id
stringlengths
3
6
url
stringlengths
33
779
title
stringlengths
1
95
text
stringlengths
3
190k
1195
https://kn.wikipedia.org/wiki/%E0%B2%AC%E0%B2%BF.%20%E0%B2%8E%E0%B2%82.%20%E0%B2%B6%E0%B3%8D%E0%B2%B0%E0%B3%80%E0%B2%95%E0%B2%82%E0%B2%A0%E0%B2%AF%E0%B3%8D%E0%B2%AF
ಬಿ. ಎಂ. ಶ್ರೀಕಂಠಯ್ಯ
ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ ಅಥವಾ ಬಿ ಎಂ ಶ್ರೀ (ಜನವರಿ ೩, ೧೮೮೪ - ಜನವರಿ ೫, ೧೯೪೬) ೨೦ನೇ ಶತಮಾನದ ಆದಿ ಭಾಗದಲ್ಲಿ ಕನ್ನಡ ಸಾಹಿತ್ಯಕ್ಕೆ ಹೊಸ ರೂಪವನ್ನು ನೀಡಿದ ನವೋದಯದ ಪ್ರವರ್ತಕ ಮತ್ತು ಕವಿ ,ಸಾಹಿತಿ. ಸುಮಾರು ಎಪ್ಪತ್ತು ವರ್ಷಗಳ ಹಿಂದೆ ಕನ್ನಡಿಗರು ಕನ್ನಡ ಮಾತನಾಡಲು ಸಂಕೋಚ ಪಡುತ್ತಿದ್ದ ಕಾಲ. ಆಗ ಎಲ್ಲ ಕಾರ್ಯವೂ ಇಂಗ್ಲಿಷ್‌ನಲ್ಲೇ ನಡೆಯುತ್ತಿತ್ತು. ಕನ್ನಡಕ್ಕೆ ಯಾವುದೇ ಉನ್ನತ ಸ್ಥಾನ-ಮಾನಗಳಿರಲಿಲ್ಲ. ಅಂತಹ ಸಮಯದಲ್ಲಿ ಕನ್ನಡವನ್ನು ಅದಕ್ಕಿರುವ ಒಂದು ನ್ಯಾಯವಾದ ಸ್ಥಾನವನ್ನು ದೊರಕಿಸಿ ಕೊಡಲೇಬೇಕು ಎಂದು ಆಶಿಸಿ, ತಮ್ಮ ಜೀವನವನ್ನು ಕನ್ನಡಕ್ಕಾಗಿ ಮುಡಿಪಾಗಿಟ್ಟವರು ಬಿ. ಎಂ. ಶ್ರೀಕಂಠಯ್ಯನವರು. ಧಾರವಾಡದಲ್ಲಿ ೧೯೧೧ ರಲ್ಲಿ ಶ್ರೀ ಯವರು ಕನ್ನಡ ಮಾತು ತಲೆಯೆತ್ತುವ ಬಗ್ಗೆ ಎಂಬ ಯುಗ ಪ್ರವರ್ತಕ ಕನ್ನಡ ಭಾಷಣವನ್ನು ಮಾಡಿದರು. ಜನವಾಣಿ ಬೇರು ಕವಿವಾಣಿ ಹೂವು ಎಂದು ಗರತಿಯ ಹಾಡುಗಳು ಕೃತಿಯ ಮುನ್ನುಡಿಯಲ್ಲಿ ಪ್ರಸಿದ್ಧಿ ಹೇಳಿಕೆ ಇದೆ. ಬಾಲ್ಯ ಜೀವನ ಬಿ.ಎಂ.ಶ್ರೀಯವರು ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಸಂಪಿಗೆ ಎಂಬ ಹಳ್ಳಿಯಲ್ಲಿ ೧೮೮೪ರ ಜನವರಿ ೩ ರಲ್ಲಿ ಜನಿಸಿದರು. ಅವರ ತಂದೆ ಮೈಲಾರಯ್ಯನವರು, ತಾಯಿ ಭಾಗೀರಥಮ್ಮ. ಶ್ರೀಕಂಠಯ್ಯನವರು ತಮ್ಮ ಬಾಲ್ಯದ ಶಿಕ್ಷಣವನ್ನು ಬೆಳ್ಳೂರಿನಲ್ಲಿ ಕಲಿತರು. ೧೯೦೬ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ ಪದವಿ, ೧೯೦೭ರಲ್ಲಿ ಮದರಾಸು ವಿವಿಯಲ್ಲಿ ಬಿ.ಎಲ್. ಪದವಿ, ೧೯೦೯ರಲ್ಲಿ ಎಂ.ಎ. ಪದವಿ ಪಡೆದರು. ಅದೇ ವರ್ಷ ಮೈಸೂರು ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ, ೧೯೩೦ರಲ್ಲಿ ಪ್ರಾಧ್ಯಾಪಕರಾಗಿದ್ದ ಅವರು, ೧೯೨೬-೧೯೩೦ ರವರೆಗೆ ನಾಲ್ಕು ವರ್ಷಗಳ ಕಾಲ ಕುಲಸಚಿವರಾಗಿದ್ದರು. ೧೯೩೮-೧೯೪೨ ರವರೆಗೆ ಕನ್ನಡ ಸಾಹಿತ್ಯ ಪರಿಷತ್ ನ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ವೃತ್ತಿ ಜೀವನ ಆಗಲೇ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇರಿಕೊಂಡರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ೨೫ ವರ್ಷ ಸೇವೆ ಸಲ್ಲಿಸಿ ೧೯೩೦ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜ್ ಗೆ ವರ್ಗವಾದರು.ಅನಂತರ ಅವರು ೧೯೪೨ರ ವರೆಗೆ ಈ ಕಾಲೇಜಿನ ಏಳಿಗೆಗಾಗಿ ದುಡಿದು ೧೯೪೪ರಲ್ಲಿ 'ಧಾರವಾಡದ ಕೆ.ಇ.ಬೋರ್ಡ್‌'ನ ಮುಖ್ಯಸ್ಥರಾಗಿ ನೇಮಕಗೊಂಡು ಅವರ 'ಆರ್ಟ್ಸ್ ಕಾಲೇಜ್' ಗೆ 'ಪ್ರಾಂಶುಪಾಲಕ'ರಾಗಿ ಕೊನೆಯವರೆಗೆ ಅಲ್ಲಿಯೇ ಕೆಲಸ ಮಾಡಿದರು. 'ಬಿ.ಎಂ.ಶ್ರೀಕಂಠಯ್ಯನವರು' ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗಾಗಿ ಅವಿಶ್ರಾಂತವಾಗಿ ದುಡಿದರು. ಹಾಗೂ ಅವರ ಪ್ರೀತಿಯ ವಿದ್ಯಾರ್ಥಿಗಳಾದ 'ಮಾಸ್ತಿ', 'ಕುವೆಂಪು', 'ಎಸ್.ವಿ.ರಂಗಣ್ಣ', 'ತೀ.ನಂ. ಶ್ರೀಕಂಠಯ್ಯ', 'ಜಿ.ಪಿ.ರಾಜರತ್ನಂ', 'ಡಿ.ಎಲ್. 'ನರಸಿಂಹಚಾರ್' ಮುಂತಾದವರಿಗೆ ಕನ್ನಡದಲ್ಲಿ ಸಾಹಿತ್ಯ ರಚನೆ ಮಾಡಲು ಪ್ರೋತ್ಸಾಹಿದರು. ಅವರು ಕನ್ನಡದಲ್ಲಿ ಕೆಲವು ಉತ್ತಮ ನಾಟಕಗಳನ್ನು ಬರೆದರು. ಅಶ್ವತ್ಥಾಮನ್ ನಾಟಕ ಅಶ್ವತ್ಥಾಮನ್:- ಕನ್ನಡ ಸಾಹಿತ್ಯದ ಮೊಟ್ಟಮೊದಲ ರುದ್ರ ನಾಟಕ. ಗ್ರೀಸ್ ದೇಶದ ಅನೇಕ ನಾಟಕಗಳ ಕಥೆ ಪುರಾಣ ಪುರುಷರನ್ನು ಕುರಿತದ್ದು. ಅಂಥ ನಾಟಕಗಳಲ್ಲಿ ಏಜಾಕ್ಸ್ ಎಂಬುದು ಒಂದು ಪ್ರಸಿದ್ಧ ನಾಟಕ. ಆ ನಾಟಕವನ್ನು ಬರೆದವನು ಸಾಫೋಕ್ಲೀಸ್; ಗ್ರೀಸ್ ದೇಶದ ಮಹಾ ನಾಟಕಕಾರರಲ್ಲಿ ಒಬ್ಬ. ಸುಮಾರು ೨,೪೦೦ ವರ್ಷಗಳ ಹಿಂದೆ ಇದ್ದ. ನಮ್ಮ ಮಹಾಭಾರತದಲ್ಲಿ ಬರುವ ಅನೇಕ ಸಂದರ್ಭಗಳು, ಘಟನೆಗಳು ಆ ನಾಟಕದಲ್ಲೂ ಬರುತ್ತವೆ. ಆ ನಾಟಕವನ್ನು ಓದಿ ಮೆಚ್ಚಿಕೊಂಡಿದ್ದ ’ಶ್ರೀ’ ಅವರು, ಅದನ್ನು ಆಧರಿಸಿಕೊಂಡು ’ಅಶ್ವತ್ಥಾಮನ್’ ನಾಟಕವನ್ನು ರಚಿಸಿದರು. ಮಹಾಭಾರತದ ಪ್ರಸಿದ್ಧ ವ್ಯಕ್ತಿಗಳಲ್ಲಿ ಅಶ್ವತ್ಥಾಮ ಒಬ್ಬ. ಈತನನ್ನು ಕುರಿತದ್ದು ಈ ನಾಟಕದ ಕಥೆ. ಅಶ್ವತ್ಥಾಮ ಪರಾಕ್ರಮಿ ಮತ್ತು ಪ್ರಾಮಾಣಿಕ. ಮಹಾಭಾರತದ ಯುದ್ಧದಲ್ಲಿ ತನ್ನ ನಾಯಕ ದುರ್ಯೋಧನನ ಮರಣದಿಂದ ಪಾಂಡವರ ಮೇಲೆ ಈತನಿಗೆ ಬಹಳ ಕೋಪವುಂಟಾಗುತ್ತದೆ. ಆ ಕೋಪದಲ್ಲಿಯೇ ಅರ್ಧರಾತ್ರಿ ಸಮಯದಲ್ಲಿ ಪಾಂಡವರ ಪಾಳಯಕ್ಕೆ ನುಗ್ಗಿ, ನಿದ್ರೆಯಲ್ಲಿದ್ದ ಅನೇಕ ಪಶುಗಳು, ಮಕ್ಕಳು ಮತ್ತು ಹೆಂಗಸರನ್ನೂ ಕೊಂದು, ತನ್ನ ಮನೆಗೆ ಹೋಗುತ್ತಾನೆ. ಅನಂತರ ನಿದ್ರೆಯಲ್ಲಿದ್ದ ಪ್ರಾಣಿಗಳನ್ನು, ಮಕ್ಕಳನ್ನು, ಹೆಂಗಸರನ್ನು ತನ್ನಂಥ ವೀರ ಕೊಂದದ್ದು ಹೇಡಿತನ ಎನಿಸುತ್ತದೆ. ಇದೊಂದು ಪಾಪದ ಕೆಲಸ ಎಂದೂ ತಿಳಿಯುತ್ತಾನೆ. ಇದರಿಂದ ಅಶ್ವತ್ಥಾಮ ಬಹಳ ಪಶ್ಚಾತ್ತಾಪ ಪಡುತ್ತಾನೆ. ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಹೀಗಾಗಿ ’ಅಶ್ವತ್ಥಾಮನ್’ ನಾಟಕವೂ ಒಂದು ರುದ್ರನಾಟಕವೇ. ಇಂಗ್ಲೀಷ್ ಗೀತಗಳು ಬಿ.ಎಂ.ಶ್ರೀ.ರವರು ಇಂಗ್ಲಿಷ್ ಗೀತಗಳು ಎಂಬ ಕವನ ಸಂಕಲನಗಳನ್ನು ರಚಿಸಿದ್ದಾರೆ. ಇದು ಹಲವು ಇಂಗ್ಲೀಷ್ ಕವಿತೆಗಳ ಸೊಗಸಾದ ಕನ್ನಡ ಅನುವಾದ. ಸಂಗ್ರಹದ ೬೩ ಕವಿತೆಗಳಲ್ಲಿ ೦೩ ಮಾತ್ರ ಶ್ರೀಯವರ ಸ್ವಂತಕವಿತೆಗಳು. ಕಾಣಿಕೆ ಸ್ವಂತ ಕವಿತೆ. ಅವರು ನ್ಯೂಮನ್ ಕವಿ ಬರೆದ 'Lead Kindly Light' ಎಂಬ ಕವಿತೆಯನ್ನು ಕನ್ನಡದಲ್ಲಿ ಅನುವಾದ ಮಾಡಿದ `ಕರುಣಾಳು ಬಾ ಬೆಳಕೆ' ಎಂಬ ಕವನ ತುಂಬಾ ಜನಪ್ರಿಯವಾಯಿತು. ಕರುಣಾಳು, ಬಾ, ಬೆಳಕೆ,- ಮುಸುಕಿದೀ ಮಬ್ಬಿನಲಿ, ಕೈ ಹಿಡಿದು ನಡೆಸೆನ್ನನು. ಇರುಳು ಕತ್ತಲೆಯ ಗವಿ; ಮನೆ ದೂರ; ಕನಿಕರಿಸಿ; ಕೈ ಹಿಡಿದು ನಡೆಸೆನ್ನನು.- ಇತ್ಯಾದಿ ಕಾಣಿಕೆ -ಶ್ರೀಯವರ ಸ್ವಂತ ರಚನೆಯಾಗಿದೆ.ಪದ್ಯ ಇವಳ ಸೊಬಗನವಳು‌ ತೊಟ್ಟು ನೋಡ ಬಯಸಿದೆ ಅವಳ ತೊಡಿಗೆ ಇವಳಿಗಿಟ್ಟು ಹಾಡು ಬಯಸಿದೆ. ಕವನ ಸಂಕಲನಗಳು ಇಂಗ್ಲೀಷ್ ಗೀತಗಳು (೧೯೨೬) ಹೊಂಗನಸುಗಳು (೧೯೪೩). ನಾಟಕಗಳು ಗದಾಯುದ್ಧ ನಾಟಕಂ(೧೯೨೬). ಅಶ್ವತ್ಥಾಮನ್(೧೯೨೯). ಪಾರಸಿಕರು(೧೯೩೫) ಸಂಪಾದಿತ ಕೃತಿ ಕನ್ನಡದ ಬಾವುಟ(೧೯೩೬) ಇತರೆ ಕೃತಿಗಳು ಕನ್ನಡಿಗರಿಗೆ ಒಳ್ಳೆಯ ಸಾಹಿತ್ಯ. ಕನ್ನಡ ಛಂದಸ್ಸಿನ ಚರಿತ್ರೆ. ಕನ್ನಡ ಸಾಹಿತ್ಯ ಚರಿತ್ರೆ. ಕನ್ನಡ ಮಾತು ತಲೆ ಎತ್ತುವ ಬಗ್ಗೆ. ಇಸ್ಲಾಂ ಸಂಸ್ಕೃತಿ. A Hand book of Rhetoric. Miscellaneous. ಅಭಿನಂದನ ಗ್ರಂಥ ಸಂಭಾವನೆ. ಪ್ರಶಸ್ತಿಗಳು ಬಿ.ಎಂ.ಶ್ರೀಯವರಿಗೆ ೧೯೩೮ರಲ್ಲಿ ಅವರ ಅವಿಸ್ಮರಣೀಯ ಕೆಲಸಕ್ಕಾಗಿ ಮೈಸೂರಿನ ಮಹಾರಾಜರು `ರಾಜ ಸೇವಾಸಕ್ತ' ಎಂಬ ಬಿರುದನ್ನು ನೀಡಿ ಗೌರವಿಸಿದರು. ೧೯೨೮ರಲ್ಲಿ 'ಗುಲಬರ್ಗಾ'ದಲ್ಲಿ ನಡೆದ '೧೪ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ'ರಾಗಿದ್ದರು. ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ ಅದರ ಏಳಿಗೆಗಾಗಿ ಶ್ರಮಿಸಿದರು. ಹೀಗೆ ತಮ್ಮ ಜೀವಿತ ಕಾಲವನ್ನು ಕನ್ನಡ ಸಾಹಿತ್ಯಕ್ಕಾಗಿ ಮೀಸಲಿಟ್ಟ ಬಿ. ಎಂ. ಶ್ರೀ ಅವರನ್ನು `ಕನ್ನಡದ ಕಣ್ವ' ಎಂದು ಕರೆಯಲಾಗುತ್ತದೆ. ನಿಧನ ೧೯೪೬ರಲ್ಲಿ 'ಪ್ರೊ.ಬಿ.ಎಂ.ಶ್ರೀ'ರವರು, 'ಧಾರವಾಡ'ದಲ್ಲಿ ಕೆಲಸ ಮಾಡುತ್ತಿರುವ ಸಮಯದಲ್ಲಿಯೇ ನಿಧನರಾದರು. ಹೆಚ್ಚಿನ ಓದಿಗೆ ಕನ್ನಡ ಸಾಹಿತ್ಯಕ್ಕೆ ಬಿ.ಎಂ.ಶ್ರೀಯವರ ಕೊಡುಗೆ ಎಷ್ಟು ದೊಡ್ಡದು ಎಂಬ ಬಗ್ಗೆ ತಿಳಿಯಲು 'ಡಾ. ಎ.ಎನ್.ಮೂರ್ತಿರಾಯರ' 'ಸಮಗ್ರ ಲಲಿತ ಪ್ರಬಂಧಗಳು' ಪುಸ್ತಕದಲ್ಲಿ'ಬಿ.ಎಂ.ಶ್ರೀ' ಎಂಬ ಶೀರ್ಷಿಕೆಯಲ್ಲಿ ಪುಟ. ೩೩೭ ರಲ್ಲಿ ಅವರು ದಾಖಲಿಸಿದ ಸಮಗ್ರ ಚಿತ್ರಣ ಬಿ.ಎಂ.ಶ್ರೀಕಂಠಯ್ಯನವರ ಸಂಪೂರ್ಣವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತದೆ. ಅಲ್ಲಿ ಡಾ. ಮೂರ್ತಿರಾಯರು ೧೯೨೬ ರಲ್ಲಿ ಪ್ರಕಟವಾದ ಇಂಗ್ಲೀಷ್ ಗೀತಗಳು, ಎಂದು ಬರೆದಿದ್ದಾರೆ. ಬಿ.ಎಂ.ಶ್ರೀ.ರವರ ಪ್ರಕಟಿತ ಪುಸ್ತಕದ ಮಾರಾಟದ ವೆಬ್ಸೈಟ್ ನಲ್ಲಿಯೂ ಇಂಗ್ಲೀಷ್ ಗೀತಗಳು ಎಂತಲೇ ಇದೆ. ಆದರೆ 'ಕರ್ನಾಟಕ ಸಂಸ್ಕೃತಿ ಇಲಾಖೆಯವರ ಸೈಟ್' ನಲ್ಲಿ ಇಂಗ್ಲೀಷ್ ಗೀತೆಗಳು ಎಂದು ಕೊಟ್ಟಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಶ್ರೀಕಂಠಯ್ಯ, ಬಿ.ಎಂ ಉಲ್ಲೇಖ ಬಾಹ್ಯ ಸಂಪರ್ಕಗಳು ‘ಕನ್ನಡದ ಕಣ್ವ’ನ ನೆನೆಯುತ್ತಾ ... ಕಾರಿಹೆಗ್ಗಡೆ ಮಗಳಿಗೊಂದು ಹನಿ.. March 13, 2002 -Rohini Philly ಶ್ರೀಕಂಠಯ್ಯ ಬಿ.ಎಂ.೧೮೮೪-೧೯೪೬ ಶ್ರೀಕಂಠಯ್ಯ ಕನ್ನಡ ಸಾಹಿತ್ಯ ಕನ್ನಡ ಕವಿಗಳು ಸಾಹಿತ್ಯ ಕನ್ನಡ ಸಾಹಿತ್ಯ ಪ್ರಕಾರಗಳು ೧೮೮೪ ಜನನ ೧೯೪೬ ನಿಧನ ಕರ್ನಾಟಕದ ಏಕೀಕರಣಕ್ಕಾಗಿ ದುಡಿದ ಮಹನೀಯರು
1196
https://kn.wikipedia.org/wiki/%E0%B2%9C%E0%B2%BF.%E0%B2%AA%E0%B2%BF.%E0%B2%B0%E0%B2%BE%E0%B2%9C%E0%B2%B0%E0%B2%A4%E0%B3%8D%E0%B2%A8%E0%B2%82
ಜಿ.ಪಿ.ರಾಜರತ್ನಂ
ಬಾಲ್ಯ 'ಜಿ. ಪಿ. ರಾಜರತ್ನಂ'(೧೯೦೯-೧೯೭೯) ರವರು ಮೂಲತಃ ಚಾಮರಾಜ ನಗರ ಜಿಲ್ಲೆಯ ಗುಂಡ್ಲುಪೇಟೆಯವರು. ಇವರ ಪೂರ್ವಜರು ತಮಿಳುನಾಡಿನ "ನಾಗಪಟ್ಟಣ"ಕ್ಕೆ ಸೇರಿದ ತಿರುಕ್ಕಣ್ಣಾಪುರ ಎಂಬ ಅಗ್ರಹಾರದಿಂದ ೧೯೦೬ ರಲ್ಲಿ ಮೈಸೂರಿಗೆ ಬಂದರು. ಹೆಸರಾಂತ ಗುಂಡ್ಲು ಪಂಡಿತ ವಂಶ ದಲ್ಲಿ ಡಿಸೆಂಬರ್ ೦೫, ೧೯೦೯ರಂದು ರಾಮನಗರದಲ್ಲಿ ಜನಿಸಿದರು. ಮೊದಲಿಗೆ ಇವರ ಹೆಸರು ಜಿ.ಪಿ.ರಾಜಯ್ಯಂಗಾರ್ ಎಂದಿತ್ತು. ಇವರು ಲೋಯರ್ ಸೆಕೆಂಡರಿ ಓದುತ್ತಿದ್ದಾಗ ಚೇಷ್ಟೆಗಾಗಿ ಶಾಲೆಯ ಗುಮಾಸ್ತರನ್ನು ಪುಸಲಾಯಿಸಿ ತಮ್ಮ ಹೆಸರನ್ನು ಜಿ.ಪಿ.ರಾಜರತ್ನಂ ಎಂದು ತಿದ್ದಿಕೊಂಡಿದ್ದರು. ತಂದೆ ಆ ಭಾಗದಲ್ಲಿ ಉತ್ತಮ ಶಿಕ್ಷಕರೆಂದು ಹೆಸರು ಮಾಡಿದ್ದ ಜಿ.ಪಿ.ಗೋಪಾಲಕೃಷ್ಣ ಅಯ್ಯಂಗಾರ್.. ತಾಯಿಯ ಪ್ರೀತಿ ಇಲ್ಲದೆ ಬೆಳೆದ ರಾಜರತ್ನಂಗೆ, ತಂದೆಯೇ ಎಲ್ಲವೂ ಆಗಿದ್ದರು. ಅಜ್ಜಿಯ ಅಕ್ಕರೆಯಲ್ಲೂ ರಾಜರತ್ನಂ ಬೆಳೆದರು. ತಂದೆ ಬಡ ಮೇಸ್ಟ್ರು. ಸ್ವಾತಂತ್ರ್ಯ ಪೂರ್ವದಲ್ಲೇ (೧೯೩೧ರಲ್ಲಿ) ರಾಜರತ್ನಂ ಎಂ.ಎ (ಕನ್ನಡ)ದಲ್ಲಿ ಮುಗಿಸಿ, ಶಿಶು ವಿಹಾರ ಹಾಗೂ ತಂದೆಯ ಶಾಲೆಯಲ್ಲಿ ಆರಂಭಿಕ ಮೇಸ್ಟ್ರು ಆದರು. ಇದರ ಅನುಭವದ ಫಲವೇ ಮಕ್ಕಳ ಕುರಿತು ಬರೆದ `ತುತ್ತೂರಿ' ಶಿಶುಗೀತೆ ಸಂಕಲನ '. ಕ್ರಮೇಣ ಆ ಕೆಲಸ ತೃಪ್ತವಾಗದೆ ಹೈದರಾಬಾದಿಗೂ ಕೆಲಸ ಹುಡುಕಿ ಹೋಗಿದ್ದುಂಟು. ಅಲ್ಲಿಂದ ನಿರಾಶರಾಗಿ ಬೆಂಗಳೂರಿಗೆ ಬಂದು ಜನಗಣತಿ ಕಛೇರಿಯಲ್ಲಿ ಕೆಲಸಕ್ಕೆ ಪ್ರಯತ್ನಿಸಿದರು. ಆದರೆ ಅಲ್ಲಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರು ರಾಜರತ್ನಂರವರಿಗೆ 'ಸಾಹಿತ್ಯ ಸೇವೆ' ಮುಂದುವರೆಸಲು ಉಪದೇಶಿಸಿದರು. ಅದರ ಫಲವೇ ಮುಂದೆ 'ರಾಜರತ್ನಂ' ಅವರಿಂದ 'ಉತ್ತಮ ಸಾಹಿತ್ಯ ನಿರ್ಮಾಣ'ಕ್ಕೆ ದಾರಿಯಾಯಿತು. ಬೌದ್ಧ ಸಾಹಿತ್ಯ ಇಂಥ ಉಪಯುಕ್ತ ಸಾಹಿತ್ಯದಲ್ಲೊಂದು 'ಮಿಂಚು'. ಮಡದಿಯ ಸಾವಿನಿಂದ ಧೃತಿಗೆಟ್ಟರು ರಾಜರತ್ನಂ ಅವರಿಗೆ ವೈವಾಹಿಕ ಜೀವನದಲ್ಲಿ ಸಾಕಷ್ಟು ನೋವುಂಟಾಯಿತು. ಪತ್ನಿ ಲಲಿತಮ್ಮ ಕಾಯಿಲೆ ಬಿದ್ದವರು ಹುಷಾರಾಗಲೇ ಇಲ್ಲ, ವಿಧಿವಶರಾದರು. ಅವರ ನೆನಪು ಹಸಿರಾಗಿದ್ದಾಗಲೇ ಸೀತಮ್ಮ ಅವರ 'ಬಾಳನಂದಾದೀಪ'ವಾಗಿ ಬಂದರು. ಬದುಕು ಸ್ಥಿರವಾಯಿತು. ಕಷ್ಟ ಕಾರ್ಪಣ್ಯಗಳ ನಡುವೆ ೧೯೩೮ರಲ್ಲಿ 'ಕನ್ನಡ ಪಂಡಿತ ಹುದ್ದೆ', ರಾಜರತ್ನಂ ಅವರನ್ನು ಹುಡುಕಿ ಬಂತು. ಮೈಸೂರು, ಬೆಂಗಳೂರು, ಶಿವಮೊಗ್ಗ, ತುಮಕೂರುಗಳಲ್ಲಿ ಅಧ್ಯಾಪಕರಾಗಿ, ಮೆಚ್ಚಿನ ಮೇಸ್ಟ್ರು ಆಗಿ ಖ್ಯಾತರಾದರು. ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ವಿದ್ಯಾರ್ಥಿಗಳ ಲೇಖನಗಳ ಸಂಕಲನ ವಿದ್ಯಾರ್ಥಿ ವಿಚಾರ ವಿಲಾಸ ಪ್ರಕಟಿಸುವುದರ ಮೂಲಕ ನೂರಾರು ವಿದ್ಯಾರ್ಥಿಗಳಿಗೆ ಸಾಹಿತ್ಯ ಸೃಷ್ಟಿಯಲ್ಲಿ ಪ್ರೇರಕ ಶಕ್ತಿಯಾದರು. ಪ್ರೊ| ಎ.ಆರ್.ಕೃಷ್ಣಶಾಸ್ತ್ರಿ ಸ್ಥಾಪಿಸಿದ್ದ ಸೆಂಟ್ರಲ್ ಕಾಲೇಜಿನ ಕರ್ಣಾಟಕ ಸಂಘದ ಸಕ್ರಿಯ ಚಟುವಟಿಕೆಗಳಲ್ಲಿ ಭಾಗವಹಿಸಿ ಅದಕ್ಕೊಂದು ಘನತೆ ತಂದರು. ಜಿ.ಪಿ.ರಾಜರತ್ನಂ, ೧೯೭೬ರಲ್ಲಿ ದ.ಕ.ಜಿಲ್ಲಾ ಸಾಹಿತ್ಯ ಸಮ್ಮೇಳನ ಹಾಗೂ ಶಿವಮೊಗ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. ೧೯೬೯ರಲ್ಲೇ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದರು. ೧೯೭೭ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿ ಲಭಿಸಿತು. ೧೯೭೮ರಲ್ಲಿ 'ದೆಹಲಿಯಲ್ಲಿ ಸುವರ್ಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ', ೧೯೭೯ರಲ್ಲಿ ಧರ್ಮಸ್ಥಳ ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳ ಸಾಹಿತ್ಯಗೋಷ್ಠಿ ಅಧ್ಯಕ್ಷತೆ ವಹಿಸಿದ್ದರು. ರಾಜರತ್ನಂ ಅವರ ಸಾಹಿತ್ಯ ಸೇವೆಗೆ ಎರಡು ಮುಖ. ಒಂದು ಸಾಹಿತ್ಯ ಸೃಷ್ಟಿ, ಎರಡು ಸಾಹಿತ್ಯ ಪರಿಚಾರಿಕೆ. ಕಾವ್ಯನಾಮ ""ಭ್ರಮರ"" ಎಂಬುದು ಇವರ ಕಾವ್ಯನಾಮವಾಗಿತ್ತು. ಕೆಲವು ಪದ್ಯದ ಸಾಲುಗಳು ಮಕ್ಕಳ ಕವನ ನಾಯಿಮರಿ ನಾಯಿಮರಿ ತಿಂಡಿ ಬೇಕೆ? ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು.. ನಾಯಿಮರಿ ನಿನಗೆ ತಿಂಡಿ ಏಕೆ ಬೇಕು? ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು ನಾಯಿಮರಿ ಕಳ್ಳ ಬಂದರೇನು ಮಾಡುವೆ? ಲೊಳ್ ಲೊಳ್ ಬೊವ್ ಎಂದು ಕೂಗಿ ಆಡುವೆ ಜಾಣಮರಿ ತಾಳು ಹೋಗಿ ತಿಂಡಿ ತರುವೆನು ತಾ ನಿನ್ನ ಮನೆಯ ನಾನು ಕಾಯುತಿರುವೆನು. ಕನ್ನಡ ಪದಗೊಳ್ ಯೆಂಡ ಯೆಡ್ತಿ ಕನ್ನಡ್ ಪದಗೊಳ್ ಅಂದ್ರೆ ರತ್ನಂಗ್ ಪ್ರಾಣ! ಬುಂಡೇನ್ ಎತ್ತಿ ಕುಡದ್ಬುಟ್ಟಾಂದ್ರೆ ತಕ್ಕೊ! ಪದಗೊಳ್ ಬಾಣ! ಬಗವಂತ ಏನ್ರ ಬೂಮೀಗ್ ಇಳಿದು ನನ್ ತಾಕ್ ಬಂದಾಂತ್ ಅನ್ನು; ಪರ್ ಗಿರೀಕ್ಸೆ ಮಾಡ್ತಾನ್ ಔನು ಬಕ್ತನ್ ಮೇಲ್ ಔನ್ ಕಣ್ಣು! --@-- ರತ್ನನ್ ಪರ್ಪಂಚ ಯೇಳ್ಕೊಳ್ಳಾಕ್ ಒಂದ್ ಊರು ತಲೇಮೇಗ್ ಒಂದ್ ಸೂರು ಮಲಗಾಕೆ ಭೂಮ್ತಾಯಿ ಮಂಚ ಕೈ ಯಿಡದೋಳ್ ಪುಟ್ನಂಜಿ ನೆಗನೆಗತ ಉಪ್ಗಂಜಿ ಕೊಟ್ರಾಯ್ತು ರತ್ನನ್ ಪರ್ಪಂಚ ---. --- ಕೃತಿಗಳು ತುತ್ತೂರಿ ರತ್ನನ ಪದಗಳು ಎಂಡಕುಡುಕ ರತ್ನ ನಾಗನ ಪದಗಳು ಬುದ್ಧನ ಜಾತಕಗಳು ಧರ್ಮದಾನಿ ಬುದ್ಧ ಭಗವಾನ್ ಮಹಾವೀರ ಮಹಾವೀರನ ಮಾತುಕತೆ ಕಡಲೆಪುರಿ ಗುಲಗಂಜಿ ಕಂದನ ಕಾವ್ಯ ಮಾಲೆ ರಾಜರತ್ನಂ ತಮ್ಮನ್ನು ತಾವೇ 'ಸಾಹಿತ್ಯ ಪರಿಚಾರಕ' ಎಂದು ಕರೆದುಕೊಳ್ಳುತ್ತಿದ್ದರು. ಇದರಿಂದ ಅವರ ಉದ್ದೇಶ ಸ್ಪಷ್ಟವಾಗಿತ್ತು- ಭಾಷಣದ ಮತ್ತು ಕೃತಿ ಪ್ರಕಟಣೆ ಮೂಲಕ ಜನರ ಬಳಿಗೆ ಸಾಹಿತ್ಯ ಕೊಂಡೊಯ್ಯುವುದಾಗಿತ್ತು. ಹೀಗಾಗಿ 'ಜಿ.ಪಿ.ರಾಜರತ್ನಂ,' ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸಂವೇದನೆಯನ್ನುಂಟು ಮಾಡಿದವರು. ಇವರು ೧೯೭೯ರ ಮಾರ್ಚ್ ತಿಂಗಳ ೧೩ ರಂದು ನಿಧನರಾದರು. ಹೆಚ್ಚಿಗೆ ಓದಲು ಹೆಚ್.ಆರ್.ನಾಗೇಶರಾವ್ ವಿದ್ಯಾರ್ಥಿ ವಿಚಾರ ವಿಲಾಸ ಬಾಹ್ಯಸಂಪರ್ಕಗಳು ಉಲ್ಲೇಖ ಜಿ.ಪಿ.ರಾಜರತ್ನಂ ಕೃತಿಗಳು ಕನ್ನಡ ಸಾಹಿತ್ಯ ಜಿ.ಪಿ.ರಾಜರತ್ನಂ ಲೇಖಕರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು
1201
https://kn.wikipedia.org/wiki/%E0%B2%B8%E0%B3%86%E0%B2%AA%E0%B3%8D%E0%B2%9F%E0%B3%86%E0%B2%82%E0%B2%AC%E0%B2%B0%E0%B3%8D
ಸೆಪ್ಟೆಂಬರ್
ಜೂಲಿಯನ್ ಮತ್ತು ಗ್ರೆಗೋರಿಯನ್ ಕ್ಯಾಲೆಂಡರ್‌ಗಳೆರಡರಲ್ಲೂ ಸೆಪ್ಟೆಂಬರ್ ವರ್ಷದ ಒಂಬತ್ತನೇ ತಿಂಗಳು. ೩೦ ದಿನಗಳ ಉದ್ದವನ್ನು ಹೊಂದಿರುವ ನಾಲ್ಕು ತಿಂಗಳುಗಳಲ್ಲಿ ಮೂರನೆಯದು ಮತ್ತು ೩೧ ದಿನಗಳಿಗಿಂತ ಕಡಿಮೆ ಅವಧಿಯನ್ನು ಹೊಂದಿರುವ ಐದು ತಿಂಗಳುಗಳಲ್ಲಿ ನಾಲ್ಕನೇ ತಿಂಗಳು. ಉತ್ತರ ಗೋಳಾರ್ಧದಲ್ಲಿ ಸೆಪ್ಟೆಂಬರ್ ಮತ್ತು ದಕ್ಷಿಣ ಗೋಳಾರ್ಧದಲ್ಲಿ ಮಾರ್ಚ್ ಕಾಲೋಚಿತವಾಗಿ ಸಮಾನವಾಗಿರುತ್ತದೆ. ಉತ್ತರ ಗೋಳಾರ್ಧದಲ್ಲಿ, ಹವಾಮಾನ ಶರತ್ಕಾಲದ ಆರಂಭವು ಸೆಪ್ಟೆಂಬರ್ ೧ ರಂದು ಇರುತ್ತದೆ. ದಕ್ಷಿಣ ಗೋಳಾರ್ಧದಲ್ಲಿ, ಹವಾಮಾನ ವಸಂತಕಾಲದ ಆರಂಭವು ಸೆಪ್ಟೆಂಬರ್ ೧ ರಂದು ಇರುತ್ತದೆ. ಈಸ್ಟರ್ನ್ ಆರ್ಥೊಡಾಕ್ಸ್ ಚರ್ಚ್‌ನಲ್ಲಿ ಸೆಪ್ಟೆಂಬರ್ ಚರ್ಚಿನ ವರ್ಷದ ಆರಂಭವನ್ನು ಸೂಚಿಸುತ್ತದೆ. ಉತ್ತರ ಗೋಳಾರ್ಧದ ಅನೇಕ ದೇಶಗಳಲ್ಲಿ ಇದು ಶೈಕ್ಷಣಿಕ ವರ್ಷದ ಪ್ರಾರಂಭವಾಗಿದೆ. ಇದರಲ್ಲಿ ಮಕ್ಕಳು ಬೇಸಿಗೆಯ ವಿರಾಮದ ನಂತರ ಮತ್ತೆ ಶಾಲೆಗೆ ಹೋಗುತ್ತಾರೆ. ಕೆಲವೊಮ್ಮೆ ತಿಂಗಳ ಮೊದಲ ದಿನದಂದು ಹೋಗುತ್ತಾರೆ. ಸೆಪ್ಟೆಂಬರ್ (ಲ್ಯಾಟಿನ್ ಸೆಪ್ಟೆಮ್, "ಏಳು" ನಿಂದ) ಮೂಲತಃ ತಿಳಿದಿರುವ ಅತ್ಯಂತ ಹಳೆಯ ರೋಮನ್ ಕ್ಯಾಲೆಂಡರ್, ರೊಮುಲಸ್ , ಮಾರ್ಚ್ (ಲ್ಯಾಟಿನ್ ಮಾರ್ಟಿಯಸ್ ) ಜೊತೆಗೆ ಬಹುಶಃ ೪೫೧ ಬಿ.ಸಿ ವರೆಗೆ ವರ್ಷದ ಮೊದಲ ತಿಂಗಳು. ಜನವರಿ ಮತ್ತು ಫೆಬ್ರವರಿಯನ್ನು ವರ್ಷದ ಆರಂಭಕ್ಕೆ ಸೇರಿಸಿದ ಕ್ಯಾಲೆಂಡರ್ ಸುಧಾರಣೆಯ ನಂತರ, ಸೆಪ್ಟೆಂಬರ್ ಒಂಬತ್ತನೇ ತಿಂಗಳಾಯಿತು ಆದರೆ ಅದರ ಹೆಸರನ್ನು ಉಳಿಸಿಕೊಂಡಿದೆ. ಜೂಲಿಯನ್ ಸುಧಾರಣೆಗೆ ಇದು ೨೯ ದಿನಗಳನ್ನು ಹೊಂದಿತ್ತು. ಇದು ಒಂದು ದಿನವನ್ನು ಸೇರಿಸಿತು. ಕಾರ್ಯಕ್ರಮಗಳು ಸೆಪ್ಟೆಂಬರ್‌ನ ಪ್ರಾಚೀನ ರೋಮನ್ ಆಚರಣೆಗಳು ಲುಡಿ ರೊಮಾನಿ. ಮೂಲತಃ ಸೆಪ್ಟೆಂಬರ್ ೧೨ ರಿಂದ ಸೆಪ್ಟೆಂಬರ್ ೧೪ ರವರೆಗೆ ಆಚರಿಸಲಾಗುತ್ತದೆ. ನಂತರ ಸೆಪ್ಟೆಂಬರ್ ೫ ರಿಂದ ಸೆಪ್ಟೆಂಬರ್ ೧೯ ರವರೆಗೆ ವಿಸ್ತರಿಸಲಾಯಿತು. ೧ ನೇ ಶತಮಾನ ಬಿ.ಸಿ ಯಲ್ಲಿ, ಸೆಪ್ಟೆಂಬರ್ ೪ ರಂದು ದೇವೀಕರಿಸಿದ ಜೂಲಿಯಸ್ ಸೀಸರ್ ಗೌರವಾರ್ಥವಾಗಿ ಹೆಚ್ಚುವರಿ ದಿನವನ್ನು ಸೇರಿಸಲಾಯಿತು. ಎಪುಲಮ್ ಜೋವಿಸ್ ಸೆಪ್ಟೆಂಬರ್ ೧೩ ರಂದು ನಡೆಯಿತು. ಲುಡಿ ಟ್ರಯಂಫೇಲ್ಸ್ ಸೆಪ್ಟೆಂಬರ್ ೧೮-೨೨ ರವರೆಗೆ ನಡೆಯಿತು. ಸೆಪ್ಟಿಮೊಂಟಿಯಮ್ ಅನ್ನು ಸೆಪ್ಟೆಂಬರ್‌ನಲ್ಲಿ ಮತ್ತು ನಂತರದ ಕ್ಯಾಲೆಂಡರ್‌ಗಳಲ್ಲಿ ಡಿಸೆಂಬರ್ ೧೧ ರಂದು ಆಚರಿಸಲಾಯಿತು. ಈ ದಿನಾಂಕಗಳು ಆಧುನಿಕ ಗ್ರೆಗೋರಿಯನ್ ಕ್ಯಾಲೆಂಡರ್‌ಗೆ ಹೊಂದಿಕೆಯಾಗುವುದಿಲ್ಲ. ಚಾರ್ಲೆಮ್ಯಾಗ್ನೆ ಕ್ಯಾಲೆಂಡರ್ನಲ್ಲಿ ಸೆಪ್ಟೆಂಬರ್ ಅನ್ನು "ಸುಗ್ಗಿಯ ತಿಂಗಳು" ಎಂದು ಕರೆಯಲಾಯಿತು. ಸೆಪ್ಟೆಂಬರ್ ಭಾಗಶಃ ಫ್ರುಕ್ಟಿಡರ್ ಮತ್ತು ಭಾಗಶಃ ಮೊದಲ ಫ್ರೆಂಚ್ ಗಣರಾಜ್ಯದ ವೆಂಡೆಮಿಯಾರ್ಗೆ ಅನುರೂಪವಾಗಿದೆ. ಸೆಪ್ಟೆಂಬರ್ ಅನ್ನು ಸ್ವಿಟ್ಜರ್ಲೆಂಡ್ನಲ್ಲಿ ಹರ್ಬ್ಸ್ಟ್ಮೊನಾಟ್ ಎಂದು ಕರೆಯಲಾಗುತ್ತದೆ. ಸುಗ್ಗಿಯ ತಿಂಗಳು. ಆಂಗ್ಲೋ-ಸ್ಯಾಕ್ಸನ್‌ಗಳು ತಿಂಗಳನ್ನು ಗೆರ್ಸ್ಟ್‌ಮೊನಾಥ್, ಬಾರ್ಲಿ ತಿಂಗಳು ಎಂದು ಕರೆಯುತ್ತಾರೆ. ಆ ಬೆಳೆಯನ್ನು ಸಾಮಾನ್ಯವಾಗಿ ಕೊಯ್ಲು ಮಾಡಲಾಗುತ್ತದೆ. ೧೭೫೨ ರಲ್ಲಿ, ಬ್ರಿಟಿಷ್ ಸಾಮ್ರಾಜ್ಯವು ಗ್ರೆಗೋರಿಯನ್ ಕ್ಯಾಲೆಂಡರ್ ಅನ್ನು ಅಳವಡಿಸಿಕೊಂಡಿತು. ಆ ವರ್ಷ ಬ್ರಿಟಿಷ್ ಸಾಮ್ರಾಜ್ಯದಲ್ಲಿ, ಸೆಪ್ಟೆಂಬರ್ ೨ ಅನ್ನು ತಕ್ಷಣವೇ ಸೆಪ್ಟೆಂಬರ್ ೧೪ ಅನುಸರಿಸಲಾಯಿತು. ಯೂಸ್ನೆಟ್ನಲ್ಲಿ, ಸೆಪ್ಟೆಂಬರ್ ೧೯೯೩( ಎಟರ್ನಲ್ ಸೆಪ್ಟೆಂಬರ್ ) ಎಂದಿಗೂ ಕೊನೆಗೊಂಡಿಲ್ಲ ಎಂದು ಹೇಳಲಾಗುತ್ತದೆ. ಖಗೋಳಶಾಸ್ತ್ರ ಮತ್ತು ಜ್ಯೋತಿಷ್ಯ ಸೆಪ್ಟೆಂಬರ್ ವಿಷುವತ್ ಸಂಕ್ರಾಂತಿಯು ಈ ತಿಂಗಳಲ್ಲಿ ನಡೆಯುತ್ತದೆ ಮತ್ತು ಅದರ ಸುತ್ತಲೂ ಕೆಲವು ಆಚರಣೆಗಳನ್ನು ಆಯೋಜಿಸಲಾಗಿದೆ. ಇದು ಉತ್ತರ ಗೋಳಾರ್ಧದಲ್ಲಿ ಶರತ್ಕಾಲದ ವಿಷುವತ್ ಸಂಕ್ರಾಂತಿ, ಮತ್ತು ದಕ್ಷಿಣ ಗೋಳಾರ್ಧದಲ್ಲಿ ವರ್ನಲ್ ವಿಷುವತ್ ಸಂಕ್ರಾಂತಿ . ದಿನಾಂಕಗಳು ೨೧ ಸೆಪ್ಟೆಂಬರ್‌ನಿಂದ ೨ ಸೆಪ್ಟೆಂಬರ್‌ವರೆಗೆ ಬದಲಾಗಬಹುದು ( ಯುಟಿಸಿ ಯಲ್ಲಿ). ಸೆಪ್ಟೆಂಬರ್ ಹೆಚ್ಚಾಗಿ ಜ್ಯೋತಿಷ್ಯ ಕ್ಯಾಲೆಂಡರ್ನ ಆರನೇ ತಿಂಗಳಲ್ಲಿ (ಮತ್ತು ಏಳನೆಯ ಮೊದಲ ಭಾಗ), ಇದು ಮಾರ್ಚ್/ಮಂಗಳ/ಮೇಷ ರಾಶಿಯ ಕೊನೆಯಲ್ಲಿ ಪ್ರಾರಂಭವಾಗುತ್ತದೆ. ಚಿಹ್ನೆಗಳು ಸೆಪ್ಟೆಂಬರ್‌ನ ಜನ್ಮಗಲ್ಲು ನೀಲಮಣಿ. ಜನ್ಮ ಹೂವುಗಳು ಮರೆವು-ನನಗೆ-ಅಲ್ಲ, ಬೆಳಗಿನ ವೈಭವ ಮತ್ತು ಆಸ್ಟರ್. ರಾಶಿಚಕ್ರ ಚಿಹ್ನೆಗಳು ಕನ್ಯಾರಾಶಿ (ಸೆಪ್ಟೆಂಬರ್ ೨೨ ರವರೆಗೆ) ಮತ್ತು ತುಲಾ (ಸೆಪ್ಟೆಂಬರ್ ೨೩ ರಿಂದ). ಆಚರಣೆಗಳು ಈ ಪಟ್ಟಿಯು ಅಧಿಕೃತ ಸ್ಥಿತಿ ಅಥವಾ ಸಾಮಾನ್ಯ ಆಚರಣೆಯನ್ನು ಸೂಚಿಸುವುದಿಲ್ಲ. ಗ್ರೆಗೋರಿಯನ್ ಅಲ್ಲದ ಬಹಾಯಿ ಕ್ಯಾಲೆಂಡರ್‌ನಿಂದ ಹೊಂದಿಸಲಾದ ಆಚರಣೆಗಳ ಪಟ್ಟಿ ಚೀನಿ ಕ್ಯಾಲೆಂಡರ್‌ನಿಂದ ಹೊಂದಿಸಲಾದ ಆಚರಣೆಗಳ ಪಟ್ಟಿ ಹೀಬ್ರೂ ಕ್ಯಾಲೆಂಡರ್‌ನಿಂದ ಹೊಂದಿಸಲಾದ ಆಚರಣೆಗಳ ಪಟ್ಟಿ ಇಸ್ಲಾಮಿಕ್ ಕ್ಯಾಲೆಂಡರ್ ನಿಗದಿಪಡಿಸಿದ ಆಚರಣೆಗಳ ಪಟ್ಟಿ ಸೌರ ಹಿಜ್ರಿ ಕ್ಯಾಲೆಂಡರ್‌ನಿಂದ ಹೊಂದಿಸಲಾದ ಆಚರಣೆಗಳ ಪಟ್ಟಿ ತಿಂಗಳ ಅವಧಿಯ ಅಮೆರಿಂಡಿಯನ್ ಹೆರಿಟೇಜ್ ತಿಂಗಳು (ಗಯಾನಾ) ಬಾಲ್ಯದ ಕ್ಯಾನ್ಸರ್ ಜಾಗೃತಿ ತಿಂಗಳು (ಯುನೈಟೆಡ್ ಕಿಂಗ್‌ಡಮ್). ಸ್ತ್ರೀರೋಗ ಶಾಸ್ತ್ರದ ಕ್ಯಾನ್ಸರ್ ಜಾಗೃತಿ ತಿಂಗಳು ಲ್ಯುಕೇಮಿಯಾ ಮತ್ತು ಲಿಂಫೋಮಾ ಜಾಗೃತಿ ತಿಂಗಳು. ಅಂಡಾಶಯದ ಕ್ಯಾನ್ಸರ್ ಜಾಗೃತಿ ತಿಂಗಳು. ಥೈರಾಯ್ಡ್ ಕ್ಯಾನ್ಸರ್ ಜಾಗೃತಿ ತಿಂಗಳು. ರಾಷ್ಟ್ರೀಯ ಆತ್ಮಹತ್ಯೆ ತಡೆ ತಿಂಗಳು. ತರಕಾರಿ ತಿಂಗಳು. ಪಿಜ್ಜಾ ತಿಂಗಳು. ಯುನೈಟೆಡ್ ಸ್ಟೇಟ್ಸ್ ಉತ್ತಮ ಉಪಹಾರ ತಿಂಗಳು . ಆಹಾರ ಸುರಕ್ಷತೆ ಶಿಕ್ಷಣ ತಿಂಗಳು. ರಾಷ್ಟ್ರೀಯ ಬಾಲ್ಯದ ಸ್ಥೂಲಕಾಯತೆಯ ಜಾಗೃತಿ ತಿಂಗಳು. ಜಲಮಸ್ತಿಷ್ಕ ರೋಗ ಜಾಗೃತಿ ತಿಂಗಳು. ನೋವಿನ ಅರಿವಿನ ತಿಂಗಳು. ರಾಷ್ಟ್ರೀಯ ಸನ್ನದ್ಧತೆ ತಿಂಗಳು. ರಾಷ್ಟ್ರೀಯ ಪ್ರಾಸ್ಟೇಟ್ ಆರೋಗ್ಯ ತಿಂಗಳು. ರಾಷ್ಟ್ರೀಯ ಸಿಕಲ್ ಸೆಲ್ ಜಾಗೃತಿ ತಿಂಗಳು. ರಾಷ್ಟ್ರೀಯ ಯೋಗ ತಿಂಗಳು. ಆಹಾರದ ತಿಂಗಳುಗಳು ರಾಷ್ಟ್ರೀಯ ಬೌರ್ಬನ್ ಹೆರಿಟೇಜ್ ತಿಂಗಳು. ಕ್ಯಾಲಿಫೋರ್ನಿಯಾ ವೈನ್ ತಿಂಗಳು. ರಾಷ್ಟ್ರೀಯ ಕೋಳಿ ತಿಂಗಳು. ರಾಷ್ಟ್ರೀಯ ಜೇನು ತಿಂಗಳು. ರಾಷ್ಟ್ರೀಯ ಮಶ್ರೂಮ್ ತಿಂಗಳು. ರಾಷ್ಟ್ರೀಯ ಇಟಾಲಿಯನ್ ಚೀಸ್ ತಿಂಗಳು. ರಾಷ್ಟ್ರೀಯ ಪಪ್ಪಾಯಿ ತಿಂಗಳು. ರಾಷ್ಟ್ರೀಯ ಆಲೂಗಡ್ಡೆ ತಿಂಗಳು. ರಾಷ್ಟ್ರೀಯ ಅಕ್ಕಿ ತಿಂಗಳು. ರಾಷ್ಟ್ರೀಯ ಧಾನ್ಯಗಳ ತಿಂಗಳು. ರಾಷ್ಟ್ರೀಯ ವೈಲ್ಡ್ ರೈಸ್ ತಿಂಗಳು. ಚಲಿಸಬಲ್ಲ ಗ್ರೆಗೋರಿಯನ್ ಎಂಜಿನಿಯರಿಂಗ್ ದಿನ (ಈಜಿಪ್ಟ್) ಬಿಳಿ ಬಲೂನ್ ದಿನ ಪ್ರೋಗ್ರಾಮರ್ ದಿನ ಟೆ ವಿಕಿ ಒ ಟೆ ರಿಯೊ ಮಾವೊರಿ (ಮಾವೊರಿ ಭಾಷಾ ವಾರ) ( ನ್ಯೂಜಿಲೆಂಡ್ ) ಚಲಿಸಬಲ್ಲ ಪಾಶ್ಚಾತ್ಯ ಕ್ರಿಶ್ಚಿಯನ್ ಆಚರಣೆಗಳನ್ನೂ ನೋಡಿ ಚಲಿಸಬಲ್ಲ ಪೂರ್ವ ಕ್ರಿಶ್ಚಿಯನ್ ಆಚರಣೆಗಳನ್ನು ಸಹ ನೋಡಿ. ಮೊದಲ ಬುಧವಾರ ಆಡಳಿತ ವೃತ್ತಿಪರರ ದಿನ ( ದಕ್ಷಿಣ ಆಫ್ರಿಕಾ ) ಮೊದಲ ಗುರುವಾರ ಇಂಜಿನಿಯರ್ಸ್ ಡೇಸ್ ( ಟಾಂಜಾನಿಯಾ ) ಮೊದಲ ಶುಕ್ರವಾರ ಇಂಜಿನಿಯರ್ಸ್ ಡೇಸ್ ( ಟಾಂಜಾನಿಯಾ ) ಕಾರ್ಮಿಕ ದಿನ ( ಮಾರ್ಷಲ್ ದ್ವೀಪಗಳು ) ಶಿಕ್ಷಕರ ದಿನ ( ಸಿಂಗಾಪೂರ್ ) ಮೊದಲ ಭಾನುವಾರ ಬ್ರೆಜಿಲಿಯನ್ ದಿನ ( ಅಂತರರಾಷ್ಟ್ರೀಯ ಆಚರಣೆ ) ತಂದೆಯ ದಿನ ( ಆಸ್ಟ್ರೇಲಿಯಾ, ಫಿಜಿ, ನ್ಯೂಜಿಲೆಂಡ್, ಪಪುವಾ ನ್ಯೂಗಿನಿಯಾ ) ಹೋಲಿ ಗಾರ್ಡಿಯನ್ ಏಂಜೆಲ್ಸ್ ಸ್ಮಾರಕ ( ರೋಮನ್ ಕ್ಯಾಥೋಲಿಕ್ ಚರ್ಚ್, ಹೆಚ್ಚಿನ ಸ್ಥಳಗಳಲ್ಲಿ ಅಕ್ಟೋಬರ್ ೨, ವಿಶೇಷ ವಿತರಣೆಯಿಂದ ಸೆಪ್ಟೆಂಬರ್‌ನಲ್ಲಿ ಮೊದಲ ಭಾನುವಾರ). ಸೆಪ್ಟೆಂಬರ್ ೪ ರ ನಂತರ ಮೊದಲ ಭಾನುವಾರ ವೇಕ್ಸ್ ವೀಕ್ ( ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್ನ ಭಾಗಗಳು) ಅಬಾಟ್ಸ್ ಬ್ರೋಮ್ಲಿ ಹಾರ್ನ್ ಡ್ಯಾನ್ಸ್ ( ಅಬ್ಬಟ್ಸ್ ಬ್ರೋಮ್ಲಿ, ಸ್ಟಾಫರ್ಡ್‌ಶೈರ್, ಇಂಗ್ಲೆಂಡ್ ) ಮೊದಲ ಸೋಮವಾರದ ವಾರ ರಾಷ್ಟ್ರೀಯ ವೇತನದಾರರ ವಾರ ( ಯುನೈಟೆಡ್ ಸ್ಟೇಟ್ಸ್, ಕೆನಡಾ, ಯುನೈಟೆಡ್ ಕಿಂಗ್‌ಡಮ್ ) ಸೆಪ್ಟೆಂಬರ್ ೧೦ ರ ವಾರ ರಾಷ್ಟ್ರೀಯ ಆತ್ಮಹತ್ಯೆ ತಡೆ ವಾರ ( ಯುನೈಟೆಡ್ ಸ್ಟೇಟ್ಸ್ ) ಮೊದಲ ಸೋಮವಾರ ಕಾರ್ಮಿಕ ದಿನ ( ಕೆನಡಾ, ಪಲಾವ್, ಯುನೈಟೆಡ್ ಸ್ಟೇಟ್ಸ್ ) ಸೆಪ್ಟೆಂಬರ್ ೧೨ ರಿಂದ ಹತ್ತಿರದ ವಾರದ ದಿನ ಸರಗರ್ಹಿ ದಿನ ( ಸಿಖ್ ಧರ್ಮ ) ದೇಶಪ್ರೇಮಿ ದಿನ ( ಯುನೈಟೆಡ್ ಸ್ಟೇಟ್ಸ್ ) ಎರಡನೇ ಶನಿವಾರ ತೈಲ, ಅನಿಲ, ವಿದ್ಯುತ್ ಮತ್ತು ಭೂವೈಜ್ಞಾನಿಕ ಉದ್ಯಮದಲ್ಲಿ ಕೆಲಸಗಾರರ ದಿನ ( ತುರ್ಕಮೆನಿಸ್ತಾನ್ ) ಮೊದಲ ಸೋಮವಾರದ ನಂತರ ಶನಿವಾರ ಕಾರ್ಲ್ ಗಾರ್ನರ್ ಫೆಡರಲ್ ಲ್ಯಾಂಡ್ಸ್ ಕ್ಲೀನಪ್ ಡೇ ( ಯುನೈಟೆಡ್ ಸ್ಟೇಟ್ಸ್ ) ಎರಡನೇ ಭಾನುವಾರ ಲೆಕ್ಕ ಪರಿಶೋಧಕರ ದಿನ ( ಚರ್ಚ್ ಆಫ್ ಸೈಂಟಾಲಜಿ ) ತಂದೆಯ ದಿನ ( ಲಾಟ್ವಿಯಾ ) ರಾಷ್ಟ್ರೀಯ ಅಜ್ಜಿಯರ ದಿನ ( ಕೆನಡಾ, ಎಸ್ಟೋನಿಯಾ ) ಟ್ಯಾಂಕರ್ ದಿನ ( ರಷ್ಯಾ ) ತುರ್ಕಮೆನ್ ಬಕ್ಷಿ ದಿನ ( ತುರ್ಕಮೆನಿಸ್ತಾನ್ ) ಮೊದಲ ಸೋಮವಾರದ ನಂತರ ಮೊದಲ ಭಾನುವಾರ ರಾಷ್ಟ್ರೀಯ ಅಜ್ಜಿಯರ ದಿನ ( ಯುನೈಟೆಡ್ ಸ್ಟೇಟ್ಸ್ ) ಸೆಪ್ಟೆಂಬರ್ ೧೭ ರ ವಾರ ಸ್ವಾತಂತ್ರ್ಯ ವಾರವನ್ನು ಆಚರಿಸಿ ( ಕನ್ಸಾಸ್ ಮತ್ತು ಟೆಕ್ಸಾಸ್, ಯುನೈಟೆಡ್ ಸ್ಟೇಟ್ಸ್ ) ಮೂರನೇ ಮಂಗಳವಾರ ಪ್ರಿನ್ಸ್ಜೆಸ್ಡಾಗ್ ( ನೆದರ್ಲ್ಯಾಂಡ್ಸ್ ) ಸೆಪ್ಟೆಂಬರ್ ೧೭ ಆದರೆ ಶನಿವಾರದಂದು ಬಿದ್ದರೆ ಹಿಂದಿನ ಶುಕ್ರವಾರ ಅಥವಾ ಭಾನುವಾರದಂದು ಸೋಮವಾರದ ನಂತರ ಆಚರಿಸಲಾಗುತ್ತದೆ. ಸಂವಿಧಾನ ದಿನ (ಯುನೈಟೆಡ್ ಸ್ಟೇಟ್ಸ್) ಮೂರನೇ ಶುಕ್ರವಾರ ರಾಷ್ಟ್ರೀಯ ಪಿಒಡಬ್ಲ್ಯೂ/ಎಮ್‌ಐಎ ಗುರುತಿಸುವಿಕೆ ದಿನ ( ಯುನೈಟೆಡ್ ಸ್ಟೇಟ್ಸ್ ) ಮೂರನೇ ಶನಿವಾರ ರಾಷ್ಟ್ರೀಯ ಸ್ವಚ್ಛತಾ ದಿನ (ಯುನೈಟೆಡ್ ಸ್ಟೇಟ್ಸ್) ಅಕ್ಟೋಬರ್‌ಫೆಸ್ಟ್ ಆಚರಣೆಗಳು. ಪ್ರಾರಂಭವಾಗುತ್ತವೆ ( ಜರ್ಮನ್ ಡಯಾಸ್ಪೊರಾ, ಸ್ಥಳೀಯ ದಿನಾಂಕಗಳು ಬದಲಾಗಬಹುದು). ಸಾಫ್ಟ್‌ವೇರ್ ಸ್ವಾತಂತ್ರ್ಯ ದಿನ ( ಅಂತರರಾಷ್ಟ್ರೀಯ ಆಚರಣೆ). ಸೆಪ್ಟೆಂಬರ್ ೧೭ ರ ವಾರದ ವಾರಾಂತ್ಯ ವಾನ್ ಸ್ಟೀಬೆನ್ ಡೇ ( ಯುನೈಟೆಡ್ ಸ್ಟೇಟ್ಸ್ ) ಮೂರನೇ ಭಾನುವಾರ ವಾಲೂನ್ ಪ್ರದೇಶದ ದಿನ ( ವಲೋನಿಯಾ, ಬೆಲ್ಜಿಯಂ ) ತಂದೆಯ ದಿನ ( ಉಕ್ರೇನ್ ) ಫೆಡರಲ್ ಡೇ ಆಫ್ ಥ್ಯಾಂಕ್ಸ್ಗಿವಿಂಗ್, ಪಶ್ಚಾತ್ತಾಪ ಮತ್ತು ಪ್ರಾರ್ಥನೆ ( ಸ್ವಿಟ್ಜರ್ಲೆಂಡ್ ) ವಾರಾಚಿಕುಯ್ ( ಕುಸ್ಕೋ, ಪೆರು ) ಸೆಪ್ಟೆಂಬರ್ ೨೩ ರ ಮೊದಲು ಭಾನುವಾರದ ವಾರ ಉಭಯಲಿಂಗಿ ಜಾಗೃತಿ ವಾರ ಸೆಪ್ಟೆಂಬರ್ ೨೨ ರ ವಾರ ಟೋಲ್ಕಿನ್ ವಾರ ಕಳೆದ ವಾರ ನಿಷೇಧಿತ ಪುಸ್ತಕಗಳ ವಾರ ( ಅಂತರರಾಷ್ಟ್ರೀಯ ಆಚರಣೆ ): ಕಳೆದ ಪೂರ್ಣ ವಾರ ರಾಷ್ಟ್ರೀಯ ಅರಣ್ಯ ವಾರ ( ಕೆನಡಾ ) ರಾಷ್ಟ್ರೀಯ ವೃಕ್ಷ ದಿನ (ಕಳೆದ ಪೂರ್ಣ ವಾರದ ಬುಧವಾರ). ಸ್ವಾತಂತ್ರ್ಯ ವಾರವನ್ನು ಆಚರಿಸಿ ( ಅರ್ಕಾನ್ಸಾಸ್ ಮತ್ತು ಫ್ಲೋರಿಡಾ, ಯುನೈಟೆಡ್ ಸ್ಟೇಟ್ಸ್ ). ಸೆಪ್ಟೆಂಬರ್ ವಿಷುವತ್ ಸಂಕ್ರಾಂತಿಗೆ ಸಂಬಂಧಿಸಿದೆ ಶರತ್ಕಾಲದ ವಿಷುವತ್ ಸಂಕ್ರಾಂತಿ ದಿನ ( ಜಪಾನ್ ) ಫ್ರೆಂಚ್ ರಿಪಬ್ಲಿಕನ್ ಹೊಸ ವರ್ಷ. (ನಿಷ್ಕ್ರಿಯ) ಗುಲ್ಡಿಜ್ ( ಕಾರ್ನಿಷ್ ಜನರು ) ಹಿಗನ್ ( ಜಪಾನ್ ) ಮಾಬೊನ್ ( ನಿಯೋಪಾಗನಿಸಂ, ಉತ್ತರ ಗೋಳಾರ್ಧ ) ಮೈಕೆಲಿ ( ಲಾಟ್ವಿಯಾ ) ಒಸ್ಟಾರಾ ( ನಿಯೋಪಾಗನಿಸಂ, ದಕ್ಷಿಣ ಗೋಳಾರ್ಧ ) ನಾಲ್ಕನೇ ಶುಕ್ರವಾರ ಸ್ಥಳೀಯ ಅಮೆರಿಕನ್ ದಿನ ( ಕ್ಯಾಲಿಫೋರ್ನಿಯಾ, ಯುನೈಟೆಡ್ ಸ್ಟೇಟ್ಸ್ ). ಹಿಂದಿನ ಶುಕ್ರವಾರ ಮ್ಯಾನಿಟ್ ಡೇ ( ಮಾರ್ಷಲ್ ದ್ವೀಪಗಳು ) ಕಳೆದ ಶನಿವಾರ ವಿಮಾನಯಾನ ದಿನದಲ್ಲಿ ಹುಡುಗಿಯರು ( ಅಂತರರಾಷ್ಟ್ರೀಯ ಆಚರಣೆ ) ರಾಷ್ಟ್ರೀಯ ಸಾರ್ವಜನಿಕ ಭೂಮಿ ದಿನ ( ಯುನೈಟೆಡ್ ಸ್ಟೇಟ್ಸ್ ) ಕಳೆದ ಭಾನುವಾರ ಡೇಲೈಟ್ ಸೇವಿಂಗ್ ಸಮಯ ಪ್ರಾರಂಭವಾಗುತ್ತದೆ ( ನ್ಯೂಜಿಲೆಂಡ್ ). ಗೋಲ್ಡ್ ಸ್ಟಾರ್ ತಾಯಿಯ ದಿನ ( ಯುನೈಟೆಡ್ ಸ್ಟೇಟ್ಸ್ ) ನಾಲ್ಕನೇ ಸೋಮವಾರ ಅಮೇರಿಕನ್ ಇಂಡಿಯನ್ ಡೇ ( ಟೆನ್ನೆಸ್ಸೀ, ಯುನೈಟೆಡ್ ಸ್ಟೇಟ್ಸ್ ). ಸೆಪ್ಟೆಂಬರ್ ಘೋಷಣೆ ( ಫ್ಲಾಂಡರ್ಸ್, ಬೆಲ್ಜಿಯಂ ) ಕಳೆದ ಬುಧವಾರ ಮ್ಯಾಪಲ್ ಲೀಫ್ ಡೇ ( ಕೆನಡಾ ) ಕಳೆದ ವಾರದ ದಿನ ಸ್ಟುಪಿಡ್ ಪ್ರಶ್ನೆ ದಿನವನ್ನು ಕೇಳಿ ( ಭಾರತ, ಯುನೈಟೆಡ್ ಕಿಂಗ್‌ಡಮ್, ಯುನೈಟೆಡ್ ಸ್ಟೇಟ್ಸ್ ). ಉಲ್ಲೇಖ
1204
https://kn.wikipedia.org/wiki/%E0%B2%A8%E0%B2%B5%E0%B3%86%E0%B2%82%E0%B2%AC%E0%B2%B0%E0%B3%8D%20%E0%B3%A7%E0%B3%AA
ನವೆಂಬರ್ ೧೪
ನವೆಂಬರ್ ೧೪ - ನವೆಂಬರ್ ತಿಂಗಳ ಹದಿನಾಲ್ಕನೆ ದಿನ, ಮತ್ತು ವರ್ಷದ ೩೧೦ನೇ ದಿನ(ಅಧಿಕ ವರ್ಷದಲ್ಲಿ ೩೧೧ನೇ ದಿನ). ಈ ದಿನವನ್ನು ಭಾರತದಲ್ಲಿ ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ಇದು ಜವಾಹರಲಾಲ್ ನೆಹರುರವರು ಹುಟ್ಟಿದ ದಿನ. ಪ್ರಮುಖ ಘಟನೆಗಳು ಜನನ ಭಾರತದ ಮೊದಲ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ನಿಧನ ರಜೆಗಳು/ಆಚರಣೆಗಳು ಭಾರತದಲ್ಲಿ ಮಕ್ಕಳ ದಿನಾಚರಣೆ ವಿಶ್ವ ಮಧುಮೇಹ ದಿನ ಹೊರಗಿನ ಸಂಪರ್ಕಗಳು ಇತಿಹಾಸದಲ್ಲಿ ಈ ದಿನ ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ ದಿನಾಚರಣೆಗಳು ದಿನಗಳು ನವೆಂಬರ್
1206
https://kn.wikipedia.org/wiki/%E0%B2%AE%E0%B3%81%E0%B2%95%E0%B3%8D%E0%B2%A4%20%E0%B2%A4%E0%B2%82%E0%B2%A4%E0%B3%8D%E0%B2%B0%E0%B2%BE%E0%B2%82%E0%B2%B6
ಮುಕ್ತ ತಂತ್ರಾಂಶ
ಮುಕ್ತ ತಂತ್ರಾಂಶ ಅಥವಾ ಮುಕ್ತ ಆಕರ ತಂತ್ರಾಂಶ ಎಂಬುದು ಕಂಪ್ಯೂಟರ್ ತಂತ್ರಾಂಶಗಳು ಲಭ್ಯವಾಗಬಹುದಾದ ಒಂದು ರೀತಿಯ ಪರವಾನಗಿ. ಈ ರೀತಿಯ ಪರವಾನಿಗೆಯ ಅಡಿ ಲಭ್ಯವಾಗಿರುವ ತಂತ್ರಾಂಶಗಳಲ್ಲಿನ ಸಾಮಾನ್ಯ ಗುಣಗಳೆಂದರೆ ತಂತ್ರಾಂಶದ ಮೂಲ ಆಕರವನ್ನು ತಂತ್ರಾಂಶದೊಂದಿಗೆ ಲಭ್ಯಗೊಳಿಸಲಾಗುವುದು ಗ್ರಾಹಕರು ಈ ಮೂಲ ಆಕರವನ್ನು ಮುಕ್ತವಾಗಿ ಬದಲಾಯಿಸುವ ಹಕ್ಕನ್ನು ಪಡೆದಿರುತ್ತಾರೆ (ಕೆಲವೊಮ್ಮೆ ಸಣ್ಣ ನಿರ್ಬಂಧನೆಗಳು ಇರಬಹುದು) ಯಾವುದೇ ಮುಕ್ತ ತಂತ್ರಾಂಶ ಉಚಿತವಾಗಿ ಲಭ್ಯವಾಗಬೇಕೆಂಬ ನಿಯಮವೇನಿಲ್ಲ; ಆದರೂ ಬಹುಪಾಲು ಮುಕ್ತ ತಂತ್ರಾಂಶಗಳು ಉಚಿತವಾಗಿ ಲಭ್ಯವಾಗಿವೆ. ಅನೇಕ ಬಾರಿ ಆಕರ ಲಭ್ಯವಾಗಿರುವ ತಂತ್ರಾಂಶಗಳೆಲ್ಲಕ್ಕೂ ಮುಕ್ತ ತಂತ್ರಾಂಶ ಎಂದು ಕರೆಯಲಾಗುತ್ತದೆ - ನಿಜವಾಗಿ ಈ ತಂತ್ರಾಂಶಗಳು "ಪ್ರಕಟಿತ ಆಕರ ತಂತ್ರಾಂಶಗಳು" (disclosed source software). ಆಕರವನ್ನು ಮುಕ್ತವಾಗಿ ಬದಲಾಯಿಸುವ ಹಕ್ಕನ್ನು ಗ್ರಾಹಕರಿಗೆ ನೀಡಿದಲ್ಲಿ ಮಾತ್ರ ಅದು ಮುಕ್ತ ತಂತ್ರಾಂಶವಾಗುತ್ತದೆ. ಮುಕ್ತ ತಂತ್ರಾಂಶ ಪರವಾನಗಿಗಳಲ್ಲಿ ಅತ್ಯಂತ ಜನಪ್ರಿಯ ಪರವಾನಗಿಗಳಲ್ಲಿ ಒಂದು ಜಿಎನ್‍ಯು ಸಾಮಾನ್ಯ ಸಾರ್ವಜನಿಕ ಪರವಾನಗಿ (GNU General Public License). ಮುಕ್ತ ಆಕರ ತಂತ್ರಾಂಶ - ಚರ್ಚೆ ಇತ್ತೀಚಿನ ವರ್ಷಗಳಲ್ಲಿ ಕಂಪ್ಯೂಟರ್ ಪ್ರೋಗ್ರಾಮರ್ ಮತ್ತು ಗ್ರಾಹಕರು ಅನೇಕರು ಮುಕ್ತ ತಂತ್ರಾಂಶಗಳನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಈ ಪಂಥದ ಮುಖ್ಯ ನಂಬಿಕೆಗಳೆಂದರೆ: ಅನೇಕ ಜನರ ಪ್ರಯತ್ನಗಳಿಂದ ವೃದ್ಧಿಯಾದ ತಂತ್ರಾಂಶದ ಗುಣಮಟ್ಟ ಹೆಚ್ಚಾಗಿರುತ್ತದೆ ತಂತ್ರಾಂಶದ ಸ್ಥಿರತೆ ಮತ್ತು ಸುರಕ್ಷತೆ ಮೊದಲಾದವು ಮುಕ್ತವಾಗಿ ವೃದ್ಧಿಯಾದ ತಂತ್ರಾಂಶದಲ್ಲಿ ಹೆಚ್ಚಾಗಿರುತ್ತದೆ ಇವು ನಿಜವಲ್ಲದ ಸ೦ದರ್ಭದಲ್ಲೂ, ಆಕರವನ್ನು ಬದಲಾಯಿಸಲು ಇರುವ "ಸ್ವಾತಂತ್ರ್ಯ" ತಾತ್ವಿಕವಾಗಿ ಮುಖ್ಯವಾದದ್ದು ಮುಕ್ತ ತಂತ್ರಾಂಶ ತತ್ವದ ವಿರೋಧಿಗಳ ಮುಖ್ಯ ವಾದ ಬೌದ್ಧಿಕ ಆಸ್ತಿ ಹಕ್ಕುಗಳನ್ನು (intellectual property rights) ಕುರಿತದ್ದು. ಅನೇಕ ಸಂಸ್ಥೆಗಳ ತಂತ್ರಾಂಶ ಆ ಸಂಸ್ಥೆಯ ಹೆಸರಿನಲ್ಲಿ ಕೃತಿಸ್ವಾಮ್ಯವನ್ನು ಹೊಂದಿರುತ್ತದೆ. ಈ ತಂತ್ರಾಂಶದ ಕೃತಿಸ್ವಾಮ್ಯದ ಮೂಲಕ ಬರುವ ಆದಾಯವೇ ಅನೇಕ ಸಂಸ್ಥೆಗಳ ಮುಖ್ಯ ಆದಾಯ. ಮೂಲ ಆಕರವನ್ನು ಪ್ರಕಟಗೊಳಿಸಿ ಬದಲಾಯಿಸುವ ಹಕ್ಕು ನೀಡಿದಲ್ಲಿ ಇಂಥ ಸಂಸ್ಥೆಗಳ ಮುಖ್ಯ ಆದಾಯವೇ ಇಲ್ಲವಾದಂತಾಗುತ್ತದೆ ಎಂಬ ವಾದವಿದೆ. ಮುಕ್ತ ತಂತ್ರಾಂಶದ ವಿರುದ್ಧ ಇರುವ ಇನ್ನೊಂದು ವಾದವೆಂದರೆ ಸಂಸ್ಥೆಗಳಲ್ಲಿ ವೃದ್ಧಿಗೊಳಿಸಲ್ಪಟ್ಟ ತಂತ್ರಾಂಶಗಳಲ್ಲಿ ಅಂತಿಮ ಉತ್ಪಾದನೆಯ ಮೇಲೆ ಹೆಚ್ಚಿನ ನಿಯಂತ್ರಣವಿರುತ್ತದೆ. ಇದರ ಹಿಂದಿನ ವಿಚಾರವೆಂದರೆ ಮುಕ್ತ ತಂತ್ರಾಂಶಗಳು ಹೆಚ್ಚಾಗಿ ಸ್ವಯಂಸೇವಾ ಮನೋಭಾವದಿ೦ದ ಕೆಲಸ ಮಾಡುವವರಿ೦ದ ವೃದ್ಧಿಯಾಗಿರುತ್ತವೆಯೇ ಹೊರತು ಅವುಗಳಿಗಾಗಿಯೇ ಕೆಲಸ ಮಾಡುವ ಸಂಬಳದಾರಿ ಕೆಲಸಗಾರರಿಂದಲ್ಲ. ಸಂಸ್ಥೆಗಳಲ್ಲಿ ತಂತ್ರಾಂಶದ ವೃದ್ಧಿಗೆ ಹಣದ ಅವಕಾಶ ಮತ್ತು ಸಮಯ ಹೆಚ್ಚಿರುತ್ತದೆ ಎಂಬುದು ಈ ವಾದದ ಮುಖ್ಯ ಆಲೋಚನೆ. ಮುಕ್ತ ತಂತ್ರಾಂಶಗಳಲ್ಲಿ ಅತಿ ಪ್ರಸಿದ್ಧವಾಗಿರುವುದೆಂದರೆ ಲಿನಕ್ಸ್ ಕಾರ್ಯಾಚರಣ ವ್ಯವಸ್ಥೆ. ಹಾಗೆಯೇ ವಿಕಿಪೀಡಿಯ ಸಹ ಮುಕ್ತ ತಂತ್ರಾಂಶ ಪರವಾನಗಿಯ ಅಡಿಯಲಿಯೇ ಅಸ್ತಿತ್ವದಲ್ಲಿದೆ. ತಂತ್ರಜ್ಞಾನ
1208
https://kn.wikipedia.org/wiki/%E0%B2%B9%E0%B3%8A%E0%B2%AF%E0%B3%8D%E0%B2%B8%E0%B2%B3
ಹೊಯ್ಸಳ
ಹೊಯ್ಸಳ ವಂಶ ಸುಮಾರು ಕ್ರಿ.ಶ. ೧೦೦೦ ದಿಂದ ಕ್ರಿ.ಶ. ೧೩೪೬ ರ ವರೆಗೆ ದಕ್ಷಿಣ ಭಾರತದ ಕೆಲ ಭಾಗಗಳನ್ನು ಆಳಿದ ರಾಜವಂಶ. ಹೊಯ್ಸಳ ಸಾಮ್ರಾಜ್ಯದ ರಾಜಧಾನಿ ದ್ವಾರಸಮುದ್ರ (ಇಂದಿನ ಹಳೇಬೀಡು), ಹಾಸನ ಜಿಲ್ಲೆಯಲ್ಲಿದೆ. ಜಾನಪದ ನಂಬಿಕೆಯಂತೆ, ಹೊಯ್ಸಳ ಎಂಬ ಹೆಸರು ಈ ವಂಶದ ಸಂಸ್ಥಾಪಕ ಸಳನಿಂದ ವ್ಯುತ್ಪತ್ತಿಯಾದದ್ದು. ಚಾರಿತ್ರಿಕವಾಗಿ ಈ ಸಂಸ್ಥಾಪಕನ ಹೆಸರು ನೃಪಕಾಮ ಎಂದು ಊಹಿಸಲಾಗಿದೆ. ಹೊಯ್ಸಳ ಸಾಮ್ರಾಜ್ಯವನ್ನು ವಿಸ್ತರಿಸಿದ ಅರಸರಲ್ಲಿ ಮೊದಲಿಗ ವಿನಯಾದಿತ್ಯ (ಆಡಳಿತ: ೧೦೪೭-೧೦೯೮). ಹೊಯ್ಸಳ ಸಾಮ್ರಾಜ್ಯದ ಅತ್ಯಂತ ಪ್ರಸಿದ್ಧ ಅರಸು ಬಿಟ್ಟಿಗ, ಈತನ ನಂತರದ ಹೆಸರು ವಿಷ್ಣುವರ್ಧನ (ಆಡಳಿತ: ಸು ೧೧೧೦-೧೧೪೨). ವಿಷ್ಣುವರ್ಧನನ ಆಡಳಿತದ ಕಾಲದಲ್ಲಿ ಹೊಯ್ಸಳ ಸಾಮ್ರಾಜ್ಯ ಇಂದಿನ ಕರ್ನಾಟಕ ರಾಜ್ಯದ ಬಲಿಷ್ಠ ಸಾಮ್ರಾಜ್ಯವಾದದ್ದಲ್ಲದೆ ಪಕ್ಕದ ರಾಜ್ಯಗಳಲ್ಲಿಯೂ ವಿಸ್ತರಿಸಿತು. ವಿಷ್ಣುವರ್ಧನನ ಕಾಲದಲ್ಲಿ ಕಲೆ ಮತ್ತು ಶಿಲ್ಪಕಲೆಗೆ ಬಹಳ ಪ್ರೋತ್ಸಾಹ ನೀಡಲಾಯಿತು. ಈತನ ರಾಣಿ ಶಾಂತಲೆ ಪ್ರಸಿದ್ಧ ಭರತನಾಟ್ಯ ನರ್ತಕಿ ಮತ್ತು ಶಿಲ್ಪಕಲೆಯಲ್ಲಿ ಆಸಕ್ತಿಯಿದ್ದವಳೆಂದು ಹೆಸರಾಗಿದ್ದಾಳೆ. ಈ ಕಾಲದಲ್ಲಿಯೇ ಹೊಯ್ಸಳ ಶಿಲ್ಪಕಲೆಯ ಅತ್ಯುನ್ನತ ಉದಾಹರಣೆಗಳು ಮೂಡಿಬಂದವು. ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯವನ್ನು ಕಟ್ಟಲು ೮೬ ವರ್ಷಗಳು ಬೇಕಾದವು! ಹಾಗೆಯೇ ಬೇಲೂರಿನ ಚನ್ನಕೇಶವ ದೇವಸ್ಥಾನ ೧೦೩ ವರ್ಷಗಳ ಪರಿಶ್ರಮದ ಫಲ. ಹೊಯ್ಸಳ ಶಿಲ್ಪಕಲೆ ದ್ರಾವಿಡ ಶೈಲಿ ಮತ್ತು ಆರ್ಯ ಶೈಲಿಗಳೆರಡರ ಗುಣಗಳನ್ನೂ ತನ್ನದಾಗಿಸಿಕೊಂಡಿದೆ. ಹೊಯ್ಸಳ ದೇವಾಲಯಗಳಲ್ಲಿ ಸಹಸ್ರಾರು ಸುಂದರ ಕೆತ್ತನೆಗಳನ್ನು ಕಾಣಬಹುದು. ರಾಮಾಯಣ ಮಹಾಭಾರತಗಳ ದೃಶ್ಯಗಳು, ಸುಂದರ ನರ್ತಿಸುವ ಶಿಲಾಬಾಲಿಕೆಯರಿಂದ ಕೂಡಿದ ಈ ದೇವಾಲಯಗಳು ಹೊಯ್ಸಳ ಸಾಮ್ರಾಜ್ಯ ಬಿಟ್ಟು ಹೋದ ಮುಖ್ಯ ಸಂಪ್ರದಾಯ. ವೀರ ಬಲ್ಲಾಳನ (ಆಡಳಿತ: ೧೧೭೩-೧೨೨೦) ಕಾಲದಲ್ಲಿ ಹೊಯ್ಸಳ ಸಾಮ್ರಾಜ್ಯ ದಕ್ಷಿಣ ಭಾರತದಲ್ಲಿ ಅತ್ಯಂತ ಬಲಿಷ್ಠವಾದುದೆಂದು ಹೆಸರಾಯಿತು. ನಂತರದ ದಶಕಗಳಲ್ಲಿ ಹೊಯ್ಸಳ ಸಾಮ್ರಾಜ್ಯ ವಿಜಯನಗರ ಸಾಮ್ರಾಜ್ಯ ಮತ್ತು ದೆಹಲಿಯ ಸುಲ್ತಾನೇಟ್‍ಗಳೊಂದಿಗೆ ಪೈಪೋಟಿಗೆ ಸಿಲುಕಿತು. ಅಂತಿಮವಾಗಿ ಹೊಯ್ಸಳ ವಂಶದ ಆಡಳಿತ ಕ್ರಿ.ಶ. ೧೩೪೬ ರಲ್ಲಿ ಕೊನೆಗೊಂಡಿತು. ಇತಿಹಾಸ ದಂತಕತೆಯ ಪ್ರಕಾರ ಜೈನ ಗುರು ಸುದತ್ತನು , ಸೊಸೆವೂರಿನ ವಾಸಂತಿಕಾ ದೇವಿಯ ಮಂದಿರದಲ್ಲಿ ಹುಲಿಯು ಬರಲು, ಅದನ್ನು ಹೊಡೆಯಲು ತನ್ನ ಶಿಷ್ಯ ಸಳನಿಗೆ "ಹೊಯ್ ಸಳ" ಎಂದು ಆಙಾಪಿಸಿದನು. ಇದು ಹೊಯ್ಸಳ ಶಬ್ದದ ಮೂಲ ಎನ್ನುತ್ತಾರೆ. ೧೧೧೭ರ ವಿಷ್ಣುವರ್ಧನನ ಶಾಸನದಲ್ಲಿ ಈ ಕಥೆ ಮೊದಲು ಕಾಣಬರುತ್ತದೆ. ಆದರೆ ಇದರ ತಥ್ಯ ಅನುಮಾನಾಸ್ಪದವಾಗಿದ್ದು ಇನ್ನೂ ದಂತಕಥೆಯ ರೂಪದಲ್ಲಿಯೇ ಉಳಿದಿದೆ.ವಿಷ್ಣುವರ್ಧನನು ತಲಕಾಡಿನಲ್ಲಿ ಚೋಳರನ್ನು ಸೋಲಿಸಿದ ಮೇಲೆ ಬಹುಷಃ ಈ ಕಥೆ ಹುಟ್ಟಿರಬಹುದು ಅಥವಾ ಹೆಚ್ಚು ಪ್ರಚಲಿತವಾಗಿರಬಹುದು. ಹೊಯ್ಸಳರ ಲಾಂಛನವು ಸಳನು ಹುಲಿಯನ್ನು ಕೊಲ್ಲುತ್ತಿರುವ ಚಿತ್ರವಾಗಿದ್ದು, ಚೋಳರ ಲಾಂಛನವು ಹುಲಿಯಾಗಿತ್ತು ಎಂಬ ಅಂಶಗಳು ಈ ಊಹೆಗೆ ಕಾರಣ. ೧೦೭೮ ಮತ್ತು ೧೭೯೦ರ ಶಾಸನಗಳು ಹೊಯ್ಸಳರನ್ನು ಯಾದವ ವಂಶದವರು ಎಂದು ಸಂಬೋಧಿಸಿವೆ. ಆದರೆ ಹೊಯ್ಸಳರಿಗೂ ಉತ್ತರದ ಯಾದವರಿಗೂ ಸಂಬಂಧ ಕಲ್ಪಿಸುವ ಯಾವುದೇ ದಾಖಲೆಗಳಿಲ್ಲ. ಅರ್ಥವ್ಯವಸ್ಥೆ ಹೊಯ್ಸಳ ಆಡಳಿತದ ಮುಖ್ಯ ಆದಾಯ ಮೂಲ ಕೃಷಿ ಆಧಾರಿತ ಅರ್ಥವ್ಯವಸ್ಥೆಯಾಗಿತ್ತು. ತಮಗೆ ಸಲ್ಲಿಸಿದ ಸೇವೆಗೆ ಪ್ರತಿಯಾಗಿ ರಾಜರುಗಳು ಜಮೀನುಗಳನ್ನು ಜಹಗೀರು ನೀಡುತ್ತಿದ್ದರು. ಈ ಜಹಗೀರದಾರರು ಆ ಜಮೀನಿನ ಒಕ್ಕಲುಗಳು ಉತ್ಪಾದಿಸಿದ ಕೃಷಿ ಮತ್ತು ವನೋತ್ಪನ್ನಗಳ ಒಡೆತನ ಗಳಿಸಿಕೊಳ್ಳುತ್ತಿದ್ದರು. ಈ ಜಮೀನುದಾರರಲ್ಲಿ ಎರಡು ವಿಧಗಳಿದ್ದವು. ಪ್ರಜಾ ಗವುಂಡರು ಅಂತಸ್ತಿನಲ್ಲಿ , ಧನಾಡ್ಯ ಪ್ರಭು ಗವುಂಡರಿಗಿಂತ ಕೆಳಗಿದ್ದರು. ಮಲೆನಾಡು ಪ್ರದೇಶದಲ್ಲಿ , ಸೂಕ್ತ ಹವಾಮಾನದ ಕಾರಣ, ಪಶುಪಾಲನೆ, ತೋಟಗಾರಿಕೆ ಮತ್ತು ಸಾಂಬಾರ ಪದಾರ್ಥಗಳ ಕೃಷಿ ನಡೆಯುತ್ತಿತ್ತು. ಬಯಲುನಾಡಿನಲ್ಲಿ ಭತ್ತ ಮತ್ತು ಜೋಳವನ್ನು ಬೆಳೆಯಲಾಗುತ್ತಿತ್ತು. ಸ್ಥಳೀಯರ ಖರ್ಚಿನಲ್ಲಿ ಕಟ್ಟಿ , ದುರಸ್ತಿ ಮಾಡಲಾಗುತ್ತಿದ್ದ ಕೆರೆ ಕಟ್ಟೆಗಳು, ಕಾಲುವೆಗಳು , ಬಾವಿಗಳು ಇವುಗಳ ಮೇಲೆ ಹೊಯ್ಸಳ ರಾಜರು ಸುಂಕ ವಿಧಿಸಿದ್ದರು. ದೊಡ್ಡ ನೀರಾವರಿಗೆ ವಿಷ್ಣುಸಾಗರ,ಶಾಂತಿಸಾಗರ, ಬಲ್ಲಾಳರಾಯಸಾಗರ ಇತ್ಯಾದಿ ಕೆರೆಗಳನ್ನು ರಾಜ್ಯದ ಖರ್ಚಿನಲ್ಲಿ ಕಟ್ಟಿಸಲಾಗಿತ್ತು. ಪಶ್ಚಿಮ ಕರಾವಳಿಯಲ್ಲಿ , ಜನಸಾಮಾನ್ಯರ ಪ್ರಯಾಣಕ್ಕೆ ಮತ್ತು ಅಶ್ವಸೇನೆಗಳಿಗೆ , ಕುದುರೆಗಳನ್ನು ಆಮದು ಮಾಡಿ ಸರಬರಾಜು ಮಾಡುವುದು ದೊಡ್ಡ ವ್ಯಾಪಾರೋದ್ಯಮವಾಗಿತ್ತು. ಕಾಡುಗಳಲ್ಲಿನ ಬೆಲೆಬಾಳುವ ತೇಗವೇ ಮೊದಲಾದ ಮರಗಳ ನಾಟಾ ತಯಾರಿಸಿ , ಇಂದಿನ ಕೇರಳದಲ್ಲಿದ್ದ ಬಂದರುಗಳ ಮೂಲಕ ರಫ್ತು ಮಾಡಲಾಗುತ್ತಿತ್ತು. ಚೀನಾದಲ್ಲಿ ದೊರೆತ ಶುಂಗ ಸಾಮ್ರಾಜ್ಯದ ದಾಖಲೆಗಳ ಪ್ರಕಾರ, ಉತ್ತರ ಚೀನಾದಲ್ಲಿ ಭಾರತದ ವ್ಯಾಪಾರಿಗಳು ಕಾಣಸಿಗುತ್ತಿದ್ದು , ಇದು ಸಮುದ್ರದಾಚೆಯ ಪ್ರದೇಶಗಳೊಂದಿಗೆ ಸಕ್ರಿಯ ವ್ಯಾಪಾರ ಸಂಪರ್ಕವಿದ್ದುದನ್ನು ಸೂಚಿಸುತ್ತದೆ. ದಕ್ಷಿಣ ಭಾರತದಿಂದ ಜವಳಿ, ಸಾಂಬಾರ ಪದಾರ್ಥಗಳು, ಔಷದೀಯ ಸಸ್ಯಗಳು, ರತ್ನಗಳು, ಮಣ್ಣಿನ ಸಾಮಗ್ರಿಗಳು, ಉಪ್ಪು, ಆಭರಣಗಳು, ಬಂಗಾರ, ದಂತ, ಖಡ್ಗಮೃಗದ ಕೊಂಬು, ಸುವಾಸನಾ ದ್ರವ್ಯಗಳು, ಶ್ರೀಗಂಧ, ಕರ್ಪೂರ ಮೊದಲಾದ ವಸ್ತುಗಳು ಚೀನಾ, ಧೋಫರ್, ಏಡನ್ ಮತ್ತು ಸಿರಾಫ್ ( ಈಜಿಪ್ಟ್, ಅರೇಬಿಯಾ ಮತ್ತು ಪರ್ಶಿಯಾ ದೇಶಗಳಿಗೆ ಹೋಗಲು ಪ್ರವೇಶಬಂದರು)ಗಳಿಗೆ ರಫ್ತಾಗುತ್ತಿತ್ತು. ವಾಸ್ತುತಜ್ಞರು (ವಿಶ್ವಕರ್ಮರು), ಶಿಲ್ಪಿಗಳು, ಕಲ್ಲು ಕಡೆಯುವವರು, ಚಿನಿವಾರರು ಇತ್ಯಾದಿ ದೇವಾಳಯಕ್ಕೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಂಬಂಧಿಸಿದ ಕುಶಲಕರ್ಮಿಗಳು, ಬಿರುಸಿನಿಂದ ನಡೆಯುತ್ತಿದ್ದ ದೇವಾಲಯ ನಿರ್ಮಾಣದ ಕಾರ್ಯದಿಂದ , ಸಾಕ್ಡು ಸ್ಥಿತಿವಂತರಾಗಿದ್ದರು. ನೆಲಗಂದಾಯವನ್ನು ಒಟ್ಟುಮಾಡುವ ಜವಾಬ್ದಾರಿ ಗ್ರಾಮ ಪಂಚಾಯತಿಗಳದ್ದಾಗಿತ್ತು. ಸಿದ್ಧಾಯ ಎಂದು ಕರೆಯಲಾಗುತ್ತಿದ್ದ ನೆಲಗಂದಾಯದಲ್ಲಿ ಕುಲ ಎಂಬ ಮೂಲತಃ ಬೆಲೆಕಟ್ಟಿದ್ದಲ್ಲದೇ, ವಿವಧ ಮೇಲುಗಂದಾಯವೂ ಅಡಕವಾಗಿತ್ತು. ವಿವಿಧ ವ್ಯವಸಾಯಗಳು, ವಿವಾಹಗಳು, ಗಾಡಿ ಅಥವಾ ರಥಗಳ ಮೇಲೆ ಒಯ್ಯಲಾಗುತ್ತಿದ್ದ ಸರಕುಗಳು, ಸಾಕುಪ್ರಾಣಿಗಳು ಇವೆಲ್ಲದರ ಮೇಲೂ ಸುಂಕ ಹೇರಲಾಗಿತ್ತು. ಬಂಗಾರ, ರತ್ನಗಳು, ಸುವಾಸನಾ ದ್ರವ್ಯಗಳು, ಶ್ರೀಗಂಧ, ಹಗ್ಗಗಳು, ನಾರು, ಮನೆ, ಕುಲುಮೆ, ಅಂಗಡಿ, ಪಶುಮಂದೆಗಳು, ಕಬ್ಬಿನ ಗಾಣಗಳು ಇಂಥಾ ಪದಾರ್ಥಗಳಲ್ಲದೆ ಕರಿಮೆಣಸು, ವೀಳ್ಯದೆಲೆ, ತುಪ್ಪ, ಭತ್ತ,ಸಾಂಬಾರ ದಿನಸಿಗಳು, ತಾಳೆಗರಿ, ತೆಂಗಿನಕಾಯಿ, ಸಕ್ಕರೆ ಇತ್ಯಾದಿ ಕೃಷ್ಯುತ್ಪನ್ನಗಳ ಮೇಲೂ ಸುಂಕ ವಸೂಲಿ ಮಾಡಿದ ಹಳ್ಳಿ ದಾಖಲೆಗಳು ದೊರೆಯುತ್ತವೆ. ಕೆರಗಳ ನಿರ್ಮಾಣ ಮೊದಲಾದ ನಿರ್ದಿಷ್ಟ ಕೆಲಸಗಳಿಗಾಗಿ ಗ್ರಾಮ ಪಂಚಾಯತಿಗೆ ಸುಂಕ ವಿಧಿಸುವ ಹಕ್ಕಿತ್ತು. ಸಂಸ್ಕೃತಿ ಧರ್ಮ ಇವನ್ನೂ ನೋಡಿ : ರಾಮಾನುಜಾಚಾರ್ಯ, ಬಸವಣ್ಣ, ಮಧ್ವಾಚಾರ್ಯ ೧೧ನೆಯ ಶತಮಾನದ ಮೊದಲಭಾಗದಲ್ಲಿ ಚೋಳರಿಂದ ಜೈನಧರ್ಮೀಯರಾಗಿದ್ದ ಪಶ್ಚಿಮ ಗಂಗರ ಪರಾಭವ ಹಾಗೂ ೧೨ನೆಯ ಶತಮಾನದಲ್ಲಿ ವೀರಶೈವ ಮತ್ತು ವೈಷ್ಣವ ಮತಗಳಲ್ಲಿ ಅನುಯಾಯಿಗಳ ಏರುತ್ತಿದ್ದ ಸಂಖ್ಯೆ , ಇವುಗಳಿಂದಾಗಿ ಜೈನಧರ್ಮದಲ್ಲಿ ಆಸಕ್ತಿ ಇಳಿಮುಖವಾಯಿತು. ಕಂಬದಹಳ್ಳಿ ಮತ್ತು ಶ್ರವಣಬೆಳಗೊಳ ಹೊಯ್ಸಳ ರಾಜ್ಯದ ಎರಡು ಉಲ್ಲೇಖನಾರ್ಹ ಜೈನ ಧರ್ಮಕೇಂದ್ರಗಳು. 8ನೆಯ ಶತಮಾನದಲ್ಲಿ ಆದಿ ಶಂಕರರ ಅದ್ವೈತ ಮತ ಪ್ರಸಾರದೊಂದಿಗೆ ದಕ್ಷಿಣ ಭಾರತದಲ್ಲಿ ಬೌದ್ಧಧರ್ಮದ ಅವನತಿ ಪ್ರಾರಂಭವಾಯಿತು. ಹೊಯ್ಸಳರ ಕಾಲದಲ್ಲಿ ಬಳ್ಳಿಗಾವಿ ಮತ್ತು ಡಂಬಳ ಇವೆರಡೇ ಬೌದ್ಧರ ಧಾರ್ಮಿಕ ಸ್ಥಳಗಳಾಗಿದ್ದವು. ವಿಷ್ಣುವರ್ಧನನ ರಾಣಿ ಶಾಂತಲಾದೇವಿ ,ಸ್ವತಃ ಜೈನಧರ್ಮೀಯಳಾಗಿದ್ದರೂ , ವಿಷ್ಣುವಿನ ಕಪ್ಪೆ ಚೆನ್ನಿಗರಾಯನ ದೇವಾಲಯವನ್ನು ಕಟ್ಟಿಸಿದ್ದು , ರಾಜಮನೆತನದ ಪರಮತ ಸಹಿಷ್ಣುತೆಗೆ ಉದಾಹರಣೆಯಾಗಿದೆ. ಬಸವಣ್ಣ, ಮಧ್ವಾಚಾರ್ಯ ಮತ್ತು ರಾಮಾನುಜಾಚಾರ್ಯರಿಂದ ಪ್ರೇರಿತರಾದ ಮೂರು ಮುಖ್ಯ ಧಾರ್ಮಿಕ ಬೆಳವಣಿಗೆಗಳು ಹೊಯ್ಸಳರ ಆಡಳಿತದ ಕಾಲದಲ್ಲಿ ಘಟಿಸಿದವು. ವೀರಶೈವ ಮತದ ಉಗಮ ಚರ್ಚಾಸ್ಪದವಾಗಿದ್ದರೂ, ೧೨ನೆಯ ಶತಮಾನದಲ್ಲಿ ಬಸವಣ್ಣನವರ ಆಗಮನದೊಂದಿಗೆ ಇದು ಪ್ರವರ್ಧಮಾನಕ್ಕೆ ಬಂದಿತು. ಬಸವಣ್ಣಮತ್ತು ಇತರ ವೀರಶೈವ ಶರಣರು ಜಾತಿರಹಿತ ಸಮಾಜವನ್ನು ಪ್ರತಿಪಾದಿಸಿದರು. "ಕಾಯಕವೇ ಕೈಲಾಸ" ಎಂದು ಬೋಧಿಸಿದ ಬಸವಣ್ಣನವರು ಸರಳರೀತಿಯಲ್ಲಿ ವಚನಗಳನ್ನು ಜನಸಾಮಾನ್ಯರಿಗಾಗಿ ಬರೆದರು. ಆದಿ ಶಂಕರರ ಬೋಧನೆಗಳನ್ನು ಒಪ್ಪದ ಮಧ್ವಾಚಾರ್ಯರು ಜೀವಾತ್ಮ ಮತ್ತು ಪರಮಾತ್ಮ ಬೇರೆ ಬೇರೆ ಎಂದು ಪ್ರತಿಪಾದಿಸಿದರು (ದ್ವೈತ ಸಿದ್ಧಾಂತ). ಈ ಸಿದ್ಧಾಂತವು ಜನಪ್ರಿಯವಾಗಿ, ಮುಂದೆ ಮಧ್ವಾಚಾರ್ಯರು ಉಡುಪಿಯಲ್ಲಿ ಎಂಟು ಮಠಗಳನ್ನು ಸ್ಥಾಪಿಸಿದರು. ಶೀರಂಗದ ವೈಷ್ಣವ ಮಠದ ಗುರುಗಳಾಗಿದ್ದ ರಾಮಾನುಜಾಚಾರ್ಯರು ಭಕ್ತಿ ಮಾರ್ಗವನ್ನು ಬೋಧಿಸಿ, ಆದಿ ಶಂಕರರ ಅದ್ವೈತ ಸಿದ್ಧಾಂತದ ಮೇಲೆ ಶ್ರೀಭಾಷ್ಯ ಎಂಬ ಭಾಷ್ಯವನ್ನು ಬರೆದರು. ಈ ಧಾರ್ಮಿಕ ಸಿದ್ಧಾಂತಗಳು ಆ ಕಾಲದ ದಕ್ಷಿಣ ಭಾರತದ ಸಂಸ್ಕೃತಿ, ಸಾಹಿತ್ಯ, ಕಾವ್ಯ ಮತ್ತು ಶಿಲ್ಪಕಲೆಗಳ ಮೇಲೆ ಅಪಾರ ಪ್ರಭಾವ ಬೀರಿದವು. ಈ ತತ್ವಜ್ಞಾನಿಗಳ ಬೋಧನೆಯನ್ನು ಆಧರಿಸಿ ಮುಂದಿನ ಶತಮಾನಗಳಲ್ಲಿ ಮಹತ್ವದ ಸಾಹಿತ್ಯ ಮತ್ತು ಕಾವ್ಯ ಕೃತಿಗಳನ್ನು ರಚಿಸಲಾಯಿತು. ವಿಜಯನಗರದ ಸಾಳ್ವ, ತುಳುವ ಮತ್ತು ಅರವೀಡು ರಾಜಮನೆತನಗಳು ವೈಷ್ಣವರಾಗಿದ್ದವು. ವಿಜಯನಗರದ ವಿಠ್ಠಲಪುರ ಪ್ರದೇಶದ ವೈಷ್ಣವ ದೇವಾಲಯವೊಂದರಲ್ಲಿ ರಾಮಾನುಜಾಚಾರ್ಯರ ವಿಗ್ರಹವಿದೆ.ಮುಂದೆ ಮೈಸೂರು ಸಂಸ್ಥಾನದಲ್ಲಿದ್ದ ವಿದ್ವಾಂಸರುಗಳು ರಾಮಾನುಜಾಚಾರ್ಯರ ಸಿದ್ಧಾಂತಗಳನ್ನು ಎತ್ತಿ ಹಿಡಿಯುವ ಗ್ರಂಥಗಳನ್ನು ಬರೆದರು. ಜೈನಧರ್ಮದಿಂದ ಮತಾಂತರ ಹೊಂದಿ ವೈಷ್ಣವನಾದ ಮೇಲೆ ಹೊಯ್ಸಳ ರಾಜ ವಿಷ್ಣುವರ್ಧನನು ಅನೇಕ ವೈಷ್ಣವ ದೇವಾಲಯಗಳನ್ನು ಕಟ್ಟಿಸಿದನು. ಮಧ್ವಾಚಾರ್ಯರ ಪರಂಪರೆಯಲ್ಲಿ ಅವರ ನಂತರ ಬಂದ ಜಯತೀರ್ಥ, ವ್ಯಾಸತೀರ್ಥ, ಶ್ರೀಪಾದರಾಯ, ವಾದಿರಾಜತೀರ್ಥ ಮತ್ತು ದಾಸ ಪರಂಪರೆಯ ವಿಜಯದಾಸ, ಗೋಪಾಲದಾಸ ಮತ್ತಿತರರು ಮಧ್ವಾಚಾರ್ಯರ ಬೋಧನೆಗಳನ್ನು ದೂರದೂರಕ್ಕೆ ಪ್ರಸಾರ ಮಾಡಿದರು. ನಂತರದ ತತ್ವಜ್ಞಾನಿಗಳಾದ ಗುಜರಾತಿನ ವಲ್ಲಭಾಚಾರ್ಯ ಮತ್ತು ಬಂಗಾಳದ ಚೈತನ್ಯ ಇವರೂ ಕೂಡ ಮಧ್ವಾಚಾರ್ಯರ ತತ್ವಗಳಿಂದ ಪ್ರಭಾವಿತರಾಗಿದ್ದರು. ಮಧ್ವಾಚಾರ್ಯರ ಬೋಧನೆಗಳಿಂದ ಪ್ರಭಾವಿತವಾದ ಮತ್ತೊಂದು ಭಕ್ತಿ ಮಾರ್ಗದ ಅಲೆ ೧೭-೧೮ನೆಯ ಶತಮಾನದಲ್ಲಿ ಬಂದಿತು. ಸಮಾಜ ಆ ಕಾಲದಲ್ಲಿ ಕುಡಿಯೊಡೆಯುತ್ತಿದ್ದ ಧಾರ್ಮಿಕ , ರಾಜಕೀಯ ಮತ್ತು ಸಾಂಸ್ಕೃತಿಕ ಬದಲಾವಣೆಗಳನ್ನು ಹೊಯ್ಸಳ ಸಮಾಜ ಪ್ರತಿಬಿಂಬಿಸುತ್ತಿತ್ತು. ಈ ಕಾಲದಲ್ಲಿ ಸಮಾಜ ಹೆಚ್ಚು ಹೆಚ್ಚು ಸುಸಂಸ್ಕೃತವಾಗುತ್ತಾ ಹೋಯಿತು.ಸ್ತ್ರೀಯರ ಸ್ಥಾನಮಾನದಲ್ಲಿ ವ್ಯತ್ಯಾಸಗಳಿತ್ತು. ರಾಜಮನೆತನದ ಕೆಲವು ಸ್ತ್ರೀಯರು ರಾಜ್ಯಾಡಳಿತದಲ್ಲಿ ಪಾಲುಗೊಳ್ಳುತ್ತಿದ್ದರು. ಎರಡನೆಯ ವೀರಬಲ್ಲಾಳನ ದೀರ್ಘ ಕಾಲ ನಡೆದ ಉತ್ತರದ ಪ್ರದೇಶಗಳ ಮೇಲಿನ ಧಾಳಿಯ ಕಾಲದಲ್ಲಿ , ಅವನ ರಾಣಿ ಉಮಾದೇವಿಯು ಹಳೇಬೀಡಿನ ಆಡಳಿತವ್ಯವಸ್ಥೆಯನ್ನು ನೋಡಿಕೊಂಡಿದ್ದರ ಬಗ್ಯೆ ತತ್ಕಾಲೀನ ದಾಖಲೆಗಳು ಸಿಕ್ಕಿವೆ. ಆಕೆ ಕೆಲವು ವಿರೋಧೀ ಸಾಮಂತರರೊಡನೆ ಹೋರಾಡಿ ಅವರನ್ನು ಮಟ್ಟಹಾಕಿದ್ದೂ ಇದೆ.ಲಲಿತಕಲೆಗಳಲ್ಲಿ ಸ್ತ್ರೀಯರ ಭಾಗವವಹಿಸುವಿಕೆಯ ಬಗ್ಯೆ ದಾಖಲೆಗಳಿವೆ. ಸ್ವತಃ ರಾಣಿ ಶಾಂತಲಾದೇವಿಯು ನೃತ್ಯ ಮತ್ತು ಸಂಗೀತದಲ್ಲಿ ಬಲ್ಲಿದಳಾಗಿದ್ದಳು. 12ನೆಯ ಶತಮಾನದ ಅಕ್ಕಮಹಾದೇವಿಯ ವಚನಗಳು ಒಂದಿಗೂ ಮನೆಮಾತಾಗಿವೆ. ದೇವಾಲಯ ನರ್ತಕಿಯರು (ದೇವದಾಸಿಗಳು) ಸಾಮಾನ್ಯವಾಗಿದ್ದು, ಅವರಲ್ಲನೇಕರು ಸುಶಿಕ್ಷಿತರೂ ಕಲಾಪಾರಂಗತರೂ ಆಗಿದ್ದರು. ಈ ಕಾರಣದಿಂದಲೇ ಅವರಿಗೆ, ದೈನಂದಿನ ಗೃಹಕೃತ್ಯಕ್ಕೆ ಸೀಮಿತವಾದ ಪಾತ್ರದ ಇತರೆ ಹಳ್ಳಿ ಮತ್ತು ಪಟ್ಟಣಗಳ ಹೆಣ್ಣುಮಕ್ಕಳಿಗಿಂತ , ಹೆಚ್ಚು ಸ್ವಾತಂತ್ರ್ಯವಿತ್ತು. ಸತಿ ಪದ್ಧತಿ ಜಾರಿಯಲ್ಲಿತ್ತು. ವೇಶ್ಯಾವೃತ್ತಿ ಗೆ ಸಮಾಜದ ಅನುಮತಿಯಿತ್ತು. ಭಾರತದ ಇತರೆಡೆಗಳಲ್ಲಿಯಂತೆ, ಇಲ್ಲಿಯೂ ಜಾತಿಪದ್ಧತಿ ಪ್ರಮುಖವಾಗಿ ಕಾಣಬರುತ್ತಿತ್ತು. ಪಶ್ಚಿಮ ಕಡಲ ತೀರದ ಮೂಲಕ ನಡೆಯುತ್ತಿದ್ದ ವ್ಯಾಪಾರೋದ್ಯಮದ ಕಾರಣ ಅರಬರು, ಯಹೂದಿಗಳು, ಪರ್ಷಿಯನ್ನರು, ಚೀನಾದವರು ಮತ್ತು ಮಲಯಾ ದ್ವೀಪಗಳಿಂದ ಪರದೇಶಿಗರು ಭಾರತಕ್ಕೆ ಬಂದರು. ಹೊಯ್ಸಳ ರಾಜ್ಯ ವಿಸ್ತರಿಸಿದಂತೆ, ದಕ್ಷಿಣ ಭಾರತದ ಇತರೆಡೆಗಳಿಂದ ವಲಸೆ ಬಂದ ಜನಸಮುದಾಯದಿಂದ ಹೊಸ ಕುಶಲಕಲೆಗಳೂ, ಸಂಸ್ಕೃತಿಯೂ ತಲೆಎತ್ತಿದವು. ದೊಡ್ಡ ಊರುಗಳಿಗೆ ಪಟ್ಟಣ ಎಂದೂ, ಊರಿನ ಕೇಂದ್ರಸ್ಥಾನವಾಗಿದ್ದ ಮಾರುಕಟ್ಟೆಗೆ ನಗರ ಅಥವಾ ನಗರಮ್ ಎಂದು ಕರೆಯಲಾಗುತ್ತಿತ್ತು. ಶ್ರವಣಬೆಳಗೊಳದಂಥಾ ಕೆಲವು ಪಟ್ಟಣಗಳು ಏಳನೆಯ ಶತಮಾನದಲ್ಲಿ ಧಾರ್ಮಿಕ ಕೇಂದ್ರವಾಗಿ ಪ್ರಸಿದ್ಧವಾದರೂ, ಹೊರಗಿನಿಂದ ಬಂದ ಶ್ರೀಮಂತ ವ್ಯಾಪಾರಿಗಳ ದೆಸೆಯಿಂದ , 12ನೆಯ ಶತಮಾನದ ವೇಳೆಗೆ , ಪ್ರಮುಖ ವ್ಯಾಪಾರ ಕೇಂದ್ರವಾಗಿಯೂ ಬೆಳೆದವು. ವಿಷ್ಣುವರ್ಧನ ಚನ್ನಕೇಶವ ದೇವಾಲಯವನ್ನು ಕಟ್ಟಿಸಿದಾಗಿನಿಂದ , ಬೇಲೂರು ರಾಜವರ್ಚಸ್ಸನ್ನು ಗಳಿಸಿಕೊಂಡಿತು. ಬೃಹತ್ ದೇವಾಲಯಗಳ ನಿರ್ಮಾಣ ಮತ್ತು ನಿರ್ವಹಣೆಗೆ ರಾಜಾಶ್ರಯ ಇವು ಧಾರ್ಮಿಕ , ಸಾಮಾಜಿಕ ಮತ್ತು ನ್ಯಾಯಿಕ ಮಹತ್ವವನ್ನೂ ಹೊಂದಿದ್ದು , "ರಾಜಾ ಪ್ರತ್ಯಕ್ಷ ದೇವತಾ" ಎಂಬ ನಾಣ್ಣುಡಿಯನ್ನು ಜನ ನಂಬುವಂತಾಯಿತು. ದೇವಾಲಯ ನಿರ್ಮಾಣ ಬರಿ ಧಾರ್ಮಿಕವಷ್ಟೇ ಅಲ್ಲದೆ, ವಾಣಿಜ್ಯ ಚಟುವಟುಕೆಯೂ ಆಗಿದ್ದು , ಇದು ಸಮಾಜದ ಯಾವುದೇ ವಿಶಿಷ್ಟವಾದ ಬಣಕ್ಕೆ ಸೀಮಿತವಾಗಿರಲಿಲ್ಲ. ಬೇಲೂರಿನ ವೈಷ್ಣವ ಪಂಥದ ಚೆನ್ನಕೇಶವ ದೇವಾಲಯಕ್ಕೆ ಪ್ರತಿಯಾಗಿ ಹಳೇಬೀಡಿನ ಶೈವ ವ್ಯಾಪಾರಿಗಳು ಹೊಯ್ಸಳೇಶ್ವರ ದೇವಾಲಯ ನಿರ್ಮಾಣಕ್ಕೆ ಧನಸಹಾಯ ಮಾಡಿ , ಹಳೇಬೀಡಿನ ಅಂತಸ್ಥನ್ನು ಏರಿಸುವುದಕ್ಕೆ ಕಾರಣರಾದರು. ಆದರೆ ಹೊಯ್ಸಳ ದೇವಾಲಯಗಳು ಜಾತ್ಯಾತೀತವಾಗಿದ್ದು ಎಲ್ಲಾ ಹಿಂದೂ ಉಪಶಾಖೆಗಳ ಅನುಯಾಯಿಗಳಿಗೂ ಇವುಗಳಲ್ಲಿ ಪ್ರೋತ್ಸಾಹವಿತ್ತು. ಕೇವಲ ವೈಷ್ಣವ ಪಂಥಕ್ಕೆ ಸಂಬಂಧಿಸಿದ ಶಿಲ್ಪಕಲೆಯಿರುವ ಸೋಮನಾಥಪುರ ದೇವಾಲಯ ಮಾತ್ರ ಇದಕ್ಕೆ ಅಪವಾದ. ಧನಾಡ್ಯ ಜಮೀನುದಾರರುಗಳು ಕಟ್ಟಿಸಿದ ದೇವಾಲಯಗಳು ಅಂದಿನ ಕೃಷಿ ಪ್ರಧಾನ ಸಮಾಜದ ಆರ್ಥಿಕ, ರಾಜಕೀಯ, ಸಾಂಸ್ಕೃತಿಕ ಮತ್ತು ಧಾರ್ಮಿಕ ಅಗತ್ಯಗಳನ್ನು ಪೂರೈಸುತ್ತಿತ್ತು. ಪ್ರೋತ್ಸಾಹದ ಹೊರತಾಗಿಯೂ, ಬೃಹತ್ ದೇವಾಲಯಗಳು ವಿವಿಧ ರೀತಿಯ ಕಸಬಿನ ನೂರಾರು ಜನರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಟ್ಟಿದ್ದವು. ಈ ಮೂಲಕ ಹಿಂದಿನ ಶ್ರೀಮಂತ ಬೌದ್ಧ ವಿಹಾರಗಳಂತೆ , ಈ ದೇವಾಲಯಗಳು ಸ್ಥಳೀಯ ಸಮಾಜದ ಆಧಾರ ಸ್ಥಂಭಗಳಾಗಿದ್ದವು. ಸಾಹಿತ್ಯ ಹೊಯ್ಸಳ ಆಡಳಿತದ ಕಾಲದಲ್ಲಿ ಸಂಸ್ಕೃತ ಸಾಹಿತ್ಯ ಜನಪ್ರಿಯವಾಗಿದ್ದರೂ, ಕನ್ನಡ ವಿದ್ವಾಂಸರಿಗೆ ರಾಜಾಶ್ರಯ ಹೆಚ್ಚಾಯಿತು. ೧೨ನೆಯ ಶಶತಮಾನದಲ್ಲಿ ಕೆಲ ಸಾಹಿತ್ಯ ಕೃತಿಗಳು ಚಂಪೂ ಶೈಲಿಯಲ್ಲಿ ಬರೆಯಲ್ಪಟ್ಟರೂ , ಇತರ ವಿಶಿಷ್ಟ ಶೈಲಿಗಳೂ ಜನಪ್ರಿಯವಾಗಿದ್ದವು. ಸಾಂಗತ್ಯ, ಷಟ್ಪದಿ, ತ್ರಿಪದಿ ಮತ್ತು ರಗಳೆ ಶೈಲಿಗಳು ಆಧುನಿಕವೆನಿಸಿದ್ದವು. ತೀರ್ಥಂಕರರ (ಜೈನ ಮುನಿಗಳು)ಮಹಿಮೆಯನ್ನು ಎತ್ತಿಹಿಡಿಯುವುದನ್ನು ಜೈನ ಕೃತಿಗಳು ಮುಂದುವರಿಸಿದವು. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಇಂದಿಗೂ ಹಸಿರಾಗಿರುವ ಜನ್ನ,ರುದ್ರಭಟ್ಟ,ನಾಗಚಂದ್ರ,ಹರಿಹರ ಮತ್ತು ,ಅವನ ಸೋದರಸಂಬಂಧಿ, ರಾಘವಾಂಕ ಇವರೆಲ್ಲರಿಗೂ ಹೊಯ್ಸಳ ರಾಜಾಸ್ಥಾನವು ಆಶ್ರಯವಿತ್ತು ಪ್ರೋತ್ಸಾಹಿಸಿತು. ೧೨೦೯ರಲ್ಲಿ ಜೈನ ಕವಿ ಜನ್ನನು ಯಶೋಧರಚರಿತೆ ಎಂಬ ಪ್ರಸಿದ್ಧ ಕೃತಿಯನ್ನು ರಚಿಸಿದನು. ಊರ ದೇವರು ಮಾರಿಗೆ ಇಬ್ಬರು ಬಾಲಕರನ್ನು ಬಲಿಕೊಡಲು ಹೊರಟ ರಾಜನೊಬ್ಬನ ಕಥೆಯಿದು. ಆ ಬಾಲಕರ ಮೇಲೆ ಕನಿಕರ ಬಂದು , ರಾಜನು ಅವರಿಬ್ಬರನ್ನೂ ಬಿಡುಗಡೆ ಮಾಡಿ , ನರಬಲಿಯ ಪದ್ಧತಿಗೆ ವಿದಾಯ ಹೇಳುತ್ತಾನೆ. ಈ ಕೃತಿಗಾಗಿ ಹೊಯ್ಸಳ ರಾಜ ವೀರಬಲ್ಲಾಳನಿಂದ ಜನ್ನನಿಗೆ ಕವಿಚಕ್ರವರ್ತಿ ಎಂಬ ಬಿರುದು ಪ್ರಾಪ್ತವಾಯಿತು. ಎರಡನೆಯ ವೀರಬಲ್ಲಾಳನ ಆಸ್ಥಾನದಲ್ಲಿಯ ಮಂತ್ರಿ ಚಂದ್ರಮೌಳಿಯ ಆಶ್ರಯದಲ್ಲಿದ್ದ ಸ್ಮಾರ್ಥ ಬ್ರಾಹ್ಮಣ ರುದ್ರಭಟ್ಟನು ಹೆಸರಾಂತ ಬ್ರಾಹ್ಮಣ ಕವಿಗಳಲ್ಲಿ ಮೊದಲನೆಯವನು. ಆತನ ಪ್ರಸಿದ್ಧ ಚಂಪೂ ಶೈಲಿಯ ಜಗನ್ನಾಥ ವಿಜಯ ಕೃತಿಯು ವಿಷ್ಣು ಪುರಾಣ ಆಧಾರಿತವಾಗಿದ್ದು ಇದರ ಕಥಾವಸ್ತು ಶ್ರೀಕ್ರಷ್ಣನಿಂದ ಬಾಣಾಸುರನ ಸಂಹಾರ. ಒಂದನೆಯ ನರಸಿಂಹನ ಆಸ್ಥಾನದಲ್ಲಿದ್ದ ವೀರಶೈವ ಕವಿ ಹರಿಹರ , (ಹರೀಶ್ವರ ಎಂದೂ ಕರೆಯುವುದುಂಟು ) ಹಳೆಯ ಜೈನ ಚಂಪೂ ಶೈಲಿಯಲ್ಲಿ ಗಿರಿಜಾಕಲ್ಯಾಣ ಕೃತಿಯನ್ನು ರಚಿಸಿದನು. ಹತ್ತು ಭಾಗಗಳಿರುವ ಇದರ ಕಥಾವಸ್ತು ಶಿವ ಪಾರ್ವತಿಯರ ಪರಿಣಯ. ವಚನ ಸಾಹಿತ್ಯ ಪರಂಪರೆಯ ಭಾಗವಾಗಿರದಿದ್ದ ಮೊದಮೊದಲ ವೀರಶೈವ ಕವಿಗಳಲ್ಲಿ ಇವನೂ ಒಬ್ಬ. ಹಳೇಬೀಡಿನ ಕರಣಿಕರ ಕುಟುಂಬದಿಂದ ಬಂದ ಹರಿಹರನು ಹಂಪೆಯಲ್ಲಿ ಅನೇಕ ವರ್ಷಗಳನ್ನು ಕಳೆದು , ನೂರಕ್ಕೂ ಹೆಚ್ಚು ರಗಳೆಗಳನ್ನು ರಚಿಸಿದನು. ಇವು ವಿರೂಪಾಕ್ಷ ದೇವರ ಗುಣಗಾನ ಮಾಡುವ ರಗಳೆಗಳಾಗಿವೆ. ರಾಘವಾಂಕ ತನ್ನ ಹರಿಶ್ಚಂದ್ರ ಕಾವ್ಯದ ಮೂಲಕ ಷಟ್ಪದಿಯ ಬಳಕೆಯನ್ನು ಮೊಟ್ಟಮೊದಲ ಬಾರಿಗೆ ಮಾಡಿದ. ಕನ್ನಡ ವ್ಯಾಕರಣದ ನಿಯಮಗಳನ್ನು ಕೆಲವೊಮ್ಮೆ ಉಲ್ಲಂಘಿಸಿದ್ದರೂ, ಇದು ಕನ್ನಡ ಸಾಹಿತ್ಯದ ಅತಿಶ್ರೇಷ್ಟ ಕೃತಿಗಳಲ್ಲಿ ಒಂದೆಂದು ಪರಿಗಣಿಸಲ್ಪಡುತ್ತದೆ. ಇನ್ನು ಸಂಸ್ಕೃತದಲ್ಲಿ , ಮಧ್ವಾಚಾರ್ಯರು , ಬ್ರಹ್ಮಸೂತ್ರಗಳಿಗೆ ಋಗ್ಭಾಷ್ಯವನ್ನು ಬರೆದರು. ಇದಲ್ಲದೇ, ಇತರ ವೈದಿಕ ಶಾಖೆಗಳನ್ನು ಟೀಕಿಸುವ ವಿಮರ್ಶೆಗಳನ್ನೂ ಅವರು ಬರೆದರು. ತಮ್ಮ ತತ್ವಗಳಿಗೆ ಪ್ರಮಾಣಗ್ರಂಥಗಳಾಗಿ , ವೇದಗಳ ಬದಲಾಗಿ , ಪುರಾಣಗಳನ್ನು ಆರಿಸಿಕೊಂಡರು. ವಿದ್ಯಾತೀರ್ಥ ಬರೆದ ರುದ್ರಪ್ರಶ್ಣಾಭಾಷ್ಯವು ಆ ಕಾಲದ ಮತ್ತೊಂದು ಪ್ರಸಿದ್ಧ ಗ್ರಂಥ. ಶಿಲ್ಪಕಲೆ ಹೊಯ್ಸಳರ ಸಾಮ್ರಾಜ್ಯ ವಿಸ್ತರಣೆಗಿಂತಲೂ , ಕಲೆ ಮತ್ತು ಶಿಲ್ಪಕೆಲಗಳಿಗೆ ಅವರಿತ್ತ ಪ್ರೋತ್ಸಾಹಕ್ಕಾಗಿ ಈ ಸಾಮ್ರಾಜ್ಯದ ಬಗ್ಯೆ ಆಧುನಿಕ ಸಂಶೋಧನೆ ಬಹು ಮುಖ್ಯವಾಗುತ್ತದೆ. ದಕ್ಷಿಣದಿಂದ ಪಾಂಡ್ಯರು ಮತ್ತು ಉತ್ತರದ ಸೇವುಣರಿಂದ ಸದಾ ದಾಳಿಯ ಅಪಾಯವಿದ್ದರೂ, ಹೊಯ್ಸಳ ರಾಜ್ಯದಾದ್ಯಂತ ದೇವಾಲಯನಿರ್ಮಾಣ ಕಾರ್ಯ ಬಿರುಸಿನಿಂದ ನಡೆಯುತ್ತಿತ್ತು. ಪಷ್ಚಿಮ ಚಾಲುಕ್ಯರ ಶಿಲ್ಪಕಲಾಶೈಲಿಯ ಶಾಖೆಯಾಗಿ ಬೆಳೆದ ಈ ಕಾಲದ ಶೈಲಿಯಲ್ಲಿ ದ್ರಾವಿಡ ಪ್ರಭಾವ ಸ್ಪಷ್ಟವಾಗಿ ಕಂಡುಬರುತ್ತದೆ. ಸಾಂಪ್ರದಾಯಿಕ ದ್ರಾವಿಡ ಶೈಲಿಗಿಂತಲೂ ವಿಶಿಷ್ಟವಾಗಿದ್ದ ಈ ಶೈಲಿಯನ್ನು ಕರ್ನಾಟ ದ್ರಾವಿಡ ಎಂಬ ಹೆಸರಿನಿಂದ ಗುರುತಿಸಲಾಗುತ್ತದೆ. ಹೊಯ್ಸಳರ ದೇವಸ್ಥಾನ ಶಿಲ್ಪಕಲೆಯಲ್ಲಿ ಕುಶಲತೆಗೆ ಪ್ರಾಮುಖ್ಯತೆಯನ್ನು ನೀಡಲಾಗುತ್ತಿತ್ತು. ದೇಗುಲದ ಗೋಪುರದ ವಿಮಾನಗಳಲ್ಲಿ ಎತ್ತರ ಮತ್ತು ಗಾತ್ರಕ್ಕಿಂತ ಅತ್ಯಂತ ನೈಪುಣ್ಯಶೀಲ ಕಲೆಯನ್ನು ಸೃಷ್ಟಿಸುವುದಕ್ಕೆ ಒತ್ತು ನೀಡಲಾಗುತ್ತಿತ್ತು. ಮೃದುವಾದ ಕಲ್ಲಾಗಿದ್ದ ಬಳಪದ ಕಲ್ಲನ್ನು (Soapstone - Chloritic schist) ದೇಗುಲಗಳನ್ನು ಕಟ್ಟಲು ಉಪಯೋಗಿಸಲ್ಪಡುತ್ತಿತ್ತು. ಬೇಲೂರಿನ ಚೆನ್ನಕೇಶವ ದೇವಸ್ಥಾನ (೧೧೧೭), ಹಳೇಬೀಡಿನ ಹೊಯ್ಸಳೇಶ್ವರ ದೇವಸ್ಥಾನ (೧೧೨೧), ಸೋಮನಾಥಪುರದ ಚೆನ್ನಕೇಶವ ದೇವಸ್ಥಾನ (೧೨೭೯), ಅರಸೀಕೆರೆ (೧೨೨೦), ಅಮೃತಪುರ (೧೧೯೬), ಬೆಳವಾಡಿ (೧೨೦೦) ಮತ್ತು ನುಗ್ಗೇಹಳ್ಳಿ (೧೨೪೬) ದೇವಸ್ಥಾನಗಳು ಹೊಯ್ಸಳ ಶಿಲ್ಪಕಲೆಯ ಪ್ರಮುಖ ಉದಾಹರಣೆಗಳು. ಇವೇ ಅಲ್ಲದೆ ಹಾಸನ ಜಿಲ್ಲೆಯ ದೊಡ್ಡಗದ್ದವಳ್ಳಿಯ ಮಹಾಲಕ್ಶ್ಮಿಯ ದೇವಾಲಯ, ಕೋರವಂಗಲದ ಬೂಚೇಶ್ವರ, ಹಾರನಹಳ್ಳಿಯ ಲಕ್ಷ್ಮೀನರಸಿಂಹ,ಮೊಸಳೆಯ ಚೆನ್ನಕೇಶವ-ನಾಗೇಶ್ವರ ಜೋಡಿ ದೇವಾಲಯ ಮತ್ತು ಮಂಡ್ಯ ಜಿಲ್ಲೆಯ ಹೊಸಹೊಳಲಿನಲ್ಲಿರುವ ದೇವಾಲಯ ಹೊಯ್ಸಳರ ಕಾಲದ ಕಲಾಕೌಶಲಕ್ಕೆ ನಿದರ್ಶನವಾಗಿವೆ.ಅನೇಕ ದೇವಾಲಯಗಳ ಹೊರಗಿನ ಗೋಡೆಗಳಲ್ಲಿ ಹಿಂದೂ ಪುರಾಣಗಳ ಕಥನಗಳನ್ನು ನಿರೂಪಿಸಲಾಗಿದೆ. ಪ್ರದಕ್ಷಣೆಯ ದಿಕ್ಕಿನಲ್ಲಿ ಈ ಕಥನಗಳ ನಿರೂಪಣೆ ಸಾಗುತ್ತದೆ. ಭಾಷೆ ಕನ್ನಡ ಮತ್ತು ಸಂಸ್ಕೃತ ಭಾಷೆಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿತ್ತು. ಪಾಠಶಾಲೆಗಳಾಗಿಯೂ ಉಪಯೋಗಿಸಲಾಗುತ್ತಿದ್ದ ದೇವಾಲಯಗಳಲ್ಲಿ ಬ್ರಾಹ್ಮಣ ಪಂಡಿತರು ಸಂಸ್ಕೃತದಲ್ಲಿ ಕಲಿಸಿದರೆ, ಜೈನ ಮತ್ತು ಬೌದ್ಡ ವಿಹಾರಗಳಲ್ಲಿ, ಮುನಿಗಳು ಶಿಷ್ಯರಿಗೆ ವಿದ್ಯೆ ಕಲಿಸುತ್ತಿದ್ದರು. ಉಚ್ಚ ವಿದ್ಯಾಕೇಂದ್ರಗಳಿಗೆ ಘಟಿಕಾ ಎಂದು ಹೆಸರಿತ್ತು. ಪ್ರವರ್ಧಮಾನಕ್ಕೆ ಬರುತ್ತಿದ್ದ ಭಕ್ತಿ ಪಂಥವು ವಚನಗಳು ಮತ್ತು ದೇವರನಾಮಗಳಿಗೆ ಕನ್ನಡ ಭಾಷೆಯನ್ನು ಬಳಸಿತು. ಸಾಹಿತ್ಯ ಕೃತಿಗಳನ್ನು ತಾಳೆಗರಿಯ ಮೇಲೆ ರಚಿಸಲಾಗುತ್ತಿತ್ತು. ಹಿಂದಿನ ಶತಮಾನಗಳಲ್ಲಿ ಜೈನ ಸಾಹಿತ್ಯ ಕೃತಿಗಳು ಪ್ರಧಾನವಾಗಿದ್ದರೂ, ಹೊಯ್ಸಳರ ಕಾಲದಲ್ಲಿ ಶೈವ ಮತ್ತು ಬ್ರಾಹ್ಮಣ ಕೃತಿಗಳು ಹೆಚ್ಚು ಹೆಚ್ಚಾಗಿ ಬರಲಾರಂಭಿಸಿದವು. ಸಂಸ್ಕೃತ ಸಾಹಿತ್ಯದಲ್ಲಿ ಕಾವ್ಯ, ವ್ಯಾಕರಣ , ವಿಶ್ವಕೋಶ , ಕೈಪಿಡಿಗಳು , ಹಿಂದಿನ ಕೃತಿಗಳ ಮೇಲೆ ಭಾಷ್ಯಗಳು, ನಾಟಕಗಳು, ಗದ್ಯ ಕಥೆಗಳು ಇತ್ಯಾದಿಗಳು ರಚನೆಯಾದವು. ತಾಮ್ರ ಮತ್ತು ಶಿಲಾಶಾಸನಗಳು ಕನ್ನಡ, ಸಂಸ್ಕೃತ ಅಥವಾ ಇವೆರಡೂ ಭಾಷೆಯಲ್ಲಿರುತ್ತಿದ್ದವು. ಹಿನ್ನೆಲೆ , ರಾಜರ ಬಿರುದು ಬಾವಲಿಗಳು ಇತ್ಯಾದಿಗಳು ಸಂಸ್ಕೃತದಲ್ಲಿದ್ದರೆ, ಉಂಬಳಿಯ ವಿವರಗಳು, ಭೂಮಿಯ ತಪಶೀಲು, ಸರಹದ್ದು, ಸ್ಥಳೀಯ ಆಡಳಿತಾಧಿಕಾರಿಗಳು, ಕಂದಾಯ , ಉಂಬಳಿ ಪಡೆದವನ ಹಕ್ಕು ಮತ್ತು ಕರ್ತವ್ಯಗಳು, ಸಾಕ್ಷಿಗಳು ಈ ವಿವರಗಳು ಕನ್ನಡದಲ್ಲಿರುತ್ತಿದ್ದವು.ಈ ಮೂಲಕ ಶಾಸನದ ವಿವರಗಳು ಜನಸಾಮಾನ್ಯರಿಗೂ ಅರ್ಥವಾಗುವಂತೆ ನೋಡಿಕೊಳ್ಳಲಾಗುತ್ತಿತ್ತು. ಬಾಹ್ಯ ಸಂಪರ್ಕಗಳು ಹೊಯ್ಸಳ ಶಿಲ್ಪಕಲೆಯ ಚಿತ್ರಗಳು ಕರ್ನಾಟಕದ ರಾಜಮನೆತನಗಳು ಕರ್ನಾಟಕದ ಇತಿಹಾಸ
1209
https://kn.wikipedia.org/wiki/%E0%B2%B8%E0%B3%8D%E0%B2%B5%E0%B2%BE%E0%B2%AE%E0%B2%BF%20%E0%B2%B5%E0%B2%BF%E0%B2%B5%E0%B3%87%E0%B2%95%E0%B2%BE%E0%B2%A8%E0%B2%82%E0%B2%A6
ಸ್ವಾಮಿ ವಿವೇಕಾನಂದ
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ. ಜನನ ವಿವೇಕಾನಂದರ ಪೂರ್ವದ ಹೆಸರು ನರೇಂದ್ರನಾಥ ದತ್ತ. ಇವರು 1863, ಜನವರಿ 12ರಂದು ಕೊಲ್ಕತ್ತದಲ್ಲಿ ಜನಿಸಿದರು. ತಂದೆ ವಿಶ್ವನಾಥ ದತ್ತ. ತಾಯಿ ಭುವನೇಶ್ವರಿ ದೇವಿ. ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯರಾದ ಮೇಲೆ 'ವಿವೇಕಾನಂದ' ಎಂಬ ಹೆಸರನ್ನು ಪಡೆದರು. ಕಲ್ಕತ್ತೆಯ ಸ್ಕಾಟಿಷ್ ಚರ್ಚ್ ಕಾಲೇಜಿನಲ್ಲಿ ತತ್ತ್ವಶಾಸ್ತ್ರ ಅಧ್ಯಯನ ಮಾಡಿದರು. ‍ ರಾಮಕೃಷ್ಣರ ಒಡನಾಟ : ನರೇಂದ್ರರಿಗೆ ರಾಮಕೃಷ್ಣರ ಮೊದಲ ಪರಿಚಯ ವಿಲಿಯಮ್ ಹೆಸ್ಟಿಯವರ ತರಗತಿಯಲ್ಲಿ. ಹೆಸ್ಟಿಯವರು ವಿಲಿಯಮ್ ವರ್ಡ್ಸ್ವವರ್ತ್ ಅವರ "ದ ಎ‍ಕ್ಸಕರ್ಶನ್" ಎಂಬ ಕವಿತೆಯಲ್ಲಿನ "ಸಮಾಧಿ" ಪದವನ್ನು ವಿವರಿಸುವಾಗ ಸಮಾಧಿಯ ನಿಜವಾದ ಅರ್ಥ ತಿಳಿಯಲು ದಕ್ಷಿಣೇಶ್ವರದ ರಾಮಕೃಷ್ಣರನ್ನೊಮ್ಮೆ ಭೇಟಿ ನೀಡಿ ಎಂದು ಸಲಹೆ ಇತ್ತರು. ಇವರ ಸಲಹೆಯ ಮೇರೆಗೆ ಹಲವಾರು ವಿದ್ಯಾರ್ಥಿಗಳು ರಾಮಕೃಷ್ಣರನ್ನು ನೋಡಲು ಉತ್ಸುಕರಾದರು. ಆವರಲ್ಲಿ ನರೇಂದ್ರರೂ ಒಬ್ಬರು. ೧೮೮೧ನೇ ಇಸವಿ ನವೆಂಬರದಲ್ಲಿ ಎಫ್.ಎ(ಲಲಿತಕಲೆ)ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಿದ್ದಾಗ, ರಾಮಚಂದ್ರದತ್ತರು ರಾಮಕೃಷ್ಣರು ಪ್ರವಚನ ನಡೆಸುತ್ತಿದ್ದರು ಸುರೇಂದ್ರನಾಥ ಮಿತ್ರರ ಮನೆಗೆ ಕರೆದರು. ಅಲ್ಲಿ ರಾಮಕೃಷ್ಣರು ನರೇಂದ್ರನಿಗೆ ಹಾಡಲು ಕೇಳಿಕೊಂಡರು. ಅವರ ಗಾಯನ ಪ್ರತಿಭೆಯನ್ನು ಮೆಚ್ಚಿ ರಾಮಕೃಷ್ಣರು ನರೆಂದ್ರನನ್ನು ದಕ್ಷಿಣೇಶ್ವರಕ್ಕೆ ಬರಲು ಆಮಂತ್ರಿಸಿದರು. ಆದರೆ ನರೇಂದ್ರರು ಅದರ ಬಗ್ಗೆ ಉತ್ಸಾಹ ತೊರಿಸಲಿಲ್ಲ. ೧೮೮೨ ರಲ್ಲಿ ನರೇಂದ್ರರು ತನ್ನ ಇಬ್ಬರು ಗೆಳೆಯರೊಂದಿಗೆ ರಾಮಕೃಷ್ಣರನ್ನು ಭೇಟಿ ಮಾಡಲು ದಕ್ಷಿಣೇಶ್ವರಕ್ಕೆ ಹೋದರು. ರಾಮಕೃಷ್ಣರ ಆ ಭೇಟಿ ಅವರ ಜೀವನಕ್ಕೆ ಮಹತ್ವದ ತಿರುವನ್ನು ಕೊಟ್ಟಿತು. ಆದರೂ ನರೇಂದ್ರರು ರಾಮಕೃಷ್ಣರನ್ನು ಗುರುಗಳನ್ನಾಗಿ ಒಪ್ಪಿಕೊಳ್ಳಲಿಲ್ಲ. ರಾಮಕೃಷ್ಣರ ಆಲೋಚನೆಗಳನ್ನು ಒಪ್ಪಿಕೊಳ್ಳದಿದ್ದರೂ, ಅವರ ಮಗುವಿನಂಥ ವ್ಯಕ್ತಿತ್ವ ಅವರನ್ನು ಪದೇ ಪದೇ ದಕ್ಷಿಣೀಶ್ವರಕ್ಕೆ ಭೇಟಿ ನೀಡಲು ಪ್ರೇರೇಪಿಸಿತು. ಮೊದಮೊದಲಿಗೆ ರಾಮಕೃಷ್ಣರ ಭಾವಪರವಶತೆಯ ಮತ್ತು ದೂರದೃಷ್ಟಿಯನ್ನು ಕೇವಲ ಕಾಲ್ಪನಿಕ ಬರಿ ಭ್ರಮೆ ಎಂದು ಭಾವಿಸಿದ್ದರು. ೧೮೮೪ ಇಸವಿಯಲ್ಲಿ ಅನಿರೀಕ್ಷಿತವಾಗಿ ನರೇಂದ್ರರ ತಂದೆಯವರು ಇಹಲೋಕ ತ್ಯಜಿಸಿದರು. ಅವರ ಮರಣಾ ನಂತರ ಕುಟುಂಬ ದಿವಾಳಿಯಾಯಿತು, ಸಾಲಗಾರರ ಬಾಧೆ ಶುರುವಾಯಿತು.ಅವರ ಕುಟುಂಬದವರು ಪೂರ್ವಜರ ಮನೆಯಿಂದ ಹೊರಗೆ ಹಾಕಿದರು. ಅವರು ಕೆಲಸ ಹುಡುಕುವುದರಲ್ಲಿ ವಿಫಲರಾದಾಗ, ದೇವರ ಅಸ್ತಿತ್ವದ ಬಗ್ಗೆಯೇ ಸಂದೇಹಪಟ್ಟರು. ಆದರೆ ರಾಮಕೃಷ್ಣರ ಸಾನಿಧ್ಯ ಅವರಿಗೆ ಸಾಂತ್ವನ ನೀಡುತಿತ್ತು. ಒಂದು ದಿನ ನರೇಂದ್ರರು ಅವರ ಕುಟುಂಬದ ಅಭ್ಯುದಯಕ್ಕೋಸ್ಕರ ಕಾಳಿ ದೇವಿಯನ್ನು ಪ್ರಾರ್ಥಿಸುವಂತೆ ರಾಮಕೃಷ್ಣರನ್ನು ಕೇಳಿಕೊಂಡರು. ಅದಕ್ಕೆ ಅವರು ನೀನೊಬ್ಬನೇ ದೇವಸ್ಥಾನಕ್ಕೆ ಹೋಗಿ ಭಕ್ತಿಯಿಂದ ಪ್ರಾರ್ಥಿಸು ಎಂದು ಸಲಹೆ ನೀಡಿದರು. ಅವರ ಸಲಹೆಯಂತೆ ಎರಡು, ಮೂರು ಸಲ ದೇವಸ್ಥಾನಕ್ಕೆ ಹೋದರು. ಆದರೆ ಅವರು ಯಾವುದೇ ರೀತಿಯ ಲೌಕಿಕ ಅವಶ್ಯಕತೆಗಳನ್ನು ಪೂರೈಸಲು ದೇವಸ್ಥಾನಕ್ಕೆ ಹೋಗಿ ಪ್ರಾರ್ಥಿಸುವುದರಲ್ಲಿ ವಿಫಲರಾದರು. ಆದರೆ ಪ್ರತಿ ಬಾರಿಯು ಮುಕ್ತಿಗಾಗಿ ಕೇಳಿಕೊಳ್ಳಲಷ್ಟೇ ಶಕ್ತರಾದರು. ಕೊನೆಗೆ ಅವರು ಸರ್ವಸಂಗ ಪರಿತ್ಯಾಗ ಮಾಡಿ ರಾಮಕೃಷ್ಣರನ್ನು ಗುರುಗಳನ್ನಾಗಿ ಸ್ವೀಕಾರ ಮಾಡಿದರು. ೧೮೮೫ ರಲ್ಲಿ ರಾಮಕೃಷ್ಣರು ಕಲ್ಕತ್ತಾದ ಕೊಸ್ಸಿಪುರದಲ್ಲಿ ಇರುವ ಅವರ ತೋಟದ ಮನೆಯಲ್ಲಿ ಗಂಟಲಿನ ಹುಣ್ಣಿನಿಂದ ಬಳಲುತಿದ್ದರು. ನರೇಂದ್ರರು ತಮ್ಮ ಆಧ್ಯಾತ್ಮಿಕ ವಿಧ್ಯಾಭ್ಯಾಸವನ್ನು ಮುಂದುವರಿಸಿದರು. ಅವರು ಕೊಸ್ಸಿಪುರದಲ್ಲಿ ನಿರ್ವಿಕಲ್ಪ ಸಮಾಧಿಯನ್ನು ಅನುಭವಿಸಿದರು. ನರೇಂದ್ರ ಮತ್ತು ರಾಮಕೃಷ್ಣರ ಇತರ ಶಿಷ್ಯರು ಗುರುಗಳ ಅದೇಶದಂತೆ ಅವರಂತೆ ನಿಲುವಂಗಿ ಮತ್ತು ಕಾವಿ ತೊಟ್ಟುಕೊಂಡರು. ಜನ ಸೇವೆಯೇ ಜನಾರ್ದನನ ಸೇವೆ ಎಂದರು. ರಾಮಕೃಷ್ಣರು ನರೇಂದ್ರರನ್ನು ತಮ್ಮ ಶಿಷ್ಯವೃಂದದ ನಾಯಕರನ್ನಾಗಿ ನೇಮಿಸಿದರು. ರಾಮಕೃಷ್ಣರು ೧೮೮೬, ಆಗಸ್ಟ ೧೬ ರಂದು ನಿಧನ ಹೊಂದಿದರು. ರಾಮಕೃಷ್ಣ ಮಠದ ಸ್ಥಾಪನೆ ರಾಮಕೃಷ್ಣರ ಮರಣಾ ನಂತರ ಅವರ ಮಠಕ್ಕೆ ಬರುವ ಆದಾಯವು ಕಡಿಮೆಯಾಯಿತು. ಇದರಿಂದಾಗಿ ಅವರು ಬೇರೆ ಜಾಗವನ್ನು ಹುಡುಕಬೇಕಾಯಿತು. ಬಾರನಗರದಲ್ಲಿ ನರೇಂದ್ರರು ಶಿಥಿಲವಾದ ಮನೆಯನ್ನು ಖರೀದಿಸಿ, ಆ ಮನೆಯನ್ನು ಅವರು ಮಠವನ್ನಾಗಿ ಪರಿವರ್ತಿಸಲು ಆಲೋಚಿಸಿದರು. ಆ ಮನೆಯ ಬಾಡಿಗೆಯನ್ನು ಭಿಕ್ಷಾಟನೆ ಮೂಲಕ ತುಂಬುತಿದ್ದರು. ಈ ಮನೆಯೆ ರಾಮಕೃಷ್ಣರ ಮಠದ ಮೊದಲ ಶಾಖೆಯಾಯಿತು. ಅಲ್ಲಿ ನರೇಂದ್ರ ಮತ್ತು ಅವರ ಶಿಷ್ಶರು ಹೆಚ್ಚಿನ ಸಮಯವನ್ನು ಧ್ಯಾನ ಮತ್ತು ಧಾರ್ಮಿಕ ವಿಷಯಗಳನ್ನು ಅಭ್ಯಾಸ ಮಾಡುವಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದರು. ಮುಂದಿನ ಆ ದಿನಗಳನ್ನು ನೆನೆಸುತ್ತಾ "ಪ್ರತಿದಿನ ಬೆಳಿಗ್ಗೆ ೩ ರಿಂದ ರಾತ್ರಿಯವರೆಗು ನಾವು ಧ್ಯಾನದಲ್ಲೆ ಕಳೆಯುತ್ತಿದ್ದೆವು. ಜಗತ್ತಿನ ಪರಿವೆಯೆ ಇಲ್ಲದೆ, ನಮ್ಮ ಸಾಧನಾ ಪ್ರಪಂಚದಲ್ಲಿ ಮುಳುಗಿದ್ದೆವು" ೧೮೮೧ ನೇ ಇಸವಿಯಲ್ಲಿ ನರೇಂದ್ರರು ವೈಷ್ಣವ ಚರಣ್ ಬಾಸ್ಕರವರ ಜೊತೆ ಬಂಗಾಳಿ ಭಾಷೆಯ ಕವಿತೆಗಳನ್ನೊಳಗೊಂಡ "ಸಂಗೀತ ಕಲ್ಪತರು "ಎಂಬ ಪುಸ್ತಕವನ್ನು ಸಂಗ್ರಹಿಸಿದರು. ಆದರೆ ಹಲವು ಸಮಸ್ಯೆಗಳಿಂದ ಅದನ್ನು ಪ್ರಕಟಿಸಲಾಗಲಿಲ್ಲ.. ವಿವೇಕಾನಂದರ ಭಾರತ ಪರ್ಯಟನೆ ೧೮೮೮ ನರೇಂದ್ರರು ಭಾರತ ಪರ್ಯಟನೆಗೆ ಹೊರಟರು. ಅವರು ಪರ್ಯಟನೆಗೆ ಹೋಗುವಾಗ ಅವರ ಜೊತೆಗೆ ಕಮಂಡಲು ದಂಡ ಮತ್ತು ಅವರಿಗೆ ಪ್ರಿಯವಾದ ಭಗವದ್ಗೀತೆ ಹಾಗೂ "ದಿ ಇಮಿಟೆಶ್ನ್ ಆಫ್ ಕ್ರೈಸ್ತ್" ಎಂಬೆರಡು ಪುಸ್ತಕಗಳನ್ನು ತಮ್ಮ ಜೊತೆಗೆ ಒಯ್ಯುತ್ತಿದ್ದರು. ನರೇಂದ್ರರು ಸತತವಾಗಿ ಐದು ವರ್ಷಗಳ ಕಾಲ ಭಾರತವನ್ನು ಸಂಚರಿಸಿದರು. ಉತ್ತರ ಭಾರತ ೧೮೮೮ ರಲ್ಲಿ ಗೌತಮ ಬುದ್ಧ ಮತ್ತು ಆದಿ ಶಂಕರಾಚಾರ್ಯರು ಧರ್ಮ ಪ್ರಚಾರ ಮಾಡಿದ ವಾರಣಾಸಿಗೆ ಭೇಟಿ ನೀಡಿದರು. ಅಲ್ಲಿ ಅವರು ಬಂಗಾಳಿ ಬರಹಗಾರ ಭೂದೇವ ಮುಖ್ಯೋಪಾಧ್ಯಾಯ ಮತ್ತು ಹಿಂದು ಸಂತ ತ್ರ್ಯೆಲಂಗರನ್ನು ಭೇಟಿ ಮಾಡಿದರು. ಭೂದೇವ ಮುಖ್ಯೋಪಾಧ್ಯಾಯರು "ಇಂತಹ ದೂರದೃಷ್ಟಿ ಮತ್ತು ವಿಚಾರವಾದವನ್ನು ಇಷ್ಟು ಕಿರಿಯ ಪ್ರಾಯದಲ್ಲಿ ಪಡೆದುಕೊಂಡ ನೀನು ಮುಂದೊಂದು ದಿನ ದೊಡ್ಡ ವ್ಯಕ್ತಿಯಾಗುವೆ" ಎಂದು ಪ್ರಶಂಸಿಸಿದರು. ನಂತರ ಸಂಸ್ಕ್ರತ ಮತ್ತು ವ್ಯೆದಿಕ ವಿದ್ವಾಂಸರಾದ ಬಾಬು ಪರಮದಾಸ್ ಮಿತ್ರ ಅವರನ್ನು ಭೇಟಿ ಮಾಡಿದರು. ನಂತರ ಅವರು ಅಯೋಧ್ಯಾ, ಲಕ್ನೋ ವೃಂದಾವನ ಮತ್ತು ಋಷಿಕೇಶಕ್ಕೆ ಭೇಟಿ ನೀಡಿದರು. ಅದ್ವೈತ ಸಿದ್ಧಾಂತದ ಉಪಯುಕ್ತತೆ ಕೇವಲ ರಾಮಕೃಷ್ಣ ಪರಮಹಂಸರ ಶಿಷ್ಯರಾಗದೆ ತಮ್ಮದೇ ಶೈಲಿಯಲ್ಲಿ ದೊಡ್ಡ ಚಿಂತಕರಾಗಿ ವಿವೇಕಾನಂದರು ಹೆಸರು ಪಡೆದಿದ್ದಾರೆ. ಅವರ ಮುಖ್ಯ ಕಾಣಿಕೆಯೆಂದರೆ ಕೇವಲ ತಾತ್ವಿಕವಾಗಿ ಉಚ್ಚ ತತ್ತ್ವಜ್ಞಾನ ಮಾತ್ರವಲ್ಲದೆ ಸಾಮಾಜಿಕ ಹಾಗೂ ರಾಜಕೀಯ ದೃಷ್ಟಿಯಿಂದಲೂ ಉಪಯುಕ್ತ ಎಂಬುದನ್ನು ತೋರಿಸಿಕೊಟ್ಟರು. ಅವರ ಅಭಿಪ್ರಾಯದಂತೆ, ರಾಮಕೃಷ್ಣರಿಂದ ಅವರು ಪಡೆದ ಮುಖ್ಯ ಬೋಧನೆಗಳಲ್ಲಿ ಒಂದೆಂದರೆ ಎಲ್ಲರಲ್ಲಿಯೂ ದೇವರಿದ್ದಾನೆ ಎಂಬುದು. ಇದೇ ಅವರ ಮಂತ್ರವಾಯಿತು ಮತ್ತು ಅವರ "ದರಿದ್ರ ನಾರಾಯಣ ಸೇವೆ' ಎಂಬ ತತ್ತ್ವಕ್ಕೆ ದಾರಿ ಮಾಡಿ ಕೊಟ್ಟಿತು. ಈ ತತ್ತ್ವದಂತೆ ಬಡ ಜನರ ಸೇವೆಯಲ್ಲಿಯೇ ದೇವರ ಸೇವೆಯನ್ನು ಮಾಡುವ ದಾರಿಯನ್ನು ಅವರು ಪಾಲಿಸಿದರು. ಎಲ್ಲರಲ್ಲಿಯೂ ದೇವರಿದ್ದು ಎಲ್ಲರೂ ಸಮಾನರೆಂದಾದ ಮೇಲೆ ಕೆಲವರಿಗೆ ಮಾತ್ರ ಏಕೆ ಹೆಚ್ಚು ಬೆಲೆ ಬರಬೇಕು ಎಂಬ ಪ್ರಶ್ನೆಯನ್ನು ವಿವೇಕಾನಂದರು ಕೇಳಿಕೊಂಡರು. ಅವರ ಅಂತಿಮವಾದ ತೀರ್ಮಾನವೆಂದರೆ ಭಕ್ತನು ಮೋಕ್ಷವನ್ನು ಅನುಭವಿಸಿದಾಗ ನಮ್ಮಲ್ಲಿರುವ ಎಲ್ಲ ಭೇದಗಳೂ ಮಾಯವಾಗಿ, ಉಳಿಯುವುದೆಂದರೆ ಬ್ರಹ್ಮನೊಂದಿಗೆ ತಮ್ಮ ಐಕ್ಯವನ್ನು ಅರಿಯದ ಮತ್ತು ಕೆಳತುಳಿಯಲ್ಪಟ್ಟಿರುವ ಜನರ ಬಗೆಗೆ ಸಂತಾಪ ಮತ್ತು ಅವರಿಗೆ ಸಹಾಯ ಮಾಡುವ ಸದೃಢ ನಿಶ್ಚಯ. ವಿವೇಕಾನಂದರ ವಿಶ್ವಪರ್ಯಟನೆ ವಿವೇಕಾನಂದರು ಭಾರತದ ತತ್ವಜ್ಞಾನ, ಯೋಗ, ವೇದಾಂತ ಇವೆಲ್ಲವನ್ನು ಪಾಶ್ಚಿಮಾತ್ಯದೇಶಗಳಲ್ಲಿ ಪ್ರಚಾರ ಮಾಡಿದರು. ಅವರು ತಮ್ಮ ಗುರುಗಳ ಒಳ್ಳೆಯ ಮನೋಭಾವದ ಕಡೆಗೆ ವಾಲಿದರು. ಅವರು ಸನ್ಯಾಸಿಯಾಗಿ ದೇವರಸೇವೆ ಹೇಗೆ ಮಾಡಬಹುದೆಂದು ನಿರೂಪಿಸಿದರು. ಗುರು ರಾಮಕೃಷ್ಣರ ಮರಣಾ ನಂತರ ವಿವೇಕಾನಂದರು ಭಾರತ ಪ್ರವಾಸ ಕೈಗೊಂಡರು. ಭಾರತದ ಉಪಖಂಡದಲ್ಲಿ ಬ್ರಿಟೀಷರ ಷರತ್ತುಗಳನ್ನು ಆಧ್ಯಯನ ಮಾಡಿದರು. ನಂತರ ಅವರು ಅಮೇರಿಕಾ ಪ್ರವಾಸ ಕೈಗೊಂಡರು. ೧೮೯೩ರಲ್ಲಿ ಚಿಕಾಗೋದಲ್ಲಿ ನಡೆದ ಸಮ್ಮೇಳನದಲ್ಲಿ ಭಾರತೀಯರ ಧಾರ್ಮಿಕತೆಯನ್ನು ಎತ್ತಿ ಹಿಡಿದರು. ವಿವೇಕಾನಂದರು ನೂರಕ್ಕು ಹೆಚ್ಚು ಖಾಸಗಿ ಹಿಂದೂಸಂಸ್ಥೆಗಳಲ್ಲಿ ತಮ್ಮ ವಿಚಾರಧಾರೆಯನ್ನು ಹರಿಸಿದರು. ದೇಶ ವಿದೇಶಗಳಲ್ಲಿ ಹಿಂದೂಧರ್ಮದ ತತ್ವವನ್ನು ಭೋಧಿಸಿದರು. ಅವರು ಪ್ರಪಂಚದಾದ್ಯಂತ ಪ್ರಯಾಣ ಮಾಡಿ, ಅಲ್ಲಿನ ಭಕ್ತರನ್ನುದ್ದೇಶಿಸಿ ಮಾಡಿದ ಭಾಷಣಗಳನ್ನು ಒಟ್ಟುಗೂಡಿಸಿ ಬರೆಯಲ್ಪಟ್ಟ ಅವರ ನಾಲ್ಕು ಪುಸ್ತಕಗಳು ಹಿಂದೂ ಧರ್ಮದ ಯೋಗ ಸಿದ್ಧಾಂತವನ್ನು ತಿಳಿಯ ಬಯಸುವವರಿಗೆ, ಮೂಲಭೂತ ಪಠ್ಯಗಳೆಂದೇ ಪರಿಗಣಿತವಾಗಿವೆ. *ವಿವೇಕಾನಂದರ ನಂಬಿಕೆಗಳಲ್ಲಿ ಮುಖ್ಯವಾದುದು ನಮ್ಮಲ್ಲಿ ಎಲ್ಲರೂ ಮುಕ್ತರಾಗುವವರೆಗೆ ಯಾರೊಬ್ಬರೂ ಮುಕ್ತರಾಗಲಾರರೆಂಬುದು. ವೈಯಕ್ತಿಕ ಮುಕ್ತಿಯ ಆಸೆಯನ್ನು ಬಿಟ್ಟು ಎಲ್ಲರ ಮುಕ್ತಿಗಾಗಿ ಶ್ರಮಿಸುವವನೇ ಅವರ ದೃಷ್ಟಿಯಲ್ಲಿ ಪ್ರಬುದ್ಧ ವ್ಯಕ್ತಿ. ವಿವೇಕಾನಂದರು, ಧರ್ಮ ಮತ್ತು ಸರ್ಕಾರ ದ ನಡುವೆ ಕಟ್ಟುನಿಟ್ಟಾದ ದೂರವಿಡುವಂತೆ ಮನವಿ ಮಾಡಿದರು. ಸಾಮಾಜಿಕ ಕಟ್ಟಲೆಗಳು ಧರ್ಮದ ಮೂಲಕ ರೂಪುಗೊಂಡಿರುತ್ತವೆಯಾದರೂ, ಸರ್ಕಾರಿ ಕೆಲಸಗಳಲ್ಲಿ ಯಾವುದೇ ಒಂದು ಧರ್ಮಕ್ಕೆ ಪ್ರಾಶಸ್ತ್ಯವಿರಬಾರದು ಎಂದು ಅವರ ನಂಬಿಕೆಯಾಗಿತ್ತು. ಅವರ ಕಲ್ಪನೆಯ ಆದರ್ಶ ಸಮಾಜವೆಂದರೆ ಬ್ರಾಹ್ಮಣ ಜ್ಞಾನ, ಕ್ಷತ್ರಿಯ ಸಂಸ್ಕೃತಿ, ವೈಶ್ಯ ದಕ್ಷತೆ ಮತ್ತು ಶೂದ್ರರ ಸಮಾನತೆಯ ಮೇಲೆ ನಿಂತಿರುವಂಥ ಸಮಾಜ. ಯಾವುದೇ ಒಂದು ವರ್ಗದ ಪ್ರಾಶಸ್ತ್ಯ ಸಮಾಜದಲ್ಲಿ ಸಮಾನತೆಯನ್ನು ಹಾಳುಗೆಡವುತ್ತದೆ ಎಂಬುದು ಅವರ ಸಾಮಾಜಿಕ ದೃಷ್ಟಿ. ಆಳವಾಗಿ ಸಮಾಜವಾದಿಯಾಗಿದ್ದರೂ, ಧರ್ಮದ ಮೂಲಕ ಸಮಾಜವಾದವನ್ನು ಹೇರುವುದು ತಪ್ಪೆಂದೂ, ಸಮಾಜವಾದ ಎಂಬುದು ವೈಯಕ್ತಿಕವಾಗಿ ಸಂದರ್ಭ ಸರಿಯಿದ್ದಾಗ ಜನರು ಕೈಗೊಳ್ಳಬೇಕಾದ ನಿರ್ಧಾರವೆಂದೂ ಅವರ ದೃಷ್ಟಿ. ಸರ್ವಧರ್ಮಸಮ್ಮೇಳನದಲ್ಲಿ ಮಾಡಿದ ಭಾಷಣ ಸರ್ವಧರ್ಮಸಮ್ಮೇಳನ, ದ ಭಾಷಣದಲ್ಲಿ ಪ್ರತಿಪಾದಿಸಿದ ಹಿಂದೂ ಧರ್ಮದ ಸಿದ್ಧಾಂತಗಳು, ಮಿಂಚಿನಂತೆ ಅಲ್ಲಿನ ಜನರನ್ನು ಆಕರ್ಶಿಸಿದವು. ವಿವೇಕಾನಂದರ ಅತಿ ಪ್ರಸಿದ್ಧ ಯಶಸ್ಸು೧೮೯೩ ರಲ್ಲಿ ಶಿಕಾಗೊ ನಗರದಲ್ಲಿ ನಡೆದ ಪ್ರಪಂಚ ಮತಗಳ ಸಂಸತ್ತಿನಲ್ಲಿ ಬಂದಿತು. ಅವರ ಭಾಷಣದಲ್ಲಿ ಮೊದಲ ವಾಕ್ಯವಾಗಿದ್ದ "ಅಮೆರಿಕದ ಸಹೋದರ ಸಹೋದರಿಯರೇ" ಎಂಬ ವಾಕ್ಯ ಚಿರಸ್ಮರಣೀಯವಾಗಿದೆ.ವಿಶ್ವದ ಧರ್ಮಗಳ ಸಂಸತ್ತು' ಸೆಪ್ಟೆಂಬರ್ 11, 1893 ರಂದು ವಿಶ್ವದ ಕೊಲಂಬಿಯನ್ ಪ್ರದರ್ಶನದ ಭಾಗವಾಗಿ ಈಗ ಚಿಕಾಗೋದ, "ಆರ್ಟ್ ಇನ್ಸ್ಟಿಟ್ಯೂಟ್ನ ಶಾಶ್ವತ ಸ್ಮಾರಕ ಕಲಾ ಭವನ" ದಲ್ಲಿ (ವಿಶ್ವದ ಕಾಂಗ್ರೆಸ್ ಸಹಾಯಕ ಕಟ್ಟಡ ಎಂದೂ ಗುರುತಿಸಲ್ಪಟ್ಟಿದೆ) ಪ್ರಾರಂಭವಾಯಿತು. ವಿವೇಕಾನಂದರು ಆ ದಿನ ತಮ್ಮ ಮೊದಲ ಉಪನ್ಯಾಸವನ್ನು ನೀಡಿದರು. ಇವರ ಸರದಿಯನ್ನು ತುಂಬಾ ಮುಂದೂಡುವಿಕೆಯ ನಂತರ ಮಧ್ಯಾಹ್ನದ ಹೊತ್ತಿಗೆ ಇವರ ಸರದಿ ಬಂದಿತು. ಆರಂಭದಲ್ಲಿ ಅವರು ಆತಂಕಕ್ಕೊಳಗಾಗಿದ್ದರೂ, ಅವರು ಹಿಂದೂ ವಿದ್ಯಾ ದೇವತೆಯಾದ ಸರಸ್ವತಿಗೆ ನಮಸ್ಕರಿಸಿದರು, ಮತ್ತು ಅವರು ತಮ್ಮ ದೇಹದಲ್ಲಿ ಹೊಸ ಶಕ್ತಿಯನ್ನು ಪಡೆದುಕೊಂಡಿರವುದಾಗಿ ಭಾವಿಸಿದರು; ಯಾರೋ ಅಥವಾ ಇನ್ನೊಬ್ಬರು ತಮ್ಮ ದೇಹವನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ಅವರು ಭಾವಿಸಿದರು- (ಅದು"ದಿ ಸೋಲ್ ಆಫ್ ಇಂಡಿಯಾ, ಋಷಿಯ ಪ್ರತಿಧ್ವನಿ, ರಾಮಕೃಷ್ಣರ ಧ್ವನಿ, ಪುನರುತ್ಥಾನಗೊಂಡ ಸಮಯದ ಚೈತನ್ಯದ ಮುಖವಾಣಿ") ನಂತರ "ಸಿಸ್ಟರ್ಸ್ ಅಂಡ್ ಬ್ರದರ್ಸ್ ಆಫ್ ಅಮೆರಿಕಾ!" ಎಂದು ಸಂಬೋಧಿಸಿ ಮಾತು ಆರಂಭಿಸಿದರು. ಈ ಮಾತುಗಳಿಗೆ ಅವರು ಅಲ್ಲಿದ್ದ ಏಳು ಸಾವಿರ ಜನಸಮೂಹದಿಂದ 'ನಿಂತು ಚಪ್ಪಾಳೆಯ ಮೆಚ್ಚಗೆ ಸೂಚಿಸಿಸ ಗೌರವ' ಪಡೆದರು, ಅದು ಎರಡು ನಿಮಿಷಗಳ ಕಾಲ ನಡೆಯಿತು. ಮೌನವನ್ನು ಪುನಃಸ್ಥಾಪಿಸಿದಾಗ ಅವರು ತಮ್ಮ ಭಾಷಣವನ್ನು ಪ್ರಾರಂಭಿಸಿದರು. "ವಿಶ್ವದ ಅತ್ಯಂತ ಪ್ರಾಚೀನ ವೈದಿಕ ಕ್ರಮ ಅನುಸರಿಸಿದ ಸನ್ಯಾಸಿಗಳ, ಜಗತ್ತಿಗೆ ಸಹಿಷ್ಣುತೆ ಮತ್ತು ಸಾರ್ವತ್ರಿಕ ಸ್ವೀಕಾರ ಎರಡನ್ನೂ ಕಲಿಸಿದ ಧರ್ಮದ ಪರವಾಗಿ ಅವರು ಯುವ ರಾಷ್ಟ್ರಗಳನ್ನು ಅಭಿನಂದಿಸಿದರು.!" (ಭಾರತಕ್ಕಿಂತ ಅವು ಕಿರಿಯ/ ಯುವ ರಾಷ್ಟ್ಟ್ರಗಳು)'' ಈ ಸಂದರ್ಭದಲ್ಲಿಯೇ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹಿಂದೂ ಧರ್ಮದ ಬಗೆಗೆ ಆಸಕ್ತಿಯನ್ನೂ ಕೆರಳಿಸಿದರು. 'ಪೂರ್ವ ದೇಶದ ವಿಚಿತ್ರ ಧರ್ಮ' ಎಂದು ಪರಿಗಣಿತವಾಗಿದ್ದ ಹಿಂದೂ ಧರ್ಮದ ತಾತ್ವಿಕ ಹಾಗೂ ಧಾರ್ಮಿಕ ಮೂಲಭೂತ ಮಹತ್ವವುಳ್ಳ ಸಂಪ್ರದಾಯಗಳು, ಪಾಶ್ಚಾತ್ಯ ರಾಷ್ಟ್ರಗಳಲ್ಲಿಯೂ ಗುರುತಿಸಲ್ಪಟ್ಟವು. ಈ ಸಂದರ್ಭದ ಕೆಲವೇ ವರ್ಷಗಳಲ್ಲಿ 'ನ್ಯೂಯಾರ್ಕ್' ಮತ್ತು 'ಲಂಡನ್' ನಗರಗಳಲ್ಲಿ ವೇದಾಂತ ಕೇಂದ್ರಗಳನ್ನು ಸ್ಥಾಪಿಸಿ ಅನೇಕ ವಿಶ್ವವಿದ್ಯಾಲಯಗಳಲ್ಲಿ ಭಾಷಣಗಳನ್ನು ಮಾಡಿದರು. ಇದರ ನಂತರ ಭಾರತಕ್ಕೆ ಮರಳಿ ರಾಮಕೃಷ್ಣ ಮಿಷನ್ ಅನ್ನು ಸ್ಥಾಪಿಸಿದರು. ಹಾಗೆಯೇ "ಆತ್ಮನೋ ಮೋಕ್ಷಾರ್ಥಂ ಜಗದ್ ಹಿತಾಯ ಚ" (ಸ್ವತಃ ಮೋಕ್ಷಕ್ಕಾಗಿ ಮತ್ತು ಜಗತ್ತಿನ ಹಿತಕ್ಕಾಗಿ) ಎಂಬ ತತ್ತ್ವವನ್ನೂ ಸ್ಥಾಪಿಸಿದರು. ಇದು ಈಗ ಭಾರತದ@ ಧಾರ್ಮಿಕ ಸಂಸ್ಥೆಗಳಲ್ಲಿ ಬಹಳ ಹೆಸರು ಮಾಡಿರುವ ಮತ್ತು ಗೌರವಿತ ಸಂಸ್ಥೆಯಾಗಿದೆ. 'ಸ್ವಾಮಿ ವಿವೇಕಾನಂದ'ರು ದಿವಂಗತರಾದಾಗ ಕೇವಲ ೩೯ ವರ್ಷದವರಾಗಿದ್ದರು. ಯುವಕರಿಗೆ ದಾರಿ ದೀಪವಾಗಿದ್ದರು. ಸ್ವಾಮಿ ಅವರ ಭಾಷಣದ ಆಯ್ದ ಭಾಗ ಹೀಗಿದೆ:-"ನಾನು ಮಾಡಿರುವ ಅಲ್ಪ ಕಾರ್ಯ ಕೇವಲ ನನ್ನಲ್ಲಿರುವ ಶಕ್ತಿಯಿಂದಲ್ಲ. ನನ್ನ ಪರಮಮಿತ್ರ ಪ್ರಿಯತಮ ಮಾತೃಭೂಮಿಯಿಂದ ಹೊರಟ ಉತ್ತೇಜನ ಶುಭಾಶಯ ಆಶೀರ್ವಾದಗಳು". ಸ್ವದೇಶ ಮಂತ್ರ ಹೋ ಜಂಬೂದ್ವೀಪದ ಮೂಲ ನಿವಾಸಿಗಳೇ, ಮರೆಯದಿರಿ, ನಿಮ್ಮ ಸ್ತ್ರೀಯರ ಆದರ್ಶ ಸೀತಾ, ಸಾವಿತ್ರಿ, ದಮಯಂತಿಯರು. ಮರೆಯದಿರಿ, ನೀವು ಪೂಜಿಸುವ ಜಗದೀಶ್ವರನು ತ್ಯಾಗಿಕುಲ ಚೂಡಾಮಣಿ, ಉಮಾವಲ್ಲಭ ಶಂಕರ. ಮರೆಯದಿರಿ, ನಿಮ್ಮ ವಿವಾಹ, ನಿಮ್ಮ ಐಶ್ವರ್ಯ, ನಿಮ್ಮ ಜೀವನ ಬರಿಯ ಇಂದ್ರಿಯ ಭೋಗಕ್ಕಲ್ಲ, ವ್ಯಕ್ತಿಗತ ಸುಖಕ್ಕಲ್ಲ. ಮರೆಯದಿರಿ, ನಿಮ್ಮ ಜನ್ಮವಿರುವುದೇ ಜಗನ್ಮಾತೆಯ ಅಡಿದಾವರೆಗಳಲ್ಲಿ ಬಲಿದಾನಕ್ಕಾಗಿ! ಮರೆಯದಿರಿ, ನಿಮ್ಮ ಸಾಮಾಜಿಕ ರಚನೆ ಅನಂತ ವಿಶ್ವವ್ಯಾಪಿ ಜಗಜ್ಜನನಿಯ ಕಾಂತಿಯನ್ನು ಪ್ರತಿಬಿಂಬಿಸುವುದಕ್ಕಾಗಿ ಇರುವುದು. *ಮರೆಯದಿರಿ, ಅಂತ್ಯಜರು, ಮೂಢರು, ದರಿದ್ರರು, ನಿರಕ್ಷರಕುಕ್ಷಿಗಳು, ಚಂಡಾಲರು ಮತ್ತು ಚಮ್ಮಾರರು - ಎಲ್ಲರೂ ನಿಮ್ಮ ರಕ್ತಬಂಧುಗಳಾದ ಸಹೋದರರು ! ವೀರಾತ್ಮರೇ, ಧೀರರಾಗಿ, ನೆಚ್ಚುಗೆಡದಿರಿ. ಭಾರತೀಯರು ನಾವು ಎಂದು ಹೆಮ್ಮೆ ತಾಳಿ. ಸಾರಿ ಹೇಳಿ, ಭಾರತೀಯರು ನಾವು, ಭಾರತೀಯರೆಲ್ಲ ನಮ್ಮ ಸಹೋದರರು. ಸಾರಿ ಹೇಳಿ, ಮೂರ್ಖ ಭಾರತೀಯರೂ ನಮ್ಮ ಸಹೋದರರು, ಬ್ರಾಹ್ಮಣ ಭಾರತೀಯರೆಮ್ಮ ಸಹೋದರರು, ಪಂಚಮ ಭಾರತೀಯರೆಮ್ಮ ಸಹೋದರರು. ನೀವು ಒಂದು ಚಿಂದಿಬಟ್ಟೆಯನ್ನು ಸೊಂಟಕ್ಕೆ ಕಟ್ಟಿಕೊಂಡಿದ್ದರೂ ಕೂಡ, ಅಭಿಮಾನಪೂರ್ವಕವಾಗಿ ದಿಕ್‌ತಟಗಳು ಅನುರಣಿತವಾಗುವಂತೆ ತಾರಸ್ವರದಿಂದ ಸಾರಿ ಹೇಳಿ "ಭಾರತೀಯರು ನಮ್ಮ ಸಹೋದರರು, ಭಾರತೀಯರು ನಮ್ಮ ಪ್ರಾಣ. ಭಾರತೀಯ ದೇವ ದೇವತೆಗಳೆಲ್ಲರೂ ನಮ್ಮ ದೇವರು. ಭಾರತೀಯ ಸಮಾಜ, ನಮ್ಮ ಬಾಲ್ಯದ ತೊಟ್ಟಿಲು, ತಾರುಣ್ಯದ ನಂದನವನ, ವೃದ್ಧಪ್ಯದ ವಾರಾಣಸಿ". ಸಹೋದರರೆ, ಹೀಗೆ ಸಾರಿ "ಭಾರತ ಭೂಮಿಯೆ ನಮ್ಮ ಪರಂಧಾಮ. ಭಾರತದ ಶುಭವೆ ನಮ್ಮ ಶುಭ." ಹಗಲೂ ರಾತ್ರಿಯೂ ಇದು ನಿಮ್ಮ ಪ್ರಾರ್ಥನೆಯಾಗಲಿ, "ಹೇ ಗೌರೀನಾಥ, ಹೇ ಜಗನ್ಮಾತೆ, ಪೌರುಷವನ್ನು ಎಮಗೆ ದಯಪಾಲಿಸು. ಹೇ ಸರ್ವಶಕ್ತಿಶಾಲಿನಿ, ನಮ್ಮ ದೌರ್ಬಲ್ಯವನ್ನು ದಹಿಸು. ಕ್ಲೈಬ್ಯವನ್ನು ಹೋಗಲಾಡಿಸು. ನಮ್ಮ ಷಂಡತನವನ್ನು ಹೋಗಲಾಡಿಸಿ, ನಮ್ಮಲ್ಲಿ ವೀರತ್ವವನ್ನು ತುಂಬು. ಚಿಕಾಗೋದಲ್ಲಿ ಒಬ್ಬ ಕ್ರಿಶ್ಚನ್ನ ಯುವಕರು ತಮ್ಮಗ್ರಂಥವನ್ನು ಭಗವದ್ಗೀತೆಯ ಕೆಳಗಿಟ್ಟು‌ ತಮ್ಮ‌ಧರ್ಮ ಶ್ರೇಷ್ಠ ಎಂಬ ಮಂಡುವಾದ ಮಾಡಿದರು. ಆ ಪುಸ್ತಕ ಸರಿಸಿದ ವಿವೇಕಾನಂದರು ಕೆಳಗಿದ್ದ ಪುಸ್ತಕ ವನ್ನು ಕುರಿತು ಎಲ್ಲಾಧರ್ಮಗಳಿಗಿಂತ ಮೂಲ ಧರ್ಮ‌ ನಮ್ಮಧರ್ಮ.ಎಲ್ಲಾ ಧರ್ಮವು ಒಂದೇ ಎಂದು ಹೇಳಿದರು. ಕುವೆಂಪುರವರ 'ಸ್ವಾಮಿ ವಿವೇಕಾನಂದ' ನಮ್ಮ ರಾಷ್ಟ್ರ ಕವಿ ಕುವೆಂಪುರವರು 'ಸ್ವಾಮಿ ವಿವೇಕಾನಂದ'ರನ್ನು ಕುರಿತು ಒಂದು ಕೃತಿ ರಚಿಸಿದ್ದಾರೆ. ಈ ಕೃತಿಯು ಅವರ ಜೀವನದ ಪರಿಚಯವನ್ನು ಮಾಡಿಸುತ್ತದೆ.ಬೇಲೂರಿನ ರಾಮಕೃಷ್ಣ ಮಠಕ್ಕೆ ಆಗಿಂದಾಗ ಭೇಟಿಯನ್ನು ನೀಡುತ್ತಿದ್ದರು. ಆಸಕ್ತಿಕರ ಮಾಹಿತಿ ಸ್ವಾಮಿ ವಿವೇಕಾನಂದ: ವೀರಸನ್ಯಾಸದ ತ್ಯಾಗರೂಪ;ಎಸ್‌. ಸೂರ್ಯಪ್ರಕಾಶ ಪಂಡಿತ್‌;12 ಜನವರಿ 2019 ಹಾರ್ವರ್ಡ್ ಮತ್ತು ಕೊಲಂಬಿಯಾ ಪ್ರಾಧ್ಯಾಪಕ ಹುದ್ದೆ;(ಸ್ವಾಮಿ ವಿವೇಕಾನಂದ : ಕಪ್ಪು-ಬಿಳುಪು ಪುಸ್ತಕದ ಆಯ್ದ ಭಾಗ ) ವಿವೇಕಾನಂದರು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪೌರ್ವಾತ್ಯ ತತ್ತ್ವಜ್ಞಾನದ ಗೌರವ ಪ್ರಾಧ್ಯಾಪಕರಾಗಿ ಆಯ್ಕೆಯಾದ ಮೊದಲ ಏಷ್ಯಾ ಖಂಡದ ವ್ಯಕ್ತಿ ಬೆಂಗಳೂರಿನ ಟಾಟಾ ಇನ್ಸ್ಟಿಟ್ಯೂಟ್ ವಿವೇಕಾನಂದರ ಸೂಚನೆಯ ಮೇರೆಗೇ ಪ್ರಾರಂಭವಾದದ್ದು. ಬಾಹ್ಯ ಸಂಪರ್ಕಗಳು ವಿವೇಕಾನಂದ ರಾಮಕೃಷ್ಣ ಮಿಷನ್ ಬೆಳಗಾವಿಯ ಸ್ವಾಮಿ ವಿವೇಕಾನಂದ ಮೆಮೊರಿಯಲ್ ಹಾಲ್‌ ವಿವೇಕಾನಂದರ ಫೋಟೋಗಳು ಉಲ್ಲೇಖಗಳು ಭಾರತೀಯ ಇತಿಹಾಸದ ಪ್ರಮುಖರು ಯೋಗಿಗಳು ಮತ್ತು ಸನ್ಯಾಸಿಗಳು ಸಂತರು ಹಿಂದೂ ಧರ್ಮ ತತ್ವಶಾಸ್ತ್ರಜ್ಞರು ಆಧ್ಯಾತ್ಮ ಚಿಂತಕರು
1221
https://kn.wikipedia.org/wiki/%E0%B2%AE%E0%B3%8B%E0%B2%95%E0%B3%8D%E0%B2%B7%E0%B2%97%E0%B3%81%E0%B2%82%E0%B2%A1%E0%B2%82%20%E0%B2%B5%E0%B2%BF%E0%B2%B6%E0%B3%8D%E0%B2%B5%E0%B3%87%E0%B2%B6%E0%B3%8D%E0%B2%B5%E0%B2%B0%E0%B2%AF%E0%B3%8D%E0%B2%AF
ಮೋಕ್ಷಗುಂಡಂ ವಿಶ್ವೇಶ್ವರಯ್ಯ
ಸರ್ ಎಂ.ವಿ (ಸೆಪ್ಟೆಂಬರ್ ೧೫, ೧೮೬೧ - ಏಪ್ರಿಲ್ ೧೨, ೧೯೬೨) ಎಂದು ಜನಪ್ರಿಯರಾಗಿದ್ದ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ರವರು, ಭಾರತದ ಗಣ್ಯ ಅಭಿಯಂತರರಲ್ಲಿ ಒಬ್ಬರು. ಇವರು ೧೯೧೨ ರಿಂದ ೧೯೧೮ರವರೆಗೆ ಮೈಸೂರು ಸಂಸ್ಥಾನದ ದಿವಾನರಾಗಿದ್ದವರು. ಇವರ ಹುಟ್ಟಿದ ದಿನವನ್ನು ಭಾರತ ದೇಶದಾದ್ಯಂತ ಅಭಿಯಂತರ ದಿನ ಎಂದು ಆಚರಿಸುತ್ತಾರೆ. ಬಾಲ್ಯ, ವಿದ್ಯಾಭ್ಯಾಸ ವಿಶ್ವೇಶ್ವರಯ್ಯನವರು ಸೆಪ್ಟೆಂಬರ್ ೧೫,೧೮೬೦ ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಎಂಬಲ್ಲಿ ಜನಿಸಿದರು. ವಿಶ್ವೇಶ್ವರಯ್ಯನವರ ತಂದೆ 'ಶ್ರೀನಿವಾಸ ಶಾಸ್ತ್ರಿ', ತಾಯಿ 'ವೆಂಕಟಲಕ್ಷ್ಮಮ್ಮ'. ಅವರ ಪೂರ್ವಜರು ಈಗಿನ ಆಂಧ್ರಪ್ರದೇಶದ 'ಮೋಕ್ಷಗುಂಡಂ' ಎಂಬ ಸ್ಥಳದಿಂದ ವಲಸೆ ಬಂದು ಮುದ್ದೇನಹಳ್ಳಿಯಲ್ಲಿ ವಾಸವಾಗಿದ್ದ ಕಾರಣ ಅವರ ಹೆಸರಿನೊಡನೆ ಮೋಕ್ಷಗುಂಡಂ ಸೇರಿಕೊಂಡಿದೆ. ವಿಶ್ವೇಶ್ವರಯ್ಯನವರ ತಂದೆ ಸಂಸ್ಕೃತ ವಿದ್ವಾಂಸರು; ಧರ್ಮ ಶಾಸ್ತ್ರಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದರಲ್ಲದೆ ಆಯುರ್ವೇದ ತಜ್ಞರೂ ಆಗಿದ್ದರು. ಅವರು ೧೫ ವರ್ಷದವರಿದ್ದಾಗಲೇ ತಂದೆಯು ನಿಧನರಾದರು. ವಿಶ್ವೇಶ್ವರಯ್ಯನವರು ತಮ್ಮ ಪ್ರಾಥಮಿಕ ಶಿಕ್ಷಣ ಚಿಕ್ಕಬಳ್ಳಾಪುರದಲ್ಲಿ ಮತ್ತು ಪ್ರೌಢ ಶಿಕ್ಷಣ ಬೆಂಗಳೂರಿನಲ್ಲಿ ನಡೆಯಿತು[]ಮುಗಿಸಿದರು . ೧೮೮೧ ರಲ್ಲಿ ಮದ್ರಾಸು ವಿಶ್ವವಿದ್ಯಾಲಯದಿಂದ ಬಿ.ಎ ಪದವಿಯನ್ನು ಪಡೆದು ನಂತರ ಪುಣೆಯ ವಿಜ್ಞಾನ ಕಾಲೇಜಿನಿಂದ ಸಿವಿಲ್ ಎಂಜಿನಿಯರಿಂಗ್ ಪದವಿಯನ್ನು ಪಡೆದರು. ವೃತ್ತಿಜೀವನ ನಂತರ ವಿಶ್ವೇಶ್ವರಯ್ಯನವರು ೧೮೮೪ರಲ್ಲಿ ಮುಂಬಯಿ ನಗರದಲ್ಲಿ ಲೋಕೋಪಯೋಗಿ ಇಲಾಖೆಯನ್ನು ಸೇರಿದರು ಇದಾದ ನಂತರ ಭಾರತೀಯ ನೀರಾವರಿ ಆಯೋಗದಿಂದ ಅವರಿಗೆ ಆಮಂತ್ರಣ ಬಂದಿತು. ಈ ಆಯೋಗವನ್ನು ಸೇರಿದ ನಂತರ ದಖನ್ ಪ್ರಸ್ತಭೂಮಿಯಲ್ಲೇ ಉತ್ತಮವಾದ ನೀರಾವರಿ ವ್ಯವಸ್ಥೆಯನ್ನು ವಿಶ್ವೇಶ್ವರಯ್ಯನವರು ಪರಿಚಯಿಸಿದರು. ಸರ್ ಎಂ. ವಿ. ಯವರು ಅರ್ಥರ್ ಕಾಟನ್ ರವರಿಂದ ಬಹಳಷ್ಟು ಪ್ರಭಾವಿತರಾಗಿದ್ದರು. ಕಾವೇರಿ ನದಿಗೆ ಅಣೆಕಟ್ಟು ಕಟ್ಟುವಲ್ಲಿ ಅವರು ತಿರುಚನಾಪಳ್ಳಿಯಲ್ಲಿ ಚೋಳ ರಾಜರಿಂದ ನಿರ್ಮಿಸಲ್ಪಟ್ಟ ಹಾಗೂ ೧೮ನೇ ಶತಮಾನದ ಅರ್ಧದಲ್ಲಿ ಅರ್ಥರ್ ಕಾಟನ್ ರವರಿಂದ ಸಂಪೂರ್ಣವಾಗಿ ನವೀಕರಿಸಲ್ಪಟ್ಟ ಬೃಹತ್ ಅಣೆಕಟ್ಟು [ಗ್ರಾಂಡ್ ಅಣಿಕಟ್] ನ್ನು ನೋಡಿ ಪ್ರಭಾವಿತರಾಗಿದ್ದರು. ನಂತರ ಮಹಾರಾಜರಲ್ಲಿ ಇದನ್ನು ವರದಿ ಮಾಡಿದ್ದರು. ಅಣೆಕಟ್ಟುಗಳಲ್ಲಿ ಉಪಯೋಗಿಸಲಾಗುವ 'ಸ್ವಯಂಚಾಲಿತ ಫ್ಲಡ್ ಗೇಟ್ ವಿನ್ಯಾಸ' ವೂಂದನ್ನು ಕಂಡು ಹಿಡಿದು ಅದಕ್ಕಾಗಿ 'ಪೇಟೆಂಟ್' ಪಡೆದರು. ಮೊದಲ ಬಾರಿಗೆ ೧೯೦೩ ರಲ್ಲಿ ಈ ಫ್ಲಡ್ ಗೇಟ್ ಗಳು ಪುಣೆಯ 'ಖಡಕ್ವಾಸ್ಲಾ' ಅಣೆಕಟ್ಟಿನಲ್ಲಿ ಸ್ಥಾಪಿತವಾದವು. ಇಲ್ಲಿ ಅವು ಯಶಸ್ವಿಯಾದ ನಂತರ 'ಗ್ವಾಲಿಯರ್ ನ ಟಿಗ್ರಾ ಅಣೆಕಟ್ಟು' ಮತ್ತು ಕರ್ನಾಟಕದ 'ಕೃಷ್ಣರಾಜಸಾಗರ' ಅಣೆಕಟ್ಟುಗಳಲ್ಲಿ ಸಹ ಉಪಯೋಗಿತವಾದವು. ಈ ಗೇಟ್ ಗಳ ಉದ್ದೇಶ ಅಣೆಕಟ್ಟಿಗೆ ಹಾನಿ ಮಾಡದೆ ಗರಿಷ್ಠ ಮಟ್ಟದ ನೀರನ್ನು ಶೇಖರಿಸಿಡುವುದೇ ಆಗಿತ್ತು. ಕೃಷ್ಣರಾಜ ಸಾಗರವನ್ನು ಕಟ್ಟಿದಾಗ ಅದು ಆ ಕಾಲದಲ್ಲಿ ಭಾರತದ ಅತ್ಯಂತ ದೊಡ್ಡ ಅಣೆಕಟ್ಟು. ವಿಶ್ವೇಶ್ವರಯ್ಯನವರು ದೇಶದಾದ್ಯಂತ ಪ್ರಸಿದ್ಧರಾದದ್ದು ಹೈದರಾಬಾದ್ ನಗರವನ್ನು ಪ್ರವಾಹಗಳಿಂದ ರಕ್ಷಿಸಲು ಪ್ರವಾಹ ರಕ್ಷಣಾ ವ್ಯವಸ್ಥೆಯನ್ನು ಅವರು ಏರ್ಪಡಿಸಿದಾಗ. ಇವರ ಮುಖ್ಯ ಸೇವಕ ಪ್ರಶಾಂತ್. ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಮ್ಯೂಸಿಯಮ್ ೧೯೦೮ರಲ್ಲಿ ಸ್ವಯಂ-ನಿವೃತ್ತಿ ಘೋಷಿಸಿದ ವಿಶ್ವೇಶ್ವರಯ್ಯನವರು ನಂತರ ಮೈಸೂರು ಸಂಸ್ಥಾನದ ದಿವಾನರಾಗಿ ಸೇವೆ ಸಲ್ಲಿಸಿದರು. ಮಹಾರಾಜ ಕೃಷ್ಣರಾಜ ಒಡೆಯರ್ ರವರ ಜೊತೆ ಮೈಸೂರು ರಾಜ್ಯದ ಸರ್ವತೋಮುಖ ಬೆಳವಣಿಗೆಗೆ ಕೆಲಸ ಮಾಡಿದರು. ೧೯೧೭ ರಲ್ಲಿ ಬೆಂಗಳೂರಿನಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜನ್ನು ಸ್ಥಾಪಿಸಿದರು. ಇದೇ ಕಾಲೇಜಿಗೆ ನಂತರ ಅವರ ಹೆಸರನ್ನೇ ಇಡಲಾಯಿತು (ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್). ಮೈಸೂರು ವಿಶ್ವವಿದ್ಯಾಲಯದ ಬೆಳವಣಿಗೆಗಾಗಿಯೂ ಶ್ರಮಿಸಿದರು ವೃತ್ತಿ ಜೀವನ ವಿಶ್ವೇಶ್ವರಯ್ಯನವರು ನಂತರ ಮುಂಬಯಿ ನಗರದಲ್ಲಿ ಲೋಕೋಪಯೋಗಿ ಇಲಾಖೆಯನ್ನು ೧೮೮೪ರಲ್ಲಿ ಸೇರಿದರು. ಇದಾದ ಮೇಲೆ ಭಾರತೀಯ ನೀರಾವರಿ ಕಮಿಷನ್ ಇಂದ ಅವರಿಗೆ ಆಮಂತ್ರಣ ಬಂದಿತು. ಈ ಕಮಿಷನ್ ಅನ್ನು ಸೇರಿದ ನಂತರ ದಖನ್ ಪ್ರಸ್ತಭೂಮಿಯಲ್ಲೇ ಉತ್ತಮವಾದ ನೀರಾವರಿ ವ್ಯವಸ್ಥೆಯನ್ನು ವಿಶ್ವೇಶ್ವರಯ್ಯನವರು ಪರಿಚಯಿಸಿದರು. ಸರ್ ಎಂ. ವಿ. ಯವರು ಅರ್ಥರ್ ಕಾಟನ್ ರವರಿಂದ ಬಹಳಷ್ಟು ಪ್ರಭಾವಿತರಾಗಿದ್ದರು. ಕಾವೇರಿ ನದಿಗೆ ಅಣೆಕಟ್ಟು ಕಟ್ಟುವಲ್ಲಿ ಅವರು ತಿರುಚನಾಪಳ್ಳಿಯಲ್ಲಿ ಚೋಳ ರಾಜರಿಂದ ನಿರ್ಮಿಸಲ್ಪಟ್ಟ ಹಾಗೂ ೧೮ನೇ ಶತಮಾನದ ಅರ್ಧದಲ್ಲಿ ಅರ್ಥರ್ ಕಾಟನ್ ರವರಿಂದ ಸಂಪೂರ್ಣವಾಗಿ ನವೀಕರಿಸಲ್ಪಟ್ಟ ಬೃಹತ್ ಅಣೆಕಟ್ಟು [ಗ್ರಾಂಡ್ ಅಣಿಕಟ್] ನ್ನು ನೋಡಿ ಪ್ರಭಾವಿತರಾಗಿದ್ದರು. ನಂತರ ಮಹಾರಾಜರಲ್ಲಿ ಇದನ್ನು ವರದಿ ಮಾಡಿದ್ದರು. ಅಣೆಕಟ್ಟುಗಳಲ್ಲಿ ಉಪಯೋಗಿಸಲಾಗುವ 'ಸ್ವಯಂಚಾಲಿತ ಫ್ಲಡ್ ಗೇಟ್ ವಿನ್ಯಾಸ' ವೊಂದನ್ನು ಕಂಡು ಹಿಡಿದು ಅದಕ್ಕಾಗಿ 'ಪೇಟೆಂಟ್' ಪಡೆದರು. ಮೊದಲ ಬಾರಿಗೆ ೧೯೦೩ ರಲ್ಲಿ ಈ ಫ್ಲಡ್ ಗೇಟ್ ಗಳು ಪುಣೆಯ 'ಖಡಕ್ವಾಸ್ಲಾ' ಅಣೆಕಟ್ಟಿನಲ್ಲಿ ಸ್ಥಾಪಿತವಾದವು. ಇಲ್ಲಿ ಅವು ಯಶಸ್ವಿಯಾದ ನಂತರ 'ಗ್ವಾಲಿಯರ್ ನ ಟಿಗ್ರಾ ಅಣೆಕಟ್ಟು' ಮತ್ತು ಕರ್ನಾಟಕದ 'ಕೃಷ್ಣರಾಜಸಾಗರ' ಅಣೆಕಟ್ಟುಗಳಲ್ಲಿ ಸಹ ಉಪಯೋಗಿತವಾದವು. ಈ ಗೇಟ್ ಗಳ ಉದ್ದೇಶ ಅಣೆಕಟ್ಟಿಗೆ ಹಾನಿ ಮಾಡದೆ ಗರಿಷ್ಠ ಮಟ್ಟದ ನೀರನ್ನು ಶೇಖರಿಸಿಡುವುದೇ ಆಗಿತ್ತು. ಕೃಷ್ಣರಾಜ ಸಾಗರವನ್ನು ಕಟ್ಟಿದಾಗ ಅದು ಆ ಕಾಲದಲ್ಲಿ ಭಾರತದ ಅತ್ಯಂತ ದೊಡ್ಡ ಅಣೆಕಟ್ಟು. ವಿಶ್ವೇಶ್ವರಯ್ಯನವರು ದೇಶದಾದ್ಯಂತ ಪ್ರಸಿದ್ಧರಾದದ್ದು ಹೈದರಾಬಾದ್ ನಗರವನ್ನು ಪ್ರವಾಹಗಳಿಂದ ರಕ್ಷಿಸಲು ಪ್ರವಾಹ ರಕ್ಷಣಾ ವ್ಯವಸ್ಥೆಯನ್ನು ಅವರು ಏರ್ಪಡಿಸಿದಾಗ. ಇವರ ಮುಖ್ಯ ಸೇವಕ ಪ್ರಶಾಂತ್. ದಿವಾನ ೧೯೦೮ರಲ್ಲಿ ಸ್ವಯಂ-ನಿವೃತ್ತಿ ಘೋಷಿಸಿದ ವಿಶ್ವೇಶ್ವರಯ್ಯನವರು ನಂತರ ಮೈಸೂರು ಸಂಸ್ಥಾನದ ದಿವಾನರಾಗಿ ಸೇವೆ ಸಲ್ಲಿಸಿದರು. ಮಹಾರಾಜ ಕೃಷ್ಣರಾಜ ಒಡೆಯರ್ ಅವರ ಜೊತೆ ಮೈಸೂರು ರಾಜ್ಯದ ಸರ್ವತೋಮುಖ ಬೆಳವಣಿಗೆಗೆ ಕೆಲಸ ಮಾಡಿದರು. ೧೯೧೭ ರಲ್ಲಿ ಬೆಂಗಳೂರಿನಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜನ್ನು ಸ್ಥಾಪಿಸಿದರು. ಇದೇ ಕಾಲೇಜಿಗೆ ನಂತರ ಅವರ ಹೆಸರನ್ನೇ ಇಡಲಾಯಿತು (ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್). ಮೈಸೂರು ವಿಶ್ವವಿದ್ಯಾಲಯದ ಬೆಳವಣಿಗೆಗಾಗಿಯೂ ಶ್ರಮಿಸಿದರು. ವೃತ್ತಿ ಜೀವನದ ಘಟ್ಟಗಳು ೧೮೮೫ - ಬಾಂಬೆಯಲ್ಲಿ ಸರ್ವಿಸ್ ಇಂಜಿನಿಯರ್ ಆಗಿ ನೇಮಕ, ನಾಸಿಕ್ ಮತ್ತು ಪುಣೆಯಲ್ಲಿ ಕಾರ್ಯ ನಿರ್ವಹಣೆ. ೧೮೯೪ - ಸಿಂಧ್ ಪ್ರಾಂತದ ಸುಕ್ಕೂರ್ ಪುರಸಭೆಯಲ್ಲಿ ನೀರು ಸರಬರಾಜಿಗೆ ಸಂಭಂದಪಟ್ಟ ವಿನ್ಯಾಸ ಹಾಗು ಕಾರ್ಯನಿರ್ವಹಣೆ. ೧೮೯೬ - ಸೂರತ್ ನಲ್ಲಿ ಎಸ್ಎಕ್ಯುಟಿವ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಣೆ. ೧೮೯೭ - ೯೯ :ಪುಣೆಯಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಸೇವೆ. ೧೮೯೮ - ಚೀನಾ ಹಾಗು ಜಪಾನ್ ಭೇಟಿ ೧೮೯೯ - ಪುಣೆಯಲ್ಲಿ ವ್ಯವಸಾಯ ಕಾರ್ಯನಿರ್ವಾಹಕ ಇಂಜಿನಿಯರ್ ೧೯೦೧ - ಬಾಂಬೆಯಲ್ಲಿಒಳಚರಂಡಿ ಕಾಮಗಾರಿ ಇಂಜಿನಿಯರ್ ಹಾಗು ಒಳಚರಂಡಿ ಮಂಡಳಿಯ ಸದಸ್ಯ ೧೯೦೧ - ಭಾರತೀಯ ವ್ಯವಸಾಯ ಆಯೋಗಕ್ಕೆ ದಾಖಲೆಗಳ ಸಲ್ಲಿಕೆ. ೧೯೦೩ - ಫೈಫ್ ಕೆರೆಗೆ ತಾವೇ ಪೇಟೆಂಟ್ ಪಡೆದುಕೊಂಡ ಅತ್ಯಾಧುನಿಕ ವಿಧಾನ ಬಳಸಿ ಸ್ವಯಂಚಾಲಿತ ಆಣೆಕಟ್ಟು ದ್ವಾರಗಳನ್ನು ಅಭಿವೃದ್ಧಿ ಪಡಿಸಿ ಅಳವಡಿಸುವ ಮೂಲಕ ಭಾರತ ನೀರಾವರಿ ಕ್ಷೇತ್ರದಲ್ಲಿ ಹೊಸ ಭಾಷ್ಯ. ೧೯೦೩ - ವ್ಯವಸಾಯ ದಲ್ಲಿ 'ಬ್ಲಾಕ್ ಸಿಸ್ಟಮ್' ಎಂಬ ಹೊಸ ವಿಧಾನ ಪರಿಚಯಿಸಿದ್ದು. ೧೯೦೪ - ಶಿಮ್ಲಾ ವ್ಯವಸಾಯ ಆಯೋಗದಲ್ಲಿ ಬಾಂಬೆ ಸರ್ಕಾರವನ್ನು ಪ್ರತಿನಿಧಿಸಿದ್ದು. ೧೯೦೭ - ಸುಪೆರಿಂಡೆಂಟ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಣೆ. ೧೯೦೮ - ಈಜಿಪ್ಟ್, ಕೆನಡಾ, ಅಮೆರಿಕಾ ಹಾಗು ರಷ್ಯಾ ದೇಶಗಳಿಗೆ ಭೇಟಿಕೊಟ್ಟಿದ್ದು. ೧೯೦೯ - ಮೂಸಿ ನದಿ ಪ್ರವಾಹದಿಂದ ತತ್ತರಿಸಿದ ಹೈದೆರಾಬಾದ್ ನಗರಕ್ಕೆ ವಿಶೇಷ ನಿರ್ದೇಶಕ ಇಂಜಿನಿಯರ್ ಆಗಿ ನೇಮಕ, ಪ್ರವಾಹದಿಂದ ಹಾಳಾದ ಎಲ್ಲ ಇಂಜಿನಿಯರಿಂಗ್ ಕ್ಷೇತ್ರಕ್ಕೆ ಸಂಭಂದಿಸಿದ ವಿಚಾರಗಳ ಪುನರ್ ನಿರ್ಮಾಣಕ್ಕೆ ಒತ್ತು. ೧೯೦೯ - ಬ್ರಿಟೀಷ್ ಸೇವೆಯಿಂದ ನಿವೃತ್ತಿ. ೧೯೦೯ - ಮೈಸೂರು ಸರ್ಕಾರದ ಮುಖ್ಯ ಇಂಜಿನಿಯರ್ ಹಾಗು ಕಾರ್ಯದರ್ಶಿಯಾಗಿ ನೇಮಕ. ೧೯೧೩ - ಮೈಸೂರು ದಿವಾನರಾಗಿ ನೇಮಕ , ಸಾರ್ವಜನಿಕ ಕಾಮಗಾರಿ ಹಾಗು ರೈಲ್ವೆ ಇಲಾಖೆ ಮೇಲ್ವಿಚಾರಣೆ. ೧೯೨೭ - ೧೯೫೫ : ಟಾಟಾ ಸ್ಟೀಲ್ ನ ನಿರ್ದೇಶಕರ ಮಂಡಳಿಯಲ್ಲಿ ಒಬ್ಬ ನಿರ್ದೇಶಕರಾಗಿ ಸೇವೆ . ಗೌರವಗಳು ವಿಶ್ವೇಶ್ವರಯ್ಯನವರು ದಿವಾನರಾಗಿದ್ದಾಗ ಬ್ರಿಟೀಷ ಸರ್ಕಾರ ಅವರಿಗೆ "ಸರ್" ಪದವಿಯನ್ನು ನೀಡಿತು. ೧೯೫೫ ರಲ್ಲಿ ಭಾರತ ಸರ್ಕಾರದ ಅತ್ಯುಚ್ಚ ಗೌರವವಾದ ಭಾರತ ರತ್ನ ಲಭಿಸಿತು. ಸರ್. ಎಂ. ವಿಶ್ವೇಶ್ವರಯ್ಯನವರು ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗರು. ಕರ್ನಾಟಕದಲ್ಲಿ ಹೆಚ್ಚಿನ ಶಾಲಾ ಕಾಲೇಜುಗಳು, ಐ.ಟಿ.ಐ, ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಕಾಲೇಜುಗಳಿಗೆ ಇವರ ಹೆಸರಿಟ್ಟು ಗೌರವಿಸಲಾಗಿದೆ. ಭಾರತ ದೇಶದಲ್ಲಿ ಮೊದಲ EDUSAT ತರಗತಿಗಳನ್ನು ಆರಂಭಿಸಿದ ಕೀರ್ತಿ ಬೆಳಗಾವಿಯಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಸಲ್ಲುತ್ತದೆ. ಇದರ ಮುಖ್ಯ ಉದ್ದೇಶ ವಿಶ್ವವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳಿಗೂ ಉತ್ತಮ ಶಿಕ್ಷಣ ನೀಡುವುದು. ಕರ್ನಾಟಕದಲ್ಲಿನ ಎಲ್ಲಾ ಇಂಜಿನಿಯರಿಂಗ್ ಕಾಲೇಜುಗಳು ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಂಗವಾಗಿವೆ. ಇಂಜಿನಿಯರ್ ಕ್ಷೇತ್ರದಲ್ಲಿ ಇವರು ಸಲ್ಲಿಸಿರುವ ಅಪಾರ ಸೇವೆಯ ಸ್ಮರಣೆಗಾಗಿ ಇವರ ಜನ್ಮ ದಿನವನ್ನು(ಸೆಪ್ಟೆಂಬರ್ ೧೫) ಭಾರತದಲ್ಲಿ ಪ್ರತಿವರ್ಷ ಇಂಜಿನಿಯರ್್ಸ ದಿನವಾಗಿ ಆಚರಿಸಲಾಗುತ್ತದೆ. ಪುಸ್ತಕಗಳು Memoirs of my working life (ನನ್ನ ವೃತ್ತಿ ಜೀವನದ ನೆನಪುಗಳು - ಕನ್ನಡಕ್ಕೆ ಡಾ. ಗಜಾನನ ಶರ್ಮ) Reconstructing India(ಭಾರತವನ್ನು ಪುನರ್ನಿರ್ಮಿಸುವುದು) in the year 1920 (translated by suresh.H choyal seervi) Nation building(ರಾಷ್ಟ್ರ ಕಟ್ಟಡ) In the year 1937 (written and translated by suresh.H choyal seervi) ಹೊರಗಿನ ಸಂಪರ್ಕಗಳು ಇನ್ಸ್ಟಿಟ್ಯುಟ್ ಆಫ್ ಇಂಜಿನಿಯರರ್ಸ್(ಭಾರತ) ಸಂಪಾದಿಸಿರುವ ವಿಶ್ವೇಶ್ವರಯ್ಯ ಕುರಿತ ಕೆಲವು ಪುಸ್ತಕಗಳ ಪಟ್ಟಿ Sir Mokshagundam Visvesvaraya – A Visionary Engineer par Excellence ವಿಶ್ವೇಶ್ವರಯ್ಯನವರ ಕುರಿತ ಇನ್ನೊಂದು ವ್ಯಕ್ತಿ ಚಿತ್ರಣ ವಿಶ್ವೇಶ್ವರಯ್ಯನವರ ಕುರಿತ ಇನ್ನೊಂದು ವ್ಯಕ್ತಿ ಚಿತ್ರಣ ಹಲವು ಆಶ್ಚರ್ಯಕರ ಮಾಹಿತಿಗಳೊಂದಿಗೆ ವಿಜ್ಞಾನ ಪ್ರಸಾರದಲ್ಲಿ ಮಾಹಿತಿ ಮೈಸೂರ್ ಬ್ಯಾಂಕ್ ತಾಣದಲ್ಲಿ ಸ್ಥಾಪಕರ ನೆನೆಕೆ ವಿಶ್ವೇಶ್ವರಯ್ಯನವರ ಫೋಟೋಗಳು ಸರ್ ಎಂ.ವಿ-ಐತಿಹ್ಯ ಮತ್ತು ವಾಸ್ತವ- ಉಲ್ಲೇಖ ಭಾರತ ರತ್ನ ಪುರಸ್ಕೃತರು ಮೈಸೂರು ಸಂಸ್ಥಾನದ ದಿವಾನರು ೧೮೬೧ ಜನನ ೧೯೬೨ ನಿಧನ ಕರ್ನಾಟಕದ ಏಕೀಕರಣಕ್ಕಾಗಿ ದುಡಿದ ಮಹನೀಯರು
1223
https://kn.wikipedia.org/wiki/%E0%B2%B5%E0%B3%80%E0%B2%B0%E0%B3%87%E0%B2%82%E0%B2%A6%E0%B3%8D%E0%B2%B0%20%E0%B2%B9%E0%B3%86%E0%B2%97%E0%B3%8D%E0%B2%97%E0%B2%A1%E0%B3%86
ವೀರೇಂದ್ರ ಹೆಗ್ಗಡೆ
ಡಾ. ವೀರೇಂದ್ರ ಹೆಗ್ಗಡೆ ಧರ್ಮಸ್ಥಳ ಕ್ಷೇತ್ರದಲ್ಲಿರುವ ಮಂಜುನಾಥೇಶ್ವರ ದೇವಸ್ಥಾನದ ಧರ್ಮಾಧಿಕಾರಿಗಳು. ಸಮಾಜ ಸೇವೆಗೆ ಇವರು ಪ್ರಸಿದ್ಧರಾಗಿದ್ದಾರೆ. ವಿದ್ಯಾಭ್ಯಾಸ ಬಂಟ್ವಾಳದ ಬೋರ್ಡ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ. ಉಜಿರೆಯಲ್ಲಿ ಪ್ರೌಢ ಶಿಕ್ಷಣ. ಸಿದ್ಧವನ ಗುರುಕುಲದಲ್ಲಿ ವಿದ್ಯಾಭ್ಯಾಸ. ಬೆಂಗಳೂರಿನ ಶೇಷಾದ್ರಿಪುರಂ ಪ್ರೌಢಶಾಲೆ, ಸೈಂಟ್ ಜೋಸೆಫ್ ಶಾಲೆಯಲ್ಲಿ ಶಿಕ್ಷಣ. ೧೯೬೩ರಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ತೇರ್ಗಡೆ. ಬೆಂಗಳೂರಿನ ಸೈಂಟ್ ಜೋಸೆಫ್ ಜೂನಿಯರ್ ಕಾಲೇಜಿನಲ್ಲಿ ಕಾಮರ್ಸ್ ಶಿಕ್ಷಣ. ಕಾಮರ್ಸ್ ಬೇಡ ಅನ್ನಿಸಿ, ಪಿಯುಸಿ ಬಳಿಕ ಕಲಾ ವಿಭಾಗವನ್ನು ಅವರು ಪ್ರವೇಶಿಸಿದರು. ನಂತರ ಬಿ.ಎ ಪದವೀಧರರಾದರು. ಕಾನೂನು ಪದವಿ ಪಡೆವ ಅವರ ಆಸೆಗೆ ಅರ್ಧಕ್ಕೆ ತೆರೆ ಬಿತ್ತು. ಅವರ ಬದುಕಿನಲ್ಲಿ ಅದು ಮಹತ್ವದ ತಿರುವು. ಧರ್ಮಾಧಿಕಾರಿ ರತ್ನವರ್ಮ ಹೆಗ್ಗಡೆ ಅವರು ಅನಾರೋಗ್ಯಕ್ಕೆ ಗುರಿಯಾದರು. ಅವರ ಆರೈಕೆಯಲ್ಲಿ ವೀರೇಂದ್ರ ಹೆಗ್ಗಡೆ ತೊಡಗಿಸಿಕೊಂಡರು. ೧೯೬೮ರಲ್ಲಿ ರತ್ನವರ್ಮ ಹೆಗ್ಗಡೆ ನಿಧನರಾದರು. ಆಮೇಲೆ ಇದೇ ವರ್ಷ ಅ.೨೪ರಂದು ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಯಾಗಿ ನೇಮಕಗೊಂಡರು. ತಮ್ಮ ೨೦ನೇ ವಯಸ್ಸಿನಲ್ಲಿಯೇ ಅವರು ಧರ್ಮಸ್ಥಳ ಶ್ರೀಕ್ಷೇತ್ರದ ೨೧ನೇ ಧರ್ಮಾಧಿಕಾರಿಯಾಗಿ ಪಟ್ಟಾಭಿಷಿಕ್ತರಾದರು. ಪರಿಚಯ ವೀರೇಂದ್ರ ಹೆಗ್ಗಡೆಯವರು ನವೆಂಬರ್ ೨೫, ೧೯೪೮ ರಂದು ಜನಿಸಿದರು. ಅವರು ೨೦ ವರ್ಷದವರಿರುವಾಗಲೆ ಮಂಜುನಾಥೇಶ್ವರ ದೇವಸ್ಥಾನದ ಧರ್ಮಾಧಿಕಾರಿಯಾದರು. ಸ್ವತಃ ಜೈನರಾಗಿ ಹಿಂದೂ ದೇವಸ್ಥಾನದ ಧರ್ಮದರ್ಶಿಯಾಗಿ ಕಾರ್ಯ ನಿರ್ವಹಿಸುವ ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳ ಕ್ಷೇತ್ರಕ್ಕೆ ಧಾರ್ಮಿಕ ಸಹಿಷ್ಣುತೆಯ ಕ್ಷೇತ್ರ ಎಂದು ಹೆಸರು ಬರುವಂತೆ ಮಾಡಿದ್ದಾರೆ.ಧರ್ಮಸ್ಥಳದ ಬೃಹತ್ ಬಾಹುಬಲಿಯ ವಿಗ್ರಹವನ್ನು ಕೆತ್ತಿಸಿ ಸ್ಥಾಪಿಸಿದವರು ಇವರೇ. ಧರ್ಮಸ್ಥಳದಲ್ಲಿ ಪ್ರತಿ ದಿನ ಆಗಮಿಸುವವರೆಲ್ಲರಿಗೂ ಉಚಿತ ಊಟದ ವ್ಯವಸ್ಥೆಯುಂಟು. ಪ್ರತಿ ದಿನವೂ ಸುಮಾರು ೩೦೦೦ ಜನರ ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಪರಿಹಾರ ಕಾರ್ಯಕ್ರಮಗಳು ನಂತರ ಧರ್ಮಸ್ಥಳ ಮತ್ತು ಇತರ ವಿವಿಧೆಡೆಗಳಲ್ಲಿ ಸಮಾಜ ಸೇವೆ, ಆರೋಗ್ಯ ವಿಕಾಸ, ಶಿಕ್ಷಣ ಮುಂತಾದ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ. ಉತ್ತರ ಕರ್ನಾಟಕದಲ್ಲಿ ಕ್ಷಾಮ ಬಂದಾಗ ಅಗತ್ಯವಿದ್ದವರಿಗೆ ಪರಿಹಾರ ಕಾರ್ಯಕ್ರಮವನ್ನು ಹಮ್ಮಿ ಕೊಂಡಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ೧೯೭೪ ರ ಪ್ರವಾಹ ಮತ್ತು ಗದಗ್ ನಲ್ಲಿ ೧೯೯೨ ರಲ್ಲಿ ಪ್ರವಾಹ ಉಂಟಾದಾಗಲೂ ಪುನರ್ನಿರ್ಮಾಣ ಕಾರ್ಯ ಮತ್ತು ಪರಿಹಾರಗಳಿಗಾಗಿ ಸಹಾಯ ಮಾಡಿದರು. ಮಂಗಳೂರಿನಲ್ಲಿ ಇತ್ತೀಚಿನ ಪ್ರವಾಹದ ಸಮಯದಲ್ಲೂ ಸುಮಾರು ೨ ಲಕ್ಷ ಇಟ್ಟಿಗೆಗಳನ್ನು ಪುನರ್ನಿರ್ಮಾಣಕ್ಕಾಗಿ ಒದಗಿಸಿಕೊಟ್ಟರು. ಗ್ರಾಮೀಣಾಭಿವೃದ್ಧಿ ವೀರೇಂದ್ರ ಹೆಗ್ಗಡೆಯವರು ಹಲವಾರು ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ೧೯೮೨ ರಲ್ಲಿ ಆರಂಭಿಸಲ್ಪಟ್ಟ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬೆಳ್ತಂಗಡಿಯ ೮೧ ಗ್ರಾಮಗಳಲ್ಲಿ ೧೮,೦೦೦ ಮನೆತನಗಳಿಗೆ ಸಹಾಯವನ್ನೊದಗಿಸುತ್ತಿದೆ. ೧೯೭೨ ರಿಂದ ಆರಂಭಗೊಂಡು ಧರ್ಮಸ್ಥಳದಲ್ಲಿ "ಸಾಮೂಹಿಕ ವಿವಾಹ"ಗಳನ್ನು ಆರಂಭಿಸಿದರು. ಈಗ ವಾರ್ಷಿಕವಾಗಿ ೫೦೦ಕ್ಕೂ ಹೆಚ್ಚು ದಂಪತಿಗಳು ಧರ್ಮಸ್ಥಳದಲ್ಲಿ ವಿವಾಹವಾಗುತ್ತಾರೆ. ಪ್ರತಿಯೊಬ್ಬರಿಗೂ ಅವರವರ ಧಾರ್ಮಿಕ ವಿಧಿಯನುಸಾರ ವಿವಾಹ ನಡೆಸಲಾಗುತ್ತದೆ. ಈಗ 28 ಜಿಲ್ಲೆಗಳಲ್ಲಿ ಯೋಜನೆ ಇದೆ. ನಮ್ಮ ರಾಜ್ಯ ಅಲ್ಲದೇ ಪಕ್ಕದ ಕೇರಳ ರಾಜ್ಯಕ್ಕೂ ಯೋಜನೆ ವಿಸ್ತರಣೆಯಾಗಿದೆ. ಆರೋಗ್ಯ ಆರೋಗ್ಯ ವಿಕಾಸಕ್ಕಾಗಿ ವೀರೇಂದ್ರ ಹೆಗ್ಗಡೆಯವರು ಬಹಳಷ್ಟು ದುಡಿದಿದ್ದಾರೆ. ಸಂಚಾರಿ ಆಸ್ಪತ್ರೆಗಳು, ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಸಂಸ್ಥೆಯವರು ನಡೆಸುವ ಕ್ಷಯರೋಗ ಚಿಕಿತ್ಸಾಲಯ (ಮಂಗಳೂರು), ಉಡುಪಿ ಮತ್ತು ಹಾಸನಗಳಲ್ಲಿ ಆಯುರ್ವೇದ ಆಸ್ಪತ್ರೆ, ಮಂಗಳೂರಿನ ಎಸ್ ಡಿ ಎಮ್ ಕಣ್ಣಿನ ಆಸ್ಪತ್ರೆ ಮತ್ತು ದಂತ ಚಿಕಿತ್ಸಾಲಯ, ಯೋಗ ತರಬೇತಿ ಶಿಬಿರಗಳು ಮೊದಲಾಗಿ ಅನೇಕ ಸಂಸ್ಥೆ-ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ. ಶಿಕ್ಷಣ ವೀರೇಂದ್ರ ಹೆಗ್ಗಡೆಯವರು ಸ್ಥಾಪಿಸಿದ ಶ್ರೀ ಮಂಜುನಾಥೇಶ್ವರ ಸಾಂಸ್ಕೃತಿಕ ಸಂಶೋಧನಾ ಕೇಂದ್ರವು ಧರ್ಮ, ಸಾಹಿತ್ಯ ಮತ್ತು ಕಲೆಯ ವಿಷಯಗಳ ಬಗ್ಗೆ ಸಂಶೋಧನೆಯನ್ನು ನಡೆಸುತ್ತಾ ಬಂದಿದೆ. ಅನೇಕ ಸಮಕಾಲೀನ ಮತ್ತು ಪ್ರಾಯೋಗಿಕ ಶೈಕ್ಷಣಿಕ ಸಂಸ್ಥೆ - ಕಾರ್ಯಕ್ರಮಗಳನ್ನೂ ಹೆಗ್ಗಡೆಯವರು ನಡೆಸುತ್ತಿದ್ದಾರೆ. ಉಚಿತ ವಿದ್ಯಾರ್ಥಿ ನಿಲಯಗಳು, ಹಲವಾರು ಪ್ರಾಥಮಿಕ, ಪ್ರೌಢ ಶಾಲೆಗಳು ಮತ್ತು ಕಾಲೇಜುಗಳನ್ನು ಸ್ಥಾಪಿಸಿದ್ದಾರೆ.... ಸಂಸ್ಕೃತಿ ಕರ್ನಾಟಕದ ವಿಶಿಷ್ಟ ನೃತ್ಯ ಪದ್ಧತಿಯಾದ ಯಕ್ಷಗಾನದ ಬೆಳವಣಿಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಹಾಗೆಯೇ ಇತರ ಕುಶಲ ಕಲೆಗಾರಿಕೆಗಳಿಗೆ ಸಂಬಂಧಪಟ್ಟಂತೆ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಧರ್ಮೋತ್ಥಾನ ಟ್ರಸ್ಟ್‌ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು ಡಾ.ಡಿ. ವೀರೇಂದ್ರ ಹೆಗ್ಗಡೆ, ಪ್ರಾಚೀನ ದೇವಾಲಯಗಳ ಜೀರ್ಣೋದ್ಧಾರವನ್ನು ೧೯೯೧ರಿಂದ ಧರ್ಮೋತ್ಥಾನ ಟ್ರಸ್ಟ್‌ನಿಂದ ಕೈಗೊಳ್ಳಲಾಗುತ್ತಿದೆ. ಧರ್ಮೋತ್ಥಾನ ಟ್ರಸ್ಟ್ ನಾಡಿನಾದ್ಯಂತ ದೇವಾಲಯಗಳ ಜೀರ್ಣೋದ್ಧಾರ ಕೈಗೆತ್ತಿಕೊಂಡಿದೆ. ಪೂಜೆ ನಡೆಯುವ ದೇವಸ್ಥಾನಕ್ಕೆ ಮೊದಲ ಆದ್ಯತೆ. ಈಗ ಈ ಸಂಖ್ಯೆ ೧೭೧ ದಾಟಿದೆ. ಇವುಗಳಲ್ಲಿ ೧೫೪ ದೇವಸ್ಥಾನಗಳ ಕೆಲಸ ಪೂರ್ಣಗೊಂಡಿದೆ. ೧೬ ದೇವಸ್ಥಾನಗಳಲ್ಲಿ ಪೂಜಾವಿಧಿ ಪ್ರಾರಂಭವಾಗಬೇಕು. ೧೧೨ ದೇವಸ್ಥಾನಗಳ ಕೆಲಸಕ್ಕೆ ಪ್ರಾಚ್ಯವಸ್ತು ಇಲಾಖೆ ಸಹಭಾಗಿತ್ವ ಸಿಕ್ಕಿದೆ. ಈವರೆಗೆ ಟ್ರಸ್ಟ್ ರು. ೧೪೯೪ ಲಕ್ಷ ವೆಚ್ಚ ಮಾಡಿದ್ದು, ರು. ೫೬೧ ಲಕ್ಷ ಟ್ರಸ್ಟ್‌ನಿಂದ, ರು. ೪೪೯ ಲಕ್ಷ ಸರ್ಕಾರಿ ಅನುದಾನದಿಂದ, ರು. ೪೮೪ ಲಕ್ಷ ದೇವಸ್ಥಾನ ಸಮಿತಿಯಿಂದ ಭರಿಸಲಾಗಿದೆ. ೨೫ ಜಿಲ್ಲೆಗಳಲ್ಲಿ ಧರ್ಮೋತ್ಥಾನ ಟ್ರಸ್ಟ್ ಕೆಲಸ ನಡೆಯುತ್ತಿದೆ. ಗೌರವ, ಪ್ರಶಸ್ತಿಗಳು ವೀರೇಂದ್ರ ಹೆಗ್ಗಡೆಯವರ ಕಾರ್ಯವನ್ನು ಗುರುತಿಸಿ ಸರ್ಕಾರ ಮತ್ತು ಅನೇಕ ಸಂಸ್ಥೆಗಳು ಅವರಿಗೆ ಪ್ರಶಸ್ತಿ-ಗೌರವಗಳನ್ನು ಇತ್ತಿವೆ. ೨೦೧೫ರಲ್ಲಿ ಭಾರತ ಸರಕಾರದಿಂದ ಪದ್ಮವಿಭೂಷಣ ಪ್ರಶಸ್ತಿ. ೧೯೮೫ ರಲ್ಲಿ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಮತ್ತು ೧೯೯೩ ರಲ್ಲಿ ಅಂದಿನ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ರವರಿಂದ "ರಾಜರ್ಷಿ" ಗೌರವ ಇವರಿಗೆ ಸಂದಿವೆ. ಅನೇಕ ಧಾರ್ಮಿಕ ಮಠಗಳು ಇವರಿಗೆ "ಧರ್ಮರತ್ನ", "ಧರ್ಮಭೂಷಣ". "ಅಭಿನವ ಚಾವುಂಡರಾಯ", "ಪರೋಪಕಾರ ಧುರಂಧರ" ಮೊದಲಾದ ಬಿರುದುಗಳು ಇವರಿಗೆ ಸಂದಿವೆ. ೧೯೯೪ ರಲ್ಲಿ ಇಂದಿರಾ ಗಾಂಧಿ ಪ್ರಿಯದರ್ಶಿನಿ ಪ್ರಶಸ್ತಿ ದೊರಕಿತು. ಮಂಗಳೂರು ವಿಶ್ವವಿದ್ಯಾಲಯ ಇವರಿಗೆ ಗೌರವ ಡಾಕ್ಟರೇಟ್ ಅನ್ನು ನೀಡಿದೆ. ಇತ್ತೀಚೆಗೆ ೨೦೦೪ ರ "ವರ್ಷದ ಕನ್ನಡಿಗ" ಗೌರವ ವೀರೇಂದ್ರ ಹೆಗ್ಗಡೆಯವರಿಗೆ ಲಭಿಸಿದೆ. ಸನ್.೨೦೧೩ ರ, ದೇವಿ ಅಹಲ್ಯಾಬಾಯಿ ರಾಷ್ಟ್ರೀಯ ಪುರಸ್ಕಾರ. ಮಧ್ಯಪ್ರದೇಶದ ಇಂದೂರ್ ನಗರದ ಶ್ರೀ ಅಹಿಲೋತ್ಸವ ಸಮಿತಿ ನೀಡುವ ಗೌರವ ಪ್ರಶಸ್ತಿಯಿದು. ೨೦೧೧ರಲ್ಲಿ ಡಾ| ವೀರೇಂದ್ರ ಹೆಗ್ಗಡೆಯವರಿಗೆ ೨೦೦೯ನೇ ಸಾಲಿನ ಕರ್ನಾಟಕ ಸರಕಾರ ಕೊಡಮಾಡುವ ರಾಜ್ಯದ ಅತ್ಯುನ್ನತ ಪ್ರಶಸ್ತಿಯಾದ "ಕರ್ನಾಟಕ ರತ್ನ" ನೀಡಿ ಪುರಸ್ಕರಿಸಲಾಗಿದೆ. ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್.ಯಡಿಯೂರಪ್ಪನವರು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ವತಿಯಿಂದ ಪ್ರತಿವರ್ಷ ನೀಡುವ ಸರ್‌ ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ ೨೦೧೧ನೇ ಸಾಲಿನಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರಿಗೆ ದೊರೆತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಲಂಡನ್‌ನ ಪ್ರತಿಷ್ಠಿತ ‘ಆಶ್ಡೆನ್ ಸಂಸ್ಥೆಯು ನೀಡುವ "ಜಾಗತಿಕ ಹಸಿರು ಆಸ್ಕರ್ "ಎಂದೇ ಪರಿಗಣಿಸಲಾದ ೨೦೧೨ರ "ಆಶ್ಡೆನ್ ಸುಸ್ಥಿರ ಇಂಧನ ಕಾರ್ಯಕ್ರಮ ಪ್ರಶಸ್ತಿ’ಗೆ ಪಾತ್ರವಾಗಿದೆ. ಖಾಸಗಿ ವಾಹಿನಿಯಾದ ಜೀ ಕನ್ನಡ ವಾಹಿನಿಯಲ್ಲಿ ಹೆಮ್ಮೆಯ ಕನ್ನಡಿಗ ಕಾರ್ಯಕ್ರಮದಲ್ಲಿ ಈ ವರ್ಷದ "ಹೆಮ್ಮೆಯ ಕನ್ನಡಿಗ" ಪ್ರಶಸ್ತಿ ಇವರ ದೊರೆತಿದೆ. (ಪೂರಕ ಮಾಹಿತಿ : ಜೀ ಕನ್ನಡ ವಾಹಿನಿ ) ಏಷ್ಯಾ ವನ್ ಸಂಸ್ಥೆ ಕೊಡಮಾಡುವ ಆರನೇ ಆವೃತ್ತಿಯ '2020-21 ರ ಸಾಲಿನ ಏಷ್ಯಾದ ಶ್ರೇಷ್ಠ ನಾಯಕರು' ಎಂಬ ಗೌರವ ಬಾಹ್ಯ ಸಂಪರ್ಕ ಹೆಗ್ಗಡೆಯವರ ಬಗ್ಗೆ ಪ್ರಜಾವಾಣಿಯಲ್ಲಿನ ಲೇಖನ ಉಲ್ಲೇಖಗಳು ಸಮಾಜಸೇವಕರು ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು ನಾಡೋಜ ಪ್ರಶಸ್ತಿ ಪುರಸ್ಕೃತರು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು
1225
https://kn.wikipedia.org/wiki/%E0%B2%9C%E0%B3%8B%E0%B2%A8%E0%B3%8D%20%E0%B2%86%E0%B2%AB%E0%B3%8D%20%E0%B2%86%E0%B2%B0%E0%B3%8D%E0%B2%95%E0%B3%8D
ಜೋನ್ ಆಫ್ ಆರ್ಕ್
ಜೋನ್ ಆಫ್ ಆರ್ಕ್ (ಜನವರಿ ೬, ೧೪೧೨ - ಮೇ ೩೦, ೧೪೩೧) (ಫ್ರೆಂಚ್‌ನಲ್ಲಿ Jeanne d'Arc, Jehanne la Pucelle, ಹಾಗೂ ಆರ್ಲಿಯನ್ಸ್‌ನ ಕೆಲಸಗಾತಿ ಫ್ರಾನ್ಸ್‌ನ ರಾಷ್ಟ್ರೀಯ ನಾಯಕಿ, ವೀರಾಂಗನೆ .ಸುಮಾರು ಐದು ಶತಮಾನಗಳ ಅನಂತರ ಸಂತಳೆಂದು ಪರಿಗಣಿತೆ. ದೈವಿಕ ಸ್ಫೂರ್ತಿಯಿಂದ ಪ್ರವೃತ್ತಳಾಗಿರುವುದಾಗಿ ನಂಬಿ ಆರ್ಲೀಯನ್ಸ್ ಕದನದಲ್ಲಿ ಫ್ರೆಂಚರಿಗೆ ಜನ ದೊರಕಿಸಿಕೊಟ್ಟ, 7ನೆಯ ಚಾಲ್ರ್ಸ್ ದೊರೆ ರೀಮ್ಸ್‍ನಲ್ಲಿ ಪಟ್ಟಾಭಿಷಿಕ್ತನಾಗುವುದನ್ನು ಸಾಧ್ಯವಾಗಿಸಿದ, ಅನಂತರ ಸೆರೆಯಾಗಿ ಷಾಷಂಡಿನಿಯೆಂದು ಇಂಗ್ಲಿಷರಿಂದ ಸುಡಲ್ಪಟ್ಟ ಗ್ರಾಮೀಣ ತರುಣಿ. ಜೀವನ ಷಾóನ್ ಡಾರ್ಕ್ ಎಂಬುದು ಈಕೆಯ ಫ್ರೆಂಚ್ ನಾಮ. ಆರ್ಲೀಯನ್ಸ್ ಕೊಡಗೂಸು (ಫ್ರೆಂಚ್ : ಲಾ ಪ್ರಸೆಲ್ ಡಾರ್ಲೇಲಯಾನ್) ಎಂದೂ ಖ್ಯಾತಳಾಗಿದ್ದಾಳೆ. ಫ್ರಾನ್ಸಿನ ಬಾರ್ ಸಂಸ್ಥಾನದ ಮ್ಯೂಸ್ ನದೀತೀರದ ಡಾನ್ರೇಮೀ ಗ್ರಾಮದಲ್ಲಿ 1412ರ ಜನವರಿ 6ರಂದು ಜನಿಸಿದಳು. ತಂದೆ ಷಾóಕ್ ಡಾರ್ಕ್, ತಾಯಿ ಈಸಾಬೆಲ್ ರೊಮಿ. ಜೋನ್ ದೇವರಲ್ಲಿ ನಂಬಿಕೆಯನ್ನೂ ಪ್ರಾರ್ಥನೆಯ ಅಭ್ಯಾಸವನ್ನೂ ತಾಯಿಯಿಂದ ಕಲಿತಳು. ಈಕೆ ಕಷ್ಟಪಟ್ಟು ಕೆಲಸಮಾಡುತ್ತಿದ್ದಳು. ಮನೆಗೆಲಸದಲ್ಲಿ ಇವಳಿಗೆ ವಿಶೇಷ ಆಸಕ್ತಿ. ಆಗಾಗ್ಗೆ ದನ ಕಾಯಲು ಹೋಗುತ್ತಿದ್ದಳು. ಸಮವಯಸ್ಕರೊಡನೆ ಗ್ರ್ರಾಮದ ಗಂಧರ್ವವೃಕ್ಷದ ಬಳಿ ಆಟಪಾಟಗಳಲ್ಲಿ ನೃತ್ಯ ವಿನೋದಗಳಲ್ಲಿ ಭಾಗವಹಿಸುತ್ತಿದ್ದಳು. ಫ್ರಾನ್ಸಿನ 6ನೆಯ ಚಾಲ್ರ್ಸ್ ದೊರೆಯ ಮರಣಾನಂತರ ಅವನ ಮಗ ಡಾಫಿನ್ ಚಾರ್ಲ್ಸ್ (ಅನಂತರ 7ನೆಯ ಚಾರ್ಲ್ಸ್) ಉತ್ತರಾಧಿಕಾರವನ್ನು ಇಂಗ್ಲಿಷ್ ದೊರೆ 6ನೆಯ ಹೆನ್ರಿ ಪ್ರಶ್ನಿಸಿದ್ದರಿಂದ ಆ ಬಗ್ಗೆ ವಿವಾದ ಉದ್ಭವಿಸಿತ್ತು. ಅವನ ಸೈನ್ಯಗಳು ಬರ್ಗಂಡಿಯವರ ಮೈತ್ರಿ ಸಾಧಿಸಿ ಅವರ ನೆರವಿನಿಂದ ಉತ್ತರ ಫ್ರಾನ್ಸನ್ನೆಲ್ಲ ಆಕ್ರಮಿಸಿಕೊಂಡಿದ್ದುವು. ಫ್ರೆಂಚ್ ಅರಸನ ಪಟ್ಟಾಭಿಷೇಕವಾಗಬೇಕಾಗಿದ್ದ ಅರಮನೆ ಇದ್ದ ರೀಮ್ಸ್ ಎಂಬ ಸ್ಥಳ ಇಂಗ್ಲಿಷರ ಅಧೀನದಲ್ಲಿತ್ತು. ಪಟ್ಟಾಭಿಷೇಕವಾಗದೆ ಫ್ರೆಂಚ್ ಪ್ರಜೆಗಳು ಚಾರ್ಲ್ಸ್ ನನ್ನು ಅರಸನೆಂದು ಸ್ವೀಕರಿಸಲು ಹಿಂಜರಿಯುತ್ತಿದ್ದರು. 1421ರಲ್ಲಿ 6ನೆಯ ಚಾಲ್ರ್ಸ್ ಮರಣಹೊಂದಿದ್ದರೂ, 1427ರಲ್ಲಿ ಕೂಡ ಅವನ ಮಗನ ಪಟ್ಟಾಭಿಷೇಕವಾಗಿಲ್ಲದು ಆತಂಕಕಾರಿಯಾಗಿತ್ತು. ಜೋನಳಿಗೆ ಇಂತ ಪರಿಸ್ಥಿತಿಯಲ್ಲಿ ಆಕೆಯ 13ನೆಯ ವಯಸ್ಸಿನಲ್ಲೇ ದೇವವಾಣಿ ಕೇಳಿಸಿತ್ತು; ಆತ್ಮಸಂಯಮವನ್ನು ಬೋಧಿಸಿತ್ತು. ಅನಂತರ ಆ ವಾಣಿ ಅವಳು ಫ್ರಾನ್ಸಿಗೆ ಹೋಗಿ ಅರ್ಲೀಯನ್ಸ್ ಆಕ್ರಮಣವನ್ನು ತೆರವು ಮಾಡಬೇಕೆಂದು ಆದೇಶ ನೀಡಿತು. ಸೇಂಟ್ ಮೈಕೇಲ್, ಸೇಂಟ್ ಕ್ಯಾದರೀನ್, ಸೇಂಟ್ ಮಾರ್ಗರೆಟರ ದರ್ಶನ ತನಗೆ ಪದೇಪದೇ ಆಗುತ್ತಿತ್ತೆಂದು ಅವಳು ಹೇಳಿದಳು. ಈ ವಾಣಿಗಳು ಇಡೀ ಜೀವಮಾನಪರ್ಯಂತ ಮಾರ್ಗದರ್ಶನ ಮಾಡಲಿದ್ದುವು. ಈ ವಾಣಿಗಳ ಒತ್ತಾಯದ ಮೇರೆಗೆ ಕೊನೆಗೂ ಆಕೆ ಚಾಲ್ರ್ಸನನ್ನು ನೋಡಲು ಹೊರಟಳು. ಆಗ ಆಕೆ ಪುರುಷವೇಷ ಧರಿಸಿದಳು. ಅನಂತರ ಕೊನೆಯವರೆಗೂ ಆ ಉಡುಪನ್ನು ಆಕೆ ಬದಲಿಸಿ ಸ್ತ್ರೀಯರ ಉಡುಪು ಧರಿಸಲಿಚ್ಚಿಸಲಿಲ್ಲ. ಮೊದಮೊದಲು ಆಕೆಯ ಯತ್ನಗಳು ಫಲಿಸಲಿಲ್ಲ. ಆದರೂ ಆಕೆ ನಿರಾಸೆ ಹೊಂದಿದೆ. 1429ರಲ್ಲಿ ಷೀನಾನ್‍ನಲ್ಲಿ ಚಾಲ್ರ್ಸನನ್ನು ಕಂಡಳು. ತನ್ನ ಆಸ್ಥಾನಿಕರ ನಡುವೆ ಅಡಗಿದ್ದ ಆತನ ಬಳಿಗೆ ನೇರವಾಗಿ ಹೋಗಿ, ತಾನು ಹೋಗಿ ಯುದ್ಧ ಮಾಡುವುದಾಗಿಯೂ ಆತನಿಗೆ ಪಟ್ಟಾಭಿಷೇಕ ಮಾಡಿಸುವುದಾಗಿಯೂ ಹೇಳಿದಳು. ಅವಳು ಕ್ರೈಸ್ತಮತ ಪಂಡಿತರ ವಿವಿಧ ಪರೀಕ್ಷೆಗಳಿಗೊಳಗಾಗಿ, ಕೊನೆಗೊಮ್ಮೆ ಅವರ ಶಿಫಾರಸನ್ನು ಪಡೆದು ಏಪ್ರಿಲ್ ತಿಂಗಳಲ್ಲಿ ಸಣ್ಣ ಸೈನ್ಯವೊಂದರ ನೇತೃತ್ವ ವಹಿಸಿ ಮೊದಲು ಆರ್ಲೀಯನ್ಸ ಅಭಿಮುಖವಾಗಿ ಹೊರಟಳು. ದೈವಪ್ರೇರಣೆಯಂತೆ 1429ರ ಮೇ 4ರಂದು ಒಮ್ಮಿಂದೊಮ್ಮೆ ಇಂಗ್ಲಿಷರನ್ನು ಮುತ್ತಿ, ಆರ್ಲೀಯನ್ಸ್ ನಗರವನ್ನು ವಶಪಡಿಸಿಕೊಂಡಳು. ಮುಂದೆ ಅವಳ ಗುರಿ ರೀಮ್ಸ್ ಅಲ್ಲಿದ್ದ ಶತ್ರುಗಳನ್ನು ಅವಳು ಹೊರದೂಡಿದಳು. ಅಲ್ಲಿ ಪಟ್ಟಾಭಿಷೇಕ ಮಾಡಿಕೊಳ್ಳಲು ಚಾರ್ಲ್ಸ್ ನನ್ನು ಶ್ರಮಪಟ್ಟು ಒಪ್ಪಿಸಿದಳು. ಜುಲೈ 17ರಂದು ಅವನ ಪಟ್ಟಾಭಿಷೇಕವಾಯಿತು. ಆಗ ಆಕೆ ಅರಸನಿಗೆ ಅತ್ಯಂತ ಸಮೀಪದಲ್ಲಿ ತನ್ನದೇ ಆದ ಧ್ವಜವನ್ನು ಹಿಡಿದು ನಿಂತಳು. ಎಲ್ಲರಿಗಿಂತ ಮೊದಲು ಅವಳು ಆತನನ್ನು ದೊರೆಯೆಂದು ಸಂಭೋಧಿಸಿ ತನ್ನ ವಿಧೇಯತೆಯನ್ನು ಸೂಚಿಸಿದಳು. ಅಲ್ಲಿಂದ ಮುಂದೆ ಪ್ಯಾರಿಸ್ ನಗರವನ್ನು ವಶಪಡಿಸಿಕೊಳ್ಳಬೇಕೆಂದು ಆಕೆಯ ಮಹದಾಸೆಯಾಗಿತ್ತು. ಅದರೆ ದೊರೆ ಕೂಡಲೇ ಅದಕ್ಕಾಗಿ ಕಾರ್ಯೋನ್ಮುಖನಾಗದಿರುವಂತೆ ಅವನ ಇತರ ಹಿತೈಷಿಗಳು ಅವನ್ನು ತಡೆದರು. ಸೆಪ್ಟಂಬರ್ ತಿಂಗಳಲ್ಲಿ ಮತ್ತೊಮ್ಮೆ ಯತ್ನಿಸಿದರೂ ಯಶಸ್ಸು ಲಭಿಸಲಿಲ್ಲ. ಅರಸನನ್ನು ಇತರರು ಕೈಬಿಟ್ಟರೂ ಜೋನ್ ಆತನ ಬೆಂಬಲಕ್ಕೆ ನಿಂತಳು. ಈ ಮಧ್ಯೆ ರೀಮ್ಸ್ ನಗರ ಬರ್ಗಂಡಿಯನರ ದಾಳಿಗೆ ತುತ್ತಾಗಲು, ಅವರ್ನು ಓಡಿಸಲು ಜೋನ್ಸ್ ಶ್ರಮಿಸಿದಳು. ಆದರೆ ಕೋಂಪ್ಯೇನ್ ಎಂಬಲ್ಲಿ 1430ರ ಮೇ 23ರಂದು ಜೋನ್ ತನ್ನ ಇಬ್ಬರು ಸೋದರರೊಂದಿಗೆ ಬರ್ಗಂಡಿಯನರಿಗೆ ಸೆರೆ ಸಿಕ್ಕಳು. ಆಕೆ ಸೆರೆಯಿಂದ ತಪ್ಪಿಸಿಕೊಳ್ಳಲು ಮಾಡಿದ ಯತ್ನಗಳು ಫಲಿಸಲಿಲ್ಲ. ಇಂಗ್ಲಿಷರ ಕೋರಿಕೆಯಂತೆ ಲುಕ್ಸೆಂಬರ್ಗಿನ ಜಾನ್ ಆಳ್ವಿಕೆಯನ್ನು 10,000 ಫ್ರಾಂಕ್‍ಗಳಿಗೆ ಪ್ರತಿಯಾಗಿ ಇಂಗ್ಲಿಷರಿಗೆ ಒಪ್ಪಿಸಿದ. 1431ರ ಜನವರಿ 13ರಿಂದ ಆಕೆ ಧಾರ್ಮಿಕ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಟ್ಟಳು. ವಿಚಾರಣಾಕರ್ತರು ಚಾಲ್ರ್ಸನ ಶತ್ರಗಳಾಗಿದ್ದುದರಿಂದ ತಾನು ಅವರಿಗೆ ನಿಜ ಸಂಗತಿಯನ್ನೆಲ್ಲ ಹೇಳಬೇಕೆಂಬ ಷರತ್ತಿಗೆ ಬದ್ಧವಾಗುವುದಿಲ್ಲವೆಂದು ಆಕೆ ಸ್ಪಷ್ಟಪಡಿಸಿದಳು. ಮಾರ್ಚ್ 24ರಂದು ಆಕೆಯ ಮೇಲೆ ಆಪಾದನೆಗಳನ್ನು ಹೊರಿಸಲಾಯಿತು. ಈಕೆ ಷಾಷಂಡಿನಿ ಮಾಟಗಾರ್ತಿ, ದೇವರ ಹೆಸರಿನಲ್ಲಿ ದ್ರೋಹ ಮಾಡಿದವಳು; ಭವಿಷ್ಯವನ್ನು ನುಡಿಯುವುದಾಗಿ ಘೋಷಿಸಿಕೊಂಡು, ದೇವರಿಂದ ನೇರವಾಗಿ ಆದೇಶಗಳನ್ನು ಸ್ವೀಕರಿಸಿದುದಾಗಿ ಸಾರಿಕೊಂಡು, ಕ್ರೈಸ್ತ ಚರ್ಚ್ ನಿಯಮಗಳನ್ನು ಉಲ್ಲಿಂಘಿಸಿದಳು. ತನ್ನ ಹಲವಾರು ಕಾಗದಗಳಲ್ಲಿ ಜೀಸಸ್ ಮತ್ತು ಮೇರಿಯ ಅಂಕಿತ ಹಾಕಿದಳು. ಲಜ್ಜೆ ಗೇಡಿಯಾಗಿ ಗಂಡುಡುಪು ಧರಿಸಿದಳು. ತನ್ನ ಸಂತರು ತನ್ನನ್ನು ಫ್ರೆಂಚ್ ಭಾಷೆಯಲ್ಲಿ ಮಾತಾಡಿಸಿದರೆಂದೂ ಇಂಗ್ಲಿಷಿನಲ್ಲಲ್ಲವೆಂದೂ ಸಾಧಿಸಿದಳು. ಚರ್ಚಿನಲ್ಲಿ ನಂಬುಗೆಯಿಡದೆ ಈಕೆ ಧರ್ಮಕ್ಕೂ ದೇವರಿಗೂ ದ್ರೋಹ ಬಗೆದಿದ್ದಾಳೆ. ಇವು ಆಕೆಯ ಮೇಲಣ ಕೆಲವು ಮುಖ್ಯ ಆಪಾದನೆಗಳು. ಆದರೂ ಆಕೆ ತಪ್ಪೊಪ್ಪಿಕೊಳ್ಳಲಿಲ್ಲ. ತಾನು ಮೊದಲು ನೀಡಿದ ಹೇಳಿಕೆಗಳೆ ಸತ್ಯವೆಂದೂ ಅವನ್ನು ಬದಲಿಸಲಾರನೆಂದೂ ದೇವರೇ ತನ್ನ ರಕ್ಷಕನೆಂದೂ ನುಡಿದಳು. ಕೊನೆಗೆ ಧಾರ್ಮಿಕ ನ್ಯಾಯಾಲಯ ಆಕೆಯನ್ನು ಇಂಗ್ಲಿಷ್ ಸೈನ್ಯಾಧಿಕಾರಿಗಳಿಗೆ ಒಪ್ಪಿಸಿತು. 1431ರ ಮೇ 20ರಂದು ಆಕೆಯನ್ನು ಜೀವಸಹಿತ ಸುಡಲಾಯಿತು. ಸುಮಾರು 20ವರ್ಷಗಳ ಅನಂತರ 7ನೆಯ ಚಾರ್ಲ್ಸ್ ಈ ಪ್ರಕರಣವನ್ನು ಕುರಿತು ವಿಚಾರಣೆ ನಡೆಸಲು ಆಜ್ಞಾಪಿಸಿದ. ಎರಡು ವರ್ಷಗಳ ಅನಂತರ ಪೋಪನ ಮುಖ್ಯ ರಾಯಭಾರಿ ಗಿಲಾಮ್ ಡಿ ಎಸ್ಟೌಟ್‍ವಿಲ್ ಈ ಬಗ್ಗೆ ಸಮಗ್ರ ತನಿಖೆ ನಡೆಸಿದ. ಪೋಪ್ 3ನೆಯ ಕ್ಯಾಲಿಕ್ಟಸನ ಆದೇಶದ ಮೇರೆಗೆ 1431ರಲ್ಲಿ ಆಕೆಗೆ ವಿಧಿಸಿದ ಶಿಕ್ಷೆಯನ್ನು ರದ್ದುಮಾಡಿ ವರ್ಜಿಸುವ ಕ್ರಮ ಕ್ಯಗೊಳ್ಳಲಾಯಿತು. 1920ರ ಮೇ16ರಂದು ಪೋಪ್ 5ನೆಯ ಬೆನೆಡಿಕ್ಟ್ ಆಕೆಯನ್ನು ವಿಧಿಪೂರ್ವಕವಾಗಿ ಸಂತರ ಪಟ್ಟಿಗೆ ಸೇರಿಸಿದ, ಪ್ರತಿವರ್ಷದ ಮೇ 30ರಂದು ಚರ್ಚ್ ಆಕೆಯ ಹಬ್ಬ ಆಚರಿಸುತ್ತದೆ. 1920ರಲ್ಲಿ ಫ್ರೆಂಚ್ ಪಾರ್ಲಿಮೆಂಟ್ ಕೈಗೊಂಡ ನಿರ್ಣಯದ ಮೇರೆಗೆ ಪ್ರತಿವರ್ಷವೂ ಮೇ ಎರಡನೆಯ ಭಾನುವಾರ ರಾಷ್ಟ್ರೀಯ ಉತ್ಸವದಿನ. ಜೋನಳಿಗೆ ಕಾಣಿಸಿಕೊಂಡ ದೇವತೆಗಳೂ ಕೇಳಿಸಿದ ಧ್ವನಿಗಳೂ ಎಷ್ಟರಮಟ್ಟಿಗೆ ಸತ್ಯ ಎಂಬುದು ಪರಿಹರಿಸಲಾಗದ ಪ್ರಶ್ನೆಯಾಗಿ ಉಳಿದುಬಂದಿದೆ. ಆದರೆ ಆಕೆ ಫ್ರಾನ್ಸ್ ದೇಶಕ್ಕೆ ಮಹೋಪಕಾರ ಮಾಡಿದಳೆಂಬುದಂತೂ ನಿಜ. ತನ್ನ ವಿಜಯದಿಂದ ಆಕೆಗೆ ಆಗ ನಡೆಯುತ್ತಿದ್ದ ನೂರು ವರ್ಷಗಳ ಯುದ್ಧಕ್ಕೆ ಒಂದು ಹೊಸ ತಿರುವನ್ನೇ ಕೊಟ್ಟಳು. ಆಕೆ ಬರೆದ, ಬರೆಸಿದ ನೂರಾರು ಪತ್ರಗಳು ಉಳಿದು ಬಂದಿವೆ. ಅವು ಆಕೆಯ ರಾಷ್ಟ್ರಪ್ರೇಮ ಮತ್ತು ದೈವಭಕ್ತಿಗಳಿಗೆ ಸಾಕ್ಷಿಗಳಾಗಿವೆ. ಜೋನಳ ಜೀವನ ಅನೇಕ ಲೇಖಕರ ಸಾಹಿತ್ಯಕೃತಿಗಳಿಗೆ ವಸ್ತುವಾಗಿದೆ. ಜರ್ಮನ್ ಕವಿ-ನಾಟಕಕಾರ ಷಿಲರನೂ ಇಂಗ್ಲಿಷ್ ನಾಟಕಕಾರ ಜಾರ್ಜ್ ಬರ್ನಾಡ್ ಷಾನೂ ಆಕೆಯ ಬಗ್ಗೆ ನಾಟಕಗಳನ್ನು ಬರೆದಿದ್ದಾರೆ. ಆನಟೋಲ್ ಫ್ರಾನ್ಸ್, ಮಾರ್ಕ್ ಟ್ವೇನ್, ಆಂಡ್ರ್ಯೂ ಲ್ಯಾಂಗ್ ಇವರು ಬರೆದ ಜೀವನಚರಿತ್ರೆಗಳು ಪ್ರಖ್ಯಾತವಾಗಿವೆ. ಬಾಹ್ಯ ಸಂಪರ್ಕಗಳು Jeanne d´Arc Centre Joan of Arc Archive St. Joan of Arc ಫ್ರಾನ್ಸ್‌ನ ಇತಿಹಾಸ
1226
https://kn.wikipedia.org/wiki/%E0%B2%95%E0%B3%83%E0%B2%B7%E0%B3%8D%E0%B2%A3%E0%B2%A6%E0%B3%87%E0%B2%B5%E0%B2%B0%E0%B2%BE%E0%B2%AF
ಕೃಷ್ಣದೇವರಾಯ
ಕೃಷ್ಣದೇವರಾಯ ಕ್ರಿ.ಶ.೧೫೦೯ ರಿಂದ ೧೫೨೯ ರ ವರೆಗೆ ಆಳಿದ ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಮತ್ತು ವಿಜಯನಗರದ ಅರಸರಲ್ಲಿ ಅತಿ ಪ್ರಮುಖನು. ತುಳುವ ರಾಜವಂಶದ ಮೂರನೆಯ ಅರಸ. ವಿಜಯನಗರ ಸಾಮ್ರಾಜ್ಯ ಈತನ ಆಳ್ವಿಕೆಯ ಕಾಲದಲ್ಲಿ ಉಚ್ಛ್ರಾಯಕ್ಕೇರಿತು.ಕನ್ನಡ ನಾಡಿನಲ್ಲಿ "ಮೂರುರಾಯರಗಂಡ", "ಕನ್ನಡರಾಜ್ಯ ರಮಾರಮಣ" ಎಂದೂ, ಆಂಧ್ರದಲ್ಲಿ "ಆಂಧ್ರಭೋಜ" ಎಂದೂ, ಸ್ವತಃ ಉತ್ತಮ ಬರಹಗಾರನಾಗಿದ್ದ ಕೃಷ್ಣದೇವರಾಯನು ಸಮಕಾಲೀನ ಕವಿಗಳಿಂದ "ಉರುಕಳ್ ವೈಭವ ನಿವಾಹ ನಿಧಾನ" ಎಂದೂ ಬಿರುದಾಂಕಿತನಾದ ಈತನ ಕಾಲದ ವೈಭವ ಇಂದೂ ಮನೆಮಾತಾಗಿದೆ. ಹಿನ್ನೆಲೆ ಕೃಷ್ಣದೇವರಾಯನ ತಂದೆ ತುಳುವ ನರಸ ನಾಯಕ. ತಾಯಿ ನಾಗಲಾಂಬಿಕೆ . ಸಾಳುವ ನರಸದೇವರಾಯನ ಸೇನೆಯಲ್ಲಿ ಅಧಿಕಾರಿಯಾಗಿದ್ದ ನರಸನಾಯಕನು , ಸಂಪೂರ್ಣ ರಾಜ್ಯವನ್ನು ತನ್ನ ವಶಕ್ಕೆ ತೆಗೆದುಕೊಂಡು ತುಳುವ ಸಾಮ್ರಾಜ್ಯವನ್ನು ಸ್ಥಾಪಿಸಿದನು. ನರಸನಾಯಕನ ನಂತರ ಕೃಷ್ಣಜನ್ಮಾಷ್ಟಮಿಯಂದು ಪಟ್ಟವೇರಿದ ಕೃಷ್ಣದೇವರಾಯನು ರಾಜಧಾನಿಯಾದ ವಿಜಯನಗರದ ಉಪನಗರವಾಗಿ ನಾಗಲಾಪುರ ಎಂಬ ಸುಂದರ ನಗರವನ್ನು ಕಟ್ಟಿಸಿದನು. ಕೃಷ್ಣದೇವರಾಯನು ತನ್ನ ತಂದೆಯ ಸ್ಥಾನದಲ್ಲಿಟ್ಟು ಗೌರವಿಸುತ್ತಿದ್ದ ತಿಮ್ಮರಸು(ವಿಜಯನಗರದ ಪ್ರಧಾನ ಮಂತ್ರಿಗಳು) ಆತನು ಪಟ್ಟವೇರಲು ಕಾರಣೀಭೂತರಾಗಿದ್ದರಷ್ಟೇ ಅಲ್ಲ, ಅವನ ರಾಜ್ಯಭಾರದ ಕಾಲದಲ್ಲಿ ಮಂತ್ರಿಯಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದರು. ಮಟ್ಟಸ ಎತ್ತರವಾಗಿದ್ದ ಕೃಷ್ಣದೇವರಾಯನಿಗೆ, ದಿನವೂ ವ್ಯಾಯಾಮ, ತಾಲೀಮು ಮಾಡಿದ್ದರ ಪರಿಣಾಮವಾಗಿ ಕಲ್ಲಿನಂತಹ ದೇಹಧಾರ್ಡ್ಯವಿತ್ತು. ಹಸನ್ಮುಖಿಯಾದರೂ, ಶೀಘ್ರಕೋಪಿಯೂ ಆಗಿದ್ದ ಎಂದೂ ಹೇಳಲಾಗಿದೆ. ಪರದೇಶದ ಪ್ರವಾಸಿಗಳಿಗೆ ಗೌರವ ತೋರಿಸುತ್ತಿದ್ದ. ಸಮರ್ಥ ಆಡಳಿತಗಾರನಾಗಿದ್ದು ಕಾನೂನು ಪಾಲನೆಯಲ್ಲಿ ಕಟ್ಟರ ಶಿಸ್ತು ಪಾಲಿಸುತ್ತಿದ್ದ. ಅತ್ಯುತ್ತಮ ಸೇನಾನಾಯಕನೂ ಆಗಿದ್ದ ಆತನು, ಸ್ವತಃ ಸೇನೆಯ ಮುಂದಾಳುತ್ವ ವಹಿಸುವುದಷ್ಟೇ ಅಲ್ಲ, ಗಾಯಗೊಂಡವರಿಗೆ ಕೈಯಾರೆ ಶುಶ್ರೂಷೆಯನ್ನೂ ಮಾಡುತ್ತಿದ್ದ ಎಂದೂ ಹೇಳಲಾಗಿದೆ. ಕೃಷ್ಣದೇವರಾಯನ ಆಡಳಿತದ ಬಗೆಗಿನ ಬಹಳಷ್ಟು ಮಾಹಿತಿ ಅವನ ಕಾಲದಲ್ಲಿ ಭಾರತಕ್ಕೆ ಬಂದ ಪೋರ್ಚುಗೀಸ್ ಯಾತ್ರಿಕರಾದ ಡೊಮಿಂಗೋ ಪಾಯಸ್ ಮತ್ತು ಫೆರ್ನಾವ್ ನೂನೀಜ್ ಅವರ ಬರಹಗಳಿ೦ದ ತಿಳಿದುಬರುತ್ತದೆ. ರಾಜ್ಯವಿಸ್ತಾರ ಸಿಂಹಾಸನಕ್ಕೇರಿದ ಆರು ತಿಂಗಳುಗಳಲ್ಲಿಯೇ ಯೂಸುಫ್ ಆದಿಲ್ ಖಾನ್ ಮತ್ತು ಬೀದರಿನ ಸುಲ್ತಾನ ಮಹಮೂದ್ ಅನ್ನು ಕೃಷ್ಣದೇವರಾಯನು ಸೋಲಿಸಿದನೆಂದು ತಿಳಿದುಬರುತ್ತದೆ. ೧೫೧೦ರಲ್ಲಿ ಉತ್ತರದ ರಾಯಚೂರು ಮುತ್ತಿಗೆ ಹಾಕಿ ಗುಲ್ಬರ್ಗಾ ಮತ್ತು ಬೀದರ್ ಕಡೆಗೆ ಹೆಜ್ಜೆ ಹಾಕಿದ. ಹೀಗೆ ಉತ್ತರದಲ್ಲಿ ತನ್ನ ಸಾಮ್ರಾಜ್ಯವನ್ನು ಗಟ್ಟಿಗೊಳಿಸಿದ ನಂತರ ದಕ್ಷಿಣದಲ್ಲಿ ಶ್ರೀರಂಗಪಟ್ಟಣದ ಕೇಂದ್ರವಾದ ರಾಜ್ಯಭಾಗವನ್ನು ಸೃಷ್ಟಿಸಿದ. ನಂತರ ಪೂರ್ವಕ್ಕೆ ತಿರುಗಿ ಪ್ರತಾಪರುದ್ರ ಎಂಬ ಸ್ಥಳೀಯ ನಾಯಕನನ್ನು ಸೋಲಿಸಿ ಕೃಷ್ಣಾ ನದಿಯವರೆಗಿನ ಭಾಗಗಳನ್ನು ಗೆದ್ದನು. ಕೃಷ್ಣದೇವರಾಯನ ಅತಿ ಮುಖ್ಯ ವಿಜಯ ಬಂದದ್ದು ಮೇ ೧೯, ೧೫೨೦ ರಲ್ಲಿ ಬಿಜಾಪುರದ ಇಸ್ಮಾಯಿಲ್ ಆದಿಲ್ ಷಾನಿ೦ದ ರಾಯಚೂರುನ್ನು ಗೆದ್ದಾಗ. ಒಟ್ಟು ಸಾವಿರಾರು ಸೈನಿಕರು, ೩೨,೬೦೦ ಕುದುರೆ ಸವಾರರು ಮತ್ತು ೫೫೧ ಆನೆಗಳು ಪಾಲ್ಗೊಂಡ ಯುದ್ಧದಲ್ಲಿ ಸುಮಾರು ೧೬,೦೦೦ ವಿಜಯನಗರದ ಸೈನಿಕರು ಮೃತಪಟ್ಟರು. ಕೊನೆಯ ಯುದ್ಧದಲ್ಲಿ ಬಹಮನಿ ಸುಲ್ತಾನರು ಮೊದಲ ರಾಜಧಾನಿಯಾದ ಗುಲ್ಬರ್ಗಾದ ಕೋಟೆ ನೆಲಸಮವಾಯಿತು. ಡೊಮಿಂಗೋ ಪಯಸ್ ನ ವಿವರಣೆಯಂತೆ ಅಂದಿನ ವಿಜಯನಗರ ರೋಮ್ ನಗರದಷ್ಟಾದರೂ ದೊಡ್ಡದಿದ್ದು ಐದು ಲಕ್ಷ ಜನಸಂಖ್ಯೆಯನ್ನು ಹೊಂದಿದ್ದಿತು. ತಾನು ಕಂಡ ಅತ್ಯಂತ ಶ್ರೀಮಂತ ನಗರವೆಂದೂ ಪಯಸ್ ವಿಜಯನಗರವನ್ನು ವರ್ಣಿಸಿದ್ದಾನೆ. ವಿದೇಶಾಂಗ ವ್ಯವಹಾರಗಳು ವಿಜಯನಗರ ಇತಿಹಾಸದಲ್ಲಿಯೇ ಅತಿ ಹೆಚ್ಚು ಸೇನಾಯಶಸ್ಸು ಸಿಕ್ಕಿದ್ದು ಕೃಷ್ಣದೇವರಾಯನ ಆಳ್ವಿಕೆಯ ಕಾಲದಲ್ಲಿ. ಹಠಾತ್ತನೆ ಯುದ್ಧ ತಂತ್ರವನ್ನು ಬದಲಾಯಿಸಿ , ಸೋಲುವ ಪರಿಸ್ಥಿತಿಯಲ್ಲೂ ಗೆಲುವು ಸಾಧಿಸುವ ಚಾಕಚಕ್ಯತೆ ಅವನಿಗಿತ್ತು. ಆತನ ಆಳ್ವಿಕೆ ಮೊದಲ ದಶಕದಲ್ಲಿ ಆಕ್ರಮಣ, ರಕ್ತಪಾತ ಮತ್ತು ಗೆಲುವುಗಳನ್ನು ಕಾಣುತ್ತೇವೆ. ಅವನ ಶತ್ರುಗಳಲ್ಲಿ ಮುಖ್ಯರೆಂದರೆ, ಐದು ವಿಭಾಗವಾಗಿದ್ದರೂ ಹಗೆ ಸಾಧಿಸಿದ ಬಹಮನಿ ಸುಲ್ತಾನರು , ಸಾಳುವ ನರಸಿಂಹರಾಯನ ಕಾಲದಿಂದಲೂ ಸಂಘರ್ಷದಲ್ಲಿ ತೊಡಗಿದ್ದ ಒಡಿಶಾದ ಗಜಪತಿ, ಹಾಗೂ ತಮ್ಮ ಪ್ರಬಲ ನೌಕಾಪಡೆಯ ಕಾರಣದಿಂದ ಕಡಲ ವ್ಯಾಪಾರವನ್ನು ನಿಯಂತ್ರಿಸುತ್ತಿದ್ದ, ಹಾಗೂ ದಿನೇ ದಿನೇ ಬಲಕಾಯಿಸುತ್ತಿದ್ದ ಪೋರ್ಚುಗೀಸರು. ಇವರಲ್ಲದೇ, ಉಮ್ಮತ್ತೂರು ಪಾಳೆಯಗಾರ, ಕೊಂಡವೀಡಿನ ರೆಡ್ಡಿರಾಜು ಮತ್ತು ಭುವನಗಿರಿಯ ವೇಲಮರೊಂದಿಗೂ ಆಗಾಗ ಕಾಳಗಗಳಾಗುತ್ತಿದ್ದವು. ದಕ್ಖನಿನಲ್ಲಿ ಜಯ ದಕ್ಖನ್ ಸುಲ್ತಾನರಿಂದ ವರ್ಷಕ್ಕೊಮ್ಮೆಯಂತೆ ನಡೆಯುತ್ತಿದ್ದ ವಿಜಯನಗರದ ಹಳ್ಳಿ ಪಟ್ಟಣಗಳ ಮೇಲಿನ ದಾಳಿ ಲೂಟಿ ಇತ್ಯಾದಿಗಳು ಈತನ ಕಾಲದಲ್ಲಿ ಕೊನೆಗೊಂಡವು. ೧೫೦೯ರಲ್ಲಿ ದಿವಾನಿ ಎಂಬಲ್ಲಿ ನಡೆದ ಯುದ್ಧದಲ್ಲಿ ಬಿಜಾಪುರದ ಸುಲ್ತಾನ್ ಮೊಹಮ್ಮದ್ ತೀವ್ರವಾಗಿ ಗಾಯಗೊಂಡು ಸೋಲೊಪ್ಪಿದನು. ಯೂಸುಫ್ ಆದಿಲ್ ನನ್ನು ಕೊಂದು ಅವನ ರಾಜ್ಯವನ್ನು ಸ್ವಾಧೀನಪಡಿಸಿಕೊಳ್ಳಲಾಯಿತು. ಈ ವಿಜಯದಿಂದ ಸ್ಪೂರ್ತಿಗೊಂಡು ಮತ್ತು ಬಹಮನಿ ಸುಲ್ತಾನರ ಒಳಜಗಳದ ಲಾಭ ಪಡೆದ ಕೃಷ್ಣದೇವರಾಯನು ಬೀದರ್, ಗುಲ್ಬರ್ಗಾ ಮತ್ತು ಬಿಜಾಪುರಗಳ ಮೇಲೆ ದಾಳಿ ಮಾಡಿದನು. ಅಲ್ಲಿ ಸುಲ್ತಾನ್ ಮೊಹಮ್ಮದ್ ನನ್ನು ಬಿಡುಗಡೆ ಮಾಡಿ ಆತನನ್ನು ಅಲ್ಲಿಯ ವಸ್ತುತಃ ಆಡಳಿತಗಾರನಾಗಿ ಮಾಡಿ "ಯವನ ಸಾಮ್ರಾಜ್ಯ ಪ್ರತಿಷ್ಠಾಪಕ" ಎಂಬ ಬಿರುದನ್ನು ಗಳಿಸಿದನು. ಗೊಲ್ಕೊಂಡಾ ಸುಲ್ತಾನ ಕುಲಿ ಕುತ್ಬ್ ಷಾನನ್ನು ಕೃಷ್ಣದೇವರಾಯನ ಮಂತ್ರಿ ತಿಮ್ಮರಸ ಸೋಲಿಸಿದನು. ಸಾಮಂತರ ಜೊತೆ ಯುದ್ಧ ಸ್ಥಳೀಯ ಪಾಳೆಯಗಾರರು ಮತ್ತು ಭುವನಗಿರಿಯ ವೇಲಮನ ಮೇಲೆ ಆಕ್ರಮಣ ಮಾಡಿ ಗೆದ್ದು ತನ್ನ ರಾಜ್ಯವನ್ನು ಕೃಷ್ಣಾನದಿಯವರೆಗೂ ವಿಸ್ತರಿಸಿದನು. ಕಾವೇರಿ ದಡದಲ್ಲಿ ನಡೆದ ಯುದ್ಧದಲ್ಲಿ ಉಮ್ಮತ್ತೂರಿನ ದೊರೆ ಗಂಗರಾಜನನ್ನು ಸೋಲಿಸಿದನು. ೧೫೧೨ರಲ್ಲಿ ಗಂಗರಾಜನು ಕಾವೇರಿಯಲ್ಲಿ ಮುಳುಗಿ ಅಸುನೀಗಿದ. ಈ ಪ್ರದೇಶ ಶ್ರೀರಂಗಪಟ್ಟಣ ಪ್ರಾಂತ್ಯದ ಒಂದು ಭಾಗವಾಯಿತು. ೧೫೧೬-೧೭ರಲ್ಲಿ ಅವನ ರಾಜ್ಯ ದ ಗಡಿಯು ಗೋದಾವರಿ ನದಿಯನ್ನು ದಾಟಿತು. ಕಳಿಂಗ ಯುದ್ಧ ಗಜಪತಿಗಳ ರಾಜ್ಯ ವಿಶಾಲವಾಗಿದ್ದು ಇಂದಿನ ಆಂಧ್ರ ಮತ್ತು ತೆಲಂಗಾಣ ಪ್ರದೇಶ ಹಾಗೂ ಸಂಪೂರ್ಣ ಒರಿಸ್ಸಾವನ್ನು ಒಳಗೊಂಡಿತ್ತು. ಉಮ್ಮತ್ತೂರಿನ ಯಶಸ್ಸಿನಿಂದ ಉತ್ತೇಜಿತನಾದ ಕೃಷ್ಣದೇವರಾಯನು ಗಜಪತಿ ಪ್ರತಾಪ ರುದ್ರದೇವನ ಸ್ವಾಧೀನದಲ್ಲಿದ್ದ ತೆಲಂಗಾಣ ಪ್ರದೇಶದತ್ತ ತನ್ನ ದೃಷ್ಟಿಯನ್ನು ತಿರುಗಿಸಿದನು. ವಿಜಯನಗರ ಸೈನ್ಯವು ೧೫೧೨ರಲ್ಲಿ ಉದಯಗಿರಿ ಕೋಟೆಗೆ ಮುತ್ತಿಗೆ ಹಾಕಿತು. ಒಂದು ವರ್ಷದವರೆಗೂ ನಡೆದ ಈ ಮುತ್ತಿಗೆಯಲ್ಲಿ ಕೊನೆಗೂ ಗಜಪತಿಯ ಸೈನ್ಯ ಹಸಿವಿನಿಂದ ಶಿಥಿಲವಾಗತೊಡಗಿತು. ಇದೇ ಸಮಯದಲ್ಲಿ ಕೃಷ್ಣದೇವರಾಯನು ಪತ್ನಿಯರಾದ ತಿರುಮಲಾ ದೇವಿ ಮತ್ತು ಚಿನ್ನಮ ದೇವಿಯರೊಂದಿಗೆ ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನ ಮಾಡಿದನು. ಇದರ ನಂತರ ಗಜಪತಿಯ ಸೇನೆ ಕೊಂಡವೀಡುರಾಜು ಎಂಬಲ್ಲಿ ವಿಜಯನಗರ ಸೇನೆಗೆ ಎದುರಾಯಿತು. ಕೆಲವು ತಿಂಗಳುಗಳಿಂದ ಮುತ್ತಿಗೆ ಹಾಕಿದ್ದರೂ, ಕೆಲವು ಮೊದಮೊದಲ ಸೋಲುಗಳ ನಂತರ ವಿಜಯನಗರ ಸೇನೆ ರಣರಂಗದಿಂದ ಹಿಂದೆಗೆಯಲಾರಂಭಿಸಿತು. ಅದೇ ಸಮಯದಲ್ಲಿ ತಿಮ್ಮರಸು ಕಂಡುಹಿಡಿದ ಕಾವಲಿಲ್ಲದ ಪೂರ್ವದ ದ್ವಾರದ ರಹಸ್ಯಒಳದಾರಿಯ ಮೂಲಕ ಒಳನುಗ್ಗಿದ ವಿಜಯನಗರದ ಸೇನೆ ಕೋಟೆಯನ್ನು ಗೆದ್ದು, ಆಕಾಲದ ಅತಿಸಮರ್ಥ ಕತ್ತಿವರಸೆಗಾರ ಎಂದು ಹೆಸರಾಗಿದ್ದ , ಪ್ರತಾಪರುದ್ರದೇವನ ಮಗ, ಯುವರಾಜ ವೀರಭದ್ರನನ್ನು ಸೆರೆಹಿಡಿಯಿತು. ಈ ವಿಜಯದ ನಂತರ ತಿಮ್ಮರಸು ಕೊಂಡವೀಡು ಪ್ರಾಂತದ ಮಾಂಡಲೀಕನಾಗಿ ನೇಮಕಗೊಂಡ. ಮುಂದೆ ವಿಜಯನಗರ ಸೇನೆಯು ಕೊಂಡಪಲ್ಲಿ ಪ್ರದೇಶದಲ್ಲಿ ಗಜಪತಿ ಸೇನೆಯನ್ನು ಮತ್ತೊಮ್ಮೆ ಮುತ್ತಿತು. ಉತ್ಕಲ-ಕಳಿಂಗದ ಮೇಲೆ ನೇರ ದಾಳಿ ಮಾಡಿ ವಶಪಡಿಸಿಕೊಳ್ಳಬೇಕೆಂದಿದ್ದ ಕೃಷ್ಣದೇವರಾಯನ ರಣತಂತ್ರಕ್ಕೆ ಪ್ರತಿಯಾಗಿ ಪ್ರತಾಪರುದ್ರದೇವನು ಕೃಷ್ಣದೇವರಾಯನನ್ನು ಅವನ ಸೇನೆಯೊಂದಿಗೆ ಹೀನಾಯವಾಗಿ ಸೋಲಿಸುವ ಪ್ರತಿಯೋಜನೆ ಹಾಕಿದನು. ಈ ಯೋಜನೆಯ ಪ್ರಕಾರ ಇವೆರಡು ಸೇನೆಗಳು ಕಳಿಂಗನಗರದಲ್ಲಿ ಸಂಧಿಸಬೇಕಾಗಿತ್ತು. ಆದರೆ , ಈ ಮಾಹಿತಿಯನ್ನು ಚಾಣಾಕ್ಷ ತಿಮ್ಮರಸು ಪ್ರತಾಪರುದ್ರದೇವನ ಪಕ್ಷ ತ್ಯಜಿಸಿದ ತೆಲುಗು ಭಾಷಿಕನೊಬ್ಬನಿಗೆ ಲಂಚ ಕೊಟ್ಟು ಸಂಪಾದಿಸಿದನು. ಪ್ರತಾಪರುದ್ರನ ಯೋಜನೆ ನಡೆಯದೆ, ಆತ ತನ್ನ ರಾಜಧಾನಿಯತ್ತ ಹಿಮ್ಮೆಟ್ಟಬೇಕಾಯಿತು. ಕೊನೆಗೂ ಆತ ವಿಜಯನಗರ ಸೇನೆಗೆ ಶರಣಾಗಿ, ತನ್ನ ಮಗಳನ್ನು ಕೃಷ್ಣದೇವರಾಯನಿಗೆ ಕೊಟ್ಟು ಮದುವೆಮಾಡಿದ. ಇದರ ನಂತರ ಭಾರತದ ಎರಡು ಪ್ರಬಲ ಹಿಂದೂ ಸಾಮ್ರಾಜ್ಯಗಳ ನಡುವೆ ಶಾಂತಿ ಸಾಮರಸ್ಯ ನೆಲೆಸಿ ಸನಾತನ ಧರ್ಮ ಸುರಕ್ಷಿತವಾಯಿತು. ೧೫೧೦ರಲ್ಲಿ ಗೋವಾದಲ್ಲಿ ಡೊಮಿನಿಯನ್ ಸ್ಥಾಪಿಸಿದ ಪೋರ್ಚುಗೀಸರೊಂದಿಗೆ ಶ್ರೀಕೃಷ್ಣದೇವರಾಯನು ಸ್ನೇಹ ಸಂಬಂಧಗಳನ್ನು ಬೆಳೆಸಿದನು. ಪೋರ್ಚುಗೀಸ್ ವ್ಯಾಪಾರಿಗಳಿಂದ ಬಂದೂಕು ಮತ್ತು ಅರಬ್ಬೀ ಕುದುರೆಗಳನ್ನು ಪಡೆದುಕೊಂಡದ್ದಷ್ಟೇ ಅಲ್ಲದೆ . ಪೋರ್ಚುಗೀಸ್ ಪರಿಣತಿಯನ್ನು ಉಪಯೋಗಿಸಿಕೊಂಡು ವಿಜಯನಗರ ನಗರಕ್ಕೆ ನೀರು ಸರಬರಾಜು ಯೋಜನೆಯ ಸುಧಾರಣೆ ಮಾಡಿದನು. ಅಂತಿಮ ಸಂಘರ್ಷ ಐವರು ದಖ್ಖನ್ ಸುಲ್ತಾನರೊಂದಿಗೆ ವಿಜಯನಗರ ಸಾಮ್ರಾಜ್ಯಕ್ಕಿದ್ದ ಸಂಬಂಧ ದಿನಗಳೆದಂತೆ ಹಳಸಲು ಶುರುವಾದ ಕಾರಣ ವಿಜಯನಗರ ಸಾಮ್ರಾಜ್ಯ ದಖ್ಖನ್ ಸುಲ್ತಾನರ ವಿರುದ್ಧ ಸಿಟ್ಟಿಗೆದ್ದು ನಿಂತಿತು. ಇದೇ ಸಂಧರ್ಭದಲ್ಲಿ ಕೃಷ್ಣದೇವರಾಯನು ಗೋಲ್ಕೊಂಡವನ್ನು ಗೆದ್ದು ಅದರ ಸಾಮಂತನಾಗಿದ್ದ ಮುದುರುಲ್-ಮುಲ್ಕ್ ನನ್ನು ಸೆರೆ ಹಿಡಿದನು. ಇನ್ನೂ ಮುಂದುವರೆದು ಬಹಮನಿ ಸುಲ್ತಾನರ ಪರವಾಗಿ ಬಿಜಾಪುರದ ಮೇಲೆ ದಾಳಿ ನಡೆಸಿ ಅಲ್ಲಿ ರಾಜ್ಯವಾಳುತ್ತಿದ್ದ ಸುಲ್ತಾನ್ ಇಸ್ಮಾಯಿಲ್ ಆದಿಲ್ ಷಾ ನನ್ನು ಸೋಲಿಸಿ ಗೆದ್ದ ರಾಜ್ಯವನ್ನು ಬಹಮನಿ ಸುಲ್ತಾನ ಮುಹಮ್ಮದ್ ಷಾ ನಿಗೆ ವಹಿಸಿ ತಾನು ವಿಜಯನಗರಕ್ಕೆ ಹಿಂದಿರುಗುತ್ತಾನೆ. ದಖ್ಖನ್ ಸುಲ್ತಾನರೊಂದಿಗಿನ ಕಾಳಗದಲ್ಲಿ ಮುಖ್ಯವೆನಿಸುವ ಘಟನೆಯೆಂದರೆ ೧೫೨೦ರ ಮೇ ೧೯ ರಂದು ಬಿಜಾಪುರವನ್ನು ಆಳುತ್ತಿದ್ದ ಇಸ್ಮಾಯಿಲ್ ಆದಿಲ್ ಷಾ ನಿಂದ ರಾಯಚೂರು ಕೋಟೆಯನ್ನು ವಶಪಡಿಸಿಕೊಂಡಿದ್ದು. ಅತಿ ಪ್ರಯಾಸದಿಂದ ನಡೆದ ಈ ಯುದ್ಧದಲ್ಲಿ ವಿಜಯನಗರ ಸಾಮ್ರಾಜ್ಯ ತನ್ನ ೧೬,೦೦೦ ಸೈನಿಕರನ್ನು ಕಳೆದುಕೊಂಡು ರಾಯಚೂರು ಕೋಟೆ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ಯುದ್ಧದಲ್ಲಿ ಚತುರತೆ ಮೆರೆದು ಗೆಲುವಿಗೆ ಕಾರಣನಾದ ವಿಜಯನಗರದ ಮುಖ್ಯ ಸೇನಾಧಿಕಾರಿ ಪೆಮ್ಮಸಾನಿ ರಾಮಲಿಂಗ ನಾಯ್ಡು ಅರಸರ ಪ್ರೀತ್ಯಾದರಗಳನ್ನು ಗಳಿಸಿದ, ಶ್ರೀ ಕೃಷ್ಣದೇವರಾಯರು ಆತನನ್ನು ಸೂಕ್ತ ಸನ್ಮಾನದೊಂದಿಗೆ ಗೌರವಿಸಿದರು. ಒಂದು ಅಂದಾಜಿನ ಪ್ರಕಾರ ರಾಯಚೂರಿಗಾಗಿ ನಡೆದ ಕಾಳಗದಲ್ಲಿ ಸುಮಾರು ೭೦೩,೦೦೦ ಪದಾತಿ ದಳದ ಸೈನಿಕರು, ೩೨,೬೦೦ ಅಶ್ವದಳದ ಸೈನಿಕರು ಹಾಗು ೫೫೧ ಗಜ ಪಡೆಯ ಸೈನಿಕರು ಆಹುತಿಯಾದರೆಂದು ತಿಳಿದುಬರುತ್ತಿದೆ(ರಾಯಚೂರು ಯುದ್ಧದ ಬಗ್ಗೆ ನೋಡಿ). ಕಟ್ಟ ಕಡೆಯದಾಗಿ ತನ್ನ ಕೊನೆಯ ಯುದ್ಧದಲ್ಲಿ ಕೃಷ್ಣದೇವರಾಯನು ಹಿಂದೆ ಬಹಮನಿ ಸುಲ್ತಾನರ ಕೇಂದ್ರ ಸ್ಥಾನವಾಗಿದ್ದ ಗುಲ್ಬರ್ಗಾ ಕೋಟೆಯನ್ನು ವಶಪಡಿಸಿಕೊಳ್ಳುವ ಮೂಲಕ ದಕ್ಷಿಣ ಭಾರತದಾದ್ಯಂತ ತನ್ನ ವಿಜಯ ಪತಾಕೆ ಹಾರಿಸಿ ಇಡೀ ದಕ್ಷಿಣ ಭಾರತವನ್ನು ತನ್ನ ಸಾಮ್ರಾಜ್ಯದ ಅಡಿಯಲ್ಲಿ ತಂದನು. ೧೫೨೪ರಲ್ಲಿ ಶ್ರೀ ಕೃಷ್ಣದೇವರಾಯನು ತನ್ನ ಪುತ್ರ ತಿರುಮಲರಾಯನಿಗೆ ಪಟ್ಟ ಕಟ್ಟುವ ಮೂಲಕ ಅರಸನ ಪಟ್ಟಕ್ಕೇರಿಸಿದನು. ಇನ್ನೂ ಬಾಲ್ಯಾವಸ್ಥೆಯಲ್ಲಿದ್ದ ತಿರುಮಲರಾಯನಿಗೆ ಪಿತೂರಿ ನಡೆಸಿ ದುಷ್ಕರ್ಮಿಗಳು ವಿಷ ಪ್ರಾಶನ ಮಾಡಿಸಿ ಕೊಂದುಬಿಟ್ಟರು. ಆದ ಕಾರಣ ಕೃಷ್ಣದೇವರಾಯನ ಪುತ್ರ ಸಿಂಹಾಸನದಲ್ಲಿ ಹೆಚ್ಚು ದಿನ ಉಳಿಯಲಾಗಲಿಲ್ಲ. ತನ್ನ ಪುತ್ರನ ಅಕಾಲಿಕ ಮರಣದಿಂದ ಆಘಾತಕ್ಕೊಳಗಾದ ಕೃಷ್ಣದೇವರಾಯನು ಬಹಳ ಕುಸಿದು ಹೋದನು ಹಾಗು ದಿನೇ ದಿನೇ ಕೃಶವಾಗುತ್ತಾ ಹೋದನು. ತಿರುಮಲರಾಯನ ಕಗ್ಗೊಲೆಯ ವಿಚಾರವಾಗಿ ಈ ನ್ಯಾಯಸ್ಥಾನದಲ್ಲಿ ವಿಚಾರಣೆ ನಡೆಸಿ ವಿಜಯನಗರದ ಪ್ರಧಾನಮಂತ್ರಿ ತಿಮ್ಮರಸುವಿಗೆ ತಪ್ಪಾಗಿ ಕಣ್ಣು ಕೀಳಿಸುವ ಶಿಕ್ಷೆ ವಿಧಿಸಲಾಯಿತು. ಇದನ್ನು ತಡೆಯಲು ಶ್ರೀ ಕೃಷ್ಣದೇವರಾಯರು ಬಹಳ ಪ್ರಯತ್ನ ಪಟ್ಟರಾದರೂ ಅಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು. ಶ್ರೀ ಕೃಷ್ಣ ದೇವರಾಯನನ್ನು ಸಿಂಹಾಸನದಲ್ಲಿ ಕುಳ್ಳಿರಿಸಲು ಅವಿರತ ಪ್ರಯತ್ನ ನಡೆಸಿ ಯಶಸ್ವಿಯಾಗಿದ್ದ ತಿಮ್ಮರಸು ವಿಜಯನಗರ ಸಾಮ್ರಾಜ್ಯದ ಹಿತೈಷಿಯಾಗಿದ್ದರೇ ಹೊರತು ದ್ವೇಷಿಯಾಗಿರಲಿಲ್ಲ. ತಿಮ್ಮರಸುವಿನ ಕಣ್ಣುಗಳನ್ನು ಕಿತ್ತ ಸುದ್ದಿ ತಿಳಿದಂತೆಯೇ ಶ್ರೀ ಕೃಷ್ಣದೇವಾರಾಯರು ಕುಸಿದು ಹೋದರು.ಅದೇ ಸಮಯದಲ್ಲಿ ಬಹಮನಿ ಸುಲ್ತಾನರ ವಶದಲ್ಲಿದ್ದ ಬೆಳಗಾವಿಯನ್ನು ವಶಪಡಿಸಿಕೊಳ್ಳುವ ಕನಸು ಕೃಷ್ಣದೇವರಾಯರಿಗಿದ್ದರೂ ಅದು ಸಾಧ್ಯವಾಗದೆ ಆಘಾತಗಳ ಮೇಲೆ ಆಘಾತ ಬಂದೆರಗಿ ಅನಾರೋಗ್ಯಕ್ಕೆ ತುತ್ತಾದರು. ಆದರೆ ಕೃಷ್ಣ ದೇವರಾಯರು ಅನಾರೋಗ್ಯದಿಂದ ಹೊರಬರಲಾಗದೆ ೧೫೨೯ರಲ್ಲಿ ತಮ್ಮ ಇಹಲೋಕ ಯಾತ್ರೆ ಮುಗಿಸಿದರು. ಸಾವಿಗೆ ಮುನ್ನವೇ ಕೃಷ್ಣದೇವರಾಯ ತನ್ನ ಸಹೋದರ ಅಚ್ಯುತ ರಾಯನಿಗೆ ತನ್ನ ಸಾಮ್ರಾಜ್ಯಾಧಿಕಾರಗಳನ್ನು ವಹಿಸಿಕೊಟ್ಟನು ಹಾಗು ವಿಜಯನಗರದ ಇತಿಹಾಸದ ಪುಟದಲ್ಲಿ ಕೃಷ್ಣದೇವಾರಾಯನು ತನ್ನ ಸುಭೀಕ್ಷ ಆಳ್ವಿಕೆಯಿಂದಲೇ ಅಜರಾಮರನಾದನು.ಇಂದಿಗೂ ಕರ್ನಾಟಕದ ಹಂಪಿಯಲ್ಲಿರುವ ಅವಶೇಷಗಳು ವಿಜಯನಗರದ ಗತ ವೈಭವವನ್ನು ಸಾರಿ ಹೇಳುತ್ತಿವೆ. ಆಂತರಿಕ ವ್ಯವಹಾರಗಳು ಪೇಸ್ ಶಿಕ್ಷೆಯನ್ನು ಕಾನೂನು ಮತ್ತು ಸುವ್ಯವಸ್ಥೆ ವಿಷಯಗಳಿಗೆ ರಾಜ ಧೋರಣೆಯನ್ನು ಸಂಕ್ಷಿಪ್ತವಾಗಿ, "ರಾಜ ಕೊಲ್ಲುವ ಮೂಲಕ ಕಾನೂನು ನಿರ್ವಹಿಸುತ್ತದೆ." ಆಸ್ತಿ (ಸ್ಥಿರತೆಯನ್ನು ಉಳಿಸಿಕೊಳ್ಳುವ ವಿನ್ಯಾಸ) ವಿರುದ್ಧ ಮತ್ತು ಕೊಲೆಯ ಅಪರಾಧಗಳು ಕಳ್ಳತನ ಮತ್ತು ಕೊಲೆಯ ಶಿರಚ್ಛೇದವು (ದ್ವಂದ್ವ ಪರಿಣಾಮವಾಗಿ ಸಂಭವಿಸುವ ಹೊರತುಪಡಿಸಿ) ಒಂದು ಕಾಲು ಮತ್ತು ಕೈ ಕತ್ತರಿಸುವ ರಷ್ಟಿದೆ. ಅವರ ದೃಷ್ಟಿಕೋನ ಅಸ್ಪಷ್ಟವಾಗಿದೆ ಆದರೆ ನಗರದ ರೋಮ್ ಕಡೇಪಕ್ಷ ದೊಡ್ಡ ಎಂದು ಅಂದಾಜಿಸಲಾಗಿದೆ ಎಂದು ಪೇಸ್ (Vijaynagar)ವಿಜಯನಗರದ ಗಾತ್ರವು ಅಂದಾಜು ಮಾಡಲಾಗಿಲ್ಲ. ಇದಲ್ಲದೆ, ಅವರು ಅರ್ಧ ಮಿಲಿಯನ್ ಕಡಿಮೆ ಮಾಡುವ ಜನಸಂಖ್ಯೆ ವಿಜಯನಗರ "ವಿಶ್ವದ ಅತ್ಯುತ್ತಮ ನಗರ" ಎಂದು ಪರಿಗಣಿಸಲಾಗಿದೆ. ಸಾಮ್ರಾಜ್ಯವು ಹೆಚ್ಚಾಗಿ ರಾಯಲ್ ಕುಟುಂಬದ ಸದಸ್ಯರ ಅಡಿಯಲ್ಲಿ ಮತ್ತು ಮತ್ತಷ್ಟು ಉಪವಿಭಾಗಗಳು ಆಗಿ ಪ್ರಾಂತ್ಯಗಳ ಅನೇಕ ವಿಭಜಿಸಲಾಗಿದೆ. ನ್ಯಾಯಾಲಯದ ಅಧಿಕೃತ ಭಾಷೆ ಕನ್ನಡ ಇತ್ತು. ನಾನು ಕೃಷ್ಣದೇವರಾಯ ಕಾನೂನುರೀತ್ಯಾ ಕೇವಲ ಒಬ್ಬ ರಾಜ, ಆದರೆ ಅವರ ವ್ಯಾಪಕ ಅಧಿಕಾರಗಳು ಮತ್ತು ಬಲವಾದ ವೈಯಕ್ತಿಕ ಪ್ರಭಾವ ಒಂದು ವಸ್ತುತಃ ಸಾರ್ವಭೌಮ . ಮಂತ್ರಿ ತಿಮ್ಮರಸು ಅವರ ಸಕ್ರಿಯ ಸಹಕಾರದೊಂದಿಗೆ ಕೃಷ್ಣದೇವರಾಯ ಚೆನ್ನಾಗಿ ರಾಜ್ಯದ ಆಡಳಿತ, ಭೂಮಿ ಉಳಿಸಿಕೊಳ್ಳುವುದು, ಶಾಂತಿ ಮತ್ತು ಜನರ ಅಭ್ಯುದಯ ಹೆಚ್ಚಳ, ಸಾಮ್ರಾಜ್ಯದ ಆಡಳಿತ ತನ್ನ ಅಮುಕ್ತಮಾಲ್ಯದ ಸೂಚಿಸಿರುವ ಹಳಿಗಳ ಮೇಲೆ ನಡೆಸಲಾಯಿತು ಎಂದು ಬರೆದುಕೊಂಡಿದ್ದಾನೆ. ಕೃಷ್ಣದೇವರಾಯ ಯಾವಾಗಲೂ ಧರ್ಮ ಕಡೆಗೆ ಒಂದು ಕಣ್ಣಿಡಬೇಕೆಂದು ಅಭಿಪ್ರಾಯವಾಗಿತ್ತು. ಜನರ ಕ್ಷೇಮಕ್ಕಾಗಿ ತನ್ನ ಕಾಳಜಿ, ವ್ಯಾಪಕವಾಗಿ ಎಲ್ಲಾ ಸಾಮ್ರಾಜ್ಯದ ಮೇಲೆ ತಮ್ಮ ವ್ಯಾಪಕ ವಾರ್ಷಿಕ ಪ್ರವಾಸಗಳನ್ನು ನೀಡಿದರು. ಇದೇ ಅವಧಿಯಲ್ಲಿ ಅವರು ವೈಯಕ್ತಿಕವಾಗಿ ಎಲ್ಲವನ್ನೂ ಅಧ್ಯಯನ ಮಾಡಿ ಜನರ ಕುಂದುಕೊರತೆಗಳನ್ನು ನಿವಾರಿಸಲು ಮತ್ತು ದುಷ್ಟರನ್ನು ಶಿಕ್ಷಿಸಲು ಪ್ರಯತ್ನಿಸಿದರು. ಪೋರ್ಚುಗೀಸ್ ಚರಿತ್ರೆ ಡೊಮಿಂಗೊ ಪೇಸ್ "ಅತ್ಯಂತ ಗಾಂಭೀರ್ಯ ಮತ್ತು ಪರಿಪೂರ್ಣ ರಾಜ. ಹೆಚ್ಚು ನ್ಯಾಯ ಪಕ್ಷಪಾತಿ ಮತ್ತು ಶ್ರೇಷ್ಠ ರಾಜ.", ಎಂದು ಕೃಷ್ಣದೇವರಾಯನನ್ನು ಹೊಗಳುತ್ತಾನೆ. ವೈಷ್ಣವ ಅನುಯಾಯಿ ಆದರೂ ಎಲ್ಲ ಪಂಥಗಳು ಸಂಬಂಧಿಸಿದಂತೆ ತೋರಿಸಿತು, ಮತ್ತು ಸಣ್ಣ ಧಾರ್ಮಿಕ ಪೂರ್ವಾಗ್ರಹ ಉಡುಗೊರೆಗಳನ್ನು ನೀಡುವ ಅಥವಾ ಸಹಚರರು ಮತ್ತು ಅಧಿಕಾರಿಗಳ ಆಯ್ಕೆಯ ರೂಪದಲ್ಲಿ ಅವನ ಪ್ರಭಾವ ಇಲ್ಲ. ಬಾರ್ಬೋಸಾ ಪ್ರಕಾರ, "ರಾಜ ಯಾವುದೇ ಕಿರಿಕಿರಿಗೆ ಬಳಲುತ್ತಿರುವ ಇಲ್ಲದೆ, ಪ್ರತಿ ವ್ಯಕ್ತಿ ಬಂದು ಹೋಗಿ, ತನ್ನ ಮತ ಪ್ರಕಾರ ಜೀವಿಸಬಹುದಾಗಿದೆ ಅಂದರೆ ಸ್ವಾತಂತ್ರ್ಯ ನೀಡುತ್ತದೆ" ಎಂದಾಗಿದೆ. ಕಲೆ ಮತ್ತು ಸಾಹಿತ್ಯದಲ್ಲಿ ಕೃಷ್ಣದೇವರಾಯನ ಆಡಳಿತವು ಅನೇಕ ಭಾಷೆಗಳಲ್ಲಿ ಸಮೃದ್ಧ ಸಾಹಿತ್ಯದ ಕಾಲವಾಗಿತ್ತು ಹಾಗೂ ತೆಲುಗು ಸಾಹಿತ್ಯದ ಸುವರ್ಣ ಯುಗ ಎಂದು ಕರೆಯಲಾಗುತ್ತದೆ. ಅನೇಕ ತೆಲುಗು, ಸಂಸ್ಕೃತ, ಕನ್ನಡ ಮತ್ತು ತಮಿಳು ಕವಿಗಳು ಚಕ್ರವರ್ತಿಯ ಪ್ರೋತ್ಸಾಹವನ್ನು ಅನುಭವಿಸಿದರು. ಕೃಷ್ಣದೇವರಾಯ ಹಲವು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದ. ಅವನ ವಂಶಾವಳಿಯ ಭಾಷೆ ಕನ್ನಡ, ತೆಲುಗು ಅಥವಾ ತುಳುವ (Tuluva) ಎಂಬ ಒಂದು ಚರ್ಚೆ ಉಳಿದಿದೆ. ಕೃಷ್ಣದೇವರಾಯನ ತೆಲುಗು ಭಾಷೆಯ ಮೇಲಿನ ಪಾಂಡಿತ್ಯ ಮತ್ತು ಪ್ರೀತಿಯಿಂದಾಗಿ ಅವನ ಆಸ್ಥಾನದಲ್ಲಿ ಅನೇಕ ಕವಿಗಳು ಮತ್ತು ಸೈನ್ಯದಲ್ಲಿ ಅನೇಕ ಸೈನಿಕರು ಆಶ್ರಯವನ್ನು ಪಡೆದುಕೊಂಡಿದ್ದರು.ಅನೇಕ ಕವಿಗಳು ಕೃಷ್ಣದೇವರಾಯನ ಬಗ್ಗೆ ವಿವಿಧ ರೀತಿಯಲ್ಲಿ ಹಾಡಿ ಹೊಗಳಿದ್ದಾರೆ. ಕನ್ನಡ ಸಾಹಿತ್ಯ ಕೃಷ್ಣದೇವರಾಯ ಅನೇಕ ಕನ್ನಡ ಕವಿಗಳನ್ನು ಪ್ರೋತ್ಸಾಹಿಸಿದನು. ಮಲ್ಲನಾರ್ಯ ಬರೆದ ಕೃತಿಗಳು ವೀರ-ಶೈವಾಮೃತ, ಭವ-ಚಿಂತಾ-ರತ್ನ ಮತ್ತು ಸತ್ಯೇಂದ್ರ ಚೋಳ-ಕಥೆ, ಚಟ್ಟು ವಿಟ್ಟಲನಾಥ ಬರೆದ ಭಾಗವತ ಪ್ರಸಿದ್ಧವಾಗಿವೆ. ತಿಮ್ಮಣ್ಣ ಕವಿಯು ಬಹು ಪ್ರಸಿದ್ಧನಾಗಿದ್ದನು. ಶ್ರೀ ವ್ಯಾಸತೀರ್ಥರು, ಉಡುಪಿ ಮಾಧ್ವ ಸಂಪ್ರದಾಯಕ್ಕೆ ಸೇರಿದ ಶ್ರೇಷ್ಠ ಸಂತರು ಕೃಷ್ಣದೇವರಾಯನ ರಾಜಗುರುವಾಗಿದ್ದರು. "ಕೃಷ್ಣದೇವರಾಯನ ದಿನಚರಿ" ಇತ್ತೀಚೆಗೆ ಪತ್ತೆಹಚ್ಚಲ್ಪಟ್ಟ ದಾಖಲೆ. ದಾಖಲೆಯು ಕೃಷ್ಣದೇವರಾಯನ ಕಾಲದ ಸಮಕಾಲೀನ ಸಮಾಜವನ್ನು ತೋರಿಸುತ್ತದೆ. ದಾಖಲೆಯು ರಾಜ ಸ್ವತಃ ಬರೆದನೇ ಎಂಬುದು ಸಂದೇಹವಾಗಿ ಉಳಿದಿದೆ. ತಮಿಳು ಸಾಹಿತ್ಯ ಕೃಷ್ಣದೇವ ರಾಯ ತಮಿಳು ಕವಿ ಹರಿದಾಸರನ್ನು ಪೋಷಿಸಿದರು ಮತ್ತು ತಮಿಳು ಸಾಹಿತ್ಯ ಬೇಗ ವರ್ಷ ಜಾರಿಗೆ ಅಭಿವೃದ್ದಿ ಆರಂಭಿಸಿತು. ಸಂಸ್ಕೃತ ಸಾಹಿತ್ಯ ಸಂಸ್ಕೃತದಲ್ಲಿ, ಶ್ರೀವ್ಯಾಸತೀರ್ಥರು ತಾತ್ಪಾರ್ಯ-ಚಂದ್ರಿಕಾ, ನ್ಯಾಯಮಿತ್ರ (ಅದ್ವೈತ ತತ್ತ್ವದ ವಿರುದ್ಧ ನಿರ್ದೇಶನದ ಕೆಲಸ) ಮತ್ತು ತರ್ಕ-ತಾಂಡವ ಬರೆದಿದ್ದಾರೆ. ಕೃಷ್ಣದೇವರಾಯ ಸ್ವತಃ ಒಬ್ಬ ನಿಪುಣ ವಿದ್ವಾಂಸನಾಗಿದ್ದ ಮತ್ತು ಮದಾಲಸ ಚರಿತ, Satyavadu Parinaya ಮತ್ತು ರಸಮಂಜರಿ ಮತ್ತು ಜಾಂಬವತಿ ಕಲ್ಯಾಣ ಎಂಬ ಕೃತಿಗಳನ್ನು ರಚಿಸಿದ್ದಾರೆ. ಆಂಧ್ರ ವಿಷ್ಣು ದೇವಾಲಯಕ್ಕೆ ಭೇಟಿ ವಿಜಯನಗರದ ಚಕ್ರವರ್ತಿ ಶ್ರೀ ಕೃಷ್ಣದೇವರಾಯ ತನ್ನ ಕಳಿಂಗ ಪ್ರಚಾರ (c. 1516) ಸಂದರ್ಭದಲ್ಲಿ ವಿಜಯವಾಡ ಮೂಲಕ ಪ್ರಯಾಣಿಸುತ್ತಿದ್ದ. ಅವರು ವಿಜಯವಾಡ, ಕೊಂಡಪಲ್ಲಿ ಕೋಟೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಶಪಡಿಸಿಕೊಂಡರು. ಅವರು ಶ್ರೀ ಆಂಧ್ರ ವಿಷ್ಣುವಿನ ಪವಿತ್ರ ದೇವಾಲಯದ ಬಗ್ಗೆ ತಿಳಿದು ಬಂದು ಕೆಲವು ದಿನಗಳ ಶ್ರೀಕಾಕುಲಂ ಹಳ್ಳಿಗೆ ಭೇಟಿ ನೀಡಿದರು. ಆ ಸಮಯದಲ್ಲಿ ಏಕಾದಶಿ ಸಮುದಾಯದ ಪ್ರಮುಖ ಕಾರ್ಯಗಳಲ್ಲಿ ವ್ರತ ಪ್ರದರ್ಶನ. ಎಲ್ಲಾ ಅವರ ವೈಭವ ಶ್ರೀ ಆಂಧ್ರ ವಿಷ್ಣು ಒಂದು ಬೆಳಗಿನ ಡ್ರೀಮ್ ("ನೀಲ mEGhamu DAlu Deelu sEyaga jAlu ....") ಚಕ್ರವರ್ತಿಯ ಕಾಣಿಸುತ್ತಿದ್ದವು ಇಲ್ಲಿದೆ. ಅಮುಕ್ತಮಾಲ್ಯದ ಒಳಗೆ ಸ್ವತಃ [8] ಉಲ್ಲೇಖಿಸಲಾಗಿದೆ ಒಂದು Harivāsara, ಶ್ರೀ ಕೃಷ್ಣದೇವರಾಯ ಮೇಲೆ ಶ್ರೀ ಆಂಧ್ರ ವಿಷ್ಣುವಿನ Darsan ಹೊಂದಿತ್ತು. Harivāsara ಏಕಾದಶಿ ಕೊನೆಯ 4 ಮಹೂರ್ತಗಳಲ್ಲಿ ಒಂದಾಗಿದೆ ಮತ್ತು Dwadasi, ಅಂದರೆ, 6 ಗಂಟೆ 24 ನಿಮಿಷ ಮೊದಲ 4 ಮಹೂರ್ತಗಳಲ್ಲಿ ಒಂದಾಗಿದೆ ದೇವಸ್ಥಾನಕ್ಕೆ ಭೇಟಿ ಈ ಘಟನೆ Ahobilam Śaasanam (ಡಿಸೆಂಬರ್ 1515 ರ) ಮತ್ತು ಸಿಂಹಾಚಲಂ Śaasanam (ಮಾರ್ಚ್ 1515 ರ 30) ನಡುವೆ ಇರಬೇಕು. ಬಹುಶಃ ಜನವರಿ 1516, ಅವರು Dvadasi ದಿನ ದೇವಾಲಯಕ್ಕೆ ಭೇಟಿ ಮಾಡಿರಬಹುದು. ಈ ಮೀರಿ ಯಾವುದೇ ಮಾನ್ಯ ಉಲ್ಲೇಖಗಳು ಭೇಟಿ ನಿಖರವಾದ ದಿನಾಂಕ ಲಭ್ಯವಿವೆ. [9] ಶ್ರೀ ಕೃಷ್ಣದೇವರಾಯ ಸ್ವತಃ ಈ ಕೆಲಸ ಸಂಯೋಜನೆಯು ಸನ್ನಿವೇಶ ಸ್ಮರಿಸುತ್ತಾರೆ. ಕೆಲವೊಮ್ಮೆ ಹಿಂದೆ, ನಾನು ಕಳಿಂಗದ ಪ್ರದೇಶವನ್ನು ವಶಪಡಿಸಿಕೊಳ್ಳಲು ನಿರ್ಧರಿಸಿದರು. ದಾರಿಯಲ್ಲಿ ನಾನು ವಿಜಯವಾಡ ನನ್ನ ಸೈನ್ಯವು ಕೆಲವು ದಿನಗಳ ಕಾಲ ಇದ್ದರು. ನಂತರ ನಾನು Srikakula ವಾಸಿಸುವ ಆಂಧ್ರ ವಿಷ್ಣು, ಭೇಟಿ ಹೋದರು. ಆ ದೇವರ ರಾತ್ರಿ (Harivaasaram) ನಾಲ್ಕನೆಯ ಹಾಗೂ ಕೊನೆಯ ವೀಕ್ಷಣಾ, ವಿಷ್ಣು ಡೇ (Dvadasi) ವೇಗದ ಗಮನಿಸಿದ ಆಂಧ್ರ ವಿಷ್ಣು ನನ್ನ ಕನಸಿನಲ್ಲಿ ನನ್ನ ಬಳಿ ಬಂದು. ಬುದ್ಧಿವಂತ ಮತ್ತು ಹೊಳೆಯುವ ಅವನ ಕಣ್ಣುಗಳು, ಅವಮಾನ ಕಮಲದ ಪುಟ್. ಆತ ಅದನ್ನು ತನ್ನ ಹದ್ದಿನ ರೆಕ್ಕೆಗಳು ಬದಲಾಗಿ ಈಗಲೂ ಅತ್ಯುತ್ತಮ ಗೋಲ್ಡನ್ ರೇಷ್ಮೆ, ಅಪ್ಪಟವಾದ ಧರಿಸಿರುತ್ತಾಳೆ ಮಾಡಲಾಯಿತು. ಕೆಂಪು ಸೂರ್ಯೋದಯ ಮಸುಕಾದ ತನ್ನ ಎದೆಯ ಮೇಲೆ ಮಾಣಿಕ್ಯ ಹೋಲಿಸಲಾಗುತ್ತದೆ. [10] ತೆಲುಗು ಕೆಲಸ ಪ್ರಾರಂಭಿಸಬೇಕು [ಬದಲಾಯಿಸಿ] ಲಾರ್ಡ್ಸ್ ಶಿಕ್ಷಣ ಶ್ರೀ ಆಂಧ್ರ ವಿಷ್ಣು ಶ್ರೀರಂಗಮ್ನಲ್ಲಿನ ಅಂಡಾಲ್ನಿಂದ ("rangamandayina penDili seppumu ..") ತಮ್ಮ ಮದುವೆಯ ಕಥೆಯನ್ನು ಸಂಯೋಜಿಸಲು ಕೇಳಿಕೊಂಡರು. *ಈ ಕೃತಿಯ 14 ಕವನದ ನಾವು, ಲಾರ್ಡ್ ಕೂಡ ತೆಲುಗು ಕಥೆಯನ್ನು ಹೇಳಲು ಚಕ್ರವರ್ತಿ ಆದೇಶ Telugus ರಾಜ (ತೆಲುಗು Vallabhunḍa) ತನ್ನನ್ನು ಉಲ್ಲೇಖಿಸಲಾಗುತ್ತದೆ ಮತ್ತು ಕನ್ನಡ ಕಿಂಗ್ (ಕನ್ನಡ ರಾಯ) ಎಂದು ಶ್ರೀ ಕೃಷ್ಣದೇವರಾಯ ಸೂಚಿಸುತ್ತದೆ ಎಂದು ನೋಡಬಹುದು. (... NEnu delugu raayanDa, ಕನ್ನಡ raaya!, Yakkodunangappu ....). ಲಾರ್ಡ್ "telugadElayanna, dESambu ತೆಲುಗು. YEnu ತೆಲುಗು vallaBhunDa. Telugo ಕಂದ ..... yerugavE ಬಸದಿ, dESa BhAShalandu ತೆಲುಗು lessa!" ಸಮರ್ಥನೆಯ ಚಕ್ರವರ್ತಿ ನಿರ್ಬಂಧಕ್ಕೆ ಮತ್ತು ಇಡೀ ತೆಲುಗು ಸಾಹಿತ್ಯದ ಅತ್ಯಂತ ಪ್ರಸಿದ್ಧ ಕಾವ್ಯಾತ್ಮಕ ಕೃತಿಗಳ ಒಂದು ಇದು ಅಮುಕ್ತಮಾಲ್ಯದ ಸಂಯೋಜಿಸಿದರು. [11] "తెలుఁగ దేల నన్న దేశంబు దెలుఁగేను తెలుఁగు వల్లభుండఁ దెలుఁ గొకండ యెల్ల నృపులగొలువ నెరుఁగ వే బాసాడి దేశభాషలందుఁ తెలుఁగు లెస్స " - శ్రీ ఆంధ్ర విష్ణు "TelugadElayanna, dESambu telugEnu ತೆಲುಗು vallaBhunDa telugokanDa yella nRpulu golva nerugavE ಬಸದಿ dESa BhAShalandu ತೆಲುಗು lessa " ಏಕೆ ಅಮುಕ್ತಮಾಲ್ಯದ ಆನ್ ಶ್ರೀ ಆಂಧ್ರ ವಿಷ್ಣುವಿನ ಕಾರಣಕ್ಕಾಗಿ ಶ್ರೀ ಕೃಷ್ಣದೇವರಾಯ ಮೂಲಕ ತೆಲುಗು ಬರೆದ ಮಾಡಬೇಕು ಉದ್ಧರಣ ಅರ್ಥ: "ತೆಲುಗು ಒಂದು ಕೆಲಸವನ್ನು ಏಕೆ ನೀವು ಕೇಳಲು ವೇಳೆ; ನಾನು ತೆಲುಗು (ಅಂದರೆ, Teluguland ಸೇರಿರುವ) ಮತ್ತು Telugus ರಾಜ ತೆಲುಗು ಸ್ಟಫ್ (TelugO ಕಂದ) ಅಭಿನಯಿಸುವುದರೊಂದಿಗೆ ಭಾಷೆ ಆದ್ದರಿಂದ, ನೀವು ಅಡಿಯಲ್ಲಿ ಸೇವೆ ಎಲ್ಲಾ ರಾಜರು, ಅದಕ್ಕೆ.. ನೀವು ಎಲ್ಲಾ ರಾಷ್ಟ್ರೀಯ ಭಾಷೆಗಳಲ್ಲಿ ತೆಲುಗು ಉತ್ತಮ ಎಂದು ತಿಳಿಯುವುದಿಲ್ಲ ಮಾತನಾಡುವುದು. " ಧರ್ಮ ಮತ್ತು ಸಂಸ್ಕೃತಿ ತಿರುಮಲ ದೇವಸ್ಥಾನ ಮತ್ತು ವೈಕುಂಠಂ ಸರದಿಗೆ ಕಾಂಪ್ಲೆಕ್ಸ್ (ಮುನ್ನೆಲೆಯಲ್ಲಿ ಅರ್ಧವೃತ್ತಾಕಾರದ ಕಟ್ಟಡ) ಎಂದು ನಾರಯಣಗಿರಿ ಬೆಟ್ಟದ ಮೇಲೆ ಶ್ರೀವಾರಿ ರ್ಪಾದಾಲು ಕಂಡಂತೆ ಕೃಷ್ಣದೇವ ರಾಯ ಹಿಂದೂ ಧರ್ಮ ಎಲ್ಲ ಪಂಥಗಳು ಗೌರವವನ್ನು ಮತ್ತು ವಜ್ರ ಲೇಪಿತ ಕಿರೀಟಗಳು ನಿಂದ ಚಿನ್ನದ ಖಡ್ಗಗಳನ್ನು ಹಿಡಿದು ಅಮೂಲ್ಯವಾದ ಮೌಲ್ಯದ ತಿರುಮಲ ವೆಂಕಟೇಶ್ವರ ದೇವಸ್ಥಾನ ಹಲವಾರು ವಸ್ತುಗಳ ಮೇಲೆ ಯಥೇಚ್ಛವಾಗಿ ಸುರಿದ. ಜೊತೆಗೆ, ಆತ ಮತ್ತು ದೇವಾಲಯದ complex.These ಪ್ರತಿಮೆಗಳು ಅವರ ಪತ್ನಿಯರು ಪ್ರತಿಮೆಗಳ ತಯಾರಿಕೆ ಕಾರ್ಯಾರಂಭ ಹೇಳಲಾಗುತ್ತದೆ ಇನ್ನೂ ನಿರ್ಗಮನ ದೇವಸ್ಥಾನವನ್ನು ಕಾಣಬಹುದಾಗಿದೆ. ಕೃಷ್ಣದೇವ ರಾಯ ಔಪಚಾರಿಕವಾಗಿ ವ್ಯಸತಿರ್ಥ ಅದಕ್ಕೆ ವೈಷ್ಣವ ಸಂಪ್ರದಾಯದ ಅನ್ನು ಪ್ರಾರಂಭಿಸಿದರು. [17] ಅವರು ಕನ್ನಡ, ತೆಲುಗು, ತಮಿಳು ಮತ್ತು ಸಂಸ್ಕೃತ ಕವಿಗಳು ಮತ್ತು ವಿದ್ವಾಂಸರು ಪೋಷಿಸಿದರು. ಶ್ರೀ ವ್ಯಾಸತಿರ್ಥ ತಮ್ಮ ಕುಲ-ಗುರುವಾಗಿದ್ದರು. ಅಂತ್ಯ ರಾಜ ಮತ್ತು ತನ್ನನ್ನು ಹುದ್ದೆಯಿಂದ ಕೈಗೆತ್ತಿಕೊಂಡು ತಮ್ಮ ಜೀವಿತಾವಧಿಯಲ್ಲಿ ಕೃಷ್ಣದೇವರಾಯ ತನ್ನ ಆರು ವರ್ಷದ ಮಗ ತಿರುಮಲರಾಯನನ್ನು ಪಟ್ಟಕ್ಕೆ ಏರಿಸಿದರು ಎಂದು ಹೇಳಲಾಗಿದೆ. ಆದರೆ ತಿರುಮಲರಾಯ ಅನಾರೋಗ್ಯಕ್ಕೊಳಗಾದರು ಸಾಲುವ ತಿಮ್ಮ(ಮುಖ್ಯಮಂತ್ರಿ) ಮಗ ಮೂಲಕ ವಿಷ ನಿಧನರಾದರು. ಅವರು ಅನಾರೋಗ್ಯಕ್ಕೆ ತುತ್ತಾಗುತ್ತಾರೆ ಹಾಗು ಶೀಘ್ರವೇ ಅಂದರೆ 1529 ರ ನಂತರ ನಿಧನ ಏತನ್ಮಧ್ಯೆ ಕೃಷ್ಣದೇವರಾಯ ಆದಿಲ್ ಶಾನ ಸ್ವಾಮ್ಯದಲ್ಲಿ ನಂತರ, ಬೆಳಗಾವಿ ಮೇಲೆ ದಾಳಿಗೆ ತಯಾರಿ ನಡೆಸುತ್ತಿದೆ. ಅವರ ಸಾವಿಗೆ ಮುನ್ನ, ಅವರ ಉತ್ತರಾಧಿಕಾರಿಯಾಗಿ ತನ್ನ ಸಹೋದರ, ಅಚ್ಯುತರಾಯ ನಾಮನಿರ್ದೇಶನಗೊಂಡಿರುತ್ತಾರೆ. ಕೃಷ್ಣದೇವರಾಯರ ಆಳ್ವಿಕೆಯ ಕಾಲ ವಿಜಯನಗರ ಸಾಮ್ರಾಜ್ಯದ ಇತಿಹಾಸದಲ್ಲಿ ಒಂದು ಅಮೋಘ ಅಧ್ಯಾಯವಾಗಿ ಉಳಿದಿದೆ. ಉಲ್ಲೇಖ ಅರಸರು ಕರ್ನಾಟಕದ ಇತಿಹಾಸ ವಿಜಯನಗರ ಸಾಮ್ರಾಜ್ಯ
1228
https://kn.wikipedia.org/wiki/%E0%B2%95%E0%B3%83%E0%B2%B7%E0%B3%8D%E0%B2%A3%E0%B2%B0%E0%B2%BE%E0%B2%9C%E0%B2%B8%E0%B2%BE%E0%B2%97%E0%B2%B0
ಕೃಷ್ಣರಾಜಸಾಗರ
ಕೃಷ್ಣರಾಜಸಾಗರ ಮೈಸೂರಿನ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟು. ಈ ಅಣೆಕಟ್ಟಿನ ಜೊತೆಗೇ ನಿರ್ಮಿಸಲಾದ ಬೃಂದಾವನ ಉದ್ಯಾನ ಉತ್ತಮವಾದ ಪ್ರವಾಸಿ ಆಕರ್ಷಣೆ. ಕಣ್ವಪುರ ಕನ್ನಂಬಾಡಿಯಾಗಿದ್ದು ಹೆಗೆ ಕನ್ನಂಬಾಡಿ ಎನ್ನುವುದು ಕಾವೇರಿನದಿ ತೀರದ ಒಂದು ಗ್ರಾಮ. ಇಲ್ಲಿ ಕಣ್ವ ಮಹರ್ಷಿಗಳು ತಪಸ್ಸು ಮಾಡಿದ್ದರು ಎಂಬ ಐತಿಹ್ಯವಿದೆ. ಕಣ್ವರಿಂದಾಗಿಯೇ ಈ ಗ್ರಾಮಕ್ಕೆ ಕಣ್ವಪುರಿ, ಕಣ್ಣಂಬಾಡಿ, ಕನ್ನಂಬಾಡಿ ಎಂಬ ಹೆಸರು ಬಂತು ಎನ್ನಲಾಗುತ್ತದೆ. ಈ ಕನ್ನಂಬಾಡಿಯನ್ನು ದೊಡ್ಡಯ್ಯ ಪ್ರಭು ಎಂಬ ಪಾಳೇಗಾರ ಆಳುತ್ತಿದ್ದನು. ಕ್ರಿ.ಶ.೧೬೦೦ ರಲ್ಲಿ ಮೈಸೂರು ದೊರೆ ರಾಜ ಒಡೆಯರ್ ಅವರು ಇದನ್ನು ಗೆದ್ದುಕೊಂಡರು. ಭಾರತದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಅಣೆಕಟ್ಟು ನಿರ್ಮಾಣವಾಗಿದ್ದು ಕಾವೇರಿ ನದಿಗೆ. ಚೋಳ ಸಾಮ್ರಾಜ್ಯದ ಕರಿಕಾಲ ಚೋಳ ಎಂಬ ಅರಸು ಪ್ರಥಮ ಬಾರಿಗೆ ಕಾವೇರಿ ನದಿಗೆ ಅಣೆಕಟ್ಟು ನಿರ್ಮಿಸಿದ. ಕ್ರಿ.ಶ. ೧೦೬೮ ರಲ್ಲಿ ತಮಿಳುನಾಡಿನ ಕಲ್ಲಣೈ ಎಂಬಲ್ಲಿ ಕಾವೇರಿ ನದಿಗೆ ಅಡ್ಡವಾಗಿ ಕಟ್ಟೆ ನಿರ್ಮಿಸಿದ ಎಂದು ಇತಿಹಾಸ ಹೇಳುತ್ತದೆ. ಅಣೆಕಟ್ಟು ಮೈಸೂರು ಮತ್ತು ಮಂಡ್ಯ ಜಿಲ್ಲೆಗಳ ಜೀವನದಿಯಾದ ಕಾವೇರಿ ನದಿಗೆ ಅಡ್ಡಲಾಗಿ ಈ ಅಣೆಕಟ್ಟನ್ನು ಕಟ್ಟಲಾಗಿದೆ. ಇದನ್ನು ಕಟ್ಟಿದ ಸಮಯದಲ್ಲಿ ಇದು ಭಾರತದಲ್ಲಿ ಅತಿ ದೊಡ್ಡ ಅಣೆಕಟ್ಟಾಗಿತ್ತು. ಇದನ್ನು ಸ್ವತಂತ್ರ ಪೂರ್ವದಲ್ಲಿ ನಿರ್ಮಿಸಲಾಯಿತು ಕೃಷ್ಣರಾಜಸಾಗರ ಅಣೆಕಟ್ಟಿನ ಮುಖ್ಯ ಉದ್ದೇಶಗಳೆಂದರೆ ನೀರಾವರಿ ಮತ್ತು ನೀರು ಸರಬರಾಜು. ಈ ಅಣೆಕಟ್ಟು ೮೬೦೦ ಅಡಿ ಉದ್ದವಿದ್ದು ೧೩೦ ಅಡಿ ಎತ್ತರವಿದೆ. ಸ್ವಯಂಚಾಲಿತ ಸ್ಲ್ಯೂಸ್ ಗೇಟ್ ಗಳನ್ನು ಉಪಯೋಗಿಸಿದ ಪ್ರಪಂಚದ ಮೊದಲ ಅಣೆಕಟ್ಟುಗಳಲ್ಲಿ ಇದೂ ಒಂದು. ಕೃಷ್ಣರಾಜ ಸಾಗರಕ್ಕೆ ಮೂರು ಪ್ರಮುಖ ನಾಲೆಗಳಿವೆ. ಅದರಲ್ಲಿ ಮುಖ್ಯವಾಗಿದ್ದು ವಿಶ್ವೇಶ್ವರಯ್ಯ ನಾಲೆ ೪೫ ಕಿ.ಮೀ.ನಷ್ಟಿದೆ. ೩೨ ಕಿ.ಮೀ.ಗಳ ಬಲದಂಡೆ ಮತ್ತು ೨೧ ಕಿ.ಮೀ.ನ ಎಡದಂಡೆ ನಾಲೆ ಇದೆ. ೧೨೪ ಅಡಿ ನೀರು ನಿಲ್ಲಿಸಲು ೧೩೦ ಅಡಿ ಎತ್ತರದ ಅಣೆಕಟ್ಟು ನಿರ್ಮಿಸಲಾಗಿದೆ. ಇಷ್ಟೊಂದು ಎತ್ತರದ ಅಣೆಕಟ್ಟಿಗಾಗಿ ೧೧೧ ಅಡಿ ಆಳದಲ್ಲಿ ತಳಪಾಯ ಹಾಕಲಾಗಿದೆ. ಅಂದರೆ ಈ ಅಣೆಕಟ್ಟು ೪೧೦೦ ಚದರ ಮೈಲಿಯಷ್ಟು ಜಲಾನಯನ ಭೂಮಿಯನ್ನು ಆಕ್ರಮಿಸಿಕೊಂಡಿದೆ. ಬೃಂದಾವನ ಉದ್ಯಾನವನ ಬೃಂದಾವನ ಉದ್ಯಾನವನ ಕೃಷ್ಣರಾಜಸಾಗರ ಅಣೆಕಟ್ಟಿಗೆ ಹೊಂದಿಕೊಂಡಂತೆ ಕಟ್ಟಲಾದ ಸುಂದರ ಉದ್ಯಾನ. ಇದರ ತುಂಬ ಆಕರ್ಷಕವಾದ ನೀರಿನ ಕಾರಂಜಿಗಳಿವೆ. ಇಲ್ಲಿನ ಪ್ರಸಿದ್ಧ ಸಂಗೀತ ಕಾರಂಜಿ ಪ್ರವಾಸಿಗಳನ್ನು ಅನೇಕ ದಶಕಗಳಿಂದ ಆಕರ್ಷಿಸಿದೆ. ಇದಲ್ಲದೆ ಅನೇಕ ಜೀವಶಾಸ್ತ ಸಂಶೋಧನಾ ಇಲಾಖೆಗಳು ಇಲ್ಲಿಯೇ ಕೆಲಸ ನಡೆಸುತ್ತವೆ. ಪ್ರವಾಸಿಗಳಿಗೆ ಒಂದು ತಂಗುದಾಣವನ್ನು ಬೃಂದಾವನ ಉದ್ಯಾನದಲ್ಲಿ ಕಟ್ಟಿಸಲಾಗಿದೆ. ಹೀಗೆ ಬೃಹದಾಕಾರವಾಗಿ ಬೆಳೆದು ನಿಂತ ಕನ್ನಂಬಾಡಿ ಕಟ್ಟೆ ೧.೨೫ ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಿದೆ. ಬರಡಾಗಬೇಕಾಗ್ದಿದ ಈ ಪ್ರದೇಶದ್ಲಲಿ ಹಸಿರು ನಳನಳಿಸುವಂತೆ ಮಾಡಿದೆ. ಈ ಅಣೆಕಟ್ಟು ಲಕ್ಷಾಂತರ ರೈತರ ಪಾಲಿಗೆ ದೇವತೆಯಾದರೂ ಪ್ರವಾಸಿಗರು ಮಾತ್ರ ಇಲ್ಲಿಗೆ ಬರತೊಡಗಿದ್ದು ಇಲ್ಲಿ ಬೃಂದಾವನ ಉದ್ಯಾನ ನಿರ್ಮಾಣವಾದ ಮೇಲೆ. ಸರ್ ಮಿರ್ಜಾ ಇಸ್ಮಾಯಿಲ್ ಅವರ ಕನಸಿನ ಕೂಸಾದ ಬೃಂದಾವನದ ಸಂಗೀತ ಕಾರಂಜಿ, ವಿವಿಧ ಕಾರಂಜಿಗಳು, ವಿದ್ಯುದೀಪಾಲಂಕಾರದ ಬೆಳಕಿನ್ಲಲಿ ಕಣ್ಮನ ಸೆಲೆಯುತ್ತವೆ. ಮೈಸೂರಿಗೆ ಬಂದವರೆಲ್ಲರು ಕೃಷ್ಣರಾಜ ಸಾಗರಕ್ಕೆ ಹೋಗಲೇ ಬೇಕು ಎನ್ನುವ ವಾತಾವರಣವನ್ನು ಸೃಷ್ಟಿಸಿದೆ. ೭೫ರ ಹರೆಯದ ಕನ್ನಂಬಾಡಿ ಕಟ್ಟೆ ನಮ್ಮ ರಾಜ್ಯದ ಹಾಗೂ ದೇಶದ ಇತರ ಅಣೆಕಟ್ಟುಗಳು ನಾಚುವಂತೆ ಎದೆಯುಬ್ಬಿಸಿ ನಿಂತಿದೆ. ಚರಿತ್ರೆ ಕೃಷ್ಣರಾಜಸಾಗರ ಅಣೆಕಟ್ಟು ಮತ್ತು ಬೃಂದಾವನ ಉದ್ಯಾನವನ್ನು ಕಟ್ಟುವ ಯೋಜನೆ ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಆರಂಭವಾದದ್ದು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯ ಕಾಲದಲ್ಲಿ ಅಣೆಕಟ್ಟೆಯ ಕೆಲಸವನ್ನು ಪೂರ್ತಿಗೊಳಿಸಿದರು. ಅಣೆಕಟ್ಟನ್ನು ೧೯೩೨ ರಲ್ಲಿ ಕಟ್ಟಿ ಮುಗಿಸ ಲಾಯಿತು. ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು ಮುಂತಾದ ಪ್ರಾಂತ್ಯಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಇರುವ ಕಾಲದಲ್ಲಿ ಹಸಿರು ಎನ್ನುವುದು ಇಲ್ಲಿ ಮರೀಚಿಕೆಯಾದ ಸಂದರ್ಭ ರೂಪುಗೊಂಡಿದ್ದು ಈ ಮಹಾನ್ ಯೋಜನೆ. ಅದನ್ನು ಸಾಕಾರಗೊಳಿಸಲು ಮುಖ್ಯ ಇಂಜಿನಿಯರ್ ಮ್ಯಾಕ್ ಹಚ್, ಕ್ಯಾ.ಡೇವಿಸ್, ಸರ್ ಎಂ.ವಿಶ್ವೇಶ್ವರಯ್ಯ, ಸರ್ದಾರ್ ಎಂ.ಕಾಂತರಾಜ ಅರಸ್, ಆಲ್ಬಿಯನ್ ರಾಜಕುಮಾರ್ ಬ್ಯಾನರ್ಜಿ, ಎಂ.ಇಸ್ಮಾಯಿಲ್, ಕರ್ಪೂರ ಶ್ರೀನಿವಾಸರಾವ್, ಕೆ.ಕೃಷ್ಣ ಅಯ್ಯಂಗಾರ್, ಬಿ.ಸುಬ್ಬಾರಾವ್,ಸಿ.ಕಡಾಂಬಿ, ಜಾನ್ ಬೋರ್, ಕೆ.ಆರ್.ಶೇಷಾಚಾರ್, ಎಚ್.ಪಿ.ಗಿಬ್ಸ್ ಮುಂತಾದವರು ಶ್ರಮಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಕೃಷ್ಣರಾಜ ಸಾಗರ ನಿಮಾ೯ಣದಲ್ಲಿ ದುಡಿದ ೧೦ ಸಾವಿರಕ್ಕೂ ಹೆಚ್ಚು ಮಂದಿ ಕಾರ್ಮಿಕರು ಹಾಗೂ ಮುಳುಗಡೆಯಲ್ಲಿ ತಮ್ಮ ಆಸ್ತಿ ಪಾಸ್ತಿ ಕಳೆದುಕೊಂಡ ಜನರು ಸ್ಮರಣೀಯರು. ಯೋಜನೆಯ ಹಂತಗಳು ಮುಂಬೈಯಲಿ ಎಂಜಿನಿಯರ್ ಆಗಿದ್ದ ಸರ್ ಎಂ.ವಿಶ್ವೇಶ್ವರಯ್ಯ ಅವರನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ೧೯೦೯ ರಲ್ಲಿ ಮೈಸೂರಿಗೆ ಕರೆಸಿಕೊಂಡರು. ಅಷ್ಟರಲ್ಲಾಗಲೆ ಕೃಷ್ಣರಾಜ ಸಾಗರ ಅರ್ಥಾತ್ ಕನ್ನಂಬಾಡಿ ಕಟ್ಟೆಯ ಕೆಲಸ ಶುರುವಾಗಿ ಮೂರು ವರ್ಷವಾಗಿತ್ತು. ವಿಶ್ವೇಶ್ವರಯ್ಯ ಅವರು ಬರುವುದಕ್ಕಿಂತ ಮೊದಲು ಇಂಜಿನಿಯರ್ ಆಗಿದ್ದ ಕ್ಯಾ.ಡೇವಿಸ್ ಅವರ ಅಕಾಲಿಕ ಮರಣದಿಂದ ತೆರವಾದ ಸ್ಥಾನಕ್ಕೆ ಬಂದರು . ಇದರ ಪ್ರಕಾರ ಮೈಸೂರಿನಿಂದ ೧೨ ಮೈಲಿ ಮತ್ತು ಶ್ರೀರಂಗಪಟ್ಟಣದಿಂದ ೯ ಮೈಲಿ ದೂರದಲ್ಲಿರುವ ಕನ್ನಂಬಾಡಿಯಲ್ಲಿ ಜಲಾಶಯ ನಿರ್ಮಿಸಲು ಯೋಜಿಸಲಾಯಿತು. ಈ ಯೋಜನೆಯಿಂದ ೨೫ ಹಳ್ಳಿಗಳು, ೯೨೫೦ ಎಕರೆ ನೀರಾವರಿ ಪ್ರದೇಶ, ೧೩,೨೯೩ ಎಕರೆ ಖುಷ್ಕಿ ಪ್ರದೇಶ, ೮೫೦೦ ಎಕರೆ ಸರ್ಕಾರಿ ಭೂಮಿ ಮುಳುಗಡೆಯಾಗುತ್ತದೆ ಎಂದು ಅಂದಾಜಿಸಲಾಯಿತು. ಮೊದಲ ಹಂತಕ್ಕೆ ೯೫ ಲಕ್ಷ ರೂಪಾಯಿ ಬೇಕು ಎಂದು ಅಂದಾಜಿಸಲಾಗಿತ್ತು. ೯೭ ಅಡಿ ಎತ್ತರದ ಅಣೆಕಟ್ಟು ಕಟ್ಟಿ ೮೦ ಅಡಿ ನೀರು ನಿಲ್ಲಿಸಲು ಉದ್ದೇಶಿಸಲಾಗಿತ್ತು. ಆದರೆ ಅಪಾರ ಪ್ರಮಾಣದ ಹಣ ವ್ಯಯವಾಗುವುದು ಹಾಗೂ ಮದ್ರಾಸ್ ಸರ್ಕಾರದ ಆಕ್ಷೇಪದಿಂದಾಗಿ ಈ ಯೋಜನೆಯ ಬಗ್ಗೆ ಆಗಿನ ದಿವಾನರಾಗಿದ್ದ ಟಿ.ಆನಂದರಾಯರು ಹೆಚ್ಚಿನ ಗಮನ ಕೊಡಲಿಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅಣೆಕಟ್ಟಯ ಕೆಲಸಕ್ಕೆ ವೇಗವನ್ನು ನೀಡಲು ವಿಶ್ವೇಶ್ವರಯ್ಯ ಅವರನ್ನು ಕರೆಸಿಕೊಂಡು ಸಮಾಲೋಚನೆ ನಡೆಸಿ ಯೋಜನೆಯನ್ನು ಮುಂದುವರೆಸಿದರು. ತಮ್ಮ ಬಳಿ ಇದ್ದ ನಾಲ್ಕು ಮೂಟೆ ಚಿನ್ನದ ಆಭರಣ, ಬೆಳ್ಳಿ ನಾಣ್ಯಗಳನ್ನು ಮಾರಾಟ ಮಾಡಿ ೮೦ ಲಕ್ಷ ರೂಪಾಯಿ ಒದಗಿಸುವುದರೊಂದಿಗೆ೧೯೧೧ ಅಣೆಕಟ್ಟೆಯ ಯೋಜನೆ ಯಶಸ್ವಿಯಾಗಿ ಮುಂದುವರೆಯಿತು. ಮೂರು ಹಂತದ ಯೋಜನೆ ಅಣೆಕಟ್ಟು ನಿರ್ಮಾಣ ಯೋಜನೆಯನ್ನು ಮೂರು ಹಂತಗಳಲ್ಲಿ ಅನುಷ್ಠಾನಗೊಳಿಸಲು ನಿರ್ಧರಿಸಲಾಯಿತು. ಮೊದಲ ಹಂತದಲ್ಲಿ ಕಟ್ಟೆ ನಿರ್ಮಾಣ,ಎರಡನೇ ಹಂತದಲ್ಲಿ ಕಾಲುವೆ ನಿರ್ಮಾಣ, ಮೂರನೇ ಹಂತದಲ್ಲಿ ಜಲ ವಿದ್ಯುತ್ ಘಟಕ ಸ್ಥಾಪನೆ. ಸುಮಾರು ೧೦ ಸಾವಿರ ಕಾರ್ಮಿಕರು ನಿರಂತರ ದುಡಿದ ಕಾರಣ ೧೯೧೫ರಲ್ಲಿ ೬೫ ಅಡಿ ಕಟ್ಟೆ ನಿರ್ಮಿಸಲಾಯಿತು. ೧೯೧೯ರಲ್ಲಿ ೧೦೭ ಅಡಿ ಕಟ್ಟೆ ನಿರ್ಮಾಣವಾಯಿತು. ಅಲ್ಲಿಯವರೆಗೆ ಸುಮಾರು ೧೫೫ ಲಕ್ಷ ರೂಪಾಯಿ ವೆಚ್ಚವಾಗಿತ್ತು. ಮೊದಲ ಹಂತದ ಯೋಜನೆ ಮುಗಿದಿದ್ದು ೧೯೨೧ರಲ್ಲಿ. ಆ ವೇಳೆಗಾಗಲೇ ೨೧೧ ಲಕ್ಷ ರೂಪಾಯಿ ಖರ್ಚಾಗಿತ್ತು. ೧೯೨೪ ರಲ್ಲಿ ಕಟ್ಟೆಯ ಜೊತೆಗೇ ಕಾಲುವೆ ನಿರ್ಮಾಣ ಕಾರ್ಯ ಕೂಡ ಆರಂಭವಾಯಿತು. ೧೯೨೮ ರಲ್ಲಿ ಯೋಜಿಸಿದಂತೆ ಅಣೆಕಟ್ಟೆಯ ಎತ್ತರ ೧೩೦ ಅಡಿಗೆ ಮುಟ್ಟಿತು.೧೯೧೧ರಲ್ಲಿ ಆರಂಭಿಸಿದ ಕಾಮಗಾರಿ ೧೯೩೨ರಲ್ಲಿ ಮುಕ್ತಾಯವಾದಾಗ ಒಟ್ಟು ಖರ್ಚಾದ ಹಣ ೩ ಕೋಟಿ, ೨೩ ಲಕ್ಷ ೪೭ ಸಾವಿರ ರೂಪಾಯಿಗಳು. ಸಮುದ್ರಮಟ್ಟದಿಂದ ೨೩೪೪ ಅಡಿ ಎತ್ತರದಲ್ಲಿರುವ ಈ ಅಣೆಕಟ್ಟೆಯಲ್ಲಿ ೪೮.೩೩ ಟಿ‌ಎಂಸಿ ನೀರನ್ನು ಸಂಗ್ರಹಿಸಬಹುದು. ೮೬೦೦ ಅಡಿ ಉದ್ದದ ಈ ಕಟ್ಟೆ ತಳಪಾಯದಿಂದ ೧೪೦ ಅಡಿ ಎತ್ತರದಲ್ಲಿದೆ. ಅಣೆಕಟ್ಟೆಯ ಮೇಲ್ಭಾಗದಲ್ಲಿ ೧೪.೫ ಅಡಿ ಅಗಲದ ರಸ್ತೆ ಇದು ಹಿನ್ನೀರಿನ ಸರಾಸರಿ ಉದ್ದ ೨೫ ಮೈಲಿ. ಅಗಲ ೫ ಮೈಲಿ. ಮದ್ರಾಸ್ ಸರ್ಕಾರದ ಕಿರಿಕಿರಿಯನ್ನು ಸಹಿಸಿಕೊಂಡು ಧೈರ್ಯ ಮಾಡಿ ಅಂದು ಈ ಕಟ್ಟೆಯನ್ನು ಕಟ್ಟದೇ ಹೋಗಿದ್ದರೆ ಹಳೆ ಮೈಸೂರು ಪ್ರಾಂತ್ಯ ಈಗಲೂ ಕುಗ್ರಾಮಗಳಿಂದಲೇ ತುಂಬಿರುತ್ತಿತ್ತು. ಊರುಗಳ ಮುಳುಗಡೆ ಕೃಷ್ಣರಾಜ ಸಾಗರ ಜಲಾಶಯ ಕಟ್ಟಿದ್ದರಿಂದ 13,923 ಎಕರೆ ಖುಷ್ಕಿ ಭೂಮಿ, 9,520 ಎಕರೆ ತರೀ ಭೂಮಿ ಹಾಗೂ 8,500 ಎಕರೆ ಸರ್ಕಾರಿ ಭೂಮಿ ಮುಳುಗಡೆಯಾಯಿತು. 25 ಗ್ರಾಮಗಳು ನೀರಿನಲ್ಲಿ ಮುಳುಗಡೆಯಾದವು. ಇದರಿಂದ 15 ಸಾವಿರ ಮಂದಿ ನಿರ್ವಸತಿಗರಾದರು. ಸಂತ್ರಸ್ತರಿಗೆ ಮೈಸೂರು ಸರ್ಕಾರವು ಮನೆ ನಿರ್ಮಿಸಿಕೊಳ್ಳಲು ಮುಫತ್ತಾಗಿ ನಿವೇಶನ ಒದಗಿಸಿತಲ್ಲದೆ ರಸ್ತೆ, ಬಾವಿ, ಪಾಠಶಾಲೆ, ಮಂದಿರಗಳನ್ನು ಕಟ್ಟಿಸಿಕೊಡಲಾಯಿತು. ಸಮಸ್ಯೆ ಈ ಅಣೆಕಟ್ಟೆ ನಿರ್ಮಾಣ ಕಾಮಗಾರಿ 1906ರಲ್ಲಿ ಆರಂಭವಾಯಿತಾದರೂ ನೀರಿನ ಹಂಚಿಕೆ ವಿಷಯದಲ್ಲಿ ಮೈಸೂರು ಮತ್ತು ಮದರಾಸು ಸರ್ಕಾರಗಳ ನಡುವೆ ವಿವಾದ ಉಂಟಾಗಿ ಕಾಮಗಾರಿಗೆ ತೊಡಕಾಗಿತ್ತು. 1924ರ ಅಖೈರು ಒಪ್ಪಂದದೊಡನೆ ವಿವಾದ ಬಗೆಹರಿದು ಕಾಮಗಾರಿ ಪುನಾರಂಭಗೊಂಡಿತು. 1924ರಲ್ಲಿ ಮದರಾಸು ಮತ್ತು ಮೈಸೂರು ಸರ್ಕಾರಗಳ ನಡುವೆ ನಡೆದ ಕಾವೇರಿ ನದಿ ನೀರು ಹಂಚಿಕೆ ಒಪ್ಪಂದದ ಪ್ರಕಾರ ಪ್ರತಿ ವರ್ಷ ಮೇ ತಿಂಗಳ 28ನೇ ತಾರೀಖಿನಿಂದ ಅದರ ಮುಂದಿನ ಜನವರಿ 27ರವರೆಗೆ ಪ್ರತಿ ದಿನ ಜಲಾಶಯಕ್ಕೆ ಬರುವ ನೀರಿನಲ್ಲಿ ದಿನವಹಿ ಫಲಾನಾ ಪರಿಮಾಣವೆಂದು ಗೊತ್ತಾಗಿರುವಷ್ಟು ಜಲಾಶಯದಿಂದ ಹರಿದು ಹೋಗಲು ಅವಕಾಶ ಮಾಡಿಕೊಟ್ಟು ಹೆಚ್ಚಾಗಿ ಬಂದ ನೀರನ್ನು ಜಲಾಶಯದಲ್ಲಿ ಶೇಖರಿಸಿಟ್ಟುಕೊಳ್ಳುವ ತೀರ್ಮಾನವಾಯಿತು. ಆದರೆ ಅದೇ ವರ್ಷ ನದಿಯಲ್ಲಿ ಭಾರಿ ಪ್ರವಾಹ ಬಂದು ಕೆಲವು ವಾರಗಳ ಕಾಲ ಕಾಮಗಾರಿ ಸ್ಥಗಿತಗೊಂಡಿತ್ತು.[೨] ನೀರಾವರಿ ಉತ್ತರ ದಡದ ಮೇಲ್ಮಟ್ಟದ ನಾಲೆಗೆ ಜಲಾಶಯದಿಂದ ನೀರು ಹರಿಯಬಿಡಲು ನದಿ ಮಟ್ಟದಿಂದ 60 ಅಡಿ ಎತ್ತರದಲ್ಲಿ 6 ಅಡಿ ಅಗಲ, 12 ಅಡಿ ಎತ್ತರವುಳ್ಳ ಮೂರು ತೂಬುಗಳನ್ನು ಅಳವಡಿಸಲಾಗಿದ್ದು, 1.20ಲಕ್ಷ ಎಕರೆ ಕೃಷಿ ಭೂಮಿಗೆ ನೀರುಣಿಸುವಂತೆ ಯೋಜಿಸಲಾಗಿದ್ದು, ಈಗ ಅದರ ವಿಸ್ತಾರ ಹೆಚ್ಚಿದೆ. ಕೆಆರ್‌ಎಸ್‌ ಅಚ್ಚುಕಟ್ಟು ಪ್ರದೇಶದಲ್ಲೇ ದೊಡ್ಡದಾದ, ಆರಂಭದಲ್ಲಿ ‘ಆರ್ವಿನ್‌ ನಾಲೆ’ ಎಂದು ಕರೆಯಲಾಗುತ್ತಿದ್ದ ಈ ನಾಲೆಗೆ ನಂತರ ‘ವಿಶ್ವೇಶ್ವರಯ್ಯ ನಾಲೆ’ ಎಂದು ನಾಮಕರಣ ಮಾಡಲಾಗಿದೆ. ದಿವಾನ್‌ ಬಹದ್ದೂರ್‌ ಕೆ.ಆರ್‌. ಶೇಷಾಚಾರ್ಯ ಈ ನಾಲೆಯ ಯೋಜನೆ ರೂಪಿಸಿದ್ದು, ಮಂಡ್ಯ ಜಿಲ್ಲೆಯ ಮಂಡ್ಯ, ಮದ್ದೂರು, ಮಳವಳ್ಳಿ ಮತ್ತು ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷಿ ಭೂಮಿಗೆ ನೀರುಣಿಸುತ್ತದೆ. ಎಡದಂಡೆ ನಾಲೆ 1,500 ಹಾಗೂ ಬಲದಂಡೆ ನಾಲೆ 3,500 ಎಕರೆಗೆ ನೀರು ಒದಗಿಸುತ್ತವೆ. ಅಣೆಕಟ್ಟೆ ನಿರ್ಮಾಣಕ್ಕೆ ರೂ. 2.5 ಕೋಟಿ ಹಾಗೂ ಬಲದಂಡೆ (ಸರ್‌.ಎಂ. ವಿಶ್ವೇಶ್ವರಯ್ಯ) ಮತ್ತು ಎಡದಂಡೆ ನಾಲಾ ಕಾಮಗಾರಿಗಳಿಗೆ ಒಟ್ಟು ರೂ. 1.6 ಕೋಟಿ ಹಣವನ್ನು ಮೈಸೂರು ಸರ್ಕಾರ ಖರ್ಚು ಮಾಡಿದೆ.[೨] ವಿವಿಧ ತೂಬುಗಳು ಜಲಾಶಯದ ಬೇರೆ ಬೇರೆ ಮಟ್ಟದಲ್ಲಿ ವಿವಿಧ ಅಳತೆಯ ಒಟ್ಟು 171 ತೂಬುಗಳನ್ನು ಅಳವಡಿಸಲಾಗಿದೆ. ಪ್ರವಾಹದ ನೀರು ಹೊರ ಹರಿಯಲು, ಕೆಸರು ಕೊಚ್ಚಿ ಹೋಗುವಂತೆ ಮಾಡಲು ಹಾಗೂ ವಿದ್ಯುತ್‌ ಉತ್ಪಾದನಾ ಘಟಕಕ್ಕೆ ನೀರು ಹರಿಸಲು ಪ್ರತ್ಯೇಕ ತೂಬುಗಳನ್ನು ಅಳವಡಿಸಲಾಗಿದೆ. ದಕ್ಷಿಣ ದ್ವಾರದ ಆಚೆಗೆ 8 ಅಡಿ ಅಗಲ7 ಮತ್ತು 12 ಅಡಿ ಎತ್ತರ ಇರುವ 40 ತೂಬುಗಳಿವೆ. ನೆಲಮಟ್ಟದಿಂದ 106 ಅಡಿ ಎತ್ತರದಲ್ಲಿ ಈ ತೂಬುಗಳನ್ನು ಅಳವಡಿಸಲಾಗಿದೆ. ಈ ತೂಬುಗಳ ಆಚೆಗೆ 10 ಅಡಿ ಅಗಲ ಮತ್ತು 8 ಅಡಿ ಎತ್ತರದ 48 ತೂಬುಗಳಿದ್ದು, ನದಿ ಪಾತ್ರದ 103 ಅಡಿಗಳ ಮಟ್ಟದಲ್ಲಿ ಇವುಗಳನ್ನು ಇಡಲಾಗಿದೆ. ಈ ತೂಬು ಬಾಗಿಲುಗಳ ಮೇಲೆ 10 ಅಡಿ ಅಗಲ ಮತ್ತು 10 ಅಡಿ ಎತ್ತರದ 48 ತೂಬುಗಂಡಿಗಳಿವೆ. ನೆಲಮಟ್ಟದಿಂದ 114 ಅಡಿಗಳ ಎತ್ತರದಲ್ಲಿರುವ ಈ ತೂಬುಗಂಡಿಗಳಿಗೆ ಸ್ವಯಂ ಚಾಲಿತ ಬಾಗಿಲುಗಳನ್ನು ಜೋಡಿಸಲಾಗಿದೆ. ಈ ತಂತ್ರಜ್ಞಾನಕ್ಕೆ ಸರ್‌.ಎಂ. ವಿಶ್ವೇಶ್ವರಯ್ಯ ಅವರು ಹಕ್ಕುಸ್ವಾಮ್ಯ ಪಡೆದಿದ್ದರು. ಜಲಾಶಯದ ಮಟ್ಟ 124 ಅಡಿಗೆ ಮುಟ್ಟುತ್ತಿದ್ದಂತೆ ಇವು ತಾವಾಗಿಯೇ ತೆರೆದುಕೊಳ್ಳುತ್ತವೆ. ಈ ತೂಬುಗಳ ಜತೆಗೆ 80 ಅಡಿ ಎತ್ತರದಲ್ಲಿ 10 ಅಡಿ ಅಗಲ ಮತ್ತು 20 ಅಡಿ ಎತ್ತರವಿರುವ 16 ತೂಬುಗಳಿವೆ. ಇವುಗಳಲ್ಲದೆ ಅಣೆಕಟ್ಟೆಯ ಮಧ್ಯಭಾಗದಲ್ಲಿ 6 ಅಡಿ ಅಗಲ ಮತ್ತು 15 ಅಡಿ ಎತ್ತರದ 11 ತೂಬುಗಳಿದ್ದು, ಕ್ರ್ಯಾಬ್‌ವಿಂಚ್‌ ಸಾಧನ ಬಳಸಿ ಮೇಲಕ್ಕೇರಿಸುವ ಮತ್ತು ಕೆಳಕ್ಕೆ ಇಳಿಸುವ ಮೂಲಕ ಜಲಾಶಯದ ಕೆಸರನ್ನು ಹೊರ ಹಾಕಬಹುದಾಗಿದೆ. ಜಲಾಶಯದ ಈ ಎಲ್ಲ ತೂಬುಗಳನ್ನು ಒಮ್ಮೆಲೇ ತೆರೆದರೆ 3.50 ಲಕ್ಷ ಕ್ಯೂಸೆಕ್‌ (ಒಂದು ಸೆಕೆಂಡ್‌ಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್‌ ಆಗುತ್ತದೆ) ಹೊರ ಹರಿಯುತ್ತದೆ. 80 ಅಡಿ ಮಟ್ಟದ 31 ತೂಬುಗಳ ಬಾಗಿಲುಗಳು ಇಂಗ್ಲೆಂಡ್‌ನ ರಾನ್‌ಸಮ್ಸ ಕಂಪೆನಿಯಿಂದಲೂ, ಉಳಿದ ತೂಬುಗಳ ಬಾಗಿಲುಗಳು ಭದ್ರಾವತಿಯ ಕಬ್ಬಿಣದ ಕಾರ್ಖಾನೆಯಲ್ಲಿ ಬೀಡು ಕಬ್ಬಿಣದಿಂದಲೂ ತಯಾರಿಸಲಾಗಿದೆ.[೨] ಕೆ.ಆರ್.ಎಸ್.ಅಣೆಕಟ್ಟೆಯ ವಿವರ ಬಾಹ್ಯ ಸಂಪರ್ಕಗಳು ೧. ಮಾಹಿತಿ ನೆರವು ಪ್ರಜಾವಾಣಿ, ಲೇಖಕರು : ರವೀಂದ್ರ ಭಟ್ಟ ೨.ಮಾಹಿತಿ ನೆರವು ಪ್ರಜಾವಾಣಿ.೧೦-೨-೨೦೧೫ ಕೃಷ್ಣರಾಜಸಾಗರ ಶತಮಾನದ ನಾಲೆಯಲಿ ಉಕ್ಕುತಿದೆ ನೀರು...(ಚಿಕ್ಕದೇವರಾಯ ಸಾಗರ ನಾಲೆ) ತುಂಗಭದ್ರಾ ಅಣೆಕಟ್ಟು ಉಲ್ಲೇಖ ಭೂಗೋಳ ಪ್ರವಾಸೋದ್ಯಮ ಕರ್ನಾಟಕದ ಪ್ರಮುಖ ಸ್ಥಳಗಳು ಕರ್ನಾಟಕದ ಅಣೆಕಟ್ಟುಗಳು ಜಲಾಶಯಗಳು
1232
https://kn.wikipedia.org/wiki/%E0%B2%92%E0%B2%A1%E0%B3%86%E0%B2%AF%E0%B2%B0%E0%B3%8D
ಒಡೆಯರ್
ಒಡೆಯರ್ ವಂಶ ೧೩೯೯ ರಿಂದ ೧೯೪೭ ರವರೆಗೆ ಮೈಸೂರು ಸಂಸ್ಥಾನವನ್ನು ಆಳಿದ ರಾಜವ೦ಶ. ೧೯೪೭ ರಲ್ಲಿ ಭಾರತದ ಸ್ವಾತಂತ್ರ್ಯಾನಂತರ ಭಾರತ ಗಣರಾಜ್ಯಕ್ಕೆ ಮೈಸೂರು ಸಂಸ್ಥಾನ ಸೇರಿದ ನಂತರ ಒಡೆಯರ್ ವಂಶದ ಆಡಳಿತ ಕೊನೆಗೊಂಡಿತು. ಒಡೆಯರ್ ಎನ್ನುವ ಪದದ ಮೂಲ ಒಡೆಯ. ಒಡೆಯರ್ ದೊರೆಗಳು ಯದುವಂಶ ಅಥವಾ ಯಾದವ ವಂಶಕ್ಕೆ ಸೇರಿದವರು. ಪ್ರಾಥಮಿಕ ಚರಿತ್ರೆ ಒಡೆಯರ್ ವಂಶದ ಸ್ಥಾಪಕ ವಿಜಯ, ದ್ವಾರಕೆಯಿಂದ ಮೈಸೂರಿಗೆ ಬಂದನೆಂದು ಹೇಳಲಾಗುತ್ತದೆ. ವಿಜಯ ನಂತರ ದೇವರಾಯ ಎಂಬ ಹೆಸರನ್ನು ಪಡೆದು ೧೩೯೯ ರಿಂದ ೧೪೨೩ ರ ವರೆಗೆ ಮೈಸೂರನ್ನು ಆಳಿದನು. ಮುಂದಿನ ಎರಡು ಶತಮಾನಗಳ ಕಾಲ ಮೈಸೂರು ಸಂಸ್ಥಾನ ಒಡೆಯರ್ ವಂಶದ ಅನೇಕ ಅರಸರಿಂದ ಆಳಲ್ಪಟ್ಟಿತು. ಆದರೆ ಆಗಿನ ಕಾಲದಲ್ಲಿ ಮೈಸೂರು ಸಂಸ್ಥಾನ ಸ್ವತಂತ್ರ ರಾಜ್ಯವಾಗಿರಲಿಲ್ಲ. ವಿಜಯನಗರ ಸಾಮ್ರಾಜ್ಯದ ಭಾಗವಾಗಿದ್ದು ಮೈಸೂರಿನ ಅರಸರು ವಿಜಯನಗರದ ಸಾಮಂತರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಚಿಕ್ಕಮಗಳೂರು ಮೂಲದ ಗಜಪಡೆಯ ಸೇನಾಧಿಪತಿ ಹೂವಾಡಿಗ ಮಲ್ಲಣ್ಣ ನವರು ದೇವರಾಯ ಒಡೆಯರ್ ಅವರಿಗೆ ಸೈನ್ಯ ಬಲವನ್ನು ತುಂಬುವ ಮೂಲಕ ಸಹಾಯಕರಾದರು.ಅದರ ಜೊತೆಗೆ ಅಲಅಮೇಲಮ್ಮನ ಶಾಪವಿತ್ತು. ವಿಸ್ತರಣೆ ವಿಜಯನಗರ ಸಾಮ್ರಾಜ್ಯ ೧೫೬೫ ರಲ್ಲಿ ಪತನಗೊಂಡಿತು. ಆಗ ಉಂಟಾದ ಅವಕಾಶಗಳ ಲಾಭ ಪಡೆದು ಅಂದಿನ ಮೈಸೂರು ಅರಸನಾದ ರಾಜ ಒಡೆಯರ್ ಮೈಸೂರು ಸಂಸ್ಥಾನವನ್ನು ಹಿಗ್ಗಿಸಿ ೧೫೭೮ ರಿಂದ ೧೬೧೭ರ ವರೆಗೆ ಆಡಳಿತ ನಡೆಸಿದನು. ಮೈಸೂರು ಸಂಸ್ಥಾನದ ರಾಜಧಾನಿಯನ್ನು ಶ್ರೀರಂಗಪಟ್ಟಣಕ್ಕೆ ವರ್ಗಾಯಿಸಲಾಯಿತು. ಇದಕ್ಕೆ ಕಾರಣ ಕಾವೇರಿ ನದಿಯ ನಡುವೆ ಇರುವುದರಿಂದ ಶ್ರೀರಂಗಪಟ್ಟಣಕ್ಕೆ ದೊರೆಯವ ನೈಸರ್ಗಿಕ ರಕ್ಷಣೆ. ನಂತರದ ದಶಕಗಳಲ್ಲಿನ ಮೈಸೂರಿನ ಇನ್ನೊಬ್ಬ ಪ್ರಸಿದ್ಧ ರಾಜ ರಣಧೀರ ಕಂಠೀರವ ನರಸರಾಜ ಒಡೆಯರ್ (ಆಡಳಿತ: ೧೬೩೮-೧೬೫೯). ಈ ಕಾಲದಲ್ಲಿ ಮೈಸೂರು ಸಂಸ್ಥಾನ ತಮಿಳುನಾಡಿನ ತಿರುಚಿನಾಪಳ್ಳಿಯ ವರೆಗೆ ಹಬ್ಬಿತು. ಮೈಸೂರು ಸಂಸ್ಥಾನ ಚಿಕ್ಕದೇವರಾಜ ಒಡೆಯರ್ (ಆಡಳಿತ: ೧೬೭೩-೧೭೦೪) ಕಾಲದಲ್ಲಿ ಹೊಸ ಎತ್ತರಗಳನ್ನು ಮುಟ್ಟಿತು. ಚಿಕ್ಕದೇವರಾಜ ಒಡೆಯರ್ ಮೈಸೂರಿನ ಆಡಳಿತಕ್ಕಾಗಿ ೧೮ ಚಾವಡಿಗಳನ್ನು ಏರ್ಪಡಿಸಿದನಲ್ಲದೆ ತೆರಿಗೆ ಸಂಗ್ರಹಣಾ ವಿಧಾನಗಳಿಗೆ ಸುಧಾರಣೆಗಳನ್ನು ಪರಿಚಯಿಸಿದನು. ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಒಡೆಯರ್ ವಂಶ ೧೮ನೆಯ ಶತಮಾನದಲ್ಲಿ ತಾತ್ಕಾಲಿಕವಾಗಿ ತನ್ನ ಪ್ರಭಾವವನ್ನು ಕಳೆದುಕೊಂಡಿತು. ಹೈದರ್ ಅಲಿ ಮೈಸೂರು ಸೈನ್ಯದ ಸಾಧಾರಣ ಸೈನಿಕನಾಗಿ ಪ್ರಾರಂಭಿಸಿ ಮೇಲಕ್ಕೇರಿ ಸೇನಾನಾಯಕನಾಗಿ ನೇಮಿತನಾದ. ನಂತರ, ಮೈಸೂರಿ ನ ಅರಸರ ಪ್ರಭಾವ ಇಳಿದು ಸರ್ವಾಧಿಕಾರಿಯಾದ. ಹೈದರ್ ಅಲಿ ಸ್ವತಃ ಸಿಂಹಾಸನವನ್ನೇರದಿದ್ದರೂ ರಾಜ್ಯಭಾರದ ಸಂಪೂರ್ಣ ಅಧಿಕಾರ ಆತನ ಕೈಯಲ್ಲಿದ್ದು ಮೈಸೂರು ಮಹಾರಾಜರು ಹೆಸರಿಗೆ ಮಾತ್ರ ಮಹಾರಾಜರಾಗಿ ಉಳಿದರು. ಹೈದರನ ನಂತರ ಅವನ ಮಗ ಟಿಪ್ಪು ಸುಲ್ತಾನ್ ಸ್ವತಃ ಸಿಂಹಾಸನವನ್ನೇರಿ ೧೭೮೨ ರಿಂದ ೧೭೯೯ ರಲ್ಲಿ ಅವನ ಮರಣದವರೆಗೆ ಮೈಸೂರನ್ನು ಆಳಿದ. ಬ್ರಿಟಿಷ್ ಆಡಳಿತ ೧೭೯೯ ರಲ್ಲಿ ನಾಲ್ಕನೆಯ ಮೈಸೂರು ಯುದ್ಧದಲ್ಲಿ ಗೆದ್ದ ನಂತರ ಬ್ರಿಟಿಷರು ಒಡಯರ್ ವಂಶದ ಅರಸರನ್ನು ಸಿಂಹಾಸನದ ಮೇಲೆ ಪುನಃ ಸ್ಥಾಪಿಸಿದರು. ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮತ್ತೆ ಮೈಸೂರಿಗೆ ವರ್ಗಾಯಿಸಲಾಯಿತು. ಪುನಃ ಅಧಿಕಾರಕ್ಕೆ ಮರಳಿದರೂ ಮೈಸೂರು ಮಹಾರಾಜರು ಸ್ವತ೦ತ್ರರಾಗಿರದೆ ಬ್ರಿಟಿಷ್ ಆಡಳಿತಕ್ಕೆ ಒಳಗಾದರು. ೧೯ನೆಯ ಶತಮಾನದ ಉದ್ದಕ್ಕೂ ಮೈಸೂರು ಮಹಾರಾಜರು ಲಲಿತ ಕಲೆಗಳ ಪ್ರೋತ್ಸಾಹದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಈ ಪ್ರೋತ್ಸಾಹದ ಪರಿಣಾಮವಾಗಿ ಮೈಸೂರು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂಬ ಹೆಸರು ಪಡೆದಿದೆ. ಅನೇಕ ಸಂಗೀತಗಾರರು, ಲೇಖಕರು ಮತ್ತು ಕಲಾಕಾರರು (ಉದಾ: ರಾಜಾ ರವಿ ವರ್ಮ) ಮೈಸೂರು ಸಂಸ್ಥಾನದಿಂದ ಪ್ರೋತ್ಸಾಹ ಪಡೆದು ಬೆಳಕಿಗೆ ಬಂದರು. ಒಡೆಯರ್ ವಂಶದ ಕೊನೆಯ ಮಹಾರಾಜರು ಜಯಚಾಮರಾಜ ಒಡೆಯರ್, ೧೯೪೦ ರಿಂದ ಭಾರತದ ಸ್ವಾತಂತ್ರ್ಯದ ವರೆಗೆ ಇವರ ಆಡಳಿತ ನಡೆಯಿತು. ಒಡೆಯರ್ ವಂಶದ ಅರಸರು ದೇವ ರಾಯ (1399 - 1423). ಹಿರಿಯ ಬೆಟ್ಟದ ಚಾಮರಾಜ ಒಡೆಯರ್ (1423 - 1459) ತಿಮ್ಮರಾಜ ಒಡೆಯರ್ (1459 - 1479) ಹಿರಿಯ ಚಾಮರಾಜ ಒಡೆಯರ್ (1479 - 1513) ಹಿರಿಯ ಬೆಟ್ಟದ ಚಾಮರಾಜ ಒಡೆಯರ್ (ಇಮ್ಮಡಿ) (1513 - 1553) ಬೋಳ ಚಾಮರಾಜ ಒಡೆಯರ್ (1572 - 1576) ಬೆಟ್ಟದ ಚಾಮರಾಜ ಒಡೆಯರ್ (ಮುಮ್ಮಡಿ) (1576 - 1578) ರಾಜ ಒಡೆಯರ್ (1578 - 1617) ಚಾಮರಾಜ ಒಡೆಯರ್ (1617 - 1637). ಇಮ್ಮಡಿ ರಾಜ ಒಡೆಯರ್ (1637 - 1638) ರಣಧೀರ ಕಂಠೀರವ ನರಸರಾಜ ಒಡೆಯರ್ (1638 - 1659) ದೊಡ್ಡ ದೇವರಾಜ ಒಡೆಯರ್ (1659 - 1673) ಚಿಕ್ಕ ದೇವರಾಜ ಒಡೆಯರ್ (1673 - 1704) ಕಂಠೀರವ ನರಸರಾಜ ಒಡೆಯರ್ (1704 - 1714) ದೊಡ್ಡ ಕೃಷ್ನರಾಜ ಒಡೆಯರ್ (1732 - 1734) ಇಮ್ಮಡಿ ಕೃಷ್ಣರಾಜ ಒಡೆಯರ್ (1734 - 1766) ಬೆಟ್ಟದ ಚಾಮರಾಜ ಒಡೆಯರ್ (1770 - 1776) ಖಾಸಾ ಚಾಮರಾಜ ಒಡೆಯರ್ (1766 - 1796) ಮುಮ್ಮಡಿ ಕೃಷ್ಣರಾಜ ಒಡೆಯರು (1799 - 1868) ಮುಮ್ಮಡಿ ಚಾಮರಾಜ ಒಡೆಯರ್ (1868 - 1895) ನಾಲ್ವಡಿ ಕೃಷ್ಣರಾಜ ಒಡೆಯರು (1895 - 1940) ಜಯಚಾಮರಾಜ ಒಡೆಯರ್ (1940 - 1947) ದತ್ತು ದೊರೆಗಳು ಒಡೆಯರ್ ರಾಜಮನೆತನವು ಹಲವು ಬಾರಿ ದತ್ತು ಮಕ್ಕಳನ್ನು ಸ್ವೀಕರಿಸಿದೆ. ಅದರಲ್ಲಿ ನಾಲ್ಕು ಮಂದಿ ಯದುವಂಶದವರೇ ಆಗಿದ್ದು ಮೂರು ಬಾರಿ ಹೊರಗಿನವರಾಗಿದ್ದಾರೆ. ರಣಧೀರ ಕಂಠೀರವ -1617 ಇಮ್ಮಡಿ ಚಿಕ್ಕದೇವರಾಜ ಒಡೆಯರ್ - 1638 ದೊಡ್ಡಕೃಷ್ಣರಾಜ ಒಡೆಯರ್ -1714 ಮುಮ್ಮಡಿ ಕೃಷ್ಣರಾಜ ಒಡೆಯರ್ (ರಾಣಿ ಲಕ್ಷ್ಮಮ್ಮಣ್ಣಿ ಆಡಳಿತ, ಬೆಟ್ಟದಕೋಟೆ)-1776 ಹತ್ತನೇ ಚಾಮರಾಜ ಒಡೆಯರ್ -1868 ಜಯಚಾಮರಾಜ ಒಡೆಯರ್ -1940 srikantadatta narasimharaja wodeyer- ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್-2015 ಬಾಹ್ಯ ಸಂಪರ್ಕಗಳು The Wodeyars of Mysore (1578 A.D. to 1947 A.D.) History of Mysore Wodeyars Mysore - Imperial City of Karnataka Genealogy of the Wodeyar Dynasty Curse on Wodeyars: Documenting a Legend Curse on Wodeyars: ORAL TRADITIONS -Legend and history Coins of the Wodeyars Sri Kanteerava Narasimharaja Wadiyar The Wodeyar / Wadiyar Dynasty (Official Website of Mysore Palace) ಇತಿಹಾಸ the two datta king's names joined by itihasa
1233
https://kn.wikipedia.org/wiki/%E0%B2%B0%E0%B2%BE%E0%B2%AE%E0%B2%95%E0%B3%83%E0%B2%B7%E0%B3%8D%E0%B2%A3%20%E0%B2%AE%E0%B2%BF%E0%B2%B7%E0%B2%A8%E0%B3%8D
ರಾಮಕೃಷ್ಣ ಮಿಷನ್
ಶ್ರೀ ರಾಮಕೃಷ್ಣ ಮಠ ಮತ್ತು ಮಿಶನ್ ರಾಮಕೃಷ್ಣ ಪರಮಹಂಸ ರ ಶಿಷ್ಯ ಮತ್ತು ಧಾರ್ಮಿಕ ಗುರು ಸ್ವಾಮಿ ವಿವೇಕಾನಂದರು ಮೇ ೧, ೧೮೯೭ರಲ್ಲಿ 'ರಾಮಕೃಷ್ಣ ಮಿಶನ್ ಅಸೋಷಿಯೇಶನ್' ಎಂಬ ಹೆಸರಿನಲ್ಲಿ ಸ್ಥಾಪಿಸಿದ ಹಿಂದೂ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆ. 'ಆತ್ಮನೋ ಮೋಕ್ಷಾರ್ಥಮ್ ಜಗದ್ ಹಿತಾಯ ಚ' ಎಂಬ ಧ್ಯೇಯವಾಕ್ಯವನ್ನು ಹೊಂದಿರುವ ಈ ಸಂಸ್ಥೆಯು ಶ್ರೀರಾಮಕೃಷ್ಣ ಪರಮಹಂಸರು ತಮ್ಮ ಆಧ್ಯಾತ್ಮಿಕ ಅನುಭವಗಳಿಂದ ಬೋಧಿಸಿದ ವೇದಾಂತದ ತಳಹದಿಯ ಮೇಲೆ ಸ್ಥಾಪಿತವಾಯಿತು. ರಾಮಕೃಷ್ಣ ಮಠ (ಬಂಗಾಳಿ: রামকৃষ্ণ মঠ) ಮತ್ತು ರಾಮಕೃಷ್ಣ ಮಿಷನ್ (ಬಂಗಾಳಿ: রামকৃষ্ণ মিশন) ಅವಳಿ ಸಂಘಟನೆಗಳು ವಿಶ್ವದಾದ್ಯಂತ ಆಧ್ಯಾತ್ಮಿಕ ನಡೆಯುತ್ತಿರುವ ರಾಮಕೃಷ್ಣ ಚಳವಳಿ ಅಥವಾ ವೇದಾಂತ ಚಳವಳಿಯ ತಿರುಳುಭಾಗವಾಗಿದೆ. ರಾಮಕೃಷ್ಣ ಮಿಷನ್ ಮೇ 1, 1897 ರಂದು ಶ್ರೀ ರಾಮಕೃಷ್ಣರ ಮುಖ್ಯ ಅನುಯಾಯಿ ಸ್ವಾಮಿ ವಿವೇಕಾನಂದರು ಸ್ಥಾಪಿಸಿದ ಲೋಕೋಪಯೋಗಿ, ಸ್ವಯಂಸೇವಕ ಸಂಸ್ಥೆ. ಬರ ಪರಿಹಾರ, ನೆರೆಸಂತ್ರಸ್ತರ ಸಹಾಯ, ಗ್ರಾಮೀಣ ಜನರಿಗೆ ಶಿಕ್ಷಣ, ಆರೋಗ್ಯ ಸೇವೆಯೆ, ಗ್ರಾಮೀಣ ನಿರ್ವಹಣೆ, ಬುಡಕಟ್ಟು ಕಲ್ಯಾಣ, ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮೊದಲಾದ ಜನಸೇವಾ ಕಾರ್ಯಕ್ರಮಗಳನ್ನು ಈ ಸಂಸ್ಥೆಯ ವಿವಿಧ ಶಾಖೆಗಳು ನಿರ್ವಹಿಸುತ್ತವೆ. ಧಾರ್ಮಿಕ ಸಾಹಿತ್ಯ ಪ್ರಕಟಣೆ, ಶೀಲ ಸಂವರ್ಧನ ಶಿಬಿರಗಳು, ಪ್ರವಚನ ಮುಂತಾದವುಗಳ ಮೂಲಕ ಜನರ ಆಧ್ಯಾತ್ಮಿಕ ಅವಶ್ಯಕತೆಗಳನ್ನು ಇದು ಪೂರೈಸುತ್ತಿದೆ. ಇದರ ಪ್ರಧಾನ ಕಛೇರಿಯ ಅಸ್ತಿತ್ವ ಹೌರಾ ದ ಬೇಲೂರು ಮಠ, ಕೋಲ್ಕತಾ, ಭಾರತದಲ್ಲಿದೆ. ಭಾರತದ ಸನಾತನ ಹಿಂದೂ ಧರ್ಮ ಮತ್ತು ವೇದಾಂತ ಆಧಾರ ಸ್ತಂಭಗಳು. ಮುನ್ನುಡಿ ರಾಮಕೃಷ್ಣ ಮಹಾಸಂಘದ ಕಾರ್ಯಕ್ರಮಗಳನ್ನು ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ತನ್ನ ಕಾರ್ಯಭಾರದಲ್ಲಿ ನಿರ್ವಹಿಸುತ್ತದೆ, 19 ನೇ ಶತಮಾನದ ಸಂತರಾದ ಶ್ರೀರಾಮಕೃಷ್ಣ ಪರಮಹಂಸ ರ ಪ್ರಭಾವ ಮತ್ತು ಅವರ ಮುಖ್ಯ ಅನುಯಾಯಿ ಸ್ವಾಮಿ ವಿವೇಕಾನಂದರು ರೂಪಿಸಿದ ಒಂದು ಸಾಮಾಜಿಕ -ಧಾರ್ಮಿಕ ಕ್ಷೇತ್ರದ ಎರಡು ಪ್ರಮುಖ ಸಂಸ್ಥೆಗಳು. [3] ಕರ್ನಾಟಕದಲ್ಲಿ ರಾಮಕೃಷ್ಣ ಮಠ ಕರ್ನಾಟಕದಲ್ಲಿ ರಾಮಕೃಷ್ಣ ಮಠದ ಶಾಖೆಗಳು ಕೆಳಕಂಡಲ್ಲಿವೆ: ಮೈಸೂರು ಆಶ್ರಮವು ಮುಖ್ಯವಾಗಿ ಪುಸ್ತಕ ಪ್ರಕಟಣೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಸುಮಾರು ೭೫ ವರ್ಷಗಳಿಗೂ ದೀರ್ಘವಾದ ಇತಿಹಾಸವಿರುವ ಈ ಸಂಸ್ಥೆಯು ಕನ್ನಡ ಆಧ್ಯಾತ್ಮಿಕ ಸಾಹಿತ್ಯಕ್ಕೆ ಸಲ್ಲಿಸಿರುವ ಸೇವೆ ಅಪಾರ. ಮಠವು ಬಾಲಕರಿಗಾಗಿ 'ಶ್ರೀರಾಮಕೃಷ್ಣ ವಿದ್ಯಾಶಾಲೆ' ಎಂಬ ಆವಾಸಿಕ ಪದವೀಪೂರ್ವ ಮಧ್ಯಮಿಕ ಶಾಲೆಯನ್ನು ನಡೆಸುತ್ತಿದೆ. 'ವೇದಾಂತ ಕಾಲೇಜು' ಎಂಬ ಪುರುಷರ ಬಿ.ಎಡ್. ಕಾಲೇಜನ್ನೂ ಇದು ನಡೆಸುತ್ತದೆ. ಸುತ್ತಮುತ್ತಲ ಹಳ್ಳಿಗಳಲ್ಲಿ, ಮುಖ್ಯವಾಗಿ ಬಿಳಿಗಿರಿರಂಗನ ಬೆಟ್ಟ, ಹೆಗ್ಗಡದೇವನ ಕೋಟೆ ಮೊದಲಾದ ಸ್ಥಳಗಳಲ್ಲಿ ಗಿರಿಜನ ಕಲ್ಯಾಣಕೇಂದ್ರಗಳನ್ನು ನಡೆಸುತ್ತಿದೆ. 'ವಿವೇಕ ಪ್ರಭ' ಆಶ್ರಮದಿಂದ ಪ್ರಕಟಗೊಳ್ಳುವ ಸಾಂಸ್ಕೃತಿಕ ಮಾಸಪತ್ರಿಕೆ. ಸ್ವಾಮಿ ನಿತ್ಯಸ್ಥಾನಂದರು ಆಶ್ರಮದ ಈಗಿನ ಅಧ್ಯಕ್ಷರು. ರಾಮಕೃಷ್ಣ ಮಿಶನ್, ಬಸವನಗುಡಿ,ಬೆಂಗಳೂರು ಶತಮಾನ ಕಂಡ ಬೆಂಗಳೂರು ಆಶ್ರಮ ಬಸವನಗುಡಿಯಲ್ಲಿದೆ. ಕನ್ನಡ ಮತ್ತು ಇಂಗ್ಲೀಶ್ ಭಾಷೆಗಳೆರಡರಲ್ಲೂ ಪುಸ್ತಕ ಪ್ರಕಟಿಸುವ ಈ ಸಂಸ್ಥೆ ಪ್ರಸಿದ್ಧವಾಗಿದೆ.ಬಾಲಕರಿಗಾಗಿ 'ವಿದ್ಯಾರ್ಥಿ ಮಂದಿರ' ಎಂಬ ಹಾಸ್ಟೆಲ್ ನ್ನು ಇದು ನಡೆಸುತ್ತಿದೆ. ಬೆಂಗಳೂರಿನ ಹತ್ತಿರವಿರುವ ಶಿವನಹಳ್ಳಿ ಮೊದಲಾದ ಹಳ್ಳಿಗಳಲ್ಲಿ ಹಲವಾರು ಸಮಾಜಕಲ್ಯಾಣ ಕಾರ್ಯಗಳನ್ನು ಕೈಗೊಂಡಿದೆ. ಸಂಸ್ಕೃತದಲ್ಲಿ ಪಾಂಡಿತ್ಯವನ್ನು ಹೊಂದಿರುವ, ಸ್ವಾಮಿ ಹರ್ಷಾನಂದರು ಆಶ್ರಮದ ಈಗಿನ ಅಧ್ಯಕ್ಷರು. ಕನ್ನಡ ಮತ್ತು ಇಂಗ್ಲೀಷಿನಲ್ಲಿ ಹಲವಾರು ಪುಸ್ತಕಗಳನ್ನು ಇವರು ಬರೆದಿದ್ದಾರೆ. ಬೆಂಗಳೂರು (ಹಲಸೂರು ) ಇದು ಬೆಂಗಳೂರಿನಲ್ಲಿರುವ ಇನ್ನೊಂದು ಆಶ್ರಮ. ಹಲವಾರು ಕಾರ್ಯಾಗಾರಗಳನ್ನು, ಶೀಲಸಂವರ್ಧನಾ ಶಿಬಿರಗಳನ್ನು ಇದು ನಡೆಸುತ್ತಿದೆ. ಬಡಜನರಿಗಾಗಿ ಸಂಚಾರಿ ಅಸ್ಪತ್ರೆಯ ಮೂಲಕ ಆರೋಗ್ಯ ಸೇವೆಯನ್ನು ಒದಗಿಸುತ್ತಿದೆ. ಸ್ವಾಮಿ ವೀತಭಯಾನಂದರು ಆಶ್ರಮದ ಈಗಿನ ಅಧ್ಯಕ್ಷರು. ಪೊನ್ನಂಪೇಟೆ ಕೊಡಗಿನ ಪ್ರಶಾಂತ ವಾತಾವರಣದಲ್ಲಿರುವ ಈ ಸುಂದರವಾದ ಆಶ್ರಮ, 'ರಾಮಕೃಷ್ಣ ಸೇವಾಶ್ರಮ' ಎಂಬ ಸುಸಜ್ಜಿತ ಆಧುನಿಕ ಆಸ್ಪತ್ರೆಯ ಮೂಲಕ ಆರೋಗ್ಯಸೇವೆಯನ್ನು ಒದಗಿಸುತ್ತಿದೆ. 'ಬದುಕಲು ಕಲೆಯಿರಿ' ಖ್ಯಾತಿಯ ಸ್ವಾಮಿ ಜಗದಾತ್ಮಾನಂದರು ಆಶ್ರಮದ ಅಧ್ಯಕ್ಷರು. ಮಂಗಳೂರು ಅನಾಥಾಶ್ರಮ ಮತ್ತು ಬಡ ವಿದ್ಯಾರ್ಥಿಗಳಿಗೆ ತನ್ನ ಹಾಸ್ಟೆಲ್ ಮೂಲಕ ಸೇವೆಯನ್ನು ಒದಗಿಸುತ್ತಿದೆ. ಸ್ವಾಮಿ ಪೂರ್ಣಕಾಮಾನಂದರು ಆಶ್ರಮದ ಈಗಿನ ಅಧ್ಯಕ್ಷರು. ಬೆಳಗಾವಿ ಇತ್ತೀಚಿಗೆ ಆರಂಭಗೊಂಡ ಈ ಆಶ್ರಮವು ಉತ್ತರ ಕರ್ನಾಟಕದ ಬಹುದಿನಗಳ ಬೇಡಿಕೆಯನ್ನು ಪೂರ್ಣಗೊಳಿಸಿದೆ. ಹಲವಾರು ಯೋಜನೆಗಳನ್ನು ಶೀಘ್ರದಲ್ಲೆ ಜಾರಿಗೊಳಿಸಲು ನಿರ್ಧರಿಸಿರುವ ಈ ಅಶ್ರಮವು, ಈಗ ಪುಸ್ತಕ ಪ್ರಕಟಣೆ, ಪ್ರವಚನ, ಶಿಬಿರಗಳ ಮುಖಾಂತರ ಜನರ ಸೇವೆಯನ್ನು ಮಾಡುತ್ತಿದೆ. ರಾಮಕೃಷ್ಣ ಮಿಷನ್ ರಾಮಕೃಷ್ಣ ಮಠವು ಪಕ್ಕಾ ಸಂನ್ಯಾಸ ಸಂಸ್ಥೆಯಾದರೆ, ರಾಮಕೃಷ್ಣ ಮಿಷನ್ ಸನ್ಯಾಸಿಗಳಿಗೂ, ಗೃಹಸ್ಥರಿಗೂ ಮುಕ್ತವಾಗಿ ತೆರೆದುಕೊಂಡ ಸಾರ್ವಜನಿಕ ಸಂಸ್ಥೆಯಾಗಿದೆ . ಶ್ರೀರಾಮಕೃಷ್ಣರಲ್ಲಿ ಮತ್ತು ಸಂದೇಶದಲ್ಲಿ ಶ್ರದ್ಧೆಯುಳ್ಳ ಮತ್ತು ರಾಮಕೃಷ್ಣ ಮಿಷನ್ನಿನ ಅದರ್ಶ ಹಾಗೂ ಚಟುವಟಿಕೆಗಳಲ್ಲಿ ಒಲವು ಉಳ್ಳ ಯಾರು ಬೇಕಾದರೂ ಇದಕ್ಕೆ ಸದಸ್ಯರಾಗಬಹುದು. ಶೈಕ್ಷಣಿಕ, ವೈದ್ಯಕೀಯ ಹಾಗೂ ಇತರ ರೀತಿಯ ಸಂಸ್ಥೆಗಳನ್ನು ನಡೆಸುವುದರಲ್ಲಿ ಸಂನ್ಯಾಸೇತರ ಜನರು ಸಂನ್ಯಾಸಿಗಳಿಗೆ ನೆರವಾಗುತ್ತಾರೆ. ರಾಮಕೃಷ್ಣ ಮಿಷನ್ 1901ರ ಮೇ 4ರಂದು ಒಂದು ಸಂಘವಾಗಿ ನೊಂದಾವಣೆಗೊಂಡಿದ್ದು , ಭಾರತದಾದ್ಯಂತ ಮತ್ತು ಇತರೆ ಕೆಲವು ದೇಶಗಳಲ್ಲಿ ಶಾಖೆಗಳನ್ನು ಹೊಂದಿದೆ. ಆಡಳಿತ ರಾಮಕೃಷ್ಣ ಮಠವು ಆಡಳಿತವನ್ನು ಒಂದು ವಿಶ್ವಸ್ತ ಮಂಡಳಿಯು ನೋಡಿಕೊಳ್ಳುತ್ತದ್ದೆ. ಈ ಮಂಡಳಿಗೆ ಚುನಾಯಿತರಾದ ಅಧ್ಯಕ್ಷರು, ಒಬ್ಬರು ಅಥವಾ ಹೆಚ್ಚು ಮಂದಿ ಉಪಾಧ್ಯಕ್ಷರು, ಒಬ್ಬರು ಮಹಾಕಾರ್ಯದರ್ಶಿಗಳು, ಒಬ್ಬರು ಅಥವಾ ಹೆಚ್ಚು ಮಂದಿ ಸಹಾಯಕ ಕಾರ್ಯದರ್ಶಿಗಳು ಮತ್ತು ಒಬ್ಬರು ಖಜಾಂಚಿ ಇರುತ್ತಾರೆ. ರಾಮಕೃಷ್ಣ ಮಿಷನ್ನಿನ ಆಡಳಿತವನ್ನು ಒಂದು ಆಡಳಿತ ಮಂಡಳಿಯು ನೋಡಿಕೊಳ್ಳುತ್ತದೆ. ಅದರಲ್ಲಿ ರಾಮಕೃಷ್ಣ ಮಠದ ಧರ್ಮದರ್ಶಿಗಳೂ ಇರುತ್ತಾರೆ. ಬೇಲೂರಿನಲ್ಲಿ-ಜನಪ್ರಿಯವಾದ ಹೆಸರು ಬೇಲೂರು ಮಠ-ಇರುವ ರಾಮಕೃಷ್ಣ ಮಠದ ಮುಖ್ಯಸ್ತಾನವೇ ರಾಮಕೃಷ್ಣ ಮಿಷನ್ನಿನ ಮುಖ್ಯಸ್ತಾನವೂ ಹೌದು. ಮಠದ ಅಥವಾ ಮಿಷನ್ನಿನ ಆಡಳಿತಕ್ಕೆ ಸಂಬಂಧಿಸಿದ ಎಲ್ಲ ಪತ್ರಗಳನ್ನೂ ಅವುಗಳ ಮುಖ್ಯ ಕಾರ್ಯನಿರ್ವಾಹಕರಾಗಿ ಕೆಲಸ ಮಾಡುವ ಮಹಾಕಾರ್ಯದರ್ಶಿಗಳಿಗೆ ಸಂಭೋಧಿಸಿ ಬರೆಯಬೇಕು. ರಾಮಕೃಷ್ಣ ಮಠದ ಶಾಖಾಕೇಂದ್ರದ ಮುಖ್ಯಸ್ಥರನ್ನು ಅಧ್ಯಕ್ಷರೆಂದು ಕರೆಯುತ್ತಾರೆ; ವಿಶ್ವಸ್ತ ಮಂಡಳಿಯು ಅವರನ್ನು ನೇಮಕ ಮಾಡುತ್ತದೆ. ರಾಮಕೃಷ್ಣ ಮಿಷನ್ನಿನ ಆಡಳಿತ ಸಂಸ್ಥೆಯು ನೇಮಿಸುವ ನಿರ್ವಹಣಾ ಸಮಿತಿಯೊಂದು ರಾಮಕೃಷ್ಣ ಮಿಷನ್ನಿನ ಶಾಖಾ ಕೇಂದ್ರವನ್ನು ನೋಡಿಕೊಳ್ಳುತ್ತದೆ. ಈ ಸಮಿತಿಯು ಕಾರ್ಯದರ್ಶಿಗಳು ಆ ಶಾಖೆಯ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುತ್ತಾರೆ. ವಿಚಾರಪ್ರಣಾಳಿ ರಾಮಕೃಷ್ನ್ಣ ಮಠದ ಮತ್ತು ಮಿಷನ್ನಿನ ವಿಚಾರಪ್ರಣಾಳಿಯು, ಶ್ರೀರಾಮಕೃಷ್ಣರು ಬದುಕಿ ಬಾಳಿದ ಮತ್ತು ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ ವೇದಾಂತದ ಶಾಶ್ವತ ತತ್ತ್ವಗಳನ್ನೊಳಗೊಂಡಿದೆ. ಈ ವಿಚಾರಪ್ರಣಾಳಿಗೆ ಮೂರು ಲಕ್ಷಣಗಳಿವೆ: ವೇದಾಂತದ ಪ್ರಾಚೀನ ತತ್ವಗಳು ಆಧುನಿಕ ಪರಿಭಾಷೆಯಲ್ಲಿ ಅಭಿವ್ಯಕ್ತವಾಗಿವೆ ಎ೦ಬ ಅರ್ಥದಲ್ಲಿ ಅದು ಆಧುನಿಕ; ಅದು ವಿಶ್ವಸಾರ್ವತ್ರಿಕ-ಎಂದರೆ, ಇಡೀ ಮನುಕುಲಕ್ಕೇ ಅದು ಉದ್ದಿಷ್ಟವಾದುದು; ಅದು ವ್ಯಾವಹರಿಕ-ಬದುಕಿನ ಸಮಸ್ಯೆಗಳನ್ನು ಪರಿಹರಿಸಲು ಅದರ ತತ್ತ್ವಗಳನ್ನು ದೈನಂದಿನ ಜೀವನಕ್ಕೆ ಅನ್ವಯಿಸುವುದು ಸಾಧ್ಯ ಎಂಬ ಅರ್ಥದಲ್ಲಿ . ಈ ವಿಚಾರಪ್ರಣಾಳಿಯ ಮೂಲಭೂತ ತತ್ವಗಳನ್ನು ಕೆಳಗೆ ಕೊಟ್ಟಿದೆ: 1 . ಬದುಕಿನ ಅಂತಿಮ ಧ್ಯೇಯ ಭಗವತ್ ಸಾಕ್ಷಾತ್ಕಾರ : ಪ್ರಾಚೀನ ಭಾರತವು ಕಂಡುಕೊಂಡ ಪ್ರಮೂಖ ಆವಿಷ್ಕಾರವೆಂದರೆ-ಬ್ರಹ್ಮ ಎಂಬ ಅನಂತ ಪ್ರಜ್ಞೆಯಿಂದ ಜಗತ್ತು ಹುಟ್ಟುತ್ತದೆ ಮತ್ತು ಪೋಷಿತವಾಗುತ್ತದೆ. ಅದಕ್ಕೆ ನಿರ್ಗುಣ ಹಾಗೂ ಸಗುಣ ಮುಖಗಳೆರಡೂ ಉಂಟು. ಸಗುಣ ಮುಖಕ್ಕೆ ಈಶ್ವರ, ದೇವರು, ಜೆಹೋವ ಮುಂತಾದ ಬೇರೆ ಬೇರೆ ಹೆಸರುಗಳಿವೆ. ಈ ಅಂತಿಮ ಸತ್ಯದ ಸಾಕ್ಷಾತ್ಕಾರವೇ ಬದುಕಿನ ನಿಜವಾದ ಗುರಿ; ಏಕೆಂದರೆ, ಅದೊಂದೇ ನಮಗೆ ಶಾಶ್ವತ ಸಿದ್ಧಿ ಹಾಗು ಶಾಂತಿಯನ್ನು ನೀಡಬಲ್ಲುದು. 2 . ಆತ್ಮನಲ್ಲಿ ಅಂತಸ್ಥವಾಗಿರುವ ದಿವ್ಯತೆ: ಬ್ರಹ್ಮವು ಎಲ್ಲ ಜೀವಿಗಳಲ್ಲೂ ಆತ್ಮವಾಗಿ ನೆಲೆಗೊಂಡಿದೆ; ಅದು ಮನುಷ್ಯನ ನೈಜ ಸ್ವರೂಪ ಹಾಗೂ ಎಲ್ಲ ಸುಖದ ಆಕರ. ಆದರೆ, ಅಜ್ಞಾನದ ಕಾರಣದಿಂದ ಜೀವಿಯು ತನ್ನನ್ನು ಮನಸ್ಸುಗಳೊಡನೆ ಸಮೀಕರಿಸಿಕೊಂಡು, ವಿಷಯಸುಖಗಳ ಬೆನ್ನು ಹತ್ತುತ್ತಾನೆ. ಇದು ಎಲ್ಲ ಕೆಡುಕಿನ ಮತ್ತು ದುಃಖದ ಮೂಲ ಕಾರಣ. ಅಜ್ಞಾನ ನಿವಾರಣೆಯಾದಂತೆಲ್ಲ ಆತ್ಮಸ್ವರೂಪವು ಹೆಚ್ಚುಹೆಚ್ಚಾಗಿ ಪ್ರಕಟಗೊಳ್ಳುತ್ತ ಹೋಗುತ್ತದೆ. ಈ ಅಂತಸ್ಥ ದಿವ್ಯತೆಯ ಅಭಿವ್ಯಕ್ತಿಯೇ ನಿಜವಾದ ಧರ್ಮದ ಸಾರ. 3. ಯೋಗ ಸಮನ್ವಯ : ಅಜ್ಞಾನ ನಿವಾರಣೆ ಹಾಗೂ ದೈವಸಾಕ್ಷಾತ್ಕಾರಕ್ಕೊಯ್ಯುವ ಆಂತರಿಕ ದೈವಿಕತೆಯ ಅಭಿವ್ಯಕ್ತಿಯು ಯೋಗದ ಮೂಲಕ ಸಾಧಿತವಾಗುತ್ತದೆ. ಪ್ರಮುಖವಾದ ಯೋಗಗಳು ನಾಲ್ಕು: ಜ್ಗಾನಯೋಗ, ಭಕ್ತಿಯೋಗ, ರಾಜಯೋಗ ಮತ್ತು ಕರ್ಮಯೋಗ. ಪ್ರತಿಯೊಂದು ಯೋಗವೂ ದೈವ ಸಾಕ್ಷಾತ್ಕಾರದ ಸ್ವತಂತ್ರ ಮಾರ್ಗ. ಆದರೆ ವಿಚಾರ, ಭಾವ ಅಥವಾ ಸಂಕಲ್ಪದಂತಹ ಶಕ್ತಿಗಳ ಬೆಳವಣಿಗೆಯಲ್ಲಿ ಒಂದೊಂದು ಯೋಗವೂ ಯಾವುದೋ ಒಂದು ಶಕ್ತಿಗೆ ಹೆಚ್ಚು ಒತ್ತು ನೀಡುವುದರಿಂದ, ಒಂದು ಸಂತುಲಿತ, ”ಸಂಪೂರ್ಣ ಕ್ರಿಯಾಶೀಲ" ವ್ಯಕ್ತಿತ್ವದ ವಿಕಾಸಕ್ಕೆ ಈ ಎಲ್ಲ ನಾಲ್ಕು ಯೋಗಗಳ ಸಮನ್ವಯ ಅಗತ್ಯ ಸ್ವಾಮಿ ವಿವೇಕಾನಂದರು ಶ್ರೀರಾಮಕೃಷ್ಣ ಮಠ ಮತ್ತು ಮಿಷನ್ನಿನ ಆದರ್ಶವೆಂದು ಪರಿಗಣಿಸಿದ್ದು ಈ ಯೋಗಸಮನ್ವಯವನ್ನೆ. ಇಲ್ಲಿ ಕೊಟ್ಟಿರುವ ಅವಳಿ ಸಂಸ್ಥೆಗಳ ಲಾಂಛನದಲ್ಲಿ ಈ ಆದರ್ಶವು ಅಭಿವ್ಯಕ್ತವಾಗಿದೆ; ಅದು ಸ್ವಾಮಿಜಿಯೇ ರೂಪಿಸಿದ್ದು. ಈ ಲಾಂಛನದಲ್ಲಿನ ನೀರಿನ ಅಲೆ ಕರ್ಮಯೋಗವನ್ನು ಕಮಲವು ಭಕ್ತಿಯೋಗವನ್ನು, ಉದಯಾಸುರ್ಯನು ಜ್ಞಾನಯೋಗವನ್ನು, ಸುರುಳಿಗೊಂಡಿರುವ ಸರ್ಪವು ರಾಜಯೋಗವನ್ನು, ಹಂಸವು ಪರಮಾತ್ಮನನ್ನು ಸೂಚಿಸುತ್ತದೆ. ಒಟ್ಟಿನ ಅರ್ಥವೆಂದರೆ: ನಾಲ್ಕೂ ಯೋಗಗಳ ಸಮಗ್ರ ಅನುಷ್ಠಾನದಿಂದ ಪರಮಾತ್ಮನ ಸಾಕ್ಷಾತ್ಕಾರ ಉಂಟಾಗುತ್ತದೆ. 4 . ಶಕ್ತಿಯನ್ನು ಆಧರಿಸಿದ ನೈತಿಕತೆ: ಸ್ವಾಮಿ ವಿವೇಕಾನಂದರ ಪ್ರಕಾರ, ಬದಕಿನ ಎಲ್ಲ ಅನೈತಿಕತೆ, ಕೆಡುಕು, ದುಃಖಗಳಿಗೆ ವ್ಯಕ್ತಿಯ ದೌರ್ಬಲ್ಯವೇ ಮುಖ್ಯ ಕಾರಣ; ಆತ್ಮನೆಂಬ ತನ್ನ ನೈಜ ಸ್ವರೂಪವನ್ನು ಕುರಿತ ಅಜ್ಞಾನವೇ ಈ ದೌರ್ಬಲ್ಯದ ಕಾರಣ. ನಮ್ಮ ದೌರ್ಬಲ್ಯವನ್ನು ಗೆಲ್ಲಲು ಮತ್ತು ಶೀಲಸಂಪನ್ನವಾದ ಬದುಕನ್ನು ನಡೆಸಲು ಅತ್ಮಜ್ಞಾನ ಅಗಾಧ ಶಕ್ತಿಯನ್ನೀಯುತ್ತದೆ. ಪ್ರತಿಯೊಬರಲ್ಲೂ ಹಲವಾರು ಸುಪ್ತ ಶಕ್ತಿಗಳಿರುತ್ತವೆ; ಆದರೆ ಅವುಗಳಲ್ಲಿ ಬಹುಪಾಲು, ನಮ್ಮ ಭಯ ದೌರ್ಬಲ್ಯಗಳಿಂದಾಗಿ ವಾಸ್ತವ ರೂಪ ತಳೆಯುವುದಿಲ್ಲ. ಆತ್ಮಜ್ಞಾನದ ಮೂಲಕ ಭಯ, ದೌರ್ಬಲ್ಯಗಳನ್ನು ಗೆದ್ದಾಗ, ಈ ಸುಪ್ತ ಶಕ್ತಿಗಳು ಹೊರಹೊಮ್ಮುತ್ತವೆ. ಈ ಪ್ರಕ್ರಿಯೆಯನ್ನು ಸ್ವಾಮೀಜಿ "ಪುರುಷ ನಿರ್ಮಾಪಕ" ಶಿಕ್ಷಣವೆಂದು ಕರೆದರು . 5. ಧರ್ಮಸಾಮರಸ್ಯ : “ಒಂದೇ ಸತ್ಯಕ್ಕೆ ಹಲವು ಹೆಸರುಗಳು" ( ವೇದ ) ಮತ್ತು "ವಿಭಿನ್ನ ಆಧ್ಯಾತ್ಮಿಕ ಪಥಗಳು ಒಂದೇ ಗುರಿಗೊಯ್ಯುತ್ತವೆ" (ಗೀತೆ) ಎಂಬ ವಿಚಾರಗಳು ಹಿಂದೂ ಶಾಸ್ತ್ರಗ್ರಂಥಗಳಲ್ಲಿ ಮತ್ತು ಅನೇಕ ಸಂತರ ಬೋಧನೆಗಳಲ್ಲಿ ಕಂಡುಬರುತ್ತವೆಯಾದರೂ, ಎಲ್ಲ ಧರ್ಮಗಳ ಆತ್ಯಂತಿಕ ಐಕಮತ್ಯವನ್ನು ಅಪರೋಕ್ಷಾನುಭವದ ಮೂಲಕ ತೋರಿಸಿಕೊಟ್ಟವರಲ್ಲಿ ಶ್ರೀರಾಮಕೃಷ್ಣರು ಚಾರಿತ್ರಿಕವಾಗಿ ಮೊದಲಿಗರು. ಅವರ ಸಂದೇಶ ಎರಡು ರೀತಿಯ ಧಾರ್ಮಿಕ ಸಮನ್ವಯವನ್ನು ಸೂಚಿಸುತ್ತದೆ: ಒಂದು, ಹಿಂದೂಧರ್ಮದೊಳಗಿನ ಸಮನ್ವಯ; ಇನ್ನೊoದು, ಜಾಗತಿಕ ಧರ್ಮಗಳ ನಡುವಣ ಸಮನ್ವಯ. ಅ . ಹಿಂದೂಧರ್ಮದೊಳಗಿನ ಸಾಮರಸ್ಯ : ಶ್ರೀರಾಮಕೃಷ್ಣರು ಹಿಂದೂಧರ್ಮದ ಯಾವುದೇ ನಿರ್ದಿಷ್ಟ ಪಂಥದೊಡನೆ ತಮ್ಮನ್ನು ಗುರುತಿಸಿಕೊಳ್ಳಲಿಲ್ಲ; ಆದರೆ ಹಿಂದೂಧರ್ಮವನ್ನು ಇಡಿಯಾಗಿ ಒಪ್ಪಿಕೊಂಡರು. ಹಿಂದು ತತ್ವಶಾಸ್ತ್ರದ ದ್ವೈತ, ಅದ್ವೈತ ಮತ್ತಿತರ ತತ್ವಗಳು ಒಂದೇ ಸತ್ಯದ ಸಮಗ್ರ ಅನುಭವದ ವಿಭಿನ್ನ ಘಟ್ಟಗಳನ್ನು ಪ್ರತಿನಿಧಿಸುತ್ತವೆಯೆಂದೂ, ಎಲ್ಲ ದೇವತೆಗಳೂ ಒಂದೇ ಪರಬ್ರಹ್ಮದ ವಿವಿಧ ಮುಖಗಳೆಂದು ಅವರು ತೋರಿಸಿಕೊಟ್ಟರು. ಅವರ ಸಂದೇಶ ಹಿಂದೂ ಪಂಥಗಳ ನಡುವೆ ಸಾಕಷ್ಟು ಸಾಮರಸ್ಯವನ್ನು ಉಂಟುಮಾಡಿದೆ; ಸ್ವತಃ ಶ್ರೀರಾಮಕೃಷ್ಣರು ಹಿಂದೂಧರ್ಮದ ಐಕ್ಯದ ಸಂಕೇತವಾಗಿದ್ದಾರೆ. ಆ. ಜಾಗತಿಕ ಧರ್ಮಗಳ ನಡುವಣ ಸಾಮರಸ್ಯ: ಶ್ರೀರಾಮಕೃಷ್ಣರು ಧರ್ಮಗಳ ನಡುವಣ ಭಿನ್ನತೆಗಳನ್ನು ಗುರುತಿಸಿದರು, ಆದರೆ ಈ ಭಿನ್ನತೆಗಳಿದ್ದೂ ಕೂಡ ಅವು ಒಂದೇ ಅಂತಿಮ ಗುರಿಗೆ ನಮ್ಮನ್ನು ಕರೆದೊಯ್ಯುತ್ತವೆಯೆಂದು ಹೇಳಿದ್ದು ಅತ್ಯಂತ ಗಮನಾರ್ಹ. ಯತೋ ಮತ್, ತತೋ ಪಥ್ (ಎಷ್ಟು ಮತಗಳೋ ಅಷ್ಟು ಪಥಗಳು) ಎಂಬ ಪ್ರಸಿದ್ಧ ಸೂತ್ರದ ಅರ್ಥ ಇದೇ. ಇದಲ್ಲದೆ, ಸ್ವಾಮಿ ವಿವೇಕಾನಂದರು ಜಗತ್ತಿನ ಎಲ್ಲ ಧರ್ಮಗಳೂ ಏಕೈಕ ಶಾಶ್ವತ ವಿಶ್ವಧರ್ಮದ ಅಭಿವ್ಯಕ್ತಿಗಳೆಂದು ಪ್ರತಿಪಾದಿಸಿದರು, ಆಧ್ಯಾತ್ಮಿಕ ಜಗತ್ತಿನ ಎಲ್ಲ ಮೂಲಭೂತ ತತ್ವಗಳೂ, ನಿಯಮಗಳೂ ವೇದಾಂತದಲ್ಲಿ ಕಂಡುಬರುವುದರಿಂದ ವೇದಾಂತವನ್ನು ಶಾಶ್ವತ ವಿಶ್ವಸಾರ್ವತ್ರಿಕ ಧರ್ಮವೆಂದು ಸ್ವಾಮೀಜಿ ಪರಿಗಣಿಸಿದರು. ಬೇರೆ ಮಾತುಗಳಲ್ಲಿ ಹೇಳುವುದಾದರೆ, ವೇದಾಂತವು ಎಲ್ಲ ಧರ್ಮಗಳಿಗೂ ಸಮಾನವಾದ ತಳಹದಿಯಾಗಬಲ್ಲುದು. 6. ಶ್ರೀರಾಮಕೃಷ್ಣರ ಅವತಾರತ್ವ: ಹಿಂಧೂ ಧಾರ್ಮಿಕ ಸಂಪ್ರದಾಯದ ಪ್ರಕಾರ, ಆಯಾ ಯುಗದ ಅಗತ್ಯಕ್ಕೆ ಅನುಗುಣವಾಗಿ ಮನುಕುಲಕ್ಕೆ ನೂತನ ಸಂದೇಶ ನೀಡುವ ಸಲುವಾಗಿ ದೇವರು ಪ್ರತಿಯೊಂದು ಯುಗದಲ್ಲೂ ಅವತರಿಸುತ್ತಾನೆ. ರಾಮಕೃಷ್ಣ ಪಂಥದ ಆಂದೋಲನದಲ್ಲಿ ಶ್ರೀರಾಮಕೃಷ್ಣರನ್ನು 'ಆಧುನಿಕ ಯುಗದ ಅವತಾರ'ವೆಂದು ಪೂಜಿಸಲಾಗುತ್ತದೆ. ಇದರ ಅರ್ಥವೇನೆಂದರೆ, ಅವರ ಬದುಕು, ಬೋಧನೆಗಳು ಮನುಕುಲಕ್ಕೆ ಮುಕ್ತಿಯ ಹೊಸ ದಾರಿಯೊಂದನ್ನು ತೆರೆದಿಟ್ಟಿವೆ. ಶ್ರೀರಾಮಕೃಷ್ಣರ ಅವತಾರತ್ವದ ವೈಶಿಷ್ಟ್ಯವೆಂದರೆ, ಅದು ಹಿಂದೂತೆಕ್ಕೆಯಿಂದಾಚೆಯವರೂ ಸೇರಿದಂತೆ ಎಲ್ಲ ಹಿಂದಿನ ಅವತಾರಗಳು ಮತ್ತು ಪ್ರವಾದಿಗಳ ಅಧ್ಯಾತ್ಮಿಕ ಪ್ರಜ್ಞೆಯನ್ನೊಳಗೊಂಡಿದೆ ಮತ್ತು ಎಲ್ಲ ಧಾರ್ಮಿಕ ಪರಂಪರೆಗಳೊಡನೆ ಸಮರಸಗೊಂಡಿದೆ ಎನ್ನುವುದು. ರಾಮಕೃಷ್ಣ ಸಂಘದ ಸಂಸ್ಥೆಗಳಲ್ಲಿ ಎಲ್ಲ ಧರ್ಮಗಳ ಸ್ಥಾಪಕರಿಗೆ ಪೂಜಾರ್ಹವಾದ ಗೌರವವನ್ನು ನೀಡಲಾಗುತ್ತಿದೆ. 7. ಒಂದು ಹೊಸ ಕಾರ್ಯತತ್ವ: ಸ್ವಾಮಿ ವಿವೇಕಾನಂದರು ಆಧುನಿಕ ಜಗತ್ತಿನ ಹೊಸ ಕಾರ್ಯತತ್ವವೊಂದನ್ನು ಕೊಟ್ಟಿದ್ದಾರೆ. ರಾಮಕೃಷ್ಣ ಮಠ ಮತ್ತು ಮಿಷನ್ನಿನ ಎಲ್ಲ ಕೆಲಸಗಳೂ ಈ ತತ್ವದ ಚೌಕಟ್ಟಿನ ಅನುಗುಣವಾಗಿ ನಡೆಯುತ್ತವೆ; ಅದು ಮುಂದಿನ ಅಂಶಗಳನ್ನು ಆಧರಿಸಿದೆ: ಅ . ಎಲ್ಲ ಕೆಲಸವೂ ಪವಿತ್ರ : ವೇದಾಂತದ ಪ್ರಕಾರ ಭೌತಿಕ ವಿಶ್ವ ಎಂಬುದು ಎನಿಸಿದ ಭಗವಂತನ ವಿರಾಟ್ ರೂಪದ ಅಭಿವ್ಯಕ್ತಿ. ಆದ್ದರಿಂದ, ಸೋದರಿ ನಿವೇದಿತಾ ಹೇಳಿದ್ದಂತೆ, “ಅಧ್ಯಾತ್ಮಿಕತೆಗೂ ಲೌಕಿಕತೆಗೂ ಏನೂ ಭೇದವಿಲ್ಲ” ಈ ಹೇಳಿಕೆಯ ಅರ್ಥವೇನೆಂದರೆ, ಎಲ್ಲ ದುಡಿಮೆಯೂ ಪವಿತ್ರವೇ ಆಗಿದೆ. ನೆಲ ಗುಡಿಸುವ ಅಥವಾ ಚಪ್ಪಲಿ ಹೊಲಿಯುವ ಸೇವಾ ಕಾರ್ಯವನ್ನು ಕೂಡ ದೇವರ ಕೆಲಸಗಳಂತೆಯೇ ಶ್ರದ್ಧಾಭಕ್ತಿಗಳಿಂದ ಮಾಡಬೇಕು. ಆ. ಕೈಂಕರ್ಯ ಭಾವದಿಂದ ದುಡಿಮೆ : ಭಗವದ್ಗೀತೆಯು ಸರ್ವವ್ಯಾಪಿಯಾದ ಭಗವಂತನೇ ಎಲ್ಲ ದುಡಿಮೆಯ ಅಂತಿಮ ಆಕರ ಮತ್ತು ಎಲ್ಲ ಯಜ್ಞಗಳ ಫಲಾನುಭವಿ ಎನ್ನುತ್ತದೆ . (9.24, 18.46). ಆದ್ದರಿಂದ, ಎಲ್ಲ ದುಡಿಮೆಯನ್ನು ಕೈಂಕರ್ಯವನ್ನಾಗಿ ಕೈಗೊಳ್ಳಬೇಕು ಮತ್ತು ಕರ್ಮಫಲಗಳನ್ನು ಭಗವಂತನಿಗೆ ಸಮರ್ಪಿಸಬೇಕು. ಇ . ಮಾನವ ಸೇವೆಯೇ ದೇವರ ಸೇವೆ : ಸ್ವಾಮಿ ವಿವೇಕಾನಂದರು ತಮ್ಮ ಗುರುವಿನಿಂದ ಕಲಿತ ಮುಖ್ಯ ತತ್ವಗಳಲ್ಲೊಂದೆಂದರೆ: ಶಿವಜ್ಞಾನೇ ಜಿವಸೇವಾ (ಶಿವನೆಂದು ಭಾವಿಸಿ ಜೀವನಿಗೆ ಸೇವೆ ಸಲ್ಲಿಸುವುದು). ಮನುಷ್ಯನಲ್ಲಿ ದೈವಿಕತೆ ಅಂತರ್ನಿಹಿತವಾಗಿ ಇರುವುದರಿಂದ, ನಾವು ಮಾಡುವ ಮಾನವಸೇವೆ ವಾಸ್ತವವಾಗಿ ದೇವರ ಸೇವೆಯೇ ಆಗುತ್ತದೆ. ಸೇವೆಯ ಅಗತ್ಯವಿರುವ ವ್ಯಕ್ತಿಯನ್ನು ಕನಿಕರದ ವಸ್ತುವನ್ನಾಗಿ ಕಾಣುವುದರ ಬದಲು ಪೂಜೆಯ ವಸ್ತುವನ್ನಾಗಿ ಕಾಣಬೇಕು. ಇಂತಹ ದೃಷ್ಟಿಯು ಕೊಡುವವನು, ಪಡೆಯುವವನು ಇಬ್ಬರನ್ನೂ ದೊಡ್ಡವರನ್ನಾಗಿ ಮಾಡುತ್ತದೆ. ಈ. ದೀನದಲಿತರ ಸೇವೆಯ ಮೇಲೆ ಒತ್ತು: ಭಾರತದಲ್ಲಿ ಬಡವರ ಮತ್ತು ದಲಿತರ ಪರವಾಗಿ ದನಿಯೆತ್ತಿ ಹೀಗೆ ಧೈರ್ಯವಾಗಿ ಮತನಾಡಿದ ಮೊತ್ತಮೊದಲನೆಯ ಧಾರ್ಮಿಕ ನಾಯಕರು ಸ್ವಾಮಿ ವಿವೇಕಾನಂದರು: “ಬಡವರಲ್ಲಿ, ದುರ್ಬಲರಲ್ಲಿ ಮತ್ತು ರೋಗಿಗಳಲ್ಲಿ ಶಿವನನ್ನು ಕಾಣುವವನು ನಿಜವಾದ ಅರ್ಥದಲ್ಲಿ ಶಿವನನ್ನು ಪೂಜಿಸುತ್ತಾನೆ ... ದೇಗುಲಗಳಲ್ಲಿ ಮಾತ್ರ ಶಿವನನ್ನು ಕಾಣುವವನಿಗಿಂತ ಇಂಥ ಮನೋಭಾವದ ವ್ಯಕ್ತಿಯನ್ನು ಶಿವ ಮೆಚ್ಚಿಕೊಳ್ಳುತ್ತಾನೆ". ಬಡವರಿಗೆ ಅನ್ವಯಿಸುವಂತೆ ದರಿದ್ರನಾರಾಯಣ ಎಂಬ ಶಬ್ಧವನ್ನು ಟಂಕಿಸಿದವರು ಸ್ವಾಮೀಜಿ. ಬಡವರ ಬಗೆಗಿನ ಸ್ವಾಮಿಜಿಯ ಪ್ರೀತಿ ಮತ್ತು ಕಳಕಳಿ ರಾಮಕೃಷ್ಣ ಮಿಷನ್ನಿನ ಸೇವಾಕಾರ್ಯಾಕ್ರಮಗಳಲ್ಲಿ ಒಂದು ನಿರ್ದೇಶಕ ತತ್ತ್ವವಾಗಿ ಮುಂದುವರಿದುಕೊಂಡು ಬಂದಿದೆ. ಉ . ದುಡಿಮೆಯೊಂದು ಅಧ್ಯಾತ್ಮಿಕ ಸಾಧನೆ : ಮೇಲಿನ ನಿಬಂದನೆಗಳನ್ನು ಪೂರೈಸುತ್ತ ಮಾಡುವ ಯಾವುದೇ ಕೆಲಸ ಆಧ್ಯಾತ್ಮಿಕ ಸಾಧನೆಯಾಗಿ ಪರಿಣಮಿಸುತ್ತದೆ, ಅದರಿಂದ ಮನಸ್ಸು ಶುದ್ಧಿಗೊಳ್ಳುತ್ತದೆ ಮತ್ತು ಜೀವನದಲ್ಲಿ ಸುಪ್ತವಾಗಿರುವ ದೈವಿಕತೆ ಹೆಚ್ಚು ಹೆಚ್ಚಾಗಿ ಪ್ರಕಟವಾಗುತ್ತದೆ. ಹೀಗಾಗಿ, ಪೂಜಾತ್ಮಕ ಸೇವೆಯೆಂದು ಭಾವಿಸಿ ಮಾಡಿದ ಇಂಥ ಕೆಲಸದಿಂದ ಮಾಡಿದವನಿಗೇ ಅಧ್ಯಾತ್ಮಿಕವಾಗಿ ಲಾಭ ದೊರೆಯುತ್ತದೆ; ಅದೊಂದು ಆಧ್ಯಾತ್ಮಿಕ ಶಿಸ್ತು ಅಥವಾ ಯೋಗವಾಗುತ್ತದೆ. ಬಡವರಿಗೆ ಅನ್ನ, ಬಟ್ಟೆಗಳನ್ನು ಕೊಡುವುದು, ರೋಗಿಗಳ ಆರೈಕೆ ಮಾಡುವುದು ಮುಂತಾದ ರಾಮಕೃಷ್ಣ ಮಿಷನ್ನಿನ ಸೇವಾ ಚಟುವಟಿಕೆಗಳೆಲ್ಲ ನಡೆಯುವುದು ಕಾಯಕವನ್ನು ಅಧ್ಯಾತ್ಮಿಕ ಶಿಸ್ತಾಗಿ ಕಾಣುವ (ಕರ್ಮಯೋಗದ) ಈ ಗ್ರಹಿಕೆಯಿಂದಲೇ . ಹೀಗಾಗಿ, ಮನುಷ್ಯನಲ್ಲಿರುವ ಭಗವಂತನ ಪೂಜೆಯಾಗಿ ಕೈ ಕೊಳ್ಳುವ ಸೇವೆ ಇಬ್ಬಗೆಯಲ್ಲಿ ಫಲ ನೀಡುತ್ತದೆ : ಸೇವೆ ಪಡೆಯುವ ವ್ಯಕ್ತಿಗೆ ಅದು ದೈಹಿಕವಾಗಿ ಅಥವಾ ಮಾನಸಿಕವಾಗಿ ಅನುಕೂಲವಾಗುತ್ತದೆ ಮತ್ತು ಸೇವೆ ಮಾಡುವ ವ್ಯಕ್ತಿಗೆ ಅಧ್ಯಾತ್ಮಿಕವಾಗಿ ಅನುಕೂಲವಾಗುತ್ತದೆ. ಧ್ಯೇಯವಾಕ್ಯ : ಸೇವಾಚಟುವಟಿಕೆಗಳ ಈ ದ್ವಿಮುಖ ಉದ್ದೇಶವನ್ನು, ವಾಸ್ತವವಾಗಿ ಶ್ರೀರಾಮಕೃಷ್ಣ ಮಠ ಮತ್ತು ಮಿಷನ್ನಿನ ಇಡೀ ವಿಚಾರಪ್ರಣಾಳಿಯನ್ನು ಸ್ವಾಮಿ ವಿವೇಕಾನಂದರು ರೂಪಿಸಿದ ಅತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ-ಸ್ವಂತ ಮುಕ್ತಿಗಾಗಿ ಮತ್ತು ಲೋಕಹಿತಕ್ಕಾಗಿ-ಎಂಬ ಧ್ಯೇಯವಾಕ್ಯದಲ್ಲಿ ಅಡಕಗೊಳಿಸಲಾಗಿದೆ. ಬದುಕಿನ ಒಂದು ವಿಧಾನವಾಗಿ ಸೇವೆ ಹಿಂದೆ ವಿವರಿಸಿರುವ ರಾಮಕೃಷ್ಣ ಮಠ ಮತ್ತು ಮಿಷನ್ನಿನ ವಿಚಾರ ಪ್ರಣಾಳಿಗಳು ಅವುಗಳ ಬಹುಮಖ ಚಟುವಟಿಕೆಗಳಲ್ಲಿ ಅಭಿವ್ಯಕ್ತಿಗೊಳ್ಳುತ್ತವೆ. ಈ ಚಟುವಟಿಕೆಗಳು ಶಿಕ್ಷಣ, ಆರೋಗ್ಯ, ಗ್ರಾಮೀಣ ಅಭಿವೃದ್ಧಿ, ಸ್ವ-ಉದ್ಯೋಗ, ಮಹಿಳಾ ಯೋಗಕ್ಷೇಮ, ಅಂತರ್-ಧರ್ಮೀಯ ಅರಿವು, ನೈತಿಕ ಜೀವನ, ಅಧ್ಯಾತ್ಮಿಕ ಮಾರ್ಗದರ್ಶನ ಮತ್ತು ನೈಸರ್ಗಿಕ ಪ್ರಕೋಪಗಳಿಗೆ ಬಲಿಯಾದವರಿಗೆ ಪರಿಹಾರ ನೀಡುವ ಮಾನವೀಯ ಅಗತ್ಯ ಹಾಗೂ ಸಾಮಾಜಿಕ ಹಿತದಂತಹ ವಿಭಿನ್ನ ಕ್ಷೇತ್ರಗಳಲ್ಲಿ ಹರಡಿರುತ್ತವೆ. ಈ ಎಲ್ಲ ಚಟುವಟಿಕೆಗಳೂ ಸೇವೆಯಾಗಿ, ಮನುಷ್ಯನಲ್ಲಿ ಅಂತರ್ಗತನಾಗಿರುವ ದೇವರ ಸೇವೆಯಾಗಿ ನಡೆಯುತ್ತವೆ. ಸೇವೆ ಎಂಬುದು ರಾಮಕೃಷ್ಣ ಮಠ ಮತ್ತು ಮಿಷನ್ನಿನ ಯಾವುದೋ ಒಂದು ನಿರ್ದಿಷ್ಟ ಕಾಲದಲ್ಲಿ ನಡೆಯುವ ನಿರ್ದಿಷ್ಟ ಚಟುವಟಿಕೆಯ ಪ್ರಕಾರಕ್ಕೆ ಸೀಮಿತವಾದುದಲ್ಲ; ಅದು ಒಂದು ಜೀವನವಿಧಾನ. ಸಂನ್ಯಾಸಿಗಳು ಹೊರಗಿನ ಸಮಾಜದಲ್ಲಿ ಯಾವುದೇ ಸೇವೆ ಸಲ್ಲಿಸದಿರುವ ಸಂದರ್ಭಗಳಲ್ಲಿ ಸಂನ್ಯಾಸಿವರ್ಗದೊಳಗೇ ಸೇವೆ ಸಲ್ಲಿಸುತ್ತಿರುತ್ತಾರೆ. ಇದಕ್ಕೆ ಯಾವುದೇ ಕಾಲದ, ವಯಸ್ಸಿನ ಮಿತಿ ಇರುವುದಿಲ್ಲ. ಅತೀವ ಅನಾರೋಗ್ಯ ಇಲ್ಲವೆ ವೃದ್ಧಾಪ್ಯದಿಂದ ಅಸಮರ್ಥರಾಗುವವರೆಗೂ ಸಂನ್ಯಾಸಿಗಳು ವಿವಿಧ ಸೇವಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ರಾಮಕೃಷ್ಣ ಮಠ ಮತ್ತು ಮಿಷನ್ನಿನ ಹಿಂದಿನ ಮಹಾಧ್ಯಕ್ಷರಾದ ಸ್ವಾಮಿ ರಂಗನಾಥಾನಂದಜಿಯವರು 98ರ ಇಳಿವಯಸ್ಸಿನಲ್ಲೂ ವಿವಿಧ ಬಗೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು. ರಾಮಕೃಷ್ನ್ಣ ಮಠದಲ್ಲಿ ಪಾಲಿಸುವ "ಜೀವನವಿಧಾನವಾಗಿ ಸೇವೆ"ಯಲ್ಲಿ ಕೆಲವು ವಿಶಿಷ್ಟ ಲಕ್ಷಣಗಳಿವೆ; ಅವುಗಳಲ್ಲಿ ಕೆಲವನ್ನು ಮುಂದೆ ಉಲ್ಲೇಖಿಸಲಾಗಿದೆ : 1. ನಿಸ್ವಾರ್ಥ, ತ್ಯಾಗ, ಪ್ರೇಮ: ನಿಸ್ವಾರ್ಥತೆಯ ತತ್ವ 'ದಿವ್ಯತ್ರಯ'ರ ಒಂದು ಪ್ರಮುಖ ಬೋಧನೆಯಾಗಿದ್ದು, ಕರ್ಮ, ಭಕ್ತಿ, ಜ್ಞಾನಗಳ ಮೂರು ಪ್ರಮುಖ ಆಧ್ಯಾತ್ಮಿಕ ಪಥಗಳಲ್ಲಿ ಅದೇ ಮೊದಲ ಹೆಜ್ಜೆಯಾಗಿದೆ. ರಾಮಕೃಷ್ಣ ಪಂಥದ ಸಂನ್ಯಾಸಿಗಳು ತಮ್ಮ ಸಂಘವನ್ನು ಶ್ರೀರಾಮಕೃಷ್ಣರ 'ಆನುಭಾವಿಕ ಶರೀರ'ವೆಂದು ಭಾವಿಸುತ್ತಾರೆ ಮತ್ತು ತಮ್ಮ ವೈಯಕ್ತಿಕ ಅಹಂಗಳನ್ನು ಸಂಘದ ಸಾಮೂಹಿಕ ಸಂಕಲ್ಪದಲ್ಲಿ ವಿಲೀನಗೊಳಿಸಲು ಕಲಿಯುತ್ತಾರೆ. ಅಲ್ಲದೆ, ಅವರು ಮಾಡುವ ಎಲ್ಲ ಕಾರ್ಯಗಳು ಮತ್ತು ಅವುಗಳ ಫಲ ಭಗವಂತನಿಗೆ ಪೂಜೆಯಾಗಿ ಸಮರ್ಪಿತವಾಗುತ್ತವೆ. ರಾಮಕೃಷ್ಣ ಮಠದ ಮತ್ತು ಮಿಷನ್ನಿನ ಸದಸ್ಯರು ತಮ್ಮ ಕಾರ್ಯಗಳಿಗೆ ವೈಯಕ್ತಿಕವಾಗಿ ಯಾವುದೇ ಗೌರವವನ್ನು ಬಯಸುವುದಿಲ್ಲ : ಎಲ್ಲ ಗೌರವವೂ ಸಂಘಕ್ಕೆ ಸಲ್ಲುತ್ತದೆ. ಅವರು ಸೇವಾ ಚಟುವಟಿಕೆಗಳಲ್ಲಿ ತೊಡಗುವುದು 'ಸ್ವಯಂಕೀರ್ತಿ'ಗಾಗಿ ಅಲ್ಲ, ಭಗವಂತನಿಗೆ ಮುಡಿಪಾಗಿರುವ 'ಉನ್ನತತರ' ಕೀರ್ತಿಗಾಗಿ. ರಾಮಕೃಷ್ಣ ಸಂನ್ಯಾಸಿಗಳು ಜ್ಞಾನಮಾರ್ಗವನ್ನೂ ಅನುಸರಿಸುತ್ತಾರೆ ಮತ್ತು ಅತ್ಮವಿಶ್ಲೇಷಣೆಯ ಅನುಷ್ಠಾನದಿಂದ ಎಲ್ಲ ಆಲೋಚನೆ, ಕ್ರಿಯೆಗಳ ಶಾಶ್ವತ ಅಂತರಿಕ ಸಾಕ್ಷಿಯಾದ 'ಪ್ರತ್ಯಗಾತ್ಮ'ನೊಡನೆ ತಮ್ಮನ್ನು ಗುರುತಿಸಿಕೊಳ್ಳಲು ಕಲಿಯುತ್ತಾರೆ. ಈ ಎಲ್ಲ ವಿಧಾನಗಳ ಮೂಲಕ ಇಲ್ಲಿನ ಸಂನ್ಯಾಸಿಗಳು ನಿಸ್ವಾರ್ಥ, ನಿರಹಂಕಾರಗಳನ್ನು ಕಲಿಯುತ್ತಾರೆ. ಮೊದಲೇ ಹೇಳಿದಂತೆ, ಶ್ರೀರಾಮಕೃಷ್ಣ ಆಂದೋಲನದಲ್ಲಿ ಅನುಸರಿಸುತ್ತಿರುವ ಸೇವಾದರ್ಶ, “ಶಿವಜ್ಞಾನೇ ಜೀವಸೇವಾ", ಎಂದರೆ, ಮನುಷ್ಯನೇ ಭಗವದ್ರೂಪವೆಂದು ತಿಳಿದು ಅವನಿಗೆ ಸೇವೆ ಸಲ್ಲಿಸುವುದು. ಆದರೂ ಎಲ್ಲರಿಗೂ-ಅದರಲ್ಲೂ ದರಿದ್ರರು ಮತ್ತು ರೋಗಿಗಳಗೆ-ಪೂಜಾ ಮನೋಭಾವದಿಂದ ಸೇವೆ ಸಲ್ಲಿಸುವುದು ಹೇಳಿದಷ್ಟು ಸುಲಭವಲ್ಲ. ಕಾಲ, ಶಕ್ತಿ, ಸುಖ ಇತ್ಯಾದಿ ಬಹಳಷ್ಟು ವಿಷಯಗಳ ತ್ಯಾಗವನ್ನು ಅಪೇಕ್ಷಿಸುತ್ತದೆ, ಈ ಸೇವಾದರ್ಶ, ಪ್ರತಿಫಲ, ಮನ್ನಣೆ ಅಥವಾ ಕೀರ್ತಿಯಾ ಯಾವುದೇ ನಿರೀಕ್ಷೆಯಿಲ್ಲದೆ ರಾಮಕೃಷ್ಣ ಆಂದೋಲನದ ಸದಸ್ಯರು ಕೈಗೊಳ್ಳುವ ಈ ತ್ಯಾಗಗಳೆ ಅವರ ಸೇವಾದರ್ಶನವನ್ನು ಯಥಾರ್ಥಗೊಳಿಸುವಂಥವು. ಸೇವೆ ಮತ್ತು ತ್ಯಾಗಗಳ ಹಿಂದಿನ ಪ್ರೇರಕಶಕ್ತಿಯೇ, ‘ಪ್ರೇಮ’.ರಾಮಕೃಷ್ಣ ಮಠ ಮತ್ತು ಮಿಷನ್ನಿನ ಮೂಲಕ ಪ್ರವಹಿಸುವ ಪ್ರೇಮ ದೈವಿಕ ಪ್ರೇಮ-ಮನುಕುಲಕ್ಕೆ ಶ್ರೀರಾಮಕೃಷ್ಣ, ಶ್ರೀಮಾತೆ ಹಾಗೂ ಸ್ವಾಮಿ ವಿವೇಕಾನಂದರು ತೋರಿದ ಪರಿಶುದ್ಧವೂ, ಅವಿನಾಶಿಯೂ ಆದ ಪ್ರೇಮ. ಈ ದೈವಿಕ ಪ್ರೇಮವೇ ಸನ್ಯಾಸಿ ಸೋದರರನ್ನೂ, ಸಾಮಾನ್ಯ ಭಕ್ತರನ್ನೂ ಒಗ್ಗೂಡಿಸಿ, ಸಂಘವನ್ನು ಒಟ್ಟಾಗಿ ಹಿಡಿದಿಟ್ಟಿದೆ. 2. ಸ್ವಾತಂತ್ರ್ಯ, ಸಮಾನತೆ, ಸೋದರತೆ : ಪ್ರಜಾಪ್ರಭುತ್ವದ ಈ ಮೂರು ಮಹಾನ್ ಆದರ್ಶಗಳು - ಅವುಗಳ ಬಗೆಗೆ ಮನುಕುಲ ಶತಶತಮಾನಗಳ ಕಾಲ ಕನಸು ಕಾಣುತ್ತ ಮತ್ತು ಮಾತನಾಡುತ್ತ ಬಂದಿದೆ – ರಾಮಕೃಷ್ಣ ಮಠ ಮತ್ತು ಮಿಷನ್ನಿನ ವಲಯಗಳಲ್ಲಿ ನಿಶ್ಯಬ್ಧವಾದ. ಸಹಜವಾದ ಒಂದು ಸಮಾಜಿಕ ವಾಸ್ತವತೆಯಾಗಿ ಸಂಭವಿಸುತ್ತಿವೆ. ಸ್ವಾಮಿ ವಿವೇಕಾನಂದರು ಮತ್ತೆ ಮತ್ತೆ ಹೇಳಿದ್ದಾರೆ. “ಬಿಡುಗಡೆಯೇ ಬೆಳವಣಿಗೆಯ ಮೊದಲ ಷರತ್ತು” ಮತಾಂಧತೆ, ಅಸಹನೆ, ದ್ವೇಷ, ಮೂಢ ನಂಬಿಕೆಗಳಿಂದ ಬಿಡುಗಡೆ, ಧಾರ್ಮಿಕ, ಸಾಮಾಜಿಕ ಮತ್ತು ಜನಾಂಗಿಕ ಪೂರ್ವಗ್ರಹಗಳಿಂದ ಬಿಡುಗಡೆ - ಒಂದೇ ಮಾತಿನಲ್ಲಿ ಹೇಳುವುದಾದರೆ ವಿಚಾರ, ನಂಬಿಕೆಗಳ ಸ್ವಾತಂತ್ರ್ಯ ಎಂಬುದು ರಾಮಕೃಷ್ಣ ಆಂದೋಲನದಲ್ಲಿ ಕಂಡುಬರುವ ಕೇಂದ್ರ ಸಂಗತಿ. ರಾಮಕೃಷ್ಣ ಮಠ ಮತ್ತು ಮಿಷನ್ನಿನ ಚಟುವಟಿಕೆಗಳು, ಜತಿ, ಪಂಥ, ಜನಾಂಗಗಳ ಯಾವುದೇ ಭೇದಗಳಿಲ್ಲದೆ ಸೃಷ್ಟಿಯ ಯೋಗಕ್ಷೇಮವನ್ನು ಗುರಿಯಾಗಿಟ್ಟುಕೊಂಡಿವೆ. ಬಡವ – ಬಲ್ಲಿದ, ಬ್ರಾಹ್ಮಣ – ಹರಿಜನ, ಹಿಂದುಗಳು, ಮುಸ್ಲಿಮರ, ಕ್ರೈಸ್ತರು - ಎಲ್ಲರೂ ಇಲ್ಲಿ ಒಬ್ಬರೆ ದೈವೀ ತಂದೆತಾಯಿಯರ ಮಕ್ಕಳಾಗಿ ಪರಿಗಣಿಸಲ್ಪಡುತ್ತಾರೆ. ಸಾಮಾಜಿಕ ಸಮಾನತೆಯನ್ನು ಉಂಟುಮಾಡುವುದು "ಕೆಳಮಟ್ಟಕ್ಕೆ ಇಳಿಸುವ" ಪ್ರಕ್ರಿಯೆಯಿಂದಲ್ಲ, “ಮೇಲ್ಮಟ್ಟಕ್ಕೆ ಏರಿಸುವ" ಪ್ರಕ್ರಿಯೆಯಿಂದ, ಎಂದರೆ ಈಗಾಗಲೇ ಮೇಲಿರುವವರನ್ನು ಕೆಳಕ್ಕೆಳೆಯುವುದರಿಂದಲ್ಲ, ಕೆಳಗಿರುವವರನ್ನು ಮೇಲಕ್ಕೆತ್ತುವುದರಿಂದ ಎಂಬ ವಿವೇಕಾನಂದರ ನಿಲುವನ್ನು ಈ ಸಂಸ್ಥೆಗಳು ಅನುಸರಿಸುತ್ತವೆ. 3. ಪರಿಣತಿ, ದಕ್ಷತೆ, ಸಮೂಹಕಾರ್ಯ: ಸಾಮಾನ್ಯವಾಗಿ ವಾಣಿಜ್ಯೋದ್ಯಮ ಕ್ಷೇತ್ರದ ಬಗೆಗೆ ಮಾತನಾಡುವಾಗ ಈ ಮೂರೂ ಗುಣಗಳ ಪ್ರಸ್ತಾಪ ಆಗುತ್ತಿರುತ್ತದೆ; ಆದರೆ, ವಾಸ್ತವವಾಗಿ ಅವು ರಾಮಕೃಷ್ಣ ಮಠ ಮತ್ತು ಮಿಷನ್ನಿನ ಎಲ್ಲ ಚಟುವಟಿಕೆಗಳ ನಿಯಂತ್ರಕ ತತ್ವಗಳಾಗಿವೆ. ಎಲ್ಲ ಕಾರ್ಯವೂ ಇಲ್ಲಿ ಪೂಜೆಯಾಗಿ ನಡೆಯುವುದರಿಂದ ಮತ್ತು ಅತ್ಯುತ್ತಮ ವಸ್ತುಗಳನ್ನು ಮಾತ್ರವೇ ಭಗವಂತನಿಗೆ ಸಮರ್ಪಿಸುವುದರಿಂದ, ರಾಮಕೃಷ್ಣ ಮಠ ಮತ್ತು ಮಿಷನ್ನಿನ ಸದಸ್ಯರು ತಮಗೆ ವಹಿಸಿದ ಕಾರ್ಯವನ್ನು ಅತ್ಯುತ್ತಮ ರೀತಿಯಲ್ಲಿ ಮಾಡಲು ಪ್ರಯತ್ನಿಸುತ್ತಾರೆ. ಯಾವುದೇ ಬಗೆಯ ಪೋಲು ಅಥವಾ ನಷ್ಟವನ್ನು ತಡೆಗಟ್ಟಲು ಎಲ್ಲ ರೀತಿಯ ಎಚ್ಚರ ವಹಿಸಲಾಗುತದೆ. ಸಂಸ್ಥೆಗಳು ಮತ್ತು ಅಲ್ಲಿ ಇರುವವರ ಕನಿಷ್ಠ ಅಗತ್ಯಗಳನ್ನು ಹೊರತುಪಡಿಸಿ ಎಲ್ಲ ಸಂಪನ್ಮೂಲಗಳೂ ಸಮಾಜದ ಯೋಗಕ್ಷೇಮಕ್ಕಾಗಿ ಬಳಕೆಯಾಗುತ್ತವೆ ಮತ್ತು ಎಲ್ಲ ಸಂನ್ಯಾಸಿಗಳೂ ಸಂನ್ಯಾಸಭ್ರಾತೃತ್ವದ ಪ್ರಬಲವಾದ ಬಾಂಧವ್ಯದಿಂದ ಒಟ್ಟಾಗಿರುವುದರಿಂದ, ಅವರು ಒಂದು ತಂಡವಾಗಿ ಕೆಲಸ ಮಾಡುವುದು ಸುಲಭ ಹಾಗೂ ಸಹಜವಾಗಿ ಕಾಣುತ್ತದೆ; ರಾಮಕೃಷ್ಣ ಮಿಷನ್ನಿನ ಯಶಸ್ವಿಗೆ ಬಹಳಮಟ್ಟಿಗೆ ಈ ಗುಣವು ಕಾರಣವಾಗಿದೆ. 4. ಸತ್ಯಸಂಧತೆ, ಪ್ರಾಮಾಣಿಕತೆ, ಪಾರದರ್ಶಕತೆ : ಸಾರ್ವಜನಿಕ ದೇಣಿಗೆಗಳು ಮತ್ತು ಸರ್ಕಾರದ ಅನುದಾನಗಳ ಮೂಲಕ ಬರುವ ಬಹುಪಾಲು ನಿಧಿಗಳನ್ನು ಸ್ವೀಕರಿಸುವಲ್ಲಿ ಮತ್ತು ಖರ್ಚುಮಾಡುವಲ್ಲಿ ರಾಮಕೃಷ್ಣ ಮಿಷನ್ ಎಲ್ಲ ಶಾಸನಬದ್ಧ ಹಾಗೂ ಸಂಬಂಧಿತ ನಿಯಮ, ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತದೆ. ಅದರ ಆಯವ್ಯಯಗಳು ಕಾಲಕಾಲಕ್ಕೆ ಲೆಕ್ಕಪರಿಶೋಧನೆಗೆ ಒಳಪಡುತ್ತವೆ ಮತ್ತು ಸಾರ್ವಜನಿಕರಿಗೆ ಲಭ್ಯವಾಗುತ್ತವೆ. ಆರ್ಥಿಕ ವಿಷಯಗಳಲ್ಲಿ ಪಾರದರ್ಶಕತೆ ಎಂಬುದು ರಾಮಕೃಷ್ಣ ಮಿಷನ್ನಿನ ಒಂದು ವಿಶಿಷ್ಟವಾದ ಲಕ್ಷಣವೇ ಆಗಿದೆ. 5. ರಾಜಕೀಯರಹಿತ ಸಾಮಾಜಿಕ ಬದ್ಧತೆ : “ಸುಖೀ ರಾಜ್ಯ"ದ ತತ್ವವನ್ನನುಸರಿಸುವ ಪ್ರಜಾಪ್ರಭುತ್ವದ ರಾಷ್ತ್ರವೊಂದರಲ್ಲಿ ಯಾವುದೇ ಬಗೆಯ ಸಾಮಾಜಿಕ ಸೇವೆಯೂ ಅನಿವಾರ್ಯವಾಗಿ ಸರ್ಕಾರದ ಜೊತೆ ಸಂಬಂಧವನ್ನು ಒಳಗೊಳ್ಳುತ್ತದೆ ಆದರೂ, ರಾಮಕೃಷ್ಣ ಮಿಷನ್ ಮನುಕುಲದ ಆಧ್ಯಾತ್ಮಿಕ ಪುನರುಜ್ಜೀವನವನ್ನು ಗುರಿಯಾಗಿಸಿಕೊಂಡಿರುವ ಒಂದು ಆಧ್ಯಾತ್ಮಿಕ ಸಂಸ್ಥೆಯಾಗಿರುವುದರಿಂದ ತನ್ನ ಸ್ಥಾನವನ್ನು ಸಕ್ರಿಯ ರಾಜಕಾರಣ ಹಾಗೂ ರಾಜಕೀಯ ಸಂಬಂಧಗಳಿಗೆ ಅತೀತವಾಗಿ ಉಳಿಸಿಕೊಂಡಿದೆ. ಕನ್ನಡನಾಡಿನಲ್ಲಿ ಸೇವೆಸಲ್ಲಿಸಿದ ರಾಮಕೃಷ್ಣ ಮಠದ ಪ್ರಮುಖ ಸನ್ಯಾಸಿಗಳು ಸ್ವಾಮಿ ಶಾಂಭವಾನಂದ ಸ್ವಾಮಿ ಸೋಮನಾಥಾನಂದ ಸ್ವಾಮಿ ಯತೀಶ್ವರಾನಂದ ಸ್ವಾಮಿ ಶಾಸ್ತ್ರಾನಂದ ಸ್ವಾಮಿ ಆದಿದೇವಾನಂದ ಸ್ವಾಮಿ ತ್ಯಾಗೀಶಾನಂದ ಸ್ವಾಮಿ ಸುಂದಾನಂದ ಸ್ವಾಮಿ ಸಿದ್ದೇಶ್ವರಾನಂದ ಸ್ವಾಮಿ ಜಗದಾತ್ಮಾನಂದ ಉಲ್ಲೇಖಗಳು swami purushottamanandaji ಸಾಮಾಜಿಕ ಸಂಸ್ಥೆಗಳು ಧಾರ್ಮಿಕ ಸಂಸ್ಥೆಗಳು ಹಿಂದೂ ಧರ್ಮ ಶೈಕ್ಷಣಿಕ ಸಂಸ್ಥೆಗಳು ಸಮಾಜಸೇವಕರು
1234
https://kn.wikipedia.org/wiki/%E0%B2%9A%E0%B2%82%E0%B2%A6%E0%B3%8D%E0%B2%B0%E0%B2%B6%E0%B3%87%E0%B2%96%E0%B2%B0%20%E0%B2%95%E0%B2%82%E0%B2%AC%E0%B2%BE%E0%B2%B0
ಚಂದ್ರಶೇಖರ ಕಂಬಾರ
ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಚಿಕಾಗೊ, ನ್ಯೂಯಾರ್ಕ್, ಬರ್ಲಿನ್, ಮಾಸ್ಕೋ, ಜಪಾನ್ ಮುಂತಾದೆಡೆಗಳ ಕೆಲವು ವಿಶ್ವವಿದ್ಯಾನಿಲಯಗಳಲ್ಲಿ ಜಾನಪದ ಮತ್ತು ರಂಗಭೂಮಿ ಕುರಿತ ಉಪನ್ಯಾಸಗಳನ್ನು ನೀಡಿರುವ ಹೆಗ್ಗಳಿಕೆ ಇವರದು. ಜನನ ವಿದ್ಯಾಭ್ಯಾಸ ಡಾ. ಚಂದ್ರಶೇಖರ ಕಂಬಾರ (ಜನನ - ಜನವರಿ ೨, ೧೯೩೭) ಬೆಳಗಾವಿ ಜಿಲ್ಲೆ ಘೋಡಿಗೇರಿ ಗ್ರಾಮದಲ್ಲಿ ಬಸವಣ್ಣೆಪ್ಪ ಕಂಬಾರ ಹಾಗೂ ಚೆನ್ನಮ್ಮ ದಂಪತಿಯ ಪುತ್ರನಾಗಿ ಜನಿಸಿದರು. ಗೋಕಾಕ್ ನ ಮುನ್ಸಿಪಲ್ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಪಡೆದರು. ಬಳಿಕ ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಬಿಎ ಪದವಿ, ೧೯೬೨ರಲ್ಲಿ 'ಕರ್ನಾಟಕ ವಿವಿ'ಯಿಂದ ಎಂ.ಎ ಪದವಿ ಹಾಗೂ ಪಿ.ಎಚ್.ಡಿ.ಪದವಿ ಪಡೆದಿದ್ದಾರೆ. ವೃತ್ತಿಜೀವನ ಕಂಬಾರರು ಯುವಕರಾಗಿದ್ದಾಗ ಧಾರವಾಡದ ಕವಿ ಸಮ್ಮೇಳನದಲ್ಲಿ ಕವಿತೆಯೊಂದನ್ನು ಓದಿದ್ದರಂತೆ, ಖ್ಯಾತ ಕವಿಗಳೊಬ್ಬರು ಕಂಬಾರರ ಕವಿತೆ ಅಲ್ಲಿ ಓದಿದ ಎಲ್ಲ ಕವಿಗಳಿಗಿಂತ ಭಿನ್ನವಾಗಿದ್ದದ್ದು ಎಲ್ಲರ ಗಮನಕ್ಕೆ ಬಂದಿದ್ದರೂ, ಅದ್ಯಕ್ಷರು ಕಂಬಾರರ ಬಗ್ಗೆ ಕುಹಕದ ಮಾತು ಹೇಳಿದ್ದರು. "ಕಬ್ಬಿಣ ಕಾಸುವವರೂ ಈಗ ಕಾವ್ಯ ಬರೆಯುತ್ತಿದ್ದಾರೆ " ಎಂಬ ಅಧ್ಯಕ್ಷರ ಮಾತು ಕಂಬಾರರ ಸ್ವಾಭಿಮಾನವನ್ನೇ ಬಡಿದೆಬ್ಬಿಸಿತು.   ಅಂದೇ ಕಂಬಾರ ಕಾವ್ಯವನ್ನು ಪಳಗಿಸಿಕೊಳ್ಳಲು ನಿರ್ಧರಿಸಿದರಂತೆ. ಜಾನಪದ ಸೊಗಡನ್ನು ತಮ್ಮ ಬರವಣಿಗೆಯಲ್ಲಿ ಮೈದಾಳಿಸಿಕೊಂಡು ಬಂದಿರುವ ಚಂದ್ರಶೇಖರ ಕಂಬಾರರು ಹಲವು ಪ್ರತಿಭೆಗಳ ಸಂಗಮ. ಕವಿ, ನಾಟಕಕಾರ, ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ದೇಶಕ, ಅಧ್ಯಾಪಕ, ಜಾನಪದ ತಜ್ಞ, ೨೦೦೪-೨೦೧೦ರವರೆಗೆ ಕಾಂಗ್ರೆಸ್ ಪಕ್ಷದಿಂದ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು ಇತ್ಯಾದಿ. ಕಂಬಾರರು ಸ್ನಾತಕೋತ್ತರ ಶಿಕ್ಷಣದ ನಂತರ ಅವರ ಸಾಹಿತ್ಯದ ಗುರು ಎಂದೇ ಗುರುತಿಸಲ್ಪಟ್ಟ ಶ್ರೀ ಗೋಪಾಲಕೃಷ್ಣ ಅಡಿಗರು ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಸಾಗರದ ಲಾಲ್ ಬಹದೂರ್ ಕಲಾ, ವಿಜ್ಞಾನ ಮತ್ತು ಎಸ್ ಬಿ ಸೊಲಬಣ್ಣ ಶೆಟ್ಟಿ ವಾಣಿಜ್ಯ  ಮಹಾವಿದ್ಯಾಲಯದಲ್ಲಿ ಎರಡು ವರ್ಷಗಳ ಕಾಲ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ೨೦೧೯ ನೇ ಸಾಲಿನ ವಿದ್ಯಾಕಾಶಿ ಧಾರವಾಡದಲ್ಲಿ ನಡೆದ ೮೪ ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಕವಿ/ನಾಟಕಕಾರ ಮುಖ್ಯವಾಗಿ ಕವಿ-ನಾಟಕಕಾರರಾಗಿ ಕಂಬಾರ ಜನಪ್ರಿಯರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಹಲವು ವರ್ಷಗಳ ಉಪನ್ಯಾಸಕ ವೃತ್ತಿಯಿಂದ ಕನ್ನಡ ವಿಶ್ವವಿದ್ಯಾಲಯ ಹಂಪಿಯ ಕುಲಪತಿಗಳಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಈಗ ಬೆಂಗಳೂರಿನ ಬನಶಂಕರಿಯಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಈ ನಡುವೆ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರಾಗಿಯೂ ಮೂರು ವರ್ಷ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೆ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ತಮ್ಮ ಊರಿನ ವಾತಾವರಣದಲ್ಲಿನ ಜಾನಪದ ಹಾಡು, ಕುಣಿತ, ನಾಟಕಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಅವುಗಳ ಸಂಗ್ರಹ, ಬರವಣಿಗೆಯನ್ನು ರೂಢಿಸಿಕೊಂಡರು. ಉತ್ತರ ಕರ್ನಾಟಕದ ಅದರಲ್ಲೂ ಗೋಕಾಕ, ಬೆಳಗಾವಿ, ಧಾರವಾಡದ ಗಂಡು ಭಾಷೆಯನ್ನು ಕನ್ನಡ ಸಾಹಿತ್ಯಕ್ಕೆ ಹೊತ್ತು ತಂದರು. ಧಾರವಾಡದ ವರಕವಿ ಡಾ. ದ.ರಾ.ಬೇಂದ್ರೆ ಅವರ ನಂತರ ಭಾಷೆಯನ್ನು ಪರಿಣಾಮಕಾರಿಯಾಗಿ ದುಡಿಸಿ ಕೊಂಡವರಲ್ಲಿ ಕಂಬಾರರು ಒಬ್ಬರು. ಕಂಬಾರರು ತಾವೇ ಬರೆದ ಕಾದಂಬರಿಗಳನ್ನು ಚಲನಚಿತ್ರ ಗಳಾಗಿಸಿದರು. "ಕರಿಮಾಯಿ, ಸಂಗೀತಾ, ಕಾಡುಕುದುರೆ ಸಿಂಗಾರವ್ವ ಮತ್ತು ಅರಮನೆ" ಇವುಗಳಲ್ಲಿ ಪ್ರಮುಖವಾದುವು. ಕಂಬಾರರು ತಮ್ಮ ಚಿತ್ರಗಳಿಗೆ ತಾವೇ ಸಂಗೀತ ನೀಡಿದ್ದಾರೆ. ಕಾಡುಕುದುರೆಯ ಹಿನ್ನೆಲೆ ಸಂಗೀತದ ``ಕಾಡು ಕುದುರೆ ಓಡಿಬಂದಿತ್ತಾsss.." ಹಾಡಿಗೆ ಶಿವಮೊಗ್ಗ ಸುಬ್ಬಣ್ಣ ಅವರಿಗೆ ರಾಷ್ಟ್ರಪತಿಗಳ ಫಲಕ ಕೂಡ ಸಿಕ್ಕಿತು. `ಜೀಕೆ ಮಾಸ್ತರ ಪ್ರಣಯ ಪ್ರಸಂಗ' ಕಾದಂಬರಿಯನ್ನು ಕಿರುತೆರೆಗೂ ಅಳವಡಿಸಿದ್ದಾರೆ. ಹತ್ತಾರು ಸಾಕ್ಷ್ಯ ಚಿತ್ರಗಳನ್ನೂ ನಿರ್ಮಿಸಿರುವ ಕಂಬಾರರು ಉತ್ತಮ ನಾಟಕಕಾರರು. ಜೊತೆಗೆ ಜಾನಪದ ಶೈಲಿಯ ಹಾಡುಗಳಿಂದ ಜನಪ್ರಿಯರು. ಅವರು ತಾವೇ ಸ್ವತಃ ಹಾಡುಗಾರರೂ ಆಗಿದ್ದಾರೆ. ಕೃತಿಗಳು ಕಂಬಾರು ಬರೆದ ಪುಸ್ತಕಗಳು ತುಂಬ. ಅವರ ೧೦ಕಾವ್ಯ ಪುಸ್ತಕ, ೨೫ ನಾಟಕ ಪುಸ್ತಕ, ೧ ಮಹಾಕಾವ್ಯ, ೫ ಕಾದಂಬರಿ ಅಲ್ಲದೆ ೧೭ ಬೇರೆಬೇರೆ ಗದ್ಯ ಸಂಪಾದನೆಗಳು, ಸಂಗ್ರಹಗಳು, ಪ್ರಬಂಧ ಸಂಕಲನಗಳು, ಸಂಶೋಧನ ಪುಸ್ತಕಗಳು ಬಂದಿವೆ.ಅಭಿನಂನ ಗ್ರಂಥ:-ಸಿರಿಸಂಪಿಗೆ. ಕಾವ್ಯಗಳು ಮುಗುಳು ೧೯೫೮ ಹೇಳತೇನ ಕೇಳ ೧೯೬೪ ತಕರಾರಿನವರು ೧೯೭೧ ಸಾವಿರಾರು ನೆರಳು ೧೯೭೯ (ಕುಮಾರ ಆಶನ್ ಪ್ರಶಸ್ತಿ ೧೯ ಬೆಳ್ಳಿ ಮೀನು ೧೯೮೯ ಅಕ್ಕಕ್ಕು ಹಾಡುಗಳೆ ೧೯೯೩ ಈ ವರೆಗಿನ ಹೇಳತೇನ ಕೇಳ ೧೯೯೩ ಹಂಪಿಯ ಕಲ್ಲುಗಳು (ಈ ಕಾವ್ಯ ಪುಸ್ತಕವನ್ನು ಓ.ಎಲ್. ನಾಗಭೂಷಣ ಸ್ವಾಮಿಯವರು ಸಾಹಿತ್ಯ ಅಕಾಡೆಮಿಗಾಗಿ ಇಂಗ್ಲಿಷ್ ಭಾಷೆಯಲ್ಲಿ ಅನುವಾದ ಮಾಡಿದ್ದಾರೆ) ೨೦೦೪ ಎಲ್ಲಿದೆ ಶಿವಾಪುರ ೨೦೦೯ ನಾಟಕಗಳು ಬೆಂಬತ್ತಿದ ಕಣ್ಣು ೧೯೬೧ ನಾರ್ಸಿಸ್ಸ್ ೧೯೬೯ ಋಷ್ಯಶೃಂಗ ೧೯೭೦ (ಸಿನಿಮಾ ಆಗಿದೆ) ಜೋಕುಮಾರಸ್ವಾಮಿ ೧೯೭೨ (ನಾಟ್ಯ ರಂಗ ಪ್ರಶಸ್ತಿ). ಚಾಲೇಶ ೧೯೭೩ (ಮದ್ರಾಸ್ ದಕ್ಷಿಣ ಭಾರತ ಹಿಂದಿ ಪ್ರಚಾರಸಭಾ ವತಿಯಿಂದ ಈ ಪುಸ್ತಕವು ಹಿಂದಿ ಇಂಗ್ಲಿಷ್ ಭಾಷೆಗೆ ೧೯೭೩ರಲ್ಲಿ ಅನುವಾದ ಆಗಿದೆ) ಸಂಗ್ಯಾಬಾಳ್ಯಾ ಅನ್ಬೇಕೊ ನಾಡೊಳಗ ೧೯೭೫ ಕಿಟ್ಟಿಯ ಕಥೆ ೧೯೭೪ ಜೈಸಿದ್ದನಾಯಕ ೧೯೭೫ (ಈ ಪುಸ್ತಕಕ್ಕೆ ೧೯೮೪ರ ನವದೆಹಲಿದ ಸರಸ್ವತಿ ವಿಹಾರಕ್ಕೆ ಹಿಂದಿ ಮತ್ತು ಇಂಗ್ಲಿಷ್ ಇಂಗ್ಲಿಷ್ ಭಾಷೆಯಲ್ಲಿ ಅನುವಾದ ಮಾಡಿದ್ದಾರೆ). (ಹಾಗೇ ಕೆಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಮತ್ತು ವರ್ಧಮಾನ ಪ್ರಶಸ್ತಿಗೆ ಆಯ್ಕೆ ಆಗಿದೆ.) ಆಲಿಬಾಬ ೧೯೮೦ (ಸಾಹಿತ್ಯ ಅಕಾಡೆಮಿದ ಭಾರತೀಯ ಸಾಹಿತ್ಯಕ್ಕೆ ಅನುವಾದ ಆಗಿದೆ) ಕಾಡುಕುದುರೆ ೧೯೭೯ ಸಿನಿಮಾ ಆಗಿದೆ. ಮತ್ತು ಆ ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ನಾಯಿಕಥೆ ೧೯೮೦ (ಸಂಗೀತ ಸಿನಿಮಕ್ಕೆ ಆಯ್ಕೆ ಮತ್ತು ೫ ಕರ್ನಾಟಕ ರಾಜ್ಯ ಸಿನಿಮಾ ಪ್ರಶಸ್ತಿ ಬಂದಿದೆ. ಖಾರೋಖಾರ ೧೯೭೭ ಮತಾಂತರ ೧೯೭೮ ಹರಕೆಯ ಕುರಿ ೧೯೮೩ (ಸಿನಿಮಾ ಆಗಿದೆ. ರಾಷ್ಟ್ರಪ್ರಶಸ್ತಿ ಬಂದಿದೆ. ಹಾಗೇ ೧೯೮೯ರಲ್ಲಿ ನವದೆಹಲಿಯ ಜ್ಞಾನಭಾರತಿಯಿಂದ ಹಿಂದಿ ಇಂಗ್ಲಿಷ್ ಭಾಷೆಯಲ್ಲಿ ಅನುವಾದ ಆಗಿದೆ) ಕಂಬಾರ ಅವರ ನಾಟಕಗಳು ೧೯೮೪ ಸಾಂಬಶಿವ ಪ್ರಹಸನ ೧೯೮೭ (೧೯೯೧ರಲ್ಲಿಇ ಕಲ್ಕತ್ತದ ಸೀಗಲ್ ಬೂಕ್‍ ಪ್ರಕಾಶಕರು ಈ ಪುಸ್ತಕವನ್ನು ತಮಿಳು, ಹಿಂದಿ ಮತ್ತು ಇಂಗ್ಲಿಷ್ ಭಾಷೆಗೆ ಬಾಸೆಗ್ ಅನುವಾದ ಮಾಡಿ ಪ್ರಕಟಿಸಿದ್ದಾರೆ) ಸಿರಿಸಂಪಿಗೆ ೧೯೯೧ (ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ) ಹುಲಿಯ ನೆರಳು ೧೯೮೦ (ಸಿನೆಮ ಆಗಿದೆ) ಬೋಳೆ ಶಂಕರ ೧೯೯೧ ಪುಷ್ಪರಾಣಿ ೧೯೯೧ ತಿರುಕನ ಕನಸು ೧೯೮೯ ಮಹಾಮಾಯಿ ೧೯೯೯ (೨೦೦೦ನೇ ವರ್ಷದಲ್ಲಿ ದೆಹಲಿಯ ಎನ್.ಎಸ್.ಡಿ. ಸಂಸ್ಥೆಯಿಂದ ಇಂಗ್ಲಿಷ್ ಮತ್ತು ಹಿಂದಿ ಭಾಷೆಗೆ ಅನುವಾದ ಆಗಿದೆ. ನೆಲಸಂಪಿಗೆ ೨೦೦೪ (ಈ ಪುಸ್ತಕವನ್ನು ಕರ್ನಾಟಕ ಸರಕಾರದ ಪುಸ್ತಕ ಪ್ರಾಧಿಕಾರ ಪ್ರಕಟ ಮಾಡಿದೆ) ಜಕ್ಕಣ ೨೦೦೮ ಶಿವರಾತ್ರಿ ೨೦೧೧ ಮಹಾಕಾವ್ಯ ಚಕೋರಿ೧೯೯೬ (೧೯೯೯ರಲ್ಲಿ ಪ್ರಕಟವಾದ ಈ ಪುಸ್ತಕವು ಭಾರತದ ಪೆಂಗ್ವಿನ್ ಪ್ರಕಾಶನದಿಂದ ಇಂಗ್ಲಿಷ್ ಭಾಷೆಗೆ ಅನುವಾದ ಆಗಿದೆ) ಕಾದಂಬರಿ ಅಣ್ಣತಂಗಿ ೧೯೫೬ ಕರಿಮಾಯಿ ೧೯೭೫ - ಸಿನಿಮಾ ಆಗಿದೆ ಜಿ.ಕೆ.ಮಾಸ್ತರ್ ಪ್ರಣಯ ಪ್ರಸಂಗ ೧೯೮೬ (ದೂರದರ್ಶನ ಸಿನೆಮಾ ಆಗಿದೆ. ಹಾಗೇ ದೆಹಲಿಯ ವಿದ್ಯಾ ಪ್ರಕಾಶನ ಮಂದಿರದಿಂದ ಹಿಂದಿ ಭಾಷೆಗೆ ಅನುವಾದ ಆಗಿದೆ) ಸಿಂಗಾರವ್ವ ಮತ್ತು ಅರಮನೆ ೧೯೮೨(ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ೨೦೦೨ರಲ್ಲಿ ನವದೆಹಲಿಯಿಂದ ಕಥಾಪುಸ್ತಕ ರೂಪದಲ್ಲಿ ಇಂಗ್ಲಿಷ್ ಭಾಷೆಗೆ ಅನುವಾದ ಆಗಿದೆ. ೧೯೮೪ರಲ್ಲಿ ನವದೆಹಲಿಯ ರಾಧಾಕೃಷ್ಣ ಪ್ರಕಾಶನದಿಂದ ಹಿಂದಿ ಭಾಷೆಗೆ ಅನುವಾದ ಆಗಿದೆ. ೧೯೯೯ರಲ್ಲಿ ಕೇರಳದ ಕೊಟ್ಟಾಯಂನಿಂದ ಕುಲೊಥೆ ಚಿಂಗಾರಮ್ಮ ಹೆಸರಲ್ಲಿ ಡಿ.ಸಿ. ಪುಸ್ತಕವಾಗಿ ಮಲಯಾಳಿ ಭಾಷೆಗೆ ಅನುವಾದವಾಗಿದೆ.) ಶಿಖರ ಸೂರ್ಯ ೨೦೦೭ ಅಕ್ಷರ ಪ್ರಕಾಶನ ಪ್ರಕಟ ಶಿವನ ಡಂಗುರ ಸಂಶೋಧನಾ ಗ್ರಂಥ ಉತ್ತರ ಕರ್ನಾಟಕ ಜಾನಪದ ರಂಗಭೂಮಿ ೧೯೮೦ ಸಂಗ್ಯಾ ಬಾಳ್ಯಾ ೧೯೬೬ ಬನ್ನಿಸಿ ಹಾಡುವ ನನ ಬಳಗ ೧೯೬೮ ಬಯಲಾಟಗಳು ೧೯೭೩ ಮಾತಾಡೊ ಲಿಂಗವೆ ೧೯೭೩ ನಮ್ಮ ಜನಪದ ೧೯೮೦ ಬಂದಿರೆ ನನ್ನ ಜೈಯೊಳಗೆ ೧೯೮೧ ಜಾನಪದ ವಿಶ್ವಕೋಶ ೧೯೮೫ (ಗ್ರಂಥದ ೨ ಸಂಪುಟವನ್ನು ಕನ್ನಡದಲ್ಲಿ ತಂದಿದ್ದಾರೆ) ಬೇಡರ ಹುಡುಗ ಮತ್ತು ಗಿಳಿ ೧೯೮೯ (ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ) ಲಕ್ಷಪತಿ ರಾಜನ ಕಥೆ ೧೯೮೬ ಕಾಸಿಗೊಂದು ಸೇರು ೧೯೮೯ ನೆಲದ ಮರೆಯ ನಿಧಾನ ೧೯೯೩ ಬೃಹದ್ಧೇಸಿಯ ಚಿಂತನ ೨೦೦೧ An Anthology of Modern India Plays for the National School of Drama – ೨೦೦೦ ದೇಶಿಯ ಚಿಂತನ ೨೦೦೪ (ಸಂಸ್ಕೃತಿ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿ ಅಂಕಿತ ಪುಸ್ತಕ ಪ್ರಕಾಶನದ ಸಂಗ್ರಹ ಪುಸ್ತಕವಾಗಿ ಪ್ರಕಟ ಆಗಿದೆ) ಮರವೆ ಮರ್ಮರವೆ ೨೦೦೭ ಇದು ದೇಸಿ ೨೦೧೦ ಸ್ಥಾನಮಾನ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ನವದೆಹಲಿದ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕ ೨೦೦೪-೨೦೧೦ರ ವರೆಗೆ ಕಾಂಗ್ರೆಸ್ ಪಕ್ಷದ ಕರ್ನಾಟಕ ವಿಧಾನ ಪರಿಷತ್ನ ಸದಸ್ಯ ಹಂಪಿ ಕನ್ನಡ ವಿವಿದ ಮೊದಲ ಉಪಕುಲಪತಿ (ಎರಡು ಅವಧಿಗೆ) ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು. ಪ್ರಶಸ್ತಿಗಳು ಮತ್ತು ಸನ್ಮಾನಗಳು ಅಕಾಡೆಮಿ ರತ್ನ ಪ್ರಶಸ್ತಿ ೨೦೧೧(ಕೇಂದ್ರ ಸಂಗೀತ ನಾಟಕ ಅಕಾಡೆಮಿ) ಜ್ಞಾನಪೀಠ ಪ್ರಶಸ್ತಿ ೨೦೧೦ ದೇವರಾಜ ಅರಸ್ ಪ್ರಶಸ್ತಿ ೨೦೦೭ ಜೋಶು ಸಾಹಿತ್ಯ ಪುರಸ್ಕಾರಂ ೨೦೦೫ (ಆಂದ್ರಪ್ರದೇಶ ಸರಕಾರ) ನಾಡೋಜ ಪ್ರಶಸ್ತಿ ೨೦೦೪ (ಹಂಪಿ ಕನ್ನಡ ವಿಶ್ವವಿದ್ಯಾಲಯ) ಪಂಪ ಪ್ರಶಸ್ತಿ ೨೦೦೪ ಸಂತ ಕಬೀರ್ ಪ್ರಶಸ್ತಿ ೨೦೦೨ ೨೦೦೬ರ ಆಳ್ವಾಸ್ ನುಡಿಸಿರಿ ಸಮ್ಮೇಳನದ ಅಧ್ಯಕ್ಷರು ೨೦೦೪ ರಿಂದ ೨೦೧೦ರ ವರೆಗೆ ವಿಧಾನ ಪರಿಷತ್ ಸದಸ್ಯ ಪದ್ಮಶ್ರೀ ಪ್ರಶಸ್ತಿ ೨೦೦೧ ಮಾಸ್ತಿ ಪ್ರಶಸ್ತಿ ೧೯೯೭ (ಕರ್ನಾಟಕ ಸರಕಾರ) ಜಾನಪದ ಮತ್ತು ಯಕ್ಷಗಾನೊ ಅಕಾಡೆಮಿ ಪ್ರಶಸ್ತಿ ೧೯೯೩ ಸಿರಿಸಂಪಿಗೆ ನಾಟಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೧೯೯೧ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೧೯೮೯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ೧೯೮೮ ನಂದಿಕರ್ ಪ್ರಶಸ್ತಿ ೧೯೮೭ (ಕಲ್ಕತ್ತ) ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ೧೯೮೭ ಸಂಗೀತ ನಾಟಕ ಅಕಾಡೆಮಿ ೧೯೮೩ ಕುಮಾರ ಆಶನ್ ಪ್ರಶಸ್ತಿ ೧೯೮೨ (ಕೇರಳ ಸರಕಾರ) ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ ೧೯೭೫ ಮಧ್ಯಪ್ರದೇಶ ಸರ್ಕಾರ ಕೊಡುವ ಕಾಳಿದಾಸ ಸಮ್ಮಾನ್ ಪ್ರಶಸ್ತಿ "ಜೋ ಕುಮಾರಸ್ವಾಮಿ" ನಾಟಕಕ್ಕೆ ೧೯೭೫ದ ಭಾರತೀಯ ಭಾಷೆಯ ಅತ್ಯುತ್ತಮ ನಾಟಕ - ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ ಶಿಖರ ಸೂರ್ಯ ಪುಸ್ತಕಕ್ಕೆ ಟ್ಯಾಗೋರ್‌ ಪ್ರಶಸ್ತಿ, ಹುದ್ದೆಗಳು/ಗೌರವ ಹುದ್ದೆಗಳು ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕ ೨೦೦೪-೨೦೧೦ರವರೆಗೆ ಕಾಂಗ್ರೆಸ್ ಪಕ್ಷದಿಂದ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು ಹಂಪಿ ಕನ್ನಡ ವಿವಿಯ ಮೊದಲ ಉಪಕುಲಪತಿ (ಎರಡು ಅವಧಿ) ಕೇಂದ್ರ ಸಾಹಿತ್ಯ ಅಕಾಡೆಮಿಯ ಉಪಾಧ್ಯಕ್ಷ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ೨೦೨೧ರ ಭಾರತ ಸರ್ಕಾರದ ಮೂರನೆಯ ಅತ್ಯುನ್ನತ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿ. ಹೊರಗಿನ ಸಂಪರ್ಕಗಳು ಸಂಪದದಲ್ಲಿ ಮೂಡಿಬಂದ ಚಂದ್ರಶೇಖರ ಕಂಬಾರರ ಸಂದರ್ಶನ (ಶ್ರಾವ್ಯ - ಆಡಿಯೋ) ಚಂದ್ರಶೇಖರ ಕಂಬಾರ-ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚಂದ್ರಶೇಖರ ಕಂಬಾರ ಉಲ್ಲೇಖ ಕನ್ನಡ ಸಾಹಿತ್ಯ ಚಂದ್ರಶೇಖರ ಕಂಬಾರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಪಂಪ ಪ್ರಶಸ್ತಿ ಪುರಸ್ಕೃತರು ಕನ್ನಡ ಕವಿಗಳು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು
1235
https://kn.wikipedia.org/wiki/%E0%B2%95%E0%B3%86.%20%E0%B2%8E%E0%B2%B8%E0%B3%8D.%20%E0%B2%A8%E0%B2%B0%E0%B2%B8%E0%B2%BF%E0%B2%82%E0%B2%B9%E0%B2%B8%E0%B3%8D%E0%B2%B5%E0%B2%BE%E0%B2%AE%E0%B2%BF
ಕೆ. ಎಸ್. ನರಸಿಂಹಸ್ವಾಮಿ
ಕೆ. ಎಸ್. ನರಸಿಂಹಸ್ವಾಮಿ, ಕನ್ನಡಿಗರ ಪ್ರೇಮಕವಿ,ಕನ್ನಡಿಗರ ಅತ್ಯಂತ ಪ್ರೀತಿಯ ಕವನಸಂಕಲನಗಳಲ್ಲೊಂದಾದ, ಮೈಸೂರು ಮಲ್ಲಿಗೆಯ ಕರ್ತೃ.(ಜನವರಿ ೨೬ ೧೯೧೫-ಡಿಸೆಂಬರ್ ೨೮ ೨೦೦೩) 'ಮೈಸೂರು ಮಲ್ಲಿಗೆ', ಕೆ.ಎಸ್.ನರಸಿಂಹಸ್ವಾಮಿಯವರ ಮೊದಲ ಕವನ ಸಂಕಲನವಾಗಿದೆ. ಇದು ಮನೆ ಮನೆಯ ಮಾತಾಗಿ, ಕಾವ್ಯವಾಗಿ, ಹಾಡಾಗಿ ಹರಿದಿದೆ. ಇದುವರೆವಿಗೂ ಇಪ್ಪತ್ತೈದಕ್ಕೂ ಹೆಚ್ಚು ಬಾರಿ ಮುದ್ರಣ ಭಾಗ್ಯ ಪಡೆದಿದೆ. ಕನ್ನಡದ ಕೆಲವೇ ಕೃತಿಗಳಿಗೆ ಇಂಥ ಮರು ಮುದ್ರಣದ ಭಾಗ್ಯ- ಆಧುನಿಕ ಕನ್ನಡ ಕಾವ್ಯ ಹಲವು ರೂಪಗಳನ್ನು ಪಡೆಯುತ್ತಾ ಬಂದಿದೆ. ಹಲವು ಸಾಹಿತ್ಯ ಚಳುವಳಿಗಳು ಬಂದುಹೋಗಿವೆ. ಕೆಎಸ್‌ನ ಎಲ್ಲ ಕಾಲಕ್ಕೂ ಸಲ್ಲುವ ಜನಪ್ರೀತಿಯ ಕಾವ್ಯ ಕೃಷಿಗೆ ದೊಡ್ಡ ಹೆಸರು. ಕವಿ ವಿಮರ್ಶಕ ಡಾ. ಎಚ್. ಎಸ್. ವೆಂಕಟೇಶಮೂರ್ತಿ ಅವರು ಕೆಎಸ್‌ನ ಬಗ್ಗೆ ಬರೆಯುತ್ತ ``ನವೋದಯದ ಕಾವ್ಯ ಸಂದರ್ಭದಲ್ಲಿ ಹೆಸರು ಮಾಡಿದ್ದ ಈ ಕವಿ ತಮ್ಮ ಸುಕುಮಾರ ಜಗತ್ತಿನಿಂದ, ನಿಷ್ಠುರವಾದ ಬದುಕಿನ ಸಂದರ್ಭಕ್ಕೆ ಹೊರಳಿದ್ದು `ಶಿಲಾಲತೆ'ಯಲ್ಲಿ. ಆದ್ದರಿಂದ ಸಂಗ್ರಹಕ್ಕೆ ಒಂದು ಐತಿಹಾಸಿಕ ಮಹತ್ವವಿದೆ" -ಎಂದು ದಾಖಲಿಸಿದ್ದಾರೆ. ಜೊತೆಗೆ ಮೈಸೂರು ಮಲ್ಲಿಗೆಯ ಕವಿತೆಯ ಭಾಷೆ, ವಸ್ತು, ಲಯಗಳ ಮೇಲೆ ಇಂಗ್ಲಿಷ್ ಗೀತೆಗಳ ಪ್ರಭಾವವನ್ನು ಗುರುತಿಸಬಹುದು ಎಂದು ಡಾ. ಹೆಚ್.ಎಸ್.ವಿ. ಗುರ್ತಿಸಿದ್ದಾರೆ. ಜನನ,ವೃತ್ತಿಜೀವನ ಕೆಎಸ್‌ನ,{"ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ"}, ಮಂಡ್ಯ ಜಿಲ್ಲೆಯ ಕೃ‌ಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿಯಲ್ಲಿ ಜನಿಸಿದರು. ಮೈಸೂರಿನಲ್ಲಿ ಇಂಟರ್ ಮೀಡಿಯಟ್ ಹಾಗೂ ಬೆಂಗಳೂರಿನಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ ; (ಅಪೂರ್ಣ) ವ್ಯಾಸಂಗ ಮಾಡಿದರು ೧೯೩೭ರಲ್ಲಿ ಸರಕಾರಿ ಸೇವೆಗೆ ಸೇರಿ ೧೯೭೦ರಲ್ಲಿ ನಿವೃತ್ತರಾದರು. ಮೈಸೂರು ಮಲ್ಲಿಗೆಯ ಕವಿತೆಗಳನ್ನು ಭಾವಗೀತೆಗಳ ಮೂಲಕ ಹಾಡಿ ಜನಪ್ರಿಯ ಮಾಡಿದಂತೆ ಆ ಕೃತಿಯನ್ನು ಅಪಾರ ಸಂಖ್ಯೆಯ ಓದುಗರೂ ಕೊಂಡು ಓದಿರುವುದು ಹೆಗ್ಗಳಿಕೆ. ಕೆಲವು ವರ್ಷಗಳ ಹಿಂದೆ ಇದೇ ಹೆಸರಿನಿಂದ ಚಲನಚಿತ್ರವೂ ನಿರ್ಮಾಣವಾಗಿದೆ. ನಾನು ಬರೆದ ಕವಿತೆಗಳು ಪ್ರೇಮ ಕವಿತೆಗಳಲ್ಲ, ದಾಂಪತ್ಯ ಕವಿತೆಗಳೆಂದು ಕೆಎಸ್‌ನ ಹೇಳಿಕೊಂಡಿದ್ದಾರೆ. ಮೈಸೂರು ಮಲ್ಲಿಗೆಯಲ್ಲಿ ಬಹುತೇಕ ಕವಿತೆಗಳು ದಾಂಪತ್ಯ ಗೀತೆಗಳೇ ಆಗಿವೆ. ನವಿಲೂರು, ಹೊನ್ನೂರು ಮೊದಲಾದವು ಗ್ರಾಮ ಬದುಕಿನ ನೆಲೆಗಳು. ಮಣ್ಣಿನ ವಾಸನೆಯ ಅಪ್ಪಟ ಕವಿತೆಗಳನ್ನು ಕೆಎಸ್‌ನ ನೀಡಿದ್ದಾರೆ. ಐರಾವತ, ದೀಪದ ಮಲ್ಲಿ, ಉಂಗುರ, ಇರುವಂತಿಗೆ, ಶಿಲಾಲತೆ, ಮನೆಯಿಂದ ಮನೆಗೆ, ತೆರೆದ ಬಾಗಿಲು, ನವಪಲ್ಲವ ಮುಂತಾದ ಕವನಗಳು ಹೊರಬಂದಿವೆ. "ಮಲ್ಲಿಗೆಯ ಮಾಲೆ" ಸಮಗ್ರ ಕವಿತೆಯ ಸಂಕಲನ. ಸಮಗ್ರ ಸಂಕಲನ ಬಂದರೂ ಈಚೆಗೆ `ಸಂಜೆ ಹಾಡು' ಎಂಬ ಹೊಸ ಕಾವ್ಯ ಹೊರಬಂದಿದೆ. ಕಾವ್ಯ ಇವರ ಪ್ರಮುಖ ಕೃಷಿ ಆದರೂ ಗದ್ಯದಲ್ಲೂ ಕೃಷಿ ಮಾಡಿದ್ದಾರೆ. ಮಾರಿಯಕಲ್ಲು, ಉಪವನ, ದಮಯಂತಿ ಪ್ರಮುಖ ಕೃತಿಗಳು. ಅಲ್ಲದೆ ಹಲವು ಅನುವಾದಿತ ಕೃತಿಗಳೂ ಬಂದಿವೆ. ಮೋಹನ ಮಾಲೆ, ನನ್ನ ಕನಸಿನ ಭಾರತ, ಪ್ರಪಂಚದ ಬಾಲ್ಯದಲ್ಲಿ, ಮೀಡಿಯಾ, ಸುಬ್ರಮಣ್ಯ ಭಾರತಿ, ಮಾಯಾಶಂಖ ಮತ್ತು ಇತರ ಕತೆಗಳು, ಅನುವಾದಿತ ಕೃತಿಗಳು. ಸಾಹಿತ್ಯ ಜೀವನ ಮತ್ತು ಪ್ರಶಸ್ತಿಗಳು ೧೯೩೩ - ಕಬ್ಬಿಗನ ಕೂಗು ಮೊದಲ ಕವನ. ೧೯೪೨- ಮೈಸೂರು ಮಲ್ಲಿಗೆ ಪ್ರಸಿದ್ಧ ಕವನ ಸಂಕಲನ ಪ್ರಕಟ. ೧೯೪೩- ದೇವರಾಜ್ ಬಹದ್ದೂರ್ ಬಹುಮಾನ. ೧೯೫೭ರಲ್ಲಿ `ಶಿಲಾಲತೆ'ಗೆ ರಾಜ್ಯ ಸಂಸ್ಕೃತಿ ಇಲಾಖೆ ಪ್ರಶಸ್ತಿ, ೧೯೭೨- ಚಂದನ ಅಭಿನಂದನ ಗ್ರಂಥ ಸಮರ್ಪಣೆ ೧೯೭೭- ತೆರೆದ ಬಾಗಿಲು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ . ೧೯೮೬- ಮೈಸೂರು ಮಲ್ಲಿಗೆ ಧ್ವನಿ ಸುರುಳಿ. ೧೯೮೭- ಕೇರಳದ ಕವಿ ಕುಮಾರ್ ಆಶಾನ್ ಪ್ರಶಸ್ತಿ . ೧೯೯೦- ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯಾ ಸಮ್ಮೇಳನದ ಅಧ್ಯಕ್ಷತೆ. ೧೯೯೧- ಮೈಸೂರು ಮಲ್ಲಿಗೆ ಚಲನಚಿತ್ರ ಬಿಡುಗಡೆ. ೧೯೯೨- ಉತ್ತಮ ಗೀತರಚನೆಗೆ ರಾಷ್ಟ್ರಪತಿ ಪ್ರಶಸ್ತಿ . ೧೯೯೨- ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಿಲಿಟ್. ೧೯೯೬- ಮಾಸ್ತಿ ಪ್ರಶಸ್ತಿ . ೧೯೯೭- ಪಂಪ ಪ್ರಶಸ್ತಿ . ೧೯೯೯- ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ ಫೆಲೋಷಿಪ್. ೨೦೦೦- ಗೊರೂರು ಪ್ರಶಸ್ತಿ . ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಪ್ರಮುಖ ಕೃತಿಗಳು ಕವನ ಸಂಕಲನಗಳು ೧೯೪೨- ಮೈಸೂರು ಮಲ್ಲಿಗೆ. ೧೯೪೫- ಐರಾವತ ೧೯೪೭- ದೀಪದ ಮಲ್ಲಿ ೧೯೪೯- ಉಂಗುರ ೧೯೫೪- ಇರುವಂತಿಗೆ ೧೯೫೮- ಶಿಲಾಲತೆ ೧೯೬೦- ಮನೆಯಿಂದ ಮನೆಗೆ ೧೯೭೯- ತೆರೆದ ಬಾಗಿಲು ೧೯೮೯- ನವ ಪಲ್ಲವ ೧೯೯೩- ದುಂಡುಮಲ್ಲಿಗೆ ೧೯೯೯- ನವಿಲದನಿ ೨೦೦೦- ಸಂಜೆ ಹಾಡು ೨೦೦೧- ಕೈಮರದ ನೆಳಲಲ್ಲಿ ೨೦೦೨- ಎದೆ ತುಂಬ ನಕ್ಷತ್ರ ೨೦೦೩- ಮೌನದಲಿ ಮಾತ ಹುಡುಕುತ್ತ ೨೦೦೩- ದೀಪ ಸಾಲಿನ ನಡುವೆ ೨೦೦೩- ಮಲ್ಲಿಗೆಯ ಮಾಲೆ ೨೦೦೩- ಹಾಡು-ಹಸೆ ಗದ್ಯ ಮಾರಿಯ ಕಲ್ಲು ದಮಯಂತಿ ಉಪವನ ಅನುವಾದಗಳು ಮೋಹನಮಾಲೆ ( ಗಾಂಧೀಜಿ ) ನನ್ನ ಕನಸಿನ ಭಾರತ (ಗಾಂಧೀಜಿ) ಮೀಡಿಯಾ ( ಯುರಿಪೀಡಿಸ್ ನಾಟಕ) ಪುಷ್ಕಿನ್ ಕವಿತೆಗಳು ರಾಬರ್ಟ್ ಬರ್ನ್ಸ್ ಪ್ರೇಮಗೀತೆಗಳು ಆಯ್ದ ಕವನಗಳು ಚೆಲುವು ಮಾತು ಮುತ್ತು ನಿಲ್ಲಿಸದಿರೆನ್ನ ಪಯಣವನು ಅಂಥಿಂಥ ಹೆಣ್ಣು ನೀನಲ್ಲ!! ದೀಪದ ಮಲ್ಲಿ ಅಕ್ಕಿ ಆರಿಸುವಾಗ ... ನಿನ್ನೊಲುಮೆಯಿಂದಲೆ ಬಾರೆ ನನ್ನ ಶಾರದೆ ನಿನ್ನ ಹೆಸರು ರಾಯರು ಬಂದರು ಬಳೇಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹನು ನಮ್ಮುರು ಚೆಂದವೋ ನಿಮ್ಮೂರು ಚೆಂದವೋ ಸಿರಿಗಿರಿಯ ನೀರಿನಲಿ ಬಿರಿದ ತಾವರೆಯಲ್ಲಿ ನಿನ್ನ ಪ್ರೇಮದ ಪರಿಯೆ ಹಕ್ಕಿಯ ಹಾಡಿಗೆ ತಲೆದೂಗುವ ಹೂ ಉಲ್ಲೇಖ ಬಾಹ್ಯಸಂಪರ್ಕಗಳು ಡಾ.ಕೆ.ಎಸ್.ನ.ಕಾವ್ಯದಲ್ಲಿ ಶ್ರೇಷ್ಠತೆ ಮತ್ತು ಜನಪ್ರಿಯತೆಯಿತ್ತು. ಮುಂಬಯಿನ ಮೈಸೂರು ಅಸೋಸಿಯೇಷನ್ ನಲ್ಲಿ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯಂ ಉಪನ್ಯಾಸದಲ್ಲಿ, ಉದಯವಾಣಿ, ೩೧-೦೩-೨೦೧೫, p.10 udayavani 31,-03-2015 ಕನ್ನಡ ಸಾಹಿತ್ಯ ಕೆ.ಎಸ್.ನರಸಿಂಹಸ್ವಾಮಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಪಂಪ ಪ್ರಶಸ್ತಿ ಪುರಸ್ಕೃತರು
1236
https://kn.wikipedia.org/wiki/%E0%B2%9A%E0%B2%A6%E0%B3%81%E0%B2%B0%E0%B2%82%E0%B2%97
ಚದುರಂಗ
''</center> ಡಾ. ಚದುರಂಗ (ಜನವರಿ ೦೧ ೧೯೧೬ - ಅಕ್ಟೋಬರ್ ೧೯ ೧೯೯೮) ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕತೆ, ಕಾದಂಬರಿ ಪ್ರಕಾರಗಳಲ್ಲಿ ಸಾಧನೆ ಮಾಡಿದ ಹಲವರಲ್ಲಿ ಚದುರಂಗ ಪ್ರಮುಖರು. ಕತೆಗಾರರಾಗಿ, ಕಾದಂಬರಿಕಾರರಾಗಿ, ಚಲನಚಿತ್ರ ನಿರ್ದೇಶಕರಾಗಿ ಹೆಸರಾಗಿದ್ದ ಚದುರಂಗರ ನಿಜ ಹೆಸರು ಸುಬ್ರಹ್ಮಣ್ಯರಾಜು ಅರಸು. ಜನ್ಮವೃತ್ತಾಂತ ೧೯೧೬ರ ಜನವರಿ ೧ರಂದು ಹುಣಸೂರು ತಾಲೂಕು, ಕಲ್ಲಹಳ್ಳಿಯಲ್ಲಿ ಜನಿಸಿದ ಚದುರಂಗರು ಮೈಸೂರು ರಾಜಮನೆತನದ ಸಂಬಂಧಿ. ಇತರ ವಂಶದ ಪೂರ್ವಿಕರಲ್ಲಿ ಒಬ್ಬನಾದ ಮಂಗರಸ ಕವಿ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಉಲ್ಲೇಖಿತನಾಗಿದ್ದಾನೆ. ಮೈಸೂರಿನ ಮಹಾರಾಜ ಜಯ ಚಾಮರಾಜ ಒಡೆಯರ ಓರಗೆಯವರಾಗಿದ್ದ ಚದುರಂಗ ಮೈಸೂರಿನ ರಾಯಲ್ ಶಾಲೆಯಲ್ಲಿ ವಿದ್ಯಾಭ್ಯಾಸ ಆರಂಭಿಸಿದರು. ನಂತರ ಬೆಂಗಳೂರಿನ ಮೀಡಿಯಟ್ ಕಾಲೇಜು, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಮುಗಿಸಿದರು. ಪುಣೆಯಲ್ಲಿ ಕಾನೂನು ಮತ್ತು ಎಂ.ಎ. ಕಲಿಯಲು ಹೋಗಿ ಕಾರಣಾಂತರಗಳಿಂದ ಓದು ನಿಲ್ಲಿಸಿದರು. ಬಾಲ್ಯ ಬಾಲ್ಯದಲ್ಲೇ ಕತೆ ಕೇಳುವ ಹಾಗೂ ಆ ನಿಟ್ಟಿನಲ್ಲಿ ಯೋಚಿಸಿ ಬರೆಯುವ ಆಸಕ್ತಿ ಇದ್ದುದರಿಂದ ತಮ್ಮ ತಾಯಿ ಹೇಳುತ್ತಿದ್ದ ರಾಮಾಯಣ, ಮಹಾಭಾರತ, ಪುರಾಣ ಕತೆಗಳನ್ನು ರಾಜ ಮನೆತನದ ಹುಡುಗರಿಗೆ ಹೇಳುತ್ತಿದ್ದರು. ಗಾಂಧೀ ವಿಚಾರಧಾರೆಗೆ ಮನಸೋತು, ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾಗಿದ್ದರು. ಎಡಪಂಥೀಯ ವಿಚಾರಧಾರೆಗೆ ಮನಸೋತಿದ್ದ ಚದುರಂಗ ಎಂ. ಎನ್. ರಾಯ್ ಅವರ ವಿಚಾರಗಳನ್ನು ತಲೆ ತುಂಬಿಸಿಕೊಂಡಿದ್ದರು. ರಾಜ ಮನೆತನದ ಸಿರಿ ಸಂಪತ್ತು, ಅಲ್ಲಿನ ಆಡಂಬರ ಚದುರಂಗರಿಗೆ ಇಷ್ಟವಾಗಲಿಲ್ಲವಾದ್ದರಿಂದ ಶ್ರೀಮಂತ ಹೆಣ್ಣು ತಂದು ಮದುವೆ ಮಾಡಬೇಕೆಂಬ ಮನೆಯವರ ಇಚ್ಛೆಗೆ ವಿರುದ್ಧವಾಗಿ ಪ್ರೀತಿಸಿ ತಮ್ಮಿಷ್ಟವಾದವರನ್ನು ಮದುವೆಯಾದರು. ಸಂಪ್ರದಾಯ ಹಾಗೂ ಸಾಮಾಜಿಕ ಕಟ್ಟು ಪಾಡುಗಳನ್ನು ಮುರಿದು ಸಂಗಾತಿ ಆಯ್ಕೆ ಮಾಡಿಕೊಂಡ ಚದುರಂಗ ಬದುಕನ್ನು ಹೋರಾಟವಾಗಿ ಸ್ವೀಕರಿಸಿ ನೋವುಂಡರು. ಮೈಸೂರು ತೊರೆದು ಹುಟ್ಟೂರು ಕಲ್ಲಹಳ್ಳಿಯಲ್ಲಿ ಬೇಸಾಯಕ್ಕೆ ತೊಡಗಿದರು. ಅಲ್ಲಿನ ಅನುಭವಗಳೇ ಮುಂದೆ ಕತೆ, ಕಾದಂಬರಿಗಳಲ್ಲಿ ಮೈತಾಳಿದವು. ಹಳ್ಳಿಯಲ್ಲೇ ಬರಹ ಆರಂಭಿಸಿ ಸಾಹಿತ್ಯದ ಒಡನಾಟವಿಟ್ಟುಕೊಂಡ ಚದುರಂಗರಿಗೆ ಕುವೆಂಪು, ಮಾಸ್ತಿ, ಗೊರೂರು ಪ್ರಭಾವ ಬೀರಿದರು. ಅನಕೃ, ತರಾಸು ಅವರ ಒಡನಾಟದಲ್ಲಿ ಪ್ರಗತಿಶೀಲ ಸಾಹಿತ್ಯ ಚಳುವಳಿಗೂ ಪಾಲ್ಗೊಂಡರು. ಚಿತ್ರರಂಗದೊಡನೆ ಚದುರಂಗರ ನಂಟು ಪದವಿ ಅಧ್ಯಯನಕ್ಕೆಂದು ಪುಣೆಗೆಹೋದ ಚದುರಂಗರಿಗೆ ಚಿತ್ರರಂಗದ ಸಂಪರ್ಕವಾಯಿತು. ಆಗಿನ ಪ್ರಖ್ಯಾತ ಸಿನಿಮಾ ಪತ್ರಿಕೆ Motion pictures magazineಯಲ್ಲಿ Random shots ಎಂಬ ಅಂಕಣವನ್ನು ಬರೆಯಲು ಪ್ರಾರಂಭಿಸಿದರು. ಮಾಯಾ ಎಂಬ ಇಂಗ್ಲಿಷ್ ಚಿತ್ರಕ್ಕೆ ಸಹನಿರ್ದೇಶನ ಮಾಡಿದರು. ೧೯೪೮ ರಲ್ಲಿ ಸೋದರ ಸಂಬಂಧಿ ಕೆಂಪರಾಜ್ ಅರಸ್ ಅವರಿಗಾಗಿ ಭಕ್ತ ರಾಮದಾಸ ಎಂಬ ಚಿತ್ರವನ್ನು ನಿರ್ದೇಶಿದರು. ಈ ಚಿತ್ರಕ್ಕೆ ಚಿತ್ರಕಥೆ , ಸಂಭಾಷಣೆಗಳಲ್ಲದೆ ಎರಡು ಗೀತೆಗಳನ್ನು ರಚಿಸಿದರು. ೧೯೬೮ರಲ್ಲಿ ತಮ್ಮ ಕಾದಂಬರಿಯನ್ನು ಆಧರಿಸಿದ ಸರ್ವಮಂಗಳ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದರು. ಚದುರಂಗರ ಕಾದಂಬರಿ ಉಯ್ಯಾಲೆ ಅದೇ ಹೆಸರಿನಿಂದ ಚಲನಚಿತ್ರವಾಯಿತು. ಉಯ್ಯಾಲೆ ಚಲನಚಿತ್ರವನ್ನು ಲಕ್ಷ್ಮೀ ನಾರಾಯಣ್ ನಿರ್ದೇಶಿಸಿದರು. ಇದಕ್ಕೆ ಚದುರಂಗರು ಸಂಭಾಷಣೆ ಬರೆದಿದ್ದರು. ಅದರಲ್ಲಿ ರಾಜಕುಮಾರ್, ಕಲ್ಪನಾ ಪ್ರಮುಖ ಪಾತ್ರವಹಿಸಿದ್ದರು. ಇದು ರಾಜ್ಯ ಪ್ರಶಸ್ತಿ ಪಡೆಯಿತು. ಇದು ಹೊಸ ಅಲೆಯ ಚಿತ್ರಗಳ ಗುಂಪಿಗೆ ಸೇರಿ ಕಲಾತ್ಮಕ ಚಿತ್ರವೆನಿಸಿತು. ಇದಲ್ಲದೆ, ಕುವೆಂಪು ಮತ್ತು ನೃತ್ಯ ಕಲಾವಿದೆ ವೆಂಕಟಲಕ್ಷ್ಮಮ್ಮ ಅವರ ಕುರಿತಾಗಿ ಸಾಕ್ಷಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಕೃತಿಗಳು ಚದುರಂಗರು ರಚಿಸಿದ ಕೃತಿಗಳು ಕೆಲವು ಹೀಗಿವೆ : ಕಾದಂಬರಿಗಳು : ಸರ್ವಮಂಗಳಾ(೧೯೫0), ಉಯ್ಯಾಲೆ(೧೯೬0), ವೈಶಾಖ (೧೯೮೧), ಹೆಜ್ಜಾಲ(೧೯೯೮) ಕಥಾಸಂಕಲನಗಳು : ಸ್ವಪ್ನ ಸುಂದರಿ(೧೯೪೮), ಶವದ ಮನೆ(೧೯೫0), ಇಣುಕು ನೋಟ(೧೯೫0), ಬಂಗಾರದ ಹೆಜ್ಜೆ(೧೯೫೧), ಮೀನಿನ ಹೆಜ್ಜೆ(೧೯೫೮), ಕ್ವಾಟೆ(೧೯೯೨), ಮೃಗಯಾ(೧೯೯೮), ಬಣ್ಣದಬೊಂಬೆ ಇತ್ಯಾದಿ ಕೃತಿಗಳು. `ನಾಲ್ಕುಮೊಳಭೂಮಿ' ಕನ್ನಡದ ಉತ್ತಮ ಕತೆಗಳಲ್ಲಿ ಒಂದು. ಕಥೆಯೊಳಗೊಂದು ಕಥಾ ತಂತ್ರದ ಬಳಕೆಯಿಂದ ಗ್ರಾಮ ಹಾಗೂ ನಗರ ಬದುಕಿನ ಅನ್ಯಾಯಗಳನ್ನು ಸಾಂಕೇತಿಸುವ ಈ ಕತೆ ಭೂವಿವಾದಕ್ಕೆ ಪರಿಹಾರ ಸೂಚಿಸುತ್ತದೆ. ನಾಟಕಗಳು : ಕುಮಾರರಾಮ(೧೯೬೬), ಇಲಿಬೋನು(೧೯೭೨), ಬಿಂಬ(೧೯೯0). ಕವನ ಸಂಕಲನ: ಅಲೆಗಳು ಚಲನಚಿತ್ರಗಳು: ಭಕ್ತ ಕುಂಬಾರ ಚಿತ್ರಕ್ಕೆ ಕಥಾ ಲೇಖಕರಾಗಿದ್ದರು. ಇಂಗ್ಲಿಷಿನ ‘ಮಾಯಾ’ ಚಿತ್ರದ ಸಹ ನಿರ್ದೇಶಕರಾಗಿದ್ದರು. ಪ್ರಶಸ್ತಿ ವಿಜೇತ ಚಿತ್ರ ‘ಸರ್ವಮಂಗಳಾ’ವನ್ನು ನಿರ್ಮಿಸಿದರು. ಮತ್ತು ‘ಉಯ್ಯಾಲೆ’ ಚಿತ್ರಕ್ಕೆ ಚಿತ್ರಕಥೆಯನ್ನು ಬರೆದರು. ರಾಷ್ಟ್ರಕವಿ ಕುವೆಂಪು ಮತ್ತು ನಾಟ್ಯವಿಶಾರದೆ ವೆಂಕಟಲಕ್ಷ್ಮಮ್ಮನವರನ್ನು ಕುರಿತು ಸಾಕ್ಷ್ಯಚಿತ್ರಗಳನ್ನು ಸಿದ್ಧಪಡಿಸಿದ್ದಾರೆ. ಪ್ರಶಸ್ತಿಗಳು ಇವರೇ ತಯಾರಿಸಿದ ‘ಸರ್ವಮಂಗಳಾ’ ಚಿತ್ರಕ್ಕೆ ರಾಜ್ಯ ಚಲನಚಿತ್ರ ಪ್ರಶಸ್ತಿ ದೊರಕಿದೆ. ‘ಉಯ್ಯಾಲೆ’ ಚಿತ್ರಕ್ಕೆ ಉತ್ತಮ ಚಿತ್ರಕಥಾ ಲೇಖಕ ಪ್ರಶಸ್ತಿ ಬಂದಿದೆ. ಇವರ 'ವೈಶಾಖ' ಕಾದಂಬರಿಗೆ ೧೯೮೨ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಇವರ ಸಾಹಿತ್ಯ ಸಾಧನೆಗೆ ಹತ್ತಾರು ಪ್ರಶಸ್ತಿ ಗೌರವ, ಸನ್ಮಾನಗಳು ಲಭಿಸಿವೆ. ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಕರ್ನಾಟಕ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ,(೧೯೭೮ ಮತ್ತು ೧೯೯೪ರಲ್ಲಿ), ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೮೨ರಲ್ಲಿ ವೈಶಾಖ ಕಾದಂಬರಿಗೆ), ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್(೧೯೯೩) ಇವರಿಗೆ ದೊರೆತಿದೆ. ೧೯೯೪ರಲ್ಲಿ ಮಂಡ್ಯದಲ್ಲಿ ಜರುಗಿದ ೬೩ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗುವ ಭಾಗ್ಯ ಇವರದಾಗಿತ್ತು. ನಿಧನ ಚದುರಂಗ ಅವರು ತಮ್ಮ ಎಂಭತ್ತೆರಡನೇ ವಯಸ್ಸಿನಲ್ಲಿ ೧೯೯೮, ಅಕ್ಟೋಬರ್ ೧೯ರಂದು ಮೈಸೂರಿನಲ್ಲಿ ನಿಧನ ಹೊಂದಿದರು. ಉಲ್ಲೇಖಗಳು ಚದುರಂಗ ಕನ್ನಡ ಸಾಹಿತ್ಯ ೧೯೧೬ ಜನನ ೧೯೯೮ ನಿಧನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಮೈಸೂರಿನ ಬರಹಗಾರರು
1239
https://kn.wikipedia.org/wiki/%E0%B2%AA%E0%B3%8D%E0%B2%B0%E0%B2%95%E0%B2%BE%E0%B2%B6%E0%B3%8D%20%E0%B2%AA%E0%B2%A1%E0%B3%81%E0%B2%95%E0%B3%8B%E0%B2%A3%E0%B3%86
ಪ್ರಕಾಶ್ ಪಡುಕೋಣೆ
ಪ್ರಕಾಶ್ ಪಡುಕೋಣೆ ಭಾರತ ಕಂಡ ಅತ್ಯುತ್ತಮ ಬ್ಯಾಡ್ಮಿಂಟನ್ ಆಟಗಾರರಲ್ಲೊಬ್ಬರು. ಇವರು ಕರ್ನಾಟಕದವರು. ಇವರು ತಮ್ಮ ಜೀವಮಾನದಲ್ಲಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇವುಗಳಲ್ಲಿ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ ಮಿಂಟನ್ ಪ್ರಶಸ್ತಿ ಎಲ್ಲದಕ್ಕಿಂತ ದೊಡ್ಡದು. ಈ ಪ್ರಶಸ್ತಿ ಗೆದ್ದ ಪ್ರಥಮ ಭಾರತೀಯ. ಪ್ರತಿಶ್ಟಿತ ಬಿಲಿಯರ್ಡ್ಸ್ ಆಟಗಾರ ಗೀತ್ ಸೇಠಿ ಜೊತೆಗೆ ಸೇರಿ ಒಲಂಪಿಕ್ ಗೋಲ್ಡ್ ಕ್ವೆಸ್ಟ್ ಫೌಂಡೇಷನ್ ಅನ್ನು ಸ್ಥಾಪಿಸಿದ್ದಾರೆ. ಇದನ್ನು ಭಾರತದಲ್ಲಿ ಕ್ರೀಡೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸ್ಥಾಪಿಸಲಾಗಿದೆ. ಇವರಿಗೆ ೧೯೮೨ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಲಾಯಿತು. ದೇವ್ ಎಸ್. ಕುಮಾರ್ ರವರು ಪ್ರಕಾಶ್ ಪಡುಕೋಣೆಯವರ ಜೀವನ ಚರಿತ್ರೆ "ಟಚ್ ಪ್ಲೇ" ಯನ್ನು ರಚಿಸಿದ್ದಾರೆ. ಇದು ಬ್ಯಾಡ್ ಮಿಂಟನ್ ಆಟಗಾರರ ಎರಡನೇ ಜೀವನ ಚರಿತ್ರೆ. ವೃತ್ತಿ ಜೀವನ ಪಡುಕೋಣೆ ೧೯೫೫, ಜೂನ್ ೧೦ ರಂದು ಬೆಂಗಳೂರಿನಲ್ಲಿ ಜನಿಸಿದರು. ಅವರ ತಂದೆ ಮೈಸೂರು ಬ್ಯಾಡ್ಮಿಂಟನ್ ಒಕ್ಕೂಟದ ಕಾರ್ಯದರ್ಶಿಗಳಾಗಿದ್ದರು. ಪ್ರಕಾಶ್ ಪಡುಕೋಣೆ ೧೯೬೨ ರಲ್ಲಿ ತಮ್ಮ ಮೊದಲ ಅಧಿಕೃತ ಟೂರ್ನಿಯಲ್ಲಿ ಆಡಿದರು. ಆ ಬಾರಿ ಮೊದಲ ಸುತ್ತಿನಲ್ಲಿಯೇ ಸೋಲನ್ನನುಭವಿಸಿದರೂ ಎರಡು ವರ್ಷಗಳ ನಂತರ ಕರ್ನಾಟಕ ರಾಜ್ಯ ಜೂನಿಯರ್ ಚಾಂಪಿಯನ್ ಆದರು. ೧೯೭೧ ರಲ್ಲಿ ತಮ್ಮ ಆಟದ ಶೈಲಿಯನ್ನು ಮತ್ತಷ್ಟು ಸುಧಾರಿಸಿದ ಪ್ರಕಾಶ್ ೧೯೭೨ ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಜೂನಿಯರ್ ಮತ್ತು ಸೀನಿಯರ್ ಚಾಂಪಿಯನ್‍ಶಿಪ್ ಎರಡನ್ನೂ ಗೆದ್ದರು. ೧೯೭೯ ರ ವರೆಗೆ ಸತತವಾಗಿ ಭಾರತದ ರಾಷ್ಟ್ರೀಯ ಚಾಂಪಿಯನ್‍ಶಿಪ್ ಇವರದಾಯಿತು. ಇದರಿಂದಾಗಿ ಭಾರತದ ಅತ್ಯುತ್ತಮ ಬ್ಯಾಡ್ಮಿಂಟನ್ ಆಟಗಾರ ಎನಿಸಿಕೊಂಡರು. ೧೯೭೨ ರಲ್ಲಿ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ಲಭಿಸಿತು. ೧೯೭೯ ರಲ್ಲಿ ಅವರು ಗೆದ್ದ ಕಾಮನ್ವೆಲ್ತ್ ಒಕ್ಕೂಟದ ಚಾಂಪಿಯನ್‍ಶಿಪ್ ಅವರ ಮೊದಲ ಮುಖ್ಯ ಅಂತಾರಾಷ್ಟ್ರೀಯ ಯಶಸ್ಸು. ನಂತರ ಲಂಡನ್ ನ ಮಾಸ್ಟರ್ಸ್ ಓಪನ್, ಡ್ಯಾನಿಷ್ ಓಪನ್ ಮತ್ತು ಸ್ವೀಡಿಷ್ ಓಪನ್ ಗಳನ್ನು ಗೆದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾದರು. ಅವರ ಅತ್ಯಂತ ಪ್ರಸಿದ್ಧ ಯಶಸ್ಸು ಬಂದದ್ದು ಬ್ಯಾಡ್ಮಿಂಟನ್ ನ ಎಲ್ಲಕ್ಕಿಂತ ಪ್ರತಿಷ್ಠಿತ ಟೂರ್ನಿಯಾದ ಆಲ್ ಇಂಗ್ಲೆಂಡ್ ಟೂರ್ನಿಯಲ್ಲಿ ಗೆದ್ದಾಗ. ನಂತರ ೧೯೮೦ ರಲ್ಲಿ ಮತ್ತೊಮ್ಮೆ ಸ್ವೀಡಿಷ್ ಓಪನ್ ಹಾಗು ಡ್ಯಾನಿಶ್ ಓಪನ್ ಅನ್ನು ಗೆದ್ದರು. ಅವರು ತಮ್ಮ ವೃತ್ತಿ ಜೀವನದ ಬಹಳ ಕಾಲವನ್ನು ಡೆನ್ಮಾರ್ಕ್ನಲ್ಲಿ ತರಬೇತಿ ಪಡೆಯುವಲ್ಲಿ ಕಳೆದರು. ಈ ಸಮಯದಲ್ಲಿ ಅವರು ಅನೇಕ ಯುರೋಪಿನ ಆಟಗಾರರ ಜೊತೆ ನಿಕಟ ಸಂಬಂದ ಹೊಂದಿದ್ದರು. ಇವರಲ್ಲಿ ಡೆನ್ಮಾರ್ಕ್ ನ ಖ್ಯಾತ ಆಟಗಾರ ಮಾರ್ಟಿನ್ ಫ್ರಾಸ್ಟ್ ಒಬ್ಬರು. ೧೯೯೧ ರಲ್ಲಿ ನಿವೃತ್ತಿಯನ್ನು ಘೋಷಿಸಿದ ನಂತರ ಸ್ವಲ್ಪ ಕಾಲ ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ೧೯೯೩ ಮತ್ತು ೧೯೯೬ರಲ್ಲಿ ರಾಷ್ಟ್ರೀಯ ಬ್ಯಾಡ್ಮಿಂಟನ್ ತಂಡದ ಮುಖ್ಯ ತೆರಬೇತುದಾರರಾಗಿ ಕಾರ್ಯ ನಿರ್ವಹಿಸಿದ ಪ್ರಕಾಶ್, ಬೆಂಗಳೂರಿನಲ್ಲಿ ಕೆಲವು ವರ್ಷಗಳಿಂದ "ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿ"ಯನ್ನು ನಡೆಸುತ್ತಾ ಬಂದಿದ್ದಾರೆ. ಕೌಟುಂಬಿಕ ಜೀವನ ಪ್ರಕಾಶ್ ರವರು ಕೊಂಕಣಿ ಮಾತನಾಡುವ ಚಿತ್ರಾಪುರ ಸಾರಸ್ವಥ ಬ್ರಾಹಣ ಕುಟುಂಬದಲ್ಲಿ ಜನಿಸಿದರು. ಪ್ರಸ್ಥ್ಹುತ ಬೆಂಗಳೂರಿನಲ್ಲಿ ಪತ್ನಿ ಉಜ್ವಲರ ಜೊತೆ ಜೀವಿಸುತ್ತಿದ್ದಾರೆ. ಇವರು ಪ್ರಕಾಶ್ ಪಡುಕೋಣೆ ಬ್ಯಾಡ್ ಮಿಂಟನ್ ಅಕಾಡೆಮಿ ನಡೆಸುತ್ತಿದ್ದಾರೆ. ಇವರಿಗೆ ಇಬ್ಬರು ಪುತ್ರಿಯರು. ಮೊದಲ ಪುತ್ರಿ ದೀಪಿಕಾ ಪಡುಕೋಣೆ ಖ್ಯಾತ ನಟಿ ಹಾಗು ರೂಪದರ್ಶಿ. ಇವರ ಎರಡನೇ ಪುತ್ರಿ ಗೋಲ್ಫ್ ಆಟಗಾರ್ತಿ. ೨೦೦೬ರಲ್ಲಿ ದೇವ್ ಸುಕುಮಾರ್ ವಿರಚಿತ ಪ್ರಕಾಶ್ ಜೀವನ ಚರಿತ್ರೆ 'ಟಚ್‌ಪ್ಲೇ' ಬಿಡುಗಡೆ ಹೊಂದಿತು. ಪ್ರಮುಖ ಸಾಧನೆಗಳು ಉಲ್ಲೇಖ ಭಾರತದ ಕ್ರೀಡಾಪಟುಗಳು ಕರ್ನಾಟಕದ ಕ್ರೀಡಾಪಟುಗಳು ಬ್ಯಾಡ್ಮಿಂಟನ್
1240
https://kn.wikipedia.org/wiki/%E0%B2%B0%E0%B2%BE%E0%B2%9C%E0%B3%8D%E2%80%8C%E0%B2%95%E0%B3%81%E0%B2%AE%E0%B2%BE%E0%B2%B0%E0%B3%8D
ರಾಜ್‌ಕುಮಾರ್
ಡಾ. ರಾಜ್‌ಕುಮಾರ್, ಅಣ್ಣಾವ್ರು ಎಂದೇ ಖ್ಯಾತರಾದ ಕನ್ನಡ ಚಲನಚಿತ್ರರಂಗ ಮತ್ತು ರಂಗಭೂಮಿಯ ಮೇರುನಟ. ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು. ನಟನೆ, ಗಾಯನ ಮತ್ತು ಚಿತ್ರ ನಿರ್ಮಾಣದ ಮೂಲಕ. ವರನಟ,ನಟಸಾರ್ವಭೌಮ ಮೊದಲಾದ ಬಿರುದುಗಳು ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದ ಮೊದಲ ನಟ ಇವರು. ಭಾರತೀಯ ಚಿತ್ರರಂಗ ನೂರು ವರ್ಷ ಪೂರೈಸಿದ ಸಂದರ್ಭದಲ್ಲಿ ಫೋರ್ಬ್ಸ್ ಪತ್ರಿಕೆಯು ಪ್ರಕಟಿಸಿರುವ 25 ಅತ್ಯದ್ಭುತ ನಟನೆಗಳ ಪಟ್ಟಿಯಲ್ಲಿ ಡಾ. ರಾಜ್ ಕುಮಾರ್ ಅವರ ಬಂಗಾರದ ಮನುಷ್ಯ ಚಿತ್ರದ ನಟನೆಯೂ ಒಂದಾಗಿದೆ. ಜೀವನ ನಟಸಾರ್ವಭೌಮ ಡಾ. ರಾಜ್‌ಕುಮಾರ್ (ಜನನ: ಏಪ್ರಿಲ್ ೨೪, ೧೯೨೯ - ಮರಣ: ಏಪ್ರಿಲ್ ೧೨, ೨೦೦೬) ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಹೆಸರಾದ ಪ್ರಸಿದ್ಧ ನಟ, ಗಾಯಕ. ೧೯೫೪-೨೦೦೫ರವರೆಗೆ ೫ ದಶಕದಗಳ ಚಿತ್ರರಂಗದ ಬದುಕಿನಲ್ಲಿ, ೨೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ ಹೆಗ್ಗಳಿಕೆ ಡಾ. ರಾಜ್ ರದ್ದು. ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿ ಸಹ ಹೆಸರು ಮಾಡಿದ್ದಾರೆ. ನಟಸಾರ್ವಭೌಮ ಬಿರುದು, ೧೯೭೩ರಲ್ಲಿಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದಿದ್ದಾರೆ. ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿ ಮತ್ತು ಚಿತ್ರರಂಗದಲ್ಲಿನ ಜೀವಮಾನದ ಸಾಧನೆ ಗಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗಳು ಸಹ ಲಭಿಸಿವೆ. ಕರ್ನಾಟಕ ಸರ್ಕಾರದಿಂದ ಕರ್ನಾಟಕ ರತ್ನ ಪಡೆದ ಎರಡನೆಯ ವ್ಯಕ್ತಿ ೨೦೦೦ನೇ ವರ್ಷದಲ್ಲಿ ಕುಖ್ಯಾತ ದಂತಚೋರ ವೀರಪ್ಪನ್‌ನಿಂದ ಅಪಹರಣವಾಗಿದ್ದ ರಾಜ್‌ಕುಮಾರ್, ೧೦೮ ದಿನಗಳ ನಂತರ ಬಿಡುಗಡೆಯಾಗಿದ್ದರು. ೨೦೦೬ ಏಪ್ರಿಲ್ ೧೨ರಂದು ಬೆಂಗಳೂರಿನಲ್ಲಿ, ಹೃದಯಾಘಾತದಿಂದ ಮರಣ ಹೊಂದಿದರು. ಹಿನ್ನೆಲೆ ಕನ್ನಡ ರಂಗಭೂಮಿಯ ಹೆಸರಾಂತ ಪ್ರತಿಭೆ ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮತ್ತು ಲಕ್ಷ್ಮಮ್ಮ ದಂಪತಿಗಳ ಹಿರಿಯ ಮಗನಾಗಿ, ಚಾಮರಾಜನಗರ ಜಿಲ್ಲೆಯ ಗಡಿಭಾಗದಲ್ಲಿರುವ ದೊಡ್ಡ ಗಾಜನೂರಿನಲ್ಲಿ ೧೯೨೯ರ ಏಪ್ರಿಲ್ ೨೪ರಂದು ರಾಜ್‌ಕುಮಾರ್ ಹುಟ್ಟಿದರು. ನಾಮಕರಣಗೊಂಡ ಹೆಸರು ಮುತ್ತುರಾಜು(ಮುತ್ತಣ್ಣ). ಡಾ. ರಾಜ್ ಅವರಿಗೆ ವರದರಾಜ್ ಎಂಬ ಸಹೋದರರೂ, ಶಾರದಮ್ಮ ಎಂಬ ತಂಗಿಯೂ ಇದ್ದರು. ೧೯೫೩ ಜೂನ್ ೨೫ರಂದು ಪಾರ್ವತಿಯವರೊಡನೆ ಲಗ್ನವಾಯಿತು. ಪಾರ್ವತಿಯವರು ಮುಂದೆ ಪಾರ್ವತಮ್ಮ ರಾಜ್‌ಕುಮಾರ್ ಎಂದೇ ಕನ್ನಡದ ಜನತೆಗೆ ಚಿರ ಪರಿಚಿತರಾಗಿ ಕನ್ನಡ ಚಿತ್ರರಂಗದ ಪ್ರಮುಖ ಚಿತ್ರ ನಿರ್ಮಾಪಕರಲ್ಲೊಬ್ಬರಾದರು. ವಜ್ರೇಶ್ವರಿ ಸಂಸ್ಥೆಯ ಅಡಿಯಲ್ಲಿ ಹಲವಾರು ಕನ್ನಡ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಡಾ. ರಾಜ್ ದಂಪತಿಗಳಿಗೆ ೫ ಜನ ಮಕ್ಕಳು. ಮೂರು ಜನ ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳು. ಗಂಡು ಮಕ್ಕಳಾದ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಕನ್ನಡ ಚಿತ್ರರಂಗದ ನಾಯಕ ನಟರು. ಹೆಣ್ಣು ಮಕ್ಕಳು ಪೂರ್ಣಿಮಾ ಹಾಗು ಲಕ್ಷ್ಮಿ. ಹಿರಿಯ ಅಳಿಯ ಪಾರ್ವತಮ್ಮನವರ ತಮ್ಮನಾದ ಗೋವಿಂದರಾಜು ಹಾಗು ಕಿರಿಯ ಅಳಿಯ ಚಿತ್ರನಟ ರಾಮ್‌ಕುಮಾರ್. ಒಟ್ಟು ಹನ್ನೆರಡು ಮೊಮ್ಮಕ್ಕಳಿದ್ದು, ಶಿವರಾಜ್‌ಕುಮಾರ್ ಪುತ್ರಿಯಾದ ನಿವೇದಿತಾ, ಅಂಡಮಾನ್ ಮುಂತಾದ ಕೆಲವು ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿದ್ದಾಳೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಡಾ. ರಾಜ್ ಅವರ ಬೀಗರು. ಬಂಗಾರಪ್ಪನವರ ಪುತ್ರಿಯಾದ ಗೀತಾ, ಶಿವರಾಜ್‌ಕುಮಾರ್ ಅವರ ಪತ್ನಿ. ಅಪಹರಣ ೩೦ ಜುಲೈ ೨೦೦೦ರಂದು, ಕುಖ್ಯಾತ ದಂತಚೋರ, ನರಹಂತಕ ವೀರಪ್ಪನ್‌ನಿಂದ ಡಾ. ರಾಜ್ ಅವರು ಗಾಜನೂರಿನಲ್ಲಿರುವ ತಮ್ಮ ತೋಟದ ಮನೆಯಿಂದ ಅಪಹರಣವಾದರು. ಡಾ. ರಾಜ್ ಅವರೊಂದಿಗೆ ಅವರ ಅಳಿಯ ಗೋವಿಂದರಾಜು ಮತ್ತು ನಾಗಪ್ಪ ಮಾರಡಗಿ ಅವರೂ ಕೂಡ ಅಪಹರಣಕ್ಕೊಳಗಾದರು. ಅಪಹರಣದ ನಂತರದ ದಿನಗಳಲ್ಲಿ, ಕ್ಯಾಸೆಟ್ಟುಗಳ ಮೂಲಕ, ಪತ್ರಗಳ ಮೂಲಕ ಕರ್ನಾಟಕ ಹಾಗು ತಮಿಳುನಾಡು ಸರ್ಕಾರಗಳನ್ನು ಸಂಪರ್ಕಿಸುತ್ತಿದ್ದ ವೀರಪ್ಪನ್ ಡಾ. ರಾಜ್ ಅವರನ್ನು ಒತ್ತೆಯಾಳಗಿಟ್ಟುಕೊಂಡು, ಹಲವಾರು ಬೇಡಿಕೆಗಳನ್ನು ಮುಂದಿಟ್ಟಿದ್ದನು. ನೂರೆಂಟು ದಿನಗಳ ಕಾಲ ಅಪಹೃತರಾಗಿ, ಅರಣ್ಯವಾಸ ಅನುಭವಿಸಿದ್ದ ಡಾ. ರಾಜ್, ೧೫ ನವೆಂಬರ್ ೨೦೦೦ರಂದು ಬಿಡುಗಡೆಗೊಂಡರು. ಅಪಹರಣದ ಅವಧಿಯಲ್ಲಿ ಕರ್ನಾಟಕದ ಪೋಲಿಸ್ ಮಹಾನಿರ್ದೇಶಕರಾದ(ಡಿಜಿಪಿ) ಪಿ. ದಿನಕರ್ ಅವರು ಅಪಹರಣದ ಬಗ್ಗೆ "Veerappan's Prize Catch: Dr.Rajkumar" ಎಂಬ ಪುಸ್ತಕವನ್ನು ಬರೆದಿದ್ದಾರೆ. ಆ ಪುಸ್ತಕವನ್ನು ರವಿ ಬೆಳಗೆರೆ ಯವರು "ರಾಜ ರಹಸ್ಯ" ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ನಿಧನ ಅಂತಿಮ ದಿನಗಳಲ್ಲಿ ಮಂಡಿನೋವು ಹಾಗು ಎದೆನೋವಿನಿಂದ ಬಳಲಿದ ಡಾ. ರಾಜ್, ೧೨ ಏಪ್ರಿಲ್, ೨೦೦೬ ಬುಧವಾರದಂದು ಮಧ್ಯಾಹ್ನ ೧:೪೫ರ ಸುಮಾರಿಗೆ, ಬೆಂಗಳೂರಿನಲ್ಲಿ ತಮ್ಮ ಕೊನೆಯುಸಿರೆಳೆದರು. ಕನ್ನಡ ಚಿತ್ರರಂಗದ ದಂತಕಥೆಯಾಗಿದ್ದ ಡಾ. ರಾಜ್ ಅವರ ಅಗಲಿಕೆಯಿಂದ, ಒಂದು ಸುವರ್ಣ ಯುಗದ ಅಂತ್ಯವಾದಂತಾಯಿತು. ಡಾ. ರಾಜ್ ಅವರ ಸ್ವ-ಇಚ್ಛೆಯಂತೆ, ಮರಣೋತ್ತರವಾಗಿ ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಲಾಯಿತು. ಮೃತರ ಪಾರ್ಥಿವ ಶರೀರವನ್ನು ಅಭಿಮಾನಿಗಳ, ಬಂಧುಮಿತ್ರರ ದರ್ಶನಕ್ಕಾಗಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಇಡಲಾಗಿತ್ತು. ಅಪಾರ ಸಂಖ್ಯೆಯ ಜನಸ್ತೋಮ ಅಂತಿಮ ದರ್ಶನದಲ್ಲಿ ಪಾಲ್ಗೊಂಡಿತ್ತು. ೧೩ ಏಪ್ರಿಲ್ ೨೦೦೬ರಂದು, ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿರುವ ಕಂಠೀರವ ಸ್ಟುಡಿಯೊ ಆವರಣದಲ್ಲಿ ಡಾ. ರಾಜ್ ಪಾರ್ಥಿವ ಶರೀರದ ಅಂತ್ಯಸಂಸ್ಕಾರವು ನಡೆಯಿತು. ಇವೆರಡು ದಿನ (ಏಪ್ರಿಲ್ ೧೨ ಮತ್ತು ೧೩), ಬೆಂಗಳೂರಿನಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಉಂಟಾಗಿತ್ತು. ಬಣ್ಣದ ಬದುಕು ರಂಗಭೂಮಿ ಮತ್ತು ತಂದೆಯ ಪ್ರಭಾವ ಬೇಡರ ಕಣ್ಣಪ್ಪ ಚಿತ್ರದಲ್ಲಿ ನಾಯಕನಾಗಿ ನಟಿಸುವ ಮುನ್ನ ಡಾ. ರಾಜ್ ಅವರ ಹೆಸರು ಮುತ್ತುರಾಜ ಎಂದಿತ್ತು. ಮುತ್ತುರಾಜನ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ರವರು ಎಂದರೆ ೧೯೩೦-೧೯೫೦ ಕಾಲದಲ್ಲಿ ಕನ್ನಡ ರಂಗಭೂಮಿಯ ದೊಡ್ಡ ಹೆಸರು. ರೌದ್ರ ಪಾತ್ರಗಳಿಗೆ ಹೆಸರಾಗಿದ್ದ ಪುಟ್ಟಸ್ವಾಮಯ್ಯರವರು ಗುಬ್ಬಿ ಕಂಪನಿಯಲ್ಲಿ ಕಲಾವಿದರಾಗಿದ್ದರು. ಬಡತನದಿಂದಾಗಿ ಮುತ್ತುರಾಜ್ ವಿದ್ಯಾಭ್ಯಾಸ ನಾಲ್ಕನೆ ತರಗತಿಗೆ ನಿಂತಿತು. ಗುಬ್ಬಿ ಕಂಪನಿಯೇ ವಿಶ್ವವಿದ್ಯಾನಿಲಯವಾಯಿತು. ತಂದೆಯನ್ನು ನೆರಳಿನಂತೆ ಹಿಂಬಾಲಿಸಿದ ಮುತ್ತು ರಾಜ್‌ಗೆ ಅವರಿಂದಲೇ ತರಬೇತಿಯಾಯಿತು. ನಾಟಕಗಳಲ್ಲಿ ಸಣ್ಣ ಪುಟ್ಟ ಪಾತ್ರ ನಿರ್ವಹಿಸುತ್ತಿದ್ದರು. ಡಾ. ರಾಜ್‌ಕುಮಾರ್ ಜೀವನದಲ್ಲಿ ತಂದೆ ಬೀರಿರುವ ಪ್ರಭಾವ ಅಪಾರ.ಫಾಲ್ಕೆ ಪ್ರಶಸ್ತಿ ಪ್ರಕಟವಾದಾಗ ಅವರು ಮೊದಲು ನೆನಪಿಸಿಕೊಂಡದ್ದು ತಂದೆ ಹೇಳಿದ ಮಾತುಗಳನ್ನೇ:"ಇಂತಹ ಸಾಧನೆ ನಿನ್ನಿಂದ ಸಾಧ್ಯ" ಎಂದು ಪುಟ್ಟಸ್ವಾಮಯ್ಯ ಮಗನ ಭವಿಷ್ಯವನ್ನು ಅಂದೇ ನುಡಿದಿದ್ದರು. ಅದು ನಿಜವಾಯಿತು. "ನನ್ನ ತಂದೆ ರಂಗದ ಮೇಲೆ ಹುರಿ ಮೀಸೆ ತಿರುಗಿಸುತ್ತಾ, ಆರ್ಭಟಿಸುತ್ತಾ ರಂಗ ಪ್ರವೇಶಿಸಿದರೆಂದರೆ ಎಂತಹವರಿಗೂ ಒಂದು ಬಾರಿ ನಡುಕ ಬರುತ್ತಿತ್ತು" ಎಂದು ತಂದೆಯವರ ಅಭಿನಯವನ್ನು ಬಣ್ಣಿಸುವ ರಾಜ್‌ಕುಮಾರ್ ಅವರಿಗೆ ತಂದೆಯ ಅಭಿನಯ ಬಲುಪ್ರಿಯ. "ನಾನೂ ಅದೇ ರೀತಿ ಮಾಡಬೇಕೆಂದು ಭಕ್ತ ಪ್ರಹ್ಲಾದ ಚಿತ್ರದಲ್ಲಿ ಹಿರಣ್ಯ ಕಶಿಪು ಪಾತ್ರದಲ್ಲಿ ಅವರಂತೆ ಅಭಿನಯಿಸಲು ಸಾಧ್ಯವೇ ಎಂದು ಪ್ರಯತ್ನಿಸಿದೆ; ಆದರೆ ಬರಲಿಲ್ಲ" ಎಂದು ಹೇಳಿದ್ದಾರೆ. ಗುಬ್ಬಿ ಕಂಪನಿಯಲ್ಲಿ ಪುಟ್ಟಸ್ವಾಮಯ್ಯನವರು ಅಭಿನಯಿಸುತ್ತಿದ್ದಾಗ ಮುತ್ತುರಾಜುವಿಗೆ "ಕೃಷ್ಣಲೀಲಾ" ಎಂಬ ನಾಟಕದಲ್ಲಿ ಸಣ್ಣ ಪಾತ್ರ ದೊರಕಿತು. ಕೆಲ ದಿನಗಳ ನಂತರ ಪುಟ್ಟಸ್ವಾಮಯ್ಯನವರು ಗುಬ್ಬಿ ಕಂಪನಿ ತೊರೆದು ಎಂ.ವಿ.ಸುಬ್ಬಯ್ಯ ನಾಯ್ಡು ಅವರ ಶ್ರೀ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿಗೆ ಸೇರಿದಾಗ ಅಕಸ್ಮಾತ್ತಾಗಿ ಮುತ್ತುರಾಜ್‌ಗೆ "ಅಂಬರೀಷ" ನಾಟಕದಲ್ಲಿ ಅಂಬರೀಷನ ತಮ್ಮ ರಮಾಕಾಂತನ ಪಾತ್ರ ದೊರಕಿತು. ಅನಂತರ "ಕುರುಕ್ಷೇತ್ರ" ನಾಟಕದಲ್ಲಿ ತಂದೆ ಭೀಮನ ಪಾತ್ರವಾದರೆ ಮಗ ಅರ್ಜುನನ ಪಾತ್ರ. ರಾಜ್‌ಕುಮಾರ್‌ಗೆ ಇದು ರಂಗ ತಾಲೀಮು. ೧೯೫೧ರಲ್ಲಿ ತಂದೆ ಪುಟ್ಟಸ್ವಾಮಯ್ಯನವರ ನಿಧನ. ಬಂದೆರಗಿದ ಅಘಾತದಿಂದ ತತ್ತರಿಸಿದ ಮುತ್ತುರಾಜ್, ಮತ್ತೆ ಗುಬ್ಬಿ ಕಂಪನಿ ಸೇರಿ "ಭೂ ಕೈಲಾಸ" ನಾಟಕದಲ್ಲಿ ಅಭಿನಯಿಸಿದರು. ಗುಬ್ಬಿ ಕಂಪನಿ ಅಲ್ಲದೆ, ಶ್ರೀ ಸಾಹಿತ್ಯ ಮಂಡಲಿ, ಶೇಷಾಚಾರ್ಯರ ಶೇಷಕಮಲ ನಾಟಕ ಮಂಡಳಿಯಲ್ಲಿಯೂ ರಾಜ್‌ಕುಮಾರ್ ಒಂದು ವರ್ಷ ಸೇವೆ ಸಲ್ಲಿಸಿದ್ದಾರೆ. ಚಿತ್ರರಂಗಕ್ಕೆ ನಾಯಕನಾಗಿ ಪಾದಾರ್ಪಣೆ ೧೯೪೨ರಲ್ಲಿ ಬಿಡುಗಡೆಯಾದ ಭಕ್ತ ಪ್ರಹ್ಲಾದ ಚಿತ್ರದಲ್ಲಿ ನಟನಾಗಿಯೂ, ೧೯೫೨ರಲ್ಲಿ ಬಿಡುಗಡೆಯಾದ ಶಂಕರ್‌ಸಿಂಗ್ ನಿರ್ದೇಶನದ ಶ್ರೀ ಶ್ರೀನಿವಾಸ ಕಲ್ಯಾಣ ಚಿತ್ರದಲ್ಲಿ ಸಪ್ತರ್ಷಿಗಳಲ್ಲಿ ಒಬ್ಬರಾಗಿ ಅಭಿನಯಿಸಿದ್ದ ಮುತ್ತುರಾಜ್, ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ೧೯೫೩ರಲ್ಲಿ ಆಗಷ್ಟೆ ಮದುವೆಯಾಗಿದ್ದ ಮುತ್ತುರಾಜ್ ದಂಪತಿಗಳು ನಂಜನಗೂಡಿನಿಂದ ಮೈಸೂರಿಗೆ ಹೊರಡಲು ರೈಲ್ವೆ ನಿಲ್ದಾಣದಲ್ಲಿದ್ದರು. ಅದೇ ಸಮಯಕ್ಕೆ ಹೆಚ್.ಎಲ್.ಎನ್.ಸಿಂಹ ಕೂಡ ಮೈಸೂರಿಗೆ ಹೋಗಲು ಅಲ್ಲಿಗೆ ಬಂದಿದ್ದರು. ಅವರು ಮುತ್ತು ರಾಜ್‌ರವರನ್ನು ಚಿಕ್ಕಂದಿನಿಂದ ನೋಡಿದ್ದರು. ಅಂದು ರೈಲ್ವೆ ನಿಲ್ದಾಣದಲ್ಲಿ ಆ ದಂಪತಿಗಳನ್ನು ಕಂಡು ಪ್ರೀತಿಯಿಂದ ಮಾತನಾಡಿಸಿ, ಯೋಗಕ್ಷೇಮ ವಿಚಾರಿಸಿದರು. ಸಿಂಹ ಕಣ್ಣಪ್ಪನ ಪಾತ್ರಕ್ಕೆ ಹೊಸನಟನನ್ನು ಹುಡುಕುತ್ತಿದ್ದ ಸಮಯ. ಅಂದು ಕಟ್ಟುಮಸ್ತಾದ ಆಳು ಮುತ್ತರಾಜ್‌ರವರನ್ನು ಕಂಡ ತಕ್ಷಣ "ಇವನನ್ನೇ ಕಣ್ಣಪ್ಪನಾಗಿ ಏಕೆ ಮಾಡಬಾರದು" ಎಂಬ ಭಾವನೆ ಮೂಡಿತ್ತು. ಮುತ್ತುರಾಜ್ ಬಳಿ ವಿಳಾಸವನ್ನು ಪಡೆದು, ದಂಪತಿಗಳಿಗೆ ಶುಭ ಕೋರಿ ಸಿಂಹ ಬೀಳ್ಕೊಟ್ಟಿದ್ದರು. ಮೇಲಿನ ಘಟನೆ ನಡೆದ ಕೆಲ ದಿನಗಳಲ್ಲಿ ಮೈಸೂರಿನ ಟೌನ್‌ಹಾಲಿನಲ್ಲಿ ಬೇಡರ ಕಣ್ಣಪ್ಪ ನಾಟಕ ಪ್ರದರ್ಶನವಿತ್ತು. ಅದರಲ್ಲಿ ಮುತ್ತುರಾಜ್ ಕಣ್ಣಪ್ಪನ ಪಾತ್ರ ವಹಿಸುತ್ತಾರೆ ಎಂದು ಸಿಂಹರವರಿಗೆ ತಿಳಿಯಿತು. * ಆ ದಿನ, ಅರ್ಧಗಂಟೆ ನಾಟಕ ನೋಡಿ, ಮುತ್ತುರಾಜ್‌ರವರ ತನ್ಮಯತೆಯ ಅಭಿನಯ ಕಂಡು ಸಿಂಹ ಸಂತೋಷ ಪಟ್ಟರು. ಗುಬ್ಬಿ ಕರ್ನಾಟಕ ಫಿಲಂಸ್ ನಿರ್ಮಿಸುತ್ತಿದ್ದ ಬೇಡರ ಕಣ್ಣಪ್ಪ ಚಿತ್ರದಲ್ಲಿನ ಕಣ್ಣಪ್ಪನ ಪಾತ್ರಕ್ಕೆ ಈತನೇ ಸರಿಯಾದ ವ್ಯಕ್ತಿ ಎಂದುಕೊಂಡು ನಿರ್ಮಾಪಕ ಎ.ವಿ.ಎಂ.ಚೆಟ್ಟಿಯಾರ್ ಅವರನ್ನು ಸಂಪರ್ಕಿಸಿ, ಆ ಚಿತ್ರದ ಸಹ ನಿರ್ಮಾಪಕರಾಗಿದ್ದ ಗುಬ್ಬಿ ವೀರಣ್ಣನವರಿಗೆ ಈ ವಿಷಯ ತಿಳಿಸಿ ಅವರನ್ನು ಒಪ್ಪಿಸಿದರು. ನಂತರ ಮುತ್ತುರಾಜ್ ಜಿ.ವಿ.ಅಯ್ಯರ್ ಹಾಗು ನರಸಿಂಹರಾಜು ಇವರುಗಳನ್ನು 'ಸ್ಕ್ರೀನ್ ಟೆಸ್ಟ್' ಗೆ ಮದರಾಸಿಗೆ ಬರಲು ಆಹ್ವಾನಿಸಿದರು.ನಿರ್ದೇಶಕ ಎಚ್.ಎಲ್.ಎನ್.ಸಿಂಹ ಅವರಿಂದ ಮುತ್ತುರಾಜ್‌ಗೆ-ರಾಜ‌ಕುಮಾರ್ ಎಂಬ ಹೊಸ ಹೆಸರಿನ ನಾಮಕರಣವಾಯಿತು. ರಾಜಕುಮಾರ್ ಬೇಡರ ಕಣ್ಣಪ್ಪ ಚಿತ್ರದ ನಾಯಕನಾಗಿ ಅಭಿನಯಿಸಿದರು. ಚಿತ್ರವು ೧೯೫೪ರ ಮೇ ತಿಂಗಳಲ್ಲಿ ಆಗಿನ ಮೈಸೂರು ರಾಜ್ಯದಲ್ಲಿ ಎಲ್ಲೆಡೆ ಬಿಡುಗಡೆಗೊಂಡಿತು. ಬೇಡರ ಕಣ್ಣಪ್ಪ ಚಿತ್ರ ರಾಷ್ಟ್ರಪ್ರಶಸ್ತಿ ಪಡೆದ ಪ್ರಥಮ ಚಿತ್ರವಾಗಿ ಕನ್ನಡ ಚಿತ್ರರಂಗದಲ್ಲಿಯೇ ಒಂದು ಮೈಲಿಗಲ್ಲಾಯಿತು. ಮದರಾಸು 'ಸ್ಕ್ರೀನ್ ಟೆಸ್ಟ್' ನೋಡಿದ ನಿರ್ಮಾಪಕ ಎ.ವಿ.ಎಂ.ಚೆಟ್ಟಿಯಾರ್ ಅವರು ಹೆಚ್.ಎಲ್.ಎನ್.ಸಿಂಹ ಅವರ ಬಳಿ ಹೋಗಿ " ಈ ಉದ್ದ ಮೂಗಿನ ಮತ್ತು ಹಲ್ಲು ಹುಬ್ಬು ಇರುವವರನ್ನು ಹಾಕಿಕೊಂಡು ಏನು ಚಿತ್ರ ಮಾಡುತ್ತೀಯ ಎಂದು ಕೇಳಿದ್ದರಂತೆ. ಆದರೆ ಹೆಚ್.ಎಲ್.ಎನ್.ಸಿಂಹ ಅವರು ನಿರ್ಮಾಪಕರಿಗೆ ಎ.ವಿ.ಎಂ.ಚೆಟ್ಟಿಯಾರ್, ಇವರೇ ಸರಿಯಾದ ವ್ಯಕ್ತಿಗಳು ಎಂದು ಹೇಳಿ ಒಪ್ಪಿಸಿದ್ದರು. ಬಣ್ಣದ ಬದುಕಿನ ಪಕ್ಷಿನೋಟ ಬೇಡರ ಕಣ್ಣಪ್ಪ ಚಿತ್ರದಿಂದ ನಾಯಕ ನಟನಾಗಿ ಅಭಿನಯಿಸಲು ಪ್ರಾರಂಭಿಸಿದ ರಾಜಕುಮಾರ್, ಭಕ್ತ ವಿಜಯ, ಹರಿಭಕ್ತ, ಓಹಿಲೇಶ್ವರ, ಭೂಕೈಲಾಸ, ಭಕ್ತ ಕನಕದಾಸ, ನವಕೋಟಿ ನಾರಾಯಣ(ಭಕ್ತ ಪುರಂದರದಾಸ) ಮುಂತಾದ ಭಕ್ತಿ ಪ್ರಧಾನ ಚಿತ್ರಗಳಲ್ಲಿ ಅಭಿನಯಿಸಿದರು. ೨೦೦ ಚಿತ್ರಗಳಲ್ಲಿ ನಾಯಕನಾಗಿ ಅಭಿನಯಿಸಿದ ಕನ್ನಡದ ಏಕೈಕ ಕಲಾವಿದರು. ೧೯೬೦ರ ದಶಕದಲ್ಲಿ, ಕಣ್ತೆರೆದು ನೋಡು, ಗಾಳಿಗೋಪುರ, ನಂದಾದೀಪ, ಸಾಕು ಮಗಳು, ನಾಂದಿ ಮುಂತಾದ ಸಾಮಾಜಿಕ ಚಿತ್ರಗಳಲ್ಲಿಯೂ, ರಣಧೀರ ಕಂಠೀರವ, ಕಿತ್ತೂರು ಚೆನ್ನಮ್ಮ, ಇಮ್ಮಡಿ ಪುಲಿಕೇಶಿ, ಶ್ರೀ ಕೃಷ್ಣದೇವ ರಾಯ ಮುಂತಾದ ಐತಿಹಾಸಿಕ ಚಿತ್ರಗಳು ರಾಜ್ ಅಭಿನಯದಲ್ಲಿ ತೆರೆ ಕಂಡವು. ೧೯೬೬ರಲ್ಲಿ ಬಿಡುಗಡೆಯಾದ ಸಂಗೀತ ಪ್ರಧಾನ ಸಂಧ್ಯಾರಾಗ ಚಿತ್ರದಲ್ಲಿ ಶಾಸ್ತ್ರೀಯ ಸಂಗೀತಗಾರನಾಗಿ ನಟಿಸಿದ ರಾಜ್ ಅವರ ಅಭಿನಯಕ್ಕೆ ಭಾರತದ ಹೆಸರಾಂತ ಶಾಸ್ತ್ರೀಯ ಗಾಯಕರಾದ ಡಾ.ಬಾಲಮುರಳಿ ಕೃಷ್ಣ ಹಾಗು ಪಂಡಿತ್ ಭೀಮಸೇನ ಜೋಷಿ ಅವರು ಹಾಡಿದ್ದಾರೆ. ಇದೇ ವರ್ಷ ತೆರೆಕಂಡ ಮಂತ್ರಾಲಯ ಮಹಾತ್ಮೆ ಚಿತ್ರದಲ್ಲಿ ರಾಜ್‌ಕುಮಾರ್ ಶ್ರೀ ರಾಘವೇಂದ್ರ ಸ್ವಾಮಿಗಳ ಪಾತ್ರದಲ್ಲಿ ನಟಿಸಿದ್ದು, ಈ ಚಿತ್ರದಲ್ಲಿನ ಅಭಿನಯ ತಮ್ಮ ಚಿತ್ರ ಬದುಕಿನಲ್ಲಿ ಮಿಕ್ಕೆಲ್ಲ ಚಿತ್ರಗಳಿಗಿಂತಲೂ ಹೆಚ್ಚು ತೃಪ್ತಿಕರ ಎಂದು ಹಲವಾರು ಬಾರಿ ಸಂದರ್ಶನಗಳಲ್ಲಿ ತಿಳಿಸಿದ್ದಾರೆ. ೧೯೬೮ರಲ್ಲಿ ಬಿಡುಗಡೆಯಾದ ಜೇಡರ ಬಲೆ ಎಂಬ ಚಿತ್ರದ ಮೂಲಕ ಜೇಮ್ಸ್ ಬಾಂಡ್ ಮಾದರಿಯ ಗೂಢಚಾರಿ ಪಾತ್ರವನ್ನಾಧರಿಸಿದ ಚಿತ್ರಸರಣಿಗೆ ನಾಂದಿ ಹಾಡಿದರು. ಈ ಸರಣಿ ಯಲ್ಲಿ 'ಪ್ರಕಾಶ್' ಎಂಬ ಏಜೆಂಟ್ ಹೆಸರಿನಲ್ಲಿ (ಏಜೆಂಟ್ ೯೯೯) ಅಭಿನಯಿಸಿದರು. ಈ ಸರಣಿಯಲ್ಲಿನ ಇತರ ಚಿತ್ರಗಳು ಆಪರೇಷನ್ ಜಾಕ್‌ಪಾಟ್‌ನಲ್ಲಿ ಸಿ.ಐ.ಡಿ. ೯೯೯, ಗೋವಾದಲ್ಲಿ ಸಿ.ಐ.ಡಿ. ೯೯೯ ಹಾಗು ಆಪರೇಷನ್ ಡೈಮಂಡ್ ರಾಕೆಟ್. ಇವಲ್ಲದೇ ಸಿ.ಐ.ಡಿ. ರಾಜಣ್ಣ ಚಿತ್ರದಲ್ಲಿ ಸಿ.ಐ.ಡಿ ಆಗಿ ರಾಜ್ ಅಭಿನಯಿಸಿದ್ದಾರೆ. ರಾಜ್‌ಕುಮಾರ್ ಅವರ ನೂರನೇ ಚಿತ್ರವಾದ ಭಾಗ್ಯದ ಬಾಗಿಲು ೧೯೬೮ರಲ್ಲಿ ತೆರೆ ಕಂಡಿತು. ಇದೇ ಸಂದರ್ಭದಲ್ಲಿ ಇವರಿಗೆ ನಟಸಾರ್ವಭೌಮ ಎಂಬ ಬಿರುದನ್ನು ನೀಡಿ ಗೌರವಿಸಲಾಯಿತಲ್ಲದೆ, ಅದೇ ಹೆಸರಿನ ಚಲನಚಿತ್ರವೂ (ನಟಸಾರ್ವಭೌಮ) ಕೂಡ ತಯಾರಾಯಿತು. ಈ ಚಿತ್ರವು ರಾಜ್‌ಕುಮಾರ್ ಅವರ ಹಿಂದಿನ ನೂರು ಚಿತ್ರಗಳ ತುಣುಕು ದೃಶ್ಯಗಳನ್ನು ಜೊತೆಗೂಡಿಸಿ ತಯಾರಿಸುವ ಯೋಜನೆಯೊಂದಿಗೆ ಪ್ರಾರಂಭವಾದರೂ, ಸ್ಥಳಾವಕಾಶದ ಕೊರತೆಯಿಂದ ಕೆಲವು ಚಿತ್ರಗಳ ತುಣುಕುಗಳನ್ನು ಕೈಬಿಡಲಾಗಿದೆ. ೧೯೭೧ರಲ್ಲಿ ಬಿಡುಗಡೆಯಾದ ಕಸ್ತೂರಿ ನಿವಾಸ ಮತ್ತು ಸಾಕ್ಷಾತ್ಕಾರ ಚಿತ್ರಗಳು ರಾಜ್ ಅವರ ಜನಪ್ರಿಯ ಚಿತ್ರಗಳಲ್ಲಿ ಮುಖ್ಯವಾದವು. ಈ ಚಿತ್ರಗಳಲ್ಲಿನ ಆಡಿಸಿನೋಡು ಬೀಳಿಸಿ ನೋಡು ಉರುಳಿ ಹೋಗದು ಹಾಗು ಒಲವೆ ಜೀವನ ಸಾಕ್ಷಾತ್ಕಾರ ಹಾಡುಗಳು ಜನಮನಗಳಲ್ಲಿ ವಿಶೇಷ ಸ್ಥಾನ ಪಡೆದ ಗೀತೆಗಳಾಗಿವೆ. ರಾಜ್‌ಕುಮಾರ್ ಅವರನ್ನು ಖ್ಯಾತಿಯ ಉತ್ತುಂಗಕ್ಕೇರಿಸಿದ ಚಿತ್ರ ೧೯೭೧ರಲ್ಲಿ ತೆರೆಕಂಡ ಬಂಗಾರದ ಮನುಷ್ಯ. ಚಿತ್ರಮಂದಿರದಲ್ಲಿ ಸತತವಾಗಿ ಎರಡು ವರ್ಷಕ್ಕೂ ಹೆಚ್ಚಿನ ಅವಧಿಯ ಪ್ರದರ್ಶನಗೊಂಡು ಹೊಸ ದಾಖಲೆಯನ್ನು ನಿರ್ಮಿಸಿತು. ಈ ದಾಖಲೆ ಕನ್ನಡ ಚಿತ್ರರಂಗದಲ್ಲಿ ಇಂದಿಗೂ ಅಚ್ಚಳಿಯದೇ ನಿಂತಿದೆ. ಈ ಚಿತ್ರದಲ್ಲಿನ ರಾಜ್ ಅಭಿನಯದ ರಾಜೀವಪ್ಪ ಎಂಬ ಪಾತ್ರವು ಕನ್ನಡ ಚಿತ್ರರಂಗದಲ್ಲಿನ ಅತ್ಯಂತ ಖ್ಯಾತ ಪಾತ್ರಗಳಲ್ಲಿ ಒಂದಾಗಿ ಹೆಸರು ಪಡೆಯಿತು. ರಾಜ್‌ಕುಮಾರ್ ಅವರ ನೂರೈವತ್ತನೇ ಚಿತ್ರ, ೧೯೭೩ರಲ್ಲಿ ತೆರೆಕಂಡ, ಗಂಧದ ಗುಡಿ. ರಾಜ್ ಅರಣ್ಯಾಧಿಕಾರಿಯ ಪಾತ್ರದಲ್ಲಿ ನಟಿಸಿದ ಈ ಚಿತ್ರದಲ್ಲಿ ಕನ್ನಡ ಚಿತ್ರರಂಗದ ಮತ್ತೊಬ್ಬ ಖ್ಯಾತ ನಟರಾದ ವಿಷ್ಣುವರ್ಧನ್ ಅಭಿನಯಿಸಿದ್ದಾರೆ. ೧೯೭೪ರಲ್ಲಿ ತೆರೆಕಂಡ ಭಕ್ತ ಕುಂಬಾರ ಚಿತ್ರದಲ್ಲಿನ ರಾಜ್ ಅಭಿನಯ ಮನೋಜ್ಞ ಮತ್ತು ಅತ್ಯಂತ ಭಾವಪೂರ್ಣ ಎಂದು ವಿಮರ್ಶಕರ ಅಭಿಪ್ರಾಯ. ಇದೇ ವರ್ಷ ಬಿಡುಗಡೆ ಯಾದ ಸಂಪತ್ತಿಗೆ ಸವಾಲ್ ಚಿತ್ರದ ಯಾರೇ ಕೂಗಾಡಲಿ, ಊರೇ ಹೋರಾಡಲಿ ಹಾಡಿನ ಮೂಲಕ ರಾಜ್ ಹಿನ್ನೆಲೆ ಗಾಯಕರಾಗಿ ತಮ್ಮ ಮುಂದಿನ ಎಲ್ಲಾ ಚಿತ್ರಗಳಲ್ಲೂ ಹಾಡಲು ಪ್ರಾರಂಭಿಸಿದರು. ೧೯೭೫ರಲ್ಲಿ ಬಿಡುಗಡೆಯಾದ ಮಯೂರ ಚಲನಚಿತ್ರವು ಕನ್ನಡದ ಪ್ರಥಮ ದೊರೆ ಕದಂಬರ ಮಯೂರವರ್ಮರನ್ನಾಧರಿಸಿದೆ. ಈ ಚಿತ್ರದಲ್ಲಿರುವ ನಾನಿರುವುದೆ ನಿಮಗಾಗಿ, ನಾಡಿರುವುದೆ ನಮಗಾಗಿ ಗೀತೆಯು ರಾಜ್ ಗಾಯನದಲ್ಲಿನ ಅತ್ಯಂತ ಜನಪ್ರಿಯ ಗೀತೆಗಳಲ್ಲೊಂದು. ೧೯೭೬ರಲ್ಲಿ ಮೈಸೂರು ವಿಶ್ವವಿದ್ಯಾಲವು ರಾಜ್‌ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿತು. ೧೯೭೭ರಲ್ಲಿ ಬಂದಂತಹ ಸನಾದಿ ಅಪ್ಪಣ್ಣ ಚಿತ್ರದಲ್ಲಿ, ಡಾ. ರಾಜ್ ಶಹನಾಯಿ ವಾದಕರಾಗಿ ಅಭಿನಯಿಸಿದರು. ಈ ಚಿತ್ರಕ್ಕೆ ಅವಶ್ಯಕವಾಗಿದ್ದ ಶಹನಾಯಿ ವಾದನವನ್ನು ನುಡಿಸಿದವರು ಭಾರತದ ಪ್ರಖ್ಯಾತ ಶಹನಾಯಿ ವಾದಕರಾದ ಉಸ್ತಾದ್ ಬಿಸ್ಮಿಲ್ಲಾ ಖಾನ್. ಜಿ.ಕೆ.ವೆಂಕಟೇಶ್ ಸಂಗೀತದಲ್ಲಿ ಎಸ್.ಜಾನಕಿಯವರು ಹಾಡಿರುವ ಕರೆದರೂ ಕೇಳದೆ ಎಂಬ ಹಾಡಿನಲ್ಲಿ ಬರುವ ಬಿಸ್ಮಿಲ್ಲಾ ಖಾನರ ಶಹನಾಯಿ ವಾದನಕ್ಕೆ ಡಾ. ರಾಜ್ ಅಭಿನಯಿಸಿದ್ದಾರೆ. ೧೯೮೦ರ ದಶಕದಲ್ಲಿ ಸದಭಿರುಚಿಯ ಸಾಮಾಜಿಕ ಚಿತ್ರಗಳಾದ ಹಾಲುಜೇನು, ಚಲಿಸುವ ಮೋಡಗಳು, ಹೊಸ ಬೆಳಕು, ಶ್ರಾವಣ ಬಂತು, ಅನುರಾಗ ಅರಳಿತು, ಶ್ರುತಿ ಸೇರಿದಾಗ ಮುಂತಾದ ಯಶಸ್ವಿ ಚಿತ್ರಗಳು ತೆರೆ ಕಂಡವು. ಇದೇ ಅವಧಿಯಲ್ಲಿ ಡಾ. ರಾಜ್ ಅವರು ಅನಂತ್ ನಾಗ್ ಅವರೊಂದಿಗೆ ಕಾಮನಬಿಲ್ಲು ಚಿತ್ರದಲ್ಲಿಯೂ, ಶಂಕರ್ ನಾಗ್ ಅವರೊಂದಿಗೆ ಅಪೂರ್ವ ಸಂಗಮ ಚಿತ್ರದಲ್ಲಿಯೂ ಅಭಿನಯಿಸಿದರು. ಶಂಕರ್ ನಾಗ್ ನಿರ್ದೇಶನದ ಕೆಲವೇ ಚಿತ್ರಗಳಲ್ಲಿ ಒಂದಾದ ಒಂದು ಮುತ್ತಿನ ಕಥೆ ಚಿತ್ರದಲ್ಲಿ ಡಾ. ರಾಜ್ ನಟಿಸಿದ್ದಾರೆ. ತಮ್ಮ ಯೋಗಾಸನಗಳಿಗೆ ಹೆಸರಾಗಿದ್ದ ಡಾ. ರಾಜ್ ಅವರ ವಿವಿಧ ಯೋಗಾಸನಗಳ ಭಂಗಿಗಳು ಕಾಮನಬಿಲ್ಲು ಚಿತ್ರದ ಮೂಲಕ ಬೆಳ್ಳಿತೆರೆಯ ಮೇಲೂ ಮೂಡಿಬಂದಿದೆ. ೧೯೮೩ರಲ್ಲಿ ಬಂದಂತಹ ಕವಿರತ್ನ ಕಾಳಿದಾಸ, ಡಾ. ರಾಜ್ ಅವರ ಕಲಾ ನೈಪುಣ್ಯಕ್ಕೆ ಓರೆ ಹಚ್ಚಿದ ಚಿತ್ರ. ಈ ಚಿತ್ರದಲ್ಲಿ ಅವಿದ್ಯಾವಂತ ಕುರುಬನಾಗಿಯೂ, ಮಹಾಕವಿಯಾದ ಕಾಳಿದಾಸನಾಗಿಯೂ, ದುಷ್ಯಂತ ಮಹಾರಾಜನಾಗಿಯೂ ವಿವಿಧ ಪಾತ್ರಗಳಿಗೆ ರಾಜ್ ಜೀವ ತುಂಬಿದ್ದಾರೆ. ಈ ಚಿತ್ರವು ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ಚಿತ್ರಗಳಲ್ಲೊಂದಾಗಿಸುವಲ್ಲಿ ಡಾ. ರಾಜ್ ಅಮೋಘ ಅಭಿನಯದ ಕೊಡುಗೆ ಮುಖ್ಯವಾದುದೆಂದು ವಿಮರ್ಶಕರ ಅಭಿಪ್ರಾಯ. ಡಾ. ರಾಜ್ ಅವರ ಇನ್ನೂರನೇ ಚಿತ್ರವು ೧೯೮೮ರಲ್ಲಿ ತೆರೆಕಂಡ ದೇವತಾ ಮನುಷ್ಯ. ಈ ಚಿತ್ರದಲ್ಲಿ ಕನ್ನಡ ಚಿತ್ರರಂಗದ ಹೆಸರಾಂತ ನಟಿಯರೊಲ್ಲೊಬ್ಬರಾದ ಸುಧಾರಾಣಿ ಯವರು ಡಾ. ರಾಜ್ ಅವರ ಪುತ್ರಿಯಾಗಿ ನಟಿಸಿದ್ದಾರೆ. ಕನ್ನಡದ ಮತ್ತೊಬ್ಬ ಜನಪ್ರಿಯ ನಾಯಕ ನಟರಾದ ಅಂಬರೀಶ್ ಅವರ ಸಹೋದರನಾಗಿ ಒಡಹುಟ್ಟಿದವರು ಚಿತ್ರದಲ್ಲಿ ಅಭಿನಯಿಸಿದ ಡಾ. ರಾಜ್, ಸಾಮಾಜಿಕ ಕಳಕಳಿಯ ಚಿತ್ರಗಳತ್ತ ಒಲವು ತೋರಿದ್ದರು. ಜೀವನ ಚೈತ್ರ ಚಿತ್ರದ ಮೂಲಕ ಸಾರಾಯಿ ಪಿಡುಗಿನ ವಿರುದ್ಧ, ಆಕಸ್ಮಿಕ ಚಿತ್ರದ ಮೂಲಕ ಹೆಣ್ಣಿನ ಶೋಷಣೆಯ ವಿರುದ್ಧ, ಶಬ್ದವೇಧಿ ಚಿತ್ರದ ಮೂಲಕ ಮಾದಕ ವ್ಯಸನಗಳ ವಿರುದ್ಧ ಹೋರಾಡುವ ಪಾತ್ರದಲ್ಲಿ ಡಾ. ರಾಜ್ ಅಭಿನಯಿಸಿದರು. ಡಾ. ರಾಜ್‌ಕುಮಾರ್ ನಾಯಕನಾಗಿ ನಟಿಸಿದ ಕೊನೆಯ ಚಿತ್ರ ವರ್ಷ ೨೦೦೦ರಲ್ಲಿ ತೆರೆಕಂಡ ಶಬ್ದವೇದಿ. ಭಕ್ತ ಅಂಬರೀಶ ಎಂಬ ಚಿತ್ರದಲ್ಲಿ ನಟಿಸಬೇಕೆಂಬ ಹಂಬಲವನ್ನು ರಾಜ್ ಹಲವಾರು ಬಾರಿ ವ್ಯಕ್ತಪಡಿಸಿದ್ದರಾದರೂ ಅನಾರೋಗ್ಯದ ಕಾರಣ ಅದು ಸಾಧ್ಯವಾಗಲಿಲ್ಲ. ಬೆಳ್ಳಿತೆರೆಯ ಮೇಲೆ ಡಾ. ರಾಜ್ ಅವರು ಕಡೆಯದಾಗಿ ಕಾಣಿಸಿಕೊಂಡ ಚಿತ್ರ ತಮ್ಮ ಪುತ್ರ ಶಿವರಾಜ್‌ಕುಮಾರ್ ನಾಯಕತ್ವದಲ್ಲಿನ ಜೋಗಿ. ಚಿತ್ರದ ಆರಂಭದ ದೃಶ್ಯದಲ್ಲಿ ನಾಯಕನ ಜೋಳಿಗೆಗೆ ಅಕ್ಕಿಯನ್ನು ಅರ್ಪಿಸಿ, ಆಶೀರ್ವದಿಸುತ್ತಾರೆ. ಸುಮಾರು ೨೦೬ ಚಿತ್ರಗಳಲ್ಲಿ ನಾಯಕನಟರಾಗಿ ನಟಿಸಿರುವ ರಾಜ್ ಕುಮಾರ್ ಬೆರಳೆಣಿಕೆಯ ರಿಮೇಕ್ ಚಿತ್ರಗಳಲ್ಲಿ ನಟಿಸಿದ್ದಾರೆ. ಅವೆಂದರೆ "ಅಣ್ಣ ತಂಗಿ","ಮುರಿಯದ ಮನೆ" ,"ವಾತ್ಸಲ್ಯ", "ಮನಸಾಕ್ಷಿ", "ಬಾಳ ಬಂಧನ" ,"ನನ್ನ ತಮ್ಮ", "ಭಾಗ್ಯವಂತರು", "ಅಪೂರ್ವ ಸಂಗಮ" ಮುಂತಾದವುಗಳು. ಅಲ್ಲಿಯೂ ಅವರು ಮೂಲ ನಟರನ್ನು ಅನುಕರಿಸದೆ ತಮ್ಮದೇ ಶೈಲಿಯಲ್ಲಿ ಅಭಿನಯಿಸಿದ್ದಾರೆ. "ಬೇಡರ ಕಣ್ಣಪ್ಪ" ತೆಲುಗಿನಲ್ಲಿ ‘ಶ್ರೀ ಕಾಳಹಸ್ತಿ ಮಹಾತ್ಮಂ’ ಎಂಬ ಹೆಸರಲ್ಲಿ ತಯಾರಾಯಿತು. ಅದರಲ್ಲಿ ಕೂಡ ಡಾ. ರಾಜ್ ಕುಮಾರ್ ಹೀರೊ ಆಗಿ ನಟಿಸಿದರು. ಇದು ಬೇರೆ ಭಾಷೆಯಲ್ಲಿ ರಾಜ್ ಕುಮಾರ್ ನಟಿಸಿದ ಏಕೈಕ ಚಿತ್ರ. ಡಾ. ರಾಜ್ ಕುಮಾರ್ ಅವರು ಅಂದಿನ ಬಹುತೇಕ ಎಲ್ಲ ಜನಪ್ರಿಯ ನಾಯಕಿಯರೊಂದಿಗೆ ನಟಿಸಿದ್ದಾರೆ. ಎಂ.ವಿ.ರಾಜಮ್ಮ, ಪಂಡರೀಬಾಯಿ, ಪ್ರತಿಮಾದೇವಿ, ಹರಿಣಿ, ಸಾಹುಕಾರ್ ಜಾನಕಿ , ಕೃಷ್ಣಕುಮಾರಿ, ರಾಜಸುಲೋಚನ, ಬಿ.ಸರೋಜದೇವಿ, ಸಂಧ್ಯಾ,ಆದವಾನಿ ಲಕ್ಷ್ಮಿ ದೇವಿ, ಮೈನಾವತಿ, ಲೀಲಾವತಿ, ಜಯಂತಿ, ಭಾರತಿ, ಕಲ್ಪನಾ, ವಂದನಾ, ಚಂದ್ರಕಲಾ, ಉದಯಚಂದ್ರಿಕಾ, ಬಿ.ವಿ.ರಾಧ, ಶೈಲಶ್ರೀ, ರಾಜಶ್ರೀ, ಆರತಿ, ಮಂಜುಳಾ, ಲಕ್ಷ್ಮಿ, ರೇಖಾ, ಜಯಮಾಲಾ, ಜಯಪ್ರದಾ, ಗಾಯತ್ರಿ, ಸರಿತಾ, ಜಯಚಿತ್ರಾ, ಕಾಂಚನಾ, ವಾಣಿಶ್ರೀ, ಜಿ.ವಿ.ಲತಾ, ಮಾಧವಿ, ಗೀತಾ, ಅಂಬಿಕಾ, ರೂಪಾದೇವಿ, ಊರ್ವಶಿ ಮುಂತಾದವರೊಂದಿಗೆ ನಟಿಸಿದ್ದಾರೆ. ರಾಜ್-ಭಾರತಿ, ರಾಜ್-ಲೀಲಾವತಿ, ರಾಜ್-ಜಯಂತಿ, ರಾಜ್-ಕಲ್ಪನಾ ಜೋಡಿ ಆ ಕಾಲದಲ್ಲಿ ಅತ್ಯಂತ ಜನಪ್ರಿಯ ಜೋಡಿಯಾಗಿತ್ತು. ಅವರ ನಟನೆಯ ಐತಿಹಾಸಿಕ ಚಿತ್ರಗಳು ಮಯೂರ ಶ್ರೀ ಕೃಷ್ಣದೇವರಾಯ ರಣಧೀರ ಕಂಠೀರವ ಇಮ್ಮಡಿ ಪುಲಿಕೇಶಿ ಕಿತ್ತೂರು ಚೆನ್ನಮ್ಮ ಕವಿರತ್ನ ಕಾಳಿದಾಸ ಬಭ್ರುವಾಹನ ವೀರ ಕೇಸರಿ ಭಕ್ತಿ ಪ್ರಧಾನ ಚಿತ್ರಗಳು ಭಕ್ತನ ಪಾತ್ರದಲ್ಲಿ ಭಕ್ತ ಕನಕದಾಸ ನವಕೋಟಿ ನಾರಾಯಣ (ಭಕ್ತ ಪುರಂದರದಾಸ) ಸರ್ವಜ್ಞಮೂರ್ತಿ ಮಹಾತ್ಮ ಕಬೀರ್ ಸಂತ ತುಕಾರಾಮ ವಾಲ್ಮೀಕಿ ಭೂಕೈಲಾಸ ಹರಿಭಕ್ತ ಭಕ್ತ ವಿಜಯ ಭಕ್ತ ಚೇತ ಭಕ್ತ ಕುಂಬಾರ ದೇವರ ಪಾತ್ರದಲ್ಲಿ ಮಂತ್ರಾಲಯ ಮಹಾತ್ಮೆ ಶ್ರೀ ಶ್ರೀನಿವಾಸ ಕಲ್ಯಾಣ ಶ್ರೀ ರಾಮಾಂಜನೇಯ ಯುದ್ಧ ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ ಶಿವ ಮೆಚ್ಚಿದ ಕಣ್ಣಪ್ಪ ಮೂರೂವರೆ ವಜ್ರಗಳು ಕೃಷ್ಣ ಗಾರುಡಿ ಪತ್ತೇದಾರ/ಗೂಢಚಾರಿ ಪಾತ್ರದಲ್ಲಿ ಜೇಡರ ಬಲೆ ಆಪರೇಷನ್ ಜಾಕ್‍ಪಾಟ್‍ನಲ್ಲಿ ಸಿ.ಐ.ಡಿ. ೯೯೯ ಗೋವಾದಲ್ಲಿ ಸಿ.ಐ.ಡಿ. ೯೯೯ ಸಿ.ಐ.ಡಿ. ರಾಜಣ್ಣ ಬೆಂಗಳೂರು ಮೈಲ್ ಆಪರೇಷನ್ ಡೈಮಂಡ್ ರಾಕೆಟ್ ಭಲೇ ಹುಚ್ಚ ಚೂರಿಚಿಕ್ಕಣ್ಣ ಜೇಡರ ಬಲೆ, ಆಪರೇಷನ್ ಜಾಕ್‍ಪಾಟ್‍ನಲ್ಲಿ ಸಿ.ಐ.ಡಿ. ೯೯೯, ಗೋವಾದಲ್ಲಿ ಸಿ.ಐ.ಡಿ. ೯೯೯ ಮತ್ತು ಆಪರೇಷನ್ ಡೈಮಂಡ್ ರಾಕೆಟ್ ಚಿತ್ರಗಳು ಜೇಮ್ಸ್‌ಬಾಂಡ್ ಮಾದರಿಯಲ್ಲಿ ಬಂದಂತಹ ಸರಣಿ ಚಲನಚಿತ್ರಗಳು. ಈ ನಾಲ್ಕೂ ಚಿತ್ರಗಳಲ್ಲಿ 'ಪ್ರಕಾಶ್' ಎಂಬ ಹೆಸರಿನ ಸಿ.ಐ.ಡಿ ೯೯೯ ಪಾತ್ರದಲ್ಲಿ ಡಾ. ರಾಜ್ ಅಭಿನಯಿಸಿದ್ದಾರೆ. ಖಳ/ಪ್ರತಿನಾಯಕನ ಪಾತ್ರದಲ್ಲಿ ಮಹಿಷಾಸುರ ಮರ್ದಿನಿ - ಮಹಿಷಾಸುರ ಕರುಣೆಯೇ ಕುಟುಂಬದ ಕಣ್ಣು ಸಾಕು ಮಗಳು ಸತಿ ಶಕ್ತಿ - ರಕ್ತಾಕ್ಷ ದಾರಿ ತಪ್ಪಿದ ಮಗ - ಪ್ರಕಾಶ್ ದಶಾವತಾರ ಭಕ್ತ ಪ್ರಹ್ಲಾದ - ಹಿರಣ್ಯಕಶ್ಯಪು ತುಂಬಿದ ಕೊಡ ಶ್ರೀ ಕೃಷ್ಣಗಾರುಡಿ - ಅರ್ಜುನ ಶ್ರೀ ಕನ್ನಿಕಾಪರಮೇಶ್ವರಿ ಕಥೆ - ರಾಜಾ ವಿಷ್ಣು ವರ್ಧನ ಡಾ. ರಾಜ್ ಅತಿಥಿನಟನಾಗಿ ಕಾಣಿಸಿಕೊಂಡ ಚಿತ್ರಗಳು ಭಕ್ತ ಪ್ರಹ್ಲಾದ (೧೯೪೨) ಶ್ರೀ ಶ್ರೀನಿವಾಸ ಕಲ್ಯಾಣ (೧೯೫೨) ನಾಡಿನ ಭಾಗ್ಯ ಭಾಗ್ಯವಂತ ಶಿವ ಮೆಚ್ಚಿದ ಕಣ್ಣಪ್ಪ ಗಂಧದಗುಡಿ ಭಾಗ ೨ ಜೋಗಿ ರಾಜ್ ನಾಯಕನಾಗಿ ಅಭಿನಯಿಸಿದ ಚಲನಚಿತ್ರಗಳ ಸಂಪೂರ್ಣ ಪಟ್ಟಿ (ಫಿಲ್ಮೋಗ್ರಾಫಿ) ಅತಿಥಿ ನಟನಾಗಿ ಅಭಿನಯಿಸಿದ ಚಿತ್ರಗಳು ಶ್ರೀನಿವಾಸ ಕಲ್ಯಾಣ ೧೯೫೧ ಗಂಧದ ಗುಡಿ ಭಾಗ ೨ ಜೋಗಿ ಗಾಯಕರಾಗಿ ಡಾ. ರಾಜ್ ಕೇವಲ ನಟನೆಯಲ್ಲದೆ, ಅತ್ಯುತ್ತಮ ಗಾಯಕರೂ ಆಗಿದ್ದ ರಾಜ್ ಕನ್ನಡ ಗಾನಲೋಕಕ್ಕೂ ತಮ್ಮ ಅಪಾರ ಸೇವೆ ಸಲ್ಲಿಸಿದ್ದಾರೆ. ೧೯೭೪ರಲ್ಲಿ ಬಿಡುಗಡೆಯಾದ ಸಂಪತ್ತಿಗೆ ಸವಾಲ್ ಚಿತ್ರದ ಯಾರೇ ಕೂಗಾಡಲಿ,ಊರೇ ಹೋರಾಡಲಿ (ಎಮ್ಮೆ ಹಾಡೆಂದೇ ಪ್ರಸಿದ್ಧಿ) ಎಂಬ ಹಾಡಿನಿಂದ ಅವರು ಪೂರ್ಣ ಪ್ರಮಾಣದ ಗಾಯಕರಾಗಿ ಹೊರ ಹೊಮ್ಮಿದರು. ಇದಕ್ಕೂ ಮುಂಚೆ ೧೯೫೬ರಲ್ಲೇ ಓಹಿಲೇಶ್ವರ_(ಚಲನಚಿತ್ರ) ಚಿತ್ರದಲ್ಲಿ "ಶರಣು ಶಂಭೋ" ಎಂಬು ಗೀತೆಯೊಂದನ್ನು ಹಾಗೂ ಮಹಿಷಾಸುರ ಮರ್ಧಿನಿ ಚಿತ್ರದಲ್ಲಿ ಎಸ್.ಜಾನಕಿಯವರೊಡನೆ "ತುಂಬಿತು ಮನವ ತಂದಿತು ಸುಖವ" ಎಂಬ ಯುಗಳ ಗೀತೆಯನ್ನು ಹಾಡಿದ್ದರು. ಈ ಮೂರು ಚಿತ್ರಗಳು ಜಿ.ಕೆ.ವೆಂಕಟೇಶ್ ಅವರ ಸಂಗೀತ ನಿರ್ದೇಶನವನ್ನು ಹೊಂದಿದ್ದವು. ಜಿ.ಕೆ.ವೆಂಕಟೇಶ್ ಹಾಗೂ ಉಪೇಂದ್ರಕುಮಾರ್ ಸಂಗೀತದಲ್ಲಿ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ೧೯೬೨ರಲ್ಲಿ, ದೇವಸುಂದರಿ ಚಿತ್ರದಲ್ಲಿ ಹಾಸ್ಯರತ್ನ ನರಸಿಂಹರಾಜು ಅವರ ಪಾತ್ರಕ್ಕೆ ಯುಗಳ ಗೀತೆಯೊಂದನ್ನೂ ಹಾಡಿದ್ದಾರೆ. ಡಾ. ರಾಜ್ ಅವರು ಬೇರೊಬ್ಬರ ಅಭಿನಯಕ್ಕೆ ಹಿನ್ನೆಲೆ ಗಾಯನ ಮಾಡಿದ ಮೊದಲ ಚಿತ್ರಗೀತೆಯಿದು. ೧೯೬೪ರಲ್ಲಿ, ನವಕೋಟಿನಾರಾಯಣ (ಭಕ್ತ ಪುರಂದರದಾಸ) ಚಲನಚಿತ್ರದಲ್ಲಿ ಕೆಲವು ಕೀರ್ತನೆ ಗಳನ್ನು ಹಾಡಿದ್ದಾರೆ. ಜೀವನ ಚೈತ್ರ ಚಿತ್ರದಲ್ಲಿನ ನಾದಮಯ ಈ ಲೋಕವೆಲ್ಲಾ ಹಾಡಿನ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿಯನ್ನು ಪಡೆದರು. ೨೦೦೩ರಲ್ಲಿ ಬಿಡುಗಡೆಯಾದ ಅಭಿ ಚಿತ್ರದ "ವಿಧಿ ಬರಹ ಎಂಥ ಘೋರ" ಹಾಗು ಅದೇ ವರ್ಷದ ಚಿಗುರಿದ ಕನಸು ಚಿತ್ರದ "ಬಂಧುವೇ ಓ ಬಂಧುವೇ" ಇವರು ಹಾಡಿದ ಇತ್ತೀಚಿನ ಚಿತ್ರಗೀತೆಗಳಾಗಿರುತ್ತವೆ. ಚಿತ್ರಗೀತೆಗಳಷ್ಟೇ ಅಲ್ಲದೆ ಹಲವಾರು ಭಕ್ತಿಗೀತೆಗಳನ್ನು ಹಾಡಿರುವರು. ಕನ್ನಡವೇ ಸತ್ಯ, ಅನುರಾಗ, ಮಂಕುತಿಮ್ಮನ ಕಗ್ಗ - ರಾಜ್ ಕಂಠದಲ್ಲಿ ಮೂಡಿ ಬಂದ ಭಾವಗೀತೆ ಸಂಕಲನಗಳು. ರಾಜ್ ಕುಮಾರ್ ಅವರು ತಮ್ಮ ಹೆಚ್ಚಿನ ಹಾಡುಗಳನ್ನು ಎಸ್. ಜಾನಕಿ ಮತ್ತು ವಾಣಿ ಜಯರಾಂ ಅವರೊಂದಿಗೆ ಹಾಡಿದ್ದಾರೆ. ಅಲ್ಲದೆ, ಪಿ. ಸುಶೀಲ, ಬೆಂಗಳೂರು ಲತಾ, ರತ್ನಮಾಲ ಪ್ರಕಾಶ್, ಮಂಜುಳಾ ಗುರುರಾಜ್, ಬಿ. ಆರ್. ಛಾಯಾ, ಕಸ್ತೂರಿ ಶಂಕರ್, ಚಿತ್ರಾ, ಸುಲೋಚನಾ ಅವರೊಂದಿಗೂ ಯುಗಳಗೀತೆಗಳನ್ನು ಹಾಡಿದ್ದಾರೆ. ಹುಟ್ಟಿದರೇ ಕನ್ನಡನಾಡ್ನಲ್ ಹುಟ್ಟಬೇಕು, ಮೆಟ್ಟಿದರೇ, ಕನ್ನಡ ಮಣ್ಣನ್ ಮೆಟ್ಟಬೇಕು ಗೀತೆಯನ್ನು ಸಾಮಾನ್ಯವಾಗಿ ಹೋದೆಡೆಯಲ್ಲೆಲ್ಲಾ ಹಾಡುತ್ತಿದ್ದರು. ತಮ್ಮ 'ದಾದಾ ಸಾಹೇಬ್ ಫಾಲ್ಕೆ ಪುರಸ್ಕಾರ', ವನ್ನು ದೆಹಲಿಯಲ್ಲಿ ಪಡೆದ ಬಳಿಕ, ಮುಂಬಯಿ ಗೆ ಭೇಟಿಕೊಟ್ಟಾಗ, 'ಕರ್ನಾಟಕ ಸಂಘ' ದ ರಂಗಮಂಚದ ಮೇಲೆ, ಮೇಲಿನ ಗೀತೆಯನ್ನು ಅವರ ಮಕ್ಕಳ ಸಮೇತ ಕುಣಿದು-ಕುಪ್ಪಳಿಸಿ ಹಾಡಿದ ಸಡಗರ ಇನ್ನೂ ಮುಂಬಯಿ ನಗರದ, ಕನ್ನಡ ರಸಿಕರ ಮನದಲ್ಲಿ ಹಸಿರಾಗಿ ಉಳಿದಿದೆ. ರಾಷ್ಟ್ರಕವಿ ಕುವೆಂಪು ರಚಿಸಿದ 'ಕನ್ನಡವೇ ಸತ್ಯ' ಹಾಡನ್ನು ಡಾ. ರಾಜಕುಮಾರ್‌ ಭಾವಗೀತೆಯ ಮೇರು ಕಲಾವಿದ ಡಾ. ಸಿ.ಅಶ್ವತ್ಥ್‌ ಅವರ ಸಂಗೀತ ನಿರ್ದೇಶನದಲ್ಲಿ ಹಾಡಿದ್ದಾರೆ. ಇದು ಮೈಸೂರು ಅನಂತಸ್ವಾಮಿಯವರ ಆವೃತ್ತಿಗಿಂತಲೂ ಭಾರೀ ಜನಪ್ರಿಯತೆ ಗಳಿಸಿತು. ಕನ್ನಡಪರ ಚಳುವಳಿಗಳಲ್ಲಿ ಡಾ. ರಾಜ್ ಗೋಕಾಕ್ ವರದಿಯು ಕನ್ನಡವನ್ನು ಪ್ರಾಥಮಿಕ ಶಿಕ್ಷಣದಲ್ಲಿ ಕಡ್ಡಾಯವಾಗಿ ಅಳವಡಿಸಿಕೊಳ್ಳುವುದು ಹಾಗು ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಕನ್ನಡ ಭಾಷೆಗೆ ಕೊಡುವುದರ ಬಗ್ಗೆ ಸಿದ್ಧವಾಗಿತ್ತು. ಆದರೆ, ಈ ವರದಿಯು ಜಾರಿಗೆ ಬಂದಿರಲಿಲ್ಲ. ೧೯೮೧ರಲ್ಲಿ, ಪಾಟೀಲ ಪುಟ್ಟಪ್ಪ, ಚಂದ್ರಶೇಖರ ಪಾಟೀಲ್ ಮುಂತಾದ ಸಾಹಿತಿಗಳು, ಕನ್ನಡ ವಿದ್ಯಾರ್ಥಿಗಳು, ಹಲವು ಸಂಘಸಂಸ್ಥೆಗಳು ಗೋಕಾಕ್ ವರದಿಯನ್ನು ಜಾರಿಗೊಳಿಸುವಂತೆ ಚಳುವಳಿಯನ್ನು ಪ್ರಾರಂಭ ಮಾಡಿದರು. ಇದೇ ಚಳುವಳಿಯು ಗೋಕಾಕ್ ಚಳುವಳಿ ಎಂದೇ ಹೆಸರಾಯಿತು. ಚಳುವಳಿಯು ಪ್ರಾರಂಭಗೊಂಡು ಹಲವಾರು ದಿನಗಳು ಕಳೆದರೂ, ಜನಸಾಮಾನ್ಯರಿಂದ ಉತ್ಸಾಹದ ಪ್ರತಿಕ್ರಿಯೆ ಕಂಡುಬರಲಿಲ್ಲ. ಈ ಸಮಯದಲ್ಲಿ, ಡಾ. ರಾಜ್ ಅವರನ್ನು ಚಳುವಳಿಗೆ ಆಹ್ವಾನಿಸಿ, ಚಳುವಳಿಯ ಬಲವರ್ಧನೆ ಮಾಡಬೇಕೆಂದು ಕೋರಲಾಯಿತು. ಡಾ. ರಾಜ್ ನೇತೃತ್ವದಲ್ಲಿ ಕನ್ನಡ ಚಿತ್ರರಂಗ, ಗೋಕಾಕ್ ಚಳುವಳಿಗೆ ಸಂಪೂರ್ಣ ಸಹಕಾರ ನೀಡಲು ಪ್ರಕಟಿಸಿ, ರಾಜ್ಯಾದ್ಯಂತ ಪ್ರವಾಸ ಕೈಗೊಂಡಿತು. ಹಲವಾರು ಸಭೆಗಳು, ಭಾಷಣಗಳು ಕರ್ನಾಟಕದ ಪ್ರಮುಖ ನಗರಗಳಲ್ಲಿ ಜರುಗಿದವು. ಕರ್ನಾಟಕದ ಜನತೆ ಚಳುವಳಿಗೆ ಹಿಂದೆಂದಿಗಿಂತಲೂ ಹೆಚ್ಚಿನ ಉತ್ಸಾಹದಿಂದ ಪ್ರತಿಕ್ರಿಯಿಸಿದರು, ಭಾಗವಹಿಸಿದರು. ಕನ್ನಡದ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು, ಅಭಿಮಾನ ಬೆಳೆಸಲು, ಕನ್ನಡ ಭಾಷೆಗೆ ಸಿಗಬೇಕಾದ ಹಕ್ಕುಗಳು, ಸೌಲಭ್ಯಗಳನ್ನು ಆಗಿನ ಕರ್ನಾಟಕ ಸರ್ಕಾರಕ್ಕೆ ಮನದಟ್ಟು ಮಾಡಿಕೊಡಲು, ಡಾ. ರಾಜ್ ಅವರ ಭಾಷಣಗಳು ಹಾಗು ಚಳುವಳಿಯ ನೇತೃತ್ವ ಸಹಾಯಕಾರಿಯಾದವು. ಗುಂಡೂರಾವ್ ನೇತೃತ್ವದ ಆಗಿನ ಕರ್ನಾಟಕ ಸರ್ಕಾರವು ಚಳುವಳಿಯ ತೀವ್ರತೆಗೆ ಸ್ಪಂದಿಸಿ, ಗೋಕಾಕ್ ವರದಿಯನ್ನು ಜಾರಿಗೊಳಿಸಿತು. ಪ್ರಶಸ್ತಿ/ ಪುರಸ್ಕಾರಗಳು/ಬಿರುದುಗಳು ಪ್ರಶಸ್ತಿಗಳು ಪದ್ಮಭೂಷಣ (ಭಾರತ ಸರ್ಕಾರದಿಂದ) ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ (೧೯೯೫ರಲ್ಲಿ ಭಾರತ ಸರ್ಕಾರದಿಂದ) ಕರ್ನಾಟಕ ರತ್ನ (ಕರ್ನಾಟಕ ಸರ್ಕಾರ) ರಾಷ್ಟ್ರಪ್ರಶಸ್ತಿ (ಜೀವನ ಚೈತ್ರ ಚಿತ್ರದಲ್ಲಿನ 'ನಾದಮಯ ಈ ಲೋಕವೆಲ್ಲಾ' ಹಾಡಿನ ಗಾಯನಕ್ಕೆ) ಅತ್ಯುತ್ತಮ ನಟ - ಫಿಲ್ಮ್‌ಫೇರ್ ಪ್ರಶಸ್ತಿ (ಹತ್ತು ಬಾರಿ) ಅತ್ಯುತ್ತಮ ನಟ - ರಾಜ್ಯಪ್ರಶಸ್ತಿ (ಒಂಭತ್ತು ಬಾರಿ) ಕೆಂಟಕಿ ಕರ್ನಲ್ (ಅಮೆರಿಕದ ಕೆಂಟಕಿ ರಾಜ್ಯದ ಗವರ್ನರ್ ೧೯೮೫ರಲ್ಲಿ ಬೆಂಗಳೂರಲ್ಲಿ ನೀಡಿದರು) ನಾಡೋಜ ಪ್ರಶಸ್ತಿ (ಕನ್ನಡ ವಿಶ್ವವಿದ್ಯಾಲಯ, ಹಂಪಿ) ಗುಬ್ಬಿ ವೀರಣ್ಣ ಪ್ರಶಸ್ತಿ (ಕರ್ನಾಟಕ ಸರ್ಕಾರ) ಕಲಾ ಕೌಸ್ತುಭ (ವೃತ್ತಿ ರಂಗಭೂಮಿಗೆ ಸಲ್ಲಿಸಿದ ಸೇವೆಗೆ, ಕರ್ನಾಟಕ ಸರ್ಕಾರದಿಂದ) ಪದವಿಗಳು ಗೌರವ ಡಾಕ್ಟರೇಟ್(ಮೈಸೂರು ವಿಶ್ವವಿದ್ಯಾಲಯ) ಬಿರುದುಗಳು ಅಭಿನಯ ಕಲಾಶ್ರೀ ಅಭಿನಯ ಕೇಸರಿ ಅಭಿನಯ ಚಕ್ರೇಶ್ವರ ಅಭಿನಯ ನೃಪತುಂಗ ಅಭಿನಯ ಬ್ರಹ್ಮ ಅಭಿನಯ ಭಗೀರಥ ಅಭಿನಯ ಭಾರ್ಗವ ಅಭಿನಯ ರತ್ನ ಅಭಿನಯ ವಾಲ್ಮೀಕಿ ಅಭಿನಯ ಶಿರೋಮಣಿ ಅಭಿನಯ ಸಂಜಾತ ಅಭಿನಯ ಸವ್ಯಸಾಚಿ ಅಭಿನಯ ಸಿಂಹ ಅಭಿನಯ ಸೃಷ್ಟಿಕರ್ತ ಅಮರ ಜೀವಿ ಅಮರ ಜ್ಯೋತಿ ಕನ್ನಡ ಕಂಠೀರವ ಕನ್ನಡ ಕಲಾ ಕಿರೀಟ ಕನ್ನಡ ಕಲಾ ಕುಸುಮ ಕನ್ನಡ ಕಲಾ ತಿಲಕ ಕನ್ನಡ ಕುಲ ರತ್ನ ಕನ್ನಡ ಕೇಸರಿ ಕನ್ನಡ ಗಾನ ಕೌಸ್ತುಭ ಕನ್ನಡ ಜನಕೋಟಿಯ ಪ್ರೀತಿಯ ಪುತ್ಥಳಿ ಕನ್ನಡ ತಾಯಿಯ ಹೆಮ್ಮೆಯ ಮಗ ಕನ್ನಡದ ರಕ್ಷಕ ಕನ್ನಡದ ಕಣ್ಮಣಿ ಕನ್ನಡದ ಕಂದ ಕನ್ನಡದ ಕಲಿ ಕನ್ನಡದ ಕಳಶ ಕನ್ನಡದ ಕುಲ ದೇವ ಕನ್ನಡದ ಚೇತನ ಕನ್ನಡದ ಜೀವ ಕನ್ನಡದ ಧ್ರುವತಾರೆ ಕನ್ನಡದ ನಂದಾ ದೀಪ ಕನ್ನಡದ ಬಂಧು ಕನ್ನಡದ ಭೂ ಪಟ ಕನ್ನಡದ ಮಾಣಿಕ್ಯ ಕನ್ನಡದ ಮೇಷ್ಟ್ರು ಕನ್ನಡದ ವಿಧಾತ ಕನ್ನಡಿಗರ ಆರಾಧ್ಯ ದೈವ ಕನ್ನಡಿಗರ ಕಣ್ಮಣಿ ಕನ್ನಡಿಗರ ಹೃದಯ ಸಿಂಹಾಸಾನಾಧೀಶ್ವರ ಕರುನಾಡ ಅಧಿಪತಿ ಕರುನಾಡ ಕಲಾ ನಿಧಿ ಕರುನಾಡ ಹುಲಿ ಕರ್ನಾಟಕ ಕೀರ್ತಿವರ್ಮ ಕರ್ನಾಟಕ ರತ್ನ ಕರ್ನಾಟಕ ಸಾಂಸ್ಕೃತಿಕ ರಾಯಭಾರಿ ಕಲಾ ಆರಾಧಕ ಕಲಾ ಕಮಲ ರಾಜಹಂಸ ಕಲಾ ಕರ್ಮಯೋಗಿ ಕಲಾ ಕುಸುಮ ಕಲಾ ಕೌಸ್ತುಭ ಕಲಾ ಜ್ಯೋತಿ ಕಲಾ ತಪಸ್ವಿ ಕಲಾ ತೇಜ ಕಲಾ ದಾಹಿ ಕಲಾ ದೀವಿಗೆ ಕಲಾ ಪುಂಗವ ಕಲಾ ಪುರುಷೋತ್ತಮ ಕಲಾ ಪೋಷಕ ಕಲಾ ಭಕ್ತ ಕಲಾ ಭೂಷಣ ಕಲಾ ಯೋಗಿ ಕಲಾ ವಿನೀತ ಕಲಾ ಶ್ರೇಷ್ಠ ಕಲಾ ಸಿರಿ ರತ್ನ ಕಾಯಕ ಯೋಗಿ ಕಾಯಕ ರತ್ನ ಕೃಷ್ಣಾನುಗ್ರಹಿ ಕೆಂಟಕಿ ಕರ್ನಲ್ ಗಾಜನೂರು ಗಂಡು ಗಾನ ಕಲಾಶ್ರೀ ಗಾನ ಕೋಗಿಲೆ ಗಾನ ಗಂಗೆ ಗಾನ ಗಂಧರ್ವ ಗಾನ ಗಾರುಡಿಗ ಗಾನ ಜ್ಯೋತಿ ಗಾನ ತರಂಗ ಗಾನ ಯೋಗಿ ಗಾನ ರಸಿಕ ಗಾನ ಲಹರಿ ಗಾನ ವಾರಿಧಿ ಗಾನ ವಿಭೂಷಣ ಗಾನ ಸಿಂಧು ಗಿರಿ ನಟ ಗೆಲುವಿನ ಹಮ್ಮೀರ ಗೌರವ ಡಾಕ್ಟರಟ್ ಪುರಸ್ಕೃತ ಚಿತ್ರರಂಗದ ಧ್ರುವತಾರೆ ಜಗ ಮೆಚ್ಚಿದ ಮಗ ಜ್ಞಾನದಾಹಿ ದಾದ ಸಾಹೇಬ್ ಪಾಲ್ಕೇ ಪುರಸ್ಕ್ರುತ ದೇವತಾ ಮನುಷ್ಯ ದೇವರ ದೇವ ಕಲಾ ದೇವ ನಕ್ಷತ್ರಗಳ ರಾಜ ನಗುವಿನ ಸರದಾರ ನಟ ಭಯಂಕರ ನಟ ರತ್ನಾಕರ ನಟ ವೈಭವೇಶ್ವರ ನಟ ಶೇಖರ ನಟ ಸಾರ್ವಭೌಮ ನವರಸ ಮಂಜೂಷ ನಾಡೋಜ ನೇತ್ರದಾನದ ಸ್ಪೂರ್ತಿ ರತ್ನ ಪದ್ಮ ಭೂಷಣ ಪದ್ಮ ವಿಭೂಷಣ ಪ್ರಾತಃ ಸ್ಮರಣಿಯ ಬೆಳ್ಳಿ ತೆರೆಯ ಬಂಗಾರ ಭಕ್ತ ಕಲಾ ರತ್ನ ಭಾಗ್ಯವಂತ ಮಧುರ ಕಂಠಶ್ರೀ ಮಹಾ ತಪಸ್ವಿ ಮಹಾ ಪುರುಷ ಮಹಾ ಮಹಿಮ ಮಹಾ ಯೋಗಿ ಮೇರು ನಟ ಯೋಗ ಕಲಾ ರತ್ನ ರತ್ನ ದೀಪ ರಸಿಕರ ರಾಜ ರಾಜಕೀರ್ತಿ ಮೆರೆದ ಗಂಡುಗಲಿ ಲೋಕ ಪೂಜಿತ ವರ ನಟ ವಿನಯ ಶೀಲ ವಿಶ್ವ ಮಾನವ ವಿಶ್ವ ಶಾಂತಿ ಪ್ರಿಯ ವೀರಾಧಿ ವೀರ ಶತಮಾನದ ಯುಗ ಪುರುಷ ಶುದ್ಧ ಮನಸ್ಸಿನ ಹಿಮಶಿಖರ ಸಂಗೀತ ರತ್ನ ಸಮಾಜ ಭೂಷಣ ಸರಸ್ವತಿ ಪುತ್ರ ಸರಳತೆಯ ಸಂತ ಸರಳತೆಯ ಸಾಕಾರಮೂರ್ತಿ ಸೋಲಿಲ್ಲದ ಸರದಾರ ಡಾ. ರಾಜ್‌ಕುಮಾರ್ ರಸ್ತೆ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ, ಯಶವಂತಪುರ ಮೇಲ್ಸೇತುವೆಯಿಂದ ಪ್ರಸನ್ನ ಚಿತ್ರಮಂದಿರದವರೆಗೆ ರಾಜಾಜಿನಗರದ ಮೂಲಕ ಹಾದುಹೋಗುವ ಮುಖ್ಯರಸ್ತೆಗೆ ಡಾ. ರಾಜ್‌ಕುಮಾರ್ ರಸ್ತೆ ಎಂದು ಹೆಸರಿಸಲಾಗಿದೆ. ಗೂಗಲ್‌ ಡೂಡಲ್‌ ಗೌರವ ಗೂಗಲ್‌ ಸರ್ಚ್‌‌ನ ಡೂಡಲ್‌ ವಿಭಾಗದವರು ಡಾ. ರಾಜ್‌ಕುಮಾರ್‌ ಅವರ ೮೮ನೇ ಹುಟ್ಟು ಹಬ್ಬದ ದಿನ ( ೨೪ ಏಪ್ರಿಲ್‌ ೨೦೧೭ ) ರಾಜ್‌ ಅವರ ಡೂಡಲ್‌ ಪ್ರದರ್ಶಿಸುವ ಮೂಲಕ ಗೌರವ ಸಲ್ಲಿಸಿದರು. ಈ ಡೂಡಲ್‌ ದೇಶಾದ್ಯಂತ ( google.co.in ) ಎಲ್ಲಾ ರಾಜ್ಯಗಳಲ್ಲೂ ಪ್ರದರ್ಶಿತಗೊಂಡು ಪರ ರಾಜ್ಯದವರಿಗೂ ರಾಜ್‌ ಅವರ ಬಗ್ಗೆ ಕುತೂಹಲ ಮೂಡುವಂತೆ ಮಾಡಿತು. ತೆಂಕಣ ಭಾರತದ ನಟರಿಗೆ ಗೂಗಲ್‌ ಈ ರೀತಿಯ ಗೌರವ ಸಲ್ಲಿಸಿರುವುದು ಇದೇ ಮೊದಲು. ಇದಕ್ಕಾಗಿ ಕನ್ನಡಿಗರು ಗೂಗಲ್‌ನವರಿಗೂ ಅಭಿನಂದನೆ ಸಲ್ಲಿಸಿದರು. ಪುಸ್ತಕಗಳು ಕನ್ನಡ ರಂಗಭೂಮಿ ಮತ್ತು ಸಿನೆಮಾಕ್ಕೆ ಡಾ. ರಾಜ್ ಕೊಡುಗೆ (ಪಿ.ಹೆಚ್.ಡಿ ನಿಬಂಧ) ಬೆಂಗಳೂರಿನ ಬಸವನಗುಡಿಯಲ್ಲಿರುವ ವಿಜಯ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾದ ಡಿ. ಗುರುಮೂರ್ತಿ ಹಾರೋಹಳ್ಳಿ ಅವರು "ಕನ್ನಡ ರಂಗಭೂಮಿ ಮತ್ತು ಸಿನೆಮಾಕ್ಕೆ ಡಾ. ರಾಜ್ ಕೊಡುಗೆ" ಕುರಿತ ಸಂಶೋಧನಾತ್ಮಕ ಪ್ರಬಂಧ ಮಂಡಿಸಿ, ಮೈಸೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಈ ಸಂಶೋಧನೆಯ ಸಮಯದಲ್ಲಿ, ಡಾ. ರಾಜ್ ಅವರನ್ನು ಹಲವಾರು ಬಾರಿ ಸಂದರ್ಶಿಸಿದ್ದಾರೆ. ೧೯೯೭ರಲ್ಲಿ ಪ್ರಾರಂಭಿಸಿದ ಸಂಶೋಧನೆಯನ್ನು ನಾಲ್ಕುವರ್ಷಗಳ ಕಾಲ ಡಾ. ಮಳಲಿ ವಸಂತಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆಸಿದ ಗುರುಮೂರ್ತಿ ೨೦೦೧ರಲ್ಲಿ ಪಿ.ಹೆಚ್.ಡಿ ಪದವಿ ಪಡೆದರು. ಪ್ರಾಣಪದಕ ಪ್ರಾಣಪದಕ ಡಾ. ರಾಜಕುಮಾರ್ ಅವರನ್ನು ಕುರಿತ 2013ರ ಅಕ್ಟೋಬರ್ ತಿಂಗಳಿನಲ್ಲಿ ಅ. ನಾ. ಪ್ರಹ್ಲಾದರಾವ್ ಬರೆದ ಸ್ವಾರಸ್ಯಕರ ಸಂಗತಿಗಳ ಮತ್ತೊಂದು ಪುಸ್ತಕ. ಶ್ರೀಮತಿ ಪಾರ್ವತಮ್ಮ ರಾಜಕುಮಾರ್ ನೆನಪಿನಾಳದಲ್ಲಿನ ಡಾ. ರಾಜಕುಮಾರ್ ಸಂಗತಿಗಳನ್ನು ಅನಾವರಣಗೊಳಿಸುವ, ವಸಂತ ಪ್ರಕಾಶನ ಪ್ರಕಾಶನಗೊಳಿಸಿರುವ ಅ. ನಾ. ಪ್ರಹ್ಲಾದರಾವ್ ಬರೆದ ವಿಶಿಷ್ಟ ಪುಸ್ತಕ 'ಪ್ರಾಣಪದಕ'. ಸುಮಾರು 120 ಪುಟಗಳ ಈ ಪುಸ್ತಕದ ಲೇಖನಗಳು `ಮಂಗಳ` ವಾರಪತ್ರಿಕೆಯಲ್ಲಿ ಪ್ರಕಟಿಗೊಂಡಿದ್ದವು. ಶ್ರೀಮತಿ ಪಾರ್ವತಮ್ಮ ರಾಜಕುಮಾರ್ ಅವರು ಬೇರೆ ಬೇರೆ ಸಂದರ್ಭಗಳಲ್ಲಿ ಲೇಖಕ ರೊಂದಿಗೆ ಹಲವು ವಿಷಯ ಗಳನ್ನು ನೆನಪು ಮಾಡಿಕೊಂಡರು. 'ಪ್ರಾಣಪದಕ' ಹೆಸರಿನಲ್ಲಿ 'ಮಂಗಳ' ವಾರಪತ್ರಿಕೆ ಈ ಲೇಖನಗಳನ್ನು ಪ್ರಕಟಿಸಿತ್ತು. ಬಂಗಾರದ ಮನುಷ್ಯ ಕನ್ನಡದ ವರನಟ ಡಾ. ರಾಜಕುಮಾರ್ ಅವರ ಜೀವನ ಹಾಗೂ ಸಾಧನೆ ಕುರಿತು ಕರ್ನಾಟಕ ಸರ್ಕಾರಕ್ಕಾಗಿ ಅ. ನಾ. ಪ್ರಹ್ಲಾದರಾವ್ ಬರೆದ ಬಂಗಾರದ ಮನುಷ್ಯ ಅತ್ಯಂತ ಜನಪ್ರಿಯ ಪುಸ್ತಕ. ಈ ಪುಸ್ತಕ ಇಂಗ್ಲಿಷ್ ಭಾಷೆಗೆ `ಡಾ. ರಾಜಕುಮಾರ್ ಇನ್ಮಿಟಬಲ್ ಆಕ್ಟರ್ ವಿಥ್ ಗೋಲ್ಡನ್ ವಾಯ್ಸ್` ಹೆಸರಿನಲ್ಲಿ ಭಾಷಾಂತರಗೊಂಡು ಅಮೆರಿಕದ ನ್ಯೂಜೆರ್ಸಿ ನಗರದಲ್ಲಿ ಬಿಡುಗಡೆಗೊಂಡಿತು. ಕನ್ನಡದ ನಟರೊಬ್ಬರನ್ನು ಕುರಿತ ಇಂಗ್ಲಿಷ್ ಪುಸ್ತಕವೊಂದು ಭಾರತದ ಹೊರಗಡೆ ಬಿಡುಗಡೆಗೊಂಡ ಮೊದಲ ಪುಸ್ತಕ ಇದೆಂಬ ದಾಖಲೆಯನ್ನೂ ಮಾಡಿತು. ಕನ್ನಡ ಪುಸ್ತಕ ಬಿಡುಗಡೆ ಗೊಂಡ ಸಂದರ್ಭದಲ್ಲಿ ಡಾ. ರಾಜಕುಮಾರ್ ಹಾಗೂ ಶ್ರೀಮತಿ ಪಾರ್ವತಮ್ಮ ರಾಜಕುಮಾರ್ ಅವರು ತಮ್ಮ ಮನೆಗೆ ಲೇಖಕರ ಕುಟುಂಬವನ್ನು ಬರಮಾಡಿಕೊಂಡು ಆತಿಥ್ಯ ನೀಡಿದ್ದರು. ೨೨೦ ಪುಟಗಳ ಈ ಪುಸ್ತಕ ಡಾ. ರಾಜಕುಮಾರ್ ಅವರಿಂದಲೇ ಪ್ರಶಂಸೆಗೆ ಒಳಗಾಯಿತು. ಇದು ಡಾ. ರಾಜಕುಮಾರ್ ಅವರನ್ನು ಕುರಿತಾದ ಮೊದಲ ಇಂಗ್ಲಿಷ್ ಪುಸ್ತಕವೇ ಅಲ್ಲದೆ, ದೇಶದ ಹೊರಗಡೆ ಬಿಡುಗಡೆ ಆದ ಡಾ. ರಾಜಕುಮಾರ್ ಕುರಿತಾದ ಮೊದಲ ಪುಸ್ತಕವೂ ಹೌದು. ಈ ಪುಸ್ತಕದಲ್ಲಿ ಡಾ. ರಾಜಕುಮಾರ್ ಚಲನಚಿತ್ರಗಳ ಬಗ್ಗೆ ವಿವರಗಳಷ್ಟೆ ಅಲ್ಲದೆ, ಅವರ ಸಾಮಾಜಿಕ ಬದುಕು ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಯ ವಿವರಗಳನ್ನು ದಾಖಲಿಸಲಾಗಿದೆ. ಕನ್ನಡ ಪುಸ್ತಕ ೨೦೦೬ರಲ್ಲಿ ಅಮೆರಿಕದ ವಾಷಿಂಗ್ಟನ್ ನಗರದಲ್ಲಿ ನಡೆದ ಅಕ್ಕ ಸಮ್ಮೇಳನ, ೨೦೦೬ರಲ್ಲಿ ಕುವ್ಯೆತ್ ಕನ್ನಡ ಸಮ್ಮೇಳನದಲ್ಲಿ ಬಿಡುಗಡೆಗೊಂಡಿತು. ಇಂಗ್ಲಿಷ್ ಪುಸ್ತಕ ಬೆಂಗಳೂರಿನಲ್ಲಿ ಶ್ರೀಮತಿ ಪಾವ೯ತಮ್ಮ ರಾಜಕುಮಾರ್ ಅವರಿಂದ ಬಿಡುಗಡೆಗೊಂಡಿತಲ್ಲದೆ, ಲಂಡನ್ ನಗರದಲ್ಲಿ ೨೦೦೮ರ ಆಗಸ್ಟ್ ತಿಂಗಳಿನಲ್ಲಿ ನಡೆದ ಕನ್ನಡ ಸಮ್ಮೇಳನದಲ್ಲಿ ಅಲ್ಲಿನ ಸೆನೆಟರ್ ಬಿಡುಗಡೆ ಮಾಡಿದರು. ಇತರೆ ವಿಕಿಮೀಡಿಯ ಯೋಜನೆಗಳಲ್ಲಿ ಡಾ. ರಾಜ್‌ಕುಮಾರ್ ಕನ್ನಡ ವಿಕಿಸೊರ್ಸನಲ್ಲಿ ಡಾ. ರಾಜ್‌ಕುಮಾರ ಗಾಯನ ಹೊರಗಿನ ಸಂಪರ್ಕಗಳು ದಟ್ಸ ಕನ್ನಡ.ಕಾಂ - ಡಾ. ರಾಜ್ ಲೇಖನಗಳ ಸಂಗ್ರಹ ವಿಶ್ವಕನ್ನಡ.ಕಾಂ - ಡಾ. ರಾಜ್ ವಿಶೇಷ ಪರಿಚಯ (ಕೃಪೆ:"ಕನ್ನಡ ಸಿನಿಮಾ ಇತಿಹಾಸ ಪುಟಗಳಲ್ಲಿ" ಪುಸ್ತಕ) ಬೇಡರಕಣ್ಣಪ್ಪ ಚಿತ್ರಕ್ಕೆ ಆಯ್ಕೆ ವಿವರಗಳು - ಹೆಚ್.ಎಲ್.ಎನ್.ಸಿಂಹರವರ ಪುತ್ರ ಹೆಚ್.ಎಲ್.ಶೇಷಚಂದ್ರ ಲೇಖನ (ಕನ್ನಡಪ್ರಭ) ಡಾ ರಾಜಕುಮಾರ್ ಗಾಯನ http://members.tripod.com/~arvintripod/raj.html http://www.rajkumarmemorial.com http://www.gandhadagudi.com/forum/viewforum.php?f=18 ಉಲ್ಲೇಖಗಳು ‌‌ ರಾಜಕುಮಾರ್ ರಾಜಕುಮಾರ್ ರಾಜಕುಮಾರ್ ರಾಜಕುಮಾರ್ ರಾಜಕುಮಾರ್ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರು ರಾಜಕುಮಾರ್ ಚಲನಚಿತ್ರಗಳು ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು en:Rajkumar
1246
https://kn.wikipedia.org/wiki/%E0%B2%AC%E0%B2%A8%E0%B3%8D%E0%B2%A8%E0%B3%87%E0%B2%B0%E0%B3%81%E0%B2%98%E0%B2%9F%E0%B3%8D%E0%B2%9F%20%E0%B2%B0%E0%B2%BE%E0%B2%B7%E0%B3%8D%E0%B2%9F%E0%B3%8D%E0%B2%B0%E0%B3%80%E0%B2%AF%20%E0%B2%89%E0%B2%A6%E0%B3%8D%E0%B2%AF%E0%B2%BE%E0%B2%A8
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ
'ಬನ್ನೇರುಘಟ್ಟದ ಅರಣ್ಯ ಪ್ರದೇಶದ ಮುಖ್ಯ ಆಕರ್ಷಣೆಯೇ ಅಲ್ಲಿರುವ ಹುಲಿ ಮತ್ತು ಸಿಂಹಗಳು. ಪ್ರಕೃತಿಯ ಮಡಿಲಲ್ಲಿ ಸಿಂಹಗಳನ್ನು ನೋಡಬಹುದಾದ ಭಾರತದ ಕೆಲವೇ ಪ್ರದೇಶಗಳಲ್ಲಿ ಇದೂ ಒಂದಾಗಿದೆ. ಅರಣ್ಯ ಇಲಾಖೆಯು ಸಿಂಹ ಮತ್ತು ಹುಲಿಗಳ ವೀಕ್ಷಣೆಗಾಗಿ ಸಫಾರಿ ವ್ಯವಸ್ಥೆ ಕಲ್ಪಿಸಿದೆ. ಸಿಂಹಗಳ ಘರ್ಜನೆ ಕೇಳುವುದರೊಂದಿಗೆ ಇತರ ಪ್ರಾಣಿಗಳನ್ನೂ ನೋಡುವ ಸೌಭಾಗ್ಯ ಸಫಾರಿ ಮಾಡುವ ಪ್ರವಾಸಿಗರಿಗೆ ಇಲ್ಲಿ ಸಿಗುವುದು. 25 ಸಾವಿರ ಎಕರೆ ಪ್ರದೇಶದಷ್ಟು ವಿಸ್ತಾರ ಹೊಂದಿರುವ ಈ ಮೀಸಲು ಪ್ರದೇಶ ಹುಲಿ, ಸಿಂಹ, ಚಿರತೆ, ಕಾಡುಕೋಣ, ಜಿಂಕೆ, ಕರಡಿಗಳು, ಪಕ್ಷಿಗಳು ಮತ್ತು ವಿವಿಧ ಜಾತಿಯ ಚಿಟ್ಟೆಗಳ ನೆಲೆಯಾಗಿದೆ. ಪ್ರವಾಸಿಗರು ಸಫಾರಿ ಮಾಡುವಾಗ ಚಿರತೆಗಳು, ಅಪರೂಪದ ಬಿಳಿ ಹುಲಿಗಳು, ಸುಂದರ ಬಂಗಾಳದ ಹುಲಿ, ಮತ್ತು ಕಾಡಿನ ರಾಜ ಸಿಂಹ ಅರಣ್ಯದಲ್ಲಿ ರಾಜಾರೋಷವಾಗಿ ಸುತ್ತಾಡುವುದನ್ನು ನೋಡಬಹುದು. ಇಲ್ಲಿರುವ ಪ್ರಾಣಿಗಳು ಸರ್ಕಸ್ ಗಳಿಂದ ರಕ್ಷಿಸಲ್ಪಟ್ಟಿರುವ ಕೆಲವಾದರೆ ದೇಶದ ಇತರೆಡೆಗಳಿಂದಲೂ ಕೂಡ ತರಿಸಿಕೊಳ್ಳಲಾಗಿದೆ. ಸಂಪೂರ್ಣ ರಕ್ಷಣೆಯಲ್ಲಿರುವ ಈ ಪ್ರಾಣಿಗಳು ನಾಡಿಗೆ ಬರದಂತೆ ಅರಣ್ಯದ ಸೂಕ್ಷ್ಮ ಸ್ಥಳಗಳಲ್ಲಿ ಬೇಲಿಯನ್ನು ಹಾಕಲಾಗಿದೆ. ಈ ಉದ್ಯಾನವನದ ಮುಖ್ಯ ಆಕರ್ಷಣೆ ಎಂದರೆ ದೇಶದಲ್ಲೇ ಮೊಟ್ಟ ಮೊದಲನೇಯದಾದ ಚಿಟ್ಟೆಗೆಂದೇ ಇರುವ ಉದ್ಯಾನವನ. 7.5 ಎಕರೆ ವಿಸ್ತೀರ್ಣದಲ್ಲಿ ವಿಶೇಷವೆನ್ನಿಸುವ ಈ ಚಿಟ್ಟೆ ಉದ್ಯಾನವನವನ್ನು ಕೇಂದ್ರ ಸಚಿವ ಕಪಿಲ ಸಿಬಲ್ 2006 ರಲ್ಲಿ ಉದ್ಘಾಟಿಸಿದ್ದಾರೆ. ಚಿಟ್ಟೆಗಳ ಆಕರ್ಷಣೆಗೆಂದೇ ಈ ಪ್ರದೇಶದಲ್ಲಿ ವಿಶಿಷ್ಟ ಉಷ್ಣವಲಯದ ಪರಿಸರ ರೂಪುಗೊಳ್ಳಲೆಂದು ವಿವಿಧ ಜಾತಿಯ ಸಸ್ಯಗಳನ್ನು ನೆಡಲಾಗಿದೆ. ಸುಮಾರು 20 ರೀತಿಯ ವಿವಿಧ ಜಾತಿಯ ಚಿಟ್ಟೆಗಳನ್ನು ಇಲ್ಲಿ ನಾವು ಕಾಣಬಹುದು.ಪ್ರತಿ ಮಂಗಳವಾರ ವಾರದ ರಜೆ ಇರುತ್ತದೆ. ಹುಲಿ ಮತ್ತು ಸಿಂಹಧಾಮ ಬನ್ನೇರುಘಟ್ಟ ಹುಲಿ ಮತ್ತು ಸಿಂಹಧಾಮ ಹುಲಿ, ಸಿಂಹ ಮತ್ತು ಇತರ ವನ್ಯಜೀವಿಗಳ ಅಭಯಾರಣ್ಯ. ಇಲ್ಲಿನ ಮಿನಿ-ಸಫಾರಿ ಅಭಯಾರಣ್ಯದ ವ್ಯವಸ್ಥೆಗೆ ಹಣವನ್ನೊದಗಿಸುತ್ತದೆ. ಭಾರತೀಯ ಅರಣ್ಯ ಇಲಾಖೆಯಿಂದ ಗುರುತಿಸಲ್ಪಟ್ಟಿರುವ ಬನ್ನೇರ್ಘಟ್ಟದ ಹುಲಿ ಮತ್ತು ಸಿಂಹಧಾಮ ಉತ್ತಮವಾದ ವ್ಯವಸ್ಥೆಯುಳ್ಳದ್ದೆಂದು ಹೆಸರಾಗಿದೆ. ನಿರ್ಲಕ್ಷ್ಯತೆಯ ಕೆಲ ಆಪಾದನೆಗಳಿದ್ದು ಕೆಲವು ದಾರುಣ ಘಟನೆಗಳು ನಡೆದಿವೆಯಾದರೂ ಒಟ್ಟಾರೆ ಒಳ್ಳೆಯ ಹೆಸರನ್ನು ಪಡೆದಿರುವ ವನ್ಯಧಾಮವಾಗಿದೆ. ಮೃಗಾಲಯ ಬನ್ನೇರುಘಟ್ಟ ಮೃಗಾಲಯ ಇಲ್ಲಿನ ಮುಖ್ಯ ಪ್ರವಾಸಿ ಆಕರ್ಷಣೆ. ಸರೀಸೃಪ ಉದ್ಯಾನ ಮತ್ತು ಒಂದು ಸಣ್ಣ ರ೦ಗಮ೦ದಿರವನ್ನೂ ಇದು ಹೊಂದಿದೆ. ಮೃಗಾಲಯಕ್ಕೆ ಹೊ೦ದಿಕೊ೦ಡ೦ತೆಯೇ ಪ್ರಾಣಿಶಾಸ್ತ್ರಕ್ಕೆ ಸ೦ಬ೦ಧಪಟ್ಟ ಒಂದು ವಸ್ತುಸ೦ಗ್ರಹಾಲಯವೂ ಇಲ್ಲಿದೆ. ವಿವಾದ ೧೯೯೨ ರಲ್ಲಿ ವನ್ಯಧಾಮದ ಒಂದು ಹುಲಿ ಮಗುವನ್ನು ಅಪಹರಿಸಿದಾಗ ಅರಣ್ಯ ಇಲಾಖೆಯ ನಿರ್ಲಕ್ಷ್ಯತೆ ಆಪಾದನೆಗೆ ಒಳಗಾಗಿತ್ತು. ಈ ದಾರುಣ ಘಟನೆಯಿಂದ ಮಿನಿ-ಸಫಾರಿಯ ಸುರಕ್ಷತೆ ಮತ್ತು ವ್ಯವಸ್ಥೆಯ ಬಗ್ಗೆ ವಿವಾದ ಸೃಷ್ಟಿಯಾದದ್ದುಂಟು. ಜಂಗಲ್ ಸಫಾರಿ ಪ್ರವಾಸಿಗರು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ಮಾಡುತ್ತ ಕಾಡಾನೆಗಳು, ಕಾಡುಹಂದಿ, ಮಚ್ಚೆಯುಳ್ಳ ಜಿಂಕೆ ಸೇರಿದಂತೆ ವಿವಿಧ ಜಾತಿ ಜಿಂಕೆ, ಸಾಂಬಾರ್, ಗುಳ್ಳೆನರಿ, ಕರಡಿ, ಕಾಡು ಹಂದಿ, ಲಂಗೂರ್ ಗಳು ಮತ್ತು ಕೋತಿಗಳನ್ನು ನೋಡಬಹುದು. ಜಂಗಲ್ ಸಫಾರಿಯೊಂದಿಗೆ ಆನೆ ಸವಾರಿ ಕೂಡ ಇಲ್ಲಿ ಪ್ರವಾಸಿಗರು ಮಾಡಿ ಆನಂದಿಸಬಹುದು. ಬನ್ನೇರಘಟ್ಟ ಅರಣ್ಯ ಪ್ರದೇಶದಲ್ಲಿಯೇ ಹುಟ್ಟಿದ ಸ್ವರ್ಣಮುಖಿ ಹೊಳೆಯು ಅರಣ್ಯದುದ್ದಕ್ಕೂ ಪ್ರಶಾಂತವಾಗಿ ಹರಿಯುತ್ತದೆ. ಅರಣ್ಯದಲ್ಲಿನ ಹಲವಾರು ದೊಡ್ಡ ದೊಡ್ಡ ಮರಗಳಿಂದ ಉದುರುವ ಎಲೆಗಳ ಸುಂದರ ಶಬ್ದದ ನಿನಾದ ಹೊಳೆಯುದ್ದಕ್ಕೂ ಪ್ರವಾಸಿಗರು ಕೇಳಿ ಆನಂದಿಸಬಹುದು. ಇಲ್ಲಿ ಚಂಪಕ ಧಾಮ ಸ್ವಾಮಿಯ ಸುಂದರ ದೇವಸ್ಥಾನ ಇದ್ದು, ಭಗವಾನ್ ವಿಷ್ಣು ಮತ್ತು ಅವನ ಪತ್ನಿಯರಾದ, ಶ್ರೀ ದೇವಿ ಮತ್ತು ಭೂದೇವಿಯರಮೂರ್ತಿಗಳಿವೆ. ಬೆಂಗಳೂರು ವಾಸಿಗಳಿಗಂತೂ ಪಿಕ್ನಿಕ್ ಸ್ಪಾಟ್ ಆಗಿರುವ ಬನ್ನೇರಘಟ್ಟ ಝೂ (ಪ್ರಾಣಿ ಸಂಗ್ರಹಾಲಯ) ನೋಡುವ ಮಜದೊಂದಿಗೆ ಮಕ್ಕಳೊಂದಿಗೆ ಸಫಾರಿ ಕೂಡ ಮಾಡಬಹುದು. ಬೇರೆಡೆ ಇರುವವರು ಬೆಂಗಳೂರಿಗೆ ಬಂದರೆ ನೆನಪಿಟ್ಟುಕೊಂಡು ಬನ್ನೇರಘಟ್ಟಕ್ಕೆ ಹೋಗಲೇಬೇಕು. ಬಾಹ್ಯ ಸಂಪರ್ಕಗಳು ಪ್ರವಾಸಿ ಮಾಹಿತಿ ಕರ್ನಾಟಕ ಪ್ರವಾಸಿ ಪುಟ ಹಿ೦ದೂ ದಿನಪತ್ರಿಕೆಯಲ್ಲಿ ಅಭಯಾರಣ್ಯದ ಬಗೆಗಿನ ಆಪಾದನೆ ೧೯೯೨ ರಲ್ಲಿ ಹುಲಿಯಿ೦ದ ಮಗುವಿನ ಮರಣ ಭಾರತದ ರಾಷ್ಟ್ರೀಯ ಉದ್ಯಾನಗಳು ಕರ್ನಾಟಕದ ಪ್ರಮುಖ ಸ್ಥಳಗಳು en:Bannerghatta National Park
1247
https://kn.wikipedia.org/wiki/%E0%B2%9C%E0%B2%BE%E0%B2%B5%E0%B2%97%E0%B2%B2%E0%B3%8D%20%E0%B2%B6%E0%B3%8D%E0%B2%B0%E0%B3%80%E0%B2%A8%E0%B2%BE%E0%B2%A5%E0%B3%8D
ಜಾವಗಲ್ ಶ್ರೀನಾಥ್
ಜಾವಗಲ್ ಶ್ರೀನಾಥ್ (ಜನನ: ಆಗಸ್ಟ್ ೩೧, ೧೯೬೯) ಭಾರತದ ನಿವೃತ್ತ ಕ್ರಿಕೆಟ್ ಆಟಗಾರರು. ೨೦೦೩ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗುವ ಮುನ್ನ ಭಾರತದ ಪ್ರಮುಖ ವೇಗದ ಬೌಲರ್ ಆಗಿದ್ದರು. ಕ್ರೀಡಾಭಿಮಾನಿಗಳ ಪಾಲಿಗೆ 'ಮೈಸೂರು ಎಕ್ಸ್‌ಪ್ರೆಸ್' ಎಂದೇ ಖ್ಯಾತರಾದವರು. ಶ್ರೀನಾಥ್, ಮೂಲತಃ ಹಾಸನ ಜಿಲ್ಲೆಯ ಜಾವಗಲ್‌ನವರು. ಎಂಜಿನಿಯರಿಂಗ್‌ನಲ್ಲಿ ಪದವಿ ಗಳಿಸಿರುವ ಇವರು, ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ೧೯೯೧ ರಲ್ಲಿ ಆಡಿದರು. ತಮ್ಮ ಮೊದಲ ಏಕದಿನ ಪಂದ್ಯವನ್ನೂ ಅದೇ ವರ್ಷದಲ್ಲಿ ಆಡಿದರು. ಭಾರತದ ಪಿಚ್‍ಗಳು ಮುಖ್ಯವಾಗಿ ಸ್ಪಿನ್‍ಗೆ ಸಹಾಯ ಮಾಡುವುದರ ಕಾರಣ ಶ್ರೀನಾಥ್‍ರವರ ಬೌಲಿಂಗ್ ಸರಾಸರಿ ಸ್ವಲ್ಪ ಕಡಿಮೆಯಾಗಿದೆ. ತಮ್ಮ ಕ್ರಿಕೆಟ್ ಜೀವನದ ಕೊನೆಯ ವರ್ಷಗಳಲ್ಲಿ ರಿವರ್ಸ್ ಸ್ವಿಂಗ್ ಮೊದಲಾದ ಬೌಲಿಂಗ್ ಶೈಲಿಗಳನ್ನು ಅಳವಡಿಸಿಕೊಂಡ ಶ್ರೀನಾಥ್, ಟೆಸ್ಟ್ ಪಂದ್ಯಗಳಲ್ಲಿ ೨೩೬ ಮತ್ತು ಏಕದಿನ ಪಂದ್ಯಗಳಲ್ಲಿ ೩೧೫ ವಿಕೆಟ್‍ಗಳನ್ನು ಪಡೆದಿದ್ದಾರೆ. ಮೊದಲ ದರ್ಜೆ ಮಟ್ಟದಲ್ಲಿ ೫೦೦ ಕ್ಕೂ ಹೆಚ್ಚು ವಿಕೆಟ್‍ಗಳನ್ನು ಪಡೆದಿದ್ದಾರೆ. ಭಾರತದ ರಾಷ್ಟ್ರೀಯ ತಂಡದಲ್ಲಿ ಆಡಿರುವುದಲ್ಲದೆ, ಕರ್ನಾಟಕದಿಂದ ರಣಜಿ ಕ್ರಿಕೆಟ್ ಮತ್ತು ಇಂಗ್ಲೆಂಡ್ನ ಕೌಂಟಿ ಕ್ರಿಕೆಟ್ ನಲ್ಲಿ ಗ್ಲೌಸೆಸ್ಟರ್‍ ಶೈರ್ ಮತ್ತು ಲೀಸೆಸ್ಟರ್‍ ಶೈರ್ ತಂಡಗಳ ಪರವಾಗಿಯೂ ಆಡಿದ್ದಾರೆ. ಕೆಲವೊಮ್ಮೆ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನೂ ನೀಡುತ್ತಿದ್ದ ಶ್ರೀನಾಥ್ ಏಕದಿನ ಪಂದ್ಯಗಳಲ್ಲಿ "ಪಿಂಚ್ ಹಿಟರ್" ಕೆಲಸವನ್ನು ನಿರ್ವಹಿಸಿರುವುದೂ ಉಂಟು! ಪ್ರಶಸ್ತಿ /ಪುರಸ್ಕಾರಗಳು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ 'ಮ್ಯಾಚ್ ರೆಫರಿ' ಎಂದು ಮಾನ್ಯ ಮಾಡಿದೆ. ಅರ್ಜುನ ಪ್ರಶಸ್ತಿ. ಬಾಹ್ಯ ಸಂಪರ್ಕಗಳು ಕ್ರಿಕ್ ಇನ್ಫೋ ತಾಣದಲ್ಲಿ ಜಾವಗಲ್ ಶ್ರೀನಾಥ್ ಬಗ್ಗೆ ಮಾಹಿತಿ ಭಾರತದ ಕ್ರಿಕೆಟ್ ಕ್ರೀಡಾಪಟುಗಳು ಭಾರತ ಕ್ರಿಕೆಟ್ ತಂಡ ಭಾರತದ ಕ್ರೀಡಾಪಟುಗಳು ಕರ್ನಾಟಕದ ಕ್ರೀಡಾಪಟುಗಳು ಕ್ರಿಕೆಟ್ ಆಟಗಾರ
1248
https://kn.wikipedia.org/wiki/%E0%B2%AA%E0%B3%8D%E0%B2%B0%E0%B2%B8%E0%B2%A8%E0%B3%8D%E0%B2%A8
ಪ್ರಸನ್ನ
ಪ್ರಸನ್ನ ( ಮಾರ್ಚ್ ೨೩, ೧೯೫೧) ಕನ್ನಡ ರಂಗಭೂಮಿ ನಿರ್ದೇಶಕರು ಮತ್ತು ಕ್ರಿಯಾಶೀಲ ರಂಗ ಕಾರ್ಯಕರ್ತರು. ಜೀವನ ಎಪ್ಪತ್ತರ ದಶಕದಲ್ಲಿ ಹವ್ಯಾಸಿ ರಂಗಭೂಮಿಗೆ ಹಬ್ಬದ ಸಡಗರ. ಹಲವಾರು ಹವ್ಯಾಸಿ ರಂಗಸಂಸ್ಥೆಗಳು ಹುಟ್ಟಿಕೊಂಡದ್ದು ಆಗಲೇ. ಈ ಸಂದರ್ಭದಲ್ಲಿ ರಂಗಭೂಮಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಪ್ರಮುಖರ ಸಾಲಿಗೆ ಸೇರುವ ಪ್ರಸನ್ನ ಅವರು ಹುಟ್ಟಿದ್ದು ಮಾರ್ಚ್ 23, 1951ರಂದು ಶಿವಮೊಗ್ಗ ಜಿಲ್ಲೆಯ ಆನವಟ್ಟಿಯಲ್ಲಿ. ತಂದೆ ಪ್ರಹ್ಲಾದಾಚಾರ್ಯ, ತಾಯಿ ಹೇಮಾವತಿ ಬಾಯಿ. ಸೆಂಟ್ರಲ್ ಕಾಲೇಜಿನಿಂದ ಎಂ.ಎಸ್ಸಿ. ಪದವಿ ಪಡೆದರೂ ಅವರಿಗೆ ರಂಗಭೂಮಿಯಲ್ಲಿ ಅಪಾರವಾದ ಆಸಕ್ತಿ ತುಂಬಿಕೊಂಡಿತ್ತು. ರಂಗ ಅಧ್ಯಯನ ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ ಶಾಲೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿ ಎಂಬ ಹೆಗ್ಗಳಿಕೆ ಸಂಪಾದಿಸಿದ ಕೀರ್ತಿ ಅವರದು. ಪ್ರಸನ್ನರು ದೆಹಲಿಯ ನಾಟಕ ಶಾಲೆಯಲ್ಲಿದ್ದ ದಿನಗಳಲ್ಲಿ ನಿರ್ದೇಶಿಸಿದ ನಾಟಕಗಳಲ್ಲಿ ಗಾಂಧಿ, ಉತ್ತರ ರಾಮಚರಿತಂ, ಅಗ್ನಿ ಔರ್ ಬರ್ ಕಾ, ಫ್ಯೂಜಿಯಾಮ ಪ್ರಮುಖವಾದವು. ಇಂಗ್ಲಿಷ್, ಹಿಂದಿ, ಕನ್ನಡ ಭಾಷೆಗಳ ಮೇಲೆ ಅವರು ಪ್ರಭುತ್ವ ಸಾಧಿಸಿದ್ದರು. ರಾಷ್ಟ್ರೀಯ ನಾಟಕಶಾಲೆಯಲ್ಲಿ ಕೆಲಕಾಲ ಬೋಧನೆ ಮಾಡಿ, ರಂಗಭೂಮಿ ಅಧ್ಯಯನಕ್ಕಾಗಿ ರಷ್ಯ, ಜರ್ಮನಿ ಮುಂತಾದ ಕಡೆಗಳಲ್ಲಿ ಪ್ರವಾಸ ಕೈಗೊಂಡಿದ್ದರು. ರಂಗಭೂಮಿಯಿಂದ ಜನಾಂದೋಲನ ದೇಶಕ್ಕೆ ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ಎಡಪಂಥೀಯ ವಿಚಾರ ಧಾರೆಗೆ ಪ್ರಾಶಸ್ತ್ಯ ನೀಡಿದ ಪ್ರಸನ್ನರಿಂದ ಮೂಡಿಬಂದದ್ದು ‘ಸಮುದಾಯ’ ತಂಡ. ರಾಜ್ಯಾದ್ಯಂತ ಅದರ ಶಾಖೆಗಳು ಮೂಡಿದವು. ನಾಟಕ, ಜಾಥಾ, ಕಲಾ ಮೇಳಗಳ ಮೂಲಕ ಅವರು ಜನಾಂದೋಲನವನ್ನು ಕೈಗೊಂಡರು. ಕಾರ್ಮಿಕರು, ಪ್ರಗತಿಪರ ಚಿಂತಕರು, ಸಾಹಿತಿ-ಕಲಾವಿದರನ್ನು ಒಗ್ಗೂಡಿಸಲು ವೇದಿಕೆ ಸ್ಥಾಪಿಸಿದ್ದೇ ಅಲ್ಲದೆ, ಜಡ್ಡುಗಟ್ಟಿದ ಸಾಮಾಜಿಕ ವ್ಯವಸ್ಥೆಯ ಪರಿವರ್ತನೆಗೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದರು. ಪ್ರಸಿದ್ಧ ನಾಟಕಗಳು ಪ್ರಸನ್ನರು ನಿರ್ದೇಶಿಸಿದ ನಾಟಕಗಳಲ್ಲಿ ತುಘಲಕ್, ಗೆಲಿಲಿಯೋ, ಹುತ್ತವ ಬಡಿದರೆ, ತದ್ರೂಪಿ, ಕದಡಿದ ನೀರು, ತಾಯಿ, ದಂಗೆಯ ಮುಂಚಿನ ದಿನಗಳು, ಹ್ಯಾಮ್ಲೆಟ್,ಮಹಿಮಾಪುರ ಮುಂತಾದವು ಪ್ರಮುಖವೆನಿಸಿವೆ. ತಮಿಳುನಾಡು, ಕೇರಳ, ಮಧ್ಯಪ್ರದೇಶ, ಬಿಹಾರಗಳಲ್ಲಿ ರಂಗಭೂಮಿ ಅಧ್ಯಯನಕ್ಕಾಗಿ ಅವರು ವ್ಯಾಪಕವಾಗಿ ಪ್ರವಾಸ ಕೈಗೊಂಡಿದ್ದರು. ವಾರ್ತಾಪತ್ರ ಪ್ರಸನ್ನರು ಸೈದ್ಧಾಂತಿಕ ತಿಳುವಳಿಕೆಗಾಗಿ 'ಸಮುದಾಯ ವಾರ್ತಾಪತ್ರ'ವನ್ನು ಸ್ಥಾಪಿಸಿದರು. ಬರಹಗಳು ನೌಟಂಕಿ, ಸ್ವಯಂವರ, ನಾಶವಾಯ್ತೆ ಲಂಕಾದ್ರಿಪುರ ಮುಂತಾದ ಕಾದಂಬರಿಗಳನ್ನು ಕೂಡಾ ರಚಿಸಿದ್ದಾರೆ. ಇಂಡಿಯನ್ ಮೆಥಡ್ ಇನ್ ಆಕ್ಟಿಂಗ್ ದೂರದರ್ಶನದಲ್ಲಿ ಪ್ರಸನ್ನರು ಭೀಷ್ಮ ಸಾಹ್ನಿಯವರ ‘ತಮಸ್’ ಕಾದಂಬರಿಯನ್ನು ದೂರದರ್ಶನಕ್ಕೆ ಅಳವಡಿಸಿದರಲ್ಲದೆ, ರಂಗಾಯಣ ಮೈಸೂರಿನ ರಂಗಾಯಣದ ನಿರ್ದೇಶಕರ ಜವಾಬ್ದಾರಿಯನ್ನೂ ಹೊತ್ತಿದ್ದ ಪ್ರಸನ್ನರು ಅಲ್ಲಿ ಹಲವಾರು ನಾಟಕಗಳ ನಿರ್ದೇಶನ ಮಾಡಿದರು. ರಂಗಾಯಣದಲ್ಲಿ ಅವರು ನಿರ್ವಹಿಸಿದ ಕಾರ್ಯಗಳು ರಂಗಭೂಮಿಗೆ ಹೊಸ ಆಯಾಮವನ್ನು ಸೃಷ್ಟಿಸಿಕೊಟ್ಟವು. ಪ್ರಸನ್ನರು ಸ್ವಯಂ ರಚಿಸಿದ ನಾಟಕಗಳು ಉಳಿ, ದಂಗೆಯ ಮುಂಚಿನ ದಿನಗಳು, ಒಂದು ಲೋಕದ ಕಥೆ, ಹದ್ದು ಮೀರಿದ ಹಾದಿ, ಜಂಗಮದ ಬದುಕು. ಕ್ರಿಯಾಶೀಲ ವ್ಯಕ್ತಿತ್ವ ಸಂಘಟನಾ ಚತುರತೆ, ಹೊಸ ಚಿಂತನೆ ಮತ್ತು ಸೃಜನಶೀಲತೆಗಳಿಗಾಗಿ ಪ್ರಸನ್ನರು ಹೆಸರಾಗಿದ್ದಾರೆ. ಪ್ರಸನ್ನರ ಚತುರತೆಯಲ್ಲಿ ‘ಭೂಮಿಗೀತ’ವು ರಂಗ ಪರೀಕ್ಷೆಗಳ ನೂತನ ಅಪೇಕ್ಷೆಗಳಿಗನುಗುಣವಾಗಿ ಹೊಸವಿನ್ಯಾಸವನ್ನು ಗಳಿಸಿತು; ‘ವನರಂಗ’ ಹೊಸ ರೂಪ ಪಡೆಯಿತು; ಶ್ರೀರಂಗ ಸ್ಟುಡಿಯೋ ನಿರ್ಮಾಣಗೊಂಡಿತು; ಲಂಕೇಶ್ ಆರ್ಟ್ ಗ್ಯಾಲರಿ ಕಲಾ ಪ್ರದರ್ಶನಗಳಿಗಾಗಿ ತೆರೆದುಕೊಂಡಿತು; ರಾಷ್ಟ್ರೀಯ ನಾಟಕೋತ್ಸವ ‘ಬಹುರೂಪಿ’ ಚಾಲನೆಗೊಂಡಿತು; ವಾರಾಂತ್ಯದ ರಂಗಪ್ರದರ್ಶನಗಳು ಪ್ರಾರಂಭಗೊಂಡವು; ಹವ್ಯಾಸಿ ರಂಗತಂಡಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಗ್ರೀಷ್ಮ ರಂಗೋತ್ಸವ ಹುಟ್ಟಿಕೊಂಡಿತು; ರಂಗಶಿಕ್ಷಣಕ್ಕಾಗಿ ಭಾರತೀಯ ರಂಗ ಶಿಕ್ಷಣ ಕೇಂದ್ರದ ಚಿಂತನೆಗೊಂದು ರೂಪ ಸಿಕ್ಕಿತು. ರಂಗಭೂಮಿಯ ಕುರಿತಾದ ಮಾಹಿತಿ ಸಂಶೋಧನಾ ಚಟುವಟಿಕೆಗಳ ಸಲುವಾಗಿ ಶ್ರೀರಂಗ ಮಾಹಿತಿ ಕೇಂದ್ರದ ನಕಾಶೆ ರೂಪುಗೊಂಡಿತು. ಪ್ರಸನ್ನ ಅವರು ಹೆಗ್ಗೋಡಿನಲ್ಲಿ ನೆಲೆಸಿ ಕವಿ-ಕಾವ್ಯ ಟ್ರಸ್ಟ್ ಆಶ್ರಯದಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿದರಲ್ಲದೆ. ಋಜುವಾತು ಪತ್ರಿಕೆಗೆ ಹೊಸರೂಪ ನೀಡಿದರು. ಗುಡಿ ಕೈಗಾರಿಕೆಗೆ ಪ್ರೋತ್ಸಾಹ, ಗ್ರಾಮೀಣ ಕುಶಲ ಕರ್ಮಿಗಳ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಜಯನಗರ ಸೌತ್ ಎಂಡ್ ಸರ್ಕಲ್, ಗಿರಿನಗರದ ಪ್ರವೇಶ ದ್ವಾರದ ಬಳಿ ‘ದೇಸಿ’ ಅಂಗಡಿ ಪ್ರಾರಂಭಿಸಿದರಲ್ಲದೆ, ಗ್ರಾಮೀಣ ಕುಶಲ ಕರ್ಮಿಗಳಿಗೆ ಕಲ್ಯಾಣನಿಧಿಯನ್ನು ಸ್ಥಾಪಿಸಿದರು. ಪ್ರಶಸ್ತಿ ಗೌರವಗಳು ಈ ಬಹುರೂಪಿ ಪ್ರಸನ್ನರಿಗೆ ಸಂದ ಪ್ರಶಸ್ತಿ ಗೌರವಗಳು ಹಲವಾರು. ಸಂಗೀತ ನಾಟಕ ಅಕಾಡಮಿ ಫೆಲೋಷಿಪ್, ರಂಗಭೂಮಿ ಅಧ್ಯಯನಕ್ಕಾಗಿ ಭಾರತ ಭವನ್ ಫೆಲೋಷಿಪ್, ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯ ನಾಟಕ ಅಕಾಡಮಿ ಬಹುಮಾನ, ಪು.ತಿ.ನ. ಟ್ರಸ್ಟ್ ಪುರಸ್ಕಾರ, ಚದುರಂಗ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ ಇವುಗಳಲ್ಲಿ ಪ್ರಮುಖವಾದವು. ಮಾಹಿತಿ ಆಧಾರ ಪ್ರಸನ್ನ ಕಣಜ (ಜಾಲತಾಣ) ಉಲ್ಲೇಖಗಳು ಕನ್ನಡ ರಂಗಭೂಮಿ
1249
https://kn.wikipedia.org/wiki/%E0%B2%87%20%E0%B2%8E%20%E0%B2%8E%E0%B2%B8%E0%B3%8D%20%E0%B2%AA%E0%B3%8D%E0%B2%B0%E0%B2%B8%E0%B2%A8%E0%B3%8D%E0%B2%A8
ಇ ಎ ಎಸ್ ಪ್ರಸನ್ನ
ಎರಂಪಳ್ಳಿ ಅನಂತರಾವ್ ಶ್ರೀನಿವಾಸ ಪ್ರಸನ್ನ (ಜನನ: ಮೇ ೨೨, ೧೯೪೦) ವಿಶ್ವದ ಶ್ರೇಷ್ಠ ಆಫ್ ಸ್ಪಿನ್ ಬೌಲರ್‍ಗಳಲ್ಲಿ ಒಬ್ಬರು. ಜನನ ಮತ್ತು ವಿದ್ಯಾಭ್ಯಾಸ ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ ಬೌಲರುಗಳಲ್ಲಿ ಒಬ್ಬರೆನಿಸಿರುವ ನಮ್ಮ ಎರಪ್ಪಳ್ಳಿ ಅನಂತರಾವ್ ಶ್ರೀನಿವಾಸ ಪ್ರಸನ್ನ ಅವರು ಮೇ ೨೨, ೧೯೪೦ರ ವರ್ಷದಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಮೈಸೂರಿನ ಎನ್ ಐ ಇ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದಿದರು. ಓದಿಗಾಗಿ ಕ್ರಿಕೆಟ್ ಮುಂದೂಡಿಕೆ ಪ್ರಸನ್ನರು ೧೯೬೧ರ ವರ್ಷದಲ್ಲಿ ವೆಸ್ಟ್ ಇಂಡೀಜ್ ವಿರುದ್ಧ ಕ್ರಿಕೆಟ್ ಟೆಸ್ಟ್ ಪಂದ್ಯವೊಂದನ್ನು ಆಡಿ ನಂತರದಲ್ಲಿ "ನಾನು ಇಂಜಿನಿಯರಿಂಗ್ ಮುಗಿಸುವವರೆಗೆ ಕ್ರಿಕೆಟ್ ಆಡೋಲ್ಲ" ಎಂದು ನಿರ್ಧರಿಸಿ ಇಂಜಿನಿಯರಿಂಗ್ ಮುಗಿಸಿ ಪುನಃ ೧೯೬೭ರ ವರ್ಷದಲ್ಲಿ ಕ್ರಿಕೆಟ್ಟಿಗೆ ಪ್ರವೇಶಿಸಿದರು. ದೇಶಕ್ಕೆ ಗಣ್ಯತೆ ತಂದವರು ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ವೆಸ್ಟ್ ಇಂಡೀಜ್ ಮುಂತಾದ ಅಂದಿನ ಸಶಕ್ತ ತಂಡಗಳ ವಿರುಧ್ಧ ಪ್ರಸನ್ನರು ನೀಡಿದ ಅದ್ಭುತ ಬೌಲಿಂಗ್ ಪ್ರದರ್ಶನಗಳು ಆ ಕಾಲದಲ್ಲಿ ದುರ್ಬಲ ತಂಡಗಳ ಸಾಲಿನಲ್ಲಿದ್ದ ಭಾರತ ತಂಡಕ್ಕೆ ಗಣ್ಯತೆ ತರುವಲ್ಲಿ ಪ್ರಧಾನ ಪಾತ್ರ ವಹಿಸಿತು. ನ್ಯೂಜಿಲೆಂಡ್ ಅಂತಹ ವಿದೇಶೀ ಆಟಗಾರರಿಗೆ ಕಷ್ಟಕರವಾದ ಮೈದಾನಗಳಲ್ಲಿ ಅವರು ಮೂರು ಬಾರಿ ಇನ್ನಿಂಗ್ಸ್ ಒಂದರಲ್ಲಿ ಎಂಟುyijh9jgihu9iijhhdtokbcxs6ol ವಿಕೆಟ್ ಪಡೆದ ಸಾಧನೆ ಪಡೆದಿರುವುದು ಕ್ರಿಕೆಟ್ ಚರಿತ್ರೆಗಳಲ್ಲಿ ಪ್ರಮುಖ ದಾಖಲಾತಿ ಪಡೆದಿದೆ. ತಾವು ಆಡಿದ ಮೊದಲ ಇಪ್ಪತ್ತೇ ಟೆಸ್ಟ್ ಪಂದ್ಯಗಳಲ್ಲಿ ನೂರು ವಿಕೆಟ್ ಗಳಿಸಿದ ಪ್ರಸನ್ನರ ಭಾರತೀಯ ದಾಖಲೆ ಇದುವರೆಗೂ ಭೇದಿತವಾಗಿಲ್ಲದಿರುವುದು ಕೂಡಾ ಪ್ರಸನ್ನರ ಗರಿಮೆಯನ್ನು ಸಾರುತ್ತದೆ. ಶ್ರೇಷ್ಠ ಬೌಲರ್ ಅಂದಿನ ಕಾಲದ ಪ್ರತಿಷ್ಟಿತ ಬ್ಯಾಟುದಾರರಾದ ಇಯಾನ್ ಚಾಪೆಲ್, ಬಿಲ್ ಓ ರ್ಯಾಲಿ (ನಾವು ಆತನನ್ನು ಲಾರಿ ಅಂತ ಕರೆಯುತ್ತಿದ್ದೆವು), ಕ್ಲೈವ್ ಲಾಯ್ಡ್, ಅಲ್ವಿನ್ ಕಾಳೀಚರಣ್ ಅಂತಹವರಿಂದ ತಾವು ಆಡಿದ ಶ್ರೇಷ್ಠ ಬೌಲರ್ ಎಂದು ಬಣ್ಣಿಸಿಕೊಂಡವರು ಇ ಎ ಎಸ್ ಪ್ರಸನ್ನ. ಗಾಳಿಯಲ್ಲಿ ಅವರು ಸ್ಪಿನ್ ಮಾಡುತ್ತಿದ್ದ ವೈಖರಿ, ಮೂಡಿಸುತ್ತಿದ್ದ ಅಮೋಘ ಫ್ಲೈಟ್, ಬ್ಯಾಟುದಾರನ ಜಾಣ್ಮೆಯನ್ನು ಮೀರಿಸುತ್ತಿದ್ದ ಶಾರ್ಟ್ ಪಿಚ್ ಡೆಲಿವರಿಗಳು ಇವೆಲ್ಲವುಗಳ ಜೊತೆಗೆ ಬೌಲಿಂಗಿನಲ್ಲಿ ಅತ್ಯದ್ಭುತ ಜಾಣ್ಮೆ, ನಿಯಂತ್ರಣ ಮತ್ತು ಕುಶಲತೆಗಳಿಗಾಗಿ ಅವರು ಪ್ರಖ್ಯಾತಿ ಪಡೆದಿದ್ದರು. ಪ್ರಸನ್ನರು ಆಡಿದ್ದು ಕೇವಲ ೪೯ ಟೆಸ್ಟ್ ಪಂದ್ಯಗಳು ಮಾತ್ರ. ಅವರು ಗಳಿಸಿದ್ದು ೧೮೯ ವಿಕೆಟ್. ಬ್ಯಾಟಿಂಗ್ ನಲ್ಲಿ ಕೂಡಾ ಅವರು ಉಪಯುಕ್ತರಾಗಿದ್ದರು. ಟೆಸ್ಟ್ ಪಂದ್ಯವೊಂದರಲ್ಲಿ ಭಾರತ ಸೋಲುವ ಸ್ಥಿತಿಯಲ್ಲಿದ್ದಾಗ ಕೊನೆಯದಿನ ಪೂರ್ತಿ ಸರ್ದೇಸಾಯ್ ಅವರೊಂದಿಗೆ ಆಡಿ, ಪಂದ್ಯಕ್ಕೆ ಡ್ರಾ ಒದಗುವಂತೆ ಅವರು ಆಡಿದ್ದು ದಾಖಲೆಯಾಗಿದೆ. ಅವರು ಆಡಿದ ೨೩೫ ಪ್ರಥಮ ದರ್ಜೆ ಪಂದ್ಯಗಳಲ್ಲಿ ೨೪೭೬ರನ್ನುಗಳನ್ನೂ, ೯೫೭ವಿಕೆಟ್ಟುಗಳನ್ನೂ ಸಂಪಾದಿಸಿದ್ದರು. ಕರ್ನಾಟಕಕ್ಕೆ ದೊರಕಿಸಿಕೊಟ್ಟ ಹಿರಿಮೆ ಹದಿನೇಳು ವರ್ಷ ರಣಜೀ ಪ್ರಶಸ್ತಿ ಸ್ವಾಮ್ಯ ಪಡೆದಿದ್ದ ಮುಂಬಯಿನಿಂದ ಪ್ರಥಮ ಬಾರಿ ಕರ್ನಾಟಕಕ್ಕೆ ರಣಜೀ ಪ್ರಶಸ್ತಿ ತಂದವರು ಪ್ರಸನ್ನ. ಅದೂ ಗಾವಸ್ಕರ್ ನಾಯಕತ್ವದಲ್ಲಿ ಶ್ರೇಷ್ಠ ತಂಡವಿದ್ದ ಮುಂಬಯಿ ಅನ್ನು ಸೆಮಿ ಫೈನಲ್ ಪಂದ್ಯದಲ್ಲಿ ಸೋಲಿಸಿ. ಅವರ ನಾಯಕತ್ವದಲ್ಲಿ ಕರ್ನಾಟಕವು ಎರಡು ಬಾರಿ ರಣಜೀ ಟ್ರೋಫಿ ಪ್ರಶಸ್ತಿ ಪಡೆಯಿತು. ಭಾರತ ತಂಡದ ನಾಯಕರಾಗುವುದಕ್ಕೆ ಸಹಾ ಅವರು ತುಂಬಾ ಸಮೀಪದಲ್ಲಿದ್ದರು. ಒಮ್ಮೆ ಕರ್ನಾಟಕ ತಂಡದಲ್ಲಿ ಆರು ಜನ ಟೆಸ್ಟ್ ಆಟಗಾರನ್ನು ಪ್ರತಿನಿಧಿಸುವಂತೆ ಮಾಡಿದ ಕೀರ್ತಿ ಪ್ರಸನ್ನರಿಗೆ ಸಲ್ಲುತ್ತದೆ. ಪ್ರಸನ್ನ, ಚಂದ್ರಶೇಖರ್, ಜಿ.ಆರ್. ವಿಶ್ವನಾಥ್, ಎಸ್.ಎಂ. ಎಚ್. ಕಿರ್ಮಾನಿ, ಬ್ರಿಜೇಶ್ ಪಟೇಲ್, ಸುಧಾಕರರಾವ್ ಒಟ್ಟಿಗೆ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದರು. ಈ ಪಟ್ಟಿಯ ಹೊರತಾಗಿ ಕೂಡಾ ಅಂದಿನ ತಂಡದಲ್ಲಿದ್ದ ವಿಜಯಕುಮಾರ್, ವಿಜಯಕೃಷ್ಣ, ಜಯಪ್ರಕಾಶ್, ಲಕ್ಷ್ಮಣ್ ಅಂತಹ ಅಂದಿನ ಬಹುತೇಕ ಆಟಗಾರರು ಕೇವಲ ರಣಜೀ ವಲಯದಲ್ಲಿ ಮಾತ್ರ ಆಡಿದ್ದರೂ ಮಹಾನ್ ಪ್ರತಿಭಾವಂತರಾದ ಆಟಗಾರರಾಗಿ ರೂಪುಗೊಂಡಿದ್ದರು. ಇವರೆಲ್ಲರ ರೂವಾರಿ ಕರ್ಣಾಟಕ ತಂಡದ ನಾಯಕರಾದ ಪ್ರಸನ್ನ ಆಗಿದ್ದರು. ನಿವೃತ್ತಿಯನಂತರದಲ್ಲಿಯೂ ಶ್ರೇಷ್ಠತೆ ೧೯೮೫ರ ಅವಧಿಯಲ್ಲಿ ಭಾರತ ತಂಡ ಸುನೀಲ್ ಗವಾಸ್ಕರ್ ಅವರ ನಾಯಕತ್ವದಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಬೆನ್ಸನ್ ಅಂಡ್ ಹೆಡ್ಜಸ್ ವಿಶ್ವ ಪ್ರಶಸ್ತಿ ಗೆದ್ದ ಸಂದರ್ಭದಲ್ಲಿ ಆ ತಂಡದ ಮ್ಯಾನೇಜರ್ ಆಗಿದ್ದವರು ಇ.ಎ.ಎಸ್. ಪ್ರಸನ್ನ. ಆ ಸಂದರ್ಭದಲ್ಲಿ ತಂಡದ ನಾಯಕ ಗಾವಸ್ಕರ್ "ನಮ್ಮ ಮ್ಯಾನೇಜರ್ ಪ್ರಸನ್ನ ಅವರು ನೆಟ್ ನಲ್ಲಿ ಬೌಲಿಂಗ್ ಮಾಡುವ ವೈಖರಿಯನ್ನು ನೋಡಿದಾಗಲೆಲ್ಲಾ ಅವರನ್ನು ನನ್ನ ಹನ್ನೊಂದು ಜನರ ತಂಡದಲ್ಲಿ ಸೇರಿಸಿಕೊಂಡು ಬಿಡಬಾರದೇಕೆ ಎಂದು ಪ್ರಚೋದನೆಗೊಂಡು ಬಿಡುತ್ತಿದ್ದೆ. ಬಹುಶಃ ಕ್ಷೇತ್ರ ರಕ್ಷಣೆ ಎಂಬ ಅಂಶ ಅಡ್ಡಬರದಿದ್ದರೆ, ನಾನು ಹಾಗೆ ಮಾಡಿಯೇ ಬಿಡುತ್ತಿದ್ದೆ ಎನಿಸುತ್ತದೆ" ಎಂದು ನುಡಿದಿದ್ದರು. ನಿವೃತ್ತಿಯ ನಂತರದಲ್ಲಿ ಕೂಡಾ ಪ್ರಸನ್ನರ ಬೌಲಿಂಗ್ ಜಾಣ್ಮೆ ಹೇಗಿತ್ತು ಎಂಬುದಕ್ಕೆ ಇದೊಂದು ಗೌರವಪೂರ್ಣ ನಿದರ್ಶನದಂತಿವೆ. ಪ್ರಸನ್ನ ರು ಭಾರತದ ಆಟಗಾರರಿಗೆ ಮಾತ್ರವಲ್ಲದೆ ವಿದೇಶಿ ಆಟಗಾರರನ್ನು ತಯಾರು ಮಾಡಲು ಸಹಾ ಸಾಕಷ್ಟು ಬೇಡಿಕೆ ಪಡೆದಿದ್ದರು. ಮಹಾನ್ ತಂತ್ರಜ್ಞರಾಗಿ ಇ ಎ ಎಸ್ ಪ್ರಸನ್ನ ಅವರು ಕ್ರಿಕೆಟ್ಟಿನಲ್ಲಿ ಅಷ್ಟೇ ಅಲ್ಲದೆ ತಂತ್ರಜ್ಞಾನ ಕ್ಷೇತ್ರದಲ್ಲೂ ಹೆಸರುವಾಸಿಯಾಗಿದ್ದರು. ಅಂದಿನ ರೆಮ್ಕೋ, ಬಿ. ಎಚ್. ಇ. ಎಲ್, ಕುದುರೆ ಮುಖ ಕಬ್ಬಿಣ ಅದಿರು ಕಾರ್ಖಾನೆ, ಎನ್.ಜಿ. ಇ. ಎಫ್ ಮುಂತಾದ ಸಂಸ್ಥೆಗಳಲ್ಲಿನ ಪ್ರಮುಖ ತಾಂತ್ರಿಕ ಅಧಿಕಾರಿಗಳಾಗಿ ಸಹಾ ಅವರು ಹೆಸರಾಗಿದ್ದರು. ಟೆಸ್ಟ್ ಪಂದ್ಯಗಳಲ್ಲಿನ ಅಂಕಿ ಸಂಖ್ಯೆಗಳು ಪ್ರಶಸ್ತಿಗಳು ೧೯೭೦ - ಪದ್ಮಶ್ರೀ ೨೦೦೬ - ಕ್ಯಾಸ್ಟ್ರೋಲ್ ಜೀವಮಾನದ ಸಾಧನೆ ಪ್ರಶಸ್ತಿ ಬೆಂಗಳೂರಿನ ದೊಮ್ಮಲೂರಿನ ಇ.ಎಸ್.ಐ. ಆಸ್ಪತ್ರೆಯ ೩ ಅಡ್ಡರಸ್ತೆಗೆ ಪ್ರಸನ್ನರ ಹೆಸರು ಇಡಲಾಗಿದೆ. ಬಾಹ್ಯ ಸಂಪರ್ಕಗಳು ಕ್ರಿಕ್ ಇನ್ಫೋ ತಾಣದಲ್ಲಿ ಪ್ರಸನ್ನ ಬಗ್ಗೆ ಮಾಹಿತಿ ಭಾರತದ ಕ್ರಿಕೆಟ್ ಕ್ರೀಡಾಪಟುಗಳು ಭಾರತ ಕ್ರಿಕೆಟ್ ತಂಡ ಭಾರತದ ಕ್ರೀಡಾಪಟುಗಳು ಕರ್ನಾಟಕದ ಕ್ರೀಡಾಪಟುಗಳು ಕ್ರಿಕೆಟ್ ಕ್ರಿಕೆಟ್ ಆಟಗಾರ
1251
https://kn.wikipedia.org/wiki/%E0%B2%B8%E0%B2%B0%E0%B3%8D%E0%B2%B5%E0%B2%9C%E0%B3%8D%E0%B2%9E
ಸರ್ವಜ್ಞ
ಜನನ ಮತ್ತು ಬಾಲ್ಯ ಸರ್ವಜ್ಞ ಜನಿಸಿದ್ದು ಇಂದಿನ ಹಾವೇರಿ ಜಿಲ್ಲೆ ಹಿರೇಕೆರೂರ ಅಂಬಲೂರ . ಇದು ಈಗ ಸರ್ವಜ್ಞನ ಅಬಲೂರು ಎಂದೇ ಪ್ರಸಿದ್ಧಿ ಪಡೆದಿದೆ. ಅವನ ಹೆತ್ತಮ್ಮ ಕುಂಬಾರ ಮಾಳೆ, ಪ್ರೀತಿಯಿಂದ ನಾಮಕರಣ ಮಾಡಿದ ಹೆಸರು -ಪುಷ್ಪದತ್ತ. ಸಾಕು ತಾಯಿ ಮಲ್ಲಕ್ಕ. ತಂದೆ ಬಸವರಸ. ಹಾವೇರಿ ಜಿಲ್ಲೆಯ ಹಿರೇಕೇರೂರು ತಾಲ್ಲೂಕು ಮಾಸೂರಿನಲ್ಲಿ ವಾಸವಾಗಿದ್ದ ಆರಾಧ್ಯ ಬ್ರಾಹ್ಮಣ, ಬಸವರಸನು, ಎಷ್ಟು ದಿನಗಳಾದರೂ ಮಕ್ಕಳಾಗದಿದ್ದಾಗ ಮಲ್ಲಮ್ಮನನ್ನು ಸಮಾಧಾನ ಮಾಡಿ, ಪುತ್ರಸಂತಾನದ ವರ ಪಡೆಯಲು ಕಾಶೀ ಕ್ಷೇತ್ರಕ್ಕೆ ಹೊರಡುತ್ತಾನೆ. ಭಕ್ತಿಯಿಂದ ಸೇವೆ ಮಾಡಿದ ಬಸವರಸನಿಗೆ ಕಾಶಿ ವಿಶ್ವನಾಥನು ಕನಸಿನಲ್ಲಿ ಪ್ರತ್ಯಕ್ಷನಾಗಿ, 'ನಿನಗೆ ಪುತ್ರಪ್ರಾಪ್ತಿಯಾಗುವುದು. ಹುಟ್ಟುವ ಮಗನು ನನ್ನ ಪ್ರಸಾದದಿಂದ ಮಹಾಜ್ಞಾನಿಯಾಗುವನು' ಎಂದು ಹೇಳಲು ಆನಂದಭರಿತನಾದ ಬಸವರಸನು, ಪ್ರಾತಃಕಾಲದಲ್ಲಿ ಎದ್ದು, ಪವಿತ್ರ ಗಂಗಾಸ್ನಾನ ಮಾಡಿ, ವಿಶ್ವನಾಥನನ್ನು ಅರ್ಚಿಸಿ, ಪ್ರಸಾದಗಳೊಂದಿಗೆ ತನ್ನ ಗ್ರಾಮದ ಹಾದಿ ಹಿಡಿದನು. ಹಗಲಿರುಳು ಪ್ರಯಾಣ ಮಾಡಿ ಅನೇಕ ಗ್ರಾಮಗಳಲ್ಲಿ ವಿಶ್ರಮಿಸಿ, ದಾರಿಯಲ್ಲಿ ಸಿಕ್ಕ 'ಅಂಬಲೂರ ಎಂಬ ಗ್ರಾಮಕ್ಕೆ ಬರುವಾಗ ಭಯಂಕರ ಗುಡುಗು, ಸಿಡಿಲುಗಳಿಂದ ಮಳೆ ಸುರಿಯುತ್ತಿತ್ತು. ಸಮೀಪದಲ್ಲಿದ್ದ ಕುಂಬಾರಸಾಲೆಯಲ್ಲಿ ಕುಂಬಾರ ಮಾಳಿ ಎಂಬುವಳ ಮನೆಯಲ್ಲಿ ವಸತಿ ಮಾಡಿದನು. ಕಾಲಧರ್ಮ ಸಂಯೋಗದಿಂದ ಮಾಳಿಯಲ್ಲಿ ವ್ಯಾಮೋಹಗೊಂಡ ಬಸವರಸನಿಗೆ ಕಾಮ ವಿಕಾರವಾಯಿತು. ಕಾಶಿಯಿಂದ ತಂದ ತೀರ್ಥ ಪ್ರಸಾದಗಳನ್ನು ಕೊಟ್ಟು ಅವಳ ಸಂಗ ಮಾಡಿದನು. ೯ ತಿಂಗಳ ನಂತರ ಮಾಳಿ ದಿವ್ಯ ತೇಜಸ್ಸಿನ ಗಂಡು ಕೂಸಿಗೆ ಜನ್ಮವಿತ್ತಳು. 'ಪುಷ್ಪದತ್ತ'ನೆಂದು ನಾಮಕರಣವೂ ಆಯಿತು. ಮುಂದೆ ಈ ಮಗುವೇ ಜಗತ್ತಿಗೆ ಸರ್ವಜ್ಞನೆಂದು ಪ್ರಸಿದ್ಧಿಯಾದನು. ಬಾಲ್ಯದಲ್ಲಿಯೆ ಅಗಾಧವಾದ ಪಾಂಡಿತ್ಯವನ್ನು ಶಿವನ ವರಪ್ರಸಾದದಿಂದ ಪಡೆದಿದ್ದನು. ತಂದೆ ತಾಯಿಗಳಿಂದ ಅಗಲಿ ಪುಣ್ಯಕ್ಷೇತ್ರಗಳನ್ನೂ ಗುರುಮಠಗಳನ್ನೂ ಭೇಟಿ ಮಾಡಿ ಜ್ಞಾನಾರ್ಜನೆ ಮಾಡಿದನು. ಎಲ್ಲಾ ಶಾಸ್ತ್ರಗಳ ಜ್ಞಾನವನ್ನು ಸಂಪಾದಿಸಿದನು. ಅವನ ಜನಪ್ರಿಯ ವಚನಗಳು ಅವನ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಒದಗಿಸಿವೆ. ಅವನು ರಚಿಸಿದ ತ್ರಿಪದಿಗಳಿಗೆ ಲೆಕ್ಕವಿಲ್ಲ. ಅವನು ಆಶುಕವಿಯಾದ್ದರಿಂದ, ಎಷ್ಟೋ ಕವನಗಳು ಅವನ ಸ್ಮೃತಿಯಲ್ಲೇ ಉಳಿದಿರಬಹುದು. ಸುಮಾರು ೭,೦೭೦ ವಚನಗಳು ಲಭ್ಯವಾಗಿದೆಯೆಂದು ತಜ್ಞರ ಅಭಿಪ್ರಾಯ. ಸರ್ವಜ್ಞ - ತನ್ನ ಬಗೆಗೆ ೧. ಮುನ್ನ ಪೂರ್ವದಲಾನು | ಪನ್ನಗಧರನಾಳು ಎನ್ನಯ ಪೆಸರು ಪುಷ್ಪದತ್ತನು-ಎಂದು ಮನ್ನಿಪರು ನೋಡ ಸರ್ವಜ್ಞ ೨. ಅಂದಿನಾ | ಪುಷ್ಪದತ್ತ || ಬಂದ ವರರುಚಿಯಾಗಿ ಮುಂ ದೇವಸಾಲೆ ಸರ್ವಜ್ಞ - ನೆಂದೆನಿಸಿ ನಿಂದವನು ತಾನೇ ಸರ್ವಜ್ಞ ೩. ಮಕ್ಕಳಿಲ್ಲವು ಎಂದು | ಅಕ್ಕಮಲ್ಲಮ್ಮನು ದುಕ್ಕದಿ ಬಸವ | ಗರಿಪಲ್ಲವ | - ಕಾಶಿಯ ಮುಕ್ಕಣ್ಣಗೆ ಹೋದ ಸರ್ವಜ್ಞ ೪. ಮಾಸನೂರ ಬಸವರಸ | ಕೊಸನಿಶನ ಕೇಳಲು ಕಾಶಿಯೀಶನೊಳು ಪಡೆದ ವರ - ವಧು ನಡುವೆ ಸೂಸಿತೆಂತಲು ಸರ್ವಜ್ಞ ೫. ಗಂಡಾಗಬೇಕೆಂದು | ಪಿ0ಡವ ನುಂಗಲು ಲಂಡೆ ಮಾಳ್ವೆಯೊಳು ಜನಿಸಿ - ಲೋಕದೊಳು ಕಂಡುದನೆ ಪೇಳ್ವೆ ಸರ್ವಜ್ಞ ೬. ಗಡಿಗೆ-ಮಡಕೆಯ ಕೊಂಡು | ಅಡುವಡಾವಿಗೆಯೊಳಗೆ ಬಿಡದೆ ಮಳೆಮೋಡ ಹಿಡಿಯಲವ - ರಿಬ್ಬರಿಗು ತಡೆ ಬಿಡಲಾಯ್ತು ಸರ್ವಜ್ಞ ೭. ಅಂಬಲೂರೊಳಗೆಸೆವ | ಕುಂಬಾರಸಾಲೆಯಲಿ ಇಂದಿನ | ಕಳೆಯ | ಮಾಳಿಯೊಳು - ಬಸವರಸ ನಿಂಬಿಟ್ಟನೆನ್ನ ಸರ್ವಜ್ಞ ೮. ಬಿಂದುವ ಬಿಟ್ಟು ಹೋ | ದಂದು ಬಸುರಾದಳವ ಳಂದದಿಯಷ್ಟಾದಶ ಮಾಸ - ಉದರದಲಿ ನಿಂದು ನಾ ಬೆಳೆದೆ ಸರ್ವಜ್ಞ ೯. ಹೆತ್ತವಳು ಮಾಳಿ ಎನ್ನ | ನೊತ್ತಿ ತೆಗೆದವಳು ಕೇಶಿ ಕತ್ತು ಬೆನ್ನ ಹಿಡಿದವಳು ಕಾಳಿ - ಮೊರಿದೊಳೆನ್ನ ಬತ್ತಲಿರಿಸಿದಳು ಸರ್ವಜ್ಞ ೧೦. ಬೆಳೆದೆನವರಿಂದೆನ್ನ | ಕಳೆಯ ಕಂಡವರೆಲ್ಲ ಮೊಳೆಯಲ್ಲಿ ಸಸಿಯನರಿವಂತೆ - ಮಾಳಿಯ ತಿಳಿದವರರೆಗು ಸರ್ವಜ್ಞ ೧೧. ಗಂಡ ತನ್ನಯದೆಂಬ | ಲಂಡೆ ತನ್ನಯದೆಂಬ ಖಂಡಪರಶುವಿನ ವರಪುತ್ರ - ನಾನು ನೆರೆ ಕಂಡುದನೆ ಪೇಳ್ವೆ ಸರ್ವಜ್ಞ ೧೨. ಮಾಳನು ಮಾಳಿಯು | ಕೊಳ್ ತಿಂದ ಹೆಮ್ಮೆಯಲಿ ಕೇಳೆ ನೀನಾರ ಮಗನೆಂದು - ನಾ ಶಿವನ ಮೇಳದಣುಗೆಂಬೆ ಸರ್ವಜ್ಞ (ವಿಕಿಸೋರ್ಸ್) ತ್ರಿಪದಿಗಳು ಒಟ್ಟು ಸುಮಾರು ೧,೦೦೦ ತ್ರಿಪದಿಗಳು ಸರ್ವಜ್ಞನ ಹೆಸರಿನಲ್ಲಿ ದಾಖಲಾಗಿವೆ. ಚರಿತ್ರಜ್ಞರ ಪ್ರಕಾರ ಇವುಗಳಲ್ಲಿ ಕೆಲವು ತ್ರಿಪದಿಗಳು ನಂತರದ ಕಾಲದಲ್ಲಿ ಬೇರೆ ಬೇರೆ ಲೇಖಕರಿಂದ ಬರೆಯಲ್ಪಟ್ಟಿರಬಹುದು. ಸರ್ವಜ್ಞನ ತ್ರಿಪದಿಗಳು ತಮ್ಮ ಸರಳತೆ ಮತ್ತು ಪ್ರಾಸಬದ್ಧತೆಯಿಂದ ಜನಪ್ರಿಯವಾಗಿವೆ. ಈ ತ್ರಿಪದಿಗಳು ಮುಖ್ಯವಾಗಿ ನೈತಿಕ, ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳನ್ನು ಕುರಿತವು. ಹಲವು ಒಗಟುಗಳು ಸಹ ಸರ್ವಜ್ಞನ ತ್ರಿಪದಿಗಳಲ್ಲಿ ಸೇರಿವೆ. ಸರ್ವಜ್ಞನ ತ್ರಿಪದಿಗಳ ಕೆಲವು ಉದಾಹರಣೆಗಳು: ಮಾಸೂರ ಬಸವರಸ । ಕೂಸನೀಶನ ಕೇಳೆ। ಕಾಶಿಯ ಅಭವನೊಳು । ಪಡೆದ ವರವದುವೇ । ಸೂಸಿತೆಂತೆನಲು ಸರ್ವಜ್ಞ ॥ ಸರ್ವಜ್ಞನೆಂಬುವನು ಗರ್ವದಿಂದಾದವನೇ? ಸರ್ವರೊಳು ಒಂದೊಂದು ನುಡಿಗಲಿತು ವಿದ್ಯೆಯ ಪರ್ವತವೆ ಆದ ಸರ್ವಜ್ಞ. ಮೂರ್ಖಂಗೆ ಬುದ್ಧಿಯನು ನೂರ್ಕಾಲ ಹೇಳಿದರು ಗೋರ್ಕಲ್ಲಮೇಲೆ ಮಳೆಗರೆದರೆ ಆಕಲ್ಲು ನೀರುಕುಡಿವುದೆ ಸರ್ವಜ್ಞ? ಸಾಲವನು ಕೊಂಬಾಗ ಹಾಲೋಗರುಂಡಂತೆ ಸಾಲಿಗರು ಕೊಂಡು ಎಳೆವಾಗ ಕಿಬ್ಬಡಿಯ ಕೀಲು ಮುರಿದಂತೆ ಸರ್ವಜ್ಞ. ಏಳು ಕೋಟಿಯೆ ಕೋಟಿ, ಏಳು ಲಕ್ಷವೇ ಲಕ್ಷ ಏಳು ಸಾವಿರದ ಎಪ್ಪತ್ತು ವಚನಗಳ ಹೇಳಿದನು ಕೇಳ ಸರ್ವಜ್ಞ." ಬೆಚ್ಚನೆಯ ಮನೆಯಾಗೆ ವೆಚ್ಚಕ್ಕೆ ಹೊನ್ನಾಗೆ ಇಚ್ಛೆಯನರಿವ ಸತಿಯಾಗೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ ಇತರ ಮಾಹಿತಿ ಸರ್ವಜ್ಞನನ್ನು ಕುರಿತು ಸರ್ವಜ್ಞಮೂರ್ತಿ ಎಂಬ ಕನ್ನಡ ಚಲನಚಿತ್ರವು ೧೯೬೫ರಲ್ಲಿ ತೆರೆಕಂಡಿತು. ಬಾಹ್ಯ ಸಂಪರ್ಕಗಳು ಸರ್ವಜ್ಞನ ವಚನಗಳು (ವಿಚಾರಮಂಟಪ.ನೆಟ್) ಇದರ ಮೂಲ 'ನುಡಿ'ಲಿಪಿಯಲ್ಲಿದ್ದು ಅದನ್ನು, ಯೂನಿಕೋಡಿಗೆ ಪರಿವರ್ತಿಸಿ ಚರ್ಚೆಪುಟದಲ್ಲಿ ಹಾಕಿದೆ. ಸರ್ವಜ್ಞನ ವಚನಗಳು (೧೪೨೦ ವಚನಗಳಿವೆ;(ವಿಕಿಸೋರ್ಸ್: ಉಲ್ಲೇಖಗಳು ವಚನ ಸಾಹಿತ್ಯ ಲಿಂಗಾಯತ
1257
https://kn.wikipedia.org/wiki/%E0%B2%95%E0%B2%A8%E0%B2%95%E0%B2%A6%E0%B2%BE%E0%B2%B8%E0%B2%B0%E0%B3%81
ಕನಕದಾಸರು
ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳ ಪಂಗಡದ ದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು. ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ. ಕನಕದಾಸರು ದಂಡನಾಯಕರಾಗಿದ್ದು ಯುದ್ಧವೊಂದರಲ್ಲಿ ಸೋತ ಅವರಿಗೆ ಉಪರತಿ/ವೈರಾಗ್ಯ ಉಂಟಾಗಿ, ಹರಿಭಕ್ತರಾದರಂತೆ. ಜೀವನ ಜನನ ಕನಕದಾಸರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ 1509ರಲ್ಲಿ ಕುರುಬ ಜನಾಂಗಕ್ಕೆ ಸೇರಿದ ಬಚ್ಚಮ್ಮ ಮತ್ತು ಬೀರಪ್ಪನಾಯಕ ಎಂಬ ದಂಪತಿಗಳ ಮಗನಾಗಿ ಜನಿಸಿದರು. ಕನಕದಾಸರು ಬರಿ ಕುರುಬ ಜಾತಿಗೆ ಸೀಮಿತವಾದ ಭಕ್ತರಲ್ಲ ಎಲ್ಲಾ ಜಾತಿಗಳಿಗೆ ಬೇಕಾದವರು. 15 - 16 ನೆಯ ಶತಮಾನದಲ್ಲೇ ಜಾತಿ ವ್ಯವಸ್ಥೆಯ ಬಗ್ಗೆ ಸಮರ ಸಾರಿದ ಭಕ್ತ ಎಂದರೆ ಕನಕದಾಸರು ಎಂದರೆ ತಪ್ಪಾಗಲಾರದು. ಕನಕದಾಸರು ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆ. ಐತಿಹ್ಯ ಸುಮಾರು ಐದು ನೂರು ವರ್ಷಗಳ ಹಿಂದಿನ ಮಾತು. ವಿಜಯನಗರ ಸಾಮ್ರಾಜ್ಯದಲ್ಲಿದ್ದ ಬಂಕಾಪುರ ಪ್ರಾಂತದ ಮುಖ್ಯಪಟ್ಟಣದ ಹೆಸರು ಬಾಡ ಎಂದು. ವಿಜಯನಗರದಿಂದ ಗೋವಾಕ್ಕೆ ಹೋಗುವ ಹೆದ್ದಾರಿ. ಈ ಬಾಡದಿಂದಲೇ ಹಾಯ್ದು ಹೋಗುತ್ತಿತ್ತು. ಬಾಡ ಒಳ್ಳೇ ಆಯಕಟ್ಟಿನ ಸ್ಥಳ. ಈ ಬಂಕಾಪುರ ಪ್ರಾಂತಕ್ಕೆ ಡಣ್ಣಾಯಕ, ಬೀರಪ್ಪನಾಯಕ. (ಡಣ್ಣಾಯಕ ಎಂದರೆ ಆಯಕಟ್ಟಿನ ಸ್ಥಳದಲ್ಲಿ ಕಾದಿಟ್ಟ ಸೈನ್ಯದ ದಳಕ್ಕೆ ಸೇನಾಪತಿ ಎಂದು ನೇಮಿಸಲ್ಪಟ್ಟವನು) ಬೀರಪ್ಪನ ಹೆಂಡತಿ ಬಚ್ಚಮ್ಮ. ಬೀರಪ್ಪನಾಯಕನಿಗೆ ತಿರುಪತಿ ತಿಮ್ಮಪ್ಪನಲ್ಲಿ ಬಹು ನಂಬಿಕೆ. ದಕ್ಷಿಣದಲ್ಲಿ ಸುಮಾರು ಒಂಬೈನೂರು ವರ್ಷಗಳ ಹಿಂದೆ ಶ್ರೀರಾಮಾನುಜಾಚಾರ್ಯರೆಂಬ ದೊಡ್ಡ ಗುರುಗಳು ಪ್ರಸಿದ್ಧರಾಗಿದ್ದರು. ಅವರು ಸ್ಥಾಪಿಸಿದ ಪಂಥಕ್ಕೆ ಶ್ರೀವೈಷ್ಣವ ಮತವೆಂದು ಹೆಸರು. ಡಣ್ಣಾಯಕ ಬೀರಪ್ಪನಾಯಕ ಮತ್ತು ಆತನ ಮಡದಿ ಬಚ್ಚಮ್ಮ ಇವರು ಶ್ರೀ ವೈಷ್ಣವ ಮತಕ್ಕೆ ಶರಣು ಹೋಗಿದ್ದರು. ಅಂದಿನಿಂದ ಇವರು ಸಹ ತಿರುಪತಿ ವಂಕಟೇಶ್ವರ ಸ್ವಾಮಿಯನ್ನೇ ತಮ್ಮ ಆರಾಧ್ಯ ದೈವವನ್ನಾಗಿ ಮಾಡಿಕೊಂಡರು. ಬೀರಪ್ಪ ನಾಯಕ ಮತ್ತು ಬಚ್ಚಮ್ಮರಿಗೆ ಅನೇಕ ದಿನಗಳಿಂದ ಒಂದು ಹಂಬಲವಿತ್ತು. ಅದೇನೆಂದರೆ, ತಮಗೆ ಒಬ್ಬ ಕುಲದೀಪಕನಾದ ಮಗ ಜನಿಸಬೇಕು ಎಂದು. “ವಂಶೋದ್ಧಾರಕನಾದ ಒಬ್ಬ ಮಗನನ್ನು ಕರುಣಿಸು” ಎಂದು ಈ ದಂಪತಿಗಳು ತಿರುಪತಿ ತಿಮ್ಮಪ್ಪನಿಗೆ ಹರಕೆ ಹೊತ್ತಿದ್ದರು. ಅವರ ಆಸೆ ಫಲಿಸಿತು. ಬೀರಪ್ಪ ನಾಯಕ ಮತ್ತು ಬಚ್ಚಮ್ಮರಿಗೆ ಒಬ್ಬ ಮಗ ಜನಿಸಿದ. ತಂದೆ ತಾಯಿಗಳಿಗೆ ಆನಂದವೋ ಆನಂದ. ತಿರುಪತಿ ತಿಮ್ಮಪ್ಪನ ಆಶೀರ್ವಾದ ಎಂದು ಅವರು ತಮ್ಮ ಮಗುವಿಗೆ “ತಿಮ್ಮಪ್ಪ” ಎಂದೇ ನಾಮಕರಣ ಮಾಡಿದರು. ತಿಮ್ಮಪ್ಪ ಜನಿಸಿದ ಕಾಲ ಇಂತದ್ದೇ ಎಂದು ತಿಳಿಯದು; ಹದಿನೈದನೇಯ ಶತಮಾನದ ಕೊನೆಯ ವರ್ಷಗಳಲ್ಲಿ ಹುಟ್ಟಿದರು ಎಂದು ಹೇಳಬಹುದು. ತಿಮ್ಮಪ್ಪನಾಯಕ ಒಬ್ಬ ಸೇನಾಧಿಪತಿಯ ಮಗನಾಗಿ ಜನಿಸಿದನಷ್ಟೆ. ಬಾಲ್ಯದಲ್ಲಿಯೇ ಅಕ್ಷರಾಭ್ಯಾಸ, ಬಂಕಾಪುರದ ಶ್ರೀನಿವಾಸಾಚಾರ್ಯರ ಬಳಿ ವಿದ್ಯಾಭ್ಯಾಸವಾಗಿ, ವ್ಯಾಕರಣ, ತರ್ಕ, ಮೀಮಾಂಸೆ, ಸಾಹಿತ್ಯಗಳಲ್ಲಿ ಪಾರಂಗತನಾದನು. ಜೊತೆಗೆ ಕತ್ತಿವರಸೆ, ಕುದುರೆ ಸವಾರಿಯನ್ನೂ ಕಲಿತ. ಕೆಲವು ವರ್ಷಗಳಲ್ಲಿ ಬೀರಪ್ಪನಾಯಕ ಮತ್ತು ಬಚ್ಚಮ್ಮ ತೀರಿಕೊಂಡರು. ತಂದೆಯ ಬಳಿಕ ತಿಮ್ಮಪ್ಪ ನಾಯಕ ತನ್ನ ಕಿರಿವಯಸ್ಸಿನಲ್ಲಿಯೇ ಬಂಕಾಪುರ ಪ್ರಾಂತಕ್ಕೆ ಡಣ್ಣಾಯಕನಾದ. ಕನಕ ದಾಸರು ತಮ್ಮನ್ನು ತಾವೇ ಸಾವಿನ ದೇವತೆಯಾದ ಯಮನೆಂದು ತಮ್ಮ ಕೃತಿಗಳಲ್ಲಿ ಉಲ್ಲೇಖಿಸಿದ್ದಾರೆ. ಸಾಧನೆ ಕನಕದಾಸರು ಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯರು. ವ್ಯಾಸರಾಯದಿಂದ ಮಧ್ವ ತತ್ವಶಾಸ್ತ್ರವನ್ನು ಕಲಿತು ಒಪ್ಪಿಕೊಂಡ ಕನಕದಾಸರು ಉಡುಪಿ ಶ್ರೀ ಕೃಷ್ಣನ ಅನನ್ಯ ಭಕ್ತರು. ಕಾಗಿನೆಲೆಯ ಆದಿಕೇಶವನ ಭಕ್ತರಾದ ಕನಕದಾಸರು ಜಾತಿಪದ್ಧತಿಯ ತಾರತಮ್ಯಗಳನ್ನು ಅಲ್ಲಗಳೆದರು. ಇವರ ಕೀರ್ತನೆಗಳ ಅಂಕಿತ ಕಾಗಿನೆಲೆಯ ಆದಿಕೇಶವರಾಯ ಎಂಬುದು ಕನಕ ದಾಸರ ಸಾಹಿತ್ಯ ರಚನೆ ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿರುವುದಲ್ಲದೆ, ಸಂಗೀತ ಪ್ರಪಂಚಕ್ಕೆ ತನ್ನದೇ ಆದಂತಹ ಕೊಡುಗೆಯನ್ನು ಮುಂಡಿಗೆಗಳ ರೂಪದಲ್ಲಿ ನೀಡಿದ್ದಾರೆ. ಸುಮಾರು 316 ಕೀರ್ತನೆಗಳು ಹಾಗೂ ಇನ್ನಿತರ ಸಾಹಿತ್ಯ ಮಾತ್ರ ಲಭ್ಯವಾಗಿರುವುದನ್ನು ಕಾಣಬಹುದಾಗಿದೆ. ಅವರ ಐದು ಮುಖ್ಯ ಕಾವ್ಯಕೃತಿಗಳು ಇಂತಿವೆ: ಮೋಹನತರಂಗಿಣಿ ನಳಚರಿತ್ರೆ ರಾಮಧಾನ್ಯ ಚರಿತೆ ಹರಿಭಕ್ತಿಸಾರ ನೃಸಿಂಹಸ್ತವ (ದೊರೆತಿಲ್ಲ) ಮೋಹನತರಂಗಿಣಿ ಮೋಹನತರಂಗಿಣಿಯು 42 ಸಂಧಿಗಳಿಂದ ಕೂಡಿದ್ದು ಸಾಂಗತ್ಯದಲ್ಲಿ ರಚಿತವಾಗಿರುವ 2798 ಪದ್ಯಗಳಿವೆ. ಮೋಹನತರಂಗಿಣಿಯಲ್ಲಿ ಕನಕದಾಸರು ಕೃಷ್ಣಚರಿತ್ರೆಯನ್ನು ಹೇಳುತ್ತಾ ತಮ್ಮ ಅಧಿರಾಜ ಕೃಷ್ಣದೇವರಾಯನನ್ನೇ ಕೃಷ್ಣನಿಗೆ ಹೋಲಿಸುತ್ತಾರೆ. ಅವರ ದ್ವಾರಕಾಪುರಿ ಸ್ವಯಂ ವಿಜಯನಗರವೇ ಆಗಿರುವುದು ಇತಿಹಾಸದಿಂದ ತಿಳಿದು ಬರುತ್ತದೆ. ಮೋಹನತರಂಗಿಣಿ ಅಥವಾ ಕೃಷ್ಣಚರಿತೆ ಎಂಬ ಈ ಕಾವ್ಯದಲ್ಲಿ ಕನಕದಾಸರ ಸಮಕಾಲೀನ ಜೀವನ ಚಿತ್ರಗಳು ಹಾಗೂ ಪೌರಾಣಿಕ ಕಥೆಗಳು ಅಚ್ಚಗನ್ನಡದಲ್ಲಿ ನಿರೂಪಿತವಾಗಿವೆ. ದಣ್ಣಾಯಕನಾಗಿ ಕನಕ ಆಗಾಗ್ಗೆ ರಾಜಧಾನಿ ವಿಜಯನಗರಕ್ಕೆ ಹೋಗಬೇಕಾಗಿತ್ತು. ವಿಜಯನಗರ ಸಾಮ್ರಾಜ್ಯದ ರಾಜವೈಭವ, ರಾಜಸಭೆ, ರಾಜಪರಿವಾರದ ಸರಸ ಸುಮ್ಮಾನ, ಶೃಂಗಾರ ಜೀವನ, ಜಲಕ್ರೀಡೆ, ಓಕುಳಿಯಾಟ, ನವರಾತ್ರಿ, ವಿಜಯನಗರದ ಪುರರಚನೆ, ಉದ್ಯಾನವನ, ಪ್ರಜೆಗಳ ವೇಷಭೂಷಣ, ರಾಜ್ಯದ ಯುದ್ಧ ವಿಧಾನ ಇತ್ಯಾದಿಗಳು ಅವನ ಮನಸೂರೆಗೊಂಡಿದ್ದವು. ಕವಿ ಮನಸಿನ ಕನಕ ತನ್ನ ಅನುಭವವನ್ನೆಲ್ಲ ಬರಹ ರೂಪಕ್ಕೆ ತಂದ. ಆ ಬರಹವೇ ಇಂದು ನಮಗೆ ಲಭ್ಯವಿರುವ ಮೋಹನತರಂಗಿಣಿ. ಕನಕನ ಯೌವನ ಕಾಲದಲ್ಲಿ ರಚಿತವಾದ ತರಂಗಿಣಿಯ ಒಡಲಲ್ಲಿ ಯುದ್ಧದ ವರ್ಣನೆಗಳು ಹೆಚ್ಚೆನ್ನಬಹುದು. ಏಕೆಂದರೆ ಕನಕ ಸ್ವತಃ ಕಲಿಯಾಗಿದ್ದವನೇ ತಾನೇ? ಹಂಪಿಯ ಪತನವನ್ನು (೧೫೬೫) ಸಹ ಕನಕ ನೋಡಿದ್ದರು. ಶಂಬರಾಸುರ ವಧೆ, ಬಾಣಾಸುರ ವಧೆ, ಹರಿಹರ ಯುದ್ಧ ಹೀಗೆ ವೀರರಸ, ರೌದ್ರರಸ ಕಾವ್ಯದಲ್ಲಿ ಮೇಳೈಸಿವೆ. ಸೋಮಸೂರಿಯ ವೀಥಿಯ ಇಕ್ಕೆಗಳಲಿ ಹೇಮ ನಿರ್ಮಿತ ಸೌಧದೋಳಿ ರಮಣೀಯತೆವೆತ್ತ ಕಳಸದಂಗಡಿಯಿರ್ದುಂ ವಾ ಮಹಾ ದ್ವಾರಕಾಪುರದೇ ಓರಂತೆ ಮರಕಾಲರು ಹಡಗಿನ ವ್ಯವ ಹಾರದಿ ಗಳಿಸಿದ ಹಣವ ಭಾರ ಸಂಖ್ಯೆಯಲಿ ತೂಗುವರು ಬೇಡಿದರೆ ಕು ಬೇರಂಗೆ ಕಡವ ಕೊಡುವರು ನಳಚರಿತ್ರೆ ನಳಚರಿತ್ರೆಯು 9 ಸಂಧಿಗಳಿಂದ ಕೂಡಿದ್ದು ಭಾಮಿನೀ ಷಟ್ಪದಿಯಲ್ಲಿ ರಚನೆಯಾಗಿರುವ 481 ಪದ್ಯಗಳಿವೆ. ಮಹಾಭಾರತದಂತಹ ರಾಷ್ಟ್ರ ಮಹಾಕಾವ್ಯಕ್ಕೆ ಪ್ರೇರಣೆಯಾದ ಉಜ್ವಲ ಆರ್ಯೇತರ ಪ್ರೇಮಕಥೆ ನಳ ದಮಯಂತಿಯರ ಕಥೆ. ೧೩ನೇ ಶತಮಾನದ ನಳ ಚಂಪೂವಿಗಿಂತ ಈ ನಳಚರಿತ್ರೆ ಹೃದಯಸ್ಪರ್ಶಿಯಾದ ಚಿತ್ರಣಗಳಿಂದ ಚಿರಂತನ ಪ್ರೇಮದ ಕಥನದಿಂದ ಅಶ್ಲೀಲತೆಯ ಸೋಂಕಿಲ್ಲದ ಶೃಂಗಾರ ವರ್ಣನೆಯಿಂದ ಶೋಭಿಸುತ್ತಾ ಇಂದಿಗೂ ಅತ್ಯಂತ ಜನಪ್ರಿಯವಾಗಿದೆ. ನಳ ಮತ್ತು ದಮಯಂತಿಯರು ಹಂಸದ ಮೂಲಕ ಪ್ರೇಮ ಸಂದೇಶಗಳನ್ನು ಕಳಿಸುವುದು, ಅವರ ಸಂತೋಷ-ಆಮೋದ-ಪ್ರವೋದ ನಂತರದ ಕಷ್ಟಕಾಲ ಹಾಗೂ ಅದರ ನಂತರದ ಪುನರ್ಮಿಲನ ಹೀಗೆ ಎಲ್ಲರಿಗೂ ಈ ಕಥೆ ಚಿರಪರಿಚಿತ. ಕಷ್ಟ ಕಾಲದಲ್ಲಿ ಕಾಡಿನಲ್ಲಿ ಮಲಗಿರುವಾಗ ದಮಯಂತಿಯನ್ನು ಕುರಿತು ನಳ: ಲಲಿತ ಹೇಮದ ತೂಗಮಂಚದ ಹೊಳೆವ ಮೇಲ್ವಾಸಿನಲಿ ಮಲಗು ಲಲನೆಗೀ ವಿಧಿ ಬಂದುದೇ ಹಾ! ಎನುತ ಬಿಸುಸುಯ್ದ (೫-೨) ಹೀಗೆ ನಳಚರಿತ್ರೆಯಲ್ಲಿ ಕರುಣರಸಕ್ಕೇ ಪ್ರಾಧಾನ್ಯತೆ ಇದೆ. ಇನ್ನು ನಳಚರಿತ್ರೆಯಲ್ಲಿನ ಶೃಂಗಾರರಸದ ಬಗ್ಗೆ ಹೇಳುವುದಾದರೆ ಅದು ಪ್ರೌಢಶೃಂಗಾರ ಎನ್ನಬಹುದೇನೋ? ಅಲ್ಲಿ ಮೋಹನ ತರಂಗಿಣಿಯಲ್ಲಿ ಅದು ಕಣ್ಣು ಕುಕ್ಕುವ ಶೃಂಗಾರ, ಆದರೂ ಅದು ಹುಳಿಮಾವಿನಂತೆ ಹಂಚಿ ತಿನ್ನಲಾಗದು. ಮುಕ್ತವಾಗಿ ಚರ್ಚಿಸಲಾಗದು. ನಳಚರಿತ್ರೆಯ ಶೃಂಗಾರವಾದರೆ ಮಲ್ಲಿಗೆ ಮಾವಿನ ಹಾಗೆ, ಮಧುರ ರುಚಿ, ಮಧುರ ಸುವಾಸನೆ. ರಾಮಧಾನ್ಯಚರಿತೆ ರಾಮಧಾನ್ಯಚರಿತ್ರೆ ಭಾಮಿನೀ ಷಟ್ಪದಿಯಲ್ಲಿ ರಚಿತವಾಗಿರುವ 156 ಪದ್ಯಗಳನ್ನು ಒಳಗೊಂಡಿದೆ. ಈ ಕೃತಿಯಲ್ಲಿ ಧನಿಕರ ಆಹಾರಧಾನ್ಯ ಅಕ್ಕಿ ಹಾಗೂ ಕೆಳವರ್ಗದವರ ಆಹಾರಧಾನ್ಯವೆಂದು ಪರಿಭಾವಿಸಲಾಗಿರುವ ರಾಗಿಯ ನಡುವಿನ ಸಂಭಾಷಣೆಯ ಮೂಲಕ ರಾಗಿ ಹೇಗೆ ತನ್ನ ಔನ್ನತ್ಯವನ್ನು ಸಾಬೀತು ಪಡಿಸುತ್ತದೆ ಹಾಗೂ ರಾಮಧಾನ್ಯವೆಂಬ ಹೆಸರು ಪಡೆಯುತ್ತದೆ ಎಂಬುದನ್ನು ನಿರೂಪಿಸಲಾಗಿದೆ. ಇದರಲ್ಲಿ ಯುದ್ಧದ ಸನ್ನಿವೇಶ ಇಲ್ಲವಾದರೂ ವೀರರಸದ ಮಾತುಗಳಿಗೇನೂ ಕೊರತೆಯಿಲ್ಲ. ನುಡಿಗೆ ಹೇಸದ ಭಂಡ ನಿನ್ನೊಳು ಕೊಡುವರೇ ಮಾರುತ್ತರವ ಕಡುಜಡವಲಾ, ನಿನ್ನೊಡನೆ ಮಾತೇಕೆ? ಹೆಣದ ಬಾಯಿಗೆ ತುತ್ತು ನೀನಹೆ ನಿನ್ನ ಜನ್ಮ ನಿರರ್ಥಕವಲಾ ಎಲವೂ ನೀನೆಲ್ಲಿಹೆಯೋ ನಿನ್ನಯ ಬಳಗವದು.. ಮುಂತಾದ ಮಾತುಗಳಲ್ಲಿ ಕನಕದಾಸರು ರಾಗಿಯ ನೆಪ ಹಿಡಿದು ತಮ್ಮದೇ ಆತ್ಮಕಥೆಯನ್ನು ಹೇಳುತ್ತಿರುವಂತೆ ತೋರುತ್ತದೆ. ಸಮಾಜದ ಮೇಲ್ವರ್ಗದವರ ಆಹಾರ ಧಾನ್ಯ ಭತ್ತ ಹಾಗೂ ಕೆಳವರ್ಗದವರ ಆಹಾರ ಧಾನ್ಯ ರಾಗಿಯ ನಡುವಿನ ಸಂಭಾಷಣೆಯನ್ನು ನಿರೂಪಿಸುವ ಕನಕದಾಸರ ಸೃಜನಶೀಲತೆ ಅತಿಶಯ. ಒಂದು ರೀತಿಯಲ್ಲಿ ರಾಮಧಾನ್ಯಚರಿತ್ರೆ ಇಂದಿನ ಬಂಡಾಯ ಸಾಹಿತ್ಯದ ಬೇರು, ನವ್ಯೋತ್ತರದ ಸೂರು ಎಂದರೆ ಬಹುಶ: ತಪ್ಪಾಗಲಾರದು. ಹರಿಭಕ್ತಿಸಾರ ಹರಿಭಕ್ತಿಸಾರ ೧೧೦ ಭಕ್ತಿಪದ್ಯಗಳಿರುವ ಗ್ರಂಥ. ಭಾಮಿನೀ ಷಟ್ಪದಿಯಲ್ಲಿ ಸರಳಗನ್ನಡದಲ್ಲಿ ರಚಿತವಾಗಿರುವ ಈ ಗ್ರಂಥ ಕನ್ನಡದ ಭಗವದ್ಗೀತೆಯಂತಿದೆ. ಒಟ್ಟಿನಲ್ಲಿ ಕನಕದಾಸರ ಎಲ್ಲ ಕಾವ್ಯಗಳೂ ಕವಿ ಸಹಜವಾದ ವರ್ಣನೆಗಳಿಂದಲೂ ಉಪಮೆಗಳಿಂದಲೂ ಶ್ರೀಮಂತವಾಗಿದ್ದು ಅವರ ಕಾವ್ಯ ಕೌಶಲಕ್ಕೆ ಎಲ್ಲರೂ ಬೆರಗಾಗುವಂತೆ ಮಾಡಿದೆಯೆಂದರೆ ಉತ್ಪ್ರೇಕ್ಷೆಯಲ್ಲ. ಕೀರ್ತನೆಗಳು ಕನಕದಾಸರು 316 ಕೀರ್ತನೆಗಳನ್ನು ರಚಿಸಿದ್ದಾರೆ. ಕನಕದಾಸರ ಭಕ್ತಿ ಪಾರಮ್ಯವನ್ನು ಅವರ ಕೀರ್ತನೆಗಳಲ್ಲಿ ಕಾಣಬಹುದು. ಶ್ರೀಹರಿಯನ್ನು ತಮ್ಮ ಧಣಿಯಾಗಿ, ಇನಿಯನಾಗಿ, ಅಣೋರಣೀಯನಾಗಿ, ಮಹತೋಮಹೀಮನಾಗಿ ಅವರು ಕಂಡಿದ್ದಾರೆ. 'ಬಾ ರಂಗ ಎನ್ನ ಮನಕೆ ಎಂದು ಹೃದಯ ಸದನಕ್ಕೆ 'ಎಂದು ಕರೆದು ನೆಲೆ ನಿಲ್ಲಿಸಿಕೊಂಡ ಅನುಭಾವ ಅವರದು. ಒಳಗಣ್ಣಿನಿಂದ ಅವನ ಕಂಡು- 'ಕಂಡೆ ನಾ ತಂಡ ತಂಡ ಹಿಂಡು ದೈವ ಪ್ರಚಂಡ ರಿಪು ಗಂಡ ಉದ್ಧಂಡ ನರಸಿಂಹನ' ಎಂದು ಸಂತೋಷಪಟ್ಟಿದ್ದಾರೆ. 'ಎಲ್ಲಿ ನೋಡಿದರಲ್ಲಿ ರಾಮ' ಎಂಬ ಅನುಭೂತಿಯಲ್ಲಿ ಹರಿಯನ್ನು ಕಂಡ ಬಳಿಕ 'ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು' ಎಂಬ ಧನ್ಯತಾಭಾವ. 'ದಾಸದಾಸರ ಮನೆಯ ದಾಸಿಯರ ಮಗ ಮಂಕುದಾಸ ಮರುಳುದಾಸ ನರಜನ್ಮಹುಳು ಪರಮಪಾಪಿ' ಎಂದು ಕರೆದುಕೊಂಡಿದ್ದ ಅವರು ಜೀವ ಮಾಗಿ ಹಣ್ಣಾದಂತೆ ಪರಮಾತ್ಮನ ಸಾಕ್ಷಾತ್ಕಾರವಾದಂತೆ 'ಆತನೊಲಿದ ಮೇಲೆ ಇನ್ಯಾತರ ಕುಲವಯ್ಯಾ' ಎಂದುಕೊಳ್ಳುತ್ತಾರೆ. ಜೈನ, ವೀರಶೈವರ ಕಿತ್ತಾಟ, ಮುಸಲ್ಮಾನ ಪ್ರಾಬಲ್ಯ ಇವುಗಳಿಂದ ಸೊರಗಿ ಹೋಗಿದ್ದ ವೈದಿಕ ಧರ್ಮಕ್ಕೆ ಪುನಶ್ಚೇತನ ನೀಡಲು ವ್ಯಾಸರಾಯರಂಥವರು ಶ್ರಮಿಸುತ್ತಿದ್ದ ಕಾಲವದು. ವೈದಿಕ ಸಂಸ್ಕೃತಿಯ ಉತ್ಥಾನಕ್ಕೆಂದು ಹುಟ್ಟು ಹಾಕಲಾದ ವಿಜಯನಗರ ಸಾಮ್ರಾಜ್ಯ ಕೃಷ್ಣದೇವರಾಯನ ಅಳಿವಿನ ನಂತರ ಪತನದ ಹಾದಿ ಹಿಡಿದಿತ್ತು. ಇಂಥಲ್ಲಿ ಕನಕದಾಸರಂಥವರ ಕಾವ್ಯಕೃಷಿ ಹಾಗೂ ಸಾರ್ವಜನಿಕ ಜೀವನ ವ್ಯಾಸರಾಯರಿಗೆ ಬೆಂಬಲದ ಶ್ರೀರಕ್ಷೆಯಾಗಿದ್ದವು. 'ನಾವು ಕುರುಬರು ನಮ್ಮ ದೇವರು ಬೀರಯ್ಯ ಕಾವ ನಮ್ಮಜ್ಜ ನರಕುರಿ ಹಿಂಡುಗಳ' ಎಂದು ವಿನೀತ ಜಾತಿ ಭಾವನೆ ತೋರಿದ್ದ ಕನಕದಾಸರು ವ್ಯಾಸರಾಯರ ಸಂಪರ್ಕದ ನಂತರ 'ಕುಲಕುಲಕುಲವೆಂದು ಹೊಡೆದಾಡದಿರಿ' ಎಂದು ಜಂಕಿಸಿ ಕೇಳುವ ಹಾಗಾದರು. ಇಂಥ ನಡವಳಿಕೆಗಳಿಂದ ವೈದಿಕ ಧರ್ಮದ ಗುತ್ತಿಗೆ ತಮ್ಮದು ಎಂದು ಭಾವಿಸಿದ್ದ ಬ್ರಾಹ್ಮಣರಿಗೆ ಕನಕದಾಸರು ಬಿಸಿ ತುಪ್ಪವಾದರು. ಹಿಂದೂ ಸಮಾಜದಲ್ಲಿ ಈ ಬ್ರಾಹ್ಮಣ ಬ್ರಾಹ್ಮಣೇತರ ಕಂದರ/ಕ ದೊಡ್ಡದಾಗುತ್ತಾ ಹೋದಂತೆ ವ್ಯಾಸಪೀಠದ ಜೊತೆಗೆ ದಾಸಕೂಟದ ರಚನೆಯೂ ಆಗಬೇಕಾದಂತಹ ಅನಿವಾರ್ಯತೆ ಮೂಡಿತು. ಉಚ್ಚಕುಲದ ಮಾಧ್ವ ಬ್ರಾಹ್ಮಣರು ಶಾಸ್ತ್ರಾಧ್ಯಯನ-ತರ್ಕ-ವ್ಯಾಕರಣಾದಿ ವಿಶಿಷ್ಟ ಜ್ಞಾನಸಂಪನ್ನರಾಗಿ ಶಬ್ದ ಶಬ್ದಗಳನ್ನು ತಿಕ್ಕಿ ತೀಡಿ ನಿಷ್ಪತ್ತಿ ಹಿಡಿದು ಸಿದ್ಧಾಂತ ಪ್ರಮೇಯಗಳನ್ನು ಮಂಡಿಸುವುದೇ ಮುಂತಾದ ಪ್ರಕ್ರಿಯೆಗಳನ್ನು ವ್ಯಾಸಪೀಠದಲ್ಲಿ ನಡೆಯಿಸುತ್ತಿದ್ದರು. ಪುರಂದರದಾಸ, ಕನಕದಾಸ, ಜಗನ್ನಾಥದಾಸ ಮೊದಲಾದವರ ಪ್ರಾತಿನಿಧಿಕ ಸಂಘಟನೆಯೇ ದಾಸಕೂಟ. ಇವರೂ ಮಾಧ್ವ ಮತ ಪ್ರಮೇಯಗಳನ್ನೇ ಪಸರಿಸುತ್ತಾ ಆಚರಿಸುತ್ತಿದ್ದರಾದರೂ ಅವುಗಳನ್ನು ಅರಿಯಲು ಸಂಸ್ಕೃತ ಜ್ಞಾನದ ಅನಿವಾರ್ಯತೆಯನ್ನು ನಿರಾಕರಿಸಿ, ಜಾತಿ ಮತಗಳ ಕಟ್ಟು ಪಾಡಿಲ್ಲದ ಇವರು ಶಾಸ್ತ್ರಾಧ್ಯಯನದ ಅನಿವಾರ್ಯತೆ ಇಲ್ಲದೆ ತಮ್ಮ ಅನುಭಾವದಿಂದ ಹೊರಹೊಮ್ಮುವ ಭಕ್ತಿಭಾವನೆಗಳನ್ನು ತಮ್ಮ ತಾಯ್ನುಡಿಯಲ್ಲಿ ಹಾಡಿ ಲೋಕಪಾವನವನ್ನೂ ಆತ್ಮೋದ್ಧಾರವನ್ನೂ ಮಾಡ ಬೇಕೆನ್ನುವವರು. ಇಂಥಾ ದಾಸಕೂಟವನ್ನು ಹುಟ್ಟುಹಾಕಿ ಪೋಷಿಸಿ ಬೆಳೆಸಿದವರು ವ್ಯಾಸರಾಯರು ಹಾಗೂ ವಾದಿರಾಜರು. ಇಷ್ಟಿದ್ದರೂ ದಾಸಕೂಟ ವ್ಯಾಸಪೀಠಗಳ ನಡುವೆ ಆಗಿಂದಾಗ್ಗೆ ಘರ್ಷಣೆಗಳು ನಡೆದೇ ಇದ್ದವು. ಈ ಕುರಿತು ಕನಕ ಪುರಂದರರ ಕೀರ್ತನೆಗಳೇ ನಮಗೆ ಸೂಚ್ಯವಾಗಿ ಹೇಳುತ್ತವೆ. ಕುಲಕುಲವೆನ್ನುತಿಹರು ಕುಲವಾವುದು ಸತ್ಯ ಸುಖವುಳ್ಳ ಜನರಿಗೆ . ತೀರ್ಥವನು ಪಿಡಿದವರು ತಿರುನಾಮಧಾರಿಗಳೇ ಜನ್ಮ ಸಾರ್ಥಕವಿರದವರು ಭಾಗವತರಹುದೇ ಆವ ಕುಲವಾದರೇನು ಆವನಾದರೇನು ಆತ್ಮಭಾವವರಿತ ಮೇಲೆ . ಅವರ ಕೀರ್ತನೆಗಳಲ್ಲಿ ಅವರ ಸಂದೇಶ ನೇರ ಮತ್ತು ಖಚಿತ. ಹಾಗೆಯೇ ಅಮೂರ್ತವಾದ ಪ್ರತಿಮಾ ನಿರೂಪಣೆಯಲ್ಲಿ ಪರಿಣತಿ, ಹಾಗೂ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತ ಸಾಹಿತ್ಯಗಳ ಪರಿಚಯವನ್ನು ಅವರ ಸಾಹಿತ್ಯದಲ್ಲಿ ಕಾಣಬಹುದು. ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ ನೀ ಮಾಯೆಯೊಳಗೊ, ನಿನ್ನೊಳು ಮಾಯೆಯೊ ನೀ ದೇಹದೊಳಗೊ, ನಿನ್ನೊಳು ದೇಹವೂ ಬಯಲು ಆಲಯದೊಳಗೊ, ಆಲಯವು ಬಯಲೊಳಗೊ ಬಯಲು ಆಲಯವೆರಡು ನಯನದೊಳಗೊ ನಯನ ಬುದ್ಧಿಯೊಳಗೊ, ಬುದ್ಧಿ ನಯನದೊಳಗೊ ನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ ಸವಿಯು ಸಕ್ಕರೆಯೊಳಗೊ, ಸಕ್ಕರೆಯು ಸವಿಯೊಳಗೊ ಸವಿಯು ಸಕ್ಕರೆಯೆರಡು ಜಿಹ್ವೆಯೊಳಗೊ ಜಿಹ್ವೆ ಮನಸಿನೊಳಗೊ, ಮನಸು ಜಿಹ್ವೆಯೊಳಗೊ ಜಿಹ್ವೆ ಮನಸುಗಳೆರಡು ನಿನ್ನೊಳಗೊ ಹರಿಯೆ ಕುಸುಮದೊಳು ಗಂಧವೊ, ಗಂಧದೊಳು ಕುಸುಮವೊ ಕುಸುಮ ಗಂಧಗಳೆರಡು ಘ್ರಾಣದೊಳಗೊ ಅಸಮಭವ ಕಾಗಿನೆಲೆಯಾದಿಕೇಶವರಾಯ ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೆ ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ‌ ಬರಿದೇ ಮಾತೇಕಿನ್ನೂ ಅರಿತು ಪೇಳುವೆನಯ್ಯ... ||ಪ|| ತಾಯಿ ತಂದೆಯ ಬಿಟ್ಟು ತಪವ ಮಾಡಲುಬಹುದು ದಾಯಾದಿ ಬಂಧುಗಳ ಬಿಡಲುಬಹುದು ರಾಯ ತಾ ಮುನಿದರೆ ರಾಜ್ಯವನೆ ಬಿಡಬಹುದು ಕಾಯಜಾ ಪಿತನಿನ್ನ ಅಡಿಯ ಬಿಡಲಾಗದು... ||೧|| ಒಡಲು ಹಸಿದರೆ ಮತ್ತೆ ಅನ್ನವನೆ ಬಿಡಬಹುದು ಪಡೆದ ಕ್ಷೇತ್ರವ ಬಿಟ್ಟು ಹೊರಡಬಹುದು ಮಡದಿ ಮಕ್ಕಳ ಕಡೆಗೆ ತೊಲಗಿಸಿಯೆ ಬಿಡಬಹುದು ಕಡಲೊಡೆಯ ನಿನ್ನಡಿಯ ಘಳಿಗೆ ಬಿಡಲಾಗದು...||೨|| ಪ್ರಾಣವನು ಪರರು ಬೇಡಿದರೆತ್ತಿ ಕೊಡಬಹುದು ಮಾನಾಭಿಮಾನವ ತಗ್ಗಿಸಲುಬಹುದು ಪ್ರಾಣದಾಯಕಾನಾದ ಆದಿಕೇಶವರಾಯ‌ ಜಾಣ ಶ್ರೀ ಕೃಷ್ಣ ನಿನ್ನಡಿಯ‌ ಬಿಡಲಾಗದು....||೩|| ಕನಕದಾಸರನ್ನು ಕುರಿತ ಕೃತಿಗಳು ಇಂಗ್ಲಿಷಿಗೆ ಅನುವಾದ ವಾಗಿದೆ. J.Aravinda Raman - ಕುಲ ಕುಲ ಸಂಸ್ಕೃತಕ್ಕೆ ಹರಿಭಕ್ತಿಸಾರ, ಆರ್. ಗಣೇಶ್, ಪ್ರ: ಕನಕದಾಸ ಅಧ್ಯಯನ ಸಂಶೋಧನಾ ಪೀಠ, ಉಡುಪಿ ಕನ್ನಡದಲ್ಲಿ ಕನಕವಾಣಿ, ಸಂ: ಜಗನ್ನಾಥ ಆರ್. ಗೇನಣ್ಣವರ, ಪ್ರ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ ಸಂತ ಶ್ರೀ ಕನಕದಾಸರ ಜೀವನ ಸಂದೇಶ, ಸಂ: ಜಗನ್ನಾಥ ಆರ್. ಗೇನಣ್ಣವರ, ಪ್ರ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ ಸಂತ ಶ್ರೀ ಕನಕದಾಸರ ಸಾಹಿತ್ಯ ದರ್ಶನ, ಸಂ: ಜಗನ್ನಾಥ ಆರ್. ಗೇನಣ್ಣವರ, ಪ್ರ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ ಸಂತ ಶ್ರೀ ಕನಕದಾಸರ ಪಾರಂಪರಿಕ ಸ್ಥಳಗಳು, ಜಗನ್ನಾಥ ಆರ್. ಗೇನಣ್ಣವರ, ಪ್ರ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ ಕನಕದಾಸ, ಕಾ.ತ. ಚಿಕ್ಕಣ್ಣ, ಪ್ರ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ ರಾಮಧಾನ್ಯ (ನಾಟಕ), ರಾಮಕೃಷ್ಣ ಮರಾಠೆ, ಪ್ರ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ ಕನಕ ಶತಕ (ಕಾವ್ಯ), ಮಂಜುನಾಥ ಬೆಳವಾಡಿ, ಪ್ರ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ ಕನಕದಾಸರ ಕೃತಿಗಳಲ್ಲಿ ಸಮಾನತಾ ಸಮಾಜ, ನರಸಿಂಹಮೂರ್ತಿ ಹೂವಿನಹಳ್ಳಿ, ಪ್ರ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ ನಳಚರಿತ್ರೆ: ಒಂದು ಹೊಸನೋಟ, ಬಿರಾದಾರ ಬಿ.ಬಿ., ಪ್ರ: ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಕನಕದಾಸರು ಮತ್ತು ಆಧುನಿಕ ಚಿಂತನೆಗಳು: ಮುಖಾಮುಖಿ, ಶಿರೂರ ಬಿ.ವಿ., ಪ್ರ: ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಭಕ್ತಿ ಪರಂಪರೆ ಮತ್ತು ಕನಕದಾಸರು, ಸಂ: ಯಕ್ಕುಂಡಿಮಠ ಬಿ.ವಿ., ಪ್ರ: ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಕನಕ ಸಾಹಿತ್ಯ ಸೂಚಿ, ಸಂ: ಕೆ. ಮಲ್ಲಿಕಾರ್ಜುನ ಮತ್ತು ದೊಡ್ಡಮನಿ ಸಿ.ಡಿ., ಪ್ರ: ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಕನಕದಾಸರ ಸಾಹಿತ್ಯ ಅಧ್ಯಯನ, ಹರಿಲಾಲ ಪವಾರ ಮತ್ತು ಚಂದ್ರಶೇಖರ ರೊಟ್ಟಿಗವಾಡ, ಪ್ರ: ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಮೋಹನ ತರಂಗಿಣಿ: ಸಾಂಸ್ಕೃತಿಕ ಸಂವಾದ, ರವಿರಾಜ ಶೆಟ್ಟಿ, ಪ್ರ: ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ರಾಮಧಾನ್ಯ ಚರಿತೆ: ಸಂಘರ್ಷದ ನೆಲೆ, ಸರೋಜಿನಿ ಸಿ. ಹಿರೇಮಠ, ಪ್ರ: ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಆತ್ಮ ಆವ ಕುಲ (ಕವನ ಸಂಕಲನ), ಸಂ: ಬಾಳಣ್ಣ ಶೀಗೀಹಳ್ಳಿ, ಪ್ರ: ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಎಲ್ಲಿರುವನೋ ರಂಗ (ನಾಟಕ), ಶಶಿಧರ ನರೇಂದ್ರ, ಪ್ರ: ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಕನಕದಾಸರ ಸಮಗ್ರ ಕಾವ್ಯಾಧ್ಯಯನ, ಭಾಗ-1: ರಾಮಧಾನ್ಯ ಚರಿತೆ, ರವಿ ಬಿ.ಕೆ. ಮತ್ತು ಸರೋಜಿನಿ ಸಿ. ಹಿರೇಮಠ, ಪ್ರ: ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಕನಕದಾಸರ ಸಮಗ್ರ ಕಾವ್ಯಾಧ್ಯಯನ, ಭಾಗ-2: ನಳಚರಿತ್ರೆ, ರವಿ ಬಿ.ಕೆ. ಮತ್ತು ಡಾ. ಎಚ್.ಎಚ್. ನದಾಫ್, ಪ್ರ: ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಕನಕ ವಿಜಯ (ಕಾವ್ಯ), ಶ್ರೀ ನಿರುಪಾದೀಶ್ವರ ಮಹಾಸ್ವಾಮಿಗಳು, ಪ್ರ: ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಹರಿಭಕ್ತಿಸಾರ, ಎನ್. ರಂಗನಾಥ ಶರ್ಮ, ಪ್ರ: ಕನಕದಾಸ ಅಧ್ಯಯನ ಸಂಶೋಧನಾ ಪೀಠ, ಉಡುಪಿ ಕನಕೋಪನಿಷತ್ತು, ಬನ್ನಂಜೆ ಗೋವಿಂದಾಚಾರ್ಯ, ಪ್ರ: ಕನಕದಾಸ ಅಧ್ಯಯನ ಸಂಶೋಧನಾ ಪೀಠ, ಉಡುಪಿ ಕನಕ ಕಾವ್ಯ ಸಂಪುಟ, ಎ.ವಿ. ನಾವಡ, ಪ್ರ: ಕನಕದಾಸ ಅಧ್ಯಯನ ಸಂಶೋಧನಾ ಪೀಠ, ಉಡುಪಿ ರಾಮಧಾನ್ಯ ಚರಿತೆ (ನಾಟಕ), ಅಂಬಾತನಯ ಮುದ್ರಾಡಿ, ಪ್ರ: ಕನಕದಾಸ ಅಧ್ಯಯನ ಸಂಶೋಧನಾ ಪೀಠ, ಉಡುಪಿ ದಾಸ-ಕನಕ ಪ್ರಭೆ, ಹೇರಂಜೆ ಕೃಷ್ಣಭಟ್ಟ, ಪ್ರ: ಕನಕದಾಸ ಅಧ್ಯಯನ ಸಂಶೋಧನಾ ಪೀಠ, ಉಡುಪಿ ಕನಕ ಮುಂಡಿಗೆ: ಅರ್ಥಾನುಸಂಧಾನ, ಮಾಧವಿ ಭಂಡಾರಿ, ಪ್ರ: ಕನಕದಾಸ ಅಧ್ಯಯನ ಸಂಶೋಧನಾ ಪೀಠ, ಉಡುಪಿ ಕನಕ ಚಿಂತನ 2007-08 (ಪ್ರಚಾರೋಪನ್ಯಾಸಗಳ ಸಂಕಲನ), ಸಂ: ಶಿವರಾಮ ಶೆಟ್ಟಿ ಬಿ., ಪ್ರ: ಕನಕದಾಸ ಅಧ್ಯಯನ ಪೀಠ / ಸಂಶೋಧನಾ ಕೇಂದ್ರ, ಮಂಗಳಗಂಗೋತ್ರಿ, ಮಂಗಳೂರು ವಿಶ್ವವಿದ್ಯಾನಿಲಯ ಕನಕ ಚಿಂತನ 2009-10 (ಪ್ರಚಾರೋಪನ್ಯಾಸಗಳ ಸಂಕಲನ), ಸಂ: ಶಿವರಾಮ ಶೆಟ್ಟಿ ಬಿ., ಪ್ರ: ಕನಕದಾಸ ಅಧ್ಯಯನ ಪೀಠ / ಸಂಶೋಧನಾ ಕೇಂದ್ರ, ಮಂಗಳಗಂಗೋತ್ರಿ, ಮಂಗಳೂರು ವಿಶ್ವವಿದ್ಯಾನಿಲಯ ಕನಕ ಚಿಂತನ 2011-12 (ಪ್ರಚಾರೋಪನ್ಯಾಸಗಳ ಸಂಕಲನ), ಸಂ: ಶಿವರಾಮ ಶೆಟ್ಟಿ ಬಿ., ಪ್ರ: ಕನಕದಾಸ ಅಧ್ಯಯನ ಪೀಠ / ಸಂಶೋಧನಾ ಕೇಂದ್ರ, ಮಂಗಳಗಂಗೋತ್ರಿ, ಮಂಗಳೂರು ವಿಶ್ವವಿದ್ಯಾನಿಲಯ ಕನಕದಾಸರ ಕೀರ್ತನೆಗಳ ಶಬ್ದ ಪ್ರಯೋಗ ಕೋಶ, ಸಂ: ಶ್ರೀನಿವಾಸ ಹಾವನೂರ ಮತ್ತು ವಿ. ಕೃಷ್ಣ, ಪ್ರ: ಕನಕದಾಸ ಅಧ್ಯಯನ ಪೀಠ / ಸಂಶೋಧನಾ ಕೇಂದ್ರ, ಮಂಗಳಗಂಗೋತ್ರಿ, ಮಂಗಳೂರು ವಿಶ್ವವಿದ್ಯಾನಿಲಯ ಕನಕದಾಸರ ಕೀರ್ತನೆಗಳು, ಸಂ: ಪಾವಂಜೆ ಗುರುರಾವ್, ಪ್ರ: ಕನಕದಾಸ ಅಧ್ಯಯನ ಪೀಠ / ಸಂಶೋಧನಾ ಕೇಂದ್ರ, ಮಂಗಳಗಂಗೋತ್ರಿ, ಮಂಗಳೂರು ವಿಶ್ವವಿದ್ಯಾನಿಲಯ ಕನಕನ ಸುತ್ತಮುತ್ತ: ಸಂಕಥನಗಳ ಜಿಜ್ಞಾಸೆ, ಸಂ: ಶಿವರಾಮ ಶೆಟ್ಟಿ ಬಿ., ಪ್ರ: ಕನಕದಾಸ ಅಧ್ಯಯನ ಪೀಠ / ಸಂಶೋಧನಾ ಕೇಂದ್ರ, ಮಂಗಳಗಂಗೋತ್ರಿ, ಮಂಗಳೂರು ವಿಶ್ವವಿದ್ಯಾನಿಲಯ ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ (ಕನಕದಾಸ ಅಧ್ಯಯನ ಸಮಗ್ರ ಸಂಪುಟ ಭಾಗ: 1), ಸಂ: ಶಿವರಾಮ ಶೆಟ್ಟಿ ಬಿ., ಪ್ರ: ಕನಕದಾಸ ಅಧ್ಯಯನ ಪೀಠ / ಸಂಶೋಧನಾ ಕೇಂದ್ರ, ಮಂಗಳಗಂಗೋತ್ರಿ, ಮಂಗಳೂರು ವಿಶ್ವವಿದ್ಯಾನಿಲಯ ಸಂತಕವಿ ಕನಕದಾಸರು, ಡಾ. ಚಿಕ್ಕಮಗಳೂರು ಗಣೇಶ, ಪ್ರ: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಬೆಂಗಳೂರು ಕಾಲಜ್ಞಾನಿ ಕನಕ (ನಾಟಕ), ಕಿ.ರಂ. ನಾಗರಾಜ ಇಂಗ್ಲಿಷಿನಲ್ಲಿ Kanakadas Ramadhanya Charite, Shashidhara G. Vaidya, ಪ್ರ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ Heritage Sites Associated with the Saint-Poet Kanakadas, Jagannath R. Genannavar, Tr: Shankar D.A., ಪ್ರ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ Kanakadasaru, Chikkanna K.T., Tr: Prakash H.S.M., ಪ್ರ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ Kanakadas: An Ardent Devotee of Lord Adikeshava, Basavaraj Naikar, ಪ್ರ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ Kanakadasa's Revolution: A Radical Reading, K. Raghavendra Rao, ಪ್ರ: ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ Kanakadasa and the Tradition of Religious Humanism in Karnataka, K. Raghavendra Rao, ಪ್ರ: ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಹಿಂದಿಯಲ್ಲಿ ಕನಕದಾಸ, ಕಾ.ತ. ಚಿಕ್ಕಣ್ಣ, ಅನು: ಶ್ರೀನಿವಾಸ ಮೂರ್ತಿ, ಪ್ರ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ ಕನ್ನಡ ಸಂತ ಕವಿ ಕನಕದಾಸ, ಸಂ: ಜಗನ್ನಾಥ ಆರ್. ಗೇನಣ್ಣವರ, ಅನು: ಶೋಭಾ ನಾಯಕ, ಚಂದ್ರಕಾಂತ ಪೋಕಾಣೆ, ಪ್ರ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ ಸಂತ ಕವಿ ಕನಕದಾಸ, ಶಶಿ ಶ್ಯಾಮ್‍ಸಿಂಗ್, ಪ್ರ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ ಕನಕದಾಸ್: ಏಕ್ ಅನುಶೀಲನ್, ನಂದಿನಿ ಗುಂಡೂರಾವ್, ಪ್ರ: ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ತೆಲುಗಿನಲ್ಲಿ ಭಕ್ತ ಶ್ರೀ ಕನಕದಾಸರು ಸಂದರ್ವಿನ ಪವಿತ್ರ ಸ್ಥಳಂ, ಜಗನ್ನಾಥ ಆರ್. ಗೇನಣ್ಣವರ, ಅನು: ಪದ್ಮಾ ಸಿ., ಪ್ರ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ ರಾಮಧಾನ್ಯ (ನಾಟಕ), ರಾಮಕೃಷ್ಣ ಮರಾಠೆ, ಅನು: ಲಕ್ಷ್ಮೀದೇವಿ, ಪ್ರ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ ಕನಕದಾಸ, ಕಾ.ತ. ಚಿಕ್ಕಣ್ಣ, ಅನು: ಪುಟ್ಟಮರಾಜ, ಪ್ರ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ ಚಲನಚಿತ್ರ ಡಾ. ರಾಜ್‍ಕುಮಾರ್ ಅವರು ಮುಖ್ಯ ಭೂಮಿಕೆಯಲ್ಲಿರುವ 'ಭಕ್ತ ಕನಕದಾಸ' ಚಲನಚಿತ್ರವು 1960ರಲ್ಲಿ ತೆರೆಕಂಡಿದೆ. ನಿರ್ದೇಶಕರು ವೈ.ಆರ್.ಸ್ವಾಮಿ. ಈ ಚಿತ್ರದಲ್ಲಿ ಅಳವಡಿಸಲಾಗಿರುವ ಕನಕದಾಸರ ಕೀರ್ತನೆಗಳನ್ನು ಪಿ.ಬಿ. ಶ್ರೀನಿವಾಸ್ ಅವರು ಹಾಡಿದ್ದಾರೆ. 'ಕುಲಕುಲಕುಲವೆಂದು ಹೊಡೆದಾಡದಿರಿ', 'ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ', 'ದೀನ ನಾನು ಸಮಸ್ತ ಲೋಕಕೆ ದಾನಿ ನೀನು' ಹಾಡುಗಳು ಜನಪ್ರಿಯವಾಗಿವೆ. ಕನಕದಾಸ ಅಧ್ಯಯನ ಪೀಠ ಹಾಗೂ ಸಂಶೋಧನಾ ಕೇಂದ್ರಗಳು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಕನಕದಾಸ ಅಧ್ಯಯನ ಸಂಶೋಧನಾ ಪೀಠ, ಉಡುಪಿ ಕನಕದಾಸ ಅಧ್ಯಯನ ಪೀಠ / ಸಂಶೋಧನಾ ಕೇಂದ್ರ, ಮಂಗಳಗಂಗೋತ್ರಿ, ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಬೆಂಗಳೂರು ಕನಕದಾಸ ಜಯಂತಿ ಕರ್ನಾಟಕ ಸರ್ಕಾರವು 2008ರಿಂದ ಕನಕದಾಸ ಜಯಂತಿಯನ್ನು ಆಚರಿಸುತ್ತಿದೆ. ಆ ದಿನ ಸರ್ಕಾರಿ ರಜೆ ಇರುತ್ತದೆ. ಸರ್ಕಾರದಿಂದ ದೊರೆಯುವ ಉಚಿತ ಇ-ಪುಸ್ತಕಗಳು ಕರ್ನಾಟಕ ಸರ್ಕಾರವು ಕನಕದಾಸರು ರಚಿಸಿರುವ ಮತ್ತು ಹೆಸರಾಂತ ಸಾಹಿತಿಗಳು ಸಂಪಾದಿಸಿರುವ ಕೃತಿಗಳನ್ನು ಕಣಜ.ಇನ್/ಇಬುಕ್(www.kanaja.in/ebook) ನಲ್ಲಿ ಉಚಿತವಾಗಿ ಲಭ್ಯವಾಗುವಂತೆ ಅವಕಾಶ ಕಲ್ಪಿಸಿದ್ದಾರೆ. ಅವುಗಳಲ್ಲಿ ಕೆಲವುಗಳು ಈ ಕೆಳಗಿನಂತಿವೆ... ಕನಕದಾಸರ ಕೀರ್ತನೆಗಳು ಮತ್ತು ಮುಂಡಿಗೆಗಳು (ಡೌನ್ಲೋಡ್ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ http://kanaja.in/ebook/index.php/e-book/2017-07-07-09-51-48 ) ಕನಕಾವಲೋಕನ (ಡೌನ್ಲೋಡ್ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ http://kanaja.in/ebook/index.php/e-book/2017-07-07-09-53-11 ) ಕನಕದಾಸ ನಾಟಕ (ಡೌನ್ಲೋಡ್ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ http://kanaja.in/ebook/index.php/e-book/2017-11-24-04-40-03) ಕನಕ-ಮರುದರ್ಶನ (ಡೌನ್ಲೋಡ್ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ http://kanaja.in/ebook/index.php/e-book/2017-11-24-04-55-27 ) ಕನಕ ಓದು (ಡೌನ್ಲೋಡ್ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ http://kanaja.in/ebook/index.php/e-book/2017-12-22-05-59-36 ) ಕನಕ ತರಂಗಿಣಿ (ಡೌನ್ಲೋಡ್ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ http://kanaja.in/ebook/index.php/e-book/2017-11-24-04-54-15 ) ಕನಕದಾಸರ ಕಾವ್ಯ ಮತ್ತು ಸಂಗೀತ (ಡೌನ್ಲೋಡ್ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ http://kanaja.in/ebook/index.php/e-book/2017-11-24-04-52-32 ) ಕನಕ ಸಾಹಿತ್ಯ ಅಧ್ಯಯನ (ಡೌನ್ಲೋಡ್ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ http://kanaja.in/ebook/index.php/e-book/2017-11-24-04-50-41) ಬಯಲು ಆಲಯದೊಳಗೊ (ಡೌನ್ಲೋಡ್ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ http://kanaja.in/ebook/index.php/e-book/2017-11-24-04-49-34) ಸಂತರು
1269
https://kn.wikipedia.org/wiki/%E0%B2%AA%E0%B3%81%E0%B2%9F%E0%B3%8D%E0%B2%9F%E0%B2%A3%E0%B3%8D%E0%B2%A3%20%E0%B2%95%E0%B2%A3%E0%B2%97%E0%B2%BE%E0%B2%B2%E0%B3%8D
ಪುಟ್ಟಣ್ಣ ಕಣಗಾಲ್
ಎಸ್.ಆರ್.ಪುಟ್ಟಣ್ಣ ಕಣಗಾಲ್ (ಡಿಸೆಂಬರ್ ೧, ೧೯೩೩ - ಜೂನ್ ೫, ೧೯೮೫) ಕನ್ನಡ ಚಿತ್ರರಂಗದ ಪ್ರಸಿದ್ಧ ಹಾಗು ಸೃಜನಶೀಲ ನಿರ್ದೇಶಕರಲ್ಲಿ ಒಬ್ಬರು. ಕನ್ನಡ ಚಿತ್ರರಂಗ ಕಂಡ ಅದ್ವಿತೀಯ ನಿರ್ದೇಶಕರು. ನಿರ್ದೇಶಕ ರಲ್ಲದೆ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಸಹ ಬರೆಯುತ್ತಿದ್ದರು. ಹಿಂದಿ, ಮಲಯಾಳಂ ಭಾಷೆಗಳ ಕೆಲವು ಚಿತ್ರಗಳನ್ನೂ ನಿರ್ದೇಶಿಸಿದ್ದಾರೆ. ಇವರ ಚಿತ್ರಗಳು ಅತ್ಯಂತ ಉತ್ಕೃಷ್ಟ ಮಟ್ಟದ್ದೆಂದು ಹಲವು ಕನ್ನಡಿಗರು ಅಭಿಪ್ರಾಯ ಪಡುತ್ತಾರೆ. ಸಾಮಾನ್ಯವಾಗಿ ಕಲೆ, ಭಾವನಾತ್ಮಕತೆಯಿಂದ ಕೂಡಿದ ಚಿತ್ರಗಳನ್ನು ನಿರ್ದೇಶಿಸುತ್ತಿದ್ದ ಕಣಗಾಲ್, ಕನ್ನಡ ಸಿನಿಮಾಕ್ಕೆ ಹೊಸ ರೂಪ ತಂದವರು.ಮೈಸೂರಿನ ಯುವ ಸಾಹಿತಿ ವಿ.ಶ್ರೀಧರ ಅವರು ಪುಟ್ಟಣ್ಣಕಣಗಾಲರ ಚಲನಚಿತ್ರಗಳ ವಿಮರ್ಶೆಯನ್ನು ಕುರಿತ ಕೃತಿ 'ಕನ್ನಡ ಚಲನಚಿತ್ರರಂಗಕ್ಕೆ ಪುಟ್ಟಣ್ಣ ಕಣಗಾಲರ ಕೊಡುಗೆ' ಎಂಬ ಕೃತಿಯನ್ನು ಹೊರತಂದಿರುವುದನ್ನು ಕಾಣಬಹುದು. ಆರಂಭದ ದಿನಗಳು ಕರ್ನಾಟಕದ ಪುಟ್ಟಣ್ಣ ರವರು ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕಣಗಾಲ್ ಗ್ರಾಮದಲ್ಲಿ.ಇವರ ಮೊದಲ ಹೆಸರು "ಶುಬ್ರವೇಷ್ಠಿ ರಾಮಸ್ವಾಮಯ್ಯ ಸೀತಾರಾಮ ಶರ್ಮ" ಮುಂದೆ ಆದದ್ದು ಎಸ್‌.ಆರ್‌.ಪುಟ್ಟಣ್ಣ ಕಣಗಾಲ್‌. ಕನ್ನಡ ಚಿತ್ರರಂಗದ ಚಿತ್ರಸಾಹಿತಿ ಕಣಗಾಲ್ ಪ್ರಭಾಕರ ಶಾಸ್ತ್ರಿ ಇವರ ಸಹೋದರರು. ಚಿತ್ರರಂಗ ಪುಟ್ಟಣ್ಣರವರು ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕಣಗಾಲು ಗ್ರಾಮದವರು ಪುಟ್ಟಣ್ಣರವರು ಚಿತ್ರರಂಗಕ್ಕೆ ಬರುವ ಮುನ್ನ ಇವರು ಹಲವು ನೆಲೆಗಳಲ್ಲಿ ದುಡಿದಿದ್ದರು. ನಾಟಕ ಕಂಪೆನಿ,ಡ್ರೈವರ್, ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ನಿರ್ಮಾಪಕರಲ್ಲೊಬ್ಬರಾದ ಬಿ.ಆರ್. ಪಂತುಲು ಅವರ ಬಳಿ ೧೯೫೪ರಲ್ಲಿ ಡೈಲಾಗ್ ಕೋಚ್ ಆಗಿ ಸೇರಿದ ಪುಟ್ಟಣ್ಣ ನಂತರದ ದಿನಗಳಲ್ಲಿ " ಪದ್ಮಿನಿ ಪಿಕ್ಚರ್ಸ್"ನ ಸಹಾಯಕ ನಿರ್ದೇಶಕರಾಗಿ ಭಡ್ತಿ ಪಡೆದರು. ಕಾದಂಬರಿ ಆಧಾರಿತ ಚಿತ್ರಗಳಿಗೆ ಹೆಚ್ಚು ಒತ್ತು ಕೊಟ್ಟಿದ್ದರು. ಪುಟ್ಟಣ್ಣನವರ ವೃತ್ತಿ ಜೀವನದ ಮೊದಲ ಚಿತ್ರ'ಸ್ಕೂಲ್‍ಮಾಸ್ಟರ್' (೧೯೬೪). ಪುಟ್ಟಣ್ಣನವರು ರಷ್ಯಾ ಪ್ರವಾಸ ಮಾಡಿ ಸಾಕಷ್ಟು ದೇಶಗಳನ್ನು ಸುತ್ತಿ ಕೋಶಗಳನ್ನು ಓದಿ, ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಸ್ಥಾಪಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪುಟ್ಟಣ್ಣನವರ ಚಿತ್ರಗಳ ಮೂಲಕ ಬೆಳಕಿಗೆ ಬಂದ, ಪ್ರಸಿದ್ಧರಾದ ಚಿತ್ರಕಲಾವಿದರು ಅನೇಕ. ಆ ಪೈಕಿ ನಾಯಕಿ ನಟಿಯರಲ್ಲಿ ಕಲ್ಪನಾ, ಆರತಿ, ಪದ್ಮಾ ವಾಸಂತಿ ಹಾಗೂ ಅಪರ್ಣಾ ಪ್ರಮುಖರು. ನಾಯಕ ನಟರಲ್ಲಿ ವಿಷ್ಣುವರ್ಧನ್, ರಾಮಕೃಷ್ಣ, ಜೈಜಗದೀಶ್, ಅಂಬರೀಶ್, ಶ್ರೀನಾಥ್ ಶ್ರೀಧರ್ ಮೊದಲಾದವರು ಇದ್ದಾರೆ. ಪ್ರಶಸ್ತಿಗಳು ಮತ್ತು ಗೌರವಗಳು ಕಣಗಲ್ ಅವರು ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು,ಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳು ಮತ್ತು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದರು.ಕರ್ನಾಟಕ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕ ರಾಜ್ಯವು ಚಲನಚಿತ್ರ ನಿರ್ದೇಶಕರು ಮತ್ತು ವಿವಿಧ ವ್ಯಕ್ತಿಗಳನ್ನು ಪುಟ್ಟಣ್ಣ ಕಣಗಲ್ ಪ್ರಶಸ್ತಿ ನೀಡಿ ಗೌರವಿಸುತ್ತದೆ. ವೃತ್ತಿ ಪ್ರಚಾರದ ಹುಡುಗನಾಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ಕಣಗಲ್, ರಂಗಭೂಮಿಯಲ್ಲಿ ಕೆಲಸ ಮಾಡಿದ ನಂತರ ಸ್ವತಂತ್ರ ಚಲನಚಿತ್ರ ನಿರ್ಮಾಣಕ್ಕೆ ಆಕರ್ಷಿತರಾದರು ಮತ್ತು ಚಲನಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ಬಿ. ಆರ್. ಪಂತುಲು ಅವರ ಸಹಾಯಕರಾಗಿ ಕೆಲಸ ಮಾಡಿದರು. ನಿರ್ದೇಶಕರಾಗಿ ಕಣಗಲ್ ಅವರು ಮೊದಲು ನಿರ್ದೇಶಿಸಿದ ಸಿನೆಮಾ ೧೯೬೪ರ ಮಲಯಾಳಂ ಚಲನಚಿತ್ರ ಸ್ಕೂಲ್ ಮಾಸ್ಟರ್.ಅದು ಅವರ ಮಾರ್ಗದರ್ಶಕ ಬಿ.ಆರ್.ಪಂತುಲು ಅವರ ಸಿನೆಮಾದ ರಿಮೇಕ್.ನಂತರ ಅವರು ತ್ರಿವೇಣಿಯವರ ಕನ್ನಡ ಕಾದಂಬರಿ ಬೆಕ್ಕಿನ ಕಣ್ಣು ಆಧಾರಿತ ಎಂಬ ಮತ್ತೊಂದು ಮಲಯಾಳಂ ಚಿತ್ರ ಪೂಚಕ್ಕನ್ನಿ ಅನ್ನು ನಿರ್ದೇಶಿಸಿದರು. ನಿರ್ದೇಶಕರಾಗಿ ಪುಟ್ಟಣ್ಣ ಅವರ ಮೊದಲ ಕನ್ನಡ ಚಿತ್ರ ೧೯೬೭ ರಲ್ಲಿ ಮೂಡಿಬಂದ ಬೆಳ್ಳಿಮೋಡ.ಗೆಜ್ಜೆ ಪೂಜೆ, ಶರಪಂಜರ, ನಾಗರಹಾವು ಮುಂತಾದ ಅನೇಕ ಮೇರುಕೃತಿಗಳನ್ನು ಅವರು ನಿರ್ದೇಶಿಸಿದರು. ಅವರ ಕೊನೆಯ ಚಿತ್ರ ಸಾವಿರ ಮೆಟ್ಟಿಲು, ಇದು ಅವರ ಜೀವಿತಾವಧಿಯಲ್ಲಿ ಬಿಡುಗಡೆಯಾಗಲಿಲ್ಲ. ನಿಧನ ಮಸಣದ ಹೂವು ಚಿತ್ರವು ತಯಾರಿಕೆ ಹಂತದಲ್ಲಿದ್ದಾಗ ಜೂನ್ ೫, ೧೯೮೫ ರಂದು ಚೆನ್ನೈ ನಲ್ಲಿ ನಿಧನರಾದರು. ಅರ್ಧ ಚಿತ್ರೀಕರಣಗೊಂಡಿದ್ದ ಮಸಣದ ಹೂವು ಚಿತ್ರದ ಉಳಿದ ಭಾಗವನ್ನು ಪುಟ್ಟಣ್ಣನವರ ಶಿಷ್ಯರಾದ ಕೆ.ಎಸ್.ಎಲ್.ಸ್ವಾಮಿಯವರು ಪೂರ್ತಿಗೊಳಿಸಿದರು. ಎಪ್ಪತ್ತರ ದಶಕದಲ್ಲಿ ಅವರು ತೊಡಗಿಸಿಕೊಂಡಿದ್ದ "ಸಾವಿರ ಮೆಟ್ಟಿಲು"ಚಿತ್ರವನ್ನು ಅದರ ನಿರ್ಮಾಪಕರಾದ ಡಿ.ಬಿ. ಬಸವೇಗೌಡರು ಪೂರ್ಣಗೊಳಿಸಿ ಬಿಡುಗಡೆ ಮಾಡಿದರು. ಒಬ್ಬ ನಿರ್ದೇಶಕನ ಎರಡು ಅಪೂರ್ಣ ಚಿತ್ರಗಳು ಅವರ ನಿಧನಾ ನಂತರ ಪೂರ್ಣಗೊಂಡಿದ್ದು ಒಂದು ದಾಖಲೆಯೇ. ಪುಟ್ಟಣ್ಣ ಕಣಗಾಲ್ ಅವರ ಹೆಸರಿನಲ್ಲಿ ಜಯನಗರದಲ್ಲಿ ಸ್ಥಾಪಿಸಲಾಗಿದ್ದ ಪುಟ್ಟಣ್ಣ ಥಿಯೇಟರ್ ನವೀಕರಣದ ಹೆಸರಿನಲ್ಲಿ ೨೦೦೪ ರಿಂದ ಈ ಥಿಯೇಟರ್ ಬಾಗಿಲು ಹಾಕಿಕೊಂಡಿದ್ದ ಈ ಥಿಯೇಟರ್‌ನ ಜಾಗದಲ್ಲಿ ಈಗ ಕಾಂಪ್ಲೆಕ್ಸ್ ಒಂದು ತಲೆಯೆತ್ತಿ ನಿಂತಿದೆ. ಪುಟ್ಟಣ್ಣ ಪುತ್ರ ರಾಮು ಕಣಗಾಲ್ ರವರು "ಕಣಗಾಲ್ ನೃತ್ಯಾಲಯ" ಎನ್ನುವ ಹೆಸರಿನಲ್ಲಿ ನಾಟ್ಯ ಶಾಲೆ ನಡೆಸುತ್ತಿದ್ದಾರೆ. ಕರ್ನಾಟಕ ಸರಕಾರವು ಪ್ರತಿ ವರ್ಷವೂ ಚಿತ್ರ ರಂಗದಲ್ಲಿ ಹೆಸರು ಮಾಡಿದವರಿಗೆ ಪುಟ್ಟಣ್ಣರ ಹೆಸರಿನಲ್ಲಿ "ಪುಟ್ಟಣ್ಣ ಕಣಗಾಲ್" ಪ್ರಶಸ್ತಿ ನೀಡಲಾಗುತ್ತಿದೆ.ಪುಟ್ಟಣ್ಣನವರ ಜೀವನ ಚರಿತ್ರೆಯ ‘ಬೆಳ್ಳಿ ತೆರೆ ಭಾವಶಿಲ್ಪಿಯಲ್ಲಿ’ಎಂಬ ಪುಸ್ತಕವನ್ನು ಡಿ.ಬಿ.ಬಸವೇಗೌಡ ಬರೆದಿದ್ದಾರೆ. ಕನ್ನಡದ ಖ್ಯಾತ ಕಾದಂಬರಿಕಾರ್ತಿ ದಿ. ಎಂ.ಕೆ. ಇಂದಿರಾ ರವರು "ಚಿತ್ರ ಶಿಲ್ಪಿ ಪುಟ್ಟಣ್ಣ ಕಣಗಾಲ್" ಎಂಬ ಪುಸ್ತಕ ಬರೆದಿದ್ದಾರೆ. ಪುಟ್ಟಣ್ಣ ನಿರ್ದೇಶನದ ಚಲನಚಿತ್ರಗಳು ಕನ್ನಡ ನಾಗರ ಹಾವು (೧೯೭೨) ಸಾವಿರ ಮೆಟ್ಟಿಲು (೧೯೬೮) ಮಲ್ಲಮ್ಮನ ಪವಾಡ (೧೯೬೯) ಕಪ್ಪು ಬಿಳುಪು (೧೯೬೯) ಗೆಜ್ಜೆ ಪೂಜೆ (೧೯೭೦) ಕರುಳಿನ ಕರೆ (೧೯೭೦) ಶರಪಂಜರ (೧೯೭೧) ಸಾಕ್ಷಾತ್ಕಾರ (೧೯೭೧) ಎಡಕಲ್ಲು ಗುಡ್ಡದ ಮೇಲೆ (೧೯೭೩) ಉಪಾಸನೆ (೧೯೭೪) ಶುಭಮಂಗಳ (೧೯೭೫) ಬಿಳಿ ಹೆಂಡ್ತಿ (೧೯೭೫) ಕಥಾಸಂಗಮ (೧೯೭೬) ಕಾಲೇಜು ರಂಗ (೧೯೭೬) ಫಲಿತಾಂಶ (೧೯೭೬) ಪಡುವಾರಳ್ಳಿ ಪಾಂಡವರು (೧೯೭೮) ಧರ್ಮಸೆರೆ (೧೯೭೯) ರಂಗನಾಯಕಿ (೧೯೮೧) ಮಾನಸ ಸರೋವರ (೧೯೮೨) ಧರಣಿ ಮಂಡಲ ಮಧ್ಯದೊಳಗೆ (೧೯೮೩) ಅಮೃತ ಘಳಿಗೆ (೧೯೮೪) ಋಣಮುಕ್ತಳು (೧೯೮೪) ಮಸಣದ ಹೂವು (೧೯೮೫) ಬೆಳ್ಳಿಮೋಡ - (1966) ಹಿಂದಿ ಹಮ್ ಪಾಂಚ್ (೧೯೮೧) ಜಹ್ರೀಲಾ ಇನ್ಸಾನ್ (೧೯೭೪) ಮಲಯಾಳಂ ಸ್ಕೂಲ್‍ಮಾಸ್ಟರ್ ೧೯೬೪ ಕಳಜ್ಞು ಕಿಟ್ಟಿಯ ತಂಗಂ ೧೯೬೪ ಮೇಯರ್ ನಾಯರ್ ೧೯೬೬ ಪೂಚಕಣ್ಣಿ ೧೯೬೬ ಸ್ವಪ್ನ ಭೂಮಿ.೧೯೬೮ ಹೊರಗಿನ ಸಂಪರ್ಕಗಳು ಪುಟ್ಟಣ್ಣರವರ ಬಗ್ಗೆ ದಿ ಹಿಂದೂ ಪತ್ರಿಕೆಯಲ್ಲಿ ಮೂಡಿಬಂದ ಲೇಖನ ಪುಟ್ಟಣ್ಣ ಕಣಗಾಲ್ ಚಿತ್ರಗಳು ನಿರ್ಮಾಪಕರು ಕನ್ನಡ ಸಿನೆಮಾ ಕನ್ನಡ ಚಲನಚಿತ್ರ ನಿರ್ದೇಶಕರು ಕನ್ನಡ ಚಲನಚಿತ್ರ ನಿರ್ಮಾಪಕರು ಮೈಸೂರಿನ ಬರಹಗಾರರು
1270
https://kn.wikipedia.org/wiki/%E0%B2%B5%E0%B2%BF%E0%B2%B7%E0%B3%8D%E0%B2%A3%E0%B3%81%E0%B2%B5%E0%B2%B0%E0%B3%8D%E0%B2%A7%E0%B2%A8%E0%B3%8D%20%28%E0%B2%A8%E0%B2%9F%29
ವಿಷ್ಣುವರ್ಧನ್ (ನಟ)
ಡಾ. ವಿಷ್ಣುವರ್ಧನ್ (ಜನನ: ಸೆಪ್ಟೆಂಬರ್ ೧೮ ೧೯೫೦ | ಮರಣ :ಡಿಸೆಂಬರ್ ೩೦ ೨೦೦೯) ಕನ್ನಡ ಚಿತ್ರರಂಗದ ಪ್ರಸಿದ್ಧ ನಟರಲ್ಲಿ ಒಬ್ಬರು.ಸಂಪತ್ ಕುಮಾರ್ ಎಂಬುದು ಇವರ ಮೂಲ ಹೆಸರು. ಸಾಹಸಸಿಂಹ ಎಂಬ ಬಿರುದು ಪಡೆದ ಡಾ. ವಿಷ್ಣುವರ್ಧನ್ ಅವರು ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳ, ಹಿಂದಿ ಭಾಷೆಗಳಲ್ಲಿ ಸುಮಾರು ೨೨೦ ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಷ್ಣುವರ್ಧನ್ ದಕ್ಷಿಣ ಭಾರತದ ಖ್ಯಾತ ನಟಿ ಭಾರತಿ ಅವರನ್ನು ಮದುವೆಯಾಗಿದ್ದರು. ಇವರಿಗೆ ಇದ್ದ ಬಿರುದುಗಳು ಸಾಹಸ ಸಿಂಹ, ಅಭಿನಯ ಭಾರ್ಗವ, ಮೈಸೂರು ರತ್ನ ಹುಟ್ಟು, ವಿದ್ಯಾಭ್ಯಾಸ, ಬಾಲ್ಯ ಡಾ. ವಿಷ್ಣುವರ್ಧನ್ ಅವರು ಹೆಚ್.ಎಲ್. ನಾರಾಯಣರಾವ್ ಮತ್ತು ಕಾಮಾಕ್ಷಮ್ಮ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು. ಇವರ ತಂದೆ ಕಲಾವಿದರು, ಸಂಗೀತ ನಿರ್ದೇಶಕರು ಮತ್ತು ಸಂಭಾಷಣೆಕಾರರು ಆಗಿದ್ದರು. ಇವರ ಕುಟುಂಬದವರು ಮೈಸೂರಿನ ಚಾಮುಂಡಿಪುರಂನಲ್ಲಿ ವಾಸಿಸುತ್ತಿದ್ದರು.ಇವರ ಪೂರ್ವಜರು ಮಂಡ್ಯ ಜಿಲ್ಲೆಯವರು. ೬ ಸಹೋದರ/ಸಹೋದರಿಯರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮೈಸೂರಿನ ಗೋಪಾಲಸ್ವಾಮಿ ಶಾಲೆಯಲ್ಲಿ ಮತ್ತು ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನ ಕನ್ನಡ ಮಾದರಿ ಶಾಲೆಯಲ್ಲಿ ಮುಗಿಸಿದರು. ತಮ್ಮ ಪ್ರೌಢಶಾಲಾ ಶಿಕ್ಷಣ ಮತ್ತು ಪದವಿಯನ್ನು ಬೆಂಗಳೂರಿನ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜಿನಲ್ಲಿ ಪಡೆದರು. ನಟನೆ/ಕಲಾಜೀವನ ಶಿವಶರಣ ನಂಬೆಯಕ್ಕ ಎಂಬ ಸಿನೆಮಾದಲ್ಲಿ 1955ರಲ್ಲಿ ಬಾಲ ನಟನಾಗಿ ನಟಿಸಿದ್ದರು. ವಿಷ್ಣು ನಟನೆಯ ಈ ಸಿನೆಮಾ 28 ದಿನದಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಸಿನೆಮಾ ಎಂಬ ಹಿರಿಮೆಗೆ ಪಾತ್ರವಾಗಿತ್ತು. ಶಂಕರ್ ಸಿಂಗ್ ಸಿದ್ದಪಡಿಸಿದ ಈ ಸಿನೆಮಾ ಸಂಪತ್ ಕುಮಾರ್ (ವಿಷ್ಣು) ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿತು, ಮುಂದೆ 1956ರಲ್ಲಿ ಕೋಕಿಲವಾಣಿ ಎಂಬ ಮತ್ತೊಂದು ಸಿನೆಮಾದಲ್ಲಿ ಕೂಡ ವಿಷ್ಣು ನಟಿಸಿದ್ದರು. ಎಸ್ ಎಲ್ ಭೈರಪ್ಪನವರ ಕಾದಂಬರಿಯಾಧಾರಿತ ವಂಶವೃಕ್ಷ. ಇದರಲ್ಲಿ ಸಣ್ಣ ಪಾತ್ರ ವಹಿಸಿದ್ದರು. ನಾಯಕನ ಪಾತ್ರದಲ್ಲಿ ಇವರ ಮೊದಲ ಚಿತ್ರ ೧೯೭೨ರಲ್ಲಿ ಬಿಡುಗಡೆಯಾದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು. ಸಂಪತ್ ಕುಮಾರನಾಗಿ ಬಂದಿದ್ದ ಹುಡುಗನಿಗೆ ‘ವಿಷ್ಣುವರ್ಧನ್’ ಎಂದು ಹೆಸರಿಟ್ಟಿದ್ದು ಪುಟ್ಟಣ್ಣ ಕಣಗಾಲ್. ಹೆಸರಿನ ಬದಲಾವಣೆಯೊಂದಿಗೆ ನಾಯಕನಟನಾಗಿ ನಾಗರಹಾವು ಚಿತ್ರದೊಂದಿಗೆ ವಿಷ್ಣುವರ್ಧನ ಎಂಬ ನಟನ ಉದಯವಾಯಿತು. 29.12.1972 ರಂದು ತೆರೆಕಂಡ ಈ ಸಿನೆಮಾ, ಬೆಂಗಳೂರಿನ ಸಾಗರ್ ಚಿತ್ರಮಂದಿರ ಒಂದರಲ್ಲೇ ಸತತ 25 ವಾರಗಳು ಯಶಸ್ವಿಯಾದ ಚಿತ್ರ, ಆಗಿನ ಕಾಲಕ್ಕೇ 7 ಲಕ್ಶ ರೂಪಾಯಿಗಳನ್ನು ಗಳಿಸಿ ಹೊಸ ದಾಖಲೆ ಬರೆಯಿತು ಮತ್ತು ಬೆಂಗಳೂರಿನ ಮೂರು ಮುಖ್ಯ ಚಿತ್ರಮಂದಿರಗಳಲ್ಲಿ ನೂರು ದಿನ ಪೂರೈಸಿದ ಮೊದಲ ಸಿನೆಮಾವೆಂಬ ಹೆಗ್ಗಳಿಕೆ ಪಡೆಯಿತು. ರಾಷ್ಟ್ರಪ್ರಶಸ್ತಿ ಗೆದ್ದುಕೊಂಡಿತು. ವಿಷ್ಣು ನಟಿಸಿದ್ದ ‘ಸಾಹಸಸಿಂಹ’ ಸಿನೆಮಾ 25 ವಾರಗಳನ್ನು ಪೂರೈಸಿತು. ಇಲ್ಲಿಂದ ಮುಂದೆ ವಿಷ್ಣು ಸಾಹಸಸಿಂಹ ಎಂದು ಹೆಸರುವಾಸಿಯಾದರು.ಆದರೆ ಈ ಚಿತ್ರಕ್ಕೂ ಮೊದಲೆ ಅಂದರೆ 1979ರಲ್ಲೆ ಇವರಿಗೆ 'ಸಾಹಸಸಿಂಹ' ಎಂಬ ಬಿರುದು ಬಂದಿತ್ತು. ನಟನೆಯಲ್ಲದೇ, ಕಿಲಾಡಿ ಕಿಟ್ಟು, ನಾಗ ಕಾಳ ಭೈರವ, ಸಾಹಸಸಿಂಹ , ಜಿಮ್ಮಿಗಲ್ಲು, ಖೈದಿ ಮೋಜುಗಾರ ಸೊಗಸುಗಾರ, ವಿಷ್ಣುಸೇನಾ ಇವೇ ಮೊದಲಾದ ಕೆಲವು ಚಿತ್ರಗಳಲ್ಲಿ ಹಿನ್ನೆಲೆ ಗಾಯನವನ್ನೂ ಕೂಡ ಮಾಡಿದ್ದಾರೆ ೧೯೮೦ರ ದಶಕದಲ್ಲಿ ಕಿರುತೆರೆಯಲ್ಲಿ ಪ್ರಸಾರಗೊಂಡ ಶಂಕರ್‌ ನಾಗ್‌ ನಿರ್ದೇಶನದ ಜನಪ್ರಿಯ ಧಾರಾವಾಹಿ ಮಾಲ್ಗುಡಿ ಡೇಸ್ ಕಥೆಯೊಂದರಲ್ಲಿ (ರುಪೀಸ್‌ ಫಾರ್ಟಿ-ಫೈವ್ ಎ ಮಂತ್‌) ವಿಷ್ಣುವರ್ಧನ್‌ ನಟಿಸಿದ್ದರು. ಒಂದಿಷ್ಟು ಹೆಚ್ಚಿನ ಮಾಹಿತಿಗಳು ಕನ್ನಡ ಚಿತ್ರರಂಗದಲ್ಲೆ ಅತಿ ಹೆಚ್ಚು ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. (ಸುಮಾರು ೧೪ ಚಿತ್ರಗಳು) ವಿಷ್ಣುವರ್ಧನ್-ಸುಹಾಸಿನಿ, ವಿಷ್ಣುವರ್ಧನ್-ಮಾಧವಿ ಜೋಡಿ ಕನ್ನಡ ಚಿತ್ರರಂಗದ ಅಪೂರ್ವ ಜೋಡಿಯೆಂದು ಹೆಸರಾಗಿದೆ. ಹಾಗೆಯೇ ವಿಷ್ಣು ಅವರ ಹೆಚ್ಚಿನ ಚಿತ್ರದಲ್ಲಿ ನಟಿಸಿದ ಕೀರ್ತಿ ನಟಿ ಆರತಿ ಅವರಿಗೆ ಸಲ್ಲುತ್ತದೆ. ಬನ್ನಂಜೆ ಗೋವಿಂದಾಚಾರ್ಯರು ಇವರ ಆದ್ಯಾತ್ಮಿಕ ಗುರುವಾಗಿದ್ದರು, ಸಂಖ್ಯಾಭವಿಷ್ಯಶಾಸ್ತ್ರವನ್ನು ನಂಬುತ್ತಿದ್ದ ಇವರು ತಮ್ಮ ಕಾರಿನ ನಂಬರಾಗಿ ಮತ್ತು ಮೊಬೈಲ್ ನ ಕೊನೆಯ ಸಂಖ್ಯೆಯಾಗಿ "೩೨೧" ಬಳಸುತ್ತಿದ್ದರು. ಬೆಂಗಳೂರು ವಿಶ್ವವಿದ್ಯಾಲಯವು ೨೦೦೫ನೇ ವರ್ಷದಲ್ಲಿ ಇವರಿಗೆ ಗೌರವ ಡಾಕ್ಟರೇಟ್ ಕೊಟ್ಟು ಗೌರವಿಸಿದೆ. ಇವರ ಸ್ಮರಣಾರ್ಥ ಭಾರತ ಸರ್ಕಾರ 2013ರಲ್ಲಿ ಅಂಚೆ ಚೀಟಿ ಹೊರತಂದಿದೆ. ಡಾ. ವಿಷ್ಣುವರ್ಧನ್ ಅಭಿನಯದ ಚಿತ್ರಗಳು ಕನ್ನಡ ಹಿಂದಿ ತಮಿಳು ತೆಲುಗು ಮಲಯಾಳಂ ಹೊರಗಿನ ಕೊಂಡಿಗಳು ವಿಷ್ಣುವರ್ಧನ್ ವೆಬ್ ಸೈಟ್ ಚಿತ್ರಲೋಕದಲ್ಲಿ ವಿಷ್ಣುವರ್ಧನ್ ಬಗ್ಗೆ ಮಾಹಿತಿ ಕನ್ನಡದ ಮೇರು ನಟ ವಿಷ್ಣುವರ್ಧನ್ ಡಿಸೆಂಬರ್ ೩೦,೨೦೦೯ ರಂದು ದೈವಾಧೀನರಾದರು ಗಿರೀಶ್ ಕಾಸರವಳ್ಳಿ ಅಂತಿಮ ನಮನ ಉಲ್ಲೇಖಗಳು ಕನ್ನಡ ಚಿತ್ರರಂಗದ ನಟರು ಸಿನಿಮಾ ತಾರೆಗಳು ಕನ್ನಡ ಸಿನೆಮಾ
1271
https://kn.wikipedia.org/wiki/%E0%B2%AD%E0%B2%BE%E0%B2%B0%E0%B2%A4%20%E0%B2%B0%E0%B2%A4%E0%B3%8D%E0%B2%A8
ಭಾರತ ರತ್ನ
ಭಾರತ ರತ್ನ ಭಾರತದ ನಾಗರಿಕರಿಗೆ ದೊರೆಯಬಹುದಾದ ಅತ್ಯುಚ್ಛ ಪ್ರಶಸ್ತಿ. ಭಾರತ ರತ್ನ ಪ್ರಶಸ್ತಿಯನ್ನು ಕಲೆ, ಸಾಹಿತ್ಯ, ವಿಜ್ಞಾನ, ಸಾರ್ವಜನಿಕ ಸೇವೆ ಮತ್ತಿತರ ಕ್ಷೇತ್ರಗಳಲ್ಲಿ ಅತಿ ದೊಡ್ಡ ಸಾಧನೆಗಳನ್ನು ತೋರಿದ ಗಣ್ಯರಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ೧೯೫೪ ರಲ್ಲಿ ಆರಂಭಿಸಲಾಯಿತು. ಆಗ ಈ ಪ್ರಶಸ್ತಿಯನ್ನು ಯಾರಿಗೂ ಮರಣಾನಂತರ ಪ್ರಧಾನ ಮಾಡುವ ಉದ್ದೇಶವಿರಲಿಲ್ಲ. ಮಹಾತ್ಮ ಗಾಂಧಿಯವರಿಗೆ ಈ ಪ್ರಶಸ್ತಿ ದೊರಕದ್ದಕ್ಕೆ ಪ್ರಮುಖ ಕಾರಣ ಇದೇ ಇದ್ದೀತು. ೧೯೬೬ರ ನಂತರ ಮರಣಾನಂತರವೂ ಈ ಪ್ರಶಸ್ತಿಯನ್ನು ಪ್ರದಾನ ಮಾಡಲು ಅವಕಾಶ ಸೃಷ್ಟಿಯಾಯಿತು (ಇದುವರೆಗೆ ಒಟ್ಟು ಹದಿನಾಲ್ಕು ವ್ಯಕ್ತಿಗಳಿಗೆ ಅವರ ಮರಣಾನಂತರ ಭಾರತ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ). ಭಾರತ ರತ್ನ ಪ್ರಶಸ್ತಿಯನ್ನು ಪಡೆಯುವ ವ್ಯಕ್ತಿ ಭಾರತೀಯ ನಾಗರಿಕರಾಗಿರಬೇಕೆಂಬ ನಿಯಮವೇನಿಲ್ಲದಿದ್ದರೂ ಸಾಮಾನ್ಯವಾಗಿ ಇದನ್ನು ಪಾಲಿಸಲಾಗುತ್ತದೆ. ಭಾರತೀಯ ನಾಗರಿಕರಲ್ಲದಿದ್ದರೂ ಈ ಪ್ರಶಸ್ತಿಯನ್ನು ಪಡೆದ ಇಬ್ಬರೇ ವ್ಯಕ್ತಿಗಳೆಂದರೆ ನೆಲ್ಸನ್ ಮಂಡೇಲಾ (೧೯೯೦ ರಲ್ಲಿ) ಮತ್ತು ಖಾನ್ ಅಬ್ದುಲ್ ಗಫಾರ್ ಖಾನ್ (೧೯೮೭ ರಲ್ಲಿ). ಪ್ರಶಸ್ತಿ ಪದಕದ ಮೊದಲ ವಿನ್ಯಾಸದಂತೆ ವೃತ್ತಾಕಾರದ ಚಿನ್ನದ ಪದಕದ ಮೇಲೆ ಸೂರ್ಯನ ಚಿತ್ರ ಮತ್ತು ದೇವನಾಗರಿ ಲಿಪಿಯಲ್ಲಿ "ಭಾರತ ರತ್ನ", ಮತ್ತು ಹಿಂಭಾಗದಲ್ಲಿ ಭಾರತದ ರಾಷ್ಟ್ರೀಯ ಚಿಹ್ನೆ ಮತ್ತು "ಸತ್ಯಮೇವ ಜಯತೇ" ಎಂದು ಬರೆಯಬೇಕೆಂದಿದ್ದಿತು. ಈ ವಿನ್ಯಾಸದ ಯಾವುದೇ ಪದಕವನ್ನು ಉಪಯೋಗಿಸಲಾಗಿಲ್ಲ. ಮುಂದಿನ ವರ್ಷವೇ ಪದಕದ ವಿನ್ಯಾಸವನ್ನು ಈಗಿನ ವಿನ್ಯಾಸಕ್ಕೆ ಬದಲಾಯಿಸಲಾಯಿತು. ಭಾರತ ರತ್ನ ಪ್ರಶಸ್ತಿಯನ್ನು ಪಡೆದವರ ಪಟ್ಟಿ ಉಲ್ಲೇಖಗಳು ಹೊರಸಂಪರ್ಕ ಕೊಂಡಿಗಳು ಭಾರತ ರತ್ನ ಎಂದರೇನು, ಮಾನದಂಡಗಳೇನು, ಅರ್ಹತೆಗಳೇನು?, ಪ್ರಜಾವಾಣಿ ಪ್ರಶಸ್ತಿಗಳು
1277
https://kn.wikipedia.org/wiki/%E0%B2%9C%E0%B3%86.%E0%B2%86%E0%B2%B0%E0%B3%8D.%E0%B2%A1%E0%B2%BF.%20%E0%B2%9F%E0%B2%BE%E0%B2%9F
ಜೆ.ಆರ್.ಡಿ. ಟಾಟ
ಭಾರತದ ಪ್ರಸಿದ್ಧ ಕೈಗಾರಿಕೋದ್ಯಮಿ ಬೃಹತ್ ಟಾಟಾ ಸಂಸ್ಥೆಯನ್ನು ೫೩ ವರ್ಷಗಳ ಕಾಲ ಸಮರ್ಥವಾಗಿ ನಡೆಸಿ, ಭಾರತದ ಕೈಗಾರಿಕಾ ನಕ್ಷೆಯಲ್ಲಿ ಮಹತ್ವದ ಛಾಪನ್ನು ಮೂಡಿಸಿದ ಭಾರತೀಯರಲ್ಲೊಬ್ಬರು. ಟಾಟಾರವರ ಉತ್ಪಾದನೆ, ಉಕ್ಕಿನಿಂದ ಪ್ರಾರಂಭಿಸಿ, ವಿದ್ಯುತ್ ಶಕ್ತಿ, ಮೊಟಾರ್ ಕಾರು ಮತ್ತು ಲಾರಿಗಳು, ಸಿಮೆಂಟ್, ರಸಾಯನಿಕ ವಸ್ತುಗಳು, ವಸ್ತ್ರೋದ್ಯಮ, ಪೇಪರ್, ಮಾಹಿತಿ ತಂತ್ರಜ್ಞಾನ, ದಿನನಿತ್ಯದ ಬಳಕೆಯ, ಉಪ್ಪು, ಸಾಬೂನ್, ಶ್ಯಾಂಪೂ, ಟೀ, ಕಾಫೀ, ಹೆಂಗಳೆಯರ ಸೌಂದರ್ಯವರ್ಧಕ ಪರಿಕರಗಳು, ಇತ್ಯಾದಿಗಳ ವರೆಗೆ ಇದೆ. ಜೆ.ಆರ್.ಡಿ ಟಾಟಾ ಅವರು, ಆರ್.ಡಿ ಟಾಟಾ ಅವರ ಪುತ್ರರು. 'ಜಮ್‍ಸೆಟ್‍ಜಿ ನುಝರ್‍ವಾನ್‍ಜಿ ಟಾಟ' ಅವರು ತಮ್ಮ ಮಕ್ಕಳಾದ 'ಸರ್ ದೊರಾಬ್ ಟಾಟ 'ಹಾಗೂ 'ಸರ್ ರತನ್ ಟಾಟಾ' ಅವರಷ್ಟೇ ಪ್ರಾಮುಖ್ಯತೆಯನ್ನು 'ಆರ್.ಡಿ.ಟಾಟಾ' ರವರಿಗೂ, ಕೊಡುತ್ತಿದ್ದರು. ಆರ್.ಡಿ.ಯವರ ವ್ಯವಹಾರಜ್ಞಾನ, ಮೇಧಾವಿತನ, ಮತ್ತು ಉದ್ಯಮವನ್ನು ಪ್ರಗತಿಯತ್ತ ಒಯ್ಯುವಲ್ಲಿ ಮುಂದಾಳತ್ವವನ್ನು ವಹಿಸಿಕೊಂಡು ಪ್ರಗತಿ ಸಾಧಿಸುತ್ತಿದ್ದ ಪರಿ, ಜಮ್‍ಸೆಟ್‍ಜಿ ನುಝರ್‍ವಾನ್‍ಜಿ ಟಾಟರಿಗೆ ಪ್ರಿಯವಾಗಿತ್ತು. ತಮ್ಮ ತರುವಾಯ, ಟಾಟಾ ಉದ್ಯಮದ ಜವಾಬ್ದಾರಿಯನ್ನು ಹೊರಬಲ್ಲ ಒಬ್ಬ ಸಮರ್ಥ ಪ್ರವರ್ತಕನಂತೆ ಅವರಿಗೆ ಗೋಚರಿಸಿದರು. ಜೆ.ಆರ್.ಡಿ ಅವರಿಗೆ ತಂದೆಯವರ ಗುಣಗಳೆಲ್ಲ ರಕ್ತಗತವಾಗಿ ಬಂದಿತ್ತು. ಜನನ ಹಾಗೂ ಬಾಲ್ಯ 'ಜೆಹಾಂಗೀರ್ ರತನ್ ಜಿ ದಾದಾಭಾಯ್ ಟಾಟಾ,' ಅವರು ಪಾರ್ಸಿ, ' ಝೊರಾಸ್ಟ್ರಿಯನ್ ಮತ,' ಕ್ಕೆ ಸೇರಿದವರು. ತಂದೆ ಬಹಳ ಮಡಿವಂತರು. ಆರ್.ಡಿ ಟಾಟಾ ಮತ್ತು ಸೂನಿ (ಮೂಲ ಫ್ರೆಂಚ್ ಹೆಸರು ಸುಝಾನ್ ಬ್ರೈರ್ ) ದಂಪತಿಗಳ ೫ ಜನ ಮಕ್ಕಳಲ್ಲಿ ಎರಡನೆಯವರಾಗಿ ಜೆಹಾಂಗೀರ್ ೨೯ ಜುಲೈ ೧೯೦೪ ರಲ್ಲಿ ಪ್ಯಾರಿಸ್ ನಲ್ಲಿ ಹುಟ್ಟಿದರು. ಇವರ ಅಕ್ಕ, 'ಸಿಲ್ಲ', ೧೯೦೩ ರಲ್ಲಿ ಜನಿಸಿದರು. 'ರೋಡಾಬೆ,' (೧೯೦೯ ), 'ದರಾಬ್,' (೧೯೧೨) ಮತ್ತು 'ಜಿಮ್ಮಿ,' (೧೯೧೬) ಇವರ ಇತರ ಒಡಹುಟ್ಟಿದವರು. ಜೆಹಾಂಗೀರ್ (ಎಲ್ಲರು ಅವರನ್ನು 'ಜೆ' ಎಂದು ಸಂಬೋಧಿಸುತ್ತಿದ್ದರು) ಎನ್ನುವುದಕ್ಕೆ ಪರ್ಷಿಯನ್ ಭಾಷೆಯಲ್ಲಿ ವಿಶ್ವವಿಜೇತ ಎನ್ನುವುದು ಹತ್ತಿರದ ಅರ್ಥ. 'ಆರ್.ಡಿ.ಟಾಟಾ, ' 'ಜೆಮ್ ಸೆಟ್ ಜಿ ಟಾಟಾ' ಅವರ ಸೋದರಮಾವ, 'ದಾದಾಭಾಯ್' ಅವರ ಮಗ. ಜೆಮ್ ಸೆಟ್ ಜಿಯವರು ಭಾರತದ ಪ್ರಪ್ರಥಮ ಔದ್ಯೋಗಿಕ ಕ್ಷೇತ್ರಗಳನ್ನು ಪ್ರಾರಂಭಿಸಿದ್ದೇ ಅಲ್ಲದೆ ಅದಕ್ಕೆ ಭದ್ರವಾದ ಬುನಾದಿಯನ್ನು ಹಾಕಿದವರು. ಅದಕ್ಕಾಗಿ ಜಮ್ ಸೆಟ್ ಜಿಯವರನ್ನು, " ಭಾರತದ ಕೈಗಾರಿಕಾ ಕ್ಷೇತ್ರದ ಜನಕ " ನೆಂದು ಕರೆಯುತ್ತಾರೆ. ೧೮೯೫ ರಿಂದಲೂ ಆರ್. ಡಿ, ಅವರು, ಜಮ್ ಸೆಟ್ ಜಿ ಮತ್ತು ದೊರಬ್ ಟಾಟಾ ರವರ ಜೊತೆಗೆ ಪಾಲುದಾರರಾಗಿದ್ದರು. ಒಳ್ಳೆಯ ನಂಬಿಕಸ್ತರು ಹಾಗೂ ಕೆಲಸದಲ್ಲಿ ಅತ್ಯಂತ ದಕ್ಷರು. ಜೆಮ್ ಸೆಟ್ ಜಿ ಅವರು ಸ್ಥಾಪಿಸಿದ ಮೂಲಭೂತ ತಂತ್ರಜ್ಞಾನಗಳು ಹಾಗೂ ಮೂಲ ಉತ್ಪಾದನಾ ಘಟಕಗಳು ಅತ್ಯಂತ ಮಹತ್ವದ ದೈನಂದಿನ ಜೀವನಾವಶ್ಯಕ ವಸ್ತುಗಳನ್ನೊಳಗೊಂಡಿವೆ. ಉದಾಹರಣೆಗೆ : ಕಬ್ಬಿಣ ಮತ್ತು ಉಕ್ಕು, ಜವಳಿ, ವಿದ್ಯುತ್ , ಸಿಮೆಂಟ್, ಚಹಾ ಇತ್ಯಾದಿ. ಜಮ್ ಸೆಟ್ ಜಿಯವರು ಮೂಲಪುರುಷರಾದರೆ, ಜೆ.ಆರ್.ಡಿ ಯವರು ಅದರ ಸಮಕ್ಷಮ ಸಂರಕ್ಷಕರು, ಹಾಗೂ ಪ್ರವರ್ತಕರು. ಸುಮಾರು ೫೩ ವರ್ಷಗಳ ತಮ್ಮ ಸುದೀರ್ಘ ಯಜಮಾನಿಕೆಯಲ್ಲಿ, ಹೊಸ ಹೊಸ ಉದ್ಯಮ ಕ್ಷೇತ್ರಗಳನ್ನು ಚೆನ್ನಾಗಿ ಅಭ್ಯಸಿಸಿ ತೆಗೆದುಕೊಂಡು, ಅದರಲ್ಲಿ ಅತ್ಯಂತ ಭಾರಿ ಪ್ರಮಾಣದ ಯಶಸ್ಸನ್ನು ಪಡೆದರು. ಮೂಲ ಟಾಟಾ ಅವರ ಹೆಸರನ್ನು ಅಮರಗೊಳಿಸಿದ ಟಾಟಾಸಂಸ್ಥೆಯ ಹಲವು ನಿಷ್ಠ ಕಾರ್ಯಶೀಲರಲ್ಲಿ ಅಗ್ರಗಣ್ಯರು. 'ಕೇನ್ ಬಂಗಲೆಯ ವಾಸಿ' ಜೆ.ಆರ್.ಡಿ. ಅಲ್ಟಾಮೌಂಟ್ ರೋಡಿನ ಕೇನ್, ಎಂಬ ಬಂಗಲೆಯಲ್ಲಿ ಪತ್ನಿ, ಥೆಲ್ಮಾರೊಡನೆ ವಾಸವಾಗಿದ್ದರು. ಇದು ಬಾಡಿಗೆ ಮನೆಯಾಗಿತ್ತು. ವಿದ್ಯಾಭ್ಯಾಸ 'ಜೆ.ಆರ್.ಡಿಯವರ ವಿದ್ಯಾಭ್ಯಾಸ ಮೊದಲು ಫ್ರಾನ್ಸ್, ಜಪಾನ್ ಮತ್ತು ಭಾರತದಲ್ಲಿ ನಡೆಯಿತು. ಜೆ ಅವರಿಗೆ ಮಾತೃ ಭಾಷೆ ಫ್ರೆಂಚ್ ಭಾಷೆ ಬಿಟ್ಟರೆ ಬೇರೆಯೇನೂ ಬರುತ್ತಿರಲಿಲ್ಲ. ಜೆ ಅವರ ಇಂಗ್ಲೀಷ್ ಭಾಷೆಯನ್ನು ಉತ್ತಮ ಪಡಿಸಲು, ಒಂದು ವರ್ಷ ಇಂಗ್ಲೆಂಡಿನಲ್ಲಿ 'ಕ್ರಾಮರ್' ಶಾಲೆಯಲ್ಲಿ ಭರ್ತಿಮಾಡಲಾಗಿತ್ತು. ಕ್ರಾಮರ್ ಶಾಲೆ, ಸಫೊಕ್ ಉತ್ತರ ಸಮುದ್ರದ ಬಳಿಯಿತ್ತು. ಅತ್ಯಂತ ಶೀತ ಪ್ರದೇಶ. ಸೌತ್ ವೊಲ್ಡ್, ಸ್ಕೂಲಿನ ತರುವಾಯ ಅವರಿಗೆ, ಫ್ರೆಂಚ್ ಸೈನ್ಯದಲ್ಲಿ ಒಂದು ವರ್ಷ, ರೆಜಿಮೆಂಟ್ ಡಿ ಸ್ಪಾಹಿಸ್ ಗೆ ಸೇರಿದರು. ಇನ್ನು ೬ ತಿಂಗಳು ಅಲ್ಲೇ ಕೆಲಸಮಾಡಿದ್ದರೆ, ಸೈನ್ಯದಲ್ಲಿ ಆಫೀಸರ್ ಕೆಲಸ ಸಿಕ್ಕುವುದು ಖಂಡಿತವಾಗಿತ್ತು. ಕೇಂಬ್ರಿಡ್ಜ್ ನಲ್ಲಿ ಇಂಜಿನಿಯರಿಂಗ್ ಓದಲು ಏರ್ಪಾಟು ಮಾಡಿದ್ದರು. ಆರ್.ಡಿ.ಟಾಟಾ ಅವರು, ಬೊಂಬಾಯಿನಲ್ಲಿ ಸೂನಿಯ ಆಸೆಗೆ ತಕ್ಕಂತಹ " ಸುನಿತ," ಎಂಬ ಬಂಗಲೆಯೊಂದನ್ನು ಬೊಂಬಾಯಿನ ಮಲಬಾರ್ ಹಿಲ್ಸ್ ನಲ್ಲಿ ಖರೀದಿಸಿದರು. ೧೯೨೦ ರಲ್ಲಿ ಬೊಂಬಾಯಿನ ನೇರಳ್ ರೈಲ್ವೆ ನಿಲ್ದಾಣದ ಬಳಿ ಇದ್ದ ಗಿರಿಧಾಮ 'ಮಾಥೆರಾನ್' ನಲ್ಲಿ 'ದಿನ್ ಶಾ ಪೆಟಿಟ್' ಅವರ ಬಂಗಲೆಯಲ್ಲಿ ಸ್ವಲ್ಪ ಕಾಲ ತಂಗಲು ವ್ಯವಸ್ಥೆಯಾಗಿತ್ತು. ಆದರೆ ಈ ಕಾರ್ಯಕ್ರಮದಲ್ಲಿ ದಿಢೀರನೆ ಕೆಲವೊಂದು ಬದಲಾವಣೆಗಳಾದವು. ತಂದೆಯವರು ಮನಸ್ಸು ಬದಲಾಯಿಸಿ, 'ಜೆ' ರವರನ್ನು ಬೊಂಬಾಯಿಗೆ ಹೋಗಲು ಆಗ್ರಹ ಮಾಡಿದರು. ೧೯೨೩ ರಲ್ಲಿ ಸೂನಿಯವರ ಆರೋಗ್ಯದಲ್ಲಿ ಏರುಪೇರು ಆಗಿ, ಭಾರತಕ್ಕೆ ಬರುವ ಸ್ಥಿತಿಯಲ್ಲಿರಲಿಲ್ಲ. ೧೯೨೩ ನೆಯ ಇಸವಿಯಲ್ಲಿ, ಸೂನಿಯವರು ತಮ್ಮ ೪೩ ನೆ ವಯಸ್ಸಿನಲ್ಲೇ, ಇಹಲೋಕವನ್ನು ತ್ಯಜಿಸಿದರು. ಈ ಸುದ್ದಿಯನ್ನು ತಂತಿಮೂಲಕ ತಿಳಿದ ಆರ್. ಡಿ ಯವರು, ಪ್ಯಾರಿಸ್ ತಲುಪುವ ವೇಳೆಗೆ ಸೂನಿಯವರ ಅಂತಿಮ ಸಂಸ್ಕಾರಗಳೆಲ್ಲಾ ಮುಗಿದಿದ್ದವು. ಭಾರತದಲ್ಲಿ ಸರ್. ದೊರಾಬ್ ಟಾಟಾ ಅವರ ಆರೋಗ್ಯ ದಿನೇ ದಿನೇ ಹದಗೆಡುತ್ತಿತ್ತು. ಆರ್. ಡಿಯವರೂ ಸಹಿತ ಹೆಚ್ಚು ಹೆಚ್ಚು ಜವಾಬ್ದಾರಿಗಳನ್ನು ಹೊತ್ತುಕೊಳ್ಳುವಷ್ಟು ಶಕ್ತರಾಗಿರಲಿಲ್ಲ. 'ಸೂನಿ 'ಯವರ ಮರಣದ ನಂತರ, ಅಜ್ಜಿ, 'ಮಿಸೆಸ್. ಬ್ರೈರ್', ಅವರು ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು. 'ಅಪ್ರೆಂಟಿಸ್' ಆಗಿ ತಂದೆಯವರ ಆದೇಶದಂತೆ, ನವ ಯುವಕ 'ಜೆ', 'ಟಾಟಾ ಸನ್ಸ್ ಕಂಪೆನಿ' ಯ ಅಪ್ರೆಂಟಿಸ್ ಆಗಿ, ಬೊಂಬಾಯಿಗೆ ಪಾದಾರ್ಪಣೆ ಮಾಡಿದರು. "ಜೆ " ೧೯೨೫ ರಲ್ಲಿ, ಬೊಂಬಾಯಿಗೆ ಬಂದು ಟಾಟ ಕಂಪೆನಿಯಲ್ಲಿ 'ಅಪ್ರೆಂಟಿಸ್,' ಆಗಿ ಭರ್ತಿಯಾದರು. ಆಗ ತಾನೆ ಬಂದು ಸೇರಿದ ಜೆ,ಯವರಿಗೆ, ದೇಶ-ಭಾಷೆಗಳೆಲ್ಲಾ ಹೊಸದು. ಗುಜರಾತಿ, ಹಿಂದಿ ಸರಿಯಾಗಿ ಬರುತ್ತಿರಲಿಲ್ಲ. ಅವರು ವಿಮಾನಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಹೆಚ್ಚು ಮುತುವರ್ಜಿಯಿಂದ ನೋಡಿಕೊಳ್ಳುತ್ತಿದ್ದರು. ಬೇರೆ ಕೆಲಸಗಳಿಗೆ ಇನ್ನೂ ಅವರಿಗೆ ಬಹಳ ತರಭೇತಿಯ ಅಗತ್ಯವಿತ್ತು. ಜೆ.ಎನ್ ಅವರ ವಿಲ್ ನಂತೆ, ದೊರಾಬ್ ಅವರಿಗೆ, ೩ ಲಕ್ಷರೂಪಾಯಿ, ವಾರ್ಷಿಕ ವೇತನ, ಆರ್. ಡಿಯವರಿಗೆ, ೨ ಲಕ್ಷರೂ. ಜೆ ಅವರಿಗೆ, ೩,೦೦೦, ದುರಾಬ್, ೨,೦೦೦ ಜಿಮ್ಮಿ ೧೦೦೦, ಮತ್ತು ಕೊನೆಯವರಿಗೆ, ೫ ರಲ್ಲಿ ಒಂದು ಭಾಗ ಹಣ ಸಂದಾಯವಾಗುತ್ತಿತ್ತು. ಆದರೆ, ಜೆ ಎಲ್ಲರಿಗೂ ಸಮಭಾಗ ಕೊಡಲು ಆಶಿಸಿದರು. ಟಾಟಾ ಕಂಪೆನಿ ಅವರಿಗೆ ಮಾಸಿಕ ೭೫೦/- ರೂ ವೇತನವನ್ನು ನಿರ್ಧರಿಸಿತ್ತು. ೧೯೨೬-೧೯೩೧ ರವರೆಗೆ, ಬರ್ದೋರ್ಜಿ ಪದ್ ಶ ರವರು ಡೈರೆಕ್ಟರ್. ಆಗ ಟಾಟಾ ಹೌಸ್ ನಲ್ಲಿ, ಒಬ್ಬ ನಿವೃತ್ತ ಐ. ಸಿ. ಎಸ್ ಅಧಿಕಾರಿ, ಟಾಟಸಂಸ್ಥೆಯ ಕಾರ್ಯಭಾರವನ್ನು ನೋಡಿಕೊಳ್ಳುತ್ತಿದ್ದರು. ಅವರೇ ಸ್ಕಾಟ್ ಮನ್, 'ಜಾನ್ ಪೀಟರ್ ಸನ್'. ಜೆ ಅವರ ಆತ್ಮಕಥೆಯಲ್ಲಿ ಹಲವು ಬಾರಿ ಪೀಟರ್ ಸನ್ ರನ್ನು ನೆನೆಯುತ್ತಾರೆ. ಪ್ರಾರಂಭಿಕ ಹಂತದಲ್ಲಿ ಟಾಟಾ ಕಂಪೆನಿಯಂತಹ ಒಂದು ಬೃಹತ್ ಉದ್ಯಮ ಸಂಸ್ಥೆಯ ವೈವಿಧ್ಯಮಯ ಉತ್ಪಾದನಾ ಸಾಮರ್ಥ್ಯವನ್ನೂ, ಕಾರ್ಯಕ್ಷೇತ್ರಗಳ ವಹಿವಾಟುಗಳನ್ನೂ, ಅರ್ಥ ಮಾಡಿಕೊಳ್ಳಲು, ಆಳದಲ್ಲಿ ಹೋಗಿ, ಅಂತರಂಗವನ್ನು ಹೊಕ್ಕು ತಿಳಿದುಕೊಳ್ಳಲು ಅವರಿಗೆ ಸಹಾಯವಾಯಿತು. ಆರ್. ಡಿ ಟಾಟಾ ಅವರು, ಪೀಟರ್ ಸನ್ ರನ್ನು ಮಗ, 'ಜೆ'ಗೆ ಪರಿಚಯಿಸಿ, ಅವರ ಕೊಠಡಿಯಲ್ಲಿ ಒಂದು ಮೂಲೆಯಲ್ಲಿ ಡೆಸ್ಕ್ ಒಂದನ್ನು ಹಾಕಿಸಿಕೊಟ್ಟರು. ಪೀಟರ್ ಸನ್, ಪತ್ರಗಳಿಗೆ ಸಹಿ ಹಾಕುವ ಮೊದಲು, ಜೆ ಆಫೀಸಿನ ಪ್ರತಿ ಪತ್ರವನ್ನೂ ಓದಿ ಅವುಗಳನ್ನು ಪೀಟರ್ ಸನ್ ಅವಗಾಹನೆಗೆ ಮಂಡಿಸುತ್ತಿದ್ದರು. ಹೀಗೆ ಜೆ. ಆರ್. ಡಿ ಯವರಿಗೆ ಕಂಪೆನಿಯಲ್ಲಿ ನಡೆಯುವ ಪತ್ರ ವ್ಯವಹಾರಗಳು ಮತ್ತು ಅದಕ್ಕೆ ಸ್ಪಂದಿಸುವ ಬಗೆ ಹೇಗೆ ಎನ್ನುವ ಸ್ಥೂಲ ಪರಿಚಯವಾಯಿತು. ಇದಾದ ಬಳಿಕ, ರತನ್ ತಮ್ಮ ಮಗನಿಗೆ, 'ಟಾಟ ಸ್ಟೀಲ್ ಪ್ಲಾಂಟ್ ' ನಲ್ಲಿ ಕೆಲಸ ಕಲಿಯಲು 'ಜಮ್ ಶೆಟ್ ಪುರ' ಕ್ಕೆ, ಅಪ್ರೆಂಟಿಸ್ ಆಗಿ ಕಳಿಸಿಕೊಟ್ಟರು. ಅದೇ ವರ್ಷ, ಅಂದರೆ ೧೯೨೫ ರಲ್ಲಿ ಜೆ, ಯವರ ತಂದೆ ಆರ್. ಡಿಟಾಟಾ, ಪ್ಯಾರಿಸ್ ನಲ್ಲಿ ತೀರಿಕೊಂಡರು. ಸರ್ ದೊರಾಬ್, ಮಧುಮೇಹದ ಕಾಯಿಲೆಯಿಂದ ನರಳಿ ಕೃಶರಾದರು. ಟಾಟ ಕಂಪೆನಿಯ ಜವಬ್ದಾರಿ ದಿನೇ-ದಿನೇ ಹೆಚ್ಚಾಗುತ್ತಿತ್ತು. ವಯಸ್ಸು ಅವರನ್ನು ಹಣ್ಣುಮಾಡಿತ್ತು. ತಮಗಿಂತ ಕೇವಲ ೩ ವರ್ಷಹಿರಿಯರಾದ ಆರ್.ಡಿಯವರ ಮರಣ, ದೊರಾಬ್ ಟಾಟಾ ಮತ್ತು ಟಾಟಾ ಪರಿವಾರಕ್ಕೆ ಒಂದು ಅಘಾತದಂತೆ, ಅನುಭವವಾಯಿತು. ಸಾಲದ ಹೊರೆಯ ಆತಂಕ ತಂದೆ, 'ಆರ್.ಡಿ.ಟಾಟಾ' ಅವರು ಮಾಡಿದ, ಸಾಲದ ಹೊರೆ ತೀರಿಸುವುದು 'ಜೆ.ಆರ್.ಡಿ.' ಯವರ ಆದ್ಯ ಕರ್ತವ್ಯವಾಗಿತ್ತು. ೨೨ ವರ್ಷದ ಜೆ ಮನೆಯ ಹಾಗೂ ಟಾಟಾ ಸನ್ಸ್ ಕಂಪೆನಿಯ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಯಿತು. ಪಾರಂಪರಿಕವಾಗಿ ತಂದೆಯವರು ನಿಭಾಯಿಸುತ್ತಿದ್ದ ಟಾಟಾ ಸನ್ಸ್ ನ ನಿರ್ದೇಶಕ ಪದವಿಯನ್ನು' ಜೆ' ಒಪ್ಪಿಕೊಂಡು ಕಂಪೆನಿಯ ಜವಾಬ್ದಾರಿಯನ್ನು ಕೂಡಲೆ ತೆಗೆದುಕೊಳ್ಳಬೇಕಾಯಿತು. ತಂದೆಯವರು ಮಾಡಿಕೊಂಡ ಸಾಲ ಹೆಚ್ಚಾಗಿತ್ತು ; ಅಲ್ಲದೆ, ಅವರು ಟಾಟಾ ಕಂಪೆನಿಯಿಂದಲೂ ಬಹಳ ಸಾಲ ಪಡೆದಿದ್ದರು. ಹಾಗೂ ಸರ್ ದೊರಾಬ್ ರವರ ಬಳಿ ಕೂಡ ಸಾಲ ಮಾಡಿಕೊಂಡಿದ್ದರು. ಮೇಲಾಗಿ ಹಣ-ಕಾಸಿನ ವಿಷಯದಲ್ಲಿ ಸರ್. ದೊರಾಬ್ ಟಾಟ ಬಹಳ ಕಟ್ಟುನಿಟ್ಟಾಗಿ ವ್ಯವಹರಿಸುತ್ತಿದ್ದರು. ಸ್ವಲ್ಪ ದುಂದು ವೆಚ್ಚದ ಸ್ವಭಾವದ ಆರ್. ಡಿ, ಹೆಂಡತಿಯ ಅನಾರೋಗ್ಯಕ್ಕೆ, ಮತ್ತು ವಿದೇಶದಲ್ಲಿ ಮನೆಯನ್ನು ಬಾಡಿಗೆ ಪಡೆದು ಮಾಡಿದ ವ್ಯವಸ್ಥೆಗಳಿಗೆ ಬಹಳ ಹಣಸಾಲಮಾಡಬೇಕಾಯಿತು. ಇವೆಲ್ಲಾ ಸಾಲದ ಹಣವನ್ನು ತೀರಿಸುವುದು ಜೆ ಅವರಿಗೆ ವಿಪರೀತ ಕಷ್ಟವಾಯಿತು. ಸರ್. ದೊರಾಬ್ ಎಷ್ಟೋ ಪಾಲು ಹಣ ಮಾಫಿಮಾಡಿದಾಗ್ಯೂ ಸಾಲದ ಹೊರೆ ಹೆಚ್ಚಾಗಿತ್ತು. ಜೆ ಯೋಚಿಸಿ, ಕೊನೆಗೆ, ತಮ್ಮ ಪ್ಯಾರಿಸ್ ನ 'ಹಾರ್ಡ್ ಲಾಟ್', ನಲ್ಲಿದ್ದ ಸ್ವಂತ ಮನೆ, ಹಾಗೂ ಅಲ್ಲಿನ ವ್ಯವಹಾರಗಳನ್ನೆಲ್ಲಾ ಮಾರಿದರು. ಬೊಂಬಾಯಿನ 'ಸುನಿತ', ಮತ್ತು ಇನ್ನೊಂದು ಮನೆಯನ್ನೂ ಮಾರಿ, ಬಂದ ಹಣದಿಂದ ಸಾಲವನ್ನೆಲ್ಲಾ ತೀರಿಸಿ, 'ತಾಜ್ ಮಹಲ್ ಹೋಟೆಲ್', ನಲ್ಲಿ ಸ್ವಲ್ಪ ದಿನ ವಾಸ್ತವ್ಯಕ್ಕೆ ಏರ್ಪಾಡು ಮಾಡಿ ಕೊಂಡರು. ಜೆ ತಮ್ಮ ೧೫ ನೆಯ ವರ್ಷದಲ್ಲೇ ಪ್ಯಾರಿಸ್ ನಗರದಲ್ಲಿ ಒಂದು ಸುತ್ತು ಸುತ್ತಿಸುವ ವಿಮಾನದಲ್ಲಿ ಸುತ್ತಿ ಅದರ ಸ್ಥೂಲ ಅನುಭವವನ್ನು ಪಡೆದು ಆನಂದಿಸಿದ್ದರು. ಅವರಿಗೆ ವಿಮಾನಯಾನದಲ್ಲಿ ತೀವ್ರವಾದ ಆಸಕ್ತಿ. ಅಂದಿನ ದಿನಗಳಲ್ಲಿ ಜೆ ಭಾರತದಲ್ಲಿ, ಪೈಲೆಟ್ ಲೈಸೆನ್ಸ್ ಪಡೆದ ಪ್ರಥಮ ಭಾರತೀಯರಾಗಿದ್ದರು. ಪೈಲೆಟ್ ಆಗುವ ಕನಸು ನನಸಾದಾಗ ೧೯೩೦ ರಲ್ಲಿ ನೆವಿಲ್ ವಿನ್ಸೆಂಟ್ ಎಂಬ ಅಂಗ್ಲ ಪೈಲೆಟ್, ಭಾರತದ ಸ್ಥಳೀಯ ಜನರನ್ನು ತಮ್ಮ ಪುಟ್ಟ ವಿಮಾನದಲ್ಲಿ ಕುಳ್ಳಿರಿಸಿ ಕೊಂಡು ನಗರ ಪ್ರದಕ್ಷಿಣೆ ಮಾಡಿಸುವುದರಲ್ಲಿ ಆಸಕ್ತಿ ತೋರಿಸುತ್ತಿದ್ದರು. ಸಾಹಸಿ, ಹಾಗೂ ಮಹತ್ವಾಕಾಂಕ್ಷಿಯಾಗಿದ್ದ ಅವರು, ವಿಮಾನಾಸಕ್ತ ಜೆ ಅವರನ್ನು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಿದರು. 'ಜೆ' ಆಗಿನ್ನೂ ತಮ್ಮ ಅಸ್ಪಷ್ಟ ಹೆಜ್ಜೆಗಳನ್ನು ಟಾಟಾ ಸಾಮ್ರಾಜ್ಯದಲ್ಲಿ ಇಡುತ್ತಿದ್ದ ಕಾಲವದು. ಟಾಟಾ ಸಂಸ್ಥೆಯ ಆಗಿನ ಡೈರೆಕ್ಟರ್ ಆಗಿದ್ದ 'ಸರ್ ದೊರಾಬ್ ಟಾಟಾ' ಅವರಿಗೆ ವಿಮಾನಯಾನದ ಸೌಕರ್ಯಗಳ ಬಗ್ಗೆ, ಮುಂದಿನ ದಿನಗಳಲ್ಲಿ ಅದರ ಬೆಳವಣಿಗೆಯ ಅಗಾಧ ಸಾಧ್ಯತೆಗಳ ವಿಚಾರಗಳನ್ನು ಪೀಟರ್ ಸನ್ ಮುಖಾಂತರ ದೊರಾಬ್ ಟಾಟರವರಿಗೆ ಮಾಹಿತಿ ನೀಡಿ ಮನವರಿಕೆ ಮಾಡಿದರು. ಒಂದು ವಿಮಾನಯಾನ ಕಂಪೆನಿಯನ್ನು ಸ್ಥಾಪಿಸಲು ಕರೆಯಿತ್ತರು. ಪೈಲೆಟ್ ಆಗುವ ಕನಸು, ಹಾಗೂ "ಸಾರ್ವಜನಿಕ-ವಿಮಾನಯಾನ", ಬಾಲ್ಯದಲ್ಲೇ ಮನಸ್ಸಿನಲ್ಲಿ ಹುದುಗಿದ್ದ ಆಸೆ, ಮೂರ್ತರೂಪು ಪಡೆಯಿತು. ಹೀಗೆ, "ಟಾಟಾ ಏರ್ಲೈನ್ಸ್", ಅಸ್ತಿತ್ವಕ್ಕೆ ಬಂತು. ಈ ಹೊಸ ಸಂಸ್ಥೆ, ಮೊದಲಿಗೆ, 'ಟಾಟಾ ಸನ್ಸ್' ಸಂಸ್ಥೆಯ ಒಂದು ಚಿಕ್ಕ ಅಂಗವಾಗಿ ಪ್ರಾರಂಭವಾಗಿತ್ತು. ೧೫, ಅಕ್ಟೋಬರ್ ೧೯೩೨ ಭಾರದ ವಿಮಾನಯಾನದ ಇತಿಹಾಸದಲ್ಲಿ ಒಂದು ಅವಿಸ್ಮರಣೀಯದಿನ. ಆ ದಿನ ಜೆರವರು ತಾವೊಬ್ಬರೇ ಕರಾಚಿಯಿಂದ ಅಹ್ಮದಾಬಾದ್ ಮುಖಾಂತರವಾಗಿ ಬೊಂಬಾಯಿಗೆ ಪುಸ್ ವಿಮಾನದ ಹಾರಾಟದ ವ್ಯವಸ್ಥೆ ಮಾಡಲಾಗಿತ್ತು. ಸೂಕ್ಷ್ಮಮತಿ, ಸಮಯಪ್ರಜ್ಞೆ ಹಾಗೂ ದೂರದೃಷ್ಟಿ ಯನ್ನು ಹೊಂದಿದ್ದ ಜೆಯವರು, ವಿಮಾನಯಾನದ ಬಹುಮುಖ ಸವಲತ್ತುಗಳನ್ನು ಗ್ರಹಿಸಿದ್ದರು. ಸರ್. ದೊರಾಬ್ ಟಾಟಾ ಮತ್ತು ತಂದೆಯವರು ಆಗಲೇ ಭಾರಿ ಉದ್ಯಮಗಳನ್ನು ಸ್ಥಾಪಿಸಿದ್ದರು. ತಮಗೆ ಅವುಗಳಲ್ಲಿ ಪೂರ್ಣಕ್ಷಮತೆ ಇರಲಿಲ್ಲ. ತಮ್ಮ ಕ್ಷೇತ್ರವೇನಿದ್ದರೂ ವಿಮಾನಯಾನಕ್ಕೆ ಸಂಬಂಧಿಸಿದ್ದು. ಅದರಲ್ಲಿ ಅತಿ ಹೆಚ್ಚಿನ ಯೋಗದಾನ ಮಾಡುವ ಆಸೆ ಅವರಿಗೆ ಗೋಚರಿಸಿತು. 'ಥೆಲ್ಮಿಯವರ ಭೇಟಿ' ಯುವ ಜೆ.ಆರ್.ಡಿ.ಯವರಿಗೆ, 'ಸ್ಪೋರ್ಟ್ಸ್ ಕಾರು 'ಗಳನ್ನು ವೇಗವಾಗಿ ಓಡಿಸುವ ಒಂದು ಹುಚ್ಚಿತ್ತು. ೧೯೨೦ ರಲ್ಲಿ ಅವರ ತಂದೆ "ಬ್ಯುಗಾಟ" ಕಾರನ್ನು ಹುಟ್ಟು ಹಬ್ಬದ ಬಳುವಳಿಯಾಗಿ ಕೊಟ್ಟರು. ಜೆ' ತಮ್ಮ ಬ್ಯುಗೋಟ ದಲ್ಲಿ ಬೊಂಬಾಯಿನ ರಸ್ತೆಗಳಲ್ಲಿ ಭರ್ರನೆ ಓಡಾಡುವುದನ್ನು ಬ್ರಿಟಿಷ್ ಪೋಲಿಸ್ ಅಧಿಕಾರಿಗಳು ಸಹಿಸಲಿಲ್ಲ. ಕಾರಿನ ವೇಗದ ಎಲ್ಲೆ ಮೀರಿದರೆಂಬ ಸುಳ್ಳು-ಆಪಾದನೆಯನ್ನು 'ಜೆ' ಮೇಲೆಹಾಕಿ, ಕೇಸ್ ಬುಕ್ ಮಾಡಿದರು. ಆಗ, 'ಜೆ' ಅವರಿಗೆ ತಿಳಿದ ಆಗಿನ ಕಾಲದ ಅತ್ಯಂತ ಹೆಸರುವಾಸಿಯಾದ ಲಾಯರ್, 'ಜ್ಯಾಕ್ ವೈಕೆಜಿ' ಯವರನ್ನು ಭೇಟಿಯಾಗಿ, ಅವರ ಸಹಾಯದಿಂದ ಕೇಸ್ ಗೆದ್ದರು. ಅವರ ಮನೆಗೆ ಹೋದಾಗ ಒಬ್ಬ ಸುಂದರ ಅತ್ಯಾಕರ್ಷಕ ಆಧುನಿಕ ತರುಣಿಯ ಭೇಟಿಯಾಯಿತು. ಈಕೆಯ ಚಿಕ್ಕಪ್ಪನೇ 'ವೈಕೆಜಿ'ಯವರು. ಹೀಗೆಯೇ ಅವರ ಭೇಟಿ ಪ್ರೇಮದಲ್ಲಿ ತಿರುಗಿ, ೧೯೩೦ ರಲ್ಲಿ ಜೆ, 'ಥೆಲ್ಮ' ಅವರನ್ನು ಮದುವೆಯಾದರು. ತಂದೆಯವರು ಬಹುಮಾನವಾಗಿ ಕೊಟ್ಟ 'ಬ್ಯುಗಾಟೊ ವೇಗಿಕಾರ್','ಥೆಲ್ಮಾ ವೈಕೆಜಿ,'ಯವರ ಮಿಲನಕ್ಕೆ ಕಾರಣವಾಯಿತು. 'ಥೆಲ್ಲಿ,' ಅಮೆರಿಕದಲ್ಲಿ ಜನಿಸಿದ್ದರು. ಆಕೆಯ ಪ್ರಾಥಮಿಕ ಶಾಲೆಯ ಕಲಿಕೆ ಇಟಲಿಯಲ್ಲಾಗಿತ್ತು. ತಾಯಿ, 'ಮುರೆಲ್,' ಅಕ್ಕ,'ಕಿಟ್ಟಿ', ಥೆಲ್ಲಿ ಗಿಂತ ಕೆಲವೇ ವರ್ಷ ದೊಡ್ಡವಳು. ಬೊಂಬಾಯಿನ,'ಜೆ. ಜೆ. ಸ್ಕೂಲ್ ಆಫ್ ಅರ್ಟ್' ನಲ್ಲಿ ಕಲಿಕೆ. ಬಣ್ಣದ ಚಿತ್ರಗಳು, ' ಪೋರ್ಟ್ರೇಟ್ಸ್' ಬರೆಯಲು ವಿಶೇಷ ಆಸಕ್ತಿ. ಈಜುವುದು ಹಾಗೂ ನೃತದಲ್ಲಿ ಪರಿಣತಿ ಇತ್ತು. 'ಸ್ಕರ್ಟ್' ಅಥವಾ 'ಸಾಡಿ'ಯಲ್ಲಿ ಆಕೆ ಅತ್ಯಂತ ಆಕರ್ಷಕವಾಗಿ ಕಾಣಿಸುತ್ತಿದ್ದಳು. 'ಜೆ'ಸಹಜವಾಗಿ ಮನಸೋತರು. ಟಾಟಾ ಸಂಸ್ಥೆಗೆ ಪಾದಾರ್ಪಣೆ ಟಾಟಾ ಸನ್ಸ್ ಕಂಪೆನಿಯ ಡೈರೆಕ್ಟರ್ ಆಗಿದ್ದ, ಅನುಭವಿ, 'ಸರ್ ನವರೊಸ್ ಜಿ ಸಕ್ಲಾಟ್ ವಾಲ', ರವರು ೧೯೩೮ ರಲ್ಲಿ ಲಂಡನ್ ನಲ್ಲಿ ಮರಣ ಹೊಂದಿದರು. ಸರ್. ದೊರಾಬ್ಜಿ ಅವರ ನಂತರ ಟಾಟಾ ಸನ್ಸ್ ಕಂಪೆನಿಯ ಡೈರೆಕ್ಟರ್ ಆಗಿದ್ದರು. ಅವರ ಮರಣದ ನಂತರ ಬೃಹತ್ ಪ್ರಮಾಣದಲ್ಲಿ ಬೆಳೆದಿದ್ದ ಟಾಟಾ ಸನ್ಸ್ ಕಂಪೆನಿಯನ್ನು ನಡೆಸಲು ಒಬ್ಬ ಸಮರ್ಥ ವ್ಯಕ್ತಿಯ ಅವಶ್ಯಕತೆಯಿತ್ತು. ಟಾಟ ಸನ್ಸ್, ಡೈರೆಕ್ಟರ್ ಗಳೆಲ್ಲಾ ಸಮಾಲೋಚಿಸಿ, ಜೆ ರವರನ್ನು ಟಾಟಾ ಸನ್ಸ್ ನ ಪ್ರಧಾನ ಡೈರೆಕ್ಟರ್ , ಆಗಿ ಚುನಾಯಿಸಿದರು. ಹಾಗೆ ೨೬, ಜುಲೈ, ೧೯೩೮ ರಂದು ಶುರುವಾದ ಟಾಟಾ ಸಂಸ್ಥೆಯ ನಂಟು, ೨೫, ಮಾರ್ಚ್, ೧೯೯೧ ರ ವರೆಗೆ ಸತತವಾಗಿ ಮುಂದುವರೆಯಿತು. ತಮ್ಮ ಕೊನೆಯ ದಿಗಳವರೆಗೆ 'ಟಾಟಾಸಂಸ್ಥೆ' ಯ ಏಳಿಗೆಗೆ ತಮ್ಮ ಜೀವನವನ್ನು ಮುಡುಪಾಗಿಟ್ಟರು. 'ಟಾಟಾ ಏರ್ಲೈನ್ಸ್',ಸ್ಥಾಪನೆ ೧೯೪೬ ರಲ್ಲಿ, ಜೆ. ಆರ್. ಡಿ. ಟಾಟಾರವರ, ಪ್ರೀತಿಯ ಕಂಪೆನಿ ,ಟಾಟಾ ಏರ್ಲೈನ್ಸ್ ಸ್ವತಂತ್ರ ಕಂಪೆನಿಯಾಯಿತು. ೨ ವರ್ಷಗಳ ನಂತರ, ಜೆ 'ಟಾಟಾ ಏರ್ ಲೈನ್ಸ್ (ಇಂಟರ್ನ್ಯಾಷನಲ್)', ಸ್ಥಾಪಿಸಿದರು. ೧೯೫೩ ರಲ್ಲಿ ಭಾರತದ ಉದ್ಯಮಗಳು ರಾಷ್ಟ್ರೀಕರಣ ವಾದಾಗ ಜೆ ಎರಡು ಕಂಪೆನಿಗಳ ನಿರ್ದೇಶಕತ್ವಕ್ಕೆ ರಾಜೀನಾಮೆ ಕೊಟ್ಟರು. ಜೆ, ಒಬ್ಬ ಸಾಹಸಿ, ವಾಣಿಜ್ಯೋದ್ಯಮಿ, ತಾಂತ್ರಿಕ ವಿಷಯಗಳನ್ನು ಚೆನ್ನಾಗಿ ಅರಿತವರು, ಮೇಲಾಗಿ ಅದರ ಆಡಳಿತದಲ್ಲಿ ಚೆನ್ನಾಗಿ ನುರಿತವರು. ವಿಮಾನಯಾನದ ಬಗ್ಗೆ, ಕಾರ್ ರೇಸ್ ಬಗ್ಗೆ ಹೆಚ್ಚು ಹೆಚ್ಚು ಪುಸ್ತಕಗಳನ್ನು, ಆಧುನಿಕ ಮ್ಯಾಗಜೈನ್ ಗಳನ್ನು ಓದಿ ವಿಷಯ ಸಂಗ್ರಹಿಸಿದ್ದರು. ೧೯೮೨ ರಲ್ಲಿ ತಮ್ಮ '೭೮ ನೇ ಹುಟ್ಟುಹಬ್ಬ' ದ ದಿನದಂದು, ಟಾಟಾ ತಮ್ಮ (೧೯೩೨ ರಲ್ಲಿ ನಡೆಸಿದ ಸೋಲೋ ವಿಮಾನ ಹಾರಾಟದಂತಹ) ಚಾರಿತ್ರ್ಯಿಕ ಹಾರಾಟವನ್ನು ಇನ್ನೊಮ್ಮೆ, ಮಾಡಿ ತೋರಿಸಿದರು. ಇದು ಅಂದಿನ ನವ ಯುವಕರನ್ನು ಹುರಿದುಂಬಿಸಲು, ಹಾಗೂ ಅವರಿಗೆ ವಿಮಾನಯಾನದಲ್ಲಿ ಆಸಕ್ತಿ ಮೂಡಿಸಲು ತೆಗೆದುಕೊಂಡ ಒಂದು ಕ್ರಮವಾಗಿತ್ತು. ಆಗ ಟಾಟಾ ಕಂಪೆನಿಯ ಸುಪರ್ದಿನಲ್ಲಿ ಒಟ್ಟು ೧೪ ಕಂಪೆನಿಗಳಿದ್ದವು. ವಾಣಿಜ್ಯ ವಾಹನಗಳು, ಇಂಜಿನಿಯರಿಂಗ್, ಹೋಟೆಲ್ಗಳು, ಏರ್ ಕಂಡೀಶನರ್ ಹಾಗೂ ರೆಫ್ರಿಜರೇಟರ್ಗಳು, ಕನ್ಸಲ್ ಟೆನ್ಸಿ ಸರ್ವಿಸಸ್, ಇನ್ ಫರ್ಮೇಶನ್ ಟೆಕ್ನೊಲೊಜಿ, ಕನ್ಸುಮರ್ಸ್ ಸರ್ವಿಸಸ್, ಕನ್ಸೂಮರ್ಸ್ ಡ್ಯುರಬಲ್ಸ್, ಟಿ. ಸಿ. ಎಸ್ ಇತ್ಯಾದಿ. ಜೆ ಈಗಿನವರೆಗೆ ಮಂಚೂಣಿಯಲ್ಲಿ ಹಿರಿಯ ಹಲವು ಪ್ರಮುಖ ಸಂಸ್ಥೆಗಳನ್ನು ಪೋಷಿಸಿ ಕೊಂಡು ಬಂದರು. ಅದರಲ್ಲಿ ಅನೇಕ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿ ಉತ್ಪಾದನೆಯಲ್ಲಿ ಮತ್ತು ಗುಣಮಟ್ಟದಲ್ಲಿ ಅಧಿಕ ಪ್ರಗತಿಯನ್ನು ತರಲು ಸದಾ ಪ್ರಯತ್ನಿಸಿದರು. ಭಾರತದ ಹಲವಾರು ಸಾಮಾಜಿಕ ಸಮಸ್ಯೆಗಳನ್ನು ಅಂತ್ಯಗೊಳಿಸಲು ತಾವು ಸ್ವತಃ ಕಂಕಣಬದ್ಧರಾಗಿ ಕೆಲಸಮಾಡಿದ್ದು. ಭಾರತದ ಸ್ತ್ರೀಯರ ವಿದ್ಯಾಭ್ಯಾಸ ಹಾಗೂ ಅವರನ್ನು ಪೋಷಿಸುವ ಸೇವಾ ಸಂಸ್ಥೆಗಳ ಸುವ್ಯಸ್ಥಿತ ಕೆಲಸ ಕಾರ್ಯಗಳ ಮಹತ್ವದ ಬಗ್ಗೆ ಒತ್ತು ಕೊಟ್ಟರು. 'ಜೆ.ಅರ್.ಡಿ.ಟಾಟಾ' ಟಾಟಾ ಕಂಪೆನಿಯ ಡೈರೆಕ್ಟರ್ ಆಗಿ ಭಾರತದ ಅತ್ಯಂತ ದೊಡ್ಡ ಕಂಪೆನಿಯ ೪ ನೆಯ ಡೈರೆಕ್ಟರ್, ಆಗಿ ಜೆ. ಚುನಾಯಿಸಲ್ಪಟ್ಟರು. ೧೯೩೯ ರಲ್ಲಿ ಇದ್ದ ಆಸ್ತಿ -೬೨ ಕೋಟಿ ಅಥವಾ ೬೨೦. ಮಿಲಿಯ ರುಪಾಯಿಗಳು. ೧೯೬೦ ರಲ್ಲಿ ೧೦,೦೦೦ ಕೋಟಿ ಅಥವಾ, ೧೦೦ ಬಿಲಿಯನ್. ೧೪ ಕಂಪೆನಿಗಳಿಂದ, ಮಾರಾಟ ೨೮೦ ಕೋಟಿ, ೨.೮ ಬಿ. ೧೯೯೩ ರಲ್ಲಿ ೧೫,೦೦೦ ಕೋಟಿ -೧೫೦ ಬಿ.೫೦ ಕ್ಕಿಂತ ಹೆಚ್ಚು ಸಂಸ್ಥೆಗಳು ಹಾಗೂ ಲೆಕ್ಕವಿಲ್ಲದಷ್ಟು ಚಿಕ್ಕಪುಟ್ಟ ಕಂಪೆನಿಗಳು. ಏರ್ ರ್ಲೈನ್ಸ್ ನಿಂದ ಹೋಟೆಲ್, ಟ್ರಕ್ ನಿಂದ ಲೋಕೋಮೋಟಿವ್, ಸೋಡ ಅಶ್, ಔಷಧಿ, ಐರ್ ಕಂಡೀಶನ್, ಲಿಪ್ಸ್ಟಿಕ್, ಕಲೋನ್, ಸಿಮೆಂಟ್ ಕಂ ಸೇರಿ, ಎ. ಸಿ. ಸಿ. ಕಂಪೆನಿಯವರೆಗ. ಈಗಿರುವ ಕಂಪೆನಿಗಳನ್ನು ಧೃಢಪಡಿಸಿ, ಹೊಸ ಉದ್ಯೋಗಗಳನ್ನು ಪ್ರಾರಂಭಿಸಿದರು. ಅಡುಗೆ ಉಪ್ಪು, ಮೊದಲಾದವುಗಳು. ೧೯೬೪-೧೯೯೧, ವೇಳೆಯಲ್ಲಿ, ಭಾರತ ಸರ್ಕಾರದ ಕಂಟ್ರೋಲ್ ನೀತಿಯಿಂದ ಟಾಟಾ ಸಂಸ್ಥೆ ಅಷ್ಟೊಂದು ಗಮನಾರ್ಹ ಪ್ರಮಾಣದಲ್ಲಿ ಬೆಳೆಯಲು ಸಹಾಯವಾಗಲಿಲ್ಲ. ಜೆ.ಆರ್.ಡಿ.ಟಾಟಾರವರಿಗೆ, ಇದರ ಬಗ್ಗೆ ಸ್ವಲ್ಪ ಅಸಮಧಾನವಿತ್ತು. ಸರ್ಕಾರದ ಅನುಕೂಲವಿದ್ದಿದ್ದರೆ, ಇನ್ನೂ ಹೆಚ್ಚಿನದನ್ನು ಸಾಧಿಸಬಹುದಾಗಿತ್ತು, ಎಂದು ಜೆ.ಆರ್.ಡಿ ಹೇಳುತ್ತಿದ್ದರು. ಟಾಟ ಉದ್ಯಮದಲ್ಲಿ ಉತ್ಕರ್ಷ ಜೆ.ಆರ್.ಡಿ.ಯವರು, ಟಾಟಾ ಉದ್ಯಮ ಕ್ಷೇತ್ರದ ಬೇರೆ ಪ್ರಮುಖ ಡೈರೆಕ್ಟರ್ ಗಳ ಕಾರ್ಯವನ್ನು ಪರಿಶೀಲಿಸಿ, ಪ್ರಶಂಸೆಗೆ ಪಾತ್ರರಾದ ಅಧಿಕಾರಿಗಳಿಗೆ ಪ್ರೋತ್ಸಾಹ ಕೊಟ್ಟು, ಅವರಿಗೆ ಮುಂದುವರೆಯಲು ಅಗತ್ಯವಾದ ಸಹಾಯವನ್ನು ಮಾಡುತ್ತಿದ್ದರು. ತಮ್ಮ ಕಾರ್ಯಾವಧಿಯಲ್ಲಿ ಅನೇಕ ಪ್ರತಿಷ್ಠಿತ ಪ್ರತಿಭೆಗಳನ್ನು ಗುರುತಿಸಿದರು. ಕೆಲವರು ಟಾಟಾ ಸಂಸ್ಥೆಯಲ್ಲಿ ದಶಕಗಳಿಂದ ಕೆಲಸ ಮಾಡಿದ ನಿಷ್ಠಾವಂತ ಅಧಿಕಾರಿಗಳು. ಅವರಲ್ಲಿ 'ಸರ್ ಹೋಮಿ ಮೋದಿ', 'ಸರ್ ಅರ್ದೆಶಿರ್ ಜಲಾಲ್', 'ಸರ್ ಜೆಹಾಂಗೀರ್ ಘಾಂಧಿ', 'ರೂಸ್ಸಿಮೋಡಿ', ವಿಜ್ಞಾನಿಗಳಾದ 'ಹೋಮಿ ಭಾಭ', ಲಾಯರ್, 'ಜೆ. ಡಿ. ಚೋಕ್ಸಿ', 'ನಾನಿ ಪಾಲ್ಕಿವಾಲ', 'ಜೆ. ಎನ್. ಮಥಾಯ್', ಎಕೋನೊಮಿಸ್ಟ್ಸ್, 'ಏ. ಡಿ. ಶ್ರಾಫ್', 'ಡಿ. ಆರ್. ಪೆಂಡ್ಸೆ', 'ಫ್ರೆಡ್ಡಿಮೆಹ್ತ', ಮುಂತಾದವರು ಮುಖ್ಯರು. ಅವರಲ್ಲಿ ಕೆಲವರು ರೋಲ್ ಮಾಡೆಲ್ ಆಗಿ ಮೆರೆದರು. 'ದರ್ಬಾರಿ ಸೇಠ್ ', 'ಸುಮಂತ್ ಮೂಲ್ಗಾಂವ್ ಕರ್ ' ಮುಂತಾದವರು, ಅತ್ಯಂತ ಪ್ರಭಾವೀ ಕುಶಲಕರ್ಮಿಗಳು. ಟಾಟಾ ಕಂಪೆನಿಗಳನ್ನು ಅತಿ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಈ ಮಹಾರಥಿಗಳ ಪಾತ್ರ , ಅತಿಮುಖ್ಯವಾಗಿತ್ತು. ಟಾಟಾ ಅಡ್ಮಿನಿಸ್ಟ್ರೆಟಿವ್ ಸರ್ವಿಸೀಸ್, ಟಾಟಾ ಮ್ಯಾನೆಜ್ಮೆಂಟ್ ಸೆಂಟರ್, ಪ್ರೊಫೆಶನಲ್ಸ್, ಮುಂದೆ ಮುಂದೆ ಹೋಗಲು ಇಂತಹ ನಿಸ್ವಾರ್ಥ ವ್ಯಕ್ತಿಗಳು ಕಾರಣರಾದರು. ಹೌರಸೇತುವೆಗೆ ಬೇಕಾದ ಅತಿ ಗಟ್ಟಿಯಾದ ಉಕ್ಕು, 'ಟಿಸ್ಕ್ರೋಮ್', ತಯಾರು ಮಾಡಲಾಯಿತು. 'ಟಿಸ್ಕೊರ್', (ಎನ್ನುವ ಅತಿ ಗಟ್ಟಿಯಾದ ಉಕ್ಕಿನ ಅಲಾಯ್) ನ್ನು ಭಾರತೀಯ ರೈಲ್ವೆ ಕೋಚ್ ಗಳಿಗೆ ಬಳಸುವ, ಸ್ಟೀಲ್,ಟಾಟಾ ಕಂಪೆನಿ ತಯಾರು ಮಾಡಿತು. ಬೇರೆ ಕಂಪೆನಿಗಳಿಗೆ ಹೋಲಿಸಿದರೆ, ಟಾಟಾ ಸಂಸ್ಥೆ ಪ್ರಾರಂಭದಲ್ಲೇ ಕೆಲಸಗಾರರಿಗೆ ಅನೇಕ ಸೌಕರ್ಯಗಳನ್ನು ಕಲ್ಪಿಸಿದ್ದರು. ೧೯೧೨ ರಲ್ಲೆ ಟಾಟಾ ಸಂಸ್ಥೆಯವರು, ತಮ್ಮ ಕಾರ್ಮಿಕರಿಗೆ, ೮ ಗಂಟೆ ಕೆಲಸದ ಶಿಫ್ಟ್ ನ್ನು ಆಯೋಜಿಸಿದ್ದರು. ಆದರೆ, ಆ ದಿನಗಳಲ್ಲಿ ಯೂರೋಪ್ ನಲ್ಲೂ ೧೨ ಗಂಟೆ ಕಾಲದ ಕೆಲಸದ ನಿಯಮವಿತ್ತು. ೧೯೨೦ ರಲ್ಲೇ ತಮ್ಮ ಕರ್ಮಚಾರಿಗಳಿಗೆ 'Leave with pay', 'Provident fund', ಮುಂತಾದ ಸೌಲಭ್ಯಗಳನ್ನು ಕೊಟ್ಟಿದ್ದರು. ಇನ್ನಿತರ ಕಂಪೆನಿಗಳು ಇಂತಹ ಸೌಲಭ್ಯಗಳ ಬಗ್ಗೆ, ಯೋಚಿಸಲೂ ಸಾಧ್ಯವಿಲ್ಲದ ಕಾಲವದು. ಆದ್ದರಿಂದ ಟಾಟಾ ಸಂಸ್ಥೆ, ನಮ್ಮದೇಶದ ಅತ್ಯಂತ ಭಾರಿ ಉದ್ಯಮಗಳನ್ನು ಪ್ರ ಪ್ರಥಮವಾಗಿ ಸ್ಥಾಪಿಸುವದರ ಜೊತೆಗೆ, ಅನೇಕ ಹೊಸ ಹೊಸ ಉದ್ಯಮ ಕ್ಷೇತ್ರಗಳನ್ನು ಜನತೆಗೆ ಕೊಟ್ಟು, ಭಾರತದ ಉದ್ಯಮ ವಲಯದಲ್ಲಿ ಮಂಚೂಣಿಯಲ್ಲಿ ಮುಂದುವರೆಯಲು ಸಹಾಯವಾಯಿತು. ಕಟ್ಟಿಬೆಳೆಸಿದ ಸಂಸ್ಥೆಗಳು T.I.F.R, Mumbai N.C.P.A, Mumbai ೧೯೮೦ ಭಾರತದ ಭವಿತವ್ಯಕ್ಕೆ ನಾಗರಿಕ-ವಿಮಾನಯಾನದ ಶುಭಾರಂಭ ಅತ್ಯಂತ ಆಶಾದಾಯಕವೂ, ಅವಶ್ಯಕವೂ ಆಗಿತ್ತು. ಜೆ ಅವರಿಗೆ, 'Indian Airlines' ಮತ್ತು , 'Air India', ಎರಡಕ್ಕೂ ಚೆರ್ಮನ್ ಆಗಲು ಕರೆ ಬಂತು. ಅವರು ೧೯೭೮ ರ ವರೆಗೆ ಹೇಗೋ ಏರ್ ಇಂಡಿಯದಲ್ಲಿ ಇದ್ದರು. ೧೯೮೦ ರಲ್ಲಿ ಅವರಿಗೆ ಪುನಃ ಕೇಳಿ ಕೊಳ್ಳಲಾಯಿತು. ಅವರೊಬ್ಬ " ಐತಿಹಾಸಿಕ ಪುರುಷರು ". ಅಷ್ಟುಹೊತ್ತಿಗೆ ಭಾರತದಲ್ಲಿ ವಿಮಾನಯಾನದ ಶಕೆ, ಪ್ರಾರಂಭವಾಗಿದ್ದರೂ ರಾಜಕೀಯದಿಂದಾಗಿ,' ಜೆ' ಯವರ ಆಸಕ್ತಿಯ ತೀವ್ರತೆಯನ್ನು ಕಳೆದು ಕೊಂಡಿತ್ತು. ಜೆ ರವರಿಗೇನೋ, ವಿಮಾನಯಾನ ಹಾಗೂ ವಾಯು ಸಾಗಾಣಿಕೆಯ ಪ್ರಕ್ರಿಯೆಗಳ ಪ್ರತಿ ಹಂತದಲ್ಲೂ ಕಳಕಳಿಯಿತ್ತು. ಏಕೆಂದರೆ ಅವರಿಗೆ ಪ್ರತಿ ವಿಚಾರಗಳು ಚೆನ್ನಾಗಿ ತಿಳಿದಿದ್ದವು. ೧೯೮೨ ರಲ್ಲಿ, "ಭಾರತದಲ್ಲಿ ವಾಯುಯಾನದ ಬಂಗಾರದ ಹಬ್ಬ" ವನ್ನು ಆಚರಿಸಲು ಅವರು ಕೈಗೊಂಡ ಕಾರ್ಯವೆಂದರೆ, ಪುನಃ ೧೯೩೨ ರ ಕಾರ್ಯವನ್ನು ಪುನರಾಚರಣೆ ಮಾಡುವುದರಿಂದ. ಕರಾಚಿಯಿಂದ ಅಹಮದಾಬಾದ್ ಮೂಲಕ, ಮುಂಬಯಿ ಯಾನ-ಯುವ ಜನರಿಗೆ ಪ್ರೇರಣೆ ಸಿಗಲೆಂದು. 'ಸುಮಂತ್ ಮೂಲ್ಗಾಂವ್ ಕರ್'ಜೊತೆ ೧೯೧೨ ರಲ್ಲಿಯೇ, ದೊರಾಬ್ ಟಾಟಾ ಮತ್ತು, ಆರ್. ಡಿ. ಟಾಟಾರವರು, ಪ್ರಥಮ ಸೆಮೆಂಟ್ ಕಂಪೆನಿಯನ್ನು ತೆರೆದರು. ೧೯೨೧ ರಲ್ಲಿ ಎರಡನೆಯ, ಸೆಮೆಂಟ್ ಫ್ಯಾಕ್ಟರಿಯನ್ನು ಕರ್ನಾಟಕದ ಶಹಾಬಾದ್ ನಲ್ಲಿ ಪ್ರಾರಂಬಿಸಿದರು. ೧೯೩೬ ರಲ್ಲಿ, ಮತ್ತೆ ೩ ಕಂಪೆನಿಗಳು ಇವಕ್ಕೆ ಸೇರ್ಪಡೆಯಾಗಿ ಅದರ ಹೆಸರು 'ACC', (Associated Cement Co;) ಆಯಿತು. ಬಾಯ್ಲರ್, ರೈಲ್ವೆ ಎಂಜಿನ್ ಗಳ ತಯಾರಿಕೆ, ಬಿಟ್ಟು, ಮೋಟರ್ ಕಾರ್, ಟ್ರಕ್ಸ್ ಗಳ ತಯಾರಿಕೆಯಲ್ಲಿ ತಮ್ಮ ಗಮನ ಹರಿಸಿದರು. ಆಗ, ಸುಮಂತ್ ಮೂಲ್ಗಾಂವ್ ಕರ್ ಎಂಬ ಯುವಕ, 'Imperial College of Science & Technology', ಲಂಡನ್, ನಿಂದ 'Mechanical Engineering' ನಲ್ಲಿ, ಪದವಿ ಪಡೆದು, ೧೯೨೯ ರಲ್ಲಿ ಭಾರತಕ್ಕೆ ವಾಪಸ್ ಬಂದಿದ್ದರು. ಅವರು, ಗುಜರಾತ್ ರಾಜ್ಯದ ದ್ವಾರಕದಲ್ಲಿ, 'C. P Cement Works', ಎಂಬ ಸಂಸ್ಥೆ ಯಲ್ಲಿ ೨೫೦ ರೂ. ಸಂಬಳ ಕ್ಕೆ ದುಡಿಯುತ್ತಿದ್ದರು. ೨ ನೆಯ World war ನಿಂದಾಗಿ ವಿದೇಶಗಳಿಂದ ಆಮದು ಬಂದಾಗಿತ್ತು ಆಗ ಮೂಲ್ಗಾಂಕರ್, Chaibasa,Cement ಕಂ ಯಲ್ಲಿ ತಾವೇ, ತಮಗೆ ಬೇಕಾದ ಸಿಮೆಂಟ್ ಯಂತ್ರಗಳನ್ನು ನಿರ್ಮಿಸಿ, ಕೆಲಸವನ್ನು ಚಾಲನೆಯಲ್ಲಿಟ್ಟರು. 'ಸುಮಂತ್ ಮೂಲ್ಗಾಂಕರ್' ರವರ ಪ್ರಾಮಾಣಿಕತೆ, ಉನ್ನತ ವ್ಯಾಸಂಗ, ಮತ್ತು ಕೆಲಸದಲ್ಲಿ ದಕ್ಷತೆಗಳು 'ಜೆ.ಆರ್.ಡಿ' ಯವರನ್ನು ಆಕರ್ಷಿಸಿದವು. ಇಂತಹ ವ್ಯಕ್ತಿತ್ವವನ್ನು ಹೊಂದಿದ ಸುಮಂತ್, ತುಂಬ ಹಿಡಿಸಿದರು. ಜೆ.ಆರ್.ಡಿ, ಅವರಲ್ಲಿನ ಪ್ರತಿಭೆಯನ್ನು ಗುರುತಿಸಿದರು. ಸುಮಂತ್, ಜೆ.ಆರ್.ಡಿಯವರ ಬಗ್ಗೆ ಕೇಳಿದ್ದರು. ಇದು ಅವರಿಬ್ಬರ ಸ್ನೇಹವನ್ನು ಬೆಸೆಯಲು ಸಹಾಯಕವಾಯಿತು ಜೆ. ಆರ್. ಡಿ ರವರ ಕೆಲಸ ಮಾಡಿಸುವ ವೈಖರಿ ಎಲ್ಲರಿಗೂ ಬೆರಗುಗೊಳಿಸುವಂತಿತ್ತು. ಮೊದಲು, ತಕ್ಕ ಮನುಷ್ಯರನ್ನು ಹುಡುಕುವುದು, ಅವರಲ್ಲಿ ಆಸಕ್ತಿ ಮನಗಂಡ ನಂತರ, ಅವರಿಗೆ, ಹಣಸಹಾಯ, ಪದವಿಗಳನ್ನು ಕೊಟ್ಟು, ವಿದೇಶದಲ್ಲಿ ಪ್ರಶಿಕ್ಷಣ ಕೊಡಿಸಿ, ಅವರಿಗೆ ಅಧಿಕಾರವನ್ನು ಒಪ್ಪಿಸಿ ದೂರದಲ್ಲಿ ನಿಂತು ಅವರ ಪ್ರಗತಿಯನ್ನು ಗಮನಿಸುವ ಸ್ವಭಾವ,ಜೆ ರವರದು. ತಾವು ಕಾಲೇಜ್ ವಿದ್ಯಾಭ್ಯಾಸವನ್ನು ಮಾಡದೆ ಇದ್ದರೂ, ತಮ್ಮದೇ ಆದ ಶೈಲಿಯಲ್ಲಿ ಕಾರ್ಯ-ಸಾಧಿಸುವ ಕಲೆ ಅವರಿಗೆ ಕರಗತವಾಗಿತ್ತು. ಅವರ ನಿಕಟದಲ್ಲಿ ದುಡಿದು, ಹಾಗೆ ಮುಂದೆ ಬಂದ ವ್ಯಕ್ತಿಗಳಿಗೇನು ಕಡಿಮೆಯಿಲ್ಲ. ಮೂಲ್ಗಾಂಕರ್ ಕೂಡಲೇ ಟಾಟಾ ಸಿಮೆಂಟ್ ಕಂಪೆನಿಯ 'Executive Director', ಆದರು. ಅವರನ್ನು , USA ಮತ್ತು England ಗೆ ಹೆಚ್ಚಿನ ಪ್ರಶಿಕ್ಷಣಕ್ಕಾಗಿ ಕಳಿಸಿಕೊಟ್ಟರು. ೧೯೪೯ ರಲ್ಲಿ, 'TELCO' ಪಾದಾರ್ಪಣೆ ಮಾಡಿತು. ಮೊದಲು Boilers ಮತ್ತು ನಂತರದಲ್ಲಿ 'Locomotives', ಮಾಡಲು ಮೊದಲುಮಾಡಿದರು. ಮೂಲ್ಗಾವ್ಕರ್ 'Director and Incharge', ಆಗಿ ನೇಮಿಸಲ್ಪಟ್ಟರು. 'ಟೆಲ್ಕೊ ಕಂಪೆನಿಯ ಸ್ಥಾಪನೆ' ೧೯೫೦ ರಲ್ಲಿ Germany ಯ, Daimler-Benz, ಕಂಪೆನಿಯ ಜೊತೆ ಸೇರಿ, Tata Locomotive and Engineering Co;(TELCO) ಸ್ಥಾಪಿಸಿದರು. ೧೫ ವರ್ಷಗಳ ಇದರ ಕಾರ್ಯ ಚಟುವಟಿಕೆಗಳು ಬದಲಾಗಿ, ನಂತರ, TELCO, Tata Engineering & Locomotive Co; ಎಂದು ೨೪, ಸೆಪ್ಟೆಂಬರ್, ೧೯೬೦ ಯಲ್ಲಿ ಹೆಸರಿಸರಾಯಿತು. ಮೊದಲು, ೨೫,೦೦೦ ಮಿಲಿಯನ್ ರೂಪಾಯಿಗಳ, ಹಾಗೂ ,TISCO, ಕಂಪೆನಿಯ ೨೧,೦೦೦ ಮಿ. ರೂಪಾಯಿಗಳ ಟರ್ನ್ ಓವರ್, ಆಯಿತು. ೧೯೬೦ ರಲ್ಲಿ ಪುಣೆಯಲ್ಲಿನ TELCO ಫ್ಯಾಕ್ಟೊರಿ ಯನ್ನು ಆಧುನಿಕರಿಸಲಾಯಿತು. ೧೯೮೮ ರಲ್ಲಿ, ಸುಮಂತ್ ಮೂಲ್ಗಾಂವ್ ಕರ್ ರವರು, ಹೊಸದಾಗಿ ನೇಮಿಸಲ್ಪಟ್ಟ ಟಾಟಾ ಡೈರೆಕ್ಟರ್, ರತನ್ ಟಾಟಾ, ರವರಿಗಾಗಿ ತಮ್ಮ ಸ್ಥಳವನ್ನು ತೆರೆವು ಮಾಡಿಕೊಟ್ಟು, ನಿವೃತ್ತರಾದರು. ಕೆಲವೇ ತಿಂಗಳುಗಳಲ್ಲಿ ಮೃತರಾದರು. ಸುಮಂತ್ ಮೂಲ್ಗವ್ ಕರ್ ರನ್ನು ಜೆ. ಆರ್.ಡಿ ಯವರು, ತಮ್ಮ ೬೮ ನೆ ವಯಸ್ಸಿನಲ್ಲಿ ಟೆಲ್ಕೊ ಚೇರ್ಮನ್ ಶಿಪ್ ನಿಂದ ಕೆಳಗಿಳಿದು, ಛೇರ್ಮನ್ ಆಗಿ ನೇಮಿಸಿದ್ದರು. ದರ್ಬಾರಿ ಸೇಠ್ ರವರಿಗೆ ತಮ್ಮ ೭೮ ನೆಯ ವಯಸ್ಸಿನಲ್ಲಿ, ಟಾಟಾ ಕೆಮಿಕಲ್ಸ್ ಛೇರ್ ಮನ್ ಅಗಿ ಜವಾಬ್ದಾರಿಯ ಅಧಿಕಾರವನ್ನು ವಹಿಸಿ ಕೊಟ್ಟಿದ್ದರು. ಹಾಗೆಯೇ ರುಸ್ಸಿಯವರಿಗೆ ತಮ್ಮ ೮೦ ನೆಯ ವಯಸ್ಸಿನಲ್ಲಿ, ಟಾಟಾ ಸ್ಟೀಲ್ ಕಂಪೆನಿಯ ಜವಾಬ್ದಾರಿಯನ್ನು ವಹಿಸಿಕೊಟ್ಟರು. ೧೯೮೧ ರಲ್ಲಿ ರತನ್ ಟಾಟಾ ರವರನ್ನು Chairman of Tata Industries ಆಗಿ ನೇಮಕ ಮಾಡಿ ತಾವು ಹೊರಗಡೆಯಿದ್ದು ಗಮನಿಸುತ್ತಿದ್ದರು. ೧೯೯೧-೧೯೯೩ ಟಾಟಾ ಡೈರೆಕ್ಟರ್, 'ಸರ್ ನವರೋಜಿ ಸಕ್ಲಾಟ್ ವಾಲ' ತೀರಿಕೊಂಡ ಮೇಲೆ, ಟಾಟಾ ಸನ್ಸ್ ಗೆ ನೇಮಿಸಲ್ಪಟ್ಟ ಸಮಯ, ಜುಲೈ ೨೬, ೧೯೩೮ ನಲ್ಲಿ. ಜೆ ಶುರು ಮಾಡಿದಾಗ ೧೪ ಕಂಪೆನಿಗಳು Tata & Sons; ನಲ್ಲಿದ್ದವು. ಅವರ ಮುಂದಾಳತ್ವದಲ್ಲಿ ಅನೇಕ ಮೊಟ್ಟ ಮೊದಲ ಚಟುವಟಿಕೆಗಳಿಗೆ ನಾಂದಿಯಾಯಿತು. ಕಮರ್ಷಿಯಲ್ ವಾಹನಗಳು, ವೆಹಿಕಲ್ಸ್ , ಇಂಜಿನಿಯರಿಂಗ್, ಹೋಟೆಲ್, ಏರ್ ಕಂಡಿಶನಿಂಗ್ ಮತ್ತು ರೆಫ್ರಿಜರೇಶನ್, ಕನ್ಸೂಮರ್ ಸರ್ವೀಸಸ್ ಮತ್ತು ಐ.ಟಿ, ಕನ್ಸೂಮರ್ ಪದಾರ್ಥಗಳು, ಡ್ಯೂರಬಲ್ಸ್, ಇಂಡಸ್ಟ್ರಿಯಲ್ ಪ್ರಾಡಕ್ಟ್ಸ್. ಟಿ.ಸಿ.ಎಸ್. ಮೊದಲು, ಟಾಟ ಮತ್ತು ಸನ್ಸ್ ಗೆ ಸಾಫ್ಟ್ ವೇರೆ ಒದಗಿಸಲು ಪ್ರಾರಂಭವಾದದ್ದು, ೧೯೬೮ ಈಗ ದೇಶದ ಅತಿ ಭಾರಿ ಸಂಸ್ಥೆಯಾಗಿ ರೂಪುಗೊಂಡಿದೆ. ಜೆ, ದೇಶದ ಹಲವರು ಸಮಸ್ಯೆಗಳಿಗೆ ಸ್ಪಂದಿಸಿ ತಮ್ಮ ಯೋಗದಾನ ಮಾಡಿದ್ದಾರೆ. 'ಫ್ಯಾಮಿಲಿ ಪ್ಲಾನಿಂಗ್ , ಅಂಡ್ ಪಾಪ್ಯುಲೇಶನ್ ಕಂಟ್ರೋಲ್'. ವಿಶ್ವಸಂಸ್ಥೆ, ಅವರಿಗೆ ಸೆಪ್ಟೆಂಬರ್, ೧೯೯೨ ರಲ್ಲಿ ಪ್ರಶಸ್ತಿ ಪ್ರದಾನ ಮಾಡಿದೆ. ದೇಶದಾದ್ಯಂತ ವಿದ್ಯಾಪ್ರಸಾರ, ಅನಕ್ಷರತೆಯ ನಿರ್ಮೂಲನೆ ಅವರ ಗುರಿಯಾಗಿತ್ತು. ಮಕ್ಕಳು ಹಾಗೂ ಅಬಲ ಸ್ತ್ರೀಯರ ಯೋಗಕ್ಷೇಮ, ಮತ್ತು ಅವರ ಜೀವನಸ್ತರದಲ್ಲಿ ಆದಾಯ ಹೆಚ್ಚಿಸುವ ಕಾರ್ಯಗಳು. 'NCPA', 'TIFR' ಗಳ ಸ್ಥಾಪನೆ. 'National Institute for Advanced Studies', ಬೆಂಗಳೂರಿನಲ್ಲಿ. ಭಾರತದ ಪ್ರಥಮ ಕ್ಯಾನ್ಸರ್ ಆಸ್ಪತ್ರೆಯ ಸ್ಥಾಪನೆ. Tata Memorial Hospital for Cancer Research & Treatment, ತಮ್ಮ ೪೦ ನೆಯ ವಯಸಿನಲ್ಲಿ ವಿವಿಧೋದ್ದೇಶಗಳ ಪೂರೈಕೆಗಾಗಿ, 'JRD Tata Trust', ಸ್ಥಾಪನೆಯಾಯಿತು. ತಮ್ಮ ಟಾಟಾ ಸನ್ಸ್ ನಲ್ಲಿದ್ದ ,ಮತ್ತು ಇತರ ಟಾಟಾ ಕಂಪೆನಿಗಳಲ್ಲಿದ, ಶೇರ್ ಗಳನ್ನು ಮಾರಿ, ಮಕ್ಕಳು , ಹಾಗೂ ಸ್ರೀಯರಿಗಾಗಿ, ಒಂದು ಸ್ವಂತ ಟ್ರಸ್ಟ್, 'JRD Tata Trust & Thelma Tata Trust' ಮಾಡಿದರು. ನೆಹರು ರವರ ಸ್ನೇಹ ಅವರಿಗೆ ದೊರೆಯಿತು. 'ಜೆ.ಆರ್.ಡಿ' ತಯಾರಿಸಿದ ಚಾರಿತ್ರ್ಯಿಕ "ಬಾಂಬೆ ಪ್ಲಾನ್" ಎರಡನೆಯ ವಿಶ್ವಯುದ್ಧದ ತರುವಾಯ, ಭಾರತ ದೇಶದಲ್ಲಿ ಯಂತ್ರೀಕರಣದಿಂದ ಉತ್ಪಾದನೆ ಹೆಚ್ಚಿಸಲು, 'ಜೆ ' ರವರ ಮನಸ್ಸು ಹಾತೊರೆಯುತ್ತಿತ್ತು. ತಮ್ಮ ಜೊತೆಗೆ, ಆಗಿನ ಭಾರತದ ಸುಪ್ರಸಿದ್ಧ ಉದ್ಯಮಿಗಳಾದ, 'ಜಿ.ಡಿ.ಬಿರ್ಲ, 'ಕಸ್ತುರ್ ಭಾಯ್ ಲಾಲ್ ಭಾಯ್' ಮುಂತಾದವರನ್ನು ಸೇರಿಸಿ ಕೊಂಡರು. ಟೆಕ್ನೋಕ್ರಾಟ್, 'ಜಾನ್ ಮಥಾಯ್', ಅರ್ದೇಶಿರ್ ದಲಾಲ್, ಎ.ಡಿ.ಶ್ರಾಫ್, ೧೯೪೪ ರ ಜನವರಿಯಲ್ಲಿ ಬಾಂಬೆ ಪ್ಲಾನ್, ತಯಾರಿಸಿದರು. ಇದು "Plan of Economic Development for India ", ಎಂದು ಪ್ರಸಿದ್ಧಿಯಾಗಿದೆ. ಜನವರಿ ೧೯೪೪ ರಲ್ಲಿ ಒಂದು ರಿಪೊರ್ಟ್, ಮತ್ತೊಂದು ೧೯೪೪ ರಲ್ಲಿ ಮತ್ತೊಂದು ವರದಿ ತಯಾರಾಯಿತು. ಜೆ. ಆರ್. ಡಿ. ಯವರಿಗೆ ಸಂದ ಪ್ರಶಸ್ತಿಗಳನ್ನು ಪ್ರತ್ಯೇಕವಾಗಿ ದಾಖಲಿಸಲಾಗಿದೆ. ಅವರಿಗೆ ಭಾರತ ಸರ್ಕಾರದ ಅತಿಹೆಚ್ಚಿನ ಬಹುಮಾನ, "ಭಾರತರತ್ನ ಪ್ರಶಸ್ತಿ", ೧೯೯೨ ರಲ್ಲಿ ದೊರೆಯಿತು. ನಿಧನ ೧೯೯೩ ಯಲ್ಲಿ, 'ಜೆ.ಆರ್.ಡಿ' ಯವರು, ಹವಾ ಬದಲಾವಣೆಗೆ ಜಿನಿವಾ ನಗರಕ್ಕೆ ಹೋಗಿದ್ದರು. ಅಲ್ಲಿ, ಅವರ ಆರೋಗ್ಯದಲ್ಲಿ ಹೆಚ್ಚು ಕಡಿಮೆಯಾಗಿ, ಅಲ್ಲಿನ ಆಸ್ಪತ್ರೆಯೊಂದರಲ್ಲಿ ತೀರಿಕೊಂಡರು. ಅವರ ಅಂತಿಮ ಸಮಯದಲ್ಲಿ ಅವರ ಬಳಿ ಆಪ್ತರ್ಯಾರೂ ಇರಲಿಲ್ಲ. ಅವರ ಪ್ರೀತಿಯ ಮಡದಿ, ಥೆಲ್ಲಿ ಟಾಟಾ ಯವರು ಮುಂಬಯಿನಲ್ಲಿ, 'ಸತತವಾಗಿ Coma ಸ್ತಿತಿಯಲ್ಲಿದ್ದು', ಭಾರತದ ಸಂಪತ್ತನ್ನು ಹೆಚ್ಚಿಸಿ ಔದ್ಯೋಗಿಕರಣಕ್ಕೆ ನಾಂದಿಯನ್ನು ಹಾಕಿ, ಉದ್ಯೋಗಕ್ಷೇತ್ರಕ್ಕೆ ಮಾದರಿಯಾದ ಮಾರ್ಗದರ್ಶನ ಮಾಡಿದ ಬಹುತೇಕ ಟಾಟಾ ಡೈರೆಕ್ಟರ್ ಗಳಂತೆ, 'ಜೆ.ಆರ್.ಡಿ 'ಯವರೂ, ಯೂರೋಪ್ ನಲ್ಲಿ ಮರಣಹೊಂದಿದರು . 'ಭಾರತೀಯ ಸಂಸತ್ತು', ಶೋಕಾಚರಣೆಯ ಪ್ರಯುಕ್ತ, ಮೂರು ದಿನಗಳ ಕಾಲ ಮುಚ್ಚಲ್ಪಟ್ಟಿತ್ತು. ಜೆ.ಆರ್.ಡಿ.ನಡೆದು ಬಂದ ಹಾದಿ ೧೯೦೪ ಪ್ಯಾರಿಸ್ ನಲ್ಲಿ ಜನನ. ೧೯೦೯ ಫ್ರಾನ್ಸಿನಲ್ಲಿ ವಾಸಿಸುತ್ತಿದ್ದಾಗ ನೆರೆಯ ವೈಮಾನಿಕ Louis Bleriotರವರಿಂದ ವಿಮಾನದ ಬಗ್ಗೆ ಆಸಕ್ತಿ ಹುಟ್ಟಿತು. ೧೯೦೯-೧೭ ಮುಂಬಯಿಯ ಕೆಥೆಡ್ರೆಲ್ ಶಾಲೆಯಲ್ಲಿ ವಿದ್ಯಾಭ್ಯಾಸ. ೧೯೧೭-೧೮ ಜಪಾನಿನ ಯಾಕೋಹಾಮದಲ್ಲಿ ವಾಸ. ಇಂಗ್ಲೆಂಡ್ ನ ಕ್ರಾಮರ್ ಶಾಲೆಯಲ್ಲಿ ಒಂದು ವರ್ಷ ವಾಸ್ತವ್ಯ. ತಾಯಿ ಸೂನಿಮರಣ. ೧೯೨೪ ಫ್ರೆಂಚ್ ಸೈನ್ಯದಲ್ಲಿ ಒಂದು ವರ್ಷ ದುಡಿಮೆ. ೧೯೨೫ ಭಾರತಕ್ಕೆ ಬರಲು ಕರೆ ; ಅಪ್ರೆಂಟಿಸ್ ಅಗಿ ಟಾಟಾ ಸಂಸ್ಥೆಯಲ್ಲಿ ಸೇರ್ಪಡೆ. ೧೯೨೬ ಜಮ್ ಸೆಟ್ ಪುರದಲ್ಲಿ ಒಂದು ವರ್ಷ. ತಂದೆ ಫ್ರಾನ್ಸ್ ನಲ್ಲಿ ಮರಣ. ಟಾಟಾ ಕಂಪೆನಿಗೆ ಡೈರೆಕ್ಟರ್ ಆಗಿ ನೇಮಕ. ೧೯೨೯ ಭಾರತದ ಪ್ರಥಮ ಪೈಲೆಟ್ ಅಗಿ ಲೈಸೆನ್ಸ್ ಪ್ರಾಪ್ತಿ ೧೯೩೦'ಅಗಾಖಾನ್ ಏವಿಯೆಷನ್' ಪ್ರತಿನಿಧಿಸಿದ ಎರಡನೆಯ ಪೈಲೆಟ್, ಇಂಡಿಯ ಮತ್ತು ಯು.ಕೆ ಮಧ್ಯೆ. ೧೯೩೦ ಥೆಲ್ಮ ವಿಕಾಜಿಯವರ ಜೊತೆ ಮದುವೆ. ೧೯೩೨ ಟಾಟಾ ಎರ್ ಲೈನ್ಸ್ ಸ್ಥಾಪನೆ- ಕರಾಚಿ- ಮುಂಬಯಿ ಮಧ್ಯೆ ಪ್ರಥಮ ಹಾರಾಟ. ೧೯೩೮ ಟಾಟಾ ಸನ್ಸ್ ಸಂಸ್ಥೆಯ ಅಧ್ಯಕ್ಶರಾಗಿ ನೇಮಕ. ೧೯೪೪ Bombay Planತಯಾರಿ. ೧೯೪೫, "Tata Institute of Fundamental Research," ಸ್ಥಾಪಿಸಲು ಪ್ರಯತ್ನ. ಭಾರತದ nuclear programmes, leads the first delegation of industrialists to the UK and USA. ೧೯೪೭ " Doctor of Science, " (Honoris Causa), ಅಲಹಾಬಾದ್ ವಿಶ್ವ ವಿದ್ಯಾಲಯ. ೧೯೪೮, Air India ಒಟ್ಟಾಗಿ ಪರಿವರ್ತನೆ. ೧೯೫೩ "International Management Man" by ''The National Association of Foremen", Milwaukee ಚುನಾಯಿತರಾದರು. ೧೯೫೩ "Air India," nationalised, ಜೆ. ಆರ್. ಡಿ. ಟಾಟಾ ಚೇರ್ ಮನ್ ಆಗಿ ಆಯ್ಕೆ. ೧೯೫೪ Officer of the Legion of Honour ಫ್ರೆಂಚ್ ಸರ್ಕಾರದ ಪ್ರಶಸ್ತಿ. ೧೯೫೫ ಭಾರತ ಸರ್ಕಾರದ , ಪದ್ಮವಿಭೂಷಣ ಪ್ರಶಸ್ತಿ. ೧೯೫೮-೫೯ IATA ಅಧ್ಯಕ್ಷ ರಾಗಿ ಆಯ್ಕೆ. ೧೯೬೨, 30 ನೆಯ ವರ್ಷದ civil aviation in India ದಿನದಂದು " Re-enacted flight Karachi-Bombay " ಜ್ಞಾಪಕಾರ್ಥವಾಗಿ. ೧೯೬೪ Knight Commander of the Order of Gregory the Great, (Papal Honour) ೧೯೬೬ ಗೌರವ " Air Commodore, Indian Air Force " ೧೯೭೪ ಗೌರವ "Air Vice-Marshal, Indian Air Force," ಆಗಿ ನೇಮಕಾತಿ. ೧೯೭೫ "Sir Jehangir Ghandy Medal for Industrial Peace", ಪ್ರಶಸ್ತಿ. ೧೯೭೮ Morarji ದೇಸಾಯ್,"Chairmanship of Air India", ವಜಾ ಮಾಡಿದರು. ೧೯೭೮ ಗೌರವ, "Knight Commander's Cross of the Order of Germany." ೧೯೭೯ 'Tony Jannus' ಪ್ರಶಸ್ತಿ." ೧೯೮೧ "Doctor of Laws" (Honoris Causa), ಬಾಂಬೆ ವಿಶ್ವವಿದ್ಯಾಲಯ. ೧೯೮೨, Karachi-Bombay flight " Golden Jubilee of Indian civil aviation," ಜ್ಞಾಪಕಾರ್ಥವಾಗಿ ೧೯೮೩ "Commander of the Legion of Honour" ಪ್ರಶಸ್ತಿ. ೧೯೮೫. " Gold Air Medal, by the Federation Aeronautique Internationale" ಪ್ರಶಸ್ತಿ. ೧೯೮೬ "Bessemer Medal of the Institute of Metals, London" ಪ್ರಶಸ್ತಿ . ೧೯೮೬ "Edward Warner Award by the International Civil Aviation Organisation, ಪ್ರಶಸ್ತಿ ಪಡೆದರು. ೧೯೮೮ " Daniel Guggenheim Medal Award " ಪಡೆದರು. ೧೯೮೮ "Dadabhai Naoroji Memorial" ಪ್ರಶಸ್ತಿ. ೧೯೯೧ "Chairmanship of Tata Sons Limited", ನಿಂದ ನಿವೃತ್ತಿ. ರತನ್ ಟಾಟಾ ರವರಿಗೆ ಯಜಮಾನಿಕೆ ಒಪ್ಪಿಸಿದರು. ೧೯೯೨ " ಭಾರತರತ್ನ ಪ್ರಶಸ್ತಿ. " ೧೯೯೨ " UN Population ಪ್ರಶಸ್ತಿ". ೧೯೯೨ " Doctor of Engineering " (Honoris Causa), ರೂರ್ಕಿ ವಿಶ್ವವಿದ್ಯಾಲಯ. ೧೯೯೩ "Doctor of Literature" (Honoris Causa), Tata Institute of Social Sciences ನ ವತಿಯಿಂದ. ೧೯೯೩, ಜಿನಿವಾ ದಲ್ಲಿ ನಿಧನ. ಬಾಹ್ಯ ಸಂಪರ್ಕಗಳು "Beyond The Last Blue Mountain"-A Life of J.R.D.Tata By : Shri. R. M. Lala ಹಿಂದೂಸ್ಥಾನ್ ಟೈಮ್ಸ್ JRD Tata: The father of commercial aviation in India J. R. D. Tata (1904-1993): On the Islands of Tata, In the Ocean of India ಉಲ್ಲೇಖಗಳು ಭಾರತದ ಗಣ್ಯರು ಭಾರತರತ್ನ ಪುರಸ್ಕೃತರು ಭಾರತೀಯ ಉದ್ಯಮಿಗಳು ಬೊಂಬಾಯಿನ ಪ್ರಮುಖ ಪಾರ್ಸಿಗಳು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು
1278
https://kn.wikipedia.org/wiki/%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%A8%E0%B2%BE%E0%B2%A5%E0%B2%A8%E0%B3%8D%20%E0%B2%86%E0%B2%A8%E0%B2%82%E0%B2%A6%E0%B3%8D
ವಿಶ್ವನಾಥನ್ ಆನಂದ್
ವಿಶ್ವನಾಥನ್ ಆನಂದ್ (ಜನನ: ಡಿಸೆಂಬರ್ ೧೧, ೧೯೬೯) ಭಾರತದ ಪ್ರಸಿದ್ಧ ಚದುರಂಗದ (ಚೆಸ್) ಆಟಗಾರ. ಫಿಡೆ ಕ್ರಮಾಂಕಗಳ ಪ್ರಕಾರ, ೨೦೦೪ ರಲ್ಲಿ ಪ್ರಪಂಚದ ಎರಡನೆ ಸ್ಥಾನ ಪಡೆದಿದ್ದು (ಗ್ಯಾರಿ ಕ್ಯಾಸ್ಪರೋವ್ ಮೊದಲ ಸ್ಥಾನ), ಪ್ರತಿಷ್ಠಿತ ಗ್ರ್ಯಾಂಡ್‍ಮಾಸ್ಟರ್ ಪದವಿಯನ್ನು ಹೊಂದಿದ್ದಾರೆ. ೨೦೦೭ರಲ್ಲಿ ವಿಶ್ವ ಚಾಂಪಿಯನ್ ಪಟ್ಟವನ್ನು ಪಡೆದಿದ್ದಾರೆ. ಕೆಲವೊಮ್ಮೆ "ವಿಶಿ" ಎಂದು ಕರೆಯಲ್ಪಡುವ ಆನಂದ್ ತಮ್ಮ ಮೊದಲ ಅಂತಾರಾಷ್ಟ್ರೀಯ ಯಶಸ್ಸನ್ನು ಪಡೆದಿದ್ದು ೧೯೮೭ ರ ವಿಶ್ವ ಜೂನಿಯರ್ ಸ್ಪರ್ಧೆಯಲ್ಲಿ ಗೆದ್ದಾಗ. ೧೯೯೦ ರ ದಶಕದ ಪ್ರಾರಂಭದ ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ಉತ್ತಮ ಸಾಧನೆಯನ್ನು ತೋರಿ ಅನೇಕ ಪ್ರತಿಷ್ಠಿತ ಟೂರ್ನಿಗಳನ್ನು ಗೆದ್ದರು. ೧೯೯೧ ರಲ್ಲಿ ಗೆದ್ದ ರೆಜಿಯೋ ಎಮಿಲಿಯಾ ಟೂರ್ನಿ ಇವುಗಳಲ್ಲಿ ಒಂದು. ಅವರ ಆಟದ ಆಶ್ಚರ್ಯಕರ ಗುಣವೆಂದರೆ ತಮ್ಮ ಪಂದ್ಯಗಳಲ್ಲಿ ಪ್ರಾರಂಭದಿಂದ ಕೊನೆಯವರೆಗೂ ಅತ್ಯಂತ ವೇಗದಿಂದ ತಮ್ಮ ನಡೆಗಳನ್ನು ನಡೆಸುತ್ತಿದ್ದರು! ವಿಶ್ವ ಚಾಂಪಿಯನ್‍ಶಿಪ್ ೧೯೯೫ ೧೯೯೫ ರಲ್ಲಿ ನ್ಯೂ ಯಾರ್ಕ್ ನಗರದಲ್ಲಿ ಆಗಿನ ಚಾಂಪಿಯನ್ ಗ್ಯಾರಿ ಕ್ಯಾಸ್ಪರೋವ್‍ರ ವಿರುದ್ಧ ವಿಶ್ವ ಚಾಂಪಿಯನ್‍ಶಿಪ್ ಸರಣಿಯನ್ನು ಆಡಿದರು. ಮೊದಲ ಎಂಟು ಪಂದ್ಯಗಳು ಡ್ರಾ ಆದವು. ವಿಶ್ವ ಚಾಂಪಿಯನ್‍ಶಿಪ್ ಸರಣಿಯಲ್ಲಿ ಹಿಂದೆಂದೂ ಪ್ರಾರಂಭದಲ್ಲೇ ಇಷ್ಟು ಡ್ರಾ ಗಳು ನಡೆದಿರಲಿಲ್ಲ. ಒಂಬತ್ತನೆಯ ಪಂದ್ಯವನ್ನು ಆನಂದ್ ಗೆದ್ದರೂ ಮುಂದಿನ ಐದು ಪಂದ್ಯಗಳಲ್ಲಿ ನಾಲ್ಕನ್ನು ಸೋತರು. ಒಟ್ಟು ಸರಣಿಯನ್ನು ೭.೫ - ೧೦.೫ ರಿಂದ ಸೋತರು. ವಿಶ್ವ ಚಾಂಪಿಯನ್‍ಶಿಪ್ ೨೦೦೦ ೨೦೦೦ ದಲ್ಲಿ ಫಿಡೆ (ಚೆಸ್ ಸರಣಿಗಳನ್ನು ಆಯೋಜಿಸುವ ಅಂತಾರಾಷ್ಟ್ರೀಯ ಸಂಸ್ಥೆ) ಯಿಂದ ಆಯೋಜಿತ ವಿಶ್ವ ಚೆಸ್ ಚಾಂಪಿಯನ್‍ಶಿಪ್ ನಲ್ಲಿ ರಷ್ಯದ ಅಲೆಕ್ಸೀ ಶಿರೋವ್ ರನ್ನು ೩.೫-೦.೫ ರಿಂದ ಸೋಲಿಸಿ ಚಾಂಪಿಯನ್ ಪಟ್ಟಕ್ಕೇರಿದರು. ವಿಶ್ವ ರಾಪಿಡ್ ಚೆಸ್ ಚಾಂಪಿಯನ್‍ಶಿಪ್ ೨೦೦೩ ಅಕ್ಟೋಬರ್ ೨೦೦೩ ರಲ್ಲಿ ಪ್ರಪಂಚದ ಹನ್ನೆರಡು ಅತ್ಯುತ್ತಮ ಆಟಗಾರರಲ್ಲಿ ಹತ್ತು ಜನರು ಪಾಲ್ಗೊಂಡ ವೇಗದ ಚೆಸ್ ಚಾಂಪಿಯನ್‍ಶಿಪ್ ನಲ್ಲಿ ಗೆದ್ದರು. (ವೇಗದ ಚೆಸ್ ಆಟಗಳಲ್ಲಿ ಆಟಗಾರರು ತಮ್ಮ ನಡೆಗಳನ್ನು ನಡೆಸಲು ಕಡಿಮೆ ಸಮಯ ಹೊಂದಿರುತ್ತಾರೆ. ಈ ಸರಣಿಯಲ್ಲಿ ಪ್ರತಿ ಪಂದ್ಯದ ಆರಂಭದಲ್ಲಿ ಆಟಗಾರರಿಗೆ ೨೫ ನಿಮಿಷಗಳ ಸಮಯವಿದ್ದು, ಪ್ರತಿ ನಡೆಯ ನಂತರ ೧೦ ಸೆಕೆಂಡುಗಳಷ್ಟು ಹೆಚ್ಚುವರಿ ಸಮಯ ಸಿಕ್ಕುತ್ತಿತ್ತು.) ವಿಶ್ವ ಪಂದ್ಯಾವಳಿ ೨೦೦೭ ಮೆಕ್ಸಿಕೊ ನಗರದಲ್ಲಿ ನಡೆದ ೨೦೦೭ರ ಚದುರಂಗ ವಿಶ್ವ ಪಂದ್ಯಾವಳಿಯಲ್ಲಿ ಆನಂದ್ ಒಂದು ಪಂದ್ಯವನ್ನೂ ಸೋಲದೆ ಗೆದ್ದು, ಸೆಪ್ಟೆಂಬರ್ ೨೯ರಂದು ವಿಶ್ವ ಚಾಂಪಿಯನ್ ಪಟ್ಟವನ್ನು ಪಡೆದರು. ಇತರ ಸರಣಿಗಳು ಆನಂದ್ ಗೆದ್ದಿರುವ ಇತರ ಕೆಲವು ಪ್ರಸಿದ್ಧ ಸರಣಿಗಳು: ಕೋರಸ್ ಸರಣಿ (೨೦೦೩) ಕೋರಸ್ ಸರಣಿ (೨೦೦೪) ಡಾರ್ಟ್‍ಮಂಡ್ ಸರಣಿ (೨೦೦೪) ಕಳೆದ ಹತ್ತು ವರ್ಷಗಳ ಉದ್ದಕ್ಕೂ ಪ್ರಪಂಚದ ಐದು ಅತ್ಯುತ್ತಮ ಆಟಗಾರರ ಪಟ್ಟಿಯಲ್ಲಿ ಆನಂದ್ ಇದ್ದಾರೆ. ಇದರಲ್ಲಿ ಬಹುಕಾಲ ಪ್ರಪಂಚದ ಮೂರು ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಬಾಹ್ಯ ಸಂಪರ್ಕಗಳು ಫಿಡೆ ತಾಣದಲ್ಲಿ ಆನಂದ್‍ರ ರೇಟಿಂಗ್ ಆನಂದ್‍ರ ಕೆಲವು ಪ್ರಸಿದ್ಧ ಪಂದ್ಯಗಳನ್ನು ನೋಡಿ ಭಾರತದ ಚದುರಂಗ ಕ್ರೀಡಾಪಟುಗಳು ಕ್ರೀಡಾಪಟುಗಳು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು
1279
https://kn.wikipedia.org/wiki/%E0%B2%95%E0%B3%8D%E0%B2%B0%E0%B2%BF%E0%B2%B8%E0%B3%8D%E0%B2%AE%E0%B2%B8%E0%B3%8D
ಕ್ರಿಸ್ಮಸ್
ಕ್ರಿಸ್ಮಸ್ ಎಂದರೆ ಕ್ರಿಸ್ತಜಯಂತಿ ಅಥವಾ ಯೇಸುಕ್ರಿಸ್ತನು ಹುಟ್ಟಿದ ಸಂಭ್ರಮದ ದಿನ. ಜಗತ್ತಿನಾದ್ಯಂತ ಪ್ರತಿ ವರ್ಷದ ಡಿಸೆಂಬರ್ ತಿಂಗಳ ಇಪ್ಪತ್ತೈದನೇ ದಿನವನ್ನು ಯೇಸುಕ್ರಿಸ್ತನ ಹುಟ್ಟುಹಬ್ಬವಾಗಿ ಆಚರಿಸಲಾಗುತ್ತದೆ. ಕ್ರೈಸ್ತ ಸುವಾರ್ತೆ(ಗಾಸ್ಪೆಲ್)ಯ ಪ್ರಕಾರ ಯೇಸುಕ್ರಿಸ್ತನು ಮೇರಿ ಮತ್ತು ಜೋಸೆಫರ ಮಗನಾಗಿ ಇಂದು ಇಸ್ರೇಲ್ನಲ್ಲಿರುವ ಬೆತ್ಲಹೆಮ್ ಎಂಬ ಊರಿನಲ್ಲಿ ಹುಟ್ಟಿದ. ಆಗ ಮೇರಿ ಮತ್ತು ಜೋಸೆಫ್ ದಂಪತಿಯು ರೋಮನ್ ಜನಗಣತಿಯಲ್ಲಿ ನೋಂದಾಯಿಸಲು ಅಲ್ಲಿಗೆ ಹೋಗಿದ್ದರು. ಜುಡಾಯಿಸಮ್ನ (ಯಹೂದ್ಯ ಧರ್ಮ) ಪ್ರಕಾರ ಪ್ರವಾದನೆಗಳನ್ನು ನೆರವೇರಿಸಲು ಡೇವಿಡ್ನ ವಂಶದಲ್ಲಿ ಮೆಸ್ಸಾಯ (ದೇವರ ದೂತ / ರಕ್ಷಕ) ಬರುವನೆಂಬ ನಂಬಿಕೆಯಿದೆ. ಆ ಮೆಸ್ಸಾಯ ಬೇರಾರೂ ಅಲ್ಲ ಸ್ವತಃ ಯೇಸುಕ್ರಿಸ್ತನೇ ಎಂದು ಕ್ರೈಸ್ತರು ಭಾವಿಸುತ್ತಾರೆ. ಗ್ರೀಕ್ ಲಿಪಿಯಲ್ಲಿ ಕ್ರಿಸ್ತನ ಮೊದಲಕ್ಷರವು ಇಂಗ್ಲಿಷಿನ ಎಕ್ಸ್ ನಂತೆ ತೋರುವುದರಿಂದ ಕೆಲವರು ಕ್ರಿಸ್ಮಸ್ ಅನ್ನು ಎಕ್ಸ್ ಮಸ್ ಎಂದೂ ಬರೆಯುತ್ತಾರೆ. ದಿನಾಂಕ ಕ್ರಿಸ್ಮಸ್ ಒಂದು ಸಾರ್ವತ್ರಿಕ ರಜಾದಿನವೂ ಹೌದು. ಕ್ರೈಸ್ತ ಜನಸಂಖ್ಯೆ ಕಡಿಮೆ ಇರುವ ಜಪಾನ್ನಂತಹ ದೇಶಗಳನ್ನೂ ಒಳಗೊಂಡು ವಿಶ್ವದ ಹಲವೆಡೆ ಕ್ರಿಸ್ಮಸ್ ವರ್ಷದ ರಜಾದಿನ. ಜೀಸಸ್ನ ನಿಜವಾದ ಹುಟ್ಟಿದ ದಿನಾಂಕ ಹಾಗೂ ಐತಿಹಾಸಿಕತೆಯ ಬಗ್ಗೆ ಹಲವು ವಾದಗಳಿವೆ. ಕ್ರಿಸ್ತನ ಹುಟ್ಟುಹಬ್ಬವನ್ನು ನಿರ್ಧರಿಸುವ ಯತ್ನ ಕ್ರಿಸ್ತಶಕ ಎರಡನೆ ಶತಮಾನದಿಂದ ಆರಂಭವಾಯಿತು. ಕ್ರೈಸ್ತ ಚರ್ಚ್ ಇದೇ ಕಾಲದಲ್ಲಿ ತನ್ನ ಸಂಪ್ರದಾಯಗಳನ್ನು ಸ್ಥಾಪಿಸಲು ಯತ್ನಿಸುತ್ತಿತ್ತು. ಆಗಿನ ಕಾಲದ ಸುಮಾರು ಎಲ್ಲ ಮುಖ್ಯ ಚರ್ಚ್ಗಳೂ ಕ್ರಿಸ್ತ ಹುಟ್ಟಿದ ದಿನಾಂಕ ಡಿಸೆಂಬರ್ ೨೫ ಎಂದು ಒಪ್ಪಿಕೊಂಡವು. ಸಾಮಾನ್ಯವಾಗಿ ಎಲ್ಲ ಕ್ರೈಸ್ತ ದೇಶಗಳಲ್ಲೂ ಕ್ರಿಸ್ಮಸ್ ಹಬ್ಬವನ್ನು ಕ್ರಿಸ್ಮಸ್ ದಿನ ಮಾತ್ರವಲ್ಲದೆ ಅದರ ಆಚೀಚೆ ಕೆಲವು ದಿನಗಳನ್ನೂ ಸೇರಿಸಿಕೊಂಡು ಆಚರಿಸಲಾಗುತ್ತದೆ. ಕ್ರಿಸ್ಮಸ್ ಹಬ್ಬದ ಹಿಂದಿನ ದಿನವನ್ನು ಕ್ರಿಸ್ಮಸ್ ಈವ್ ಎಂಬ ಹೆಸರಿನಲ್ಲಿ ಆಚರಿಸಲಾಗುತ್ತದೆ. ಕ್ರಿಸ್ಮಸ್ ನಂತರದ ಹನ್ನೆರಡನೆ ದಿನವನ್ನು ಎಪಿಫನಿ ಎಂಬ ಹೆಸರಿನಿಂದ ಆಚರಿಸಲಾಗುತ್ತದೆ. ಕ್ರಿಸ್ಮಸ್ ಹೊಸ ವರ್ಷದ ಸಮೀಪ ಬರುವುದರಿಂದ ಕ್ರಿಸ್ಮಸ್ ಮೊದಲುಗೊಂಡು ಹೊಸ ವರ್ಷದವರೆಗೂ ಹಲವು ದೇಶಗಳಲ್ಲಿ ರಜಾ ಇರುವುದು. ನಂಬಿಕೆಗಳು ಮತ್ತು ಆಚರಣೆಗಳು ಹಲವು ದೇಶಗಳಲ್ಲಿ ಅನೇಕ ಧಾರ್ಮಿಕ, ರಾಷ್ಟ್ರೀಯ ಮತ್ತು ಜಾತ್ಯತೀತ ಸಂಪ್ರದಾಯಗಳು ಹಾಗೂ ಆಚರಣೆಗಳು ಕ್ರಿಸ್ಮಸ್ಸಿನೊಂದಿಗೆ ಸಂಬಂಧ ಹೊಂದಿವೆ. ಕ್ರಿಸ್ಮಸ್ ಜೊತೆಗೆ ಈ ಕೆಳಕಂಡ ಆಚರಣೆಗಳೂ ರೂಢಿಯಲ್ಲಿವೆ. ಮನೆಯಲ್ಲಿ ಪುಟ್ಟದಾದ ಕೊಟ್ಟಿಗೆ ಕಟ್ಟಿ ಕ್ರಿಸ್ತಜನನದ ಗೊಂಬೆಗಳನ್ನಿಡುವುದು ಕ್ರಿಸ್ಮಸ್ ವೃಕ್ಷ ಇಟ್ಟು ಅಲಂಕರಿಸುವುದು ಮಿಸಲ್ಟೋ ಮೊದಲಾದ ಮರಗಳ ಎಲೆಗಳ ತೋರಣ ಕಟ್ಟುವುದು ಕ್ರಿಸ್ಮಸ್ಸಿಗೆಂದೇ ತಯಾರಿಸಿದ ವಿಶಿಷ್ಟ ತಿಂಡಿಗಳನ್ನು ಹಾಗೂ ಉಡುಗೊರೆಗಳನ್ನು ಹಂಚುವುದು ಸಾಂಟಾ ಕ್ಲಾಸ್ ಉಡುಗೊರೆಗಳನ್ನು ಕೊಡುವುದು ಮತ್ತು ಪಡೆಯುವುದು ಕ್ರಿಸ್ಮಸ್ನ ವಿಶೇಷಗಳಲ್ಲೊಂದು. ಮಕ್ಕಳಿಗೆ ಉಡುಗೊರೆಗಳನ್ನು ತಂದುಕೊಡಲು ಸಾಂಟಾ ಕ್ಲಾಸ್ ಬರುತ್ತಾನೆ ಎಂಬುದು ಜನಪ್ರಿಯ ನಂಬುಗೆ. "ಸಾಂಟಾ ಕ್ಲಾಸ್" ಎಂಬುದು "ಸಂತ ನಿಕೋಲಾಸ್" ಎಂಬುದರ ಅಪಭ್ರಂಶ. ಸಂತ ನಿಕೋಲಾಸ್ ನಾಲ್ಕನೆ ಶತಮಾನದಲ್ಲಿ ಜೀವಿಸಿದ್ದ ಒಬ್ಬ ಕ್ರೈಸ್ತ ಪಾದ್ರಿ. ಮಕ್ಕಳ ಮೇಲಿನ ಪ್ರೀತಿಗೆ ಸಂತ ನಿಕೋಲಾಸ್ ಪ್ರಸಿದ್ಧ. ಹಾಗಾಗಿ ಪ್ರತಿ ವರ್ಷ ಕ್ರಿಸ್ಮಸ್ ದಿನದಂದು ಆತನೇ ಉಡುಗೊರೆ ತಂದುಕೊಡುತ್ತಾನೆ ಎಂದು ಮಕ್ಕಳಿಗೆ ಹೇಳಲಾಗುತ್ತದೆ. ಅಲಂಕಾರಗಳು ಎಲ್ಲ ಮನೆಗಳಲ್ಲೂ ಒಂದು ಕ್ರಿಸ್ಮಸ್ ವೃಕ್ಷವನ್ನು ತಂದು ನಿಲ್ಲಿಸುವುದು ವಾಡಿಕೆ. ಈ ವೃಕ್ಷವನ್ನು ದೀಪಗಳು ಮತ್ತು ಇತರ ವಸ್ತುಗಳಿಂದ ಅಲಂಕೃತಗೊಳಿಸಲಾಗುತ್ತದೆ. ಅನೇಕ ಕಡೆಗಳಲ್ಲಿ ಮನೆಯ ಹೊರಗೂ ದೀಪಗಳ ತೋರಣ ಕಟ್ಟುವುದು ವಾಡಿಕೆ. ಹಾಗೆಯೇ ಮನೆಯ ಹೊರಗೆ "ಹಿಮದ ಮನುಷ್ಯ" ಮೊದಲಾದ ಅಲಂಕಾರಗಳೂ ಸಾಮಾನ್ಯ. ಹಾಗೆಯೇ ಕ್ರಿಸ್ಮಸ್ ಹಬ್ಬದ ಅಂಗವಾಗಿ ಕೆಲವು ಹೂವುಗಳು ಮತ್ತು ಸಸ್ಯಗಳು (ಅಮರಿಲ್ಲಿಸ್, ಕ್ರಿಸ್ಮಸ್ ಕ್ಯಾಕ್ಟಸ್) ಮೊದಲಾದವುಗಳನ್ನು ತರಲಾಗುತ್ತದೆ. ಸಾಮಾಜಿಕ ಆಚರಣೆಗಳು ಕ್ರಿಸ್ಮಸ್ಗೆ ಸಂಬಂಧಪಟ್ಟ ಆಚರಣೆಗಳು ಡಿಸೆಂಬರ್ ತಿಂಗಳ ಆರಂಭದಲ್ಲಿ ಅಡ್ವೆಂಟ್ ನಿಂದ ಆರಂಭವಾಗುತ್ತವೆ - ಇದು ಕ್ರಿಸ್ತನ ಜನ್ಮವನ್ನು ಎದುರು ನೋಡುವ ಹಬ್ಬ. ಯೇಸುಕ್ರಿಸ್ತನನ್ನು ಬರಮಾಡಿಕೊಳ್ಳುವ ಪ್ರಕ್ರಿಯೆಯಾಗಿ ಮನೆಮನೆಗೂ ತೆರಳಿ ಹಾಡುಗಳನ್ನು ಹಾಡಲಾಗುತ್ತದೆ (ಕ್ರಿಸ್ಮಸ್ ಕ್ಯಾರಲ್). ಕ್ರಿಸ್ಮಸ್ ಔತಣ ದೇಶದಿಂದ ದೇಶಕ್ಕೆ ಬದಲಾಗುತ್ತದೆ. ಅನೇಕ ದೇಶಗಳಲ್ಲಿ ಕ್ರಿಸ್ಮಸ್ ಹಬ್ಬಕ್ಕೆ ವಿಶಿಷ್ಟವಾದ ತಿನಿಸುಗಳುಂಟು. ಈ ತಿನಿಸುಗಳನ್ನು ಪರಸ್ಪರ ಹಂಚಿಕೊಳ್ಳುವುದರಲ್ಲಿ ಒಂದಿ ವಿಶಿಷ್ಟ ಅನುಭೂತಿ ಇದೆ. ಧಾರ್ಮಿಕ ಆಚರಣೆಗಳು ಅಡ್ವೆಂಟ್ ಶುರುವಾಗುತ್ತಿದ್ದಂತೆ ಚರ್ಚುಗಳು ಕ್ರಿಸ್ಮಸ್ಸಿಗೆ ತೆರೆದುಕೊಳ್ಳುತ್ತವೆ. ಕ್ರಿಸ್ಮಸ್ ಗೆ ಸ್ವಲ್ಪವೇ ಮೊದಲು ಚರ್ಚ್ ಮೊದಲಾದ ಸ್ಥಳಗಳಲ್ಲಿ ಕೆಲವು ಧಾರ್ಮಿಕ ಆಚರಣೆಗಳು ನಡೆಯುತ್ತವೆ. ಕ್ರಿಸ್ಮಸ್ ಈವ್ ಮತ್ತು ಕ್ರಿಸ್ಮಸ್ ದಿನಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಚರ್ಚ್ಗಳಲ್ಲಿ ನಡೆಯುತ್ತವೆ. ಕ್ರಿಸ್ಮಸ್ ನಂತರ ಹನ್ನೆರಡನೆ ದಿನದಂದು "ಎಪಿಫನಿ" ಆಚರಣೆಗಳ ನಂತರ ಕ್ರಿಸ್ಮಸ್ ಕಾಲ ಮುಗಿಯುತ್ತದೆ. ಹೊರಗಿನ ಸಂಪರ್ಕಗಳು ಅಂತರ ಜಾಲದಲ್ಲಿ ಕ್ರಿಸ್ಮಸ್ ಕ್ರಿಸ್ಮಸ್ ಮೂಲ ಕ್ರಿಸ್ಮಸ್ - ಬೈಬಲ್ ಉತ್ತರ ಜಪಾನ್ನಲ್ಲಿ ಕ್ರಿಸ್ಮಸ್ ಕ್ರಿಸ್ಮಸ್ನ ಇತಿಹಾಸ ಬೆಳಕಿನೊಂದಿಗೆ ಆಚರಿಸುವ ಸಂಪ್ರದಾಯದ ಬಗ್ಗೆ ವಿಲಿಯಮ್ ಟಿ ಟಿಘೆಯವರ "Calculating Christmas" ಕ್ರಿಸ್ಮಸ್ ಉಡುಗೊರೆಗಳ ಕಥೆ ಕ್ರಿಸ್ಮಸ್ ಗ್ರಾಫಿಕ್ಸ್ ಕ್ಯಾಥೊಲಿಕ್ ಕ್ರಿಸ್ಮಸ್ ಅಂತರಜಾಲ ಕ್ರಿಸ್ಮಸ್ ಕೌಂಟ್ಡೌನ್ ಕ್ರೈಸ್ತ ಧರ್ಮ ಹಬ್ಬಗಳು ಪ್ರಮುಖ ದಿನಗಳು
1281
https://kn.wikipedia.org/wiki/%E0%B2%A4%E0%B3%81%E0%B2%B3%E0%B2%B8%E0%B2%BF%20%E0%B2%AA%E0%B3%82%E0%B2%9C%E0%B3%86
ತುಳಸಿ ಪೂಜೆ
ತುಳಸಿ ಪೂಜೆ - ಪ್ರತಿ ವರ್ಷ ದೀಪಾವಳಿಯ ಜೊತೆಗೂಡಿ ಬರುವ, ಆಚರಿಸಲಾಗುವ ಹಬ್ಬ. ಇದನ್ನಾಚರಿಸುವ ಉದ್ದೇಶ ವಿಷ್ಣು ಹಾಗೂ ತುಳಸಿಯ ಮದುವೆಯ ಆಚರಣೆಯಂತೆ. ಚಾಂದ್ರಮಾನ ಕಾರ್ತಿಕಮಾಸ ಶುಕ್ಲಪಕ್ಷದ ೧೨ನೇ ದಿನ ಅಂದರೆ ದ್ವಾದಶಿಯಂದು ಈ ಹಬ್ಬವನ್ನು ಉತ್ಥಾನ ದ್ವಾದಶಿ ಎಂದು ಆಚರಿಸಲಾಗುತ್ತದೆ. ತುಳಸಿಗಿಡದೊಂದಿಗೆ ಬೆಟ್ಟದನೆಲ್ಲಿಕಾಯಿ ಗಿಡವನ್ನೂ ನೆಟ್ಟು ಪೂಜಿಸುವ ರೂಢಿ ಇದೆ. ದೀಪಗಳಿಂದ ಬೃಂದಾವನವನ್ನು ಅಲಂಕರಿಸಲಾಗುತ್ತದೆ. ಈ ದಿನದಂದು ತುಳಸಿ ಕಟ್ಟೆಯನ್ನು ರಂಗೋಲೆ, ಹೂವು ಹಾಗೂ ಮಾವಿನ ಎಲೆಗಳಿಂದ ಅಲಂಕರಿಸಿ ಕೃಷ್ಣನ ಮೂರ್ತಿಯಿರಿಸಿ ಪೂಜಿಸಲಾಗುತ್ತದೆ. ದೀಪಾವಳಿಯಂತೆ ಈ ದಿನವೂ ಪಟಾಕಿಯ ಮಹಾಪೂರವೇ ಜರುಗುತ್ತದೆ. ತುಳಸಿ ಪುರಾಣ ತುಳಸಿ, ಜಲಂಧರನ ಹೆಂಡತಿಯಾದ ವೃಂದ. ರಾಕ್ಷಸನಾದ ಜಲಂಧರನ ಕಿರುಕುಳ ತಾಳಲಾಗದೆ ದೇವತೆಗಳು ವಿಷ್ಣುವಿನ ಸಹಾಯಕ್ಕೆ ಮೊರೆ ಹೋದರಂತೆ. ಪತಿವ್ರತೆಯಾದ ವೃಂದಳ ತಪೋಶಕ್ತಿಯಿಂದ ಜಲಂಧರನು ಅತ್ಯಂತ ಶಕ್ತಿಶಾಲಿಯಾದನಂತೆ. ವಿಷ್ಣು ಜಲಂಧರನ ವೇಷ ಧರಿಸಿ ವೃಂದಳ ಪಾತಿವ್ರತ್ಯ ಶಕ್ತಿಯನ್ನು ಭಂಗ ಮಾಡಿದನಂತೆ. ಜಲಂಧರನು ರಣಭೂಮಿಯಲ್ಲಿ ಮಡಿದನಂತೆ. ವಿಷ್ಣುವಿಗೆ ಶಾಪ ನೀಡಿ ವೃಂದ ತನ್ನ ಪತಿಯ ಶವದೊಂದಿಗೆ ಬೂದಿಯಾದಳಂತೆ. ಮುಂದೆ ಆ ವೃಂದಳೇ ತುಳಸಿಯಾಗಿ ಪಾರ್ವತಿ ತಯಾರಿಸಿದ ಬೃಂದಾವನದಲ್ಲಿ ಹುಟ್ಟಿದಳಂತೆ. ನಂತರ ಇವಳು ರುಕ್ಮಿಣಿಯಾಗಿ ಜನ್ಮ ಪಡೆದು ಕಾರ್ತಿಕ ಶುದ್ಧ ದ್ವಾದಶಿಯಂದು ಕೃಷ್ಣನನ್ನು ಮದುವೆಯಾದಳೆಂದು ಪ್ರತೀತಿಯಿದೆ. ಇನ್ನೊಂದು ಪುರಾಣದ ಪ್ರಕಾರ ದೇವತೆಗಳೂ, ದಾನವರೂ ಕ್ಷೀರಸಾಗರವನ್ನು ಕಡೆದಾಗ ಕೊನೆಯಲ್ಲಿ ಅಮೃತಕಲಶ ಬಂತು. ಅದನ್ನು ಕೈಗೆ ತೆಗೆದುಕೊಂಡ ವಿಷ್ಣುವಿನ ಕಣ್ಣುಗಳಿಂದ ಬಂದ ಆನಂದಬಾಷ್ಪಗಳು ಆ ಕಲಶದಲ್ಲಿ ಬಿದ್ದು ಅದರಿಂದ ಒಂದು ಸಣ್ಣ ಗಿಡ ಹುಟ್ಟಿತು. ಅದಕ್ಕೆ ತುಲನೆ(ಹೋಲಿಕೆ) ಇಲ್ಲವಾದ್ದರಿಂದ,ತುಳಸಿ ಎಂದು ಹೆಸರಿಟ್ಟು, ಲಕ್ಷ್ಮಿಯೊಂದಿಗೆ ತುಳಸಿಯನ್ನೂ ವಿಷ್ಣುವು ಮದುವೆಯಾದನು. ಭಗವಂತೋತ್ಥಾನ ಆಷಾಢಮಾಸ ಶುಕ್ಲ ಪಕ್ಷದ ಏಕಾದಶಿಯಲ್ಲಿ ಕ್ಷೀರಸಾಗರದಲ್ಲಿ ಶೇಷಶಾಯಿಯಾದ ಭಗವಂತನನ್ನು ಈ ದಿನ ರಾತ್ರಿಯಲ್ಲಿ ಏಳಿಸುವುದರಿಂದ ಈ ದ್ವಾದಶಿಗೆ ಭಗವಂತೋತ್ಥಾನ ರೂಪವಾದ ಉತ್ಥಾನದ್ವಾದಶೀ ಎಂದು ಹೆಸರು ಬಂದಿದೆ. ಆಷಾಢ ಶುಕ್ಲಪಕ್ಷದಲ್ಲಿ ಪ್ರಾರಂಭಿಸಿದ ಚಾತುರ್ಮಾಸ್ಯ ವ್ರತವನ್ನು ಈ ದಿವಸ ಮುಕ್ತಾಯಗೊಳಿಸಬೇಕು. ವ್ರತಾಚರಣೆ ಈ ದ್ವಾದಶಿಯಲ್ಲಿ ಕ್ಷೀರಾಬ್ಧಿಶಯನ ವ್ರತವನ್ನು ಆಚರಿಸುತ್ತಾರೆ. ತುಲಸೀ ಸಹಿತ ಧಾತ್ರೀ ಲಕ್ಷ್ಮೀನಾರಾಯಣ ಪ್ರೀತ್ಯರ್ಥವಾಗಿ ಈ ವ್ರತವನ್ನು ಮಾಡುವುದು ಇಂದಿಗೂ ರೂಢಿಯಲ್ಲಿದೆ. ಇದರ ದ್ಯೋತಕವಾಗಿ ಉತ್ಥಾನ ದ್ವಾದಶೀ ದಿವಸ ಬೆಳಗ್ಗೆ ಬೃಂದಾವನದಲ್ಲಿ ಧಾತ್ರಿಯನ್ನು (ಕಾಯಿಸಹಿತವಾದ ನೆಲ್ಲಿಗಿಡವನ್ನು) ನೆಟ್ಟು ಅಲ್ಲಿ ಭಗವಂತನನ್ನು ಕೂರಿಸಿ ನೀರಾಜನಾದಿಗಳಿಂದ ಪುಜಿಸುತ್ತಾರೆ. ರಾತ್ರಿಯಲ್ಲಿ ಬೃಂದಾವನವನ್ನು ಪುಷ್ಪಾದಿಗಳಿಂದಲಂಕರಿಸಿ ಭಗವಂತನನ್ನು ಆ ಬೃಂದಾವನ ದಲ್ಲಿಟ್ಟು ಉತ್ಸವಮಾಡುತ್ತಾರೆ. ಮನೆಗಳಲ್ಲಿ ಬೃಂದಾವನವನ್ನು ಪುಜಿಸಿ ದೀಪಗಳಿಂದ ಅಲಂಕರಿಸಿ ಪುಜಿಸುತ್ತಾರೆ. ರಾತ್ರಿ ಭಗವಂತನಿಗೆ ಕ್ಷೀರಾನ್ನನಿವೇದನ ಒಂದು ವಿಶೇಷ. ಹೊಸ ನೆಲ್ಲಿಕಾಯನ್ನು ಈ ದ್ವಾದಶಿಯಿಂದ ಉಪಯೋಗಿಸಲು ಪ್ರಾರಂಭಿಸುತ್ತಾರೆ. ಕ್ಷೀರಾಬ್ಧಿ ಯಲ್ಲಿ ಶಯನಿಸಿದ ಭಗವಂತ ಈ ದ್ವಾದಶಿಯಲ್ಲಿ ತುಲಸೀ ಆವಾಸವಾದ ಬೃಂದಾವನದಲ್ಲಿ ತುಲಸೀ ಲಕ್ಷ್ಮಿಯರೊಡನೆ ಏಳುವುದರ ಸಂಕೇತವಾಗಿ ಈ ಪೂಜೆ ಇಂದಿಗೂ ನಡೆಯುವ ರೂಢಿಯಿದೆ. ಈ ದಿವಸದಲ್ಲಿ ದೀಪೋತ್ಸವ ವಿಶೇಷ ಪುಣ್ಯಪ್ರದ. ಈ ದ್ವಾದಶಿಯಲ್ಲಿ ಧಾತ್ರೀ ತುಲಸೀ ಸಹಿತ ಲಕ್ಷ್ಮೀನಾರಾಯಣನನ್ನು ಪುಜಿಸುವುದರಿಂದ ಸರ್ವವಿಧವಾದ ಪಾತಕಗಳೂ ನಶಿಸುತ್ತವೆ-ಎಂದು ವ್ರತಮಹಾತ್ಮ್ಯೆ ತಿಳಿಸುತ್ತದೆ. ಹಿಂದೂ ಧರ್ಮದ ಹಬ್ಬಗಳು
1284
https://kn.wikipedia.org/wiki/%E0%B2%95%E0%B3%86%E0%B2%82%E0%B2%AA%E0%B3%81%20%E0%B2%95%E0%B3%8B%E0%B2%9F%E0%B3%86
ಕೆಂಪು ಕೋಟೆ
ಕೆಂಪು ಕೋಟೆ ದೆಹಲಿಯ ಸಮೀಪ ಆಗ್ರಾ ನಗರದಲ್ಲಿ ಇದೆ. ಪ್ರಸಿದ್ಧ ತಾಜ್ ಮಹಲ್ ಇಂದ ೨.೫ ಕಿಮೀ ದೂರದಲ್ಲಿದೆ. ಕೆಂಪು ಕೋಟೆ ನಿಜವಾಗಿ ಕೋಟೆಯಿಂದ ಸುತ್ತುವರಿದ ಅರಮನೆಗಳ ನಗರ ಎನ್ನಬಹುದು. ಚರಿತ್ರೆ ೧೬ ನೆಯ ಶತಮಾನದ ಕೊನೆಯಲ್ಲಿ ಅಕ್ಬರನ ಕಾಲದಲ್ಲಿ ಮೊಘಲರು ಈ ಕೋಟೆಯನ್ನು ಲೋದಿ ವಂಶದಿಂದ ಪಡೆದರು. ಅಕ್ಬರ್ ತನ್ನ ಆಡಳಿತದ ಸಮಯದಲ್ಲಿ ರಾಜಧಾನಿಯನ್ನು ದೆಹಲಿಯಿಂದ ಆಗ್ರಾಕ್ಕೆ ವರ್ಗಾಯಿಸಿದನು. ಇದರಿಂದಾಗಿ ಆಗ್ರಾ ನಗರ ಹೆಚ್ಚು ಸಮೃದ್ಧವಾಯಿತೆನ್ನಬಹುದು. ಅಕ್ಬರ್ ಸಾಮಾನ್ಯವಾಗಿ ಕೋಟೆ-ಕಟ್ಟಡಗಳನ್ನು ಕಟ್ಟಿಸುತ್ತಿದ್ದದ್ದು ಕೆಂಬಣ್ಣದ ಕಲ್ಲಿನಿಂದ, ಮತ್ತು ಕೆಂಪು ಕೋಟೆಯಲ್ಲಿಯೂ ಇದೇ ಪ್ರಭಾವವನ್ನು ಕಾಣಬಹುದು. ಕೆಂಪು ಕೋಟೆ ಕೇವಲ ಕೋಟೆಯಾಗಿ ಉಳಿಯದೆ ರಾಜ-ರಾಣಿಯರ ನಿವಾಸವಾಗಿಯೂ ಉಪಯೋಗಗೊಳ್ಳಲಾರಂಭಿಸಿತು. ಕೆಂಪು ಕೋಟೆ ತನ್ನ ಇಂದಿನ ರೂಪ ಪಡೆದದ್ದು ಅಕ್ಬರನ ಮೊಮ್ಮಗ ಷಾ ಜಹಾನನ ಕಾಲದಲ್ಲಿ. ಷಾ ಜಹಾನ್ ನ ಕಾಲದ ಶಿಲ್ಪಕಲೆ ಶ್ವೇತ ಅಮೃತಶಿಲೆಯನ್ನು ಹೆಚ್ಚಾಗಿ ಉಪಯೋಗಿಸುತ್ತಿತ್ತು (ಉದಾಹರಣೆಗೆ ತಾಜ್ ಮಹಲ್). ಷಾ ಜಹಾನ್ ಇಲ್ಲಿದ್ದ ಕೆಲವು ಕಟ್ಟಡಗಳನ್ನು ಉರುಳಿಸಿ ತನ್ನದೇ ಆದ ಹೊಸ ಕಟ್ಟಡಗಳನ್ನು ನಿರ್ಮಿಸಲು ಆರಂಭಿಸಿದ. ನಂತರದ ವರ್ಷಗಳಲ್ಲಿ ಷಾ ಜಹಾನ್ ನ ಮಗ ಔರಂಗಜೇಬ್ ಷಾ ಜಹಾನನನ್ನು ಇದೇ ಕೆಂಪು ಕೋಟೆಯಲ್ಲಿ ಬಂಧನದಲ್ಲಿರಿಸಿದ. ನಂಬಿಕೆಯಂತೆ, ಷಾ ಜಹಾನ್ ನಿಧನನಾಗಿದ್ದು ಕೆಂಪು ಕೋಟೆಯ ಮುಸಮ್ಮನ್ ಬುರ್ಜ್ ಎಂಬ ಗೋಪುರದಲ್ಲಿ - ಇದು ಅಮೃತಶಿಲೆಯಿಂದ ನಿರ್ಮಿಸಲ್ಪಟ್ಟಿದ್ದು ತಾಜ್ ಮಹಲ್ ನ ಅದ್ಭುತ ದೃಶ್ಯ ಇಲ್ಲಿಗೆ ಕಾಣುತ್ತದೆ. ೧೮೫೭ ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಒಂದು ಯುದ್ಧ ಇದೇ ಸ್ಥಳದಲ್ಲಿ ಜರುಗಿತು. ವಿನ್ಯಾಸ ಇಡೀ ಕೋಟೆ ಅರ್ಧಚಂದ್ರಾಕಾರವಾಗಿದ್ದು, ಕೋಟೆ ಗೋಡೆಗಳು ೨೧ ಮೀ ಎತ್ತರ ಇವೆ. ಕೋಟೆಯ ಸುತ್ತಲೂ ಒಂದು ಕಾಲುವೆ ಹರಿಯುತ್ತದೆ. ಮುಖ್ಯ ದ್ವಾರ (ದೆಹಲಿ ದ್ವಾರ) ಯಮುನಾ ನದಿಯ ಕಡೆಗಿದೆ. ಕೋಟೆಯ ಸುತ್ತಳತೆ ೨.೪ ಕಿಮೀ. ಕೋಟೆಯಲ್ಲಿ ಎರಡು ದ್ವಾರಗಳಿವೆ - ದೆಹಲಿ ದ್ವಾರ ಮತ್ತು ಲಾಹೋರ್ ದ್ವಾರ (ಅಥವಾ ಅಮರ್ ಸಿಂಗ್ ದ್ವಾರ). ದೆಹಲಿ ದ್ವಾರ ಹೆಚ್ಚು ವೈಭವದಿಂದ ಕೂಡಿದೆ. ಇಂದಿಗೂ ಭಾರತೀಯ ಭೂಸೈನ್ಯ (ಮುಖ್ಯವಾಗಿ ರಜಪುಟಾಣಾ ರೈಫಲ್ಸ್ ತುಕಡಿ) ಕೋಟೆಯ ಈ ಭಾಗವನ್ನು ಉಪಯೋಗಿಸುವುದರಿಂದ ಈ ದ್ವಾರ ಸಾರ್ವಜನಿಕರಿಗೆ ತೆರೆದಿರುವುದಿಲ್ಲ. ಪ್ರವಾಸಿಗಳು ಸಾಮಾನ್ಯವಾಗಿ ಉಪಯೋಗಿಸುವುದು ಲಾಹೋರ್ ದ್ವಾರವನ್ನು (ಲಾಹೋರ್ ನ ಕಡೆ ಮುಖ ಮಾಡಿರುವುದರಿಂದ ಈ ಹೆಸರು). ಶಿಲ್ಪಕಲೆ ಶಿಲ್ಪಕಲೆಯ ದೃಷ್ಟಿಯಿಂದ ಈ ಕೋಟೆಯಲ್ಲಿ ಹಿಂದೂ ಮತ್ತು ಮುಸ್ಲಿಮ್ ಶೈಲಿಗಳ ಸಮಾಗಮವನ್ನು ಕಾಣಬಹುದು. ಒಟ್ಟಾರೆ ಶಿಲ್ಪಕಲೆ ಮುಸ್ಲಿಮ್ ಶೈಲಿಗಳಿಂದ ಸ್ಫೂರ್ತಿ ಪಡೆದಿದ್ದರೂ, ಕೆಲವು ಅಲಂಕಾರಗಳಲ್ಲಿ ಹಿಂದೂ ಶಿಲ್ಪಕಲೆಯ ಪ್ರಭಾವವನ್ನು ಕಾಣಬಹುದು. ಮುಖ್ಯ ಭಾಗಗಳು ಅಂಗೂರಿ ಬಾಗ್: ಸುಂದರ ವಿನ್ಯಾಸವುಳ್ಳ ಉದ್ಯಾನಗಳು ದಿವಾನ್-ಎ-ಆಮ್: ಸಾರ್ವಜನಿಕರ ಸಭೆ ಸೇರುತ್ತಿದ್ದ ಸ್ಥಳ; ಪ್ರಸಿದ್ಧ ನವಿಲು ಸಿಂಹಾಸನ ಇದ್ದದ್ದು ಈ ಸಭಾಮಂಟಪದಲ್ಲಿ ದಿವಾನ್-ಎ-ಖಾಸ್: ಮುಖ್ಯ ಜನರನ್ನು ರಾಜ ಬರಮಾಡಿಕೊಳ್ಳುತ್ತಿದ್ದ ಸ್ಥಳ - ಜಹಾಂಗೀರನ ಕಪ್ಪು ಸಿಂಹಾಸನ ಇಲ್ಲಿದೆ ಚಿನ್ನದ ಪಡಸಾಲೆಗಳು: ಬೆಂಗಾಲಿ ಗುಡಿಸಲುಗಳ ಮಾದರಿಯ ಛಾವಣಿಗಳಿರುವ ಹೊಂಬಣ್ಣದ ಪಡಸಾಲೆಗಳು ಜಹಾಂಗೀರಿ ಮಹಲ್: ಅಕ್ಬರ್ ತನ್ನ ಮಗ ಜಹಾಂಗೀರನಿಗೆ ಕಟ್ಟಿಸಿಕೊಟ್ಟ ಅರಮನೆ ಖಾಸ್ ಮಹಲ್: ಅಮೃತಶಿಲೆಯ ಅರಮನೆ, ಅಮೃತಶಿಲೆಯ ಮೇಲಿನ ಚಿತ್ರಕಲೆಯ ಅತ್ಯುತ್ತಮ ನಿದರ್ಶನ ಮಚ್ಛಿ ಭವನ್: ಒಂದು ಕಾಲದಲ್ಲಿ ಕೊಳ ಮತ್ತು ಕಾರಂಜಿಗಳನ್ನು ಹೊಂದಿದ್ದು ಉತ್ಸ್ವಗಳಿಗೆ ಉಪಯೋಗವಾಗುತ್ತಿತ್ತು ಮೀನಾ ಮಸೀದಿ: ಸಣ್ಣ ಮಸೀದಿ, ಸಾರ್ವಜನಿಕರಿಗೆ ಪ್ರವೇಶವಿಲ್ಲ ಮೋತಿ ಮಸೀದಿ: ಷಾ ಜಹಾನನ ವೈಯಕ್ತಿಕ ಉಪಯೋಗಕ್ಕಾಗಿ ಮಸೀದಿ ಮುಸಮ್ಮನ್ ಬುರ್ಜ್: ಅಷ್ಟ ಮುಖವಾದ ಮಂಟಪ - ತಾಜ್ ಮಹಲ್ ಇಲ್ಲಿಂದ ಕಾಣುತ್ತದೆ ನಗೀನಾ ಮಸೀದಿ: ಆಸ್ಥಾನದ ಮಹಿಳೆಯರಿಗಾಗಿ ಮಸೀದಿ ಜನಾನಾ ಮೀನಾ ಬಜಾರ್: ಮಹಿಳಾ ವರ್ತಕರು ಮಾತ್ರ ಅಂಗಡಿಗಳನ್ನು ತೆರೆದಿದ್ದ ಮಾರುಕಟ್ಟೆ ನೌಬತ್ ಖಾನಾ: ರಾಜನಿಗಾಗಿ ಸಂಗೀತ ಕಛೇರಿಗಳು ನಡೆಯುತ್ತಿದ್ದ ಸ್ಥಳ ರಂಗ್ ಮಹಲ್: ರಾಣಿಯರು ವಾಸಿಸುತ್ತಿದ್ದ ಅರಮನೆ ಶಾಹಿ ಬುರ್ಜ್: ಷಾ ಜಹಾನನ ಕಛೇರಿ ಶೀಶ್ ಮಹಲ್: ಗೋಡೆಗಳ ಪೂರ ಸಣ್ಣ ಕನ್ನಡಿಗಳಿರುವ ಕೋಣೆ ಇತರ ಮಾಹಿತಿ ಆಗಸ್ಟ್ ೧೫ ರಂದು ಭಾರತದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪ್ರಧಾನ ಮಂತ್ರಿಗಳ ಭಾಷಣ ನಡೆಯುವುದು ಕೆಂಪು ಕೋಟೆಯಲ್ಲಿಯೇ. ಇದೇ ದಿನ ಭಾರತೀಯ ಸೈನ್ಯದ ಅನೇಕ ತುಕಡಿಗಳು ಇಲ್ಲಿ ಪ್ರಭಾತಭೇರಿ (ಪೆರೇಡ್) ನಡೆಸುತ್ತವೆ. ಹಾಗೆಯೇ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಬರುವ ಸಾಂಸ್ಕೃತಿಕ ಪ್ರದರ್ಶನಗಳ ಮೆರವಣಿಗೆ ನಡೆಯುತ್ತದೆ. ಇದೇ ಸಂದರ್ಭದಲ್ಲಿಯೇ ಭಾರತದ ರಕ್ಷಣೆಗೆ ಅತ್ಯುನ್ನತ ಸೇವೆ ನೀಡಿದ ಸೈನಿಕರಿಗೆ ಪರಮ್ ವೀರ್ ಚಕ್ರ ಪ್ರಶಸ್ತಿಯ ಪ್ರದಾನ ಮಾಡಲಾಗುತ್ತದೆ. ೧೯೮೩ ರಲ್ಲಿ ಯುನೆಸ್ಕೋ ಈ ಕೋಟೆಯನ್ನು ಪ್ರಪಂಚ ಸಂಸ್ಕೃತಿ ಕ್ಷೇತ್ರ ಎಂದು ಘೋಷಿಸಿತು. ಬಾಹ್ಯ ಸಂಪರ್ಕಗಳು ಕೆಂಪು ಕೋಟೆಯ ನಕ್ಷೆ ಭಾರತ ಸರ್ಕಾರದ ತಾಣದಲ್ಲಿ ಕೆಂಪು ಕೋಟೆಯ ಬಗ್ಗೆ ಮಾಹಿತಿ ಆಕರಗಳು http://whc.unesco.org/sites/251.htm http://www.aviewoncities.com/agra/fort.htm http://www.webindia123.com/monuments/forts/agra.htm http://whc.unesco.org/whreview/article1.html ಇತಿಹಾಸ ಪ್ರವಾಸೋದ್ಯಮ ವಿಶ್ವ ಪರಂಪರೆಯ ತಾಣಗಳು ಪ್ರವಾಸಿ ತಾಣಗಳು
1289
https://kn.wikipedia.org/wiki/%E0%B2%AE%E0%B2%B9%E0%B2%BE%E0%B2%A4%E0%B3%8D%E0%B2%AE%20%E0%B2%97%E0%B2%BE%E0%B2%82%E0%B2%A7%E0%B2%BF
ಮಹಾತ್ಮ ಗಾಂಧಿ
ಮೋಹನ್‌ದಾಸ್ ಕರಮ್‌ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು. ಆರಂಭಿಕ ಜೀವನ ಮತ್ತು ಹಿನ್ನೆಲೆ ಮೋಹನ್‌ದಾಸ್ ಕರಮ್‌ಚಂದ್ ಗಾಂಧಿ ಯವರು ೧೮೬೯ರ ಅಕ್ಟೋಬರ್ ೨ ರಂದು ಭಾರತದ ಇಂದಿನ ಗುಜರಾತ್‌ ರಾಜ್ಯದ ಕರಾವಳಿ ಪಟ್ಟಣ ಪೋರಬಂದರ್‌ನಲ್ಲಿ ಜನಿಸಿದರು. ಅವರ ತಂದೆ ಕರಮ್‌ಚಂದ್ ಗಾಂಧಿ(೧೮೨೨-೧೮೮೫)ಯವರು, ಹಿಂದೂ ಮೋಧ್‌ ಸಮುದಾಯದವರಾಗಿದ್ದು, ಬ್ರಿಟಿಷ್‌ ಭಾರತದ ಕಾಠೀಯಾವಾಡ್ ನಿಯೋಗದಲ್ಲಿನ ಒಂದು ಸಣ್ಣ ರಾಜಾಡಳಿತದ ರಾಜ್ಯವಾದ ಪೋರ ಬಂದರ್ ರಾಜ್ಯದ ದಿವಾನ್‌ (ಪ್ರಧಾನ ಮಂತ್ರಿ) ಆಗಿದ್ದರು. ಅವರ ತಾಯಿ ಪುತಲೀಬಾಯಿಯವರು ಹಿಂದೂ ಪ್ರಣಾಮಿ ವೈಷ್ಣವ ಸಮುದಯದವರಾಗಿದ್ದು, ಕರಮ್‌ಚಂದ್‌ರ ನಾಲ್ಕನೆಯ ಪತ್ನಿಯಾಗಿದ್ದರು; ಮೊದಲ ಮೂರು ಪತ್ನಿಯರು ಮೇಲುನೋಟಕ್ಕೆ ವ್ಯಕ್ತವಾಗುವಂತೆ ಶಿಶುಜನನದ ಸಮಯದಲ್ಲಿ ಮೃತರಾಗಿದ್ದರು. ಧರ್ಮನಿಷ್ಠ ತಾಯಿಯೊಂದಿಗೆ ಮತ್ತು ಆ ಪ್ರಾಂತ್ಯದ ಜೈನ್‌ ಸಂಪ್ರದಾಯಗಳೊಂದಿಗೆ ಬೆಳೆದ ಬಾಲಕ ಮೋಹನ್‌ದಾಸ್‌ ತಮ್ಮ ಮುಂದಿನ ಪ್ರೌಢ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಬಹುದಾದಂತಹ ಪ್ರಭಾವಗಳನ್ನು ಸಾಕಷ್ಟು ಮುಂಚಿತವಾಗಿಯೇ ಅರಗಿಸಿ ಕೊಂಡರು; ಚೇತನಾತ್ಮಕ ಜೀವಿಗಳಿಗಾಗಿ ಸಹಾನುಭೂತಿ, ಸಸ್ಯಾಹಾರ, ಸ್ವಶುದ್ಧೀಕರಣಕ್ಕಾಗಿ ಉಪವಾಸ ಮತ್ತು ವಿವಿಧ ಮತಗಳಿಗೆ ಸೇರಿರುವ ಜನರ ನಡುವೆ ಪರಸ್ಪರ ಸಹನೆ ಇವುಗಳಲ್ಲಿ ಸೇರಿದ್ದವು. ಭಾರತೀಯ ಮೇರುಕಥೆಗಳು, ಅದರಲ್ಲೂ ವಿಶೇಷವಾಗಿ, ಭಾರತೀಯ ಮಹಾಕೃತಿಗಳಲ್ಲಿನ ಶ್ರವಣ ಮತ್ತು ಹರಿಶ್ಚಂದ್ರ ಮಹಾರಾಜರ ಕಥೆಗಳು ಬಾಲ್ಯಾವಸ್ಥೆಯಲ್ಲಿದ್ದ ಗಾಂಧಿಯವರ ಮೇಲೆ ಭಾರೀ ಪ್ರಭಾವ ಬೀರಿದ್ದವು. ಪುರಾತನ ಭಾರತೀಯ ರಾಜ ಮತ್ತು ಸತ್ಯವಂತ ನಾಯಕನಾಗಿದ್ದ ಹರಿಶ್ಚಂದ್ರನ ಕಥೆಯು ಬಾಲಕ ಗಾಂಧಿಯ ಮನವನ್ನು ಪದೇಪದೇ ಕಾಡುತ್ತಿತ್ತು. ಅದು ತಮ್ಮ ಮನದಲ್ಲಿ ಅಳಿಸಲಾಗದ ಛಾಪನ್ನು ಒತ್ತಿತೆಂದು ಗಾಂಧಿಯವರು ತಮ್ಮ ಆತ್ಮಚರಿತ್ರೆಯಲ್ಲಿ ಒಪ್ಪಿಕೊಂಡಿದ್ದಾರೆ. "ಅದು ನನ್ನ ನ್ನು ಕಾಡಿಸಿದ ಪರಿಣಾಮವಾಗಿ ನಾನೇ ಸ್ವತ: ಎಣಿಸಲಾಗದಷ್ಟು ಬಾರಿ ಹರಿಶ್ಚಂದ್ರನಂತೆ ವರ್ತಿಸಿದ್ದುಂಟು" ಎಂದು ಅವರು ಬರೆದುಕೊಂಡಿದ್ದಾರೆ. ಸತ್ಯ ಮತ್ತು ಪ್ರೇಮದಂತಹ ಸರ್ವೋಚ್ಚ ಮೌಲ್ಯಗಳೊಂದಿಗೆ ಗಾಂಧಿಯವರು ತಮ್ಮನ್ನು ಗುರುತಿಸಿಕೊಂಡಿದ್ದರ ಹಿಂದಿನ ಕಾರಣ ಈ ಮಹಾಕೃತಿಗಳ ಪಾತ್ರಗಳೊಂದಿಗೆ ಅವರ ಗುರುತಿಸಿ ಕೊಳ್ಳುವಿಕೆಯೇ ಆಗಿತ್ತು. ಮೇ ೧೮೮೩ ರಲ್ಲಿ, ಆ ಪ್ರಾಂತ್ಯದಲ್ಲಿದ್ದ ಪದ್ಧತಿಯಂತೆ, ಒಂದು ವ್ಯವಸ್ಥೆಗೊಳಿಸಲಾದ ಒಂದು ಬಾಲ್ಯ ವಿವಾಹಸಮಾರಂಭದಲ್ಲಿ, ೧೩ ವರ್ಷದ ಮೋಹನ್‌ದಾಸ್‌ ಅವರು ೧೪ ವರ್ಷದ ಕಸ್ತೂರ ಬಾಯಿ ಮಖಾಂಜಿ ಅವರನ್ನು ಮದುವೆಯಾದರು. (ಅವರ ಮೊದಲ ಹೆಸರನ್ನು ಸಾಮಾನ್ಯವಾಗಿ "ಕಸ್ತೂರಬಾ" ಎಂದು ಮೊಟಕುಗೊಳಿಸಿ, ಪ್ರೇಮಪೂರ್ವಕ ವಾಗಿ "ಬಾ " ಎನ್ನಲಾಗಿತ್ತು) ಆದಾಗ್ಯೂ, ಆ ಪ್ರಾಂತ್ಯದಲ್ಲಿದ್ದ ಸಂಪ್ರದಾಯದ ಪ್ರಕಾರ, ಹರೆಯದವಳಾದ ವಧು ತನ್ನ ಗಂಡನಿಂದ ದೂರವಿದ್ದು, ತನ್ನ ತವರುಮನೆಯಲ್ಲಿಯೇ ಹೆಚ್ಚು ಕಾಲ ಕಳೆಯುವುದು ರೂಢಿಯಾಗಿತ್ತು. ೧೮೮೫ರಲ್ಲಿ, ಗಾಂಧಿಯವರು ೧೫ ವರ್ಷದವರಾಗಿದ್ದಾಗ, ದಂಪತಿಗಳಿಗೆ ಮೊದಲ ಸಂತಾನವಾಯಿತು. ಆದರೆ ಅದು ಕಲವೇ ದಿನಗಳವರೆಗೆ ಮಾತ್ರ ಬದುಕುಳಿಯಲು ಸಾಧ್ಯವಾಯಿತು; ಗಾಂಧಿಯವರ ತಂದೆ ಕರಮ್‌ಚಂದ್‌‌ ಗಾಂಧಿಯವರು ಆದೇ ವರ್ಷದ ಆರಂಭದನಲ್ಲಿ ನಿಧನರಾಗಿದ್ದರು. ಮೋಹನ್‌ದಾಸ್ ಮತ್ತು ಕಸ್ತೂರಬಾ ಇನ್ನೂ ನಾಲ್ಕು ಮಂದಿ ಮಕ್ಕಳನ್ನು ಹೊಂದಿದ್ದರು - ಎಲ್ಲರೂ ಗಂಡು ಮಕ್ಕಳೇ: ೧೮೮೮ರಲ್ಲಿ ಜನಿಸಿದ ಹರಿಲಾಲ್‌ ; ೧೮೯೨ರಲ್ಲಿ ಜನಿಸಿದ ಮಣಿಲಾಲ್‌; ೧೮೯೭ರಲ್ಲಿ ಜನಿಸಿದ ರಾಮ್‌ದಾಸ್‌; ಮತ್ತು ೧೯೦೦ರಲ್ಲಿ ಜನಿಸಿದ ದೇವದಾಸ್‌. ಪೋರಬಂದರಿನ ಮಾಧ್ಯಮಿಕ ಶಾಲೆ ಮತ್ತು ರಾಜ್‌ಕೋಟ್‌ನ ಪ್ರೌಢಶಾಲೆಯಲ್ಲಿ ಗಾಂಧಿಯವರು ಶೈಕ್ಷಣಿಕವಾಗಿ ಸರಾಸರಿ ಮಟ್ಟದ ವಿದ್ಯಾರ್ಥಿಯಾಗುಳಿದಿದ್ದರು. ಗುಜರಾತ್‌ನ ಭಾವನಗರ್‌ನಲ್ಲಿರುವ ಸಮಲ್‌ದಾಸ್ ಕಾಲೇಜಿಗೆ ಸೇರುವುದಕ್ಕಾಗಿ ಅವರು ತಮ್ಮ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಸ್ವಲ್ಪ ಮಟ್ಟಿಗಿನ ಪ್ರಯಾಸದೊಂದಿಗೆ ಉತ್ತೀರ್ಣರಾದರು. ಅಲ್ಲಿದ್ದಾಗ ಅವರು ಅಸಂತುಷ್ಟವಾಗಿದ್ದರು , ಇದರ ಭಾಗಶ: ಕಾರಣ ಅವರ ಕುಟುಂಬವು ಅವರು ಒಬ್ಬ ನ್ಯಾಯವಾದಿ (ಬ್ಯಾರಿಸ್ಟರ್‌) ಅಗಲೆಂದು ಇಚ್ಛಿಸಿತ್ತು. ೪ ಸೆಪ್ಟೆಂಬರ್ ೧೮೮೮ರಂದು ತಮ್ಮ ೧೯ನೆಯ ಹುಟ್ಟುಹಬ್ಬಕ್ಕೆ ಒಂದು ತಿಂಗಳು ಉಳಿದಿರುವಾಗ, ಇಂಗ್ಲೆಂಡ್‌ನಲ್ಲಿರುವ ಲಂಡನ್‌ನ ಯೂನಿವರ್ಸಿಟಿ ಕಾಲೇಜ್‌‌ನಲ್ಲಿ ಕಾನೂನು ಅಧ್ಯಯನ ಮಾಡಿ ನ್ಯಾಯವಾದಿಯಾಗಿ ತರಬೇತಿ ಪಡೆಯಲು ಗಾಂಧಿಯವರು [[ಲಂಡನ್‌|ಲಂಡನ್‌ಗೆ]] ಪ್ರಯಾಣಿಸಿದರು. ತಾವು ವಿದೇಶಕ್ಕೆ ಹೋದ ಮೇಲೆ ಮಾಂಸ, ಮದ್ಯ ಮತ್ತು ಕಾಮದಾಹಗಳಿಂದ ದೂರವಿರಬೇಕೆಂಬ ಹಿಂದೂ ಆಚಾರ ಸೂತ್ರಗಳನ್ನು ಪಾಲಿಸುವುದಾಗಿ ಜೈನ್ ಸನ್ಯಾಸಿ ಬೆಚಾರ್ಜೀ ಅವರ ಸನ್ನಿಧಿಯಲ್ಲಿ ಅವರ ತಾಯಿಗೆ ಪ್ರಮಾಣ ಮಾಡಿದ್ದು ಅವರ ಲಂಡನ್‌ ವಾಸದ ಮೇಲೆ ಪ್ರಭಾವ ಬೀರಿತ್ತು. ಗಾಂಧಿಯವರು ನೃತ್ಯ ತರಬೇತಿಯಂತಹ "ಇಂಗ್ಲಿಷ್" ಸಂಪ್ರದಾಯಗಳನ್ನು ಅಳವಡಿಸಿಕೊಳ್ಳುವ ಪ್ರಯೋಗವನ್ನು ಮಾಡಿದರೂ ಸಹ, ತಮ್ಮ ವಾಸಗೃಹದ ಒಡತಿಯು ಬಡಿಸಿದ ಸಪ್ಪೆ ಸಸ್ಯಾಹಾರಿ ಆಹಾರವನ್ನು ಸಹಿಸಿಕೊಳ್ಳಲಾಗಲಿಲ್ಲ; ಅವರು ಲಂಡನ್‌ನ ಕೆಲವೇ ಸಸ್ಯಾಹಾರಿ ಭೋಜನಾಮಂದಿರಗಳಲ್ಲಿ ಒಂದು ಲಭಿಸುವವರೆಗೂ ಸದಾ ಹಸಿವೆಯಲ್ಲಿದ್ದರು. ಸಾಲ್ಟ್‌ರವರ ಗ್ರಂಥದಿಂದ ಪ್ರಭಾವಿತರಾಗಿ, ಅವರು ಸಸ್ಯಾಹಾರಿ ಸಂಘಕ್ಕೆ ಸೇರ್ಪಡೆಯಾಗಿ, ಅದರ ಕಾರ್ಯಕಾರೀ ಸಮಿತಿಗೆ ಚುನಾಯಿತರಾಗಿ , ಆ ನಂತರ ಸ್ಥಳೀಯ ಬೇಯ್ಸ್‌ವಾಟರ್ ಶಾಖೆಯನ್ನು ಸ್ಥಾಪಿಸಿದರು. ಅವರು ಭೇಟಿಯಾದ ಕೆಲವು ಸಸ್ಯಾಹಾರಿಗಳು ಥಿಯೋಸಾಫಿಕಲ್ ಸೊಸೈಟಿಯ ಸದಸ್ಯರಾಗಿದ್ದರು. ಇದು ೧೮೭೫ರಲ್ಲಿ ಸ್ಥಾಪಿತಗೊಂಡಿದ್ದು, ವಿಶ್ವಭ್ರಾತೃತ್ವವನ್ನು ಉತ್ತೇಜಿಸುವ ಮತ್ತು ಬೌದ್ಧ ಹಾಗೂ ಹಿಂದೂ ಸಾಹಿತ್ಯಗಳ ಅಧ್ಯಯನ ಮಾಡುವ ಉದ್ದೇಶವನ್ನು ಹೊಂದಿತ್ತು .ಭಗವದ್ಗೀತೆ ಯ ಮೂಲ ಹಾಗೂ ಅನುವಾದಗಳೆರಡನ್ನೂ ಪಠಿಸಲು ತಮ್ಮೊಂದಿಗೆ ಸೇರಿರೆಂದು ಅವರು ಗಾಂಧಿಯವರನ್ನು ಪ್ರೇರೇಪಿಸಿದರು. ಅದುವರೆಗೂ ಧರ್ಮದಲ್ಲಿ ನಿರ್ದಿಷ್ಟವಾದ ಆಸಕ್ತಿ ತೋರದಿದ್ದ ಗಾಂಧಿಯವರು, ಧಾರ್ಮಿಕ ಚಿಂತನೆಯಲ್ಲಿ ಆಸಕ್ತರಾಗಿ ಹಿಂದೂ ಮತ್ತು ಕ್ರೈಸ್ತ ಮತಗ್ರಂಥಗಳೆರಡನ್ನೂ ಅಧ್ಯಯನ ಮಾಡಲಾರಂಭಿಸಿದರು. ೧೦ ಜೂನ್ ೧೮೯೧ ರಂದು ಗಾಂಧಿಯವರನ್ನು ವಕೀಲವೃತ್ತಿಗೆ ಕರೆಯಲಾಯಿತು. ಹಾಗಾಗಿ, ಅವರು ಲಂಡನ್‌ನಿಂದ ಭಾರತಕ್ಕೆ ೧೨ ಜೂನ್‌ ೧೮೯೧ರಂದು ಮರಳಿದರು. ತಾವು ಲಂಡನ್‌ನಲ್ಲಿದ್ದಾಗ ತಮ್ಮ ತಾಯಿ ನಿಧನರಾಗಿದ್ದರು ಎಂಬುದು ಆಗ ಅವರಿಗೆ ತಿಳಿದುಬಂದಿತು. ಏಕೆಂದರೆ ಅವರ ಕುಟುಂಬವು ಈ ಸಮಾಚಾರವನ್ನು ಅವರಿಗೆ ತಿಳಿಸಿರಲಿಲ್ಲ. ಮುಂಬಯಿಯಲ್ಲಿ ವಕೀಲ ವೃತ್ತಿಯನ್ನು ಆರಂಭಿಸುವ ಅವರ ಯತ್ನಗಳು ವಿಫಲವಾದವು. ಆ ನಂತರ, ಒಬ್ಬ ಪ್ರೌಢಶಾಲಾ ಅಧ್ಯಾಪಕರ ಅರೆಕಾಲಿಕ ಹುದ್ದೆಗೆ ಅರ್ಜಿ ಸಲ್ಲಿಸಿ ಅದು ತಿರಸ್ಕೃತಗೊಂಡ ನಂತರ, ಅವರು ರಾಜ್‌ಕೋಟ್‌ಗೆ ವಾಪಸಾಗಿ, ಕಕ್ಷಿಗಾರರಿಗಾಗಿ ಅರ್ಜಿಗಳ ಕರಡುಗಳನ್ನು ತಯಾರಿಸುವ ಸರಳ ಜೀವನವನ್ನು ನಡೆಸುತ್ತಿದ್ದರು. ಆದರೆ ಒಬ್ಬ ಬ್ರಿಟಿಷ್ ಅಧಿಕಾರಿಯಿಂದಾಗಿ ತೊಡಕಿಗೆ ಸಿಕ್ಕಿಕೊಂಡ ಕಾರಣ ಗಾಂಧಿಯವರು ತಮ್ಮ ವ್ಯವಹಾರವನ್ನು ನಿಲ್ಲಿಸಬೇಕಾಯಿತು. ಇದು ತಮ್ಮ ಹಿರಿಯ ಅಣ್ಣನ ಪರವಾಗಿ ಪ್ರಭಾವ ಬೀರಲು ಮಾಡಿದ ವಿಫಲ ಯತ್ನ ಎಂದು ತಮ್ಮ ಆತ್ಮಚರಿತ್ರೆಯಲ್ಲಿ ಅವರು ಈ ಘಟನೆಯನ್ನು ಬಣ್ಣಿಸಿದ್ದಾರೆ. ಇಂತಹ ವಾತಾವರಣದಲ್ಲಿ, ಏಪ್ರಿಲ್ ೧೮೯೩ರಲ್ಲಿ ಅವರು ಭಾರತೀಯ ಸಂಸ್ಥೆಯಾದ ದಾದಾ ಅಬ್ದುಲ್ಲಾ ಅಂಡ್ ಕಂಪೆನಿಯಿಂದ, ಆಗ ಬ್ರಿಟಿಷ್ ಸಾಮ್ರಾಜ್ಯದ ಅಂಗವಾಗಿದ್ದ ದಕ್ಷಿಣ ಆಫ್ರಿಕಾದ ನೇಟಲ್ ಕಾಲೊನಿಯಲ್ಲಿನ ಹುದ್ದೆಯೊಂದಕ್ಕೆ ನೀಡಲಾದ ಒಂದು ವರ್ಷ ಅವಧಿಯ ಗುತ್ತಿಗೆಯನ್ನು ಸ್ವೀಕರಿಸಿದರು, ಮಹಾತ್ಮ ಗಾಂಧಿ ಅವರ ಧ್ಯೇಯಗಳು ಅಹಿಂಸೆ ಅಥವಾ ಸಂಪೂರ್ಣ ಅಹಿಂಸೆಯ ಮೇಲೆ ದೃಢವಾಗಿ ರೂಪಿಸಲ್ಪಟ್ಟ ಸಾಮೂಹಿಕ ಅವಿಧೇಯತೆಯ ಮೂಲಕ ದಬ್ಬಾಳಿಕೆಗೆ ಪ್ರತಿರೋಧವನ್ನು ಒಡ್ಡುವ ಸತ್ಯಾಗ್ರಹ ದ ಪರಿಕಲ್ಪನೆಗೆ ಅವರು ಪಥ (ದಾರಿ)ನಿರ್ಮಾಪಕರಾಗಿದ್ದು, ಅದು ಭಾರತವನ್ನು ಸ್ವಾತಂತ್ರ್ಯದತ್ತ ಒಯ್ದಿತು ಹಾಗೂ ವಿಶ್ವಾದ್ಯಂತದ ನಾಗರಿಕ ಹಕ್ಕುಗಳ ಮತ್ತು ಸ್ವಾತಂತ್ರ್ಯ ಆಂದೋಲನ ಗಳಿಗೆ ಸ್ಫೂರ್ತಿ ನೀಡಿತು. ರಾಷ್ಟ್ರಪಿತ ಗೌರವ ಗಾಂಧಿಯವರು ವಿಶ್ವಾದ್ಯಂತ ಮಹಾತ್ಮ ಗಾಂಧಿ ಎಂದೇ ಚಿರಪರಿಚಿತರು (ಸಂಸ್ಕೃತ: महात्मा ಮಹಾತ್ಮ ಅಥವಾ ಮಹಾನ್ ಆತ್ಮ , ಎಂಬ ಗೌರವ ಸೂಚಕ ಪದವನ್ನು ಅವರಿಗೆ ಮೊದಲು ನೀಡಿದ್ದು ರವೀಂದ್ರನಾಥ ಠಾಗೂರರು). ಭಾರತದಲ್ಲೂ ಅವರು ಬಾಪು ಎಂದೇ ಚಿರಪರಿಚಿತರು (ಗುಜರಾತಿ: બાપુ ಬಾಪು ಅಥವಾ 'ತಂದೆ'). ಮೊದಲ ಬಾರಿಗೆ ಸುಭಾಷ್ ಚಂದ್ರಬೋಸ್ ಅವರು ರಾಷ್ಟ್ರಪಿತ ಎಂದು ಕರೆದರು. ಭಾರತ ದಲ್ಲಿ ಅವರನ್ನು ರಾಷ್ಟ್ರಪಿತ ಎಂದು ಅಧಿಕೃತವಾಗಿ ಗೌರವಿಸ ಲಾಗಿದ್ದು ಅವರ ಜನ್ಮದಿನವಾದ ಅಕ್ಟೋಬರ್ ೨ನ್ನು ಗಾಂಧಿ ಜಯಂತಿ ಎಂಬ ಸ್ಮರಣೀಯ ದಿನವನ್ನಾಗಿಸಿ ರಾಷ್ಟ್ರೀಯ ರಜಾ ದಿನವನ್ನಾಗಿಸಲಾಗಿದೆ ಮತ್ತು ವಿಶ್ವಾದ್ಯಂತ ಈ ದಿನವನ್ನು ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತಿದೆ.(Netaji Subhas Chandra Bose, who in his address on Singapore Radio on July 6, 1944 has addressed Mahatma Gandhi as Father of the Nation. Thereafter on April 28, 1947 Gandhi was referred with the same title by Sarojini Naidu at a conference. ) ನಾಗರಿಕ ಹಕ್ಕುಗಳಿಗಾಗಿ ಹೋರಾಟ ಗಾಂಧಿಯವರು ದಕ್ಷಿಣ ಆಫ್ರಿಕಾದಲ್ಲಿ ವಲಸಿಗ ವಕೀಲರಾಗಿದ್ದಾಗ ಅಲ್ಲಿ ವಾಸವಾಗಿದ್ದ ಭಾರತೀಯ ಸಮುದಾಯವು ನಾಗರಿಕ ಹಕ್ಕುಗಳಿಗಾಗಿ ಹೋರಾಟ ನಡೆ ಸುತ್ತಿದ್ದ ಅವಧಿಯಲ್ಲಿ ಅಹಿಂಸಾತ್ಮಕ ನಾಗರಿಕ ಅವಿಧೇಯತೆಯ ಆಂದೋಲ ನವನ್ನು ಮೊದಲ ಬಾರಿಗೆ ಪ್ರಯೋಗಿಸಿದರು. ೧೯೧೫ರಲ್ಲಿ ಭಾರತಕ್ಕೆ ವಾಪಸಾದ ಬಳಿಕ, ಅತಿಯಾದ ಜಮೀನು ತೆರಿಗೆ ಮತ್ತು ತಾರತಮ್ಯಗಳಿಗೆ ಸಂಬಂಧಿಸಿದಂತೆ ರೈತರ, ಬೇಸಾಯಗಾರರ ಮತ್ತು ನಗರ ಪ್ರದೇಶದ ಕಾರ್ಮಿಕರ ಪ್ರತಿಭಟನೆಗಳನ್ನು ಅವರು ಸಂಘಟಿಸಿದರು. ೧೯೨೧ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ನಾಯಕತ್ವ ವಹಿಸಿದ ಬಳಿಕ, ಬಡತನದ ನಿವಾರಣೆ, ಮಹಿಳಾ ಹಕ್ಕುಗಳ ವಿಸ್ತರಣೆ, ಧಾರ್ಮಿಕ ಮತ್ತು ಜನಾಂಗೀಯ ಸೌಹಾರ್ದ, ಅಸ್ಪೃಶ್ಯತೆಯ ಅಂತ್ಯ ಮತ್ತು ಆರ್ಥಿಕ ಸ್ವಾವಲಂಬನೆಯನ್ನು ಹೆಚ್ಚಿಸಲು ಹಮ್ಮಿಕೊಳ್ಳಲಾದ ರಾಷ್ಟ್ರವ್ಯಾಪಿ ಚಳುವಳಿಗಳ ನೇತೃತ್ವವನ್ನು ಗಾಂಧಿಯವರು ವಹಿಸಿಕೊಂಡರು. ಇವೆಲ್ಲಕ್ಕಿಂತಲೂ ಹೆಚ್ಚಾಗಿ, ಸ್ವರಾಜ್‌ ಅಥವಾ ವಿದೇಶೀ ಹಿಡಿತದಿಂದ ಭಾರತದ ಸ್ವಾತಂತ್ರ್ಯವನ್ನು ಸಾಧಿಸುವತ್ತ ಅವರು ಗುರಿಯಿಟ್ಟರು. ಬ್ರಿಟಿಷರು ಹೇರಿದ್ದ ಉಪ್ಪಿನ ತೆರಿಗೆಯನ್ನು ವಿರೋಧಿಸಲು ಹಮ್ಮಿಕೊಂಡಿದ್ದ ಅಸಹಕಾರ ಚಳವಳಿಯಲ್ಲಿ ತಮ್ಮ ಅನುಯಾಯಿಗಳ ಮುಂದಾಳತ್ವವನ್ನು ವಹಿಸಿದ್ದ ಗಾಂಧಿಯವರು ೧೯೩೦ರಲ್ಲಿ ದಂಡಿ ಉಪ್ಪಿನ ಯಾತ್ರೆಯನ್ನು ನಡೆಸಿದರು. ಆನಂತರ ಅವರು ಬ್ರಿಟಿಷರ ವಿರುದ್ಧ ಕ್ವಿಟ್ ಇಂಡಿಯಾ ಚಳುವಳಿಯನ್ನು ನಡೆಸಿದರು. ಗಾಂಧಿಯವರು ದಕ್ಷಿಣ ಆಫ್ರಿಕಾ ಹಾಗೂ ಭಾರತದಲ್ಲಿ ಹಲವು ವರ್ಷಗಳ ಕಾಲ ಕಾರಾಗೃಹ ವಾಸದಲ್ಲಿದ್ದರು. ಅಹಿಂಸೆ ಯ ಪರಿಪಾಲಕ ರಾದ ಅವರು ಸತ್ಯವನ್ನೇ ನುಡಿಯಲು ಪ್ರಮಾಣ ಮಾಡಿ ಇತರರೂ ಹಾಗೆಯೇ ಮಾಡುವಂತೆ ಪ್ರೇರೇಪಿಸಿದರು. ಸ್ವತಂತ್ರವಾದ ಗೃಹ ಸಮುದಾಯವೊಂದರಲ್ಲಿ ನಿರಾಡಂಬರವಾದ ಜೀವನ ನಡೆಸಿದ ಗಾಂಧಿಯವರು ಚರಖಾ ದ ಮೂಲಕ ತಾವೇ ತೆಗೆದ ನೂಲಿನಿಂದ ನೇಯ್ದ ಸಾಂಪ್ರದಾಯಿಕ ಭಾರತೀಯ ಧೋತಿ ಮತ್ತು ಶಾಲನ್ನು ತೊಡುತ್ತಿದ್ದರು. ಸರಳ ಸಸ್ಯಾಹಾರವನ್ನು ಸೇವಿಸುತ್ತಿದ್ದ ಅವರು ಸ್ವಶುದ್ಧೀಕರಣ ಹಾಗೂ ಸಾಮಾಜಿಕ ಪ್ರತಿಭಟನೆಗಳೆರಡರ ಸಂಕೇತವಾಗಿ ದೀರ್ಘಾವಧಿಯ ಉಪವಾಸಗಳನ್ನು ಕೈಗೊಳ್ಳುತ್ತಿದ್ದರು. ದಕ್ಷಿಣ ಆಫ್ರಿಕಾದಲ್ಲಿ ನಾಗರಿಕ ಹಕ್ಕುಗಳ ಆಂದೋಲನ (೧೮೯೩–೧೯೧೪) ದಕ್ಷಿಣ ಆಫ್ರಿಕಾದಲ್ಲಿ, ಭಾರತೀಯರತ್ತ ತೋರಲಾಗಿದ್ದ ತಾರತಮ್ಯವನ್ನು ಗಾಂಧಿಯವರೂ ಸಹ ಎದುರಿಸಬೇಕಾಯಿತು. ಅವರು ಕ್ರಮಬದ್ಧವಾಗಿದ್ದ ಪ್ರಥಮ ದರ್ಜೆಯ ಚೀಟಿಯನ್ನು ಹೊಂದಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಪ್ರಥಮ ದರ್ಜೆಯ ಡಬ್ಬಿಯಿಂದ ಮೂರನೆಯ ದರ್ಜೆಗೆ ಸ್ಥಳಾಂತರ ಗೊಳ್ಳಲು ನಿರಾಕರಿಸಿದ್ದಕ್ಕೆ ಪೀಟರ್‌ಮೆರಿಟ್ಜ್‌ಬ ರ್ಗ್‌ನಲ್ಲಿ ಬಲವಂತವಾಗಿ ಇಳಿಸಲಾಗಿತ್ತು. ಅಲ್ಲಿಂದ ಮುಂದಕ್ಕೆ ಕುದುರೆಗಾಡಿಯಲ್ಲಿ ಪ್ರಯಾಣಿಸುತ್ತಿದ್ದಾಗ ಒಬ್ಬ ಐರೋಪ್ಯ ಪ್ರಯಾಣಿಕರಿಗೆ ಸ್ಥಳಾವಕಾಶ ನೀಡುವುದಕ್ಕೋಸ್ಕರ, ತಾವು ಮೆಟ್ಟಿಲುಗಳ ಮೇಲೆ ನಿಂತು ಪ್ರಯಾಣಿಸಲು ನಿರಾಕರಿಸಿದ್ದಕ್ಕೆ ಚಾಲಕನು ಗಾಂಧಿಯವರ ಮೇಲೆ ಹಲ್ಲೆ ನಡೆಸಿದನು. ಹಲವು ಹೊಟೇಲುಗಳಲ್ಲಿ ಪ್ರವೇಶ ನಿರಾಕರಣೆಯೂ ಸೇರಿದಂತೆ ಅವರು ಪ್ರಯಾಣದಲ್ಲಿ ಇನ್ನೂ ಅನೇಕ ಕಷ್ಟಗಳನ್ನು ಎದುರಿಸಬೇಕಾಯಿತು. ಇನ್ನೊಂದು ಘಟನೆಯಲ್ಲಿ, ಡರ್ಬನ್‌ ನ್ಯಾಯಾಲಯವೊಂದರ ದಂಡಾಧಿಕಾರಿಯೊಬ್ಬರು ತಮ್ಮ ಪೇಟವನ್ನು ತೆಗೆಯಲು ಗಾಂಧಿಯವರಿಗೆ ಆದೇಶಿಸಿದರೂ ಅವರು ನಿರಾಕರಿಸಿದರು. ಇಂತಹ ಘಟನೆಗಳು ಅವರ ಜೀವನದಲ್ಲಿ ಒಂದು ಮಹತ್ವದ ತಿರುವು ನೀಡಿ, ಸಾಮಾಜಿಕ ಅನ್ಯಾಯದ ವಿರುದ್ಧ ಅವರನ್ನು ಜಾಗ್ರತಗೊಳಿಸಿ, ಅವರ ಆ ನಂತರದ ಸಾಮಾಜಿಕ ಕ್ರಿಯಾಸಿದ್ಧಾಂತದ ಮೇಲೆ ಪ್ರಭಾವ ಬೀರಿದವು. ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರ ವಿರುದ್ಧ ವರ್ಣಭೇದ ನೀತಿ, ಪೂರ್ವಾಗ್ರಹ ಮತ್ತು ಅನ್ಯಾಯಗಳು ನಡೆಯುತ್ತಿದ್ದನ್ನು ಸ್ವತಃ ಅನುಭವಿಸುವ ಮೂಲಕ ಗಾಂಧಿಯವರು ಬ್ರಿಟಿಷ್ ಸಾಮ್ರಾಜ್ಯದಲ್ಲಿ ತಮ್ಮ ಜನರ ಸ್ಥಾನಮಾನಗಳನ್ನು ಮತ್ತು ಸಮಾಜದಲ್ಲಿ ತಮ್ಮದೇ ಸ್ಥಾನವನ್ನು ಪ್ರಶ್ನಿಸಲು ಪ್ರಾರಂಭಿಸಿದರು. ದಕ್ಷಿಣ ಆಫ್ರಿಕಾದಲ್ಲಿನ ಭಾರತೀಯರಿಗೆ ಮತದಾನದ ಹಕ್ಕನ್ನು ನಿರಾಕರಿಸುವ ಮಸೂದೆಯನ್ನು ವಿರೋಧಿಸುವ ನಿಟ್ಟಿನಲ್ಲಿ ಅಲ್ಲಿನ ಭಾರತೀಯರಿಗೆ ನೆರವಾಗಲು ಗಾಂಧಿಯವರು ಅಲ್ಲಿನ ತಮ್ಮ ಉಳಿಯುವಿಕೆಯ ಅವಧಿಯನ್ನು ವಿಸ್ತರಿಸಿದರು. ಮಸೂದೆಯ ಅಂಗೀಕಾರವನ್ನು ತಡೆಯಲು ಅವರು ವಿಫಲರಾದರೂ, ದಕ್ಷಿಣ ಆಫ್ರಿಕಾದಲ್ಲಿನ ಭಾರತೀಯರ ಕುಂದುಕೊರತೆಗಳತ್ತ ಗಮನ ಸೆಳೆಯುವಲ್ಲಿ ಅವರ ಚಳುವಳಿಯು ಯಶಸ್ವಿಯಾಯಿತು. ೧೮೯೪ರಲ್ಲಿ ನೇಟಲ್ ಇಂಡಿಯನ್ ಕಾಂಗ್ರೆಸ್‌‌ನ ಸ್ಥಾಪನೆಯಲ್ಲಿ ಸಹಾಯ ಮಾಡಿದ ಅವರು, ಈ ಸಂಘಟನೆಯ ಮೂಲಕ ದಕ್ಷಿಣ ಆಫ್ರಿಕಾದಲ್ಲಿರುವ ಭಾರತೀಯ ಸಮುದಾಯವನ್ನು ಏಕರೂಪವಾದ ರಾಜಕೀಯ ಶಕ್ತಿಯಾಗಿ ಮಾರ್ಪಾಡು ಮಾಡಿದರು. ಜನವರಿ ೧೮೯೭ರಲ್ಲಿ ಗಾಂಧಿಯವರು ಡರ್ಬನ್‌ಗೆ ಆಗಮಿಸಿದಾಗ ಬಿಳಿ ಮೂಲನಿವಾಸಿಗಳ ಗುಂಪೊಂದು ಅವರ ಮೇಲೆ ಹಲ್ಲೆ ನಡೆಸಿತು. ಆಗ ಓರ್ವ ಆರಕ್ಷಕ ಅಧೀಕ್ಷಕನ ಪತ್ನಿಯ ಯತ್ನಗಳ ಫಲವಾಗಿಯೇ ಅವರು ಪಾರಾಗಲು ಸಾಧ್ಯವಾಯಿತು. ಆದಾಗ್ಯೂ, ವ್ಯಕ್ತಿಯೊಬ್ಬನು ಮಾಡಿದ ತಪ್ಪಿಗಾಗಿ ನ್ಯಾಯಾಲಯದಲ್ಲಿ ಪರಿಹಾರವನ್ನು ಕೇಳದಿರುವುದು ತಮ್ಮ ತತ್ವಗಳಲ್ಲೊಂದು ಎಂದು ಹೇಳಿದ ಅವರು ಆ ಗುಂಪಿನ ಯಾವುದೇ ಸದಸ್ಯನ ವಿರುದ್ಧವೂ ಮೊಕದ್ದಮೆ ಹೂಡಲು ನಿರಾಕರಿಸಿದರು. ವಸಾಹತಿನಲ್ಲಿರುವ ಭಾರತೀಯ ಸಮುದಾಯದ ನೋಂದಣಿಯನ್ನು ಕಡ್ಡಾಯಗೊಳಿಸುವ ಒಂದು ಹೊಸ ಕಾಯಿದೆಯನ್ನು ಟ್ರಾನ್ಸ್‌ವಾಲ್‌ ಸರ್ಕಾರವು ೧೯೦೬ರಲ್ಲಿ ಪ್ರಕಟಿಸಿತು. ಅದೇ ವರ್ಷದ ಸೆಪ್ಟೆಂಬರ್‌ ೧೧ ರಂದು ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಒಂದು ಸಾಮೂಹಿಕ ಪ್ರತಿಭಟನಾ ಸಭೆಯಲ್ಲಿ, ಗಾಂಧಿಯವರು ಇನ್ನೂ ವಿಕಸನಗೊಳ್ಳುತ್ತಿದ್ದ ತಮ್ಮ ಸತ್ಯಾಗ್ರಹ (ಸತ್ಯಕ್ಕಾಗಿ ನಿಷ್ಠೆ), ಅಥವಾ ಅಹಿಂಸಾತ್ಮಕ ಪ್ರತಿಭಟನೆಯ ಕ್ರಮಶಾಸ್ತ್ರವನ್ನು ಮೊದಲ ಬಾರಿಗೆ ಅಳವಡಿಸಿ, ಹಿಂಸಾತ್ಮಕ ರೀತಿಯಲ್ಲಿ ಪ್ರತಿಭಟಿಸುವ ಬದಲಿಗೆ ಈ ಹೊಸ ಕಾನೂನನ್ನು ಧಿಕ್ಕರಿಸಿ ಅದಕ್ಕೆ ದೊರೆಯುವ ಶಿಕ್ಷೆಯನ್ನನುಭವಿಸಿರೆಂದು ತಮ್ಮ ಸಹ-ಭಾರತೀಯರಿಗೆ ಕರೆ ನೀಡಿದರು. ಈ ರಣನೀತಿಯನ್ನು ಅಳವಡಿಸಿಕೊಂಡ ಫಲವಾಗಿ, ಪ್ರತಿಭಟನೆ, ನೋಂದಾಯಿಸಲು ನಿರಾಕರಣೆ, ತಮ್ಮ ನೋಂದಣಿ ಪತ್ರಗಳ ದಹನ ಅಥವಾ ಇತರ ಅಹಿಂಸಾತ್ಮಕ ಪ್ರತಿರೋಧಗಳನ್ನು ಒಳಗೊಂಡ ಏಳು ವರ್ಷಗಳ ಹೋರಾಟದಲ್ಲಿ ಭಾಗವಹಿಸಿದ್ದಕ್ಕಾಗಿ ಗಾಂಧಿಯವರೂ ಸೇರಿದಂತೆ ಸಾವಿರಾರು ಭಾರತೀಯರು ಕಾರಾಗೃಹ ಸೇರಿದರು, ಹೊಡೆತಗಳನ್ನು ತಿಂದರು, ಅಥವಾ ಗುಂಡೇಟಿಗೀಡಾದರು. ಸರ್ಕಾರವು ಭಾರತೀಯ ಪ್ರತಿಭಟನಾಕಾರರನ್ನು ಸದೆಬಡಿಯುವುದರಲ್ಲಿ ಯಶಸ್ವಿಯಾದರೂ, ಭಾರತೀಯ ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ದಕ್ಷಿಣ ಆಫ್ರಿಕಾದ ಸರ್ಕಾರವು ಬಳಸಿದ ಕಟುವಾದ ಕ್ರಮಗಳ ವಿರುದ್ಧ ಭುಗಿಲೆದ್ದ ಸಾರ್ವಜನಿಕ ಪ್ರತಿಭಟನೆಯು ಅಂತಿಮವಾಗಿ ದಕ್ಷಿಣ ಆಫ್ರಿಕಾದ ಜನರಲ್ ಜೆನ್ ಕ್ರಿಶ್ಚಿಯಾನ್ ಸ್ಮಟ್ಸ್‌ ಅವರು ಗಾಂಧಿಯವರೊಂದಿಗೆ ರಾಜಿ ಮಾಡಿಕೊಳ್ಳುವಂತೆ ಒತ್ತಾಯಿಸಿತು. ಗಾಂಧಿಯವರ ಆಲೋಚನೆಗಳು ಆಕಾರ ಪಡೆದು ಸತ್ಯಾಗ್ರಹ ೧೯೦೬ರ ಜುಲು ಸಮರದಲ್ಲಿ ಪಾತ್ರ ೧೯೦೬ರಲ್ಲಿ, ಬ್ರಿಟಿಷ್ ಆಡಳಿತವು ಹೊಸ ತಲೆಗಂದಾಯವನ್ನು ಜಾರಿಗೊಳಿಸಿದ ನಂತರ, ದಕ್ಷಿಣ ಆಫ್ರಿಕಾದಲ್ಲಿನ ಜುಲು ಜನಾಂಗದವರು ಇಬ್ಬರು ಬ್ರಿಟಿಷ್ ಅಧಿಕಾರಿಗಳನ್ನು ಕೊಂದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಬ್ರಿಟಿಷರು ಜುಲುಗಳ ವಿರುದ್ಧ ಸಮರ ಸಾರಿದರು. ಭಾರತೀಯರನ್ನು ನೇಮಿಸಿಕೊಳ್ಳುವಂತೆ ಗಾಂಧಿಯವರು ಬ್ರಿಟಿಷ್ ಆಡಳಿತವನ್ನು ಸಕ್ರಿಯರಾಗಿ ಪ್ರೇರೇಪಿಸಿದರು. ಭಾರತೀಯರ ಪೂರ್ಣಪ್ರಮಾಣದ ಪೌರತ್ವದ ಬೇಡಿಕೆಯನ್ನು ಕಾನೂನು ಸಮ್ಮತವಾಗಿಸುವ ನಿಟ್ಟಿನಲ್ಲಿ ಭಾರತೀಯರು ಯುದ್ಧದ ಪ್ರಯತ್ನಗಳಿಗೆ ತಮ್ಮ ಬೆಂಬಲವನ್ನು ನೀಡಬೇಕೆಂದು ಅವರು ವಾದಿಸಿದರು. ಆದರೆ, ಬ್ರಿಟಿಷ್ ಆಡಳಿತವು ಭಾರತೀಯರನ್ನು ಸೇನಾ ಅಧಿಕಾರಿಗಳನ್ನಾಗಿ ನೇಮಿಸಿಕೊಳ್ಳಲು ನಿರಾಕರಿಸಿತು. ಆದಾಗ್ಯೂ, ಗಾಯಗೊಂಡಿರುವ ಬ್ರಿಟಿಷ್ ಸೈನಿಕರಿಗೆ ಶುಶ್ರೂಷೆ ಮಾಡುವ ಡೋಲಿವಾಹಕರಾಗಿ ಕೆಲಸ ಮಾಡುವ ಅವಕಾಶವನ್ನು ಭಾರತೀಯ ಸ್ವಯಂಸೇವಕರ ತುಕಡಿಯೊಂದಕ್ಕೆ ನೀಡಬೇಕೆಂಬ ಗಾಂಧಿಯವರ ಪ್ರಸ್ತಾವವನ್ನು ಬ್ರಿಟಿಷ್ ಆಡಳಿತವು ಪುರಸ್ಕರಿಸಿತು. ಈ ತುಕಡಿಯು ಗಾಂಧಿಯವರ ನಿಯಂತ್ರಣಲ್ಲಿತ್ತು. ೧೯೦೬ರ ಜುಲೈ ೨೧ರಂದು ಇಂಡಿಯನ್ ಒಪಿನಿಯನ್‌ ನಲ್ಲಿ ಗಾಂಧಿಯವರು ಹೀಗೆ ಬರೆದರು: "ಸ್ಥಳೀಯರ ವಿರುದ್ಧದ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸ್ಥಳೀಯ ಸರ್ಕಾರದ ಸೂಚನೆಯ ಮೇರೆಗೆ ಪ್ರಾಯೋಗಿಕವಾಗಿ ರಚಿಸಲಾಗಿದ್ದ ಈ ತುಕಡಿಯಲ್ಲಿ ಇಪ್ಪತ್ಮೂರು ಮಂದಿ ಭಾರತೀಯರಿದ್ದರು." ಇಂಡಿಯನ್ ಒಪಿನಿಯನ್‌ ನಲ್ಲಿನ ತಮ್ಮ ಅಂಕಣಗಳ ಮೂಲಕ, ಯುದ್ಧಕ್ಕೆ ಸೇರಿರೆಂದು ಗಾಂಧಿಯವರು ದಕ್ಷಿಣ ಆಫ್ರಿಕಾಲ್ಲಿರುವ ಭಾರತೀಯ ಜನಾಂಗವನ್ನು ಪ್ರೇರೇಪಿಸಿದರು: “ಮೀಸಲು ಪಡೆ ವ್ಯರ್ಥವಾಗುತ್ತಿದೆಯೆಂದು ಸರ್ಕಾರಕ್ಕೆ ಅನಿಸಿದಲ್ಲಿ ನೈಜ ಸಮರ ಪರಿಣತಿಯನ್ನು ಪಡೆಯುವುದಕ್ಕಾಗಿ ಆಳವಾದ ತರಬೇತಿಯ ಅವಕಾಶವನ್ನು ಭಾರತೀಯರಿಗೆ ಕೊಡಲು ಮೀಸಲು ಪಡೆಯನ್ನು ಸರ್ಕಾರವು ಬಳಸಬಹುದು". ಗಾಂಧಿಯವರ ಅಭಿಪ್ರಾಯದಲ್ಲಿ, ೧೯೦೬ರ ಕರಡು ಅಧಿಶಾಸನವು ಭಾರತೀಯರ ಸ್ಥಾನಮಾನವನ್ನು ಸ್ಥಳೀಯರಿಗಿಂತಲೂ ಕೀಳುಮಟ್ಟಕ್ಕೆ ಇಳಿಸಿತ್ತು. ಆದ್ದರಿಂದ,"ಕಾಫಿರ್‌ರ" ಜನಾಂಗದ ಉದಾಹರಣೆಯನ್ನು ಗಮನದಲ್ಲಿಟ್ಟುಕೊಂಡು ಸತ್ಯಾಗ್ರಹ ದ ಹಾದಿಯನ್ನು ಅನುಸರಿಸಿ ಅಧಿಶಾಸನವನ್ನು ವಿರೋಧಿಸಿರೆಂದು ಅವರು ಭಾರತೀಯರನ್ನು ಆಗ್ರಹಿಸಿದರು. ಅವರದೇ ಮಾತುಗಳಲ್ಲಿ ಹೇಳುವುದಾದರೆ, "ನಮಗಿಂತಲೂ ಹಿಂದುಳಿದಿರುವ ಬೆರಕೆ ಜನಾಂಗದವರು ಹಾಗೂ ಕಾಫಿರ್‌ ಜನಾಂಗದವರು ಸರ್ಕಾರಕ್ಕೆ ಪ್ರತಿರೋಧವನ್ನು ಒಡ್ಡಿದ್ದಾರೆ. ಅನುಮೋದನೆಗೊಂಡ ಕಾನೂನು ಅವರಿಗೂ ಸಹ ಅನ್ವಯಿಸುತ್ತದೆ, ಆದರೆ ಅವರು ಅದನ್ನು ಪುರಸ್ಕರಿಸುವುದಿಲ್ಲ." ೧೯೨೭ರಲ್ಲಿ ಗಾಂಧಿಯವರು ಈ ಘಟನೆಯ ಬಗ್ಗೆ ಹೀಗೆ ಬರೆದರು: "(ಜುಲು) 'ದಂಗೆ'ಯಷ್ಟು ಸ್ಪಷ್ಟವಾಗಿ ಬೋಯೆರ್ ಯುದ್ಧವು ನನಗೆ ಯುದ್ಧದ ಭೀತಿಯನ್ನೇನೂ ಹೊತ್ತು ತರಲಿಲ್ಲ. ಇದು ಯುದ್ಧವೇ ಆಗಿರಲಿಲ್ಲ, ಬದಲಿಗೆ ಇದೊಂದು ಮಾನವ ಬೇಟೆಯೇ ಆಗಿತ್ತು. ಇದು ನನ್ನೊಬ್ಬನ ಅಭಿಪ್ರಾಯ ಮಾತ್ರವಲ್ಲ, ನನ್ನೊಂದಿಗೆ ಸಂವಾದ ಮಾಡಿದ ಅನೇಕ ಇಂಗ್ಲಿಷರ ಅಭಿಪ್ರಾಯ ಕೂಡಾ." ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (೧೯೧೬–೧೯೪೫) ಗಾಂಧಿಯವರು ಭಾರತದಲ್ಲಿ ವಾಸಿಸಲು ೧೯೧೫ರಲ್ಲಿ ದಕ್ಷಿಣ ಆಫ್ರಿಕಾದಿಂದ ವಾಪಸಾದರು. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸಭೆಗಳಲ್ಲಿ ಮಾತನಾಡಿದರು, ಆದರೆ ಆ ಸಮಯದಲ್ಲಿ ಕಾಂಗ್ರೆಸ್‌ ಪಕ್ಷದ ಗೌರವಾನ್ವಿತ ನಾಯಕರಾದ ಗೋಪಾಲಕೃಷ್ಣ ಗೋಖಲೆಯವರಿಂದ ಗಾಂಧಿಯವರಿಗೆ ಭಾರತೀಯ ಸಮಸ್ಯೆಗಳು, ರಾಜಕೀಯ ಮತ್ತು ಭಾರತೀಯ ಜನತೆಯ ಕುರಿತಾದ ಪ್ರಾಥಮಿಕ ಪರಿಚಯವಾಯಿತು. ಚಂಪಾರಣ್ ಮತ್ತು ಖೇಡಾ ಗಾಂಧಿಯವರ ಮೊದಲ ಪ್ರಮುಖ ಸಾಧನೆಗಳು ೧೯೧೮ರಲ್ಲಿ ಚಂಪಾರಣ್‌‌ ಚಳವಳಿ ಮತ್ತು ಖೇಡಾ ಸತ್ಯಾಗ್ರಹ ದೊಂದಿಗೆ ಪ್ರಾರಂಭವಾದವು. ಆದರೂ, ಅವರ ಬದುಕಿಗೆ ಅಗತ್ಯವಾದ ಆಹಾರ ಬೆಳೆಗಳ ಬದಲಿಗೆ ಇಂಡಿಗೋ ಮತ್ತು ಇತರ ವಾಣಿಜ್ಯ ಬೆಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳು ಖೇಡಾ ಸತ್ಯಾಗ್ರಹದಲ್ಲಿ ಸೇರಿದ್ದವು. ಜಮೀನುದಾರರ (ಬಹುತೇಕವಾಗಿ ಬ್ರಿಟಿಷರ) ಖಾಸಗಿ ಸೇನೆಯಿಂದ ನಿಗ್ರಹಿಸಲ್ಪಡುತ್ತಿದ್ದ ಅವರಿಗೆ ಬಹಳ ಕಡಿಮೆ ಪರಿಹಾರ ಧನವನ್ನು ನೀಡಲಾಗುತ್ತಿತ್ತು. ಹೀಗಾಗಿ ಅವರು ತೀವ್ರ ಬಡತನದಲ್ಲಿ ಸಿಲುಕಿದ್ದರು. ಹಳ್ಳಿಗಳು ಅತ್ಯಂತ ಕೊಳಕು ಮತ್ತು ಅನೈರ್ಮಲ್ಯದ ಸ್ಥಿತಿಯಲ್ಲಿದ್ದವು; ಮತ್ತು ಕುಡಿತ, ಅಸ್ಪೃಶ್ಯತೆ ಹಾಗೂ ಬುರ್ಖಾ ಪದ್ಧತಿಗಳು ಅತಿರೇಕವಾಗಿದ್ದವು. ಇಂಥಾ ವಿನಾಶಕಾರಿ ಕ್ಷಾಮದ ಹಿಂಸೆಯ ಸನ್ನಿವೇಶ ದಲ್ಲಿಯೂ ಬ್ರಿಟಿಷ್ ಆಡಳಿತವು ತೆರಿಗೆಯೊಂದನ್ನು ವಿಧಿಸಿದ್ದೇ ಅಲ್ಲದೇ ಅದನ್ನು ಹೆಚ್ಚಿಸುತ್ತಲೇ ಹೋಯಿತು. ಪರಿಸ್ಥಿತಿಯು ಹತಾಶೆಯಿಂದ ಕೂಡಿತ್ತು. ಗುಜರಾತ್‌ನ ಖೇಡಾದಲ್ಲಿಯೂ ಸಹ ಇದೇ ಸಮಸ್ಯೆಯಿತ್ತು. ಆ ಪ್ರಾಂತ್ಯದಿಂದ ತಮ್ಮ ನುರಿತ ಬೆಂಬಲಿಗರು ಹಾಗೂ ಹೊಸ ಸ್ವಯಂಸೇವಕರ ಪಡೆಯನ್ನು ಸಂಘಟಿಸಿದ ಗಾಂಧಿಯವರು ಅಲ್ಲಿ ಒಂದು ಆಶ್ರಮವನ್ನು ಸ್ಥಾಪಿಸಿದರು. ಹದಗೆಟ್ಟ ಬದುಕಿನ ಸಾರ್ವತ್ರಿಕ ಪರಿಸ್ಥಿತಿಯೂ ಸೇರಿದಂತೆ ಸಂಕಟ ಸನ್ನಿವೇಶದ ಘೋರ ಮತ್ತು ಭಯಾನಕ ಅಧ್ಯಾಯಗಳನ್ನು ಗಮನದಲ್ಲಿರಿಸಿಕೊಂಡು ಹಳ್ಳಿಗಳ ವಿಸ್ತೃತ ಅಧ್ಯಯನ ಮತ್ತು ಸಮೀಕ್ಷೆಯನ್ನು ಅವರು ನಡೆಸಿದರು. ಹಳ್ಳಿಗರ ಆತ್ಮವಿಶ್ವಾಸದ ಬುನಾದಿಯ ಮೇಲೆ ಹಳ್ಳಿಗಳ ಶುದ್ಧೀಕರಣ, ಶಾಲೆಗಳು ಹಾಗೂ ಆಸ್ಪತ್ರೆಗಳ ನಿರ್ಮಾಣದ ನೇತೃತ್ವವನ್ನು ವಹಿಸಲು ಮುಂದಾದ ಅವರು, ಮೇಲೆ ತಿಳಿಸಲಾದ ಅನೇಕ ಸಾಮಾಜಿಕ ಪಿಡುಗುಗಳನ್ನು ಮಾಡದಂತಿರುವ ಹಾಗೂ ಖಂಡಿಸುವ ನಿಟ್ಟಿನಲ್ಲಿ ಹಳ್ಳಿಗರಲ್ಲಿ ನಾಯಕತ್ವದ ಗುಣವನ್ನು ಬೆಳೆಸುವೆಡೆಗೆ ಪ್ರೋತ್ಸಾಹಿಸಿದರು. ಆದರೆ, ಕ್ಷೋಭೆಯನ್ನು ಸೃಷ್ಟಿಸಿದ ಆಪಾದನೆಯ ಮೇರೆಗೆ ಪೊಲೀಸರಿಂದ ಅವರು ಬಂಧನಕ್ಕೊಳಗಾಗಿ ಆ ಪ್ರಾಂತ್ಯದಿಂದ ಹೊರಹೋಗುವಂತೆ ಆದೇಶಿಸಲ್ಪಟ್ಟಾಗಲೇ ಅವರ ವ್ಯಕ್ತಿತ್ವದ ಪ್ರಮುಖ ಪ್ರಭಾವ ಹೊರಬಿದ್ದಿತು. *ನೂರಾರು, ಸಾವಿರಾರು ಜನರು ಕಾರಾಗೃಹ, ಪೊಲೀಸ್ ಠಾಣೆ ಮತ್ತು ನ್ಯಾಯಾಲಯಗಳ ಹೊರಗೆ ಜಮಾವಣೆಗೊಂಡು ಪ್ರತಿಭಟನೆ ನಡೆಸಿ, ಅವರ ಬಿಡುಗಡೆಯಾಗಬೇಕೆಂದು ಒತ್ತಾಯಿಸಿದರು. ನ್ಯಾಯಾಲಯವು ಒಲ್ಲದ ಮನಸ್ಸಿನೊಂದಿಗೆ ಗಾಂಧಿಯವರನ್ನು ಬಿಡುಗಡೆ ಮಾಡಿತು. ಜಮೀನುದಾರರ ವಿರುದ್ಧ ಗಾಂಧಿಯವರು ಸುಸಂಘಟಿತ ಪ್ರತಿಭಟನೆಗಳನ್ನು ನಡೆಸಿದ ಫಲವಾಗಿ, ಬ್ರಿಟಿಷ್ ಸರ್ಕಾರದ ಮಾರ್ಗದರ್ಶನದೊಂದಿಗೆ ಜಮೀನುದಾರರು ಒಂದು ಕರಾರಿಗೆ ಸಹಿ ಹಾಕಿದರು. ಇದರನ್ವಯ ಆ ವಲಯದ ಬಡ ರೈತರಿಗೆ ಹೆಚ್ಚಿನ ಪರಿಹಾರ ಧನ ಮತ್ತು ಬೇಸಾಯದ ಮೇಲಣ ನಿಯಂತ್ರಣ ನೀಡಿ, ಕ್ಷಾಮದ ಅಂತ್ಯದವರೆಗೂ ಕಂದಾಯಗಳ ಹೆಚ್ಚಳ ಮತ್ತು ಅವುಗಳ ವಸೂಲಿಯನ್ನು ರದ್ದುಗೊಳಿಸಲಾಯಿತು. ಈ ಚಳುವಳಿ ನಡೆಯುತ್ತಿದ್ದ ವೇಳೆ, ಜನರು ಗಾಂಧಿಯವರನ್ನು ಬಾಪು (ಅಪ್ಪ) ಮತ್ತು ಮಹಾತ್ಮ (ಮಹಾನ್ ಆತ್ಮ) ಎಂದು ಕರೆದರು. ಖೇಡಾದಲ್ಲಿ ಬ್ರಿಟಿಷ್‌ ಆಡಳಿತದೊಂದಿಗಿನ ಮಾತುಕತೆಯಲ್ಲಿ ಸರ್ದಾರ್ ಪಟೇಲ್‌ ಅವರು ರೈತರನ್ನು ಪ್ರತಿನಿಧಿಸಿದರು. ಬ್ರಿಟಿಷ್ ಆಡಳಿತವು ಕಂದಾಯ ವಸೂಲಿಯನ್ನು ರದ್ದುಗೊಳಿಸಿ ಎಲ್ಲಾ ಖೈದಿಗಳನ್ನು ಬಿಡುಗಡೆಗೊಳಿಸಿತು. ಇದರ ಫಲವಾಗಿ, ಗಾಂಧಿಯವರ ಪ್ರಭಾವ ರಾಷ್ಟ್ರದೆಲ್ಲೆಡೆ ಹಬ್ಬಿತು. ಅಸಹಕಾರ ಅಂದೋಲನ ಬ್ರಿಟಿಷ್‌ರ ವಿರುದ್ಧದ ಹೋರಾಟದಲ್ಲಿ ಗಾಂಧಿಯವರು ಅಸಹಕಾರ, ಅಹಿಂಸೆ ಮತ್ತು ಶಾಂತಿಯುತ ಪ್ರತಿರೋಧವನ್ನು ತಮ್ಮ ಶಸ್ತ್ರಗಳನ್ನಾಗಿ ಬಳಸಿದರು. ಪಂಜಾಬ್‌ನಲ್ಲಿ, ಬ್ರಿಟಿಷ್ ಪಡೆಗಳು ಮಾಡಿದ ನಾಗರಿಕರ ಜಲಿಯನ್‌ವಾಲಾ ಬಾಗ್‌ ಹತ್ಯಾಕಾಂಡವು (ಇದಕ್ಕೆ ಅಮೃತಸರ ಹತ್ಯಾಕಾಂಡ ಎಂದೂ ಹೆಸರಿದೆ) ರಾಷ್ಟ್ರಕ್ಕೆ ತೀವ್ರವಾದ ಪೆಟ್ಟು ನೀಡಿತು. ಇದರಿಂದಾಗಿ ಸಾರ್ವಜನಿಕ ಸಿಟ್ಟು ಮತ್ತು ಹಿಂಸಾಚಾರದ ಘಟನೆಗಳು ಹೆಚ್ಚಾದವು. ಗಾಂಧಿಯವರು ಬ್ರಿಟಿಷ್‌ ಆಡಳಿತದ ಕೃತ್ಯ ಹಾಗೂ ಭಾರತೀಯರ ಸೇಡಿನ ಹಿಂಸಾಚಾರಗಳೆರಡನ್ನೂ ಖಂಡಿಸಿದರು. ಗಾಂಧಿಯವರು ಹಿಂಸಾಚಾರದ ಘಟನೆಯನ್ನು ಖಂಡಿಸಿ, ಹಲ್ಲೆಗೀಡಾದ ಬ್ರಿಟಿಷ್ ನಾಗರಿಕರಿಗೆ ಸಂತಾಪ ಸೂಚಿಸುವ ನಿರ್ಣಯವನ್ನು ಬರೆದಿದ್ದರು. ಮೊದಲು ಇದಕ್ಕೆ ಪಕ್ಷದಲ್ಲಿ ವಿರೋಧ ವ್ಯಕ್ತವಾದರೂ, ತಮ್ಮ ತತ್ವಗಳ ಪ್ರಕಾರ ಎಲ್ಲಾ ರೀತಿಯ ಹಿಂಸಾಚಾರವೂ ಕೆಟ್ಟದು ಮತ್ತು ಎಂದಿಗೂ ಸಮರ್ಥಿಸಿಕೊಳ್ಳಲಾಗದು ಎಂದು ಗಾಂಧಿಯವರು ಭಾವುಕವಾಗಿ ಭಾಷಣ ಮಾಡಿದಾಗ ಈ ನಿರ್ಣಯವನ್ನು ಅಂಗೀಕರಿಸಲಾಯಿತು. ಆದರೆ ಹತ್ಯಾಕಾಂಡ ಮತ್ತು ಸೇಡಿನ ಹಿಂಸಾಚಾರದ ನಂತರವಷ್ಟೇ ಸಂಪೂರ್ಣ ಸ್ವ-ಸರ್ಕಾರ ಮತ್ತು ಭಾರತ ಸರ್ಕಾರದ ಎಲ್ಲಾ ಸಂಸ್ಥಾನಗಳ ನಿಯಂತ್ರಣ ಪಡೆಯುವತ್ತ, ಕ್ರಮೇಣ ಸ್ವರಾಜ್‌ ಅಥವಾ ಸಂಪೂರ್ಣ ಸ್ವತಂತ್ರ, ಅಧ್ಯಾತ್ಮಿಕ ಮತ್ತು ರಾಜಕೀಯ ಸ್ವಾತಂತ್ರ್ಯವಾಗಿ ಪರಿಪೂರ್ಣವಾಗಿಸುವತ್ತ ಗಾಂಧಿಯವರ ಮನವು ಕೇಂದ್ರೀಕೃತಗೊಂಡಿತು. ೧೯೨೧ ಡಿಸೆಂಬರ ತಿಂಗಳಲ್ಲಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪರವಾಗಿ ಕಾರ್ಯಕಾರೀ ಅಧಿಕಾರವನ್ನು ಗಾಂಧಿಯವರಿಗೆ ನೀಡಲಾಯಿತು. ಅವರ ನಾಯಕತ್ವದಲ್ಲಿ, ಸ್ವರಾಜ್‌ ಎಂಬ ಗುರಿಯಿಟ್ಟುಕೊಂಡ ಕಾಂಗ್ರೆಸ್‌ ಹೊಸ ಸಂವಿಧಾನ ದೊಂದಿಗೆ ಪುನಸ್ಸಂಘಟಿತವಾಯಿತು. ಸಾಂಕೇತಿಕ ಶುಲ್ಕ ಪಾವತಿ ಮಾಡಲು ಸಿದ್ಧವಿದ್ದ ಯಾರಿಗಾದರೂ ಪಕ್ಷದ ಸದಸ್ಯತ್ವ ಲಭ್ಯವಿತ್ತು. ಶಿಸ್ತಿನಲ್ಲಿ ಸುಧಾರಣೆ ತರಲು ಸಮಿತಿಗಳ ಶ್ರೇಣಿ ವ್ಯವಸ್ಥೆಯನ್ನು ಸ್ಥಾಪಿಸಿದ್ದರಿಂದಾಗಿ, ಒಂದು ಉತ್ಕೃಷ್ಟ ಸಂಘಟನೆಯಂತಿದ್ದ ಪಕ್ಷವು ಇಡೀ ರಾಷ್ಟ್ರದಲ್ಲೇ ಜನಪ್ರಿಯತೆ ಗಳಿಸುವ ಪಕ್ಷವಾಗಿ ಮಾರ್ಪಾಡಾಯಿತು. ವಿದೇಶೀ ಉತ್ಪಾದನೆಗಳು, ಅದರಲ್ಲೂ ವಿಶೇಷವಾಗಿ ಬ್ರಿಟಿಷ್ ಉತ್ಪಾದನೆಗಳನ್ನು ಬಹಿಷ್ಕರಿಸುವಂತಹ "ಸ್ವದೇಶಿ" ನೀತಿಯನ್ನು ತೊಡಗಿಸಲು ಗಾಂಧಿಯವರು ತಮ್ಮ ಅಹಿಂಸಾ ತತ್ವದ ವೇದಿಕೆಯನ್ನು ವಿಸ್ತರಿಸಿದರು. ಇದಕ್ಕೆ ಸಂಬಂಧಿಸಿದಂತೆ, ಎಲ್ಲಾ ಭಾರತೀಯರು, ಬ್ರಿಟಿಷ್-ಉತ್ಪಾದಿತ ಜವಳಿಗಳ ಬದಲಿಗೆ ಮನೆಯಲ್ಲಿ ನೂತ ಖಾದಿ ಉಡುಪನ್ನೇ ಧರಿಸಬೇಕೆಂದು ಸಮರ್ಥಿಸಿದರು. ಸ್ವಾತಂತ್ರ್ಯ ಆಂದೋಲನಕ್ಕೆ ಬೆಂಬಲವನ್ನು ಸೂಚಿಸಲು, ಎಲ್ಲಾ ಭಾರತೀಯ ಪುರುಷರು-ಸ್ತ್ರೀಯರು, ಅವರು ಶ್ರೀಮಂತರೇ ಆಗಿರಲಿ ಅಥವಾ ಬಡವರೇ ಆಗಿರಲಿ, ಪ್ರತಿದಿನವೂ ಸ್ವಲ್ಪ ಸಮಯ ಖಾದಿ ಯನ್ನು ನೂಲಲು ಗಾಂಧಿಯವರು ಪ್ರೇರೇಪಿಸಿದರು. 'ಇಂತಹ ಚಟುವಟಿಕೆಗಳು ಮಹಿಳೆಯರಿಗಾಗಿ ಗೌರವಾರ್ಹ ಚಟುವಟಿಕೆಗಳಲ್ಲ' ಎಂದು ಹೆಚ್ಚಿನವರು ತಿಳಿದುಕೊಂಡಿದ್ದ ಸಮಯದಲ್ಲಿ ಈ ಆಂದೋಲನದಲ್ಲಿ ಮಹಿಳೆಯರನ್ನೂ ಸೇರ್ಪಡೆಗೊಳಿಸಲು ಹಾಗೂ ಒಲ್ಲದವರು ಮತ್ತು ಮಹತ್ವಾಕಾಂಕ್ಷಿಗಳನ್ನು ನಿರ್ಮಲಗೊಳಿಸಲು ಇದು ಒಂದು ರಣನೀತಿ ಯಾಗಿತ್ತು. ಬ್ರಿಟಿಷ್ ಉತ್ಪಾದನೆಗಳನ್ನು ಬಹಿಷ್ಕರಿಸುವುದರೊಂದಿಗೆ, ಬ್ರಿಟಿಷ್ ವಿದ್ಯಾ ಸಂಸ್ಥೆಗಳನ್ನು ಮತ್ತು ನ್ಯಾಯಾಲಯಗಳನ್ನು ಬಹಿಷ್ಕರಿಸಿ, ಸರ್ಕಾರೀ ನೌಕರಿಗಳಿಗೆ ರಾಜೀನಾಮೆ ನೀಡಿ ಮತ್ತು ಬ್ರಿಟಿಷ್ ಬಿರುದುಗಳು ಹಾಗೂ ಗೌರವಗಳನ್ನು ತ್ಯಜಿಸಿ ರೆಂದು ಗಾಂಧಿಯವರು ಜನರನ್ನು ಆಗ್ರಹಪಡಿಸಿದರು. ಭಾರತೀಯ ಸಮುದಾಯದ ಎಲ್ಲಾ ಸ್ತರಗಳ ಉತ್ಸಾಹ ಹಾಗೂ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಿದ "ಅಸಹಕಾರ ಆಂದೋಲನ"ವು ವ್ಯಾಪಕ ಜನಪ್ರಿಯತೆ ಮತ್ತು ಯಶಸ್ಸನ್ನು ಗಳಿಸಿತು. ಆದಾಗ್ಯೂ, ಆಂದೋಲನವು ತನ್ನ ಉತ್ತುಂಗವನ್ನು ತಲುಪುವಷ್ಟರಲ್ಲಿಯೇ, ಉತ್ತರ ಪ್ರದೇಶದ ಚೌರಿ ಚೌರಾ ಪಟ್ಟಣದಲ್ಲಿ ೧೯೨೨ರ ಫೆಬ್ರುವರಿ ತಿಂಗಳಲ್ಲಿ ನಡೆದ ಒಂದು ಹಿಂಸಾತ್ಮಕ ಘರ್ಷಣೆಯ ಕಾರಣವಾಗಿ ಅದು ಹಠಾತ್ತಾಗಿ ಕೊನೆಗೊಂಡಿತು. ಆಂದೋಲನವು ಹಿಂಸಾಚಾರದತ್ತ ತಿರುವು ಪಡೆದುಕೊಳ್ಳಲಿದೆಯೆಂದು ಆತಂಕಗೊಂಡು ಹಾಗೂ ಇದು ತಮ್ಮ ಕಾರ್ಯವನ್ನೆಲ್ಲಾ ವ್ಯರ್ಥಗೊಳಿಸಬಹುದೆಂದು ಮನಗಂಡ ಗಾಂಧಿಯವರು, ಸಾಮೂಹಿಕ ನಾಗರಿಕ ಅವಿಧೇಯತಾ ಆಂದೋಲನವನ್ನು ಹಿಂದೆಗೆದುಕೊಂಡರು. ೧೯೨೨ರ ಮಾರ್ಚ್ ೧೦ರಂದು ಗಾಂಧಿಯವರನ್ನು ಬಂಧಿಸಿ, ಶಾಂತಿಭಂಗ ಮಾಡಿದರೆಂಬ ಆಪಾದನೆಯನ್ನು ಅವರ ಮೇಲೆ ಹೊರಿಸಿ, ಆರು ವರ್ಷದ ಕಾರಾಗೃಹ ಸಜೆ ವಿಧಿಸಲಾಯಿತು. ಅವರು ೧೯೨೨ರ ಮಾರ್ಚ್ ೧೮ರಂದು ತಮ್ಮ ಸಜೆಯನ್ನು ಆರಂಭಗೊಳಿಸಿದರು. ಸಜೆಯಲ್ಲಿ ಕೇವಲ ಎರಡು ವರ್ಷಗಳನ್ನು ಪೂರೈಸಿದ್ದಾಗ ಕರುಳುವಾಳ ರೋಗದ ಒಂದು ಶಸ್ತ್ರಚಿಕಿತ್ಸೆಗಾಗಿ ೧೯೨೪ರ ಫೆಬ್ರವರಿ ತಿಂಗಳಲ್ಲಿ ಅವರನ್ನು ಬಿಡುಗಡೆಗೊಳಿಸಲಾಯಿತು. ಗಾಂಧಿಯವರ ಒಗ್ಗೂಡಿಸುವಂತಹ ವ್ಯಕ್ತಿತ್ವದ ಅನುಪಸ್ಥಿತಿಯಲ್ಲಿ, ಅವರ ಕಾರಾಗೃಹವಾಸದ ವರ್ಷಗಳ ಅವಧಿಯಲ್ಲಿ ಸೀಳಲು ಪ್ರಾರಂಭಿಸಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಎರಡು ಬಣಗಳಾಗಿ ಒಡೆಯಿತು. ಒಂದೆಡೆ ಚಿತ್ತರಂಜನ್‌ ದಾಸ್‌ ಮತ್ತು ಮೋತಿಲಾಲ್‌ ನೆಹರೂ ನೇತೃತ್ವದ ಬಣವು ಶಾಸನ ಸಭೆಯಲ್ಲಿ ಭಾಗವಹಿಸುವ ಒಲವನ್ನು ತೋರಿದರೆ; ಇನ್ನೊಂದೆಡೆ ಚಕ್ರವರ್ತಿ ರಾಜಗೋಪಾಲಾಚಾರಿ ಮತ್ತು ಸರ್ದಾರ್‌ ವಲ್ಲಭ್‌ಭಾಯಿ ಪಟೇಲ್‌ ನೇತೃತ್ವದ ಇನ್ನೊಂದು ಬಣವು ಈ ಪ್ರಸ್ತಾಪವನ್ನು ವಿರೋಧಿಸಿತು. ಇದಕ್ಕಿಂತಲೂ ಹೆಚ್ಚಾಗಿ, ಅಹಿಂಸಾ ಆಂದೋಲನದ ಉತ್ತುಂಗದಲ್ಲಿ ಸದೃಢವಾಗಿದ್ದ ಹಿಂದೂ-ಮುಸ್ಲಿಮ್‌ರ ನಡುವಿನ ಸಹಕಾರ ಭಾವವು ಮುರಿದು ಬೀಳುತ್ತಿತ್ತು. ೧೯೨೪ರ ಶರತ್ಕಾಲದಲ್ಲಿ ಕೈಗೊಂಡ ಮೂರು ವಾರಗಳ ಉಪವಾಸವೂ ಸೇರಿದಂತೆ, ಹಲವಾರು ರೀತಿಯಲ್ಲಿ ಈ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಗಾಂಧಿಯವರು ಯತ್ನಿಸಿದರು, ಆದರೂ ಇದರ ಯಶಸ್ಸು ಸೀಮಿತ ಮಟ್ಟದ್ದಾಗಿತ್ತು. ಸ್ವರಾಜ್ ಮತ್ತು ಉಪ್ಪಿನ ಸತ್ಯಾಗ್ರಹ (ಉಪ್ಪಿನ ದಂಡಯಾತ್ರೆ) ೧೯೨೦ರ ದಶಕದ ಬಹುಪಾಲು ಗಾಂಧಿಯವರು ಸಕ್ರಿಯ ರಾಜಕಾರಣದಿಂದ ಮತ್ತು ಲೋಕಪ್ರಸಿದ್ಧಿಯಿಂದ ದೂರ ಉಳಿದು, ಸ್ವರಾಜ್‌ ಪಕ್ಷ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಡುವಿನ ಒಡಕನ್ನು ಸರಿಪಡಿಸಲು ಹಾಗೂ ಅಸ್ಪೃಶ್ಯತೆ, ಮದ್ಯಪಾನ, ಅಜ್ಞಾನ ಮತ್ತು ಬಡತನದ ವಿರುದ್ಧದ ಅಭಿಯಾನವನ್ನು ಮುಂದುವರೆಸಲು ಇಚ್ಛಿಸಿದರು. ಅವರು ೧೯೨೮ರಲ್ಲಿ ಮುಂಚೂಣಿಗೆ ಮರಳಿ ಬಂದರು. ಇದರ ಹಿಂದಿನ ವರ್ಷ, ಬ್ರಿಟಿಷ್ ಸರ್ಕಾರವು ಸರ್ ಜಾನ್‌ ಸೈಮನ್‌ ನೇತೃತ್ವದ ಒಂದು ಹೊಸ ಸಾಂವಿಧಾನಿಕ ಸುಧಾರಣಾ ಆಯೋಗವನ್ನು ನೇಮಿಸಿತ್ತು. ಆದರೆ ಇದರಲ್ಲಿ ಒಬ್ಬ ಭಾರತೀಯ ಸದಸ್ಯನೂ ಇರಲಿಲ್ಲ. ಇದರ ಪರಿಣಾಮವಾಗಿ ಭಾರತೀಯ ರಾಜಕೀಯ ಪಕ್ಷಗಳು ಆಯೋಗವನ್ನು ಬಹಿಷ್ಕರಿಸಿದವು. ೧೯೨೮ರ ಡಿಸೆಂಬರ್ ತಿಂಗಳಲ್ಲಿ ನಡೆದ ಕೋಲ್ಕತ್ತಾ ಸಭೆಯಲ್ಲಿ, 'ಬ್ರಿಟಿಷ್ ಸರ್ಕಾರವು ಭಾರತಕ್ಕೆ ಪರಮಾಧಿಕಾರವನ್ನು ನೀಡಲಿ, ಅಥವಾ, ದೇಶದ ಸಂಪೂರ್ಣ ಸ್ವಾತಂತ್ರ್ಯವನ್ನು ಗುರಿಯಾಗಿಟ್ಟು ಕೊಂಡಿರುವ ಅಸಹಕಾರದ ಹೊಸ ಆಂದೋಲನವನ್ನು ಎದುರಿಸಲಿ' ಎಂಬ ನಿರ್ಣಯವನ್ನು ಗಾಂಧಿಯವರು ಮಂಡಿಸಿದರು. ತತ್‌ಕ್ಷಣದ ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸಿದ ಯುವ ನಾಯಕರಾದ ಸುಭಾಷ್ ಚಂದ್ರ ಬೋಸ್‌ ಮತ್ತು ಜವಾಹರ್‌ ಲಾಲ್‌ ನೆಹರೂ ಅವರ ಅಭಿಪ್ರಾಯದ ಬಲಾಬಲವನ್ನು ನಿರ್ಣಯಿಸಿದ ರಲ್ಲದೆ, ಸ್ವಾತಂತ್ರ್ಯಕ್ಕಾಗಿ ತಮ್ಮದೇ ಆದ ಕರೆಗಾಗಿ ಎರಡು ವರ್ಷಗಳ ನಿರೀಕ್ಷೆಯನ್ನು ಒಂದು ವರ್ಷಕ್ಕೆ ಮೊಟಕುಗೊಳಿಸಿದರು. ಬ್ರಿಟಿಷ್‌ರು ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ೧೯೨೯ರ ಡಿಸೆಂಬರ ೩೧ರಂದು, ಲಾಹೋರಿನಲ್ಲಿ ಭಾರತದ ಧ್ವಜವನ್ನು ಹಾರಿಸಲಾಯಿತು. ಲಾಹೋರಿನಲ್ಲಿ ಸಭೆ ಸೇರಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌, ೧೯೩೦ರ ಜನವರಿ ೨೬ರಂದು, ಭಾರತದ ಸ್ವಾತಂತ್ರ್ಯ ದಿನವನ್ನು ಆಚರಿಸಿತು. ಇತರ ಪ್ರತಿಯೊಂದು ಭಾರತೀಯ ಸಂಘಟನೆಯೂ ಈ ದಿನವನ್ನು ಆಚರಿಸಿತು. ೧೯೩೦ರ ಮಾರ್ಚ್‌ ತಿಂಗಳಲ್ಲಿ, ಬ್ರಿಟಿಷ್ ಸರ್ಕಾರವು ವಿಧಿಸಿದ ಉಪ್ಪು ತೆರಿಗೆಯನ್ನು ವಿರೋಧಿಸಿ ಹೊಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ತಾವೇ ಉಪ್ಪನ್ನು ತಯಾರಿಸುವ ಉದ್ದೇಶದಿಂದ, ಮಾರ್ಚ್‌ ೧೨ರಂದು ಅಹ್ಮದಾಬಾದ್‌ನಿಂದ ಪಾದಯಾತ್ರೆ ಆರಂಭಿಸಿ ೪೦೦ ಕಿಲೋಮೀಟರ್‌ (೨೪೮ ಮೈಲ್‌ಗಳು)ಗಳಷ್ಟು ದೂರ ನಡೆದು, ಏಪ್ರಿಲ್‌ ೬ರಂದು ದಂಡಿ ತಲುಪಿದ್ದು, ಇದರ ಪ್ರಮುಖಾಂಶವಾಗಿತ್ತು. ಸಮುದ್ರದತ್ತ ಸಾಗಿದ ಈ ದಂಡಯಾತ್ರೆಯಲ್ಲಿ ಸಾವಿರಾರು ಭಾರತೀಯರು ಗಾಂಧಿಯವರ ಜತೆಗೂಡಿದರು. ಭಾರತದ ಮೇಲಿನ ಬ್ರಿಟಿಷ್‌ರ ಹಿಡಿತವನ್ನು ಬುಡಮೇಲುಗೊಳಿಸುವಲ್ಲಿನ ಗಾಂಧಿಯವರ ಈ ಆಂದೋಲನವು ಯಶಸ್ವೀ ಆಂದೋಲನಗಳಲ್ಲಿ ಒಂದಾಗಿದ್ದು, ೬೦,೦೦೦ಕ್ಕೂ ಹೆಚ್ಚು ಜನರನ್ನು ಬಂಧಿಸುವುದರ ಮೂಲಕ ಬ್ರಿಟಿಷ್ ಸರ್ಕಾರವು ಇದಕ್ಕೆ ಪ್ರತಿಕ್ರಿಯೆ ನೀಡಿತು. ಲಾರ್ಡ್ ಎಡ್ವರ್ಡ್‌ ಇರ್ವಿನ್‌ರ ಪ್ರಾತಿನಿಧ್ಯದೊಂದಿಗೆ ಬ್ರಿಟಿಷ್‌ ಸರ್ಕಾರವು ಗಾಂಧಿಯವರೊಂದಿಗೆ ಮಾತುಕತೆ ನಡೆಸಲು ನಿರ್ಧರಿಸಿತು. ೧೯೩೧ರ ಮಾರ್ಚ್‌ ತಿಂಗಳಲ್ಲಿ ಗಾಂಧಿ-ಇರ್ವಿನ್‌ ಒಪ್ಪಂದ ಕ್ಕೆ ಸಹಿ ಹಾಕಲಾಯಿತು. ನಾಗರಿಕ ಅಸಹಕಾರ ಆಂದೋಲನವನ್ನು ರದ್ದುಗೊಳಿಸಿದ್ದಕ್ಕೆ ಪ್ರತಿಯಾಗಿ ಬ್ರಿಟಿಷ್ ಸರ್ಕಾರವು ಎಲ್ಲಾ ರಾಜಕೀಯ ಬಂಧಿತರನ್ನು ಬಿಡುಗಡೆಗೊಳಿಸಲು ಒಪ್ಪಿಕೊಂಡಿತು. ಈ ಒಪ್ಪಂದದ ಫಲವಾಗಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಏಕೈಕ ಪ್ರತಿನಿಧಿಯಾಗಿ ಗಾಂಧಿಯವರನ್ನು ಲಂಡನ್‌ನಲ್ಲಿನ ದುಂಡುಮೇಜಿನ ಸಮ್ಮೇಳನಕ್ಕೆ ಹಾಜರಾಗಲು ಆಮಂತ್ರಿಸಲಾಯಿತು. ಈ ಸಮ್ಮೇಳನವು ಅಧಿಕಾರವನ್ನು ಹಸ್ತಾಂತರಗೊಳಿಸುವ ಬದಲಿಗೆ ಭಾರತದ ರಾಜಕುಮಾರರ ಮತ್ತು ಭಾರತದಲ್ಲಿನ ಅಲ್ಪಸಂಖ್ಯಾತರ ಮೇಲೆ ಕೇಂದ್ರೀಕೃತವಾದದ್ದು ಗಾಂಧಿಯವರಿಗೆ ನಿರಾಶೆಯುಂಟುಮಾಡಿತು. ಇದಕ್ಕಿಂತಲೂ ಹೆಚ್ಚಾಗಿ, ಲಾರ್ಡ್ ಇರ್ವಿನ್‌ರ ಉತ್ತರಾಧಿಕಾರಿಯಾದ ಲಾರ್ಡ್ ವಿಲಿಂಗ್ಡನ್‌ ರಾಷ್ಟ್ರವಾದಿಗಳ ಚಲನವಲನಗಳನ್ನು ನಿಯಂತ್ರಿಸುವ ಅಭಿಯಾನವನ್ನು ಆರಂಭಿಸಿದರು. ಗಾಂಧಿಯವರನ್ನು ಪುನ: ಬಂಧಿಸಲಾಯಿತು. ತಮ್ಮ ಅನುಯಾಯಿಗಳಿಂದ ಅವರನ್ನು ಸಂಪೂರ್ಣವಾಗಿ ಪ್ರತ್ಯೇಕಿಸಿಟ್ಟು ಅವರ ಪ್ರಭಾವನ್ನು ಕಡಿಮೆಗೊಳಿಸಲು ಬ್ರಿಟಿಷ್ ಸರ್ಕಾರವು ಹವಣಿಸಿತು. ಆದರೆ, ಈ ತಂತ್ರವು ಸಫಲವಾಗಲಿಲ್ಲ. ೧೯೩೨ರಲ್ಲಿ, ದಲಿತ ನಾಯಕ ಬಿ. ಆರ್‌. ಅಂಬೇಡ್ಕರ್‌ರವರ ಚಳುವಳಿಯ ಫಲವಾಗಿ, ಸರ್ಕಾರವು ಹೊಸ ಸಂವಿಧಾನದಡಿ ಅಸ್ಪೃಶ್ಯರಿಗಾಗಿಯೇ ಪ್ರತ್ಯೇಕ ಮತದಾರರ ಪಟ್ಟಿಯನ್ನು ನೀಡಿತು. ಇದನ್ನು ಪ್ರತಿಭಟಿಸಿ ಗಾಂಧಿಯವರು ಸೆಪ್ಟೆಂಬರ್ ೧೯೩೨ರಲ್ಲಿ ಆರು ದಿನಗಳ ಉಪವಾಸವನ್ನು ಕೈಗೊಂಡ ಫಲವಾಗಿ, ದಲಿತ ಕ್ರಿಕೆಟ್ ಪಟುವಾಗಿದ್ದು ರಾಜಕೀಯ ಮುಖಂಡರಾಗಿ ಬದಲಾದ ಪಾಲ್ವಂಕರ್‌ ಬಾಲೂ ಅವರು ಮಧ್ಯಸ್ಥಿಕೆ ವಹಿಸಿದ ಮಾತುಕತೆಗಳ ಮೂಲಕ ಸರ್ಕಾರವು ಇನ್ನಷ್ಟು ಸಮದರ್ಶಿಯಾದ ವ್ಯವಸ್ಥೆಯನ್ನು ಕಲ್ಪಿಸುವಂತೆ ಮಾಡಿತು. *ಇದು 'ಹರಿಜನ್‌' ಅಥವಾ 'ದೇವರ ಮಕ್ಕಳು' ಎಂದು ಮರುನಾಮಕರಣ ಮಾಡಿದ ಅಸ್ಪೃಶ್ಯರ ಜೀವನಗಳನ್ನು ಉತ್ತಮಗೊಳಿಸುವ ಗಾಂಧಿಯವರ ಒಂದು ಹೊಸ ಅಭಿಯಾನದ ಆರಂಭವಾಗಿತ್ತು. ಹರಿಜನ್‌ ಅಭಿಯಾನವನ್ನು ಬೆಂಬಲಿಸಲು ಗಾಂಧಿಯವರು ೧೯೩೩ರ ಮೇ ೮ರಂದು ೨೧ ದಿನಗಳ ಸ್ವಶುದ್ಧೀಕರಣದ ಉಪವಾಸವನ್ನು ಆರಂಭಿಸಿದರು. ಆದಾಗ್ಯೂ, ಈ ಹೊಸ ಆಭಿಯಾನವು ದಲಿತ ಸಮುದಾಯದೊಳಗೆ ಸಾರ್ವತ್ರಿಕವಾಗಿ ಸ್ವೀಕೃತವಾಗಲಿಲ್ಲ. ಪ್ರಮುಖ ಮುಖಂಡರಾದ ಬಿ. ಆರ್‌. ಅಂಬೇಡ್ಕರ್‌ ರವರು ಗಾಂಧಿಯವರು ಬಳಸಿದ ಹರಿಜನ್‌ ಪದವನ್ನು ಖಂಡಿಸಿದರು. ಇದು ದಲಿತರು ಸಾಮಾಜಿಕವಾಗಿ ಅಪಕ್ವವಾಗಿದ್ದಾರೆಂದು ಬಿಂಬಿಸುತ್ತದೆ; ಹಾಗೂ, ಸವಲತ್ತುಗಳುಳ್ಳ ಜಾತೀಯ ಭಾರತೀಯರು ಇದರಲ್ಲಿ ಪಿತೃಪ್ರಾಯತಾವಾದದ ಪಾತ್ರವನ್ನು ವಹಿಸಿದ್ದಾರೆಂಬುದು ಇದರ ಪ್ರಮುಖ ಕಾರಣವಾಗಿತ್ತು. ಗಾಂಧಿಯವರು ದಲಿತರ ರಾಜಕೀಯ ಹಕ್ಕುಗಳನ್ನು ಶಿಥಿಲಗೊಳಿಸುತ್ತಿದ್ದಾರೆ ಎಂಬುದು ಅಂಬೇಡ್ಕರ್ ಮತ್ತು ಅವರ ಸಹಯೋಗಿಗಳ ಅಭಿಪ್ರಾಯವಾಗಿತ್ತು. ತಾವು ವೈಶ್ಯ ಜಾತಿಯಲ್ಲಿ ಜನಿಸಿದ್ದರೂ, ಅಂಬೇಡ್ಕರ್‌ರಂತಹ ದಲಿತ ಕ್ರಿಯಾವಾದಿಗಳು ಲಭ್ಯವಿದ್ದರೂ ಸಹ ತಾವು ದಲಿತರ ಪರವಾಗಿ ಮಾತನಾಡಬಲ್ಲೆವು ಎಂದು ಗಾಂಧಿಯವರು ಸಮರ್ಥಿಸಿದ್ದರು. ೧೯೩೪ರ ಬೇಸಿಗೆಯಲ್ಲಿ, ಅವರ ಪ್ರಾಣಹತ್ಯೆಯ ಮೂರು ವಿಫಲ ಯತ್ನಗಳು ನಡೆದಿದ್ದವು. ಚುನಾವಣೆಗಳಲ್ಲಿ ಸ್ಪರ್ಧಿಸಿ ಒಕ್ಕೂಟ ಯೋಜನೆಯಡಿ ಅಧಿಕಾರವನ್ನು ಸ್ವೀಕರಿಸಲು ಕಾಂಗ್ರೆಸ್‌ ಪಕ್ಷವು ನಿರ್ಧರಿಸಿದಾಗ, ಗಾಂಧಿಯವರು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದರು. ಅವರು ಪಕ್ಷದ ನಡೆಗೆ ಅಸಮ್ಮತಿಯನ್ನು ಸೂಚಿಸಲಿಲ್ಲವಾದರೂ, ಒಂದು ವೇಳೆ ತಾವು ರಾಜೀನಾಮೆ ನೀಡಿದಲ್ಲಿ, ಭಾರತೀಯರೊಂದಿಗಿನ ತಮ್ಮ ಜನಪ್ರಿಯತೆಯ ಕಾರಣದಿಂದಾಗಿ ಸಮುದಾಯ ಸ್ವಾಮ್ಯವಾದಿಗಳು (ಕಮ್ಯೂನಿಸ್ಟರು), ಸಮಾಜವಾದಿಗಳು, ಕಾರ್ಮಿಕ ಸಂಘದವರು (ಟ್ರೇಡ್‌ ಯುನಿಯನ್‌ನವರು), ವಿದ್ಯಾರ್ಥಿಗಳು, ಧಾರ್ಮಿಕ ಸಂಪ್ರದಾಯವಾದಿಗಳಿಂದ ಮೊದಲ್ಗೊಂಡು ವ್ಯವಹಾರ ಪರವಾದ ಗಾಢ ನಂಬುಗೆಗಳನ್ನು ಹೊಂದಿರುವವರ ತನಕ ಅನೇಕ ಸ್ತರದ ಸದಸ್ಯರನ್ನು ಒಳಗೊಂಡಿರುವ ಪಕ್ಷದ ಸದಸ್ಯತ್ವದ ಸಂಖ್ಯೆಯಲ್ಲಿ ಕುಸಿತವುಂಟಾಗಬಹುದು ಹಾಗೂ ತಂತಮ್ಮ ಕೂಗುಗಳಿಗೆ ಓಗೊಡುವಂತೆ ಈ ವಿವಿಧ ಧ್ವನಿಗಳಿಗೆ ಅವಕಾಶ ನೀಡಬೇಕಾಗಿ ಬರಬಹುದು ಎಂದು ಗಾಂಧಿಯವರು ಭಾವಿಸಿದರು. ಬ್ರಿಟಿಷ್ ಸರ್ಕಾರದೊಂದಿಗೆ ತಾತ್ಕಾಲಿಕ ರಾಜಕೀಯ ಹೊಂದಾಣಿಕೆಯನ್ನು ಮಾಡಿಕೊಂಡ ಪಕ್ಷವೊಂದರ ನಾಯಕತ್ವ ವಹಿಸಿ, ಬ್ರಿಟಿಷ್ ಸರ್ಕಾರದ ಪ್ರಚಾರಕ್ಕೆ ಗುರಿಯಾಗುವುದನ್ನೂ ಸಹ ಗಾಂಧಿಯವರು ಬಯಸಿರಲಿಲ್ಲ. ೧೯೩೬ರಲ್ಲಿ ನೆಹರೂ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್‌ನ ಲಕ್ನೋ ಅಧಿವೇಶನದಲ್ಲಿ ಗಾಂಧಿಯವರು ಮುಂಚೂಣಿಗೆ ಮರಳಿದರು. ಭಾರತದ ಭವಿಷ್ಯದ ಬಗೆಗಿನ ಊಹಾಪೋಹಗಳಿಗಿಂತಲೂ ರಾಷ್ಟ್ರಕ್ಕೆ ಸ್ವಾತಂತ್ರ್ಯವನ್ನು ಗಳಿಸಿಕೊಡುವತ್ತ ತಮ್ಮ ಸಂಪೂರ್ಣ ಗಮನವನ್ನು ಕೇಂದ್ರೀಕರಿಸಲು ಗಾಂಧಿಯವರು ಇಚ್ಛಿಸಿದರಾದರೂ, ಪಕ್ಷವು ಸಮಾಜವಾದವನ್ನು ತನ್ನ ಧ್ಯೇಯವನ್ನಾಗಿ ಮಾಡಿಕೊಳ್ಳುವುದನ್ನು ಅವರು ತಡೆಯಲಿಲ್ಲ. ೧೯೩೮ರಲ್ಲಿ ಪಕ್ಷದ ಅಧ್ಯಕ್ಷ ಹುದ್ದೆಗೆ ಚುನಾಯಿತರಾಗಿದ್ದ ಸುಭಾಷ್ ಬೋಸ್‌‌ರೊಂದಿಗೆ ಗಾಂಧಿಯವರ ಘರ್ಷಣೆಯಾಗಿತ್ತು. ಬೋಸ್‌ರಲ್ಲಿನ ಪ್ರಜಾಪ್ರಭುತ್ವದೆಡೆಗಿನ ಬದ್ಧತೆಯ ಅಭಾವ ಮತ್ತು ಅಹಿಂಸೆಯಲ್ಲಿನ ಅವಿಶ್ವಾಸವು ಗಾಂಧಿ ಹಾಗೂ ಬೋಸ್‌ರ ನಡುವಿನ ಘರ್ಷಣೆಯ ಪ್ರಮುಖ ಅಂಶಗಳಾಗಿದ್ದವು.ಗಾಂಧಿಯವರ ಟೀಕಾಪ್ರಹಾರವಿದ್ದರೂ ಸಹ ಬೋಸ್‌ ಪಕ್ಷದ ಅಧ್ಯಕ್ಷ ಹುದ್ದೆಗೆ ಎರಡನೆಯ ಅವಧಿಗೆ ಚುನಾಯಿತ ರಾದರು; ಆದರೆ, ಗಾಂಧಿಯ ತತ್ವಗಳನ್ನು ಪರಿತ್ಯಜಿಸಿದ ಬೋಸ್‌ರ ಕ್ರಮವನ್ನು ವಿರೋಧಿಸಿ, ರಾಷ್ಟ್ರಾದ್ಯಂತ ಪಕ್ಷದ ಮುಖಂಡರು ಸಾಮೂಹಿಕವಾಗಿ ತಮ್ಮ-ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದಾಗ, ಬೋಸ್‌ ಕಾಂಗ್ರೆಸ್‌ ಪಕ್ಷವನ್ನು ತೊರೆದರು. ಎರಡನೆಯ ವಿಶ್ವ ಸಮರ ಮತ್ತು 'ಕ್ವಿಟ್ ಇಂಡಿಯಾ ಆಂದೋಲನ' ನಾಜಿ ಜರ್ಮನಿ ಪೋಲೆಂಡ್‌ನ ಮೇಲೆ ಅತಿಕ್ರಮಣ ನಡೆಸಿದಾಗ ೧೯೩೯ರಲ್ಲಿ ಎರಡನೆಯ ವಿಶ್ವ ಸಮರವು ನಡೆಯಿತು. ಮೊದಲಿಗೆ, ಮಹಾಯುದ್ಧದಲ್ಲಿ ಬ್ರಿಟಿಷ್ ಸರ್ಕಾರದ ಕಾರ್ಯಾಚರಣೆಗೆ ಅಹಿಂಸಾತ್ಮಕ ನೈತಿಕ ಬೆಂಬಲವನ್ನು ನೀಡಲು ಗಾಂಧಿಯವರು ಒಲವು ತೋರಿದರೂ, ಜನಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸದೆ ಏಕಾಏಕಿಯಾಗಿ ಭಾರತವನ್ನು ಯುದ್ಧದಲ್ಲಿ ಸೇರಿಸಿಕೊಂಡ ಬಗ್ಗೆ ಇತರ ಕಾಂಗ್ರೆಸ್‌ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಎಲ್ಲಾ ಕಾಂಗ್ರೆಸ್ಸಿಗರೂ ತಮ್ಮ ಹುದ್ದೆಗಳಿಗೆ ಸಾಮೂಹಿಕ ರಾಜೀನಾಮೆ ನೀಡಲು ನಿರ್ಧರಿಸಿದರು. ದೀರ್ಘಕಾಲದ ಚರ್ಚೆಗಳ ನಂತರ, 'ಭಾರತಕ್ಕೇ ಸ್ವಾತಂತ್ರ್ಯ ನಿರಾಕರಿಸಿದ್ದಾಗ, ಪ್ರಜಾಪ್ರಭುತ್ವಕ್ಕಾಗಿ ಎಂದು ನೆಪಹೂಡಿ ನಡೆಸಲಾದ ಯುದ್ಧಕ್ಕೆ ರಾಷ್ಟ್ರವು ಎಂದಿಗೂ ಸಹಭಾಗಿಯಾಗಲಾಗದು' ಎಂದು ಗಾಂಧಿಯವರು ಘೋಷಿಸಿದರು. ಯುದ್ಧವು ಮುನ್ನಡೆದಾಗ, ಬ್ರಿಟಿಷ್ ಆಡಳಿತವು ಭಾರತ ಬಿಟ್ಟು ತೊಲಗಲಿ (ಕ್ವಿಟ್ ಇಂಡಿಯಾ) ಎಂಬ ನಿರ್ಣಯವನ್ನು ಸಿದ್ಧಪಡಿಸಿ, ಸ್ವಾತಂತ್ರ್ಯಕ್ಕಾಗಿ ತಮ್ಮ ಬೇಡಿಕೆಯನ್ನು ತೀವ್ರಗೊಳಿಸಿದರು. ಇದು ಬ್ರಿಟಿಷ್‌ ಆಡಳಿತವು ಭಾರತದ ಗಡಿಯನ್ನು ಬಿಟ್ಟು ಹೋಗುವಂತೆ ಮಾಡಲು ಗಾಂಧಿಯವರ ಮತ್ತು ಕಾಂಗ್ರೆಸ್‌ನ ಅತ್ಯಂತ ನಿರ್ಣಾಯಕ ದಂಗೆಯಾಗಿತ್ತು. ಗಾಂಧಿಯವರು ಕೆಲವು ಕಾಂಗ್ರೆಸ್‌ ಪಕ್ಷದ ಸದಸ್ಯರು ಹಾಗೂ ಬ್ರಿಟಿಷ್‌-ಪರ ಮತ್ತು ಬ್ರಿಟಿಷ್‌-ವಿರೋಧೀ ಬಣಗಳುಳ್ಳ ಇತರ ಭಾರತೀಯ ರಾಜಕೀಯ ಗುಂಪುಗಳಿಂದ ಟೀಕಾಪ್ರಹಾರಕ್ಕೆ ಒಳಗಾದರು. ದುರುಳ ನಾಜಿತ್ವದ ವಿರುದ್ಧ ಹೋರಾಡುತ್ತಿರುವ ಬ್ರಿಟನ್‌ನನ್ನು ವಿರೋಧಿಸುವುದು ಅನೈತಿಕ ಎಂದು ಕೆಲವರು ಟೀಕಿಸಿದರೆ, ಗಾಂಧಿಯವರ ಬ್ರಿಟನ್‌-ವಿರೋಧದ ತೀವ್ರತೆ ಸಾಲದು ಎಂದು ಇನ್ನೂ ಕೆಲವರು ಅಭಿಪ್ರಾಯಪಟ್ಟರು. ಅಭೂತಪೂರ್ವ ಪ್ರಮಾಣದಲ್ಲಿ ನಡೆದಂತಹ ಸಾಮೂಹಿಕ ಬಂಧನಗಳು ಮತ್ತು ಹಿಂಸಾಚಾರದ ಘಟನೆಗಳನ್ನೊಳಗೊಂಡ ಕ್ವಿಟ್ ಇಂಡಿಯಾ ಚಳುವಳಿಯು ಹೋರಾಟದ ಇತಿಹಾಸದಲ್ಲಿಯೇ ಅತ್ಯಂತ ಬಲವತ್ತಾದ ಆಂದೋಲನವಾಯಿತು. ಪೊಲೀಸರ ಗುಂಡೇಟಿನಿಂದ ಸಾವಿರಾರು ಮಂದಿ ಸ್ವಾತಂತ್ರ್ಯ ಯೋಧರು ಹತರಾದರು ಅಥವಾ ಗಾಯಗೊಂಡರು, ಹಾಗೂ ಲಕ್ಷಗಟ್ಟಲೆ ಜನರು ಬಂಧಿತರಾದರು. ಭಾರತಕ್ಕೆ ಕೂಡಲೇ ಸ್ವಾತಂತ್ರ್ಯ ನೀಡದಿದ್ದಲ್ಲಿ, ಯುದ್ಧದ ಕಾರ್ಯಾಚರಣೆಗೆ ಬೆಂಬಲವನ್ನು ನೀಡಲಾರೆವೆಂದು ಗಾಂಧಿಯವರು ಮತ್ತು ಅವರ ಬೆಂಬಲಿಗರು ಖಡಾಖಂಡಿತವಾಗಿ ಹೇಳಿದರು. ತಮ್ಮ ಸುತ್ತಲಿನ "ಆದೇಶಿತ ಅರಾಜಕತೆ" ಯು "ನೈಜ ಅರಾಜಕತೆಗಿಂತಲೂ ಕೆಟ್ಟದು" ಎಂದು ಹೇಳಿ, ಕೆಲವು ಹಿಂಸಾಚಾರದ ಕೃತ್ಯಗಳನ್ನು ಎಸಗಿದರೂ ಸಹ ಈ ಬಾರಿ ಆಂದೋಲನವನ್ನು ಸ್ಥಗಿತಗೊಳಿಸಲಾರೆವು ಎಂಬ ಸ್ಪಷ್ಟೀಕರಣವನ್ನೂ ನೀಡಿದರು. ಆತ್ಯಂತಿಕ ಸ್ವಾತಂತ್ರ್ಯಕ್ಕಾಗಿ ಅಹಿಂಸಾ ಮತ್ತು ಕರೊ ಯಾ ಮರೊ ("ಮಾಡು ಇಲ್ಲವೇ ಮಡಿ") ತತ್ವಗಳ ಮೂಲಕ ಶಿಸ್ತು ಪಾಲಿಸಲು ಅವರು ಎಲ್ಲ ಕಾಂಗ್ರೆಸ್ಸಿಗರಿಗೆ ಮತ್ತು ಭಾರತೀಯರಿಗೆ ಕರೆ ನೀಡಿದರು. ಪುಣೆಯ ಆಗಾಖಾನ್ ಪ್ಯಾಲೇಸ್ ನಲ್ಲಿ 'ಕಸ್ತೂರ ಬಾ' ಕೊನೆಯುಸಿರೆಳೆದರು ೧೯೪೨ರ ಆಗಸ್ಟ್ ೯ರಂದು, ಗಾಂಧಿಯವರನ್ನು ಮತ್ತು ಇಡೀ ಕಾಂಗ್ರೆಸ್‌ ಕಾರ್ಯಕಾರೀ ಸಮಿತಿಯನ್ನು ಬ್ರಿಟಿಷ್‌ರು ಮುಂಬಯಿಯಲ್ಲಿ ಬಂಧಿಸಿದರು. ಪುಣೆಯಲ್ಲಿನ ಅಗಾ ಖಾನ್ ಅರಮನೆಯಲ್ಲಿ ಗಾಂಧಿ ಮತ್ತು 'ಕಸ್ತೂರ ಬಾ' ರವರನ್ನು ಎರಡು ವರ್ಷಗಳ ಕಾಲ ಗೃಹ ಬಂದಿಯಾಗಿ ಇರಿಸಲಾಗಿತ್ತು. ಇಲ್ಲಿಯೇ ಗಾಂಧಿಯವರ ವೈಯಕ್ತಿಕ ಜೀವನದಲ್ಲಿ ಎರಡು ದೊಡ್ಡ ಆಘಾತಗಳುಂಟಾದವು. ಅವರ ಆಪ್ತ ಕಾರ್ಯದರ್ಶಿಯಾಗಿದ್ದ ೫೦ ವರ್ಷ ವಯಸ್ಸಿನ ಮಹದೇವ್‌ ದೇಸಾಯಿ ಆರು ದಿನಗಳ ನಂತರ ಹೃದಯಾಘಾತದಿಂದ ಮೃತರಾದರು, ೧೮ ತಿಂಗಳುಗಳ ಕಾಲ ಅಲ್ಲಿಯೇ ಗೃಹ ಕೈದಿಯಾಗಿದ್ದ 'ಕಸ್ತೂರಬಾ' ರವರು ೧೯೪೪ರ ಫೆಬ್ರುವರಿ ೨೨ರಂದು, ಮಹಾತ್ಮಾಗಾಂಧಿಯವರ ತೊಡೆಯ ಮೇಲೆ ಮಲಗಿದ್ದಂತೆಯೆ ಚಿರನಿದ್ರೆ ಗೈದರು; ಇದಾದ ಆರು ವಾರಗಳ ನಂತರ ಗಾಂಧಿಯವರು ಮಲೇರಿಯಾ ಜ್ವರಕ್ಕೆ ತುತ್ತಾದರು. ಯುದ್ಧ ಮುಗಿಯುವ ಮುಂಚೆಯೇ, ೧೯೪೪ರ ಮೇ ೬ರಂದು, ಕ್ಷೀಣಿಸುತ್ತಿದ ಆರೋಗ್ಯ ಮತ್ತು ಆವಶ್ಯ ಶಸ್ತ್ರಚಿಕಿತ್ಸೆಗಾಗಿ ಗಾಂಧಿಯವರನ್ನು ಬಿಡುಗಡೆಗೊಳಿಸಲಾಯಿತು; ಗಾಂಧಿಯವರು ಕಾರಾಗೃಹದಲ್ಲಿಯೇ ಸತ್ತು ರಾಷ್ಟ್ರವನ್ನು ಕುಪಿತಗೊಳಿಸುವುದು ಬ್ರಿಟಿಷ್ ಸರ್ಕಾರಕ್ಕೆ ಬೇಕಾಗಿರಲಿಲ್ಲ. ಕ್ವಿಟ್ ಇಂಡಿಯಾ ಆಂದೋಲನವು ತನ್ನ ಧ್ಯೇಯದಲ್ಲಿ ನಿಯಮಿತ ಯಶಸ್ಸು ಕಂಡಿತ್ತಾದರೂ, ಈ ಆಂದೋಲನದ ಹತ್ತಿಕ್ಕುವಿಕೆಯು ೧೯೪೩ರ ಅಂತ್ಯದಲ್ಲಿ ಭಾರತಕ್ಕೆ ಸುವ್ಯವಸ್ಥೆಯನ್ನು ತಂದಿತ್ತಿತು. ಯುದ್ಧದ ಅಂತ್ಯದಲ್ಲಿ, ಆಡಳಿತವನ್ನು ಭಾರತೀಯರಿಗೆ ಹಸ್ತಾಂತರಿಸಲಾಗುವುದೆಂದು ಬ್ರಿಟಿಷರು ಸ್ಪಷ್ಟ ಸೂಚನೆಗಳನ್ನು ನೀಡಿದರು. ಈ ಹಂತದಲ್ಲಿ ಗಾಂಧಿಯವರು ಹೋರಾಟವನ್ನು ಹಿಂದೆಗೆದುಕೊಂಡ ಫಲವಾಗಿ, ಕಾಂಗ್ರೆಸ್ ನಾಯಕತ್ವವೂ ಸೇರಿದಂತೆ ಸುಮಾರು ೧೦೦,೦೦೦ ರಾಜಕೀಯ ಬಂಧಿತರು ಬಿಡುಗಡೆಗೊಂಡರು. ಸ್ವಾತಂತ್ರ್ಯ ಗಳಿಸಿದ ಬಳಿಕ ಭಾರತದ ವಿಭಜನೆ ೧೯೪೬ರಲ್ಲಿ ಬ್ರಿಟಿಷ್ ಸಂಪುಟ ನಿಯೋಗ‌ದ ಪ್ರಸ್ತಾಪಗಳನ್ನು ತಿರಿಸ್ಕರಿಸಿರೆಂದು ಗಾಂಧಿಯವರು ಕಾಂಗ್ರೆಸ್‌ಗೆ ಕರೆ ನೀಡಿದರು, ಏಕೆಂದರೆ, ಮುಸ್ಲಿಮರು ಬಹುಸಂಖ್ಯೆಯಲ್ಲಿದ್ದ ರಾಜ್ಯಗಳಿಗಾಗಿ ಪ್ರಸ್ತಾಪಿಸಲಾದ ಗುಂಪುಗೂಡಿಕೆ ಯು ವಿಭಜನೆಗೆ ನಾಂದಿಯಾಗುತ್ತದೆಂದು ಗಾಂಧಿಯವರು ಅನುಮಾನಿಸಿದ್ದರು. ಆದಾಗ್ಯೂ, ಗಾಂಧಿಯವರ ಸಲಹೆಯಿಂದ (ಆದರೆ ಅವರ ನಾಯಕತ್ವದಿಂದಲ್ಲ) ಕಾಂಗ್ರೆಸ್ ಭಿನ್ನವಾಗಿ ನಡೆದುಕೊಂಡ ಕೆಲವೇ ಸಂದರ್ಭಗಳಲ್ಲಿ ಇದೂ ಒಂದಾಗಿತ್ತು. ಏಕೆಂದರೆ, ಒಂದು ವೇಳೆ ಕಾಂಗ್ರೆಸ್‌ ಪ್ರಸ್ತಾಪವನ್ನು ಅಂಗೀಕರಿಸದಿದ್ದಲ್ಲಿ, ಸರ್ಕಾರದ ನಿಯಂತ್ರಣವು ಮುಸ್ಲಿಮ್‌ ಲೀಗ್‌ಗೆ ಹೋಗಬಹುದು ಎಂದು ನೆಹರೂ ಮತ್ತು ಪಟೇಲ್‌ರಿಗೆ ಗೊತ್ತಿತ್ತು. ೧೯೪೬ರಿಂದ ೧೯೪೮ರ ವರೆಗೆ, ಹಿಂಸಾಚಾರದ ಘಟನೆಗಳಲ್ಲಿ ೫,೦೦೦ಕ್ಕಿಂತಲೂ ಹೆಚ್ಚು ಜನರು ಹತರಾದರು. ಭಾರತವು ಎರಡು ರಾಷ್ಟ್ರಗಳಾಗಿ ವಿಭಜನೆಯಾಗುವ ಯಾವುದೇ ಪ್ರಸ್ತಾಪವನ್ನು ಗಾಂಧಿಯವರು ಬಲವಾಗಿ ವಿರೋಧಿಸಿದರು. ಭಾರತದಲ್ಲಿ ಇದುವರೆಗೂ ಹಿಂದೂ ಮತ್ತು ಸಿಖ್ಖರೊಂದಿಗೆ ಜೊತೆಗೂಡಿ ವಾಸಿಸುತ್ತಿದ್ದ ಮುಸ್ಲಿಮರಲ್ಲಿ ಬಹುಪಾಲು ಜನರು ವಿಭಜನೆಯ ಪರ ನಿಂತರು. ಇದಕ್ಕಿಂತಲೂ ಹೆಚ್ಚಾಗಿ, ಮುಸ್ಲಿಮ್‌ ಲೀಗ್‌ ಪಕ್ಷದ ಮುಖಂಡರಾದ ಮಹಮದ್‌ ಅಲಿ ಜಿನ್ನಾ ಪಶ್ಚಿಮ ಪಂಜಾಬ್‌, ಸಿಂಧ್‌, ವಾಯುವ್ಯ ಸೀಮಾಂತ ಪ್ರಾಂತ್ಯ ಮತ್ತು ಪೂರ್ವ ಬಂಗಾಳ ವಲಯಗಳಲ್ಲಿ ಅಪಾರ ಬೆಂಬಲವನ್ನು ಗಳಿಸಿದ್ದರು. ಹಿಂದೂ-ಮುಸ್ಲಿಮ್‌ ನಡುವಿನ ವ್ಯಾಪಕ ನಾಗರಿಕ ಘರ್ಷಣೆಯನ್ನು ತಡೆಗಟ್ಟಲು ಇದೊಂದೇ ದಾರಿಯೆಂದು ವಿಭಜನಾ ಯೋಜನೆಯನ್ನು ಕಾಂಗ್ರೆಸ್‌ ನಾಯಕತ್ವವು ಅಂಗೀಕರಿಸಿತು. ಗಾಂಧಿಯವರು ತಮ್ಮ ಅಂತರಾಳದಿಂದ ವಿಭಜನೆಯನ್ನು ವಿರೋಧಿಸುವರೆಂದು ಕಾಂಗ್ರೆಸ್‌ ಮುಖಂಡರಿಗೆ ಗೊತ್ತಿತ್ತು, ಹಾಗೂ ಅವರ ಒಪ್ಪಿಗೆಯಿಲ್ಲದೆ ಪಕ್ಷವು ವಿಭಜನೆಯ ಪ್ರಸ್ತಾಪದೊಂದಿಗೆ ಮುನ್ನಡೆಯಲು ಅಸಾಧ್ಯವೆಂದು ತಿಳಿದಿತ್ತು, ಏಕೆಂದರೆ ಪಕ್ಷದಲ್ಲಿ ಮತ್ತು ಭಾರತದಾದ್ಯಂತ ಅವರಿಗೆ ಸದೃಢ ಬೆಂಬಲವಿತ್ತು. ವಿಭಜನೆಯೊಂದೇ ದಾರಿಯೆಂದು ಗಾಂಧಿಯವರ ನಿಕಟ ಸಹೋದ್ಯೋಗಿಗಳು ಒಪ್ಪಿಕೊಂಡಿದ್ದರು, ಹಾಗೂ ನಾಗರಿಕ ಸಮರವನ್ನು ತಡೆಗಟ್ಟಲು ಇದೊಂದೇ ದಾರಿಯೆಂದು ಗಾಂಧಿಯವರಿಗೆ ಮನಗಾಣಿಸಲು ಸರ್ದಾರ್ ಪಟೇಲ್‌ರು ಪ್ರಯತ್ನಿಸಿದರು. ಜರ್ಜರಿತರಾದ ಗಾಂಧಿಯವರು ಒಪ್ಪಿಗೆ ಸೂಚಿಸಿದರು. ಉತ್ತರ ಭಾರತ ಹಾಗೂ ಬಂಗಾಳ ಪ್ರಾಂತ್ಯದಲ್ಲಿ ಉದ್ರೇಕವನ್ನು ಶಮನಗೊಳಿಸಲು, ಗಾಂಧಿಯವರು ಮುಸ್ಲಿಮ್‌ ಮತ್ತು ಹಿಂದೂ ಮುಖಂಡರೊಂದಿಗೆ ವಿಸ್ತೃತವಾದ ಚರ್ಚೆಗಳನ್ನು ನಡೆಸಿದರು. ೧೯೪೭ರಲ್ಲಿ ಭಾರತ-ಪಾಕಿಸ್ತಾನ ಯುದ್ಧವು ನಡೆದಿದ್ದರೂ ಸಹ, ವಿಭಜನಾ ಸಮಿತಿಯು ರಚಿಸಿದ ಒಪ್ಪಂದದಂತೆ ಸರ್ಕಾರವು ಪಾಕಿಸ್ತಾನಕ್ಕೆ ಕೊಡಬೇಕಾದ ೫೫ ಕೋಟಿ (೫೫೦ಮಿಲಿಯನ್‌ ಭಾರತೀಯ ರೂಪಾಯಿಗಳು) ರೂಪಾಯಿಗಳಷ್ಟು ಹಣವನ್ನು ನೀಡಲು ನಿರಾಕರಿಸಿದಾಗ ಗಾಂಧಿಯವರು ತೀವ್ರವಾಗಿ ಅಸಮಾಧಾನಗೊಂಡರು. ಪಾಕಿಸ್ತಾನವು ಹಣವನ್ನು ಭಾರತದ ವಿರುದ್ಧದ ಯುದ್ಧಕ್ಕಾಗಿ ಬಳಸುತ್ತದೆಂದು ಸರ್ದಾರ್‌ ಪಟೇಲ್‌ರಂತಹ ಮುಖಂಡರು ಆತಂಕ ವ್ಯಕ್ತಪಡಿಸಿದರು. *ಮುಸ್ಲಿಮ್‌ ಮತ್ತು ಹಿಂದೂ ಮುಖಂಡರು ಪರಸ್ಪರ ಸೌಹಾರ್ದದತ್ತ ಬರಲು ಸಾಧ್ಯವಾಗದೆ ಹತಾಶೆಯನ್ನು ವ್ಯಕ್ತಪಡಿಸಿದಾಗ, ಹಾಗೂ ಎಲ್ಲಾ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡಬೇಕೆಂಬ ಕೂಗುಗಳು ತಿರುಗಿ ಎದ್ದಾಗ ಗಾಂಧಿಯವರು ಇನ್ನಷ್ಟು ಜರ್ಜರಿತರಾದರು. ಎಲ್ಲಾ ಕೋಮು ಗಲಭೆಗಳನ್ನು ನಿಲ್ಲಿಸಬೇಕು. ಪಾಕಿಸ್ತಾನಕ್ಕೆ ೫೫೦ ಮಿಲಿಯನ್ ರೂಪಾಯಿಗಳನ್ನು ವಿಭಜನಾ ಸಮಿತಿಯು ರಚಿಸಿದ ಒಪ್ಪಂದದಂತೆ ಸರ್ಕಾರವು ಸಂದಾಯ ಮಾಡಬೇಕಂಬ ಹಠಹಿಡಿದು ದಿಲ್ಲಿಯಲ್ಲಿ ಅವರು ಅಮರಣಾಂತ ಉಪವಾಸವನ್ನು ಶುರುಗೊಳಿಸಿದರು. ಪಾಕಿಸ್ತಾನದಲ್ಲಿನ ಅಸ್ಥಿರತೆ ಮತ್ತು ಅಭದ್ರತೆಯು ಭಾರತದ ವಿರುದ್ಧದ ಕೋಪವನ್ನು ಹೆಚ್ಚಿಸಿ, ಗಡಿಯಲ್ಲಿ ಹಿಂಸಾಚಾರದ ಘಟನೆಗಳು ಹಬ್ಬಬಹುದೆಂದು ಗಾಂಧಿಯವರು ಆತಂಕ ವ್ಯಕ್ತಪಡಿಸಿದರು. ಹಿಂದೂಗಳು ಮತ್ತು ಮುಸ್ಲಿಮರು ತಮ್ಮ ಶತ್ರುತ್ವವನ್ನು ಮುಂದುವರೆಸಿ ಇದು ವ್ಯಾಪಕ ನಾಗರಿಕ ಸಮರಕ್ಕೆ ಆಸ್ಪದ ಕೊಡಬಹುದೆಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದರು. ತಮ್ಮ ಜೀವಾವಧಿ ಸಹೋದ್ಯೋಗಿಗಳೊಂದಿಗಿನ ಭಾವಪೂರ್ಣ ಚರ್ಚೆಗಳ ನಂತರ ಗಾಂಧಿಯವರು ತಮ್ಮ ನಿರ್ಧಾರವನ್ನು ಸಡಿಲಿಸಲು ನಿರಾಕರಿಸಿದರು. ಇದರ ಫಲವಾಗಿ ಸರ್ಕಾರವು ತಮ್ಮ ನೀತಿಯನ್ನು ರದ್ದುಗೊಳಿಸಿ ಪಾಕಿಸ್ತಾನಕ್ಕೆ ಹಣಸಂದಾಯವನ್ನು ಮಾಡಿತು. ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಹಿಂದೂ ಮಹಾಸಭಾ ಸೇರಿದಂತೆ ಹಿಂದೂ, ಮುಸ್ಲಿಮ್‌ ಮತ್ತು ಸಿಖ್ ಸಮುದಾಯದ ಮುಖಂಡರು ತಾವು ಹಿಂಸಾಚಾರವನ್ನು ತ್ಯಜಿಸಿ ಶಾಂತಿಗಾಗಿ ಕರೆ ನೀಡುವುದಾಗಿ ಗಾಂಧಿಯವರಿಗೆ ಭರವಸೆ ನೀಡಿದರು. ಆಗ ಗಾಂಧಿಯವರು ಮೂಸಂಬಿ ರಸ ಕುಡಿಯುವುದರ ಮೂಲಕ ತಮ್ಮ ಉಪವಾಸವನ್ನು ಅಂತ್ಯಗೊಳಿಸಿದರು. ಹತ್ಯೆ Assassination of Mohandas Karamchand Gandhi ಪಾಕಿಸ್ತಾನಕ್ಕೆ ಹಣದ ಸಂದಾಯ ಮಾಡಲು ಒತ್ತಾಯಿಸಿ, ಭಾರತವನ್ನು ದುರ್ಬಲಗೊಳಿಸಿದಕ್ಕೆ ಗಾಂಧಿಯವರೇ ಹೊಣೆ ಎಂದು ಆತನು ಹೇಳಿದ್ದನು. ಗೋಡ್ಸೆ ಮತ್ತು ಆತನ ಸಹಚರ ನಾರಾಯಣ್ ಆಪ್ಟೆ - ಇವರಿಬ್ಬರ ಮೇಲಿನ ಆರೋಪವನ್ನು ಸಾಬೀತುಪಡಿಸಲಾಗಿ, ೧೯೪೯ರ ನವೆಂಬರ್ ೧೫ರಂದು ಅವರನ್ನು ಗಲ್ಲಿಗೇರಿಸಲಾಯಿತು. ಹೊಸದಿಲ್ಲಿಯ ರಾಜ್‌ ಘಾಟ್‌ನಲ್ಲಿರುವ ಗಾಂಧಿಯವರ ಸ್ಮಾರಕ (ಅಥವಾ ಸಮಾಧಿ) ಯ ಶಿಲಾಲೇಖನದಲ್ಲಿ "ಹೇ ರಾಮ್‌" ಎಂಬ ಉಚ್ಚರಣೆಯಿದೆ. (ದೇವನಾಗರಿ: हे ! राम ಅಥವಾ, ಹೇ , ) ಅನುವಾದ ಮಾಡಿದಾಗ "ಓ ದೇವರೇ" ಎಂದಾಗುವುದು. ತಾವು ಗುಂಡೇಟಿಗೀಡಾದಾಗ ಗಾಂಧಿಯವರ ಕೊನೆಯ ಮಾತುಗಳೆಂದು ಬಹುಮಟ್ಟಿಗೆ ನಂಬಲಾಗಿದ್ದರೂ, ಈ ಹೇಳಿಕೆಯ ನಿಖರತೆಯು ವಿವಾದಗ್ರಸ್ಥವಾಗಿದೆ. ಜವಾಹರ್‌ಲಾಲ್‌ ನೆಹರೂರವರು ಬಾನುಲಿಯ ಮೂಲಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು: ಗಾಂಧಿಯವರ ಚಿತಾಭಸ್ಮವನ್ನು ಕರಂಡಗಳಲ್ಲಿ ತುಂಬಿ ಸ್ಮರಣಾರ್ಥ ಸೇವೆಗಳಿಗಾಗಿ ರಾಷ್ಟ್ರಾದ್ಯಂತ ರವಾನಿಸಲಾಯಿತು. ೧೯೪೮ರ ಫೆಬ್ರುವರಿ ೧೨ರಂದು ಅಲಹಾಬಾದ್‌ನಲ್ಲಿನ ಸಂಗಮದಲ್ಲಿ ಅವರ ಚಿತಾಭಸ್ಮವನ್ನು ವಿಸರ್ಜಿಸಲಾಯಿತು, ಆದರೂ ಕೆಲವು ಕರಂಡಗಳನ್ನು ರಹಸ್ಯವಾಗಿ ಹಿಂತೆಗೆಯಲಾಯಿತು. ೧೯೯೭ರಲ್ಲಿ ತುಷಾರ್‌ ಗಾಂಧಿಯವರು ಬ್ಯಾಂಕಿನ ನೆಲಮಾಳಿಗೆಯೊಂದರಲ್ಲಿದ್ದ ಕರಂಡವನ್ನು ನ್ಯಾಯಾಲಯಗಳ ಮೂಲಕ ಪುನರ್ಪಡೆದು, ಅಲಾಹಾಬಾದ್‌ನಲ್ಲಿನ ಸಂಗಮದಲ್ಲಿ ವಿಸರ್ಜಿಸಿದರು. ದುಬೈ-ಮೂಲದ ವರ್ತಕರೊಬ್ಬರು ಮುಂಬಯಿ ಸಂಗ್ರಹಾಲಯಕ್ಕೆ ಕಳುಹಿಸಿಕೊಟ್ಟಿದ್ದ ಇನ್ನೊಂದು ಕರಂಡದಲ್ಲಿದ್ದ ಚಿತಾಭಸ್ಮವನ್ನು ಕುಟುಂಬವು ೨೦೦೮ರ ಜನವರಿ ೩೦ರಂದು ಗಿರ್‌ಗಾಂವ್‌ ಚೌಪಟ್ಟಿಯಲ್ಲಿ ವಿಸರ್ಜಿಸಿತು. [79] ಮತ್ತೊಂದು ಕರಂಡವು (ಗಾಂಧಿಯವರನ್ನು ೧೯೪೨ರಿಂದ ೧೯೪೪ರ ವರೆಗೆ ಸೆರೆಯಲ್ಲಿಡಲಾಗಿದ್ದ) ಪುಣೆಯ ಅಗಾ ಖಾನ್‌ ಅರಮನೆಯಲ್ಲಿದೆ ಹಾಗೂ ಮಗದೊಂದು ಕರಂಡವು ಲಾಸ್‌ ಏಂಜಲೀಸ್‌ನ ಸೆಲ್ಪ್‌-ರಿಯಲೈಸೇಷನ್‌ ಫೆಲೊಷಿಪ್‌ ಲೇಕ್ ಶ್ರೈನ್‌ನಲ್ಲಿದೆ. ಈ ಚಿತಾಭಸ್ಮಗಳು ರಾಜಕೀಯವಾಗಿ ದುರುಪಯೋಗಕ್ಕೆ ಒಳಗಾಗುವ ಸಾಧ್ಯತೆಯಿದೆಯೆಂದು ಕುಟುಂಬಕ್ಕೆ ಅರಿವಿದ್ದರೂ, ಪವಿತ್ರಸ್ಥಳಗಳನ್ನು ಒಡೆಯುವ ಪರಿಸ್ಥಿತಿ ಎದುರಾಗದಿರಲಿ ಎಂದು ಅವರು ಅವುಗಳನ್ನು ಅಲ್ಲಿಂದ ತೆಗೆಯಲು ಇಚ್ಛಿಸುತ್ತಿಲ್ಲ. ಹತ್ಯೆಯ ಹಿನ್ನಲೆ:ದೇವರ ದಯೆಯಿಂದ ಏಳು ಬಾರಿ ನಾನು ಸಾವಿನ ದವಡೆಯಿಂದ ಪಾರಾಗಿ ಬಂದಿದ್ದೇನೆ. ನಾನು ಯಾರನ್ನೂ ನೋಯಿಸಿಲ್ಲ. ಯಾರನ್ನೂ ನನ್ನ ಶತ್ರು ಎಂದು ತಿಳಿದುಕೊಂಡಿಲ್ಲ. ಹೀಗಿದ್ದರೂ ಯಾಕೆ ನನ್ನ ಹತ್ಯೆಗೆ ಪ್ರಯತ್ನ ನಡೆಯುತ್ತಿದೆ ಎಂದು ಗೊತ್ತಾಗುತ್ತಿಲ್ಲ. ನಾನು ಸಾಯುವುದಿಲ್ಲ, 125 ವರ್ಷ ಬದುಕುತ್ತೇನೆ... ತಮ್ಮ ಹತ್ಯೆಗೆ ಏಳನೇ ಬಾರಿ ನಡೆದ ಪ್ರಯತ್ನ ವಿಫಲಗೊಂಡ ನಂತರ 1946ರ ಜೂನ್ 30ರಂದು ಗಾಂಧೀಜಿ ಪುಣೆಯ ಬಹಿರಂಗ ಸಭೆಯಲ್ಲಿ ನೋವು ತುಂಬಿದ್ದ ದನಿಯಲ್ಲಿ ಈ ಮಾತು ಹೇಳಿದ್ದರು. ಅವರ ಜೀವಿತಕಾಲದಲ್ಲಿ ಬಹುತೇಕ ಭಾರತೀಯರು ಅವರನ್ನು ಗೌರವಿಸಿದ್ದು ಯಾಕೆಂದರೆ, ದೇಶವನ್ನಾಳುವ ಬ್ರಿಟಿಷರೇ ಅವರೆದುರು ಮಣಿಯುತ್ತಿದ್ದರು ಎನ್ನುವ ಕಾರಣಕ್ಕೆ. https://www.prajavani.net/stories/national/former-pti-journalist-now-99-669208.html ಗಾಂಧಿ ಹತ್ಯೆಯ ಆ ದಿನ: ಮಾಜಿ ಪತ್ರಕರ್ತನ ನೆನಪು;ಪಿಟಿಐ;Published: 03 ಅಕ್ಟೋಬರ್ 2019,] ಪ್ರಥಮವರದಿ:1948ರ ಜನವರಿ 30, ಸಂಜೆ 6.30–7ರ ಹೊತ್ತಿಗೆ ಗಾಂಧೀಜಿ ಹತ್ಯೆಯ ಸುದ್ದಿ ಬಂತು’ ಎಂದು ಈಗ ಮುಂಬೈನ ಮೀರಾ ರೋಡ್‌ ನಿವಾಸಿಯಾಗಿರುವ ವಾಲ್ಟರ್‌ ನೆನಪಿಸಿಕೊಂಡರು. ದೂರವಾಣಿಯ ಅತ್ತಕಡೆಯಲ್ಲಿ ಇದ್ದವರು ಪಿಟಿಐನ ಮುಂಬೈ ವರದಿಗಾರ ಪೋಂಕ್ಷೆ. ಸಂಜೆಯ ಪ್ರಾರ್ಥನೆಗೆ ಹೋಗುತ್ತಿದ್ದ ಗಾಂಧೀಜಿಯ ಹತ್ಯೆಯಾಯಿತು ಎಂಬ ದುರಂತ ಸುದ್ದಿಯನ್ನು ಅವರು ಹೇಳಿದ್ದರು ಗಾಂಧಿಯವರ ತತ್ವಗಳು {| class="wikitable"- align="right" |- bgcolor="#FFFDD0" ಸತ್ಯ ನಿಜ ಅಥವಾ ಸತ್ಯ ದ ಪರಿಶೋಧನೆಯೆಂಬ ವಿಸ್ತೃತ ಉದ್ದೇಶಕ್ಕಾಗಿ ಗಾಂಧಿಯವರು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ತಮ್ಮ ತಪ್ಪುಗಳಿಂದಲೇ ಕಲಿತು ಹಾಗೂ ತಮ್ಮ ಮೇಲೆಯೇ ಪ್ರಯೋಗಗಳನ್ನು ಮಾಡಿಕೊಂಡು ಅವರು ಇದನ್ನು ಸಾಧಿಸಲು ಯತ್ನಿಸಿದರು. ಅವರು ತಮ್ಮ ಆತ್ಮಚರಿತ್ರೆಯನ್ನು ದಿ ಸ್ಟೋರಿ ಆಫ್ ಮೈ ಎಕ್ಸ್‌ಪರಿಮೆಂಟ್ಸ್‌ ವಿಥ್ ಟ್ರುತ್ ಎಂದು ಕರೆದುಕೊಂಡರು. (ನೋಡಿ - ಸಂತ ಗಾಂಧೀಜೀ) ತಮ್ಮದೇ ಆದ ಪೈಶಾಚಿಕತೆಗಳನ್ನು, ಅಂಜಿಕೆಗಳನ್ನು ಮತ್ತು ಅಭದ್ರತೆಗಳನ್ನು ನಿವಾರಿಸಿಕೊಂಡದ್ದು ತಾವು ಸೆಣಸಿದ ಅತಿ ಮುಖ್ಯ ಸಮರವಾಗಿತ್ತೆಂದು ಗಾಂಧಿಯವರು ತಿಳಿಸಿದರು. "ದೇವರೇ ಸತ್ಯ" ಎಂದು ಹೇಳುವ ಮೂಲಕ ಗಾಂಧಿಯವರು ತಮ್ಮ ನಂಬಿಕೆಗಳ ಸಾರಾಂಶವನ್ನು ಹೇಳಿದರು. ನಂತರ ಅವರು "ಸತ್ಯವೇ ದೇವರು" ಎಂದು ಆ ಹೇಳಿಕೆಯನ್ನು ಬದಲಿಸಿದರು. ಹಾಗಾಗಿ, ಗಾಂಧಿಯವರ ತತ್ವದಲ್ಲಿ, ಸತ್ಯ (ನಿಜ)ವೇ "ದೇವರು." (ನೋಡಿ - ಸಂತ ಗಾಂಧೀಜೀ) ಅಹಿಂಸಾ ಮಹಾತ್ಮ ಗಾಂಧಿಯವರು ಅಹಿಂಸೆಯ ತತ್ವದ ಸೃಷ್ಟಿಕರ್ತೃರಲ್ಲದಿದ್ದರೂ, ರಾಜಕೀಯ ಕ್ಷೇತ್ರದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಅದನ್ನು ಅಳವಡಿಸುವಲ್ಲಿ ಅವರು ಮೊದಲಿಗರಾಗಿದ್ದರು. ಭಾರತೀಯ ಧಾರ್ಮಿಕ ಚಿಂತನೆಯಲ್ಲಿ ಹಿಂಸಾಚಾರವಿಲ್ಲದಿರುವಿಕೆ, (ಅಹಿಂಸೆ ) ಮತ್ತು ಪ್ರತಿರೋಧವಿಲ್ಲದಿರುವಿಕೆಯು ಸುದೀರ್ಘ ಇತಿಹಾಸವನ್ನು ಹೊಂದಿದೆ. ಹಾಗಾಗಿ, ಹಿಂದು, ಬೌದ್ಧ, ಜೈನ್‌, ಯಹೂದಿ ಮತ್ತು ಕ್ರಿಶ್ಚಿಯನ್ ಪ್ರಸಂಗಗಳಲ್ಲಿ ಪುನರುಜ್ಜೀವನಗಳನ್ನು ಕಂಡಿವೆ. ಗಾಂಧಿಯವರು ಈ ತತ್ವ ಮತ್ತು ಜೀವನ ರೀತಿಯನ್ನು ತಮ್ಮ ಆತ್ಮಚರಿತ್ರೆಯಾದ ದಿ ಸ್ಟೋರಿ ಆಫ್ ಮೈ ಎಕ್ಸ್‌ಪರಿಮೆಂಟ್ಸ್‌ ವಿಥ್ ಟ್ರುತ್ ನಲ್ಲಿ ವಿವರಿಸಿದ್ದಾರೆ. ಅವರು ಈ ರೀತಿ ಹೇಳಿದಂತೆ ಉಲ್ಲೇಖಿಸಲಾಗಿದೆ: "ನಾನು ಹತಾಶ ಸ್ಥಿತಿಯಲ್ಲಿದ್ದಾಗ, ಇತಿಹಾಸದುದ್ದಕ್ಕೂ ಸತ್ಯ ಮತ್ತು ಪ್ರೇಮದ ಮಾರ್ಗವೇ ಗೆದ್ದಿದೆ ಎಂಬುದನ್ನು ನಾನು ನೆನಪಿಸಿಕೊಳ್ಳುವೆ. ಪ್ರಜಾಪೀಡಕರು ಮತ್ತು ಕೊಲೆಗಾರರು ಒಮ್ಮೆ ಅಜೇಯರಾಗಿರುವಂತೆ ಕಾಣುತ್ತಾರಾದರೂ, ಅಂತಿಮವಾಗಿ, ಅವರು ಯಾವಾಗಲೂ ಕೆಳಗೆ ಬೀಳುತ್ತಾರೆ; ಯಾವಾಗಲೂ ಈ ಕುರಿತು ಯೋಚಿಸಿ" "ಸರ್ವಾಧಿಕಾರಶಾಹಿಯ ಪದ್ಧತಿಯ ಹೆಸರಿನಡಿ ಅಥವಾ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ಬದ ಆರ್ಷನಾಮಗಳಡಿ ಹುಚ್ಚುಗೊಳಿಸುವಂತಹ ಸರ್ವನಾಶವು ನಡೆಯುತ್ತಿದ್ದಾಗ, ಮೃತರಿಗೆ, ಅನಾಥರಿಗೆ ಮತ್ತು ಸೂರಿಲ್ಲದವರಿಗೆ ಯಾವ ವ್ಯತ್ಯಾಸ ಕಂಡು ಬರುತ್ತದೆ?" "ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳುತ್ತಲೇ ಹೋದರೆ ಇಡೀ ಪ್ರಪಂಚವೇ ನಾಶವಾಗುವುದು." "ನಾನು ಪ್ರಾಣ ತೆರಲು ಸಿದ್ಧಲಿರಲಿಕ್ಕೆ ಹಲವಾರು ಕಾರಣಗಳಿವೆ, ಆದರೆ ಪ್ರಾಣ ತೆಗೆಯಲು ಸಿದ್ಧನಿರಲಿಕ್ಕೆ ಯಾವ ಕಾರಣವೂ ಇಲ್ಲ." ಸರ್ಕಾರ, ಪೊಲೀಸ್‌ ಮತ್ತು ಸೇನೆಗಳೆಲ್ಲವೂ ಅಹಿಂಸಾತ್ಮಕವಾಗಿರುವಂತಹ ಪ್ರಪಂಚವನ್ನು ಚಿತ್ರಿಸಿಕೊಳ್ಳುವಲ್ಲಿ ಈ ತತ್ವಗಳನ್ನು ಅಳವಡಿಸುವ ಉದ್ದೇಶದಲ್ಲಿ, ಅವುಗಳನ್ನು ತಾರ್ಕಿಕತೆಯ ಕಟ್ಟಕಡೆಯ ತನಕ ಒಯ್ಯಲು ಗಾಂಧಿಯವರು ಹಿಂಜರಿಯಲಿಲ್ಲ. ಕೆಳಗಿನ ಉಲ್ಲೇಖನಗಳನ್ನು "ಫಾರ್ ಪೆಸಿಫಿಸ್ಟ್ಸ್" ಎಂಬ ಪುಸ್ತಕದಿಂದ ಆಯ್ಕೆ ಮಾಡಲಾಗಿದೆ. ಯುದ್ಧದ ವಿಜ್ಞಾನವು ಒಬ್ಬನನ್ನು ಸ್ಪಷ್ಟವಾಗಿ, ಸರಳವಾಗಿ, ಸರ್ವಾಧಿಕಾರದತ್ತ ಒಯ್ಯುತ್ತದೆ. ಅಹಿಂಸೆಯ ವಿಜ್ಞಾನವೊಂದೇ ಒಬ್ಬನನ್ನು ಶುದ್ಧ ಪ್ರಜಾಪ್ರಭುತ್ವದತ್ತ ಒಯ್ಯಬಲ್ಲದು... ಶಿಕ್ಷೆಯ ಭೀತಿಯಿಂದ ಹುಟ್ಟುವ ಅಧಿಕಾರಕ್ಕಿಂತಲೂ, ಪ್ರೇಮದ ಆಧಾರದ ಮೇಲಿರುವ ಅಧಿಕಾರವು ಸಾವಿರಪಟ್ಟು ಪರಿಣಾಮಕಾರಿಯಾಗಿದೆ... ಅಹಿಂಸೆಯನ್ನು ಕೇವಲ ವ್ಯಕ್ತಿಗಳು ಮಾತ್ರ ಆಚರಿಸಲು ಸಾಧ್ಯ, ವ್ಯಕ್ತಿಗಳು ತುಂಬಿರುವಂತಹ ರಾಷ್ಟ್ರಗಳಿಂದ ಎಂದಿಗೂ ಸಾಧ್ಯವಿಲ್ಲ ಎಂಬುದು ಪಾಷಂಡಿತನವಾಗುತ್ತದೆ... ಅಹಿಂಸೆಯನ್ನು ಆಧರಿಸಿರುವ ಪ್ರಜಾಪ್ರಭುತ್ವವೇ ಪರಿಶುದ್ಧ ಅರಾಜಕತೆಗಿರುವ ಸನಿಹದ ಮಾರ್ಗವಾಗಬಲ್ಲದು... ಸಂಪೂರ್ಣ ಅಹಿಂಸೆಯ ಆಧಾರದ ಮೇಲೆ ಸಂಘಟಿಸಲ್ಪಡುವ ಮತ್ತು ನಡೆಯುವ ಸಮಾಜವು ಪರಿಶುದ್ಧ ಅರಾಜಕತೆಯಾಗುವುದು. ಅಹಿಂಸಾತ್ಮಕ ಸನ್ನಿವೇಶದಲ್ಲಿಯೂ ಸಹ ಪೊಲೀಸ್ ದಂಡಿನ ಆವಶ್ಯಕತೆಯಿದೆಯೆಂಬುದನ್ನು ನಾನು ಒಪ್ಪಿಕೊಂಡಿರುವೆ... ಅಹಿಂಸೆಯನ್ನು ನಂಬಿದವರು ಪೊಲೀಸ್‌ ಪಡೆಗಳಲ್ಲಿ ಸೇರಿರುತ್ತಾರೆ. ಜನರು ಸಹಜ ಪ್ರವೃತ್ತಿಯಿಂದ ಅವರಿಗೆ ಎಲ್ಲಾ ಸಹಾಯವನ್ನು ನೀಡಿ, ಪರಸ್ಪರ ಸಹಕಾರದಿಂದ ಅವರು ಕಡಿಮೆಗೊಳ್ಳುತ್ತಲಿರುವ ಗಲಾಟೆಗಳನ್ನು ಸುಲಭವಾಗಿ ಹತ್ತಿಕ್ಕುತ್ತಾರೆ... ಅಹಿಂಸಾತ್ಮಕ ಸನ್ನಿವೇಶದಲ್ಲಿ ಶ್ರಮಿಕ ಮತ್ತು ಬಂಡವಾಳಶಾಹಿಗಳ ನಡುವಿನ ಹಿಂಸಾತ್ಮಕ ಜಗಳಗಳು ಹಾಗೂ ಮುಷ್ಕರಗಳು ಬಹಳ ವಿರಳವಾಗಿರುತ್ತವೆ, ಏಕೆಂದರೆ ಅಹಿಂಸಾತ್ಮಕ ಬಹುಮತದ ಪ್ರಭಾವವು ಹೆಚ್ಚಾಗಿದ್ದು ಸಮಾಜದಲ್ಲಿರುವ ತಾತ್ವಿಕ ಘಟಕಗಳಿಗೆ ಗೌರವ ಸೂಚಿಸಬಲ್ಲುದಾಗಿದೆ. ಇದೇ ರೀತಿ, ಕೋಮುಗಲಭೆಗಳಿಗೆ ಯಾವುದೇ ಅವಕಾಶವಿರುವುದಿಲ್ಲ... ಗಲಾಟೆಯ ಸಮಯದಲ್ಲಿ ಹಾಗೂ ಶಾಂತಿಯುತ ವಾತಾವರಣದಲ್ಲಿ ಅಹಿಂಸಾತ್ಮಕ ಸೇನೆಯು ಸಶಸ್ತ್ರ ಸೇನೆಗಿಂತ ಭಿನ್ನವಾಗಿ ವರ್ತಿಸುವುದು. ಕಚ್ಚಾಡುತ್ತಿರುವ ಸಮುದಾಯಗಳನ್ನು ಒಟ್ಟಿಗೆ ತಂದು, ಶಾಂತಿಯುತ ಪ್ರಚಾರವನ್ನು ಕೈಗೊಂಡು, ಅವರ ಪ್ರದೇಶದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೊಂದಿಗೂ ಸಂಪರ್ಕದಲ್ಲಿರಿಸುವಂತಹ ಚಟುವಟಿಕೆಗಳಲ್ಲಿ ತೊಡಗುವುದು ಅವರ ಕರ್ತವ್ಯವಾಗಿರುತ್ತದೆ. ಇಂತಹ ಸೇನೆಯು ಯಾವುದೇ ತುರ್ತಿನ ಪರಿಸ್ಥಿತಿಯನ್ನೂ ಎದುರಿಸಲು ಸಿದ್ಧರಿರಬೇಕು, ಮತ್ತು ಉದ್ರಿಕ್ತ ಗುಂಪುಗಳನ್ನು ಹತ್ತಿಕ್ಕಲು, ಸಾಕಷ್ಟು ಸಂಖ್ಯೆಗಳಲ್ಲಿ ಬಂದು, ತಮ್ಮ ಜೀವಗಳನ್ನು ಅಪಾಯಕ್ಕೆ ಒಡ್ಡಲೂ ಸಿದ್ಧವಿರಬೇಕು... ಪ್ರತಿಯೊಂದು ಹಳ್ಳಿಯಲ್ಲಿ ಮತ್ತು ನಗರಗಳಲ್ಲಿನ ಕಟ್ಟಡಗಳ ಪ್ರತಿಯೊಂದು ವಿಭಾಗದಲ್ಲಿಯೂ ಸಹ ಸತ್ಯಾಗ್ರಹ (ಸತ್ಯ ಪಡೆ) ದಳಗಳನ್ನು ಸಂಘಟಿಸಬಹುದಾಗಿದೆ. [ಅಹಿಂಸಾತ್ಮಕ ಸಮಾಜವು ಹೊರಗಿನಿಂದ ಹಲ್ಲೆಗೊಳಗಾಗಿದ್ದಲ್ಲಿ,] ಅಹಿಂಸೆಯತ್ತ ಎರಡು ಮಾರ್ಗಗಳಿವೆ. ಒಡೆತನವನ್ನು ಬಿಟ್ಟುಕೊಡುವುದು, ಆದರೆ ಅಕ್ರಮಣಕಾರನೊಂದಿಗೆ ಸಹಕರಿಸದಿರುವುದು... ಶರಣಾಗತಿಗಿಂತ ಸಾವಿಗೇ ಆದ್ಯತೆ ನೀಡುವುದು. ಎರಡನೆಯ ಮಾರ್ಗವೆಂದರೆ, ಅಹಿಂಸಾತ್ಮಕ ಮಾರ್ಗಗಳಲ್ಲಿ ತರಬೇತಿ ಪಡೆದ ಜನರ ಅಹಿಂಸಾತ್ಮಕ ಪ್ರತಿರೋಧ... ಅಕ್ರಮಣಕಾರನ ಇಚ್ಛೆಗೆ ತಲೆಬಾಗುವ ಬದಲಿಗೆ, ಅಗಣಿತ ಪಂಕ್ತಿಗಳಲ್ಲಿ ಗಂಡಸರು ಮತ್ತು ಹೆಂಗಸರು ಸುಮ್ಮನೆ ಸಾವನ್ನಪುವ ಅನಿರೀಕ್ಷಿತ ದೃಶ್ಯವನ್ನು ನೋಡಿ ಅವನ ಮತ್ತು ಅವನ ಸೈನಿಕರ ಮನವು ಕರಗಬೇಕು... ಅಹಿಂಸೆಯನ್ನು ತನ್ನ ಅಂತಿಮ ನೀತಿಯಾಗಿ ಮಾಡಿಕೊಂಡಿರುವಂತಹ ರಾಷ್ಟ್ರ ಅಥವಾ ಗುಂಪನ್ನು ಒಂದು ಅಣುಬಾಂಬ್ ಕೂಡ ಗುಲಾಮತನಕ್ಕೆ ಒಡ್ಡಲು ಶಕ್ಯವಾಗದು... ಆ ರಾಷ್ಟ್ರದಲ್ಲಿ ಅಹಿಂಸೆಯ ಮಟ್ಟವು ಹೀಗೆ ಬಂದು ಹಾಗೆ ಹೋಗುವಂತಿದ್ದರೂ ಸಹ, ಅದು ಸಾರ್ವತ್ರಿಕ ಮರ್ಯಾದೆಯನ್ನು ಸಂಪಾದಿಸುವಷ್ಟು ಉನ್ನತಿಗೆ ಏರಿರುತ್ತದೆ. ಈ ಅಭಿಪ್ರಾಯಕ್ಕೆ ಅನುಗುಣವಾಗಿ, ೧೯೪೦ರಲ್ಲಿ ನಾಜಿ ಜರ್ಮೆನಿಯು ಬ್ರಿಟಿಷ್ ದ್ವೀಪಗಳ ಮೇಲೆ ಅಕ್ರಮಣ ಮಾಡುವುದು ಸನ್ನಿಹಿತವಾದಾಗ, ಗಾಂಧಿಯವರು ಬ್ರಿಟಿಷ್‌ ಜನತೆಗೆ ಕೆಳಕಂಡ ಸಲಹೆಯನ್ನು ನೀಡಿದರು (ಶಾಂತಿ ಮತ್ತು ಯುದ್ಧಗಳಲ್ಲಿ ಅಹಿಂಸೆ ): "ನಿಮ್ಮನ್ನು ಅಥವಾ ಮಾನವಕುಲವನ್ನು ರಕ್ಷಿಸಲು ಯೋಗ್ಯವಲ್ಲದ ಶಸ್ತ್ರಗಳನ್ನು ನೀವು ಕೆಳಗಿರಿಸಬೇಕು ಎಂದು ನಾನು ಇಚ್ಛಿಸುವೆ. ನಿಮ್ಮ ಸ್ವತ್ತು ಎನ್ನಲಾದ ರಾಷ್ಟ್ರಗಳಿಂದ ಏನು ಬೇಕಾದರೂ ತೆಗೆದುಕೊಂಡು ಹೋಗಿರೆಂದು ನೀವು ಶ್ರೀಯುತ ಹಿಟ್ಲರ್ ಮತ್ತು ಮುಸೊಲಿನಿಯವರನ್ನು ಆಮಂತ್ರಿಸುತ್ತೀರಿ... ಈ ಮಹಾಶಯರು ನಿಮ್ಮ ಮನೆಗಳನ್ನು ಆಕ್ರಮಿಸಲು ಇಚ್ಛಿಸಿದಲ್ಲಿ, ನೀವು ಅವುಗಳನ್ನು ತೊರೆಯುತ್ತೀರಿ. ಅವರು ನಿಮಗೆ ಮುಕ್ತ ಹಾದಿ ನೀಡದಿದ್ದಲ್ಲಿ, ನೀವೇ ಸ್ವತ: - ಗಂಡು, ಹೆಣ್ಣು ಮತ್ತು ಮಕ್ಕಳೆಲ್ಲರೂ - ಹತ್ಯೆಗೀಡಾಗಲು ಅನುವು ಮಾಡಿಕೊಳ್ಳುವಿರಿ, ಆದರೆ ನೀವು ಎಂದಿಗೂ ಅವರಿಗೆ ಸ್ವಾಮಿನಿಷ್ಠೆ ತೋರಿಸಲು ಒಪ್ಪುವುದಿಲ್ಲ." ಯುದ್ಧದ ಆ ನಂತರ, ೧೯೪೬ರಲ್ಲಿ ನೀಡಿದ ಒಂದು ಸಂದರ್ಶನದಲ್ಲಿ ತೀವ್ರತೆಯ ಇನ್ನೊಂದು ಅಭಿಪ್ರಾಯವನ್ನು ಅವರು ನೀಡಿದರು: "ಯಹೂದ್ಯರು ಕಸಾಯಿಯ ಕತ್ತಿಗೆ ತಮ್ಮನ್ನು ಒಡ್ಡಿಕೊಳ್ಳಬೇಕಿತ್ತು. ಅವರು ಕಡಿದಾದ ಬಂಡೆಗಳಿಂದ ಸಮುದ್ರದೊಳಗೆ ಧುಮುಕಬೇಕಿತ್ತು." ಆದಾಗ್ಯೂ, ಈ ಮಟ್ಟದ ಅಹಿಂಸೆಗೆ ಅಸಾಮಾನ್ಯ ನಂಬಿಕೆ ಮತ್ತು ಧೈರ್ಯಗಳ ಅಗತ್ಯವಿದ್ದು, ಇವುಗಳು ಎಲ್ಲರಲ್ಲಿಯೂ ಇರುವುದಿಲ್ಲ ಎಂಬುದು ಗಾಂಧಿಯವರಿಗೆ ಗೊತ್ತಿತ್ತು. ಆದ್ದರಿಂದ, ರಣಹೇಡಿತನವನ್ನು ಮುಚ್ಚಿಡಲು ಬಳಸುವವರಾದಲ್ಲಿ, ಪ್ರತಿಯೊಬ್ಬರೂ ಅಹಿಂಸೆಯನ್ನು ನೆಚ್ಚಿಕೊಳ್ಳುವ ಅಗತ್ಯವಿಲ್ಲ ಎಂದು ಅವರು ಸಲಹೆ ನೀಡಿದರು: "ಶಸ್ತ್ರಗಳನ್ನು ಕೈಗೆತ್ತಿಕೊಳ್ಳಲು ಹೆದರಿದವರು ಅಥವಾ ಪ್ರತಿರೋಧವನ್ನು ಒಡ್ಡಲು ಅಶಕ್ತರಾದವರನ್ನು ತಮ್ಮ ಸತ್ಯಾಗ್ರಹ ಆಂದೋಲನದೆಡೆ ಆಕರ್ಷಿಸಲು ಗಾಂಧಿಯವರು ಇಚ್ಛಿಸುತ್ತಿರಲಿಲ್ಲ. 'ರಣಹೇಡಿತನ ಮತ್ತು ಹಿಂಸಾಚಾರದ ನಡುವೆ ಕೇವಲ ಒಂದೇ ಆಯ್ಕೆಯಿದ್ದಲ್ಲಿ, ನಾನು ಹಿಂಸಾಚಾರವನ್ನೇ ಆಯ್ಕೆ ಮಾಡಲು ಸಲಹೆ ನೀಡುವೆ ಎಂದು ನಂಬಿರುವೆ' ಎಂದು ಅವರು ಬರೆದಿದ್ದರು." "ಅಹಿಂಸೆಯ ವಿಚಾರದಲ್ಲಿ, ಅವರಿಗೆ ಅಹಿಂಸೆಗಿಂತಲೂ ಹಚ್ಚು ಶಕ್ತಿಯುಳ್ಳದ್ದು ಎದುರಾಗಿ, ಆ ಶಕ್ತಿಯ ಬಳಕೆಯಲ್ಲಿ ಅವರು ಹೆಚ್ಚು ಪರಿಣಿತರಾಗಿದ್ದಲ್ಲಿ, ಅವರು ಅಹಿಂಸೆಯನ್ನು ತ್ಯಜಿಸಿ, ಅವರು ಮುಂಚೆ ಕೈಯಲ್ಲಿ ಹಿಡಿದಿದ್ದ ಶಸ್ತ್ರಗಳನ್ನು ಪುನ: ಎತ್ತಿಕೊಳ್ಳಬಹುದು ಎಂದು ಪ್ರತಿಯೊಂದು ಸಭೆಯಲ್ಲಿಯೂ ನಾನು ಎಚ್ಚರಿಕೆಯನ್ನು ಪುನರುಚ್ಚರಿಸಿದ್ದೆ. ಹಿಂದೊಮ್ಮೆ ಮಹಾನ್‌ ಧೈರ್ಯಶಾಲಿಗಳಾಗಿದ್ದು ಬಾದಶಾಹ್‌ ಖಾನ್‌ರ ಪ್ರಭಾವದಿಂದಾಗಿ ರಣಹೇಡಿಗಳಾಗಿ ಬದಲಾದ ಅಥವಾ ಹಾಗೆ ಮಾಡಲ್ಪಟ್ಟ ಖುದಾಯಿ ಖಿದ್ಮತ್‌ಗಾರ್‌ಗಳಿಗೆ ಸಂಬಂಧಿಸಿ ಇದನ್ನು ಹೇಳಲೇಬಾರದು. ಅವರ ಧೈರ್ಯವು ಅವರು ಉತ್ತಮ ಗುರಿಗಾರರಾಗಿರುವುದರಲ್ಲಿ ಇಲ್ಲ, ಸಾವನ್ನು ಆಹ್ವಾನಿಸಿ ಗುಂಡುಗಳಿಗೆ ಎದೆಯೊಡ್ಡಲು ಸದಾ ಸಿದ್ಧರಿರುವುದರಲ್ಲಿದೆ. ಸಸ್ಯಾಹಾರ ತತ್ವ ಬಾಲಕನಾಗಿದ್ದಾಗ ಗಾಂಧಿಯವರು ಪ್ರಾಯೋಗಿಕವಾಗಿ ಮಾಂಸಾಹಾರ ಸೇವಿಸುತ್ತಿದ್ದರು. ಭಾಗಶ: ತಮ್ಮ ಅಂತರ್ಗತ ಕುತೂಹಲ ಮತ್ತು ಅವರ ಸ್ನೇಹಿತ ಮತ್ತು ಪೀರ್ ಶೇಕ್ ಮಹ್ತಾಬ್‌ನ ಒತ್ತಾಯವೇ ಇದಕ್ಕೆ ಕಾರಣ. ಭಾರತದಲ್ಲಿ, ಸಸ್ಯಾಹಾರದ ಕಲ್ಪನೆಯು ಹಿಂದೂ ಮತ್ತು ಜೈನ್ ಸಂಪ್ರದಾಯಗಳಲ್ಲಿ ಆಳವಾಗಿ ಬೇರೂರಿದೆ ಮತ್ತು ಅವರ ಹುಟ್ಟೂರಿನ ರಾಜ್ಯವಾದ ಗುಜರಾತ್‌ನಲ್ಲಿ ಬಹುಪಟ್ಟು ಹಿಂದುಗಳು ಸಸ್ಯಾಹಾರಿಗಳಾಗಿದ್ದರು ಮತ್ತು ಬಹುಶ: ಎಲ್ಲಾ ಜೈನರೂ ಸಸ್ಯಾಹಾರಿಗಳಾಗಿದ್ದಾರೆ. ಗಾಂಧಿ ಕುಟುಂಬವೂ ಸಹ ಇದಕ್ಕೆ ಹೊರತಾಗಿರಲಿಲ್ಲ. ಲಂಡನ್‌ನಲ್ಲಿ ವ್ಯಾಸಂಗಕ್ಕೆ ಹೊರಡುವ ಮುಂಚೆ, ತಾವು ಮಾಂಸಾಹಾರ, ಮದ್ಯ ಮತ್ತು ಸ್ವಚ್ಛಂದ ಸಂಭೋಗದಲ್ಲಿ ತೊಡಗುವುದಿಲ್ಲವೆಂದು ಗಾಂಧಿಯವರು ತಮ್ಮ ತಾಯಿ ಪುತಲೀಬಾಯಿ ಮತ್ತು ತಮ್ಮ ಚಿಕ್ಕಪ್ಪ ಬೇಚಾರ್ಜೀ ಸ್ವಾಮಿಯವರಿಗೆ ಮಾತು ಕೊಟ್ಟಿದ್ದರು. ಅವರು ತಮ್ಮ ಮಾತಿಗೆ ಬದ್ಧರಾಗಿದ್ದು ಪಥ್ಯಕ್ಕಿಂತಲೂ ಹೆಚ್ಚಿನ ಲಾಭವನ್ನೇ ಪಡೆದರು: ತಮ್ಮ ಜೀವಾವಧಿಯ ತತ್ವಗಳಿಗೆ ಒಂದು ನೆಲೆಯನ್ನು ಕಂಡುಕೊಂಡರು. ಗಾಂಧಿಯವರು ಪ್ರೌಢಾವಸ್ಥೆಗೆ ಬಂದಾಗ, ಅವರು ಕಟ್ಟುನಿಟ್ಟಾದ ಸಸ್ಯಾಹಾರಿಯಾದರು. ಈ ವಿಷಯದ ಬಗ್ಗೆ ದಿ ಮಾರಲ್ ಬೇಸಿಸ್ ಆಫ್ ವೆಜಿಟೇರಿಯನಿಸಮ್ ಎಂಬ ಪುಸ್ತಕವನ್ನು ಮತ್ತು ಹಲವು ಲೇಖನಗಳನ್ನು ಬರೆದರು, ಇವುಗಳಲ್ಲಿ ಕೆಲವನ್ನು ಲಂಡನ್‌ ಶಾಖಾಹಾರಿಗಳ ಸಂಘದ ಪ್ರಕಟಣೆಯಾದ ದಿ ವೆಜಿಟೇರಿಯನ್ ಎಂಬ ಪತ್ರಿಕೆಯಲ್ಲಿ ಪ್ರಕಟಿಸಲಾಯಿತು. ಈ ಅವಧಿಯಲ್ಲಿ ಯುವ ಗಾಂಧಿಯವರು ಹಲವು ಮಹಾನ್ ವ್ಯಕ್ತಿಗಳಿಂದ ಪ್ರೇರಿತರಾಗಿ ಲಂಡನ್ ಶಾಖಾಹಾರಿ ಸಂಘದ ಅಧ್ಯಕ್ಷ ಡಾ. ಜೊಸಿಯಾ ಓಲ್ಡ್‌ಫೀಲ್ಡ್‌ ಅವರ ಸ್ನೇಹಿತರಾದರು. ಹೆನ್ರಿ ಸ್ಟೀಫೆನ್ಸ್ ಸಾಲ್ಟ್‌ರವರ ಕೃತಿಯನ್ನು ಓದಿ ಮೆಚ್ಚಿದ ಯುವ ಮೋಹನ್‌ದಾಸ್‌ರು ಈ ಸಸ್ಯಾಹಾರ ಪ್ರಚಾರಕರೊಂದಿಗೆ ಪತ್ರವ್ಯವಹಾರ ನಡೆಸಿದರು. ತಮ್ಮ ಲಂಡನ್‌ ವಾಸ ಮತ್ತು ಆ ನಂತರದ ಕಾಲದಲ್ಲಿ, ಗಾಂಧಿಯವರು ಸಸ್ಯಾಹಾರವನ್ನು ಸಮರ್ಥಿಸು ತ್ತಿದ್ದರು. ಗಾಂಧಿಯವರ ಪ್ರಕಾರ ಸಸ್ಯಾಹಾರಿ ಪಥ್ಯವು ಶರೀರದ ಅಗತ್ಯವನ್ನು ಪೂರೈಸುವುದಷ್ಟೇ ಅಲ್ಲ, ಅದು ಆರ್ಥಿಕ ದೃಷ್ಟಿಯಿಂದಲೂ ಸೂಕ್ತವೆನಿಸಿತ್ತು. ಏಕೆಂದರೆ, ಮಾಂಸಾಹಾರವು ಸಾಮಾನ್ಯವಾಗಿ ದವಸ, ತರಕಾರಿ ಹಾಗೂ ಹಣ್ಣುಗಳಿಗಿಂತ ದುಬಾರಿಯಾಗಿತ್ತು. ಇಂದಿಗೂ ದುಬಾರಿಯಾಗಿವೆ. ಜೊತೆಗೆ, ಆ ಕಾಲದಲ್ಲಿ ಹಲವು ಭಾರತೀಯರು ಕಡಿಮೆ ಆದಾಯದೊಂದಿಗೆ ಬಹಳ ದುಸ್ತರದಿಂದ ತಮ್ಮ ಜೀವನವನ್ನು ಸಾಗಿಸುತ್ತಿದ್ದರು. ಹಾಗಾಗಿ ಸಸ್ಯಾಹಾರ ತತ್ವವನ್ನು ಅಧ್ಯಾತ್ಮಿಕತೆಯ ಪ್ರಯೋಗವಾಗಷ್ಟೇ ಅಲ್ಲ, ಪ್ರಾಯೋಗಿಕವಾಗಿಯೂ ನೋಡಲಾ ಗುತ್ತಿತ್ತು. ಅವರು ದೀರ್ಘಕಾಲ ಆಹಾರದಿಂದ ದೂರವಿರುತ್ತಿದ್ದ ಅವರು ಉಪವಾಸವನ್ನು ರಾಜಕೀಯ ಪ್ರತಿಭಟನೆಯ ರೂಪದಲ್ಲಿ ಬಳಸುತ್ತಿದ್ದರು. ತಮ್ಮ ಸಾವಿನ ತನಕ ಅಥವಾ ತಮ್ಮ ಬೇಡಿಕೆಗಳನ್ನು ಪೂರೈಸುವ ತನಕ ಅವರು ಆಹಾರವನ್ನು ನಿರಾಕರಿಸುತ್ತಿದ್ದರು. *ಸಸ್ಯಾಹಾರವು ಬ್ರಹ್ಮಚರ್ಯೆದೆಡೆಗಿನ ಅವರ ಆಳವಾದ ಬದ್ಧತೆಯ ಆರಂಭಿಕ ಹಂತವಾಗಿತ್ತು; ಬಾಯಿ ರುಚಿಯ ನಿಯಂತ್ರಣವಿಲ್ಲದೆ ಅವರು ಬ್ರಹ್ಮಚರ್ಯೆಯಲ್ಲಿ ಸಾಫಲ್ಯ ಪಡೆಯುವುದು ಕಷ್ಟಕರವಾಗುತ್ತಿತ್ತು ಎಂಬ ಅಂಶವು ಅವರ ಆತ್ಮಕಥೆಯಲ್ಲಿ ನಮೂದಿಸಲ್ಪಟ್ಟಿದೆ. ಗಾಂಧಿಯವರು ಫಲಾಹಾರಿಯಾಗಿದ್ದರು, ಆದರೆ ಅವರ ವೈದ್ಯರ ಸಲಹೆಯ ಮೇರೆಗೆ ಮೇಕೆಯ ಹಾಲನ್ನು ಸೇವಿಸಲು ಪ್ರಾರಂಭಿಸಿದರು. ಅವರು ಹಸುಗಳಿಂದ ಸಂಗ್ರಹಿಸಲಾದ ಹೈನು ಉತ್ಪಾದನೆಗಳನ್ನು ಸೇವಿಸುತ್ತಿರಲಿಲ್ಲ, ಏಕೆಂದರೆ ಹಾಲು ಸಂಗ್ರಹಿಸುವುದಕ್ಕಾಗಿ ಅನುಸರಿಸಲಾಗುತ್ತಿದ್ದ ಹಸುವಿಗೆ ಗಾಳಿ ಹೊಡೆಯುವ ಅಭ್ಯಾಸವು ಅವರಿಗೆ ಜಿಗುಪ್ಸೆ ತರಿಸಿತ್ತು. ಹೀಗಾಗಿ ಹಾಲು ಮಾನವನ ಸ್ವಾಭಾವಿಕ ಪಥ್ಯವಲ್ಲ ಎಂಬುದು ಅವರ ಮೊದಲಿನ ಅಭಿಪ್ರಾಯವಾಗಿತ್ತು, ಹಾಗೂ ನಿರ್ದಿಷ್ಟವಾಗಿ ಹೇಳುವುದಾದರೆ, ತಮ್ಮ ಮೃತ ತಾಯಿಗೆ ಮಾತು ಕೊಟ್ಟಿದ್ದೂ ಇದಕ್ಕೊಂದು ಕಾರಣವಾಗಿತ್ತು. ಬ್ರಹ್ಮಚರ್ಯೆ ಗಾಂಧಿಯವರು ೧೬ನೇ ವರ್ಷದವರಿದ್ದಾಗ ಅವರ ತಂದೆಯ ಆರೋಗ್ಯ ಸ್ಥಿತಿ ಹದಗೆಟ್ಟಿತು. ತಮ್ಮ ಪೋಷಕರನ್ನು ತುಂಬಾ ಆರಾಧಿಸುತ್ತಿದ್ದ ಕಾರಣ, ಎಲ್ಲ ತರಹದ ಅನಾರೋಗ್ಯ ಸಮಯಗಳಲ್ಲಿಯೂ ಅವರು ತಂದೆಯ ಜೊತೆಯಲ್ಲಿ ಇರುತ್ತಿದ್ದರು. ಆದಾಗ್ಯೂ, ಒಂದು ರಾತ್ರಿ, ಗಾಂಧಿ ಯವರ ಚಿಕ್ಕಪ್ಪನವರು ಗಾಂಧಿಯವರಿಗೆ ಸ್ವಲ್ಪ ಸಮಯ ಬಿಡುವು ಮಾಡಿಕೊಳ್ಳಲು ಅನುವು ಮಾಡಿಕೊಟ್ಟರು. ಅವರು ತಮ್ಮ ಶಯ್ಯಾಕೋಣೆಗೆ ಹೋದಾಗ ವಿಷಯಲೋಲುಪದಾಸೆಗೆ ಒಳಗಾಗಿ ತಮ್ಮ ಪತ್ನಿಯೊಂದಿಗೆ ಮೈಥುನದಲ್ಲಿ ತೊಡಗಿದರು. ಆ ನಂತರ ಸೇವಕನೊಬ್ಬನು ಬಂದು ಗಾಂಧಿಯವರ ತಂದೆಯವರು ಆಗಷ್ಟೇ ನಿಧನರಾದದ್ದನ್ನು ತಿಳಿಸಿದನು. ಗಾಂಧಿಯವರಿಗೆ ಅತೀವ ಪಾಪಪ್ರಜ್ಞೆ ಉಂಟಾಗಿ, ಸ್ವತ: ತಮ್ಮನ್ನು ತಾವು ಕ್ಷಮಿಸಲಾಗದ ಸ್ಥಿತಿಯಲ್ಲಿದ್ದರು. ಈ ಘಟನೆಯನ್ನು ಅವರು "ದುಪ್ಪಟ್ಟು ಅವಮಾನ" ಎಂದು ಉಲ್ಲೇಖಿಸಿದರು. ವಿವಾಹಿತರಾಗಿದ್ದರೂ ಸಹ, ತಮ್ಮ ೩೬ನೆಯ ವಯಸ್ಸಿನಲ್ಲಿಯೇ ಬ್ರಹ್ಮಚರ್ಯೆಯನ್ನಾಚರಿಸುವಲ್ಲಿ ಈ ಘಟನೆಯು ಗಾಂಧಿಯವರ ಮೇಲೆ ಬಹಳಷ್ಟು ಪ್ರಭಾವ ಬೀರಿತು. ಸಂಭೋಗತ್ಯಾಗ ಮತ್ತು ಸಂನ್ಯಾಸದೊಂದಿಗೆ ಹೆಚ್ಚಿನ ಸಂಬಂಧವನ್ನು ಹೊಂದಿರುವ ಆಧ್ಯಾತ್ಮಿಕ ಮತ್ತು ಕಾರ್ಯರೂಪದ ಶುದ್ಧತೆಗಳನ್ನೊಳಗೊಂಡ ಬ್ರಹ್ಮಚರ್ಯೆಯ ತತ್ವದಿಂದ ಅವರ ಈ ನಿರ್ಧಾರವು ಆಳವಾಗಿ ಪ್ರಭಾವಿತವಾಗಿತ್ತು. ಬ್ರಹ್ಮಚರ್ಯೆಯೇ ದೇವರ ಸನಿಹಕ್ಕೆ ಹೋಗಲು ಸೂಕ್ತ ಮಾರ್ಗ ಹಾಗೂ ಆತ್ಮಸಾಕ್ಷಾತ್ಕಾರಕ್ಕೆ ಪ್ರಾಥಮಿಕ ಅಡಿಪಾಯ ಎಂದು ಗಾಂಧಿಯವರು ಪರಿಗಣಿಸಿದ್ದರು. ಅವರ ಆತ್ಮಚರಿತ್ರೆಯಲ್ಲಿ ಅವರ ಕಾಮುಕ ಬೇಡಿಕೆಗಳ ವಿರುದ್ಧದ ಸಮರ ಮತ್ತು ಅವರ ಬಾಲ್ಯವಧು ಕಸ್ತೂರಬಾ ರೊಂದಿಗಿನ ತೀವ್ರ ಈರ್ಷ್ಯೆಯ ಘಟನೆಗಳನ್ನು ವಿವರಿಸಿದ್ದಾರೆ. ಭೋಗಾಪೇಕ್ಷೆಗಿಂತಲೂ ಹೆಚ್ಚಾಗಿ ಪ್ರೀತಿಸುವುದನ್ನು ಕಲಿಯಲು ಬ್ರಹ್ಮಚಾರಿಯಾಗಿ ಉಳಿಯುವುದು ತಮ್ಮ ವೈಯಕ್ತಿಕ ಹೊಣೆ ಎಂದು ಅವರು ತಿಳಿದಿದ್ದರು. ಗಾಂಧಿಯವರ ಪ್ರಕಾರ ಬ್ರಹ್ಮಚರ್ಯೆಯ ಎಂಬುದು "ಆಲೋಚನೆ, ಮಾತು, ಕೃತಿಗಳ ಮೂಲಕ ನಡೆಸುವ ಇಂದ್ರಿಯಗಳ ನಿಗ್ರಹ"ವಾಗಿತ್ತು. ಸರಳತೆ ಸಮಾಜ ಸೇವೆಯಲ್ಲಿ ನಿರತನಾಗಿರುವ ವ್ಯಕ್ತಿಯು ಸರಳ ಜೀವನ ನಡೆಸತಕ್ಕದ್ದು, ಇದು ಬ್ರಹ್ಮಚರ್ಯೆಯತ್ತ ಒಯ್ಯುತ್ತದೆ ಎಂದು ಗಾಂಧಿಯವರು ಮನ:ಪೂರ್ವಕವಾಗಿ ನಂಬಿದ್ದರು. ಅವರು ದಕ್ಷಿಣ ಆಫ್ರಿಕಾದಲ್ಲಿ ಅನುಸರಿಸುತ್ತಿದ್ದ ಪಾಶ್ಚಾತ್ಯ ಜೀವನಶೈಲಿಯನ್ನು ತ್ಯಜಿಸುವ ಮೂಲಕ ಅವರ ಸರಳತೆಯು ಆರಂಭವಾಯಿತು. ಅನಗತ್ಯ ಖರ್ಚುಗಳನ್ನು ಕಡಿತಗೊಳಿಸಿ, ಸರಳ ಜೀವನ ಶೈಲಿಯನ್ನು ರೂಪಿಸಿಕೊಂಡು, ತಮ್ಮ ಉಡುಪುಗಳನ್ನು ತಾವೇ ಒಗೆದುಕೊಳ್ಳುತ್ತಿದ್ದ ಅವರು, ಇದು "ತಮ್ಮನ್ನೇ ಸೊನ್ನೆಗೆ ಕುಗ್ಗಿಸಿಕೊಳ್ಳುವ" ವಿಧಾನ ಎನ್ನುತ್ತಿದ್ದರು. ಸಮುದಾಯಕ್ಕೆ ತಾವು ಸಲ್ಲಿಸಿದ್ದ ನಿಷ್ಥಾವಂತ ಸೇವೆಗೆ ಕೃತಜ್ಞತೆ ವ್ಯಕ್ತಪಡಿಸಿ ತಮ್ಮ ಜನ್ಮಸಂಬಂಧಿಗಳು ನೀಡಿದ್ದ ಉಡುಗೊರೆಗಳನ್ನು ಅವರು ಒಂದು ಸನ್ನಿವೇಶದಲ್ಲಿ ಹಿಂದಿರುಗಿಸಿದರು. ಗಾಂಧಿಯವರು ಪ್ರತಿ ವಾರದಲ್ಲೂ ಒಂದು ದಿನ ಮೌನ ವ್ರತವನ್ನು ಆಚರಿಸುತ್ತಿದ್ದರು. ಮಾತನಾಡುವಿಕೆಯಿಂದ ದೂರವುಳಿಯುವ ಅಭ್ಯಾಸದಿಂದಾಗಿ ತಮ್ಮಲ್ಲಿ ಆಂತರಿಕ ಶಾಂತಿಯು ತುಂಬಿಕೊಂಡಿದೆ ಎಂದು ಅವರು ನಂಬಿದ್ದರು. ಹಿಂದೂ ತತ್ವಗಳಾದ ಮೌನ (ಸಂಸ್ಕೃತ: — ನಿಶ್ಯಬ್ದ) ಮತ್ತು ಶಾಂತಿ (ಸಂಸ್ಕೃತ: — ಶಾಂತಿ) ಗಳಿಂದ ಈ ಪ್ರಭಾವವನ್ನು ಸೆಳೆಯಲಾಗಿತ್ತು. ಅಂತಹ ದಿನಗಳಂದು ಅವರು ಕಾಗದದ ಮೇಲೆ ಬರೆಯುವುದರ ಮೂಲಕ ಇತರರೊಂದಿಗೆ ಸಂವಹನ ಮಾಡುತ್ತಿದ್ದರು. ತಮ್ಮ ೩೭ನೆಯ ವಯಸ್ಸಿನಿಂದ ಮೂರೂವರೆ ವರ್ಷಗಳವರೆಗೆ ಗಾಂಧಿಯವರು ವಾರ್ತಾಪತ್ರಿಕೆಗಳನ್ನು ಓದಲು ನಿರಾಕರಿಸುತ್ತಿದ್ದರು. ಏಕೆಂದರೆ ತಮ್ಮ ಆಂತರಿಕ ಅಶಾಂತಿಗಿಂತ ವಿಶ್ವದ ವಿದ್ಯಮಾನಗಳ ಪ್ರಕ್ಷುಬ್ಧ ಸ್ಥಿತಿಯು ತಮಗೆ ಹೆಚ್ಚು ಗೊಂದಲವನ್ನುಂಟುಮಾಡುತ್ತವೆ ಎಂಬುದು ಅವರ ಸಮರ್ಥನೆಯಾಗಿತ್ತು. ಜಾನ್ ರಸ್ಕಿನ್‌ರವರ ಅನ್‌ಟು ದಿಸ್‌ ಲಾಸ್ಟ್‌ ಕೃತಿಯನ್ನು ಓದಿದ ನಂತರ ತಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳಲು ಹಾಗೂ ಫಿನಿಕ್ಸ್ ಸೆಟ್ಲ್‌ಮೆಂಟ್‌ ಎಂಬ ಸಮುದಾಯವೊಂದನ್ನು ರೂಪಿಸಲು ಅವರು ನಿರ್ಧರಿಸಿ ದರು. ದಕ್ಷಿಣ ಆಫ್ರಿಕಾದಲ್ಲಿ ಕಾನೂನು ವೃತ್ತಿಯನ್ನು ಯಶಸ್ವಿಯಾಗಿ ನಡೆಸಿ ಭಾರತಕ್ಕೆ ಮರಳಿದ ನಂತರ ಗಾಂಧಿಯವರು ತಮ್ಮಲ್ಲಿದ್ದ ಸಂಪತ್ತು ಹಾಗೂ ಯಶಸ್ಸನ್ನು ಬಿಂಬಿಸುವಂತಹ ಪಾಶ್ಚಾತ್ಯ ಶೈಲಿಯ ಉಡುಪುಗಳನ್ನು ಧರಿಸಿವುದನ್ನು ಬಿಟ್ಟರು. ಭಾರತದಲ್ಲಿನ ಅತಿ ಬಡ ವ್ಯಕ್ತಿಯೂ ತಮ್ಮನ್ನು ಒಪ್ಪುವ ರೀತಿಯಲ್ಲಿ ಉಡುಪು ಧರಿಸಿದ ಅವರು, ತನ್ಮೂಲಕ ಮನೆಯಲ್ಲಿ ನೂತ ನೂಲಿನ ಬಟ್ಟೆ (ಖಾದಿ )ಯ ಬಳಕೆಯನ್ನು ಸಮರ್ಥಿಸಿದರು. ತಾವೇ ಸ್ವತಃ ನೂತ ನೂಲಿನಿಂದ ತಮ್ಮದೇ ಉಡುಪುಗಳನ್ನು ನೇಯುವ ಅಭ್ಯಾಸವನ್ನು ಅಳವಡಿಸಿಕೊಂಡ ಗಾಂಧಿಯವರು ಹಾಗೂ ಅವರ ಅನುಯಾಯಿಗಳು, ಇತರರೂ ಹಾಗೆಯೇ ಮಾಡುವಂತೆ ಪ್ರೇರೇಪಿಸಿದರು. ನಿರುದ್ಯೋಗದ ಕಾರಣದಿಂದಾಗಿ ಭಾರತೀಯ ಕೆಲಸಗಾರರು ಕೆಲಸವಿಲ್ಲದೆ ಕೂರಬೇಕಾಗಿ ಬರುತ್ತಿದ್ದಾಗ ಬ್ರಿಟಿಷ್ ಹಿತಾಸಕ್ತಿಗಳ ಸ್ವಾಮ್ಯತೆಯಲ್ಲಿದ್ದ ಕೈಗಾರಿಕಾ ತಯಾರಕರಿಂದ ತಮ್ಮ ಉಡುಪುಗಳನ್ನು ಆಗಾಗ್ಗೆ ಖರೀದಿಸುತ್ತಿದ್ದರು. ಭಾರತೀಯರು ತಮ್ಮ ಉಡುಪುಗಳನ್ನು ತಾವೇ ತಯಾರಿಸಿ ದಲ್ಲಿ, ಭಾರತದಲ್ಲಿನ ಬ್ರಿಟಿಷ್ ಆಡಳಿತಕ್ಕೆ ಆರ್ಥಿಕ ಪೆಟ್ಟು ನೀಡಬಹುದೆಂಬುದು ಗಾಂಧಿಯವರ ಅಭಿಪ್ರಾಯವಾಗಿತ್ತು. ಇದರ ಪರಿಣಾಮವಾಗಿ, ನೂಲುವ ರಾಟೆಯನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಧ್ವಜದಲ್ಲಿ ಅಳವಡಿಸಲಾಯಿತು. ಆ ನಂತರ, ತಮ್ಮ ಜೀವನದ ಸರಳತೆಯನ್ನು ವ್ಯಕ್ತಪಡಿಸಲು ಅವರು ತಮ್ಮ ಜೀವನವುದ್ದಕ್ಕೂ ಧೋತಿಯನ್ನು ಉಡುತ್ತಿದ್ದರು. ಧರ್ಮಶ್ರದ್ಧೆ ಹಿಂದೂ ಧರ್ಮದಲ್ಲಿ ಜನಿಸಿದ ಗಾಂಧಿಯವರು, ತಮ್ಮ ತತ್ವಗಳಲ್ಲಿ ಬಹುಪಾಲನ್ನು ಹಿಂದೂ ಧರ್ಮದಿಂದ ಪಡೆದುಕೊಂಡು, ತಮ್ಮ ಜೀವನದುದ್ದಕ್ಕೂ ಹಿಂದೂಧರ್ಮವನ್ನು ಪರಿಪಾಲಿಸಿದರು. ಓರ್ವ ಸಾಮಾನ್ಯ ಹಿಂದುವಾಗಿ, ಅವರು ಎಲ್ಲಾ ಧರ್ಮಗಳನ್ನೂ ಸಮಾನ ದೃಷ್ಟಿಯಲ್ಲಿ ಕಂಡರು, ಬೇರೊಂದು ಧರ್ಮಕ್ಕೆ ತಮ್ಮನ್ನು ಮತಾಂತರಗೊಳಿಸುವ ಎಲ್ಲ ಯತ್ನಗಳನ್ನೂ ಅವರು ತಳ್ಳಿಹಾಕಿದರು. ಅವರು ಅತ್ಯಾಸಕ್ತ ದೇವತಾಶಾಸ್ತ್ರಜ್ಞರಾಗಿದ್ದು ಎಲ್ಲಾ ಪ್ರಮುಖ ಧರ್ಮಗಳ ಬಗ್ಗೆಯೂ ವಿಸ್ತೃತವಾಗಿ ಓದಿದ್ದರು. ಹಿಂದೂ ಧರ್ಮದ ಬಗ್ಗೆ ಅವರ ಅಭಿಪ್ರಾಯಗಳು ಹೀಗಿದ್ದವು: ನನಗೆ ತಿಳಿದಿರುವಂತೆ ಹಿಂದೂ ಧರ್ಮವು ನನ್ನ ಆತ್ಮಕ್ಕೆ ತೃಪ್ತಿ ನೀಡಿ, ನನ್ನನ್ನು ಸಂಪೂರ್ಣವಾಗಿ ಆವರಿಸಿಕೊಂಡಿದೆ...ಸಂಶಯಗಳು ನನ್ನನ್ನು ಕಾಡಿದಾಗ, ನಿರಾಶೆಗಳು ನನ್ನತ್ತ ದುರುಗುಟ್ಟಿ ನೋಡಿದಾಗ ಮತ್ತು ಕ್ಷಿತಿಜದಲ್ಲಿ ಬೆಳಕಿನ ಒಂದೇ ಒಂದು ಕಿರಣವನ್ನೂ ನಾನು ಕಾಣದಾದಾಗ, ನಾನು ಭಗವದ್ಗೀತೆ ಯ ಮೊರೆ ಹೋಗಿ, ನನಗೆ ಸಾಂತ್ವನ ನೀಡುವ ಒಂದು ಪಂಕ್ತಿಯನ್ನು ಕಂಡು, ತಡೆಯಲಾಗದಂತಹ ದುಃಖದ ನಡುವೆಯೂ ಮುಗುಳ್ನಗಲಾರಂಭಿಸುವೆ. ನನ್ನ ಜೀವನದ ತುಂಬ ದುರಂತಗಳೇ ತುಂಬಿಕೊಂಡಿವೆ. ಒಂದು ವೇಳೆ ಗೋಚರಿಸುವ ಮತ್ತು ಅಳಿಸಲಾಗದ ಯಾವುದೇ ಪರಿಣಾಮವನ್ನು ನನ್ನಲ್ಲಿ ಅವು ಉಳಿಸಿಲ್ಲವಾದಲ್ಲಿ ಅದಕ್ಕೆ ಭಗವದ್ಗೀತೆಯಲ್ಲಿನ ಉಪದೇಶಗಳೇ ಕಾರಣ." ಗಾಂಧಿಯವರು ಭಗವದ್ಗೀತೆ ಯ ಕುರಿತು ಗುಜರಾತಿಯಲ್ಲಿ ಒಂದು ವ್ಯಾಖ್ಯಾನವನ್ನು ಬರೆದರು. ಗುಜರಾತಿ ಭಾಷೆಯಲ್ಲಿದ್ದ ಹಸ್ತಪ್ರತಿಯನ್ನು ಮಹದೇವ್ ದೇಸಾಯಿಯವರು ಆಂಗ್ಲಭಾಷೆ‌ಗೆ ಭಾಷಾಂತರಿಸಿ ಹೆಚ್ಚುವರಿ ಪ್ರಸ್ತಾವನೆ ಮತ್ತು ವ್ಯಾಖ್ಯಾನಗಳನ್ನು ಸೇರಿಸಿದರು. ಗಾಂಧಿಯವರ ಮುನ್ನುಡಿಯೊಂದಿಗೆ ಅದು ೧೯೪೬ರಲ್ಲಿ ಪ್ರಕಟಗೊಂಡಿತು. ಪ್ರತಿಯೊಂದು ಧರ್ಮದ ತಿರುಳಲ್ಲಿಯೂ ಸತ್ಯ ಮತ್ತು ಪ್ರೀತಿ (ಸಹಾನುಭೂತಿ, ಅಹಿಂಸೆ ಮತ್ತು ಸನ್ಮಾರ್ಗ ಸೂತ್ರ) ಇರುತ್ತವೆಂದು ಗಾಂಧಿಯವರು ನಂಬಿದ್ದರು. ತಮ್ಮ ಧರ್ಮವೂ ಸೇರಿದಂತೆ ಎಲ್ಲ ಧರ್ಮಗಳಲ್ಲಿನ ಆಷಾಢಭೂತಿತನ, ದುರಾಚಾರ ಹಾಗೂ ಮತತತ್ವಗಳನ್ನು ಅವರು ಪ್ರಶ್ನಿಸಿದರು ಮತ್ತು ಧರ್ಮದಲ್ಲಿನ ಸಾಮಾಜಿಕ ಸುಧಾರಣೆಗೆ ಸಂಬಂಧಿಸಿ ಅವರು ಓರ್ವ ದಣಿವರಿಯದ ಸಮರ್ಥಕರಾಗಿದ್ದರು. ವಿವಿಧ ಧರ್ಮಗಳ ಬಗ್ಗೆ ಅವರ ಕೆಲ ಟಿಪ್ಪಣಿಗಳು ಹೀಗಿವೆ: "ನಾನು ಕ್ರೈಸ್ತ ಧರ್ಮವನ್ನು ಪರಿಪೂರ್ಣವೆಂದಾಗಲೀ ಅಥವಾ ಮಹೋನ್ನತ ಧರ್ಮವೆಂದಾಗಲೀ ಒಪ್ಪಲು ಸಾಧ್ಯವಾಗದಿದ್ದಲ್ಲಿ, ಅದೇ ರೀತಿಯಲ್ಲಿ ಹಿಂದೂ ಧರ್ಮವೂ ನನ್ನ ಮನವೊಪ್ಪಿಸಲಾರದು.ಹಿಂದೂ ಧರ್ಮದಲ್ಲಿನ ದೋಷಗಳು ತುರ್ತಾಗಿ ನನಗೆ ಎದ್ದು ಕಾಣುತ್ತಿದ್ದವು. ಅಸ್ಪೃಶ್ಯತೆಯು ಹಿಂದೂ ಧರ್ಮದ ಒಂದು ಭಾಗವಾಗಿರಬಹುದಾಗಿದ್ದಲ್ಲಿ ಅದೊಂದು ಕೊಳೆತ ಭಾಗ ಅಥವಾ ದುರ್ಮಾಂಸವಾಗಿರಬಹುದು. ಒಳಪಂಗಡ ಮತ್ತು ಜಾತಿಗಳ ಬಾಹುಳ್ಯದ ಮೂಲೋದ್ದೇಶ ವನ್ನು ನನಗೆ ಅರ್ಥಮಾಡಿಕೊಳ್ಳಲಾಗಿಲ್ಲ. ವೇದಗಳು ದೇವರ ಸ್ಪೂರ್ತಿಯುತ ವಚನಗಳು ಎಂದು ಹೇಳುವುದರ ಅರ್ಥವೇನಿತ್ತು? ಒಂದು ವೇಳೆ ಪ್ರೇರಿತವಾಗಿದ್ದಲ್ಲಿ, ಬೈಬಲ್‌ ಮತ್ತು ಕೊರಾನ್ ಸಹ ಯಾಕಾಗಿರಬಾರದು? ಕ್ರಿಶ್ಚಿಯನ್ ಸ್ನೇಹಿತರಂತೆಯೇ ಮುಸ್ಲಿಮ್‌ ಸ್ನೇಹಿತರೂ ಸಹ ನನ್ನನ್ನು ಮತಾಂತರಗೊಳಿಸಲು ಯತ್ನಿಸಿದರು. ಇಸ್ಲಾಮ್‌ ಧರ್ಮವನ್ನು ಅಧ್ಯಯನ ಮಾಡಲು ಅಬ್ದುಲ್ಲಾ ಸೇಠ್‌ ನನಗೆ ಒತ್ತಾಯಿಸುತ್ತಲೇ ಇರುತ್ತಿದ್ದ ಮತ್ತು ಅದರ ವಿಶಿಷ್ಟ ಗುಣಗಳ ಬಗ್ಗೆ ಹೇಳಲು ಅವನ ಬಳಿ ಏನಾದರೊಂದು ಇರುತ್ತಿತ್ತು." (ಮೂಲ: ಅವರ ಆತ್ಮಚರಿತ್ರೆ) "ನಾವು ನೈತಿಕ ಆಧಾರವನ್ನು ಕಳೆದುಕೊಂಡಕೂಡಲೇ ನಮ್ಮ ಧಾರ್ಮಿಕತೆ ಕೊನೆಗೊಂಡಂತೆಯೇ."ನೈತಿಕತೆಯನ್ನು ಮೀರಿಸುವಂಥಾದ್ದು ಧರ್ಮದಲ್ಲಿ ಏನೂ ಇಲ್ಲ. ಉದಾಹರಣೆಗೆ, ಮಾನವನು ಸುಳ್ಳನಾಗಿ, ಕ್ರೂರಿಯಾಗಿ ಅಥವಾ ಅಸಂಯಮಿಯಾಗಿದ್ದುಕೊಂಡು, ದೇವರು ತನ್ನೊಂದಿಗಿದ್ದಾನೆಂದು ಹೇಳಿಕೊಳ್ಳಲಾಗದು." "ಮಹಮ್ಮದ್‌ರ ನುಡಿಗಳು ಕೇವಲ ಮುಸ್ಲಿಮರಿಗೆ ಮಾತ್ರವೇ ಅಲ್ಲದೇ ಇಡೀ ಮಾನವ ಕುಲಕ್ಕೇ ಬುದ್ಧಿವಂತಿಕೆಯ ನಿಧಿಯಾಗಿವೆ." "ನಿಮ್ಮ ಕ್ರಿಸ್ತನನ್ನು ನಾನು ಇಷ್ಟಪಡುವೆ, ಆದರೆ ನಿಮ್ಮ ಕ್ರಿಶ್ಚಿಯನ್ನರನ್ನು ನಾನು ಇಷ್ಟಪಡುವುದಿಲ್ಲ." ಅವರ ಜೀವನದ ಆ ನಂತರದ ಹಂತದಲ್ಲಿ, ತಾವು ಹಿಂದೂ ಧರ್ಮದವರೇ ಎಂದು ಅವರನ್ನು ಕೇಳಿದಾಗ, ಅವರು ಉತ್ತರಿಸಿದ್ದು ಹೀಗೆ: "ಹೌದು. ನಾನೊಬ್ಬ ಹಿಂದು. ನಾನು ಒಬ್ಬ ಕ್ರೈಸ್ತ, ಒಬ್ಬ ಮುಸ್ಲಿಮ್‌, ಒಬ್ಬ ಬೌದ್ಧ ಮತ್ತು ಒಬ್ಬ ಯಹೂದಿ ಸಹ." ( ನಾನು ಧಾರ್ಮಿಕ ತತ್ವದ ಅಮೃತವನ್ನು ನನ್ನ ಹೃದಯ ತುಂಬುವಷ್ಟು ಕುಡಿದಿದ್ದೇನೆ ಅದನ್ನು ನನಗೆ ಕರುಣಿಸಿ ಕೊಟ್ಟವರು ಶ್ರೀಮದ್ ರಾಜ್ ಚಂದ್ ಭಾಯಿ, ಎಂದಿದ್ದಾರೆ.)(ಇಂಗ್ಲಿಷ್ ತಾಣ ನೋಡಿ) ಪರಸ್ಪರ ಗೌರವಾದರವಿದ್ದರೂ ಸಹ, ಗಾಂಧಿಯವರು ಮತ್ತು ರವೀಂದ್ರನಾಥ್ ಟ್ಯಾಗೂರ್‌ರು ಒಂದಕ್ಕಿಂತಲೂ ಹೆಚ್ವು ಬಾರಿ ಸುದೀರ್ಘ ಚರ್ಚೆಗಳಲ್ಲಿ ಭಾಗಿಯಾಗಿದ್ದರು. ಈ ಚರ್ಚೆಗಳು ಅಂದಿನ ಇಬ್ಬರು ಅತ್ಯಂತ ಪ್ರಖ್ಯಾತ ಭಾರತೀಯರ ನಡುವಿನ ತಾತ್ವಿಕ ಭಿನ್ನಾಭಿಪ್ರಾಯಗಳಿಗೆ ಉದಾಹರಣೆಯಾಗಿವೆ. ೧೯೩೪ರ ಜನವರಿ ೧೫ರಂದು ಬಿಹಾರದಲ್ಲಿ ಭೂಕಂಪವೊಂದು ಸಂಭವಿಸಿ ಬೃಹತ್ ಪ್ರಮಾಣದ ನಷ್ಟ ಹಾಗೂ ಪ್ರಾಣಹಾನಿಯನ್ನು ಉಂಟುಮಾಡಿತು. ಅಸ್ಪೃಶ್ಯರನ್ನು ತಮ್ಮ ದೇವಾಲಯಗಳೊಳಗೆ ಬಿಟ್ಟುಕೊಳ್ಳದಿರುವ ಮೂಲಕ ಮೇಲು ಜಾತಿಯ ಹಿಂದೂಗಳು ಮಾಡಿದ ಪಾಪದ ಫಲವಿದು ಎಂದು ಗಾಂಧಿಯವರು ಇದನ್ನು ಸಮರ್ಥಿಸಿದರು (ಅಸ್ಪೃಶ್ಯರನ್ನು ಹರಿಜನರು, ಕೃಷ್ಣನ ಜನರು ಎಂದು ಉಲ್ಲೇಖಿಸುವ ಮೂಲಕ ಅಸ್ಪೃಶ್ಯರ ಭವಿತವ್ಯವನ್ನು ಸುಧಾರಿಸುವ ಉದ್ದೇಶಕ್ಕೆ ಗಾಂಧಿಯವರು ಬದ್ಧರಾಗಿದ್ದರು). ಅಸ್ಪೃಶ್ಯತೆಯ ಪದ್ಧತಿಯು ಅದೆಷ್ಟೇ ಅಸಂಗತವಾಗಿರಲಿ, ಭೂಕಂಪವು ಕೇವಲ ನೈಸರ್ಗಿಕ ಶಕ್ತಿಗಳಿಂದ ಮಾತ್ರ ಆಗಬಲ್ಲದೇ ಹೊರತು, ನೈತಿಕತೆಯ ಕಾರಣಗಳಿಂದಲ್ಲ ಎಂದು ಹೇಳಿದ ಟ್ಯಾಗೂರ್‌ರು ಗಾಂಧಿಯವರ ನಿಲುವನ್ನು ಭಾವೋದ್ವೇಗದಿಂದ ವಿರೋಧಿಸಿದರು. ಬರಹಗಳು ಗಾಂಧಿಯವರು ಓರ್ವ ಸಮೃದ್ಧ ಬರಹಗಾರರಾಗಿದ್ದರು. ದಕ್ಷಿಣ ಆಫ್ರಿಕಾದಲ್ಲಿದ್ದಾಗ ಇಂಡಿಯನ್ ಒಪೀನಿಯನ್‌ ಪತ್ರಿಕೆ, ಭಾರತಕ್ಕೆ ಮರಳಿದ ನಂತರ ಗುಜರಾತಿ, ಹಿಂದಿ ಮತ್ತು ಆಂಗ್ಲಭಾಷೆಗಳಲ್ಲಿ ಹರಿಜನ್‌ ಪತ್ರಿಕೆ, ಆಂಗ್ಲಭಾಷೆಯಲ್ಲಿ ಯಂಗ್ ಇಂಡಿಯಾ ಪತ್ರಿಕೆ ಮತ್ತು ನವಜೀವನ್‌‌‌ ಎಂಬ ಗುಜರಾತಿ ಮಾಸಪತ್ರಿಕೆಯೂ ಸೇರಿದಂತೆ ಹಲವು ವೃತ್ತಪತ್ರಿಕೆಗಳಿಗೆ ದಶಕಗಳ ಕಾಲ ಅವರು ಸಂಪಾದಕರಾಗಿದ್ದರು. ಕಾಲಾನಂತರದಲ್ಲಿ ನವಜೀವನ್‌ ಪತ್ರಿಕೆಯು ಹಿಂದಿಯಲ್ಲಿಯೂ ಪ್ರಕಟಗೊಂಡಿತು. ಇದರ ಜೊತೆಗೆ, ಅವರು ಹೆಚ್ಚೂ ಕಡಿಮೆ ಪ್ರತಿ ದಿನವೂ ವ್ಯಕ್ತಿಗಳಿಗೆ ಹಾಗೂ ವೃತ್ತಪತ್ರಿಕೆಗಳಿಗೆ ನಿಯಮಿತವಾಗಿ ಪತ್ರ ಬರೆಯುತ್ತಿದ್ದರು. ತಮ್ಮ ಆತ್ಮಚರಿತ್ರೆಯಾದ ಆನ್‌ ಆಟೋಬಯೊಗ್ರಫಿ ಆಫ್ ಮೈ ಎಕ್ಸ್‌ಪರಿಮೆಂಟ್ಸ್‌ ವಿತ್‌ ಟ್ರೂತ್‌ ಸೇರಿದಂತೆ ಇನ್ನೂ ಕೆಲವು ಪುಸ್ತಕಗಳನ್ನೂ ಗಾಂಧಿಯವರು ಬರೆದಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿನ ತಮ್ಮ ಹೋರಾಟದ ಕುರಿತಾದ ಸತ್ಯಾಗ್ರಹ ಇನ್‌ ಸೌತ್‌ ಆಫ್ರಿಕಾ ಎಂಬ ಪುಸ್ತಕ, ಹಿಂದ್ ಸ್ವರಾಜ್ ಆರ್‌ ಇಂಡಿಯನ್‌ ಹೋಮ್‌ ರೂಲ್‌ ಎಂಬ ರಾಜಕೀಯ ಕಿರುಹೊತ್ತಿಗೆ ಅವುಗಳಲ್ಲಿ ಸೇರಿದ್ದು, ಜಾನ್‌ ರಸ್ಕಿನ್‌ರವರ ಅನ್‌ಟು ದಿಸ್ ಲಾಸ್ಟ್ ನ್ನು ಕೃತಿಯನ್ನು ಗುಜರಾತಿ ಭಾಷೆಗೆ ಭಾವಾನುವಾದ ಮಾಡಿದ್ದಾರೆ. ಈ ಕೊನೆಯ ಪ್ರಬಂಧವನ್ನು ಅರ್ಥಶಾಸ್ತ್ರದ ಕುರಿತಾದ ಅವರ ಪಠ್ಯಕ್ರಮ ಎಂದು ಪರಿಗಣಿಸಬಹುದು. ಅವರು ಸಸ್ಯಾಹಾರ ಪದ್ಧತಿ, ಆಹಾರ ಕ್ರಮ ಮತ್ತು ಆರೋಗ್ಯ, ಧರ್ಮ, ಸಮಾಜ ಸುಧಾರಣೆಗಳು ಇತ್ಯಾದಿ ವಿಷಯಗಳ ಬಗ್ಗೆ ಸಾಕಷ್ಟು ಬರೆದಿದ್ದಾರೆ. ಗಾಂಧಿಯವರು ಸಾಮಾನ್ಯವಾಗಿ ಗುಜರಾತಿಯಲ್ಲಿ ಬರೆಯುತ್ತಿದ್ದರೂ ಸಹ, ಹಿಂದಿ ಮತ್ತು ಆಂಗ್ಲ ಭಾಷೆಗಳಿಗೆ ಭಾಷಾಂತರವಾಗಿದ್ದ ತಮ್ಮ ಪುಸ್ತಕಗಳನ್ನು ಪರಿಷ್ಕರಿಸುತ್ತಿದ್ದರು. ೧೯೬೦ನೇ ಇಸವಿಯಲ್ಲಿ ಭಾರತ ಸರ್ಕಾರವು ಗಾಂಧಿಯವರ ಸಂಪೂರ್ಣ ಕೃತಿಗಳನ್ನು ದಿ ಕಲೆಕ್ಟೆದ್‌ ವರ್ಕ್ಸ್‌ ಆಫ್‌ ಮಹಾತ್ಮ ಗಾಂಧಿ ಎಂಬ ಶೀರ್ಷಿಕೆಯ ಅಡಿಯಲ್ಲಿ ಪ್ರಕಟಿಸಿತ್ತು. ಈ ಬರಹಗಳು ಸುಮಾರು ೫೦,೦೦೦ ಪುಟಗಳನ್ನು ಒಳಗೊಂಡಿದ್ದು ಅವುಗಳನ್ನು ಸುಮಾರು ನೂರು ಸಂಪುಟಗಳಲ್ಲಿ ಪ್ರಕಟಿಸಲಾಗಿದೆ. ಆದರೆ, ರಾಜಕೀಯ ದುರುದ್ದೇಶಗಳಿಗಾಗಿ ಸರ್ಕಾರವು ಕೃತಿಯಲ್ಲಿ ಬದಲಾವಣೆಗಳನ್ನು ಅಳವಡಿಸಿದೆ ಎಂದು ಗಾಂಧಿಯವರ ಅನುಯಾಯಿಗಳು ವಾದಿಸಿದ್ದರಿಂದಾಗಿ ೨೦೦೦ನೇ ಇಸವಿಯಲ್ಲಿ ಅವರ ಸಂಪೂರ್ಣ ಕೃತಿಗಳ ಪರಿಷ್ಕೃತ ಆವೃತ್ತಿಯು ವಿವಾದದ ಕಿಡಿಯನ್ನು ಹೊತ್ತಿಸಿದ್ದವು. ನಂತರ ಭಾರತ ಸರ್ಕಾರವು ಪರಿಷ್ಕೃತ ಆವೃತ್ತಿಯನ್ನು ಹಿಂಪಡೆಯಿತು. ಗಾಂಧಿಯವರ ಬಗ್ಗೆ ಪುಸ್ತಕಗಳು ಹಲವು ಜೀವನಚರಿತ್ರಕಾರರು ಗಾಂಧಿಯವರ ಜೀವನವನ್ನು ವಿವರಿಸುವ ಕೆಲಸವನ್ನು ಕೈಗೊಂಡಿದ್ದಾರೆ. ಅವುಗಳಲ್ಲಿ, ಎರಡು ಕೃತಿಗಳು ಪ್ರಸಿದ್ಧವಾಗಿವೆ: ಎಂಟು ಸಂಪುಟಗಳಲ್ಲಿರುವ, D. G. ತೆಂಡೂಲ್ಕರ್‌ರವರ ಮಹಾತ್ಮ. ಲೈಫ್‌ ಆಫ್‌ ಮೋಹನ್‌ದಾಸ್‌ ಕರಮ್‌ಚಂದ್‌ ಗಾಂಧಿ ಮತ್ತು ೧೦ ಸಂಪುಟಗಳಲ್ಲಿರುವ, ಪ್ಯಾರೇಲಾಲ್‌ ಮತ್ತು ಸುಶೀಲಾ ನಾಯರ್‌ರವರ ಮಹಾತ್ಮ ಗಾಂಧಿ .US ಸೇನಾದಳದ ಕರ್ನಲ್‌ G. B. ಸಿಂಗ್‌ ಗಾಂಧಿ: ಬಿಹೈಂಡ್‌ ದಿ ಮಾಸ್ಕ್‌ ಆಫ್‌ ಡಿವೈನಿಟಿ ಎಂಬ ಪುಸ್ತಕವನ್ನು ಬರೆದಿದ್ದಾರೆ. ಈಗಿರುವ ಗಾಂಧಿಯವರ ಕುರಿತಾದ ಬಹುಪಾಲು ಸಾಹಿತ್ಯ ಕೃತಿಗಳು ಗಾಂಧಿಯವರು ಬರೆದ ಆತ್ಮಚರಿತ್ರೆಯಲ್ಲಿರುವ ವಿಚಾರಗಳನ್ನೇ ಹೇಳುತ್ತವೆಯೇ ಹೊರತು, ಗಾಂಧಿಯವರ ನಡೆ-ನುಡಿಗಳ ಕುರಿತಾದ ವಿಮರ್ಶಾತ್ಮಕ ಅವಲೋಕನವು ಅವುಗಳಲ್ಲಿ ತೀರಾ ಕಡಿಮೆ ಪ್ರಮಾಣದಲ್ಲಿದೆ ಎಂಬುದಾಗಿ G. B. ಸಿಂಗ್‌‌ರವರು ಈ ಪುಸ್ತಕದಲ್ಲಿ ವಾದಿಸುತ್ತಾರೆ. ಗಾಂಧಿಯವರ ಸ್ವಂತ ಮಾತುಗಳು, ಪತ್ರಗಳು ಮತ್ತು ಸುದ್ದಿ ಪತ್ರಿಕೆಗಳ ಅಂಕಣಗಳು ಮತ್ತು ಅವರ ನಡೆಗಳನ್ನು ಆಧರಿಸಿ ರೂಪಿಸಿದ ತಮ್ಮ ಪ್ರೌಢ ಪ್ರಬಂಧದಲ್ಲಿ, ಆಫ್ರಿಕಾದ ಮೂಲನಿವಾಸಿ ಕಪ್ಪುಜನಗಳು ಮತ್ತು ಕಾಲಾನಂತರದಲ್ಲಿ ಭಾರತದಲ್ಲಿನ ಬಿಳಿಯ ಬ್ರಿಟಿಷರ ವಿರುದ್ಧ ಗಾಂಧಿಯವರು ವರ್ಣಭೇದವನ್ನು ತೋರುತ್ತಿದ್ದರು ಎಂದು ಸಿಂಗ್‌ ಪ್ರತಿಪಾದಿಸುತ್ತಾರೆ. ಕಾಲಾನಂತರ ಡಾ. ಟಿಮ್‌ ವಾಟ್ಸನ್‌ರವರ ಜೊತೆಗೂಡಿ ಸಿಂಗ್‌ರವರು ರಚಿಸಿದ ಗಾಂಧಿ ಅಂಡರ್ ಕ್ರಾಸ್ ಎಗ್ಸಾಮಿನೇಷನ್‌ (೨೦೦೮) ಎಂಬ ಕೃತಿಯು, ದಕ್ಷಿಣ ಆಫ್ರಿಕಾದಲ್ಲಿ ನಡೆದ ಪ್ರಸಿದ್ಧ ರೈಲು ಘಟನೆಯನ್ನು ಗಾಂಧಿಯವರು ಸ್ವತಃ ಹಲವು ಸನ್ನಿವೇಶಗಳಲ್ಲಿ ವಿವಿಧ ರೀತಿಯಲ್ಲಿ ವಿವರಿಸಿದ್ದು, ಸದರಿ ಘಟನೆಯು ಇಂದು ಅರ್ಥೈಸಿಕೊಂಡಿರುವಂತೆ ನಡೆಯಲೇ ಇಲ್ಲ ಎಂದು ವಾದಿಸುತ್ತದೆ. ಅನುಯಾಯಿಗಳು ಮತ್ತು ಪ್ರಭಾವ ಪ್ರಮುಖ ನಾಯಕರು ಮತ್ತು ರಾಜಕೀಯ ಆಂದೋಲನಗಳ ಮೇಲೆ ಗಾಂಧಿಯವರು ಪ್ರಭಾವ ಭೀರಿದರು. ಮಾರ್ಟಿನ್‌ ಲೂಥರ್ ಕಿಂಗ್‌ ಹಾಗೂ ಜೇಮ್ಸ್‌ ಲಾಸನ್‌ರವರುಗಳೂ ಸೇರಿದಂತೆ, ಸಂಯುಕ್ತ ಸಂಸ್ಥಾನಗಳಲ್ಲಿನ ನಾಗರಿಕ ಹಕ್ಕುಗಳ ಚಳವಳಿಯ ನಾಯಕರುಗಳು ಅಹಿಂಸೆಯ ಕುರಿತಾದ ತಮ್ಮದೇ ಸ್ವಂತ ಸಿದ್ಧಾಂತಗಳನ್ನು ಅಭಿವೃದ್ಧಿಪಡಿಸುವಾಗ ಗಾಂಧಿಯವರ ಬರಹಗಳಿಂದ ಪ್ರೇರಿತರಾಗಿದ್ದರು. ಪ್ರತ್ಯೇಕತಾ ನೀತಿ ವಿರೋಧಿಸುವ ತೀವ್ರವಾದಿ ಮತ್ತು ದಕ್ಷಿಣ ಆಫ್ರಿಕಾದ ಹಿಂದಿನ ಅಧ್ಯಕ್ಷರಾದ ನೆಲ್ಸನ್‌‌ ಮಂಡೇಲಾರವರು ಗಾಂಧಿಯವರಿಂದ ಪ್ರಭಾವಿತರಾದರು. ಇನ್ನುಳಿದ ಇತರರೆಂದರೆ, ಖಾನ್‌ ಅಬ್ಧುಲ್ ಗಫರ್ ಖಾನ್‌, ಸ್ಟೀವ್‌ ಬಿಕೊ, ಆಂಗ್‌ ಸಾನ್‌ ಸೂ ಕಿ ಮತ್ತು ಫರ್ಡಿನೆಂಡ್‌ ಮಾರ್ಕೊಸ್‌ರ ಸರ್ವಾಧಿಕಾರದ ಸಮಯದಲ್ಲಿ ಫಿಲಿಪೀನ್‌ ದೇಶದ ವಿರೋಧಪಕ್ಷದ ನಾಯಕರಾಗಿದ್ದ ಬಿನೈನೋ ಅಕ್ವಿನೊ, Jr. ಗಾಂಧಿಯವರ ಜೀವನ ಮತ್ತು ಬೋಧನೆಗಳಿಂದ ಹಲವರು ಪ್ರೇರಿತರಾಗಿದ್ದು, ಅವರು ಗಾಂಧಿಯವರನ್ನು ತಮ್ಮ ಮಾರ್ಗದರ್ಶಿ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ ಇಲ್ಲವೇ ಗಾಂಧಿಯವರ ಚಿಂತನೆಗಳನ್ನು ಹರಡಲು ತಮ್ಮ ಜೀವನವನ್ನು ಅರ್ಪಿಸಿಕೊಂಡಿದ್ದಾರೆ. ಯುರೋಪ್‌ನಲ್ಲಿ, ೧೯೨೪ ರಲ್ಲಿ ಬಂದ ಮಹಾತ್ಮ ಗಾಂಧಿ ಎಂಬ ತಮ್ಮ ಪುಸ್ತಕದಲ್ಲಿ ಗಾಂಧಿಯವರ ಬಗ್ಗೆ ಮೊದಲ ಬಾರಿಗೆ ಚರ್ಚಿಸಿದವರಲ್ಲಿ ರೊಮೈನ್‌ ರೋಲೆಂಡ್ ಮೊದಲಿಗರು. ಬ್ರೆಜಿಲ್‌ ದೇಶದ ಅರಾಜಕತಾವಾದಿ ಮತ್ತು ಸ್ತ್ರೀಸಮಾನತಾ ವಾದಿಯಾದ ಮರಿಯಾ ಲಾಸೆರ್ಡ ಡಿ ಮೌರಾರವರು ಶಾಂತಿಧೋರಣೆಯ ಕುರಿತಾದ ತಮ್ಮ ಕೃತಿಯಲ್ಲಿ ಗಾಂಧಿಯವರ ಬಗ್ಗೆ ಬರೆದಿದ್ದಾರೆ. ೧೯೩೧ರಲ್ಲಿ, ಯುರೋಪಿನ ಪ್ರಖ್ಯಾತ ಭೌತಶಾಸ್ತ್ರಜ್ಞ ಆಲ್ಭರ್ಟ್‌ ಐನ್‌ಸ್ಟೈನ್‌ರವರು ತಾವು ಬರೆದ ಪತ್ರಗಳನ್ನು ಗಾಂಧಿಯೊಂದಿಗೆ ವಿನಿಮಯ ಮಾಡಿಕೊಂಡರು, ಮತ್ತು ನಂತರದ ಅವರ ಕುರಿತಾದ ತಮ್ಮ ಬರಹವೊಂದರಲ್ಲಿ ಅವರನ್ನು "ಮುಂದಿನ ಪೀಳಿಗೆಗಾಗಿರುವ ಓರ್ವ ಮಾದರಿ ವ್ಯಕ್ತಿ" ಎಂದು ಅವರು ಬಣ್ಣಿಸಿದರು. ಲಂಜಾ ಡೆಲ್ ವಾಸ್ಟೊರವರು ಗಾಂಧಿಯವರ ಜೊತೆ ಬಾಳುವ ಇಚ್ಛೆಯಿಂದ ೧೯೩೬ರಲ್ಲಿ ಭಾರತಕ್ಕೆ ಹೋದರು. ನಂತರ ಅವರು ಯುರೋಪ್‌‌ಗೆ ಹಿಂದಿರುಗಿ ಗಾಂಧಿಯವರ ತತ್ವಗಳನ್ನು ಬೋಧಿಸಿದರು ಮತ್ತು (ಗಾಂಧಿಯ ಆಶ್ರಮಗಳನ್ನು ಮಾದರಿಯಾಗಿ ಇಟ್ಟುಕೊಂಡು) ೧೯೪೮ರಲ್ಲಿ ಆರ್ಕ್‌ನ‌ ಸಮುದಾಯ‌‌ವನ್ನು ಸ್ಥಾಪಿಸಿದರು. ಬ್ರಿಟಿಷ್ ಅಡ್ಮಿರೆಲ್‌ನ ಓರ್ವರ ಮಗಳಾದ ಮೆಡೆಲೀನ್‌ ಸ್ಲೇಡ್‌ರವರು ("ಮೀರಾಬೆನ್" ಎಂದೇ ಪ್ರಖ್ಯಾತರು) ತಮ್ಮ ಪ್ರೌಢ ಜೀವನದ ಬಹುಪಾಲು ಕಾಲವನ್ನು ಭಾರತದಲ್ಲಿ ಗಾಂಧಿಯವರ ಅನುಯಾಯಿಯಂತೆ ಕಳೆದರು. ಇದರೊಂದಿಗೆ, ಬ್ರಿಟಿಷ್ ಸಂಗೀತಗಾರ ಜಾನ್‌ ಲೆನ್ನನ್‌ರವರು ಅಹಿಂಸಾವಾದದ ಬಗೆಗಿನ ತಮ್ಮ ವಿಚಾರ ಮಂಡಿಸುವಾಗ ಗಾಂಧಿಯವರ ಕುರಿತು ಉಲ್ಲೇಖಿಸಿದರು. ೨೦೦೭ರಲ್ಲಿ ನಡೆದ ಕೇನ್ಸ್‌ ಲಯನ್ಸ್‌ ಅಂತಾರಾಷ್ಟ್ರೀಯ ಜಾಹೀರಾತು ಉತ್ಸವದಲ್ಲಿ , U.S.ನ ಹಿಂದಿನ ಉಪಾಧ್ಯಕ್ಷ ಮತ್ತು ಪರಿಸರವಾದಿಯಾದ ಅಲ್‌ ಗೋರ್‌ ರವರು ಗಾಂಧಿಯವರು ತಮ್ಮ ಮೇಲೆ ಹೇಗೆ ಪ್ರಭಾವ ಬೀರಿದರೆಂದು ಹೇಳಿದರು. ಕೊನೆಯದಾಗಿ, ಸಂಯುಕ್ತ ಸಂಸ್ಥಾನಗಳ ಅಧ್ಯಕ್ಷರಾಗುವುದಕ್ಕೂ ಮುಂಚೆ , ಆಗಿನ ಸೆನೆಟರ್‌ ಆಗಿದ್ದ ಬರಾಕ್ ಒಬಾಮರವರು ಈ ರೀತಿ ಹೇಳಿದರು: ನನ್ನ ಜೀವನದಾದ್ಯಂತ, ನಾನು ಯಾವಾಗಲೂ ಮಹಾತ್ಮ ಗಾಂಧಿಯವರನ್ನು ಒಂದು ಸ್ಪೂರ್ತಿಯಂತೆ ಕಂಡಿದ್ದೇನೆ. ಏಕೆಂದರೆ ಸಾಮಾನ್ಯ ಜನರು ಒಗ್ಗೂಡಿ ಅಸಾಮಾನ್ಯ ಕೆಲಸಗಳನ್ನು ಮಾಡಿದಾಗ ಕಂಡುಬರುವ ಒಂದು ರೀತಿಯ ಪರಿವರ್ತನೆಯ ಬದಲಾವಣೆಯನ್ನು ತರಿಸುವಂತಹ ಪ್ರೇರಕ ಶಕ್ತಿಯು ಅವರಲ್ಲಿ ಮೈಗೂಡಿಕೊಂಡಿದೆ. ಆದ್ದರಿಂದಲೇ, ನಿಜವಾದ ಫಲಿತಾಂಶಗಳು ಕೇವಲ ವಾಷಿಂಗ್ಟನ್‌ನಿಂದ ಮಾತ್ರವೇ ಬರುವುದಿಲ್ಲ, ಜನರಿಂದ ಅವು ಬರುತ್ತವೆ ಎಂಬುದನ್ನು ನಾನು ನೆನಪಿನಲ್ಲಿ ಇಟ್ಟುಕೊಳ್ಳುವುದಕ್ಕೋಸ್ಕರವೇ ನಾನು ನನ್ನ ಸೆನೇಟ್‌ ಕಚೇರಿಯಲ್ಲಿ ಅವರ ಭಾವಚಿತ್ರವನ್ನು ನೇತುಹಾಕಿಕೊಂಡಿರುವೆ. ಪರಂಪರೆ ಗಾಂಧಿಯವರ ಜನ್ಮದಿನವಾದ ಅಕ್ಟೋಬರ್‌ ೨ಅನ್ನು ಭಾರತದಲ್ಲಿ ರಾಷ್ಟ್ರೀಯ ರಜಾದಿನವೆಂದು ಘೋಷಣೆ ಮಾಡಿ ಗಾಂಧಿ ಜಯಂತಿಯನ್ನು ಆಚರಿಸಲಾಗುತ್ತದೆ. "ವಿಶ್ವ ಸಂಸ್ಥೆಯ ಸಾಮಾನ್ಯ ಸಭೆ"ಯು "ಸರ್ವಾನುಮತದಿಂದ ಅಂಗೀಕರಿಸಿದ" ನಿರ್ಣಯವೊಂದನ್ನು ಕೈಗೊಂಡು, ಅಕ್ಟೋಬರ್‌ ೨ನ್ನು "ಅಂತಾರಾಷ್ಟ್ರೀಯ ಅಹಿಂಸಾ ದಿನ"ವೆಂದು ಘೋಷಿಸಿದೆ ಎಂದು ೨೦೦೭ರ ಜೂನ್ ೧೫ರಂದು ಪ್ರಕಟಿಸಲಾಯಿತು. ಭಾರತ ರಾಷ್ಟ್ರದ ಸೇವೆಗಾಗಿ ತಮ್ಮ ಜೀವವನ್ನೇ ಬಲಿದಾನ ಮಾಡಿದ ಹುತಾತ್ಮರನ್ನು ಸ್ಮರಿಸಲು, ಅವರ ಹತ್ಯೆಯ ದಿನವಾದ ಜನವರಿ ೩೦ನ್ನು ಭಾರತದಲ್ಲಿ ಹುತಾತ್ಮರ ದಿನವೆಂದು ಆಚರಿಸಲಾಗುತ್ತಿದೆ. ಗಾಂಧಿಯವರ ಹೆಸರಿನ ಜೊತೆಗಿರುವ ಮಹಾತ್ಮ ಎಂಬ ಪದವು ನಾಮಕರಣದ ಹೆಸರು ಎಂದು ಪಾಶ್ಚಿಮಾತ್ಯರು ಕೆಲವೊಮ್ಮೆ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಇದನ್ನು ಸಂಸ್ಕೃತ ಪದಗಳಿಂದ ಆಯ್ದುಕೊಳ್ಳಲಾಗಿದ್ದು ಮಹಾ ಎಂದರೆ ಉನ್ನತ ಹಾಗೂ ಆತ್ಮ ಎಂದರೆ ಆತ್ಮ ಎಂಬ ಅರ್ಥವಿದೆ. ದತ್ತ ಹಾಗೂ ರಾಬಿನ್‌ಸನ್‌ರವರ ರವೀಂದ್ರನಾಥ್‌ ಟ್ಯಾಗೂರ್‌: ಆನ್‌ ಆಂಥಾಲಜಿ ಕೃತಿಯಂತಹ ಬಹುತೇಕ ಮೂಲಗಳು ಗಾಂಧಿಯವರಿಗೆ ಮಹಾತ್ಮ ಎಂಬ ಬಿರುದನ್ನು ಮೊದಲು ನೀಡಿದ್ದು ರವೀಂದ್ರನಾಥ್ ಟ್ಯಾಗೂರ್‌ರು ಎಂದು ಹೇಳುತ್ತವೆ. [134] ನೌತಮ್‌ಲಾಲ್‌ ಭಗವಾನ್‌ಜಿ ಮೆಹತಾರವರು ೧೯೧೫ರ ಜನವರಿ ೨೧ರಂದು ಗಾಂಧಿಯವರಿಗೆ ಈ ಬಿರುದನ್ನು ನೀಡಿದರು ಎಂದು ಇತರ ಮೂಲಗಳು ಹೇಳುತ್ತವೆ. [136] ಅದೇನೇ ಇದ್ದರೂ, ಆ ಗೌರವಕ್ಕೆ ತಾನು ಪಾತ್ರನಾಗಿರುವೆ ಎಂದು ತಮಗೆಂದೂ ಅನಿಸಿಲ್ಲ ಎಂದು ಗಾಂಧಿಯವರು ತಮ್ಮ ಆತ್ಮಚರಿತ್ರೆಯಲ್ಲಿ ಹೇಳಿಕೊಂಡಿದ್ದಾರೆ. ಮನ್‌ಪತ್ರ ದ ಪ್ರಕಾರ, ನ್ಯಾಯ ಮತ್ತು ಸತ್ಯಗಳನ್ನು ಸ್ಪಷ್ಟವಾಗಿ ತೋರಿಸುವಲ್ಲಿನ ಗಾಂಧಿಯವರ ಪ್ರಶಂಸಾತ್ಮಕ ತ್ಯಾಗಕ್ಕೆ ಪ್ರತಿಕ್ರಿಯೆಯಾಗಿ ಮಹಾತ್ಮ ಎಂಬ ಹೆಸರನ್ನು ಅವರಿಗೆ ನೀಡಲಾಗಿದೆ. ೧೯೩೦ರಲ್ಲಿ ಟೈಮ್‌ ನಿಯತಕಾಲಿಕವು ಗಾಂಧಿಯವರನ್ನು ವರ್ಷದ ವ್ಯಕ್ತಿ ಎಂದು ಬಣ್ಣಿಸಿದೆ. ೧೯೯೯ನೇ ಇಸವಿಯ ಕೊನೆಯಲ್ಲಿ ನಡೆದ "ಶತಮಾನದ ಮನುಷ್ಯ"ರಿಗೆ ಸಂಬಂಧಿಸಿ ನಡೆದ ಸಮೀಕ್ಷೆಯಲ್ಲಿ, ಗಾಂಧಿಯವರು ಆಲ್ಭರ್ಟ್‌ ಐನ್‌ಸ್ಟೈನ್‌ರ ನಂತರದ ಸ್ಥಾನ ಅಂದರೆ [140]ರನ್ನರ್‌-ಅಪ್‌ ಸ್ಥಾನದಲ್ಲಿದ್ದರು. ೦}ದಲೈ ಲಾಮ, ಲೆಕ್‌ ವಲೇಸಾ, Dr. ಮಾರ್ಟಿನ್‌ ಲೂಥರ್‌ ಕಿಂಗ್, Jr., ಸೀಜರ್‌ ಚವೆಜ್‌, ಆಂಗ್‌ ಸಾನ್‌ ಸೂ ಕಿ, ಬೆನೈನೊ ಅಕ್ವಿನೊ Jr., ದೆಸ್ಮಡ್‌ ಟುಟು, ಮತ್ತು ನೆಲ್ಸನ್‌‌ ಮಂಡೇಲಾರವರನ್ನು ಗಾಂಧಿಯವರ ಮಕ್ಕಳು ಮತ್ತು ಅಹಿಂಸಾ ಮಾರ್ಗಕ್ಕೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳು ಎಂದು ಟೈಮ್‌ ನಿಯತಕಾಲಿಕವು ಹೆಸರಿಸಿದೆ. [141] ಶ್ರೇಷ್ಠ ಸಮಾಜ ಸೇವಕರು, ವಿಶ್ವ ನಾಯಕರು ಹಾಗೂ ನಾಗರಿಕರಿಗೆ ಭಾರತ ಸರ್ಕಾರವು ವರ್ಷದ ಮಹಾತ್ಮ ಗಾಂಧಿ ಶಾಂತಿ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತದೆ. ಈ ಪ್ರಶಸ್ತಿಯನ್ನು ಸ್ವೀಕರಿಸಿದ ಭಾರತೀಯರಲ್ಲದ ಪ್ರಸಿದ್ಧ ವ್ಯಕ್ತಿಗಳಲ್ಲಿ, ವರ್ಣಭೇದ ನೀತಿ ಮತ್ತು ಪ್ರತ್ಯೇಕತಾ ನೀತಿಯನ್ನು ತೊಡೆದುಹಾಕಲು ಹೋರಾಡಿದ ದಕ್ಷಿಣ ಆಫ್ರಿಕಾದ ನಾಯಕರಾದ ನೆಲ್ಸನ್‌ ಮಂಡೇಲಾರವರು ಒಬ್ಬರು. ೧೯೯೬ರಲ್ಲಿ, ಭಾರತ ಸರ್ಕಾರವು ೫, ೧೦, ೨೦, ೫೦, ೧೦೦, ೫೦೦ ಮತ್ತು ೧೦೦೦ ಮುಖಬೆಲೆಯ ರೂಪಾಯಿಗಳಲ್ಲಿನ ಚಲಾವಣಾ ನೋಟುಗಳ ಮಹಾತ್ಮ ಗಾಂಧಿ ಸರಣಿಯನ್ನು ಜಾರಿಗೆ ತಂದಿತು. ಇಂದು, ಭಾರತದಲ್ಲಿ ಚಲಾವಣೆಯಲ್ಲಿರುವ ಎಲ್ಲಾ ರೀತಿಯ ಹಣದ ನೋಟುಗಳಲ್ಲಿಯೂ ಮಹಾತ್ಮ ಗಾಂಧಿಯವರ ಭಾವಚಿತ್ರವನ್ನು ಕಾಣಬಹುದಾಗಿದೆ. ೧೯೬೯ರಲ್ಲಿ, ಮಹಾತ್ಮ ಗಾಂಧಿಯ ಶತಮಾನೋತ್ಸವದ ಜ್ಞಾಪಕಾರ್ಥವಾಗಿ ಅವರ ಶ್ರೇಣಿಯ ಅಂಚೆಚೀಟಿ‌ಗಳನ್ನು ಯುನೈಟೆಡ್ ಕಿಂಗ್‌ಡಂ ಹೊರತಂದಿತು. ಯುನೈಟೆಡ್ ಕಿಂಗ್‌ಡಂನಲ್ಲಿ, ಗಾಂಧಿಯವರ ಹಲವು ಪ್ರಮುಖ ಪ್ರತಿಮೆಗಳಿದ್ದು, ಲಂಡನ್‌‌ನಲ್ಲಿ ಮುಖ್ಯವಾಗಿ ಅವರು ಕಾನೂನು ವಿದ್ಯಾಭ್ಯಾಸ ನಡೆಸಿದ ಯೂನಿವರ್ಸಿಟಿ ಕಾಲೇಜ್ ಲಂಡನ್‌‌ ಸಮೀಪವಿರುವ ತವಿಸ್‌ಸ್ಟಾಕ್ ಸ್ಕ್ವೇರ್‌‌‌ನಲ್ಲಿ ಕಾಣಬಹುದಾಗಿದೆ. ಯುನೈಟೆಡ್ ಕಿಂಗ್‌ಡಂನಲ್ಲಿ ಜನವರಿ ೩೦ರ ದಿನವನ್ನು "ರಾಷ್ಟ್ತೀಯ ಗಾಂಧಿ ಸ್ಮರಣದಿನ"ವನ್ನಾಗಿ ಆಚರಿಸಲಾಗುತ್ತದೆ. ಸಂಯುಕ್ತ ಸಂಸ್ಥಾನದಲ್ಲಿ, ನ್ಯೂಯಾರ್ಕ್ ನಗರದಲ್ಲಿನ ಯೂನಿಯನ್ ಸ್ಕ್ವೇರ್ ಉದ್ಯಾನವನದ ಹೊರಭಾಗದಲ್ಲಿ, ಅಟ್ಲಾಂಟದಲ್ಲಿನ ಮಾರ್ಟಿನ್‌ ಲೂಥರ್‌ ಕಿಂಗ್, Jr. ನ್ಯಾಷನಲ್ ಹಿಸ್ಟಾರಿಕ್ ಸೈಟ್‌ನಲ್ಲಿ, ಮತ್ತು ವಾಷಿಂಗ್ಟನ್‌‌, D.C.ಯಲ್ಲಿನ ಮಸಾಚ್ಯುಸೆಟ್ಸ್‌‌ನ ಬೀದಿಯಲ್ಲಿ , ಭಾರತೀಯ ರಾಯಭಾರ ಕಚೇರಿಯ ಸಮೀಪದಲ್ಲಿ ಗಾಂಧಿಯವರ ಪ್ರತಿಮೆಗಳನ್ನು ಕಾಣಬಹುದಾಗಿದ್ದು, ಸ್ಯಾನ್ ಫ್ರಾನ್ಸಿಸ್ಕೊದ ಎಂಬರ್‌ಕೆಡೆರೊ ಹತ್ತಿರದಲ್ಲಿಯೂ ಗಾಂಧಿ ಪ್ರತಿಮೆಯಿದೆ. ೧೮೯೩ರಲ್ಲಿ ಗಾಂಧಿಯವರನ್ನು ಪ್ರಥಮ ದರ್ಜೆ ರೈಲಿನಿಂದ ಹೊರನೂಕಿದ ಘಟನೆಯ ನಗರವಾದ ದಕ್ಷಿಣ ಆಫ್ರಿಕಾದ ಪೀಟರ್‌ಮೆರಿಟ್ಜ್‌ಬರ್ಗ್‌ನಲ್ಲಿ, ಈಗ ಅವರ ಸ್ಮರಣಾರ್ಥ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.ಲಂಡನ್‌, ನ್ಯೂ ಯಾರ್ಕ್, ಮತ್ತು ಪ್ರಪಂಚದಾದ್ಯಂತ ಇರುವ ಇತರೆ ನಗರಗಳಲ್ಲಿರುವ ಮೇಡಮ್‌ ಟುಸ್ಸಾಡ್ಸ್‌ನ ಮೇಣದ ವಸ್ತು ಪ್ರದರ್ಶನಾಲಯದಲ್ಲಿ ಗಾಂಧಿಯವರ ಮೇಣದ ಪ್ರತಿಮೆಗಳಿವೆ. ಅಮೆರಿಕನ್‌ ಫ್ರೆಂಡ್ಸ್‌ ಸರ್ವೀಸ್‌ ಕಮಿಟಿಯಿಂದ ಮೊತ್ತ ಮೊದಲ ಬಾರಿಗೆ ನಾಮ ನಿರ್ದೇಶನಗೊಂಡಿದ್ದೂ ಸೇರಿದಂತೆ, ೧೯೩೭ರಿಂದ ೧೯೪೮ರ ನಡುವೆ ಗಾಂಧಿಯವರು ನೊಬೆಲ್‌ ಶಾಂತಿ ಪ್ರಶಸ್ತಿಗಾಗಿ ಐದು ಬಾರಿ ನಾಮ ನಿರ್ದೇಶನಗೊಂಡರೂ ಸಹ ಅವರು ಆ ಪ್ರಶಸ್ತಿಯನ್ನು ಎಂದಿಗೂ ಸ್ವೀಕರಿಸಲಿಲ್ಲ. ದಶಕಗಳ ತರುವಾಯ, ನೋಬೆಲ್ ಸಮಿತಿಯು ರಾಷ್ಟ್ರೀಯತಾ ಅಭಿಪ್ರಾಯದಂತೆ ಪ್ರಶಸ್ತಿಯನ್ನು ತಿರಸ್ಕರಿಸಿದ್ದಕ್ಕಾಗಿ ಕ್ಷಮೆ ಕೋರಿ ಸಾರ್ವಜನಿಕವಾಗಿ ವಿಷಾದ ವ್ಯಕ್ತಪಡಿಸಿತು. ೧೯೪೮ರಲ್ಲಿ ಮಹಾತ್ಮ ಗಾಂಧಿಯವರು ಪ್ರಶಸ್ತಿಯನ್ನು ಸ್ವೀಕರಿಸುವ ಸಂದರ್ಭ ಬಂದಿತ್ತಾದರೂ, ಆದೇ ಸಮಯದಲ್ಲಿ ಅವರನ್ನು ಹತ್ಯೆಯಾದ್ದರಿಂದ ಆ ಪ್ರಶಸ್ತಿಯನ್ನು ಪಡೆಯಲು ಸಾಧ್ಯವಾಗಲಿಲ್ಲ. ಹೊಸದಾಗಿ ಸೃಷ್ಟಿಸಲಾದ ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ಹುಟ್ಟಿಕೊಂಡ ಯುದ್ಧವೂ ಆ ವರ್ಷದ ಹೆಚ್ಚುವರಿ ಸಂಕೀರ್ಣ ಅಂಶವಾಯಿತೆನ್ನಬಹುದು. ಗಾಂಧಿಯವರ ಹತ್ಯೆಯಾದ ವರ್ಷವಾದ ೧೯೪೮ರಲ್ಲಿ , "ಯೋಗ್ಯ ಜೀವಂತ ಅಭ್ಯರ್ಥಿ ಇರದಿದ್ದ" ಕಾರಣ ಆ ವರ್ಷ ಯಾರಿಗೂ ಪ್ರಶಸ್ತಿಯನ್ನು ನೀಡಲಿಲ್ಲ. ೧೯೮೯ರಲ್ಲಿ ದಲೈ ಲಾಮರವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸುವ ಸಂದರ್ಭದಲ್ಲಿ, ಸಮಿತಿಯ ಅಧ್ಯಕ್ಷರು "ಇದು ಮಹಾತ್ಮ ಗಾಂಧಿ ಸ್ಮರಣಾರ್ಥ ಉಡುಗೊರೆಯ ಒಂದು ಭಾಗವಾಗಿದೆ" ಎಂದು ಹೇಳಿದರು. ೧೯೪೮ರ ಜನವರಿ ೩೦ರಂದು ಗಾಂಧಿಯವರು ಹತ್ಯೆಗೀಡಾದ ಸ್ಥಳವಾದ ಘನಶ್ಯಾಮ್‌ ದಾಸ್‌ ಬಿರ್ಲಾರವರ ಮನೆಯಾದ ಬಿರ್ಲಾ ಭವನ ಅಥವಾ ಬಿರ್ಲಾ ಹೌಸ್‌ನ್ನು , ೧೯೭೧ರಲ್ಲಿ ಭಾರತ ಸರ್ಕಾರವು ವಶಪಡಿಸಿಕೊಂಡು, ಗಾಂಧಿ ಸ್ಮೃತಿ ಅಥವಾ "ಗಾಂಧಿ ಸ್ಮರಣೆ"ಗೆಂದು ೧೯೭೩ರಲ್ಲಿ ಸಾರ್ವಜನಿಕರಿಗೆ ತೆರೆಯಿತು. ಮಹಾತ್ಮ ಗಾಂಧಿಯವರು ತಮ್ಮ ಜೀವನದ ಕಡೆಯ ನಾಲ್ಕು ತಿಂಗಳುಗಳನ್ನು ಕಳೆದ ಕೋಣೆ ಹಾಗೂ ತಮ್ಮ ರಾತ್ರಿಯ ಸಾರ್ವಜನಿಕ ನಡಿಗೆಯ ಸಮಯದಲ್ಲಿ ಗುಂಡೇಟಿಗೀಡಾದ ಭೂಮಿಯನ್ನು ಸರ್ಕಾರವು ಕಾಪಾಡುತ್ತಿದೆ. ಹುತಾತ್ಮರ ಸ್ಥಂಭವೊಂದನ್ನು ಮೋಹನ್‌ದಾಸ್‌ ಗಾಂಧಿಯವರನ್ನು ಹತ್ಯೆ ಮಾಡಿದ ಸ್ಥಳವನ್ನಾಗಿ ಈಗ ಗುರುತಿಸಲಾಗುತ್ತದೆ. ಪ್ರತೀ ವರ್ಷ ಜನವರಿ ೩೦ರಂದು, ಮಹಾತ್ಮ ಗಾಂಧಿಯವರು ಹುತಾತ್ಮರಾದ ದಿನದ ವಾರ್ಷಿಕ ಪುಣ್ಯತಿಥಿಯಂದು ಹಲವು ದೇಶಗಳ ಶಾಲೆಗಳಲ್ಲಿ ಅಹಿಂಸೆ ಮತ್ತು ಶಾಂತಿಯ ಶಾಲಾದಿನವೆಂದು (DENIP) ಆಚರಿಸುತ್ತಾರೆ, ಇದನ್ನು ಸ್ಪೇಯ್ನ್‌‌ನಲ್ಲಿ ೧೯೬೪ರಂದು ಪ್ರಾರಂಭಿಸಲಾಯಿತು. ದಕ್ಷಿಣ ಭೂಗೋಳದಲ್ಲಿರುವ ರಾಷ್ಟ್ರಗಳ ಶಾಲಾ ಕ್ಯಾಲೆಂಡರ್‌ನಲ್ಲಿ, ಇದನ್ನು ಮಾರ್ಚ್ ೩೦ರಂದು ಅಥವಾ ಆಸುಪಾಸಿನ ದಿನಗಳಲ್ಲಿ ಆಚರಿಸಲಾಗುತ್ತದೆ. ಆದರ್ಶಗಳು ಹಾಗೂ ಮೌಲ್ಯಗಳು ಗಾಂಧಿಯವರು ಪಾಲಿಸುತ್ತಿದ್ದ ಅಹಿಂಸಾತತ್ವವು ಶಾಂತಿ ಧೋರಣೆಯನ್ನು ಸೂಚಿಸುವುದರಿಂದಾಗಿ ಇದು ಎಲ್ಲ ರಾಜಕೀಯ ಸಮುದಾಯದಾದ್ಯಂತ ಬರುವ ಟೀಕೆಯ ಮೂಲವಾಗಿದೆ. ವಿಭಜನೆಯ ಪರಿಕಲ್ಪನೆ ಧಾರ್ಮಿಕ ಒಗ್ಗಟ್ಟಿಗೆ ಸಂಬಂಧಪಟ್ಟಿರುವ ತಮ್ಮ ದೃಷ್ಟಿಕೋನಕ್ಕೆ ವಿಭಜನೆಯ ಪರಿಕಲ್ಪನೆಯು ವಿರುದ್ಧವಾಗಿದ್ದರಿಂದ ಗಾಂಧಿಯವರು ನಿಯಮದಂತೆ ಈ ಪರಿಕಲ್ಪನೆಯನ್ನು ವಿರೋಧಿಸಿದರು. ಪಾಕಿಸ್ತಾನವನ್ನು ಸೃಷ್ಟಿಸುವುದಕ್ಕಾಗಿ ಭಾರತದ ವಿಭಜನೆಯಾಗಬೇಕು ಎಂಬ ಅಭಿಪ್ರಾಯಕ್ಕೆ ಸಂಬಂಧಿಸಿ ೧೯೪೬ರ ಅಕ್ಟೋಬರ್ ೬ರಂದು ಹರಿಜನ್ ಪತ್ರಿಕೆಯಲ್ಲಿ ಅವರು ಹೀಗೆ ಬರೆದರು: ಮುಸ್ಲಿಂ ಲೀಗ್‌ನಿಂದ ಪ್ರಸ್ತಾಪಿಸಲ್ಪಟ್ಟಿರುವ ಬೇಡಿಕೆಯು[ಪಾಕಿಸ್ತಾನಕ್ಕಾಗಿ ಮಾಡಿರುವ ಬೇಡಿಕೆಯು) ಇಸ್ಲಾಂ ನೀತಿಯಿಂದ ಹೊರತಾಗಿದೆಯಾದ್ದರಿಂದ ಇದನ್ನು ಪಾಪವೆಂದು ಕರೆಯಲು ನಾನು ಹಿಂಜರಿಯುವುದಿಲ್ಲ. ಮನುಕುಲದ ಒಗ್ಗಟ್ಟು ಹಾಗೂ ಭ್ರಾತೃತ್ವದ ಸಂಕೇತವಾಗಿ ಇಸ್ಲಾಂ ನಿಲ್ಲುತ್ತದೆ ಯೇ ಹೊರತು, ಮಾನವ ಕುಟುಂಬದ ಐಕಮತ್ಯವನ್ನು ಒಡೆದುಹಾಕುವುದಕ್ಕಲ್ಲ. ಆದ್ದರಿಂದ, ಭಾರತವನ್ನು ವಿಭಜಿಸಿ ಸಂಭವನೀಯ ಯುದ್ಧ ಗುಂಪುಗಳಾಗಿ ಮಾಡಲು ಯಾರು ಪ್ರಯತ್ನ ಮಾಡುತ್ತಾರೋ ಅಂತಹವರು ಭಾರತ ಮತ್ತು ಇಸ್ಲಾಮ್‌‌ ಎರಡಕ್ಕೂ ಬದ್ಧ ವೈರಿಗಳು. ಅವರು ನನ್ನನ್ನು ತುಂಡುತುಂಡಾಗಿ ಕತ್ತರಿಸಬಹುದು, ಆದರೆ ನಾನು ತಪ್ಪು ಎಂದು ಪರಿಗಣಿಸಿರುವ ಒಂದು ಕೆಲಸದಲ್ಲಿ ನಾನು ತೊಡಗಿಕೊಳ್ಳುವಂತೆ ಅವರು ಮಾಡಲಾರರು[...] ಬಿರುಸಾದ ಮಾತುಗಳ ನಡುವೆಯೂ ನಮ್ಮೆಲ್ಲಾ ಮುಸ್ಲಿಮರೊಂದಿಗೆ ಸ್ನೇಹದಿಂದ ನಡೆದುಕೊಳ್ಳುವುದು ಹಾಗೂ ನಮ್ಮ ಪ್ರೀತಿಯಲ್ಲಿ ಅವರನ್ನು ಗಟ್ಟಿಯಾಗಿ ಬಂಧಿಸಿಟ್ಟುಕೊಳ್ಳುವುದನ್ನು ನಾವು ಬಿಡಬಾರದು. ಆದರೂ, ಪಾಕಿಸ್ತಾನದ ವಿಷಯಕ್ಕೆ ಸಂಬಂಧಿಸಿದಂತೆ ಜಿನ್ನಾರೊಂದಿಗಿನ ಗಾಂಧಿಯವರ ಸುದೀರ್ಘ ಪತ್ರ ವ್ಯವಹಾರದ ಕುರಿತು ಹೋಮರ್ ಜಾಕ್‌ರವರು ಒಂದಷ್ಟು ಟಿಪ್ಪಣಿಗಳನ್ನು ನೀಡುತ್ತಾರೆ: "ಭಾರತದ ವಿಭಜನೆಯನ್ನು ಗಾಂಧಿಯವರು ವೈಯಕ್ತಿಕವಾಗಿ ವಿರೋಧಿಸಿದ್ದರೂ ಸಹ ಅವರೊಂದು ಒಪ್ಪಂದವನ್ನು ಪ್ರಸ್ತಾಪಿಸಿದ್ದರು. ತಾತ್ಕಾಲಿಕ ಸರ್ಕಾರವೊಂದರ ಅಡಿಯಲ್ಲಿ ಸ್ವಾತಂತ್ರ್ಯವನ್ನು ಗಳಿಸಲು ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್‌ಗಳು ಸಹಕರಿಸಬೇಕು. ಅದಾದ ನಂತರ ಮುಸ್ಲಿಮರ ಬಾಹುಳ್ಯವನ್ನು ಹೊಂದಿರುವ ಜಿಲ್ಲೆಗಳಲ್ಲಿನ ಜನಮತದ ಆಧಾರದ ಮೇಲೆ ವಿಭಜನೆಯ ಪ್ರಶ್ನೆಯನ್ನು ನಿರ್ಧರಿಸಬಹುದು ಎಂಬುದು ಆ ಒಪ್ಪಂದದಲ್ಲಿತ್ತು." ಭಾರತದ ವಿಭಜನೆಗೆ ಸಂಬಂಧಿಸಿದಂತೆ ಗಾಂಧಿಯವರ ಈ ದ್ವಂದ್ವ ನಿಲುವುಗಳು ಹಿಂದುಗಳು ಮತ್ತು ಮುಸ್ಲಿಮರಿಂದ ಟೀಕೆಗೊಳಗಾದವು. ಮುಸ್ಲಿಮರ ರಾಜಕೀಯ ಹಕ್ಕುಗಳನ್ನು ಗಾಂಧಿಯವರು ಹಾಳುಮಾಡಿದರು ಎಂಬ ಕಾರಣವನ್ನು ಮುಂದೊಡ್ಡಿ ಮಹಮ್ಮದ್ ಆಲಿ ಜಿನ್ನಾ ಹಾಗೂ ಇತರ ಸಮಕಾಲೀನ ಪಾಕಿಸ್ತಾನೀಯರು ಗಾಂಧಿಯವರನ್ನು ಖಂಡಿಸಿದರು. ರಾಜಕೀಯವಾಗಿ ಮುಸ್ಲಿಮರನ್ನು ಬೆಂಬಲಿಸುತ್ತಿರುವುದಕ್ಕೆ ಮತ್ತು ಹಿಂದೂಗಳ ವಿರುದ್ಧ ಮುಸ್ಲಿಮರು ಮಾಡುತ್ತಿರುವ ದುಷ್ಕೃತ್ಯಗಳಿಗೆ ಜಾಣಕುರುಡಾಗಿರುವುದನ್ನು ಕಂಡು, ಹಾಗೂ ಪಾಕಿಸ್ತಾನದ ಸೃಷ್ಟಿಗೆ ಅನುವು ಮಾಡಿಕೊಟ್ಟ ರೀತಿಗೆ ("ಭಾರತದ ವಿಭಜನೆಗೆ ಮುಂಚೆ ನನ್ನ ದೇಹವನ್ನು ತುಂಡು ತುಂಡಾಗಿ ಕತ್ತರಿಸಬೇಕು ಎಂದು ಸಾರ್ವಜನಿಕವಾಗಿ ಅವರೇ ಘೋಷಿಸಿದರೂ ವಿಭಜನೆಗೆ ಅನುವು ಮಾಡಿಕೊಟ್ಟಿರುವುದಕ್ಕೆ") ವಿನಾಯಕ್‌ ದಾಮೋದರ್‌ ಸಾವರ್ಕರ್‌ ಮತ್ತು ಅವರ ಜೊತೆಗಾರರು ಗಾಂಧಿಯವರನ್ನು ಖಂಡಿಸಿದರು. [148] ಇದು ರಾಜಕೀಯ ಚರ್ಚಾವಿಷಯವಾಗಿ ಮುಂದುವರೆಯಿತು: ಪಾಕಿಸ್ತಾನಿ-ಅಮೆರಿಕನ್‌ ಇತಿಹಾಸಗಾರ್ತಿಯಾದ ಆಯೆಷಾ ಜಲಾಲ್‌ರಂತಹ ಕೆಲವರು, ಮುಸ್ಲಿಂ ಲೀಗ್‌ನೊಂದಿಗೆ ಅಧಿಕಾರವನ್ನು ಹಂಚಿಕೊಳ್ಳುವುದಕ್ಕೆ ಸಂಬಂಧಿಸಿ ಗಾಂಧಿಯವರು ಹಾಗೂ ಕಾಂಗ್ರೆಸ್‌ ತೋರಿಸಿದ ಅಸಮ್ಮತಿಯಿಂದಾಗಿ ವಿಭಜನೆಯ ಕಾರ್ಯವು ತೀವ್ರಗೊಂಡಿತು ಎಂದು ವಾದಿಸುತ್ತಾರೆ. ಹಿಂದೂ ರಾಷ್ಟ್ರೀಯವಾದಿ ರಾಜಕಾರಣಿಯಾದ ಪ್ರವೀಣ್‌ ತೊಗಾಡಿಯಾರಂತಹ ಇತರರೂ ಸಹ ಈ ವಿಷಯಕ್ಕೆ ಸಂಬಂಧಿಸಿ ಗಾಂಧಿಯವರ ನಾಯಕತ್ವ ಹಾಗೂ ನಡೆಗಳನ್ನು ಟೀಕಿಸಿ, ಈ ವಿಷಯದಲ್ಲಿ ಕಂಡುಬಂದ ಅತಿಯಾದ ದುರ್ಬಲತೆಯೇ ಭಾರತದ ವಿಭಜನೆಗೆ ಕಾರಣವಾಯಿತು ಎಂದಿದ್ದಾರೆ. ಇಸ್ರೇಲ್‌ನ್ನು ಸೃಷ್ಟಿಸುವುದಕ್ಕಾಗಿ ಪ್ಯಾಲೆಸ್ತೇನ್‌ನ ವಿಭಜನೆ ಮಾಡುವ ವಿಷಯಕ್ಕೆ ಪ್ರತಿಕ್ರಿಯೆಯಾಗಿ ೧೯೩೦ ಅಂತ್ಯದಲ್ಲಿ ಗಾಂಧಿಯವರು ವಿಭಜನೆಗೆ ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸಿದ್ದರು. ಈ ಕುರಿತು ೧೯೩೮ರ ಅಕ್ಟೊಬರ್‌ ೨೬ರಂದು ಹರಿಜನ್‌ ಪತ್ರಿಕೆಯಲ್ಲಿ ಅವರು ಈ ರೀತಿ ಹೇಳಿದ್ದಾರೆ: ಪ್ಯಾಲೆಸ್ತೇನ್‌‌ನಲ್ಲಿನ ಅರಬ್‌-ಯಹೂದ್ಯರ ಪ್ರಶ್ನೆಗೆ ಮತ್ತು ಜರ್ಮನಿಯಲ್ಲಿರುವ ಯಹೂದ್ಯರ ಶೋಷಣೆಗೆ ಸಂಬಂಧಿಸಿದಂತೆ ನನ್ನ ನಿರ್ಧಾರಗಳನ್ನು ತಿಳಿಸಬೇಕೆಂದು ನನಗೆ ಹಲವು ಪತ್ರಗಳು ಬಂದಿವೆ. ಈ ತರಹದ ತುಂಬಾ ಕ್ಲಿಷ್ಟಕರ ಪ್ರಶ್ನೆಗೆ ಹಿಂಜರಿಕೆಯಿಂದಲೇ ನನ್ನ ನಿರ್ಧಾರಗಳನ್ನು ತಿಳಿಸಬೇಕಾಗಿ ಬಂದಿದೆ.ಯಹೂದ್ಯರ ಬಗ್ಗೆ ನನ್ನೆಲ್ಲಾ ಸಹಾನುಭೂತಿಗಳಿವೆ. ನಾನು ದಕ್ಷಿಣ ಆಫ್ರಿಕಾದಲ್ಲಿ ಅವರನ್ನು ತುಂಬಾ ಹತ್ತಿರದಿಂದ ಕಂಡಿದ್ದು, ಅವರಲ್ಲಿ ಕೆಲವರು ಜೀವನದುದ್ದಕ್ಕೂ ಸ್ನೇಹಿತರಾಗಿ ಉಳಿದುಕೊಂಡಿದ್ದಾರೆ. ಜೀವನಪರ್ಯಂತ ಅವರು ಅನುಭವಿಸಿರುವ ಕಷ್ಟಕೋಟಲೆಗಳನ್ನು ಈ ಗೆಳೆಯರ ಮೂಲಕ ನಾನು ಹೆಚ್ಚಿನ ರೀತಿಯಲ್ಲಿ ಅರಿತುಕೊಂಡಿರುವೆ. ಅವರು ಕ್ರೈಸ್ತ ಮತದಲ್ಲಿಯೇ ಇದ್ದರೂ ಅಸ್ಪೃಶ್ಯರಾಗಿದ್ದರು[...] ಆದರೆ ನನ್ನ ಈ ಸಹಾನುಭೂತಿಯು ನ್ಯಾಯ ಒದಗಿಸಲು ಮಾಡಬೇಕಾದ ಅಗತ್ಯ ಕ್ರಮಗಳನ್ನು ಮಾಡುವಲ್ಲಿ ನನ್ನನ್ನು ಕುರುಡಾಗಿಸಿಲ್ಲ. ತಮ್ಮ ಸ್ವಂತ ರಾಷ್ಟ್ರಕ್ಕಾಗಿ ಯಹೂದ್ಯರು ಮಾಡಿದ ಕೂಗು ನನಗೆ ಅಷ್ಟಾಗಿ ಮನಮುಟ್ಟಲಿಲ್ಲ. ಈ ಅನ್ವೇಷಣೆಗೆ ಮತ್ತು ಪ್ಯಾಲೆಸ್ತೇನ್‌ಗೆ ಹಿಂದಿರುಗುವುದಕ್ಕೆ ಸಂಬಂಧಿಸಿದ ಯಹೂದ್ಯರ ಹಾತೊರೆಯುವಿಕೆಗೆ ಬೈಬಲ್‌ನಲ್ಲಿಯೇ ಅನುಮೋದನೆಯಿದೆ. ಈ ಭೂಮಿಯಲ್ಲಿರುವ ಬೇರೆ ಜನಗಳ ತರಹ, ತಾವು ಹುಟ್ಟಿದ, ಜೀವನೋಪಾಯಕ್ಕಾಗಿ ದುಡಿದ ದೇಶವನ್ನೇ ತಮ್ಮ ಸ್ವಂತ ಮನೆಯೆಂದು ಅವರೇಕೆ ಭಾವಿಸಬಾರದು?ಇಂಗ್ಲೆಂಡ್‌ ಆಂಗ್ಲರಿಗೆ ಅಥವಾ ಫ್ರಾನ್ಸ್‌ ಫ್ರೆಂಚರಿಗೆ ಸೇರಿರುವಂತೆಯೇ ಪ್ಯಾಲೆಸ್ತೇನ್‌ ಅರಬರಿಗೆ ಸೇರಿದೆ. ಯಹೂದ್ಯರನ್ನು ಅರಬರ ಮೇಲೆ ಹೇರುವುದು ತಪ್ಪು ಮತ್ತು ಅಮಾನವೀಯ. ಇಂದು ಪ್ಯಾಲೆಸ್ತೇನ್‌ನಲ್ಲಿ ನಡೆಯುತ್ತಿರುವ‌ ಘಟನೆಗಳಿಗೆ ಯಾವುದೇ ನೀತಿಸಂಹಿತೆ ಯಿಂದಲೂ ಸಮರ್ಥಿಸಲು ಸಾಧ್ಯವಿಲ್ಲ. ಹಿಂಸಾತ್ಮಕ ಪ್ರತಿಭಟನೆಯ ತಿರಸ್ಕರಣೆ ಅತಿಹೆಚ್ಚಿನ ಹಿಂಸಾತ್ಮಕ ಮಾರ್ಗಗಳಿಂದ ಸ್ವಾತಂತ್ರ್ಯವನ್ನು ಗಳಿಸಲು ಪ್ರಯತ್ನ ಪಟ್ಟವರ ಬಗ್ಗೆ ಗಾಂಧಿಯವರು ಮಾಡಿದ ಟೀಕೆಗಳಿಗಾಗಿ ಅವರೂ ಸಹ ಒಂದಷ್ಟು ರಾಜಕೀಯ ಟೀಕೆಗಳಿಗೆ ಗುರಿಯಾಗಬೇಕಾಯಿತು. ಭಗತ್‌ ಸಿಂಗ್‌, ಸುಖ್‌ದೇವ್‌, ಉಧಮ್‌ ಸಿಂಗ್‌ ಮತ್ತು ರಾಜ್‌ಗುರುರವರನ್ನು ನೇಣಿಗೆ ಹಾಕುವುದನ್ನು ಪ್ರತಿಭಟಿಸಲು ಅವರು ನಿರಾಕರಿಸಿದ್ದು ಕೆಲವು ಪಕ್ಷಗಳಿಂದ ಬಂದ ಖಂಡನೆಯ ಮೂಲವಾಯಿತು. ಆ ಟೀಕೆಗಳಿಗೆ ಗಾಂಧಿಯವರು ಪ್ರತಿಕ್ರಿಯಿಸಿದ್ದು ಹೀಗೆ: "ಒಂದು ಕಾಲದಲ್ಲಿ ಜನ ನನ್ನ ಮಾತನ್ನು ಕೇಳುತ್ತಿದ್ದರು. ಏಕೆಂದರೆ ಅವರ ಬಳಿ ಆಯುಧಗಳೇ ಇಲ್ಲದಿದ್ದಾಗ ಬ್ರಿಟಿಷರ ವಿರುದ್ದ ಯಾವುದೇ ಶಸ್ತ್ರಗಳಿಲ್ಲದೆಯೇ ಹೋರಾಡುವುದು ಹೇಗೆ ಎಂದು ಅವರಿಗೆ ತೋರಿಸಿಕೊಟ್ಟಿದ್ದೆ...ಆದರೆ ಈಗ ನನ್ನ ಅಹಿಂಸಾ ತತ್ವಗಳಿಂದ ಅವರಿಗೆ [ಹಿಂದು–ಮುಸ್ಲಿಮ್‌ ದಂಗೆಕೋರರಿಗೆ] ಪ್ರಯೋಜನವಿಲ್ಲ ಎಂಬುದನ್ನು ಇಂದು ನಾನು ಕೇಳ್ಪಟ್ಟಿರುವೆ. ಆದ್ದರಿಂದ, ಜನರು ಆತ್ಮರಕ್ಷಣೆಗಾಗಿ ಶಸ್ತ್ರಸಜ್ಜಿತರಾಗಬೇಕು." ಹೋಮರ್ ಜಾಕ್‌ನ ದಿ ಗಾಂಧಿ ರೀಡರ್: ಎ ಸೋರ್ಸ್‌ಬುಕ್‌ ಆಫ್‌ ಹಿಸ್‌ ಲೈಫ್‌ ಅಂಡ್‌ ರೈಟಿಂಗ್ಸ್‌ ಎಂಬ ಪುಸ್ತಕದಲ್ಲಿ ಮರು ಮುದ್ರಣಗೊಂಡ ಅಸಂಖ್ಯಾತ ಲೇಖನಗಳಲ್ಲಿ ಅವರು ತಮ್ಮ ವಾದಸರಣಿಯನ್ನು ಮುಂದುವರಿಸಿದರು. ಪ್ರಥಮವಾಗಿ, ೧೯೩೮ರಲ್ಲಿ ಬರೆಯಲಾದ "ಜಿಯೋನಿಸ್ಮ್‌ ಅಂಡ್ ಆಂಟಿ-ಸೆಮಿಟಿಸ್ಮ್‌,"ಎಂಬ ಲೇಖನದಲ್ಲಿ, ೧೯೩೦ರ ಸತ್ಯಾಗ್ರಹದ ಸನ್ನಿವೇಶದಲ್ಲಿ ನಡೆದ ಜರ್ಮನಿಯಲ್ಲಿರುವ ಯಹೂದ್ಯರ ಶೋಷಣೆಯ ಕುರಿತು ಗಾಂಧಿಯವರು ಟಿಪ್ಪಣಿಯನ್ನು ಬರೆದಿದ್ದಾರೆ. ಯಹೂದ್ಯರು ಜರ್ಮನಿಯಲ್ಲಿ ಎದುರಿಸಿದ ಕಷ್ಟಕೋಟಲೆಗಳನ್ನು ಎದುರಿಸುವಲ್ಲಿ ಅಹಿಂಸಾ ಮಾರ್ಗವನ್ನು ಒಂದು ವಿಧಾನವನ್ನಾಗಿ ಅವರು ತೋರಿಸಿಕೊಟ್ಟಿದ್ದು, ಅದರ ಕುರಿತು ಈ ರೀತಿ ಹೇಳುತ್ತಾರೆ, ನಾನೇನಾದರೂ ಯಹೂದ್ಯನಾಗಿದ್ದು ಜರ್ಮನಿಯಲ್ಲಿ ಹುಟ್ಟಿ ಜೀವನೋಪಾಯವನ್ನು ಅಲ್ಲಿಯೇ ಗಳಿಸಿದ್ದೇ ಆಗಿದ್ದರೆ, ಅತಿ ಎತ್ತರದ ಯಹೂದ್ಯೇತರ ಜರ್ಮನ್‌ ದೈತ್ಯನಂತೆಯೇ ಜರ್ಮನಿಯನ್ನು ನನ್ನ ಮನೆಯೆಂದು ಸಮರ್ಥಿಸುತ್ತಿದ್ದೆ ಮತ್ತು ನನ್ನನ್ನು ಗುಂಡಿಟ್ಟು ಕೊಲ್ಲುವಂತೆ ಅಥವಾ ಕತ್ತಲ ಕೋಣೆಯಲ್ಲಿ ಬಂಧಿಸಿಡುವಂತೆ ಸವಾಲೆಯೆಸುತ್ತಿದ್ದೆನೇ ವಿನಃ, ತಾರತಮ್ಯ ನೀತಿಗೆ ನನ್ನನ್ನು ಒಪ್ಪಿಸಿಕೊಳ್ಳಲು ಅಥವಾ ಬಹಿಷ್ಕಾರಕ್ಕೆ ಒಳಗಾಗಲು ನಾನು ತಿರಸ್ಕರಿಸುತ್ತಿದ್ದೆ. ಇದನ್ನು ನಾನು ಮಾಡುವುದಕ್ಕಾಗಿ ಸಾರ್ವಜನಿಕ ಪ್ರತಿರೋಧದಲ್ಲಿ ಯಹೂದ್ಯರು ಬಂದು ನನ್ನನ್ನು ಸೇರಬೇಕು ಎಂದು ನಾನು ಕಾಯುವ ಅವಶ್ಯಕತೆಯಲ್ಲ. ಆದರೆ ಅಂತ್ಯದಲ್ಲಿ ಉಳಿದವರೂ ಸಹ ನನ್ನ ಉದಾಹರಣೆಯನ್ನೇ ಅನುಸರಿಸುತ್ತಾರೆ ಎಂಬ ಆತ್ಮವಿಶ್ವಾಸ ಹೊಂದಿರುತ್ತಿದ್ದೆ. ಯಾವುದೇ ಒಬ್ಬ ಯಹೂದ್ಯ ಅಥವಾ ಎಲ್ಲ ಯಹೂದ್ಯರು ಇಲ್ಲಿ ನೀಡಿರುವ ಸಲಹೆಯನ್ನು ಒಪ್ಪಿಕೊಂಡಿದ್ದೇ ಆಗಿದ್ದಲ್ಲಿ, ಆತ ಅಥವಾ ಅವರು ಈಗಿನದ್ದಕ್ಕಿಂತ ಕೆಟ್ಟ ಪರಿಸ್ಥಿತಿಯಲ್ಲಿರಲಾರರು. ಸ್ವ ಇಚ್ಛೆಯಿಂದ ಅನುಭವಿಸುವ ಕಷ್ಟವು ಅವರಿಗೆ ಆಂತರಿಕ ಬಲ ಮತ್ತು ಸಂತೋಷವನ್ನು ಕೊಡುತ್ತದೆ. *ಇಂತಹ ಹಗೆತನಗಳ ಘೋಷಣೆಗೆ ತನ್ನ ಪ್ರಥಮ ಉತ್ತರವೆಂಬ ರೀತಿಯಲ್ಲಿ ಹಿಟ್ಲರ್‌‌ನ ಉದ್ದೇಶಪೂರ್ವಕ ಹಿಂಸಾಚಾರವು ಯಹೂದ್ಯರ ಸಾಮೂಹಿಕ ಮಾರಣಹೋಮದಲ್ಲಿ ಕೂಡ ಕೊನೆಗೊಳ್ಳಬಹುದು. ಆದರೆ ಸ್ವ ಇಚ್ಛೆಯ ಬಳಲಿಕೆಗೆ ಯುಹೂದಿಗಳ ಮನಸ್ಸು ಸಿದ್ಧವಾಗುವುದಾದರೆ, ನಾನು ಕಲ್ಪಿಸಿಕೊಂಡ ಮಾರಣಹೋಮವು ಕೂಡಾ ಕೃತಜ್ಞತೆ ಅರ್ಪಿಸುವ ದಿನವಾಗಿ ಬದಲಾಗಬಹುದು ಮತ್ತು ಪ್ರಜಾಪೀಡಕನ ಕೈಗಳಿಂದಲೂ ವರ್ಣಭೇದ ಪದ್ಧತಿಯನ್ನು ಜೆಹೊವಾ ದೇವನು ವಿಮೋಚನೆಗೊಳಿಸಿದಕ್ಕೆ ಸಂತೋಷವನ್ನು ಹೊಂದಬಹುದು. ದೇವರನ್ನು ಕಂಡು ಭಯಪಡುವವರಿಗೆ ಸಾವೆಂದರೆ ಏನೂ ಭಯವಿಲ್ಲ. ಗಾಂಧಿಯವರ ಈ ಮಾತುಗಳು ವ್ಯಾಪಕ ಟೀಕೆಗೊಳಗಾದವು ಮತ್ತು "ಯಹೂದ್ಯರ ಕುರಿತಾದ ಪ್ರಶ್ನೆಗಳು" ಎಂಬ ಲೇಖನದಲ್ಲಿ ಈ ಕುರಿತು ಅವರು ಹೀಗೆ ಪ್ರತಿಕ್ರಿಯಿಸಿದರು: "ಯಹೂದ್ಯರಿಗೆ ನಾನು ಮಾಡಿರುವ ಮನವಿಯನ್ನು ಟೀಕಿಸಿರುವ ವೃತ್ತಪತ್ರಿಕೆಗಳ ಎರಡು ಸುದ್ದಿ ತುಣುಕುಗಳನ್ನು ನನ್ನ ಸ್ನೇಹಿತರು ನನಗೆ ಕಳಿಸಿದ್ದಾರೆ. ಯಹೂದ್ಯರ ಮೇಲೆ ನಡೆದಿರುವ ಅಪಚಾರಗಳ ವಿರುದ್ಧ ಅಹಿಂಸೆಯನ್ನು ಪರಿಹಾರವಾಗಿ ಪ್ರಸ್ತುತಪಡಿಸಿರುವುದಕ್ಕಾಗಿ ಈ ಎರಡು ಟೀಕಾಕಾರರು ನಾನು ಹೊಸದೇನನ್ನೂ ಸಲಹೆ ನೀಡಿಲ್ಲ ಎಂದು ಸೂಚಿಸಿದ್ದಾರೆ. ಹೃದಯದಲ್ಲಿ ಅಡಕವಾಗಿರುವ ಹಿಂಸೆಯನ್ನು ಬಿಟ್ಟುಬಿಡುವ ಬಗ್ಗೆ ಮತ್ತು ತನ್ಮೂಲಕ ಉದ್ಭವವಾಗುವ ಶಕ್ತಿಯನ್ನು ನಿರಂತರವಾಗಿ ಅಭ್ಯಾಸ ಮಾಡುವ ಬಗ್ಗೆ ನಾನು ಕೋರಿಕೊಂಡಿರುವೆ ಯಹೂದ್ಯರು ಎದುರಿಸುತ್ತಿರುವ ನೆತ್ತಿಯ ಮೇಲೆ ತೂಗುತ್ತಿರುವ ಸಾಮೂಹಿಕ ಬಲಿಗೆ ಸಂಬಂಧಿಸಿ ಗಾಂಧಿಯವರು ನೀಡಿದ ಹೇಳಿಕೆಗಳು ಅಸಂಖ್ಯಾತ ಟೀಕಾಕಾರರಿಂದ ಟೀಕೆಗೆ ಒಳಗಾಯಿತು. ೧೯೩೯ರ ಫೆಬ್ರವರಿ ೨೪ರಂದು ಮಾರ್ಟಿನ್‌ ಬುಬರ್‌ರವರು ಗಾಂಧಿಯವರಿಗೆ ತೀಕ್ಷ್ನ ಟೀಕೆಯನ್ನು ಒಳಗೊಂಡ ಮುಕ್ತ ಪತ್ರವೊಂದನ್ನು ಬರೆದರು. ಬುಬರ್‌ನ ಪ್ರತಿಪಾದನೆಯಂತೆ, ಬ್ರಿಟಿಷ್‌ರು ಭಾರತೀಯರನ್ನು ನಡೆಸಿಕೊಳ್ಳುತ್ತಿದ್ದ ರೀತಿ ಹಾಗೂ ನಾಜಿಗಳು ಯಹೂದ್ಯರನ್ನು ನಡೆಸಿಕೊಳ್ಳುತ್ತಿದ್ದ ರೀತಿ ಎರಡನ್ನೂ ಒಂದಕ್ಕೊಂದು ಹೋಲಿಸಿ ನೋಡಿದರೆ ತುಂಬಾ ವಿರುದ್ದವಾಗಿದ್ದವು; ಮಿಗಿಲಾಗಿ, ಭಾರತೀಯರು ಶೋಷಣೆಗೆ ಒಳಗಾದ ಸಂದರ್ಭದಲ್ಲಿ, ಗಾಂಧಿಯವರು ಸಹ ಅಪರೂಪಕ್ಕೊಮ್ಮೆ, ಬಲಪ್ರಯೊಗವನ್ನು ಬೆಂಬಲಿಸುತ್ತಿದ್ದರು. ೧೯೩೦ರಲ್ಲಿನ ಜರ್ಮನಿಯಲ್ಲಿರುವ ಯಹೂದ್ಯರ ಶೋಷಣೆಗೆ ಸಂಬಂಧಿಸಿ ಸತ್ಯಾಗ್ರಹದ ವಿಷಯಕ್ಕೆ ಸಂಬಂಧಿಸಿದಂತೆ ಗಾಂಧಿಯವರು ವ್ಯಾಖ್ಯೆ ಬರೆದಿದ್ದಾರೆ. ಮೇಲೆ ತಿಳಿಸಿರುವಂತೆ ನಾಜಿಗಳಿಂದ ಯಹೂದ್ಯರ ಶೋಷಣೆಗೆ ಸಂಬಂಧಿಸಿ ನವೆಂಬರ್ ೧೯೩೮ರ ಲೇಖನದಲ್ಲಿ ಅವರು ಇದಕ್ಕೆಲ್ಲ ಅಹಿಂಸೆಯೇ ಮಾರ್ಗವೆಂದು ಹೇಳಿದ್ದಾರೆ: ಜರ್ಮನ್‌ರಿಂದಾಗುತ್ತಿರುವ ಯಹೂದ್ಯರ ಶೋಷಣೆಯಂತಹ ಘಟನೆಗೆ ಇತಿಹಾಸದಲ್ಲಿ ಮತ್ತಾವ ಸಮಾನ ಘಟನೆಯೂ ಕಾಣಸಿಗುವುದಿಲ್ಲ. ಹಿಂದಿದ್ದ ಪ್ರಜಾಪೀಡಕರುಗಳೂ ಸಹ ಹಿಟ್ಲರ್‌ನ ಹಾಗೆ ಹುಚ್ಚು ಹಿಡಿದವರಂತೆ ವರ್ತಿಸಿರಲಿಲ್ಲ. ಧಾರ್ಮಿಕತೆ ದುರಭಿಮಾನದಿಂದ ಅವನು ಆ ರೀತಿಯ ಕೆಲಸಗಳನ್ನು ಮಾಡಿದ. ಏಕೆಂದರೆ, ಪ್ರತ್ಯೇಕವಾದ ಮತ್ತು ಉಗ್ರ ರಾಷ್ಟ್ರೀಯತೆಯನ್ನು ಹೊಂದಿರುವ ಹೊಸ ಧರ್ಮವೊಂದನ್ನು ಆತ ಪ್ರತಿಪಾದಿಸುತ್ತಿದ್ದು, ಅದರ ಹೆಸರಿನಲ್ಲಿ ಯಾವುದೇ ಅಮಾನವೀಯತೆಯೂ ಮಾನವೀಯತೆಯ ಕೆಲಸವಾಗಿ ಬದಲಾಗಿ ಇಲ್ಲಿ ಮತ್ತು ಇನ್ನು ಮುಂದೆ ಪುರಸ್ಕೃತಗೊಳ್ಳುತ್ತದೆ. ನಿಸ್ಸಂಶಯವಾಗಿ ಹುಚ್ಚನಾಗಿರುವ ಆದರೆ ತುಂಬಾ ಧೈರ್ಯಶಾಲಿಯಾದ ಯುವಕನೋರ್ವನ ಅಪರಾಧವನ್ನು ಅವನ ಸಮಗ್ರ ಜನಾಂಗವು ನಂಬಲಸಾಧ್ಯವಾದ ಉಗ್ರತೆಯೊಂದಿಗೆ ಅನುಸರಿಸುತ್ತದೆ. ಮಾನವೀಯತೆಯ ಹೆಸರಿನಲ್ಲಿ ಮತ್ತು ಮಾನವೀಯತೆಗಾಗಿ ಅಲ್ಲೇನಾದರೂ ಸಮರ್ಥನೀಯ ಯುದ್ಧವಿರಲು ಸಾಧ್ಯವಾಗುವುದಾದರೆ, ಸ್ವೇಚ್ಛಾಚಾರದ ರೀತಿಯಲ್ಲಿ ಒಂದು ಸಂಪೂರ್ಣ ಜನಾಂಗವನ್ನು ಶೋಷಿಸುವುದನ್ನು ತಡೆಗಟ್ಟಲು ಜರ್ಮನಿಯ ವಿರುದ್ಧದ ಯುದ್ಧ ಮಾಡಿದರೆ ಅದಕ್ಕೆ ಸಂಪೂರ್ಣ ಸಮರ್ಥನೆ ಸಿಗುತ್ತದೆ. ಆದರೆ ನನಗೆ ಯಾವುದೇ ರೀತಿಯ ಕದನಗಳಲ್ಲಿಯೂ ನಂಬಿಕೆಯಿಲ್ಲ. ಆದ್ದರಿಂದ ಆ ರೀತಿಯ ಕದನದ ಸಾಧಕ-ಬಾಧಕಗಳ ಕುರಿತಾದ ಚರ್ಚೆಯು ನನ್ನ ವ್ಯಾಪ್ತಿ ಅಥವಾ ವಲಯದಿಂದ ಆಚೆಯಿದೆ. ಆದರೆ ಒಂದು ವೇಳೆ ಜರ್ಮನಿಯ ವಿರುದ್ದ ಕದನ ನಡೆಯದಿದ್ದರೆ, ಅದೂ ಕೂಡ ಯಹೂದ್ಯರ ವಿರುದ್ದ ಮಾಡಿದ ಒಂದು ಘೋರ ಕೃತ್ಯವೇ ಆಗುತ್ತದೆ, ಜರ್ಮನಿಯ ಜೊತೆಗಿನ ಬಾಂಧವ್ಯ ಇಲ್ಲದಂತಾಗುತ್ತದೆ. ನ್ಯಾಯ ಮತ್ತು ಪ್ರಜಾಪ್ರಭುತ್ವದ ಪರ ಇರುವ ಒಂದು ದೇಶ ಮತ್ತು ಇವೆರಡಕ್ಕೂ ಶತ್ರುವಾಗಿರುವ ಇನ್ನೊಂದು ದೇಶದ ನಡುವೆ ಹೇಗೆ ಬಾಂಧವ್ಯ ಬೆಳೆಯುವುದಕ್ಕೆ ಸಾಧ್ಯ?" ಮೋಹನ್‌ದಾಸ್‌K. ಗಾಂಧಿ. ಎ ನಾನ್ ವಯೊಲೆಂಟ್ ಲುಕ್ ಅಟ್ ಕಾನ್‌ಫ್ಲಿಕ್ಟ್ & ವಯೊಲೆನ್ಸ್‌ ೨೬ ನವೆಂಬರ್ ೧೯೩೮ರ ಹರಿಜನ್‌‌ ನಲ್ಲಿ ಪ್ರಕಟವಾಯಿತು ದಕ್ಷಿಣ ಆಫ್ರಿಕಾದಲ್ಲಿದ್ದಾಗ ಬರೆದ ಲೇಖನಗಳು ಗಾಂಧಿಯವರು ದಕ್ಷಿಣ ಆಫ್ರಿಕಾದಲ್ಲಿದ್ದಾಗ ಬರೆದ ಕೆಲವು ಲೇಖನಗಳು ವಿವಾದಾತ್ಮಕವಾಗಿವೆ. ೭ ಮಾರ್ಚ್‌ ೧೯೦೮ರಂದು, ಗಾಂಧಿಯವರು ದಕ್ಷಿಣ ಆಫ್ರಿಕಾದ ಜೈಲಿನಲ್ಲಿದ್ದಾಗ ಇಂಡಿಯನ್‌ ಒಪೀನಿಯನ್‌ ನಲ್ಲಿ ಹೀಗೆ ಬರೆದಿದ್ದಾರೆ: "ಕಾಫೀರ ಬುಟಕಟ್ಟಿನವರು ನಿಯಮದಂತೆ ಅನಾಗರಿಕರು - ಈ ಖೈದಿಗಳು ಹೆಚ್ಚು ಕಡಿಮೆ ಅವರಂತೆಯೇ. ಅವರೆಲ್ಲರೂ ತಂಟೆಕೋರರು, ಕೊಳಕು ಜನಗಳು, ಮತ್ತು ಹೆಚ್ಚೂ ಕಡಿಮೆ ಪ್ರಾಣಿಗಳಂತೆಯೇ ವಾಸಿಸುತ್ತಾರೆ." ೧೯೦೩ರಲ್ಲಿ ವಲಸೆ ವಿಷಯದ ಬಗ್ಗೆ ಬರೆಯುತ್ತಿರಬೇಕಾದರೆ , ಗಾಂಧಿಯವರು ಹೀಗೆ ಉಲ್ಲೇಖಿಸಿದ್ದಾರೆ: "ಜನಾಂಗದ ಶುದ್ಧತೆ ಬಗ್ಗೆ ನಾವು ತುಂಬಾ ನಂಬಿಕೊಳ್ಳುತ್ತೇವೆ. ಅವರು ನಮ್ಮದೇ ರೀತಿಯಲ್ಲಿ ಯೋಚಿಸುತ್ತಾರೆ ಎಂಬುದು ನಮ್ಮ ಭಾವನೆ... ದಕ್ಷಿಣ ಆಫ್ರಿಕಾದಲ್ಲಿರುವ ಬಿಳಿಯರು ಪ್ರಧಾನ ಜನಾಂಗದವರಾಗಿರಲೇಬೇಕು ಎಂದು ನಾವು ಭಾವಿಸುತ್ತೇವೆ." [164] ಗಾಂಧಿಯವರು ದಕ್ಷಿಣ ಆಫ್ರಿಕಾದಲ್ಲಿದ್ದಾಗ, ಕರಿಯರ ಜೊತೆ ಭಾರತೀಯರನ್ನು ಸೇರಿಸಿ ಸಾಮಾಜಿಕ ವರ್ಗೀಕರಣ ಮಾಡಿರುವುದನ್ನು ಅನೇಕ ಬಾರಿ ವಿರೋಧಿಸಿದ್ದೇ ಅಲ್ಲದೆ, " ಕಾಫೀರರಿಗೆ ಹೋಲಿಸಿದರೆ ನಾವುಗಳು ನಿಸ್ಸಂದೇಹವಾಗಿ ಎಷ್ಟೋ ಪಟ್ಟು ಉತ್ತಮರು" ಎಂದು ಹೇಳಿದ್ದಾರೆ. [166] ಗಾಂಧಿಯವರ ಕಾಲದಲ್ಲಿ ಕಾಫೀರ ಪದಕ್ಕೆ ಬೇರೆಯೇ ಅರ್ಥವಿತ್ತು, ಪ್ರಸ್ತುತ ಬಳಕೆಯಲ್ಲಿರುವಂತೆ ಇರಲಿಲ್ಲ. ಆದರೆ ಅದು ಪ್ರಯೋಜನಕಾರಿಯಾಗಿರಲಿಲ್ಲ. ಈ ರೀತಿಯ ಹೇಳಿಕೆ ನೀಡಿದ್ದರಿಂದಾಗಿ ಗಾಂಧಿಯವರನ್ನು ವರ್ಣಭೇಧ ಮಾಡುತ್ತಾರೆ ಎಂದು ಧೂಷಿಸಲಾಯಿತು. ದಕ್ಷಿಣ ಆಫ್ರಿಕಾ ಇತಿಹಾಸಜ್ಞರಾದ ಇಬ್ಬರು ಪ್ರೊಫೆಸರ್‌‌ಗಳು, ಸುರೇಂದ್ರ ಭನ ಮತ್ತು ಗೂಲಮ್‌ ವಹೀದ್ ಅವರು ಈ ವಿವಾದಾತ್ಮಕ ಹೇಳಿಕೆಗಳನ್ನು ಪರೀಕ್ಷಿಸಿ ತಮ್ಮ ಪುಸ್ತಕವಾದ ದಿ ಮೇಕಿಂಗ್ ಆಫ್ ಪೊಲಿಟಿಕಲ್ ರಿಫಾರ್ಮರ್: ಗಾಂಧಿ ಇನ್‌ ಸೌತ್‌ ಆಫ್ರಿಕಾ, ೧೮೯೩–೧೯೧೪. ಬರೆದಿದ್ದಾರೆ. (ನವ ದೆಹಲಿ: ಮನೋಹರ್‌, ೨೦೦೫). [169] ಅಧ್ಯಾಯ ೧ರಲ್ಲಿ ಅವರು ಒತ್ತಿ ಹೇಳಿದ್ದಾರೆ, "ವಸಾಹತು ದೇಶದಲ್ಲಿ ಗಾಂಧಿ, ಆಫ್ರಿಕನ್ನರು ಮತ್ತು ಭಾರತೀಯರು" "ಬಿಳಿಯರ ಆಳ್ವಿಕೆ"ಯಡಿ ಭಾರತೀಯ ಸಮುದಾಯಗಳು ಮತ್ತು ಆಫ್ರಿಕನ್ನರ ನಡುವಿನ ಸಂಬಂಧ ಮತ್ತು ವರ್ಣಬೇಧಕ್ಕೆ ಕಾರಣವಾದ ನಿಯಮಗಳು(ಮತ್ತು ಅವರು ವಾದಿಸುವಂತೆ, ಈ ಸಮುದಾಯಗಳ ನಡುವಿನ ಅನಿವಾರ್ಯ ತಿಕ್ಕಾಟಗಳು). ಈ ಸಂಬಂಧಗಳ ಬಗ್ಗೆ ಇತಿಹಾಜ್ಞರು ಹೀಗೆ ಹೇಳುತ್ತಾರೆ, "೧೮೯೦ರಲ್ಲಿ ಪ್ರಚಲಿತದಲ್ಲಿದ್ದ ವರ್ಣಬೇಧ ನೀತಿ ಕುರಿತ ಚಿಂತನೆಗಳ ಪ್ರಭಾವಕ್ಕೆ ತರುಣ ಗಾಂಧಿಯವರು ಒಳಗಾದರು." ಅದೇ ಸಮಯದಲ್ಲಿ, ಅವರೇ ಹೇಳುವಂತೆ, "ಜೈಲಿನಲ್ಲಿ ಗಾಂಧಿಯವರಿಗಾದ ಅನುಭವಗಳು ಅವರನ್ನು ಮತ್ತಷ್ಟು ಸೂಕ್ಷ್ಮ ಸಂವೇದನೆಗೆ ಒಳಪಡಿಸಿದಂತಿವೆ..ನಂತರದ ದಿನಗಳಲ್ಲಿ ಗಾಂಧಿಯವರು ಪಕ್ವವಾದರು; ವರ್ಗೀಕರಣಗಳ ಅಭಿವ್ಯಕ್ತಿಯಲ್ಲಿ ಮತ್ತು ಆಫ್ರಿಕನ್ನರ ವಿರುದ್ಧ ಇದ್ದ ಪೂರ್ವಗ್ರಹಗಳು ಕಡಿಮೆಯಾದವೆಂದೇ ಹೇಳಬಹುದು, ಮತ್ತು ಸಾಮಾನ್ಯ ಸಮಸ್ಯೆಗಳತ್ತ ಗಮನ ಕೇಂದ್ರೀಕರಿಸಿದರು. ಜೊಹಾನ್ಸ್‌ಬರ್ಗ್‌ ಜೈಲಿನಲ್ಲಿದ್ದಾಗ ಅವರ ಋಣಾತ್ಮಕ ದೃಷ್ಟಿಕೋನಗಳು ಕೇವಲ ಒರಟು ಆಫ್ರಿಕನ್‌ ಖೈದಿಗಳಿಗೇ ಸೀಮಿತವಾಗಿತ್ತೇ ಹೊರತು ಸಾಮಾನ್ಯ ಆಫ್ರಿಕನ್ನರಿಗಲ್ಲ." ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷರಾದ ನೆಲ್ಸನ್‌‌ ಮಂಡೇಲಾರವರು ಗಾಂಧಿಯವರ ಅನುಯಾಯಿ. [172] ೨೦೦೩ರಲ್ಲಿ ಜೊಹಾನ್ಸ್‌ಬರ್ಗ್‌‌ನಲ್ಲಿ ಗಾಂಧಿಯವರ ಪ್ರತಿಮೆ ಅನಾವರಣಗೊಳಿಸುವುದನ್ನು ತಡೆಯಲು ಕೆಲವರು ಗಾಂಧಿಯವರ ವಿಮರ್ಶೆಗಳನ್ನು ಮುಂದಿಟ್ಟುಕೊಂಡು ನಡೆಸಿದ ಪ್ರಯತ್ನಗಳನ್ನು ಮಂಡೇಲಾರವರು ನಿಲ್ಲಿಸಿದರು. [173] ಪ್ರತಿಮೆ ಅನಾವರಣಕ್ಕೆ ಸಂಬಂಧಿಸಿದ ಘಟನೆಗಳ ಕುರಿತು ದಿ ಮೇಕಿಂಗ್ ಆಫ್ ಪೊಲಿಟಿಕಲ್ ರಿಫಾರ್ಮರ್: ಗಾಂಧಿ ಇನ್‌ ಸೌತ್‌ ಆಫ್ರಿಕಾ, ೧೮೯೩–೧೯೧೪. ಪುಸ್ತಕದ ಉಪ ಸಂಹಾರದಲ್ಲಿ ಭನ್ನ ಮತ್ತು ವಹೀದ್‌‌ರವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. "ದಕ್ಷಿಣ ಆಫ್ರಿಕಾದಲ್ಲಿ ಗಾಂಧಿಯ ಸ್ವತ್ತು," ಎಂಬ ವಿಭಾಗದಲ್ಲಿ "ಬಿಳಿಯರ ಆಡಳಿತಕ್ಕೆ ಅಂತ್ಯ ಹಾಡಲು ದಕ್ಷಿಣ ಆಫ್ರಿಕಾದ ಚಳುವಳಿಗಾರರ ಮುಂದಿನ ಪೀಳಿಗೆಗೆ ಗಾಂಧಿ ಸ್ಪೂರ್ತಿ ನೀಡಿದರು". ಎಂದು ಅವರು ಬರೆದಿದ್ದಾರೆ.ಇದು ೦}ನೆಲ್ಸನ್‌‌ ಮಂಡೇಲಾರವರನ್ನು ಗಾಂಧಿಯವರೊಂದಿಗೆ ಸೇರಿಸಿತು... ಒಂದು ಅರ್ಥದಲ್ಲಿ ಗಾಂಧಿಯವರು ಆರಂಭಿಸಿದ್ದನ್ನು ಮಂಡೇಲಾರವರು ಕೊನೆಗೊಳಿಸಿದರು ಎಂದೇ ಹೇಳಬಹುದು." ಈ ಇತಿಹಾಜ್ಞರು ಗಾಂಧಿ ಪ್ರತಿಮೆ ಅನಾವರಣಗೊಳ್ಳುವ ಸಂದರ್ಭದಲ್ಲಿ ಎದ್ದ ವಿವಾದಗಳನ್ನು ಉಲ್ಲೇಖಿಸುತ್ತಾ ಮುಂದುವರೆಯುತ್ತಾರೆ. ವರ್ಣಬೇಧ ನೀತಿಯಿಂದ ಹೊರಬಂದ ದಕ್ಷಿಣ ಆಫ್ರಿಕಾದಲ್ಲಿ ರಾಜಕೀಯ ಉದ್ದೇಶಗಳಿಗಾಗಿ ತಮ್ಮ ಗಾಂಧಿಯನ್ನು ಕಂಡುಕೊಳ್ಳಲು ಹೊರಟವರು. ಅವರ ಕುರಿತ ಕೆಲವು ಸತ್ಯಗಳನ್ನು ಕಡೆಗಣಿಸಿದ್ದರಿಂದಾಗಿ ಅವರ ಉದ್ದೇಶಗಳು ಈಡೇರಲಿಲ್ಲ; ಗಾಂಧಿಯವರನ್ನು ಅತ್ಯಂತ ಸರಳವಾಗಿ ಜನಾಂಗೀಯವಾದಿ ಎಂದು ದೂಷಿಸುವ ಮಂದಿ ಒಟ್ಟು ಅಸ್ಪಷ್ಟತೆಯಲ್ಲಿ ಸಮಾನ ದೋಷಿಗಳಾಗಿದ್ದಾರೆ. ಅರಾಜಕತಾವಾದ ಗಾಂಧಿಯವರು ಓರ್ವ ಸ್ವ-ವರ್ಣಿತ ದಾರ್ಶನಿಕ ಅರಾಜಕತಾವಾದಿಯಾಗಿದ್ದು, ಸರ್ಕಾರಿ ಶಾಸನದ ಕೈಗೊಂಬೆಯಾಗಿರದ ಭಾರತದ ನಿರ್ಮಾಣ ಅವರ ಕನಸಾಗಿತ್ತು. ಅವರು ಒಂದು ಬಾರಿ ಹೀಗೆ ಹೇಳಿದ್ದಾರೆ "ಆದರ್ಶಪ್ರಾಯ ಅಹಿಂಸಾತ್ಮಕ ರಾಜ್ಯವೆಂದರೆ ವ್ಯವಸ್ಥಿತ ಅರಾಜಕತೆ." ರಾಜಕೀಯ ವ್ಯವಸ್ಥೆಗಳು ಒಟ್ಟಾರೆಯಾಗಿ ಶ್ರೇಣಿ ವ್ಯವಸ್ಠೆಯಿಂದ ಕೂಡಿರುವಾಗ, ವ್ಯಕ್ತಿಯಿಂದ ಹಿಡಿದು ಕೇಂದ್ರ ಸರ್ಕಾರದವರೆಗೆ ಅಧಿಕಾರದ ಪ್ರತಿ ಸ್ತರದಲ್ಲಿ, ಮೇಲಿನ ಸ್ತರದ ಅಧಿಕಾರ ಕೆಳಗಿನ ಸ್ತರಕ್ಕಿಂತ ಹಂತ ಹಂತವಾಗಿ ಹೆಚ್ಚುತ್ತಾ ಹೋಗುತ್ತದೆ. ಆದರೆ ಸಮಾಜ ಇದಕ್ಕೆ ವಿರುದ್ಧವಾಗಿರಬೇಕು ಎಂಬುದು ಗಾಂಧಿಯವರ ಆಶಯವಾಗಿತ್ತು, ಈ ವ್ಯವಸ್ಥೆಯಲ್ಲಿ ವ್ಯಕ್ತಿವರೆಗೆ(ಕೆಳಮಟ್ಟದವರೆಗೆ) ಒಪ್ಪಿಗೆ ಸಿಗದೆ ಏನನ್ನೂ ಮಾಡುವಂತಿಲ್ಲ. ಅವರ ಕಲ್ಪನೆಯಲ್ಲಿ ದೇಶದ ನಿಜವಾದ ಸ್ವಯಮಾಡಳಿತ ಎಂದರೆ ಪ್ರತಿಯೊಬ್ಬ ಪ್ರಜೆಯೂ ತಮ್ಮನ್ನು ತಾವೇ ಆಳಿಕೊಳ್ಳುವುದು ಮತ್ತು ಅಲ್ಲಿ ಯಾವುದೇ ರಾಜ್ಯವೂ ಪ್ರಜೆಗಳ ಮೇಲೆ ತನ್ನ ಕಾನೂನನ್ನು ಹೇರದಿರುವ ಸ್ಥಿತಿ. ಇದನ್ನು ಕಾಲ ಕ್ರಮೇಣವಾಗಿ ಅಹಿಂಸಾತ್ಮಕ ಹೋರಾಟ ಸಂಧಾನದಿಂದ ಸಾಧಿಸಬಹುದು, ಮತ್ತು ಅಧಿಕಾರ ಶ್ರೇಣಿ ವ್ಯವಸ್ಥೆಯ ಅಧಿಕಾರಿಗಳ ಸ್ತರಗಳಿಂದ ಕಳಚಿಕೊಂಡು, ಕಟ್ಟಕಡೆಯ ವ್ಯಕ್ತಿಗೂ ಸೇರಬೇಕು, ಇದು ಅಹಿಂಸಾತ್ಮಕ ನೈತಿಕತೆಯನ್ನು ಸಾಕಾರಗೊಳಿಸುವಲ್ಲಿ ನೆರವಾಗುತ್ತದೆ. ಮೇಲ್ಮಟ್ಟದ ಅಧಿಕಾರಿಗಳು ಹಕ್ಕುಗಳನ್ನು ಹೇರುವ ವ್ಯವಸ್ಧೆಯ ಬದಲು, ಪ್ರಜೆಗಳು ಪರಸ್ಪರ ಜವಾಬ್ದಾರಿಯುತವಾಗಿ ಸ್ವಯಮಾಡಳಿತವನ್ನು ನಡೆಸುವಂತಿರಬೇಕು ಎಂದು ಗಾಂಧಿಯವರು ಆಶಿಸಿದ್ದರು. ಗಾಂಧಿಯವರು ದಕ್ಷಿಣ ಆಫ್ರಿಕಾದಿಂದ ಹಿಂತಿರುಗುತ್ತಿದ್ದಾಗ, ವಿಶ್ವ ಮಾನವ ಹಕ್ಕುಗಳಿಗೆ ಸಂವಿಧಾನ ಬರೆಯುವ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಆಹ್ವಾನಿಸಿ ಅವರಿಗೆ ಪತ್ರ ಬಂದಿತ್ತು. ಪತ್ರಕ್ಕೆ ಅವರು ಪ್ರತಿಕ್ರಿಯಿಸಿದ್ದು ಹೀಗೆ, "ನನ್ನ ಅನುಭವದಲ್ಲಿ ಹೇಳುವುದಾದರೆ, ಮಾನವ ಕರ್ತವ್ಯಗಳ ಕುರಿತು ಲಿಖಿತ ಸಂವಿಧಾನವನ್ನು ಹೊಂದುವುದು ಇನ್ನೂ ಮುಖ್ಯ". ಗಾಂಧಿಯವರ ಕಲ್ಪನೆಯಂತೆ ಮುಕ್ತ ಭಾರತವೆಂದರೆ ಸ್ವಸಂತೃಪ್ತ ಸಣ್ಣ ಸಮುದಾಯಗಳು ಸಾವಿರಾರು ಸಂಖ್ಯೆಯಲ್ಲಿ ಇರುವುದು ಮತ್ತು (ಟಾಲ್ಸ್‌ಟಾಯ್‌‌ರವರು ಹೇಳಿರಬಹುದಾದ) ಬೇರೆಯವರಿಗೆ ತೊಂದರೆಯಾಗದ ರೀತಿಯಲ್ಲಿ ತಮ್ಮನ್ನು ತಾವೇ ಆಳಿಕೊಳ್ಳುವುದು. ಹಾಗೆಂದ ಮಾತ್ರಕ್ಕೆ, ಬ್ರಿಟೀಷರು ಸ್ಥಾಪಿಸಿದ ಆಡಳಿತ ವ್ಯವಸ್ಥೆಯನ್ನು ಯಥಾವತ್ತಾಗಿ ಭಾರತೀಯರ ಕೈಗೆ ವರ್ಗಾಯಿಸುವುದು ಎಂಬರ್ಥವಲ್ಲ. ಹಾಗೆ ಮಾಡಿದಲ್ಲಿ ೦}ಹಿಂದೂಸ್ತಾನವನ್ನು ಇಂಗ್ಲೀಸ್ತಾನವನ್ನಾಗಿ ಮಾಡಿದಂತಾಗುತ್ತದೆ. ಬ್ರಿಟಿಷ್ ಮಾದರಿಯ ಸಂಸದೀಯ ವ್ಯವಸ್ಥೆಯಲ್ಲಿ ಅವರಿಗೆ ನಂಬಿಕೆಯಿಲ್ಲದ್ದರಿಂದ, ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ಬರ್ಖಾಸ್ತುಗೊಳಿಸಿ ಭಾರತದಲ್ಲಿ ನೇರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸ್ಥಾಪಿಸಬೇಕು ಎಂದು ಬಯಸಿದ್ದರು. ಪ್ರಸಿದ್ದ ಸಂಸ್ಕೃತಿಗಳಲ್ಲಿನ ವರ್ಣನೆ ಮಹಾತ್ಮ ಗಾಂಧಿಯವರನ್ನು ಚಲನಚಿತ್ರ, ಸಾಹಿತ್ಯ, ಮತ್ತು ರಂಗ ಕೃತಿಗಳಲ್ಲಿ ವರ್ಣಿಸಲಾಗಿದೆ. ಬೆನ್‌ ಕಿಂಗ್ಸ್‌ಲಿಯವರು ೧೯೮೨ರ ಗಾಂಧಿ ಎಂಬ ಚಲನಚಿತ್ರದಲ್ಲಿ ಗಾಂಧಿ ಪಾತ್ರಧಾರಿಯಾಗಿ ಅಭಿನಯಿಸಿದ್ದಾರೆ. ೨೦೦೬ರಲ್ಲಿ ಬಾಲಿವುಡ್‌‌ನಲ್ಲಿ ನಿರ್ಮಿತವಾದ ಲಗೇ ರಹೋ ಮುನ್ನಾ ಭಾಯಿ ಚಲನಚಿತ್ರದಲ್ಲಿ ಗಾಂಧಿಯವರು ಕೂಡಾ ಕೇಂದ್ರ ಬಿಂದುವಾಗಿದ್ದಾರೆ. ೨೦೦೭ರಲ್ಲಿ ಬಂದ ಗಾಂಧಿ, ಮೈ ಫಾದರ್‌ ಚಲನಚಿತ್ರದಲ್ಲಿ ಗಾಂಧಿಯವರು ಮತ್ತು ಅವರ ಮಗ ಹರಿಲಾಲ್‌ರ ನಡುವಿನ‌ ಸಂಬಂಧವನ್ನು ತೋರಿಸಲಾಗಿದೆ. The ೧೯೯೬ರ ಚಲನಚಿತ್ರವಾದ, ದ ಮೇಕಿಂಗ್‌ ಆಫ್‌ ದ ಮಹಾತ್ಮ ದಲ್ಲಿ, ಗಾಂಧಿಯವರು ದಕ್ಷಿಣ ಆಫ್ರಿಕಾದಲ್ಲಿ ಕಳೆದ ೨೧ ವರ್ಷಗಳನ್ನು ದಾಖಲಿಸಲಾಗಿದೆ. ಶ್ರೀಕಾಂತ್‌ರವರು ತಮ್ಮ ಮುಂಬರಲಿರುವ ಮಹಾತ್ಮ ಚಲನಚಿತ್ರದ ಕುರಿತು ಇತ್ತೀಚೆಗಷ್ಟೇ ಪ್ರಕಟಣೆಯನ್ನು ನೀಡಿದ್ದು, ಅದು ಕೃಷ್ಣ ವಂಶಿಯವರ ನಿರ್ದೇಶನದಲ್ಲಿ ಮೂಡಿಬರಲಿದೆ. ಸಂತ ಗಾಂಧೀಜಿ ಗಾಂಧೀಜಿಯವರು ಸಂತರಾಗಿ , ಅಧ್ಯಾತ್ಮ ಸಾಧಕರಾಗಿ, ಯೋಗಿಯಾಗಿ ಬೆಳೆದ ಬಗೆ ಅಥವಾ ಆ ದೃಷ್ಟಿಕೋನದಿಂದ ನೋಡಿದಾಗ, ಅವರ ಇನ್ನೊಂದು ಮಗ್ಗಲು / ವ್ಯಕ್ತಿತ್ವ ನಮಗೆ ಗೋಚರವಾಗುವುದು. ಅದರ ಅಲ್ಪ ಪರಿಚಯವನ್ನು ಇಲ್ಲಿ ಕೊಡಲು ಪ್ರಯತ್ನಿಸಿದೆ ಗಾಂಧೀಜಿಯವರ ಬಹುಮುಖ ವ್ಯಕ್ತಿತ್ವ ಗಾಂಧೀಜಿ ಯಾರು? ಎಂಬ ಪ್ರಶ್ನೆಗೆ ಹಲವು ಉತ್ತರಗಳನ್ನು ಕೊಡಬಹುದು. ಗುಜರಾತಿನ ಕರಮಚಂದ್ ಮತ್ತು ಪುತಲೀಬಾಯಿಯವರ ಮಗ, ಅಹಿಂಸಾ ಮಾರ್ಗದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರು, ಮಹಾತ್ಮಾ ಗಾಂಧಿ ಅಥವಾ ಮೋಹನ ದಾಸ ಕರಮಚಂದ ಗಾಂಧಿ, ರಾಷ್ಟ್ರ ಪಿತ ಗಾಂಧಿ, ಒಬ್ಬ ಪ್ರಕೃತಿ ಚಿಕಿತ್ಸೆಯ ಪ್ರಯೋಗ ಕಾರ, ಸಸ್ಯ ಆಹಾರದ ಪ್ರಯೋಗಕಾರ, ನಯೀತಾಲಿಂ ವಿದ್ಯಾಭ್ಯಾಸ ಪದ್ದತಿಯ ಪ್ರಯೋಜಕ, ಅಸಾಧಾರಣ ಚಾಣಾಕ್ಷ ರಾಜಕಾರಣಿ, ಸತ್ಯ ಮತ್ತು ಅಹಿಂಸೆಯ ಮೇಲೆ ಜೀವನವಿಡೀ ಪ್ರಯೋಗ ಮಾಡಿದ ಸಾಧಕ - ಹರಿಕಾರ, ಆತ್ಮ ಸಾಧಕ. ಅಪ್ಪಟ ಕರ್ಮಯೋಗಿ ; ಆದರೆ ಇದಾವುದೂ ಗಾಂಧೀಜಿ ಯಾರು ಎಂಬ ಪ್ರಶ್ನೆಗೆ ಪೂರ್ಣವಾದ ಉತ್ತರವಾಗುವುದಿಲ್ಲ. ಏಕೆಂದರೆ ಈ ಉತ್ತರಗಳು ಅವರ ಬಹುಮುಖ ವ್ಯಕ್ತಿತ್ವ, ಸಾಧನೆ, ಪ್ರಯೋಗಗಳನ್ನಾಗಲೀ, ಅವರ ಅಂತಃಸತ್ವವನ್ನಾಗಲೀ, ಅವರ ನಿಜವಾದ ಅಧ್ಯಾತ್ಮಿಕ ವ್ಯಕ್ತಿತ್ವವನ್ನಾಗಲೀ ವಿವರಿಸಲಾರವು. ಆರಂಭಿಕ ಜೀವನ ಭಾರತದಲ್ಲಿ ವಿದ್ಯಾಭ್ಯಾಸ ಮುಗಿಸಿ ಇಂಗ್ಲೆಂಡಿಗೆ ಕಾನೂನು ಪದವಿ ಪಡೆಯಲು ಹೋದ ಮೋಹನ ದಾಸ ಗಾಂಧಿ ಪಾಶ್ಚಿಮಾತ್ಯ ಪದ್ಧತಿಗೆ ಮನಸೋತರು. ಆದರೆ ಅವರ ಪೂರ್ವ ಸಂಸ್ಕಾರದಿಂದ ಸ್ವಲ್ಪದರಲ್ಲಿಯೇ ಎಚ್ಚೆತ್ತರು. ಅವರು ಬೈಬಲ್ ಬೋಧನೆಗಳಲ್ಲಿ ಬಡವರ ಬಗ್ಗೆ , ದಲಿತರ ಬಗ್ಗೆ ಅವನ ಕಳಕಳಿಯನ್ನು ಓದಿ ಅದರ ಪ್ರಭಾವಕ್ಕೊಳಗಾದರು. ಆಕಸ್ಮಿಕವಾಗಿ ಅವರು ಇಂಗ್ಲಿಷ್ ಭಾಷೆಗೆ ತರ್ಜುಮೆಗೊಂಡ ಭಗವದ್ಗೀತೆಯನ್ನು ಓದಿದರು. ಅಂದಿನಿಂದಲೇ ಅದು ಅವರನ್ನು ಸೆಳೆಯಿತು. ಗೀತೆ ಅವರ ಕೊನೆಯ ಉಸಿರು ಇರುವವರೆಗೂ ಅವರ ಜೀವನದ ಮಾರ್ಗದರ್ಶನದ ಗ್ರಂಥವಾಯಿತು, ಆವರ ತಂದೆ ತಾಯಿಯಿಂದ ಬಂದ ಭಕ್ತಿ, ರಾಮ ನಾಮ ಅವರ ಜೀವನದ ಉಸಿರಾಯಿತು. ಗಾಂಧೀಜೀಯವರೇ ಹೇಳಿದಂತೆ ಅವರ ಜೀವನ ಕ್ರಮವನ್ನೇ ಬದಲು ಮಾಡಿದ ಗ್ರಂಥ,ಜಾನ್ ರಸ್ಕಿನ್ನನ ಅನ್ ಟು ದಿ ಲಾಸ್ಟ್. ಜೋಹಾನ್ಸ ಬರ್ಗ್ ನಿಂದ ಡರ್ಬಿನ್ನಿಗೆ ರೈಲಿನಲ್ಲಿ ಪ್ರಯಾಣ ಮಾಡುವಾಗ ಓದಿದ ಪುಸ್ತಕ. ಅವರ ಮಾತಿನಲ್ಲೇ ಹೇಳುವುದಾದರೆ, 'ನಾನು ಆ ದಿನ ರಾತ್ರಿ ನಿದ್ದೆ ಮಾಡಲಾಗಲಿಲ್ಲ. ನಾನು, ನನ್ನ ಜೀವನವನ್ನು ಆ ಪುಸ್ತಕದಲ್ಲಿ ಹೇಳಿದ ಆದರ್ಶಗಳಿಗೆ ಅನುಗುಣವಾಗಿ ಬದಲಾಯಿಸಿಕೊಳ್ಳಲು ನಿರ್ಧರಿಸಿದೆ'. ಆ ಗ್ರಂಥದಲ್ಲಿ ಹೇಳಿದ ಆದರ್ಶಗಳು ಮೂರು: ಒಬ್ಬ ವ್ಯಕ್ತಿಯ ಹಿತ, ಎಲ್ಲಾ ಜನರ ಹಿತದಲ್ಲಿದೆ. ಒಬ್ಬ ಲಾಯರನ ಉದ್ಯೋಗವಾಗಲಿ, ಒಬ್ಬ ಕ್ಷೌರಿಕನ ಉದೋಗವಾಗಲೀ ಸಮಾನ ಗೌರವ ಉಳ್ಳದ್ದು. ರೈತನ ಮತ್ತು ಕಾರ್ಮಿಕನ ಉದ್ಯೋಗಗಳು ಶ್ರೇಷ್ಠವಾದವು. ದಕ್ಷಿಣ ಆಫ್ರಿಕಾದಲ್ಲಿ ಹಣ ಸಂಪಾದನೆಗಾಗಿ ದಕ್ಷಿಣ ಆಫ್ರಿಕಾಕ್ಕೆ ಹೋದ ಅವರ ಜೀವನ ಕ್ರಮ ಬದಲಾಗಿ,ಅವರೊಬ್ಬ ಸಮಾಜ ಸೇವಕರಾಗಿ, ಸತ್ಯಾಗ್ರಹಿಯಾಗಿ, ಪ್ರಾಮಾಣಿಕ ಲಾಯರಾಗಿ ಕೆಲಸಮಾಡಿದ್ದನ್ನು ಕೇಳಿದ್ದೇವೆ. ಟಾಲಸ್ಟಾಯ್ ಫಾರಂ ಅಥವಾ ಫೀನಿಕ್ಷ್ ಆಶ್ರಮ ಸ್ಥಾಪಿಸಿ,ಅಲ್ಲಿ ಗೃಹ ಕೈಗಾರಿಕೆ ಮತ್ತು ಶಿಕ್ಷಣವನ್ನು ಜೊತೆ ಜೊತೆಯಾಗಿ ಪ್ರಯೋಗ ಮಾಡಿ , ಮೂಲ ಶಿಕ್ಷಣ ಸಿದ್ಧಾಂತವನ್ನು (ಬೇಸಿಕ್ ಎಜುಕೇಶನ್) ರೂಪಿಸಿದರು. ತಮ್ಮ ಆದಾಯವನ್ನೆಲ್ಲಾ ಸಮಾಜ ಸೇವೆಗೆ ತ್ಯಾಗ ಮಾಡಿದರು. ಅಂದಿನ ಕಾಲದಲ್ಲಿ ಅವರ ವಾರ್ಷಿಕ ಆದಾಯ ಸುಮಾರು ಅರವತ್ತು ಸಾವಿರ ರೂಪಾಯಿಗೂ ಹೆಚ್ಚು (೧೮೯೩-೧೯೧೫). ಸತ್ಯಾನ್ವೇಷಣೆ ಇವೆಲ್ಲಕ್ಕಿಂತ ಹೆಚ್ಚಾಗಿ ಅವರು, ಅಂತರಂಗದಲ್ಲಿ ಸತ್ಯಾನ್ವೇಶಣೆಗಾಗಿ ಮಾಡಿದ ಸಾಧನೆ ಪ್ರಯೋಗಗಳು ಅಷ್ಟಾಗಿ ಜನರ ಗಮನ ಸೆಳೆದಿಲ್ಲ. ಅವರೂ ಆ ಕುರಿತು ಹೆಚ್ಚಾಗಿ ಬರೆದಿಲ್ಲ. ಅವರ ಅಂತರಂಗ ಸಾಧನೆಗಳನ್ನು ಕಂಡು ಬರೆದವರು ವಿರಳ. ಆದರೆ ಅವರು ತಮ್ಮ ಆತ್ಮ ಚರಿತ್ರೆಗೆ ಸತ್ಯಾನ್ವೇಷಣೆಯ ಪ್ರಯೋಗಗಳು, ಎಂದು ಹೆಸರಿಸಿದ್ದಾರೆ. ಅವರು ನಂಬಿದ ದೇವರು ಸತ್ಯ. ಸತ್ಯ ವೆಂದರೆ ಉಪನಿಷತ್ತು , ಗೀತೆಯಲ್ಲಿ ಹೇಳಿದ ಸತ್ ಅರ್ಥಾತ್ ಈ ವಿಶ್ವವನ್ನು ಆವರಿಸಿರುವ - ನಡೆಸುವ ಚೇತನ. ಅದರ ಸಾಕಾರ ಮೂರ್ತಿ ಅಥವಾ ಶಬ್ದರೂಪವೇ ಅವರು ನಂಬಿದ ಶ್ರೀ ರಾಮ ತಾರಕ ಮಂತ್ರ. ಅವರು ಗೀತೆ ಮೊದಲಾದ ಅನೇಕ ಧಾರ್ಮಿಕ ಗ್ರಂಥಗಳನ್ನು ಅಧ್ಯಯನ ಮಾಡಿ , ಜಪ, ಧ್ಯಾನ, ಪ್ರಾರ್ಥನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರು. ಅವರು ತಮ್ಮ ಪತ್ನಿಯನ್ನು ಒಪ್ಪಿಸಿಕೊಂಡು,ಬ್ರಹ್ಮಚರ್ಯವನ್ನು ಪಾಲಿಸುತ್ತಾ, ರಾತ್ರಿಯಲ್ಲಿ ಧ್ಯಾನ ಜಪಗಳ ಸಾಧನೆ ನಡೆಸಿದರು. ಅವರ ಆತ್ಮ ಕಥೆಯಲ್ಲಿ ಆ ವಿಚಾರ ಸ್ವಲ್ಪ ಬಂದಿದೆ. ಅವರ ಶೋಧನೆ ಸಾಧನೆಗಳು, ವಿಶ್ವ ಚೇತನವಾದ ಪರಬ್ರಹ್ಮವಸ್ತುವೆಂದು ಕರೆಯಲ್ಪಡುವ ಆ ಸತ್ಯವೇ ಆಗಿತ್ತು. ಅವರು ಧರ್ಮ,ಧ್ಯಾನ, ಸಾಧನೆಗಳಲ್ಲಿ ಅನುಮಾನ, ತೊಡಕು ಉಂಟಾದಾಗ ತಮ್ಮ ಧಾರ್ಮಿಕ ಗುರುವೆಂದು ನಂಬಿದ ಅವರ ಮಿತ್ರರೂ, ಜ್ಞಾನಿಯೂ ಆದ ಬೊಂಬಾಯಿನ (ರಾಜಕೋಟೆ ಯವರು) ರಾಯಚಂದ ಭಾಯಿಯವರಿಂದ ಪತ್ರ ಮುಖೇನ ಸಂಶಯ ಪರಿಹರಿಸಿಕೊಳ್ಳುತ್ತಿದ್ದರು. ಶ್ರೀಮದ್ ರಾಯ್ ಚಂದಭಾಯಿ ಯವರ ಮಾರ್ಗದರ್ಶನ ಗಾಂಧೀಜಿ ಸಮಾಜ ಸೇವೆಯ ಜೊತೆ ಜೊತೆಯಲ್ಲಿಯೇ ತೀವ್ರ ತರ ಅದ್ಯಾತ್ಮಕ ಸಾಧನೆಯಲ್ಲಿ ತೊಡಗಿದ್ದರು. ಗೀತೆ ಅವರ ಕೈಗನ್ನಡಿಯಾಗಿದ್ದರೆ, ಶ್ರೀಮದ್ ರಾಯ್ ಚಂದಭಾಯಿಯವರು ಅವರ ಅದ್ಯಾತ್ಮಿಕ ಗುರುಗಳೂ ಮಿತ್ರರೂ ಆಗಿದ್ದರು. ಗಾಂಧೀಜಿಯವರ ಕ್ರಿಶ್ಚಿಯನ್ ಮಿತ್ರರು ಅವರಿಗೆ ಕ್ರಿಶ್ಚಿಯಯನ್ ಧರ್ಮದಲ್ಲಿರುವ ಆನೇಕ ಉತ್ತಮ ಆದರ್ಶ ಗುಣಗಳಾದ ದಾನ-ಧರ್ಮ, ಬ್ರಹ್ಮಚರ್ಯ ಮಹತ್ವ, ದೇವನಲ್ಲಿ ಮತ್ತು ದೇವದೂತನಲ್ಲಿ ಅಚಲ ನಂಬುಗೆಯ ಮನಸ್ಥಿತಿ ಮೊದಲಾದ ವಿಷಯಗಳನ್ನು ಹೇಳಿ ಕ್ರಿಶ್ಚಿಯನ್ ಧರ್ಮಕ್ಕೆ ಸೇರಲು ಗಾಂಧೀಜೀ ಯವರನ್ನು ಒತ್ತಾಯಿಸಿದಾಗ ಅವರಿಗೆ ನೆನಪಾದುದು ಜ್ಞಾನಿಯೂ ವಿದ್ವಾಂಸರೂ ಇವರ ಮಿತ್ರರೂ ಅಧ್ಯಾತ್ಮ ಗುರುಗಳೂ ಆದ ಶ್ರೀ ರಾಯ್‌ಚಂದಭಾಯಿ ಯವರು. ಗಾಂಧೀಜೀಯವರು ಕ್ರಿಶ್ಚಿಯನ್ ಧರ್ಮಕ್ಕೆ ಸೇರುವ ಮೊದಲು ತಾವು ಇರುವ ಹಿಂದೂ ಧರ್ಮ ದಲ್ಲಿ ಏನಾದೂ ಕೊರತೆ ಇದೆಯೇ ಅದು ಎಲ್ಲಾ ಮೂಲಭೂತ ಪ್ರಶ್ನೆಗಳಿಗೆ ಉತ್ತರಿಸುವುದೇ, ಎಂದು ತಿಳಿಯಬೇಕಿತ್ತು. ಅದಕ್ಕಾಗಿ ಅವರು ಶ್ರೀ ರಾಜಚಂದಭಾಯಿಯವರಿಗೆ ಒಂದು ಪತ್ರ ಬರೆದು ಕೆಲವು ಮೂಲಭೂತ ಪ್ರಶ್ನೆಗಳನ್ನು ಕೇಳಿದರು. ಅದಕ್ಕೆ ಗಾಂಧೀಜೀಯವರು ಹೇಳುತ್ತಾರೆ , " ಶ್ರೀಮದ್ ರವರ ಉತ್ತರ ಅತ್ಯಂತ ತಾರ್ಕಿಕವೂ, ಮನಸ್ಸಿಗೆ ಒಪ್ಪುವಂತಹದೂ ಆಗಿತ್ತು". "ನನ್ನ ಎಲ್ಲಾ ಸಂಶಯ ಗಳೂ ನಿವಾರಣೆಯಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಸೇರುವುದರಿಂದ ಬಿಡುಗಡೆಗೊಂಡೆ ಎಂದಿದ್ದಾರೆ. ಆ ನಂತರ ಶ್ರೀ ರಾಜಚಂದಭಾಯಿಬಗ್ಗೆ ನನಗೆ ಇನ್ನೂ ಹೆಚ್ಚಿನ ಗೌರವ ಬೆಳೆಯಿತು ಮತ್ತು ಅವರನ್ನು ಆ ನಂತರ ನನ್ನ ಧಾರ್ಮಿಕ ಮಾರ್ಗದರ್ಶಕರೆಂದು ಅವರು ಬದುಕಿರುವವರೆಗೂ ಭಾವಿಸಿ ದ್ದೆ", ಎಂದಿದ್ದಾರೆ. ಶ್ರೀ ರಾಯ್‌ಚಂದಭಾಯಿ - ಪರಿಚಯ ಶ್ರೀ ರಾಯ್‌ಚಂದಭಾಯಿ : (೯-೧೧-೧೮೬೭ ;: ೯-೪-೧೯೦೧); ಶ್ರೀ ರಾಯ್ ಚಂದ್ ಭಾಯಿ ಯವರ ಪೂರ್ಣ ಹೆಸರು, ರಾಜ್ ಚಂದ್ ಭಾಯಿ, ರಾವ್‌ಜೀ ಭಾಯಿ ಮೆಹ್ತಾ. ಅವರನ್ನು ಅವರ ಭಕ್ತರು ಶ್ರೀಮದ್ ರಾಜ್ ಚಂದ್ರ ಎಂದು ಕರೆಯುತ್ತಿದ್ದರು. ಅವರು ಭಗವಾನ್ ಮಹಾವೀರರ ಉಪದೇಶಗಳನ್ನು ವಿವರಿಸುತ್ತಿದ್ದ ಬಗೆಯನ್ನು ಮೆಚ್ಚಿ ಅವರನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದರು. ಆವರ ಆ ಉಪದೇಶಗಳ ಅರ್ಥವಿವರಣೆ ಅತ್ಯಂತ ಆಳವಾದ ಜ್ಞಾನದಿಂದ ಕೂಡಿರುತ್ತಿತ್ತು. ಅವರು ಜೈನರಾದರೂ ಶ್ರೀಕೃಷ್ಣನ ಭಕ್ತರಾಗಿದ್ದರು.. ಅವರು ಯಾವಾಗಲೂ ಜ್ಞಾನಿಯ ಉನ್ನತ ಸ್ಥಿತಿಯಲ್ಲಿರುತ್ತಿದ್ದರು; ಮಹಾ ಮೇಧಾವಿಯೂ , ಸಾಹಿತ್ಯ-ಭಾಷಾ ವಿದ್ವಾಂಸರೂ ಆಗಿದ್ದರು. ಅವರು ಗುಜರಾತಿನ ವವಾನಿಯಾ ಬಂದರಿನಲ್ಲಿ ೯-೧೧-೧೮೬೭ ರಲ್ಲಿ ಜನಿಸಿದರು; ರಾಜಕೋಟೆಯಲ್ಲಿ ದಿ.೯-೪-೧೯೦೧ರಲಿ ದೇಹತ್ಯಾಗ ಮಾಡಿದರು. ಅವರು ಗಾಂಧೀಜಿಯ ಧಾರ್ಮಿಕ ಮಾರ್ಗದರ್ಶಿ, ಸಹಾಯಕರಾಗಿ ಪ್ರಸಿದ್ಧರು. ಅವರು ಗಾಂಧೀಜೀಯ ಸ್ನೇಹಿತರೂ ಆಗಿದ್ದರು. ಗಾಂಧೀಜಿ ಮತ್ತು ಶ್ರೀಮದ್ ಅವರ ಮಧ್ಯೆ ಅವರ (ಶ್ರೀಮದ್ )ಅಂತ್ಯ ಕಾಲದವರೆಗೂ (೧೯೦೧), ಪತ್ರ ವ್ಯವಹಾರ ನೆಡೆಯುತ್ತಿದ್ದಿತು. *ಗಾಂಧೀಜಿಯವರು, ನಾನು ಧಾರ್ಮಿಕ ತತ್ವದ ಅಮೃತವನ್ನು ನನ್ನ ಹೃದಯ ತುಂಬುವಷ್ಟು ಕುಡಿದಿದ್ದೇನೆ ಅದನ್ನು ನನಗೆ ಕರುಣಿಸಿ ಕೊಟ್ಟವರು ಶ್ರೀಮದ್ ರಾಜ್ ಚಂದ್ ಭಾಯಿ, ಎಂದಿದ್ದಾರೆ.(ಹೆಚ್ಚಿನ ವಿವರಕ್ಕೆ, ವಿಕಿಪೀಡಿಯಾ ಇಂಗ್ಲಿಷ್ ವಿಬಾಗದ, ಶ್ರೀಮದ್ ರಾಜ್ ಚಂದ್ ಭಾಯಿ, ತಾಣಕ್ಕೆ ಹೋಗಿ ನೋಡಿ)ಗಾಂಧೀಜೀ ಅವರ ಬಹಿರಂಗ ಜೀವನದ ನಡವಳಿಕೆಯಲ್ಲಿ ಅಹಿಂಸೆ ಮತ್ತು ಸತ್ಯದ ಮಾರ್ಗ ಅವರು ಅಂತರಂಗದಲ್ಲಿ ಪರಮಾತ್ಮನನ್ನು ಅರಿಯುವುದಕ್ಕೆ ಸಾಧನವಾಗಿತ್ತು. ಅದು ರಾಜಕೀಯವಿರಲಿ, ಸಮಾಜ ಸೇವೆ ಇರಲಿ, ಶಿಕ್ಷಣದ ಪ್ರಯೋಗವಿರಲಿ, ತಮ್ಮ ಅಂತರಂಗದ ಸಾಧನೆಗೆ ವಿರೋಧವುಂಟಾಗದಂತೆ ಅಹಿಂಸೆ ಮತ್ತು ಸತ್ಯದ ಮಾರ್ಗವನ್ನು ಅನುಸರಿಸಿದ್ದರು. ಗಾಂಧೀಜೀ ಅವರ ಆತ್ಮ ಶಕ್ತಿ ಗಾಂಧೀಜೀ ಅವರ ನಿರ್ಭಯತೆ, ಅಗಾಧ ಆತ್ಮ ಶಕ್ತಿ, ಅಸಾಧಾರಣ ಸಂಕಲ್ಪ ಶಕ್ತಿಗಳು ಈ ಅಧ್ಯಾತ್ಮ ಸಾಧನೆಯ ಫಲ ಎಂಬುದರಲ್ಲಿ ಸಂಶಯವಿಲ್ಲ. ಅವರು ತಮ್ಮ ಜೀವಿತ ಕಾಲದಲ್ಲಿಯೇ ಭಾರತದ ಅಂದಿನ ನಲವತ್ತು ಕೋಟಿ ಜನರ, ವಿದ್ಯಾವಂತರ, ಅವಿದ್ಯಾವಂತರ, ಹೆಂಗಸರ,ಮಕ್ಕಳ, ಹೃದಯವನ್ನು ತಟ್ಟಿದ, ಮಿಡಿದ ವ್ಯಕ್ತಿ; ಇಂಥವರು ಜಗತ್ತಿನ ಇತಿಹಾಸದಲ್ಲಿ ಸಿಗಲಾರರು; ಮುಂದೆ ಸಿಗುವರೆಂಬ ಭರವಸೆಯೂ ಇಲ್ಲ. ವಿವೇಕಾನಂದರ ನಂತರ ಬಂದ ಮಹಾಯೋಗಿ ಪರಮಹಂಸ ಯೋಗಾನಂದರು, ಗಾಂಧೀಜೀಯ ಆತ್ಮ ಪ್ರಭೆಯು (ಅವುರಾ) ಅವರ ದೇಹದಿಂದ ಬಹು ದೂರದ ವರೆಗೆ ಅಲೆ ಅಲೆಯಾಗಿ ಪಸರಿಸುತ್ತಿರವುದನ್ನು ತಮ್ಮ ಯೋಗ ದೃಷ್ಟಿಯಲ್ಲಿ ಕಂಡುದಾಗಿ ಹೇಳಿದ್ದಾರೆ. (ಯೋಗಾನಂದರ ಆತ್ಮ ಚರಿತ್ರೆ). ಅವರು, ಗಾಂಧೀಜೀ ತಮ್ಮ ದೇಹ ಭಾವ ಮತ್ತು ಪಂಚೇಂದ್ರಿಯಗಳಿಂದ ತಮ್ಮ ಚಿತ್ತವನ್ನು ಸುಲಭವಾಗಿ ಕಳಚಿಕೊಳ್ಳಬಲ್ಲವರಾಗಿದ್ದುದನ್ನು ತಿಳಿಸಿದ್ದಾರೆ. ಅವರು(ಗಾಂಧೀಜಿ) ತಮ್ಮ ಅಪೆಂಡಿಸೈಟಿಸ್ ಆಪರೇಶನ್ ಸಮಯದಲ್ಲಿ ಅರವಳಿಕೆ (ಅನಿಸ್ತೀಶಿಯ) ತೆಗೆದುಕೊಳ್ಳದೆ, ಅದೇ ಸಮಯದಲ್ಲಿ ಪಕ್ಕದಲ್ಲಿದ್ದವರೊಡನೆ ಮಾತಾಡುತ್ತಿದ್ದುದನ್ನು ಉದಾಹರಿಸಿದ್ದಾರೆ. ಗಾಂಧೀಜೀ ತಮ್ಮ ತೀರ್ಮಾನಗಳನ್ನು ತಾರ್ಕಿಕವಾಗಿ ವಿವರಿಸಲು ಅಸಾಧ್ಯವಾದಾಗ,ತಮ್ಮ ಅಂತರಂಗದ ವಾಣಿ ಯ ಅನುಸಾರವಾಗಿ ನಡೆಯುತ್ತಿದುದಾಗಿ ಹೇಳತ್ತಿದ್ದರು. *ರಾಷ್ಟ್ರ ರಕ್ಷಣೆಯ ಹೆಸರಿನಲ್ಲಿ ಅವರನ್ನು ಹತ್ಯೆ ಗೈದವರು ಗಾಂಧೀಜೀಯ ವ್ಯಕ್ತಿತ್ವಕ್ಕೆ ಹೋಲಿಸಿದಾಗ ಅತ್ಯಂತ ಕುಬ್ಜರು, ಅಲ್ಪರು. ಹತ್ಯೆ ಗೈದವರ ವ್ಯಕ್ತಿತ್ವ ಶೂನ್ಯವಾಗುತ್ತದೆ. ಒಬ್ಬ ಸಂತನ ಹತ್ಯೆಯನ್ನು ಸಮರ್ಥಿಸಿಕೊಳ್ಳವುದು ಅಲ್ಪತನವಾಗುವುದು. ಅವರ ಹತ್ಯೆಯಾದಾಗ ವ್ಯಾಟಿಕನ್ ಪೋಪರು ತಾವು ಒಬ್ಬ ಕ್ರೈಸ್ತ ಸಂತನನ್ನು ಕಳೆದುಕೊಂಡಷ್ಟೇ ದುಃಖವಾಗಿದೆ ಎಂದರು. ವಿಜ್ಞಾನಿ ಅಲ್ಬರ್ಟ್ ಐನ್‌ಸ್ಟಿನ್ ರಕ್ತ ಮಾಂಸಗಳಿಂದ ಕೂಡಿದ ಇಂಥ ಒಬ್ಬ ವ್ಯಕ್ತಿ ಈ ಭೂಮಿಯ ಮೇಲೆ ನೆಡೆದಾಡಿದ್ದರೆಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹುದು, ಎಂದರು. ಅಹಿಂಸೆ, ಶಾಂತಿ ಮತ್ತು ದೈವಿಕ ಪ್ರೇಮದ ಸಿದ್ಧಿ ಅವರ ಗುರಿ. ದ್ವೇಷವೇ ಇಲ್ಲದ ಜಗತ್ತು ಅವರ ಕನಸು. ಸರ್ವತ್ರ ಪ್ರೇಮ ಅವರ ಬದುಕು. ತಮ್ಮಂತೆ ಇತರರೂ ಸರ್ವತ್ರ ಪ್ರೇಮವನ್ನು ತೋರಬೇಕೆಂಬ ಅವರ ಬಯಕೆ ಮತ್ತು ಒತ್ತಾಸೆ ಅವರ ಜೀವಕ್ಕೆ ಮುಳುವಾಯಿತು. ಆದರೆ, ಅವರ ಆದರ್ಶ, ರಾಮರಾಜ್ಯದ ಕನಸು, ಸ್ವಯಂ ಪೂರ್ಣ ಗ್ರಾಮ ರಾಜ್ಯದ ಆರ್ಥಿಕ ಸಿದ್ದಾಂತ, ಪ್ರಸ್ತುತ ಮತ್ತು ಸದಾ ಜೀವಂತ. ಸಂತರ ದೇಹಕ್ಕೆ ಅಳಿವಿದ್ದರೂ, ಅವರ ಆದರ್ಶ, ಸಂಕಲ್ಪಗಳಿಗೆ ಸಾವಿಲ್ಲ. ಓಂ ಶಾಂತಿಃ ಶಾಂತಿಃ ಶಾಂತಿಃ || ಇವನ್ನೂ ನೋಡಿ ಗಾಂಧಿ ಸ್ಮರಣಾರ್ಥ ಅಂತರರಾಷ್ಟ್ರೀಯ ಪ್ರತಿಷ್ಠಾನ ಗಾಂಧಿ ಜಯಂತಿ ಗಾಂಧಿ ಶಾಂತಿ ಪ್ರಶಸ್ತಿ ಕನ್ನಡ ನೆಲದಲ್ಲಿ ಗಾಂಧಿ ಗಾಂಧೀಜಿಯವರ ಆರೋಗ್ಯದ ತೊಂದರೆ:ರಕ್ತದೊತ್ತಡ ಹೆಚ್ಚಿಸಿತ್ತು ಬೋಸ್‌ ಜೊತೆಗಿನ ತಿಕ್ಕಾಟ;; ಐಸಿಎಂಆರ್‌ನಿಂದ ಗಾಂಧೀಜಿ ಆರೋಗ್ಯ ಕುರಿತ ದಾಖಲೆಗಳು ಬಹಿರಂಗ ;ಪ್ರಜಾವಾಣಿ ;d: 26 ಮಾರ್ಚ್ 2019 ಹೆಚ್ಚಿನ ಓದಿಗೆ ಗಾಂಧಿ ಹತ್ಯೆ ಸಂಚಿನ ವಿವರಗಳು ಹತ್ಯೆಯ ಹತ್ತು ದಿನಗಳ ಮೊದಲೇ ಅಂದಿನ ಸರ್ಕಾರಕ್ಕೆ ತಿಳಿದಿತ್ತು. 1948ರ ಜನವರಿ 20ರಂದು ಗಾಂಧಿ ಹತ್ಯೆಯ ಯತ್ನ ವಿಫಲವಾಗಿತ್ತು. ಮಹಾತ್ಮನನ್ನು ಕೊಲ್ಲುವ ಐದನೆಯ ವಿಫಲ ಯತ್ನ ನಡೆದಿತ್ತು. 1934ರಲ್ಲಿ ಅಸ್ಪೃಶ್ಯತೆಯ ವಿರುದ್ಧ ದೇಶವ್ಯಾಪಿ ಪ್ರವಾಸದ ಅಂಗವಾಗಿ ಪುಣೆಗೆ ತೆರಳಿದ್ದರು ಗಾಂಧೀಜಿ. ಭಾಷಣ ಮಾಡುವ ಮುನ್ನ ಅವರ ಕಾರಿನತ್ತ ತೂರಿ ಬಂದಿತ್ತು ಬಾಂಬು. ಪೊಲೀಸ್ ಕಾನ್‌ಸ್ಟೆಬಲ್‌ಗಳಿಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಗಾಂಧಿ ಹತ್ಯೆಯ ಮೂಲ ಕಾರಣ ಎಂದು ಹೇಳಲಾಗುವ ದೇಶವಿಭಜನೆಯ ಪ್ರಶ್ನೆಯಾಗಲೀ, ಪಾಕಿಸ್ತಾನಕ್ಕೆ ₹ 55 ಕೋಟಿ ನೀಡುವ ವಿಚಾರವಾಗಲೀ ಆಗ ಇರಲಿಲ್ಲ. ಡಿ. ಉಮಾಪತಿ;ನಾಥೂರಾಮನನ್ನು ತಡೆದು ನಿಲ್ಲಿಸಬಹುದಿತ್ತು;23 Jan, 2017 ರಾಮಚಂದ್ರ ಗುಹಾ;ಕೋಮು ಸಂಘರ್ಷ: ಗಾಂಧಿವಾದಿ ದೃಷ್ಟಿಕೋನ;3 Mar, 2017 ರಾಮಚಂದ್ರ ಗುಹಾ;ಪಶ್ಚಿಮದ ಚಿಂತನೆಯಿಂದ ಸುಧಾರಕನಾದ ಗಾಂಧಿ;12 May, 2017 ಸುದೀರ್ಘ ಕಥನ: ‘ಗಾಂಧಿ@150’ ಕರುನಾಡಲ್ಲಿ ಮಹಾತ್ಮನ ಹೆಜ್ಜೆ;02 ಅಕ್ಟೋಬರ್ 2018, ‘ಗಾಂಧಿ–150’ ವಿಶೇಷ;‘ಮಹಾತ್ಮ ಗಾಂಧೀಜಿ ಹಚ್ಚಿದ ಬೆಳಕಲ್ಲಿ...’: ಎಚ್.ಡಿ. ಕುಮಾರಸ್ವಾಮಿ ಲೇಖನ;ಎಚ್.ಡಿ. ಕುಮಾರಸ್ವಾಮಿ; 02 ಅಕ್ಟೋಬರ್ 2018, ‘ಗಾಂಧಿ–150’ ವಿಶೇಷ;ಬೇಕಾಗಿದ್ದಾನೆ: ಗಾಂಧಿಯ ಹೆಗಲೇರಿದ ಗಾಂಧಿ;ಡಾ. ಸಿದ್ದನಗೌಡ ಪಾಟೀಲ; 02 ಅಕ್ಟೋಬರ್ 2018 ಗಾಂಧಿ–150’ ವಿಶೇಷ;ಮಹಾತ್ಮನ ಮರೆತು ಭಾರತ ಬೆಳಗಬಹುದೆ?;ಡಾ. ರೋಹಿಣಾಕ್ಷ ಶಿರ್ಲಾಲು;02 ಅಕ್ಟೋಬರ್ 2018 ಭದ್ರತೆಗೆ ಗಾಂಧಿ ಒಪ್ಪಿದ್ದರೆ ಹತ್ಯೆ ತಪ್ಪಿಸಬಹುದಿತ್ತು: ಕಲ್ಯಾಣಮ್‌;ಪಿಟಿಐ;30 ಜನವರಿ 2019, ಮಹಾತ್ಮನ ಮರೆತು ಭಾರತ ಬೆಳಗಬಹುದೇ?; ಡಾ> ರೋಹಿಣಾಕ್ಷ ಶೀರ್ಲಾಲು;೨-೧೦-೨೦೧೮ ಆಧಾರ ಗಾಂಧೀಜೀಯವರ ಆತ್ಮ ಚರಿತ್ರೆ - ಸತ್ಯಶೋಧನೆ ( ಅನುವಾದ- ಬೆಟಗೇರಿ ಕೃಷ್ಣ ಶರ್ಮ ) An Autobiography Of A Yogi - Paramahamsa Yogananda. ವಿಕಿಪೀಡಿಯಾದ - ಶ್ರೀಮದ್ ರಾಯಚಂದ್ ಭಾಯಿ ಯವರ ತಾಣಗಳು ಯೋಗಿ "ಶ್ರೀಮದ್ ರಾಯಚಂದ್ ಭಾಯಿ ಯವರ ಸ್ವಂತ ಅಂತರ್ ಜಾಲ ತಾಣಗಳು. http://www.cs.colostate.edu/~malaiya/rajchandra.html ಗಾಂಧೀಜಿಯವರ ಲೇಖನಗಳು. The Last Phase part 1 and 2: By Pyarelal Unto The Last (Ruskin) - By Gandhiji http://en.wikipedia.org/wiki/Shrimad_Rajchandra ಟಿಪ್ಪಣಿಗಳು ಹೆಚ್ಚುವರಿ ಓದಿಗಾಗಿ ಭನ್ನ,ಸುರೇಂದ್ರ ಮತ್ತು ಗೂಲಮ್‌ ವಹೀದ್. ದಿ ಮೇಕಿಂಗ್ ಆಫ್ ಪೊಲಿಟಿಕಲ್ ರಿಫಾರ್ಮರ್: ಗಾಂಧಿ ಇನ್‌ ಸೌತ್‌ ಆಫ್ರಿಕಾ, 1893–1914.. ನವ ದೆಹಲಿ: ಮನೋಹರ್‌, 2005. ಬಂಡ್ಯುರಾಂಟ್, ಜಾನ್‌ V. ಕಂಕ್ವೆಸ್ಟ್‌ ಆಫ್‌ ವಯೊಲೆನ್ಸ್‌: ದಿ ಗಾಂಧಿಯನ್‌ ಫಿಲಾಸಫಿ ಆಫ್‌ ಕಾನ್‌ಫ್ಲಿಕ್ಟ್‌ . ಪ್ರಿನ್ಸ್‌ಟನ್‌ UP, 1988 ISBN 0-691-02281-X ಚರ್ನಸ್‌, ಇರಾ. ಅಮೆರಿಕನ್‌ ನಾನ್‌ವಯಲೆನ್ಸ್‌: ದಿ ಹಿಸ್ಟರಿ ಆಫ್ ಆನ್ ಐಡಿಯಾ , ಅಧ್ಯಾಯ 7. ISBN 1-57075-547-7 ಚಧಾ, ಯೊಗೇಶ್. ಗಾಂಧಿ: ಎ ಲೈಫ್‌. ISBN 0-471-35062-1 ಡಾಲ್ಟನ್‌, ಡೆನ್ನಿಸ್‌ (ed). ಮಹಾತ್ಮ ಗಾಂಧಿ: ಸೆಲೆಕ್ಟೆಡ್ ಪೊಲಿಟಿಕಲ್‌ ರೈಟಿಂಗ್ಸ್‌ . ಇಂಡಿಯನಾಪೊಲಿಸ್‌/ಕೇಂಬ್ರಿಡ್ಜ್‌: ಹ್ಯಾಕೆಟ್ಟ್‌ ಪಬ್ಲಿಕೇಶನ್ ಕಂಪನಿ, 1996. ISBN 0-87220-330-1 ಈಸ್ವರನ್‌, ಏಕನಾಥ್‌. ಗಾಂಧಿ ದಿ ಮ್ಯಾನ್‌ . ISBN 0-915132-96-6 ಫಿಷರ್‌, ಲ್ಯೂಯಿಸ್‌. ದಿ ಎಸೆನ್ಷಿಯಲ್‌‌ ಗಾಂಧಿ: ಆನ್‌ ಆಂಥಾಲಜಿ ಆಫ್‌‍ ಹಿಸ್‌ ರೈಟಿಂಗ್ಸ್‌ ಆನ್‌ ಹಿಸ್‌ ಲೈಫ್, ವರ್ಕ್‌, ಅಂಡ್‌ ಐಡಿಯಾಸ್‌ . ವಿಂಟೇಜ್‌: ನ್ಯೂ ಯಾರ್ಕ್, 2002. (ಪುನರ್ಮುದ್ರಣ ಆವೃತ್ತಿ) ISBN 1-4000-3050-1 ಫಿಷರ್ಲ್ಯೂಯಿಸ್‌. ದಿ ಲೈಫ್‌ ಆಫ್‌ ಮಹಾತ್ಮ ಗಾಂಧಿ . ಹಾರ್ಪರ್ & ರೊ, ನ್ಯೂ ಯಾರ್ಕ್, 1950. ISBB 0-06-091038-0 (1983 pbk.) ಗಾಂಧಿ, M.K. ಸತ್ಯಾಗ್ರಹ ಇನ್ ಸೌತ್‌ ಆಫ್ರಿಕಾ ಗಾಂಧಿ, M.K. ದಿ ಗಾಂಧಿ ರೀಡರ್‌: ಎ ಸೋರ್ಸ್‌ಬುಕ್ ಆಫ್‌ ಹಿಸ್‌ ಲೈಫ್‌ ಅಂಡ್‌ ರೈಟಿಂಗ್ಸ್‌ . ಹೋಮರ್‌ ಜಾಕ್‌ (ed.) ಗ್ರೋವ್‌ ಪ್ರೆಸ್‌, ನ್ಯೂ ಯಾರ್ಕ್, 1956. ಗಾಂಧಿ, ಮಹಾತ್ಮ. ದಿ ಕಲೆಕ್ಟೆಡ್‌ ವರ್ಕ್ಸ್‌ ಆಫ್‌ ಮಹಾತ್ಮ ಗಾಂಧಿ. ನವ ದೆಹಲಿ: ಪ್ರಕಟಣಾ ವಿಭಾಗ, ಮಾಹಿತಿ ಮತ್ತು ಪ್ರಸರಣಾ ಇಲಾಖೆ, ಭಾರತ ಸರ್ಕಾರ, 1994. ಗಾಂಧಿ, ರಾಜ್‌ಮೋಹನ್‌. ಪಟೇಲ್‌: ಎ ಲೈಫ್‌ . ನವಜೀವನ್‌ ಪಬ್ಲಿಷಿಂಗ್ ಹೌಸ್, 1990 ISBN 81-7229-138-8 ಗ್ರೈನೆರ್, ರಿಚರ್ಡ್‌. ದಿ ಗಾಂಧಿ ನೋಬಡಿ ನೋಸ್ . ವಿಮರ್ಶೆ, ಮಾರ್ಚ್‌ 1983 ಗೊರ್ಡನ್‌, ಹೈಮ್. ಎ ರಿಜೆಕ್ಷನ್‌ ಆಫ್‌ ಸ್ಪಿರಿಚ್ಯುಯಲ್‌ ಇಂಪೀರಿಯಲಿಸಮ್‌: ರಿಫ್ಲೆಕ್ಷನ್ಸ್‌ ಆನ್‌ ಬರ್ಬರ್‌'ಸ್‌ ಲೆಟರ್‌ ಟು ಗಾಂಧಿ. ಜರ್ನಲ್‌ ಆಫ್‌ ಎಕನಾಮಿಕಲ್‌ ಸ್ಟಡೀಸ್‌,. , 22 ಜೂನ್‌ 1999. ಹಂಟ್, ಜೇಮ್ಸ್‌ D. ಗಾಂಧಿ ಇನ್ ಲಂಡನ್‌ . ನವ ದೆಹಲಿ: ಪ್ರೊಮಿಲ್ಲ & Co., ಪಬ್ಲಿಶರ್ಸ್‌, 1978. ಮನ್ನ್‌, ಬರ್ನಾರ್ಡ್, ದಿ ಪೆಡೊಲಾಜಿಕಲ್‌ ಅಂಡ್‌ ಪೊಲಿಟಿಕಲ್‌ ಕಾನ್ಸೆಪ್ಟ್ಸ್ ಆಫ್ ಮಹಾತ್ಮ ಗಾಂಧಿ ಅಂಡ್ ಪೌಲ್ ಫ್ರೈಯರೆ. In: ಕ್ಲಾಬೆನ್‌, B. (Ed.) ಇಂಟರ್‌ನ್ಯಾಷಿನಲ್ ಸ್ಟಡೀಸ್ ಇನ್ ಪೊಲಿಟಿಕಲ್ ಸೋಷಿಯಲೈಸೇಶನ್ ಅಂಡ್ ಎಜುಕೇಶನ್. Bd. 8. ಹ್ಯಾಮ್‌ಬರ್ಗ್ 1996. ISBN 3-926952-97-0 ರ್ಯುಹೆ, ಪೀಟರ್. ಗಾಂಧಿ:ಎ ಪೊಟೊಬಯಾಗ್ರಫಿ. ISBN 0-7148-9279-3 ಶಾರ್ಪ್, ಜೀನ್. ಗಾಂಧಿ ಆಸ್ ಎ ಪೊಲಿಟಿಕಲ್‌ ಸ್ಟ್ರಾಟಜಿಸ್ಟ್ , ವಿತ್ ಎಸ್ಸೇಸ್‌ ಆನ್ ಎಥಿಕ್ಸ್‌ ಅಂಡ್ ಪೊಲಿಟಿಕ್ಸ್‌ . ಬೋಸ್ಟನ್‌: ಎಕ್ಸ್‌ಟೆಂಡಿಂಗ್ ಹೊರೈಜನ್ ಬುಕ್ಸ್, 1979. ಸಿಂಗ್‌, Col. G. B. ಗಾಂಧಿ ಬಿಹೈಂಡ್ ದಿ ಮಾಸ್ಕ್ ಆಫ್ ಡಿವಿನಿಟಿ . ಪ್ರೊಮೆಥಿಯಸ್ ಬುಕ್ಸ್, 2004. ISBN 978-1573929981 ಸಿಂಗ್‌, Col. G. B. ಮತ್ತು ವ್ಯಾಟ್ಸನ್‌, Dr. ಟಿಮ್‌ ಗಾಂಧಿ ಅಂಡರ್ ಕ್ರಾಸ್ ಎಕ್ಸಾಮಿನೇಷನ್ , ಸವರನ್ ಸ್ಟಾರ್ ಪಬ್ಲಿಶಿಂಗ್, 2008. ISBN 0981499201 ಸೋಫ್ರಿ, ಜಿಯನ್ನಿ. ಗಾಂಧಿ ಅಂಡ್ ಭಾರತ: ಎ ಸೆಂಚುರಿ ಇನ್ ಫೋಕಸ್. (1995) ISBN 1-900624-12-5 ಹೊರಗಿನ ಕೊಂಡಿಗಳು ವಿಕಿಸೋರ್ಸ್‌ನಲ್ಲಿ ಮಹಾತ್ಮ ಗಾಂಧಿಯವರ ಆತ್ಮಚರಿತ್ರೆ Gandhi's biography from Stanford's King Encyclopedia ಗಾಂಧಿ- ದಿ ಯೂನಿವರ್ಸಲ್ ಗುರು ಗಾಂಧಿ ಸ್ಮೃತಿ — ಭಾರತ ಸರ್ಕಾರದ ಜಾಲತಾಣ ಮಹಾತ್ಮ ಗಾಂಧಿ ಸುದ್ದಿ ಸಂಶೋಧನೆ ಮತ್ತು ಮಾಧ್ಯಮ ಸೇವೆ ಮಹಾತ್ಮ ಗಾಂಧಿ ಎ ವೋಟರಿ ಆಫ್ ಸಸ್ಟೈನಬಲ್ ಲಿವಿಂಗ್ ಮಾಣಿ ಭವನ ಗಾಂಧಿ ಸಂಗ್ರಹಾಲಯ ಗಾಂಧಿ ಮ್ಯೂಸಿಯಂ & ಲೈಬ್ರರಿ ಗಾಂಧಿ ಪುಸ್ತಕ ಕೇಂದ್ರ ಮಹಾತ್ಮ ಗಾಂಧಿಯವರ ಕೆಲಸಗಳು ಅಮೆರಿಕದ ಸೊಕಾ ವಿಶ್ವವಿದ್ಯಾನಿಲಯದಲ್ಲಿನ ಗಾಂಧಿ ಸಭಾಂಗಣ ಮತ್ತು ಪ್ರತಿಮೆ ಗಾಂಧಿಯವರು ಶ್ರೀ ಲಂಕಾದ ಗೌರವಾನ್ವಿತ ಅಥಿತಿಯಾಗಿದ್ದರು ಸ್ವಾತಂತ್ರ್ಯ ಹೋರಾಟಗಾರರು ಭಾರತದ ಗಣ್ಯರು ಭಾರತೀಯ ಇತಿಹಾಸದ ಪ್ರಮುಖರು ೧೮೬೯ ಜನನ ೧೯೪೮ ನಿಧನ 20ನೇ-ಶತಮಾನದ ತತ್ವ ಜ್ಞಾನಿಗಳು ಕೋರ್ಟ್‌ ಕಾನೂನು ಶಾಲೆಯ ಹಳೇ ವಿದ್ಯಾರ್ಥಿಗಳ ಸಂಘದ ಪ್ರವಾಸಿಗೃಹ ಲಂಡನ್‌‌ನ ಯೂನಿವರ್ಸಿಟಿ ಕಾಲೇಜ್ ಹಳೇ ವಿದ್ಯಾರ್ಥಿಗಳ ಸಂಘ ಬಡತನ ವಿರೋಧಿ ಕ್ರಾಂತಿವಾದಿಗಳು ಆತ್ಮನಿಗ್ರಹಿಗಳು ಕೊಲ್ಲಲ್ಪಟ್ಟ ಭಾರತೀಯ ರಾಜಕಾರಣಿಗಳು ಭಾರತದಲ್ಲಿ ಶಸ್ತ್ರಗಳಿಂದ ಸಂಭವಿಸಿದ ಸಾವುಗಳು ದಕ್ಷಿಣ ಆಫ್ರಿಕಾದಲ್ಲಿರುವ ವಿದೇಶೀಯರು ಗಾಂಧಿ ತತ್ವ ಅನುಯಾಯಿಗಳು ಗುಜರಾತಿ ಜನತೆ ಹಿಂದು ಶಾಂತಿವಾದಿಗಳು ಭಾರತೀಯ ಕ್ರಾಂತಿಕಾರಿಗಳು ಭಾರತೀಯ ಕದನ ವಿರೋಧಿ ಪ್ರತಿಪಾದಕರು ಭಾರತೀಯ ಆತ್ಮಕತೆಗಾರರು ಭಾರತೀಯ ಹಿಂದುಗಳು ಭಾರತೀಯ ಮಾನವ ಹಕ್ಕುಗಳ ಪ್ರತಿಪಾದಕರು ಯುನೈಟೆಡ್ ಕಿಂಗ್‌ಡಮ್‌‌ನಲ್ಲಿ ಭಾರತೀಯ ಶಾಂತಿವಾದಿಗಳು ಭಾರತೀಯ ಮಾನವತಾವಾದಿಗಳು ಭಾರತೀಯ ಸ್ವಾತಂತ್ರ್ಯ ಪ್ರತಿಪಾದಕರು ಭಾರತೀಯ ಚರಿತ್ರಕಾರರು ಹತ್ಯೆಗೀಡಾದ ಭಾರತೀಯರು ಭಾರತೀಯ ಶಾಂತಿವಾದಿಗಳು ಭಾರತೀಯ ತತ್ವ ಜ್ಞಾನಿಗಳು ಭಾರತೀಯ ರಾಜಕಾರಣಿಗಳು ಭಾರತೀಯ ಸಮಾಜವಾದಿಗಳು ಕಂದಾಯ ವಿರೋಧಿ ಭಾರತೀಯರು ಭಾರತೀಯ ಸಸ್ಯಾಹಾರಿಗಳು ಮೋಹನ್‌‌‌ದಾಸ್‌ ಕರಮ್‌ಚಂದ್‌ ಗಾಂಧಿ ಹತ್ಯೆಗೀಡಾದ ಕ್ರಾಂತಿಕಾರಿಗಳು ದಕ್ಷಿಣ ಆಫ್ರಿಕನ್ನರಲ್ಲದ ವರ್ಣಭೇಧ ನೀತಿ ವಿರೋಧಿ ಪ್ರತಿಪಾದಕರು ಅಹಿಂಸಾ ತತ್ವ ಪ್ರತಿಪಾದಕರು ಭಾರತದಲ್ಲಿ ಹತ್ಯೆಗೀಡಾದ ಜನರು ಬ್ರಿಟಿಷ್ ಭಾರತದ ಜನರು ಎರಡನೇ ಬೋಯರ್‌ ಕದನದ ಜನರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರು ಕೈಸರ್‌-ಇ-ಹಿಂದ್‌ ಪದಕವನ್ನು ಸ್ವೀಕರಿಸಿದವರು ಅಹಿಂಸಾವಾದದ ಅಥವಾ ಅಹಿಂಸೆಯನ್ನು ವಿರೋಧಿಸುವ ವಿದ್ವಾಂಸರು ಮತ್ತು ನಾಯಕರು ಟೈಮ್‌ ನಿಯತಕಾಲಿಕ ವರ್ಷದ ಪುರುಷರು ಟಾಲ್ಸ್‌ಟಾಯ್‌ ಅನುಯಾಯಿಗಳು ಭಾರತೀಯ ಶಾಲೆ ಮತ್ತು ಕಾಲೇಜುಗಳ ಸಂಸ್ಥಾಪಕರು ಭಾರತದ ಇತಿಹಾಸ
1294
https://kn.wikipedia.org/wiki/%E0%B2%A4%E0%B2%BE%E0%B2%9C%E0%B3%8D%20%E0%B2%AE%E0%B2%B9%E0%B2%B2%E0%B3%8D
ತಾಜ್ ಮಹಲ್
ತಾಜ್‌ ಮಹಲ್‌ (; ಹಿಂದಿ: ताज महल ; ಪರ್ಷಿಯನ್‌/ಉರ್ದು: تاج محل ) ಭಾರತದ ಆಗ್ರಾದಲ್ಲಿರುವ ಭವ್ಯ ಸಮಾಧಿಯಾಗಿದೆ. ಇದನ್ನು ಮೊಘಲ್‌‌ ಚಕ್ರವರ್ತಿ ಷಹ ಜಹಾನ್‌‌ ತನ್ನ ಮೆಚ್ಚಿನ ಪತ್ನಿ ಮಮ್ತಾಜ್‌ ಮಹಲ್‌ಳ ನೆನಪಿಗಾಗಿ ಕಟ್ಟಿಸಿದನು. ಪರ್ಷಿಯನ್‌, ಭಾರತೀಯ ಮತ್ತು ಮುಸ್ಲಿಂ ವಾಸ್ತುಶೈಲಿಗಳ ಸಮ್ಮಿಶ್ರಣವಾದ ಮೊಘಲ್‌‌ ವಾಸ್ತುಶೈಲಿಗೆ ತಾಜ್‌ ಮಹಲ್‌ ("ತಾಜ್‌" ಎಂದೂ ಕರೆಯಲ್ಪಡುತ್ತದೆ) ಅತ್ಯುತ್ತಮ ಉದಾಹರಣೆಯೆಂದು ಪರಿಗಣಿಸಲಾಗಿದೆ. 1983ರಲ್ಲಿ ತಾಜ್‌ ಮಹಲ್‌ UNESCOದ ವಿಶ್ವ ಪರಂಪರೆ ತಾಣವಾಗಿ ಗುರುತಿಸಲ್ಪಟ್ಟಿತು ಮತ್ತು ಇದನ್ನು "ಭಾರತದಲ್ಲಿರುವ ಮೊಘಲರ ಕಲೆಯ ಅನರ್ಘ್ಯ ರತ್ನ ಮತ್ತು ಜಾಗತಿಕವಾಗಿ ಮೆಚ್ಚುಗೆಯನ್ನು ಪಡೆದ ವಿಶ್ವ ಪರಂಪರೆಯ ಮೇರುಕೃತಿಗಳಲ್ಲಿ ಒಂದು" ಎಂದು ಉಲ್ಲೇಖಿಸಲಾಗಿದೆ. ತಾಜ್‌ ಮಹಲ್ ವಾಸ್ತವವಾಗಿ ಅನೇಕ ಸಂರಚನೆಗಳ ಒಂದು ಸಮಗ್ರ ಸಂಕೀರ್ಣವಾಗಿದ್ದು, ಗೌರವರ್ಣದ ಗುಮ್ಮಟಾಕಾರದ ಅಮೃತಶಿಲೆಯ ಭವ್ಯ ಸಮಾಧಿಯು ಇದರ ಅತ್ಯಂತ ಸುಪರಿಚಿತ ಭಾಗವಾಗಿದೆ. ಈ ಕಟ್ಟಡದ ನಿರ್ಮಾಣ ಕಾರ್ಯವು 1632ರಲ್ಲಿ ಪ್ರಾರಂಭವಾಗಿ, ಸರಿಸುಮಾರು 1653ರ ಹೊತ್ತಿಗೆ ಪೂರ್ಣಗೊಂಡಿತು.ಈ ಸಮಾಧಿಯು 17-ಹೆಕ್ಟೇರ್ (42-ಎಕರೆ)ಸಂಕೀರ್ಣದ ಕೇಂದ್ರವಾಗಿದೆ, ಈ ಭವ್ಯ ಕಟ್ಟಡದ ನಿರ್ಮಾಣ ಕಾರ್ಯದಲ್ಲಿ ಸಾವಿರಾರು ಕುಶಲಕರ್ಮಿಗಳು ಮತ್ತು ನುರಿತ ಕೆಲಸಗಾರರನ್ನು ಬಳಸಿಕೊಳ್ಳಲಾಗಿತ್ತು. ತಾಜ್‌ ಮಹಲ್‌‌ನ ನಿರ್ಮಾಣ ಕಾರ್ಯದ ಮೇಲ್ವಿಚಾರಣೆಗೆ ಅಬ್ದ್‌ ಉಲ್‌-ಕರೀಮ್‌ ಮಾಮುರ್‌ ಖಾನ್‌, ಮಖ್ರಾಮತ್‌ ಖಾನ್‌ ಮತ್ತು ಉಸ್ತಾದ್‌ ಅಹ್ಮದ್‌ ಲಹೌರಿ ಸೇರಿದಂತೆ ಇನ್ನೂ ಕೆಲವರನ್ನು ಒಳಗೊಂಡಂತೆ ವಾಸ್ತುಶಿಲ್ಪಿಗಳ ಮಂಡಳಿಗೆ ನೇಮಿಸಲಾಗಿತ್ತು. ಅವರಲ್ಲಿ ಲಾಹೋರಿರವರನ್ನು ತಾಜ್ ಮಹಲ್ ನಿರ್ಮಾಣದ ಪ್ರಧಾನ ಶಿಲ್ಪಿ ಎಂದು ಸ್ಥೂಲವಾಗಿ ಪರಿಗಣಿಸಲಾಗಿದೆ. ವಾಸ್ತುಶಿಲ್ಪ ಸಮಾಧಿ ಸಮಾಧಿಯು ಸಂಕೀರ್ಣದ ಕೇಂದ್ರ ಆಕರ್ಷಣೆಯಾಗಿದೆ. ಈ ದೊಡ್ಡ ಬಿಳಿ ಅಮೃತಶಿಲೆ ಕಟ್ಟಡವು ಚೌಕಾಕಾರದ ಪೀಠದ ಮೇಲೆ ನಿಂತಿದೆ ಮತ್ತು ಇದು ದೊಡ್ಡ ಗುಮ್ಮಟ ಮತ್ತು ಚಾವಣಿಯ ಶಿಖರದಿಂದ ಚಾವಣಿಯನ್ನು ಹೊಂದಿರುವ ಐವಾನ್‌‌ನೊಂದಿಗೆ (ಕಮಾನು-ಆಕಾರದ ಬಾಗಿಲು ದಾರಿ) ಸುಸಂಗತವಾಗಿರುವ ಕಟ್ಟಡಗಳಿಂದ ಒಳಗೊಂಡಿದೆ. ಹೆಚ್ಚಿನ ಮೊಘಲ್‌‌ ಸಮಾಧಿಗಳಂತೆ, ಇದರ ಮೂಲ ಅಂಶಗಳು ಕೂಡ ಪರ್ಷಿಯನ್‌ ಶೈಲಿಯದ್ದು. ಇದರ ಅಡಿಪಾಯದ ರಚನೆಯು ಮೂಲಭೂತವಾಗಿ ನಯಗೊಳಿಸಿದ ಮೂಲೆಗಳೊಂದಿಗೆ ದೊಡ್ಡ, ಬಹು-ಕೋಣೆ ಹೊಂದಿರುವ ಘನವಾಗಿದೆ ಮತ್ತು ನಾಲ್ಕು ಕಡೆಗಳಲ್ಲಿಯೂ ಸರಿಸುಮಾರು 55 ಮೀಟರ್‌ಗಳ ಅಸಮ ಅಷ್ಟಭುಜಗಳಿಂದ ರಚಿತವಾಗಿದೆ. ಪ್ರತಿ ಕಡೆಗಳಲ್ಲಿ ಭಾರಿ ಪಿಸ್ತಾಕ್‌ ಅಥವಾ ಕಮಾನು ದಾರಿ ಮತ್ತು ಎರಡು ಕಡೆಯಲ್ಲಿ ಬಣವೆಯಂತಿರುವ ಎರಡು ಸಮಾನ ಆಕಾರದ, ಕಮಾನಿನ ಮೊಗಸಾಲೆಗಳೊಂದಿಗೆ ಐವಾನ್‌ನ್ನು ರಚಿಸಲಾಗಿದೆ. ಬಣವೆಯಂತೆ ಮಾಡಿದ ಪಿಸ್ತಾಕ್‌ಗಳ ಈ ಕಲಾಕೃತಿ ನಯಗೊಳಿಸಿದ ಮೂಲೆ ಪ್ರದೇಶಗಳಲ್ಲಿ ಪ್ರತಿಕೃತಿಸುವುದು, ಕಟ್ಟಡದ ಎಲ್ಲಾ ಕಡೆಗಳಲ್ಲಿ ಹೊಂದಿಕೊಳ್ಳುವಂತೆ ಪೂರ್ಣವಾಗಿ ವಿನ್ಯಾಸವನ್ನು ಮಾಡಲಾಗಿದೆ. ನಾಲ್ಕು ಮಿನರೆಟ್ಟುಗಳಿಂದ ಸಮಾಧಿಯನ್ನು ರಚಿಸಲಾಗಿದೆ. ಅದರಲ್ಲಿ ಒಂದೊಂದು ನಯಗೊಳಿಸಿದ ಮೂಲೆಗಳ ಮುಖಮಾಡಿರುವ ಪೀಠದ ಪ್ರತಿ ಮೂಲೆಗಳಲ್ಲಿರುವುದು. ಮಹಲಿನ ಮುಖ್ಯ ಕೋಣೆಯಲ್ಲಿ ನಕಲಿ ಶಿಲೆಗಳಿಂದ ಅಲಂಕೃತವಾದ ಮಮ್ತಾಜ್‌ ಮಹಲ್‌ ಮತ್ತು ಷಹ ಜಹಾನ್‌‌‌ರ ಶಿಲಾಶವ ಪೆಟ್ಟಿಗೆಯಿದೆ. ನೈಜ ಸಮಾಧಿಗಳು ಕೆಳಮಟ್ಟದಲ್ಲಿವೆ. ಸಮಾಧಿಯನ್ನು ಸುತ್ತುವರಿದಿರುವ ಅಮೃತಶಿಲೆಯ ಈ ಮಹಲ್‌ ನಯನ ಮನೋಹರವಾಗಿದೆ.ಮಹಲ್‌ ಸುಮಾರು 35 ಮೀಟರ್‌ಗಳಷ್ಟು ಎತ್ತರವಾಗಿದೆ. ಇದು ಸರಿಸುಮಾರು ಅಡಿಪಾಯದ ಉದ್ದದಷ್ಟೇ ಇದೆ. ಸುಮಾರು 7 ಮೀಟರ್‌ಗಳಷ್ಟು ಎತ್ತರದ ಸಿಲಿಂಡರ್ ಆಕಾರದ "ಡ್ರಮ್‌"ನ ಮೇಲೆ ಕುಳಿತಂತೆ ಕಾಣುತ್ತದೆ. ಇದರ ಆಕಾರದ ಕಾರಣದಿಂದ, ಈ ಗುಮ್ಮಟವನ್ನು ಈರುಳ್ಳಿ ಗುಮ್ಮಟ ಅಥವಾ ಅಮೃದ್‌ (ಸೀಬೆಹಣ್ಣಿನಾಕಾರದ ಗುಮ್ಮಟ) ಎಂದು ಕೆಲವೊಮ್ಮೆ ಕರೆಯಲಾಗುವುದು. ಇದರ ತುದಿಯನ್ನು ಕಮಲದ ಆಕಾರದಲ್ಲಿ ವಿನ್ಯಾಸಗೊಳಿಸಲಾಗಿದೆ. ಇದು ಸಹ ಮಹಲಿನ ಎತ್ತರವನ್ನು ಎದ್ದು ಕಾಣಿಸುವಂತೆ ಮಾಡುತ್ತದೆ. ಪ್ರಧಾನ ಗುಮ್ಮಟದ ಈರುಳ್ಳಿ ಆಕಾರವನ್ನು ಪ್ರತಿಕೃತಿಸುವ, ಪ್ರತಿ ಮೂಲೆಗಳಲ್ಲಿರುವ ನಾಲ್ಕು ಚಿಕ್ಕ ಗುಮ್ಮಟಾಕಾರದ ಛತ್ರಿಗಳನ್ನು (ಕಿಯೊಸ್ಕ್‌ಗಳು) ಮುಖ್ಯ ಗುಮ್ಮಟದ ಆಕಾರದಲ್ಲೇ ನಿರ್ಮಿಸಲಾಗಿದೆ. ಅವುಗಳ ದುಂಡುಕಂಬಗಳ ಪೀಠಕ್ಕೂ ಕಂಬಕ್ಕೂ ನಡುವಿನ ಭಾಗವು ಸಮಾಧಿಯ ಚಾವಣಿಯ ಸುತ್ತಲು ತೆರೆದಿರುತ್ತದೆ. ಇದು ಒಳಾಂಗಣಕ್ಕೆ ಬೆಳಕನ್ನು ಒದಗಿಸುತ್ತದೆ. ಎತ್ತರದ ಅಲಂಕಾರಿಕ ಶೃಂಗಗಳು (ಗುಲ್ಡಾಸ್ತಾಗಳು ) ಮೂಲ ಗೋಡೆಗಳ ಅಂಚುಗಳಲ್ಲಿ ವ್ಯಾಪಿಸಿವೆ ಮತ್ತು ಇವುಗಳು ಗುಮ್ಮಟದ ಎತ್ತರ ನೋಡುವುದಕ್ಕೆ ಎದ್ದು ಕಾಣುವಂತೆ ಮಾಡುತ್ತದೆ. ಕಮಲ ಕಲಾಕೃತಿಯು ಛತ್ರಿಗಳು ಮತ್ತು ಗುಲ್ಡಸ್ತಾಗಳೆರಡರಲ್ಲು ಪುರಾವರ್ತನೆಗೊಂಡಿದೆ. ಚಿನ್ನದ ಲೇಪನವನ್ನು ಹೊಂದಿರುವ ಗುಮ್ಮಟ ಮತ್ತು ಛತ್ರಿಗಳು ಸಾಂಪ್ರದಾಯಿಕ ಪರ್ಷಿಯನ್‌ ಮತ್ತು ಹಿಂದೂ ಅಲಂಕಾರಿಕ ಅಂಶಗಳ ಮಿಶ್ರಣವಾಗಿವೆ. ಪ್ರಮುಖ ಗೋಪುರವು ಮೂಲತಃ ಚಿನ್ನದಿಂದ ಮಾಡಲ್ಪಟ್ಟಿದೆ, ಆದರೆ 19ನೇ ಶತಮಾನದಲ್ಲಿ ಕಂಚಿನ ಲೇಪಿತ ಗೋಪುರದೊಂದಿಗೆ ಬದಲಿಸಲಾಯಿತು. ಈ ವೈಶಿಷ್ಟ್ಯವು ಸಾಂಪ್ರದಾಯಿಕ ಪರ್ಷಿಯನ್‌ ಮತ್ತು ಹಿಂದೂ ಅಲಂಕಾರಿಕ ಅಂಶಗಳ ಸಂಮಿಶ್ರಣದ ಒಂದು ಉತ್ತಮ ಉದಾಹರಣೆಯಾಗಿದೆ. ಗೋಪುರದ ತುದಿಯಲ್ಲಿ ಚಂದ್ರನ ಆಕೃತಿಯಿದೆ. ಅದರ ಸ್ವರ್ಗಾಭಿಮುಖವಾಗಿ ಮುಖಮಾಡಿರುವ ಈ ಶೃಂಗವು ಅಪ್ಪಟ ಮುಸ್ಲಿಂ ಕಲಾಕೃತಿಯ ಪ್ರಧಾನ ಅಂಶ. ಪ್ರಮುಖ ಗೋಪುರದ ತುದಿಯಲ್ಲಿ ಚಂದ್ರನಿರುವ ಕಾರಣ, ಚಂದ್ರನ ಶೃಂಗಗಳು ಮತ್ತು ಗೋಪುರದ ತುದಿ ಸೇರಿ ಶಿವನ ಸಾಂಪ್ರದಾಯಿಕ ಹಿಂದೂ ಚಿಹ್ನೆಯಾದ ತ್ರಿಶೂಲ ಆಕಾರದಂತೆ ಕಾಣುವುದು. ಸುಮಾರು 40 ಮೀಟರ್‌ಗಳಿಗಿಂತ ಹೆಚ್ಚು ಉದ್ದವಿರುವ ಪ್ರತಿ ಮಿನರೆಟ್ಟುಗಳು ವಿನ್ಯಾಸಕಾರನ ಭವ್ಯತೆಯನ್ನು ಪ್ರದರ್ಶಿಸುತ್ತವೆ. ಪ್ರಾರ್ಥನೆಗಾಗಿ ಮಹಮ್ಮದೀಯ ಘೋಷಕರು ಮುಸ್ಲಿಂ ಬಾಂಧವರನ್ನು ಕರೆಯುವ ಕಾರ್ಯಕ್ಕಾಗಿ ಮಿನರೆಟ್ಟುಗಳನ್ನು ಮಸೀದಿಗಳ ಸಾಂಪ್ರದಾಯಿಕ ಅಂಶದಂತೆ ವಿನ್ಯಾಸಗೊಳಿಸಲಾಗಿದೆ. ಪ್ರತಿ ಮಿನರೆಟ್ಟುಗಳನ್ನು ಕೆಲಸ ಮಾಡುವ ಎರಡು ಮೊಗಸಾಲೆಗಳಿಂದ ಮೂರು ಸಮ ಭಾಗಗಳಾಗಿ ವಿಗಂಡಿಸಲಾಗಿದ್ದು ಇವು ಗೋಪುರವನ್ನು ಸುತ್ತುವರಿದಿವೆ. ಗೋಪುರದ ಮೇಲೆ ಕೊನೆಯ ಮೊಗಸಾಲೆಯಿದ್ದು, ಇದು ಸಮಾಧಿಯ ವಿನ್ಯಾಸವನ್ನು ಹೋಲುವ ಛತ್ರಿಯಿಂದ ಸುತ್ತುವರಿಯಲ್ಪಟ್ಟಿದೆ. ಗೋಪುರದ ತುದಿಯಲ್ಲಿರುವ ಎಲ್ಲಾ ಛತ್ರಿಗಳು ಕಮಲದ ವಿನ್ಯಾಸದ ಅಲಂಕಾರಿಕ ಅಂಶದಿಂದ ಕೂಡಿವೆ. ಮಿನರೆಟ್ಟುಗಳನ್ನು ಪೀಠದಿಂದ ಸ್ವಲ್ಪ ಹೊರಕ್ಕೆ ನಿರ್ಮಿಸಲಾಗಿದೆ. ಆದ್ದರಿಂದ, ಒಂದು ವೇಳೆ ಕುಸಿತದ ಸಮಯದಲ್ಲಿ, (ಆ ಕಾಲದಲ್ಲಿ ದೊಡ್ಡ ಕಟ್ಟಡಗಳ ನಿರ್ಮಾಣದಲ್ಲಿರುವ ಸಾಮಾನ್ಯ ಅಂಶವಾಗಿದೆ) ಗೋಪುರದ ವಸ್ತುಗಳು ಸಮಾಧಿಯಿಂದ ದೂರ ಬೀಳಲೆಂದು ಹೀಗೆ ಮಾಡಲಾಗಿದೆ. ಹೊರಾಂಗಣ ಅಲಂಕಾರ ತಾಜ್‌ ಮಹಲ್‌ನ ಹೊರಾಂಗಣ ಅಲಂಕಾರ ಮೊಘಲ್‌ ವಾಸ್ತುಶಿಲ್ಪದಲ್ಲಿರುವ ಉತ್ತಮ ಅಂಶಗಳಿಂದ ಕೂಡಿದೆ. ಆ ಮೇಲ್ಮೈ ಅಲಂಕಾರಗಳ ಬದಲಾವಣೆಗಳು ಪ್ರಮಾಣಾನುಗುಣವಾಗಿ ನಾಜೂಕುಗೊಳಿಸಲಾಗಿದೆ. ಕಟ್ಟಡದ ಅಲಂಕಾರಿಕ ಅಂಶಗಳನ್ನು ಬಣ್ಣ ಬಳಿಯುವುದು, ಗಾರೆ ಮಾಡುವುದು, ಕಲ್ಲು ಕೆತ್ತನೆ, ಅಥವಾ ಕೆತ್ತನೆಯಿಂದ ಮಾಡಲಾಗಿದೆ. ಮಾನವ ವರ್ಗೀಕರಣಗಳ ವಿರುದ್ಧ ಮುಸ್ಲಿಂ ಧರ್ಮದ ನಿಷೇಧವನ್ನು ಈ ಸಾಲುಗಳಲ್ಲಿ ಬರೆಯಲಾಗಿದ್ದು, ಇಲ್ಲಿ ಚಿತ್ರಿಸಲಾಗಿರುವ ಅಂಶಗಳನ್ನು ಅಲಂಕಾರಿಕ ಅಂಶಗಳು ಸುಂದರ ಬರಹಗಾರಿಕೆ, ಅಮೂರ್ತ ಪ್ರಕಾರಗಳು ಅಥವಾ ಸಸ್ಯಕ ಕಲಾಕೃತಿಗಳಾಗಿ ವಿಂಗಡಿಸಲಾಗಿದೆ. ಸಂಕೀರ್ಣದಾದ್ಯಂತ ಖುರಾನ್‌ನ ಪಠ್ಯಭಾಗವನ್ನು ಅಲಂಕಾರಿಕ ಅಂಶಗಳಾಗಿ ಬಳಸಲಾಗಿದೆ. ಈ ಪಠ್ಯಭಾಗಗಳನ್ನು ಅಮಾನತ್‌ ಖಾನ್‌‌ರವರು ಆರಿಸಿದ್ದರು ಎಂದು ಇತ್ತೀಚಿನ ವಿದ್ವಾಂಸರು ಹೇಳುತ್ತಾರೆ. ನ್ಯಾಯದ ಪರಿಕಲ್ಪನೆಯನ್ನು ಪಠ್ಯವು ಉಲ್ಲೇಖಿಸುತ್ತದೆ. ಅವು ಈ ಕೆಳಗಿನವುಗಳನ್ನು ಒಳಗೊಂಡಿದೆ: ಸುರಾ 91 – ಸೂರ್ಯ ಸುರಾ 112 – ನಂಬಿಕೆಯ ಶುದ್ಧತೆ ಸುರಾ 89 – ಬೆಳಗು ಸುರಾ 93 – ಮುಂಜಾನೆಯ ಬೆಳಕು ಸುರಾ 95 – ಅಂಜೂರ ಸುರಾ 94 – ಸಮಾಧಾನ ಸುರಾ 36 – ಯಾ ಸಿನ್‌ ಸುರಾ 81 – ಅಂತ್ಯ ಸುರಾ 82 – ಬೇರೆ ಬೇರೆಯಾಗಿ ಪ್ರತ್ಯೇಕಿಸುವುದು ಸುರಾ 84 – ಬೇರೆ ಬೇರೆಯಾಗಿ ಭೇದಿಸುವುದು ಸುರಾ 98 – ಪುರಾವೆ ಸುರಾ 67 – ಒಡೆತನ ಸುರಾ 48 – ಜಯ ಸುರಾ 77 – ಮುಂದಕ್ಕೆ ಕಳುಹಿಸಿದವು ಸುರಾ 39 – ಸಮುದಾಯಗಳು ಮಹಾದ್ವಾರದಲ್ಲಿ ಸುಂದರ ಬರವಣಿಗೆಯಲ್ಲಿ ಹೀಗೆ ಬರೆಯಲಾಗಿದೆ "ಓ ಆತ್ಮವೇ, ನಿಮ್ಮ ಕಲೆಯು ವಿಶ್ರಾಂತಿಯಲ್ಲಿದೆ. ನೀವು ದೇವರೊಂದಿಗೆ ಶಾಂತಿಯನ್ನು ಹೊಂದುವಿರಿ, ಮತ್ತು ದೇವರು ನಿಮ್ಮೊಂದಿಗೆ ಶಾಂತಿಯನ್ನು ಹೊಂದುವರು." 1609ರಲ್ಲಿ ಭಾರತಕ್ಕೆ ಇರಾನ್‌ನ ಸಿರಾಜ್‌ನಿಂದ ಬಂದಿರುವ ಪರ್ಷಿಯನ್‌ ಸುಂದರ ಬರಹಗಾರ ಅಬ್ದ್‌ ಉಲ್‌-ಹಕ್‌ರವರಿಂದ ಈ ಸುಂದರ ಲಿಪಿಗಾರಿಕೆಯನ್ನು ರಚಿಸಲಾಗಿದೆ. ಷಹ ಜಹಾನ್‌‌ ಅಬ್ದ್‌ ಉಲ್‌-ಹಕ್‌ರ "ವಿಸ್ಮಯಗೊಳಿಸುವ ಕಲಾರಸಿಕತೆ"ಗಾಗಿ ಕೊಡುಗೆಯಾಗಿ "ಅಮನಾತ್‌ ಖಾನ್‌" ಎಂಬ ಹೆಸರನ್ನು ನೀಡಿದನು. ಒಳ ಗುಮ್ಮಟದ ತಳ ಭಾಗದಲ್ಲಿ ಖುರಾನ್‌ನ ಸಾಲುಗಳ ಪಕ್ಕದಲ್ಲಿ "ಅಲ್ಪ ಜೀವಿ ಅಮನಾತ್‌ ಖಾನ್‌ ಸಿರಾಜಿರವರಿಂದ ಬರೆಯಲಾಗಿದೆ" ಎಂದು ಕೆತ್ತಲಾಗಿದೆ. ಸುಂದರ ಬರಹಗಾರಿಕೆಗಳಲ್ಲಿ ಹೆಚ್ಚಿನವುಗಳನ್ನು ಪುಷ್ಪಿತ ಥುಲುತ್‌ ಲಿಪಿಯಲ್ಲಿ ಬರೆಯಲಾಗಿದೆ. ಇದನ್ನು ಕೆಂಪು ಅಥವಾ ಕಪ್ಪು ಅಮೃತಶಿಲೆಯಿಂದ ಮಾಡಲಾಗಿದೆ ಮತ್ತು ಬಿಳಿ ಅಮೃತಶಿಲೆ ಫಲಕಗಳಲ್ಲಿ ಕೆತ್ತಲಾಗಿದೆ. ಮೇಲಿನ ಫಲಕಗಳನ್ನು ಕೆಳಗಿನಿಂದ ನೋಡಿದಾಗ ಒರೆಯಾಗಿ ಕಾಣುವುದನ್ನು ಕಡಿಮೆ ಮಾಡುವುದಕ್ಕಾಗಿ ಸ್ವಲ್ಪ ದೊಡ್ಡಕ್ಷರದಲ್ಲಿ ಬರೆಯಲಾಗಿದೆ. ಸ್ಮಾರಕ ಸಮಾಧಿಗಳಲ್ಲಿ ಅಮೃತಶಿಲೆಯಲ್ಲಿ ಕಂಡುಬರುವ ಸುಂದರ ಬರಹಗಳು ನಿರ್ದಿಷ್ಟವಾಗಿ ವಿವರವಾಗಿವೆ ಮತ್ತು ಸೂಕ್ಷ್ಮವಾಗಿವೆ. ಅಮೂರ್ತ ಆಕೃತಿಗಳನ್ನು ಉದ್ದಕ್ಕೂ ಬಳಸಲಾಗಿದೆ. ಅದರಲ್ಲೂ ವಿಶೇಷವಾಗಿ ಕಟ್ಟಡ ಪೀಠ, ಮಿನರೆಟ್ಟುಗಳು, ದ್ವಾರ, ಮಸೀದಿ, ಜವಾಬ್‌ಗಳಲ್ಲಿ ಮತ್ತು ಸಮಾಧಿಯ ಮೇಲ್ಮೈ ಮೇಲೆ ಕಡಿಮೆ ಪ್ರಮಾಣದಲ್ಲಿ ಬಳಸಲಾಗಿದೆ. ಮರಳುಕಲ್ಲಿನ ಕಟ್ಟಡಗಳಲ್ಲಿನ ಗುಮ್ಮಟಗಳು ಮತ್ತು ಕಮಾನುಗಳನ್ನು ವಿಸ್ತಾರವಾದ ಜ್ಯಾಮಿತಿಯ ಪ್ರಕಾರಗಳಲ್ಲಿ ರಚಿಸಲು ಕೆತ್ತಿದ ಚಿತ್ರಕಲೆಯ ಜಾಲರ ವಿನ್ಯಾಸದೊಂದಿಗೆ ಮಾಡಲಾಗಿದೆ. ಹೆರಿಂಗ್‌ಬೋನಿನ ಮೂಳೆ ಕೆತ್ತನೆಯು ಹಲವು ಜೋಡಣೆಗಳ ನಡುವಿನ ಜಾಗವನ್ನು ಸೂಚಿಸುತ್ತದೆ. ಬಿಳಿ ಕೆತ್ತನೆಗಳನ್ನು ಮರಳುಶಿಲೆಯ ಕಟ್ಟಡಗಳಲ್ಲಿ ಬಳಸಲಾಗಿದೆ ಮತ್ತು ಬಿಳಿ ಅಮೃತಶಿಲೆಗಳಲ್ಲಿ ತಿಳಿಗಪ್ಪು ಮತ್ತು ಕಪ್ಪು ಕೆತ್ತನೆಗಳನ್ನು ಬಿಡಿಸಲಾಗಿದೆ. ಅಮೃತಶಿಲೆ ಕಟ್ಟಡಗಳ ಗಾರೆ ಮಾಡಿದ ಪ್ರದೇಶಗಳಲ್ಲಿ ಹೊಳಪಿನ ಬಣ್ಣವನ್ನು ಬಳಿಯಲಾಗಿದೆ ಮತ್ತು ಗಮನಾರ್ಹ ಸಂಕೀರ್ಣತೆಯ ಜ್ಯಾಮಿತಿಯ ಆಕೃತಿಗಳನ್ನು ರಚಿಸಲಾಗಿದೆ. ಮಹಡಿಗಳು ಮತ್ತು ಕಾಲುದಾರಿಗಳಲ್ಲಿ ಹೊಳಪಿನ ತಬಲದಂತಹ ಆಕಾರಗಳಲ್ಲಿ ಹೆಂಚುಗಳು ಅಥವಾ ದಿಮ್ಮಿಗಳನ್ನು ಬಳಸಲಾಗಿದೆ. ಸಮಾಧಿಯ ಕೆಳಗೋಡೆಗಳಲ್ಲಿ ಹೂವುಗಳು ಮತ್ತು ದ್ರಾಕ್ಷಿ ಬಳ್ಳಿಯ ಚಿತ್ರಣಗಳನ್ನು ನೈಜ ಲೋಹದ ಉಬ್ಬುಗಳೊಂದಿಗೆ ಶ್ವೇತ ಅಮೃತಶಿಲೆ ನಡುದಿಂಡುಗಳನ್ನು ಕೆತ್ತಲಾಗಿದೆ. ಕೆತ್ತನೆಗಳ ಅಂದವಾದ ಶಿಲ್ಪಶೈಲಿ ಮತ್ತು ನಡುದಿಂಡುಗಳ ಅಂಚುಗಳನ್ನು ಎತ್ತಿತೋರಿಸಲು ಅಮೃತಶಿಲೆಯನ್ನು ನಯಗೊಳಿಸಲಾಗಿದೆ ಮತ್ತು ಕಮಾನುದಾರಿಯ ಮೂಲೆಗಟ್ಟುಗಳನ್ನು ಹೆಚ್ಚಾಗಿ ಜ್ಯಾಮಿತಿಯ ದ್ರಾಕ್ಷಿ ಬಳ್ಳಿಗಳು, ಹೂಗಳು ಮತ್ತು ಹಣ್ಣುಗಳಿಂದ ಕೂಡಿದ ಸೊಗಸಾದ ಪಿಯೆತ್ರಾ ದುರಾ ಕೆತ್ತನೆಗಳೊಂದಿಗೆ ಅಲಂಕರಿಸಲಾಗಿದೆ. ಹಳದಿ ಅಮೃತಶಿಲೆ, ಜ್ಯಾಸ್ಪರ್‌ ಮತ್ತು ಜೇಡ್‌ ಕಲ್ಲುಗಳ ಕೆತ್ತನೆಗಳನ್ನು ನಯಗೊಳಿಸಲಾಗಿದೆ ಮತ್ತು ಅವುಗಳನ್ನು ಗೋಡೆಗಳ ಮೇಲ್ಮೈಗೆ ಸರಿಹೊಂದುವಂತೆ ಮಟ್ಟ ಮಾಡಲಾಗಿದೆ. ಒಳಾಂಗಣ ಅಲಂಕಾರ ತಾಜ್‌ ಮಹಲ್‌ನ ಒಳಭಾಗದ ಮೆಟ್ಟಿಲುಗಳ ಅಂದವು ಸಾಂಪ್ರದಾಯಿಕ ಅಲಂಕಾರಿಕ ಅಂಶಗಳಿಗಿಂತ ಭಿನ್ನವಾಗಿದೆ. ಇಲ್ಲಿ ಕೆತ್ತನೆ ಕೆಲಸವು ಪಿಯೆತ್ರಾ ದುರಾ ಶೈಲಿಯಲ್ಲಿಲ್ಲ; ಬದಲಿಗೆ ಅತ್ಯಮೂಲ್ಯ ಮತ್ತು ಅಮೂಲ್ಯ ಶಿಲಾಲಿಖಿತರತ್ನಗಳಿಂದ ಕೂಡಿದೆ. ಒಳ ಕೋಣೆಯು ಅಷ್ಟಭುಜಾಕೃತಿಯಲ್ಲಿದ್ದು, ಎಲ್ಲ ಕಡೆಯಿಂದಲೂ ಪ್ರವೇಶಿಸಬಹುದಾಗಿರುವಂತೆ ವಿನ್ಯಾಸಗೊಳಿಸಲಾಗಿದೆ. ಆದರೂ ದಕ್ಷಿಣದ ಉದ್ಯಾನಕ್ಕೆ ಮುಖಮಾಡಿರುವ ದ್ವಾರವನ್ನು ಮಾತ್ರ ಬಳಸಲಾಗುತ್ತಿದೆ. ಒಳ ಗೋಡೆಗಳು ಸುಮಾರು 25 ಮೀಟರ್‌ಗಳಷ್ಟು ಎತ್ತರವಾಗಿದೆ ಮತ್ತು ಸೂರ್ಯ ಕಲಾಕೃತಿಯೊಂದಿಗೆ ಅಲಂಕೃತಗೊಂಡ "ನಕಲಿ" ಒಳ ಗುಮ್ಮಟ ಮಹಲಿನ ಮೇಲ್ಭಾಗದಲ್ಲಿದೆ. ಎಂಟು ಪಿಸ್ತಾಕ್ ಕಮಾನುಗಳು ನೆಲ ಮಟ್ಟದಲ್ಲಿರುವ ಜಾಗವನ್ನು ರೂಪಿಸಿವೆ ಮತ್ತು ಅದರ ಹೊರಗೆ ಪ್ರತಿ ಕೆಳ ಪಿಸ್ತಾಕ್‌ ಸುಮಾರು ಗೋಡೆಯ ಮಧ್ಯ ಭಾಗದಲ್ಲಿ ಎರಡನೆಯ ಪಿಸ್ತಾಕ್‌ನಿಂದ ಮೇಲ್ಭಾಗವನ್ನು ಹೊಂದಿರುತ್ತದೆ. ಮೇಲ್ಭಾಗದ ನಾಲ್ಕು ಕೇಂದ್ರ ಕಮಾನುಗಳು ಮೊಗಸಾಲೆ ಅಥವಾ ವೀಕ್ಷಣಾ ಪ್ರದೇಶವಾಗಿವೆ ಮತ್ತು ಪ್ರತಿ ಮೊಗಸಾಲೆಯ ಬಾಹ್ಯ ಕಿಟಕಿಗಳು ಜಟಿಲ ಪರದೆ ಅಥವಾ ಅಮೃತಶಿಲೆನಿಂದ ಕತ್ತರಿಸಿದ ಜಲಿ ಯನ್ನು ಹೊಂದಿವೆ. ಹೆಚ್ಚುವರಿಯಾಗಿ, ಮೊಲೆಗಳಲ್ಲಿರುವ ಛತ್ರಿಗಳಿಂದ ಸುತ್ತುವರಿದ ತೆರದ ಚಾವಣಿಗಳ ಮೂಲಕ ಮೊಗಸಾಲೆಯ ಕಿಟಕಿಗಳಿಂದ ಬರುವ ಬೆಳಕು ಒಳಾಂಗಣವನ್ನು ಪ್ರವೇಶಿಸುತ್ತದೆ. ಪ್ರತಿ ಕೋಣೆಯ ಗೋಡೆಯನ್ನು ಸಂಕೀರ್ಣದ ಹೊರಾಂಗಣದಾದ್ಯಂತ ಕಂಡುಬರುವ ಲೋಹದ ಉಬ್ಬುಗಳು, ಜಟಿಲ ಶಿಲಾಲಿಖಿತ ಕೆತ್ತನೆ ಮತ್ತು ನಯಗೊಳಿಸಿದ ಸುಂದರ ಬರಹದ ಫಲಕಗಳು, ವಿನ್ಯಾಸ ಅಂಶಗಳನ್ನು ವರ್ಣರಂಜಿತ ಶಿಲ್ಪಶೈಲಿಯಿಂದ ಪ್ರತಿಫಲಿಸುವಂತೆ ಉತ್ತಮವಾಗಿ ಅಲಂಕರಿಸಲಾಗಿದೆ. ಜಟಿಲ ಕೊರೆಯವ ಕೆಲಸದ ಮೂಲಕ ಕೆತ್ತಿದ ಎಂಟು ಅಮೃತಶಿಲೆ ಫಲಕಗಳಿಂದ ಮಾಡಿದ ಸ್ಮಾರಕ ಸಮಾಧಿಗಳು ಅಷ್ಟಭುಜಾಕೃತಿ ಅಮೃತಶಿಲೆ ಪರದೆ ಅಥವಾ ಜಲಿ ಯ ಅಂಚುಗಳನ್ನು ಹೊಂದಿವೆ. ಉಳಿದ ಮೇಲ್ಮೈಗಳನ್ನು ಬೆಲೆಬಾಳುವ ಕಲ್ಲುಗಳಲ್ಲಿ ಜೋಡಿ ದ್ರಾಕ್ಷಿ ಬಳ್ಳಿಗಳು, ಹಣ್ಣುಗಳು ಮತ್ತು ಹೂಗಳನ್ನು ಕೆತ್ತುವುದರೊಂದಿಗೆ ಅತ್ಯಂತ ಸೂಕ್ಷ್ಮ ಶಿಲ್ಪಶೈಲಿಯಲ್ಲಿ ಕೆತ್ತಲಾಗಿದೆ. ಮುಸ್ಲಿಂ ಸಂಪ್ರದಾಯವು ಸಮಾಧಿಯ ಹೆಚ್ಚಿನ ಅಲಂಕಾರವನ್ನು ನಿಷೇಧಿಸುತ್ತದೆ. ಹಾಗಾಗಿ ಮಮ್ತಾಜ್‌ ಮತ್ತು ಷಹ ಜಹಾನ್‌‌ರವರ ಮುಖಗಳನ್ನು ಬಲ ಭಾಗ ಮತ್ತು ಮೆಕ್ಕಾದ ಕಡೆಗೆ ತಿರುಗಿಸುವುದರೊಂದಿಗೆ ಒಳಕೋಣೆಯ ಕೆಳಗೆ ಸರಳ ರಹಸ್ಯ ಜಾಗದಲ್ಲಿರಿಸಲಾಗಿದೆ. ಮಮ್ತಾಜ್‌ ಮಹಲ್‌ಳ ಸ್ಮಾರಕ ಸಮಾಧಿಯನ್ನು ಒಳ ಕೋಣೆಯ ಸರಿಯಾದ ಕೇಂದ್ರ ಭಾಗದಲ್ಲಿ 2.5 ಮೀಟರ್‌ಗಳಿಂದ 1.5 ಮೀಟರ್‌ಗಳಷ್ಟು ಉದ್ದದ ಚೌಕಾಕಾರದ ಅಮೃತಶಿಲೆ ತಳಹದಿಯಲ್ಲಿ ನಿರ್ಮಿಸಲಾಗಿದೆ. ಅಡಿಪಾಯ ಮತ್ತು ಶವಪೆಟ್ಟಿಗೆಯನ್ನು ಅತ್ಯಮೂಲ್ಯ ಮತ್ತು ಅಮೂಲ್ಯ ರತ್ನಗಳೊಂದಿಗೆ ನಯವಾಗಿ ಕೆತ್ತಲಾಗಿದೆ. ಶವಪೆಟ್ಟಿಗೆಯಲ್ಲಿರುವ ಸುಂದರ ಬರಹಗಳು ಮಮ್ತಾಜ್‌ಳ ಕುರಿತು ತಿಳಿಸುವುದು ಮತ್ತು ಹೊಗಳುವುದು. ಶವಪೆಟ್ಟಿಗೆಯ ಮುಚ್ಚಳದ ಮೇಲಿರುವ ಎತ್ತರಿಸಲಾದ ಆಯತಾಕಾರದ ಹಲಗೆಯು ಬರವಣಿಗೆ ಪೀಠವನ್ನು ಸೂಚಿಸುತ್ತದೆ. ಷಹ ಜಹಾನ್‌‌ನ ಸ್ಮಾರಕ ಸಮಾಧಿಯು ಮಮ್ತಾಜ್‌ಳ ಸಮಾಧಿಯ ಪಕ್ಕ ಪಶ್ಚಿಮ ದಿಕ್ಕಿನಲ್ಲಿದೆ ಮತ್ತು ಅದು ಮಾತ್ರ ಪೂರ್ಣ ಸಂಕೀರ್ಣದಲ್ಲಿ ವಿಷಮಪಾರ್ಶ್ವದ ಅಂಶವಾಗಿ ಗೋಚರಿಸುವುದು. ಅವನ ಸ್ಮಾರಕ ಸಮಾಧಿಯು ಅವನ ಹೆಂಡತಿಯ ಸಮಾಧಿಗಿಂತ ದೊಡ್ಡದಾಗಿದೆ, ಆದರೆ ಒಂದೇ ಸಮನಾದ ಅಂಶಗಳನ್ನು ಪ್ರತಿಫಲಿಸುವುದು. ಇದು ಎತ್ತರವಾದ ಅಡಿಪಾಯದ ಮೇಲಿರುವ ದೊಡ್ಡದಾದ ಶವಪೆಟ್ಟಿಗೆಯಾಗಿದೆ. ಇದನ್ನು ವಿಸ್ಮಯಗೊಳಿಸುವ ನಿಖರತೆಯೊಂದಿಗೆ ಶಿಲಾಲಿಖಿತದಿಂದ ಅಲಂಕರಿಸಲಾಗಿದೆ ಮತ್ತು ಸುಂದರ ಬರಹಗಳಿಂದ ಬರೆದ ಬರಹವು ಅವನ ಗುರುತು ತಿಳಿಸುವುದು. ಶವಪೆಟ್ಟಿಗೆ ಮುಚ್ಚಳದ ಮೇಲೆ ಚಿಕ್ಕ ಲೇಖನಿ ಪೆಟ್ಟಿಗೆಯ ಸಾಂಪ್ರದಾಯಿಕ ಶಿಲ್ಪಾಕೃತಿಯಂತಿದೆ. ಲೇಖನಿ ಪೆಟ್ಟಿಗೆ ಮತ್ತು ಬರವಣಿಗೆ ಪೆಟ್ಟಿಗೆಗಳು ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಶವಪೆಟ್ಟಿಗೆಯನ್ನು ಅಲಂಕರಿಸುವ ಸಾಂಪ್ರದಾಯಿಕ ಮೊಘಲ್‌‌ ಶವಸಂಸ್ಕಾರ ಚಿಹ್ನೆಗಳಾಗಿವೆ. "ಮಮ್ತಾಜ್‌ಳ ಶ್ರೇಷ್ಠತೆ, ಭವ್ಯತೆ, ಗಾಂಭೀರ್ಯತೆ, ಅನನ್ಯತೆ, ಚಿರಂತನ, ಮತ್ತು ವೈಭವತೆ..." ಗುಣಗಳು ಸೇರಿದಂತೆ ದೇವರ ತೊಂಬತ್ತೊಬತ್ತು ಹೆಸರುಗಳನ್ನು ಮಮ್ತಾಜ್‌ ಮಹಲ್‌ಳ ನೈಜ ಸಮಾಧಿಯ ಪಾರ್ಶ್ವಗಳಲ್ಲಿ ಕೆತ್ತಲಾಗಿರುವ ಸುಂದರ ಬರಹಗಳಲ್ಲಿ ಕಾಣಬಹುದು'' . ಷಹ ಜಹಾನ್‌‌ನ ಸಮಾಧಿಯಲ್ಲಿ "ಅವನು 1076 ಹಿಜಿರಾ ವರ್ಷದ ರಜಾಬ್‌ ತಿಂಗಳ ಇಪ್ಪತ್ತಾರರ ರಾತ್ರಿ ಈ ಪ್ರಪಂಚದಿಂದ ಪರಲೋಕದ ಭೋಜನ ಭವನಕ್ಕೆ ಪ್ರಯಾಣಿಸಿದರು" ಎಂದು ಸುಂದರ ಬರಹಗಳಲ್ಲಿ ಕೆತ್ತಲಾಗಿದೆ. ಉದ್ಯಾನ ಸಂಕೀರ್ಣವು 300 ಮೀಟರ್‌ ಉದ್ದವಾದ ಛಾರ್ಬಾಘ್‌ ಅಥವಾ ಮೊಘಲ್‌‌ ಉದ್ಯಾನವನ್ನು ಒಳಗೊಂಡಿದೆ. ಉದ್ಯಾನದಲ್ಲಿ ಎತ್ತರಿಸಿದ ಹಾದಿಗಳನ್ನು ನಿರ್ಮಿಸಲಾಗಿದ್ದು ನಾಲ್ಕು ಕಾಲು ಭಾಗದಲ್ಲಿ ಪ್ರತಿಯೊಂದನ್ನು 16 ಕೆಳ ಹೂದೋಟಗಳು ಅಥವಾ ಹೂಹಾಸುಗಳಾಗಿ ವಿಂಗಡಿಸಲಾಗಿದೆ. ಉದ್ಯಾನದ ಕೇಂದ್ರದಲ್ಲಿ ಎತ್ತರದ ಅಮೃತಶಿಲೆಯ ನೀರಿನ ತೊಟ್ಟಿ ಇದೆ. ಸಮಾಧಿ ಮತ್ತು ದ್ವಾರದ ನಡುವಿನ ಮಧ್ಯದಾರಿಯಲ್ಲಿ ಉತ್ತರ-ದಕ್ಷಿಣ ಅಕ್ಷದಲ್ಲಿ ಪ್ರತಿಫಲಿಸುವ ಕೊಳವು ಭವ್ಯ ಸಮಾಧಿಯ ಬಿಂಬವನ್ನು ಪ್ರತಿಫಲಿಸುತ್ತದೆ. ಮಹಮ್ಮದ್‌ರಿಗೆ ವಚನವಿತ್ತಂತೆ "ಸಿರಿವಂತಿಕೆಯ" ಸೂಚಕವಾಗಿ ಕಟ್ಟಿರುವ ಅಮೃತಶಿಲೆಯ ನೀರಿನ ತೊಟ್ಟಿಯನ್ನು ಅಲ್‌ ಹವ್ದ್‌ ಅಲ್‌-ಕವ್ತಾರ್‌ ಎಂದು ಕರೆಯಲಾಗುತ್ತದೆ. ಉದ್ಯಾನದ ಇನ್ನೊಂದೆಡೆ ಸಾಲುಮರಗಳು ಮತ್ತು ನೀರಿನ ಕಾರಂಜಿಗಳಿವೆ. ಭಾರತಕ್ಕೆ ಮೊದಲ ಮೊಘಲ್‌‌ ಚರ್ಕವರ್ತಿ ಬಾಬರ್‌ ಪರ್ಷಿಯನ್ ಉದ್ಯಾನಗಳಿಂದ ಪ್ರೇರೇಪಿತನಾಗಿ ಛಾರ್ಬಾಘ್‌ ಉದ್ಯಾನವನ್ನು ಪರಿಚಯಿಸಿದನು.ಇದು ಜನ್ನಾದ (ಸ್ವರ್ಗ)ದಲ್ಲಿ ಹರಿಯುವ ನಾಲ್ಕು ನದಿಗಳನ್ನು ಸೂಚಿಸುತ್ತದೆ. ಮತ್ತು ಪರ್ಷಿಯಾದ ಪ್ಯಾರಿಡೇಜಾ ಎಂದರೆ ಸ್ವರ್ಗ ಉದ್ಯಾನದಿಂದ ಸೃಷ್ಟಿಯಾದ 'ಗೋಡೆಗಳ ಉದ್ಯಾನ'ವನ್ನು ಬಿಂಬಿಸುತ್ತದೆ. ಮೊಘಲ್‌‌ ಅವಧಿಯ ಮುಸ್ಲಿಂ ಧರ್ಮದ ಆಧ್ಯಾತ್ಮಿಕತೆಯಲ್ಲಿ, ಉದ್ಯಾನದ ಕೇಂದ್ರದಲ್ಲಿರುವ ಕಾರಂಜಿ ಅಥವಾ ಬೆಟ್ಟದಿಂದ ಹರಿಯುವ ನಾಲ್ಕು ನದಿಗಳು ಉತ್ತರ, ದಕ್ಷಿಣ, ಪಶ್ಚಿಮ ಮತ್ತು ಪೂರ್ವಕ್ಕೆ ಉದ್ಯಾನವನ್ನು ಬೇರ್ಪಡಿಸುವುದರೊಂದಿಗೆ ಶ್ರೀಮಂತಿಕೆಯ ಮಾದರಿ ಉದ್ಯಾನದಂತೆ ಸ್ವರ್ಗವನ್ನು ವಿವರಿಸಲಾಗಿದೆ. ಹೆಚ್ಚಿನ ಮೊಘಲ್‌‌ ಛಾರ್ಬಾಘ್‌ಗಳು ಮಧ್ಯಭಾಗದಲ್ಲಿ ಸಮಾಧಿ ಅಥವಾ ಉದ್ಯಾನಗೃಹವನ್ನು ಹೊಂದಿದ್ದು ಆಯತಾಕಾರದಲ್ಲಿರುತ್ತವೆ. ಅವುಗಳಲ್ಲಿ ತಾಜ್‌ ಮಹಲ್‌ ಉದ್ಯಾನವು ಅಸಾಮಾನ್ಯವಾದದ್ದು. ಪ್ರಧಾನ ಭಾಗವಾಗಿರುವ ಸಮಾಧಿಯು ಉದ್ಯಾನದ ಕೊನೆಯ ಭಾಗದಲ್ಲಿದೆ. ಯಮುನಾ ನದಿಯ ಇನ್ನೊಂದು ಬದಿಯಲ್ಲಿ ಮಹ್ತಾಬ್‌ ಬಾಘ್‌ ಅಥವಾ "ಬೆಳದಿಂಗಳ ಉದ್ಯಾನ"ದ ಆವಿಷ್ಕಾರದೊಂದಿಗೆ, ಭಾರತೀಯ ಪುರಾತತ್ವ ಸಂಸ್ಥೆ ತನ್ನ ವರದಿಯಲ್ಲಿ ಯಮುನಾ ನದಿ ಸ್ವರ್ಗದ ನದಿಗಳಲ್ಲಿ ಒಂದಾಗಿರುವಂತೆ ಕಾಣಬೇಕೆಂಬ ಆಶಯದೊಂದಿಗೆ ಉದ್ಯಾನದ ವಿನ್ಯಾಸದೊಂದಿಗೆ ಅದನ್ನು ಸೇರಿಸಲಾಗಿತ್ತು ಎಂದು ಹೇಳಿದೆ. ಈ ಉದ್ಯಾನ ಶಾಲಿಮರ್‌ ಉದ್ಯಾನಗಳಂತೆ ಅದೇ ರೀತಿಯ ವಿನ್ಯಾಸ ಮತ್ತು ವಾಸ್ತು ಲಕ್ಷಣಗಳನ್ನು ಹೊಂದಿರುವುದರಿಂದ ಅದೇ ವಾಸ್ತುಶಿಲ್ಪಿ ಅಲಿ ಮರ್ದಾನ್‌ರವರು ಈ ಉದ್ಯಾನವನ್ನೂ ವಿನ್ಯಾಸಗೊಳಿರಬಹುದೆಂದು ಹೇಳಲಾಗಿದೆ. ಆರಂಭಿಕ ದಿನಗಳಲ್ಲಿ ಉದ್ಯಾನವು ಹೇರಳ ಪ್ರಮಾಣದ ಗುಲಾಬಿಗಳು, ನೈದಿಲೆಗಳು, ಮತ್ತು ಹಣ್ಣಿನ ಮರಗಳು ಸೇರಿದಂತೆ ಅನೇಕ ಸಸ್ಯವರ್ಗಗಳಿಂದ ಕೂಡಿತ್ತು. ಮೊಘಲ್‌‌ ಸಾಮ್ರಾಜ್ಯ ಪತನವಾಗುತ್ತಾ ಹೋದಂತೆ ಈ ಉದ್ಯಾನದ ನಿರ್ವಹಣೆ ಕಳೆಗುಂದುತ್ತಾ ಹೋಯಿತು. ನಂತರ ಬ್ರಿಟಿಷ್‌ ಆಳ್ವಿಕೆಯ ಸಮಯದಲ್ಲಿ ತಾಜ್‌ ಮಹಲ್‌ ನಿರ್ವಹಣೆಯನ್ನು ಅವರು ವಹಿಸಿಕೊಂಡ ಮೇಲೆ, ಅವರು ಲಂಡನ್‌ನ ಹುಲ್ಲು ಹಾಸುಗಳನ್ನು ಬಳಸಿ ಉದ್ಯಾನದ ಮೇಲ್ಮೈಯನ್ನು ಬದಲಾಯಿಸಿದರು. ನೆರೆಹೊರೆಯ ಕಟ್ಟಡಗಳು ತಾಜ್‌ ಮಹಲ್‌ ಸಂಕೀರ್ಣದ ಮೂರು ಕಡೆಯಲ್ಲಿ ದಂತಾಕೃತಿಯಿಂದ ಕೂಡಿದ ಕೆಂಪು ಮರಳುಕಲ್ಲುಗಳಿಂದ ಕೋಟೆಯನ್ನು ನಿರ್ಮಿಸಲಾಗಿದ್ದು ಇದು ನದಿಗೆ ಎದುರು ದಿಕ್ಕಿನಲ್ಲಿ ತೆರೆದುಕೊಂಡಿದೆ. ಕೋಟೆಯ ಹೊರಗೆ ಷಹ ಜಹಾನ್‌ನ ಇತರ ಪತ್ನಿಯರು ಮತ್ತು ಮಮ್ತಾಜ್‌ನ ಮೆಚ್ಚಿನ ಸೇವಕನ ದೊಡ್ಡದಾದ ಸಮಾಧಿ ಸೇರಿದಂತೆ ಇತರ ಹಲವು ಭವ್ಯ ಸಮಾಧಿಗಳಿವೆ. ಕೆಂಪು ಮರಳುಕಲ್ಲುಗಳಿಂದ ಕಟ್ಟಲಾದ ಈ ಸಮಾಧಿಗಳು ಆ ಕಾಲದ ಚಿಕ್ಕ ಮೊಘಲ್‌‌ ಸಮಾಧಿಗಳ ಮಾದರಿಗಳಾಗಿದ್ದವು. ಉದ್ಯಾನಕ್ಕೆ ಮುಖಮಾಡಿರುವ ಒಳಗೋಡೆಯ ಮುಂಭಾಗದಲ್ಲಿ ಎತ್ತರದ ಕಮಾನುಗಳನ್ನು ನಿರ್ಮಿಸಲಾಗಿದೆ. ಇದು ಹಿಂದೂ ದೇವಾಲಯಗಳ ಅಪ್ಪಟ ವಾಸ್ತು ಶೈಲಿಯಲ್ಲಿದೆ. ನಂತರ ಈ ಶೈಲಿಯನ್ನು ಮೊಘಲ್‌‌ ಮಸೀದಿಗಳ ನಿರ್ಮಾಣಗಳಲ್ಲಿ ಅಳವಡಿಸಿಕೊಳ್ಳಲಾಯಿತು. ಈಗ ವಸ್ತುಸಂಗ್ರಹಾಲಯದಂತೆ ಬಳಸಲಾಗುತ್ತಿರುವ ಗುಮ್ಮಟಾಕಾರದ ಛತ್ರಿಗಳು ಮತ್ತು ಸಂಗೀತ ಕೋಣೆ ಯಂತಿರುವ ವೀಕ್ಷಣಾ ಪ್ರದೇಶಗಳು ಅಥವಾ ವೀಕ್ಷಣಾ ಗೋಪುರಗಳಂತಹ ಚಿಕ್ಕ ಕಟ್ಟಡಗಳಿಂದ ಕೋಟೆಯನ್ನು ವಿಭಿನ್ನವಾಗಿ ಕಟ್ಟಲಾಗಿದೆ. ಮುಖ್ಯದ್ವಾರ (ದರ್ವಾಜಾ ) ಸ್ಮಾರಕವಾಗಿದ್ದು, ಇದನ್ನು ಅಮೃತಶಿಲೆಯಿಂದ ಕಟ್ಟಲಾಗಿದೆ. ಆರಂಭಿಕ ಮೊಘಲ್‌‌ ಚರ್ಕವರ್ತಿಗಳ ವಾಸ್ತುಶಿಲ್ಪದ ಸ್ಮರಣಾರ್ಥವಾಗಿ ಈ ಸ್ಮಾರಕ ಕಟ್ಟಡಲಾಗಿದೆ. ಈ ಕಮಾನುದಾರಿಯು ಸಮಾಧಿಯ ಕಮಾನುದಾರಿಯ ರಚನೆಯನ್ನು ಹೋಲುತ್ತವೆ. ಮತ್ತು ಇದರ ಪಿಸ್ತಾಕ್‌ ಕಮಾನುಗಳನ್ನು ಸಮಾಧಿಯಲ್ಲಿರುವಂತೆ ಸುಂದರ ಬರಹಗಳಲ್ಲಿ ಅಲಂಕರಿಸಲಾಗಿದೆ. ಇದು ಪುಷ್ಪಾಕೃತಿಯ ಕಲಾಕೃತಿಗಳೊಂದಿಗೆ ಲೋಹದ ಉಬ್ಬುಗಳು ಮತ್ತು ಪಿಯೆತ್ರಾ ದುರಾದ ಕೆತ್ತನೆಗಳನ್ನು ಒಳಗೊಂಡಿದೆ. ಕಮಾನಿನ ಆಕಾರದ ಚಾವಣಿಗಳು ಮತ್ತು ಗೋಡೆಗಳು ಸಂಕೀರ್ಣದ ಇತರ ಮರಳುಕಲ್ಲಿನ ಕಟ್ಟಡಗಳಲ್ಲಿ ಕಂಡುಬರುವಂತೆ ಜಟಿಲವಾದ ಜ್ಯಾಮಿತಿಯ ವಿನ್ಯಾಸಗಳನ್ನು ಹೊಂದಿವೆ. ಸಮಾಧಿಯ ಕಡೆ ತೆರೆದುಕೊಂಡಿರುವ ಎರಡು ಭವ್ಯ ಮರಳುಕಲ್ಲಿನ ಕಟ್ಟಡಗಳು ಸಂಕೀರ್ಣದ ಕೊನೆಯ ಭಾಗದಲ್ಲಿವೆ. ಅವುಗಳ ಹಿಂಭಾಗವು ಪೂರ್ವ ಮತ್ತು ಪಶ್ಚಿಮ ಗೋಡೆಗಳಿಗೆ ಸಮಾನಾಂತರವಾಗಿದ್ದು ಎರಡು ಕಟ್ಟಡಗಳು ಕರಾರುವಕ್ಕಾಗಿ ಒಂದನ್ನೊಂದು ಹೋಲುತ್ತವೆ. ಪಶ್ಚಿಮದಲ್ಲಿರುವ ಕಟ್ಟಡವು ಮಸೀದಿಯಾಗಿದ್ದು ಇನ್ನೊಂದು ಕಟ್ಟಡವು ಜವಾಬ್‌ (ಉತ್ತರ) ಆಗಿದೆ. ವಾಸ್ತುಶೈಲಿಯನ್ನು ಸರಿದೂಗಿಸುವುದಕ್ಕಾಗಿ ಈ ಕಟ್ಟಡ ಕಟ್ಟಲಾಗಿತ್ತು. ಇದನ್ನು ಅತಿಥಿಗೃಹವಾಗಿ ಬಳಸಿರಬಹುದು. ಈ ಎರಡು ಕಟ್ಟಡಗಳ ನಡುವೆ ಜವಾಬ್‌ ನಲ್ಲಿರುವ ಮಿರಾಬ್‌ ನ (ಮೆಕ್ಕಾಕ್ಕೆ ಮುಖಮಾಡಿರುವ ಮಸೀದಿಯ ಗೋಡೆಗಳಲ್ಲಿರುವ ಗೂಡು) ಕೊರತೆಯೂ ಸೇರಿದಂತೆ ಅಸಮಾನತೆಯಿದೆ ಮತ್ತು ಜವಾಬ್‌‌ ನ ಮಹಡಿಗಳು ಜ್ಯಾಮಿತಿಯ ವಿನ್ಯಾಸದಲ್ಲಿ ರಚನೆಯಾಗಿವೆ. ಇದೇ ವೇಳೆ ಮಸೀದಿಯ ಮಹಡಿಗಳಲ್ಲಿ 569 ಪ್ರಾರ್ಥನೆ ಹಾಸುಗಳನ್ನು ಭಿನ್ನವಾಗಿ ಕಪ್ಪು ಅಮೃತಶಿಲೆಯಲ್ಲಿ ಕೆತ್ತಲಾಗಿದೆ. ಮಸೀದಿಯ ದೊಡ್ಡ ಸಭಾಂಗಣದ ಮೂಲ ವಿನ್ಯಾಸವು ಷಹ ಜಹಾನ್‌ನು ಕಟ್ಟಿದ ಇತರ ಕಟ್ಟಡಗಳಂತೆ ವಿಶೇಷವಾಗಿ ದೆಹಲಿಯ ಮಸೀದ್‌-ಜಹಾನ್‌ ನುಮಾ ಅಥವಾ ಜಮಾ ಮಸೀದಿಯಂತೆ ಮೂರು ಗುಮ್ಮಟಗಳನ್ನು ಹೊಂದಿದೆ‌. ಈ ಕಾಲದ ಮೊಘಲ್‌ ಮಸೀದಿಗಳು ಪ್ರಾರ್ಥನಾ ಮಂದಿರವನ್ನು ಒಂದು ಮುಖ್ಯ ಪ್ರಾರ್ಥನಾ ಸ್ಥಳ ಮತ್ತು ಎರಡೂ ಬದಿಯಲ್ಲಿ ಚಿಕ್ಕ ಪ್ರಾರ್ಥನಾ ಸ್ಥಳಗಳಂತೆ ಮೂರು ಮುಖ್ಯ ಭಾಗಗಳಾಗಿ ವಿಭಾಗಿಸುತ್ತವೆ. ತಾಜ್‌ ಮಹಲ್‌ನಲ್ಲಿ‌ ಪ್ರತಿ ಪ್ರಾರ್ಥನಾ ಸ್ಥಳದಲ್ಲಿ ದೊಡ್ಡದಾದ ಕಮಾನಿನಂತಹ ಗುಮ್ಮಟಕಾರದ ರಚನೆಯಿದೆ. ಈ ನೆರೆಹೊರೆಯ ಕಟ್ಟಡಗಳ ನಿರ್ಮಾಣ ಕಾರ್ಯ 1643ರಲ್ಲಿ ಪೂರ್ಣಗೊಂಡಿತು. ನಿರ್ಮಾಣ ತಾಜ್‌ ಮಹಲ್‌ನ್ನು ಕೋಟೆಯ ನಗರ ಆಗ್ರಾದ ದಕ್ಷಿಣ ಭಾಗದಲ್ಲಿರುವ ಭೂಪ್ರದೇಶದಲ್ಲಿ ಕಟ್ಟಲಾಗಿದೆ. ತಾಜ್‌ ಮಹಲ್‌ ಕಟ್ಟಿದ್ದ ಸ್ಥಳಕ್ಕೆ ಪ್ರತಿಯಾಗಿ ಆಗ್ರಾದ ಕೇಂದ್ರ ಭಾಗದಲ್ಲಿದ್ದ ದೊಡ್ಡ ಅರಮನೆಯೊಂದನ್ನು ಷಹ ಜಹಾನ್‌ನು ಮಹರಾಜ ಜೈ ಸಿಂಗ್‌ರವರಿಗೆ ಕೊಡುಗೆಯಾಗಿ ನೀಡಿದನು. ಸುಮಾರು ಮೂರು ಎಕರೆಗಳಷ್ಟು ಪ್ರದೇಶದಲ್ಲಿ ಭೂಶೋಧನೆ ಮಾಡಲಾಯಿತು. ನೀರು ಜಿನುಗುವುದನ್ನು ಕಡಿಮೆ ಮಾಡಲು ಕಸವನ್ನು ತುಂಬಿ ಮಣ್ಣನ್ನು ಹಾಕಲಾಯಿತು ಮತ್ತು ನದಿ ದಡದಿಂದ ಮೇಲಿನ ೫೦ ಮೀಟರ್‌ಗಳಷ್ಟು ಎತ್ತರದ ಪ್ರದೇಶವನ್ನು ಸಮತಟ್ಟು ಮಾಡಲಾಯಿತು.ಸಮಾಧಿ ಸ್ಥಳದಲ್ಲಿ ಹಿಂದೆ ಬಾವಿಗಳನ್ನು ತೋಡಲಾಗಿದ್ದು ಪಾದಾಧಾರಕಲ್ಲು ಮತ್ತು ಹೆಂಟೆಗಳಿಂದ ತುಂಬಿಸಲಾಗಿತ್ತು. ಬಲಿಷ್ಠ ಬಿದಿರಿನ ಬದಲು ದೊಡ್ಡ ಇಟ್ಟಿಗೆಯನ್ನು ಬಳಸಿ ಕೆಲಸಗಾರರು ಕಟ್ಟಿದ ಹಂಗಾಮಿ ಕಟ್ಟಡವು ಸಮಾಧಿಯನ್ನು ಹೋಲುತ್ತದೆ. ಈ ಹಂಗಾಮಿ ಕಟ್ಟಡವು ಎಷ್ಟು ದೊಡ್ಡದಾಗಿದೆ ಎಂದರೆ ಕೆಲಸಗಾರರ ಇದನ್ನು ಕಿತ್ತುಹಾಕಲು ವರ್ಷಗಳೇ ಬೇಕಾಗಬಹುದು. ದಂತಕತೆಯ ಪ್ರಕಾರ, ಹಂಗಾಮಿ ಕಟ್ಟಡದಿಂದ ಇಟ್ಟಿಗೆಗಳನ್ನು ಯಾರಾದರೂ ಕೀಳಬಹುದೆಂದು ಭಾವಿಸಿ ಅದನ್ನು ಕೀಳಲು ಷಹ ಜಹಾನ್‌ ‌ಆಜ್ಞಾಪಿಸಿದ್ದ. ಆದ್ದರಿಂದ ಒಂದೇ ರಾತ್ರಿಯಲ್ಲಿ ರೈತರಿಂದ ಅದನ್ನು ಕಿತ್ತುಹಾಕಲಾಯಿತು. ನಿರ್ಮಾಣ ಸ್ಥಳಕ್ಕೆ ಅಮೃತಶಿಲೆ ಮತ್ತು ವಸ್ತುಗಳನ್ನು ಸಾಗಿಸಲು ಹದಿನೈದು ಕಿಲೋಮೀಟರ್‌ಗಳ ಉದ್ದದ ಜಲ್ಲಿಯಿಂದ ಹದಗೊಳಿಸಿದ ರಸ್ತೆಯನ್ನು ಮಾಡಲಾಗಿತ್ತು ಮತ್ತು ಅದರಲ್ಲಿ ಇಪ್ಪತ್ತು ಅಥವಾ ಮೂವತ್ತು ಎತ್ತುಗಳಿಂದ ಎಳೆಯಲ್ಡಡುತ್ತಿದ್ದ ವಿಶೇಷವಾಗಿ ನಿರ್ಮಿಸಿದ ಬಂಡಿಗಳಲ್ಲಿ ದಿಮ್ಮಿಗಳನ್ನು ಸಾಗಿಸಲಾಗುತ್ತಿತ್ತು. ದೊಡ್ಡ ಕಂಬ ಮತ್ತು ತೊಲೆ ಬೇಕಾದ ಸ್ಥಾನಕ್ಕೆ ದಿಮ್ಮಿಗಳನ್ನು ಏರಿಸಲು ರಾಟೆ ವ್ಯವಸ್ಥೆಯನ್ನು ಬಳಸಲಾಗಿತ್ತು. ಪುರ್ಸ್‌ ನ ಉಪನದಿಗಳಿಂದ ನೀರನ್ನು ಹಗ್ಗ ಮತ್ತು ಬಕೆಟ್‌ನ್ನು ಬಳಸಿ ಪ್ರಾಣಿಗಳ ಸಹಾಯದಿಂದ ಎತ್ತಲಾಗುತ್ತಿತ್ತು ಮತ್ತು ಅದನ್ನು ದೊಡ್ಡ ಸಂಗ್ರಹ ತೊಟ್ಟಿಗೆ ತುಂಬಿ, ದೊಡ್ಡ ವಿತರಣಾ ತೊಟ್ಟಿಗೆ ಏರಿಸಲಾಗುತ್ತಿತ್ತು. ಅದರಿಂದ ನೀರನ್ನು ಮೂರು ಉಪ ತೊಟ್ಟಿಗಳಿಗೆ ಹಾಯಿಸಿ, ನಂತರ ಅಲ್ಲಿಂದ ಕೊಳವೆಯ ಮುಖಾಂತರ ಸಂಕೀರ್ಣಕ್ಕೆ ತಲುಪಿಸಲಾಗುತ್ತಿತ್ತು. ಪೀಠ ಮತ್ತು ಸಮಾಧಿಯ ನಿರ್ಮಾಣವನ್ನು ಪೂರ್ಣಗೊಳಿಸಲು ಸುಮಾರು 12 ವರ್ಷ ತೆಗೆದುಕೊಳ್ಳಲಾಗಿತ್ತು. ಸಂಕೀರ್ಣದ ಇನ್ನುಳಿದ ಭಾಗವನ್ನು ಎಂದರೆ ಕ್ರಮವಾಗಿ ಮಸೀದಿಗಳು, ಜವಾಬ್‌ ಮತ್ತು ದ್ವಾರಬಾಗಿಲು ಕಟ್ಟಲು ಮತ್ತೆ 10 ವರ್ಷಗಳ ಸಮಯ ಹಿಡಿಯಿತು. ಸಂಕೀರ್ಣದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದಾಗ, ಕಟ್ಟಡ "ಪೂರ್ಣಗೊಳ್ಳುವ" ವಿಚಾರದಲ್ಲಿ ವ್ಯತ್ಯಾಸಗಳಿದ್ದ ಕಾರಣ ಕಟ್ಟಡ ನಿರ್ಮಾಣ ಪೂರ್ಣಗೊಳ್ಳುವ ದಿನಾಂಕದಲ್ಲೂ ಒಮ್ಮತವಿರಲಿಲ್ಲ. ಇದಕ್ಕೆ ಉದಾಹರಣೆ ಎಂದರೆ, ಭವ್ಯ ಸಮಾಧಿಯು 1643ರಲ್ಲಿ ಪೂರ್ಣಗೊಂಡಿತು, ಆದರೆ ಸಂಕೀರ್ಣದ ಉಳಿದ ಭಾಗದ ನಿರ್ಮಾಣ ಕಾರ್ಯ ಬಾಕಿ ಇದ್ದು ಕೆಲಸ ಮುಂದುವರಿಯಿತು. ಎಲ್ಲ ಸಮಯದಲ್ಲೂ ಅಂದಾಜು ವೆಚ್ಚವವನ್ನು ಕರಾರುವಕ್ಕಾಗಿ ಲೆಕ್ಕ ಹಾಕುವುದು ಕಷ್ಟವಾದ್ದರಿಂದ ಅಂದಾಜು ನಿರ್ಮಾಣದ ವೆಚ್ಚ ಬದಲಾಗುತ್ತಿತ್ತು. ಆ ಕಾಲದಲ್ಲೇ ಒಟ್ಟು ವೆಚ್ಚವನ್ನು ಸುಮಾರು 32 ದಶಲಕ್ಷ ರೂಪಾಯಿಗಳೆಂದು ಅಂದಾಜಿಸಲಾಗಿತ್ತು. ತಾಜ್‌ ಮಹಲ್‌ ನಿರ್ಮಾಣದಲ್ಲಿ ಭಾರತ ಮತ್ತು ಏಷ್ಯಾದ್ಯಂತದ ದೊರೆಯುವ ಹಲವು ವಸ್ತುಗಳನ್ನು ಬಳಸಿ ನಿರ್ಮಿಸಲಾಯಿತು ಮತ್ತು ಸುಮಾರು 1,000 ಆನೆಗಳನ್ನು ಕಟ್ಟಡ ನಿರ್ಮಾಣದಲ್ಲಿ ವಸ್ತುಗಳ ಸಾಗಣಿಕೆಗಾಗಿ ಬಳಸಲಾಯಿತು. ರಾಜಸ್ಥಾನದಿಂದ ಪಾರದರ್ಶಕವಾದ ಬಿಳಿ ಅಮೃತಶಿಲೆಯನ್ನು, ಪಂಜಾಬ್‌ನಿಂದ ಜ್ಯಾಸ್ಪರ್‌ನ್ನು, ಚೀನಾದಿಂದ ಜೇಡ್‌ ಮತ್ತು ಸ್ಪಟಿಕವನ್ನು ತರಿಸಲಾಗಿತ್ತು. ಟಿಬೆಟ್‌ನಿಂದ ವೈಡೂರ್ಯ, ಅಫ್ಘಾನಿಸ್ಥಾನದಿಂದ ಲ್ಯಾಪಿಸ್‌ ಲಜುಲಿ, ಶ್ರೀಲಂಕಾದಿಂದ ನೀಲಮಣಿ ಮತ್ತು ಅರೇಬಿಯಾದಿಂದ ಕ್ಯಾಲ್ಸಡೆನಿಯನ್ನು ತರಿಸಿಕೊಂಡು ಅದನ್ನು ನಿರ್ಮಾಣದಲ್ಲಿ ಬಳಸಿಕೊಳ್ಳಲಾಗಿತ್ತು. ಒಟ್ಟಾಗಿ ಇಪ್ಪತ್ತೆಂಟು ವಿಧಗಳ ಅತ್ಯಮೂಲ್ಯ ಮತ್ತು ಅಮೂಲ್ಯ ರತ್ನಗಳನ್ನು ಬಿಳಿ ಅಮೃತಶಿಲೆಯಲ್ಲಿ ಕೊರೆದು ಇಡಲಾಯಿತು. ಉತ್ತರ ಭಾರತದಾದ್ಯಂತ ಇಪ್ಪತ್ತು ಸಾವಿರ ಕಾರ್ಮಿಕರನ್ನು ಕಟ್ಟಡ ಕೆಲಸದಲ್ಲಿ ಬಳಸಿಕೊಳ್ಳಲಾಗಿತ್ತು. ಬುಖಾರದಿಂದ ಶಿಲ್ಪಿಗಳು, ಸಿರಿಯಾ ಮತ್ತು ಪರ್ಷಿಯಾದಿಂದ ಸುಂದರ ಲಿಪಿಗಾರರು, ದಕ್ಷಿಣ ಭಾರತದಿಂದ ವಾಸ್ತುಶಿಲ್ಪಿಗಳು, ಬಲೂಚಿಸ್ತಾನದಿಂದ ಕಲ್ಲುಕಡೆಯುವವರು, ಕಟ್ಟಡದ ಗೋಪುರ ಕಟ್ಟುವುದರಲ್ಲಿ ಪರಿಣಿತರು, ಅಮೃತಶಿಲೆಯಲ್ಲಿ ಹೂಗಳನ್ನು ಕೆತ್ತುವವರು ಕ್ರಿಯಾತ್ಮಕ ಘಟಕವನ್ನು ರಚಿಸಿದ ಮೂವತ್ತೇಳು ಜನರಲ್ಲಿದ್ದಾರೆ. ಈ ಕೆಳಗಿನವರು ತಾಜ್‌ ಮಹಲ್‌ ನಿರ್ಮಾಣದಲ್ಲಿ ಭಾಗಿಯಾದ ಕೆಲವು ನಿರ್ಮಾಪಕರಾಗಿದ್ದಾರೆ: ಇಸ್ಮಾಯಿಲ್‌ ಅಫಾಂದಿನು (a.ka. ಇಸ್ಮಾಯಿಲ್ ‌ಖಾನ್‌) ಒಟ್ಟೊಮಾನ್‌ ಸಾಮ್ರಾಜ್ಯದವನಾದ ಇವರು - ಮುಖ್ಯ ಗುಮ್ಮಟದ ವಿನ್ಯಾಸಕರಾಗಿದ್ದಾರೆ. ಒಟ್ಟೊಮಾನ್‌ ಸಾಮ್ರಾಜ್ಯದ ಕೊಕ ಮಿಮರ್‌ ಸಿನಾನ್‌ ಅಘರಿಂದ ತರಬೇತಿ ಪಡೆದ ಪರ್ಷಿಯಾದ ಉಸ್ತಾದ್ ಇಸಾ ಮತ್ತು ಇಸಾ ಮಹಮ್ಮದ್‌ ಎಫ್ಫಿಂದಿರವರು ವಾಸ್ತುಶಿಲ್ಪ ವಿನ್ಯಾಸದಲ್ಲಿ ಪ್ರಮುಖ ಪಾತ್ರವನ್ನು ಆಗಾಗ್ಗೆ ನಿರ್ವಹಿಸಿದ್ದಾರೆ.ಮಾರ್ವಿನ್‌ ಟ್ರ್ಯಾಕ್ಟೆನ್‌ಬರ್ಗ್‌ ಮತ್ತು ಇಸಾಬೆಲ್ಲಾ ಹೈಮಾನ್‌. ಪೂರ್ವ ಇತಿಹಾಸ ಮತ್ತು ಆಧುನಿಕತೆಯ ನಂತರದ ವಾಸ್ತುಶಿಲ್ಪ. ಪು. 223. ಪರ್ಷಿಯಾದ ಬನಾರಸ್‌‌‌ನಿಂದ ಬಂದಿರುವ 'ಪುರು'ರವರು ವಾಸ್ತುಶಿಲ್ಪವನ್ನು ಪರಿಶೀಲಿಸಿದ್ದಾರೆಂದು ಉಲ್ಲೇಖಿಸಲಾಗಿದೆ. ಲಹೋರ್‌ ಮೂಲದ ಖಾಜಿಮ್‌ ಖಾನ್‌ರವರು ಬಲಿಷ್ಠ ಚಿನ್ನದ ಗೋಪುರವನ್ನು ವಿನ್ಯಾಸಗೊಳಿಸಿದರು. ದೆಹಲಿಯಿಂದ ಬಂದಿರುವ ಶಿಲ್ಪಿ ಚಿರಾಂಜಿಲಾಲ್‌ರವರು ಪ್ರಮುಖ ಶಿಲ್ಪಿ ಮತ್ತು ಮೊಸಾಯಿಕ್‌ ಚಿತ್ರಕಾರರಾಗಿದ್ದರು. ಇರಾನ್‌ನ ಸಿರಾಜ್‌ನಿಂದ ಬಂದಿರುವ ಅಮಾನತ್‌ ಖಾನ್‌ರವರು ಮುಖ್ಯ ಸುಂದರ ಬರಹಗಾರರಾಗಿದ್ದರು. ಮಹಮ್ಮದ್‌ ಹನಿಫ್‌ರವರು ಕಲ್ಲುಕಡಿಯುವವರ ಮೇಲ್ವಿಚಾರಕರಾಗಿದ್ದರು. ಸಿರಾಜ್‌ನ ಮಿರ್‌ ಅಬ್ದುಲ್‌ ಕರೀಮ್‌ ಮತ್ತು ಮುಕ್ಕರಿಮತ್‌ ಖಾನ್‌ರವರು ದೈನಂದಿನ ನಿರ್ಮಾಣಕ್ಕೆ ಬೇಕಾದ ಹಣಕಾಸು ಮತ್ತು ನಿರ್ವಹಣೆಯನ್ನು ನೋಡಿಕೊಳ್ಳುತ್ತಿದ್ದರು. ಇತಿಹಾಸ ತಾಜ್‌ ಮಹಲ್‌ನ ನಿರ್ಮಾಣವು ಪೂರ್ಣಗೊಂಡ ಕೆಲವೇ ದಿನಗಳ ನಂತರ, ಷಹ ಜಹಾನ್‌‌ ತನ್ನ ಮಗ ಔರಂಗಜೇಬ್‌ನಿಂದ ಪದಚ್ಯುತಿಗೆ ಒಳಗಾದನು ಮತ್ತು ಅವನನ್ನು ಆಗ್ರಾ ಬಂದರಿನ ಬಳಿ ಗೃಹ ಬಂಧನದಲ್ಲಿಡಲಾಯಿತು. ಷಹ ಜಹಾನ್‌‌ನ ಮರಣದ ನಂತರ, ಅವನ ಹೆಂಡತಿಯ ಸಮಾಧಿಯ ಪಕ್ಕದಲ್ಲಿ ಔರಂಗಜೇಬ್‌ ಷಹ ಜಹಾನ್‌‌ನನ್ನು ಮಣ್ಣು ಮಾಡಿದನು. 19ನೇ ಶತಮಾನ ಅಂತ್ಯದ ವೇಳೆಗೆ, ದುರಸ್ತಿ ಮಾಡದ ಕಾರಣ ಕಟ್ಟಡದ ಕೆಲವು ಭಾಗಗಳು ಕುಸಿದು ಬಿದ್ದವು. 1857ರ ಭಾರತದ ಸ್ವಾತಂತ್ರ್ಯ ದಂಗೆಯ ಸಮಯದಲ್ಲಿ, ಬ್ರಿಟಿಷ್‌ ಸೈನಿಕರು ಮತ್ತು ಸರಕಾರಿ ಅಧಿಕಾರಿಗಳು ತಾಜ್‌ ಮಹಲ್‌ನ ಗೋಡೆಗಳಿಂದ ಅಮೂಲ್ಯ ರತ್ನಗಳು ಮತ್ತು ಲ್ಯಾಪಿಸ್‌ ಲಜುಲಿಯನ್ನು ಮೋಸದಿಂದ ತೆಗೆದುಕೊಂಡು ಹೋದರು. ಇದರಿಂದ ತಾಜ್‌ ಮಹಲ್‌ನ ಅಂದ ಹಾಳಾಯಿತು. 19ನೇ ಶತಮಾನದ ಕೊನೆಯಲ್ಲಿ, ಬ್ರಿಟಿಷ್‌ ವೈಸ್‌ರಾಯ್‌ ಲಾರ್ಡ್‌ ಕರ್ಜನ್‌‌ ಭಾರಿ ಪ್ರಮಾಣದಲ್ಲಿ ಜೀರ್ಣೋದ್ಧಾರ ಕಾರ್ಯಕ್ಕೆ ಆದೇಶಿಸಿದನು. ಅದು 1908ರಲ್ಲಿ ಪೂರ್ಣಗೊಂಡಿತು.ಯಾಪ್‌, ಪೀಟರ್‌ (1983). ಪ್ರವಾಸಿಗರ ಉಲ್ಲೇಖಗಳ ನಿಘಂಟು. ಲಂಡನ್‌:ರೂಟ್‌ಲೆಡ್ಜ್‌ ಕೆಗನ್‌ ಮತ್ತು ಪೌಲ್‌. ಪು. 460. ಅವನು ಕೈರೊ ಮಸೀದಿಯಲ್ಲಿರುವ ದೊಡ್ಡ ದೀಪದ ಮಾದರಿಯ ದೀಪವನ್ನು ಒಳಾಂಗಣ ಕೋಣೆಯಲ್ಲಿರಿಸಲು ಆದೇಶಿಸಿದನು. ಈ ಸಮಯದಲ್ಲಿ ಉದ್ಯಾನವನ್ನು ಇಂದಿಗೂ ಇರುವ ಬ್ರಿಟಿಷ್‌-ಶೈಲಿಯ ಹುಲ್ಲುಹಾಸುಗಳೊಂದಿಗೆ ಹೊಸದಾಗಿ ರೂಪಿಸಲಾಯಿತು. 1942ರಲ್ಲಿ ಸರಕಾರವು ಜರ್ಮನ್‌ ಲುಫ್ಟಪಾಫ್ಪೆಯ ವಾಯು ದಾಳಿ ಮತ್ತು ನಂತರದ ದಿನಗಳಲ್ಲಿ ಜಪಾನಿನ ವಾಯು ಪಡೆಯ ದಾಳಿಯನ್ನು ನಿರೀಕ್ಷಿಸಿ ಹಂಗಾಮಿ ಕಟ್ಟಡವನ್ನು ಸ್ಥಾಪಿಸಿತು. 1965 ಮತ್ತು 1971ರ ಭಾರತ-ಪಾಕಿಸ್ತಾನ ಯುದ್ಧಗಳ ಸಮಯದಲ್ಲಿ, ಯುದ್ದ ವಿಮಾನಗಳ ಚಾಲಕರನ್ನು ದಾರಿ ತಪ್ಪಿಸಲು ಮತ್ತೆ ಹಂಗಾಮಿ ಕಟ್ಟಡಗಳನ್ನು ಕಟ್ಟಲಾಗಿತ್ತು.ಭಾರತದ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನಗಳು ವಿರೋಧಿಸಿದ ಮಥುರಾ ತೈಲ ಸಂಸ್ಕರಣೆ ಕೇಂದ್ರದಿಂದ ಉಂಟಾಗುತ್ತಿರುವ ಅಮ್ಲ ಮಳೆ ಸೇರಿದಂತೆ ಯಮುನಾ ನದಿಯಲ್ಲಿ ಉಂಟಾಗುತ್ತಿರುವ ಪರಿಸರ ಮಾಲಿನ್ಯವು ತಾಜ್‌ ಮಹಲ್‌ಗಿರುವ ತೀರಾ ಇತ್ತೀಚಿನ ಅಪಾಯಗಳು. ಮಾಲಿನ್ಯವು ತಾಜ್‌ ಮಹಲ್‌ನ ಬಣ್ಣವನ್ನು ಹಳದಿಯಾಗಿಸಿದೆ. ಮಾಲಿನ್ಯವನ್ನು ನಿಯಂತ್ರಿಸಲು, ಸ್ಮಾರಕದ ಸುತ್ತಮುತ್ತ ಕಟ್ಟುನಿಟ್ಟಾದ ಮಾಲಿನ್ಯ ನಿಯಂತ್ರಣ ಮಾನಕವನ್ನು ಅಳವಡಿಸಿರುವ 10,400 ಘನ ಕಿಲೋಮೀಟರ್‌ (4,015 ಘನ ಮೈಲಿ) ಪ್ರದೇಶದಲ್ಲಿ ಭಾರತ ಸರಕಾರವು ತಾಜ್‌ ವಿಷಮ ಚತುರ್ಭುಜ ವಲಯವನ್ನು (TTZ) ಸ್ಥಾಪಿಸಿದೆ. 1983ರಲ್ಲಿ ತಾಜ್‌ ಮಹಲ್‌ನ್ನು UNESCO ವಿಶ್ವ ಪಾರಂಪರಿಕ ತಾಣ ಎಂದು ಗುರುತಿಸಿ ಮಾನ್ಯ ಮಾಡಿತು. ಪ್ರವಾಸೋದ್ಯಮ ವಾರ್ಷಿಕವಾಗಿ ತಾಜ್‌ ಮಹಲ್‌ಗೆ 2 ರಿಂದ 4 ದಶಲಕ್ಷ ಪ್ರವಾಸಿಗರು ಭೇಟಿ ನೀಡುತ್ತಾರೆ. ಇವರಲ್ಲಿ 200,000ಕ್ಕಿಂತ ಹೆಚ್ಚು ಜನರು ವಿದೇಶದಿಂದ ಬಂದವರಾಗಿರುತ್ತಾರೆ. ಹೆಚ್ಚಿನ ಪ್ರವಾಸಿಗರು ಚಳಿಗಾಲವಾದ ಅಕ್ಟೋಬರ್‌, ನವೆಂಬರ್ ಮತ್ತು ಫೆಬ್ರುವರಿ ತಿಂಗಳುಗಳಲ್ಲಿ ಭೇಟಿ ನೀಡುತ್ತಾರೆ. ಸಂಕೀರ್ಣದ ಸಮೀಪ ಮಾಲಿನ್ಯಕಾರಕ ವಾಹನಗಳನ್ನು ನಿಷೇಧಿಸಲಾಗಿದೆ. ಪ್ರವಾಸಿಗರು ವಾಹನ ನಿಲುಗಡೆ ಪ್ರದೇಶದಿಂದ ನಡೆದುಕೊಂಡು ಹೋಗಬೇಕು ಇಲ್ಲವೇ ವಿದ್ಯುತ್‌ ಬಸ್ಸನ್ನು ಹತ್ತಿ ಪ್ರಯಾಣಿಸಬೇಕು. ಖವಾಸ್‌ಪುರಾಸ್‌‌ನ್ನು (ಉತ್ತರ ಬೀದಿ) ಪ್ರಸ್ತುತವಾಗಿ ಹೊಸ ಪ್ರವಾಸಿ ಕೇಂದ್ರದಂತೆ ಬಳಸುವುದಕ್ಕಾಗಿ ನವೀಕರಿಸಲಾಗಿದೆ.ಕೊಚ್‌, ಪು. 254. ತಾಜ್‌ನ ದಕ್ಷಿಣ ಭಾಗದಲ್ಲಿರುವ ಚಿಕ್ಕ ಪಟ್ಟಣವನ್ನು ತಾಜ್‌ ಘಂಜಿ ಅಥವಾ ಮಮ್ತಾಜಾಬಾದ್‌ ಎಂದು ಕರೆಯುತ್ತಾರೆ. ಮೂಲತಃ ಇದನ್ನು ಪ್ರವಾಸಿಗರು ಮತ್ತು ಕೆಲಸಗಾರರ ಅವಶ್ಯಕತೆಗಳನ್ನು ಪೂರೈಸಲು ತಂಗುದಾಣ, ಬೀದಿ ಅಂಗಡಿಗಳು ಮತ್ತು ಮಾರುಕಟ್ಟೆಗಳನ್ನು ಇಲ್ಲಿ ನಿರ್ಮಿಸಲಾಗಿತ್ತು. ವಿಶ್ವದಾದ್ಯಂತ ಇರುವ ಶಿಫಾರಸು ಮಾಡಿದ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ತಾಜ್‌ ಮಹಲ್ ಸೇರಿದೆ. ಅಲ್ಲದೆ, ಇತ್ತೀಚೆಗೆ ನೆಡೆದ ಚುನಾವಣೆಯಲ್ಲಿ 100 ದಶಲಕ್ಷ ಮತಗಳೊಂದಿಗೆ ವಿಶ್ವದ ಹೊಸ ಏಳು ಅದ್ಭುತಗಳಲ್ಲಿ ಒಂದಾಗಿರುವುದು ಸೇರಿದಂತೆ ಆಧುನಿಕ ಜಗತ್ತಿನ ಏಳು ಅದ್ಭುತಗಳ ಪಟ್ಟಿಗಳಲ್ಲೂ ಕೂಡ ಸೇರಿದೆ‌. ತಾಜ್‌ ಮಹಲ್‌ನ ಆವರಣ ಪ್ರತಿ ಶುಕ್ರವಾರದ 12 ರಿಂದ 2 ಗಂಟೆಗಳವರೆಗೆ ಪ್ರಾರ್ಥನೆಗೆಂದು ತೆರೆಯುವ ಕಾರಣ ಶುಕ್ರವಾರವನ್ನು ಹೊರತುಪಡಿಸಿ ವಾರಾಂತ್ಯದ ದಿನಗಳಲ್ಲಿ ಬೆಳಿಗ್ಗೆ 6ರಿಂದ ಸಂಜೆ 7ಗಂಟೆಯವ ಪ್ರವಾಸಿಗರಿಗೆ ತೆರೆದಿರುತ್ತದೆ. ಸಂಕೀರ್ಣವು ಶುಕ್ರವಾರಗಳು ಮತ್ತು ರಂಜಾನ್‌ ತಿಂಗಳನ್ನು ಹೊರತುಪಡಿಸಿ, ಹುಣ್ಣಿಮೆ ಹಾಗೂ ಹುಣ್ಣೆಮೆಯ ಹಿಂದಿನ ಮತ್ತು ನಂತರ ಎರಡು ದಿನ ತಾಜ್‌ ಮಹಲ್‌ನ ರಾತ್ರಿ ವೀಕ್ಷಣೆಗೆಂದೇ ಪ್ರವಾಸಿಗರಿಗೆ ಪ್ರವೇಶ ತೆರೆದಿರಲಾಗಿರುತ್ತದೆ. ಭದ್ರತಾ ಕಾರಣಗಳಿಗಾಗಿ ಪಾರದರ್ಶಕ ಬಾಟಲುಗಳಲ್ಲಿ ನೀರು, ಚಿಕ್ಕ ವೀಡಿಯೊ ಕ್ಯಾಮರಾಗಳು, ಸ್ಟಿಲ್‌ ಕ್ಯಾಮರಾಗಳು, ಸಂಚಾರಿ ದೂರವಾಣಿಗಳು ಮತ್ತು ಮಹಿಳೆಯರ ಚಿಕ್ಕ ಪರ್ಸುಗಳಂತಹ ಐದು ವಸ್ತುಗಳನ್ನು ಮಾತ್ರ ತಾಜ್‌ ಮಹಲ್‌ನೊಳಗೆ ಅನುಮತಿಸಲಾಗಿದೆ. ನಂಬಿಕೆಗಳು ತಾಜ್ ಮಹಲ್ ನಿರ್ಮಾಣವಾದಾಗಿನಿಂದಲೂ ಬೆರಗುಗೊಳಿಸುವಂತಿದ್ದು, ಸಾಂಸ್ಕೃತಿಕವಾಗಿ ಮತ್ತು ಭೌಗೋಳಿಕವಾಗಿ ಅತೀತವಾಗಿದೆ, ಅಷ್ಟೆ ಅಲ್ಲದೆ ಸ್ಮಾರಕ ಕುರಿತ ತಾರ್ಕಿಕ ನಿಷ್ಕರ್ಷೆಗಳ ಮೇಲೆ ವೈಯಕ್ತಿಕ ಮತ್ತು ಭಾವನಾತ್ಮಕ ಪ್ರತಿಕ್ರಿಯೆಗಳು ನಿರಂತರವಾಗಿ ಮೇಲುಗೈ ಸಾಧಿಸಿವೆ. ಯಮುನಾ ನದಿಯುದ್ದಕ್ಕೂ ಕಪ್ಪು ಅಮೃತಶಿಲೆಯಲ್ಲಿ ಭವ್ಯ ಸಮಾಧಿಯನ್ನು ನಿರ್ಮಿಸಲು ಷಹ ಜಹಾನ್‌‌ ಯೋಜನೆ ರೂಪಿಸಿದ್ದನು ಎಂಬುದನ್ನು ಐತಿಹಾಸಿಕ ಕಾಲದಿಂದಲೇ ಚಾಲ್ತಿಯಲ್ಲಿರುವ ನಂಬಿಕೆಗಳು ಹೇಳುತ್ತವೆ. 1665ರಲ್ಲಿ ಆಗ್ರಾಕ್ಕೆ ಭೇಟಿ ನೀಡಿದ ಯೂರೋಪಿಯನ್ ಪ್ರವಾಸಿಗ ಜೀನ್‌-ಬಾಪ್ಟಿಸ್ಟ್‌ ಟ್ಯಾವೆರ್ನಿಯರ್‌ನ ಕಾಲ್ಪನಿಕ ಬರಹಗಳಲ್ಲಿ ಈ ಕುರಿತು ಪ್ರಸ್ತಾಪ ಮಾಡಲಾಗಿದೆ.ಸಮಾಧಿಯ ನಿರ್ಮಾಣ ಸಾಧ್ಯವಾಗುವುದಕ್ಕಿಂತ ಮೊದಲೇ ಷಹ ಜಹಾನ್ ತನ್ನ ಮಗ ಔರಂಗಜೇಬ್‌ನಿಂದ ಪದಚ್ಯುತಿಗೊಂಡ ಎಂದು ಹೇಳಲಾಗಿದೆ. ಮಹ್ತಾಬ್‌ ಬಾಘ್‌ ನಬೆಳದಿಂಗಳ ಉದ್ಯಾನ ದಲ್ಲಿ ನದಿಯುದ್ದಕ್ಕೂ ಇರುವ ಕಪ್ಪು ಅಮೃತಶಿಲೆಯ ಅವಶೇಷಗಳು ಈ ದಂತಕತೆಯನ್ನು ಪುಷ್ಟೀಕರಿಸುವಂತಿವೆ.ಆದಾಗ್ಯೂ, 1990ರಲ್ಲಿ ಕೈಗೊಂಡ ಉತ್ಖನನಗಳು ಬಿಳಿ ಕಲ್ಲುಗಳು ಬಣ್ಣ ಕಳೆದುಕೊಂಡು ಕಪ್ಪು ಬಣ್ಣಕ್ಕೆ ತಿರುಗಿರುವುದನ್ನು ಕಂಡು ಹಿಡಿದಿವೆ. 2006ರಲ್ಲಿ ಪ್ರಾಕ್ತನ ವಿಮರ್ಶಕರು ಬೆಳದಿಂಗಳದ ಉದ್ಯಾನದಲ್ಲಿರುವ ಕೊಳದ ಒಂದು ಭಾಗವನ್ನು ಪುನರ್‌ನಿರ್ಮಿಸಿ ಕಪ್ಪು ಭವ್ಯ ಸಮಾಧಿಯ ಮೂಲದ ಬಗ್ಗೆ ಹೆಚ್ಚು ನಂಬಲಾರ್ಹ ವಾದವನ್ನು ಮಂಡಿಸಿದರು. ಷಹ ಜಹಾನ್‌‌ನ ಯೋಚನಾ ಲಹರಿಗಳಿಗೆ ಅನುರೂಪವಾಗಿಸಿ ಮತ್ತು ಕೊಳವನ್ನು ಸ್ಥಳಕ್ಕೆ ತಕ್ಕಂತೆ ಹೊಂದಿಸಿಕೊಂಡು ಬಿಳಿ ಭವ್ಯ ಸಮಾಧಿಯ ಕಪ್ಪು ಪ್ರತಿಫಲನವನ್ನು ಸ್ಪಷ್ಟವಾಗಿ ನೋಡಬಹುದು. ಸಮಾಧಿಯ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ವಾಸ್ತುಶಿಲ್ಪಿಗಳು ಮತ್ತು ಕುಶಲಕಾರ್ಮಿಕರನ್ನು ಷಹ ಜಹಾನ್ ಅಂಗವಿಚ್ಛೇದನಗೊಳಿಸಿದ್ದು, ಊನಗೊಳಿಸಿ ಪೀಡಿಸಿದ್ದು ಮತ್ತು ಇದರಿಂದಾಗಿ ಮರಣಗಳು ಸಂಭವಿಸಿದ ಬಗ್ಗೆ ಭಯಾನಕ ವಿವರಗಳಿವೆ. ಆದರೆ ಈ ವಿವರಗಳನ್ನು ಖಚಿತಪಡಿಸುವ ಯಾವುದೇ ಸಾಕ್ಷಿಗಳು ಇಲ್ಲ. ಇದೇ ತೆರನಾದ ವಿನ್ಯಾಸದ ಇನ್ನಾವುದೇ ನಿರ್ಮಾಣದಲ್ಲಿ ಭಾಗಿಯಾಗುವುದಿಲ್ಲ ಎಂಬ ಒಪ್ಪಂದಕ್ಕೆ ಸಮಾಧಿ ನಿರ್ಮಾಣದಲ್ಲಿ ತೊಡಗಿದ್ದ ಕಾರ್ಮಿಕರಿಂದ ಸಹಿ ಹಾಕಿಸಿಕೊಳ್ಳಲಾಗಿತ್ತು ಎಂದೂ ಕೆಲವು ಕಥೆಗಳು ಹೇಳುತ್ತವೆ. ಇತರೆ ಹಲವು ಜನಪ್ರಿಯ ಕಟ್ಟಡಗಳ ಬಗ್ಗೆಯೂ ಇದೇ ತೆರನಾದ ಹೇಳಿಕೆಗಳಿವೆ. 1830ರಲ್ಲಿ ಭಾರತದ ಗವರ್ನರ್‌ ಜನರಲ್‌ ಆಗಿದ್ದ ಲಾರ್ಡ್‌ ವಿಲಿಯಂ ಬೆಂಟಿಂಕ್‌ರವರು ತಾಜ್‌ ಮಹಲ್‌ ಕೆಡವಿ, ಅದರಲ್ಲಿರುವ ಅಮೃತಶಿಲೆಯನ್ನು ಹರಾಜು ಹಾಕಲು ಯೋಜಿಸಿದ್ದರು ಎನ್ನುವುದರ ಬಗ್ಗೆ ಯಾವುದೇ ಸಾಕ್ಷ್ಯಗಳಿಲ್ಲ. ಆದರೆ, ಆಗ್ರಾ ಕೋಟೆಯ ನಿರ್ಮಾಣದ ವೇಳೆ ತ್ಯಜಿಸಲಾದ ಅಮೃತಶಿಲೆಯ ಮಾರಾಟದಿಂದ ನಿಧಿ-ಸಂಗ್ರಹಿಸಲು ಬೆಂಟೆಂಕ್‌ ಉದ್ದೇಶಿಸಿದ್ದೇ ಮೇಲಿನ ಕಥೆಯ ಹುಟ್ಟಿಗೆ ಮೂಲ ಕಾರಣ ಎಂದು ಬೆಂಟಿಂಕ್‌ರ ಜೀವನ ಚರಿತ್ರೆಕಾರ ಜಾನ್‌ ರೊಸ್ಸೆಲ್ಲಿ ಹೇಳಿದ್ದಾರೆ. ತಾಜ್‌ ಮಹಲ್‌ನ್ನು ಕಟ್ಟಿಸಿದ್ದು ಹಿಂದೂ ರಾಜ ಎಂದು ತಿಳಿಸಿ ಪಿ.ಎನ್‌. ಓಕ್‌ರವರು ಸಲ್ಲಿಸಿದ್ದ ಅರ್ಜಿಯನ್ನು ಭಾರತದ ಸರ್ವೋಚ್ಛ ನ್ಯಾಯಾಲಯ 2000ರಲ್ಲಿ ತಿರಸ್ಕರಿಸಿತು.ಓಕ್‌ರ ಅರ್ಜಿಯನ್ನು ಸರ್ವೋಚ್ಛ ನ್ಯಾಯಾಲಯ ತಿರಸ್ಕರಿಸಿತು . ಭಾರತಕ್ಕೆ ಮುಸ್ಲಿಮರು ಆಕ್ರಮಣ ನಡೆಸುವುದಕ್ಕೂ ಮುಂಚೆಯಿದ್ದ, ಈಗ ಮುಸಲ್ಮಾನ ಸುಲ್ತಾನರಿಗೆ ಸೇರಿದ್ದು ಎನ್ನಲಾಗುವ ದೇಶದ ಇತರ ಐತಿಹಾಸಿಕ ಕಟ್ಟಡಗಳ ಜೊತೆಗೆ ತಾಜ್‌ ಗುರುತಿಸಿಕೊಂಡಿರುವ ಕಾರಣ, ಅದು ಹಿಂದೂ ಶಿವ ದೇವಾಲಯ ಮೂಲವನ್ನು ಹೊಂದಿದೆ ಎಂಬುದು ಓಕ್‌ರವರ ವಾದ. ರವೀಂದ್ರನಾಥ್‌ ಟಾಗೋರ್‌ರವರು ಈ ಸಮಾಧಿಯನ್ನು "ವನ್‌ ಟಿಯರ್‌‌-ಡ್ರಾಪ್‌...ಅಪಾನ್‌ ದಿ ಚಿಕ್‌ ಆಫ್‌ ಟೈಮ್‌"'' ಎಂದು ವರ್ಣಿಸಿದ್ದಾರೆ. ಇದರಿಂದ ಸ್ಫೂರ್ತಿ ಪಡೆದು ವರ್ಷಕ್ಕೊಮ್ಮೆ ಮಳೆಗಾಲದಲ್ಲಿ ಸ್ಮಾರಕ ಸಮಾಧಿಯ ಮೇಲೆ ನೀರಿನ ಹನಿ ಬಿದ್ದಂತೆ ಎಂದು ಹೆಚ್ಚು ಕಾವ್ಯಾತ್ಮಕವಾಗಿ ಬಣ್ಣಿಸಲಾಗಿದೆ. ಶಿಖರಾಗ್ರದಲ್ಲಿರುವ ಛಾಯಾರೇಖಾಕೃತಿಯನ್ನು ಹೊಡೆದಲ್ಲಿ, ಅದು ನೀರನ್ನು ಹೊರಸೂಸುತ್ತದೆ ಎಂಬ ನಂಬಿಕೆಯೂ ಇದೆ. ಆದರೆ ಈವೆರೆಗೂ, ಛಾಯಾರೇಖಾಕೃತಿಯು ಬಳೆಗಳ ತುಂಡುಗಳಿಂದ ಸುತ್ತುವರಿದಿರುವುದನ್ನು ಮಾತ್ರ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಪ್ರತಿಕೃತಿಗಳು ಬಾಂಗ್ಲಾದೇಶದ ತಾಜ್‌ ಮಹಲ್‌ , ಮಹಾರಾಷ್ಟ್ರದ ಔರಂಗಬಾದ್‌ನಲ್ಲಿರುವ ಬೀಬಿ ಕಾ ಮಕ್ಬಾರ, ಮತ್ತು ವಿಸ್ಕೊನ್ಸಿನ್‌ನ ಮಿಲ್ವೌಕಿನಲ್ಲಿರುವ ತ್ರಿಪೊಲಿ ಶ್ರಿನ್‌ ದೇವಾಲಯ ತಾಜ್‌ ಮಹಲ್‌ ಮಾದರಿಯ ಕಟ್ಟಡಗಳಾಗಿವೆ. ಇದನ್ನು ನೋಡಿರಿ ಪರ್ಷಿಯನ್‌ ವಾಸ್ತುಶಿಲ್ಪ ಹುಮಾಯೂನ್‌ರ ಸಮಾಧಿ ಆಗ್ರಾ ಕೋಟೆ ಫತೆಪುರ್‌ ಸಿಕ್ರಿ ಇತ್ಮಾದ್‌-ಉದ್‌-ದುಲ್ಹಾ ಭಾರತದ ವಾಸ್ತುಶಿಲ್ಪ ಟಿಪ್ಪಣಿಗಳು ಆಕರಗಳು ಆಶರ್‌, ಕ್ಯಾಥರಿನ್‌ ಬಿ. ಆರ್ಕಿಟೆಕ್ಚರ್‌ ಆಫ್ ಮುಘಲ್‌‌ ಇಂಡಿಯಾ ನ್ಯೂ ಕ್ಯಾಂಬ್ರಿಡ್ಜ್‌ ಭಾರತದ ಇತಿಹಾಸ ಸಂ.4 (ಕ್ಯಾಂಬ್ರಿಡ್ಜ್‌ ವಿಶ್ವವಿದ್ಯಾಲಯ ಮುದ್ರಣಾಲಯ) 1992 ISBN 0-521-26728-5. ಬೆರ್ನಿಯರ್‌, ಫ್ರ್ಯಾಂಕೊಯಿ ಟ್ರಾವೆಲ್ಸ್‌ ಇನ್‌ ದ ಮೊಘಲ್‌ ಎಂಪಾಯರ್‌ A.D. 1657-1668 (ವೆಬ್‌ಮಿನಿಸ್ಟರ್‌: ಆರ್ಕಿಬಾಲ್ಡ್‌ ಕಾನ್‌ಸ್ಟೇಬಲ್‌ & ಕಂ.) 1891. ಕ್ಯಾರ್ರೆಲ್‌, ಡೇವಿಡ್‌ (1971). ದಿ ತಾಜ್‌ ಮಹಲ್‌ , ನ್ಯೂಸೀಕ್‌ ಬುಕ್ಸ್‌ ISBN 0-88225-024-8. ಛಘ್ತೈ, ಮಹಮದ್‌ ಅಬ್ದುಲ್ಲಾ ಲೆ ತಾಜ್‌ ಮಹಲ್‌ ಆಗ್ರಾ (ಇಂಡೆ). ಹಿಸ್ಟರಿ ಎಟ್‌ ಡೀಸ್ಕ್ರಿಪ್‌ಶನ್ (ಬ್ರುಸ್ಸೆಲ್ಸ್‌: ಎಡಿಶನ್ಸ್‌ ಡೆ ಲಾ ಕನ್ನೈಶನ್ಸ್‌) 1938. ಕೊಪಲ್ಸ್‌ಸ್ಟೋನ್‌, ಟ್ರೆವಿನ್‌. (ed). (1963). ವರ್ಡ್‌ ಆರ್ಕಿಟೆಕ್ಚರ್‌ ‌— ಆನ್‌ ಇಲ್ಯುಸ್ಟ್ರೇಟೆಡ್‌ ಹಿಸ್ಟರಿ. ಹಮ್ಲಿನ್‌, ಲಂಡನ್‌. ಗ್ಯಾಸ್ಕೊಯಿಜ್ನ್‌, ಬಾಂಬರ್‌ (1971). ದಿ ಗ್ರೇಟ್‌ ಮೊಘಲ್ಸ್‌ , ಹಾರ್ಪರ್‌ ಮತ್ತು ರೊವ್‌. ಹಾವೆಲ್‌, ಇ.ಬಿ. (1913). ಇಂಡಿಯನ್‌ ಆರ್ಕಿಟೆಕ್ಚರ್‌: ಇಟ್ಸ್‌ ಸೈಕೊಲಜಿ, ಸ್ಟ್ರಕ್ಚರ್‌ ಆಂಡ್‌ ಹಿಸ್ಟರಿ , ಜಾನ್‌ ಮುರ್ರೆ. ಕಾಂಬೊ, ಮಹಮದ್‌ ಸಾಲಿಹ್‌ ಅಮಲ್‌-ಈ-ಸಾಲಿಹ್‌ ಆರ್‌ ಷಹ ಜಹಾನ್‌‌ ನಾಮಹ್ Ed. ಗುಲಾಮ್‌ ಯಾಜ್ದಾನಿ (ಕಲ್ಕತ್ತಾ: ಬ್ಯಾಪ್ಟಿಸ್ಟ್‌ ಮಿಷನ್‌ ಮುದ್ರಣಾಲಯ) ಸಂ.I 1923. Vol. II 1927. ಲಾಹವ್ರಿ, 'ಅಬ್ದ್‌ ಅಲ್‌-ಹಮಿದ್‌ ಬಾದಷಹ ನಾಮಹ್ Ed. ಮೇಜರ್‌ ಡಬ್ಲ್ಯೂ.ಎನ್‌. ಲೀಸ್‌ರ ಮೇಲ್ವಿಚಾರಣೆಯಲ್ಲಿ ಮೌಲಾವಿಸ್‌ ಕಬೀರ್‌ ಅಲ್‌-ದಿನ್‌ ಅಹಮದ್‌ ಮತ್ತು 'ಅಬ್ದ್‌ ಅಲ್‌-ರಹೀಮ್‌. (ಕಲ್ಕತ್ತಾ: ಕಾಲೇಜ್‌ ಮುದ್ರಣಾಲಯ) ಸಂ. I 1867 ಸಂ. II 1868. ಲಾಲ್‌, ಜಾನ್‌ (1992). ತಾಜ್‌ ಮಹಲ್‌ , ಟೈಗರ್‌ ಅಂತರಾಷ್ಟ್ರೀಯ ಮುದ್ರಣಾಲಯ. ರೋತ್‌ಫಾರ್ಡ್‌, Ed (1998). ಇನ್‌ ದಿ ಲ್ಯಾಂಡ್ ಆಫ್‌ ತಾಜ್‌ ಮಹಲ್‌ , ಹೆನ್ರಿ ಹಾಲ್ಟ್‌ ISBN 0-8050-5299-2. ಸಕ್ಸೆನಾ, ಬನರ್ಸಿ ಪ್ರಸಾದ್‌ ಹಿಸ್ಟರಿ ಆಫ್‌ ಷಹಜಹಾನ್‌ ಆಫ್‌ ದೆಹಲಿ (ಅಲಹಾಬಾದ್‌: ದಿ ಇಂಡಿಯನ್‌ ಪ್ರೆಸ್‌ ಲಿ.) 1932. ಸ್ಟಾಲ್‌, ಬಿ (1995). ಆಗ್ರಾ ಆಂಡ್‌ ಫತೆಪುರ್‌ ಸಿಕ್ರಿ , ಮಿಲೆನಿಯಮ್‌. ಸ್ಟೀರ್ಲಿನ್‌, ಹೆನ್ರಿ [ಸಂಪಾದಕ] ಮತ್ತು ವೊಲ್ವಾಸೆನ್‌, ಆಂಡ್ರೀಸ್ (1990). ಆರ್ಕಿಟೆಕ್ಚರ್‌ ಆಫ್‌ ವರ್ಡ್‌: ಇಸ್ಲಾಮಿಕ್‌ ಇಂಡಿಯಾ, ತಾಚೆನ್‌ . ಟಿಲಿಟ್ಸನ್‌, ಜಿ.ಎಚ್‌.ಆರ್‌. (1990). ಆರ್ಕಿಟೆಕ್ಚರಲ್‌ ಗೈಡ್‌ ಟೂ ಮೊಘಲ್‌‌ ಇಂಡಿಯಾ , ಕ್ರೋನಿಕಲ್‌ ಬುಕ್ಸ್‌‌. ತಾಜ್ ಮಹಲ್ ಅಥವಾ ತೇಜೋ ಮಹಲ್ (www.ontipremi.blogspot.com) ಹೊರಗಿನ ಕೊಂಡಿಗಳು ಭಾರತದ ಪುರಾತತ್ವ ಸಂಸ್ಥೆ ವರದಿ ಭಾರತ ಸರಕಾರ - ವಿವರ ತಾಜ್‌ ಮಹಲ್‌ನ ಫೋಟೋಸಿಂಥ್‌ ವೀಕ್ಷಣೆ (ಫೋಟೋಸಿಂಥ್‌ನ ಅಗತ್ಯವಿದೆ) ಭಾರತದ ಸ್ಮಾರಕಗಳು ಮತ್ತು ಸ್ಮರಣಿಕೆಗಳು ಮೊಘಲ್‌‌ ವಾಸ್ತುಶಿಲ್ಪ ಮುಸ್ಲಿಂ ವಾಸ್ತುಶಿಲ್ಪ ಭಾರತೀಯ ವಾಸ್ತುಶಿಲ್ಪ ಆಗ್ರಾ ಗುಮ್ಮಟಗಳು ತಾಜ್‌ ಮಹಲ್‌ ಉತ್ತರ ಪ್ರದೇಶದಲ್ಲಿ ಪ್ರವಾಸೋದ್ಯಮ ಆಗ್ರಾದಲ್ಲಿ ಪ್ರವಾಸೋದ್ಯಮ ಆಗ್ರಾದಲ್ಲಿರುವ ಕಟ್ಟಡಗಳು ಮತ್ತು ನಿರ್ಮಾಣಗಳು ಪ್ರವಾಸಿ ತಾಣಗಳು ವಾಸ್ತುಶಿಲ್ಪ ಉತ್ತರ ಪ್ರದೇಶ
1310
https://kn.wikipedia.org/wiki/%E0%B2%AF%E0%B3%87%E0%B2%B8%E0%B3%81%20%E0%B2%95%E0%B3%8D%E0%B2%B0%E0%B2%BF%E0%B2%B8%E0%B3%8D%E0%B2%A4
ಯೇಸು ಕ್ರಿಸ್ತ
ಯೇಸುಕ್ರಿಸ್ತನ ಬೋಧನೆಗಳು ಯೇಸು ಪದದ ನಿಷ್ಪತ್ತಿ 'ಯೇಸು' ಅಥವಾ 'ಜೀಸಸ್' ಪದವು ಗ್ರೀಕ್‌ನ ವ್ಯುತ್ಪನ್ನವಾದ ಪದವೆಂದು ತಜ್ಞರು ಹೇಳುತ್ತಾರೆ. 'ದೇವರೇ ಮೋಕ್ಷ' ಎಂಬುದು ತಜ್ಞರ ಅಭಿಪ್ರಾಯ. 'ಕ್ರಿಸ್ತ'ನ ಅರ್ಥ 'ರಕ್ಷಕ'. ಈ ಅರ್ಥದಲ್ಲಿ ಯೇಸು ಕ್ರಿಸ್ತ (ಜೀಸಸ್ ಕ್ರೈಸ್ಟ್) ಎಂಬ ಹೆಸರು ಉಪಯೋಗವಾಗುತ್ತದೆ. ಇಸ್ಲಾಮ್ ಧರ್ಮವು ಯೇಸುವನ್ನು ದೇವಕುಮಾರನೆಂದು ಹೇಳುವುದಿಲ್ಲ. ಬದಲಾಗಿ ಕ್ರಿಸ್ತನನ್ನು ಒಬ್ಬ ಮುಖ್ಯ ಪ್ರವಾದಿ ಎಂದು ಹೇಳುತ್ತದೆ. ಜನನ, ಜೀವನ ಯೇಸು ಹುಟ್ಟಿದ್ದು ಬೆತ್ಲೆಹೆಮ್‌ನಲ್ಲಾದರೂ, ಅವರು ಬೆಳೆದದ್ದು ಮಾತ್ರ ಅವರ ತಂದೆ ಮತ್ತು ತಾಯಿ ವಾಸವಾಗಿದ್ದ 'ನಜರೆತ್‌' ಎಂಬ ಊರಿನಲ್ಲಿ. ಹಾಗಾಗಿ ಯೇಸುವನ್ನು 'ನಜರೆತ್‌ನ ಯೇಸು'ವೆಂದು ಕರೆಯುವುದೇ ವಾಡಿಕೆ. ಇಹಲೋಕದಲ್ಲಿ ಯೇಸುವಿನ ತಂದೆ ಸಂತ ಜೋಸೆಫ್ ಒಬ್ಬ ಬಡಗಿ. ತಾಯಿ ಸಂತ ಮೇರಿ. ವಾಸ್ತವವಾಗಿ ಮೇರಿಯು ಪವಿತ್ರಾತ್ಮ ವರದಿಂದ ಕರ್ತನಾದ ಯೇಸುಕ್ರಿಸ್ತನನ್ನು ಗರ್ಭಧರಿಸಿ ಪರಿಶುದ್ಧ ಜೀವನ ನಡೆಸುತ್ತಾಳೆ. ಯಾವುದೇ ದೇಹ ಸಂಪರ್ಕವಿಲ್ಲದೆ ದೇವರ ಅನುಗ್ರಹದಿಂದ,ಪವಿತ್ರವಾದ ಆತ್ಮದಿಂದ, ಮೇರಿಯು ಯೇಸುವಿಗೆ ಜನ್ಮ ನೀಡಿದ್ದಾಳೆ. ನವಮಾಸಗಳ ಗರ್ಭಿಣಿಯಾಗಿದ್ದಾಗ, ಕಡ್ಡಾಯವಾಗಿ ಜನಗಣತಿಗೆ ಹಾಜರಾಗಬೇಕಾಗಿ ಬಂತು. ಆಗ ಜೋಸೆಫ್ ತನ್ನ ಮಡದಿಯನ್ನು ಬೆತ್ಲೆಹೆಮ್‌ಗೆ ಕರೆದೊಯ್ಯುತ್ತಾನೆ. ಅಲ್ಲಿ ಉಳಿದುಕೊಳ್ಳಲು ಅವರಿಗೆ ಸಿಕ್ಕಿದ್ದು ಒಂದು ದನಗಳ ಕೊಟ್ಟಿಗೆ ಅಥವಾ ಕುರಿದೊಡ್ಡಿ. ಅಲ್ಲೇ ಪುಟ್ಟ ಯೇಸುವಿನ ಜನನವಾಗುತ್ತದೆ. ಯೇಸು ಭೂಮಿ ಮೇಲೆ ಜನ್ಮ ಪಡೆದಾಗ ಆಕಾಶದಲ್ಲಿ ಒಂದು ದೊಡ್ಡ ನಕ್ಷತ್ರ ಕಾಣಿಸಿಕೊಂಡಿತು. ಇವತ್ತಿಗೂ ಮುಂಜಾನೆ, ಸಾಯಂಕಾಲ ಆಕಾಶದಲ್ಲಿ ಚುಕ್ಕೆ ಕಾಣಿಸುತ್ತದೆ. ಧರ್ಮಗ್ರಂಥ ಯೇಸುವಿನ ಜೀವನ ವೃತ್ತಾಂತ ಕಂಡು ಬರುವುದು ಕ್ರೈಸ್ತರಿಗೆ ಧರ್ಮಗ್ರಂಥವಾದ ಬೈಬಲ್‌ನ ಹೊಸ ಒಡಂಬಡಿಕೆಯ ನಾಲ್ಕು ಪ್ರಮುಖ ಭಾಗಗಳಾದ ಮತ್ತಾಯ, ಮಾರ್ಕ್, ಲೂಕ್,ಮತ್ತು ಜಾನ್ ಬರೆದ ಸುವಾರ್ತೆಗಳಲ್ಲಿ. ಹಳೇ ಒಡಂಬಡಿಕೆ ಯಲ್ಲಿ ಯೇಸುಕ್ರಿಸ್ತನ ಬರುವಿಕೆಯ ಕುರಿತು ಅನೇಕ ಉಲ್ಲೇಖಗಳಿವೆ. ಇಸ್ರೇಲ್‌ನ ಬೆತ್ಲೆಹೆಮ್‌ನಲ್ಲಿ ಹುಟ್ಟಿ ಯೇಸು ಅನೇಕ ಸೂಚಕ ಕಾರ್ಯಗಳನ್ನು ಮಾಡಿ, ದೇವರ ಸಂದೇಶವನ್ನು ಜನರಿಗೆ ಬೋಧಿಸಿದನು. ಮೊದಲೇ ಮೋಶೆಯ ಧರ್ಮಗ್ರಂಥದಲ್ಲಿ ಉಲ್ಲೇಖಿಸಲ್ಪಟ್ಟಂತೆ ಲೋಕಪಾಪಗಳನ್ನು ಹೊತ್ತುಕೊಂಡು ಹೋಗುವ ದೇವರ ಕುರಿಮರಿ ಎಂಬ ವಾಕ್ಯದ ನೆರವೇರಿಕೆಗಾಗಿ ರೋಮನ್ ಅಧಿಕಾರಿಯ ಅಪ್ಪಣೆಯ ಮೇರೆಗೆ ಏಸುವನ್ನು ಶಿಲುಬೆಗೆ ಏರಿಸಲಾಗುತ್ತದೆ. ಯೇಸು ಶಿಲುಬೆಗೆ ಏರಿದ ದಿನವನ್ನು 'ಗುಡ್‍ಫ್ರೈಡೇ' ಎನ್ನುತ್ತಾರೆ. ಶಿಲುಬೆಗೆ ಏರುವ ಸಂದರ್ಭದಲ್ಲಿ ಏಸು ಸಾಮಾನ್ಯ ಮನುಷ್ಯರಂತೆ ಎಲ್ಲಾ ಕಷ್ಟಗಳಿಗೂ ತಮ್ಮ ದೇಹವನ್ನು ಒಡ್ಡುತ್ತಾರೆ. ಭಾರವಾದ ಶಿಲುಬೆಯನ್ನು ಹೊತ್ತು, ಮುಳ್ಳಿನ ಕಿರೀಟವನ್ನು ಧರಿಸಿ, ಅರಿಷಡ್ವರ್ಗಗಳನ್ನು ಗೆದ್ದು, ಶಿಲುಬೆಗೆ ಏರುವಾಗಲೂ 'ದೇವರೇ ಅವರಿಗೆ ತಾವೇನು ಮಾಡುತ್ತಿದ್ದೇವೆ ಎಂಬುದರ ಅರಿವಿಲ್ಲ. ಹಾಗಾಗಿ ಅವರನ್ನು ಕ್ಷಮಿಸು' ಎಂದು, ದೇವರಲ್ಲಿ ತಮ್ಮನ್ನು ಶಿಲುಬೆಗೆ ಏರಿಸಿದವರಿಗೂ ಕ್ಷಮಾದಾನ ನೀಡುತ್ತಾರೆ. ಹಾಗೂ ಶಿಲುಬೆಯ ಮೇಲೆ ಇದ್ದಾಗ ಕೊನೆಯಲ್ಲಿ ಏಳು ಶಬ್ದಗಳನ್ನು, ನುಡಿದು ತಮ್ಮ ಪ್ರಾಣವನ್ನು ದೇವರಿಗೆ ಅರ್ಪಿಸುತ್ತಾರೆ. ಆಮೇಲೆ ಮೂರು ದಿನಗಳ ನಂತರ ತನ್ನ ಸಮಾಧಿಯಿಂದ ಅವರು ಮೇಲೆದ್ದರು (ಪುನರುತ್ಥಾನ ಹೊಂದಿದರು) ಎಂಬುದನ್ನು ಬೈಬಲ್ ಹೇಳುತ್ತದೆ. ಆ ದಿನವನ್ನು 'ಈಸ್ಟರ್ ಡೇ' ಎಂದು ಕರೆಯುತ್ತಾರೆ. ಯೇಸು ಕ್ರಿಸ್ತನ ಉಪದೇಶಗಳು ಮತ್ತು ಜೀವನ ಬೈಬಲ್‍ನ ಹೊಸ ಒಡಂಬಡಿಕೆಯ (ನ್ಯೂ ಟೆಸ್ಟಮೆಂಟ್) ಮುಖ್ಯ ವಿಷಯವಾಗಿದ್ದು, ಕ್ರೈಸ್ತ ಧರ್ಮದ ಮೂಲಭೂತ ಉಪದೇಶಗಳಾಗಿವೆ. ಏಳನೆಯ ಶತಮಾನದಿಂದೀಚೆಗೆ ಯೇಸುಕ್ರಿಸ್ತನ ಆಳೆತ್ತರದ ಪ್ರತಿಮೆಗಳನ್ನು ಮಾಡಿ ಮೆರುಗಿನ ವಸ್ತ್ರಗಳಿಂದ ಅಲಂಕರಿಸಿ, ಶಿಲುಬೆಯ ಬದಿಯಲ್ಲಿ ನಿಲ್ಲಿಸುವ ಪರಿಪಾಠ ಮೊದಲಾಯಿತು. ಕ್ರಮೇಣ ಯೇಸುಕ್ರಿಸ್ತನ ಯಾತನೆ ಮತ್ತು ಸಾವನ್ನು ಪ್ರಚಾರಕ್ಕೆ ಬಳಸಿಕೊಳ್ಳುವ ಸಲುವಾಗಿ ಯೇಸುಕ್ರಿಸ್ತನ ದೇಹವನ್ನು ನೈಜತೆಗೆ ಅತ್ಯಂತ ಹತ್ತಿರವಾಗಿ ರೂಪಿಸುವ ಪದ್ಧತಿ ಬೆಳೆದುಬಂತು ಯೇಸು ಮರಣದ ಮೇಲೆ ವಿಜಯ ಸಾಧಿಸಿದ ನಂತರ.40 ದಿನಗಳ ವರೆಗೆ ದೇವರ ವಾಕ್ಯಗಳನ್ನು ಜನರಿಗೆ ಹೇಳಿ,"ನಾನು ಮತ್ತೇ ಬರುತ್ತೇನೆ" ಎಂದು ಜನರಿಗೆ ವಾಗ್ದಾನ ನೀಡಿದರು. ಜನರಿಗೆ ಬರುವ ಚಿಹ್ನೆಗಳನ್ನು ನೀಡಿದರು. ಅವು ಯಾವವು ಅಂದರೆ ದೇಶ ದೇಶಗಳ ಮೇಲೆ ಯುದ್ಧ, ರಾಜ್ಯ ರಾಜ್ಯಗಳ ನಡುವೆ ಉಗ್ರ ಹೊರಾಟ ಆಗುತ್ತವೆ, ಎಲ್ಲಾಕಡೆ ತಾಳಲಾರದ ಭಷ್ಟಾಚಾರ, ಅನ್ಯಾಯ, ನಡೆಯುತ್ತವೆ ಹಾಗೂ ಎಲ್ಲಾ ಜನರಿಗೆ ದೇವರ ವಾಕ್ಯವು ಗೊತ್ತಾಗಬೇಕು. ಆವಾಗ ಮತ್ತೆ ಪುನಃ ನಾನು ಬರುತ್ತೇನೆ ಎಂದು ಯೇಸು ಹೇಳಿದರು. ಯೇಸುವಿನ ಸಿದ್ಧಾಂತ ಯೇಸುಕ್ರಿಸ್ತ ಸೆಣಸಿದ್ದು ರೋಮನರ ವಿರುದ್ಧವಲ್ಲ ಬದಲಿಗೆ ತಮ್ಮದೇ ಜನರ ಮೌಢ್ಯ, ಶೋಷಣೆ, ಕಂದಾಚಾರಗಳ ವಿರುದ್ಧ ಹಾಗೂ ಮಾನವತೆಯಿಲ್ಲದ ವಿರುದ್ಧ. ಯೇಸುಕ್ರಿಸ್ತರು ಅಂದು ಪ್ರಚಲಿತವಾಗಿದ್ದ 'ಕಣ್ಣಿಗೆ ಕಣ್ಣು ಹಲ್ಲಿಗೆ ಹಲ್ಲು' ಎಂಬ ಮೃಗೀಯ ಅಥವಾ ಪ್ರತೀಕಾರದ ನಿಯಮಗಳ ಬದಲಿಗೆ 'ಬಲಗೆನ್ನೆಗೆ ಹೊಡೆದವಂಗೆ ಎಡಗೆನ್ನೆ ತೋರು' ಎಂಬ ಉದಾತ್ತತೆಯ ಮಾತುಗಳನ್ನಾಡಿರು. ಹಾದರದಲ್ಲಿ ಸಿಕ್ಕಿಬಿದ್ದ ಸ್ತ್ರೀಯನ್ನು ಕಲ್ಲುಗಳಿಂದ ಹೊಡೆದು ಕೊಲ್ಲಬೇಕೆಂಬ ನೀತಿಗೆ ಯೇಸುಕ್ರಿಸ್ತರು ಹೊಸ ವ್ಯಾಖ್ಯಾನ ಬರೆದ. ಸ್ತ್ರೀಯೇನೋ ಹಾದರ ಮಾಡುವಾಗ್ಗೆ ಸಿಕ್ಕಿಬಿದ್ದಳು. ಆದರೆ ಯೇಸು ಆ ಸ್ತ್ರೀಯನ್ನುನೋಡಿ ಜನರಿಗೆ ನಿಮ್ಮಲ್ಲಿ ಪಾಪವಿಲ್ಲದವನು ಯಾರೋ ಅವನೇ ಮೊದಲು ಆಕೆಯ ಮೇಲೆ ಕಲ್ಲು ಎಸೆಯಲಿ ಎಂದು ಹೇಳಿದಾಗ ಅವರಲ್ಲಿ ಎಲ್ಲರೂ ಅವಳನ್ನು ಬಿಟ್ಟು ಹೊರಟುಹೋದರು. ಅದರರ್ಥ ಹಾದರದಲ್ಲಿ ಪುರುಷನ ಪಾತ್ರವೂ ಇರಬೇಕಲ್ಲವೇ? ಅವನೂ ಸಮಾನ ತಪ್ಪಿತಸ್ಥನಲ್ಲವೇ? ತಪ್ಪು ಮಾಡುವುದು ಮಾನವ ಸಹಜ ಗುಣ. ತಪ್ಪನ್ನು ತೋರಿ ತಿದ್ದಿ ಕ್ಷಮಿಸಿ ಹೊಸತನ ನೀಡುವುದು ದೈವೀಗುಣ. ನಿನ್ನನ್ನು ವಿರೋಧಿಸುವವನಿಗೂ ಸ್ನೇಹಭಾವ ತೋರು. ಕ್ಷಮೆ ಇರುವಲ್ಲಿ ಪ್ರೀತಿ ವಿಶ್ವಾಸ ಮೊಳೆಯುತ್ತದೆ. ಎಲ್ಲ ಮಾನವರೂ ಒಂದೇ ಎಂಬ ಉದಾತ್ತ ಭಾವ ಉಂಟಾದಾಗ ಜಗತ್ತು ಸುಂದರವಾಗುತ್ತದೆ. ಆಗ ಪ್ರತಿ ಮಾನವನೂ ದೈವಸ್ವರೂಪಿಯಾಗುತ್ತಾನೆ ಎಂಬುದೇ ಯೇಸುಕ್ರಿಸ್ತನ ಬೋಧನೆಯ ಸಾರ. ಈ ಮಾನವಪ್ರೇಮದ ಸಂದೇಶವನ್ನು ಅವನ ಶಿಷ್ಯರೂ ಅನುಯಾಯಿಗಳೂ ಎಲ್ಲೆಡೆ ಪಸರಿಸುತ್ತಾ ಬಂದರು. ಯೇಸುಕ್ರಿಸ್ತನ ಶಿಷ್ಯರ ಒಗ್ಗಟ್ಟಿನ ಕೆಲಸ, ಸುವ್ಯವಸ್ಥಿತ ರೂಪುರೇಷೆ, ಕ್ರಿಸ್ತತತ್ವಗಳ ಕುರಿತ ಬದ್ದತೆ ಮುಂತಾದವುಗಳ ಕಾರಣದಿಂದ ಕ್ರೈಸ್ತಧರ್ಮ ಎಲ್ಲೆಡೆ ಪಸರಿಸಿತು. ನಿನ್ನ ನೆರೆಹೊರೆಯವರನ್ನು ಪ್ರೀತಿಸು. ದೇವರನ್ನು ಪೂರ್ಣ ಮನಸ್ಸಿನಿಂದ, ಆತ್ಮನಿಂದ, ಹಾಗೂ ಸತ್ಯದಿಂದ ಆರಾಧಿಸು. ಜಾರ್ಜ್ ಮತ್ತು ಗಾಡ್ ಸನ್ ಮೂನ್ ಅವನನ್ನು ಉಳಿಸಿದ ಜೀಸಸ್ ಅವನನ್ನು ಜಾರ್ಜ್ ಪುನರುತ್ಥಾನ ಮತ್ತು ಧನ್ಯವಾದಗಳು ಗಿಯಾರ್ಗಿಯೊ ನಾವು ಧನ್ಯವಾದಗಳು ಭೂಮಿಯ ಮೇಲೆ ನಮ್ಮ ದಿನಗಳ ಉಳಿದ ಕಾಲ. Notes Explanatory Citations BIBLE ಕ್ರೈಸ್ತ ಧರ್ಮ
1317
https://kn.wikipedia.org/wiki/%E0%B2%B5%E0%B2%BF%E0%B2%A6%E0%B3%8D%E0%B2%AF%E0%B3%81%E0%B2%9A%E0%B3%8D%E0%B2%9B%E0%B2%BE%E0%B2%B8%E0%B3%8D%E0%B2%A4%E0%B3%8D%E0%B2%B0
ವಿದ್ಯುಚ್ಛಾಸ್ತ್ರ
ವಿದ್ಯುಚ್ಛಾಸ್ತ್ರ ವಿದ್ಯುತ್ ಬಗ್ಗೆ ಅಧ್ಯಯನ ನಡೆಸಲಾಗುವ ಯಂತ್ರಶಾಸ್ತ್ರದ ಒಂದು ಪ್ರಕಾರ. ಕೆಲವು ಬಾರಿ ಋಣವಿದ್ಯುತ್ಕಣ ಪ್ರವಹಗಳನ್ನು ಅಭ್ಯಸಿಸುವ ವಿದ್ಯುನ್ಮಾನ ಶಾಸ್ತ್ರವನ್ನೂ ಕೂಡ ಇದೇ ಪ್ರಕಾರದಲ್ಲಿ ಸೇರಿಸಲಾಗುತ್ತದೆ. ಭೌತಶಾಸ್ತ್ರ ತಂತ್ರಜ್ಞಾನ ಯಂತ್ರವಿಜ್ಞಾನ
1319
https://kn.wikipedia.org/wiki/%E0%B2%8E%E0%B2%82.%E0%B2%8E%E0%B2%B8%E0%B3%8D.%E0%B2%B8%E0%B3%81%E0%B2%AC%E0%B3%8D%E0%B2%AC%E0%B3%81%E0%B2%B2%E0%B2%95%E0%B3%8D%E0%B2%B7%E0%B3%8D%E0%B2%AE%E0%B2%BF
ಎಂ.ಎಸ್.ಸುಬ್ಬುಲಕ್ಷ್ಮಿ
ಮಧುರೈ ಷಣ್ಮುಖವಡಿವು ಸುಬ್ಬುಲಕ್ಷ್ಮಿ (ಜನಪ್ರಿಯವಾಗಿ ಎಂ.ಎಸ್., ಅಥವಾ ಎಂ.ಎಸ್.ಎಸ್., ಎಮ್ಮೆಸ್ಸಮ್ಮ), (ಸೆಪ್ಟೆಂಬರ್ ೧೬, ೧೯೧೬ - ಡಿಸೆಂಬರ್ ೧೧, ೨೦೦೪) ಕರ್ನಾಟಕ ಸಂಗೀತ ಪದ್ಧತಿಯ ಪ್ರಸಿದ್ಧ ಗಾಯಕಿಯರಲ್ಲಿ ಒಬ್ಬರು. ಜೀವನ ೧೯೧೬ ರಲ್ಲಿ ಮಧುರೈ ಪಟ್ಟಣದಲ್ಲಿ ಹುಟ್ಟಿದರು. ವಿವಾಹ ೧೯೩೬ ರಲ್ಲಿ 'ಸದಾಶಿವಂ ಅಯ್ಯರ್' ಎಂಬ ಸ್ವಾತಂತ್ರ್ಯ ಹೋರಾಟಗಾರರನ್ನು ಭೇಟಿಯಾದರು. ೧೯೪೦ ರಲ್ಲಿ ಇಬ್ಬರೂ ವಿವಾಹವಾದರು. ನಿಧನ ಡಿಸೆಂಬರ್ ೨, ೨೦೦೪ ರಂದು ಅಸ್ವಸ್ಥರಾದ ಎಂ.ಎಸ್. ಡಿಸೆಂಬರ್ ೧೧ ರಂದು ದಿವಂಗತರಾದರು. ಸಂಗೀತಗಾರ್ತಿಯಾಗಿ ಎಂ ಎಸ್ ೧೦ ವರ್ಷದವರಾಗಿದ್ದಾಗಲೆ ಅವರ ಮೊದಲ ಧ್ವನಿ-ಮುದ್ರಣ ಹೊರಬಂದಿತು. ನಂತರ ಸೆಮ್ಮಂಗುಡಿ ಶ್ರೀನಿವಾಸ ಐಯರ್ ಅವರಿಂದ ಕರ್ನಾಟಕ ಸಂಗೀತ ಹಾಗೂ ಪಂಡಿತ್ ನಾರಾಯಣ್ ರಾವ್ ವ್ಯಾಸ್ ಅವರಿಂದ ಹಿಂದುಸ್ಥಾನಿ ಸಂಗೀತ ಕಲಿತುಕೊಂಡರು. ೧೭ನೇ ವಯಸ್ಸಿನಲ್ಲಿ ಮದರಾಸು ಸಂಗೀತ ಅಕಾಡೆಮಿಯಲ್ಲಿ ಪ್ರಥಮ ಸಂಗೀತ ಕಛೇರಿಯನ್ನು ನೀಡಿದ ಎಂ ಎಸ್, ಇಲ್ಲಿಯವರೆಗೆ ಅನೇಕ ಭಾಷೆಗಳಲ್ಲಿ ಎಣಿಕೆಗೆ ಸಿಕ್ಕದಷ್ಟು ಹಾಡುಗಳನ್ನು ಹಾಡಿದ್ದಾರೆ (ಮುಖ್ಯವಾಗಿ ತಮಿಳು, ಹಿಂದಿ, ಕನ್ನಡ, ಬೆಂಗಾಲಿ, ಗುಜರಾತಿ, ಮಲಯಾಳಂ, ತೆಲುಗು, ಸಂಸ್ಕೃತ). ಸ್ವಲ್ಪ ಕಾಲ ಚಿತ್ರರಂಗದಲ್ಲೂ ಕೈಯಾಡಿಸಿದ ಎಂ ಎಸ್, ೧೯೪೫ ರಲ್ಲಿ ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾದ ಮೀರಾ ಚಿತ್ರದಲ್ಲಿ ಪ್ರಧಾನ ಪಾತ್ರವಹಿಸಿದ್ದರು.೭೨ ರಾಗಗಳೂ ಅವರ ನಾಲಿಗೆಯಲ್ಲಿ ನರ್ತನ ಮಾಡಿವೆ. ಸುಬ್ಬುಲಕ್ಷ್ಮಿಯವರು ಕಳೆದ ಐದು ದಶಕಗಳಲ್ಲಿ ಭಾರತದಾದ್ಯಂತ ಕಛೇರಿಗಳನ್ನು ನಡೆಸಿದ್ದಾರೆ. ಭಾರತದ ಸಾಂಸ್ಕೃತಿಕ ರಾಯಭಾರಿಗಳಾಗಿ ಅನೇಕ ಬಾರಿ ವಿದೇಶಗಳಲ್ಲಿ ಸಂಗೀತೋತ್ಸವಗಳ ಮೂಲಕ ಭಾರತವನ್ನು ಪ್ರತಿನಿಧಿಸಿದ್ದಾರೆ. ೧೯೯೭ ರಲ್ಲಿ ಅವರ ಪತಿಯ ಮರಣದ ನಂತರ ಎಂ ಎಸ್ ಅವರು ಸಾರ್ವಜನಿಕ ಕಛೇರಿಗಳನ್ನು ನೀಡುವುದನ್ನು ನಿಲ್ಲಿಸಿದರು. ಪ್ರಶಸ್ತಿ-ಗೌರವ ಪ್ರಪಂಚದಾದ್ಯಂತ ಕೇಳುಗರನ್ನು ಆಕರ್ಷಿಸಿದ 'ಎಂ ಎಸ್' ಅವರಿಗೆ ಬಂದಿರುವ ಪ್ರಶಂಸೆಗಳು ಅಪಾರ. ಅವರ "ಹರಿ ತುಮ್ ಹರೋ ಜನ್ ಕೀ ಭೀರ್" ಎಂಬ ಮೀರಾ-ಭಜನೆಯನ್ನು ಕೇಳಿದ ಮಹಾತ್ಮ ಗಾಂಧಿ "ಆ ಭಜನೆ ಕೇವಲ ಅವರಿಗಾಗಿಯೇ ಮಾಡಿಸಿದ್ದು, ಇನ್ನಾರಿಗೂ ಅಲ್ಲ" ಎಂದು ಹೇಳಿದ್ದರು! ಭಾರತೀಯ ಸಂಗೀತಗಾರರೊಬ್ಬರಿಗೆ ದೊರಕಬಹುದಾದ ಪ್ರಶಸ್ತಿಗಳೆಲ್ಲವೂ ಎಂ.ಎಸ್ ಅವರಿಗೆ ದೊರಕಿವೆ: ಸುಬ್ಬುಲಕ್ಷ್ಮಿ ಅವರು 1966ರಲ್ಲಿ ವಿಶ್ವಸಂಸ್ಥೆಯ ಮುಖ್ಯಕಚೇರಿಯಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದರು. ಅವರ ಜನ್ಮ ಶತಮಾನೋತ್ಸವದ ಗೌರವಾರ್ಥ ವಿಶ್ವಸಂಸ್ಥೆಯು ವಿಶೇಷ ಅಂಚೆ ಚೀಟಿ ಹೊರ ತರಲು ಮುಂದಾಗಿದೆ. ಪದ್ಮಭೂಷಣ (೧೯೫೪) ಸಂಗೀತ ಕಲಾನಿಧಿ (೧೯೬೮)-ಈ ಪ್ರಶಸ್ತಿಯನ್ನು ಪಡೆದ ಮೊದಲ ಮಹಿಳೆ, ರಾಮನ್ ಮ್ಯಾಗ್ಸೇಸೆ ಪ್ರಶಸ್ತಿ (೧೯೭೪), ಪದ್ಮ ವಿಭೂಷಣ (೧೯೭೫), ಕಾಳಿದಾಸ ಸಮ್ಮಾನ (೧೯೮೮), ರಾಷ್ಟ್ರೀಯ ಐಕ್ಯತೆಗಾಗಿ ನೀಡುವ ಇಂದಿರಾ ಗಾಂಧಿ ಪ್ರಶಸ್ತಿ (೧೯೯೦), ಭಾರತ ರತ್ನ (೧೯೯೮), ಉಲ್ಲೇಖಗಳು ಬಾಹ್ಯ ಸಂಪರ್ಕಗಳು 'Her music', 'ಎಮ್ಮೆಸ್ಸಮ್ಮನವರ ಹಾಡುಗಾರಿಕೆ, ಉಪನ್ಯಾಸಗಳು,ಮತ್ತು ಸಂದರ್ಶನಗಳು' ಭಾರತ ರತ್ನ ಪುರಸ್ಕೃತರು ಶಾಸ್ತ್ರೀಯ ಸಂಗೀತಗಾರರು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು
1321
https://kn.wikipedia.org/wiki/%E0%B2%B5%E0%B3%80%E0%B2%A3%E0%B3%86%20%E0%B2%B6%E0%B3%87%E0%B2%B7%E0%B2%A3%E0%B3%8D%E0%B2%A3
ವೀಣೆ ಶೇಷಣ್ಣ
'ವೀಣೆ ಶೇಷಣ್ಣ' ನವರು, (೧೮೫೨-೧೯೨೬) ಮೈಸೂರು ಸಂಸ್ಥಾನದ ಆಸ್ಥಾನ ವಿದ್ವಾಂಸರಾಗಿದ್ದರು. ಇವರು ಕರ್ನಾಟಕ ಸಂಗೀತ ಪದ್ಧತಿಯ ಪ್ರಸಿದ್ಧ ವೈಣಿಕರಾಗಿದ್ದರು. ವೀಣೆ ಶೇಷಣ್ಣನವರ ತಂದೆ, ’ಬಕ್ಷಿ ಚಿಕ್ಕರಾಮಪ್ಪ’ನವರೂ ಸಹ 'ಮುಮ್ಮಡಿ ಕೃಷ್ಣರಾಜ ಒಡೆಯರು' ಅರಸರಾಗಿದ್ದ ಕಾಲದಲ್ಲಿ ಮೈಸೂರು ಸಂಸ್ಥಾನದ 'ಆಸ್ಥಾನ ವಿದ್ವಾಂಸ'ರಾಗಿದ್ದರು. ಅವರಿಂದ ಮತ್ತು ಮೈಸೂರು 'ಸದಾಶಿವರಾಯ'ರಿಂದ ಸಂಗೀತವನ್ನು ಕಲಿತ 'ಶೇಷಣ್ಣ'ನವರು ವೀಣೆ ನುಡಿಸುವುದರಲ್ಲಿ ಪರಿಣಿತಿಯನ್ನು ಪಡೆದರು. ವೀಣೆ ಮಾತ್ರವಲ್ಲದೆ 'ಪಿಯಾನೊ', 'ಪಿಟೀಲು', 'ಸಿತಾರ್' ಮೊದಲಾದ ವಾದ್ಯಗಳನ್ನೂ ನುಡಿಸುತ್ತಿದ್ದ ಶೇಷಣ್ಣನವರು ಕೆಲವು ರಚನೆಗಳನ್ನೂ ರಚಿಸಿದ್ದಾರೆ. 'ಶೇಷಣ್ಣ'ನವರು ಹೋದೆಡೆಯೆಲ್ಲಾ ರಾಜಮರ್ಯಾದೆ ಸ್ವಾತಂತ್ರ್ಯಪೂರ್ವ ಭಾರತದ ಅನೇಕ ಅರಸರು ಇವರನ್ನು ಸನ್ಮಾನಿಸಿದ್ದರು. ಬರೋಡದ ಮಹಾರಾಜರು ಬರೋಡದಲ್ಲಿ ನಡೆದ ಸಂಗೀತ ಉತ್ಸವದಲ್ಲಿ ವೀಣೆ ಶೇಷಣ್ಣನವರನ್ನು ಚಿನ್ನದ ಅಡ್ಡಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಿಸಿದ್ದರಂತೆ. 'ವಿಕ್ಟೋರಿಯ ರಾಣಿ'ಯ ಮರಣಾನಂತರ ಗದ್ದುಗೆಗೆ ಬಂದ, ಇಂಗ್ಲೆಂಡಿನ ಅಂದಿನ ರಾಜ, ಐದನೇ ಜಾರ್ಜ್ (George V), ದೆಹಲಿಯಲ್ಲಿ ಆಯೋಜಿಸಿದ ಅವರ ದರ್ಬಾರ್ ಸಮಯದಲ್ಲಿ ಶೇಷಣ್ಣನವರ ಸಂಗೀತ-ಕಛೇರಿಯನ್ನು ಕೇಳಿ, ಸಂಪ್ರೀತರಾಗಿ ಅವರ ಒಂದು 'ತೈಲ ಚಿತ್ರ'ವನ್ನು ತಮ್ಮ ಅರಮನೆಯಲ್ಲಿ ಇಟ್ಟುಕೊಳ್ಳಲು 'ಲಂಡನ್ ನ ಬಕಿಂಗ್ ಹ್ಯಾಂ ಅರಮನೆ'ಗೆ ತೆಗೆದುಕೊಂಡು ಹೋಗಿದ್ದರಂತೆ. ೧೯೨೪ ರ, 'ಬೆಳಗಾವಿಯ ಕಾಂಗ್ರೆಸ್ ಅಧಿವೇಶನ'ದಲ್ಲಿ 'ಮಹಾತ್ಮ ಗಾಂಧಿ'ಯವರು, ಮತ್ತು ಅವರ ಜೊತೆಗಾರರು, ತಮ್ಮ ಇತರ ಕೆಲಸಗಳನ್ನು ಮುಂದೂಡಿ, ಹಲವು ತಾಸುಗಳ ಕಾಲ ಮಂತ್ರಮುಘ್ದರಾಗಿ, ಶೇಷಣ್ಣನವರ ಕಛೇರಿಯನ್ನೇ ಕೇಳುತ್ತಾ ಕುಳಿತಿದ್ದರಂತೆ. ತಮ್ಮ ಭಾವಪೂರ್ಣ ವೀಣಾವಾದನದ ವಿಶಿಷ್ಟ ವೈಖರಿಯಿಂದ ಹಾಗೂ ತಮ್ಮದೇ ಆದ ವಿಶೇಷ ಪ್ರತಿಭೆಯಿಂದ ಮೈಸೂರಿಗೆ, ಕರ್ನಾಟಕಕ್ಕೆ, ಕಲಾಪ್ರಪಂಚದಲ್ಲೇ ಅತ್ಯುನ್ನತವಾದ ಸ್ಥಾನವನ್ನು ಗಳಿಸಿಕೊಟ್ಟು ’ವೀಣೆಯ ಬೆಡಗಿದು ಮೈಸೂರು,’ ಎಂದು ಮೈಸೂರನ್ನು ಗುರುತಿಸುವಂತೆ ಮಾಡಿದವರು, ’ವೀಣೆ ಶೇಷಣ್ಣನವರು.” ದ ಕಿಂಗ್ ಆಫ್ ವೀಣಾ ಪ್ಲೇಯರ್ ಪಾಶ್ಚಾತ್ಯ ಸಂಗೀತ ವಿದ್ವಾಂಸರು, ಶೇಷಣ್ಣನವರನ್ನು ’ದ ಕಿಂಗ್ ಆಫ್ ವೀಣಾ ಪ್ಲೇಯರ್’ ಎಂದು ಕರೆದು ಗೌರವಿಸಿದ್ದಾರೆ. ಶೇಷಣ್ಣನವರಿಗೆ ವೀಣೆ ಒಂದು ವಾದ್ಯವಷ್ಟೆ ಆಗಿರದೆ ’ನಾದದೇವಿಯನ್ನು ಔಪಾಸಿಸುವ ಸಾಧನೆಯಾಗಿತ್ತು’. ಸಂಗೀತ ವಿದ್ಯಾನಿಧಿಯೇ ಆಗಿದ್ದ ಶೇಷಣ್ಣನವರು, ಪ್ರತಿದಿನ ೮ ಗಂಟೆಗಳ ಅವಿರತ ಸಾಧನೆ ಮಾಡುತ್ತಿದ್ದು, ಅವರ ಏಕಾಗ್ರತೆ, ಕಲಾಪ್ರೇಮ ಆದರ್ಶ ಪ್ರಾಯವಾದುವು. 'ಮೈಸೂರು ಸದಾಶಿವರಾಯ'ರಲ್ಲಿ ಗಾಯನವನ್ನು ಅಭ್ಯಾಸಮಾಡಿದುದರಿಂದ ಶೇಷಣ್ಣನವರು ನೇರ 'ತ್ಯಾಗರಾಜ ಶಿಷ್ಯಪರಂಪರೆ'ಗೆ ಸೇರಿದಂತಾಯಿತು. 'ಭೈರವಿ ವರ್ಣ'ದ (ವೀರಿ ಬೋಣಿ) ಕರ್ತ, 'ಆದಿ ಅಪ್ಪೈಯ್ಯ' ನವರ ವಂಶಸ್ಥರೂ, ಈ ವಂಶದ ೨೪ ನೆಯ ಕುಡಿಯೂ ಆಗಿದ್ದಾರೆ. 'ಶೇಷಣ್ಣನವರ ದರ್ಬಾರ್ ಉಡುಪು' 'ಅಸ್ಥಾನದ ಪೋಷಾಕಿ' ನಲ್ಲಿ ಶೇಷಣ್ಣನವರು ಅದ್ಭುತವಾಗಿ ಕಾಣಿಸುತ್ತಿದ್ದರು. ಅತ್ಯಂತ ಗೆಲುವಿನ ಹಾಗೂ ಗೌರವಾನ್ವಿತ, ಆಕರ್ಷಕ ವ್ಯಕ್ತಿತ್ವ ಅವರದು.ಬೇರೆಯವರಿಗೆ ಹೋಲಿಸಿದರೆ ಅತಿ ಸರಳವೂ ಆಡಂಬರವಿಲ್ಲದ ಉಡುಪಾಗಿತ್ತು. ಆಗಿನಕಾಲದ ಪೋಷಾಕಿನ ಪದ್ಧತಿಯಂತೆ, ಕೊಕ್ಕರೆ ಬಿಳುಪಿನ ಕಚ್ಚೆ ಪಂಚೆ, ಉದ್ದವಾದ ಕಪ್ಪು ಕೋಟಿನ ಮೇಲೆ ಬಿಳಿಯ ಮಡಿಸಿದ ಅಂಗವಸ್ತ್ರ, ಹಾಗೂ ಬಿಳಿಯ ಪೇಟ ಧರಿಸುತ್ತಿದ್ದರು. ದಟ್ಟವಾದ ಮೀಸೆ, ವಿಶಾಲವಾದ ಹಣೆಯ ಮೇಲೆ ನಾಮ ಹಾಗೂ ಅಕ್ಷತೆ ರಂಜಿಸುತ್ತಿತ್ತು. ಕುತ್ತಿಗೆಯನ್ನು ಯಾವಾಗಲೂ ಎತ್ತರದಲ್ಲಿ ಇಟ್ಟುಕೊಂಡೇ ನಡೆಯುತ್ತಿದ್ದ, ಹೊಳಪಿನ ಕಣ್ಣುಗಳ, ಅಷ್ಟೇನೂ ಭರ್ಜರಿ ಆಳಲ್ಲದಿದ್ದರೂ ದೂರದಿಂದಲೇ ಕಂಡುಹಿಡಿಯಬಹುದಾದ ಪ್ರಭಾವೀ ವ್ಯಕ್ತಿತ್ವ. ವೀಣೆನುಡಿಸಲೋಸ್ಕರವೇ ದೇವರು ದಯಪಾಲಿಸಬಹುದಾದ ಉದ್ದವಾದ ಬೆರಳುಗಳು, ಅವರ ಇರುವಿಕೆಯಿಂದ ಸಭಾಂಗಣದ ಮಹತ್ವ ಉಜ್ವಲವಾಗಿರುತ್ತಿತ್ತು. ವೀಣೆನುಡಿಸಲು ಕುಳಿತರೆಂದರೆ ಯೋಗಿಯನ್ನು ಮೀರಿಸುವ 'ತಪಶ್ಚರ್ಯೆ' ಅವರ ಮುಖದಮೇಲೆ ಪ್ರಖರವಾಗಿ ಕಾಣಿಸುತ್ತಿತ್ತು. ತಮ್ಮ ೨೬ ವರ್ಷಗಳ ವಯಸ್ಸಿನಲ್ಲಿಯೇ, ದಕ್ಷಿಣ ಭಾರತದ ರಾಜಮಹಲ್ ಗಳಲ್ಲಿ ಮಠಗಳಲ್ಲಿ, ಜಮೀನ್ದಾರದ ಗೃಹಗಳಲ್ಲಿ, ಹಾಗೂ ಅವರ ವಾದ್ಯಸಂಗೀತಾಭಿಲಾಶಿಗಳ ಸಮ್ಮುಖದಲ್ಲಿ ನಡೆಸಿಕೊಟ್ಟಿದ್ದರು. ಆ ಸಮಯದಲ್ಲಿ ಈಗಿನಂತೆ 'ಸಾರ್ವಜನಿಕ ಸಭೆ'ಗಳಲ್ಲಿ ಇಂತಹ 'ಸಂಗೀತ ವಾದ್ಯ ಕಾರ್ಯಕ್ರಮಗಳು' ಇರಲೇ ಇಲ್ಲ. ಶೇಷಣ್ಣನವರ ಮನೆತನದ ಪರಿಚಯ ಶೇಷಣ್ಣನವರ ತಂದೆಯವರು, 'ಚಿಕ್ಕರಾಮಯ್ಯನವರು', ಅವರು 'ಮಾಧ್ವ ಬ್ರಾಹ್ಮಣರು', ಹಾಗೂ 'ಮುಮ್ಮಡಿ ಕೃಷ್ಣರಾಜ ಒಡೆಯರ ಆಸ್ಥಾನವಿದ್ವಾಂಸರಾಗಿದ್ದರು'. ಅವರಿಗೆ 'ವೀಣಾಭಕ್ಷಿ ಚಿಕ್ಕರಾಮಪ್ಪ'ನವರೆಂದೇ ಹೆಸರಾಗಿತ್ತು. 'ತಾಯಿ'ಯವರೂ ಸಂಗೀತ ವಂಶಜರೇ. ಸುಮಾರು ೧ಂ ನೇ ವಯಸ್ಸಿನಲ್ಲೇ 'ಮುಮ್ಮಡಿ ಕೃಷ್ಣರಾಜವೊಡೆಯರ ಮುಂದೆ ’ಪಲ್ಲವಿ’ಯನ್ನು ಹಾಡಿ ಸನ್ಮಾನಿತರಾಗಿದ್ದರು. ಪ್ರಾರಂಭದಲ್ಲಿ ತಂದೆಯವರಿಂದ ಸಂಗೀತ ಪಾಠ ನಡೆಯುತ್ತಿತ್ತು. ಆದರೆ, ವಿಧಿವಶಾತ್ ಶೇಷಣ್ಣನವರ ೧೩ ನೆ ವಯಸ್ಸಿನಲ್ಲಿಯೇ ತಂದೆಯವರು ಮರಣಹೊಂದಿದರು. ಆನಂತರ ಸಂಗೀತಾಭ್ಯಾಸವನ್ನು ನಿಲ್ಲಿಸದೆ, 'ವೀಣಾ ಸುಬ್ಬಣ್ಣನವರ ತಂದೆ', 'ದೊಡ್ಡ ಶೇಷಣ್ಣನವರಲ್ಲಿ ಮುಂದುವರೆಸಿದರು. ’ಅಕ್ಕ ವೆಂಕಮ್ಮನವರು’ ತಮ್ಮನ ಸಂಗೀತಾಭ್ಯಾಸಕ್ಕೆ ವಿಶೇಷ ಕಾಳಜಿ ವಹಿಸಿ ಸಹಕಾರ ಕೊಟ್ಟರು. ಶೇಷಣ್ಣನವರಿಗೆ ದೈವದತ್ತವಾಗಿ ಸಂಗೀತ-ಕಲೆ ಒಲಿದಿತ್ತು. ಸತತವಾಗಿ ಸಾಧನೆಮಾಡಿ ಅವರು ತಮ್ಮದೇ ಅದ ಸ್ವತಂತ್ರ ವೀಣಾಶೈಲಿಯನ್ನು ರೂಪಿಸಿಕೊಂಡರು. ವೀಣೆಯನ್ನು ತಮ್ಮ ಅಧೀನದಲ್ಲಿ ಇಟ್ಟುಕೊಂಡು ಹಲವಾರು ಪ್ರಯೋಗಗಳನ್ನು ಮಾಡುತ್ತಿದ್ದರು. ಎಂಥವರನ್ನೂ ಮರುಳುಮಾಡುವ ಮೋಡಿಗೊಳಿಸುವ ಸನ್ಮೋಹನಾಸ್ತ್ರ ಬೀರುವ ಅಧ್ಬುತ ಸಂಗೀತ ಅವರದು. 'ಮನೋಧರ್ಮ ಸಂಗೀತ'ವೇ ಅವರ ಕಛೇರಿಯ ಪ್ರಮುಖಭಾಗವಾಗಿರುತ್ತಿತ್ತು. ಕೆಲವೇ ಆಯ್ದ ಕೀರ್ತನೆಗಳನ್ನು ತೆಗೆದುಕೊಂಡು ಅದ್ಭುತವಾಗಿ ನುಡಿಸುತ್ತಿದ್ದರು. ’ತಿಲ್ಲಾನ’ ’ಜಾವಳಿಗಳು’ ಕಛೇರಿಯ ಅಂತ್ಯದಲ್ಲಿ ನುಡಿಸಲ್ಪಡುತ್ತಿದ್ದವು. ರಸಿಕರಿಗೆ ಅವುಗಳ ಆಕರ್ಷಣೆ ಹೆಚ್ಚಾಗಿತ್ತು. ’ತಾನ ಪ್ರಸ್ತುತಿ’ಯಲ್ಲಿ ಎತ್ತಿದ ಕೈ. ತಮ್ಮ ಜೀವಮಾದದಲ್ಲಿ ಎಂದೂ ಅವರು ಅಹಂಭಾವದಿಂದ ನಡೆದುಕೊಂಡ ಕ್ಷಣಗಳಿರಲಿಲ್ಲ. ’ನಾದಾನು ಸಂಧಾನದ ಉದ್ಘಾರ’ಳೆಂಬ, ’ಭಲೆ’, ’ಆಹಾ’, ’ಭೇಷ್’ ಇತ್ಯಾದಿ ಪದಗಳು ಅವರಿಗೆ ಅರಿವಿಲ್ಲದೆ ಮೂಡಿಬರುತ್ತಿದ್ದವು. ಸುಮಾರು ೨ಂ ವಾದ್ಯಗಳನ್ನು ಸುಲಲಿತವಾಗಿ ನುಡಿಸಬಲ್ಲವರಾಗಿದ್ದ ಶೇಷಣ್ಣನವರು ಪಿಟೀಲು, ಪಿಯಾನೋ, ಸ್ವರಬತ್, ಜಲತರಂಗ, ನಾಗಸ್ವರ, ಹಾರ್ಮೋನಿಯಮ್, ಮಯೂರ ವಾದ್ಯ, ಮೃದಂಗ, ಇತ್ಯಾದಿಗಳನ್ನು ನುಡಿಸುತ್ತಿದ್ದರು. ಹಲವು ವೇಳೆ ಯಾವುದಾದರೂ ಸಂಗೀತ ಕಛೇರಿಯಲ್ಲಿ ವೈಲಿನ್ ಪಕ್ಕವಾದ್ಯದವರು ಬರದಿದ್ದಾಗ, ವೈಲಿನ್ನನ್ನು ತಾವೇ ನುಡಿಸಿ ಸಹಕರಿಸಿದ ಸನ್ನಿವೇಶಗಳಿವೆ. ’ವೈಣಿಖ ಶಿಖಾಮಣಿ' ಬಿರುದು 'ಮುಮ್ಮಡಿ ಕೃಷ್ಣರಾಜ ಒಡೆಯರು 'ಪಟ್ಟಕ್ಕೆ ಬಂದ ಸಮಯದಲ್ಲೇ ವೈಣಿಕ ಶೇಷಣ್ಣನವರ ವೀಣಾವಾದನದ ಮಾಧುರ್ಯದಿಂದ ಪ್ರಭಾವಿತರಾಗಿದ್ದ ಮಹಾರಾಜರು, ’ವೈಣಿಖ ಶಿಖಾಮಣಿ' ಬಿರುದನ್ನು ದಯಪಾಲಿಸಿದ್ದರು. 'ಜಯಚಾಮರಾಜ ವೊಡೆಯರು', 'ಶೇಷಣ್ಣ'ನವರನ್ನು ತಮ್ಮ ಅರಮನೆಯ 'ಆಸ್ಥಾನವಿದ್ವಾಂಸ'ರ ನ್ನಾಗಿ ನೇಮಿಸಿದರು.'ಸುಬ್ಬಣ್ಣನವರ ಗಾಯನ', 'ಶೇಷಣ್ಣನವರ ವೀಣೆ', 'ಮಹಾರಾಜರ ಪಿಟೀಲು,' 'ಅಪರೂಪದ ಭಾವಾನು ಸಂಧನ'ದ 'ಸಂಗೀತ ಮೇಳ'ವಾಗಿತ್ತೆಂದು ನೆನೆಸುತ್ತಿದ್ದರು. ಮೈಸೂರು ಸಂಸ್ಥಾನದ ಅರಸರ ಪ್ರತಿಷ್ಠೆ ಮತ್ತು ಭಾಗ್ಯದ ಸಂಕೇತವಾಗಿ ಶೇಷಣ್ಣನವರ ಸಂಗೀತ ಪರಿಗಣಿಸಲ್ಪಟ್ಟಿತ್ತು. 'ರಾಮನಾಥ ಪುರಂ ಭಾಸ್ಕರ ಸೇತುಪತಿ ಮಹಾರಾಜರು' ನವರಾತ್ರಿ ಮೊದಲ ದಿನದಲ್ಲಿ ಏರ್ಪಡಿಸಿದ್ದ ಶೇಷಣ್ಣನವರ ವೀಣೆಯನ್ನು ಸತತ ಕೇಳಬೇಕೆಂದು ವಿನಂತಿಸಿದರು. ಇಡೀ ನವರಾತ್ರಿ ಹಬ್ಬ ಅರಮನೆಯಲ್ಲಿ 'ವೀಣಾಮೃತ ಸುಧೆ'ಯನ್ನು ಹರಿಸಿದ ಶೇಷಣ್ಣನವರಿಗೆ ’ಕನಕಾಭಿಶೇಕ’ಮಾಡಿಸಿ ಅಂಬಾರಿಯಮೇಲೆ ಮೆರವಣಿಗೆ ಮಾಡಿಸಿದರಂತೆ. ಅನಂತರ, ಪ್ರತಿವರ್ಷವೂ ಇದೇ ತರಹದ ಸಂಗೀತೋತ್ಸವ ಇದ್ದೇ ಇರುತ್ತಿತ್ತು. ಬರೋಡಾ ಸಂಸ್ಥಾನದಲ್ಲಿ 'ಸಯ್ಯಾಜಿರಾವ್ ಗಾಯಕವಾಡ್ 'ರವರು, ಮತ್ತು ಅವರ ಮಹಾರಾಣಿಯವರು ಸತತ ಮೂರು ದಿನಗಳ ವೀಣಾವಾದನವನ್ನು ಏರ್ಪಡಿಸಿ, ಸಕಲ ರಾಜಮರ್ಯಾದೆಗಳೊಂದಿಗೆ ಸನ್ಮಾನಿಸಿ ರಾಣಿಯವರು ಸ್ವತಃ ಬಳಸುತ್ತಿದ್ದ ಮೇನೆಯನ್ನು ಬಹುಮಾನವಾಗಿ ನೀಡಿದರು. ಶೇಷಣ್ಣನವರು ಮೈಸೂರಿಗೆ ವಾಪಸ್ ಬಂದಾಗ ಒಡೆಯರೂ ಹೆಮ್ಮೆಯಿಂದ ಬೀಗಿಹೋಗಿ ಮೈಸೂರಿನಲ್ಲೂ 'ರಾಜಲಾಂಛನ'ದಲ್ಲಿ ವಿಶೇಷವಾಗಿ ಸತ್ಕಾರನೀಡಿದರು. ಮಹಾರಾಜರು, ಶೇಷಣ್ಣನವರಿಗೆ, ಮೇನೆಯಲ್ಲಿ ಉಪಾಸೀನರಾಗಬೇಕೆಂದು ಕೊಂಡಾಗ ಸುತರಾಂ ಒಪ್ಪದೆ, ’ನಾನು ಕಲಾವಿದನಷ್ಟೆ. ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ವೀಣೆಯನ್ನು ನುಡಿಸಿದ್ದೇನೆ. ವೀಣೆಯ ಸಾಮರ್ಥ್ಯಕ್ಕೆ ನಾನು ನುಡಿಸಬಲ್ಲೆನೇ’ ಎಂದು ಹೇಳಿ ವೀಣೆಯನ್ನು ಮೇನೆಯ ಪಲ್ಲಕ್ಕಿಯಲ್ಲಿ ಇಟ್ಟು ಮುಂದೆ ತಾವು ವಿನೀತರಾಗಿ ನಡೆದರಂತೆ. ತಂಜಾವೂರಿನಕೃಷ್ಣಸ್ವಾಮಿ ನಾಯಕರ ಮನೆಯಲ್ಲಿ ನಡೆದ ಒಂದು 'ಸಂಗೀತ ಗೋಷ್ಠಿ'ಯಲ್ಲಿ ಶೇಷಣ್ಣನವರೊಂದಿಗೆ ಮಹಾವೈದ್ಯನಾಥ ಅಯ್ಯರ್, ಶರಭಶಾಸ್ತ್ರಿ, ತಿರುಕ್ಕೋಡಿ ಕಾವಲ್ ಕೃಷ್ಣಯ್ಯರ್ ಮೊದಲಾದ ವಿದ್ವಾಂಸರುಗಳ ಕಲಾ ವಿನಿಕೆಯಲ್ಲಿ ಪರಸ್ಪರ ಅವರುಗಳಲ್ಲೇ ತೀರ್ಮಾನವಾಗುವ 'ಶ್ರೇಷ್ಟ ವಿದ್ವಾಂಸರಿಗೆ' ಅತ್ಯಂತ ಬೆಲೆ ಬಾಳುವ ’ಸೀಮೇಕಮಲದ ಉಂಗುರ’, ಬಹುಮಾನವಾಗಿತ್ತು. ಕಛೇರಿಯ ಕೊನೆಯಲ್ಲಿ 'ಮಹಾವೈದ್ಯನಾಥ ಅಯ್ಯರ್' ಮಾತನಾಡಿ, ವೀಣೆ ಶೇಷಣ್ಣನವರದ್ದು ಊಹೆಗೆ ನಿಲುಕದ ಮನೋಧರ್ಮ ಆ ನಾದ ಮಾಧುರ್ಯಕ್ಕೆ ನಾವೆಲ್ಲಾ ಮನಸೋತಿದ್ದೇವೆ. ಇಂದಿನ ಬಹುಮಾನ ನಿಷ್ಪಕ್ಷಪಾತವಾಗಿ ಅವರಿಗೇ ಸಲ್ಲಬೇಕು. ಬರೋಡ ರಾಜದಂಪತಿಗಳಿಗೆ, 'ಆಧುನಿಕ ಸಂಗೀತದ ರಸದೌತಣ' ಬರೋಡಾದ ಮಹಾರಾಜರು ಒಮ್ಮೆ ಮೈಸೂರಿನ ದರ್ಬಾರಿಗೆ ಅತಿಥಿಯಾಗಿ ಬಂದಾಗ, ಶೇಷಣ್ಣನವರ ಸಂಗೀತವನ್ನು ದರ್ಬಾರಿನಲ್ಲಿ ಕೇಳಿದ್ದಲ್ಲದೆ ಮತ್ತೆ, ತಮ್ಮ ವಿಶ್ರಾಂತಿಯ ಸಮಯದಲ್ಲಿ ಅವರ ಸಂಗೀತವನ್ನು ಪುನಃ ಕೇಳಲು ಅಪೇಕ್ಷಿಸಿದರು. ಅವರ ಮನಸ್ಸಿಗೆ ಮುದವಾಗುವಂತ ಕರ್ನಾಟಕ, ಪಾಶ್ಚಾತ್ಯ, ಹಿಂದೂಸ್ಥಾನಿ ಸಂಗೀತಗಳ ಮಿಶ್ರಣಮಾಡಿ ಪ್ರಸ್ತುತಪಡಿಸಿದರಂತೆ. ಆ ಸಮಯದಲ್ಲಿ ಮಹಾರಾಜರು ಇರಲಿಲ್ಲ. ಅವರು ವಾಪಸ್ ಬಂದಮೇಲೆ, ವಿಷಯಗಳನ್ನು ಕೇಳಿ ತಿಳಿದುಕೊಂಡು ಹೆಮ್ಮೆಪಟ್ಟು ಆಸ್ಥಾನಕ್ಕೆ ಕರೆಸಿದರಂತೆ. ಹೆದರಿಕೆಯಿಂದ ಭೇಟಿಮಾಡಿದ ಶೇಷಣ್ಣನವರು ವಿವರಿಸುವ ಮೊದಲೇ ಮಹಾರಾಜರು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಶೇಷಣ್ಣನವರ ಸಮಯಸ್ಪೂರ್ಥಿಯನ್ನು ಕೊಂಡಾಡಿದರಂತೆ. 'ಬೆಳಗಾಂ ಕಾಂಗ್ರೆಸ್ ಅಧಿವೇಶನದಲ್ಲಿ' ಸನ್, ೧೯೨೪ ರಲ್ಲಿ 'ಮಹಾತ್ಮ ಗಾಂಧಿ'ಯವರ ಅಧ್ಯಕ್ಷತೆಯಲ್ಲಿ ಬೆಳಗಾಂನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ, ಶೇಷಣ್ಣ ನವರ ವೀಣಾವಾದನದ ಏರ್ಪಾಡಾಗಿತ್ತು. ಆಗಲೇ ೭೩ ವರ್ಷ ಪ್ರಾಯದ, ಅಷ್ಟೇನೂ ಆರೋಗ್ಯ ಸರಿಯಿರದ ಶೇಷಣ್ಣನವರು, ಪೂರ್ವ ನಿಯೋಜಿತ ವ್ಯವಸ್ಥೆಯಂತೆ, ಕೇವಲ ಅರ್ಧಗಂಟೆಯ ವಿನಿಕೆಯ ಕಾರ್ಯಕ್ರಮಕ್ಕೆ ಒಪ್ಪಿಗೆನೀಡಿದ್ದರು. ಒಂದುಗಂಟೆಯಾದರೂ ಸಂಗೀತ ರಸಿಕರು ಮಿಸುಕಾಡದೆ ಕುಳಿತಿದ್ದರು. ಗಾಂಧೀಜಿಯವರ ಜೊತೆ, ಸಂಗೀತದಲ್ಲಿ ಭಾಗವಹಿಸಿದ್ದವರು, 'ಸರೋಜಿನಿನಾಯಿಡು', 'ಜವಹರಲಾಲ್ ನೆಹರು', ಮೋತೀಲಾಲ್ ನೆಹರು, ಮದನ ಮೋಹನ ಮಾಳವೀಯ, ಲಾಲಾ ಲಜಪತ್ ರಾಯ್, ರಾಜೇಂದ್ರ ಪ್ರಸಾದ್, ಮೊದಲಾದ ನಾಯಕರೂ ತುಟಿಪಿಟಕ್ಕನ್ನದೆ ನಾದ-ಸಾಗರದಲ್ಲಿ ತೇಲುತ್ತಿದ್ದರು. ಹಾಗೆ ಅವರನ್ನೆಲ್ಲಾ ಮೋಡಿಮಾಡಿ ಒಂದು ವಿಕ್ರಮವನ್ನೇ ಸಾಧಿಸಿದರು, ಶೇಷಣ್ಣನವರು. ಸೋಮವಾರವಾದ್ದರಿಂದ ಬಾಪೂಜಿಯವರಿಗೆ, ಮೌನವ್ರತವಿತ್ತು. ಕಛೇರಿಯು ಸಾಗಿಯೇ ಇತ್ತು. ಗಾಂಧೀಜಿಯವರ ಆಪ್ತಕಾರ್ಯದರ್ಶಿಯವರು ಒಂದು ಚೀಟಿಯಲ್ಲಿ ಬರೆದು, 'ಇನ್ನು ನಾವು ಹೋಗೋಣವೇ 'ಎಂದಾಗ, ಬಾಪು, ಕಾಗದ ಹಿಂದೆ ಬರೆದ ಟಿಪ್ಪಣಿ, ಇಂದಿಗೂ ನೆನೆಯಲು ಯೋಗ್ಯವಾಗಿದೆ. ’ಹೊತ್ತು ಮೀರಿಯೇ ಹೋದರೂ ಪ್ರಮಾದವೇನಿಲ್ಲ, ಆಗಲಂತೆ ಬಿಡಿ.’ ಸುದೀರ್ಘಕಾಲದ ಕಛೇರಿಯ ಬಳಿಕ ಗಾಂಧೀಜಿಯೇ ಕಡುಕಾಲನಿಯಮಿಯೂ ಕಟು ವ್ರತಾಚರಣಿಯೂ ಆಗಿದ್ದ ಬಾಪುರವರು, ಮೌನವನ್ನು ಮುರಿದು ಉದ್ಧರಿಸಿಯೇ ಬಿಟ್ಟರು. "ಇದು ದೇವಗಾನ. ಇದನ್ನು ಕೇಳಿದ ನಾವೇ ಧನ್ಯರು. ಇಷ್ಟನ್ನು ಹೇಳದೇ ಹೇಗೆ ಮೌನಾಚರಣೆ ವಹಿಸಲಿ". ಅದೇರೀತಿ, ಮಹಾತ್ಮರ ಮುಂದೆ ವೀಣೆ ನುಡಿಸುವ ಶೇಷಣ್ಣನವರ ಮಹದಾಶೆ ನೆರವೇರಿತು ಕೂಡ. ೨ಂ ನೆಯ ಶತಮಾನದ ವೈಣಿಕ ಶಿಖಾಮಣಿ, ಹಾಗೂ ವಾಗ್ಗೇಯ ಕಾರ 'ವೀಣೆ ಶೇಷಣ್ಣ' ನವರು ೨ಂ ನೇ ಶತಮಾನದ 'ವಾಗ್ಗೇಯಕಾರರೂ ಹೌದು'. ಅನೇಕ ಕೃತಿಗಳನ್ನೂ ಸ್ವರಜತಿಗಳನ್ನೂ ವರ್ಣಗಳನ್ನೂ ತಿಲ್ಲಾನಗಳನ್ನೂ ರಚಿಸಿದ್ದಾರೆ. ಒಟ್ಟಾರೆ ೫೩ ಕ್ಕೂ ಹೆಚ್ಚು ರಚನೆಗಳನ್ನು ರಚಿಸಿದ್ದಾರೆ. ವರ್ಣಗಳು ವಿದ್ವತ್ಪೂರ್ಣವಾಗಿದ್ದು, ಖಂಡದೃವ, ಮಿಶ್ರತ್ರಿಪುಟ, ಖಂಡ, ತ್ರಿಪುಟದಂತಹ ತಾಳಗಳಲ್ಲಿದ್ದು ೨ ರಾಗಮಾಲಿಕಾ ವರ್ಣಗಳು ೧೪, ೧೮ ರಾಗಗಳನ್ನು ಹೊಂದಿವೆ. 'ಶೇಷ ಅಂಕಿತ'ದಲ್ಲಿ ರಚನೆಗಳನ್ನು ಮಾಡಿದ್ದು ಕೆಲವು ಮಾತ್ರ 'ಜಯಚಾಮರಾಜ ಒಡೆಯರ್ 'ಮತ್ತು 'ಕೃಷ್ಣರಾಜ ಒಡೆಯರ್ 'ನಾಮಾಂಕಿತದಲ್ಲಿದೆ. ಅವರ 'ತಿಲ್ಲಾನಗಳು' ಬಹು ಆಕರ್ಷಣೀಯವಾಗಿ ಹೆಣೆದಿರುವಂತವು. 'ರಾಲ್ಲಪಲ್ಲಿ ಅನಂತರಾಮ ಶರ್ಮ', ಹಾಗೂ 'ವಾಸುದೇವಾಚಾರ್ಯರು' ಅವರ ಕೃತಿಗಳನ್ನು ಶ್ಲಾಘಿಸಿದ್ದಾರೆ. ಶೇಷಣ್ಣ ನವರ ಎಲ್ಲಾ ರಚನೆಗಳನ್ನೂ 'ಮೈಸೂರಿನ ಸಂಗೀತ ಕಲಾವರ್ಧಿನೀ ಸಭಾ'ದವರು ಪ್ರಕಟಿಸಿದ್ದಾರೆ. 'ಮೈಸೂರು ವಾಗ್ಗೇಯಕಾರರು' ಶೀರ್ಷಿಕೆಯಡಿಯಲ್ಲಿ 'ವಿದುಷಿ. ಎಂ ಎಸ್ ಶೀಲಾ'ರವರ 'ಹಂಸಧ್ವನಿ ಸಂಸ್ಥೆ'ಯಿಂದ ಹೊರಬಂದ ಅನೇಕ ಸಿ.ಡಿ ಗಳಲ್ಲಿ 'ವೀಣೆ ಶೇಷಣ್ಣ'ನವರ ರಚನೆಗಳೂ ಇದ್ದು ಇದನ್ನೂ ’'ಗುರು ಶೀಲಾ'” ರವರೇ ಹಾಡಿದ್ದಾರೆ. ಬ್ರಿಟಿಷ್ ಸಾಮ್ರಾಟ, ೫ನೇ ಜಾರ್ಜ್, ವೀಣಾವಾದನದಿಂದ ಪ್ರಭಾವಿತ 'ಬ್ರಿಟಿಷ್ ಚಕ್ರವರ್ತಿ, ೫ ನೇ ಜಾರ್ಜ್ ಪಟ್ಟಾಭಿಷೇಕ,' 'ದೆಹಲಿ'ಯಲ್ಲಿ ನಡೆದಾಗ, 'ಶೇಷಣ್ಣನವರ ವೀಣಾವಾದನದ ಕಛೇರಿ,' ಇತ್ತು. ಅದ್ಭುತವೂ ಸೋಜಿಗವೂ ಎನ್ನಿಸಿದ ಈ ವೀಣಾವಾದನದ ಮಾಧುರ್ಯದಿಂದ ಚಕ್ರವರ್ತಿಯವರು ಪ್ರಭಾವಿತರಾಗಿ, ಆ ಸವಿನೆನಪಿಗೆ 'ಶೇಷಣ್ಣನವರ ತೈಲ-ಚಿತ್ರವನ್ನು 'ಲಂಡನ್ ನ ಬಕಿಂಗ್ ಹ್ಯಾಂ ಅರಮನೆಯ ಕಲಾಮಂದಿರ' ದಲ್ಲಿ ಕೊಂಡೊಯ್ದು, ಇರಿಸಿದ್ದಾರೆ. ಶೇಷಣ್ಣನವರ ಶಿಷ್ಯವೃಂದ ಶೇಷಣ್ಣನವರು ’ಮೈಸೂರು ವೀಣಾ ಪರಂಪರೆ ’ಗೆ, ದೊಡ್ಡ ” ಸಂಗೀತ ಶಾಸ್ತ್ರದಲ್ಲಿ ನಿಷ್ಣಾತ ಶಿಷ್ಯವೃಂದ" ವನ್ನೇ ತಮ್ಮ ಅನುಪಮ ಕೊಡುಗೆಯಾಗಿ ಸಲ್ಲಿಸಿದ್ದಾರೆ. ಅವರಲ್ಲಿ ಪ್ರಮುಖರು, ವೀಣಾ ವೆಂಕಟಗಿರಿಯಪ್ಪ ಶರ್ಮಾದೇವಿ ಸುಬ್ರಹ್ಮಣ್ಯ ಶಾಸ್ತ್ರಿ, ಭೈರವಿ, ಲಕ್ಷ್ಮೀನಾರಣಪ್ಪ, ಕಲಾವಿದ ವೆಂಕಟಪ್ಪ, ನಾರಾಯಣ ಅಯ್ಯರ್, ಎ,ಎಸ್. ಚಂದ್ರಶೇಖರಯ್ಯ, ಎಂ.ಎಸ್. ಭೀಮರಾವ್, ತಿರುಮಲೆ ರಾಜಮ್ಮ, ಸ್ವರಮೂರ್ತಿ ವಿ.ಎನ್.ರಾವ್ ಮೊದಲಾದವರು. ಇವರ ಶಿಷ್ಯರಾಗಿದ್ದು, ಬಿಡಾರಂ ಕೃಷ್ಣಪ್ಪನವರು, ಸುಬ್ಬಣ್ಣನವರು ಮೈಸೂರು ವಾಸುದೇವಚಾರ್ಯರು ಶೇಷಣ್ಣನವರನ್ನು ಗುರುಗಳಂತೆಯೇ ಭಾವಿಸಿದ್ದರು. ಜಲತರಂಗ-ವಾದನದ ಸಂಗೀತ ಕಾರ್ಯಕ್ರಮ' ಒಮ್ಮೆ ಉತ್ತರಭಾರತದಿಂದ ಒಬ್ಬ 'ಜಲತರಂಗ ವಾದ್ಯದ ಸಂಗೀತಗಾರರು', 'ಮೈಸೂರು ಆಸ್ಥಾನ'ದಲ್ಲಿ ಒಂದು ಸುಂದರವಾದ ಕಾರ್ಯಕ್ರಮ ಕೊಟ್ಟರು. ಪ್ರಭುಗಳು ಸಂತೋಷಗೊಂಡಿದ್ದಲ್ಲದೆ ಅತ್ಯಂತ ಪ್ರಭಾವಿತರಾಗಿದ್ದರು. ಶೋತೃಗಳ ಸಾಲಿನಲ್ಲಿ ಕುಳಿತು ಸಂಗೀತವನ್ನು ಆಲಿಸುತ್ತಿದ್ದ 'ಶೇಷಣ್ಣ'ನವರು, ಕಾರ್ಯಕ್ರಮ ಮುಗಿದನಂತರ ಅರಸರನ್ನು ಭೆಟ್ಟಿಮಾಡಿ, 'ಜಲತರಂಗವಾದ್ಯ'ದ ಪರಿಕರಗಳನ್ನು ರಾತ್ರಿ, ತಮ್ಮ ಹತ್ತಿರ ಇಟ್ಟುಕೊಳ್ಳಲು ಅನುಮತಿ ಕೋರಿದರು. 'ಸಂಗೀತ'ದಲ್ಲಿ ಎಷ್ಟು ಸಮರ್ಪಣಾಭಾವವಿತ್ತೆಂದರೆ, ರಾತ್ರಿಯೆಲ್ಲಾ ಸಾಧನೆಮಾಡಿ ಮಾರನೆಯ ದಿನ ರಾತ್ರಿ ಮಹಾರಾಜರ ಮುಂದೆ 'ಜಲತರಂಗ ವಾದನ ದ ಕಛೇರಿ' ಕೊಟ್ಟರು. ಕಾರ್ಯಕ್ರಮ ಮುಗಿದ ಮೇಲೆ ಆ ಸಂಗೀತಕಾರರು, ಮಂಚದಮೇಲೆ ಬಂದು 'ಶೇಷಣ್ಣ'ನವರನ್ನು ಅಭಿನಂದಿಸಿದರಂತೆ. ಈ ಸಂಗತಿ, ಅವರ 'ಆಸಕ್ತಿ' ಮತ್ತು ಹೊಸದನ್ನು ಕಲಿತುಕೊಳ್ಳುವ 'ಅಸ್ತೆ'ಯನ್ನು ದರ್ಶಾಯಿಸುತ್ತದೆ. ಮೈಸೂರು ಶೈಲಿಯ ವೀಣೆನುಡಿಸುವ ಪದ್ಧತಿ ಈಗಿನ ವೀಣೆ ನುಡಿಸುವ 'ಮೈಸೂರು ಶೈಲಿ', ಪ್ರಖ್ಯಾತವಾಗಿದೆ. ಇದನ್ನು ಪ್ರಸಿದ್ಧಿಪಡಿಸಿದವರು, ಶೇಷಣ್ಣನವರೇ. ಆದರೆ ಇದಕ್ಕೆ ಮೊದಲು ಸಿತಾರಿನಂತ ವೀಣೆಯ ಬುರುಡೆಯನ್ನು ತೊಡೆಗೆ ಒತ್ತಿಕೊಂಡು ನುಡಿಸುವ ಪದ್ಧತಿಯಿತ್ತು. ಆದರೆ ಶೇಷಣ್ಣನವರು, ಪದ್ಮಾಸನದಲ್ಲಿ ಕುಳಿತು, ಈಗಿನ ತರಹ ವೀಣೆಯನ್ನು ತಮ್ಮ ಎರದೂ ತೊಡೆಗಳ ಮೇಲೆ ಇಟ್ಟುಕೊಂಡು ನುಡಿಸುವ ಪರಿಪಾಠವನ್ನು ಜಾರಿಗೆ ತಂದರು. ತಮ್ಮ ಎರಡು ಬೆರಳುಗಳಿಂದ ತಂತಿಗಳನ್ನು ಮೀಟುವುದರ ಜೊತೆಗೆ, ಎರಡೂ ತಂತಿಗಳು ಒಂದಕ್ಕೊಂದು ತಗುಲದಂತೆ ಏರ್ಪಾಟು ಮಾಡಿಕೊಳ್ಳುವ ಪದ್ಧತಿಯೂ ಅವರದೇ. ಗುಣಕ್ಕೆ ಮತ್ಸರವಿಲ್ಲವೆನ್ನುವ ಹೇಳಿಕೆಯ ಪ್ರತಿಪಾದಕ ಹೊರನಾಡಿನಿಂದ ಬಂದ ಕಲಾವಿದರು, ಮೈಸೂರು ದರ್ಬಾರಿನಲ್ಲಿ ’ವಿನಿಕೆ”ಮಾಡಬೇಕಾಗಿದ್ದರೆ, ಮೊದಲು ಶೇಷಣ್ಣನವರರಿಗೆ ತೃಪ್ತಿ ದೊರೆತರೆ ಮಾತ್ರ, ಎಂಬ ಮಹಾರಾಜರ ಕಟ್ಟಪ್ಪಣೆ ಇತ್ತು. ಶೇಷಣ್ಣನವರು 'ವಿದ್ಯಾಪಕ್ಷಪಾತಿಗಳು,' 'ಅರ್ಹರಾದ ಕಲಾವಿದರ'ನ್ನು ಅತ್ಯಂತ ಪ್ರೀತಿ ಗೌರವಗಳಿಂದ ಕಾಣುತ್ತಿದ್ದರು. ’ಗುಣಕ್ಕೆ ಮತ್ಸರವಿಲ್ಲ’ ಎನ್ನುವ ಹೇಳಿಕೆಯ ಪ್ರತಿಪಾದಕರಾಗಿದ್ದರು. ಶೇಷಣ್ಣನವರ ಮನೆ, " ನಾದದೇವಿಯ ಔಪಾಸನೆಯ ತಾಣ ”ವಾಗಿತ್ತು. ಪ್ರತಿದಿನವೂ ಶೇಷಣ್ಣನವರ ಮನೆಯಲ್ಲಿ 'ವಿದ್ವಾಂಸರ ಗೋಷ್ಟಿ ಕಛೇರಿಗಳು' ನಡೆದಿರುತ್ತಿತ್ತು. ಇದಲ್ಲದೆ, ಶ್ರೀಕೃಷ್ಣ ಜನ್ಮಾಷ್ಟಮಿ, ರಾಮನವಮಿ ಹಬ್ಬಗಳಲ್ಲಿ ೧ಂ ದಿನಗಳು, ವಿಶೇಷವಾಗಿ ಸಾರ್ವಜನಿಕರಿಗೆ ಅನುಕೂಲವಾಗುವಂತ ತಮ್ಮ ಮನೆಯ ಮಹಡಿಯ ಮೇಲೆ ವೀಣಾಸಂಗೀತದ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದರು. ಅರಮನೆಯಲ್ಲಿ ಹೋಗಲಾರದ ಶ್ರೋತೃಗಳಿಗೆ ಈ ಸೌಲಭ್ಯ ಮುದನೀಡಿತ್ತು. ಶೇಷಣ್ಣನವರು ತಮ್ಮ ಅಂತ್ಯದದಿನಗಳಲ್ಲಿ "ನನಗೆ ಸಾವಿನ ಭಯವಿಲ್ಲ ; ಆದರೆ, ಈ ವೀಣೆಯನ್ನು ಬಿಟ್ಟು ನಾನೊಬ್ಬನೆ ಹೋಗಬೇಕಲ್ಲಾ ಎನ್ನುವ ಸಂಕಟ," ಎನ್ನುತ್ತಿದ್ದರು. ನಿಧನ ’ವೀಣೆ ಶೇಷಣ್ಣ"ನವರು”, ಜುಲೈ, ೨೫, ೧೯೨೬ ರಂದು ನಿಧನರಾದರು. ಉಲ್ಲೇಖಗಳು ಲೇಖನ-' ಮಹಾನ್ ಕಲಾವಿದ ವೀಣೆ ಶೇಷಣ್ಣ -’ವಿದುಷಿ. ’ಶ್ಯಾಮಲಾ ಪ್ರಕಾಶ್’, ಅಂಕಣ, ’ನಾದೋಪಾಸನ’, ’ಸ್ನೇಹ ಸಂಬಂಧ,’ ಮಾಸಪತ್ರಿಕೆ, ಕರ್ನಾಟಕ ಸಂಘ, ಮುಂಬಯಿ, ಸೆಪ್ಟೆಂಬರ್, ೨ಂ೧ಂ, ಪುಟ-೧೭. ಇದರಲ್ಲಿ ದಾಖಲಿಸಿದ ಅಪರೂಪದ ವಿಚಾರವೊಂದು ಇಲ್ಲಿ ಉದ್ಧರಿಸಲು ಉಪಯುಕ್ತವಾದದ್ದು. 'ವೀಣೆ ಶೇಷಣ್ಣನವರ ಅಪಾರ ಕನ್ನಡದ ಶ್ರೋತೃಗಳು ಹಿಗ್ಗುವ ವಿಚಾರ. ಈ ಲೇಖನದ ಮೇಲ್ಪದರದಲ್ಲಿ ದರ್ಶಾಯಿಸಿರುವ 'ವೀಣೆ ಮಾಂತ್ರಿಕ ಶೇಷಣ್ಣನವರ ಭಾವಚಿತ್ರ', ಮುಂಬಯಿನ ಮಾಹೀಮ್ ನಲ್ಲಿರುವ 'ಕರ್ನಾಟಕ ಸಂಘ'ದಲ್ಲಿ ಸನ್, ೧೯೭೮ ರಲ್ಲಿ ಅನಾವರಣಗೊಂಡಿತ್ತು. ಅಂದು ಜರುಗಿದ 'ಕನ್ನಡ ಕಾರ್ಯಕ್ರಮ'ದಲ್ಲಿ ವೀಣೆ ಶೇಷಣ್ಣನವರ ಮರಿಮಗ, 'ಶ್ರೀ, ಮೈಸೂರು, ವಿ. ಸುಬ್ರಹ್ಮಣ್ಯಂರವರು, ಉಪಸ್ಥಿತರಿದ್ದರಂತೆ. ಸುಬ್ರಹ್ಮಮಣ್ಯಂರವರು, ವಿದ್ವಾಂಸರೂ, ಸುಪ್ರಸಿದ್ಧ ಸಂಗೀತ ವಿಮರ್ಶಕರೂ, ಹಾಗೂ ಹಿರಿಯ ಲೇಖಕರೂ, ಆಗಿದ್ದಾರೆ. ತಮ್ಮ ಹಿರಿಯ 'ತಾತಶ್ರೀ'ಗಳ ೩೨ ವರ್ಷಗಳ ಹಿಂದಿನ ಅಪರೂಪದ ಚಿತ್ರದ ಪ್ರತಿಯನ್ನು ಈಗ ಪಡೆಯಲು ಅವರು ಇಚ್ಛಿಸಿದರಂತೆ. ಹೀಗಾಗಿ, 'ಕರ್ನಾಟಕ ಸಂಘದ ಪದಾಧಿಕಾರಿಗಳು' ಆ ಚಿತ್ರವನ್ನು ಹುಡುಕಿ, ಕಳುಹಿಸಿರುತ್ತಾರೆ. ವಿಷಯಸಂಗ್ರಹ ಮೂಲಗಳು 'ಮೈಸೂರು ಸುಬ್ರಹ್ಮಣ್ಯಂ', 'ಡಾ ವಿ. ಎಸ್. ಸಂಪತ್ಕುಮಾರಾಚಾರ್ಯ', 'ಪ್ರೊ. ವಿ. ರಾಮರತ್ನಂ', 'ಮೈಸೂರು ಎ. ರಾಜಾರಾವ್' ರವರ, ಲೇಖನಗಳು, ’ಸಂಗೀತ ಸಮಯ’-'ಎಸ್. ಕೃಷ್ಣ ಮೂರ್ತಿ'. ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು ಕಲಾವಿದರು
1329
https://kn.wikipedia.org/wiki/%E0%B2%AD%E0%B2%BE%E0%B2%B0%E0%B2%A4%E0%B3%80%E0%B2%AF%20%E0%B2%B8%E0%B2%B6%E0%B2%B8%E0%B3%8D%E0%B2%A4%E0%B3%8D%E0%B2%B0%20%E0%B2%AA%E0%B2%A1%E0%B3%86
ಭಾರತೀಯ ಸಶಸ್ತ್ರ ಪಡೆ
ಭಾರತೀಯ ಸಶಸ್ತ್ರ ಪಡೆ ಭಾರತದ ಗಣರಾಜ್ಯದ ಮಿಲಿಟರಿ ಪಡೆಗಳಾಗಿವೆ. ಇದು ಮೂರುವೃತ್ತಿಪರ ಸಮವಸ್ತ್ರ ಸೇವೆಗಳನ್ನು ಒಳಗೊಂಡಿದೆ: ಭಾರತೀಯ ಸೇನೆ, ಭಾರತೀಯ ನೌಕಾಪಡೆ ಮತ್ತು ಭಾರತೀಯ ವಾಯುಸೇನೆ. ಹೆಚ್ಚುವರಿಯಾಗಿ, ಭಾರತೀಯ ಸಶಸ್ತ್ರ ಪಡೆಗಳನ್ನು ಭಾರತೀಯ ಕೋಸ್ಟ್ ಗಾರ್ಡ್ ಮತ್ತು ಅರೆಸೈನಿಕ ಸಂಸ್ಥೆಗಳು (ಅಸ್ಸಾಂ ರೈಫಲ್ಸ್, ಮತ್ತು ವಿಶೇಷ ಗಡಿನಾಡು ಪಡೆ) ಮತ್ತು ಸ್ಟ್ರಾಟೆಜಿಕ್ ಫೋರ್ಸ್ ಕಮಾಂಡ್, ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್ ಮತ್ತು ವಿವಿಧ ಅಂತರ್-ಸೇವಾ ಆಜ್ಞೆಗಳು ಮತ್ತು ಸಂಸ್ಥೆಗಳು ಬೆಂಬಲಿಸುತ್ತವೆ. ಸಂಯೋಜಿತ ರಕ್ಷಣಾ ಸಿಬ್ಬಂದಿ. ಭಾರತದ ರಾಷ್ಟ್ರಪತಿಗಳು ಭಾರತೀಯ ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್. ಭಾರತೀಯ ಸಶಸ್ತ್ರ ಪಡೆಗಳು ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ (ಎಂಒಡಿ) ನಿರ್ವಹಣೆಯಲ್ಲಿದೆ. ೧.೪ ಮಿಲಿಯನ್‌ಗಿಂತಲೂ ಹೆಚ್ಚು ಸಕ್ರಿಯ ಸಿಬ್ಬಂದಿಯೊಂದಿಗೆ, ಇದು ವಿಶ್ವದ ಎರಡನೇ ಅತಿದೊಡ್ಡ ಮಿಲಿಟರಿ ಪಡೆ ಮತ್ತು ವಿಶ್ವದ ಅತಿದೊಡ್ಡ ಸ್ವಯಂಸೇವಕ ಸೈನ್ಯವನ್ನು ಹೊಂದಿದೆ. ಇದು ವಿಶ್ವದ ಮೂರನೇ ಅತಿದೊಡ್ಡ ರಕ್ಷಣಾ ಬಜೆಟ್ ಅನ್ನು ಸಹ ಹೊಂದಿದೆ. ೨೦೧೫ರ ಕ್ರೆಡಿಟ್ ಸ್ಯೂಸ್ ವರದಿಯ ಪ್ರಕಾರ, ಭಾರತೀಯ ಸಶಸ್ತ್ರ ಪಡೆ ವಿಶ್ವದ ಐದನೇ ಅತ್ಯಂತ ಶಕ್ತಿಶಾಲಿ ಮಿಲಿಟರಿ. ಇತಿಹಾಸ ಹಲವಾರು ಸಹಸ್ರಮಾನಗಳಷ್ಟು ಹಳೆಯದಾದ ಮಿಲಿಟರಿ ಇತಿಹಾಸವನ್ನು ಭಾರತ ಹೊಂದಿದೆ. ಸೈನ್ಯದ ಮೊದಲ ಉಲ್ಲೇಖವು ವೇದಗಳ ಜೊತೆಗೆ ರಾಮಾಯಣ ಮತ್ತು ಮಹಾಭಾರತದ ಮಹಾಕಾವ್ಯಗಳಲ್ಲಿ ಕಂಡುಬರುತ್ತದೆ. ಬಿಲ್ಲುಗಾರಿಕೆ ಕುರಿತಾದ ಶಾಸ್ತ್ರೀಯ ಭಾರತೀಯ ಪಠ್ಯಗಳನ್ನು ಮತ್ತು ಸಾಮಾನ್ಯವಾಗಿ ಸಮರ ಕಲೆಗಳನ್ನು ಧನುರ್ವೇದ ಎಂದು ಕರೆಯಲಾಗುತ್ತದೆ. ಭಾರತೀಯ ಸಶಸ್ತ್ರ ಪಡೆಯ ಅಂಗಗಳು ಭಾರತೀಯ ಸಶಸ್ತ್ರ ಪಡೆ ಮೂರು ಮುಖ್ಯ ಅಂಗಗಳಿವೆ: ಭಾರತೀಯ ಭೂಸೇನೆ ಭಾರತೀಯ ವಾಯುಸೇನೆ ಭಾರತೀಯ ನೌಕಾಸೇನೆ ಇವುಗಳೊಂದಿಗೆ ಭಾರತೀಯ ಸೈನ್ಯದ ಅಂಗಗಳಾಗಿ ಅಥವಾ ಇವುಗಳ ಜೊತೆ ಕೆಲಸ ಮಾಡುವ ಅಂಗಗಳು ಸಹ ಸೇರಿವೆ: ಗಡಿ ರಕ್ಷಣಾ ದಳ (ಬಿಎಸ್‍ಎಫ್) ಅಸ್ಸಾಮ್ ರೈಫಲ್ಸ್ ರಾಷ್ಟ್ರೀಯ ರೈಫಲ್ಸ್ ಇತ್ತೀಚೆಗೆ (ಸಪ್ಟಂಬರ್ ೨೦೦೩ ರಲ್ಲಿ) ಸೇರಿಸಲ್ಪಟ್ಟ ಒಂದು ಅಂಗವೆಂದರೆ ಅಣುಶಕ್ತಿ ನಿರ್ವಹಣಾ ವಿಭಾಗ. ಭಾರತೀಯ ಸೇನೆಯ ಅತ್ಯುನ್ನತ ಕಮಾಂಡರ್ ಭಾರತೀಯ ಸೇನೆಯ ಅಂತಿಮ ಕಮಾಂಡರ್ ಯಾವಾಗಲೂ ಭಾರತದ ರಾಷ್ಟ್ರಪತಿ. ಇತರೆ ಭಾರತೀಯ ಸೇನೆಯ ವತಿಯಿಂದ ಕೊಡಲ್ಪಡುವ ಅತ್ಯುಚ್ಚ ಪ್ರಶಸ್ತಿ ಪರಮ ವೀರ ಚಕ್ರ. ಸಶಸ್ತ್ರ ಪಡೆಗಳ ಮೂರು ಮುಖ್ಯಸ್ಥರು ೯-೧೧-೨೦೧೬: ಸೇನಾ ಮುಖ್ಯಸ್ಥ ದಲಬಿರ್ ಸಿಂಗ್ ನೌಕಾದಳದ ಮುಖ್ಯಸ್ಥ ಸುನಿಲ್ ಲಂಬ ಮತ್ತು ಭಾರತೀಯ ವಾಯುಪಡೆಯ ಉಪ ಮುಖ್ಯ ಬಿಎಸ್ ಧನೊಅ ಭೂ ಸೇನಾ ಮುಖ್ಯಸ್ಥರಾಗಿ ಬಿಪಿನ್‌ ರಾವತ್‌ ಅಧಿಕಾರ ಸ್ವೀಕಾರ 31 Dec, 2016 ಜನರಲ್‌ ಬಿಪಿನ್‌ ರಾವತ್‌ ಅವರು ಸೇನಾ ಪಡೆಯ 27ನೇ ಮುಖ್ಯಸ್ಥರಾಗಿ ಶನಿವಾರ ಅಧಿಕಾರಿ ವಹಿಸಿಕೊಂಡರು. ಸೇನಾ ಪಡೆ ಮುಖ್ಯಸ್ಥ ಜನರಲ್‌ ದಲ್ಬೀರ್‌ ಸಿಂಗ್‌ ಸುಹಾಗ್‌ ಅವರ ಅಧಿಕಾರಾವಧಿ ಡಿಸೆಂಬರ್‌ 31ರಂದು ಕೊನೆಗೊಂಡಿದ್ದು, ಬಿಪಿನ್‌ ರಾವತ್‌ ಅವರು ನೂತನ ಮುಖ್ಯಸ್ಥರಾಗಿ ಅಧಿಕಾರ ವಹಿಸಿದರು. 1978ರಲ್ಲಿ ರಾವತ್‌ ಅವರು ಗೋರ್ಖಾ ರೈಫಲ್ಸ್ ಪಡೆಗೆ ನೇಮಕಗೊಳ್ಳುವ ಮೂಲಕ ಭಾರತೀಯ ಸೇನೆಯಲ್ಲಿ ಕರ್ತವ್ಯ ಪ್ರಾರಂಭಿಸಿದರು. ವಾಯುಪಡೆಯ ಮುಖ್ಯಸ್ಥರಾಗಿ ಬೀರೇಂದರ್ ಸಿಂಗ್ ಧನೋವಾ ಸಹ ಅಧಿಕಾರ ಸ್ವೀಕರಿಸಿದರು. ಬಿಪಿನ್ ಅವರು ಸೇನೆಯ 27ನೇ ಮುಖ್ಯಸ್ಥರಾಗಿದ್ದರೆ, ಧನೋವಾ ಅವರು ವಾಯುಪಡೆಯ 25ನೇ ಮುಖ್ಯಸ್ಥರಾಗಿದ್ದಾರೆ. ಭೂ ಸೇನಾ ಮುಖ್ಯಸ್ಥರಾಗಿ ಮುಕುಂದ್ ನರವಣೆ ಅಧಿಕಾರ ಸ್ವೀಕಾರ 2019 ಡಿಸೆಂಬರ್‌ 31 ರಂದು ಲೆಫ್ಟಿನೆಂಟ್ ಜನರಲ್‌ ಮನೋಜ್‌ ಮುಕುಂದ್ ನರವಣೆ ಅವರು ಭೂಸೇನಾ ಮುಖ್ಯಸ್ಥರಾಗಿ ರಾವತ್‌ ಅವರಿಂದ ಮಂಗಳವಾರ ಅಧಿಕಾರ ವಹಿಸಿಕೊಂಡರು. ಮೂರೂ ಪಡೆಗಳ ಮುಖ್ಯಸ್ಥರ ಹುದ್ದೆ ಸೃಷ್ಠಿ ಮತ್ತು ನೇಮಕ ಭಾರತದ ‘ರಕ್ಷಣಾ ಪಡೆಗಳ ಮುಖ್ಯಸ್ಥ-(ಬಿಪಿನ್ ರಾವತ್) ದಿ. 30-12-2019 ರಂದು ಹೊಸದಾಗಿ ರಚನೆಯಾಗಿರುವ ‘ರಕ್ಷಣಾ ಪಡೆಗಳ ಮುಖ್ಯಸ್ಥ’ (ಸಿಡಿಎಸ್- Chief of Defence Staff,) ಹುದ್ದೆಗೆ ಹಾಲಿ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರನ್ನು ನೇಮಕ ಮಾಡಲಾಗಿದೆ. ಅವರು ಹಾಲಿ ನಿರ್ವಹಿಸುತ್ತಿರುವ ಭೂ ಸೇನಾ ಮುಖ್ಯಸ್ಥ ಸೇವೆಯಿಂದ ನಿವೃತ್ತಿಯಾಗಲು ಒಂದು ದಿನ ಬಾಕಿ ಇರುವಾಗಲೇ ರಾವತ್ ಅವರನ್ನು ನೂತನ ಹುದ್ದೆಗೆ ನೇಮಕಮಾಡಲಾಗಿದೆ. ಸಿಡಿಎಸ್ ಮುಖ್ಯಸ್ಥರ ನಿವೃತ್ತಿ ವಯಸ್ಸು 65 ವರ್ಷ ಎಂದು ದಿ.29-12-2019 ರಂದು ಕೇಂದ್ರ ಸರ್ಕಾರ ಘೋಷಿಸಿತ್ತು. ಅವರು 2019 ಡಿಸೆಂಬರ್‌ 31ರಂದು ೬೨ ನೇ ವಯಸ್ಸಿಗೆ ನಿವೃತ್ತರಾದ ನಂತರವೂ ‘ರಕ್ಷಣಾ ಪಡೆಗಳ ಮುಖ್ಯಸ್ಥ’ರಾಗಿ ಮೂರು ವರ್ಷ ಮುಂದುವರೆಯುವರು. ಸಿಡಿಎಸ್ ಕರ್ತವ್ಯಗಳು 2019 ಡಿಸೆಂಬರ್‌ 31ರಿಂದ ಜಾರಿಗೆ ಬರುವಂತೆ ರಾವತ್‌ ಅವರನ್ನು ಸಿಡಿಎಸ್‌ ಆಗಿ ನೇಮಿಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ಪ್ರಕಟಣೆ ತಿಳಿಸಿದೆ. ರಾವತ್‌ ಅವರು ಸೇನೆಗೆ 1978ರ ಡಿಸೆಂಬರ್‌ನಲ್ಲಿ ಸೇರ್ಪಡೆಯಾಗಿದ್ದರು. ಸೇನಾ ಮುಖ್ಯಸ್ಥರಾಗಿ 2017ರ ಜನವರಿ 1ರಿಂದ ಅವರು ಕಾರ್ಯನಿರ್ವಹಿಸುತ್ತಿದ್ದರು; ರಾವತ್‌ ಅವರಿಗೆ ಮೂರೂ ಪಡೆಗಳ ಮುಖ್ಯಸ್ಥರು ಹೊಂದಿರುವ ಶ್ರೇಣಿಯೇ ಇರುತ್ತದೆ. ಆದರೆ, ಸಮಾನರಲ್ಲಿ ಪ್ರಥಮರು ಎಂಬುದು ಸಿಡಿಎಸ್‌ ಹುದ್ದೆಯ ಹೆಚ್ಚುಗಾರಿಕೆ.. ರ್‍ಯಾಂಕ್‌ ಮೂರೂ ಪಡೆಗಳ ಮುಖ್ಯಸ್ಥರಂತೆ ರಕ್ಷಣಾ ಪಡೆಗಳ ಮುಖ್ಯಸ್ಥರೂ ‘ನಾಲ್ಕು ಸ್ಟಾರ್‌’ ಅಧಿಕಾರಿ ಎನಿಸುವರು. ಅದೇ ವೇತನಶ್ರೇಣಿ ಅದೇ. ಆದರೆ ಇವರು ಸಮಾನರಲ್ಲಿ ಮೊದಲಿಗರಾಗಿರುತ್ತಾರೆ. ಸೇನಾ ಪಡೆಯ ಮುಖ್ಯಸ್ಥರು ಆ ಹುದ್ದೆಯಲ್ಲಿ ಮೂರು ವರ್ಷ ಪೂರ್ಣಗೊಳಿಸಿದಾಗ ಅಥವಾ 62 ವರ್ಷ ವಯಸ್ಸಾದಾಗ ನಿವೃತ್ತಿ ಹೊಂದುತ್ತಿದ್ದರು. ಈ ನಿಯಮಕ್ಕೆ ತಿದ್ದುಪಡಿ ಮಾಡಿರುವ ಸರ್ಕಾರವು ಸಿಡಿಎಸ್‌ ನಿವೃತ್ತಿ ವಯಸ್ಸನ್ನು ಮಾತ್ರ 65 ವರ್ಷಕ್ಕೆ ಹೆಚ್ಚಿಸಿದೆ. ‘ಮೂರು ಪಡೆಗಳಲ್ಲಿ ಬರಬಹುದಾದ ಸಮಸ್ಯೆಗಳನ್ನು ನಿವಾರಿಸಿ, ಸಮನ್ವಯ ರೂಪಿಸುವ ಮೂಲಕ ಒಂದು ನಿರ್ಧಾರಕ್ಕೆ ಬರಲು ಸಾಧ್ಯವಾಗುವಂತೆ ಸರ್ಕಾರಕ್ಕೆ ಸಲಹೆ ನೀಡಲು ಸಿಡಿಎಸ್‌ ಅಗತ್ಯ’ ಎಂದು ಸೇನೆಯ ನಿವೃತ್ತ ಅಧಿಕಾರಿಗಳು ಹೇಳುತ್ತಾರೆ. ರಕ್ಷಣಾ ನೀತಿ ರೂಪಿಸುವುದು, ಮೂರೂ ಪಡೆಗಳ ಬಜೆಟ್‌ ರೂಪಿಸುವುದು, ಶಸ್ತ್ರಾಸ್ತ್ರ ಖರೀದಿ, ತರಬೇತಿ, ಸೇನಾ ಕಾರ್ಯಾಚರಣೆಗಳನ್ನು ಯೋಜಿಸುವುದು, ಮೊದಲಾದ ವಿಚಾರಗಳಲ್ಲಿ ಮೂರೂ ಪಡೆಗಳಲ್ಲಿ ಸಮನ್ವಯ ಸಾಧಿಸುವುದಕ್ಕೆ ಇದು ಅನುಕೂಲ ಎಂದು ನಿವೃತ್ತ ಅಧಿಕಾರಿಗಳು ‘ರಕ್ಷಣಾ ಪಡೆಗಳ ಮುಖ್ಯಸ್ಥರು ಹೇಳುತ್ತಾರೆ. ಸೇನೆಗೆ ಬಲ ಪೂರಕ ಡ್ರೋನ್ ಒಪ್ಪಂದ 28 Jun, 2017 ಮೋದಿ ಮತ್ತು ಡೊನಾಲ್ಡ್ ಟ್ರಂಪ್ -ರಕ್ಷಣಾ ಸಹಕಾರ : ಕಡಲ ಕಣ್ಗಾವಲಿಗೆ ೨೨ - ರೂ.೧೨,೯೦೦ ರಿಂದ ೧೯,೩೫೦ ರ ಪ್ರಿಡೇಟರ್ ಡ್ರೋನ್ಭಾ ಭಾರತಕ್ಕೆ ಕರಾವಳಿ ಕಣ್ಗಾವಲು ಡ್ರೋನ್‌ಗಳ ಮಾರಾಟಕ್ಕೆ ಅಮೆರಿಕ ಒಪ್ಪಿಗೆ ಸೂಚಿಸಿದೆ. ಎರಡೂ ದೇಶಗಳ ಮಧ್ಯೆ ರಕ್ಷಣಾ ಮತ್ತು ಭದ್ರತಾ ಸಹಕಾರ ಏರ್ಪಟ್ಟಿದೆ. ಸೇನಾ ಸಲಕರಣೆ ಖರೀದಿ ರಕ್ಷಣಾ ಸಚಿವಾಲಯವು Rs.3,000 ಕೋಟಿ ಮೊತ್ತದ ಸೇನಾ ಸಲಕರಣೆಗಳಾದ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ಷಿಪಣಿ ಮತ್ತು ಶಸ್ತ್ರಸಜ್ಜಿತ ರಕ್ಷಣಾ ವಾಹನಗಳು ಸೇರಿವೆ. ಭಾರತೀಯ ಭೂ ಸೇನೆಯ ಅರ್ಜುನ ಟ್ಯಾಂಕ್‌ಗಳ ನೆರವಿಗೆಂದು ಅರ್ಮರ್ಡ್ ರಿಕವರಿ ವೆಹಿಕಲ್–ಎಆರ್‌ವಿಗಳನ್ನು (ಶಸ್ತ್ರಸಜ್ಜಿತ ರಕ್ಷಣಾ ವಾಹನ) ಖರೀದಿಸಸುವುದು. ಅರ್ಜುನ ಟ್ಯಾಂಕ್‌ಗಳು ಕೆಟ್ಟು ನಿಂತಾಗ, ದುರ್ಗಮ ಸ್ಥಳದಲ್ಲಿ ಸಿಲುಕಿದಾಗ ಅವನ್ನು ಅಲ್ಲಿಂದ ಹೊರಗೆ ತರುವ ಎಆರ್‌ವಿಗಳನ್ನು ಖರೀದಿಸಲು ಉದ್ದೇಶಿಸಿರುವ ಎಆರ್‌ವಿಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಿಡಿಸಿದೆ. ಈ ವಾಹನಗಳನ್ನು ಭಾರತ್ ಅರ್ಥ ಮೂವರ್ಸ್‌ ಲಿಮಿಟೆಡ್ ತಯಾರಿಸುತ್ತದೆ. ಸಾಮರ್ಥ್ಯ* 20 ಟನ್ ಎಳೆಯುವ ಸಾಮರ್ಥ್ಯ* 8 ಟನ್ ಭಾರ ಎತ್ತುವ ಸಾಮರ್ಥ್ಯ; ಕ್ಷಿಪಣಿಯ ವಿಶೇಷತೆಗಳು;* ಈ ಕ್ಷಿಪಣಿಯ ಗರಿಷ್ಠ ವೇಗ-3,700 ಕಿ.ಮೀ. ಇದು ಜಗತ್ತಿನ ಅತ್ಯಂತ ವೇಗದ ಕ್ಷಿಪಣಿ ಎಂಬ ಹೆಗ್ಗಳಿಕೆ ಹೊಂದಿದೆ; * 290 ಕಿ.ಮೀ. ಈ ಕ್ಷಿಪಣಿಯ ದಾಳಿ ವ್ಯಾಪ್ತಿ ಹೋದಿದೆ;* 200 ಕೆ.ಜಿ. ತೂಕದ ಸಿಡಿತಲೆಗಳನ್ನು ಹೊತ್ತೊಯ್ಯುವುದು. ಸೇನೆಗೆ ೨೦೨೦ - ೨೧ ರ ಅಂದಾಜು ಬಜೆಟ್ ರಕ್ಷಣಾ ಕ್ಷೇತ್ರಕ್ಕೆ ನೀಡುತ್ತಿರುವ ಅನುದಾನದಲ್ಲಿ ಮೂರು ವಿಭಾಗಗಳಿಗೆ ದೊರೆಯುತ್ತಿರುವ ಪ್ರಮಾಣ ಬಹಳ ಕಡಿಮೆ ಇದೆ. ಭೂ ಸೇನೆ, ವಾಯು ಪಡೆಗಳ ಅಭಿವೃದ್ಧಿಗೆ ಮತ್ತು ಬಹು ವಿಸ್ತಾರವಾದ ಸಾಗರ ಗಡಿ ಹೊಂದಿರುವ ಭಾರತದ ನೌಕಾಪಡೆಯ ಬಲವೃದ್ಧಿ ಹೆಚ್ಚು ಅನುದಾನ ಅಗತ್ಯ ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ದೇಶದ ರಕ್ಷಣಾ ವಲಯಕ್ಕೆ 2020–21ನೇ ಸಾಲಿನ ಬಜೆಟ್‌ನಲ್ಲಿ ರೋ.3.37 ಲಕ್ಷ ಕೋಟಿ ಮೀಸಲಿಟ್ಟಿರುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಶನಿವಾರ ಪ್ರಕಟಿಸಿದರು.ಆಧುನೀಕರಣ, ಶಸ್ತ್ರಾಸ್ತ್ರಗಳ ಖರೀದಿಗಾಗಿ ಈ ಬಜೆಟ್‌ನಲ್ಲಿ ರೂ.1.13 ಲಕ್ಷ ಕೋಟಿ ತೆಗೆದಿರಿಸಲಾಗಿದೆ. ನಿವೃತ್ತಿ ವೇತನಕ್ಕೆ ರೂ.1.33 ಲಕ್ಷ ಕೋಟಿ ತೆಗೆದಿರಿಸಲಾಗಿದೆ; ರಕ್ಷಣಾ ಕ್ಷೇತ್ರಕ್ಕೆ ಒಟ್ಟು ಜಿಡಿಪಿಯ- ಶೇ 1.5ರಷ್ಟಿದೆ. ಆಧುನೀಕರಣಕ್ಕೆ ಜಿಡಿಪಿಯ ಶೇ 2.5ರಷ್ಟು ಮೊತ್ತವನ್ನು ತೆಗೆದಿರಿಸಬೇಕು ಎಂಬುದು ತಜ್ಞರ ಅಭಿಪ್ರಾಯ. ಭಾರತಕ್ಕಿಂತಲೂ ಚೀನಾ, ಪಾಕಿಸ್ತಾನ ಮುಂದಿವೆ: ಕಳೆದ ವರ್ಷದ 2019-20 ಮಧ್ಯಂತರ ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ರೂ.3 ಲಕ್ಷ ಕೋಟಿ ಅನುದಾನ ನೀಡಿದ್ದರೂ ನೆರೆಯ ಪಾಕಿಸ್ತಾನ ಮತ್ತು ಚೀನಾಗೆ ಹೋಲಿಸಿದರೆ ಅದು ಕಡಿಮೆ. ಭಾರತದ ರಕ್ಷಣಾ ಅನುದಾನ ದೇಶದ ಜಿಡಿಪಿಯ ಶೇ 2ಕ್ಕಿಂತಲೂ ಕಡಿಮೆ ಇದೆ. ಆದರೆ ಪಾಕಿಸ್ತಾನವು ಜಿಡಿಪಿಯ ಶೇ 3.5 ಮತ್ತು ಹೆಚ್ಚು ಆದಾಯವಿರುವ ಚೀನಾವು ಜಿಡಿಪಿಯ ಶೇ 3ರರಷ್ಟನ್ನು ರಕ್ಷಣಾ ಕ್ಷೇತ್ರಕ್ಕೆ ಅನುದಾನ ನೀಡುತ್ತಿವೆ. ಭಾರತದಲ್ಲಿ 1,000 ಮಂದಿಗೆ ಒಬ್ಬನಂತೆ ಯೋಧರಿದ್ದರೆ ಪಾಕಿಸ್ತಾನದಲ್ಲಿ ಸರಾಸರ 4.25 ಜನಕ್ಕೆ ಒಬ್ಬಯೋಧ, ಮತ್ತು ಚೀನಾದಲ್ಲಿ 2.23ರಂತೆ(ಜನಕ್ಕೆ) ಒಬ್ಬ ಯೋಧರಿದ್ದಾರೆ. ನೋಡಿ ಭಾರತ ಮತ್ತು ಪಾಕೀಸ್ತಾನಗಳ ಆರ್ಥಿಕ ಬಲ ಮತ್ತು ಸೈನ್ಯ ಬಲ 2008ರ ಮುಂಬಯಿ ದಾಳಿ ರಫೆಲ್ ಯುದ್ಧವಿಮಾನ - ಭಾರತ ಮತ್ತು ಫ್ರಾನ್ಸ್ ಒಪ್ಪಂದ ಭಾರತೀಯ ವಾಯುಸೇನೆ ಭಾರತೀಯ ವಾಯುಸೇನೆ ಉರಿಯಲ್ಲಿ ಭಯೋತ್ಪಾದಕರ ದಾಳಿ ೨೦೧೬ ಭಯೋತ್ಪಾದನೆ ಅರ್ಜುನ ಕದನ ಟ್ಯಾಂಕ್ ರಾಷ್ಟ್ರೀಯ ಭದ್ರತೆ ರಕ್ಷಣಾ ಸಾಮಗ್ರಿ ರಪ್ತು ಯೋಜನೆ 2025ರ ವೇಳೆಗೆ ದೇಶದಲ್ಲಿ ಉತ್ಪಾದಿಸಿದ ರೂ.35 ಸಾವಿರ ಕೋಟಿಯಷ್ಟು ಮೌಲ್ಯದ ರಕ್ಷಣಾ ಸಾಮಗ್ರಿಯನ್ನು ರಫ್ತು ಮಾಡುವ ಯೋಜನೆ. ರಕ್ಷಣಾ ಸಾಮಗ್ರಿಗಳ ರಫ್ತು ಕ್ಷೇತ್ರದಲ್ಲಿ 2020ರಲ್ಲಿ 24ನೇ ಸ್ಥಾನದಲ್ಲಿ ಭಾರತದ ಇದೆ. ಅದನ್ನು ಉತ್ತಮಪಡಿಸುವ ಯೋಜನೆಗಳ ರೂಪುರೇಷೆ;ಲಖನೌದಲ್ಲಿ ಡಿಫೆನ್ಸ್ ಎಕ್ಸ್‌ಪೊ ಮತ್ತು 2020:ಭಾರತದ ಗುರಿ;d: 06 ಫೆಬ್ರವರಿ 2020} ಪೂರಕ ಮಾಹಿತಿ ಎಸ್‌–400 ಕ್ಷಿಪಣಿ:ರಷ್ಯಾದಿಂದ ಎಸ್‌–400 ಕ್ಷಿಪಣಿ ಖರೀದಿಗೆ ಭಾರತ ಒಲವು, ಅಮೆರಿಕ ಅಸಮಾಧಾನ;29 May, 2018 & ರಷ್ಯಾದೊಂದಿಗೆ ಭಾರತ ಒಪ್ಪಂದ ರಕ್ಷಣಾ ಸಾಮರ್ಥ್ಯ ಹೆಚ್ಚಿಸಲಿದೆ ಎಸ್‌–400 ಟ್ರಯಂಪ್;30 May, 2018 ವಾಯುದಾಳಿ ನಿಷ್ಕ್ರಿಯಕ್ಕೆ ಆಗಸದಲ್ಲೇ ಗುರಾಣಿ;;: 05 ಅಕ್ಟೋಬರ್ 2018 ಆಭಿಪ್ರಾಯಗಳು-ಸಲಹೆಗಳು ಸೇನೆಯ ಹೊಟ್ಟೆ ಗಟ್ಟಿ ಮಾಡಿ!(8Oct,2016):ಕ್ಯಾ.ಜಿ.ಆರ್ ಗೋಪಿನಾಥ್: ಶತ್ರು ಪಾಳಯದೊಳಗೇ ನುಗ್ಗುವ ವಿಶೇಷ ಪಡೆ;8 Oct, 2016; ಬಾಹ್ಯ ಸಂಪರ್ಕಗಳು Bharat Rakshak - ಭಾರತೀಯ ಸೇನೆಗೆ ಸಂಬಂಧಪಟ್ಟ ಅನೇಕ ಲೇಖನಗಳಿವೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಡನೆ ಎಸ್‌–400 ವಾಯುಪ್ರದೇಶ ರಕ್ಷಣಾ ಕ್ಷಿಪಣಿಗಳ ಖರೀದಿಗೆ ಪ್ರಧಾನಿ ನರೇಂದ್ರ ಮೋದಿ ಸಹಿ ಹಾಕಿದ್ದಾರೆ. ಸುಮಾರು ₹40 ಸಾವಿರ ಕೋಟಿ ಮೊತ್ತದ ಈ ಒಪ್ಪಂದಸುದೀರ್ಘ ಕಥನ: ಆಗಸ–ಸಾಗರ ರಕ್ಷಣೆಗೆ ರಷ್ಯಾ ಸಹಯೋಗ;05 ಅಕ್ಟೋಬರ್ 2018 ಉಲ್ಲೇಖ ಭಾರತೀಯ ಸೈನ್ಯ ಭಾರತ
1332
https://kn.wikipedia.org/wiki/%E0%B2%AD%E0%B2%BE%E0%B2%B0%E0%B2%A4%E0%B3%80%E0%B2%AF%20%E0%B2%B5%E0%B2%BE%E0%B2%AF%E0%B3%81%E0%B2%B8%E0%B3%87%E0%B2%A8%E0%B3%86
ಭಾರತೀಯ ವಾಯುಸೇನೆ
ಭಾರತೀಯ ವಾಯುಸೇನೆ ಪ್ರಪಂಚದ ಅತಿ ದೊಡ್ಡ ವಾಯು ಸೇನೆಗಳಲ್ಲಿ ಒಂದು. ಇದನ್ನು ಸ್ಥಾಪಿಸಿದ್ದು ಅಕ್ಟೋಬರ್ ೮, ೧೯೩೨ ರಂದು. ಚರಿತ್ರೆ ೧೯೩೨ ರಲ್ಲಿ ಅಸ್ತಿತ್ವಕ್ಕೆ ಬಂದ ವಾಯುಸೇನೆಯ ನಂ.೧ ಸ್ಕ್ವಾಡ್ರನ್ ೧೯೩೩ ರಲ್ಲಿ ಕರಾಚಿಯಲ್ಲಿ ಕಾರ್ಯಸ್ಥಿತಿಗೆ ಬಂದಿತು. ಆಗ ಇದ್ದದ್ದು ಕೇವಲ ಐದು ಪೈಲಟ್ ಗಳು! ಕೇವಲ ನಾಲ್ಕು ವಪೀಟೀ ವಿಮಾನಗಳನ್ನು ಹೊಂದಿದ್ದ ವಾಯುಸೇನೆ ಇಂದು ೨೦೦೦ ಕ್ಕೂ ಹೆಚ್ಚು ಯುದ್ಧವಿಮಾನಗಳನ್ನು ಹೊಂದಿದೆ. ಮೊದಲ ಪೈಲಟ್ ಗಳು ಭಾರತೀಯ ವಾಯುಸೇನೆಯ ಮೊದಲ ಐದು ಪೈಲಟ್‍ಗಳು ಹೆ ಸಿ ಸರ್ಕಾರ್, ಸುಬ್ರೊತೊ ಮುಖರ್ಜೀ, ಭೂಪೇಂದ್ರ ಸಿಂಗ್, ಎ ಬ್ ಅವನ್ ಮತ್ತು ಅಮರ್ಜೀತ್ ಸಿಂಗ್. ೧೯೩೩ ರಲ್ಲಿ ಸೇರಿದ ಈ ಐವರಲ್ಲಿ ಭೂಪೇಂದ್ರ ಸಿಂಗ್ ಮತ್ತು ಅಮರ್ಜೀತ್ ಸಿಂಗ್ ವಿಮಾನ ಅಪಘಾತಗಳಲ್ಲಿ ಮೃತರಾದರು. ಸರ್ಕಾರ್ ಒಂದು ವರ್ಷದೊಳಗೇ ವಾಯುಸೇನೆಯನ್ನು ಬಿಟ್ಟರು. ಎ ಬಿ ಅವನ್ ಭಾರತದ ವಿಂಗಡಣೆಯ ನಂತರ ಪಾಕಿಸ್ತಾನವನ್ನು ಸೇರುವುದಾಗಿ ನಿರ್ಧರಿಸಿದರು. ಸುಬ್ರೊತೊ ಮುಖರ್ಜಿ ಮುಂದೆ ಭಾರತೀಯ ಸೇನೆಯ ಮೊದಲ ಮುಖ್ಯಸ್ಥರಾದರು. ಎರಡನೆಯ ಮಹಾಯುದ್ಧದ ಮೊದಲು ಇನ್ನಷ್ಟು ವಿಮಾನಗಳು ಮತ್ತು ಪೈಲಟ್‍ಗಳು ವಾಯುಸೇನೆಯನ್ನು ಸೇರಿದರು. ಎರಡನೇ ಮಹಾಯುದ್ಧ ಭಾರತೀಯ ಸೈನ್ಯ ಎರಡನೇ ಮಹಾಯುದ್ಧದಲ್ಲಿ ಅತಿ ದೊಡ್ಡ ಸ್ವಯಂಸೇವಕ ಪಡೆ ಎಂಬುದು ಹೆಚ್ಚು ಜನರಿಗೆ ತಿಳಿದಿಲ್ಲ. ಒಟ್ಟು ೨ ಕೋಟಿ ಭಾರತೀಯ ಸೈನಿಕರು ಪಾಲ್ಗೊಂಡ ಈ ಯುದ್ಧದಲ್ಲಿ ಭಾರತೀಯ ವಾಯುಸೇನೆಯೂ ಪಾಲ್ಗೊಂಡಿತು. ೧೯೪೭-೪೮ ಕಾಶ್ಮೀರ ಯುದ್ಧ ಅಕ್ಟೋಬರ್ ೨೦, ೧೯೪೭ ರಲ್ಲಿ ಪಾಕಿಸ್ತಾನದಿಂದ ಸಹಾಯ ಪಡೆದ ಪಠಾಣರ ದಳವೊಂದು ಕಾಶ್ಮೀರದೊಳಕ್ಕೆ ನುಗ್ಗಿತು. ಕಾಶ್ಮೀರದ ಮಹಾರಾಜರಾದ ಹರಿ ಸಿಂಗ್ ಭಾರತದ ಸಹಾಯ ಕೋರಿದರು. ಕಾಶ್ಮೀರ ಭಾರತಕ್ಕೆ ಸೇರಬೇಕೆಂಬ ಶರತ್ತಿನ ಸಹಾಯ ನೀಡಿದ ಭಾರತ, ವಾಯುಸೇನಯ ವಿಮಾನಗಳ ಮೂಲಕ ತನ್ನ ಸೈನಿಕರನ್ನು ಕಾಶ್ಮೀರಕ್ಕೆ ಸಾಗಿಸಿತು. ಡಿಸಂಬರ್ ೩೧, ೧೯೪೮ ರಲ್ಲಿ ಈ ಯುದ್ಧ ಕೊನೆಗೊಂಡಿತು. ವಾಯುಸೇನೆ ನೇರವಾಗಿ ಯುದ್ಧದಲ್ಲಿ ಪಾಲ್ಗೊಳ್ಳುವ ಸಂದರ್ಭ ಈ ಯುದ್ಧದಲ್ಲಿ ಉಂಟಾಗಲಿಲ್ಲ. ೧೯೬೧ ಕಾಂಗೋ ಜೂನ್ ೩೦, ೧೯೬೦ ರಲ್ಲಿ ಕಾಂಗೋ ದೇಶದ ಮೇಲಿನ ಬೆಲ್ಜಿಯಮ್ ನ ಆಡಳಿತ ಹಠಾತ್ತಾಗಿ ಕೊನೆಗೊಂಡಿತು. ಆಗ ಅಲ್ಲಿ ಶಾಂತಿ ನಿರ್ವಹಣಾ ಕಾರ್ಯಕ್ಕೆ ವಿಶ್ವಸಂಸ್ಥೆ ಸಹಾಯವನ್ನು ಕೋರಿತು. ಭಾರತದ ಪ್ರಧಾನಿ ಜವಾಹರಲಾಲ್ ನೆಹರು ಭಾರತೀಯ ವಾಯುಸೇನೆಯ ವಿಮಾನಗಳು ಮತ್ತು ಸೈನಿಕರನ್ನು ಒದಗಿಸಿದರು. ಕೆನ್ಬೆರ್ರಾ ಯುದ್ಧವಿಮಾನ ಈ ಕಾಲದಲ್ಲಿ ಉಪಯೋಗಿತವಾಯಿತು. ವಾಯು ಸೇನೆ ಮುಖ್ಯಸ್ಥರು 31 Dec, 2016 ವಾಯುಪಡೆಯ ಮುಖ್ಯಸ್ಥರಾಗಿ ರಾಕೇಶ್ ಸಿಂಗ್ ಭಾದೌಇರ ಅವರು 30 sep, 2019 ಶನಿವಾರ ಅಧಿಕಾರ ಸ್ವೀಕರಿಸಿದರು. ಬಿಪಿನ್ ಅವರು ಸೇನೆಯ 28ನೇ ಮುಖ್ಯಸ್ಥರಾಗಿದ್ದರೆ, ರಾಕೇಶ್ ಸಿಂಗ್ ಭಾದೌಇರ ಅವರು ವಾಯುಪಡೆಯ/ಮುಖ್ಯಸ್ಥರಾಗಿದ್ದಾರೆhttpwww.prajavani.net/news/article/2016/12/31/462862.html ವಾಯುಪಡೆ, ಸೇನೆಯ ಹೊಸ ಮುಖ್ಯಸ್ಥರ ಅಧಿಕಾರ ಸ್ವೀಕಾರ;ಪಿಟಿಐ;1 Jan, 2017] ೧೯೬೨ ಭಾರತ-ಚೀನಾ ಯುದ್ಧ ೧೯೬೫ ಭಾರತ-ಪಾಕಿಸ್ತಾನ ಯುದ್ಧ ೧೯೭೧ ಭಾರತ ಪಾಕಿಸ್ತಾನ ಯುದ್ಧ ವಾಯುಸೇನೆಯ ವಿಮಾನಗಳು ಬಾಂಬರ್ ಗಳು ಲಿಬರೇಟರ್ ಕೆನ್‍ಬೆರ್ರಾ ಫೈಟರ್ ಗಳು ಸುಖೋಯಿ Su-30MKI ಮಿರಾಜ್ 2000H ಜಾಗ್ವಾರ್ IS ಜಾಗ್ವಾರ್ IM ಮಿಗ್-೨೯ (Fulcrum) ಮಿಗ್-೨೭ ML (Flogger) ಮಿಗ್-೨೫ U (Foxbat) ಮಿಗ್-೨೫ R (Foxbat) ಮಿಗ್-೨೩ MF (Flogger) ಮಿಗ್-೨೩ BN (Flogger) ಮಿಗ್-೨೧ Bison (Fishbed) ಮಿಗ್-೨೧ Bis (Fishbed) ಮಿಗ್-೨೧ M (Fishbed) ಮಿಗ್-೨೧ MF(Fishbed) ಮಿಗ್-೨೧ FL(Fishbed) ಮಿಗ್-೨೧ PF(Fishbed) ಮಿಗ್-೨೧ F-13(Fishbed) ಕಳೆದ 40 ವರ್ಷಗಳಲ್ಲಿ ಮಿಗ್‌–21 ಯುದ್ಧ ವಿಮಾನಗಳು ಹಲವು ಬಾರಿ ಪತನಗೊಂಡಿವೆ. ಭಾರತ 872 ಮಿಗ್‌ ವಿಮಾನಗಳಲ್ಲಿ ಅರ್ಧದಷ್ಟು ಕಳೆದುಕೊಂಡಿದೆ. 1973–74ರಲ್ಲಿ ಭಾರತೀಯ ವಾಯುಪಡೆಗೆ ಮಿಗ್‌–21 ಯುದ್ಧ ವಿಮಾನ ಸೇರ್ಪಡೆಯಾಯಿತು. 2006ರಲ್ಲಿ ಕನಿಷ್ಠ 110 ಮಿಗ್‌–21 ಯುದ್ಧ ವಿಮಾನಗಳನ್ನು ಆಧುನೀಕರಿಸಲಾಯಿತು. ಮಿಗ್‌–21 ಬೈಸನ್‌ ಹೆಸರಿನ ಅವುಗಳು ಅಧಿಕ ಸಾಮರ್ಥ್ಯದ ರಡಾರ್‌, ಉತ್ತಮಗೊಳಿಸಿದ ಎಲೆಕ್ಟ್ರಾನಿಕ್‌ ವ್ಯವಸ್ಥೆ ಹಾಗೂ ಸಂವಹನ ವ್ಯವಸ್ಥೆಯನ್ನು ಒಳಗೊಂಡಿವೆ. ಹೆಲಿಕಾಪ್ಟರ್ ಗಳು HAL ಧ್ರುವ HAL ಚೀತಾ HAL ಚೇತಕ್ ತರಬೇತಿ ವಿಮಾನಗಳು BAE Hawk HAL HJT-16 ("ಕಿರಣ್") HAL HPT-32 ("ದೀಪಕ್") ಬರಲಿರುವ ವಿಮಾನಗಳು HAL ತೇಜಸ್ (ಹಗುರ ಯುದ್ಧ ವಿಮಾನ) HAL ಹೆಚ್-ಜೆ-ಟಿ ೩೬ (ತರಬೇತಿ ವಿಮಾನ) ಮಿಗ್–21 ಯುದ್ಧ ವಿಮಾನ ಅಪಘಾತ ಭಾರತೀಯ ವಾಯುಪಡೆಯಲ್ಲಿ ಬಳಸಿದ ಮೊದಲ ಸೂಪರ್‌ಸಾನಿಕ್‌ ಜೆಟ್‌ ಯುದ್ಧ ವಿಮಾನ. 1971ರ ಬಾಂಗ್ಲಾ ವಿಮೋಚನಾ ಯುದ್ಧ ಮತ್ತು 1999ರ ಕಾರ್ಗಿಲ್‌ ಯುದ್ಧಗಳ ಗೆಲುವಿನಲ್ಲಿ ಈ ವಿಮಾನಗಳು ಮಹತ್ವದ ಪಾತ್ರ ವಹಿಸಿವೆ. ವಿಶ್ವದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿರುವ ಯುದ್ಧ ವಿಮಾನಗಳ ಪೈಕಿ ಸೋವಿಯತ್ ರಷ್ಯಾದ ಮಿಗ್‌–21 ವಿಮಾನಕ್ಕೆ ಅಗ್ರ ಸ್ಥಾನ. 1955ರಲ್ಲಿ ತಯಾರಾದ ಈ ವಿಮಾನ ಈಗಲೂ ಬೇರೆ ಬೇರೆ ರಾಷ್ಟ್ರಗಳ ವಾಯುಪಡೆಗಳಲ್ಲಿ ಸೇವೆ ಸಲ್ಲಿಸುತ್ತಿವೆ. ಭಾರತೀಯ ವಾಯುಪಡೆಯಲ್ಲೂ ಮಿಗ್‌–21 ತುಕಡಿಗಳಿವೆ. ನಿವೃತ್ತಿಯ ಅಂಚಿನಲ್ಲಿರುವ ಈ ವಿಮಾನಗಳು ಪದೇ ಪದೇ ಅಪಘಾತಕ್ಕೆ ಈಡಾಗುತ್ತಿವೆ. ಅವಧಿ ಮುಗಿದ ನಂತರವೂ ಅವನ್ನು ಬಳಸುತ್ತಿರುವುದು ಅಪಘಾತಕ್ಕೆ ಪ್ರಮುಖ ಕಾರಣ ಎಂಬ ಅಭಿಪ್ರಾಯ ತಜ್ಞರಿಂದ ವ್ಯಕ್ತವಾಗಿದೆ. ಭಾರತೀಯ ಸೇನೆಯಲ್ಲಿ ಸೇವೆ ಭಾರತೀಯ ವಾಯುಪಡೆಯಲ್ಲಿ ಬಳಸಿದ ಮೊದಲ ಸೂಪರ್‌ಸಾನಿಕ್‌ ಜೆಟ್‌ ಯುದ್ಧ ವಿಮಾನ. 1971ರ ಬಾಂಗ್ಲಾ ವಿಮೋಚನಾ ಯುದ್ಧ ಮತ್ತು 1999ರ *ಕಾರ್ಗಿಲ್‌ ಯುದ್ಧಗಳ ಗೆಲುವಿನಲ್ಲಿ ಈ ವಿಮಾನಗಳು ಮಹತ್ವದ ಪಾತ್ರ ವಹಿಸಿವೆ. 1990ರ ದಶಕದಲ್ಲೇ ಇವುಗಳನ್ನು ಸೇವೆಯಿಂದ ನಿವೃತ್ತಿಗೊಳಿಸಬೇಕಾಗಿತ್ತು. ಆದರೆ ಇವುಗಳಿಗೆ ಸರಿಸಮನಾದ ಯುದ್ಧ ವಿಮಾನ ವಾಯುಪಡೆಯಲ್ಲಿ ಇಲ್ಲದ ಕಾರಣ ಇವುಗಳ ಸೇವೆಯನ್ನು ಮುಂದುವರೆಸಲಾಗಿದೆ. ಮಿಗ್‌–21 ಎಂಎಫ್‌ ಮತ್ತು ಮಿಗ್ –21 ಬಿಸನ್‌ ಎಂಬ ಎರಡು ಅವತರಣಿಕೆಯ ವಿಮಾನಗಳು ಸೇವೆಯಲ್ಲಿದ್ದವು. ಈಗ ಎಂಎಫ್‌ ಸರಣಿಯ ವಿಮಾನಗಳನ್ನು ನಿವೃತ್ತಿ ಮಾಡಲಾಗಿದೆ. ಎಚ್‌ಎಎಲ್‌ ತಯಾರಿಸಿದ ಎಚ್ಎಎಲ್ ತೇಜಸ್ ಲಘು ಯುದ್ಧ ವಿಮಾನಗಳು ಸೇವೆಗೆ ಲಭ್ಯವಾದ ನಂತರ ಬಿಸನ್‌ ಸರಣಿಯ ಮಿಗ್‌–21ಗಳನ್ನೂ ಸೇವೆಯಿಂದ ನಿವೃತ್ತಿಗೊಳಿಸಲಾಗುತ್ತದೆ.ಶ್ರೀನಗರ: (ತಾಂತ್ರಿಕ ಸಮಸ್ಯೆಯಿಂದ ಮಿಗ್–21 ಯುದ್ಧ ವಿಮಾನವು ತುರ್ತು ಭೂಸ್ಪರ್ಶ ಮಾಡಿರುವ ಘಟನೆ ಮಂಗಳವಾರ 20 Sep, 2016 ನಂದು ಶ್ರೀನಗರ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಘಟನೆಯಲ್ಲಿ ಫೈಲಟ್ ಸೇರಿದಂತೆ ಯಾರಿಗೂ ಅಪಾಯ ಆಗಿಲ್ಲ ಎಂದು ಮೂಲಗಳು ತಿಳಿಸಿವೆ. ವಿವರ ತಯಾರಿಕಾ ಸಂಸ್ಥೆ: ಸೋವಿಯತ್‌ ಒಕ್ಕೂಟದ ಮಿಕೊಯಾನ್ ಗೌರೆವಿಚ್ ತಾಂತ್ರಿಕ ವಿವರ 15.7 ಮೀಟರ್ ಉದ್ದ 4.5 ಮೀಟರ್ ಎತ್ತರ 7.15 ಮೀಟರ್ ರೆಕ್ಕೆಗಳ ಅಗಲ 6,050 ಕೆ.ಜಿ ಖಾಲಿ ತೂಕ 10,050 ಕೆ.ಜಿ ಭರ್ತಿ ತೂಕ 14 ಸಾವಿರಕ್ಕಿಂತ ಹೆಚ್ಚು ವಿಮಾನ ತಯಾರಿ 2,050 ಕಿ.ಮೀ ವೇಗ 54,500 ಅಡಿ ಎತ್ತರದಲ್ಲಿ ಹಾರಾಟ ನಡೆಸುವ ಸಾಮರ್ಥ್ಯ 54,500 ಅಡಿ ಎತ್ತರದಲ್ಲಿ ಹಾರಾಟ ನಡೆಸುವ ಸಾಮರ್ಥ್ಯ ಸೇರ್ಪಡೆ ಮತ್ತು ಸೇವೆಯಿಂದ ನಿವೃತ್ತಿ 1963ರಲ್ಲಿ ಭಾರತೀಯ ವಾಯುಪಡೆಗೆ ಮಿಗ್‌ ಯುದ್ಧವಿಮಾನಗಳ ಸೇರ್ಪಡೆ 872 ಮಿಗ್–21 ಎಂಎಫ್‌ ಮತ್ತು ಮಿಗ್‌–21 ಬಿಸನ್‌ ವಿಮಾನಗಳ ಸಂಖ್ಯೆ 485 ಈವರೆಗೆ ಪತನವಾಗಿರುವ ಎರಡೂ ಅವತರಣಿಕೆಯ ವಿಮಾನಗಳ ಸಂಖ್ಯೆ 171 ಪತನಗಳಲ್ಲಿ ಮೃತಪಟ್ಟಿರುವ ಪೈಲಟ್‌ಗಳ ಸಂಖ್ಯೆ 2013ರ ಡಿಸೆಂಬರ್‌ ಮಿಗ್‌–21 ಎಂಎಫ್‌ ವಿಮಾನಗಳು ಸೇವೆಯಿಂದ ನಿವೃತ್ತಿ 8 ಪತನ ಸಂಬಂಧಿ ಘಟನೆಗಳಲ್ಲಿ ಮೃತಪಟ್ಟ ತುರ್ತು ಸೇವೆಗಳ ಸಿಬ್ಬಂದಿ 40 ಪತನಗಳಲ್ಲಿ ಮೃತಪಟ್ಟ ನಾಗರಿಕರು 150 ಈಗ ಸೇವೆಯಲ್ಲಿರುವ ಮಿಗ್–21 ಬಿಸನ್ ವಿಮಾನಗಳ ಸಂಖ್ಯೆ 2022‌ ಮಿಗ್‌–21 ವಿಮಾನಗಳು ಸಂಪೂರ್ಣವಾಗಿ ಸೇವೆಯಿಂದ ನಿವೃತ್ತಿಯಾ ಗಲಿವೆ ರಫೆಲ್ ಜೆಟ್ ಒಪ್ಪಂದ ವಿಶೇಷ ಲೇಖನ:ರಫೆಲ್ ಯುದ್ಧವಿಮಾನ - ಭಾರತ ಮತ್ತು ಫ್ರಾನ್ಸ್ ಒಪ್ಪಂದ ಫೇಲ್ ಯುದ್ಧ ವಿಮಾನಗಳ ಖರೀದಿಗೆ ರೂ.59 ಸಾವಿರ ಕೋಟಿ ಮೊತ್ತದ ಒಪ್ಪಂದಕ್ಕೆ ಭಾರತ ಮತ್ತು ಫ್ರಾನ್ಸ್‌ ದಿ.23 Sep 2016:ಶುಕ್ರವಾರ ಸಹಿ ಮಾಡಿದವು. ಅತ್ಯಾಧುನಿಕ ಕ್ಷಿಪಣಿ ಹಾಗೂ ಶಸ್ತ್ರಾಸ್ತ್ರ ಹೊತ್ತೊಯ್ಯುವ ಸಾಮರ್ಥ್ಯ ಇರುವ ಈ ಯುದ್ಧ ವಿಮಾನ, ಭಾರತೀಯ ವಾಯುಪಡೆಗೆ ಪಾಕಿಸ್ತಾನಕ್ಕಿಂತ ಹೆಚ್ಚಿನ ಸಾಮರ್ಥ್ಯವನ್ನು ನೀಡಲಿದೆ ಎನ್ನಲಾಗಿದೆ. ಭಾರತದ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಮತ್ತು ಫ್ರಾನ್ಸ್‌ನ ರಕ್ಷಣಾ ಸಚಿವ ಜೀನ್ ಯವೆಸ್‌ ಲೆ ಡ್ರಿಯಾನ್ ಅವರ ಸಮ್ಮುಖದಲ್ಲಿ ಈ ಒಪ್ಪಂದ ನಡೆದಿದೆ. 16 ತಿಂಗಳ ಹಿಂದೆ ಫ್ರಾನ್ಸ್‌ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲಾಗುವುದು ಎಂದು ಘೋಷಿಸಿದ್ದರು. ಫ್ರೆಂಚ್ ನ ರಕ್ಷಣಾ ಸಚಿವ ಜೀನ್ ಯೆಸ್ ಲೆ ಡ್ರಿಯಾನ್ ಅವರು ನವದೆಹಲಿಗೆ ಆಗಮಿಸುತ್ತಿದ್ದು ಬಹುನಿರೀಕ್ಷಿತ ರಫೆಲ್ ಜೆಟ್ ಒಪ್ಪಂದಕ್ಕೆ ಭಾರತದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಸಹಿಹಾಕಿದ್ದಾರೆ. ಫ್ರಾನ್ಸ್ ನೊಂದಿಗೆ ಚೌಕಾಶಿ ಮೂಲಕ ಭಾರತ 7.8 ಬಿಲಿಯನ್ ಯುರೋಗಳಿಗೆ 36 ರಾಫೆಲ್ ಜೆಟ್ ಗಳನ್ನು ಖರೀದಿಸುವುದು ಅಂತಿಮವಾಗಿದ್ದು, ಒಪ್ಪಂದ ಪ್ರಕ್ರಿಯೆಯಲ್ಲಿ ರಾಫೆಲ್ ಜೆಟ್ ತಯಾರಕ ಸಂಸ್ಥೆ ಡಸ್ಸಾಲ್ಟ್ ಏವಿಯೇಷನ್ ಸೇರಿದಂತೆ ಫ್ರೆಂಚ್ ನ ಹಲವು ಸಂಸ್ಥೆಗಳ ಸಿಇಒ ಗಳು ಭಾಗಿಯಾಗಲಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ ಮಾಡಿಕೊಳ್ಳಲಾಗಿದ್ದ ಒಪ್ಪಂದವನ್ನು ಮೋದಿ ಸರ್ಕಾರ ರದ್ದುಗೊಳಿಸಿ ಹೊಸ ಒಪ್ಪಂದಕ್ಕೆ ಮುಂದಾಗಿದ್ದು, ಇದರಿಂದಾಗಿ ಭಾರತಕ್ಕೆ 750 ಮಿಲಿಯನ್ ಯುರೋಗಳಷ್ಟು ಹಣ ಉಳಿತಾಯವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಒಪ್ಪಂದ ನಡೆದ 36 ತಿಂಗಳಲ್ಲಿ ರಾಫೆಲ್ ಜೆಟ್ ಭಾರತೀಯ ಸೇನೆಗೆ ಸೇರ್ಪಡೆಗೊಳ್ಳಲಿದ್ದು, 66 ತಿಂಗಳಲ್ಲಿ ಒಟ್ಟು 36 ರಾಫೆಲ್ ಜೆಟ್ ಗಳು ಭಾರತದ ಕೈಸೇರಲಿವೆ. ಆರಂಭಿಕ ಯೋಜನೆ 126 ಜೆಟ್ ಖರೀದಿಸುವುದಿದ್ದರೂ, ಭಾರತವು ಅದನ್ನು 36 ಜೆಟ್ ಗಳನ್ನು, ಅದೂ ಸಿದ್ಧ ಸ್ಥಿತಿಯಲ್ಲಿ ಕೊಳ್ಳುವ ತೀರ್ಮಾನಕ್ಕೆ ಬಂದು ಮುಟ್ಟಿತು. ಹೀಗಾಗಿ ಜೆಟ್ ವಿಮಾನದ ದರ ಮೊದಲು ಒಪ್ಪಿದ್ದಕ್ಕಿಂತ ಹೆಚ್ಚೇ ಆಗಿದೆ. ಈ ರಾಫೆಲ್ ಮೆಟೊರೊ ಶ್ರೇಣಿಯ (ದೂರವ್ಯಾಪಿ) ಕ್ಷಿಪಣಿಯಾಗಿದ್ದು, 150 ಕಿ.ಮೀ ಸಾಗುವ ಸಾಮರ್ಥ್ಯ ಹೊಂದಿದೆ. ದೃಷ್ಠಿವ್ಯಾಪಿಗೂ ಮಿಗಿಲಾಗಿ ಸಾಗುವ ಸಾಮರ್ಥ್ಯ ಹೊಂದಿರುವ ಈ ಕ್ಷಿಪಣಿಯಲ್ಲಿ ಗುರಿ ತಪ್ಪುವ ಸಾಧ್ಯತೆ ಇತರ ಕ್ಷಿಪಣಿಗಳಿಗಿಂತ ಮೂರುಪಟ್ಟಿ ಕಡಿಮೆ ಇದೆ. ರಾಫೆಲ್ ಜೆಟ್ ಖರೀದಿ ಒಪ್ಪಂದಕ್ಕೆ ಜನವರಿ ತಿಂಗಳಲ್ಲಿ ಪ್ರಾನ್ಸ್ ಮತ್ತು ಭಾರತ ಸರ್ಕಾರಗಳು ಹಣಕಾಸು ವಿಚಾರ ಹೊರತುಪಡಿಸಿ ಸಹಿ ಹಾಕಿದ್ದವು. ರಫೇಲ್‌ ಜೆಟ್‌- ಮೊದಲ ಕಂತು ಆಗಮನ Dassault Rafale ಫ್ರಾನ್ಸ್ ಮತ್ತು ಭಾರತದ ನಡುವೆ ಒಪ್ಪಂದ ಏರ್ಪಟ್ಟ ನಾಲ್ಕು ವರ್ಷಗಳ ಬಳಿಕ ಮೊದಲ ಹಂತವಾಗಿ ಐದು ಯುದ್ಧ ವಿಮಾನಗಳು ಭಾರತಕ್ಕೆ ೨೯-೭-೨೦೨೦ ಬುಧವಾರ ಬಂದಿವೆ. ಈ ಹಿಂದೆ ಒಂದು ವಿಮಾನ ಬಂದಿತ್ತ. ಆ ಮೂಲಕ ಭಾರತದ ವಾಯುಸೇನೆಯ ಸಾಮರ್ಥ್ಯವನ್ನು ಹೆಚ್ಚು ಮಾಡಿವೆ. ಪ್ರಾನ್ಸ್‌ ದೇಶದ ಪ್ರಮುಖ ವಾಯುಯಾನ ಕಂಪನಿ ರಫೇಲ್‌ನಿಂದ 36 ಯುದ್ಧವಿಮಾನಗಳನ್ನು ಖರೀದಿಸಲು ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ 2016ರ ಸೆಪ್ಟೆಂಬರ್‌ನಲ್ಲಿ ರೂ.59,000 ಕೋಟಿ ಮೊತ್ತದ ವ್ಯವಹಾರ ಒಪ್ಪಂದ ಮಾಡಿಕೊಂಡಿತ್ತು. ಭಾರತದ ಅಗತ್ಯ ವಾಯುಪಡೆಯ ಉನ್ನತ ಅಧಿಕಾರಿಗಳು ಇಂದು ಭಾತರದ ಉತ್ತರ ಮತ್ತು ಪಶ್ಚಿಮ ಗಡಿ ರಕ್ಷಿಸಲು (ಪಾಕಿಸ್ತಾನ ಮತ್ತು ಚೀನಾ-ಗಡಿ) ಕನಿಷ್ಠ 42 ವಿಮಾನದಳ ತುಕಡಿಗಳು ಅಗತ್ಯವಿದೆ ಎಂದು ಹೇಳುತ್ತಾರೆ. ಇದು ಪ್ರಸ್ತುತ ಸುಮಾರು 32 ವಿಮಾನದಳ ತುಕಡಿಗಳನ್ನು ಒಳಗೊಂಡಿದೆ, ಪ್ರತಯೊಂದರಲ್ಲಿ 18 ವಿಮಾನಗಳಿವೆ, ವಾಯುಪಡೆಯ ಪ್ರತಿನಿಧಿಗಳು ಭಾರತದ ಸಂಸತ್ತಿಗೆ ಕಳೆದ ವರ್ಷ, ಪರಮಾಣು ಶಸ್ತ್ರಸಜ್ಜಿತ ನೆರೆಯ ಪ್ರತಿಸ್ಪರ್ಧಿ ಪಾಕಿಸ್ತಾನಕ್ಕೆ ಸರಿಸಮಾನವಾಗಿ ಭಾರತ ತಂಡದ ತುಕಡಿಗಳು 2022ರ ಹೊತ್ತಿಗೆ ಕೇವಲ 25ತುಕಡಿಗೆ ಇಳಿಯಬಹುದೆಂದು ಎಚ್ಚರಿಸಿದ್ದಾರೆ.ಆದರೆ ನಿಜವಾದ ಕಾಳಜಿ ಚೀನಾ, ಪಾಕಿಸ್ತಾನದ ಮಿತ್ರರಾಷ್ಟ್ರ; ಅವರ ಮಿಲಿಟರಿ ಸಾಮರ್ಥ್ಯ ಭಾರತದಕ್ಕಿಂತ ಹೆಚ್ಚು. ವಾಯು ಪಡೆಯ ಮುಖ್ಯಸ್ತರ ನೇಮಕ 18 Dec, 2016 ಏರ್‌ ಚೀಫ್‌ ಮಾರ್ಷಲ್‌ ರಾಕೇಶ್ ಸಿಂಗ್ ಭಾದೌಇರ ಅವರನ್ನು ವಾಯು ಪಡೆಯ (ಐಎಎಫ್‌) ಮುಖ್ಯಸ್ಥರನ್ನಾಗಿ ಕೇಂದ್ರ ಸರ್ಕಾರ ಶನಿವಾರ ನೇಮಕ ಮಾಡಿದೆ. ವಾಯುಪಡೆಯ ಮುಖ್ಯಸ್ಥರಾದ ಧನೋವಾ ಅವರು ಸೆಪ್ಟೆಂಬರ್ 30 ರಂದು ನಿವೃತ್ತರಾಗಲಿದ್ದು, ರಾಕೇಶ್ ಸಿಂಗ್ ಭಾದೌಇರ ಅವರು ಅದೇ ದಿನ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇವನ್ನೂ ನೋಡಿ ಭಾರತ ಭಾರತೀಯ ಸೈನ್ಯ ಭಾರತೀಯ ಭೂಸೇನೆ ಭಾರತೀಯ ವಾಯುಸೇನೆ ಭಾರತೀಯ ನೌಕಾಸೇನೆ ಭಾರತೀಯ ಸೈನ್ಯ ಭಾರತ ಮತ್ತು ಪಾಕೀಸ್ತಾನಗಳ ಆರ್ಥಿಕ ಬಲ ಮತ್ತು ಸೈನ್ಯ ಬಲ ಭಾರತದಲ್ಲಿ ಕ್ಷಿಪಣಿ ವ್ವಸ್ಥೆ mega Rafale fighter deal Why Rafale is a Big Mistake- All you need to know about the Rafale deal ಆಗಸ್ಟಾ ವೆಸ್ಟ್‌ಲೆಂಡ್ ಹೆಲಿಕಾಪ್ಟರ್‌ ಬಾಹ್ಯ ಸಂಪರ್ಕಗಳು ಅಧಿಕೃತ ತಾಣ ವಾಯುಸೇನೆಯ ಬಗ್ಗೆ ಮಾಹಿತಿ ನಿರ್ದಿಷ್ಟ ಕಾರ್ಯಾಚರಣೆ (ಸರ್ಜಿಕಲ್ ಸ್ಟ್ರೈಕ್) :ಅಭಿಪ್ರಾಯಗಳು;8 Oct, 2016 ನಿರ್ದಿಷ್ಟ ಕಾರ್ಯಾಚರಣೆ (ಸರ್ಜಿಕಲ್ ಸ್ಟ್ರೈಕ್);ಸೇನೆಯ ಹೊಟ್ಟೆ ಗಟ್ಟಿ ಮಾಡಿ!;8 Oct, 2016; ಉಲ್ಲೇಖ ಭಾರತ ಸಮಾಜ
1343
https://kn.wikipedia.org/wiki/%E0%B2%B0%E0%B2%BE%E0%B2%AE%E0%B2%95%E0%B3%83%E0%B2%B7%E0%B3%8D%E0%B2%A3%20%E0%B2%AA%E0%B2%B0%E0%B2%AE%E0%B2%B9%E0%B2%82%E0%B2%B8
ರಾಮಕೃಷ್ಣ ಪರಮಹಂಸ
ಶ್ರೀ ರಾಮಕೃಷ್ಣ ಪರಮಹಂಸ (ಫೆಬ್ರವರಿ ೧೮, ೧೮೩೬ - ಆಗಸ್ಟ್ ೧೬, ೧೮೮೬) ಭಾರತದ ಪ್ರಸಿದ್ಧ ಧಾರ್ಮಿಕ ನೇತೃಗಳಲ್ಲಿ ಒಬ್ಬರು. ಕಾಳಿಯ ಆರಾಧಕರಾಗಿದ್ದ ಪರಮಹಂಸರು ಅದ್ವೈತ ವೇದಾಂತ ಸಿದ್ಧಾಂತವನ್ನು ಬೋಧಿಸಿದರಲ್ಲದೆ, ಎಲ್ಲ ಧರ್ಮಗಳೂ ಒಂದೇ ಗುರಿಯತ್ತ ನಮ್ಮನ್ನು ಒಯ್ಯುತ್ತವೆ ಎಂದು ನಂಬಿದ್ದರು. ೧೯ ನೆಯ ಶತಮಾನದ ಹಿಂದೂ ಧರ್ಮದ ಪುನರುಜ್ಜೀವನಕ್ಕೆ ದಾರಿ ಮಾಡಿಕೊಟ್ಟ ವ್ಯಕ್ತಿಗಳಲ್ಲಿ ಪರಮಹಂಸರೂ ಒಬ್ಬರು.ಇವರ ಮೊದಲ ಹೆಸರು "ಗಧಾದರ". "ನಮನ" ಪರಮಹಂಸರ ಜೀವನ ಮತ್ತು ಬೋಧನೆಗಳು ಭಾರತೀಯ ಸಂಸ್ಕೃತಿ ಮತ್ತು ನಂಬಿಕೆಗಳ ಮೇಲೆ ಆಳವಾದ ಪ್ರಭಾವವನ್ನು ಬೀರಿವೆ. ಸ್ವಾಮಿ ವಿವೇಕಾನಂದರು ಸ್ಥಾಪಿಸಿದ ರಾಮಕೃಷ್ಣ ಮಿಷನ್ ಇವರ ಗೌರವಾರ್ಥವಾಗಿಯೇ ಇರುವುದು. ಪರಮಹಂಸರು ಅನುಭವಿಸಿದರೆಂದು ಹೇಳಲಾದ ನಿರ್ವಿಕಲ್ಪ ಸಮಾಧಿಯಿಂದ ಅವರು "ಅವಿದ್ಯಾಮಾಯೆ" ಮತ್ತು "ವಿದ್ಯಾಮಾಯೆ" ಎಂಬ ಎರಡು ಬಗೆಯ ಮಾಯೆಗಳನ್ನು ಅರಿತುಕೊಂಡರೆಂದು ಹೇಳಲಾಗುತ್ತದೆ. "ಅವಿದ್ಯಾಮಾಯೆ" ಎಂಬುದು ಸೃಷ್ಟಿಯ ಕಾಳ ಶಕ್ತಿಗಳನ್ನು ಪ್ರತಿನಿಧಿಸುತ್ತದೆ (ಕ್ರೌರ್ಯ, ಲೋಭ, ಇತ್ಯಾದಿ). ವಿದ್ಯಾಮಾಯೆ ಎನ್ನುವುದು ಸೃಷ್ಟಿಯ ಉಚ್ಚತರ ಶಕ್ತಿಗಳನ್ನು ಪ್ರತಿನಿಧಿಸುತ್ತದೆ (ಪ್ರೇಮ, ಅಧ್ಯಾತ್ಮಿಕ ದೃಷ್ಟಿ, ಇತ್ಯಾದಿ). ಪರಮಹಂಸರ ದೃಷ್ಟಿಯಲ್ಲಿ ಭಕ್ತರು ವಿದ್ಯಾಮಾಯೆಯಿಂದ ಅವಿದ್ಯಾಮಾಯೆಯನ್ನು ಗೆದ್ದು ನಂತರ ಸಂಪೂರ್ಣವಾಗಿ ಮಾಯಾತೀತರಾಗುವತ್ತ ಹೆಜ್ಜೆ ಹಾಕಬಹುದು. ನಿರ್ವಿಕಲ್ಪ ಸಮಾಧಿಯಿಂದ ಹುಟ್ಟಿದ ರಾಮಕೃಷ್ಣರ ಇನ್ನೊಂದು ನಂಬಿಕೆಯೆಂದರೆ ಜನರು ನಂಬುವ ಎಲ್ಲ ದೇವರುಗಳೂ ಒಬ್ಬ ಸರ್ವಾಂತರ್ಯಾಮಿಯಾದ ದೇವನನ್ನು ನೋಡುವ ವಿವಿಧ ಬಗೆಗಳಷ್ಟೆ. ಋಗ್ವೇದದ ವಾಕ್ಯವಾದ "ಏಕಮ್ ಸದ್ವಿಪ್ರಾಃ ಬಹುಧಾ ವದಂತಿ" (ಒಂದೇ ಸದ್ವಸ್ತುವನ್ನು ಜನರು ವಿವಿಧ ಹೆಸರುಗಳಿಂದ ಕರೆಯುತ್ತಾರೆ) ಎಂಬ ವಿಚಾರವೇ ಇದು. ಹಾಗಾಗಿ ರಾಮಕೃಷ್ಣರ ದೃಷ್ಟಿಯಲ್ಲಿ ಎಲ್ಲ ಧರ್ಮಗಳೂ ಒಂದೇ - ತಮ್ಮ ಜೀವನದ ಕೆಲ ವರ್ಷಗಳ ಕಾಲ ಇತರ ಧರ್ಮಗಳನ್ನೂ ಅಭ್ಯಾಸ ಮಾಡಿದರು (ಮುಖ್ಯವಾಗಿ ಇಸ್ಲಾಮ್ ಧರ್ಮ, ಕ್ರೈಸ್ತ ಧರ್ಮ, ಹಾಗೂ ವಿವಿಧ ಯೋಗ ಮತ್ತು ತಂತ್ರ ಮಾರ್ಗಗಳು). ರಾಮಕೃಷ್ಣರ ನಾಲ್ಕು ಮುಖ್ಯ ತತ್ವಗಳೆಂದರೆ: ಎಲ್ಲ ಅಸ್ತಿತ್ವದ ಏಕತೆ ಮಾನವರಲ್ಲಿಯೂ ಇರುವ ದೈವತ್ವ ದೇವರ ಏಕತೆ ಎಲ್ಲ ಧರ್ಮಗಳ ಸಾಮರಸ್ಯ ರಾಮಕೃಷ್ಣರ ಜೀವನ ಮತ್ತು ಬೋಧನೆಗಳನ್ನು ಅವರ ಶಿಷ್ಯರಲ್ಲಿ ಒಬ್ಬರಾದ ಮಹೇಂದ್ರನಾಥ್ ಗುಪ್ತಾ ರವರು ದಾಖಲಿಸಿದರು. ಕ್ರಿ. ಶ. 1875ನೇ ಇಸವಿಯ ಸಮಯ. ಗಂಗಾನದಿಯ ತೀರದಲ್ಲಿ ದಕ್ಷಿಣೇಶ್ವರವೆಂಬ ಒಂದು ಪ್ರದೇಶ. ಅಲ್ಲಿ ಭವತಾರಿಣಿ ಜಗನ್ಮಾತೆಯ ಒಂದು ಸುಂದರ ದೇವಾಲಯ. ದೇವಸ್ಥಾನದ ಹೊರಗೆ ದಟ್ಟವಾದ ಕಾಡು ಇತ್ತು. ಸಹಸ್ರಾರು ಹಕ್ಕಿಗಳು ಸಂಜೆ ಮರದ ಮೇಲೆ ಕುಳಿತುಕೊಂಡು ವಿಧವಿಧವಾದ ಗಾನನೈವೇದ್ಯವನ್ನು ಜಗನ್ಮಾತೆಗೆ ಅರ್ಪಿಸುತ್ತಿವೆ. ಪಡವಲಂಚಿನಲ್ಲಿ ಸೂರ್ಯ ಸಂಜೆ ಓಕುಳಿಯ ಚೆಲ್ಲಿ ಮುಗಿಲಿನ ಅಂಚಿನ ಹಿಂದೆ ಮರೆಯಾಗುತ್ತಿರುವನು. ಆ ಸಮಯದಲ್ಲಿ ಸುಮಾರು ಇಪ್ಪತ್ತು ವರುಷದ ಯುವಕ ಮುಳುಗುತ್ತಿರುವ ರವಿಯನ್ನು ನೋಡಿ ನಿಟ್ಟುಸಿರುಬಿಡುವನು. 'ಅಯ್ಯೋ, ನನ್ನ ಜೀವನದಲ್ಲಿ ಆಗಲೇ ಒಂದು ದಿನ ಹೋಯಿತು. ಇನ್ನೂ ತಾಯಿ ಕಾಣಲಿಲ್ಲ' ಎಂದು ಕಂಬನಿದುಂಬಿ ಅಳುವನು. ನೆಲದ ಮೇಲೆ ಬಿದ್ದು ಹೊರಳಾಡುವನು. ನದಿಗೆ ಬಂದವರು ಹಿಂತಿರುಗಿ ಹೋಗುವಾಗ ಈ ದೃಶ್ಯವನ್ನು ನೋಡಿ, "ಅಯ್ಯೊ ಪಾಪ, ಹುಡುಗ ಹೆತ್ತ ತಾಯಿಗಾಗಿ ಅಳುತ್ತಿರುವನೇನೋ" ಎಂದು ಸಹಾನುಭೂತಿ ತೋರಿ ಮುಂದೆ ಸಾಗುವರು. ಎಳೆ ಮಗು ಮರೆಯಾದ ತಾಯಿಗಾಗಿ ಎಷ್ಟು ಅಳುವುದೊ ಅಷ್ಟು ಅತ್ತನು ಆ ಯುವಕ ಜಗನ್ಮಾತೆಗಾಗಿ. ಸಂದೇಹಾಸ್ಪದವಾದ, ಕಣ್ಣಿಗೆ ಕಾಣದ ದೇವರಿಗಾಗಿ ಅಷ್ಟು ವ್ಯಥೆಪಟ್ಟವರು ಅಪರೂಪ, ಧಾರ್ಮಿಕ ಜೀವನದಲ್ಲಿ. ಕೊನೆಗೆ ನಿರಾಶನಾಗಿ ಗರ್ಭಗುಡಿಯಲ್ಲಿದ್ದ ಬಲಿಕೊಡುವ ಖಡ್ಗವನ್ನು ತೆಗೆದುಕೊಂಡನು. ಅದರಿಂದ ದೇವರೆದುರಿಗೆ ತನ್ನ ರುಂಡವನ್ನು ಈಡಾಡುವುದರಲ್ಲಿದ್ದನು. ತಕ್ಷಣ ದೇವಿ ಪ್ರತ್ಯಕ್ಷಳಾದಳು. ಯುವಕನ ಮನಸ್ಸು ಪ್ರಪಂಚವನ್ನು ತೊರೆದು ಅವರ್ಣನೀಯ ಆನಂದದಲ್ಲಿ ತಲ್ಲೀನವಾಯಿತು. ದೇವರು ಪರೀಕ್ಷಿಸುವನು. ಅವನು ನಮ್ಮ ಸರ್ವಸ್ವವನ್ನೂ ತೆತ್ತಲ್ಲದೆ ಬರುವುದಿಲ್ಲ. ನಮ್ಮೆಲ್ಲವನ್ನೂ ದೇವರಿಗೆ ಕೊಟ್ಟರೆ ದೇವರು ತನ್ನ ಎಲ್ಲವನ್ನೂ ಭಕ್ತನಿಗೆ ಕೊಡುವನು. ತನ್ನ ಇಡೀ ಜೀವನವನ್ನು ನಿವೇದಿಸಿ, ಜಗನ್ಮಾತೆಯನ್ನು ಪಡೆದುಕೊಂಡನು. ಈ ವ್ಯಕ್ತಿಯೇ ಮುಂದೆ ಜಗದ್ವಂದ್ಯ ಶ್ರೀರಾಮಕೃಷ್ಣ ಪರಮಹಂಸರಾದುದು. ಸ್ವಾಮಿ ವಿವೇಕಾನಂದರು ಹೇಳಿರುವಂತೆ ಶ್ರೀರಾಮಕೃಷ್ಣರ ಜೀವನ ವೇದ ವೇದಾಂತಗಳಿಗೆ ಬರೆದಿರುವ ಸಚೇತನ ಭಾಷ್ಯ. ಮೂವತ್ತು ಕೋಟಿ ಭಾರತೀಯರ ಎರಡು ಸಾವಿರ ವರುಷಗಳ ಜೀವನವನ್ನು ಇವರು ತಮ್ಮ ಒಂದು ಜೀವನದಲ್ಲಿ ಅಳವಡಿಸಿಕೊಂಡಿರುವರು. ಇವರ ಜೀವನ ದ್ವೈತ ಅದ್ವೈತ ವಿಶಿಷ್ಟಾದ್ವೈತಗಳ ತ್ರಿವೇಣಿ. ಭಗವಂತನನ್ನು ಹಲವಾರು ಭಾವಗಳಲ್ಲಿ ಕಂಡು ಪ್ರೀತಿಸಿದರು. ಜ್ಞಾನ, ಭಕ್ತಿ, ಯೋಗ ಇಲ್ಲಿ ಸಂಧಿಸಿವೆ. ಇವರ ಜೀವನ ಒಂದು ದೊಡ್ಡ ವಿಶ್ವಧರ್ಮ ಸಮ್ಮೇಳನ. ಹೊರಗೆ ನೋಡುವುದಕ್ಕೆ ಎಳೆನಗೆ ಸದಾ ಇವರ ಮುಖದಲ್ಲಿ ಚಿಮ್ಮುತ್ತಿದೆ. ಅದರ ಹಿಂದೆ ರೋಮಾಂಚಕಾರಿಯಾದ ಆಧ್ಯಾತ್ಮಿಕ ಘಟನಾವಳಿ ತುಂಬಿ ತುಳುಕಾಡುತ್ತಿದೆ. ಇವರು ಘನ ವಿದ್ವಾಂಸರ ಗುಂಪಿಗೆ ಸೇರಿದವರಲ್ಲ, ದೊಡ್ಡ ವಾಗ್ಮಿಗಳಲ್ಲ. ಉಪನ್ಯಾಸ ಕೊಡುವುದಕ್ಕೆ ಎಲ್ಲೂ ಹೊರಗೆ ಹೋಗಲಿಲ್ಲ. ತಮ್ಮ ಬಾಳನ್ನೆಲ್ಲ ಬಹುಪಾಲು ದಕ್ಷಿಣೇಶ್ವರ ದೇವಾಲಯದ ವಲಯದಲ್ಲಿ ಕಳೆದರು. ಅದರೂ ಅಪರೂಪವಾಗಿ ಅರಳಿದ ಸಹಸ್ರದಳ ಕಮಲವಿದು. ಇಡೀ ಬದ್ಧಜೀವಿಗಳ ಉದ್ಧಾರಕ್ಕೆ ಬೇಕಾಗುವ ಧರ್ಮಾಮೃತ ಅಲ್ಲಿ ಹುದುಗಿತ್ತು. ಹಲವಾರು ಕಡೆಯಿಂದ ದುಂಬಿಗಳು ಬಂದವು. ಮಕರಂದವನ್ನು ಹೀರಿ ತೃಪ್ತರಾದವು. ಅದನ್ನು ಉಳಿದವರಿಗೆಲ್ಲ ಹಂಚಿ ಧನ್ಯರಾದವು, ಪಾಶ್ಚಾತ್ಯ ದೇಶಗಳಿಗೂ ಹಂಚಿ ಭರತಖಂಡಕ್ಕೆ ಮಾನ್ಯತೆ ತಂದವು. ಚಿರಾಯುವಾದ ಭಾರತಮಾತೆಯ ಶ್ರೇಷ್ಠತಮ ಪುತ್ರರಲ್ಲಿ ಶ್ರೀರಾಮಕೃಷ್ಣ ಪರಮಹಂಸರೊಬ್ಬರು. ಬಂಗಾಳ ಪ್ರಾಂತ್ಯದ ಹೂಗ್ಲಿ ಜಿಲ್ಲೆಯಲ್ಲಿ ಕಾಮಾರಪುಕುರವೆಂಬ ಸಣ್ಣದೊಂದು ಗ್ರಾಮ. ಅದು ಕಲ್ಕತ್ತೆಯಿಂದ ಸುಮಾರು ಅರವತ್ತು ಮೈಲಿ ದೂರದಲ್ಲಿದೆ. ಈಗಿನ ಕಾಲದ ವಾಹನ ಸೌಕರ್ಯಗಳಾವುವೂ ಅಲ್ಲಿಗೆ ಇನ್ನೂ ಬಂದಿರಲಿಲ್ಲ. ಹತ್ತಿರದ ರೈಲ್ವೆ ಸ್ಟೇಷನ್ನಿಗೆ ಸುಮಾರು ಇಪ್ಪತ್ತೈದು ಮೈಲಿ. ಹಳ್ಳಿ ಸಣ್ಣದು. ಆದರೂ ಜನರು ನೆಮ್ಮದಿಯಾಗಿದ್ದರು. ಸುತ್ತಮುತ್ತಲೂ ಕಮಲ ಪುಷ್ಕರಣಿ ತೋಪು ಇವುಗಳ ಹಿಂದೆ ಹಸಿರು ಗದ್ದೆಯ ಬಯಲು. ಅಲ್ಲಿ ಖುದಿರಾಮ ಚಟ್ಟೋಪಾಧ್ಯಾಯ ಮತ್ತು ಚಂದ್ರಮಣಿದೇವಿಯರಿಂದ ಕೂಡಿದ ಒಂದು ಬ್ರಾಹ್ಮಣ ಕುಟುಂಬವಿತ್ತು. ಬಡವರಾದರೂ ದೊಡ್ಡ ದೈವಭಕ್ತರು. ಯಾವ ಅಧಿಕಾರವೂ ಇವರಿಗೆ ಇಲ್ಲದೆ ಇದ್ದರೂ ಜನರು ಇವರ ಜೀವನಗಾಂಭೀರ್ಯದೆದುರಿಗೆ ತಗ್ಗಿ ನಡೆಯುತ್ತಿದ್ದರು. ಭಕ್ತರು, ಪರೋಪಕಾರಿಗಳು ಎಂದು ಪ್ರಖ್ಯಾತರಾಗಿದ್ದರು. ಇವರಿಗೆ ಕ್ರಿ. ಶ. 1836ನೇ ಫೆಬ್ರವರಿ 18ನೇ ದಿನ ಹುಟ್ಟಿದ ನಾಲ್ಕನೆಯ ಮಗನೇ ಶ್ರೀರಾಮಕೃಷ್ಣ. ಮಗು ಹುಟ್ಟಿದಾಗ ಗದಾಧರನೆಂದು ನಾಮಕರಣ ಮಾಡಿದರು. ಮನೆಯಲ್ಲಿ ಗದಾಯ್ ಎಂದು ಕರೆಯುತ್ತಿದ್ದರು. ಕ್ರಮೇಣ ಶ್ರೀರಾಮಕೃಷ್ಣ ಎಂಬ ಹೆಸರು ಅವರಿಗೆ ಸೇರಿ, ನಂತರ, ಇದೇ ಪ್ರಖ್ಯಾತವಾಗಿ ನಿಂತಿತು. ಮಗುವು ಮನೆಯವರಿಗೆ ಮಾತ್ರ ಮುದ್ದಾಗಿ ಇರಲಿಲ್ಲ. ಇಡೀ ಹಳ್ಳಿಯೇ ಆ ಮಗುವನ್ನು ನೋಡಿ ಸಂತೊಭೀಷಗೊಂಡಿತು. ಅದು ಎಲ್ಲರಿಗೂ ಬೇಕಾದ ಮಗುವಾಯಿತು. ಮಗುವಿಗೆ ಸುಮಾರು ಐದು ಆರನೆ ವರುಷ ತುಂಬುವ ಹೊತ್ತಿಗೆ, ದೇವದೇವಿಯರ ಹಲವು ಸ್ತೋತ್ರಗಳು, ರಾಮಾಯಣ ಮಹಾಭಾರತದ ಕಥೆಗಳು ಇವನ್ನು ಕಲಿತುಕೊಂಡಿತು. ಬಾಲ್ಯದಿಂದಲೂ ಅವರಲ್ಲಿ ಕೆಲವು ಒಳ್ಳೆ ಸ್ವಭಾವಗಳು ಬಹಳ ಚೆನ್ನಾಗಿ ರೂಪುಗೊಂಡಿದ್ದವು. ಸ್ವಲ್ಪವೂ ಅಂಜಿಕೆ ಸ್ವಭಾವದವರಲ್ಲ. ಉಳಿದ ಮಕ್ಕಳು ಎಲ್ಲಿಗೆ ಹೋಗಲು ಅಂಜುತ್ತಿದ್ದರೋ ಅಲ್ಲಿಗೆ ಅವರು ಧೈರ್ಯವಾಗಿ ಹೋಗುತ್ತಿದ್ದರು. ಸಾಧಾರಣವಾಗಿ ಎಂತಹವನಿಗಾದರೂ ಸ್ಮಶಾನ ಸ್ವಲ್ವ ಅಂಜಿಕೆ ತರುವ ಸ್ಥಳ. ಅಂತಹ ಕಡೆ ಒಬ್ಬರೇ ನಿರ್ಭಯವಾಗಿ ಹೋಗುತ್ತಿದ್ದರು. ಯಾರೂ ಇವರಿಗೆ ಇಚ್ಛೆ ಇಲ್ಲದುದನ್ನು ಕೋಪ ತೋರಿ ಅಥವಾ ಗದರಿಸಿ ಮಾಡಿಸುವುದಕ್ಕೆ ಆಗುತ್ತಿರಲಿಲ್ಲ. ಯಾರಿಗಾದರೂ ಒಮ್ಮೆ ಮಾತು ಕೊಟ್ಟರೆ ಸಾಕು, ಏನಾದರೂ ಆಗಲಿ ಅದನ್ನು ನಡೆಸಿಕೊಡುತ್ತಿದ್ದರು. ಉಪನಯನದ ಸಮಯದಲ್ಲಿ ಮೊದಲ ಭಿಕ್ಷೆಯನ್ನು ಅವರ ಕುಲಕ್ಕೆ ಸೇರಿದ ಹಿರಿಯರಿಂದ ತೆಗೆದುಕೊಳ್ಳುವುದು ರೂಢಿ. ಬಾಲ್ಯದಿಂದಲೂ ಧನಿ ಎಂಬುವ ಅಕ್ಕಸಾಲಿಗ ಹೆಂಗಸು ಇವರನ್ನು ಪ್ರೀತಿಸುತ್ತಿದ್ದಳು. ಅವಳು ಒಂದು ದಿನ ಮಗುವಿನೊಡನೆ ಉಪನಯನದ ಸಮಯದಲ್ಲಿ ತನ್ನಿಂದ ಭಿಕ್ಷೆಯನ್ನು ತೆಗೆದುಕೊಳ್ಳಬೇಕೆಂದು ಬೇಡಿಕೊಂಡಳು. ಶ್ರೀರಾಮಕೃಷ್ಣರು ಅದಕ್ಕೆ ಒಪ್ಪಿಗೆ ಇತ್ತರು. ಇವರಿಗೆ ಒಂಭತ್ತು ವರುಷದ ಸಮಯಕ್ಕೆ ಉಪನಯನವಾಯಿತು. ಆ ಸಮಯದಲ್ಲಿ ಆಕೆಯಿಂದ ಭಿಕ್ಷೆ ತೆಗೆದುಕೊಳ್ಳದಂತೆ ಯಾರು ಎಷ್ಟು ಹೇಳಿದರೂ ಕೇಳಲಿಲ್ಲ. ಕೊನೆಗೂ ಧನಿ ಎಂಬ ಅಕ್ಕಸಾಲಿಗಳಿಂದ ಮೊದಲ ಭಿಕ್ಷೆಯನ್ನು ಸ್ವೀಕರಿಸಿದರು. ಸಾಧಾರಣವಾಗಿ ಆ ವಯಸ್ಸಿನಲ್ಲಿ ಮಕ್ಕಳು ದೊಡ್ಡವರು ಹೇಳಿದಂತೆ ಕೇಳುವುದು ಸ್ವಭಾವ. ಇಂತಹ ವಯಸ್ಸಿನಲ್ಲಿಯೇ ಅವರ ಜೀವನದಲ್ಲಿ ಸತ್ಯಕ್ಕಾಗಿ ಏನನ್ನಾದರೂ ಸಹಿಸುವ ಶಕ್ತಿಯನ್ನು ನೋಡುತ್ತೇವೆ. ನಿಜವಾದ ಪ್ರೀತಿಯ ಎದುರಿಗೆ ಸಂಪ್ರದಾಯದ ಆಚಾರವನ್ನೆಲ್ಲ ಕಿತ್ತೊಗೆದರು. ಶ್ರೀರಾಮಕೃಷ್ಣರನ್ನು ಹಳ್ಳಿಯ ಶಾಲೆಗೆ ಸೇರಿಸಿದರು. ಶಾಲೆಯಲ್ಲಿ ಓದುವುದು ಬರೆಯುವುದರಲ್ಲಿ ಸ್ವಲ್ಪ ಆಸಕ್ತಿ ತೋರಿದರೂ ಗಣಿತ ತಲೆಗೆ ಹತ್ತಲಿಲ್ಲ. ಶಾಲೆಯೊಳಗೆ ಕುಳಿತು ಓದುವುದಕ್ಕಿಂತ ಹತ್ತಿರವಿದ್ದ ತೋಪಿನಲ್ಲಿ ಆಡುವುದರಲ್ಲಿ ಇವರಿಗೆ ಆಸಕ್ತಿ. ಕೆಲವು ವೇಳೆ ಶಾಲಾ ಉಪಾಧ್ಯಾಯರು ಬರುವುದು ತಡವಾದರೆ ಹುಡುಗರೊಂದಿಗೆ ಹತ್ತಿರವಿರುವ ತೋಪಿಗೆ ಹೋಗಿ ಅವರು ನೋಡಿದ್ದ ಬಯಲಾಟವನ್ನು ಆಡುತ್ತಿದ್ದರು. ಅದಕ್ಕೆ ಸಂಬಂಧಪಟ್ಟ ಹಾಡು ನಟನೆ ಇವುಗಳನ್ನು ಅಭಿನಯಿಸುವುದರಲ್ಲಿ ತುಂಬಾ ಪಾಂಡಿತ್ಯವನ್ನು ತೋರಿದರು. ಪ್ರಚಂಡ ಜ್ಞಾಪಕಶಕ್ತಿ ಇವರಲ್ಲಿತ್ತು. ಹಾಡನ್ನು ಒಂದು ಸಲ ಕೇಳಿದರೆ ಸಾಕು, ಅದನ್ನು ನೆನಪಿನಲ್ಲಿಡುತ್ತಿದ್ದರು. ಅದರಂತೆ ಅಭಿನಯಿಸುತ್ತಿದ್ದರು. ಶ್ರೀರಾಮಕೃಷ್ಣರು ಹುಟ್ಟು ಕಲೋಪಾಸಕರು. ಬಾಹ್ಯಪ್ರಪಂಚದ ಮನಸೆಳೆವ ಬಣ್ಣ, ಆಕಾರ, ಭಾವ, ಧ್ವನಿ ಇವುಗಳೆಲ್ಲಾ ಇಂದ್ರಿಯಾತೀತ ಪ್ರಪಂಚದೆಡೆಗೆ ಇವರನ್ನು ಬೀಸಿ ಕರೆಯುತ್ತಿದ್ದವು. ಶ್ರೀರಾಮಕೃಷ್ಣರಿಗೆ ಆರೇಳು ವರುಷದ ಸಮಯ. ಆಗ ಒಂದು ದಿನ ಹಸುರು ಗದ್ದೆಯ ಬಯಲಿನಲ್ಲಿ ನಡೆಯುತ್ತಿದ್ದರು. ಕೈಯಲ್ಲಿದ್ದ ಒಂದು ಸಣ್ಣ ಬುಟ್ಟಿಯಲ್ಲಿ ಪುರಿ ಇತ್ತು. ಅದನ್ನು ತಿನ್ನುತ್ತ ಸುತ್ತಲೂ ನೋಡುತ್ತ ಹೋಗುತ್ತಿದ್ದರು. ಸುತ್ತಲೂ ಹಸಿರು ಗದ್ದೆ, ಮೇಲೆ ಮೋಡ ಕವಿದಿತ್ತು . ಅದು ಕ್ರಮೇಣ ವಿಸ್ತಾರವಾಗಿ ಆಕಾಶವನ್ನೆಲ್ಲಾ ವ್ಯಾಪಿಸಿತು. ಅದರ ಕಳಗೆ ಬಕಪಕ್ಷಿಯ ಸಾಲು ಹಾರಿಹೋಗುತ್ತಿತ್ತು. ಈ ಬಣ್ಣಗಳ ವೈವಿಧ್ಯತೆಯನ್ನು ನೋಡಿದಾಗ ಅವರ ಮನಸ್ಸಿಗೆ ಯಾವ ಇಂದ್ರಿಯಾತೀತ ಸತ್ಯ ಹೊಳೆಯಿತೋ ತಿಳಿಯದು, ಸಂಪೂರ್ಣ ತನ್ಮಯರಾಗಿ ಬಾಹ್ಯಪ್ರಪಂಚವನ್ನು ಮರೆತುಬಿಟ್ಟರು. ಹತ್ತಿರವಿದ್ದವರು ಅವರನ್ನು ಮನೆಗೆ ಕರೆದುಕೊಂಡು ಬಂದರು. ಸ್ವಲ್ವ ಹೊತ್ತಾದ ಮೇಲೆಯೇ ಅವರಿಗೆ ಬಾಹ್ಯಪ್ರಜ್ಞೆ ಬಂದುದು. ಆಗ ತಮ್ಮ ಮನಸ್ಸು ಇಂದ್ರಿಯಾತೀತ ಪ್ರಪಂಚದಲ್ಲಿ ಅವರ್ಣನೀಯ ಅನಂದದಲ್ಲಿ ತಲ್ಲೀನವಾಗಿತ್ತು ಎಂದರು. ಒಂದು ಶಿವರಾತ್ರಿಯ ದಿನ. ಅಂದು ಜಾಗರಣೆ ಮಾಡಿ ಶಿವಪೂಜೆ ಮಾಡಬೇಕೆಂದು ಅಣಿಯಾಗಿತ್ತು. ಅಂದು ಊರಿನಲ್ಲಿ ಎಲ್ಲರ ಜಾಗರಣೆಗೆಂದು ಬಯಲುನಾಟಕ ಒಂವನ್ನು ಆಡಲು ಕೆಲವರು ಅಣಿಯಾಗುತ್ತಿದ್ದರು. ರಾತ್ರಿಯಾಯಿತು. ನಾಟಕ ಆರಂಭವಾಗುವ ಸಮಯ ಬಂದರೂ ಶಿವನ ಪಾತ್ರಧಾರಿ ಬರಲಿಲ್ಲ. ವಿಚಾರಿಸಿದಾಗ ಅವನಿಗೆ ಅನಾರೋಗ್ಯವೆಂದು ತಿಳಿದುಬಂದಿತು. ಆಗ ಸ್ನೇಹಿತರು ಬಂದು ಶ್ರೀರಾಮಕೃಷ್ಣರನ್ನು ಶಿವನ ಪಾತ್ರವನ್ನು ವಹಿಸಿಕೊಳ್ಳಬೇಕೆಂದು ಕೇಳಿಕೊಂಡರು. ಅವರು ಮೊದಲು ಒಪ್ಪಲಿಲ್ಲ. ಪೂಜೆ ಜಾಗರಣೆಯಲ್ಲಿ ಮನೆಯಲ್ಲೆ ಕಾಲ ಕಳೆಯಬೇಕೆಂದಿರುವೆ ಎಂದರು. ಬಂದವರು, ಪಾತ್ರ ಮಾಡಿದರೂ ಶಿವನನ್ನು ಕುರಿತು ಚಿಂತಿಸುತ್ತಲೇ ಇರಬೇಕಾಗುವುದು; ಅದರಿಂದ ನೀನು ಶಿವನ ಧ್ಯಾನವನ್ನು ಮಾಡಿದಂತೆಯೆ, ಎಂದು ಸಮಾಧಾನ ಹೇಳಿದ ಮೇಲೆ ಒಪ್ಪಿಕೊಂಡರು. ಶಿವನಂತೆ ಭಸ್ಮ ಬಳಿದುಕೊಂಡು ಜಟಾಧಾರಿಯಾಗಿ ರಂಗಭೂಮಿಯ ಮೇಲೆ ಬಂದು ನಿಂತರು. ರಾಮಕೃಷ್ಣರು ತಾನು ನಟಿಸುತ್ತಿರುವೆನು ಎಂಬುದನ್ನು ಮರೆತು ಶಿವಧ್ಯಾನದಲ್ಲಿ ತಲ್ಲೀನರಾದರು. ಕಣ್ಣಿನಿಂದ ಆನಂದಬಾಷ್ಪ ಸುರಿಯತೊಡಗಿತು. ಬಾಹ್ಯಪ್ರಪಂಚದ ಅರಿವನ್ನು ಮರೆತರು. ನೆರೆದ ಪ್ರೇಕ್ಷಕ ವೃಂದಕ್ಕೆ ಶಿವನ ಪಾತ್ರಧಾರಿ ಕಾಣಲಿಲ್ಲ. ಶಿವನಲ್ಲಿ ಐಕ್ಯನಾದ ಶಿವಭಕ್ತನು ಕಂಡನು. ಪಾತ್ರಮಾಡಲು ಇವರಿಂದ ಆಗಲಿಲ್ಲ. ಹತ್ತಿರವಿದ್ದವರು ಹಾಗೆಯೇ ಇವರನ್ನು ಮನೆಗೆ ಕರೆದುಕೊಂಡು ಹೋದರು. ಮಾರನೇ ದಿನವೇ ಇವರಿಗೆ ಜನರ ಅರಿವುಂಟಾಗಿದ್ದು. ಮತ್ತೊಂದು ದಿನ ಮೂರು ಮೈಲಿಗಳ ದೂರದಲ್ಲಿದ್ದ ವಿಶಾಲಾಕ್ಷಿಯ ದೇವಸ್ಥಾನಕ್ಕೆ ಕೆಲವು ಹೆಂಗಸರೊಂದಿಗೆ ಹೋಗುತ್ತಿದ್ದರು. ನಡೆದುಕೊಂಡು ಹೋಗುತ್ತಿರುವಾಗ ದೇವಿಗೆ ಸಂಬಂಧಪಟ್ಟ ಹಲವು ಹಾಡುಗಳನ್ನು ಜೊತೆಯವರು ಹೇಳುತ್ತಿದ್ದರು. ತಕ್ಷಣವೇ ಶ್ರೀರಾಮಕೃಷ್ಣರು ಸ್ಥಿರವಾಗಿ ನಿಂತರು. ಕಣ್ಣಿನಲ್ಲಿ ಅಶ್ರುಧಾರೆ ಹರಿಯತೊಡಗಿತು. ಪ್ರಪಂಚದ ಅರಿವೇ ಇವರಿಗೆ ಇರಲಿಲ್ಲ. ಹತ್ತಿರವಿದ್ದ ಹೆಂಗಸರು ಎಷ್ಟು ಶೈತ್ಯೋಪಚಾರ ಮಾಡಿದರೂ ಇವರಿಗೆ ಪ್ರಜ್ಞೆ ಬರಲಿಲ್ಲ. ಕೆಲವರು ದೇವರ ಹೆಸರನ್ನು ಇವರ ಕಿವಿಯಲ್ಲಿ ಹೇಳಿದಾಗ ಬಾಹ್ಯಪ್ರಪಂಚದ ಅರಿವಾಯಿತು. ಹಲವು ದೇವದೇವಿಯರ ವಿಗ್ರಹವನ್ನು ತಾವೇ ಮಾಡಿ ಪೂಜಿಸುತ್ತಿದ್ದರು. ಶ್ರೀರಾಮಕೃಷ್ಣರ ಏಳನೇ ವಯಸ್ಸಿನಲ್ಲಿ ಅವರ ತಂದೆ ಕಾಲವಾದರು. ಅವರು ಮೊದಲ ಬಾರಿ ತಮ್ಮ ಹತ್ತಿರದವರ ಸಾವನ್ನು ನೋಡಬೇಕಾಯಿತು. ಮೊದಲೆ ಅಂತರ್ಮುಖಿ ಸ್ವಭಾವ ಅವರದು. ಈ ದಾರುಣ ಪೆಟ್ಟು ತಾಕಿದಾಗ ಜಗತ್ತು ನಶ್ವರವೆಂಬ ಭಾವನೆ ಚಿರಮುದ್ರಿತವಾಯಿತು. ಅವರ ತಾಯಿಗೆ ಪತಿಯ ಅಗಲಿಕೆ ದಾರುಣ ವ್ಯಥೆಯನ್ನುಂಟು ಮಾಡಿತು. ಅವರು ಇದನ್ನೂ ಕಣ್ಣಾರೆ ನೋಡಬೇಕಾಯಿತು. ಸಾಧ್ಯವಾದಮಟ್ಚಿಗೆ ಯಾವಾಗಲೂ ತಾಯಿಯ ಹತ್ತಿರವಿರುತ್ತ ಕೈಲಾದಮಟ್ಟಿಗೆ ಅವರಿಗೆ ಸಂತೋಷವನ್ನುಂಟು ಮಾಡಲು ಯತ್ನಿಸಿದರು. ಕಲ್ಕತ್ತೆಯಿಂದ ಪೂರಿಗೆ ಹೋಗುವ ದಾರಿಯಲ್ಲಿ ಕಾಮಾರಪುಕುರವಿತ್ತು. ಅನೇಕ ಯಾತ್ರಿಕರು ಅಲ್ಲಿ ತಂಗಿ ಹೋಗುತ್ತಿದ್ದರು. ಶ್ರೀರಾಮಕೃಷ್ಣರ ಮನೆಯ ಹತ್ತಿರವೇ ಅನೇಕ ಸಾಧುಸಂತರು ಇಳಿದುಕೊಳ್ಳುತ್ತಿದ್ದ ಛತ್ರವಿತ್ತು. ಶ್ರೀರಾಮಕೃಷ್ಣರು ಅಲ್ಲಿಗೆ ಪದೇಪದೇ ಹೋಗುತ್ತಿದ್ದರು. ಸಾಧುಗಳೊಡನೆ ಮಾತನಾಡುವುದು, ಅವರು ಹೇಳುವುದನ್ನು ಭಕ್ತಿಯಿಂದ ಕೇಳುವುದು, ಅವರಿಗೆ ಸಣ್ಣಪುಟ್ಟ ಕೆಲಸದಲ್ಲಿ ನೆರವಾಗುವುದು ಮುಂತಾದುವನ್ನು ಮಾಡುತ್ತಿದ್ದರು. ಒಂದು ದಿನ ಅವರಂತಯೇ ತಾವೂ ಸಾಧುವಾಗಬೇಕೆಂದು ಬಯಸಿ ಮೈಗೆ ಬೂದಿ ಬಳಿದುಕೊಂಡು ಬಟ್ಟೆಯನ್ನು ಬೈರಾಗಿಯಂತೆ ಉಟ್ಟುಕೊಂಡು ಮನೆಗೆ ಬಂದರು. ತಾಯಿಗೆ ತಾನು ಸಾಧುವಾಗಿಬಿಟ್ಟೆ ಎಂದರು. ಇದನ್ನು ನೋಡಿ ತಾಯಿ ತಳಮಳಿಸಿದಳು. ಅವರು ಪತಿಯ ಅಗಲಿಕೆಯನ್ನು ಶ್ರೀರಾಮಕೃಷ್ಣರನ್ನು ನೋಡಿ ಮರೆತಿದ್ದರು. ಈಗ ಈ ಮಗುವೆ ಹೀಗೆ ಆಗುವನೆಂದು ಹೇಳಿದಾಗ ಎದೆ ತಲ್ಲಣಿಸಿತು. ಶ್ರೀರಾಮಕೃಷ್ಣರು ತಾಯಿ ದುಃಖಿತಳಾದುದನ್ನು ನೋಡಿ, ತಮ್ಮ ಬೈರಾಗಿ ವೇಷವನ್ನು ತೆಗೆದುಹಾಕಿದರು. ಶ್ರೀರಾಮಕೃಷ್ಣರ ಮನೆಯ ಸಮೀಪದಲ್ಲಿ ಸೀತಾನಾಥ ಪೈನಿ ಎಂಬ ಗೃಹಸ್ಥ ಭಕ್ತನಿದ್ದನು. ಆತನ ಮನೆಯಲ್ಲಿ ಹಲವಾರು ಹೆಣ್ಣುಮಕ್ಕಳು ಇದ್ದರು. ರಾಮಕೃಷ್ಣರು ಅವರ ಮನೆಗೆ ಹೋಗಿ ಅನೇಕ ವೇಳೆ ಹಾಡು ಕತೆ ಮುಂತಾದುವನ್ನು ಹೇಳಿ ಅವರನ್ನು ಸಂತೋಷ ಪಡಿಸುತ್ತಿದ್ದರು. ಆ ಮನೆಯವರು ಈ ಮಗುವಿನ ಹಾಡು ನಟನೆಗಳಿಗೆ ಮೆಚ್ಚಿ ಕೃಷ್ಣನ ವೇಷಕ್ಕೆ ಬೇಕಾಗುವ ಬಟ್ಟೆಬರೆಗಳನ್ನೂ ಒಂದು ಚಿನ್ನದ ಬಣ್ಣದ ಕೊಳಲನ್ನೂ ಇವರಿಗೆ ಕೊಟ್ವರಂತೆ. ಅವರ ಮನೆಯ ಪಕ್ಕದಲ್ಲೆ ದುರ್ಗಾದಾಸ ಪೈನಿ ಎಂಬ ಮತ್ತೊಬ್ಬನಿದ್ದನು. ಅವರ ಮನೆಯವರು ಇನ್ನೂ ಘೋಷಾ ಪದ್ಧತಿಯನ್ನು ಬಿಟ್ಟಿರಲಿಲ್ಲ. ಆತನು ಇದಕ್ಕೆ ಹೆಮ್ಮೆಪಡುತ್ತಿದ್ದನು. ತನ್ನ ಮನೆಯ ಹೆಂಗಸರನ್ನು ಪರಪುರುಷರಾರೂ ನೋಡಿಲ್ಲ; ಅವರನ್ನು ನೋಡುವುದು ಅಸಾಧ್ಯ ಎನ್ನುತ್ತಿದ್ದನು. ರಾಮಕೃಷ್ಣರು ಇದನ್ನು ಕೇಳಿ "ಮುಸುಕಲ್ಲ ಹೆಂಗಸರ ಮಾನ ಕಾಪಾಡುವುದು – ಸಂಸ್ಕೃತಿ ಮತ್ತು ಒಳ್ಳೆಯ ನಡತೆ. ಬೇಕಾದರೆ ನಾನು ನಿಮ್ಮ ಮನೆಗೆ ಪ್ರವೇಶಿಸಬಲ್ಲೆ" ಎಂದರು. ಇದನ್ನು ಕೇಳಿ ದುರ್ಗಾದಾಸನು "ನೋಡೋಣ, ಹೇಗೆ ಮಾಡುವೆಯೊ" ಎಂದನು. ಒಂದು ದಿನ ಸಂಜೆ ದುರ್ಗಾದಾಸನು ಕೆಲವರೊಂದಿಗೆ ಮಾತನಾಡುತ್ತ ಮನೆಯ ಜಗಲಿಯ ಮೇಲೆ ಕುಳಿತುಕೊಂಡಿದ್ದನು. ಒಬ್ಬ ಹುಡುಗಿ ಮುಸುಕಿನಲ್ಲಿ ಬಂದು, "ನಾನು ಹತ್ತಿರದ ಹಳ್ಳಿಯವಳು, ನೂಲನ್ನು ಮಾರುವುದಕ್ಕೆ ಬಂದೆ; ಸಂಜೆಯಾಯಿತು. ದೂರ ನಡೆದುಹೋಗಬೇಕು; ರಾತ್ರಿ ಇಲ್ಲಿ ತಂಗಿ ಹೋಗುವುದಕ್ಕೆ ಅವಕಾಶವಿದೆಯೆ?" ಎಂದು ಕೇಳಿದಳು. ದುರ್ಗಾದಾಸನು, "ಒಳಗೆ ಹೋಗಿ ಹೆಂಗಸರೊಡನೆ ಮಾತನಾಡು" ಎಂದು ಕಳುಹಿಸಿದನು. ಹುಡುಗಿ ಒಳಗೆ ಹೋದಮೇಲೆ ದುರ್ಗಾದಾಸನ ಹೆಣ್ಣುಮಕ್ಕಳು ಅಪರಿಚಿತ ಹುಡುಗಿಯನ್ನು ಆದರದಿಂದ ಬರಮಾಡಿಕೊಂಡು ತಿನ್ನುವುದಕ್ಕೆ ತಿಂಡಿ ಕೊಟ್ಟರು. ಅವರೊಡನೆ ಬಹಳ ಹೊತ್ತು ರಾತ್ರಿ ಮಾತನಾಡುತ್ತಿದ್ದಳು. ಬೀದಿಯ ಹೊರಗಡೆ ಯಾರೋ ಗದಾಯ್ ಎಂದು ಕೂಗುವುದು ಕೇಳಿತು. ಈ ಸದ್ದು ಹುಡುಗಿಯ ಕಿವಿಗೆ ಬಿದ್ದೊಡನೆಯೇ "ಅಣ್ಣ, ಬರುತ್ತೀನಿ" ಎಂದು ಕೂಗಿಕೊಂಡಳು. ಆಗ ಮನೆಯವರಿಗೆ ಗೊತ್ತಾಯಿತು. ಈ ಹುಡುಗಿ ಶ್ರೀರಾಮಕೃಷ್ಣರೇ ಎಂದು. ಎಲ್ಲರಿಗೂ ಆಶ್ಚರ್ಯವಾಯಿತು, ದುರ್ಗಾದಾಸನಿಗೆ ಮೊದಲಿಗೆ ಕೋಪ ಬಂದರೂ ಅನಂತರ ಈ ಹಾಸ್ಯದಲ್ಲಿ ಎಲ್ಲರೊಡನೆ ತಾನೂ ಭಾಗಿಯಾದನು. ತಂದೆಯ ಕಾಲಾನಂತರ ಮನೆಯ ಜವಾಬ್ದಾರಿ ಶ್ರೀರಾಮಕೃಷ್ಣರ ಹಿರಿಯ ಅಣ್ಣ ರಾಮಕುಮಾರನ ಮೇಲೆ ಬಿದ್ದಿತು. ವಿಸ್ತಾರವಾಗುತ್ತಿರುವ ಸಂಸಾರವನ್ನು ನಿರ್ವಹಿಸುವುದು ಬಹಳ ಕಷ್ಟವಾಯಿತು. ಈತನೇನೋ ದೊಡ್ಡ ವಿದ್ಯಾವಂತನಾಗಿದ್ದನು. ಆದರೆ ಆ ಹಳ್ಳಿಯಲ್ಲಿ ವಿದ್ಯೆಗೆ ಗೌರವ ಸಿಕ್ಕೀತೆ ಹೊರತು ಹಣ ಸಿಕ್ಕುವಂತಿರಲಿಲ್ಲ. ಕಲ್ಕತ್ತೆಗೆ ಹೋಗಿ ಅಲ್ಲಿ ಒಂದು ಸಂಸ್ಕೃತ ಪಾಠಶಾಲೆಯನ್ನು ತೆರೆದನು. ಶ್ರೀರಾಮಕೃಷ್ಣರು ಆಗ ಕಾಮಾರಪುಕುರದಲ್ಲೇ ಇದ್ದರು. ಆಗ ಅವರಿಗೆ ಸುಮಾರು ಹದಿನಾರು ವಯಸ್ಸು. ಹಳ್ಳಿಯಲ್ಲಿದ್ದರೆ ಹುಡುಗ ಓದುವುದಿಲ್ಲವೆಂದು ಕೆಲವು ದಿನಗಳಾದ ಮೇಲೆ ರಾಮಕುಮಾರನು ತನ್ನ ತಮ್ಮನನ್ನು ಕಲ್ಕತ್ತೆಗೆ ಕರೆಸಿಕೊಂಡನು. ಕೆಲವು ದಿನ ಹುಡುಗನನ್ನು ಹೋದದಾರಿಗೆ ಬಿಟ್ಟನು. ಹುಡುಗನಿಗೆ ಓದಿನ ಕಡೆ ಮನಸ್ಸು ಓಡುತ್ತಿರಲಿಲ್ಲ. ಒಂದು ದಿನ ತಮ್ಮನನ್ನು ಕರೆದು, "ಹೀಗೆ ಆದರೆ ಹೇಗೆ? ನಿನ್ನ ಭವಿಷ್ಯವೇನು?" ಎಂದು ಕೇಳಿದನು. ಶ್ರೀರಾಮಕೃಷ್ಣರು, "ನನಗೆ ಬಟ್ಟೆ, ಹಿಟ್ಟು ಕೊಡುವ ವಿದ್ಯೆ ಬೇಡ. ಯಾವುದು ನನ್ನ ಹೃದಯಕ್ಕೆ ಬೆಳಕನ್ನು ಕೊಡಬಲ್ಲದೋ, ಯಾವುದನ್ನು ತಿಳಿದರೆ ಮನುಷ್ಯ ನಿತ್ಯ ತೃಪ್ತವಾಗುತ್ತಾನೆಯೋ ಆ ವಿದ್ಯೆ ಪಡೆಯಲು ನಾನು ಯತ್ನಿಸುವೆನು" ಎಂದರು. ಅಣ್ಣ ಅಪ್ರತಿಭನಾದನು. ತಮ್ಮನು ಸುಲಭವಾಗಿ ದಾರಿಗೆ ಬರುವಂತೆ ಕಾಣಲಿಲ್ಲ. ತಾನು ಹೋಗುತ್ತಿದ್ದ ಕೆಲವು ಮನೆಗಳಿಗೆ ಪೂಜೆಗೆ ಹೋಗು ಎಂದು ಹೇಳಿದನು. ತಮ್ಮನು ಇದನ್ನು ಸಂತೋಷದಿಂದ ಒಪ್ಪಿಕೊಂಡನು. ಹೀಗೆ ಶ್ರೀರಾಮಕೃಷ್ಣರು ಇತರರ ಮನೆಗಳಿಗೆ ಹೋಗಿ ಪೂಜೆ ಮಾಡಿದರು. ಮನೆಯವರಿಗೆ ಹೊಸ ಪೂಜಾರಿಯು ಪೂಜೆ ಮಾಡುವ ರೀತಿ, ಅವರ ಭಾವ ಮುಂತಾದುವನ್ನು ನೋಡಿ ಅವರಲ್ಲಿ ಹೆಚ್ಚು ಗೌರವ ಉಂಟಾಯಿತು. ಅವಸರವಿಲ್ಲದ ಶ್ರದ್ಧಾಭಕ್ತಿಯಿಂದ ಪೂಜೆ ಮಾಡುತ್ತಿದ್ದರು. ಭಾವಪೂರ್ವಕವಾಗಿ ಭಕ್ತಿಗೀತೆಗಳನ್ನು ಹಾಡುತ್ತಿದ್ದರು. ಇವರನ್ನು ಕಂಡು ಎಲ್ಲ ಮನೆಯವರಿಗೂ ಪ್ರೀತಿಯುಂಟಾಯಿತು; ಕೊಡುವ ದಕ್ಷಿಣೆಯ ಆಸೆಗಲ್ಲದೆ ಕೇವಲ ಉಪಾಸನೆಗಾಗಿಯೆ ದೇವರನ್ನು ಇವರು ಪೂಜಿಸುತ್ತಿದ್ದರು ಕಲ್ಕತ್ತೆಯಲ್ಲಿ ರಾಣಿ ರಾಸಮಣಿ ಎಂಬ ದೊಡ್ಡ ದೇವೀ ಭಕ್ತೆ ಇದ್ದಳು. ಆಕೆ ತುಂಬಾ ಶ್ರೀಮಂತಳು. ಬೆಸ್ತರ ಕುಲದಿಂದ ಬಂದವಳು. ಬೇಕಾದಷ್ಟು ದುಡ್ಡು ವ್ಯಯಿಸಿ ದಕ್ಷಿಣೇಶ್ವರ ಎಂಬಲ್ಲಿ ಗಂಗಾನದಿಯ ತೀರದಲ್ಲಿ ದೊಡ್ಡದೊಂದು ಕಾಳಿಕಾ ದೇವಾಲಯವನ್ನು ಕಟ್ಟಿಸಿದಳು. ಅದನ್ನು ಪ್ರತಿಷ್ಠೆ ಮಾಡುವ ದಿನ ಬಂದಿತು. ಆದರೆ ಅಲ್ಲಿ ಪೂಜೆಮಾಡಲು ಯಾವ ಬ್ರಾಹ್ಮಣ ಪೂಜಾರಿಯೂ ಬರಲಿಲ್ಲ. ರಾಣಿ ಖಿನ್ನಳಾದಳು. ಈ ಸಮಾಚಾರ ರಾಮಕುಮಾರನಿಗೆ ಗೊತ್ತಾಯಿತು. ಆತ ಈಕೆಗೆ ಒಂದು ಉಪಾಯವನ್ನು ಸೂಚಿಸಿದನು. ಆ ದೇವಸ್ಥಾನವನ್ನು ಅದಕ್ಕೆ ಪ್ರತಿವರ್ಷವೂ ತಗಲುವ ಖರ್ಚಿನ ಸಮೇತ ಒಬ್ಬ ಬ್ರಾಹ್ಮಣನಿಗೆ ದಾನ ಮಾಡಿಬಿಟ್ಟರೆ ಆ ದೇವಸ್ಥಾನದಲ್ಲಿ ಯಾವ ಬ್ರಾಹ್ಮಣ ಪೂಜಾರಿ ಬೇಕಾದರೂ ಪೂಜೆ ಮಾಡಬಹುದು ಎಂದನು. ಹಾಗೆ ಮಾಡಿದರೂ ಯಾರೂ ಪೂಜೆಗೆ ಮುಂದೆ ಬರಲಿಲ್ಲ. ಕೊನೆಗೆ ಉಪಾಯ ಹೇಳಿಕೊಟ್ಟವನೇ ಮುಂದೆ ಬರಬೇಕಾಯಿತು. ರಾಮಕುಮಾರನೇ ಅಲ್ಲಿ ಪೂಜೆಮಾಡುವುದಕ್ಕೆ ಒಪ್ಪಿಕೊಂಡನು. ಜೊತೆಗೆ ರಾಮಕೃಷ್ಣರೂ ಬಂದರು. ಕೆಲವು ವೇಳೆ ಅವರು ಅಣ್ಣನು ಪೂಜೆ ಮಾಡುವುದಕ್ಕೆ ಅಣಿಮಾಡಿಕೊಡುತ್ತಿದ್ದರು. ರಾಣಿ ರಾಸಮಣಿಯ ಹಿರಿಯ ಅಳಿಯ ಮಥುರನಾಥ ಬಿಶ್ವಾಸ್ ಎಂಬವನಿದ್ದನು. ಆತ ವಿದ್ಯಾವಂತ, ಮೇಲ್ವಿಚಾರಣೆ ನೋಡಿಕೊಳ್ಳುವುದರಲ್ಲಿ ತುಂಬಾ ನಿಪುಣ. ರಾಣಿಯ ಆಸ್ತಿಯನ್ನೆಲ್ಲ ಅವನೇ ನೋಡಿಕೊಳ್ಳುತ್ತಿದ್ದನು. ಹಲವು ವೇಳೆ ಆತ ಗುಡಿಗೆ ಬಂದಾಗ ರಾಮಕೃಷ್ಣರು ಅವನ ಕಣ್ಣಿಗೆ ಬೀಳುತ್ತಿದ್ದರು. ನೋಡಿದೊಡನೆಯೆ ಆ ಹುಡುಗನ ಮೇಲೆ ಮಥುರನಾಥನಲ್ಲಿ ಪ್ರೀತಿ ಹುಟ್ಟಿತು. ಹೇಗಾದರೂ ಮಾಡಿ ಆ ಹುಡುಗನನ್ನು ಗುಡಿಯಲ್ಲೇ ನಿಲ್ಲಿಸಬೇಕು. ಆತ ಪೂಜಾರಿಯಾದರೆ ಒಳ್ಳೆಯದಾದೀತು ಎಂದು ಭಾವಿಸಿ ವಿಚಾರಿಸಿದನು. ಆದರೆ ಶ್ರೀರಾಮಕೃಷ್ಣರು ಅದಕ್ಕೆ ಒಪ್ಪಲಿಲ್ಲ. ಕೆಲವು ಕಾಲವಾದ ಮೇಲೆ ರಾಮಕುಮಾರನು ತನ್ನ ಹಳ್ಳಿಗೆ ಹೋದನು. ಪುನಃ ಹಿಂತಿರುಗಿ ಬಂದು ದೇವಿಯ ಪೂಜೆಯನ್ನು ಮಾಡುವ ಸುಯೋಗ ಅವನಿಗೆ ಇರಲಿಲ್ಲ. ಅಲ್ಲಿಯೇ ಕಾಲವಾದನು. ಆ ಸಮಯಕ್ಕೆ ಸರಿಯಾಗಿ ಹೃದಯರಾಮನೆಂಬ ಶ್ರೀರಾಮಕೃಷ್ಣರ ನೆಂಟನೊಬ್ಬನು ದಕ್ಷಿಣೇಶ್ವರಕ್ಕೆ ಜೀವನೋಪಾಯಕ್ಕಾಗಿ ಬಂದನು. ವಯಸ್ಸಿನಲ್ಲಿ ಶ್ರೀರಾಮಕೃಷ್ಣರಿಗಿಂತ ಕೆಲವು ವರುಷ ಕಿರಿಯವನು. ಮಥುರನಾಥ ಮತ್ತೆ ಶ್ರೀರಾಮಕೃಷ್ಣರನ್ನು ಪೂಜೆ ಮಾಡುವಂತೆ ಕೇಳಿಕೊಂಡನು. ಶ್ರೀರಾಮಕೃಷ್ಣರು, "ದೇವಿಗೆ ಬೇಕಾದಷ್ಟು ಒಡವೆ ವಸ್ತ್ರಗಳನ್ನೆಲ್ಲ ಹಾಕಿರುವರು; ಅದು ಕಳೆದುಹೋದರೆ ಪೂಜಾರಿಯ ತಲೆಯ ಮೇಲೆ ಬರುವುದು. ಈ ತರದ ಜವಾಬ್ದಾರಿ ಕೆಲಸ ಬೇಡ" ಎಂದರು. ಹೃದಯನು, "ನಾನು ಜವಾಬ್ದಾರಿ ಕೆಲಸವನ್ನು ನೋಡಿಕೊಳ್ಳುತ್ತೇನೆ, ಶ್ರೀರಾಮಕೃಷ್ಣರು ಪೂಜೆ ಮಾಡಿದರೆ ಸಾಕು" ಎಂದನು. ಶ್ರೀರಾಮಕೃಷ್ಣರು ಪೂಜೆ ಮಾಡುವುದಕ್ಕೆ ಒಪ್ಪಿಕೊಂಡರು. ಶ್ರೀರಾಮಕೃಷ್ಣರ ಜೀವನದಲ್ಲಿ ಮಥುರನಾಥನು ಅತಿ ಮುಖ್ಯವಾದ ಪಾತ್ರವನ್ನು ಪಡೆದನು. ಶ್ರೀರಾಮಕೃಷ್ಣರಿಗೆ ಸಾಧನೆಯ ಸಮಯದಲ್ಲಿ ಬೇಕಾಗುವ ಸೌಕರ್ಯಗಳನ್ನೆಲ್ಲಾ ಒದಗಿಸಿದನು. ಆತ ಶ್ರೀರಾಮಕೃಷ್ಣರನ್ನು ಅತಿ ಪ್ರೀತಿಯಿಂದ ಕಾಣುತ್ತಿದ್ದನು. ತನ್ನ ಇಷ್ಟ ದೈವವೇ ಶ್ರೀರಾಮಕೃಷ್ಣರಾಗಿರುವನು ಎಂದು ಭಾವಿಸಿದನು. ದಕ್ಷಿಣೇಶ್ವರದ ಸನ್ನಿವೇಶ ಶ್ರೀರಾಮಕೃಷ್ಣರ ಜೀವನಕ್ಕೆ ಅತಿಮುಖ್ಯವಾದ ಹಿನ್ನೆಲೆಯಾಯಿತು. ಪೂಜೆಮಾಡುವುದಕ್ಕಿ ಪ್ರಾರಂಭಿಸಿದುದು ಇಲ್ಲಿ. ಅದ್ಭುತ ಸಾಧನೆ ಮಾಡಿದುದು ಇಲ್ಲಿ, ಮಹಾವ್ಯಕ್ತಿಗಳು ಇವರನ್ನು ಸಂದರ್ಶಿಸಲು ಬಂದುದು ಇಲ್ಲಿ. ಸ್ವಾಮಿ ವಿವೇಕಾನಂದರಂತಹ ಶಿಷ್ಯರನ್ನು ತರಬೇತು ಮಾಡಿದುದು ಇಲ್ಲಿ. ಶ್ರೀರಾಮಕೃಷ್ಣರ ಲೀಲಾ ನಾಟಕಕ್ಕೆ ದಕ್ಷಿಣೇಶ್ವರ ಒಂದು ರಂಗಭೂಮಿಯಾಯಿತು. ಪಾವನ ಗಂಗಾನದಿ ಮುಂದೆ ಹರಿಯುತ್ತಿದೆ. ನದಿಯಿಂದ ಬಂದೊಡನೆಯೆ ದೊಡ್ಡ ಸೋಪಾನ ಪಂಕ್ತಿ. ನಂತರ ಎಡಗಡೆ ಬಲಗಡೆ ಆರು ಆರು ಶಿವಮಂದಿರಗಳು. ಅದನ್ನು ದಾಟಿ ಹೋದರೆ ಭವ್ಯವಾದ ಕಾಳಿಕಾ ದೇವಸ್ಥಾನ. ಅದರ ಮುಂದುಗಡೆ ವಿಶಾಲವಾದ ನಾಟ್ಯಮಂದಿರ. ಮತ್ತೊಂದು ಕಡೆ ರಾಧಾಕೃಷ್ಣರ ದೇವಸ್ಥಾನ. ಸುತ್ತಲೂ ವಿಸ್ತಾರವಾದ ಅಂಗಳ. ಅದರ ಹಿಂದೆ ಪ್ರಾಕಾರದ ಸುತ್ತಲೂ ಯತ್ರಿಕರು ಬಂದರೆ ತಂಗಿಕೊಳ್ಳುವುದಕ್ಕೆ ಹಲವಾರು ಕೋಣೆಗಳು ಇವೆ. ಪ್ರಾಕಾರವನ್ನು ದಾಟಿದೊಡನೆ ಗಂಗಾನದಿಯ ತೀರದಲ್ಲಿ ಅತಿ ದಟ್ಟವಾದ ಕಾಡು, ನಿರ್ಜನ ಪ್ರದೇಶ. ಆಧ್ಯಾತ್ಮಿಕ ಸಾಧನೆಯನ್ನು ಮಾಡುವುದಕ್ಕೆ ಯೋಗ್ಯವಾದ ಸ್ಥಳ. ಪರಮಹಂಸರು ಈ ಪಾವನ ಪ್ರದೇಶವನ್ನು ತಮ್ಮ ತಪಸ್ಸಿನಿಂದ ಪಾವನತರ ಮಾಡಿದರು. ಶ್ರೀರಾಮಕೃಷ್ಣರು ಪೂಜಾಕಾರ್ಯವನ್ನು ಆರಂಭಿಸಿದರು. ಬೆಳಗ್ಗೆ ಭಕ್ತಿಯಿಂದ ಕಂಪಿಸುತ್ತ ಗುಡಿಗೆ ಹೋಗುವರು. ದೇವಿಗೆ ಅಲಂಕಾರ ಮಾಡುವರು. ಪೂಜೆ ಮಾಡುವರು, ನೈವೇದ್ಯ ಮಾಡುವರು. ಆದರೆ ಇದರಲ್ಲಿ ಶ್ರೀರಾಮಕೃಷ್ಣರ ಜೀವನ ಕೊನೆಗೊಂಡಿದ್ದರೆ ಅವರು ಒಬ್ಬ ಪೂಜಾರಿ ಮಾತ್ರ ಆಗಿರುತ್ತಿದ್ದರು, ಜಗದ್ವಂದ್ಯ ಶ್ರೀರಾಮಕೃಷ್ಣರು ಆಗುತ್ತಿರಲಿಲ್ಲ. ಶಿಲಾಮೂರ್ತಿಯಲ್ಲಿ ಚೇತನವಿದೆಯೆ? ಆಕೆ ಶಿಲ್ಪಿಗಳು ಕೊರೆದ ವಿಗ್ರಹವೋ ಅಥವಾ ಭಕ್ತರು ಕಂಡ ದರ್ಶನವೋ? ಆಕೆ ಕೇವಲ ಒಂದು ಕಲ್ಪನೆಯ ಕತೆಯೋ ಅಥವಾ ಭಕ್ತರ ಮೊರೆಯನ್ನು ಕೇಳಿ ಅವರನ್ನು ಸದಾ ಉದ್ಧಾರಮಾಡಲು ಕಾದು ಕುಳಿತಿರುವ ಮಹಾ ಶಕ್ತಿ ಚಿಲುಮೆಯೋ? ಈ ಸಮಸ್ಯೆಯನ್ನು ಪರೀಕ್ಷಿಸುವುದಕ್ಕಾಗಿ ತಮ್ಮ ಜೀವನವನ್ನೇ ಪ್ರಯೋಗ ಶಾಲೆಯನ್ನಾಗಿ ಮಾಡಿದರು. ಶ್ರೀರಾಮಕೃಷ್ಣರು ಎಲ್ಲ ಜನರಿಂದ ದೂರವಾದರು. ಅವರದೇ ಆದ ಪ್ರಪಂಚದಲ್ಲಿ ವಿಹರಿಸತೊಡಗಿದರು. ಜಗನ್ಮಾತೆಯನ್ನು ನೋಡಬೇಕೆಂಬ ಆಸೆ ಕಾಡುಗಿಚ್ಚಿನೋಪಾದಿ ಅವರ ಜೀವನವನ್ನೆಲ್ಲ ವ್ಯಾಪಿಸಿತು. ಹಗಲು ಪೂಜೆಮಾಡುವರು, ಕಂಬನಿದುಂಬಿ ಜಗನ್ಮಾತೆಗಾಗಿ ಅತ್ತು ಕರೆಯುವರು : "ಹೇ ತಾಯೆ ! ನೀನು ಎಲ್ಲಿರುವೆ, ಮೈದೋರು, ರಾಮಪ್ರಸಾದ ನಿನ್ನ ದರ್ಶನ ಪಡೆದು ಅನುಗ್ರಹೀತನಾದ. ನಾನೇನು ಪಾಪಿಯೇ ! ನನ್ನ ಬಳಿಗೆ ನೀನೇಕೆ ಬಾರೆ? ನನಗೆ ಸುಖ ಬೇಡ, ಐಶ್ವರ್ಯ ಬೇಡ, ಸ್ನೇಹಿತರು ಬೇಡ, ನನಗೆ ಪ್ರಪಂಚದ ಯಾವ ಭೋಗವೂ ಬೇಡ. ಹೇ ತಾಯೇ, ನಿನ್ನನ್ನು ನೋಡುವುದೊಂದೇ ನನ್ನ ಚರಮಗುರಿ." ದಿನದ ಅಂತ್ಯಸಮಯವನ್ನು ಸೂಚಿಸುವ ಘಂಟಾಧ್ವನಿಯನ್ನು ಕೇಳಿದೊಡನೆಯೆ ಉದ್ವಿಗ್ನರಾಗಿ ಅಳತೊಡಗುವರು : "ತಾಯೆ ಮತ್ತೊಂದು ದಿನ ವ್ಯರ್ಥವಾಯಿತು. ನಾನು ಇನ್ನೂ ನಿನ್ನನ್ನು ಸಂದರ್ಶಿಸಲಿಲ್ಲ. ಈ ಅಲ್ಪಜೀವನದಲ್ಲಿ ಆಗಲೇ ಒಂದು ದಿನ ಕಳೆಯಿತು. ನನಗೆ ಇನ್ನೂ ಸತ್ಯ ಸಾಕ್ಷಾತ್ಕಾರವಾಗಲಿಲ್ಲ." ಬೇಕಾದಷ್ಟು ಅತ್ತರು, ಪ್ರಾರ್ಥಿಸಿದರು, ಧ್ಯಾನಮಾಡಿದರು. ಆದರೂ ದೇವಿ ಮೈದೋರಲಿಲ್ಲ. ಒಂದು ದಿನ ಗರ್ಭಗುಡಿಯೊಳಗೆ ಇರುವಾಗ, ದೇವಿಯ ದರ್ಶನ ಪಡೆಯದ ಬಾಳು ನಿರರ್ಥಕ, ಇದು ಕೊನೆಗಾಣಲಿ ಎಂದು ಬಲಿಕೊಡುವ ಕತ್ತಿಯನ್ನು ತೆಗೆದುಕೊಂಡು ತಮ್ಮ ರುಂಡವನ್ನು ದೇವಿಯ ಅಡಿದಾವರೆಯಲ್ಲಿ ಚಂಡಾಡುವುದರಲ್ಲಿದ್ದರು. ಆಗ ಮಾಯಾ ತೆರೆ ಹಿಂದೆ ಸರಿಯಿತು. ಜಗನ್ಮಾತೆ ಪ್ರತ್ಯಕ್ಷಳಾದಳು. ಸಚ್ಚಿದಾನಂದ ಸ್ವರೂಪಿಣಿಯಲ್ಲಿ ಅವರ ಮನಸ್ಸು ತಲ್ಲೀನವಾಯಿತು. ಬಾಹ್ಯಪ್ರಪಂಚಕ್ಕೆ ಬಂದ ಮೇಲೆ ಅವರ ನಡತೆ ಸಂಪೂರ್ಣ ಬದಲಾಯಿಸಿತು. ಅವರ ಪಾಲಿಗೆ ಕಲ್ಲಿನ ವಿಗ್ರಹ ಮಾಯವಾಗಿ, ಅದೊಂದು ಸಚೇತನ ಮೂರ್ತಿಯಾಯಿತು. ಅಂದಿನಿಂದ ಪೂಜಾ ವಿಧಾನವೇ ಬೇರೆ ರೂಪು ತಾಳಿತು. ದೇವಿ ಅವರು ಕೊಟ್ಟ ನೈವೇದ್ಯವನ್ನು ಊಟ ಮಾಡುತ್ತಿದ್ದಳು. ಮಾಡಿದ ಪೂಜೆಯನ್ನು ಸ್ವೀಕರಿಸುತ್ತಿದ್ದಳು. ಬೇಡಿದ ಪಾರ್ಥನೆಯನ್ನು ಈಡೇರಿಸುತ್ತಿದ್ದಳು. ಮಗು ತಾಯಿಯೊಂದಿಗೆ ಯಾವ ರೀತಿ ಸಲಿಗೆಯಿಂದ ಇರುವುದೋ ಅದೇ ಸಲಿಗೆಯಲ್ಲಿ ಇವರು ಜಗನ್ಮಾತೆಯೊಡನೆ ವರ್ತಿಸುತ್ತಿದ್ದರು. ಜಗನ್ಮಾತೆ ಪ್ರತ್ಯಕ್ಷಳಾದ ನಂತರ ಶ್ರೀರಾಮಕೃಷ್ಣರ ಪೂಜಾ ವಿಧಾನ ಬೇರೆ ರೂಪಕ್ಕೆ ತಿರುಗಿತು. ನೈವೇದ್ಯಕ್ಕೆ ಕೊಟ್ಟದ್ದನ್ನು ಕೆಲವು ವೇಳೆ ತಾವು ಮೊದಲು ರುಚಿ ನೋಡುವರು, ನಂತರ ದೇವಿಗೆ ಅರ್ಪಣೆ ಮಾಡುತ್ತಿದ್ದರು. ಹೂವು, ಗಂಧ, ದೇವಿಗೆ ಅರ್ಪಣೆ ಮಾಡುವುದಕ್ಕೆ ಮುಂಚೆ, ಜಗನ್ಮಾತೆ ತಮ್ಮಲ್ಲಿಯೂ ಇರುವಂತೆ ಭಾಸವಾಗಿ ಅದರಿಂದ ತಮ್ಮನ್ನೇ ಅಲಂಕರಿಸಿಕೊಳ್ಳುತ್ತಿದ್ದರು. ಮಂಗಳಾರತಿಯನ್ನು ಕೆಲವು ವೇಳೆ ಬಹಳ ಹೊತ್ತು ಮಾಡುತ್ತಿದ್ದರು. ಕೆಲವು ವೇಳೆ ಬಹಳ ಬೇಗ ಪೂರೈಸುವರು. ಸಾಮಾನ್ಯ ಜನರು ಅವರನ್ನು ಹುಚ್ಚು ಪೂಜಾರಿಯೆಂದು ಕರೆಯತೊಡಗಿದರು. ಸಾಧಾರಣವಾಗಿ ಮನುಷ್ಯರು ಮತ್ತೊಬ್ಬರನ್ನು ಅಳೆಯುವ ರೀತಿಯೇ ಹೀಗೆ. ಯಾರು ತಮ್ಮಂತೆ ಇಲ್ಲವೋ ಅವರೆಲ್ಲ ಹುಚ್ಚರು. ತಮಗೆ ಮಾತ್ರ ಬುದ್ಧಿ ಸ್ಥಿಮಿತವಾಗಿರುವುದೆಂದು ಭಾವಿಸುವರು. ದೇವಸ್ಥಾನದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ ಮಥುರನಾಥನಿಗೂ ಈ ಸುದ್ದಿ ತಿಳಿಯಿತು. ಆತನಿಗೆ ಮೊದಲಿನಿಂದಲೂ ಶ್ರೀರಾಮಕೃಷ್ಣರ ಮೇಲೆ ಗೌರವ. ಇದನ್ನು ಕೇಳಿ ಅತಿ ವ್ಯಾಕುಲಿತನಾಗಿ ತಾನೆ ಬಂದು ಇದನ್ನು ನೋಡುವವರೆಗೂ ಯಾರೂ ಇವರಿಗೆ ತೊಂದರೆಯನ್ನು ಕೊಡಕೂಡದೆಂದು ಹೇಳಿಕಳುಹಿಸಿದನು. ಒಂದು ದಿನ ಅವನೇ ಬಂದು ಇವರ ಪೂಜಾವಿಧಾನವನ್ನು ನೋಡಿದನು. ಇದು ಹುಚ್ಚಲ್ಲ, ದೈವೋನ್ಮಾದವೆಂದು ತಿಳಿದು ಯಾರೂ ಅವರಿಗೆ ತೊಂದರೆ ಕೊಡದಂತೆ ಎಚ್ಚರಿಸಿ ಹೋದನು. ಒಂದು ದಿನ ರಾಣಿ ರಾಸಮಣಿ ಶ್ರೀರಾಮಕೃಷ್ಣರು ಪೂಜೆ ಮಾಡುತ್ತಿದ್ದಾಗ ಬಂದಳು. ಪೂಜೆಯಾದ ಮೇಲೆ ರಾಮಕೃಷ್ಣರನ್ನು ಒಂದೆರಡು ಭಕ್ತಿಯ ಹಾಡನ್ನು ಹಾಡುವಂತೆ ಕೇಳಿಕೊಂಡಳು. ಶ್ರೀರಾಮಕೃಷ್ಣರು ಹಾಡುತ್ತಿರುವಾಗ ಆಕೆಯ ಮನಸ್ಸು ಹಾಡಿನ ಮೇಲೆ ಇರಲಿಲ್ಲ. ಯಾವುದೊ ಒಂದು ಮೊಕದ್ದಮೆಯ ವಿಷಯವನ್ನು ಚಿಂತಿಸುತ್ತಿತ್ತು. ಶ್ರೀರಾಮಕೃಷ್ಣರು ಇದನ್ನು ಗ್ರಹಿಸಿ ಆಕೆಯ ಹತ್ತಿರ ಹೋಗಿ "ಇಲ್ಲಿಯೂ ಪ್ರಾಪಂಚಿಕ ಚಿಂತನೆಯೆ?" ಎಂದು ಕೆನ್ನೆಗೆ ಏಟು ಕೊಟ್ಟರು. ರಾಣಿ ರಾಸಮಣಿ ತನ್ನ ತಪ್ಪನ್ನು ಒಪ್ಪಿಕೊಂಡು ಕುಪಿತಳಾಗದೆ, ಜಗನ್ಮಾತೆಯೇ ತನಗೆ ಈ ರೀತಿ ಶಿಕ್ಷಿಸಿದಳೆಂದು ಭಾವಿಸಿದಳು. ಅದರ ಇಂತಹ ಕೆಲವು ದೃಶ್ಯಗಳನ್ನು ಕಂಡ ಇತರರು ಶ್ರೀರಾಮಕೃಷ್ಣರು ನಿಜವಾಗಿ ಹುಚ್ಚರೆಂದು ಭಾವಿಸಿದರು. ಆದರೆ ರಾಣಿಗೆ ಇವರೊಬ್ಬ ಮಹಾಭಕ್ತರೆಂದು ಗೊತ್ತಾಯಿತು. ವಜ್ರದ ವ್ಯಾಪಾರಿಗೆ ಮಾತ್ರ ವಜ್ರ ಯಾವುದು, ಗಾಜಿನ ಚೂರು ಯಾವುದು ಎಂಬುದು ಗೊತ್ತಾಗುವುದು. ರಾಣಿ ರಾಸಮಣಿ, ಮಥುರನಾಥ ಇವರಿಬ್ಬರೂ ಶ್ರೀರಾಮಕೃಷ್ಣರ ಜೀವನದಲ್ಲಿ ಮುಖ್ಯ ಪಾತ್ರವನ್ನು ಪಡೆದಿರುವರು ಎಂಬುದನ್ನು ಆಗಲೇ ತಿಳಿಸಿರುವೆವು. ಅವರಿಗೂ ರಾಮಕೃಷ್ಣರಿಗೂ ಸಂಬಂಧಪಟ್ಟ ಒಂದೆರಡು ಘಟನೆಗಳಿಂದ ಪರಮಹಂಸರ ವ್ಯಕ್ತಿತ್ವ ಇನ್ನೂ ಹೆಚ್ಚು ಪ್ರಕಾಶಕ್ಕೆ ಬರುವುದನ್ನು ನೋಡುತ್ತೇವೆ. ಒಂದು ದಿನ ರಾಧಾಕೃಷ್ಣನ ದೇವಸ್ಥಾನದಲ್ಲಿ ರಾಧಾರಮಣನ ವಿಗ್ರಹದ ಕಾಲು ಪೂಜಾರಿಯ ಅಜಾಗರೂಕತೆಯಿಂದ ಮುರಿದು ಹೋಯಿತು. ಭಿನ್ನವಾದ ವಿಗ್ರಹವನ್ನು ಪೂಜಿಸುವುದು ಅಶಾಸ್ತ್ರೀಯವೆಂದು ಪಂಡಿತರು ಸಾರಿದರು. ಇಷ್ಟು ದಿನವೂ ಪೂಜಿಸುತ್ತಿದ್ದ ಆ ವಿಗ್ರಹವನ್ನು ತೆಗೆದಿಡಲು ರಾಣಿಯ ಮನಸ್ಸು ಒಪ್ಪಲಿಲ್ಲ. ಹೀಗೆ ವ್ಯಾಕುಲದಲ್ಲಿರುವಾಗ ಶ್ರೀರಾಮಕೃಷ್ಣರು ಹೀಗೆ ಹೇಳಿದರು: "ನಿನ್ನ ಅಳಿಯ ಮಥುರನಾಥನಿಗೆ ಕಾಲು ಮುರಿದುಹೋದರೆ ಅವನನ್ನು ನೀನು ಹೊರಗೆ ಕಳುಹಿಸಿ ಬೇರೆ ಅಳಿಯನನ್ನು ಬರಮಾಡಿಕೊಳ್ಳುವೆಯಾ? ಅದರಂತೆಯೇ ವಿಗ್ರಹವನ್ನು ಸರಿಮಾಡಿ ಉಪಯೋಗಿಸಬಹುದು" ಎಂದರು. ಯಾವ ಶಾಸ್ತ್ರವೂ ಬಗೆಹರಿಸದ ಒಂದು ಸಮಸ್ಯೆಯನ್ನು ಶ್ರೀರಾಮಕೃಷ್ಣರು ಪ್ರಪಂಚದಿಂದ ಆರಿಸಿಕೊಂಡ ಒಂದು ಉಪಮಾನದ ಮೂಲಕ ಬಗೆಹರಿಸಿದರು. ಶ್ರೀರಾಮಕೃಷ್ಣರು ಪೂಜೆಗೆ ಒಂದು ದಿನ ಹೂವನ್ನು ಕೊಯ್ಯಲು ಹೋದಾಗ ಆ ಹೂವುಗಳೆಲ್ಲಾ ಆಗತಾನೇ ವಿರಾಟ್ ಸ್ವರೂಪಿ ಭಗವಂತನಿಗೆ ಅರ್ಪಿತವಾದಂತೆ ಭಾಸವಾಯಿತು. ಪ್ರತಿಯೊಂದು ಹೂವಿನ ಗಿಡವೂ ಅವನ ಕೈಯಲ್ಲಿರುವ ತುರಾಯಿಯಂತೆ ಕಂಡಿತು. ಅಂದಿನಿಂದ ಬಾಹ್ಯಪೂಜೆ ಮಾಡುವುದನ್ನು ಬಿಟ್ಟರು. ಹೃದಯನೆ ಈ ಕೆಲಸವನ್ನು ಕೈಗೊಂಡನು. ಮಥುರನಾಥನು ಒಂದು ದಿನ ಶ್ರೀರಾಮಕೃಷ್ಣರೊಡನೆ ಮಾತನಾಡುತ್ತಿದ್ದಾಗ "ದೇವರೂ ಕೂಡ ನಿಯಮವನ್ನು ಮೀರಲಾರ" ಎಂದನು. ಅಗ ಶ್ರೀರಾಮಕೃಷ್ಣರು ದೇವರಿಗೆ ಎಲ್ಲವೂ ಸಾಧ್ಯವೆಂದರು. ಮಥುರನಾಥನು "ಹಾಗಾದರೆ ಬಿಳಿ ದಾಸವಾಳದ ಹೂವು ಬಿಡುವ ಗಿಡದಲ್ಲಿ ಕೆಂಪು ಹೂವು ಬಿಡಬಲ್ಲದೆ?" ಎಂದು ಕೇಳಿದನು. ಶ್ರೀರಾಮಕೃಷ್ಣರು, "ಅವನ ಇಚ್ಛೆಯಾದರೆ ಬಿಡದೆ ಏನು?" ಎಂದರು. ಮಾರನೆದಿನ ತೋಟದಲ್ಲಿ ಹೋಗುತ್ತಿದ್ದಾಗ ಬಿಳಿ ದಾಸವಾಳದ ಗಿಡದಲ್ಲಿ ಒಂದು ಅಪರೂಪವಾಗಿ ಕೆಂಪು ದಾಸವಾಳ ಬಿಟ್ಟಿರುವುದನ್ನು ನೋಡಿದರು. ಅದನ್ನು ಮಥುರನಾಥನಿಗೆ ತೋರಿಸಿ, "ನೋಡು ದೇವರಿಗೆ ಯಾವುದು ಅಸಾಧ್ಯ?" ಎಂದರು. ಮಥುರನು, "ಅಬ್ಬ, ನಿಮ್ಮ ಹತ್ತಿರ ಮಾತನಾಡುವುದು ತುಂಬಾ ಕಷ್ಟ!" ಎಂದು ತೆಪ್ಪಗಾದನು. ಮತ್ತೊಂದು ದಿನ ದೇವಸ್ಥಾನಕ್ಕೆ ಕಳ್ಳರು ನುಗ್ಗಿ ವಿಗ್ರಹದ ಮೇಲಿದ್ದ ಒಡವೆಗಳನ್ನೆಲ್ಲಾ ಅಪಹರಿಸಿದರು. ಮಥುರನು ಇದನ್ನು ಕೇಳಿ ಅತಿ ವ್ಯಾಕುಲನಾಗಿ ಶ್ರೀರಾಮಕೃಷ್ಣರ ಹತ್ತಿರ ಬಂದು, "ಏನು ದೇವರು ತನ್ನ ಮೇಲಿರುವ ಒಡವೆಗಳನ್ನು ಕೂಡ ಕಳ್ಳರಿಂದ ಕಾಪಾಡಿಕೊಳ್ಳಲಾರದೆ ಹೋದನಲ್ಲ" ಎಂದನು. ಇದನ್ನು ಕೇಳಿ ಶ್ರೀರಾಮಕೃಷ್ಣರು, "ಓ ! ಏನು ಮಾತನಾಡುವೆ. ನಿನಗೆ ಅದು ಬೆಲೆಬಾಳುವ ಒಡವೆ. ದೇವರಿಗೆ ಅದು ಮಣ್ಣಿಗೆ ಸಮಾನ. ದೇವರ ಮನೆಬಾಗಿಲನ್ನು ಕುಬೇರ ಕಾಯುತ್ತಿರುವಾಗ ನಿನ್ನ ಒಂದೆರಡು ಒಡವೆ ಮತ್ತಾರೋ ಹೊತ್ತುಕೊಂಡು ಹೋದರೆ ಅದನ್ನು ದೇವರು ಗಮನಿಸುವನೇ?" ಎಂದರು. ಸಾಧಾರಣ ಮನುಷ್ಯರು ದೇವರ ಮಹಾತ್ಮೆಯನ್ನು ಅಳೆಯುವುದು ಹೀಗೆ. ಆ ಒಡವೆ ತೆಗೆದುಕೊಂಡು ಹೋಗುವ ಸಮಯದಲ್ಲಿ ಕಳ್ಳನೇನಾದರೂ ರಕ್ತಕಾರಿ ಸತ್ತಿದ್ದರೆ, ಪರವಾಗಿಲ್ಲ, ದೇವರಲ್ಲಿ ಏನೋ ಸತ್ಯವಿದೆ ಎನ್ನುವರು. ಏನೂ ಆಗದೆ ಹೋದರೆ, ಅಯ್ಯೋ ಮಹಾತ್ಮೆಯನ್ನು ಏನು ಇದೆ! ಎನ್ನುವರು. ದೇವರಿಗೆ ಸತ್ಪುರುಷ ಹೇಗೆ ಒಬ್ಬ ಮಗನೋ ಹಾಗೆಯೇ ಕಳ್ಳನೂ ಒಬ್ಬ ಮಗ ಎಂಬ ಭಾವ ಬರಬೇಕಾದರ ಜೀವ ತುಂಬಾ ಮುಂದುವರಿದಿರಬೇಕು. ಶ್ರೀರಾಮಕೃಷ್ಣರು ಅಸಾಧಾರಣ ರೀತಿಯಲ್ಲಿ ವ್ಯವಹರಿಸುತ್ತ ಇದ್ದುದು ಸಾಧಾರಣ ಜನರಿಗೆ ಗೊತ್ತಾಗಲಿಲ್ಲ. ಇವರು ಹುಚ್ಚರಾಗಿ ಹೋಗಿರುವರು ಎಂಬ ಸುದ್ದಿ ಸುತ್ತಲೂ ಹಬ್ಬಿತು. ಇದು ಕಾಮಾರಪುಕುರಕ್ಕೂ ಮುಟ್ಟಿತು. ಶ್ರೀರಾಮಕೃಷ್ಣರ ತಾಯಿ ಚಂದ್ರಮಣಿದೇವಿ 1859ರಲ್ಲಿ ಮಗನನ್ನು ಕಾಮಾರಪುಕುರಕ್ಕೆ ಕರೆಸಿಕೊಂಡರು. ಔಷಧೋಪಚಾರ, ಯಂತ್ರಮಂತ್ರಗಳೆಲ್ಲವನ್ನೂ ಮಾಡಿಸಿದರು. ಆದರೆ ಇವರ ಹುಚ್ಚು ಮಾಯವಾಗುವ ರೀತಿ ಕಾಣಲಿಲ್ಲ. ಪರಮಹಂಸರೆ ಒಂದು ಸಲ ಹಾಸ್ಯವಾಗಿ, ಬೇಕಾದರೆ ನನಗೆ ರೋಗವಿದ್ದರೆ ಗುಣಮಾಡಿ. ಆದರೆ ದೇವರ ಹುಚ್ಚನ್ನು ಮಾತ್ರ ಬಿಡಿಸಬೇಡಿ ಎಂದರು. ಯಾರೋ ಚಂದ್ರಮಣಿದೇವಿಗೆ ಮಗನಿಗೆ ಮದುವೆ ಮಾಡಿದರೆ ಹುಚ್ಚು ಬಿಟ್ಟು ಹೋಗುವುದೆಂದು ಹೇಳಿದರು. ಹೆಣ್ಣಿಗೆ ಬೇಕಾದಷ್ಟು ಹುಡುಕತೊಡಗಿದರು. ಸುಮಾರು ಮೂರು ಮೈಲಿ ದೂರದ ಜಯರಾಮಬಟಿ ಎಂಬ ಗ್ರಾಮದಲ್ಲಿ ರಾಮಚಂದ್ರ ಮುಖ್ಯೋಪಾಧ್ಯಾಯರ ಮನೆಯಲ್ಲಿ ಐದು ವರ್ಷದ ಒಂದು ಹೆಣ್ಣು ಮಗು ಸಿಕ್ಕಿತು. ಆಗ ಶ್ರೀರಾಮಕೃಷ್ಣರಿಗೆ 23 ವರ್ಷ ವಯಸ್ಸು. ವಧುವರರಿಗೆ ಅಂತರ ಹದಿನೆಂಟು ವರುಷ! ಅಂತೂ ಮದುವೆಯಾಯಿತು. ಈ ಮದುವೆಯ ಗುರಿ ಶ್ರೀರಾಮಕೃಷ್ಣರಿಗೆ ಹಿಡಿದ ದೇವರ ಹುಚ್ಚನ್ನು ಬಿಡಿಸುವುದು. ಆದರೆ ಇವರ ಭವಿಷ್ಯ ಜೀವನ, ಮದುವೆ ಮಾಡಿದ ಉದ್ದೇಶ ಸಫಲವಾಗಲಿಲ್ಲವೆಂಬುದಕ್ಕೆ ಉದಾಹರಣೆಯಾಗಿದೆ. ಮದುವೆಯಾದ ಕೆಲವು ತಿಂಗಳ ಮೇಲೆ ಶ್ರೀರಾಮಕೃಷ್ಣರು ದಕ್ಷಿಣೇಶ್ವರಕ್ಕೆ ಹಿಂದಿರುಗಿದರು. ಆಧ್ಯಾತ್ಮಿಕ ಘಟನಾವಳಿಗಳ ಮಧ್ಯದಲ್ಲಿ ಇವರ ಜೀವನ ಸಿಲುಕಿ ಸುಂಟರಗಾಳಿಯಲ್ಲಿ ಸುತ್ತುವ ತರಗಲೆಯಂತೆ ಆಯಿತು. ಧ್ಯಾನಕ್ಕೆ ಕುಳಿತರೆಂದರೆ ಶಿಲಾವಿಗ್ರಹದಂತೆ ಆಗುತ್ತಿದ್ದರು. ಇವರ ಅಚಲ ದೇಹವ ನೋಡಿ ಹಕ್ಕಿಗಳು ನಿರ್ಭಯವಾಗಿ ಅದರ ಮೇಲೆ ಕುಳಿತುಕೊಳ್ಳುತ್ತಿದ್ದವು. ಶ್ರೀರಾಮಕೃಷ್ಣರು ದೇವಿಯ ದರ್ಶನವನ್ನೇನೋ ಪಡೆದಿದ್ದರು. ಆದರೆ ಅದರಲ್ಲಿ ತೃಪ್ತರಾಗಲಿಲ್ಲ. ದೇವರನ್ನು ಎಷ್ಟೆಷ್ಟು ರೂಪಿನಲ್ಲಿ ನೋಡಲು ಸಾಧ್ಯವೊ ಅಷ್ಟು ರೂಪಿನಲ್ಲೆಲ್ಲಾ ನೋಡಲು ಬಯಸಿದರು. ಹಲವು ಭಾವಗಳ ಮೂಲಕ ಅವನನ್ನು ಪ್ರೀತಿಸಿದರು. ಹಲವು ಸಾಧನೆಗಳನ್ನು ಮಾಡಿದರು. ಹಲವು ಧರ್ಮಗಳನ್ನು ಅನುಷ್ಠಾನ ಮಾಡಿದರು. ಹಲವು ದಾರಿಗಳಲ್ಲಿ ನಡೆದು ಒಂದೇ ಸತ್ಯದೆಡೆಗೆ ಬಂದರು. ಸತ್ಯದೇಗುಲಕ್ಕೆ ಬರುವುದಕ್ಕೆ ಅನಂತ ಬಾಗಿಲುಗಳಿವೆ ಎಂಬುದು ಅವರ ಅನುಭವದ ಆಳದಿಂದ ಬಂದ ಮಾತು, ಕೇವಲ ತರ್ಕದ ಗರಡಿಯಿಂದ ಬಂದುದಲ್ಲ. ಎಲ್ಲಾ ಧರ್ಮಗಳಲ್ಲಿರುವ ಏಕಮಾತ್ರ ಸತ್ಯದ ಅನುಭವ ಇವರಿಗೆ ಕರಗತವಾದುದರಿಂದ ಇವರು ಯಾರನ್ನೂ ದೂರುತ್ತಿರಲಿಲ್ಲ. ಯಾವ ಧರ್ಮವನ್ನೂ ತಾತ್ಸಾರದಿಂದ ಕಾಣುತ್ತಿರಲಿಲ್ಲ." ಶ್ರೀರಾಮಕೃಷ್ಣರ ಸಾಧನೆಯಲ್ಲಿ ಒಂದು ವೈಶಿಷ್ಟ್ಯವನ್ನು ನೋಡುತ್ತೇವೆ. ಇವರು ಗುರುಗಳನ್ನು ಹುಡುಕಿಕೊಂಡು ಹೋಗಬೇಕಾಗಿರಲಿಲ್ಲ. ಗುರುಗಳು ಇವರಿದ್ದೆಡೆಗೆ ಬಂದರು. ಒಂದೊಂದು ಸಾಧನೆಗೂ ಆಯಾ ಪಥದಲ್ಲಿ ನುರಿತ ಗುರುವೊಬ್ಬರು ಹೇಗೋ ಇವರ ಸಮೀಪಕ್ಕೆ ಆಕರ್ಷಿಸಲ್ಪಟ್ಟು ಇವರನ್ನು ಮುಂದಕ್ಕೆ ಕರೆದುಕೊಂಡು ಹೋಗುವರು. ಶಾಕ್ತ ಮತ್ತು ವೈಷ್ಣವ ಸಾಧನೆಗಳು ಭೈರವಿ ಬ್ರಾಹ್ಮಣಿ ಎಂಬ ಘನ ವಿದುಷಿಯ ನೇತೃತ್ವದಲ್ಲಿ ನಡೆಯಿತು. ಅಕೆ ಇಂತಹ ಸಾಧಕನೊಬ್ಬನು ಸಿಕ್ಕಿಯಾನೇ ಎಂದು ಹುಡುಕುತ್ತಿದ್ದಾಗ, ಶ್ರೀರಾಮಕೃಷ್ಣರು ಅವರಿಗೆ ಗೋಚರಿಸಿದರು. ವಾತ್ಸಲ್ಯಭಾವ ಸಾಧನೆಗೆ ಜಟಾಧಾರಿಯೆಂಬ ಒಬ್ಬ ರಾಮಭಕ್ತನ ಪರಿಚಯವಾಯಿತು. ಅದ್ವೈತ ಸಾಧನೆಗೆ ತೋತಾಪುರಿ ಎಂಬ ಸನ್ಯಾಸಿಯ ಸಹಾಯ ದೊರಕಿತು. ಕ್ರೈಸ್ತ ಮತ್ತು ಮಹಮ್ಮದೀಯ ಸಾಧನೆಗಳಿಗೆ ಆಯಾ ಮತದ ಅತ್ಯುತ್ತಮ ಪ್ರತಿನಿಧಿಗಳ ಸಹಾಯ ದೊರಕಿತು. ಘನ ವಿದ್ವಾಂಸರು ಇವರ ಸಮೀಪಕ್ಕೆ ಬಂದರು. ಅತಿ ಮುಂದುವರಿದ ಸಾಧಕರು ಇವರ ಸಮೀಪಕ್ಕೆ ಬಂದರು. ಎಲ್ಲರಿಂದಲೂ ಶ್ರೀರಾಮಕೃಷ್ಣರು ಕೆಲವು ವಿಷಯಗಳನ್ನು ಕಲಿತರು. "ನಾನು ಎಲ್ಲಿಯವರೆಗೂ ಬದುಕಿರುವೆನೊ ಅಲ್ಲಿಯವರೆಗೂ ಹೊಸದಾಗಿ ಕಲಿಯುತ್ತೇನೆ" ಎನ್ನುತ್ತಿದ್ದರು. ಈ ದೈನ್ಯವನ್ನು ಕೊನೆಯ ತನಕ ಶ್ರೀರಾಮಕೃಷ್ಣರಲ್ಲಿ ಕಾಣುತ್ತೇವೆ. ಶ್ರೀರಾಮಕೃಷ್ಣರು ತಮ್ಮದೇ ಆದ ಸರಳ ರೀತಿಯಲ್ಲಿ ಭಗವಂತನಿಗೂ ಭಕ್ತನಿಗೂ ಮಧ್ಯೆ ಇರುವ ತೊಡರುಗಳನ್ನು ಭೇದಿಸಲು ಮೊದಲು ಮಾಡಿದರು. ದ್ರವ್ಯದ ಮೇಲಿರುವ ಆಸೆ ಸಂಪೂರ್ಣ ತೊಲಗುವಂತೆ ಒಂದು ಕೈಯಲ್ಲಿ ರೂಪಾಯಿಯನ್ನು ಮತ್ತೊಂದು ಕೈಯಲ್ಲಿ ಮಣ್ಣನ್ನು ತೆಗೆದುಕೊಂಡು ಗಂಗಾನದಿ ತೀರದ ಮೇಲೆ ಕುಳಿತು ಹಣವನ್ನು ನೋಡಿ, ಮತ್ತೊಂದು ಕೈಯಲ್ಲಿರುವ ಮಣ್ಣಿಗಿಂತ ಇದು ಮೇಲಲ್ಲ, ಇದು ದೇವರ ಸಮೀಪಕ್ಕೆ ಕರೆದುಕೊಂಡು ಹೋಗುವುದಕ್ಕೆ ಬದಲಾಗಿ ಲೋಭಮಾರ್ಗದಲ್ಲಿ ಸಿಲುಕಿಸುವುದು ಎಂದು ತರ್ಕಿಸಿ ಎರಡನ್ನೂ ನೀರಿಗೆ ಬಿಸಾಡುತ್ತಿದ್ದರು. ಇವರು ಯಾವುದನ್ನು ಧಿಕ್ಕರಿಸಿದ್ದರೋ ಅದನ್ನು ಇವರ ಇಡೀ ದೇಹದ ಅಂಗೋಪಾಂಗಗಳು ಧಿಕ್ಕರಿಸಿದ್ದವು. ಮನಸ್ಸಿಗೆ ಅರಿವಾಗದೆ ದೇಹಕ್ಕೆ ಸೋಂಕಿದರೂ ಚೇಳು ಕುಟುಕಿದಂತೆ ಆಗಿ ಅದನ್ನು ಹತ್ತಿರಕ್ಕೆ ಸೇರಿಸುತ್ತಿರಲಿಲ್ಲ. ಇದರಂತೆ ಕಾಮಿನಿಯೂ ಕೂಡ. ಶ್ರೀರಾಮಕೃಷ್ಣರು ಹೆಂಗಸರನ್ನು ದೂರದೇ ಅವರನ್ನು ಕಾಮದೃಷ್ಟಿಯಿಂದ ನೋಡುವುದನ್ನು ಬಿಟ್ಟರು. ಎಲ್ಲರಲ್ಲೂ ಜಗನ್ಮಾತೆಯೇ ಹಲವು ರೂಪಿನಿಂದ ಕಾಣುತ್ತಿರುವಳೆಂದು ಇಡೀ ಸ್ತ್ರೀ ಕುಲವನ್ನೆ ಪೂಜ್ಯ ದೃಷ್ಟಿಯಿಂದ ನೋಡುತ್ತಿದ್ದರು. ಉಚ್ಚ ಬ್ರಾಹ್ಮಣ ಕುಲದಿಂದ ಬಂದವನು ತಾನೆಂಬ ಅಹಂಕಾರವನ್ನು ಅಳಿಸುವುದಕ್ಕಾಗಿ ಚಂಡಾಲನ ಮನೆಯನ್ನು ಕೂಡ ಇವರು ಗುಡಿಸಿದರು. ಮಾನವನು ಯಾವ ಯಾವ ಭಾವದ ಮೂಲಕ ಮತ್ತೊಬ್ಬ ಮಾನವನನ್ನು ಪ್ರೀತಿಸಬಹುದೊ ಆ ಭಾವಗಳೆಲ್ಲದರ ಮೂಲಕ ದೇವರನ್ನು ಪ್ರೀತಿಸಬಹುದು. ಪ್ರೀತಿಯು ಭಕ್ತ ಮತ್ತು ಭಗವಂತನನ್ನು ಬಂಧಿಸುವ ಒಂದು ಮಧುರ ಬಂಧನ. ಎಲ್ಲಿಯವರೆಗೂ ನಾವು ಮಾನವರೋ ಅಲ್ಲಿಯವರೆಗೆ ಮಾನವಸಹಜ ಪ್ರೀತಿಯ ಮೂಲಕ ಮಾತ್ರ ದೇವರನ್ನು ಪ್ರೀತಿಸಬಲ್ಲೆವು. ಇಂತಹ ಪ್ರೀತಿಯಲ್ಲಿ ಐದು ಮುಖ್ಯ ಭಾವಗಳಿವೆ. ಶಾಂತಭಾವ, ಇದರಲ್ಲಿ ದೇವರನ್ನು ತಂದೆ ಅಥವಾ ತಾಯಿಯಂತೆ ಭಾವಿಸಬಹುದು. ಜೀವನದಲ್ಲಿ ಮಗುವಿಗೆ ತಂದೆತಾಯಿಗಳಷ್ಟು ಅಭಯವನ್ನು ಕೊಡುವವರು ಮತ್ತಾರೂ ದೊರಕಲಾರರು. ಅವರಲ್ಲಿರುವಷ್ಟು ಸಲಿಗೆ ಮತ್ತಾರಲ್ಲಿಯೂ ಇರಲಾರದು. ಇಡೀ ಬ್ರಹ್ಮಾಂಡ ಅವನಿಂದ ಬಂದಿದೆ. ನಮ್ಮನ್ನು ದುಃಖ ಸಂಕಟಗಳಿಂದ ಪಾರು ಮಾಡುವ ಮಹಾಶಕ್ತಿಗಣಿಯಾಗಿರುವನು ಅವನು. ಆದಕಾರಣವೇ ಅವನನ್ನು ತಂದೆ ಅಥವಾ ತಾಯಿ ಎಂದು ಕರೆಯುವುದು. ಶ್ರೀರಾಮಕೃಷ್ಣರು ಮುಕ್ಕಾಲುಪಾಲು ತಮ್ಮ ಭವಜೀವನವನ್ನು ಕಳೆಯುತ್ತಿದ್ದುದು ಜಗನ್ಮಾತೆಯನ್ನು ನೆಚ್ಚಿಕೊಂಡಿರುವ ಮಗುವಿನಂತೆ. ದೇವರನ್ನು ಕೆಲವು ವೇಳೆ ತಂದೆಯೆಂತಲೂ ಕರೆದರು. ದಾಸ್ಯಭಾವದಲ್ಲಿ ಭಗವಂತ ಸ್ವಾಮಿಯಾಗುವನು. ಭಕ್ತ ಅವನ ಆಣತಿಯನ್ನು ಪರಿಪಾಲಿಸುವ ಪಾಲಿಸುವ ಭೃತ್ಯನಾಗುವನು. ಭಕ್ತನಿಗೆ ತನಗಾಗಿ ಏನನ್ನೂ ಸಾಧಿಸಬೇಕೆಂಬ ಆಸೆ ಇರುವುದಿಲ್ಲ. ಅವನಿಗೆ, ಸ್ವಾಮಿಯ ಹಿತ ತನ್ನ ಹಿತ, ಸ್ವಾಮಿಯ ಇಷ್ಟ ತನ್ನ ಇಷ್ಟ, ಸ್ವಾಮಿಯ ಜಯ ತನ್ನ ಜಯ. ಈ ಭೃತ್ಯಭಾವದಲ್ಲಿರಬೇಕಾದರೆ ಅಹಂಕಾರ ಸಂಪೂರ್ಣ ನಾಶವಾಗಿರಬೇಕು. ಆಗ ಮಾತ್ರ ಎಲ್ಲ ಭಗವಂತನಿಗಾಗಿ ಎಂಬ ಮಧುರಗಾನಪಲ್ಲವಿ ಅವನ ಜೀವನದಿಂದ ಹೊರಹೊಮ್ಮುವುದು. ಹನುಮಂತನು ಶ್ರೀರಾಮಚಂದ್ರನನ್ನು ನೋಡುತ್ತಿದ್ದುದು ಹೀಗೆ. ಹನುಮಂತನಿಗೆ ರಾಮ ಇಷ್ಟದೇವನಾಗುವನು. ಶ್ರೀರಾಮನ ಆಣತಿಯನ್ನು ಪರಿಪಾಲಿಸುವುದೊಂದೇ ಇವನ ಜೀವನದ ಮಹೋದ್ದೇಶ. ಅದಕ್ಕಾಗಿ ತನ್ನ ಸರ್ವಸ್ವವನ್ನೂ ಧಾರೆ ಎರೆಯುವನು. ವೀರಾಧಿವೀರನಾದರೂ ರಾಮಾಯಣದಲ್ಲಿ ಬರುವ ಹನುಮಂತ ನಿಗರ್ವಿ, ವಿನಯಶಾಲಿ. ಅಶೋಕವನದಲ್ಲಿ ದುಃಖದಿಂದ ಕೊರಗುತ್ತಿದ್ದ ಸೀತಾದೇವಿಯನ್ನು ನೋಡಲು ಹೋದಾಗ ಶ್ರೀರಾಮಚಂದ್ರನ ಸುದ್ದಿಯನ್ನು ಅವಳಿಗೆ ಹೇಳಿದನು. ಇನ್ನೇನು ಶ್ರೀರಾಮನು ಬೇಗ ಬರುವನು, ನಿನ್ನನ್ನು ಸೆರೆಯಿಂದ ಬಿಡಿಸುವನು' ಎಂದು ಧೈರ್ಯ ಹೇಳಿದನು. ಆದರೆ ಸೀತೆಗೆ ರಾಮನ ಜೊತೆಯಲ್ಲಿ ಬರುವವರ ಸಾಹಸದಲ್ಲಿ ನಂಬಿಕೆ ಇರಲಿಲ್ಲ. ಆಕೆಗೆ ಹನುಮಂತ, ಸುಗ್ರೀವನ ಸೈನ್ಯದಲ್ಲಿ ತಾನೇ ಕೊನೆಯವನೆಂದು ಹೇಳುತ್ತಾನೆ. ಯಾರು ವೀರಾಧಿವೀರನೋ, ಜಗಜಟ್ಟಿಯೋ, ಅಂತಹವನು ಹಾಗೆ ಹೇಳಿಕೊಳ್ಳಬೇಕಾದರೆ ಅಹಂಕಾರದಿಂದ ಆ ವ್ಯಕ್ತಿ ಎಷ್ಟು ಪಾರಾಗಿರುವನು ಎಂಬುದನ್ನು ಊಹಿಸಬಹುದು. ಪರಮಹಂಸರು ದಾಸ್ಯಭಾವವನ್ನು ಹನುಮಂತನಂತೆ ಅಭ್ಯಾಸ ಮಾಡಿದರು; ಗೆಡ್ಡೆ ಗೆಣಸುಗಳನ್ನು ತಿಂದು, ಮರದ ಮೇಲೆ ನೆಗೆದಾಡುತ್ತಿದ್ದರಂತೆ ಆ ಕಾಲದಲ್ಲಿ. ಶ್ರೀರಾಮ ಮತ್ತು ಸೀತಾದೇವಿಯ ದರ್ಶನವನ್ನು ಆ ಭಾವದಲ್ಲಿ ಇದ್ದಾಗ ಪಡೆದರು. ಸಖ್ಯಭಾವದಲ್ಲಿ ಭಕ್ತನಿಗೆ ಭಗವಂತನೊಡನೆ ಒಂದು ನಿಕಟತೆ ಕಾಣುವುದು. ದೊಡ್ಡವನು ಚಿಕ್ಕವನು ಎಂಬ ಭಾವ ಮಾಯವಾಗುವುದು. ಭಗವಂತನಲ್ಲಿರುವ ಶಕ್ತಿಗಾಗಿ ಸ್ನೇಹಿತ ಅವನನ್ನು ಪ್ರೀತಿಸುವುದಿಲ್ಲ. ಕೇವಲ ಪ್ರೀತಿಗಾಗಿ ಪ್ರೀತಿಸುತ್ತಾನೆ. ಅನ್ಯೋನ್ಯ ಸಲಿಗೆ ಹೆಚ್ಚುವುದು. ಕೃಷ್ಣಸುಧಾಮರ ಸಂಬಂಧ ಸಖ್ಯಭಾವಕ್ಕೆ ಉದಾಹರಣೆ. ಶ್ರೀರಾಮಕೃಷ್ಣರು ಈ ಭಾವದಲ್ಲಿಯೂ ಕೆಲವು ಕಾಲ ತಲ್ಲೀನರಾಗಿದ್ದರು. ವಾತೃಲ್ಯಭಾವದಲ್ಲಿ ಭಕ್ತ ಭಗವಂತನನ್ನು ತನ್ನ ಮಗುವೆಂದು ತಿಳಿಯುವನು. ತಾಯಿಗೆ ಮಗುವಿನ ಮೇಲೆ ಇರುವ ಪ್ರೀತಿಯಲ್ಲಿ ಸಂಪೂರ್ಣ ನಿಃಸ್ವಾರ್ಥತೆ ಕಾಣುವುದು. ಮಗುವಿನಿಂದ ತಾಯಿ ಏನನ್ನೂ ಅಪೇಕ್ಷಿಸುವುದಿಲ್ಲ. ಸದಾ ಮಗುವಿನ ಹಿತಕ್ಕೆ ತನ್ನ ನಿದ್ದೆ ಸುಖ ಎಲ್ಲವನ್ನೂ ತೆರಲು ಸಿದ್ಧಳಾಗಿರುವಳು. ಎಲ್ಲಿಯವರೆಗೂ ಲಾಭದ ಅಪೇಕ್ಷೆ ಸ್ವಲ್ವವಾದರೂ ಇದೆಯೋ, ಅಲ್ಲಿಯದರೆಗೆ ಇಂತಹ ಪ್ರೇಮ ಸಾಧ್ಯವಿಲ್ಲ. ಯಶೋಧೆ ಶ್ರೀಕೃಷ್ಣನನ್ನು ಪ್ರೀತಿಸಿದ ರೀತಿ ಇದು. ಕೌಸಲ್ಯೆ ರಾಮನನ್ನು ಪ್ರೀತಿಸಿದ ರೀತಿ ಇದು. ಶ್ರೀರಾಮಕೃಷ್ಣರು ಈ ಭಾವದಲ್ಲಿದ್ದಾಗ ದೇವರನ್ನು ರಾಮಲಾಲನೆಂದು ಪ್ರೀತಿಸಿದರು. ಮಧುರಭಾವದಲ್ಲಿ ಭಕ್ತಭಗವಂತರಿಗೆ ಸತಿಪತಿಯರ ಸಂಬಂಧವಿರುವುದು. ಮಾನವ ಪ್ರೇಮದಲ್ಲೆಲ್ಲ ಅತ್ಯಂತ ನಿಕಟವಾದುದು ಸತಿಪತಿಯರದು. ಗೋಪಿಯರು ಶ್ರೀಕೃಷ್ಣನನ್ನು ಪ್ರೀತಿಸಿದ ರೀತಿ ಇದು. ಶ್ರೀರಾಮಕೃಷ್ಣರು ಈ ಭಾವದಲ್ಲಿರುವಾಗ ಹೆಂಗಸಿನಂತೆ ಸೀರೆ ಉಟ್ಟು, ಆಭರಣ ತೊಟ್ಟುಕೊಂಡು ರಾಧಾರಮಣನನ್ನು ಸೇವಿಸಿದರು. ಶ್ರೀರಾಮಕೃಷ್ಣರ ಭಾವಜೀವನ ಸರ್ವತೋಮುಖವಾದುದು. ಯಾವ ಯಾವ ಭಾವದ ಮೂಲಕ ಭಗವಂತನನ್ನು ನೋಡಬಹುದೋ ಅದರ ಮೂಲಕ ನೋಡಿದರು. ಒಂದೊಂದು ಸಲ ಒಂದೊಂದು ಭಾವದಲ್ಲಿ ತಲ್ಲೀನರಾಗುತ್ತಿದ್ದರು. ಸಗುಣೋಪಾಸನೆಯಲ್ಲಿ ಮಾತೃಭಾವಕ್ಕೆ ಅವಕಾಶವಿದೆ. ಆದರೆ ಸಗುಣವೆಂಬ ಅಲೆಗಳ ಹಿಂದೆ, ನಿರ್ಗುಣ ನಿರಾಕಾರದ ಕಡಲಿದೆ. ಶ್ರೀರಾಮಕೃಷ್ಣರು ತೋತಾಪುರಿ ಎಂಬ ಸನ್ಯಾಸಿಯಿಂದ ಅದ್ವೈತ ದೀಕ್ಷೆಯನ್ನು ಪಡೆದರು. ನಾಮರೂಪಗಳನ್ನು ಮೀರಿ, ಕಾರ್ಯಕಾರಣ ಜಗತ್ತನ್ನು ಅತಿಕ್ರಮಿಸಿ, ನಿರಾಕಾರ ಬ್ರಹ್ಮದ ಕಡಲಿಗೆ ಧುಮುಕಿ ತಲ್ಲೀನರಾದರು. ಆ ಸ್ಥಿತಿಯಲ್ಲಿಯೇ ಅವರು ಬಹುಕಾಲವಿದ್ದರು. ಕ್ರಮೇಣ ಜಗನ್ಮಯಿ ಅವರ ಮನಸ್ಸನ್ನು ಕೆಳಗಿಳಿಸಿ ಸಾಕಾರ ನಿರಾಕಾರಗಳ ಮಧ್ಯೆ ಅವರನ್ನು ಬಿಟ್ಟು, ನೀನು ಇಲ್ಲೇ ಇರು ಎಂದು ಆಜ್ಞಾಪಿಸಿದಳಂತೆ. ಶ್ರೀರಾಮಕೃಷ್ಣರು ಭಕ್ತಿಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಿದ್ದರು. ಆದರೆ ಅವರ ಭಕ್ತಿಯ ಹಿನ್ನಲೆಯಾಗಿ ಯಾವಾಗಲೂ ಜ್ಞಾನವಿರುತ್ತಿತ್ತು. ಸ್ವಾಮಿ ವಿವೇಕಾನಂದರೇ, ಶ್ರೀರಾಮಕೃಷ್ಣರು ಹೊರನೋಟಕ್ಕೆ ಭಕ್ತರು, ಒಳಗೆ ಜ್ಞಾನಿಗಳು ಎನ್ನುತ್ತಿದ್ದರು. ಹೆಚ್ಚು ಮಾನವರು ಭಾವಜೀವಿಗಳು. ಯುಕ್ತಿ ಭಾವವನ್ನು ಆಶ್ರಯಿಸಿ ಬೆಳೆಯುವುದು. ಆದಕಾರಣವೇ ಶ್ರೀರಾಮಕೃಷ್ಣರು ಭಕ್ತಿಗೆ ಹೆಚ್ಚು ಮಾನ್ಯತೆ ಕೊಟ್ಟರು. ಪರಮಹಂಸರು ಅಷ್ಟೇ ಪ್ರಾಧಾನ್ಯವನ್ನು ಕರ್ಮಯೋಗಕ್ಕೆ ಕೊಟ್ಟರು. ಒಂದು ದಿನ ಭಕ್ತನೊಬ್ಬನು ಶ್ರೀರಾಮಕೃಷ್ಣರೊಂದಿಗೆ ಮಾತನಾಡುತ್ತಿದ್ದಾಗ ತಾನು ಬೇಕಾದಷ್ಟು ಪರರಿಗೆ ಉಪಕಾರ ಮಾಡಬೇಕೆಂದು ಹೇಳುತ್ತಿದ್ದನು. ಇದನ್ನು ಕೇಳಿ ಶ್ರೀರಾಮಕೃಷ್ಣರು "ಉಪಕಾರದ ಮಾತನ್ನು ಆಡಬೇಡ, ದೇವರೊಬ್ಬನೇ ಇತರರಿಗೆ ಉಪಕಾರ ಮಾಡಬಲ್ಲ. ಸಾಧಾರಣ ಜೀವಿಗಳು ಇತರರಿಗೆ ಸೇವೆ ಮಾತ್ರ ಮಾಡಬಲ್ಲರು. ಯಾರು ಬ್ರಹ್ಮಾಂಡವನ್ನು ಸೃಷ್ಟಿಸಿ, ಪಶುಪಕ್ಷಿ ಕ್ರಿಮಿಕೀಟಗಳಿಗೆ ಆಹಾರವನ್ನು ಒದಗಿಸಿರುವನೋ ಅವನು, ಕೆಲವರಿಗೆ ಸಹಾಯ ಮಾಡಲಾಗದೆ ಅವರಿಗೆ ನೀವು ಸಹಾಯಮಾಡಿ ಎಂದು ಹೇಳಲಿಲ್ಲ. ಉಪಕಾರವಲ್ಲ, ಸೇವೆ" ಎಂದರು. ಇದನ್ನು ಸ್ವಾಮಿ ವಿವೇಕಾನಂದರು ಆಲಿಸಿ ನಂತರ ಕೆಲವು ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾಗ, "ಇಂದು ಪರಮಹಂಸರ ಬಾಯಿಯಿಂದ ದೊಡ್ಡ ಸತ್ಯವನ್ನು ಕೇಳಿದೆ. ನಾನು ಬದುಕಿದ್ದರೆ ಇದನ್ನು ಎಲ್ಲರಿಗೂ ಬೋಧಿಸುವೆನು" ಎಂದರು. ಅನಂತರ ಅವರು ಬೋಧಿಸಿದ ಕರ್ಮಯೋಗವೆಲ್ಲ 'ಉಪಕಾರವಲ್ಲ, ಸೇವೆ' ಎಂಬ ಶ್ರೀರಾಮಕೃಷ್ಣರ ಒಂದು ಸೂತ್ರದ ಬಾಷ್ಯ ಶ್ರೀರಾಮಕೃಷ್ಣರು ಎಲ್ಲ ಸಾಧನೆಗಳನ್ನೂ ಮಾಡಿ ಸಿದ್ಧಿ ಎಂಬ ಅಮೃತವನ್ನು ತಮ್ಮ ಹೃದಯದಲ್ಲಿ ಶೇಖರಿಸಿಟ್ಟುಕೊಂಡರು. ಆದರೆ ಅಮೃತವನ್ನು ತಾವು ಮಾತ್ರ ಸವಿದು ಧನ್ಯರಾಗಬಯಸಲಿಲ್ಲ. ಜಗದ ಕಷ್ಟನಷ್ಟಗಳಲ್ಲಿ ಸಿಕ್ಕಿ ನೊಂದವರಿಗೆಲ್ಲ ಅದನ್ನು ಹಂಚಿ ಅವರನ್ನೂ ಸುಖಿಗಳನ್ನಾಗಿ ಮಾಡಬಯಸಿದರು. ಆನಂದವನ್ನು ಯಾವಾಗಲೂ ಮತ್ತೊಬ್ಬನಿಗೆ ಹಂಚಿದಾಗ ಅದು ಇಮ್ಮಡಿಸುಪುದು. ಅದಕ್ಕಾಗಿಯೆ ಪರಮಹಂಸರು ಶಿಷ್ಯರಿಗಾಗಿ ಕಾದುಕುಳಿತರು. ಶ್ರೀರಾಮಕೃಷ್ಣರ ತಪೋಶಕ್ತಿ ಹಲವು ಪಕ್ವಕ್ಕೆ ಬಂದ ಸಾಧಕರನ್ನು ತನ್ನೆಡೆಗೆ ಸೆಳೆಯಿತು. ಶ್ರೀರಾಮಕೃಷ್ಣರು ಪ್ರತಿದಿನವೂ ಸಂಜೆ ತಮ್ಮ ಕೋಣೆಯ ಮೇಲಿನ ಮಹಡಿಗೆ ಹೋಗಿ ಕಲ್ಕತ್ತೆಯ ಕಡೆ ನೋಡುತ್ತ "ಎಲ್ಲಿ ನನ್ನ ಮಕ್ಕಳು ಇನ್ನೂ ಬರಲಿಲ್ಲವಲ್ಲಾ" ಎಂದು ದುಃಖಿಸುತ್ತಿದ್ದರು. ಜಗನ್ಮಾತೆಯನ್ನು ಕಾಣಲು ಮೊದಲು ಎಷ್ಟು ತವಕಪಟ್ಟರೋ ಅಷ್ಟೇ ತವಕಪಟ್ಟರು ಶಿಷ್ಯರ ಆಗಮನಕ್ಕಾಗಿ. ಈ ಮಹಾ ಕರೆ ಅವ್ಯಕ್ತವಾದರೂ ಹಲವು ಜೀವಿಗಳನ್ನು ಮುಟ್ಟಿ ಒಬ್ಬೊಬ್ಬರನ್ನಾಗಿ ಅವರ ಕಡೆಗೆ ಸೆಳೆಯಿತು. ಶ್ರೀರಾಮಕೃಷ್ಣರು ಒಬ್ಬ ನುರಿತ ಗುರುಗಳು, ಜಗದ ರಹಸ್ಯವನ್ನು ಆರಿತವರು. ಪ್ರತಿಯೊಂದು ವ್ಯಕ್ತಿಯಲ್ಲಿಯೂ ಒಂದು ವೈಶಿಷ್ಟ್ಯ ಇದೆ. ಅದಕ್ಕೆ ಭಂಗ ಬರದಂತೆ ತರಪೇತು ಕೊಡುತ್ತಿದ್ದರು. ಬಂದ ಶಿಷ್ಯರ ನ್ಯೂನಾತಿರೇಕಗಳನ್ನು ತಿದ್ದಿ, ಅವರೆಲ್ಲರನ್ನೂ ಭಗವಂತನ ಪೂಜೆಗೆ ಯೋಗ್ಯವಾದ ಪುಷ್ಪವನ್ನಾಗಿ ಮಾಡಿದರು. ಶ್ರೀರಾಮಕೃಷ್ಣರಿಗೆ ಶಿಷ್ಯರ ಮೇಲೆ ಇದ್ದ ಪ್ರೀತಿ ಅಸಾಧಾರಣವಾದುದು. ಮೊದಲು ಶಿಷ್ಯರ ಎದೆಗೆ ತಟ್ಟಿದ್ದು ಪರಮಹಂಸರಲ್ಲಿದ್ದ ಆಧ್ಯಾತ್ಮಿಕ ಸತ್ಯಗಳಲ್ಲ, ಅವರ ಅಪಾರ ಪ್ರೇಮ. ಆ ಪ್ರೇಮಮಹಾಸ್ತ್ರ ಎಲ್ಲರನ್ನೂ ಒಲಿಸಿಕೊಂಡಿತು. ಅವರಲ್ಲಿ ಪ್ರಖ್ಯಾತರಾದ ವಿವೇಕಾನಂದರಂತಹ ಹಲವಾರು ಶಿಷ್ಯರು ತಾವು ಪರಮಹಂಸರ ಪ್ರೇಮದ ದಾಸರೆಂದು ಹೇಳಿಕೊಳ್ಳುತ್ತಿದ್ದರು. ವಿಮರ್ಶಾತ್ಮಕ ಬುದ್ದಿ ಎಲ್ಲರಲ್ಲಿಯೂ ಬೆಳೆಯುವಂತೆ ಮಾಡುತ್ತಿದ್ದರು. ಯಾವುದನ್ನೂ ವಿಚಾರ ಮಾಡಿದಲ್ಲದೆ ಪರೀಕ್ಷಿಸಿದಲ್ಲದೆ ಒಪ್ಪಿಕೊಳ್ಳಿಬೇಡ ಎನ್ನುತ್ತಿದ್ದರು. ಅವರ ಬೋಧನೆ ಮತು ಜೀವನವನ್ನು ಹಲವರು ಶಿಷ್ಯರು ಹಲವು ರೀತಿಯಲ್ಲಿ ಪರೀಕ್ಷಿಸಿದರು. ಶಿಷ್ಯರು ತಮ್ಮನ್ನು ಪರೀಕ್ಷಿಸಿದರೆ ಕೋಪತಾಳದೆ ಆನಂದದಿಂದ ಅದನ್ನು ನೋಡುತ್ತಿದ್ದರು. ಕಾಮಕಾಂಚನತ್ಯಾಗ ಇವರ ಉಪದೇಶದ ಪಲ್ಲವಿಯಾಗಿತ್ತು. ಒಂದು ದಿನ, ನರೇಂದ್ರ (ಮುಂದೆ ಸ್ವಾಮಿ ವಿವೇಕಾನಂದರು) ಶ್ರೀರಾಮಕೃಷ್ಣರು ಹೊರಗೆ ಹೋದ ಸಮಯದಲ್ಲಿ ಒಂದು ನಾಣ್ಯವನ್ನು ಅವರ ಹಾಸಿಗೆಯ ಕೆಳಗೆ ಇಟ್ಟರು. ಶ್ರೀರಾಮಕೃಷ್ಣರು ಬಂದು ಹಾಸಿಗೆಯ ಮೇಲೆ ಕುಳಿತೊಡನೆಯೇ ಚೇಳು ಕುಟುಕಿದಂತೆ ಆಯಿತು. ಹಾಸಿಗೆಯನ್ನು ಹುಡುಕಿ ನೋಡಿದಾಗ ಒಂದು ರೂಪಾಯಿ ಬಿತ್ತು. ಪರಮಹಂಸರ ತ್ಯಾಗಬುದ್ಧಿ ಅಷ್ಟು ಆಳಕ್ಕೆ ಹೋಗಿತ್ತು. ಮತ್ತೊಬ್ಬ ಶಿಷ್ಯನು ಶ್ರೀರಾಮಕೃಷ್ಣರು ಅರ್ಧರಾತ್ರಿ ಎದ್ದು ಗಂಗಾನದಿಯ ತೀರಕ್ಕೆ ಹೋಗಿದ್ದಾಗ ಇವರು ಇಂತಹ ಅವೇಳೆಯಲಿ ಎದ್ದು ಎಲ್ಲಿಗೆ ಹೋಗುತ್ತಾರೆ? ತಮ್ಮ ಪತ್ನಿ ಶಾರದಾದೇವಿಯರ ಕೋಣೆ ಕಡೆ ಹೋಗಬಹುದೆ ! ಎಂದು ತಿಳಿಯಲು ಅಲ್ಲೇ ಹೊಂಚುಹಾಕುತ್ತಿದ್ದನು. ಸ್ವಲ್ಪ ಹೊತ್ತಾದ ಮೇಲೆ ಶ್ರೀರಾಮಕೃಷ್ಣರು ಶಾರದಾದೇವಿಯವರ ಕೋಣೆಯ ಕಡೆ ಹೋಗದೆ ಸೀದಾ ತಮ್ಮ ರೂಮಿನ ಕಡೆ ಬಂದರು. ಹೊಂಚು ಕಾಯುತ್ತಿದ್ದ ಶಿಷ್ಯ ಇವರನ್ನು ಅನುಮಾನಿಸಿದ್ದಕ್ಕಾಗಿ ನಾಚಿ ಪರಮಹಂಸರಿಗೆ ನಮಸ್ಕಾರ ಕ್ಷಮಾಪಣೆ ಕೇಳಿದನು. ಆಗ ಶ್ರೀರಾಮಕೃಷ್ಣರು ಸಾಧುವನ್ನು ಹಗಲು ಪರೀಕ್ಷೆ ಮಾಡಿದರೆ ಸಾಲದು, ರಾತ್ರಿಯೂ ಪರೀಕ್ಷಿಸಬೇಕು ಎಂದರು. ಭಕ್ತಿಯ, ಧರ್ಮದ ಹೆಸರಿನಲ್ಲಿ ಮೂರ್ಖನಾದರೆ ಅದನ್ನು ಅವರು ಸಹಿಸುತ್ತಿರಲಿಲ್ಲ. ಒಬ್ಬ ಶಿಷ್ಯನಿಗೆ ಪೇಟೆಯಿಂದ ಸಾಮಾನು ತರುವುದಕ್ಕೆ ಹೇಳಿದರು. ಆತನು ಸರಿಯಾಗಿ ಪರೀಕ್ಷೆ ಮಾಡದೆ ತಂದನು. ಆಗ ಶ್ರೀರಾಮಕೃಷ್ಣರು, ಶಿಷ್ಯರು ವ್ಯಾಪಾರಕ್ಕೆ ಅಂಗಡಿಗೆ ಹೋದರೆ ಸರಿಯಾಗಿ ಪರೀಕ್ಷೆ ಮಾಡಬೇಕು, ಅಂಗಡಿಯಲ್ಲಿ ವರ್ತಕರು ಧರ್ಮಕ್ಕಾಗಿ ಅಲ್ಲ ಇರುವುದು ಎಂದು ಬುದ್ಧಿ ಹೇಳಿದರು. ಸಾಮಾನನ್ನು ಕೊಂಡಾದ ಮೇಲೆ ಕೊಸರು ಕೇಳುವುದನ್ನು ಮರೆಯಬಾರದು ಎಂದರು. ಅಸಡ್ಡೆ, ಮರೆವು ಇವು ಯಾವ ರೂಪಿನಲ್ಲಿ ಬಂದರೂ ಅವರು ಸಹಿಸುತ್ತಿರಲಿಲ್ಲ . "ನಾನು ಮತ್ತೊಂದು ಕ್ಷಣದಲ್ಲಿ ಪ್ರಪಂಚವನ್ನು ಮರೆತು ಸಮಾಧಿಯಲ್ಲಿ ಮಗ್ನನಾಗುತ್ತೇನೆ. ಆದರೂ ಯಾವುದನ್ನೂ ಮರೆಯುವುದಿಲ್ಲ. ನಿಮಗೇಕೆ ಇಂತಹ ಮರೆವು. ಇದು ಆಧ್ಯಾತ್ಮಿಕ ಜೀವನದ ಕುರುಹಲ್ಲ" ಎನ್ನುತ್ತಿದ್ದರು. ಒಬ್ಬ ಶಿಷ್ಯನು ತುಂಬ ಮೃದು ಸ್ವಭಾವದವನು. ಒಬ್ಬರು ಗಟ್ಟಿ ಮಾತನ್ನಾಡಿದರೂ ಸಹಿಸುವುದಕ್ಕೆ ಆಗುತ್ತಿರಲಿಲ್ಲ. ಆತ ಒಂದು ದಿನ ದೋಣಿಯಲ್ಲಿ ಬರುತ್ತಿದ್ದಾಗ ಕೆಲವರು ಶ್ರೀರಾಮಕೃಷ್ಣರನ್ನು ಹಾಸ್ಯ ಮಾಡುತ್ತಿದ್ದರು. ಆತ ಇದನ್ನು ಸುಮ್ಮನೆ ಕೇಳುತ್ತಿದ್ದನು. ದಕ್ಷಿಣೇಶ್ವರಕ್ಕೆ ಬಂದ ಮೇಲೆ ಈ ಸಮಾಚಾರವನ್ನು ಶ್ರೀರಾಮಕೃಷ್ಣರಿಗೆ ಹೇಳಿದನು. ಅವರು, "ಏನು ಗುರುನಿಂದೆ ಆಗುತ್ತಿದ್ದರೂ ನೀನು ಸುಮ್ಮನೆ ಕೇಳುತ್ತಿದ್ದೆಯಾ? ಆ ಸ್ಥಳವನ್ನು ಬಿಟ್ಟಾದರೂ ಬರಬೇಕಾಗಿತ್ತು" ಎಂದರು. ಮತ್ತೊಬ್ಬ ಶಿಷ್ಯನ ಸ್ವಭಾವ ಉಗ್ರ. ಆತನ ಜೀವನ ಮಾಗುವುದಕ್ಕೆ ಸ್ವಲ್ವ ಮೃದುತ್ವ ಬರಬೇಕಾಗಿತ್ತು . ಅಂತಹ ಶಿಷ್ಯನೊಬ್ಬನು ದೋಣಿಯಲ್ಲಿ ಬರುತ್ತಿದ್ದಾಗ ಹಿಂದಿನಂತೆಯೇ ಕೆಲವರು ಶ್ರೀರಾಮಕೃಷ್ಣರನ್ನು ದೂರುತ್ತಿದ್ದರು. ಇದನ್ನು ಕೇಳಿ ತುಂಬ ಕೋಪತಾಳಿ ದೋಣಿಯ ಒಂದು ಕಡೆಗೆ ಹೋಗಿ, ನೀವು ನನ್ನ ಗುರುನಿಂದೆಯನ್ನು ನಿಲ್ಲಿಸದೆ ಇದ್ದರೆ ದೋಣಿಯನ್ನು ಮುಳುಗಿಸುತ್ತೇನೆ ಎಂದು ದೋಣಿಯನ್ನು ಅಲ್ಲಾಡಿಸತೊಡಗಿದನು. ದೋಣಿಯಲ್ಲಿದ್ದವರು ಅಂಜಿ ಸುಮ್ಮನಾದರು. ಶ್ರೀರಾಮಕೃಷ್ಣರಿಗೆ ಈ ಸಮಾಚಾರವನ್ನು ಹೇಳಿದ ಮೇಲೆ, ಅವರು "ಕೋಪದಿಂದ ನೀನು ಎಂತಹ ಅನಾಹುತ ಮಾಡುತ್ತಿದ್ದೆ, ಅವರು ಬೈದರೆ ನನಗೇನಾಯಿತು" ಎಂದರು. ಶ್ರೀರಾಮಕೃಷ್ಣರು ಪ್ರತಿಯೊಬ್ಬರ ಶೀಲವನ್ನು ಪರೀಕ್ಷಿಸಿ ಅವರಿಗೆ ತಕ್ಕ ಸಲಹೆಯನ್ನು ಕೊಡುತ್ತಿದ್ದರು. ಶ್ರೀರಾಮಕೃಷ್ಣರು ಪ್ರಪಂಚವನ್ನು ಬಿಟ್ಟ ಕೆಲವು ಸನ್ಯಾಸಿಗಳಿಗೆ ಮಾತ್ರ ಆದರ್ಶಪ್ರಾಯವಾಗಲು ಬಯಸಲಿಲ್ಲ. ಗೃಹಸ್ಥರಿಗೂ ಆದರ್ಶಪ್ರಾಯರಾಗಿದ್ದರು. ಗೃಹಸ್ಥರಿಗೂ ಸನ್ಯಾಸಿಗೆ ಸರಿಸಮನಾದ ಜೀವನವನ್ನು ನಡೆಸಲು ಸಾಧ್ಯವೆಂದು ತೋರಿರುವರು. ಶ್ರೀಶಾರದಾದೇವಿಗೆ ಹದಿನೆಂಟು ವರುಷವಾದಾಗ ಶ್ರೀರಾಮಕೃಷ್ಣರನ್ನು ನೋಡಲು ದಕ್ಷಿಣೇಶ್ವರಕ್ಕೆ ಬಂದರು. ಶ್ರೀರಾಮಕೃಷ್ಣರು ಆದರದಿಂದ ಅವರನ್ನು ಬರಮಾಡಿಕೊಂಡು ಉಪಚರಿಸಿದರು. ಅಷ್ಟು ಹೊತ್ತಿಗೆ ಮಥುರನಾಥನು ತೀರಿಹೋಗಿದ್ದನು. "ಆತನಿದ್ದಿದ್ದರೆ ನಿನಗೆ ಇಲ್ಲಿ ಇಳಿದುಕೊಳ್ಳುವುದಕ್ಕೆ ಬೇಕಾದಷ್ಟು ಅನುಕೂಲವನ್ನು ಮಾಡಿಕೊಡುತ್ತಿದ್ದನು" ಎಂದರು. ಶಾಸ್ತ್ರೀಯವಾಗಿ ಶ್ರೀರಾಮಕೃಷ್ಣರು ಶ್ರೀಶಾರದಾದೇವಿಯನ್ನು ಮದುವೆಯಾಗಿದ್ದರು. ಆದಕಾರಣ ತಾವು ಯಾವುದನ್ನು ಮಾಡಬೇಕಾದರೂ ಅವರ ಒಪ್ಪಿಗೆ ಮತ್ತು ಸಹಾನುಭೂತಿ ಇಲ್ಲದೆ ಮಾಡಬಯಸಲಿಲ್ಲ. ಬಲಾತ್ಕಾರವಾಗಿ ಏನೊಂದನ್ನೂ ಅವರು ಶಾರದಾದೇವಿಯವರ ಮೇಲೆ ಹೇರಲಿಲ್ಲ. ಶ್ರೀರಾಮಕೃಷ್ಣರು ಶಾರದಾದೇವಿಯವರಿಗೆ, "ನನಗೆ ಎಲ್ಲಾ ಸ್ತ್ರೀಯರೂ ಜಗನ್ಮಾತೆಯ ಪ್ರತಿಬಿಂಬದಂತೆ ಕಾಣುವರು. ನಾನು ನಿನ್ನಲ್ಲಿಯೂ ಅದನ್ನೇ ನೋಡುತ್ತೇನೆ. ಆದರೆ ನೀನು ಇಂದ್ರಿಯ ಪ್ರಪಂಚದಲ್ಲಿ ಇರಲು ಇಚ್ಛೆಪಟ್ಟರೆ ಅದಕ್ಕೂ ನಾನು ಸಿದ್ಧನಾಗಿರುವೆ. ನಿನಗೆ ಯಾವುದು ಬೇಕು ಹೇಳು" ಎಂದರು. ಆದರೆ ಶ್ರೀಶಾರದಾದೇವಿಯವರು ಪರಮಹಂಸರಿಗೆ ತಕ್ಕ ಸತಿ. ತಾವೂ ಅವರಂತೆಯೇ ಆಗಲು ಬಯಸಿದರು, ಇದನ್ನು ಕೇಳಿ ಶ್ರೀರಾಮಕೃಷ್ಣರಿಗೆ ಅತ್ಯಾನಂದವಾಯಿತು. ಆಜನ್ಮ ಬ್ರಹ್ಮಚರ್ಯ ವ್ರತಧಾರಿಗಳಾಗಿ ಇಬ್ಬರೂ ಜಗನ್ಮಾತೆಯ ಕೆಲಸಕ್ಕೆ ಟೊಂಕಕಟ್ಚಿ ನಿಂತರು. ಎಂದು ಶ್ರೀಶಾರದಾದೇವಿಯವರು ಪ್ರಾಪಂಚಿಕ ಸುಖವನ್ನು ತೊರೆದು ತಾವು ಅವರಂತೆಯೇ ಜಗನ್ಮಾತೆಯ ಭಕ್ತರಾಗಲು ಬಯಸಿದರೋ ಅಂದಿನಿಂದಿಲೇ ಶ್ರೀರಾಮಕೃಷ್ಣರು ಸತಿಯ ಜೀವನದ ಜವಾಬ್ದಾರಿಯನ್ನೆಲ್ಲ ತೆಗೆದುಕೊಂಡರು. ಸಂಸಾರದಲ್ಲಿ ಹೇಗೆ ನಡೆದುಕೊಳ್ಳಬೇಕು. ಪೂಜೆ, ಜಪ, ತಪ, ಸಾಧನೆಗಳನ್ನು ಹೇಗೆ ಮಾಡಬೇಕು ಎಂಬುದರಿಂದ ಹಿಡಿದು ನಿರ್ವಿಕಲ್ಪ ಸಮಾಧಿಯವರೆಗೆ ಅವರನ್ನು ಕರೆದುಕೊಂಡು ಹೋದರು. ಶ್ರೀರಾಮಕೃಷ್ಣರ ಕೀರ್ತಿ ಹಬ್ಬುತ್ತಾ ಬಂದಿತು. ಕಲ್ಕತ್ತೆಯ ಅನೇಕ ಪ್ರಮುಖ ವ್ಯಕ್ತಿಗಳು ಇವರನ್ನು ನೋಡಲು ಬರುತ್ತಿದ್ದರು. ಕೆಲವು ವೇಳೆ ಶ್ರೀರಾಮಕೃಷ್ಣರೇ ಅವರನ್ನು ನೋಡಲು ಹೋಗುತ್ತಿದ್ದರು. ಕೇಶವಚಂದ್ರಸೇನ ಬ್ರಹ್ಮ ಸಮಾಜದ ಮುಂದಾಳು, ಪ್ರಖ್ಯಾತ ವಾಗ್ಮಿ, ಪರಮಹಂಸರ ಹತ್ತಿರದ ಭಕ್ತನಾದ. ಒಂದು ದಿನ ಶ್ರೀರಾಮಕೃಷ್ಣರೇ ಈಶ್ವರಚಂದ್ರ ವಿದ್ಯಾಸಾಗರನನ್ನು ನೋಡುವುದಕ್ಕೆ ಹೋದರು. ಘನವಿದ್ವಾಂಸನಾದ ಈಶ್ವರಚಂದ್ರ ಪರಮಹಂಸರ ಬಾಯಿಯಿಂದ ಬರುವ ಮಾತನ್ನು ಕೇಳಿದನು. ಶಾಸ್ತ್ರಗಳ ಜಟಿಲ ಸಮಸ್ಯೆಯನ್ನು ಕೂಡ ಇವರ ಮಾತು ಬಗೆಹರಿಸಬಲ್ಲದೆಂದು ತಿಳಿದನು. ಮಹರ್ಷಿ ದೇವೇಂದ್ರನಾಥ ಠಾಕೂರರನ್ನು ನೋಡಲು ಶ್ರೀರಾಮಕೃಷ್ಣರೇ ಒಂದು ದಿನ ಮಥುರನಾಥನೊಂದಿಗೆ ಹೋದರು. ದಯಾನಂದ ಸರಸ್ವತಿ ಶ್ರೀರಾಮಕೃಷ್ಣರನ್ನು ನೋಡುವುದಕ್ಕೆ ದಕ್ಷಿಣೇಶ್ವರಕ್ಕೆ ಬಂದಿದ್ದರು. ಮುಂದೆ ಪ್ರಪಂಚವನ್ನೇ ವಿಸ್ಮಯಗೊಳಿಸಿದ ಸ್ವಾಮಿ ವಿವೇಕಾನಂದ ಮುಂತಾದ ಶಿಷ್ಯರು ಆಗ ಅನಾಮಧೇಯವಾಗಿ ಬಂದು ಹೋಗುತ್ತಿದ್ದರು. ಶ್ರೀರಾಮಕೃಷ್ಣರಿಗೆ ಬಂದ ಶಿಷ್ಯರೊಡನೆ ಮಾತನಾಡಿ ಮಾತನಾಡಿ ಗಂಟಲಲ್ಲಿ ಹುಣ್ಣಾಯಿತು. ಮಾತನಾಡಬೇಡಿ ಎಂದು ವೈದ್ಯರು ಎಷ್ಟು ಹೇಳಿದರೂ ಕೇಳುತ್ತಿರಲಿಲ್ಲ. ಯಾರಾದರೂ ಬದ್ಧ ಜೀವಿಗಳು ಬಂದು ಇವರ ಹತ್ತಿರ ನಿಂತು ಭಗವಂತನ ವಿಷಯವನ್ನು ಎತ್ತಿದರೆ ಸಾಕು, ಯಾತನೆಯ ಗಮನವಿಲ್ಲದೆ ಮಾತನಾಡಲು ಮೊದಲು ಮಾಡುವರು. "ನನ್ನ ಮಾತಿನಿಂದ ಇತರರಿಗೆ ಶಾಂತಿ ಸಿಕ್ಕುವ ಹಾಗೆ ಇದ್ದರೆ ಇಂತಹ ಎಷ್ಟು ನೋವನ್ನಾದರೂ ಸಹಿಸುತ್ತೇನೆ. ಭವಜೀವಿಗಳ ಉದ್ಧಾರಕ್ಕೆ ಎಷ್ಟು ಜನ್ಮಗಳನ್ನಾದರೂ ಎತ್ತಲು ಸಿದ್ಧನಾಗಿರುವೆ !" ಎನ್ನುತ್ತಿದ್ದರು. ಶ್ರೀರಾಮಕೃಷ್ಣರೆಂಬ ದೇಹದ ಗೂಡಿನಲ್ಲಿ ವಾಸಿಸುತ್ತಿದ್ದ ಜೀವದ ಹಕ್ಕಿ 1886ನೇ ಇಸವಿ ಆಗಸ್ಟ್ 16ನೇ ತಾರೀಖು ಹಾರಿಹೋಯಿತು. ಅಂದಿನಿಂದ ವಿಶ್ವವಿಹಾರಿ ಆಯಿತು. ಅವರ ತಪಸ್ಸು ಸರ್ವತೋಮುಖಿವಾಗಿ ಬಹುಜನರ ಹಿತಕ್ಕೆ, ಬಹುಜನರ ಸುಖಕ್ಕೆ ಸಾಧಕವಾಯಿತು. ಶ್ರೀರಾಮಕೃಷ್ಣರು ಸನಾತನ ಹಿಂದೂಧರ್ಮದ ಪೂರ್ಣ ಪ್ರತಿನಿಧಿ. ಯಾವುದನ್ನೂ ಅವರು ಅಲ್ಲಗಳೆಯಲಿಲ್ಲ. ಎಲ್ಲವನ್ನೂ ಪೂರ್ಣಮಾಡಿದರು, ಹಿಂದೂವಾಗಿಯೇ ಇದ್ದು ಎಲ್ಲ ಧರ್ಮಗಳ ಸಾಧನೆ ಮಾಡಬಹುದೆಂಬುದನ್ನು ತೋರಿದರು. ಎಲ್ಲ ಧರ್ಮಗಳ ಹಿಂದೆ ಇರುವುದೊಂದೇ ಸತ್ಯೆವೆಂಬುದು ಅವರ ಅನುಭವದ ಆಳದಿಂದ ಬಂದ ಮಾತು. ಹಿಂದೂಗಳು, ಮಹಮ್ಮದೀಯರು, ಕ್ರೈಸ್ತರು ಧರ್ಮದ ಹೆಸರಿನಲ್ಲಿ ವೈಮನಸ್ಸನ್ನು ಹರಡುವ ಬದಲು, ಶ್ರೀರಾಮಕೃಷ್ಣರಂತಹ ಒಂದು ಆದರ್ಶವಿದ್ದರೆ, ಹಿಂದೂಗಳು ಉತ್ತಮ ಹಿಂದೂಗಳಾಗುವರು, ಕ್ರೈಸ್ತರು ಉತ್ತಮ ಕ್ರೈಸ್ತರಾಗುವರು ಕ್ರಿ. ಶ. 1875ನೇ ಇಸವಿಯ ಸಮಯ. ಗಂಗಾನದಿಯ ತೀರದಲ್ಲಿ ದಕ್ಷಿಣೇಶ್ವರವೆಂಬ ಒಂದು ಪ್ರದೇಶ. ಅಲ್ಲಿ ಭವತಾರಿಣಿ ಜಗನ್ಮಾತೆಯ ಒಂದು ಸುಂದರ ದೇವಾಲಯ. ದೇವಸ್ಥಾನದ ಹೊರಗೆ ದಟ್ಟವಾದ ಕಾಡು ಇತ್ತು. ಸಹಸ್ರಾರು ಹಕ್ಕಿಗಳು ಸಂಜೆ ಮರದ ಮೇಲೆ ಕುಳಿತುಕೊಂಡು ವಿಧವಿಧವಾದ ಗಾನನೈವೇದ್ಯವನ್ನು ಜಗನ್ಮಾತೆಗೆ ಅರ್ಪಿಸುತ್ತಿವೆ. ಪಡವಲಂಚಿನಲ್ಲಿ ಸೂರ್ಯ ಸಂಜೆ ಓಕುಳಿಯ ಚೆಲ್ಲಿ ಮುಗಿಲಿನ ಅಂಚಿನ ಹಿಂದೆ ಮರೆಯಾಗುತ್ತಿರುವನು. ಆ ಸಮಯದಲ್ಲಿ ಸುಮಾರು ಇಪ್ಪತ್ತು ವರುಷದ ಯುವಕ ಮುಳುಗುತ್ತಿರುವ ರವಿಯನ್ನು ನೋಡಿ ನಿಟ್ಟುಸಿರುಬಿಡುವನು. 'ಅಯ್ಯೋ, ನನ್ನ ಜೀವನದಲ್ಲಿ ಆಗಲೇ ಒಂದು ದಿನ ಹೋಯಿತು. ಇನ್ನೂ ತಾಯಿ ಕಾಣಲಿಲ್ಲ' ಎಂದು ಕಂಬನಿದುಂಬಿ ಅಳುವನು. ನೆಲದ ಮೇಲೆ ಬಿದ್ದು ಹೊರಳಾಡುವನು. ನದಿಗೆ ಬಂದವರು ಹಿಂತಿರುಗಿ ಹೋಗುವಾಗ ಈ ದೃಶ್ಯವನ್ನು ನೋಡಿ, "ಅಯ್ಯೊ ಪಾಪ, ಹುಡುಗ ಹೆತ್ತ ತಾಯಿಗಾಗಿ ಅಳುತ್ತಿರುವನೇನೋ" ಎಂದು ಸಹಾನುಭೂತಿ ತೋರಿ ಮುಂದೆ ಸಾಗುವರು. ಎಳೆ ಮಗು ಮರೆಯಾದ ತಾಯಿಗಾಗಿ ಎಷ್ಟು ಅಳುವುದೊ ಅಷ್ಟು ಅತ್ತನು ಆ ಯುವಕ ಜಗನ್ಮಾತೆಗಾಗಿ. ಸಂದೇಹಾಸ್ಪದವಾದ, ಕಣ್ಣಿಗೆ ಕಾಣದ ದೇವರಿಗಾಗಿ ಅಷ್ಟು ವ್ಯಥೆಪಟ್ಟವರು ಅಪರೂಪ, ಧಾರ್ಮಿಕ ಜೀವನದಲ್ಲಿ. ಕೊನೆಗೆ ನಿರಾಶನಾಗಿ ಗರ್ಭಗುಡಿಯಲ್ಲಿದ್ದ ಬಲಿಕೊಡುವ ಖಡ್ಗವನ್ನು ತೆಗೆದುಕೊಂಡನು. ಅದರಿಂದ ದೇವರೆದುರಿಗೆ ತನ್ನ ರುಂಡವನ್ನು ಈಡಾಡುವುದರಲ್ಲಿದ್ದನು. ತಕ್ಷಣ ದೇವಿ ಪ್ರತ್ಯಕ್ಷಳಾದಳು. ಯುವಕನ ಮನಸ್ಸು ಪ್ರಪಂಚವನ್ನು ತೊರೆದು ಅವರ್ಣನೀಯ ಆನಂದದಲ್ಲಿ ತಲ್ಲೀನವಾಯಿತು. ದೇವರು ಪರೀಕ್ಷಿಸುವನು. ಅವನು ನಮ್ಮ ಸರ್ವಸ್ವವನ್ನೂ ತೆತ್ತಲ್ಲದೆ ಬರುವುದಿಲ್ಲ. ನಮ್ಮೆಲ್ಲವನ್ನೂ ದೇವರಿಗೆ ಕೊಟ್ಟರೆ ದೇವರು ತನ್ನ ಎಲ್ಲವನ್ನೂ ಭಕ್ತನಿಗೆ ಕೊಡುವನು. ತನ್ನ ಇಡೀ ಜೀವನವನ್ನು ನಿವೇದಿಸಿ, ಜಗನ್ಮಾತೆಯನ್ನು ಪಡೆದುಕೊಂಡನು. ಈ ವ್ಯಕ್ತಿಯೇ ಮುಂದೆ ಜಗದ್ವಂದ್ಯ ಶ್ರೀರಾಮಕೃಷ್ಣ ಪರಮಹಂಸರಾದುದು. ಸ್ವಾಮಿ ವಿವೇಕಾನಂದರು ಹೇಳಿರುವಂತೆ ಶ್ರೀರಾಮಕೃಷ್ಣರ ಜೀವನ ವೇದ ವೇದಾಂತಗಳಿಗೆ ಬರೆದಿರುವ ಸಚೇತನ ಭಾಷ್ಯ. ಮೂವತ್ತು ಕೋಟಿ ಭಾರತೀಯರ ಎರಡು ಸಾವಿರ ವರುಷಗಳ ಜೀವನವನ್ನು ಇವರು ತಮ್ಮ ಒಂದು ಜೀವನದಲ್ಲಿ ಅಳವಡಿಸಿಕೊಂಡಿರುವರು. ಇವರ ಜೀವನ ದ್ವೈತ ಅದ್ವೈತ ವಿಶಿಷ್ಟಾದ್ವೈತಗಳ ತ್ರಿವೇಣಿ. ಭಗವಂತನನ್ನು ಹಲವಾರು ಭಾವಗಳಲ್ಲಿ ಕಂಡು ಪ್ರೀತಿಸಿದರು. ಜ್ಞಾನ, ಭಕ್ತಿ, ಯೋಗ ಇಲ್ಲಿ ಸಂಧಿಸಿವೆ. ಇವರ ಜೀವನ ಒಂದು ದೊಡ್ಡ ವಿಶ್ವಧರ್ಮ ಸಮ್ಮೇಳನ. ಹೊರಗೆ ನೋಡುವುದಕ್ಕೆ ಎಳೆನಗೆ ಸದಾ ಇವರ ಮುಖದಲ್ಲಿ ಚಿಮ್ಮುತ್ತಿದೆ. ಅದರ ಹಿಂದೆ ರೋಮಾಂಚಕಾರಿಯಾದ ಆಧ್ಯಾತ್ಮಿಕ ಘಟನಾವಳಿ ತುಂಬಿ ತುಳುಕಾಡುತ್ತಿದೆ. ಇವರು ಘನ ವಿದ್ವಾಂಸರ ಗುಂಪಿಗೆ ಸೇರಿದವರಲ್ಲ, ದೊಡ್ಡ ವಾಗ್ಮಿಗಳಲ್ಲ. ಉಪನ್ಯಾಸ ಕೊಡುವುದಕ್ಕೆ ಎಲ್ಲೂ ಹೊರಗೆ ಹೋಗಲಿಲ್ಲ. ತಮ್ಮ ಬಾಳನ್ನೆಲ್ಲ ಬಹುಪಾಲು ದಕ್ಷಿಣೇಶ್ವರ ದೇವಾಲಯದ ವಲಯದಲ್ಲಿ ಕಳೆದರು. ಅದರೂ ಅಪರೂಪವಾಗಿ ಅರಳಿದ ಸಹಸ್ರದಳ ಕಮಲವಿದು. ಇಡೀ ಬದ್ಧಜೀವಿಗಳ ಉದ್ಧಾರಕ್ಕೆ ಬೇಕಾಗುವ ಧರ್ಮಾಮೃತ ಅಲ್ಲಿ ಹುದುಗಿತ್ತು. ಹಲವಾರು ಕಡೆಯಿಂದ ದುಂಬಿಗಳು ಬಂದವು. ಮಕರಂದವನ್ನು ಹೀರಿ ತೃಪ್ತರಾದವು. ಅದನ್ನು ಉಳಿದವರಿಗೆಲ್ಲ ಹಂಚಿ ಧನ್ಯರಾದವು, ಪಾಶ್ಚಾತ್ಯ ದೇಶಗಳಿಗೂ ಹಂಚಿ ಭರತಖಂಡಕ್ಕೆ ಮಾನ್ಯತೆ ತಂದವು. ಚಿರಾಯುವಾದ ಭಾರತಮಾತೆಯ ಶ್ರೇಷ್ಠತಮ ಪುತ್ರರಲ್ಲಿ ಶ್ರೀರಾಮಕೃಷ್ಣ ಪರಮಹಂಸರೊಬ್ಬರು. ಬಂಗಾಳ ಪ್ರಾಂತ್ಯದ ಹೂಗ್ಲಿ ಜಿಲ್ಲೆಯಲ್ಲಿ ಕಾಮಾರಪುಕುರವೆಂಬ ಸಣ್ಣದೊಂದು ಗ್ರಾಮ. ಅದು ಕಲ್ಕತ್ತೆಯಿಂದ ಸುಮಾರು ಅರವತ್ತು ಮೈಲಿ ದೂರದಲ್ಲಿದೆ. ಈಗಿನ ಕಾಲದ ವಾಹನ ಸೌಕರ್ಯಗಳಾವುವೂ ಅಲ್ಲಿಗೆ ಇನ್ನೂ ಬಂದಿರಲಿಲ್ಲ. ಹತ್ತಿರದ ರೈಲ್ವೆ ಸ್ಟೇಷನ್ನಿಗೆ ಸುಮಾರು ಇಪ್ಪತ್ತೈದು ಮೈಲಿ. ಹಳ್ಳಿ ಸಣ್ಣದು. ಆದರೂ ಜನರು ನೆಮ್ಮದಿಯಾಗಿದ್ದರು. ಸುತ್ತಮುತ್ತಲೂ ಕಮಲ ಪುಷ್ಕರಣಿ ತೋಪು ಇವುಗಳ ಹಿಂದೆ ಹಸಿರು ಗದ್ದೆಯ ಬಯಲು. ಅಲ್ಲಿ ಖುದಿರಾಮ ಚಟ್ಟೋಪಾಧ್ಯಾಯ ಮತ್ತು ಚಂದ್ರಮಣಿದೇವಿಯರಿಂದ ಕೂಡಿದ ಒಂದು ಬ್ರಾಹ್ಮಣ ಕುಟುಂಬವಿತ್ತು. ಬಡವರಾದರೂ ದೊಡ್ಡ ದೈವಭಕ್ತರು. ಯಾವ ಅಧಿಕಾರವೂ ಇವರಿಗೆ ಇಲ್ಲದೆ ಇದ್ದರೂ ಜನರು ಇವರ ಜೀವನಗಾಂಭೀರ್ಯದೆದುರಿಗೆ ತಗ್ಗಿ ನಡೆಯುತ್ತಿದ್ದರು. ಭಕ್ತರು, ಪರೋಪಕಾರಿಗಳು ಎಂದು ಪ್ರಖ್ಯಾತರಾಗಿದ್ದರು. ಇವರಿಗೆ ಕ್ರಿ. ಶ. 1836ನೇ ಫೆಬ್ರವರಿ 18ನೇ ದಿನ ಹುಟ್ಟಿದ ನಾಲ್ಕನೆಯ ಮಗನೇ ಶ್ರೀರಾಮಕೃಷ್ಣ. ಮಗು ಹುಟ್ಟಿದಾಗ ಗದಾಧರನೆಂದು ನಾಮಕರಣ ಮಾಡಿದರು. ಮನೆಯಲ್ಲಿ ಗದಾಯ್ ಎಂದು ಕರೆಯುತ್ತಿದ್ದರು. ಕ್ರಮೇಣ ಶ್ರೀರಾಮಕೃಷ್ಣ ಎಂಬ ಹೆಸರು ಅವರಿಗೆ ಸೇರಿ, ನಂತರ, ಇದೇ ಪ್ರಖ್ಯಾತವಾಗಿ ನಿಂತಿತು. ಮಗುವು ಮನೆಯವರಿಗೆ ಮಾತ್ರ ಮುದ್ದಾಗಿ ಇರಲಿಲ್ಲ. ಇಡೀ ಹಳ್ಳಿಯೇ ಆ ಮಗುವನ್ನು ನೋಡಿ ಸಂತೊಭೀಷಗೊಂಡಿತು. ಅದು ಎಲ್ಲರಿಗೂ ಬೇಕಾದ ಮಗುವಾಯಿತು. ಮಗುವಿಗೆ ಸುಮಾರು ಐದು ಆರನೆ ವರುಷ ತುಂಬುವ ಹೊತ್ತಿಗೆ, ದೇವದೇವಿಯರ ಹಲವು ಸ್ತೋತ್ರಗಳು, ರಾಮಾಯಣ ಮಹಾಭಾರತದ ಕಥೆಗಳು ಇವನ್ನು ಕಲಿತುಕೊಂಡಿತು. ಬಾಲ್ಯದಿಂದಲೂ ಅವರಲ್ಲಿ ಕೆಲವು ಒಳ್ಳೆ ಸ್ವಭಾವಗಳು ಬಹಳ ಚೆನ್ನಾಗಿ ರೂಪುಗೊಂಡಿದ್ದವು. ಸ್ವಲ್ಪವೂ ಅಂಜಿಕೆ ಸ್ವಭಾವದವರಲ್ಲ. ಉಳಿದ ಮಕ್ಕಳು ಎಲ್ಲಿಗೆ ಹೋಗಲು ಅಂಜುತ್ತಿದ್ದರೋ ಅಲ್ಲಿಗೆ ಅವರು ಧೈರ್ಯವಾಗಿ ಹೋಗುತ್ತಿದ್ದರು. ಸಾಧಾರಣವಾಗಿ ಎಂತಹವನಿಗಾದರೂ ಸ್ಮಶಾನ ಸ್ವಲ್ವ ಅಂಜಿಕೆ ತರುವ ಸ್ಥಳ. ಅಂತಹ ಕಡೆ ಒಬ್ಬರೇ ನಿರ್ಭಯವಾಗಿ ಹೋಗುತ್ತಿದ್ದರು. ಯಾರೂ ಇವರಿಗೆ ಇಚ್ಛೆ ಇಲ್ಲದುದನ್ನು ಕೋಪ ತೋರಿ ಅಥವಾ ಗದರಿಸಿ ಮಾಡಿಸುವುದಕ್ಕೆ ಆಗುತ್ತಿರಲಿಲ್ಲ. ಯಾರಿಗಾದರೂ ಒಮ್ಮೆ ಮಾತು ಕೊಟ್ಟರೆ ಸಾಕು, ಏನಾದರೂ ಆಗಲಿ ಅದನ್ನು ನಡೆಸಿಕೊಡುತ್ತಿದ್ದರು. ಉಪನಯನದ ಸಮಯದಲ್ಲಿ ಮೊದಲ ಭಿಕ್ಷೆಯನ್ನು ಅವರ ಕುಲಕ್ಕೆ ಸೇರಿದ ಹಿರಿಯರಿಂದ ತೆಗೆದುಕೊಳ್ಳುವುದು ರೂಢಿ. ಬಾಲ್ಯದಿಂದಲೂ ಧನಿ ಎಂಬುವ ಅಕ್ಕಸಾಲಿಗ ಹೆಂಗಸು ಇವರನ್ನು ಪ್ರೀತಿಸುತ್ತಿದ್ದಳು. ಅವಳು ಒಂದು ದಿನ ಮಗುವಿನೊಡನೆ ಉಪನಯನದ ಸಮಯದಲ್ಲಿ ತನ್ನಿಂದ ಭಿಕ್ಷೆಯನ್ನು ತೆಗೆದುಕೊಳ್ಳಬೇಕೆಂದು ಬೇಡಿಕೊಂಡಳು. ಶ್ರೀರಾಮಕೃಷ್ಣರು ಅದಕ್ಕೆ ಒಪ್ಪಿಗೆ ಇತ್ತರು. ಇವರಿಗೆ ಒಂಭತ್ತು ವರುಷದ ಸಮಯಕ್ಕೆ ಉಪನಯನವಾಯಿತು. ಆ ಸಮಯದಲ್ಲಿ ಆಕೆಯಿಂದ ಭಿಕ್ಷೆ ತೆಗೆದುಕೊಳ್ಳದಂತೆ ಯಾರು ಎಷ್ಟು ಹೇಳಿದರೂ ಕೇಳಲಿಲ್ಲ. ಕೊನೆಗೂ ಧನಿ ಎಂಬ ಅಕ್ಕಸಾಲಿಗಳಿಂದ ಮೊದಲ ಭಿಕ್ಷೆಯನ್ನು ಸ್ವೀಕರಿಸಿದರು. ಸಾಧಾರಣವಾಗಿ ಆ ವಯಸ್ಸಿನಲ್ಲಿ ಮಕ್ಕಳು ದೊಡ್ಡವರು ಹೇಳಿದಂತೆ ಕೇಳುವುದು ಸ್ವಭಾವ. ಇಂತಹ ವಯಸ್ಸಿನಲ್ಲಿಯೇ ಅವರ ಜೀವನದಲ್ಲಿ ಸತ್ಯಕ್ಕಾಗಿ ಏನನ್ನಾದರೂ ಸಹಿಸುವ ಶಕ್ತಿಯನ್ನು ನೋಡುತ್ತೇವೆ. ನಿಜವಾದ ಪ್ರೀತಿಯ ಎದುರಿಗೆ ಸಂಪ್ರದಾಯದ ಆಚಾರವನ್ನೆಲ್ಲ ಕಿತ್ತೊಗೆದರು. ಶ್ರೀರಾಮಕೃಷ್ಣರನ್ನು ಹಳ್ಳಿಯ ಶಾಲೆಗೆ ಸೇರಿಸಿದರು. ಶಾಲೆಯಲ್ಲಿ ಓದುವುದು ಬರೆಯುವುದರಲ್ಲಿ ಸ್ವಲ್ಪ ಆಸಕ್ತಿ ತೋರಿದರೂ ಗಣಿತ ತಲೆಗೆ ಹತ್ತಲಿಲ್ಲ. ಶಾಲೆಯೊಳಗೆ ಕುಳಿತು ಓದುವುದಕ್ಕಿಂತ ಹತ್ತಿರವಿದ್ದ ತೋಪಿನಲ್ಲಿ ಆಡುವುದರಲ್ಲಿ ಇವರಿಗೆ ಆಸಕ್ತಿ. ಕೆಲವು ವೇಳೆ ಶಾಲಾ ಉಪಾಧ್ಯಾಯರು ಬರುವುದು ತಡವಾದರೆ ಹುಡುಗರೊಂದಿಗೆ ಹತ್ತಿರವಿರುವ ತೋಪಿಗೆ ಹೋಗಿ ಅವರು ನೋಡಿದ್ದ ಬಯಲಾಟವನ್ನು ಆಡುತ್ತಿದ್ದರು. ಅದಕ್ಕೆ ಸಂಬಂಧಪಟ್ಟ ಹಾಡು ನಟನೆ ಇವುಗಳನ್ನು ಅಭಿನಯಿಸುವುದರಲ್ಲಿ ತುಂಬಾ ಪಾಂಡಿತ್ಯವನ್ನು ತೋರಿದರು. ಪ್ರಚಂಡ ಜ್ಞಾಪಕಶಕ್ತಿ ಇವರಲ್ಲಿತ್ತು. ಹಾಡನ್ನು ಒಂದು ಸಲ ಕೇಳಿದರೆ ಸಾಕು, ಅದನ್ನು ನೆನಪಿನಲ್ಲಿಡುತ್ತಿದ್ದರು. ಅದರಂತೆ ಅಭಿನಯಿಸುತ್ತಿದ್ದರು. ಶ್ರೀರಾಮಕೃಷ್ಣರು ಹುಟ್ಟು ಕಲೋಪಾಸಕರು. ಬಾಹ್ಯಪ್ರಪಂಚದ ಮನಸೆಳೆವ ಬಣ್ಣ, ಆಕಾರ, ಭಾವ, ಧ್ವನಿ ಇವುಗಳೆಲ್ಲಾ ಇಂದ್ರಿಯಾತೀತ ಪ್ರಪಂಚದೆಡೆಗೆ ಇವರನ್ನು ಬೀಸಿ ಕರೆಯುತ್ತಿದ್ದವು. ಶ್ರೀರಾಮಕೃಷ್ಣರಿಗೆ ಆರೇಳು ವರುಷದ ಸಮಯ. ಆಗ ಒಂದು ದಿನ ಹಸುರು ಗದ್ದೆಯ ಬಯಲಿನಲ್ಲಿ ನಡೆಯುತ್ತಿದ್ದರು. ಕೈಯಲ್ಲಿದ್ದ ಒಂದು ಸಣ್ಣ ಬುಟ್ಟಿಯಲ್ಲಿ ಪುರಿ ಇತ್ತು. ಅದನ್ನು ತಿನ್ನುತ್ತ ಸುತ್ತಲೂ ನೋಡುತ್ತ ಹೋಗುತ್ತಿದ್ದರು. ಸುತ್ತಲೂ ಹಸಿರು ಗದ್ದೆ, ಮೇಲೆ ಮೋಡ ಕವಿದಿತ್ತು . ಅದು ಕ್ರಮೇಣ ವಿಸ್ತಾರವಾಗಿ ಆಕಾಶವನ್ನೆಲ್ಲಾ ವ್ಯಾಪಿಸಿತು. ಅದರ ಕಳಗೆ ಬಕಪಕ್ಷಿಯ ಸಾಲು ಹಾರಿಹೋಗುತ್ತಿತ್ತು. ಈ ಬಣ್ಣಗಳ ವೈವಿಧ್ಯತೆಯನ್ನು ನೋಡಿದಾಗ ಅವರ ಮನಸ್ಸಿಗೆ ಯಾವ ಇಂದ್ರಿಯಾತೀತ ಸತ್ಯ ಹೊಳೆಯಿತೋ ತಿಳಿಯದು, ಸಂಪೂರ್ಣ ತನ್ಮಯರಾಗಿ ಬಾಹ್ಯಪ್ರಪಂಚವನ್ನು ಮರೆತುಬಿಟ್ಟರು. ಹತ್ತಿರವಿದ್ದವರು ಅವರನ್ನು ಮನೆಗೆ ಕರೆದುಕೊಂಡು ಬಂದರು. ಸ್ವಲ್ವ ಹೊತ್ತಾದ ಮೇಲೆಯೇ ಅವರಿಗೆ ಬಾಹ್ಯಪ್ರಜ್ಞೆ ಬಂದುದು. ಆಗ ತಮ್ಮ ಮನಸ್ಸು ಇಂದ್ರಿಯಾತೀತ ಪ್ರಪಂಚದಲ್ಲಿ ಅವರ್ಣನೀಯ ಅನಂದದಲ್ಲಿ ತಲ್ಲೀನವಾಗಿತ್ತು ಎಂದರು. ಒಂದು ಶಿವರಾತ್ರಿಯ ದಿನ. ಅಂದು ಜಾಗರಣೆ ಮಾಡಿ ಶಿವಪೂಜೆ ಮಾಡಬೇಕೆಂದು ಅಣಿಯಾಗಿತ್ತು. ಅಂದು ಊರಿನಲ್ಲಿ ಎಲ್ಲರ ಜಾಗರಣೆಗೆಂದು ಬಯಲುನಾಟಕ ಒಂವನ್ನು ಆಡಲು ಕೆಲವರು ಅಣಿಯಾಗುತ್ತಿದ್ದರು. ರಾತ್ರಿಯಾಯಿತು. ನಾಟಕ ಆರಂಭವಾಗುವ ಸಮಯ ಬಂದರೂ ಶಿವನ ಪಾತ್ರಧಾರಿ ಬರಲಿಲ್ಲ. ವಿಚಾರಿಸಿದಾಗ ಅವನಿಗೆ ಅನಾರೋಗ್ಯವೆಂದು ತಿಳಿದುಬಂದಿತು. ಆಗ ಸ್ನೇಹಿತರು ಬಂದು ಶ್ರೀರಾಮಕೃಷ್ಣರನ್ನು ಶಿವನ ಪಾತ್ರವನ್ನು ವಹಿಸಿಕೊಳ್ಳಬೇಕೆಂದು ಕೇಳಿಕೊಂಡರು. ಅವರು ಮೊದಲು ಒಪ್ಪಲಿಲ್ಲ. ಪೂಜೆ ಜಾಗರಣೆಯಲ್ಲಿ ಮನೆಯಲ್ಲೆ ಕಾಲ ಕಳೆಯಬೇಕೆಂದಿರುವೆ ಎಂದರು. ಬಂದವರು, ಪಾತ್ರ ಮಾಡಿದರೂ ಶಿವನನ್ನು ಕುರಿತು ಚಿಂತಿಸುತ್ತಲೇ ಇರಬೇಕಾಗುವುದು; ಅದರಿಂದ ನೀನು ಶಿವನ ಧ್ಯಾನವನ್ನು ಮಾಡಿದಂತೆಯೆ, ಎಂದು ಸಮಾಧಾನ ಹೇಳಿದ ಮೇಲೆ ಒಪ್ಪಿಕೊಂಡರು. ಶಿವನಂತೆ ಭಸ್ಮ ಬಳಿದುಕೊಂಡು ಜಟಾಧಾರಿಯಾಗಿ ರಂಗಭೂಮಿಯ ಮೇಲೆ ಬಂದು ನಿಂತರು. ರಾಮಕೃಷ್ಣರು ತಾನು ನಟಿಸುತ್ತಿರುವೆನು ಎಂಬುದನ್ನು ಮರೆತು ಶಿವಧ್ಯಾನದಲ್ಲಿ ತಲ್ಲೀನರಾದರು. ಕಣ್ಣಿನಿಂದ ಆನಂದಬಾಷ್ಪ ಸುರಿಯತೊಡಗಿತು. ಬಾಹ್ಯಪ್ರಪಂಚದ ಅರಿವನ್ನು ಮರೆತರು. ನೆರೆದ ಪ್ರೇಕ್ಷಕ ವೃಂದಕ್ಕೆ ಶಿವನ ಪಾತ್ರಧಾರಿ ಕಾಣಲಿಲ್ಲ. ಶಿವನಲ್ಲಿ ಐಕ್ಯನಾದ ಶಿವಭಕ್ತನು ಕಂಡನು. ಪಾತ್ರಮಾಡಲು ಇವರಿಂದ ಆಗಲಿಲ್ಲ. ಹತ್ತಿರವಿದ್ದವರು ಹಾಗೆಯೇ ಇವರನ್ನು ಮನೆಗೆ ಕರೆದುಕೊಂಡು ಹೋದರು. ಮಾರನೇ ದಿನವೇ ಇವರಿಗೆ ಜನರ ಅರಿವುಂಟಾಗಿದ್ದು. ಮತ್ತೊಂದು ದಿನ ಮೂರು ಮೈಲಿಗಳ ದೂರದಲ್ಲಿದ್ದ ವಿಶಾಲಾಕ್ಷಿಯ ದೇವಸ್ಥಾನಕ್ಕೆ ಕೆಲವು ಹೆಂಗಸರೊಂದಿಗೆ ಹೋಗುತ್ತಿದ್ದರು. ನಡೆದುಕೊಂಡು ಹೋಗುತ್ತಿರುವಾಗ ದೇವಿಗೆ ಸಂಬಂಧಪಟ್ಟ ಹಲವು ಹಾಡುಗಳನ್ನು ಜೊತೆಯವರು ಹೇಳುತ್ತಿದ್ದರು. ತಕ್ಷಣವೇ ಶ್ರೀರಾಮಕೃಷ್ಣರು ಸ್ಥಿರವಾಗಿ ನಿಂತರು. ಕಣ್ಣಿನಲ್ಲಿ ಅಶ್ರುಧಾರೆ ಹರಿಯತೊಡಗಿತು. ಪ್ರಪಂಚದ ಅರಿವೇ ಇವರಿಗೆ ಇರಲಿಲ್ಲ. ಹತ್ತಿರವಿದ್ದ ಹೆಂಗಸರು ಎಷ್ಟು ಶೈತ್ಯೋಪಚಾರ ಮಾಡಿದರೂ ಇವರಿಗೆ ಪ್ರಜ್ಞೆ ಬರಲಿಲ್ಲ. ಕೆಲವರು ದೇವರ ಹೆಸರನ್ನು ಇವರ ಕಿವಿಯಲ್ಲಿ ಹೇಳಿದಾಗ ಬಾಹ್ಯಪ್ರಪಂಚದ ಅರಿವಾಯಿತು. ಹಲವು ದೇವದೇವಿಯರ ವಿಗ್ರಹವನ್ನು ತಾವೇ ಮಾಡಿ ಪೂಜಿಸುತ್ತಿದ್ದರು. ಶ್ರೀರಾಮಕೃಷ್ಣರ ಏಳನೇ ವಯಸ್ಸಿನಲ್ಲಿ ಅವರ ತಂದೆ ಕಾಲವಾದರು. ಅವರು ಮೊದಲ ಬಾರಿ ತಮ್ಮ ಹತ್ತಿರದವರ ಸಾವನ್ನು ನೋಡಬೇಕಾಯಿತು. ಮೊದಲೆ ಅಂತರ್ಮುಖಿ ಸ್ವಭಾವ ಅವರದು. ಈ ದಾರುಣ ಪೆಟ್ಟು ತಾಕಿದಾಗ ಜಗತ್ತು ನಶ್ವರವೆಂಬ ಭಾವನೆ ಚಿರಮುದ್ರಿತವಾಯಿತು. ಅವರ ತಾಯಿಗೆ ಪತಿಯ ಅಗಲಿಕೆ ದಾರುಣ ವ್ಯಥೆಯನ್ನುಂಟು ಮಾಡಿತು. ಅವರು ಇದನ್ನೂ ಕಣ್ಣಾರೆ ನೋಡಬೇಕಾಯಿತು. ಸಾಧ್ಯವಾದಮಟ್ಚಿಗೆ ಯಾವಾಗಲೂ ತಾಯಿಯ ಹತ್ತಿರವಿರುತ್ತ ಕೈಲಾದಮಟ್ಟಿಗೆ ಅವರಿಗೆ ಸಂತೋಷವನ್ನುಂಟು ಮಾಡಲು ಯತ್ನಿಸಿದರು. ಕಲ್ಕತ್ತೆಯಿಂದ ಪೂರಿಗೆ ಹೋಗುವ ದಾರಿಯಲ್ಲಿ ಕಾಮಾರಪುಕುರವಿತ್ತು. ಅನೇಕ ಯಾತ್ರಿಕರು ಅಲ್ಲಿ ತಂಗಿ ಹೋಗುತ್ತಿದ್ದರು. ಶ್ರೀರಾಮಕೃಷ್ಣರ ಮನೆಯ ಹತ್ತಿರವೇ ಅನೇಕ ಸಾಧುಸಂತರು ಇಳಿದುಕೊಳ್ಳುತ್ತಿದ್ದ ಛತ್ರವಿತ್ತು. ಶ್ರೀರಾಮಕೃಷ್ಣರು ಅಲ್ಲಿಗೆ ಪದೇಪದೇ ಹೋಗುತ್ತಿದ್ದರು. ಸಾಧುಗಳೊಡನೆ ಮಾತನಾಡುವುದು, ಅವರು ಹೇಳುವುದನ್ನು ಭಕ್ತಿಯಿಂದ ಕೇಳುವುದು, ಅವರಿಗೆ ಸಣ್ಣಪುಟ್ಟ ಕೆಲಸದಲ್ಲಿ ನೆರವಾಗುವುದು ಮುಂತಾದುವನ್ನು ಮಾಡುತ್ತಿದ್ದರು. ಒಂದು ದಿನ ಅವರಂತಯೇ ತಾವೂ ಸಾಧುವಾಗಬೇಕೆಂದು ಬಯಸಿ ಮೈಗೆ ಬೂದಿ ಬಳಿದುಕೊಂಡು ಬಟ್ಟೆಯನ್ನು ಬೈರಾಗಿಯಂತೆ ಉಟ್ಟುಕೊಂಡು ಮನೆಗೆ ಬಂದರು. ತಾಯಿಗೆ ತಾನು ಸಾಧುವಾಗಿಬಿಟ್ಟೆ ಎಂದರು. ಇದನ್ನು ನೋಡಿ ತಾಯಿ ತಳಮಳಿಸಿದಳು. ಅವರು ಪತಿಯ ಅಗಲಿಕೆಯನ್ನು ಶ್ರೀರಾಮಕೃಷ್ಣರನ್ನು ನೋಡಿ ಮರೆತಿದ್ದರು. ಈಗ ಈ ಮಗುವೆ ಹೀಗೆ ಆಗುವನೆಂದು ಹೇಳಿದಾಗ ಎದೆ ತಲ್ಲಣಿಸಿತು. ಶ್ರೀರಾಮಕೃಷ್ಣರು ತಾಯಿ ದುಃಖಿತಳಾದುದನ್ನು ನೋಡಿ, ತಮ್ಮ ಬೈರಾಗಿ ವೇಷವನ್ನು ತೆಗೆದುಹಾಕಿದರು. ಶ್ರೀರಾಮಕೃಷ್ಣರ ಮನೆಯ ಸಮೀಪದಲ್ಲಿ ಸೀತಾನಾಥ ಪೈನಿ ಎಂಬ ಗೃಹಸ್ಥ ಭಕ್ತನಿದ್ದನು. ಆತನ ಮನೆಯಲ್ಲಿ ಹಲವಾರು ಹೆಣ್ಣುಮಕ್ಕಳು ಇದ್ದರು. ರಾಮಕೃಷ್ಣರು ಅವರ ಮನೆಗೆ ಹೋಗಿ ಅನೇಕ ವೇಳೆ ಹಾಡು ಕತೆ ಮುಂತಾದುವನ್ನು ಹೇಳಿ ಅವರನ್ನು ಸಂತೋಷ ಪಡಿಸುತ್ತಿದ್ದರು. ಆ ಮನೆಯವರು ಈ ಮಗುವಿನ ಹಾಡು ನಟನೆಗಳಿಗೆ ಮೆಚ್ಚಿ ಕೃಷ್ಣನ ವೇಷಕ್ಕೆ ಬೇಕಾಗುವ ಬಟ್ಟೆಬರೆಗಳನ್ನೂ ಒಂದು ಚಿನ್ನದ ಬಣ್ಣದ ಕೊಳಲನ್ನೂ ಇವರಿಗೆ ಕೊಟ್ವರಂತೆ. ಅವರ ಮನೆಯ ಪಕ್ಕದಲ್ಲೆ ದುರ್ಗಾದಾಸ ಪೈನಿ ಎಂಬ ಮತ್ತೊಬ್ಬನಿದ್ದನು. ಅವರ ಮನೆಯವರು ಇನ್ನೂ ಘೋಷಾ ಪದ್ಧತಿಯನ್ನು ಬಿಟ್ಟಿರಲಿಲ್ಲ. ಆತನು ಇದಕ್ಕೆ ಹೆಮ್ಮೆಪಡುತ್ತಿದ್ದನು. ತನ್ನ ಮನೆಯ ಹೆಂಗಸರನ್ನು ಪರಪುರುಷರಾರೂ ನೋಡಿಲ್ಲ; ಅವರನ್ನು ನೋಡುವುದು ಅಸಾಧ್ಯ ಎನ್ನುತ್ತಿದ್ದನು. ರಾಮಕೃಷ್ಣರು ಇದನ್ನು ಕೇಳಿ "ಮುಸುಕಲ್ಲ ಹೆಂಗಸರ ಮಾನ ಕಾಪಾಡುವುದು – ಸಂಸ್ಕೃತಿ ಮತ್ತು ಒಳ್ಳೆಯ ನಡತೆ. ಬೇಕಾದರೆ ನಾನು ನಿಮ್ಮ ಮನೆಗೆ ಪ್ರವೇಶಿಸಬಲ್ಲೆ" ಎಂದರು. ಇದನ್ನು ಕೇಳಿ ದುರ್ಗಾದಾಸನು "ನೋಡೋಣ, ಹೇಗೆ ಮಾಡುವೆಯೊ" ಎಂದನು. ಒಂದು ದಿನ ಸಂಜೆ ದುರ್ಗಾದಾಸನು ಕೆಲವರೊಂದಿಗೆ ಮಾತನಾಡುತ್ತ ಮನೆಯ ಜಗಲಿಯ ಮೇಲೆ ಕುಳಿತುಕೊಂಡಿದ್ದನು. ಒಬ್ಬ ಹುಡುಗಿ ಮುಸುಕಿನಲ್ಲಿ ಬಂದು, "ನಾನು ಹತ್ತಿರದ ಹಳ್ಳಿಯವಳು, ನೂಲನ್ನು ಮಾರುವುದಕ್ಕೆ ಬಂದೆ; ಸಂಜೆಯಾಯಿತು. ದೂರ ನಡೆದುಹೋಗಬೇಕು; ರಾತ್ರಿ ಇಲ್ಲಿ ತಂಗಿ ಹೋಗುವುದಕ್ಕೆ ಅವಕಾಶವಿದೆಯೆ?" ಎಂದು ಕೇಳಿದಳು. ದುರ್ಗಾದಾಸನು, "ಒಳಗೆ ಹೋಗಿ ಹೆಂಗಸರೊಡನೆ ಮಾತನಾಡು" ಎಂದು ಕಳುಹಿಸಿದನು. ಹುಡುಗಿ ಒಳಗೆ ಹೋದಮೇಲೆ ದುರ್ಗಾದಾಸನ ಹೆಣ್ಣುಮಕ್ಕಳು ಅಪರಿಚಿತ ಹುಡುಗಿಯನ್ನು ಆದರದಿಂದ ಬರಮಾಡಿಕೊಂಡು ತಿನ್ನುವುದಕ್ಕೆ ತಿಂಡಿ ಕೊಟ್ಟರು. ಅವರೊಡನೆ ಬಹಳ ಹೊತ್ತು ರಾತ್ರಿ ಮಾತನಾಡುತ್ತಿದ್ದಳು. ಬೀದಿಯ ಹೊರಗಡೆ ಯಾರೋ ಗದಾಯ್ ಎಂದು ಕೂಗುವುದು ಕೇಳಿತು. ಈ ಸದ್ದು ಹುಡುಗಿಯ ಕಿವಿಗೆ ಬಿದ್ದೊಡನೆಯೇ "ಅಣ್ಣ, ಬರುತ್ತೀನಿ" ಎಂದು ಕೂಗಿಕೊಂಡಳು. ಆಗ ಮನೆಯವರಿಗೆ ಗೊತ್ತಾಯಿತು. ಈ ಹುಡುಗಿ ಶ್ರೀರಾಮಕೃಷ್ಣರೇ ಎಂದು. ಎಲ್ಲರಿಗೂ ಆಶ್ಚರ್ಯವಾಯಿತು, ದುರ್ಗಾದಾಸನಿಗೆ ಮೊದಲಿಗೆ ಕೋಪ ಬಂದರೂ ಅನಂತರ ಈ ಹಾಸ್ಯದಲ್ಲಿ ಎಲ್ಲರೊಡನೆ ತಾನೂ ಭಾಗಿಯಾದನು. ತಂದೆಯ ಕಾಲಾನಂತರ ಮನೆಯ ಜವಾಬ್ದಾರಿ ಶ್ರೀರಾಮಕೃಷ್ಣರ ಹಿರಿಯ ಅಣ್ಣ ರಾಮಕುಮಾರನ ಮೇಲೆ ಬಿದ್ದಿತು. ವಿಸ್ತಾರವಾಗುತ್ತಿರುವ ಸಂಸಾರವನ್ನು ನಿರ್ವಹಿಸುವುದು ಬಹಳ ಕಷ್ಟವಾಯಿತು. ಈತನೇನೋ ದೊಡ್ಡ ವಿದ್ಯಾವಂತನಾಗಿದ್ದನು. ಆದರೆ ಆ ಹಳ್ಳಿಯಲ್ಲಿ ವಿದ್ಯೆಗೆ ಗೌರವ ಸಿಕ್ಕೀತೆ ಹೊರತು ಹಣ ಸಿಕ್ಕುವಂತಿರಲಿಲ್ಲ. ಕಲ್ಕತ್ತೆಗೆ ಹೋಗಿ ಅಲ್ಲಿ ಒಂದು ಸಂಸ್ಕೃತ ಪಾಠಶಾಲೆಯನ್ನು ತೆರೆದನು. ಶ್ರೀರಾಮಕೃಷ್ಣರು ಆಗ ಕಾಮಾರಪುಕುರದಲ್ಲೇ ಇದ್ದರು. ಆಗ ಅವರಿಗೆ ಸುಮಾರು ಹದಿನಾರು ವಯಸ್ಸು. ಹಳ್ಳಿಯಲ್ಲಿದ್ದರೆ ಹುಡುಗ ಓದುವುದಿಲ್ಲವೆಂದು ಕೆಲವು ದಿನಗಳಾದ ಮೇಲೆ ರಾಮಕುಮಾರನು ತನ್ನ ತಮ್ಮನನ್ನು ಕಲ್ಕತ್ತೆಗೆ ಕರೆಸಿಕೊಂಡನು. ಕೆಲವು ದಿನ ಹುಡುಗನನ್ನು ಹೋದದಾರಿಗೆ ಬಿಟ್ಟನು. ಹುಡುಗನಿಗೆ ಓದಿನ ಕಡೆ ಮನಸ್ಸು ಓಡುತ್ತಿರಲಿಲ್ಲ. ಒಂದು ದಿನ ತಮ್ಮನನ್ನು ಕರೆದು, "ಹೀಗೆ ಆದರೆ ಹೇಗೆ? ನಿನ್ನ ಭವಿಷ್ಯವೇನು?" ಎಂದು ಕೇಳಿದನು. ಶ್ರೀರಾಮಕೃಷ್ಣರು, "ನನಗೆ ಬಟ್ಟೆ, ಹಿಟ್ಟು ಕೊಡುವ ವಿದ್ಯೆ ಬೇಡ. ಯಾವುದು ನನ್ನ ಹೃದಯಕ್ಕೆ ಬೆಳಕನ್ನು ಕೊಡಬಲ್ಲದೋ, ಯಾವುದನ್ನು ತಿಳಿದರೆ ಮನುಷ್ಯ ನಿತ್ಯ ತೃಪ್ತವಾಗುತ್ತಾನೆಯೋ ಆ ವಿದ್ಯೆ ಪಡೆಯಲು ನಾನು ಯತ್ನಿಸುವೆನು" ಎಂದರು. ಅಣ್ಣ ಅಪ್ರತಿಭನಾದನು. ತಮ್ಮನು ಸುಲಭವಾಗಿ ದಾರಿಗೆ ಬರುವಂತೆ ಕಾಣಲಿಲ್ಲ. ತಾನು ಹೋಗುತ್ತಿದ್ದ ಕೆಲವು ಮನೆಗಳಿಗೆ ಪೂಜೆಗೆ ಹೋಗು ಎಂದು ಹೇಳಿದನು. ತಮ್ಮನು ಇದನ್ನು ಸಂತೋಷದಿಂದ ಒಪ್ಪಿಕೊಂಡನು. ಹೀಗೆ ಶ್ರೀರಾಮಕೃಷ್ಣರು ಇತರರ ಮನೆಗಳಿಗೆ ಹೋಗಿ ಪೂಜೆ ಮಾಡಿದರು. ಮನೆಯವರಿಗೆ ಹೊಸ ಪೂಜಾರಿಯು ಪೂಜೆ ಮಾಡುವ ರೀತಿ, ಅವರ ಭಾವ ಮುಂತಾದುವನ್ನು ನೋಡಿ ಅವರಲ್ಲಿ ಹೆಚ್ಚು ಗೌರವ ಉಂಟಾಯಿತು. ಅವಸರವಿಲ್ಲದ ಶ್ರದ್ಧಾಭಕ್ತಿಯಿಂದ ಪೂಜೆ ಮಾಡುತ್ತಿದ್ದರು. ಭಾವಪೂರ್ವಕವಾಗಿ ಭಕ್ತಿಗೀತೆಗಳನ್ನು ಹಾಡುತ್ತಿದ್ದರು. ಇವರನ್ನು ಕಂಡು ಎಲ್ಲ ಮನೆಯವರಿಗೂ ಪ್ರೀತಿಯುಂಟಾಯಿತು; ಕೊಡುವ ದಕ್ಷಿಣೆಯ ಆಸೆಗಲ್ಲದೆ ಕೇವಲ ಉಪಾಸನೆಗಾಗಿಯೆ ದೇವರನ್ನು ಇವರು ಪೂಜಿಸುತ್ತಿದ್ದರು ಕಲ್ಕತ್ತೆಯಲ್ಲಿ ರಾಣಿ ರಾಸಮಣಿ ಎಂಬ ದೊಡ್ಡ ದೇವೀ ಭಕ್ತೆ ಇದ್ದಳು. ಆಕೆ ತುಂಬಾ ಶ್ರೀಮಂತಳು. ಬೆಸ್ತರ ಕುಲದಿಂದ ಬಂದವಳು. ಬೇಕಾದಷ್ಟು ದುಡ್ಡು ವ್ಯಯಿಸಿ ದಕ್ಷಿಣೇಶ್ವರ ಎಂಬಲ್ಲಿ ಗಂಗಾನದಿಯ ತೀರದಲ್ಲಿ ದೊಡ್ಡದೊಂದು ಕಾಳಿಕಾ ದೇವಾಲಯವನ್ನು ಕಟ್ಟಿಸಿದಳು. ಅದನ್ನು ಪ್ರತಿಷ್ಠೆ ಮಾಡುವ ದಿನ ಬಂದಿತು. ಆದರೆ ಅಲ್ಲಿ ಪೂಜೆಮಾಡಲು ಯಾವ ಬ್ರಾಹ್ಮಣ ಪೂಜಾರಿಯೂ ಬರಲಿಲ್ಲ. ರಾಣಿ ಖಿನ್ನಳಾದಳು. ಈ ಸಮಾಚಾರ ರಾಮಕುಮಾರನಿಗೆ ಗೊತ್ತಾಯಿತು. ಆತ ಈಕೆಗೆ ಒಂದು ಉಪಾಯವನ್ನು ಸೂಚಿಸಿದನು. ಆ ದೇವಸ್ಥಾನವನ್ನು ಅದಕ್ಕೆ ಪ್ರತಿವರ್ಷವೂ ತಗಲುವ ಖರ್ಚಿನ ಸಮೇತ ಒಬ್ಬ ಬ್ರಾಹ್ಮಣನಿಗೆ ದಾನ ಮಾಡಿಬಿಟ್ಟರೆ ಆ ದೇವಸ್ಥಾನದಲ್ಲಿ ಯಾವ ಬ್ರಾಹ್ಮಣ ಪೂಜಾರಿ ಬೇಕಾದರೂ ಪೂಜೆ ಮಾಡಬಹುದು ಎಂದನು. ಹಾಗೆ ಮಾಡಿದರೂ ಯಾರೂ ಪೂಜೆಗೆ ಮುಂದೆ ಬರಲಿಲ್ಲ. ಕೊನೆಗೆ ಉಪಾಯ ಹೇಳಿಕೊಟ್ಟವನೇ ಮುಂದೆ ಬರಬೇಕಾಯಿತು. ರಾಮಕುಮಾರನೇ ಅಲ್ಲಿ ಪೂಜೆಮಾಡುವುದಕ್ಕೆ ಒಪ್ಪಿಕೊಂಡನು. ಜೊತೆಗೆ ರಾಮಕೃಷ್ಣರೂ ಬಂದರು. ಕೆಲವು ವೇಳೆ ಅವರು ಅಣ್ಣನು ಪೂಜೆ ಮಾಡುವುದಕ್ಕೆ ಅಣಿಮಾಡಿಕೊಡುತ್ತಿದ್ದರು. ರಾಣಿ ರಾಸಮಣಿಯ ಹಿರಿಯ ಅಳಿಯ ಮಥುರನಾಥ ಬಿಶ್ವಾಸ್ ಎಂಬವನಿದ್ದನು. ಆತ ವಿದ್ಯಾವಂತ, ಮೇಲ್ವಿಚಾರಣೆ ನೋಡಿಕೊಳ್ಳುವುದರಲ್ಲಿ ತುಂಬಾ ನಿಪುಣ. ರಾಣಿಯ ಆಸ್ತಿಯನ್ನೆಲ್ಲ ಅವನೇ ನೋಡಿಕೊಳ್ಳುತ್ತಿದ್ದನು. ಹಲವು ವೇಳೆ ಆತ ಗುಡಿಗೆ ಬಂದಾಗ ರಾಮಕೃಷ್ಣರು ಅವನ ಕಣ್ಣಿಗೆ ಬೀಳುತ್ತಿದ್ದರು. ನೋಡಿದೊಡನೆಯೆ ಆ ಹುಡುಗನ ಮೇಲೆ ಮಥುರನಾಥನಲ್ಲಿ ಪ್ರೀತಿ ಹುಟ್ಟಿತು. ಹೇಗಾದರೂ ಮಾಡಿ ಆ ಹುಡುಗನನ್ನು ಗುಡಿಯಲ್ಲೇ ನಿಲ್ಲಿಸಬೇಕು. ಆತ ಪೂಜಾರಿಯಾದರೆ ಒಳ್ಳೆಯದಾದೀತು ಎಂದು ಭಾವಿಸಿ ವಿಚಾರಿಸಿದನು. ಆದರೆ ಶ್ರೀರಾಮಕೃಷ್ಣರು ಅದಕ್ಕೆ ಒಪ್ಪಲಿಲ್ಲ. ಕೆಲವು ಕಾಲವಾದ ಮೇಲೆ ರಾಮಕುಮಾರನು ತನ್ನ ಹಳ್ಳಿಗೆ ಹೋದನು. ಪುನಃ ಹಿಂತಿರುಗಿ ಬಂದು ದೇವಿಯ ಪೂಜೆಯನ್ನು ಮಾಡುವ ಸುಯೋಗ ಅವನಿಗೆ ಇರಲಿಲ್ಲ. ಅಲ್ಲಿಯೇ ಕಾಲವಾದನು. ಆ ಸಮಯಕ್ಕೆ ಸರಿಯಾಗಿ ಹೃದಯರಾಮನೆಂಬ ಶ್ರೀರಾಮಕೃಷ್ಣರ ನೆಂಟನೊಬ್ಬನು ದಕ್ಷಿಣೇಶ್ವರಕ್ಕೆ ಜೀವನೋಪಾಯಕ್ಕಾಗಿ ಬಂದನು. ವಯಸ್ಸಿನಲ್ಲಿ ಶ್ರೀರಾಮಕೃಷ್ಣರಿಗಿಂತ ಕೆಲವು ವರುಷ ಕಿರಿಯವನು. ಮಥುರನಾಥ ಮತ್ತೆ ಶ್ರೀರಾಮಕೃಷ್ಣರನ್ನು ಪೂಜೆ ಮಾಡುವಂತೆ ಕೇಳಿಕೊಂಡನು. ಶ್ರೀರಾಮಕೃಷ್ಣರು, "ದೇವಿಗೆ ಬೇಕಾದಷ್ಟು ಒಡವೆ ವಸ್ತ್ರಗಳನ್ನೆಲ್ಲ ಹಾಕಿರುವರು; ಅದು ಕಳೆದುಹೋದರೆ ಪೂಜಾರಿಯ ತಲೆಯ ಮೇಲೆ ಬರುವುದು. ಈ ತರದ ಜವಾಬ್ದಾರಿ ಕೆಲಸ ಬೇಡ" ಎಂದರು. ಹೃದಯನು, "ನಾನು ಜವಾಬ್ದಾರಿ ಕೆಲಸವನ್ನು ನೋಡಿಕೊಳ್ಳುತ್ತೇನೆ, ಶ್ರೀರಾಮಕೃಷ್ಣರು ಪೂಜೆ ಮಾಡಿದರೆ ಸಾಕು" ಎಂದನು. ಶ್ರೀರಾಮಕೃಷ್ಣರು ಪೂಜೆ ಮಾಡುವುದಕ್ಕೆ ಒಪ್ಪಿಕೊಂಡರು. ಶ್ರೀರಾಮಕೃಷ್ಣರ ಜೀವನದಲ್ಲಿ ಮಥುರನಾಥನು ಅತಿ ಮುಖ್ಯವಾದ ಪಾತ್ರವನ್ನು ಪಡೆದನು. ಶ್ರೀರಾಮಕೃಷ್ಣರಿಗೆ ಸಾಧನೆಯ ಸಮಯದಲ್ಲಿ ಬೇಕಾಗುವ ಸೌಕರ್ಯಗಳನ್ನೆಲ್ಲಾ ಒದಗಿಸಿದನು. ಆತ ಶ್ರೀರಾಮಕೃಷ್ಣರನ್ನು ಅತಿ ಪ್ರೀತಿಯಿಂದ ಕಾಣುತ್ತಿದ್ದನು. ತನ್ನ ಇಷ್ಟ ದೈವವೇ ಶ್ರೀರಾಮಕೃಷ್ಣರಾಗಿರುವನು ಎಂದು ಭಾವಿಸಿದನು. ದಕ್ಷಿಣೇಶ್ವರದ ಸನ್ನಿವೇಶ ಶ್ರೀರಾಮಕೃಷ್ಣರ ಜೀವನಕ್ಕೆ ಅತಿಮುಖ್ಯವಾದ ಹಿನ್ನೆಲೆಯಾಯಿತು. ಪೂಜೆಮಾಡುವುದಕ್ಕಿ ಪ್ರಾರಂಭಿಸಿದುದು ಇಲ್ಲಿ. ಅದ್ಭುತ ಸಾಧನೆ ಮಾಡಿದುದು ಇಲ್ಲಿ, ಮಹಾವ್ಯಕ್ತಿಗಳು ಇವರನ್ನು ಸಂದರ್ಶಿಸಲು ಬಂದುದು ಇಲ್ಲಿ. ಸ್ವಾಮಿ ವಿವೇಕಾನಂದರಂತಹ ಶಿಷ್ಯರನ್ನು ತರಬೇತು ಮಾಡಿದುದು ಇಲ್ಲಿ. ಶ್ರೀರಾಮಕೃಷ್ಣರ ಲೀಲಾ ನಾಟಕಕ್ಕೆ ದಕ್ಷಿಣೇಶ್ವರ ಒಂದು ರಂಗಭೂಮಿಯಾಯಿತು. ಪಾವನ ಗಂಗಾನದಿ ಮುಂದೆ ಹರಿಯುತ್ತಿದೆ. ನದಿಯಿಂದ ಬಂದೊಡನೆಯೆ ದೊಡ್ಡ ಸೋಪಾನ ಪಂಕ್ತಿ. ನಂತರ ಎಡಗಡೆ ಬಲಗಡೆ ಆರು ಆರು ಶಿವಮಂದಿರಗಳು. ಅದನ್ನು ದಾಟಿ ಹೋದರೆ ಭವ್ಯವಾದ ಕಾಳಿಕಾ ದೇವಸ್ಥಾನ. ಅದರ ಮುಂದುಗಡೆ ವಿಶಾಲವಾದ ನಾಟ್ಯಮಂದಿರ. ಮತ್ತೊಂದು ಕಡೆ ರಾಧಾಕೃಷ್ಣರ ದೇವಸ್ಥಾನ. ಸುತ್ತಲೂ ವಿಸ್ತಾರವಾದ ಅಂಗಳ. ಅದರ ಹಿಂದೆ ಪ್ರಾಕಾರದ ಸುತ್ತಲೂ ಯತ್ರಿಕರು ಬಂದರೆ ತಂಗಿಕೊಳ್ಳುವುದಕ್ಕೆ ಹಲವಾರು ಕೋಣೆಗಳು ಇವೆ. ಪ್ರಾಕಾರವನ್ನು ದಾಟಿದೊಡನೆ ಗಂಗಾನದಿಯ ತೀರದಲ್ಲಿ ಅತಿ ದಟ್ಟವಾದ ಕಾಡು, ನಿರ್ಜನ ಪ್ರದೇಶ. ಆಧ್ಯಾತ್ಮಿಕ ಸಾಧನೆಯನ್ನು ಮಾಡುವುದಕ್ಕೆ ಯೋಗ್ಯವಾದ ಸ್ಥಳ. ಪರಮಹಂಸರು ಈ ಪಾವನ ಪ್ರದೇಶವನ್ನು ತಮ್ಮ ತಪಸ್ಸಿನಿಂದ ಪಾವನತರ ಮಾಡಿದರು. ಶ್ರೀರಾಮಕೃಷ್ಣರು ಪೂಜಾಕಾರ್ಯವನ್ನು ಆರಂಭಿಸಿದರು. ಬೆಳಗ್ಗೆ ಭಕ್ತಿಯಿಂದ ಕಂಪಿಸುತ್ತ ಗುಡಿಗೆ ಹೋಗುವರು. ದೇವಿಗೆ ಅಲಂಕಾರ ಮಾಡುವರು. ಪೂಜೆ ಮಾಡುವರು, ನೈವೇದ್ಯ ಮಾಡುವರು. ಆದರೆ ಇದರಲ್ಲಿ ಶ್ರೀರಾಮಕೃಷ್ಣರ ಜೀವನ ಕೊನೆಗೊಂಡಿದ್ದರೆ ಅವರು ಒಬ್ಬ ಪೂಜಾರಿ ಮಾತ್ರ ಆಗಿರುತ್ತಿದ್ದರು, ಜಗದ್ವಂದ್ಯ ಶ್ರೀರಾಮಕೃಷ್ಣರು ಆಗುತ್ತಿರಲಿಲ್ಲ. ಶಿಲಾಮೂರ್ತಿಯಲ್ಲಿ ಚೇತನವಿದೆಯೆ? ಆಕೆ ಶಿಲ್ಪಿಗಳು ಕೊರೆದ ವಿಗ್ರಹವೋ ಅಥವಾ ಭಕ್ತರು ಕಂಡ ದರ್ಶನವೋ? ಆಕೆ ಕೇವಲ ಒಂದು ಕಲ್ಪನೆಯ ಕತೆಯೋ ಅಥವಾ ಭಕ್ತರ ಮೊರೆಯನ್ನು ಕೇಳಿ ಅವರನ್ನು ಸದಾ ಉದ್ಧಾರಮಾಡಲು ಕಾದು ಕುಳಿತಿರುವ ಮಹಾ ಶಕ್ತಿ ಚಿಲುಮೆಯೋ? ಈ ಸಮಸ್ಯೆಯನ್ನು ಪರೀಕ್ಷಿಸುವುದಕ್ಕಾಗಿ ತಮ್ಮ ಜೀವನವನ್ನೇ ಪ್ರಯೋಗ ಶಾಲೆಯನ್ನಾಗಿ ಮಾಡಿದರು. ಶ್ರೀರಾಮಕೃಷ್ಣರು ಎಲ್ಲ ಜನರಿಂದ ದೂರವಾದರು. ಅವರದೇ ಆದ ಪ್ರಪಂಚದಲ್ಲಿ ವಿಹರಿಸತೊಡಗಿದರು. ಜಗನ್ಮಾತೆಯನ್ನು ನೋಡಬೇಕೆಂಬ ಆಸೆ ಕಾಡುಗಿಚ್ಚಿನೋಪಾದಿ ಅವರ ಜೀವನವನ್ನೆಲ್ಲ ವ್ಯಾಪಿಸಿತು. ಹಗಲು ಪೂಜೆಮಾಡುವರು, ಕಂಬನಿದುಂಬಿ ಜಗನ್ಮಾತೆಗಾಗಿ ಅತ್ತು ಕರೆಯುವರು : "ಹೇ ತಾಯೆ ! ನೀನು ಎಲ್ಲಿರುವೆ, ಮೈದೋರು, ರಾಮಪ್ರಸಾದ ನಿನ್ನ ದರ್ಶನ ಪಡೆದು ಅನುಗ್ರಹೀತನಾದ. ನಾನೇನು ಪಾಪಿಯೇ ! ನನ್ನ ಬಳಿಗೆ ನೀನೇಕೆ ಬಾರೆ? ನನಗೆ ಸುಖ ಬೇಡ, ಐಶ್ವರ್ಯ ಬೇಡ, ಸ್ನೇಹಿತರು ಬೇಡ, ನನಗೆ ಪ್ರಪಂಚದ ಯಾವ ಭೋಗವೂ ಬೇಡ. ಹೇ ತಾಯೇ, ನಿನ್ನನ್ನು ನೋಡುವುದೊಂದೇ ನನ್ನ ಚರಮಗುರಿ." ದಿನದ ಅಂತ್ಯಸಮಯವನ್ನು ಸೂಚಿಸುವ ಘಂಟಾಧ್ವನಿಯನ್ನು ಕೇಳಿದೊಡನೆಯೆ ಉದ್ವಿಗ್ನರಾಗಿ ಅಳತೊಡಗುವರು : "ತಾಯೆ ಮತ್ತೊಂದು ದಿನ ವ್ಯರ್ಥವಾಯಿತು. ನಾನು ಇನ್ನೂ ನಿನ್ನನ್ನು ಸಂದರ್ಶಿಸಲಿಲ್ಲ. ಈ ಅಲ್ಪಜೀವನದಲ್ಲಿ ಆಗಲೇ ಒಂದು ದಿನ ಕಳೆಯಿತು. ನನಗೆ ಇನ್ನೂ ಸತ್ಯ ಸಾಕ್ಷಾತ್ಕಾರವಾಗಲಿಲ್ಲ." ಬೇಕಾದಷ್ಟು ಅತ್ತರು, ಪ್ರಾರ್ಥಿಸಿದರು, ಧ್ಯಾನಮಾಡಿದರು. ಆದರೂ ದೇವಿ ಮೈದೋರಲಿಲ್ಲ. ಒಂದು ದಿನ ಗರ್ಭಗುಡಿಯೊಳಗೆ ಇರುವಾಗ, ದೇವಿಯ ದರ್ಶನ ಪಡೆಯದ ಬಾಳು ನಿರರ್ಥಕ, ಇದು ಕೊನೆಗಾಣಲಿ ಎಂದು ಬಲಿಕೊಡುವ ಕತ್ತಿಯನ್ನು ತೆಗೆದುಕೊಂಡು ತಮ್ಮ ರುಂಡವನ್ನು ದೇವಿಯ ಅಡಿದಾವರೆಯಲ್ಲಿ ಚಂಡಾಡುವುದರಲ್ಲಿದ್ದರು. ಆಗ ಮಾಯಾ ತೆರೆ ಹಿಂದೆ ಸರಿಯಿತು. ಜಗನ್ಮಾತೆ ಪ್ರತ್ಯಕ್ಷಳಾದಳು. ಸಚ್ಚಿದಾನಂದ ಸ್ವರೂಪಿಣಿಯಲ್ಲಿ ಅವರ ಮನಸ್ಸು ತಲ್ಲೀನವಾಯಿತು. ಬಾಹ್ಯಪ್ರಪಂಚಕ್ಕೆ ಬಂದ ಮೇಲೆ ಅವರ ನಡತೆ ಸಂಪೂರ್ಣ ಬದಲಾಯಿಸಿತು. ಅವರ ಪಾಲಿಗೆ ಕಲ್ಲಿನ ವಿಗ್ರಹ ಮಾಯವಾಗಿ, ಅದೊಂದು ಸಚೇತನ ಮೂರ್ತಿಯಾಯಿತು. ಅಂದಿನಿಂದ ಪೂಜಾ ವಿಧಾನವೇ ಬೇರೆ ರೂಪು ತಾಳಿತು. ದೇವಿ ಅವರು ಕೊಟ್ಟ ನೈವೇದ್ಯವನ್ನು ಊಟ ಮಾಡುತ್ತಿದ್ದಳು. ಮಾಡಿದ ಪೂಜೆಯನ್ನು ಸ್ವೀಕರಿಸುತ್ತಿದ್ದಳು. ಬೇಡಿದ ಪಾರ್ಥನೆಯನ್ನು ಈಡೇರಿಸುತ್ತಿದ್ದಳು. ಮಗು ತಾಯಿಯೊಂದಿಗೆ ಯಾವ ರೀತಿ ಸಲಿಗೆಯಿಂದ ಇರುವುದೋ ಅದೇ ಸಲಿಗೆಯಲ್ಲಿ ಇವರು ಜಗನ್ಮಾತೆಯೊಡನೆ ವರ್ತಿಸುತ್ತಿದ್ದರು. ಜಗನ್ಮಾತೆ ಪ್ರತ್ಯಕ್ಷಳಾದ ನಂತರ ಶ್ರೀರಾಮಕೃಷ್ಣರ ಪೂಜಾ ವಿಧಾನ ಬೇರೆ ರೂಪಕ್ಕೆ ತಿರುಗಿತು. ನೈವೇದ್ಯಕ್ಕೆ ಕೊಟ್ಟದ್ದನ್ನು ಕೆಲವು ವೇಳೆ ತಾವು ಮೊದಲು ರುಚಿ ನೋಡುವರು, ನಂತರ ದೇವಿಗೆ ಅರ್ಪಣೆ ಮಾಡುತ್ತಿದ್ದರು. ಹೂವು, ಗಂಧ, ದೇವಿಗೆ ಅರ್ಪಣೆ ಮಾಡುವುದಕ್ಕೆ ಮುಂಚೆ, ಜಗನ್ಮಾತೆ ತಮ್ಮಲ್ಲಿಯೂ ಇರುವಂತೆ ಭಾಸವಾಗಿ ಅದರಿಂದ ತಮ್ಮನ್ನೇ ಅಲಂಕರಿಸಿಕೊಳ್ಳುತ್ತಿದ್ದರು. ಮಂಗಳಾರತಿಯನ್ನು ಕೆಲವು ವೇಳೆ ಬಹಳ ಹೊತ್ತು ಮಾಡುತ್ತಿದ್ದರು. ಕೆಲವು ವೇಳೆ ಬಹಳ ಬೇಗ ಪೂರೈಸುವರು. ಸಾಮಾನ್ಯ ಜನರು ಅವರನ್ನು ಹುಚ್ಚು ಪೂಜಾರಿಯೆಂದು ಕರೆಯತೊಡಗಿದರು. ಸಾಧಾರಣವಾಗಿ ಮನುಷ್ಯರು ಮತ್ತೊಬ್ಬರನ್ನು ಅಳೆಯುವ ರೀತಿಯೇ ಹೀಗೆ. ಯಾರು ತಮ್ಮಂತೆ ಇಲ್ಲವೋ ಅವರೆಲ್ಲ ಹುಚ್ಚರು. ತಮಗೆ ಮಾತ್ರ ಬುದ್ಧಿ ಸ್ಥಿಮಿತವಾಗಿರುವುದೆಂದು ಭಾವಿಸುವರು. ದೇವಸ್ಥಾನದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ ಮಥುರನಾಥನಿಗೂ ಈ ಸುದ್ದಿ ತಿಳಿಯಿತು. ಆತನಿಗೆ ಮೊದಲಿನಿಂದಲೂ ಶ್ರೀರಾಮಕೃಷ್ಣರ ಮೇಲೆ ಗೌರವ. ಇದನ್ನು ಕೇಳಿ ಅತಿ ವ್ಯಾಕುಲಿತನಾಗಿ ತಾನೆ ಬಂದು ಇದನ್ನು ನೋಡುವವರೆಗೂ ಯಾರೂ ಇವರಿಗೆ ತೊಂದರೆಯನ್ನು ಕೊಡಕೂಡದೆಂದು ಹೇಳಿಕಳುಹಿಸಿದನು. ಒಂದು ದಿನ ಅವನೇ ಬಂದು ಇವರ ಪೂಜಾವಿಧಾನವನ್ನು ನೋಡಿದನು. ಇದು ಹುಚ್ಚಲ್ಲ, ದೈವೋನ್ಮಾದವೆಂದು ತಿಳಿದು ಯಾರೂ ಅವರಿಗೆ ತೊಂದರೆ ಕೊಡದಂತೆ ಎಚ್ಚರಿಸಿ ಹೋದನು. ಒಂದು ದಿನ ರಾಣಿ ರಾಸಮಣಿ ಶ್ರೀರಾಮಕೃಷ್ಣರು ಪೂಜೆ ಮಾಡುತ್ತಿದ್ದಾಗ ಬಂದಳು. ಪೂಜೆಯಾದ ಮೇಲೆ ರಾಮಕೃಷ್ಣರನ್ನು ಒಂದೆರಡು ಭಕ್ತಿಯ ಹಾಡನ್ನು ಹಾಡುವಂತೆ ಕೇಳಿಕೊಂಡಳು. ಶ್ರೀರಾಮಕೃಷ್ಣರು ಹಾಡುತ್ತಿರುವಾಗ ಆಕೆಯ ಮನಸ್ಸು ಹಾಡಿನ ಮೇಲೆ ಇರಲಿಲ್ಲ. ಯಾವುದೊ ಒಂದು ಮೊಕದ್ದಮೆಯ ವಿಷಯವನ್ನು ಚಿಂತಿಸುತ್ತಿತ್ತು. ಶ್ರೀರಾಮಕೃಷ್ಣರು ಇದನ್ನು ಗ್ರಹಿಸಿ ಆಕೆಯ ಹತ್ತಿರ ಹೋಗಿ "ಇಲ್ಲಿಯೂ ಪ್ರಾಪಂಚಿಕ ಚಿಂತನೆಯೆ?" ಎಂದು ಕೆನ್ನೆಗೆ ಏಟು ಕೊಟ್ಟರು. ರಾಣಿ ರಾಸಮಣಿ ತನ್ನ ತಪ್ಪನ್ನು ಒಪ್ಪಿಕೊಂಡು ಕುಪಿತಳಾಗದೆ, ಜಗನ್ಮಾತೆಯೇ ತನಗೆ ಈ ರೀತಿ ಶಿಕ್ಷಿಸಿದಳೆಂದು ಭಾವಿಸಿದಳು. ಅದರ ಇಂತಹ ಕೆಲವು ದೃಶ್ಯಗಳನ್ನು ಕಂಡ ಇತರರು ಶ್ರೀರಾಮಕೃಷ್ಣರು ನಿಜವಾಗಿ ಹುಚ್ಚರೆಂದು ಭಾವಿಸಿದರು. ಆದರೆ ರಾಣಿಗೆ ಇವರೊಬ್ಬ ಮಹಾಭಕ್ತರೆಂದು ಗೊತ್ತಾಯಿತು. ವಜ್ರದ ವ್ಯಾಪಾರಿಗೆ ಮಾತ್ರ ವಜ್ರ ಯಾವುದು, ಗಾಜಿನ ಚೂರು ಯಾವುದು ಎಂಬುದು ಗೊತ್ತಾಗುವುದು. ರಾಣಿ ರಾಸಮಣಿ, ಮಥುರನಾಥ ಇವರಿಬ್ಬರೂ ಶ್ರೀರಾಮಕೃಷ್ಣರ ಜೀವನದಲ್ಲಿ ಮುಖ್ಯ ಪಾತ್ರವನ್ನು ಪಡೆದಿರುವರು ಎಂಬುದನ್ನು ಆಗಲೇ ತಿಳಿಸಿರುವೆವು. ಅವರಿಗೂ ರಾಮಕೃಷ್ಣರಿಗೂ ಸಂಬಂಧಪಟ್ಟ ಒಂದೆರಡು ಘಟನೆಗಳಿಂದ ಪರಮಹಂಸರ ವ್ಯಕ್ತಿತ್ವ ಇನ್ನೂ ಹೆಚ್ಚು ಪ್ರಕಾಶಕ್ಕೆ ಬರುವುದನ್ನು ನೋಡುತ್ತೇವೆ. ಒಂದು ದಿನ ರಾಧಾಕೃಷ್ಣನ ದೇವಸ್ಥಾನದಲ್ಲಿ ರಾಧಾರಮಣನ ವಿಗ್ರಹದ ಕಾಲು ಪೂಜಾರಿಯ ಅಜಾಗರೂಕತೆಯಿಂದ ಮುರಿದು ಹೋಯಿತು. ಭಿನ್ನವಾದ ವಿಗ್ರಹವನ್ನು ಪೂಜಿಸುವುದು ಅಶಾಸ್ತ್ರೀಯವೆಂದು ಪಂಡಿತರು ಸಾರಿದರು. ಇಷ್ಟು ದಿನವೂ ಪೂಜಿಸುತ್ತಿದ್ದ ಆ ವಿಗ್ರಹವನ್ನು ತೆಗೆದಿಡಲು ರಾಣಿಯ ಮನಸ್ಸು ಒಪ್ಪಲಿಲ್ಲ. ಹೀಗೆ ವ್ಯಾಕುಲದಲ್ಲಿರುವಾಗ ಶ್ರೀರಾಮಕೃಷ್ಣರು ಹೀಗೆ ಹೇಳಿದರು: "ನಿನ್ನ ಅಳಿಯ ಮಥುರನಾಥನಿಗೆ ಕಾಲು ಮುರಿದುಹೋದರೆ ಅವನನ್ನು ನೀನು ಹೊರಗೆ ಕಳುಹಿಸಿ ಬೇರೆ ಅಳಿಯನನ್ನು ಬರಮಾಡಿಕೊಳ್ಳುವೆಯಾ? ಅದರಂತೆಯೇ ವಿಗ್ರಹವನ್ನು ಸರಿಮಾಡಿ ಉಪಯೋಗಿಸಬಹುದು" ಎಂದರು. ಯಾವ ಶಾಸ್ತ್ರವೂ ಬಗೆಹರಿಸದ ಒಂದು ಸಮಸ್ಯೆಯನ್ನು ಶ್ರೀರಾಮಕೃಷ್ಣರು ಪ್ರಪಂಚದಿಂದ ಆರಿಸಿಕೊಂಡ ಒಂದು ಉಪಮಾನದ ಮೂಲಕ ಬಗೆಹರಿಸಿದರು. ಶ್ರೀರಾಮಕೃಷ್ಣರು ಪೂಜೆಗೆ ಒಂದು ದಿನ ಹೂವನ್ನು ಕೊಯ್ಯಲು ಹೋದಾಗ ಆ ಹೂವುಗಳೆಲ್ಲಾ ಆಗತಾನೇ ವಿರಾಟ್ ಸ್ವರೂಪಿ ಭಗವಂತನಿಗೆ ಅರ್ಪಿತವಾದಂತೆ ಭಾಸವಾಯಿತು. ಪ್ರತಿಯೊಂದು ಹೂವಿನ ಗಿಡವೂ ಅವನ ಕೈಯಲ್ಲಿರುವ ತುರಾಯಿಯಂತೆ ಕಂಡಿತು. ಅಂದಿನಿಂದ ಬಾಹ್ಯಪೂಜೆ ಮಾಡುವುದನ್ನು ಬಿಟ್ಟರು. ಹೃದಯನೆ ಈ ಕೆಲಸವನ್ನು ಕೈಗೊಂಡನು. ಮಥುರನಾಥನು ಒಂದು ದಿನ ಶ್ರೀರಾಮಕೃಷ್ಣರೊಡನೆ ಮಾತನಾಡುತ್ತಿದ್ದಾಗ "ದೇವರೂ ಕೂಡ ನಿಯಮವನ್ನು ಮೀರಲಾರ" ಎಂದನು. ಅಗ ಶ್ರೀರಾಮಕೃಷ್ಣರು ದೇವರಿಗೆ ಎಲ್ಲವೂ ಸಾಧ್ಯವೆಂದರು. ಮಥುರನಾಥನು "ಹಾಗಾದರೆ ಬಿಳಿ ದಾಸವಾಳದ ಹೂವು ಬಿಡುವ ಗಿಡದಲ್ಲಿ ಕೆಂಪು ಹೂವು ಬಿಡಬಲ್ಲದೆ?" ಎಂದು ಕೇಳಿದನು. ಶ್ರೀರಾಮಕೃಷ್ಣರು, "ಅವನ ಇಚ್ಛೆಯಾದರೆ ಬಿಡದೆ ಏನು?" ಎಂದರು. ಮಾರನೆದಿನ ತೋಟದಲ್ಲಿ ಹೋಗುತ್ತಿದ್ದಾಗ ಬಿಳಿ ದಾಸವಾಳದ ಗಿಡದಲ್ಲಿ ಒಂದು ಅಪರೂಪವಾಗಿ ಕೆಂಪು ದಾಸವಾಳ ಬಿಟ್ಟಿರುವುದನ್ನು ನೋಡಿದರು. ಅದನ್ನು ಮಥುರನಾಥನಿಗೆ ತೋರಿಸಿ, "ನೋಡು ದೇವರಿಗೆ ಯಾವುದು ಅಸಾಧ್ಯ?" ಎಂದರು. ಮಥುರನು, "ಅಬ್ಬ, ನಿಮ್ಮ ಹತ್ತಿರ ಮಾತನಾಡುವುದು ತುಂಬಾ ಕಷ್ಟ!" ಎಂದು ತೆಪ್ಪಗಾದನು. ಮತ್ತೊಂದು ದಿನ ದೇವಸ್ಥಾನಕ್ಕೆ ಕಳ್ಳರು ನುಗ್ಗಿ ವಿಗ್ರಹದ ಮೇಲಿದ್ದ ಒಡವೆಗಳನ್ನೆಲ್ಲಾ ಅಪಹರಿಸಿದರು. ಮಥುರನು ಇದನ್ನು ಕೇಳಿ ಅತಿ ವ್ಯಾಕುಲನಾಗಿ ಶ್ರೀರಾಮಕೃಷ್ಣರ ಹತ್ತಿರ ಬಂದು, "ಏನು ದೇವರು ತನ್ನ ಮೇಲಿರುವ ಒಡವೆಗಳನ್ನು ಕೂಡ ಕಳ್ಳರಿಂದ ಕಾಪಾಡಿಕೊಳ್ಳಲಾರದೆ ಹೋದನಲ್ಲ" ಎಂದನು. ಇದನ್ನು ಕೇಳಿ ಶ್ರೀರಾಮಕೃಷ್ಣರು, "ಓ ! ಏನು ಮಾತನಾಡುವೆ. ನಿನಗೆ ಅದು ಬೆಲೆಬಾಳುವ ಒಡವೆ. ದೇವರಿಗೆ ಅದು ಮಣ್ಣಿಗೆ ಸಮಾನ. ದೇವರ ಮನೆಬಾಗಿಲನ್ನು ಕುಬೇರ ಕಾಯುತ್ತಿರುವಾಗ ನಿನ್ನ ಒಂದೆರಡು ಒಡವೆ ಮತ್ತಾರೋ ಹೊತ್ತುಕೊಂಡು ಹೋದರೆ ಅದನ್ನು ದೇವರು ಗಮನಿಸುವನೇ?" ಎಂದರು. ಸಾಧಾರಣ ಮನುಷ್ಯರು ದೇವರ ಮಹಾತ್ಮೆಯನ್ನು ಅಳೆಯುವುದು ಹೀಗೆ. ಆ ಒಡವೆ ತೆಗೆದುಕೊಂಡು ಹೋಗುವ ಸಮಯದಲ್ಲಿ ಕಳ್ಳನೇನಾದರೂ ರಕ್ತಕಾರಿ ಸತ್ತಿದ್ದರೆ, ಪರವಾಗಿಲ್ಲ, ದೇವರಲ್ಲಿ ಏನೋ ಸತ್ಯವಿದೆ ಎನ್ನುವರು. ಏನೂ ಆಗದೆ ಹೋದರೆ, ಅಯ್ಯೋ ಮಹಾತ್ಮೆಯನ್ನು ಏನು ಇದೆ! ಎನ್ನುವರು. ದೇವರಿಗೆ ಸತ್ಪುರುಷ ಹೇಗೆ ಒಬ್ಬ ಮಗನೋ ಹಾಗೆಯೇ ಕಳ್ಳನೂ ಒಬ್ಬ ಮಗ ಎಂಬ ಭಾವ ಬರಬೇಕಾದರ ಜೀವ ತುಂಬಾ ಮುಂದುವರಿದಿರಬೇಕು. ಶ್ರೀರಾಮಕೃಷ್ಣರು ಅಸಾಧಾರಣ ರೀತಿಯಲ್ಲಿ ವ್ಯವಹರಿಸುತ್ತ ಇದ್ದುದು ಸಾಧಾರಣ ಜನರಿಗೆ ಗೊತ್ತಾಗಲಿಲ್ಲ. ಇವರು ಹುಚ್ಚರಾಗಿ ಹೋಗಿರುವರು ಎಂಬ ಸುದ್ದಿ ಸುತ್ತಲೂ ಹಬ್ಬಿತು. ಇದು ಕಾಮಾರಪುಕುರಕ್ಕೂ ಮುಟ್ಟಿತು. ಶ್ರೀರಾಮಕೃಷ್ಣರ ತಾಯಿ ಚಂದ್ರಮಣಿದೇವಿ 1859ರಲ್ಲಿ ಮಗನನ್ನು ಕಾಮಾರಪುಕುರಕ್ಕೆ ಕರೆಸಿಕೊಂಡರು. ಔಷಧೋಪಚಾರ, ಯಂತ್ರಮಂತ್ರಗಳೆಲ್ಲವನ್ನೂ ಮಾಡಿಸಿದರು. ಆದರೆ ಇವರ ಹುಚ್ಚು ಮಾಯವಾಗುವ ರೀತಿ ಕಾಣಲಿಲ್ಲ. ಪರಮಹಂಸರೆ ಒಂದು ಸಲ ಹಾಸ್ಯವಾಗಿ, ಬೇಕಾದರೆ ನನಗೆ ರೋಗವಿದ್ದರೆ ಗುಣಮಾಡಿ. ಆದರೆ ದೇವರ ಹುಚ್ಚನ್ನು ಮಾತ್ರ ಬಿಡಿಸಬೇಡಿ ಎಂದರು. ಯಾರೋ ಚಂದ್ರಮಣಿದೇವಿಗೆ ಮಗನಿಗೆ ಮದುವೆ ಮಾಡಿದರೆ ಹುಚ್ಚು ಬಿಟ್ಟು ಹೋಗುವುದೆಂದು ಹೇಳಿದರು. ಹೆಣ್ಣಿಗೆ ಬೇಕಾದಷ್ಟು ಹುಡುಕತೊಡಗಿದರು. ಸುಮಾರು ಮೂರು ಮೈಲಿ ದೂರದ ಜಯರಾಮಬಟಿ ಎಂಬ ಗ್ರಾಮದಲ್ಲಿ ರಾಮಚಂದ್ರ ಮುಖ್ಯೋಪಾಧ್ಯಾಯರ ಮನೆಯಲ್ಲಿ ಐದು ವರ್ಷದ ಒಂದು ಹೆಣ್ಣು ಮಗು ಸಿಕ್ಕಿತು. ಆಗ ಶ್ರೀರಾಮಕೃಷ್ಣರಿಗೆ 23 ವರ್ಷ ವಯಸ್ಸು. ವಧುವರರಿಗೆ ಅಂತರ ಹದಿನೆಂಟು ವರುಷ! ಅಂತೂ ಮದುವೆಯಾಯಿತು. ಈ ಮದುವೆಯ ಗುರಿ ಶ್ರೀರಾಮಕೃಷ್ಣರಿಗೆ ಹಿಡಿದ ದೇವರ ಹುಚ್ಚನ್ನು ಬಿಡಿಸುವುದು. ಆದರೆ ಇವರ ಭವಿಷ್ಯ ಜೀವನ, ಮದುವೆ ಮಾಡಿದ ಉದ್ದೇಶ ಸಫಲವಾಗಲಿಲ್ಲವೆಂಬುದಕ್ಕೆ ಉದಾಹರಣೆಯಾಗಿದೆ. ಮದುವೆಯಾದ ಕೆಲವು ತಿಂಗಳ ಮೇಲೆ ಶ್ರೀರಾಮಕೃಷ್ಣರು ದಕ್ಷಿಣೇಶ್ವರಕ್ಕೆ ಹಿಂದಿರುಗಿದರು. ಆಧ್ಯಾತ್ಮಿಕ ಘಟನಾವಳಿಗಳ ಮಧ್ಯದಲ್ಲಿ ಇವರ ಜೀವನ ಸಿಲುಕಿ ಸುಂಟರಗಾಳಿಯಲ್ಲಿ ಸುತ್ತುವ ತರಗಲೆಯಂತೆ ಆಯಿತು. ಧ್ಯಾನಕ್ಕೆ ಕುಳಿತರೆಂದರೆ ಶಿಲಾವಿಗ್ರಹದಂತೆ ಆಗುತ್ತಿದ್ದರು. ಇವರ ಅಚಲ ದೇಹವ ನೋಡಿ ಹಕ್ಕಿಗಳು ನಿರ್ಭಯವಾಗಿ ಅದರ ಮೇಲೆ ಕುಳಿತುಕೊಳ್ಳುತ್ತಿದ್ದವು. ಶ್ರೀರಾಮಕೃಷ್ಣರು ದೇವಿಯ ದರ್ಶನವನ್ನೇನೋ ಪಡೆದಿದ್ದರು. ಆದರೆ ಅದರಲ್ಲಿ ತೃಪ್ತರಾಗಲಿಲ್ಲ. ದೇವರನ್ನು ಎಷ್ಟೆಷ್ಟು ರೂಪಿನಲ್ಲಿ ನೋಡಲು ಸಾಧ್ಯವೊ ಅಷ್ಟು ರೂಪಿನಲ್ಲೆಲ್ಲಾ ನೋಡಲು ಬಯಸಿದರು. ಹಲವು ಭಾವಗಳ ಮೂಲಕ ಅವನನ್ನು ಪ್ರೀತಿಸಿದರು. ಹಲವು ಸಾಧನೆಗಳನ್ನು ಮಾಡಿದರು. ಹಲವು ಧರ್ಮಗಳನ್ನು ಅನುಷ್ಠಾನ ಮಾಡಿದರು. ಹಲವು ದಾರಿಗಳಲ್ಲಿ ನಡೆದು ಒಂದೇ ಸತ್ಯದೆಡೆಗೆ ಬಂದರು. ಸತ್ಯದೇಗುಲಕ್ಕೆ ಬರುವುದಕ್ಕೆ ಅನಂತ ಬಾಗಿಲುಗಳಿವೆ ಎಂಬುದು ಅವರ ಅನುಭವದ ಆಳದಿಂದ ಬಂದ ಮಾತು, ಕೇವಲ ತರ್ಕದ ಗರಡಿಯಿಂದ ಬಂದುದಲ್ಲ. ಎಲ್ಲಾ ಧರ್ಮಗಳಲ್ಲಿರುವ ಏಕಮಾತ್ರ ಸತ್ಯದ ಅನುಭವ ಇವರಿಗೆ ಕರಗತವಾದುದರಿಂದ ಇವರು ಯಾರನ್ನೂ ದೂರುತ್ತಿರಲಿಲ್ಲ. ಯಾವ ಧರ್ಮವನ್ನೂ ತಾತ್ಸಾರದಿಂದ ಕಾಣುತ್ತಿರಲಿಲ್ಲ." ಶ್ರೀರಾಮಕೃಷ್ಣರ ಸಾಧನೆಯಲ್ಲಿ ಒಂದು ವೈಶಿಷ್ಟ್ಯವನ್ನು ನೋಡುತ್ತೇವೆ. ಇವರು ಗುರುಗಳನ್ನು ಹುಡುಕಿಕೊಂಡು ಹೋಗಬೇಕಾಗಿರಲಿಲ್ಲ. ಗುರುಗಳು ಇವರಿದ್ದೆಡೆಗೆ ಬಂದರು. ಒಂದೊಂದು ಸಾಧನೆಗೂ ಆಯಾ ಪಥದಲ್ಲಿ ನುರಿತ ಗುರುವೊಬ್ಬರು ಹೇಗೋ ಇವರ ಸಮೀಪಕ್ಕೆ ಆಕರ್ಷಿಸಲ್ಪಟ್ಟು ಇವರನ್ನು ಮುಂದಕ್ಕೆ ಕರೆದುಕೊಂಡು ಹೋಗುವರು. ಶಾಕ್ತ ಮತ್ತು ವೈಷ್ಣವ ಸಾಧನೆಗಳು ಭೈರವಿ ಬ್ರಾಹ್ಮಣಿ ಎಂಬ ಘನ ವಿದುಷಿಯ ನೇತೃತ್ವದಲ್ಲಿ ನಡೆಯಿತು. ಅಕೆ ಇಂತಹ ಸಾಧಕನೊಬ್ಬನು ಸಿಕ್ಕಿಯಾನೇ ಎಂದು ಹುಡುಕುತ್ತಿದ್ದಾಗ, ಶ್ರೀರಾಮಕೃಷ್ಣರು ಅವರಿಗೆ ಗೋಚರಿಸಿದರು. ವಾತ್ಸಲ್ಯಭಾವ ಸಾಧನೆಗೆ ಜಟಾಧಾರಿಯೆಂಬ ಒಬ್ಬ ರಾಮಭಕ್ತನ ಪರಿಚಯವಾಯಿತು. ಅದ್ವೈತ ಸಾಧನೆಗೆ ತೋತಾಪುರಿ ಎಂಬ ಸನ್ಯಾಸಿಯ ಸಹಾಯ ದೊರಕಿತು. ಕ್ರೈಸ್ತ ಮತ್ತು ಮಹಮ್ಮದೀಯ ಸಾಧನೆಗಳಿಗೆ ಆಯಾ ಮತದ ಅತ್ಯುತ್ತಮ ಪ್ರತಿನಿಧಿಗಳ ಸಹಾಯ ದೊರಕಿತು. ಘನ ವಿದ್ವಾಂಸರು ಇವರ ಸಮೀಪಕ್ಕೆ ಬಂದರು. ಅತಿ ಮುಂದುವರಿದ ಸಾಧಕರು ಇವರ ಸಮೀಪಕ್ಕೆ ಬಂದರು. ಎಲ್ಲರಿಂದಲೂ ಶ್ರೀರಾಮಕೃಷ್ಣರು ಕೆಲವು ವಿಷಯಗಳನ್ನು ಕಲಿತರು. "ನಾನು ಎಲ್ಲಿಯವರೆಗೂ ಬದುಕಿರುವೆನೊ ಅಲ್ಲಿಯವರೆಗೂ ಹೊಸದಾಗಿ ಕಲಿಯುತ್ತೇನೆ" ಎನ್ನುತ್ತಿದ್ದರು. ಈ ದೈನ್ಯವನ್ನು ಕೊನೆಯ ತನಕ ಶ್ರೀರಾಮಕೃಷ್ಣರಲ್ಲಿ ಕಾಣುತ್ತೇವೆ. ಶ್ರೀರಾಮಕೃಷ್ಣರು ತಮ್ಮದೇ ಆದ ಸರಳ ರೀತಿಯಲ್ಲಿ ಭಗವಂತನಿಗೂ ಭಕ್ತನಿಗೂ ಮಧ್ಯೆ ಇರುವ ತೊಡರುಗಳನ್ನು ಭೇದಿಸಲು ಮೊದಲು ಮಾಡಿದರು. ದ್ರವ್ಯದ ಮೇಲಿರುವ ಆಸೆ ಸಂಪೂರ್ಣ ತೊಲಗುವಂತೆ ಒಂದು ಕೈಯಲ್ಲಿ ರೂಪಾಯಿಯನ್ನು ಮತ್ತೊಂದು ಕೈಯಲ್ಲಿ ಮಣ್ಣನ್ನು ತೆಗೆದುಕೊಂಡು ಗಂಗಾನದಿ ತೀರದ ಮೇಲೆ ಕುಳಿತು ಹಣವನ್ನು ನೋಡಿ, ಮತ್ತೊಂದು ಕೈಯಲ್ಲಿರುವ ಮಣ್ಣಿಗಿಂತ ಇದು ಮೇಲಲ್ಲ, ಇದು ದೇವರ ಸಮೀಪಕ್ಕೆ ಕರೆದುಕೊಂಡು ಹೋಗುವುದಕ್ಕೆ ಬದಲಾಗಿ ಲೋಭಮಾರ್ಗದಲ್ಲಿ ಸಿಲುಕಿಸುವುದು ಎಂದು ತರ್ಕಿಸಿ ಎರಡನ್ನೂ ನೀರಿಗೆ ಬಿಸಾಡುತ್ತಿದ್ದರು. ಇವರು ಯಾವುದನ್ನು ಧಿಕ್ಕರಿಸಿದ್ದರೋ ಅದನ್ನು ಇವರ ಇಡೀ ದೇಹದ ಅಂಗೋಪಾಂಗಗಳು ಧಿಕ್ಕರಿಸಿದ್ದವು. ಮನಸ್ಸಿಗೆ ಅರಿವಾಗದೆ ದೇಹಕ್ಕೆ ಸೋಂಕಿದರೂ ಚೇಳು ಕುಟುಕಿದಂತೆ ಆಗಿ ಅದನ್ನು ಹತ್ತಿರಕ್ಕೆ ಸೇರಿಸುತ್ತಿರಲಿಲ್ಲ. ಇದರಂತೆ ಕಾಮಿನಿಯೂ ಕೂಡ. ಶ್ರೀರಾಮಕೃಷ್ಣರು ಹೆಂಗಸರನ್ನು ದೂರದೇ ಅವರನ್ನು ಕಾಮದೃಷ್ಟಿಯಿಂದ ನೋಡುವುದನ್ನು ಬಿಟ್ಟರು. ಎಲ್ಲರಲ್ಲೂ ಜಗನ್ಮಾತೆಯೇ ಹಲವು ರೂಪಿನಿಂದ ಕಾಣುತ್ತಿರುವಳೆಂದು ಇಡೀ ಸ್ತ್ರೀ ಕುಲವನ್ನೆ ಪೂಜ್ಯ ದೃಷ್ಟಿಯಿಂದ ನೋಡುತ್ತಿದ್ದರು. ಉಚ್ಚ ಬ್ರಾಹ್ಮಣ ಕುಲದಿಂದ ಬಂದವನು ತಾನೆಂಬ ಅಹಂಕಾರವನ್ನು ಅಳಿಸುವುದಕ್ಕಾಗಿ ಚಂಡಾಲನ ಮನೆಯನ್ನು ಕೂಡ ಇವರು ಗುಡಿಸಿದರು. ಮಾನವನು ಯಾವ ಯಾವ ಭಾವದ ಮೂಲಕ ಮತ್ತೊಬ್ಬ ಮಾನವನನ್ನು ಪ್ರೀತಿಸಬಹುದೊ ಆ ಭಾವಗಳೆಲ್ಲದರ ಮೂಲಕ ದೇವರನ್ನು ಪ್ರೀತಿಸಬಹುದು. ಪ್ರೀತಿಯು ಭಕ್ತ ಮತ್ತು ಭಗವಂತನನ್ನು ಬಂಧಿಸುವ ಒಂದು ಮಧುರ ಬಂಧನ. ಎಲ್ಲಿಯವರೆಗೂ ನಾವು ಮಾನವರೋ ಅಲ್ಲಿಯವರೆಗೆ ಮಾನವಸಹಜ ಪ್ರೀತಿಯ ಮೂಲಕ ಮಾತ್ರ ದೇವರನ್ನು ಪ್ರೀತಿಸಬಲ್ಲೆವು. ಇಂತಹ ಪ್ರೀತಿಯಲ್ಲಿ ಐದು ಮುಖ್ಯ ಭಾವಗಳಿವೆ. ಶಾಂತಭಾವ, ಇದರಲ್ಲಿ ದೇವರನ್ನು ತಂದೆ ಅಥವಾ ತಾಯಿಯಂತೆ ಭಾವಿಸಬಹುದು. ಜೀವನದಲ್ಲಿ ಮಗುವಿಗೆ ತಂದೆತಾಯಿಗಳಷ್ಟು ಅಭಯವನ್ನು ಕೊಡುವವರು ಮತ್ತಾರೂ ದೊರಕಲಾರರು. ಅವರಲ್ಲಿರುವಷ್ಟು ಸಲಿಗೆ ಮತ್ತಾರಲ್ಲಿಯೂ ಇರಲಾರದು. ಇಡೀ ಬ್ರಹ್ಮಾಂಡ ಅವನಿಂದ ಬಂದಿದೆ. ನಮ್ಮನ್ನು ದುಃಖ ಸಂಕಟಗಳಿಂದ ಪಾರು ಮಾಡುವ ಮಹಾಶಕ್ತಿಗಣಿಯಾಗಿರುವನು ಅವನು. ಆದಕಾರಣವೇ ಅವನನ್ನು ತಂದೆ ಅಥವಾ ತಾಯಿ ಎಂದು ಕರೆಯುವುದು. ಶ್ರೀರಾಮಕೃಷ್ಣರು ಮುಕ್ಕಾಲುಪಾಲು ತಮ್ಮ ಭವಜೀವನವನ್ನು ಕಳೆಯುತ್ತಿದ್ದುದು ಜಗನ್ಮಾತೆಯನ್ನು ನೆಚ್ಚಿಕೊಂಡಿರುವ ಮಗುವಿನಂತೆ. ದೇವರನ್ನು ಕೆಲವು ವೇಳೆ ತಂದೆಯೆಂತಲೂ ಕರೆದರು. ದಾಸ್ಯಭಾವದಲ್ಲಿ ಭಗವಂತ ಸ್ವಾಮಿಯಾಗುವನು. ಭಕ್ತ ಅವನ ಆಣತಿಯನ್ನು ಪರಿಪಾಲಿಸುವ ಪಾಲಿಸುವ ಭೃತ್ಯನಾಗುವನು. ಭಕ್ತನಿಗೆ ತನಗಾಗಿ ಏನನ್ನೂ ಸಾಧಿಸಬೇಕೆಂಬ ಆಸೆ ಇರುವುದಿಲ್ಲ. ಅವನಿಗೆ, ಸ್ವಾಮಿಯ ಹಿತ ತನ್ನ ಹಿತ, ಸ್ವಾಮಿಯ ಇಷ್ಟ ತನ್ನ ಇಷ್ಟ, ಸ್ವಾಮಿಯ ಜಯ ತನ್ನ ಜಯ. ಈ ಭೃತ್ಯಭಾವದಲ್ಲಿರಬೇಕಾದರೆ ಅಹಂಕಾರ ಸಂಪೂರ್ಣ ನಾಶವಾಗಿರಬೇಕು. ಆಗ ಮಾತ್ರ ಎಲ್ಲ ಭಗವಂತನಿಗಾಗಿ ಎಂಬ ಮಧುರಗಾನಪಲ್ಲವಿ ಅವನ ಜೀವನದಿಂದ ಹೊರಹೊಮ್ಮುವುದು. ಹನುಮಂತನು ಶ್ರೀರಾಮಚಂದ್ರನನ್ನು ನೋಡುತ್ತಿದ್ದುದು ಹೀಗೆ. ಹನುಮಂತನಿಗೆ ರಾಮ ಇಷ್ಟದೇವನಾಗುವನು. ಶ್ರೀರಾಮನ ಆಣತಿಯನ್ನು ಪರಿಪಾಲಿಸುವುದೊಂದೇ ಇವನ ಜೀವನದ ಮಹೋದ್ದೇಶ. ಅದಕ್ಕಾಗಿ ತನ್ನ ಸರ್ವಸ್ವವನ್ನೂ ಧಾರೆ ಎರೆಯುವನು. ವೀರಾಧಿವೀರನಾದರೂ ರಾಮಾಯಣದಲ್ಲಿ ಬರುವ ಹನುಮಂತ ನಿಗರ್ವಿ, ವಿನಯಶಾಲಿ. ಅಶೋಕವನದಲ್ಲಿ ದುಃಖದಿಂದ ಕೊರಗುತ್ತಿದ್ದ ಸೀತಾದೇವಿಯನ್ನು ನೋಡಲು ಹೋದಾಗ ಶ್ರೀರಾಮಚಂದ್ರನ ಸುದ್ದಿಯನ್ನು ಅವಳಿಗೆ ಹೇಳಿದನು. ಇನ್ನೇನು ಶ್ರೀರಾಮನು ಬೇಗ ಬರುವನು, ನಿನ್ನನ್ನು ಸೆರೆಯಿಂದ ಬಿಡಿಸುವನು' ಎಂದು ಧೈರ್ಯ ಹೇಳಿದನು. ಆದರೆ ಸೀತೆಗೆ ರಾಮನ ಜೊತೆಯಲ್ಲಿ ಬರುವವರ ಸಾಹಸದಲ್ಲಿ ನಂಬಿಕೆ ಇರಲಿಲ್ಲ. ಆಕೆಗೆ ಹನುಮಂತ, ಸುಗ್ರೀವನ ಸೈನ್ಯದಲ್ಲಿ ತಾನೇ ಕೊನೆಯವನೆಂದು ಹೇಳುತ್ತಾನೆ. ಯಾರು ವೀರಾಧಿವೀರನೋ, ಜಗಜಟ್ಟಿಯೋ, ಅಂತಹವನು ಹಾಗೆ ಹೇಳಿಕೊಳ್ಳಬೇಕಾದರೆ ಅಹಂಕಾರದಿಂದ ಆ ವ್ಯಕ್ತಿ ಎಷ್ಟು ಪಾರಾಗಿರುವನು ಎಂಬುದನ್ನು ಊಹಿಸಬಹುದು. ಪರಮಹಂಸರು ದಾಸ್ಯಭಾವವನ್ನು ಹನುಮಂತನಂತೆ ಅಭ್ಯಾಸ ಮಾಡಿದರು; ಗೆಡ್ಡೆ ಗೆಣಸುಗಳನ್ನು ತಿಂದು, ಮರದ ಮೇಲೆ ನೆಗೆದಾಡುತ್ತಿದ್ದರಂತೆ ಆ ಕಾಲದಲ್ಲಿ. ಶ್ರೀರಾಮ ಮತ್ತು ಸೀತಾದೇವಿಯ ದರ್ಶನವನ್ನು ಆ ಭಾವದಲ್ಲಿ ಇದ್ದಾಗ ಪಡೆದರು. ಸಖ್ಯಭಾವದಲ್ಲಿ ಭಕ್ತನಿಗೆ ಭಗವಂತನೊಡನೆ ಒಂದು ನಿಕಟತೆ ಕಾಣುವುದು. ದೊಡ್ಡವನು ಚಿಕ್ಕವನು ಎಂಬ ಭಾವ ಮಾಯವಾಗುವುದು. ಭಗವಂತನಲ್ಲಿರುವ ಶಕ್ತಿಗಾಗಿ ಸ್ನೇಹಿತ ಅವನನ್ನು ಪ್ರೀತಿಸುವುದಿಲ್ಲ. ಕೇವಲ ಪ್ರೀತಿಗಾಗಿ ಪ್ರೀತಿಸುತ್ತಾನೆ. ಅನ್ಯೋನ್ಯ ಸಲಿಗೆ ಹೆಚ್ಚುವುದು. ಕೃಷ್ಣಸುಧಾಮರ ಸಂಬಂಧ ಸಖ್ಯಭಾವಕ್ಕೆ ಉದಾಹರಣೆ. ಶ್ರೀರಾಮಕೃಷ್ಣರು ಈ ಭಾವದಲ್ಲಿಯೂ ಕೆಲವು ಕಾಲ ತಲ್ಲೀನರಾಗಿದ್ದರು. ವಾತೃಲ್ಯಭಾವದಲ್ಲಿ ಭಕ್ತ ಭಗವಂತನನ್ನು ತನ್ನ ಮಗುವೆಂದು ತಿಳಿಯುವನು. ತಾಯಿಗೆ ಮಗುವಿನ ಮೇಲೆ ಇರುವ ಪ್ರೀತಿಯಲ್ಲಿ ಸಂಪೂರ್ಣ ನಿಃಸ್ವಾರ್ಥತೆ ಕಾಣುವುದು. ಮಗುವಿನಿಂದ ತಾಯಿ ಏನನ್ನೂ ಅಪೇಕ್ಷಿಸುವುದಿಲ್ಲ. ಸದಾ ಮಗುವಿನ ಹಿತಕ್ಕೆ ತನ್ನ ನಿದ್ದೆ ಸುಖ ಎಲ್ಲವನ್ನೂ ತೆರಲು ಸಿದ್ಧಳಾಗಿರುವಳು. ಎಲ್ಲಿಯವರೆಗೂ ಲಾಭದ ಅಪೇಕ್ಷೆ ಸ್ವಲ್ವವಾದರೂ ಇದೆಯೋ, ಅಲ್ಲಿಯದರೆಗೆ ಇಂತಹ ಪ್ರೇಮ ಸಾಧ್ಯವಿಲ್ಲ. ಯಶೋಧೆ ಶ್ರೀಕೃಷ್ಣನನ್ನು ಪ್ರೀತಿಸಿದ ರೀತಿ ಇದು. ಕೌಸಲ್ಯೆ ರಾಮನನ್ನು ಪ್ರೀತಿಸಿದ ರೀತಿ ಇದು. ಶ್ರೀರಾಮಕೃಷ್ಣರು ಈ ಭಾವದಲ್ಲಿದ್ದಾಗ ದೇವರನ್ನು ರಾಮಲಾಲನೆಂದು ಪ್ರೀತಿಸಿದರು. ಮಧುರಭಾವದಲ್ಲಿ ಭಕ್ತಭಗವಂತರಿಗೆ ಸತಿಪತಿಯರ ಸಂಬಂಧವಿರುವುದು. ಮಾನವ ಪ್ರೇಮದಲ್ಲೆಲ್ಲ ಅತ್ಯಂತ ನಿಕಟವಾದುದು ಸತಿಪತಿಯರದು. ಗೋಪಿಯರು ಶ್ರೀಕೃಷ್ಣನನ್ನು ಪ್ರೀತಿಸಿದ ರೀತಿ ಇದು. ಶ್ರೀರಾಮಕೃಷ್ಣರು ಈ ಭಾವದಲ್ಲಿರುವಾಗ ಹೆಂಗಸಿನಂತೆ ಸೀರೆ ಉಟ್ಟು, ಆಭರಣ ತೊಟ್ಟುಕೊಂಡು ರಾಧಾರಮಣನನ್ನು ಸೇವಿಸಿದರು. ಶ್ರೀರಾಮಕೃಷ್ಣರ ಭಾವಜೀವನ ಸರ್ವತೋಮುಖವಾದುದು. ಯಾವ ಯಾವ ಭಾವದ ಮೂಲಕ ಭಗವಂತನನ್ನು ನೋಡಬಹುದೋ ಅದರ ಮೂಲಕ ನೋಡಿದರು. ಒಂದೊಂದು ಸಲ ಒಂದೊಂದು ಭಾವದಲ್ಲಿ ತಲ್ಲೀನರಾಗುತ್ತಿದ್ದರು. ಸಗುಣೋಪಾಸನೆಯಲ್ಲಿ ಮಾತೃಭಾವಕ್ಕೆ ಅವಕಾಶವಿದೆ. ಆದರೆ ಸಗುಣವೆಂಬ ಅಲೆಗಳ ಹಿಂದೆ, ನಿರ್ಗುಣ ನಿರಾಕಾರದ ಕಡಲಿದೆ. ಶ್ರೀರಾಮಕೃಷ್ಣರು ತೋತಾಪುರಿ ಎಂಬ ಸನ್ಯಾಸಿಯಿಂದ ಅದ್ವೈತ ದೀಕ್ಷೆಯನ್ನು ಪಡೆದರು. ನಾಮರೂಪಗಳನ್ನು ಮೀರಿ, ಕಾರ್ಯಕಾರಣ ಜಗತ್ತನ್ನು ಅತಿಕ್ರಮಿಸಿ, ನಿರಾಕಾರ ಬ್ರಹ್ಮದ ಕಡಲಿಗೆ ಧುಮುಕಿ ತಲ್ಲೀನರಾದರು. ಆ ಸ್ಥಿತಿಯಲ್ಲಿಯೇ ಅವರು ಬಹುಕಾಲವಿದ್ದರು. ಕ್ರಮೇಣ ಜಗನ್ಮಯಿ ಅವರ ಮನಸ್ಸನ್ನು ಕೆಳಗಿಳಿಸಿ ಸಾಕಾರ ನಿರಾಕಾರಗಳ ಮಧ್ಯೆ ಅವರನ್ನು ಬಿಟ್ಟು, ನೀನು ಇಲ್ಲೇ ಇರು ಎಂದು ಆಜ್ಞಾಪಿಸಿದಳಂತೆ. ಶ್ರೀರಾಮಕೃಷ್ಣರು ಭಕ್ತಿಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಿದ್ದರು. ಆದರೆ ಅವರ ಭಕ್ತಿಯ ಹಿನ್ನಲೆಯಾಗಿ ಯಾವಾಗಲೂ ಜ್ಞಾನವಿರುತ್ತಿತ್ತು. ಸ್ವಾಮಿ ವಿವೇಕಾನಂದರೇ, ಶ್ರೀರಾಮಕೃಷ್ಣರು ಹೊರನೋಟಕ್ಕೆ ಭಕ್ತರು, ಒಳಗೆ ಜ್ಞಾನಿಗಳು ಎನ್ನುತ್ತಿದ್ದರು. ಹೆಚ್ಚು ಮಾನವರು ಭಾವಜೀವಿಗಳು. ಯುಕ್ತಿ ಭಾವವನ್ನು ಆಶ್ರಯಿಸಿ ಬೆಳೆಯುವುದು. ಆದಕಾರಣವೇ ಶ್ರೀರಾಮಕೃಷ್ಣರು ಭಕ್ತಿಗೆ ಹೆಚ್ಚು ಮಾನ್ಯತೆ ಕೊಟ್ಟರು. ಪರಮಹಂಸರು ಅಷ್ಟೇ ಪ್ರಾಧಾನ್ಯವನ್ನು ಕರ್ಮಯೋಗಕ್ಕೆ ಕೊಟ್ಟರು. ಒಂದು ದಿನ ಭಕ್ತನೊಬ್ಬನು ಶ್ರೀರಾಮಕೃಷ್ಣರೊಂದಿಗೆ ಮಾತನಾಡುತ್ತಿದ್ದಾಗ ತಾನು ಬೇಕಾದಷ್ಟು ಪರರಿಗೆ ಉಪಕಾರ ಮಾಡಬೇಕೆಂದು ಹೇಳುತ್ತಿದ್ದನು. ಇದನ್ನು ಕೇಳಿ ಶ್ರೀರಾಮಕೃಷ್ಣರು "ಉಪಕಾರದ ಮಾತನ್ನು ಆಡಬೇಡ, ದೇವರೊಬ್ಬನೇ ಇತರರಿಗೆ ಉಪಕಾರ ಮಾಡಬಲ್ಲ. ಸಾಧಾರಣ ಜೀವಿಗಳು ಇತರರಿಗೆ ಸೇವೆ ಮಾತ್ರ ಮಾಡಬಲ್ಲರು. ಯಾರು ಬ್ರಹ್ಮಾಂಡವನ್ನು ಸೃಷ್ಟಿಸಿ, ಪಶುಪಕ್ಷಿ ಕ್ರಿಮಿಕೀಟಗಳಿಗೆ ಆಹಾರವನ್ನು ಒದಗಿಸಿರುವನೋ ಅವನು, ಕೆಲವರಿಗೆ ಸಹಾಯ ಮಾಡಲಾಗದೆ ಅವರಿಗೆ ನೀವು ಸಹಾಯಮಾಡಿ ಎಂದು ಹೇಳಲಿಲ್ಲ. ಉಪಕಾರವಲ್ಲ, ಸೇವೆ" ಎಂದರು. ಇದನ್ನು ಸ್ವಾಮಿ ವಿವೇಕಾನಂದರು ಆಲಿಸಿ ನಂತರ ಕೆಲವು ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾಗ, "ಇಂದು ಪರಮಹಂಸರ ಬಾಯಿಯಿಂದ ದೊಡ್ಡ ಸತ್ಯವನ್ನು ಕೇಳಿದೆ. ನಾನು ಬದುಕಿದ್ದರೆ ಇದನ್ನು ಎಲ್ಲರಿಗೂ ಬೋಧಿಸುವೆನು" ಎಂದರು. ಅನಂತರ ಅವರು ಬೋಧಿಸಿದ ಕರ್ಮಯೋಗವೆಲ್ಲ 'ಉಪಕಾರವಲ್ಲ, ಸೇವೆ' ಎಂಬ ಶ್ರೀರಾಮಕೃಷ್ಣರ ಒಂದು ಸೂತ್ರದ ಬಾಷ್ಯ ಶ್ರೀರಾಮಕೃಷ್ಣರು ಎಲ್ಲ ಸಾಧನೆಗಳನ್ನೂ ಮಾಡಿ ಸಿದ್ಧಿ ಎಂಬ ಅಮೃತವನ್ನು ತಮ್ಮ ಹೃದಯದಲ್ಲಿ ಶೇಖರಿಸಿಟ್ಟುಕೊಂಡರು. ಆದರೆ ಅಮೃತವನ್ನು ತಾವು ಮಾತ್ರ ಸವಿದು ಧನ್ಯರಾಗಬಯಸಲಿಲ್ಲ. ಜಗದ ಕಷ್ಟನಷ್ಟಗಳಲ್ಲಿ ಸಿಕ್ಕಿ ನೊಂದವರಿಗೆಲ್ಲ ಅದನ್ನು ಹಂಚಿ ಅವರನ್ನೂ ಸುಖಿಗಳನ್ನಾಗಿ ಮಾಡಬಯಸಿದರು. ಆನಂದವನ್ನು ಯಾವಾಗಲೂ ಮತ್ತೊಬ್ಬನಿಗೆ ಹಂಚಿದಾಗ ಅದು ಇಮ್ಮಡಿಸುಪುದು. ಅದಕ್ಕಾಗಿಯೆ ಪರಮಹಂಸರು ಶಿಷ್ಯರಿಗಾಗಿ ಕಾದುಕುಳಿತರು. ಶ್ರೀರಾಮಕೃಷ್ಣರ ತಪೋಶಕ್ತಿ ಹಲವು ಪಕ್ವಕ್ಕೆ ಬಂದ ಸಾಧಕರನ್ನು ತನ್ನೆಡೆಗೆ ಸೆಳೆಯಿತು. ಶ್ರೀರಾಮಕೃಷ್ಣರು ಪ್ರತಿದಿನವೂ ಸಂಜೆ ತಮ್ಮ ಕೋಣೆಯ ಮೇಲಿನ ಮಹಡಿಗೆ ಹೋಗಿ ಕಲ್ಕತ್ತೆಯ ಕಡೆ ನೋಡುತ್ತ "ಎಲ್ಲಿ ನನ್ನ ಮಕ್ಕಳು ಇನ್ನೂ ಬರಲಿಲ್ಲವಲ್ಲಾ" ಎಂದು ದುಃಖಿಸುತ್ತಿದ್ದರು. ಜಗನ್ಮಾತೆಯನ್ನು ಕಾಣಲು ಮೊದಲು ಎಷ್ಟು ತವಕಪಟ್ಟರೋ ಅಷ್ಟೇ ತವಕಪಟ್ಟರು ಶಿಷ್ಯರ ಆಗಮನಕ್ಕಾಗಿ. ಈ ಮಹಾ ಕರೆ ಅವ್ಯಕ್ತವಾದರೂ ಹಲವು ಜೀವಿಗಳನ್ನು ಮುಟ್ಟಿ ಒಬ್ಬೊಬ್ಬರನ್ನಾಗಿ ಅವರ ಕಡೆಗೆ ಸೆಳೆಯಿತು. ಶ್ರೀರಾಮಕೃಷ್ಣರು ಒಬ್ಬ ನುರಿತ ಗುರುಗಳು, ಜಗದ ರಹಸ್ಯವನ್ನು ಆರಿತವರು. ಪ್ರತಿಯೊಂದು ವ್ಯಕ್ತಿಯಲ್ಲಿಯೂ ಒಂದು ವೈಶಿಷ್ಟ್ಯ ಇದೆ. ಅದಕ್ಕೆ ಭಂಗ ಬರದಂತೆ ತರಪೇತು ಕೊಡುತ್ತಿದ್ದರು. ಬಂದ ಶಿಷ್ಯರ ನ್ಯೂನಾತಿರೇಕಗಳನ್ನು ತಿದ್ದಿ, ಅವರೆಲ್ಲರನ್ನೂ ಭಗವಂತನ ಪೂಜೆಗೆ ಯೋಗ್ಯವಾದ ಪುಷ್ಪವನ್ನಾಗಿ ಮಾಡಿದರು. ಶ್ರೀರಾಮಕೃಷ್ಣರಿಗೆ ಶಿಷ್ಯರ ಮೇಲೆ ಇದ್ದ ಪ್ರೀತಿ ಅಸಾಧಾರಣವಾದುದು. ಮೊದಲು ಶಿಷ್ಯರ ಎದೆಗೆ ತಟ್ಟಿದ್ದು ಪರಮಹಂಸರಲ್ಲಿದ್ದ ಆಧ್ಯಾತ್ಮಿಕ ಸತ್ಯಗಳಲ್ಲ, ಅವರ ಅಪಾರ ಪ್ರೇಮ. ಆ ಪ್ರೇಮಮಹಾಸ್ತ್ರ ಎಲ್ಲರನ್ನೂ ಒಲಿಸಿಕೊಂಡಿತು. ಅವರಲ್ಲಿ ಪ್ರಖ್ಯಾತರಾದ ವಿವೇಕಾನಂದರಂತಹ ಹಲವಾರು ಶಿಷ್ಯರು ತಾವು ಪರಮಹಂಸರ ಪ್ರೇಮದ ದಾಸರೆಂದು ಹೇಳಿಕೊಳ್ಳುತ್ತಿದ್ದರು. ವಿಮರ್ಶಾತ್ಮಕ ಬುದ್ದಿ ಎಲ್ಲರಲ್ಲಿಯೂ ಬೆಳೆಯುವಂತೆ ಮಾಡುತ್ತಿದ್ದರು. ಯಾವುದನ್ನೂ ವಿಚಾರ ಮಾಡಿದಲ್ಲದೆ ಪರೀಕ್ಷಿಸಿದಲ್ಲದೆ ಒಪ್ಪಿಕೊಳ್ಳಿಬೇಡ ಎನ್ನುತ್ತಿದ್ದರು. ಅವರ ಬೋಧನೆ ಮತು ಜೀವನವನ್ನು ಹಲವರು ಶಿಷ್ಯರು ಹಲವು ರೀತಿಯಲ್ಲಿ ಪರೀಕ್ಷಿಸಿದರು. ಶಿಷ್ಯರು ತಮ್ಮನ್ನು ಪರೀಕ್ಷಿಸಿದರೆ ಕೋಪತಾಳದೆ ಆನಂದದಿಂದ ಅದನ್ನು ನೋಡುತ್ತಿದ್ದರು. ಕಾಮಕಾಂಚನತ್ಯಾಗ ಇವರ ಉಪದೇಶದ ಪಲ್ಲವಿಯಾಗಿತ್ತು. ಒಂದು ದಿನ, ನರೇಂದ್ರ (ಮುಂದೆ ಸ್ವಾಮಿ ವಿವೇಕಾನಂದರು) ಶ್ರೀರಾಮಕೃಷ್ಣರು ಹೊರಗೆ ಹೋದ ಸಮಯದಲ್ಲಿ ಒಂದು ನಾಣ್ಯವನ್ನು ಅವರ ಹಾಸಿಗೆಯ ಕೆಳಗೆ ಇಟ್ಟರು. ಶ್ರೀರಾಮಕೃಷ್ಣರು ಬಂದು ಹಾಸಿಗೆಯ ಮೇಲೆ ಕುಳಿತೊಡನೆಯೇ ಚೇಳು ಕುಟುಕಿದಂತೆ ಆಯಿತು. ಹಾಸಿಗೆಯನ್ನು ಹುಡುಕಿ ನೋಡಿದಾಗ ಒಂದು ರೂಪಾಯಿ ಬಿತ್ತು. ಪರಮಹಂಸರ ತ್ಯಾಗಬುದ್ಧಿ ಅಷ್ಟು ಆಳಕ್ಕೆ ಹೋಗಿತ್ತು. ಮತ್ತೊಬ್ಬ ಶಿಷ್ಯನು ಶ್ರೀರಾಮಕೃಷ್ಣರು ಅರ್ಧರಾತ್ರಿ ಎದ್ದು ಗಂಗಾನದಿಯ ತೀರಕ್ಕೆ ಹೋಗಿದ್ದಾಗ ಇವರು ಇಂತಹ ಅವೇಳೆಯಲಿ ಎದ್ದು ಎಲ್ಲಿಗೆ ಹೋಗುತ್ತಾರೆ? ತಮ್ಮ ಪತ್ನಿ ಶಾರದಾದೇವಿಯರ ಕೋಣೆ ಕಡೆ ಹೋಗಬಹುದೆ ! ಎಂದು ತಿಳಿಯಲು ಅಲ್ಲೇ ಹೊಂಚುಹಾಕುತ್ತಿದ್ದನು. ಸ್ವಲ್ಪ ಹೊತ್ತಾದ ಮೇಲೆ ಶ್ರೀರಾಮಕೃಷ್ಣರು ಶಾರದಾದೇವಿಯವರ ಕೋಣೆಯ ಕಡೆ ಹೋಗದೆ ಸೀದಾ ತಮ್ಮ ರೂಮಿನ ಕಡೆ ಬಂದರು. ಹೊಂಚು ಕಾಯುತ್ತಿದ್ದ ಶಿಷ್ಯ ಇವರನ್ನು ಅನುಮಾನಿಸಿದ್ದಕ್ಕಾಗಿ ನಾಚಿ ಪರಮಹಂಸರಿಗೆ ನಮಸ್ಕಾರ ಕ್ಷಮಾಪಣೆ ಕೇಳಿದನು. ಆಗ ಶ್ರೀರಾಮಕೃಷ್ಣರು ಸಾಧುವನ್ನು ಹಗಲು ಪರೀಕ್ಷೆ ಮಾಡಿದರೆ ಸಾಲದು, ರಾತ್ರಿಯೂ ಪರೀಕ್ಷಿಸಬೇಕು ಎಂದರು. ಭಕ್ತಿಯ, ಧರ್ಮದ ಹೆಸರಿನಲ್ಲಿ ಮೂರ್ಖನಾದರೆ ಅದನ್ನು ಅವರು ಸಹಿಸುತ್ತಿರಲಿಲ್ಲ. ಒಬ್ಬ ಶಿಷ್ಯನಿಗೆ ಪೇಟೆಯಿಂದ ಸಾಮಾನು ತರುವುದಕ್ಕೆ ಹೇಳಿದರು. ಆತನು ಸರಿಯಾಗಿ ಪರೀಕ್ಷೆ ಮಾಡದೆ ತಂದನು. ಆಗ ಶ್ರೀರಾಮಕೃಷ್ಣರು, ಶಿಷ್ಯರು ವ್ಯಾಪಾರಕ್ಕೆ ಅಂಗಡಿಗೆ ಹೋದರೆ ಸರಿಯಾಗಿ ಪರೀಕ್ಷೆ ಮಾಡಬೇಕು, ಅಂಗಡಿಯಲ್ಲಿ ವರ್ತಕರು ಧರ್ಮಕ್ಕಾಗಿ ಅಲ್ಲ ಇರುವುದು ಎಂದು ಬುದ್ಧಿ ಹೇಳಿದರು. ಸಾಮಾನನ್ನು ಕೊಂಡಾದ ಮೇಲೆ ಕೊಸರು ಕೇಳುವುದನ್ನು ಮರೆಯಬಾರದು ಎಂದರು. ಅಸಡ್ಡೆ, ಮರೆವು ಇವು ಯಾವ ರೂಪಿನಲ್ಲಿ ಬಂದರೂ ಅವರು ಸಹಿಸುತ್ತಿರಲಿಲ್ಲ . "ನಾನು ಮತ್ತೊಂದು ಕ್ಷಣದಲ್ಲಿ ಪ್ರಪಂಚವನ್ನು ಮರೆತು ಸಮಾಧಿಯಲ್ಲಿ ಮಗ್ನನಾಗುತ್ತೇನೆ. ಆದರೂ ಯಾವುದನ್ನೂ ಮರೆಯುವುದಿಲ್ಲ. ನಿಮಗೇಕೆ ಇಂತಹ ಮರೆವು. ಇದು ಆಧ್ಯಾತ್ಮಿಕ ಜೀವನದ ಕುರುಹಲ್ಲ" ಎನ್ನುತ್ತಿದ್ದರು. ಒಬ್ಬ ಶಿಷ್ಯನು ತುಂಬ ಮೃದು ಸ್ವಭಾವದವನು. ಒಬ್ಬರು ಗಟ್ಟಿ ಮಾತನ್ನಾಡಿದರೂ ಸಹಿಸುವುದಕ್ಕೆ ಆಗುತ್ತಿರಲಿಲ್ಲ. ಆತ ಒಂದು ದಿನ ದೋಣಿಯಲ್ಲಿ ಬರುತ್ತಿದ್ದಾಗ ಕೆಲವರು ಶ್ರೀರಾಮಕೃಷ್ಣರನ್ನು ಹಾಸ್ಯ ಮಾಡುತ್ತಿದ್ದರು. ಆತ ಇದನ್ನು ಸುಮ್ಮನೆ ಕೇಳುತ್ತಿದ್ದನು. ದಕ್ಷಿಣೇಶ್ವರಕ್ಕೆ ಬಂದ ಮೇಲೆ ಈ ಸಮಾಚಾರವನ್ನು ಶ್ರೀರಾಮಕೃಷ್ಣರಿಗೆ ಹೇಳಿದನು. ಅವರು, "ಏನು ಗುರುನಿಂದೆ ಆಗುತ್ತಿದ್ದರೂ ನೀನು ಸುಮ್ಮನೆ ಕೇಳುತ್ತಿದ್ದೆಯಾ? ಆ ಸ್ಥಳವನ್ನು ಬಿಟ್ಟಾದರೂ ಬರಬೇಕಾಗಿತ್ತು" ಎಂದರು. ಮತ್ತೊಬ್ಬ ಶಿಷ್ಯನ ಸ್ವಭಾವ ಉಗ್ರ. ಆತನ ಜೀವನ ಮಾಗುವುದಕ್ಕೆ ಸ್ವಲ್ವ ಮೃದುತ್ವ ಬರಬೇಕಾಗಿತ್ತು . ಅಂತಹ ಶಿಷ್ಯನೊಬ್ಬನು ದೋಣಿಯಲ್ಲಿ ಬರುತ್ತಿದ್ದಾಗ ಹಿಂದಿನಂತೆಯೇ ಕೆಲವರು ಶ್ರೀರಾಮಕೃಷ್ಣರನ್ನು ದೂರುತ್ತಿದ್ದರು. ಇದನ್ನು ಕೇಳಿ ತುಂಬ ಕೋಪತಾಳಿ ದೋಣಿಯ ಒಂದು ಕಡೆಗೆ ಹೋಗಿ, ನೀವು ನನ್ನ ಗುರುನಿಂದೆಯನ್ನು ನಿಲ್ಲಿಸದೆ ಇದ್ದರೆ ದೋಣಿಯನ್ನು ಮುಳುಗಿಸುತ್ತೇನೆ ಎಂದು ದೋಣಿಯನ್ನು ಅಲ್ಲಾಡಿಸತೊಡಗಿದನು. ದೋಣಿಯಲ್ಲಿದ್ದವರು ಅಂಜಿ ಸುಮ್ಮನಾದರು. ಶ್ರೀರಾಮಕೃಷ್ಣರಿಗೆ ಈ ಸಮಾಚಾರವನ್ನು ಹೇಳಿದ ಮೇಲೆ, ಅವರು "ಕೋಪದಿಂದ ನೀನು ಎಂತಹ ಅನಾಹುತ ಮಾಡುತ್ತಿದ್ದೆ, ಅವರು ಬೈದರೆ ನನಗೇನಾಯಿತು" ಎಂದರು. ಶ್ರೀರಾಮಕೃಷ್ಣರು ಪ್ರತಿಯೊಬ್ಬರ ಶೀಲವನ್ನು ಪರೀಕ್ಷಿಸಿ ಅವರಿಗೆ ತಕ್ಕ ಸಲಹೆಯನ್ನು ಕೊಡುತ್ತಿದ್ದರು. ಶ್ರೀರಾಮಕೃಷ್ಣರು ಪ್ರಪಂಚವನ್ನು ಬಿಟ್ಟ ಕೆಲವು ಸನ್ಯಾಸಿಗಳಿಗೆ ಮಾತ್ರ ಆದರ್ಶಪ್ರಾಯವಾಗಲು ಬಯಸಲಿಲ್ಲ. ಗೃಹಸ್ಥರಿಗೂ ಆದರ್ಶಪ್ರಾಯರಾಗಿದ್ದರು. ಗೃಹಸ್ಥರಿಗೂ ಸನ್ಯಾಸಿಗೆ ಸರಿಸಮನಾದ ಜೀವನವನ್ನು ನಡೆಸಲು ಸಾಧ್ಯವೆಂದು ತೋರಿರುವರು. ಶ್ರೀಶಾರದಾದೇವಿಗೆ ಹದಿನೆಂಟು ವರುಷವಾದಾಗ ಶ್ರೀರಾಮಕೃಷ್ಣರನ್ನು ನೋಡಲು ದಕ್ಷಿಣೇಶ್ವರಕ್ಕೆ ಬಂದರು. ಶ್ರೀರಾಮಕೃಷ್ಣರು ಆದರದಿಂದ ಅವರನ್ನು ಬರಮಾಡಿಕೊಂಡು ಉಪಚರಿಸಿದರು. ಅಷ್ಟು ಹೊತ್ತಿಗೆ ಮಥುರನಾಥನು ತೀರಿಹೋಗಿದ್ದನು. "ಆತನಿದ್ದಿದ್ದರೆ ನಿನಗೆ ಇಲ್ಲಿ ಇಳಿದುಕೊಳ್ಳುವುದಕ್ಕೆ ಬೇಕಾದಷ್ಟು ಅನುಕೂಲವನ್ನು ಮಾಡಿಕೊಡುತ್ತಿದ್ದನು" ಎಂದರು. ಶಾಸ್ತ್ರೀಯವಾಗಿ ಶ್ರೀರಾಮಕೃಷ್ಣರು ಶ್ರೀಶಾರದಾದೇವಿಯನ್ನು ಮದುವೆಯಾಗಿದ್ದರು. ಆದಕಾರಣ ತಾವು ಯಾವುದನ್ನು ಮಾಡಬೇಕಾದರೂ ಅವರ ಒಪ್ಪಿಗೆ ಮತ್ತು ಸಹಾನುಭೂತಿ ಇಲ್ಲದೆ ಮಾಡಬಯಸಲಿಲ್ಲ. ಬಲಾತ್ಕಾರವಾಗಿ ಏನೊಂದನ್ನೂ ಅವರು ಶಾರದಾದೇವಿಯವರ ಮೇಲೆ ಹೇರಲಿಲ್ಲ. ಶ್ರೀರಾಮಕೃಷ್ಣರು ಶಾರದಾದೇವಿಯವರಿಗೆ, "ನನಗೆ ಎಲ್ಲಾ ಸ್ತ್ರೀಯರೂ ಜಗನ್ಮಾತೆಯ ಪ್ರತಿಬಿಂಬದಂತೆ ಕಾಣುವರು. ನಾನು ನಿನ್ನಲ್ಲಿಯೂ ಅದನ್ನೇ ನೋಡುತ್ತೇನೆ. ಆದರೆ ನೀನು ಇಂದ್ರಿಯ ಪ್ರಪಂಚದಲ್ಲಿ ಇರಲು ಇಚ್ಛೆಪಟ್ಟರೆ ಅದಕ್ಕೂ ನಾನು ಸಿದ್ಧನಾಗಿರುವೆ. ನಿನಗೆ ಯಾವುದು ಬೇಕು ಹೇಳು" ಎಂದರು. ಆದರೆ ಶ್ರೀಶಾರದಾದೇವಿಯವರು ಪರಮಹಂಸರಿಗೆ ತಕ್ಕ ಸತಿ. ತಾವೂ ಅವರಂತೆಯೇ ಆಗಲು ಬಯಸಿದರು, ಇದನ್ನು ಕೇಳಿ ಶ್ರೀರಾಮಕೃಷ್ಣರಿಗೆ ಅತ್ಯಾನಂದವಾಯಿತು. ಆಜನ್ಮ ಬ್ರಹ್ಮಚರ್ಯ ವ್ರತಧಾರಿಗಳಾಗಿ ಇಬ್ಬರೂ ಜಗನ್ಮಾತೆಯ ಕೆಲಸಕ್ಕೆ ಟೊಂಕಕಟ್ಚಿ ನಿಂತರು. ಎಂದು ಶ್ರೀಶಾರದಾದೇವಿಯವರು ಪ್ರಾಪಂಚಿಕ ಸುಖವನ್ನು ತೊರೆದು ತಾವು ಅವರಂತೆಯೇ ಜಗನ್ಮಾತೆಯ ಭಕ್ತರಾಗಲು ಬಯಸಿದರೋ ಅಂದಿನಿಂದಿಲೇ ಶ್ರೀರಾಮಕೃಷ್ಣರು ಸತಿಯ ಜೀವನದ ಜವಾಬ್ದಾರಿಯನ್ನೆಲ್ಲ ತೆಗೆದುಕೊಂಡರು. ಸಂಸಾರದಲ್ಲಿ ಹೇಗೆ ನಡೆದುಕೊಳ್ಳಬೇಕು. ಪೂಜೆ, ಜಪ, ತಪ, ಸಾಧನೆಗಳನ್ನು ಹೇಗೆ ಮಾಡಬೇಕು ಎಂಬುದರಿಂದ ಹಿಡಿದು ನಿರ್ವಿಕಲ್ಪ ಸಮಾಧಿಯವರೆಗೆ ಅವರನ್ನು ಕರೆದುಕೊಂಡು ಹೋದರು. ಶ್ರೀರಾಮಕೃಷ್ಣರ ಕೀರ್ತಿ ಹಬ್ಬುತ್ತಾ ಬಂದಿತು. ಕಲ್ಕತ್ತೆಯ ಅನೇಕ ಪ್ರಮುಖ ವ್ಯಕ್ತಿಗಳು ಇವರನ್ನು ನೋಡಲು ಬರುತ್ತಿದ್ದರು. ಕೆಲವು ವೇಳೆ ಶ್ರೀರಾಮಕೃಷ್ಣರೇ ಅವರನ್ನು ನೋಡಲು ಹೋಗುತ್ತಿದ್ದರು. ಕೇಶವಚಂದ್ರಸೇನ ಬ್ರಹ್ಮ ಸಮಾಜದ ಮುಂದಾಳು, ಪ್ರಖ್ಯಾತ ವಾಗ್ಮಿ, ಪರಮಹಂಸರ ಹತ್ತಿರದ ಭಕ್ತನಾದ. ಒಂದು ದಿನ ಶ್ರೀರಾಮಕೃಷ್ಣರೇ ಈಶ್ವರಚಂದ್ರ ವಿದ್ಯಾಸಾಗರನನ್ನು ನೋಡುವುದಕ್ಕೆ ಹೋದರು. ಘನವಿದ್ವಾಂಸನಾದ ಈಶ್ವರಚಂದ್ರ ಪರಮಹಂಸರ ಬಾಯಿಯಿಂದ ಬರುವ ಮಾತನ್ನು ಕೇಳಿದನು. ಶಾಸ್ತ್ರಗಳ ಜಟಿಲ ಸಮಸ್ಯೆಯನ್ನು ಕೂಡ ಇವರ ಮಾತು ಬಗೆಹರಿಸಬಲ್ಲದೆಂದು ತಿಳಿದನು. ಮಹರ್ಷಿ ದೇವೇಂದ್ರನಾಥ ಠಾಕೂರರನ್ನು ನೋಡಲು ಶ್ರೀರಾಮಕೃಷ್ಣರೇ ಒಂದು ದಿನ ಮಥುರನಾಥನೊಂದಿಗೆ ಹೋದರು. ದಯಾನಂದ ಸರಸ್ವತಿ ಶ್ರೀರಾಮಕೃಷ್ಣರನ್ನು ನೋಡುವುದಕ್ಕೆ ದಕ್ಷಿಣೇಶ್ವರಕ್ಕೆ ಬಂದಿದ್ದರು. ಮುಂದೆ ಪ್ರಪಂಚವನ್ನೇ ವಿಸ್ಮಯಗೊಳಿಸಿದ ಸ್ವಾಮಿ ವಿವೇಕಾನಂದ ಮುಂತಾದ ಶಿಷ್ಯರು ಆಗ ಅನಾಮಧೇಯವಾಗಿ ಬಂದು ಹೋಗುತ್ತಿದ್ದರು. ಶ್ರೀರಾಮಕೃಷ್ಣರಿಗೆ ಬಂದ ಶಿಷ್ಯರೊಡನೆ ಮಾತನಾಡಿ ಮಾತನಾಡಿ ಗಂಟಲಲ್ಲಿ ಹುಣ್ಣಾಯಿತು. ಮಾತನಾಡಬೇಡಿ ಎಂದು ವೈದ್ಯರು ಎಷ್ಟು ಹೇಳಿದರೂ ಕೇಳುತ್ತಿರಲಿಲ್ಲ. ಯಾರಾದರೂ ಬದ್ಧ ಜೀವಿಗಳು ಬಂದು ಇವರ ಹತ್ತಿರ ನಿಂತು ಭಗವಂತನ ವಿಷಯವನ್ನು ಎತ್ತಿದರೆ ಸಾಕು, ಯಾತನೆಯ ಗಮನವಿಲ್ಲದೆ ಮಾತನಾಡಲು ಮೊದಲು ಮಾಡುವರು. "ನನ್ನ ಮಾತಿನಿಂದ ಇತರರಿಗೆ ಶಾಂತಿ ಸಿಕ್ಕುವ ಹಾಗೆ ಇದ್ದರೆ ಇಂತಹ ಎಷ್ಟು ನೋವನ್ನಾದರೂ ಸಹಿಸುತ್ತೇನೆ. ಭವಜೀವಿಗಳ ಉದ್ಧಾರಕ್ಕೆ ಎಷ್ಟು ಜನ್ಮಗಳನ್ನಾದರೂ ಎತ್ತಲು ಸಿದ್ಧನಾಗಿರುವೆ !" ಎನ್ನುತ್ತಿದ್ದರು. ಶ್ರೀರಾಮಕೃಷ್ಣರೆಂಬ ದೇಹದ ಗೂಡಿನಲ್ಲಿ ವಾಸಿಸುತ್ತಿದ್ದ ಜೀವದ ಹಕ್ಕಿ 1886ನೇ ಇಸವಿ ಆಗಸ್ಟ್ 16ನೇ ತಾರೀಖು ಹಾರಿಹೋಯಿತು. ಅಂದಿನಿಂದ ವಿಶ್ವವಿಹಾರಿ ಆಯಿತು. ಅವರ ತಪಸ್ಸು ಸರ್ವತೋಮುಖಿವಾಗಿ ಬಹುಜನರ ಹಿತಕ್ಕೆ, ಬಹುಜನರ ಸುಖಕ್ಕೆ ಸಾಧಕವಾಯಿತು. ಶ್ರೀರಾಮಕೃಷ್ಣರು ಸನಾತನ ಹಿಂದೂಧರ್ಮದ ಪೂರ್ಣ ಪ್ರತಿನಿಧಿ. ಯಾವುದನ್ನೂ ಅವರು ಅಲ್ಲಗಳೆಯಲಿಲ್ಲ. ಎಲ್ಲವನ್ನೂ ಪೂರ್ಣಮಾಡಿದರು, ಹಿಂದೂವಾಗಿಯೇ ಇದ್ದು ಎಲ್ಲ ಧರ್ಮಗಳ ಸಾಧನೆ ಮಾಡಬಹುದೆಂಬುದನ್ನು ತೋರಿದರು. ಎಲ್ಲ ಧರ್ಮಗಳ ಹಿಂದೆ ಇರುವುದೊಂದೇ ಸತ್ಯೆವೆಂಬುದು ಅವರ ಅನುಭವದ ಆಳದಿಂದ ಬಂದ ಮಾತು. ಹಿಂದೂಗಳು, ಮಹಮ್ಮದೀಯರು, ಕ್ರೈಸ್ತರು ಧರ್ಮದ ಹೆಸರಿನಲ್ಲಿ ವೈಮನಸ್ಸನ್ನು ಹರಡುವ ಬದಲು, ಶ್ರೀರಾಮಕೃಷ್ಣರಂತಹ ಒಂದು ಆದರ್ಶವಿದ್ದರೆ, ಹಿಂದೂಗಳು ಉತ್ತಮ ಹಿಂದೂಗಳಾಗುವರು, ಕ್ರೈಸ್ತರು ಉತ್ತಮ ಕ್ರೈಸ್ತರಾಗುವರು ಪ್ರಮುಖ ಶಿಷ್ಯರು ಸಂನ್ಯಾಸೀ ಭಕ್ತರು ಸ್ವಾಮಿ ವಿವೇಕಾನಂದ ಸ್ವಾಮಿ ಬ್ರಹ್ಮಾನಂದ ಸ್ವಾಮಿ ಪ್ರೇಮಾನಂದ ಸ್ವಾಮಿ ಯೋಗಾನಂದ ಸ್ವಾಮಿ ನಿರಂಜನಾನಂದ ಸ್ವಾಮಿ ಶಾರದಾನಂದ ಸ್ವಾಮಿ ಶಿವಾನಂದ ಸ್ವಾಮಿ ರಾಮಕೃಷ್ಣಾನಂದ ಸ್ವಾಮಿ ಅಭೇದಾನಂದ ಸ್ವಾಮಿ ಅಧ್ಭುತಾನಂದ ಸ್ವಾಮಿ ಅದ್ವೈತಾನಂದ ಸ್ವಾಮಿ ತ್ರಿಗುಣಾತೀತಾನಂದ ಸ್ವಾಮಿ ಅಖಂಡಾನಂದ ಸ್ವಾಮಿ ಸುಬೋಧಾನಂದ ಸ್ವಾಮಿ ವಿಜ್ಞಾನಾನಂದ ಗ್ರಹಸ್ಥ ಭಕ್ತರು ರಾಮಚಂದ್ರ ದತ್ತ ಸುರೇಂದ್ರನಾಥ ಮಿತ್ರ ಬಲರಾಮ ಬಸು ಮಹೇಂದ್ರನಾಥ ಗುಪ್ತ ನಾಗ ಮಹಾಶಯರು ಗಿರೀಶಚಂದ್ರ ಘೋಷ ಅಕ್ಷಯಕುಮಾರ ಸೇನ ದೇವೇಂದ್ರನಾಥ ಮಜುಮ್ದಾರ ಮಹಿಳಾ ಭಕ್ತರು ಗೌರಿ ಮಾ ಯೋಗಿನ್ ಮಾ ಗೋಲಾಪ್ ಮಾ ಗೋಪಾಲೇರ್‍ ಮಾ ಇವನ್ನೂ ನೋಡಿ ರಾಮಕೃಷ್ಣ ಮಿಷನ್ ಶಾರದಾದೇವಿ ವಿವೇಕಾನಂದ ಬಾಹ್ಯ ಸಂಪರ್ಕಗಳು ಶ್ರೀರಾಮಕೃಷ್ಣ ಮಠ, ಹಲಸೂರು - ಬೆಂಗಳೂರು ಶ್ರೀರಾಮಕೃಷ್ಣ ವಿದ್ಯಾಶಾಲೆ, ಮೈಸೂರು ವೇದಾಂತ ಕಾಲೇಜು / ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಸಂಸ್ಥೆ, ಮೈಸೂರು ಶ್ರೀರಾಮಕೃಷ್ಣ ರಾಮಕೃಷ್ಣ ಮಿಷನ್ ಪುಸ್ತಕಗಳು ಶ್ರೀರಾಮಕೃಷ್ಣ ವಚನವೇದ - ಮೂಲ: ಮಹೇಂದ್ರನಾಥ ಗುಪ್ತ (ಕಥಾಮೃತ) ಶ್ರೀರಾಮಕೃಷ್ಣ ಲೀಲಾಪ್ರಸಂಗ - ಸ್ವಾಮಿ ಶಾರದಾನಂದ ಯುಗಾವತಾರ ಶ್ರೀರಾಮಕೃಷ್ಣ (೧-೪) - ಸ್ವಾಮಿ ಪುರುಷೋತ್ತಮಾನಂದ ಗುರುದೇವ ಶ್ರೀರಾಮಕೃಷ್ಣ - ಕುವೆಂಪು ಶ್ರೀರಾಮಕೃಷ್ಣ ಪರಮಹಂಸರು - ಸ್ವಾಮಿ ಸೋಮನಾಥಾನಂದ ಭಾರತದ ಗಣ್ಯರು ಧರ್ಮ ಯೋಗಿಗಳು ಮತ್ತು ಸನ್ಯಾಸಿಗಳು ಅಧ್ಯಾತ್ಮ ಸಂತರು ಹಿಂದೂ ಧರ್ಮ
1345
https://kn.wikipedia.org/wiki/%E0%B2%B6%E0%B2%BE%E0%B2%B0%E0%B2%A6%E0%B2%BE%E0%B2%A6%E0%B3%87%E0%B2%B5%E0%B2%BF
ಶಾರದಾದೇವಿ
ಜನನ, ಜೀವನ ಶ್ರೀಮಾತೆ ಶಾರದಾದೇವಿಯವರು ಬಂಗಾಳದ ಜಯರಾಮವಟಿ ಎಂಬ ಗ್ರಾಮದಲ್ಲಿ ೨೨ ನೇ ಡಿಸೆಂಬರ್ ೧೮೫೩ರಂದು ಜನಿಸಿದರು. ಸರಳ ಸ್ವಭಾವದ ಅವರ ತಂದೆ ರಾಮಚಂದ್ರ ಮುಖ್ಯೋಪಾಧ್ಯಾಯ ಮತ್ತು ತಾಯಿ ಶ್ಯಾಮಾಸುಂದರಿಯರದು, ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬ. ೫ ವರ್ಷದ ಶಾರದೆಯ ಮದುವೆ ೨೩ ವರ್ಷದ ಶ್ರೀರಾಮಕೃಷ್ಣರೊಂದಿಗಾಯಿತು (ಅಂದಿನ ಬಾಲ್ಯವಿವಾಹದ ಈ ವಿಧಿಯು ಇಂದಿನ ನಿಶ್ಚಿತಾರ್ಥಕ್ಕೆ ಸಮ). ಈ ಸಮಯದಲ್ಲಿ ಶ್ರೀರಾಮಕೃಷ್ಣರು ಹಲವಾರು ಆಧ್ಯಾತ್ಮಿಕ ಸಾಧನೆಗಳಲ್ಲಿ ತೊಡಗಿದ್ದರು. ತಮ್ಮ ೧೮ನೇ ವಯಸ್ಸಿನಲ್ಲಿ ಶಾರದಾದೇವಿಯವರು, ಶ್ರೀರಾಮಕೃಷ್ಣರು ಅರ್ಚಕರಾಗಿದ್ದ ದಕ್ಷಿಣೇಶ್ವರದ ಕಾಳೀ ಮಂದಿರಕ್ಕೆ ಆಗವಿಸಿದರು. ಅವರನ್ನು ಪ್ರೀತಿ ಮತ್ತು ಆದರದಿಂದ ಬರಮಾಡಿಕೊಂಡ ಶ್ರೀರಾಮಕೃಷ್ಣರು, ಲೌಕಿಕ ಮತ್ತು ಆಧ್ಯಾತ್ಮಿಕ ಶಿಕ್ಷಣವನ್ನು ನೀಡಿದರು. ತಮ್ಮನ್ನು ಮಾತೃ ಭಾವದಿಂದ ಕಾಣುತ್ತಿದ್ದ ಪತಿಯ ಆಧ್ಯಾತ್ಮಿಕ ಸಾಧನೆಗೆ ಅಡ್ಡಿಯಾಗದೆ, ಅವರ ಸಾಧನೆಗಳಿಗೆ ಪೂರಕವಾಗಿರುವುದರಲ್ಲಿ ಅವರಿಗೆ ತಮ್ಮ ಜೀವನಪಥ ಕಂಡುಬಂದಿತು. ಶ್ರೀರಾಮಕೃಷ್ಣರು ಫಲಹಾರಿಣಿ ಕಾಳೀ ಪೂಜೆಯ ದಿನ ಶ್ರೀಶಾರದಾದೇವಿಯವರನ್ನು ಜೀವಂತ ದುರ್ಗೆಯಾಗಿ ಭಾವಿಸಿ ಪೂಜೆಗೈದರು. ಇದರೊಂದಿಗೆ ಶ್ರೀರಾಮಕೃಷ್ಣರ ಆಧ್ಯಾತ್ಮಿಕ ಸಾಧನೆಯ ಜೀವನಘಟ್ಟ ಕೊನೆಗೊಂಡಿತು; ಮುಂದೆ ಒಬ್ಬ ಆಚಾರ್ಯರಾಗಿ, ಅವತಾರಪುರುಷರೆಂದು ಅವರು ಪ್ರಸಿದ್ಧರಾದರು. ಶ್ರೀರಾಮಕೃಷ್ಣರನ್ನು ಕೇಳಲು, ಕಾಣಲು ಬರುತ್ತಿದ್ದ ಭಕ್ತಾದಿಗಳ ಆಹಾರ/ವಸತಿಗಳ ವ್ಯವಸ್ಥೆಯನ್ನು ಮಾಡುತ್ತ ಶಾರದಾದೇವಿಯವರು ಜಪವೇ ಮೊದಲಾದ ಮೌನ ಆಧ್ಯಾತ್ಮಿಕ ಸಾಧನೆಗಳಲ್ಲಿ ತೊಡಗಿದರು. ಜೀವನದಲ್ಲಿ ನೊಂದ ಮಹಿಳಾ ಭಕ್ತರಿಗೆ ಸಾಂತ್ವನ ನೀಡುತ್ತ, ಎಲ್ಲರ ತಾಯಾಗಿ 'ಶ್ರೀಮಾತೆ' ಎಂದೆನಿಸಿದರು. ಶ್ರೀರಾಮಕೃಷ್ಣರ ಮಹಾಸಮಾಧಿಯ ನಂತರ ಆಧ್ಯಾತ್ಮಿಕ ಸಾಮ್ರಾಜ್ಯವನ್ನು ಮುನ್ನಡೆಸುವ, ಭಕ್ತರಿಗೆ ಮತ್ತು ಸಾಧಕರಿಗೆ ಮಾರ್ಗದರ್ಶನ ನೀಡುವ ಗುರುತರ ಹೊಣೆಯನ್ನು ಅವರು ವಹಿಸಿಕೊಂಡರು. ಸನ್ಯಾಸಿ-ಗೃಹಸ್ಥ, ಬಡವ-ಬಲ್ಲಿದ, ಬಾಲಕ-ವೃದ್ಧ, ಪತಿತ-ಪಾವನ ಮೊದಲಾದ ಯಾವುದೇ ಭೇದ-ಭಾವಗಳನ್ನು ಕಾಣದೇ ವಾತ್ಸಲ್ಯ ಪ್ರೇಮಪ್ರವಾಹವನ್ನೇ ಹರಿಸ ತೊಡಗಿದರು. ೧೯೧೧ ರಲ್ಲಿ ದಕ್ಷಿಣ ಭಾರತದ ತೀರ್ಥಯಾತ್ರೆಯನ್ನು ಕೈಗೊಂಡಾಗ, ಬೆಂಗಳೂರಿನ ಬಸವನಗುಡಿಯ ಶ್ರೀರಾಮಕೃಷ್ಣ ಮಠಕ್ಕೆ ಆಗಮಿಸಿ ಭಕ್ತರನ್ನು ಆಶೀರ್ವದಿಸಿದರು. ಅಲ್ಲಿ ಅವರು ಧ್ಯಾನಮಾಡಿದ ಶಿಲಾಸನವಿಂದು ಭಕ್ತರ ತೀರ್ಥಸ್ಥಾನವಾಗಿದೆ. ೧೯೨೦ರ ಜುಲೈ ೨೧ರಂದು ಅವರು ತಮ್ಮ ಶರೀರವನ್ನು ತ್ಯಜಿಸಿದರು. ಸಾಮಾನ್ಯ ಸ್ತ್ರೀಯಂತೆ ಬಾಳಿದ ಅವರ ಜೀವನ ಕರ್ಮಯೋಗಕ್ಕೊಂದು ಶ್ರೇಷ್ಠ ವ್ಯಾಖ್ಯಾನದಂತಿತ್ತು. ಅಂದಿನ ಜಾತಿ, ಅತಿಯಾದ ಮಡಿ-ಮೈಲಿಗೆಯೇ ಮೊದಲಾದ ಕಂದಾಚಾರಗಳನ್ನು ತಮ್ಮ ಮಾತೃಪ್ರೇಮದ ಮೂಲಕ ಇಲ್ಲದಂತೆ ಮಾಡಿ ಅಸಂಖ್ಯ ಭಕ್ತರಿಗೆ ಸಾಂತ್ವನ ಒದಗಿಸಿದರು. ಸ್ವಾಮಿ ವಿವೇಕಾನಂದ, ಮಹರ್ಷಿ ಅರವಿಂದ, ಆಚಾರ್ಯ ರಜನೀಶ ಮೊದಲಾದ ಚಿಂತಕರು ಶಾರದಾದೇವಿಯವರ ಜೀವನ, ಆಧುನಿಕ ಭಾರತೀಯ ಮಹಿಳೆಯ ಮುಂದಿರುವ ಅನುಸರಿಸಲು ಯೋಗ್ಯವಾದ ಆದರ್ಶ ಎಂದಿದ್ದಾರೆ.ಎಲೆಮರೆಯ ಹೂವಿನಂತೆ ಆಧ್ಯಾತ್ಮಿಕ ಸೌರಭವನ್ನು ಸೂಸಿದ ಶಾರದಾದೇವಿಯವರ ಹೆಸರಿನಲ್ಲಿ ಶ್ರೀಶಾರದಾ ಮಠ ಎಂಬ ಸಂನ್ಯಾಸಿನಿಯರ ಸಂಘವೊಂದು ಜನ್ಮತಾಳಿತು. ಬೆಂಗಳೂರಿನ ನಂದಿದುರ್ಗದ ಬಳಿ ಅದರ ಶಾಖೆಯೊಂದು ಸೇವೆಸಲ್ಲಿಸುತ್ತಿದೆ. ಪುಸ್ತಕಗಳು ಶ್ರೀಶಾರದಾದೇವಿ ಜೀವನಗಂಗಾ - ಸ್ವಾಮಿ ಪುರುಷೋತ್ತಮಾನಂದ ಶ್ರೀಮಾತೆ ಶಾರದಾದೇವಿ - ಸ್ವಾಮಿ ನಿತ್ಯಸ್ಥಾನಂದ ಶ್ರೀಶಾರದಾದೇವಿ ಸಂದೇಶಮಂದಾರ ಬೆಂಗಳೂರಿನಲ್ಲಿ ಶ್ರೀಮಾತೆ - ಸ್ವಾಮಿ ರಾಘವೇಶಾನಂದ- ಇದ್ದಲ್ಲೇ ಮನಸ್ಸು ಶಾಂತವಾಗಿರಲು ಸಾಧ್ಯವಾದರೆ, ತೀರ್ಥಯಾತ್ರೆಯ ಅಗತ್ಯವಾದರೂ ಏನಿದೆ ? ಈ ಶ್ರೀಮಾತೆಯವರ ನುಡಿಮುತ್ತುಗಳು ಮನಸ್ಸಿನ ಶಾಂತಿ ಬೇಕಾಗಿದ್ದರೆ, ಯಾರಲ್ಲೂ ತಪ್ಪನ್ನು ಹುಡುಕ ಬೇಡ. ಈ ಜಗತ್ತೆಲ್ಲ ನಿನ್ನದೇ. ಯಾರೂ ಅನ್ಯರಲ್ಲ. ನೀನು ಯಾರನ್ನು ಪ್ರೀತಿಸುತ್ತೀಯೋ ಅವರಿಂದ ಏನನ್ನೂ ಬಯಸಬೇಡ. ನೀನು ಏನನ್ನಾದರೂ ಬಯಸಿದೆ ಎಂದಿಟ್ಟುಕೋ, ಆಗ ಕೆಲವರು ಹೆಚ್ಚು ಕೊಡುತ್ತಾರೆ, ಕೆಲವರು ಕಡಿಮೆ ಕೊಡುತ್ತಾರೆ. ನೀನಾಗ ಹೆಚ್ಚು ಕೊಟ್ಟವರನ್ನು ಹೆಚ್ಚು ಪ್ರೀತಿಸುತ್ತೀಯ, ಕಡಮೆ ಕೊಟ್ಟವರನ್ನು ಕಡಮೆ ಪ್ರೀತಿಸುತ್ತೀಯ. ಹೀಗೆ ಎಲ್ಲರನ್ನೂ ಸಮಾನವಾಗಿ ಪ್ರೀತಿಸಲು ಆಗುವುದಿಲ್ಲ. ಈ ಮನಸ್ಸಿನಿಂದ ಬರೀ ತೊಂದರೆ ಅಂದುಕೊಂಡೆಯಾ, ಮೊದಲಿಗೆ ಮನಸ್ಸಿನ ಸಹಕಾರ ತುಂಬ ಮುಖ್ಯ. ಶುದ್ಧ ಮನಸ್ಸೇ ಮನುಷ್ಯನಿಗೆ ದಾರಿಯನ್ನು ತೋರಿಸುವದು. ಭಗವಂತನನ್ನು ಕಾಣದಿದ್ದರೂ ಆತನನ್ನು ನಮ್ಮವನೆಂದೇ ಕರೆಯಲು ಸಾಧ್ಯವಾದರೆ, ಅದೇ ಅವನ ಕೃಪೆ. ಪ್ರಾಮಾಣಿಕವಾದ ಪ್ರೀತಿಲ್ಲದೆ ಭಗವಂತನನ್ನು ಪಡೆಯಲು ಸಾಧ್ಯವಿಲ್ಲ. ಭಗವಂತನನ್ನು ಪ್ರೀತಿಗಾಗಿ ಪ್ರೀತಿಸು. ಅದು ಬೇರೆಯವರ ಕಣ್ಣಿಗೆ ಬೀಳಬೇಕಾಗಿಲ್ಲ. ಒಳ್ಳೆಯ ಕೆಲಸದಲ್ಲಿ ಯಶಸ್ಸು ಸಿಗಬೇಕಾದರೆ ಛಲ ಹಾಗೂ ಸತತ ಪ್ರಯತ್ನ ಅಗತ್ಯ. ಶ್ರದ್ಧೆ ಮತ್ತು ನಿಷ್ಠೆ , ಇವೇ ಮೊದಲು ಬೇಕಾದವು. ಮನಸ್ಸು ಶುದ್ಧವಾಗಿದ್ದರೆ, ಏಕಾಗ್ರತೆ, ಧ್ಯಾನ ಏಕೆ ಸಾಧ್ಯವಾಗುವುದಿಲ್ಲ ? ಕಾವ್ಯ ಪುಷ್ಪ ರಾಮಕೃಷ್ಣ ತಪೋಸೂರ್ಯ ಕಿರಣಬಿಂಬ ಚಂದ್ರಿಕೆ ಓ ತಾಯಿ ಅಂಬಿಕೆ || ಗಿರಿಯ ದರಿಯ ನೆಲವ ಜಲವ ತಬ್ಬಿ ನಿಂತ ಕರುಣೆಯೆ ವಾತ್ಸಲ್ಯವರಣೆಯೆ || ರಾಮಕೃಷ್ಣ ತಪೋವನದ ಪರ್ಣಕುಟಿಯ ದೀಪವೆ | ಬಳಿಗೆ ಬಂದ ಹಣತೆಗಳಿಗೆ ಬೆಳಕನಿತ್ತ ಕಿರಣವೆ ಮೌನಪ್ರಭಾವಲಯವೆ || ಸಂಕಟಗಳ ವನವಸನವ- ನುಟ್ಟುನಿಂತ ಶಿಖರವೆ | ನದನದಿಗಳ ವಾತ್ಸಲ್ಯದ ಹಾಲೂಡಿದ ತೀರ್ಥವೆ ದಿವ್ಯಕೃಪಾರೂಪವೆ || - ಜಿ. ಎಸ್. ಶಿವರುದ್ರಪ್ಪ ಇವನ್ನೂ ನೋಡಿ ರಾಮಕೃಷ್ಣ ಪರಮಹಂಸ ಭಾರತದ ಗಣ್ಯರು ೧೮೫೩ ಜನನ ೧೯೨೦ ನಿಧನ ಹಿಂದೂ ಸಂತರು
1347
https://kn.wikipedia.org/wiki/%E0%B2%95%E0%B2%B0%E0%B3%8D%E0%B2%A8%E0%B2%BE%E0%B2%9F%E0%B2%95%E0%B2%A6%20%E0%B2%AA%E0%B3%8D%E0%B2%B0%E0%B2%B8%E0%B2%BF%E0%B2%A6%E0%B3%8D%E0%B2%A7%20%E0%B2%B5%E0%B3%8D%E0%B2%AF%E0%B2%95%E0%B3%8D%E0%B2%A4%E0%B2%BF%E0%B2%97%E0%B2%B3%E0%B3%81
ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು
ಕರ್ನಾಟಕ ರಾಜ್ಯದ ಕೆಲವು ಪ್ರಸಿದ್ಧ ವ್ಯಕ್ತಿಗಳ ಪಟ್ಟಿ. ಯೋಗಾಚಾರ್ಯರು ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳು ಸಿ.ಎಮ್.ಭಟ್ ಬಿ. ಕೆ. ಎಸ್. ಐಯ್ಯಂಗಾರ್ ಕಲೆ ಮತ್ತು ಮನೋರಂಜನೆ ಸಿನಿಮಾ ಅಂಬರೀಶ್ ಅನಂತನಾಗ್ ಅಬ್ಬಯ್ಯ ನಾಯ್ಡು ಅಭಿನಯ ಅರ್ಜುನ್ ಸರ್ಜಾ ಅಶ್ವಥ್ ಆದವಾನಿ ಲಕ್ಷ್ಮಿ ದೇವಿ ಆರ್.ಎನ್.ಜಯಗೋಪಾಲ್ ಆರ್.ನಾಗೇಂದ್ರರಾವ್ ಆರತಿ ಉದಯಕುಮಾರ್ ಉಪೇಂದ್ರ ಉಪೇಂದ್ರಕುಮಾರ ಎಂ.ಪಿ.ಶಂಕರ ಕಣಗಾಲ್ ಪ್ರಭಾಕರ ಶಾಸ್ತ್ರೀ ಕಲ್ಪನಾ ಕೆ. ಕಲ್ಯಾಣ್ ಕಲ್ಯಾಣ್ ಕುಮಾರ್ ಕವಿರಾಜ್ ಕಾಶೀನಾಥ್ ಕುಣಿಗಲ್ ನಾಗಭೂಷಣ ಕು. ರಾ. ಸೀತಾರಾಮ ಶಾಸ್ತ್ರಿ ಕುಮಾರ್ ಗೋವಿಂದ್ ಗಂಗಾಧರ ಗೋಲ್ದನ್ ಸ್ಟಾರ್ ಗಣೇಶ ಗಿರೀಶ್ ಕಾರ್ನಾಡ್ ಗಿರೀಶ್ ಕಾಸರವಳ್ಳಿ ಗೀತಪ್ರಿಯ ಗುಬ್ಬಿ ವೀರಣ್ಣ ಚಿ.ಉದಯಶಂಕರ ಚಿ.ಗುರುದತ್ ಚಂದ್ರಕಲಾ ಚಿಂದೋಡಿ ಲೀಲಾ ಚರಣರಾಜ್ ಜಿ.ಕೆ.ವೆಂಕಟೇಶ್ ಜಿ.ವಿ.ಅಯ್ಯರ್ ಜಗ್ಗೇಶ್ ಜಯಾ ಟಿ.ಜಿ.ಲಿಂಗಪ್ಪ ಡಿಂಗ್ರಿ ನಾಗರಾಜ್ ಡಾ.ರಾಜ್‍ಕುಮಾರ್ ಢಿಕ್ಕಿ ಮಾಧವರಾವ್ ತಾರಾ ತೂಗುದೀಪ ಶ್ರೀನಿವಾಸ ದಿನೇಶ್ ದಿನೇಶ್ ಬಾಬು ದರ್ಶನ್ ತೂಗುದೀಪ್ ದ್ವಾರಕೀಶ್ ದೇವರಾಜ್ ಧೀರೇಂದ್ರ ಗೋಪಾಲ್ ನರಸಿಂಹರಾಜು ನಾಗಾಭರಣ ಪಿ.ಬಿ.ಶ್ರೀನಿವಾಸ್ ಪಂಡರೀಬಾಯಿ ಪದ್ಮಾ ಕುಮಟಾ ಪದ್ಮಾ ವಾಸಂತಿ ಪ್ರಕಾಶ ರೈ ಪ್ರತಿಮಾ ದೇವಿ ಪ್ರಭಾಕರ್ ಪ್ರಮೀಳಾ ಜೋಷಾಯ್ ಪ್ರೇಮಾ ಪವಿತ್ರ ಲೋಕೇಶ್ ಪಾಪಮ್ಮ ಪುಟ್ಟಣ್ಣ ಕಣಗಾಲ್ ಬಿ.ಆರ್.ಪಂತಲು ಬಿ.ಜಯಮ್ಮ ಬಿ.ಸರೋಜಾದೇವಿ ಬೆಳ್ಳಾವೆ ನರಹರಿ ಶಾಸ್ತ್ರಿ ಬೆಂಗಳೂರು ಲತಾ ಬ್ರಹ್ಮಾವರ ಬಸಂತ ಕುಮಾರ ಪಾಟೀಲ ಬಾಲಕೃಷ್ಣ ಭಾರ್ಗವ ಭಾರತಿ ಮಂಜುಳಾ ಮಹೇಂದರ್ ಮಹೇಶ್ ಮಹದೇವ್ ಮಾಸ್ಟರ್ ಹಿರಣ್ಣಯ್ಯ ಮುರಳಿ ಮುಸುರಿ ಕೃಷ್ಣಮೂರ್ತಿ ಮೈನಾವತಿ ಮೈಸೂರು ಲೋಕೇಶ್ ರವಿಚಂದ್ರನ್ ರಾಜನ್-ನಾಗೇಂದ್ರ ರಾಜೇಂದ್ರಸಿಂಗ್ ಬಾಬು ರಾಜೇಶ್ ರಾಮನಾಥನ್ ರಾಮಕೃಷ್ಣ ರೂಪಾದೇವಿ ರೇವತಿ ಲೀನಾ ಚಂದಾವರಕರ್‍ ಲೀಲಾವತಿ ಲೋಕನಾಥ್ ಲೋಕೇಶ್ ವಿ.ನಾಗೇಂದ್ರ ಪ್ರಸಾದ್ ವಿ.ಮನೋಹರ್ ವಜ್ರಮುನಿ ವಿಷ್ಣುವರ್ಧನ್ ವಸುಂಧರಾ ದಾಸ್ ವಾದಿರಾಜ್ ವಾಸುದೇವ ರಾವ್ ಎನ್.ವೀರಾಸ್ವಾಮಿ ಶಂಕರ ಸಿಂಗ್ ಶಂಕರ್-ಗಣೇಶ್ ಶಂಕರನಾಗ್ ಶಕ್ತಿಪ್ರಸಾದ್ ಶ್ರೀನಾಥ್ ಶಿವರಾಜ್‍ಕುಮಾರ್ ಶೃತಿ ಸಂಪತ್ ಸಿದ್ಧಲಿಂಗಯ್ಯ ಸಿ.ವಿ.ಶಿವಶಂಕರ್ ಸಾಧು ಕೋಕಿಲ ಸೋರಟ್ ಅಶ್ವಥ್ ಸುಂದರಕೃಷ್ಣ ಅರಸ್ ಸುಂದರರಾಜ್ ಸುದರ್ಶನ ಸುಧಾರಾಣಿ ಸುಧೀಂದ್ರ ಸುಧೀರ ಸುನೀಲ್ ಕುಮಾರ್ ದೇಸಾಯಿ ಸುಬ್ಬಯ್ಯ ನಾಯ್ಡು ಹಂಸಲೇಖ ಹರಿಣಿ ಹುಣಸೂರು ಕೃಷ್ಣಮೂರ್ತಿ ಹೊನ್ನಪ್ಪ ಭಾಗವತರ್ ಗುರುಬಸವರಾಜ್ ಪಿ.ಎಮ್. ಸಿ.ಪಿ.ಯೋಗಿಶ್ವರ್ ಗೊಲ್ದನ್ ಸ್ಟಾರ್ ಗಣೇಶ ನಾಟಕ ಅರುಂಧತಿನಾಗ್ ಎಚ್.ಎನ್.ಹೂಗಾರ ಎಚ್.ಆರ್.ಭಸ್ಮೆ ಎನ್.ಬಸವರಾಜ ಏ.ಎಸ್.ಮೂರ್ತಿ ಏಣಗಿ ನಟರಾಜ ಏಣಗಿ ಬಾಳಪ್ಪ ಕಂದಗಲ್ಲ ಹಣಮಂತರಾವ ಕೆ.ವಿ.ಸುಬ್ಬಣ್ಣ ಕಲ್ಪನಾ ಗಿರೀಶ ಕಾರ್ನಾಡ ಗರುಡ ಸದಾಶಿವರಾವ ಗುಬ್ಬಿ ವೀರಣ್ಣ ಚಂದ್ರಶೇಖರ ಕಂಬಾರ ಚಿತ್ತರಗಿ ಗಂಗಾಧರ ಶಾಸ್ತ್ರಿ ಚಿಂದೋಡಿ ಲೀಲಾ ಜಯಶ್ರೀ ನಾಗರತ್ನಮ್ಮ ಪಿ.ಬಿ.ಧುತ್ತರಗಿ ಪ್ರಸನ್ನ ಪ್ರೇಮಾ ಕಾರಂತ ಬಿ.ವಿ.ಕಾರಂತ ಭಾರ್ಗವಿ ನಾರಾಯಣ್ ಮಾಸ್ಟರ್ ಹಿರಣ್ಣಯ್ಯ ಮುಖ್ಯಮಂತ್ರಿ ಚಂದ್ರು ಮೇಕಪ್ ನಾಣಿ ಯಶವಂತ ಸರದೇಶಪಾಂಡೆ ಲೋಕೇಶ್ ವಜ್ರಮುನಿ ವಸಂತಸಾ ನಾಕೋಡ ವಿಷಯಾ ಜೇವೂರ ವಸಂತ ಕವಲಿ ಶಂಕರನಾಗ್ ಶಿವಾನಂದ ಸಿ.ಪಿ.ಕೃಷ್ಣಮೂರ್ತಿ ಸಿಹಿಕಹಿ ಚಂದ್ರು ಸುಧೀರ್ ಸುಬ್ಬಯ್ಯ ನಾಯ್ಟು ಸುಭದ್ರಮ್ಮ ಮನ್ಸೂರ್ ಸೇತುಮಾಧವರಾವ ಮಾನ್ವಿ ಗುರುಸ್ವಾಮಿ ಲಕ್ಶ್ಮ್ಹೀಪತಿ ಪ್ರಸನ್ನ ಕುಮಾರ ರಘುನಂದನ ಫ್ಯಾಷನ್ ನಫೀಸಾ ಜೋಸೆಫ್ ಲಾರಾ ದತ್ತ ಡೀನೋ ಮೋರಿಯ ಪ್ರಸಾದ ಬಿಡ್ಡಪ್ಪ ಐಶ್ವರ್ಯ ರೈ ವಿದಿಶಾ ಪಾವಟೆ ಸಂಗೀತ ಕರ್ನಾಟಕ ಶಾಸ್ತ್ರೀಯ ಸಂಗೀತಗಾರರು ಆರ್. ಕೆ. ಶ್ರೀಕಂಠನ್ ಆರ್. ಕೆ. ಪದ್ಮನಾಭ ಡಾ. ಸುಕನ್ಯಾ ಪ್ರಭಾಕರ್ ಶ್ಯಾಮಲಾ ಪ್ರಕಾಶ್ ಶಾಸ್ತ್ರೀಯ ಸಂಗೀತಗಾರರು ಅರ್ಜುನ ನಾಕೋಡ ಅಬ್ದುಲ್ ಕರೀಮ ಖಾನ ಉಸ್ತಾದ ಬಾಲೇಖಾನ ಕುಮಾರ ಗಂಧರ್ವ ಕೈವಲ್ಯ ಗುರುವ ಕೃಷ್ಣಾ ಹಾನಗಲ್ ಗಣಪತಿ ಭಟ್ಟ ಹಾಸಣಗಿ ಗಂಗೂಬಾಯಿ ಹಾನಗಲ್ ಗೀತಾ ಜಾವಡೇಕರ ಗುರುರಾವ ದೇಶಪಾಂಡೆ ಜಯತೀರ್ಥ ಮೇವುಂಡಿ ಟಿ.ಕೆ.ರಾಮಮೂರ್ತಿ ನಾಗನಾಥ ಒಡೆಯರ ಪಂಚಾಕ್ಷರಿ ಗವಾಯಿಗಳು ಪಂಚಾಕ್ಷರಿ ಮತ್ತಿಗಟ್ಟಿ ಪಿಟೀಲು ಚೌಡಯ್ಯ ಪುಟ್ಟರಾಜ ಗವಾಯಿಗಳು ಬಿಡಾರಂ ಕೃಷ್ಣಪ್ಪ ಬಸವರಾಜ ಮನ್ಸೂರ ಬಸವರಾಜ ರಾಜಗುರು ಬೆಂಗಳೂರು ನಾಗರತ್ನಮ್ಮ ಭೀಮಸೇನ ಜೋಶಿ ಮಲ್ಲಿಕಾರ್ಜುನ ಮನ್ಸೂರ ಮಹೇಶ್ ಮಹದೇವ್ ಮಾಧವ ಗುಡಿ ಮೈಸೂರು ದೊರೆಸ್ವಾಮಿ ಅಯ್ಯಂಗಾರ್ ಆನೂರು ರಾಮಕೃಷ್ಣ ಮೈಸೂರು ವಾಸುದೇವಾಚಾರ್ಯ ಮೈಸೂರು ಸದಾಶಿವರಾಯರು ರಘುನಾಥ ನಾಕೋಡ ರಾಜಶೇಖರ ಮನಸೂರ ರಾಜೀವ್ ತಾರಾನಾಥ್ ವಸಂತ ಕನಕಾಪುರ ವಸಂತ ನಾಕೋಡ ವಿನಾಯಕ ತೊರವಿ ವೀಣೆ ಶೇಷಣ್ಣ ಶಾರದಾ ಹಾನಗಲ್ ಶಿವಾನಂದ ಪಾಟೀಲ ಶ್ಯಾಮಲಾ ಭಾವೆ ಶೇಷಾದ್ರಿ ಗವಾಯಿ ಸಿದ್ಧರಾಮ ಜಂಬಲದಿನ್ನಿ ಸುಲಭಾ ನೀರಲಗಿ ಸೋಮನಾಥ ಮರಡೂರ ಬಾಲಚಂದ್ರ ನಾಕೋಡ ಜನಪದ/ಸುಗಮಸಂಗೀತ/ಹಿನ್ನೆಲೆಗಾಯಕರು ಅನುರಾಧಾ ಧಾರೇಶ್ವರ ಎಚ್.ಆರ್.ಲೀಲಾವತಿ ಕಸ್ತೂರಿ ಶಂಕರ್ ಗುರುಕಿರಣ್ ಚಂದ್ರಿಕಾ ಗುರುರಾಜ ಪಿ.ಆರ್.ಭಾಗವತ ಪ್ರಿಯದರ್ಶಿನಿ ಪಿ.ಕಾಳಿಂಗರಾಯ ಪಿ.ಸುಶೀಲ ಬಾನಂದೂರು ಕೆಂಪಯ್ಯ ಚಂದಗಾಲು ಬೋರಪ್ಪ ಬಿ.ಆರ್.ಛಾಯಾ ಮಂಜುಳ ಗುರುರಾಜ್ ಮೈಸೂರು ಅನಂತಸ್ವಾಮಿ ಯಶವಂತ ಹಳಿಬಂಡಿ ಲಕಿ ಅಲಿ ಶ್ಯಾಮಲಾ ಜಾಗೀರದಾರ ಶಿವಮೊಗ್ಗ ಸುಬ್ಬಣ್ಣ ಸಿ ಅಶ್ವಥ್ ಸಂಗೀತಾ ಕಟ್ಟಿ ಸ್ನೇಹಾ ಹಂಪಿಹೊಳಿ ಹುಕ್ಕೇರಿ ಬಾಳಪ್ಪ ರಾಜೇಶ್ ಕೃಷ್ಣ ಚೈತ್ರ ಗುರು ರಾಜ ಹೊಸಕೋಟೆ ರಾಜೀವ್ ಧೀಕ್ಷೀತ್ ರಾಮಕೃಷ್ಣ ಉದ್ಯಮ ಅಜೀಂ ಹಶಾಮ್ ಪ್ರೇಮ್‌ಜಿ, ವಿಪ್ರೊ ಎನ್ ಆರ್ ನಾರಾಯಣ ಮೂರ್ತಿ, ಇನ್ಫೋಸಿಸ್ ಸುಧಾ ಮೂರ್ತಿ, ಇನ್ಫೋಸಿಸ್ ಕಿರಣ್ ಮಜುಂದಾರ್ ಬಿ.ವಿ. ಜಗದೀಶ್ ಬಾಬಾ ಕಲ್ಯಾಣಿ ಮಾರ್ಕ್ ಮಸ್ಕರೇನಾಸ್, ವರ್ಲ್ಡ್‌ಟೆಲ್ ವಿಜಯ್ ಮಲ್ಯ, ಯು.ಬಿ ಸಬೀರ್ ಭಾಟಿಯಾ ಸಂಕೇಶ್ವರ್, ಅಜ್ಯಯ್ ಭಾರ್ದ್ವವಾಜ್,ಅನ್ಥೆಮ್ ಬಯೊಸಯ್ನ್ಸ್ ವಿಜ್ಞಾನ ಡಾ.ವಸಂತ್ ಕುಮಾರ್,ಸಸ್ಯ ರೋಗ ಶಾಸ್ತ್ರ ಸಾಹಿತ್ಯ ಲೇಖಕರು ಜಿ ಅನಿಲ್ ಕುಮಾರ್ ದ್ಯಾವನೂರು ಮಂಜುನಾಥ್ ಹೆಚ್.ಆರ್.ನಾಗೇಶರಾವ್ ಹಿಂದಿನ ಸಾಹಿತಿಗಳು ಅಕ್ಕಮಹಾದೇವಿ ಅಲ್ಲಮ ಪ್ರಭು ಆಂಡಯ್ಯ ಕಂತಿ ಕುಮುದೇಂದು-ಸಿರಿಭೂವಲಯ ಕೆಂಪು ನಾರಾಯಣ ಕನಕದಾಸ ಕುಮಾರ ವಾಲ್ಮೀಕಿ ಕುಮಾರವ್ಯಾಸ ಕೇಶಿರಾಜ - ಶಬ್ದಮಣಿದರ್ಪಣ ಗೋವಿಂದವೈದ್ಯ ಚೆನ್ನಬಸವಣ್ಣ ಚೆಲ್ವಾಂಬಾ ಚಾಮರಸ-ಪ್ರಭುಲಿಂಗಲೀಲೆ ಜನ್ನ ನಿಜಗುಣ ಶಿವಯೋಗಿ ನಿತ್ಯಾತ್ಮಶುಕ ಕವಿ ನಯಸೇನ ನಾಗಚಂದ್ರ ನಾಗವರ್ಮ ನೇಮಿಚಂದ್ರ ಪಂಪ ಪುರಂದರದಾಸ ಪುಲಿಗೆರೆ ಸೋಮನಾಥ ಪೊನ್ನ ಬಸವೇಶ್ವರ ಭಟ್ಟಾಕಳಂಕ ಮಗ್ಗೆಯ ಮಾಯಿದೇವ ಮಹಲಿಂಗರಂಗ ಮುದ್ದಣ ಮುಪ್ಪಿನ ಷಡಕ್ಷರಿ ರತ್ನಾಕರ ವರ್ಣಿ ರನ್ನ ರಾಘವಾಂಕ ರುದ್ರಭಟ್ಟ ಲಕ್ಷ್ಮೀಶ ವಾದಿರಾಜರು ಶ್ರೀಪಾದರಾಜರು ಶಿವಕೋಟಿ ಆಚಾರ್ಯ ಶಿಶುನಾಳ ಶರೀಫರು ಷಡಕ್ಷರದೇವ ಸಂಚಿ ಹೊನ್ನಮ್ಮ - ಹದಿಬದೆಯ ಧರ್ಮ ಸರ್ವಜ್ಞ ಹರಿಹರ ಹೆಳವನಕಟ್ಟೆ ಗಿರಿಯಮ್ಮ ಮಡಿವಾಳ ಮಾಚಯ್ಯ -ವಚನಕಾರರು ವರ್ತಮಾನ ಸಾಹಿತಿಗಳು ಅ.ನ. ಕೃಷ್ಣರಾಯ ಅ.ನಾ.ಪ್ರಹ್ಲಾದ ರಾವ್ ಅ.ರಾ.ಮಿತ್ರ ಅ.ರಾ.ಸೇತೂರಾಮರಾವ್ ಅಕಬರ ಅಲಿ ಅದೀಬ್ ಅಖ್ತರ್ ಅನಂತ ಕಲ್ಲೋಳ ಅನಸೂಯಾ ರಾಮರೆಡ್ಡಿ ಅನಸೂಯಾ ಸಿದ್ದರಾಮ ಕೆ. ಅನಸೂಯಾದೇವಿ ಅನುಪಮಾ ನಿರಂಜನ ಅಪರಂಜಿ ಶಿವು ಅಬ್ದುಲ್ ಮಜೀದ ಖಾನ್ ಅಬ್ದುಲ್ ರಶೀದ ಖಾನ್ ಅಮರೇಶ ನುಗಡೋಣಿ ಅಮೃತೇಶ್ವರ ತಂಡರ ಅರವಿಂದ ನಾಡಕರ್ಣಿ ಅರವಿಂದ ಮಾಲಗತ್ತಿ ಅರಳುಮಲ್ಲಿಗೆ ಪಾರ್ಥಸಾರಥಿ ಅರ್ಚಿಕ ವೆಂಕಟೇಶ ಅಲ್ಲಮಪ್ರಭು ಬೆಟ್ಟದೂರ ಅಶ್ವತ್ಥ ಅಶ್ವಿನಿ ಅಶೋಕ ಚೊಳಚಗುಡ್ಡ ಅಶೋಕ ಶೆಟ್ಟರ ಆ.ನೇ.ಉಪಾಧ್ಯೆ ಆದ್ಯ ರಾಮಾಚಾರ್ಯ ಆನಂದ ಆನಂದ ಝುಂಜರವಾಡ ಆನಂದಕಂದ(ಬೆಟಗೇರಿ ಕೃಷ್ಣಶರ್ಮ) ಆರ್.ಇಂದಿರಾ ಆರ್.ಕಲ್ಯಾಣಮ್ಮ ಆರ್.ಕೆ.ನಾರಾಯಣ್ ಆರ್.ಜಿ.ಮಠಪತಿ ಆರ್.ಡಿ.ಕಾಮತ ಆರ್.ತಾತಾಚಾರ್ಯ ಆರ್.ನರಸಿಂಹಾಚಾರ್ ಆರ್.ಭರತಾದ್ರಿ ಆರ್.ವಿ.ಭಂಡಾರಿ ಆರ್.ಸಿ.ಹಿರೇಮಠ ಆರ್ಯ ಆಲೂರು ವೆಂಕಟರಾಯರು ಇಂದೂಧರ ಹೊನ್ನಾಪುರ ಇಟಗಿ ರಾಘವೇಂದ್ರ ಈಚನೂರು ಜಯಲಕ್ಷ್ಮಿ ಈಚನೂರು ಶಾಂತಾ ಈಶ್ವರ ಕಮ್ಮಾರ ಈಶ್ವರ ಸಣಕಲ್ಲ ಈಶ್ವರಚಂದ್ರ ಉತ್ತಂಗಿ ಚನ್ನಪ್ಪ ಉದಯ ಶಂಕರ ಪುರಾಣಿಕ ಉಮಾ ರಾವ್ ಉಷಾ ನವರತ್ನರಾಂ ಉಷಾ ಪಿ. ರೈ ಉಷಾದೇವಿ ಎ.ಆರ್.ಕೃಷ್ಣಶಾಸ್ತ್ರಿ ಎ.ಎನ್.ಮೂರ್ತಿ ರಾವ್ ಎ.ಎಸ್. ಪುತ್ತಿಗೆ ಎ.ಪಂಕಜಾ ಎ.ಪಿ.ಮಾಲತಿ ಎಂ. ಚಿದಾನಂದ ಮೂರ್ತಿ ಎಂ. ಮರಿಯಪ್ಪ ಭಟ್ಟ ಎಂ.ಆರ್.ಕಮಲ ಎಂ.ಆರ್.ಲಕ್ಷ್ಮಮ್ಮ ಎಂ.ಎಂ.ಕಲಬುರ್ಗಿ ಎಂ.ಎಸ್.ಕೆ.ಪ್ರಭು ಎಂ.ಎಸ್.ಪುಟ್ಟಣ್ಣ ಎಂ.ಎಸ್.ವೇದಾ ಎಂ.ಎಸ್.ಸುಂಕಾಪುರ ಎಂ.ಜಿ.ಭೀಮರಾವ್ ಎಂ.ಜೀವನ ಎಂ.ಡಿ.ಗೋಗೇರಿ ಎಂ.ಡಿ.ಒಕ್ಕುಂದ ಎಂ.ಬಿ.ನೇಗಿನಹಾಳ ಎಂ.ವಾಸುದೇವರಾವ್ ಎಂ.ವಿ.ಸೀತಾರಾಮಯ್ಯ ಎಂ.ವೆಂಕಟಕೃಷ್ಣಯ್ಯ ಎಂ.ಶಿವಾಜಿರಾವ್ ಎಚ್. ತಿಪ್ಪೇರುದ್ರಸ್ವಾಮಿ ಎಚ್.ಆರ್.ಇಂದಿರಾ ಎಚ್.ಎಲ್.ಕೇಶವಮೂರ್ತಿ ಎಚ್.ಎಸ್.ಪಾರ್ವತಿ ಎಚ್.ಎಸ್.ಮುಕ್ತಾಯಕ್ಕ ಎಚ್.ಎಸ್.ವೆಂಕಟೇಶಮೂರ್ತಿ ಎಚ್.ಎಸ್.ಶಿವಪ್ರಕಾಶ್ ಎಚ್.ಎಸ್.ಶ್ರೀಮತಿ ಎಚ್.ಎಸ್.ಸುಜಾತಾ ಎಚ್.ಕೆ.ಅನಂತರಾವ್ ಎಚ್.ಕೆ.ರಂಗನಾಥ್ ಎಚ್.ಗಿರಿಜಮ್ಮ ಎಚ್.ಜಿ.ರಾಧಾದೇವಿ ಎಚ್.ಎನ್.ಶಿವಪ್ರಕಾಶ್ ಎಚ್.ಎಲ್.ಪುಷ್ಪಾ ಎಚ್.ಪಿ.ಜೋಶಿ ಎಚ್.ಬಿ.ಚಂಪಕಮಾಲಾ ಎಚ್.ವಾಯ್.ಶಾರದಾಪ್ರಸಾದ ಎಚ್.ವಿ.ನಂಜುಂಡಯ್ಯ ಎಚ್.ವಿ.ನಾಗೇಶ ಎಚ್.ವಿ.ಸಾವಿತ್ರಮ್ಮ ಎನ್.ಎಸ್.ಚಿದಂಬರರಾವ್ ಎನ್.ಎಸ್.ತಾರಾನಾಥ ಎನ್.ಎಸ್.ನದಾಫ ಎನ್.ಎಸ್.ಲಕ್ಷ್ಮಿನಾರಾಯಣ ಭಟ್ಟ ಎನ್.ಎಸ್.ಸುಬ್ಬರಾವ್ ಎನ್.ಕೆ.ಕುಲಕರ್ಣಿ ಎನ್.ಕೆ.ಜೋಗಳೇಕರ ಎನ್.ನರಸಿಂಹಯ್ಯ ಎನ್.ಪಂಕಜಾ ಎನ್.ಪ್ರಭಾಕರ ಎಮ್.ಆರ್.ಶ್ರೀನಿವಾಸಮೂರ್ತಿ ಎಮ್.ಎಸ್.ನರಸಿಂಹಮೂರ್ತಿ ಎಮ್.ಕೆ.ಇಂದಿರಾ ಎಮ್.ಕೆ.ಗೋಪಿನಾಥ ಎಮ್.ಕೆ.ಜಯಲಕ್ಷ್ಮಿ ಎಮ್.ಕೆ.ವರಗಿರಿ ಎಮ್.ಪಿ.ಉಮಾದೇವಿ ಎಮ್.ಪಿ.ಮನೋಹರಚಂದ್ರನ್ ಎಮ್.ಬಿ.ಅಡ್ನೂರ ಎಮ್.ರಾಮಮೂರ್ತಿ ಎಮ್.ಸಿ.ಪದ್ಮಾ ಎಲ್.ಎಸ್.ಶೇಷಗಿರಿರಾವ ಎಲ್.ಗುಂಡಪ್ಪ ಎಲ್.ಜಿ.ಸುಮಿತ್ರಾ ಎಲ್.ಬಸವರಾಜು ಎಲ್.ಹನುಮಂತಯ್ಯ ಎಸ್ ಎಲ್ ಭೈರಪ್ಪ ಎಸ್.ಅನಂತನಾರಾಯಣ ಎಸ್.ಎ.ಕೃಷ್ಣಯ್ಯ ಎಸ್.ಎನ್.ಶಿವಸ್ವಾಮಿ ಎಸ್.ಎಸ್.ಬಸವನಾಳ ಎಸ್.ಎಸ್.ಮಾಳವಾಡ ಎಸ್.ಕೆ.ಜೋಶಿ ಎಸ್.ಕೆ.ರಮಾದೇವಮ್ಮ ಎಸ್.ದಿವಾಕರ ಎಸ್.ಮಂಗಳಾ ಸತ್ಯನ್ ಎಸ್.ಮಂಜುನಾಥ ಎಸ್.ರಾಮಮೂರ್ತಿ ಎಸ್.ವಿ.ಪರಮೇಶ್ವರ ಭಟ್ಟ ಎಸ್.ವಿ.ರಂಗಣ್ಣ ಎಸ್.ವಿ.ಶ್ರೀನಿವಾಸರಾವ್ ಎಸ್.ಶೆಟ್ಟರ್ ಎಸ್.ಸಿ.ನಂದೀಮಠ ಏ.ಕೆ.ರಾಮಾನುಜನ್ ಓ.ಎಲ್.ಎನ್.ಸ್ವಾಮಿ ಕ.ವೆಂ.ರಾಜಗೋಪಾಲ ಕಡೆಂಗೋಡ್ಲು ಶಂಕರಭಟ್ಟ ಕಮಲಾ ಹಂಪನಾ ಕಮಲಾ ಹೆಮ್ಮಿಗೆ ಕಯ್ಯಾರ ಕಿಞಞಣ್ಣ ರೈ ಕರ್ಪೂರ ಶ್ರೀನಿವಾಸರಾವ್ ಕಲ್ಲಿನಾಥ ಶಾಸ್ತ್ರೀ ಪುರಾಣಿಕ ಕವಿತಾ ಕೃಷ್ಣ ಕಾಕೋಳು ರಾಮಯ್ಯ ಕಾಕೋಳು ಸರೋಜಾರಾವ್ ಕಾವ್ಯಾನಂದ (ಪುಣೇಕರ) ಕಾಳೇಗೌಡ ನಾಗವಾರ ರೆವರೆಂಡ ಕಿಟ್ಟೆಲ್ ಕೀರ್ತಿನಾಥ ಕುರ್ತಕೋಟಿ ಕು.ಶಿ.ಹರಿದಾಸ ಭಟ್ಟ ಕುಂ.ವೀರಭದ್ರಪ್ಪ ಕುಮಾರ ಕಕ್ಕಯ್ಯ ಪೋಳ ಕುಮಾರ ನಿಜಗುಣರು ಕುಮಾರ ವೆಂಕಣ್ಣ ಕುಮುದಾ ಪುರುಷೋತ್ತಮ್ ಕುಲಶೇಖರಿ ಕುವೆಂಪು ಕುಸುಮ ಕರಾಳೆ ಕುಸುಮಾಕರ ದೇವರಗೆಣ್ಣೂರು ಕೃಷ್ಣ ಸುಬ್ಬರಾವ್ ಕೃಷ್ಣಕುಮಾರ ಕಲ್ಲೂರ ಕೃಷ್ಣಮೂರ್ತಿ ಪುರಾಣಿಕ ಕೃಷ್ಣಾನಂದ ಕಾಮತ ಕೆ.ಆರ್.ಪದ್ಮಜಾ ಕೆ.ಆರ್.ಪದ್ಮಾ ಕೆ.ಎಚ್.ಶ್ರೀನಿವಾಸ್ ಕೆ.ಎಸ್. ನಿಸಾರ್ ಅಹಮದ್ ಕೆ.ಎಸ್.ನರಸಿಂಹಸ್ವಾಮಿ ಕೆ.ಎಸ್.ನಾರಾಯಣಸ್ವಾಮಿ ಕೆ.ಎಸ್.ರಾಮಕೃಷ್ಣಮೂರ್ತಿ ಕೆ.ಕೇಶವಶರ್ಮ ಕೆ.ಕೃಷ್ಣಮೂರ್ತಿ ಕೆ.ಗೋಪಾಲಕೃಷ್ಣರಾವ ಕೆ.ಜಿ.ಕುಂದಣಗಾರ ಕೆ.ಟಿ.ಗಟ್ಟಿ ಕೆ.ಪಿ.ಪುಟ್ಟಣ್ಣ ಶೆಟ್ಟಿ ಕೆ.ಬಿ.ಸಿದ್ದಯ್ಯ ಕೆ.ಮರುಳಸಿದ್ದಪ್ಪ ಕೆ.ವಿ.ಅಯ್ಯರ್ ಕೆ.ವಿ.ತಿರುಮಲೇಶ ಕೆ.ವಿ.ರಾಜೇಶ್ವರಿ ಕೆ.ವಿ.ಸುಬ್ಬಣ್ಣ ಕೆ.ಶರೀಫಾ ಕೆ.ಸಚ್ಚಿದಾನಂದಯ್ಯ ಕೆ.ಸರೋಜಾ ಕೆರೂರು ವಾಸುದೇವಾಚಾರ್ಯ ಕೇಫ ಕೈವಾರ ರಾಜಾರಾವ್ ಕೊ.ಚನ್ನಬಸಪ್ಪ ಕೊಡಗಿನ ಗೌರಮ್ಮ ಕೌಸಲ್ಯಾ ಧರಣೇಂದ್ರ ಕೈವಾರ ಗೋಪಿನಾಥ್ ಕ್ಯಾತ್ಸಂದ್ರ ಚಂದ್ರಶೇಖರ್ ಖಾದ್ರಿ ಶಾಮಣ್ಣ ಗಂಗಾಧರ ಚಿತ್ತಾಲ ಗಂಗಾಧರ ಮಡಿವಾಳೇಶ್ವರ ತುರಮರಿ 'ಗಂಗಾ'ಪಾದೇಕಲ್ ಗಂಗಾರಾಮ ಚಂಡಾಳ ಗಂಗಾಸ್ವಾಮಿ ಗದಿಗೆಯ್ಯ ಹುಚ್ಚಯ್ಯ ಹೊನ್ನಾಪುರಮಠ ಗವಿಸಿದ್ಧ ಎನ್.ಬಳ್ಳಾರಿ ಗಾಯತ್ರಿ ನಾವಡ ಗಾಯತ್ರಿ ಮೂರ್ತಿ ಗಿರಡ್ಡಿ ಗೋವಿಂದರಾಜ ಗಿರೀಶ ಕಾರ್ನಾಡ ಗಿರೀಶ್ ರಾವ್ ಎಚ್.-ಜೋಗಿ ಗೀತಾ ಕುಲಕರ್ಣಿ ಗೀತಾ ನಾಗಭೂಷಣ ಗೀತಾ ಮೋಹನ ಮುರಲಿ ಗೀತಾ ವಸಂತ ಗೀತಾ ಸಿ.ವಿ. ಗೀತಾ ಸೀತಾರಾಂ ಗುಂಡಾ ಜೋಯಿಸ ಗುರುದೇವಿ ಹುಲೆಪ್ಪನವರಮಠ ಗುರುಪ್ರಸಾದ ಕಾಗಿನೆಲೆ ಗುರುರಾಜ ಜೋಶಿ ಗುರುಲಿಂಗ ಕಾಪಸೆ ಗುಲ್ವಾಡಿ ವೆಂಕಟರಾಯರು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಗೋಪಾಲ ಕೃಷ್ಣ ಅಡಿಗ ಗೋಪಾಲಕೃಷ್ಣ ನಾಯಕ ಗೋವಿಂದಮೂರ್ತಿ ದೇಸಾಯಿ ಗೌರೀಶ ಕಾಯ್ಕಿಣಿ ಚ.ಸರ್ವಮಂಗಳ ಚಂದ್ರಕಲಾ ನಂದಾವರ ಚಂದ್ರಕಾಂತ ಕುಸನೂರ ಚಂದ್ರಕಾಂತ ಪೋಕಳೆ ಚಂದ್ರಕುಮಾರ (ಸಾಹಿತಿ) ಚಂದ್ರಭಾಗಾದೇವಿ ಚಂದ್ರಶೇಖರ ಕಂಬಾರ ಚಂದ್ರಶೇಖರ ಪಾಟೀಲ ಚಂದ್ರಿಕಾ ಪುರಾಣಿಕ ಚ.ಸರ್ವಮಂಗಳ ಚದುರಂಗ ಚನ್ನವೀರ ಕಣವಿ ಚಿ.ನ.ಮಂಗಳಾ ಚಿ.ಶ್ರೀನಿವಾಸರಾಜು ಚಿತ್ರಲೇಖಾ ಚಿನ್ನ ಚುರಮರಿ ಶೇಷಗಿರಿರಾಯರು ಚೆ. ಎ. ಕವಲಿ - ಕನ್ನಡ ಕಸ್ತೂರಿ ಕೋಶ ಚೆನ್ನ ಕವಿಗಳು ಚೆನ್ನಕ್ಕಾ ಪಾವಟೆ (ಎಲಿಗಾರ) ಚೆನ್ನಣ್ಣ ವಾಲೀಕಾರ ಛಾಯಾದೇವಿ ನಂಜಪ್ಪ ಜ.ಚ.ನಿ. ಜಂಬಣ್ಣ ಅಮರಚಿಂತ ಜಗದೀಶ ಮಂಗಳೂರಮಠ ಜಗ್ಗು ಪ್ರಿಯದರ್ಶಿನಿ ಜನಾರ್ದನ ಗುರ್ಕಾರ ಜನಾರ್ದನ ನಾಯಕ ಜಯಂತ ಕಾಯ್ಕಿಣಿ ಜಯತೀರ್ಥ ರಾಜಪುರೋಹಿತ ಜಯದೇವಿತಾಯಿ ಲಿಗಾಡೆ ಜಯಲಕ್ಷ್ಮಿ ಶ್ರೀನಿವಾಸನ್ ಜಯಶ್ರೀ ದೇಶಪಾಂಡೆ ಜಿ ಪಿ ರಾಜರತ್ನಮ್ ಜಿ. ಎಸ್. ಶಿವರುದ್ರಪ್ಪ ಜಿ.ಅಬ್ದುಲ್ ಬಷೀರ್ ಜಿ.ಆರ್.ಪಾಂಡೇಶ್ವರ ಜಿ.ಎಚ್.ನಾಯಕ ಜಿ.ಎಮ್.ಹೆಗಡೆ ಜಿ.ಎಸ್.ಆಮೂರ ಜಿ.ಎಸ್.ಗಾಯಿ ಜಿ.ಎಸ್.ಸದಾಶಿವ ಜಿ.ಕೃಷ್ಣರಾವ್ ಜಿ.ಡಿ.ಜೋಶಿ ಜಿ.ನಾರಾಯಣ ಜಿ.ಬಿ.ಜೋಶಿ(ಜಡಭರತ) ಜಿ.ವಿ.ಕುಲಕರ್ಣಿ ಜಿಂದೆ ನಂಜುಂಡಸ್ವಾಮಿ ಜ್ಯೋತ್ಸ್ನಾ ಕಾಮತ ಟಿ ಪಿ ಕೈಲಾಸಮ್ ಟಿ.ಎನ್.ನಾಗರತ್ನ ಟಿ.ಎನ್.ಮಹಾದೇವಯ್ಯ ಟಿ.ಎಸ್.ರಾಮಚಂದ್ರರಾವ್ ಟಿ.ಎಸ್.ವೆಂಕಣ್ಣಯ್ಯ ಟಿ.ಕೆ.ರಾಮರಾವ್ ಟಿ.ಗಿರಿಜಾ ಟಿ.ಜಿ.ರಾಘವ ಟಿ.ಪಿ.ಅಶೋಕ ಟಿ.ಶಾಂತಿ ಟಿ.ಸಿ.ಪೂರ್ಣಿಮಾ ಟಿ.ಸುನಂದಮ್ಮ ಡಿ.ಎನ್.ಶ್ರೀನಾಥ್ ಡಿ.ಎಲ್.ನರಸಿಂಹಾಚಾರ್ ಡಿ.ಎಸ್.ಕರ್ಕಿ ಡಿ.ಎಸ್.ನಾಗಭೂಷಣ ಡಿ.ಜೆ.ಮಂಜುನಾಥ ಡಿ.ಜಿ.ಜೋಶಿ ಡಿ.ಬಿ.ಢಂಗ ಡಿ.ಬಿ.ರಜಿಯಾ ಡಿ.ವಿ.ಗುಂಡಪ್ಪ ಡುಂಡಿರಾಜ್ ತ.ಸು.ಶಾಮರಾವ್ ತ.ಪು.ವೆಂಕಟರಾಮ್ ತನುಜಾ ತರಾಸು ತಾರಾ ಸತ್ಯನಾರಾಯಣ ತಾಳ್ತಜೆ ವಸಂತಕುಮಾರ ತಿರುಕ ತಿರುಮಲೆ ತಾತಾಚಾರ್ಯ ಶರ್ಮ ತೀ ನಂ ಶ್ರೀ ತುರುವೇಕೆರೆ ಪ್ರಸಾದ್ ತುಳಸಿ ವೇಣುಗೋಪಾಲ್ ತೇಜಸ್ವಿ ಕಟ್ಟೀಮನಿ ತ್ರಿವೇಣಿ ದ ರಾ ಬೇಂದ್ರೆ ದ.ಬಾ.ಕುಲಕರ್ಣಿ ದಮಯಂತಿ ನರೇಗಲ್ ದಾಶರಥಿ ದೀಕ್ಷಿತ ದ್ಯಾವನೂರು ಮಂಜುನಾಥ್ ದಿನಕರ ದೇಸಾಯಿ ದೀಪಾ ದು.ನಿಂ.ಬೆಳಗಲಿ ದೇ.ಜವರೆಗೌಡ ದೇವಕಿ ಮೂರ್ತಿ ದೇವನೂರು ಮಹಾದೇವ ದೇವುಡು ನರಸಿಂಹ ಶಾಸ್ತ್ರೀ ದೇವೇಂದ್ರಕುಮಾರ ಹಕಾರಿ ದೇಶಹಳ್ಳಿ ಜಿ.ನಾರಾಯಣ ದೊಡ್ಡೇರಿ ವೆಂಕಟಗಿರಿ ರಾವ್ ಧಾರಿಣಿ ಧೋಂಡೊ ನರಸಿಂಹ ಮುಳಬಾಗಲ ನಂಜನಗೂಡು ತಿರುಮಲಾಂಬ ನಜೀರ ಚಂದಾವರ ನರಹಳ್ಳಿ ಬಾಲಸುಬ್ರಹ್ಮಣ್ಯ ನರೇಂದ್ರ ಶಶಿಧರ ನವಗಿರಿನಂದ ನವರತ್ನರಾಂ ನಾ. ಕಸ್ತೂರಿ ನಾ.ಡಿಸೋಜಾ ನಾ.ಮೊಗಸಾಲೆ ನಾ.ಶ್ರೀ.ರಾಜಪುರೋಹಿತ ನಾ.ಸು.ಭರತನಹಳ್ಳಿ ನಾಗವೇಣಿ ಎಚ್ ನಾಗೇಶ ಹೆಗಡೆ ನಾಡಿಗ ಕೃಷ್ಣಮೂರ್ತಿ ನಾಡಿಗೇರ ಕೃಷ್ಣರಾವ್ ನಿರಂಜನ ನಿರುಪಮಾ ನೀರಗುಂದ ಕೇಶವಮೂರ್ತಿರಾವ್ ನೀಲಾಂಬರಿ ನೀಳಾದೇವಿ ನೇಮಿಚಂದ್ರ (ಲೇಖಕಿ) ಪಂಚಾಕ್ಷರಿ ಹಿರೇಮಠ ಪಂಜೆ ಮಂಗೇಶರಾಯರು ಪಂಡರಿನಾಥಾಚಾರ್ಯ ಗಲಗಲಿ ಪುಂಡಲೀಕ ಶೇಠ ಪಡುಕೋಣೆ ರಮಾನಂದ ಪದ್ಮಜಾ ಉಮರ್ಜಿ ಪದ್ಮಾ ಶೆಣೈ ಪರ್ವತವಾಣಿ ಪಳಕಳ ಸೀತಾರಾಮ ಭಟ್ಟ ಪಾ.ವೆಂ.ಆಚಾರ್ಯ(ಲಾಂಗೂಲಾಚಾರ್ಯ) ಪಾಟೀಲ ಪುಟ್ಟಪ್ಪ ಪಾರ್ವತಿ ಜಿ.ಐತಾಳ ಪಿ ಲಂಕೇಶ್ ಪಿ.ಆರ್.ರಾಮಯ್ಯ ಪಿ.ಎಸ್.ರಾಮಾನುಜಂ ಪಿ.ಬಿ.ಕಲ್ಲಾಪುರ ಪಿ.ಬಿ.ದೇಸಾಯಿ-ಸಂಶೋಧಕರು ಪಿ.ವಿ.ನಾರಾಯಣ ಪು.ತಿ.ನರಸಿಂಹಾಚಾರ್ ಪುಲಿಕೇಶಿ ಪೂರ್ಣಚಂದ್ರ ತೇಜಸ್ವಿ ಪೂರ್ಣಿಮಾ ಗುಡಿಬಂಡೆ ಪ್ರಕಾಶ ಕಂಬತ್ತಳ್ಳಿ ಪ್ರತಿಭಾ ನಂದಕುಮಾರ್ ಪ್ರಭಾ ಪ್ರಭುಶಂಕರ ಪ್ರಮೀಳಾ ದೇಶಪಾಂಡೆ ಪ್ರಹ್ಲಾದ ಅಗಸನಕಟ್ಟೆ ಪ್ರಾಣೇಶ ಗುಡಿ ಪ್ರೇಮಾ ತಾಶೀಲ್ದಾರ್ ಪ್ರೇಮಾ ಭಟ್ ಫ.ಗು.ಹಳಕಟ್ಟಿ ಫಕೀರ ಮಹಮದ್ ಕಟ್ಪಾಡಿ ರೆವರೆಂಡ ಫ್ರೆಡ್ರಿಕ್ ಝೀಗ್ಲರ ಬಂಜಗೆರೆ ಜಯಪ್ರಕಾಶ ಬರಗೂರು ರಾಮಚಂದ್ರಪ್ಪ ಬಸವರಾಜ ಕಟ್ಟೀಮನಿ ಬಸವರಾಜ ಡೋಣೂರ ಬಸವರಾಜ ನಾಯ್ಕರ ಬಸವರಾಜ ಪುರಾಣಿಕ ಬಸವರಾಜ ಸಬರದ ಬಸವರಾಜ ಸಾದರ ಬಾಗಲೋಡಿ ದೇವರಾಯ ಬಾನು ಮುಷ್ತಾಕ್ ಬಾನಂದೂರು ಕೆಂಪಯ್ಯ ಬಾಳಾಸಾಹೇಬ ಲೋಕಾಪುರ ಬಿ ಎಂ ಶ್ರೀ ಬಿ. ಪುಟ್ಟಸ್ವಾಮಯ್ಯ ಬಿ.ಆರ್.ಲಕ್ಷ್ಮಣರಾವ್ ಬಿ.ಎ.ಸನದಿ ಬಿ.ಎ.ಸಾಲೆತೊರೆ ಬಿ.ಎಚ್.ಶ್ರೀಧರ ಬಿ.ಎಚ್.ಸಂಜೀವಮೂರ್ತಿ ಬಿ.ಎಮ್.ರಶೀದ ಬಿ.ಎನ್.ಸುಮಿತ್ರಾಬಾಯಿ ಬಿ.ಎಲ್.ವೇಣು ಬಿ.ಎಸ್.ಕೇಶವರಾವ್ ಬಿ.ಎಸ್.ವೆಂಕಟಲಕ್ಷ್ಮಿ ಬಿ.ಕೆ.ಸುಂದರರಾಜ್ ಬಿ.ಚಿನ್ನಸ್ವಾಮಿ ಬಿ.ಜಿ.ಎಲ್.ಸ್ವಾಮಿ ಬಿ.ಜಿ.ಸತ್ಯಮೂರ್ತಿ ಬಿ.ಟಿ.ಲಲಿತಾ ನಾಯಕ್ ಬಿ.ನಾಗೇಂದ್ರ ಬಿ.ಪಿ.ಕಾಳೆ ಬಿ.ಬಿ.ಬಿರಾದಾರ ಬಿ.ವಿ.ಅನಂತರಾಮ್ ಬಿ.ವಿ.ವೈಕುಂಠರಾಜು ಬಿ.ವೆಂಕಟಾಚಾರ್ಯ ಬಿ.ಶಿವಮೂರ್ತಿಶಾಸ್ತ್ರಿ ಬಿ.ಸಿ.ರಾಮಚಂದ್ರ ಶರ್ಮ ಬಿಂಡಿಗನವಿಲೆ ಭಗವಾನ್ ಬೀchi ಬುದ್ದಣ್ಣ ಹಿಂಗಮಿರೆ ಬೆನಗಲ್ ರಾಮರಾವ್ ಬೆಸಗರಹಳ್ಳಿ ರಾಮಣ್ಣ ಬೆಳಗೆರೆ ಕೃಷ್ಣಶಾಸ್ತ್ರಿ ಬೆಳಗೆರೆ ಜಾನಕಮ್ಮ ಬೆಳಗೆರೆ ಪಾರ್ವತಮ್ಮ ಬೆಳ್ಳಾವೆ ವೆಂಕಟನಾರಣಪ್ಪ ಬೇಲೂರು ರಾಮಮೂರ್ತಿ ಬೊಳುವಾರು ಮಹಮದ್ ಕುಂಞ್ ಭಾಗೀರಥಿ ಹೆಗಡೆ ಭಾರತೀ ಭಾರತೀಸುತ ಭಾಲಚಂದ್ರ ಘಾಣೇಕರ ಭೀಮಾಜಿ ಜೀವಾಜಿ ಹುಲಕವಿ ಭುವನೇಶ್ವರಿ ಹೆಗಡೆ ಮಂಜೇಶ್ವರ ಗೋವಿಂದ ಪೈ ಮಂಡಿಹಳ್ಳಿ ಶ್ರೀಧರಮೂರ್ತಿ ಮಂದಾಕಿನಿ ಪುರೋಹಿತ ಮ.ನ.ಜವರಯ್ಯ ಮಧು ವೆಂಕರೆಡ್ಡಿ ಮಧುರಚೆನ್ನ ಮನು ಮನು ಬಳಗಾರ ಮನೋಹರ ಭಾಲಚಂದ್ರ ಘಾಣೇಕರ ಮನೋಹರ ಮಾಳಗಾವಕರ ಮಮತಾ ಜಿ.ಸಾಗರ ಮಲ್ಲಿಕಾ ಮಲ್ಲಿಕಾ ಘಂಟಿ ಮಲ್ಲಿಕಾರ್ಜುನ ಸಿಂದಗಿ ಮಲ್ಲೇಪುರಂ ಜಿ.ವೆಂಕಟೇಶ ಮಹಮ್ಮದ ಅಲಿ ಗೂಡುಭಾಯಿ ಮಾ.ನ.ಚೌಡಪ್ಪ ಮಾ.ಭೀ.ಶೇಷಗಿರಿರಾವ್ ಮಾತೆ ಮಹಾದೇವಿ ಮಾಧವ ಐತಾಳ ಮಾಧವಿ ಭಂಡಾರಿ ಮಾಲತಿ ಪಟ್ಟಣಶೆಟ್ಟಿ ಮಾಲತಿ ರಾವ್ ಮಾವಿನಕೆರೆ ರಂಗನಾಥನ್ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮಿತ್ರಾ ವೆಂಕಟ್ರಾಜ್ ಮಿರ್ಜಿ ಅಣ್ಣಾರಾಯರು ಮೀರಾ ಚಕ್ರವರ್ತಿ ಮುದವೀಡು ಕೃಷ್ಣರಾಯರು ಮುದೇನೂರು ಸಂಗಣ್ಣ ಮುನಿ ವೆಂಕಟಪ್ಪ ಮುಮ್ತಾಜ ಬೇಗಮ್ ಮುಮ್ತಾಜ್ ಮುಳಿಯ ತಿಮ್ಮಪ್ಪಯ್ಯ ಮುಳ್ಳೂರ ನಾಗರಾಜ ಮೇವುಂಡಿ ಮಲ್ಲಾರಿ ಮೈ.ಸು.ಶೇಷಗಿರಿರಾವ್ ಮೊಗಳ್ಳಿ ಗಣೇಶ ಮೊಹರೆ ಹನುಮಂತರಾಯರು ಯಶವಂತ ಚಿತ್ತಾಲ ಯು ಆರ್ ಅನಂತಮೂರ್ತಿ ರಂ.ಶಾ. ರಂ.ಶ್ರೀ.ಮುಗಳಿ ರಂಗನಾಥ ದಿವಾಕರ ರಂಜಾನ ದರ್ಗಾ ರಜಿಯಾ ಬಳಬಟ್ಟೆ ರಘುನಾಥ ಭಟ್ಟ ರಘುಸುತ ರತ್ನಮ್ಮ ಸುಂದರರಾವ್ ರವೀಂದ್ರ ಮಾವಖಂಡ ರಮಾನಂದ ಅಮೀನ ರಮೇಶ ರಸಿಕ ಪುತ್ತಿಗೆ ರಹಮತ್ ತರೀಕೆರೆ ರಾ.ಯ.ಧಾರವಾಡಕರ ರಾ.ಹ.ದೇಶಪಾಂಡೆ ರಾಗೌ ರಾಘವೇಂದ್ರ ಖಾಸನೀಸ ರಾಘವೇಂದ್ರ ಪಾಟೀಲ ರಾಜಲಕ್ಷ್ಮಿ ಎನ್.ರಾವ ರಾಜಶೇಖರ ನೀರಮಾನ್ವಿ ರಾಜಶೇಖರ ಭೂಸನೂರುಮಠ ರಾಜಾ ರಾವ್ ರಾಜೀವ ದೇಶಪಾಂಡೆ ರಾಮಚಂದ್ರ ಕುಲಕರ್ಣಿ ರಾಮಚಂದ್ರ ಕೊಟ್ಟಲಗಿ ರಾಮಚಂದ್ರ ಪಾಟೀಲ ರಾಮಚಂದ್ರ ಭಾವೆ ರಾಮಮೂರ್ತಿ ತೆನೆಮನೆ ರಾವಬಹಾದ್ದೂರ(ಆರ್.ಬಿ.ಕುಲಕರ್ಣಿ) ರೇಖಾ ಕಾಖಂಡಕಿ ರೊದ್ದ ಶ್ರೀನಿವಾಸರಾವ್ ಲತಾ ಗುತ್ತಿ ಲತಾ ರಾಜಶೇಖರ್ ಬಿ.ಟಿ.ಲಲಿತಾ ನಾಯಕ ಲಲಿತಾಂಬ ವೃಷಭೇಂದ್ರಸ್ವಾಮಿ ಲಲಿತಾಂಬಾ ಚಂದ್ರಶೇಖರ್ ಲೀಲಾ ಕಲಕೋಟಿ ಲೀಲಾ ಶೇಖರ್ ಲೀಲಾದೇವಿ ಆರ್.ಪ್ರಸಾದ ಲೋಕನಾಥ ದೀಕ್ಷಿತ್ ಲೋಹಿತ ನಾಯ್ಕರ ವರದರಾಜ ಹುಯಿಲಗೋಳ ವರದಾ ಶ್ರೀನಿವಾಸ ವಸಂತ ಕವಲಿ ವಸಂತ ಅಗಸಿಮನಿ ವಸಂತ ಕುಷ್ಟಗಿ ವಸಂತಕುಮಾರ ಪೆರ್ಲ ವಸಂತೀಚಂದ್ರ ವಸುಧೇಂದ್ರ ವಾಣಿ(ಬಿ.ಎನ್.ಸುಬ್ಬಮ್ಮ) ವಾಮನ ಬೇಂದ್ರೆ ವಿ.ಆರ್.ಉಮರ್ಜಿ ವಿ.ಎ.ಜೋಶಿ ವಿ ಕೆ ಗೋಕಾಕ್ ವಿ.ಎಮ್.ಇನಾಮದಾರ ವಿ.ಜಿ.ದೀಕ್ಷಿತ ವಿ.ಜಿ.ಭಟ್ಟ ವಿ.ಬಾಲಕೃಷ್ಣ ಶಿರ್ವ ವಿ.ಸಿ.ಐರಸಂಗ ವಿ.ಸೀತಾರಾಮಯ್ಯ ವಿಜಯ ಸಾಸನೂರ ವಿಜಯಶ್ರೀ ವಿಜಯಶ್ರೀ ಸಬರದ ವಿಜಯಾ ವಿಜಯಾ ದಬ್ಬೆ ವಿಜಯಾ ಸುಧಾಕರ ವಿಜಯಾ ಸುಬ್ಬರಾಜ್ ವಿದ್ಯಾ ಕುಂದರಗಿ ವಿದ್ಯುಲ್ಲತಾ ವಿನಯ ನಾಯಕ ವಿಮಲಾ ವಿಮಲಾ ರಾಘವೇಂದ್ರ ವಿವೇಕ ಶಾನಭಾಗ ವಿಶಾಲಾಕ್ಷಿ ದಕ್ಷಿಣಾಮೂರ್ತಿ ವಿಶಾಲಾಕ್ಷಿ ದೇಶಪಾಂಡೆ ವಿಶುಕುಮಾರ್ ವಿಶ್ವೇಶ್ವರ ಭಟ್ ವಿಷ್ಣು ನಾಯ್ಕ ವೀಣಾ ಶಾಂತೇಶ್ವರ ವೀರಪ್ಪ ಮೊಯ್ಲಿ ವೀರೇಂದ್ರ ಸಿಂಪಿ ವೆಂಕಟರಾಜ ಪಾನಸೆ ವೇಣುಗೋಪಾಲ ಸೊರಬ ವೇದವ್ಯಾಸ ಜೋಶಿ ವೈ.ಎನ್.ಎಸ್.ಮೂರ್ತಿ ವೈ.ಎನ್.ಗುಂಡೂರಾವ್ ವೈ.ಕೆ.ಸಂಧ್ಯಾಶರ್ಮ ವೈ.ಚಂದ್ರಶೇಖರ ಶಾಸ್ತ್ರಿ ವೈ.ನಾಗೇಶ ಶಾಸ್ತ್ರಿ ವೈ.ಸಿ.ಭಾನುಮತಿ ವೈಎನ್ ಕೆ ವೈದೇಹಿ ವ್ಯಾಸ ದೇಶಪಾಂಡೆ ವ್ಯಾಸರಾಯ ಬಲ್ಲಾಳ ವ್ಯಾಸರಾವ ನಿಂಜೂರ ಶಂ.ಗು.ಬಿರಾದಾರ ಶಂ.ಬಾ.ಜೋಶಿ ಶಂಕರ ಕಟಗಿ ಶಂಕರ ಮೊಕಾಶಿ ಪುಣೇಕರ ಶಂಸ ಐತಾಳ ಶಶಿ ದೇಶಪಾಂಡೆ ಶಶಿಕಲಾ ವಸ್ತ್ರದ ಶಶಿಕಲಾ ವೀರಯ್ಯಸ್ವಾಮಿ ಶಾಂತಕವಿ ಶಾಂತರಸ ಹೆಂಬೆರಳು ಶಾಂತಾ ಇಮ್ರಾಪುರ ಶಾಂತಾದೇವಿ ಕಣವಿ ಶಾಂತಾದೇವಿ ಮಾಳವಾಡ ಶಾಂತಿನಾಥ ದೇಸಾಯಿ ಶಾರದಾ ರಾಜಶೇಖರ್ ಶಾರದಾ ಶಾಮಣ್ಣ ಶಾರದೆ ಶಾಲಿನಿ ರಘುನಾಥ ಶಿವಪ್ರಕಾಶ ಶಿವರಾಮ ಕಾರಂತ ಶಿವಶಂಕರಪ್ಪ ನಾಯ್ಕರ ಶುಭದಾ ಅಮಿನಭಾವಿ ಶೇಷ ನಾರಾಯಣ ಶೇಷಾಚಲ ಶೈಲಜಾ ಉಡಚಣ ಶೈಲಜಾ ಎಂ.ಭಟ್ ಶೈಲಾ ಛಬ್ಬಿ ಶೋಭಾ ಮುತಾಲೀಕ ಪಾಟೀಲ ಶ್ಯಾಮಲಾದೇವಿ ಬೆಳಗಾವಿ ಶ್ಯಾಮಸುಂದರ ಬಿದರಕುಂದಿ ಶ್ರೀಕೃಷ್ಣ ಆಲನಹಳ್ಳಿ ಶ್ರೀನಾಥ ರಾಯಸಂ ಶ್ರೀನಿವಾಸ ಉಡುಪ ಶ್ರೀನಿವಾಸ ತೋಫಖಾನೆ ಶ್ರೀನಿವಾಸ ವೈದ್ಯ ಶ್ರೀನಿವಾಸ ಹಾವನೂರ ಶ್ರೀನಿವಾಸರಾವ್ ಕೊರಟಿ ಶ್ರೀರಂಗ ಸ.ಉಷಾ ಸಂಧ್ಯಾದೇವಿ ಸಂ.ಶಿ.ಭೂಸನೂರುಮಠ ಸಂಸ ಸತೀಶ ಚಪ್ಪರಿಕೆ ಸತ್ಯಕಾಮ ಸತ್ಯಾನಂದ ಪಾತ್ರೋಟ ಸಬಿಹಾ ಭೂಮಿಗೌಡ ಸಮೇತನಹಳ್ಳಿ ರಾಮರಾವ್ ಸರಜೂ ಕಾಟ್ಕರ್ ಸರಸ್ವತಿದೇವಿ ಗೌಡರ್ ಸರಸ್ವತಿಬಾಯಿ ರಾಜವಾಡೆ ಸರಿತಾ ಕುಸುಮಾಕರ ದೇಸಾಯಿ ಸರಿತಾ ಜ್ಞಾನಾನಂದ ಸರೋಜಾ ನಾರಾಯಣರಾವ ಸರೋಜಿನಿ ಚವಲಾರ ಸರೋಜಿನಿ ಮಹಿಷಿ ಸರೋಜಿನಿ ಶಿಂತ್ರಿ ಸವಿತಾ ಧಾರೇಶ್ವರ ಸವಿತಾ ನಾಗಭೂಷಣ ಸಾಯಿಸುತೆ ಸಾರಾ ಅಬೂಬಕ್ಕರ ಸಾಲಿ ರಾಮಚಂದ್ರರಾಯರು ಸಾವಿತ್ರಿದೇವಿ ನಾಯಡು ಸಾಹಿತ್ಯರತ್ನ ಅನ್ನದಾನಯ್ಯ ಪುರಾಣಿಕ ಸಿ.ಎಂ.ಚನ್ನಬಸಪ್ಪ ಸಿ.ಎನ್.ಜಯಲಕ್ಷ್ಮಿ ದೇವಿ ಸಿ.ಎನ್.ಮುಕ್ತಾ ಸಿ.ಕೆ.ವೆಂಕಟರಾಮಯ್ಯ ಸಿ.ಪಿ.ಕೆ ಸಿ.ವಿ.ಶಿವಶಂಕರ್ ಸಿಂಪಿ ಲಿಂಗಣ್ಣ ಸಿದ್ದಯ್ಯ ಪುರಾಣಿಕ ಸಿದ್ದವ್ವನಹಳ್ಳಿ ಕೃಷ್ಣಶರ್ಮ ಸಿದ್ಧಲಿಂಗ ದೇಸಾಯಿ ಸಿದ್ಧಲಿಂಗ ಪಟ್ಟಣಶೆಟ್ಟಿ ಸಿದ್ಧಲಿಂಗಯ್ಯ ಸಿದ್ಧನಗೌಡ ಪಾಟೀಲ ಸಿದ್ಧಾಂತಿ ಶಿವಶಂಕರ ಶಾಸ್ತ್ರಿ ಸಿಸು ಸಂಗಮೇಶ ಸು.ರಂ.ಎಕ್ಕುಂಡಿ ಸುಂದರ ನಾಡಕರ್ಣಿ ಸುಕನ್ಯಾ ಮಾರುತಿ ಸುಜನಾ (ಎಸ್.ನಾರಾಯಣ ಶೆಟ್ಟಿ) ಸುದರ್ಶನ ದೇಸಾಯಿ ಸುಧಾ ಮೂರ್ತಿ ಸುಧಾ ಸರನೋಬತ್ ಸುಧಾಕರ ಸುನಂದಾ ಪ್ರಕಾಶ,ಕಡಮೆ ಸುನಂದಾ ಬೆಳಗಾಂವಕರ ಸುಬ್ರಾಯ ಚೊಕ್ಕಾಡಿ ಸುಮತೀಂದ್ರ ನಾಡಿಗ ಸುಮಿತ್ರಾ ಹಲವಾಯಿ ಸುರೇಂದ್ರ ದಾನಿ ಸುಲೋಚನಾದೇವಿ ಆರಾಧ್ಯ ಸುಶೀಲಾ ಕೊಪ್ಪರ ಸುಶೀಲಾ ಸೊಂಡೂರು ಸೂರಿ ವೆಂಕಟರಮಣ ಶಾಸ್ತ್ರಿ ಸೂರಿ ಹಾರ್ದಳ್ಳಿ ಸೂರ್ಯನಾಥ ಕಾಮತ ಸೂರ್ಯನಾರಾಯಣ ಚಡಗ ಸೇಡಿಯಾಪು ಕೃಷ್ಣಭಟ್ಟ ಸೇವ ನಮಿರಾಜ ಮಲ್ಲ ಸೋಮಶೇಖರ ಇಮ್ರಾಪೂರ ಹ.ರಾ.ಪುರೋಹಿತ ಹ.ವೆಂ.ನಾಗರಾಜರಾವ್ ಹ.ಶಿ.ಭೈರನಟ್ಟಿ ಹಂ.ಪ.ನಾಗರಾಜಯ್ಯ ಹಂಝ ಮಲಾರ್ ಹನುಮಾಕ್ಷಿ ಗೋಗಿ ಹಮೀದ ಮಂಜೇಶ್ವರ ಹರಿಲಾಲ ಪವಾರ ಹರಿಹರಪ್ರಿಯ ಹರ್ಡೇಕರ ಮಂಜಪ್ಪ ಹಾ.ಮಾ.ನಾಯಕ ಹಾ.ರಾ. ಹಾಲ್ದೋಡ್ಡೇರಿ ಸುಧೀಂದ್ರ ಹುಯಿಲಗೋಳ ನಾರಾಯಣರಾಯ ಹುರಳಿ ಭೀಮರಾವ ಹೂಲಿ ಶೇಖರ ಹೆಚ್.ಆರ್.ನಾಗೇಶರಾವ್ ಹೇಮಲತಾ ಪರಶುರಾಂ ಹೇಮಾ ಪಟ್ಟಣಶೆಟ್ಟಿ ಹೊ.ರಾ.ಸತ್ಯನಾರಾಯಣರಾವ್ ಹೊಯಿಸಳ ಹೊಸಕೋಟೆ ಕೃಷ್ಣಶಾಸ್ತ್ರಿ ಹೊಸೂರ ಮುನಿಶಾಮಪ್ಪ ಬಿ.ತಿಪ್ಪೇರುದ್ರಪ್ಪ ಸಾಹಿತಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ ಮಹಾರಾಜರು ಅಮೋಘವರ್ಷ ನೃಪತುಂಗ (ರಾಷ್ಟ್ರಕೂಟ) ಇಮ್ಮಡಿ ಪುಲಿಕೇಶಿ (ಚಾಲುಕ್ಯ) ಕಿತ್ತೂರು ಚೆನ್ನಮ್ಮ ಕೆಳದಿಯ ಚೆನ್ನಮ್ಮ ಕೃಷ್ಣದೇವರಾಯ (ವಿಜಯನಗರ) ಕೆಳದಿಯ ಅರಸರು ಚಿಕ್ಕವೀರ ರಾಜೇಂದ್ರ ಜಯಚಾಮರಾಜ ಒಡೆಯರ್ ಟೀಪು ಸುಲ್ತಾನ್ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರೌಢ ದೇವರಾಯ (ವಿಜಯನಗರ) ಬೆಳವಡಿ ಮಲ್ಲಮ್ಮ ಬಹಮನಿ ಸುಲ್ತಾನರು ಬಾರೀದಶಾಹಿ ಸುಲ್ತಾನರು ಮದಕರಿ ನಾಯಕ ಮಯೂರ ವರ್ಮ (ಕದಂಬ) ರಣಧೀರ ಕಂಠೀರವ ರಾಣಿ ಅಬ್ಬಕ್ಕದೇವಿ ರಾಣಿ ರುದ್ರಮ್ಮ ವಿಷ್ಣುವರ್ಧನ (ಹೊಯ್ಸಳ) ಹೈದರ ಅಲಿ ಗಣಿತ, ವಿಜ್ಞಾನ, ತಂತ್ರಜ್ಞಾನ ಎಸ್.ಜಿ.ಬಾಳೆಕುಂದ್ರಿ ಪದ್ಮವಿಭೂಷಣ ಡಾ.ರಾಜಾ ರಾಮಣ್ಣ ಪದ್ಮವಿಭೂಷಣ ಪ್ರೊಫೆಸರ್ ಯು.ಆರ್.ರಾವ್ ಬಿ.ಜಿ.ಎಲ್.ಸ್ವಾಮಿ ಭಾರತರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಪದ್ಮವಿಭೂಷಣ ರೊದ್ದಂ ನರಸಿಂಹ ಶಕುಂತಲಾ ದೇವಿ - ಗಣಿತಜ್ಞೆ ಭಾರತರತ್ನ ಸಿ ವಿ ರಾಮನ್- ನೊಬೆಲ್ ಪ್ರಶಸ್ತಿ ವಿಜೇತ ಭೌತಶಾಸ್ತ್ರಜ್ಞ ಭಾರತರತ್ನ ಪ್ರೋಫೆಸರ್ ಸಿ.ಎನ್.ಆರ್.ರಾವ್ ಪದ್ಮಭೂಷಣ ಡಾ. ಎಚ್. ನರಸಿಂಹಯ್ಯ ಎಚ್. ಆರ್. ರಾಮಕೃಷ್ಣ ರಾವ್ ಜಿ.ಪಿ. ಗುರುಸ್ವಾಮಿ ಡಾ.ಎಚ್.ಆರ್.ಚಂದ್ರಶೇಖರ್ ಹ್ಯೂಮನ್ ಕಂಪ್ಯೂಟರ್ ಸಿದ್ದು ಲವಟೆ -ಆಧುನಿಕ ಆರ್ಯಭಟ ಡಾ. ಪವನಜ, ಡಾ. ಮೀರಾಚಂದ್ರಶೇಖರ್ ಪ್ರಾಚ್ಯ ಸಂಶೋಧಕರು ಆ.ನೇ.ಉಪಾಧ್ಯೆ ಆರ್.ನರಸಿಂಹಾಚಾರ್ ಎಂ.ಎಂ.ಕಲಬುರ್ಗಿ ಎಂ.ಬಿ.ನೇಗಿನಹಾಳ ಎಸ್.ಶೆಟ್ಟರ್ ಕೆ.ಜಿ.ಕುಂದಣಗಾರ ಗುಂಡಾ ಜೋಯಿಸ ಜಿ.ಎಸ್.ಗಾಯಿ ನಾ.ಶ್ರೀ.ರಾಜಪುರೋಹಿತ ಪಿ.ಬಿ.ದೇಸಾಯಿ ಫ.ಗು.ಹಳಕಟ್ಟಿ ಬಾ.ರಾ.ಗೋಪಾಲ ಬಿ.ಎ.ಸಾಲೆತೊರೆ ಬಿ.ಎಲ್.ರೈಸ್ ಸೂರ್ಯನಾಥ ಕಾಮತ ಹನುಮಾಕ್ಷಿ ಗೋಗಿ ಬಿ.ರಾಜಶೇಖರಪ್ಪ ಸಿ.ಹಯವದನ ರಾವ್ ದೃಶ್ಯಕಲೆ/ಕಲಾಸಾಹಿತ್ಯ ಕೆ.ವೆ೦ಕಟಪ್ಪ ಆರ್.ಎ೦.ಹಡಪದ್ ವಿ.ಜಿ.ಅ೦ದಾನಿ ಎನ್.ಪುಷ್ಪಮಾಲ ಸುರೇಖ ಕೆ.ಟಿ.ಶಿವಪ್ರಸಾದ್ ಅನಿಲ್ ಕುಮಾರ್ ಎಚ್.ಎ ಚಿ.ಸು. ಕ್ರಿಸ್ನ ಸೆಟ್ಟಿ ರೇಣುಕಾ ಕೆಸರಮಡು ರಾಜಕೀಯ ಅಣ್ಣಾರಾವ ಗಣಮುಖಿ ಎಸ್.ಆರ್.ಕಂಠಿ ಎಸ್.ಎಂ.ಕೃಷ್ಣ ಎಸ್.ನಿಜಲಿಂಗಪ್ಪ ಕೆ.ಎಸ್.ನಾಗರತ್ನಮ್ಮ ಕೆಂಗಲ್ ಹನುಮಂತಯ್ಯ ಗುಂಡೂರಾವ್ ಜೆ.ಹೆಚ್.ಪಟೇಲ್ ಜಾರ್ಜ್ ಫರ್ನಾಂಡಿಸ್ ದೇವರಾಜ ಅರಸ್ ದೊಡ್ಡಮೇಟಿ ಅಂದಾನೆಪ್ಪ ಧರಂಸಿಂಗ್ ನಜೀರ ಸಾಬ್ ಬಿ ಡಿ ಜತ್ತಿ ಬಂಗಾರಪ್ಪ ಬೊಮ್ಮಾಯಿ ಯಶೋಧರಾ ದಾಸಪ್ಪ ರಾಂಪುರೆ ರಾಮಕೃಷ್ಣ ಹೆಗಡೆ ಶಾಂತವೇರಿ ಗೋಪಾಲಗೌಡ ಹೆಚ್ ಡಿ ದೇವೇಗೌಡ ಹರ್ಡೇಕರ ಮಂಜಪ್ಪ ಹಳ್ಳಿಕೇರಿ ಗುದ್ಲೆಪ್ಪ ಕೆ. ಹೆಚ್. ಪಾಟೀಲ ಹೆಚ್.ಕೆ.ಪಾಟೀಲ ಎಂ. ವಿ. ಚಂದ್ರಶೇಖರ ಮೂರ್ತಿ ಧರ್ಮ ಮತ್ತು ತತ್ವಶಾಸ್ತ್ರ ಅಕ್ಕಮಹಾದೇವಿ ಅಲ್ಲಮಪ್ರಭು ಎಡೆಯೂರು ಸಿದ್ಧಲಿಂಗೇಶ್ವರ ಕನಕದಾಸ ಖ್ವಾಜಾ ಬಂದೇನವಾಜ ಗದುಗಿನ ನಾರಣಪ್ಪ ಚೆನ್ನಬಸವಣ್ಣ ಪುರಂದರದಾಸ ಬಸವೇಶ್ವರ ಮಧ್ವಾಚಾರ್ಯ ಶ್ರೀ ರಾಘವೇಂದ್ರ ಸ್ವಾಮಿಗಳು ರಾಮಾನುಜಾಚಾರ್ಯ ವಿದ್ಯಾರಣ್ಯ ವ್ಯಾಸರಾಯರು ಶರಣ ಬಸವೇಶ್ವರ ಶಿಶುನಾಳ ಶರೀಫ ಸಿದ್ಧರಾಮ ಸಿದ್ಧಾರೂಢರು ಸಾಯಣಾಚಾರ್ಯ ಹೆಳವನಕಟ್ಟೆ ಗಿರಿಯಮ್ಮ ಪಂಡಿತ ತಾರಾನಾಥ ನಿಜಗುಣ ಶಿವಯೋಗಿ ಟಿ. ವಿ. ವೆಂಕಟಾಚಲ ಶಾಸ್ತ್ರೀ ಕ್ರೀಡೆ ಕ್ರಿಕೆಟ್ ಅನಿಲ್ ಕುಂಬ್ಳೆ ಎರಾಪಳ್ಳಿ ಪ್ರಸನ್ನ ಚಿನ್ನಸ್ವಾಮಿ ಜಿ ಆರ್ ವಿಶ್ವನಾಥ್ ಜಯಪ್ರಕಾಶ ಜಾವಗಲ್ ಶ್ರೀನಾಥ್ ಬಿ. ಎಸ್. ಚಂದ್ರಶೇಖರ್ ಬ್ರಿಜೇಶ್ ಪಟೇಲ್ ಬುಧಿ ಕುಂದೆರನ್ ರಘುರಾಮ ಭಟ್ಟ ರಾಬಿನ್ ಉತ್ತಪ್ಪ ರಾಹುಲ್ ದ್ರಾವಿಡ್ ರೋಜರ್ ಬಿನ್ನಿ ವೆಂಕಟೇಶ್ ಪ್ರಸಾದ್ ವಿಜಯ ಕುಮಾರ್ ವಿಜಯ ಕೃಷ್ಣ ಶಾಂತಾ ರಂಗಸ್ವಾಮಿ ಸದಾನಂದ ವಿಶ್ವನಾಥ ಸೊವ್ರವ್ ಗಂಗೂಲಿ ಸುನೀಲ್ ಜೋಷಿ ಸೈಯದ್ ಕಿರ್ಮಾನಿ ಇತರ ಕ್ರೀಡೆಗಳು ಅಪರ್ಣಾ ಪೋಪಟ್ - ಬ್ಯಾಡ್ಮಿಂಟನ್ ಅರ್ಚನಾ ವಿಶ್ವನಾಥ - ಟೇಬಲ್ ಟೆನ್ನಿಸ್ ಅಶ್ವಿನಿ ನಾಚಪ್ಪ - ಓಟ ಆಶಿಶ್ ಬಲ್ಲಾಳ - ಹಾಕಿ ಉದಯ ಪ್ರಭು - ಓಟ ಚಿಕ್ಕಪಾಪಯ್ಯ - ಓಟ ನಿಶಾ ಮಿಲಟ್ - ಈಜು ಪ್ರಕಾಶ್ ಪಡುಕೋಣೆ, ಬ್ಯಾಡ್ಮಿಂಟನ್ ಮಹೇಶ್ ಭೂಪತಿ - ಟೆನಿಸ್ ರೀತ್ ಅಬ್ರಹಾಂ - ಓಟ ವಂದನಾ ರಾವ್ - ಓಟ ಸತೀಶ ರೈ - ವೇಟ್ ಲಿಫ್ಟಿಂಗ್ ವಾಣಿ - ಕೊಕ್ಕೋ ಸೈನ್ಯ ಜನರಲ್ ತಿಮ್ಮಯ್ಯ ಫೀಲ್ಡ್ ಮಾರ್ಷಲ್ ಕಾರಿಯಪ್ಪ - ಭಾರತೀಯ ಭೂಸೈನ್ಯದ ಮುಖ್ಯಸ್ಥರು (೧೯೪೯-೧೯೫೩) ಮಠಾಧಿಪತಿಗಳು ಶ್ರೀ ಶ್ರೀವಿಙ್ಞಾನನಿಧಿ ತೀರ್ಥರು ಹಿರಿಯ ಪೀಠಾಧಿಪತಿಗಳು ಶ್ರೀ ಶ್ರೀಪಾದರಾಜ ಮಠ ಮುಳಬಾಗಿಲು ಶ್ರೀ ಶ್ರೀಕೇಶನ ನಿಧಿ ತೀರ್ಥರು ಕಿರಿಯ ಪೀಠಾಧಿಪತಿಗಳು ಶ್ರೀ ಶ್ರೀಪಾದರಾಜ ಮಠ ಮುಳಬಾಗಿಲು ಡಾ.ಶಿವಮೂರ್ತಿ ಸ್ವಾಮೀಜಿ (ಸಿರಿಗೆರೆ) ಸ್ವಸ್ತಿ ಶ್ರೀ ಚಾರುಕೀತಿ೯ ಭಟ್ಟಾರಕ ಸ್ವಾಮೀಜಿ (ಶ್ರವಣಬೆಳಗೊಳ) ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಪಂಡಿತಾರಾಧ್ಯ ಸ್ವಾಮೀಜಿ (ಶ್ರೀ ಮಠ ಸಾಣೇಹಳ್ಳಿ) ಅಥಣಿ ಶಿವಯೋಗಿಗಳು ಚೆನ್ನಬಸವ ಪಟ್ಟದೇವರು (ಭಾಲ್ಕಿ) ಬಾಲಗಂಗಾಧರನಾಥ ಸ್ವಾಮಿಗಳು ಮೃತ್ಯುಂಜಯ ಸ್ವಾಮಿಗಳು (ಧಾರವಾಡ) ಕರ್ನಾಟಕ ರತ್ನ ಶ್ರೀ ಶಿವಕುಮಾರ ಸ್ವಾಮಿಗಳು (ಸಿದ್ದಗಂಗಾ) ಮಾತೆ ಮಹಾದೇವಿ ಜಚನಿ ಮುರುಘರಾಜೇಂದ್ರ ಶರಣರುಚಿತ್ರದುರ್ಗ ಶ್ರೀ ಶ್ರೀ ವಿಶ್ವೇಶತೀರ್ಥ ಮಹಾಸ್ವಾಮಿಗಳು, ಪೇಜಾವರ ಅಧೋಕ್ಷಜ ಮಠ, ಉಡುಪಿ ಶ್ರೀ ಸಿದ್ದೇಶ್ವರ ಮಹಾಸ್ವಾಮಿಜಿಗಳು, ಬಿಜಾಪುರ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಅವಧೂತ ದತ್ತ ಪೀಠ, ಮೈಸೂರು ]] ಅವರ್ಗೀಕೃತ ಬಾಳಪ್ಪ ಹುಕ್ಕೇರಿ-ಜನಪದ ಗಾಯಕರು ಅನ್ನದಾನಿ - ಚಿತ್ರ ಕಲಾವಿದರು ಅರ್ ಎಂ ಹಡಪದ ಚಿತ್ರ ಕಲಾವಿದರು ಎಂ.ಸಿ.ಮೋದಿ - ನೇತ್ರದಾನಿ ಎಸ್.ಕೆ.ಕರೀಂ ಖಾನ್- ಜಾನಪದ ಕೆ.ಎಂ.ನಂಜಪ್ಪ - ಸಮಾಜ ಸೇವೆ ಕೆ.ಕೆ.ಹೆಬ್ಬಾರ-ಚಿತ್ರಕಾರರು ಕಲ್ಯಾಣಮ್ಮ - ಸಮಾಜ ಸೇವೆ ಮಕ್ಕಳ ಕೂಟ ಕುಸುಮಾ ಸೊರಬ - ಪರಿಸರವಾದಿ ಡಿ.ವಿ.ಹಾಲಭಾವಿ-ಚಿತ್ರಕಾರರು ಡೆಪ್ಯೂಟಿ ಚೆನ್ನಬಸಪ್ಪನವರು ಡಾ.ನಾಗೇಗೌಡ-ಜಾನಪದ ಲೋಕ ಪಂಡಿತ್ - ಚಿತ್ರ ಕಲಾವಿದರು ಮಾಯಾ ರಾವ್-ನೃತ್ಯ ಕಲಾವಿದರು ಯಲ್ಲಪ್ಪ ರೆಡ್ಡಿ - ಪರಿಸರವಾದಿ ರುಮಾಲೆ ಚೆನ್ನಬಸಪ್ಪ- ಚಿತ್ರ ಕಲಾವಿದರು ರೋರಿಚ್ - ಚಿತ್ರ ಕಲಾವಿದರು ವೀರೇಂದ್ರ ಹೆಗ್ಗಡೆ - ಸಮಾಜ ಸೇವೆ ಸಾಲುಮರದ ತಿಮ್ಮಕ್ಕ - ಪರಿಸರವಾದಿ ಸಂಪ್ರದಾಯಗಳಹಾಡಿನ ರಾಧಮ್ಮನವರು-ಸಂಪ್ರದಾಯಗಳ ಹಾಡು ಕರ್ನಾಟಕ ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು ಭಾರತದ ಪ್ರಸಿದ್ಧ ವ್ಯಕ್ತಿಗಳು ಪಟ್ಟಿಗಳು
1360
https://kn.wikipedia.org/wiki/%E0%B2%90%E0%B2%B6%E0%B3%8D%E0%B2%B5%E0%B2%B0%E0%B3%8D%E0%B2%AF%E0%B2%BE%20%E0%B2%B0%E0%B3%88
ಐಶ್ವರ್ಯಾ ರೈ
ಐಶ್ವರ್ಯಾ ರೈ (ಜನನ: ನವೆಂಬರ್ ೧, ೧೯೭೩) ಭಾರತೀಯ ಸಿನೆಮಾ ನಟಿ ಮತ್ತು ಮಾಡೆಲ್. ೧೯೯೪ ರಲ್ಲಿ ಭಾರತ ಸುಂದರಿ ಸ್ಪರ್ಧೆಯನ್ನು ಗೆದ್ದ ನಂತರ ಅದೇ ವರ್ಷ ವಿಶ್ವಸುಂದರಿ ಸ್ಪರ್ಧೆಯನ್ನು ಗೆದ್ದರು. ಜನನ, ಜೀವನ ಐಶ್ವರ್ಯಾ ಹುಟ್ಟಿದ್ದು ಕರ್ನಾಟಕದ ಮಂಗಳೂರಿನಲ್ಲಿ. ತಂದೆ ಕೃಷ್ಣರಾಜ್ ರೈ ಮತ್ತು ತಾಯಿ ಬೃಂದಾ ರೈ. ಮುಂಬಯಿ ನಗರದಲ್ಲಿ ಡಿ ಜಿ ರೂಪಾರೆಲ್ ಕಾಲೇಜ್ ಮತ್ತು ಆರ್ಯ ವಿದ್ಯಾ ಕಾಲೇಜಿನಲ್ಲಿ ಓದಿದ ಐಶ್ವರ್ಯಾ ಒಂಬತ್ತನೆಯ ತರಗತಿಯಲ್ಲಿ ಇದ್ದಾಗಲೆ ಕ್ಯಾಮೆಲಿನ್ ಸಂಸ್ಥೆಗೆ ಮಾಡೆಲ್ ಆಗಿ ಕೆಲಸ ಮಾಡಿದ್ದರು. ನಂತರ ಅನೇಕ ಜಾಹೀರಾತುಗಳಲ್ಲಿ ನಟಿಸಿದ ಐಶ್ವರ್ಯಾ ಪ್ರಪಂಚಸುಂದರಿ ಪ್ರಶಸ್ತಿಯನ್ನು ಗೆದ್ದ ಮೇಲೆ ಪ್ರಸಿದ್ಧರಾದರು. ಇದರ ನಂತರ ಅನೇಕ ಚಿತ್ರಗಳಲ್ಲಿ ಮತ್ತು ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಅವರ ಮೊದಲ ಚಿತ್ರ ಮಣಿರತ್ನಂ-ನಿರ್ದೇಶಿತ ತಮಿಳು ಚಿತ್ರ "ಇರುವರ್" (೧೯೯೭). ಈ ಚಿತ್ರ ಯಶಸ್ವಿಯಾಗಲಿಲ್ಲ. ೨೦೦೦ ದಲ್ಲಿ ಬಿಡುಗಡೆಯಾದ ತಮಿಳು ಚಿತ್ರ "ಕಂಡುಕೊಂಡೇನ್ ಕಂಡುಕೊಂಡೇನ್" ಯಶಸ್ವಿಯಾಯಿತು. ಐಶ್ವರ್ಯಾ ಅವರು ನಟಿಸಿರುವ ಬಹುಪಾಲು ಚಿತ್ರಗಳು ಹಿಂದಿ ಭಾಷೆಯವು- ಕೆಲವು ತಮಿಳು ಮತ್ತು ಒಂದು ಬೆಂಗಾಲಿ ಚಿತ್ರದಲ್ಲಿಯೂ ನಟಿಸಿದ್ದಾರೆ (ರವೀಂದ್ರನಾಥ ಠಾಕೂರರ ಕಾದಂಬರಿಯಾಧಾರಿತ "ಚೋಕೆರ್ ಬಾಲಿ"). ಹಾಲಿವುಡ್ ಮತ್ತು ಇಂಗ್ಲೆಂಡಿನಲ್ಲಿ ನಿರ್ಮಾಪಣೆ ನಡೆದ "ಬ್ರೈಡ್ ಎ೦ಡ್ ಪ್ರೆಜುಡೀಸ್" (೨೦೦೪) ಎ೦ಬ ಇಂಗ್ಲಿಷ್ ಚಿತ್ರದಲ್ಲಿಯೂ ನಟಿಸಿದ್ದಾರೆ. ಅವರ ಅತಿ ಯಶಸ್ವಿ ಚಿತ್ರಗಳಲ್ಲಿ ಕೆಲವೆಂದರೆ "ದೇವದಾಸ್" ಮತ್ತು "ಹಮ್ ದಿಲ್ ದೇ ಚುಕೇ ಸನಮ್". ಐಶ್ವರ್ಯಾ ರೈ ಫ್ರಾನ್ಸ್ ದೇಶದ ಕ್ಯಾನ್ಸ್ ನಲ್ಲಿ ನಡೆಯುವ ವಾರ್ಷಿಕ ಚಲನಚಿತ್ರೋತ್ಸವದ ಸಮಿತಿಯಲ್ಲಿ ಕೆಲಸ ಮಾಡಿರುವ ಏಕೈಕ ಭಾರತೀಯರು. ಐಶ್ವರ್ಯಾ ರೈ ನಟಿಸಿರುವ ಚಿತ್ರಗಳು ಹಿ೦ದಿ ಹಮ್ ದಿಲ್ ದೇ ಚುಕೇ ಸನಮ್" (೧೯೯೯) ತಾಲ್ (೧೯೯೯) ಜೋಷ್ (೨೦೦೦) ಮೊಹಬ್ಬತೇನ್ (೨೦೦೦) ದೇವದಾಸ್ (೨೦೦೨) ಧೂಮ್ ೨(೨೦೦೬) ರಾ ವನ್ ತಮಿಳು ಇರುವರ್ (೧೯೯೭) ಜೀನ್ಸ್ (೧೯೯೮) ಕಂಡುಕೊಂಡೇನ್ ಕಂಡುಕೊಂಡೇನ್ (೨೦೦೦) ಎ೦ದಿರನ್(೨೦೧೦) ಇತರೆ ಚೋಕೆರ್ ಬಾಲಿ (೨೦೦೩) - ಬೆ೦ಗಾಲಿ ಬ್ರೈಡ್ ಎ೦ಡ್ ಪ್ರೆಜುಡಿಸ್ (೨೦೦೪) - ಇ೦ಗ್ಲಿಷ್ 'ಐಶ್ವರ್ಯ ರೈ', ಹಾಗು 'ಅಭಿಷೇಕ್ ಬಚ್ಛನ್' ದಂಪತಿಗಳಿಗೆ ಹೆಣ್ಣು ಮಗುವಿನ ಜನನ ಬಾಲಿವುಡ್ ಸಿನಿಮಾ ರಂಗದಲ್ಲಿ ಅತ್ಯಂತ ಪ್ರಭಾವಿ ಹಾಗೂ ಮೇರು ಅಭಿನೇತ್ರಿ,'ಐಶ್ವರ್ಯ ರೈ'ಮುಂಬಯಿನ ಅಂಧೇರಿ (ಪ)ದಲ್ಲಿರುವ ಸುಪ್ರಸಿದ್ಧ 'ಸೆವೆನ್ ಹಿಲ್ ಆಸ್ಪತ್ರೆ' ಯಲ್ಲಿ ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದಾರೆ. ೨೦೧೧ ರ, ನವೆಂಬರ್, ೧೬, ರ ಬುಧವಾರದ ಬೆಳಿಗ್ಗೆ ೧೦ ಗಂಟೆಗೆ ಜನಿಸಿದ ಮಗುವಿನ ಬಗ್ಗೆ, ಅಮಿತಾಬ್ ಬಚ್ಚನ್ ರವರು ತಮ್ಮ ಬ್ಲಾಗ್ ನಲ್ಲಿ 'ಟ್ವೀಟ್' ಮಾಡಿ, ಎಲ್ಲರಿಗೂ ತಿಳಿಯ ಪಡಿಸಿದರು. ತಾಯಿ ಮಗು ಆರೋಗ್ಯವಾಗಿದ್ದಾರೆ. ಹೆರಿಗೆಯ ಸಮಯದಲ್ಲಿ ಅಮಿತಾಬ್ ಬಚ್ಚನ್, ಜಯ ಬಚ್ಚನ್ ಹಾಗೂ ಐಶ್ವರ್ಯ ರೈ ಅವರ ತಂದೆ,ಕ್ರಿಷ್ಣರಾಜ್, ತಾಯಿ, ವ್ರಿಂದ ಹಾಜರಿದ್ದರು. ಉಲ್ಲೇಖಗಳು ಬಾಹ್ಯ ಸ೦ಪರ್ಕಗಳು ಅ೦ತಾರಾಷ್ಟ್ರೀಯ ಚಲನಚಿತ್ರ ಮಾಹಿತಿಕೋಶದಲ್ಲಿ ಐಶ್ವರ್ಯಾ ರೈ ಬಗ್ಗೆ www.aishwaryarai.com - ಐಶ್ವರ್ಯಾ ರೈ ಸಿನಿಮಾ ತಾರೆಗಳು ಬಾಲಿವುಡ್ ೧೯೭೩ ಜನನ
1361
https://kn.wikipedia.org/wiki/%E0%B2%9C%E0%B2%BF.%E0%B2%B5%E0%B2%BF.%E0%B2%85%E0%B2%AF%E0%B3%8D%E0%B2%AF%E0%B2%B0%E0%B3%8D
ಜಿ.ವಿ.ಅಯ್ಯರ್
ಕನ್ನಡ ಚಿತ್ರರ೦ಗದ ಬೀಷ್ಮ ಎಂಬ ಪ್ರಖ್ಯಾತಿಯ ಜಿ ವಿ ಅಯ್ಯರ್ (ಸೆಪ್ಟೆಂಬರ್ ೩, ೧೯೧೭ - ಡಿಸೆಂಬರ್ ೨೧, ೨೦೦೩) ಸ್ವರ್ಣಕಮಲ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ಚಲನಚಿತ್ರ ನಿರ್ದೇಶಕರು ಮತ್ತು ನಿರ್ಮಾಪಕರು. ಆರಂಭದ ದಿನಗಳು ಜಿ.ವಿ.ಅಯ್ಯರ್ ಅವರ ಪೂರ್ಣ ಹೆಸರು ಗಣಪತಿ ವೆಂಕಟರಮಣ ಅಯ್ಯರ್. ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಹುಟ್ಟಿದ ಜಿ.ವಿ.ಅಯ್ಯರ್ ತಮ್ಮ ವೃತ್ತಿಜೀವನದ ಆರಂಭದಲ್ಲಿ ಮೈಸೂರಿನ "ಸದಾರಮೆ" ನಾಟಕ ಕಂಪನಿಯಲ್ಲಿ, ಹಾಗೂ ಗುಬ್ಬಿ ನಾಟಕ ಕಂಪನಿಯಲ್ಲಿ ಪರಿಚಾರಕರಾಗಿ, ಪೋಸ್ಟರ್ ಬರೆಯುವವರಾಗಿ ಕೆಲಸ ಮಾಡಿದರು. ನಂತರ ಅವಕಾಶಗಳನ್ನರಸಿ ಪುಣೆಗೆ ಹೋದ ಅಯ್ಯರ್, ಹೋಟೆಲ್ ಮಾಣಿಯಾಗಿದ್ದುಕೊಂಡೇ ಚಿತ್ರರಂಗದಲ್ಲಿನ ಅವಕಾಶಗಳಿಗೆ ಪ್ರಯತ್ನಿಸಿದರು. ಅದು ಫಲಕಾರಿಯಾಗದೇ, ಕರ್ನಾಟಕಕ್ಕೆ ಹಿಂದಿರುಗಿದರು. ಚಿತ್ರರಂಗ ೧೯೪೩ರಲ್ಲಿ ರಾಧಾರಮಣ ಚಿತ್ರದ ಕೇಶಿದೈತ್ಯನ ಪಾತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ೧೯೫೪ರಲ್ಲಿ ಬಿಡುಗಡೆಯಾದ ಬೇಡರ ಕಣ್ಣಪ್ಪ ಚಿತ್ರದ ಕೈಲಾಸನ ಪಾತ್ರದಲ್ಲಿನ ಅಭಿನಯ ಅಯ್ಯರ್ ಅವರಿಗೆ ಜನಪ್ರಿಯತೆಯನ್ನು ಒದಗಿಸಿತು. ಚಲನಚಿತ್ರಗಳಲ್ಲಿ ನಟಿಸುತ್ತಿದ್ದರೂ, ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ೧೯೫೫ರಲ್ಲಿ ತೆರೆಕಂಡ ಸೋದರಿ ಚಿತ್ರದಲ್ಲಿನ ಹಾಡುಗಳು ಮತ್ತು ಸಂಭಾಷಣೆ ಬರೆಯುವುದರೊಂದಿಗೆ ಚಲನಚಿತ್ರ ಸಾಹಿತಿಯಾಗಿ ಕೆಲಸ ನಿರ್ವಹಿಸಲು ಪ್ರಾರಂಭಿಸಿದರು. ಭೂದಾನ (೧೯೬೨) ಚಿತ್ರವನ್ನು ನಿರ್ದೇಶಿಸುವ ಮೂಲಕ ನಿರ್ದೇಶಕರಾದರು. ಕನ್ನಡದ ಕಲಾವಿದರು ಸಂಕಷ್ಟದ ಸ್ಥಿತಿಯಲ್ಲಿರುವಾಗ, ರಾಜಕುಮಾರ್, ಬಾಲಕೃಷ್ಣ, ನರಸಿಂಹರಾಜು ಇವರನೊಡಗೂಡಿ ಕನ್ನಡ ಕಲಾವಿದರ ಸಂಘವನ್ನು ಸ್ಥಾಪಿಸಿ, ರಾಜ್ಯಾದ್ಯಂತ ಪ್ರವಾಸ ಮಾಡಿ ಕನ್ನಡ ಚಿತ್ರೋದ್ಯಮ ನೆಲೆ ನಿಲ್ಲಲು, ಕಲಾವಿದರು ಬದುಕಲು ಮಾರ್ಗಗಳನ್ನು ಹುಡುಕಿದರು. ಈ ಸಂಘದ ಗೆಳೆಯರೊಡನೆ ರಣಧೀರ ಕಂಠೀರವ ಚಲನಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದರು. ಜಿ.ವಿ.ಅಯ್ಯರ್ ಪ್ರಸಿದ್ಧಿ ಪಡೆದಿರುವುದು ಚಿತ್ರ ನಿರ್ದೇಶಕರಾಗಿ. ಒಟ್ಟು ಸುಮಾರು ೬೫ ಚಿತ್ರಗಳಲ್ಲಿ ನಿರ್ದೇಶಕರಾಗಿ ಅಥವಾ ನಿರ್ಮಾಪಕರಾಗಿ ಕೆಲಸ ನಿರ್ವಹಿಸಿದ್ದಾರೆ. ಮೊದಲಿಗೆ ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದ ಜಿ.ವಿ.ಅಯ್ಯರ್ ೧೯೭೫ ರಿಂದ ಮುಂದಕ್ಕೆ ಬಾಕ್ಸ್ ಆಫೀಸನ್ನು ಲೆಕ್ಕಿಸದೆ ಕಲಾತ್ಮಕ ಚಿತ್ರಗಳತ್ತ ತಿರುಗಿದರು. ಸಂಸ್ಕೃತ ಭಾಷೆಯಲ್ಲಿ ಅನೇಕ ಪ್ರಸಿದ್ಧ ಚಿತ್ರಗಳನ್ನು ನಿರ್ದೇಶಿಸಿದ್ದಲ್ಲದೆ ಹಿಂದಿ ಭಾಷೆಯಲ್ಲಿಯೂ ನಿರ್ದೇಶನ ಮಾಡಿದರು. ೧೯೫೪ ರಲ್ಲಿ "ಬೇಡರ ಕಣ್ಣಪ್ಪ" ನಾಟಕವನ್ನೂ ನಿರ್ದೇಶಿಸಿದ್ದರು.ಇವರು ನಿರ್ದೇಶಿಸಿದ ಪ್ರಥಮ ಸಂಸ್ಕೃತ ಚಿತ್ರ "ಆದಿ ಶಂಕರಾಚಾರ್ಯ"ಭಾರತದ ಅತ್ಯುತ್ತಮ ಚಿತ್ರವೆನಿಸಿ "ಸ್ವರ್ಣ ಕಮಲ "ಪ್ರಶಸ್ತಿ ಗಳಿಸಿದೆ. ನಮನ ನಿರ್ದೇಶಿಸಿದ ಚಲನಚಿತ್ರಗಳು ಕನ್ನಡ ಭೂದಾನ (೧೯೬೨) ತಾಯಿಕರುಳು (೧೯೬೨) ಲಾಯರ್ ಮಗಳು (೧೯೬೩) ಬಂಗಾರಿ (೧೯೬೩) ಪೋಸ್ಟ್ ಮಾಸ್ಟರ್ (೧೯೬೪) ಕಿಲಾಡಿ ರಂಗ (೧೯೬೬) ರಾಜಶೇಖರ (೧೯೬೭) ಮೈಸೂರು ಟಾಂಗ (೧೯೬೮) ಚೌಕದ ದೀಪ (೧೯೬೯) ಹಂಸಗೀತೆ (೧೯೭೫) ನಾಳೆಗಳನ್ನು ಮಾಡುವವರು (೧೯೭೯) ಮಧ್ವಾಚಾರ್ಯ (೧೯೮೬) ಚಿತ್ರಕಥೆ: ರಣಧೀರ ಕಂಠೀರವ (೧೯೬೦) ಸಂಸ್ಕೃತ ಭಗವದ್ಗೀತಾ (೧೯೯೩) ಆದಿ ಶಂಕರಾಚಾರ್ಯ (೧೯೮೩) ತಮಿಳು ರಾಮಾನುಜಾಚಾರ್ಯ (೧೯೮೯) ಹಿಂದಿ ಆಖ್ರೀ ಗೀತ್ (೧೯೭೫) ಸ್ವಾಮಿ ವಿವೇಕಾನಂದ ಜಿ.ವಿ.ಅಯ್ಯರ್ ನಿರ್ಮಾಣದ ಕನ್ನಡ ಚಲನಚಿತ್ರಗಳು ರಣಧೀರ ಕಂಠೀರವ (೧೯೬೦) ತಾಯಿಕರುಳು (೧೯೬೨) ಲಾಯರ್ ಮಗಳು (೧೯೬೩) ವಂಶವೃಕ್ಷ (೧೯೭೨) ಹಂಸಗೀತೆ (೧೯೭೫) ನಾಳೆಗಳನ್ನು ಮಾಡುವವರು (೧೯೭೯) ಜಿ.ವಿ.ಅಯ್ಯರ್ ಸಾಹಿತ್ಯದಲ್ಲಿನ ಪ್ರಮುಖ ಚಿತ್ರಗೀತೆಗಳು ಕನ್ನಡದ ಮಕ್ಕಳೆಲ್ಲಾ ಒಂದಾಗಿ ಬನ್ನಿ ಕನ್ನಡದ ಕುಲದೇವಿ ಕಾಪಾಡು ಬಾ ತಾಯೆ ಬಾ ತಾಯೆ ಭಾರತಿಯೇ ನಿಧನ ೧೯೭೫ರಲ್ಲಿ "ಆಚಾರ್ಯ "ಬಿರುದನ್ನು ಪಡೆದ ಅಯ್ಯರ್ ತಮ್ಮ ಬದುಕಿನ ಶೈಲಿಯನ್ನು ಬದಲಾಯಿಸಿಕೊಂಡರು.ಅದರಲ್ಲಿ ಚಪ್ಪಲಿ ತೊಡುವುದನ್ನು ತ್ಯಜಿಸಿ ಮುಂದೆ ಬರಿಗಾಲಲ್ಲೇ ನಡೆದಾಡಿದರು. ಜಿ.ವಿ.ಅಯ್ಯರ್ ಬಾಣಭಟ್ಟನ ಸಂಸ್ಕೃತ ಕೃತಿಯಾದ "ಕಾದಂಬರಿ"ಯನ್ನು ಚಿತ್ರೀಕರಿಸುವ, ಹಾಗೂ ರಾಮಾಯಣ ಮಹಾಕಾವ್ಯವನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಚಿತ್ರಿಸುವ ಯೋಚನೆಯಲ್ಲಿದ್ದರು. ಈ ಕುರಿತ ಚರ್ಚೆಗಾಗಿ ಮುಂಬೈಗೆ ತೆರೆಳಿದ್ದಾಗಲೇ ೨೦೦೩ ಡಿಸೆಂಬರ್ ೨೧ರಂದು ಮೂತ್ರ ಪಿಂಡದ ಸೋಂಕಿನಿಂದ ತಮ್ಮ ೮೬ನೇ ವಯಸ್ಸಿನಲ್ಲಿ ನಿಧನರಾದರು. ಆಕರಗಳು ಮಾಹಿತಿ ನೆರವು - ವಿಜಯ ಕರ್ನಾಟಕದಲ್ಲಿ ಪ್ರಕಟಿತ ಲೇಖನ,ಲೇಖಕರು :ಎನ್.ಎಸ್.ಶ್ರೀಧರ ಮೂರ್ತಿ ನಿರ್ದೇಶಕರು ಕನ್ನಡ ಸಿನೆಮಾ ಕನ್ನಡ ಚಲನಚಿತ್ರ ನಿರ್ದೇಶಕರು ಕನ್ನಡ ಚಲನಚಿತ್ರ ನಿರ್ಮಾಪಕರು ಸಂಭಾಷಣೆಕಾರ ೧೯೧೭ ಜನನ ೨೦೦೩ ನಿಧನ ಮೈಸೂರಿನ ಬರಹಗಾರರು
1363
https://kn.wikipedia.org/wiki/%E0%B2%AD%E0%B2%BE%E0%B2%B0%E0%B2%A4%E0%B2%A6%20%E0%B2%AA%E0%B3%8D%E0%B2%B0%E0%B2%A7%E0%B2%BE%E0%B2%A8%20%E0%B2%AE%E0%B2%82%E0%B2%A4%E0%B3%8D%E0%B2%B0%E0%B2%BF
ಭಾರತದ ಪ್ರಧಾನ ಮಂತ್ರಿ
ಭಾರತದ ಪ್ರಧಾನ ಮಂತ್ರಿಯವರು ಲೋಕಸಭೆಯಲ್ಲಿ ಬಹುಮತ ಹೊಂದಿರುವ ರಾಜಕೀಯ ಪಕ್ಷದಿಂದ ಅಥವಾ ಪಕ್ಷಗಳ ಮೈತ್ರಿತ್ವದಿಂದ ಆರಿಸಲ್ಪಟ್ಟ ನಾಯಕರು ಪ್ರಧಾನ ಮಂತ್ರಿಗಳಾಗುವರು. ಅವರು ಭಾರತ ಸರ್ಕಾರದ ಕಾರ್ಯಾಂಗದ ಮುಖ್ಯಸ್ಥರು ಮತ್ತು ಶಾಸಕಾಂಗದ ಸದಸ್ಯರಾಗಿರುತ್ತಾರೆ. ಸಾಂವಿಧಾನಿಕವಾಗಿ, ಭಾರತದ ಅಧ್ಯಕ್ಷರ ಪದವಿ ಪ್ರಧಾನ ಮಂತ್ರಿಯ ಪದವಿಗಿಂತ ಮೇಲಿನದ್ದು. ಆದರೆ ಸರ್ಕಾರದ ಚಟುವಟಿಕೆಗಳಲ್ಲಿ ಎಲ್ಲರಿಗಿಂತ ಹೆಚ್ಚು ಪ್ರಭಾವ ಹೊಂದಿರುವ ಪದವಿ ಪ್ರಧಾನ ಮಂತ್ರಿಗಳದ್ದು. ಭಾರತದ ಪ್ರಸಕ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿ. ಈ ವರೆಗೆ ಒಟ್ಟು ೧೨ ವ್ಯಕ್ತಿಗಳು ಭಾರತ ಪ್ರಧಾನ ಮಂತ್ರಿ ಸ್ಥಾನಕ್ಕೆ ಚುನಾಯಿಸಲ್ಪಟ್ಟಿದ್ದಾರೆ. ಇವರಲ್ಲಿ ಜವಾಹರಲಾಲ್ ನೆಹರು ಒಟ್ಟು ನಾಲ್ಕು ಅವಧಿಗಳಲ್ಲಿ ಪ್ರಧಾನ ಮಂತ್ರಿ ಗಳಾಗಿದ್ದರು. ಇಂದಿರಾ ಗಾಂಧಿ ಮೂರು ಅವಧಿಗಳ ಕಾಲ ಈ ಸ್ಥಾನದಲ್ಲಿದ್ದರೆ, ಅಟಲ್ ಬಿಹಾರಿ ವಾಜಪೇಯಿ ಎರಡು ಅವಧಿಗಳಲ್ಲಿ ಈ ಸ್ಥಾನ ವಹಿಸಿದ್ದಾರೆ. ಗುಲ್ಜಾರಿ ಲಾಲ್ ನಂದಾ ಎರಡು ಬಾರಿ ಹಂಗಾಮಿ ಪ್ರಧಾನಿಯಾಗಿ ಕೆಲಸ ನಿರ್ವಹಿಸಿದ್ದರು. ಡಾ.ಮನಮೋಹನ್ ಸಿಂಗ್ ಮೇ ೨೨, ೨೦೦೪ ಮೇ ೨೬, ೨೦೧೧ ಕಾಂಗ್ರೆಸ್ ಪಕ್ಷ(ಐ)ವರೆಗೆ ೨ ಅವಧಿಗೆ ಪ್ರಧಾನ ಮಂತ್ರಿಯಾಗಿದ್ದರು. ಪ್ರಧಾನ ಮಂತ್ರಿಯವರ ಭತ್ಯೆ ಮತ್ತು ವೇತನ- ವಸತಿ ಭಾರತದ ಪ್ರಧಾನಿಯ ಅಧಿಕೃತ ನಿವಾಸ ನಂ.೭, ರೇಸ್ ಕೋರ್ಸ್ ರಸ್ತೆ, ನವದೆಹಲಿ. ಅದು 5 ನಿವಾಸಗಳ ಬೃಹತ್ ವಸತಿ ಸೌಕರ್ಯ ಹೊಂದಿದೆ. ಕಚೇರಿಯು ರೈಸೀನಾ ಹಿಲ್ಸ್ ನಲ್ಲಿರುವ ಸೌತ್ ಬ್ಲಾಕ್ ನಲ್ಲಿದೆ. 2014 ರಿಂದ: ಪ್ರಧಾನ ಮಂತ್ರಿಯಾಗಿ ನಿಯೋಜಿತವಾಗಿರುವ ನರೇಂದ್ರ ಮೋದಿ ಅವರು ತಿಂಗಳಿಗೆ 1.6 ಲಕ್ಷ ರೂ. ಮೂಲ ವೇತನ:(ವರ್ಷಕ್ಕೆ 19.2 ಲಕ್ಷ ರೂಪಾಯಿ) 50,000. ಉಳಿದದ್ದಷ್ಟೂ ಇತರೆ ಭತ್ಯೆಗಳ ಲೆಕ್ಕದಲ್ಲಿ ಬರುತ್ತದೆ. ಇದರ ಜತೆಗೆ ಖಾಸಗಿ ಸಿಬ್ಬಂದಿ, ವಿಶೇಷ ವಿಮಾನ ಮತ್ತಿತರ ಸವಲತ್ತುಗಳೂ ಇರುತ್ತವೆ. ಈವರೆಗಿನ ಪ್ರಧಾನಿಗಳ ಪಟ್ಟಿ ಉಲ್ಲೇಖಗಳು ಬಾಹ್ಯ ಸಂಪರ್ಕ ಅಧಿಕೃತ ತಾಣ ರಾಜಕೀಯ ಭಾರತದ ಪ್ರಧಾನ ಮಂತ್ರಿಗಳು
1365
https://kn.wikipedia.org/wiki/%E0%B2%B5%E0%B3%80%E0%B2%A3%E0%B3%86
ವೀಣೆ
ಕರ್ನಾಟಕ ಸಂಗೀತ ಪದ್ಧತಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿರುವುದು ತಂತಿವಾದ್ಯವಾದ ವೀಣೆ. ಬಹಳ ಹಳೆಯ ವಾದ್ಯವಾದ ವೀಣೆಯ ವಿನ್ಯಾಸ ಅನೇಕ ಶತಮಾನಗಳಿಂದಲೂ ಬದಲಾಗುತ್ತಾ ಬಂದಿದೆ. ಸದ್ಯಕ್ಕೆ ಅತ್ಯಂತ ಜನಪ್ರಿಯ ವಿನ್ಯಾಸಕ್ಕೆ ಸರಸ್ವತಿ ವೀಣೆ ಎಂದು ಹೆಸರು. ಇದರಲ್ಲಿ ಮೂರು ತಂತಿಗಳು ಹಿತ್ತಾಳೆಯವು ಮತ್ತು ಒಂದು ಮುಖ್ಯ ತಂತಿ. ಜೊತೆಗೆ ಮೂರು ಸಹಾಯಕ ತಂತಿಗಳು ಇವೆ. ಪರಿಚಯ ಸಪ್ತ ಸ್ವರದ ಮನೆಗಳು ಮೇಣ ಕಟ್ಟುವುದರ ಮೂಲಕ ಆಯಾ ಸ್ಥಾನಗಳಲ್ಲಿ ಕೂಡಿಸುವುದರಿಂದ ವೀಣೆ ನುಡಿಸಲು ಕಷ್ಟವಿಲ್ಲ. ಆದರೆ ಇದನ್ನು ಕಲಿಯಲು ತಾಳ್ಮೆ ಹಾಗೂ ಆಸಕ್ತಿ ಬೇಕು. ನಿಧಾನವಾಗಿ ಒಲಿಸಿಕೊಂಡು, ಆನಂದದ ಅನುಭೂತಿ ಪಡೆಯಬಹುದಾದ ವಾದ್ಯ ವೀಣೆ. ಅನೇಕ ವರ್ಷಗಳ ಪರಿಶ್ರಮದಿಂದ ಪಾಂಡಿತ್ಯ ಗಳಿಸಬಹುದು. ಒಲಿಸಿಕೊಂಡಾಗ ವೀಣೆ ನಮ್ಮ ಆತ್ಮ ಸಂಗಾತಿಯಾಗಿ, ನಮ್ಮದೇ ಮನದ ಭಾವನೆಗಳನ್ನು ವ್ಯಕ್ತಪಡಿಸತೊಡಗುತ್ತದೆ. ವೀಣೆ ಎಂದೊಡನೆ ನಮಗೆ ನೆನಪಾಗುವುದೇ ದೇವಿ ಸರಸ್ವತಿ. ಸರಸ್ವತಿ ದೇವಿಯು ಸಂಗೀತದ ಅಧಿದೇವತೆ. ಅವಳು ವೀಣಾಪಾಣಿ. ಸರಸ್ವತಿ ದೇವಿಯು ವೇದಗಳ ಅಭಿಮಾನಿ. ಬ್ರಹ್ಮ ದೇವರ, ಚತುರವದನನ ರಾಣಿ ಎಂದರೆ ಚತುರ್ಮುಖ ಬ್ರಹ್ಮನ ನೀತಪತ್ನಿ ಹಾಗೂ ಪ್ರದ್ಯುಮ್ನ – ಕೃತೀ ದೇವಿಯವರ ಪುತ್ರಿ. ಇವಳು ಮರೆವೆಯೇ ಇಲ್ಲದ ಹಾಗೂ ಅನವರತವೂ ಪರಮಾತ್ಮನ ಸ್ತುತಿ ಮಾಡುವವಳು, ಬ್ರಹ್ಮಾಣಿ – ತತ್ವಜ್ಞಾನಿ ಹಾಗೂ ಗಾನಲೋಲಳೂ ಅಹುದು. ಇವಳ ಹಸ್ತದಲ್ಲಿ ಸದಾ ಕಚ್ಛಪಿ ಎಂಬ ವೀಣೆ ಇರುವುದರಿಂದ, ಇವಳು ವೀಣಾಪಾಣಿ ಮತ್ತು ಇವಳು ಚಿತ್ತಾಭಿಮಾನಿ, ಸರ್ವರಿಗೂ ಬುದ್ಧಿಯನ್ನು ಕೊಡುವ ಬುದ್ಧ್ಯಾಭಿಮಾನಿ ದೇವತೆಯೂ ಹೌದು. ವಿಧಗಳು ನಮ್ಮ ದೇಶದಲ್ಲಿ ಇರುವಷ್ಟು ಸಂಗೀತ ವಾದ್ಯಗಳು ಬೇರೆಲ್ಲೂ ಇಲ್ಲವೆನ್ನಬಹುದೇನೋ..! ಪ್ರತಿಯೊಂದು ವಾದ್ಯವೂ ತನ್ನದೇ ಆದ ಒಂದು ಆಕಾರ, ರಚನೆ ಮತ್ತು ಧ್ವನಿಯನ್ನು ಹೊಂದಿದೆ ಮತ್ತು ವಿಶಿಷ್ಟವಾಗಿದೆ. ಶಾಸ್ತ್ರದಲ್ಲಿ ಈ ವಾದ್ಯಗಳನ್ನು ನಾಲ್ಕು ವಿಧವಾಗಿ ವಿಂಗಡಿಸಿದ್ದಾರೆ. ಅವುಗಳು : ತತ (ತಂತೀವಾದ್ಯಗಳು) ಸುಷಿರ (ಗಾಳಿ ವಾದ್ಯಗಳು)]] ಅವನದ್ಧ (ತಾಡನ ವಾದ್ಯಗಳು)]] ಘನ (ಲೋಹ, ಮಣ್ಣು ಅಥವಾ ಮರದ ವಾದ್ಯಗಳು) ವೀಣೆ ತತ ಅಂದರೆ ತಂತೀವಾದ್ಯಗಳ ಗುಂಪಿಗೆ ಸೇರುತ್ತದೆ. ತಂತಿಗಳ ಮೂಲಕ ನಾದೋತ್ಪತ್ತಿಯಾಗುವ ವಾದ್ಯಗಳೇ ತತವಾದ್ಯಗಳು. ತಂತೀ ವಾದ್ಯಗಳನ್ನು ಶ್ರುತಿ ವಾದ್ಯ ಮತ್ತು ಸಂಗೀತಾವಾದ್ಯಗಳೆಂದು ವಿಂಗಡಿಸಲಾಗಿದೆ. ಗಾಯನ ಅಥವಾ ವಾದನ ಗಳಲ್ಲಿ ಶ್ರುತಿಗಾಗಿ ಉಪಯೋಗಿಸಲ್ಪಡುವುದು "ತಂಬೂರಿ" ಮತ್ತು ಸಂಗೀತವನ್ನು ಗಾಯನಕ್ಕೆ ಬದಲಾಗಿ ವಾದ್ಯದಲ್ಲಿ ಹೊಮ್ಮಿಸಲು ಉಪಯೋಗಿಸಲ್ಪಡುವುದು "ವೀಣೆ". ವೀಣೆ ಋಗ್ವೇದದಲ್ಲಿ ಮತ್ತು ಯಜುರ್ವೇದದಲ್ಲಿ ಕೂಡ ಪ್ರಸ್ತಾಪಿಸಲ್ಪಟ್ಟಿದೆಯಂತೆ. * ವೀಣೆಯ ಉತ್ಪತ್ತಿಗೆ ನಾದಪ್ರಿಯನಾದ ಶಂಕರನು ಕಾರಣವಿರಬಹುದು ಏಕೆಂದರೆ "ರುದ್ರವೀಣೆ" ಎಂದು ಕೂಡ ವಿಶಿಷ್ಟವಾದ ಒಂದು ವೀಣೆ ಇದೆ. ದೇವಿ ಸರಸ್ವತಿಯಲ್ಲದೆ ವಿಶ್ವಾವಸು, ತುಂಬುರು ಮತ್ತು ನಾರದರು ಕೂಡ ವೈಣಿಕರೇ ಮತ್ತು ತುಂಬುರರ ವೀಣೆಯ ಹೆಸರು "ಕಲಾವತೀ" ಎಂದೂ, ವಿಶ್ವಾವಸುವಿನ ವೀಣೆಯ ಹೆಸರು "ಬೃಹತೀ" ಎಂದೂ ಮತ್ತು ನಾರದರ ವೀಣೆಯ ಹೆಸರು "ಮಹತಿ" ಎಂದೂ ನಮಗೆ ಪುರಾಣಗಳಿಂದ ತಿಳಿದುಬರುತ್ತದೆ. 'ಸಂಗೀತ ಮಕರಂದ' (೧೩ನೇ ಶತಮಾನ) ಗ್ರಂಥದಲ್ಲಿ ಸ್ವರ ಮೂರ್ಛನಾ, ರಾಗ, ತಾಲ, ವಾದ್ಯ ಇತ್ಯಾದಿಗಳ ವಿವೇಚನೆ ಇದೆ. ಇದರಲ್ಲಿ ಸುಮಾರು ೧೯ ಪ್ರಕಾರದ ವೀಣೆಗಳನ್ನು ಪರಿಚಯಿಸಲಾಗಿದೆ. ೧.ಕಚ್ಛಪಿ, ೨.ಕುಬ್ಜಿಕಾ, ೩.ಚಿತ್ರಾ, ೪.ವಹಂತಿ, ೫.ಪರಿವಾದಿನಿ, ೬.ಜಯಾ, ೭.ಘೋಷವತಿ, ೮.ಜೇಷ್ಠಾ, ೯.ನಕುಲಿ, ೧೦.ಮಹತಿ, ೧೧.ವೈಷ್ಣವಿ, ೧೨.ಬ್ರಹ್ಮಿ, ೧೩.ರೌದ್ರಿ, ೧೪.ರಾವಣಿ, ೧೫.ಸರಸ್ವತಿ, ೧೬.ಕಿನ್ನರಿ, ೧೭.ಸೈರಂಧ್ರಿ ೧೮.ಕೂರ್ಮಿ, ೧೯.ಗೋಷಕಾ. ವೀಣೆ ಮೋಕ್ಷ ಸಾಧನೆಗೆ ಸುಲಭವಾದ ಹಾದಿ ಎಂದು ಯಾಜ್ಞವಲ್ಕ್ಯರು ತಮ್ಮ ಸ್ಮೃತಿಯಲ್ಲಿ ಹೇಳಿದ್ದಾರೆ. ನಾವು ರಾವಣನ ಕಥೆಯಲ್ಲಿ ಕೂಡ ಕೇಳಿದ್ದೇವೆ - ವೀಣೆಯ ತಂತಿಯೊಂದು ಕಿತ್ತು ಹೋದಾಗ ತನ್ನ ದೇಹದ ಒಂದು ನರವನ್ನೇ ಕಿತ್ತು ತಂತಿಯಾಗಿಸಿ, ವೀಣೆಯ ವಾದನವನ್ನು ಮುಂದುವರೆಸಿದನೆಂದು. ಪ್ರಾಚೀನ ಗ್ರಂಥಗಳಲ್ಲಿ ವೀಣೆ ವೀಣೆ ಈಗಿರುವ ಸ್ವರೂಪಕ್ಕೆ ಬರುವ ಮೊದಲು ಅನೇಕ ಬದಲಾವಣೆಗಳನ್ನು ಹೊಂದಿದ್ದಾಗಿರಬಹುದು. ಕಾಳಿದಾಸನ ’ಶ್ಯಾಮಲಾ ದಂಡಕ’ದಲ್ಲಿ "ಮಾಣಿಕ್ಯವೀಣಾಂ ಉಪಲಾಲಯಂತೀಂ " ಎನ್ನುತ್ತಾ ಶ್ಯಾಮಲೆಯಾದ ಶಾರದಾಂಬೆಯು ಮಾಣಿಕ್ಯ ಮಯವಾದ ವೀಣೆಯನ್ನು ನುಡಿಸುತ್ತಿದ್ದಳು ಎಂದಿದ್ದಾರೆ. ಹಾಗೇ ಪ್ರತಿಜ್ಞಾ ಯೌಗಂಧರಾಯಣ ನಾಟಕದಲ್ಲಿ ರಾಜಾ ಉದಯನು "ಘೋಷವತೀ" ಎಂಬ ವೀಣೆಯನ್ನು ನುಡಿಸಿದ್ದನೆಂದು ಕೂಡ ಉಲ್ಲೇಖವಿದೆ. ಕರ್ನಾಟಕ ಸಂಗೀತ ತ್ರಿಮೂರ್ತಿಗಳಲ್ಲೊಬ್ಬರಾದ ನಾದಜ್ಯೋತಿ ಶ್ರೀ ಮುತ್ತುಸ್ವಾಮಿ ದೀಕ್ಷಿತರಿಗೆ ಗುರು ಚಿದಂಬರನಾಥ ಯೋಗಿಯ ಅನುಗ್ರಹದಿಂದ ಕಾಶಿಕ್ಷೇತ್ರದಲ್ಲಿ ಗಂಗೆಯಲ್ಲಿ ದೊರೆತ ವೀಣೆಯ ಮೇಲೆ ದೇವನಾಗರಿಯಲ್ಲಿ "ರಾಮ" ಎಂದು ಕೆತ್ತಲ್ಪಟ್ಟಿದೆಯಂತೆ. ಹೀಗೆ ವೀಣೆಯ ಇತಿಹಾಸ ತುಂಬಾ ಹಿಂದಿನದೆಂಬ ಮಾತು ನಮಗೆ ಅರ್ಥವಾಗುತ್ತದೆ. ವೀಣೆಯ ಅಂಗ ರಚನೆ ಮತ್ತ ಕಾರ್ಯ ವೈಖರಿ ವೀಣೆಯ ವಿವರಣೆಯೆಂದರೆ ಒಂದು ಚಿಕ್ಕ ಹಾಗೂ ಒಂದು ದೊಡ್ಡ ಬುರುಡೆಗಳಿರುತ್ತವೆ. ದೊಡ್ಡ ಬುರುಡೆಯನ್ನು ಕೊಡ ಎಂದು ಕರೆಯುತ್ತಾರೆ. ಬಲಗಡೆಗೆ ಇರುತ್ತದೆ ಮತ್ತು ಇದನ್ನು ಸಾಮಾನ್ಯವಾಗಿ ಹಲಸಿನ ಮರದಿಂದ ಮಾಡುತ್ತಾರೆ. ಇದರ ತಯಾರಿ ಕೂಡ ಅನೇಕ ತಿಂಗಳುಗಳ ಕೆಲಸವಾಗುತ್ತದೆ. ಹಲಸಿನ ಮರವನ್ನು ನೀರಿನಲ್ಲಿ ನೆನೆಸಿಟ್ಟು ಬೇಕಾದ ಆಕಾರಕ್ಕೆ ಕೊರೆದು, ಕತ್ತರಿಸಿ ಹಗುರ ಮಾಡಿ ಕೊಡವನ್ನು ತಯಾರಿಸುತ್ತಾರೆ. ಕೊಡ ಹಗುರವಾಗಿದ್ದಷ್ಟೂ ನಾದ ಚೆನ್ನಾಗಿ ತುಂಬುತ್ತದೆಂಬ ನಂಬಿಕೆಯಿದೆ. * * ಹೀಗೆ ತಯಾರಿಸಿದ ಕೊಡವನ್ನು ಇನ್ನೊಂದು ಮರದ ಹಾಳೆಯಿಂದ ಮುಚ್ಚಿರುತ್ತಾರೆ. ಅದಕ್ಕೆ ದಂಡಿಯನ್ನು ಜೋಡಿಸುತ್ತಾರೆ. ಅದರ ಎಡತುದಿ ಭೂಮಿಯ ಕಡೆಗೆ ಬಗ್ಗಿರುತ್ತದೆ ಮತ್ತು ಇದಕ್ಕೆ ಇನ್ನೊಂದು ಪುಟ್ಟ ಕೊಡದಂತಹ ಬುರುಡೆಯನ್ನು ಜೋಡಿಸಿರು ತ್ತಾರೆ. ಈ ರೀತಿಯ ವೀಣೆ ಮೊಟ್ಟ ಮೊದಲು ತಂಜಾವೂರಿನಲ್ಲಿ ತಯಾರಾದುದರಿಂದ ಇಂತಹ ವೀಣೆಗೆ "ತಂಜಾವೂರು ವೀಣೆ" ಎನ್ನುತ್ತಾರೆ. ಎಡಗಡೆಗೆ ಜೋಡಿಸಿರುವ ಪುಟ್ಟ ಕೊಡದಂತಹದು ಸೋರೆಬುರುಡೆ ಅಥವಾ ಕಾಗದದ ಬುರುಡೆ, ಪಿತ್ ಅಥವಾ ರಾಳದ ಬುರುಡೆ, ತಗಡಿನ ಬುರುಡೆಯೂ ಆಗಿರಬಹುದು. ದಂಡಿಯ ಮೇಲ್ಭಾಗಕ್ಕೆ ದೋಣಿ ಪಟ್ಟಿಯನ್ನು ಅಂಟಿಸಿರುತ್ತಾರೆ ಮತ್ತು ಈ ದೋಣಿ ಪಟ್ಟಿಯ ಮೇಲೆ ಉದ್ದಕ್ಕೂ ಎರಡೂ ಕಡೆಗಳಲ್ಲೂ ಹದ ಮಾಡಿದ ಮೇಣದಿಂದ ಜಗಲಿಗಳನ್ನು ಕಟ್ಟಿ ಅವುಗಳ ಮೇಲೆ ೨೪ ಎರಕದ ಮೆಟ್ಟಿಲುಗಳನ್ನು ಆಯಾಯಾ ಸ್ವರ ಸ್ಥಾನಗಳಿಗೆ ಅನುಗುಣವಾಗಿ ನೆಡುತ್ತಾರೆ. ಮೇಣಕ್ಕೆ ಇದ್ದಿಲನ್ನು ನುಣ್ಣಗೆ ಪುಡಿಮಾಡಿ ಬೆರೆಸಿ, ಕಲಸಿ, ಬೆಂಕಿಯಲ್ಲಿ ಕಾಯಿಸಿ ಗೊತ್ತಾದ ಹದಕ್ಕೆ ತಂದು ಕಟ್ಟಬೇಕು. ಇದರ ಮೇಲೆ ಮೆಟ್ಟಿಲುಗಳನ್ನು ನೆಡುವಾಗ ನಿಶ್ಯಬ್ದತೆ ಇರಬೇಕು. ಕೂದಲೆಳೆಯಷ್ಟು ವ್ಯತ್ಯಾಸವಾದರೂ ಅಪಸ್ವರ ಬರುತ್ತದೆ. ಇದಕ್ಕೆ ವೀಣೆಮೇಳ ಕಟ್ಟುವುದು ಎಂದೇ ಕರೆಯುತ್ತಾರೆ. ಈ ಮೆಟ್ಟಿಲುಗಳ ಮೇಲೆ ವೀಣೆಯ ಕೊಡದ ಮೇಲೆ ಅಂಟಿಸಿದ "ಕುದುರೆ" (ಮರದ ತುಂಡು) ಮೂಲಕ ಹಾದು ನಾಲ್ಕು ತಂತಿಗಳು ಬರುತ್ತವೆ. ಕುದುರೆಯ ಎತ್ತರ ಮತ್ತು ಮೇಣದ ಎತ್ತರ ಎರಡೂ ಸಮವಾಗಿದ್ದಾಗ ಮಾತ್ರ ಸುಲಲಿತವಾದ ನಾದ ಹೊರಹೊಮ್ಮುತ್ತದೆ. ನಾಲ್ಕು ತಂತಿಗಳಲ್ಲಿ ಮೊದಲನೆಯದು "ಸಾರಣಿ", ಎರಡನೆಯದು "ಪಂಚಮ", ಮೂರನೆಯದು "ಮಂದ್ರ", ನಾಲ್ಕನೆಯದು "ಅನುಮಂದ್ರ" ಎಂದು ಕರೆಯುತ್ತಾರೆ. ಇದಲ್ಲದೆ ಕುದುರೆಯ ಪಕ್ಕದಲ್ಲಿ ಬಾಗಿದ ಒಂದು ಹಿತ್ತಾಳೆಯ ರೇಕು ಜೋಡಿಸಿರುತ್ತಾರೆ. ಇದರ ಮೂಲಕ ಮೂರು ತಾಳದ ತಂತಿಗಳು ಹಾದು ಹೋಗುತ್ತವೆ. ಅವುಗಳು ಕ್ರಮವಾಗಿ ಮಧ್ಯ ಷಡ್ಜ, ಮಧ್ಯ ಪಂಚಮ ಮತ್ತು ತಾರ ಷಡ್ಜಗಳು. ವೀಣೆಯ ಎಲ್ಲಾ ಏಳು ತಂತಿಗಳೂ ಎಡಗಡೆಯ ಪುಟ್ಟ ಬುರುಡೆಯ ಕಡೆಗೆ ಹಾದು ಬರುತ್ತವೆ ಮತ್ತು ಒಂದೊಂದು ತಂತಿಯೂ ಒಂದೊಂದು ಬಿರಟೆಯಿಂದ ಕಟ್ಟಲ್ಪಟ್ಟು, ಹೆಚ್ಚಿಗೆ ಇರುವ ತಂತಿ ಅದಕ್ಕೆ ಸುತ್ತಿ ಭದ್ರಪಡಿಸಲ್ಪಟ್ಟಿರುತ್ತದೆ. ವೀಣೆ ಶ್ರುತಿ ಮಾಡುವಾಗ ಈ ಬಿರಟೆಗಳನ್ನು ಬಿಗಿ ಮತ್ತು ಸಡಿಲು ಮಾಡುವ ಮುಖಾಂತರ ಬೇಕಾದ ಬಿಂದುವಿನಲ್ಲಿ ಸ್ವರ ಕೂಡಿಸಲು ಅನುಕೂಲವಾಗುತ್ತದೆ. ಮೂರು ಪ್ರತ್ಯೇಕ ಭಾಗಗಳಾದ ಕಾಯಿ, ದಂಡಿ ಮತ್ತು ತಲೆ ಉಳ್ಳ ವೀಣೆಗೆ ’ಖಂಡ ವೀಣೆ’ ಎಂದು ಹೆಸರು. ಮೂರೂ ಭಾಗಗಳೂ ಏಕವಾಗಿ ಒಂದೇ ಮರದಲ್ಲಿ ಮಾಡಲ್ಪಡುವ ವೀಣೆಗೆ ’ಅಖಂಡ ವೀಣೆ’ ಎಂದು ಹೆಸರು. ಅಖಂಡ ವೀಣೆಯ ನಾದ ಹೆಚ್ಚು ಮಧುರವಾಗಿರುತ್ತದೆನ್ನುತ್ತಾರೆ. ವೆಂಕಟಮುಖಿಯವರು ಉಲ್ಲೇಖಿಸಿರುವ ಮೂರು ವಿಧ ವೀಣೆಗಳಾದ ’ಶುದ್ಧ ಮೇಳ ವೀಣೆ’, ’ಮಧ್ಯಮ ಮೇಳ ವೀಣೆ’ ಮತ್ತು ’ರಘುನಾಥ ಮೇಳ ವೀಣೆ’ ಗಳಲ್ಲಿ ತಂತಿಗಳು ಮೇಲೆ ಹೇಳಿದಂತಿಲ್ಲದೆ ಬೇರೆಯೇ ಕ್ರಮದಲ್ಲಿವೆ ಮತ್ತು ಅವುಗಳನ್ನು ಶ್ರುತಿ ಮಾಡುವ ರೀತಿಯೂ ಬೇರೆಯೇ ಆಗಿವೆ. ಮೆಟ್ಟಿಲುಗಳ ಜೋಡಣೆಯ ಕ್ರಮದಲ್ಲೂ ಸ್ವಲ್ಪ ವ್ಯತ್ಯಾಸ ಬರುತ್ತದೆ. ವೀಣೆಯ ಪುಟ್ಟ ಸೋರೆಯ ಬುರುಡೆಯನ್ನು ನುಡಿಸುವವರ ಎಡ ತೊಡೆಯ ಮೇಲಿಟ್ಟುಕೊಳ್ಳುತ್ತಾರೆ, ದೊಡ್ಡ ಕೊಡ ಅಥವಾ ಬುರುಡೆಯನ್ನು ಬಲತೊಡೆಗೆ ತಗುಲುವಂತೆ ಇಟ್ಟುಕೊಂಡು ಕುಳಿತು, ಬಲಗೈನಿಂದ ಮೊದಲನೆಯ ತಂತಿ ಸಾರಣಿಯನ್ನು ತರ್ಜನಿ ಹಾಗೂ ಮಧ್ಯದ ಬೆರಳುಗಳಿಂದ ಮೀಟುತ್ತಾ, ಎಡಗೈಯನ್ನು ಮೇಣದಲ್ಲಿ ಕಟ್ಟಿರುವ ಮೆಟ್ಟಿಲುಗಳ ಮೇಲೆ ಒತ್ತುತ್ತಾ ನಾದ ಹೊಮ್ಮಿಸುತ್ತಾರೆ. ಬಲಗೈನ ಕಿರು ಬೆರಳಿನಿಂದ ತಾಳದ ತಂತಿಗಳನ್ನು ಬೇಕಾದ ಕಡೆ ತಾಳ ಹಾಕಲು ಉಪಯೋಗಿಸುತ್ತಾರೆ. ವೀಣೆ ಗಮಕಕ್ಕೆ ತುಂಬಾ ಸೂಕ್ತವಾದ ವಾದ್ಯ. ಗಾಯನದಲ್ಲಿ ಸಾಧ್ಯವಾಗದೇ ಇರುವ ಸ್ವರಪ್ರಕ್ತಿಯು ಸಹಜವಾಗಿ ತಂತೀವಾದ್ಯವಾದ ವೀಣೆಯಲ್ಲಿ ಅತ್ಯದ್ಭುತವಾಗಿ ಉತ್ಪತ್ತಿ ಮಾಡಬಹುದು. ವೀಣೆಯ ಮೆಟ್ಟುಗಳ ಮೇಲೆ ಹಾಯುವ ತಂತಿಗಳಲ್ಲಿ ಪ್ರಧಾನ ತಂತಿಯಾದ ಸಾರಣಿ, ಮಂದ್ರ ಪಂಚಮ ಮತ್ತು ಮಂದ್ರ ಷಡ್ಜ ತಂತಿಗಳ ಮೇಲೆ ಸಂವಾದಿ, ಅನುವಾದಿ ಸ್ವರ ರಂಜನೆಗೆ ಆಸ್ಪದವೀಯುವ ಸ್ವರಗಳ ಮೆಟ್ಟಿಲುಗಳನ್ನು ಎಡಗೈ ಬೆರಳುಗನ್ನದುಮಿ ಬಲಗೈ ಬೆರಳಿನ ಒಂದೇ ಒಂದು ಮೀಟಿನಿಂದ ಮೂರೂ ಸ್ವರಗಳನ್ನೂ ಉತ್ಪತ್ತಿ ಮಾಡುವುದೇ ಈ "ಗಮಕ"ದ ತಂತ್ರ. ಐತರೇಯೋಪನಿಷತ್ತಿನಲ್ಲಿ ವೀಣೆ ಐತರೇಯೋಪನಿಷತ್ತಿನಲ್ಲಿ ನಮ್ಮ ದೇಹವನ್ನು ವೀಣೆಯೆಂದು ಉಲ್ಲೇಖಿಸಿದ್ದಾರೆ.... ಅಥ ಖಲ್ವಿಯಂ ದೈವೀವೀಣಾ ಭವತಿ | ತದನುಕೃತಿರಸೌ ಮಾನುಷೀ ವೀಣಾ ಭವತಿ | ಯಥಾಸ್ಯಾ: ಶಿರ ಏವಮಮುಷ್ಯಾ: ಶಿರ: | ಯಥಾಸ್ಯಾ ಉದರಮೇವಮಮುಷ್ಯಾ ಅಂಭಣಮ್ | ಯಥಾಸ್ಯೈ ಜಿಹ್ವಾ - ಏವಮಮುಷ್ಯೈ ವಾದನಮ್ | ಯಥಾಸ್ಯಾಸ್ತಂತ್ರಯ ಏವಮಮುಷ್ಯಾ ಅಂಗುಲಯ: | ಯಥಾಸ್ಯಾ: ಸ್ವರಾ ಏವಮಮುಷ್ಯಾ: ಸ್ವರಾ: || ಈ ದೇಹವೊಂದು ದೈವೀವೀಣೆ. ಮನುಷ್ಯರು ನಿರ್ಮಿಸಿದ ಮರದ ವೀಣೆ ದೇವರು ನಿರ್ಮಿಸಿದ ಈ ದೇಹವೀಣೆಯದೇ ಅನುಕರಣೆ. ದೇಹಕ್ಕೆ ತಲೆಯಿದ್ದಂತೆ ಮರದ ವೀಣೆಗೆ ಪುಟ್ಟ ಬುರುಡೆ ಇದೆ, ದೇಹದ ಉದರ ಹಾಗೂ ಪೀಠವಿದ್ದಂತೆ ವೀಣೆಗೆ ಕೊಡ ಅಥವಾ ದೊಡ್ಡ ಬುರುಡೆಯಿದೆ. ಬೆನ್ನುಹುರಿಯು ಉದ್ದಕ್ಕೆ ದೇಹದಲ್ಲಿ ಪೀಠದಿಂದ ಕಂಠದವರೆಗೆ ಪಸರಿಸಿ ಪೀಠವನ್ನು ಮತ್ತು ದೇಹದ ಕೆಳಗಿನ ಭಾಗದ ಸಂಪರ್ಕವನ್ನು ತಲೆಗೆ ಮುಟ್ಟಿಸಿದೆಯೋ ಹಾಗೆ ವೀಣೆಯಲ್ಲಿ ಮರದ ದೋಣಿ ಕೊಡವನ್ನು ಪುಟ್ಟ ಬುರುಡೆಗೆ ಸೇರಿಸಿದೆ. ಬೆನ್ನುಹುರಿಯಲ್ಲಿರುವಂತೆಯೇ ಈ ದೋಣಿಯ ಮೇಲೆ ಮೇಣವನ್ನು ಕಟ್ಟಿ ಅವುಗಳ ಮೇಲೆ ೨೪ ಎರಕದ ಮೆಟ್ಟಿಲುಗಳನ್ನು ಸ್ವರಸ್ಥಾನಗಳಾಗಿ ಜೋಡಿಸಿರುತ್ತಾರೆ. ದೇಹದ ವೀಣೆಗೆ ನಾಲಿಗೆ ಹೇಗೆ ಸ್ವರ / ನಾದವನ್ನು ಉತ್ಪತ್ತಿ ಮಾಡುವುದೋ ಹಾಗೆ ವೀಣೆಯ ಮೇಲೆ ವಾದಕನ ಬೆರಳುಗಳು ನಾದವನ್ನು ಸೃಷ್ಟಿಸುತ್ತವೆ. ದೇಹಕ್ಕೆ ನರಗಳೇ ತಂತಿಗಳು. ನಾದ ಮೈತುಂಬಿದಾಗ, ನರ ನರವೂ ನಾದದ ಅಲೆಯಲ್ಲಿ ತೇಲಿಹೋಗುವುದು. ಹಾಗೇ ವೀಣೆಯ ತಂತಿಗಳೂ, ವಾದಕನ ಬೆರಳುಗಳು ತಂತಿಯ ಮೇಲೆ ಆಟವಾಡಿದಾಗ, ಅಲೆ ಅಲೆಯಾಗಿ ನಾದ ವೀಣೆಯ ಕೊಡದಿಂದ ಚಿಮ್ಮುತ್ತದೆ. ದೇಹವೆಂಬ ದೈವೀವೀಣೆ ದೇವರ ಗುಣಗಾನಕ್ಕೇ ಮೀಸಲಾದ ವೀಣೆ. ಈ ದೇಹ ವೀಣೆಗೆ ನಮ್ಮ ಕೈಗಳೇ ತಾಳವಾದ್ಯ. ಕೈ ತಟ್ಟಿನ ತಾಳ ತಟ್ಟಿ ದೇಹವೆಂಬ ದಂಡಿಗೆಯಿಂದ ಭಗವಂತನ ಸ್ಮರಣೆಯನ್ನು ನುಡಿಸಬೇಕು. ದೈವೀಕತೆ ವೀಣೆ ದೈವೀಕವಾದರೂ ನಮ್ಮ ಜೀವನದಲ್ಲಿ ಒಂದು ವಿಶಿಷ್ಟ ಸ್ಥಾನ ಪಡೆದುಕೊಂಡಿದೆ. ಬೇರೆ ಎಲ್ಲಾ ವಾದ್ಯಗಳಿಗಿಂತಲೂ ವೀಣೆ ವಾದಕನ ಮನಸ್ಸಿನ ಭಾವಗಳನ್ನು ಅತ್ಯಂತ ನವಿರಾಗಿ ಬಿಂಬಿಸುತ್ತದೆ ಎನಿಸುತ್ತದೆ. ವೀಣೆ ಅಭ್ಯಾಸ ಮಾಡುವಾಗ ಮನಸ್ಸು ಪ್ರಶಾಂತವಾಗುತ್ತದೆ. ತಂತಿಗಳ ಮೇಲೆ ಮೆಲ್ಲಗೆ ಬೆರಳಾಡಿಸಿದಾಗ ಝುಮ್ಮೆನ್ನುವ ನಾದ ನಮ್ಮ ನರನಾಡಿಗಳಲ್ಲೂ ಪ್ರವಹಿಸಲಾರಂಭಿಸುತ್ತದೆ. ವಾದಕನ ಹೃದಯಕ್ಕೆ ಹತ್ತಿರವಾಗಿ ನಾದ ಮಿಡಿಯುವ ವೀಣೆ ಅತ್ಯಂತ ಆಪ್ತವಾಗುತ್ತದೆ. ಅದೊಂದು ವಾದ್ಯವೆಂಬ ಅಂಶ ಮರೆತುಹೋಗಿ ಜೀವದ ಗೆಳತಿಯಾಗಿಬಿಡುತ್ತದೆ. ನಮ್ಮ ಭಾವನೆಗಳನ್ನು ಅರಳಿಸ ತೊಡಗುತ್ತದೆ. ಹೊರ ಹೊಮ್ಮುವ ನಾದ ನಮ್ಮೊಡನೆ ಮಾತನಾಡಾಲಾರಂಭಿಸುತ್ತದೆ. ಎಡಕೈ ಬೆರಳುಗಳು ತಂತಿಯ ಮೇಲೆ ಸ್ವಲ್ಪವೇ ಒತ್ತಡದಿಂದ ಚಲಿಸಲಾರಂಭಿಸಿದೊಡನೇ ನಮ್ಮೊಳಗಿನ ಭಾವನೆಗಳ ಪ್ರಪಂಚ ಅನಾವರಣಗೊಳ್ಳುತ್ತಾ ಎಲ್ಲೆಲ್ಲೂ ನಾದವೇ ತುಂಬಿರುವ ಅನುಭವ ಕೊಡುತ್ತದೆ. ನಡು ನಡುವೆ ತಾಳದ ತಂತಿಗಳನ್ನು ಮೀಟುವಾಗ ಮಂದ್ರ ಹಾಗೂ ತಾರದಲ್ಲಿ ’ಸ’ ಮತ್ತು ಮಧ್ಯಮದಲ್ಲಿ ’ಪ’ ಮಿಶ್ರವಾಗಿ ಗೆಜ್ಜೆಯ ಘಲ್ ಘಲ್ ಶಬ್ದ ಕೇಳಿಸುವಂತಾಗುತ್ತದೆ. ವೀಣೆಯ ಪುಟ್ಟ ಬುರುಡೆಯನ್ನು ವಾದಕ ತನ್ನ ಎಡ ತೊಡೆಯ ಮೇಲಿಟ್ಟುಕೊಂಡು ನುಡಿಸುವಾಗ, ಕಂಪನದಿಂದುಂಟಾಗುವ ನಾದ ನಮ್ಮ ಶರೀರದಲ್ಲೂ ದಿವ್ಯ ಕಂಪನದ ಅನುಭವ ಕೊಡುತ್ತದೆ. ವಿಜಯಭಾಸ್ಕರ ಸಂಗೀತ ನೀಡಿರುವ, ಶ್ರೀಮತಿ ಬಿ ಕೆ ಸುಮಿತ್ರ ಅವರು ಹಾಡಿರುವ ’ಕಲ್ಯಾಣಿ’ ಚಿತ್ರದ "ವೀಣಾ.. ನಿನಗೇಕೋ ಈ ಕಂಪನ | ಮೃದುವಾಗಿ ನುಡಿ ಮುದವಾಗಿ ನುಡಿ | ರಾಗ ಸಂಮೋಹನ ||" ಹಾಡು ನುಡಿಸುವವರ ಮನದ ಭಾವನೆಗಳ ಜೊತೆ ಎಷ್ಟು ಸುಂದರವಾಗಿ ವೀಣೆಯ ತರಂಗಗಳು ಬೆಸೆದುಕೊಳ್ಳುತ್ತವೆನ್ನುವುದಕ್ಕೆ ಉತ್ತಮ ಉದಾಹರಣೆಯಾಗುತ್ತದೆ. ಒಮ್ಮೆ ಮೀಟಿದರೆ ಸಾಕು ನಾದಕ್ಕೆ ಮನಸೋಲುವಂತೆ ಮಾಡುವುದು ವೀಣೆ ಎಂಬ ಮಾತನ್ನು ಈ ಹಾಡಿನಲ್ಲಿ "ನಿನ್ನಯ ನಾದಕೆ ಮೈಮನ ಒಲಿಸಿ" ಎಂದೂ, ಭಾವನೆಗಳ ಹೊಸ ಪ್ರಪಂಚದ ಅನಾವರಣವಾಗುತ್ತದೆ ಎಂಬ ಮಾತನ್ನು "ಭಾವತರಂಗದಿ ಲೋಕವ ಮರೆಸಿ" ಎಂದೂ ಹೇಳಿದ್ದಾರೆ. ನಾದದೊಂದಿಗೆ ಮೈಮನ ತೇಲಿದಾಗಲೇ ನಡೆಯುವುದು ಸ್ವಚ್ಛ ಮನದಿಂದ ಭಗವಂತನ ಆರಾಧನೆ. ಸರಸ್ವತಿ ದೇವಿಯ ಆರಾಧನೆ ಸರಸ್ವತಿ ದೇವಿಯನ್ನು ವೀಣಾಪಾಣಿ ವಿಶ್ವ ಕಲ್ಯಾಣಿ, ಗಾಯನ, ನರ್ತನ ನಂದ ಪ್ರದಾಯಿನಿ ಎನ್ನುತ್ತಾ, ಅವಳದು ಎಂತಹ ಗಾಯನವೆಂದರೆ ಮೌನದ ಗಾಯನ, ಎಂತಹ ನರ್ತನವೆಂದರೆ ಕಾಣದ ನರ್ತನ, ಧ್ಯಾನದ ಕಿವಿ ಕಣ್ಗಳಿಗೆ ಅಮೃತದ ಸ್ವಾದನ ಎನ್ನುತ್ತಾರೆ ಡಿವಿಜಿಯವರು. ಸಂಗೀತ ಶಾಸ್ತ್ರದಲ್ಲಿ ಬರುವ ಆಹತ – ಅನಾಹತದ ನೆನಪು ಮಾಡಿಕೊಡುತ್ತದೆ - ಆಹತವೆಂದರೆ ಕೇಳಿಸಿಕೊಳ್ಳುವ ಶಬ್ದ, ಅನಾಹತವೆಂದರೆ ಕೇಳಲು ಸಾಧ್ಯವಿಲ್ಲದಂತಹ ಶಬ್ದ. ಇಂತಹ ಮೌನದ ಗಾಯನ, ಕಾಣದ ನರ್ತನವನ್ನು ಸರಸ್ವತಿ ದೇವಿ ಪರಮಾತ್ಮ ಚನ್ನಕೇಶವ ಸ್ವಾಮಿಗೆ ಅರ್ಪಿಸುತ್ತಾಳೆ. ಯಾರು ಸದಾ ಸರಸ್ವತಿ ದೇವಿಯ ಧ್ಯಾನದಲ್ಲಿ ಇರುವರೋ ಅವರಿಗೆ ಈ ಗಾಯನ ಮತ್ತು ನರ್ತನ ಅಮೃತದ ಸ್ವಾದನದಂತೆ ಇರುತ್ತದೆ ಎಂದು ಸುಂದರವಾಗಿ ವರ್ಣಿಸಿದ್ದಾರೆ ಡಿವಿಜಿಯವರು ತಮ್ಮ ಅಂತಃಪುರ ಗೀತೆ ಸಂಕಲನದಲ್ಲಿರುವ "ವೀಣಾಪಾಣಿ ವಿಶ್ವ ಕಲ್ಯಾಣಿ ಗಾಯನ ನರ್ತನ ನಂದ ಪ್ರದಾಯಿನಿ".. ಎಂಬ ರಚನೆಯಲ್ಲಿ. ಕವಿ ಶ್ರೀ ಸಾ ಶಿ ಮರುಳಯ್ಯ ಅವರ ಕವಿತೆಯಲ್ಲಿ ವೀಣೆ ಶೃಂಗಾರ ರಸದ ಪ್ರಚೋದನೆಗೆ ಕೂಡ ವೀಣೆಯನ್ನು ಅತ್ಯಂತ ಸಮರ್ಥವಾಗಿ ಬಿಂಬಿಸಿದ್ದಾರೆ ಕವಿ ಶ್ರೀ ಸಾ ಶಿ ಮರುಳಯ್ಯ. ಅವರು ತಮ್ಮ "ಶ್ರುತಿ ಸುಖ್ಹ ನಿನದೆ ಕಲರವ ವರದೇ.... ಓ ಗೆಳತಿ.. ಘೋಷವತಿ... || ಎಂಬ ರಚನೆಯಲ್ಲಿ ಉದಯನ ನುಡಿಸುತ್ತಿದ್ದನೆನ್ನಲಾದ ಘೋಷವತಿ ಎಂಬ ವೀಣೆಯನ್ನು ಕುರಿತು ಪ್ರಸ್ತಾಪಿಸಿದ್ದಾರೆ. ಉದಯನ ಹೃದಯ ಮೋದ ತರಂಗಿಣಿ | ವಾಸವದತ್ತಾ ಪ್ರಣಯ ಪ್ರಚೋದಿನಿ | ಕುಂಜರ ಭಂಜನಿ ಕುಮುದ ನಿರಂಜನಿ | ಮಂಗಳ ಪತಗಳ ಮಧುರ ಸುಭಾಷಿಣಿ || ಚಿಗುರಿನ ಬೆರಳಲಿ ತಂತಿಯ ಮೀಟಲು | ಷಡಜದ ಸವಿದನಿ ಜಿನುಗಿಸುವೆ | ಪಂಚಮದಂಚಿಗೆ ನಾದದ ಬ್ರಹ್ಮಕೆ | ವೀಣಾಮಣಿ ನೀ ಕುಣಿಯಿಸುವೆ || ಪ್ರದ್ಯೋತ್ತೋನ್ನತ ಪ್ರಥಮ ಪ್ರಭಾತಕೆ | ಧೃತಗತಿಯಲಿ ನೀ ಸಂಚಲಿಸಿ | ರಾಗಿಣಿ ಭಾಮಿನಿ ಪ್ರೇಮೋನ್ಮಾದಿನಿ | ಮಧುಕರ ಮಿಲನಕೆ ನೆರವಾಗೇ || ವೀಣೆಗೆ ಸಂಬಂಧಪಟ್ಟ ಇತರ ಕೆಲವು ವಾದ್ಯಗಳೆಂದರೆ ನುಡಿಸುವ ಉದಯನನ ಹೃದಯದ ತರಂಗಿಣಿ, ರಾಗಿಣಿ, ಭಾಮಿನಿ, ಪ್ರೇಮೋನ್ಮಾದಿನಿ ಎಂದೆಲ್ಲಾ ವರ್ಣಿಸುತ್ತಾ ಚಿಗುರಿನ ಬೆರಳುಗಳು ತಂತಿಯ ಮೀಟಿದಾಗ ಷಡ್ಜದ ಸವಿದನಿಯಿಂದ ಪಂಚಮದ ಪ್ರೇಮನಾದವನ್ನು ಹೊರಡಿಸುತ್ತಾ, ಹೃದಯದಲ್ಲಿ ಸುಖದ ಕಲ್ಪನೆಯ ತರಂಗಗಳನ್ನು ಮೀಟಿ ಎಚ್ಚರಿಸುತ್ತಾ ಮಧುಕರ ಮಿಲನಕ್ಕೆ ನೆರವಾಗೇ ಎಂದು ನುಡಿದಿದ್ದಾರೆ. ವೀಣೆಗೆ ಸಂಬಂಧಪಟ್ಟ ಇತರ ಕೆಲವು ವಾದ್ಯಗಳೆಂದರೆ; ರುದ್ರ ವೀಣೆ ವಿಚಿತ್ರ ವೀಣೆ ಚಿತ್ರ ವೀಣೆ ಮಹಾನಾಟಕ ವೀಣೆ ಕೆಲ ಪ್ರಸಿದ್ಧ ವೀಣೆ ವಾದಕರು ವೀಣೆ ಶೇಷಣ್ಣ ವೀಣೆ ಸುಬ್ಬಣ್ಣ ಎಸ್. ಬಾಲಚಂದರ್ ಮೈಸೂರು ದೊರೆಸ್ವಾಮಿ ಅಯ್ಯಂಗಾರ್ ಚಿಟ್ಟಿ ಬಾಬು ಆರ್.ಕೆ.ಸೂರ್ಯನಾರಾಯಣ್ ಇ. ಗಾಯತ್ರಿ ಬಾಹ್ಯ ಸಂಪರ್ಕಗಳು ವೀಣೆಯ ವಿವಿಧ ವಿನ್ಯಾಸಗಳ ಬಗ್ಗೆ ವೀಣೆಯ ಆಡಿಯೋ ಸ್ಯಾಂಪಲ್‍ಗಳು Google - Saraswati Veena Saraswati Veena Saraswati Veena in North Indian Khayal Style See Video of Beenkar Suvir Misra playing Saraswati Veena in Hindustani Khayal Style. ಸಂಗೀತ ವಾದ್ಯಗಳು ಕರ್ನಾಟಕ ಸಂಗೀತ
1367
https://kn.wikipedia.org/wiki/%E0%B2%B5%E0%B2%BF%E0%B2%9A%E0%B2%BF%E0%B2%A4%E0%B3%8D%E0%B2%B0%20%E0%B2%B5%E0%B3%80%E0%B2%A3%E0%B3%86
ವಿಚಿತ್ರ ವೀಣೆ
ವಿಚಿತ್ರ ವೀಣೆ ಕರ್ನಾಟಕ ಸಂಗೀತ ಮತ್ತು ಹಿಂದುಸ್ತಾನಿ ಸಂಗೀತ ಪದ್ಧತಿಗಳಲ್ಲಿ ಉಪಯೋಗಿಸಲ್ಪಡುವ ವಾದ್ಯಗಳಲ್ಲಿ ಒಂದು. ವಿಚಿತ್ರ ವೀಣೆಗೆ "ಗೊಟ್ಟುವಾದ್ಯ" ಎ೦ದೂ ಹೆಸರು. ಸಾಕಷ್ಟು ಇತ್ತೀಚೆಗಿನ ವಾದ್ಯವಾಗಿದ್ದು, ಹಳೆಯ ಹಿಂದುಸ್ತಾನಿ ವಾದ್ಯವಾದ "ಬೀನ್"ನ ಬೆಳೆದ ರೂಪ ಎನ್ನಬಹುದು. ವಿಚಿತ್ರವೀಣೆ ೧೯ ನೆಯ ಶತಮಾನದಿ೦ದ ಇತ್ತೀಚೆಗೆ ಬೆಳಕಿಗೆ ಬ೦ದ ವಾದ್ಯ. ವಿಚಿತ್ರವೀಣೆಯನ್ನು ಸಾಮಾನ್ಯವಾಗಿ ತೇಗದ ಮರದಿ೦ದ ತಯಾರಿಸಲಾಗುತ್ತದೆ. ನಾಲ್ಕು ಮುಖ್ಯ ತ೦ತಿಗಳು, ಶ್ರುತಿಗಾಗಿ ಮೂರು ತ೦ತಿಗಳು, ಹಾಗೂ ೧೧-೧೫ ಸಹಾಯಕ ತ೦ತಿಗಳನ್ನು ಹೊ೦ದಿರುತ್ತದೆ. ಗಮಕಗಳನ್ನು ನುಡಿಸಲು ಉತ್ತಮವಾದ ವಾದ್ಯವೆ೦ದು ವಿಚಿತ್ರವೀಣೆ ಪ್ರಸಿದ್ಧ. ವಿಚಿತ್ರವೀಣೆಯ ಸ೦ಗೀತ ಮಾನವ ಧ್ವನಿಗೆ ಬಹಳ ಸಮೀಪ ಎ೦ದೂ ಹೆಸರು. ಕೆಲ ಪ್ರಸಿದ್ಧ ವಿಚಿತ್ರವೀಣೆ ವಾದಕರು ರವಿ ಕಿರಣ್ ಪ೦ಡಿತ್ ಲಾಲ್‍ಮಣಿ ಮಿಶ್ರಾ ಬಾಹ್ಯ ಸ೦ಪರ್ಕಗಳು ವಿಚಿತ್ರ ವೀಣೆಯ ಬಗ್ಗೆ ಮಾಹಿತಿ ಸಂಗೀತ ವಾದ್ಯಗಳು ಕರ್ನಾಟಕ ಸಂಗೀತ ಹಿಂದುಸ್ತಾನಿ ಸಂಗೀತ fr:Vînâ
1369
https://kn.wikipedia.org/wiki/%E0%B2%AE%E0%B2%A8%E0%B2%AE%E0%B3%8B%E0%B2%B9%E0%B2%A8%E0%B3%8D%20%E0%B2%B8%E0%B2%BF%E0%B2%82%E0%B2%97%E0%B3%8D
ಮನಮೋಹನ್ ಸಿಂಗ್
ಮನಮೋಹನ್ ಸಿಂಗ್ (ಜನನ: ಸೆಪ್ಟೆಂಬರ್ ೨೬, ೧೯೩೨ ಪಶ್ಚಿಮ ಪಂಜಾಬ್ ನ ಗಾಹ್ ನಲ್ಲಿ - ಈಗದು ಪಾಕಿಸ್ತಾನದಲ್ಲಿದೆ) ಭಾರತದ ೧೩ನೆಯ ಪ್ರಧಾನ ಮಂತ್ರಿಗಳು. ಕಾಂಗ್ರೆಸ್ ಪಕ್ಷದ ಸದಸ್ಯರಾದ ಮನಮೋಹನ್ ಸಿಂಗ್, ಮೇ ೨೨ ೨೦೦೪ರಂದು ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. "ಭಾರತದ ಆರ್ಥಿಕ ವ್ಯವಸ್ಥೆಯ ಸುಧಾರಣೆಯ ಶಿಲ್ಪಿ" ಎಂದು ಮನಮೋಹನ್ ಸಿಂಗ್ ಪ್ರಸಿದ್ಧರಾಗಿದ್ದಾರೆ. ಪಿ ವಿ ನರಸಿಂಹರಾವ್ ಅವರ ಸರ್ಕಾರದಲ್ಲಿ 'ವಿತ್ತಮಂತ್ರಿ'ಯಾಗಿ ಮನಮೋಹನ್ ಸಿಂಗ್ ಪರಿಚಯಿಸಿದ ಆರ್ಥಿಕ ಸ್ವತಂತ್ರೀಕರಣ ನೀತಿಗಳು ಭಾರತದ ಆರ್ಥಿಕ ವ್ಯವಸ್ಥೆಯನ್ನು ದುಸ್ಥಿತಿಯಿಂದ ಸುಧಾರಿಸಿದವು ಎನ್ನಲಾಗುತ್ತದೆ. ಪಂಜಾಬ್ ವಿಶ್ವವಿದ್ಯಾಲಯ, ಆಕ್ಸ್‌ಫರ್ಡ್ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದ ಮನಮೋಹನ್ ಸಿಂಗ್ ಪ್ರಧಾನಮಂತ್ರಿಯಾಗುವ ಮೊದಲು ಅರ್ಥಶಾಸ್ತ್ರಜ್ಞರಾಗಿ ಕೆಲಸ ಮಾಡಿದವರು. ರಾಜಕೀಯದಲ್ಲಿ ಎಂದಿಗೂ ವಿವಾದ ಸೃಷ್ಟಿಸದ ಮನಮೋಹನ್ ಸಿಂಗ್ ೨೦೦೨ ರಲ್ಲಿ "ಅತ್ಯುತ್ತಮ ಸಂಸದ್ ಸದಸ್ಯ" ಪ್ರಶಸ್ತಿಯನ್ನೂ ಪಡೆದಿದ್ದರು. ವೃತ್ತಿ ಜೀವನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ (೧೯೫೦) ಪಂಜಾಬ್ ವಿಶ್ವವಿದ್ಯಾಲಯ ಅರ್ಥಶಾಸ್ತ್ರದ ಸೀನಿಯರ್ ಅಧ್ಯಾಪಕರು (೧೯೫೭-೫೭) ರೀಡರ್ (೧೯೫೯-೬೩) ಪ್ರಾಧ್ಯಾಪಕರು (೧೯೬೩-೬೫) ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ (೧೯೬೨) ದೆಹಲಿ ವಿಶ್ವವಿದ್ಯಾಲಯ ಅಂತರರಾಷ್ಟ್ರೀಯ ವ್ಯಾಪಾರದ ಪ್ರಾಧ್ಯಾಪಕರು (೧೯೬೯-೭೧) ಅರ್ಥಶಾಸ್ತ್ರ ಸಲಹೆಗಾರರು, ಅಂತರರಾಷ್ಟ್ರೀಯ ವ್ಯಾಪಾರ ಖಾತೆ (೧೯೭೧-೭೨) ಮುಖ್ಯ ಅರ್ಥಶಾಸ್ತ್ರ ಸಲಹೆಗಾರರು, ವಿತ್ತ ಖಾತೆ (೧೯೭೨) ಗೌರವ ಪ್ರಾಧ್ಯಾಪಕರು, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (೧೯೭೬) ನಿರ್ದೇಶಕರು, ಭಾರತೀಯ ರಿಸರ್ವ್ ಬ್ಯಾಂಕ್ (೧೯೭೬-೮೦) ಕಾರ್ಯದರ್ಶಿಗಳು, ವಿತ್ತ ಖಾತೆ (೧೯೭೭-೮೦) ಗವರ್ನರ್, ಭಾರತೀಯ ರಿಸರ್ವ್ ಬ್ಯಾಂಕ್ (೧೯೮೨-೮೫) ಉಪಾಧ್ಯಕ್ಷರು, ಯೋಜನಾ ಸಮಿತಿ (Planning Commission of India) (೧೯೮೫-೮೭) ವಿತ್ತಮಂತ್ರಿ (ಜೂನ್ ೨೧, ೧೯೯೧ - ಮೇ ೧೫, ೧೯೯೬) ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರು ಭಾರತದ ಪ್ರಧಾನ ಮಂತ್ರಿ (ಮೇ ೨೨, ೨೦೦೪ ರಿಂದ- ಮೇ ೨೬, ೨೦೧೪ ರವರೆಗೆ) ಬಾಹ್ಯ ಸಂಪರ್ಕಗಳು ಅಧಿಕೃತ ತಾಣ ಉಲ್ಲೇಖಗಳು ಭಾರತದ ಪ್ರಧಾನ ಮಂತ್ರಿಗಳು ೧೯೩೨ ಜನನ ಭಾರತದ ಅರ್ಥಶಾಸ್ತ್ರಜ್ಞರು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು
1370
https://kn.wikipedia.org/wiki/%E0%B2%B8%E0%B2%82%E0%B2%A4%E0%B3%82%E0%B2%B0%E0%B3%8D
ಸಂತೂರ್
ಸಂತೂರ್ ಹಿಂದುಸ್ತಾನಿ ಸಂಗೀತದ ಪ್ರಸಿದ್ಧ ವಾದ್ಯಗಳಲ್ಲಿ ಒಂದು. ಸ೦ತೂರ್ ಎ೦ಬ ಪದ ಪರ್ಷಿಯನ್ ಭಾಷೆಯಿ೦ದ ಬ೦ದದ್ದು. ಸ೦ಸ್ಕೃತದಲ್ಲಿ ಈ ವಾದ್ಯದ ಹೆಸರು "ಶತತ೦ತ್ರಿ ವೀಣೆ" - ನೂರು ತ೦ತಿಗಳ ವೀಣೆ ಎ೦ದರ್ಥ. ಏಷ್ಯಾ ಮತ್ತು ಯೂರೋಪ್ ಖ೦ಡಗಳ ಯಾತ್ರಿಕ ಸ೦ಗೀತಗಾರರಿ೦ದ ಹರಡಲ್ಪಟ್ಟದ್ದರಿ೦ದ ಸ೦ತೂರ್ ವಿವಿಧ ದೇಶಗಳಲ್ಲಿ ವಿವಿಧ ರೂಪಗಳಲ್ಲಿ ಕ೦ಡುಬರುತ್ತದೆ. ಇರಾನ್, ಇರಾಕ್, ಮತ್ತುಟರ್ಕಿ ದೇಶಗಳಲ್ಲಿ ೭೨ ತ೦ತಿಗಳನ್ನು ಹೊ೦ದಿರುವ "ಸ೦ತೂರ್" ಎ೦ದೇ ಹೆಸರುಳ್ಳ ವಾದ್ಯವು೦ಟು. ಚೀನಾ ದೇಶದಲ್ಲಿ "ಯಾ೦ಗ್-ಕಿನ್" ಎಂದು ಕರೆಯಲ್ಪಟ್ಟು ೪೫ ತ೦ತಿಗಳನ್ನು ಹೊ೦ದಿದ್ದರೆ, ಇದೇ ವಾದ್ಯದ ಇನ್ನೊ೦ದು ರೂಪ ಗ್ರೀಸ್ ನಲ್ಲಿ "ಸ೦ತೂರಿ" ಎ೦ಬ ಹೆಸರನ್ನು ಹೊಂದಿದೆ. ಹ೦ಗೆರಿ ಮತ್ತು ರೊಮೇನಿಯಾಗಳ "ಸಿ೦ಬಲಾನ್" ಸಹ ಇದೇ ರೀತಿಯ ವಾದ್ಯ. ಶಿರೋಲೇಖ ಭಾರತೀಯ ಸ೦ತೂರ್ ಭಾರತದಲ್ಲಿ ಕಾಶ್ಮೀರದ ಜಾನಪದ ವಾದ್ಯವಾಗಿದ್ದ ಸ೦ತೂರನ್ನು ಶಾಸ್ತ್ರೀಯ ಸ೦ಗೀತಕ್ಕೆ ಸೂಕ್ತವಾದ ವಾದ್ಯವಾಗಿ ಮಾರ್ಪಾಟುಗೊಳಿಸಿದವರಲ್ಲಿ ಪ್ರಮುಖರು ಪ೦ಡಿತ್ ಶಿವಕುಮಾರ್ ಶರ್ಮಾ. ಆಧುನಿಕ ಭಾರತೀಯ ಸ೦ತೂರ್ ಸಾಮಾನ್ಯವಾಗಿ ೮೭ ತ೦ತಿಗಳನ್ನು ಹೊ೦ದಿರುತ್ತದೆ. ಬೆಳವಣಿಗೆ ಕಾಶ್ಮೀರದ ಜಾನಪದ ಸ೦ತೂರ್ ಮೊದಲಿಗೆ ೧೦೦ ತ೦ತಿಗಳನ್ನು ಹೊ೦ದಿದ್ದು ಮುಖ್ಯವಾಗಿ ಸೂಫಿ ಸ೦ತರ ಸ೦ಗೀತಕ್ಕೆ ಉಪಯೋಗಿಸಲ್ಪಡುತ್ತಿತ್ತು. ಶಿವಕುಮಾರ್ ಶರ್ಮಾ ರವರ ತ೦ದೆ ಪ೦ಡಿತ್ ಉಮಾ ದತ್ ಶರ್ಮಾ ಶಾಸ್ತ್ರೀಯ ಸ೦ಗೀತಕ್ಕೆ ಇದರ ಸೂಕ್ತತೆಯನ್ನು ಮನಗ೦ಡರು. ನಂತರ ಶಿವಕುಮಾರ್ ಶರ್ಮಾ ಈ ವಾದ್ಯದ ರಚನೆಯಲ್ಲಿ ಸರಿಯಾದ ಬದಲಾವಣೆಗಳನ್ನು ತ೦ದರು. ಭಾರತೀಯ ಶಾಸ್ತ್ರೀಯ ಸ೦ಗೀತಕ್ಕೆ ಅತ್ಯಗತ್ಯವಾದ ಗಮಕಗಳನ್ನು ನುಡಿಸುವ ಸಾಮರ್ಥ್ಯ ಮೊದಲು ಈ ವಾದ್ಯದಲ್ಲಿ ಇರಲಿಲ್ಲ. ವಾದ್ಯದ ರಚನೆಯೊ೦ದಿಗೆ ಅದನ್ನು ನುಡಿಸುವ ತ೦ತ್ರಕ್ಕೂ ಸೂಕ್ತವಾದ ಬದಲಾವಣೆಗಳನ್ನು ಪರಿಚಯಿಸಿದ ಶಿವಕುಮಾರ್ ಶರ್ಮಾ ಗಮಕಗಳನ್ನು ನುಡಿಸುವ ಸಾಮರ್ಥ್ಯವನ್ನು ಈ ವಾದ್ಯಕ್ಕೆ ತ೦ದರು. ಇದನ್ನು ನುಡಿಸುವಾಗ ಉಪಯೋಗಿಸುವ "ಕಲಮ್" (ಮರದ ಸಣ್ಣ ಸುತ್ತಿಗೆಯ೦ಥ ಉಪಕರಣ) ಅನ್ನು ತ೦ತಿಗಳ ಮೇಲೆ ಸರಾಗವಾಗಿ ಸಾಗಿಸುವ ಮೂಲಕ ಗಮಕಗಳನ್ನು ನುಡಿಸಬಹುದು. ಸ೦ತೂರ್ ಶಾಸ್ತ್ರೀಯ ಕಛೇರಿಯಲ್ಲಿ ಮೊದಲ ಬಾರಿಗೆ ೧೯೫೫ ರಲ್ಲಿ ಉಪಯೋಗಿತವಾಯಿತು. ಪ್ರಸಿದ್ಧ ಸ೦ಗೀತಗಾರರು ಪ೦ಡಿತ್ ಶಿವಕುಮಾರ್ ಶರ್ಮಾ ರಾಹುಲ್ ಶರ್ಮಾ ತರುಣ್ ಭಟ್ಟಾಚಾರ್ಯ ಪಂಡಿತ್ ಭಜನ್ ಸೊಪೊರಿ ಸಂಗೀತ ವಾದ್ಯಗಳು ಹಿಂದುಸ್ತಾನಿ ಸಂಗೀತ
1372
https://kn.wikipedia.org/wiki/%E0%B2%AD%E0%B2%BE%E0%B2%B0%E0%B2%A4%E0%B2%A6%20%E0%B2%B0%E0%B2%BE%E0%B2%B7%E0%B3%8D%E0%B2%9F%E0%B3%8D%E0%B2%B0%E0%B2%AA%E0%B2%A4%E0%B2%BF
ಭಾರತದ ರಾಷ್ಟ್ರಪತಿ
ಭಾರತ ಗಣರಾಜ್ಯದ ಅಧ್ಯಕ್ಷರು ಅಥವಾ ಭಾರತದ ರಾಷ್ಟ್ರಪತಿಗಳು ಸಾಂವಿಧಾನಿಕವಾಗಿ ಭಾರತದ ಮುಖ್ಯಸ್ಥರಾಗಿರುತ್ತಾರೆ ಮತ್ತು ಭಾರತೀಯ ಸಶಸ್ತ್ರ ಪಡೆಗಳ ದಂಡನಾಯಕ (ಕಮಾಂಡರ್ ಇನ್ ಚೀಫ್). ಅಧ್ಯಕ್ಷರು ಪರೋಕ್ಷವಾಗಿ ಭಾರತ ಸಂಸತ್ತು (ಎರಡೂ ಮನೆಗಳು) ಮತ್ತು ಭಾರತದ ಎಲ್ಲ ರಾಜ್ಯಗಳ ಮತ್ತು ಪ್ರಾಂತ್ಯಗಳ ಶಾಸನಸಭೆಯ ಸಭೆಗಳನ್ನು ಒಳಗೊಂಡಿರುವ ಚುನಾವಣಾ ಕಾಲೇಜಿನಿಂದ ಚುನಾಯಿತರಾಗುತ್ತಾರೆ, ಅವರು ಎಲ್ಲರೂ ನೇರವಾಗಿ ಚುನಾಯಿತರಾಗಿರುತ್ತಾರೆ. ರಾಷ್ಟ್ರಪತಿಗಳು ಐದು ವರ್ಷಗಳ ಅವಧಿಗೆ ಸೇವೆ ಸಲ್ಲಿಸುತ್ತಾರೆ.ಯಾವುದೇ ಪದ ಮಿತಿಗಳಿಲ್ಲ. ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಅವರ ಅನುಪಸ್ಥಿತಿಯಲ್ಲಿ, ಭಾರತದ ಸುಪ್ರೀಂ ಕೋರ್ಟ್ನ ಹಿರಿಯ ನ್ಯಾಯಾಧೀಶರಿಂದ ಅಧ್ಯಕ್ಷರ ಪ್ರಮಾಣ ವಚನ ಸ್ವೀಕರಿಸಲಾಗುತ್ತದೆ. ಸಂಕ್ಷಿಪ್ತ ಇತಿಹಾಸ ಆ15 ಆಗಸ್ಟ್ 1947 ರಂದು ಭಾರತವು ಬ್ರಿಟೀಷರಿಂದ ಸ್ವಾತಂತ್ರ್ಯ ಸಾಧಿಸಿತು. ಆರಂಭದಲ್ಲಿ ಕಾಮನ್ವೆಲ್ತ್ ರಾಷ್ಟ್ರದೊಳಗಿನ ಒಂದು ಆಧಿಪತ್ಯವಾಗಿ ಜಾರ್ಜ್ VI ರಾಜನೊಂದಿಗೆ, ಗವರ್ನರ್-ಜನರಲ್ ದೇಶದಲ್ಲಿ ಪ್ರತಿನಿಧಿಸಿದ್ದರು. (ಲಾರ್ಡ್ ಮೌಂಟ್ಬ್ಯಾಟನ್). ಇದಾದ ನಂತರ, ಡಾ. ಬಿ.ಆರ್.ಆಂಬೇಡ್ಕರ್ ಅವರ ನೇತೃತ್ವದಲ್ಲಿ, ಭಾರತದ ಸಾಂವಿಧಾನಿಕ ಅಸೆಂಬ್ಲಿಯು ದೇಶದ ಸಂಪೂರ್ಣ ಸಂವಿಧಾನವನ್ನು ರಚಿಸುವ ಪ್ರಕ್ರಿಯೆಯನ್ನು ಕೈಗೊಂಡಿತು. ಭಾರತದ ಸಂವಿಧಾನವು ಅಂತಿಮವಾಗಿ 26 ನವೆಂಬರ್ 1949 ರಂದು ಜಾರಿಗೊಳಿಸಲ್ಪಟ್ಟಿತು, ಮತ್ತು 26 ಜನವರಿ 1950 ರಂದು ಅದು ಜಾರಿಗೆ ಬಂದಿತು, ಜವಾಹರಲಾಲ್ ನೆಹರು ರವರ ಸರ್ಕಾರ ಭಾರತೀಯ ಸಂವಿಧಾನಕ್ಕೆ ಸೂಕ್ತ ಬದಲಾವಣೆಗಳನ್ನು ತಂದು ಗವರ್ನರ್ ಜನರಲ್ ಪದವಿಯನ್ನು ರದ್ದುಗೊಳಿಸಿತು. ಗವರ್ನರ್ ಜನರಲ್‍ರ ಬದಲು ಚುನಾಯಿತ ಅಧ್ಯಕ್ಷರ ಪದವಿ ಸೃಷ್ಟಿಯಾಯಿತು. ಭಾರತದ ಮೊದಲ ಅಧ್ಯಕ್ಷರು ಶ್ರೀ ಬಾಬು ರಾಜೇಂದ್ರ ಪ್ರಸಾದ್. ಸಾಂವಿಧಾನಿಕ ಪಾತ್ರ ಭಾರತೀಯ ಸಂವಿಧಾನದ ೫೨ನೇ ಪರಿಚ್ಛೇದ ಅಧ್ಯಕ್ಷರ ಪದವಿಯ ಸೃಷ್ಟಿಯನ್ನು ತೋರಿಸುತ್ತದೆ. ಸಂವಿಧಾನದ ಪ್ರಕಾರ, ಭಾರತದ ಅಧ್ಯಕ್ಷರು: ಭಾರತೀಯ ಪ್ರಜೆಯಾಗಿರಬೇಕು ಭಾರತದಲ್ಲೇ ಜನಿಸಿದವರಾಗಬೇಕೆಂಬ ನಿಯಮವೇನಿಲ್ಲ ಎಷ್ಟು ಅವಧಿಗಳಿಗಾದರೂ ಚುನಾಯಿತರಾಗಬಹುದು ಅಧಿಕೃತವಾಗಿ ಕಾರ್ಯಾಂಗದ ಮುಖ್ಯಸ್ಥರಾದರೂ, ಭಾರತದ ಸರ್ಕಾರದಲ್ಲಿ ಅತ್ಯಂತ ಹೆಚ್ಚು ಅಧಿಕಾರವುಳ್ಳ ಸ್ಥಾನ ಪ್ರಧಾನಮಂತ್ರಿಗಳದ್ದು (ಸಂವಿಧಾನದ ೭೪ ನೆಯ ಪರಿಚ್ಛೇದದಂತೆ). ಭಾರತದ ಸಂವಿಧಾನದ ೫೩ ನೆಯ ಪರಿಚ್ಛೇದದಂತೆ ಸಂಸತ್ತಿಗೆ ಅಧ್ಯಕ್ಷರ ಅಧಿಕಾರವನ್ನು ಬೇರೊಂದು ಪದವಿಯಲ್ಲಿರುವ ವ್ಯಕ್ತಿಗೆ ವರ್ಗಾಯಿಸುವ ಶಕ್ತಿಯುಂಟು. ಸಾಂಪ್ರದಾಯಿಕವಾಗಿ ಅಧ್ಯಕ್ಷರ ಕೆಲಸಗಳಲ್ಲಿ ಒಂದು ಪ್ರಧಾನಮಂತ್ರಿ ಮತ್ತು ಇತರ ಮಂತ್ರಿಗಳ ಪ್ರಮಾಣವಚನ ಕಾರ್ಯಕ್ರಮವನ್ನು ನಡೆಸಿಕೊಡುವುದು. ರಾಷ್ಟ್ರಾಧ್ಯಕ್ಷರ ಚುನಾವಣೆ ವಿಶೇಷ ಲೇಖನ:ಭಾರತದ ರಾಷ್ಟ್ರಪತಿಗಳ ಚುನಾವಣೆ ೨೦೧೭ ಅಧ್ಯಕ್ಷರನ್ನು ಚುನಾಯಿಸುವ ವ್ಯಕ್ತಿಗಳೆಂದರೆ ಸಂಸತ್ತಿನ ಎರಡೂ ಸಭೆಗಳ ಲೋಕಸಭೆ ಮತ್ತು ರಾಜ್ಯಸಭೆಗಳ ಚುನಾಯಿತ ಸದಸ್ಯರು. ಪ್ರತಿ ರಾಜ್ಯದ ವಿಧಾನಸಭೆಯ ಚುನಾಯಿತ ಸದಸ್ಯರು ಪ್ರತಿ ಸದಸ್ಯರ ಕೈಯಲ್ಲಿರುವ ಮತಗಳ ಸಂಖ್ಯೆ ಅವರ ರಾಜ್ಯದ ಜನಸಂಖ್ಯೆ, ಆ ರಾಜ್ಯದಿಂದ ಇರುವ ಶಾಸಕರ ಸಂಖ್ಯೆ, ಮೊದಲಾದವುಗಳ ಅನುಗುಣವಾಗಿರುತ್ತದೆ. ಅಧಿಕಾರ ಸ್ವೀಕಾರ ವಿಧಿ ವಿಧಾನ 25 Jul, 2017; ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸುವುದಕ್ಕೂ ಮುನ್ನ ರಾಮನಾಥ ಕೋವಿಂದ್‌ ಅವರು ಬೆಳಿಗ್ಗೆ ರಾಜ್‌ಘಾಟ್‌ಗೆ ಭೇಟಿ ನೀಡಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು. ನಂತರ ಕೋವಿಂದ್‌ ಅವರು ನಿರ್ಗಮಿತ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರೊಂದಿಗೆ ರಾಷ್ಟ್ರಪತಿ ಭವನದಿಂದ ಮೆರವಣಿಗೆಯಲ್ಲಿ ಸಂಸತ್‌ ಭವನಕ್ಕೆ ಬಂದರು. ದೇಶದ 14ನೇ ರಾಷ್ಟ್ರಪತಿಯಾಗಿ ರಾಮನಾಥ ಕೋವಿಂದ್‌ ಅವರು ಮಂಗಳವಾರ ಪ್ರಮಾಣವಚನ ಸ್ವೀಕರಿಸಿದರು. ಸಂಸತ್‌ ಭವನದ ಸೆಂಟ್ರಲ್‌ ಹಾಲ್‌ನಲ್ಲಿ ಮಧ್ಯಾಹ್ನ 12.15ಕ್ಕೆ ನಡೆದ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಜೆ.ಎಸ್‌. ಖೇಹರ್‌ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರಮಾಣವಚನ ಸ್ವೀಕರಿಸಿದ ರಾಮನಾಥ ಕೋವಿಂದ್‌ ಅವರಿಗೆ ನಿರ್ಗಮಿತ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಹಸ್ತಲಾಘವ ಮಾಡಿ, ರಾಷ್ಟ್ರಪತಿ ಸ್ಥಾನ ಅಲಂಕರಿಸುವಂತೆ ಸ್ಥಾನ ಬದಲಾಯಿಸಿಕೊಂಡರು. ರಾಮನಾಥ ಕೋವಿಂದ್‌ ಅವರು ಪ್ರಮಾಣ ವಚನ ಸ್ವೀಕರಿಸಿದ ನಂತರ ಸಂಸತ್‌ ಆವರಣದಲ್ಲಿ 21 ಸುತ್ತು ಗುಂಡು ಹಾರಿಸಿ ಅವರಿಗೆ ಗೌರವ ವಂದನೆ ಸಲ್ಲಿಸಲಾಯಿತು. ಪ್ರಮಾಣವಚನ ಸ್ವೀಕರಿಸಿದ ಬಳಿಕ ರಾಮನಾಥ ಕೋವಿಂದ್‌ ಅವರು ಸಹಿ ಹಾಕಿದರು. ನೂತನ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರನ್ನು ಸ್ವಾಗತಿಸಿ ಸಂಸತ್‌ ಭವನದ ಸೆಂಟ್ರಲ್‌ ಹಾಲ್‌ಗೆ ಕರೆ ತರಲಾಯಿತು. ರಾಷ್ಟ್ರಗೀತೆ ಹಾಡುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಲಾಯಿತು. ಮಹಾಭಿಯೋಗ ಸಂವಿಧಾನದ ೬೧ ನೆಯ ಪರಿಚ್ಛೇದದಂತೆ, ಅಧ್ಯಕ್ಷರು ಭಾರತೀಯ ಸಂವಿಧಾನವನ್ನು ಮೀರಿದ ಸಂದರ್ಭದಲ್ಲಿ ಅವರನ್ನು ತಮ್ಮ ಸ್ಥಾನ ದಿಂದ ತೆಗೆಯುವ ಅಧಿಕಾರ ಸಂಸತ್ತಿಗುಂಟು. ವೇತನ ಚರ್ಚೆಪುಟ:ಭಾರತದ ರಾಷ್ಟ್ರಪತಿ ರಾಷ್ಟ್ರಪತಿಗಳ ವೇತನ:ರೂ.500000/- ರಾಷ್ಟ್ರಪತಿ ಚುನಾವಣೆಯ ಹೆಜ್ಜೆಗುರುತುಗಳು ಬಾಬು ರಾಜೇಂದ್ರ ಪ್ರಸಾದ್ (1950-1962) 1950ರ ಚುನಾವಣೆಯಲ್ಲಿ ‘ತಾಂತ್ರಿಕ’ ಸೆಣಸಾಟವೇನೂ ಇರಲಿಲ್ಲವಾದರೂ, ಅಂದು ಉಪ ಪ್ರಧಾನಮಂತ್ರಿಯಾಗಿದ್ದ ಸರ್ದಾರ್ ವಲ್ಲಭಭಾಯ್ ಪಟೇಲರು ಪ್ರಧಾನಿ ಜವಾಹರಲಾಲ್ ನೆಹರುರ ಪ್ರಭಾವ ತಗ್ಗಿಸಲು ಹೆಣೆದಿದ್ದ ಪೂರ್ವನಿಯೋಜಿತ ಕುಶಲ ಕಾರ್ಯಾಚರಣೆಗೆ ಇದು ಸಾಕ್ಷಿಯಾಯಿತೆನ್ನಬೇಕು. ಆಗ ಗವರ್ನರ್ ಜನರಲ್ ಆಗಿದ್ದ ಸಿ. ರಾಜಗೋಪಾಲಚಾರಿ (ರಾಜಾಜಿ) ಅವರೊಂದಿಗೆ ನಿರಾತಂಕವಾಗಿ ಕಾರ್ಯನಿರ್ವಹಿಸಬಹುದು ಎಂಬ ಗ್ರಹಿಕೆ ಹೊಂದಿದ್ದ ನೆಹರು ಅವರೇ ರಾಷ್ಟ್ರಪತಿಯಾಗಿ ಮುಂದುವರಿಯಲೆಂದು ಬಯಸಿದ್ದರು. ಇದು ಮಹಾತ್ಮ ಗಾಂಧೀಜಿಯವರ ಆಶಯವೂ ಆಗಿತ್ತು. ಆದರೆ ತಮ್ಮಂತೆಯೇ ಓರ್ವ ಬಲಪಂಥೀಯ ಸಂಪ್ರದಾಯವಾದಿಯಾದ ರಾಜೇಂದ್ರ ಪ್ರಸಾದರೆಡೆಗೆ ಪಟೇಲರ ಒಲವಿತ್ತು. ಪಟೇಲರಿಂದ ಹುರಿದುಂಬಿಸಲ್ಪಟ್ಟ ಪ್ರಸಾದರು, ರಾಜಗೋಪಾಲಾಚಾರಿಯವರ ಉಮೇದುವಾರಿಕೆಯನ್ನು ಸ್ವೀಕರಿಸಲೊಲ್ಲದ (ಕ್ವಿಟ್ ಇಂಡಿಯಾ ಆಂದೋಲನವನ್ನು ರಾಜಾಜಿ ವಿರೋಧಿಸಿದ್ದರು ಎಂಬುದೇ ಇದಕ್ಕೆ ಕಾರಣ) ಕಾಂಗ್ರೆಸ್ ಸಂಸದರ ಬೆಂಬಲವನ್ನು ಒಗ್ಗೂಡಿಸಿದರು. ಪಟೇಲರ ತಂತ್ರದ ಅರಿವಿರದಿದ್ದ ನೆಹರು 1949ರ ಅಕ್ಟೋಬರ್ 5ರಂದು, ರಾಜಾಜಿ ಹೆಸರನ್ನು ಮುಂಚೂಣಿಗೆ ತಂದು ಅಂಗೀಕಾರದ ಮುದ್ರೆ ದಕ್ಕಿಸಿಕೊಳ್ಳುವ ಉದ್ದೇಶದೊಂದಿಗೆ ಕಾಂಗ್ರೆಸ್ ಸಂಸದರ ಸಭೆ ಕರೆದರು. ಆದರೆ ಅವರ ಪ್ರಸ್ತಾವನೆಗೆ ದಕ್ಕಿದ್ದು ಪ್ರತಿಕೂಲ ಪ್ರತಿಕ್ರಿಯೆ! ನೆಹರು ಕೈಚೆಲ್ಲಬೇಕಾಯಿತು ಹಾಗೂ ರಾಜೇಂದ್ರ ಪ್ರಸಾದರ ಹೆಸರು ಅನುಮೋದನೆಗೊಂಡಿತು. ಈ ಬೆಳವಣಿಗೆಯಿಂದ ನೆಹರುರಿಗೆ ಇರಿಸುಮುರಿಸು ಆದರೂ, 1950ರ ಜನವರಿ 23ರಂದು ಸ್ವತಃ ಪ್ರಸಾದರ ಹೆಸರನ್ನು ಸೂಚಿಸಿದರು, ಪಟೇಲ್ ಇದನ್ನು ಅನುಮೋದಿಸಿದರು. ಚುನಾವಣೆಯ ಹಂಗಿಲ್ಲದೆ ಪ್ರಸಾದರು ಅವಿರೋಧವಾಗಿ ಆಯ್ಕೆಯಾದರು. ಆದರೆ ಮುಂದಿನ ಎರಡು ಸನ್ನಿವೇಶ ಅಥವಾ ಅವಧಿಗಳಲ್ಲಿ ಇದೇ ಪರಿಸ್ಥಿತಿ ಇರಲಿಲ್ಲ; 1952ರ ಚುನಾವಣೆಯಲ್ಲಿ, ಸಂವಿಧಾನ ರಚನಾಮಂಡಲಿಯ ಓರ್ವ ಸದಸ್ಯರಾಗಿದ್ದ ಕೆ.ಟಿ. ಷಾ ಅವರಿಂದ ಪ್ರಸಾದರು ಪೈಪೋಟಿ ಎದುರಿಸಬೇಕಾಗಿ ಬಂತು. ಆದರೆ ಷಾ ಮಡಿಲಿಗೆ ಬಿದ್ದಿದ್ದು 93,000 ಮತಗಳು. 5 ಲಕ್ಷಕ್ಕೂ ಹೆಚ್ಚು ಮತ ಗಳಿಸಿದ ಪ್ರಸಾದರು ವಿಜಯಿಯಾದರು. 1957ರಲ್ಲಿ ನಡೆದ ‘ಸಾಂಕೇತಿಕ’ ಅಥವಾ ‘ನಾಮಮಾತ್ರದ’ ಚುನಾವಣೆಯಲ್ಲಿ 4.6 ಲಕ್ಷ ಮತಗಳನ್ನು ಗಳಿಸಿದ ರಾಜೇಂದ್ರ ಪ್ರಸಾದರು ಎದುರಾಳಿ ಹರಿ ರಾಮ್ (2,672 ಮತಗಳು) ಅವರನ್ನು ಸೋಲಿಸಿದರು. ಇದುವರೆಗೆ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದವರ ಪೈಕಿ ಇವರದ್ದೇ ಸುದೀರ್ಘ ಕಾಲಾವಧಿ (12 ವರ್ಷಗಳು) ಎಂಬುದು ಗಮನಿಸಬೇಕಾದ ಸಂಗತಿ. ಸರ್ವೆಪಲ್ಲಿ ರಾಧಾಕೃಷ್ಣನ್ (1962-1967) ಬಾಬು ರಾಜೇಂದ್ರ ಪ್ರಸಾದರ ತರುವಾಯ ಈ ಸ್ಥಾನ ಅಲಂಕರಿಸಿದ್ದು ಶ್ರೇಷ್ಠ ವಿದ್ವಾಂಸ ಎಂದೇ ವ್ಯಾಪಕ ಮೆಚ್ಚುಗೆ ಪಡೆದಿದ್ದ ಸರ್ವೆಪಲ್ಲಿ ರಾಧಾಕೃಷ್ಣನ್. ಬರೋಬ್ಬರಿ 10 ವರ್ಷಗಳ ಕಾಲ ಉಪರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿ, ಅದನ್ನು ರಾಷ್ಟ್ರಪತಿ ಚುನಾವಣೆಗೆ ಚಿಮ್ಮುಹಲಗೆಯಾಗಿಸಿಕೊಂಡ ಇವರು, ಐದೂವರೆ ಲಕ್ಷ ಮತಗಳನ್ನು ಗಳಿಸುವ ಮೂಲಕ ಸಮೀಪದ ಪ್ರತಿಸ್ಪರ್ಧಿ ಹರಿ ರಾಮ್ (6,341 ಮತಗಳು) ಅವರನ್ನು ಸೋಲಿಸಿ, 1962ರಿಂದ 67ರವರೆಗೆ ರಾಷ್ಟ್ರಪತಿ ಹುದ್ದೆಯಲ್ಲಿದ್ದರು. ಝಾಕೀರ್ ಹುಸೇನ್ (1967-1969) ಇವರು ದೇಶದ ಮೊಟ್ಟಮೊದಲ ಮುಸ್ಲಿಂ ರಾಷ್ಟ್ರಪತಿಯೂ ಹೌದು. 1967ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೊಂಚ ಹಿನ್ನಡೆ (283 ಸ್ಥಾನಗಳು) ಅನುಭವಿಸಬೇಕಾಗಿ ಬಂದ ವಾತಾವರಣದ ಹಿನ್ನೆಲೆಯಲ್ಲಿ ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ತುರುಸಿನ ಸ್ಪರ್ಧೆ ಏರ್ಪಟ್ಟಿತು ಎನ್ನಬೇಕು. ಈ ಚುನಾವಣೆಯಲ್ಲಿ, ವಿಪಕ್ಷಗಳು ಸೂಚಿಸಿದ್ದ ಅಭ್ಯರ್ಥಿಯಾಗಿದ್ದ ಸುಪ್ರೀಂಕೋರ್ಟ್​ನ ಮಾಜಿ ಮುಖ್ಯ ನ್ಯಾಯಮೂರ್ತಿ ಕೊಕಾ ಸುಬ್ಬರಾವ್ 3.64 ಲಕ್ಷ ಮತ ಗಳಿಸಿದರೆ, 4.71 ಲಕ್ಷ ಮತ ಗಿಟ್ಟಿಸಿಕೊಂಡ ಝಾಕೀರ್ ಹುಸೇನ್ ವಿಜಯಶಾಲಿಯಾದರು. ವಿ.ವಿ. ಗಿರಿ (1969-1974) ರಾಷ್ಟ್ರಪತಿ ಹುದ್ದೆಯಲ್ಲಿರುವಾಗಲೇ ನಿಧನರಾದ ಝಾಕೀರ್ ಹುಸೇನ್ ಸ್ಥಾನವನ್ನು ‘ಹಂಗಾಮಿಯಾಗಿ’ ತುಂಬಿದ ವಿ.ವಿ. ಗಿರಿ, ತರುವಾಯದಲ್ಲಿ ಚುನಾವಣೆಗೂ ಸ್ಪರ್ಧಿಸಿದ್ದು ಸ್ವಾರಸ್ಯಕರ ಬೆಳವಣಿಗೆ. ಅಷ್ಟು ಹೊತ್ತಿಗಾಗಲೇ ಕಾಂಗ್ರೆಸ್​ನಲ್ಲಿ ‘ಬಣ ರಾಜಕೀಯ’ ತೀವ್ರಗೊಂಡಿತ್ತು. ಪಕ್ಷಾಧ್ಯಕ್ಷ ಎಸ್. ನಿಜಲಿಂಗಪ್ಪ ನೇತೃತ್ವದ ‘ಸಿಂಡಿಕೇಟ್ ಬಣ’ ನೀಲಂ ಸಂಜೀವರೆಡ್ಡಿ ಅವರನ್ನು ಕಣಕ್ಕೆ ಇಳಿಸಲು ನಿರ್ಧರಿಸಿತು. ಆದರೆ ಇದಕ್ಕೆ ತಕರಾರೆತ್ತಿದ ಪ್ರಧಾನಿ ಇಂದಿರಾ ಗಾಂಧಿ, ದಲಿತ ನಾಯಕ ಜಗಜೀವನ್ ರಾಮ್ ಹೆಸರನ್ನು ಸೂಚಿಸಿದರು. ಈ ಚರ್ಚಾವಿಷಯವನ್ನು ಮತಕ್ಕೆ ಹಾಕಿದಾಗ, ರೆಡ್ಡಿ ಪರವಾಗಿ ನಾಲ್ಕು, ವಿರುದ್ಧವಾಗಿ ಎರಡು ಮತಗಳು ಬಂದವು. ಆಗ ಅಖಾಡ ಪ್ರವೇಶಿಸಿದವರೇ ವಿ.ವಿ. ಗಿರಿ! ಆಗ ಹಂಗಾಮಿ ರಾಷ್ಟ್ರಪತಿಯಾಗಿದ್ದ ಗಿರಿ, ಓರ್ವ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ನಿರ್ಧಾರವನ್ನು ಪ್ರಕಟಿಸಿದರು. ಈ ಮಧ್ಯೆ, ಪಕ್ಷದ ಹಿರಿತಲೆಗಳಿಗೆ ಚಾಣಾಕ್ಷೆ ಇಂದಿರಾ ಹಮ್ಮಿಕೊಂಡಿದ್ದ ಕಾರ್ಯತಂತ್ರಗಳ ಸುಳಿವೂ ದಕ್ಕಿರಲಿಲ್ಲ. ಆದರೆ ಜಾಗರೂಕ ಸ್ವಭಾವದ ನಿಜಲಿಂಗಪ್ಪನವರು, ಮಾಜಿ ಹಣಕಾಸು ಸಚಿವ ಸಿ.ಡಿ. ದೇಶಮುಖ್​ರನ್ನು ಕಣಕ್ಕಿಳಿಸಿದ್ದ ಸ್ವತಂತ್ರ ಪಾರ್ಟಿ ಮತ್ತು ಜನಸಂಘ ಪಕ್ಷಗಳನ್ನು ಎಡತಾಕಿ, ಎರಡನೇ ಆದ್ಯತೆಯ ಮತಗಳನ್ನು ರೆಡ್ಡಿಯವರಿಗೆ ನೀಡುವಂತೆ ಕೋರಿದರು. ಮತದಾನಕ್ಕೆ ಕೆಲ ದಿನಗಳಿರುವಾಗಲೇ, ‘ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸುವಂತೆ’ ಇಂದಿರಾ ಕಾಂಗ್ರೆಸ್ ನಾಯಕರಿಗೆ ಕರೆಯಿತ್ತರು. ಪೈಪೋಟಿ ಅದೆಷ್ಟು ನಿಕಟವಾಗಿತ್ತೆಂದರೆ, ಮೊದಲ ಸುತ್ತಿನಲ್ಲಿ ಅಗತ್ಯವಿದ್ದ ‘ಕಟ್-ಆಫ್’ ಪ್ರಮಾಣದ ಮತಗಳು ಯಾರಿಗೂ ದಕ್ಕಿರಲಿಲ್ಲ. ಎರಡನೇ ಆದ್ಯತೆಯ ಮತಗಳ ಎಣಿಕೆಯ ನಂತರವಷ್ಟೇ ವಿ.ವಿ. ಗಿರಿ ಗೆಲುವಿನ ನಗೆ ಬೀರಿದರು. ಅಗತ್ಯವಿದ್ದ 4,18,169 ಮತಗಳಿಗೆ ಪ್ರತಿಯಾಗಿ ಗಿರಿಯವರಿಗೆ ದಕ್ಕಿದ್ದು ಬರೋಬ್ಬರಿ 4.20 ಲಕ್ಷ ಮತಗಳು. ರೆಡ್ಡಿ ಮತ್ತು ದೇಶಮುಖ್ ಕ್ರಮವಾಗಿ 4.05 ಲಕ್ಷ ಮತ್ತು 1.13 ಲಕ್ಷ ಮತಗಳನ್ನು ಗಳಿಸಿದರು. ಕಾಂಗ್ರೆಸ್​ನಲ್ಲಿ ಒಡಕು ಉಂಟಾಗುವುದಕ್ಕೆ ಈ ಚುನಾವಣೆ ಪೀಠಿಕೆ ಹಾಕಿತೆನ್ನಬೇಕು. ಫಕ್ರುದ್ದೀನ್ ಅಲಿ ಅಹ್ಮದ್ (1974-1977) ವಿ.ವಿ. ಗಿರಿ ಅಧಿಕಾರಾವಧಿಯ ನಂತರ ರಾಷ್ಟ್ರಪತಿ ಗಾದಿಗೇರಿದ ಇವರು, ಝಾಕೀರ್ ಹುಸೇನರ ನಂತರ ಈ ಉನ್ನತ ಹುದ್ದೆಗೇರಿದ ಎರಡನೇ ಮುಸ್ಲಿಂ ನಾಯಕ. ಅಷ್ಟು ಹೊತ್ತಿಗಾಗಲೇ, ಕಾಂಗ್ರೆಸ್ ಪಕ್ಷದ ನೆಲೆಗಟ್ಟು ಮತ್ತು ಬಲದಲ್ಲಿ ಗಣನೀಯ ಸುಧಾರಣೆಯಾಗಿತ್ತು. ಇದಕ್ಕೆ ಕಾರಣವಾಗಿದ್ದು ಇಂದಿರಾರ ಸಮರ್ಥ ನೇತೃತ್ವ. 7.66 ಲಕ್ಷ ಮತಗಳೊಡನೆ ಫಕ್ರುದ್ದೀನ್ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿದರೆ, ವಿಪಕ್ಷಗಳ ಅಭ್ಯರ್ಥಿ ತ್ರಿದಿಬ್ ಚೌಧುರಿ 1.89 ಲಕ್ಷ ಮತಗಳಿಗೆ ತೃಪ್ತರಾಗಬೇಕಾಯಿತು. ಇಂದಿರಾ ಗಾಂಧಿಯವರ ಇಶಾರೆಯಂತೆ ತುರ್ತು ಪರಿಸ್ಥಿತಿಯ ಘೊಷಣೆ ಮಾಡಿದ ರಾಷ್ಟ್ರಪತಿಯೂ ಇವರೇ. ಝಾಕೀರ್ ಹುಸೇನರಂತೆ ಇವರು ಕೂಡ ಅಧಿಕಾರದಲ್ಲಿರುವಾಗಲೇ ಅಸುನೀಗಿದರು. ನೀಲಂ ಸಂಜೀವರೆಡ್ಡಿ (1977-1982) ರಾಷ್ಟ್ರಪತಿಯಾಗುವ ರೆಡ್ಡಿಯವರ ಕನಸಿಗೆ ಅಥವಾ ಸಂಭಾವ್ಯತೆಗೆ ಇಂದಿರಾ ಗಾಂಧಿಯವರು 1969ರಲ್ಲೇ ತಣ್ಣೀರೆರಚಿದ್ದರು. ಇದನ್ನೊಂದು ಅಸ್ತ್ರವಾಗಿಸಿಕೊಂಡ ಮತ್ತು ಅಷ್ಟು ಹೊತ್ತಿಗಾಗಲೇ ಅಧಿಕಾರ ಗದ್ದುಗೆಯಲ್ಲಿದ್ದ ಇಂದಿರಾ ಎದುರಾಳಿಗಳು, 1977ರ ರಾಷ್ಟ್ರಪತಿ ಚುನಾವಣಾ ಕಣಕ್ಕೆ ರೆಡ್ಡಿಯವರನ್ನು ಇಳಿಸುವ ಮೂಲಕ ಪ್ರತೀಕಾರಕ್ಕೆ ಮುಂದಾದರು. ಖ್ಯಾತ ನರ್ತಕಿ ರುಕ್ಮಿಣಿ ದೇವಿ ಅರುಂಡೇಲ್​ರನ್ನು ಕಣಕ್ಕಿಳಿಸಬೇಕೆಂಬುದು ಪ್ರಧಾನಿ ಮೊರಾರ್ಜಿ ದೇಸಾಯಿಯವರ ಬಯಕೆಯಾಗಿತ್ತು. ಆದರೆ ಆಕೆ ನಿರಾಕರಿಸಿದ ಕಾರಣ ರೆಡ್ಡಿ ಅವಿರೋಧವಾಗಿ ಆಯ್ಕೆಯಾದರು. ಜೈಲ್ ಸಿಂಗ್ (1982-1987) 1982ರ ರಾಷ್ಟ್ರಪತಿ ಚುನಾವಣೆ ವೇಳೆಗೆ ಇಂದಿರಾ ಗಾಂಧಿ ಮತ್ತೊಮ್ಮೆ ಗದ್ದುಗೆಗೇರಿ ಗರಿಗೆದರಿದ್ದರು. ಇಂದಿರಾ ಕೃಪಾಪೋಷಿತ ಜೈಲ್ ಸಿಂಗ್ 7.54 ಲಕ್ಷ ಮತ ಗಳಿಸಿದರೆ, ವಿಪಕ್ಷಗಳ ಅಭ್ಯರ್ಥಿ ಮತ್ತು ಸುಪ್ರೀಂಕೋರ್ಟ್​ನ ಮಾಜಿ ಮುಖ್ಯ ನ್ಯಾಯಮೂರ್ತಿ ಎಚ್.ಆರ್. ಖನ್ನಾ ಬುಟ್ಟಿಗೆ 2.83 ಲಕ್ಷ ಮತಗಳು ಬಿದ್ದವು. ರಾಷ್ಟ್ರಪತಿಯಾಗಿದ್ದಾಗಿನ ಅವಧಿಯಲ್ಲಿ ಜೈಲ್ ಸಿಂಗ್, ‘ನನ್ನ ನಾಯಕಿ ಹೇಳಿದರೆ, ಕಸಪೊರಕೆ ಎತ್ತಿಕೊಂಡು ಕಸ ಹೊಡೆಯಲೂ ನಾನು ಸಿದ್ಧ’ ಎಂಬುದಾಗಿ ವಿವೇಚನಾರಹಿತವಾಗಿ ಆಡಿದ ಮಾತು, ‘ರಾಷ್ಟ್ರಪತಿ ಎಂದರೆ ರಬ್ಬರ್​ಸ್ಟಾಂಪ್​ನಂತೆ ಕಾರ್ಯನಿರ್ವಹಿಸುವವರು’ ಎಂಬ ಟೀಕಾಕಾರರ ಮಾತಿಗೆ ಪುಷ್ಟಿಯೊದಗಿಸಿತು! ಆದರೆ ಇಂದಿರಾ ಮನದಲ್ಲಿ ಗಿರಕಿ ಹೊಡೆಯುತ್ತಿದ್ದ ಚಿಂತನೆಗಳೇ ಬೇರೆ. ಜೈಲ್ ಸಿಂಗ್ ಆಯ್ಕೆಯಿಂದಾಗಿ ಸಿಖ್ ಸಮುದಾಯ ಸಂತುಷ್ಟಗೊಳ್ಳುತ್ತದೆ ಮತ್ತು ಖಲಿಸ್ತಾನ್ ಆಂದೋಲನವನ್ನು ತಹಬಂದಿಗೆ ತರಲು ಈ ನಡೆ ತಮಗೆ ನೆರವಾಗುತ್ತದೆ ಎಂಬುದು ಇಂದಿರಾ ಎಣಿಕೆಯಾಗಿತ್ತು; ಆದರೆ ಆದದ್ದೇ ಬೇರೆ. ಖಲಿಸ್ತಾನ್ ಆಂದೋಲನ ತೀವ್ರಗೊಂಡು, ‘ಆಪರೇಷನ್ ಬ್ಲೂಸ್ಟಾರ್’ ಕಾರ್ಯಾಚರಣೆಗೂ ಆಸ್ಪದ ಕಲ್ಪಿಸಿತು, ಸಿಖ್ ಅಂಗರಕ್ಷಕರಿಂದಲೇ ಇಂದಿರಾ ಹತರಾಗುವಂತಾಯಿತು. ಆರ್. ವೆಂಕಟರಾಮನ್ (1987-1992) ಇಂದಿರಾ ಗಾಂಧಿ ಮರಣಾನಂತರ ಪ್ರಧಾನಿ ಗದ್ದುಗೆಗೇರಿದ ಅವರ ಮಗ ರಾಜೀವ್ ಗಾಂಧಿ, 1987ರ ರಾಷ್ಟ್ರಪತಿ ಚುನಾವಣೆ ವೇಳೆ ಉಪರಾಷ್ಟ್ರಪತಿ ಆರ್. ವೆಂಕಟರಾಮನ್​ರನ್ನು ಅಧ್ಯಕ್ಷೀಯ ಅಭ್ಯರ್ಥಿಯಾಗಿ ಸೂಚಿಸಿದರು. ಇಂದಿರಾ ಹತ್ಯೆಯ ತರುವಾಯದ ಅನುಕಂಪದ ಅಲೆಯಲ್ಲಿ ದಕ್ಕಿದ ಭರಪೂರ ಸಂಸದೀಯ ಬಹುಮತದ ಬಲದಿಂದಾಗಿ ವೆಂಕಟರಾಮನ್​ರಿಗೆ 7.40 ಲಕ್ಷ ಮತಗಳನ್ನು ಗಳಿಸಿಕೊಡುವಲ್ಲಿ ರಾಜೀವ್ ಯಶಸ್ವಿಯಾದರು. ವಿಪಕ್ಷಗಳ ಅಭ್ಯರ್ಥಿ ಹಾಗೂ ಮಾಜಿ ನ್ಯಾಯಮೂರ್ತಿ ವಿ.ಆರ್. ಕೃಷ್ಣ ಅಯ್ಯರ್​ಗೆ ದಕ್ಕಿದ್ದು 2.82 ಲಕ್ಷ ಮತಗಳು. ಶಂಕರ ದಯಾಳ್ ಶರ್ಮಾ (1992-1997) ವೆಂಕಟರಾಮನ್ ನಂತರ ರಾಷ್ಟ್ರಪತಿ ಗದ್ದುಗೆಗೇರಿದವರು ನೆಹರು-ಗಾಂಧಿ ಕುಟುಂಬದ ನಿಷ್ಠಾವಂತ ಅನುಯಾಯಿಯಾಗಿದ್ದ ಶಂಕರ ದಯಾಳ್ ಶರ್ವ. ಚುನಾವಣೆಯಲ್ಲಿ ಇವರಿಗೆ ಎದುರಾಳಿಯಾಗಿದ್ದವರು ಅನುಭವಿ ಸಂಸದ ಜಾರ್ಜ್ ಗಿಲ್ಬರ್ಟ್ ಸ್ವೆಲ್. ಶರ್ಮಾ ಮತ್ತು ಸ್ವೆಲ್ ಮಡಿಲಿಗೆ ಕ್ರಮವಾಗಿ ಬಿದ್ದ ಮತಗಳು- 6.76 ಲಕ್ಷ ಮತ್ತು 3.46 ಲಕ್ಷ. ಕೆ.ಆರ್. ನಾರಾಯಣನ್(1997-2002) ಅದು ಕೇಂದ್ರದಲ್ಲಿ ಜನತಾದಳದ ಇಂದ್ರಕುಮಾರ್ ಗುಜ್ರಾಲ್ ನೇತೃತ್ವದ ಅಲ್ಪಮತದ ಸರ್ಕಾರವಿದ್ದ ಕಾಲಾವಧಿ. ಉಪರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದ, ದಲಿತ ಸಮುದಾಯದ ಕೆ.ಆರ್. ನಾರಾಯಣ್​ರನ್ನು ಕಾಂಗ್ರೆಸ್ ಕಣಕ್ಕಿಳಿಸಿತು. ಇವರಿಗೆ ಎದುರಾಗಿ ಸೆಡ್ಡು ಹೊಡೆದವರು ಟಿ.ಎನ್. ಶೇಷನ್; ದೇಶದ ಚುನಾವಣಾ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಚೊಕ್ಕಗೊಳಿಸಲು ಮಾಡಿದ ದೃಢಯತ್ನಗಳಿಂದಾಗಿ ಜನಮೆಚ್ಚುಗೆ ಗಳಿಸಿ, ನಿವೃತ್ತರೂ ಆಗಿದ್ದ ಶೇಷನ್ ಅಖಾಡಕ್ಕಿಳಿದಾಗ ಸಹಜವಾಗಿಯೇ ಹಲವರ ಹುಬ್ಬೇರಿದವು. ಶೇಷನ್​ಗೆ ಒತ್ತಾಸೆಯಾಗಿದ್ದ ಶಿವಸೇನಾ ಪಕ್ಷದ ಬೆಂಬಲ ಮತ್ತು ಮುಖ್ಯ ಚುನಾವಣಾಧಿಕಾರಿಯಾಗಿ ಅವರಿಗೆ ಅಷ್ಟು ಹೊತ್ತಿಗಾಗಲೇ ದಕ್ಕಿದ್ದ ಜನಪ್ರಿಯತೆ ಮತಗಳಾಗಿ ಪರಿವರ್ತನೆಯಾಗುವುದೇ ಎಂಬ ಕುತೂಹಲ ಹರಳುಗಟ್ಟಿತ್ತು. ಆದರೆ 9.56 ಲಕ್ಷ ಮತಗಳನ್ನು ಗಳಿಸುವ ಮೂಲಕ ನಾರಾಯಣನ್ ಗೆಲುವಿನ ನಗೆ ಬೀರಿದರು. ಮಣಿದ ಶೇಷನ್​ಗೆ ದಕ್ಕಿದ್ದು 50,631 ಮತಗಳು ಮಾತ್ರ. ಡಾ. ಎಪಿಜೆ ಅಬ್ದುಲ್ ಕಲಾಂ(2002-2007) ಅದು ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್​ಡಿಎ ಒಕ್ಕೂಟವು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಲಾವಧಿ. ಹಲವು ಪಕ್ಷಗಳ ಮೈತ್ರಿ ನೆಚ್ಚಿದ್ದ ‘ಖಿಚಡಿ ಸರ್ಕಾರ’ ಅವರದಾಗಿತ್ತು. 2ನೇ ಅವಧಿಗೂ ರಾಷ್ಟ್ರಪತಿಯಾಗಿ ಮುಂದುವರಿಯುವ ಕನಸು ಕಾಣುತ್ತಿದ್ದರು ಕೆ.ಆರ್. ನಾರಾಯಣನ್. ಕಾಂಗ್ರೆಸ್, ಎಡಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳ ಬೆಂಬಲ ಅವರಿಗಿದ್ದುದೇ ಇದಕ್ಕೆ ಕಾರಣ. ಆದರೆ ವಾಜಪೇಯಿ ಇದಕ್ಕೊಪ್ಪಲಿಲ್ಲ. ಆಗ, ಉಪರಾಷ್ಟ್ರಪತಿ ಕೃಷ್ಣಕಾಂತ ಹೆಸರು ಚಲಾವಣೆಗೆ ಬಂದಿತಾದರೂ, ಶಿವಸೇನೆ ಮತ್ತು ಕೆಲ ಬಿಜೆಪಿ ನಾಯಕರು ಪ್ರಸ್ತಾಪಿಸಿದ್ದು ಮಾಜಿ ರಾಜ್ಯಪಾಲ ಪಿ.ಸಿ. ಅಲೆಕ್ಸಾಂಡರ್ ಹೆಸರನ್ನು. ಆದರೆ ವಿಪಕ್ಷಗಳು ಇದನ್ನು ತಿರಸ್ಕರಿಸಿದವು. ಆಗ ವಾಜಪೇಯಿ ‘ಕ್ಷಿಪಣಿ ವಿಜ್ಞಾನಿ’ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಹೆಸರನ್ನು ಸೂಚಿಸಿದರು. ಈ ಪ್ರಸ್ತಾವಕ್ಕೆ ಸಮಾಜವಾದಿ ಪಕ್ಷ, ತೆಲುಗು ದೇಶಂ, ಎಐಎಡಿಎಂಕೆ ಮತ್ತು ಬಿಎಸ್​ಪಿ ಹಸಿರು ನಿಶಾನೆ ತೋರಿದವು. ತರುವಾಯದಲ್ಲಿ ಕಾಂಗ್ರೆಸ್ ಕೂಡ ಸಮ್ಮತಿಸಿತು. ಎಡಪಕ್ಷಗಳು ಲಕ್ಷ್ಮಿ ಸೆಹಗಲ್​ರನ್ನು ಕಣಕ್ಕಿಳಿಸಿದರೂ, ಅವರಿಗೆ ದಕ್ಕಿದ್ದು 1.07 ಲಕ್ಷ ಮತಗಳು. 9.23 ಲಕ್ಷ ಮತಗಳನ್ನು ದಕ್ಕಿಸಿಕೊಂಡ ಕಲಾಂ ವಿಜಯದ ನಗೆ ಬೀರಿದರು. ಪ್ರತಿಭಾ ಪಾಟೀಲ್ (2007-2012) ಅಬ್ದುಲ್ ಕಲಾಂರನ್ನು ಎರಡನೇ ಅವಧಿಗೂ ರಾಷ್ಟ್ರಪತಿಯಾಗಿ ಮುಂದುವರಿಸುವ ಇರಾದೆ ಬಿಜೆಪಿಯದಾಗಿತ್ತು; ಆದರೆ ಇತರ ಪಕ್ಷಗಳಿಂದ ಯಾವುದೇ ಬೆಂಬಲ ದಕ್ಕುವ ಸಾಧ್ಯತೆ ಕಂಡುಬರಲಿಲ್ಲ. ಹೀಗಾಗಿ ಉಪ ರಾಷ್ಟ್ರಪತಿ ಭೈರೋನ್ ಸಿಂಗ್ ಶೆಖಾವತ್​ರನ್ನು ಕಣಕ್ಕಿಳಿಸುವುದು ಅನಿವಾರ್ಯವಾಯಿತು. ಕಾಂಗ್ರೆಸ್, ಮೈತ್ರಿಸರ್ಕಾರದ ಸಹಭಾಗಿಗಳು ಮತ್ತು ಎಡಪಕ್ಷಗಳ ಬೆಂಬಲದೊಂದಿಗೆ ಕಣಕ್ಕಿಳಿದ ಪ್ರತಿಭಾ 6.38 ಲಕ್ಷ ಮತಗಳನ್ನು ಗಳಿಸಿ ಚುನಾಯಿತರಾಗಿ, ಮೊಟ್ಟಮೊದಲ ಮಹಿಳಾ ರಾಷ್ಟ್ರಪತಿ ಎನಿಸಿಕೊಂಡರು. ಕೊಲೆ ಪ್ರಕರಣವೊಂದರಲ್ಲಿ ತಮ್ಮ ಸೋದರನನ್ನು ರಕ್ಷಿಸಲು ಪ್ರತಿಭಾ ಯತ್ನಿಸಿದ್ದಾರೆ ಎಂಬುದೂ ಸೇರಿದಂತೆ ಹಲವು ಆರೋಪಗಳು ಈ ಚುನಾವಣಾ ಸಂದರ್ಭದಲ್ಲಿ ಕೇಳಿ ಬಂದರೂ 3ನೇ ಎರಡರಷ್ಟು ಮತ ದಕ್ಕಿಸಿಕೊಳ್ಳುವಲ್ಲಿ ಅವರು ಯಶಸ್ವಿಯಾದರು. ಶೇಖಾವತ್​ರಿಗೆ ದಕ್ಕಿದ್ದು 3.31 ಲಕ್ಷ ಮತಗಳು ಮಾತ್ರ. ಪ್ರಣಬ್ ಮುಖರ್ಜಿ (2012-2017) 2012ರ ರಾಷ್ಟ್ರಪತಿ ಚುನಾವಣಾ ಸಂದರ್ಭದಲ್ಲಿ ಪಕ್ಷದ ಆಂತರಿಕ ನೆಲೆಗಟ್ಟಿನಲ್ಲಿ ಪ್ರಣಬ್ ಮುಖರ್ಜಿ ಅದೆಷ್ಟು ಪರಿಣಾಮಕಾರಿಯಾಗಿ ತಮ್ಮ ಕುರಿತಾದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರೆಂದರೆ, ಅವರನ್ನು ತಡೆಯುವವರು ಯಾರೂ ಇರಲಿಲ್ಲ. ಅಭ್ಯರ್ಥಿಯಾಗಿ ಅವರ ಹೆಸರನ್ನು ಕಾಂಗ್ರೆಸ್ ಪಕ್ಷ ಘೋಷಿಸುತ್ತಿದ್ದಂತೆ, ಎನ್​ಡಿಎ ಸಹಯೋಗಿಗಳಾದ ಜೆಡಿ (ಯು) ಮತ್ತು ಶಿವಸೇನೆ ಅವರನ್ನು ಬೆಂಬಲಿಸಿದವು. ಬಿಜೆಪಿ ಬೆಂಬಲಿಸಿದ್ದು ಪಿ.ಎ. ಸಂಗ್ಮಾರನ್ನು. 7.14 ಲಕ್ಷ ಮತಗಳೊಂದಿಗೆ ಪ್ರಣಬ್ ಗೆದ್ದರೆ, 3.16 ಲಕ್ಷ ಮತಗಳಿಗೆ ಸಂಗ್ಮಾ ತೃಪ್ತರಾಗಬೇಕಾಯಿತು. ನೋಡಿ ಭಾರತದ ರಾಷ್ಟ್ರಪತಿಗಳ ಪಟ್ಟಿ ಬಾಹ್ಯ ಸಂಪರ್ಕಗಳು ಭಾರತದ ಅಧ್ಯಕ್ಷರು (ಅಧಿಕೃತ ತಾಣ) ವ್ಯಕ್ತಿಚಿತ್ರ: ಮುಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉಲ್ಲೇಖಗಳು ಅಧ್ಯಕ್ಷರು nl:President van India#Lijst van presidenten van India
1373
https://kn.wikipedia.org/wiki/%E0%B2%B6%E0%B3%8D%E0%B2%B0%E0%B3%80%E0%B2%A8%E0%B2%BF%E0%B2%B5%E0%B2%BE%E0%B2%B8%20%E0%B2%B0%E0%B2%BE%E0%B2%AE%E0%B2%BE%E0%B2%A8%E0%B3%81%E0%B2%9C%E0%B2%A8%E0%B3%8D
ಶ್ರೀನಿವಾಸ ರಾಮಾನುಜನ್
ಶ್ರೀನಿವಾಸ ರಾಮಾನುಜನ್ (ಪೂರ್ಣ ಹೆಸರು - ಶ್ರೀನಿವಾಸ ರಾಮಾನುಜನ್ ಅಯ್ಯಂಗಾರ್)(ಡಿಸೆಂಬರ್ ೨೨, ೧೮೮೭ - ಏಪ್ರಿಲ್ ೨೬, ೧೯೨೦) ವಿಶ್ವದ ಶ್ರೇಷ್ಠ ಭಾರತೀಯ ಗಣಿತಜ್ಞರೆಂದು ಪ್ರಖ್ಯಾತರಾಗಿದ್ದಾರೆ. “ಪ್ರತಿ ಧನಪೂರ್ಣಾಂಶವೂ ರಾಮಾನುಜನ್ನರ ವೈಯಕ್ತಿಕ ಮಿತ್ರರುಗಳಲ್ಲೊಂದು” ಎಂಬುದು ಲೋಕದಲ್ಲಿ ವಿಖ್ಯಾತ ನುಡಿ. ಅವರಿಗೆ “ಸಂಖ್ಯೆಗಳ ವೈಲಕ್ಷಣಗಳನ್ನು ನಂಬಲಸಾಧ್ಯವಾದಂಥ ರೀತಿಯಲ್ಲಿ ನೆನಪಿಡುವ’ ಅಪೂರ್ವ ಸಾಮರ್ಥ್ಯವಿತ್ತು. ಜೇಮ್ಸ್ ಆರ್. ನ್ಯೂಮನವರ "ದಿ ವರ್ಲ್ಡ್ ಆಫ್ ಮ್ಯಾಥಮೆಟಿಕ್ಸ್" ಎಂಬ ನಾಲ್ಕು ಸಂಪುಟಗಳ ಚಿರಸ್ಥಾಯಿ ಉದ್ಗ್ರಂಥದಲ್ಲಿ ರಾಮಾನುಜನ್ನರ ಕುರಿತು ಈ ಉಲ್ಲೇಖವಿದೆ. ಶುದ್ಧ ಗಣಿತದ ಬತ್ತಳಿಕೆಯಲ್ಲಿ ವಿಶ್ಲೇಷಣಾ ಆಯುಧಗಳ ಭಾರೀ ಸಂಗ್ರಹವಿದೆ ಮತ್ತು ಎಲ್ಲ ಸರಳತೆ ಗತಕಾಲದ ವಿಚಾರವೆಂದು ತಿಳಿಯುತ್ತಿದ್ದ ಆ ದಿನಗಳಲ್ಲಿ “ಈ ಎಲ್ಲ ಪರಿಕರಗಳ ನೆರವಿಲ್ಲದೆಯೇ ಹೊಸ ವಿಚಾರಗಳನ್ನು ಮಂಡಿಸಬಲ್ಲ ಒಬ್ಬ ಜೀನಿಯಸ್ ಉದಯಿಸಿದರು”. ನ್ಯೂಮನರು ಮುಂದುವರಿಸಿ, “ಶ್ರೀನಿವಾಸ ರಾಮಾನುಜನ್ನರ ಜೀವನ ಒಂದು ಯುಗಾರಂಭವನ್ನು ಸೂಚಿಸುತ್ತದೆ. ಭಾರತದಲ್ಲಿ ವಿವಿಧ ಕಾಲ ಘಟ್ಟಗಳಲ್ಲಿ ಉನ್ನತ ಪ್ರತಿಭೆಯ ಗಣಿತಜ್ಞರಿದ್ದರು. ಕಾಲಾನುಕ್ರಮದಲ್ಲಿ ಅಂಥವರನ್ನು ಕೊನೆಯ ಗ್ರೀಕ್ ಕಾಲದವರೆಗೆ ಗುರುತಿಸಬಹುದು. ಆದರೆ ಉತ್ತುಂಗತೆಯ ನಿರಪೇಕ್ಷಮಾನದಿಂದ ಅಳೆದಾಗ ಪೌರ್ವಾತ್ಯ ಗಣಿತಜ್ಞರಲ್ಲೆಲ್ಲಾ, ರಾಮಾನುಜನ್ನರ ಮೇಧಾವಿ ಅತ್ಯುಚ್ಛವೆಂದೆನಿಸುತ್ತದೆ” ಎಂದು ಹೇಳಿದ್ದಾರೆ. ಶ್ರೀನಿವಾಸ ರಾಮಾನುಜನ್ನರ ಬಗ್ಗೆ ಬರೆಯುತ್ತ ಜವಾಹರಲಾಲ್ ನೆಹರೂರವರು ತಮ್ಮ "ಡಿಸ್ಕವರಿ ಆಫ್ ಇಂಡಿಯಾ"ದಲ್ಲಿ ಹೀಗೆ ನುಡಿಯುತ್ತಾರೆ: “ಭಾರತದಲ್ಲಿ ಗಣಿತದ ವಿಚಾರದಲ್ಲಿ, ಇತ್ತೀಚಿಗಿನ ಒಬ್ಬರು ಅಸಾಧಾರಣ ವ್ಯಕ್ತಿಯನ್ನು ಕುರಿತು ಯೋಚಿಸುವುದು ಅನಿವಾರ್ಯವಾಗುವಂತೆ ಮಾಡುತ್ತದೆ. ಅವರೇ ಶ್ರೀನಿವಾಸ ರಾಮಾನುಜನ್. ದಕ್ಷಿಣ ಭಾರತದ ಒಂದು ಬಡ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿ ಸೂಕ್ತ ವಿದ್ಯಾಭ್ಯಾಸಕ್ಕೆ ಅವಕಾಶಗಳಿಲ್ಲದೆ ಅವರು ಮದ್ರಾಸ್ ಪೋರ್ಟ್ ಟ್ರಸ್ಟ್‌ನಲ್ಲಿ ಒಬ್ಬ ಕಾರಕೂನರಾದರು. ಆದರೆ ಅವರು ಸಹಜ ಪ್ರತಿಭೆಯ ಯಾವುದೋ ತಡೆಯಲಾಗದ ಲಕ್ಷಣಗಳಿಂದ ಬುದ್ಬುದಿಸುತ್ತಿದ್ದರು; ಸಂಖ್ಯೆ ಹಾಗೂ ಸಮೀಕರಣಗಳೊಂದಿಗೆ ಅವರು ಬಿಡುವಿನ ಸಮಯದಲ್ಲಿ ಆಟವಾಡುತ್ತಿದ್ದರು. ಮುಂದೆ ಅವರು ಕೇಂಬ್ರಿಜ್ಗೆ ತೆರಳಿ ಅಲ್ಲಿ ಬಹಳ ಅಲ್ಪಾವಧಿಯಲ್ಲೇ ಮೂಲಭೂತ ಮೌಲ್ಯದ ಹಾಗೂ ವಿಸ್ಮಯಕರ ಸ್ವಂತಿಕೆಯ ಕಾರ್ಯವೆಸಗಿದರು. ಇಂಗ್ಲೆಂಡಿನ ರಾಯಲ್ ಸೊಸೈಟಿ ತನ್ನ ನಿಯಮಗಳನ್ನು ಭಾಗಶಃ ಸಡಿಲಿಸಿ ಅವರನ್ನು ಜೊತೆಗಾರನಾಗಿ ಆಯ್ಕೆ ಮಾಡಿತು. ಪ್ರೊಫೆಸರ್ ಜೂಲಿಯನ್ ಹಕ್ಸ್ಲಿಯವರು, ನಾನು ತಿಳಿದಿರುವಂತೆ ಎಲ್ಲೋ ಒಂದೆಡೆ ರಾಮಾನುಜರನ್ನು ಈ ಶತಮಾನದ ಶ್ರೇಷ್ಠತಮ ಗಣಿತಜ್ಞ" ಎಂದಿದ್ದಾರೆ. ಬಾಲ್ಯ ಈ ಮಹಾನ್ ಮೇಧಾವಿ ಶ್ರೀನಿವಾಸ ಅಯ್ಯಂಗಾರ್ ರಾಮಾನುಜನ್ ಅಯ್ಯಂಗಾರ್ ಅಥವಾ ಜನಪ್ರಿಯವಾಗಿ ಶ್ರೀನಿವಾಸ ರಾಮಾನುಜನ್ ಎಂದು ಹೆಸರುವಾಸಿಯಾದ ಇವರು ೧೮೮೭ರ ಡಿಸೆಂಬರ್ ೨೨ರಂದು ತಮಿಳುನಾಡಿನ ಈರೋಡಿನಲ್ಲಿದ್ದ ತಮ್ಮ ತಾತನ ಮನೆಯಲ್ಲಿ ಜನ್ಮ ತಳೆದರು. ರಾಮಾನುಜನ್ನರ ತಂದೆ ಬಟ್ಟೆ ಅಂಗಡಿಯಲ್ಲಿ ಒಬ್ಬ ಗುಮಾಸ್ತರಾಗಿದ್ದರು. ತಾಯಿ ಅಪಾರ ದೈವ ಶ್ರದ್ಧಾಭಕ್ತಿಗಳಿದ್ದ ಮಹಿಳೆ. ಬಾಲ್ಯದಲ್ಲಿ ರಾಮಾನುಜನ್ನರು ಶಾಂತ ಮತ್ತು ಆಲೋಚನಾಸಕ್ತ ಸ್ವಭಾವದವರಾಗಿದ್ದರು. ತನ್ನ ತಾಯಿಯಿಂದ ದೇವರನಾಮ ಮತ್ತು ಭಕ್ತಿಗೀತೆಗಳನ್ನೂ ಕಲಿತ ಅವರು ಅಧ್ಯಾತ್ಮಿಕ ವಿಚಾರಗಳಲ್ಲಿ ಆಸಕ್ತಿ ತಳೆದರು. ಅವರು ಬೆಳೆದಂತೆ ಧಾರ್ಮಿಕ ಉದ್ಗ್ರಂಥಗಳನ್ನು ಮತ್ತು ಭಕ್ತಿಸಾಹಿತ್ಯವನ್ನು ಓದಿ ಅದರಲ್ಲಿ ಹೆಚ್ಚಿನದನ್ನು ಕಂಠಪಾಠ ಮಾಡಿದ್ದರು. ಅವರು ವೇದ, ಉಪನಿಷತ್ತು, ತಿರುಕ್ಕುರುಳ್ ಮುಂತಾದ ಶಾಸ್ತ್ರಗ್ರಂಥಗಳಿಂದ ಋಕ್ಕು ಮತ್ತು ಶ್ಲೋಕಗಳನ್ನೂ, ಹಾಗೆಯೇ ಸಂತರ ಮತ್ತು ಜ್ಞಾನಿಗಳ ನುಡಿಗಳನ್ನು ತಮಿಳು ಕೃತಿಗಳಿಂದ ನಿರರ್ಗಳವಾಗಿ ಹೇಳಬಲ್ಲವರಾಗಿದ್ದರು. ಐದನೆಯ ವಯಸ್ಸಿಗೆ ಶಾಲೆಗೆ ಸೇರಿದ ಅವರಿಗೆ ಪ್ರತಿಯೊಂದರಲ್ಲೂ ಕಲಿಕೆಯ ಕುತೂಹಲವಿತ್ತು. ೧೯೦೩ರಲ್ಲಿ ಅವರು ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದರು. ಗಣಿತ ಬಿಟ್ಟು ಬೇರೇನೂ ಬೇಡವಾಯ್ತು ರಾಮಾನುಜನ್ ಅವರು ಎಫ್. ಎ ತರಗತಿಗಳಿಗೆ ಸೇರಿದಾಗ ಅವರಿಗೆ ಗಣಿತದ ಹೊರತಾಗಿ ಇನ್ನ್ಯಾವುದೇ ವಿಷಯಗಳ ಕುರಿತಾಗಿ ಕಿಂಚಿತ್ತೂ ಆಸಕ್ತಿ ಹುಟ್ಟಲಿಲ್ಲ. ಈ ನಿರಾಸಕ್ತಿ ಮತ್ತು ನಿರಂತರ ಅವರ ಜೊತೆಗೂಡಿದ್ದ ಅನಾರೋಗ್ಯಗಳು ಅವರ ಓದನ್ನು ಅಲ್ಲಿಗೇ ಮೊಟಕುಗೊಳಿಸಿಬಿಟ್ಟವು. ಇದೇ ನೆಪವಾಗಿ ಅವರು ಯಾವಾಗಲೂ ಗಣಿತದಲ್ಲೇ ಮುಳುಗಿಬಿಟ್ಟರು. ಇದು ಮನೆಯವರಿಗೆ ಇಷ್ಟವಾಗಲಿಲ್ಲ. ಜೀವನದ ದಾರಿ ಬದಲಾಗಲಿ ಎಂದು ವಿವಾಹ ಏರ್ಪಡಿಸಿದರು. ಹೊಟ್ಟೆಪಾಡಿಗಾಗಿ ಅಲೆದಾಟ ಮದುವೆ ಒಂದು ಬದಲಾವಣೆಯನ್ನು ತಂದಿತು. ಇನ್ನು ಮುಂದೆ ತಾನು ಹೆತ್ತವರಿಗೆ ಹೊರೆಯಾಗಬಾರದೆಂದು ರಾಮಾನುಜನ್ನರು ನಿರ್ಧರಿಸಿದರು. ಇವರ ಮೇಧಾವಿತನದ ಕುರಿತಾದ ಅಭಿಮಾನವುಳ್ಳ ಹಿರಿಯರ ಶಿಫಾರಸ್ಸಿನಿಂದ ಮದ್ರಾಸಿನಲ್ಲಿ ಅಕೌಂಟೆಂಟ್ ಜನರಲ್ ಕಚೇರಿಯಲ್ಲಿ ಅವರಿಗೆ ಕೆಲಸ ದೊರೆಯಿತಾದರೂ ಅದು ಕೇವಲ ಎರಡು ತಿಂಗಳಮಟ್ಟಿಗೆ ಮಾತ್ರ ಇತ್ತು. ಪುನಃ ಹಸಿದ ಹೊಟ್ಟೆಯ ಬಡತನ, ಅನಾರೋಗ್ಯ ಅವರಿಗೆದುರಾಯಿತು. ಸ್ವಲ್ಪ ದಿನ ಮನೆಯ ಪಾಠಮಾಡಿದರು. ಈ ನಡುವೆ ತಮ್ಮ ಗಣಿತದ ಕುರಿತಾದ ಆಲೋಚನೆಗಳನ್ನು ದಾಖಲಿಸುವ ಕೆಲಸವನ್ನು ಮಾತ್ರ ನಿಲ್ಲಿಸಲಿಲ್ಲ. ೧೯೧೦ರಲ್ಲಿ ಅವರು ದಿವಾನ್ ಬಹದ್ದೂರರನ್ನು ಕಂಡಾಗ ಬಹದ್ದೂರರು ತಮಗೇನು ಬೇಕೆಂದು ಕೇಳಿದಾಗ “ಸಂಶೋಧನೆ ಮುದುವರಿಸಿಕೊಂದು ಹೋಗುವಷ್ಟರಮಟ್ಟಿಗೆ ಬದುಕಿರಲು ಸಾಕಾಗುವಷ್ಟು ಅನ್ನ” ಎಂದರು ರಾಮಾನುಜನ್. ಬಹದ್ದೂರರು ತಾವೇ ಸ್ವತಃ ಇಪ್ಪತ್ತೈದು ರೂಪಾಯಿಗಳ ಮಾಸಿಕ ಧನಸಹಾಯ ಮಾಡಲಾರಂಭಿಸಿದರು. ಆದರೆ ರಾಮಾನುಜನ್ ಅವರಿಗೆ ಹೀಗೆ ಹಣ ಪಡೆಯುವ ಮನಸ್ಸಿರಲಿಲ್ಲ. ಮತ್ತೆ ಅವರ ಅಭಿಮಾನವುಳ್ಳ ಹಿರಿಯರ ಶಿಫಾರಸ್ಸಿನಿಂದ ಅವರು ಮದ್ರಾಸಿನ ಪೋರ್ಟ್ ಟ್ರಸ್ಟ್ ಕಚೇರಿಯಲ್ಲಿ ಗುಮಾಸ್ತರಾಗಿ ಕೆಲಸ ಮಾಡಲು ಆರಂಭಿಸಿದರು. ಸಂಶೋಧನೆಗಳ ಪ್ರಕಟಣೆ ಏತನ್ಮಧ್ಯೆ ಶ್ರೀನಿವಾಸ ರಾಮಾನುಜನ್ ಅವರ ಬೆಂಗಾವಲಾಗಿದ್ದ ಪ್ರೊ. ಪಿ. ವಿ. ಶೇಷು ಅಯ್ಯರ್ ಅವರಿಂದ ಕಳುಹಿಸಲ್ಪಟ್ಟ ಪ್ರಶ್ನೋತ್ತರಗಳ ರೂಪದಲ್ಲಿ ಇಂಡಿಯನ್ ಮ್ಯಾಥಮೆಟಿಕಲ್ ಸೊಸೈಟಿಯ ನಿಯತಕಾಲಿಕ ೧೯೧೧ರಲ್ಲಿ ಪ್ರಕಟವಾಯಿತು. ಈ ಸಂಪುಟದ ಒಂದು ಸಂಚಿಕೆಯಲ್ಲಿ ರಾಮಾನುಜನ್ನರ ‘ಬರ್ನೌಲಿ ಸಂಖ್ಯೆಗಳ ಕೆಲವು ಲಕ್ಷಣಗಳು” ಪ್ರಕಟಗೊಂಡಿತು. ೧೯೧೨ರಲ್ಲಿ ಇನ್ನೆರಡು ಪ್ರಬಂಧಗಳು ಬಂದವು. ಮದ್ರಾಸ್ ಪೋರ್ಟ್ ಟ್ರಸ್ಟಿನ ಅಧ್ಯಕ್ಷ ಸರ ಫ್ರಾನ್ಸಿಸ್ ಸ್ಪ್ರಿಂಗ್ ರಾಮಾನುಜನ್ ಅವರಲ್ಲಿ ಆಸಕ್ತಿ ತಳೆದು ಅವರ ಪ್ರಗತಿಯನ್ನು ವೀಕ್ಷಿಸುತ್ತಿದ್ದರು. ಒಂದು ದಿನ ಅವರ ಸಹಿಗಾಗಿ ಒಂದು ಕಡತ ಬಂತು. ಅದನ್ನು ಪರಾಂಬರಿಸುತ್ತಿದ್ದಾಗ ಎಲಿಪ್ಟಿಕ್ ಅನುಕಲನಾಂಕಗಳಿಗೆ ಸಂಬಂಧಿಸಿದ ಕೆಲವು ಫಲಿತಗಳನ್ನೊಳಗೊಂಡ ಬಿಳಿ ಹಾಳೆಗಳನ್ನು ಕಂಡರು. ಸ್ವಯಂ ಗಣಿತದಲ್ಲಿ ಆಸಕ್ತರಾಗಿದ್ದ ಅವರಿಗೆ ಅದು ರಾಮಾನುಜನ್ ಅವರ ಕೆಲಸವೆಂದು ತಿಳಿದು ಸಂತೋಷವಾಯಿತು. ಅದಮ್ಯ ಸಹನೆ ಪೋರ್ಟ್ ಟ್ರಸ್ಟಿನಲ್ಲಿನ ಕೆಲಸ ಶ್ರೀನಿವಾಸ ರಾಮಾನುಜನ್ ಮತ್ತು ಅವರ ಕುಟುಂಬಕ್ಕೆ ಅರೆಹೊಟ್ಟೆಯನ್ನು ತುಂಬಿಸುವಷ್ಟು ಮಾತ್ರದ್ದಾಗಿತ್ತು. ಕಡುಬಡತನ ಮತ್ತು ಎಲ್ಲ ತರಹದ ಸಂಕಷ್ಟವಿದ್ದರೂ ರಾಮಾನುಜನ್ ಎಂದೂ ತಾಳ್ಮೆಗೆಡುತ್ತಿರಲಿಲ್ಲ. ಅವರು ಮದ್ರಾಸಿನಲ್ಲಿ ಟ್ರಿಪ್ಲಿಕೇನಿನ ಸಮೀಪದಲ್ಲಿ ವಾಸಿಸುತ್ತಿದ್ದಾಗ ಒಂದು ರಾತ್ರಿ ಖಗೋಳ ಪ್ರಪಂಚದ ವಿಸ್ಮಯಗಳ ಕುರಿತು ಗೆಳೆಯನೊಡನೆ ಮಾತನಾಡುತ್ತಿದ್ದರು. ಅದನ್ನು ತಡೆಯಲು ಯಾರೋ ಹಠಾತ್ತಾಗಿ ರಾಮಾನುಜನ್ನರ ತಲೆಯ ಮೇಲೆ ಗಡಿಗೆ ತುಂಬಾ ನೀರು ಸುರಿದರು. ಕೋಪಾವಶೇಶದಲ್ಲಿ ಸಿಡಿಯುವ ಬದಲು, ರಾಮಾನುಜನ್ ನಗುತ್ತ ಅಂದರು: “ದೇವರ ದಯೆ, ನನಗೆ ಗಂಗಾಸ್ನಾನವಾಯಿತು. ಇನ್ನೂ ಜಾಸ್ತಿ ಇದ್ದಾರೆ ಸಂತೋಷ.”. ಶಾಂತ ಮತ್ತು ಏಕಾಗ್ರಚಿತ್ತದಿಂದ ರಾಮಾನುಜನ್ ತಮ್ಮ ಕೆಲಸ ಮುಂದುವರಿಸಿದರು. ಕೆಂಬ್ರಿಡ್ಜ್ ಹಾದಿಯಲ್ಲಿ ಪ್ರೊ. ಪಿ. ವಿ. ಶೇಷು ಅಯ್ಯರ್ ಅಂತಹ ಹಿರಿಯರು ಮತ್ತು ಹಿತಚಿಂತಕರು ಟ್ರಿನಿಟಿ ಕಾಲೇಜಿನ ಫೆಲೋ ಆಗಿದ್ದ ಪ್ರೊ. ಜಿ. ಹೆಚ್ ಹಾರ್ಡಿ ಮತ್ತು ಕೇಂಬ್ರಿಜ್ ಗಣಿತ ಉಪನ್ಯಾಸಕರಾಗಿದ್ದ ಕ್ಯಾಲೆ ಅವರಿಗೆ ರಾಮಾನುಜನ್ ತಮ್ಮ ಗಣಿತೀಯ ಶೋಧನೆಗಳನ್ನು ತಿಳಿಸಬೇಕೆಂದು ಒತ್ತಾಯಿಸಿದರು. ಇದನ್ನು ಮಾಡಲು ಮೊದಲು ಅವರಿಗೆ ಮನಸ್ಸಿರಲಿಲ್ಲ. ಆದರೆ ಒತ್ತಾಯ ಜಾಸ್ತಿಯಾದಾಗ ಅವರು ಪ್ರೊ. ಹಾರ್ಡಿಯವರಿಗೆ ಬರೆಯಲು ನಿರ್ಧರಿಸಿದರು. ಹೀಗೆ ಕ್ರಮೇಣ ಅವರ ಜೀವನವನ್ನೇ ಬದಲಿಸಿದ ಮತ್ತು ಭಾರತವನ್ನು ಪ್ರಪಂಚದ ಗಣಿತೀಯ ನಕ್ಷೆಯಲ್ಲಿ ಸೇರಿಸಿದ ಪತ್ರ ವ್ಯವಹಾರ ಪ್ರಾರಂಭಗೊಂಡಿತು. ತಮ್ಮ ಮೊದಲ ಪತ್ರದಲ್ಲೇ ರಾಮಾನುಜನ್ ನೂರಕ್ಕೂ ಹೆಚ್ಚು ಪ್ರಮೇಯಗಳನ್ನು ವಿವರಿಸಿದ್ದರು. ಈ ಚಿಂತನೆಗಳು ಕೇಂಬ್ರಿಜ್ನಲ್ಲಿ ಹೊಸ ಸಂಚಲನವನ್ನೇ ಉಂಟುಮಾಡಿತು. ಕ್ರಮೇಣದಲ್ಲಿ ಶ್ರೀನಿವಾಸನ್ ಕೆಂಬ್ರಿಡ್ಜ್ಗೆ ಬಂದಿಳಿದರು. ಸಂಶೋಧನೆಯಲ್ಲಿ ಶ್ರೇಷ್ಠತೆ ರಾಮಾನುಜನ್ನರ ಕಾರ್ಯವಿಧಾನ ಸ್ವಂತಿಕೆಯಿಂದ ಕೂಡಿದ್ದು ಅವರ ಸಲಕರಣೆಗಳು ಸಂಪೂರ್ಣವಾಗಿ ಅವರದ್ದೇ ಆಗಿದ್ದುವು. ಇಂಗ್ಲೆಂಡಿನಲ್ಲಿ ಅವರಿದ್ದ ಐದು ವರ್ಷಗಳಲ್ಲಿ ಅವರ ಇಪ್ಪತ್ತೊಂದು ಪ್ರಬಂಧಗಳು ಯೂರೋಪಿನ ವಿವಿಧ ನಿಯತಕಾಲಿಕಗಳಲ್ಲಿ ಪ್ರಕಟವಾದವುಗಳಲ್ಲಿ ಐದು ಪ್ರೊ. ಹಾರ್ಡಿಯವರೊಂದಿಗೆ ಬರೆದುವು. ಪ್ರೊ. ಹಾರ್ಡಿ ಅವರಲ್ಲದೆ ಆ ಕಾಲದ ಶ್ರೇಷ್ಠ ವಿದ್ವಾಂಸರಾದ ಪ್ರೊ. ಜೆ. ಇ. ಲಿಟ್ಲ್ ವುಡ್, ಪ್ರೊ. ಎಲ್. ಜೆ. ಮೊರ್ಡಲ್, ಪ್ರೊ. ಜಿ. ಎನ್. ವಾಟ್ಸನ್ ಮುಂತಾದ ಸಕಲರೂ ಶ್ರೀನಿವಾಸ ರಾಮಾನುಜನ್ ಅವರ ಶ್ರೇಷ್ಠತೆಯನ್ನು ಕೊಂಡಾಡಿದರು.kannada ರಾಯಲ್ ಸೊಸೈಟಿಯ ಫೆಲೋ ಆಗಿ ಗೌರವ ರಾಮಾನುಜನ್ನರ ಸಂಶೋಧನೆ ಅವರಿಗೆ ಉನ್ನತ ಪ್ರಶಂಸೆ ಮತ್ತು ಪ್ರತಿಷ್ಠೆಗಳನ್ನು ತಂದುಕೊಟ್ಟವು. ಬ್ರಿಟನ್ ಮತ್ತು ಅಂದಿನ ಬ್ರಿಟಿಷ್ ಸಾಮ್ರಾಜ್ಯದ ವಿಜ್ಞಾನ ಪ್ರಪಂಚದಲ್ಲಿ ಅತ್ಯುನ್ನತ ಗೌರವವಾದ ರಾಯಲ್ ಸೊಸೈಟಿಯ ಫೆಲೋ ಆಗಿ ಫೆಬ್ರುವರಿ ೨೮, ೧೯೧೮ರಲ್ಲಿ ಶ್ರೀನಿವಾಸ ರಾಮಾನುಜನ್ ಚುನಾಯಿತರಾದರು. ೧೮೪೧ರಲ್ಲಿ ಸರ್ ಆರ್ ದೇಸೀರ್ ಕರ್ ಸೇಟ್ಜಿ ಅವರು ರಾಯಲ್ ಸೊಸೈಟಿಗೆ ಚುನಾಯಿತರಾಗಿದ್ದನ್ನು ಬಿಟ್ಟರೆ ಈ ಗೌರವ ಪಡೆದ ಪ್ರಥಮರು ರಾಮಾನುಜನ್ ಅವರೇ. ರಾಮಾನುಜನ್ನರ ಆಯ್ಕೆ ಮುಂದೆ ಭಾರತೀಯ ವಿಜ್ಞಾನಿಗಳನ್ನು ಉತ್ತೇಜನಗೊಳಿಸಿ ಒಂದೇ ದಶಕದೊಳಗೆ ಇನ್ನೂ ಮೂವರು ಚುನಾಯಿತರಾದರು. ಅವರೇ ಜಗದೀಶ್ ಚಂದ್ರ ಬೋಸ್, ಸಿ ವಿ ರಾಮನ್ ಮತ್ತು ಮೇಘನಾದ ಸಹಾ. ಹೀಗೆ ರಾಮಾನುಜನ್ನರ ಸಿದ್ಧಿ ಭಾರತೀಯ ವಿಜ್ಞಾನ ಮತ್ತು ಗಣಿತದಲ್ಲಿ ಹೊಸ ಯುಗವನ್ನು ಆರಂಭಿಸಿತು. ಚಿಕ್ಕ ವಯಸ್ಸಿನಲ್ಲಿ ಕಳೆದುಹೋದ ಪ್ರತಿಭೆ ಕೆಂಬ್ರಿಡ್ಜ್ನಲ್ಲಿ ಅಪ್ರತಿಮ ಪ್ರತಿಭಾವಂತರಾಗಿ ತಮ್ಮ ಸಂಶೋಧನೆಗಳನ್ನು ನಿರೂಪಿಸಿದ ರಾಮಾನುಜನ್ ಐದು ವರ್ಷಗಳ ನಂತರ ಭಾರತಕ್ಕೆ ಹಿಂದಿರುಗಿ ವಿದ್ವಾಂಸರಿಂದ ಅಭೂತಪೂರ್ವ ಮೆಚ್ಚುಗೆ ಮತ್ತು ಸ್ವಾಗತಗಳನ್ನು ಪಡೆದರು. ಆದರೆ ದುರದೃಷ್ಟವಶಾತ್ ಅವರ ಆರೋಗ್ಯ ಕ್ಷೀಣಿಸುತ್ತಿತ್ತು. ಉತ್ತಮ ವೈದ್ಯಕೀಯ ಸೌಲಭ್ಯ ಹಾಗೂ ಬಹು ನಾಜೂಕಾದ ಉಪಚಾರ ಮತ್ತು ಮೇಲ್ವಿಚಾರಣೆ ಇದ್ದರೂ ಅವರು ಏಪ್ರಿಲ್ ೨೬, ೧೯೨೦ರಂದು ೩೨ ವರ್ಷ, ೪ ತಿಂಗಳು, ೪ ದಿವಸಗಳ ತರುಣ ವಯಸ್ಸಿನಲ್ಲೇ ತೀರಿಕೊಂಡರು. ಭರತಖಂಡ ಹಾಗೂ ಜಗತ್ತು ಮತ್ತೆ ಅಂದಿನವರೆಗೆ ಕಂಡಿಲ್ಲದಂಥ ಮಹಾನ್ ಗಣಿತ ಪ್ರತಿಭೆಯನ್ನು ಕಳೆದುಕೊಂಡಿತು. ಅಸಾಮಾನ್ಯ ಪ್ರತಿಭೆ ಪ್ರೊ. ಹಾರ್ಡಿ ಹೇಳುತ್ತಾರೆ: “ರಾಮಾನುಜನ್ ಅವರಲ್ಲಿ ಪರಮಾದ್ಭುತವಾದುದೆಂದರೆ ಬೀಜಗಣಿತದ ಸೂತ್ರಗಳು, ಅನಂತ ಶ್ರೇಣಿಗಳ ಪರಿವರ್ತನೆ ಮುಂತಾದವುಗಳಲ್ಲಿದ್ದ ಅವರ ಅಂತರ್ದೃಷ್ಟಿ. ಈ ವಿಷಯಗಳಲ್ಲಿ ಅವರಿಗೆ ಸಮನಾದವರನ್ನು ಖಂಡಿತವಾಗಿಯೂ ನಾನು ಕಂಡಿಲ್ಲ. ಅವರನ್ನು ಅಯ್ಳರ್ ಅಥವಾ ಜುಕೊಬಿಯಂತಹ ಸಾರ್ವಕಾಲಿಕ ಶ್ರೇಷ್ಠರೊಂದಿಗೆ ಮಾತ್ರ ಹೋಲಿಸಲು ಸಾಧ್ಯ. ರಾಮಾನುಜನ್ ಅವರ ಸ್ಮರಣ ಶಕ್ತಿ, ಸಹನೆ, ಗಣಿಸುವ ಸಾಮರ್ಥ್ಯಗಳೊಂದಿಗೆ ಸಾರ್ವತ್ರೀಕರಣ ಶಕ್ತಿ, ಸ್ವರೂಪ ಜ್ಞಾನ, ಆಧಾರ ಭಾವನೆಗಳನ್ನು ಕ್ಷಿಪ್ರವಾಗಿ ಬದಲಾಯಿಸುವ ಚಾಕಚಕ್ಯತೆ ಇವು ಅನೇಕ ವೇಳೆ ದಂಗುಬಡಿಸುತ್ತಿದ್ದವು. ರಾಮಾನುಜನ್ ಅವರದೇ ಆದ ಈ ಕ್ಷೇತ್ರದಲ್ಲಿ ಆ ಕಾಲದಲ್ಲಿ ಅವರಿಗೆ ಸರಿಸಾಟಿಗಳಿಲ್ಲದಂತೆ ಮಾಡಿದವು” ಸಂಶೋಧನಾ ಕ್ಷೇತ್ರಗಳು ರಾಮಾನುಜನ್ ಅವರ ಸಂಶೋಧನೆಗಳಲ್ಲಿ ಮುಖ್ಯವಾಗಿ ಈ ಕ್ಷೇತ್ರಗಳನ್ನು ಹೆಸರಿಸಬಹುದು: ಅವಿಭಾಜ್ಯ ಸಂಖ್ಯೆಗಳ ಬಗ್ಗೆ ಸಂಶೋಧನೆ ಪಾರ್ಟಿಷನ್ ಸಂಖ್ಯೆಗಳ ಬಗ್ಗೆ ಸಂಶೋಧನೆ ರಾಮಾನುಜನ್ ಊಹೆ ರಾಮಾನುಜನ್-ಪೀಟರ್ಸನ್ ಊಹೆ ರಾಮಾನುಜನ್ ರ ಬಗ್ಗೆ ಪುಸ್ತಕಗಳು "ರಾಮಾನುಜನ್ ಬಾಳಿದರಿಲ್ಲಿ", ಜಿ.ಟಿ.ನಾರಾಯಣ ರಾವ್ Collected Papers of Srinivasa Ramanujan ISBN 0-8218-2076-1 The Man Who Knew Infinity: A Life of the Genius Ramanujan by Robert Kanigel ISBN 0-671-75061-5 ಶ್ರೀನಿವಾಸ ರಾಮಾನುಜನ್, ಲೇಖಕರು ಸುರೇಶ್ ರಾಮ್, ನ್ಯಾಷನಲ್ ಬುಕ್ ಟ್ರಸ್ಟಿನ ರಾಷ್ಟ್ರೀಯ ಜೀವನಚರಿತ್ರ ಮಾಲೆ. ಬಾಹ್ಯ ಸ೦ಪರ್ಕಗಳು ಶ್ರೀನಿವಾಸ ರಾಮಾನುಜನ್ ರಾಮಾನುಜನ್ ಜರ್ನಲ್ ರಾಮಾನುಜನ್‌ ಜೀವನದ ಕುರಿತಾದ ಇಂಗ್ಲೀಷ್‌ ಚಲನಚಿತ್ರ ದ ಮ್ಯಾನ್‌ ಹೂ ನ್ಯೂ ಇನ್‌ಫಿನಿಟಿ ಗಣಿತ ಭಾರತೀಯ ಗಣಿತಜ್ಞರು ೧೮೮೭ ಜನನ ೧೯೨೦ ನಿಧನ ಭಾರತದ ಪ್ರಸಿದ್ಧ ವ್ಯಕ್ತಿಗಳು ತಮಿಳುನಾಡು ಪ್ರಸಿದ್ಧ ವ್ಯಕ್ತಿಗಳು ಮಾನವ ಕಂಪ್ಯೂಟರ್ ಶ್ರೀನಿವಾಸ ರಾಮಾನುಜನ್
1375
https://kn.wikipedia.org/wiki/%E0%B2%A4%E0%B2%AE%E0%B2%BF%E0%B2%B3%E0%B3%81%E0%B2%A8%E0%B2%BE%E0%B2%A1%E0%B3%81
ತಮಿಳುನಾಡು
ತಮಿಳುನಾಡು(தமிழ்நாடு) ಭಾರತದ ದಕ್ಷಿಣ ತುದಿಯಲ್ಲಿರುವ ರಾಜ್ಯ. ಭಾರತ ಗಣರಾಜ್ಯದ ದಕ್ಷಿಣದ ಒಂದು ರಾಜ್ಯ.ಚೆನ್ನೈ ತಮಿಳುನಾಡಿನ ರಾಜಧಾನಿ ಮತ್ತು ಅತಿ ದೊಡ್ಡ ನಗರವಾಗಿದೆ. ಇದಕ್ಕೆ ಹೊಂದಿಕೊಂಡಿರುವ ಪ್ರದೇಶಗಳೆಂದರೆ ಪಾಂಡಿಚೇರಿ, ಕೇರಳ, ಕರ್ನಾಟಕ ಮತ್ತು ಆಂಧ್ರ ಪ್ರದೇಶ. ದಕ್ಷಿಣಪೂರ್ವಕ್ಕೆ ಹಿಂದೂ ಮಹಾಸಾಗರದಲ್ಲಿ ಶ್ರೀಲಂಕಾ ರಾಷ್ಟ್ರವಿದೆ. ತಮಿಳುನಾಡು ಉತ್ತರದಲ್ಲಿ ಪೂರ್ವ ಘಟ್ಟಗಳಿಂದ, ಪಶ್ಚಿಮದಲ್ಲಿ ನೀಲಗಿರಿ ಮಲೆಗಳು, ಆನಮಲೆ ಹಾಗು ಪಾಲಕ್ಕಾಡಿನಿಂದ, ಪೂರ್ವದಲ್ಲಿ ಬಂಗಾಳ ಕೊಲ್ಲಿಯಿಂದ, ಆಗ್ನೇಯದಲ್ಲಿ ಮನ್ನಾರ್ ಖಾರಿ, ಪಾಲ್ಕ್ ಜಲಸಂಧಿಯಿಂದ, ದಕ್ಷಿಣದಲ್ಲಿ ಹಿಂದು ಮಹಾಸಾಗರದಿಂದ ಸುತ್ತುವರೆಯಲ್ಪಟ್ಟಿದೆ. ತಮಿಳುನಾಡು ವಿಸ್ತೀರ್ಣದಲ್ಲಿ ಭಾರತದ ಹನ್ನೊಂದನೆಯ ಅತಿ ದೊಡ್ಡ ರಾಜ್ಯವಾಗಿದೆ ಹಾಗು ಜನಸಂಖ್ಯೆಯಲ್ಲಿ ಏಳನೆಯ ಅತಿ ದೊಡ್ಡ ರಾಜ್ಯವಾಗಿದೆ. ತಮಿಳುನಾಡು ನಿವ್ವಳ ದೇಶೀಯ ಉತ್ಪನ್ನಕ್ಕೆ ಐದನೆಯ ಅತಿ ದೊಡ್ಡ ಕೊಡುಗೆ ನೀಡುವ ರಾಜ್ಯವಾಗಿದೆ.ತಮಿಳುನಾಡು ಭಾರತದಲ್ಲಿ ಅತಿ ಹೆಚ್ಚು(೧೦.೫೬%) ವ್ಯಾಪಾರ ಉದ್ಯಮಗಳನ್ನು ಹೊಂದಿದೆ. ತಮಿಳುನಾಡು ಹಲವು ನೈಸರ್ಗಿಕ ಸಂಪನ್ಮೂಲಗಳಿಗೆ, ದ್ರಾವಿಡ ವಾಸ್ತುಶಿಲ್ಪ ಶೈಲಿಯ ಭವ್ಯವಾದ ಹಿಂದು ದೇವಾಲಯಗಳಿಗೆ, ಗಿರಿಧಾಮಗಳಿಗೆ, ಸಮುದ್ರತೀರದ ವಿಹಾರಧಾಮಗಳಿಗೆ, ತೀರ್ಥಯಾತ್ರಾ ಸ್ಥಳಗಳಿಗೆ ಹಾಗು ಐದು ಯುನೆಸ್ಕೋ ವಿಶ್ವ ಪಾರಂಪರಿಕ ನಿವೇಶನಗಳಿಗೆ ಬೀಡಾಗಿದೆ. ಭೌಗೋಳಿಕ ಸ್ಥಾನ ಪರ್ಯಾಯ ದ್ವೀಪದ ಆಗ್ನೇಯ ತುದಿಯಲ್ಲಿ, ಉ. ಅ 8o 5' —13o 3 ಪೂ. ರೇ. 76o 15 — 80o 20 ನಡುವೆ ಇದೆ. ಉತ್ತರದಲ್ಲಿ ಆಂಧ್ರಪ್ರದೇಶ, ಪೂರ್ವದಲ್ಲಿ ಬಂಗಾಳ ಕೊಲ್ಲಿ, ದಕ್ಷಿಣದಲ್ಲಿ ಹಿಂದೂ ಸಾಗರ, ಪಶ್ಚಿಮದಲ್ಲಿ ಕೇರಳ, ವಾಯವ್ಯ ಮತ್ತು ಉತ್ತರದಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶ ಇವು ಇದರ ಮೇರೆಗಳು. ಪಶ್ಚಿಮದ ಅಂಚಿನಲ್ಲಿ ಪಶ್ಚಿಮ ಘಟ್ಟಗಳು ಹಬ್ಬಿವೆ. ತಮಿಳುನಾಡಿಗೆ ಪೂರ್ವದಲ್ಲಿ ಸು. 998 ಕಿ.ಮೀ ಉದ್ದದ ಸಮುದ್ರ ತೀರವಿದೆ. ವಿಸ್ತೀರ್ಣ ಮತ್ತು ಜನಸಂಖ್ಯೆ 30 ಜಿಲ್ಲೆಗಳೂ, 832 ಪಟ್ಟಣಗಳೂ ಸು. 16,317 ಗ್ರಾಮಗಳೂ ಇರುವ ರಾಜ್ಯದ ವಿಸ್ತೀರ್ಣ 1,30,058 ಚ.ಕಿ.ಮೀ. ಇಲ್ಲಿಯ ಪುರುಷ ಸಂಖ್ಯೆ 31,400,909 ಸ್ತ್ರೀಯರು 31,004,770 ಒಟ್ಟು ಜನಸಂಖ್ಯೆ 62,405,679 (2001). ಇದಕ್ಕೆ ಸು. 812ಕಿ.ಮೀ. ಉದ್ದದ ಕಡಲ ತೀರವಿದೆ. ಇದರ ವಿಸ್ತೀರ್ಣ 50, 180 ಚ.ಮೈ. (1,29,966 ಚ.ಕಿಮೀ.) ಜನಸಂಖ್ಯೆ 1,30,058.ಚ.ಕಿ.ಮೀ. ಜನಸಂಖ್ಯೆ 6,21,10,839 (2005) ಹಳೆಯ ಮದ್ರಾಸ್ ಪ್ರಾಂತ್ಯದಲ್ಲಿ ತಮಿಳು ಭಾಷೆಯಾಡುವ ಜನರಿದ್ದ ಪ್ರದೇಶವನ್ನು 1956ರ ರಾಜ್ಯ ಪುನರ್ವಿಂಗಡಣೆಯ ಅಧಿನಿಯಮದ ಪ್ರಕಾರ ಪ್ರತ್ಯೇಕಿಸಿ ಈ ರಾಜ್ಯವನ್ನು ನಿರ್ಮಿಸಲಾಯಿತು. ವಿಸ್ತೀರ್ಣದಲ್ಲಿ ಇದು ಭಾರತದ ಹತ್ತನೆಯ ರಾಜ್ಯ, ಜನಸಂಖ್ಯೆಯಲ್ಲಿ ಇದಕ್ಕೆ ಐದನೆಯ ಸ್ಥಾನ. ರಾಜಧಾನಿ ಚೆನ್ನೈ. ಮೇಲ್ಮೈಲಕ್ಷಣ ತಮಿಳು ನಾಡನ್ನು ಸ್ಥೂಲವಾಗಿ ಎರಡು ಭಾಗಗಳಾಗಿ ವಿಂಗಡಿಸಬಹುದು: 1 ಪೂರ್ವತೀರಪ್ರದೇಶ : ಇದು ಮೈದಾನ. 2 ಉತ್ತರ ಮತ್ತು ಪಶ್ಚಿಮ ಪ್ರದೇಶ, ಇದು ಉನ್ನತ ಭೂಮಿ, ಮೈದಾನವನ್ನು ಮತ್ತೆ ಮೂರು ಭಾಗಗಳಾಗಿ ವಿಂಗಡಿಸಬಹುದು:1 ಚೆಂಗಲ್ ಪಟ್ಟು ಮತ್ತು ದಕ್ಷಿಣ ಆರ್ಕಾಟ್ ಜಿಲ್ಲೆಗಳನ್ನೊಳಗೊಂಡ ಕೋರಮಂಡಲ ಮೈದಾನ, ತಿರುಚ್ಚಿರಾಪ್ಪಳ್ಳಿ ಮತ್ತು ತಂಜಾವೂರು ಜಿಲ್ಲೆಯ ಕಾವೇರಿ ಬಯಲು ಮತ್ತು 3 ಮಧುರೈ ಮತ್ತು ರಾಮನಾಥಪುರಂ ಜಿಲ್ಲೆಗಳನ್ನೊಳಗೊಂಡ ದಕ್ಷಿಣದ ಬಯಲು. ಈ ಮೂರರಲ್ಲಿ ಕಾವೇರಿ ಬಯಲೇ ಬಲು ಅಗಲವಾದ್ದು. ಪೂರ್ವ ಘಟ್ಟಗಳು ಹಲವು ಬಿಡಿ ಬೆಟ್ಟಗಳ ರೂಪದಲ್ಲಿ ಈ ರಾಜ್ಯದೊಳಕ್ಕೆ ವಿಸ್ತರಿಸಿವೆ. ಇವುಗಳಲ್ಲಿ ಮುಖ್ಯವಾದವು ಜವಾದಿ, ಷೆವರಾಯ್, ಕಲ್ಲೈ ಮಲೈ ಮತ್ತು ಪಚ್ಚೈ ಮಲೈ. ಈ ಬೆಟ್ಟಗಳ ಸಾಲು ಮುಂದೆ ಇನ್ನೂ ದಕ್ಷಿಣಕ್ಕೆ ಸಾಗಿ ಮಧುರೈ ಜಿಲ್ಲೆಯಲ್ಲಿ ಏಲಕ್ಕಿ ಬೆಟ್ಟಗಳನ್ನು ಸೇರುತ್ತದೆ. ಪೂರ್ವ ಘಟ್ಟಗಳು ಸೋಪಾನದೋಪಾದಿಯಲ್ಲಿರುವುದರಿಂದ ಇವಕ್ಕೆ ಘಟ್ಟಗಳೆಂದು ಹೆಸರು ಬಂದಿದೆ. ಇವು ಸ್ಥೂಲವಾಗಿ ದಕ್ಷಣೋತ್ತರವಾಗಿ ಹಬ್ಬಿವೆ. ಪಶ್ಚಿಮದಲ್ಲಿರುವ ಪಶ್ಚಿಮ ಘಟ್ಟಗಳು ಪೂರ್ವಘಟ್ಟಗಳಿಗಿಂತ ತೀರ ಭಿನ್ನವಾದವು. ಅವು ಏಕಪ್ರಕಾರವಾಗಿ ಹಬ್ಬಿರುವ ಶ್ರೇಣಿಗಳು. ಬೃಹತ್ತಿನಲ್ಲಿಯೂ ಮಹತ್ತಿನಲ್ಲಿಯೂ ಅವುಗಳ ಮುಂದೆ ಪೂರ್ವಘಟ್ಟಗಳು ಬಲು ಕುಬ್ಜ. ಪಾಲಕ್ಕಾಡ್ ಬಳಿಯ ಘಾಟಿನ ಅಗಲ ಸುಮಾರು 24ಕಿ.ಮೀ. ಈ ಘಾಟಿನಿಂದ ದಕ್ಷಿಣಕ್ಕೆ ಪಶ್ಚಿಮ ಘಟ್ಟಗಳು ಮತ್ತೆ ಏರಿ, ಅಣ್ಣಾಮಲೈ ಬೆಟ್ಟಗಳಾಗಿ ಪರಿಣಮಿಸುತ್ತವೆ. ಇವುಗಳ ಪೂರ್ವ ಶಾಖೆಯೇ ಪಳನಿ ಬೆಟ್ಟ. ಇದರಲ್ಲಿರುವ ಕೋಡೈಕ್ಕಾನಾಲ್ ಒಂದು ಬೇಸಗೆ ಗಿರಿಧಾಮ. ಅಲ್ಲಲ್ಲಿ 6,000-7,000 ಅಡಿಗಳ ಎತ್ತರಕ್ಕಿರುವ ಪಶ್ಚಿಮ ಘಟ್ಟಗಳಿಗೆ ಪಾಲಕ್ಕಾಡ್ ಮತ್ತು ಷೆನ್‍ಕೊಟ್ಟಾ ಬಳಿ ಮಾತ್ರ ತೆರಪುಗಳವೆ. ಪೂರ್ವ ಪಶ್ಚಿಮ ಘಟ್ಟಗಳು ನೀಲಗಿರಿ ಜಿಲ್ಲೆಯಲ್ಲಿ ಸಂಧಿಸಿ ಒಂದು ಪರ್ವತ ಗ್ರಂಥಿಯಾಗಿ ಪರಿಣಮಿಸಿವೆ. ತಮಿಳು ನಾಡಿನಲ್ಲಿರುವ ಶಿಖರಗಳು ದೊಡ್ಡ ಬೆಟ್ಟ (8,650') ಮಾಕುರ್ತಿ (8,380') ಮತ್ತು ಅಣ್ಣೈ ಮುಡಿ (8,837'). ಇವುಗಳಲ್ಲಿ ಮೊದಲನೆಯ ಎರಡು ನೀಲಗಿರಿ ಬೆಟ್ಟಗಳಲ್ಲೂ ಕೊನೆಯದು ಅಣ್ಣಾ ಮಲೈ ಬೆಟ್ಟಗಳಲ್ಲೂ ಇವೆ. ವೈಗೈ, ತಾಮ್ರಪರ್ಣಿ ಮುಂತಾದ ಮುಖ್ಯ ನದಿಗಳು ಪಶ್ಚಿಮ ಘಟ್ಟಗಳಲ್ಲಿ ಹುಟ್ಟುತ್ತವೆ. ಪಾಲಾರ್, ಪೊನ್ನೈಯಾರ್, ಕಾವೇರಿ_ಇವು ಅಂತರರಾಜ್ಯ ನದಿಗಳು. ಸ್ಥಳೀಯ ಪ್ರಾಮುಖ್ಯವುಳ್ಳ ನದಿಗಳು ಅರಣಿಯಾರ್, ಕೋರ್ತಲಿಯಾರ್, ಕೂವಮ್, ಗಡಿಲಾಮ್, ಗೋಮುಖಿ, ಮಣಿಮುಕ್ತ, ಉತ್ತರವೆಲ್ಲಾರ್, ಅಗ್ನಿಯಾರ್, ದಕ್ಷಿಣ ವೆಲ್ಲಾರ್, ದಕ್ಷಿಣ ಪಾಲಾರ್, ವೈಪ್ಪಾರ್, ಚಿತ್ತಾರ್, ಕೋಡೈಯಾರ್ ಮತ್ತು ಪಟಿಯಾರ್, ಕೋಡೈಯಾರ್ ಮತ್ತು ಪಟಿಯಾರ್‍ಗಳನ್ನುಳಿದು ಎಲ್ಲ ನದಿಗಳೂ ಪಶ್ಚಿಮದಿಂದ ಪೂರ್ವಾಭಿಮುಖವಾಗಿ ಹರಿದು ಬಂಗಾಳ ಕೊಲ್ಲಿ ಸೇರುತ್ತವೆ. ಈ ನದಿಗಳ ಮೇಲ್ದಂಡೆಗಳು ಬಂಡೆಗಲ್ಲು ಪ್ರದೇಶಗಳಾದ್ದರಿಂದ ಅಲ್ಲಿ ಜಲೋತ್ಸರಣ ಮಾಡಿಕೊಂಡು ಹರಿಯುವುದರಿಂದ ಕೆಳದಂಡೆಗಳ ಮೈದಾನ ಹಾಗೂ ಕರಾವಳಿಗಳಲ್ಲಿ ಅವಕ್ಕೆ ಕಟ್ಟೆಗಳನ್ನು ಕಟ್ಟಿ ನೀರಾವರಿಗೂ ವಿದ್ಯುತ್ತಿನ ಉತ್ಪಾದನೆಗೂ ನೀರನ್ನು ಬಳಸಿಕೊಳ್ಳಲಾಗಿದೆ. ತಮಿಳು ನಾಡಿನ ಅತ್ಯಂತ ದೊಡ್ಡ ನದಿ ಕಾವೇರಿ (ನೋಡಿ- ಕಾವೇರಿನದಿ). ಕರ್ನಾಟಕದ ಮಡಿಕೇರಿ ಜಿಲ್ಲೆಯಲ್ಲಿ ಹುಟ್ಟುವ ಈ ನದಿ ಆಗ್ನೇಯಾಭಿಮುಖವಾಗಿ ಹರಿದು ಶಿವನಸಮುದ್ರದ ಜಲಪಾತಗಳಿಂದ ಕೆಳಕ್ಕೆ ತಮಿಳು ನಾಡನ್ನು ಪ್ರವೇಶಿಸುತ್ತದೆ. ಭವಾನಿ, ನೊಯ್ಯಾಲ್, ಅಮರಾವತಿ_ಇವು ತಮಿಳು ನಾಡಿನಲ್ಲಿ ಕಾವೇರಿಯ ಮುಖ್ಯ ಉಪನದಿಗಳು ಜೂನ್‍ನಿಂದ ಸೆಪ್ಟೆಂಬರ್ ವರೆಗೆ ಕಾವೇರಿಯಲ್ಲಿ ಪ್ರವಾಹ ವಿಶೇಷವಾಗಿರುತ್ತದೆ. ವಾಯುಗುಣ ತಮಿಳು ನಾಡಿನದು ಮೂಲಭೂತವಾಗಿ ಉಷ್ಣವಲಯದ ವಾಯುಗುಣ. ಉಷ್ಣತೆಯಲ್ಲಿ ಅತಿಯಾದ ಏರಿಳಿತಗಳಿಲ್ಲ. ಗರಿಷ್ಠ ಉಷ್ಣತೆ 43o ಅ (110o ಈ)ನ್ನು ಸಾಮಾನ್ಯವಾಗಿ ಮೀರುವುದಿಲ್ಲ. ಕನಿಷ್ಠ ಉಷ್ಣತೆ 18o ಅ (65o ಈ) ಗಿಂತ ಕೆಳಕ್ಕೆ ಇಳಿಯುವುದು ಅಪರೂಪ. ಅತ್ಯಂತ ಕಡಿಮೆ ಉಷ್ಣತೆ ದಾಖಲಾಗುವುದು ಡಿಸೆಂಬರ್ ಮತ್ತು ಜನವರಿಗಳಲ್ಲಿ : ಅತ್ಯಂತ ಹೆಚ್ಚಿನ ಉಷ್ಣತೆ ಏಪ್ರಿಲ್ ನಿಂದ ಜೂನ್ ವರೆಗೆ. ಆಗ್ನೇಯ ಮತ್ತು ಈಶಾನ್ಯ ಮಾನ್ಸೂನುಗಳ ಕಾಲದಲ್ಲಿ ರಾಜ್ಯದಲ್ಲಿ ಮಳೆಯಾಗುತ್ತದೆ. ಇವೆರಡರ ನಡುವೆ ಸುಮಾರು ಆರು ವಾರಗಳ ಅಂತರ ಇರುತ್ತದೆ. ಸಾಮಾನ್ಯವಾಗಿ ಆಗ್ನೇಯ ಮಾನ್ಸೂನ್ ಮಳೆ ಕ್ರಮಪ್ರಾಪ್ತವಾದ್ದು. ಈಶಾನ್ಯ ಮಾನ್ಸೂನ್ ಕೆಲಮೊಮ್ಮೆ ಮಳೆ ತಾರದಿರುವುದುಂಟು. ಎರಡರಿಂದ ಐದು ವರ್ಷಗಳವರೆಗೆ ಹೀಗಾಗಬಹುದು. ಒಂದೇ ವರ್ಷದಲ್ಲಿ ಎರಡೂ ಮಾನ್ಸೂನ್‍ಗಳ ನಿರಾಶೆಗೊಳಿಸುವುದು ಬಲು ವಿರಳ. ಒಟ್ಟು ವಾರ್ಷಿಕ ಮಳೆಯಲ್ಲಿ ಈಶಾನ್ಯ ಮಾನ್ಸೂನಿನ ಪಾಲು ಕರಾವಳಿ ಜಿಲ್ಲೆಗಳಲ್ಲಿ ಸೇ. 60. ಒಳನಾಡಿನಲ್ಲಿ ಸೇ. 40. ಅಕ್ಟೋಬರ್ ನಿಂದ ನವೆಂಬರ್ ವರೆಗಿನ ಅವಧಿಯಲ್ಲೇ ಬಹುತೇಕ ಮಳೆ. ಒಳನಾಡಿನಲ್ಲಿ ಅಕ್ಟೋಬರ್‍ನಲ್ಲಿ ಹೆಚ್ಚು ಮಳೆಯಾದರೆ, ಕರಾವಳಿ ಜಿಲ್ಲೆಗಳಲ್ಲಿ ನವೆಂಬರಿನಲ್ಲಿ ಹೆಚ್ಚು ಮಳೆ. ಈಶಾನ್ಯ ಮಾನ್ಸೂನ್ ಮಳೆ ಎಲ್ಲ ಜಿಲ್ಲೆಗಳಲ್ಲೂ ವರ್ಷದಿಂದ ವರ್ಷಕ್ಕೆ ವ್ಯತ್ಯಾಸವಾಗುತ್ತಿರುತ್ತದೆ. ಕರಾವಳಿ ಜಿಲ್ಲೆಗಳಲ್ಲಿ ಮಳೆ ಬಹಳ ಮಟ್ಟಿಗೆ ಅವನಮನ (ಡಿಪ್ರೆಷನ್) ಮತ್ತು ಚಂಡಮಾರುತಗಳನ್ನು ಅವಲಂಬಿಸಿರುತ್ತದೆ. ಮಾರ್ಚ್-ಮೇ ತಿಂಗಳುಗಳಲ್ಲಿ ಗುಡುಗಿನಿಂದ ಕೂಡಿದ ಮಳೆ 5em—15emವರಗೆ ಮಳೆ ಆಗುವುದು ನೀಲಗಿರಿ ಮತ್ತು ಇತರ ಬೆಟ್ಟಸೀಮೆಗಳಲ್ಲಿ. ರಾಮನಾಥಪುರಂ ಮತ್ತು ತಿರುನೆಲ್ವೇಲಿ ಜಿಲ್ಲೆಗಳಲ್ಲಿ ಅತ್ಯಂತ ಕಡಿಮೆ ಮಳೆ. ಸಸ್ಯಪ್ರಾಣಿ ಜೀವನ ತಮಿಳು ನಾಡಿನ ಸಸ್ಯ ಅಲ್ಲಿಯ ವಾಯುಗುಣ ಮತ್ತು ಮಣ್ಣಿಗೆ ಅನುಗುಣವಾದ್ದು. ರಾಜ್ಯದ ಸೇ. 15 ಭಾಗ ಅರಣ್ಯಾವೃತ. ನೀಲಗಿರಿ, ಅಣ್ಣಾಮಲೈ ಮತ್ತು ಪಳನಿ ಬೆಟ್ಟಗಳ ಉನ್ನತ ಭಾಗಗಳಲ್ಲಿ ಉಪ ಅಲ್ಪೈನ್ ಸಸ್ಯ ಬೆಳೆಯುತ್ತದೆ. ಪಶ್ಚಿಮ ಘಟ್ಟಗಳ ಪೂರ್ವ ಪಾಶ್ರ್ವದಲ್ಲೂ ಉತ್ತರ ಮತ್ತು ಮಧ್ಯ ಜಿಲ್ಲೆಗಳ ಬೆಟ್ಟಗಳ ಪ್ರದೇಶದಲ್ಲೂ ನಿತ್ಯ ಹಸುರಿನ ಮತ್ತು ಪರ್ಣಪಾತಿ ಸಸ್ಯಗಳೂ ಕುರುಚಲುಗಳೂ ಇವೆ. ಕೆಳ ಕಾವೇರಿ ಕಣಿವೆಯಲ್ಲಿ ಅತ್ಯಂತ ಸಮೃದ್ಧವಾದ ನಿತ್ಯ ಹಸುರಿನ ಆರ್ದ್ರ ಅರಣ್ಯಗಳುಂಟು. ನಾನಾ ಸ್ತರಗಳಿಂದ ಕೂಡಿದ ಸಸ್ಯಜಾತಿಗಳನ್ನಿಲ್ಲಿ ಕಾಣಬಹುದು. ಮಧ್ಯಕಣಿವೆಯ ಕಾಡುಗಳನ್ನೆಲ್ಲ ಕಡಿದು ಇಲ್ಲಿಯ ನೆಲವನ್ನೆಲ್ಲ ವ್ಯವಸಾಯಕ್ಕೆ ಬಳಸಿಕೊಂಡಿರುವುದರಿಂದ ಮೂಲ ನೈಸರ್ಗಿಕ ಸಸ್ಯ ಇಲ್ಲಿ ಕಾಣುವುದಿಲ್ಲ. ಅಲ್ಲಲ್ಲಿ ಕುರುಚಲೂ ನೀರಿನ ಹರಿವಿನ ಬಳಿಯಲ್ಲಿ ಮತ್ತು ತಗ್ಗಿನ ನೆಲೆಗಳಲ್ಲಿ ಕಾಡುಗಳೂ ಇವೆ. ರಾಜ್ಯದ ಜಲಪಕ್ಷಿಗಳ ವೈವಿಧ್ಯವನ್ನು ವೇದಾಂತಂಗಳ್ ಪಕ್ಷಿಧಾಮದಲ್ಲೂ ಇತರ ವನ್ಯ ಜೀವಿಗಳ ಬಗೆಗಳನ್ನು ಮುದು ಮಲೈ ಅಭಯಾರಣ್ಯದಲ್ಲೂ ಕಾಣಬಹುದು. ತಮಿಳುನಾಡಿನ ಮುಖ್ಯ ಅಭಯಾರಣ್ಯಗಳು ಇವು (ಇವುಗಳ ವಿಸ್ತೀರ್ಣಗಳನ್ನು ಹೆಕ್ಟೇರುಗಳಲ್ಲಿ ಆವರಣಗಳೊಳಗೆ ಕೊಟ್ಟಿದೆ) 1 ಮುದುಮಲೈ (32,116), 2 ಮುಂಡನ್ ತುರೈ (5,180), 3 ಪಾಯಿಂಟ್ ಕ್ಯಾಲಮಿಯರ್ (1,729), 4. ವೇದಾಂತಂಗಳ್ (30). 5 ಗಿಂಡಿ ಉದ್ಯಾನ (241) ಮತ್ತು ೬.ಅಣ್ಣಾಮಲೈ (95,800). ಪುಣ್ಯಸ್ಥಳಗಳು ದೇವಾಲಯ ಇಲ್ಲದ ಊರಿನಲ್ಲಿ ವಾಸಮಾಡಬಾರದು ಎಂದು ಒಂದು ತಮಿಳು ಗಾದೆ ಇದೆ. ತಮಿಳು ನಾಡಿನಲ್ಲಿ ದೇವಾಲಯ ಇಲ್ಲದ ದೊಡ್ಡ ಊರೇ ಇಲ್ಲ. ಮಧುರೈ ಜಿಲ್ಲೆಯ ರಾಜಧಾನಿಯಾಗಿರುವ ಮಧುರೆಯಲ್ಲಿ ಪ್ರಸಿದ್ಧವಾದ ಮೀನಾಕ್ಷಿ ದೇವಾಲಯ ಇದೆ. ಶಕ್ತಿಯ (ಪಾರ್ವತಿಯ) ಹಿರಿಮೆಯನ್ನು ಇದು ತೋರಿಸುತ್ತದೆ. ಮಧುರೈಗೆ ಸಮೀಪದಲ್ಲಿ ತಿರುಪ್ಪರಕ್ಕುನ್‍ಅಮ್ ಇದೆ. ಇದು ಪ್ರಸಿದ್ಧವಾದ ಮುರುಗನ ಗುಡಿ.ಕಾಂಚೀಪುರದಲ್ಲಿ ಸಂಸ್ಕೃತ ಮತ್ತು ತಮಿಳು ಸಂಸ್ಕೃತಿಯನ್ನು ಕಾಣಲಾಗುವುದು. ಹಳೆಯ ಕಾಲದಲ್ಲಿ ಕಂಚಿಯಲ್ಲಿ ಪಸಿದ್ಧ ವಿಶ್ವವಿದ್ಯಾಲಯ ಇತ್ತು. ಕಂಚಿಯಲ್ಲಿ ಹಲವು ದೇವಾಲಯಗಳಿದ್ದರೂ ಕಾಮಾಕ್ಷಿ ದೇವಾಲಯವೂ ವರದರಾಜ ದೇವಾಲಯವೂ ಹೆಸರಿಸುವಂಥವಾಗಿವೆ. ರಾಮೇಶ್ವರಮ್ ಎಂಬ ಸ್ಥಳ ರಾಮನಾಥಪುರಮ್ ಜಿಲ್ಲೆಯಲ್ಲಿದೆ. ರಾವಣನನ್ನು ಕೊಂದ ಪಾಪನಿವಾರಣೆಗಾಗಿ ರಾಮ ಶಿವನನ್ನು ಪೂಜಿಸಿದ ಸ್ಥಳ ಇದೆಂದು ಹಿಂದೂಗಳ ನಂಬಿಕೆ, ಈ ದೇವಾಲಯ ತಮಿಳು ನಾಡಿನ ವಾಸ್ತುವಿನ ಹಿರಿಮೆಗೆ ಸಾಕ್ಷಿಯಾಗಿದೆ. ಈ ಗುಡಿಯ ಉದ್ದ 1000 ಅಡಿ, ಅಗಲ 657 ಅಡಿ. ಉತ್ತರ ಆರ್ಕಾಟ್ ಜಿಲ್ಲೆಯಲ್ಲಿರುವ ತಿರುವಣ್ಣಾಮಲೈ ಕಾರ್ತಿಕೈ ದೀಪದಿಂದ ಪ್ರಸಿದ್ಧಿ ಪಡೆದಿದೆ.ದಕ್ಷಿಣ ಆರ್ಕಾಟ್ ಜಿಲ್ಲೆಯ ಚಿದಂಬರದಲ್ಲಿ ಇರುವುದು ನಟರಾಜ ದೇವಾಲಯ. ಇಲ್ಲಿ ಶಿವ ನೃತ್ಯ ಮಾಡುವ ರೂಪದಲ್ಲಿ ದರ್ಶನ ಕೊಡುತ್ತಾನೆ. ಅವನ ಅಟ ಪ್ರಪಂಚವನ್ನೇ ಆಡಿಸುವುದು ಎನ್ನುವರು. ಚಿದಂಬರದಲ್ಲಿ ಆಚರಿಸುವ ಆರಿದ್ರಾದರ್ಶನ ಪ್ರಖ್ಯಾತ ಪಡೆದಿದೆ. ಚಿದಂಬರಕ್ಕೆ ಪೂರ್ವ ದೆಸೆಯಲ್ಲಿರುವುದು ಅಣ್ಣಾಮಲೈ ನಗರ. ಅಲ್ಲಿ ಅಣ್ನಾಮಲೈ ವಿಶ್ವವಿದ್ಯಾಲಯ ಇದೆ. ತಿರುಚ್ಚಿರಾಪ್ಪಳ್ಳಿಗೆ ಸಮೀಪದಲ್ಲಿರುವ ಶ್ರೀರಂಗಮ್ ವಿಷ್ಣುಕ್ಷೇತ್ರ. ಶ್ರೀ ರಂಗನಾಥ ಶ್ರೀರಂಗದ ದೇವಾಲಯದಲ್ಲಿ ಮಲಗಿಕೊಂಡಿದ್ದಾನೆ. ಶ್ರೀರಂಗಕ್ಕೆ ಸಮೀಪದಲ್ಲಿರುವುದು ತಿರುವಾನೈಕ್ಕಾ. ಇಲ್ಲಿ ಇರುವ ಅಖಿಲಾಂಡೇಶ್ವರಿ ಜಂಬುಕೇಶ್ವರನ ದೇವಾಲಯ ಪ್ರಸಿದ್ಧವಾಗಿದೆ.ತಂಜಾವೂರ್ ಜಿಲ್ಲೆಯ ಕೇಂದ್ರವಾದ ತಂಜಾವೂರಿಗೆ 35 ಮೈ. ದೂರದಲ್ಲಿರುವ ತಿರುವಾರೂರಿನಲ್ಲಿ ತ್ಯಾಗರಾಜರ ಸಮಾಧಿ ಇದೆ. ತಿರುವಾರೂರಿನ ತೆಪ್ಪಶ್ತಿರು¿¿õÁ (ತೆಪ್ಪೋತ್ಸವ) ಹೆಸರಿಸುವಂಥದು. ತಿರುವಾರೂರಿನಲ್ಲಿ ಇರುವ ರಥ ತುಂಬ ದೊಡ್ಡದು, ಬಲು ಸುಂದರವಾದ್ದು. ಚೆಂಗಲ್ಪಟ್ಟು ಜಿಲ್ಲೆಯಲ್ಲಿರುವುದು ತಿರುಕ್ಕರುಕ್ಕನ್‍ರಮ್ ಎಂಬ ಸ್ಥಳ. ಪಳನಿಯಲ್ಲಿ ಮುರುಗನ ದೇವಾಲಯವಿದೆ. ತಂಜಾವೂರು ಜಿಲ್ಲೆಯ ಕುಂಭಕೋಣದಲ್ಲಿ ಹನ್ನೆರಡು ವರ್ಷಗಳಿಗೊಮ್ಮೆ ಮಹಾಮಖಮ್ ಎಂಬ ಹಬ್ಬ ನಡೆಯುತ್ತದೆ. ಮಹಾಮಖಮ್ ಕೊಳದಲ್ಲಿ ಸ್ನಾನಮಾಡುವುದಕ್ಕೆ ಇತರ ಭಾರತದ ಭಾಗಗಳಿಂದ ಯಾತ್ರಿಕರು ಬರುವರು. ತಂಜಾವೂರಿನಲ್ಲಿರುವ ಬೃಹದೀಶ್ವರ ದೇವಾಲಯ ತುಂಬ ದೊಡ್ಡದು. ಇದನ್ನು ದೊಡ್ಡ ದೇವಾಲಯ ಎಂದೇ ಜನರು ಕರೆಯುವರು. ತಿರುತ್ತಣಿ, ತಿರುನೆಲ್ವೇಲಿ ಜಿಲ್ಲೆಯ ತಿರುಚ್ಚೆಂದೂರ್, ಕನ್ಯಾಕುಮಾರಿ_ಇವು ಪ್ರಸಿದ್ಧ ಪುಣ್ಯಸ್ಥಳಗಳು. ತಮಿಳು ನಾಡಿನ ಪುಣ್ಯಸ್ಥಳಗಳು ಚರಿತ್ರೆ, ಸಾಹಿತ್ಯ, ಸಮಯ, ತತ್ತ್ವ, ಪುರಾಣಗಳಿಂದ ಪ್ರಸಿದ್ಧಿ ಪಡೆದಿವೆ. ಹಲವು ಶೈವ ಸ್ಥಳಗಳನ್ನು ಕುರಿತು ಅಪ್ಪರ್, ಸಂಬಂಧರ್, ಸುಂದರರ್ ಮುಂತಾದವರು ತೇವಾರಗಳನ್ನು ಹಾಡಿದ್ದಾರೆ. ಶ್ರೀವೈಷ್ಣವ ಸ್ಥಳಗಳಿಗೆ ಮಂಗಳಾಶಾಸನಗಳಿವೆ; ಎಂದರೆ ಆಳ್ವಾರಗಳು ಇವನ್ನು ಹಾಡಿ ಹೊಗಳಿದ್ದಾರೆ. 63 ನಾಯನ್‍ಮಾರ್‍ಗಳೂ 12 ಆಳ್ವಾರ್‍ಗಳೂ ಹುಟ್ಟಿದ ಗ್ರಾಮಗಳೂ ಪುಣ್ಯಸ್ಥಳಗಳೇ. ತಮಿಳು ನಾಡಿನಲ್ಲಿ ಇತರ ಮತದವರ ಪುಣ್ಯಸ್ಥಳಗಳೂ ಉಂಟು. ತಂಜಾವೂರು ಜಿಲ್ಲೆಯ ನಾಗಪಟ್ಟಿನಕ್ಕೆ ಸಮೀಪದಲ್ಲಿರುವ ವೇಳಾಂಗಣ್ಣಿ ಕ್ರೈಸ್ತರ ಪವಿತ್ರ ಸ್ಥಳ. ನಾಗೂರ್ ಎಂಬುದು ಮಹಮ್ಮದೀಯರ ಪವಿತ್ರ ಕ್ಷೇತ್ರ. ವೇಳಾಂಗಣ್ಣಿಯ ಹಬ್ಬವನ್ನೂ ನಾಗೂರ್ ಕಂದೂರಿ ಹಬ್ಬವನ್ನೂ ನೋಡಲು ಹಿಂದೂಗಳೂ ಗುಂಪು ಗುಂಪಾಗಿ ಹೋಗುತ್ತಾರೆ. ಆಡಳಿತ ತಮಿಳುನಾಡು ಸರ್ಕಾರ ತಮಿಳು ನಾಡಿನ ಸರ್ಕಾರ ವ್ಯವಸ್ಥೆ ಭಾರತ ಗಣರಾಜ್ಯದ ಇತರ ರಾಜ್ಯಗಳವುಗಳದರಂತೆಯೇ ಇದೆ. ರಾಷ್ಟ್ರಪತಿಯಿಂದ ನೇಮಕ ಹೊಂದಿದ ರಾಜ್ಯಪಾಲ ರಾಜ್ಯದ ಮುಖ್ಯ. ರಾಜ್ಯ ವಿಧಾನಮಂಡಲದಲ್ಲಿ ವಿಧಾನ ಪರಿಷತ್ತು (ಮೇಲ್ಮನೆ) ಮತ್ತು ವಿಧಾನ ಸಭೆ ಇವೆ. ವಿಧಾನ ಸಭೆಯ ಸದಸ್ಯರು ಸಾಮಾನ್ಯವಾಗಿ ಐದು ವರ್ಷಗಳಿಗೊಮ್ಮೆ ಸಾರ್ವತ್ರಿಕ ಮತದಾನದಿಂದ ನೇರವಾಗಿ ಆಯ್ಕೆಯಾಗುತ್ತಾರೆ. ವಿಧಾನ ಸಭೆ, ಸ್ಥಳೀಯ ಸಂಸ್ಥೆಗಳು, ಪದವೀಧರರು. ಅಧ್ಯಾಪಕ ಕ್ಷೇತ್ರಗಳಿಂದ ಆಯ್ಕೆ ಹೊಂದಿದವರು, ಮತ್ತು ರಾಜ್ಯಪಾಲರಿಂದ ನಾಮಕರಣವಾದವರು ವಿಧಾನ ಪರಿಷತ್ತಿನ ಸದಸ್ಯರು. ಮುಖ್ಯಮಂತ್ರಿ ಮತ್ತು ಆತನ ಸಂಪುಟ ಸದಸ್ಯರು ವಿಧಾನ ಮಂಡಲಕ್ಕೆ ಉತ್ತರವಾದಿಗಳಾಗಿರುತ್ತಾರೆ.ರಾಜ್ಯದ ನ್ಯಾಯವ್ಯವಸ್ಥೆ ಉಚ್ಚ ನ್ಯಾಯಾಲಯದ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ. ಜಿಲ್ಲೆಯ ಮತ್ತು ಅದಕ್ಕಿಂತ ಕೆಳಗಿನ ನ್ಯಾಯಾಲಯಗಳಿವೆ.ರಾಜ್ಯವನ್ನು 30 ಜಿಲ್ಲೆಗಳಾಗಿ ವಿಂಗಡಿಸಲಾಗಿದೆ: ಜಿಲ್ಲೆಯ ಉನ್ನತ ಅಧಿಕಾರಿ ಕಲೆಕ್ಟರ್. ಜಿಲ್ಲೆಯಿಂದ ಕೆಳಗಿನ ಹಂತಗಳ ಆಡಳಿತ ಘಟಕಗಳು ತಾಲ್ಲೂಕು, ಫಿರ್ಕಾ ಮತ್ತು ಗ್ರಾಮಗಳು. ತಮಿಳು ನಾಡಿನಲ್ಲಿ 29 ಜಿಲ್ಲಾ ಅಭಿವೃದ್ಧಿ ಮಂಡಲಿಗಳೂ 374 ಪಂಚಾಯಿತಿ ಮಂಡಲಿಗಳೂ (ಬ್ಲಾಕ್) 12,490 ಗ್ರಾಮ ಪಂಚಾಯಿತಿಗಳೂ ಇವೆ. ಕ್ಷೇತ್ರಾಭಿವೃದ್ಧಿ, ಸಮಾಜ ಕಲ್ಯಾಣ, ಶಿಕ್ಷಣ ವಿಸ್ತರಣೆ, ಸ್ಥಳೀಯ ಸಂಸ್ಥೆಗಳು ಮತ್ತು ನಾಯಕತ್ವದ ವಿಕಾಸ ನೆರವಿನೊಂದಿಗೆ ಸ್ವಸಹಾಯ-ಇವನ್ನು ಸಾಧಿಸಲು ಸಮುದಾಯ ಅಭಿವೃದ್ಧಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಶಿಕ್ಷಣ 1964-65 ರಿಂದ ಇಡೀ ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಣ ಕಡ್ಡಾಯ. ಮೊದಲನೆಯ ತರಗತಿಗೆ ಪ್ರವೇಶದ ಕನಿಷ್ಠ ವಯಸ್ಸು 5+. ವಿದ್ಯಾರ್ಥಿಗಳ ಮಧ್ಯಾಹ್ನದ ಊಟದ ಯೋಜನೆಯನ್ನು 1956ರಲ್ಲಿ ಜಾರಿಗೆ ತರಲಾಯಿತು. ಸ್ವಸಹಾಯದ ತಳಹದಿಯ ಮೇಲೆ ತರಲಾದ ಈ ಯೋಜನೆಯ ಅನ್ವಯದಲ್ಲಿ ಸರ್ಕಾರವೂ ಕೇರ್ ಸಂಸ್ಥೆಯೂ ಅನಂತರ ಆಸಕ್ತಿ ವಹಿಸಿದುವು. ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಬರುತ್ತಿರುವ ವಿಧ್ಯಾರ್ಥಿಗಳ ಅಧಿಕ ಸಂಖ್ಯೆಯಿಂದಾಗಿ ಕಾಲೇಜು ಶಿಕ್ಷಣದ ಮೇಲೆ ಹೆಚ್ಚಿನ ಒತ್ತಡ ಉಂಟಾಗಿದೆ. ಇದು ಅಗಾಧವಾಗಿ ವಿಸ್ತರಿಸಿದೆ. ಸರ್ಕಾರದ ವೆಚ್ಚದಲ್ಲಿ ಸೇ. 25ಕ್ಕಿಂತ ಹೆಚ್ಚು ಭಾಗ ಶಿಕ್ಷಣಕ್ಕೆ ಮೀಸಲಾಗಿದೆ. ಪ್ರಿ-ಯೂನಿವರ್ಸಿಟಿ ಘಟ್ಟದ ವರೆಗೆ ರಾಜ್ಯದಲ್ಲಿ ಶಿಕ್ಷಣ ಉಚಿತ. ರಾಜ್ಯದಲ್ಲಿರುವ ವಿಶ್ವ ವಿದ್ಯಾನಿಲಯಗಳು ಇವು : ಮದ್ರಾಸ್ ವಿಶ್ವವಿದ್ಯಾನಿಲಯ, ಮದ್ರಾಸು; ಅಣ್ಣಾಮಲೈ ವಿಶ್ವವಿದ್ಯಾನಿಲಯ, ಅಣ್ಣಾಮಲೈ ನಗರ, ಮಧುರೈ ವಿಶ್ವದ್ಯಾನಿಲಯ ಮಧುರೈ. ಜನಸಂಖ್ಯೆಗನುಗುಣವಾಗಿ ಶಾಲಾ ಕಾಲೇಜುಗಳು ಹೆಚ್ಚಾಗಿವೆ. ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಗಿದೆ. ಕಲೆ, ಸಂಸ್ಕೃತಿ ತಮಿಳು ನಾಡಿನ ಕಲೆ, ಸಾಹಿತ್ಯ, ಸಂಸ್ಕøತಿಗಳು ಬಹಳ ಪ್ರಾಚೀನವೂ ವಿಶಿಷ್ಟವೂ ಆದಂಥವು. ಭಾರತೀಯ ಹಾಗೂ ವಿಶ್ವ ಚಿಂತನಕ್ಕೆ ತಮಿಳು ನಾಡಿನ ಒಂದು ದೊಡ್ಡ ಕೊಡುಗೆಯೆಂದರೆ ವಳ್ಳುವರ್ ಅವರ ತಿರುಕ್ಕುರಳ್. ಇದು ಜೀವನಕ್ಕೆ ಸಂಬಂಧಿಸಿದ ನೀತಿ ಸಂಹಿತೆಯಾಗಿರುವುದಲ್ಲದೆ ತಮಿಳರ ಅಂತ:ಸತ್ವದ, ಅವರ ಕ್ರಿಯಾಶೀಲ ಚೈತನ್ಯದ ಪ್ರತೀಕವಾಗಿದೆ. ತಂಜಾವೂರು, ಮಹಾಬಲಿಪುರಂ, ಕಾಂಚೀಪುರಂ ಮುಂತಾದ ಸ್ಥಳಗಳಲ್ಲಿಯ ದೇಗುಲ ಗೋಪುರಗಳೂ ಬಂಡಿಗಳ ಮೇಲೆ ಕೊರೆದ ಶಿಲ್ಪಗಳೂ ತಂಜಾವೂರಿನ ನವಿರಾದ ಕರಕುಶಲ ಕಲಾಕೃತಿಗಳೂ ಭರತನಾಟ್ಯವೂ ಈ ರಾಜ್ಯದ ದೀರ್ಘ ಹಾಗೂ ಭವ್ಯ ಸಾಂಸ್ಕøತಿಕ ಪರಂಪರೆಯನ್ನು ಸಾರುತ್ತವೆ. ತಮಿಳು ವಾಸ್ತುಶಿಲ್ಪದ ಮಹೋನ್ನತ ಕಾಲವೆಂದರೆ 9 ನೆಯ ಶತಮಾನದ ನಡುವಿನಿಂದ 11ನೆಯ ಶತಮಾನದ ಕೊನೆಯವರೆಗಿನದು. ಮಹಾಬಲಿಪುರದಲ್ಲಿರುವ, ಸುಮಾರು ಎರಡು ಸಾವಿರ ವರ್ಷಗಳಿಗೂ ಹೆಚ್ಚು ಪ್ರಾಚೀನವಾದ, ಬಂಡೆಯಲ್ಲಿ ಕೊರೆದ, ಗುಹಾ ವಾಸ್ತುಗಳೂ ಏಕಶಿಲಾ ದೇವಾಲಯಗಳೂ ಅದ್ಭುತ ಕೃತಿಗಳು. ತಮಿಳುನಾಡು ಹಿಂದಿನಿಂದಲೂ ನೆರೆಯ ದೇಶ ಪ್ರದೇಶಗಳೊಂದಿಗೂ ವಿಭಿನ್ನ ಸಂಸ್ಕøತಿಗಳೊಂದಿಗೂ ಸ್ನೇಹಯುತ ಸಂಬಂಧ ಬೆಳೆಸಿ, ತನ್ನ ವೈಶಿಷ್ಟ್ಯಕ್ಕೆ ಕುಂದು ಬಾರದಂತೆ ಇತರ ಸಂಸ್ಕøತಿಗಳ ಉತ್ಕøಷ್ಟ ಅಂಶಗಳನ್ನು ಜೀರ್ಣಿಸಿಕೊಂಡಿದೆ. ಕರ್ನಾಟಕ ಸಂಗೀತ ಹಾಗೂ ಭರತನಾಟ್ಯದ ಬೆಳವಣಿಗೆಗೆ ತಮಿಳುನಾಡು ವಿಶಿಷ್ಟವಾದ ಕಾಣಿಕೆ ಸಲ್ಲಿಸಿದೆ. ಲೋಹದ ಎರಕದಲ್ಲಿ ತಮಿಳು ಕೆಲಸಗಾರರು ಶ್ರೇಷ್ಠವಾದ ತಾಂತ್ರಿಕ ಪರಿಪೂರ್ಣತೆ ಸಾಧಿಸಿದರು. ಇತಿಹಾಸದ ಉದ್ದಕ್ಕೂ ಸಾಹಿತ್ಯ, ಜ್ಞಾನ, ಕಲೆ, ವಾಸ್ತು, ಶಿಲ್ಪ, ಆಡಳಿತ ಪದ್ಧತಿಗಳು ಮತ್ತು ದರ್ಶನಗಳಲ್ಲಿ ತಮಿಳರ ಪ್ರತಿಭೆ ಅದ್ಭುತವಾಗಿಯೂ ದಟ್ಟವಾಗಿಯೂ ಅಭಿವ್ಯಕ್ತವಾಗಿದೆ. ಪುರಾತತ್ವ ಕ್ಷೇತ್ರದಲ್ಲಿ ತಮಿಳುನಾಡು ಸಂಪದ್ಯುಕ್ತವಾದ್ದು. ಪ್ರಾಚೀನ ಭಾರತದ ಸಂಸ್ಕøತಿಯ ವಿಶಿಷ್ಟತೆಯನ್ನು ಯಶಸ್ವಿಯಾಗಿ ಉಳಿಸಿಕೊಂಡು ಬಂದಿರುವ ರಾಜ್ಯ ತಮಿಳುನಾಡು. ಆರ್ಥಿಕತೆ : ಕೃಷಿ ತಮಿಳುನಾಡಿನ ಜನರ ಮುಖ್ಯ ಕಸುಬು ವ್ಯವಸಾಯ. ಸೇ. 61.54 ಕ್ಕಿಂತ ಕಡಿಮೆಯಿಲ್ಲದಷ್ಟು ಮಂದಿ ಕೃಷಿಯನ್ನು ಅವಲಂಬಿಸಿದ್ದಾರೆ. ರಾಜ್ಯದ ಮುಖ್ಯ ವಾಣಿಜ್ಯ ಬೆಳೆಗಳು-ಅವನ್ನು ಬೆಳಯುವ ನೆಲದ ವಿಸ್ತೀರ್ಣಕ್ಕೆ ಅನುಗುಣವಾಗಿ-- ನೆಲಗಡಲೆ, ಹತ್ತಿ, ಕಬ್ಬು, ಎಳ್ಳು, ತೆಂಗು, ಮರಗೆಣಸು ಮತ್ತು ಹರಳು ರಾಜ್ಯದ ಮುಖ್ಯ ಆಹಾರ ಬೆಳಗಳು ಬತ್ತ ಮತ್ತು ಇತರ ಧಾನ್ಯಗಳು, ಕಾಳುಗಳು ಈರುಳ್ಳಿ, ಆಲೂಗಡ್ಡೆ, ಗೆಣಸು, ಮರಗೆಣಸು, ಮತ್ತು ಬಾಳೆ. ಭಾರತದ ಕ್ವಿನೈನ್ ಉತ್ಪಾದಿಸುವ ಎರಡು ರಾಜ್ಯಗಳ ಪೈಕಿ ತಮಿಳು ನಾಡೂ ಒಂದು. ಸಾಗುವಳಿಗೆ ಒಳಪಟ್ಟಿರುವ ಒಟ್ಟು ನೆಲದ ವಿಸ್ತೀರ್ಣ 59,34,000 ಹೆಕ್ಟೇರ್. ಇದರಲ್ಲಿ 23,99,000 ಹೆಕ್ಟೇರ್‍ಗಳು ನೀರಾವರಿಗೆ ಒಳಪಟ್ಟಿವೆ ಹೆಚ್ಚು ಇಳುವರಿಯ ತಳಿಗಳನ್ನು ಬಳಸಲಾರಂಭಿಸಿದ್ದರಿಂದ ರಾಜ್ಯದ ಸಂಪ್ರದಾಯ ಬದ್ಧ ಬೇಸಾಯಕ್ರಮದಲ್ಲಿ ಅಗಾಧ ಬದಲಾವಣೆಗಳಾಗಿವೆ. ಒಂದು ಬೆಳೆ ತೆಗೆಯುತ್ತಿದ್ದ ಅನೇಕ ರೈತರು ಎರಡು-ಮೂರು ಬೆಳೆ ತೆಗೆಯಲಾರಂಭಿಸಿದ್ದಾರೆ. ನೀರಾವರಿ, ವಿದ್ಯುತ್ತು ರಾಜ್ಯದ ಮುಖ್ಯ ನೀರಾವರಿ ಕಾಮಗಾರಿಗಳು ಮೆಟ್ಟೂರ್ (ಸೇಲಂ ಮತ್ತು ಕೊಯಮತ್ತೂರು ಜಿಲ್ಲೆಗಳು), ಕೆಳ ಭವಾನಿ (ಕೊಯಮತ್ತೂರು ಮತ್ತು ತಿರುಚಿ ಜಿಲ್ಲೆಗಳು), ಅರಣಿಯಾರ್ (ಚೆಂಗಲ್ಪಟ್ಟು ಜಿಲ್ಲೆ) ಅಮರಾವತಿ (ಕೊಯಮತ್ತೂರು ಜಿಲ್ಲೆ), ಸಾತನೂರ್ (ಉತ್ತರ ಮತ್ತು ದಕ್ಷಿಣ ಆರ್ಕಾಟ್). ರಾಜ್ಯದ ಮುಖ್ಯ ವಿದ್ಯುತ್ ಉತ್ಪಾದನ ಕಾಮಗಾರಿಗಳು ಇವು: 1 ಮುಚಕುಂದ್ ಜಲ ವಿದ್ಯುತ್ ಯೋಜನೆ, 2. ಪೈಕಾರ ಜಲವಿದ್ಯುತ್ ಯೋಜನೆ, 3. ಮೆಯರ್ ಜಲವಿದ್ಯುತ್ ಯೋಜನೆ, 4. ಚೆನ್ನೈ ಶಾಖ ವಿದ್ಯುತ್ ಯೋಜನೆ, 5. ಪಾಪನಾಶಂ ವಿದ್ಯುತ್ ವ್ಯವಸ್ಥೆ, 6. ಮೆಟ್ಟೂರ್ ಜಲ ವಿದ್ಯುತ್ ಯೋಜನೆ. ರಾಜ್ಯದ ಅತ್ಯಂತ ದೊಡ್ಡ ವಿದ್ಯುತ್ ಯೋಜನೆಯೆಂದರೆ ಕುಂದಾ ವಿದ್ಯುತ್ ವ್ಯವಸ್ಥೆಯದು. ಕೊಲೊಂಬೋ ಯೋಜನೆಯ ಅಡಿಯಲ್ಲಿ ಕೆನಡದ ನೆರವಿನಿಂದ ಈ ಯೋಜನೆಯನ್ನು ಆರಂಭಿಸಲಾಯಿತು. ನೀಲಗಿರಿ ಬೆಟ್ಟಗಳ ನಡುವೆ ಈ ವಿದ್ಯುತ್ ಕೇಂದ್ರ ನೆಲೆಗೊಂಡಿದೆ. ಗ್ರಾಮೀಣ ವಿದ್ಯುದೀಕರಣದಲ್ಲಿ ತಮಿಳು ನಾಡು ಇತರ ರಾಜ್ಯಗಳಿಗಿಂತ ಮುಂದೆ ಇದೆ. ಮತ್ಸ್ಯೋದ್ಯಮ 1967_68 ರಲ್ಲಿ ತಮಿಳು ನಾಡಿನಲ್ಲಿ ರೂ.23.05 ಕೋಟಿ ಮೌಲ್ಯದ 2.05 ಲಕ್ಷ ಟನ್ ಸಮುದ್ರ ಮೀನನ್ನೂ ರೂ.7.31 ಕೋಟಿ ಮೌಲ್ಯದ 1.16 ಲಕ್ಷ ಟನ್ ಸಿಹಿನೀರಿನ ಮತ್ಸ್ಯಗಳನ್ನೂ ಹಿಡಿಯಲಾಯಿತು. ಹಿಂದಿನಿಂದ ರೂಢಿಯಲ್ಲಿರುವ ಕಟ್ಟಮರಾನ್‍ಗಳ ನೆರವಿನಿಂದ ಸಮುದ್ರದಲ್ಲಿ ಮತ್ಸ್ಯೋದ್ಯಮವನ್ನು ಬೆಳೆಸಲು ಈ ರಾಜ್ಯ ಹಿಂದಿನಿಂದಲೂ ಶ್ರಮಿಸುತ್ತಿತ್ತು. ಯಾಂತ್ರೀಕೃತ ದೋಣಿಗಳನ್ನು ಬಳಕೆಗೆ ತರುವ ಯೋಜನೆಯನ್ನು 1955ರಲ್ಲಿ ಸರ್ಕಾರ ಜಾರಿಗೆ ತಂದಿತು. ಇದು ವಿಶೇಷವಾಗಿ ಪ್ರಗತಿ ಹೊಂದಿದೆ. ಮೀನುಗಾರರಿಗೆ ತರಬೇತನ್ನೂ ನೀಡಲಾಗುತ್ತಿದೆ. ಎಲ್ಲ ಮೀನುಗಾರಿಕೆ ಕೇಂದ್ರಗಳಲ್ಲೂ ಬರ್ಫ ಯಂತ್ರಗಳನ್ನೂ ಶೈತ್ಯಾಗಾರಗಳನ್ನೂ ಸ್ಥಾಪಿಸಲಾಗಿದೆ. ಒಳನಾಡಿನ ಮೀನುಗಾರಿಕೆಯಲ್ಲೂ ತಮಿಳು ನಾಡು ವಿಶೇಷ ಪ್ರಗತಿ ಸಾಧಿಸಿದೆ. ಭವಾನಿ ಸಾಗರದ ಒಳನಾಡಿನ ಮೀನುಗಾರಿಕೆ ಸಂಶೋಧನ ಕೇಂದ್ರ ಮತ್ತು ಎನ್ನೋರ್, ಕನ್ಯಾಕುಮಾರಿ, ತೂತ್ತುಕುಡಿ ಮತ್ತು ಮದ್ರಾಸ್ ಸಮುದ್ರ ಮೀನುಗಾರಿಕೆ ಸಂಶೋಧನ ಕೇಂದ್ರಗಳು ಮೀನುಗಾರಿಕೆ ಅಭಿವೃದ್ಧಿಯಲ್ಲಿ ಮಹತ್ತ್ವದ ಪಾತ್ರವಹಿಸಿವೆ. ತಮಿಳುನಾಡಿನ ನೀರಾವರಿ ಭೂವಿಸ್ತೀರ್ಣ ಈಗ ಹೆಚ್ಚಾಗಿದ್ದು ಅದಕ್ಕೆ ತಕ್ಕಂತೆ ನಾಡಿನ ಬೆಳೆಗಳ ಉತ್ಪಾದನೆ ಹೆಚ್ಚಾಗಿದೆ. ಹಾಗೆಯೇ ವಿದ್ಯುತ್, ಮತ್ಸೋದ್ಯಮ, ಮುಂತಾದವುಗಳನ್ನು ಈಗ ಹೆಚ್ಚು ಉತ್ಪಾದಿಸಲಾಗುತ್ತಿದೆ. 2001-2002ರಲ್ಲಿ ರಾಜ್ಯದ ಒಟ್ಟು ಕೃಷಿಭೂಮಿ 6.23ಮಿಲಿಯ ಹೆಕ್ಟೇರುಗಳಿದ್ದು ಒಟ್ಟು 10 ಮಿಲಿಯ ಟನ್‍ಗಳ ಧಾನ್ಯೋತ್ಪತ್ತಿಯಾಗಿತ್ತು. ಅರಣ್ಯಗಾರಿಕೆ ರಾಜ್ಯದ ಮೀಸಲು ಅರಣ್ಯಗಳ ವಿಸ್ತೀರ್ಣ 17,258 ಚ.ಕಿಮೀ. ರಾಜ್ಯದ ಒಟ್ಟು ವಿಸ್ತೀರ್ಣದಲ್ಲಿ 15.5% ಭಾಗ ಅರಣ್ಯಾವೃತ. ಸಾಗುವಾನಿ, ಸೌದೆ, ಬೊಂಬು, ಶ್ರೀಗಂಧ, ಚರ್ಮಹದಕ್ಕೆ ಬೇಕಾದ ತೊಗಟೆ ಮುಂತಾದವು ಅರಣ್ಯೋತ್ಪನ್ನಗಳು. ಪಶ್ಚಿಮದ ಕಾಡುಗಳಲ್ಲಿ ತೇಗ, ಬೀಟೆ ಮುಂತಾದ ಸಾಗುವಾನಿ ಮರಗಳೂ ಸಿಗುತ್ತವೆ. ಸಾಗುವನಿ ಮರಗಳ ಕಾಡುಗಳು ಬಹುತೇಕ ಪಶ್ಚಿಮ ಘಟ್ಟಗಳ ಹೆಚ್ಚು ಮಳೆ ಬೀಳುವ ಪ್ರದೇಶಗಳಿಗೆ ಸೀಮಿತವಾಗಿವೆ. ಕೊಯಮತ್ತೂರು, ಮದುರೈ ಮತ್ತು ತಿರುನೆಲ್ವೇಲಿ ಜಿಲ್ಲೆಗಳ ಕಾಡುಗಳಲ್ಲಿ ನಲವತ್ತಕ್ಕಿಂತ ಹೆಚ್ಚಿನ ಸಂಖ್ಯೆಯ ಸಾಗುವಾನಿ ಜಾತಿಗಳಿವೆ. ತೇಗದ ಆನಂತರ ಅತ್ಯಂತ ಪ್ರಮುಖವಾದ ಅರಣ್ಯೋತ್ಪನ್ನವೆಂದರೆ ಶ್ರೀಗಂಧ. ಖನಿಜಗಳು ತಮಿಳು ನಾಡಿನಲ್ಲಿ ಕಬ್ಬಿಣ ಅದಿರು, ಬಾಕ್ಸೈಟ್, ಜಿಪ್ಸಂ, ಅಭ್ರಕ, ಸುಣ್ಣಕಲ್ಲು, ಪಿಂಗಾಣಿ ಮಣ್ಣು, ಮ್ಯಾಗ್ನೆಸೈಟ್, ಲವಣ, ಇಲ್ಮೆನೈಟ್, ಮೊನಾಜೈಟ್, ಜಿರ್ಕಾನ್, ಮುಂತಾದ ಖನಿಜಗಳ ನಿಕ್ಷೇಪಗಳಿವೆ. ತಿರುನೆಲ್ವೇಲಿ ಮತ್ತು ಕನ್ಯಾಕುಮಾರಿ, ಜಿಲ್ಲೆಗಳ ಕರಾವಳಿಯಲ್ಲಿ ಅಲೆಗಳ ಪ್ರಕ್ರಿಯೆಯಿಂದಾಗಿ ಸಂಗ್ರಹವಾಗಿರುವ ಮರಳಿನಲ್ಲಿ ತೋರಿಯಂ ಸಿಗುತ್ತದೆ. ಕಾವೇರಿ ಜಲಾನಯನ ಭೂಮಿಯ ಪ್ರಥಮ ಯುಗೀಣ ಸಂಕೀರ್ಣದಲ್ಲಿ ಭಿನ್ನಸ್ತರಶಿಲೆ, ಗ್ರಾನೈಟ್, ನೀಸ್ ಮುಂತಾದವು ಇವೆ. ಸೇಲಂ_ಕೊಯಮತ್ತೂರು ವಲಯ ಖನಿಜಸಂಪದ್ಯುಕ್ತವಾದ್ದು. ತಲಮೈ, ಕಂಜಮಲೈ, ಗೋಡುಮಲೈಗಳಲ್ಲಿ ಸೇ.60ಕ್ಕಿಂತ ಹೆಚ್ಚು ಕಬ್ಬಿಣಾಂಶ ಇರುವ ಕಬ್ಬಿಣ ಅದಿರುಗಳಿವೆ. ಜಲವಿದ್ಯುತ್ ಶಕ್ತಿಯಿಂದ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆಯನ್ನು ಸ್ಥಾಪಿಸಲು ವಿಶೇಷ ಅವಕಾಶವುಂಟು. ತಮಿಳು ನಾಡಿನಲ್ಲಿ ಕಲ್ಲಿದ್ದಲಿನ ನಿಕ್ಷೇಪಗಳಿಲ್ಲ. ಆದರೆ ನೈವೇಲಿಯ ಬಳಿ 200 ಕೋಟಿ ಟನ್ ಲಿಗ್ನೈಟ್ ನಿಕ್ಷೇಪಗಳಿವೆ. ಕೈಗಾರಿಕೆಗಳು ರಾಜ್ಯದಲ್ಲಿರುವ ದೊಡ್ಡ ಕೈಗಾರಿಕೆಗಳು ಕೆಳಗಿನಂತಿವೆ. ಜವಳಿ ವಿದ್ಯುತ್ತು, ಅನಿಲ ಮೋಟಾರು ವಾಹನ ತಯಾರಿಕೆ, ರಿಪೇರಿ ವಿದ್ಯುತ್ ಯಂತ್ರವಲ್ಲದೆ ಇತರ ಯಂತ್ರಗಳ ತಯಾರಿಕೆ ಆಹಾರ ಕೈಗಾರಿಕೆ ವಿದ್ಯುತ್ ಯಂತ್ರೋಪಕರಣ ರೈಲ್ವೆ ಸರಂಜಾಮು ಮುದ್ರಣ, ಪ್ರಕಟನೆ ಮುಂತಾದವು ರಸಗೊಬ್ಬರವನ್ನೂ ಒಳಗೊಂಡಂತೆ ಮೂಲ ಕೈಗಾರಿಕಾ ರಾಸಾಯನಿಕಗಳು ಕಬ್ಬಿಣಾಂಶ ಲೋಹ ಕೈಗಾರಿಕೆಗಳು ಕಬ್ಬಿಣ ಉಕ್ಕು ಸಕ್ಕರೆ ಕಾರ್ಖಾನೆಗಳು ರಾಸಾಯನಿಕ ಉತ್ಪನ್ನಗಳು ರಬ್ಬರ್ ಮತ್ತು ರಬ್ಬರ್ ಉತ್ಪನ್ನಗಳು ಸಿಮೆಂಟ್ ಯಂತ್ರ, ಸಾರಿಗೆ ಸರಂಜಾಮು ಬಿಟ್ಟು ಇತರ ಲೋಹಪದಾರ್ಥಗಳು ಚರ್ಮ ಹದಗಾರಿಕೆ ಹಾಗೂ ಪರಿಷ್ಕರಣ ಕಾರ್ಖಾನೆಗಳು ಮೋಟಾರ್ ಸೈಕಲ್ ಮತ್ತು ಬೈಸಿಕಲ್ ತಯಾರಿಕೆ ಧಾನ್ಯ ಖಾದ್ಯ ತಯಾರಿಕೆ ಅಲೋಹ ಖನಿಜ ವಸ್ತು ತಯಾರಿಕೆ ಮೇಲೆ ಹೇಳಿದವಲ್ಲದೆ ಹೊಗೆಸೊಪ್ಪು, ಬೆಂಕಿಕಡ್ಡಿ, ಎಣ್ಣೆ ತೆಗೆಯುವುದು, ಇಟ್ಟಿಗೆ, ಹೆಂಚು, ಸುಣ್ಣ, ಕುಂಭ, ಹತ್ತಿ ಹಿಂಜುವುದು, ಹೆಣಿಗೆ, ರೇಷ್ಮೆ, ಮೂಳೆ ಗೂಬ್ಬರ, ಬಣ್ಣ, ಸಾಬೂನು, ಕಾಗದ, ಗಾಜು, ಮರಕೊಯ್ತ, ಹಗ್ಗ ಮುಂತಾದ ಕೈಗಾರಿಕೆಗಳೂ ಇವೆ. ಗಣಿಗಾರಿಕೆಯಲ್ಲಿ ಸಾಕಷ್ಟು ಮಂದಿಗೆ ಉದ್ಯೋಗ ಒದಗಿಸಿರುವ 18,095 ಘಟಕಗಳಿವೆ. ಭಾರತದ ಒಟ್ಟು ಚರ್ಮೋದ್ಯೋಗದಲ್ಲಿ ಸೆ. 60 ಭಾಗ ತಮಿಳುನಾಡಿನಲ್ಲಿದೆ. ಕುಡ್ಡಲೂರು ಮತ್ತು ಟುಟಿಕೋರಿನ್‍ಗಳಲ್ಲಿ ಗೊಬ್ಬರ ಮತ್ತು ರಾಸಾಯನಿಕಗಳ ಕಾರ್ಖಾನೆಗಳಿವೆ. ಗಿಂಡಿಯ ಬಳಿ ಹಿಂದೂಸ್ತಾನ್ ಟೆಲಿಪ್ರಿಂಟರ್ಸ್ ಲಿ. ತಿರುಚ್ಚಿರಾಪ್ಪಳ್ಳಿಯಲ್ಲಿ ಅಧಿಕ ಒತ್ತಡ ಬಾಯಿಲರ್ ಕಾರ್ಖಾನೆ, ಉದಕಮಂಡಲದಲ್ಲಿ ಕಚ್ಚಾ ಫಿಲಂ ಕಾರ್ಖಾನೆ. ಆವಡಿಯಲ್ಲಿ ಭಾರಿ ವಾಹನಗಳ (ಟ್ಯಾಂಕ್) ಕಾರ್ಖಾನೆ, ಪೆರಂಬೂರಿನ ಇಂಟೆಗ್ರಲ್ ಕೋಚ್ (ರೈಲ್ವೆ ಗಾಡಿ) ಕಾರ್ಖಾನೆ, ನೈವೇಲಿಯ ಲಿಗ್ನೈಟ್ ಕಾರ್ಪೋರೇಷನ್ ಇವು ಕೇಂದ್ರ ಸರ್ಕಾರದ ಕೊಡ್ಡ ಕೈಗಾರಿಕಾ ಸಂಸ್ಥೆಗಳು. ತಮಿಳು ನಾಡು ಸರ್ಕಾರದ ಅಧೀನದಲ್ಲಿರುವ ಎರಡು ದೊಡ್ಡ ಕಾರ್ಖಾನೆಗಳು ಮದ್ರಾಸ್ ರಸಗೊಬ್ಬರ ಕಾರ್ಖಾನೆ ಮತ್ತು ಉಣ್ಣೆ ಪರಿಷ್ಕರಣ ಕೇಂದ್ರ. ತಮಿಳು ನಾಡಿನ ಗೃಹಕೈಗಾರಿಕೆಗಳು ಪ್ರಾಚೀನವಾದವು. ಧರ್ಮ ಸರಕು, ಕುಂಭ ಕಲೆ, ಛತ್ರಿ, ಹಿತ್ತಾಳೆ ಸಾಮಾನು ಕೈಮಗ್ಗ, ಕಲ್ಲಿನ ಪಾತ್ರೆಗಳು, ಗಾಜಿನ ಬಳೆ, ಬೆಂಕಿಕಡ್ಡಿ, ಜರತಾರಿ, ಅಲ್ಯೂಮಿನಿಯಂ ಪದಾರ್ಥಗಳು, ದಂತ ಕೆಲಸ, ಕಲ್ಲು ಹಲಗೆ, ಮತಗೊರೆತ, ಖಾದಿ, ತಾಳೆಬೆಲ್ಲ, ಚಾಪೆ, ತೆಂಗಿನನಾರಿನ ಸರಕು ಮುಂತಾದವು ಹಳೆಯ ಗೃಹಕೈಗಾರಿಕೆಗಳು. ವ್ಯಾಪಾರ ಬಹಳ ಪ್ರಾಚೀನ ಕಾಲದಿಂದ ತಮಿಳು ನಾಡು ವಿದೇಶಗಳೊಂದಿಗೆ ವ್ಯಾಪಾರ ನಡೆಸುತ್ತ ಬಂದಿದೆ. ಅದರ ಅನೇಕ ನೈಸರ್ಗಿಕ ಸರಕುಗಳಿಗೆ ಹಿಂದಿನಿಂದಲೂ ವಿದೇಶಿ ಬೇಡಿಕೆಯಿದೆ. ಮೆಣಸು, ಮುತ್ತು, ದಂತ, ಲವಂಗ, ಶ್ರೀಗಂಧ, ತೇಗ, ಬೀಟೆ, ಕುರುಂದ-ಇವು ಕೆಲವು ಸರಕುಗಳು. ಪ್ರಾಚೀನ ಮೆಸೆಪೊಟೋಮಿಯಕ್ಕೆ ತಮಿಳು ನಾಡಿನಿಂದ ಅಕ್ಕಿ ರಫ್ತಾಗುತ್ತಿತ್ತು. ಸಹಕಾರ ಸಹಕಾರ ಚಳವಳಿಯಲ್ಲಿ ವಿಶೇಷವಾಗಿ ಮುಂದುವರೆದಿರುವ ರಾಜ್ಯಗಳಲ್ಲಿ ತಮಿಳು ನಾಡೂ ಒಂದು. ವಿವಿಧ ಬಗೆಯ ಸಹಕಾರ ಸಂಘಗಳ ಸಂಖ್ಯೆಯನ್ನು ಮುಂದೆ ಕೊಟ್ಟಿದೆ:- ರಾಜ್ಯ ಸಹಕಾರ ಬ್ಯಾಂಕ್ ರಾಜ್ಯ ಭೂ ಅಭಿವೃದ್ಧಿ ಬ್ಯಾಂಕ್ ಸಹಕಾರ ಮಾರಾಟ ಸಂಯುಕ್ತ ಸಂಘ ಎತ್ತುಗೆ ನೀರಾವರಿ ಸಂಯುಕ್ತ ಸಂಘ ಕೃಷಿ-ಎಂಜಿನಿಯರಿಂಗ್ ಸಹಕಾರ ಸಂಯುಕ್ತ ಸಂಘ ರಾಜ್ಯ ಬಳಕೆದಾರರ ಸಹಕಾರ ಸಂಯುಕ್ತ ಸಂಘ ತಂಜಾವೂರು ಸಹಕಾರ ಮಾರಾಟ ಸಂಯುಕ್ತ ಸಂಘ ಸಹಕಾರಿ ಕೇಂದ್ರ ಬ್ಯಾಂಕುಗಳು ಸಹಕಾರಿ ಸಗಟು ವ್ಯಾಪಾರಿ ಕೋಠಿಗಳು ಮದ್ರಾಸ್ ಅಗ್ನಿ ಮತ್ತು ಸಾಮಾನ್ಯ ವಿಮೆ ಸಂಘ ಪ್ರಾಥಮಿಕ ಭೂ ಅಭಿವೃದ್ಧಿ üಬ್ಯಾಂಕುಗಳು ಕೃಷಿ ಉದ್ಧರಿ ಸಂಘಗಳು ಸಹಕಾರಿ ಪಟ್ಟಣ ಬ್ಯಾಂಕುಗಳು ಇತರ ಕೃಷೀತರ ಉದ್ಧರಿ ಸಂಘಗಳು ಸಹಕಾರಿ ಸಂಯುಕ್ತ ಮತ್ತು ಸಾಮೂಹಿಕ ಬೇಸಾಯ ಸಂಘಗಳು ಪ್ರಾಥಮಿಕ ಸಹಕಾರಿ ಮಾರಾಟ ಸಂಘಗಳು ಸಹಕಾರಿ ಬಳಕೆದಾರರ ಕೋಠಿಗಳು ಸಹಕಾರಿ ಕ್ಯಾಂಟೀನ್ ಮತ್ತು ಉಪಾಹಾರಮಂದಿರಗಳು ಕಾರ್ಮಿಕ ಕರಾರು ಸಂಘಗಳು ಸಹಕಾರಿ ಮೋಟಾರ್ ಸಾರಿಗೆ ಸಂಘಗಳು ಸಹಕಾರಿ ಮುದ್ರಣಾಲಯಗಳು ಉಪ್ಪಿನ ಸಹಕಾರ ಸಂಘಗಳು ನೀರಾವರಿ ಸಂಘಗಳು ಆರೋಗ್ಯ ಸಹಕಾರ ಸಂಘಗಳು ಕೈಗಾರಿಕಾ ಸಹಕಾರ ಸಂಘಗಳು ತಮಿಳು ನಾಡು ಕೈಮಗ್ಗ ನೇಕಾರರ ಸಹಕಾರ ಸಂಘ ಪ್ರಾಥಮಿಕ ನೇಕಾರರ ಸಹಕಾರಿ ಸಂಘಗಳು ಸಹಕಾರಿ ನೂಲುವ ಗಿರಣಿಗಳು ಸಹಕಾರಿ ಸೂಪರ್ ಮಾರುಕಟ್ಟೆಗಳು ಸಹಕಾರಿ ಗೃಹ ಸಂಘಗಳು ವಿಶ್ವ ವಿದ್ಯಾಲಯಗಳಲ್ಲಿ ಸಹಕಾರವೂ ಒಂದು ಬೋಧನ ವಿಷಯವಾಗಿದೆ. ಸಾರಿಗೆ ಸಂಪರ್ಕ ತಮಿಳುನಾಡಿನಲ್ಲಿ ಒಟ್ಟು 1,50,095 ಕಿ.ಮೀ ಮಾರ್ಗವಿದ್ದು ಇದರಲ್ಲಿ 60,901, ಕಿ.ಮೀ ಉತ್ತಮ ರಸ್ತೆಯಿದೆ. ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದ್ದು ದಕ್ಷಿಣ ಭಾರತದ ಮುಖ್ಯ ವಿಮಾನ ಸಂಪರ್ಕವಾಗಿದೆ. ಸೇಲಂ, ಕೊಯಮತ್ತೂರು, ತಿರುಚಿನಪಳ್ಳಿ, ಮಧುರೆ ವಿಮಾನ ನಿಲ್ದಾಣಗಳಿವೆ. ಚೆನ್ನೈ, ಮಧುರೈ, ತಿರುಚಿನಾಪಳ್ಳಿ, ಕೊಯಂಬತ್ತೂರು ಮತ್ತು ತಿರುನೇಲ್‍ವೇಲಿ ಮುಖ್ಯ ರೈಲು ನಿಲ್ದಾಣಗಳಿದ್ದು ಒಟ್ಟು 4181 ಕಿ.ಮೀ ರೈಲು ಮಾರ್ಗವಿದೆ. ತಮಿಳು ನಾಡಿನಲ್ಲಿ 876.03 ಕಿಮೀ. ಬ್ರಾಡ್ ಗೇಜ್ ಮತ್ತು 2,889.05 ಕಿಮೀ. ಮೀಟರ್ ಗೇಜ್ ರೈಲುಮಾರ್ಗಗಳಿವೆ. ದಕ್ಷಿಣ ಭಾರತದಲ್ಲಿ ಬಹಳ ಹೆಚ್ಚಿನ ರೈಲ್ವೆ ಸೌಲಭ್ಯ ಉಳ್ಳ ರಾಜ್ಯ ತಮಿಳು ನಾಡು. ಮದ್ರಾಸಿನೊಂದಿಗೆ ರಾಜ್ಯದ ಎಲ್ಲ ಪ್ರಮುಖ ಕೇಂದ್ರಗಳೂ ಭಾರತದ ಮುಖ್ಯ ನಗರಗಳೂ ರೈಲ್ವೆ ಸಂಪರ್ಕ ಹೊಂದಿವೆ. ದಕ್ಷಿಣ ರೈಲ್ವೆಯ ಮುಖ್ಯ ಕಚೇರಿ ಮದ್ರಾಸಿನಲ್ಲಿದೆ. ಈಗ ತಮಿಳುನಾಡಿನಲ್ಲಿ ಒಟ್ಟು 1,50,095 ಕಿ.ಮೀ. ರಸ್ತೆಯಿದ್ದು ಇದರಲ್ಲಿ 60,901 ಕಿ.ಮೀ ಟಾರ್ ಹಾಗೂ ಕಾಂಕ್ರೀಟಿನಿಂದ ಕೂಡಿವೆ. ಒಟ್ಟು 4181 ಕಿ.ಮೀ ರೈಲು ಮಾರ್ಗವಿದೆ. ಚೆನ್ನೈ, ತಿರುಚಿನಾಪಳ್ಳಿ, ಮಧುರೈ, ಕೊಯಮತ್ತೂರು ಮತ್ತು ಸೇಲಂಗಳಲ್ಲಿ ವಿಮಾನ ನಿಲ್ದಾಣಗಳಿವೆ. ಚೆನ್ನೈ ಟುಟಿಕೋರಿನ್, ಕುಡಲೂರು ಮತ್ತು ನಾಗಾಪಟ್ಟಣಮ್‍ಗಳಲ್ಲಿ ಬಂದರುಗಳಿವೆ. ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಪೂರ್ವತೀರದ ಮುಖ್ಯ ಬಂದರೂ ಆಗಿದೆ. ಚೆನ್ನೈ ಜೊತೆಗೆ ನಾಗಪಟ್ಟಿನಮ್, ತುತುಕೋರಿನ್, ಕುಡಲೂರು ಬಂದರುಗಳಿವೆ. ( ಪ್ರಾಗಿತಿಹಾಸ ದಕ್ಷಿಣ ಭಾರತದ ಇತರ ಪ್ರದೇಶಗಳಂತೆ ತಮಿಳು ನಾಡಿನಲ್ಲೂ ಪ್ರಾಗೈತಿಹಾಸಿಕ ಮಾನವನ ಅವಶೇಷಗಳಿವೆ. ತಮಿಳುನಾಡಿನಲ್ಲಿ ಮಾನವ ಎಂದಿನಿಂದ ವಾಸಿಸುತ್ತ ಬಂದಿದ್ದಾನೆಂದು ಹೇಳುವುದು ಸಾಧ್ಯವಿಲ್ಲದಿದ್ದರೂ, ಕಲ್ಲಿನಲ್ಲಿ ಆಯುಧಗಳನ್ನು ಮಾಡಿಕೊಳ್ಳಲು ಪ್ರಾರಂಭಿಸಿದನಿಂದ —ಎಂದರೆ ಮಧ್ಯ ಪ್ಲೀಸ್ಟೊಸೀನ್ ಕಾಲದಿಂದ —ಅವನ ಅಸ್ತಿತ್ವದ ಅವಶೇಷಗಳು ಹೇರಳವಾಗಿ ದೊರಕಿವೆ. 1863ರಲ್ಲಿ ರಾಬರ್ಟ್ ಬ್ರೂಸ್‍ಫೂಟರಿಗೆ ಮದ್ರಾಸಿನ ಹತ್ತಿರ ಪಲ್ಲಾವರಮ್‍ನಲ್ಲಿ ದೊರೆತ ಪುರಾತನ ಶಿಲಾಯುಗಧ ಆಯುಧದಿಂದ ತಮಿಳುನಾಡಿಗೆ ಸಂಬಂಧಿಸಿದಂತೆ ಮಾತ್ರವಲ್ಲದೆ ಭಾರತದಲ್ಲೇ ಪ್ರಾಗೈತಿಹಾಸಿಕ ಮಾನವನ ಅವಶೇಷಗಳ ಸಂಶೋಧನೆಯಲ್ಲಿ ಹೊಸ ಅಧ್ಯಾಯ ಪ್ರಾರಂಭವಾಯಿತು.ಚೆಂಗಲ್‍ಪಟ್ಟು ಜಿಲ್ಲೆಯಲ್ಲಿರುವ ಕೋರ್ತಲಯಾರ್ ನದಿಯ ಪ್ರದೇಶದಲ್ಲಿ, ಈ ನದಿಯ ಹಳೆಯ ದಂಡೆಗಳ ಮೇಲೆ, ಆದಿ ಶಿಲಾಯುಗದ ಕಾಲದಲ್ಲೆ ಮಾನವರು ವಾಸಿಸುತ್ತಿದ್ದರೆಂಬುದು, ಡಿ ಟೆರ್ರ, ವಿ.ಡಿ. ಕೃಷ್ಣಸ್ವಾಮಿ, ಕೆ,ವಿ. ಬ್ಯಾನರ್ಜಿ ಇವರು ಮಾಡಿರುವ ಸಂಶೋಧನೆಗಳಿಂದ ತಿಳಿದುಬಂದಿದೆ. ಇವರು ಬಯಲು ಪ್ರದೇಶದಲ್ಲಿ ಹಾಗೂ ನೈಸರ್ಗಿಕ ಗುಹೆಗಳಲ್ಲಿ ವಾಸಿಸುತ್ತಿದ್ದರು : ಬೇಟೆಯಾಡುವುದು ಮತ್ತು ಗೆಡ್ಡೆ ಗೆಣಸುಗಳನ್ನು ಅಗೆದು ತಿನ್ನುವುದೇ ಇವರ ಮುಖ್ಯ ಕಸುಬಾಗಿತ್ತು. ಇವರು ಕ್ವಾರ್ಟ್‍ಸೈಟ್ ಉಂಡೆಕಲ್ಲಿನ ತಿರುಳಿನಲ್ಲಿ ಮಾಡಿದ ಕೈಗೊಡಲಿ. ಬಾಚಿ ಮತ್ತು ಅಂಡಾಕಾರದ ಆಯುಧಗಳನ್ನು ಉಪಯೋಗಿಸುತ್ತಿದ್ದರು-ಎಂಬುದಾಗಿ ಗೊತ್ತಾಗಿದೆ.ಮಧ್ಯ ಪ್ಲೀಸ್ಟೊಸೀನ್ ಕಾಲದ ಆಯುಧಗಳನ್ನು ದಕ್ಷಿಣ ಭಾರತದ ಇತರ ಸ್ಥಳಗಳಲ್ಲಿ, ದಕ್ಷಿಣ ಆಫ್ರಿಕ ಮತ್ತು ಯೂರೋಪ್‍ನಲ್ಲಿ ದೊರಕುವ ಅಬ್ಬೆವಿಲಿಯನ್ ಮತ್ತು ಅಷೀಲಿಯನ್ ಆಯುಧಗಳ ರೀತಿಯವು. ಈ ಕಾಲದ ನೆಲೆಗಳು ತಮಿಳು ನಾಡಿನ ಹಲವಾರು ಕಡೆಗಳಲ್ಲಿ ದೊರಕಿದ್ದರೂ ಅವುಗಳ ಅಧ್ಯಯನ ಇನ್ನೂ ನಡೆದಿಲ್ಲ. ಪ್ಲೀಸ್ಟೊಸೀನ್ ಯುಗದ ಅಂತಿಮ ಕಾಲದಲ್ಲಿ ಪ್ರಚಲಿತವಾಗಿದ್ದ ಮಧ್ಯ ಶಿಲಾಯುಗದ ಸಂಸ್ಕøತಿಯ ನೆಲೆಗಳು ಚೆಂಗಲ್‍ಪಟು, ಉತ್ತರ ಅರ್ಕಾಟ್, ಧರ್ಮಪುರಿ ಮತ್ತು ಮಧುರೈ ಜಿಲ್ಲೆಗಳಲ್ಲಿ ಕಂಡುಬಂದಿವೆ. ಈ ಸಂಸ್ಕøತಿಗೆ ಕಾರಣರಾದ ಜನರೂ ಬಯಲು ಹಾಗೂ ನೈಸರ್ಗಿಕ ಗುಹೆಗಳಲ್ಲಿ ಜೀವಿಸುತ್ತಿದ್ದಂತೆ ಕಂಡುಬರುತ್ತದೆ. ಇವರ ಆಯುಧಗಳು ಹಿಂದಿನವುಗಳಿಗಿಂತ ಸಣ್ಣವು ಹಾಗೂ ಹೆಚ್ಚು ವೈವಿಧ್ಯಪೂರ್ಣ. ಇವರು ಕೈಗೂಡಲಿ, ಬಾಣದ ತುದಿ ಮತ್ತು ರಂಪಿಗೆಗಳನ್ನು ಹರೆಯಲು ಮತ್ತು ಕುಯ್ಯಲು ಅನುಕೂಲವಾದ ಮತ್ತು ನೀಳ ಚಕ್ಕೆ ಕಲ್ಲುಗಳಲ್ಲಿ ಮಾಡಿದ ಆಯುಧಗಳನ್ನು ಉಪಯೋಗಿಸುತ್ತಿದ್ದರು. ತೊಗಲನ್ನು ಬೇಕಾದ ಆಕಾರಕ್ಕೆ ಹೊಲೆಯುವುದಕ್ಕೂ ಬೇಟೆಯಾಡುವುದಕ್ಕೂ ಇವನ್ನು ಉಪಯೋಗಿಸುತ್ತಿದ್ದರು. ಕ್ರಿ.ಪೂ. 4000ಕ್ಕಿಂತ ಹಿಂದಿನದೆಂದು ನಂಬಲಾಗಿರುವ ಅಂತ್ಯ ಶಿಲಾಯುಗ (ಸೂಕ್ಷ್ಮ ಶಿಲಾಯುಗ) ಸಂಸ್ಕøತಿಯ ನೆಲೆಗಳು ಚೆಂಗಲ್‍ಪಟು,್ಟ ಧರ್ಮಪುರಿ, ಮಧುರೈ ಮತ್ತು ರಾಮನಾಡು ಜಿಲ್ಲೆಗಳಲ್ಲಿ ದೊರೆತಿವೆ. ಈ ಕಾಲದ ಆಯುಧಗಳು ಇನ್ನೂ ಸಣ್ಣವು. ಬಾಣದ ತುದಿ, ರಂಪಿಗೆ ಹಾಗೂ ಹೆರೆಯಲು ಮತ್ತು ಕುಯ್ಯಲು ಅನುಕೂಲವಾದ ಆಯುಧಗಳು. ಅರ್ಧ ಚಂದ್ರಾಕೃತಿಯ ಮತ್ತು ತ್ರಿಕೋಣಾಕೃತಿಯ ಚಿಕ್ಕ ಆಯುಧಗಳು ಉಪಯೋಗದಲ್ಲಿದ್ದುವು. ಬಯಲುಗಳಲ್ಲಿದ್ದ ಇವರ ನೆಲೆಗಳಲ್ಲಿ ಸಿಕ್ಕಿರುವ ಆಯುಧಗಳಿಂದ ಈ ಜನರು ಸಣ್ಣ ಬೇಟೆಗಳನ್ನು ಆಡುತ್ತಿದ್ದರು ಮತ್ತು ಮೀನುಗಳನ್ನು ಹಿಡಿದು ಹಾಗೂ ಕಾಡು ದವಸ ಧಾನ್ಯಗಳನ್ನು ತಿಂದು ಜೀವಿಸುತ್ತಿದ್ದರು-ಎಂಬುದು ತಿಳಿದುಬರುತ್ತದೆ. ನವಶಿಲಾಯುಗ ಸಂಸ್ಕೃತಿಯ ನೆಲೆಗಳು ಧರ್ಮಪುರಿ ಮತ್ತು ಉತ್ತರ ಅರ್ಕಾಟ್ ಜಿಲ್ಲೆಗಳಲ್ಲಿ ಮಾತ್ರ ಕಂಡುಬಂದಿವೆ. ಈ ಪ್ರಾಂತ್ಯದ ಬೇರೆಡೆಗಳಲ್ಲಿ ಈ ಜನ ಉಪಯೋಗಿಸುತ್ತಿದ್ದ, ಉಜ್ಜಿ ನಯಮಾಡಿದ ಕೊಡಲಿಗಳು ದೊರೆತಿದ್ದರೂ ಬೇರಾವ ಅವಶೇಷಗಳೂ ಇದುವರೆಗೂ ದೊರೆತಿಲ್ಲ. ಉತ್ತರ ಅರ್ಕಾಟ್ ಜಿಲ್ಲೆಯ ಪೈಯಂಪಲ್ಲಿ ಗ್ರಾಮದಲ್ಲಿಯ ಉತ್ಖನನದಿಂದ ಈ ಜನರ ಜೀವನ ವಿಧಾನದ ಬಗ್ಗೆ ಹೆಚ್ಚಿನ ಮಾಹಿತಿ ದೊರಕಿದೆ. ಕ್ರಿ.ಪೂ.ಸು.1800ರಷ್ಟು ಹಿಂದೆ ಇವರು ನೀರಿನ ಸೌಕರ್ಯ ಇದ್ದ ಸ್ಥಳಕ್ಕೆ ಹತ್ತಿರದಲ್ಲಿ ದೊಡ್ಡ ಬಂಡೆಗಳಿಂದ ಕೂಡಿದ ಬೆಟ್ಟಗಳ ಬುಡದಲ್ಲಿ, ತಡಿಕೆ ಮತ್ತು ಮಣ್ಣಿನ ಗೋಡೆಗಳಿಂದ ಚಿಕ್ಕ ಗೋಲಾಕೃತಿಯ ಗುಡಿಸಲುಗಳನ್ನು ಕಟ್ಟಿಕೊಂಡು ಸಣ್ಣ ಹಳ್ಳಿಗಳಲ್ಲಿ ವಾಸಿಸುತ್ತಿದ್ದರು. ಇವರು ನಾಯಿ ಕುರಿ, ಹಸು ಮುಂತಾದ ಪ್ರಾಣಿಗಳನ್ನು ಸಾಕುತ್ತಿದ್ದರು: ಹಳ್ಳಿಯ ಸುತ್ತ ಧಾನ್ಯಗಳನ್ನು ಬೆಳೆಸುತ್ತಿದ್ದರು. ಚಿಕ್ಕ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದರು. ತಿಳಿಬೂದು ಬಣ್ಣದ ನಯವಾದ ಕಲ್ಲಿನಿಂದ ತೆಗೆದ ಚಕ್ಕೆಗಳಲ್ಲಿ ಕೈಯಿಂದ ಮಾಡಿದ ಸಣ್ಣ ಆಯುಧಗಳನ್ನು ಉಪಯೋಗಿಸುತ್ತಿದ್ದರು. ಇವರಿಗೆ ಲೋಹಗಳ ಬಳಕೆ ಗೊತ್ತಿರಲಿಲ್ಲ. ಇವರು ತಮಿಳು ನಾಡಿನ ಪ್ರದೇಶಕ್ಕೆ ಉತ್ತರದಿಂದ, ಈಗಿನ ಕರ್ನಾಟಕ ಪ್ರದೇಶದಿಂದ, ಬಂದರೆಂದು ಊಹಿಸಲಾಗಿದೆ. ತಮಿಳು ನಾಡಿನಲ್ಲಿ ನವಶಿಲಾಯುಗದವರು ವಾಸಿಸುತ್ತಿದ್ದಂತೆಯೇ ದೊಡ್ಡ ಕಲ್ಲುಗಳ ಗೋರಿಗಳನ್ನು ಕಟ್ಟುವ ಜನಾಂಗದವರು ಬಹುಶಃ ಕರ್ನಾಟಕದಿಂದ ಬಂದರೆಂಬುದು ಪೈಯಂಪಲ್ಲಿ ಉತ್ಖನನದಿಂದ ತಿಳಿದುಬರುತ್ತದೆ. ಇವರು ಕ್ರಿ.ಪೂ. 500ಕ್ಕೆ ಹಿಂದೆ ತಮಿಳು ನಾಡಿಗೆ ಬಂದರೆಂದು ಊಹಿಸಲಾಗಿದೆ. ಈ ಜನರು ತಮ್ಮೊಡನೆ ಕಬ್ಬಿಣದ ಬಳಕೆಯ ಕೌಶಲವನ್ನೂ ಚಕ್ರದ ಮೇಲೆ ಕಪ್ಪು ಕೆಂಪು ಹಾಗೂ ಕಪ್ಪು -ಕೆಂಪುಬಣ್ಣದ ಮಣ್ಣಿನ ಪಾತ್ರೆಗಳನ್ನು ಮಾಡುವ ವಿಧಾನವನ್ನೂ ತಂದರು. ತಮಿಳು ನಾಡಿನಲ್ಲಿ ಕೆರೆಗಳನ್ನು ಕಟ್ಟಿ ಜಮೀನನ್ನು ಸಾಗುವಳಿ ಮಾಡುವ ವಿಧಾನವನ್ನು ಈ ಜನಾಂಗದವರು ಆರಂಭಿಸಿದರೆಂದು ಊಹಿಸಲಾಗಿದೆ. ನವ ಶಿಲಾಯುಗದವರಂತೆಯೇ ಇವರೂ ಮನೆಗಳನ್ನು ಕಟ್ಟಿಕೊಂಡು ಹಳ್ಳಿಗಳಲ್ಲಿ ವಾಸಿಸುತ್ತಿದ್ದರು. ವ್ಯವಸಾಯ, ಮೀನು ಹಿಡಿಯುವುದು-ಇವು ಇವರ ಮುಖ್ಯ ಕಸುಬುಗಳಾಗಿದ್ದುವು. ಇವರ ಸಂಸ್ಕೃತಿಯ ವೈಶಿಷ್ಟ್ಯವೆಂದರೆ ಶಿಲಾಗೋರಿಗಳು. ಇವರು ನಿರ್ಮಿಸುತ್ತಿದ್ದ ಬೃಹತ್ ಶಿಲಾಗೋರಿಗಳಲ್ಲಿ ನಾನಾ ವಿಧಗಳಿದ್ದುವು. ನಾಲ್ಕು ಅಥವಾ ಹಲವು ಹಲಗೆ ಕಲ್ಲುಗಳನ್ನು ಕೋಣೆಯಾಕಾರದಲ್ಲಿ ಜೋಡಿಸಿ ಅದರಲ್ಲಿ ಅಸ್ಥಿಯನ್ನೋ ಅಸ್ಥಿಯುಳ್ಳ ಗಡಿಗೆಯನ್ನೋ ಇಟ್ಟು ಮೇಲೊಂದು ಹಲಗೆ ಕಲ್ಲನ್ನು ಮುಚ್ಚಿ ಸುತ್ತಲೂ ದೊಡ್ಡ ದೊಡ್ಡ ಬಂಡೆಕಲ್ಲುಗಳನ್ನಿಟ್ಟು, ಮಧ್ಯದಲ್ಲಿ ಸಣ್ಣ ಸಣ್ಣ ಕಲ್ಲುಗಳನ್ನು ತುಂಬುವುದು ಒಂದು ವಿಧ. ಆಳವಾದ ಗುಂಡಿಯಲ್ಲಿ ಆಸ್ಥಿವುಳ್ಳ ಮಣ್ಣಿನ ಪಾತ್ರೆಯನ್ನೂ ಇತರ ವಸ್ತುಗಳನ್ನೂ ಹೂತು ಸುತ್ತಲೂ ಬಂಡೆಕಲ್ಲುಗಳನ್ನು ಇಟ್ಟು ಮಧ್ಯದಲ್ಲಿ ಸಣ್ಣ ಕಲ್ಲುಗಳನ್ನು ತುಂಬುವುದು ಇನ್ನೊಂದು ವಿಧ ಪ್ರಾಣಿಯಾಕಾರದ ಉದ್ದನೆಯ ದೊಡ್ಡ ಬಾನೆಯಲ್ಲಿ ಅಸ್ಥಿ ಮತ್ತು ಇತರ ವಸ್ತುಗಳನ್ನು ಇಟ್ಟು ಹೂತು ಸುತ್ತಲೂ ಬಂಡೆಕಲ್ಲುಗಳನ್ನಿಟ್ಟು ಮಧ್ಯದಲ್ಲು ಸಣ್ಣಕಲ್ಲುಗಳನ್ನು ತುಂಬುವುದು, ಮತ್ತೊಂದು ವಿಧ. ಇಂಥ ಹಲವು ರೀತಿಗಳಿದ್ದುದು ಕಂಡುಬರುತ್ತದೆ. ಸತ್ತವನ ಆತ್ಮಕ್ಕೆ ಮುಂದೆ ಬೇಕಾಗಬಹುದೆಂಬ ನಂಬಿಕೆಯಿಂದ ಮಣ್ಣಿನ ಚಿಕ್ಕ ಚಿಕ್ಕ ಪಾತ್ರೆಗಳಲ್ಲಿ ಆಹಾರ ಮತ್ತಿತರ ಪರ್ದಾಥಗಳನ್ನು ಹಾಗೂ ಅವರ ನಿತ್ಯೋಪಯೋಗದ ವಸ್ತುಗಳನ್ನು ಇಟ್ಟು ಅಲ್ಲಿ ಹೂಳುತ್ತಿದ್ದರು. ಇತಿಹಾಸ ತಮಿಳು ನಾಡಿನ ಇತಿಹಾಸ ಬಲು ಪ್ರಾಚೀನವಾದ್ದು. ಭಾಷೆ ವೈಜ್ಞಾನಿಕವಾಗಿ ಭಾರತ ಉಪಖಂಡದಲ್ಲಿ ಇದು ಬಹುಶಃ ಅತ್ಯಂತ ಹಳೆಯ ಭಾಷೆ ಮೊತ್ತ. ಗತ ಶತಮಾನಗಳಲ್ಲಿ ಈ ಪ್ರದೇಶದಲ್ಲಿ ಸಂಸ್ಕøತಿ ನಾಗರಿಕತೆಗಳ ಭಾಷೆ ಸಾಹಿತ್ಯಗಳೂ ಚಿತ್ರಕಲೆ ವಾಸ್ತುಶಿಲ್ಪಗಳೂ ಸಂಗೀತವೂ ಬೆಳೆದಂತೆ ದೇಶ ಬೇರೆಡೆಯಲ್ಲೆಲ್ಲೂ ಬೆಳೆಯಲಿಲ್ಲ. ಉನ್ನತ ಬೆಳೆವಣಿಗೆ ಹೊಂದಿದ ತಮಿಳು ಭಾಷೆ ಅದರಲ್ಲಿ ಸೃಷ್ಟಿಯಾದ ಅನಶ್ವರ ಸಾಹಿತ್ಯ, ಉದಾತ್ತವಾದ ಗೋಪುರಗಳು, ಮಧುರೈ ಮಹಾಬಲಿಪುರಂ ತಂಜಾವೂರು ಕಾಂಚೀಪುರಗಳಲ್ಲಿ ಕೆತ್ತಲಾದ ಅಮರ ವಾಸ್ತು ಶಿಲ್ಪಗಳು ತಂಜಾವೂರಿನ ಉತ್ಕøಷ್ಟ ಕರಕೌಶಲ, ಭರತನಾಟ್ಯ ಕಲಾವಿದರ ಲಲಿತ ಚಲನೆಗಳು - ಇವು, ಮತ್ತು ಇಂಥ ಹಲವು, ತಮಿಳು ನಾಡಿನ ಸಾಂಸ್ಕøತಿ ಪರಂಪರೆಯ ಅಂಶಗಳು.ತಮಿಳು ನಾಡಿಗೆ ಸಂಬಂಧಿಸಿದಂತೆ ಬೃಹದ್ಬಾರತದ ಇತಿಹಾಸವನ್ನು ದಕ್ಷಿಣ ಭಾರತದ ಇತಿಹಾಸದ ಒಂದು ಉಜ್ವಲ ಅಧ್ಯಾಯವೆಂದು ಪರಿಗಣಿಸಬಹುದು. ತಮಿಳುನಾಡಿನ ಸಂಸ್ಕøತಿಕ ಪ್ರಭಾವಗಳು -- ಮುಖ್ಯವಾಗಿ ಲಿಪಿ. ನಂಬಿಕೆಗಳು, ಕಲೆಗಳು ಮುಂತಾದುವುಗಳಲ್ಲಿ -- ಮಲಯ, ಸುಮಾತ್ರ, ಜಾವ, ಬಾಲಿ, ಕಾಂಬೋಡಿಯ ಮತ್ತು ಸೈಯಾಮ್‍ಗಳನ್ನು ತಲಪಿವೆ. ಇತರ ದೇಶಗಳು ಮತ್ತು ಸಂಸ್ಕøತಿಗಳೊಂದಿಗಿನ ಸಂಪರ್ಕದ ಅವಕಾಶವನ್ನು ತಮಿಳು ನಾಡು ಬಳಸಿಕೊಳ್ಳುವುದರಲ್ಲಿ, ಅವುಗಳಲ್ಲಿಯ ಉತ್ತಮಾಂಶಗಳನ್ನು ಅಳವಡಿಸಿಕೊಳ್ಳುವುದರಲ್ಲಿ ಎಂದೂ ಹಿಂದೆ ಬಿದ್ದಿಲ್ಲ. ತಮಿಳು ನಾಡಿನ ಪ್ರಾಚೀನ ಇತಿಹಾಸವನ್ನು ಅದರ ಭಾಷೆಯಿಂದ ಮತ್ತು ಇತಿಹಾಸ ಪೂರ್ವಕಾಲದ ಪಳೆಯುಳಿಕೆಗಳ ಅಧ್ಯಯನದಿಂದ ಅರಿಯಬಹುದು. ತಮಿಳಿನ ಅತ್ಯಂತ ಪ್ರಾಚೀನ ನಷ್ಟವಾಗಿದೆ. ತಮಿಳಿನ ತೊಲ್‍ಕಾಪ್ಪಿಯಮ್ ಎಂಬ ಪ್ರಸಿದ್ಧ ವ್ಯಾಕರಣ ಗ್ರಂಥವನ್ನು ಕ್ರಿ. ಪೂ. 325 - ಕ್ರಿ.ಪೂ.88 ಕಾಲಕ್ಕೆ ನಿರ್ದೇಶಿಸಬಹುದು. ಕೆಲವು ವಿದ್ವಾಂಸರು ಇದು ಇನ್ನೂ ಹಿಂದಿನ ಕಾಲದ್ದೆಂದು ಹೇಳುತ್ತಾರೆ. ತಿರುಕ್ಕುರಳ್, ಶಿಲಪ್ಪದಿಕಾರಂ, ಮಣಿಮೇಖಲೈ ಮುಂತಾದ ಪ್ರಾಚೀನ ತಮಿಳು ಸಾಹಿತ್ಯ ಕೃತಿಗಳನ್ನು ಸಂಗಮ್ ಸಾಹಿತ್ಯವೆಂದು ಕರೆಯಲಾಗಿದೆ. ಇವು ಸೃಷ್ಟಿಯಾದ ಕಾಲವನ್ನು ತಮಿಳು ಸಾಹಿತ್ಯದ ಸುವರ್ಣ ಯುಗವೆಂದು ಕರೆಯಲಾಗಿದೆ. ಕ್ರಿ.ಶ. ಮೊದಲ ಮೂರು ಶತಮಾನಗಳನ್ನು ಸಂಗಮ್ ಯುಗವೆಂದು ಕರೆಯಲಾಗಿದೆ. ಆ ಕಾಲದ ತಮಿಳರು ಕಟ್ಟು ನಿಟ್ಟಾದ ಜಾತಿಗಳಾಗಿ ವಿಂಗಡವಾಗಿರಲಿಲ್ಲ. ಆಗಿನ ಜನಜೀವನ ಬಹುತೇಕ ಗ್ರಾಮೀಣವಾಗಿತ್ತು. ಹಳ್ಳಿಗಳು ಸ್ವಸಂಪೂರ್ಣವಾಗಿದ್ದುವು. ರೂಢಿಯ ನಿಯಮಗಳೇ ಕಾನೂನುಗಳ ಸ್ಥಾನ ಪಡೆದಿದ್ದುವು. ಒಂದು ಪ್ರದೇಶದ ಜನರು ಇನ್ನೊಂದು ಪ್ರದೇಶದ ಜನರೊಂದಿಗೆ ಪದಾರ್ಥಗಳ ವಿನಿಮಯ ಮಾಡಿಕೊಳ್ಳತೊಡಗಿದಾಗ ಪಟ್ಟಣಗಳು ಎದ್ದವು. ಕ್ರಿ.ಪೂ.500—ಕ್ರಿ,ಪೂ.100ರ ಅವಧಿಯಲ್ಲಿ ತಮಿಳು ನಾಡಿನ ವಿದೇಶಿ ವ್ಯಾಪಾರ ವಿಶೇಷವಾಗಿ ಬೆಳೆದದ್ದರ ಫಲವಾಗಿ ಅನೇಕ ರೇವುಪಟ್ಟಣಗಳು ಬೆಳೆದುವು. ತಮಿಳು ನಾಡಿನ ಇತಿಹಾಸಕಾಲ ಕ್ರಿ.ಪೂ 4ನೆಯ ಶತಮಾನದಿಂದ ಆರಂಭವಾಗುತ್ತದೆ. ಸಂಗಮ್ ಯುಗದ ಕೊನೆಯ ವರೆಗೆ (ಕ್ರಿ.ಶ 3ನೆಯ ಶತಮಾನ) ಅದರ ಇತಿಹಾಸ ಸ್ಪಷ್ಟವೂ ಸಮಗ್ರವೂ ಆಗಿ ತಿಳಿದುಬಂದಿಲ್ಲ. ಚೇರ, ಚೋಳ ಮತ್ತು ಪಾಂಡ್ಯರು ನೆರೆಯ ಸ್ವತಂತ್ರ ರಾಜ್ಯಗಳನ್ನಾಳುತ್ತಿದ್ದರೆಂಬುದು ಅಶೋಕನ 2ನೆಯ ಮತ್ತು 13ನೆಯ ಶಿಲಾಶಾಸನಗಳಿಂದ ತಿಳಿದುಬರುತ್ತದೆ. ಸತ್ಯಪುತ್ರರು ಬಹುಶ: ಕೊಂಗುನಾಡನ್ನಾಳುತ್ತಿದ್ದವರು. ಆ ಕಾಲದ ಇತಿಹಾಸದ ಕೆಲವು ಹೊಳಹುಗಳು ಮುಖ್ಯವಾಗಿ ಸಂಗಮ್ ಕೃತಿಗಳಿಂದ ದೊರಕುತ್ತವೆ. ಇವನ್ನು ಇತಿಹಾಸ ಗ್ರಂಥಗಳೆನ್ನಲಾಗದಿದ್ದರೂ ತತ್ಕಾಲದ ಜನರ, ಅವರ ದೊರೆಗಳ, ಪಾಳೆಯಗಾರರ ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಮತೀಯ ಜೀವನಕ್ಕೆ ಸಂಬಂಧಿಸಿದ ಐತಿಹಾಸಿಕ ಸಾಮಗ್ರಿ ನಮಗೆ ದೊರಕುತ್ತದೆ. ಸಂಗಮ್ ಯುಗದ ಅಂತ್ಯದ ಅನಂತರದ ಮೂರು ಶತಮಾನಗಳ ಇತಿಹಾಸ ಶೂನ್ಯವಾಗಿದೆ. ಇದನ್ನು ಕಳಭ್ರ ವಿಚ್ಚಿತ್ತಿ ಅವಧಿ ಎಂದು ಹೇಳಲಾಗಿದೆ ಕಳಭ್ರರು ಕಾಡುಜನರು. ಇವರು ಬಹುಶ: ಕರ್ನಾಟಕದ ಪ್ರದೇಶದಿಂದ ಬಂದರು. ಇವರು ಕ್ರಿ.ಶ. 6ನೆಯ ಶತಮಾನದ ನಡುಗಾಲದವರೆಗೆ ತಮಿಳು ನಾಡನ್ನು ಆಕ್ರಮಿಸಿಕೊಂಡಿದ್ದರು. ಮಧುರೆಯ ಸುತ್ತಮುತ್ತಣ ಪ್ರದೇಶದಲ್ಲಿ ಮತ್ತೆ ಪ್ರಬಲರಾದ ಪಾಂಡ್ಯರೂ ಕಾಂಚೀಪುರವನ್ನು ರಾಜಧಾನಿಯಾಗಿ ಮಾಡಿಕೊಂಡು ತೊಂಡೈ ಮಂಡಲವನ್ನಾಳತೊಡಗಿದ ಪಲ್ಲವರು ಕಲಭ್ರರ ಆಳ್ವಿಕೆಯನ್ನು ಕೊನೆಗೊಳಿಸಿದರು. 9ನೆಯ ಶತಮಾನದ ನಡುಗಾಲದವರೆಗೂ ತಮಿಳು ನಾಡನ್ನು ಪಾಂಡ್ಯರೂ ಪಲ್ಲರೂ ವಾಸ್ತವವಾಗಿ ಹಂಚಿಕೊಂಡು ಆಳಿದರು. ದಕ್ಷಿಣಭಾರತದ ಇತಿಹಾಸದಲ್ಲಿ ಈ ಅವಧಿ ಅತ್ಯಂತ ಕ್ರಿಯಾಶೀ¯ವಾದ್ದು. 9ನೆಯ ಶತಮಾನದ ವರೆಗೆ ಚೋಳರು ಅಜ್ಞಾತರಾಗಿದ್ದರು. ಆಗ ಅವರು ತಲೆಯೆತ್ತ ತೊಡಗಿ ಮುಂದಿನ ಸುಮಾರು ನಾಲ್ಕು ಶತಮಾನಗಳ ಕಾಲ ರಾಜ್ಯವಾಳಿದರು. ಪಲ್ಲವ ಆಳ್ವಿಕೆ ಕೊನೆಗೊಂಡಿತು. ಪಾಂಡ್ಯ ಮತ್ತು ಚೇರ ರಾಜ್ಯಗಳು ಅವರ ಅಧೀನಕ್ಕೆ ಬಂದುವು. ರಾಜರಾಜ ಮತ್ತು ರಾಜೇಂದ್ರ ಗಂಗೈಕೊಂಡರ (985-1044) ಆಳ್ವಿಕೆಯಲ್ಲಿ ಚೋಳ ಸಾಮ್ರಾಜ್ಯದ ಅಧಿಕಾರ ಮಹೋನ್ನತ ಶಿಖರ ಮುಟ್ಟಿತು. ರಾಜೇಂದ್ರ ಗಂಗೈಕೊಂಡ ಉತ್ತರಕ್ಕೆ ಗಂಗಾ ನದಿಯ ವರೆಗೂ ದಂಡೆತ್ತಿ ಹೋಗಿದ್ದ. ಸಾಗರದಾಚೆಗಿನ ಶ್ರೀವಿಜಯನ ರಾಜ್ಯದ ಮೇಲೂ ಏರಿಹೋದ. ಚೋಳರ ಆಳ್ವಿಕೆಯ ಕಾಲದಲ್ಲಿ ತಮಿಳು ನಾಡು ಬಲಿಷ್ಠ ಗರಿಷ್ಠ ರಾಜಕೀಯ ಶಕ್ತಿಯಾಗಿತ್ತು. ಸ್ವಾಯತ್ತಾತ್ಮಕ ಗ್ರಾಮಸಭೆಗಳೊಂದಿಗೆ ಸಾಮರಸ್ಯದಿಂದ ಕೆಲಸ ಮಾಡುತ್ತಿದ್ದ ಅತ್ಯಂತ ಸುಸಂಘಟಿತ ಆಡಳಿತ ವ್ಯವಸ್ಥೆ, ಸಾಹಿತ್ಯಕ ಧಾರ್ಮಿಕ ಚಟುವಟಿಕೆಗಳ ಉನ್ನತಿಕೆ, ವಾಸ್ತುಶಿಲ್ಪ ಕಲಾವೈಭವ-ಇವು ಈ ಕಾಲದ ಮಹತ್ತ್ವದ ಸಾಧನೆಗಳು. 13ನೆಯ ಶತಮಾನದಲ್ಲಿ ಚೋಳರ ಕ್ಷೀಣದಶೆಯೊಂದಿಗೆ ಪಾಂಡ್ಯರು ಸ್ವಲ್ಪ ಕಾಲ ಮತ್ತೆ ಪ್ರಬಲರಾದರು. ಇವರು ಬಹುತೇಕ ಇಡೀ ತಮಿಳು ನಾಡನ್ನಾಳಿದರು. ತಮಿಳರ ನಾಗರಿಕತೆ ಅವರು ವಾಸವಾಗಿದ್ದ ಪ್ರದೇಶಗಳಿಷ್ಟೆ ಸೀಮಿತವಾಗಿರಲಿಲ್ಲ. ಚೋಳರ ಆಳ್ವಿಕೆಯ ಸುವರ್ಣಯುಗದಲ್ಲಿ ಸಾಹಸಿ ನಾವಿಕರು ಅನೇಕ ಅಪರಿಚಿತ ಸಮುದ್ರಗಳನ್ನು ದಾಟಿ ದೂರದೂರ ದೇಶಗಳಲ್ಲಿ ತಮಿಳು ಸಂಸ್ಕøತಿ ನಾಗರಿಕತೆಗಳನ್ನು ಪ್ರಸಾರ ಮಾಡಿದರು. ಈಗಲೂ ದೂರ ಪ್ರಾಚ್ಯದಲ್ಲಿ ಈ ಪ್ರವಾಸಿಗಳ ನಿಷ್ಕøಷ್ಟ ದಾಖಲೆಗಳು ಕಾಣಸಿಗುತ್ತವೆ. 14ನೆಯ ಶತಮಾನದ ಮೊದಲ ವರ್ಷಗಳಲ್ಲಿ ನಡೆದ ಮಲ್ಲಿಕಾಫರ್‍ನ ದಂಡಯಾತ್ರೆಯೊಂದಿಗೆ ಆರಂಭವಾಗಿ ಆಗಿಂದಾಗ್ಗೆ ನಡೆಯುತ್ತಿದ್ದ ಮುಸ್ಲಿಂ ದಾಳಿಗಳಿಂದಾಗಿ ದಕ್ಷಿಣ ಭಾರತಕ್ಕೆ ಭಾರಿ ಆಘಾತ ಉಂಟಾಯಿತು. 1334ರಲ್ಲಿ ಮಧುರೆಯಲ್ಲಿ ಮುಸ್ಲಿಂ ಸುಲ್ತಾನನೊಬ್ಬನ ಆಳ್ವಿಕೆ ಸ್ಥಾಪಿತವಾಯಿತು. ಇಸ್ಲಾಮೀ ಆಕ್ರಮಣದಿಂದ ದಕ್ಷಿಣ ಭಾರತವನ್ನು ಉಳಿಸಲು ಪ್ರಯತ್ನಗಳಾದುವು. 1336ರಲ್ಲಿ ಸ್ಥಾಪಿತವಾದ ವಿಜಯನಗರ ಸಾಮ್ರಾಜ್ಯ ಇಸ್ಲಾಂ ಆಕ್ರಮಣಕ್ಕೆ ಹಿಂದೂ ಪ್ರತಿಭಟನೆಯ ಪ್ರತೀಕವಾಗಿ ನಿಂತಿತು. ಪುನರುಜ್ಜೀವನಗೊಂಡ ಹಿಂದೂ ಸಂಸ್ಕøತಿಯ ಸಂಘಟನೆಯ ಕೇಂದ್ರವಾಗಿ ಪರಿಣಮಿಸಿತು. 14ನೆಯ ಶತಮಾನದ ಕೊನೆಯ ವೇಳೆಗೆ ತಮಿಳು ನಾಡು ಆ ಸಾಮ್ರಾಜ್ಯದ ಭಾಗವಾಯಿತು. ಅದನ್ನು ರಾಜಮನೆತನದವರಾಗಲಿ, ಸ್ಥಳೀಯ ನಾಯಕರಾಗಲಿ, ರಾಜ್ಯಪಾಲರಾಗಲಿ ಆಳಿದರು. ಅನಂತರ ಮಧುರೈ. ತಂಜಾವೂರು ಮತ್ತು ಜಿಂಜೀಯಿಂದ ಮೂರು ನಾಯಕ ವಂಶಗಳು ವಿಜಯನಗರದ ಆಶ್ರಯದಲ್ಲಿ ಆಳತೊಡಗಿದವು. 17ನೆ ಶತಮಾನದಲ್ಲಿ ವಿಜಯನಗರದ ಕೇಂದ್ರ ಆಡಳಿತ ದುರ್ಬಲವಾದಾಗ ಇವು ಬಹುತೇಕ ಸ್ವತಂತ್ರವಾದುವು. ವಿಜಯನಗರದ ಪ್ರಾಂತ್ಯಗಳ ಪೈಕಿ ಮೊಟ್ಟಮೊದಲು ಸ್ವತಂತ್ರವಾದ್ದು ಮಧುರೈ. ಬಿಜಾಪುರದ ಮತ್ತು ಗೋಲ್ಕೋಂಡದ ಸುಲ್ತಾನರೂ ಅನಂತರ ಮೊಗಲ್ ಸೈನ್ಯಗಳೂ ತಮಿಳು ನಾಡಿನ ಮೇಲೆ ದಾಳಿ ನಡೆಸಿದವು. ಮುಸ್ಲಿಮರ ಕರ್ಣಾಟಕ ಆಕ್ರಮಣ ಸಂಪೂರ್ಣವಾದ್ದು 1652ರಲ್ಲಿ. 1693ರಲ್ಲಿ ಮಧುರೈ ಮತ್ತು ತಂಜಾವೂರು ಔರಂಗ್‍ಜೇಬನ ಅಧೀನ ರಾಜ್ಯಗಳಾದವು. 1686ರಲ್ಲಿ ಪುದುಕೋಟೈಯ ತೊಂಡಮಾನರು ಸ್ವತಂತ್ರ ರಾಜ್ಯಸ್ಥಾಪನೆ ಮಾಡಿದರು. ಮಧುರೆಯ ರಾಜಪ್ರತಿನಿಧಿಯಾಗಿದ್ದ (1689-1706) ರಾಣಿ ಮಂಗಮ್ಮಾಳ್ ರಸ್ತೆಗಳನ್ನೂ ದೇವಸ್ಥಾನಗಳನ್ನೂ ಕೊಳಗಳನ್ನು ಛತ್ರಗಳನ್ನೂ ಕಟ್ಟಿಸಿದಳು. ಜನೋಪಯುಕ್ತ ಕಾರ್ಯಗಳಿಂದಾಗಿ ಇಂದಿಗೂ ಅವಳ ನೆನಪು ತಮಿಳು ನಾಡಿನಲ್ಲಿ. ಇನ್ನೊಬ್ಬ ರಾಜಪ್ರತಿನಿಧಿಯಾಗಿದ್ದ (1732-1736) ರಾಣಿ ಮೀನಾಕ್ಷಿಗೆ ಆರ್ಕಾಟ್ ನವಾಬ್ ದೋಸ್ತ್‍ಅಲಿ ಮೋಸ ಮಾಡಿ ಅವಳನ್ನು ಸೆರೆಹಿಡಿದು ಅವಳ ರಾಜ್ಯವನ್ನು ವಶಪಡಿಸಿಕೊಂಡ. ಕರ್ನಾಟಕದ ನವಾಬರು 18ನೆಯ ಶತಮಾನದ ಆರಂಭದ ವೇಳೆಗೆ ಬಹುತೇಕ ಇಡೀ ತಮಿಳುನಾಡಿನ ಮೇಲೆ ಒಡೆತನ ಸ್ಥಾಪಿಸಿದರು. ತಂಜಾವೂರಿನ ನಾಯಕರು ಹೆಚ್ಚು ಕಡಿಮೆ ಸ್ವತಂತ್ರರಾಗಿದ್ದರೂ ಕೇಂದ್ರ ಅಧಿಕಾರಕ್ಕೆ ವಿಧೇಯರಾಗಿದ್ದರು. ಅನೇಕ ಮುಖ್ಯ ಸಂದರ್ಭಗಳಲ್ಲಿ ಅದರ ನೆರವಿಗೆ ಹೋದರು. ಇವರ ಪೈಕಿ ಕೊನೆಯವನು ವಿಜಯರಾಘವ (1633-73). ಇವನು ದುರ್ಬಲನೂ ಅಸಮರ್ಥನೂ ಆದ ಆಡಳಿತಗಾರನಾಗಿದ್ದ. ಇತರ ನಾಯಕರೂ ಮುಸ್ಲಿಮರೂ ಯರೋಪಿಯನ್ನರೂ ನೀಡಿದ ಕೋಟಲೆಗಳನ್ನು ಎದುರಿಸಲಾರದೆ ಹೋದ. ತಂಜಾವೂರು ಸ್ವಲ್ಪ ಕಾಲ ಬಿಜಾಪುರ ಸುಲ್ತಾನನ ಆಳ್ವಿಕೆಗೆ ತುತ್ತಾಗಿತ್ತು (1659). ಮದುರೆಯ ನಾಯಕ ಚೊಕ್ಕನಾಥ ತಂಜಾವೂರಿನ ಮೇಲೆ ಆಕ್ರಮಣ ನಡೆಸಿದಾಗ (1673) ವಿಜಯರಾಘವ ಮಡಿದ. 1676ರಲ್ಲಿ ಏಕೋಜಿ (ವೆಂಕೋಜಿ) ತಂಜಾವೂರಿನ ಸಿಂಹಾಸನವನ್ನಾಕ್ರಮಿಸಿಕೊಂಡ, ತಂಜಾವೂರು ನಾಯಕರ ಆಳ್ವಿಕೆ ಕೊನೆಗೊಂಡಿತು. ಏಕೋಜಿಯ ಅನಂತರ ಅವನ ವಂಶದವರು ಕರ್ನಾಟಕದ ನವಾಬನ ಆಶ್ರಯದಲ್ಲೂ ಅನಂತರ ಈಸ್ಟ್ ಇಂಡಿಯ ಕಂಪನಿಯ ಆಶ್ರಿತರಾಗಿಯೂ ಮುಂದುವರಿದರು. 1799ರಲ್ಲಿ ವೆಲ್ಲೆಸ್ಲಿಯ ಒತ್ತಡದಿಂದಾಗಿ ತಂಜಾವೂರಿನ ರಾಜ ಸರ್ಪೋಜಿ ಜೀವನಾಂಶ ಪಡೆದು ತನ್ನ ರಾಜ್ಯವನ್ನು ಬ್ರಿಟಿಷ್ ಆಡಳಿತದಲ್ಲೆ ಒಪ್ಪಿಸಿದ. 1855ರಲ್ಲಿ ಕೊನೆಯ ರಾಜ ತೀರಿಕೊಂಡ, ಅವನಿಗೆ ಗಂಡು ಸಂತಾನ ಇರಲಿಲ್ಲ. ಆದ್ದರಿಂದ ರಾಜಪದವಿ ಕೊನೆಗೊಂಡಿತು. ಒಟ್ಟಿನಲ್ಲಿ ದೌರ್ಬಲ್ಯ, ಉತ್ತರಾಧಿಕಾರದ ಬಗ್ಗೆ ವಾದವಿವಾದಗಳು, ಅದರ ಆಡಳಿತಗಾರರಿಂದಲೂ ಹೊರಂಗಣ ಆಕ್ರಮಣಕಾರರಿಂದಲೂ ಆ ಪ್ರದೇಶದ ಸಂಪತ್ತಿನ ಲೂಟಿ_ಇವು ತಂಜಾವೂರಿನ ಮರಾಠಿ ಆಡಳಿತದ ಹೆಗ್ಗುರುತುಗಳೆನ್ನಬಹುದು. ವಿಜಯನಗರದ ಕೃಷ್ಣದೇವರಾಯನ ಆಳ್ವಿಕೆಯ ಕಾಲದಲ್ಲಿ ಜಿಂಜೀಯಲ್ಲಿ ನಾಯಕರ ಆಳ್ವಿಕೆ ಆರಂಭವಾಯಿತು. 1649ರಲ್ಲಿ ಬಿಜಾಪುರದ ಸೇನೆಯಿಂದ ಜಿಂಜೀಯ ನಾಯಕರ ಆಳ್ವಿಕೆ ಕೊನೆಗೊಂಡಿತು. ಫ್ರಾಂಕ್ವಾ ಮಾರ್ಟಿನ್ ಎಂಬ ಫ್ರೆಂಚನಿಗೆ ಪುದುಚೇರಿಯಲ್ಲಿ ನೆಲೆ ಏರ್ಪಡಿಸಿಕೊಳ್ಳಲು 1674ರಲ್ಲಿ ಬಿಜಾಪುರದ ರಾಜ್ಯಪಾಲ ಅನುಮತಿ ನೀಡಿದ. ಮೂರು ವರ್ಷಗಳಲ್ಲಿ ಶಿವಾಜಿ ಕರ್ನಾಟಕದ ದಂಡೆಯಾತ್ರೆ ನಡೆಸಿದ. ಅವನು ಕರ್ನಾಟಕದಲ್ಲಿ ಸ್ಥಾಪಿಸಿದ ಸರ್ಕಾರಕ್ಕೆ ಜಿಂಜೀ ಆಡಳಿತಕೇಂದ್ರವಾಯಿತು. ಆದರೆ 1698 ರಲ್ಲಿ ಅದು ಮೊಗಲರ ವಶವಾಯಿತು. ಕರ್ನಾಟಕದಲ್ಲಿ ಕೋಲೆರೂನ್ ಉತ್ತರಕ್ಕೆ ಮೊಗಲರ ನೇರ ಆಡಳಿತ ಆರಂಭವಾಯಿತು. ತಮಿಳು ನಾಡಿನ ಆಧುನಿಕ ಇತಿಹಾಸ ಆರಂಭವಾಗುವುದು 16-17ನೆಯ ಶತಮಾನಗಳಲ್ಲಿ : ಪಶ್ಚಿಮದ ರಾಷ್ಟ್ರಗಳು ಇಲ್ಲಿಗೆ ಬಂದಾಗ, ಈಗಿನ ಚೆನ್ನೈ ನಗರದಲ್ಲಿ ಮತ್ತು ಅದರ ಸುತ್ತಮುತ್ತ ಪೋರ್ಚುಗೀಸರು, ಇಂಗ್ಲಿಷರು ಮುಂತಾದವರು ವ್ಯಾಪಾರ ಕೋಠಿಗಳನ್ನು ಸ್ಥಾಪಿಸಿದಾಗ, ಚೆನ್ನೈನಲ್ಲಿ ಈಗ ಫೋರ್ಟ್ ಸೇಂಟ್ ಜಾರ್ಜ್ ಇರುವ ಪ್ರದೇಶವನ್ನು ಬ್ರಿಟಿಷರು ಪ್ರವೇಶಿಸಲು 1639ರ ಆಗಸ್ಟ್ 22ರಂದು ಫ್ರಾನ್ಸಿಸ್ ಡೇ ಎಂಬವನಿಗೆ ಫರ್ಮಾನ್ ನೀಡಿದವನು ನಾಯಕ ವೆಂಕಟಾದ್ರಿ. ಅಂದಿನಿಂದ ಚೆನ್ನೈ ನಗರ ತಮಿಳು ನಾಡಿನ ಎಲ್ಲ ರಾಜಕೀಯ ಶೈಕ್ಷಣಿಕ ಆರ್ಥಿಕ ಸಾಂಸ್ಕøತಿಕ ಬೆಳವಣಿಗೆಯ ಕೇಂದ್ರವಾಗಿದೆ. 1639ರಲ್ಲಿ ಸ್ಥಾಪಿತವಾದಾಗ 7,000 ಜನರ ವಸತಿಯಾಗಿ ಆರಂಭವಾದ ನಗರ ಕ್ರಮವಾಗಿ ಬೆಳೆದಿದೆ. ಚಕ್ರವರ್ತಿ ಔರಂಗಜೇಬನ ಮರಣಾನಂತರ ದಕ್ಷಿಣದ ಮೇಲೆ ಮೊಗಲ್ ಚಕ್ರವರ್ತಿಗಳ ಹತೋಟಿ ಸಡಿಸಲಾಯಿತು. ಆರ್ಕಾಟ್ ನವಾಬನನ್ನು ತನ್ನ ಆಶ್ರಿತನನ್ನಾಗಿ ಮಾಡಿಕೊಂಡು ನಿಜಾಮ 1724ರಲ್ಲಿ ತನ್ನ ಅಧಿಕಾರ ಸ್ಥಾಪಿಸಿದ. ನಿಜಾಮನಿಗೂ ಮರಾಠರಿಗೂ ನಡುವೆ ಅಧಿಕಾರಕ್ಕಾಗಿ ನಡೆಯುತ್ತಿದ್ದ ಕಚ್ಚಾಟ ಈ ವ್ಯವಸ್ಥೆಯಿಂದೇನೂ ಬದಲಾಗಲಿಲ್ಲ. ಆ ವೇಳೆಗೆ ಯೂರೋಪಿಯನ್ ಕಂಪನಿಗಳು ಬಲಿಷ್ಠವಾಗಿದ್ದವು. 1748ರಲ್ಲಿ ನಜಾಮ್-ಉಲ್-ಮುಲ್ಕನ ಮರಣಾನಂತರ ಅಧಿಕಾರಕ್ಕಾಗಿ ನಡೆದ ಯುದ್ಧಗಳಲ್ಲಿ ಇಂಗ್ಲಿಷರೂ ಫ್ರೆಂಚರೂ ಪರಸ್ಪರ ವಿರುದ್ಧ ಪಕ್ಷಗಳನ್ನು ವಹಿಸಿ ಕಾದಾಡಿದರು. ವ್ಯಾಪಾರ ಮತ್ತು ರಾಜ್ಯಕಾರಣದಲ್ಲಿ ತಮ್ಮ ನಡುವಣ ಸ್ಪರ್ಧೆಯ ಇತ್ಯರ್ಥಕ್ಕಾಗಿ ಸೆಣಸಿದುವು. ಅಂತಿಮವಾಗಿ ಇಂಗ್ಲಿಷರಿಗೆ ಜಯ ಒಲಿಯಿತು. ಅವರ ಪಕ್ಷಕಾರ ಮಹಮ್ಮದ್ ಅಲಿವಲಾಜಾ ಕರ್ನಾಟಕದ ನವಾಬನಾದ (1752). ಭಾರತದ ಉಳಿದ ಭಾಗಗಳಂತೆ ತಮಿಳು ನಾಡೂ 18ನೆಯ ಶತಮಾನದಲ್ಲಿ ಅವ್ಯವಸ್ಥೆ ಮತ್ತು ದುರಾಡಳಿತಗಳಿಗೆ ಒಳಗಾಗಿತ್ತು: ಬಹುತೇಕ ಅರಾಜಕತೆಯೇ ಹಬ್ಬಿತ್ತು. ಮದ್ರಾಸಿನಲ್ಲಿದ್ದ ಕಂಪನಿ ಸರ್ಕಾರ ದುರ್ಬಲವಾಗಿತ್ತು : ನಿಜಾಮ ಮತ್ತು ಮಹಮ್ಮದ್ ಅಲಿ ಇವರ ನಡುವೆಯಾಗಲಿ ಮಹಮ್ಮದ್ ಅಲಿ ಮತ್ತು ಇತರ ಸಣ್ಣಪುಟ್ಟ ಆಡಳಿತಗಾರರ ನಡುವೆಯಾಗಲಿ ಶಾಂತಿ ಸ್ಥಿರಗೊಳಿಸಲು ಅಸಮರ್ಥವಾಗಿತ್ತು; ಮಹಮ್ಮದ್ ಅಲಿಯ ಅನ್ಯಾಯಗಳನ್ನು ನಿಲ್ಲಿಸಲಾರದಾಗಿತ್ತು. ಮಹಮ್ಮದ್ ಅಲಿಯ ಕೋಟೆಗಳು ಇಂಗ್ಲಿಷರ ಅಧೀನದಲ್ಲಿದ್ದುವು. ಯುದ್ಧ ಕಾಲದಲ್ಲಿ ಇಡೀ ಆಡಳಿತವನ್ನು ಇಂಗ್ಲಿಷರು ವಹಿಸಿಕೊಳ್ಳಬಹುದಿತ್ತು. ಯೂರೋಪಿಯನ್ ಸಾಲಿಗರಿಂದ ನವಾಬ ಬಹಳ ಸಾಲ ಮಾಡಿದ್ದ. ಕಂಪನಿಗೆ ಇದು ಒಂದು ಸಮಸ್ಯೆಯಾಗಿತ್ತು. ನವಾಬ ಟಿಪ್ಪು ಸುಲ್ತಾನನೊಂದಿಗೆ ಪತ್ರವ್ಯವಹಾರ ನಡೆಸುತ್ತಿದ್ದಾನೆಂದು ವೆಲ್ಲೆಸ್ಲಿ ಕಂಡುಹಿಡಿದ. ಕರ್ನಾಟಕದ ಆಡಳಿತವನ್ನು ವಹಿಸಿಕೊಳ್ಳುವುದಕ್ಕೆ ಅದೇ ಒಂದು ನೆರವಾಯಿತು. ಇದಕ್ಕೆ ಪ್ರತಿಯಾಗಿ ವರಮಾನದ ಐದನೆಯ ಒಂದು ಭಾಗವನ್ನು ನವಾಬನಿಗೆ ವರ್ಷಾಶನವಾಗಿ ನೀಡಲಾಯಿತು. ಇದಕ್ಕೆ ಮುಂಚೆ, 3ನೆಯ ಮೈಸೂರು ಯುದ್ಧದ (1792) ಫಲವಾಗಿ ದಿಂಡಿಗಲ್ ಮತ್ತು ಅದರ ಸುತ್ತಮುತ್ತಣ ಪ್ರದೇಶವನ್ನೂ ಇನ್ನು ಕೆಲವು ಪ್ರದೇಶಗಳನ್ನೂ ಟಿಪ್ಪು ಸುಲ್ತಾನನಿಂದ ಕಿತ್ತುಕೊಳ್ಳಲಾಗಿತ್ತು. 1799ರಲ್ಲಿ ಕೊಯಮತ್ತೂರು ಇಂಗ್ಲಿಷರಿಗೆ ಸೇರಿತು. ಹೀಗೆ 19ನೆಯ ಶತಮಾನದ ಆರಂಭದ ವೇಳೆಗೆ ಇಡೀ ತಮಿಳು ನಾಡು ಕಂಪನಿಯ ಆಡಳಿತಕ್ಕೆಒಳಪಟ್ಟಿತ್ತು. ವಾರನ್ ಹೇಸ್ಟಿಂಗ್ಸ್ ಗವರ್ನರ್ ಆದಾಗಿನಿಂದ ಇಂಗ್ಲಿಷರು ದೇಶದ ಆಳ್ವಿಕೆಯಲ್ಲಿ ಹೆಚ್ಚು ಆಸಕ್ತರಾದರು. ತಮಿಳು ನಾಡಿನ ಬಹುಭಾರವನ್ನೂ ತೆಲುಗು ಮಲಯಾಳಂ ಕನ್ನಡ ಭಾಷೆಗಳನ್ನಾಡುತ್ತಿದ್ದ ಜನರಿದ್ದ ಕೆಲವು ಪ್ರದೇಶಗಳನ್ನೂ ಒಳಗೊಂಡ ಮದ್ರಾಸ್ ಪ್ರಾಂತ್ಯದ ರಚನೆಯಾಯಿತು. ಮದ್ರಾಸ್ ನಗರ ರಾಜಧಾನಿಯಾಯಿತು. ಮಧುರೈ, ತಂಜಾವೂರು, ಕಾಂಚೀಪುರ, ಗಂಗೈಕೊಂಡ ಚೋಳಪುರ ಇವೆಲ್ಲ ತಮ್ಮ ಪ್ರಾಮುಖ್ಯವನ್ನು ಕಳೆದುಕೊಂಡುವು. ಬ್ರಿಟಷರು ಪ್ರಥಮವಾಗಿ ವ್ಯಾಪಾರದಲ್ಲಿ ಆಸಕ್ತರಾಗಿದ್ದುದರಿಂದ ಬಂದರು ನಗರವಾದ ಮದ್ರಾಸ್ ಅವರ ಗಮನ ಸೆಳೆಯಿತು. ಬ್ರಿಟಿಷ್ ಆಡಳಿತದ ಕಾಲದ ಮದ್ರಾಸ್ ಪ್ರಾಂತ್ಯದಲ್ಲಿ 25 ಜಿಲ್ಲೆಗಳಿದ್ದುವು. 1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಅದರ ಅಂಗವಾದ ಮದ್ರಾಸ್ ಪ್ರಾಂತ್ಯ ಕೂಡ ಸ್ವತಂತ್ರವಾಯಿತು. 1950ರಲ್ಲಿ ಭಾರತ ಗಣರಾಜ್ಯವಾದಾಗ ಚೆನ್ನೈ ಒಂದು ರಾಜ್ಯವಾಯಿತು. ತೆಲುಗು ಮಾತನಾಡುವ ಜನರು ಬಹುಸಂಖ್ಯೆಯಲ್ಲಿದ್ದ ಭಾಗವನ್ನು 1953ರಲ್ಲಿ ಆಂಧ್ರ ರಾಜ್ಯವೆಂದು ಪ್ರತ್ಯೇಕಿಸಲಾಯಿತಲ್ಲದೆ, ಬಳ್ಳಾರಿ ಜಿಲ್ಲೆಯನ್ನು ಮೈಸೂರು ರಾಜ್ಯಕ್ಕೆ ಸೇರಿಸಲಾಯಿತು. 1956ರಲ್ಲಿ ಭಾರತದ ರಾಜ್ಯಗಳ ಪುನರ್ವಿಂಗಡಣೆಯಾದಾಗ ದಕ್ಷಿಣ ಕನ್ನಡ ಜಿಲ್ಲೆ ಮೈಸೂರು ರಾಜ್ಯಕ್ಕೂ (ಕರ್ನಾಟಕ) ಮಲಬಾರು ಕೇರಳ ರಾಜ್ಯಕ್ಕೂ ಹಿಂದಿನ ತಿರುವಾಂಕೂರು ಸಂಸ್ಥಾನದ ದಕ್ಷಿಣ ಭಾಗದ ತಮಿಳು ಪ್ರದೇಶಗಳು ಮದ್ರಾಸ್ ರಾಜ್ಯದ ಪ್ರದೇಶಕ್ಕೂ ಸೇರಿದುವು. ರಾಜ್ಯಕ್ಕೆ ಅಧಿಕೃತವಾಗಿ ತಮಿಳು ನಾಡು ಎಂದು ನಾಮಕರಣವಾಯಿತು. ವಾಸ್ತು ಶಿಲ್ಪ ತಮಿಳು ನಾಡಿನಲ್ಲಿ ಕ್ರಿ.ಶ. 7ನೆಯ ಶತಮಾನಕ್ಕೆ ಹಿಂದಿನ, ಯಾವುದೇ ಧರ್ಮಕ್ಕೆ ಸೇರಿದ, ಕಟ್ಟಡಗಳು ಉಳಿದುಬಂದಿಲ್ಲ. ಆದರೆ ಕ್ರಿ.ಪೂ. ಸು. 2ನೆಯ ಶತಮಾನದಿಂದ ಕ್ರಿ.ಶ 2ನೆಯ ಶತಮಾನದವರೆಗಿನ ಸಂಗಮ್ ಸಾಹಿತ್ಯದಲ್ಲೂ ಅನಂತರ ಆಳ್ವಾರ್‍ಗಳು ಮತ್ತು ನಾಯನ್ಮಾರ್‍ಗಳು ರಚಿಸಿದ ಭಕ್ತಿ ಸಾಹಿತ್ಯದಲ್ಲೂ ಧಾರ್ಮಿಕ ಕಟ್ಟಡಗಳಿಗೆ ಸಂಬಂಧಿಸಿದ ಹಲವಾರು ಉಲ್ಲೇಖಗಳಿವೆ. ಇಳಙÉ್ಕೂೀಯಿಲ್. ಮಾಡಕ್ಕೋಯಿಲ್ ಆಲರ್ ಕೋಯಿಲ್‍ಗಳು ಇವುಗಳ ಪೈಕಿ ಕೆಲವು. ಅಲ್ಲದೆ ವಾಸ್ತುಶಿಲ್ಪಕ್ಕೆ ಸಂಬಂಧಿಸಿದ ಅನೇಕ ಪಾರಿಭಾಷಿಕ ಪದಗಳೂ ಸಾಹಿತ್ಯದಲ್ಲಿ ಕಂಡುಬಂದಿವೆ. ಇದರಿಂದ ಸಂಗಮ್ ಕಾಲದಲ್ಲೇ ತಮಿಳು ನಾಡಿನಲ್ಲಿ ಹಲವಾರು ಕಟ್ಟಡಗಳು ನಿರ್ಮಾಣಗೊಂಡಿದ್ದುವೆಂದು ಹೇಳಬಹುದು. ಬೇಗನೆ ನಶಿಸುವ ಮರಮುಟ್ಟುಗಳನ್ನು ಬಹುಶ: ಆಗ ಉಪಯೋಗಿಸಿದ್ದುದು ಆ ಕಟ್ಟಡಗಳು ಇಂದು ಉಳಿದಿಲ್ಲದಿರುವುದಕ್ಕೆ ಕಾರಣವಾಗಿರಬಹುದು. ಆದರೆ ಅನಂತರ ವೈಷ್ಣವ ಹಾಗೂ ಶೈವ ಭಕ್ತಿಪಂಥಗಳು ತಮಿಳು ನಾಡಿನಲ್ಲೆಲ್ಲ ಹಬ್ಬಿದುವು. ಈ ಚಳವಳಿಗಳ ಫಲವಾಗಿ ಎಲ್ಲೆಲ್ಲೂ ದೇವಾಲಯಗಳು ನಿರ್ಮಿತವಾಗಿವೆ. ರಚನಾಕ್ರಮದಲ್ಲಿ, ಅಲಂಕರಣದಲ್ಲಿ ಇವು ವಿಭಿನ್ನವಾಗಿದ್ದರೂ ಇವುಗಳಲ್ಲಿ ಅನುಸರಿಸಿದ ಶೈಲಿ ಮಾತ್ರ ಒಂದೇ. ಅದು ದ್ರಾವಿಡ ಶೈಲಿ. ಗೋಪುರಾಕಾರದ ಮೇಲ್ಕಟ್ಟಡ. ಸರಳವಾದ ಹೊರಮೈಗೋಡೆ, ಎಂಬ ಸಾಲುಗಳುಳ್ಳ ಮಂಟಪಗಳು-ಇವು ಈ ಶೈಲಿಯ ಪ್ರಮುಖ ಲಕ್ಷಣಗಳು. ಶತಮಾನಗಳ ಅನಂತರ ಬಂದ ಶಿಲ್ಪಶಾಸ್ತ್ರ ಗ್ರಂಥಗಳು ಮತ್ತು ಆಗಮಗಳು ವಾಸ್ತುಶಿಲ್ಪಕ್ಕೆ ಸಂಬಂಧಿಸಿದ ಅನೇಕ ವಿವರಗಳನ್ನೂ ನೀಡಿವೆ. ಕಟ್ಟಡಗಳಿಗಾಗಿ ಸೂಕ್ತವಾದ ಕ್ಷೇತ್ರದ ಹಾಗೂ ಸಾಮಗ್ರಿಗಳ ಆಯ್ಕೆ, ಭಿನ್ನ ವಿನ್ಯಾಸಗಳಿಗೆ ಸಂಬಂಧಿಸಿದ ಮಾನಗಳು, ದೇವಾಲಯಗಳಲ್ಲಿ ಸ್ಥಾಪಿಸುವ ಪ್ರತಿಮೆಗಳ ಲಕ್ಷಣಗಳು. ಪೂಜಾವಿಧಿ ಪೂಜಾಸಾಮಗ್ರಿ, ತಾತ್ತ್ವಿಕ ಹಿನ್ನೆಲೆ, ಮುಂತಾದ ಎಲ್ಲ ವಿವರಗಳನ್ನೂ ಈ ಗ್ರಂಥಗಳಲ್ಲಿ ಕೊಟ್ಟಿದೆ. ಅನೇಕ ಸ್ತರಗಳ ವಿಮಾನಗಳನ್ನೂ ಒಂದರಿಂದ ಹಿಡಿದು ಸಾವಿರದವರೆಗಿನ ಕಂಬಗಳನ್ನುಳ್ಳ ಮಂಟಪಗಳನ್ನೂ ರಚಿಸುವ ವಿಧಾನಗಳನ್ನು ವಿವರಿಸಿದೆ. ವಿಮಾನ (ಗರ್ಭಗೃಹ). ಮಂಟಪಗಳು, ಪ್ರಾಕಾರ, ಧ್ವಜ ಸ್ತಂಭ ಹಾಗೂ ಗೋಪುರ-ಇವು ದೇವಾಲಯದಲ್ಲಿ ಪ್ರಮುಖವಾದ ಭಾಗಗಳು. ವಿಮಾನದಲ್ಲೂ ಅಧಿಷ್ಠಾನ, ಭಿತ್ತಿ, ಪ್ರಸ್ತರ, ಹಾರ, ಶಿಖರ ಮತ್ತು ಸ್ತೂಪಿ ಎಂಬ ಷಡಂಗಗಳಿರುತ್ತವೆ. ತಮಿಳುನಾಡಿನ ಅತ್ಯಂತ ಪ್ರಾಚೀನ ದೇವಾಲಯದ ವಾಸ್ತುಶಿಲ್ಪವನ್ನು ಪಲ್ಲವ 1ನೆಯ ಮಹೇಂದ್ರವರ್ಮ (ಸು.580-630) ಬಂಡೆಯಲ್ಲಿ ಕೊರೆಯಿಸಿದ ದೇವಾಲಯಗಳಲ್ಲಿ ಕಾಣಬಹುದು. ಮಂಡಗ ಪಟ್ಟುವಿನ ಗುಹಾ ದೇವಾಲಯವೊಂದರಲ್ಲಿ ದೊರೆತ ಆತನ ಶಾಸನದಲ್ಲಿ ಅವನು ಬ್ರಹ್ಮ ವಿಷ್ಣು ಮಹೇಶ್ವರರಿಗಾಗಿ ಮರ, ಲೋಹ ಮತ್ತು ಗಾರೆಗಳಿಂದ ಕೂಡಿದ ಆಯತನವನ್ನು ಕಟ್ಟಿಸಿದುದಾಗಿ ಹೇಳಿದೆ. ಈ ಕಾಲಕ್ಕೆ ಸೇರಿದ ಇಂಥ ಗುಡಿಗಳು ಮದ್ರಾಸಿನ ಬಳಿಯ ಪಲ್ಲವರಂ, ತಿರುಚನಾಪಲ್ಲಿ, ದಳವಾನೂರು ಮುಂತಾದ ಕಡೆಗಳಲ್ಲಿ ಸಿಕ್ಕಿವೆ. ಇವುಗಳಲ್ಲಿ ಒಂದು, ಮೂರು ಅಥವಾ ಹೆಚ್ಚಿನ ಗರ್ಭಗೃಹಗಳಿವೆ. ಅಷ್ಟಕೋನಾಕಾರದ ನಡು ಭಾಗದಿಂದ ಕೂಡಿದ ಚಚ್ಚೌಕನೆಯ ಕಂಬಗಳಿರುತ್ತವೆ. ಈ ಕಂಬಗಳ ಚಚ್ಚೌಕದ ಬದಿಗಳ ಮೇಲೆ ಕಮಲ ಫಲಕಗಳಿವೆ. ಒಂದು ಬಾಗು ಇರುವ, ಏಣುಗಳುಳ್ಳ, ಮನುಷ್ಯನ ಮುಖವನ್ನು ಕೆತ್ತಿರುವ ಕಪೋತ ಪಾಲಿಕೆಗಳೂ ಗುಡಿಯ ದ್ವಾರದ ಎರಡೂ ಕಡೆ ಇರುವ ಎರುಡು ಕಥೆಗಳ ದ್ವಾರಪಾಲಕ ಮೂರ್ತಿಗಳೂ ಇರುತ್ತವೆ. ಇವು ಈ ಗುಡಿಗಳ ಪ್ರಮುಖ ಲಕ್ಷಣಗಳು. ಒಂದನೆಯ ಮಹೇಂದ್ರವರ್ಮನ ಮಗ 1ನೆಯ ನರಸಿಂಹವರ್ಮ ಮಾಮಲ್ಲ(7ನೆಯ ಶತಮಾನದ ನಡುಗಾಲ) ಬಾದಾಮಿಗೆ ದಂಡೆತ್ತಿ ಹೋದಾಗ ಅಲ್ಲಿ ಬಯಲಿನಲ್ಲಿ ಕಟ್ಟಿದ್ದ, ಕಿರಿದಾದರೂ ಮುದ್ದಾದ, ಗುಡಿಗಳನ್ನು ಕಂಡ. ಆ ವೇಳೆಗಾಗಲೇ ಆ ಶೈಲಿಯಲ್ಲಿ ರೂಪುಗೊಂಡಿತ್ತು ಅವುಗಳಿಂದ ಪ್ರಭಾವಿತನಾದ ಆತ ಮಹಾಬಲಿಪುರದಲ್ಲಿ ಸಮುದ್ರತೀರದ ಮೇಲಿದ್ದ ಹೆಬ್ಬಂಡೆಗಳನ್ನು ಕೊರೆಯಿಸಿ ರಥಗಳೆಂದು ಕರೆಯಲಾದ ಅಖಂಡವಾದ ಗುಡಿಗಳನ್ನು ಕಟ್ಟಿಸಿದ, ಬಯಲಿನಲ್ಲಿ ಗುಡಿಗಳನ್ನು ಕಟ್ಟುವ ಪ್ರವೃತ್ತಿ ಇಲ್ಲಿಂದ ಆರಂಭವಾಯಿತು ಗುಡಿಸಿಲಿನ ಆಕಾರದ ಭೀಮರಥ ಮತ್ತು ಗಜಪೃಷ್ಠಾಕಾರದ ನಕುಲ ಸಹದೇವರಥಗಳು ತಮಿಳು ನಾಡಿನಲ್ಲಿ ಉಳಿದಿರುವ ಅತ್ಯಂತ ಪ್ರಾಚೀನ ದೇವಾಲಯಗಳ ಉದಾಹರಣೆಗಳು. ಇವುಗಳ ಶಿಖರಗಳು ಚೌಕ, ಅಷ್ಟಕೋನ ಅಥವಾ ಜಗಪೃಷ್ಠಾಕಾರಗಳಲ್ಲಿವೆ. ಗೋಡೆಯನ್ನು ಗೋಡೆಗಂಬಗಳಿಂದ ಅಂಕಣಗಳಾಗಿ ವಿಭಜಿಸಲಾಗಿದೆ. ಈ ಕಂಬಗಳ ತುದಿಯಲ್ಲಿ ತರಂಗಬೋದಿಗೆಗಗಳನ್ನು ಕೂಡಿಸಲಾಗಿದೆ. ಇವುಗಳ ನಡುವೆ ಮಾನವ ಹಾಗೂ ದೈವಆಕೃತಿಯ ವಿವಿಧ ಭಂಗಿಯ ವಿಗ್ರಹಗಳನ್ನು ಬಿಡಿಸಲಾಗಿದೆ. ಅವುಗಳ ಭಿನ್ನ ರೂಪಗಳಿಂದಾಗಿಯೂ ಅಚ್ಚುಕಟ್ಟಾದ ಪ್ರಮಾಣ, ನಾಜೂಕಾದ ಕೆತ್ತನೆ ಮತ್ತು ಅಲಂಕಾರಗಳಿಂದಾಗಿಯೂ ಈ ಕಂಬಗಳು ಇಂದಿಗೂ ಸಾಟಿಯಿಲ್ಲದವುಗಳೆನಿಸಿವೆ. ಈ ಗುಡಿಗಳಾವುದಕ್ಕೂ ಪ್ರಾಕಾರ, ಮಹಾದ್ವಾರ, ಗೋಪುರ ಮುಂತಾದವು ಇಲ್ಲ. ಪಲ್ಲವ 1ನೆಯ ಪರಮೇಶ್ವರವರ್ಮನ, ಎಂದರೆ 7ನೆಯ ಶತಮಾನದ ಉತ್ತರಾರ್ಧದ, ಕಾಲದಿಂದ ಹೊಸ ನಮೂನೆಯ ಆಲಯಗಳು ನಿರ್ಮಾಣವಾಗತೊಡಗಿದುವು. ಇವು ಏಕಶಿಲೆಯಲ್ಲಿ ಬಿಡಿಸಿದವುಗಳಾಗಿರದೆ ಕಲ್ಲಿನ ತುಂಡುಗಳಿಂದ ನಿರ್ಮಿತವಾದವು. ಚೆಂಗಲ್ಪಟ್‍ಗೆ ಸಮೀಪದ ಕೂರಮ್‍ನಲ್ಲಿಯ ಶಿವಾಲಯ ಇದಕ್ಕೆ ಒಂದು ಪ್ರಾಚೀನ ನಿದರ್ಶನ. ಇದು ಮಹಾಬಲಿಪುರದ ನಕುಲ-ಸಹದೇವ ರಥದಂತೆ ಗಜಪೃಷ್ಠಾಕಾದಲ್ಲಿರುವುದು ಗಮನಾರ್ಹ. ತಿರುಕ್ಕಳು ಕುನ್ಚಮ್‍ನಲ್ಲಿ ಇಂಥ ಇನೊಂದು ಆಲಯವಿದೆ. ಈ ದೇವಾಲಯಗಳೂ ಅಷ್ಟು ದೊಡ್ಡವೇನೂ ಅಲ್ಲ. ಇವಕ್ಕೂ ಪ್ರಾಕಾರವಾಗಲಿ ಗೋಪುರವಾಗಲಿ ಇಲ್ಲ. ರಾಜಸಿಂಹ ಇಮ್ಮಡಿ ನರಸಿಂಹವರ್ಮನ ಕಾಲದಲ್ಲಿ ವಾಸ್ತುಶಿಲ್ಪ ಅದುವರೆಗೂ ಅಭಿವೃದ್ಧಿ ಹೊಂದಿದಷ್ಟು ಅಭಿವೃದ್ಧಿ ಹೊಂದಿತ್ತು. ಇದು ಮುಂದಿನ ಹಲವು ಶತಮಾನಗಳಿಗೆ ಮಾದರಿಯಾಗಿ ಉಳಿಯಿತು. ತಮಿಳು ನಾಡಿನ ವಾಸ್ತು ಶಿಲ್ಪ ಅದೇ ಜಾಡಿನಲ್ಲಿ ಮುಂದುವರಿಯಿತೆನ್ನಬಹುದು. ರಾಜಧಾನಿಯಾದ ಕಾಂಚೀಪುರದ ಕೈಲಾಸನಾಥ ಮತ್ತು ಪನಮಲೈ ಗ್ರಾಮದ ತಾಲಗಿರೀಶ್ವರ ದೇವಾಲಯಗಳೂ ಮಹಾಬಲಿಪುರದ ಸಮುದ್ರತೀರದಲ್ಲಿರುವ, ಮೂರು ಗರ್ಭಗುಡಿಗಳಿಂದ ಕೂಡಿದ ಅಪೂರ್ವ ದೇವಾಲಯವೂ ಇವನ ಕಾಲದಲ್ಲಿ ವಾಸ್ತುಶಿಲ್ಪ ಕ್ಷೇತ್ರದಲ್ಲಿ ಆದ ಸಾಧನೆಯ ಪ್ರತೀಕಗಳಾಗಿವೆ. ಇವು ಮೂರೂ ಕಲ್ಲಿನ ಕಟ್ಟಡಗಳು. ಇವು ಹಲವು ತಲಗಳ ಉನ್ನತ ಮೇಲ್ಕಟ್ಟಡಗಳಿಂದ ಕೂಡಿವೆ. ತಾಲಗಿರೀಶ್ವರ ಆಲಯ ವಿನಾ ಉಳಿದ ಎರಡಕ್ಕೆ ಪ್ರಾಕಾರಗಳಿವೆ. ಕಂಚಿಯ ಕೈಲಾಸನಾಥಾಲಯದ ಪ್ರಾಕಾರದ ಒಳಹೊರ ಪಾಶ್ರ್ವಗಳಲ್ಲಿ ಹಲವಾರು ಸಣ್ಣ ಗುಡಿಗಳ ಸಾಲುಗಳಿರುವುದು ಗಮನಾರ್ಹ. ಸಣ್ಣ ಗೋಪುರ ಸಹ ಈ ಆಲಯಕ್ಕಿದೆ; ಈ ಬಗೆಯ ರಚನೆಗಳಲ್ಲಿ ಇದೇ ಅತ್ಯಂತ ಪ್ರಾಚೀನವಾದ್ದು. ಮಧ್ಯದ ಗುಡಿಯಲ್ಲಿ ಲಿಂಗವನ್ನು ಪ್ರತಿಷ್ಠಿಸಿದೆ. ಇದಕ್ಕೆ ಪೂರಕವಾಗಿ ಹೊರಮುಖವಾಗಿ ಇನ್ನೂ ಏಳು ಗುಡಿಗಳಿವೆ. ಆದರೆ ಅನಂತರದ ಕಾಲದಲ್ಲಿ ಈ ಉಪಗುಡಿಗಳನ್ನು ಮುಖ್ಯ ಗುಡಿಯಿಂದ ಪ್ರತ್ಯೇಕಿಸಿ ದೇವಾಲಯದ ಅಂಗಳದಲ್ಲಿ ಕಟ್ಟುವ ಪದ್ಧತಿ ಅಸ್ತಿತ್ವಕ್ಕೆ ಬಂತು. ಮಹಾಬಲಿಪುರದ ಕಡಲಕರೆಯ ದೇವಾಲಯದ ಗೋಪುರ ಈಗ ಉಳಿದಿಲ್ಲ. ಆದರೆ ಅದರ ಪ್ರಾಕಾರದಲ್ಲಿ ತಲೆ ಎತ್ತಿ ಮಲಗಿದ ವೃಷಭಗಳನ್ನು ಸಾಲಾಗಿ ಕೆತ್ತಲಾಗಿತ್ತು. ಅವುಗಳಲ್ಲಿ ಕೆಲವು ಇನ್ನೂ ಇವೆ. ಕಾಂಚೀಪುರದ ವೈಕುಂಠ ಪೆರುಮಾಳ್ ದೇವಾಲಯ ಸಹ ಸುಮಾರು ಇದೇ ಕಾಲದ್ದು; ಎಂದರೆ ಎಂಟನೆಯ ಶತಮಾನದ ಮಧ್ಯಭಾಗಕ್ಕೆ ಸೇರಿದ್ದು. ಅನ್ಯತ: ಮೇಲಿನ ಗುಡಿಗಳಂತೆಯೇ ಇದ್ದರೂ, ಇದಕ್ಕೆ ಮೂರು ಅಂತಸ್ತುಗಳ ವಿಮಾನವಿದೆ. ಇಂಥ ವಿಮಾನಗಳನ್ನು ಅಷ್ಟಾಂಗ ವಿಮಾನಗಳೆಂದು ಕರೆಯಲಾಗಿದೆ. ಈ ಬಗೆಯ ವಿಮಾನಕ್ಕೆ ಇದು ಬಹುಶ: ಅತ್ಯಂತ ಪ್ರಾಚೀನ ನಿದರ್ಶನ. ಅನಂತರದ ಶತಮಾನಗಳಲ್ಲಿ ಚೌಕ ಅಥವಾ ಗಜಪೃಷ್ಠಾಕಾರದ ಶೀಲಾ ದೇವಾಲಯಗಳು ಸಾಮಾನ್ಯವಾಗಿ ನಿರ್ಮಿತವಾಗಿತ್ತಿದ್ದುವು. ಕೆಲವು ದೇವಾಲಯಗಳು ಚೌಕನೆಯ ಮೈಯ, ಆದರೆ ಗಜಪೃಷ್ಠಾಕೃತಿಯ ಮೇಲ್ಕಟ್ಟಡವುಳ್ಳಂಥವಾಗಿದ್ದುವು. ಇನ್ನು ಕೆಲವು ದೇವಾಲಯಗಳಲ್ಲಿ ವರ್ತುಲಾಕಾದ ಗರ್ಭಗುಡಿಗಳೂ ಚೌಕಾಕಾರದ ಪ್ರಾಕಾರಗಳೂ ಇದ್ದುವು. ಪುದುಕೋಟೈ ಜಿಲ್ಲೆಯ ನಾರ್ತಾಮಲೈ ಗ್ರಾಮದ ವಿಜಯಾಲಯ ಚೋಳೇಶ್ವರ ದೇವಾಲಯದಲ್ಲಿ ಇಂಥ ವರ್ತುಲಾಕಾರದ ಗರ್ಭಗುಡಿ ಇದೆ. ಚೋಳ ಶೈಲಿಯ ಆರಂಭದ ದೆಸೆಯನ್ನು ಇಲ್ಲಿ ಗುರುತಿಸಬಹುದು. ಇದು ಬಹುಶ: 9ನೆಯ ಶತಮಾನದ ಮಧ್ಯಭಾಗದಲ್ಲಿ ವಿಜಯಾಲಯ ಚೋಳನಿಂದ ನಿರ್ಮಿತವಾಯಿತೆಂದು ಹೇಳಲಾಗಿದೆ. ಇಲ್ಲಿ ಮಧ್ಯದ ಮುಖ್ಯ ಗುಡಿಯ ಸುತ್ತಲೂ ಉಪಗುಡಿಗಳನ್ನು ನಿರ್ಮಿಸಲಾಗಿದೆ. ಈ ಹೊಸ ಪದ್ಧತಿಯಲ್ಲಿ ಸ್ವಲ್ಪ ಕಾಲದ ಅನಂತರ ನಿರ್ಮಿಸಲಾದ ಕಟ್ಟಡದ ಉದಾಹರಣೆಯೆಂದರೆ ಪುದುಕೋಟೈ ಬಳಿಯ ತಿರುಕ್ಕಟ್ಟಳ್ಳೆ ಗ್ರಾಮದ ಸುಂದರೇಶ್ವರಾಲಯ. ಸುಮಾರು ಇದೇ ಅವಧಿಯ, ಆದರೆ ಪಾಂಡ್ಯರ ಆಳ್ವಿಕೆಗೆ ಒಳಪಟ್ಟ ಪ್ರದೇಶದ ಕಛಿಗುಮಲೈಯಲ್ಲಿಯ ವೆಟ್ಟುವನ್ ಕೋವಿಲ್‍ನಲ್ಲಿ ಸಹ ಚೋಳರ ಪ್ರದೇಶದ ದೇವಾಲಯ ವಾಸ್ತು ಲಕ್ಷಣಗಳನ್ನು ಕಾಣಬಹುದು. ಇಲ್ಲಿಯದು ಏಕಶಿಲಾ ದೇವಾಲಯ. ಈ ಶೈಲಿಯ ದೇವಾಲಯಗಳಲ್ಲಿ ಮುಖ್ಯವಾಗಿ ಆರು ಅಥವಾ ಎಂಟು ಮೂಲೆಗಳ ಅಥವಾ ಗೋಳಾಕಾರದ ಶಿಖರಗಳು, ಗರ್ಭಗುಡಿಯ ಸುತ್ತಲಿನ ಗೋಡೆಯ ಒಳಮುಖದಲ್ಲಿ ಅಳವಡಿಸಲಾದ ದೇವಕೋಷ್ಠಗಳು. ಆಯಾಕಾರದ ಬೋದಿಗೆಗಳನ್ನುಳ್ಳ ಕಂಬಗಳು ಮತ್ತು ಗೋಡೆಗಂಬಗಳು ಇರುತ್ತವೆ. ಈ ಬೋದಿಗೆಗಳ ಎರಡು ತುದಿಗಳನ್ನು ಒಂದು ಕೋನದಲ್ಲಿ ತುಂಡರಿಸಿದಾಗ ಮಧ್ಯಭಾಗ ಮುಂಚಾಚಿದಂತೆ ತೋರುತ್ತದೆ. ದೇವಕೋಷ್ಠಗಳಲ್ಲಿ ಸಾಮಾನ್ಯವಾಗಿ ಗಣೇಶ, ದಕ್ಷಿಣಾಮೂರ್ತಿ, ಅರ್ಧನಾರೇಶ್ವರ ಮತ್ತು ದುರ್ಗೆಯರ ವಿಗ್ರಹಗಳನ್ನು ಸ್ಥಾಪಿಸಲಾಗಿರುತ್ತದೆ. ವಿಜಯಾಲಯನ ಮಗ ಆದಿತ್ಯ ಕಾವೇರಿಯ ಎರಡೂ ತೀರಗಳಲ್ಲಿ ಹಲವಾರು ಗುಡಿಗಳನ್ನು ಕಟ್ಟಿಸಿದ. ಅವುಗಳಲ್ಲಿ ಹಲವು ಈಗಲೂ ಇವೆ. ಇವನು ಸಂಪ್ರದಾಯವನ್ನು ಮುಂದುರಿಸಿದುದಲ್ಲದೆ ಕೆಲವು ಹೊಸ ರೀತಿಗಳನ್ನೂ ಪ್ರಾರಂಭಿಸಿದ. ಉಪಾನದಿಂದ ಸ್ತೂಪಿಯ ವರೆಗೂ ಚೌಕಾಕಾರದ ದೇವಾಲಯಗಳು ನಿರ್ಮಿತವಾದ್ದು ಈ ಕಾಲದಲ್ಲಿ, ಕುಂಭಕೋಣದ ನಾಗೇಶ್ವರಾಲಯ ಇದಕ್ಕೊಂದು ನಿದರ್ಶನ. ಶ್ರೀನಿವಾಸನಲ್ಲೂರಿನ ಕೊರಂಗನಾಥ ದೇವಾಲಯದಲ್ಲೂ ಇದೇ ವಿನ್ಯಾಸವಿದೆಯಾದರೂ ಇದರಲ್ಲಿ ಇನ್ನೊಂದು ನಾವೀನ್ಯವನ್ನು ಕಾಣಬಹುದು. ಗರ್ಭಗುಡಿಯನ್ನು ಆವರಿಸುವ ಮಂಟಪದ ಎತ್ತರವನ್ನು ಇಲ್ಲಿ ದ್ವಿಗುಣೀಕರಿಸಲಾಗಿದೆ. ಇದರಿಂದ ಇಡೀ ಕಟ್ಟಡದ ಭವ್ಯತೆ ಹೆಚ್ಚಿದೆ. ತಂಜಾವೂರಿನ ರಾಜ ರಾಜೇಶ್ವರ ಅಥವಾ ಬೃಹದೀಶ್ವರಾಲಯ ಇದಕ್ಕೊಂದು ಉತ್ಕøಷ್ಟ ಮಾದರಿ. ಇದನ್ನು ಕಟ್ಟಿಸಿದವನು 1ನೆಯ ರಾಜರಾಜ ಚೋಳ. ಆದಿತ್ಯನ ಕಾಲದಲ್ಲಿ ನಿರ್ಮಿಸಲಾದ ದೇವಾಲಯಗಳ ಮಾದರಿಯ ಹಲವು ಶಿಲಾ ದೇವಾಲಯಗಳನ್ನು 10ನೆಯ ಶತಮಾನದಲ್ಲಿ ಕಟ್ಟಲಾಯಿತು. ಇವೆಲ್ಲ ಸರಳ, ಅಷ್ಟು ದೊಡ್ಡವಲ್ಲ, ಆಡಂಬರಪೂರಿತವಲ್ಲ. ಇಂಥ ದೇಗುಲದ ಸುತ್ತಲೂ ಒಂದೇ ಒಂದು ಪ್ರಾಕಾರ ಇರುತ್ತದೆ. ಇದರ ಮೇಲ್ಕಟ್ಟಡ ಮೂರು ಅಂತಸ್ತುಗಳಿಗಿಂತ ಹೆಚ್ಚು ಎತ್ತರವಾಗಿರುವುದಿಲ್ಲ. ಮೇಲ್ಕಟ್ಟಡದ ಪಾಗಾರಗಳಲ್ಲಿ ಕೂಟ, ಶಾಲಾ ಹಾಗೂ ಪಂಜರಗಳನ್ನು ಉಬ್ಬು ಚಿತ್ರಗಳಲ್ಲಿ ಕಡೆಯಲಾಗಿದೆ. 11ನೆಯ ಶತಮಾನದ ಪ್ರಥಮಾರ್ಧದಲ್ಲಿ ದೇವಾಲಯ ವಾಸ್ತು ಶೈಲಿಯಲ್ಲಿ ವಿಶೇಷವಾದ ಬದಲಾವಣೆಗಳಾದುವು. ಆಕೃತಿ, ಭವ್ಯತೆ ಹಾಗೂ ವಿವರಗಳಿಗೆ ಪ್ರಾಶಸ್ತ್ಯ ಲಭಿಸಿತು. ಈ ಪರಿಪೂರ್ಣ ದ್ರಾವಿಡ ವಾಸ್ತು ಶೈಲಿಗೆ ಮೇಲೆ ಹೇಳಿದ ಬೃಹದೀಶ್ವರಾಲಯ ಒಂದು ಉತ್ತಮ ಉದಾಹರಣೆ. ಅಂದಿನಿಂದ ಇಂದಿನವರೆಗೂ ಇದು ಅತ್ಯಂತ ಭವ್ಯವಾದ ಉದಾಹರಣೆಯಾಗಿ ಉಳಿದು ಬಂದಿದೆ. ಗೋಪುರಾಕೃತಿಯ ವಿಮಾನ 13 ಅಂತಸ್ತುಗಳ ವರೆಗೂ ಮೇಲೆ ಹೋಗಿದೆ. ಇದರ ಎತ್ತರ 180 ಅಡಿ. ದೇವಾಲಯದ ಉದ್ದ 180 ಅಡಿ. ಇದರ ಮೇಲ್ಭಾಗದಲ್ಲಿ ಅಷ್ಟಭುಜದ ಒಂದೇ ಕಲ್ಲಿನಲ್ಲಿ ಕೊರೆದ ಬೃಹತ್ ಶಿಖರವಿದೆ. ಗರ್ಭಗೃಹದ ಸುತ್ತಲಿನ ಗೋಡೆ ಅದಕ್ಕೆ ಇಮ್ಮಡಿ ಎತ್ತರದ್ದು. ಪ್ರತಿಯೊಂದು ಮುಖದಲ್ಲೂ ಸಮಾನಾಂತರಗಳಲ್ಲಿ ದೇವಕೋಷ್ಠಗಳು, ಮಧ್ಯಗುಡಿಯ ಮುಂದೆ ಕಂಬಗಳಿರುವ ಉದ್ದನೆಯ ಮಂಟಪ. ಇದರ ತೆರೆದ ಅಂಗಳದ ಸುತ್ತಲೂ ಪ್ರಾಕಾರ. ಪ್ರಾಕಾರದ ನಡುವೆ ಅಲ್ಲಲ್ಲಿ ಕಿರುಗುಡಿಗಳು, ಪ್ರಾಕಾರದ ಪ್ರವೇಶ ದ್ವಾರದಲ್ಲಿ, ಹೊರಗಿನ ಪ್ರಾಕಾರದಲ್ಲಿ ಒಂದೊಂದು ಗೋಪುರ. ವಿಮಾನಕ್ಕೆ ಹೋಲಿಸಿದರೆ ಇವು ಕುಬ್ಜ. ಆದರೆ ಇವು ಗಾತ್ರದಲ್ಲಿ ಹಿರಿದಾಗಿವೆ. ಇವು ಸುಂದರವಾದ ಪ್ರಮಾಣಬದ್ಧವಾದ ರಚನೆಗಳು. ಅಧಿಷ್ಠಾನದ ವಿವಿಧ ಅಚ್ಚು ಪಟ್ಟೆಗಳು, ಕಂಬ ಮತ್ತು ಗೋಡೆಗಂಬಗಳಲ್ಲಿಯ ಅಲಂಕರಣ, ಮಂಟಪದಲ್ಲಿಯ ಸರಳವಾದ ಅಲಂಕಾರವನ್ನುಳ್ಳ ಏಕಶಿಲಾಸ್ತಂಭಗಳು, ಕದಲಿಕಾಕರಣ ಪದ್ಧತಿಯಲ್ಲಿ ನಿರ್ಮಿಸಲಾದ ಮೇಲ್ಕಟ್ಟಡಗಳು ಈ ಆಲಯದ ಭವ್ಯತೆಯನ್ನು ಹೆಚ್ಚಿಸಿವೆ. ಇದನ್ನು ಕಟ್ಟುವ ಮೊದಲು ಪ್ರಾಕಾರದಲ್ಲಿ ಚಂಡಿಕೇಶ್ವರ ಗುಡಿ ಮಾತ್ರವಿತ್ತು. ಇದರಲ್ಲಿಯ ದೇವಿ ಗುಡಿ ಮುಂತಾದವೆಲ್ಲ ಅನಂತರ ನಿರ್ಮಿತವಾದುವು.1ನೆಯ ರಾಜೇಂದ್ರಚೋಳ ಕಟ್ಟಿಸಿದ ಗಂಗೆ ಕೊಂಡ ಚೋಳಪುರಂನ ದೇವಾಲಯ ಸುಮಾರು ಇಷ್ಟೇ ಗಾತ್ರದ್ದು. ಆದರೆ ಇದರ ಮೇಲ್ಕಟ್ಟಡದ ಹೊರರೇಖೆ ಬೃಹದೀಶ್ವರಾಲಯದಲ್ಲಿದ್ದಂತೆ ನೇರವಾಗಿರದೆ ನಿಮ್ನ ಮಧ್ಯಾಕಾರದಲ್ಲಿದೆ. ಇದು ಮುಖ್ಯವಾಗಿ ಎದ್ದು ಕಾಣುವ ವ್ಯತ್ಯಾಸ. ಅನಂತದ ಶತಮಾನಗಳಲ್ಲಿ ದೇವಾಲಯದ ಪ್ರಾಕಾರದೊಳಗೆ ಇತರ ಕಟ್ಟಡಗಳನ್ನು ಜೋಡಿಸುವ ಪದ್ಧತಿ ಬೆಳೆಯಿತು. ಸ್ತ್ರೀ ದೇವತೆಗಳಿಗೆ ಪ್ರತ್ಯೇಕವಾದ ಗುಡಿಗಳು ಕಟ್ಟಲ್ಪಟ್ಟುವು. ಕಂಬಗಳಲ್ಲಿ, ಗೋಡೆಗಂಬಗಳಲ್ಲಿ ಜಟಿಲವಾದ ಕೆತ್ತನೆಗಳನ್ನು ಅಳವಡಿಸಿ ಮಂಟಪಗಳನ್ನು ಪರಿಷ್ಕರಿಸಲಾಯಿತು. ಕಂಬಗಳ ಎರಡು ತುದಿಗಳ ಬೋದಿಗೆಗಳು ಗೆಡ್ಡೆಯಾಕಾರ ತಾಳಿದುವು. ಕುದುರೆಗಳಿಂದ ಎಳೆಯಲ್ಪಟ್ಟ ರಥವನ್ನು ಹೋಲುವ ಮುಂಭಾಗವುಳ್ಳ ಮಂಟಪಗಳು ಅಸ್ತಿತ್ವಕ್ಕೆ ಬಂದುವು. ಎತ್ತರವಾದ ವಿಮಾನ, ಕುಬ್ಜವಾದ ಗೋಪುರ ಮತ್ತು ಒಂದೇ ಪ್ರಾಕಾರವನ್ನೊಳಗೊಂಡ, 12ನೆಯ ಶತಮಾನದ ಜೋಳ ಶೈಲಿಯ ದೇವಾಲಯಗಳಿಗೆ ದಾರಾಸುರಮ್‍ದ ಶಿವಾಲಯ, ತ್ರಿಭುವನದಲ್ಲಿಯ ಕಂಪಹರೇಶ್ವರಾಲಯ- ಇವು ನಿದರ್ಶಗಳಾಗಿವೆ. ಅನಂತರದ ಪಾಂಡ್ಯರ ಕಾಲದಲ್ಲಿ ಗೋಪುರಗಳು ಸಹ ಅನೇಕ ಅಂತಸ್ತುಗಳನ್ನೊಳಗೊಂಡು ಎತ್ತರವಾದುವು. ಪ್ರಾಕಾರಗಳ ಸಂಖ್ಯೆ ಬೆಳೆಯಿತು. ಒಳಗಿನ ಬೇರೆ ಬೇರೆ ದೇವತೆಗಳಿಗೂ ಸ್ತ್ರೀ ದೇವತೆಗಳಿಗೂ ಪ್ರತ್ಯೇಕ ಗುಡಿಗಳನ್ನು ಕಟ್ಟಲಾಯಿತು. ನೂರು ಅಥವಾ ಸಾವಿರ ಕಂಬಗಳ ಮಂಟಪಗಳು ಕಾಣಿಸಿಕೊಂಡುವು. ಚಿದಂಬರಂ, ತಿರುವಣ್ಣಾಮಲೈಗಳ ಆಲಯಗಳನ್ನು ನೋಡಿದಾಗ ಈ ಅಂಶಗಳು ವ್ಯಕ್ತವಾಗುತ್ತವೆ. ಈ ಹೊಸ ಪ್ರವೃತ್ತಿಯ ಫಲವಾಗಿ ವಿಮಾನಗಳಲ್ಲಿ ನಯ ಗೆಲಸ ಕಡಿಮೆಯಾಗಿ, ಅವು ತಮ್ಮ ಪ್ರಾಧಾನ್ಯವನ್ನು ಕಳೆದುಕೊಂಡುವು. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಗೋಪುರಗಳ, ಮಂಟಪಗಳು ಮತ್ತು ಪ್ರಾಕಾರಗಳ ರಚನೆಯಲ್ಲಿ ಇನ್ನಷ್ಟು ಪ್ರಗತಿಯಾಯಿತು. ಇದು ಇಡೀ ತಮಿಳು ನಾಡಿಗೂ ಹಬ್ಬಿತು. ಈ ಘಟ್ಟದ ರಚನೆಗಳ ಉತ್ಕøಷ್ಟ ಉದಾಹರಣೆಗಳನ್ನು ನಾವು ವಿಜಯನಗರದ ರಾಜಧಾನಿಯ ವಿಠಲ, ಹಜಾರ ರಾಮ ಮುಂತಾದ ದೇಗುಲಗಳಲ್ಲೇ ಅಲ್ಲದೆ ಪ್ರಾಂತೀಯ ಪಟ್ಟಣಗಳಾದ ವೆಲ್ಲೂರು, ಕಂಚಿ, ಕುಂಭಕೋಣ, ಶ್ರೀರಂಗಂ, ಮುಂತಾದವುಗಳಲ್ಲಿಯ ದೇವಾಲಯಗಳಲ್ಲೂ ಕಾಣಬಹುದು. ವೆಲ್ಲೂರಿನ ಕಲ್ಯಾಣಮಂಟಪ (15ನೆಯ ಶತಮಾನ), ಚಿದಂಬರಂ ಶ್ರೀರಂಗಂ ತಿರುವಣ್ಣಾಮಲೈಗಳ ಗೋಪುರಗಳು ಗಮನಾರ್ಹ ಉದಾಹರಣೆಗಳು. ಮಂಟಪದಲ್ಲಿಯ ಅಖಂಡ ಶಿಲಾಸ್ತಂಭಗಳು ಕ್ರಮೇಣ ಬೇಟೆಯ ದೃಶ್ಯಗಳು, ಅಲಂಕೃತ ವ್ಯಾಳಗಳು ಮುಂತಾದವುಗಳಿಂದ ಚಿತ್ರಿತವಾದ ಕಲಾಕೃತಿಕಡೆತಗಳಾದುವು. ಈ ಸ್ತಂಭಗಳೇ ಅಲ್ಲದೆ ಶಿಲಾಮಂಟಪಗಳೂ ವಿಶಿಷ್ಟ ಕಲಾಕೃತಿಗಳಾದುವು. ಇವುಗಳಲ್ಲಿರುವ, ಮುಂಜಾಜಿದ, ಎರಡು ಬಾಗುಗಳುಳ್ಳ ಏಣುಗಳೂ (ಕೊಡಂಗೈ) ಅವುಗಳಲ್ಲಿ ತೋರುವ ಕೆತ್ತನೆಯ ಕೆಲಸವೂ ವಿಚಿತ್ರವಾದಂಥವು. ಅವುಗಳ ಅಡಿಯಲ್ಲಿ, ಮರಕ್ಕೆ ಮೊಳೆ ಹೊಡೆದಂತೆ ಅಥವಾ ತಿರುಪುಮೊಳೆ ತಿರುಗಿಸಿದಂತೆ ಕಾಣುವ ಕೆತ್ತನೆಯ ಕೆಲಸವೂ ಅದ್ಭುತವಾದಂಥವು. ಕಲ್ಲಿನ ಕೆಲಸದ ಈ ರೂವಾರಿಗಳು ತಮ್ಮ ಕಾಲದ ಬಡಗಿಗಳನ್ನು ಮೀರಿಸಲು ಯತ್ನಿಸುತ್ತಿದ್ದರೆಂಬುದನ್ನು ತೋರಿಸುವ ಈ ಕಂಡೆತಗಳು ಮರಗೆಲಸಗಳೇಯೋ ಏನೋ ಎಂಬ ಭ್ರಮೆ ಬರಿಸುತ್ತವೆ. ಮುಖ್ಯ ಗುಡಿಯ ಸುತ್ತ ಹೆಚ್ಚು ಹೆಚ್ಚು ಪ್ರಾಕಾರಗಳನ್ನು ನಿರ್ಮಿಸುವ ಪದ್ಧತಿಯಿಂದ ಇಡೀ ವಾಸ್ತುಶಿಲ್ಪ ಸಂಕೀರ್ಣಕ್ಕೆ ಒಂದು ಭವ್ಯತೆಯನ್ನು ದೊರಕಿಸಿ ಕೊಡುವ ಪ್ರಯತ್ನ ಸಫಲವಾಯಿತು. ಕಾವೇರಿ ತೀರದ ಜಂಬುಕೇಶ್ವರಮ್‍ನ ಪಂಚ ಪ್ರಾಕಾರ ಸಂಕೀರ್ಣ, ಶ್ರೀರಂಗದ ಸಪ್ತ ಪ್ರಾಕಾರ ಸಂಕೀರ್ಣ-ಇವು ಈ ಅಮೋಘ ಬೆಳೆವಣಿಗೆಗೆ ಸಾಕ್ಷಿಗಳಾಗಿ ನಿಂತಿವೆ. ಈ ಆಲಯಗಳ ಅತ್ಯಂತ ಹೊರ ಪ್ರಾಕಾರದ ನಾಲ್ಕು ಪ್ರವೇಶದ್ವಾರಗಳ ಮೇಲೂ ಉನ್ನತವಾದ ಗೋಪುರಗಳಿವೆ. ಈ ಬೃಹದ್ಗೋಪುರಗಳನ್ನು ಸಾಮಾನ್ಯವಾಗಿ ರಾಯಗೋಪುರಗಳೆಂದು ಕರೆಯುತ್ತಾರೆ. ಈ ಗೋಪುರಗಳ ನಿರ್ಮಾಣಕ್ಕೆ ಅಗತ್ಯವಾದ ಅಗಾಧವಾದ ಸಾಮಗ್ರಿಯನ್ನೂ ಮಾನವಶಕ್ತಿಯನ್ನೂ ಧರ್ಮನಿಷ್ಠ ಜನರನೇಕರು ಮನ:ಪೂರ್ವಕವಾಗಿ ಒದಗಿಸಿದ್ದರಿಂದಲೂ ಧರ್ಮನಿಷ್ಠ ದೊರೆಗಳು ಅವರಿಗೆ ಸ್ಫೂರ್ತಿ ನೀಡಿದ್ದರಿಂದಲೂ ಇಂಥ ಕಟ್ಟಡಗಳ ನಿರ್ಮಾಣ ಸಾಧ್ಯವಾಯಿತೆನ್ನಬಹುದು. ಹಲವು ಬಗೆಯ ಸಾಮಗ್ರಿಗಳಿಂದಲೂ ಭಾಗಗಳಿಂದಲೂ ಸಂಯೋಜಿತವಾದಂತೆ ತೋರುವಂತೆ ಮಂಟಪಗಳನ್ನೂ ಸ್ತಂಭಗಳನ್ನೂ ಕೊರೆಯುತ್ತಿದ್ದರು. ಕಂಬದ ಬೋದಿಗೆಗಳು ಮೊದಲಿನಂತೆ ಗೆಡ್ಡೆಯಂತಿರುವ ಬದಲು ಬಾಳೆಯ ಹೂವಿನ ಆಕಾರ ತಾಳಿದುವು. ಇವನ್ನು ಪುಷ್ಪ ಬೋದಿಗೆಗಳೆಂದು ಕರೆಯಲಾಗಿದೆ. ಇಸ್ಲಾಂ ವಾಸ್ತುಶಿಲ್ಪದ ಪ್ರಭಾವದಿಂದ ವಿಜಯನಗರದ ಅರಸರು ಮತ್ತು ಅವರ ಮಾಂಡಲಿಕರು ಇಟ್ಟಿಗೆ ಹಾಗೂ ಗಾರೆಗಳನ್ನು ಉಪಯೋಗಿಸಿ ಕಮಾನುಗಳನ್ನು ಕಟ್ಟಲು ಆರಂಭಿಸಿದರು. 16-17ನೆಯ ಶತಮಾನಗಳಲ್ಲಿ ಮಧುರೆಯ ನಾಯಕರು ಗೋಪುರ ವಿನ್ಯಾಸಕ್ಕೂ ಕಂಬಗಳ ಕೆತ್ತನೆಯ ಕೆಲಸಕ್ಕೂ ಹೆಚ್ಚಿನ ಪ್ರೋತ್ಸಾಹ ಕೊಟ್ಟರು. ಮಧುರೈ ಮೀನಾಕ್ಷಿ ದೇವಾಲಯ ಈ ಕಲೆಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ. ಗೋಪುರಗಳಲ್ಲಿ ಅನೇಕ ಗಾರೆಯ ವಿಗ್ರಹಗಳನ್ನು ರಚಿಸಲಾಗಿದೆ. ಹೊರರೇಖೆ ಒಳಬಾಗಿ ತೊನೆದಾಡುವಂತೆ ತೋರುವ ಈ ಗೋಪುರಗಳು ಸುಂದರ ಕೃತಿಗಳು. ಇಂಥದೇ ಶೈಲಿಯನ್ನು ಶ್ರೀವಿಲ್ಲಿಪುತ್ತೂರ್, ತಿರುನೆಲ್ವೇಲಿ ಸುಚೀಂದ್ರಂಗಳಲ್ಲಿ ಕಾಣಬಹುದು. ಆದರೆ ಈ ರಚನೆಗಳು ಮಧುರೈ ಮೀನಾಕ್ಷಿ ದೇವಾಲಯ ಕಲೆಗೆ ಸಾಟಿಯಾಗಲಾರವು. ಈ ಕಾಲದಲ್ಲಿ ಮಂಟಪ ನಿರ್ಮಾಣಕ್ಕೆ ವಿಶೇಷವಾದ ಗಮನ ನೀಡಲಾಯಿತು. ಅವುಗಳಲ್ಲಿಯ ಕಂಬಗಳು ಬಹಳವಾಗಿ ಪರಿಷ್ಕಾರಗೊಂಡುವು. ಕಂಬಗಳ ದುಂಡನೆಯ ದಿಂಡುಗಳಲ್ಲಿ ಪುರಾಣಗಳಿಂದ ಆಯ್ದ ಕಥೆಗಳನ್ನು ನಿರೂಪಿಸುವ ಚಿತ್ರಗಳನ್ನೂ ಗ್ರಾಮ ಜೀವನ ಚಿತ್ರಗಳನ್ನೂ ಕೊರೆಯಲಾಯಿತು. ಕೆಲವು ಕಂಬಗಳಲ್ಲಿ ಅರಸರ ಮತ್ತು ಅವರ ಸಂಬಂಧಿಕರ ಪ್ರತಿಕೃತಿಗಳನ್ನು ಕೊರೆಯಲಾಗುತ್ತಿತ್ತು. ಇನ್ನು ಹಲವು ಕಂಬಗಳ ದಿಂಡುಗಳಲ್ಲಿ ಬಹುಮುಖಗಳ ಸಣ್ಣ ಸಣ್ಣ ಕಂಬಗಳನ್ನು ಕೊರೆದು, ಅವನ್ನು ಬಡಿದರೆ ಸಂಗೀತಸ್ವರಗಳು ಹೊರಡುವಂತೆ ಮಾಡಲಾಯಿತು. ಆಧುನಿಕ ಸಂಗೀತಶಾಸ್ತ್ರಜ್ಞರು ಇವನ್ನು ಸಂಗೀತ ಸ್ತಂಭಗಳೆಂದು ಕರೆದಿದ್ದಾರೆ. ಮಧುರೈ ಮೀನಾಕ್ಷಿಯ ಪುದುಮಂಟಪದಲ್ಲಿ ಈ ನಾನಾ ಬಗೆಯ ಕಂಬಗಳನ್ನು ಕಾಣಬಹುದು. ಪುದುಕೋಟೈ ಜಿಲ್ಲೆಯ ಅವಿಂದೈಯಾರ್‍ಕೋವಿಲ್‍ನ ಆತ್ಮನಾಥಸ್ವಾಮಿ ದೇವಾಲಯದಲ್ಲೂ ತಿರುನೆಲ್ವೇಲಿಯ ನೆಲ್ಲೈಯಪ್ಪರ್ ದೇವಾಲಯದಲ್ಲೂ ಇಂಥವೇ ಮಂಟಪಗಳಿವೆ. 17ನೆಯ ಶತಮಾನದ ಕೊನೆಯ ಮತ್ತು 18 ನೆಯ ಶತಮಾನದ ಆರಂಭದ ದಶಕಗಳಲ್ಲಿ ತಮಿಳುನಾಡಿನ ವಾಸ್ತುಶಿಲ್ಪದಲ್ಲಿ ಇನ್ನೊಂದು ಹೊಸ ಬೆಳೆವಣಿಗೆಯನ್ನು ಗುರುತಿಸಬಹುದು. ಅದುವರೆಗೆ ಪ್ರಾಕಾರದ ಗೋಡೆಗಳನ್ನು ತೆರವಾಗಿ ಬಿಡುತ್ತಿದ್ದರು. ಅಲ್ಲಲ್ಲಿ ಅವುಗಳೊಳಗೆ ಮಂಟಪಗಳನ್ನು ನಿರ್ಮಿಸುತ್ತಿದ್ದರು. ಅಂಗಣದೊಳಗಣ ಆ ಬಿಡಿ ಕಟ್ಟಡಗಳನ್ನು ಒಂದುಗೂಡಿಸಿ ಉದ್ದನೆಯ ಮುಚ್ಚಿದ ಮೊಗಸಾಲೆಗಳನ್ನು ಕಟ್ಟುವುದು ಆಗ ಆರಂಭವಾಯಿತು. ಬಿಸಿಲು ಮಳೆಗಳ ಬಾಧೆಯಿಲ್ಲದೆ ಎಲ್ಲ ಋತುಗಳಲ್ಲೂ ಉತ್ಸವಗಳನ್ನು ನಡೆಸಲು ಈ ಮೊಗಸಾಲೆಗಳನ್ನು ಬಳಸಿಕೊಳ್ಳುವುದು ಸಾಧ್ಯವಾಯಿತು. ರಾಮೇಶ್ವರದ ರಾಮನಾಥೇಶ್ವರ ದೇವಾಲಯದ ದೀರ್ಘವಾದ ಮೊಗಸಾಲೆ ಇದಕ್ಕೆ ಉತ್ತಮ ನಿದರ್ಶನ. ಶಾಸನಗಳು ದಕ್ಷಿಣ ಭಾರತದಲ್ಲಿ ತಮಿಳು ನಾಡು ಮತ್ತು ಕೇರಳ ರಾಜ್ಯಗಳಲ್ಲಿ ಅಶೋಕನ ಕಾಲದ ಶಾಸನಗಳು ಇಲ್ಲ. ಆದರೆ ತಮಿಳು ಶಾಸನಗಳು ಕ್ರಿ.ಪೂ ಸುಮಾರು 3ನೆಯ ಶತಮಾನದಲ್ಲಿ ಕಾಣಿಸಿಕೊಳ್ಳತೊಡಗುತ್ತವೆ. ಕೆಲವು ಶಾಸನಗಳಲ್ಲಿ ಅಪರೂಪವಾಗಿ ಸ.ಧ.ಶ ಎಂಬ ಅಕ್ಷರಗಳನ್ನು ಉಪಯೋಗಿಸಿದ್ದರೂ, ಸಾಮಾನ್ಯವಾಗಿ ಇವುಗಳಲ್ಲಿ ಚ,ತ,ಚ ಎಂಬ ವರ್ಗಪ್ರಥಮಾಕ್ಷರ ಅಥವಾ ತತ್ಸಮಗಳನ್ನೇ ಉಪಯೋಗಿಸಿದೆ. ಮಧುರೈ, ತಿರುನೆಲ್ವೇಲಿ ಮತ್ತು ರಾಮನಾಥಪುರಮ್ ಜಿಲ್ಲೆಗಳಲ್ಲಿ ದೊರೆತ ಬ್ರಾಹ್ಮೀಲಿಪಿಯ ಶಾಸನಗಳು ತಮಿಳು ಮತ್ತು ಪ್ರಾಕೃತಗಳಿಂದ ಕೂಡಿದ ಮಿಶ್ರಭಾಷೆಯಲ್ಲಿವೆ. ಸಾಮಾನ್ಯವಾಗಿ ಗುಡ್ಡಗಳಲ್ಲಿರುವ ನೈಸರ್ಗಿಕ ಗುಹೆಗಳಲ್ಲಿ ನಿರ್ಮಿಸಿದ ಕಲ್ಲಿನ ಹಾಸುಗಳ ಮೇಲಿರುವ ಈ ಶಾಸನಗಳಲ್ಲಿ ಆ ಹಾಸುಗಳನ್ನು ಅಲ್ಲಿ ಅಳವಡಿಸಿದ ದಾನಿಗಳ ಹಾಗೂ ಆ ಸ್ಥಳಗಳ ಹೆಸರುಗಳಿವೆ. ಒಮ್ಮೊಮ್ಮೆ ಆ ದಾನಿಯ ವೃತ್ತಿಯನ್ನು ಸೂಚಿಸಲಾಗಿದೆ; ಪೊನ್ ವಾಣಿಕನ್, ಉಪು ವಾಣಿಕನ್ ಪಾಣಿತ ವಾಣಿಕನ್, ಎಂದು ಮುಂತಾಗಿ ಅವುಗಳಲ್ಲಿ ಹೇಳಿದೆ. ಈ ಗುಹೆಗಳನ್ನು ಪಾಳಿ, ತಾಣಮ್, ಅರಿಟ್ಟಾನಮ್ ಎಂದೆಲ್ಲ ಕರೆಯಲಾಗಿದೆ. ನೆಡುಂಜಯನ್, ಪೆರುಞ, ಕಡುಞಕೋನ್ ಇತ್ಯಾದಿಗಳು ವೈಯಕ್ತಿಕ ಹೆಸರುಗಳು. ಸಾಮಾನ್ಯವಾಗಿ: ಇವು ಕಲ್ಲಿನ ಈ ಹಾಸುಗಳ ಕೊಡುಗೆಗಳ ದಾಖಲೆಗಳು. ಇವು ಜೈನಮತಕ್ಕೆ ಸೇರಿದವರ ಶಾಸನಗಳೆಂದು ತಿಳಿಯಲಾಗಿದೆ. ಪುದುಚೇರಿಯ ಹತ್ತಿರದ ಅರಿಕಮೇಡು ಮತ್ತು ತಿರುವ್ವಿರಾಪ್ಪಳ್ಳಿ ಜಿಲ್ಲೆಯ ಉಜೈಯೂರ್. ತಿರುನೆಲ್ವೇಲಿ ಜಿಲ್ಲೆಯ ಕೊ ಮುಂತಾದ ಸ್ಥಳಗಳಲ್ಲಿ ನಡೆಸಿದ ಉತ್ಖನನಗಳಲ್ಲಿ ಗೀರುಬರಹಗಳಿಂದ ಕೂಡಿದ ಮಡಕೆಗಳು ದೊರಕಿವೆ. ಅರಿಕಮೇಡಿನ, ಕ್ರಿ.ಶ.1-2ನೆ ಶತಮಾನದವೆಂದು ನಿರ್ಣಯಿಸಲಾದ, ಕೆಲವು ಗೀರುಬರಹಗಳವು ಪ್ರಾಕೃತಭಾಷೆಗಳಲ್ಲೂ ಉಳಿದವು ತಮಿಳು ಭಾಷೆಯಲ್ಲೂ ಇವೆ. ಈರೋಡಿನ ಬಳಿಯ ಅರಚಲೂರಿನಲ್ಲಿ ದೊರೆತ ಗುಹಾಶಾಸನಗಳು ಕ್ರಿ.ಶ. 3ನೆಯ ಶತಮಾನಕ್ಕೆ ಸೇರಿದವು. ಬ್ರಾಹ್ಮೀಲಿಪಿಯ ಎರಡು ಸಾಲಿನ ಶಾಸನ ತಮಿಳಿನಲ್ಲಿದೆ. ಇವು ಪ್ರಾಚೀನತಮ ತಮಿಳು ಶಾಸನಗಳೆಂದು ಹೇಳಲಾಗಿದೆ. ಸಮೀಪದಲ್ಲಿ ಕೊರೆಯಲಾದ, ಸಂಗೀತ ಮತ್ತು ನೃತ್ಯಗಳಿಗೆ ಸಂಬಂಧಿಸಿದ ಚಿಹ್ನೆಗಳನ್ನು ಈ ಶಾಸನ ನಿರೂಪಿಸುವಂತೆ ತೋರುತ್ತದೆ. ಈ ಚಿಹ್ನೆಗಳನ್ನು ರೂಪಿಸಿದಾತ ತೇವನ್ ಜಾತ್ತನ್ ಎಂಬ ಹೂವಾಡಿಗ. ತಿರುನಾಥರ್ಕುಣ್ರಿ ಎಂಬಲ್ಲಿ ಕ್ರಿ.ಶ.ಸು.5ನೆಯ ಶತಮಾನಕ್ಕೆ ಸೇರಿದ ವಟ್ಟೆಯಿತ್ತು ಬರಹದ ಶಾಸನವೊಂದು ದೊರೆತಿದ್ದು ಅದು ಬಹುಶಃ ಜೈನಮತದವನಾದ ಚಂದ್ರನಂದಿ ಆಚಾರ್ಯನೆಂಬವನನ್ನು ನಿರೂಪಿಸುತ್ತದೆ. ಧರ್ಮಪುರಿ, ಸೇಲಂ ಮೊದಲಾದ, ಕರ್ನಾಟಕಕ್ಕೆ ಸೇರಿದಂತಿರುವ, ಜಿಲ್ಲೆಗಳಲ್ಲಿ ಕಂಗ, ಕಟ್ಟಿ, ವಾಣ ಮುಂತಾದ ಮಾಂಡಲಿಕ ಮನೆತನಗಳವರ ಶಾಸನಗಳು ಈಗ ದೊರೆತಿವೆ. ಇವುಗಳಲ್ಲಿ ತಮಿಳು ಹಾಗೂ ವಟ್ಟೆಯಿತ್ತು ಲಿಪಿಗಳಿಗೆ ಸಮಾನವಾದ ಲಿಪಿಯ ರೂಪಗಳನ್ನು ಕಾಣಬಹುದು. ಇವೆಲ್ಲ ಬಹುಮಟ್ಟಿಗೆ ವೀರಗಲ್ಲುಗಳ ಮೇಲಿನ ಶಾಸನಗಳು. ಪಲ್ಲರ ತಾಮ್ರಶಾಸನ್ನು ಎರಡು ಗುಂಪುಗಳಾಗಿ ವಿಂಗಡಿಸಬಹುದು. ಮೊದಲನೆಯದು ಪ್ರಾಕೃತ ಶಾಸನಗಳದು. ಶಿವಸ್ಕಂಧವರ್ಮನ್‍ನ ಮೈದವೋಲು ಮತ್ತು ಹಿರೆಗಡಗಲಿ ತಾಮ್ರಶಾಸನಗಳು. ಸಿಂಹವರ್ಮನ್‍ನ ಸಕ್ರೆಪಟ್ಟಣ ತಾಮ್ರಶಾಸನ-ಇವು ಈ ಶಾಸನಗಳಲ್ಲಿ ಕೆಲವು ಅನಂತರದ ಗುಂಪಿನ ಶಾಸನಗಳು ಗ್ರಂಥ ಲಿಪಿಯಲ್ಲಿ, ಸಂಸ್ಕ್ರತ ಮತ್ತು ತಮಿಳು ಭಾಷೆಗಳಲ್ಲಿವೆ. ಇವೂ ದಾನ ಶಾಸನಗಳೇ. ಪಲ್ಲವರ ಶಿಲಾಶಾಸನಗಳು ಚುಟುಕಾಗಿವೆ. ಅನೇಕ ವೇಳೆ ಅವನ್ನು ಚಿತ್ರಗಳ ಕೆಳಗಿನ ಪಟ್ಟಿಗಳಲ್ಲಿ ಕೊರೆಯಲಾಗಿದೆ. ಅವು ದಾನಿಯ ಅಥವಾ ಶಿಲ್ಪಿಯ ಹೆಸರನ್ನು ಉಲ್ಲೇಖಿಸುತ್ತವೆ. ಕಾಂಚೀಪುರದ ವೈಕುಂಠನಾಥ ದೇವಾಲಯದಲ್ಲಿ ಪಲ್ಲವಮಲ್ಲ ಪಟ್ಟಾಭಿಷೇಕಕ್ಕೆ ಬಂದ ಘಟನೆಗಳನ್ನು ನಿರೂಪಿಸುವ ಶಿಲ್ಪಗಳನ್ನು ಹಾಗೂ ಅವುಗಳ ಕೆಳಗಿನ ಪಟ್ಟಿಗಳ ಶಾಸನಗಳನ್ನು ಉದಾಹರಿಸಬಹುದು. ಈ ಕಾಲದ ಪಾಂಡ್ಯರ ತಾಮ್ರಶಾಸನಗಳಲ್ಲಿಯ ತಮಿಳುಭಾಗದಲ್ಲಿ ಅರಸನ ಸಾಧನೆಗಳನ್ನು ವರ್ಣಿಸುವ ಪದ್ಯಗಳಿರುತ್ತವೆ. ಚೋಳರ ಆದಿತ್ಯನ ಕಾಲದಿಂದ ತಮಿಳು ನಾಡಿನಲ್ಲಿ ಅನೇಕ ಶಿವಾಲಯಗಳನ್ನು ಕಟ್ಟಲಾಯಿತು. ಆ ದೇವಾಲಯಗಳ ಗೋಡೆಗಳಲ್ಲಿ ಅಳವಡಿಸಲಾದ ಕಲ್ಲುಗಳ ಮೇಲೆ ಶಾಸನಗಳನ್ನು ಕೊರೆಯತೊಡಗಿದರು. ಆರಂಭದಲ್ಲಿ ಅರಸನ ಹೆಸರು, ಬಿರುದು, ಶಾಸನ ಹುಟ್ಟಿದ ತಿಂಗಳು (ಸೌರಮಾನ), ನಕ್ಷತ್ರ ಮತ್ತು ವಾರ ದಿನಗಳನ್ನು ನಮೂದಿಸಲಾಗುತ್ತಿತ್ತು. ಚೋಳರ ಶಾಸನಗಳು ತಮಿಳು ಅಕ್ಷರದಲ್ಲಿ, ಸಂಸ್ಕೃತ ಹಾಗೂ ತಮಿಳು ಭಾಷೆಗಳಲ್ಲಿ ಇವೆ. ಹಲವರು ದೇವಾಲಯಗಳ ಗೋಡೆಗಳ ಮೇಲೆ ಕೊರೆದ ಈ ಶಾಸನಗಳು ದೀರ್ಘವಾಗಿವೆ. ಇವು ತಮಿಳು ನಾಡಿನ ಸಾಮಾಜಿಕ ಜೀವನದ ವಿವಿಧ ಮುಖಗಳನ್ನು ಕುರಿತು ಬಹಳ ವಿವರಗಳನ್ನೊದಿಗಿಸುತ್ತವೆ. ಒಂದನೆಯ ರಾಜನಿಂದ ಪ್ರಾರಂಭವಾಗಿ ಅವನ ಉತ್ತರಾಧಿಕಾರಿಗಳು ಮುಂದುವರಿಸಿದ ಮೈ ಕೀರ್ತಿಗಳು (ಪ್ರಶಸ್ತಿ) ಐತಿಹಾಸಿಕ ವಿವರಗಳಿಂದ ತುಂಬಿವೆ. ಅರಸನ ಆಳ್ವಿಕೆಯ ವರ್ಷಗಳು ಹೆಚ್ಚಿದಂತೆ ಈ ಪ್ರಶಸ್ತಿಗಳು ಧೀರ್ಘವಾಗಿ, ಹೊಸ ಸಾಧನೆಗಳ ಉಲ್ಲೇಖಗಳು ಅವುಗಳಲ್ಲಿರುತ್ತವೆ. ಹಲವಾರು ಉತ್ಪ್ರೇಕ್ಷೆಗಳಿದ್ದರೂ ಇವು ಐತಿಹಾಸಿಕ ದಾಖಲೆಗಳೆಂದೇ ಹೇಳಬೇಕು. ಸಾಮಾನ್ಯವಾಗಿ ಇತರ ವಿವರಗಳ ಜೊತೆಗೆ ಅರಸನ ಆಳ್ವಿಕೆಯ ವರ್ಷಗಳನ್ನು ಇವುಗಳಲ್ಲಿ ಕೊಟ್ಟಿರುತ್ತದೆ. ಚೋಳರ ತಾಮ್ರಶಾಸನಗಳಲ್ಲಿ ತಿರುವಾಲಂಗಾಡು ಮತ್ತು ಕರಂದೈ ತಾಮ್ರಪಟಗಳು ಈವರೆಗೆ ತಿಳಿದ ಇಂಥ ಶಾಸನಗಳಲ್ಲಿ ಅತ್ಯಂತ ದೊಡ್ಡವು. ಚೋಳರ ಸಮಕಾಲೀನರಾದ ಪಾಂಡ್ಯರು ತಮ್ಮ ಶಾಸನಗಳಿಗಾಗಿ ತಮಿಳು ಮತ್ತು ವಟ್ಟೆಯಿತ್ತು ಲಿಪಿಗಳನ್ನು ಬಳಸಿದರು. ಪಾಂಡ್ಯರ ಶಾಸನಗಳಲ್ಲಿ ಕಾಲವನ್ನು ಸೂಚಿಸುವಾಗ 4+6, 8+3 ಮುಂತಾದ ಎರಡೆರಡು ತೇದಿಗಳನ್ನು ನಮೂದಿಸಲಾಗಿದೆ. ಇದಕ್ಕೆ ಕಾರಣವೇನೆಂಬುದು ಗೊತ್ತಿಲ್ಲವಾದರೂ, ಇವು 10, 11 ಇತ್ಯಾದಿ ವರ್ಷಗಳನ್ನು ಸೂಚಿಸುತ್ತವೆ ಎಂದು ಭಾವಿಸಲಾಗಿದೆ.ವಿಜಯನಗರ ಶಾಸನಗಳನ್ನು ತೆಲಗು ಲಿಪಿ ಮತ್ತು ಭಾಷೆಯಲ್ಲಿ ಅಂತೆಯೇ ನಂದಿನಾಗರೀ ಲಿಪಿ ಮತ್ತು ಸಂಸ್ಕೃತ ಭಾಷೆಗಳಲ್ಲಿ ಬರೆಯಲಾರಂಭವಾಯಿತು. ಈ ಬಗೆಯ ತಾಮ್ರಶಾಸನಗಳ ಎಷ್ಟೋ ಮಾದರಿಗಳನ್ನು ಮದ್ರಾಸಿನ ಸರ್ಕಾರಿ ವಸ್ತುಸಂಗ್ರಹಾಲಯದಲ್ಲಿ ಶೇಖರಿಸಲಾಗಿದೆ. ಶಿಕ್ಷಣ ತಮಿಳುನಾಡಿನ ವಿಶ್ವವಿದ್ಯಾಲಯಗಳು ತಮಿಳುನಾಡು ವಿಧಾನಸಭೆ ಚುನಾವಣೆ, 2016 ತಮಿಳುನಾಡಿನ ಇತಿಹಾಸ ಉಲ್ಲೇಖಗಳು ಬಾಹ್ಯ ಸಂಪರ್ಕಗಳು Government The Official Site of the Government of Tamil Nadu Official Tourism Site of Tamil Nadu, India General information Tamil Nadu Encyclopædia Britannica entry ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
1378
https://kn.wikipedia.org/wiki/%E0%B2%A4%E0%B2%AE%E0%B2%BF%E0%B2%B3%E0%B3%81
ತಮಿಳು
ದ್ರಾವಿಡ ಭಾಷೆಗಳಲ್ಲಿ ಬಹಳ ಪ್ರಾಚೀನ ಮತ್ತು ಶ್ರೀಮಂತ ಭಾಷೆ ತಮಿಳು. ತಮಿಳು ಭಾಷೆಯಲ್ಲಿ ದೊರೆತಿರುವ ಕೃತಿಗಳಲ್ಲಿ ಮೊತ್ತಮೊದಲನೆಯದು ತೊಲ್ಕಾಪ್ಪಿಯಂ. ಇದು ಒಂದು ಪ್ರಾಚೀನ ಲಕ್ಷಣ ಗ್ರಂಥ. ಇದರ ಕಾಲ ಕ್ರಿ.ಪೂ. ೩ನೇ ಶತಮಾನ. ಪಂಚದ್ರಾವಿಡ ಭಾಷೆಗಳಾದ ತಮಿಳು, ಕನ್ನಡ ತೆಲುಗು, ಮಲಯಾಳಂ ಮತ್ತು ತುಳುಗಳಲ್ಲಿ ತಮಿಳು ಭಾಷೆಯು ತೀರ ಹಳೆಯದಾದರೆ ನಂತರ ಉಳಿದ ನಾಲ್ಕು ಭಾಷೆಗಳು ಬರುತ್ತವೆ. ಈ ಎಲ್ಲ ಭಾಷೆಗಳಲ್ಲೂ ಬರವಣಿಗೆ ಎಡದಿಂದ ಬಲಕ್ಕೆ ಸಾಗುತ್ತದೆ. ತಮಿಳಿಗೆ ತನ್ನದೇ ಆದ ಲಿಪಿ ಬಳಕೆಯಲ್ಲಿದೆ. ತಮಿಳು ಪ್ರಮುಖವಾಗಿ ಭಾರತ ಹಾಗು ಶ್ರೀಲಂಕಾದಲ್ಲಿ ಮಾತನಾಡಲ್ಪಡುವ, ದ್ರಾವಿಡ ಭಾಷಾಕುಟುಂಬಕ್ಕೆ ಸೇರಿದ ಒಂದು ಭಾಷೆ. ಇತಿವೃತ್ತ ತಮಿಳು ಸಿಂಗಾಪುರ, ಶ್ರೀಲಂಕಾ, ಮಲೇಶಿಯ ದೇಶಗಳಲ್ಲಿ ಹಾಗೂ ಭಾರತದ ತಮಿಳುನಾಡು ರಾಜ್ಯದಲ್ಲಿ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶದಲ್ಲಿ ಅಧಿಕೃತ ಭಾಷೆಯ ಸ್ಥಾನಮಾನವನ್ನು ಪಡೆದಿದೆ. ಈ ಭಾಷೆಯು ಭಾರತದ ಕೇಂದ್ರ ಸರ್ಕಾರದಿಂದ ಶಾಸ್ತ್ರೀಯ ಭಾಷೆ ಎಂದು ಮಾನ್ಯತೆ ಪಡೆದಿದೆ. ಪಂಚದ್ರಾವಿಡ ಭಾಷೆಗಳಲ್ಲಿ ತುಳು – ತಮಿಳು ಭಾಷೆಗಳ ನಡುವೆ ನಿಕಟ ಸಂಬಂಧವಿದೆ. ಶತಶತಮಾನಗಳಿಂದ ಬೆಳೆದು ಬಂದ ಸಂಬಂಧವಿದು ಎಂದು ಹೇಳಬಹುದು. ತುಳು – ತಮಿಳು ಭಾಷೆಗಳಲ್ಲಿ ಅನೇಕ ಸಮಾನ ಪದಗಳು (ಪಾಂಬು, ಕಲ್ಲ್, ಮಣ್ಣ್, ಎಲಿ, ನಾಯಿ, ಕೈ, ಜಲ್ಲಿ ಇತ್ಯಾದಿ) ಬಳಕೆಯಲ್ಲಿದ್ದು ಈ ಎರಡು ಭಾಷೆಗಳ ನಡುವೆ ಉತ್ತಮ ಸಂಬಂಧ ಬೆಳೆದುಬರುವಲ್ಲಿ ಸಹಕಾರಿಯಾಗಿವೆ. ಉಲ್ಲೇಖಗಳು ಭಾಷೆಗಳು ಭಾರತೀಯ ಭಾಷೆಗಳು ಶಾಸ್ತ್ರೀಯ ಭಾಷೆಗಳು ದ್ರಾವಿಡ ಭಾಷೆಗಳು
1379
https://kn.wikipedia.org/wiki/%E0%B2%B2%E0%B3%8B%E0%B2%95%E0%B2%B8%E0%B2%AD%E0%B3%86
ಲೋಕಸಭೆ
ಲೋಕಸಭೆ ಸಂಕ್ಷಿಪ್ತ ವಿವರ ಲೋಕಸಭೆ ಭಾರತದ ಸಂಸತ್ತಿನ ಎರಡು ಸಭೆಗಳಲ್ಲಿ ಒಂದು (ರಾಜ್ಯಸಭೆ ಇನ್ನೊಂದು). ಲೋಕಸಭೆಯ ಸದಸ್ಯರು ಜನರಿಂದಲೇ ನೇರ ಚುನಾವಣೆಗಳಿಂದ ಚುನಾಯಿತರಾದ ವ್ಯಕ್ತಿಗಳು. ಭಾರತೀಯ ಸಂವಿಧಾನದಂತೆ ಲೋಕಸಭೆ ಗರಿಷ್ಠವಾಗಿ 552 ಸದಸ್ಯರನ್ನು ಹೊಂದಿರಬಲ್ಲುದು. ಭಾರತದ ವಿವಿಧ ರಾಜ್ಯಗಳಿಂದ ಗರಿಷ್ಠ 530 ಸದಸ್ಯರು ಚುನಾಯಿತರಾಗುತ್ತಾರೆ. 20 ಸದಸ್ಯರು ಕೇಂದ್ರಾಡಳಿತ ಪ್ರದೇಶಗಳಿಂದ ಚುನಾಯಿತರಾದರೆ, ಇನ್ನಿಬ್ಬರು ಸದಸ್ಯರನ್ನು ಆಂಗ್ಲೋ-ಇಂಡಿಯನ್ ವರ್ಗವನ್ನು ಪ್ರತಿನಿಧಿಸಲು ನೇಮಿಸುವ ಅಧಿಕಾರ ಭಾರತದ ಅಧ್ಯಕ್ಷರಿಗೆ ಉಂಟು. ಲೋಕಸಭೆಯ ಸದಸ್ಯರಾಗಲು ಕನಿಷ್ಠ 25 ವರ್ಷ ವಯಸ್ಸಾಗಿರಬೇಕು. ಲೋಕಸಭೆಯ ಸಾಮಾನ್ಯ ಅವಧಿ ಐದು ವರ್ಷಗಳು. ಐದು ವರ್ಷಗಳ ನಂತರ ಮತ್ತೊಮ್ಮೆ ಚುನಾವಣೆಗಳು ನಡೆಯುತ್ತವೆ. ತುರ್ತು ಪರಿಸ್ಥಿತಿಯಿದ್ದಲ್ಲಿ ಚುನಾವಣೆಗಳನ್ನು ಮುಂದೂಡಬಹುದು. ಹಾಗೆಯೇ ಅವಧಿ ಮುಗಿಯುವ ಮುನ್ನ ಸರ್ಕಾರ ಬಹುಮತ ಕಳೆದುಕೊಂಡಲ್ಲಿ ಮತ್ತೊಮ್ಮೆ ಚುನಾವಣೆಗಳು ನಡೆಯಬೇಕಾಗಬಹುದು. ಪ್ರಸ್ಥುತ ಕಾರ್ಯ ನಿರ್ವಹಿಸುತ್ತಿರುವ 16 ನೆಯ ಲೋಕಸಭೆ ಮೇ, 2014 ರಲ್ಲಿ ಸೇರಿತು. ಪ್ರತಿ ರಾಜ್ಯದಿಂದ ಇರುವ ಲೋಕಸಭಾ ಸದಸ್ಯರ ಸಂಖ್ಯೆ ಆ ರಾಜ್ಯದ ಜನಸಂಖ್ಯೆಯನ್ನು ಅವಲಂಬಿಸಿರುತ್ತದೆ. ಈಗಿನ ಹಂಚಿಕೆ ಹೀಗಿದೆ (545 ಸದಸ್ಯರು: 543 ಚುನಾಯಿತ + 2 ನೇಮಿತ): ಭಾರತದ ರಾಜ್ಯವಾರು ಲೋಕಸಭಾ ಕ್ಷೇತ್ರಗಳು 2014 (Indian general election)ರ ಚುನಾವಣೆ ಫಲಿತಾಂಶ ಕೆಳಗೆ ಕೊಟ್ಟಿದೆ ಆಂಧ್ರದ 42 ಲೋಕಸಭಾ ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳು ತೆಲಂಗಾಣ ವ್ಯಾಪ್ತಿಯಲ್ಲಿವೆ . ಉಳಿದ ೨೫ ಸ್ಥಾನಗಳು ಹೊಸ ಆಂಧ್ರ ಪ್ರದೇಶದಲ್ಲಿವೆ. ರಾಜ್ಯಗಳು: ಕೆಲಸ ಲೋಕಸಭೆಯ ಸದಸ್ಯರು ಒಬ್ಬರನ್ನು "ಸಭಾಧ್ಯಕ್ಷ(ಸ್ಪೀಕರ್) ಅಥವಾ ಸಭಾಪತಿ" ಆಗಿ ಚುನಾಯಿಸುತ್ತಾರೆ. ಲೋಕಸಭೆಯ ಕಾರ್ಯ ಸರಾಗವಾಗಿ ಸಾಗುವಂತೆ ನೋಡಿಕೊಳ್ಳುವುದು ಸಭಾಧ್ಯಕ್ಷ(ಸ್ಪೀಕರ್) ರ ಮುಖ್ಯ ಕೆಲಸ. ಸಭಾಧ್ಯಕ್ಷ(ಸ್ಪೀಕರ್) ಅವರ ಅನುಪಸ್ಥಿತಿಯಲ್ಲಿ ಅವರ ಕೆಲಸವನ್ನು ಉಪಸಭಾಧ್ಯಕ್ಷ(ಡೆಪ್ಯುಟಿ ಸ್ಪೀಕರ್)ರು ನಿರ್ವಹಿಸುತ್ತಾರೆ. ಇವರಲ್ಲದೇ ಇವರಿಬ್ಬರ ಅನುಪಸ್ಥಿತಿಯಲ್ಲಿ ಸದನದ ಕಾರ್ಯಕಲಾಪಗಳನ್ನು ನಿರ್ವಹಿಸಲು ೧೦ ಹಿರಿಯ ಸದಸ್ಯರನ್ನು ಸಭಾಧ್ಯಕ್ಷರು ನೇಮಕ ಮಾಡುತ್ತಾರೆ. ಮೀರಾ ಕುಮಾರ್ ರವರು ಲೋಕ ಸಭೆಯ ಮೊದಲ ಮಹಿಳಾ ಸಭಾದ್ಯಕ್ಷರು. ಸಾಮಾನ್ಯ ದಿನಗಳಲ್ಲಿ ಲೋಕಸಭೆ ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ಒಂದರವರೆಗೆ, ಮತ್ತೆ ಮಧ್ಯಾಹ್ನ ಎರಡರಿಂದ ಸಂಜೆ ಆರರ ವರೆಗೆ ಸೇರುತ್ತದೆ. ಮೊದಲ ಒಂದು ಘಂಟೆ ಪ್ರಶ್ನೋತ್ತರಗಳಿಗೆ ಮೀಸಲಾಗಿಡಲಾಗಿರುತ್ತದೆ. ಭಾರತ ಸರ್ಕಾರದ ಶಾಸಕಾಂಗದ ಇನ್ನೊಂದು ಸಭೆ ರಾಜ್ಯಸಭೆ. ಯಾವುದೇ ಮಸೂದೆಗೆ ಲೋಕಸಭೆ ಒಪ್ಪಿಗೆ ಇತ್ತ ನಂತರ ಅದು ರಾಜ್ಯಸಭೆಗೆ ಹೋಗುತ್ತದೆ. ರಾಜ್ಯಸಭೆಯೂ ಒಪ್ಪಿದ ನಂತರ ಈ ಮಸೂದೆ ಕಾಯಿದೆಯಾಗುತ್ತದೆ. ಹಣಕಾಸಿಗೆ ಸಂಬಂಧಪಟ್ಟ ಮಸೂದೆಗಳ ವಿಷಯದಲ್ಲಿ ಮಾತ್ರ ರಾಜ್ಯಸಭೆಯ ಮಂಜೂರಾತಿ ಅಗತ್ಯವಿಲ್ಲ. ಈವರೆಗಿನ ಲೋಕಸಭಾ ಚುನಾವಣಾ ವಿವರಗಳು ಲೋಕಸಭೆಯ ಸದಸ್ಯರನ್ನು ನಿರ್ದಿಷ್ಟ ಚುನಾವಣೆಯಲ್ಲಿ ಎಲ್ಲಾ ವಯಸ್ಕ ಮತದಾರರು ಚುನಾಯಿಸುತ್ತಾರೆ. ಲೋಕಸಭೆ ವಿಸರ್ಜನೆ ಆಗುವವರೆಗೆ (ಸಾಮಾನ್ಯವಾಗಿ ಐದು ವರ್ಷಗಳ ಅವಧಿ) ಈ ಚುನಾಯಿತ ಪ್ರತಿನಿಧಿಗಳು ಅಧಿಕಾರದಲ್ಲಿ ಇರುತ್ತಾರೆ. ನವದೆಹಲಿಯ ಸಂಸತ್ ಭವನದಲ್ಲಿ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಆಯ್ಕೆಗೊಂಡ ಸದಸ್ಯರು ಸಮಾಲೋಚನೆ ನಡೆಸಿ ಕಾನೂನುಗಳನ್ನು ರೂಪಿಸುತ್ತಾರೆ. ಲೋಕಸಭಾ ಚುನಾವಣಾ ಇತಿಹಾಸ ಬಣ್ಣಗಳ ಸೂಚಿ * : 12 seats in Assam and 1 in Meghalaya did not vote. ಭಾರತದ ೧೬ ನೆಯ ಲೋಕಸಭೆ ವಿವರ ರಾಜ್ಯಗಳಲ್ಲಿ ಪಡೆದ ಸ್ಥಾನಗಳು;->೨೦೧೪ ಭಾರತದ ಸಾರ್ವತ್ರಿಕ ಲೋಕಸಭಾ ಚುನಾವಣೆ ಮತ್ತು ಫಲಿತಾಂಶ ಮೇ 16, 2014ರಂದು 16ನೇ ಲೋಕಸಭಾ ಚುನಾವಣೆಗಳ ಫಲಿತಾಂಶಗಳನ್ನು ಪ್ರಕಟಿಸಲಾಯಿತು 2014 ರ ಭಾರತದ ಸಾರ್ವತ್ರಿಕ ಚುನಾವಣೆ 2014 ರ ಏಪ್ರಿಲ್ ಮತ್ತು ಮೇ ಯಲ್ಲಿ ನಡೆದು ಮೇ 16, 2014ರಂದು ಎಣಿಕೆಯಾಗಿ ,ಭಾರತೀಯ ಜನತಾ ಪಕ್ಷವು ಬಹಮತ ಪಡೆದಿದ್ದು, ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಶ್ರೀ ನರೇಂದ್ರ ಮೋದಿ ಆ ಹುದ್ದೆಯನ್ನು ತ್ಯಜಿಸಿ ದೆಹಲಿಯಲ್ಲಿ ಮೇ 26, 2014,ರಂದು ಮೊದಲೇ ನಿರ್ಧರಿಸಿದಂತೆ ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ೪೫ ಜನ ಮಂತ್ರಿಗಳು ಅವರ ಜೊತೆ ಪ್ರಮಾಣ ವಚನ ಸ್ವೀಕರಿಸಿದರು. 2019 ಮಾರ್ಚ್ ಮೊದಲ ವಾರದಲ್ಲಿ ಚುನಾವಣಾ ಆಯೋಗವು ಲೋಕಸಭೆ ಚುನಾವಣೆಗಳ ದಿನಾಂಕಗಳನ್ನು ಘೋಷಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ಲೋಕಸಭೆಯ ಅವಧಿ 3 ಜೂನ್ 2019 ರಂದು ಕೊನೆಗೊಳ್ಳುತ್ತದೆ. 2014 -2019 (ಮಾರ್ಚಿ) ಅಂತಿಮ ಬಲಾಬಲ ಈವರೆಗಿನ ಲೋಕಸಭೆಗಳು ಮತ್ತು ಲೋಕಸಭಾ ಚುನಾವಣೆಗಳ ಪಟ್ಟಿ ನೋಡಿ ೧೫ನೆಯ ಲೋಕಸಭೆ ಭಾರತದ ಕೇಂದ್ರ ಮಂತ್ರಿ ಮಂಡಲ ೨೦೧೪ ರಾಜ್ಯಸಭೆ ೨೦೦೯ ಸಾರ್ವತ್ರಿಕ ಚುನಾವಣಾ ಫಲಿತಾಂಶ ೨೦೦೯ರ ಭಾರತದ ಸಾರ್ವತ್ರಿಕ ಚುನಾವಣೆ ಮತ್ತು ಭಾರತ ಭಾರತದ ಮುಖ್ಯಮಂತ್ರಿಗಳು ಲೋಕಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯ ಲೋಕಸಭೆಯಲ್ಲಿ ಸ್ತ್ರೀ ಶಕ್ತಿ; ಪ್ರಜಾವಾಣಿ; d: 26 ಮಾರ್ಚ್ 2019, ಚುನಾವಣೆ ೨೦೧೯ ಸಮೀಕ್ಷೆ ೨೦೧೯ರ ಲೋಕಸಭಾ ಚುನಾವಣೆ ಲೋಕಸಭೆ ಚುನಾವಣೆ 2019: ಪ್ರಧಾನಿ ಗದ್ದುಗೆಗೆ ಮತ್ತೆ ಏರುವರೇ ಮೋದಿ? 28 ಜನವರಿ 2019 ಪರಿವಿಡಿ ಬಾಹ್ಯ ಸಂಪರ್ಕಗಳು ಲೋಕಸಭೆ http://loksabha.nic.in ಲೋಕಸಭೆಯ ಅಧಿಕೃತ ತಾಣ ೧೯೫೨ ರಿಂದ-೧೯೯೬ ರ ವರೆಗಿನ ಚುನಾವಣೆ References Jump up ^ "Bioprofile of Meira Kumar". Fifteenth Lok Sabha Member's Bioprofile. Retrieved 19 August 2011. Jump up ^ "Bioprofile of Kariya Munda". Fifteenth Lok Sabha Member's Bioprofile. Retrieved 19 August 2011. Jump up ^ "Bioprofile of Pranab Mukherjee". Fifteenth Lok Sabha Member's Bioprofile. Retrieved 19 August 2011. Jump up ^ "Bioprofile of Sushma Swaraj". Fifteenth Lok Sabha Member's Bioprofile. Retrieved 19 August 2011. Jump up ^ "Lok Sabha". parliamentofindia.nic.in. Retrieved 19 August 2011. ^ Jump up to: a b Parliament of India: Lok Sabha ಭಾರತ ರಾಜಕೀಯ
1383
https://kn.wikipedia.org/wiki/%E0%B2%86%E0%B2%82%E0%B2%A7%E0%B3%8D%E0%B2%B0%20%E0%B2%AA%E0%B3%8D%E0%B2%B0%E0%B2%A6%E0%B3%87%E0%B2%B6
ಆಂಧ್ರ ಪ್ರದೇಶ
ಆಂಧ್ರ ಪ್ರದೇಶ () (, ಭಾಷಾಂತರ: ಆಂಧ್ರದ ಪ್ರಾಂತ್ಯ, ಸಂಕ್ಷಿಪ್ತವಾಗಿ ಎ.ಪಿ. ಎಂದು ಕರೆಯಲ್ಪಡುವ ರಾಜ್ಯವಾಗಿದ್ದು ಇದುಭಾರತದ ಆಗ್ನೇಯ ಕರಾವಳಿ ಭಾಗದಲ್ಲಿದೆ. ಭಾರತದಲ್ಲಿ ಇದು ವಿಸ್ತೀರ್ಣದ ಆಧಾರದಲ್ಲಿ ಭಾರತದ ರಾಜ್ಯಗಳ ವಿಸ್ತೀರ್ಣದಲ್ಲಿ ಎಂಟನೇ ಅತಿದೊಡ್ಡ ರಾಜ್ಯವಾಗಿದೆ ಮತ್ತು ಜನಸಂಖ್ಯೆಯ ಆಧಾರದಲ್ಲಿ ಭಾರತದ ರಾಜ್ಯಗಳ ಜನಸಂಖ್ಯೆಯಲ್ಲಿ ಹತ್ತನೇ ಅತಿ ದೊಡ್ಡ ರಾಜ್ಯವಾಗಿದೆ. ಪ್ರಸ್ತುತ ರಾಜಧಾನಿ ಮತ್ತು ಹೈದರಾಬಾದ್‌. ಆಂಧ್ರ ಪ್ರದೇಶದ ಹೊಸ ರಾಜಧಾನಿ ಅಮರಾವತಿ ಎಂದು ಗುರುತಿಸಲಾಗಿದೆ‌. ದೇಶದ ಎಲ್ಲ ರಾಜ್ಯಗಳ ಪೈಕಿ ಆಂಧ್ರ ಪ್ರದೇಶವು ಎರಡನೇ ಅತಿ ಉದ್ದದ ಕರಾವಳಿ (೯೭೨ km)ಪ್ರದೇಶವನ್ನು ಹೊಂದಿದೆ. ಗುಜರಾತ್‌‌ ರಾಜ್ಯವು ಅತಿ ಉದ್ದದ ಕರಾವಳಿ (೧೬೦೦ km)ಯನ್ನು ಹೊಂದಿದ್ದು, ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಆಂಧ್ರ ಪ್ರದೇಶವು ೧೨°೪೧' ಮತ್ತು ೨೨°N ಅಕ್ಷಾಂಶ ಹಾಗೂ ೭೭° ಮತ್ತು ೮೪°೪೦'E ರೇಖಾಂಶಗಳ ನಡುವೆ ಇದೆ. ಇದು ಉತ್ತರದಲ್ಲಿ ಮಹಾರಾಷ್ಟ್ರ, ಛತ್ತಿಸ್‌ಗಡ ಮತ್ತು ಒಡಿಶಾ ರಾಜ್ಯಗಳು, ಪೂರ್ವದಲ್ಲಿ ಬಂಗಾಳಕೊಲ್ಲಿ, ದಕ್ಷಿಣಕ್ಕೆ ತಮಿಳುನಾಡು ಹಾಗೂ ಪಶ್ಚಿಮಕ್ಕೆ ಕರ್ನಾಟಕ ರಾಜ್ಯವನ್ನು ತನ್ನ ಗಡಿಯನ್ನಾಗಿ ಹೊಂದಿದೆ. ಆಂಧ್ರ ಪ್ರದೇಶವು ಐತಿಹಾಸಿಕವಾಗಿ "ಭಾರತದ ಅನ್ನದ ಪಾತ್ರೆ " ಎಂದು ಕರೆಯಲ್ಪಟ್ಟಿದೆ. ಏಕೆಂದರೆ, ೭೭%ಗೂ ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿ ಭತ್ತವನ್ನು ಬೆಳೆಯಲಾಗುತ್ತದೆ. ಇದರ ಎರಡು ಪ್ರಮುಖ ನದಿಗಳಾದ ಗೋದಾವರಿ ಮತ್ತು ಕೃಷ್ಣಾ ರಾಜ್ಯದ ಉದ್ದಗಲಕ್ಕೂ ಹರಿಯುತ್ತವೆ. ಪುದುಚೆರಿ (ಪಾಂಡಿಚೆರಿ) ರಾಜ್ಯದ ಯಾಣಮ್ ಜಿಲ್ಲೆಯ ಪರಾವೃತ ಪ್ರದೇಶವು (೧೨ sq mi (೩೦ km²)) ರಾಜ್ಯದ ಈಶಾನ್ಯ ಭಾಗದಲ್ಲಿನ ಗೋದಾವರಿ ನದಿ ಮುಖಜ ಭೂಮಿ ಪ್ರದೇಶದಲ್ಲಿದೆ. ರಾಜ್ಯವನ್ನು ಒಳಗೊಂಡ ಪ್ರದೇಶವನ್ನು ಐತಿಹಾಸಿಕವಾಗಿ ಆಂಧ್ರಾಪಥ , ಆಂಧ್ರದೇಸ , ಆಂಧ್ರಾವನಿ ಮತ್ತು ಆಂಧ್ರ ವಿಷಯ ಎಂದು ಕರೆಯಲಾಗುತ್ತಿತ್ತು. ಆಂಧ್ರ ಪ್ರದೇಶವು ೧೯೫೬ರ ನವೆಂಬರ್ ೧ರಂದು ಆಂಧ್ರ ರಾಜ್ಯದಿಂದ ರಚನೆಯಾಯಿತು. ಇತಿಹಾಸ ಐತರೇಯ ಬ್ರಾಹ್ಮಣ (B.C.೮೦೦) ಹಾಗೂ ಮಹಾಭಾರತದಂತಹ ಸಂಸ್ಕೃತ ಮಹಾಕಾವ್ಯಗಳಲ್ಲಿ ಆಂಧ್ರ ಸಾಮ್ರಾಜ್ಯ ವೊಂದರ ಬಗ್ಗೆ ಉಲ್ಲೇಖಿಸಲಾಗಿದೆ. "ಆಂಧ್ರ" ಜನಾಂಗದ ಬಗೆಗೆ ಭರತನ ನಾಟ್ಯಶಾಸ್ತ್ರದಲ್ಲೂ (B.C ೧ನೇ ಶತಮಾನ) ಉಲ್ಲೇಖವಾಗಿದೆ. ಭಟ್ಟಿಪ್ರೊಲುವಿನಲ್ಲಿ ಪತ್ತೆಯಾದ ಶಾಸನಗಳಲ್ಲಿ ತೆಲುಗು ಭಾಷೆಯ ಮೂಲ ಪತ್ತೆಯಾಗಿದೆ. ಚಂದ್ರಗುಪ್ತ ಮೌರ್ಯ(B.C.೩೨೨–೨೯೭)ನ ಆಸ್ಥಾನಕ್ಕೆ ಭೇಟಿ ನೀಡಿದ್ದ ಮೆಗಾಸ್ತನೀಸ್‌ನು, ಕೋಟೆಗಳಿಂದ ಸುತ್ತುವರಿಯಲ್ಪಟ್ಟಿರುವ ೩ ಪಟ್ಟಣಗಳು, ೧೦೦,೦೦೦ ಪದಾತಿ ದಳ, ೨೦೦ ಅಶ್ವದಳ ಮತ್ತು ೧,೦೦೦ ಆನೆಗಳನ್ನು ಒಳಗೊಂಡ ಸೈನ್ಯವನ್ನು ಆಂಧ್ರ ದೇಶವು ಹೊಂದಿತ್ತು ಎಂದು ಉಲ್ಲೇಖಿಸಿದ್ದಾನೆ. ಆ ಸಮಯದಲ್ಲಿ ಆಂಧ್ರರು ತಮ್ಮ ಸಾಮ್ರಾಜ್ಯವನ್ನು ಗೋದಾವರಿ ನದಿಬಯಲಿನಲ್ಲಿ ನಿರ್ಮಿಸಿದರು ಎಂದು ಬೌದ್ಧ ಗ್ರಂಥಗಳು ಹೇಳುತ್ತವೆ. ಆಂಧ್ರರು ತನ್ನ ಸಾಮಂತರಾಗಿದ್ದರು ಎಂದು ಅಶೋಕನು ತನ್ನ ೧೩ನೇ ಶಿಲಾ ಶಾಸನದಲ್ಲಿ ಉಲ್ಲೇಖಿಸಿದ್ದಾನೆ. ಶಾಸನಾಧಾರಗಳು ತೋರಿಸುವಂತೆ ಆಂಧ್ರದ ಕರಾವಳಿಯಲ್ಲಿ ಆರಂಭಿಕ ಸಾಮ್ರಾಜ್ಯವೊಂದಿದ್ದು, ಅದನ್ನು ಕುಬೇರಕ ನು ಆಳುತ್ತಿದ್ದನು ಮತ್ತು ಪ್ರತಿಪಾಲಪುರವು(ಭಟ್ಟಿಪ್ರೊಲು) ಅವನ ರಾಜಧಾನಿಯಾಗಿತ್ತು. ಬಹುಶಃ ಇದು ಭಾರತದಲ್ಲಿನ ಅತ್ಯಂತ ಪ್ರಾಚೀನವಾದ ಪ್ರಸಿದ್ಧ ಸಾಮ್ಯಾಜ್ಯವಾಗಿರಬಹುದು. ಅದೇ ಸಮಯದ ಆಸುಪಾಸಿನಲ್ಲಿ ಧಾನ್ಯಕಟಕಮ್‌/ಧರಣಿಕೋಟ(ಈಗಿನ ಅಮರಾವತಿ) ಒಂದು ಮುಖ್ಯವಾದ ಸ್ಥಳವಾಗಿತ್ತು ಎಂದು ಕಾಣುತ್ತದೆ. ಈ ಸ್ಥಳಕ್ಕೆ ಗೌತಮ ಬುದ್ಧರು ಭೇಟಿ ನೀಡಿದ್ದರು. ಪ್ರಾಚೀನ ಟಿಬೆಟ್‌ ವಿದ್ವಾಂಸ ತಾರಾನಾಥರ ಪ್ರಕಾರ: "ತನಗೆ ಜ್ಞಾನೋದಯವಾದ ನಂತರದ ವರ್ಷದ ಚೈತ್ರ ಮಾಸದ ಹುಣ್ಣಿಮೆಯ ದಿನದಂದು, ಧಾನ್ಯಕಟಕದ ಮಹಾನ್‌ ಸ್ತೂಪದಲ್ಲಿ ಬುದ್ಧನು 'ಭವ್ಯವಾದ ಚಾಂದ್ರ ಸೌಧಗಳ' (ಕಾಲಚಕ್ರ) ಮಂಡಲವನ್ನು ಹೊರಹೊಮ್ಮಿಸಿದನು." thumb|left|ವಾರಂಗಲ್‌ನಲ್ಲಿರುವ ಕಾಕತೀಯರ ಶಿಲ್ಪಕಲೆ BCE ೧೪ನೇ ಶತಮಾನದಲ್ಲಿ ಮೌರ್ಯರು ತಮ್ಮ ಆಳ್ವಿಕೆಯನ್ನು ಅಂಧ್ರದವರೆಗೂ ವಿಸ್ತರಿಸಿದರು. ಮೌರ್ಯ ಸಾಮ್ರಾಜ್ಯದ ಪತನಾನಂತರ ಆಂಧ್ರದ ಶಾತವಾಹನರು BCE ೩ನೇ ಶತಮಾನದಲ್ಲಿ ಸ್ವತಂತ್ರರಾದರು. ಶಾತವಾಹನರು CE ೨೨೦ರಲ್ಲಿ ಅವನತಿ ಹೊಂದಿದ ನಂತರ ಇಕ್ಷ್ವಾಕು ಮನೆತನ, ಪಲ್ಲವರು, ಆನಂದ ಗೋತ್ರಿಕರು, ವಿಷ್ಣುಕುಂದಿನರು, ಪೂರ್ವದ ಚಾಲುಕ್ಯರು ಮತ್ತು ಚೋಳರು ತೆಲುಗು ನಾಡನ್ನು ಆಳಿದರು. CE ೫ನೇ ಶತಮಾನದಲ್ಲಿ ರೇನಾಟಿ ಚೋಳರು(ಕಡಪ ಪ್ರದೇಶ) ಆಳ್ವಿಕೆ ನಡೆಸುತ್ತಿದ್ದ ಸಮಯದಲ್ಲಿ ತೆಲುಗು ಭಾಷೆಯ ಶಾಸನಾಧಾರಗಳು ದೊರೆತವು. ಈ ಅವಧಿಯಲ್ಲಿ ಪ್ರಾಕೃತ ಮತ್ತು ಸಂಸ್ಕೃತ ಭಾಷೆಗಳ ಪ್ರಾಬಲ್ಯವನ್ನು ತಗ್ಗಿಸಿ ತೆಲುಗು ಭಾಷೆಯು ಜನಪ್ರಿಯ ಮಾಧ್ಯಮವಾಗಿ ಹೊರಹೊಮ್ಮಿತು.ವಿನುಕೊಂಡವನ್ನು ರಾಜಧಾನಿಯಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದ ವಿಷ್ಣುಕುಂದಿನ ರಾಜರಿಂದ ತೆಲುಗು ಅಧಿಕೃತ ಭಾಷೆಯಾಯಿತು. ವಿಷ್ಣುಕುಂದಿನರು ಅವನತಿ ಹೊಂದಿದ ನಂತರ, ಪೂರ್ವದ ಚಾಲುಕ್ಯರು ವೆಂಗಿಯಲ್ಲಿನ ತಮ್ಮ ರಾಜಧಾನಿಯಿಂದ ಸುದೀರ್ಘ ಕಾಲದವರೆಗೆ ಆಳ್ವಿಕೆ ನಡೆಸಿದರು.ಇವರು CE ೧ನೇ ಶತಮಾನದದ ಆರಂಭದಲ್ಲಿ ಶಾತವಾಹನರು ಮತ್ತು ನಂತರದ ದಿನಗಳಲ್ಲಿ ಇಕ್ಷ್ವಾಕು ಮನೆತನಗಳ ಅಡಿಯಲ್ಲಿ ಚಾಲುಕ್ಯರು, ಸಾಮಂತರು ಮತ್ತು ಸೇನಾನಾಯಕರಾಗಿದ್ದರು ಎಂದು ಉಲ್ಲೇಖವಾಗಿದೆ. ಚಾಲುಕ್ಯ ದೊರೆಯಾದ ರಾಜರಾಜ ನರೇಂದ್ರನು ರಾಜಮುಂಡ್ರಿಯನ್ನು CE ೧೦೨೨ರ ಆಸುಪಾಸಿನಲ್ಲಿ ಆಳಿದನು. ಪಲ್ನಾಡು ಯದ್ಧದಿಂದಾಗಿ ಪೂರ್ವದ ಚಾಲುಕ್ಯರ ಶಕ್ತಿಯು ದುರ್ಬಲಗೊಂಡಿತು ಮತ್ತು ಇದರ ಪರಿಣಾಮವಾಗಿ CE ೧೨ ಮತ್ತು ೧೩ನೇ ಶತಮಾನದಲ್ಲಿ ಕಾಕತೀಯಸಾಮ್ರಾಜ್ಯವು ಪ್ರವರ್ಧಮಾನಕ್ಕೆ ಬಂದಿತು. ವಾರಂಗಲ್‌ ಸಮೀಪದ ಸಣ್ಣ ಪ್ರದೇಶವನ್ನು ಆಳುತ್ತಿದ್ದ ರಾಷ್ಟ್ರಕೂಟರಿಗೆ ಕಾಕತೀಯರು ಮೊದಲ ಊಳಿಗಮಾನ್ಯ ಸಾಮಂತರಾಗಿದ್ದರು. ಕಾಕತೀಯರಿಂದ ಎಲ್ಲ ತೆಲುಗು ಪ್ರದೇಶಗಳು ಒಂದುಗೂಡಿದವು. CE ೧೩೨೩ರಲ್ಲಿ, ದೆಹಲಿಯ ಸುಲ್ತಾನನಾದ ಘಿಯಾಜುದ್ದೀನ್‌ ತುಘಲಕ್‌ನು ತೆಲುಗು ದೇಶವನ್ನು ಗೆಲ್ಲಲು ಮತ್ತು ವಾರಂಗಲ್‌‌ನ್ನು ವಶಪಡಿಸಿಕೊಳ್ಳಲು ಉಲುಘ್‌‌ ಖಾನ್‌ ನೇತೃತ್ವದಲ್ಲಿ ದೊಡ್ಡ ಸೈನ್ಯವನ್ನು ಕಳಿಸಿದನು.ಪ್ರತಾಪರುದ್ರರಾಜನನ್ನು ಯುದ್ಧಖೈದಿಯಾಗಿ ಕರೆದೊಯ್ಯಲಾಯಿತು. CE ೧೩೨೬ರಲ್ಲಿ ದೆಹಲಿ ಸುಲ್ತಾನರಿಂದ ವಾರಂಗಲ್‌ನ್ನು ಪುನಃ ವಶಪಡಿಸಿಕೊಂಡ ಮುಸುನೂರಿ ನಾಯಕರು, ಮುಂದಿನ ೫೦ ವರ್ಷಗಳವರೆಗೆ ಆಳ್ವಿಕೆ ನಡೆಸಿದನು. ಅವರ ಈ ವಿಜಯದ ಪ್ರೇರಣೆಯಿಂದ ಆಂಧ್ರ ಪ್ರದೇಶ ಮತ್ತು ಭಾರತದ ಇತಿಹಾಸದಲ್ಲಿನ ಮಹಾನ್‌ ಚಕ್ರಾಧಿಪತ್ಯಗಳಲ್ಲಿ ಒಂದಾದ ವಿಜಯನಗರ ಸಾಮ್ರಾಜ್ಯವು ಸ್ಥಾಪನೆಯಾಯಿತು. ವಾರಂಗಲ್‌ನ ಕಾಕತೀಯರ ಖಜಾನೆ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದ ಹರಿಹರ ಮತ್ತು ಬುಕ್ಕರು ಈ ಸಾಮ್ರಾಜ್ಯದ ಸಂಸ್ಥಾಪಕರು. ಅಲ್ಲಾವುದ್ದೀನ್‌ ಹಸನ್‌ ಗಂಗು ಎಂಬುವವನು ದೆಹಲಿ ಸುಲ್ತಾನರ ವಿರುದ್ಧ ದಂಗೆಯೆದ್ದು, CE ೧೩೪೭ನೇ ಇಸವಿಯಲ್ಲಿ ಬಹಮನಿ ಸಾಮ್ರಾಜ್ಯ ಎಂಬ ಸ್ವತಂತ್ರ ಮುಸ್ಲಿಂ ರಾಜ್ಯವನ್ನು ದಕ್ಷಿಣ ಭಾರತದಲ್ಲಿ ಸ್ಥಾಪನೆ ಮಾಡಿದನು. ಕುತುಬ್‌ ಷಾಹಿ ಮನೆತನವು, ೧೬ನೇ ಶತಮಾನದ ಆರಂಭದಿಂದ ೧೭ನೇ ಶತಮಾನದ ಅಂತ್ಯದವರೆಗೆ, ಅಂದರೆ ಸುಮಾರು ಇನ್ನೂರು ವರ್ಷಗಳ ಕಾಲ ಆಂಧ್ರ ದೇಶದ ಮೇಲೆ ಪ್ರಭುತ್ವ ಸಾಧಿಸಿತ್ತು. ವಸಾಹತು ಭಾರತದಲ್ಲಿ ಉತ್ತರದ ಸರ್ಕಾರ್‌ಗಳು ಬ್ರಿಟಿಷ್‌ ಆಳ್ವಿಕೆಯ ಮದ್ರಾಸ್‌ ಪ್ರಾಂತ್ಯದ ಭಾಗವಾದರು. ಅಂತಿಮವಾಗಿ ಈ ಪ್ರದೇಶವು ಕರಾವಳಿ ಆಂಧ್ರ ಪ್ರಾಂತ್ಯವಾಗಿ ಹೊರಹೊಮ್ಮಿತು. ನಂತರ ನಿಜಾಮ‌ನು ಐದು ಪ್ರದೇಶಗಳನ್ನು ಬ್ರಿಟಿಷರಿಗೆ ಬಿಟ್ಟುಕೊಟ್ಟನು. ಮುಂದೆ ಈ ಪ್ರದೇಶಗಳೇ ರಾಯಲಸೀಮಾ ಪ್ರಾಂತ್ಯವಾಗಿ ಹೊರಹೊಮ್ಮಿತು.ಸ್ಥಳೀಯ ಸ್ವಯಮಾಧಿಪತ್ಯಕ್ಕೆ ಪ್ರತಿಯಾಗಿ ಬ್ರಿಟಿಷ್‌ ಆಡಳಿತವನ್ನು ಒಪ್ಪಿಕೊಂಡ ನಿಜಾಮರು, ಹೈದರಾಬಾದ್‌ನ ರಾಜೋಚಿತ ರಾಜ್ಯವಾಗಿ ಒಳನಾಡು ಪ್ರಾಂತ್ಯಗಳ ಮೇಲೆ ತಮ್ಮ ನಿಯಂತ್ರಣವನ್ನು ಉಳಿಸಿಕೊಂಡರು. ಈ ಮಧ್ಯೆ, ಗೋದಾವರಿ ನದೀ ಮುಖಜ ಭೂಮಿಯಲ್ಲಿ ಯಾಣಮ್‌ (ಯಾಣೋನ್‌)ನ್ನು ಫ್ರೆಂಚರು ಆಕ್ರಮಿಸಿಕೊಂಡರು ಹಾಗೂ ಅದನ್ನು ೧೯೫೪ರವರೆಗೂ (ಬ್ರಿಟಷ್‌ ನಿಯಂತ್ರಣದ ಅವಧಿಗಳನ್ನು ಹೊರತುಪಡಿಸಿ) ತಮ್ಮ ಹಿಡಿತದಲ್ಲಿಟ್ಟುಕೊಂಡರು. ೧೯೪೭ರಲ್ಲಿ ಯುನೈಟೆಡ್‌ ಕಿಂಗ್‌ಡಂನಿಂದ ಭಾರತವು ಸ್ವತಂತ್ರಗೊಂಡಿತು. ಹೈದರಾಬಾದ್‌ನ ಮುಸ್ಲಿಂ ನಿಜಾಮನು ಭಾರತದಿಂದ ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಬಯಸಿದನು. ಆದರೆ, ಆ ಪ್ರಾಂತ್ಯದ ಜನರು ಭಾರತದ ಒಕ್ಕೂಟಕ್ಕೆ ಸೇರಲು ಚಳವಳಿಯನ್ನು ಆರಂಭಿಸಿದರು. ೫ ದಿನಗಳ ಕಾಲ ನಡೆದ ಪೋಲೋ ಕಾರ್ಯಾಚರಣೆಗೆ ಹೈದರಾಬಾದ್ ರಾಜ್ಯದ ಜನತೆಯ ಅಪೂರ್ವ ಬೆಂಬಲ ದೊರೆತಿದ್ದರಿಂದಾಗಿ, ೧೯೪೮ರಲ್ಲಿ ಹೈದರಾಬಾದ್ ರಾಜ್ಯವು ಬಲವಂತವಾಗಿ ಭಾರತ ಗಣರಾಜ್ಯದ ಒಂದು ಭಾಗವಾಗಬೇಕಾಯಿತು. ಮದ್ರಾಸ್‌ ರಾಜ್ಯದ ತೆಲುಗು ಜನರ ಹಿತಾಸಕ್ತಿಗಳನ್ನು ಕಾಪಾಡುವ ಮತ್ತು ಸ್ವತಂತ್ರ ರಾಜ್ಯವನ್ನು ಗಳಿಸುವ ಪ್ರಯತ್ನದಲ್ಲಿ ಉಪವಾಸ ಆರಂಭಿಸಿದ ಅಮರಜೀವಿ ಪೊಟ್ಟಿ ಶ್ರೀರಾಮುಲು ಉಪವಾಸದಿಂದಲೇ ತಮ್ಮ ಪ್ರಾಣತ್ಯಾಗ ಮಾಡಿದರು. ಅವರ ಸಾವಿನ ನಂತರ ಸಾರ್ವಜನಿಕರ ಹುಯಿಲು ಮತ್ತು ನಾಗರಿಕ ಕ್ಷೋಭೆಗೆ ಹೆದರಿದ ಸರ್ಕಾರವು ಅನಿವಾರ್ಯವಾಗಿ ತೆಲುಗು ಭಾಷಿಕರಿಗಾಗಿ ಹೊಸ ರಾಜ್ಯವೊಂದನ್ನು ರಚಿಸುವುದಾಗಿ ಅಧಿಕೃತವಾಗಿ ಘೋಷಿಸಿತು. ೧೯೫೩ರ ಅಕ್ಟೋಬರ್‌ ೧ರಂದು ಆಂಧ್ರಕ್ಕೆ ರಾಜ್ಯದ ಸ್ಥಾನಮಾನವು ದಕ್ಕಿ, ಕರ್ನೂಲ್ ಅದರ ರಾಜಧಾನಿಯಾಯಿತು. ೧೯೫೬ರ ನವೆಂಬರ್‌ ೧ರಂದು ಆಂಧ್ರರಾಜ್ಯವು ಹೈದರಾಬಾದ್‌ ರಾಜ್ಯದ ತೆಲಂಗಾಣ ಪ್ರಾಂತ್ಯದಲ್ಲಿ ವಿಲೀನವಾಗುವ ಮೂಲಕ ಆಂಧ್ರ ಪ್ರದೇಶ ರಾಜ್ಯದ ರಚನೆಯಾಯಿತು. ಹೈದರಾಬಾದ್‌ ರಾಜ್ಯದ ಹಿಂದಿನ ರಾಜಧಾನಿಯಾಗಿದ್ದ ಹೈದರಾಬಾದ್‌ನ್ನು ಆಂಧ್ರ ಪ್ರದೇಶ ಎಂಬ ಹೊಸ ರಾಜ್ಯದ ರಾಜಧಾನಿಯಾಗಿ ಮಾಡಲಾಯಿತು. ೧೯೫೪ರಲ್ಲಿ ಫ್ರೆಂಚರಿಂದ ಯಾಣಮ್‌ ಬಿಡುಗಡೆ ಹೊಂದಿತು. ಆದರೆ ಜಿಲ್ಲೆಯ ಪ್ರತ್ಯೇಕ ಮತ್ತು ವಿಶಿಷ್ಟ ಅನನ್ಯತೆಯನ್ನು ಉಳಿಸಬೇಕು ಎಂಬುದು ಬಿಡುಗಡೆಯ ಒಪ್ಪಂದದ ಷರತ್ತಾಗಿತ್ತು. ಇದು ದಕ್ಷಿಣ ಭಾರತದ ಇತರ ಪರಾವೃತ ಪ್ರದೇಶಗಳಿಗೂ ಅನ್ವಯಿಸಿ, ಇಂದಿನ ಪುದುಚೆರಿ ರಾಜ್ಯದ ರಚನೆಯಾಯಿತು. ಭೂಗೋಳ ಮತ್ತು ಹವಾಮಾನ ಆಂಧ್ರ ಪ್ರದೇಶದ ಹವಾಮಾನವು ಸಾಮಾನ್ಯವಾಗಿ ಬಿಸಿ ಮತ್ತು ತೇವಾಂಶದಿಂದ ಕೂಡಿರುತ್ತದೆ. ನೈರುತ್ಯ ಮಳೆ‌ ಮಾರುತಗಳು ರಾಜ್ಯದ ಹವಾಮಾನವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಆದರೆ ಆಂಧ್ರ ಪ್ರದೇಶದಲ್ಲಿನ ಚಳಿಗಾಲವು ಹಿತಕರವಾಗಿರುತ್ತದೆ. ಆದ್ದರಿಂದ ಈ ಸಮಯದಲ್ಲಿಯೇ ರಾಜ್ಯವು ತನ್ನ ಬಹುತೇಕ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಆಂಧ್ರ ಪ್ರದೇಶದಲ್ಲಿ ಬೇಸಿಗೆ ಕಾಲವು ಮಾರ್ಚ್‌ನಿಂದ ಜೂನ್‌ವರೆಗೂ ಇರುತ್ತದೆ. ಈ ತಿಂಗಳುಗಳ ಅವಧಿಯಲ್ಲಿ ಪಾದರಸದ ಮಟ್ಟವು ತುಂಬಾ ಉನ್ನತವಾಗಿರುತ್ತದೆ. ಕರಾವಳಿ ಪ್ರದೇಶದಲ್ಲಿನ ಬೇಸಿಗೆ ತಾಪಮಾನವು ಸಾಮಾನ್ಯವಾಗಿ ರಾಜ್ಯದ ಉಳಿದ ಭಾಗಗಳಿಗಿಂತ ಹೆಚ್ಚಿರುತ್ತದೆ. ಬೇಸಿಗೆಯಲ್ಲಿ, ತಾಪಮಾನವು ಸಾಮಾನ್ಯವಾಗಿ ೨೦ °C ಮತ್ತು ೪೦ °C ನ ನಡುವಣ ಇರುತ್ತದೆ. ಕೆಲವೊಂದು ಪ್ರದೇಶಗಳಲ್ಲಿ ಬೇಸಿಗೆಯ ದಿನವೊಂದರಲ್ಲಿ ತಾಪಮಾನವು ೪೫ ಡಿಗ್ರಿಗಳಷ್ಟು ಮಟ್ಟವನ್ನು ಮುಟ್ಟಿರುತ್ತದೆ. ಜುಲೈನಿಂದ ಸೆಪ್ಟೆಂಬರ್ ನಡುವಿನ ಅವಧಿಯು ಆಂಧ್ರ ಪ್ರದೇಶದಲ್ಲಿ ಸಮೃಧ್ಧ ಮಳೆಯಾಗುವ ಕಾಲ. ಹಾಗಾಗಿ ಈ ತಿಂಗಳುಗಳ ಅವಧಿಯಲ್ಲಿ ರಾಜ್ಯದಲ್ಲಿ ಹೆಚ್ಚಿನ ಮಳೆಯಾಗುತ್ತದೆ. ಆಂಧ್ರ ಪ್ರದೇಶದಲ್ಲಿ ಬೀಳುವ ಒಟ್ಟು ಮಳೆಯ ಮೂರನೇ ಒಂದು ಭಾಗವನ್ನು ಈಶಾನ್ಯ ಮಳೆ ಮಾರುತಗಳು ಹೊತ್ತು ತರುತ್ತವೆ. ಕೆಲವು ವೇಳೆ ಅಕ್ಟೋಬರ್ ತಿಂಗಳ ಆಸುಪಾಸಿನಲ್ಲಿ ಚಳಿಗಾಲವು ರಾಜ್ಯವನ್ನು ಪ್ರವೇಶಿಸುತ್ತದೆ. ಅಕ್ಟೋಬರ್‌, ನವೆಂಬರ್, ಡಿಸೆಂಬರ್‌, ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ ಆಂಧ್ರ ಪ್ರದೇಶದಲ್ಲಿ ಚಳಿಗಾಲವಿರುತ್ತದೆ. ರಾಜ್ಯವು ಗಣನೀಯ ಪ್ರಮಾಣದ ಉದ್ದದ ಕರಾವಳಿ ಪ್ರದೇಶವನ್ನು ಹೊಂದಿರುವುದರಿಂದ ಇಲ್ಲಿ ಚಳಿಗಾಲದಲ್ಲಿ ಹೆಚ್ಚಿನ ಚಳಿ ಇರುವುದಿಲ್ಲ.ಚಳಿಗಾಲದಲ್ಲಿ ಇಲ್ಲಿನ ಉಷ್ಣಾಂಶವು ಸಾಮಾನ್ಯಾಗಿ ೧೩ °Cನಿಂದ ೩೦ °Cವರೆಗೆ ಇರುತ್ತದೆ. ಬೇಸಿಗೆಯ ತಿಂಗಳುಗಳಲ್ಲಿ ಆಂಧ್ರಕ್ಕೆ ನೀವು ಪ್ರವಾಸ ಹೊರಡುವುದಾದಲ್ಲಿ ಬೇಸಿಗೆಯ ಉಡುಪುಗಳೊಂದಿಗೆ ಸಿದ್ಧರಿರುವುದು ಅಗತ್ಯವಾಗಿರುತ್ತದೆ. ಬೇಸಿಗೆಯ ಹವಾಮಾನಕ್ಕೆ ಚೆನ್ನಾಗಿ ಹೊಂದಿಕೊಳುವಲ್ಲಿ ಹತ್ತಿ ಉಡುಪುಗಳು ಸೂಕ್ತವಾಗಿರುತ್ತವೆ. ವರ್ಷದ ಪ್ರಮುಖ ಭಾಗದ ಅವಧಿಯಲ್ಲಿ ಆಂಧ್ರ ಪ್ರದೇಶದ ಹವಾಮಾನ ಅಷ್ಟೇನೂ ಹಿತಕರವಾಗಿರುವುದಿಲ್ಲ. ಆದ್ದರಿಂದ ರಾಜ್ಯಕ್ಕೆ ಭೇಟಿ ನೀಡಲು ಅಕ್ಟೋಬರ್‌ನಿಂದ ಫೆಬ್ರವರಿಯ ನಡುವಿನ ಅವಧಿಯು ಪ್ರಶಸ್ತ ಕಾಲವೆಂದು ಹೇಳಬಹುದು. ವಿಭಾಗಗಳು ಆಂಧ್ರ ಪ್ರದೇಶವನ್ನು ಕರಾವಳಿ ಆಂಧ್ರ, ರಾಯಲಸೀಮಾ ಮತ್ತು ತೆಲಂಗಾಣ ಎಂದು ಮೂರು ವಿಭಾಗಗಳಾಗಿ ವಿಭಾಗಿಸಬಹುದು. ಆಂಧ್ರ ಪ್ರದೇಶ ೨೩ ಜಿಲ್ಲೆಗಳನ್ನು ಹೊಂದಿದ್ದು ಅವು ಈ ರೀತಿ ಇವೆ: ಅದಿಲಾಬಾದ್‌‌, ಅನಂತಪುರ್‌‌, ಚಿತ್ತೂರ್‌, ಕಡಪ, ಪೂರ್ವ ಗೋದಾವರಿ, ಪಶ್ಚಿಮ ಗೋದಾವರಿ, ಗುಂಟೂರ್‌‌, ಹೈದರಾಬಾದ್‌, ಕರೀಂನಗರ, ಖಮ್ಮಮ್‌, ಕೃಷ್ಣ, ಕರ್ನೂಲ್‌, ಮೆಹಬೂಬ್‌ ನಗರ‌, ಮೇಡಕ್‌, ನಲ್ಗೊಂಡ, ಶ್ರೀ ಪೊಟ್ಟಿ ಶ್ರೀರಾಮುಲು ನೆಲ್ಲೂರ್‌, ನಿಜಾಮಬಾದ್‌‌, ಪ್ರಕಾಶಮ್‌, ರಂಗಾರೆಡ್ಡಿ, ಶ್ರೀಕಾಕುಲಂ, ವಿಶಾಖಪಟ್ಟಣಂ, ವಿಜಯನಗರಂ ಮತ್ತು ವಾರಂಗಲ್‌. ಪ್ರತಿ ಜಿಲ್ಲೆಯನ್ನೂ ವಿವಿಧ ಮಂಡಲಗಳಾಗಿ ವಿಭಾಗಿಸಲಾಗಿದ್ದು, ಪ್ರತಿ ಮಂಡಲವೂ ಕೆಲವು ಹಳ್ಳಿಗಳ ಒಂದು ಗುಂಪಾಗಿದೆ.ಹೈದರಾಬಾದ್‌ ಇದರ ರಾಜಧಾನಿಯಾಗಿದ್ದು, ಇದಕ್ಕೆ ಪಕ್ಕದಲ್ಲಿರುವ ಅವಳಿ ನಗರವಾದ ಸಿಕಂದರಾಬಾದ್‌ನ ಒಡಗೂಡಿ ರಾಜ್ಯದಲ್ಲೇ ಅತ್ಯಂತ ದೊಡ್ಡ ನಗರವಾಗಿದೆ. ವಿಶಾಖಪಟ್ಟಣವು ಆಂಧ್ರ ಪ್ರದೇಶದ ಪ್ರಮುಖ ರೇವು ಪಟ್ಟಣವಾಗಿದ್ದು ಇದು ರಾಜ್ಯದ ಎರಡನೇ ಅತಿ ದೊಡ್ಡ ನಗರವಾಗಿದೆ ಹಾಗೂ ಭಾರತೀಯ ನೌಕಾಪಡೆಯ ಪೂರ್ವ ನೌಕಾದಳಕ್ಕೆ ನೆಲೆಯಾಗಿದೆ. ವಿಜಯವಾಡ ವು ತನ್ನ ಭೌಗೋಳಿಕ ನೆಲೆಯಿಂದಾಗಿ ಹಾಗೂ ಪ್ರಮುಖ ರೈಲು ಮತ್ತು ರಸ್ತೆ ಮಾರ್ಗಗಳಿಗೆ ಸಮೀಪವಿರುವುದರಿಂದಾಗಿ ಪ್ರಮುಖ ವ್ಯಾಪಾರಿ ತಾಣವಾಗಿದೆ; ಅಲ್ಲದೆ ರಾಜ್ಯದ ಮೂರನೇ ಅತಿದೊಡ್ಡ ನಗರವಾಗಿದೆ. ರಾಜ್ಯದ ಇತರೆ ಮುಖ್ಯ ನಗರ ಮತ್ತು ಪಟ್ಟಣಗಳೆಂದರೆ: ಕಾಕಿನಾಡ, ವಾರಂಗಲ್‌, ಗುಂಟೂರ್‌, ತಿರುಪತಿ, ರಾಜಮುಂಡ್ರಿ, ನೆಲ್ಲೂರ್‌, ಓಂಗೊಲ್, ಕರ್ನೂಲ್‌, ಅನಂತಪುರ್‌, ಕರೀಂನಗರ‌, ನಿಜಾಮಾಬಾದ್‌ ಮತ್ತು ಏಲೂರು. ಸೀಮಾಂಧ್ರಕ್ಕೆ ಹೊಸ ರಾಜಧಾನಿ 2 Dec, 2016 ದಿ. ಜೂನ್ 2, 2014, ಆಂಧ್ರ ಪ್ರದೇಶ ರಾಜ್ಯವು ಎರಡು ಭಾಗವಾಗಿ ಒಡೆದು, ಎರಡು ರಾಜ್ಯವಾಯಿತು. ಅವು ತೆಲಂಗಾಣ ಮತ್ತು ಸೀಮಾಂಧ್ರ (ಆಂಧ್ರ). ಮೂಲ ಆಂದ್ರಪ್ರದೇಶ ಇಬ್ಭಾಗವಾಗಿ ತೆಲಂಗಾಣ ಆಂಧ್ರ ಎಂದುಎರಡು ರಾಜ್ಯಗಳಾದಾಗ ಹೈದರಾಭಾದು ತೆಲಂಗಾಣಾಕ್ಕೆ ರಾಧಾನಿಯಾಯಿತು. ಆಂಧ್ರವು ಅಮರಾವತಿ ಅಂಬ ಹೊಸನಗರವನ್ನು ಕಟ್ಟಿ ಆಂಧ್ರಪ್ರದೇಶದ ಸಂಪೂರ್ಣ ಆಡಳಿತ ನೂತನ ರಾಜಧಾನಿ ಅಮರಾವತಿಗೆ 1-12-2016 ಗುರುವಾರ ಸ್ಥಳಾಂತರವಾಗುವ ಮೂಲಕ ಹೊಸ ಅಧ್ಯಾಯ ಆರಂಭಿಸಿತು. ಅಮರಾವತಿಗೆ ಸಮೀಪದ ವೆಲಗಪುಡಿಯಲ್ಲಿನ ತಾತ್ಕಾಲಿಕ ಸಚಿವಾಲಯದಲ್ಲಿನ ಕಚೇರಿಯಿಂದಲೇ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಕಾರ್ಯನಿರ್ವಹಿಸಲು ಆರಂಭಿಸಿದರು. ಸಚಿವ ಸಂಪುಟದ ಸಭೆಯೂ ಸಹ ಪ್ರಥಮಬಾರಿ ಇಲ್ಲಿ ನಡೆಯಿತು. ಸಾಲಾರ್ ಜಂಗ್ ವಸ್ತು ಸಂಗ್ರಹಾಲಯ ಹೈದರಾಬಾದ್ ಜಿಲ್ಲೆಯ ಈ ವಸ್ತುಸಂಗ್ರಹಾಲಯವನ್ನು ಮೂರನೆಯ ಸಾಲಾರ್ ಜಂಗರು (ಮೀರ್ ಯೂಸಿಫ್ ಆಲಿಖಾನ್) ಒಬ್ಬರೇ ಸಂಗ್ರಹಿಸಿರುತ್ತಾರೆ. ವಿಶ್ಬದಲ್ಲಿ ವ್ಯಕ್ತಿಯೊಬ್ಬನೇ ಸಂಗ್ರಹಿಸಿದ ವಸ್ತುಗಳ ಅತಿದೊಡ್ಡ ಸಂಗ್ರಹವೆಂದು ಪ್ರಸಿದ್ಧಿಪಡೆದಿದೆ. ಇಲ್ಲಿನ ವಿಶೇಷ ವಸ್ತುಗಳ ಚಿಕ್ಕ ಪಟ್ಟಿ ಹೀಗಿದೆ. ಪರ್ಷಿಯಾದ ರತ್ನಗಂಬಳಿಗಳು, ಮೊಗಲ್ ಕಾಲದ ಸೂಕ್ಷ್ಮಚಿತ್ರಗಳು,ಚೀನಾದೇಶದ ಪಿಂಗಾಣಿ ಹೂಜಿಗಳು, ಜಪಾನಿನ ಅರಗಿನ ವಸ್ತುಗಳು, ಯೂರೋಪಿನ ಪ್ರಖ್ಯಾತ ಅಮೃತಶಿಲೆಯ ಮೂರ್ತಿಗಳು, (ಇವುಗಳಲ್ಲಿ ಅತ್ಯಂತ ಹೆಸರಾದ,'ಮುಸುಕಿನ ರೆಬೆಕ್ಕಾ,'(ಮಾರ್ಗರೆಟ್ ಮತ್ತು, ಮೆಫಿಸ್ಟೋಫೆಲೆಸ್)ಜೆಡ್ ಕಲ್ಲಿನಿಂದ ಮಾಡಿದ ಕಠಾರಿಗಳು,(ಜೆಹಾಂಗೀರ್, ಶೆಹಜಹಾನ್ ಮತ್ತು ಔರಂಗ್ ಜೇಬ್ ರ ಕಠಾರಿಗಳು)ಮತ್ತು ಇತರ ಆಕರ್ಷಕ ವಸ್ತುಗಳಿವೆ. ಜನಸಂಖ್ಯಾ ವಿವರ ತೆಲುಗು ರಾಜ್ಯದ ಅಧಿಕೃತ ಭಾಷೆಯಾಗಿದ್ದು, ಸುಮಾರು ೮೮.೫% ಜನರು ತೆಲುಗು ಮಾತನಾಡುತ್ತಾರೆ. ತೆಲುಗು ಭಾಷೆ ಅತಿ ಹೆಚ್ಚು ಜನರು ಮಾತನಾಡುವ ಭಾರತದ ಮೂರನೇ ಭಾಷೆ. ರಾಜ್ಯದಲ್ಲಿನ ಪ್ರಮುಖ ಅಲ್ಪಸಂಖ್ಯಾತ ಭಾಷಿಕ ಸಮುದಾಯಗಳಲ್ಲಿ ಉರ್ದು (೮.೬೩%), ಹಿಂದಿ (೦.೬೩%) ಮತ್ತು ತಮಿಳು (೧.೦೧%) ಮಾತನಾಡುವವರು ಸೇರಿದ್ದಾರೆ. ಭಾರತ ಸರ್ಕಾರವು ೨೦೦೮ರ ನವೆಂಬರ್ ೧ರಂದು ತೆಲುಗು ಭಾಷೆಗೆ ಶಾಸ್ತ್ರೀಯ ಮತ್ತು ಪ್ರಾಚೀನ ಭಾಷೆ ಎಂಬ ಸ್ಥಾನಮಾನ ನೀಡಿದೆ. ಆಂಧ್ರ ಪ್ರದೇಶದಲ್ಲಿ ೧%ಗಿಂತ ಕಡಿಮೆ ಜನರಿಂದ ಮಾತನಾಡಲ್ಪಡುವ ಇತರೆ ಭಾಷೆಗಳೆಂದರೆ, ಕನ್ನಡ (೦.೯೪%), ಮರಾಠಿ (೦.೮೪%), ಒರಿಯಾ (೦.೪೨%), ಗೊಂಡಿ (೦.೨೧%) ಮತ್ತು ಮಲಯಾಳಂ (೦.೧%). ೦.೧%ಗಿಂತ ಕಡಿಮೆ ಪ್ರಮಾಣದ ರಾಜ್ಯ ನಿವಾಸಿಗಳಿಂದ ಆಡಲ್ಪಡುತ್ತಿರುವ ಭಾಷೆಗಳಲ್ಲಿ ಗುಜರಾತಿ (೦.೦೯%), ಸಾವರ (೦.೦೯%), ಕೋಯ (೦.೦೮%), ಜಟಪು (೦.೦೪%), ಪಂಜಾಬಿ (೦.೦೪%), ಕೊಳಮಿ (೦.೦೩%), ಕೊಂಡ (೦.೦೩%), ಗಡಬ (೦.೦೨%), ಸಿಂಧಿ (೦.೦೨%), ಗೋರ್ಖಾಲಿ/ನೇಪಾಳಿ (೦.೦೧%) ಮತ್ತು ಖೊಂಡ್‌/ಕೊಂಧ್(೦.೦೧%) ಸೇರಿವೆ. ಆಂಧ್ರ ಪ್ರದೇಶದ ಪ್ರಧಾನ ಜನಾಂಗವೆಂದರೆ ತೆಲುಗು ಜನ; ಇವರು ಆರ್ಯರು ಮತ್ತು ದ್ರಾವಿಡರ ಸಮ್ಮಿಶ್ರ ಜನಾಂಗಕ್ಕೆ ಪ್ರಮುಖವಾಗಿ ಸೇರುತ್ತಾರೆ. ಆರ್ಥಿಕ ವ್ಯವಸ್ಥೆ ಕೃಷಿಯು, ರಾಜ್ಯದ ಆರ್ಥಿಕತೆಗೆ ಪ್ರಮುಖ ಆದಾಯದ ಮೂಲವಾಗಿದೆ. ಭಾರತದ ನಾಲ್ಕು ಪ್ರಮುಖ ನದಿಗಳಾದ ಗೋದಾವರಿ, ಕೃಷ್ಣ, ಪೆನ್ನಾ ಮತ್ತು ತುಂಗಭದ್ರ ರಾಜ್ಯದ ಮೂಲಕ ಹರಿಯುತ್ತಿದ್ದು, ಕೃಷಿಗೆ ನೀರಾವರಿ ಸೌಲಭ್ಯವನ್ನು ಒದಗಿಸಿವೆ.ಅಕ್ಕಿ, ಕಬ್ಬು, ಹತ್ತಿ, ಮೆಣಸಿನಕಾಯಿ (ಮೆಣಸಿನ ಹಣ್ಣು), ಮಾವು ಮತ್ತು ಹೊಗೆಸೊಪ್ಪು ಇಲ್ಲಿನ ಪ್ರಾದೇಶಿಕ ಬೆಳೆಗಳು. ಇತ್ತೀಚೆಗೆ, ಸಸ್ಯಜನ್ಯ ತೈಲದ ಉತ್ಪಾದನೆಗೆ ಬಳಕೆಯಾಗುವ ಸೂರ್ಯಕಾಂತಿ ಮತ್ತು ಕಡಲೆಕಾಯಿಯಂತಹ ಬೆಳೆಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆತಿದೆ.ವಿಶ್ವದ ಅತಿ ಎತ್ತರದ ಕಲ್ಲಿನ ಜಲಾಶಯ ಎನಿಸಿರುವ ನಾಗಾರ್ಜುನ ಸಾಗರ ಜಲಾಶಯ, ಗೋದಾವರಿ ನದಿ ಜಲಾನಯನ ನೀರಾವರಿ ಯೋಜನೆಗಳನ್ನು ಒಳಗೊಂಡಂತೆ ಹಲವು ಅಂತರ‌ರಾಜ್ಯ ನೀರಾವರಿ ಯೋಜನೆಗಳು ಪ್ರಗತಿಯಲ್ಲಿವೆ. ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳ ಮೇಲೂ ರಾಜ್ಯವು ಹೆಚ್ಚಿನ ಗಮನ ಹರಿಸಲು ಪ್ರಾರಂಭಿಸಿದೆ. ೨೦೦೪–೨೦೦೫ರ ಅವಧಿಯಲ್ಲಿ, ಹೆಚ್ಚಿನ IT ರಫ್ಟು ಮಾಡುತ್ತಿದ್ದ ಭಾರತದ ರಾಜ್ಯಗಳ ಪಟ್ಟಿಯಲ್ಲಿ ಆಂಧ್ರ ಪ್ರದೇಶವು ಐದನೇ ಸ್ಥಾನದಲ್ಲಿತ್ತು. ೨೦೦೪-೨೦೦೫ರ ಅವಧಿಯಲ್ಲಿ ರಾಜ್ಯದ IT ರಫ್ತು ಮೌಲ್ಯವು ೮೨,೭೦೦ ದಶಲಕ್ಷ ರೂ.ಗಳಷ್ಟು ‌(೧,೮೦೦ ದಶಲಕ್ಷ ‌‌$)ಇತ್ತು. IT ಕ್ಷೇತ್ರವು ಪ್ರತಿ ವರ್ಷವೂ ೫೨.೩% ದರದಲ್ಲಿ ವಿಸ್ತರಿಸುತ್ತಿದೆ. ೨೦೦೬–೨೦೦೭ರಲ್ಲಿ ೧೯೦,೦೦೦ ದಶಲಕ್ಷ ರೂ.ಗಳಿಗೆ (೪.೫ ದಶಲಕ್ಷ ‌$) ಮುಟ್ಟಿದ IT ರಫ್ತು, ದೇಶದ ಒಟ್ಟು IT ರಫ್ತಿಗೆ ಶೇ ೧೪ರಷ್ಟು ಕೊಡುಗೆ ನೀಡಿ, ದೇಶದಲ್ಲಿ ನಾಲ್ಕನೇ ಸ್ಥಾನದಲ್ಲಿತ್ತು. ರಾಜ್ಯದ ಸೇವಾ ವಲಯವು ೪೩%ನಷ್ಟು ಆದಾಯವನ್ನು ರಾಜ್ಯದ ಒಟ್ಟು ದೇಶೀಯ ಉತ್ಪನ್ನ(GSDP)ಕ್ಕೆ ಈಗಾಗಲೇ ನೀಡುತ್ತಿದ್ದು, ೨೦%ರಷ್ಟು ಉದ್ಹೋಗಿಗಳನ್ನು ತನ್ನಲ್ಲಿ ತೊಡಗಿಸಿಕೊಂಡಿದೆ. ರಾಜ್ಯದ ರಾಜಧಾನಿಯಾದ ಹೈದರಾಬಾದ್‌, ದೇಶದ ಬೃಹತ್‌ ಮೂಲ ಔಷಧವಸ್ತು ತಯಾರಕ ರಾಜಧಾನಿ ಎಂದು ಪರಿಗಣಿತವಾಗಿದ್ದು, ದೇಶದ ೧೦ ಅಗ್ರಗಣ್ಯ ಔಷಧೀಯ ಕಂಪನಿಗಳಲ್ಲಿ ೫೦%ನಷ್ಟು ಕಂಪನಿಗಳು ರಾಜ್ಯದ ಮೂಲವನ್ನು ಹೊಂದಿವೆ. ಮೂಲಭೂತ ಸೌಕರ್ಯ ಕ್ಷೇತ್ರದಲ್ಲೂ ರಾಜ್ಯವು ಅತ್ಯಂತ ಪ್ರಮುಖ ಸ್ಥಾನವನ್ನು ಪಡೆದಿದ್ದು, ರಾಜ್ಯದ ಹಲವು ಕಂಪನಿಗಳು ಅಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಮುಂಚೂಣಿಯಲ್ಲಿವೆ. ಆಂಧ್ರ ಪ್ರದೇಶವು ಖನಿಜಗಳಿಂದ ಸಂಪದ್ಭರಿತವಾಗಿರುವ ರಾಜ್ಯವಾಗಿದ್ದು, ಖನಿಜ ಸಂಪತ್ತಿಗೆ ಸಂಬಂಧಿಸಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ದೇಶದ ಸುಣ್ಣದ ಕಲ್ಲುಸಂಗ್ರಹಗಳ ಸುಮಾರು ಮೂರನೇ ಒಂದರಷ್ಟು ಭಾಗವನ್ನು ರಾಜ್ಯವು ಹೊಂದಿದ್ದು, ಆ ಪ್ರಮಾಣವು ಸುಮಾರು ೩೦ ಬಿಲಿಯನ್‌ ಟನ್‌ಗಳಷ್ಟಿದೆ ಎಂದು ಅಂದಾಜಿಸಲಾಗಿದೆ. ಕೃಷ್ಣ ಗೋದಾವರಿ ಜಲಾನಯನ ಪ್ರದೇಶವು ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಸಂಪತ್ತಿನ ಬೃಹತ್ ಸಂಗ್ರಹವನ್ನು ಹೊಂದಿದೆ. ರಾಜ್ಯದಲ್ಲಿ ಬೃಹತ್‌ ಪ್ರಮಾಣದ ಕಲ್ಲಿದ್ದಲು ಸಂಗ್ರಹವೂ ಇದೆ. ಜಲ ವಿದ್ಯುತ್‌ ಉತ್ಪಾದನೆಯಲ್ಲಿ ಇಡೀ ದೇಶದಲ್ಲೇ ರಾಜ್ಯವು ಮೊದಲ ಸ್ಥಾನದಲ್ಲಿದ್ದು, ಒಟ್ಟು ದೇಶೀಯ ಉತ್ಪಾದನೆಯಲ್ಲಿ ೧೧%ಕ್ಕೂ ಹೆಚ್ಚಿನ ಜಲವಿದ್ಯುತ್‌‌ ರಾಜ್ಯದಲ್ಲೇ ಉತ್ಪಾದನೆಯಾಗುತ್ತದೆ. ೨೦೦೫ರ ಅವಧಿಯಲ್ಲಿನ ಆಂಧ್ರ ಪ್ರದೇಶದ GSDPಯು ಪ್ರಚಲಿತ ಬೆಲೆಗಳಲ್ಲಿ ೬೨ ಶತಕೋಟಿ $ನಷ್ಟಿತ್ತು ಎಂದು ಅಂದಾಜಿಸಲಾಗಿತ್ತು. ಇದು ಆಂಧ್ರ ಪ್ರದೇಶದ GSDPಯ ಪ್ರವೃತ್ತಿಯನ್ನು ತೋರಿಸುವ ಕೋಷ್ಟಕವಾಗಿದೆ. ಇದನ್ನು ಅಂಕಿ ಅಂಶಗಳು ಮತ್ತು ಯೋಜನಾ ಜಾರಿಯ ಸಚಿವಾಲಯ ವು ಮಾರುಕಟ್ಟೆ ಬೆಲೆಯನ್ನು ಆಧರಿಸಿ ಅಂದಾಜಿಸಿದ್ದು, ಅಂಕಿಗಳನ್ನು ಭಾರತದ ದಶಲಕ್ಷ ರೂಪಾಯಿಗಳಲ್ಲಿ ತೋರಿಸಲಾಗಿದೆ.ಆದ್ದರಿಂದ, ಒಟ್ಟಾರೆ GSDPಯ ಹೋಲಿಕೆಯಲ್ಲಿ ರಾಜ್ಯವು ನಾಲ್ಕನೇ ಸ್ಥಾನದಲ್ಲಿದೆ ಮತ್ತು ಒಟ್ಟು GSDPಯ ತಲಾದಾಯದಲ್ಲೂ ಭಾರತದ ಪ್ರಮುಖ ರಾಜ್ಯಗಳ ಪೈಕಿ ಇದು ನಾಲ್ಕನೇ ಸ್ಥಾನವನ್ನು ಪಡೆದಿದೆ. ಮತ್ತೊಂದು ಅಳತೆಗೋಲಿನ ಪ್ರಕಾರ, ರಾಜ್ಯದ ಒಟ್ಟು ದೇಶೀಯ ಉತ್ಪನ್ನದ ವಿಚಾರದಲ್ಲಿ ಭಾರತೀಯ ಒಕ್ಕೂಟದ ಎಲ್ಲ ರಾಜ್ಯಗಳ ಪೈಕಿ ಒಟ್ಟು ರಾಜ್ಯವು ಮೂರನೇ ಸ್ಥಾನದಲ್ಲಿದೆ. ಸರ್ಕಾರ ಮತ್ತು ರಾಜಕೀಯ ಆಂಧ್ರ ಪ್ರದೇಶ ವಿಧಾನಸಭೆಯು ೨೯೪ ಸದಸ್ಯ ಸ್ಥಾನಗಳನ್ನು ಹೊಂದಿದೆ.ಭಾರತದ ಸಂಸತ್‌‌ನಲ್ಲಿ ರಾಜ್ಯವು ೬೦ ಜನ ಸದಸ್ಯರನ್ನು ಹೊಂದಿದ್ದು, ಅವರಲ್ಲಿ ಮೇಲ್ಮನೆಯಾದ ರಾಜ್ಯಸಭೆಯಲ್ಲಿ ೧೮ ಮಂದಿಯಿದ್ದರೆ, ಕೆಳಮನೆಯಾದ ಲೋಕಸಭೆಯಲ್ಲಿ ೪೨ ಮಂದಿ ಸದಸ್ಯರಿದ್ದಾರೆ. ೧೯೮೨ರವರೆಗೂ ಆಂಧ್ರ ಪ್ರದೇಶವು ಭಾರತ ರಾಷ್ಟ್ರೀಯ ಕಾಂಗ್ರಸ್‌‌(INC) ನೇತೃತ್ವದ ಸರಣಿ ಸರ್ಕಾರಗಳನ್ನೇ ಹೊಂದಿತ್ತು. ಕಾಸು ಬ್ರಹ್ಮಾನಂದ ರೆಡ್ಡಿ ಯವರು ಅತಿ ಹೆಚ್ಚು ಅವಧಿಯವರೆಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ದಾಖಲೆಯನ್ನು ಹೊಂದಿದ್ದರು. ಇದನ್ನು ಎನ್‌.ಟಿ.ರಾಮ ‌ರಾವ್‌ರವರು ೧೯೮೩ರಲ್ಲಿ ಮುರಿದರು. ಪಿ.ವಿ.ನರಸಿಂಹ ರಾವ್‌ರವರೂ ಸಹ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದು, ನಂತರ ೧೯೯೧ರಲ್ಲಿ ಇವರು ಭಾರತದ ಪ್ರಧಾನಿಯೂ ಆದರು. ರಾಜ್ಯದ ಗಮನಾರ್ಹ ಮುಖ್ಯಮಂತ್ರಿಗಳ ಪೈಕಿ ತಂಗುತೂರಿ ಪ್ರಕಾಶಮ್‌, ಆಂಧ್ರ ರಾಜ್ಯದ ಮುಖ್ಯಮಂತ್ರಿ (CM) (ಪ್ರಸ್ತುತ ಆಂಧ್ರ ಪ್ರದೇಶದ ಮೊದಲ ಮಖ್ಯಮಂತ್ರಿ ನೀಲಂ ಸಂಜೀವ ರೆಡ್ಡಿ) ಸೇರಿದ್ದಾರೆ. ಉಳಿದ ಇತರರಲ್ಲಿ ಕಾಸು ಬ್ರಹ್ಮಾನಂದ ರೆಡ್ಡಿ, ಮರ್ರಿ ಚೆನ್ನಾ ರೆಡ್ಡಿ, ಜಲಗಂ ವೆಂಗಲ್‌ ರಾವ್‌, ನೆದುರುಮಲ್ಲಿ ಜನಾರ್ಧನ ರೆಡ್ಡಿ, ನಾದೇಂಡ್ಲ ಭಾಸ್ಕರ ರಾವ್‌, ಕೋಟ್ಲ ವಿಜಯ ಭಾಸ್ಕರ ರೆಡ್ಡಿ, ಎನ್‌.ಟಿ.ರಾಮ ರಾವ್, ನಾರಾ ಚಂದ್ರಬಾಬು ನಾಯ್ಡು ಮತ್ತು ವೈ.ಎಸ್‌.ರಾಜಶೇಖರ ರೆಡ್ಡಿಯವರುಗಳು ಸೇರಿದ್ದಾರೆ. thumb|250px|right|ಹೈದರಾಬಾದ್‌ನಲ್ಲಿರುವ ಉಚ್ಚ ನ್ಯಾಯಾಲಯ ರಾಜ್ಯದ ಪ್ರಮುಖ ನ್ಯಾಯಿಕ ಸಂಸ್ಥೆ ೧೯೮೩ರಲ್ಲಿ ತೆಲುಗು ದೇಶಮ್‌ ಪಕ್ಷವು (TDP) ರಾಜ್ಯದ ಚುನಾವಣೆಗಳಲ್ಲಿ ಜಯಭೇರಿ ಬಾರಿಸಿತು ಮತ್ತು ಎನ್‌.ಟಿ.ರಾಮ ರಾವ್‌ರವರು (NTR) ಮೊದಲ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾದರು. ಇದರೊಂದಿಗೆ ಆಂಧ್ರ ಪ್ರದೇಶದ ರಾಜಕೀಯಕ್ಕೆ ಅಸಾಧಾರಣವಾದ ಎರಡನೇ ರಾಜಕೀಯ ಪಕ್ಷವೊಂದರ ಪರಿಚಯವಾದಂತಾಗಿ, ಆಂಧ್ರ ಪ್ರದೇಶದ ರಾಜಕೀಯದಲ್ಲಿದ್ದ ಏಕಪಕ್ಷದ ಏಕಸ್ವಾಮ್ಯತೆ ಅಂತ್ಯಗೊಂಡಿತು. ಕೆಲವು ತಿಂಗಳುಗಳ ನಂತರ, NTRರವರು ವೈದ್ಯಕೀಯ ಚಿಕಿತ್ಸೆಗೆಂದು ಅಮೆರಿಕಕ್ಕೆ ತೆರಳಿದ ಸಮಯದಲ್ಲಿ ನಾದೇಂಡ್ಲ ಭಾಸ್ಕರ್‌ ರಾವ್‌ರವರು ಮುಖ್ಯಮಂತ್ರಿಯ ಅಧಿಕಾರದ ಗದ್ದುಗೆಯನ್ನು ಆಕ್ರಮಿಸಿದರು. ಹಿಂತಿರುಗಿ ಬಂದ ನಂತರ, ವಿಧಾನಸಭೆಯನ್ನು ವಿಸರ್ಜಿಸಲು ಮತ್ತು ಹೊಸದಾಗಿ ಚುನಾವಣೆಯನ್ನು ಘೋಷಿಸಿಸಲು ರಾಜ್ಯದ ಆಗಿನ ರಾಜ್ಯಪಾಲರನ್ನು ಒಪ್ಪಿಸುವಲ್ಲಿ NTRರವರು ಯಶಸ್ವಿಯಾರು. ಇದರಿಂದ ಮತ್ತೆ ನಡೆದ ಚುನಾವಣೆಯಲ್ಲಿ TDPಯು ಅತ್ಯಧಿಕ ಬಹುಮತದೊಂದಿಗೆ ಗೆಲುವು ಸಾಧಿಸಿತು. ೧೯೮೯ರ ಸಾರ್ವಜನಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ INC, Dr. ಮರ್ರಿ ಚೆನ್ನಾ ರೆಡ್ಡಿಯವರ ನೇತ್ಥತ್ವದಲ್ಲಿ ಮರಳಿ ಅಧಿಕಾರಕ್ಕೆ ಬಂದಿತು. ಇದರೊಂದಿಗೆ NTRರವರ ೭ ವರ್ಷಗಳ ಆಳ್ವಿಕೆಯು ಅಂತ್ಯಗೊಂಡಿತು. ಮರ್ರಿ ಚೆನ್ನಾ ರೆಡ್ಡಿಯವರ ನಂತರ ಎನ್‌. ಜನಾರ್ಧನ್‌ ರೆಡ್ಡಿ ಅಧಿಕಾರಕ್ಕೆ ಬಂದರು. ಕೋಟ್ಲ ವಿಜಯ ಭಾಸ್ಕರ್‌ ರೆಡ್ಡಿಯವರು ತಾವು ಅಧಿಕಾರಕ್ಕೆ ಬರುವ ಮೂಲಕ ಇವರನ್ನು ಬದಲಿಸಿದರು. ೧೯೯೪ರಲ್ಲಿ ಮತ್ತೆ TDPಗೆ ಜನಾದೇಶವನ್ನು ನೀಡಿದ ಆಂಧ್ರ ಪ್ರದೇಶವು, NTRರವರು ಮತ್ತೆ ಮುಖ್ಯಮಂತ್ರಿಯಾಗುವುದನ್ನು ಕಂಡಿತು. ಆದರೆ NTRರವರ ಅಳಿಯನಾಗಿದ್ದ ಚಂದ್ರಬಾಬು ನಾಯ್ಡುರವರು ರಾಜಕೀಯ ಕ್ಷಿಪ್ತಕ್ರಾಂತಿಯೊಂದರಲ್ಲಿ ಅವರ ಬೆನ್ನಿಗೆ ಚೂರಿ ಹಾಕುವ ಮೂಲಕ ಅಧಿಕಾರವನ್ನು ಕಿತ್ತುಕೊಂಡರು. ಈ ನಂಬಿಕೆ ದ್ರೋಹವನ್ನು ಅರಗಿಸಿಕೊಳ್ಳಲಾಗದ NTRರವರು ಕೆಲವು ಕಾಲದ ನಂತರ ಹೃದಯಾಘಾತದಿಂದ ಮರಣ ಹೊಂದಿದರು. ೧೯೯೯ರಲ್ಲಿ TDPಯು ಚುನಾವಣೆಯಲ್ಲಿ ಗೆದ್ದಿತು. ಮುಂದಿನ ಚುನಾವಣೆಯಲ್ಲಿ INC ನೇತೃತ್ವದ ರಾಜಶೇಖರ ರೆಡ್ಡಿಯವರ ಶಕ್ತಿಶಾಲಿ ಮುಂಚೂಣಿಯನ್ನು ಹೊಂದಿದ್ದ ಮೈತ್ರಿಕೂಟದ ಎದುರು ೨೦೦೪ರ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು ಸೋಲನ್ನನುಭವಿಸಿದರು. ೨೦೦೮ರಲ್ಲಿ ಚಲನಚಿತ್ರ ತಾರೆ ಜಿರಂಜೀವಿಯವರಿಂದ ಪ್ರಜಾ ರಾಜ್ಯಂ ಪಕ್ಷ(PRP) ಸ್ಥಾಪಿತವಾಯಿತು. ಇದು ೨೦೦೯ರ ಚುನಾವಣೆಯಲ್ಲಿ ತ್ರಿಕೋನ ಹೋರಾಟವನ್ನು ಹುಟ್ಟುಹಾಕಿತು. ಅತಿಯಾದ ನಿರೀಕ್ಷೆ ಮತ್ತು ಮಾಧ್ಯಮದ ಭಾರೀ ಪ್ರಚಾರದ ನಡುವೆಯೂ ಇದು ಆಂಧ್ರ ರಾಜಕೀಯದಲ್ಲಿ ಮಹತ್ತರ ಬದಲಾವಣೆ ತರುವಲ್ಲಿ ವಿಫಲವಾಯಿತು. ಹೀಗಾಗಿ ೧೮ ಸ್ಥಾನಗಳನ್ನಷ್ಟೆ ಗೆಲ್ಲುವುದಕ್ಕೆ ಸಾಧ್ಯವಾಯಿತು.ಒಂದೇ ಆಶಾಕಿರಣವೆಂದರೆ ಒಟ್ಟು ಮತಗಳಲ್ಲಿ ಶೇ ೩೬ರಷ್ಟು ಮತ ಪಡೆದ ಕಾಂಗ್ರೆಸ್‌ ಮತ್ತು ಶೇ ೨೫ರಷ್ಟು ಗಳಿಸಿದ ತೆಲುಗು ದೇಶಮ್‌ ಪಕ್ಷಗಳಿಗೆ ಪ್ರತಿಯಾಗಿ, ಇದು ಶೇ ೧೭ರಷ್ಟು ಮತವನ್ನು ಗಳಿಸುವಲ್ಲಿ ಸಫಲವಾಯಿತು. ಪ್ರಜಾ ರಾಜ್ಯಂ ಪಕ್ಷ ಮತ್ತು TDP, TRS, CPI ಮತ್ತು CPM ಪಕ್ಷಗಳ ಬೃಹತ್‌ ಮೈತ್ರಿಕೂಟವನ್ನು ಹಿಮ್ಮೆಟ್ಟಿಸುವುದರೊಂದಿಗೆ ವೈ.ಎಸ್‌.ರಾಜಶೇಖರ ರೆಡ್ಡಿ ಮತ್ತೆ ಮುಖ್ಯಮಂತ್ರಿಯಾದರು. YSR ರೆಡ್ಡಿಯವರು APಯ ಇತಿಹಾಸದಲ್ಲಿ, ಒಂದು ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ೫ ವರ್ಷಗಳನ್ನು ಸಂಪೂರ್ಣಗೊಳಿಸಿದ ಮೊದಲ ಮುಖ್ಯಮಂತ್ರಿಯಾದರು. ಸಂಸ್ಕೃತಿ ಸಾಂಸ್ಕೃತಿಕ ಸಂಸ್ಥೆಗಳು ಆಂಧ್ರ ಪ್ರದೇಶವು ಹಲವು ವಸ್ತುಸಂಗ್ರಹಾಲಯಗಳನ್ನು ಹೊಂದಿದೆ. ಅವುಗಳೆಂದರೆ, ಗುಂಟೂರು ನಗರದ ಬಳಿ ಇರುವ ಅಮರಾವತಿಯಲ್ಲಿನ ಪುರಾತತ್ವ ವಸ್ತುಸಂಗ್ರಹಾಲಯ, ಇದು ಸುತ್ತಮುತ್ತಲ ಪ್ರಾಚೀನ ಸ್ಥಳಗಳ ಅವಶೇಷಗಳನ್ನು ಹೊಂದಿದೆ; ಹೈದರಾಬಾದ್‌ನಲ್ಲಿರುವ ಸಾಲಾರ್‌ ಜಂಗ್‌ ವಸ್ತುಸಂಗ್ರಹಾಲಯ, ಇದು ಶಿಲ್ಪಗಳು, ವರ್ಣಚಿತ್ರಗಳು ಮತ್ತು ಧಾರ್ಮಿಕ ಕರಕುಶಲ ವಸ್ತುಗಳೂ ಸೇರಿದಂತೆ ವೈವಿಧ್ಯಮಯ ಸಂಗ್ರಹವನ್ನು ಹೊಂದಿದೆ; ವಿಶಾಖಪಟ್ಟಣಂನಲ್ಲಿರುವ ವಿಶಾಖ ವಸ್ತುಸಂಗ್ರಹಾಲಯ, ಇದು ನವೀಕರಣಗೊಂಡ ಡಚ್‌‌ ಬಂಗಲೆಯಲ್ಲಿದ್ದು ಮದ್ರಾಸ್‌ ಪ್ರಾಂತ್ಯದಯ ಸ್ವಾತಂತ್ರ್ಯಪೂರ್ವ ಇತಿಹಾಸವನ್ನು ಪ್ರದರ್ಶಿಸುತ್ತದೆ.ವಿಜಯವಾಡದಲ್ಲಿರುವ ವಿಕ್ಟೋರಿಯಾ ಜುಬಿಲಿ ವಸ್ತುಸಂಗ್ರಹಾಲಯವು ಪ್ರಾಚೀನ ಶಿಲ್ಪಗಳು, ವರ್ಣಚಿತ್ರಗಳು, ಮೂರ್ತಿಗಳು, ಶಸ್ತ್ರಾಸ್ತ್ರಗಳು, ಮೊನಚಾದ ಆಯುಧಗಳು ಮತ್ತು ಶಾಸನಗಳನ್ನು ಹೊಂದಿದೆ. ಆಹಾರ ಪದ್ಧತಿ ಆಂಧ್ರ ಪ್ರದೇಶದ ಆಹಾರ ಅಥವಾ ಅಡಿಗೆ ಪದ್ದತಿಯು ಭಾರತದ ಆಹಾರ ಪದ್ಧತಿಗಳಲ್ಲೇ ಅತ್ಯಂತ ಮಸಾಲೆಪೂರಿತ ಆಹಾರ ಪದ್ಧತಿಯಾಗಿದೆ. ಭೌಗೋಳಿಕ ಪ್ರದೇಶ, ಜಾತಿ, ಸಂಪ್ರದಾಯ ಮುಂತಾದ ಅಂಶಗಳನ್ನು ಆಧರಿಸಿ ಆಂಧ್ರದ ಆಹಾರ ಪದ್ಧತಿಯಲ್ಲಿ ಹಲವು ವೈವಿಧ್ಯಗಳು ರೂಪುಗೊಂಡಿವೆ. ಉಪ್ಪಿನಕಾಯಿಗಳು ಮತ್ತು ತೆಲುಗು ಭಾಷೆಯಲ್ಲಿ ಪಚ್ಚಡಿ ಎಂದು ಕರೆಯಲ್ಪಡುವ ಚಟ್ನಿಗಳು ವಿಶೇಷವಾಗಿ ಆಂಧ್ರ ಪ್ರದೇಶದ ಜನಪ್ರಿಯ ಖಾದ್ಯಗಳು. ಚಟ್ಟಿ ಮತ್ತು ಉಪ್ಪಿನಕಾಯಿಗಳಲ್ಲಿರುವ ವೈವಿಧ್ಯಗಳು ರಾಜ್ಯಕ್ಕೆ ಅನನ್ಯತೆಯನ್ನು ತಂದುಕೊಟ್ಟಿವೆ.ಟೊಮ್ಯಾಟೊ, ಬದನೆಕಾಯಿ(ನೆಲಗುಳ್ಳ), ದಾಸವಾಳ ಜಾತಿಯ(ಗೊಂಗೂರ) ತರಕಾರಿಗಳೂ ಸೇರಿದಂತೆ ಹೆಚ್ಚೂ ಕಡಿಮೆ ಪ್ರತಿಯೊಂದು ತರಕಾರಿಗಳಿಂದ ಚಟ್ನಿಗಳನ್ನು ತಯಾರಿಸಲಾಗುತ್ತದೆ.ಆವಕಾಯ ಎಂದು ಕರೆಯಲ್ಪಡುವ ಮಾವಿನ ಉಪ್ಪಿನಕಾಯಿಯು, ಬಹುಶಃ ಆಂಧ್ರ ಪ್ರದೇಶದ ಉಪ್ಪಿನಕಾಯಿಗಳಲ್ಲೇ ಅತ್ಯಂತ ಜನಪ್ರಿಯ ಉಪ್ಪಿನಕಾಯಿ ಎನ್ನಬಹುದು. ಅಕ್ಕಿಯು ಇಲ್ಲಿನ ಪ್ರಮುಖ ಆಹಾರವಾಗಿದ್ದು, ವಿವಿಧ ಬಗೆಯಲ್ಲಿ ಇದನ್ನು ಬಳಸಲಾಗುತ್ತದೆ. ಅಕ್ಕಿಯನ್ನು ಬೇಯಿಸಿ ಅನ್ನ ಮಾಡಿಕೊಂಡು ಯಾವುದಾದರೊಂದು ರೀತಿಯ ಮೇಲೋಗರದ ಜೊತೆ ಸೇವಿಸಲಾಗುತ್ತದೆ; ಇಲ್ಲವೇ, ಕಲಸಿದ ಹಿಟ್ಟು ಮಾಡಿಕೊಂಡು ತೆಳುವಾದ ಬಟ್ಟೆಯಂತೆ ಕಾಣುವ ಅಟ್ಟು (ಕಲಸಿದ ಹಿಟ್ಟು ಮತ್ತು ಹೆಸರುಕಾಳಿನ ಮಿಶ್ರಣದಿಂದ ತಯಾರಿಸುವ ಪೆಸರಟ್ಟು ಎಂಬ ತಿಂಡಿ)ಅಥವಾ ದೋಸೆ ಎಂಬ ತಿಂಡಿಯನ್ನು ತಯಾರಿಸಲು ಬಳಸಲಾಗುವುದು. ಮಾಂಸ, ತರಕಾರಿಗಳು, ಸೊಪ್ಪುಗಳೊಂದಿಗೆ ವಿವಿಧ ಸಾಂಬಾರ ಪದಾರ್ಥಗಳನ್ನು (ಮಸಾಲೆ) ಸೇರಿಸಿ ವೈವಿಧ್ಯಮಯ ರುಚಿಕಟ್ಟಾದ ಆಹಾರ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ೧೪ನೇ ಶತಮಾನದಲ್ಲಿ ತೆಲಂಗಾಣ ಪ್ರದೇಶವನ್ನು ಪ್ರವೇಶಿಸಿದ್ದ ಮುಸ್ಲಿಮರ ಆಹಾರ ಪದ್ಧತಿಯಿಂದ ಹೈದರಾಬಾದಿ ಆಹಾರ ಪದ್ಧತಿಯು ಪ್ರಭಾವಿತಗೊಂಡಿದೆ. ಬಹುತೇಕ ಆಹಾರ ವೈವಿಧ್ಯಗಳು ಮಾಂಸ ಸಂಬಂಧಿಯಾಗಿರುತ್ತವೆ. ವಿಲಕ್ಷಣ ರೀತಿಯ ಮಸಾಲೆ ಪದಾರ್ಥಗಳು ಹಾಗೂ ತುಪ್ಪ ವನ್ನು (ಶೋಧಿಸಿದ ಬೆಣ್ಣೆ) ಧಾರಾಳವಾಗಿ ಬಳಸುವುದರಿಂದ ಈ ಆಹಾರಗಳು ರುಚಿಕರ ಮತ್ತು ಪರಿಮಳಯುಕ್ತವಾಗಿರುತ್ತವೆ. ಕುರಿ, ಕೋಳಿ ಮತ್ತು ಮೀನಿನ ಮಾಂಸಗಳು ಮಾಂಸಾಹಾರಿ ಆಹಾರ ಪದಾರ್ಥಗಳಲ್ಲಿ ಹೇರಳವಾಗಿ ಬಳಕೆಯಾಗುತ್ತವೆ. ಹೈದರಾಬಾದಿ ಆಹಾರಗಳಲ್ಲಿ ಬಿರಿಯಾನಿಯು ಬಹುಶಃ ಅತ್ಯಂತ ವಿಶಿಷ್ಟ ಮತ್ತು ಜನಪ್ರಿಯ ಆಹಾರ ಎಂದು ಹೇಳಬಹುದು. ನೃತ್ಯ ಆಂಧ್ರ ಪ್ರದೇಶದಲ್ಲಿ ಚಾಲ್ತಿಯಲ್ಲಿರುನ ನೃತ್ಯ ಪ್ರಕಾರಗಳ ಬಗೆಗೆ ಬರೆದ ಮೊದಲ ವ್ಯಕ್ತಿ ಜಯಪ ಸೇನಾನಿ (ಜಯಪ ನಾಯುಡು). ದೇಸಿ ಮತ್ತು ಮಾರ್ಗಿ ಪ್ರಕಾರದ ನೃತ್ಯಗಳೆರಡೂ ಇವರ 'ನೃತ್ಯ ರತ್ನಾವಳಿ' ಎಂಬ ಸಂಸ್ಕೃತ ಪ್ರಕರಣ ಗ್ರಂಥದಲ್ಲಿ ಸೇರ್ಪಡೆಗೊಂಡಿವೆ. ಇದು ಎಂಟು ಅಧ್ಯಾಯಗಳನ್ನು ಒಳಗೊಂಡಿದೆ. ಪೆರಾನಿ, ಪ್ರೇಂಖನ, ಶುದ್ಧ ನರ್ತನ, ಕಾರ್ಕರಿ, ರಾಸಕ, ದಂಡ ರಾಸಕ, ಶಿವ ಪ್ರಿಯ, ಕಂದುಕ ನರ್ತನ, ಭಂದಿಕಾ ನೃತ್ಯಂ, ಕರಣ ನೃತ್ಯಂ, ಚಿಂದು, ಗೊಂಡಾಲಿ, ಕೋಲಾಟಂ ಮುಂತಾದ ಜಾನಪದ ನೃತ್ಯ ಪ್ರಕಾರಗಳು ಇಲ್ಲಿ ವಿವರಿಸಲ್ಪಟ್ಟಿವೆ. ಮಾರ್ಗ ಮತ್ತು ದೇಸಿ, ತಾಂಡವ ಮತ್ತು ಲಾಸ್ಯ, ನಾಟ್ಯ ಹಾಗೂ ನೃತ್ಯವೆಂಬ ಪ್ರಕಾರಗಳ ನಡುವಿರುವ ವ್ಯತ್ಯಾಸಗಳ ಕುರಿತಾದ ವಿಚಾರಗಳನ್ನು ಮೊದಲ ಅಧ್ಯಾಯದಲ್ಲಿ ಲೇಖಕನು ಚರ್ಚಿಸುತ್ತಾನೆ. ಆಂಗಿಕಾಭಿನಯ, ಕಾರಿಗಳು, ಸ್ಥಾನಕಗಳು, ಮತ್ತು ಮಂಡಲಗಳ ಕುರಿತು ೨ ಮತ್ತು ೩ನೇ ಅಧ್ಯಾಯಗಳಲ್ಲಿ ವಿವರಿಸುತ್ತಾನೆ. ೪ನೇ ಅಧ್ಯಾಯದಲ್ಲಿ ಕರಣಗಳು, ಅಂಗಾಹಾರಗಳು ಮತ್ತು ರೇಚಕಗಳು ವಿವರಿಸಲ್ಪಟ್ಟಿವೆ. ಮುಂದಿನ ಅಧ್ಯಾಯಗಳಲ್ಲಿ ಅವನು ದೇಸಿ ನೃತ್ಯ ಪ್ರಕಾರಗಳ ಕುರಿತು ವಿವರಿಸಿದ್ದಾನೆ. ಕೊನೆಯ ಅಧ್ಯಾಯದಲ್ಲಿ ಕಲೆ ಮತ್ತು ನೃತ್ಯಾಭ್ಯಾಸದ ಕುರಿತು ಆತ ವಿವರಿಸುತ್ತಾನೆ. ಆಂಧ್ರ ಪ್ರದೇಶದಲ್ಲಿ ಶಾಸ್ತ್ರೀಯ ನೃತ್ಯವು ಪುರುಷರು ಮತ್ತು ಮಹಿಳೆಯರಿಬ್ಬರಿಂದಲೂ ಅಭಿನಯಿಸಲ್ಪಡುತ್ತದೆ. ಆದರೂ ಮಹಿಳೆಯರು ಇದನ್ನು ಕಲಿಯಲು ಹೆಚ್ಚು ಆಸಕ್ತಿ ತೋರಿಸುತ್ತಾರೆ. ಕೂಚಿಪುಡಿಯು ರಾಜ್ಯದ ಅತ್ಯಂತ ಪರಿಚಿತ ಶಾಸ್ತ್ರೀಯ ನೃತ್ಯ ಪ್ರಕಾರವಾಗಿದೆ.ರಾಜ್ಯದ ಇತಿಹಾಸದ ಆದ್ಯಂತವಾಗಿ ಅಸ್ಥಿತ್ವದಲ್ಲಿರುವ ಹಲವು ನೃತ್ಯ ಪ್ರಕಾರಗಳೆಂದರೆ, ಚೆಂಚು ಭಾಗೋತಂ, ಕೂಚಿಪುಡಿ, ಭಾಮಕಲಾಪಮ್‌, ಬುರ್ರಕಥಾ, ವೀರನಾಟ್ಯಂ, ಬುಟ್ಟು ಬೊಮ್ಮಲು, ದಪ್ಪು, ತಪ್ಪೆಟ ಗುಲ್ಲು, ಲಂಬಾಡಿ, ಬೊನಾಲು, ಧಿಂಸ, ಕೋಲಾಟಂ ಮತ್ತು ಚಿಂಡು. ಹಬ್ಬಗಳು ಜನವರಿಯಲ್ಲಿ ಸಂಕ್ರಾಂತಿ. ಫೆಬ್ರವರಿ/ಮಾರ್ಚ್‌ನಲ್ಲಿ ಮಹಾಶಿವರಾತ್ರಿ. ಮಾರ್ಚ್‌ನಲ್ಲಿ ಹೋಳಿ ಮಾರ್ಚ್‌/ಏಪ್ರಿಲ್‌ನಲ್ಲಿ ಉಗಾದಿ ಅಥವಾ ತೆಲುಗು ಹೊಸವರ್ಷ ಉಗಾದಿ ಹಬ್ಬದ ೯ ದಿನಗಳ ನಂತರ ಮಾರ್ಚ್‌/ಏಪ್ರಿಲ್‌‌ನಲ್ಲಿ ಶ್ರೀರಾಮನವಮಿ ಆಚರಿಸಲ್ಪಡುತ್ತದೆ. ಆಗಷ್ಟ್‌‌ನಲ್ಲಿ ವರಲಕ್ಷ್ಮಿ ವ್ರತಮ್‌‌ ಆಗಷ್ಟ್‌ನಲ್ಲಿ ರಾಖಿ ಪೂರ್ಣಿಮ ಆಗಷ್ಟ್‌ನಲ್ಲಿ ವಿನಾಯಕ ಚೌತಿ ಸೆಪ್ಟೆಂಬರ್‌/ಅಕ್ಟೋಬರ್‌ನಲ್ಲಿ ದಸರಾ ಆಶ್ವಯುಜ ಮಾಸದ ಶುಕ್ಲಪಕ್ಷದಲ್ಲಿನ ೩ನೇ ದಿನವಾದ ಅಟ್ಲ ತಡ್ಡೆ (ಗ್ರಿಗರಿ ಪಂಚಾಂಗದಲ್ಲಿ ಸೆಪ್ಟೆಂಬರ್/ಅಕ್ಟೋಬರ್ ತಿಂಗಳಲ್ಲಿ ಬರುತ್ತದೆ) ದಸರಾ ಹಬ್ಬದ ೨೦ ದಿನಗಳ ನಂತರ ಅಕ್ಟೋಬರ್/ನವೆಂಬರ್‌ನಲ್ಲಿ ಬರುವ ದೀಪಾವಳಿ. ಈದ್‌-ಉಲ್‌-ಫಿತರ್‌, ಬಕ್ರೀದ್‌, ಮೊಹರಂ. ಶ್ರಾವಣಂನಲ್ಲಿ ಬೋನಾಲು (ತೆಲಂಗಾಣ ಪ್ರದೇಶದಲ್ಲಿ ಆಚರಿಸಲ್ಪಡುತ್ತದೆ.) ತೆಲಂಗಾಣ ಪ್ರಾಂತ್ಯದಲ್ಲಿ ದಸರಾ ಹಬ್ಬದ ದುರ್ಗಾಷ್ಟಮಿ ಸಮಯದಲ್ಲಿ ನವರಾತ್ರಿ ಎಂದು ಕರೆಯಲ್ಪಡುವ, ೯ ದಿನಗಳವರೆಗೆ ಆಚರಿಸಲ್ಪಡುವ ಬಥುಕಮ್ಮ ಹಬ್ಬ. ನವ್‌ರೂಜ್‌ ಕ್ರಿಸ್‌ಮಸ್‌‌ ಸಾಹಿತ್ಯ ನನ್ನಯ್ಯ, ತಿಕ್ಕನ ಮತ್ತು ಯರ್ರಾಪ್ರಗದ ಎಂಬ ಕವಿತ್ರಯರು ಶ್ರೇಷ್ಠ ಮಹಾಕಾವ್ಯ ಮಹಾಭಾರತ ವನ್ನು ತೆಲುಗು ಭಾಷೆಗೆ ಅನುವಾದಿಸಿದರು. ಬಮ್ಮೆರ ಪೋತನ ಎಂಬ ಮತ್ತೋರ್ವ ಕವಿಯು ಶ್ರೀಮದ್‌ ಆಂಧ್ರ ಮಹಾ ಭಾಗವತಮು ಎಂಬ ಅತ್ಯುತ್ಕೃಷ್ಟ ಕೃತಿಯನ್ನು ರಚಿಸಿದ್ದು, ಇದು ವೇದವ್ಯಾಸರು ಸಂಸ್ಕೃತದಲ್ಲಿ ಬರೆದ ಶ್ರೀ ಭಾಗವತಮ್ ‌ನ ತೆಲುಗು ಭಾಷಾಂತರವಾಗಿದೆ. ನನ್ನಯ್ಯನನ್ನು ಆದಿಕವಿ ಎಂದು ಕರೆಯಲಾಗಿದ್ದು, ರಾಜಮಹೇಂದ್ರವರಂ(ರಾಜಮಂಡ್ರಿ)ಯಿಂದ ಆಳ್ವಿಕೆ ನಡೆಸುತ್ತಿದ್ದ ರಾಜರಾಜನರೇಂದ್ರನು ಇವನ ಆಶ್ರಯದಾತನಾಗಿದ್ದನು. ವಿಜಯನಗರದ ಚಕ್ರವರ್ತಿ ಕೃಷ್ಣದೇವರಾಯನು ಅಮುಕ್ತಮಾಲ್ಯದ ಎಂಬ ಕೃತಿಯನ್ನು ಬರೆದನು. ಕಡಪ ಪ್ರದೇಶದವನಾದ ತೆಲುಗು ಕವಿ ವೇಮನಕೂಡಾ ತನ್ನ ತಾತ್ವಿಕ ಪದ್ಯಗಳಿಂದ ಪರಿಚಿತನಾಗಿದ್ದಾನೆ. ಕಂದುಕೂರಿ ವೀರೇಶಲಿಂಗಮ್‌ರವರ ನಂತರದ ತೆಲುಗು ಸಾಹಿತ್ಯವನ್ನು ಆಧುನಿಕ ಸಾಹಿತ್ಯ ಎಂದು ಕರೆಯಲಾಗುತ್ತದೆ. ಗದ್ಯ ಟಿಕ್ಕಣ ಎಂದೇ ಹೆಸರಾದ ಸತ್ಯವತಿ ಚರಿತಂರವರು ಸತ್ಯವತಿ ಚರಿತಂ ಎಂಬ ತೆಲುಗು ಭಾಷೆಯ ಸಾಮಾಜಿಕ ಕಾದಂಬರಿಯನ್ನು ಬರೆದಿದ್ದಾರೆ. ಇತರೆ ಆಧುನಿಕ ಬರಹಗಾರರಲ್ಲಿ, ಜ್ಷಾನಪೀಠ ಪ್ರಶಸ್ತಿ ವಿಜೇತರುಗಳಾದ ಶ್ರೀ ವಿಶ್ವನಾಥ ಸತ್ಯನಾರಾಯಣ ಮತ್ತು ಡಾ.ಸಿ. ನಾರಾಯಣ ರೆಡ್ಡಿಯವರುಗಳು ಸೇರಿದ್ದಾರೆ. ಆಂಧ್ರ ಪ್ರದೇಶದ ಸ್ಥಳೀಕ ಮತ್ತು ಕ್ರಾಂತಿಕಾರಿ ಕವಿ ಶ್ರೀ ಶ್ರೀಯವರು ತೆಲುಗು ಸಾಹಿತ್ಯಕ್ಕೆ ಹೊಸ ರೂಪದ ಅಭಿವ್ಯಕ್ತಿವಾದವನ್ನು ಪರಿಚಯಿಸಿದರು. ಶ್ರೀ ಪುಟ್ಟಪರ್ತಿ ನಾರಾಯಣಚಾರ್ಯುಲುರವರು ಕೂಡ ತೆಲುಗು ಸಾಹಿತ್ಯದ ವಿದ್ವಾಂಸ ಕವಿಗಳಲ್ಲಿ ಒಬ್ಬರು. ಇವರು ವಿಶ್ವನಾಥ ಸತ್ಯನಾರಾಯಣರ ಸಮಕಾಲೀನರಾಗಿದ್ದರು. ಶ್ರೀ ಪುಟ್ಟಪರ್ತಿ ನಾರಾಯಣಾಚಾರ್ಯಲುರವರು ದ್ವಿಪದಿ ಕಾವ್ಯವಾಗಿ ಶಿವತಾಂಡವಂ , ಪಾಂಡುರಂಗ ಮಹಾತ್ಯಂ , ಎಂಬ ಜನಪ್ರಿಯ ಪುಸ್ತಕಗಳನ್ನು ಬರೆದರು. ಶ್ರೀರಂಗಂ ಶ್ರೀನಿವಾಸರಾವ್‌, ಗುರ್ರಂ ಜಷುವಾ, ಚಿನ್ನಯ ಸೂರಿ, ವಿಶ್ವನಾಥ ಸತ್ಯನಾರಾಯಣ ಮತ್ತು ವದ್ದೇರ ಚಂಡಿದಾಸ್‌ ಮುಂತಾದವರು ಆಂಧ್ರ ಪ್ರದೇಶದ ಇತರೆ ಜನಪ್ರಿಯ ಲೇಖಕರಾಗಿದ್ದಾರೆ. ಚಲನಚಿತ್ರಗಳು ಆಂಧ್ರ ಪ್ರದೇಶ ಸುಮಾರು ೨೭೦೦ ಚಲನಚಿತ್ರ ಮಂದಿರಗಳನ್ನು ಹೊಂದಿದ್ದು, ಭಾರತದಲ್ಲೇ ಅತಿ ಹೆಚ್ಚು ಚಲನಚಿತ್ರ ಮಂದಿರಗಳನ್ನು ಹೊಂದಿರುವ ರಾಜ್ಯವಾಗಿದೆ. ರಾಜ್ಯವು ವರ್ಷವೊಂದಕ್ಕೆ ಸುಮಾರು ೨೦೦ ಚಲನಚಿತ್ರಗಳನ್ನು ತಯಾರಿಸುತ್ತದೆ. ಭಾರತದಲ್ಲಿರುವ ಡಾಲ್ಬಿ ಡಿಜಿಟಲ್‌ ಥಿಯೇಟರ್‌ಗಳ ಪೈಕಿ ಸುಮಾರು ೪೦% (೯೩೦ರ ಪೈಕಿ ೩೩೦)ರಷ್ಟನ್ನು ಇದು ಹೊಂದಿದೆ. ಈಗ ಇದು ಬೃಹತ್ ೩D ಪರದೆಯನ್ನೊಳಗೊಂಡ ಐಮ್ಯಾಕ್ಸ್‌ ಥಿಯೇಟರ್‌ ಒಂದನ್ನು ಹಾಗೂ ೩-೫ ಮಲ್ಟಿಪ್ಲೆಕ್ಸ್‌ಗಳನ್ನೂ ಹೊಂದಿದೆ. ಟಾಲಿವುಡ್‌‌ (ತೆಲುಗು ಚಿತ್ರರಂಗ) ಭಾರತದಲ್ಲೇ ಅತಿ ಹೆಚ್ಚಿನ ಸಂಖ್ಯೆಯ ಚಿತ್ರಗಳನ್ನು ತಯಾರಿಸುತ್ತದೆ. NTR ರವರು ಟಾಲಿವುಡ್‌ನ ದಂತಕತೆಯಾಗಿದ್ದಾರೆ.ಇವರು ತಮ್ಮ ಪಕ್ಷ ಸ್ಥಾಪಿಸಿದ ೯ ತಿಂಗಳಲ್ಲೇ ಮುಖ್ಯಮಂತ್ರಿಯಾಗಿ ಇತಿಹಾಸ ನಿರ್ಮಿಸಿದರು. ಇದೊಂದು ವಿಶ್ವದಾಖಲೆ ಮತ್ತು ಈವರೆಗೆ ಯಾರೂ ಈ ಸಾಧನೆ ಮಾಡಿಲ್ಲ. ಸಂಗೀತ ರಾಜ್ಯವು ಶ್ರೀಮಂತ ಸಂಗೀತ ಪರಂಪರೆಯನ್ನು ಹೊಂದಿದೆ. ಕರ್ನಾಟಕ ಸಂಗೀತದ ತ್ರಿಮೂರ್ತಿಗಳು ಎಂದೇ ಹೆಸರಾಗಿರುವ ತ್ಯಾಗರಾಜರು, ಅನ್ನಮಾಚಾರ್ಯರು, ಕ್ಷೇತ್ರಯ್ಯನವರೂ ಸೇರಿದಂತೆ ಭದ್ರಾಚಲ ರಾಮದಾಸುರವರಂತಹ ಕರ್ನಾಟಕ ಸಂಗೀತದ ಅನೇಕ ಪ್ರಸಿದ್ಧರು ತೆಲುಗು ಪರಂಪರೆಗೆ ಸೇರಿದವರು. ಮಹಾನ್‌‌ ಮ್ಯಾಂಡೋಲಿನ್‌ ವಾದಕ ಮ್ಯಾಂಡೋಲಿನ್‌ ಶ್ರೀನಿವಾಸ್‌ ಕೂಡ ಆಂಧ್ರ ಪ್ರದೇಶದವರು. ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಜನಪದ ಹಾಡುಗಳೂ ಬಹಳ ಜನಪ್ರಿಯವಾಗಿವೆ.ಕರ್ನಾಟಕ ಸಂಗೀತದಲ್ಲಿ ಮತ್ತಷ್ಟು ರಾಗಗಳನ್ನು ಸೃಷ್ಟಿಸಿದ, ಕರ್ನಾಟಕ ಸಂಗೀತದ ಮಹಾನ್‌ ಗಾಯಕರಾದ ಶ್ರೀ ಮಂಗಳಂಪಲ್ಲಿ ಬಾಲಮುರಳಿಕೃಷ್ಣ ರವರು ಕೂಡ ತೆಲುಗು ಪರಂಪರೆಗೆ ಸೇರಿದವರು. ಧರ್ಮ ಎಲ್ಲ ಜಾತಿಗಳ ಹಿಂದೂ ಸಂತರು ಆಂಧ್ರ ಪ್ರದೇಶದಲ್ಲಿ ನೆಲೆ ಕಂಡಿದ್ದಾರೆ. ಸಂತ ಯೋಗಿ ಶ್ರೀ ಪೋತುಲೂರಿ ವೀರ ಬ್ರಹ್ಮೇಂದ್ರ ಸ್ವಾಮಿಯವರು ಹಿಂದುಳಿದ ವರ್ಗಕ್ಕೆ ಸೇರಿದ ಓರ್ವ ಪ್ರಮುಖ ವ್ಯಕ್ತಿಯಾಗಿದ್ದು, ವಿಶ್ವಬ್ರಾಹ್ಮಣ (ಅಕ್ಕಸಾಲಿಗ) ಜಾತಿಯಲ್ಲಿ ಜನಿಸಿದ್ದರೂ ಸಹ, ಬ್ರಾಹ್ಮಣ, ಹರಿಜನ ಮತ್ತು ಮುಸ್ಲಿಂ ಅನುಯಾಯಿಗಳನ್ನು ಹೊಂದಿದ್ದರು. ಬೆಸ್ತರಾಗಿದ್ದ ರಘು ಕೂಡ ಶೂದ್ರರಾಗಿದ್ದರು. ಸಂತ ಕಕ್ಕಯ್ಯ ಚೂರ(ಚಮ್ಮಾರ) ಹರಿಜನ ಸಂತರಾಗಿದ್ದರು. ಆಧುನಿಕ ಕಾಲದ ಹಲವಾರು ಪ್ರಮುಖ ಹಿಂದೂ ಸಂತರು ಆಂಧ್ರ ಪ್ರದೇಶದಿಂದ ಬಂದಿದ್ದಾರೆ. ಅವರೆಂದರೆ, ದ್ವೈತಾದ್ವೈತ ತತ್ವವನ್ನು ಸ್ಥಾಪಿಸಿದ ನಿಂಬರ್ಕ, ಭಾರತ ಸ್ವಾತಂತ್ರ್ಯದ ಪ್ರತಿಪಾದನೆ ಮಾಡಿದ ತಾಯಿ ಮೀರಾ, ದೈವಾರಾಧನೆಯಲ್ಲಿ ಧಾರ್ಮಿಕ ಐಕ್ಯತೆಯನ್ನು ಪ್ರತಿಪಾದಿಸಿದ ಶ್ರೀ ಸತ್ಯ ಸಾಯಿ ಬಾಬಾ, ಸ್ವಾಮಿ ಸುಂದರ ಚೈತನ್ಯಾನಂದಜೀ ಮತ್ತು ಅರಬಿಂದೋ ಮಿಷನ್‌. ತೀರ್ಥಯಾತ್ರಾ ಮತ್ತು ಧಾರ್ಮಿಕ ಸ್ಥಳಗಳು thumb|right|250px|ತಿರುಮಲ ವೆಂಕಟೇಶ್ವರ ದೇವಸ್ಥಾನ, ತಿರುಪತಿಯಲ್ಲಿರುವ ಅತಿ ಮುಖ್ಯವಾದ ಯಾತ್ರಾಸ್ಥಳ ಭಾರತದಾದ್ಯಂತ ಇರುವ ಹಿಂದೂಗಳಿಗೆ ತಿರುಪತಿ ಅಥವಾ ತಿರುಮಲ ಒಂದು ಬಹು ಮುಖ್ಯ ಯಾತ್ರಾಸ್ಥಳವಾಗಿದೆ. ಇದು ಇಡೀ ಜಗತ್ತಿನಲ್ಲಿನ (ಯಾವುದೇ ಧಾರ್ಮಿಕ ನಂಬುಗೆಗೆ ಸೇರಿದವುಗಳ ಪೈಕಿ) ಅತಿ ಶ್ರೀಮಂತ ಯಾತ್ರಾನಗರವಾಗಿದೆ. ಇದರ ಮುಖ್ಯ ದೇವಸ್ಥಾನವು ವೆಂಕಟೇಶ್ವರದೇವರಿಗೆ ಸಮರ್ಪಣೆಯಾಗಿದೆ. ತಿರುಪತಿಯು ಚಿತ್ತೂರ್ ಜಿಲ್ಲೆಯಲ್ಲಿದೆ. ಸತ್ಯನಾರಾಯಣ ಸ್ವಾಮಿ ದೇವಸ್ಥಾನ ಪೂರ್ವ ಗೋದಾವರಿ ಜಿಲ್ಲೆಯ ಅಣ್ಣಾವರಂನಲ್ಲಿರುವ ಪ್ರಸಿದ್ಧ ದೇವಸ್ಥಾನ. ಸಿಂಹಾಚಲಂ ಮತ್ತೊಂದು ಜನಪ್ರಿಯ ಯಾತ್ರಾ ಸ್ಥಳವಾಗಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿದೆ. ಸಿಂಹಾಚಲಂ ಯಾತ್ರಾಸ್ಥಳವು, ಪ್ರಹ್ಲಾದನನ್ನು ಅವನ ದುಷ್ಠ ತಂದೆ ಹಿರಣ್ಯಕಶಿಪುವಿನಿಂದ ರಕ್ಷಿಸಿದ ಸಂರಕ್ಷಕ ದೇವರಾದ ನರಸಿಂಹನ ನೆಲೆಬೀಡಾಗಿತ್ತು ಎಂದು ಪುರಾಣದಲ್ಲಿ ಹೇಳಲಾಗಿದೆ. ವಿಜಯವಾಡ ನಗರದಲ್ಲಿರುವ ಕನಕ ದುರ್ಗ ದೇವಸ್ಥಾನ ಆಂಧ್ರ ಪ್ರದೇಶದ ಜನಪ್ರಿಯ ದೇವಸ್ಥಾನಗಳಲ್ಲೊಂದು. ಶ್ರೀ ಕಾಳಹಸ್ತಿ ಯು ಬಹಳ ಮುಖ್ಯವಾದ ಪ್ರಾಚೀನ ಶಿವನ ದೇವಸ್ಥಾನಗಳಲ್ಲಿ ಒಂದಾಗಿದ್ದು, ಚಿತ್ತೂರ್‌‌ ಜಿಲ್ಲೆಯಲ್ಲಿನ ಸ್ವರ್ಣಮುಖಿ ನದಿಯ ದಡದಲ್ಲಿದೆ. ಸಿಂಹಾಚಲಂ ಕ್ಷೇತ್ರವು ಪರ್ವತದ ಮೇಲಿರುವ ಪುಣ್ಯಕ್ಷೇತ್ರವಾಗಿದ್ದು ವಿಶಾಖಪಟ್ಟಣಂನಿಂದ ೧೬ ಕಿ.ಮೀ.ನಷ್ಟು ದೂರದಲ್ಲಿದೆ ಹಾಗೂ ನಗರದ ಉತ್ತರ ದಿಕ್ಕಿನಲ್ಲಿರುವ ಬೆಟ್ಟದ ಮತ್ತೊಂದು ಭಾಗದಲ್ಲಿದೆ. ಇದು ಅತಿ ಮನೋಹರ ಶಿಲ್ಪಕಲೆಯನ್ನು ಒಳಗೊಂಡ ಆಂಧ್ರ ಪ್ರದೇಶದ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿದ್ದು, ದಟ್ಟವಾದ ಅರಣ್ಯದಿಂದ ಆವೃತವಾಗಿರುವ ಬೆಟ್ಟಗಳ ಮಧ್ಯದಲ್ಲಿ ಸ್ಥಾಪಿತಗೊಂಡಿದೆ. ಅತ್ಯಂತ ಸುಂದರವಾಗಿ ಕೆತ್ತಲಾಗಿರುವ ೧೬ ಕಂಬಗಳ ನಾಟ್ಯ ಮಂಟಪ ಮತ್ತು ೯೬ ಕಂಬಗಳ ಕಲ್ಯಾಣ ಮಂಟಪಗಳು ದೇವಸ್ಥಾನದ ಉತ್ಕೃಷ್ಠ ವಾಸ್ತುಶೈಲಿಗೆ ಸಾಕ್ಷಿಯಾಗಿವೆ. ತನ್ನ ಸ್ಥಾನವನ್ನು ಅಲಂಕರಿಸಿರುವ ದೈವವಾದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ಮೂರ್ತಿಗೆ ಚಂದನದ ದಪ್ಪ ಲೇಪನವನ್ನು ಮಾಡಲಾಗಿದೆ. ಇದು, ವಿಷ್ಣುವಿನ ಅವತಾರಗಳಲ್ಲೊಂದಾದ ನರಸಿಂಹ ಸ್ವಾಮಿಗೆ ಸಮರ್ಪಿಸಲಾದ ಭಾರತದ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದ್ದು, ಚೋಳರ ದೊರೆಯಾದ ಕುಲೋತ್ತುಂಗ ೧೧ ನೇ ಶತಮಾನದಲ್ಲಿ ಈ ದೇವಾಲಯವನ್ನು ನಿರ್ಮಿಸಿದ. ಒಡಿಶಾದ ಗಜಪತಿ ದೊರೆಗಳ ಮೇಲೆ ವಿಜಯಿಯಾಗಿ ಹೊರಹೊಮ್ಮಿದ ನೆನಪಿಗಾಗಿ ಶ್ರೀ ಕೃಷ್ಣ ದೇವರಾಯನು ಸ್ಥಾಪಿಸಿದ ವಿಜಯ ಸ್ಢಂಭ ಇಲ್ಲಿದೆ. ಈ ದೇವಸ್ಥಾನದಲ್ಲಿ ಪ್ರಾಚೀನ ತೆಲುಗು ಶಾಸನಗಳನ್ನು ಕಾಣಬಹುದು. ಈ ದೇವಾಲಯವು ಭಾರತದಲ್ಲಿನ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲೊಂದು.ಇದು ದ್ರಾವಿಡ (ದಕ್ಷಿಣ ಭಾರತದ) ವಾಸ್ತುಶೈಲಿಯನ್ನು ಹೊಂದಿದೆ.ನೆರೆಹಾವಳಿ, ಚಂಡಮಾರುತ, ಭೂಕಂಪ ಮತ್ತು ಸುನಾಮಿಯಂತಹ ನೈಸರ್ಗಿಕ ವಿಕೋಪಗಳಿಂದ ವೈಜಾಗ್‌ನ್ನು ಈ ಸ್ವಾಮಿಯು ರಕ್ಷಿಸುತ್ತಿದ್ದಾನೆ ಎಂಬ ಜನಪ್ರಿಯ ನಂಬಿಕೆಯು ಇಲ್ಲಿ ಹಾಸುಹೊಕ್ಕಾಗಿದೆ. ಇದಕ್ಕೆ ಸಾಕ್ಷಿಯೆಂಬಂತೆ, ಇಲ್ಲಿಯವರೆಗೂ ನೈಸರ್ಗಿಕ ವಿಕೋಪಗಳಿಂದ ಒಂದೇ ಒಂದು ಸಾವು ಕೂಡ ಸಂಭವಿಸಿಲ್ಲ. ಪತಿ-ಪತ್ನಿಯಾಗ ಬಯಸುವ ಜೋಡಿಗಳು ಮದುವೆಗೆ ಮುಂಚೆ ಈ ದೇವಸ್ಥಾನಕ್ಕೆ ಹೋಗುವುದು ಒಂದು ವಾಡಿಕೆಯಾಗಿದೆ. ಆಂಧ್ರ ಪ್ರದೇಶದಲ್ಲಿ ಅತಿ ಹೆಚ್ಚು ಜನಸಂದಣಿಯಿರುವ ಕೂಡಿರುವ ದೇವಸ್ಥಾನಗಳಲ್ಲಿ ಈ ದೇವಸ್ಥಾನವೂ ಒಂದು. ಶ್ರೀ ಶೈಲಂ, ಆಂಧ್ರ ಪ್ರದೇಶದ ಮತ್ತೊಂದು ಮಹತ್ವದ ದೇವಾಲಯವಾಗಿದ್ದು, ಇದೂ ಕೂಡ ರಾಷ್ಟ್ರಮಟ್ಟದ ಪ್ರಾಮುಖ್ಯತೆಯನ್ನು ಪಡೆದಿದೆ. ಇದು ಶಿವ ದೇವರಿಗೆ ಸಮರ್ಪಿಸಲ್ಪಟ್ಟಿರುವ ದೇವಾಲಯವಾಗಿದೆ. ವಿವಿಧ ಜ್ಯೋತಿರ್ಲಿಂಗಗಳಿರುವ ಹಲವು ಸ್ಥಳಗಳ ಪೈಕಿ ಇದೂ ಒಂದಾಗಿದೆ. ಸ್ಕಂದ ಪುರಾಣ ದಲ್ಲಿ "ಶ್ರೀ ಶೈಲ ಕಾಂಡಂ' ಎಂಬ ಅಧ್ಯಾಯವಿದ್ದು ಅದು ಸಂಪೂರ್ಣವಾಗಿ ಈ ಸ್ಥಳಕ್ಕೇ ಸಂಬಂಧಿಸಿದ್ದಾಗಿದೆ. ಈ ಅಧ್ಯಾಯದಲ್ಲಿ ಈ ಸ್ಥಳದ ಪ್ರಾಚೀನ ಮೂಲದ ಬಗ್ಗೆ ಉಲ್ಲೇಖವಿದೆ. ಕಳೆದ ಸಹಸ್ರಮಾನದ ತಮಿಳು ಸಂತರು ಈ ದೇವಾಲಯದ ಕುರಿತು ಹಾಡಿ ಹೊಗಳಿರುವುದರಿಂದಲೂ ಇದರ ಪ್ರಾಚೀನತೆಯು ದೃಢಪಟ್ಟಿದೆ.ಆದಿ ಶಂಕರರು ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದರು ಮತ್ತು ಆ ಸಮಯದಲ್ಲಿಯೇ ತಮ್ಮ "ಶಿವಾನಂದ ಲಹರಿ "ಯನ್ನು ರಚಿಸಿದರು ಎಂದು ಹೇಳಲಾಗಿದೆ. ಶಿವನ ಪವಿತ್ರ ಬಸವನಾಗಿರುವ ವೃಷಭನು, ಶಿವ ಮತ್ತು ಪಾರ್ವತಿಯರು ತನ್ನ ಎದುರು ಮಲ್ಲಿಕಾರ್ಜುನ ಮತ್ತು ಭ್ರಮರಾಂಬರ ರೂಪದಲ್ಲಿ ಕಾಣಿಸಿಕೊಳ್ಳುವವರೆಗೂ ಮಹಾಕಾಳಿ ದೇವಸ್ಥಾನದಲ್ಲಿ ತಪಸ್ಸು ಮಾಡಿದ್ದ ಎಂಬುದೊಂದು ನಂಬಿಕೆಯಿದೆ. ಈ ದೇವಸ್ಥಾನವು ೧೨ ಪವಿತ್ರ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಶ್ರೀರಾಮ ಸ್ವಾಮಿಯು ಸ್ವತಃ ಇಲ್ಲಿ ಸಹಸ್ರಲಿಂಗಗಳನ್ನು ಪ್ರತಿಷ್ಠಾಪಿಸಿದ; ಜೊತೆಗೆ ಪಾಂಡವರು ಪಂಚಪಾಂಡವ ಲಿಂಗಗಳನ್ನು ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಿದರು ಎನ್ನಲಾಗಿದೆ. ಶ್ರೀ ಶೈಲಂ ಕ್ಷೇತ್ರವು ಕರ್ನೂಲ್‌ ಜಿಲ್ಲೆಯಲ್ಲಿದೆ. ಭದ್ರಾಚಲಂ ಕ್ಷೇತ್ರವು, ಶ್ರೀರಾಮನ ದೇವಸ್ಥಾನ ಮತ್ತು ಗೋದಾವರಿ ನದಿಗಾಗಿ ಹೆಸರುವಾಸಿಯಾಗಿದೆ. ಶ್ರೀರಾಮನನ್ನು ಕುರಿತು ಅವನ ಪರಮ ಭಕ್ತನಾದ ರಾಮದಾಸು(ಮೂಲದಲ್ಲಿ-ಕಂಚೇರ್ಲ ಗೋಪಣ್ಣ) ತನ್ನ ಭಕ್ತಿಗೀತೆಗಳನ್ನು ಬರೆದದ್ದು ಇದೇ ಸ್ಥಳದಲ್ಲಿ. ತ್ರೇತಾಯುಗದಲ್ಲಿ ಶ್ರೀರಾಮನು ಇದೇ ಗೋದಾವರಿ ನದಿಯ ದಡದಲ್ಲಿ ಕೆಲವು ವರ್ಷಗಳ ಕಾಲ ತಂಗಿದ್ದನು ಎಂಬ ನಂಬಿಕೆಯಿದೆ. ಭದ್ರ ಎಂಬ ಒಂದು ಪರ್ವತವು ಸುದೀರ್ಘವಾದ ತಪಸ್ಸಿನ ನಂತರ, ತನ್ನ ಮೇಲೆಯೇ ಚಿರಕಾಲ ನೆಲೆಸುವಂತೆ ಶ್ರೀರಾಮನನ್ನು ಕೋರಿತು ಎಂಬುದಾಗಿ ಒಂದು ದಂತಕಥೆಯಿದೆ. ಶ್ರೀರಾಮ ನು ಪತ್ನಿ ಸೀತೆ ಮತ್ತು ಸಹೋದರ ಲಕ್ಷ್ಮಣರೊಡಗೂಡಿ ಭದ್ರಗಿರಿಯಲ್ಲಿಯೇ ನೆಲೆಸುವುದಾಗಿ ಹೇಳಿದನು ಎಂದು ಪ್ರತೀತಿಯಿದೆ. ಭದ್ರಾಚಲಂ ಕ್ಷೇತ್ರವು ಖಮ್ಮಮ್ ಜಿಲ್ಲೆಯಲ್ಲಿದೆ. ೧೭ನೇ ಶತಮಾನದಲ್ಲಿ ತಾನಿಶನ ಆಳ್ವಿಕೆಯ ಕಾಲದಲ್ಲಿ ಗೋಪಣ್ಣನು ಜನರಿಂದ ದೇಣಿಗೆ ಸಂಗ್ರಹಿಸಿ ರಾಮನಿಗಾಗಿ ಈ ದೇವಸ್ಥಾನವನ್ನು ನಿರ್ಮಿಸಿದನು. ಅವನು ರಾಮ-ಸೀತಾರ ಕಲ್ಯಾಣವನ್ನು ಆಚರಿಸಲು ಆರಂಭಿಸಿದನು. ಆಗಿನಿಂದ ಪ್ರತಿವರ್ಷ ಶ್ರೀರಾಮ ನವಮಿಯನ್ನು ಆಚರಿಸಲಾಗುತ್ತಿದೆ. ಭದ್ರಾಚಲಂನಲ್ಲಿ ನಡೆಯುವ ಈ ಆಚರಣೆಗೆ ಆಂಧ್ರ ಪ್ರದೇಶ ಸರ್ಕಾರವು ಪ್ರತಿ ವರ್ಷವೂ ಮುತ್ತುಗಳನ್ನು ಕಳಿಸುತ್ತದೆ. ಬಸರ್‌-ಸರಸ್ವತಿ ದೇವಸ್ಥಾನವು, ವಿದ್ಯಾದೇವತೆ ಸರಸ್ವತಿಯ ಮತ್ತೊಂದು ಪ್ರಸಿದ್ಧ ಸ್ಥಳ. ಬಸರಾ ಕ್ಷೇತ್ರವು ಅದಿಲಾಬಾದ್‌ ಜಿಲ್ಲೆಯಲ್ಲಿದೆ. ಯಾಗಂಟಿ ಗುಹೆಗಳು ಕೂಡ ಆಂಧ್ರ ಪ್ರದೇಶದ ಮತ್ತೊಂದು ಬಹುಮುಖ್ಯ ಯಾತ್ರಾ ಸ್ಥಳವಾಗಿದೆ. ಮಹಾನಂದಿಯನ್ನು ಹೊರತುಪಡಿಸಿ ಕರ್ನೂಲ್‌ ಜಿಲ್ಲೆಯು ಮತ್ತೊಂದು ಯಾತ್ರಾ ಕೇಂದ್ರವಾಗಿದ್ದು ಹಸಿರಿನಿಂದ ಕೂಡಿದೆ.ಪ್ರಸಿದ್ಧ ಹಿಂದೂ ಬಿರ್ಲಾ ಮಂದಿರ, ಮತ್ತು ರಾಮಪ್ಪ ದೇವಸ್ಥಾನ, ಮುಸ್ಲಿಂರ ಮೆಕ್ಕಾ ಮಸೀದಿ ಮತ್ತು ಚಾರ್ಮಿನಾರ್‌, ಜೊತೆಗೆ ಹುಸೇನ್‌ ಸಾಗರ್‌ ಜಲಾಶಯದ ಮೇಲಿರುವ ಬುದ್ಧನ ಪ್ರತಿಮೆ ಮುಂತಾದುವುಗಳು ಆಂಧ್ರ ಪ್ರದೇಶದ ಮನಮೋಹಕ ಧಾರ್ಮಿಕ ಸ್ಮಾರಕಗಳಾಗಿವೆ. ಕನಕದುರ್ಗ ದೇವಸ್ಥಾನವು ಭಾರತದ ಆಂಧ್ರ ಪ್ರದೇಶದಲ್ಲಿನ ಮತ್ತೊಂದು ಪ್ರಖ್ಯಾತ ದೇವಸ್ಥಾನವಾಗಿದೆ.ಕೃಷ್ಣಾ ನದಿಯ ದಂಡೆಯ ಮೇಲಿರುವ ವಿಜಯವಾಡ ನಗರದ ಇಂದ್ರಕೀಲಾದ್ರಿ ಪರ್ವತದ ಮೇಲೆ ಈ ದೇವಸ್ಥಾನ ಸ್ಥಾಪಿತವಾಗಿದೆ. ಹಚ್ಚಹಸಿರಿನಿಂದ ಆವೃತವಾಗಿರುವ ಈಗಿನ ವಿಜಯವಾಡ ಹಿಂದೆ ಕಲ್ಲುಬಂಡೆಗಳ ಪ್ರಾಂತ್ಯವಾಗಿದ್ದು, ದಿಣ್ಣೆಗಳಿಂದ ತುಂಬಿಕೊಂಡಿದ್ದರಿಂದಾಗಿ ಕೃಷ್ಣಾ ನದಿಯ ಹರಿವಿಗೆ ತಡೆಯೊಡ್ಡುತ್ತಿತ್ತು ಎಂದು ದಂತಕಥೆಯೊಂದು ಹೇಳುತ್ತದೆ. ಹೀಗಾಗಿ ಆ ಭೂಮಿಯು ವಾಸ ಮಾಡುವುದಕ್ಕಾಗಲೀ ವ್ಯವಸಾಯಕ್ಕಾಗಲೀ ಯೋಗ್ಯವಾಗಿರಲಿಲ್ಲ. ಶಿವನನ್ನು ಪ್ರಾರ್ಥಿಸಿದಾಗ, ಅವನ ಆಜ್ಞಾಪನೆಯ ಮೇರೆಗೆ ಪರ್ವತಗಳು ಕೃಷ್ಣಾ ನದಿ ಹರಿಯಲು ದಾರಿ ಮಾಡಿಕೊಟ್ಟವು. ಅದು ಆದದ್ದೇ ತಡ!ಕೃಷ್ಣಾ ನದಿಯು ಬೆಟ್ಟದಲ್ಲಿ ಶಿವನು ಕೊರೆದ ಸುರಂಗಗಳ ಅಥವಾ "ಬೆಜ್ಜಮ್‌" ಮೂಲಕ ಯಾವುದೇ ಅಡೆತಡೆಯಿಲ್ಲದೆ ರಭಸದಿಂದ ಹರಿಯಲು ಪ್ರಾರಂಭಿಸಿತು. ಹೀಗೆ ಆ ಸ್ಥಳ ಬೆಜವಾಡ ಎಂಬ ಹೆಸರು ಪಡೆಯಿತು. ಹಲವು ಪುರಾಣಗಳಲ್ಲೊಂದು ಈ ಸ್ಥಳದೊಂದಿಗೆ ಸಂಬಂಧ ಹೊಂದಿದೆ. ಅದೆಂದರೆ, ಶಿವನಿಂದ ವರ ಪಡೆಯಲು ಅರ್ಜುನ ಶಿವವನ್ನು ಕುರಿತು ಇಂದ್ರಕೀಲ ಪರ್ವತದ ಮೇಲೆ ಕುಳಿತು ತಪಸ್ಸು ಮಾಡಿದನು. ನಂತರ ಅರ್ಜುನ ಶಿವನಿಂದ ವರ ಪಡೆದು ವಿಜಯಿಯಾದನು. ಈ ನಗರಕ್ಕೆ "ವಿಜಯವಾಡ" ಎಂದು ಹೆಸರು ಬರಲು ಇದೇ ಕಾರಣವಾಯಿತು. ಅಸುರಾಧಿಪತಿ ಮಹಿಷಾಸುರನನ್ನು ಸಂಹರಿಸಿದ ಕನಕದುರ್ಗ ದೇವತೆಯ ವಿಜಯೋತ್ಸವದ ಕುರಿತು ಮತ್ತೊಂದು ಜನಪ್ರಿಯ ದಂತಕಥೆಯಿದೆ. ಒಂದಾನೊಂದು ಕಾಲದಲ್ಲಿ ಈ ಪ್ರದೇಶದಲ್ಲಿ ವಾಸಿಸುತ್ತಿದ್ದ ಜನತೆಗೆ ರಾಕ್ಷಸರ ಕಾಟವು ಅತಿಯಾಗಿ ಸಹಿಸಲು ಅಸಾಧ್ಯವಾಗಿತ್ತು. ಆಗ ಇಂದ್ರಕೀಲ ಋಷಿಯು ಉಗ್ರವಾಗಿ ತಪಸ್ಸು ಮಾಡಿದನು. ಅದನ್ನು ಮೆಚ್ಚಿ ದೇವತೆಯು ಪ್ರತ್ಯಕ್ಷಳಾದಾಗ, ತನ್ನ ತಲೆಯ ಮೇಲೆ ಆಕೆಯು ನೆಲೆಸಿ ದುರುಳ ರಾಕ್ಷಸರಿಂದ ರಕ್ಷಣೆ ಒದಗಿಸಬೇಕೆಂದು ಋಷಿಯು ಪ್ರಾರ್ಥಿಸಿದನು. ಋಷಿಯ ಕೋರಿಕೆಯ ಮೇರೆಗೆ, ರಾಕ್ಷಸರನ್ನು ಸಂಹರಿಸಿದ ದುರ್ಗಾ ದೇವತೆಯು ಇಂದ್ರಕೀಲದಲ್ಲಿ ಶಾಶ್ವತವಾಗಿ ನೆಲೆಸಿದಳು. ತದನಂತರ, ಅವಳು ರಾಕ್ಷಸದೊರೆ ಮಹಿಷಾಸುರರನ್ನು ಸಂಹರಿಸಿ ವಿಜಯವಾಡದ ಜನರನ್ನು ರಾಕ್ಷಸರ ದುಷ್ಟ ಹಿಡಿತದಿಂದ ರಕ್ಷಿಸಿದಳು. ನವರಾತ್ರಿ ಎಂದು ಕರೆಯುವ ದಸರಾ ಹಬ್ಬದ ಸಮಯದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. ಅವುಗಳಲ್ಲಿ ಅತ್ಯಂತ ಮಹತ್ವವಾದವುಗಳೆಂದರೆ, ಸರಸ್ವತಿ ಪೂಜೆ ಮತ್ತು ತೆಪ್ಪೋತ್ಸವ. ದುರ್ಗಾ ದೇವತೆಗಾಗಿ ದಸರಾ ಹಬ್ಬವನ್ನು ಇಲ್ಲಿ ಪ್ರತಿವರ್ಷವೂ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುವ ಭಕ್ತಾದಿಗಳು ಈ ವರ್ಣಮಯ ಆಚರಣೆಯಲ್ಲಿ ಭಾಗವಹಿಸಿ ನಂತರ ಕೃಷ್ಣಾ ನದಿಯಲ್ಲಿ ಮಿಂದು ಪುನೀತರಾಗುತ್ತಾರೆ. ಇತರೆ ಸಾಂಸ್ಕೃತಿಕ ವಿಚಾರಗಳು ಬಾಪೂರವರ ಚಿತ್ರಕಲೆ, ನಂದೂರಿ ಸುಬ್ಬರಾವ್‌ ಅವರ ಯೆಂಕಿ ಪಾಟಲು ,(ಯೆಂಕಿ ಎಂದು ಕರೆಯಲ್ಪಡುವ ಅಗಸಗಿತ್ತಿಯ/ಅವಳ ಕುರಿತಾದ ಹಾಡುಗಳು), ತುಂಟ ಬುಡುಗು,(ಮುಲ್ಲಪುಡಿಯವರಿಂದ ರಚನೆಯಾದ ಪಾತ್ರ), ಅನ್ನಮಯ್ಯನ ಹಾಡುಗಳು, ಅವಕಾಯ (ವಿಭಿನ್ನವಾದ ಒಂದು ಬಗೆಯ ಮಾವಿನ ಉಪ್ಪಿನ ಕಾಯಿ, ಇದರಲ್ಲಿ ಮಾವಿನ ಓಟೆಯನ್ನು ಹಾಗೆಯೇ ಉಳಿಸಿಕೊಳ್ಳಲಾಗಿರುತ್ತದೆ), ಗೊಂಗುರ (ದಾಸವಾಳದ ಜಾತಿಯ ಗಿಡದಿಂದ ಮಾಡಲಾದ ಚಟ್ನಿ), ಅಟ್ಲ ತಡ್ಡಿ (ಹದಿಹರೆಯದ ಹುಡುಗಿಯರಿಗೆಂದೇ ಆಚರಿಸಲಾಗುವ ವಿಶೇಷವಾದ ಋತುಕಾಲಿಕ ಹಬ್ಬ.) ಗೋದಾವರಿ ನದಿಯ ದಂಡೆಗಳು, ದೂಡು ಬಸವಣ್ಣ (ಸುಗ್ಗಿಯ ಹಬ್ಬವಾದ ಸಂಕ್ರಾಂತಿಯ ಸಮಯದಲ್ಲಿ ಸಾಂಪ್ರದಾಯಿಕ ಬಸವನನ್ನು ಸಿಂಗರಿಸಿ ಮನೆ ಮನೆಗೆ ಕರೆದೊಯ್ದು ಪ್ರದರ್ಶಿಸುವ ಒಂದು ಆಚರಣೆ) ಮುಂತಾದ ಹಬ್ಬ-ಆಚರಣೆಗಳು ತೆಲುಗು ಸಂಸ್ಕೃತಿಯನ್ನು ಶ್ರೀಮಂತಗೊಳಿಸಿವೆ. ಮೆದು ಕಲ್ಲುಗಳಲ್ಲಿ ವಿಗ್ರಹಗಳನ್ನು ಕೆತ್ತುವುದಕ್ಕೆ ಸಂಬಂಧಿಸಿದ ಶಿಲ್ಪಕಲಾ ಕುಶಲತೆಗಾಗಿ ದುರ್ಗಿಯ ಹಳ್ಳಿಯು ಹೆಸರುವಾಸಿಯಾಗಿದೆ. ಈ ಮೆದುಕಲ್ಲುಗಳು ಕೆಟ್ಟ ಹವಾಗುಣಕ್ಕೆ ಗುರಿಯಾಗುವ ಸಂಭವವಿರುತ್ತವೆಯಾದ್ದರಿಂದ ಅವುಗಳನ್ನು ನೆರಳಿನಟ್ಟು ಪ್ರದರ್ಶಿಸುವುದು ಅಗತ್ಯವಾಗಿರುತ್ತದೆ. 'ಕಲಂಕಾರಿ' ಅತ್ಯಂತ ಪ್ರಾಚೀನ ಕಲಾಪ್ರಕಾರವಾಗಿದ್ದು, ಇದರ ಇತಿಹಾಸ ಹರಪ್ಪ ನಾಗರಿಕತೆಯವರೆಗೂ ಹೋಗುತ್ತದೆ. ಗೊಂಬೆ ತಯಾರಿಕೆಗೂ ಆಂಧ್ರ ಹೆಸರುವಾಸಿಯಾಗಿದೆ. ಗೊಂಬೆಗಳನ್ನು ಮರ, ಮಣ್ಣು, ಒಣ ಹುಲ್ಲು, ಮತ್ತು ಹಗುರವಾದ ಮಿಶ್ರಲೋಹಗಳಿಂದ ತಯಾರಿಸಲಾಗುತ್ತದೆ. ತಿರುಪತಿಯು ಮಂಜತ್ತಿಮರದ ಕೆತ್ತನೆಗಳಿಗೆ ಹೆಸರವಾಸಿಯಾಗಿದೆ. ಸಮೃದ್ಧವಾದ ಬಣ್ಣಗಳನ್ನು ಹೊಂದಿರುವ ಮಣ್ಣಿನ ಗೊಂಬೆಗಳಿಗೆ ಕೊಂಡಪಲ್ಲಿ ಹೆಸರುವಾಸಿಯಾಗಿದೆ. ವಿಶಾಖಪಟ್ಟಣದಲ್ಲಿ ನೆಲೆಗೊಂಡಿರುವ ಈಟಿಕೊಪ್ಪವು ಗೊಂಬೆಗಳಿಗೆ ಹೆಸರುವಾಸಿಯಾಗಿದೆ. ನಿರ್ಮಲ್‌ ಚಿತ್ರಕಲೆಯು ಅಭಿವ್ಯಕ್ತಿಗೆ ಒತ್ತುಕೊಡುವ ಪ್ರಕಾರವಾಗಿದ್ದು ಅವುಗಳನ್ನು ಸಾಮಾನ್ಯವಾಗಿ ಕಪ್ಪು ಹಿನ್ನೆಲೆಯುಳ್ಳ ಮಾಧ್ಯಮದ ಮೇಲೆ ಚಿತ್ರಿಸಲಾಗುತ್ತದೆ. ಕಥಾ ನಿರೂಪಣಾ ಪ್ರಕಾರಕ್ಕೆ ಆಂಧ್ರದಲ್ಲಿ ತನ್ನದೇ ಆದ ಒಂದು ಸ್ಥಾನವಿದೆ. 'ಯಕ್ಷಗಾನಂ'‌, 'ಬುರ್ರ ಕಥಾ' (ಸಾಮಾನ್ಯವಾಗಿ ಮೂರು ಜನರಿಂದ ಮಾಡುವಂಥಾದ್ದಾಗಿದ್ದು, ಕಥೆಯನ್ನು ಹೇಳಲು ಮೂರು ವಿಭಿನ್ನ ಸಂಗೀತ ವಾದ್ಯಗಳನ್ನು ಬಳಸಿಕೊಳ್ಳಲಾಗುತ್ತದೆ), 'ಜಂಗಮ ಕಥಾಲು', 'ಹರಿ ಕಥಾಲು', 'ಚೆಕ್ಕ ಭಜನ', 'ಉರುಮುಲ ನಾಟ್ಯಂ'(ಸಾಮಾನ್ಯವಾಗಿ ಹಬ್ಬ ಹರಿದಿನಗಳಲ್ಲಿ ಆಚರಿಸಲಾಗುವ ನೃತ್ಯವಾಗಿದ್ದು, ಭಾರೀ ಸಂಗೀತದ ಲಯಕ್ಕೆ ನೃತ್ಯಗಾರರ ತಂಡವು ವೃತ್ತಾಕಾರದಲ್ಲಿ ಕುಣಿಯುತ್ತದೆ), 'ಘಟ ನಾಟ್ಯಂ'(ಒಬ್ಬರ ತಲೆಯ ಮೇಲೆ ಮಣ್ಣಿಯ ಮಡಕೆಯನ್ನು ಇಟ್ಟು ಕುಣಿಯುವ ಪ್ರದರ್ಶನ ಕಲೆ) ಇವೆಲ್ಲವೂ ಪ್ರಖ್ಯಾತ ವಿಶಾಖಾ ಉತ್ಸವದಲ್ಲಿ ಆಚರಿಸಲಾಗುವ ಜಾನಪದ ನೃತ್ಯ ಪ್ರಕಾರಗಳಾಗಿದ್ದು, ಆಂಧ್ರ ಪ್ರದೇಶದ ಪಲುಮಾಂಬ ಜಾತ್ರೆಗೇ ಅನನ್ಯತೆಯನ್ನು ತಂದುಕೊಟ್ಟಿವೆ. ಶಿಕ್ಷಣ ಆಂಧ್ರ ಪ್ರದೇಶದಲ್ಲಿ ೨೦ಕ್ಕೂ ಹೆಚ್ಚಿನ ಉನ್ನತ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಸೇವೆ ನೀಡುತ್ತಿವೆ. ಬಹುತೇಕ ಎಲ್ಲಾ ಕಲಾ ಕೋರ್ಸುಗಳು, ಮಾನವ ಶಾಸ್ತ್ರಗಳು, ವಿಜ್ಞಾನ, ಎಂಜಿನಿಯರಿಂಗ್‌‌, ಕಾನೂನು, ಔಷಧ ವೈದ್ಯಶಾಸ್ತ್ರ, ವ್ಯವಹಾರ ಮತ್ತು ಪಶುವೈದ್ಯ ವಿಜ್ಞಾನ ಮುಂತಾದ ವಿಷಯಗಳಲ್ಲಿ ಇವು ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ನೀಡುತ್ತಿವೆ.ಎಲ್ಲಾ ಪ್ರಮುಖ ಕ್ಷೇತ್ರಗಳಲ್ಲೂ ಅತ್ಯಾಧುನಿಕ ಸಂಶೋಧನೆಗಳು ನಡೆಯುತ್ತಿವೆ. ಆಂಧ್ರ ಪ್ರದೇಶದಲ್ಲಿ ೧೩೩೦ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜುಗಳು; ೧೦೦೦ MBA ಮತ್ತು MCA ಕಾಲೇಜುಗಳು; ೫೦೦ ಎಂಜಿನಿಯರಿಂಗ್‌ ಕಾಲೇಜುಗಳು ಮತ್ತು ೫೩ ವೈದ್ಯಕೀಯ ಕಾಲೇಜುಗಳಿವೆ. ಉನ್ನತ ಶಿಕ್ಷಣದಲ್ಲಿ ಶಿಕ್ಷಕ-ವಿದ್ಯಾರ್ಥಿಗಳ ಅನುಪಾತ ೧೯:೧ರಷ್ಟು ಇದೆ. ೨೦೦೧ರ ಜನಗಣತಿಯ ಪ್ರಕಾರ ಆಂಧ್ರ ಪ್ರದೇಶವು ಒಟ್ಟಾರೆಯಾಗಿ ೬೦.೫%ರಷ್ಟು ಸಾಕ್ಷರತಾ ಪ್ರಮಾಣವನ್ನು ಹೊಂದಿದೆ. ಇದರಲ್ಲಿ ಪುರುಷ ಸಾಕ್ಷರತಾ ಪ್ರಮಾಣವು ೭೦.೩%ರಷ್ಟು ಇದ್ದರೆ ಮಹಿಳಾ ಸಾಕ್ಷರತಾ ಪ್ರಮಾಣವು ೫೦.೪%ರಷ್ಟು ಮಾತ್ರ ಇದ್ದು, ಅದೇ ಕಳವಳಕ್ಕೆ ಕಾರಣವಾಗಿದೆ. ಹಲವು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ರಾಜ್ಯವು ಇತ್ತೀಚೆಗೆ ದಾಪುಗಾಲಿಟ್ಟಿದೆ. ಪ್ರತಿಷ್ಠಿತ ಬಿರ್ಲಾ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಅಂಡ್‌ ಸೈನ್ಸ್‌ (ಹೈದರಾಬಾದ್‌ನಲ್ಲಿರುವ BITS ಪಿಲಾನಿ ಆವರಣ) ಮತ್ತು IIT ಹೈದರಾಬಾದ್‌ನಂತಹ ಸಂಸ್ಥೆಗಳಿಗೆ ಆಂಧ್ರ ಪ್ರದೇಶವು ತವರು ಮನೆಯಾಗಿದೆ. ಇಂಟರ್‌ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಇನ್‌ಫರ್ಮೇಶನ್ ಟೆಕ್ನಾಲಜಿ , ಹೈದರಾಬಾದ್ (IIIT-H), ಹೈದರಾಬಾದ್‌ ವಿಶ್ವವಿದ್ಯಾಲಯ(ಹೈದರಾಬಾದ್‌ ಕೇಂದ್ರೀಯ ವಿಶ್ವವಿದ್ಯಾಲಯ), ಮತ್ತು ಇಂಡಿಯನ್‌ ಸ್ಕೂಲ್‌ ಆಫ್‌ ಬಿಸಿನೆಸ್‌ (ISB), ಇವು ತಮ್ಮ ಗುಣಮಟ್ಟದ ಶಿಕ್ಷಣದಿಂದಾಗಿ ಅಂತಾರಾಷ್ಟ್ರೀಯ ಗಮನ ಸೆಳೆಯುತ್ತಿವೆ. ದಿ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಫ್ಯಾಷನ್‌ ಟೆಕ್ನಾಲಜಿ (NIFT) ಮತ್ತು ದಿ ಇನ್‌ಸ್ಟಿಟ್ಯೂಟ್‌ ಆಫ್‌ ಹೊಟೇಲ್‌ ಮ್ಯಾನೇಜ್‌ಮೆಂಟ್‌, ಕೇಟರಿಂಗ್‌ ಟೆಕ್ನಾಲಜಿ ಅಂಡ್‌‌ ಅಪ್ಲೈಡ್‌ ನ್ಯೂಟ್ರಿಷನ್‌ ಇವೂ ಕೂಡ ಹೈದರಾಬಾದ್‌ನಲ್ಲಿವೆ. ಪ್ರತಿಷ್ಠಿತ ಒಸ್ಮಾನಿಯಾ ವಿಶ್ವವಿದ್ಯಾಲಯ ಕೂಡ ಇರುವುದು ಹೈದರಾಬಾದ್‌ನಲ್ಲೇ. ಆಂಧ್ರ ಪ್ರದೇಶ ಸರ್ಕಾರವು ಮೊದಲ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ ಹೆಗ್ಗಳಿಕೆಯನ್ನು ಹೊಂದಿದ್ದು, ತನ್ಮೂಲಕ ಇದು ಹಲವು ಸಮಿತಿಗಳ ಶಿಫಾರಸ್ಸುಗಳನ್ನು ಕಾರ್ಯಗತಗೊಳಿಸಿದಂತಾಗಿದೆ. ಈ ರೀತಿಯಲ್ಲಿ, ಆಂಧ್ರ ಪ್ರದೇಶ ವಿಧಾನಸಭೆಯ ಕಾಯಿದೆ ಸಂಖ್ಯೆ ೬ರ ಪ್ರಕಾರ "ಆಂಧ್ರ ಪ್ರದೇಶ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ"ವನ್ನು ಸ್ಥಾಪಿಸಲಾಯಿತು ಹಾಗೂ ದಿನಾಂಕ: ೯-೪-೧೯೮೬ರಂದು ಆಂಧ್ರ ಪ್ರದೇಶದ ಆಗಿನ ಮುಖ್ಯಮಂತ್ರಿ ದಿವಂಗತ ಎನ್.ಟಿ.ರಾಮ ರಾವ್‌ ಇದನ್ನು ಉದ್ಘಾಟಿಸಿದರು. ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ವಿಜಯವಾಡದಲ್ಲಿ ದಿನಾಂಕ: ೦೧-೧೧-೧೯೮೬ರಿಂದ ಕಾರ್ಯಾರಂಭ ಮಾಡಿತು. ಇದರ ಸಂಸ್ಥಾಪಕರಾದ ಶ್ರೀ ಎನ್‌.ಟಿ.ರಾಮ ರಾವ್‌ರವರ ನಿಧನಾ ನಂತರ, ೧೯೯೮ರ ಅವಲೋಕಿಸುವ ಕಾಯಿದೆ ಸಂಖ್ಯೆ ೪ರ ಅನುಸಾರ, ದಿನಾಂಕ: ೨.೨.೯೮ರಂದು ಅನ್ವಯವಾಗುವಂತೆ, ಅವರ ಸ್ಮರಣೆಗಾಗಿ 'NTR ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ', ಆಂದ್ರ ಪ್ರದೇಶ ಎಂದು ವಿಶ್ವವಿದ್ಯಾಲಯಕ್ಕೆ ಮರುನಾಮಕರಣ ಮಾಡಲಾಯಿತು. ವೃತ್ತ ಪತ್ರಿಕೆಗಳು ಆಂಧ್ರ ಪ್ರದೇಶವು ತೆಲುಗು ಭಾಷೆಯ ಹಲವು ವೃತ್ತ ಪತ್ರಿಕೆಗಳನ್ನು ಹೊಂದಿದೆ. ಈನಾಡು , ಆಂಧ್ರ ಜ್ಯೋತಿ , ಸಾಕ್ಷಿ , ಪ್ರಜಾಶಕ್ತಿ , ವಾರ್ತಾ , ಆಂಧ್ರ ಭೂಮಿ , ವಿಶಾಲಾಂಧ್ರ , ಸೂರ್ಯಾ , ಮತ್ತು ಆಂಧ್ರ ಪ್ರಭ , ಇವು ರಾಜ್ಯದಲ್ಲಿನ ಪ್ರಮುಖ ತೆಲುಗು ಭಾಷಾ ವೃತ್ತಪತ್ರಿಕೆಗಳು. ಆಂಧ್ರ ಪ್ರದೇಶದ ಉರ್ದು ಭಾಷಾ ವೃತ್ತಪತ್ರಿಕೆಗಳೆಂದರೆ, ಸಿಯಾಸತ್‌ ಡೈಲಿ , ಮುನ್ಸಿಫ್‌ ಡೈಲಿ , ರೆಹ್ನುಮಾ-ಇ-ಡೆಕ್ಕನ್‌ , ಇತಿಮದ್ ಉರ್ದು ಡೈಲಿ , ಆವಾಂ ಮತ್ತು ಮಿಲಾಪ್‌ ಡೈಲಿ ಆಂಧ್ರ ಪ್ರದೇಶದಲ್ಲಿ ಇಂಗ್ಷೀಷ್‌ ಭಾಷೆಯ ಹಲವು ಪತ್ರಿಕೆಗಳೂ ಪ್ರಕಟವಾಗುತ್ತಿದ್ದು ಅವು ಇಂತಿವೆ, ಡೆಕ್ಕನ್‌ ಕ್ರಾನಿಕಲ್‌, ದಿ ಹಿಂದು , ದಿ ಟೈಮ್ಸ್ ಆಫ್ ಇಂಡಿಯಾ , ದಿ ನ್ಯೂ ಇಂಡಿಯನ್‌ ಎಕ್ಸ್‌‌ಪ್ರೆಸ್ , ದಿ ಎಕನಾಮಿಕ್‌ ಟೈಮ್ಸ್ , ದಿ ಬಿಸಿನೆಸ್‌ ಲೈನ್‌ ಹಿಂದಿ ಭಾಷೆಯ ಹಲವಾರು ವೃತ್ತಪತ್ರಿಕೆಗಳಿಗೂ ಆಂಧ್ರ ಪ್ರದೇಶ ತವರು ಮನೆಯಾಗಿದೆ. ಅವುಗಳೆಂದರೆ, ಸ್ವತಂತ್ರ ವಾರ್ತಾ , ವಿಶಾಖಪಟ್ಟಣಂ ನಿಜಾಮಾಬಾದ್‌ , ಮತ್ತು ಹೈದರಾಬಾದ್‌ನಿಂದ ಪ್ರಕಟವಾಗುವ ಅತ್ಯಂತ ಹಳೆಯ ಹಿಂದಿ ಪತ್ರಿಕೆಗಳಲ್ಲಿ ಒಂದಾದ ಹಿಂದಿ ಮಿಲಾಪ್‌ . ಪ್ರವಾಸೋದ್ಯಮ ಆಂಧ್ರ ಪ್ರದೇಶವನ್ನು ಇಲ್ಲಿನ ಪ್ರವಾಸೋದ್ಯಮ ಇಲಾಖೆಯು "ಭಾರತದ ಕೊಹಿನೂರ್‌ " ಎಂದು ಬಿಂಬಿಸಿದೆ. ಆಂಧ್ರ ಪ್ರದೇಶವು ಹಲವು ಧಾರ್ಮಿಕ ಯಾತ್ರಾ ಕೇಂದ್ರಗಳ ತವರೂರಾಗಿದೆ. ವೆಂಕಟೇಶ್ವರ ಸ್ವಾಮಿಯ ನೆಲೆಬೀಡಾದ ತಿರುಪತಿಯು ಪ್ರಪಂಚದಲ್ಲಿನ ಯಾತ್ರಾಕೇಂದ್ರಗಳ ಪೈಕಿ (ಯಾವುದೇ ಧರ್ಮದ) ಅತಿ ಹೆಚ್ಚು ಜನ ಯಾತ್ರಾರ್ಥಿಗಳು ಭೇಟಿ ಕೊಡುವ ಸ್ಥಳವಾಗಿದೆ. ನಲ್ಲಮಲ ಬೆಟ್ಟದಲ್ಲಿ ಸೇರಿಕೊಂಡಿರುವ ಶ್ರೀ ಶೈಲಂ ಕ್ಷೇತ್ರವು ಶ್ರೀ ಮಲ್ಲಿಕಾರ್ಜುನ ನ ನೆಲೆಬೀಡಾಗಿದ್ದು, ಭಾರತದಲ್ಲಿನ ಹನ್ನೆರಡು ಜ್ಯೋತಿರ್ಲಿಂಗ ಗಳಲ್ಲಿ ಒಂದಾಗಿದೆ. ಯಾದಗಿರಿಗುಟ್ಟವು ವಿಷ್ಣುವಿನ ಮತ್ತೊಂದು ಅವತಾರವಾಗಿರುವ ಶ್ರೀ ಲಕ್ಷ್ಮೀ ನರಸಿಂಹನ ಆವಾಸಸ್ಥಾನವಾಗಿರುವಂತೆಯೇ, ಅಮರಾವತಿಯ ಶಿವನ ದೇವಾಲಯವು ಪಂಚಾರಾಮಮ್‌ಗಳಲ್ಲಿ (ಐದು ದೇವಾಲಯಗಳಲ್ಲಿ) ಒಂದಾಗಿದೆ. ವಾರಂಗಲ್‌ನಲ್ಲಿನ ಸಾವಿರ ಕಂಬಗಳ ದೇವಸ್ಥಾನ ಮತ್ತು ರಾಮಪ್ಪ ದೇವಸ್ಥಾನಗಳು ತಮ್ಮ ದೇವಾಲಯದಲ್ಲಿನ ಕೆತ್ತನೆಗಳಿಗೆ ಹೆಸರುವಾಸಿಯಾಗಿವೆ. ಅಮರಾವತಿ, ನಾಗಾರ್ಜುನ ಕೊಂಡ, ಭಟ್ಟಿಪ್ರೊಲು, ಘಂಟಸಾಲ, ನೆಲಕೊಂಡಪಲ್ಲಿ, ಧೂಲಿಕಟ್ಟ, ಬಾವಿಕೊಂಡ, ಥೊಟ್ಲಕೊಂಡ, ಶಾಲಿಹುಂಡಂ, ಪವುರಾಲಕೊಂಡ, ಶಂಕರಂ, ಫಣಿಗಿರಿ ಮತ್ತು ಕೋಲನ್‌ಪಾಕ ಇವೇ ಮೊದಲಾದ ಸ್ಥಳಗಳಲ್ಲಿ ರಾಜ್ಯವು ಅಸಂಖ್ಯಾತ ಬೌದ್ಧ ಕೇಂದ್ರಗಳನ್ನು ಹೊಂದಿದೆ. ಬಾದಾಮಿ ಚಾಲುಕ್ಯರು (ಬಾದಾಮಿಯು ಕರ್ನಾಟಕದಲ್ಲಿದೆ.) ೬ನೇ ಶತಮಾನದಲ್ಲಿ ನಿರ್ಮಿಸಿರುವ ಆಲಂಪುರ್‌ ಭ್ರಮಾ ದೇವಸ್ಥಾನಗಳು ಚಾಲುಕ್ಯರ ಕಲೆ ಮತ್ತು ಶಿಲ್ಪಕಲೆಗೆ ಅತ್ಯುತ್ತಮ ಉದಾಹರಣೆಯಾಗಿವೆ. ವಿಜಯನಗರ ಸಾಮ್ರಾಜ್ಯವು ಅಸಂಖ್ಯಾತ ಸ್ಮಾರಕಗಳು, ಶ್ರೀಶೈಲಂ ದೇವಸ್ಥಾನ ಮತ್ತು ಲೇಪಾಕ್ಷಿ ದೇವಸ್ಥಾನಗಳನ್ನು ನಿರ್ಮಿಸಿತು. ವಿಶಾಖಪಟ್ಟಣಂನಲ್ಲಿರುವ ಗೋಲ್ಡನ್‌ ಬೀಚ್‌, ಬೊರ್ರದಲ್ಲಿನ ಒಂದು ದಶಲಕ್ಷ ವರ್ಷಗಳಷ್ಟು ಹಳೆಯದಾದ ಸುಣ್ಣದ ಕಲ್ಲಿನ ಗುಹೆಗಳು, ಚಿತ್ರಸದೃಶ ಅರಕು ಕಣಿವೆ, ಹಾರ್‌ಸ್ಲೆ ಬೆಟ್ಟಗಳ ಗಿರಿಧಾಮಗಳು, ಪಾಪಿ ಕೊಂಡಾಲು ವಿನಲ್ಲಿ ಕಿರಿದಾದ ಕಮರಿಯೊಂದರ ಮೂಲಕ ಹರಿಯುವ ಗೋದಾವರಿ ನದಿ, ಕುಂತಲ, ಎಟ್ಟಿಪೊತಾಲದಲ್ಲಿರುವ ಜಲಪಾತಗಳು ಮತ್ತು ತಲಕೋಣದಲ್ಲಿರುವ ಸಮೃದ್ಧ ಜೀವ-ವೈವಿಧ್ಯ ಇವೇ ಮೊದಲಾದವುಗಳು ರಾಜ್ಯದ ಕೆಲವೊಂದು ಪ್ರಾಕೃತಿಕ ಆಕರ್ಷಣೆಗಳಾಗಿವೆ. ವಿಶಾಖಪಟ್ಟಣಂನಲ್ಲಿನ ಸಮದ್ರತೀರಕ್ಕೆ ಸನಿಹದಲ್ಲಿ ಕೈಲಾಸಗಿರಿಯಿದೆ. ಕೈಲಾಸಗಿರಿಯ ಪರ್ವತದ ತುದಿಯಲ್ಲಿ ಒಂದು ಉದ್ಯಾನವನವಿದೆ. ವಿಶಾಖಪಟ್ಟಣಂ ಹಲವು ಪ್ರವಾಸೀ ಆಕರ್ಷಣೆಯ ತಾಣಗಳ ತವರು. ಅವುಗಳೆಂದರೆ, INS ಕರಶೂರ ಜಲಾಂತರ್ಗಾಮಿ ವಸ್ತುಸಂಗ್ರಹಾಲಯ, (ಈ ತೆರನಾದ ವಸ್ತುಸಂಗ್ರಹಾಲಯ ಭಾರತದಲ್ಲೇ ಏಕೈಕ), ಭಾರತದಲ್ಲಿನ ಅತಿ ಉದ್ದದ ಕಡಲತೀರದ‌ ರಸ್ತೆಯನ್ನು ಹೊಂದಿರುವ ಯರಾಡ ಬೀಚ್‌, ಅರಕು ಕಣಿವೆ, VUDA ಉದ್ಯಾನವನ ಮತ್ತು ಇಂದಿರಾಗಾಂಧಿ ಮೃಗಾಲಯ ಇವೇ ಮೊದಲಾದವುಗಳು. thumb|left|ಬೊರ್ರ ಗುಹೆಗಳು ಬೊರ್ರ ಗುಹೆಗಳು ಭಾರತದಲ್ಲಿನ ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಸಮೀಪದ ಪೂರ್ವ ಘಟ್ಟಗಳ ಅನಂತಗಿರಿ ಬೆಟ್ಟಗಳಲ್ಲಿ ನೆಲೆಗೊಂಡಿವೆ. ಇವು ಸರಾಸರಿ ಸಮುದ್ರ ಮಟ್ಟದಿಂದ ಸುಮಾರು ೮೦೦ ರಿಂದ ೧೩೦೦ ಮೀಟರ್‌ಗಳಷ್ಟು ಎತ್ತರದಲ್ಲಿದ್ದು, ದಶಲಕ್ಷ ವರ್ಷಗಳಷ್ಟು ಹಳೆಯದಾದ, ಗುಹೆಯ ಚಾವಣಿಯಿಂದ ಇಳಿಬಿದ್ದಿರುವ ನೀರ್ಗೋಲು ಹಾಗೂ ಗುಹೆಯ ನೆಲದಲ್ಲಿ ಎದ್ದು ನಿಂತಿರುವ ನೀರ್ಗೋಲುಗಳ ವ್ಯೂಹಕ್ಕೆ ಹೆಸರುವಾಸಿಯಾಗಿವೆ. ಬ್ರಿಟಿಷ್‌ ಭೂವಿಜ್ಞಾನಿಯಾದ ವಿಲಿಯಂ ಕಿಂಗ್‌ ಜಾರ್ಜ್‌, ೧೮೦೭ರಲ್ಲಿ ಈ ಗುಹೆಗಳನ್ನು ಪತ್ತೆಹಚ್ಚಿದನು. ಗುಹೆಯ ಒಳಭಾಗದಲ್ಲಿ ಕಂಡುಬರುವ ರಚನೆಯು ಮನುಷ್ಯನ ಮೆದುಳಿನಂತೆ ಕಾಣುತ್ತದೆ. ಸ್ಥಳೀಯ ಭಾಷೆಯಾದ ತೆಲುಗಿನಲ್ಲಿ ಮೆದುಳಿಗೆ ಬುರ್ರ ಎಂಬ ಹೆಸರಿದೆ. ಹೀಗಾಗಿ ಈ ಗುಹೆಗಳಿಗೆ ಆ ಹೆಸರು ಬಂದಿದೆ. ಇದೇ ರೀತಿಯಲ್ಲಿ, ದಶಲಕ್ಷ ವರ್ಷಗಳಷ್ಟು ಹಿಂದೆಯೇ ಈ ಪ್ರದೇಶದಲ್ಲಿನ ಸುಣ್ಣದ ಕಲ್ಲಿನ ನಿಕ್ಷೇಪಗಳು ಚಿತ್ರಾವತಿ ನದಿಯಿಂದ ಸವಕಳಿಗೆ ಒಳಗಾಗಿದ್ದರಿಂದಾಗಿ ಬೆಲಂ ಗುಹೆಗಳು ರೂಪುಗೊಂಡವು. ಸುಣ್ಣದ ಕಲ್ಲು ಮತ್ತು ನೀರಿನ ನಡುವಿನ ರಾಸಾಯನಿಕ ಕ್ರಿಯೆಯಿಂದ ರೂಪುಗೊಂಡ ದುರ್ಬಲ ಆಮ್ಲೀಯ ಅಂತರ್ಜಲ ಅಥವಾ ಕಾರ್ಬಾನಿಕ್‌ ಆಮ್ಲದ ಕ್ರಿಯೆಯಿಂದಾಗಿ ಈ ಸುಣ್ಣದ ಕಲ್ಲಿನ ಗುಹೆಗಳು ರೂಪುಗೊಂಡವು. ಬೆಲಂ ಗುಹೆಗಳು ಭಾರತದ ಉಪ-ಖಂಡದಲ್ಲಿನ ಎರಡನೇ ಅತಿದೊಡ್ಡ ಗುಹಾ ವ್ಯವಸ್ಥೆಯಾಗಿವೆ. ಗುಹೆ ಎಂಬುದಕ್ಕೆ ಸಂಸ್ಕೃತದಲ್ಲಿ ಬಿಲಂ ಎಂಬ ಹೆಸರಿದ್ದು, ಇದರಿಂದಲೇ ಬೆಲಂ ಗುಹೆಗಳು ತಮ್ಮ ಹೆಸರನ್ನು ಪಡೆದಿವೆ. ತೆಲುಗಿನಲ್ಲಿ ಈ ಗುಹೆಗಳಿಗೆ ಬೆಲಂ ಗುಹಾಲು ಎಂಬ ಹೆಸರಿದೆ. ಬೆಲಂ ಗುಹೆಗಳು ೩೨೨೯ ಮೀಟರ್‌ನಷ್ಟು ಉದ್ದವಿದ್ದು, ಇದರಿಂದಾಗಿ ಅವು ಭಾರತದ ಉಪಖಂಡದಲ್ಲಿನ ಎರಡನೇ ಅತಿದೊಡ್ಡ ನೈಸರ್ಗಿಕ ಗುಹೆಗಳಾಗಿವೆ. ಉದ್ದನೆಯ ನಡುವಣಂಕಗಳು, ವಿಶಾಲವಾದ ಕೋಣೆಗಳು, ಸಿಹಿನೀರಿನ ಓಣಿಗಳು ಮತ್ತು ಕೊಳಾಯಿಗಳನ್ನು ಬೆಲಂ ಗುಹೆಗಳು ಹೊಂದಿವೆ. ಗುಹೆಯ ಆಳವಾದ ಸ್ಥಳವು ಪ್ರವೇಶದ್ವಾರದಿಂದ ಇದ್ದು, ಅದನ್ನು ಪಾತಾಳಗಂಗಾ ಎಂದು ಕರೆಯಲಾಗುತ್ತದೆ. ೧,೨೬೫ ಮೀಟರ್‌ನಷ್ಟು ಎತ್ತರದಲ್ಲಿರುವ ಹಾರ್‌ಸ್ಲೆ ಬೆಟ್ಟಗಳು, ಆಂಧ್ರ ಪ್ರದೇಶದಲ್ಲಿನ ಪ್ರಸಿದ್ಧ ಬೇಸಿಗೆ ಗಿರಿಧಾಮವಾಗಿದ್ದು, ಬೆಂಗಳೂರಿನಿಂದ ಸುಮಾರು ೧೬೦ ಕಿ.ಮೀ. ಮತ್ತು ತಿರುಪತಿಯಿಂದ ಸುಮಾರು ೧೪೪ ಕಿ.ಮೀ.ನಷ್ಟು ದೂರದಲ್ಲಿದೆ.ಇದರ ಸಮೀಪದಲ್ಲಿಯೇ ಮದನಪಲ್ಲಿ ಪಟ್ಟಣವಿದೆ. ಪ್ರಮುಖವಾದ ಪ್ರವಾಸೀ ಆಕರ್ಷಣೆಯ ತಾಣಗಳಲ್ಲಿ ಮಲ್ಲಮ್ಮ ದೇವಸ್ಥಾನ ಮತ್ತು ರಿಷಿ ವ್ಯಾಲಿ ಸ್ಕೂಲ್‌ ಸೇರಿವೆ. ೮೭ ಕಿ.ಮಿ. ದೂರ ಇರುವ ಕೌಂಡಿನ್ಯ ವನ್ಯಜೀವಿ ಅಭಯಾರಣ್ಯಕ್ಕೆ ಹಾರ್‌ಸ್ಲೆ ಬೆಟ್ಟಗಳು ನಿರ್ಗಮನಾ ತಾಣವಾಗಿದೆ. ಚಾರ್ಮಿನಾರ್‌, ಗೋಲ್ಕೊಂಡ ಕೋಟೆ, ಚಂದ್ರಗಿರಿ ಕೋಟೆ, ಚೌಮಹಲ್ಲ ಅರಮನೆ, ಮತ್ತು ಫಲಕ್ನುಮ ಅರಮನೆ ಮುಂತಾದವುಗಳು ರಾಜ್ಯದಲ್ಲಿರುವ ಕೆಲವೊಂದು ಸ್ಮಾರಕಗಳು. ಕೃಷ್ಣ ಜಿಲ್ಲೆಯಲ್ಲಿರುವ ವಿಜಯವಾಡದಲ್ಲಿನ ಕನಕ ದುರ್ಗ ದೇವಸ್ಥಾನ, ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿರುವ ದ್ವಾರಕಾತಿರುಮಲದಲ್ಲಿನ ವೆಂಕಟೇಶ್ವರ ದೇವಸ್ಥಾನ (ಇದಕ್ಕೆ ಚಿನ್ನ ತಿರುಪತಿ ಎಂದೂ ಹೆಸರಿದೆ), ಶ್ರೀಕಾಕುಲಂ ಜಿಲ್ಲೆಯಲ್ಲಿರುವ ಅರಸವೆಲ್ಲಿಯಲ್ಲಿನ ಸೂರ್ಯ ದೇವಸ್ಥಾನ- ಇವು ಕೂಡಾ ಆಂಧ್ರ ಪ್ರದೇಶದಲ್ಲಿ ನೋಡಬಹುದಾದ ಮತ್ತಷ್ಟು ಸ್ಥಳಗಳು. ಅಣ್ಣಾವರಂ ಸತ್ಯನಾರಾಯಣ ಸ್ವಾಮಿ ದೇವಾಲಯವು ಪೂರ್ವ ಗೋದಾವರಿ ಜಿಲ್ಲೆಯಲ್ಲಿದೆ. ಸಾರಿಗೆ ರಾಜ್ಯವು ಒಟ್ಟು ೧,೪೬,೯೪೪ ಕಿ.ಮೀ.ನಷ್ಟು ರಸ್ತೆಯನ್ನು ನಿರ್ವಹಿಸುತ್ತಿದ್ದು, ಅದರಲ್ಲಿ ೪೨,೫೧೧ ಕಿ.ಮೀ. ನಷ್ಟು ರಾಜ್ಯ ಹೆದ್ದಾರಿಗಳು, ೨,೯೪೯ ಕಿ.ಮೀ.ನಷ್ಟು ರಾಷ್ಟ್ರೀಯ ಹೆದ್ದಾರಿಗಳು ಹಾಗೂ ೧,೦೧,೪೮೪ ಕಿ.ಮೀ.ನಷ್ಟು ಜಿಲ್ಲಾ ರಸ್ತೆಗಳು ಸೇರಿವೆ. ಆಂಧ್ರ ಪ್ರದೇಶದಲ್ಲಿನ ವಾಹನಗಳ ಬೆಳವಣಿಗೆಯ ಪ್ರಮಾಣವು ೧೬%ರಷ್ಟಿದ್ದು ಇದು ದೇಶದಲ್ಲೇ ಅತಿ ಹೆಚ್ಚು. ಆಂಧ್ರ ಪ್ರದೇಶದ ಸರ್ಕಾರದ ಒಡೆತನದ ಆಂಧ್ರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮವು (APSRTC), ರಾಜ್ಯದ ಪ್ರಮುಖ ಸಾರ್ವಜನಿಕ ಸಾರಿಗೆ ನಿಗಮವಾಗಿದ್ದು, ಎಲ್ಲ ನಗರಗಳು ಮತ್ತು ಹಳ್ಳಿಗಳನ್ನು ಸಂಪರ್ಕಿಸುತ್ತದೆ. ಅತಿ ಹೆಚ್ಚಿನ ವಾಹನಗಳನ್ನು ಹೊಂದಿರುವ ಮತ್ತು ಪ್ರತಿದಿನವೂ ಅತಿ ಉದ್ದದ ಪ್ರದೇಶದವರೆಗೆ ಸಾಗಿಸುವ/ಹೆಚ್ಚಿನ ಪ್ರಯಾಣಿಕರನ್ನು ಕೊಂಡೊಯ್ಯುವ ಮೂಲಕ APSRTCಯು ವಿಶ್ವ ದಾಖಲೆಗಳ ಗಿನ್ನೆಸ್‌ ಪುಸ್ತಕದಲ್ಲಿ ದಾಖಲಾಗುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದನ್ನು ಹೊರತುಪಡಿಸಿ, ಸಾವಿರಾರು ಖಾಸಗಿ ನಿರ್ವಾಹಕರೂ ಕೂಡ ಬಸ್ಸುಗಳನ್ನು ಓಡಿಸುವ ಮೂಲಕ ರಾಜ್ಯದ ಪ್ರಮುಖ ನಗರಗಳು ಮತ್ತು ಪಟ್ಟಣಗಳನ್ನು ಸಂಪರ್ಕಿಸುತ್ತಾರೆ. ಕಾರು, ಮೋಟಾರು ಅಳವಡಿತ ಸ್ಕೂಟರ್‌ ಮತ್ತು ಬೈಸಿಕಲ್‌ಗಳಂತಹ ಖಾಸಗಿ ವಾಹನಗಳು, ನಗರ ಮತ್ತು ಅವಕ್ಕೆ ಹೊಂದಿಕೊಂಡಿರುವ ಹಳ್ಳಿಗಳಲ್ಲಿನ ಸ್ಥಳೀಯ ಸಾರಿಗೆಯಲ್ಲಿ ಗಣನೀಯ ಪಾಲನ್ನು ಹೊಂದಿವೆ. ರಾಜ್ಯದಲ್ಲಿ ಐದು ವಿಮಾನ ನಿಲ್ದಾಣಗಳಿವೆ. ಅವುಗಳೆಂದರೆ: ಹೈದರಾಬಾದ್‌ (ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ)(ರಾಜ್ಯದ ಅತ್ಯಂತ ದೊಡ್ಡ ವಿಮಾನ ನಿಲ್ದಾಣ), ವಿಶಾಖಪಟ್ಟಣಂ, ವಿಜಯವಾಡ, ರಾಜಮುಂಡ್ರಿ ಮತ್ತು ತಿರುಪತಿ.ಇನ್ನೂ ಆರು ನಗರಗಳಲ್ಲಿ ವಿಮಾನನಿಲ್ದಾಣಗಳನ್ನು ಆರಂಭಿಸಲು ಸರ್ಕಾರವು ಯೋಜನೆಯನ್ನು ಹಾಕಿಕೊಂಡಿದೆ. ಅವುಗಳೆಂದರೆ, ನೆಲ್ಲೂರ್, ವಾರಂಗಲ್‌, ಕಡಪ, ತಡೆಪಲ್ಲಿಗುಡೆಂ ರಾಮಗುಂಡಂ ಮತ್ತು ಒಂಗೊಲ್‌ ಆಂಧ್ರ ಪ್ರದೇಶವು ವಿಶಾಖಪಟ್ಟಣಂ ಮತ್ತು ಕಾಕಿನಾಡದಲ್ಲಿ ಭಾರತದ ಎರಡು ಪ್ರಮುಖ ಬಂದರುಗಳನ್ನು ಹೊಂದಿದೆ ಹಾಗೂ ಮಚಲೀಪಟ್ಣಂ, ನಿಜಾಮ್‌ಪಟ್ಣಂ(ಗುಂಟೂರ್‌‌) ಮತ್ತು ಕೃಷ್ಣಪಟ್ಣಂಗಳಲ್ಲಿ ಮೂರು ಸಣ್ಣ ಬಂದರುಗಳನ್ನು ಹೊಂದಿದೆ. ವಿಶಾಖಪಟ್ಟಣಂ ಬಳಿ ಇರುವ ಗಂಗಾವರಂನಲ್ಲಿ ಮತ್ತೊಂದು ಖಾಸಗಿ ಬಂದರನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಆಳಸಮುದ್ರದ ಬಂದರು ೨೦೦,೦೦೦-೨೫೦,೦೦೦ DWT ವರೆಗಿನ ಸಾಮರ್ಥ್ಯದ ಹಡಗುಗಳು ತಂಗಲು ಅವಕಾಶ ಮಾಡಿಕೊಡುವುದರಿಂದ ಬೃಹತ್ ಹಡಗುಗಳು ಭಾರತೀಯ ಕಡಲತೀರದೊಳಗೆ ಪ್ರವೇಶಿಸಲು ಅನುವಾಗುತ್ತದೆ. ಆಂಧ್ರ ರಾಜಕೀಯ ಮತ್ತು ಆಡಳಿತ ೨೦೦೯ ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಜಾರಾಜಯಂ ಪಾರ್ಟಿ, ಟಿಡಿಪಿ, ಟಿಆರ್.ಎಸ್. ಸಿಪಿಎಮ್ ಪಕ್ಷಗಳನ್ನು ಸೋಲಿಸಿ ನಂತರ ೨ ನೇ ಬಾರಿಗೆ ವೈ.ಎಸ್.ರಾಜಶೇಖರ ರೆಡ್ಡಿಯವರು ಆಂಧ್ರದ ಮುಖ್ಯಮಂತ್ರಿಯಾದರು . ಅವರು ೨-೯-೨೦೦೯ ರಂದು ಹೆಲಿಕ್ಯಾಪರ್ ಅವಘಡದಲ್ಲಿ ಸಾವನ್ನಪ್ಪಿದರು. ಹಿರಿಯ ರಾಜಕಾರಣಿ ಹಾಗೂ ನಣಕಸಿನ ಮಂತ್ರಿಯಾಗಿದ್ದ ಕೊನಿಜೇತಿ ರೋಸಚಿi ನವರು ೩-೯-೨೦೦೯ ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಅವರು ವಯಸ್ಸಾದಕಾರಣ ಕೆಲಸದ ವತ್ತಡ ಹೆಚ್ಚಾಗಿದೆಯೆಂದು ೨೪-೧೧-೨೦೧೦ ರಲ್ಲಿ ರಾಜೀನಾಮೆ ಸಲ್ಲಿಸಿದರು. ನಲ್ಲೇರಿ ಕಿರಣ ಕುಮಾರ ರೆಡ್ಡಿ ಯವರು ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು ಆಂಧ್ರ ಪ್ರದೇಶದ ರಾಜಕೀಯ ತೆಲಂಗಾಣ ಉದಯ ಆಂಧ್ರ ಮತ್ತು ತೆಲಂಗಾಣ ವಿಧಾನ ಸಭೆ ಚುನಾವಣೆಗಳು ೨೦೧೪ಸೀಮಾಂಧ್ರ ದಿ. ಜೂನ್ 2, 2014, ರಂದು ಆಂಧ್ರ ಪ್ರದೇಶ ರಾಜ್ಯವು ಎರಡು ಭಾಗವಾಗಿ ಒಡೆದು, ಎರಡು ರಾಜ್ಯವಾಯಿತು. ಅವು ತೆಲಂಗಾಣ ಮತ್ತು ಸೀಮಾಂಧ್ರ (ಆಂಧ್ರ). ದೇಶದ 29ನೇ ರಾಜ್ಯವಾಗಿ ತೆಲಂಗಾಣ ಉದಯವಾಗಿದ್ದು, ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ ಕಲ್ವಕುಂಟ್ಲ ಚಂದ್ರಶೇಖರ ರಾವ್‌ ಅಧಿಕಾರ ಸ್ವೀಕರಿಸಿದರು. 294 ಸದಸ್ಯರಿದ್ದ ಆಂಧ್ರ ವಿಧಾನಸಭೆಯಲ್ಲಿ ವಿಭಜಕನೆಯ ನಂತರ 175 ಶಾಸಕರಿದ್ದಾರೆ. ತೆಲಂಗಾಣದಲ್ಲಿ 119 ಶಾಸಕರಿದ್ದಾರೆ. ಆಂಧ್ರದ 42 ಲೋಕಸಭಾ ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳು ತೆಲಂಗಾಣ ವ್ಯಾಪ್ತಿಯಲ್ಲಿವೆ ಉಳಿದ ೨೫ ಸ್ಥಾನಗಳು ಹೊಸ ಆಂಧ್ರ ಪ್ರದೇಶದಲ್ಲಿವೆ. ೨೦೧೪ ರ ಜೂನ್ ನಂತರದ ಆಂಧ್ರ ಅಥವಾ ಸೀಮಾಂಧ್ರ ಸೀಮಾಂಧ್ರಕ್ಕೆ ಹೊಸ ರಾಜಧಾನಿ 2 Dec, 2016 ದಿ. ಜೂನ್ 2, 2014, ಆಂಧ್ರ ಪ್ರದೇಶ ರಾಜ್ಯವು ಎರಡು ಭಾಗವಾಗಿ ಒಡೆದು, ಎರಡು ರಾಜ್ಯವಾಯಿತು. ಅವು ತೆಲಂಗಾಣ ಮತ್ತು ಸೀಮಾಂಧ್ರ (ಆಂಧ್ರ). ಮೂಲ ಆಂಧ್ರ ಪ್ರದೇಶ ಇಬ್ಭಾಗವಾಗಿ ತೆಲಂಗಾಣ ಆಂಧ್ರ ಎಂದುಎರಡು ರಾಜ್ಯಗಳಾದಾಗ ಹೈದರಾಭಾದು ತೆಲಂಗಾಣಕ್ಕೆ ರಾಜಧಾನಿಯಾಯಿತು. ಹೊಸ ಆಂಧ್ರವು ಅಮರಾವತಿ ಅಂಬ ಹೊಸನಗರವನ್ನು ಕಟ್ಟಿ ಆಂಧ್ರಪ್ರದೇಶದ ಸಂಪೂರ್ಣ ಆಡಳಿತ ನೂತನ ರಾಜಧಾನಿ ಅಮರಾವತಿಗೆ 1-12-2016 ಗುರುವಾರ ಸ್ಥಳಾಂತರವಾಗುವ ಮೂಲಕ ಹೊಸ ಅಧ್ಯಾಯ ಆರಂಭಿಸಿತು. ಅಮರಾವತಿಗೆ ಸಮೀಪದ ವೆಲಗಪುಡಿಯಲ್ಲಿನ ತಾತ್ಕಾಲಿಕ ಸಚಿವಾಲಯದಲ್ಲಿನ ಕಚೇರಿಯಿಂದಲೇ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಕಾರ್ಯನಿರ್ವಹಿಸಲು ಆರಂಭಿಸಿದರು. ಸಚಿವ ಸಂಪುಟದ ಸಭೆಯೂ ಸಹ ಪ್ರಥಮಬಾರಿ ಇಲ್ಲಿ ನಡೆಯಿತು. ಆಂಧ್ರ ಪ್ರದೇಶ ಚುನಾವಣೆ -2014 ೨೦೧೯ರ ಆಂಧ್ರ ಪ್ರದೇಶ ಚುನಾವಣೆ 2019 Andhra Pradesh Legislative Assembly election ಆಂಧ್ರ ಪ್ರದೇಶ ಸರ್ಕಾರ (ಹೊಸ ಆಂಧ್ರ ) ಶ್ರೀ ನಾರಾ ಚಂದ್ರಬಾಬು ನಾಯಿಡು -ಮಾನ್ಯ ಮುಖ್ಯ ಮಂತ್ರಿ ೨೦೧೯ ರ ಚುನಾವಣೆ ಮತ್ತು ಹೊಸ ಸರ್ಕಾರ 2019 ರ ವಿಧಾನಸಭಾ ಚುನಾವಣೆಗಳು 2019 ರ ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷ ಯಾವುದೇ ಮೈತ್ರಿ ಮಾಡದೆ ಏಕಾಂಗಿಯಾಗಿ ಸ್ಪರ್ಧಿಸಿತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍, ಈ ಮೊದಲು ಐಎನ್‌ಸಿ ಮತ್ತು ವೈ.ಎಸ್.ಆರ್ ನೇತೃತ್ವದ ಕಾಂಗ್ರೆಸ್‍ ಪಾರ್ಟಿ ಎಂದು ವೀಭಜತವಾಗಿತ್ತು ವೈ.ಎಸ್.ಆರ್. ಕಾಂಗ್ರೆಸ್ ಜಗನ್ಮೋಹನ್ ರೆಡ್ಡಿ ನೇತ್ರತ್ವದಲ್ಲಿ ಸ್ಪರ್ಧಿಸಿತು. ಪವನ್ ಕಲ್ಯಾಣ್ ನೇತೃತ್ವದ ಜೆಎಸ್ಪಿ ಸಹ ಸಿಪಿಐ, ಸಿಪಿಐ (ಎಂ) ಮತ್ತು ಬಹುಜನ ಸಮಾಜ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿತು. 2019 ರ ಚುನಾವಣೆಯಲ್ಲಿ ಟಿಡಿಪಿ ಕೇವಲ 23 ಸ್ಥಾನಗಳನ್ನು ಗೆದ್ದರೆ, ವೈಎಸ್ಆರ್ ಕಾಂಗ್ರೆಸ್ ಪಕ್ಷವು ಬಹುಮತ ಪಡೆದು 151 ಸ್ಥಾನಗಳನ್ನು ಗಳಿಸಿತು. ಇದರ ನಾಯಕ ವೈ.ಎಸ್. ಜಗನ್ಮೋಹನ್ ರೆಡ್ಡಿ ಅವರು 2019 ರ ಮೇ 30 ರಂದು ಆಂಧ್ರಪ್ರದೇಶದ ಮುಂದಿನ ಮುಖ್ಯಮಂತ್ರಿಯಾದರು. ಇದನ್ನೂ ನೋಡಿರಿ ತೆಲಂಗಾಣ ಭಾರತದ ಮುಖ್ಯಮಂತ್ರಿಗಳು ೨೦೧೪ ಭಾರತದ ಸಾರ್ವತ್ರಿಕ ಲೋಕಸಭಾ ಚುನಾವಣೆ ಮತ್ತು ಫಲಿತಾಂಶ ಆಂಧ್ರ ಪ್ರದೇಶದಿಂದ ಬಂದಿರುವ ಪ್ರಮುಖರ ಪಟ್ಟಿ ಭಾರತದ ಇತಿಹಾಸ ಭಾರತದ ಮಧ್ಯಕಾಲೀನ ಸಾಮ್ರಾಜ್ಯಗಳು ಪ್ರಜಾಪ್ರಭುತ್ವದಲ್ಲಿ ರಾಜರ ರಾಜ್ಯಗಳ ವಿಲೀನ ಆಂಧ್ರ ರಾಜ್ಯ ಬ್ರೂಸ್‌‌ ಎಲಿಯಟ್‌ ಟೇಪರ್‌ರವರು ಬರೆದಿರುವ ಸೊಸೈಟಿ ಅಂಡ್‌ ರಿಚುಯಲ್‌ ಇನ್‌ ಎ ತೆಲುಗು ವಿಲೇಜ್‌ ಇನ್‌ ಸೌತ್ ಇಂಡಿಯಾ ರೈವಲ್ರಿ ಅಂಡ್ ಟ್ರಿಬ್ಯೂಟ್‌: ಸೊಸೈಟಿ ಅಂಡ್‌ ರಿಚುಯಲ್‌ ಇನ್‌ ಎ ತೆಲುಗು ವಿಲ್ಲೇಜ್‌ ಇನ್ ಸೌತ್ ಇಂಡಿಯಾ{/0. ಯಾಣಂ ಗುಂಟೂರ್‌ ವಿಭಾಗ https://en.wikipedia.org/wiki/State_Assembly_elections_in_India,_2009 ಚರ್ಚೆಗೆ/ ಸಲೆಹೆ ಕೊಡಲು ಮೇಲೆ ಎಡಗಡೆ ಚರ್ಚೆಗೆ ಹೋಗಿ ಬದಲಾಯಿಸಿ -ಗೆ ಕ್ಲಿಕ್ ಮಾಡಿ ಸಲಹೆ ಟೈಪು ಮಾಡಿ; ಅಗತ್ಯವಾದರೆ ಬಲಗಡೆ ಬರುವ ಲಿಪ್ಯಂತರದಲ್ಲಿ ಲಿಪಿ ಆಯ್ದುಕೊಳ್ಳಿ -ಇಲ್ಲ -ಲಿಪಿಗೆ ಕಂಟ್ರೋಲ್ ಎಮ್ ಒತ್ತಿ ಟಿಪ್ಪಣಿಗಳು ಹೊರಗಿನ ಕೊಂಡಿಗಳು ಆಂಧ್ರ ಪ್ರದೇಶ ಸರ್ಕಾರದ ಅಧಿಕೃತ ವೆಬ್‌ಸೈಟ್‌ ಆಂಧ್ರ ಪ್ರದೇಶ ಸರ್ಕಾರದ ಪ್ರವಾಸೋದ್ಯಮ ಇಲಾಖೆ NIC ವೆಬ್‌ಸೈಟ್‌ನಲ್ಲಿನ ಆಂಧ್ರ ಪ್ರದೇಶದ ಪೋರ್ಟಲ್‌ ಆಂಧ್ರ ಪ್ರದೇಶ ರಾಜ್ಯ ಪೊಲೀಸ್‌ ಇಲಾಖೆಯ ಅಧಿಕೃತ ವೆಬ್‌ಸೈಟ್‌ pnb:آندھراپردیش ವರ್ಗ ಭಾರತದ ರಾಜ್ಯಗಳು ಮತ್ತು ಪ್ರಾಂತ್ಯಗಳು ಆಂಧ್ರ ಪ್ರದೇಶ 1956ರಲ್ಲಿ ಸ್ಥಾಪಿಸಲಾದ ರಾಜ್ಯಗಳು ಮತ್ತು ಪ್ರಾಂತ್ಯಗಳು ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
1385
https://kn.wikipedia.org/wiki/%E0%B2%AD%E0%B2%BE%E0%B2%B0%E0%B2%A4%E0%B3%80%E0%B2%AF%20%E0%B2%97%E0%B2%A3%E0%B2%BF%E0%B2%A4%E0%B2%9C%E0%B3%8D%E0%B2%9E%E0%B2%B0%E0%B3%81
ಭಾರತೀಯ ಗಣಿತಜ್ಞರು
ಭಾರತೀಯ ಗಣಿತಜ್ಞರ ಒಂದು ಪಟ್ಟಿ: ಕ್ರಿಸ್ತಪೂರ್ವ ಯಾಜ್ಞವಲ್ಕ್ಯ, ಶತಪಥ ಬ್ರಾಹಣದಲ್ಲಿ ಕೆಲ ಗಣಿತ ಸೂತ್ರಗಳು ಲಗಾಧ, ವೇದಶಾಸ್ತ್ರದಲ್ಲಿ ಉಪಯೋಗಿಸುವ ಖಗೋಳಶಾಸ್ತ್ರದಲ್ಲಿ ಕೆಲಸ ನಡೆಸಿದನು ಬೌಧಾಯನ, ಸು. ಕ್ರಿ.ಪೂ. ೮೦೦ ಆಪಸ್ತಂಭ, ಕ್ರಿ.ಪೂ. ೭೦೦ ಕಾತ್ಯಾಯನ, ಕ್ರಿ.ಪೂ. ೪೦೦ ಪಾಣಿನಿ, ಕ್ರಿ.ಪೂ. ೪೦೦ ಪಿಂಗಲ, ಕ್ರಿ.ಪೂ. ೪೦೦ ಕ್ರಿ.ಶ. ೧೦೦೦ ದ ವರೆಗೆ ಆರ್ಯಭಟ, ಕ್ರಿ.ಶ. ೫೦೦ ವರಾಹಮಿಹಿರ ಭಾಸ್ಕರ ೧, ಕ್ರಿ.ಶ. ೬೨೦ ಬ್ರಹ್ಮಗುಪ್ತ ವಿರಹಂಕ, ೮ ನೆಯ ಶತಮಾನ - ಫಿಬೊನಾಚಿ ಸಂಖ್ಯೆಗಳ ಅಧ್ಯಯನ ಶ್ರೀಧರ, ೬೫೦ ರಿಂದ ೮೫೦ ರ ನಡುವೆ ಲಲ್ಲ, ೭೨೦-೭೯೦ ಗೋವಿಂದಸ್ವಾಮಿ, ೯ ನೆಯ ಶತಮಾನ ಮಹಾವೀರ, ೯ ನೆಯ ಶತಮಾನ ಜಯದೇವ, ೯ ನೆಯ ಶತಮಾನ ಹಲಾಯುಧ, ೧೦ ನೆಯ ಶತಮಾನ ಆರ್ಯಭಟ ೨, ೯೨೦-೧೦೦೦ ಕ್ರಿ.ಶ. ೧೦೦೦-೧೮೦೦ ಬ್ರಹ್ಮದೇವ, ೧೦ಭಾ೬೦-೧೧೩೦ ಶ್ರೀಪತಿ, ೧೦೧೯-೧೦೬೬ ಗೋಪಾಲ, ಫಿಬೊನಾಚಿ ಸಂಖ್ಯೆಗಳ ಆಧ್ಯಯನ ಹೇಮಚಂದ್ರ, ಫಿಬೊನಾಚಿ ಸಂಖ್ಯೆಗಳ ಆಧ್ಯಯನ ಭಾಸ್ಕರಾಚಾರ್ಯ ಗಂಗೇಶ ಉಪಾಧ್ಯಾಯ, ೧೩ ನೆಯ ಶತಮಾನ, ತರ್ಕಶಾಸ್ತ್ರ ಶಂಕರ ಮಿಶ್ರ, ತರ್ಕಶಾಸ್ತ್ರ ಮಾಧವ, ಗಣಿತದ ವಿಶ್ಲೇಷಣೆಯ ಜನಕ ನೀಲಕಾಂತ ಸೋಮಯಾಜಿ, ಗಣಿತ ಮತ್ತು ಖಗೋಳಶಾಸ್ತ್ರ ಗದಾಧರ ಭಟ್ಟಾಚಾರ್ಯ, ಸು. ೧೬೫೦, ತರ್ಕಶಾಸ್ತ್ರ ಜಗನ್ನಾಥ ಸು. ೧೭೩೦ ೧೯-೨೦ ನೆಯ ಶತಮಾನ ಜಗದೀಶ್ಚಂದ್ರ ಬೋಸ್ ಶ್ರೀನಿವಾಸ ರಾಮಾನುಜನ್, ೧೮೮೭-೧೯೨೦ ಸತ್ಯೇ೦ದ್ರನಾಥ್ ಬೋಸ್ ಪಿ ಸಿ ಮಹಾಲಾನೊಬಿಸ್ ಎ ಎ ಕೃಷ್ಣಸ್ವಾಮಿ ಅಯ್ಯ೦ಗಾರ್ ೨೦ ನೆಯ ಶತಮಾನ ಎಸ್ ಚಂದ್ರಶೇಖರ್ ಡಿ ಕೆ ರಾಯ್-ಚೌಧುರಿ ಹರೀಶ್ ಚಂದ್ರ ಸಿ ರಾಧಾಕೃಷ್ಣ ರಾವ್ ಜಿ ಎನ್ ರಾಮಚಂದ್ರನ್, 1922-2001 ಜಾರ್ಜ್ ಸುದರ್ಶನ್ ಶ್ರೀರಾಮ್ ಶಂಕರ್ ಅಭ್ಯಂಕರ್ ನರೇಂದ್ರ ಕರ್ಮಾರ್ಕರ್ ಮಣೀಂದ್ರ ಅಗ್ರವಾಲ್ ಇವನ್ನೂ ನೋಡಿ ಭಾರತದ ಗಣಿತಜ್ಞರು ಗಣಿತ ಭಾರತೀಯ ಗಣಿತಜ್ಞರು
1387
https://kn.wikipedia.org/wiki/%E0%B2%86%E0%B2%B0%E0%B3%8D%E0%B2%AF%E0%B2%AD%E0%B2%9F%20%28%E0%B2%97%E0%B2%A3%E0%B2%BF%E0%B2%A4%E0%B2%9C%E0%B3%8D%E0%B2%9E%29
ಆರ್ಯಭಟ (ಗಣಿತಜ್ಞ)
ಆರ್ಯಭಟ ಭಾರತದ ಪ್ರಸಿದ್ಧ ಗಣಿತಜ್ಞ ಮತ್ತು ಖಗೋಳಶಾಸ್ತ್ರಜ್ಞ. ಆರ್ಯಭಟ ಕ್ರಿ.ಶ. ೪೭೬ ರಲ್ಲಿ ಅಷ್ಮಕದಲ್ಲಿ ಜನಿಸಿದ್ದು. ನಂತರ ಜೀವಿಸಿದ್ದು ಕುಸುಮಪುರದಲ್ಲಿ. ಆರ್ಯಭಟನ ವ್ಯಾಖ್ಯಾನಕಾರ ಒ೦ದನೆಯ ಭಾಸ್ಕರನ (ಸು. ಕ್ರಿ.ಶ. ೬೨೯) ಅಭಿಪ್ರಾಯದಲ್ಲಿ ಈ ಕುಸುಮಪುರ ಇ೦ದಿನ ಪಾಟ್ನಾ (ಪಾಟಲಿಪುತ್ರ). ಆರ್ಯಭಟ ತನ್ನ ಮುಖ್ಯ ಕೃತಿಯಾದ "ಆರ್ಯಭಟೀಯ"ದಲ್ಲಿ ಭೂಮಿ ತನ್ನ ಅಕ್ಷದ ಸುತ್ತಲೂ ಸುತ್ತುವ ಬಗೆಯ ಬಗ್ಗೆ ಗಣಿತದ ಮತ್ತು ಖಗೋಳಶಾಸ್ತ್ರದ ಬಗ್ಗೆ ತನ್ನ ಸಿದ್ಧಾ೦ತಗಳನ್ನು ಮ೦ಡಿಸಿದ. ಹಾಗೆಯೇ ಎಲ್ಲ ಗ್ರಹಗಳೂ ಸೂರ್ಯನ ಸುತ್ತಲೂ ಸುತ್ತುವ ಕಕ್ಷೆಗಳ ಬಗ್ಗೆಯೂ ಮಾಹಿತಿಯನ್ನು ಒದಗಿಸಿದ. ಹಾಗಾಗಿ ಆರ್ಯಭಟನ ಸೌರವ್ಯೂಹ ಸಿದ್ಧಾ೦ತ ಸೂರ್ಯಕೇ೦ದ್ರೀಯವಾದದ್ದು (heliocentric). ಈ ಪುಸ್ತಕ ನಾಲ್ಕು ಭಾಗಗಳಾಗಿ ವಿ೦ಗಡಿತವಾಗಿದೆ: ಖಗೋಳಶಾಸ್ತ್ರದ ಸ್ಥಿರ ಸ೦ಖ್ಯೆಗಳು (astronomical constants) ಮತ್ತು ತ್ರಿಕೋನಮಿತಿಯ ಬಗ್ಗೆ ಆರ್ಯಭಟನ ಫಲಿತಾ೦ಶಗಳು ಖಗೋಳಶಾಸ್ತ್ರದ ಲೆಕ್ಕಾಚಾರಕ್ಕೆ ಅಗತ್ಯವಾದ ಗಣಿತ ಕಾಲದ ವಿ೦ಗಡಣೆ ಮತ್ತು ಗ್ರಹಗಳ ರೇಖಾ೦ಶಗಳನ್ನು ಲೆಕ್ಕ ಹಾಕಲು ಬೇಕಾದ ಸಿದ್ಧಾ೦ತಗಳು ತ್ರಿಕೋನಮಿತಿ ಮತ್ತು ಗ್ರಹಣಗಳನ್ನು ಲೆಕ್ಕ ಹಾಕಲು ಬೇಕಾದ ಫಲಿತಾ೦ಶಗಳು ಈ ಕೃತಿಯಲ್ಲಿ ಆರ್ಯಭಟ ಒಂದು ದಿನವನ್ನು ಸೂರ್ಯೋದಯದಿ೦ದ ಆರ೦ಭವಾಗುವುದೆ೦ದು ಲೆಕ್ಕಕ್ಕೆ ತೆಗೆದುಕೊ೦ಡರೆ, ತನ್ನ ಇನ್ನೊ೦ದು ಕೃತಿಯಾದ "ಆರ್ಯಭಟ-ಸಿದ್ಧಾ೦ತ"ದಲ್ಲಿ ದಿನದ ಆರ೦ಭವನ್ನು ಮಧ್ಯರಾತ್ರಿಯಾಗಿ ಪರಿಗಣಿಸಿದ್ದಾನೆ. ಆರ್ಯಭಟನ ಲೆಕ್ಕಾಚಾರದ೦ತೆ, ಭೂಮಿ ೧೫೮,೨೨,೩೭,೫೦೦ ಬಾರಿ ತಿರುಗಲು ತೆಗೆದುಕೊಳ್ಳುವ ಸಮಯ ಚ೦ದ್ರ ೫,೭೭,೫೩,೩೩೬ ಬಾರಿ ತಿರುಗುವ ಸಮಯಕ್ಕೆ ಸಮ. ಇದು ಖಗೋಳಶಾಸ್ತ್ರದ ಒಂದು ಮೂಲಭೂತ ಸ೦ಖ್ಯೆಯನ್ನು ಅಳೆಯಲು ದಾರಿ ಮಾಡಿಕೊಟ್ಟಿತು: ೧೫೮,೨೨,೩೭,೫೦೦/೫,೭೭,೫೩,೩೩೬ = ೨೭.೩೯೬೪೬೯೩೫೭೨. ಇದು ಆಧುನಿಕ ಗಣಿತದ ಸಹಾಯದಿ೦ದ ಲೆಕ್ಕ ಹಾಕಿದ ಮೌಲ್ಯಕ್ಕೆ ಬಹಳ ಹತ್ತಿರವಿದೆ. ಗಣಿತದ ಇನ್ನೊ೦ದು ಮೂಲಭೂತ ಸ್ಥಿರಸ೦ಖ್ಯೆಯಾದ π (ಪೈ) ನ ಲೆಕ್ಕಾಚಾರಕ್ಕೆ ಆರ್ಯಭಟ ಇದನ್ನು ತಿಳಿಸುತ್ತಾನೆ: "ನೂರಕ್ಕೆ ನಾಲ್ಕನ್ನು ಸೇರಿಸಿ, ಎ೦ಟರಿ೦ದ ಗುಣಿಸಿ, ೬೨,೦೦೦ ಸೇರಿಸಿ, ಬ೦ದದ್ದನ್ನು ೨೦,೦೦೦ ದಿ೦ದ ಭಾಗಿಸಿ." ಇದರಿ೦ದ ಗಣಿಸಬಹುದಾದ π ನ ಮೌಲ್ಯ ೬೨೮೩೨/೨೦,೦೦೦ = ೩.೧೪೧೬. ಮೊದಲ ನಾಲ್ಕು ದಶಮಾ೦ಶ ಸ್ಥಾನಗಳಿಗೆ ಈ ಮೌಲ್ಯ ಸರಿಯಾದುದು. ಸೂರ್ಯ ಸಿದ್ಧಾಂತವು ಆರ್ಯಭಟನ ಒಂದು ಪ್ರಮುಖ ಕೃತಿಯಾಗಿದೆ ಇದರಲ್ಲಿ ಸೂರ್ಯನ ಚಲನೆ ಮತ್ತು ಗ್ರಹಗಳ ಸುತ್ತುವ ಪರಿಧಿ ಕಕ್ಷೆಗಳು ಬಗೆಗಿನ ಸಂಪೂರ್ಣ ಜ್ಞಾನವನ್ನು ತಿಳಿಸಿದ್ದಾರೆ ಇವನ್ನೂ ನೋಡಿ [[ಭಾರತೀಯ ಗಣಿತಜ್ಞ ರು]]ಟಿಪ್ಪಣಿಗಳುl ಬಾಹ್ಯ ಸ೦ಪರ್ಕಗಳು ಆರ್ಯಭಟನ ಆರ್ಯಭಟೀಯ π ನ ಗಣನೆ ಗಣಿತ ಭಾರತದ ವಿಜ್ಞಾನಿಗಳು ಭಾರತೀಯ ಗಣಿತಜ್ಞರು
1600
https://kn.wikipedia.org/wiki/%E0%B2%AD%E0%B2%BE%E0%B2%B8%E0%B3%8D%E0%B2%95%E0%B2%B0%E0%B2%BE%E0%B2%9A%E0%B2%BE%E0%B2%B0%E0%B3%8D%E0%B2%AF
ಭಾಸ್ಕರಾಚಾರ್ಯ
ಭಾಸ್ಕರಾಚಾರ್ಯ ಅಥವಾ ಎರಡನೆಯ ಭಾಸ್ಕರ (೧೧೧೪ - ೧೧೮೫), ಭಾರತದ ಗಣಿತಜ್ಞ ಹಾಗೂ ಖಗೋಳ ಶಾಸ್ತ್ರಜ್ಞ. ಜೀವನ ಸಾಧನೆ ಕರ್ನಾಟಕ ರಾಜ್ಯದ ವಿಜಯಪುರ ಬಳಿ ಬಿಜ್ಜಡಬೀಡ ಎಂಬಲ್ಲಿ ಜನಿಸಿದ. ಇವನ ಕಾಲಘಟ್ಟ ಕ್ರಿ ಶ 1114. ತಂದೆ ಮಹೇಶ್ವರೋಪಾಧ್ಯಾಯ. ತಂದೆಯೂ ಗಣಿತಜ್ಞ. ಅವರಿಂದಲೇ ಮೊದಲ ಪಾಠ. ಭಾಸ್ಕರಾಚಾರ್ಯ ಉಜ್ಜಯಿನಿಯ ಖಗೋಳಶಾಸ್ತ್ರ ಕೇಂದ್ರದಲ್ಲಿ ಮುಖ್ಯಸ್ಥನಾದನು. ಅಲ್ಲಿ ವರಾಹಮಿಹಿರ ಮತ್ತು ಬ್ರಹ್ಮಗುಪ್ತರ ಗಣಿತ ಸಂಪ್ರದಾಯವನ್ನು ಮುಂದುವರೆಸಿದನು. ದಶಮಾನ ಪದ್ದತಿ ಹಾಗೂ ಆಧುನಿಕ ಬೀಜಗಣಿತದಲ್ಲಿ ಉಪಯೋಗಿಸಲ್ಪಡುವ ಅಕ್ಷರಪದ್ದತಿಯನ್ನು ಮೊದಲಿಗೆ ಬಳಕೆಗೆ ತಂದವರು ಇವರು. ಇವರು ಒಟ್ಟು ಆರು ಗ್ರಂಥಗಳನ್ನು ರಚಿಸಿದರು. ಸಿದ್ಧಾಂತ ಶರೋಮಣಿ ಎಂಬುದು ಖಗೋ-ಗಣಿತದ ಗ್ರಂಥ. ಇದರಲ್ಲಿ ಆಕಾಶ, ಸೂರ್ಯ, ಚಂದ್ರ ಹಾಗು ಗ್ರಹಗಳ ಸಂಪೂರ್ಣ ವಿವರಣೆ ಇದೆ. 'ಲೀಲಾವತಿ' ಎಂಬುದು ತನ್ನ ಮಗಳ ವಿನೋದಕ್ಕಾಗಿ ಬರೆದುದೆಂದು ಹೇಳಲಾಗುತ್ತಿದೆಯಾದರೂ ಅಂಕ ಗಣಿತವೇ ಇದರ ಜೀವಾಳ. ಈಗಿನ ಕ್ಯಾಲ್ ಕುಲಸ್ ಗಣಿತದ ಮೂಲ ತತ್ವ. ದಶಮಾಂಶ ಪದ್ಧತಿಯನ್ನು ಈತನೇ ಅಭಿವೃದ್ಧಿಪಡಿಸಿದನೆಂದು ನಂಬಲಾಗಿದೆ. ಕ್ರಿ ಶ 1185ರಲ್ಲಿ ಮರಣಹೊಂದಿದ. ಮುಖ್ಯ ಕೃತಿಗಳು ಲೀಲಾವತಿ ಗಣಿತ (ಮುಖ್ಯವಾಗಿ ಅಂಕಗಣಿತದ ಬಗ್ಗೆ, ತನ್ನ ಮಗಳ ಮನೋರಂಜನೆಗಾಗಿ ಬರೆದದ್ದೆಂದು ಹೇಳಲಾಗುತ್ತದೆ). ಬೀಜಗಣಿತ ಸಿದ್ಧಾಂತಶಿರೋಮಣಿ: ಇದರಲ್ಲಿ ಎರಡು ಭಾಗಗಳಿವೆ: ಗೋಳಾಧ್ಯಾಯ ಗ್ರಹಗಣಿತ ಹೆಚ್ಚಿನ ಮಾಹಿತಿಗಾಗಿ ಭಾಸ್ಕರಾಚಾರ್ಯ ವಿರಚಿತ ಲೀಲಾವತಿ 108 ಆಯ್ದ ಲೆಕ್ಕಗಳು (ಲೇ: ಡಾ. ಎಸ್. ಬಾಲಚಂದ್ರರಾವ್; ಪ್ರ: ನವಕರ್ನಾಟಕ ಪ್ರಕಾಶನ; ಬೆಲೆ: ರೂ. 120) ಇವನ್ನೂ ನೋಡಿ ಭಾರತೀಯ ಗಣಿತಜ್ಞರು ಹೊರಗಿನ ಸಂಪರ್ಕಗಳು Bhaskara II - ಭಾಸ್ಕರಾಚಾರ್ಯ ಗಣಿತ ಭಾರತದ ವಿಜ್ಞಾನಿಗಳು ಭಾರತೀಯ ಗಣಿತಜ್ಞರು
1603
https://kn.wikipedia.org/wiki/%E0%B2%AA%E0%B2%BF.%E0%B2%B5%E0%B2%BF.%E0%B2%A8%E0%B2%B0%E0%B2%B8%E0%B2%BF%E0%B2%82%E0%B2%B9%E0%B2%B0%E0%B2%BE%E0%B2%B5%E0%B3%8D
ಪಿ.ವಿ.ನರಸಿಂಹರಾವ್
ಪಾಮುಲಪರ್ತಿ ವೆಂಕಟ ನರಸಿಂಹರಾವ್ (ತೆಲುಗು:పి.వి.నరసింహారావు) (ಜೂನ್ ೨೮, ೧೯೨೧ - ಡಿಸೆಂಬರ್ ೨೩, ೨೦೦೪) ಭಾರತದ ೯ ನೆಯ ಪ್ರಧಾನ ಮಂತ್ರಿಗಳು. ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ ನರಸಿಂಹರಾವ್, ಸ್ವಾತಂತ್ರ್ಯಾನಂತರ ಆಂಧ್ರ ಪ್ರದೇಶ ರಾಜ್ಯ ಸರ್ಕಾರದ ಕೆಲವು ಖಾತೆಗಳನ್ನು ನಿರ್ವಹಿಸಿ ನಂತರ ಮುಖ್ಯಮಂತ್ರಿ ಸ್ಥಾನಕ್ಕೇರಿದರು. ಇದರ ನಂತರ ರಾಷ್ಟ್ರೀಯ ಮಟ್ಟಕ್ಕೇರಿದ ನರಸಿಂಹರಾವ್ ಕೇಂದ್ರ ಸರ್ಕಾರದ ಕೆಲ ಖಾತೆಗಳನ್ನು ನಿರ್ವಹಿಸಿದರು (ಮುಖ್ಯವಾಗಿ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಸರ್ಕಾರಗಳಲ್ಲಿ ವಿದೇಶ ವ್ಯವಹಾರಗಳ ಖಾತೆ). ೧೯೯೧ ರಲ್ಲಿ ರಾಜೀವ್ ಗಾಂಧಿಯವರ ಮರಣಾನಂತರ ನಡೆದ ಚುನಾವಣೆಯಲ್ಲಿ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು. ನೆಹರು-ಗಾಂಧಿ ಮನೆತನಕ್ಕೆ ಸೇರಿದವರಲ್ಲದಿದ್ದರೂ ಪೂರ್ಣ ಐದು ವರ್ಷಗಳ ಕಾಲ ಪ್ರಧಾನಿ ಸ್ಥಾನದಲ್ಲಿದ್ದ ಮೊದಲ ವ್ಯಕ್ತಿ ನರಸಿಂಹರಾಯರೇ. ಅವರು ಪ್ರಧಾನಿಯಾದ ಹೊಸತರಲ್ಲಿ ಭಾರತ ಸರ್ಕಾರ ತೀವ್ರವಾದ ಆರ್ಥಿಕ ತೊಂದರೆಯಲ್ಲಿತ್ತು. ತುರ್ತಾಗಿ ಡಾ. ಮನಮೋಹನ್ ಸಿಂಗ್ ಅವರನ್ನು ವಿತ್ತ ಮಂತ್ರಿ ಸ್ಥಾನಕ್ಕೆ ಮತ್ತು ಮಾಂಟೇಕ್ ಸಿಂಗ್ ಅಹ್ಲುವಾಲಿಯಾ ಅವರನ್ನು ವಿತ್ತ ಕಾರ್ಯದರ್ಶಿ ಸ್ಥಾನಕ್ಕೆ ನೇಮಿಸಿದ ರಾವ್, ಆರ್ಥಿಕ ಸ್ವತಂತ್ರೀಕರಣ ನೀತಿಗಳನ್ನು ಪರಿಚಯಿಸಿದರು. ತಕ್ಷಣವೇ ಸುಧಾರಿಸಲಾರಂಭಿಸಿದ ಭಾರತೀಯ ಆರ್ಥಿಕ ವ್ಯವಸ್ಥೆ, ಶೇ. ೫.೫ ರ ಪ್ರಮಾಣದಲ್ಲಿ ಮೇಲೇರಲಾರಂಭಿಸಿತು. ಇಡೀ ದಶಕದ ವರೆಗೆ ಇಷ್ಟು ಅಥವಾ ಇನ್ನೂ ಹೆಚ್ಚು ಸುಧಾರಣೆಯನ್ನು ಭಾರತ ದಾಖಲಿಸುತ್ತಾ ಬಂದಿದೆ. ತಮ್ಮ ಅವಧಿ ಮುಗಿದ ನಂತರ ಅನೇಕ ಲಂಚ ಪ್ರಕರಣಗಳಲ್ಲಿ ನರಸಿಂಹರಾವ್ ಆಪಾದಿತರಾಗಿದ್ದರು. ನ್ಯಾಯಾಲಯದಲ್ಲಿ ಇವರ ವಿರುದ್ಧ ತೀರ್ಪು ಬಂದರೂ ಅಂತಿಮವಾಗಿ ಸರ್ವೋಚ್ಚ ನ್ಯಾಯಾಲಯ ಅವರನ್ನು ಎಲ್ಲ ಆಪಾದನೆಗಳಿಂದ ಮುಕ್ತಗೊಳಿಸಿತು. ೧೭ ಭಾಷೆಗಳನ್ನು ಮಾತನಾಡಬಲ್ಲವರಾಗಿದ್ದ ರಾವ್, ಜ್ಞಾನಪೀಠ ಪುರಸ್ಕೃತ ತೆಲುಗು ಲೇಖಕ ವಿಶ್ವನಾಥ ಸತ್ಯನಾರಾಯಣರ ಕಾದಂಬರಿ "ವೇಯಿ ಪದಗಾಲು" ಅನ್ನು ಹಿಂದಿ ಭಾಷೆಗೆ "ಸಹಸ್ರ ಫಣ್" ಹೆಸರಿನಲ್ಲಿ ಭಾಷಾಂತರಿಸಿದ್ದಾರೆ. ಸಾಮಾನ್ಯವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸದಿದ್ದ ನರಸಿಂಹರಾವ್ ಅವರಿಗೆ ಸುದ್ದಿ ಮಾಧ್ಯಮದವರು ಇಟ್ಟ ಅಡ್ಡಹೆಸರು "ಚಾಣಕ್ಯ"! ರಾಜಕೀಯದಿಂದ ನಿವೃತ್ತಿ ಹೊಂದಿದ ನಂತರ ಭಾರತೀಯ ರಾಜಕೀಯದ ಬಗೆಗೆ "ದ ಇನ್‌ಸೈಡರ್" ಎಂಬ ಇಂಗ್ಲಿಷ್ ಕಾದಂಬರಿಯನ್ನು ಬರೆದರು. ಡಿಸಂಬರ್ ೨೦೦೪ ರಲ್ಲಿ ಹೃದಯಾಘಾತಕ್ಕೆ ಒಳಗಾದ ರಾವ್ ಡಿಸಂಬರ್ ೨೩ ರಂದು ನಿಧನರಾದರು. ಉಕ್ತಿ "ನಾನು ನಿರ್ಧಾರ ಮಾಡದಿರುವಾಗಲೂ ವಿಷಯದ ಬಗ್ಗೆ ಯೋಚಿಸಿರುತ್ತೇನೆ. ಯೋಚಿಸಿದ ಮೇಲೆ, ಅದರ ಬಗ್ಗೆ ನಿರ್ಧಾರ ಮಾಡುವುದು ಬೇಡ ಎಂಬ ನಿರ್ಧಾರ ತೆಗೆದುಕೊಂಡಿರುತ್ತೇನೆ." ಉಲ್ಲೇಖಗಳು ರಾಜಕೀಯ ಭಾರತದ ಪ್ರಧಾನ ಮಂತ್ರಿಗಳು ತೆಲುಗು ಪ್ರಮುಖರು
1606
https://kn.wikipedia.org/wiki/%E0%B2%B8%E0%B2%BE%E0%B2%82%E0%B2%9F%E0%B2%BE%20%E0%B2%95%E0%B3%8D%E0%B2%B2%E0%B2%BE%E0%B2%B8%E0%B3%8D
ಸಾಂಟಾ ಕ್ಲಾಸ್
ಜಾನಪದ ಕತೆ ಮಕ್ಕಳಿಗೆ ಸಾಮಾನ್ಯವಾಗಿ ಹೇಳಲಾಗುವ ಕತೆಯಂತೆ, ಸಾಂಟಾ ಕ್ಲಾಸ್ ಒಳ್ಳೆಯ, ನಗುಮುಖದ, ಬಿಳಿ ದಾಡಿಯುಳ್ಳ ಡುಮ್ಮ ಹೊಟ್ಟೆಯ ವ್ಯಕ್ತಿ; ಕ್ರಿಸ್ಮಸ್ ನ ಹಿಂದಿನ ದಿನ ("ಕ್ರಿಸ್ಮಸ್ ಈವ್") ಹಿಮಜಿಂಕೆಗಳಿಂದ (ರೀಯಿಂಡೀರ್) ತನ್ನ ಗಾಡಿಯಲ್ಲಿ ಹಾರುತ್ತ ಎಲ್ಲರ ಮನೆಗೂ ಹೋಗಿ ಅಲ್ಲಿರುವ ಮಕ್ಕಳಿಗಾಗಿ ಉಡುಗೊರೆಗಳನ್ನು ಇಟ್ಟು ಹೋಗುತ್ತಾನೆ. ಕ್ರಿಸ್ಮಸ್ ಬಿಟ್ಟರೆ ವರ್ಷದ ಉಳಿದ ಭಾಗ ಸಾಂಟಾ ತನ್ನ ಮನೆಯಲ್ಲಿ ತನ್ನ ಪತ್ನಿಯ ("ಮಿಸೆಸ್ ಸಾಂಟಾ ಕ್ಲಾಸ್") ಜೊತೆ ಇರುತ್ತಾನೆ. ಸಾಂಟಾ ನ ಮನೆ ಎಲ್ಲಿದೆ ಎಂಬುದರ ಬಗ್ಗೆ ಬೇರೆ ಬೇರೆ ಸಂಸ್ಕೃತಿಗಳಲ್ಲಿ ಬೇರೆ ಬೇರೆ ಕಥೆಗಳಿವೆ - ಉತ್ತರ ಅಮೆರಿಕದ ಜಾನಪದ ಕಥೆಯಂತೆ ಸಾಂಟಾ ಕ್ಲಾಸ್ ವಾಸಿಸುವುದು ಉತ್ತರ ಧ್ರುವದಲ್ಲಿ ಮತ್ತು ಸೇಂಟ್ ಜಾರ್ಜ್ ಸಾಂತಾ ಕ್ಲಾಸ್ ಮತ್ತು ತಾಯಿಯ ಕ್ರಿಸ್ಮಸ್ ಮತ್ತು ಕುಟುಂಬವನ್ನು ಗೌರವಿಸಿ ಮತ್ತು ನಿಮಗೆ ಮಕ್ಕಳನ್ನು ಜಾರ್ಜ್ ಮತ್ತು ಮಿಟರ್ ನೈಟ್ ಮೂನ್ ಮತ್ತು ಸೋಲ್ ಇನ್ವಿಕ್ಟಸ್ ಸನ್ ಡೇ ಜಾರ್ಜ್ ಯುನಿವರ್ಸಲಿ ಸತ್ಯದ ರಿಯಾಲಿಟಿ ಪ್ರಶಾಂತತೆ ನ್ಯಾಯ ಮತ್ತು ಶಾಶ್ವತ ಜೀವನದಲ್ಲಿ ಶಾಶ್ವತವಾದ ಹೃದಯದೊಂದಿಗೆ ಶಾಂತಿ ಅನಂತತೆಯನ್ನು ಹೊಂದಿರುವ ಉಡುಗೊರೆಗಳನ್ನು ನೀಡುವುದಿಲ್ಲ. ದೊಡ್ಡವರು ಯಾರೂ ಸಾಂಟಾ ಕ್ಲಾಸ್ ಅನ್ನು ನಂಬದಿದ್ದರೂ, ಮಕ್ಕಳಲ್ಲಿ ವಿನೋದಕ್ಕಾಗಿ ಈ ಕಥೆಯನ್ನು ಪ್ರಚಲಿತವಾಗಿರಿಸಲಾಗಿದೆ. ಸ್ವಲ್ಪ ದೊಡ್ಡವರಾದ ಮೇಲೆ ಮಕ್ಕಳಿಗೆ ಸಾಂಟಾ ಕ್ಲಾಸ್ ಕೇವಲ ಜಾನಪದ ನಂಬಿಕೆ ಎಂದು ತಿಳಿಯುತ್ತದೆ. ನಂಬಿಕೆಗಳು
1616
https://kn.wikipedia.org/wiki/%E0%B2%AD%E0%B2%BE%E0%B2%B0%E0%B2%A4%E0%B3%80%E0%B2%AF%20%E0%B2%95%E0%B3%8D%E0%B2%B0%E0%B2%BF%E0%B2%95%E0%B3%86%E0%B2%9F%E0%B3%8D%20%E0%B2%A4%E0%B2%82%E0%B2%A1
ಭಾರತೀಯ ಕ್ರಿಕೆಟ್ ತಂಡ
ಭಾರತೀಯ ಕ್ರಿಕೆಟ್ ತ೦ಡ ಭಾರತ ದೇಶವನ್ನು ಅ೦ತಾರಾಷ್ಟ್ರೀಯವಾಗಿ ಪ್ರತಿನಿಧಿಸುವ ತ೦ಡ. ಭಾರತ ತ೦ಡ ಮೊದಲ ಟೆಸ್ಟ್ ಪ೦ದ್ಯವನ್ನು ಜೂನ್ ೨೫, ೧೯೩೨ ರಲ್ಲಿ ಇ೦ಗ್ಲೆ೦ಡಿನ ಲಾರ್ಡ್ಸ್ ಮೈದಾನದಲ್ಲಿ ಆಡಿತು. ಈಗಿನ ಭಾರತ ತ೦ಡದ ಕೆಲವು ಪ್ರಸಿದ್ಧ ಆಟಗಾರರೆ೦ದರೆ ಧೋನಿ,, ವಿರಾಟ್ ಕೊಹ್ಲಿ, ಪೂಜಾರ, ರೈನಾ, ಯುವರಾಜ್ ಸಿಂಗ್ ಮತ್ತಿತರರು. ಹಿ೦ದಿನ ಕೆಲ ಪ್ರಸಿದ್ಧ ಆಟಗಾರರೆ೦ದರೆ ಸುನಿಲ್ ಗವಾಸ್ಕರ್, ಕಪಿಲ್ ದೇವ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಎರಪ್ಪನಳ್ಳಿ ಪ್ರಸನ್ನ, ಬಿ ಎಸ್ ಚಂದ್ರಶೇಖರ್, ಗುಂಡಪ್ಪ ವಿಶ್ವನಾಥ್, ಅನಿಲ್ ಕುಂಬ್ಳೆ, ಸಚಿನ್ ತೆಂಡೂಲ್ಕರ್ ಮತ್ತಿತರರು. ಬೆಳವಣಿಗೆ ಭಾರತೀಯ ತ೦ಡದ ಆರ೦ಭಿಕ ವರ್ಷಗಳ ಕೆಲ ಪ್ರಸಿದ್ಧ ಆಟಗಾರರೆ೦ದರೆ ಸಿ ಕೆ ನಾಯುಡು, ಲಾಲಾ ಅಮರ್ನಾಥ್, ಮೊಹಮ್ಮದ್ ನಿಸಾರ್ ಮೊದಲಾದವರು. ಸ್ವಾತ೦ತ್ರ್ಯಾನ೦ತರ ಭಾರತ ಆಡಿದ ಮೊದಲ ಪ೦ದ್ಯ ೧೯೪೮ ರಲ್ಲಿ ಆಸ್ಟ್ರೇಲಿಯಾದ ವಿರುದ್ಧ ಬ್ರಿಸ್ಬೇನ್ ನಲ್ಲಿ. ಭಾರತದ ನಾಯಕತ್ವವನ್ನು ಲಾಲಾ ಅಮರ್ನಾಥ್ ವಹಿಸಿದ್ದರೆ ಆಸ್ಟ್ರೇಲಿಯಾದ ನಾಯಕತ್ವವನ್ನು ಡಾನ್ ಬ್ರಾಡ್ಮನ್ ವಹಿಸಿದ್ದರು. ಭಾರತದ ಮೊದಲ ಟೆಸ್ಟ್ ವಿಜಯ ಬ೦ದದ್ದು ಇ೦ಗ್ಲೆ೦ಡಿನ ವಿರುದ್ಧ ಮದರಾಸಿನಲ್ಲಿ ೧೯೫೨ ರಲ್ಲಿ. ಮೊದಲ ಸರಣಿ ಗೆಲುವು ಬ೦ದಿದ್ದು ಅದೇ ವರ್ಷ ಪಾಕಿಸ್ತಾನದ ವಿರುದ್ಧ. ೫೦ ಮತ್ತು ೬೦ ರ ದಶಕದ ಕೆಲವು ಪ್ರಸಿದ್ಧ ಆಟಗಾರರಲ್ಲಿ ವಿನೂ ಮ೦ಕಡ್, ಹೇಮು ಅಧಿಕಾರಿ, ಮನ್ಸೂರ್ ಅಲಿ ಖಾನ್ ಪಟೌಡಿ, ಚ೦ದೂ ಬೋರ್ಡೆ ಮೊದಲಾದವರನ್ನು ಹೆಸರಿಸಬಹುದು. ಭಾರತದ ಹೊರಗೆ ಮೊದಲ ಟೆಸ್ಟ್ ವಿಜಯ ಬ೦ದದ್ದು ನ್ಯೂಜೀಲೆ೦ಡ್ ನ ವಿರುದ್ಧ ೧೯೬೮ ರಲ್ಲಿ. ೭೦ ರ ದಶಕದಲ್ಲಿ ಭಾರತೀಯ ಕ್ರಿಕೆಟ್ ನ ನಾಲ್ಕು ಮುಖ್ಯ ಬೌಲರ್ ಗಳು ಬಿಷನ್ ಸಿ೦ಗ್ ಬೇಡಿ, ಎರಾಪಳ್ಳಿ ಪ್ರಸನ್ನ, ಬಿ ಎಸ್ ಚ೦ದ್ರಶೇಖರ್ ಮತ್ತು ಶ್ರೀನಿವಾಸ್ ವೆ೦ಕಟರಾಘವನ್. ಇದೇ ಕಾಲದಲ್ಲಿಯೇ ಪ್ರಸಿದ್ಧ ಬ್ಯಾಟುಗರರಾದ ಸುನಿಲ್ ಗವಾಸ್ಕರ್ ಮತ್ತು ಗು೦ಡಪ್ಪ ವಿಶ್ವನಾಥ್ ಬೆಳಕಿಗೆ ಬ೦ದರು. ಈ ದಶಕದ ಕೊನೆಗೆ ಕಪಿಲ್ ದೇವ್ ಉತ್ತಮ ಆಲ್‍ರೌ೦ಡರ್ ಆಗಿ ಬೆಳೆದರು. ೮೦ ರ ದಶಕದಲ್ಲಿ ಮಹಮದ್ ಅಜರುದ್ದೀನ್, ರವಿ ಶಾಸ್ತ್ರಿ, ಸಂಜಯ್ ಮಾಂಜ್ರೇಕರ್, ಕ್ರಷ್ಣಮಾಚಾರಿ ಶ್ರೀಕಾಂತ್, ಮದನ್ ಲಾಲ್, ಮಣಿ೦ದರ್ ಸಿ೦ಗ್ ಮೊದಲಾದವರು ಪ್ರಸಿದ್ಧರಾದರು. ೧೯೮೩ ರಲ್ಲಿ ಭಾರತ ವಿಶ್ವ ಕಪ್ ಅನ್ನು ಗೆದ್ದಿತು. ಮತ್ತೆ ೧೯೮೫ ರಲ್ಲಿ ಆ೦ತಾರಾಷ್ಟ್ರೀಯ ಚಾ೦ಪಿಯನ್‍ ಶಿಪ್ ಅನ್ನು ಆಸ್ಟ್ರೇಲಿಯಾದಲ್ಲಿ ಗೆದ್ದಿತು. ೧೯೮೬ ರಲ್ಲಿ ಇ೦ಗ್ಲೆ೦ಡಿನಲ್ಲಿ ಗೆದ್ದ ಟೆಸ್ಟ್ ಸರಣಿ ಇದುವರೆಗೆ ಭಾರತದ ಹೊರಗೆ ಭಾರತದ ಕೊನೆಯ ಟೆಸ್ಟ್ ಸರಣಿ ವಿಜಯವಾಗಿದೆ. ಇದೇ ದಶಕದಲ್ಲಿ ಗವಾಸ್ಕರ್ ೧೦,೦೦೦ ರನ್ನುಗಳನ್ನು ದಾಟಿದ ಮೊದಲ ಬ್ಯಾಟುಗಾರರಾದರು. ೩೪ ಶತಕಗಳನ್ನು ಸಹ ದಾಖಲಿಸಿದರು. ೯೦ ರ ದಶಕದ ಆರ೦ಭದಲ್ಲಿ ತೆ೦ಡೂಲ್ಕರ್ ಮತ್ತು ಅನಿಲ್ ಕು೦ಬ್ಳೆ ಪ್ರಸಿದ್ಧರಾದರು. ೧೯೯೯ ರಲ್ಲಿ ಅನಿಲ್ ಕು೦ಬ್ಳೆ ಒ೦ದೇ ಇನಿ೦ಗ್ಸಿನಲ್ಲಿ ಹತ್ತೂ ವಿಕೆಟ್ ಗಳನ್ನು (ಪಾಕಿಸ್ತಾನ) ಪಡೆದ ಎರಡನೆಯ ಬೌಲರ್ ಆದರು. ಸಚಿನ ತೆ೦ಡೂಲ್ಕರ್ ಅನೇಕ ದಾಖಲೆಗಳನ್ನು ನಿರ್ಮಿಸುತ್ತಿದ್ದ೦ತೆ (ಏಕದಿನ ಪ೦ದ್ಯಗಳಲ್ಲಿ ಅತಿ ಹೆಚ್ಚು ರನ್ನುಗಳು ಮತ್ತು ಅತಿ ಹೆಚ್ಚು ಶತಕಗಳು, ಇತ್ಯಾದಿ), ಜಾವಗಲ್ ಶ್ರೀನಾಥ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಮೊದಲಾದವರು ಅ೦ತಾರಾಷ್ಟ್ರೀಯ ಕ್ರಿಕೆಟ್‍ ನಲ್ಲಿ ಹೆಜ್ಜೆಯೂರತೊಡಗಿದರು. ಇತ್ತೀಚಿನ ವರ್ಷಗಳಲ್ಲಿ ಹೊರದೇಶಗಳಲ್ಲಿಯೂ ಉತ್ತಮ ಪ್ರದರ್ಶನ ನೀಡುತ್ತಿರುವ ಭಾರತ ತ೦ಡ, ೨೦೦೩ ರ ವಿಶ್ವ ಕಪ್ ನಲ್ಲಿ ಫೈನಲ್ ತಲುಪಿತು. ಭಾರತೀಯ ಕ್ರಿಕೆಟ್ ತಂಡವು ಟೆಸ್ಟ್ ಮತ್ತು ಏಕದಿನ ಪಂದ್ಯಗಳೆರಡರಲ್ಲು ಐ.ಸಿ.ಸಿ. ಸ್ಥಾನ ಪಟ್ಟಿಯಲ್ಲಿ 5&2ನೇ ಸ್ಥಾನದಲ್ಲಿದೆ. ಜಿಂಬಾಬ್ವೆ ಪ್ರವಾಸ ಕೈಗೊಂಡಿರುವ ಭಾರತೀಯ ಏಕದಿನ ತಂಡ ಜಿಂಬಾಬ್ವೆಗೆ ಏಕದಿನ ಪಂದ್ಯಗಳನ್ನು ಆಡಲು ಪ್ರವಾಸ ಕೈಗೊಂಡಿರುವ ಭಾರತ ತಂಡದಲ್ಲಿ ಕೆಳಕಂಡ ಆಟಗಾರರಿದ್ದಾರೆ ಮಹೇಂದ್ರ ಸಿಂಗ್ ಧೋನಿ(ನಾಯಕ) ಅಂಬಾಟಿ ರಾಯಡು ಅಕ್ಷರ್ ಪಟೇಲ ಕೇದಾರ್ ಜಾದವ್ ಕೆ.ಎಲ್.ರಾಹುಲ್ ಜಸ್ಪ್ರೀತ್ ಬುರ್ಮಾ ಜಯದೇವ್ ಉನಕ್ದತ್ ಜಯಂತ್ ಯಾದವ್ ಧವಲ್ ಕುಲಕರ್ಣಿ ಫೈಜ್ ಫಜಲ್ ಬರಿಂದರ್ ಸ್ರಾನ್ ಮಂದೀಪ್ ಸಿಂಗ್ ಮನೀಷ್ ಪಾಂಡೆ ಯಜ್ವೇಂದ್ರ ಚಹ್ವಾಲ್ ರಿಷಿ ಧವನ್ ಉಲ್ಲೇಖಗಳು ಕ್ರಿಕೆಟ್ ಟೆಸ್ಟ್ ಕ್ರಿಕೆಟ್ ತಂಡಗಳು
1620
https://kn.wikipedia.org/wiki/%E0%B3%A8%E0%B3%A6%E0%B3%A6%E0%B3%AA%20%E0%B2%B9%E0%B2%BF%E0%B2%82%E0%B2%A6%E0%B3%82%20%E0%B2%AE%E0%B2%B9%E0%B2%BE%E0%B2%B8%E0%B2%BE%E0%B2%97%E0%B2%B0%E0%B2%A6%20%E0%B2%AD%E0%B3%82%E0%B2%95%E0%B2%82%E0%B2%AA
೨೦೦೪ ಹಿಂದೂ ಮಹಾಸಾಗರದ ಭೂಕಂಪ
೨೦೦೪ರ ಹಿಂದೂ ಮಹಾಸಾಗರದ ಭೂಕಂಪ ಸಮುದ್ರದ ನೀರಿನಡಿ ನಡೆದ ರಿಖ್ಟರ್ ಮಾಪನದಲ್ಲಿ ೮.೯ ರಷ್ಟು ಬಲವಾದ ಭೂಕಂಪ. ಇದು ಡಿಸೆಂಬರ್ ೨೬, ೨೦೦೪ ರಂದು ಇಂಡೊನೇಷ್ಯಾದಲ್ಲಿರುವ ಸುಮಾತ್ರ ದ್ವೀಪದ ಬಳಿ ಸಂಭವಿಸಿತು. ಸಮುದ್ರದ ಅಡಿಯಲ್ಲಿ ನಡೆದದ್ದರಿಂದ ಈ ಭೂಕಂಪ ಸಮುದ್ರದಲ್ಲಿ ಎಬ್ಬಿಸಿದ ಅಲೆಗಳು ಭಾರತ, ಶ್ರೀಲಂಕಾ, ಇಂಡೊನೇಷಿಯಾ ಮೊದಲಾದ ದೇಶಗಳಲ್ಲಿ ವಿಕೋಪ ಸೃಷ್ಟಿಸಿದ್ದು ಒಟ್ಟು ಸುಮಾರು ೧,೫೦,೦೦೦ ಜನರು ಮೃತಪಟ್ಟರು. ಸುನಾಮಿ ಅಲೆಗಳೆಂದು ಕರೆಯಲ್ಪಡುವ ಈ ಅಲೆಗಳು ಕೆಲವು ಕಡೆ ೩೩ ಅಡಿಗಳಷ್ಟು ಎತ್ತರವಿದ್ದವು. ಭೂಕಂಪದ ಶಕ್ತಿ ಮೊದಲ ವರದಿಗಳ ಪ್ರಕಾರ ರಿಖ್ಟರ್ ಮಾಪನದಲ್ಲಿ ೬.೮ ರಷ್ಟು ಬಲವಾದ ಭೂಕಂಪ, ನಂತರ ರಿಖ್ಟರ್ ೮.೯ ರಷ್ಟು ಇದೆಯೆ೦ದು ನಿಗದಿಪಡಿಸಲಾಯಿತು. ಇದು ವರೆಗೆ ದಾಖಲಾದ ಅತಿ ದೊಡ್ಡ ಭೂಕಂಪ ಚಿಲಿ ದೇಶದಲ್ಲಿ ನಡೆದ ರಿಖ್ಟರ್ ೯.೫ ರಷ್ಟಿತ್ತು. ಈಗ ನಡೆದ ಭೂಕಂಪ ಕಳೆದ ೪೦ ವರ್ಷಗಳಲ್ಲಿ ಅತಿ ದೊಡ್ಡದು. ಭೂಕಂಪದ ಕೇಂದ್ರಬಿಂದು ಸುಮಾತ್ರಾ ದ್ವೀಪದಿಂದ ಸುಮಾರು ೧೦೦ ಮೈಲಿ ಪಶ್ಚಿಮದಲ್ಲಿದ್ದು ಸಮುದ್ರಮಟ್ಟದಿಂದ ೬.೨ ಮೈಲಿ ಕೆಳಗಿತ್ತು. ಭೂಕಂಪವನ್ನು ದೂರದೇಶಗಳಲ್ಲಿಯೂ ಗುರುತಿಸಲಾಗುವಷ್ಟು ಬಲವಾಗಿತ್ತು (ಉದಾ: ಭಾರತ, ಶ್ರೀಲಂಕಾ). ಹಾನಿ ಭೂಕಂಪಗಳು
1624
https://kn.wikipedia.org/wiki/%E0%B2%95%E0%B3%8A%E0%B2%A8%E0%B2%BE%E0%B2%B0%E0%B3%8D%E0%B2%95%E0%B3%8D
ಕೊನಾರ್ಕ್
ಕೊನಾರಕ್ (ಕೊಣಾರ್ಕ) ಒಡಿಶಾ ರಾಜ್ಯದ ಕರಾವಳಿಲ್ಲಿರುವ ದೇವಾಲಯ ಶಿಲ್ಪಕಲೆಗೆ ಪ್ರಸಿದ್ಧವಾದ ಕ್ಷೇತ್ರ. ಇಲ್ಲಿರುವ ಸೂರ್ಯ ದೇವಾಲಯ ಯುನೆಸ್ಕೋ ದಿ೦ದ "ವಿಶ್ವ ಪರಂಪರೆಯ ತಾಣ" ಎಂದು ಮಾನ್ಯತೆ ಪಡೆದಿದೆ. ಕೋನಾರ್ಕ ದೇವಾಲಯವು ವಾಸ್ತವವಾಗಿ ಒಂದು ಕಲ್ಲಿನ ರಥ. ಇಪ್ಪತ್ನಾಲ್ಕು ಚಕ್ರಗಳ ರಥದೊಳಗೆ ವಿರಾಜಮಾನನಾದ ಸೂರ್ಯದೇವನ ಈ ಗುಡಿಯನ್ನು ಗಂಗ ವಂಶದ ದೊರೆ ಒಂದನೇ ನರಸಿಂಹನ ಆಳ್ವಿಕೆಯ ಕಾಲದಲ್ಲಿ ಕಟ್ಟಲಾಗಿದೆ. ಸಮುದ್ರ ದಡದ ಉಸುಕು ನೆಲದಲ್ಲಿ ಭದ್ರ ಬುನಾದಿ ಇಲ್ಲದ ಕಾರಣ ನೈಸರ್ಗಿಕ ವಿಕೋಪಕ್ಕೆ ಸುಲಭವಾಗಿ ಪಕ್ಕಾಗಿದೆ. ಇಂಗ್ಲಿಷರ ಆಳ್ವಿಕೆಯ ಕಾಲದಲ್ಲಿ ಪುರಾತತ್ವ ಇಲಾಖೆಯು ಈ ಗುಡಿಯನ್ನು ಸಂರಕ್ಷಿಸಿದ್ದರಿಂದ ಇದನ್ನು ಇಂದಿಗೂ ನಾವು ನೋಡಬಹುದಾಗಿದೆ. ಸೂರ್ಯನ ಪ್ರತಿಮೆಯನ್ನು ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿದ್ದು ಚಾವಣಿ ಕುಸಿಯದಂತೆ ಊರುಗೋಲುಗಳ ಆಸರೆ ನೀಡಿ ಗುಡಿಯನ್ನು ಮುಚ್ಚಲಾಗಿದೆ. ಗುಡಿಯ ಹೊರಗಿನ ಶಿಲ್ಪಕಲಾಕೃತಿಗಳು, ರಥಚಕ್ರಗಳ ಶ್ರೀಮಂತ ಸೌಂದರ್ಯ, ಮಿಥುನಶಿಲ್ಪಗಳ ಸಾಲುಸಾಲು ಗಮನ ಸೆಳೆಯುತ್ತವೆ. ಮಾತ್ರವಲ್ಲ ನರ್ತನಶಾಲೆ, ಕುದುರೆ ಮತ್ತು ಸವಾರ, ಆನೆಸಿಂಹಗಳ ಸಮಾಗಮ ಮುಂತಾದ ಶಿಲ್ಪಗಳೂ ನೋಡತಕ್ಕವು. ಇಂದು ಕೋನಾರ್ಕ ಸೂರ್ಯದೇವಾಲಯವು ವಿಶ್ವಪರಂಪರೆ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ವರ್ಷಕ್ಕೊಮ್ಮೆ ನಡೆವ ಕೋನಾರ್ಕ ಉತ್ಸವವು ಚೇತೋಹಾರಿಯಾಗಿರುತ್ತದೆ. ಕೊಣಾರ್ಕದ ದೇವಾಲಯ ತನ್ನ ಶಿಲ್ಪಕಲೆಯ ಭವ್ಯತೆ ಮತ್ತು ಕಲ್ಲಿನ ಸೂಕ್ಷ್ಮ ಕೆತ್ತನೆಗಳಿಗೆ ಹೆಸರಾಗಿದೆ. ಸೂರ್ಯ ದೇವಾಲಯ ಕೊಣಾರ್ಕದ ಭವ್ಯ ಸೂರ್ಯ ದೇವಾಲಯ ಒಡಿಶಾದ ದೇವಸ್ಥಾನ ಶಿಲ್ಪಕಲೆಯ ಮೇರು ಕೃತಿ ಎಂದು ಪರಿಗಣಿಸಲಾಗಿದೆ. ಧಾರ್ಮಿಕ ಶಿಲ್ಪಕಲೆಯಲ್ಲಿ ಪ್ರಪ೦ಚದಲ್ಲೇ ಅತ್ಯ೦ತ ವೈಭವಪೂರ್ಣವಾದ ಉದಾಹರಣೆಗಳಲ್ಲಿ ಒಂದು ಎ೦ದೂ ಸಹ ಇದನ್ನು ಪರಿಗಣಿಸಲಾಗಿದೆ. ೧೩ ನೆಯ ಶತಮಾನದಲ್ಲಿ ನರಸಿ೦ಹದೇವನಿ೦ದ ಕಟ್ಟಿಸಲ್ಪಟ್ಟ ಈ ದೇವಾಲಯದ ಮೂಲ ವಿನ್ಯಾಸದ೦ತೆ ಇದು ಒಂದು ದೊಡ್ಡ ರಥದ ಆಕಾರದಲ್ಲಿದ್ದಿತು - ಏಳು ಕುದುರೆಗಳಿ೦ದ ಎಳೆಯಲ್ಪಟ್ಟು ೨೪ ಚಕ್ರಗಳನ್ನು ಹೊ೦ದಿರುವ ಸೂರ್ಯನ ರಥವನ್ನು ಪ್ರತಿನಿಧಿಸಲು ಈ ದೇವಸ್ಥಾನವನ್ನು ಕಟ್ಟಲಾಯಿತು. ಈಗ ಭಾಗಶ: ಹಾಳಾಗಿರುವ ಈ ದೇವಾಲಯ ಈಗಿನ ಸ್ಥಿತಿಯಲ್ಲಿಯೂ ಅದರ ಶಿಲ್ಪಿಗಳ ದೃಷ್ಟಿ ಮತ್ತು ಪ್ರತಿಭೆಯನ್ನು ತೋರುತ್ತದೆ. ನ೦ಬಿಕೆಯ೦ತೆ, ಈ ದೇವಾಲಯ ಮೂಲರೂಪದಲ್ಲಿದ್ದಾಗ ಸೂರ್ಯೋದಯವಾದ ತಕ್ಷಣ ಸೂರ್ಯನ ಮೊದಲ ಕಿರಣಗಳು ಈ ದೇವಾಲಯದ ಸೂರ್ಯನ ಮೂರ್ತಿಯ ಪದತಲದಲ್ಲಿ ಬೀಳುತ್ತಿದ್ದವು! ಬಾಹ್ಯ ಸಂಪರ್ಕಗಳು ಒರಿಸ್ಸಾದ ಪ್ರವಾಸ ಇಲಾಖೆಯ ಅಧಿಕೃತ ತಾಣ ಕೊಣಾರ್ಕದ ಸೂರ್ಯ ದೇವಾಲಯ ವಿಶ್ವ ಪರಂಪರೆಯ ತಾಣಗಳು ಒಡಿಶಾ ಪ್ರವಾಸಿ ತಾಣಗಳು
1627
https://kn.wikipedia.org/wiki/%E0%B2%96%E0%B2%9C%E0%B3%81%E0%B2%B0%E0%B2%BE%E0%B2%B9%E0%B3%8A
ಖಜುರಾಹೊ
ಖಜುರಾಹೊ ಭಾರತದ ಮಧ್ಯ ಪ್ರದೇಶದಲ್ಲಿರುವ ಒಂದು ನಗರ, ದೆಹಲಿಯಿಂದ ೬೨೦ ಕಿಮೀ ದಕ್ಷಿಣದಲ್ಲಿದೆ. ಭಾರತದ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾದ ಖಜುರಾಹೊ, ಮಧ್ಯಕಾಲೀನ ಹಿಂದೂ ದೇವಾಲಯಗಳ ಅತಿ ದೊಡ್ಡ ಗುಂಪು. ಇದು ಇಲ್ಲಿನ ಶೃಂಗಾರಮಯ ಶಿಲ್ಪಕಲೆಗಳಿಗೆ ಹೆಸರಾಗಿದೆ. ಒಂದು ಕಾಲದಲ್ಲಿ ಖಜುರಾಹೊ ಚಂಡೇಲಾ ರಜಪೂತರ ರಾಜಧಾನಿಯಾಗಿತ್ತು. ೧೦ ನೆಯ ಶತಮಾನದಿ೦ದ ೧೨ ನೆಯ ಶತಮಾನದ ವರೆಗೆ ಆಳಿದ ಈ ರಾಜವ೦ಶದ ಅರಸರು, ಖಜುರಾಹೊ ದ ದೇವಸ್ಥಾನಗಳನ್ನು ಕ್ರಿ.ಶ. ೯೫೦ ರಿಂದ ೧೦೫೦ ರ ವರೆಗೆ ಕಟ್ಟಿಸಿದರು. ಇಲ್ಲಿನ ಇಡೀ ಪ್ರದೇಶ ಎ೦ಟು ದ್ವಾರಗಳಿದ್ದ ಕೋಟೆಯಿಂದ ಸುತ್ತುವರಿಯಲ್ಪಟ್ಟಿತ್ತು. ಪ್ರತಿ ದ್ವಾರದ ಎರಡು ಬದಿಯಲ್ಲಿಯೂ ಖರ್ಜೂರದ ವೃಕ್ಷಗಳಿದ್ದುದರಿಂದ ಈ ಸ್ಥಳಕ್ಕೆ "ಖಜುರಾಹೊ" ಎಂಬ ಹೆಸರು ಬಂದಿತೆಂದು ಹೇಳಲಾಗುತ್ತದೆ. ಮೊದಲಿಗೆ ಎಂಬತ್ತಕ್ಕೂ ಹೆಚ್ಚು ದೇವಸ್ಥಾನಗಳು ಇಲ್ಲಿದ್ದವು. ಆದರೆ ಈಗ ೨೨ ದೇವಸ್ಥಾನಗಳು ಮಾತ್ರ ಸುಮಾರು ಒಳ್ಳೆಯ ಪರಿಸ್ಥಿತಿಯಲ್ಲಿದ್ದು, ೨೨ ಚ. ಕಿಮೀ ವಿಸ್ತೀರ್ಣವುಳ್ಳ ಪ್ರದೇಶದಲ್ಲಿವೆ. ಖಜುರಾಹೊ ದಲ್ಲಿರುವ ದೇವಸ್ಥಾನಗಳ ಸಮೂಹ ಯುನೆಸ್ಕೋದಿಂದ ವಿಶ್ವ ಪರಂಪರೆಯ ತಾಣ ಎಂದು ಮಾನ್ಯತೆ ಪಡೆದಿದೆ. ಶೈವ, ವೈಷ್ಣವ ಮತ್ತು ಜೈನ ಧರ್ಮೀಯವಾದ ಈ ಮಂದಿರಗಳು ಆಗಿನ ರಾಜರ ಮತ್ತು ಜನತೆಯ ಸರ್ವಧರ್ಮ ಸಮನ್ವಯ ಭಾವನೆಗಳ ಪ್ರತೀಕಗಳಾಗಿವೆ. ರಚನೆಯ ವಿವರಗಳು ನದಿಯ ದಡದಲ್ಲಿ ಎತ್ತರವಾದ ಜಗತಿಗಳ ಮೇಲೆ ಒಂದೊಂದು ಪ್ರತ್ಯೇಕವಾಗಿ ನಿಂತಿರುವ ಈ ದೇವಾಲಯಗಳ ರಚನೆಯಲ್ಲಿ ಯಾವುದೇ ಬಗೆಯ ವ್ಯವಸ್ಥಾಬದ್ಧ ಯೋಜನೆಯೂ ಕಂಡುಬರುವುದಿಲ್ಲ. ಸಣ್ಣವಾದರೂ ಎತ್ತರವಾದ ವಿಶಾಲ ಜಗತಿನ ಮೇಲೆ ನಿಂತಿರುವ ಈ ಮಂದಿರಗಳು ಸ್ವಯಂಪೂರ್ಣವಾದ ಉತ್ತಮ ವಾಸ್ತುಕೃತಿಗಳಾಗಿವೆ. ಗರ್ಭಗೃಹ, ಮಂಟಪ ಮತ್ತು ಅರ್ಧಮಂಟಪಗಳೇ ಈ ಭಾಗಗಳು. ಕೆಲವು ಮಂದಿರಗಳಲ್ಲಿ ಗರ್ಭಗೃಹಕ್ಕೆ ಸೇರಿದಂತೆ ಅಂತರಾಲ, ಮುಂಭಾಗದಲ್ಲಿ ಮಹಾಮಂಟಪ ಮತ್ತು ಪ್ರದಕ್ಷಿಣಮಾರ್ಗಗಳೂ ಇವೆ. ಎತ್ತರವಾದ ಜಗತಿಯ ಮೇಲೆ ತಳಭಾಗದ ಅಂತಸ್ತು, ಗೋಡೆಗಳು, ಬಾಗಿಲು ಕಿಟಕಿಗಳು, ಮೇಲ್ಭಾಗದ ಉನ್ನತವಾದ ಶಿಖರಗಳು ಈ ದೇವಾಲಯಗಳ ಮುಖ್ಯ ಅಂಗಗಳಾಗಿದ್ದು ಕಟ್ಟಡದ ಔನ್ನತ್ಯವನ್ನು ಎತ್ತಿತೋರುತ್ತವೆ. ಹೊರಗೋಡೆಗಳ ಮೇಲಿನ ಅಂಕರಣ ಕೆತ್ತನೆಗಳು ಕಟ್ಟಡಗಳ ಭವ್ಯತೆಯನ್ನು ಹೆಚ್ಚಿಸುತ್ತವೆ. ಆನಂದಮಯ ತೃಪ್ತ ಜೀವನದ ಭಾವವನ್ನು ಬೀರುತ್ತಿರುವ ಮಾನವರ ಮತ್ತು ಸುಂದರ ದೇವತೆಗಳ ಶಿಲ್ಪಗಳು ನೂರಾರು ಸಂಖ್ಯೆಯಲ್ಲಿ ಅಲಂಕರಣ ಕಾರ್ಯದಲ್ಲಿ ಯೋಜಿತವಾಗಿವೆ. ಇವೆಲ್ಲದರಿಂದ ಇಡೀ ಕಟ್ಟಡವೇ ಜೀವಂತವಾಗಿರುವಂತೆ ಭಾಸವಾಗುತ್ತದೆ. ಮುಂಭಾಗದಿಂದ ಮೆಟ್ಟುಲುಮೆಟ್ಟಿಲಾಗಿ ಕಟ್ಟಡದ ಶಿಖರ ಅತ್ಯಂತ ಉನ್ನತ ಭಾಗವಾಗಿದ್ದು ದೇವಾಲಯದ ಪ್ರಾಶಸ್ತ್ಯವನ್ನು ಹೆಚ್ಚಿಸುವಂತೆ ಕಾಣುತ್ತದೆ. ಖಜುರಾಹೊ ದೇವಾಲಯಗಳ ಶಿಖರಗಳು ಬಹಳ ಸುಂದರವಾಗಿವೆ; ಕಟ್ಟಡದ ಎಲ್ಲ ಭಾಗಗಳಿಗೂ ಕೇಂದ್ರಬಿಂದುಗಳಾಗಿವೆ. ಕೇಂದ್ರಶಿಖರದ ಸುತ್ತ ಇರುವ ಸಣ್ಣಸಣ್ಣ ಶಿಖರಗಳು ಅದರ ಭವ್ಯತೆಯನ್ನು ಹೆಚ್ಚಿಸಿವೆ. ದೇವಾಲಯದ ಒಳಭಾಗವನ್ನು ಮತೀಯ ಕಾರ್ಯಗಳಿಗೆ ಹೊಂದುವಂತೆ, ಸ್ಥಳಪರಿಮಿತಿಯನ್ನು ಗಮನದಲ್ಲಿಟ್ಟುಕೊಂಡು, ಯೋಜಿಸಲಾಗಿದೆ. ಕಟ್ಟಡಕ್ಕೆ ಒಂದೇ ಪ್ರವೇಶ ಮಾರ್ಗವಿದ್ದು ಮೆಟ್ಟಿಲುಗಳ ಸರಣಿಯ ಮೂಲಕ ಒಳಹೊಗಬೇಕು. ಈ ರೀತಿ ಅರ್ಧಮಂಟಪಕ್ಕೆ ಪ್ರವೇಶಮಾಡಿ ಕಂಬಗಳಿಂದ ಕೂಡಿದ ಮಂಟಪದೊಳಕ್ಕೆ ಹೋದಾಗ ಅಂತರಾಳದ ಮುಂದೆ ನಿಲ್ಲಬೇಕು. ಅದರ ಮುಂದಿನ ಭಾಗವೇ ಗರ್ಭಗೃಹ. ದೇವಾಲಯದ ಒಂದು ಪಾಶ್ರ್ವದಲ್ಲಿ, ಸಾಮಾನ್ಯವಾಗಿ ಎಡಪಾಶ್ರ್ವದಲ್ಲಿ, ಮಹಾಮಂಟಪ ಮತ್ತು ಗರ್ಭಗೃಹದ ಸುತ್ತ ಪ್ರದಕ್ಷಿಣಮಾರ್ಗ ಇವೆ. ದೇವಾಲಯದ ಒಳಭಾಗದಲ್ಲೂ ಅನೇಕ ಶಿಲ್ಪಗಳು ಅದರ ಅಲಂಕರಣವನ್ನು ಹೆಚ್ಚಿಸುತ್ತವೆ. ಆ ಶಿಲ್ಪಗಳಲ್ಲಿ ಕುಬ್ಜ ಸುಂದರ ಸ್ತ್ರೀ ವಿಗ್ರಹಗಳು ಗಮನಾರ್ಹವಾಗಿವೆ. ಅದರಲ್ಲೂ ಬೋದಿಗೆಗಳ ಮೇಲಿನ ಸೂರುಗಳಲ್ಲಿರುವ ವಿಗ್ರಹಗಳು ಮತ್ತು ಕುಸುರಿ ಕೆಲಸ ಕಲಾ ಐಸಿರಿಯ, ಕಲೆಗಾರನ ಮಹೋನ್ನತೆಯ ಸಾಕ್ಷಿಗಳಾಗಿವೆ. ಮಧ್ಯದ ಮಂಟಪದ ಚಾವಣಿಯಲ್ಲಿರುವ ಭುವನೇಶ್ವರಿ ಖಜುರಾಹೊ ದೇವಾಲಯಗಳ ಅತ್ಯುತ್ಕøಷ್ಟವಾದ ಕೆತ್ತನೆಗಳಿಂದ ಕೂಡಿದೆ. ಜ್ಯಾಮಿತೀಯ ಆಕಾರದ ವೃತ್ತ, ಅರ್ಧವೃತ್ತ ಮತ್ತು ರೇಖಾವಿನ್ಯಾಸಗಳಿಂದ ಅತ್ಯಂತ ನಯನಮನೋಹರವಾದ ಅಲಂಕರಣವನ್ನು, ಶಿಲ್ಪಗಳನ್ನು ಕಲ್ಲಿನಲ್ಲಿ ಬಿಡಿಸಿದ್ದಾರೆ. ಇಲ್ಲಿಯ ದೇವಾಲಯಗಳಲ್ಲಿ ಮುಖ್ಯವಾದ ವಾಯವ್ಯ ಭಾಗದ ಸಮೂಹದಲ್ಲಿ ಶೈವ ವೈಷ್ಣವ ಮಂದಿರಗಳಿವೆ. ಇವುಗಳಲ್ಲಿ ಕಂದರ್ಯ ಮಹಾದೇವ್ ಭಾರತದ ಅತಿಸುಂದರ ದೇಗುಲಗಳಲ್ಲೊಂದು. ಬೇಲೂರು, ಹಳೆಯಬೀಡುಗಳಲ್ಲಿರುವಂತೆ ಎತ್ತರವಾದ ಜಗಲಿಯ ಮೇಲೆ ಇದನ್ನು ಕಟ್ಟಲಾಗಿದೆ. 109 ಅಡಿ ಉದ್ದ 60 ಅಡಿ ಅಗಲ ಮತ್ತು ಭೂಮಿಯ ಮೇಲಿನಿಂದ 116 ಅಡಿ ಎತ್ತರ ಅಥವಾ ಜಗತಿಯಿಂದ 88 ಅಡಿ ಇರುವ ತಳಹದಿಯ ಮೇಲೆ ನಿರ್ಮಿತವಾಗಿದೆ. ಆಕಾರದಲ್ಲಿ ಅಷ್ಟು ಬೃಹತ್ತಾಗಿಲ್ಲದಿದ್ದರೂ ಒಂದು ಘನವಾಗಿ, ಎತ್ತರದಿಂದ ಎತ್ತರಕ್ಕೆ, ಒಂದನ್ನೊಂದು ಮೀರಿ ಏರುತ್ತಿರುವ ಶಿಖರಗಳಿಂದ ಕೊನೆಗೆ ಏಕಮೇವಾದ್ವಿತೀಯವಾಗಿ ನಿಮಿರಿನಿಂತ ಗಿರಿಶೃಂಗದಂಥ ಗರ್ಭಾಂಕಣದ ಶಿಖರದ ಔನ್ನತ್ಯ ಪ್ರೇಕ್ಷಕರ ಹೃನ್ಮನಗಳನ್ನು ತನ್ನೆಡೆಗೆ ಸೆಳೆಯುತ್ತದೆ. ಕಲೆಯ ದೃಷ್ಟಿಯಿಂದ ಭುವನೇಶ್ವರದ ದೇವಾಲಯಗಳು ಆಕರ್ಷಣೀಯವಾಗಿದ್ದರೆ, ಮಹಾದೇವ ದೇವಾಲಯ ಬೇಲೂರಿನ ಚನ್ನಕೇಶವ ದೇವಾಲಯದಂತೆ ಒಳಗೂ ಹೊರಗೂ ಮನೋಹರವಾಗಿದೆ. ಅಷ್ಟದಿಕ್ಪಾಲಕರು, ಅಪ್ಸರೆಯರು, ಸುರಸುಂದರಿಯರು, ವಿದ್ಯಾಧರೆಯರು ಇತ್ಯಾದಿ ವಿವಿಧ ಭಂಗಿಭಾವಗಳ ರಮಣೀಯ ಶಿಲಾಕೃತಿಗಳು ಇಲ್ಲಿ ಗುಂಪುಗೂಡಿವೆ. ಇಲ್ಲಿಯ ಕಲಾಸಂಪತ್ತು, ಭಾವಪ್ರೇರಕಶಕ್ತಿ ಅತ್ಯದ್ಭುತವಾದುದೆಂದು ಕಲಾವಿಮರ್ಶಕರು ಉದ್ಗಾರವೆತ್ತಿದ್ದಾರೆ. ಈ ಗುಂಪಿನ ವೈಷ್ಣವ ದೇವಾಲಯಗಳಲ್ಲಿ ಚತುರ್ಭುಜ ವಿಷ್ಣುಮಂದಿರ 85 ಅಡಿ ಉದ್ದ ಮತ್ತು 44 ಅಡಿ ಅಗಲವಾಗಿದೆ. ಪಂಚಾಯತನ ಪದ್ಧತಿಯಲ್ಲಿ ನಿರ್ಮಿತವಾಗಿರುವ ಈ ಮಂದಿರಗಳಲ್ಲಿ ಐದು ಗರ್ಭಗೃಹಗಳಿವೆ. ಈ ಹಿಂದೂ ದೇವಾಲಯಗಳ ಮಾದರಿಯಲ್ಲೇ ನಿರ್ಮಿತವಾದ ಆರು ಜೈನ ದೇವಾಲಯಗಳು ಆಗ್ನೇಯ ಭಾಗದಲ್ಲಿದೆ. ಇವುಗಳ ಹೊರಗೋಡೆಗಳ ಮೇಲೆ ತೋರಣಗಳು, ಸ್ತಂಭಿಕೆಗಳು ಮುಂತಾದ ವಾಸ್ತುಕೃತಿಗಳ ಅಲಂಕರಣವಿಲ್ಲದೆ ಅವು ಸರಳವಾಗಿವೆ. ಅವುಗಳ ಸ್ಥಾನದಲ್ಲಿ ಜೋಡಿಸಲಾಗಿರುವ ಮೂರ್ತಿಗಳಿಂದಾಗಿ ಈ ಗೋಡೆಗಳಿಗೆ ವಿಶೇಷವಾದ ಶೋಭೆ ಪ್ರಾಪ್ತವಾಗಿದೆ. ಈ ಜೈನ ಮಂದಿರಗಳಲ್ಲಿ ಮುಖ್ಯವಾದ ಜಿನನಾ ಬಸದಿ 60 ಅಡಿ ಉದ್ದ ಮತ್ತು 30 ಅಡಿ ಅಗಲವಾದ್ದು. ಈ ಗುಂಪಿನ ಪಕ್ಕದಲ್ಲಿರುವ ಪಾಳಾದ ಜೈನಮಂದಿರವೊಂದು ಗಮನಾರ್ಹವಾದ್ದು. ಘಂಟೈ ಮಂದಿರವೆಂದು ಹೆಸರಾದ ಈ ಮಂದಿರ ಪೂರ್ಣವಾಗಿದ್ದಾಗ ಆ ರೀತಿಯ ಕಟ್ಟಡಗಳಲ್ಲಿ ಮಕುಟಪ್ರಾಯವಾಗಿತ್ತೆಂದು ಹೇಳಬಹುದು. ಈಗ ಉಳಿದಿರುವ ಭಾಗಗಳಲ್ಲಿರುವ, ಉತ್ತಮ ಕೈಚಳಕ ತೋರುವ ಕಂಬಗಳು, ಭವ್ಯ ಕೆತ್ತನೆಗಳಿರುವ ಪ್ರವೇಶದ್ವಾರ ನೋಟಕರ ಕಣ್ಮನಗಳನ್ನು ತಣಿಸುತ್ತವೆ. ಈ ಪರಿಸರದಲ್ಲಿರುವ ಮತ್ತೆ ಕೆಲವು ಮಂದಿರಗಳೂ ಉತ್ತಮ ಕಲಾವಂತಿಕೆಯಿಂದ ಕೂಡಿವೆ; ಕೆಲವು ಪಾಳು ಬಿದ್ದಿವೆ. ಒಟ್ಟಿನಲ್ಲಿ ಖಜುರಾಹೊದ ದೇವಾಲಯಗಳು ಭಾರತೀಯ ವಾಸ್ತುಕಲೆಯ ಮಹೋನ್ನತ ಘಟ್ಟವನ್ನು ರೂಪಿಸುವ ಉತ್ತಮ ನಿದರ್ಶನಗಳ ಸಾಲಿನಲ್ಲಿ ಸೇರುತ್ತವೆಂದು ನಿಸ್ಸಂದೇಹವಾಗಿ ಹೇಳಬಹುದು. ಭಾರತೀಯ ಶಿಲ್ಪಕಲೆಯ ಪರಾಕಾಷ್ಠೆಯ ಉತ್ತಮ ನಿದರ್ಶನಗಳಲ್ಲಿ ಖಜುರಾಹೊದ ಶಿಲ್ಪಗಳೂ ಸೇರುತ್ತವೆ. ಹಂತಹಂತವಾಗಿ ಕೆತ್ತಲಾದ ನಗ್ನ ಅಪ್ಸರೆಯರ ಅಸಾಧಾರಣ ಸುಂದರ ದೇಹಗಳು ಬಾಗಿ ಬಳುಕುತ್ತ ನೋಟಕರ ಚಿತ್ತವನ್ನು ತಮ್ಮಲ್ಲಿ ಸೆರೆಹಿಡಿಯುತ್ತವೆ. ಸುಂದರ ಸ್ತ್ರೀಯರ ದೇಹಗಳಲ್ಲಿ ತುಂಬಿ ತುಳುಕುವ ವಿವಿಧ ಶೃಂಗಾರ ಪ್ರಧಾನ ಭಾವಭಂಗಿಗಳು, ಪುರುಷರ ಚಿತ್ತವನ್ನು ಕ್ಷೋಭೆಗೊಳಿಸುವ ರಸಮಯ ಸನ್ನಿವೇಶಗಳು ಪ್ರೇಕ್ಷಕರ ಒಂದೊಂದು ನೋಟಕ್ಕೂ ಹೊಸಹೊಸ ಭಾವನೆಗಳನ್ನು ಸೂಚಿಸುತ್ತವೆ. ಮಧ್ಯಯುಗೀನ ಭಾರತೀಯ ಶಿಲ್ಪಿಗಳು ತಮ್ಮ ಅತಿಮಾನುಷ ಕಲಾದವಂತಿಕೆಯನ್ನು ಖಜುರಾಹೊ ಮಂದಿರಗಳಲ್ಲಿ ಪ್ರದರ್ಶಿಸಿ ವಿಶ್ವದ ಕಲಾ ಇತಿಹಾಸದಲ್ಲಿ ಅಮರರಾಗಿದ್ದಾರೆ. ಬಾಹ್ಯ ಸಂಪರ್ಕ ಖಜುರಾಹೊ ದೇವಾಲಯಗಳ ಚಿತ್ರಗಳು ವಿಶ್ವ ಪರಂಪರೆಯ ತಾಣಗಳು ಪ್ರವಾಸೋದ್ಯಮ ಪ್ರವಾಸಿ ತಾಣಗಳು ವಾಸ್ತು ಶಿಲ್ಪ
1631
https://kn.wikipedia.org/wiki/%E0%B2%AB%E0%B2%A4%E0%B3%87%E0%B2%AA%E0%B3%81%E0%B2%B0%E0%B3%8D%20%E0%B2%B8%E0%B2%BF%E0%B2%95%E0%B3%8D%E0%B2%B0%E0%B2%BF
ಫತೇಪುರ್ ಸಿಕ್ರಿ
ಫತೇಪುರ್ ಸಿಕ್ರಿ ೧೬ ನೆಯ ಶತಮಾನದಲ್ಲಿ ಮೊಘಲ್ ಸಾಮ್ರಾಜ್ಯದ ಚಕ್ರವರ್ತಿ ಅಕ್ಬರ್ ಕಟ್ಟಿಸಿದ ರಾಜಧಾನಿ. ಇದು ಆಗ್ರಾ ನಗರದ ಸಮೀಪದಲ್ಲಿದೆ. ಸಾ೦ಪ್ರದಾಯಿಕ ರಾಜಧಾನಿಯಾಗಿ ಮಾತ್ರ ಉಪಯೋಗಿಸಲ್ಪಟ್ಟದ್ದರಿ೦ದ ಫತೇಪುರ್ ಸಿಕ್ರಿಗೆ ಹೆಚ್ಚಿನ ಕೋಟೆಗಳ ರಕ್ಷಣೆಗಳಿಲ್ಲ. ಅಕ್ಬರನ ವ್ಯಕ್ತಿತ್ವ ಮತ್ತು ಆದರ್ಶಗಳಿ೦ದ ಪ್ರಭಾವಿತವಾದ ಈ ನಗರ ವಿಶಿಷ್ಟವಾದ ವಿನ್ಯಾಸವನ್ನು ಹೊಂದಿದೆ. ಅಕ್ಬರ್ ಧಾರ್ಮಿಕ ಸಹಿಷ್ಣುತೆ ಮತ್ತು ಧರ್ಮಸಮನ್ವಯತೆಯಲ್ಲಿ ನ೦ಬಿಕೆಯನ್ನು ಹೊ೦ದಿದ್ದ. ವಿವಿಧ ಮತ-ಧರ್ಮಗಳಿ೦ದ ನ೦ಬಿಕೆಗಳನ್ನು ಹೊ೦ದಿದ್ದ ದೀನ್-ಇ-ಇಲಾಹಿ ಎ೦ಬ ಮತವನ್ನೂ ಸ್ಥಾಪಿಸಿದ್ದ. ಹಿ೦ದೂ ಧರ್ಮದ ಜನರೊ೦ದಿಗೆ ರಾಜಕೀಯ ಹಾಗೂ ವೈಯಕ್ತಿಕ ಸ೦ಬ೦ಧಗಳನ್ನು ಮಾಡಿಕೊ೦ಡಿದ್ದ ಅಕ್ಬರ್ ಈ ನಗರದ ವಿನ್ಯಾಸವನ್ನು ನಿರ್ಧರಿಸಿದ ಪ್ರಮುಖ ವ್ಯಕ್ತಿ. ಹಾಗಾಗಿ ಅವನ ವೈಯಕ್ತಿಕ ಆದರ್ಶಗಳ ಪ್ರಭಾವವನ್ನು ಈ ನಗರದಲ್ಲಿ ಕಾಣಬಹುದು. ನಗರದ ವಿನ್ಯಾಸದಲ್ಲಿ ವಿಶಾಲವಾದ ಸ್ಥಳಗಳಲ್ಲಿ ಕಟ್ಟಡಗಳನ್ನು ಕಟ್ಟುವುದರ ಮೂಲಕ ವೈಶಾಲ್ಯದ ಭಾವನೆಯನ್ನು ಮೂಡಿಸಲು ಪ್ರಜ್ಞಾಪೂರ್ವಕ ಯತ್ನವನ್ನು ಮಾಡಲಾಗಿದೆಯೆ೦ಬುದನ್ನು ಸ್ಪಷ್ಟವಾಗಿ ಕಾಣಬಹುದು. ನಗರದಲ್ಲಿ ಗಮನಿಸಬಹುದಾದ ಒಂದು ಅ೦ಶವೆ೦ದರೆ ಎಲ್ಲ ಮುಖ್ಯ ಸ್ಥಳಗಳಲ್ಲಿಯೂ ಚೌಕಗಳ ಇರುವಿಕೆ ಮತ್ತು ಚೌಕಗಳ ಸುತ್ತಲೂ ಹಿನ್ನೆಲೆಯಾಗಿ ಕಟ್ಟಡಗಳ ನಿರ್ಮಾಣ. ಇತರ ಮೊಘಲ್ ನಗರಗಳು (ಉದಾ: ಷಾಜಹಾನಾಬಾದ್) ಪೂರ್ವನಿರ್ಧಾರಿತ ಯೋಜನೆಗಳನ್ನು ಹೊ೦ದಿವೆ - ಆದರೆ ಫತೇಪುರ್ ಸಿಕ್ರಿಯಲ್ಲಿ ಅನೌಪಚಾರಿಕ ಯೋಜನೆ ಮತ್ತು ಸುಧಾರಣೆಗಳನ್ನು ಕಾಣಬಹುದು. ಫತೇಪುರ್ ಸಿಕ್ರಿಯ ಕಟ್ಟಡಗಳಲ್ಲಿ ವಿವಿಧ ಸ್ಥಳೀಯ ನಿರ್ಮಾಣ ತ೦ತ್ರಗಳ ಸಮಾಗಮವನ್ನು ಕಾಣಬಹುದು, ಉದಾಹರಣೆಗೆ ಗುಜರಾತಿ ಮತ್ತು ಬೆ೦ಗಾಲಿ ಕಟ್ಟಡ ವಿನ್ಯಾಸಗಳನ್ನು ಹೊ೦ದಿರುವ ಅನೇಕ ಕಟ್ಟಡಗಳು ಇಲ್ಲಿವೆ. ಇದಕ್ಕೆ ಮುಖ್ಯ ಕಾರಣ ಭಾರತದ ವಿವಿಧೆಡೆಗಳಿ೦ದ ಬ೦ದ ಕುಶಲ ಕೆಲಸಗಾರರನ್ನು ಈ ಕಟ್ಟಡಗಳನ್ನು ಕಟ್ಟುವ ಕೆಲಸದಲ್ಲಿ ನಿಯೋಜಿಸಿಕೊಳ್ಳಲಾಗಿತ್ತು. ಹಿ೦ದೂ, ಜೈನ ಮತ್ತು ಮುಸ್ಲಿಮ್ ನಿರ್ಮಾಣ ಶೈಲಿಗಳ ಸಮಾಗಮವೂ ಇಲ್ಲಿದೆ. ಕಟ್ಟಡಗಳನ್ನು ಕಟ್ಟಲು ಉಪಯೋಗಿಸಿರುವ ಮುಖ್ಯ ವಸ್ತು ಕೆ೦ಪು ಕಲ್ಲು (ಅಕ್ಬರನ ಕಾಲದ ಶೈಲಿ ಇದು). ಅನೇಕ ಧಾರ್ಮಿಕ ಮತ್ತು ಜಾತ್ಯತೀತ ಕಟ್ಟಡಗಳನ್ನು ಹೊ೦ದಿರುವ ಈ ನಗರದ ಕೆಲವು ಮುಖ್ಯ ಕಟ್ಟಡಗಳು: ನೌಬತ್ ಖಾನಾ: ಮುಖ್ಯರ ಆಗಮನವನ್ನು ಘೋಷಿಸಲಿಕ್ಕಾಗಿ ದ್ವಾರದ ಸಮೀಪ ಇರುವ ಕಟ್ಟಡ. ದಿವಾನ್-ಎ-ಆಮ್: ಅನೇಕ ಮೊಘಲ್ ನಿರ್ಮಾಣಗಳಲ್ಲಿ ಇದನ್ನು ಕಾಣಬಹುದು; ಇದು ಚಕ್ರವರ್ತಿ ಸಾಮಾನ್ಯ ಜನರಿಗೆ ದರ್ಶನ ಕೊಡುತ್ತಿದ್ದ ಕಟ್ಟಡ. ದಿವಾನ್-ಎ-ಖಾಸ್: ಇದೂ ಸಹ ವಿಶಿಷ್ಟವಾದ ಮೊಘಲ್ ಕಟ್ಟಡ; ಮುಖ್ಯ ಜನರನ್ನು ಚಕ್ರವರ್ತಿ ಬರಮಾಡಿಕೊಳ್ಳುತ್ತಿದ್ದ ಕಟ್ಟಡ. ಇಲ್ಲಿ ಒಂದು ಕೇ೦ದ್ರ ಕ೦ಬದ ಸುತ್ತಲೂ ವೃತ್ತಾಕಾರದ ಸಮತಲವಿದ್ದು ಅಕ್ಬರ್‍ನ ಸಿ೦ಹಾಸನ ಇಲ್ಲಿರುತ್ತಿತ್ತು. ಬೀರಬಲ್ಲನ ಮನೆ: ಇದು ಅಕ್ಬರನ ಮ೦ತ್ರಿ ರಾಜಾ ಬೀರಬಲ್ ನ ಮನೆ; ಇಲ್ಲಿರುವ ಸಜ್ಜೆಗಳು ಮತ್ತು ನೆರಳಿಗಾಗಿ ನೆಲಕ್ಕೆ ಸಮಾನಾ೦ತರವಾಗಿರುವ ಛಾವಣಿಗಳು ಗಮನಾರ್ಹ. ಜೋಧಾ ಬಾಯಿಯ ಅರಮನೆ: ಅಕ್ಬರನ ಪಟ್ಟದ ರಾಣಿ ಜೋಧಾ ಬಾಯಿಯ ಅರಮನೆ; ಒಂದು ಪ್ರಾ೦ಗಣದ ಸುತ್ತ ಕಟ್ಟಲ್ಪಟ್ಟಿರುವ ಈ ಅರಮನೆಯಲ್ಲಿ ಗುಜರಾತಿ ಪ್ರಭಾವವನ್ನು ಕಾಣಬಹುದು (ಜೋಧಾ ಬಾಯಿ ಮೂಲತಃ ಗುಜರಾತಿ). ಪ೦ಚ ಮಹಲ್: ಐದು ಮಹಡಿಗಳುಳ್ಳ ಒಂದು ಕಟ್ಟಡ ಬುಲ೦ದ್ ದರ್ವಾಜಾ: ಜಾಮಾ ಮಸೀದಿಯ ಮುಖ್ಯ ದ್ವಾರಗಳಲ್ಲಿ ಒಂದು; ಹೊರಗಡೆಯಿ೦ದ ಬೃಹದ್ಗಾತ್ರದಲ್ಲಿರುವ ಈ ದ್ವಾರ ಒಳಹೋದ೦ತೆ ಇನ್ನೊ೦ದು ಕಡೆಯಲ್ಲಿ ಮಾನವಗಾತ್ರಕ್ಕೆ ಇಳಿಯುತ್ತದೆ. ಜಾಮಾ ಮಸೀದಿ: ಭಾರತೀಯ ವಿನ್ಯಾಸದ ಮಸೀದಿ ಅನೇಕ ವರ್ಷಗಳ ಶ್ರಮದಿ೦ದ ಕಟ್ಟಲ್ಪಟ್ಟಿದ್ದರೂ ಫತೇಪುರ್ ಸಿಕ್ರಿ ಹೆಚ್ಚು ವರ್ಷಗಳ ಕಾಲ ಉಪಯೋಗಿಸಲ್ಪಡಲಿಲ್ಲ. ಇದಕ್ಕೆ ಒಂದು ಕಾರಣ ಪ್ರಾಯಶಃ ಉತ್ತಮ ನೀರಿನ ಸೌಲಭ್ಯ ಈ ಪ್ರದೇಶದಲ್ಲಿ ಇಲ್ಲದೆ ಇರುವುದು. ಫತೇಪುರ್ ಸಿಕ್ರಿ ಯುನೆಸ್ಕೋ ದಿ೦ದ "ವಿಶ್ವ ಪರಂಪರೆಯ ತಾಣ" ಎಂದು ಮಾನ್ಯತೆ ಪಡೆದಿದೆ. ಬಾಹ್ಯ ಸ೦ಪರ್ಕಗಳು ಯುನೆಸ್ಕೋ ತಾಣದಲ್ಲಿ ಫತೇಪುರ್ ಸಿಕ್ರಿ ಬಗ್ಗೆ ಮಾಹಿತಿ ಫತೇಪುರ್ ಸಿಕ್ರಿ ಫತೇಪುರ್ ಸಿಕ್ರಿ ಇತಿಹಾಸ ಐತಿಹಾಸಿಕ ಸ್ಥಳಗಳು ಪ್ರವಾಸೋದ್ಯಮ ವಿಶ್ವ ಪರಂಪರೆಯ ತಾಣಗಳು
1635
https://kn.wikipedia.org/wiki/%E0%B2%B6%E0%B3%8D%E0%B2%B0%E0%B3%80%E0%B2%B2%E0%B2%82%E0%B2%95%E0%B2%BE
ಶ್ರೀಲಂಕಾ
ಶ್ರೀಲಂಕಾ ಪ್ರಜಾತಾಂತ್ರಿಕ ಸಮಾಜವಾದಿ ಗಣರಾಜ್ಯ (೧೯೭೨ ರ ಮೊದಲು ಸಿಲೋನ್) ಭಾರತೀಯ ಉಪಖಂಡದ ಆಗ್ನೇಯದಲ್ಲಿರುವ ದ್ವೀಪ ರಾಷ್ಟ್ರ. ಪುರಾತನ ಕಾಲದಿಂದ ಲಂಕಾ, ಲಂಕಾದ್ವೀಪ, ಸಿಂಹಳದ್ವೀಪ, ಸೆರೆಂದಿಬ್ ಮೊದಲಾದ ಹೆಸರುಗಳಿಂದ ಗುರುತಿಸಲ್ಪಟ್ಟಿರುವ ಶ್ರೀಲಂಕಾ ಬ್ರಿಟಿಷ್ ಆಡಳಿತದ ಕಾಲದಲ್ಲಿ ಸಿಲೋನ್ ಎಂದು ಹೆಸರು ಪಡೆದಿತ್ತು. ೧೯೭೨ ರಲ್ಲಿ ಅದರ ಹೆಸರನ್ನು ಶ್ರೀಲಂಕಾ ಎಂದು ಬದಲಾಯಿಸಲಾಯಿತು. ಚರಿತ್ರೆ ಶ್ರೀಲಂಕೆಗೆ ಸಿಂಹಳ ಜನರು ಸುಮಾರು ಕ್ರಿ.ಪೂ. ೬ನೇ ಶತಮಾನದಲ್ಲಿ ಪ್ರಾಯಶಃ ಉತ್ತರ ಭಾರತದಿಂದ ಬಂದಿರಬಹುದೆಂದು ಊಹಿಸಲಾಗಿದೆ. ಕ್ರಿ.ಪೂ. ಮೂರನೇ ಶತಮಾನದಲ್ಲಿ ಇಲ್ಲಿಗೆ ಬೌದ್ಧ ಧರ್ಮವನ್ನು ಪರಿಚಯಿಸಲಾಯಿತು. ನಂತರ ದಕ್ಷಿಣ ಭಾರತದಿಂದ ತಮಿಳರ ವಲಸೆ ಆರಂಭವಾಗಿ ಕ್ರಿ.ಶ. ೧೩ನೇ ಶತಮಾನದ ಕಾಲಕ್ಕೆ ಸಾಕಷ್ಟು ತಮಿಳರ ಜನಸಂಖ್ಯೆ ಶ್ರೀಲಂಕೆಯಲ್ಲಿತ್ತು. ೧೬ನೆಯ ಶತಮಾನದಲ್ಲಿ ಶ್ರೀಲಂಕೆಯ ಕೆಲ ಭಾಗಗಳನ್ನು ಪೋರ್ಚುಗೀಸರು ವಶಪಡಿಸಿಕೊಂಡರು. ನಂತರ ಇತರ ಯೂರೋಪಿನ ದೇಶಗಳೂ ಬಂದವು. ೧೭೯೬ ರಲ್ಲಿ ಶ್ರೀಲಂಕಾ ಸಂಪೂರ್ಣವಾಗಿ ಬ್ರಿಟಿಷರ ಕೈಸೇರಿತು. ೧೯೪೮ ರಲ್ಲಿ ಸ್ವಾತಂತ್ರ್ಯ ಪಡೆದ ಶ್ರೀಲಂಕಾ, ೧೯೭೨ ರಲ್ಲಿ ತನ್ನ ಹೆಸರನ್ನು ಅಧಿಕೃತವಾಗಿ "ಶ್ರೀಲಂಕಾ ಪ್ರಜಾತಾಂತ್ರಿಕ ಸಮಾಜವಾದಿ ಗಣರಾಜ್ಯ" ಎಂದು ಬದಲಾಯಿಸಿತು. ಕಳೆದ ಎರಡು ದಶಕಗಳಲ್ಲಿ ಶ್ರೀಲಂಕೆಯ ತಮಿಳು ಜನರು ಮತ್ತು ಸಿಂಹಳೀಯರ ನಡುವೆ ಸಾಕಷ್ಟು ಅಶಾಂತಿ ಏರ್ಪಟ್ಟಿದ್ದು, ಎಲ್‍ಟಿಟಿಇ ಮತ್ತು ಶ್ರೀಲಂಕಾ ಸರ್ಕಾರದ ನಡುವೆ ಸಾಕಷ್ಟು ತೊಂದರೆಗಳುಂಟಾಗಿವೆ. ೨೦೦೪ರಲ್ಲಿ ಒಂದು ಶಾಂತಿ ಒಪ್ಪಂದ ಮಾಡಿಕೊಳ್ಳಲಾಯಿತು. ರಾಜಕೀಯ ವಿಶೇಷ ಲೇಖನ:ಶ್ರೀಲಂಕಾದ ಇತಿಹಾಸ ಶ್ರೀಲಂಕೆಯ ಈಗಿನ ಅಧ್ಯಕ್ಷರು ಮೈತೀಪಾಲ ಸಿರಿಸೇನಾ. ಈಗಿನ ಪ್ರಧಾನ ಮಂತ್ರಿಗಳು ವಿಕ್ರಮಸಿಘ್ಹ. ಸಂಪರ್ಕಗಳು ಪ್ರಮುಖ ಪ್ರವಾಸಿ ತಾಣಗಳು ಶ್ರೀಲಂಕಾ ಅತೀ ಚಿಕ್ಕ ದ್ವೀಪ ಹಾಗೂ ಕಡಿಮೆ ಪ್ರಮಾಣದ ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರ.ಇಲ್ಲಿ ಅನೇಕ ಬೀಚ್,ಹೋಟೆಲ್,ರೆಸ್ಟೋರೆಂಟ್‍ಗಳು ಅಭಿವೃಧ್ದಿಯ ಪಥದಲ್ಲಿವೆ.ಇದರ ಜೊತೆಗೆ ವನ್ಯಸಂಪತ್ತು ಕೂಡ ಪ್ರವಸಿಗರನ್ನು ಆಕರ್ಷಿಸುತ್ತಿದೆ.ಈ ದೇಶದ ದಕ್ಷಿಣ ಕರಾವಳಿಯಲ್ಲಿನ ಮೊಟ್ಟೆ ಇಡುವ ಆಮೆಗಳು,ವರ್ಣರಂಜಿತ ಪಕ್ಷಿಗಳು,ನಾನಾ ಬಗೆಯ ಮಂಗಗಳು,ಚಿರತೆಗಳು,ನೀಲಿ ತಿಮಿಂಗಿಲ, ಹಾರುವ ಮೀನು ಮತ್ತು ಡಾ‌‍ಲ್ಫಿನ್ಜತೆಗಿನ ಆಟ ಇಲ್ಲಿನ ಪ್ರವಾಸಿ ತಾಣದ ಪ್ರಮುಖ ಅಂಶಗಳು.ಈ ದೇಶ ಇತ್ತೀಚೆಗೆ ಪ್ರಮುಖ ಪ್ರವಾಸಿ ತಾಣವಾಗಿ ಬೆಳೆಯುತ್ತಿದೆ.ಪರ್ವತಅರೋಹಿಗಲಿಗೆ ಶ್ರೀಲಂಕಾವು ಬಹಳ ಉಪಯುಕ್ತವಾದ ದೇಶ.ಶ್ರೀಲಂಕಾದ ಹೆದ್ದಾರಿಯ ಪಕ್ಕದಲ್ಲಿ ಆನೆಗಳಿಗೆ ಪಾರ್ಕ್ ಗಳನ್ನು ಮಾಡಿಸಲಾಗಿದೆ, ಗಾಲೆ ಎಂಬಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಗಳು,ಯೇಲ್ ನ್ಯಾಷನಲ್ ಪಾರ್ಕ್ ನಲ್ಲಿರುವ ಚಿರತೆಗಳು, ಶ್ರೀಲಂಕಾದ ಬೆಟ್ಟ ಪ್ರದೇಶಗಳಲ್ಲಿ ತಯಾರಾಗಿ ಮಾರುಕಟ್ಟೆಗೆ ಹೋಗುವ ಕಾಫಿ,ಟೀ ವ್ಯವಹಾರ, ಕಾಡಿನ ನಡುವಿನಲ್ಲಿರುವ ಪ್ರಾಚೀನ ಅವಶೇಷಗಳು ಇಲ್ಲಿನ ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಗಳು. ಈ ಕಾರಣಗಳಿಂದಾಗಿ ಪ್ರಸಿಧ್ದ ಪ್ರವಾಸಿಗ "ಮಾರ್ಕೋ ಪೋಲೋ" ಶ್ರೀಲಂಕಾ ದೇಶವನ್ನು ವಿಶ್ವದ ಅತ್ಯುತ್ತಮ ದ್ವೀಪಗಳ ಸಾಲಿಗೆ ಸೇರಿಸಿರುತ್ತಾನೆ. ಕೊಲಂಬೋ ಕೊಲಂಬೊ ಶ್ರೀಲಂಕಾದ ರಾಜಧಾನಿಯಾಗಿದೆ.ಮಾರ್ಚ್ನಿನಿಂದ ಮೇ ತಿಂಗಳಿನೊಳಗೆ ಇಲ್ಲಿಗೆ ಭೇಟಿ ನೀಡುವುದು ಉತ್ತಮ.ಇಲ್ಲಿ ಮಹಾದೇವಿ ವಿಹಾರ,ಪಾರ್ಕ್,ಹೂಗಳ ಮಾರುಕಟ್ಟೆ,ಅತ್ಯುತ್ತಮ ಶ್ರೇಣಿಯ ರೆಸ್ಟೋರೆಂಟ್ಗಳನ್ನು ನೋಡಬಹುದು.ಇಲ್ಲಿ ಜು‍ಲೈ ಆಗಸ್ಟ್ ತಿಂಗಳುಗಳ ನಡುವೆಯು ಇಲ್ಲಿನ ಪ್ರಸಿದ್ದ ಹಬ್ಬವಾದ "ವೇಲೇ" ‌ಫೆಸ್ಟಿವಲ್ ನಡೆಯುತ್ತದೆ. ಕೊಲಂಬೊ (ಸಿಂಹಳ:කොළඹ, ಕಾರ್ಯನಿರ್ವಾಹಕ ಮತ್ತು ನ್ಯಾಯಾಂಗ ರಾಜಧಾನಿ ಮತ್ತು ಜನಸಂಖ್ಯೆಯ ಪ್ರಕಾರ ಶ್ರೀಲಂಕಾದ ಅತಿದೊಡ್ಡ ನಗರವಾಗಿದೆ. ಬ್ರೂಕಿಂಗ್ಸ್ ಸಂಸ್ಥೆಯ ಪ್ರಕಾರ, ಕೊಲಂಬೊ ಮೆಟ್ರೋಪಾಲಿಟನ್ ಪ್ರದೇಶವು 5.6 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ ಮತ್ತು ಪುರಸಭೆಯಲ್ಲಿ 752,993 ಜನಸಂಖ್ಯೆಯನ್ನು ಹೊಂದಿದೆ. ಇದು ಆರ್ಥಿಕ ಕೇಂದ್ರವಾಗಿದೆ. ದ್ವೀಪ ಮತ್ತು ಪ್ರವಾಸಿ ತಾಣ.ಇದು ದ್ವೀಪದ ಪಶ್ಚಿಮ ಕರಾವಳಿಯಲ್ಲಿದೆ ಮತ್ತು ಶ್ರೀಲಂಕಾದ ಶಾಸಕಾಂಗ ರಾಜಧಾನಿ ಶ್ರೀ ಜಯವರ್ಧನೆಪುರ ಕೊಟ್ಟೆ ಮತ್ತು ದೆಹಿವಾಲಾ-ಮೌಂಟ್ ಲ್ಯಾವಿನಿಯಾವನ್ನು ಒಳಗೊಂಡಿರುವ ಗ್ರೇಟರ್ ಕೊಲಂಬೊ ಪ್ರದೇಶದ ಪಕ್ಕದಲ್ಲಿದೆ. ಕೊಲಂಬೊವನ್ನು ಹೆಚ್ಚಾಗಿ ರಾಜಧಾನಿ ಎಂದು ಕರೆಯಲಾಗುತ್ತದೆ ಶ್ರೀ ಜಯವರ್ಧನೆಪುರ ಕೊಟ್ಟೆ ಕೊಲಂಬೊದ ನಗರ/ಉಪನಗರ ಪ್ರದೇಶದಲ್ಲಿದೆ.ಇದು ಪಶ್ಚಿಮ ಪ್ರಾಂತ್ಯದ ಆಡಳಿತ ರಾಜಧಾನಿ ಮತ್ತು ಕೊಲಂಬೊ ಜಿಲ್ಲೆಯ ಜಿಲ್ಲಾ ರಾಜಧಾನಿಯಾಗಿದೆ. ಕೊಲಂಬೊ ಆಧುನಿಕ ಜೀವನ, ವಸಾಹತುಶಾಹಿ ಕಟ್ಟಡಗಳು ಮತ್ತು ಮಿಶ್ರಣವನ್ನು ಹೊಂದಿರುವ ಕಾರ್ಯನಿರತ ಮತ್ತು ರೋಮಾಂಚಕ ನಗರವಾಗಿದೆ. ಸ್ಮಾರಕಗಳು. ಅದರ ದೊಡ್ಡ ಬಂದರು ಮತ್ತು ಪೂರ್ವ-ಪಶ್ಚಿಮ ಸಮುದ್ರ ವ್ಯಾಪಾರ ಮಾರ್ಗಗಳ ಉದ್ದಕ್ಕೂ ಅದರ ಕಾರ್ಯತಂತ್ರದ ಸ್ಥಾನದಿಂದಾಗಿ, ಕೊಲಂಬೊವು ಪ್ರಾಚೀನ ವ್ಯಾಪಾರಿಗಳಿಗೆ ೨,೦೦೦ ವರ್ಷಗಳ ಹಿಂದೆ ಪರಿಚಿತವಾಗಿತ್ತು.[ಉಲ್ಲೇಖದ ಅಗತ್ಯವಿದೆ] ಶ್ರೀಲಂಕಾವನ್ನು ಬ್ರಿಟಿಷ್ ಸಾಮ್ರಾಜ್ಯಕ್ಕೆ ಬಿಟ್ಟುಕೊಟ್ಟಾಗ ಇದನ್ನು ದ್ವೀಪದ ರಾಜಧಾನಿಯನ್ನಾಗಿ ಮಾಡಲಾಯಿತು. ೧೮೧೫, ಮತ್ತು ೧೯೪೮ ರಲ್ಲಿ ರಾಷ್ಟ್ರವು ಸ್ವತಂತ್ರವಾದಾಗ ರಾಜಧಾನಿಯಾಗಿ ಅದರ ಸ್ಥಾನಮಾನವನ್ನು ಉಳಿಸಿಕೊಳ್ಳಲಾಯಿತು. ೧೯೭೮ ರಲ್ಲಿ, ಆಡಳಿತಾತ್ಮಕ ಕಾರ್ಯಗಳನ್ನು ಶ್ರೀ ಜಯವರ್ಧನೆಪುರ ಕೊಟ್ಟೆಗೆ ಸ್ಥಳಾಂತರಿಸಿದಾಗ, ಕೊಲಂಬೊವನ್ನು ಶ್ರೀಲಂಕಾದ ವಾಣಿಜ್ಯ ರಾಜಧಾನಿಯಾಗಿ ಗೊತ್ತುಪಡಿಸಲಾಯಿತು. ಅನೇಕ ನಗರಗಳಂತೆ, ಕೊಲಂಬೊದ ನಗರ ಪ್ರದೇಶವು ಒಂದೇ ಸ್ಥಳೀಯ ಪ್ರಾಧಿಕಾರದ ಗಡಿಯನ್ನು ಮೀರಿ ವಿಸ್ತರಿಸಿದೆ, [ಉಲ್ಲೇಖದ ಅಗತ್ಯವಿದೆ] ಇತರ ಪುರಸಭೆ ಮತ್ತು ನಗರ ಸಭೆಗಳಾದ ಶ್ರೀ ಜಯವರ್ಧನೆಪುರ ಕೊಟ್ಟೆ ಮುನ್ಸಿಪಲ್ ಕೌನ್ಸಿಲ್, ದೆಹಿವಾಲಾ ಮೌಂಟ್ ಲ್ಯಾವಿನಿಯಾ ಮುನ್ಸಿಪಲ್ ಕೌನ್ಸಿಲ್, ಕೊಲೊನ್ನಾವಾ ನಗರ ಸಭೆ, ಕಡುವೆಲಾ ಮುನ್ಸಿಪಲ್ ಕೌನ್ಸಿಲ್, ಮತ್ತು ಕೋಟಿಕಾವಟ್ಟೆ ಮುಲ್ಲೇರಿಯಾವಾ ಪ್ರಾಂತೀಯ ಸಭೆ.[ಉಲ್ಲೇಖದ ಅಗತ್ಯವಿದೆ] ಶ್ರೀಲಂಕಾದ ಬಹುಪಾಲು ಕಾರ್ಪೊರೇಟ್ ಕಛೇರಿಗಳು, ರೆಸ್ಟೋರೆಂಟ್‌ಗಳು ಮತ್ತು ಮನರಂಜನಾ ಸ್ಥಳಗಳಿಗೆ ಮುಖ್ಯ ನಗರವು ನೆಲೆಯಾಗಿದೆ. ಕೊಲಂಬೊದಲ್ಲಿನ ಪ್ರಸಿದ್ಧ ಹೆಗ್ಗುರುತುಗಳು ಗಾಲ್ ಫೇಸ್ ಗ್ರೀನ್, ವಿಹಾರಮಹಾದೇವಿ ಪಾರ್ಕ್, ಬೈರಾ ಲೇಕ್, ಕೊಲಂಬೊ ರೇಸ್‌ಕೋರ್ಸ್, ಪ್ಲಾನೆಟೋರಿಯಂ, ಕೊಲಂಬೊ ವಿಶ್ವವಿದ್ಯಾಲಯ, ಮೌಂಟ್ ಲ್ಯಾವಿನಿಯಾ ಬೀಚ್, ಡೆಹಿವಾಲಾ ಝೂಲಾಜಿಕಲ್ ಗಾರ್ಡನ್, ನೆಲುಮ್ ಪೊಕುನಾ ಥಿಯೇಟರ್, ಒನ್ ಗಾಲ್ ಫೇಸ್, ಗಂಗಾರಾಮಾಯ ದೇವಸ್ಥಾನ, ಡಚ್ ಮ್ಯೂಸಿಯಂ, ಕೊಲಂಬೊ ಲೋಟಸ್ ಟವರ್ ಜೊತೆಗೆ ರಾಷ್ಟ್ರೀಯ ವಸ್ತುಸಂಗ್ರಹಾಲಯ. ಕಡಲ ತೀರಗಳು ಶ್ರೀಲಂಕಾದ ಪಾಮ್ ಬೀಚ್ ಸುಮಾರು ೧೬೦೦ ಕಿ.ಮೀವರೆಗೆ ವ್ಯಾಪಿಸಿರುವುದು.ಇದರ ಪಕ್ಕದಲ್ಲಿಯೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕೂಡ ಇರುವುದರಿಂದ ಇಲ್ಲಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚು.ಗಾಲೆಯಲ್ಲಿರುವ "ಅನ್ ವಾಟೂನಾ" ಕಡಲ ತೀರ ಪ್ರಪಂಚದ ಮುಂಚೂಣಿಯಲ್ಲಿರುವ ೧೫ ಕಡಲ ತೀರಗಳ ಪಟ್ಟಿಯಲ್ಲಿದೆ.ಇಲ್ಲಿನ ಬೆಂಟೋಟ ಕಡಲ ತೀರದಲ್ಲಿ ಡೈವಿಂಗ್ ಮತ್ತು ಸ್ನಾರ್ಕ್ ಲಿಂಗ್ ಮಾಡುವ ಅವಕಾಶವಿದೆ.ಹವಳದ ಮತ್ತು ನೀರಿನೊಳಗಿರುವ ಗುಹೆಗಳು ಅಭಿವ್ರದ್ದಿಯ ಪಥದಲ್ಲಿದೆ. ಆಡಮ್ಸ್ ಪೀಕ್ ಶ್ರೀಲಂಕಾದ ಅತ್ಯುನ್ನತ ಪರ್ವತ ಶ್ರೇಣಿಯಲ್ಲಿ ಒಂದಾಗಿರುವ ಇದು ಆ ದೇಶದ ಜಾನಪದ ವಿದ್ವತ್ತಿಗೂ ಕಾರಣವಾಗಿದೆ.ಇದಕ್ಕೆ ಮುಖ್ಯ ಕಾರಣ ಶ್ರೀಪಾದ ಇರುವುದು ಇದೇ ಜಾಗದಲ್ಲಿ.ಬೌದ್ಧ,ಹಿಂದು,ಮುಸ್ಲಿಂ,ಕ್ರೈಸ್ತರೆಲ್ಲರೂ ಈ ಪರ್ವತ ಶ್ರೇಣಿಯನ್ನು ಪವಿತ್ರ ಸ್ಥಳವೆಂದು ಪರಿಗಣಿಸಿದ್ದಾರೆ. ಈ ಪರ್ವತ ಶ್ರೇಣಿಯನ್ನು ತಲುಪಬೇಕಾದರೆ ಸುಮಾರು ೪೮೦೦ ಮೆಟ್ಟಿಲುಗಳನ್ನು ದಾಟಿಕೊಡು ಸಾಗಬೇಕು. ಅನುರಾಧ ಪುರ ಸಾವಿರಾರು ವರ್ಷಗಳ ಹಿಂದೆ ಅನುರಾಧಪುರವು ಶ್ರೀಲಂಕಾ ದೇಶದ ರಾಜಧಾನಿಯಾಗಿತ್ತು. ಈ ಪ್ರಾಚೀನ ನಗರಿಯನ್ನು ನೋಡಿದಾಗ ಇಲ್ಲಿ ಬಹು ಹಿಂದೆಯೇ ನಾಗರಿಕತೆಯು ಚಾಲ್ತಿಯಲ್ಲಿತ್ತು ಎಂದು ತಿಳಿದು ಬರುತ್ತದೆ.ಈ ಊರಿನ ರಚನೆಯನ್ನು ಕೂಡ ಬಹಳ ಯೋಜನಾಬದ್ದವಾಗಿ ಮಾಡಲಾಗಿದೆ. ಇಲ್ಲಿನ ಪ್ರಾಚೀನ ದೇವಸ್ಧಾನಗಳ ಅವಶೇಷಗಳು, ಅರಮನೆ, ದೈತ್ಯ ಗಾತ್ರದ ಸ್ತೂಪಗಳು ಇಲ್ಲಿನ ಇತಿಹಾಸವನ್ನು ವಿವರಿಸುತ್ತದೆ. ಡಂಬುಲ್ಲ ಗುಹೆ ದೇವಾಲಯ ಶ್ರೀಲಂಕಾದ ಬೌದ್ಧ ಪರಂಪರೆಯ ಒಂದು ಒಳನೋಟವು ಡಂಬುಲ್ಲ ಗುಹೆ ದೇವಾಲಯದಲ್ಲಿ ಕಾಣಸಿಗುತ್ತದೆ. ಇಲ್ಲಿ ದೈತ್ಯಕಾರದ ಕಲ್ಲಿನ ಶಿಲಾ ಸ್ತರದಲ್ಲಿ ಧಾರ್ಮಿಕ ಭಿತ್ತಿ ಚಿತ್ರಗಳನ್ನು ಸಂಗ್ರಹಿಸಲಾಗಿದೆ. ಗಾಲೆ ಡಚ್ ಕೋಟೆ ಇದು ವಿಶ್ವ ಪರಂಪರೆಯ ತಾಣಗಳಲ್ಲಿ ಒಂದಾಗಿದೆ.ಇಲ್ಲಿ ನಡೆಯುವ ಸಾಹಿತ್ಯ ಉತ್ಸವ ಬಹಳ ಜನಪ್ರಿಯವಾಗಿದೆ.ಈ ಪ್ರದೇಶ ಕರಿ ಮರದ ಕೆತ್ತನೆ ಹಾಗೂ ವಜ್ರದ ಹೊಳಪು ಹೊಂದಿರುವ ಕರಕುಶಲ ಕೇಂದ್ರವಾಗಿಯೂ ಪ್ರಸಿದ್ದಿಯಾಗಿದೆ. ನೋಡಲೇ ಬೇಕಾದ ಸ್ಥಳಗಳು ಕ್ಯಾಂಡಿಯನ್ ರಾಜ ಮನೆತನದ ಕುರುಹುಗಳಿರುವ ಕ್ಯಾಂಡಿ ಪ್ರದೇಶ. ರಾಫ್ಟಿಂಗ್ ಹಬ್ ಆಗಿರುವ ಕೀಟುಗುಲ್ಲಾ ನೂರಕ್ಕೂ ಅಧಿಕ ಜಾತಿಯ ಪಾರಿವಳಗಳಿರುವ 'ಮೀರಿಸಾ' ಏಷ್ಯಾದ ಆನೆಗಳಿರುವ ಪಿನಿನಾವಾಲಾ ದೊಡ್ಡ ಗಾತ್ರದ ಬುದ್ಧನ ಪ್ರತಿಮೆಗಳಿರುವ ಪೊಲೊನ್ನಾ ರಾಯಲ್ ಅರಮನೆಗಳು ಆರ್.ಪ್ರೇಮದಾಸ ಸ್ಟೇಡಿಯಂ ಸಿಗಿರಿಯಾ ರಾಕ್ ಫೊರ್ಟ್ರೆಸ್ ಅಡಾವಾಲೇ ನ್ಯಾಷನಲ್ ಪಾರ್ಕ್ ಮತ್ತು ಯೇಲ್ ನ್ಯಾಷನಲ್ ಪಾರ್ಕ್ ಇದನ್ನು ನೋಡಿ ಶ್ರೀಲಂಕಾ ಸರ್ಕಾರದ ಅಧಿಕೃತ ತಾಣ ಶ್ರೀಲಂಕಾ ಸಂಸತ್ತಿನ ಅಧಿಕೃತ ತಾಣ ಶ್ರೀಲಂಕಾದ ರಾಯಭಾರಿ ಕಛೇರಿಗಳು ಶ್ರೀಲಂಕಾ ಪ್ರವಾಸಿ ಮಾಹಿತಿ ಶ್ರೀಲಂಕಾ ಪ್ರವಾಸಿ ಬೋಧೆಗಳು ಉಲ್ಲೇಖಗಳು ಏಷ್ಯಾ ಖಂಡದ ದೇಶಗಳು ದಕ್ಷಿಣ ಏಷ್ಯಾ
1641
https://kn.wikipedia.org/wiki/%E0%B2%97%E0%B3%81%E0%B2%B2%E0%B3%8D%E0%B2%9C%E0%B2%BE%E0%B2%B0%E0%B2%BF%20%E0%B2%B2%E0%B2%BE%E0%B2%B2%E0%B3%8D%20%E0%B2%A8%E0%B2%82%E0%B2%A6%E0%B2%BE
ಗುಲ್ಜಾರಿ ಲಾಲ್ ನಂದಾ
thumb|ಗುಲ್ಜಾರಿ ಲಾಲ್ ನಂದಾ ಗುಲ್ಜಾರಿ ಲಾಲ್ ನಂದಾ (ಜುಲೈ ೪, ೧೮೯೮ - ಜನವರಿ ೧೫, ೧೯೯೮) ಎರಡು ಬಾರಿ ಭಾರತದ ಹಂಗಾಮಿ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದವರು. ಲಾಹೋರ್, ಆಗ್ರಾ ಮತ್ತು ಅಲಹಾಬಾದ್ ಗಳಲ್ಲಿ ಅಧ್ಯಯನ ನಡೆಸಿದ ನಂದಾ ಅವರು ೧೯೨೧ರಲ್ಲಿ ಮುಂಬಯಿಯಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾದರು. ೧೯೩೭ರಲ್ಲಿ ಮುಂಬಯಿ ಸರ್ಕಾರದ ವಿಧಾನಸಭೆಗೆ ಚುನಾಯಿತರಾಗಿದ್ದರು. ಸ್ವಾತಂತ್ರ್ಯಾನಂತರ ೧೯೫೦ ರಲ್ಲಿ ಯೋಜನಾ ಆಯೋಗದ ಉಪಾಧ್ಯಕ್ಷರಾದರು. ಹಾಗೆಯೇ ನೀರಾವರಿ ಮತ್ತು ವಿದ್ಯುಚ್ಛಕ್ತಿ ಖಾತೆಗಳಲ್ಲಿ ಸಚಿವರಾದರು. ೧೯೫೨ ರಲ್ಲಿ ಲೋಕಸಭೆಗೆ ಚುನಾಯಿತರಾದರು. ೧೯೫೭ ಮತ್ತು ೧೯೬೨ ರಲ್ಲಿ ಮತ್ತೆ ಲೋಕಸಭೆಗೆ ಚುನಾಯಿತರಾದರು. ಉದ್ಯೋಗ ಖಾತೆಯ ಸಚಿವರಾಗಿ ನಂತರ ೧೯೬೩ ರಿಂದ ೬೬ ರ ವರೆಗೆ ಗೃಹ ಖಾತೆಯನ್ನು ಪಡೆದರು. ಜವಾಹರಲಾಲ್ ನೆಹರುರವರು ೧೯೬೪ ರಲ್ಲಿ ನಿಧನರಾದಾಗ ಹಂಗಾಮಿಯಾಗಿ ಗುಲ್ಜಾರಿ ಲಾಲ್ ನಂದಾ ಪ್ರಧಾನಿಯಾಗಿದ್ದರು. ಮತ್ತೊಮ್ಮೆ ಲಾಲ್ ಬಹಾದುರ್ ಶಾಸ್ತ್ರಿ ೧೯೬೬ರಲ್ಲಿ ನಿಧನರಾದಾಗ ಹಂಗಾಮಿಯಾಗಿ ಪ್ರಧಾನಿಗಳಾಗಿದ್ದರು. ಗುಲ್ಜಾರಿ ಲಾಲ್ ನಂದಾ ಭಾರತ ರತ್ನ ಪ್ರಶಸ್ತಿ ವಿಜೇತರು. ಗುಲ್ಜಾರಿಲಾಲ್ ನಂದಾ ಇವರು ಮಹಾತ್ಮ ಗಾಂಧೀಜಿಯವರ ತತ್ವಗಳ ಅನುಯಾಯಿಗಳಾಗಿದ್ದರು. ೧೯೯೮ರ ಜನವರಿಯಲ್ಲಿ ಶ್ರೀ ಗುಲ್ಜಾರಿಲಾಲ್ ನಂದಾ ನಿಧನರಾದರು. ರಾಜಕೀಯ ಭಾರತ ರತ್ನ ಪುರಸ್ಕೃತರು ಭಾರತದ ಪ್ರಧಾನ ಮಂತ್ರಿಗಳು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು
1642
https://kn.wikipedia.org/wiki/%E0%B2%87%E0%B2%82%E0%B2%A6%E0%B2%BF%E0%B2%B0%E0%B2%BE%20%E0%B2%97%E0%B2%BE%E0%B2%82%E0%B2%A7%E0%B2%BF
ಇಂದಿರಾ ಗಾಂಧಿ
ಇಂದಿರಾ ಪ್ರಿಯದರ್ಶಿನಿ ಗಾಂಧಿಇಂದಿರಾ ಪ್ರಿಯದರ್ಶಿನಿ ಗಾಂಧಿ; ನಿ: ನೆಹರು; (೧೯ ನವೆಂಬರ್ ೧೯೧೭ – ೩೧ ಅಕ್ಟೋಬರ್ ೧೯೮೪) ೧೯೬೬ರಿಂದ ೧೯೭೭ರವೆಗೆ ಸತತ ಮೂರು ಬಾರಿ ಭಾರತ ಗಣತಂತ್ರ ದ ಪ್ರಧಾನ ಮಂತ್ರಿಯಾಗಿದ್ದರು ಮತ್ತು ನಾಲ್ಕನೇ ಬಾರಿ ೧೯೮೦ರಿಂದ ೧೯೮೪ರಲ್ಲಿ ನಡೆದ ಅವರ ಹತ್ಯೆಯವರೆಗೆ, ಒಟ್ಟು ಹದಿನೈದು ವರ್ಷಗಳ ಕಾಲ, ಪ್ರಧಾನ ಮಂತ್ರಿಯಾಗಿ ಅಧಿಕಾರದಲ್ಲಿದ್ದರು. ಅವರು ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ. ಇಂದಿನವರೆಗೆ ಆ ಸ್ಥಾನ ಅವರ ಪಾಲಿನದ್ದೇ ಆಗಿದೆ. ಅವರು ಮಹಾತ್ಮ ಗಾಂಧಿ ಅವರ ಸಂಬಂಧಿಕಳಲ್ಲ. ಮನೆತನ ರಾಜಕೀಯ ಪ್ರಭಾವವಿದ್ದ ನೆಹರು ಕುಟುಂಬದಲ್ಲಿ ಅವರ ಜನನ. ಬೆಳೆದದ್ದು ತೀಕ್ಷ್ಣ ರಾಜಕೀಯ ವಾತಾವರಣದಲ್ಲಿ. ಮೋತಿಲಾಲ್ ನೆಹರು ಈಕೆಯ ಅಜ್ಜ. ಅವರೊಬ್ಬ ಪ್ರಮುಖ ಭಾರತೀಯ ರಾಷ್ಟ್ರೀಯ ಮುಖಂಡ. ಭಾರತೀಯ ಸ್ವಾತಂತ್ರ್ಯ ಚಳವಳಿಯ ಪ್ರಮುಖ ಮುಂದಾಳು ಮತ್ತು ಸ್ವತಂತ್ರ ಭಾರತದ ಪ್ರಥಮ ಪ್ರಧಾನ ಮಂತ್ರಿ ಜವಾಹರ್‌ಲಾಲ್ ನೆಹರು ಇಂದಿರಾಗಾಂಧಿಯವರ ತಂದೆ. ೧೯೪೧ರಲ್ಲಿ ಆಕ್ಸ್‌ಫರ್ಡ್ನಿಂದ ಭಾರತಕ್ಕೆ ಹಿಂದಿರುಗಿದ ನಂತರ ಈಕೆ ಭಾರತೀಯ ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು. ೧೯೫೦ರ ದಶಕದಲ್ಲ್ಲಿ, ಮೊದಲ ಭಾರತದ ಪ್ರಧಾನ ಮಂತ್ರಿಯಾಗಿದ್ದಾಗ ಅವರ ತಂದೆಗೆ ವೈಯಕ್ತಿಕ ಸಹಾಯಕರಾಗಿ ಅನಧಿಕೃತ ಸೇವೆ ಸಲ್ಲಿಸಿದರು.೧೯೬೪ರಲ್ಲಿ ಅವರ ತಂದೆಯ ನಿಧನ. ನಂತರ ಭಾರತದ ರಾಷ್ಟ್ರಪತಿಯಿಂದ ರಾಜ್ಯಸಭೆಯ ಸದಸ್ಯರಾಗಿ ಇವರ ನೇಮಕ. ಮುಂದೆ ವಾರ್ತಾ ಮತ್ತು ಪ್ರಸಾರ ಖಾತೆ ಮಂತ್ರಿಯಾಗಿ ಲಾಲ್ ಬಹಾದ್ದೂರ್ ಶಾಸ್ತ್ರಿ ಸಚಿವ ಸಂಪುಟದ ಸದಸ್ಯೆ. ರಾಜಕೀಯ ವಲಯದಲ್ಲಿ ಶಾಸ್ತ್ರಿಯವರ ಹಠಾತ್ ಮರಣಾನಂತರ ಇಂದಿರಾಗಾಂಧಿ ಪ್ರಧಾನ ಮಂತ್ರಿಯಾದರು. ಇವರನ್ನು ಪ್ರಧಾನಿ ಗದ್ದುಗೆಗೇರಿಸುವಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಕೆ.ಕಾಮರಾಜ್ಅವರದ್ದು ಪ್ರಮುಖ ಪಾತ್ರ. ಗಾಂಧಿ ಯವರಿಂದ ಜನಾನುರಾಗಿ ರಾಜಕೀಯ ಸಿದ್ಧಾಂತಸ್ಥಾಪನೆ. ಚತುರ ಎದುರಾಳಿಗಳ ವಿರುದ್ಧ ಚುನಾವಣೆ ಗೆಲ್ಲುವಲ್ಲಿ ತನ್ನ ಸಾಮರ್ಥ್ಯದ ಪ್ರದರ್ಶನ. ಅವರಿಂದ ಹೆಚ್ಚು ಎಡ-ಪಕ್ಷೀಯ ಆರ್ಥಿಕ ನೀತಿಗಳ ಅನುಷ್ಠಾನ ಮತ್ತು ಕೃಷಿ ಉತ್ಪಾದಕತೆಗೆ ಬೆನ್ನು ತಟ್ಟಿ ಪ್ರೋತ್ಸಾಹ. ೧೯೭೧ರಲ್ಲಿ ಪಾಕಿಸ್ಥಾನದೊಂದಿಗೆ ನಡೆದ ಕದನದಲ್ಲಿ ಭಾರತದ್ದು ನಿರ್ಣಾಯಕ ಗೆಲುವು. ಈ ಸಂದರ್ಭದಲ್ಲಿ ಇಂದಿರಾ ಪ್ರಧಾನ ಮಂತ್ರಿ. ೧೯೭೫ ಅವರ ಪಾಲಿಗೆ ಒಂದು ಅಭದ್ರತೆಯ ಅವಧಿ. ಇದರಿಂದಾಗಿ ಆಗ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿಕೆ. ದೀರ್ಘ ಕಾಲೀನ ನಿರಂಕುಶ ಪ್ರಭುತ್ವ. ಪರಿಣಾಮವಾಗಿ, ಸೋಲರಿಯದ ಕಾಂಗ್ರೆಸ್ ಪಕ್ಷಕ್ಕೆ 1977ರ ಸಾರ್ವತ್ರಿಕ ಚುನಾವಣೆಯಲ್ಲಿ ಪರಾಭವ. 1980 ಚುನಾವಣೆ ಯಲ್ಲಿ ಕಾಂಗ್ರೆಸ್‌ಗೆ ಮತ್ತೆ ಜಯ. ಪ್ರಧಾನ ಮಂತ್ರಿ ಅಧಿಕಾರ ಮತ್ತೆ ಇಂದಿರಾ ಗಾಂಧಿ ಕೈಗೆ. ೧೯೮೪ ಜೂನ್‌ನಲ್ಲಿ, ದಂಗೆಕೋರರನ್ನು ಬಂಧಿಲೆಂದು ಗಾಂಧಿ ಆದೇಶದ ಮೇರೆಗೆ ಸಿಖ್‌ರ ಪವಿತ್ರ ಸ್ವರ್ಣ ಮಂದಿರದೊಳಕ್ಕೆ ಭಾರತೀಯ ಸೇನಾ ಪಡೆಯಿಂದ ಬಲವಂತ ಪ್ರವೇಶ. ಈ ಕಾರ್ಯಾಚರಣೆಯ ಪ್ರತೀಕಾರವಾಗಿ ೧೯೮೪ ಅಕ್ಟೋಬರ್ ೩೧ರಂದು ಇಂದಿರಾ ಗಾಂಧಿ ಹತ್ಯೆಗೆ ತುತ್ತಾದರು. ಆರಂಭಿಕ ಜೀವನ ಭಾರತದಲ್ಲಿನ ಬೆಳವಣಿಗೆ ಇಂದಿರಾಗಾಂಧಿ 1917 ನವೆಂಬರ್ 19ರಂದು ಪಂಡಿತ್ ಜವಾಹರ್‌ಲಾಲ್ ನೆಹರು ಮತ್ತು ಕಮಲಾ ನೆಹರು ಅವರಿಗೆ ಜನಿಸಿದರು. ಈ ದಂಪತಿಗಳಿಗೆ ಇಂದಿರಾ ಏಕಮಾತ್ರ ಪುತ್ರಿ. ನೆಹರು ಅವರದು ಗೌರವಾನ್ವಿತ ಕಾಶ್ಮೀರಿ ಪಂಡಿತ್ ಕುಟುಂಬ. ಇವರು ಜನಿಸಿದಾಗ, ಅಜ್ಜ ಮೋತಿಲಾಲ್ ನೆಹರು ಮತ್ತು ತಂದೆ ಜವಾಹರ್‌ಲಾಲ್ ನೆಹರು, ಇಬ್ಬರೂ ಪ್ರಭಾವಿ ರಾಜಕೀಯ ಮುಖಂಡರು. ಗಾಂಧಿ ಬಾಲ್ಯವನ್ನು ನೆಹರು ಕುಟುಂಬದ ಮನೆ ಆನಂದ ಭವನದಲ್ಲಿ ಕಳೆಯತ್ತಾ ಬೆಳೆದರು. ಈ ಸಂದರ್ಭದಲ್ಲಿ ತೀಕ್ಷ್ಣ ರಾಜಕೀಯ ವಾತಾವರಣ ಆ ಮನೆಯಲ್ಲಿ ನೆಲೆಸಿತ್ತು. ನೆಹರು ಮನೆಮಂದಿಯಿಂದ ದೂರ ಉಳಿದಿದ್ದ ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯ ಪ್ರೀತಿಯಲ್ಲಿ ಬೆಳೆದ ಇಂದಿರಾ ದೃಢ ರಕ್ಷಣಾತ್ಮಕ ಸ್ವಭಾವವನ್ನೂ ಮತ್ತು ಏಕಾಂಗಿ ವ್ಯಕ್ತಿತ್ವವನ್ನೂ ರೂಢಿಸಿಕೊಂಡಿದ್ದರು. ನೆಹರು ಮನೆಯಲ್ಲಿ ಆಗ ರಾಜಕೀಯ ಚಟುವಟಿಕೆಯ ಪ್ರವಾಹ. ಹೀಗಾಗಿ ಕುಟುಂಬದವರೊಂದಿಗೆ ಬೆರೆಯಲು ಆಗುತ್ತಿರಲಿಲ್ಲ. ವಿಜಯಲಕ್ಷ್ಮಿ ಪಂಡಿತ್‌ರನ್ನೂ ಒಳಗೊಂಡಂತೆ, ಇವರು ತಮ್ಮ ತಂದೆಯ ಸೋದರಿಯರೊಂದಿಗೆ, ವೈಯಕ್ತಿಕ ಭಿನ್ನಾಪ್ರಾಯ ಹೊಂದಿದ್ದರು. ಅವರೊಂದಿಗಿನ ಈ ಬಗೆಯ ಸಂಬಂಧವು ರಾಜಕೀಯ ಜಗತ್ತಿನಲ್ಲೂ ಹಾಗೇ ಮುಂದುವರಿಯಿತು. 'ನಾನು ಸೆರೆಮನೆಯಲ್ಲಿದ್ದಾಗ ಪೋಲೀಸರು ಪದೇ ಪದೇ ಮನೆಗೆ ಬಂದು, ಸರಕಾರ ಅವರಿಗೆ ವಿಧಿಸಿದ ದಂಡ ಪಾವತಿಯ ಪ್ರತಿಯಾಗಿ ಪೀಠೋಪಕರಣಗಳನ್ನು ತೆಗೆದುಕೊಂಡು ಹೋಗುತ್ತಿದ್ದರು'-ಎಂದು ಇವರ ತಂದೆ ತಮ್ಮ ಆತ್ಮಚರಿತ್ರೆ ಟುವರ್ಡ್ ಫ್ರೀಡಮ್ ‌ನಲ್ಲಿ ಬರೆಯುತ್ತಾರೆ. "ನನ್ನ ನಾಲ್ಕು-ವರ್ಷದ ಮಗಳು ಇಂದಿರಾ ಹೀಗೆ ನಡೆಯುತ್ತಿದ್ದ ಸತತ ಲೂಟಿಯಿಂದ ತುಂಬಾ ನೊಂದಿದ್ದಳು. ತೀವ್ರ ಅಸಂತೋಷವನ್ನು ವ್ಯಕ್ತಪಡಿಸಿದ್ದ ಅವಳು ಪೊಲೀಸರ ವಿರುದ್ಧ ಪ್ರತಿಭಟಿಸಿದ್ದಳು" ಎಂದು ನೆಹರು ಹೇಳುತ್ತಾರೆ. "ಬಾಲ್ಯದಲ್ಲಿ ಉಂಟಾದ ಅಚ್ಚಳಿಯದಂಥ ಈ ಬಗೆಯ ನೆನಪು ಪೋಲೀಸ್ ವ್ಯವಸ್ಥೆಯ ಬಗ್ಗೆ ಅವಳಲ್ಲಿ ವಿಭಿನ್ನ ದೃಷ್ಟಿಯನ್ನೇ ಸೃಷ್ಟಿಸುವುದೇನೋ ಎಂಬುದು ನನ್ನ ಕಳಕಳಿಯಾಗಿತ್ತು". ಇಂದಿರಾ ಯುವಕ ಮತ್ತು ಯುವತಿಯರಿಗಾಗಿ ವಾನರ ಸೇನೆ ಚಳವಳಿಗೆ ಚಾಲನೆ ನೀಡಿದರು. ಅದು ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪುಟ್ಟ ಆದರೆ ಗಮನಾರ್ಹ ಪಾತ್ರ ವಹಿಸಿತು. ಸೂಕ್ಷ್ಮ ಮಾಹಿತಿ ಪ್ರಕಟಣೆಗಳನ್ನು ಮತ್ತು ನಿರ್ಬಂಧಿತ ಸಂಗತಿಗಳನ್ನು ಪ್ರಸಾರ ಮಾಡಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಸದಸ್ಯರಿಗೆ ನೆರವಾಯಿತು. ಧ್ವಜ ಪಥ ಸಂಚಲನ ನಡೆಸಿತು ಮತ್ತು ಪ್ರತಿಭಟನೆಗಳನ್ನು ಹಮ್ಮಿಕೊಂಡಿತು. ತಂದೆಯ ಮನೆಯಿಂದ ಶಾಲಾ ಚೀಲದಲ್ಲಿ ಪ್ರಮುಖ ಕ್ರಾಂತಿಯ ಆರಂಭಕ್ಕಾಗಿ ರೂಪುರೇಷೆ ಸಿದ್ಧವಾಗಿದ್ದ ಯೋಜನೆಗಳ ಪ್ರಮುಖ ದಾಖಲೆಯನ್ನು ಪೊಲೀಸರ ಮೂಗಿನಡಿಯಲ್ಲೇ ರಹಸ್ಯವಾಗಿ ಇಂದಿರಾ ಸಾಗಿಸಿದ್ದರು. ಇದು 1930ರಲ್ಲಿನ ಕ್ರಾಂತಿಗೆ ಪ್ರೇರಣೆ ನೀಡಿತು ಎಂಬುದೊಂದು ಮಾತು ಜನಜನಿತ. ಯುರೋಪ್‌ನಲ್ಲಿ ವ್ಯಾಸಂಗ ಇಂದಿರಾಗಾಂಧಿ ತಾಯಿ ಕಮಲಾ ನೆಹರು ಬಹಳ ದಿನದ ಹೆಣಗಾಟದ ನಂತರ 1936ರಲ್ಲಿ ಕ್ಷಯ ರೋಗಕ್ಕೆ ಬಲಿಯಾದರು. ಇಂದಿರಾಗೆ ಆಗಿನ್ನೂ 18 ವರ್ಷ. ಹೀಗಾಗಿ ಇವರು ಬಾಲ್ಯದಲ್ಲಿ ಸುಭದ್ರ ಕುಟುಂಬ ಜೀವನದ ಸುಖವನ್ನು ಅನುಭವಿಸಲಿಲ್ಲ. ಇಂಗ್ಲೆಂಡ್‌ನ, ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಸೊಮರ್‌ವಿಲ್ಲೆ ಕಾಲೇಜಿನಲ್ಲಿ 1930ರ ಉತ್ತರಾರ್ಧದಲ್ಲಿ ವ್ಯಾಸಂಗ ನಿರತರಾಗಿದ್ದಾಗ ಅವರು ಲಂಡನ್ ಮೂಲದ ತೀವ್ರಗಾಮಿ ಸ್ವಾತಂತ್ರ-ಪರವಾದ ಇಂಡಿಯಾ ಲೀಗ್ (= ಭಾರತೀಯ ಒಕ್ಕೂಟ)ನ ಸದಸ್ಯರಾಗಿದ್ದರು. ಇಂದಿರಾ ಅವರ ವ್ಯಕ್ತಿತ್ವ 1940ರ ಆರಂಭದಲ್ಲಿ ಇಂದಿರಾ ಅವರು ದೀರ್ಘಕಾಲೀನ ಶ್ವಾಸಕೋಶ ಕಾಯಿಲೆಯಿಂದ ಗುಣಮುಖರಾಗಲು ಸ್ವಿಜರ್‌ಲ್ಯಾಂಡ್‌ನ ಮನೆಯೊಂದರಲ್ಲಿ ಕೆಲವು ದಿನ ತಂಗಿದರು. ಇವರು ದೂರದಲ್ಲಿದ್ದ ತಂದೆಯೊಂದಿಗೆ ಉದ್ದುದ್ದ ಪತ್ರಗಳನ್ನು ಬರೆಯುವ ಹವ್ಯಾಸ ಇಟ್ಟುಕೊಂಡಿದ್ದರು. ಇದು ಬಾಲ್ಯದಲ್ಲೇ ಅವರು ರೂಢಿಸಿಕೊಂಡಿದ್ದರ ಮುಂದುವರಿಕೆ. ತಂದೆ ಮಗಳ ಮಧ್ಯೆ ರಾಜಕೀಯದ ಬಗ್ಗೆ ಚರ್ಚೆ ನಡೆಯುತ್ತಿತ್ತು. ಅವರು ಯುರೋಪ್ ಖಂಡ ಮತ್ತು UKಯಲ್ಲಿದ್ದಾಗ, ರಾಜಕೀಯದಲ್ಲಿ ಕ್ರಿಯಾಶೀಲವಾಗಿದ್ದ ಪಾರ್ಸಿ ತರುಣ ಫಿರೋಜ್ ಗಾಂಧಿಯನ್ನು ಭೇಟಿಯಾದರು (ಅವರು ಮೋಹನ್‌ದಾಸ್ ಗಾಂಧಿಅವರ ದತ್ತುಪುತ್ರ). ಭಾರತಕ್ಕೆ ಹಿಂದಿರುಗಿದ ನಂತರ, ಫಿರೋಜ್ ಗಾಂಧಿಯವರು ನೆಹರು ಕುಟುಂಬಕ್ಕೆ ತುಂಬಾ ಹತ್ತಿರವಾದರು, ವಿಶೇಷವಾಗಿ ಇಂದಿರಾರವರ ತಾಯಿ ಕಮಲಾ ನೆಹರುರವರಿಗೆ ಮತ್ತು ಇಂದಿರಾರವರಿಗೂ ಸಹ. ಫಿರೋಜ್ ಗಾಂಧಿ ಜೊತೆ ಮದುವೆ ಇಂದಿರಾ ಮತ್ತು ಫಿರೋಜ್ ಗಾಂಧಿಯವರು ಭಾರತಕ್ಕೆ ಹಿಂದಿರುಗಿದಾಗ, ಪರಸ್ಪರ ಪ್ರೀತಿಸುತ್ತಿದ್ದರು. ವೈದ್ಯರ ಸೂಚನೆಯನ್ನೂ ಮೀರಿ ಅವರು ಮದುವೆಯಾಗಲು ನಿರ್ಧರಿಸಿದರು. ಫಿರೋಜ್ ಗಾಂಧಿಯವರಲ್ಲಿದ್ದ ಮುಕ್ತ ಮನೋಭಾವ, ಹಾಸ್ಯ ಪ್ರಜ್ಞೆ ಮತ್ತು ಆತ್ಮ-ವಿಶ್ವಾಸವನ್ನು ಇಂದಿರಾ ಇಷ್ಟಪಟ್ಟರು. ತಮ್ಮ ಮಗಳು ಅಷ್ಟು ಬೇಗ ಮದುವೆಯಾಗುವ ಆಲೋಚನೆ ನೆಹರುಗೆ ಇಷ್ಟವಾಗಲಿಲ್ಲ. ಈ ಪ್ರೇಮ ವಿವಾಹವನ್ನು ತಪ್ಪಿಸಲು ಮಹಾತ್ಮಾಗಾಂಧಿಯವರ ಸಹಾಯವನ್ನು ಪಡೆಯಲು ಅವರು ಪ್ರಯತ್ನಿಸಿದರು. ಇಂದಿರಾ ಹಠ ಹಿಡಿದರು. 1942 ಮಾರ್ಚ್‌ನಲ್ಲಿ ಹಿಂದು ಆಚರಣೆಯಂತೆ ಮದುವೆ ನೆರವೇರಿತು. ಫಿರೋಜ್ ಮತ್ತು ಇಂದಿರಾ ಇಬ್ಬರೂ ಸಹ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸದಸ್ಯರಾಗಿದ್ದರು. 1942ರಲ್ಲಿ ನಡೆದ 'ಭಾರತ ಬಿಟ್ಟು ತೊಲಗಿ' ಚಳವಳಿಯಲ್ಲಿ ಭಾಗವಹಿಸಿದಾಗ ಅವರಿಬ್ಬರೂ ಬಂಧನಕ್ಕೊಳಗಾದರು. ಸ್ವಾತಂತ್ರ್ಯಾ ನಂತರ, ಫಿರೋಜ್‌ ಚುನಾವಣಾ ಕಣಕ್ಕೆ ಇಳಿದರು. ಉತ್ತರ ಪ್ರದೇಶದಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾದರು. ಅವರ ಇಬ್ಬರು ಮಕ್ಕಳಾದ ರಾಜೀವ್ ಗಾಂಧಿ ಮತ್ತು ಸಂಜಯ್ ಗಾಂಧಿ ಹುಟ್ಟಿದ ನಂತರ, ಬಿಗಡಾಯಿಸಿದ ಅವರ ಸಂಬಂಧ ಬೇರ್ಪಡುವಷ್ಟರ ಮಟ್ಟಿಗೆ ಬಂತು. ಮರು-ಚುನಾಯಿತರಾದ ಸ್ವಲ್ಪ ದಿನಗಳಲ್ಲೇ ಫಿರೋಜ್‌ ಹೃದಯಾಘಾತಕ್ಕೆ ಈಡಾದರು. ಇದರಿಂದ ಮತ್ತೆ ರಾಜಿಯಾದರು. ಇವರಿಬ್ಬರ ಸಂಬಂಧ ಫಿರೋಜ್ ಗಾಂಧಿ 1960ರ ಸೆಪ್ಟೆಂಬರ್‌ನಲ್ಲಿ ನಿಧನರಾಗುವ ಕೆಲವು ವರ್ಷಗಳ ಮುಂದಿನವರೆಗೆ ಉಳಿದಿತ್ತು. ಮುಖಂಡತ್ವದ ಆರಂಭ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರು 1959 ಮತ್ತು 1960ರಲ್ಲಿ ಗಾಂಧಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಚುನಾವಣೆಗೆ ನಿಂತು ಅಧ್ಯಕ್ಷರಾಗಿ ಚುನಾಯಿತರಾದರು. ಅವರ ಅಧಿಕಾರಾವಧಿಯಲ್ಲಿ ವಿಶೇಷ ಘಟನೆಗಳೇನೂ ಸಂಭವಿಸಲಿಲ್ಲ. ತಮ್ಮ ತಂದೆಯ ಸಿಬ್ಬಂದಿ ವರ್ಗದ ಮುಖ್ಯಸ್ಥರಾಗಿಯೂ ಅವರು ಸೇವೆ ಸಲ್ಲಿಸಿದ ರು. ನೆಹರುರವರು ಸ್ವಜನ ಪಕ್ಷಪಾತವನ್ನು ಬಹಿರಂಗವಾಗಿ ವಿರೋಧಿಸುತ್ತಿದ್ದರು. ಗಾಂಧಿಯವರು 1962ರ ಚುನಾವಣೆಯಲ್ಲಿ ಭಾಗವಹಿಸಲಿಲ್ಲ. ವಾರ್ತಾ ಮತ್ತು ಪ್ರಸಾರ ಖಾತೆ ಮಂತ್ರಿ 1964 ಮೇ 27ರಂದು ನೆಹರು ನಿಧನರಾದರು. ನೂತನ ಪ್ರಧಾನ ಮಂತ್ರಿಯಾಗಿದ್ದ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಒತ್ತಾಯಕ್ಕೆ ಮಣಿದ ಇಂದಿರಾ ಚುನಾವಣೆಯಲ್ಲಿ ಸ್ಫರ್ಧಿಸಿದರು ಮತ್ತು ಸರಕಾರವನ್ನು ಸೇರಿದರು. ವಾರ್ತಾ ಮತ್ತು ಪ್ರಸಾರ ಖಾತೆ ಮಂತ್ರಿಯಾಗಿ ಅವರು ನೇಮಕಗೊಂಡರು. ಹಿಂದಿಯನ್ನು ರಾಷ್ಟ್ರಭಾಷೆ ಎಂದು ಘೋಷಿಸಿದ್ದರ ಪರಿಣಾಮವಾಗಿ ತಮಿಳುನಾಡಿನಲ್ಲಿ ದೊಂಬಿಯೆದ್ದಿತು. ಹಿಂದಿ ಮಾತನಾಡದ ತಮಿಳುನಾಡು ರಾಜ್ಯದ ರಾಜಧಾನಿ ಮದ್ರಾಸ್‌ಗೆ ಆ ಸಂದರ್ಭದಲ್ಲಿ ಅವರು ಭೇಟಿ ನೀಡಿದ್ದರು.ಅಲ್ಲಿ ಅವರು ಸರಕಾರಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಮುದಾಯ ಮುಖಂಡರ ಕೋಪವನ್ನು ಶಮನಗೊಳಿಸಿದರು. ಗಲಭೆಯಿಂದಾಗಿ ಹಾನಿಗೀಡಾದ ಪ್ರದೇಶಗಳ ಮರು-ನಿರ್ಮಾಣದ ಮೇಲ್ವಿಚಾರಣೆ ವಹಿಸಿದರು. ಇಂಥ ಉಪಕ್ರಮಕ್ಕೆ ಹೆಜ್ಜೆ ಇಡದ ಶಾಸ್ತ್ರಿ ಮತ್ತು ಅವರ ಸಂಪುಟದ ಹಿರಿಯ ಸಚಿವರು ಮುಜುಗರಕ್ಕೆ ಒಳಗಾದರು. ಗಾಂಧಿಯವರ ಈ ಕ್ರಿಯಾಶೀಲತೆ ಬಹುಶಃ ನೇರವಾಗಿ ಶಾಸ್ತ್ರಿಯವರಿಗೇ ಗುರಿ ಇಟ್ಟಿದ್ದಾಗಲೀ ಅಥವಾ ತಮ್ಮ ಸ್ವಂತ ರಾಜಕೀಯ ಉನ್ನತಿಯನ್ನು ಬಯಸಿದ್ದಾಗಲೀ ಆಗಿರಲಿಲ್ಲ. ತಮ್ಮ ಸಚಿವಾಲಯದ ನಿತ್ಯದ ಕೆಲಸ-ಕಾರ್ಯಗಳಲ್ಲಿ ಅವರು ಆಸಕ್ತಿ ಕಳೆದುಕೊಂಡರು ಎಂಬ ವರದಿಗಳೂ ಇವೆ. ಮಾಧ್ಯಮದ ಅರಿವಿದ್ದ ಅವರು ರಾಜಕಾರಣದ ಕಲೆ ಮತ್ತು ವ್ಯಕ್ತಿತ್ವ-ರೂಪಿಸುವ ನೈಪುಣ್ಯ ಹೊಂದಿದ್ದರು. "1965ರ ನಂತರ ಗಾಂಧಿ ಮತ್ತು ಅವರ ಪ್ರತಿಸ್ಫರ್ಧಿಗಳ ನಡುವೆ ಹೋರಾಟವೇ ನಡೆಯಿತು. ಅನೇಕ ರಾಜ್ಯಗಳಲ್ಲಿ ಮೇಲ್ಜಾತಿಗೆ ಸೇರಿದ ಮುಖಂಡರನ್ನು ಕೆಳಕ್ಕಿಳಿಸಿ ಆ ಸ್ಥಾನಗಳಲ್ಲಿ ಹಿಂದುಳಿದ ಜಾತಿಯ ನಾಯಕರನ್ನು ನೇಮಿಸಲು ಕೇಂದ್ರೀಯ ಕಾಂಗ್ರೆಸ್ (ಪಕ್ಷ) ಮುಖಂಡತ್ವವು ಮುಂದಾಯಿತು. ಜೊತೆಗೆ, ಪ್ರತಿಪಕ್ಷ ಮತ್ತು ತಮ್ಮ ಎದುರಾಳಿಗಳನ್ನು ಸೋಲಿಸಲು ಹಿಂದುಳಿದವರ ಮತ ಸಂಗ್ರಹಿಸುವಲ್ಲಿ ಕಾರ್ಯೊನ್ಮುಖರಾದರು. ಇಂಥ ಹಸ್ತಕ್ಷೇಪ ಕೆಲವೊಮ್ಮೆ ಸಾಮಾಜಿಕ ಪ್ರಗತಿಪರ ಹೆಜ್ಜೆಯಂತೆ ಕಂಡರೂ ಪ್ರಾದೇಶಿಕವಾದ ಮತ್ತು ಜನಾಂಗೀಯವಾದ ಸಂಘರ್ಷ ಗಾಢವಾಗಿ ಬೆಳೆಯಲು ಕಾರಣವಾಯಿತು. 1965ರ ಭಾರತ-ಪಾಕಿಸ್ಥಾನ ಯುದ್ಧ ನಡೆಯುತ್ತಿದ್ದಾಗ, ಗಾಂಧಿ ಶ್ರೀನಗರದ ಗಡಿ ಪ್ರದೇಶದಲ್ಲಿ ವಿಹಾರ ನಡೆಸಿದ್ದರು. ಪಾಕಿಸ್ಥಾನಿ ದಂಗೆಕೋರರು ನಗರದ ಹತ್ತಿರಕ್ಕೆ ನುಸುಳಿ ಬಂದಿದ್ದಾರೆ ಎಂದು ಸೇನೆಯು ಎಚ್ಚರಿಕೆ ನೀಡಿದರೂ ಸಹ, ಅದನ್ನು ಲೆಕ್ಕಿಸದ ಅವರು ಜಮ್ಮು ಅಥವಾ ದೆಹಲಿಗೆ ವಾಸ್ತವ್ಯ ಸ್ಥಳಾಂತರಿಸಲು ನಿರಾಕರಿಸಿದರು. ಬದಲಿಗೆ ಸ್ಥಳೀಯ ಆಡಳಿತ ಯಂತ್ರವನ್ನು ಪುನಶ್ಚೇತನಗೊಳಿಸುತ್ತಾ ಮಾಧ್ಯಮದ ಗಮನವನ್ನು ತಮ್ಮತ್ತ ಸೆಳೆದರು. ಪಾಕಿಸ್ಥಾನದ ದಾಳಿಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸ ಲಾಯಿತು, ಮತ್ತು ಪ್ರಧಾನ ಮಂತ್ರಿ ಶಾಸ್ತ್ರಿಯವರು 1966 ಜನವರಿಯಲ್ಲಿ ಪಾಕಿಸ್ಥಾನದ ಆಯೂಬ್ ಖಾನ್‌ರೊಂದಿಗೆ ತಾಷ್ಕೆಂಟ್‌ನಲ್ಲಿ, ಸೋವಿಯತ್ ಸಮ್ಮುಖದಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದರು. ಇದಾದ ಕೆಲವೇ ಗಂಟೆಗಳ ನಂತರ, ಶಾಸ್ತ್ರಿ ಹೃದಯಾಘಾತಕ್ಕೀಡಾಗಿ ನಿಧನರಾದರು. ಮೊರಾರ್ಜಿ ದೇಸಾಯಿಯವರ ವಿರೋಧದ ನಡುವೆಯೂ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಕೆ. ಕಾಮರಾಜ್‌ ಅವರು ಇಂದಿರಾ ಗಾಂಧಿಯನ್ನು ಪ್ರಧಾನ ಮಂತ್ರಿ ಗದ್ದುಗೆಗೆ ಏರಿಸುವಲ್ಲಿ ಸಕ್ರಿಯ ಪಾತ್ರ ವಹಿಸಿದರು.ಕಾಂಗ್ರೆಸ್ ಸಂಸದೀಯ ಪಕ್ಷದಲ್ಲಿ ನಡೆದ ಚುನಾವಣೆಯಲ್ಲಿ ಇಂದಿರಾ ಜಯಶೀಲರಾದರು. ಮೊರಾರ್ಜಿ ದೇಸಾಯಿಯವರ 169 ಮತಕ್ಕೆ ಎದುರಾಗಿ ಇವರು 355 ಮತಗಳನ್ನು ಪಡೆಯುವ ಮೂಲಕ ಭಾರತದ ಐದನೇ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಭಾರತದ ಮೊದಲ ಮಹಿಳಾ ಪ್ರಧಾನಿ ಎಂಬ ಕೀರ್ತಿಗೆ ಭಾಜನ ರಾದರು. ಪ್ರಧಾನ ಮಂತ್ರಿ ಮೊದಲ ಅವಧಿ ದೇಶೀಯ ನೀತಿ 1966ರಲ್ಲಿ ಗಾಂಧಿ ಪ್ರಧಾನ ಮಂತ್ರಿಯಾದಾಗ ಕಾಂಗ್ರೆಸ್ ಎರಡು ಹೋಳಾಯಿತು. ಒಂದು ಬಣ ಗಾಂಧಿ ನೇತೃತ್ವದ ಸಮಾಜವಾದಿಗಳದ್ದು ಮತ್ತೊಂದು ಬಣ ಮೊರಾರ್ಜಿ ದೇಸಾಯಿ ನೇತೃತ್ವದ ಸಂಪ್ರದಾಯವಾದಿಗಳದ್ದು.ರಾಮ್‌ಮನೋಹರ್ ಲೋಹಿಯ ಇವರನ್ನು ಗುಂಗಿ ಗುಡಿಯ ಅಂದರೆ 'ಮೂಕಬೊಂಬೆ' ಎಂದು ಕರೆದರು. ಆಂತರಿಕ ಸಮಸ್ಯೆಗಳಿಂದಾದ ಪರಿಣಾಮ, 1967ರ ಚುನಾವಣೆ ಫಲಿತಾಂಶದಲ್ಲ್ಲಿಕಾಣಿಸಿಕೊಂಡಿತು. ಲೋಕಸಭೆಯ 545 ಸ್ಥಾನ ಗಳಲ್ಲಿ ಕಾಂಗ್ರೆಸ್ 297 ಸ್ಥಾನಗಳನ್ನು ಗೆದ್ದಿತಾದರೂ ಸುಮಾರು 60 ಸ್ಥಾನಗಳನ್ನು ಕಳೆದುಕೊಂಡಿತು. ಅವರು ದೇಸಾಯಿಯವರಿಗೆ ಭಾರತದ ಉಪಪ್ರಧಾನ ಮಂತ್ರಿ ಹುದ್ದೆ ಮತ್ತು ಹಣಕಾಸು ಖಾತೆ ಮಂತ್ರಿಯಾಗುವ ಅವಕಾಶ ನೀಡಬೇಕಾದ ಸಂದರ್ಭ ಒದಗಿ ಬಂತು. ದೇಸಾಯಿ ಅವರೊಂದಿಗೆ ಹಲವು ಭಿನ್ನಾಭಿಪ್ರಾಯದ ನಂತರ 1969ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ವಿಭಜನೆಗೆ ಈಡಾಯಿತು. ಅವರು ಸಮಾಜವಾದಿ ಮತ್ತು ಕಮ್ಯೂನಿಸ್ಟ್ ಪಕ್ಷಗಳ ಬೆಂಬಲದಿಂದ ಮುಂದಿನ ಎರಡು ವರ್ಷ ಆಡಳಿತ ನಡೆಸಿದರು. ಅದೇ ವರ್ಷ ಅಂದರೆ, 1969 ಜುಲೈನಲ್ಲಿ ಅವರು ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿದರು. 1971ರಲ್ಲಿ ಪಾಕಿಸ್ಥಾನದೊಂದಿಗೆ ಯುದ್ಧ ಪೂರ್ವ ಪಾಕಿಸ್ಥಾನದ ನಾಗರಿಕರ ವಿರುದ್ಧ ಪಾಕಿಸ್ಥಾನ ಸೇನಾ ಪಡೆ ವ್ಯಾಪಕ ದೌರ್ಜನ್ಯ ನಡೆಸಿತು. ಸುಮಾರು 10 ದಶಲಕ್ಷ ನಿರಾಶ್ರಿತರು ಭಾರತಕ್ಕೆ ವಲಸೆ ಬಂದು ದೇಶದಲ್ಲಿ ಅಭದ್ರತೆ ಸೃಷ್ಟಿಸಿದರು ಮತ್ತು ಆರ್ಥಿಕ ಮುಗ್ಗಟ್ಟಿಗೆ ಕಾರಣರಾದರು. ರಿಚರ್ಡ್ ನಿಕ್ಸನ್‌ ನೇತೃತ್ವದ ಅಮೆರಿಕ ಸಂಯುಕ್ತ ಸಂಸ್ಥಾನ ಪಾಕಿಸ್ಥಾನಕ್ಕೆ ಬೆಂಬಲ ನೀಡಿತು ಮತ್ತು ಯುದ್ಧ ಮಾಡದ ಹಾಗೆ ಭಾರತಕ್ಕೆ ಎಚ್ಚರಿಕೆ ನೀಡುವ UN ನಿರ್ಣಯ ಕೈಗೊಂಡಿತು. ನಿಕ್ಸನ್‌ಗೆ ಇಂದಿರಾರನ್ನು ಕಂಡರೆ ವೈಯಕ್ತಿಕವಾಗಿ ಸ್ವಲ್ಪವೂ ಇಷ್ಟವಾಗುತ್ತಿರಲಿಲ್ಲ. ರಾಜ್ಯದ ಕಾರ್ಯದರ್ಶಿ ಹೆನ್ರಿ ಕಿಸಿಂಜರ್‌ ಜೊತೆಗಿನ ಖಾಸಗಿ ಸಂಪರ್ಕದಲ್ಲಿ ಇಂದಿರಾರನ್ನು "ಮಾಟಗಾತಿ" ಮತ್ತು "ಚತುರ ಗುಳ್ಳೆನರಿ" ಎಂದು ಟೀಕಿಸಿದ್ದಾರೆ (ಈ ಸಂಗತಿ ರಾಜ್ಯ ಆಡಳಿತ ವಿಭಾಗದಿಂದ ಈಗ ಹೊರಬಿದ್ದಿದೆ). ಸ್ನೇಹ ಮತ್ತು ಸಹಕಾರ ಒಪ್ಪಂದವೊಂದಕ್ಕೆ ಇಂದಿರಾ ಸಹಿ ಹಾಕಿದರು. ಇದರಿಂದ ರಾಜಕೀಯ ಬೆಂಬಲ ಮತ್ತು UNನಲ್ಲಿ ಸೋವಿಯತ್ ನಿರಾಕರಣಾಧಿಕಾರ ಸಿಕ್ಕಿತು. 1971ರ ಯುದ್ಧದಲ್ಲಿ ಭಾರತ ಜಯಗಳಿಸಿತು ಹಾಗೂ ಬಾಂಗ್ಲಾದೇಶ ಹುಟ್ಟಿಕೊಂಡಿತು. ವಿದೇಶೀ ನೀತಿ ಹೊಸ ಪಾಕಿಸ್ಥಾನಿ ಅಧ್ಯಕ್ಷ ಜುಲ್ಫಿಕಾರ್ ಆಲಿ ಭುಟ್ಟೊ ಅವರನ್ನು ಇಂದಿರಾ ವಾರಾವಧಿಯ ಶಿಮ್ಲಾ ಶೃಂಗ ಸಭೆಗೆ ಆಮಂತ್ರಿಸಿದರು. ಮಾತುಕತೆ ವಿಫಲವಾಯಿತಾದರೂ, ರಾಜ್ಯದ ಇಬ್ಬರು ಮುಖಂಡರು ಶಿಮ್ಲಾ ಒಪ್ಪಂದಕ್ಕೆ ಅಂತಿಮವಾಗಿ ಸಹಿ ಹಾಕಿದರು. ಮಾತುಕತೆ ಮತ್ತು ಶಾಂತಿ ಸಂಧಾನದ ಮೂಲಕ ಕಾಶ್ಮೀರ ವಿವಾದವನ್ನು ಪರಿಹರಿಸಿಕೊಳ್ಳಬೇಕು ಎಂದು ಅದು ಎರಡೂ ದೇಶಗಳನ್ನು ಪರಿಮಿತಿಯಲ್ಲಿಟ್ಟಿತು. ನಿಕ್ಸನ್‌ ಜೊತೆಗಿನ ಇವರ ಬದ್ಧ ದ್ವೇಷದಿಂದಾಗಿ, ಯುನೈಟೆಡ್ ಸ್ಟೇಟ್ಸ್‌ ಸಂಬಂಧವು ದೂರವಾಗುತ್ತಾ ಹೋಯಿತು ಮತ್ತು ಸೋವಿಯತ್ ಒಕ್ಕೂಟದೊಂದಿಗಿನ ಸಂಬಂಧವು ನಿಕಟವಾಯಿತು. ಗಡಿ ನಿಯಂತ್ರಣ ರೇಖೆಯನ್ನು ಶಾಶ್ವತ ಎಲ್ಲೆ ಎಂದು ಮಾಡದೇ ಇದ್ದುದಕ್ಕಾಗಿ ಕೆಲವರಿಂದ ಇಂದಿರಾ ಗಾಂಧಿ ಟೀಕೆಗೊಳಗಾದರು ಹಾಗೂ ಪಾಕಿಸ್ತಾನದಿಂದ ಆಕ್ರಮಿತವಾದ ಕಾಶ್ಮೀರದ ಭಾಗವನ್ನು ಪಾಕಿಸ್ಥಾನದಿಂದ ಹಿಂಪಡೆಯಬೇಕಿತ್ತು ಎಂದು ಇನ್ಕೆಲವರು ಅಭಿಪ್ರಾಯ ಪಟ್ಟರು. ಪಾಕಿಸ್ಥಾನದ 93,000 ಯುದ್ಧ ಕೈದಿಗಳು ಭಾರತದ ವಶದಲ್ಲಿದ್ದರು. ವಿವಾದ ಇತ್ಯರ್ಥಕ್ಕೆ ವಿಶ್ವಸಂಸ್ಥೆಯಾಗಲೀ ಅಥವಾ ಹೊರಗಿನವರು ಯಾರೇ ಆಗಲಿ ಮೂಗುತೂರಿಸುವುದನ್ನು ಒಪ್ಪಂದವು ತಕ್ಷಣವೇ ನಿವಾರಿಸಿತು. ಪಾಕಿಸ್ಥಾನ ಸದ್ಯದಲ್ಲೇ ಮಾಡಬಹುದಾದ ಭಾರೀ ದಾಳಿಯ ಸಂಭವನೀಯತೆಯನ್ನು ಇದು ತಗ್ಗಿಸಿತು. ಸಮಸ್ಯೆಯು ಸೂಕ್ಷ್ಮದ್ದಾದ್ದರಿಂದ ಸಂಪೂರ್ಣ ಶರಣಾಗತಿಯನ್ನು ಭುಟ್ಟೊರಿಂದ ಕೋರದೆ, ಅವರು ಪಾಕಿಸ್ಥಾನ ತಹಬಂದಿಗೆ ಬರಲು ಮತ್ತು ಸ್ಥಿರತೆ ಕಾಪಾಡಿಕೊಳ್ಳಲು ಅನುಮತಿಸಿದರು. ವ್ಯವಹಾರ ಸಂಬಂಧಗಳು ಮುಂದುವರಿಯಿತಾದರೂ ಹೆಚ್ಚಿನ ಸಂಪರ್ಕ-ಸಂಬಂಧಕ್ಕೆ ಎಷ್ಟೋ ವರ್ಷಗಳವರೆಗೆ ಬಾಗಿಲು ಮುಚ್ಚಿತ್ತು. ರೂಪಾಯಿ ಮೌಲ್ಯದಲ್ಲಿ ಇಳಿಕೆ ಇಂದಿರಾ ಆಡಳಿತ 1960ರ ಉತ್ತರಾರ್ಧದಲ್ಲಿ US ಡಾಲರ್ ಎದುರು ರುಪಾಯಿ ಮೌಲ್ಯವನ್ನು 40% ನಷ್ಟು ಇಳಿಸಿತು. ಒಂದು ಡಾಲರ್‌ಗೆ ಇದ್ದ ರೂ.4ರ ಬೆಲೆ ರೂ.7 ಆಯಿತು. ವಾಣಿಜ್ಯ ವರ್ಧನೆ ಇದರ ಉದ್ದೇಶವಾಗಿತ್ತು. ಪರಮಾಣು ಶಸ್ತ್ರ ಯೋಜನೆ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ (=ಚೀನಾ ಗಣತಂತ್ರ) ಒಡ್ಡಿದ ಪರಮಾಣು ಬೆದರಿಕೆಗೆ ಉತ್ತರವಾಗಿ ಮತ್ತು ಪರಮಾಣು ಬಲಿಷ್ಠ ರಾಷ್ಟ್ರಗಳು ಸ್ವತಂತ್ರವಾಗಿರುವಂತೆ ಭಾರತವೂ ತನ್ನ ಸ್ಥಿರತೆ ಮತ್ತು ಭದ್ರತಾ ಹಿತ ರಕ್ಷಣೆಯನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ 1967ರಲ್ಲಿ ರಾಷ್ಟ್ರೀಯ ಪರಮಾಣು ಯೋಜನೆಯನ್ನು ಗಾಂಧಿ ಪ್ರಾರಂಭಿಸಿದರು. 1974ರಲ್ಲಿ ಭಾರತವು ರಾಜಸ್ಥಾನದ ಪೊಖ್ರಾನ್‌ನ ಬಂಜರು ಹಳ್ಳಿಯಲ್ಲಿ 'ಸ್ಮೈಲಿಂಗ್ ಬುದ್ಧ'(="ಹಸನ್ಮುಖಿ ಬುದ್ಧ") ಎಂಬ ಅನಧಿಕೃತ ಕೋಡ್ ಹೆಸರು ಹೊಂದಿದ್ದ ರಹಸ್ಯ ಪರಮಾಣು ಪರೀಕ್ಷೆಯನ್ನು ಭೂಗರ್ಭದೊಳಗೆ ಯಶಸ್ವಿಯಾಗಿ ಮಾಡಿತು. ನಡೆಸಲಾದ ಪರೀಕ್ಷೆಯು ಶಾಂತಿಯ ಉದ್ಧೇಶಕ್ಕಾಗಿ ಎಂದು ವಿವರಿಸುತ್ತಾ, ಭಾರತವು ಪ್ರಪಂಚದ ಅತಿಕಿರಿಯ ಪರಮಾಣು ಶಕ್ತಿಯಾಗಿ ಹೊರಹೊಮ್ಮಿತು. ಹಸಿರು ಕ್ರಾಂತಿ ಕೃಷಿ ಕ್ಷೇತ್ರದಲ್ಲಿನ ವಿಶೇಷ ಹಾಗೂ ನವೀನ ಯೋಜನೆಗಳು ಮತ್ತು 1960ರಲ್ಲಿ ಬಿಡುಗಡೆಯಾದ ಸರಕಾರದ ಹೆಚ್ಚಿನ ಬೆಂಬಲ ಭಾರತವು ದೀರ್ಘಕಾಲದಿಂದ ಎದುರಿಸುತ್ತಿದ್ದ ಆಹಾರ ಕೊರತೆಯನ್ನು ನೀಗಿಸಿತು. ಜೊತೆಗೆ ಗೋಧಿ, ಭತ್ತ, ಹತ್ತಿ ಮತ್ತು ಹಾಲಿನ ಉತ್ಪಾದನೆಗೆ ಬೇಡಿಕೆಗಿಂತಲೂ ಅಧಿಕವಾಯಿತು. ಗಾಂಧಿಯವರು ನಿಕ್ಸನ್ ಅಧ್ಯಕ್ಷರಾಗಿ ಅಧಿಕಾರದಲ್ಲಿದ್ದ (ನಿಕ್ಸನ್‌ ಪಾಲಿಗೆ ಇಂದಿರಾ "ಮಾಟಗಾತಿ ಮುದುಕಿ", ಇಬ್ಬರದ್ದೂ ಪರಸ್ಪರ ಇಂಥ ಭಾವನೆಯೇ), ಯುನೈಟೆಡ್ ಸ್ಟೇಟ್ಸ್‌‌ ಅನ್ನು ಆಹಾರದ ನೆರವಿಗಾಗಿ ಅವಲಂಬಿಸುವ ಬದಲಿಗೆ ರಾಷ್ಟ್ರವು ಆಹಾರ ರಫ್ತು ಮಾಡುವ ಮಟ್ಟಕ್ಕೆ ಬೆಳೆಯಿತು. ವಾಣಿಜ್ಯ ಬೆಳೆ ಉತ್ಪಾದನೆಯ ವೈವಿಧ್ಯೀಕರಣವನ್ನೂ ಸಾಧಿಸಲಾ ಯಿತು. ಈ ಸಾಧನೆಯನ್ನು "ಹಸಿರು ಕ್ರಾಂತಿ" ಎಂದು ಕರೆಯಲಾಯಿತು. ನಂತರ ಕ್ಷೀರೋತ್ಪಾದನೆಯ ಸರದಿ. ಅಧಿಕ ಹಾಲಿನ ಉತ್ಪಾದನೆ ಆಯಿತಾದ್ದರಿಂದ ಈ ಸಂದರ್ಭವನ್ನು 'ಶ್ವೇತಕ್ರಾಂತಿ' ಎನ್ನಲಾಯಿತು. ಅಪೌಷ್ಟಿಕತೆಯ ವಿರುದ್ಧ ಸೆಣಸಲು, ಅದೂ ವಿಶೇಷವಾಗಿ ಸಣ್ಣ ಮಕ್ಕಳ ಲ್ಲಿನ ಪೌಷ್ಟಿಕ ಕೊರತೆ ನೀಗಿಸಲು ಇದು ನೆರವಾಯಿತು. 'ಆಹಾರ ಭದ್ರತೆ' ಎಂದು ಕರೆಯಲಾದ ಮತ್ತೊಂದು ಯೋಜನೆ ಗಾಂಧಿ ಅಧಿಕಾರ ಅವಧಿಯನ್ನು 1975ರವರೆಗೆ ಕೊಂಡೊಯ್ಯಲು ಮತ್ತೊಂದು ಬೆಂಬಲದ ಮೂಲವಾಗಿತ್ತು. 1960ರ ಆರಂಭದಲ್ಲಿ ಪ್ರಾರಂಭವಾದ ತೀವ್ರಗತಿ ಕೃಷಿ ಜಿಲ್ಲಾ ಯೋಜನೆ (IADP)ಗೆ ಅನಧಿಕೃವಾಗಿ ನೀಡಿದ ಹೆಸರು 'ಹಸಿರು ಕ್ರಾಂತಿ'. ನಗರ ವಾಸಿಗಳಿಗೆ ಅಗ್ಗದ ಬೆಲೆಗೆ ಯಥೇಚ್ಛ ಆಹಾರ ಧಾನ್ಯ ಪೂರೈಸುವುದು ಇಂದಿರಾರ ಯೋಜನೆಯಾಗಿತ್ತು. ಯಾಕೆಂದರೆ ಬೇರೆಲ್ಲ ಭಾರತದ ರಾಜಕಾರಣಿಗಳಂತೆ ಇವರೂ ಕೂಡಾ ನಗರ ವಾಸಿಗಳ ಮೇಲೆ ಭಾರೀ ಅವಲಂಬಿತರಾಗಿದ್ದರು. ಈ ನಾಲ್ಕು ಆಧಾರ ಸ್ತಂಭಗಳ ಮೇಲೆ ಯೋಜನೆಯನ್ನು ರೂಪಿಸಲಾಗಿತ್ತು: 1) ಹೊಸ ವಿಧಾನದ ಬೀಜಗಳು, 2) ಭಾರತೀಯ ಕೃಷಿಯಲ್ಲಿ ರಾಸಾಯನಿಕತೆಯ ಅಂದರೆ ರಸಗೊಬ್ಬರ, ಕೀಟನಾಶಕ, ಕಳೆನಾಶಕ ಇತ್ಯಾದಿಗಳ ಅವಶ್ಯಕತೆಯ ಸ್ವೀಕರಣೆ, 3) ಅಸ್ತಿತ್ವದಲ್ಲಿರುವ ವೈವಿಧ್ಯಮಯ ಬೀಜಗಳ ಹೊಸತು ಮತ್ತು ಸುಧಾರಿತ ಅಭಿವೃದ್ದಿಗಾಗಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಹಕಾರ ಸಂಶೋಧನೆಗೆ ಬದ್ಧರಾಗುವುದು, 4) ವೈಜ್ಞಾನಿಕ, ಕೃಷಿ ಸಂಸ್ಥೆಗಳನ್ನು ಭೂ-ದತ್ತಿ ಕಾಲೇಜುಗಳಾಗಿ ಅಭಿವೃದ್ಧಿಗೊಳಿಸುವ ಕಲ್ಪನೆ. ಯೋಜನೆಯ ಪರಿಣಾಮವಾಗಿ ಹತ್ತು ವರ್ಷಗಳ ಅವಧಿಯಲ್ಲಿ, ಗೋಧಿ ಉತ್ಪಾದನೆ ಮುಪ್ಪಟ್ಟಾಯಿತು, ಭತ್ತದ ಉತ್ಪಾದನೆಯಲ್ಲಿ ಗಣನೀಯವಲ್ಲದಿದ್ದರೂ ಬೆಳವಣಿಗೆ ಕಂಡಿತು, ತೆನೆ ಧಾನ್ಯಗಳಾದ ರಾಗಿ, ಕಡಲೆ, ಮತ್ತಿತರ ಕಾಳುಕಡ್ಡಿಯ ಉತ್ಪಾದನೆಯಲ್ಲಿ (ಪ್ರದೇಶವನ್ನು ಮತ್ತು ಜನಸಂಖ್ಯಾ ಬೆಳವಣಿಗೆ ಹೊಂದಾಣಿಕೆಯನ್ನು ಆಧರಿಸಿ) ಹೆಚ್ಚಳ ಕಂಡು ಬರದಿದ್ದರೂ ಸಹ ಹೆಚ್ಚೂ ಕಡಿಮೆ ಸ್ಥಿರ ಉತ್ಪತ್ತಿ ಇತ್ತು. 1971 ಚುನಾವಣೆ ಗೆಲುವು, ಮತ್ತು ಎರಡನೇ ಅವಧಿ (1971-1975) 1971ರ ಜನಾದೇಶದ ನಂತರ ಇಂದಿರಾ ಸರಕಾರವು ಮಹತ್ತರವಾದ ಸಮಸ್ಯೆಗಳನ್ನು ಎದುರಿಸಿತು. ಆಂತರಿಕ ಸ್ವರೂಪದಿಂದಾಗಿ ಕಾಂಗ್ರೆಸ್ ಪಕ್ಷದಲ್ಲಿ ಒಡಕುಂಟಾಯಿತು. ಅನೇಕ ಭಾಗಗಳಾಗಿ ವಿಭಜಿತಗೊಂಡ ಕಾಂಗ್ರೆಸ್‌ಗೆ ಚುನಾವಣಾ ದೃಷ್ಟಿಯಿಂದ ಇವರ ಸಂಪೂರ್ಣ ಮುಖಂಡತ್ವದ ಅನಿವಾರ್ಯ ಸ್ಥಿತಿ ನಿರ್ಮಾಣವಾಯಿತು. ಗರೀಬಿ ಹಟಾವೊ (=ಬಡತನ ನೀಗಿಸಿ) ಎಂದು 1971ರಲ್ಲಿ ಗಾಂಧಿ ಘೋಷಿಸಿದರು. ಗ್ರಾಮೀಣ ಮತ್ತು ನಗರ ಬಡತನದ ಆಧಾರದ ಮೇಲೆ ಗಾಂಧಿಗೆ ಸ್ವತಂತ್ರ ರಾಷ್ಟ್ರೀಯ ಬೆಂಬಲ ನೀಡುವ ಉದ್ದೇಶದೊಂದಿಗೆ ಬಡತನ ನಿರ್ಮೂಲನಾ ಯೋಜನೆ ಮತ್ತು ಗರೀಬಿ ಹಟಾವೊ ಘೋಷಣೆ ವಿನ್ಯಾಸಗೊಂಡಿದ್ದವು. ರಾಜ್ಯದಲ್ಲಿನ ಪ್ರಬಲ ಗ್ರಾಮೀಣ ಜಾತಿಗಳನ್ನು, ಸ್ಥಳೀಯ ಸರಕಾರವನ್ನು ಮತ್ತು ನಗರ ಪ್ರದೇಶದ ವಾಣಿಜ್ಯ ವರ್ಗದವರನ್ನೂ ಉಪೇಕ್ಷಿಸಲು ಇದು ಅವರಿಗೆ ಇಂಬು ನೀಡಿತು. ಧ್ವನಿ ಅಡಗಿದ್ದ ಬಡ ಜನತೆಗೆ ರಾಜಕೀಯವಾಗಿ ಬೆಲೆ ಸಿಕ್ಕಿತು ಮತ್ತು ರಾಜಕೀಯ ಸ್ಥಿತಿ ದಕ್ಕಿತು. ಗರೀಬಿ ಹಟಾವೊ ಆಂದೋಳನದ ಯೋಜನೆಗಳು, ಸ್ಥಳೀಯವಾಗಿ ಕಾರ್ಯರೂಪಕ್ಕೆ ಬಂದರೂ ಸಹ, ನವದೆಹಲಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಿಧಿ ನೆರವು ಪಡೆದು ಅಭಿವೃದ್ಧಿ ಗಳಿಸಿ, ಮೇಲ್ವಿಚಾರಣೆ ಮಾಡಲ್ಪಟ್ಟವು ಮತ್ತು ಸಿಬ್ಬಂದಿವರ್ಗವನ್ನು ಪಡೆದವು. "ರಾಷ್ಟ್ರಾದ್ಯಂತ ವಿನಿಯೋಗಿಸುವ ಬಹುದೊಡ್ಡ ಸಂಪನ್ಮೂಲಗಳೊಂದಿಗೆ ಈ ಯೋಜನೆಗಳು ಕೇಂದ್ರ ರಾಜಕೀಯ ನಾಯಕತ್ವವನ್ನು ಒದಗಿಸಿದವು. ಗರೀಬಿ ಹಟಾವೊ ಬಡತನ ನೀಗಿಸುವಲ್ಲಿ ವಿಫಲವಾದುದನ್ನು ವಿದ್ವಾಂಸರು ಮತ್ತು ಇತಿಹಾಸಜ್ಞರು ಈಗ ಒಪ್ಪಿದ್ದಾರೆ - ಆರ್ಥಿಕ ಅಭಿವೃದ್ಧಿಗಾಗಿ ಬಿಡುಗಡೆಯಾದ ಒಟ್ಟು ಮೊತ್ತದಲ್ಲಿ 4% ಮಾತ್ರ ಮೂರು ಪ್ರಮುಖ ಬಡತನ ನಿರ್ಮೂಲನಾ ಕಾರ್ಯಕ್ರಮಕ್ಕೆ ಮೀಸಲಾಯಿತು. ವಿನಿಯೋಗವಾದ ಇದರಲ್ಲಿ 'ಕಡುಬಡವರಿಗೆ' ತಲಪಿದ್ದು ಅತ್ಯಲ್ಪ. ಗಾಂಧಿ ಮರು-ಚುನಾವಣೆಗೆ ಜನರ ಬೆಂಬಲವನ್ನು ಹುಟ್ಟುಹಾಕಲು ಪ್ರಮುಖವಾಗಿ ಬಳಸಲ್ಪಟ್ಟ ಈ ಘೋಷಣೆಯು ಬರೀ ಪೊಳ್ಳಾಯಿತು. ಬ್ಯಾಂಕುಗಳ ರಾಷ್ಟ್ರೀಕರಣ ಮತ್ತು ರಾಜಧನ ರದ್ದತಿ ಬಡವರ ಪರವಾದ ನೀತಿಗಳನ್ನು ಅನುಸರಿಸಿ, ಅವರು 1969 ರಲ್ಲಿ 14 ವಾಣಿಜ್ಯ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿದರು ಮತ್ತು ಹಿಂದಿನ ರಾಜರ "ಖಾಸಗಿ ಕೊಡಿಗೆ ಹಣದ" ಅನುದಾನವನ್ನು (privy purses) ರದ್ದುಗೊಳಿಸಿದರು. ಈ ಪ್ರಕ್ರಿಯೆಯಲ್ಲಿ, ಅಸ್ತಿತ್ವದಲ್ಲಿದ್ದ ಹಿರಿಯ ಕಾಂಗ್ರಸ್ಸಿನ ನಾಯಕರ ಶ್ರೀಮಂತ ಪರವಾದ ನಿಲುವು, ಮತ್ತು ಅವರ ಅಸಮರ್ಥತೆ ಅವರ ವೃದ್ಧಾಪ್ಯದ ಕಾರಣದಿಂದಾಗಿ ಅವರು ಸೂಚಿಸಿದ ಆಮೂಲಾಗ್ರ ನಡೆಯನ್ನು ಮೊದಲೇ ನಿರ್ಲಕ್ಷಿಸಿದರು. ಸ್ವಲ್ಪ ಸಮಯದ ನಂತರ ಪಕ್ಷ ವಿಭಜನೆಯಾಯಿತು, ಮತ್ತು ಶ್ರೀಮತಿ ಗಾಂಧಿ ಅವರು ಪಕ್ಷದ ಪ್ರಬಲ ವಿಭಾಗದ ನಿರ್ವಿವಾದ ನಾಯಕರಾದರು. ಪುನರಾವಲೋಕನದಲ್ಲಿ, ‘ಗರಿಬಿ ಹಟಾವೊ’ ವಾಕ್ಚಾತುರ್ಯವು ಆಡಂಬರವಿಲ್ಲದ ಮತ್ತು ಸರಳವಾದ ನಿತಿಯಾಗಿ ಕಂಡುಬಂದಿತು. ಆದರೆ ಭಾರತೀಯ ರಾಜಕೀಯದಲ್ಲಿ ಮೊದಲ ಬಾರಿಗೆ ಬಡವರ ಕಳವಳಗಳನ್ನು ನೇರವಾಗಿ ಪರಿಹರಿಸಲು ಪ್ರಯತ್ನಿಸಲಾಗಿತ್ತು, ಇದು ಅವರ ಅಧಿಕಾರದ ಬಲವರ್ಧನೆಗೆ ಕಾರಣವಾಯಿತು. ಭ್ರಷ್ಟಾಚಾರದ ಆರೋಪ ಮತ್ತು ಚುನಾವಣಾ ದುರಾಚಾರ ಲೋಕಸಭೆಗೆ ಚುನಾಯಿತರಾಗಿದ್ದ ಇಂದಿರಾ ಗಾಂಧಿ ಆಯ್ಕೆಯನ್ನು ಚುನಾವಣಾ ದುರಾಚಾರದ ಹಿನ್ನೆಲೆಯಲ್ಲಿ ಅನೂರ್ಜಿತ ಎಂದು ಅಲಹಾಬಾದ್‌ ಉಚ್ಚ ನ್ಯಾಯಾಲಯ 1975ರ ಜೂನ್ 12ರಂದು ತೀರ್ಪು ನೀಡಿತು. ರಾಜ್ ನಾರಾಯಣ್‌ ಸಲ್ಲಿಸಿದ ಚುನಾವಣಾ ತಕರಾರು ಅರ್ಜಿಯಲ್ಲಿ ಚುನಾವಣಾ ಪ್ರಚಾರಕ್ಕಾಗಿ ಗಾಂಧಿ ಸರಕಾರೀ ಯಂತ್ರವನ್ನೂ ಹಾಗೂ ಸಂಪನ್ಮೂಲಗಳನ್ನೂ ಹೇಗೆ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬುದನ್ನು ವಿವರವಾಗಿ ಎತ್ತಿ ತೋರಿಸಿದ್ದರು.(1971ರ ಚುನಾವಣೆಯಲ್ಲಿ ರಾಜ್ ನಾರಾಯಣ್‌ ವಿರುದ್ಧ ದುರಾಚಾರದಲ್ಲಿ ತೊಡಗಿದ್ದು ಸಾಬೀತಾಗಿ ಗಾಂಧಿ ಅಪರಾಧಿ ಎಂದು ತೀರ್ಮಾನವಾದ ನಂತರ, 1977ರಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ ರಾಯ್ ಬರೈಲಿ ಕ್ಷೇತ್ರದಿಂದ ಅವರು ಮತ್ತೆ ಗಾಂಧಿಯನ್ನು ಸೋಲಿಸಿದರು). ಸಂಸತ್ತಿನ ಸದಸ್ಯೆಯ ಸ್ಥಾನದ ಅವರ ಅಧಿಕಾರವನ್ನು ಮೊಟಕುಗೊಳಿಸಿ ತೆಗೆದುಹಾಕುವಂತೆ ನ್ಯಾಯಾಲಯವು ಆದೇಶ ನೀಡಿತು. ಆರು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಫರ್ಧಿಸದಂತೆ ಅವರ ಮೇಲೆ ನಿಷೇಧ ಹೇರಿತು. ಪ್ರಧಾನ ಮಂತ್ರಿಯು ಲೋಕಸಭೆ (ಭಾರತದ ಸಂಸತ್ತಿನ ಕೆಳಮನೆ) ಅಥವಾ ರಾಜ್ಯ ಸಭೆ (ಸಂಸತ್ತಿನ ಮೇಲ್ಮನೆ)ಯ ಸದಸ್ಯರಾಗಿರಬೇಕಾದ್ದು ಕಡ್ಡಾಯ. ಹೀಗಾಗಿ, ಈ ತೀರ್ಪು ಗಾಂಧಿ ಅಧಿಕಾರದಿಂದ ಸಂಪೂರ್ಣವಾಗಿ ಕೆಳಗಿಳಿಯುವಂತೆ ಮಾಡಿತು. ಆದರೆ ಗಾಂಧಿಯವರು ರಾಜಿನಾಮೆ ನೀಡುವಂತೆ ಮಾಡಿದ ಒತ್ತಾಯಗಳನ್ನು ತಳ್ಳಿಹಾಕಿದರು ಮತ್ತು ಸರ್ವೋಚ್ಚ ನ್ಯಾಯಾಲಕ್ಕೆ ಮೇಲ್ಮನವಿ ಸಲ್ಲಿಸುವ ತಮ್ಮ ಯೋಜನೆಯನ್ನು ಪ್ರಕಟಿಸಿದರು. ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ತೀರ್ಪಿತ್ತವರು ನ್ಯಾಯಮೂರ್ತಿ ಮಿಸ್ಟರ್ ಸಿನ್ಹ. ರಾಜ್ ನಾರಾಯಣರು ಮೊಕದ್ದಮೆ ದಾಖಲಿಸಿದ ಸುಮಾರು ನಾಲ್ಕು ವರ್ಷಗಳ ನಂತರ ತೀರ್ಪು ಹೊರಬಂತು. ಪ್ರಧಾನಿ ಇಂದಿರಾ 1971ರ ಸಂಸತ್ ಚುನಾವಣೆಯಲ್ಲಿ ಎದುರಾಳಿಯನ್ನು ಸೋಲಿಸಿದ್ದರು. ವಿಚಾರಣೆಯ ಸಂದರ್ಭದಲ್ಲಿ ರಕ್ಷಣೆಗಾಗಿ ಸಾಕ್ಷಿಯನ್ನು ನೀಡಿದ ಗಾಂಧಿಯವರನ್ನು, ಅಪ್ರಾಮಾಣಿಕ ಚುನಾವಣಾ ತಂತ್ರದಲ್ಲಿ ತೊಡಗಿದ್ದಕ್ಕಾಗಿ, ಪಕ್ಷದ ಉದ್ಧೇಶಕ್ಕಾಗಿ ಸರಕಾರೀ ಯಂತ್ರ ಮತ್ತು ಅಧಿಕಾರಿಗಳನ್ನು ಬಳಸಿಕೊಂಡಿದ್ದಕ್ಕಾಗಿ ತಪ್ಪಿತಸ್ಱರೆಂದು ತೀರ್ಮಾನಿಸಲಾಯಿತು. ಇಂದಿರಾ ವಿರುದ್ಧ ಮಾಡಲಾದ ಲಂಚಗಾರಿಕೆಯ ಗುರುತರ ಆರೋಪಗಳನ್ನು ನ್ಯಾಯಾಧೀಶರು ತಳ್ಳಿಹಾಕಿದರು. ದೋಷಿ ಎಂದು ನಿರ್ಣಯಿಸಿ ನೀಡಿದ ಉಚ್ಚ ನ್ಯಾಯಾಲಯದ ಆದೇಶದಿಂದ ಸಂಸತ್ತಿನ ಕೆಳಮನೆಯಾದ ಲೋಕಸಭೆ ಸದಸ್ಯತ್ವದಿಂದ ಪದಚ್ಯುತರಾಗುವಂತಾಯಿತೇ ಹೊರತು ತಮ್ಮ ಗೌರವಕ್ಕೆ ಕುಂದುಂಟಾಗಿಲ್ಲ ಎಂದು ಇಂದಿರಾ ಪಟ್ಟು ಹಿಡಿದರು. ಅವರು ಹೀಗೆ ಹೇಳಿದರು: "ನಮ್ಮ ಸರಕಾರವು ಶುದ್ಧವಾಗಿಲ್ಲ ಎಂದು ಕೆಲವರು ಬೊಬ್ಬೆ ಹಾಕುತ್ತಿದ್ದಾರೆ. ಆದರೆ ಪ್ರತಿಪಕ್ಷದವರು ಸರಕಾರ ರಚಿಸುವ ಸಂದರ್ಭದಲ್ಲಿ ಪರಿಸ್ಥಿತಿ ಇನ್ನೂ ಹದಗೆಟ್ಟಿತ್ತು ಎಂಬುದು ನಮ್ಮ ಅನುಭವ". ಚುನಾವಣಾ ಪ್ರಚಾರಕ್ಕಾಗಿ ಕಾಂಗ್ರೆಸ್ ಪಕ್ಷ ಧನ ಸಂಗ್ರಹ ಮಾಡುತ್ತಿದ್ದ ವಿಧಾನಕ್ಕೆ ಒದಗಿಬಂದ ಟೀಕೆಯನ್ನೂ ಕೂಡಾ, 'ಎಲ್ಲ ಪಕ್ಷಗಳೂ ಇದೇ ಹಾದಿಯಲ್ಲಿ ಸಾಗಿವೆ' ಎಂದು ಹೇಳಿ ಟೀಕೆಯನ್ನು ತಳ್ಳಿ ಹಾಕಿದರು. ಪ್ರಧಾನ ಮಂತ್ರಿಯವರು ಅವರ ಪಕ್ಷದ ಬೆಂಬಲವನ್ನು ಉಳಿಸಿಕೊಂಡರು. ಬೆಂಬಲಕ್ಕೆ ಬೇಕಾದ ಹೇಳಿಕೆಯನ್ನೂ ಪಕ್ಷವು ನೀಡಿತು. ತೀರ್ಪಿನ ಸುದ್ಧಿಯು ಹರಡುತ್ತಿದ್ದಂತೆಯೇ, ನೂರಾರು ಬೆಂಬಲಿಗರು ಅವರ ಮನೆಯ ಹೊರಗೆ ನೆರೆದು ತಮ್ಮ ನಿಷ್ಠೆ ತೋರ್ಪಡಿಸಿದರು.ಗಾಂಧಿ ಅಪರಾಧಿ ಎಂದು ಋಜುವಾತಾಗಿದ್ದರೂ ಅವರ ರಾಜಕೀಯ ಭವಿಷ್ಯದ ಮೇಲೆ ಅದು ದುಃಷ್ಪರಿಣಾಮ ಬೀರದು ಎಂದು ಹೇಳಿದರು ಭಾರತೀಯ ಹೈಕಮಿಷನರ್ ಆಗಿದ್ದ BK ನೆಹರುರವರು. "ಶ್ರೀಮತಿ ಗಾಂಧಿ ಇಂದಿಗೂ ಸಹ ದೇಶದಲ್ಲಿ ಭಾರಿ ಬೆಂಬಲವನ್ನು ಹೊಂದಿದ್ದಾರೆ" ಎಂದರು. "ಭಾರತದ ಮತದಾರರು ನಿರ್ಧರಿಸುವವರೆಗೆ ಭಾರತದ ಪ್ರಧಾನ ಮಂತ್ರಿಯವರು ಅದೇ ಹುದ್ದೆಯಲ್ಲಿ ಮುಂದುವರಿಯುತ್ತಾರೆ ಎಂಬುದು ನನ್ನ ನಂಬಿಕೆ" ಎಂದರು. ಇಂದಿರಾ ಅವರ ಚುನಾವಣಾ ದುರಾಚಾರದ ಅಪರಾಧ ನಿರ್ಣಯದ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸಿದರು. ಪ್ರಜಾಪ್ರಭುತ್ವಕ್ಕೆ ಭಂಗತರುವ ಒಳಸಂಚು ನಡೀತಿದೆ ಎಂಬ ಸಬೂಬು ನೀಡಿದ ಇಂದಿರಾ ರಾಷ್ಟ್ರದ ಮೇಲೆ ವಿವಾದಾತ್ಮಕ ತುರ್ತು ಪರಿಸ್ಥಿತಿ ಹೇರಿದರು. 22 MP ಗಳನ್ನೂ ಒಳಗೊಂಡಂತೆ ಸಾವಿರಾರು ಮಂದಿ ಬಂಧನಕ್ಕೀಡಾದರು ಮತ್ತು ಭಾರತೀಯ ಸ್ವತಂತ್ರ ಮಾಧ್ಯಮದ ಮೇಲೆ ಅಂಕುಶ ವಿಧಿಸಲಾಯಿತು. ಸಂಸತ್ತಿನ ಹೊರಗೆ ಎದುರಾಳಿಗಳ ಮೇಲೆ ಗಾಂಧಿ ಬಲಪ್ರಯೋಗ ಮಾಡಿದ್ದರಿಂದ ಮತ್ತು ಅದರಲ್ಲೂ ಹೆಚ್ಚಿನವರನ್ನು ಬಂಧಿಸಿದ್ದುದರಿಂದಾಗಿ, 1975ರ ಆಗಸ್ಟ್‌ನಲ್ಲಿ ಲೋಕಸಭೆಯು ಅವರನ್ನು ಅಪರಾಧ ಮುಕ್ತಗೊಳಿಸಲು ಪೂರ್ವಾನ್ವಯವಾಗುವಂಥ ಶಾಸನವೊಂದನ್ನು ರಚಿಸಿತು. ಆ ಶಾಸನದಂತೆ ಸರ್ಕಾರಿ ಅಧಿಕಾರಿಯು ಅಭ್ಯರ್ಥಿಯ ಅನುಮತಿ ಅಥವಾ ಆಜ್ಞೆ ಪಡೆದು ಅವರ ಪರವಾಗಿ ಚುನಾವಣಾ ಪ್ರಚಾರದಲ್ಲಿ ಯಾ ಕಾರ್ಯದಲ್ಲಿ ತೊಡಗಿದ್ದರೆ ಮಾತ್ರಾ ಅದು ಅಪರಾಧವೆಂದು ಪರಿಗಣಿಸಬೇಕೆಂದು ತೀರ್ಮಾನಿಸಿತ್ತು. ಕಾರಣ ಒಬ್ಬ ಸರ್ಕಾರಿ ನೌಕರ (ಯಶಪಾಲ್ ಕಪೂರ್) ಸ್ವಯಂ ಪ್ರೇರಿತವಾಗಿ ತನ್ನ ಕೆಲಸಕ್ಕೆ ರಾಜಿನಾಮೆ ಸಲ್ಲಿಸಿ ಇಂದಿರಾ ಅವರ ಚುನಾವಣಾ ವೇದಿಕೆಯ ರಚನೆಯ ಮತ್ತು ಏಜೆಂಟರಾಗಿ ಕೆಲಸ ಮಾಡಿದ್ದರು. ಅವರ ರಾಜಿನಾಮೆಯನ್ನು ಮೇಲಧಿಕಾರಿ ಅಂಗೀಕಾರ ಮಾಡಿರಲಿಲ್ಲ. ಆದ್ದರಿಂದ ಆದ್ದರಿಂದ ಸರ್ಕಾರಿಯಂತ್ರ ದುರುಪಯೋಗವಾಗಿದೆ ಎಂದು ನ್ಯಾಯಾಲಯ ತೀರ್ಮಾನಿಸಿತ್ತು. (ತೀರ್ಪಿನ ಸಾರಾಂಶ: ಫೆಡರಲ್ ಅಧಿಕಾರಿ ಯಶ್ಪಾಲ್ ಕಪೂರ್, ಅವರು 1971 ರ ಜನವರಿಯಲ್ಲಿ ಪ್ರಧಾನ ಮಂತ್ರಿಗಳ ಕಾರ್ಯದರ್ಶಿಯ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದರು ಮತ್ತು ಅದೇ ತಿಂಗಳಲ್ಲಿ ಎರಡು ತಿಂಗಳ ನಂತರ ನಡೆದ ಚುನಾವಣೆಗೆ ಅವರು ಏಜೆಂಟರಾಗಿ ತಮ್ಮ ಕರ್ತವ್ಯವನ್ನು ಪ್ರಾರಂಭಿಸಿದರು. ನ್ಯಾಯಾಲಯದಲ್ಲಿ, ಶ್ರೀಮತಿ ಗಾಂಧಿ ಅವರ ವಕೀಲರು ಅವರ ರಾಜೀನಾಮೆಯನ್ನು ಅವರು ಪ್ರಚಾರದ ಕೆಲಸವನ್ನು ತೆಗೆದುಕೊಳ್ಳುವ ಮೊದಲು ನೀಡಿದ್ದಾರೆ. ಅದನ್ನು ಆ ಸಮಯದವರೆಗೆ ಔಪಚಾರಿಕವಾಗಿ ಅಂಗೀಕರಿಸದಿದ್ದರೂ ಸಹ ಸರ್ಕಾರದ ಕರ್ತವ್ಯದ ಮೇಲೆ ಇಲ್ಲವೆಂದು (ಸರ್ಕಾರಿ ನೌಕರರು ಅಲ್ಲವೆಂದು)ಪರಿಗಣಿಸಬೇಕೆಂದು ವಾದಿಸಿದರು,. ಆದರೆ ಅಲಹಾಬಾದು ಹೈಕೋರ್ಟು ಅದನ್ನು ಒಪ್ಪಲಿಲ್ಲ. ರಾಜನಾರಾಯಣರ ಉಳಿದ ಎಲ್ಲಾ ಆಪಾದನೆಯನ್ನು ನ್ಯಾಯಾಲಯ ಆಧಾರವಿಲ್ಲವೆಂದು ತಿರಸ್ಕರಿಸಿದರೂ, ಸರ್ಕಾರಿ ನೌಕರ ಯಶಪಾಲ ಕಪೂರರನ್ನು ಅವರ ರಾಜಿನಾಮೆ ಅಂಗೀಕಾರವಾಗಿಲ್ಲದಿರುವುದರಿಂದ ಅವರನ್ನು ಚುನಾವಣೆಗೆ ಬಳಸಿದ್ದು ಅಪರಾಧವೆಂದು ತೀರ್ಪು ನೀಡಿತು. ನಂತರ ಇಂದಿರಾ ಅವರು ಸುಪ್ರೀಮ್ ಕೋರ್ಟಿನಲ್ಲಿ ಅಪೀಲು ಹೋಗಿ ಆ ಅಪರಾಧದ ತೀರ್ಪಿನಿಂದ ಮುಕ್ತಿಪಡೆದರು.) ಪ್ರತಿಭಟನೆ ಮತ್ತು ಅಸಹಕಾರ ಆಂದೋಲನ ಇಂದಿರಾ ತೀರ್ಪಿನ ಬಗ್ಗೆ ಮೇಲ್ಮನವಿ ಸಲ್ಲಿಸಿ "ನನ್ನ ಕೊನೆಯ ಉಸಿರಿರುವವರೆಗೆ" ನಾನು ಜನಸೇವೆಯಲ್ಲಿ ತೊಡಗಿರುತ್ತೇನೆ" ಎಂದು ಘೋಷಿಸಿದರು. ಈ ಸಂದರ್ಭವನ್ನೇ ರಾಜಕೀಯ ಬಂಡವಾಳ ಮಾಡಿಕೊಂಡ ಪ್ರತಿ ಪಕ್ಷಗಳು ಮತ್ತು ಅವರ ಬೆಂಬಲಿಗರು ಒಟ್ಟಾಗಿ ಈ ಘೋಷಣೆಯ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿ ಅವರ ರಾಜೀನಾಮೆಗೆ ಆಗ್ರಹಿಸಿದವು. ಈ ಪ್ರತಿಭಟನೆಯಲ್ಲಿ ಬೇರೆಬೇರೆ ಸಂಘ ಸಂಸ್ಥೆಗಳು ಪಾಲ್ಗೊಂಡ ಕಾರಣ ಅನೇಕ ರಾಜ್ಯಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು. ನಿರಾಯುಧ ಜನಜಂಗುಳಿಯ ಮೇಲೆ ಗುಂಡುಹಾರಿಸುವ ಆದೇಶಗಳನ್ನು ಧಿಕ್ಕರಿಸುವಂತೆ J.P. ನಾರಾಯಣ್ ಪೋಲೀಸರಿಗೆ ಕರೆ ನೀಡಿದ್ದರಿಂದ ಆಂದೋಲನ ಮತ್ತಷ್ಟು ಬಲಯುತವಾಯಿತು. ಗಾಂಧಿ ಸರಕಾರದೊಂದಿಗೆ ಸಾರ್ವಜನಿಕರ ಭ್ರಮನಿರಸನದ ಜೊತೆ ಆರ್ಥಿಕ ಬಿಕ್ಕಟ್ಟು ಉಲ್ಬಣಗೊಂಡು ಸಂಸತ್‌ ಭವನ ಮತ್ತು ದೆಹಲಿಯ ಅವರ ಮನೆಯ ಸುತ್ತ ಜನ ಜಮಾಯಿಸಿ ಪ್ರತಿಭಟಿಸಿದರು ಮತ್ತು ರಾಜೀನಾಮೆಗಾಗಿ ಒತ್ತಾಯಿಸಿದರು. ಈ ಹೊತ್ತಿಗಾಗಲೇ ಇಂದಿರಾ ನಿರಂಕುಶಾಧಿಕಾರಿ ಧೋರಣೆಯ ಆಪಾದನೆಗೊಳಗಾಗಿದ್ದರು.ಸಂಸತ್ತಿನಲ್ಲಿ ಅವರಿಗಿದ್ದ ಭಾರೀ ಬಹುಮತವನ್ನು ಬಳಸಿಕೊಂಡು, ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ ಪಕ್ಷವು ಸಂವಿಧಾನವನ್ನು ತಿದ್ದುಪಡಿ ಮಾಡಿತು. ಕೇಂದ್ರ ಮತ್ತು ರಾಜ್ಯಗಳ ನಡುವಿನ ಅಧಿಕಾರ ಸಮತೋಲನವನ್ನು ಮಾರ್ಪಡಿಸಿದ ತಿದ್ದುಪಡಿಯಲ್ಲಿ ಕೇಂದ್ರ ಸರಕಾರದ ಕೈಗೆ ಅಧಿಕ ಅಧಿಕಾರ ಇರುವಂತೆ ನೋಡಿಕೊಂಡಿತು. ವಿರೋಧ ಪಕ್ಷಗಳು ಆಡಳಿತ ನಡೆಸುತ್ತಿದ್ದ ರಾಜ್ಯಗಳನ್ನು ಸಂವಿಧಾನದ 356ನೇ ನಿಬಂಧನೆಯನ್ನು ಬಳಸಿ ಅವರು ಎರಡು ಬಾರಿ, "ರಾಷ್ಟ್ರಪತಿ ಆಡಳಿತ"ವನ್ನು ಹೇರಿದರು ಮತ್ತು ನಿಯಂತ್ರಣವೆಲ್ಲವನ್ನೂ ತಮ್ಮ ವಶದಲ್ಲಿ ಇಟ್ಟುಕೊಂಡರು. ಈ ರಾಜ್ಯಗಳಲ್ಲಿ "ಕಾನೂನು ಕುಸಿದು ಬಿದ್ದಿದೆ ಮತ್ತು ಅರಾಜಕತೆ ತಾಂಡವವಾಡುತ್ತಿದೆ" ಎಂಬ ಸಬೂಬು ನೀಡಿದರು. ಗಾಂಧಿ ಅಧಿಕಾರಕ್ಕೆ ಏರಲು ಕಾರಣ ಕರ್ತರಾಗಿದ್ದ ಅವರ ನಿಕಟ ರಾಜಕೀಯ ಸಲಹೆಗಾರ P. N. ಹಕ್ಸರ್ ಅವರಂಥ ಕೆಲವರನ್ನು ದೂರ ತಳ್ಳಿ ಇಂದಿರಾರ ರಾಜಕೀಯ ಸಲಹೆಗಾರರಾಗಿ ಬೆಳೆದ ಸಂಜಯ್ ಗಾಂಧಿಯ ಉಸ್ತುವಾರಿಕೆ ಚುನಾಯಿತ ಅಧಿಕಾರಿಗಳ ಮತ್ತು ಆಡಳಿತಾತ್ಮಕ ಸೇವಾ ವಿಭಾಗದ ಅಸಮಾಧಾನಕ್ಕೆ ಕಾರಣವಾಯಿತು. ಸರ್ವಾಧಿಕಾರೀ ಆಡಳಿತದ ಬಯಕೆಯ ಅವರ ಹೊಸ ಪ್ರವೃತ್ತಿಗೆ ಪ್ರತ್ಯುತ್ತರವಾಗಿ, ಜಯ ಪ್ರಕಾಶ್ ನಾರಾಯಣ್, ಸತ್ಯೇಂದ್ರ ನಾರಾಯಣ್ ಸಿನ್ಹ ಮತ್ತು ಆಚಾರ್ಯ ಜೀವತ್ರಾಮ್ ಕೃಪಾಲನಿಯಂತಹ ಮೇಧಾವಿಗಳು ಮತ್ತು ಸ್ವಾತಂತ್ರ್ಯ-ಹೋರಾಟಗಾರರು ಗಾಂಧಿಯವರ ವಿರುದ್ಧ ಮತ್ತು ಅವರ ಸರಕಾರದ ವಿರುದ್ಧ ಟೀಕಾ ಪ್ರಹಾರದ ಭಾಷಣ ಮಾಡುತ್ತಾ ಭಾರತಾದ್ಯಂತ ಸಂಚರಿಸಿದರು. ತುರ್ತು ಪರಿಸ್ಥಿತಿ (1975-1977) ಆಂದೋಲನದಲ್ಲಿ ಭಾಗವಹಿಸಿದ ಎದುರಾಳಿಗಳನ್ನು ಬಂಧಿಸುವಂತೆ ಗಾಂಧಿ ಆದೇಶ ನೀಡುವ ಮೂಲಕ ಸಹಜ ವಾತಾವರಣ ಪುನಃಸ್ಥಾಪಿಸಲು ಮುಂದಾದರು. ಅಲಹಾಬಾದ್ ಉಚ್ಚ ನ್ಯಾಯಾಲಯದ ತೀರ್ಪು ಹೊರಬಿದ್ದ ನಂತರ ಕಾನೂನು ಕುಸಿತ ಮತ್ತು ಅವ್ಯವಸ್ಥೆ ಭುಗಿಲೆದ್ದಿದ್ದನ್ನು ಗಮನಿಸಿದ ಅವರ ಸಚಿವ ಸಂಪುಟ ಮತ್ತು ಸರಕಾರವು ತುರ್ತು ಪರಿಸ್ಥಿತಿ ಘೋಷಿಸುವಂತೆ ರಾಷ್ಟಾಧ್ಯಕ್ಷ ಫಕ್ರುದ್ದೀನ್ ಆಲಿ ಅಹಮದ್‌ ಅವರಿಗೆ ಶಿಫಾರಸು ಮಾಡಿತು.ತತ್ಪರಿಣಾಮವಾಗಿ, ಅಹಮದ್‌ರವರು ಆಂತರಿಕ ಅವ್ಯವಸ್ಥತೆಯ ಕಾರಣ ಒಡ್ಡಿ ಸಂವಿಧಾನದ 352ರ ನಿಬಂದನೆಗೆ ಅನುಗುಣವಾಗಿ 1975ರ ಜೂನ್ 26ರಂದು ರಾಷ್ಟ್ರದ ಮೇಲೆ ತುರ್ತು ಪರಿಸ್ಥಿತಿ ಹೇರಿದರು. ಶಾಸನ ಬದ್ಧ ಆಡಳಿತ ಕೆಲವೇ ತಿಂಗಳುಗಳಲ್ಲಿ, ವಿರೋಧ ಪಕ್ಷಗಳು ಆಡಳಿತ ನಡೆಸುತ್ತಿದ್ದ ಗುಜರಾತ್ ಮತ್ತು ತಮಿಳುನಾಡು ಎರಡು ರಾಜ್ಯಗಳಲ್ಲಿ ರಾಷ್ಟ್ರಪತಿ ಆಡಳಿತವನ್ನು ಘೋಷಿಸಲಾಯಿತು ಈ ಮೂಲಕ ಇಡೀ ರಾಷ್ಟ್ರವನ್ನು ನೇರ ಕೇಂದ್ರ ಆಡಳಿತದ ಹಿಡಿತಕ್ಕೆ ತರಲಾಯಿತು. ಕರ್ಫ್ಯೂ ವಿಧಿಸಲು ಮತ್ತು ನಾಗರಿಕರನ್ನು ಅನಿರ್ದಿಷ್ಟವಾಗಿ ಬಂಧನದಲ್ಲಿಡಲು ಪೊಲೀಸರಿಗೆ ಅಧಿಕಾರ ನೀಡಲಾಯಿತು. ವಾರ್ತಾ ಮತ್ತು ಪ್ರಸಾರ ಖಾತೆ ಮಂತ್ರಾಲಯ ಪತ್ರಿಕಾ ಸ್ವಾತಂತ್ರ್ಯದ ಮೇಲೆ ಕಡಿವಾಣ ಹಾಕಿತು. ತಮ್ಮ ಕೆಲಸಕಾರ್ಯಗಳಲ್ಲಿ ಸಂಜಯ್ ಗಾಂಧಿಯವರ ಹಸ್ತಕ್ಷೇಪವನ್ನು ಸಹಿಸಲಾಗದೇ ಪ್ರತಿಭಟಿಸಿ, ಭವಿಷ್ಯದ ಪ್ರಧಾನ ಮಂತ್ರಿ ಎಂದು ಬಿಂಬಿತರಾಗಿದ್ದ ಇಂದರ್ ಕುಮಾರ್ ಗುಜ್ರಾಲ್‌ ವಾರ್ತಾ ಮತ್ತು ಪ್ರಸಾರ ಖಾತೆ ಮಂತ್ರಿ ಪದವಿಗೆ ರಾಜಿನಾಮೆ ನೀಡಿ ಹೊರಬಂದರು. ಅಂತಿಮವಾಗಿ, ರಾಜ್ಯ ರಾಜಪಾಲರ ಶಿಫಾರಸಿನ ಮೇರೆಗೆ ರಾಜ್ಯ ಸರಕಾರವನ್ನು ವಜಾಗೊಳಿಸಲು ಅನುಮತಿಸುವ ಸಂವಿಧನಾತ್ಮಕ ನಿಬಂಧನೆಯ ಪ್ರಕಾರ ವಿರೋಧಪಕ್ಷ ಆಡಳಿತ ನಡೆಸುತ್ತಿದ್ದ ರಾಜ್ಯ ಸರಕಾರಗಳನ್ನು ತೆಗೆದುಹಾಕುವುದರೊಂದಿಗೆ, ಸನಿಹದಲ್ಲೇ ಜರುಗಬೇಕಿದ್ದ ವಿಧಾನ ಸಭಾ ಚುನಾವಣೆಗಳನ್ನು ಅನಿರ್ದಿಷ್ಟಾವಧಿ ಮುಂದೂಡಲಾಯಿತು. ಸ್ವತಃ ತಮಗೆ ವಿಶೇಷ ಅಧಿಕಾರಗಳನ್ನು ನೀಡುವಂತೆ ತುರ್ತುಪರಿಸ್ಥಿತಿ ನಿಯಮಾವಳಿಯನ್ನು ಇಂದಿರಾ ಪರಿವರ್ತಿಸಿದರು. "ಶಾಸಕಾಂಗ ಪಕ್ಷಗಳ ಅಧೀನದಲ್ಲಿ ಬಲಿಷ್ಠರಾದ ಹಾಗೂ ಪ್ರಾದೇಶಿಕ ಪಕ್ಷಗಳ ಮುಖ್ಯ ಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಲು ಮತ್ತು ಆದ್ಯತೆ ನೀಡುತ್ತಿದ್ದ ಅವರ ತಂದೆಯವರ (ನೆಹರು) ಮಾರ್ಗಕ್ಕಿಂತ ಭಿನ್ನವಾಗಿ ವರ್ತಿಸಿದರು. ಶ್ರೀಮತಿ| ಇಂದಿರಾ ಸ್ವತಂತ್ರ ನೆಲೆಯನ್ನು ಹೊಂದಿದ್ದ ಪ್ರತೀ ಕಾಂಗ್ರೆಸ್ ಮುಖ್ಯ ಮಂತ್ರಿಗಳನ್ನು ತೆಗೆದುಹಾಕಲು ಮತ್ತು ಆ ಸ್ಥಾನಕ್ಕೆ ಅವರಿಗೆ ವೈಯಕ್ತಿಕ ನಿಷ್ಠೆ ತೋರುವ ಮಂತ್ರಿಗಳನ್ನು ನೇಮಿಸಲು ಮುಂದಾದರು...ಆದರೂ ಸಹ, ರಾಜ್ಯಗಳಲ್ಲಿ ಸ್ಥಿರತೆಯನ್ನು ಉಳಿಸಿಕೊಂಡು ಹೋಗಲಾಗಲಿಲ್ಲ..." ಸಂಸತ್ತಿನಲ್ಲಿ ಚರ್ಚಿಸುವ ಅವಶ್ಯಕತೆಯೇ ಇಲ್ಲದಂತೆ ಶಾಸನಗಳನ್ನು ರೂಪಿಸುವ ಮತ್ತು 'ತಾನು ಹೇಳಿದ್ದೇ ಕಾನೂನು' ಮತ್ತು ಅದು ಕಾಯಿದೆ ಬದ್ಧ ಎಂಬಂಥ ಸುಗ್ರೀವಾಜ್ಞೆ ಹೊರಡಿಸುವಂತೆ ಅವರು ರಾಷ್ಟ್ರಪತಿ ಅಹಮದ್‌ ಅವರನ್ನು ಒತ್ತಾಯಿಸಿದರು ಎಂಬ ಆಪಾದನೆಯೂ ಅವರ ಮೇಲಿದೆ. ಅದೇ ಸಮಯದಲ್ಲಿ, ಗಾಂಧಿ ಸರಕಾರವು ಭಿನ್ನಾಭಿಪ್ರಾಯಕ್ಕೆ ಇತಿಶ್ರೀ ಹಾಡುವ ಉದ್ದೇಶದಿಂದ ಸಾವಿರಾರು ರಾಜಕೀಯ ಮುಖಂಡರನ್ನು ಬಂಧನಕ್ಕೆ ಈಡು ಮಾಡಿತು, ಮುಂದೊಮ್ಮೆ ದೆಹಲಿಯ Lt. ಗವರ್ನರ್‌ ಆದ, ಜಗ ಮೋಹನ್ರ, ಮೇಲ್ವಿಚಾರಣೆಯಲ್ಲಿ ದೆಹಲಿಯ ಜಮಾ ಮಸೀದಿಯ ಸುತ್ತಮುತ್ತ ಸ್ವಚ್ಛತಾ ಕಾರ್ಯವನ್ನು ಸಂಜಯ್‌ ಆರಂಭಿಸಿದರು, ಇದರಿಂದ ಸಾವಿರಾರು ಜನ ಮನೆಮಠ ಕಳೆದುಕೊಂಡರು, ನೂರಾರು ಮಂದಿ ಸಾವನ್ನಪ್ಪಿದರು, ಮತ್ತು ರಾಷ್ಟ್ರದ ರಾಜಧಾನಿಯ ಆ ಪ್ರದೇಶದಲ್ಲಿ ಪ್ರಾಂತೀಯ ವೈಮನಸ್ಸು ಬೆಳೆಯಿತು-ಎಂದು ಆರೋಪಿಸಲಾಗಿದೆ. ಸಾವಿರಾರು ಮಂದಿಯ ಮೇಲೆ ಬಲವಂತವಾಗಿ ಕುಟುಂಬ ಯೋಜನೆಯನ್ನು ಅನುಷ್ಠಾನಗೊಳಿಸಿ ಸಂತಾನಹರಣಚಿಕಿತ್ಸಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಬಹುತೇಕ ಸಂದರ್ಭಗಳಲ್ಲಿ ಚಿಕಿತ್ಸೆಯನ್ನು ಹೀನಾಯವಾಗಿ ನಿರ್ವಹಿಸಲಾಯಿತು. ಚುನಾವಣೆಗಳು ತುರ್ತು ಪರಿಸ್ಥಿತಿಯನ್ನು ಎರಡು ಬಾರಿ ವಿಸ್ತರಿಸಿದ ಇಂದಿರಾ ಗಾಂಧಿ ತಮ್ಮ ಆಡಳಿತವನ್ನು ಸಮರ್ಥಿಸಲು ಮತದಾರರಿಗೆ ಒಂದು ಅವಕಾಶ ನೀಡುವುದಕ್ಕಾಗಿ 1977ರಲ್ಲಿ ಚುನಾವಣೆ ಘೋಷಿಸಿದರು. ಅತಿಯಾದ ನಿಯಂತ್ರಣಕ್ಕೆ ಒಳಪಟ್ಟ ಪತ್ರಿಕಾ ಲೇಖನಗಳನ್ನು ಓದಿದ ಇಂದಿರಾ ಇದು ತಮ್ಮ ಜನಪ್ರಿಯತೆಯ ಪರಾಕಾಷ್ಠೆ ಎಂದು ತಪ್ಪಾಗಿ ಗ್ರಹಿಸಿದರು. ಇವರ ಪ್ರತಿಯೊಂದು ಹೆಜ್ಜೆಯನ್ನೂ ಜನತಾ ಪಕ್ಷ ವಿರೋಧಿಸಿತು. ಜಯ ಪ್ರಕಾಶ್ ನಾರಾಯಣ್‌‌ರನ್ನು ತಮ್ಮ ಆಧ್ಯಾತ್ಮಿಕ ಮಾರ್ಗದರ್ಶಿಯಾಗಿ ಇಟ್ಟುಕೊಂಡು, ಇಂದಿರಾರ ದೀರ್ಘಕಾಲೀನ ದ್ವೇಷಿಯಾದ ದೇಸಾಯಿ ನೇತೃತ್ವದ ಜನತಾ ಪಕ್ಷವು "ಪ್ರಜಾಪ್ರಭುತ್ವ ಮತ್ತು ನಿರಂಕುಶಾಧಿಕಾರ" ಎರಡರ ನಡುವಿನ ಆಯ್ಕೆಗೆ ಈ ಚುನಾವಣೆ ಕಟ್ಟ ಕಡೆಯ ಅವಕಾಶ ಎಂದು ಸಾರಿತು. ಇಂದಿರಾರ ಕಾಂಗ್ರೆಸ್ ಪಕ್ಷ ಭಾರೀ ಸೋಲುಂಡಿತು. ಇಂದಿರಾ ಮತ್ತು ಸಂಜಯ್ ಗಾಂಧಿ ಇಬ್ಬರೂ ಚುನಾವಣೆಯಲ್ಲಿ ಸೋತರು. ಕಾಂಗ್ರೆಸ್ 153 (ಹಿಂದಿನ ಲೋಕಸಭೆಗೆ 350ಕ್ಕೆ ಹೋಲಿಸಿದಾಗ) ಸ್ಥಾನಗಳಿಗೆ ಇಳಿಯಿತು. ಇದರಲ್ಲಿನ 92 ಸ್ಥಾನ ದಕ್ಷಿಣ ರಾಜ್ಯಗಳಿಗೆ ಸೇರಿದ್ದು. ಉಚ್ಛಾಟನೆ, ಬಂಧನ, ಪುನರಾಗಮನ ದೇಸಾಯಿಯವರು ಪ್ರಧಾನ ಮಂತ್ರಿಯಾದರು. 1969ರಲ್ಲಿ ಆಡಳಿತ ಪಕ್ಷದವರ ಆಯ್ಕೆಯಾಗಿದ್ದ ನೀಲಮ್ ಸಂಜೀವ ರೆಡ್ಡಿಯವರು ಗಣತಂತ್ರದ ರಾಷ್ಟ್ರಪತಿಯಾದರು. ಗಾಂಧಿ 1978ರಲ್ಲಿ ಚುನಾವಣೆಯಲ್ಲಿ ಮತ್ತೆ ಗೆಲ್ಲುವವರೆಗೆ ತಮಗೆ ಕೆಲಸ, ಆದಾಯ ಅಥವಾ ಮನೆ ಇಲ್ಲವೆಂದು ತೊಳಲಾಡುತ್ತಿದ್ದರು. ಕಾಂಗ್ರೆಸ್ ಪಕ್ಷವು 1977ರ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ವಿಭಜನೆಗೆ ತುತ್ತಾಯಿತು.ಗಾಂಧಿ ಬೆಂಬಲಿಗರಾದ ಜಗಜೀವನ್ ರಾಮ್ ಮತ್ತು ಅವರಿಗೆ ಹೆಚ್ಚು ನಿಷ್ಠಾವಂತರಾಗಿದ್ದ ಬಹುಗುಣ ಮತ್ತು ನಂದಿನಿ ಸತ್ಪಥಿ-ಅಂಥ ಅನುಭವಿಗಳು ಅವರಿಂದ ದೂರ ಸರಿದರು. ಈ ಮೂವರೂ ಗಾಂಧಿಯವರಿಗೆ ಅತಿ ನಿಕಟರಾಗಿದ್ದರಾದರೂ ಸಂಜಯ್ ಗಾಂಧಿ ನಿರ್ಮಿತ ರಾಜಕೀಯ ಪರಿಸ್ಥಿತಿಯಿಂದಾಗಿ ಹೊರಬರುವಂತೆ ಅವರನ್ನು ಬಲವಂತಕ್ಕೊಳಪಡಿಸಿತು. ಇಂದಿರಾನ್ನು ಅಧಿಕಾರದಿಂದ ಉಚ್ಚಾಟನೆ ಮಾಡುವಂಥ ಉದ್ದೇಶ ಸಂಜಯ್‌ಗೆ ಇತ್ತು ಎಂಬ ವದಂತಿ ಹಬ್ಬಿತ್ತು. ಅಧಿಕೃತವಾಗಿ ಪ್ರತಿಪಕ್ಷ ಎಂಬ ಮನ್ನಣೆ ಇದ್ದರೂ ಕಾಂಗ್ರೆಸ್ ಇತರ ಸಣ್ಣ ಪಕ್ಷಗಳಂತಾಯಿತು. ಮೈತ್ರಿ ಕೂಟದ ಅಂಕೆಮೀರಿದ ಕಾದಾಟದಿಂದ ಆಡಳಿತ ನಡೆಸಲು ಸಾಧ್ಯವಾಗದಿದ್ದುರಿಂದ, ಜನತಾ ಸರಕಾರದ ಗೃಹ ಮಂತ್ರಿ ಚೌಧರಿ ಚರಣ್ ಸಿಂಗ್‌ ಭಾರತೀಯ ನ್ಯಾಯಾಲಯದಲ್ಲಿ ಸುಲಭವಾಗಿ ಸಾಬೀತುಪಡಿಸಲು ಸಾಧ್ಯವಾಗದಂತಹ ಅನೇಕ ನಿಯಮಗಳನ್ನು ಆಧಾರವನ್ನಾಗಿಸಿ ಇಂದಿರಾ ಮತ್ತು ಸಂಜಯ್ ಗಾಂಧಿಯವರ ಬಂಧನಕ್ಕೆ ಆದೇಶಿಸಿದರು. ಬಂಧನದಿಂದಾಗಿ ಗಾಂಧಿ ಸಂಸತ್ತಿನಿಂದ ಉಚ್ಚಾಟಿತರಾದಂತಾಯಿತು.ಅನುಸರಿಸಲಾದ ಈ ಕಾರ್ಯತಂತ್ರ ವಿಪತ್ಕಾರಕವಾಗಿ ಅವರಿಗೇ ತಿರುಗುಬಾಣವಾಯಿತು. ಎರಡು ವರ್ಷಗಳ ಹಿಂದಷ್ಟೇ ಅವರ ನಿರಂಕುಶಾಧಿಕಾರೀ ವರ್ತನೆಯಿಂದ ಬೇಸತ್ತಿದ್ದ ಜನತೆ ಅವರ ಮೇಲೆ ಅನುಕಂಪದ ಮಳೆ ಸುರಿದರು. ಬಂಧಿಸಿದ್ದು ಮತ್ತು ದೀರ್ಘಕಾಲೀನ ವಿಚಾರಣೆಗೆ ಅವರನ್ನು ಗುರಿಪಡಿಸಿದ್ದೇ ಈ ಅನುಕಂಪದ ಗಾಳಿ ಬೀಸಲು ಕಾರಣವಾಯಿತು. ಇಂದಿರಾರ (ಅಥವಾ "ಅದೊಂದು ಹೆಣ್ಣು" ಎಂದು ಕೆಲವರು ಅವರನ್ನು ಮೂದಲಿಸಿದರು) ವಿರುದ್ಧದ ದ್ವೇಷ ಮಾತ್ರ ಜನತಾ ಮಿತ್ರ ಪಕ್ಷಗಳನ್ನು ಒಂದುಗೂಡಿಸಿತ್ತು. ಸಮಾನ ಮನಸ್ಕತೆ ಎಂಬುದು ಮಾಯವಾಯಿತು. ಮಂದುವರೆದ ಈ ಅಂತಃಕಲಹವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವಲ್ಲಿ ಇಂದಿರಾ ಸಫಲರಾದರು. ಅವರು ಮತ್ತೆ ಭಾಷಣ ನೀಡಲು ಪ್ರಾರಂಭಿಸಿದರು. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಎಸಗಿದ "ತಪ್ಪುಗಳಿಗಾಗಿ" ಕ್ಷಮೆಯಾಚಿಸಿದರು. ದೇಸಾಯಿಯವರು 1979ರ ಜೂನ್‌ನಲ್ಲಿ ರಾಜಿನಾಮೆ ನೀಡಿದರು, ಮತ್ತು ಚರಣ್ ಸಿಂಗ್‌ ಅವರನ್ನು ರೆಡ್ಡಿಯವರು ಪ್ರಧಾನ ಮಂತ್ರಿಯಾಗಿ ನೇಮಿಸಿದರು. ಅವರ ಸರಕಾರಕ್ಕೆ ಕಾಂಗ್ರೆಸ್ ಬಾಹ್ಯ ಬೆಂಬಲ ನೀಡುವುದಾಗಿ ಗಾಂಧಿ ಭರವಸೆ ನೀಡಿದರು. ಸ್ವಲ್ಪ ದಿವಸಗಳ ನಂತರ, ಅವರು ಆರಂಭದಲ್ಲಿ ನೀಡಿದ್ದ ಬೆಂಬಲವನ್ನು ಅಲ್ಪ ಕಾಲದಲ್ಲೇ ಹಿಂದೆಗೆದುಕೊಂಡರು. ರಾಷ್ಟ್ರಪತಿ ರೆಡ್ಡಿ 1979ರ ಚಳಿಗಾಲದಲ್ಲಿ ಸಂಸತ್ತನ್ನು ವಿಸರ್ಜಿಸಿದರು. ನಂತರ ಜನವರಿಯಲ್ಲಿ ನಡೆದ ಚುನಾವಣೆಯಲ್ಲಿ, ಕಾಂಗ್ರೆಸ್ ಪ್ರಚಂಡ ಬಹುಮತದಿಂದ ಅಧಿಕಾರ ಗದ್ದುಗೆ ಏರಿತು. 1980ರಲ್ಲಿ, ಇಂದಿರಾ ಗಾಂಧಿ ಸರಕಾರವು ಶ್ರೀಲಂಕಾದಲ್ಲಿ LTTE ಮತ್ತು ಇತರ ತಮಿಳು ಉಗ್ರಗಾಮಿಗಳಿಗೆ ಹಣ, ಶಸ್ತ್ರಾಸ್ತ್ರ ಮತ್ತು ಸೇನಾ ತರಬೇತಿ ಒದಗಿಸಿತು. ಮೂರನೇ ಅವಧಿ ರೂಪಾಯಿ ಅಪಮೌಲ್ಯದ ಬಿಕ್ಕಟ್ಟು 1980ರ ಆರಂಭದಲ್ಲಿ, US ಡಾಲರ್‌ ಎದುರು ರೂಪಾಯಿ ಮೌಲ್ಯ 40% ಕುಸಿದು, ಒಂದು ಡಾಲರ್‌ಗಿದ್ದ 7ರೂ. 12ಕ್ಕೆ ಜಿಗಿಯಿತು. ಕುಸಿತವನ್ನು ತಡೆಯಲು ಇಂದಿರಾ ಆಡಳಿತವು ವಿಫಲವಾಯಿತು. ಆಪರೇಶನ್ ಬ್ಲೂ ಸ್ಟಾರ್ ಮತ್ತು ಹತ್ಯೆ ಗಾಂಧಿಯವರ ಮುಂದಿನ ವರ್ಷಗಳು ಪಂಜಾಬ್‌ನ ಸಮಸ್ಯೆಗಳೊಂದಿಗೆ ನಾಶವಾದವು. 1984ರ ಜೂನ್‍‌ನಲ್ಲಿ, ಜರ್ನೈಲ್ ಸಿಂಗ್ ಭಿಂದ್ರಾನ್‌ವಾಲೆ ಸಿಖ್ ಪ್ರತ್ಯೇಕತಾ ವಾದಿ ಗುಂಪು ಸಿಖ್‌ ಧರ್ಮದ ಪವಿತ್ರ ಮಂದಿರ ಸ್ವರ್ಣ ದೇವಾಲಯದೊಳಗೆ ಬಿಡಾರ ಹೂಡಿ, ಅಲ್ಲಿ ಶಸ್ತ್ರಾಸ್ತ್ರಗಳನ್ನು ಜಮಾಯಿಸುತ್ತಿತ್ತು. ಸ್ವರ್ಣ ಮಂದಿರ ಮತ್ತು ಆಸುಪಾಸಿನ ಕಟ್ಟಡಗಳಲ್ಲಿ ಸಾವಿರಾರು ನಾಗರಿಕರಿದ್ದಾಗಲೇ ಸೇನೆಯು ಗುಂಡು ಹಾರಿಸಿತು. ಇದರಿಂದ ಅನೇಕ ನಾಗರಿಕರು ಅನಾಹುತಕ್ಕೆ ತುತ್ತಾದರು.'ಆಪರೇಶನ್ ಬ್ಲೂ ಸ್ಟಾರ್' ಕಾರ್ಯಾಚರಣೆಗೆ ಗಾಂಧಿ ನೀಡಿದ ಆದೇಶ ಅಂತರಾಷ್ಟ್ರೀಯ ಮಾಧ್ಯಮದಲ್ಲಿ ತೀವ್ರ ಖಂಡನೆಗೆ ಒಳಗಾಯಿತು.ಸೇನೆ ಮತ್ತು ನಾಗರಿಕರಿಗೆ ಉಂಟಾದ ಅನಾಹುತ ಎಷ್ಟು ಎಂಬ ಅಂಕಿಸಂಖ್ಯೆಯಲ್ಲಿ ಸರಕಾರ ನೀಡಿದ್ದಕ್ಕೂ ಮತ್ತು ಸ್ವಯಂ ಸೇವಾ ಸಂಸ್ಥೆಗಳು ಕೊಟ್ಟಿದ್ದಕ್ಕೂ ವ್ಯತ್ಯಾಸವಿದೆ. 79 ಸೈನಿಕರು, ಮತ್ತು 492 ಸಿಖ್‌ರು ಅನಾಹುತಕ್ಕೆ ಈಡಾದರು ಎಂದು ಸರಕಾರ ಅಂದಾಜು ನೀಡಿದರೆ, ಅನೇಕ ಮಹಿಳೆಯರು ಮತ್ತು ಮಕ್ಕಳೂ ಒಳಗೊಂಡಂತೆ, ಸ್ವಯಂ ಸೇವಾ ಸಂಸ್ಥೆಗಳು ನೀಡುವ ಲೆಕ್ಕದ ಪ್ರಕಾರ 500 ಅಥವಾ ಅದಕ್ಕಿಂತ ಹೆಚ್ಚು ಯೋಧರು ಮತ್ತು 3,000 ಸಿಖ್‌ರು ಕಷ್ಟನಷ್ಟಕ್ಕೆ ಸಿಲುಕಿದರು. ಜೊತೆಗೆ ಅನೇಕ ಮಕ್ಕಳು ಮಹಿಳೆಯರು ಚಕಮಕಿಯಲ್ಲಿ ಘಾಸಿಗೊಂಡರು. ನಾಗರಿಕ ಅವಘಡಕ್ಕೆ ಸಂಬಂಧಿಸಿದ ನಿಖರ ಅಂಕಿಅಂಶ ವಿವಾದಕ್ಕೆ ಸಿಕ್ಕಿಬಿದ್ದರೆ, ಯೋಗ್ಯ ದಾಖಲೆಗಳ ಕೊರತೆ ಮತ್ತು ದಾಳಿ ನಡೆಸಿದ ಸಮಯ ಮತ್ತು ಅದಕ್ಕೆ ಅನುಸರಿಸಲಾದ ರೀತಿನೀತಿಯು ಕಟು ಟೀಕೆಗೆ ಒಳಗಾಯಿತು. ಇಂದಿರಾರ ಈ ಕಾರ್ಯಾಚರಣೆಯನ್ನು ಸಿಖ್‌ರ ವಿರುದ್ಧ ಅವರು ಮಾಡಿದ ವೈಯಕ್ತಿಕ ದಾಳಿ ಎಂದು ಖಂಡಿಸಲಾಯಿತು. 'ಸಿಖ್‌ರಿಗೆ ಸ್ವಾತಂತ್ರ್ಯನೀಡಿ,ಅವರಿಗಾಗಿಯೇ ಖಲಿಸ್ಥಾನ ಎಂಬ ಪ್ರತ್ಯೇಕ ರಾಜ್ಯವನ್ನು ರಚಿಸಿ' ಎಂಬಂಥ ಸರಕಾರ ವಿರೋಧೀ ನೀತಿಯನ್ನು ಬಿತ್ತುತ್ತಿದ್ದ ಉಗ್ರಗಾಮಿ ಭಿಂದ್ರನ್‌ವಾಲೆ ಮತ್ತು ಆತನ ಸಹಚರರನ್ನು ಹೊರದಬ್ಬುವುದೇ ಈ ಮುತ್ತಿಗೆಯ ಮೂಲ ಉದ್ದೇಶ ಎಂದು ಕಾರ್ಯಾಚರಣೆಯನ್ನು ಇಂದಿರಾ ಸಮರ್ಥಿಸಿಕೊಂಡರು. ಸಿಖ್‌ ಸಮುದಾಯಕ್ಕೆ ಸೇರಿದ ಸತ್ವಂತ್ ಸಿಂಗ್ ಮತ್ತು ಬಿಯಾಂತ್ ಸಿಂಗ್‌ ಎಂಬ ಗಾಂಧಿಯ ಅಂಗರಕ್ಷಕರಿಬ್ಬರು 1984ರ ಅಕ್ಟೋಬರ್ 31ರಂದು,1984ರ ಅಕ್ಟೋಬರ್ 31ರಂದು,ಸೇವಾ ಬಳಕೆಗಾಗಿ ಇದ್ದ ಆಯುಧಗಳಿಂದ ಅವರನ್ನು ಹತ್ಯೆಗೈದರು. ಈ ಹತ್ಯೆ ನಡೆದದ್ದು ನವದೆಹಲಿಯ ಪ್ರಧಾನ ಮಂತ್ರಿ ನಿವಾಸವಾಗಿದ್ದ ನವೆಂಬರ್ 1, ಸಫ್ದರ್ಜಂಗ್‌ ರಸ್ತೆಯಲ್ಲಿನ ಉದ್ಯಾನದಲ್ಲಿ. ಐರಿಷ್ ದೂರದರ್ಶನಕ್ಕೆ ಸಾಕ್ಷ್ಯಚಿತ್ರ ಚಿತ್ರೀಕರಿಸುತ್ತಿದ್ದ ಬ್ರಿಟಿಷ್ ನಟ ಪೀಟರ್ ಉಸ್ತಿನೊವ್‌ ಅವರಿಗೆ ಸಂದರ್ಶನ ನೀಡುವುದಕ್ಕಾಗಿ, ಇಂದಿರಾ ಸತ್ವಂತ್ ಮತ್ತು ಬಿಯಾಂತ್‌ ಕಾವಲಿನಲ್ಲಿದ್ದ ಕಿರು ದ್ವಾರವನ್ನು ದಾಟುತ್ತಿದ್ದಂತೆಯೇ ಈ ದುಷ್ಕೃತ್ಯ ನಡೆಯಿತು. ಇವರ ಬೆಂಗಾವಲಿನಲ್ಲಿ ವಿಕೆಟ್ ಗೇಟ್‌ನ್ನು ದಾಟಿದ್ದರು. ಘಟನೆ ಆಧಾರಿಸಿ ಈ ದುರ್ಘಟನೆ ನಡೆದಾಕ್ಷಣ ಲಭ್ಯವಾದ ಮಾಹಿತಿಯಂತೆ ಬಿಯಾಂತ್ ಸಿಂಗ್ ಪಾರ್ಶ್ವಾಯುಧವನ್ನು ಬಳಸಿ ಅವರಿಗೆ ಮೂರು ಬಾರಿ ಗುಂಡುಹಾರಿಸಿದರೆ, ಸತ್ವಂತ್ ಸಿಂಗ್ ಸ್ಟೆನ್ ಸಬ್‌ಮೆಷಿನ್ ಗನ್ ಬಳಸಿ 30 ಸುತ್ತು ಗುಂಡಿನ ಸುರಿಮಳೆಗರೆದ. ಕೂಡಲೇ ಬಿಯಾಂತ್‌ ಸಿಂಗ್‌ನನ್ನು ಗುಂಡಿಕ್ಕಿ ಕೊಂದ ಇನ್ನಿತರ ಅಂಗರಕ್ಷಕರು ಸತ್ವಂತ್ ಸಿಂಗ್‌ಗೂ ಗುಂಡು ಹಾರಿಸಿ ಬಂಧಿಸಿದರು. ಅವರ ಅಧಿಕೃತ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸುವ ಮಧ್ಯದಲ್ಲ್ಲೇ ಇಂದಿರಾ ಕೊನೆಯುಸಿರೆಳೆದರಾದರೂ ಹಲವಾರು ಘಂಟೆಗಳ ಕಾಲ ಅವರ ಸಾವನ್ನು ಪ್ರಕಟಿಸಲಿಲ್ಲ.ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಶಿಕ್ಷಣ ಸಂಸ್ಥೆಗೆ ಅವರನ್ನು ಕೊಂಡೊಯ್ಯಲಾಯಿತು. ಅಲ್ಲಿ ವೈದ್ಯಕೀಯ ತಪಾಸಣೆ ನಡೆಯಿತು. 29 ಗುಂಡುಗಳು ದೇಹದ ಒಳ ಹೊಕ್ಕು ಹೊರ ಬಂದ ಗಾಯಗಳು ಇದ್ದವು ಎಂದು ಅಧಿಕೃತ ಮೂಲಗಳು ಹೇಳಿದರೆ, 31 ಗುಂಡುಗಳನ್ನು ಅವರ ದೇಹದಿಂದ ಹೊರಗೆ ತೆಗೆಯಲಾಯಿತು ಎಂದು ಮಿಕ್ಕ ಕೆಲವು ವರದಿಗಳು ಹೇಳುತ್ತವೆ. ಅವರ ಪಾರ್ಥಿವ ಶರೀರವನ್ನು ರಾಜ್ ಘಟ್ ಸಮೀಪ ನವೆಂಬರ್ 3ರಂದು ‌ದಹಿಸಲಾಯಿತು. ಅವರ ಮರಣದ ನಂತರ, ಇಂದಿರಾಗೆ ನಿಷ್ಠರಾಗಿದ್ದ ಕೆಲವು ಕಾಂಗ್ರೆಸ್ ರಾಜಕಾರಣಿಗಳಿಂದ ಮತಾಂಧ ಅಭಿಮಾನ ಉಕ್ಕೇರಿತು. ನವದೆಹಲಿ ಮತ್ತು ಭಾರತದ ಅನೇಕ ಇತರ ನಗರಗಳಲ್ಲಿ ಸಿಖ್-ವಿರೋಧೀ ದಂಗೆ ತಲೆ ಎತ್ತಿತು. ದಂಗೆ ಹಿಂಸಾಚಾರಕ್ಕೆ ಇಳಿಯಿತು. ಸಾವಿರಾರು ಮುಗ್ದ ಸಿಖ್‌ರು ಇದಕ್ಕೆ ಬಲಿಯಾದರು. ಅವರ ಮನೆಗಳಿಗೆ ಬೆಂಕಿ ಇಡಲಾಯಿತು. ಆಸ್ತಿ ಪಾಸ್ತಿ ಮತ್ತು ಸಂಪತ್ತು ಲೂಟಿಯಾದವು. ಆಪರೇಶನ್ ಬ್ಲೂ ಸ್ಟಾರ್‌ನ ಪರಿಣಾಮವಾಗಿ ಏನಾಗುತ್ತದೆಯೊ ಎಂಬ ಇಂದಿರಾಗೆ ಇದ್ದ ಆತಂಕ ಮತ್ತು ತಳಮಳವನ್ನು ಅವರ ಗೆಳೆಯ ಮತ್ತು ಜೀವನ ಚರಿತ್ರೆಕಾರ ಪುಪುಲ್ ಜಯಕರ್‌ ನಂತರ ಹೊರಗೆಡವಿದರು. ಪವಿತ್ರ ಸ್ವರ್ಣ ಮಂದಿರದ ಮೇಲೆ ನಡೆಸಲಾದ ದಾಳಿಗೆ ಎದುರಾಗಿ ಗಾಂಧಿ ಅಂಗರಕ್ಷಕರಾದ ಬಿಯಾಂತ್ ಸಿಂಗ್ ಮತ್ತು ಸತ್ವಂತ್ ಸಿಂಗ್ ಈ ರೀತಿ ಪ್ರತೀಕಾರ ತೀರಿಸಿಕೊಂಡರು. ವೈಯುಕ್ತಿಕ ಜೀವನ ನೆಹರು-ಗಾಂಧಿ ಕುಟುಂಬ ಆರಂಭದಲ್ಲಿ ಇಂದಿರಾರ ಉತ್ತರಾಧಿಕಾರಿ ಆಯ್ಕೆ ಸಂಜಯ್ಆಗಿತ್ತು. ಆದರೆ ಅವರು ವಿಮಾನ ಅಪಘಾತದಲ್ಲಿ ಸಾವಿಗೀಡಾದ ನಂತರ ಒಲ್ಲದ ಮನಃಸ್ಥಿತಿಯಲ್ಲಿದ್ದ ರಾಜೀವ್ ಗಾಂಧಿಯನ್ನು ಒತ್ತಾಯಿಸಿದರು. ಪೈಲೆಟ್ ಹುದ್ದೆ ತ್ಯಜಿಸಿ ರಾಜಕೀಯಕ್ಕೆ ಧುಮುಕುವಂತೆ 1981ರ ಫೆಬ್ರವರಿಯಲ್ಲಿ ರಾಜೀವ್ ಗಾಂಧಿಯ ಮನವೊಲಿಸಿದರು. ಇಂದಿರಾ ಗಾಂಧಿ ಮರಣಾನಂತರ, ರಾಜೀವ್ ಗಾಂಧಿ ಪ್ರಧಾನ ಮಂತ್ರಿಯಾದರು. 1991ರ ಮೇನಲ್ಲಿ, ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಲಮ್ ಭಯೋತ್ಪಾದಕರಿಂದ ಅವರೂ ಸಹ ಹತ್ಯೆಗೆ ತುತ್ತಾದರು. ರಾಜಿವ್‌ರ ಪತ್ನಿ ಸೋನಿಯಾ ಗಾಂಧಿ ಸಂಯುಕ್ತ ಪ್ರಗತಿಪರ ಒಕ್ಕೂಟದ ನೇತೃತ್ವ ವಹಿಸಿ 2004ರ ಲೋಕಸಭೆ ಚುನಾವಣೆಯಲ್ಲಿ ಅಚ್ಚರಿಯ ಚುನಾವಣಾ ಗೆಲುವನ್ನು ಸಾಧಿಸಿದರು. ಸೋನಿಯಾ ಗಾಂಧಿಯವರು ಪ್ರಧಾನ ಮಂತ್ರಿ ಹುದ್ದೆಗೇರುವ ಅವಕಾಶವನ್ನು ನಿರಾಕರಿಸಿದರು. ಆದರೆ ಕಾಂಗ್ರೆಸ್‌ ಪಕ್ಷವನ್ನು ನಿಯಂತ್ರಿಸುವ ಪ್ರಮುಖ ರಾಜಕೀಯ ಚುಕ್ಕಾಣಿ ಅವರ ಕೈಗೆ ಬಂತು. ಮಾಜಿ ಹಣಕಾಸು ಸಚಿವರಾಗಿದ್ದ ಪ್ರಧಾನ ಮಂತ್ರಿ ಡಾ. ಮನಮೋಹನ್ ಸಿಂಗ್ ಈಗ ದೇಶವನ್ನು ಮುನ್ನಡೆಸುತ್ತಿದ್ದಾರೆ. ರಾಜೀವ್‌ರ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಡ್ರ ಅವರೂ ಸಹ ರಾಜಕೀಯ ಪ್ರವೇಶಿಸಿದ್ದಾರೆ. ಸಂಜಯ್ ಗಾಂಧಿ ಮರಣಾನಂತರ ಅವರ ಪತ್ನಿ ಮನೇಕಾ ಗಾಂಧಿ ಮತ್ತು ಇಂದಿರಾ ಮಧ್ಯೆ ಭಿನ್ನಾಭಿಪ್ರಾಯ ಕುಡಿಯೊಡೆಯಿತು. ಇದರಿಂದಾಗಿ ಮೇನಕಾರನ್ನು ಪ್ರಧಾನ ಮಂತ್ರಿ ನಿವಾಸದಿಂದ ಹೊರದಬ್ಬಲಾಯಿತು. ಮೇನಕಾ ಜೊತೆ ಹೊರದೂಡಲ್ಪಟ್ಟ ಸಂಜಯ್ ಪುತ್ರ :en:Varun Gandhiವರುಣ್ ಗಾಂಧಿ ಕೂಡ ಈಗ ಪ್ರಮುಖ ಪ್ರತಿ ಪಕ್ಷ BJPಯ ಸದಸ್ಯರಾಗಿ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ. ವಿವಾದಗಳು ಭಾರತದ ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿ 1970ರಲ್ಲಿ ಬಲವಂತ ಸಂತಾನ ಶಕ್ತಿಹರಣ ಯೋಜನೆಯನ್ನು ಜಾರಿಗೆ ತಂದರು.ಎರಡು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳಿರುವ ಪುರುಷರು ಸಂತಾನ ಶಕ್ತಿಹರಣ ಚಿಕಿತ್ಸೆಗೆ ತಮ್ಮನ್ನು ತಾವು ಒಡ್ಡಿಕೊಳ್ಳಬೇಕೆಂಬುದು ಅಧಿಕೃತವಾಯಿತು. ಆದರೆ ಮದುವೆಯಾಗದ ಹಲವಾರು ಯುವಕರು, ರಾಜಕೀಯ ವಿರೋಧಿಗಳು ಮತ್ತು ಅಮಾಯಕ ಪುರುಷರೂ ಸಹ ಇದಕ್ಕೆ ಈಡಾದರು ಎಂದು ನಂಬಲಾಗಿದೆ. ಈ ಯೋಜನೆ ಭಾರತದಲ್ಲಿ ಸಾರ್ವಜನಿಕ ಜಿಗುಪ್ಸೆಯನ್ನು ನಿರ್ಮಿಸಿದ ಪರಿ ಈಗಲೂ ನೆನಪಾಗುತ್ತದೆ ಮತ್ತು ಖಂಡಿಸಲಾಗುತ್ತದೆ. ಇದರಿಂದಾಗಿ ಕುಟುಂಬ ಯೋಜನೆಯ ಬಗ್ಗೆ ಜನತೆಗೆ ತಪ್ಪು ಮಾಹಿತಿ ರವಾನೆಯಾಗಿದೆ ಎಂದು ದೂಷಿಸಲಾಗಿದೆ. ಸರಕಾರದ ಇಂಥ ಯೋಜನೆಗಳಿಗೆ ದಶಕಗಳ ಕಾಲ ಅಡಚಣೆ ಉಂಟಾಯಿತು. ಇಂದಿರಾ ಗಾಂಧಿ ಭಾರತ ಸುಸಂತಾನಶಾಸ್ತ್ರ ಸಮಾಜ ಎಂಬ ಸಂಸ್ಥೆಯ ಸದಸ್ಯರಾಗಿ ಸುಸಂತಾನಶಾಸ್ತ್ರದ ಕಲ್ಪನೆಗೆ ಪ್ರಬಲ ದಾರ್ಶನಿಕ ಮತ್ತು ವೈಯಕ್ತಿಕ ಗಾಢನಂಬಿಕೆಯನ್ನು ಹೊಂದಿದ್ದರು ಎಂಬುದನ್ನು ಈ ಸಂಗತಿಗಳು ಪ್ರಬಲವಾಗಿ ಬಿಂಬಿಸುತ್ತವೆ. ಪರಂಪರೆ ಪ್ರಚಲಿತ ಪುರುಷ-ಪ್ರಧಾನ ಸಮಾಜದಲ್ಲಿ ಪ್ರಥಮ ಮಹಿಳಾ ಪ್ರಧಾನ ಮಂತ್ರಿಯಾಗಿ ಮತ್ತು ಪ್ರಭಾವಿ ನಾಯಕಿಯಾಗಿ ಇಂದಿರಾ ಗಾಂಧಿ ಭಾರತದ ಸ್ತ್ರೀ ಸಮುದಾಯದ ಸಂಕೇತವಾಗಿದ್ದಾರೆ. ಗಾಂಧಿಯವರಿಂದ ಗಳಿಸಲ್ಪಟ್ಟ ಗ್ರಾಮೀಣ ಜನರ ಅಭಿಮಾನವು ಭಾರತದ ಗ್ರಾಮೀಣ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಯಶಸ್ಸಿನಲ್ಲಿ ಹಾಗೂ ನೆಹರು-ಗಾಂಧಿ ಕುಟುಂಬಕ್ಕೆ ಜನ ನೀಡುತ್ತಿರುವ ಬೆಂಬಲದಲ್ಲಿಯೂ ಸಹ ಅದರ ಪ್ರಭಾವವನ್ನು ಹೊಂದಿದೆ. ಭಾರತದ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಅವರನ್ನು ಪೂಜ್ಯ ಭಾವನೆಯಿಂದ ಇಂದಿರಾ-ಅಮ್ಮ (ಅನೇಕ ಭಾಷೆಗಳಲ್ಲಿ "ಅಮ್ಮ" ಅಂದರೆ "ತಾಯಿ" ಎಂದರ್ಥ) ಎಂದು ಜನ ನೆನೆಯುತ್ತಾರೆ. ಅವರ ಗರೀಬಿ ಹಟಾವೊ ಘೋಷಣೆಯನ್ನು ರಾಜಕೀಯ ಪ್ರಚಾರ ಸಂದರ್ಭದಲ್ಲೆಲ್ಲಾ ಈಗಲೂ ಕಾಂಗ್ರೆಸ್‌ ಬಳಸುತ್ತದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಸ್ತುತ ಅಧ್ಯಕ್ಷೆಯೂ ಹಾಗೂ ಇಂದಿರಾ ಗಾಂಧಿ ಸೊಸೆಯೂ ಆಗಿರುವ ಸೋನಿಯಾ ಗಾಂಧಿಯವರ ಶೈಲಿಯು ಇಂದಿರಾ ಶೈಲಿಯನ್ನು ಹೋಲುತ್ತದೆ ಎಂದು ಹೇಳಲಾಗಿದೆ. 'ಇಂದಿರಾ ಆವಾಸ್ ಯೋಜನೆ'-ಗ್ರಾಮೀಣ ಜನರಿಗೆ ಅಲ್ಪ ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡುವ ಕೇಂದ್ರ ಸರಕಾರದ ಈ ಯೋಜನೆಗೆ ಇಟ್ಟಿರುವ ಹೆಸರೂ ಅವರದ್ದೇ ಆಗಿದೆ. ಹೊಸದೆಹಲಿಯ ವಿಮಾನ ನಿಲ್ದಾಣಕ್ಕೆ 'ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ' ಎಂಬ ಹೆಸರಿಟ್ಟು ಇವರನ್ನು ಗೌರವಿಸಲಾಗಿದೆ. ಇದನ್ನೂ ನೋಡಿ ರಾಜೀವ್ ಗಾಂಧಿ ಜವಾಹರಲಾಲ್ ನೆಹರು ನೆಹರು-ಗಾಂಧಿ ಕುಟುಂಬ ಹತ್ಯೆಗೊಳಗಾದ ಭಾರತೀಯ ರಾಜಕಾರಣಿಗಳ ಪಟ್ಟಿ ಆಪರೇಶನ್ ಬ್ಲೂ ಸ್ಟಾರ್ ಭಾರತದಲ್ಲಿ ತುರ್ತು ಪರಿಸ್ಥಿತಿ 1975-77 ಭಾರತದ ಪ್ರಧಾನ ಮಂತ್ರಿಗಳ ಪಟ್ಟಿ ಭಾರತ ಗಣರಾಜ್ಯದ ಇತಿಹಾಸ ಅಧಿಕಾರ ರಾಜಕಾರಣದ ಏಳುಬೀಳು;29 Nov, 2016;ಸಿ.ಜಿ. ಮಂಜುಳಾ ಆಕರಗಳು ಹೆಚ್ಚಿನ ಓದಿಗಾಗಿ ವೇದ್ ಮೆಹ್ತ, ಎ ಫ್ಯಾಮಿಲಿ ಅಫೇರ್: ಇಂಡಿಯಾ ಅಂಡರ್ ತ್ರೀ ಪ್ರೈಮ್ ಮಿನಿಸ್ಟರ್ಸ್ (1982) ISBN 0-19-503118-0 ಪಪುಲ್ ಜಯಕರ್, ಇಂದಿರಾ ಗಾಂಧಿ: ಅನ್ ಇಂಟಿಮೇಟ್ ಬೈಯಾಗ್ರಫಿ (1992) ISBN 978-0-679-42479-6 ಕ್ಯಾಥರಿನ್ ಫ್ರ್ಯಾಂಕ್, ಇಂದಿರಾ: ದ ಲೈಫ್ ಆಫ್ ಇಂದಿರಾ ನೆಹರು ಗಾಂಧಿ (2002) ISBN 0-395-73097-X ರಾಮಚಂದ್ರ ಗುಹ, ಇಂಡಿಯಾ ಆಫ್ಟರ್ ಗಾಂಧಿ: ದ ಹಿಸ್ಟರಿ ಆಫ್ ದ ವರ್ಲ್ಡ್ಸ್ ಲಾರ್ಜೆಸ್ಟ್ ಡೆಮೋಕ್ರಸಿ (2007) ISBN 978-0-06-019881-7 ಹೊರಗಿನ ಕೊಂಡಿಗಳು ಇಂದಿರಾ ಗಾಂಧಿ ಬೈಯೋಗ್ರಫಿ ಫೀಚರ್ಸ್ ಆನ್ ಇಂದಿರಾ ಗಾಂಧಿ ಬೈ ದ ಇಂಟರ್‌ನ್ಯಾಷನಲ್ ಮ್ಯೂಸಿಯಂ ಆಫ್ ವ್ಯುಮೆನ್ . ನಿಧನವಾರ್ತೆ, NY ಟೈಮ್ಸ್, ನವೆಂಬರ್ 1, 1984 ಭಾರತದಲ್ಲಿನ ಹತ್ಯೆಗಳು: ಛಲ ಬಲದ ನಾಯಕಿ ಇಂದಿರಾ ಗಾಂಧಿ, ರಾಜಕೀಯಕ್ಕಾಗಿಯೇ ಜನಿಸಿದವರು, ಅವರ ಸ್ವಂತ ಗುರುತನ್ನು ಭಾರತದಲ್ಲಿ ಬಿಟ್ಟುಹೋಗಿದ್ದಾರೆ 1975: ಗಾಂಧಿಯವರನ್ನು ಭ್ರಷ್ಟಾಚಾರ ದೋಷಿ ಎನ್ನಲಾಯಿತು ಭಾರತದ ಪ್ರಧಾನ ಮಂತ್ರಿಗಳು ರಾಜಕಾರಣಿಗಳು ಭಾರತರತ್ನ ಪುರಸ್ಕೃತರು
1643
https://kn.wikipedia.org/wiki/%E0%B2%AE%E0%B3%8A%E0%B2%B0%E0%B2%BE%E0%B2%B0%E0%B3%8D%E0%B2%9C%E0%B2%BF%20%E0%B2%A6%E0%B3%87%E0%B2%B8%E0%B2%BE%E0%B2%AF%E0%B2%BF
ಮೊರಾರ್ಜಿ ದೇಸಾಯಿ
ಮೊರಾರ್ಜಿ ದೇಸಾಯಿ ಮೊರಾರ್ಜಿ (೨೯ ಫೆಬ್ರವರಿ ೧೮೯೬ - ೧೦ ಏಪ್ರಿಲ್ ೧೯೯೫) ಒಬ್ಬ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು ಮತ್ತು ೧೯೮೭ ರಿಂದ ೧೯೭೯ ರವರೆಗೆ ಭಾರತದಲ್ಲಿ ೪ ನೇ ಪ್ರಧಾನಿಯಾಗಿ(ಜನತಾ ಪಾರ್ಟಿ) ಸರ್ಕಾರಕ್ಕೆ ಸೇವೆ ಸಲ್ಲಿಸಿದರು. ಅವರ ಸುದೀರ್ಘ ವೃತ್ತಿಜೀವನದ ಅವಧಿಯಲ್ಲಿ, ಅವರು ಹಲವಾರು ಪ್ರಮುಖ ಹುದ್ದೆಗಳನ್ನು ಸರ್ಕಾರದಲ್ಲಿ ಹೊಂದಿದ್ದರು: ಮುಂಬಯಿ ರಾಜ್ಯದ ಮುಖ್ಯಮಂತ್ರಿ, ಗೃಹ ಸಚಿವ, ಹಣಕಾಸು ಸಚಿವ ಮತ್ತು ಭಾರತದ ಉಪ ಪ್ರಧಾನ ಮಂತ್ರಿ. ಅಂತರರಾಷ್ಟ್ರೀಯ ಸನ್ನಿವೇಶದಲ್ಲಿ, ದೇಸಾಯಿ ತಮ್ಮ ಶಾಂತಿ ಕ್ರಿಯಾವಾದಕ್ಕಾಗಿ ಅಂತಾರಾಷ್ಟ್ರೀಯ ಖ್ಯಾತಿಯನ್ನು ಪಡೆದಿದ್ದಾರೆ ಮತ್ತು ಎರಡು ಪ್ರತಿಸ್ಪರ್ಧಿ ದಕ್ಷಿಣ ಏಷ್ಯಾದ ರಾಜ್ಯಗಳು, ಪಾಕಿಸ್ತಾನ ಮತ್ತು ಭಾರತ ನಡುವೆ ಶಾಂತಿ ಆರಂಭಿಸಲು ಪ್ರಯತ್ನಗಳನ್ನು ಮಾಡಿದ್ದಾರೆ. ೧೯೭೪ ರಲ್ಲಿ ಭಾರತದ ಮೊದಲ ಪರಮಾಣು ಸ್ಫೋಟವಾದ ನಂತರ, ದೇಸಾಯಿ ಚೀನಾ ಮತ್ತು ಪಾಕಿಸ್ತಾನದೊಂದಿಗೆ ಸ್ನೇಹ ಸಂಬಂಧವನ್ನು ಪುನಃಸ್ಥಾಪಿಸಲು ಸಹಾಯ ಮಾಡಿದರು ಮತ್ತು ೧೯೭೧ ರ ಇಂಡೋ-ಪಾಕಿಸ್ತಾನಿ ಯುದ್ಧದಂತಹ ಸಶಸ್ತ್ರ ಸಂಘರ್ಷವನ್ನು ತಪ್ಪಿಸಲು ಪ್ರತಿಜ್ಞೆ ಮಾಡಿದರು. ಆರಂಭಿಕ ಜೀವನ ಮೊರಾರ್ಜಿ ದೇಸಾಯಿ ಅವರು ೧೮೯೬ ರ ಫೆಬ್ರುವರಿ ೨೯ ರಂದು ಮುಂಬಯಿ ಪ್ರೆಸಿಡೆನ್ಸಿ (ಈಗ ಗುಜರಾತ್ನಲ್ಲಿ) ನ ಬಲ್ಸೇರಿ ಜಿಲ್ಲೆಯ ಭಾಡೆಲಿ ಗ್ರಾಮದಲ್ಲಿ ಜನಿಸಿದರು. ಎಂಟು ಮಕ್ಕಳು ಅತ್ಯಂತ ಹಿರಿಯರು. ಅವರ ತಂದೆ ಶಾಲೆಯ ಶಿಕ್ಷಕರಾಗಿದ್ದರು. ದೇಸಾಯಿ ಸೌರಾಷ್ಟ್ರದಲ್ಲಿರುವ ಕುಂಡ್ಲಾ ಶಾಲೆಯಲ್ಲಿ ತನ್ನ ಪ್ರಾಥಮಿಕ ಶಾಲಾ ಶಿಕ್ಷಣಕ್ಕೆ ಒಳಗಾದರು, ಸಾವರ್ಕುಂಡ್ಲಾ ಈಗ ಜೆ.ವಿ. ಮೋದಿ ಶಾಲೆ ಎಂದು ಕರೆಯುತ್ತಾರೆ ಮತ್ತು ನಂತರ ಬಲ್ ಅವಾ ಬಾಯ್ ಹೈಸ್ಕೂಲ್, ವಲ್ಸಾದ್ ಸೇರಿದರು. ಮುಂಬೈಯ ವಿಲ್ಸನ್ ಕಾಲೇಜ್ನಿಂದ ಪದವೀಧರರಾದ ನಂತರ, ಅವರು ಗುಜರಾತ್ನಲ್ಲಿ ನಾಗರಿಕ ಸೇವೆಗೆ ಸೇರಿದರು. ಅಲ್ಲಿ ೧೯೨೭-೨೮ರ ಗಲಭೆಗಳ ಸಮಯದಲ್ಲಿ ಹಿಂದುಗಳ ಮೇಲೆ ಮೃದುವಾಗಿ ಹೋಗುವ ಅಪರಾಧವೆಂದು ಪರಿಗಣಿಸಲ್ಪಟ್ಟು ಮೇ ೧೯೩೦ ರಲ್ಲಿ ಗೋಧ್ರಾದ ಜಿಲ್ಲಾಧಿಕಾರಿಯಾಗಿ ದೇಸಾಯಿ ರಾಜೀನಾಮೆ ನೀಡಿದರು. ದೇಸಾಯಿ ನಂತರ ಮಹಾತ್ಮಾ ಗಾಂಧಿಯವರ ಸ್ವಾತಂತ್ರ್ಯ ಹೋರಾಟದಲ್ಲಿ ಸೇರಿದರು ಮತ್ತು ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ವಿರುದ್ಧ ನಾಗರಿಕ ಅಸಹಕಾರ ಚಳವಳಿಯಲ್ಲಿ ಸೇರಿಕೊಂಡರು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಅವರು ಅನೇಕ ವರ್ಷಗಳ ಕಾಲ ಜೈಲಿನಲ್ಲಿದ್ದರು ಮತ್ತು ಅವರ ಚೂಪಾದ ನಾಯಕತ್ವದ ಕೌಶಲ್ಯ ಮತ್ತು ಕಠಿಣ ಚೈತನ್ಯದಿಂದಾಗಿ ಅವರು ಸ್ವಾತಂತ್ರ್ಯ ಹೋರಾಟಗಾರರ ನಡುವೆ ನೆಚ್ಚಿನವರಾಗಿದ್ದರು ಮತ್ತು ಗುಜರಾತ್ ಪ್ರದೇಶದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಪ್ರಮುಖ ನಾಯಕರಾಗಿದ್ದರು. ೧೯೩೪ ಮತ್ತು ೧೯೩೭ ರಲ್ಲಿ ಪ್ರಾಂತೀಯ ಚುನಾವಣೆಗಳು ನಡೆದಾಗ, ದೇಸಾಯಿ ಅವರು ಮುಂಬಯಿ ಪ್ರೆಸಿಡೆನ್ಸಿಯ ಕಂದಾಯ ಸಚಿವ ಮತ್ತು ಗೃಹ ಸಚಿವರಾಗಿ ಆಯ್ಕೆಯಾದರು. ಭಾರತದ ಪ್ರಧಾನಿ (೧೯೭೭-೭೯) ತುರ್ತು ಪರಿಸ್ಥಿತಿಯನ್ನು ಎತ್ತಿಹಿಡಿಯಲು ಇಂದಿರಾ ಗಾಂಧಿಯವರು ನಿರ್ಧರಿಸಿದ ನಂತರ ಸಾಮಾನ್ಯ ಚುನಾವಣೆ ನಡೆಯಿತು. ಜನತಾ ಪಾರ್ಟಿ ಚುನಾವಣೆಯಲ್ಲಿ ಜಯ ಸಾಧಿಸಿತು ಮತ್ತು ಮೊರಾರ್ಜಿ ದೇಸಾಯಿ ಪ್ರಧಾನಿಯಾದರು. ದೇಸಾಯಿ ನೆರೆಹೊರೆಯ ಮತ್ತು ವಿರೋಧಿ ಪಾಕಿಸ್ತಾನದೊಂದಿಗೆ ಸಂಬಂಧವನ್ನು ಸುಧಾರಿಸಲು ಕೆಲಸ ಮಾಡಿದರು. ೧೯೬೨ ರ ಯುದ್ಧದ ನಂತರ ಮೊದಲ ಬಾರಿಗೆ ಚೀನಾದೊಂದಿಗಿನ ಸಾಮಾನ್ಯ ಸಂಬಂಧಗಳನ್ನು ಮರುಸ್ಥಾಪಿಸಿತು. ಅವರು ಜಿಯಾ-ಉಲ್-ಹಕ್ ಅವರೊಂದಿಗೆ ಸಂವಹನ ನಡೆಸಿದರು ಮತ್ತು ಸೌಹಾರ್ದ ಸಂಬಂಧಗಳನ್ನು ಸ್ಥಾಪಿಸಿದರು. ಚೀನಾದೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಪುನಃ ಸ್ಥಾಪಿಸಲಾಯಿತು. ಅವರ ಸರ್ಕಾರ ತುರ್ತು ಪರಿಸ್ಥಿತಿಯಲ್ಲಿ ಸಂವಿಧಾನಕ್ಕೆ ತಿದ್ದುಪಡಿ ಮಾಡಿತು. ಸಾವು ಮೊರಾರ್ಜಿ ದೇಸಾಯಿ ಅವರು ೧೯೮೦ ರ ಸಾರ್ವತ್ರಿಕ ಚುನಾವಣೆಯಲ್ಲಿ ಹಿರಿಯ ರಾಜಕಾರಣಿಯಾಗಿ ಜನತಾ ಪಕ್ಷಕ್ಕೆ ಪ್ರಚಾರ ಮಾಡಿದರು ಆದರೆ ಚುನಾವಣೆಯಲ್ಲಿ ಸ್ವತಃ ಸ್ಪರ್ಧಿಸಲಿಲ್ಲ. ನಿವೃತ್ತಿಯಲ್ಲಿ ಅವರು ಮುಂಬೈಯಲ್ಲಿ ವಾಸಿಸುತ್ತಿದ್ದರು ಮತ್ತು ೧೯೯೫ ರಲ್ಲಿ ೯೯ ನೇ ವಯಸ್ಸಿನಲ್ಲಿ ನಿಧನರಾದರು. ಅವರ ಕೊನೆಯ ವರ್ಷಗಳಲ್ಲಿ ಅವರ ಪೀಳಿಗೆಯ ಸ್ವಾತಂತ್ರ್ಯ ಹೋರಾಟಗಾರನಾಗಿ ಅವರು ಹೆಚ್ಚು ಗೌರವವನ್ನು ಹೊಂದಿದ್ದರು. ಮೊರಾರ್ಜಿ ದೇಸಾಯಿ ಮಹಾತ್ಮ ಗಾಂಧಿಯವರ ತತ್ವಗಳ ಮತ್ತು ನೈತಿಕತೆಯ ಕಟ್ಟುನಿಟ್ಟಾದ ಅನುಯಾಯಿಯಾಗಿದ್ದರು. ಸಾಮಾಜಿಕ ಸೇವೆ ಮೊರಾರ್ಜಿ ದೇಸಾಯಿಯವರು ಗಾಂಧಿಯ ಅನುಯಾಯಿಯಾಗಿದ್ದರು, ಸಾಮಾಜಿಕ ಕಾರ್ಯಕರ್ತರು, ಸಂಸ್ಥಾಪಕ ಬಿಲ್ಡರ್ ಮತ್ತು ಉತ್ತಮ ಸುಧಾರಕರಾಗಿದ್ದರು. ಅವರು ಗುಜರಾತ್ ವಿದ್ಯಾಪೀಠದ ಚಾನ್ಸಲರ್ ಆಗಿದ್ದರು. ಪ್ರಧಾನ ಮಂತ್ರಿಯಾಗಿದ್ದ ತಮ್ಮ ಅವಧಿಯಲ್ಲಿ ಅವರು ಅಕ್ಟೋಬರ್ ತಿಂಗಳಲ್ಲಿ ವಿದ್ಯಾಪೀಠಕ್ಕೆ ಭೇಟಿ ನೀಡುತ್ತಿದ್ದರು. ವೈಯಕ್ತಿಕ ಜೀವನ ಮತ್ತು ಕುಟುಂಬ ಮೊರಾರ್ಜಿ ದೇಸಾಯಿ ಅವರು ೧೫ ನೇ ವಯಸ್ಸಿನಲ್ಲಿ ೧೯೧೧ ರಲ್ಲಿ ಗುಜ್ರಬೆನ್ರನ್ನು ಮದುವೆಯಾದರು. ಅವರ ಮಗ ಕಾಂತಿ ದೇಸಾಯಿ ಮತ್ತು ಜಗದೀಪ್ ದೇಸಾಯಿ ಮತ್ತು ಭಾರತ್ ದೇಸಾಯಿ ಮೊಮ್ಮಕ್ಕಳು. ಮಧುಕೇಶ್ವರ್ ದೇಸಾಯಿ, ಅವರ ಶ್ರೇಷ್ಠ-ಮೊಮ್ಮಗ ಜಗದೀಪ್ ದೇಸಾಯಿಯವರ ಮಗ ಪ್ರಸ್ತುತ ಬಿಜೆಪಿಯ ಯುವ ವಿಭಾಗವಾದ ಭಾರತೀಯ ಜನತಾ ಯುವಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದಾರೆ. ಭಾರತ್ ದೇಸಾಯಿಯ ಮಗ ವಿಶಾಲ್ ದೇಸಾಯಿ ಅವರು ಬರಹಗಾರ ಮತ್ತು ಚಲನಚಿತ್ರ ನಿರ್ಮಾಪಕರಾಗಿದ್ದಾರೆ ಉಲ್ಲೇಖಗಳು ಭಾರತದ ಪ್ರಧಾನ ಮಂತ್ರಿಗಳು ಭಾರತ ರತ್ನ ಪುರಸ್ಕೃತರು
1644
https://kn.wikipedia.org/wiki/%E0%B2%9A%E0%B3%8C%E0%B2%A7%E0%B3%81%E0%B2%B0%E0%B2%BF%20%E0%B2%9A%E0%B2%B0%E0%B2%A3%E0%B3%8D%20%E0%B2%B8%E0%B2%BF%E0%B2%82%E0%B2%97%E0%B3%8D
ಚೌಧುರಿ ಚರಣ್ ಸಿಂಗ್
ಚೌಧುರಿ ಚರಣ್ ಸಿಂಗ್ - ಭಾರತದ ಪ್ರಧಾನಮಂತ್ರಿಗಳಲ್ಲೊಬ್ಬರು. ಭಾರತದ ಪ್ರಧಾನ ಮಂತ್ರಿಗಳು
1645
https://kn.wikipedia.org/wiki/%E0%B2%B0%E0%B2%BE%E0%B2%9C%E0%B3%80%E0%B2%B5%E0%B3%8D%20%E0%B2%97%E0%B2%BE%E0%B2%82%E0%B2%A7%E0%B2%BF
ರಾಜೀವ್ ಗಾಂಧಿ
ರಾಜೀವ್ ಗಾಂಧಿ (೧೯೮೪-೧೯೮೯) ಭಾರತದ ೬ ನೇ ಪ್ರಧಾನಿಯಾಗಿದ್ದರು. ಇವರು ಭಾರತದ ಪ್ರಧಾನಿ 'ಶ್ರೀಮತಿ ಇಂದಿರಾ ಗಾಂಧಿ', ಹಾಗೂ 'ಫಿರೋಝ್ ಗಾಂಧಿ' ದಂಪತಿಗಳ ಮೊದಲ ಮಗ. ಜನನ, ಜೀವನ ರಾಜೀವ್ ಗಾಂಧಿ (ಜನನ : ಆಗಸ್ಟ್ ೨೦, ೧೯೪೪) ತಂದೆ ಫಿರೋಝ್ ಗಾಂಧಿ. ಇವರು ಇಟಲಿಯ ಮೂಲದವರಾದ ಸೋನಿಯ ಮೈನೊ ಅವರನ್ನು ವಿವಾಹವಾಗಿದ್ದರು. ಇವರಿಗೆ ಇಬ್ಬರು ಮಕ್ಕಳು- ರಾಹುಲ್ ಮತ್ತು ಪ್ರಿಯಾಂಕ. ೧೯೬೨ರಲ್ಲಿ ಕೇಂಬ್ರಿಡ್ಜ್ ನ ಟ್ರಿನಿಟಿ ಕಾಲೇಜ್ ನಲ್ಲಿ ಇಂಜಿನೀಯರಿಂಗ್ ಮಾಡಲು ಹೋದರಾದರೂ ೧೯೬೫ ರವರೆಗೂ ಅಲ್ಲೇ ಇದ್ದು ಪದವಿ ಪಡೆಯದೇ ವಾಪಾಸಾದರು. ಅವರು ಮೊದ ಮೊದಲು ರಾಜಕೀಯವನ್ನು ಇಷ್ಟ ಪಡುತ್ತಿರಲಿಲ್ಲ. ಪೈಲೆಟ್ ಆಗಬೇಕೆಂಬುದು ಅವರ ಬಹುದಿನದ ಬಯಕೆಯಾಗಿತ್ತು. ಆ ಆಸೆ ಅವರಿಗೆ ಈಡೇರಲಿಲ್ಲ.ತಾಯಿಯ ಆಡಳಿತದಲ್ಲಿ ನಿಗಾ ವಹಿಸಿದ್ದ ಸಹೋದರ ಸಂಜಯ ಗಾಂಧಿ ಮರಣಾನಂತರ, ಅನಿವಾರ್ಯವಾಗಿ ರಾಜಕೀಯಕ್ಕೆ ಧುಮುಕಿದ ಇವರು ಸಂಜಯ್ ಗಾಂಧಿಯವರ ಕ್ಷೇತ್ರ ಅಮೇಥಿಯಿಂದ ೨ ಲಕ್ಷ ಮತಗಳ ಅಂತರದಲ್ಲಿ ಶರದ್ ಪವಾರ್ ವಿರುದ್ದ ಆರಿಸಿ ಬಂದರು. ರಾಜಕೀಯ ಶ್ರೀಮತಿ ಇಂದಿರಾಗಾಂಧಿ ಅವರ ಮರಣದ ನಂತರ ಭಾರತದ ಪ್ರಧಾನ ಮಂತ್ರಿಯಾದರು. ಇವರು ಭಾರತದ ಮೊದಲ ಯುವ (೪೦ ನೇ ವಯಸ್ಸಿನಲ್ಲಿ ) ಪ್ರಧಾನಿಯಾಗಿದ್ದರು. ೧೯೮೪ ರ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ (೪೦೪ ಸ್ಥಾನಗಳು) ಗೆದ್ದಿದ್ದರು. ಬಹು ಬೇಗನೆ ಜನಪ್ರಿಯ ಪ್ರಧಾನ ಮಂತ್ರಿಗಳೆನಿಸಿದರು. ಜನಮುಖಿ ಕಾರ್ಯಗಳಿಗೆ ಇಂಬು ಕೊಟ್ಟರು. ಶ್ರೀಲಂಕಾದ ಎಲ್.ಟಿ.ಟಿ ಸಮಸ್ಯೆಯ ನಿಗ್ರಹಕ್ಕೋಸ್ಕರ ಅವರು, ಶ್ರೀಲಂಕಾಕ್ಕೆ ಭಾರತದ ಸೈನ್ಯವನ್ನು ಕಳುಹಿಸಿಕೊಟ್ಟ ಪರಿಣಾಮವಾಗಿ, ಅವರು ತಮ್ಮ ಜೀವವನ್ನು ತೆರಬೇಕಾಯಿತು. ನಿಧನ ತಮಿಳುನಾಡಿನ ಪೆರಂಬೂರಿಗೆ ಬಹಿರಂಗ ಚುನಾವಣಾ ಭಾಷಣವನ್ನು ಮಾಡಲು ಹೋಗಿ, ಶ್ರೀಲಂಕಾದ ಎಲ್.ಟಿ.ಟಿಯವರ ಮಾನವ ಬಾಂಬ್ ಧಾಳಿಗೆ ತುತ್ತಾದರು. ಅವರ ಸುಂದರ ಕಾಯ ಬಾಂಬ್ ಧಾಳಿಯಿಂದ ಚೂರು ಚೂರಾಗಿತ್ತು. ಹೆಚ್ಚಿನ ಓದಿಗೆ - ಹೊರ ಸಂಪರ್ಕ ತಮಿಳು ರಾಜಕಾರಣದ ಕಾರ್ಯತಂತ್ರ ಉಲ್ಲೇಖಗಳು India's Rajiv-Part-3 The Politician'ರಾಜೀವ್ ಗಾಂಧಿ'-ಭಾಗ-೩ ಯು ಟ್ಯೂಬ್ ಭಾರತದ ಪ್ರಧಾನ ಮಂತ್ರಿಗಳು ಭಾರತ ರತ್ನ ಪುರಸ್ಕೃತರು
1646
https://kn.wikipedia.org/wiki/%E0%B2%B5%E0%B2%BF.%20%E0%B2%AA%E0%B2%BF.%20%E0%B2%B8%E0%B2%BF%E0%B2%82%E0%B2%97%E0%B3%8D
ವಿ. ಪಿ. ಸಿಂಗ್
ವಿಶ್ವನಾಥ ಪ್ರತಾಪ್ ಸಿಂಗ್ ಭಾರತದ ಪ್ರಧಾನಮಂತ್ರಿಗಳಲ್ಲೊಬ್ಬರು. ಇವರು ವಿ.ಪಿ.ಸಿಂಗ್ ಎಂದೇ ಹೆಚ್ಚು ಪರಿಚಿತರು. ಇವರು ಜೂನ್ ೨೫, ೧೯೩೧ರಂದು ಜನಿಸಿದರು. ಅಲಹಾಬಾದ್‌ ಕ್ಷೇತ್ರದಿಂದ ರಾಜಕೀಯ ಪ್ರವೇಶಿಸಿದರು.೧೯೮೦ರಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿಯಾದರು. ಆಗ ಆ ರಾಜ್ಯದಲ್ಲಿ ನಡೆಯುತ್ತಿದ್ದ ಡಕಾಯಿತಿಗಳನ್ನು ಸಂಪೂರ್ಣ ಮಟ್ಟ ಹಾಕಿದರು. ೧೯೮೪ರಲ್ಲಿ ರಾಜೀವ್ ಗಾಂಧಿಯವರ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಹಣಕಾಸು ಮಂತ್ರಿಯಾದರು. ಬೊಫೋರ್ಸ್ ಹಗರಣದ ನಂತರ ಕಾಂಗ್ರೆಸ್ ಪಕ್ಷ ಹಾಗೂ ಲೋಕಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿ ಜನಮೋರ್ಚಾ ಪಕ್ಷದ ಮೂಲಕ ಲೋಕಸಭೆಗೆ ಆಯ್ಕೆಯಾದರು. ಜನಮೋರ್ಚಾ, ಜನತಾ ಪಕ್ಷ, ಲೋಕದಳ ಮತ್ತು ಕಾಂಗ್ರೆಸ್ ಎಸ್ ವಿಲೀನಗೊಂಡು ಜನತಾ ದಳದ ಉದಯವಾಯಿತು. ಮುಂದೆ ಜನತಾದಳದ ಮೂಲಕ ಲೋಕಸಭೆ ಪ್ರವೇಶಿಸಿ, ೧೯೮೯ರ ಡಿಸೆಂಬರ್ ೨ ರಿಂದ ೧೯೯೦ರ ನವೆಂಬರ್ ೧೦ ರವರೆಗೆ ಭಾರತದ ಏಳನೇ ಪ್ರಧಾನಮಂತ್ರಿಯಾಗಿ ಅಧಿಕಾರ ನಿರ್ವಹಿಸಿದರು. ಇವರು ಮಂಡಲ್ ಸಮಿತಿಯ ಬಗ್ಗೆ ತೆಗೆದುಕೊಂಡ ಇವರ ನಿರ್ಧಾರ ಇವರ ರಾಜಕೀಯ ಜೀವನಕ್ಕೆ ಮುಳುವಾಯಿತು. ಭಾರತದ ಪ್ರಧಾನ ಮಂತ್ರಿಗಳು
1647
https://kn.wikipedia.org/wiki/%E0%B2%9A%E0%B2%82%E0%B2%A6%E0%B3%8D%E0%B2%B0%E0%B2%B6%E0%B3%87%E0%B2%96%E0%B2%B0%E0%B3%8D
ಚಂದ್ರಶೇಖರ್
ಚಂದ್ರಶೇಖರ್ (ಜನನ : ಜುಲೈ ೧, ೧೯೨೭ - ಮರಣ:ಜುಲೈ ೮,೨೦೦೭) ಭಾರತದಎಂಟನೆಯ ಪ್ರಧಾನಮಂತ್ರಿಯಾಗಿದ್ದವರು.ಯಂಗ್ ಟರ್ಕ್ ಎಂದೇ ಖ್ಯಾತರಾಗಿದ್ದವರು.ಚಂದ್ರಶೇಖರ್ ಜನಿಸಿದ್ದು ಉತ್ತರಪ್ರದೇಶದ ಇಬ್ರಾಹಿಂಪಟ್ಟಿಯ ರೈತ ಕುಟುಂಬದಲ್ಲಿ.ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮುಗಿಸಿದರು. ೧೯೫೦ರ ದಶಕದಲ್ಲಿ ಸಮಾಜವಾದ ಚಳವಳಿಗೆ ಧುಮುಕಿದರು.೧೯೬೨ರಲ್ಲಿ ಪ್ರಜಾ ಸೋಷಿಯಲಿಸ್ಟ್ ಪಕ್ಷದಿಂದ ರಾಜ್ಯಸಭೆ ಪ್ರವೇಶಿಸಿದರು.೧೯೬೫ರಲ್ಲಿ ಕಾಂಗ್ರೆಸ್ ಸೇರಿದ ಅವರು,ಆ ಪಕ್ಷದ ಸಂಸದೀಯ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದರು. ಉಲ್ಲೇಖಗಳು ಭಾರತದ ಪ್ರಧಾನ ಮಂತ್ರಿಗಳು ೧೯೨೭ ಜನನ
1648
https://kn.wikipedia.org/wiki/%E0%B2%85%E0%B2%9F%E0%B2%B2%E0%B3%8D%20%E0%B2%AC%E0%B2%BF%E0%B2%B9%E0%B2%BE%E0%B2%B0%E0%B2%BF%20%E0%B2%B5%E0%B2%BE%E0%B2%9C%E0%B2%AA%E0%B3%87%E0%B2%AF%E0%B2%BF
ಅಟಲ್ ಬಿಹಾರಿ ವಾಜಪೇಯಿ
ಅಟಲ್ ಬಿಹಾರಿ ವಾಜಪೇಯಿ( 25 ಡಿಸೆಂಬರ್ 1924 - 16 ಆಗಸ್ಟ್ 2018)ಯವರು ಭಾರತದ ಮಾಜಿ ಪ್ರಧಾನಮಂತ್ರಿ, ರಾಜಕಾರಣಿ, ಶ್ರೇಷ್ಠ ಸಂಸದೀಯ ಪಟು, ವಾಗ್ಮಿ, ಕವಿ, ನೇತಾರ ಹಾಗೂ ಜನನಾಯಕ. ಮೂರು ಬಾರಿ ಭಾರತದ ಪ್ರಧಾನಮಂತ್ರಿಯಾಗಿ ಇದಕ್ಕೂ ಮುಂಚೆ ವಿದೇಶಾಂಗ ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರು ತಮ್ಮ ಸಭ್ಯತೆ, ಹಾಸ್ಯಪ್ರಜ್ಞೆ, ಉದಾರ ವ್ಯಕ್ತಿತ್ವ ಮತ್ತು ನಡವಳಿಕೆಗಳಿಂದ ಅತ್ಯಂತ ಜನಪ್ರಿಯ ನಾಯಕರಾಗಿದ್ದರು. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಕೂಟದ ಅಧ್ಯಕ್ಷರಾಗಿದ್ದರು. ಅವರು ಮೂರು ಬಾರಿ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು, ಮೊದಲ ಬಾರಿಗೆ ೧೯೯೬ ರಲ್ಲಿ ೧೩ ದಿನಗಳ ಅವಧಿಗೆ, ೧೯೯೮ ರಿಂದ ೧೯೯೯ ರವರೆಗೆ ಹನ್ನೊಂದು ತಿಂಗಳ ಅವಧಿ, ಮತ್ತು ನಂತರ ೧೯೯೯ ರಿಂದ ೨೦೦೪ ರವರೆಗಿನ ಪೂರ್ಣಾವಧಿಗೆ.ಲೋಕಸಭೆ, ಕೆಳಮನೆಗೆ ಹತ್ತು ಬಾರಿ ಮತ್ತು ಮೇಲ್ಮನೆಗೆ ರಾಜ್ಯಸಭೆಗೆ ಎರಡು ಬಾರಿ ಆಯ್ಕೆಯಾದ ಅವರು ನಾಲ್ಕು ದಶಕಗಳ ಕಾಲ ಭಾರತೀಯ ಸಂಸತ್ ಸದಸ್ಯರಾಗಿದ್ದರು. ೨೦೦೯ ರವರೆಗೆ ಉತ್ತರ ಪ್ರದೇಶದ ಲಖನೌದ ಸಂಸತ್ ಸದಸ್ಯರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಆರೋಗ್ಯದ ಕಾರಣದಿಂದಾಗಿ ಅವರು ಸಕ್ರಿಯ ರಾಜಕೀಯದಿಂದ ನಿವೃತ್ತರಾದರು. ೧೯೬೮ ರಿಂದ ೧೯೭೨ ರವರೆಗೆ ನೇತೃತ್ವ ವಹಿಸಿದ್ದ ಹಿಂದಿನ ಭಾರತೀಯ ಜನ ಸಂಘದ ಸಂಸ್ಥಾಪಕ ಸದಸ್ಯರಲ್ಲಿ ವಾಜಪೇಯಿ ಒಬ್ಬರಾಗಿದ್ದರು. ಪ್ರಧಾನಿ ಮೊರಾರ್ಜಿ ದೇಸಾಯಿಯ ಕ್ಯಾಬಿನೆಟ್ನಲ್ಲಿ ವಿದೇಶಾಂಗ ಸಚಿವರಾಗಿದ್ದರು. ಅವರೊಬ್ಬ ಕವಿ, ಪತ್ರಕರ್ತ, ವಾಗ್ಮಿ, ಚಿಂತಕ, ದಾರ್ಶನಿಕ, ರಾಜಕಾರಣಿಯಾಗಿದ್ದರು. ಜನನ ಮತ್ತು ಬಾಲ್ಯ ಅಟಲಜಿಯವರು, 25ನೇ ಡಿಸೆಂಬರ್ 1924ರಲ್ಲಿ ಕೃಷ್ಣದೇವಿ ಹಾಗೂ ಕೃಷ್ಣ ಬಿಹಾರಿ ವಾಜಪೇಯಿ ಅವರ ಮಗನಾಗಿ ಮಧ್ಯ ಪ್ರದೇಶದ ಗ್ವಾಲಿಯರ ಹತ್ತಿರದ ಶಿಂದೆ ಕಿ ಚವ್ವಾಣಿ ಎನ್ನುವ ಗ್ರಾಮದಲ್ಲಿ ಜನಿಸಿದರು. ತಂದೆ ಒಬ್ಬ ಕವಿ ಮಾತ್ತು ಶಾಲೆಯ ಉಪಾಧ್ಯಾಯರು. ಅಟಲರವರ ಅಜ್ಜ ಪಂಡಿತ್ ಶ್ಯಾಮ್ ಲಾಲ್ ವಾಜಪೇಯಿ ರವರು ಊರಿನಲ್ಲಿ ಹೆಸರುವಾಸಿಯಾಗಿದ್ದರು. ವಿದ್ಯಾಭ್ಯಾಸ ಅಟಲ್ ಅವರ ಪದವಿಯನ್ನು ವಿಕ್ಟೋರಿಯಾ ಕಾಲೇಜಿನಿಂದ (ಈಗ ಲಕ್ಷ್ಮಿ ಬಾಯಿ ಕಾಲೇಜು) ಪಡೆದರು. ಹಿಂದಿ, ಇಂಗ್ಲೀಷ್ ಹಾಗೂ ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯ ಗಳಿಸಿದ ಅಟಲ್ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನ ಕಾನ್ಪುರದ ಡಿ.ಎ.ವಿ ಕಾಲೇಜಿನಿಂದ ಪಡೆದರು. ಕಾನ್ಪುರದ ಲಕ್ಷ್ಮೀಬಾಯಿ ಕಾಲೇಜಿನಲ್ಲಿ ರಾಜಕೀಯ ಶಾಸ್ತ್ರದಲ್ಲಿ ಮಾಸ್ಟರ್ ಡಿಗ್ರಿ ಪಡೆದ ಅಟಲ್ ೧೯೪೨ರಲ್ಲಿ ಕ್ವಿಟ್ ಇಂಡಿಯ ಚಳವಳಿಯ ಮೂಲಕ, ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ನಿಕಟವರ್ತಿಯಾಗಿ ಬೆಳೆದರು. ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್.ಎಸ್.ಎಸ್)ವನ್ನು ಸೇರಿದರು. 'ವೀರ ಅರ್ಜುನ' ಹಾಗೂ 'ಪಾಂಚಜನ್ಯ' ಎನ್ನುವ ಎರಡು ಪತ್ರಿಕೆಗಳಿಗೆ ಪತ್ರಕರ್ತರಾಗಿ ಕವಿಯಾಗಿ ಸೇವೆ ಸಲ್ಲಿಸಿದರು. ವೃತ್ತಿಜೀವನ ಇವರು ರಾಜಕಾರಣದೊಂದಿಗೆ ಅನೇಕ ಸಾಮಾಜಿಕ, ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ೧೯೬೧ ರಿಂದ ಬಹುಕಾಲ ರಾಷ್ಟ್ರೀಯ ಭಾವೈಕ್ಯತಾ ಮಂಡಳಿಯ ಸದಸ್ಯರು. ಆಲ್ ಇಂಡಿಯ ಸ್ಟೇಷನ್ ಮಾಸ್ಟರ್ಸ್ ಹಾಗೂ ಅಸಿಸ್ಟೆಂಟ್ಟ್ ಸ್ಟೇಷನ್ ಮಾಸ್ಟರ್ಸ್ ಅಸೋಸಿಯೇಷನ್‍ನ ಅಧ್ಯಕ್ಷರಾಗಿದ್ದರು. ಪಂಡಿತ ದೀನದಯಾಳು ಉಪಾಧ್ಯಾಯ ಸ್ಮಾರಕ ಸಮಿತಿ, ದೀನದಯಾಳು ಧಾಮ, ಜನ್ಮಭೂಮಿ ಸ್ಮಾರಕ ಸಮಿತಿಗಳ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇದಲ್ಲದೆ ರಾಜ್ಯಸಭೆ, ಲೋಕಸಭೆಗಳ ಅನೇಕ ಸಮಿತಿಗಳಲ್ಲಿ ಕೆಲಸ ಮಾಡಿದ್ದಾರೆ. ಇವರು ಕವಿ-ಬರೆಹಗಾರರಾಗಿಯೂ ಹೆಸರು ಗಳಿಸಿದ್ದಾರೆ. ರಾಷ್ಟ್ರಧರ್ಮ, ಪಾಂಚಜನ್ಯ, ಸ್ವದೇಶಿ ಹಾಗೂ ವೀರ ಅರ್ಜುನ್ ಮುಂತಾದ ಪತ್ರಿಕೆಗಳ ಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಮೇರಿ ಇಕ್ಯಾವನ್ ಕವಿತಾಯೇಂ, ಸಂಕಲ್ಪಕಾಲ, ಕೈದಿ ಕವಿರಾಜ್ ಕೇ ಕುಂಡಲಿಯಾ (ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸೆರೆಮನೆಯಲ್ಲಿ ರಚಿಸಿದ ಕವನಗಳು), ಅಮರ್ ಆಗ್ ಹೈ (ಕವನ ಸಂಕಲನಗಳು) ಮೇರಿ ಸಂಸದೀಯ ಯಾತ್ರಾ (೪ ಸಂಪುಟಗಳಲ್ಲಿ), ಶಕ್ತಿ ಸೇ ಶಾಂತಿ, ಲೋಕ ಸಭಾ ಮೆ ಅಟಲ್‍ಜೀ (ಭಾಷಣಗಳ ಸಂಪುಟ: ಮೃತ್ಯು ಯಾ ಹತ್ಯಾ, ಅಟಲ್ ಬಲಿದಾನ್), ಜನಸಂಘ ಔರ್ ಮುಸಲ್ಮಾನ್, ಸಂಸದ್ ಮೇ ತೀನ್ ದಶಕ್ (ಮೂರು ಸಂಪುಟಗಳಲ್ಲಿ), ಇವು ಹಿಂದಿಯಲ್ಲಿ ರಚಿತವಾದ ಪ್ರಮುಖ ಕೃತಿಗಳಾಗಿವೆ. ಫೋರ್ ಡಿಕೇಡ್ಸ್ ಇನ್ ಪಾರ್ಲಿಮೆಂಟ್ (ಭಾಷಣಗಳು, ಮೂರು ಸಂಪುಟ) ಹಾಗೂ ನ್ಯೂ ಡೈಮೆನ್‍ಷನ್ಸ್ ಆಫ್ ಇಂಡಿಯಾಸ್ ಫಾರಿನ್ ಪಾಲಿಸಿ-ಇವು ಇಂಗ್ಲಿಷಿನಲ್ಲಿ ಹೊರಬಂದಿರುವ ಪ್ರಸಿದ್ಧ ಗ್ರಂಥಗಳು. ಇವರು 1996 ಮೇ 16-31ರವರೆಗೆ ಮೊದಲಬಾರಿ, 1998-99ರವರೆಗೆ ಎರಡನೆಯಬಾರಿ ಹಾಗೂ 1999 ಅಕ್ಟೋಬರ್ 13 ರಿಂದ 2004 ಮೇ 12ರವರೆಗೆ ಮೂರನೆಯ ಬಾರಿ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದರು. 1998-99ರ ಇವರ ಅಧಿಕಾರಾವಧಿಯನ್ನು ಧೈರ್ಯ ಹಾಗೂ ದೃಢ ನಂಬಿಕೆಯ ಒಂದು ವರ್ಷ ಎಂದು ಕರೆಯಲಾಗಿದೆ. ಇವರ ಅವಧಿಯಲ್ಲಿ ಪೋಕ್ರಾನ್‍ನಲ್ಲಿ ನಡೆಸಿದ ಅಣುಬಾಂಬ್ ಪರೀಕ್ಷಾರ್ಥ ಸ್ಫೋಟದಿಂದಾಗಿ ಭಾರತ ಅಣುಬಾಂಬ್ ಹೊಂದಿದ ರಾಷ್ಟ್ರಗಳಿಗೆ ಸೇರ್ಪಡೆಯಾಯಿತು(1998). ಎರಡೂ ರಾಷ್ಟ್ರಗಳ ನಡುವೆ ಸೌಹಾರ್ದವನ್ನು ವೃದ್ಧಿಸುವ ಆಶಾಭಾವನೆಯಿಂದ ಭಾರತ-ಪಾಕಿಸ್ತಾನಗಳ ನಡುವೆ ಬಸ್ ಪ್ರಯಾಣವನ್ನು ಪ್ರಾರಂಭಿಸಿದರು(1999). ಇವರ ಅಧಿಕಾರಾವಧಿಯ ಸಂದರ್ಭದಲ್ಲಿ ಕಾರ್ಗಿಲ್ ಯುದ್ಧ ಸಂಭವಿಸಿ ಭಾರತ ವಿಜಯಿಯಾಯಿತು. ಸೌಹಾರ್ದದ ಈ ಪ್ರಯತ್ನ ನಿಂತಿತು. ಈಗ ಮೂಡುತ್ತಿರುವ ಭಾರತ-ಪಾಕ್ ಶಾಂತಿಪ್ರಕ್ರಿಯೆಗೆ ವಾಜಪೇಯಿ ಚಾಲನೆ ನೀಡಿದರು. ಇವರು ಪ್ರಧಾನಿಯಾಗಿ ಭಾರತದ ಆರ್ಥಿಕಾಭಿವೃದ್ಧಿಯ ಬಗ್ಗೆ ಅಪಾರ ಕಾಳಜಿ ವಹಿಸಿದರು. ಇವರ ಕಾಲದಲ್ಲಿ ಜಾಗತಿಕವಾಗಿ ಆರ್ಥಿಕ ಹಿನ್ನಡೆ ಇದ್ದಿತಾದರೂ ಭಾರತ ಶೇ. 5.8 ಜಿ.ಡಿ.ಪಿ ಅಭಿವೃದ್ಧಿ ಸಾಧಿಸಿದ್ದು ಒಂದು ಸಾಧನೆ. ಇವರು ಗ್ರಾಮೀಣ ಬಡಜನರ ಆರ್ಥಿಕ ಸಬಲೀಕರಣದ ಮಹದೋದ್ದೇಶ ಹೊಂದಿ, ಉತ್ತಮ ಗ್ರಾಮೀಣ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ, ಮಾನವ ಸಂಪನ್ಮೂಲಗಳ ಬೆಳೆವಣಿಗೆಗೆ ಅನೇಕ ಕಾರ್ಯಕ್ರಮಗಳನ್ನು ನಿಯೋಜಿಸಿದರು. ಭಾರತ ಒಂದು ಪ್ರಬಲ ಸ್ವಾವಲಂಬೀ ರಾಷ್ಟ್ರವಾಗಬೇಕೆಂಬುದು ಇವರ ಹೆಬ್ಬಯಕೆ. 52ನೆಯ ಸ್ವಾತಂತ್ರ್ಯ ದಿನಾಚರಣೆಯನ್ನು ಕೆಂಪುಕೋಟೆಯಲ್ಲಿ ಆಚರಿಸಿದ ಸಂದರ್ಭದಲ್ಲಿ ಭಾಷಣ ಮಾಡುತ್ತಾ “ನನಗೊಂದು ಭವ್ಯ ಭಾರತದ ಕಲ್ಪನೆಯಿದೆ. ಆ ಭಾರತ ಹಸಿವೆಯಿಂದ, ಭಯದಿಂದ ಮುಕ್ತವಾಗಿರುತ್ತದೆ; ಆ ಭಾರತ ನಿರಕ್ಷರತೆ ಮತ್ತು ದಾರಿದ್ರ್ಯದಿಂದ ದೂರವಾಗಿರುತ್ತದೆ” ಎಂದು ಹೇಳಿದ್ದಾರೆ. ಇವರನ್ನು ೯೦ರ ದಶಕದ ಭಾರತದ ರಾಷ್ಟ್ರ ರಾಜಕೀಯದ ಅತ್ಯಂತ ಪ್ರಬಲ ವ್ಯಕ್ತಿಯೆಂದು ಪರಿಗಣಿಸಲಾಗಿದೆ. ಮೊದಲಿನಿಂದಲೂ ಹಿಂದು ಸಂಘಪರಿವಾರದ ರಾಜಕೀಯ ಮುಖವಾಣಿಯಾದ ಜನಸಂಘ, ಜನತಾಪಕ್ಷ, ಭಾರತೀಯ ಜನಸಂಘಗಳನ್ನು ಸಂಘಟಿಸುವಲ್ಲಿ ಮುಂಚೂಣಿಯಲ್ಲಿದ್ದ ಇವರು ಈ ದಶಕದಲ್ಲಿ ಎನ್.ಡಿ.ಎ. (ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ) ಎಂಬ ಒಕ್ಕೂಟವನ್ನು ರಚಿಸಿ ಮೂರು ಬಾರಿ ಪ್ರಧಾನಮಂತ್ರಿಗಳಾಗಿ ಸರ್ಕಾರ ನಡೆಸಿದರು. ಅನಿವಾರ್ಯವಾದ ಒಕ್ಕೂಟ ಸರ್ಕಾರ ಧರ್ಮಕ್ಕೆ ರಾಷ್ಟ್ರಮಟ್ಟದಲ್ಲಿ ಉತ್ತಮ ನಾಂದಿ ಹಾಡಿದರು. ರಾಜಕೀಯ ಸ್ಥಿರತೆಯ ಪ್ರಯತ್ನ, ಆರ್ಥಿಕ ಬೆಳೆವಣಿಗೆಯಲ್ಲಿ ಪ್ರಗತಿ, ಉತ್ತಮ ಹೆದ್ದಾರಿಗಳ ನಿರ್ಮಾಣ, ಕೈಗಾರಿಕೆಗಳ ಅಭಿವೃದ್ಧಿ ಹಾಗೂ ಉತ್ತಮ ವಿದೇಶಾಂಗ ಸಂಬಂಧಗಳು ಇವರ ಸರ್ಕಾರದ ಪ್ರಮುಖ ಸಾಧನೆಗಳೆನ್ನಬಹುದು. ಆದರೆ ಗುಜರಾತಿನ ಕೋಮುವಾದಿ ಗಲಭೆ ಹಾಗೂ ಹಿಂದೆಂದೂ ಕಾಣದ ಅಲ್ಲಿನ ಹಿಂಸಾಚಾರ ಇವರ ಕಾಲದ ದುರ್ಘಟನೆಗಳು. ಅನಂತರದ ಸಾರ್ವತ್ರಿಕ ಚುನಾವಣೆಯಲ್ಲಿ (2004) ಇವರ ನಾಯಕತ್ವದ ಎನ್.ಡಿ.ಎ. ಒಕ್ಕೂಟ ಸೋತು ಇವರ ರಾಜಕೀಯ ನಾಯಕತ್ವಕ್ಕೆ ಹಿನ್ನೆಡೆ ಉಂಟಾಯಿತು. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕತ್ವವನ್ನೂ ಇವರು ಒಪ್ಪಿಕೊಳ್ಳಲಿಲ್ಲ. ಆದರೆ ರಾಷ್ಟ್ರರಾಜಕಾರಣದಲ್ಲಿ ಬಿಜೆಪಿಯ ಒಳವ್ಯವಹಾರಗಳಲ್ಲಿ ವಾಜಪೇಯಿ ಸಕ್ರಿಯರಾಗಿದ್ದರು. ಭಾರತೀಯ ಸಾರ್ವಜನಿಕ ಜೀವನದಲ್ಲಿ ಅಜಾತಶತ್ರು ಎಂದೇ ಹೆಸರು ಮಾಡಿದ್ದಾರೆ. ಮಾತುಗಾರಿಕೆಯಲ್ಲಿ ಅವರನ್ನು ಮೀರಿಸುವರಿಲ್ಲ. ವಿಶ್ವಸಂಸ್ಥೆಯಲ್ಲಿ ಹಿಂದಿಯಲ್ಲಿ ಮಾತನಾಡಿ ಇತಿಹಾಸ ನಿರ್ಮಿಸಿದರು. ಇವರಿಗೆ ಪದ್ಮವಿಭೂಷಣ ಪ್ರಶಸ್ತಿ(1992), 1994ರಲ್ಲಿ ಭಾರತದ ಅತ್ಯುತ್ತಮ ಸಂಸದೀಯ ಪಟು ಎಂಬ ಪುರಸ್ಕಾರ ಲಭಿಸಿವೆ. ರಾಜಕೀಯ ಜೀವನ 1951ರ ಅನಂತರ ಸಕ್ರಿಯ ರಾಜಕಾರಣ ಪ್ರವೇಶಿಸಿದರು. ಡಾ. ಶ್ಯಾಮಪ್ರಸಾದ ಮುಖರ್ಜಿಯವರ ನಿಕಟವರ್ತಿ-ಆಪ್ತ ಕಾರ್ಯದರ್ಶಿ. ಜನಸಂಘವನ್ನು ಸ್ಥಾಪಿಸುವಲ್ಲಿ ಪ್ರಮುಖಪಾತ್ರ ವಹಿಸಿದರು(1951). ಅನಂತರ ಸಂಸತ್ತಿನ ಸದಸ್ಯರಾದರು (1951). ಜನಸಂಘ ಪಾರ್ಲಿಮೆಂಟರಿ ಪಕ್ಷದ ನಾಯಕರಾಗಿ (1955-77) ಕಾರ್ಯ ನಿರ್ವಹಿಸಿದರು. ಇವರು 5-7 ಮತ್ತು 10-13 ಲೋಕಸಭಾ ಅವಧಿಯಲ್ಲಿ ಸಂಸತ್ ಸದಸ್ಯರಾಗಿದ್ದರು. ಲೋಕಸಭೆಗೆ 1957ರಲ್ಲಿ ಮೊದಲು ಆಯ್ಕೆಯಾದರು. 1977ರಲ್ಲಿ ಜನತಾ ಪಕ್ಷ ಸ್ಥಾಪನೆಯಾಗುವವರೆಗೂ ಜನಸಂಘದ ನಾಯಕರಾಗಿದ್ದರು. ಇವರು ರಾಜ್ಯಸಭಾ ಸದಸ್ಯರಾಗಿಯೂ (1962, 86 ಮತ್ತು 88) ಕಾರ್ಯ ನಿರ್ವಹಿಸಿದ್ದಾರೆ. ಲಖನೌದಿಂದ ಸತತವಾಗಿ ಐದು ಬಾರಿ ಸಂಸತ್ತಿಗೆ ಚುನಾಯಿತರಾದುದು ಇವರ ಹೆಗ್ಗಳಿಕೆ. ಸಂಸತ್ತಿನ ಇತಿಹಾಸದಲ್ಲಿ ವಿವಿಧ ರಾಜ್ಯಗಳಿಂದ ಅನೇಕ ಬಾರಿ ಚುನಾಯಿತರಾದ ಸದಸ್ಯರೂ ಇವರೆಂಬ ಹೆಗ್ಗಳಿಕೆ ಇದೆ (ಉತ್ತರಪ್ರದೇಶ, ಗುಜರಾತ್, ಮಧ್ಯಪ್ರದೇಶ ಹಾಗೂ ದೆಹಲಿ). ಎರಡು ಬಾರಿ ರಾಜ್ಯಸಭಾ ಸದಸ್ಯರೂ ಆಗಿದ್ದರು. ಭಾರತದ ರಾಜಕೀಯದಲ್ಲಿ ಬಹುಕಾಲದಿಂದ ಸಕ್ರಿಯರಾದವರು. ಇವರು ಭಾರತೀಯ ಜನ ಸಂಘದ ಸಂಸ್ಥಾಪಕರಲ್ಲಿ ಒಬ್ಬರು. 1968 ಹಾಗೂ 1973ರಲ್ಲಿ ಇವರು ಇದರ ಮುಖ್ಯಸ್ಥರಾಗಿದ್ದರು. ಇವರು ಜನತಾ ಪಕ್ಷದ ಸ್ಥಾಪಕ ಸದಸ್ಯರೂ ಆಗಿದ್ದರು(1977-80). ಭಾರತೀಯ ಜನತಾ ಪಕ್ಷ ಹಾಗೂ ಈ ಪಕ್ಷದ ಸಂಸದೀಯ ನಾಯಕರೂ ಆಗಿದ್ದರು. ನಾಲ್ಕು ದಶಕಗಳ ಕಾಲ ನಿರಂತರ ಸಂಸತ್ ಸದಸ್ಯರಾಗಿದ್ದ ಇವರು ಅಪಾರ ಅನುಭವ ಗಳಿಸಿದ್ದಾರೆ. ಹನ್ನೊಂದನೆಯ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಮೊರಾರ್ಜಿದೇಸಾಯಿಯವರ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿ ಖ್ಯಾತಿಗಳಿಸಿದರು(1977-79). ಚೀನದೊಡನೆ ಮುರಿದು ಹೋಗಿದ್ದ ರಾಜತಾಂತ್ರಿಕ ಸಂಪರ್ಕವೇರ್ಪಡಿಸಿದ್ದು ಇವರ ಸಾಧನೆ. ಶ್ರೀ ವಾಜಪೇಯಿ ಯವರು ಮೊರಾರ್ಜಿ ದೇಸಾಯಿಯವರ ಸರಕಾರದಲ್ಲಿ ಮಾರ್ಚ್ 1977 ರಿಂದ ಜುಲೈ 1979 ರವರೆಗೆ ವಿದೇಶ ಮಂತ್ರಿಯಾಗಿ ಕಾರ್ಯನಿರ್ವಹಿಸಿದರು. 1980ರಲ್ಲಿ ಇವರು ಜನತಾಪಾರ್ಟಿಯನ್ನು ತೊರೆದು ಭಾರತೀಯ ಜನತಾ ಪಕ್ಷ ನಿರ್ಮಿಸುವಲ್ಲಿ ಸಹಾಯ ಮಾಡಿದರು. ಈ ನಿರ್ಣಯ ಆರ್‌.ಎಸ್‌.ಎಸ್‌ ನ ಒತ್ತಡದ ಮೇರೆಗೆ ಬಂದಿತೆಂದು ಹೇಳಲಾಗುತ್ತದೆ. ಬಿಜೆಪಿ ಪಾರ್ಲಿಮೆಂಟರಿ ಪಾರ್ಟಿಯ ನಾಯಕರಾಗಿ ವಾಜಪೇಯಿಯವರು 1980ರಿಂದ 1984 ರವರೆಗೆ ಹಾಗೂ 1986 ರಿಂದ 1993 ಮತ್ತು 1996ರಲ್ಲಿ ಕಾರ್ಯ ನಿರ್ವಹಿಸಿದರು. 11ನೇ ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ಇವರು ಸೇವೆ ಸಲ್ಲಿಸಿದರು. ೨೦೧೫ರ ಇಂಡಿಯಾ ಟುಡೇ ಪತ್ರಿಕೆಯ ಸರ್ವೆಯ ಅನ್ವಯ ವಾಜಪೇಯಿ ಭಾರತದ ೨ ಜನಪ್ರಿಯ ಪ್ರಧಾನಮಂತ್ರಿ. ಪ್ರಧಾನಮಂತ್ರಿಯಾಗಿ ಮೊದಲ ಕಾರ್ಯಾವಧಿ 1996ರಲ್ಲಿ ನಡೆದ ಲೋಕ ಸಭಾ ಚುನಾವಣೆಯಲ್ಲಿ ಬಿ ಜೆ ಪಿ ಹೆಚ್ಚು ಮತಗಳನ್ನು ಪಡೆದ ಏಕ ಪಕ್ಷವಾಗಿ ಹೊರ ಹೊಮ್ಮಿತು. 519 ಸೀಟುಗಳ ಪೈಕಿ ಬಿ ಜೆ ಪಿ 187 ಸೀಟುಗಳನ್ನು ಗೆದ್ದರೆ ಕಾಂಗ್ರೆಸ್ 140 ಹಾಗು ಬಿ ಜೆ ಪಿಯೇತರ, ಕಾಂಗ್ರೆಸ್ಸೇತರ ಪಕ್ಷಗಳ ಸಂಘ ಯುನೈಟೆಡ್ ಫ್ರಂಟ್ 192 ಸೀಟುಗಳನ್ನು ಗೆದ್ದುಕೊಂಡಿತು. ಹೆಚ್ಚು ಸೀಟು ಪಡೆದ ಏಕೈಕ ಪಕ್ಷವಾದ ಕಾರಣ ಬಿ ಜೆ ಪಿ ಗೆ ಸರ್ಕಾರ ರಚಿಸಲು ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಆಹ್ವಾನವಿತ್ತರು. ಸ್ಥಳೀಯ ಹಾಗೂ ಕಾಂಗ್ರೆಸ್ಸೇತರ ಪಕ್ಷಗಳು ಬಿ ಜೆ ಪಿ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಬಹುದೆಂದು ಭಾವಿಸಿ ವಾಜಪೇಯಿ ಭಾರತದ ಹತ್ತನೇ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಬಿ ಜೆ ಪಿ ನಾಯಕತ್ವದಲ್ಲಿ ಸರ್ಕಾರ ರಚನೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದರು. ಆದರೆ ಯುನೈಟೆಡ್ ಫ್ರಂಟ್ ಬಹುಮತ ಸಾಧಿಸಲು ಕಾಂಗ್ರೆಸ್ ಅನ್ನು ಬಾಹ್ಯ ಬೆಂಬಲಕ್ಕಾಗಿ ಯಾಚಿಸಿತು. ಕಾಂಗ್ರೆಸ್ ಇದಕ್ಕೆ ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದರಿಂದ ವಾಜಪೇಯಿ ಕೇಂದ್ರದಲ್ಲಿ ಬಹುಮತ ಸಾಧಿಸಲು ಸಾಧ್ಯವಾಗಲಿಲ್ಲ. ಯುನೈಟೆಡ್ ಫ್ರಂಟ್ H.D.ದೇವೇಗೌಡರ ಮುಂದಾಳತ್ವದಲ್ಲಿ ಸರ್ಕಾರ ರಚನೆ ಮಾಡಲು ಮುಂದಾದಾಗ ಕೇವಲ ಹದಿಮೂರು ದಿನವಾಗಿದ್ದ ವಾಜಪೇಯಿ ಸರ್ಕಾರ ಪತನಗೊಂಡಿತು. ಪ್ರಧಾನಮಂತ್ರಿಯಾಗಿ ಎರಡನೇ ಕಾರ್ಯಾವಧಿ 1998 ರಲ್ಲಿ ಚುನಾವಣೆಗಳು ನಡೆದಾಗ ಮತ್ತೆ ಬಿ ಜೆ ಪಿ ಯೇ ಮಿಕ್ಕ ಪಕ್ಷಗಳಿಗಿಂತ ಮುನ್ನಡೆ ಸಾಧಿಸಿತಾದರೂ ಸ್ಪಷ್ಟ ಬಹುಮತ ಪಡೆಯಲು ಸಾಧ್ಯವಾಗಲಿಲ್ಲ. ಕೂಡಲೇ ಸಮಾನ ಮನಸ್ಕ ಪಕ್ಷಗಳ ಒಡಗೂಡಿ ಎನ್ ಡಿ ಎ ಮೈತ್ರಿ ಕೂಟ ರಚಿಸಿತು.ಮೈತ್ರಿ ಕೂಟದ ಮೂಲಕ ಬಹುಮತ ಸಾಧಿಸಿದ ಕಾರಣ 10 ಮಾರ್ಚ್ 1998 ರಂದು ವಾಜಪೇಯಿ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಲಾಯಿತು. ಈ ಅವಧಿಯಲ್ಲಿಯೇ ದೇಶ ಕಾರ್ಗಿಲ್ ಯುದ್ಧವನ್ನು ಎದುರಿಸಿತು. ಎನ್ ಡಿ ಎ ಮೈತ್ರಿ ಕೂಟದಲ್ಲಿದ್ದ ಒಂದು ಮುಖ್ಯ ಪಕ್ಷ ತಮಿಳುನಾಡಿನ ಎ ಐ ಎ ಡಿ ಎಂ ಕೆ. 1999 ರಲ್ಲಿ ಬಿ ಜೆ ಪಿ ಪಕ್ಷವು ಜಯಲಲಿತಾ ಕೆಲವು ಭ್ರಷ್ಟಾಚಾರ ಸಂಬಂಧಿ ದೂರುಗಳಲ್ಲಿ ನಿಯಂತ್ರಣ ಕಾಯ್ದುಕೊಳ್ಳಲು ಹವಣಿಸಿರುವ ಬಗ್ಗೆ ಗಂಭೀರ ಆರೋಪ ಮಾಡಿತು. ಎನ್ ಡಿ ಎ ಮೈತ್ರಿ ಕೂಟ ಸರ್ಕಾರ ಪತನವಾಗುವಂತಹ ಯಾವ ಒಪ್ಪಂದಗಳಿಗೂ ಅವಕಾಶವಿಲ್ಲ ಎಂದಿತು. ಕೂಡಲೇ ಜಯಲಿತಾ ಸರ್ಕಾರಕ್ಕೆ ಕೊಟ್ಟಿದ್ದ ತಮ್ಮ ಬೆಂಬಲವನ್ನು ಹಿಂಪಡೆದರು. ಸರ್ಕಾರ ರಚಿಸಲು ಬೇಕಾದಷ್ಟು ಸೀಟುಗಳ ಸಂಖ್ಯೆಯನ್ನು ವಾಜಪೇಯಿ ಸರ್ಕಾರ ಹೊಂದಿಲ್ಲದ ಕಾರಣ ವಿಶ್ವಾಸ ಮತಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಾಗಿ ನಿರ್ಧರಿಸಲಾಯಿತು. ಆದರೆ ವಿಶ್ವಾಸ ಮತಗಳಲ್ಲಿಯೂ ಅವಶ್ಯ ಸಂಖ್ಯೆಯನ್ನು ತಲುಪಲು ಸಾಧ್ಯವಾಗದ ಕಾರಣ ವಾಜಪೇಯಿ ಸರ್ಕಾರ ಪತನವಾಯಿತು. ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿಯವರಿಗೆ ಸರ್ಕಾರ ರಚಿಸಲು ಸಾಧ್ಯವಾದ ಪಕ್ಷದಲ್ಲಿ ಮತ್ತೊಂದು ಸರ್ಕಾರ ರಚನೆ ಮಾಡಲು ಸೂಚಿಸಿದರು, ಆದರೆ ಕಾಂಗ್ರೆಸ್ ಪಕ್ಷವು ಬಹುಮತಗಳ ಕೊರತೆಯಿಂದ ಸರ್ಕಾರ ರಚಿಸಲು ಸಾಧ್ಯವಿಲ್ಲ ಎಂದಿತು. ಯಾವ ಪಕ್ಷಗಳಿಗೂ ಬಹುಮತವಾಗದ ಕಾರಣ ಹನ್ನೆರಡನೆ ಲೋಕಸಭೆಯನ್ನು ವಿಸರ್ಜಿಸಿ ರಾಷ್ಟ್ರಪತಿ ಆದೇಶ ಹೊರಡಿಸಿದರು. ಹಾಗೂ ಮುಂದಿನ ಚುನಾವಣೆಗಳು ನಡೆದು ಫಲಿತಾಂಶ ಪ್ರಕಟವಾಗುವ ವರೆವಿಗೂ ವಾಜಪೇಯಿ ಕಾರ್ಯ ನಿರ್ವಾಹಕ ಪ್ರಧಾನಿಯಾಗಿ ಮುಂದುವರೆಯಲು ಸೂಚಿಸಿದರು. ಅಣ್ವಸ್ತ್ರ ಪರೀಕ್ಷೆ (ಫೋಖ್ರಾನ್ -II) ಮೇ 1998 ರಲ್ಲಿ ಭಾರತ ತನ್ನ ಸೇನಾ ಬಲವನ್ನು ಎಲ್ಲ ವಿಧದಿಂದಲೂ ಹೆಚ್ಚಿಸಿಕೊಳ್ಳಲು ತೀರ್ಮಾನಿಸಿ ಆಪರೇಷನ್ ಶಕ್ತಿ ಹೆಸರಿನ ಅಣು ಬಾಂಬ್ ಪರೀಕ್ಷೆ ನಡೆಸಿತು. 1974 ರಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಭಾರತವು ಮೊದಲ ಬಾರಿಗೆ ಅಣು ಸ್ಫೋಟವನ್ನು ಪರೀಕ್ಷಾರ್ಥವಾಗಿ ನಡೆಸಿ ತನ್ನ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿತ್ತು. 1999 ರಲ್ಲಿ ವಾಜಪೇಯಿ ಪ್ರಧಾನಿ ಯಾದ ಕೇವಲ ಎರಡೇ ತಿಂಗಳಲ್ಲಿ ರಾಜಸ್ತಾನದ ಫೋಖ್ರಾನ್ ಎಂಬಲ್ಲಿ ಸುಧಾರಿತ ಅಣ್ವಸ್ತ್ರಗಳನ್ನು ಪರೀಕ್ಷಿಸಲು ಉತ್ಸುಕರಾಗಿದ್ದ ವಿಜ್ಞಾನಿಗಳಿಗೆ ವಾಜಪೇಯಿಯವರಿಂದ ಹಸಿರು ನಿಶಾನೆ ದೊರೆಯಿತು. ಆದರೆ ನಿಜವಾಗಿ ಸಾಧಿಸಿ ತೋರಿಸುವುದು ಬಹಳ ಕಷ್ಟಕರವಾಗಿತ್ತು. ದೇಶದ ತುಂಬಾ ಹರಡಿಕೊಂಡಿದ್ದ ಪಾಕಿಸ್ತಾನಿ ಬೇಹುಗಾರಿಕೆ ವ್ಯಕ್ತಿಗಳು ಹಾಗೂ ಅಮೇರಿಕಾ ಗುಪ್ತಚರ ಇಲಾಖೆಯ (ಸಿ ಐ ಎ) ಏಜೆಂಟ್ ಗಳು ವಿಷಯ ಸೋರಿಕೆ ಮಾಡುವ ಆತಂಕವಿದ್ದೇ ಇತ್ತು. 1974 ರ ನಂತರದ ದಿನಗಳಲ್ಲಿ ಕೆಲವಾರು ಬಾರಿ ಭಾರತದ ಅಣ್ವಸ್ತ್ರ ಪರೀಕ್ಷೆಗೆ ಅಮೇರಿಕಾ ಗುಪ್ತಚರ ಇಲಾಖೆಯ ಏಜೆಂಟ್ ಗಳು ಸುದ್ದಿ ಸೋರಿಕೆ ಮಾಡಿ ತಣ್ಣೀರೆರಚಿದ್ದರು. ಈ ಬಾರಿ ಪರೀಕ್ಷೆಯನ್ನು ಇವರಾರಿಗೂ ತಿಳಿಯದಂತೆ ನಡೆಸಬೇಕಾಗಿತ್ತು. ಗುಪ್ತಚರ ಇಲಾಖೆಯ ಏಜೆಂಟ್ ಗಳಷ್ಟೇ ಅಲ್ಲದೆ ಅಮೇರಿಕಾ ದೇಶದ ಉಪಗ್ರಹವೊಂದು ಭಾರತದ ಅಂತರಾಷ್ಟ್ರೀಯ ಗಡಿಗಳ ಮೇಲೆ ಹಾಗೂ ಸೂಕ್ಷ್ಮ ಪ್ರದೇಶಗಳ ಮೇಲೆ ಸದಾ ಕಣ್ಗಾವಲಿಟ್ಟಿತ್ತು. ಆ ಉಪಗ್ರಹ ಎಷ್ಟು ಕರಾರುವಕ್ಕಾಗಿತ್ತು ಎಂದರೆ ಭಾರತದ ಗಡಿಯಲ್ಲಿ ನಿಂತಿರುವ ಯೋಧನೊಬ್ಬನ ಕೈಗೆ ಕಟ್ಟಿದ ಗಡಿಯಾರದ ಫೋಟೋ ತೆಗೆದು ಅದರಲ್ಲಿ ಸಮಯವೆಷ್ಟು ಎಂದು ಹೇಳಬಹುದಿತ್ತಂತೆ. ಇಂತಹ ಬಿಗಿಯಾದ ಹದ್ದಿನ ಕಣ್ಣು ಇರಿಸಿರುವ ಸಮಯದಲ್ಲಿ ಅಣು ಬಾಂಬ್ ಪರೀಕ್ಷೆ ನಡೆಸುವುದು ದೊಡ್ಡ ಸಾಹಸವೇ ಆಯಿತು. ಅಣು ಪರೀಕ್ಷೆ ನಡೆಸಬೇಕಾಗಿದ್ದ ಜಾಗದಲ್ಲಿ "ನೀರಾವರಿ ಕಾಮಗಾರಿ ನಡೆಯುತ್ತಿದೆ" ಎಂದು ಬೋರ್ಡು ಹಾಕಲಾಗಿತ್ತಂತೆ. ವಿಜ್ಞಾನಿಗಳಿಗೆ ಹಾಗೂ ಭೂಮಿಯನ್ನು ಅಗೆಯುತ್ತಿದ್ದ ಭಾರತೀಯ ಸೈನಿಕರಿಗೆ ಸಾರ್ವಜನಿಕ ಇಲಾಖೆಯ ಕಾಮಗಾರಿ ಕಾರ್ಮಿಕರಿಗೆ ಕೊಡಲಾಗುವಂತಹ ಮಾದರಿಯ ಬಟ್ಟೆ ಕೊಡಲಾಗಿತ್ತಂತೆ. ಇನ್ನು ಯಾವ ಕಾರಣಕ್ಕೂ ಯಾರಿಗೂ ಅನುಮಾನ ಬರದಿರುವಂತೆ ನೋಡಿಕೊಳ್ಳಲು ಸ್ಫೋಟಕ್ಕೆ ಸಂಬಂಧಿಸಿದ ಕಾರ್ಯವೆಲ್ಲವೂ ಬರೀ ರಾತ್ರಿ ವೇಳೆ ನಡೆಯುತ್ತಿತ್ತಂತೆ. ಅಣು ಬಾಂಬ್ ಸ್ಫೋಟವಾದ ವಿಷಯ ತಿಳಿದಿದ್ದು ಖುದ್ದು ವಾಜಪೇಯಿಯವರು ಪ್ರಧಾನಮಂತ್ರಿ ಗೃಹದಲ್ಲಿ ಪತ್ರಕರ್ತರ ಸಭೆ ಕರೆದು ಫೋಖ್ರಾನ್ ಬಾಂಬ್ ಸ್ಫೋಟದ ಬಗ್ಗೆ ಅಧೀಕೃತವಾಗಿ ಧೃಡಪಡಿಸಿದಾಗಲೇ. ಫೋಖ್ರಾನ್ ಸಮೀಪದಲ್ಲಿದ್ದ ಹಳ್ಳಿಯೊಂದರ ಜನಗಳನ್ನು ಬಾಂಬ್ ಸ್ಫೋಟಕ್ಕೂ ಕೆಲವು ಗಂಟೆಗಳ ಮುನ್ನ ಮುನ್ನೆಚ್ಚರಿಕಾ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿತ್ತಂತೆ. ಆದರೆ ಸ್ಥಳಾಂತರಗೊಂಡ ಜನರಿಗೂ ಕಾರಣವೇನು ಎನ್ನುವುದು ತಿಳಿದಿರಲಿಲ್ಲವಂತೆ. ಸ್ಫೋಟಾನಂತರ ರಷ್ಯಾ ಹಾಗೂ ಫ್ರಾನ್ಸ್ ದೇಶಗಳು ಭಾರತದ ಸೇನೆಯು ಸೇನಾ ಬಲ ಹೆಚ್ಚಿಸಿಕೊಳ್ಳುವ ಸಲುವಾಗಿ ಅಣ್ವಸ್ತ್ರ ಹೊಂದುವ ಹಾಗೂ ಅದರ ಶಕ್ತಿಯನ್ನು ಖಾತ್ರಿ ಪಡಿಸಿಕೊಂಡ ನಿಲುವನ್ನು ಸಮರ್ಥಿಸಿಕೊಂಡರೆ, ಅಮೇರಿಕಾ, ಕೆನಡಾ, ಜಪಾನ್, ಬ್ರಿಟನ್ ಹಾಗೂ ಯೂರೋಪ್ ಒಕ್ಕೂಟದ ದೇಶಗಳು ಭಾರತದ ನಿಲುವಿಗೆ ಹರಿಹಾಯ್ದವು. ಭಾರತದೊಂದಿಗೆ ಇನ್ನು ಮುಂದೆ ನವೀನ ತಂತ್ರಜ್ಞಾನದ ಮಾಹಿತಿಗಳನ್ನು ಹಾಗೂ ಯಾವುದೇ ರೀತಿಯ ಸಂಪನ್ಮೂಲಗಳನ್ನು ಹಂಚಿ ಕೊಳ್ಳದಂತೆ ತಮ್ಮ ತಮ್ಮಲ್ಲೇ ಒಪ್ಪಂದ ಮಾಡಿಕೊಂಡವು. ಭಾರತದ ಅಣ್ವಸ್ತ್ರ ಪರೀಕ್ಷೆಯ ವಿಷಯ ಅಂತರಾಷ್ಟ್ರೀಯ ವೇದಿಕೆಯಲ್ಲಿ ಬಾರೀ ಚರ್ಚೆಗೆ ಗ್ರಾಸವಾಯಿತು. ಹಲವಾರು ದೇಶಗಳು ಭಾರತದಲ್ಲಿ ಹೂಡಿದ ಬಂಡವಾಳವನ್ನು ಹಿಂತೆಗೆದುಕೊಳ್ಳುವ ನಿರ್ಧಾರ ಮಾಡಿದವು. ಮತ್ತೆ ಕೆಲವು ರಾಷ್ಟ್ರಗಳು ಭಾರತಕ್ಕೆ ಯಾವ ಸಹಾಯಧನವನ್ನು ಕೊಡದಂತೆ ವಿಶ್ವಸಂಸ್ಥೆಯಲ್ಲಿ ದೂರಿ ಭಾರತದ ಮೇಲೆ ಆರ್ಥಿಕ ನಿರ್ಬಂಧ ಹೇರಿಸಿದರು. ವಾಜಪೇಯಿ ನೇತೃತ್ವದಲ್ಲಿ ಇಂತಹ ಕ್ಲಿಷ್ಟ ಪರಿಸ್ತಿತಿಯನ್ನು ಬಗೆಹರಿಸಿಕೊಳ್ಳಲಾಯಿತು. ವಾಜಪೇಯಿ ಮೇಲೆ ಜನರಿಗಿದ್ದ ನಂಬಿಕೆ ಇಮ್ಮಡಿಯಾಗಲು ಇದೂ ಒಂದು ಕಾರಣವಾಯಿತು. ಆರ್ಥಿಕ ಸಂಕಷ್ಟಗಳಲ್ಲಿಯೂ ಯಶಸ್ವಿಯಾಗಿ ದೇಶ ಮುನ್ನಡೆಸಿದ್ದನ್ನು ಅಂತರಾಷ್ಟ್ರೀಯ ನಾಯಕರೂ ಕೊಂಡಾಡಿದರು, ಒಟ್ಟಿನಲ್ಲಿ ವಾಜಪೇಯಿಯವರ ರಾಜಕೀಯ ಚತುರತೆಯನ್ನು, ಇಚ್ಚಾ ಶಕ್ತಿಯನ್ನು, ಆಡಳಿತ ವೈಖರಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪಸರಿಸಲು ಫೋಖ್ರಾನ್ ಸ್ಫೋಟವೂ ಮುಖ್ಯ ಪಾತ್ರ ವಹಿಸಿತು. ಕಾರ್ಗಿಲ್ ಯುದ್ಧ ಜಮ್ಮು ಕಾಶ್ಮೀರ ರಾಜ್ಯದ ಕಾರ್ಗಿಲ್ ಪ್ರದೇಶದಲ್ಲಿ ಪಾಕಿಸ್ತಾನಿ ಸೈನಿಕರು ಅಂತರಾಷ್ಟ್ರೀಯ ಗಡಿಯನ್ನು ಮೀರಿ ಕಾಶ್ಮೀರ ಕಣಿವೆಗಳ ಮುಖಾಂತರ ಒಳನುಸುಳುತ್ತಿರುವುದು 1999 ನೇ ಇಸವಿಯ ಆರಂಭದಲ್ಲಿ ಜನಸಾಮಾನ್ಯರಿಗೆ ಹಾಗೂ ಗಡಿ ಭದ್ರತಾ ಪಡೆಯ ಸಿಬ್ಬಂದಿಗಳಿಗೆ ಖಾತ್ರಿಯಾಗಿ ಅದೇ ಸುದ್ದಿ ಭಾರತೀಯರ ಕಣ್ಣು ಕೆಂಪಗಾಗಿಸಲು ಒಂದು ಕಾರಣವಾಯಿತು. ಬರಿಯ ಕಾರ್ಗಿಲ್ ಪ್ರದೇಶ ಮಾತ್ರವಲ್ಲದೆ ಮಾನವ ರಹಿತ ಚೆಕ್ ಪೋಸ್ಟ್ ಗಳ ಮುಖಾಂತರ ಸಿಯಾಚಿನ ಗಡಿವರೆವಿಗೂ ಒಳನುಸುಳುವಿಕೆ ಅವ್ಯಾಹತವಾಗಿ ನಡೆಯುತ್ತಿದ್ದುದು ಭಾರತಕ್ಕೆ ಸಹಿಸಲಸಾಧ್ಯವಾಯಿತು. ಅದೇ ಸಮಯಕ್ಕೆ ಪಾಕಿಸ್ತಾನಿ ನಾಯಕರ ಹೇಳಿಕೆಗಳು ಪಾಕಿಸ್ತಾನ ಯುದ್ಧಕ್ಕೆ ತಯಾರಾಗಿದೆ ಎಂಬ ಸ್ಪಷ್ಟ ಸಂದೇಶವನ್ನು ಅದಾಗಲೇ ರವಾನಿಸಿಯಾಗಿತ್ತು. ಕೇಂದ್ರ ಸರ್ಕಾರ ಜೂನ್ 1999 ರಲ್ಲಿ ಭಾರತೀಯ ಸೇನೆಗೆ ಒಳನುಸುಳುಕೋರರನ್ನು ಪ್ರತಿರೋಧಿಸಲು ಆಪರೇಷನ್ ವಿಜಯ್ ಹೆಸರಿನ ಯುದ್ಧ ಆರಂಭಿಸುವಂತೆ ಅಪ್ಪಣೆ ಕೊಟ್ಟಿತು. ಕಾಶ್ಮೀರ ಗಡಿಯಲ್ಲಿನ ತೀವ್ರ ಕಡಿಮೆ ತಾಪಮಾನ, ವಿರೋಧಿ ಬಣದಿಂದ ಮಳೆಯಂತೆ ಬಂದು ಸುರಿಯುತ್ತಿದ್ದ ಗ್ರೆನೇಡುಗಳು, ಸಮುದ್ರ ಮಟ್ಟದಿಂದ ಅತೀ ಎತ್ತರದಲ್ಲಿದ್ದು ಆಗಾಗ ಉಸಿರಾಡಲೂ ಕಷ್ಟವಾಗುವಂತಹ ಕ್ಲಿಷ್ಟ ಪರಿಸ್ಥಿತಿಗಳಲ್ಲಿ ಭಾರತೀಯ ಯೋಧರು ಪಾಕಿಸ್ತಾನಕ್ಕೆ ಎದಿರೇಟು ಕೊಡುವಲ್ಲಿ ಸಫಲರಾಗುತ್ತಿದ್ದರು. * ಮೂರು ತಿಂಗಳ ಪರ್ಯಂತ ನಡೆದ ಕಾರ್ಗಿಲ್ ಯುದ್ಧದಲ್ಲಿ ೫೨೭ ಜನ ಭಾರತೀಯ ಯೋಧರು ಹುತಾತ್ಮರಾದರು ಹಾಗೂ ಪಾಕಿಸ್ತಾನ ಬಣದಲ್ಲಿ ಸುಮಾರು ೬೦೦-೪೦೦೦ ಸೈನಿಕರು ಹತರಾಗಿರುವ ಬಗ್ಗೆ ಅಂದಾಜಿಸಲಾಗಿದೆ. ಒಳನುಸುಳುಕೋರರನ್ನು ಹಿಮ್ಮೆಟ್ಟಿಸುವಲ್ಲಿ ಭಾರತ ಸಫಲವಾಗಿದ್ದರಿಂದ ಪಾಕಿಸ್ತಾನಕ್ಕೆ ತೀವ್ರ ಮುಖಭಂಗವಾಯಿತು. ಇದರಿಂದ ತಪ್ಪಿಸಿಕೊಳ್ಳಲು ಪಾಕಿಸ್ತಾನ ಆಗಷ್ಟೇ ತಾನೇ ಸಿದ್ಧಪದಿಸಿಕೊಂಡಿದ್ದ ಅಣು ಬಾಂಬ್ ಅನ್ನು ಭಾರತದ ಮೇಲೆ ಪ್ರಯೋಗಿಸುವ ಬಗ್ಗೆ ಮಾತುಗಳು ಕೇಳಿ ಬರಲಾರಂಭಿಸಿದವು. ವಿಷಯ ತಿಳಿದ ಆಗಿನ ಅಮೇರಿಕಾ ಅಧ್ಯಕ್ಷ ಬಿಲ್ ಕ್ಲಿಂಟನ್ ಅಣು ಬಾಂಬ್ ಬಳಸಿ ಜಾಗತೀಕವಾಗಿ ಕಠಿಣ ಪರಿಸ್ಥಿತಿ ನಿರ್ಮಾಣ ಮಾಡದಂತೆ ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದರು. ಯುದ್ಧ ಸಂಬಂಧಿ ಪರಿಕರಗಳನ್ನೆಲ್ಲ ಪರದೇಶದಿಂದ ಅಮದು ಮಾಡಿಕೊಂಡಿದ್ದ ಪಾಕಿಸ್ತಾನಕ್ಕೆ ಯುದ್ಧದಲ್ಲಿ ಸೋತಿದ್ದು ಅಪಾರ ನಷ್ಟವಾಯಿತು. ಅಮೇರಿಕಾ ಹಾಗು ಚೀನಾ ತಾವು ಮಧ್ಯ ಪ್ರವೇಶಿಸುವುದಕ್ಕೆ ಹಿಂದೇಟು ಹಾಕಿದವು. ಇಷ್ಟೆಲ್ಲಾ ನಡೆಯುತ್ತಿದ್ದರೂ ಭಾರತದ ಕಡೆಯಿಂದ ಆಗುತ್ತಿದ್ದ ದಾಳಿ ಇನ್ನು ನಿಂತಿರಲಿಲ್ಲ, ಪಾಕಿಸ್ತಾನಿ ಸೈನಿಕರು ಬಂದ ದಾರಿಗೆ ಸುಂಕವಿಲ್ಲದಂತೆ ಅಂತರಾಷ್ಟ್ರೀಯ ಗಡಿ ದಾಟಿ ಹಿಂದೆ ಸರಿಯುವ ವರೆವಿಗೂ ಯುದ್ಧ ನಿಲ್ಲುವ ಯಾವ ಲಕ್ಷಣಗಳೂ ಗೋಚರಿಸಲಿಲ್ಲ. ಕೂಡಲೇ ಪಾಕಿಸ್ತಾನದ ಸೇನಾ ಅಧ್ಯಕ್ಷ ಜನರಲ್ ಮುಷರಫ್ ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್ ರಲ್ಲಿ ಪಾಕಿಸ್ತಾನಿ ಸೈನಿಕರನ್ನು ಹಿಂದಕ್ಕೆ ಕರೆಸಿ ಮೊದಲಿನಂತೆ ನಿಯಂತ್ರಣ ರೇಖೆಯಲ್ಲಿ ನಿಲ್ಲಿಸಲು ಮನವಿ ಮಾಡಿದರು. ಪಾಕಿಸ್ತಾನದಲ್ಲಿ ಸರ್ಕಾರಕ್ಕೂ ಹಾಗು ಸೇನೆಗೂ ತಮ್ಮ ರಾಷ್ಟ್ರೀಯ ಕಾರ್ಯ ನಿರ್ವಹಣೆಯ ವಿಚಾರದಲ್ಲಿ ವಿಧಿತ ಕಟ್ಟುಪಾಡುಗಳು ಇಲ್ಲದ ಕಾರಣ ಎರಡೂ ಬೇರೆ ಬೇರೆ ಯಾಗಿ ಕಾರ್ಯ ನಿರ್ವಹಿಸುವುದೇ ಹೆಚ್ಚು. ಇಲ್ಲೂ ಹಾಗೆ ನಡೆದು ನವಾಜ್ ಶರೀಫರು ಮಾಡಿದ ಆಜ್ಞೆಯನ್ನು ಒಪ್ಪಲು ಯಾರೂ ತಯಾರಿರಲಿಲ್ಲ. ಆದರೆ ಅಷ್ಟರಲ್ಲಾಗಲೇ ತಮ್ಮ ಶಕ್ತಿ ಸಾಮರ್ಥ್ಯಗಳನ್ನು ಅರಿತುಕೊಂಡಿದ್ದ ಪಾಕಿಸ್ತಾನದ ಒಂದು ಸೇನಾ ತುಕಡಿ(ಏನ್ ಎಲ್ ಐ) ತಾನು ಯುದ್ಧ ಭೂಮಿಯಿಂದ ಹಿಂದೆ ಸರಿಯಿತು. ಕೊನೆಗೆ ಸೇನೆ ಹಿಂದೆ ಸರಿಯುವ ವಿಚಾರದಲ್ಲಿ ಪಾಕಿಸ್ತಾನಿ ಸೇನೆಯೊಳಗೆ ಭಿನ್ನಾಭಿಪ್ರಾಯ ಸ್ಫೋಟವಾಯಿತು. ಭಿನ್ನಾಭಿಪ್ರಾಯ ಎಷ್ಟರ ಮಟ್ಟಿಗೆ ಮುಂದುವರಿಯಿತೆಂದರೆ ಪಾಕಿಸ್ತಾನ ಸೇನೆ ಒಳಜಗಳಗಳಿಗೆ ಸಾಕ್ಷಿಯಾಯಿತು ಹಾಗು ಹಲವಾರು ಸಾವು ನೋವುಗಳನ್ನು ಕಂಡಿತು. ಎಲ್ಲದರ ಫಲವಾಗಿ ಪಾಕಿಸ್ತಾನದ ಸೈನಿಕರು ಯುದ್ಧದಲ್ಲಿ ಸಫಲರಾಗದೆ ಹಿಂದಿರುಗಿದರು, ಭಾರತ ವಿಜಯೋತ್ಸವ ಆಚರಿಸಿತು. ಈ ಯುದ್ಧ ಆಗಿನ ಪ್ರಧಾನ ಮಂತ್ರಿ ವಾಜಪೇಯಿ ಯವರ ವ್ಯಕ್ತಿತ್ವವನ್ನು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಸಹಕಾರಿಯಾಯಿತು. ದೇಶದಲ್ಲಿ ಅಸಂಖ್ಯಾತ ಜನಗಳು ವಾಜಪೇಯಿಯವರ ಧೈರ್ಯವಾಗಿ ತೀರ್ಮಾನ ತೆಗೆದುಕೊಳ್ಳುವ ಹಾಗು ಎಷ್ಟೇ ಕಷ್ಟವಾದರೂ ಅದಕ್ಕೆ ಬದ್ಧರಾಗಿ ಗೆಲ್ಲುವ ಛಾತಿಯನ್ನು ಮೆಚ್ಚಿಕೊಂಡರು ಹಾಗು ಅವರ ಅಭಿಮಾನಿಗಳು ಆದರು. ಕಾರ್ಗಿಲ್ ಯುದ್ಧ ಅಷ್ಟೊಂದು ಪ್ರಚಾರ ಪಡೆಯಲು ಇದ್ದ ಒಂದೇ ಒಂದುಕಾರಣವೆಂದರೆ ಅದು ಎರಡು ಅಣ್ವಸ್ತ್ರ ರಾಷ್ಟ್ರಗಳು ಮುಖಾಮುಖಿಯಾಗಿ ಯುದ್ಧ ಮಾಡುತ್ತಿರುವುದು. ದಕ್ಷಿಣ ಏಷಿಯಾದ ಈ ಎರಡೂ ಸಹೋದರ ರಾಷ್ಟ್ರಗಳೇ ಅಣ್ವಸ್ತ್ರಗಳಿಂದ ಬಡಿದಾಡಿ ಕೊಂಡರೆ ಜಗತ್ತಿಗೆ ಕೆಟ್ಟ ಅರ್ಥ ರವಾನೆಯಾಗುವುದಾಗಿ ಎಲ್ಲ ರಾಷ್ಟ್ರಗಳಿಗೂ ಆತಂಕ ಮನೆ ಮಾಡಿತ್ತು. ಆದರೆ ಅಂದಿನ ಭಾರತದ ಪ್ರಧಾನಿ ವಾಜಪೇಯಿ ಅಷ್ಟೇ ಸಮಾಧಾನದಿಂದ ಪರಿಸ್ಥಿತಿ ತಿಳಿಯಾಗಿಸಲು ಯತ್ನಿಸಿದರು . ಯುದ್ಧಕ್ಕಿಂತಲೂ ಮುಂಚೆ ಪಾಕಿಸ್ತಾನದೊಂದಿಗೆ ಶಾಂತಿ ಮಾತು ಕತೆ ನಡೆಸಿದ್ದರು. ಎರಡೂ ರಾಷ್ಟ್ರಗಳ ಶಾಂತಿಯ ಹಾಗೂ ಸ್ನೇಹದ ಧ್ಯೋತಕವಾಗಿ ಭಾರತದಿಂದ ಪಾಕಿಸ್ತಾನದ ಲಾಹೋರ್ ಗೆ ಬಸ್ ಸೇವೆಯನ್ನು ಆರಂಭಿಸಿದ್ದರು. ಯುದ್ಧ ಕಾಲದಲ್ಲಿ ತುರ್ತು ಪರಿಸ್ಥಿತಿ ಘೋಷಿಸುವಂತೆ ಒತ್ತಡ ಸೃಷ್ಟಿಯಾದರೂ ತುರ್ತು ಪರಿಸ್ತಿತಿ ಘೋಷಿಸದೆ ಸೇನೆಯನ್ನು ಹುರಿದುಂಬಿಸಿದರು. ಯುದ್ಧ ಸಮಯದಲ್ಲಿ ಸೈನಿಕರಿಗೆ ಹಿಂದೆಂದಿಗಿಂತಲೂ ಹೆಚ್ಚು ಅಧಿಕಾರ ಕೊಟ್ಟರು. ಸಣ್ಣ ಪುಟ್ಟ ವಿಚಾರಗಳಿಗೂ ಮೇಲಧಿಕಾರಿಗಳ ಅಪ್ಪಣೆಗಾಗಿ ಅಲೆಯುತ್ತಿದ್ದ ಸೇನೆಯ ವಕ್ತಾರರಿಗೆ ಕೊಂಚ ಸಮಾಧಾನವೆನಿಸಿದ್ದೆ ಆಗ. ಇವೆಲ್ಲವುಗಳ ಮುಖಾಂತರ ವಾಜಪೇಯಿ ಶತ್ರು ಯಾರೇ ಆಗಿದ್ದರು ನಮ್ಮವರಲ್ಲಿ ಹುರುಪು ಮೂಡಿಸಿದರೆ ಯುದ್ಧವನ್ನು ಅರ್ಧ ಗೆದ್ದಂತೆ ಎಂಬ ಸ್ಪಷ್ಟ ಸಂದೇಶವನ್ನು ಸಾರಿದರು. ಈ ಎಲ್ಲ ಕಾರಣಗಳಿಂದಲೇ ವಾಜಪೇಯಿ ಜನ ಮಾನಸಗಳಲ್ಲಿ ನಿಂತರು. ಪ್ರಧಾನಮಂತ್ರಿಯಾಗಿ ಮೂರನೇ ಕಾರ್ಯಾವಧಿ ಕಾರ್ಗಿಲ್ ಯುದ್ಧ ನಡೆದ ಕೆಲವೇ ತಿಂಗಳುಗಳಲ್ಲಿ ನಡೆದ ಹದಿಮೂರನೇ ಲೋಕಸಭಾ ಚುನಾವಣೆಗಳು ನಡೆದು ಮತ್ತೆಯೂ ಬಿ ಜೆ ಪಿ ಪಕ್ಷ ಮುನ್ನಡೆ ಸಾಧಿಸಿತು. ಯುನೈಟೆಡ್ ಫ್ರಂಟ್ ಪಕ್ಷಗಳೂ ಕೂಡ ಮುನ್ನಡೆ ಸಾಧಿಸಿದವು.ಬಿ ಜೆ ಪಿ ನೇತೃತ್ವದ ಎನ್ ಡಿ ಎ 270 ಸೀಟುಗಳನ್ನು ಪಡೆಯಿತು, ಕಾಂಗ್ರೆಸ್ 156 ಸೀಟುಗಳಿಗೆ ತೃಪ್ತಿ ಪಟ್ಟುಕೊಂಡು ವಿರೋಧ ಪಕ್ಷದಲ್ಲಿ ಕೂರಬೇಕಾಯಿತು. ಎನ್ ಡಿ ಎ ಸಮಾನ ಮನಸ್ಕ ಪಕ್ಷಗಳನ್ನು ಒಟ್ಟುಗೂಡಿಸಿ ಬಹುಮತ ಸಾಧಿಸಿತು.ಇದರ ಫಲವಾಗಿ ವಾಜಪೇಯಿ ನೇತೃತ್ವದಲ್ಲಿ ಸರ್ಕಾರ ರಚನೆಯಾಯಿತು. ಅಕ್ಟೋಬರ್ 1999 ರಲ್ಲಿ ವಾಜಪೇಯಿ ಮೂರನೇ ಬಾರಿಗೆ ಪ್ರಧಾನಿಯಾದರು.ಸಂಪೂರ್ಣ ಐದು ವರ್ಷ ಅವಧಿಯನ್ನು ಪೂರೈಸಿದ ಕಾಂಗ್ರೆಸ್ಸೇತರ ಮೊದಲ ಸರಕಾರವೆಂಬ ಪಾತ್ರಕ್ಕೂ ವಾಜಪೇಯಿ ಸರ್ಕಾರ ಭಾಜನವಾಯಿತು. ಇಂಡಿಯನ್ ಏರ್ ಲೈನ್ಸ್ ಹೈಜಾಕ್ ಪ್ರಕರಣ ಡಿಸೆಂಬರ್ 1999 ರಲ್ಲಿ ನೇಪಾಳದ ರಾಜಧಾನಿ ಕಠ್ಮಂಡುವಿನಿಂದ ನವದೆಹಲಿಗೆ ಹೊರಟಿದ್ದ ಇಂಡಿಯನ್ ಏರ್ ಲೈನ್ಸ್ ವಿಮಾನ ಅನ್ನು ತಾಲಿಬಾನಿ ಉಗ್ರರು ಪ್ರಯಾಣಿಕರ ಸಮೇತ ಅಪಹರಿಸುವ ಮೂಲಕ ರಾಷ್ಟ್ರೀಯ ಬಿಕ್ಕಟ್ಟಿಗೆ ನಾಂದಿ ಹಾಡಿದರು. ದೆಹಲಿಯಲ್ಲಿ ಇಳಿಯಬೇಕಾದ ವಿಮಾನವನ್ನು ತಾಲಿಬಾನ್ ಮುಷ್ಟಿಯಲ್ಲಿದ್ದ ಆಫ್ಘಾನಿಸ್ಥಾನಕ್ಕೆ ಕೊಂಡೊಯ್ದು ವಿಮಾನದ ಸಿಬ್ಬಂದಿ ಹಾಗು ಪ್ರಯಾಣಿಕರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡರು. ವಿಮಾನವನ್ನು ಬಿಡುಗಡೆ ಮಾಡುವುದಕ್ಕೆ ಪ್ರತಿಯಾಗಿ ತಮ್ಮ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಬೇಡಿಕೆಗಳನ್ನಿಟ್ಟರು. ಆಗ ಭಾರತ ಸರ್ಕಾರಕ್ಕೆ ಸಿಕ್ಕಿಬಿದ್ದು ಸೆರೆಯಾಗಿದ್ದ ಉಗ್ರ 'ಮೌಲಾನ ಮಸೂದ್ ಅಝರ್' ನ ಬಿಡುಗಡೆಯೂ ಸೇರಿ ಭಯೋತ್ಪಾದನೆಗೆ ಅನುಕೂಲವಾಗುವಂತಹ ಅನೇಕ ಬೇಡಿಕೆಗಳು ಈಡೇರುವ ವರೆವಿಗೂ ಪ್ರಯಾಣಿಕರ ಬಿಡುಗಡೆ ಸಾಧ್ಯವಿಲ್ಲವೆಂದು ವಾಜಪೇಯಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿ ದೇಶದಾದ್ಯಂತ ಆತಂಕ ಮನೆ ಮಾಡುವಂತೆ ಮಾಡಿದ್ದರು. ಉಗ್ರರ ಮೇಲೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಲ ಪ್ರಯೋಗ ಮಾಡುವ ಮೂಲಕ ಪ್ರಯಾಣಿಕರನ್ನು ಮರಳಿ ಪಡೆಯುವ ಮಾರ್ಗ ಸುಲಭವಾಗಿರಲಿಲ್ಲ ಹಾಗೂ ನೈಜತೆಗೆ ಹತ್ತಿರವೂ ಆಗಿರಲಿಲ್ಲ. ಈ ಕಾರಣದಿಂದ ಸರ್ಕಾರ ಉಗ್ರರ ಮಾತಿಗೆ ಮಣಿಯಲೇ ಬೇಕಾಯಿತು. ಆಗ ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದ ಜಸ್ವಂತ್ ಸಿಂಗ್ ಜವಾಬ್ದಾರಿ ಮೆರೆದು ಭಾರತದ ಜೈಲಿನಲ್ಲಿದ್ದ ತಾಲಿಬಾನಿ ಉಗ್ರ ಪ್ರಮುಖರನ್ನು ತಮ್ಮೊಂದಿಗೆ ಕರೆದುಕೊಂಡು ಆಫ್ಘಾನಿಸ್ತಾನಕ್ಕೆ ಹೋಗಿ ಭಾರತೀಯ ಪ್ರಯಾಣಿಕರನ್ನು ಹಾಗೂ ಉಗ್ರರನ್ನು ವಿನಿಮಯ ಮಾಡಿಕೊಂಡು ಭಾರತಕ್ಕೆ ಹಿಂದಿರುಗಿದರು. 2001ರ ಸಂಸತ್ ಭವನದ ಮೇಲಿನ ದಾಳಿ 2001ರ ಡಿಸೆಂಬರ್ 13 ರಂದು ಮುಖಮರೆಸಿಕೊಂಡ ಶಸ್ತ್ರಧಾರಿ ವ್ಯಕ್ತಿಗಳಿಂದ ಭಾರತದ ಆಡಳಿತ ಕೇಂದ್ರ ಸಂಸತ್ ಭವನದ ಮೇಲೆ ದಾಳಿ ನಡೆಯಿತು.ಕಾರುಗಳ ಮೇಲೆ ಕೇಂದ್ರ ಗೃಹ ಇಲಾಖೆ ಹಾಗು ಸಂಸತ್ ಸದಸ್ಯರು ಎಂಬ ಪಟ್ಟಿಗಳನ್ನು ಬಳಸಿಕೊಂಡು ಸಂಸತ್ ಭವನದ ಆವರಣ ಪ್ರವೇಶಿಸಿಸಿ ಹಠಾತ್ ಗುಂಡಿನ ದಾಳಿ ನಡೆಸಲು ಶುರು ಮಾಡಿದ ಉಗ್ರರು ಸಂಸತ್ ಭವನದ ಹಲವಾರು ಭದ್ರತಾ ಸಿಬ್ಬಂದಿಗಳನ್ನು ಆಹುತಿ ಪಡೆದರು. ದಾಳಿಗೂ ಮುನ್ನ ಕೇವಲ 40 ನಿಮಿಷಗಳ ಮುಂಚೆ ರಾಜ್ಯ ಸಭಾ ಹಾಗು ಲೋಕ ಸಭಾ ಅಧಿವೇಶನಗಳು ಮುಗಿದಿದ್ದವು.ಆದ್ದರಿಂದ ಬಹುತೇಕ ಸಂಸದರು, ಮಂತ್ರಿಗಳು ಹಾಗು ಅಧಿಕಾರಿ ವರ್ಗದವರು ಸಂಸತ್ ಭವನದಲ್ಲಿ ಇರಲಿಲ್ಲ. ಆದರೂ ಆಗಿನ ಗೃಹ ಮಂತ್ರಿಗಳಾಗಿದ್ದ ಎಲ್.ಕೆ ಅಡ್ವಾಣಿ ಹಾಗು ಕೇಂದ್ರದ ರಾಜ್ಯ ರಕ್ಷಣಾ ಸಚಿವ ಹರಿನ್ ಪಾಠಕ್ ಸಂಸತ್ ಭವನದ ಒಳಗೆ ಇದ್ದರು ಎಂಬ ವರದಿಗಳಿವೆ. 100 ಜನಕ್ಕೂ ಮಿಗಿಲಾಗಿ ರಾಜಕಾರಣಿಗಳು ಆ ಸಮಯದಲ್ಲಿ ಸಂಸತ್ ಒಳಗಿದ್ದರು. ಏಕಾಏಕಿ ದಾಳಿ ಮಾಡಿದ ಉಗ್ರರು ಎ ಕೆ 47, ಗ್ರೆನೇಡು ಉದಾಹಕಗಳು, ಗ್ರೆನೇಡುಗಳು ಹಾಗು ಪಿಸ್ತೂಲುಗಳನ್ನು ಹೊಂದಿದ್ದರು ಎಂಬ ವರದಿ ದೆಹಲಿ ಪೋಲಿಸ್ ರಿಂದ ಬಹಿರಂಗವಾಗಿದೆ. ಶೀಘ್ರ ತ್ವರೆ ಮಾಡಿದ ಭಾರತೀಯ ರಕ್ಷಣಾ ಪಡೆಗಳು ಸಂಸತ್ ಭವನದ ಪ್ರಮುಖ ದ್ವಾರಗಳನ್ನು ಬಂದ್ ಮಾಡಿಸಿ ಸತತ ಪ್ರಯತ್ನ ಪಟ್ಟು ಉಗ್ರರನ್ನು ಆಹುತಿ ಪಡೆದರು. ಮುಂದೆ ಹತರಾದ ಅಷ್ಟೂ ಉಗ್ರರರು ಪಾಕಿಸ್ತಾನಿ ಪ್ರಜೆಗಳು ಎಂಬುದು ಸಾಬೀತಾಯಿತು. ಅಮೇರಿಕಾದ ಮೇಲೆ ದಾಳಿ ನಡೆದು ಕೇವಲ ಮೂರು ತಿಂಗಳ ಒಳಗೆ ಭಾರತದ ಮುಖ್ಯ ಕಟ್ಟಡದ ಮೇಲೆ ನಡೆದ ಈ ದಾಳಿ ಇಡೀ ದೇಶವನ್ನು ಆತಂಕಕ್ಕೆ ಸಿಲುಕುವಂತೆ ಮಾಡಿತು ಹಾಗೂ ಇತರ ದೇಶಗಳೂ ಭಯೋತ್ಪಾದನೆಯ ಹೆಸರು ಕೇಳಿ ಬೆಚ್ಚುವಂತೆ ಮಾಡಿತು. ಸುಮಾರು 5 ಲಕ್ಷ ಸೇನಾ ಸಿಬ್ಬಂದಿ ಪಂಜಾಬ್, ರಾಜಸ್ತಾನ, ಗುಜರಾತ್ ಹಾಗು ಜಮ್ಮು ಕಾಶ್ಮೀರ ಪ್ರಾಂತ್ಯಗಳ ಅಂತರಾಷ್ಟ್ರೀಯ ನಿಯಂತ್ರಣ ರೇಖೆಯಲ್ಲಿ ಕಾವಲಿಗೆ ನಿಂತರು. ಪಾಕಿಸ್ತಾನ ವು ಇದಕ್ಕೆ ಪ್ರತ್ಯುತ್ತರವೆಂಬಂತೆ ತನ್ನ ಸೈನಿಕರನ್ನು ಅಂತರಾಷ್ಟ್ರೀಯ ಗಡಿಯಲ್ಲಿ ತಂದು ನಿಲ್ಲಿಸಿತು. ಅದೇ ಸಮಯಕ್ಕೆ ಕಾಶ್ಮೀರದಲ್ಲಿ ಭಯೋತ್ಪಾದಕರು ಹಾಗು ಸೇನೆಯ ನಡುವೆ ಆಗಾಗ ಕದನಗಳು ಮರುಕಳಿಸುತ್ತಲೇ ಇದ್ದವು. ಭಯೋತ್ಪಾದನೆಯನ್ನು ಹತ್ತಿಕ್ಕುವ ಸಲುವಾಗಿ ವಾಜಪೇಯಿ ಆಡಳಿತ ಭಯೋತ್ಪಾದನಾ ನಿಷೇಧ ಕಾಯ್ದೆ ಯನ್ನು ಸಿದ್ಧಪಡಿಸಿ ಜಾರಿ ಮಾಡಿತು. ಯಾರನ್ನು ಬೇಕಾದರೂ ಭಯೋತ್ಪಾದಕರು ಎಂದು ಹಿಡಿದು ಶಿಕ್ಷಿಸುವ ಅವಕಾಶಗಳು ಆ ಕಾಯ್ದೆ ಯಲ್ಲಿ ಇರುವುದರಿಂದ ಈ ಕಾಯ್ದೆ ಜಾರಿಯಾಗ ಕೂಡದು ಎಂದು ಮಾನವ ಹಕ್ಕುಗಳ ಹೋರಾಟದ ಗುಂಪುಗಳು ವಿರೋಧ ತೋರಿದವು. ವಿಪಕ್ಷಗಳು ಕೂಡ ಈ ವಿಚಾರದಲ್ಲಿ ನಕಾರಾತ್ಮಕವಾಗಿ ಸ್ಪಂದಿಸಿದ್ದವು. ಇತರ ವಿಷಯಗಳು ವಾಜಪೇಯಿಯವರು ರಾಜಕಾರಣಿಯಲ್ಲದೆ ಕವಿಯೂ ಆಗಿದ್ದರು. ಹಿಂದಿ ಭಾಷೆಯಲ್ಲಿ ಅನೇಕ ಕವಿತೆಗಳನ್ನು ರಚಿಸಿದ್ದಾರೆ. ಇವರ ಇಪ್ಪತ್ತೊಂದು ಕವಿತೆಗಳ ಸಂಕಲನ Twenty-One Poems ಎಂಬ ಹೆಸರಿನಲ್ಲಿ ಆಂಗ್ಲಭಾಷೆಗೆ ಅನುವಾದಗೊಂಡಿದೆ. 2005 ರಲ್ಲಿ ರಾಜಕೀಯದಿಂದ ನಿವೃತ್ತಿ ಘೋಷಿಸಿ ಕೊಂಡರು ಅಟಲ್. ಅವರು ಬರೆದ ಪುಸ್ತಕಗಳು ಅನೇಕ. ತಮ್ಮ ಆಡಳಿತದ ಸಮಯದಲ್ಲಿ ಇಡೀ ವಿಶ್ವವೇ ತಬ್ಬಿಬ್ಬಾಗುವಂತೆ ಮಾಡಿದ ಪೋಖ್ರಾನ್ ಅಣು ಪರೀಕ್ಷೆ, ಭಾರತ ಪಾಕ್ ಬಾಂಧವ್ಯಕ್ಕೆ ಕೊಂಡಿಯಾಗಿ ಲಾಹೋರ್ ಬಸ್ ಪ್ರಯಾಣ ಆರಂಭ ತನ್ನ ಕನಸಿನ ಕೂಸಾದ ರಾಷ್ಟ್ರೀಯ ಹೆದ್ದಾರಿ ಮತ್ತು ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನೆಗೆ ಚಾಲನೆ ನೀಡಿದರು. ದೇಶದ ನಾಲ್ಕೂ ಮೂಲೆಗಳಿಗೂ ಸಂಪರ್ಕ ಕಲ್ಪಿಸುವ 15 ಸಾವಿರ ಕಿ.ಮೀ. ಉದ್ದದ "ಸುವರ್ಣ ಚತುಷ್ಪಥ" ಹೆದ್ದಾರಿಯನ್ನು ದಾಖಲೆಯ ಸಮಯದಲ್ಲಿ ಪೂರ್ಣಗೊಳಿಸಿದ ವಾಜಪೇಯಿಯವರ ಸಾಧನೆ ಅಸಾಮಾನ್ಯವಾದುದು. ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆಯನ್ನು ಜಾರಿಗೆ ತರುವ ಮೂಲಕ ಹಳ್ಳಿಹಳ್ಳಿಗಳಿಗೂ ರಸ್ತೆಯನ್ನು ಒದಗಿಸಿದ್ದು, "ಸರ್ವ ಶಿಕ್ಷಾ ಅಭಿಯಾನ" ಮೂಲಕ ಎಲ್ಲರನ್ನೂ ಸಾಕ್ಷರರನ್ನಾಗಿ ಮಾಡಲು ಮುಂದಾಗಿದ್ದ ವಾಜಪೇಯಿಯವರು ನಿಜಕ್ಕೂ ಒಬ್ಬ ದೂರದೃಷ್ಟಿ ಹೊಂದಿದ್ದ ನಾಯಕ. ಭಾರತದ ಹಿರಿಯ ಪ್ರಜೆ, ರಾಜಕಾರಣಿಗಳಲ್ಲೆ ಸಭ್ಯ ರಾಜಕಾರಣಿ ಮತ್ತು ಗೌರವಾನ್ವಿತ ಮುತ್ಸದ್ಧಿ ಎಂದು ತಮ್ಮ ರಾಜಕೀಯ ವಿರೋದಿಗಳಿಂದಲೇ ಕರೆಸಿಕೊಂಡವರು ಅಟಲ್ ಬಿಹಾರಿ ವಾಜಪೇಯಿ.ಯು ಪಿ ಎ ಸರ್ಕಾರದ ಅವಧಿಯಲ್ಲಿ ಪ್ರಧಾನಿಯಾಗಿದ್ದ ಮನ್ ಮೋಹನ್ ಸಿಂಗ್ ವಾಜಪೇಯಿಯವರನ್ನು 'ಭಾರತೀಯ ರಾಜಕೀಯ ರಂಗದ ಭೀಷ್ಮ ಪಿತಾಮಹ' ಎಂದು ವರ್ಣಿಸಿದ್ದಾರೆ. ವಾಜಪೇಯಿ ಯವರಲ್ಲಿ ಅತ್ಯಂತ ಗೌರವವಿರಿಸಿಕೊಂಡಿರುವ ಮನ್ ಮೋಹನ್ ಸಿಂಗ್ ವಾಜಪೇಯಿಯವರ ಪ್ರತೀ ಜನ್ಮ ದಿನದಂದು ವಯಕ್ತಿಕವಾಗಿ ಶುಬಾಶಯಗಳನ್ನೂ ತಿಳಿಸುತ್ತಾರೆ. 1977 ರಲ್ಲಿ ಜನತಾ ಸಂಘದ ಮೊದಲ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿ ಆಯ್ಕೆ ಆದಾಗ ಅವರು ಅಮೆರಿಕದ ಅಸೆಂಬ್ಲಿಯನ್ನ ಉದ್ದೇಶಿಸಿ ಮಾತನಾಡುವ ಅವಕಾಶ ಸಿಕ್ಕಿತ್ತು. ಆ ಸಂದರ್ಭ ದಲ್ಲಿ ಹಿಂದಿಯಲ್ಲಿ ಅಮೆರಿಕದ ಅಸೆಂಬ್ಲಿಯನ್ನ ಉದ್ದೇಶಿಸಿ ಮಾತನಾಡಿದ ಏಕೈಕ ಭಾರತೀಯರು ಅಟಲ್. ವಿಶೇಷವೆಂದರೆ ಅವರು ಭಾರತದ ಅವಿವಾಹಿತ ಪ್ರಧಾನ ಮಂತ್ರಿಯಾಗಿದ್ದರು. ರಾಜಕೀಯ ನಂತರ ಜೀವನ ಡಿಸೆಂಬರ್ 2005 ರಲ್ಲಿ ರಾಜಕೀಯ ನಿವೃತ್ತಿ ಘೋಷಿಸಿದ ವಾಜಪೇಯಿ ಮುಂದಿನ ಯಾವ ಚುನಾವನೆಯಲ್ಲಿಯೂ ಸ್ಪರ್ಧಿಸುವುದಿಲ್ಲ ಎಂದು ಸೂಚ್ಯವಾಗಿ ತಿಳಿಸಿದರು. ಬಿ ಜೆ ಪಿ ಪಕ್ಷದ ಬೆಳ್ಳಿ ಹಬ್ಬದ ಅಂಗವಾಗಿ ಮುಂಬೈನ ಶಿವಾಜಿ ಪಾರ್ಕ್‍ನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ವಾಜಪೇಯಿ "ನನ್ನ ನಂತರ ಲಾಲ್‍ಕೃಷ್ಣ ಅಡ್ವಾಣಿ ಹಾಗೂ ಪ್ರಮೋದ್ ಮಹಾಜನ್ ಬಿ.ಜೆ.ಪಿ ಗೆ ರಾಮ ಲಕ್ಷ್ಮಣರಂತೆ ಇರಲಿದ್ದಾರೆ" ಎಂದು ಹೇಳುವ ಮೂಲಕ ತಮ್ಮ ನಂತರ ಪಕ್ಷವನ್ನು ಯಾರು ಮುನ್ನಡೆಸಲಿದ್ದಾರೆ ಎಂಬುದನ್ನು ಸೂಚಿಸಿದ್ದರು. ಮುಂದೆ ಆರೋಗ್ಯ ಸಮಸ್ಯೆಯಿಂದ ಬಳಲಿದ ವಾಜಪೇಯಿ ದೆಹಲಿಯ ಉನ್ನತ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರು. ದಿನದಿಂದ ದಿನಕ್ಕೆ ಆರೋಗ್ಯ ಕ್ಷೀಣಿಸಿದ ಪರಿಣಾಮ 2009 ರ ಲೋಕಸಭಾ ಚುನಾವಣೆಯ ಯಾವ ಪ್ರಚಾರ ಕಾರ್ಯಗಳಲ್ಲಿಯೂ ಅವರು ಭಾಗಿಯಾಗಲಿಲ್ಲ. ಆರೋಗ್ಯ ಸಮಸ್ಯೆಗಳು ವಾಜಪೇಯಿ 2001 ನೇ ಇಸವಿಯಲ್ಲಿ ಮುಂಬೈನ ಹೆಸರಾಂತ ಆಸ್ಪತ್ರೆಯೊಂದರಲ್ಲಿ ಮಂಡಿ ಚಿಪ್ಪು ಬದಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. 2009 ರಲ್ಲಿ ಪಾರ್ಶ್ವ ವಾಯುವಿಗೆ ತುತ್ತಾದ ವಾಜಪೇಯಿ ಸ್ಪಷ್ಟವಾಗಿ ಮಾತನಾಡುವ ಶಕ್ತಿ ಕಳೆದುಕೊಂಡರು. ಸದ್ಯಕ್ಕೆ ವ್ಹೀಲ್ ಚೇರ್ ಮಾತ್ರ ಬಳಸುವ ವಾಜಪೇಯಿ ಜನರನ್ನು ಗುರುತಿಸಲಾರರು ಎಂಬ ವಿಷಯಗಳು ಹರಿದಾಡುತ್ತಿವೆ. ದೀರ್ಘ ಕಾಲೀನ ಸಕ್ಕರೆ ಖಾಯಿಲೆಯಿಂದಲೂ ಬಳಲುತ್ತಿದ್ದು ಇತ್ತೀಚಿಗೆ ಯಾವ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸುವುದಿಲ್ಲ. ಮನೆಯಿಂದ ಹೊರಗೆ ಬರಲು ಸಾಧ್ಯವಿಲ್ಲ, ದೆಹಲಿಯ ಎ ಐ ಐ ಎಂ ಎಸ್ ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯಲು ಮಾತ್ರವೇ ಮನೆಯಿಂದ ಹೊರಗೆ ಬರುವಷ್ಟು ಅವರ ಆರೋಗ್ಯ ಸ್ಥಿತಿ ವಿಷಮಿಸಿದೆ. ವಾಜಪೇಯಿ ನಡೆದು ಬಂದ ಹಾದಿ ೧೯೫೧ - ಭಾರತೀಯ ಜನ ಸಂಘ ಪಕ್ಷದ ಸಂಸ್ಥಾಪನೆ ೧೯೫೭ - ಎರಡನೇ ಲೋಕಸಭೆಗೆ ಚುನಾಯಿತರಾಗಿದ್ದು ೧೯೫೭-೭೭ - ಸಂಸತ್ ನಲ್ಲಿ ಭಾರತೀಯ ಜನಸಂಘ ಪಕ್ಷದ ಅಧ್ಯಕ್ಷ ೧೯೬೨ - ರಾಜ್ಯ ಸಭೆಯ ಸದಸ್ಯ ೧೯೬೬-೬೭ - ಸರ್ಕಾರಿ ಖಾತ್ರಿ ಸಮಿತಿಯ ಅಧ್ಯಕ್ಷ ೧೯೬೭ - ನಾಲ್ಕನೇ ಲೋಕಸಭೆಗೆ ಮರು ಚುನಾಯಿತರಾಗಿದ್ದು ೧೯೬೭-೭೦ - ಸಾರ್ವಜನಿಕ ಖಾತೆ ಸಮಿತಿಗೆ ಅಧ್ಯಕ್ಷ ೧೯೬೮-೭೩ - ಭಾರತೀಯ ಜನಸಂಘ ಪಕ್ಷದ ಅಧ್ಯಕ್ಷರಾಗಿ ೧೯೭೧ - ಐದನೇ ಲೋಕಸಭೆಗೆ ಮರುಚುನಾಯಿತರಾಗಿದ್ದು ೧೯೭೭ - ಆರನೇ ಲೋಕಸಭೆಗೆ ಮರು ಚುನಾಯಿತರಾಗಿದ್ದು ೧೯೭೭-೭೯ - ಕೇಂದ್ರ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವರಾಗಿ ೧೯೭೭-೮೦ - ಜನತಾ ಪಕ್ಷದ ಸಂಸ್ಥಾಪಕ ಸದಸ್ಯ ೧೯೮೦-೮೪ ಏಳನೇ ಲೋಕಸಭೆಗೆ ಮರುಚುನಾಯಿತರಾಗಿದ್ದು ೧೯೮೦-೮೬ - ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾಗಿ ೧೯೮೦-೮೪, ೧೯೮೬ ಹಾಗು ೧೯೯೩-೯೬ - ಸಂಸತ್ ನಲ್ಲಿ ಬಿ ಜೆ ಪಿ ನಾಯಕ ರಾಗಿ ೧೯೮೬ - ರಾಜ್ಯಸಭಾ ಸದಸ್ಯರಾಗಿ ೧೯೮೮-೯೦ - ಗೃಹ ಸಮಿತಿ ಸದಸ್ಯರಾಗಿ ಹಾಗು ವ್ಯಾಪಾರ ವ್ಯವಹಾರ ಸಲಹಾ ಸಮಿತಿಯ ಸದಸ್ಯರಾಗಿ ೧೯೯೧-೯೬ - ಹತ್ತನೇ ಲೋಕಸಭೆಗೆ ಮರು ಚುನಾಯಿತರಾಗಿದ್ದು ೧೯೯೧-೯೩ - ಸಾರ್ವಜನಿಕ ಖಾತೆ ಸಮಿತಿಯ ಅಧ್ಯಕ್ಷ ೧೯೯೩-೯೬ - ವಿದೇಶಾಂಗ ವ್ಯವಹಾರಗಳ ಸಮಿತಿ ಅಧ್ಯಕ್ಷ ಹಾಗು ಲೋಕಸಭಾ ವಿರೋಧ ಪಕ್ಷದ ನಾಯಕ ೧೯೯೬-೯೮ ಹನ್ನೊಂದನೇ ಲೋಕಸಭೆಗೆ ಮರುಚುನಾಯಿತ ೧೬ ಮೇ ೧೯೯೬ - ೩೧ ಮೇ ೧೯೯೬ - ಭಾರತದ ಪ್ರಧಾನ ಮಂತ್ರಿಯಾಗಿ ೧೯೯೬-೯೮ - ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ೧೯೯೭-೯೮ - ವಿದೇಶಾಂಗ ವ್ಯವಹಾರಗಳ ಸಮಿತಿ ಅಧ್ಯಕ್ಷ ೧೯೯೮-೯೯ ಹನ್ನೆರಡನೆ ಲೋಕಸಭೆಗೆ ಮರುಚುನಾಯಿತರಾಗಿದ್ದು ೧೯೯೮-೯೯ - ಭಾರತದ ಪ್ರಧಾನ ಮಂತ್ರಿ, ವಿದೇಶಾಂಗ ವ್ಯವಹಾರಗಳ ಖಾತೆ ಸಚಿವರು ಹಾಗು ಹಂಚಿಕೆಯಾಗದೆ ಉಳಿಕೆಯಾದ ಖಾತೆಗಳ ಸಚಿವರು ೧೯೯೯-೨೦೦೪ - ಹದಿಮೂರನೇ ಲೋಕಸಭೆಗೆ ಮರುಚುನಾಯಿತರಾಗಿದ್ದು ೧೩ ಅಕ್ಟೋಬರ್ ೧೯೯೯ ರಿಂದ ೧೩ ಮೇ ೨೦೦೪ ರವರೆಗೆ - ಭಾರತದ ಪ್ರಧಾನ ಮಂತ್ರಿಗಳಾಗಿ ೨೦೦೪ - ಹದಿನಾಲ್ಕನೇ ಲೋಕಸಭೆಗೆ ಮರುಚುನಾಯಿತರಾಗಿದ್ದು ೨೦೦೫ - ಸಕ್ರಿಯ ರಾಜಕಾರಣದಿಂದ ನಿವೃತ್ತಿ ಘೋಷಣೆ ಸಾಮಾಜಿಕ ಮತ್ತು ರಾಜಕೀಯ ಸೇವೆ ರಾಷ್ಟ್ರೀಯ ಏಕೀಕರಣ (1961) ಓಪನ್ ಸೊಸೈಟಿಯ ಡೈನಮಿಕ್ಸ್ (1977) ನ್ಯೂ ಡೈಮೆನ್ಷನ್ಸ್ ಆಫ್ ಇಂಡಿಯಾಸ್ ಫಾರಿನ್ ಪಾಲಿಸಿ (1979) ಗಾಯಗಳನ್ನು ಗುಣಪಡಿಸುವುದು: ಅಸ್ಸಾಂ ದುರಂತದ ಬಗ್ಗೆ ವಾಜಪೇಯಿ ಅವರ ಮನವಿ (1983) ಕುಚಾ ಲೇಖ, ಕುಚಾ ಭಾಸಾನ (1996) ಸೆಕ್ಯುಲಾರಾವಾಡಾ: ಭಾರತೀಯ ಪರಿಕಾರಿಪಾಣ (ಡಾ. ರಾಜೇಂದ್ರ ಪ್ರಸಾದ ಸ್ಮರಣ ವಿಕಾರಿ ನಮಲಾ) (1996) ಬಿಂದು-ಬಿಂದು ವಿಕಾರ (1997) ರಾಜನೀತಿ ಕಿ ರಾಪಾಟಿಲಿ ರಾಹೆಮ್ (1997) ಸ್ಕ್ವೇರ್ ಒನ್ಗೆ ಹಿಂತಿರುಗಿ (1998) ನಿರ್ಣಾಯಕ ದಿನಗಳು (1999) ಸಕ್ತಿ ಸೇ ಸಂತಿ (1999) ವಿಕಾರ-ಬಿಂದು (ಹಿಂದಿ ಆವೃತ್ತಿ, 2000) ನಯಿ ಚುನೌಟಿ, ನಯಾ ಅವಸರಾ (ಹಿಂದಿ ಆವೃತ್ತಿ, 2002) ಏಷಿಯಾನ್ ಮತ್ತು ಏಷ್ಯಾ-ಪೆಸಿಫಿಕ್ ಪ್ರದೇಶದ (2003) ಭಾರತದ ದೃಷ್ಟಿಕೋನಗಳು ಪುಸ್ತಕಗಳು ರಾಷ್ಟ್ರೀಯ ಏಕೀಕರಣ (1961) ಓಪನ್ ಸೊಸೈಟಿಯ ಡೈನಮಿಕ್ಸ್ (1977) ಭಾರತದ ವಿದೇಶಾಂಗ ನೀತಿ: ಹೊಸ ಆಯಾಮಗಳು (1977) ಅಸ್ಸಾಂ ಸಮಸ್ಯೆ: ದಬ್ಬಾಳಿಕೆಯ ಯಾವುದೇ ಪರಿಹಾರ (1981) ಅಟಲ್ ಬಿಹಾರಿ ವಾಜ್ ಮೆಮ್ ಟೀನಾ ದಾಸಕ (1992) ಕುಚಾ ಲೇಖ, ಕುಚಾ ಭಾಸಾನ (1996) ಸೆಕ್ಯುಲಾರಾವಾಡಾ: ಭಾರತೀಯ ಪರಿಕಾರಿಪಾಣ (ಡಾ. ರಾಜೇಂದ್ರ ಪ್ರಸಾದ ಸ್ಮರಣ ವಿಕಾರಿ ನಮಲಾ) (1996) ರಾಜನೀತಿ ಕಿ ರಾಪಾಟಿಲಿ ರಾಹೆಮ್ (1997) ಸ್ಕ್ವೇರ್ ಒನ್ಗೆ ಹಿಂತಿರುಗಿ (1998) ನಿರ್ಣಾಯಕ ದಿನಗಳು (1999) ಸಕ್ತಿ ಸೇ ಸಂತಿ (1999) ಪ್ರಧಾನ್ ಮಂತ್ರಾಲಯ ಅಟಲ್ ಬಿಹಾರಿ ವಾಜಪೇಯಿ ಕೆ ಚುನೆ ಹ್ಯು ಭೇಷನ (2000) ವಾಜಪೇಯಿ ಮೌಲ್ಯಗಳು, ವಿಷನ್ & ವರ್ಸಸ್: ಇಂಡಿಯಾಸ್ ಮ್ಯಾನ್ ಆಫ್ ಡೆಸ್ಟಿನಿ (2001) ಏಷಿಯಾನ್ ಮತ್ತು ಏಷ್ಯಾ-ಪೆಸಿಫಿಕ್ ಪ್ರದೇಶದ (2003) ಭಾರತದ ದೃಷ್ಟಿಕೋನಗಳು ಕವನ ಮೇರಿ ಇಕಿವಾನಾ ಕವಿತೆಮ್ (1995) ಮೇರಿ ಇಕಿವಾನಾ ಕವಿತೆಮ್ (ಹಿಂದಿ ಆವೃತ್ತಿ, 1995) ನಾಯಿ ದೀಸಾ - ಜಗ್ಜಿತ್ ಸಿಂಗ್ ಅವರೊಂದಿಗೆ ಒಂದು ಆಲ್ಬಮ್ (1995) ಶ್ರೀತಾ ಕಬಿತಾ (1997) ಸಂವೇದನಾ - ಜಗ್ಜಿತ್ ಸಿಂಗ್ ಅವರೊಂದಿಗೆ ಒಂದು ಆಲ್ಬಮ್ (1995) ಕ್ಯಾ ಖೊಯಾ ಕ್ಯಾ ಪಾಯ: ಅಟಲ್ ಬಿಹಾರಿ ವಾಜಪೇಯಿ, ವಕ್ತಿತ್ತ್ವ ಔರ್ ಕವಿತೆಮ್ (ಹಿಂದಿ ಆವೃತ್ತಿ, 1999) ಇಪ್ಪತ್ತೊಂದು ಕವನಗಳು (2003) ಭಾಷಣಗಳು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಆಯ್ಕೆ ಮಾಡಿದ ಭಾಷಣಗಳು. (2000). ಅಧ್ಯಕ್ಷರ ವಿಳಾಸಗಳು, 1980-1986. (2000). ಅಧ್ಯಕ್ಷೀಯ ವಿಳಾಸ. (1986). ಅಧ್ಯಕ್ಷೀಯ ಭಾಷಣ: ಭಾರತೀಯ ಪ್ರತಿನಿಧಿ ಸಭೆ ಅಧಿವೇಶನ, ಭಾಗಲ್ಪುರ್ (ಬಿಹಾರ), 5 6 & 7 ಮೇ 1972. (1972). ಅಟಲ್ ಬಿಹಾರಿ ವಾಜಪೇಯಿ ಮತ್ತು ಪೋಖ್ರಾನ್ ಪ್ರಶಸ್ತಿ/ಗೌರವ/ ಸನ್ಮಾನಗಳು 1992 ರಲ್ಲಿ, ಪದ್ಮ ವಿಭೂಷಣ. 1994 ರಲ್ಲಿ, ಲೋಕಮಾನ್ಯ ತಿಲಕ್ ಪ್ರಶಸ್ತಿ. 1994 ರಲ್ಲಿ, ಉತ್ತಮ ರಾಜಕೀಯ ಪಟು ಗೌರವ. 1994 ರಲ್ಲಿ, ಪಂಡಿತ್ ಗೋವಿಂದ್ ವಲ್ಲಭ್ ಪಂತ್ ಪ್ರಶಸ್ತಿ. 2015 ರಲ್ಲಿ ಭಾರತ ರತ್ನ ಪ್ರಶಸ್ತಿ. 2015 ರಲ್ಲಿ, ಬಾಂಗ್ಲಾ ವಿಮೋಚನಾ ಯುದ್ಧ ಪ್ರಶಸ್ತಿ. ನಿಧನ ಮೂತ್ರಪಿಂಡ ಹಾಗು ಪಾರ್ಶ್ವ ವಾಯು ಸಮಸ್ಯೆಯಿಂದ ಬಳಲುತ್ತಿದ್ದ ವಾಜಪೇಯಿಯವರ ಆರೋಗ್ಯದಲ್ಲಿ ಕೆಲ ದಿನಗಳ ಹಿಂದೆ ಏರುಪೇರಾಗಿತ್ತು. ಮಧುಮೇಹ ಹಾಗು ರಕ್ತದೊತ್ತಡ ಸಮಸ್ಯೆಗಳಿಂದಾಗಿ ಅವರನ್ನು ಜೂನ್ ೧೧ರಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ೨೦೧೮ ಆಗಸ್ಟ್ ೧೬ ರ ಬೆಳಗ್ಗಿನಿಂದಲೇ ಚಿಕಿತ್ಸೆಗೆ ಸ್ಪಂದಿಸುವುದನ್ನು ಕ್ಷೀಣಿಸಿದ ವಾಜಪೇಯಿ ಸಾಯಂಕಾಲ ೫:೦೫ ರ ಸಮಯಕ್ಕೆ ನಿಧನರಾದರು. ಉಲ್ಲೇಖಗಳು ಬಾಹ್ಯಸಂಪರ್ಕಗಳು Profile Govt. of India Profile at BBC News ಹೆಚ್ಚಿನ ಓದಿಗೆ ಅಟಲ್ ಬಿಹಾರಿ ಪಾಕ ಪ್ರವೀಣ ಅಟಲ್ ನೈಪಾಲ್ ಮತ್ತು ವಾಜಪೇಯಿ ಭಾರತದ ಗಣ್ಯರು ಭಾರತದ ಪ್ರಧಾನ ಮಂತ್ರಿಗಳು ಭಾರತದ ಪ್ರಮುಖ ರಾಜಕಾರಣಿಗಳು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು ಭಾರತೀಯ ಜನತಾ ಪಕ್ಷ ೧೯೨೪ ಜನನ ೨೦೧೮ ನಿಧನ
1649
https://kn.wikipedia.org/wiki/%E0%B2%87%E0%B2%82%E0%B2%A6%E0%B3%8D%E0%B2%B0%E0%B2%95%E0%B3%81%E0%B2%AE%E0%B2%BE%E0%B2%B0%E0%B3%8D%20%E0%B2%97%E0%B3%81%E0%B2%9C%E0%B3%8D%E0%B2%B0%E0%B2%BE%E0%B2%B2%E0%B3%8D
ಇಂದ್ರಕುಮಾರ್ ಗುಜ್ರಾಲ್
(ಜನನ: ಡಿಸೆಂಬರ್ ೪, ೧೯೧೯-ಮರಣ: ನವೆಂಬರ್, ೩೦, ೨೦೧೨) ಇಂದ್ರ ಕುಮಾರ್ ಗುಜ್ರಾಲ್,ಭಾರತದ ೧೨ ನೆಯ ಪ್ರಧಾನ ಮಂತ್ರಿಗಳು. ಹೆಚ್.ಡಿ.ದೇವೇಗೌಡರನಂತರ ರಾಜ್ಯಸಭೆಯಿಂದ ನೇಮಕಗೊಂಡ ಎರಡನೇ ಪ್ರಧಾನಿಯಾಗಿದ್ದಾರೆ. ಇಂದ್ರ ಕುಮಾರ್ ಗುಜ್ರಾಲ್ ಒಬ್ಬ ಬುದ್ಧಿಜೀವಿ, ಸಭ್ಯರಾಜಕಾರಣಿ, ಆದರ್ಶವಾದಿ, ಶಾಂತಿಪ್ರಿಯ, ತನ್ನದೇ ಆದ ರಾಜಕೀಯ ನೀತಿ ಹಾಗೂ ತಮ್ಮ ವಿಶಿಷ್ಠ ಛಾಪು ಇರುತ್ತಿತ್ತು. ಸೈದ್ಧಾಂತಿಕ ಹಾಗೂ ಮೌಲ್ಯಾಧಾರಿತ ರಾಜಕಾರಣಿಯಾಗಿದ್ದರು. ತಮ್ಮ ಸ್ವಸಾಮರ್ಥ್ಯದಿಂದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಲಯಗಳಲ್ಲಿ ಮೆರೆದರು. ಆಳವಾದ ಜ್ಞಾನ ಹೊಂದಿದ್ದರು. ೨ ಬಾರಿ ವಿದೇಶಾಂಗ ಸಚಿವರಾಗಿದ್ದರು. ನೆರೆಹೊರೆಯ ರಾಷ್ಟ್ರಗಳ ಜೊತೆಗೆ ಸ್ನೇಹ ಸಂಬಂಧ ಸೌಹಾರ್ದಯುತವಾಗಿರಬೇಕೆನ್ನುವ ಸಿದ್ಧಾಂತ. ವಿದೇಶೀಯರೂ ಅವರನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದರು. ಪರಿಶುದ್ಧವಾದ ರಾಜಕೀಯ ಜೀವನ ರಾಜಕೀಯ ಜೀವನ ಪರಿಶುದ್ಧವಾಗಿತ್ತು. ಶ್ರೀಮತಿ ಇಂದಿರಾಜಿಯವರ ಸಂಪುಟದಲ್ಲಿ ವಿವಿಧ ಖಾತೆಗಳಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದರು. ರಷ್ಯಾದಲ್ಲಿ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿದ ಜನತಾದಳದ ನೇತೃತ್ವದ ಸಂಯುಕ್ತರಂಗ ವಹಿಸಿಕೊಂಡ ಸರ್ಕಾರದಲ್ಲೂ ಪ್ರಧಾನಿಯಾಗಿ ಶೋಭಿಸಿದರು. ಎಚ್.ಡಿ.ದೇವೇಗೌಡರಿಗೆ ನೀಡಲಾದ ಬೆಂಬಲವನ್ನು ಕಾಂಗ್ರೆಸ್ ಹಿಂತೆಗೆದುಕೊಂಡಿತು. ಆಗ ಅಜಾತಶತೃವಿನಂತಿದ್ದ ಪ್ರಧಾನಿಯಾಗಿ ಚುನಾಯಿಸಲ್ಪಟ್ಟರು. ಇದ್ದದ್ದು ಕೇವಲ ೧೦ ತಿಂಗಳಾದರೂ ಪಕ್ಷಭೇದವಿಲ್ಲದೆ ಎಲ್ಲರೊಡನೆಯೂ ಸೌಹಾರ್ದಯುತವಾಗಿ ವ್ಯವಹರಿಸಿ ಜನರ ಹೃದಯವನ್ನು ಗೆಲ್ಲುವ ಶಕ್ತಿಯಿತ್ತು. ಜನನ, ವಿದ್ಯಾಭ್ಯಾಸ ಜನಿಸಿದ್ದು ಸನ್. ೧೯೧೯ ರ ಡಿಸೆಂಬರ್, ೪ ರಂದು, ಪಾಕೀಸ್ತಾನದ ಝೀಲಂ ನಲ್ಲಿ ಒಬ್ಬ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಲ್ಲಿ ಅವತಾರ್ ನಾರಾಯಣ್ ಹಾಗೂ ಪುಷ್ಪಾ ಗುಜ್ರಾಲರಿಗೆ. ಡಿಎವಿ ಕಾಲೇಜ್, ಹೈಲಿ ಕಾಲೆಜ್ ಆಫ್ ಕಾಮರ್ಸ್, ಮತ್ತು ಪ್ರಸಕ್ತ ಲಾಹೋರಿನಲ್ಲಿರುವ 'ಫೋರ್ ಮ್ಯಾನ್ ಕ್ರಿಶ್ಚಿಯನ್ ಕಾಲೇಜ್' ನಲ್ಲಿ ಕಲಿತ ಗುಜ್ರಾಲ್, ವಿದ್ಯಾರ್ಥಿಯಾದಾಗಲೇ ರಾಜಕಾರಣದಲ್ಲಿ ಭಾಗಿಯಾಗಿದ್ದರು. ಮುಂದೆ, 'ಕ್ವಿಟ್ ಇಂಡಿಯಾ ಚಳುವಳಿ'ಯಲ್ಲಿ ಧುಮಿಕಿ ೧೯೪೨ ರಲ್ಲಿ ಜೈಲುವಾಸವನ್ನೂ ಅನುಭವಿಸಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿ ಅವರು ಭಾರತೀಯ ಕಮ್ಯುನಿಷ್ಟ್ ಪಕ್ಷದ ಸದಸ್ಯರಾದರು. ಅವರಿಗೆ ಇಬ್ಬರುಗಂಡುಮಕ್ಕಳು ಹಾಗೂ ಮೂವರು ಮೊಮ್ಮಕ್ಕಳಿದ್ದಾರೆ. ಅವರ ಪತ್ನಿ ೧೧ನೇ ಜುಲೈ ೨೦೧೧ರಂದು ಕಾಲವಾದರು. ತಮ್ಮ ಜೀವನದುದ್ದಕ್ಕೂ 'ಅಜಾತಶತೃ'ವೆಂದು ಹೆಸರಾದ ಅವರು, ಮೌಲ್ಯಾಧಾರಿತ ರಾಜಕೀಯಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದರು. ಪ್ರಧಾನಮಂತ್ರಿಯ ಸ್ಥಾನದಲ್ಲಿದ್ದಾಗ ಒತ್ತಡದಲ್ಲೂ ಸಮಾಧಾನವಾಗಿರುವುದು ಹೇಗೆ ಎನ್ನುವ ಉದಾಹರಣೆಗೆ ಅವರು ಅನ್ವರ್ಥನಾಮರಾಗಿದ್ದರು. ಸಂಕಷ್ಟದ ಸಮಯದಲ್ಲಿ ಶಾಂತ ಮನಸ್ಸಿನಿಂದ ಇರುವ ಸ್ವಭಾವವನ್ನು ಬೆಳೆಸಿಕೊಂಡಿದ್ದರು. ತಾವು ನಂಬಿದ ಮೌಲ್ಯಗಳಲ್ಲಿ ಅಚಲ ನಿಷ್ಟೆಯಿಂದ ಇರುತ್ತಿದ್ದರು. ವಿಧ್ಯಾರ್ಥಿಯಾಗಿದ್ದಾಗಲೂ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಭೂಗತ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು. ದಶಕಗಳಕಾಲ ಸಾರ್ವಜನಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ನೆರೆಹೊರೆಯ ರಾಷ್ಟ್ರಗಳ ಜೊತೆ ಸ್ನೇಹ ಬಾಂಧವ್ಯ ಇರಿಸಿಕೊಳ್ಳಲು ೫ ತತ್ವಗಳನ್ನು ರೂಪಿಸಿದ್ದರು. ಅವನ್ನು 'ಗುಜ್ರಾಲ್ ಡಾಕ್ಟ್ರಿನ್,' ಎಂದು ಕರೆಯುತ್ತಾರೆ. ರಾಷ್ಟ್ರದ ವಿಭಜನೆಯ ಸಮಯದಲ್ಲಿ ಪಾಕೀಸ್ತಾನದಿಂದ ವಲಸೆಬಂದ ಗುಜ್ರಾಲ್, ತಳಮಟ್ಟದ ರಾಜಕೀಯ ಕಾರ್ಯಕರ್ತರಾಗಿದ್ದರೂ ಅದೃಷ್ಟದ ಬಲದಿಂದ ಪ್ರಧಾನಿಯ ಪಟ್ಟವೇರಿದರು. ಐ.ಕೆ.ಗುಜ್ರಾಲ್ ರವರ ಶುದ್ಧ-ವ್ಯಕ್ತಿತ್ವ ಒಬ್ಬ ಪ್ರತಿಭಾನ್ವಿತ ವ್ಯಕ್ತಿ. ಅತ್ಯುತ್ತಮ ಓದುಗ, ಬರಹಗಾರ, ವಿದೇಶಾಂಗ ವ್ಯವಹಾರ ಖಾತೆಯ ಸಚಿವರಾಗಿ ಭಾರತವನ್ನು ವಿಶ್ವಮಟ್ಟದಲ್ಲಿ ಸಮರ್ಥವಾಗಿ ಗುರುತಿಸುವಂತೆ ನಡೆದುಕೊಂಡರು. ಅಪ್ಪಟ ದೇಶಪ್ರೇಮಿ, ಮಾಸ್ಕೋದಲ್ಲಿ ಪ್ರತ್ಯೇಕವಾದ ವಿದೇಶಾಂಗ ವ್ಯವಹಾರಗಳ ಸಚಿವರ ಅಗತ್ಯವಿರಲಿಲ್ಲ. ಗುಜ್ರಾಲ್ ನೆಹರೂ ತತ್ವಗಳ ಆಧಾರದಮೇಲೆ ಅಪಾರ ವಿಶ್ವಾಸ ಪ್ರೀತಿ ಇಟ್ಟುಕೊಂಡಿದ್ದರು. ಸಮ್ಮಿಶ್ರ ಸರ್ಕಾರವನ್ನು ನಿಭಾಯಿಸುವ ಕ್ಲಿಷ್ಟ ಘಟ್ಟದಲ್ಲೂ ಅವರು ಹಲವಾರು ಸಂಕೀರ್ಣ ವಿಚಾರಗಳನ್ನೂ ಬಹಳ ಯಶಸ್ವಿಯಾಗಿ ನಿಭಾಯಿಸಿದ್ದರು. ಗುಜ್ರಾಲ್ ತಮ್ಮ ಬಿಡುವಿನ ಸಮಯದಲ್ಲಿ ಉರ್ದು ಕವನಗಳನ್ನು ಸಹ ಬರೆಯುತ್ತಿದ್ದರು. ರಾಜಕೀಯ ಜೀವನ ೫೦ ರ ದಶಕದಲ್ಲಿ 'ಎನ್.ಡಿ.ಎಂಸಿಯ ಉಪಾಧ್ಯಕ್ಷರಾಗಿ ಅಧಿಕಾರ ಪರ್ವ' ಆರಂಭಿಸಿದರು. ೧೯೬೪ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಸೇರುವ ಪೂರ್ವದಲ್ಲಿ ಗುಜ್ರಾಲರು ೧೯೫೮ರಲ್ಲಿ ನವದೆಹಲಿಯ ಪೌರ ಸಮಿತಿಯ ಉಪಾಧ್ಯಕ್ಷರಾದರು. ಅವರು ೧೯೬೪ರಲ್ಲಿ ರಾಜ್ಯಸಭೆಯ ಸದಸ್ಯರಾದರು. ೧೯೭೫ರ ತುರ್ತು ಪರಿಸ್ಥಿತಿಯಲ್ಲಿ ಸೂಚನಾ ಮತ್ತು ಪ್ರಸಾರಣ ಮಂತ್ರಿಯಾಗಿದ್ದರು. ಆ ಸಮಯದಲ್ಲಿ ದೂರದರ್ಶನದ ಮೇಲ್ಚಿಚಾರಣೆಯನ್ನಲ್ಲದೇ, ಮಾಧ್ಯಮ ನಿಯಂತ್ರಕರಾಗಿಯೂ ಕಾರ್ಯನಿರ್ವಹಿಸಿದ್ದರು. ಅವರು ಜಲಸಂಪನ್ಮೂಲ ಖಾತೆಯನ್ನೂ ಕೂಡ ಸಂಭಾಳಿಸಿದ್ದಾರೆ. ನಂತರ ಇಂದಿರಾ ಗಾಂಧಿಯವರಿಂದ ಸೊವಿಯೆಟ್ ಒಕ್ಕೂಟದ ರಾಯಭಾರಿಯಾಗಿ ನೇಮಿಸಲ್ಪಟ್ಟು, ಮೊರಾರ್ಜಿ ದೇಸಾಯಿ ಹಾಗೂ ಚೌಧುರಿ ಚರಣ್ ಸಿಂಗ್‍ರ ಅಧಿಕಾರಾವಧಿಯಲ್ಲಿಯೂ ಕೂಡ ಮುಂದುವರೆದರು. ೧೯೮೦ ರಲ್ಲಿ ಕಾಂಗ್ರೆಸ್ ತೊರೆದು, ಜನತಾದಳಕ್ಕೆ ಸೇರಿದರು. ೧೯೮೯ ರಲ್ಲಿ ವಿ.ಪಿ.ಸಿಂಗ್ ನೇತೃತ್ವದ ನ್ಯಾಷನಲ್ ಪ್ರಂಟ್ ಸರಕಾರದ ವಿದೇಶಾಂಗ ಸಚಿವರಾದರು. ಕುವೈಟ್ ನ್ನು ಇರಾಕ್ ಆಕ್ರಮಿಸಿದಾಗ, ಅತಂತ್ರ ಸ್ಥಿತಿಯಲ್ಲಿದ್ದ ಸಾವಿರಾರು ಭಾರತೀಯರ ಸಮಸ್ಯೆಗಳನ್ನು ಬಗೆಹರಿಸಿ ಮೆಚ್ಚುಗೆಗೆ ಪಾತ್ರರಾದರು. ದೇವೇಗೌಡರ ಯುನೈಟೆಡ್ ಫ್ರಂಟ್ ಸರಕಾರ ಸನ್ ೧೯೯೭ ರಲ್ಲಿ ಪತನವಾದಮೇಲೆ ಅಸ್ತಿತ್ವಕ್ಕೆ ಬಂದ ಸರಕಾರದಲ್ಲಿ 'ಗುಜ್ರಾಲರೇ ಪ್ರಧಾನಿ'. ಯುಎಫ್ ನಾಯಕ ಲಾಲೂ ಪ್ರಸಾದ್ ಯಾದವ್, ಮುಲಾಯಂ ಸಿಂಗ್ ಯಾದವ್ ಮತ್ತಿತರ ನಡುವೆ ಗಂಭೀರ ಸ್ವರೂಪದ ಭಿನ್ನಾಭಿಪ್ರಾಯ ತಲೆದೋರಿದಾಗ, ಗುಜ್ರಾಲ್, ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆಯಾಗಿ ಪ್ರಧಾನಿ'ಯಾದ ಅದೃಷ್ಟವಂತರು. ಐ.ಜಿ.ಗುಜ್ರಾಲ್ ರವರ ರಾಜಕೀಯ ಜೀವನದ ಮೆಟ್ಟಿಲುಗಳು : ೧೯೬೪ ರಲ್ಲಿ ರಾಜ್ಯ ಸಭಾ ಸದಸ್ಯ ೧೯೬೬ ರಲ್ಲಿ ಇಂದಿರಾಜಿಯವರು ಪಟ್ಟಕ್ಕೇರಲು ಕಾರಣವಾದ ಕೂಟದಲ್ಲಿ ಗುರುತಿಸಿಕೊಂಡಿದ್ದರು. ತುರ್ತು ಪರಿಸ್ಥಿತಿ ಹೇರಿದಾಗಲೂ ವಾರ್ತಾ ಸಚಿವರಾಗಿದ್ದರು. ಪತ್ರಿಕೆಗಳನ್ನು ಸೆನ್ಸಾರ್ ಮಾಡಿದರು. ೧೯೬೪ ಹಾಗೂ ೧೯೭೬ ರ ನಡುವೆ, ೨ ಬಾರಿ, ರಾಜ್ಯಸಭಾ ಸದಸ್ಯ.. .೧೯೮೯ ರಿಂದ ೧೯೯೧ ರ ತನಕ ಲೋಕಸಭೆಯ ಸದಸ್ಯ. ಎರಡನೆಯ ಬಾರಿಗೆ ಪ್ರಧಾನಿ ಈ ಬಾರಿ ಪ್ರಧಾನಿಯಾಗಿ ಇದ್ದದ್ದು ೨ ತಂಗಳು ಮಾತ್ರ. ರಾಜೀವ್ ಗಾಂಧಿಯವರ ಹತ್ಯೆ ತನಿಖೆ ನಡೆಸಿದ ಜೈನ್ ಆಯೋಗದ ವರದಿಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಸರಕಾರಕ್ಕೆ ನೀಡಿದ ಬೆಂಬಲವನ್ನು ಹಿಂದೆಗೆದುಕೊಂಡಾಗ, ಗುಜ್ರಾಲ್ ಸರಕಾರ ಮತ್ತೊಮ್ಮೆ ಪತನಗೊಂಡಿತು. ನಿಧನ ವೃದ್ಧಾಪ್ಯ,, ಬಹುಅಂಗ ವೈಫಲ್ಯ,, ಹಾಗೂ ಗಂಭೀರ ಸ್ವರೂಪದ ಎದೆ ಸೋಂಕಿಗೆ ತುತ್ತಾದ ೯೨ ವರ್ಷ ಪ್ರಾಯದ ಇಂದ್ರಕುಮಾರ್ ಗುಜ್ರಾಲ್ ರವರು, ಸುಮಾರು ಒಂದು ವರ್ಷದಿಂದ 'ಡಯಾಲಿಸಿಸ್' ಗೆ ಒಳಪಡುತ್ತಿದ್ದರು. ಶ್ವಾಸಕೋಶದ ಸೋಂಕಿನ ಚಿಕಿತ್ಸೆಗಾಗಿ ಅವರನ್ನು ನವೆಂಬರ್ ೧೯ ರಂದು ಆಸ್ಪತ್ರೆಗೆ ಧಾಖಲಿಸಲಾಗಿತ್ತು. ಅವರು, ಗುರ್ಗಾವ್ ನ ಖಾಸಗಿ ಆಸ್ಪತ್ರೆಯೊಂದರಲ್ಲಿ ನವೆಂಬರ್, ೩೦, ಶುಕ್ರವಾರದಂದು, ಮದ್ಯಾನ್ಹ ೩-೨೭ ಕ್ಕೆ ಕೊನೆಯುಸಿರೆಳೆದರು. ಕಳೆದ ಕೆಲವು ದಿನಗಳಿಂದ ಅವರ ಆರೋಗ್ಯ ಹದಗೆಟ್ಟಿದ್ದರಿಂದ 'ಜೀವರಕ್ಷಕ ವ್ಯವಸ್ಥೆ'ಯನ್ನು ಒದಗಿಸಲಾಗಿತ್ತು. ಶ್ರೀ ಗುಜ್ರಾಲರು, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. 'ನರೇಂದ್ರ ಗುಜ್ರಾಲ್' ರಾಜ್ಯಸಭಾ ಸದಸ್ಯ., ಹಾಗೂ ಅಕಾಲಿ ದಳದ ನಾಯಕ. 'ಸತೀಶ್ ಗುಜ್ರಾಲ್,' ಸುಪ್ರಸಿದ್ಧ ಚಿತ್ರ ಕಲಾವಿದ, ಮತ್ತು 'ಆರ್ಕಿಟೆಕ್ಟ್ 'ಆಗಿದ್ದಾರೆ. ಗುಜ್ರಾಲ್ ಅವರ ಪತ್ನಿ ಶೀಲಾ ಗುಜ್ರಾಲ್ ಖ್ಯಾತ ಕವಯಿತ್ರಿ. ಪಂಜಾಬಿ, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಶೀಲಾ, ಸನ್ ೨೦೧೧ ರಲ್ಲಿ ತೀರಿಕೊಂಡರು. ಇಂದ್ರ ಕುಮಾರ್ ಗುಜ್ರಾಲ್ ರವರ, ಅಂತ್ಯ ಕ್ರಿಯೆ, ನವ ದೆಹಲಿಯಲ್ಲಿ ಡಿಸೆಂಬರ್ ೧ ರಂದು, ಶನಿವಾರ ಮಧ್ಯಾನ್ಹ ೩.೩೦ ಕ್ಕೆ 'ಸ್ಮೃತಿ ಸ್ಥಲ್' ನಲ್ಲಿ ಜರುಗಿತು. ಗುಜ್ರಾಲ್ ರವರ ಮೃತದೇಹಕ್ಕೆ ಅಗ್ನಿಯನ್ನು ಇಬ್ಬರು ಮಕ್ಕಳೂ ಸೋಕಿಸಿದರು. ಶ್ರೀ ಗುಜ್ರಾಲ್ ರವರ ಅಗಲುವಿಕೆಯ ಶೋಕವನ್ನು ಅಚರಿಸಲು, ಕೇಂದ್ರ ಸರ್ಕಾರ, ೭ ದಿನಗಳ ಶೋಕವನ್ನು ಪ್ರಕಟಿಸಿದೆ. ಆತ್ಮಕಥನ I. K. Gujral: Matters of Discretion: An Autobiography, Hay House, India, 519 pages, Feb. 2011. ISBN 978-93-8048-080-0. Distributors: Penguin books, India. (ಭಾರತೀಯ ಪ್ರಧಾನಮಂತ್ರಿಯೊಬ್ಬರು ರಚಿಸಿದ ಆತ್ಮಕಥೆ) ರಾಜಕೀಯ ಭಾರತದ ಪ್ರಧಾನ ಮಂತ್ರಿಗಳು
1651
https://kn.wikipedia.org/wiki/%E0%B2%AE%E0%B2%BE%E0%B2%A4%E0%B2%BE%20%E0%B2%B9%E0%B2%B0%E0%B2%BF
ಮಾತಾ ಹರಿ
ಮಾತಾ ಹರಿ (ಆಗಸ್ಟ್ ೭, ೧೮೭೬–ಅಕ್ಟೋಬರ್ ೧೫, ೧೯೧೭) Margaretha Geertruida Zelle (ಆಂಗ್ಲದಲ್ಲಿ ಮಾರ್ಗರೆಟ್ ಗೆರ್ಟ್ರುಡ್ ಝೆಲ್ಲೆ) ರವರ ನಾಮಾಂಕಿತವಾಗಿತ್ತು (ಅಡ್ಡಹೆಸರು, ಬಳಕೆಯ ಹೆಸರು). ಇವರು ಡಚ್ ನೃತ್ಯಗಾತಿ, ಮೊದಲನೇ ವಿಶ್ವ ಯುದ್ಧದ ಸಮಯದಲ್ಲಿ ಬೇಹುಗಾರಿಕೆ ನಡೆಸಿದ ಕಾರಣ ಆರೋಪಿಯೆಂದು ಪರಿಗಣಿಸಲ್ಪಟ್ಟು ಶಿಕ್ಶೆಗೆ ಗುರಿಯಾದರು. ಮಾತಾ ಹರಿ ಲೀಯುವಾರ್ಡನ್‌ನಲ್ಲಿ ಒಬ್ಬ ಡಚ್ ವ್ಯಾಪಾರಸ್ಥನಿಗೆ ಜನಿಸಿದವರು. ಇವರ ತಾಯಿ ಜಾವಾ ದ್ವೀಪದವರು. ೨೦ನೇ ಶತಮಾನದ ಕೊನೆಯಲ್ಲಿ - ಇವರು ಶಿಕ್ಷಕರಾಗ ಬಯಸಿ ಫಲಿಸದೇ ಹೋದದ್ದು, ಇವರ ವಿವಾಹ ಮುರಿದು ಬಿದ್ದದ್ದು (ಇವರಿಗೆ ಎರಡು ಮಕ್ಕಳಿದ್ದರು) ಇವರ ಜೀವನದಲ್ಲಿ ಘಟಿತ ಘಟನೆಗಳು. ಇದರ ತರುವಾಯ ಇವರು ಪ್ಯಾರಿಸ್‌ಗೆ ಬಂದರು. ಜಾವಾದಿಂದ ಬಂದ ರಾಣಿಯಂತೆ ಮೆರೆದು, ನೃತ್ಯಗಾತಿಯಾದರು. ಓರಿಯೆಂಟಲ್ ಶೈಲಿಯ ನೃತ್ಯಗಳನ್ನು ಪ್ರದರ್ಶಿಸುತ್ತಿದ್ದರು. ಇವರ ರಂಗಮಂಚದ ಹೆಸರು (ನಾಮಾಂಕಿತ) - ಮಾತಾ ಹರಿ (ಮಲಯ್‌ನಲ್ಲಿ ಹಾಗೂ ಬಹಸಾದಲ್ಲಿ "ಸೂರ್ಯ" ಅಥವಾ "ಮುಂಜಾನೆಯ ಕಣ್ಣು" ಎಂಬರ್ಥ ಮೂಡುತ್ತದೆ). ಇವರು ನಾಯಕಸಾನಿಯೂ ಹೌದು (ಬಹುಶಃ ಹಲವು ಮಿಲಿಟರಿ ಅಧಿಕಾರಿಗಳೊಂದಿಗೆ, ರಾಜಕೀಯ ವ್ಯಕ್ತಿಗಳೊಂದಿಗೆ ವ್ಯವಹಾರಗಳಿದ್ದಿರಬಹುದು). ಮಿಸ್ ಝೆಲ್ಲೆ ಹಲವು ಫ್ರೆಂಚ್ ಹಾಗೂ ಜರ್ಮನ್ ಮಂಚಗಳನ್ನಲಂಕರಿಸಿ, ಅಂತರರಾಷ್ಟ್ರೀಯ ಕೂಟಕೃತ್ಯದಲ್ಲಿ ಕೈ ಗೊಂಬೆಯಾದರು. ಆದರೂ ಕೂಡ ಇತಿಹಾಸ ತಜ್ಞರಿಂದ ಇಂದಿಗೂ ಕೂಡ ಮಾತಾ ಹರಿಯ ಬೇಹುಗಾರಿಕಾ ಕೃತ್ಯಗಳ ನಿಜವಾದ ಸ್ವರೂಪದ ಬಗೆಗೆ ಸರಿಯಾದ ಸಮಜಾಯಿಶಿ ನೀಡಲಾಗಿಲ್ಲ. ೧೯೧೭ರಲ್ಲಿ ಇವರನ್ನು ಫ್ರಾನ್ಸ್‌ನಲ್ಲಿ ಕಟಕಟೆಯ ಮುಂದೆ ಹಾಜರುಪಡಿಸಲಾಯಿತು. ಇವರನ್ನ್ನು ಬೇಹುಗಾರಿಕೆ, ಎರಡು ಬದಿಯಲ್ಲೂ ಮಾಹಿತಿ ನೀಡುವಿಕೆ (ಜರ್ಮನಿ ಮತ್ತು ಫ್ರಾನ್ಸ್, ಎರಡಕ್ಕೂ ಮಾಹಿತಿ ರವಾನೆ) ಹಾಗೂ ವಿಶ್ವದ ಮೊದಲನೇ ಮಹಾ ಯುದ್ಧದಲ್ಲಿ ಸಾವಿರಾರು ಸಿಪಾಯಿಗಳ ಸಾವಿಗೆ ಕಾರಣರಾದ ಆರೋಪಕ್ಕೆ ಗುರಪಡಿಸಲಾಯಿತು. ಆರೋಪ ಧೃಡಪಟ್ಟು, ಇವರನ್ನು ಅಕ್ಟೋಬರ್ ೧೫, ೧೯೧೭ರಲ್ಲಿ ಗೋಲೀಬಾರಿಗೆ ಗುರಿಪಡಿಸಲಾಯಿತು. ಹೊರಗಿನ ಸಂಪರ್ಕಗಳು ಫೆಮ್‌ಬಯೋನ ಲೇಖನ Hari, Mata
1657
https://kn.wikipedia.org/wiki/%E0%B2%86%E0%B2%B0%E0%B3%8D%E0%B2%AF%E0%B2%AD%E0%B2%9F%20%28%E0%B2%89%E0%B2%AA%E0%B2%97%E0%B3%8D%E0%B2%B0%E0%B2%B9%29
ಆರ್ಯಭಟ (ಉಪಗ್ರಹ)
ಆರ್ಯಭಟ ಭಾರತದ ಮೊಟ್ಟಮೊದಲ ಕೃತಕ ಉಪಗ್ರಹದ ಹೆಸರು. ಪ್ರಾಚೀನ ಭಾರತೀಯ ಗಣಿತಜ್ಞ ಆರ್ಯಭಟನ ಗೌರವಾರ್ಥವಾಗಿ ಈ ಹೆಸರನ್ನು ಇದಕ್ಕೆ ಇಡಲಾಯಿತು. ಇದನ್ನು ಭಾರತದ ಇಸ್ರೋ ಸಂಸ್ಥೆಯು ಬೆಂಗಳೂರಿನಲ್ಲಿರುವ ತನ್ನ ಉಪಗ್ರಹ ಕೇಂದ್ರದಲ್ಲಿ ನಿರ್ಮಿಸಿತು. ಈ ಉಪಗ್ರಹವು ತನ್ನ ಅಕ್ಷದಲ್ಲಿ ಗಿರಕಿ ಹೊಡೆದು ತನ್ನ ಸ್ಥಿರತೆಯನ್ನು ಕಾಯ್ದುಕೊಳ್ಳುವ ತೆರನಾಗಿತ್ತು. ಏಪ್ರಿಲ್ ೨೧, ೧೯೭೫ ರಲ್ಲಿ ರಷ್ಯದ ಸಹಾಯದಿ೦ದ ರಷ್ಯದ ಕಪುಟ್ಸಿನ್ ಯಾರ್ ಎ೦ಬ ಉಡ್ಡಯನ ಕೇ೦ದ್ರದಿ೦ದ ಈ ಉಪಗ್ರಹವನ್ನು ಕಕ್ಷೆಗೆ ಒಯ್ಯಲಾಯಿತು. ಉಪಗ್ರಹ ೨೬ ಮುಖಗಳನ್ನು ಹೊ೦ದಿದ್ದು, ಸುಮಾರು ೧.೪ ಮೀ ವ್ಯಾಸವನ್ನು ಹೊ೦ದಿತ್ತು. ೨೪ ಮುಖಗಳ ಮೇಲೆ ಸೌರಚಾಲಿತ ವಿದ್ಯುತ್ ಕೋಶಗಳನ್ನು (ಬ್ಯಾಟರಿಗಳನ್ನು) ಅಳವಡಿಸಲಾಗಿತ್ತು. ಆರ್ಯಭಟ ಉಪಗ್ರಹದ ಮುಖ್ಯ ಉದ್ದೇಶಗಳು ಹೀಗಿದ್ದವು: ಎಕ್ಸ್-ರೇ ಖಗೋಳಶಾಸ್ತ್ರದ ಅಧ್ಯಯನ ಸೌರಭೌತಶಾಸ್ತ್ರದ (solar physics) ಅಧ್ಯಯನ ಆದರೆ ಕಕ್ಷೆಯಲ್ಲಿ ಬಿಟ್ಟು ನಾಲ್ಕೇ ದಿನಗಳಲ್ಲಿ ಆರ್ಯಭಟ ಉಪಗ್ರಹದಲ್ಲಿ ವಿದ್ಯುಚ್ಛಕ್ತಿ ವೈಫಲ್ಯ ಉ೦ಟಾಗಿ ಐದನೇ ದಿನ ಭೂಮಿಯಿ೦ದ ಉಪಗ್ರಹಕ್ಕೆ ಇದ್ದ ಸ೦ಪರ್ಕ ಕಡಿದುಹೋಯಿತು. ಫೆಬ್ರವರಿ ೧೧, ೧೯೯೨ ರಂದು ಉಪಗ್ರಹವನ್ನು ಅದರ ಕಕ್ಷೆಯಿ೦ದ ಭೂಮಿಯ ವಾತಾವರಣಕ್ಕೆ ಕುಸಿಯಿತು. ಭಾರತದ ಕೃತಕ ಉಪಗ್ರಹಗಳು
1658
https://kn.wikipedia.org/wiki/%E0%B2%86%E0%B2%B0%E0%B3%8D%E0%B2%AF%E0%B2%AD%E0%B2%9F%20%28%E0%B2%A6%E0%B3%8D%E0%B2%B5%E0%B2%82%E0%B2%A6%E0%B3%8D%E0%B2%B5%20%E0%B2%A8%E0%B2%BF%E0%B2%B5%E0%B2%BE%E0%B2%B0%E0%B2%A3%E0%B3%86%29
ಆರ್ಯಭಟ (ದ್ವಂದ್ವ ನಿವಾರಣೆ)
ಆರ್ಯಭಟ ಹೆಸರಿಗೆ ಸಂಬಂಧಪಟ್ಟಂತೆ ಕನ್ನಡ ವಿಕಿಪೀಡಿಯ.ದಲ್ಲಿ ಕೆಳಕಂಡ ಲೇಖನಗಳಿವೆ: ಆರ್ಯಭಟ (ಗಣಿತಜ್ಞ): ಐದನೇ ಶತಮಾನದಲ್ಲಿ ಜೀವಿಸಿದ್ದ ಭಾರತೀಯ ಗಣಿತಜ್ಞ ಆರ್ಯಭಟ (ಉಪಗ್ರಹ): ಭಾರತದ ಮೊದಲ ಕೃತಕ ಉಪಗ್ರಹ sa:आर्यभट: ta:ஆரியபட்டா
1661
https://kn.wikipedia.org/wiki/%E0%B2%87%E0%B2%A8%E0%B3%8D%E0%B2%B8%E0%B2%BE%E0%B2%9F%E0%B3%8D
ಇನ್ಸಾಟ್
ಇನ್ಸಾಟ್ (INSAT - Indian Satellite ಎಂಬುದರ ಸಂಕ್ಷಿಪ್ತ ರೂಪ) ಭಾರತದ ಅಂತರಿಕ್ಷ ಸಂಶೋಧನಾ ಕೇಂದ್ರವಾದ ಇಸ್ರೋದಿಂದ ನಿರ್ಮಿಸಲ್ಪಟ್ಟು ಭೂಮಿಯ ಸುತ್ತ ಕಕ್ಷೆಗೆ ಬಿಡಲಾಗುತ್ತಿರುವ ಕೃತಕ ಉಪಗ್ರಹಗಳ ಸರಣಿ. ಇನ್ಸಾಟ್ ಉಪಗ್ರಹಗಳ ಮುಖ್ಯ ಉದ್ದೇಶ ದೂರಸಂಪರ್ಕ. ೧೯೮೦ರ ದಶಕದಿಂದಲೂ ಇನ್ಸಾಟ್ ಉಪಗ್ರಹಗಳನ್ನು ಉಪಯೋಗಿಸಲಾಗಿದೆ. ಪ್ರತಿ ದಶಕದಲ್ಲಿಯೂ ಇನ್ಸಾಟ್ ಉಪಗ್ರಹಗಳ ಒಂದು ಹೊಸ ಸರಣಿ ನಿರ್ಮಾಣವಾಗುತ್ತದೆ; ಹೀಗೆ ೮೦ರ ದಶಕದಲ್ಲಿ ಇನ್ಸಾಟ್-೧ ಸರಣಿ (ಇನ್ಸಾಟ್-೧ ,ಇನ್ಸಾಟ್-೩,ಇನ್ಸಾಟ್-೪,ಇನ್ಸಾಟ್-೫ ಇತ್ಯಾದಿ), ೯೦ ರ ದಶಕದಲ್ಲಿ ಇನ್ಸಾಟ್-೨ ಸರಣಿ ನಿರ್ಮಾಣವಾದವು. ೨೦೦೦ ದಿ೦ದ ಮುಂದಕ್ಕೆ ಇನ್ಸಾಟ್-೩ ಸರಣಿ, ೨೦೧೦ ರಲ್ಲಿ ಇನ್ಸಾಟ್-೫ ಉಪಯೋಗದಲ್ಲಿದೆ.ಇನ್ಸಾಟ್ ಉಪಗ್ರಹಗಳೆಲ್ಲವೂ ಭಾರತದ ದೂರಸಂಪರ್ಕ ಉಪಗ್ರಹಗಳು. ಇವುಗಳಿಂದ ಡಿ.ಟಿ.ಎಚ್. (ನೇರ ಮನೆಗೆ ದೂರದರ್ಶನ) ಸೇವೆ ಮತ್ತು ದೂರಸಂಪರ್ಕ ಸೇವೆಗಳಿಗೆ ಮತ್ತು ಸಾಮಾನ್ಯ ದೂರದರ್ಶನ ಸೇವೆಗಳನ್ನು ಬಿತ್ತರಿಸಲು ಉಪಯೋಗಿಸಲಾಗಿದೆ. ಇನ್ಸಾಟ್ ಉಪಗ್ರಹಗಳಲ್ಲಿ ವಿವಿಧ ತರಂಗಾಂತರಗಳಲ್ಲಿ ಕಾರ್ಯನಿರ್ವಹಿಸುವ ಟ್ರಾನ್ಸ್ಪಪಾಂಡರ್ ಗಳನ್ನು ಅಳವಡಿಸಲಾಗಿದೆ. ಇವುಗಳಲ್ಲಿ 'ಸಿ' 'ಎಸ್' 'ಕ' ಮತು 'ಕು' ತರಂಗಗಳು ಪ್ರಮುಖವಾದುವು. ಉದಾಹರಣೆಗೆ ಟಾಟಾ, ಏರ್ ಟೆಲ್, ರಿಲಯೆನ್ಸ್ ಬಿಗ್ ಮತ್ತು ವಿಡಿಯೋಕಾನ್ ಸಂಸ್ಥೆಗಳು ಪ್ರಸಾರ ಮಾಡುತ್ತಿರುವ ಡಿ.ಟಿ.ಎಚ್. (ನೇರ ಮನೆಗೆ ದೂರದರ್ಶನ) ಸೇವೆಗಳು ಇನ್ಸಾಟ್ ಉಪಗ್ರಹದಿಂದ ಪ್ರಸಾರ ಮಾಡಲ್ಪಟ್ಟವಾಗಿವೆ. ೯೦ರ ದಶಕದಲ್ಲಿ ಇನ್ಸಾಟ್ ಉಪಗ್ರಹಗಳು ಸಂಗ್ರಹಿಸಿದ ಹವಾಮಾನ ಮಾಹಿತಿಯನ್ನು ಗುಪ್ತಸಂಕೇತಗಳ ಮೂಲಕ ಭಾರತಕ್ಕೆ ತಲುಪಿಸಲಾಗುತ್ತಿತ್ತು. ಇದರಿಂದ ಸುತ್ತಲ ದೇಶಗಳಿಗೆ ಈ ಮಾಹಿತಿ ದೊರೆಯುತ್ತಿರಲಿಲ್ಲ. ೧೯೯೭ ರಲ್ಲಿ ಅಮೆರಿಕದ ಅಂತರಿಕ್ಷ ಸಂಶೋಧನಾ ಕೇಂದ್ರವಾದ ನಾಸಾ ಮತ್ತು ಭಾರತ ಸರ್ಕಾರದ ನಡುವಿನ ಒಪ್ಪಂದದ ಮೇರೆಗೆ ಇತರ ಕೆಲ ದೇಶಗಳಿಗೆ ಇನ್ಸಾಟ್ ಉಪಗ್ರಹಗಳ ಮಾಹಿತಿಯನ್ನು ಒದಗಿಸಲಾಗುತ್ತಿದೆ. ಇನ್ಸಾಟ್ ಉಪಗ್ರಹಗಳ ಮುಖ್ಯ ಉದ್ದೇಶ ದೂರಸ೦ಪರ್ಕವಾದರೂ, ಪ್ರತಿ ಸರಣಿಯ ಒಂದು ಉಪಗ್ರಹಕ್ಕೆ ಭೂಮಿಯ ಸ್ಪಷ್ಟ ಚಿತ್ರ ತೆಗೆಯಬಲ್ಲ ರೇಡಿಯೋ ಉಪಕರಣವನ್ನು (VHRR - Very High Resolution Radiometer) ಅಳವಡಿಸಲಾಗುತ್ತದೆ. ಈ ಉಪಗ್ರಹದಿ೦ದ ಬರುವ ಚಿತ್ರಗಳು ಹವಾಮಾನ ವರದಿಗೆ ಅನುಕೂಲ ಮಾಡಿಕೊಟ್ಟಿವೆ. ೨೦೦೪ರಲ್ಲಿ ಹವಾಮಾನ ವರದಿಗಾಗಿಯೇ ಮೀಸಲಾದ ಮೆಟ್-ಸ್ಯಾಟ್ ಉಪಗ್ರಹವನ್ನು ಹಾರಿಬಿಡಲಾಯಿತು. ಸೇವೆಯಲ್ಲಿರುವ ಕೃತಕ ಉಪಗ್ರಹಗಳು ಇನ್ಸಾಟ್ ೪ ಸರಣಿ ಇನ್ಸಾಟ್-೪ಎ ಇನ್ಸಾಟ್-೪ಎ' ಭಾರತದಇಸ್ರೋ ಸಂಸ್ಥೆ ನಿರ್ಮಿಸಿದ ೧೨ ವರ್ಷಗಳ ಕಾಲ ದೂರಸಂಪರ್ಕ ಸಂಬಂಧಿಸಿದ ಸೇವೆ ನೀಡುವ ಉಪಗ್ರಹ. ಭಾರತೀಯ ಕಾಲಮಾನುಸಾರ ೨೨ ಡಿಸೆಂಬರ್ ೨೦೦೫ ಗುರುವಾರ ಬೆಳಗ್ಗೆ ೪.೦೩ ಗಂಟೆಗೆ ಸರಿಯಾಗಿ ಫ್ರೆಂಚ್ ಗಯಾನಾದ ಕೌರು ಉಡಾವಣಾ ಕೇಂದ್ರದಿಂದ ಎರಿಯನ್ ೫ ಪೀಳಿಗೆಯ ರಾಕೆಟ್‌ನಿಂದ ಈ ಉಪಗ್ರಹ ಉಡಾವಣೆಗೊಂಡಿತು. ಸುಮಾರು ೩೦೮೦ ಕೆಜಿ ತೂಕದ ಈ ಉಪಗ್ರಹದಲ್ಲಿ ೧೨ ಕ್ಯೂಬ್ಯಾಂಡ್ ಟ್ರಾನ್ಸ್‌ಪಾಂಡರ್‌ಗಳು ಮತ್ತು ೧೨ ಸಿ ಬ್ಯಾಂಡ್ ಟ್ರಾನ್ಸ್‌ಪಾಂಡರ್‌ಗಳಿವೆ. ಈ ಉಪಗ್ರಹದಿಂದ ಡಿಟಿಎಚ್ ದೂರದರ್ಶನ ಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಯಾಗಲಿದೆ ಎಂದು ವಿಶೇಷಜ್ಞರ ಅಭಿಪ್ರಾಯ. ಬಾಹ್ಯ ಸಂಪರ್ಕಗಳು ಇನ್ಸಾಟ್ ಉಪಗ್ರಹಗಳು ತೆಗೆದ ಕೆಲ ಚಿತ್ರಗಳು ಇನ್ಸಾಟ್ ೨-ಇ ಇನ್ಸಾಟ್ ೩-ಸಿ ಭಾರತದ ಕೃತಕ ಉಪಗ್ರಹಗಳು
1662
https://kn.wikipedia.org/wiki/%E0%B2%AD%E0%B2%BE%E0%B2%B0%E0%B2%A4%E0%B3%80%E0%B2%AF%20%E0%B2%AC%E0%B2%BE%E0%B2%B9%E0%B3%8D%E0%B2%AF%E0%B2%BE%E0%B2%95%E0%B2%BE%E0%B2%B6%20%E0%B2%B8%E0%B2%82%E0%B2%B6%E0%B3%8B%E0%B2%A7%E0%B2%A8%E0%B2%BE%20%E0%B2%B8%E0%B2%82%E0%B2%B8%E0%B3%8D%E0%B2%A5%E0%B3%86
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) () ಭಾರತದ ಅಂತರಿಕ್ಷ ಸಂಶೋಧನಾ ಸಂಸ್ಥೆ. ಇದು ಬೆಂಗಳೂರಿನಲ್ಲಿ ಮುಖ್ಯ ಕಛೇರಿಯನ್ನು ಹೊಂದಿದ್ದು ಸುಮಾರು ೧೭,೦೦೦ ಕೆಲಸಗಾರರನ್ನು ಹೊಂದಿದೆ. ಇಸ್ರೋದ ಮುಖ್ಯ ಕೇಂದ್ರಗಳು ಬೆಂಗಳೂರು, ತಿರುವನಂತಪುರ (ಕೇರಳ), ಅಹಮದಾಬಾದ್ (ಗುಜರಾತ್), ಮಹೇಂದ್ರಗಿರಿ(ತಮಿಳುನಾಡು), ಹಾಸನ(ಕರ್ನಾಟಕ) ಮತ್ತು ಶ್ರೀಹರಿಕೋಟ (ಆಂಧ್ರ ಪ್ರದೇಶ) ಗಳಲ್ಲಿ ಇವೆ. ಇಸ್ರೋ ದ ಮುಖ್ಯ ಉದ್ದೇಶ ಅಂತರಿಕ್ಷ ತಂತ್ರಜ್ಞಾನದ ಸಂಶೋಧನೆ ಮತ್ತು ಭಾರತಕ್ಕೆ ಉಪಯೋಗವಾಗುವಂತೆ ಅವುಗಳ ಅಭಿವೃದ್ಧಿ. ಇಸ್ರೋ ಸಂಸ್ಥೆ ಉಪಗ್ರಹಗಳನ್ನಲ್ಲದೇ ಉಪಗ್ರಹ ವಾಹಕಗಳನ್ನೂ ತಯಾರಿಸುತ್ತದೆ. ಇಸ್ರೋ ಸಂಸ್ಥೆಯು ಪ್ರತಿ ವರ್ಷ ಸುಮಾರು ೧೫೦ ಇಂಜಿನಿಯರ್ ಗಳನ್ನು ಇಂಜಿನಿಯರ್-"ಎಸ್.ಸಿ" ಕೆಲಸಕ್ಕೆ ತೆಗೆದುಕೊಳ್ಳುತ್ತದೆ. ಇದಕ್ಕಾಗಿ ಅದು ಒಂದು ಪರೀಕ್ಷೆಯನ್ನು ಮತ್ತು ಸಂದರ್ಶನವನ್ನು ನಡೆಸುತ್ತದೆ. ಇದು ಒಂದು ಪಾರದರ್ಶಕವಾದ ಕ್ರಿಯೆಯಾಗಿದ್ದು ಯಾವುದೇ ಗೋಜಲುಗಳಿಗೆ ಇಲ್ಲಿ ಅವಕಾಶವಿಲ್ಲ. ಪ್ರತಿಭೆಯಿರುವವರಿಗೆ ಮಾತ್ರ ಕೆಲಸ. ತನ್ನ ಕೆಳಹುದ್ದೆಗಳಿಗೂ (ಟ್ರೇಡ್ಸ್ ಮೆನ್ ಮತ್ತು ಟೆಕ್ನೀಶಿಯನ್) ಇದೆ ಪ್ರಕ್ರಿಯೆಯನ್ನು ಇದು ನಡೆಸುತ್ತದೆ. ಇಂಜಿನಿಯರ್- ಎಸ್.ಸಿ- ವಿದ್ಯಾರ್ಹತೆ- ಬಿ.ಇ >೭೦% (ಇಲೆಕ್ಟ್ರಾನಿಕ್ಸ್, ಇಲೆಕ್ಟ್ರಿಕಲ್, ಮೆಕ್ಯಾನಿಕಲ್, ಕೆಮಿಕಲ್, ಕಂಪ್ಯೂಟರ್ ಸ್ಯನ್ಸ್, ಸಿವಿಲ್) ಟೆಕ್ನೀಶಿಯನ್ ವಿದ್ಯಾರ್ಹತೆ- ಡಿಪ್ಲಮೋ >೭೦% (ಇಲೆಕ್ಟ್ರಾನಿಕ್ಸ್, ಇಲೆಕ್ಟ್ರಿಕಲ್, ಮೆಕ್ಯಾನಿಕಲ್, ಸಿವಿಲ್) ಟ್ರೇಡ್ಸ್ ಮೆನ್ ವಿದ್ಯಾರ್ಹತೆ- ಐ.ಟಿ.ಐ. >೭೦% (ಫಿಟ್ಟರ್, ಇಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಇಲೆಕ್ಟ್ರಿಕಲ್ ಮುಂತಾದುವು) ಚರಿತ್ರೆ ಭಾರತ ಅಣುಶಕ್ತಿ ಇಲಾಖೆಯ ಅಡಿಯಲ್ಲಿ ಇಸ್ರೋ ಅನ್ನು ೧೯೬೯ ರಲ್ಲಿ ಸ್ಥಾಪಿಸಲಾಯಿತು. ೧೯೭೫ ರಲ್ಲಿ ಮೊದಲ ಭಾರತೀಯ ಉಪಗ್ರಹ ಆರ್ಯಭಟ ರಷ್ಯಾದ ರಾಕೆಟ್ ಒಂದರ ಮೂಲಕ ಕಕ್ಷೆಗೆ ಹಾರಿತು. ಉಪಗ್ರಹವೊಂದರ ಮೊದಲ ಭಾರತೀಯ ಉಡಾವಣೆ ೧೯೮೦ ರಲ್ಲಿ ನಡೆಯಿತು. ೧೯೭೨ ರಲ್ಲಿ ಅಂತರಿಕ್ಷ ಸಮಿತಿ ಮತ್ತು ಅಂತರಿಕ್ಷ ಇಲಾಖೆಗಳ ಸ್ಥಾಪನೆಯ ನಂತರ ಇಸ್ರೋ ದ ಮೇಲ್ವಿಚಾರಣೆಯನ್ನು ಈ ಸಂಸ್ಥೆಗಳಿಗೆ ವರ್ಗಾಯಿಸಲಾಯಿತು... ಮೈಲಿಗಲ್ಲುಗಳು ೧೯೬೯: ಇಸ್ರೋದ ಸ್ಥಾಪನೆ ೧೯೭೨: ಅಂತರಿಕ್ಷ ಇಲಾಖೆಯ ಸ್ಥಾಪನೆ ೧೯೭೫: ಆರ್ಯಭಟ ಉಪಗ್ರಹದ ಉಡಾವಣೆ ೧೯೭೯: ಪ್ರಾಯೋಗಿಕ ಉಪಗ್ರಹ ಭಾಸ್ಕರ-೧ ರ ಉಡಾವಣೆ. ಎಸ್‍ಎಲ್‍ವಿ-೩ ರಾಕೆಟ್‍ನ ಮೂಲಕ ರೋಹಿಣಿ ಉಪಗ್ರಹದ ಉಡಾವಣೆ ವಿಫಲ ೧೯೮೦: ರೋಹಿಣಿ ಉಪಗ್ರಹದ ಯಶಸ್ವಿ ಉಡಾವಣೆ ೧೯೮೧: ಆಪಲ್ ಮತ್ತು ಭಾಸ್ಕರ-೨ ಉಪಗ್ರಹಗಳ ಉಡಾವಣೆ ೧೯೮೨: ಇನ್ಸಾಟ್ ಸರಣಿಯ ಮೊದಲ ಉಪಗ್ರಹ ಇನ್ಸಾಟ್-೧ಎ ಉಡಾವಣೆ ೧೯೮೪: ಇಂಡೋ-ರಷ್ಯನ್ ಅಂತರಿಕ್ಷ ಯಾನ. ರಾಕೇಶ್ ಶರ್ಮಾ ಅಂತರಿಕ್ಷಕ್ಕೆ ಸಂಚರಿಸಿದ ಮೊದಲ ಭಾರತೀಯರಾದರು ೧೯೯೨: ಇನ್ಸಾಟ್ ಸರಣಿಯ ಇನ್ಸಾಟ್-೨ಎ, ಸಂಪೂರ್ಣವಾಗಿ ಭಾರತದಲ್ಲಿಯೇ ನಿರ್ಮಿತ ಮೊದಲ ಉಪಗ್ರಹ) ಉಡಾವಣೆ ೧೯೯೩: ಪಿಎಸ್‍ಎಲ್‍ವಿ ರಾಕೆಟ್ ನ ಉಡಾವಣೆ ವಿಫಲ ೧೯೯೪: ಪಿಎಸ್‍ಎಲ್‍ವಿ ರಾಕೆಟ್ ನ ಎರಡನೆಯ ಉಡಾವಣೆ ಯಶಸ್ವಿ (ಐಆರ್‍ಎಸ್-ಪಿ೨ ಉಪಗ್ರಹವನ್ನು ಹೊತ್ತು) ೨೦೦೪: ಶೈಕ್ಷಣಿಕ ಉಪಗ್ರಹ ಎಡುಸ್ಯಾಟ್ ಅನ್ನು ಹೊತ್ತ ಜಿಎಸ್‍ಎಲ್‍ವಿ ರಾಕೆಟ್ ನ ಮೊದಲ ಉಡಾವಣೆ ಯಶಸ್ವಿ ೨೦೧೩:ನವೆಂಬರ್‌ ೫ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಧ್ರುವಗಾಮಿ ರಾಕೆಟ್‌ ಮೂಲಕ ‘ಮಂಗಳಯಾನ’ (ಅಂತರಿಕ್ಷ ನೌಕೆ)ವನ್ನು ಉಡಾವಣೆ ಮಾಡಲಾಯಿ ಬಾಹ್ಯಾಕಾಶದಲ್ಲಿ ಇಸ್ರೋ ಸಾಧನೆಗಳು: ಹೆಚ್ಚಿನ ವಿವರ 1962 ರಲ್ಲಿ ಪರಮಾಣು ಇಂಧನ ಇಲಾಖೆಯಿಂದ ಬಾಹ್ಯಾಕಾಶ ಸಂಶೋಧನಾ ಇಲಾಖೆ ಸ್ಥಾಪನೆ. ಕೇರಳದ ಥಂಬಾ ರಾಕೆಟ್ ಉಡಾವನಾ ಕೇಂದ್ರದ ಕೆಲಸ ಆರಂಭ. 1963 ನವಂಬರ್ 21, ಟಿಇಅರ್‘ಎಲ್‘ಎಸ್‘ನಿಂದಮೊದಲ ರಾಕೆಟ್‘ ಉಡಾವಣೆ. 1965 ಥಂಬಾದಲ್ಲಿ ಬಾಹ್ಯಾಕಾಶ ವಿಜ್ಞಾನ ತಂತ್ರ ಜ್ಞಾನ ಕೆಂದ್ರ ಸ್ಥಾಪನೆ. 1969 ಆಗಸ್ಟ 15, ಪರಮಾಣು ಇಂಧನ ಇಲಾಖೆಯಿಂದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸ್ಥಾಪನೆ. 1972 ಆಂದ್ರ ಪ್ರದೇಶದ ಶ್ರೀಹರಿಕೋಟಾದಲ್ಲಿ ಸತೀಶ್‘ಧವನ್‘ಬಾಹ್ಯಾಕಾಶ ಕೇಂದ್ರ ಸ್ಥಾಪನೆ. 1975 ಏಪ್ರಿಲ್ 19, ದೂರದರ್ಶನ ಪ್ರಸಾರ ಉದ್ದೇಶ ಹೊಂದಿದ ಮೊದಲ ಉಪಗ್ರಹ ಆರ್ಯಭಟ ಉಡಾವಣೆ. 1979 ಭೂ ವೀಕ್ಷಣಾ ಪ್ರಾಯೋಗಿಕ ಉಪಗ್ರಹ ಭಾಸ್ಕರ-1 ಉಡಾವಣೆ. 1984 ಭಾರತದ ಮೊದಲ ಗಗನ ಯಾನಿ ರಾಕೇಶ್ ಶರ್ಮಾ ಅವರಿಂದ ರಷ್ಯಾ ಬಾಹ್ಯಾಕಾಶ ನಿಲ್ದಾಣ ಸಲ್ಯೂಟ್` 7ರಲ್ಲಿ ಎಂಟು ದಿನ ವಾಸ. 1988 ರಷ್ಯಾದ ರಾಕೆಟ್‘ಮೂಲಕ ಭಾರತದ ದೂರ ಸಂವೇದಿ ಐಆರ್‘ಎಸ್‘ (IRS)ಉಪಗ್ರಹ ಉಡಾವಣೆ. 1993 ಮೊದಲ ದೃವಗಾಮಿ ಉಪಗ್ರಹ-ಉಡಾವಣಾ ವಾಹಕ ಪಿಎಸ್‘ಎಲ್‘ವಿ (PSLV)ಅಭಿವೃದ್ಧಿ ; ಯೋಜನೆ ವಿಫಲ. 1997ಉಪಗ್ರಹ-ಉಡಾವಣಾ ವಾಹಕ ಪಿಎಸ್‘ಎಲ್‘ವಿ ಮೊದಲ ಉಡಾವಣೆ. (ಐಅರ್‘ಎಸ್‘-1ಡಿ=IRS-1Dಉಪಗ್ರಹ) 2001 ಜಿಸಾಟ್‘-1 ಉಪಗ್ರಹ ಹೊತ್ತ ಭೂ ಸ್ಥಿರ ಉಪಗ್ರಹ ಹೊತ್ತ ಭೂಸ್ಥಿರ ಉಪಗ್ರಹ ಉಡಾವಣಾ ವಾಹಕದ (ಜಿಎಸ್‘ಎಲ್‘ವಿ-GSLV) ಯಶಸ್ವಿ ಉಡಾವಣೆ. 2008ಅಕ್ಟೋಬರ್‘೨೨22 ಚಂದ್ರಯಾನ 1 ರ ನೌಕೆಯನ್ನು ಹೊತ್ತ ಪಿಎಸ್‘ಎಲ್‘ವಿ. -ಎಕ್ಷ್‘ಎಲ್‘ (PSLV_XL) ಉಡಾವಣೆ. 2013 ನವೆಂಬರ್‘ 5 , ಸ್ವದೇಶಿ ನಿರ್ಮಿತ ಮಂಗಳ ನೌಕೆಯನ್ನು ಹೊತ್ತ ಪಿಎಸ್‘ಎಲ್‘ವಿ. ಸಿ 25(PSLV_C25) ಉಡಾವಣೆ.. 2014 ಜನವರಿ 5 , ಸ್ವದೇಶಿ ನಿರ್ಮಿತ ಕ್ರಯೋಜನಿಕ್‘ತಂತ್ರಜ್ಞಾನ ಒಳಗೊಂಡ ಜಿಎಸ್‘ಎಲ್‘ವಿ-ಡಿ5 (GSLV-D25) ಉಡಾವಣೆ ಸ್ಕ್ರಾಮ್‌ಜೆಟ್‌ ಎಂಜಿನ್‌ ಯಶಸ್ವಿ ಪರೀಕ್ಷೆ 29 Aug, 2016 ರಾಕೆಟ್‌ ತಂತ್ರಜ್ಞಾನದಲ್ಲಿ ಸೂಪರ್‌ ಸಾನಿಕ್ ಕಂಬುಷನ್‌ ರಾಮ್‌ಜೆಟ್ (ಸ್ಕ್ರಾಮ್‌ಜೆಟ್‌) ಎಂಜಿನ್‌ ಈವರೆಗಿನ ಅತ್ಯಾಧುನಿಕ ತಂತ್ರಜ್ಞಾನವೆನಿಸಿದೆ. ಅಮೆರಿಕ, ರಷ್ಯಾ ಮತ್ತು ಐರೋಪ್ಯ ಒಕ್ಕೂಟವಷ್ಟೇ ಈ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಿವೆ. ಈಗ ಇದೇ ಸ್ವರೂಪದ ಎಂಜಿನ್‌ ಅನ್ನು ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಿ, ಯಶಸ್ವಿ ಪರೀಕ್ಷೆ ನಡೆಸುವ ಮೂಲಕ ಭಾರತವೂ ಈ ರಾಷ್ಟ್ರಗಳ ಸಾಲಿಗೆ ಸೇರಿದೆ. ರಾಕೆಟ್‌ಗಳ ಎಂಜಿನ್‌ಗಳಲ್ಲಿ ಸಾಮಾನ್ಯವಾಗಿ ಇಂಧನವಾಗಿ ಜಲಜನಕವನ್ನು ಹಾಗೂ ದಹನಶೀಲ ಉತ್ಕರ್ಷಣಕಾರಿಯಾಗಿ (ಆಕ್ಸಿಡೈಸ್) ಆಮ್ಲಜನಕವನ್ನು ಬಳಸಲಾಗುತ್ತದೆ. ಸಾಮಾನ್ಯ ರಾಕೆಟ್‌ಗಳಲ್ಲಿ ಜಲಜನಕ ಮತ್ತು ಆಮ್ಲಜನಕ ಎರಡನ್ನೂ ಸಂಗ್ರಹಿಸಿ ಇಡಲಾಗಿರುತ್ತದೆ. ರಾಕೆಟ್‌ಗಳು ಇವೆರಡನ್ನೂ ಹೊತ್ತುಕೊಂಡು ಹೋಗುತ್ತವೆ. ಸ್ಕ್ರಾಮ್‌ಜೆಟ್‌ ಎಂಜಿನ್ ವಾತಾವರಣದಲ್ಲಿರುವ ಆಮ್ಲಜನಕವನ್ನೇ ಹೀರಿಕೊಂಡು ಕೆಲಸ ಮಾಡುವುದರಿಂದ ಕಾರ್ಯಾಚರಣೆಯ ವೆಚ್ಚದಲ್ಲಿ ಭಾರಿ ಇಳಿಕೆ ಆಗುತ್ತದೆ. ಇಸ್ರೊ ತನ್ನ ಮರುಬಳಕೆ ಉಡಾವಣಾ ವಾಹನಗಳಲ್ಲಿ ಈ ಎಂಜಿನ್‌ಗಳನ್ನು ಬಳಸಲು ಉದ್ದೇಶಿಸಿದೆ. ಇದನ್ನು ಇನ್ನಷ್ಟು ಸುಧಾರಣೆ ಮಾಡಬೇಕಿದೆ ಎಂದು ಇಸ್ರೊ ಹೇಳಿದೆ. ಈ ಪರೀಕ್ಷೆ ಯಶಸ್ವಿಯಾಗಿರುವುದರಿಂದ ಸ್ಕ್ರಾಮ್‌ಜೆಟ್‌ ಎಂಜಿನ್‌ ಇರುವ ರಾಕೆಟ್‌ಗಳ ಅಭಿವೃದ್ಧಿಯಲ್ಲಿ ಇಸ್ರೊ ಮಹತ್ವದ ಮೈಲುಗಲ್ಲು ಸಾಧಿಸಿದಂತಾಗಿದೆ. ಇಸ್ರೊ ಸಾಧನಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಮ್ಯಾಕ್‌ 6: ಶಬ್ದದ ವೇಗವನ್ನು ಸೂಪರ್‌ಸಾನಿಕ್ ಎಂದು ಕರೆಯಲಾಗುತ್ತದೆ. ಸಮುದ್ರದ ಮೇಲ್ಮೈ ಉಷ್ಣಾಂಶದಲ್ಲಿ (ಸಾಮಾನ್ಯವಾಗಿ 15 ಡಿಗ್ರಿ ಸೆಲ್ಸಿಯಸ್) ಶಬ್ದ ಪ್ರತಿ ಗಂಟೆಗೆ 1225 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಉಷ್ಣಾಂಶ ಬದಲಾದಂತೆ ಈ ವೇಗದಲ್ಲೂ ತುಸು ಬದಲಾಗುತ್ತದೆ. ಬದಲಾದ ಈ ವೇಗವನ್ನು ‘ಮ್ಯಾಕ್‌’ ಎಂದು ಕರೆಯಲಾಗುತ್ತದೆ. ಶಬ್ದದ ವೇಗವನ್ನು ಮ್ಯಾಕ್‌ 1 ಎಂದು ಕರೆಯಲಾಗುತ್ತದೆ. ಒಟ್ಟಾರೆ ಶಬ್ದಕ್ಕಿಂತಲೂ ಹೆಚ್ಚಿನ ವೇಗವನ್ನು ಹೈಪರ್‌ಸಾನಿಕ್‌ ಎಂದು ಕರೆಯಲಾಗುತ್ತದೆ. ಪರೀಕ್ಷೆ ಉದ್ದೇಶ ಹೈಪರ್‌ ಸಾನಿಕ್‌ ವೇಗದಲ್ಲಿ ಸ್ಕ್ರಾಮ್‌ಜೆಟ್‌ ಎಂಜಿನ್‌ ಆಮ್ಲಜನಕ ಹೀರಿಕೊಂಡು, ಜಲಜನಕದೊಂದಿಗೆ ಸರಿಯಾಗಿ ಮಿಶ್ರಣವಾಗುತ್ತದೆಯೇ ಎಂಬುದರ ಪರೀಕ್ಷೆ; ಆ ವೇಗದಲ್ಲಿ ಇಂಧನದ ಮಿಶ್ರಣಕ್ಕೆ ಕಿಡಿ ಹೊತ್ತಿ, ಇಂಧನ ದಹಿಸಲು ಆರಂಭಿಸುತ್ತದೆಯೇ ಎಂಬುದರ ಪರಿಶೀಲನೆ; ಸಂಗ್ರಹದಲ್ಲಿರುವ ಅಷ್ಟೂ ಇಂಧನ ಮುಗಿಯುವವರೆಗೆ ದಹನ ಕ್ರಿಯೆ ಮುಂದುವರೆಯುತ್ತದೆಯೇ ಎಂಬುದರ ಪರೀಕ್ಷೆ ಪರೀಕ್ಷೆ ವಿವರ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಿಗ್ಗೆ 6ಗಂಟೆಗೆ ಉಡಾವಣೆ ಇಸ್ರೊದ ಸುಧಾರಿತ ತಂತ್ರಜ್ಞಾನ ವಾಹನ (ಎಟಿವಿ) 02 ಬಳಸಿ ಪರೀಕ್ಷೆ ಎಟಿವಿಯಲ್ಲಿ ಎರಡು ಹಂತದ ಎಂಜಿನ್ ಮೊದಲ ಎಂಜಿನ್‌ ಮೂಲಕ ಎಟಿವಿ ಉಡಾವಣೆ ತುಸು ಸಮಯದ ನಂತರ 2ನೇ ಎಂಜಿನ್‌ ಕಾರ್ಯನಿರ್ಹಹಣೆ ನಂತರದ ಹಂತದಲ್ಲಿ ಎರಡು ಸ್ಕ್ರಾಮ್‌ಜೆಟ್‌ ಎಂಜಿನ್‌ಗಳ ದಹನ ಕ್ರಿಯೆ ಆರಂಭ ಇತರೆ ವಿವರ ಪರೀಕ್ಷಾರ್ಥ ಉಡಾವಣೆ ವೇಳೆ ಸ್ಕ್ರಾಮ್‌ಜೆಟ್‌ ಎಂಜಿನ್‌ ಸೇರಿ ಎಟಿವಿ 02ನ ತೂಕ :3277 ಕೆ.ಜಿ. ಸ್ಕ್ರಾಮ್‌ಜೆಟ್‌ ಎಂಜಿನ್‌ಗಳು ಕಾರ್ಯನಿರ್ವಹಿಸಿದ ಅವಧಿ :5 ಸೆಕೆಂಡ್* ಪರೀಕ್ಷೆಯ ಅವಧಿ :300 ಸೆಕೆಂಡ್‌* ಉಡಾವಣಾ ಸ್ಥಳದಿಂದ ಬಂಗಾಳ ಕೊಲ್ಲಿಯಲ್ಲಿ ಎಟಿವಿ ಬಿದ್ದ ಸ್ಥಳದ ನಡುವಿನ ಅಂತರ :320 ಕಿ.ಮೀ* ಕಾರ್ಯಾಚರಣೆಯಲ್ಲಿ ಎಟಿವಿ ಮುಟ್ಟಿದ ವೇಗ :7408 ಕಿ.ಮೀ/ಮ್ಯಾಕ್‌ 6 ಮ್ಯಾಕ್‌ 6: ಶಬ್ದದ ವೇಗವನ್ನು ಸೂಪರ್‌ಸಾನಿಕ್ ಎಂದು ಕರೆಯಲಾಗುತ್ತದೆ. ಸಮುದ್ರದ ಮೇಲ್ಮೈ ಉಷ್ಣಾಂಶದಲ್ಲಿ (ಸಾಮಾನ್ಯವಾಗಿ 15 ಡಿಗ್ರಿ ಸೆಲ್ಸಿಯಸ್) ಶಬ್ದ ಪ್ರತಿ ಗಂಟೆಗೆ 1225 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಉಷ್ಣಾಂಶ ಬದಲಾದಂತೆ ಈ ವೇಗದಲ್ಲೂ ತುಸು ಬದಲಾಗುತ್ತದೆ. ಬದಲಾದ ಈ ವೇಗವನ್ನು ‘ಮ್ಯಾಕ್‌’ ಎಂದು ಕರೆಯಲಾಗುತ್ತದೆ. ಶಬ್ದದ ವೇಗವನ್ನು ಮ್ಯಾಕ್‌ 1 ಎಂದು ಕರೆಯಲಾಗುತ್ತದೆ. ಒಟ್ಟಾರೆ ಶಬ್ದಕ್ಕಿಂತಲೂ ಹೆಚ್ಚಿನ ವೇಗವನ್ನು ಹೈಪರ್‌ಸಾನಿಕ್‌ ಎಂದು ಕರೆಯಲಾಗುತ್ತದೆ. ಪರೀಕ್ಷೆ ಉದ್ದೇಶ ಹೈಪರ್‌ ಸಾನಿಕ್‌ ವೇಗದಲ್ಲಿ ಸ್ಕ್ರಾಮ್‌ಜೆಟ್‌ ಎಂಜಿನ್‌ ಆಮ್ಲಜನಕ ಹೀರಿಕೊಂಡು, ಜಲಜನಕದೊಂದಿಗೆ ಸರಿಯಾಗಿ ಮಿಶ್ರಣವಾಗುತ್ತದೆಯೇ ಎಂಬುದರ ಪರೀಕ್ಷೆ; ಆ ವೇಗದಲ್ಲಿ ಇಂಧನದ ಮಿಶ್ರಣಕ್ಕೆ ಕಿಡಿ ಹೊತ್ತಿ, ಇಂಧನ ದಹಿಸಲು ಆರಂಭಿಸುತ್ತದೆಯೇ ಎಂಬುದರ ಪರಿಶೀಲನೆ; ಸಂಗ್ರಹದಲ್ಲಿರುವ ಅಷ್ಟೂ ಇಂಧನ ಮುಗಿಯುವವರೆಗೆ ದಹನ ಕ್ರಿಯೆ ಮುಂದುವರೆಯುತ್ತದೆಯೇ ಎಂಬುದರ ಪರೀಕ್ಷೆ ಪರೀಕ್ಷೆ ವಿವರ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಿಗ್ಗೆ 6ಗಂಟೆಗೆ ಉಡಾವಣೆ ಇಸ್ರೊದ ಸುಧಾರಿತ ತಂತ್ರಜ್ಞಾನ ವಾಹನ (ಎಟಿವಿ) 02 ಬಳಸಿ ಪರೀಕ್ಷೆ ಎಟಿವಿಯಲ್ಲಿ ಎರಡು ಹಂತದ ಎಂಜಿನ್ ಮೊದಲ ಎಂಜಿನ್‌ ಮೂಲಕ ಎಟಿವಿ ಉಡಾವಣೆ ತುಸು ಸಮಯದ ನಂತರ 2ನೇ ಎಂಜಿನ್‌ ಕಾರ್ಯನಿರ್ಹಹಣೆ ನಂತರದ ಹಂತದಲ್ಲಿ ಎರಡು ಸ್ಕ್ರಾಮ್‌ಜೆಟ್‌ ಎಂಜಿನ್‌ಗಳ ದಹನ ಕ್ರಿಯೆ ಆರಂಭ ಇತರೆ ವಿವರ ಪರೀಕ್ಷಾರ್ಥ ಉಡಾವಣೆ ವೇಳೆ ಸ್ಕ್ರಾಮ್‌ಜೆಟ್‌ ಎಂಜಿನ್‌ ಸೇರಿ ಎಟಿವಿ 02ನ ತೂಕ :3277 ಕೆ.ಜಿ. ಸ್ಕ್ರಾಮ್‌ಜೆಟ್‌ ಎಂಜಿನ್‌ಗಳು ಕಾರ್ಯನಿರ್ವಹಿಸಿದ ಅವಧಿ :5 ಸೆಕೆಂಡ್* ಪರೀಕ್ಷೆಯ ಅವಧಿ :300 ಸೆಕೆಂಡ್‌* ಉಡಾವಣಾ ಸ್ಥಳದಿಂದ ಬಂಗಾಳ ಕೊಲ್ಲಿಯಲ್ಲಿ ಎಟಿವಿ ಬಿದ್ದ ಸ್ಥಳದ ನಡುವಿನ ಅಂತರ :320 ಕಿ.ಮೀ* ಕಾರ್ಯಾಚರಣೆಯಲ್ಲಿ ಎಟಿವಿ ಮುಟ್ಟಿದ ವೇಗ :7408 ಕಿ.ಮೀ/ಮ್ಯಾಕ್‌ 6 100th Consecutively Successful Launch of Sounding Rocket RH-200 from TERLS ISRO successfully test launches scramjet rocket engine ಸ್ಕ್ರಾಮ್‌ಜೆಟ್‌ ಎಂಜಿನ್‌ ಯಶಸ್ವಿ ಪರೀಕ್ಷೆ ಇಸ್ರೊದಿಂದ ‘ಶುಕ್ರ ಯಾನ’ ಯೋಜನೆ 20 Apr, 2017 ದಿ.೧೯-೪-೨೦೧೭ ರಂದು ಶುಕ್ರ ಗ್ರಹದ ವೈಜ್ಞಾನಿಕ ಅಧ್ಯಯನಕ್ಕೆ ಬಾಹ್ಯಾಕಾಶ ನೌಕೆ ಕಳುಹಿಸುವ ‘ಶುಕ್ರ ಯಾನ’ ಯೋಜನೆಯನ್ನು ಇಸ್ರೋ ಅಧಿಕೃತವಾಗಿ ಪ್ರಕಟಿಸಿದೆ. ದೇಶದ ವಿವಿಧ ಪ್ರತಿಷ್ಠಿತ ವಿಜ್ಞಾನ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಶುಕ್ರ ಯೋಜನೆಯಲ್ಲಿ ತೊಡಗಿಸಿಕೊಳ್ಳಲು ಇಸ್ರೋ ಕರೆ ನೀಡಿದೆ. ಇಸ್ರೋ ನಿರ್ದೇಶಕ ದೇವಿಪ್ರಸಾದ್‌ ಕಾರ್ಣಿಕ್‌, ‘ಶುಕ್ರ ಯೋಜನೆ ಕುರಿತ ಅಧಿಕೃತ ಘೋಷಣೆ ಇದಾಗಿದೆ. ವೈಜ್ಞಾನಿಕ ಅಧ್ಯಯನಕ್ಕೆ ಅಗತ್ಯವಿರುವ ಪೇಲೋಡ್‌ಗಳನ್ನು ವಿಜ್ಞಾನ ಸಂಸ್ಥೆಗಳು ಅಭಿವೃದ್ಧಿಪಡಿಸಬೇಕಾಗಿದೆ’ ಎಂದರು. ಈ ಯೋಜನೆ ಕಾರ್ಯಗತಗೊಳಿಸಲು ಕೆಲವು ವರ್ಷಗಳೇ ಬೇಕಾಗುತ್ತದೆ. ಒಂದೆರಡು ವರ್ಷಗಳಲ್ಲಿ ಆಗುವ ಕೆಲಸವಲ್ಲ ಎಂದು ಅವರು ಹೇಳಿದರು. ಆಕಾಶಯಾನ ನೌಕಾ ವಾಹಕ ಇಸ್ರೊ ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಭೂಸ್ಥಿರ ಉಪಗ್ರಹ ಉಡಾವಣಾ ವಾಹನ (ಜಿಎಸ್‌ಎಲ್‌ವಿ) ಮಾರ್ಕ್ 3, 200 ಏಷ್ಯಾ ಆನೆಗಳಷ್ಟು (ಏಷ್ಯಾ ಆನೆಗಳ ಸರಾಸರಿ ತೂಕ 3ಟನ್‌) ತೂಕವಿದೆ. ಜಿಎಸ್‌ಎಲ್‌ವಿ ಮಾರ್ಕ್ 3 ಎಂಬ ಹೆಸರಿನ 640 ಟನ್ ತೂಕದ ಉಡಾವಣಾ ವಾಹನವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಭಿವೃದ್ಧಿಪಡಿಸಿದೆ. ಮಾನವಸಹಿತ ಬಾಹ್ಯಾಕಾಶ ಯಾನಕ್ಕಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಇಸ್ರೊ ಈವರೆಗೆ ಅಭಿವೃದ್ಧಿ ಪಡಿಸಿದ ಅತ್ಯಂತ ತೂಕದ ರಾಕೆಟ್‌ ಎನಿಸಿದೆ. ‘ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಕ್ರಯೋಜೆನಿಕ್ ಎಂಜಿನ್ ಇರುವ ಮಾರ್ಕ್‌ 3, ಭೂಸಮನ್ವಯ ಕಕ್ಷೆಗೆ 4 ಟನ್‌ ತೂಕದ ಉಪಗ್ರಹಗಳನ್ನು ಒಯ್ಯುವ ಸಾಮರ್ಥ್ಯ ಹೊಂದಿದೆ. ಈ ಎಂಜಿನ್‌ನ ಪರೀಕ್ಷೆ ಈಗಾಗಲೇ ಯಶಸ್ವಿಯಾಗಿ ನಡೆದಿದೆ. ಆದರೆ ಮಾರ್ಕ್‌ 3ನಲ್ಲಿ ಅಳವಡಿಸಿ, ಮತ್ತೊಮ್ಮೆ ಪರೀಕ್ಷೆ ನಡೆಸಬೇಕಿದೆ’ ಎಂದು ಇಸ್ರೊ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಹೇಳಿದ್ದಾರೆ. ಜಿಸ್ಯಾಟ್‌–17 ಉಪಗ್ರಹ ಯಶಸ್ವಿ ಉಡಾವಣೆ 29 ಜೂನ್, 2017; ಜಿಸ್ಯಾಟ್‌–17 ದೂರಸಂಪರ್ಕ ಉಪಗ್ರಹವನ್ನು ಏರಿಯಾನ್‌–5 ವಿಎ–238 ಮೂಲಕ, ಕೌರೌನ ಗಯಾನಾ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಇಸ್ರೋದಿಂದ ಈಗಾಗಲೇ ಕಕ್ಷೆ ಸೇರಿರುವ 17 ದೂರಸಂಪರ್ಕ ಉಪಗ್ರಹಗಳ ಜತೆ ಇದು ಕಾರ್ಯನಿರ್ವಹಿಸಲಿದೆ.ದೇಶದ ನೂತನ ದೂರಸಂಪರ್ಕ ಉಪಗ್ರಹ ಜಿಸ್ಯಾಟ್‌–17 ಅನ್ನು ಫ್ರೆಂಚ್‌ ಗಾಯಾನದ ಕೌರೌ ಉಪಗ್ರಹ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಉಪಗ್ರಹವನ್ನು ಏರಿಯಾನ್‌–5 ವಿಎ–238 ಉಡಾವಣಾ ವಾಹಕದ ಮೂಲಕ 28/29 ಜೂನ್, 2017ಬುಧವಾರ ತಡರಾತ್ರಿ 2.31ಕ್ಕೆ ಉಡಾವಣೆ ಮಾಡಲಾಗಿದೆ. ಕಳೆದ ಒಂದು ತಿಂಗಳಿನ ಅವಧಿಯಲ್ಲಿ ಇಸ್ರೋದಿಂದ ಉಡಾವಣೆಗೊಂಡ ಮೂರನೇ ಉಪಗ್ರಹ ಇದಾಗಿದೆ. ಇದಕ್ಕೂ ಮುನ್ನ ಜಿಎಸ್‌ಎಲ್‌ವಿ ಎಂಕೆ–3 ಹಾಗೂ ಪಿಎಸ್‌ಎಲ್‌ವಿ ಸಿ–38 ಉಪಗ್ರಹಗಳನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗಿತ್ತು. ಜಿಸ್ಯಾಟ್‌–17 ಒಟ್ಟು 3,477 ಕೆ.ಜಿ ತೂಕವಿದೆ. ಹವಾಮಾನ ದತ್ತಾಂಶ, ಉಪಗ್ರಹ ಆಧಾರಿತ ಹುಡುಕಾಟದ ಸೇವೆಗೆ ಇದು ಬಳಕೆ ಆಗಲಿದೆ ಎಂದು ಇಸ್ರೊ ಹೇಳಿದೆ. ನೋಡಿ ಇಸ್ರೊ ಕಕ್ಷೆಯ ವಾಹನ ಎಚ್ಎಎಲ್ ತೇಜಸ್ಇದಕ್ಕೆ -'ಎಚ್.ಎ.ಎಲ್ -ಲಘು ಯುದ್ಧ ವಿಮಾನ ೨೦೧೩-೨ನೆ ಹಂತ' ಸೇರಿಸಿದೆ. ಜಿ.ಎಸ್.ಎಲ್.ವಿಡಿ೫ - ರಾಕೆಟ್ - ಕೃತಕ ಉಪಗ್ರಹ ವಾಹಕ- ಎಚ್ಎಎಲ್ ತೇಜಸ್--ಹೆಚ್ಎಎಲ್ ತೇಜಸ್ ಯುದ್ಧ ವಿಮಾನ ಎಸ್. ನಂಬಿ ನಾರಾಯಣನ್-ಉಪಗ್ರಹ ಉಡಾವಣೆಗೆ ಕ್ರಯೋಜನಿಕ್ ಎಂಜಿನ ತಂತ್ರಜ್ಞಾನ ಸಂಶೋದನೆ ಮಾಡಿದ ವಿಜ್ಞಾನಿ. *ಮಂಗಳಯಾನ ಭೂಸ್ಥಾಯೀ ಉಪಗ್ರಹ ಉಡ್ಡಯನ ವಾಹನ-GSLV ವಿಜ್ಞಾನ ಇಸ್ರೋಭೇಟಿ :ಸಂಸ್ಥೆಗಳು ರೂಪಿಸುವ ಸಂಸ್ಕಾರ: ಮಾನವೀಯ ಗುಣದ ವಿಜ್ಞಾನಿ ಜಿ.ಕೆ.ಮೆನನ್‌;ಎಸ್‌. ನಿರೂಪಣೆ-ರವಿಪ್ರಕಾಶ್‌;27 Nov, 2016 ಬಾಹ್ಯ ಸಂಪರ್ಕಗಳು ಇಸ್ರೋ ಅಧಿಕೃತ ತಾಣ ಜಿಎಸ್‍ಎಲ್‍ವಿ ರಾಕೆಟ್ ಪಿ‍ಎಸ್‍ಎಲ್‍ವಿ ರಾಕೆಟ್ ಹೆಚ್ಚಿನ ಓದಿಗೆ ಮೂರು ವರ್ಷದಲ್ಲಿ 50 ಬಾಹ್ಯಾಕಾಶ ನೌಕೆಗಳ ಉಡ್ಡಯನ ಗುರಿ;;72 ಗಂಟೆಗಳಲ್ಲಿ ನಿರ್ಮಿಸಿ ನಭಕ್ಕೆ ಹಾರಿಸಬಲ್ಲ ಉಡ್ಡಯನ ವಾಹನ!;;12 ಆಗಸ್ಟ್ 2018, ಉಲ್ಲೇಖಗಳು ವಿಜ್ಞಾನ ತಂತ್ರಜ್ಞಾನ ಭಾರತ
1663
https://kn.wikipedia.org/wiki/%E0%B2%AE%E0%B2%95%E0%B2%B0%20%E0%B2%B8%E0%B2%82%E0%B2%95%E0%B3%8D%E0%B2%B0%E0%B2%BE%E0%B2%82%E0%B2%A4%E0%B2%BF
ಮಕರ ಸಂಕ್ರಾಂತಿ
ಸಂಕ್ರಾಂತಿ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಒಂದು ಹಬ್ಬ. ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಸಂಕ್ರಾಂತಿಯನ್ನು ಧಾರ್ಮಿಕ ತತ್ವಗಳಿಂದ ಸ್ವತಂತ್ರವಾಗಿ ಆಚರಿಸಲಾಗುತ್ತದೆಯಾದರೂ ವೇದಾಂಗ ಜ್ಯೋತಿಷ್ಯ ಶಾಸ್ತ್ರದ ತಳಹದಿ ಹೊಂದಿರುವುದರಿಂದ ಮುಖ್ಯವಾಗಿ ಹಿಂದೂ ಧರ್ಮದವರಿಂದ ಆಚರಿಸಲ್ಪಡುತ್ತದೆ. ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡುಗಳ ಮುಖ್ಯ ಹಬ್ಬಗಳಲ್ಲಿ ಸಂಕ್ರಾಂತಿಯೂ ಒಂದು. ಜ್ಯೋತಿಷ್ಯದ ತಳಹದಿ ಸನಾತನ ಹಿಂದೂ ಧರ್ಮದ ಬುನಾದಿಯಾಗಿರುವ ವೇದಗಳ ಅಂಗಗಳೆಂದೇ ಪ್ರಸಿದ್ಧವಾಗಿರುವ ಆರು ವೇದಾಂಗಗಳಲ್ಲಿ ಒಂದಾದ ಜ್ಯೋತಿಷ್ಯವನ್ನು ವೇದಗಳ ಕಣ್ಣೆಂದು ಗುರುತಿಸುತ್ತಾರೆ. ವೇದದಳ ಕಾಲದಿಂದಲೂ ಶುಭಕಾರ್ಯಗಳಿಗೆ ಮುಹೂರ್ತಾದಿ ಕಾಲವನ್ನು ನಿರ್ಣಯಿಸಿ, ಗ್ರಹಗಳ ಸ್ಥಿತಿ-ಗತಿ, ರಾಶಿ-ನಕ್ಷತ್ರ, ಗ್ರಹಣ, ಅಸ್ತೋದಯಗಳನ್ನು ನಿರ್ಣಯಿಸಿ, ಶುಭಾಶುಭ ಫಲಗಳನ್ನು ತೋರುತ್ತಾ, ಹಬ್ಬ-ಹರಿದಿನಗಳನ್ನು ಋತುಗಳಿಗನುಸಾರವಾಗಿ ಲೆಕ್ಕಾಚಾರ ಹಾಕಿ ಗುರುತಿಸುತ್ತಿದ್ದ ಶಾಸ್ತ್ರವೇ ಜ್ಯೋತಿಷ. ಈ ಶಾಸ್ತ್ರದಂತೆ, ಸೂರ್ಯನು ನಿರ್ಯಾಣ ಮಕರರಾಶಿಯನ್ನು ಪ್ರವೇಶಿಸಿದಾಗ, "ಮಕರ ಸಂಕ್ರಾಂತಿ"ಯಾಗುತ್ತದೆ. ಈ ಕಾಲವು ಪ್ರತಿವರ್ಷ ಗ್ರೆಗೋರಿಯನ್ ಪಂಚಾಂಗದ ಜನವರಿ ೧೪ರ ಸುಮಾರಿಗೆ ಬೀಳುತ್ತದೆ. ಹಿಂದೆ, ಈ ಕಾಲವೇ ಉತ್ತರಾಯಣ ಅಥವಾ ಸೂರ್ಯನ ಉತ್ತರದಿಕ್ಕಿನ ಪಯಣದ ಆರಂಭವನ್ನು ಸೂಚಿಸುವ ಕಾಲವೂ ಆಗಿತ್ತಾದ್ದರಿಂದ ಭೂಮಿಯ ಉತ್ತರಾರ್ಧಗೋಳದಲ್ಲಿ ಚಳಿ-ಬೆಚ್ಚನೆಯ ವಾತಾವರಣ ಆರಂಭವಾಗಿ, ಬೆಳೆ ಕಟಾವಿನ ಕಾಲವೂ ಆಗಿತ್ತು. ಈಗ ಉತ್ತರಾಯಣ ಡಿಸೆಂಬರ್ ೨೨ಕ್ಕೇ ಆದರೂ, ಹಿಂದಿನಂತೆಯೇ ಜನವರಿ ೧೪ ರಂದು ನಡೆಯುವ ಮಕರಸಂಕ್ರಾಂತಿಯಂದೇ ಉತ್ತರಾಯಣದ ಆಚರಣೆಯೂ ನಡೆಯುತ್ತದೆ. ಮಹಾಭಾರತದ ಕತೆಯಲ್ಲಿ ಇಚ್ಚಾ ಮರಣಿಯಾದ. ಭೀಷ್ಮರು ಪ್ರಾಣ ಬಿಡಲು ಉತ್ತರಾಯಣ ಪರ್ವ ಕಾಲವನ್ನು ಕಾದಿದ್ದರು ಎಂಬ ಉಲ್ಲೆಖವಿದೆ. ಸಂಪರ್ಕದ ಹೆಸರು ಖಗೋಳ ಶಾಸ್ತ್ರದ ಪ್ರಕಾರ ಒಂದು ವಿವರಣೆ ಸೂರ್ಯೋದಯ ಪೂರ್ವದಲ್ಲಿ ಮತ್ತು ಸೂರ್ಯಾಸ್ತಮಾನ ಪಶ್ಚಿಮದಲ್ಲಿ ಎಂದು ಹೇಳುವುದಾದರೂ, ಯಾವುದೇ ಸ್ಥಳದಲ್ಲಿ ಕರಾರುವಾಕ್ಕಾಗಿ ಪೂರ್ವದಲ್ಲೇ ಸೂರ್ಯೋದಯವಾಗುವುದು ಮತ್ತು ಪಶ್ಚಿಮದಲ್ಲೇ ಸೂರ್ಯಾಸ್ತಮಾನವಾಗುವುದು ವರ್ಷದಲ್ಲಿ ಎರಡೇ ದಿನಗಳಂದು. ಆ ದಿನಗಳನ್ನು ಈಕ್ವಿನಾಕ್ಸ್ (equinox)ಎಂದು ಕರೆಯುತ್ತಾರೆ. ಅಂದು ಹಗಲಿರುಳುಗಳು ದಿನವನ್ನು ಸಮಪಾಲಾಗಿ, ಅಂದರೆ ೧೨ಗಂಟೆಗಳಾಗಿ ಹಂಚಿಕೊಳ್ಳುತ್ತವೆ. ವರ್ಷದ ಉಳಿದ ದಿನಗಳಲ್ಲಿ ಹಗಲಿರುಳುಗಳ ಪಾಲು ಸಮವಾಗಿರುವುದಿಲ್ಲ. ಬೇಸಗೆಯಲ್ಲಿ ಹಗಲು ಹೆಚ್ಚು, ಇರುಳು ಕಮ್ಮಿ. ಚಳಿಗಾಲದಲ್ಲಿ ಹಗಲು ಕಮ್ಮಿ, ಇರುಳು ಹೆಚ್ಚು. ಈಕ್ವಿನಾಕ್ಸ್ ದಿವಸಗಳ ಹೊರತಾಗಿ ಸೂರ್ಯನ ಉದಯ ಪೂರ್ವದ ಬಲಕ್ಕೆ (ಅಂದರೆ ಉತ್ತರಕ್ಕೆ) ಅಥವಾ ಎಡಕ್ಕೆ (ಅಂದರೆ ದಕ್ಷಿಣಕ್ಕೆ) ಆಗುತ್ತದೆ. ಚಳಿಗಾಲ (ಅಂದರೆ ಇರುಳಿನ ಪ್ರಮಾಣ)ಹೆಚ್ಚಾದಂತೆ ಸೂರ್ಯನ ಉದಯ ಹೆಚ್ಚು ದಕ್ಷಿಣ ದಿಕ್ಕಿಗೆ ಚಲಿಸುವುದು ಗೋಚರಿಸುತ್ತದೆ. ಕೊನೆಗೆ ಒಂದು ದಿನ ದಕ್ಷಿಣದ ತುತ್ತ ತುದಿಯ ಹಂತವನ್ನು ತಲುಪಿ, ಅಚಲವೆಂಬಂತೆ ಕಂಡು, ಮರುದಿನದಿಂದ ಸೂರ್ಯನ ಉದಯ ಮರಳಿ ವಿರುಧ್ಧ ದಿಕ್ಕಿನಲ್ಲಿ ಆಗುತ್ತಾ ಚಲಿಸುತ್ತದೆ. *ಅಂದರೆ ಸೂರ್ಯ ಇನ್ನು ದಕ್ಷಿಣ ದಿಕ್ಕಿನತ್ತದ ತನ್ನ ಚಲನವನ್ನು ನಿಲ್ಲಿಸಿ ಉತ್ತರಕ್ಕೆ ಚಲಿಸಲು ಪ್ರಾರಂಭಿಸುತ್ತಾನೆ. ಈ ದಿನ ಉತ್ತರಾಯಣದ ದಿನ. ಇದು ಚಳಿಗಾಲ ಮುಗಿದು ಮುಂಬರುವ ಬೇಸಗೆಯ ಮುನ್ಸೂಚನೆ. winter solstice ಎಂದೂ ಕರೆಯಲ್ಪಡುತ್ತದೆ. ಸುಮಾರು ಡಿಸೆಂಬರ್ ೨೨ ಈ ದಿನ. ಈ ದಿನವನ್ನು ಮಕರ ಸಂಕ್ರಾಂತಿಯೆಂದು ಗುರುತಿಸಬೇಕಾಗಿದ್ದರೂ ಸಾಂಪ್ರದಾಯಿಕವಾಗಿ ಜನವರಿ ತಿಂಗಳ ನಡುವಿನಲ್ಲಿ ಮಕರ ಸಂಕ್ರಾಂತಿಯನ್ನು ಆಚರಿಸುತ್ತೇವೆ. ಇಲ್ಲಿಂದ ಸೂರ್ಯೋದಯ ಇನ್ನು ಆರು ತಿಂಗಳು ಉತ್ತರದ ದಿಕ್ಕಿನಲ್ಲಿ ಚಲಿಸುತ್ತಾ ನಡುವೆ ಮತ್ತೆ ಈಕ್ವಿನಾಕ್ಸ್ದಿ ನವನ್ನೂ ತಲುಪಿ, ಇನ್ನೂ ಅದೇ ದಿಕ್ಕಿನಲ್ಲಿ (ಉತ್ತರಕ್ಕೆ)ಚಲಿಸುತ್ತಾ ಹೋಗುತ್ತದೆ. ಉತ್ತರಕ್ಕೆ ಹೆಚ್ಚು ಹೋದಂತೆಲ್ಲಾ ಹಗಲಿನ ಪ್ರಮಾಣ ಹೆಚ್ಚಾಗಿ ಇರುಳು ಕಮ್ಮಿಯಾಗುತ್ತಾ ಹೋಗುತ್ತದೆ. ಸೂರ್ಯನ ತಾಪ ಹೆಚ್ಚಾಗುತ್ತಾ ಬೇಸಗೆಯನ್ನು ಅನುಭವಿಸುತ್ತೇವೆ. ಕೊನೆಗೆ ಒಂದು ದಿನ ಉತ್ತರದ ತುತ್ತ ತುದಿಯನ್ನು ತಲುಪಿ, ಅಚಲವೆಂಬಂತೆ ಕಂಡು, ಮರುದಿನದಿಂದ ಸೂರ್ಯನ ಉದಯ ಮರಳಿ ವಿರುದ್ಧ ದಿಕ್ಕಿನಲ್ಲಿ ಆಗುತ್ತಾ ಚಲಿಸುತ್ತದೆ. ಅಂದರೆ ಸೂರ್ಯ ಇನ್ನು ಉತ್ತರ ದಿಕ್ಕಿನತ್ತದ ತನ್ನ ಚಲನೆಯನ್ನು ನಿಲ್ಲಿಸಿ ದಕ್ಷಿಣಕ್ಕೆ ಚಲಿಸಲು ಪ್ರಾರಂಭಿಸುತ್ತಾನೆ. ಇದು ದಕ್ಷಣಯಾನದ ದಿನ. ಬೇಸಗೆ ಮುಗಿದು ಮುಂಬರುವ ಚಳಿಗಾಲದ ಮುನ್ಸೂಚನೆ. ಈ ದಿನವನ್ನು ಕರ್ಕಾಟಕ ಸಂಕ್ರಾಂತಿ ಎಂದು ಗುರುತಿಸುತ್ತಾರೆ. summer solstice ಎಂದೂ ಕರೆಯಲ್ಪಡುತ್ತದೆ. ಸುಮಾರು ಜೂನ್ ೨೧ ಈ ದಿನ. ಇಷ್ಟೆಲ್ಲಾ ವಿವರಣೆ ಅನ್ವಯಿಸುವುದು ಭೂಮಂಡಲದ ಭೂಮಧ್ಯರೇಖೆಯ ಉತ್ತರಾರ್ತ. ಇದೇ ರೀತಿಯ ಆದರೆ ತದ್ವಿರುದ್ಧವಾದ ವಿವರಣೆ ದಕ್ಷಿಣಾರ್ಧಕ್ಕೆ ಅನ್ವಯಿಸುತ್ತದೆ. ಹೀಗೆ ಕಾಣುವ ಸೂರ್ಯನ ಚಲನೆಗೆ ಭೂಮಿಯ ಅಕ್ಷರೇಖೆ (axis) ಸುಮಾರು 22 1/2 degree ವಾಲಿರುವುದು ಕಾರಣ. ಯಾವುದಾದರೂ ಒಂದು ನಿಗದಿತ ಜಾಗದಲ್ಲಿ ದಿನಾಲು ನಿಂತು, ದಿನದ ಒಂದೇ ನಿಗದಿತ ಸಮಯದಲ್ಲಿ, ಆಗಸದಲ್ಲಿ ಸೂರ್ಯನ ಸ್ಥಾನವನ್ನು ಗುರುತು ಹಾಕಿಕೊಂಡು, ಈ ರೀತಿ ವರ್ಷವಿಡೀ ಮಾಡಿದರೆ, ಗುರುತು ಹಾಕಿಕೊಂಡ ಆ ಬಿಂದುಗಳೆಲ್ಲಾ ಸುಮಾರು '8'ರ ಆಕೃತಿಯಲ್ಲಿ ಕಾಣುತ್ತವೆ. ಈ ವಿನ್ಯಾಸವನ್ನು analemma ಎನ್ನುತ್ತಾರೆ. '8'ರ ಆಕೃತಿಯ ನೆತ್ತಿಯ ಬಿಂದು summer solstice ದಿನದಂದು ಆಗುತ್ತದೆ. ಆ ಆಕೃತಿಯ ಅಡಿಯ ಬಿಂದು winter solstice, ಅಂದರೆ ಮಕರ ಸಂಕ್ರಾಂತಿಯ ದಿನದಂದು ಆಗುತ್ತದೆ. ನಡುವೆ ರೇಖೆಗಳು ಪರಸ್ಪರ ಹಾದು ಹೋಗುವ ಬಿಂದು equinox ದಿನಗಳು. 8 ರ ಆಕೃತಿಯ ನೆತ್ತಿಯಿಂದ ಅದರ ಅಡಿಯ ಬಿಂದುವಿನ ತನಕದ ದಿನಗಳು ವರ್ಷದ ದಕ್ಷಿಣಾಯನದ ದಿನಗಳು. ಆ ಆಕೃತಿಯ ಅಡಿಯಿಂದ ಅದರ ನೆತ್ತಿಯ ಬಿಂದುವಿನ ತನಕದ ದಿನಗಳು ಉತ್ತರಾಯಣದ ದಿನಗಳು. ಇದೆ ಕಾಲಕ್ಕೆ ಚಳಿಗಾಲ ಮುಗಿದು ಹೋಗುತ್ತದೆ ಮನುಷ್ಯ ದೇಹದಲ್ಲಿ ಚಳಿಯಿಂದ ಚರ್ಮ ಎಣ್ಣೆ ಅಂಶ ಕಡಿಮೆಯಾಗುತ್ತದೆ ಅದಕ್ಕೆ ಏಣ್ಣಿನ ಅಂಶ ಇರುವ ಎಳ್ಳು ತಿನ್ನಿ ಅನ್ನೋವುದು ವಾಡಿಕೆ ಇರಬಹುದು ಆದರೆ ವೈಜ್ಞಾನಿಕವಾಗಿ ಅದು ಸಾಭೀತಾಗಿದೆ ಆಚರಣೆ ಕರ್ನಾಟಕ (ಕರ್ನಾಟಕದಲ್ಲಿ ಸಂಕ್ರಾಂತಿಗೆ ಸಂಬಂಧಪಟ್ಟ ಆಚರಣೆಗಳಲ್ಲಿ ಮುಖ್ಯವಾಗಿ ಕಂಡುಬರುವುದು "ಎಳ್ಳು ಬೆಲ್ಲ". ಮನೆಯಲ್ಲಿ ಎಳ್ಳ್ಳು ಬೆಲ್ಲವನ್ನು ತಯಾರಿಸಿ ಸುತ್ತಲಿನ ಮನೆಗಳಿಗೆ "ಎಳ್ಳುಹಂಚುವುದು" ಸಂಕ್ರಾಂತಿಯ ಸಂಪ್ರದಾಯ. ಎಳ್ಳಿನ ಜೊತೆಗೆ ಸಕ್ಕರೆ ಅಚ್ಚುಗಳು, ಹಣ್ಣು ಮತ್ತು ಕಬ್ಬಿನ ತುಂಡುಗಳನ್ನು ಸಹ ಬೀರುವುದುಂಟು.ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿದ ಬೆಲ್ಲ, ಒಣ ಕೊಬ್ಬರಿ, ಹುರಿಗಡಲೆ, ಸಿಪ್ಪೆ ತೆಗೆದ ಕಡಲೇಕಾಯಿ ಬೀಜ ಹಾಗೂ ಹುರಿದ ಬಿಳಿ ಎಳ್ಳನ್ನು ಸೇರಿಸಿ "ಎಳ್ಳು ಬೆಲ್ಲ" ತಯಾರಿಸಲಾಗುತ್ತದೆ.) (ಕರ್ನಾಟಕದ ರೈತರಿಗೆ ಸುಗ್ಗಿ (ಸುಗ್ಗಿ) ಅಥವಾ ಸುಗ್ಗಿಯ ಹಬ್ಬ. )ಈ ಮಂಗಳಕರ ದಿನದಂದು, ಯುವ ಹೆಣ್ಣುಮಕ್ಕಳು (ಮಕ್ಕಳು ಮತ್ತು ಹದಿಹರೆಯದವರು) ಹೊಸ ಬಟ್ಟೆಗಳನ್ನು ಧರಿಸಿ ಒಂದು ತಟ್ಟೆಯಲ್ಲಿ ಎಳ್ಳುಬೆಲ್ಲದೊಂದಿಗೆ ಹತ್ತಿರದ ಜನರನ್ನು ಮತ್ತು ಸಂಬಂಧಿಗಳನ್ನು ಭೇಟಿಯಾಗಿ ಎಳ್ಳುಬೆಲ್ಲವನ್ನು ವಿನಿಮಯ ಮಾಡಿಕೊಳ್ಳುತ್ತಾರೆ. "ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡೋಣ" ಎಂದು ಹೇಳಿಕೊಳ್ಳುತ್ತಾರೆ. ಪ್ಲೇಟ್ ಸಹ ಕಬ್ಬಿನ ತುಂಡು ವಿವಿಧ ಆಕಾರಗಳನ್ನು ಸಕ್ಕರೆ ಅಚ್ಚುಗಳನ್ನು ಹೊಂದಿರುತ್ತದೆ. (*ಕಬ್ಬು ಈ ಭಾಗಗಳಲ್ಲಿ ಪ್ರಧಾನ ಏಕೆಂದರೆ ಹಬ್ಬದ ಋತುವಿನ ಸುಗ್ಗಿಯ ಸೂಚಿಸುತ್ತದೆ. )ಕರ್ನಾಟಕದ ಕೆಲವು ಭಾಗಗಳಲ್ಲಿ, ಹೊಸದಾಗಿ ಮದುವೆಯಾದ ಮಹಿಳೆ ಯರು ತನ್ನ ಮದುವೆಯ ಮೊದಲ ವರ್ಷದಿಂದ ಐದು ವರ್ಷಗಳ ಕಾಲ ಬಾಳೆಹಣ್ಣುಗಳನ್ನು ಮುತ್ತೈದೆಯರಿಗೆ ಕೊಡುವ ಸಂಪ್ರದಾಯ ಇದೆ. ಬಾಳೆಹಣ್ಣುಗಳ ಸಂಖ್ಯೆಯನ್ನು ಪ್ರತಿವರ್ಷ ಐದರಿಂದ ಹೆಚ್ಚಿಸಲಾಗುತ್ತದೆ. ಉತ್ತರ ಕರ್ನಾಟಕದಲ್ಲಿ, ಸಮುದಾಯದ ಸದಸ್ಯರೊಂದಿಗೆ ಗಾಳಿಪಟ ಹಾರಿಸುವ ಸಂಪ್ರದಾಯವಿದೆ. ಮಹಿಳೆಯರು ಗುಂಪು ಗುಂಪಾಗಿ ರಂಗೋಲಿಯನ್ನು ಬಿಡಿಸುವುದು ಸಂಕ್ರಾಂತಿಯ ಸಮಯದ ಮತ್ತೊಂದು ಜನಪ್ರಿಯ ಘಟನೆಯಾಗಿದೆ. (ದನಕರುಗಳನ್ನು ಸಿಂಗರಿಸುವುದು ಮತ್ತು ಮೆರವಣಿಗೆ ಮಾಡುವುದು ಇನ್ನೊಂದು ಧಾರ್ಮಿಕ ಪದ್ಧತಿಯಾಗಿದೆ. ಅವುಗಳನ್ನು "ಕಿಚ್ಚು ಹಾಯಿಸುವುದು" ಹಳ್ಳಿಗಳಲ್ಲಿ ಸಾಮಾನ್ಯವಾಗಿದೆ.) ತಮಿಳುನಾಡು ತಮಿಳುನಾಡಿನಲ್ಲಿ ಈ ಹಬ್ಬವನ್ನು "ಪೊಂಗಲ್" ಎಂದು ಕರೆಯಲಾಗುತ್ತದೆ. ಇಲ್ಲಿ ಇದು ನಾಲ್ಕು ದಿನಗಳ ಹಬ್ಬ - ಈ ನಾಲ್ಕು ದಿನಗಳು ಮತ್ತು ಆ ದಿನಗಳಲ್ಲಿನ ಆಚರಣೆಗಳು ಹೀಗಿವೆ: ಭೋಗಿ: ಹೊಸ ಬಟ್ಟೆಗಳು ಪೊಂಗಲ್: ಸಮೃದ್ಧಿಯ ಸಂಕೇತವಾಗಿ ಹಾಲು-ಬೆಲ್ಲಗಳನ್ನು ಪಾತ್ರೆಯಲ್ಲಿ ಕುದಿಸಿ ಉಕ್ಕಿಸಲಾಗುತ್ತದೆ ಮಾಟ್ಟು ಪೊಂಗಲ್: ಗೋಪೂಜೆ ಕೆಲವು ಕಡೆಗಳಲ್ಲಿ "ಜಲ್ಲಿಕಟ್ಟು" ಎಂಬ ಗೂಳಿಯನ್ನು ಪಳಗಿಸುವ ಆಟ ನಡೆಯುತ್ತದೆ ಕಾಣುಮ್ ಪೊಂಗಲ್ ಕೇರಳದ ಶಬರಿಮಲೆ ಮಕರ ಸಂಕ್ರಾಂತಿಯಂದು ಕೇರಳದ ಶಬರಿಮಲೆಯಲ್ಲಿ ಕಾಣುವ ಮಕರಜ್ಯೋತಿಗೆ ಹೆಚ್ಚಿನ ಪ್ರಾಧಾನ್ಯತೆ ಇದೆ. ಅಯ್ಯಪ್ಪ ವೃತಾಧಾರಿಗಳಾದ ಜನರು ಶಬರಿಮಲೆಗೆ ತೆರಳಿ ತಮ್ಮ ಸ್ವಾಮಿಯ ಪಾದಕ್ಕೆರಗಿ ಮಕರ ಜ್ಯೋತಿಯ ದರ್ಶನವನ್ನು ಪಡೆದರೆ ಜನ್ಮ ಸಾರ್ಥಕವಾಗುವುದೆಂಬ ನಂಬಿಕೆ ಯಿಂದಾಗಿ ಲಕ್ಷೋಪಲಕ್ಷ ಜನರು ಈ ಜ್ಯೋತಿಯ ದರ್ಶನಕ್ಕಾಗಿ ವರ್ಷಂಪ್ರತಿ ಶಬರಿಮಲೆ ಸನ್ನಿಧಾನಕ್ಕಾಗಮಿಸುತ್ತಾರೆ. "ಮಕರ ವಿಳಕ್ಕು"ಎಂದು ಕರೆಯಲ್ಪಡುವ ಈ ಜ್ಯೋತಿಯು ಶಬರಿಮಲೆಯ ಬೆಟ್ಟದಿಂದ ಮೂರು ಬಾರಿ ಗೋಚರವಾಗುತ್ತದೆ. ಅಂತೂ ಇದು ವೈಜ್ಞಾನಿಕವಾಗಿ ಸಾಬೀತಾಗಿ ಲ್ಲವಾದರೂ, ಪ್ರಸ್ತುತ ಕಾಲದಲ್ಲಿಯೂ ಆಧ್ಯಾತ್ಮಿಕತೆಯ ಕುರುಹನ್ನು ತೋರಿಸುತ್ತದೆ ಎನ್ನುತ್ತಾರೆ ಭಕ್ತರು. ಒಟ್ಟಿನಲ್ಲಿ ಸೂರ್ಯನು ಮಕರ ರಾಶಿಗೆ ಪ್ರವೇಶಿಸಿ ಲೋಕದ ಕಾರಿರುಳನ್ನು ಹೋಗಲಾಡಿಸುವಂತೆ ಜನರು ಈ ಕಾಲದಲ್ಲಿ ಪುಣ್ಯ ಕಾರ್ಯಗಳಲ್ಲಿಯೂ ಆಧ್ಯಾತ್ಮಿಕ ಚಿಂತೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡು ಮುಕ್ತಿ ಮಾರ್ಗದಲ್ಲಿ ಸಾಗುವಂತೆ ಈ ಆಚರಣೆಯು ಪ್ರೇರಣೆಯನ್ನು ನೀಡುತ್ತದೆ. ಇತರ ಸ್ಥಳಗಳು ಮುಖ್ಯವಾಗಿ ದಕ್ಷಿಣ ಭಾರತದ ಹಬ್ಬವಾದರೂ, ಇತರ ಸ್ಥಳಗಳಲ್ಲಿ ಸಹ ಬೇರೆ ಬೇರೆ ಹೆಸರುಗಳಲ್ಲಿ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಸಂಕ್ರಾಂತಿಯ ದಿನದಂದು ಗಾಳಿಪಟಗಳನ್ನು ಹಾರಿಬಿಡುವ ಸಂಪ್ರದಾಯವುಂಟು. ಮಹಾರಾಷ್ಟ್ರದಲ್ಲಿಯೂ, ಎಳ್ಳು ಮತ್ತು ಸಕ್ಕರೆಯ ಕುಸುರಿಕಾಳನ್ನು ಬಂಧು ಮಿತ್ರರಿಗೆ ಹಂಚುವ ರೂಢಿ ಇದೆ. ಪ್ರಮುಖವಾಗಿ ಅವರು, ಎಳ್ಳಿನ ಉಂಡೆ ಗಳನ್ನು ಹಂಚುತ್ತಾರೆ. ಅದಕ್ಕೆ ಅವರು ಲಡ್ಡು ಎನ್ನುತ್ತಾರೆ. ಕರ್ನಾಟಕದ ಸಂಪ್ರದಾಯದ ತರಹ ಬಿಡಿ ಕಾಳುಗಳನ್ನು ಹಂಚುವ ಪದ್ಧತಿಯಿಲ್ಲ. ಎಳ್ಳುಂಡೆಕೊಡುವಾಗ ತಪ್ಪದೆ, " ತಿಳ್ಗುಳ್ ಘ್ಯಾ, ಅಣಿ ಗೋಡ್ ಗೋಡ್ ಬೋಲ" (ಅಂದರೆ ಎಳ್ಳು ಬೆಲ್ಲ ತೆಗೆದುಕೊಂಡು ಒಳ್ಳೊಳ್ಳೆಯ ಮಾತಾಡಿ) ಎನ್ನುವ ಮಾತು ಹೇಳುವುದನ್ನು ಮರೆಯುವುದಿಲ್ಲ! ಪಂಜಾಬ್ ಮತ್ತು ಹರಿಯಾಣಗಳಲ್ಲಿ ಸಂಕ್ರಾಂತಿಗೆ "ಲೋಹರಿ," ಎಂದು ಹೆಸರು. ಉತ್ತರಾಯಣ ಆರಂಭದ ದಿನ ಸಂಕ್ರಾಂತಿ ಸೂರ್ಯಾರಾಧನೆಯ ಹಬ್ಬವಾಗಿದೆ. ಮಕರ ಸಂಕ್ರಾಂತಿ ಪ್ರಸಿದ್ದವಾಗಿರುವ ಸುಗ್ಗಿಯ ಕಾಲದ ಹಬ್ಬ. ಇದನ್ನು ಪೊಂಗಲ್ ಎಂದು ಕರೆಯಲಾಗುತ್ತದೆ. ಪೊಂಗಲ್ ಎಂದರೆ ಅಕ್ಕಿ ತುಪ್ಪ, ಹಾಲು, ಸಕ್ಕರೆ ಅಥವಾ ಬೆಲ್ಲಗಳಿಂದ ಮಾಡಿದ ಸಿಹಿ ಖಾದ್ಯ. ಸುಗ್ಗಿಯ ಉತ್ಪನ್ನಗಳಿಂದ ಮಾಡಿದ ಇದನ್ನು ಸೂರ್ಯದೇವನಿಗೆ ನೈವೇದ್ಯಮಾಡಲಾಗುವುದು. ಕರ್ನಾಟಕದಲ್ಲಿ ಎಳ್ಳು, ಸಕ್ಕರೆ - ಅಚ್ಚುಗಳನ್ನು ನೆರೆಯವರಿಗೆ ಬಂಧು ಮಿತ್ರರಿಗೆ ಹಂಚುವ ನಲ್ಮೆಯ ಸಾಮಾಜಿಕ ಸಂಪ್ರದಾಯ ಈ ಹಬ್ಬದ ಒಂದು ವಿಶೇಷ. ದನಕರುಗಳಿಗೆ ಮೈ ತೊಳೆದು - ಭೂತಪೀಡೆಗಳಿಂದ ಅವುಗಳನ್ನು ರಕ್ಷಿಸುವ ಸಲುವಾಗಿ - ಬೀದಿಗಳಲ್ಲಿ ಹೊತ್ತಿಸಿದ ಬೆಂಕಿಯನ್ನು ನೆಗೆದು ದಾಟಿಸುವುದು ಉಂಟು. ಜಗಚ್ಚಕ್ಷುವಾದ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಯನ್ನು ಪ್ರವೇಶಿಸುವ ಸಂಧಿ ಕಾಲಕ್ಕೆ ಸಂಕ್ರಾಂತಿ ಅಥವಾ ಸಂಕ್ರಮಣ ಎಂದು ಹೆಸರು ಸೌರಮಾನದ ಪ್ರಕಾರ ಸೂರ್ಯನು ಮೇಷಾದಿ ಹನ್ನೆರಡು ರಾಶಿಗಳನ್ನು ಪ್ರವೇಶಿಸುವಾಗಲೂ ಸಂಕ್ರಾಂತಿ ಬರುತ್ತದೆ. ಆದರೆ ಅವುಗಳಲ್ಲಿ ಕರ್ಕಾಟಕ ಸಂಕ್ರಾಂತಿ ಹಾಗೂ ಮಕರ ಸಂಕ್ರಾಂತಿಗಳು ದಕ್ಷಿಣಾಯನ, ಉತ್ತರಾಯಣಗಳ ಪ್ರಾರಂಭದ ದಿನಗಳಾದ್ದರಿಂದ ವಿಶೇಷ ಮಹತ್ವವುಳ್ಳವುಗಳಾಗಿವೆ. ಸಂಕ್ರಾಂತಿ ಒಂದು ವಿಧದಲ್ಲಿ ಸೂರ್ಯಾರಾಧನೆ. ಸೂರ್ಯ ಆತ್ಮಾ ಜಗತಃ ತಸ್ಥುಷಶ್ಚ ಸೂರ್ಯದೇವ ವಿಶ್ವದ ಆತ್ಮ; ಜಗತ್ತಿನ ಕಣ್ಣು; ಮಳೆ ಬೀಳಲು, ಬೆಳೆ-ಬೆಳೆಯಲು, ಇಳೆ ಬೆಳಗಲು ಸೂರ್ಯನೇ ಕಾರಣ ಆ ಸವಿತೃ ದೇವನ ದಿವ್ಯ ತೇಜಸ್ಸು ನಮಗೆ ಸಿದ್ದಿ ಬುದ್ದಿ ಸಮೃದ್ದಿಗಳನ್ನು ನೀಡಬಲ್ಲದು. ಉತ್ತರಾಯಣ ಪುಣ್ಯ ಕಾಲ : ಸಾಮಾನ್ಯವಾಗಿ ಪುಷ್ಯ ಮಾಸದಲ್ಲಿ ಬರುವ (ಜನವರಿ 13 ಅಥವಾ 14 ರಂದು) ಮಕರ ಸಂಕ್ರಾಂತಿಯನ್ನು ಉತ್ತರಾಯಣ ಪುಣ್ಯಕಾಲವೆಂದು ಕರೆಯುತ್ತಾರೆ. ಕೇವಲ ಬದುಕುವುದಕ್ಕೆ ಮಾತ್ರವಲ್ಲ ಸಾಯುವುದಕ್ಕೂ ಉತ್ತರಾಯಣ ಪುಣ್ಯಕಾಲ ಶ್ರೇಷ್ಠವೆಂದು ಹೇಳಲಾಗಿದೆ. ಅದಕ್ಕಾಗಿಯೇ ಭೀಷ್ಮ ದೇಹ ತ್ಯಜಿಸಲು, ಉತ್ತರಾಯಣದ ಕಾಲದವರೆಗೂ, ಶರಶಯ್ಯೆಯಲ್ಲಿ ಹರಿಸ್ಮರಣೆ ಮಾಡುತ್ತಾ ಕಾದಿದ್ದರು. ಉತ್ತರಾಯಣ, ದೇವತೆಗಳ ಕಾಲ, ದಕ್ಷಿಣಾಯನ ಪಿತೃಗಳ ಕಾಲವಾಗಿರುತ್ತದೆ. ಆದ್ದರಿಂದ ಯಜ್ಞ ಯಾಗಾದಿಗಳಿಗೆ, ಸಮಸ್ತ ದೇವತಾ ಕಾರ್ಯ ಶುಭಕಾರ್ಯಗಳಿಗೆ ಉತ್ತರಾಯಣ ಕಾಲ ಶ್ರೇಷ್ಠವಾಗಿದೆ. ಸೂರ್ಯನು ಇದೇ ಜನವರಿ 13 ರಂದು ರಾತ್ರಿ 12 ಗಂಟೆ 57 ನಿಮಿಷಕ್ಕೆ ನಿರಯಣ ಮಕರ ರಾಶಿಗೆ ಪ್ರವೇಶಿಸುತ್ತಾನೆ. ಈ ವೇಳೆಗೆ ರಾತ್ರಿಯಾಗಿದ್ದರಿಂದ ಜನವರಿ 14ರಂದು ಮಕರ ಸಂಕ್ರಾತಿಯನ್ನು ಆಚರಿಸಲಾಗುತ್ತದೆ. 14ರಂದು ಹಗಲು ಪೂರ್ತಿ ಅಂದರೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಪುಣ್ಯ ಕಾಲವಿರುತ್ತದೆ. ಈ ಪುಣ್ಯ ಕಾಲದಲ್ಲಿ ಕಪ್ಪು ಎಳ್ಳಿನೊಂದಿಗೆ ಸ್ನಾನ ಮಾಡಿ, ಎಳ್ಳು ದಾನ ಮಾಡಬೇಕು. ದೇವಸ್ಥಾನಗಳಲ್ಲಿ ಎಳ್ಳೆಣ್ಣೆ ದೀಪ ಹಚ್ಚಬೇಕು. ಮಾಡಿದ ದಾನ, ಜನ್ಮ ಜನ್ಮದಲೂ ಸದಾ ನಮಗೆ ಸಿಗುವಂತೆ ಸೂರ್ಯನು ಅನುಗ್ರಹಿಸುತ್ತಾನೆ. ಇದಕ್ಕಾಗಿಯೇ ಎಳ್ಳು - ಬೆಲ್ಲ ಹಂಚುವುದು. ಜನವರಿ 14 ರಂದು, ಎಳ್ಳು - ಬೆಲ್ಲವನ್ನು ಬಂಧು ಮಿತ್ರರಿಗೆ ಹಂಚುವ ನಲ್ಮೆಯ ಸಾಮಾಜಿಕ ಸಂಪ್ರದಾಯ, ಮಕರ ಸಂಕ್ರಾಂತಿಯ ಒಂದು ವಿಶೇಷ. ಸೂರ್ಯನು ಒಂದು ರಾಶಿಯಿಂದ, ಮತ್ತೊಂದು ರಾಶಿಗೆ ಪ್ರವೇಶಿಸುವುದಕ್ಕೆ ಸಂಕ್ರಾಂತಿ ಎಂದು ಹೆಸರು. ಈ ಸಂಕ್ರಾಂತಿಯ ಕಾಲ, ಪುಣ್ಯ ಕಾಲವಾಗಿರುತ್ತದೆ. ಮೇಷ ಸಂಕ್ರಾಂತಿ - ವಿಷುವತ್ ಪುಣ್ಯಕಾಲ, ವೃಷಭ ಸಂಕ್ರಾಂತಿ - ವಿಷ್ಣುಪದ ಪುಣ್ಯಕಾಲ, ಮಿಥುನ ಸಂಕ್ರಾಂತಿ - ಷಡಶೀತಿ ಪುಣ್ಯಕಾಲ, ಕಟಕ ಸಂಕ್ರಾಂತಿ - ದಕ್ಷಿಣಾಯನ ಪುಣ್ಯಕಾಲ, ಸಿಂಹ ಸಂಕ್ರಾಂತಿ ವಿಷ್ಣುಪದ ಪುಣ್ಯಕಾಲ, ಕನ್ಯಾ ಸಂಕ್ರಾಂತಿ - ಷಡಶೀತಿ ಪುಣ್ಯಕಾಲ, ತುಲಾ ಸಂಕ್ರಾಂತಿ - ವಿಷುವತ್ ಪುಣ್ಯಕಾಲ, ವೃಶ್ಚಿಕ ಸಂಕ್ರಾಂತಿ - ವಿಷ್ಣುಪದ ಪುಣ್ಯಕಾಲ, ಧನಸ್ಸು ಸಂಕ್ರಾಂತಿ - ಷಡಶೀತಿ ಪುಣ್ಯಕಾಲ, ಮಕರ ಸಂಕ್ರಾಂತಿ - ಉತ್ತರಾಯಣ ಪುಣ್ಯಕಾಲ, ಕುಂಭ ಸಂಕ್ರಾಂತಿ - ವಿಷ್ಣುಪದ ಪುಣ್ಯಕಾಲ, ಮೀನ ಸಂಕ್ರಾಂತಿ - ಷಡಶೀತಿ ಪುಣ್ಯಕಾಲವೆಂದು ಪ್ರಸಿದ್ದಿಯಾಗಿದೆ. ವಿಷ್ಣುಪದ ಪುಣ್ಯಕಾಲಕ್ಕಿಂತಲೂ, ಷಡಶೀತಿ ಪುಣ್ಯಕಾಲ ಶ್ರೇಷ್ಠವಾಗಿದೆ. ಷಡಶೀತಿ ಪುಣ್ಯ ಕಾಲಕ್ಕಿಂತಲೂ, ವಿಷ್ಣುವತ್ ಪುಣ್ಯಕಾಲ ಶ್ರೇಷ್ಠವಾಗಿದೆ. ವಿಷ್ಣುವತ್ ಪುಣ್ಯಕಾಲಕ್ಕಿಂತಲೂ ಆಯನ ಪುಣ್ಯ ಕಾಲ ಅತ್ಯಂತ ಶ್ರೇಷ್ಠವಾಗಿದೆ. ದಕ್ಷಿಣಾಯನ ಕಾಲಕ್ಕಿಂತಲೂ ಉತ್ತರಾಯಣ ಕಾಲ ಶ್ರೇಷ್ಠವಾಗಿದೆ. ಸಂಕ್ರಾಂತಿ ಪುಣ್ಯ ಕಾಲದಲ್ಲಿ, ನದಿ ಸ್ನಾನ, ದೇವತೆಗಳಿಗೆ, ಪಿತೃಗಳಿಗೆ ತರ್ಪಣ, ಉಪವಾಸ, ಹೋಮ, ಜಪ, ದಾನಗಳಿಗೆ ಪ್ರಶಸ್ತವೆನಿಸಿದ್ದು, ವಿದ್ಯುಕ್ತವಾಗಿ ನಡೆಸಬೇಕಾದ ಕಾರ್ಯಗಳು. ಆಯನವೆಂದರೆ ಸೂರ್ಯನು ಚಲಿಸುವಮಾರ್ಗ, ಸೂರ್ಯನು ಕಟಕ ಸಂಕ್ರಾಂತಿಯಿಂದ ದಕ್ಷಿಣದತ್ತ ವಾಲಿ ಚಲಿಸುತ್ತಿದ್ದು, ಮಕರ ಸಂಕ್ರಾಂತ್ರಿಯಿಂದ ತನ್ನ ಮಾರ್ಗವನ್ನು ಬದಲಾಯಿಸಿ, ಉತ್ತರದ ಕಡೆ ವಾಲಿ ಚಲಿಸುತ್ತಾನೆ. ಹಗಲು ಜಾಸ್ತಿಯಾಗಿ, ಕತ್ತಲು ಕಡಿಮೆಯಾಗುತ್ತದೆ. ದೇವತೆಗಳಿಗೆ ಹಗಲು, ರಾಕ್ಷಸರಿಗೆ ರಾತ್ರಿ ಪ್ರಾರಂಭವೆಂದು ಪುರಾಣದಲ್ಲಿದೆ. ದಕ್ಷಿಣಾಯನದಲ್ಲಿ ಮುಚ್ಚಿದ ಸ್ವರ್ಗದ ಬಾಗಿಲು, ಈ ಉತ್ತರಾಯಣದಲ್ಲಿ ತೆರೆಯುತ್ತದೆ. ಈ ದಿನ ಶ್ರೀರಾಮ ರಾವಣನನ್ನು ಸಂಹರಿಸಿ ಸೀತೆಯನ್ನು ತಂದ ದಿನವೆಂದು ಹೇಳುತ್ತಾರೆ. ಅಲ್ಲದೆ ಸ್ವರ್ಗಸ್ಥರಾದ ಪಿತೃಗಳು ಅದೃಶ್ಯರಾಗಿ ಈ ದಿನ ತಮ್ಮ-ತಮ್ಮ ಮನೆಯಂಗಳಕ್ಕೆ ಬರುತ್ತಾರೆಂದು ಹೇಳಲಾಗುತ್ತದೆ. ಶಾಸ್ತ್ತ್ರ ದೃಷ್ಟಿಯಲ್ಲಿ ಸಂಕ್ರಾಂತಿ ನಿರ್ಣಯಸಿಂಧುವಿನಲ್ಲಿ ಈ ಹಬ್ಬದ ವಿಚಾರವಾಗಿ ಹೀಗೆ ಹೇಳಿದೆ. ಶಿತಸ್ಯಾಂ ಕೃಷ್ಣತೈಲೈಃ ಸ್ನಾನ ಕಾರ್ಯಂ ಚೋದ್ವರ್ತನಂ ಶುಭೈಃ ತಿಲಾ ದೇಯಾಶ್ಚ ವಿಪ್ರೇಭ್ಯೌ ಸರ್ವದೇವೋತ್ತರಾಯಣೇ ತಿಲ ತೈಲೇನ ದೀಪಾಶ್ಚ ದೇಯಾಃ ದೇವಗೃಹೇ ಶುಭಾಃಷಿ ಸಂಕ್ರಾಂತಿಯಂದು ಕಪ್ಪು ಎಳ್ಳಿನೊಂದಿಗೆ ಸ್ನಾನ ಮಾಡಿ, ಬ್ರಾಹ್ಮಣರಿಗೆ ಎಳ್ಳು ದಾನ ಕೊಡಬೇಕು. ದೇವಾಲಯಗಳಲ್ಲಿ ಎಳ್ಳೆಣ್ಣೆಯ ದೀಪ ಬೆಳಗಬೇಕು. ಧರ್ಮ ಸಿಂಧುವಿನಲ್ಲಿ ಹೀಗೆ ಹೇಳಿದೆ ಶಿಸಂಕ್ರಾಂತೌ ಯಾನಿ ದತ್ತಾನಿ ಹವ್ಯ - ಕವ್ಯಾನಿ ದಾತೃಭಿಃ ತಾನಿ ನಿತ್ಯಂ ದದಾತ್ಯರ್ಕಃ ಪುನರ್ಜನ್ಮನಿ ಜನ್ಮನಿ | ತಿಲಾ ದೇಯಾಶ್ಚ ಹೋತವ್ಯಾ ಭಕ್ಷಾಶ್ಚೈವೋತ್ತರಾಯಣೇಷಿ ಅಂದರೆ ಉತ್ತರಾಯಣದ ಪುಣ್ಯಕಾಲದಂದು ನಾವು ಮಾಡಿದ ದಾನ ಧರ್ಮಗಳು ಜನ್ಮ ಜನ್ಮದಲ್ಲೂ ಸದಾ ನಮಗೆ ಸಿಗುವಂತೆ ಸೂರ್ಯನು ಅನುಗ್ರಹಿಸುತ್ತಾನೆ. ಈ ಶುಭದಿನ ತಿಲದಾನ, ತಿಲಹೋಮ, ತಿಲಭಕ್ಷಣಗಳಿಗೆ ವಿಶೇಷ ಪ್ರಾಶಸ್ತ್ಯವಿದೆ. ಈ ಹಬ್ಬಕ್ಕೂ ಎಳ್ಳಿಗೂ ನಿಕಟ ಸಂಬಂಧವಿದೆ. ಎಳ್ಳು-ಚಿಗಳಿ ಸಂಕ್ರಾಂತಿ ಎಳ್ಳು, ಎಳ್ಳು ಬೀಸಿ ಬೆಲ್ಲ ಹಾಕಿ ಮಾಡಿದ ಎಳ್ಳು ನೀರು ಅಪ್ಯಾಯಮಾನವಾಗಿರುತ್ತದೆ. ಶೀತ-ವಾತ ಜನ್ಯವಾದ ಜಡ್ಡು ಅಲಸ್ಯಗಳನ್ನು ದೂರ ಮಾಡುವ ಸ್ನೇಹ ದ್ರವ್ಯಗಳ ಹಂಚಿಕೆ, ಸೇವೆನೆ, ದಾನ-ಧರ್ಮ ಈ ಹಬ್ಬದ ವೈಶಿಷ್ಟ್ಯ. ಯುಗಾದಿಯಂದು ಬೇವು-ಬೆಲ್ಲ ಹಂಚುವಂತೆ, ಇಲ್ಲಿ ಎಳ್ಳು-ಬೆಲ್ಲ ಹಂಚುವುದು, ಮನಸ್ಸಿನ ಕಹಿ ಭಾವನೆ ಮರೆತು ಸಿಹಿ ಭಾವ ತುಂಬಿ ಅಮೃತ ಪುತ್ರರಾಗೋಣ ಎಂಬುದರ ದ್ಯೌತಕವಾಗಿದೆ. ಗಣೇಶಚತುರ್ಥಿ, ದೀಪಾವಳಿಗಳಂದು ಕಂಡುಬರುವ ಬಾಹ್ಯಾಡಂಬರ, ಬಾಣ ಬಿರುಸುಗಳೇ ಮುಂತಾದ ವ್ಯರ್ಥವಾದ ಖರ್ಚು-ವೆಚ್ಚಗಳು ಇಲ್ಲದಿರುವುದು ಈ ಹಬ್ಬದ ಅಗ್ಗಳಿಕೆಯೆನ್ನಬಹುದು. ಎಳ್ಳು - ಬೆಲ್ಲ, ಶೀತ - ವಾತದಿಂದ ಉಂಟಾಗುವ ಜಡ್ಡು, ಆಲಸ್ಯಗಳನ್ನು ದೂರಮಾಡುವ ಸ್ನೇಹ ದ್ರವ್ಯಗಳ ಹಂಚಿಕೆ, ಸೇವನೆ, ದಾನ ಈ ಸಂಕ್ರಾಂತಿಯ ವೈಶಿಷ್ಟ. ಶಿಎಳ್ಳು - ಬೆಲ್ಲ ತಿಂದು ಒಳ್ಳೆ ಮಾತಾಡುಷಿ ಎನ್ನುವುದೇ ಮಕರ ಸಂಕ್ರಾಂತಿಯ ಸಂದೇಶವಾಗಿದೆ. ನೋಡಿ ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉತ್ತರಾಯಣ ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಯನ ಸಂಕ್ರಾಂತಿಗಳು ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಂಕ್ರಾಂತಿ ಉಲ್ಲೇಖ ಹಬ್ಬಗಳು ಸಂಸ್ಕೃತಿ ಹಿಂದೂ ಧರ್ಮದ ಹಬ್ಬಗಳು
1665
https://kn.wikipedia.org/wiki/%E0%B2%85%E0%B2%AE%E0%B2%B0%E0%B3%80%E0%B2%B6%E0%B3%8D%20%E0%B2%AA%E0%B3%81%E0%B2%B0%E0%B2%BF
ಅಮರೀಶ್ ಪುರಿ
ಅಮರೀಶ್ ಪುರಿ (ಜೂನ್ ೨೨,೧೯೩೨ -ಜನವರಿ ೧೨, ೨೦೦೫) ಭಾರತೀಯ ಚಿತ್ರನಟ. ಸಾಮಾನ್ಯವಾಗಿ ಖಳನಾಯಕರ ಪಾತ್ರಗಳಲ್ಲಿ ನಟಿಸುತ್ತಿದ್ದ ಅಮರೀಶ್ ಪುರಿ, ಹೆಚ್ಚಾಗಿ ಹಿ೦ದಿ ಚಿತ್ರಗಳಲ್ಲಿ ನಟಿಸಿದವರು. ಕೆಲವು ತೆಲುಗು ಚಿತ್ರಗಳು ಹಾಗೂ ಎರಡು ಇ೦ಗ್ಲಿಷ್ ಚಿತ್ರಗಳಲ್ಲಿ ("ಗಾಂಧಿ" ಮತ್ತು "ಇ೦ಡಿಯಾನಾ ಜೋನ್ಸ್ ಎ೦ಡ್ ದ ಟೆ೦ಪಲ್ ಅಫ್ ಡೂಮ್) ಸಹ ನಟಿಸಿದ್ದರು. ಮಿಸ್ಟರ್ ಇ೦ಡಿಯಾ ಚಿತ್ರದ "ಮೊಗ್ಯಾ೦ಬೋ ಖುಷ್ ಹುವಾ" ವಾಕ್ಯದ ಮೂಲಕ ಬಹಳ ಪ್ರಸಿದ್ಧರಾದರು - ಈ ಚಿತ್ರ ಕನ್ನಡದಲ್ಲಿ "ಜೈ ಕರ್ನಾಟಕ" ಹೆಸರಿನಲ್ಲಿ ಪುನರ್ನಿರ್ಮಾಣಗೊ೦ಡಿತ್ತು. "ದಿಲ್‍ವಾಲೇ ದುಲ್ಹನಿಯಾ ಲೇ ಜಾಯೇ೦ಗೇ" ಚಿತ್ರದಲ್ಲಿ ಬಲದೇವ್ ಸಿ೦ಗ್ ಪಾತ್ರದ ಮೂಲಕ ಇ೦ಗ್ಲೆ೦ಡಿನಲ್ಲಿ ಸಹ ಪ್ರಸಿದ್ಧಿಗೆ ಬ೦ದಿದ್ದರು. ಕೆಲವು ತೆಲುಗು ಚಿತ್ರಗಳಲ್ಲಿಯೂ ನಟಿಸಿದ ಅಮರೀಶ್ ಪುರಿ, ತಾವೇ ತೆಲುಗಿನಲ್ಲಿ ಮಾತನ್ನೂ ಆಡುತ್ತಿದ್ದರು. ತಮ್ಮ ನಟನಾ-ಸಾಮರ್ಥ್ಯಕ್ಕೆ, ತಮ್ಮ ಧ್ವನಿ ಹಾಗೂ ಸ೦ಭಾಷಣೆಯ ಶೈಲಿಗೆ ಇವರು ಪ್ರಸಿದ್ಧರಾಗಿದ್ದರು. ಜನವರಿ ೧೨, ೨೦೦೫ ರಂದು ಅಮರೀಶ್ ಪುರಿ ಮು೦ಬೈ ನಗರದಲ್ಲಿ ಮೆದುಳಿನ ರಕ್ತಸ್ರಾವದಿ೦ದ ಮೃತರಾದರು. ka ಪ್ರಸಿದ್ಧ ಚಿತ್ರಗಳು ರೇಷ್ಮಾ ಔರ್ ಶೇರಾ (೧೯೭೧) ಗಾಂಧಿ (೧೯೮೨) ಇ೦ಡಿಯಾನಾ ಜೋನ್ಸ್ ಎ೦ಡ್ ದ ಟೆ೦ಪಲ್ ಅಫ್ ಡೂಮ್ (೧೯೮೪) ಮಿಸ್ಟರ್ ಇ೦ಡಿಯಾ (೧೯೮೭) ದಿಲ್‍ವಾಲೇ ದುಲ್ಹನಿಯಾ ಲೇ ಜಾಯೇ೦ಗೇ (೧೯೯೫) ಕಾಲಾ ಪಾನಿ (೧೯೯೬) ಪರ್ದೇಸ್ (೧೦೦೭) ಚಾಚೀ ೪೨೦ (೧೯೯೮) ಹಲ್ ಚಲ್ (೨೦೦೪) ಬಾಹ್ಯ ಸ೦ಪರ್ಕಗಳು ಅಮರೀಶ್ ಪುರಿ ಸಿನಿಮಾ ತಾರೆಗಳು ಬಾಲಿವುಡ್ ೧೯೨೩ ಜನನ ೨೦೦೫ ನಿಧನ
1670
https://kn.wikipedia.org/wiki/%E0%B2%AC%E0%B3%86%E0%B2%A8%E0%B3%8D%E0%B2%A8%E0%B2%BF%20%E0%B2%B9%E0%B2%BF%E0%B2%A8%E0%B3%8D
ಬೆನ್ನಿ ಹಿನ್
ಬೆನೆಡಿಕ್ಟಸ್ "ಬೆನ್ನಿ" ಹಿನ್ (ಜನನ: ೧೯೫೩), ಅಮೆರಿಕದಲ್ಲಿ ವಾಸಿಸುವ ಮೂಲತಃ ಆರ್ಮೇನಿಯಾದ ಕ್ರೈಸ್ತ ಪಾದ್ರಿ. ಇವರು ಹುಟ್ಟಿದ್ದು ಜೆರುಸಲೆ೦ನಲ್ಲಿ. ಪರಿಚಯ ೯೦ ರ ದಶಕದಲ್ಲಿ ತಮ್ಮ ಟಿವಿ ಕಾರ್ಯಕ್ರಮ "ದಿಸ್ ಇಸ್ ಯುವರ್ ಡೇ" (ಇದು ನಿಮ್ಮ ದಿನ) ದ ಮೂಲಕ ಬೆನ್ನಿ ಹಿನ್ ಪ್ರಸಿದ್ಧರಾದರು. ಈ ಕಾರ್ಯಕ್ರಮದಲ್ಲಿ ಬೆನ್ನಿ ಹಿನ್ ಅವರು ಕಾಹಿಲೆ ಬ೦ದ ವ್ಯಕ್ತಿಗಳನ್ನು ಸ್ಪರ್ಶದ ಮೂಲಕ ಗುಣಪಡಿಸುವ ಸಾಮರ್ಥ್ಯವನ್ನು ಹೊ೦ದಿರುವುದಾಗಿ ಹೇಳುತ್ತಿದ್ದರು, ಮತ್ತು ಇದನ್ನು ತೋರಿಸುವುದಕ್ಕೆ ಕೆಲ ಕಾರ್ಯಕ್ರಮಗಳನ್ನೂ ಪ್ರಸಾರ ಮಾಡಲಾಯಿತು. ಈ ರೀತಿಯ ಗುಣಪಡಿಸುವಿಕೆ ಸಾಕಷ್ಟು ವಿವಾದವನ್ನು ಸೃಷ್ಟಿಸಿ ಬೆನ್ನಿ ಹಿನ್ ಆಗಾಗ ಹಳದಿ ಪತ್ರಿಕೆಗಳಲ್ಲಿ ಬರಲಾರ೦ಭಿಸಿದರು. ಇತ್ತೀಚೆಗೆ ಬೆನ್ನಿ ಹಿನ್ ಅಮೆರಿಕದ ಸ೦ಯುಕ್ತ ಸ೦ಸ್ಥಾನ ಮತ್ತು ಪ್ರಪ೦ಚದ ವಿವಿಧೆಡೆಗಳಲ್ಲಿ ಸ೦ಚರಿಸುತ್ತಾರೆ. ಅನೇಕ ದೇಶಗಳ ಕ್ರೈಸ್ತ ಸಮುದಾಯಗಳಲ್ಲಿ ಬೆನ್ನಿ ಹಿನ್ ಸಾಕಷ್ಟು ವಿವಾದಾಸ್ಪದ ವ್ಯಕ್ತಿಯಾಗಿದ್ದಾರೆ. ಅವರು ನಿಜಕ್ಕೂ ದೇವರ ಮನುಷ್ಯರು ಎಂದು ಕೆಲವರು ನ೦ಬಿದರೆ, ಇತರರು ಹೇಳುವ೦ತೆ ಅದು ನಿಜವಲ್ಲ. ಇನ್ನು ಕೆಲವರು ಬೆನ್ನಿ ಹಿನ್ ರ ಹೇಳಿಕೆಗಳನ್ನು ಧರ್ಮಬಾಹಿರ ಎಂದು ಘೋಷಿಸಿದ್ದಾರೆ. ಡಿಸ೦ಬರ್ ೩೧, ೧೯೮೯ ರಂದು ಬೆನ್ನಿ ಹಿನ್ "ಆರ್ಲ್ಯಾ೦ಡೋ ಕ್ರೈಸ್ತ ಕೇ೦ದ್ರ" ಎ೦ಬ ತಮ್ಮ ಚರ್ಚ್ ನಲ್ಲಿ ಕೆಲವು ಭವಿಷ್ಯವಾಣಿಗಳನ್ನು ಘೋಷಿಸಿದರು. ಇವುಗಳಲ್ಲಿ ಎಲ್ಲವೂ ನಿಜವಾಗಿಲ್ಲ (ಉದಾ: ಕ್ಯೂಬಾ ದ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ ೯೦ ರ ದಶಕದಲ್ಲಿ ನಿಧನರಾಗುವರೆ೦ದು ಬೆನ್ನಿ ಹಿನ್ ಹೇಳಿಕೆಯನ್ನಿತ್ತಿದ್ದರು). ನವ೦ಬರ್ ೯, ೨೦೦೪ ರಂದು ಕೆನಡಾ ದ ಒಂದು ಟಿವಿ ಚಾನಲ್ ಬೆನ್ನಿ ಹಿನ್ ರನ್ನು ಟೀಕಿಸಿ ಒಂದು ಕಾರ್ಯಕ್ರಮವನ್ನು ಪ್ರಸಾರ ಮಾಡಿತು. ಬೆನ್ನಿ ಹಿನ್ ರವರು ಭಕ್ತರನ್ನು ಮೋಸಗೊಳಿಸಲು ಅನೇಕ ಚಟುವಟಿಕೆಗಳನ್ನು ನಡೆಸಿದ್ದಾರೆ ಎಂದು ಈ ಕಾರ್ಯಕ್ರಮ ತೋರಿಸಿತು. ಬೆನ್ನಿ ಹಿನ್ ರವರ ಚರ್ಚ್ ಈ ಕಾರ್ಯಕ್ರಮಕ್ಕೆ ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ. ಇತ್ತೀಚೆಗೆ (ಜನವರಿ ೨೧-೨೩) ಬೆ೦ಗಳೂರಿನಲ್ಲಿ ಬೆನ್ನಿ ಹಿನ್ "ಭಾರತಕ್ಕಾಗಿ ಪ್ರಾರ್ಥಿಸಿ" ಎ೦ಬ ಕಾರ್ಯಕ್ರಮವನ್ನು ಹಮ್ಮಿಕೊ೦ಡಿದ್ದಾರೆ. ಇದೂ ಸಹ ಬಹಳ ವಿವಾದವನ್ನು ಸೃಷ್ಟಿಸಿದೆ. ಬಾಹ್ಯ ಸ೦ಪರ್ಕಗಳು ಬೆನ್ನಿ ಹಿನ್ ರ ಚರ್ಚ್ ಬೆನ್ನಿ ಹಿನ್ ರ ಬಗ್ಗೆ ಟೀಕೆಗಳು ಕ್ರೈಸ್ತ ಧರ್ಮ ಪ್ರಚಾರಕರು
1671
https://kn.wikipedia.org/wiki/%E0%B2%97%E0%B2%A3%E0%B2%B0%E0%B2%BE%E0%B2%9C%E0%B3%8D%E0%B2%AF%E0%B3%8B%E0%B2%A4%E0%B3%8D%E0%B2%B8%E0%B2%B5%20%28%E0%B2%AD%E0%B2%BE%E0%B2%B0%E0%B2%A4%29
ಗಣರಾಜ್ಯೋತ್ಸವ (ಭಾರತ)
ಭಾರತೀಯ ಗಣರಾಜ್ಯೋತ್ಸವ ಪ್ರತಿ ವರ್ಷದ ಜನವರಿ 26 ರಂದು ಆಚರಿಸಲಾಗುವ ದಿನಾಚರಣೆ. ಭಾರತೀಯ ಸoವಿಧಾನ ಜಾರಿಗೆ ಬಂದು ಭಾರತವು ಗಣರಾಜ್ಯವಾದದ್ದು ಜನವರಿ 26, 1950 ರಂದು. ಇದರ ಪ್ರಯುಕ್ತ ಈ ದಿನವನ್ನು ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ. ಜನವರಿ ೨೬ ಭಾರತದಾದ್ಯಂತ ಸರ್ಕಾರಿ ರಜಾ ದಿನ. ಸಾಮಾನ್ಯವಾಗಿ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಇದರ ಪ್ರಯುಕ್ತ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು ಇದಲ್ಲದೆ ನವದೆಹಲಿಯಲ್ಲಿ ಭಾರತ ಸಶಸ್ತ್ರ ಪಡೆಗಳ ಪ್ರಭಾತಭೇರಿ ನಡೆಯುತ್ತದೆ.ಮತ್ತು ದೇಶದೆಲ್ಲೆಡೆ ಜನರು ಹೆಮ್ಮೆಯಿಂದ ಈ ದಿನವನ್ನು ಆಚರಿಸಲಾಗುತ್ತದೆ. ಇತಿಹಾಸ ಭಾರತವು ಆಗಸ್ಟ್ 15, 1947 ರಂದು ಸ್ವತಂತ್ರವಾದ ನಂತರ, ಆಗಸ್ಟ್ 29 ರಂದು, ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ಕರಡು ಸಮಿತಿಯನ್ನು ನೇಮಿಸಲಾಯಿತು. ಈ ಸಮಿತಿಯು ಸಂವಿಧಾನದ ಕರಡನ್ನು ಸಿದ್ಧಪಡಿಸಿ ನವೆಂಬರ್ 4, 1947 ರಂದು ವಿಧಾನಸಭೆಯಲ್ಲಿ ಮಂಡಿಸಿತು. ಇದನ್ನು ನವೆಂಬರ್ 26, 1949 ರಂದು ಅಂಗೀಕರಿಸಲಾಯಿತು ಮತ್ತು ಅನೇಕ ಪರಿಷ್ಕರಣೆಗಳು ಮತ್ತು ತಿದ್ದುಪಡಿಗಳ ನಂತರ, ಭಾರತದ ಸಂವಿಧಾನವು ಜನವರಿ 26, 1950 ರಂದು ಜಾರಿಗೆ ಬಂದಿತು. ಭಾರತೀಯ ಸ್ವಾತಂತ್ರ್ಯ ಚಳುವಳಿ, ಜನವರಿ 26, 1929 ರಂದು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪೂರ್ಣ ಸ್ವರಾಜ್ಯವನ್ನು ಗುರಿಯಾಗಿಸಿಕೊಂಡಿತು. ಲಾಹೋರ್‌ನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು ಮತ್ತು ದಿನವನ್ನು ಪೂರ್ಣ ಸ್ವರಾಜ್ ದಿನ ಎಂದು ಘೋಷಿಸಲಾಯಿತು. ಈ ಕಾರಣಕ್ಕಾಗಿಯೇ ಭಾರತದ ಸಂವಿಧಾನವನ್ನು ಸ್ವಾತಂತ್ರ್ಯದ ನಂತರ ಈ ದಿನದಂದು ಜಾರಿಗೆ ತರಲಾಯಿತು. ಚಿತ್ರ ಮುಖ್ಯ ಗಣರಾಜ್ಯೋತ್ಸವವನ್ನು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ರಾಜ್‌ಪಾತ್‌ನಲ್ಲಿ ಭಾರತದ ರಾಷ್ಟ್ರಪತಿಗಳ ಮುಂದೆ ನಡೆಸಲಾಗುತ್ತದೆ. ಈ ದಿನ, ರಾಜ್‌ಪಾತ್‌ನಲ್ಲಿ ವಿಧ್ಯುಕ್ತ ಮೆರವಣಿಗೆಗಳು ನಡೆಯುತ್ತವೆ, ಇದನ್ನು ಭಾರತಕ್ಕೆ ಗೌರವವಾಗಿ ನಡೆಸಲಾಗುತ್ತದೆ; ವೈವಿಧ್ಯತೆ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯಲ್ಲಿ ಅದರ ಏಕತೆ. ದೆಹಲಿ ಗಣರಾಜ್ಯೋತ್ಸವ ಮೆರವಣಿಗೆ ಮುಖ್ಯ ಲೇಖನ: ದೆಹಲಿ ಗಣರಾಜ್ಯೋತ್ಸವ ಮೆರವಣಿಗೆ ದೆಹಲಿ ಗಣರಾಜ್ಯೋತ್ಸವ ಮೆರವಣಿಗೆಯನ್ನು ರಾಜಧಾನಿ ನವದೆಹಲಿಯಲ್ಲಿ ರಕ್ಷಣಾ ಸಚಿವಾಲಯ ಆಯೋಜಿಸಿದೆ. ಭಾರತ ಗೇಟ್‌ನ ಹಿಂದೆ ರಾಜ್‌ಪಾತ್‌ನಲ್ಲಿರುವ ರಾಷ್ಟ್ರಪತಿ ಭವನ (ಅಧ್ಯಕ್ಷರ ನಿವಾಸ) ದ್ವಾರಗಳಿಂದ ಪ್ರಾರಂಭವಾದ ಈ ಘಟನೆಯು ಮೂರು ದಿನಗಳ ಕಾಲ ನಡೆಯುವ ಭಾರತದ ಗಣರಾಜ್ಯೋತ್ಸವದ ಪ್ರಮುಖ ಆಕರ್ಷಣೆಯಾಗಿದೆ. ಮೆರವಣಿಗೆ ಭಾರತದ ರಕ್ಷಣಾ ಸಾಮರ್ಥ್ಯ, ಸಾಂಸ್ಕೃತಿಕ ಮತ್ತು ಸಾಮಾಜಿಕ ಪರಂಪರೆಯನ್ನು ಪ್ರದರ್ಶಿಸುತ್ತದೆ. ನೌಕಾಪಡೆಗೆ ಹೆಚ್ಚುವರಿಯಾಗಿ ಭಾರತೀಯ ಸೇನೆಯ ಒಂಬತ್ತರಿಂದ ಹನ್ನೆರಡು ವಿಭಿನ್ನ ರೆಜಿಮೆಂಟ್‌ಗಳು, ಮತ್ತು ವಾಯುಪಡೆಯು ತಮ್ಮ ಬ್ಯಾಂಡ್‌ಗಳೊಂದಿಗೆ ತಮ್ಮ ಎಲ್ಲಾ ಉತ್ಕೃಷ್ಟ ಮತ್ತು ಅಧಿಕೃತ ಅಲಂಕಾರಗಳಲ್ಲಿ ಕಳೆದವು. ಭಾರತೀಯ ಸಶಸ್ತ್ರ ಪಡೆಗಳ ಕಮಾಂಡರ್-ಇನ್-ಚೀಫ್ ಆಗಿರುವ ಭಾರತದ ರಾಷ್ಟ್ರಪತಿಗಳು ವಂದನೆ ಸಲ್ಲಿಸುತ್ತಾರೆ. ಭಾರತದ ವಿವಿಧ ಪ್ಯಾರಾ-ಮಿಲಿಟರಿ ಪಡೆಗಳು ಮತ್ತು ಇತರ ನಾಗರಿಕ ಪಡೆಗಳ ಹನ್ನೆರಡು ತುಕಡಿಗಳು ಈ ಮೆರವಣಿಗೆಯಲ್ಲಿ ಭಾಗವಹಿಸುತ್ತವೆ. ಬೀಟಿಂಗ್ ರಿಟ್ರೀಟ್ ಮುಖ್ಯ ಲೇಖನ: ಹಿಮ್ಮೆಟ್ಟುವಿಕೆಯನ್ನು ಸೋಲಿಸುವುದು ಗಣರಾಜ್ಯೋತ್ಸವದ ಅಂತ್ಯವನ್ನು ಅಧಿಕೃತವಾಗಿ ಸೂಚಿಸಿದ ನಂತರ ಬೀಟಿಂಗ್ ರಿಟ್ರೀಟ್ ಸಮಾರಂಭವನ್ನು ನಡೆಸಲಾಗುತ್ತದೆ. ಗಣರಾಜ್ಯೋತ್ಸವದ ನಂತರದ ಮೂರನೇ ದಿನವಾದ ಜನವರಿ 29 ರ ಸಂಜೆ ಇದನ್ನು ನಡೆಸಲಾಗುತ್ತದೆ. ಇದನ್ನು ಮಿಲಿಟರಿ, ಭಾರತೀಯ ಸೇನೆ, ಭಾರತೀಯ ನೌಕಾಪಡೆ ಮತ್ತು ಭಾರತೀಯ ವಾಯುಪಡೆಯ ಮೂರು ರೆಕ್ಕೆಗಳ ತಂಡಗಳು ನಿರ್ವಹಿಸುತ್ತವೆ. ಈ ಸ್ಥಳವು ರೈಸಿನಾ ಬೆಟ್ಟ ಮತ್ತು ಪಕ್ಕದ ಚೌಕ, ವಿಜಯ್ ಚೌಕ್, ರಾಷ್ಟ್ರಪತಿ ಭವನದ (ಅಧ್ಯಕ್ಷರ ಅರಮನೆ) ಉತ್ತರ ಮತ್ತು ದಕ್ಷಿಣ ಭಾಗದಿಂದ ರಾಜ್‌ಪಾತ್‌ನ ಕೊನೆಯಲ್ಲಿ ಇದೆ. ಈ ಸಮಾರಂಭದ ಮುಖ್ಯ ಅತಿಥಿಯಾಗಿ ಭಾರತದ ರಾಷ್ಟ್ರಪತಿಗಳು ಅಶ್ವದಳದ ಘಟಕವಾದ (ಪಿಬಿಜಿ) ಬೆಂಗಾವಲು ಆಗಮಿಸುತ್ತಾರೆ. ಅಧ್ಯಕ್ಷರು ಬಂದಾಗ, ಪಿಬಿಜಿ ಕಮಾಂಡರ್ ಅವರು ರಾಷ್ಟ್ರೀಯ ವಂದನೆ ನೀಡುವಂತೆ ಘಟಕವನ್ನು ಕೇಳುತ್ತಾರೆ, ಅದರ ನಂತರ ಸೇನೆಯು ಭಾರತೀಯ ರಾಷ್ಟ್ರಗೀತೆ ಜನ ಗಣ ಮನವನ್ನು ನುಡಿಸುತ್ತದೆ. ಸೈನ್ಯವು ಸಾಮೂಹಿಕ ಬ್ಯಾಂಡ್‌ಗಳಿಂದ ಪ್ರದರ್ಶನ ಸಮಾರಂಭವನ್ನು ಅಭಿವೃದ್ಧಿಪಡಿಸುತ್ತದೆ, ಇದರಲ್ಲಿ ಮಿಲಿಟರಿ ಬ್ಯಾಂಡ್‌ಗಳು, ಪೈಪ್ ಮತ್ತು ಡ್ರಮ್ ಬ್ಯಾಂಡ್‌ಗಳು, ವಿವಿಧ ಸೇನಾ ರೆಜಿಮೆಂಟ್‌ಗಳ ಬಗ್ಲರ್‌ಗಳು ಮತ್ತು ಟ್ರಂಪೆಟರ್‌ಗಳು ಮತ್ತು ನೌಕಾಪಡೆ ಮತ್ತು ವಾಯುಪಡೆಯ ಬ್ಯಾಂಡ್‌ಗಳು ಭಾಗವಹಿಸುತ್ತವೆ, ಇದು ಮಹಾತ್ಮ ಗಾಂಧಿಯವರ ನೆಚ್ಚಿನ ಅಬೈಡ್ ವಿಥ್ ಮಿ ನಂತಹ ಜನಪ್ರಿಯ ರಾಗಗಳನ್ನು ನುಡಿಸುತ್ತದೆ. ಸ್ತುತಿಗೀತೆ, ಮತ್ತು ಕೊನೆಯಲ್ಲಿ ಸಾರೇ ಜಹಾನ್ ಸೆ ಅಚ್ಚಾ. ಪ್ರಶಸ್ತಿ ವಿತರಣೆ ಗಣರಾಜ್ಯೋತ್ಸವದ ಮುನ್ನಾದಿನದಂದು ಭಾರತದ ಅಧ್ಯಕ್ಷರು ಪ್ರತಿವರ್ಷ ಭಾರತದ ನಾಗರಿಕರಿಗೆ ಪದ್ಮಾ ಪ್ರಶಸ್ತಿಗಳನ್ನು ವಿತರಿಸಿದರು, ಇದು ಭಾರತದ ರತ್ನ ನಂತರದ ಪ್ರಮುಖ ಪ್ರಶಸ್ತಿ, ಇದು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ. ಈ ಪ್ರಶಸ್ತಿಯನ್ನು ಮೂರು ವಿಭಾಗಗಳಲ್ಲಿ ನೀಡಲಾಗಿದೆ, ಅಂದರೆ. ಪ್ರಾಮುಖ್ಯತೆಯ ಕ್ಷೀಣಿಸುತ್ತಿರುವ ಕ್ರಮದಲ್ಲಿ ಪದ್ಮವಿಭೂಷಣ, ಪದ್ಮಭೂಷಣ್ ಮತ್ತು ಪದ್ಮಶ್ರೀ. ಅಸಾಧಾರಣ ಮತ್ತು ವಿಶಿಷ್ಟ ಸೇವೆ" ಗಾಗಿ ಪದ್ಮವಿಭೂಷಣ್. ಪದ್ಮವಿಭೂಷಣ್ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ. "ಉನ್ನತ ಕ್ರಮಾಂಕದ ವಿಶಿಷ್ಟ ಸೇವೆ" ಗಾಗಿ ಪದ್ಮಭೂಷಣ್. ಪದ್ಮಭೂಷಣ್ ಭಾರತದ ಮೂರನೇ ಅತಿ ಹೆಚ್ಚು ನಾಗರಿಕ ಪ್ರಶಸ್ತಿ. "ವಿಶೇಷ ಸೇವೆ" ಗಾಗಿ ಪದ್ಮಶ್ರೀ ಅವರಿಗೆ ಪ್ರಶಸ್ತಿ ನೀಡಲಾಗುತ್ತದೆ. ಪದ್ಮಶ್ರೀ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ. ರಾಷ್ಟ್ರೀಯ ಗೌರವಗಳಾಗಿದ್ದರೂ, ಪದ್ಮಾ ಪ್ರಶಸ್ತಿಗಳು ನಗದು ಭತ್ಯೆಗಳು, ಪ್ರಯೋಜನಗಳು ಅಥವಾ ರೈಲು / ವಿಮಾನ ಪ್ರಯಾಣದಲ್ಲಿ ವಿಶೇಷ ರಿಯಾಯಿತಿಗಳನ್ನು ಒಳಗೊಂಡಿಲ್ಲ. ಭಾರತದ ಸುಪ್ರೀಂ ಕೋರ್ಟ್‌ನ 1995 ರ ಡಿಸೆಂಬರ್ ತೀರ್ಪಿನ ಪ್ರಕಾರ, ಯಾವುದೇ ಶೀರ್ಷಿಕೆಗಳು ಅಥವಾ ಗೌರವಗಳು ಭಾರತ್ ರತ್ನ ಅಥವಾ ಯಾವುದೇ ಪದ್ಮ ಪ್ರಶಸ್ತಿಗಳೊಂದಿಗೆ ಸಂಬಂಧ ಹೊಂದಿಲ್ಲ; ಗೌರವಿಸುವವರು ಅವುಗಳನ್ನು ಅಥವಾ ಅವರ ಮೊದಲಕ್ಷರಗಳನ್ನು ಪ್ರತ್ಯಯಗಳು, ಪೂರ್ವಪ್ರತ್ಯಯಗಳು ಅಥವಾ ಪ್ರಶಸ್ತಿ ಪುರಸ್ಕೃತರ ಹೆಸರಿಗೆ ಲಗತ್ತಿಸಲಾದ ಪೂರ್ವ ಮತ್ತು ನಂತರದ ನಾಮನಿರ್ದೇಶನಗಳಾಗಿ ಬಳಸಲಾಗುವುದಿಲ್ಲ. ಲೆಟರ್‌ಹೆಡ್‌ಗಳು, ಆಮಂತ್ರಣ ಪತ್ರಗಳು, ಪೋಸ್ಟರ್‌ಗಳು, ಪುಸ್ತಕಗಳು ಇತ್ಯಾದಿಗಳಲ್ಲಿ ಇದು ಅಂತಹ ಯಾವುದೇ ಬಳಕೆಯನ್ನು ಒಳಗೊಂಡಿದೆ. ಯಾವುದೇ ದುರುಪಯೋಗದ ಸಂದರ್ಭದಲ್ಲಿ, ಪ್ರಶಸ್ತಿ ಪುರಸ್ಕೃತನು ಪ್ರಶಸ್ತಿಯನ್ನು ಕಳೆದುಕೊಳ್ಳುತ್ತಾನೆ, ಮತ್ತು ಗೌರವವನ್ನು ಪಡೆದ ನಂತರ ಅಂತಹ ಯಾವುದೇ ದುರುಪಯೋಗದ ವಿರುದ್ಧ ಅವನು ಅಥವಾ ಅವಳು ಎಚ್ಚರಿಕೆ ವಹಿಸುತ್ತಾರೆ. ಅಲಂಕಾರವು ಅಧ್ಯಕ್ಷರ ಕೈ ಮತ್ತು ಮುದ್ರೆಯಡಿಯಲ್ಲಿ ನೀಡಲಾದ ಸನಾದ್ (ಪ್ರಮಾಣಪತ್ರ) ಮತ್ತು ಮೆಡಾಲಿಯನ್ ಅನ್ನು ಒಳಗೊಂಡಿದೆ. ಸ್ವೀಕರಿಸುವವರಿಗೆ ಪದಕದ ಪ್ರತಿಕೃತಿಯನ್ನು ಸಹ ನೀಡಲಾಗುತ್ತದೆ, ಅವರು ಬಯಸಿದರೆ ಯಾವುದೇ ವಿಧ್ಯುಕ್ತ / ರಾಜ್ಯ ಕಾರ್ಯಗಳು ಇತ್ಯಾದಿಗಳಲ್ಲಿ ಧರಿಸಬಹುದು. ಪ್ರತಿ ಪ್ರಶಸ್ತಿ ವಿಜೇತರಿಗೆ ಸಂಬಂಧಿಸಿದಂತೆ ಸಂಕ್ಷಿಪ್ತ ವಿವರಗಳನ್ನು ನೀಡುವ ಸ್ಮರಣಾರ್ಥ ಕರಪತ್ರವನ್ನು ಹೂಡಿಕೆ ಸಮಾರಂಭದ ದಿನದಂದು ಬಿಡುಗಡೆ ಮಾಡಲಾಗುತ್ತದೆ. ಮುಖ್ಯ ಅತಿಥಿ ಈ ದಿನದಂದು ಭಾರತವು ಇತರ ದೇಶಗಳ ನಾಯಕರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸುತ್ತದೆ. ಇದನ್ನೂ ನೋಡಿ ಸ್ವಾತಂತ್ರ್ಯ ದಿನಾಚರಣೆ ಭಾರತದ ಇತಿಹಾಸ ಹೆಚ್ಚಿನ ಮಾಹಿತಿ ಮೊದಲ ಗಣರಾಜ್ಯೋತ್ಸವದ ವಿಡಿಯೊ ಸಂವಿಧಾನ: ಜಾರಿ ತಡವಾದದ್ದೇಕೆ?;ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ; 26 ಜನವರಿ 2021 ರಣತಂತ್ರ ಮತ್ತು ಗಣತಂತ್ರ;;ನಾರಾಯಣ ಎ. Updated: 26 ಜನವರಿ 202 ಉಲ್ಲೇಖಗಳು ಭಾರತ ದಿನಾಚರಣೆಗಳು ಪ್ರಮುಖ ದಿನಗಳು
1672
https://kn.wikipedia.org/wiki/%E0%B2%AE%E0%B2%B0%E0%B2%BE%E0%B2%A4%E0%B3%8D%20%E0%B2%B8%E0%B2%BE%E0%B2%AB%E0%B2%BF%E0%B2%A8%E0%B3%8D
ಮರಾತ್ ಸಾಫಿನ್
ಮರಾತ್ ಸಾಫಿನ್ (ಜನನ:ಜನವರಿ ೨೭, ೧೯೮೦) ರಶ್ಶಿಯಾ ಮೂಲದ ಟೆನ್ನಿಸ್ ಆಟಗಾರ. ಇವರು ಆಸ್ಟ್ರೇಲಿಯನ್ ಓಪನ್ ೨೦೦೫ರ ಚ್ಯಾಂಪಿಯನ್. ೨೦೦೫ರ ಆಸ್ಟ್ರೇಲಿಯನ್ ಓಪನ್ ಸೆಮಿ ಫೈನಲ್‌ನಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ರೋಜರ್ ಫೆಡರರ್ ರವರನ್ನು ರೋಮಾಂಚಕ ಪಂದ್ಯದಲ್ಲಿ ಮಣಿಸಿ ಫೈನಲ್ ಪ್ರವೇಶಿಸಿದರು. ಫೈನಲ್‌ನಲ್ಲಿ ಲ್ಯೂಟನ್ ಹೆವಿಟ್‌ರವರನ್ನು ಮಣಿಸಿದರು. ಮರಾತ್ ಸಾಫಿನ್‌ನ ಸಾಧನೆ ಹೊರಗಿನ ಸಂಪರ್ಕಗಳು Profile on ATP website The Guy From Russia Fansite Safinator Fansite ಕ್ರೀಡಾಪಟುಗಳು ಟೆನ್ನಿಸ್ ಟೆನ್ನಿಸ್_ಕ್ರೀಡಾಪಟುಗಳು
1676
https://kn.wikipedia.org/wiki/%E0%B2%9C%E0%B3%81%E0%B2%97%E0%B2%BE%E0%B2%B0%E0%B2%BF%20%E0%B2%95%E0%B3%8D%E0%B2%B0%E0%B2%BE%E0%B2%B8%E0%B3%8D
ಜುಗಾರಿ ಕ್ರಾಸ್
ಜುಗಾರಿ ಕ್ರಾಸ್ ಪೂರ್ಣಚಂದ್ರ ತೇಜಸ್ವಿಯವರ ಒಂದು ಕೃತಿ. ಪ್ರಕಾಶಕರು: ಪುಸ್ತಕ ಪ್ರಕಾಶನ. ಕಥೆ ಕನ್ನಡದ ಶ್ರೇಷ್ಠ ಬರಹಗಾರರಲ್ಲಿ ಪೂರ್ಣಚಂದ್ರ ತೇಜಸ್ವಿಯವರು ಒಬ್ಬರು. ಅವರ ಪ್ರತಿಯೊಂದು ಕೃತಿಗಳು ವಿಶಿಷ್ಟವಾದವುಗಳು. ಜುಗಾರಿ ಕ್ರಾಸ್ ಮಲೆನಾಡಿನ ಒಬ್ಬ ಕೃಷಿಕ ದಂಪತಿಗಳ ಸ್ವಾರಸ್ಯಕರ ಕಥೆಯಾಗಿದೆ. ಸಂಪೂರ್ಣ ಕೃತಿಯು ಮಲೆನಾಡಿನ ಆಡುಭಾಷೆಯಲ್ಲೆ ಬರೆಯಲ್ಪಟ್ಟಿದ್ದು ಓದುವರಿಗೆ ಬಹಳ ಮನರಂಜನೆಯನ್ನು ಕೊಡುತ್ತದೆ. ಲೇಖಕ ಪೂರ್ಣಚಂದ್ರ ತೇಜಸ್ವಿಯವರು ಮಲೆನಾಡಿನ ಜೇವನ, ಪರಿಸರ ಹಾಗು ಅಲ್ಲಿನ ಕಷ್ಟ-ಸುಖಗಳನ್ನು ಬಹಳ ಸೊಗಸಾಗಿ ವರ್ಣಿಸಿದ್ದಾರೆ. ಕಥೆಯು ಕಾಲ್ಪನಿಕವಾದರೂ, ನೈಜತೆಗೆ ಬಹಳ ಹತ್ತಿರವಾಗಿದೆ. ಮಲೆನಾಡಿನ ದಟ್ಟ ಕಾಡುಗಳಲ್ಲಿ ಬದುಕುತ್ತಿರುವ ಜನರ ಜೀವನದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಈ ಕೃತಿಯಲ್ಲಿ ಚಿತ್ರಿಸಲಾಗಿದೆ. ಈ ಕೃತಿ ಮಲೆನಾಡಿನಲ್ಲಿ ನಡೆಯುತ್ತಿರುವ ಅರಣ್ಯನಾಶದ ಬಗ್ಗೆಯೂ ಬೆಳಕು ಚೆಲ್ಲುತ್ತದೆ. ಇದೊಂದು ಕೇವಲ ೨೪ ಗಂಟೆಗಳ ಅವಧಿಯಲ್ಲಿ ನಡೆಯುವ ಪತ್ತೆದಾರಿ ಕಾದಂಬರಿಯಾಗಿದೆ. ಈ ಘಟನೆ ನಡೆಯುವ ಪ್ರದೇಶ ಮಂಗಳೂರು - ಬೆಂಗಳೂರು ರಸ್ತೆಯಲ್ಲಿರುವ ಜುಗಾರಿ ಕ್ರಾಸ್ ಮತ್ತು ದೇವಪುರಗಳಲ್ಲಿ. ಕಾದಂಬರಿಯಲ್ಲಿ ರಹಸ್ಯವಾಗಿ ನಡೆಯುವ ಅಪರಾಧ ಪ್ರಕರಣಗಳು ಒಂದು ಕಥೆಯಾದರೆ, ಪತ್ತೆದಾರ ಅವುಗಳನ್ನು ಬಯಲಿಗೆಳೆಯುವ ಕತೆ ಇನ್ನೊಂದು. ಬಸ್ಸಿನಲ್ಲಿ ಪ್ರಯಾಣ ಮಾಡುವ ಸುರೇಶ ಮತ್ತು ಗೌರಿಯರ ಒಂದು ದಿನದ ಅನುಭವ ಓದುಗನಿಗೆ ಒಂದು ಯುಗದ ಅನುಭವವನ್ನು ಉಂಟುಮಾಡುತ್ತದೆ. ಯಾಲಕ್ಕಿಯ ಮೂಟೆಯನ್ನು ಮಾರಲು ಬಸ್ಸಿನಲ್ಲಿ ಸಾಗಿಸುವಾಗ ಸುರೇಶ - ಗೌರಿಯರು ತಮಗೆ ಗೊತ್ತಿಲ್ಲದಂತೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಭೂಗತ ಜಗತ್ತಿನ ಚಕ್ರವ್ಯೂಹದೊಳಗೆ ಸಿಲುಕಿ ಕೊನೆಗೆ ಪಾರಾಗುತ್ತಾರೆ. ಹಾಗೆ ನೋಡಿದರೆ ಇದು ಸಾಹಸ ಕಥೆಯಾಗಿದೆ. ಇವರಿಬ್ಬರ ಸಾಹಸ ಸಿದ್ದಿಯೆಂದರೆ ಕೊನೆಗೆ ಜೀವ ಉಳಿಸಿಕೊಳ್ಳುವುದಾಗಿದೆ. ’ಜುಗಾರಿ ಕ್ರಾಸ್’ ಕಾದಂಬರಿಯ ಮೊದಲ ಭಾಗ ಅಮೂರ್ತವಾದ ಭೂಗತ ಜಗತ್ತಿನ ಸ್ವರೂಪವನ್ನು ಪರಿಚಯ ಮಾಡಿಕೊಟ್ಟರೆ, ಎರಡನೆಯ ಭಾಗದಲ್ಲಿ ಸುರೇಶ - ಗೌರಿಯರು ಅದರಲ್ಲಿ ಸಿಕ್ಕಿ ತಪ್ಪಿಸಿಕೊಳ್ಳಲು ಹೆಣಗಾಡುವ ಚಿತ್ರಣವಿದೆ. ಈ ಹೆಣಗಾಟದಲ್ಲಿ ಮನ್ಮಥ ಬೀಡಾಸ್ಟಾಲ್ ನ ಶೇಷಪ್ಪ, ಸುರೇಶನ ಸಹಪಾಟಿ ರಾಜಪ್ಪ ಸೇರಿಕೊಳ್ಳುತ್ತಾರೆ. ಭೂಗತ ಜಗತ್ತೆಂದರೆ ಕೊಲೆ ಮಾಡುವುದು ಅಥವಾ ಕೊಲೆಯಾಗುವುದು ಇವೆರಡರ ನಡುವೆಯೇ ಅದರ ಅಸ್ತಿತ್ವ. ಇನ್ನೊಂದು ಸಾಧ್ಯತೆಯೆಂದರೆ ಆತ್ಮಹತ್ಯೆ ಅಷ್ಟೆ. ಮೂಕಿ ದ್ಯಾವಮ್ಮನ ಮಗಳು ಹೂವಿನ ಮಾಲೆಗಳನ್ನು ಮಾರುತ್ತಿರುವಾಗ ದೌಲತರಾಮ ಅವಳಿಗೆ ಹತ್ತು ರೂಪಾಯಿ ನೋಟು ಕೊಟ್ಟು ಅವಳನ್ನು ಅಲ್ಲಿಂದ ಸಾಗಹಾಕುವುದು ತಾವು ಮಾಡುವ ಕೃತ್ಯಕ್ಕೆ ಅಡ್ಡಲಾಗಿದ್ದಾಳೆಂಬ ಕಲ್ಪನೆ ಅವರಿಗೆ. ಅವಳು ತನಗೆ ಗೊತ್ತಿಲ್ಲದೆ ಬಂದು ಅಪರಾಧದ ಕೃತ್ಯಕ್ಕೆ ಅಡ್ಡಲಾಗಿ ನಿಂತಿರುವುದೇ ಅವಳ ತಪ್ಪು. ಸುರೇಶ ಗೌರಿಯರು ಕೂಡ ಅವಳಂತೆ ತಮಗೆ ಅರಿವಾಗದಂತೆ ಅಪರಾಧದ ವಿರುದ್ಧ ನಿಂತಿದ್ದಾರೆ. ಈ ಅಪರಾಧಗಳ ಲೋಕದ ಅನಾವರಣವನ್ನು ಪತ್ತೇದಾರನಾದ ರಾಜಪ್ಪ ಮಾಡಲು ಹೋಗುತ್ತಾನೆ. ಹಳೆಯ ಕಾವ್ಯದ ಕಡತ - ಸಹ್ಯಾದ್ರಿ ಶಿಖರವೊಂದರಲ್ಲಿ ಕೆಂಪು ರತ್ನಗಳಿರುವ ಸ್ಥಳದ ಸುಳಿವು ಭೂಗತ ಜಗತ್ತಿನ ಅನಾವರಣದ ವಸ್ತುಗಳಾಗಿವೆ. ಒಟ್ಟಿನಲ್ಲಿ ಜುಗಾರಿ ಕ್ರಾಸ್ ಕಾದಂಬರಿಯಲ್ಲಿ ಅಂತರ್ಗತವಾಗಿರುವ ಸಾಹಸ ಕಥೆ ಮತ್ತು ಪತ್ತೇದಾರಿ ಕಾದಂಬರಿಯಾಗಿ ಅದ್ಭುತವಾಗಿ ಮೂಡಿಬಂದಿದೆ. ಕಾದಂಬರಿಯನ್ನು ಓದುತ್ತಾ ಹೋದಂತೆ ಕಲ್ಪನಾ ಜಗತ್ತಿನಲ್ಲಿ ನಿಂತು ನೋಡುತ್ತಿರುವಂತೆ ತಾನು ಅದರಲ್ಲಿನ ಪಾತ್ರವೆಂಬಂತೆ ಓದುಗನಿಗೆ ಭಾಷವಾಗುತ್ತದೆ. ಪೂರ್ಣಚಂದ್ರ ತೇಜಸ್ವಿಯವರ ಕೃತಿಗಳು
1680
https://kn.wikipedia.org/wiki/%E0%B2%8E%E0%B2%9A%E0%B3%8D-II%20%E0%B2%AA%E0%B3%8D%E0%B2%B0%E0%B2%A6%E0%B3%87%E0%B2%B6
ಎಚ್-II ಪ್ರದೇಶ
ಎಚ್-೨ ಪ್ರದೇಶ ಅ೦ತರಿಕ್ಷದಲ್ಲಿ ಹೊಳೆಯುತ್ತಿರುವ ನೂರಾರು ಜ್ಯೋತಿರ್ವರ್ಷಗಳಷ್ಟುಗಳಷ್ಟು ಅಗಲವಾದ ಅನಿಲ ಮೋಡ; ಹೊಸ ನಕ್ಷತ್ರಗಳು ರೂಪುಗೊಳ್ಳುತ್ತಿರುವ ಪ್ರದೇಶ. ಆಗಿನ್ನೂ ರೂಪುಗೊಳ್ಳುತ್ತಿರುವ ಅತ್ಯ೦ತ ಬಿಸಿಯಾದ ನೀಲಿ ನಕ್ಷತ್ರಗಳು ಅತಿನೇರಳೆ ಕಿರಣಗಳನ್ನು ಹೊಮ್ಮಿಸುತ್ತ ಇಲ್ಲಿನ ಅನಿಲ ಮೋಡವನ್ನು ಬೆಳಗಿಸುತ್ತವೆ. ಕೆಲ ಕೋಟಿ ವರ್ಷಗಳ ಕಾಲದಲ್ಲಿ ಸಾವಿರಾರು ನಕ್ಷತ್ರಗಳು ಒಂದು ಎಚ್-೨ ಪ್ರದೇಶದಲ್ಲಿ ರೂಪುಗೊಳ್ಳಬಹುದು. ಈ ಕಾಲದ ಕೊನೆಗೆ ಸೂಪರ್ ನೋವಾ ಸ್ಫೋಟಗಳು ಮೊದಲಾದ ಚಟುವಟಿಕೆಗಳಿ೦ದ ಅನಿಲ ಮೋಡ ಚದುರಿ ನಕ್ಷತ್ರಗಳ ಗು೦ಪು ಮಾತ್ರ ಉಳಿಯುತ್ತದೆ. ಅತ್ಯ೦ತ ಪ್ರಕಾಶಮಾನವಾದ ಎಚ್-೨ ಪ್ರದೇಶಗಳು ಬರಿಗಣ್ಣಿಗೆ ಕಾಣಸಿಗುತ್ತವೆ. ಮಾನವರು ಗಮನಿಸಿದ ಮೊದಲ ಎಚ್-೨ ಪ್ರದೇಶ ಒರೈಯನ್ ನೀಹಾರಿಕೆಯಲ್ಲಿದೆ; ಇದನ್ನು ೧೬೧೦ ರಲ್ಲಿ ಗಮನಿಸಲಾಯಿತು. ಮೊದಲಿಗೆ ಎಚ್-೨ ಪ್ರದೇಶಗಳ ಪ್ರಾಮುಖ್ಯತೆ ತಿಳಿದುಬ೦ದಿರಲಿಲ್ಲ, ೧೯೨೦ ರ ದಶಕದಲ್ಲಿ ನಡೆದ ಖಗೋಳಶಾಸ್ತ್ರದ ಸ೦ಶೋಧನೆಗಳ ಮೂಲಕ ಎಚ್-೨ ಪ್ರದೇಶಗಳಲ್ಲಿ ಅತ್ಯ೦ತ ಬಿಸಿಯಾದ ಯುವ ನಕ್ಷತ್ರಗಳು ಇರುವುದು ತಿಳಿದುಬ೦ದಿತು. ಈ ಪ್ರದೇಶಗಳಲ್ಲಿಯೇ ನಕ್ಷತ್ರಗಳು ಸಕ್ರಿಯವಾಗಿ ರೂಪುಗೊಳ್ಳುತ್ತವೆ ಎ೦ಬುದನ್ನೂ ಕ೦ಡುಹಿಡಿಯಲಾಯಿತು. ಬಾಹ್ಯ ಸಂಪರ್ಕಗಳು Hubble images of nebulae including several H II regions Information from SEDS Harvard astronomy course notes on H II regions ವಿಜ್ಞಾನ ಖಗೋಳಶಾಸ್ತ್ರ
1681
https://kn.wikipedia.org/wiki/%E0%B2%9C%E0%B3%8D%E0%B2%AF%E0%B3%8B%E0%B2%A4%E0%B2%BF%E0%B2%B0%E0%B3%8D%E0%B2%B5%E0%B2%B0%E0%B3%8D%E0%B2%B7
ಜ್ಯೋತಿರ್ವರ್ಷ
ಜ್ಯೋತಿರ್ವರ್ಷ - ಖಗೋಳಶಾಸ್ತ್ರದಲ್ಲಿ ಉಪಯೋಗಿಸಲ್ಪಡುವ ಒಂದು ದೂರಮಾನ. ಬೆಳಕು ಒಂದು ವರ್ಷದಲ್ಲಿ ಸಾಗುವ ದೂರಕ್ಕೆ ಒಂದು ಜ್ಯೋತಿರ್ವರ್ಷವೆ೦ದು ಹೆಸರು. ಇನ್ನೂ ಸ್ಪಷ್ಟವಾಗಿ, ಒಂದು ಫೋಟಾನ್ (ಬೆಳಕಿನ ಕಣ) ಮುಕ್ತವಾದ ಅವಕಾಶದಲ್ಲಿ, ಯಾವುದೇ ಗುರುತ್ವ ಅಥವಾ ಅಯಸ್ಕಾ೦ತ ಕ್ಷೇತ್ರಗಳಿ೦ದ ದೂರವಿರುವಾಗ ಒಂದು ವರ್ಷದಲ್ಲಿ ಸಾಗುವ ದೂರ. ಇ೦ತಹ ಪರಿಸ್ಥಿತಿಯಲ್ಲಿ ಬೆಳಕಿನ ವೇಗ ಕ್ಷಣಕ್ಕೆ ಸುಮಾರು ೨.೯೯ ಲಕ್ಷ ಕಿಮೀ. ಹಾಗಾಗಿ ಒಂದು ಜ್ಯೋತಿವರ್ಷ ಸುಮಾರು ೯.೪ ಲಕ್ಷ ಕೋಟಿ ಕಿಮೀ ದೂರಕ್ಕೆ ಸಮ. ಜ್ಯೋತಿರ್ವರ್ಷದ ಮಾದರಿಯಲ್ಲೇ ಉಪಯೋಗಿಸಲಾಗುವ ಇನ್ನೆರಡು ದೂರಮಾನಗಳೆ೦ದರೆ "ಜ್ಯೋತಿರ್ನಿಮಿಷ" ಮತ್ತು "ಜ್ಯೋತಿರ್ಕ್ಷಣ" ಗಣಿತಶಾಸ್ತ್ರದ ಪ್ರಕಾರ ೩,೦೦,೦೦೦ ಕಿ.ಮೀ.(ಬೆಳಕಿನ ವೇಗ ಪ್ರತಿ ಸೆಕೆಂಡಿಗೆ)x ೩೬೫ (ಒಂದು ವರುಷ)x ೨೪ (ದಿನ)x ೬೦(ನಿಮಿಷ)x ೬೦ (ಸೆಕೆಂಡು)= ೯೪,೬೦,೮೦,೦೦,೦೦,೦೦೦ ಕಿ.ಮೀ. ಜ್ಯೋತಿರ್ವರ್ಷ ದೂರದ ಮಾಪನ. ಬೆಳಕು ಒಂದು ವರ್ಷಕ್ಕೆ ಎಷ್ಟು ದೂರ ಚಲಿಸುತ್ತದೋ ಅಷ್ಟು ದೂರವೇ ಒಂದು ಜ್ಯೋತಿರ್ವರ್ಷ. ಬೆಳಕಿನ ವೇಗ ೧ ಕ್ಷಣಕ್ಕೆ ೩,೦೦,೦೦೦ ಕಿ.ಮೀ. ೧ ನಿಮಿಷ = ೬೦ ಕ್ಷಣ = ೬೦ x ೩೦೦೦೦೦ = ೧,೮೦,೦೦,೦೦೦ ಕಿ.ಮೀ. ೧ ಘಂಟೆ = ೬೦ ನಿಮಿಷ = ೬೦ x ೧೮೦೦೦೦೦೦ = ೧೦೮,೦೦,೦೦,೦೦೦ ಕಿ.ಮೀ. ೧ ದಿನ = ೨೪ ಘಂಟೆ = ೨೪ x ೧೦೮೦೦೦೦೦೦೦ = ೨,೫೯೨,೦೦,೦೦,೦೦೦ ಕಿ.ಮೀ. ೧ ವರ್ಷ = ೩೬೫ ದಿನ = ೩೬೫ x ೨೫೯೨೦೦೦೦೦೦೦ = ೯,೪೬,೦೮೦,೦೦,೦೦,೦೦೦ ಕಿ.ಮೀ. ಹಾಗಾಗಿ ೧ ಜ್ಯೋತಿರ್ವರ್ಷವೆಂದರೆ ೯ ಲಕ್ಷದ ೪೬ ಸಾವಿರದ ೮೦ ಕೋಟಿ ಕಿ.ಮೀ.ಗಳು (ಸುಮಾರು). ನಿಖರವಾಗಿ ಜ್ಯೋತಿರ್ವರ್ಷ ಪದದಲ್ಲಿ ತುದಿಗೆ 'ವರ್ಷ'ವೆಂದಿದ್ದರೂ ಅದು 'ಕಾಲ' ಸೂಚಕ ಪದವಲ್ಲ; ದೂರದ ಅಳತೆ ಬೆಳಕಿನ ವೇಗ (299792458 ಮೀಟರ್ /ಸೆಕೆಂಡಿಗೆ) // (365.25 ದಿನಗಳಲ್ಲಿ ಕ್ರಮಿಸುವ ದೂರ. 1 ಜ್ಯೋತಿರ್ವರ್ಷ = 946073047,25,80,800 ಮೀಟರ್ /9,46,073,04,72,580.8 ಕಿ. ಮೀಟರ್ (ನಿಖರವಾಗಿ) 1 ಜ್ಯೋತಿರ್ವರ್ಷ= 9 ಕೋಟಿ 46 ಲಕ್ಷ 073 ಕೋಟಿ, 04 ಲಕ್ಷದ,72 ಸಾವಿರದ 580.8 ಕಿ. ಮೀಟರ್.(ನಿಖರವಾಗಿ)... ನೋಡಿ ಸೂರ್ಯ ಬ್ರಹ್ಮಾಂಡ ಮಹಾಸ್ಪೋಟ ವಿಜ್ಞಾನ ಖಭೌತಶಾಸ್ತ್ರ ಖಗೋಳಶಾಸ್ತ್ರ
1683
https://kn.wikipedia.org/wiki/%E0%B2%AE%E0%B3%8C%E0%B2%B0%E0%B3%8D%E0%B2%AF%20%E0%B2%B8%E0%B2%BE%E0%B2%AE%E0%B3%8D%E0%B2%B0%E0%B2%BE%E0%B2%9C%E0%B3%8D%E0%B2%AF
ಮೌರ್ಯ ಸಾಮ್ರಾಜ್ಯ
ಮೌರ್ಯ ಸಾಮ್ರಾಜ್ಯ ಭಾರತವನ್ನು ಒಗ್ಗೂಡಿಸಿದ ಮೊದಲ ದೊಡ್ಡ ಸಾಮ್ರಾಜ್ಯ. ಕ್ರಿ.ಪೂ. 324 ರಿಂದ ಕ್ರಿ.ಪೂ. 185 ರ ವರೆಗೆ ಅಸ್ತಿತ್ವದಲ್ಲಿದ್ದ ಈ ಸಾಮ್ರಾಜ್ಯ, ಮೌರ್ಯ ವಂಶದ ಚಕ್ರವರ್ತಿಗಳಿಂದ ಆಳಲ್ಪಟ್ಟಿತ್ತು. ಇದರ ತುತ್ತ ತುದಿಯಲ್ಲಿ ಇದು ಆಧುನಿಕ ಭಾರತದ ಬಹುಭಾಗವನ್ನು ಒಳಗೊಂಡಿತ್ತಲ್ಲದೆ, ಪಾಕಿಸ್ತಾನ ಮತ್ತು ಭಾಗಶಃ ಅಫ್ಘಾನಿಸ್ತಾನಗಳನ್ನೂ ಒಳಗೊಂಡಿತ್ತು. ಮೌರ್ಯರ ಏಳಿಗೆ ಭಾರತದ ಇತಿಹಾಸದಲ್ಲಿ ಕತ್ತಲೆಯಿಂದ ಬೆಳಕಿನತ್ತ ಕಾಲಿಡುವ ಕಾಲ ಎಂದು ವಿ.ಎ. ಸ್ಮಿತ್ ಹೇಳಿದ್ದಾರೆ. ಉಗಮ ಮಗಧ(ಇಂದಿನ ಬಿಹಾರದ ಭಾಗ) ಪ್ರದೇಶದಲ್ಲಿ ಇದ್ದ ೧೬ ಜನಪದವನ್ನು(ಅಥವಾ ಗಣರಾಜ್ಯವನ್ನು) ಸೋಲಿಸಿ ಹರ್ಯಂಕ ವಂಶದವರು ಪ್ರಬಲ ಸಾಮ್ರಾಜ್ಯ ಕಟ್ಟಿದರು. ನಂತರ, ಮಗಧವನ್ನು ನಂದವಂಶದವರು ಸುಮಾರು ೬೦ ವರ್ಷಗಳ ಕಾಲ ಆಳಿದರು. ಅಲೆಗ್ಸಾಂಡರನ ದಂಡಯಾತ್ರೆ ನಂದವಂಶದವರನ್ನು ಎದುರಿಸುವ ಮುನ್ನವೇ ಹಿಂತಿರುಗಿತು. ಅಲೆಕ್ಸಾಂಡರ್ ಭಾರತದಿಂದ ಹಿಂದಿರುಗಿ ಕ್ರಿ.ಪೂ. ೩೨೪ರಲ್ಲಿ ನಿಧನನಾದ ನಂತರ ಭಾರತದಲ್ಲಿನ ಆತನ ಸಾಮ್ರಾಜ್ಯ ಹಂಚಿಹೋಗಲಾರಂಭಿಸಿತು. ಆಗ ಸೃಷ್ಟಿಯಾದ ಅವಕಾಶಗಳನ್ನು ಭಾರತದಲ್ಲಿ ಉಪಯೋಗಿಸಿಕೊಂಡದ್ದು ಚಂದ್ರಗುಪ್ತ ಮೌರ್ಯ. ಗ್ರೀಕರ ದಾಳಿಯಿಂದ ಅಸ್ತವ್ಯಸ್ಥಗೊಂಡ ಪಂಜಾಬನ್ನು ಚಂದ್ರಗುಪ್ತ ಮೌರ್ಯ ತನ್ನ ಅಧಿಪತ್ಯವನ್ನು ಪ್ರಾರಂಭಿಸಿದ. ಸುಮಾರು ಕ್ರಿ.ಪೂ. ೩೨೩ರಲ್ಲಿ ಅಲೆಗ್ಸಾಂಡರನ ಭಾರತದ ಭಾಗಗಳನ್ನು ಗೆದ್ದು, ೩೨೧ರಲ್ಲಿ ಪಾಟಲಿಪುತ್ರವನ್ನು ಗೆದ್ದ. ನಂದರ ದುರಾಡಳಿತವೂ ಅವರ ಪತನಕ್ಕೆ ಕಾರಣವಾಗಿ, ಚಂದ್ರಗುಪ್ತನಿಗೆ ಸಹಾಯವಾಯಿತು. ಸಾಮ್ರಾಜ್ಯದ ಸ್ಥಾಪನೆ ಸಾಮ್ರಾಜ್ಯದ ಸ್ಥಾಪನೆಗೆ ಮೂಲ ಕಾರಣವೇ ತಕ್ಷಶಿಲೆಯ ಅರ್ಥಶಾಸ್ತ್ರಜ್ಞ (ಚಾಣಕ್ಯ) ಕೌಟಿಲ್ಯ.ತಕ್ಷಶಿಲೆಯವನಾಗಿದ್ದಿರಬಹುದಾದ ಚಂದ್ರಗುಪ್ತ ಅನೇಕ ಬಾರಿ ಗ್ರೀಕರ ಯುದ್ಧನೀತಿಗಳನ್ನು ಗಮನಿಸಿದ್ದ.ಅಲೆಕ್ಸಾಂಡರನ ಸಾಮ್ರಾಜ್ಯದ ಅವನತಿಯ ನಂತರ ಗ್ರೀಕರ ಯುದ್ಧತಂತ್ರಗಳೊಂದಿಗೆ ತನ್ನ ತಂತ್ರಗಳನ್ನು ಸೇರಿಸಿ(ಚಾಣಕ್ಯ)ಕೌಟಿಲ್ಯನ ಸಹಾಯದೊಂದಿಗೆ ಮಗಧ ರಾಜ್ಯದ ನಂದವಂಶದ ಆಗಿನ ದೊರೆಯಾಗಿದ್ದ ಧನಾನಂದನನ್ನು ಅಧಿಕಾರದಿಂದ ಇಳಿಸಿ ಗಂಗಾ ನದಿ ತೀರದಲ್ಲಿ ತನ್ನ ಸಾಮ್ರಾಜ್ಯವನ್ನು ಕ್ರಿ.ಪೂ.೩೨೧ ರಲ್ಲಿ ಸ್ಥಾಪಿಸಿದ. ನಂತರ ಇಂದಿನ ಪಂಜಾಬವನ್ನು ಸಹ ಗೆದ್ದು ತಕ್ಷಶಿಲೆಯವರೆಗೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದ. ಮೌರ್ಯ ಸಾಮ್ರಾಟರು ಚಂದ್ರಗುಪ್ತ ಕ್ರಿ.ಪೂ. ೩೦೧ ರಲ್ಲಿ ಸೆಲ್ಯೂಸಿಡ್ ಸಾಮ್ರಾಜ್ಯದ ಚಕ್ರವರ್ತಿ ಸೆಲ್ಯೂಕಸ್, ಭಾರತದ ಉತ್ತರಪಶ್ಚಿಮದಲ್ಲಿ ಕಳೆದುಕೊಂಡಿದ್ದ ಭಾಗಗಳನ್ನು ಮತ್ತೊಮ್ಮೆ ಗೆದ್ದುಕೊಳ್ಳಲು ಪ್ರಯತ್ನಿಸಿದ. ಸ್ಪಷ್ಟ ಫಲಿತಾಂಶ ಕಾಣದ ಯುದ್ಧದ ನಂತರ ಸೆಲ್ಯೂಕಸ್ ಮತ್ತು ಚಂದ್ರಗುಪ್ತ ಶಾಂತಿಯ ಒಪ್ಪಂದ ಮಾಡಿಕೊಂಡರು. ಸೆಲ್ಯೂಕಸ್ ನ ಮಗಳನ್ನು ಚಂದ್ರಗುಪ್ತ ವಿವಾಹವಾದದ್ದಲ್ಲದೆ, ಗಾಂಧಾರ ಮತ್ತು ಅರಕೋಸಿಯಾ ಪ್ರಾಂತ್ಯಗಳನ್ನು ಪಡೆದ. ಹಾಗೆಯೇ ಸೆಲ್ಯೂಕಸ್ ಚಂದ್ರಗುಪ್ತನ ಸೈನ್ಯದಿಂದ ೫೦೦ ಯುದ್ಧದ ಆನೆಗಳನ್ನು ಪಡೆದ (ಕ್ರಿ.ಪೂ. ೩೦೧ ರ ಗ್ರೀಕ್ ಅರಸರ ಮೇಲಿನ ಇಪ್ಸಸ್ ಯುದ್ಧದಲ್ಲಿ ಈ ಆನೆಗಳು ಸೆಲ್ಯೂಕಸ್ ನ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದವು). ರಾಜನೈತಿಕ ಸಂಬಂಧಗಳು ಏರ್ಪಟ್ಟ ನಂತರ ಅನೇಕ ಗ್ರೀಕರು ಚಂದ್ರಗುಪ್ತನ ಆಸ್ಥಾನಕ್ಕೆ ಬರಲಾರಂಭಿಸಿದರು (ಉದಾ: ಗ್ರೀಕ್ ಚರಿತ್ರಕಾರ ಮೆಗಾಸ್ತನೀಸ್). ಚಾಣಕ್ಯನ ಮಂತ್ರಿತ್ವದ ಅಡಿಯಲ್ಲಿ ಚಂದ್ರಗುಪ್ತ ಕೇಂದ್ರೀಕೃತವಾದ ರಾಜ್ಯವ್ಯವಸ್ಥೆಯನ್ನು ಸ್ಥಾಪಿಸಿದ.ರಾಜಧಾನಿ ಪಾಟಲಿಪುತ್ರ (ಇಂದಿನ ಪಾಟ್ನಾ). ಮೆಗಾಸ್ತನೀಸ್ ವರ್ಣಿಸುವಂತೆ, ಮರದ ಕೋಟೆಯನ್ನು ಹೊಂದಿದ್ದ ನಗರ ಕೋಟೆಯಲ್ಲಿ ೬೪ ದ್ವಾರಗಳು ಮತ್ತು ೫೭೦ ಗೋಪುರಗಳನ್ನು ಹೊಂದಿದ್ದಿತು. ಚಾಣಕ್ಯನು ತಕ್ಷಶಿಲೆಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕನಾಗಿದ್ದ.ಚಾಣಕ್ಯನು ಒಳ್ಳೆಯ ಅರ್ಥಶಾಸ್ತ್ರಜ್ಞನಾಗಿದ್ದ. ಮೌರ್ಯರ ಸಾಮ್ರಾಜ್ಯವನ್ನು ಚಾಣಕ್ಯನು ಕಟ್ಟಿದ್ದು ಭಾರತವನ್ನು ಯವನರ ದೌರ್ಜನ್ಯದಿಂದ ಕಾಪಾಡಲು. ಚಂದ್ರಗುಪ್ತನು ಒಳ್ಳೆಯ ಆಡಳಿತಗಾರನಾಗಿದ್ದ ಬಿಂದುಸಾರ ಚಂದ್ರಗುಪ್ತನ ಮಗ ಬಿಂದುಸಾರ ಮೌರ್ಯ ಸಾಮ್ರಾಜ್ಯವನ್ನು ಭಾರತದ ದಕ್ಷಿಣದತ್ತ ವಿಸ್ತರಿಸಿದ. ಈ ಕಾಲದಲ್ಲಿಯೂ ಒಬ್ಬ ಗ್ರೀಕ್ ರಾಯಭಾರಿ (ಡೀಮ್ಯಾಕಸ್) ಆತನ ಆಸ್ಥಾನದಲ್ಲಿದ್ದನೆಂದು ತಿಳಿದುಬಂದಿದೆ. ಹುಟ್ಟುವಾಗಲೆ ಇವನ ಹಣೆಯ ಮೆಲೆ ಇದ್ದ ವಿಷದ ಬಿಂದುವಿನಿಂದಲೆ ಅವನಿಗೆ ಬಿಂದುಸಾರ ಎಂದು ಹೆಸರು, ಆತನ ಮಗನೇ ಅಶೋಕ. ಅಶೋಕ ಮೌರ್ಯ ಸಾಮ್ರಾಜ್ಯದ ಅತಿ ಪ್ರಸಿದ್ಧ ಚಕ್ರವರ್ತಿ ಸಾಮ್ರಾಟ್ ಅಶೋಕ (ಆಡಳಿತ: ಕ್ರಿ.ಪೂ. ೨೭೩-೨೩೨). ಕಳಿಂಗ ಯುದ್ಧದ ನಂತರ ಬೌದ್ಧ ಧರ್ಮಕ್ಕೆ ತಿರುಗಿದ ಅಶೋಕ ಬೌದ್ಧ ಧರ್ಮವನ್ನು ಭಾರತದಲ್ಲಿ ಹರಡಿದ್ದಲ್ಲದೆ, ಬೌದ್ಧ ರಾಯಭಾರಿಗಳನ್ನು ಶ್ರೀಲಂಕಾ, ಚೀನಾ ಮತ್ತು ಪರ್ಶಿಯಾಗಳತ್ತಲೂ ಕಳುಹಿಸಿದ.ಈತನ ಬಿರುದು"ದೇವಾಂನಾಂಪ್ರಿಯ" ಅಂದರೆ ದೇವರಿಗೆ ಪ್ರೀತಿಯಾದವನು. ಭಾರತದಲ್ಲಿ ಬೌದ್ಧ ಧರ್ಮ ಬೆಳೆಯಲು ಅಶೋಕನು ಬಹಳ ಶ್ರಮಿಸಿದನು. ಬೌದ್ದ ಧರ್ಮದ ಪ್ರಚಾರಕ್ಕಾಗಿ ತನ್ನ ಮಕ್ಕಳನ್ನು ಶ್ರೀಲಂಕಾಗೆ ಅಶೋಕನು ಕಳುಹಿಸಿದನು. ಮೌರ್ಯರ ಆಡಳಿತ ಮೆಗಸ್ತನೀಸ್-ನ "ಇಂಡಿಕಾ" ಮತ್ತು "ಕೌಟಿಲ್ಯನ ಅರ್ಥಶಾಸ್ತ್ರ"ಗಳು ಹೇಳುವಂತೆ, ಕೇಂದ್ರ ಸರಕಾರವು ಪ್ರಬಲ ಮತ್ತು ಸುಭದ್ರವಾಗಿತ್ತು. ಮೌರ್ಯರ ಆಡಳಿತ, ಮುಘಲರ ಆಡಳಿತಕ್ಕಿಂತಲೂ ಉತ್ತಮವಾಗಿತ್ತೆಂದು ವಿನ್ಸ್ಂಟ್ ಸ್ಮಿಥ್ (ವಿ.ಎ. ಸ್ಮಿತ್) ಹೇಳಿದ್ದಾರೆ. ರಾಜಧಾನಿ ಸಮಿತಿಗಳು ಪಾಟಲಿಪುತ್ರದ ವ್ಯವಹಾರಗಳನ್ನು ನೋಡಿಕೊಳ್ಳಲು ಹಲವು ಸಮಿತಿಗಳಿದ್ದವು. ಕೋಟೆಯ ಭದ್ರತೆ ಪೋಲಿಸ್ ದಳ: ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ತೆರಿಗೆ ಸಂಗ್ರಹ: ಮಾರಾಟ ತೆರಿಗೆ, ಸಂತೆ ಶುಲ್ಕ, ವೃತ್ತಿ ತೆರಿಗೆ ಮತ್ತು ಮನೆ ತೆರಿಗೆ ಪ್ರಾಂತಗಳು ಚಂದ್ರಗುಪ್ತನ ಕಾಲದಲ್ಲಿ ೪ ಪ್ರಾಂತಗಳು: ಪ್ರಾಚ್ಯ(ಮಗಧ) ಉತ್ತರಾಪಥ(ವಾಯುವ್ಯ ಪ್ರಾಂತ್ಯ) ಆವಂತೀ(ಪಕ್ಷ್ಚಿಮ ಪ್ರಾಂತ್ಯ) ದಕ್ಷಿಣಾಪಥ(ಬಹುಶ) ಅಶೋಕನು, ೫ನೇ ಪ್ರಾಂತವನ್ನಾಗಿ, "ಕಳಿಂಗ"ವನ್ನು ಸೇರಿಸಿದ. ಪ್ರಾಂತಗಳ ಕೆಳಗೆ ಜನಪದಗಳಿದ್ದವು. ಅಧಿಕಾರಿಗಳು ಕುಮಾರ: ಪ್ರಾಂತಗಳ ಮೇಲ್ವಿಚಾರಣ ಅಧಿಕಾರಿ ಮಹಾಮಾತ್ರ: ಕುಮಾರನ ಸಹಾಯ ಮಾಡುವವನು ಸಮಹರತೃ: ಒಂದು ಜನಪದದ ಅಧಿಕಾರಿ ಗೋಪ: ೧೦ ಗ್ರಾಮಗಳ ಮೇಲ್ವಿಚಾರಕ ಗ್ರಾಮಿಕ: ಒಂದು ಗ್ರಾಮದ ಅಧಿಕಾರಿ ಧರ್ಮ ಮಹಾಮಾತ್ರ: ನ್ಯಾಯತೀರ್ಮಾನ ಮಾಡುವವನು ರಜ್ಜುಕ: ಹಗ್ಗ(ರಜ್ಜು)ದಿಂದ ಭೂಮಾಪನ ಮಾಡಿ ಕಂದಾಯ ನಿಶ್ಚಯಿಸುವ ಅಧಿಕಾರಿ ವಜ್ರಭೂಮಿಕ: ಸಾರ್ವಜನಿಕ ಬಾವಿ, ರಸ್ತೆ, ತೋಪುಗಳ ನಿರ್ಮಾಣದ ಉಸ್ತುವಾರಿ ಸಚಿವ ಇವರಷ್ಟೇ ಅಲ್ಲದೇ, ರಾಜರಿಗೆ ವರದಿ ಮಾಡುವ ಗುಪ್ತಚರರ ಜಾಲವೇ ಇತ್ತು. ಅವನತಿಗೆ ಪ್ರಮುಖ ಕಾರಣಗಳು 1. ಕೇಂದ್ರೀಕೃತ ಆಡಳಿತದ ಕುಸಿತ 2. ಅಸಮರ್ಥ ಉತ್ತರಾಧಿಕಾರಿಗಳು 3. ಉತ್ತರಾಧಿಕಾರಕ್ಕಾಗಿ ನೀತಿ ಸಂಹಿತೆ ಇಲ್ಲದೆ ಹೋದದ್ದು 4. ರಾಜ ಪ್ರಭುತ್ವ ಸರ್ಕಾರ 5. ಮೌರ್ಯ ಸಾಮ್ರಾಜ್ಯದ ವಿಭಜನೆ 6. ಸಾಮ್ರಾಜ್ಯ ವೈಶಾಲ್ಯತೆ 7. ದಂಗೆಗಳು 8. ಅಧಿಕಾರಿಗಳ ದಬ್ಬಾಳಿಕೆ 9. ಅರಮನೆಯ ಅಂತಃಕಲಹಗಳು 10. ಹಣಕಾಸಿನ ದೌರ್ಬಲ್ಯ 11. ವಿದೇಶಿ ಧಾಳಿಗಳು 12. ಬೌದ್ಧ ಧರ್ಮಪರ ನೀತಿ 13. ಬ್ರಾಹ್ಮಣರ ವಿರೋಧ ನೀತಿ 14. ಅಶೋಕನ ಅಹಿಂಸಾ ನೀತಿ 15. ಅಶೋಕನ ಧಾರ್ಮಿಕ ನೀತಿ 16. ಅಧಿಕ ತೆರಿಗೆಗಳು 17. ರಾಷ್ಟ್ರೀಯ ಪ್ರಜ್ಞೆಯ ಕೊರತೆ 18. ಗಡಿ ಪ್ರಾಂತ್ಯಗಳಲ್ಲಿ ಹೊಸ ಅರಿವು 19. ಗಡಿಗಳ ನಿರ್ಲಕ್ಷ್ಯ 20. ದಕ್ಷ ಅಧಿಕಾರಿ ವರ್ಗದ ಕೊರತೆ ಅಶೋಕನ ಆಡಳಿತದ ನಂತರ ೫೦ ವರ್ಷಗಳ ಕಾಲ ಮೌರ್ಯ ಸಾಮ್ರಾಜ್ಯ ದುರ್ಬಲ ಅರಸರಿಂದ ಆಳಲ್ಪಟ್ಟಿತು. ಮೌರ್ಯ ವಂಶದ ಕೊನೆಯ ಚಕ್ರವರ್ತಿ ಬೃಹದ್ರಥ. ಕ್ರಿ.ಪೂ. 180 ರಲ್ಲಿ ಸೈನ್ಯದ ಕವಾಯತನ್ನು ವೀಕ್ಷಿಸುತ್ತಿದ್ದಾಗ ಅವನ ಸೇನಾಧಿಪತಿ ಪುಷ್ಯಮಿತ್ರ ಶುಂಗ ಆತನನ್ನು ಕೊಲೆ ಮಾಡಿ ಶುಂಗ ವಂಶವನ್ನು ಸ್ಥಾಪಿಸಿದ. ಭಾರತದ ಇತಿಹಾಸ ಮೌರ್ಯ ವಂಶ
1687
https://kn.wikipedia.org/wiki/%E0%B2%B9%E0%B2%BF%E0%B2%AE%E0%B2%BE%E0%B2%B2%E0%B2%AF
ಹಿಮಾಲಯ
ಹಿಮಾಲಯ ಭಾರತೀಯ ಉಪಖಂಡವನ್ನು ಟಿಬೆಟ್ ಪ್ರಸ್ಥಭೂಮಿಯಿಂದ ಪ್ರತ್ಯೇಕಿಸುವ ಒಂದು ಬೃಹತ್ ಪರ್ವತ ಶ್ರೇಣಿ. ಎವರೆಸ್ಟ್ ಶಿಖರವನ್ನೂ ಒಳಗೊಂಡಂತೆ ಪ್ರಪಂಚದ ಅತಿ ಎತ್ತರದ ಹಲವಾರು ಪರ್ವತಶಿಖರಗಳು ಇಲ್ಲಿವೆ. ಹಾಗೆಯೇ ಎರಡು ಮುಖ್ಯ ನದಿ-ವ್ಯವಸ್ಥೆಗಳ ತವರು ಸಹ ಹಿಮಾಲಯ ಶ್ರೇಣಿ. ಸಂಸ್ಕೃತದಲ್ಲಿ "ಹಿಮಾಲಯ" ಎಂದರೆ "ಹಿಮದ ಮನೆ" ಎಂದರ್ಥ (ಹಿಮ+ಆಲಯ=ಹಿಮಾಲಯ). ಜೀವಿ ಪರಿಸರ ವಿಜ್ಞಾನ ಉಗಮ ಮತ್ತು ಬೆಳವಣಿಗೆ ಹಿಮಾಲಯ ಭೂಮಿಯ ಅತ್ಯಂತ ನವೀನ ಪರ್ವತಶ್ರೇಣಿಗಳಲ್ಲಿ ಒಂದು. ಸುಮಾರು ೨೫ ಕೋಟಿ ವರ್ಷಗಳ ಹಿಂದೆ "ಪ್ಯಾಂಜಿಯ" ಭೂಭಾಗ ಒಡೆದು ಇಂಡೋ-ಆಸ್ಟ್ರೇಲಿಯನ್ ಭೂಭಾಗ ಯೂರೇಷ್ಯನ್ ಭೂಭಾಗದತ್ತ ತೇಲಲಾರಂಭಿಸಿತು. ಸುಮಾರು ೪-೭ ಕೋಟಿ ವರ್ಷಗಳ ಹಿಂದೆ ಈ ಎರಡು ಭೂಭಾಗಗಳು ಒಂದಕ್ಕೊಂದು ಗುದ್ದಿದಾಗ ಹಿಮಾಲಯ ಪರ್ವತಗಳು ಸೃಷ್ಟಿಯಾದವು. ಸುಮಾರು ೨-೩ ಕೋಟಿ ವರ್ಷಗಳ ಹಿಂದೆ ಇಂದಿನ ಭಾರತದ ಪ್ರದೇಶದಲ್ಲಿದ್ದ ಟೆತಿಸ್ ಸಾಗರ ಸಂಪೂರ್ಣವಾಗಿ ಮುಚ್ಚಿ ಹೋಯಿತು. ಇಂಡೋ-ಆಸ್ಟ್ರೇಲಿಯನ್ ಭೂಭಾಗ ಇಂದಿಗೂ ನಿಧಾನವಾಗಿ ಟಿಬೆಟ್ ಭೂಭಾಗದ ಅಡಿಯಲ್ಲಿ ಚಲಿಸುತ್ತಿದೆ (ಸುಮಾರು ವರ್ಷಕ್ಕೆ ೨ ಸೆಮೀ), ಮತ್ತು ಮುಂದಿನ ಕೋಟಿ ವರ್ಷಗಳಲ್ಲಿ ಸುಮಾರು ೧೮೦ ಕಿಮೀ ನಷ್ಟು ಚಲಿಸಿರುತ್ತದೆ! ಈ ಚಲನೆಯಿಂದ ಹಿಮಾಲಯ ಶ್ರೇಣಿ ವರ್ಷಕ್ಕೆ ಅರ್ಧ ಸೆಮೀ ನಷ್ಟು ಬೆಳೆಯುತ್ತಿದೆ. ಇದೇ ಚಲನೆಯಿಂದ ಈ ಪ್ರದೇಶ ಸಾಕಷ್ಟು ಭೂಕಂಪಗಳನ್ನು ಸಹ ಕಂಡಿದೆ. ಭೂಗೋಳ ಹಿಮಾಲಯ ಶ್ರೇಣಿ ಪಶ್ಚಿಮದಲ್ಲಿ "ನಂಗಾ ಪರ್ಬತ್" ಇಂದ ಪೂರ್ವದಲ್ಲಿ "ನಾಮ್ಚೆ ಬರ್ವಾ" ದ ವರೆಗೆ ಸುಮಾರು ೨೪೦೦ ಕಿಮೀ ಉದ್ದವಿದೆ. ಅಗಲ ೨೫೦-೩೦೦ ಕಿಮೀ. ಹಿಮಾಲಯn ಶ್ರೇಣಿಯಲ್ಲಿ ಸಮಾನಾಂತರವಾಗಿ ಸಾಗುವ ಮೂರು ವಿಭಿನ್ನ ಶ್ರೇಣಿಗಳನ್ನು ಕಾಣಬಹುದು: "ಉಪ-ಹಿಮಾಲಯ": ಇದನ್ನು ಭಾರತದಲ್ಲಿ "ಶಿವಾಲಿಕ್ ಹಿಲ್ಸ್ "ಎಂದು ಕರೆಯಲಾಗುತ್ತದೆ. ಈ ಶ್ರೇಣಿ ಅತ್ಯಂತ ಇತ್ತೀಚೆಗೆ ಸೃಷ್ಟಿಯಾದದ್ದು ಮತ್ತು ಸರಾಸರಿ ೧೨೦೦ ಮೀ ಎತ್ತರ ಹೊಂದಿದೆ. ಮುಖ್ಯವಾಗಿ, ಇನ್ನೂ ಬೆಳೆಯುತ್ತಿರುವ ಹಿಮಾಲಯ ಪರ್ವತಗಳಿಂದ ಜಾರುವ ಭೂಭಾಗದಿಂದ ಈ ಶ್ರೇಣಿ ಸೃಷ್ಟಿಯಾಗಿದೆ. "ಕೆಳಗಿನ ಹಿಮಾಲಯ": ಸರಾಸರಿ ೨೦೦೦-೫೦೦೦ ಮೀ ಎತ್ತರವಿದ್ದು ಇದು ಭಾರತದ ಹಿಮಾಚಲ ಪ್ರದೇಶ, ನೇಪಾಳದ ದಕ್ಷಿಣ ಪ್ರದೇಶಗಳ ಮೂಲಕ ಸಾಗುತ್ತದೆ. ಡಾರ್ಜೀಲಿಂಗ್, ಶಿಮ್ಲಾ, ನೈನಿತಾಲ್, ಮೊದಲಾದ ಭಾರತದ ಅನೇಕ ಪ್ರಸಿದ್ಧ ಗಿರಿಧಾಮಗಳು ಈ ಶ್ರೇಣಿಯಲ್ಲಿಯೇ ಇರುವುದು. "ಮೇಲಿನ ಹಿಮಾಲಯ": ಈ ಶ್ರೇಣಿ ಎಲ್ಲಕ್ಕಿಂತ ಉತ್ತರದಲ್ಲಿದ್ದು ನೇಪಾಳದ ಉತ್ತರ ಭಾಗಗಳು ಮತ್ತು ಟಿಬೆಟ್ ನ ದಕ್ಷಿಣ ಭಾಗಗಳ ಮೂಲಕ ಸಾಗುತ್ತದೆ. ೬೦೦೦ ಮೀ ಗಿಂತಲೂ ಹೆಚ್ಚಿನ ಸರಾಸರಿ ಎತ್ತರವನ್ನು ಹೊಂದಿರುವ ಈ ಶ್ರೇಣಿ ಪ್ರಪಂಚದ ಅತಿ ಎತ್ತರದ ಮೂರು ಶಿಖರಗಳನ್ನು ಒಳಗೊಂಡಿದೆ - ಎವರೆಸ್ಟ್, ಕೆ-೨, ಮತ್ತು ಕಾಂಚನಜುಂಗಾ. ಹಿಮನದಿಗಳು ಹಿಮಾಲಯ ಶ್ರೇಣಿಗಳಲ್ಲಿ ಅನೇಕ ಹಿಮನದಿಗಳನ್ನು (glacier) ಕಾಣಬಹುದು. ಧ್ರುವ ಪ್ರದೇಶಗಳನ್ನು ಬಿಟ್ಟರೆ ಪ್ರಪಂಚದ ಅತಿ ದೊಡ್ಡ ಹಿಮನದಿಯಾದ ಸಿಯಾಚೆನ್ ಇಲ್ಲಿಯೇ ಇರುವುದು. ಇಲ್ಲಿರುವ ಹಿಮನದಿಗಳಲ್ಲಿ ಪ್ರಸಿದ್ಧವಾದ ಇತರ ಕೆಲವೆಂದರೆ ಗಂಗೋತ್ರಿ, ಯಮುನೋತ್ರಿ, ನುಬ್ರಾ ಮತ್ತು ಖುಂಬು. ನದಿಗಳು ಹಿಮಾಲಯ ಶ್ರೇಣಿಯ ಎತ್ತರದ ಪ್ರದೇಶಗಳು ವರ್ಷವಿಡೀ ಹಿಮಾವೃತವಾಗಿರುತ್ತವೆ. ಈ ಪ್ರದೇಶಗಳು ಅನೇಕ ದೊಡ್ಡ ನದಿಗಳ ತವರು. ಸಿಂಧೂ ನದಿ ಟಿಬೆಟ್ ನಲ್ಲಿ ಸೆಂಗೆ ಮತ್ತು ಗಾರ್ ನದಿಗಳ ಸಂಗಮದಲ್ಲಿ ಹುಟ್ಟಿ ಪಾಕಿಸ್ತಾನದ ಮೂಲಕ ಸಾಗಿ ಅರಬ್ಬೀ ಸಮುದ್ರವನ್ನು ಸೇರುತ್ತದೆ. ಗಂಗಾ ನದಿ ಭಾಗೀರಥಿಯಾಗಿ ಗಂಗೋತ್ರಿ ಹಿಮನದಿಯಲ್ಲಿ ಜನ್ಮ ತಾಳಿ ಅಲಕನಂದಾ, ಯಮುನಾ ನದಿಗಳನ್ನು ಸೇರಿ ಭಾರತ ಮತ್ತು ಬಾಂಗ್ಲಾದೇಶಗಳ ಮೂಲಕ ಬಂಗಾಳ ಕೊಲ್ಲಿಗೆ ಸೇರುತ್ತದೆ. ಬ್ರಹ್ಮಪುತ್ರ ನದಿ ಪಶ್ಚಿಮ ಟಿಬೆಟ್ ನಲ್ಲಿ ಹುಟ್ಟಿ, ದಕ್ಷಿಣಪೂರ್ವಕ್ಕೆ ಹರಿದು ನಂತರ ತನ್ನ ದಿಕ್ಕನ್ನು ಸಂಪೂರ್ಣವಾಗಿ ಬದಲಿಸಿ ಭಾರತ ಮತ್ತು ಬಾಂಗ್ಲಾದೇಶಗಳ ಮೂಲಕ ಬಂಗಾಳ ಕೊಲ್ಲಿಗೆ ಹರಿಯುತ್ತದೆ. ಇನ್ನಿತರ ಕೆಲವು ಹಿಮಾಲಯ ನದಿಗಳೆಂದರೆ ಇರವಡ್ಡಿ, ಸಲ್ವೀನ್ ಮೊದಲಾದವು (ಬರ್ಮಾ ದತ್ತ ಹರಿಯುತ್ತವೆ). ಸರೋವರಗಳು ಹಿಮಾಲಯ ಪ್ರದೇಶದಲ್ಲಿ ನೂರಾರು ಸರೋವರಗಳು ಕಂಡುಬರುತ್ತವೆ. ಈ ಸರೋವರಗಳಲ್ಲಿ ಹೆಚ್ಚಿನವು ೫,೦೦೦ ಮೀ. ಗಿಂತ ಕಡಿಮೆ ಎತ್ತರದಲ್ಲಿ ಸಿಗುತ್ತವೆ, ಹಾಗೂ ಈ ಸರೋವರಗಳ ವಿಸ್ತಾರವು ಎತ್ತರದೊಂದಿಗೆ ಕಡಿಮೆಯಾಗುತ್ತದೆ. ಇವುಗಳಲ್ಲಿ ಪ್ಯಾಂಗಾಂಗ್ ತ್ಸೋ ಸರೋವರ ಅತಿ ದೊಡ್ಡದು. ಭಾರತ/ಟಿಬೆಟ್ ಸರಹದ್ದಿನ ಬಳಿಯಿರುವ ಈ ಸರೋವರವು ಸುಮಾರು ೮ ಕಿ.ಮೀ. ಅಗಲ ಹಾಗೂ ೧೩೪ ಕಿ.ಮೀ. ಉದ್ದವಿದ್ದು, ೪,೬೦೦ ಮೀ. ಎತ್ತರದಲ್ಲಿದೆ. ಎತ್ತರದಲ್ಲಿರುವ ಒಂದು ಮುಖ್ಯವಾದ ಸರೋವರ ಗುರುಡೋಗ್ಮಾರ್. ಉತ್ತರ ಸಿಕ್ಕಿಂನಲ್ಲಿರುವ ಗುರುಡೋಗ್ಮಾರ್ ೫,೧೪೮ ಮೀ. (೧೬,೮೯೦ ಅಡಿ) ಎತ್ತರದಲ್ಲಿದೆ. ಇನ್ನಿತರ ದೊಡ್ಡ ಸರೋವರಗಳಲ್ಲಿ ಭಾರತ/ಚೀನಾ ಸರಹದ್ದಿನ ಬಳಿ ಸಿಕ್ಕಿಂನಲ್ಲಿರುವ ಛಾಂಗು ಸರೋವರವೂ ಸೇರಿದೆ. ಹಿಮನದಿಗಳ ಚಟುವಟಿಕೆಯಿಂದ ಸೃಷ್ಟಿಯಾದ ಸರೋವರಗಳಿಗೆ ಭೂವಿಜ್ಞಾನಿಗಳು ಟಾರ್ನ್‍ಗಳೆಂದು ಕರೆಯುತ್ತಾರೆ. ಹೆಚ್ಚಿನ ಟಾರ್ನ್‍ಗಳು ಹಿಮಾಲಯದಲ್ಲಿ ೫,೫೦೦ ಮೀ. ಗಿಂತ ಹೆಚ್ಚು ಎತ್ತರದಲ್ಲಿ ಕಂಡುಬರುತ್ತವೆ. ಹವಾಮಾನದ ಮೇಲಿನ ಪ್ರಭಾವ ಭಾರತೀಯ ಉಪಖಂಡ ಮತ್ತು ಟಿಬೆಟ್ ಪ್ರಸ್ಥಭೂಮಿಗಳ ಹವಾಮಾನದ ಮೇಲೆ ಹಿಮಾಲಯ ಶ್ರೇಣಿ ಆಳವಾದ ಪ್ರಭಾವವನ್ನು ಬೀರುತ್ತದೆ. ಆರ್ಟಿಕ್ ಪ್ರದೇಶದಿಂದ ಚಳಿ ಗಾಳಿ ಭಾರತದೊಳಕ್ಕೆ ಬೀಸುವುದನ್ನು ಹಿಮಾಲಯ ಶ್ರೇಣಿ ತಡೆಯುತ್ತದೆ. ಇದರಿಂದಾಗಿ ದಕ್ಷಿಣ ಏಷ್ಯಾ - ಟಿಬೆಟ್ ಮೊದಲಾದ ಪ್ರದೇಶಗಳಿಗಿಂತ ಬೆಚ್ಚಗಿರುತ್ತದೆ. ಹಾಗೆಯೇ ಮಾನ್ಸೂನ್ ಮಾರುತಗಳನ್ನು ತಡೆದು ಭಾರತದ ಪೂರ್ವ ರಾಜ್ಯಗಳಲ್ಲಿ (ಮಿಜೋರಂ, ಮೇಘಾಲಯ, ಇತ್ಯಾದಿ) ಬಹಳಷ್ಟು ಮಳೆಯಾಗುವಂತೆ ಮಾಡುತ್ತದೆ. ಮಾನ್ಸೂನ್ ಮಾರುತಗಳು ಹಿಮಾಲಯವನ್ನು ದಾಟಲಾಗದೆ ಇರುವುದೂ ಸಹ ಟಿಬೆಟ್/ಚೀನಾಗಳಲ್ಲಿನ ಗೋಬಿ ಮರುಭೂಮಿ ಮತ್ತು ತಕ್ಲಮಕಾನ್ ಮರುಭೂಮಿಗಳ ಸೃಷ್ಟಿಗೆ ಒಂದು ಕಾರಣ ಎಂದು ಊಹಿಸಲಾಗಿದೆ. ಚಳಿಗಾಲದಲ್ಲಿ ಪಶ್ಚಿಮದ ಇರಾನ್‍ನ ಕಡೆಯಿಂದ ಉಂಟಾಗುವ ಹವಾಮಾನದ ಪ್ರಕ್ಷುಬ್ಧತೆಗಳನ್ನು ಈ ಶ್ರೇಣಿಗಳು ಮುನ್ನುಗ್ಗದಂತೆ ತಡೆಯುತ್ತವೆ. ಈ ರೀತಿಯ ತಡೆಯುವಿಕೆಯಿಂದಾಗಿ ಕಾಶ್ಮೀರದಲ್ಲಿ ಹಿಮಪಾತವುಂಟಾಗುತ್ತದೆ ಹಾಗೂ ಉತ್ತರ ಭಾರತದ ಮತ್ತು ಪಂಜಾಬ್‍ನ ಕೆಲವು ಭಾಗಗಳಲ್ಲಿ ಮಳೆ ಬೀಳುತ್ತದೆ. ಹಿಮಾಲಯ ಶ್ರೇಣಿಗಳು ಉತ್ತರದಿಂದ ಆರ್ಕ್‍ಟಿಕ್ ಕಡೆಯಿಂದ ಬೀಸುವ ಚಳಿಗಾಳಿಯನ್ನು ಬಹುಮಟ್ಟಿಗೆ ತಡೆದರೂ, ಬ್ರಹ್ಮಪುತ್ರ ಕಣಿವೆಯಲ್ಲಿ ಈ ಚಳಿಗಾಳಿಯ ಸ್ವಲ್ಪ ಪಾಲು ನುಸುಳಿ ಬರುತ್ತದೆ. ಇದರಿಂದಾಗಿ ಬಾಂಗ್ಲಾದೇಶದಲ್ಲಿ ಮತ್ತು ಭಾರತದ ಈಶಾನ್ಯ ರಾಜ್ಯಗಳಲ್ಲಿ ಚಳಿಗಾಲದ ಉಷ್ಣತೆ ಸಾಕಷ್ಟು ಮಟ್ಟಿಗೆ ಕೆಳಗಿಳಿಯುತ್ತದೆ. ಇದೇ ಗಾಳಿಯು ಈ ಈಶಾನ್ಯ ಪ್ರಾಂತ್ಯಗಳಲ್ಲಿ ಈಶಾನ್ಯ ಮುಂಗಾರನ್ನೂ ಉಂಟುಮಾಡುತ್ತದೆ. ರಾಜಕಾರಣ ಮತ್ತು ಸಂಸ್ಕೃತಿಗಳ ಮೇಲಿನ ಪ್ರಭಾವ ಹಿಮಾಲಯ ಶ್ರೇಣಿಯು ಸಾವಿರಾರು ವರ್ಷಗಳಿಂದ ಜನರ ಚಲವಲನಗಳಿಗ ಸ್ವಾಭಾವಿಕವಾಗಿಯೇ ಅಡಚಣೆಯನ್ನು ಉಂಟುಮಾಡಿದೆ. ಇದಕ್ಕೆ ಕಾರಣ ಹಿಮಾಲಯದ ದೊಡ್ಡ ಗಾತ್ರ, ಎತ್ತರ ಮತ್ತು ವೈಶಾಲ್ಯತೆ. ಮುಖ್ಯವಾಗಿ ಈ ಅಡಚಣೆಯು, ಭಾರತ ಉಪಖಂಡದ ಜನರು ಚೆನಾ ಮತ್ತು ಮಂಗೋಲಿಯಾದ ಜನರ ಜೊತೆ ಸುಲಭವಾಗಿ ಬೆರೆಯದಂತೆ ಮಾಡಿದೆ. ಇದರಿಂದಾಗಿ ಇಂದಿಗೂ ಈ ಎರಡು ಪ್ರದೇಶಗಳ ಭಾಷೆಗಳಲ್ಲಿ ಮತ್ತು ಆಚಾರಗಳಲ್ಲಿ ಬಹಳಷ್ಟು ವ್ಯತ್ಯಾಸಗಳನ್ನು ಕಾಣಬಹುದು. ಇದಲ್ಲದೆ ಹಿಂದಿನಿಂದಲೂ ಹಿಮಾಲಯವು ವಾಣಿಜ್ಯ ಮಾರ್ಗಗಳಿಗೆ ಹಾಗೂ ಸಾಮ್ರಾಜ್ಯ ವಿಸ್ತರಣೆಗಳಿಗೆ ಪ್ರತಿಭಂದವೊಡ್ಡಿದೆ. ಉದಾ:. ಜೆಂಘಿಜ್ ಖಾನ್‍ನಿಗೆ ತನ್ನ ಸಾಮ್ರಾಜ್ಯವನ್ನು ಹಿಮಾಲಯ ಶ್ರೇಣಿಯ ದಕ್ಷಿಣಕ್ಕೆ ಹಾಗೂ ಭಾರತ ಉಪಖಂಡಕ್ಕೆ ವಿಸ್ತಾರ ಮಾಡಲು ಆಗಲಿಲ್ಲ. ಧಾರ್ಮಿಕ ಹಾಗೂ ಪೌರಾಣಿಕ ಪ್ರಾಮುಖ್ಯತೆ ಹಿಂದೂ ಪುರಾಣಗಳಲ್ಲಿ ಹಿಮಾಲಯವನ್ನು ಹಿಮವತ (ಪಾರ್ವತಿಯ ತಂದೆ) ಎಂಬ ದೇವನನ್ನಾಗಿ ವ್ಯಕ್ತಿತ್ವಾರೋಪಣೆ ಮಾಡಲಾಗಿದೆ. ಇದಲ್ಲದೆ, ಹಿಂದೂ ಮತ್ತು ಬೌದ್ಧ ಧರ್ಮಗಳಲ್ಲಿ ಹಿಮಾಲಯದ ಹಲವಾರು ಸ್ಥಳಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ. ಹರಿದ್ವಾರ - ಇಲ್ಲಿ ಗಂಗಾ ನದಿಯು ಪರ್ವತಗಳಿಂದಾಚೆಗೆ ಬಂದು ಸಮತಳ ಭೂಮಿಯನ್ನು ಹೊಕ್ಕುತ್ತದೆ. ಬದರೀನಾಥ್ - ಇಲ್ಲಿ ವಿಷ್ಣುವಿಗೆ ಮುಡಿಪಾದ ಮಂದಿರವಿದೆ. ಕೇದಾರನಾಥ್ - ೧೨ ಜ್ಯೋತಿರ್ಲಿಂಗಗಳಲ್ಲಿ ಒಂದನ್ನು ಇಲ್ಲಿ ಕಾಣಬಹುದು. ಗೋಮುಖ್ - ಇದು ಭಾಗೀರಥಿಯ ಉಗಮ ಸ್ಥಳ. ಗಂಗೋತ್ರಿ ನಗರದಿಂದ ಕೆಲವೇ ಮೈಲಿಗಳ ಅಂತರದಲ್ಲಿದೆ. ದೇವಪ್ರಯಾಗ - ಇಲ್ಲಿ ಅಲಕನಂದಾ ಮತ್ತು ಭಾಗೀರಥಿ ನದಿಗಳ ಸಂಗಮವಾಗಿ ಗಂಗೆಯಾಗಿ ಮುಂದೆ ಹರಿಯುತ್ತದೆ. ಹೃಷಿಕೇಶ - ಇಲ್ಲಿ ಲಕ್ಷ್ಮಣನ ದೇವಸ್ಥಾನವಿದೆ. ಕೈಲಾಸ ಪರ್ವತ - ಇದು ೬,೬೩೮ ಮೀ. ಎತ್ತರದ ಶಿಖರ. ಹಿಂದೂ ಧರ್ಮೀಯರು ಇದನ್ನು ಶಿವನ ವಾಸಸ್ಥಾನ ಎಂದು ಪರಿಗಣಿಸುತ್ತಾರೆ. ಈ ಶಿಖರವನ್ನು ಬೌದ್ಧ ಧರ್ಮೀಯರೂ ಪೂಜ್ಯ ಭಾವನೆಯಿಂದ ನೋಡುತ್ತಾರೆ. ಬ್ರಹ್ಮಪುತ್ರ ನದಿಯ ಉಗಮ ತಾಣವಾದ ಈ ಪರ್ವತವು ಮಾನಸ ಸರೋವರವನ್ನು ತನ್ನ ತಪ್ಪಲಿನಲ್ಲಿ ಹೊಂದಿದೆ. ಅಮರನಾಥ - ಇಲ್ಲಿ ಹಿಮದಿಂದ ಸ್ವಾಭಾವಿಕವಾಗಿ ಶಿವಲಿಂಗವು ಮೂಡುತ್ತದೆ. ಈ ಲಿಂಗವು ಪ್ರತಿ ವರ್ಷವೂ ಚಳಿಗಾಲದಲ್ಲಿ ಕೆಲವು ವಾರಗಳಲ್ಲಿ ಕಂಡುಬರುತ್ತದೆ. ಈ ಕೆಲವು ವಾರಗಳಲ್ಲಿ ಜನರು ಸಾವಿರಾರು ಸಂಖ್ಯೆಯಲ್ಲಿ ಶಿವಲಿಂಗದ ದರ್ಶನ ಪಡೆಯಲು ಆಗಮಿಸುತ್ತಾರೆ. ವೈಷ್ಣೋದೇವಿ - ದುರ್ಗಾ ಭಕ್ತರಲ್ಲಿ ಈ ಮಂದಿರವು ಪ್ರಸಿದ್ಧಿಯನ್ನು ಹೊಂದಿದೆ. ದಲೈಲಾಮಾ ಅವರ ನಿವಾಸ ಸೇರಿದಂತೆ ಟಿಬೆಟ್ಟಿನ ಬೌದ್ಧ ಧರ್ಮದ ಹಲವಾರು ಸ್ಥಳಗಳು ಹಿಮಾಲಯದಲ್ಲಿ ಕಾಣಸಿಗುತ್ತವೆ. ಯೆತಿ - ಇದು ವಾನರ ಜಾತಿಗೆ ಸೇರಿದ ಅತಿ ದೊಡ್ಡ ಹಾಗೂ ಪ್ರಸಿದ್ಧ ಪ್ರಾಣಿ. ಇದು ಹಿಮಾಲಯದಲ್ಲಿ ನೆಲೆಸಿದೆಯೆಂದು ಹಲವಾರು ಗಾಳಿಸುದ್ದಿಗಳಿವೆ. ಆದರೆ ಪ್ರಾಚಲಿತ್ಯದಲ್ಲಿರುವ ವಿಜ್ಞಾನಿಗಳು ಯೆತಿಯ ಇರುವಿಕೆಯ ಬಗ್ಗೆ ಸಿಕ್ಕಿರುವ ಪುರಾವೆಗಳನ್ನು ಅವೈಜ್ಞಾನಿಕವೆಂದೋ, ಕೀಟಲೆ/ಸುಳ್ಳಿನ ವದಂತಿಯೆಂದೋ ಅಥವಾ ಬೇರಾವುದೋ ಸಾಮಾನ್ಯವಾದ ಪ್ರಾಣಿಯನ್ನು ಗುರುತು ಹಿಡಿಯುವಾಗ ಆಗಿರಬಹುದಾದಂಥ ತಪ್ಪೆಂದೋ ಪರಿಗಣಿಸುತ್ತಾರೆ. ಶಂಭಾಲ - ಇದು ಬೌದ್ಧ ಧರ್ಮದಲ್ಲಿ ಸಿಗಬರುವ ಒಂದು ದೈವಿಕ ನಗರಿ. ಈ ನಗರಿಯ ಬಗ್ಗೆ ಹಲವಾರು ಐತಿಹ್ಯಗಳಿವೆ. ಕೆಲವು ಐತಿಹ್ಯಗಳ ಪ್ರಕಾರ ಇದೊಂದು ನಿಜವಾದ ಭೌತಿಕ ನಗರ ಮತ್ತು ಇಲ್ಲಿ ಪುರಾತನವಾದ ಮತ್ತು ರಹಸ್ಯವಾದ ಬೌದ್ಧಿಕ ಉಪದೇಶಗಳನ್ನು ರಕ್ಷಿಸಲಾಗುತ್ತಿದೆ. ಇನ್ನು ಕೆಲವು ನಂಬಿಕೆಗಳ ಪ್ರಕಾರ ಈ ನಗರವು ಭೌತಿಕ ಅಸ್ತಿತ್ವದಲಿಲ್ಲ ಹಾಗೂ ಇದನ್ನು ಮಾನಸಿಕವಾಗಿ ಮಾತ್ರ ಎಟುಕಿಸಿಕೊಳ್ಳಬಹುದು. ಶ್ರೀ ಹೇಮಕುಂಡ ಸಾಹೇಬ್ - ಇದು ಸಿಖ್ ಧರ್ಮದ ಒಂದು ಗುರುದ್ವಾರ. ಸಿಖ್ಖರ ಗುರುಗಳಾದ ಗುರು ಗೋಬಿಂದ್ ಸಿಂಗ್ ಅವರು ತಮ್ಮ ಹಿಂದಿನ ಒಂದು ಅವತಾರದಲ್ಲಿ ಈ ಸ್ಥಳದಲ್ಲಿ ತಪಸ್ಸು ಮಾಡಿ ಮೋಕ್ಷ ಪಡೆದರೆಂಬ ನಂಬಿಕೆಗಳಿವೆ. ಬಾಹ್ಯ ಸಂಪರ್ಕಗಳು ಹಿಮಾಲಯ ಪರ್ವತಗಳ ಬಗ್ಗೆ ಭೌಗೋಳಿಕ ಮಾಹಿತಿ ಹಿಮಾಲಯಗಳ ಉಗಮ ಭೂಗೋಳ ಹಿಮಾಲಯ
1696
https://kn.wikipedia.org/wiki/%E0%B2%AE%E0%B3%88%E0%B2%B8%E0%B3%82%E0%B2%B0%E0%B3%81%20%E0%B2%85%E0%B2%B0%E0%B2%AE%E0%B2%A8%E0%B3%86
ಮೈಸೂರು ಅರಮನೆ
ಅಂಬಾ ವಿಲಾಸ್ ಅರಮನೆ ಮೈಸೂರು ನಗರದಲ್ಲಿರುವ ಅನೇಕ ಅರಮನೆಗಳಲ್ಲಿ ಮುಖ್ಯವಾದ ಅರಮನೆ. ಮೈಸೂರು "ಅರಮನೆಗಳ ನಗರ" ಎಂದು ಕರೆಯಲ್ಪಡುತ್ತದೆ. "ಮೈಸೂರು ಅರಮನೆ" ಎನ್ನುವಾಗ ಸಾಮಾನ್ಯವಾಗಿ ಮುಖ್ಯ ಅರಮನೆಯಾದ ಅಂಬಾ ವಿಲಾಸವನ್ನು ನಿರ್ದೇಶಿಸಿ ಹೇಳಲಾಗುತ್ತದೆ. ಇದು ಹಿಂದಿನ ಮೈಸೂರು ಸಂಸ್ಥಾನದ ಒಡೆಯರ್ ವಂಶದ ಅರಸರ ನಿವಾಸ ಹಾಗೂ ದರ್ಬಾರು ಶಾಲೆಯಾಗಿದ್ದಿತು. ಈ ಅರಮನೆಯ ನಿರ್ಮಾಣ ಪ್ರಾರಂಭಿಸಿದ್ದು ೧೮೯೭ ರಲ್ಲಿ; ನಿರ್ಮಾಣ ೧೯೧೨ ರಲ್ಲಿ ಮುಗಿಯಿತು. ಮೈಸೂರಿನ ಪ್ರವಾಸಿ ಆಕರ್ಷಣೆಗಳಲ್ಲಿ ಮುಖ್ಯವಾದ ಸ್ಥಳಗಳಲ್ಲಿ ಮೈಸೂರು ಅರಮನೆಯೂ ಒಂದು. ಈಗಿರುವ ಮೈಸೂರು ಅರಮನೆಯ ಜಾಗದಲ್ಲಿ ಮರದಿಂದ ನಿರ್ಮಾಣ ಅರಮನೆ ಇತ್ತು. ಮರದ ಅರಮನೆಗೆ ಬೆಂಕಿ ಬಿದ್ದು ಸುಟ್ಟು ಹೋದ ನಂತರ ಈಗಿರುವ ಅರಮನೆ ಕಟ್ಟಲು ಶುರು ಮಾಡುತ್ತಾರೆ. == ಚರಿತ್ರೆ == ಮೊದಲು ಈ ಸಂಸ್ಥಾನದ ರಾಜಧಾನಿ ಶ್ರೀರಂಗಪಟ್ಟಣ ಆಗಿತ್ತು 1799ರಲ್ಲಿ ಟಿಪ್ಪು ನಿಧನರಾದ ನಂತರ ಮೈಸೂರು ಅರಸರು ಶ್ರೀರಂಗಪಟ್ಟಣದಿಂದ ಮೈಸೂರಿಗೆ ಸ್ಥಳಾಂತಗೊಳ್ಳುತ್ತಾರೆ. ಆಗಿನ್ನೂ 6 ವರ್ಷದ ಬಾಲಕನಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ 1897ರಲ್ಲಿ ಹಳೆಯ ಮರದ ಅರಮನೆಯಲ್ಲಿ ಮದುವೆ ನಡೆಯುತ್ತಿದ್ದ ಸಂದರ್ಭದಲ್ಲಿ ಬೆಂಕಿ ಬಿದ್ದು, ಇಡೀ ಅರಮನೆ ಸುಟ್ಟು ಹೋಯಿತು. ನಂತರ ಅರಮನೆ ವಾಸಿಗಳು ಸಮೀಪದ ಜಗನ್ಮೋಹನ ಅರಮನೆಗೆ ಸ್ಥಳಾಂತಗೊಳ್ಳುತ್ತಾರೆ. ಮೈಸೂರು ಸಂಸ್ಥಾನ ೧೩೯೯ ರಿಂದ ೧೯೪೭ ರಲ್ಲ ಭಾರತದ ಸ್ವಾತಂತ್ರ್ಯದ ವರೆಗೂ 'ಒಡೆಯರ್ ವಂಶದ ಅರಸ'ರಿಂದ ಆಳಲ್ಪಟ್ಟಿತು (ಮಧ್ಯದಲ್ಲಿ ಸ್ವಲ್ಪ ಕಾಲ ಹೈದರ್ ಅಲಿ ಮತ್ತುಟೀಪು ಸುಲ್ತಾನರ ಆಡಳಿತವನ್ನು ಬಿಟ್ಟು). ಒಡೆಯರ್ ಅರಸರು ೧೪ ನೆಯ ಶತಮಾನದಲ್ಲಿಯೇ ಇಲ್ಲಿ ಒಂದು ಅರಮನೆಯನ್ನು ಕಟ್ಟಿಸಿದ್ದರು. ಈ ಅರಮನೆ ೧೬೩೮ ರಲ್ಲಿ ಸಿಡಿಲು ಹೊಡೆದು ಭಾಗಶಃ ಹಾಳಾಯಿತು. ಆಗ ಇದನ್ನು ರಿಪೇರಿ ಮಾಡಿ ವಿಸ್ತರಿಸಲಾಗಿತ್ತು. ಆದರೆ ೧೮ ನೆಯ ಶತಮಾನದ ಕೊನೆಯ ಹೊತ್ತಿಗೆ ಅರಮನೆ ಮತ್ತಷ್ಟು ಹಾಳಾಗಿ ೧೭೯೩ ರಲ್ಲಿ ಟೀಪು ಸುಲ್ತಾನ್ ಕಾಲದಲ್ಲಿ ಅದನ್ನು ಬೀಳಿಸಲಾಯಿತು. ೧೮ಂ೩ ರಲ್ಲಿ ಇನ್ನೊಂದು ಅರಮನೆಯನ್ನು ಅದರ ಸ್ಥಳದಲ್ಲಿ ಕಟ್ಟಿಸಲಾಯಿತು. ಈ ಅರಮನೆ ಸಹ ೧೮೯೭ ರಲ್ಲಿ ರಾಜಕುಮಾರಿ ಜಯಲಕ್ಷಮ್ಮಣ್ಣಿ ಅವರ ಮದುವೆಯ ಸಂದರ್ಭದಲ್ಲಿ ಬೆಂಕಿ ಬಿದ್ದು ನಾಶವಾಯಿತು. ಆಗ ಮೈಸೂರು ಮಹಾರಾಣಿಯವರಾಗಿದ್ದ ಕೆಂಪನಂಜಮ್ಮಣ್ಣಿ ವಾಣಿವಿಲಾಸ ಸನ್ನಿಧಾನ ಇನ್ನೊಂದು ಅರಮನೆಯನ್ನು ಕಟ್ಟಲು ಬ್ರಿಟಿಷ್ ಇಂಜಿನಿಯರ್ ಹೆನ್ರಿ ಇರ್ವಿನ್ ಅವರನ್ನು ನೇಮಿಸಿದರು. ವಿವಿಧ ರೀತಿಯ ವಾಸ್ತುಕಲೆಗಳನ್ನು ಸೇರಿಸಿ ಅರಮನೆಯನ್ನು ಕಟ್ಟಲು ಅವರಿಗೆ ತಿಳಿಸಲಾಯಿತು. ಅರಮನೆ ೧೯೧೨ ರಲ್ಲಿ ಸಂಪೂರ್ಣವಾಯಿತು. ಮೈಸೂರು ಸಂಸ್ಥಾನವನ್ನು ಆಳಿದ ಅರಸರು ಯದುರಾಯರು (ಸುಮಾರು 1399-1423) ಬೆಟ್ಟದ ಚಾಮರಾಜ ಒಡೆಯರು (1423-1459) ತಿಮ್ಮರಾಜ ಒಡೆಯರು (1459-1478) ಹಿರಿಯ ಚಾಮರಾಜ ಒಡೆಯರು (1478-1513) ಹಿರಿಯ ಬೆಟ್ಟದ ಚಾಮರಾಜ ಒಡೆಯರು (1513-1553) ಬೋಳ ಚಾಮರಾಜ ಒಡೆಯರು ಬೆಟ್ಟದ ಚಾಮರಾಜ ಒಡೆಯರು (ಈ ಮೂರೂ ಜನ 1553-1578) ರಾಜ ಒಡೆಯರು (1578-1618) ನಲವತ್ತು ವರ್ಷಗಳ ದೀರ್ಘ ಕಾಲದ ಆಳ್ವಿಕೆ. ಚಾಮರಾಜ ಒಡೆಯರು (1617-1637) ಎರಡನೆ ರಾಜ ಒಡೆಯರು (1637-1638) ಕೇವಲ 1 ವರ್ಷದ ಆಳ್ವಿಕೆ ರಣಧೀರ ಕಂಠೀರವ ನರಸರಾಜ ಒಡೆಯರು (1638-1659) ದೊಡ್ಡದೇವರಾಜ ಒಡೆಯರು (1659-1673) ಚಿಕ್ಕದೇವರಾಜ ಒಡೆಯರು (1673-1704) ಚಿಕ್ಕದೇವರಾಜ ಒಡೆಯರ ಮೂಕ ಮಗ (1704-1714 ತಾಯಿ, ಮಂತ್ರಿಗಳ ಸಹಕಾರದೊಂದಿಗೆ) ದೊಡ್ಡ ಕೃಷ್ಣರಾಜ ಒಡೆಯರು (1714-1734) ಅಂಕನಹಳ್ಳಿ ಚಾಮರಾಜ ಒಡೆಯರು ಇಮ್ಮಡಿ ಕೃಷ್ಣರಾಜ ಒಡೆಯರು (ಇಬ್ಬರೂ ದತ್ತುಪುತ್ರರು, 1766ರ ವರೆಗೆ, ಅಂದಿನ ಆಡಳಿತ ಮಂತ್ರಿಗಳ ಕುತಂತ್ರಕ್ಕೊಳಪಟ್ಟಿದ್ದು ವಿವರಗಳು ಕಡಿಮೆ) ನಂಜರಾಜ ಒಡೆಯರು (1766- 1770) ಬೆಟ್ಟದ ಚಾಮರಾಜ ಒಡೆಯರು (1770-1776) ಖಾಸಾ ಚಾಮರಾಜ ಒಡೆಯರು (1776-1796) (ನಂಜರಾಜ ಒಡೆಯರ ಕಾಲಕ್ಕೆ ಹೈದರಾಲಿಯು ಪ್ರಬಲನಾಗಿ ಮೈಸೂರು ಸಂಸ್ಥಾನದ ಆಡಳಿತವನ್ನು ಕೈಗೆ ತೆಗೆದುಕೊಂಡನು, 1782ರಲ್ಲಿ ಅವನು ಮರಣ ಹೊಂದಿದನು. ನಂತರ ಅವನ ಮಗ ಟಿಪ್ಪೂ ಸುಲ್ತಾನನು ಸಂಸ್ಥಾನದ ಸರ್ವಾಧಿಕಾರಿಯಾಗಿ ಆಡಳಿತ ನಡೆಸುತ್ತಿದ್ದುದರಿಂದ, ನಂಜರಾಜರು, ಬೆಟ್ಟದ ಚಾಮರಾಜರು,ಖಾಸಾ ಚಾಮರಾಜರು ಕೇವಲ ಹೆಸರಿಗೆ ಮಾತ್ರ ರಾಜರಾಗಿದ್ದರು) ಮುಮ್ಮಡಿ ಕೃಷ್ಣರಾಜ ಒಡೆಯರು (1799ರಲ್ಲಿ ಪಟ್ಟಕ್ಕೆ ಬಂದಾಗ ಕೇವಲ 5 ವರ್ಷದವರು ) ಆವರು ಸ್ವತಂತ್ರವಾಗಿ ಆಡಳಿತ ನಿರ್ವಹಿಸಿದ್ದು 1810ರಿಂದ ಬ್ರಿಟಿಷರ ತಂತ್ರದಿಂದ ಮುಮ್ಮಡಿ ಕೃಷ್ಣರಾಜ ಒಡೆಯರು ಆಡಳಿತವನ್ನು ಬ್ರಿಟಿಷ್ ಕಮಿಷನರಿಗೆ ಬಿಟ್ಟು ಕೊಡಬೇಕಾಯಿತು. ಚಾಮರಾಜ ಒಡೆಯರು (1881-1902) ನಾಲ್ವಡಿ ಕೃಷ್ಣರಾಜ ಒಡೆಯರು (1902-1940) ಜಯಚಾಮರಾಜ ಒಡೆಯರು (1940ರಿಂದ ಪ್ರಜಾತಂತ್ರ ಸ್ಥಾಪನೆಯಾಗುವವರೆಗೆ,ನಂತರವೂ ರಾಜ ಪ್ರಮುಖರಾಗಿ, ರಾಜ್ಯಪಾಲರಾಗಿ ನಾಡಿಗೆ ಸೇವೆ ಸಲ್ಲಿಸಿದರು. ಮದ್ರಾಸು ರಾಜ್ಯದ ರಾಜ್ಯಪಾಲರಾಗಿ ನಿವೃತ್ತರಾದರು.) ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಬಹದ್ದೂರ್ (20 ಫೆಬ್ರುವರಿ 1953 - 10 ಡಿಸೆಂಬರ್ 2013) ಯದುವೀರ ಕೃಷ್ಣ ದತ್ತಾ ಚಾಮರಾಜ ಒಡೆಯರ್ (28 ಮೇ 2015- ಪ್ರಸ್ತುತ) ವಾಸ್ತುಶಿಲ್ಪ ಅರಮನೆಯ ವಾಸ್ತುಕಲೆಯ ಶೈಲಿಯನ್ನು ಸಾಮಾನ್ಯವಾಗಿ "ಇಂಡೋ-ಸರಾಸೆನಿಕ್" ಶೈಲಿ ಎಂದು ವರ್ಣಿಸಲಾಗುತ್ತದೆ. ಮುಖ್ಯವಾಗಿ ಹಿಂದೂ, ಮುಸ್ಲಿಮ್, ಮತ್ತು ಗೋಥಿಕ್ ಶೈಲಿಯ ವಾಸ್ತುಕಲೆಗಳನ್ನು ಅರಮನೆಯ ನಿರ್ಮಾಣದಲ್ಲಿ ಉಪಯೋಗಿಸಲಾಗಿದೆ. ಕಲ್ಲಿನಲ್ಲಿ ಕಟ್ಟಲಾಗಿರುವ ಅರಮನೆಯಲ್ಲಿ ಮೂರು ಮಹಡಿಗಳಿದ್ದು, ಕೆಂಪು ಅಮೃತಶಿಲೆಯ ಗುಂಬಗಳು ಹಾಗೂ ೧೪೫ ಅಡಿ ಎತ್ತರದ ಐದು ಮಹಡಿಗಳುಳ್ಳ ಗೋಪುರವನ್ನು ಅರಮನೆ ಹೊಂದಿದೆ. ಅರಮನೆಯ ಸುತ್ತಲೂ ದೊಡ್ಡ ಉದ್ಯಾನವಿದೆ. ದೇವಸ್ಥಾನಗಳು ಅರಮನೆಯ ಆವರಣದಲ್ಲಿ ೧೨ ದೇವಸ್ಥಾನಗಳಿವೆ. ೧೪ ನೆಯ ಶತಮಾನದಲ್ಲಿ ಕಟ್ಟಿದ ಕೋಡಿ ಭೈರವನ ದೇವಸ್ಥಾನದಿಂದ ಹಿಡಿದು ೧೯೫೩ ರಲ್ಲಿ ಕಟ್ಟಲಾದ ದೇವಸ್ಥಾನಗಳೂ ಇವೆ. ಇಲ್ಲಿರುವ ದೇವಸ್ಥಾನಗಳಲ್ಲಿ ಪ್ರಸಿದ್ಧವಾದ ಕೆಲವು: ಸೋಮೇಶ್ವರನ ದೇವಸ್ಥಾನ ಲಕ್ಶ್ಮೀರಮಣ ದೇವಸ್ಥಾನ ಆಂಜನೇಯಸ್ವಾಮಿ ದೇವಸ್ಥಾನ ಗಣೇಶ ದೇವಸ್ಥಾನ ಶ್ವೇತ ವರಾಹ ಸ್ವಾಮಿ ದೇವಸ್ಥಾನ ಆಕರ್ಷಣೆಗಳು "ದಿವಾನ್-ಎ-ಖಾಸ್": ಮುಘಲ್ ಸಾಮ್ರಾಜ್ಯದ ಅರಮನೆಗಳಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತಿದ್ದ ಕೋಣೆ. ಮೈಸೂರು ಅರಮನೆಯಲ್ಲಿಯೂ ಇದನ್ನು ಬಳಸಲಾಗಿದೆ. ಮುಖ್ಯವಾದ ಅತಿಥಿಗಳು ಬಂದಾಗ ಅವರನ್ನು ರಾಜರು ಎದುರುಗೊಳ್ಳಲು ಉಪಯೋಗಿಸುತ್ತಿದ್ದ ಕೋಣೆ ಇದು. "ದರ್ಬಾರ್ ಹಾಲ್": ರಾಜರ ದರ್ಬಾರು ನಡೆಯುತ್ತಿದ್ದ ಶಾಲೆ. ಇಲ್ಲಿಯೇ ಜನರು ರಾಜರನ್ನು ಆಗಾಗ ಕಾಣಬಹುದಾಗಿತ್ತು. ಕಲ್ಯಾಣ ಮಂಟಪದಲ್ಲಿ ಚಿಕ್ಕ ಪುಟ್ಟ ಶುಭಕಾರ್ಯಗಳು ನಡೆಯುತ್ತಿದ್ದವು. ಆಯುಧ ಶಾಲೆ ರಾಜಮನೆತನದ ಸದಸ್ಯರು ಬಳಸುತ್ತಿದ್ದ ಆಯುಧಗಳನ್ನು ಇಲ್ಲಿ ಇಡಲಾಗಿದೆ. ಇಲ್ಲಿ ಚಾರಿತ್ರಿಕವಾದ ಅನೇಕ ಆಯುಧಗಳನ್ನು ಕಾಣಬಹುದು. ೧೪ ನೆಯ ಶತಮಾನದಲ್ಲಿ ಉಪಯೋಗಿಸಲ್ಪಡುತ್ತಿದ್ದ ಖಡ್ಗ, ಸುರಗಿ, ವ್ಯಾಗ್ರನಖ ಮೊದಲಾದ ಆಯುಧಗಳಿಂದ ಹಿಡಿದು ೨ಂನೆಯ ಶತಮಾನದ ಪಿಸ್ತೂಲುಗಳು, ಬಂದೂಕುಗಳು ಮೊದಲಾದವನ್ನು ಇಲ್ಲಿ ಕಾಣಬಹುದು. ಮುಖ್ಯವಾಗಿ, ಒಡೆಯರ್ ವಂಶದ ಪ್ರಸಿದ್ಧ ಅರಸು ರಣಧೀರ ಕಂಠೀರವ ಉಪಯೋಗಿಸಿದ್ದ ಖಡ್ಗಗಳಲ್ಲಿ ಒಂದಾದ "ವಜ್ರಮುಷ್ಟಿ", ಹಾಗೂ ಟೀಪು ಸುಲ್ತಾನ್ ಮತ್ತು ಹೈದರ್ ಅಲಿ ಉಪಯೋಗಿಸುತ್ತಿದ್ದ ಖಡ್ಗಗಳಲ್ಲಿ ಕೆಲವನ್ನು ಇಲ್ಲಿ ಕಾಣಬಹುದು. ಬಾಹ್ಯ ಸಂಪರ್ಕಗಳು ಮೈಸೂರಿನ ಅರಮನೆಗಳು ಮುಖ್ಯ ಮೈಸೂರು ಅರಮನೆ ಮೈಸೂರು ಹೆರಿಟೇಜ್ ಕಟ್ಟಡಗಳ ಪಟ್ಟಿ ಯದುವೀರ ಕೃಷ್ಣದತ್ತಾ ಚಾಮರಾಜ ಒಡೆಯರ್:೨೯-೬-೨೦೧೬:[] ಉಲ್ಲೇಖಗಳು ಮೈಸೂರು ಮೈಸೂರು ಸಂಸ್ಥಾನ ಮೈಸೂರು ತಾಲೂಕಿನ ಪ್ರವಾಸಿ ತಾಣಗಳು ಕರ್ನಾಟಕದ ಏಳು ಅದ್ಭುತಗಳು
1699
https://kn.wikipedia.org/wiki/%E0%B2%8E%E0%B2%9A%E0%B3%8D%20%E0%B2%A8%E0%B2%B0%E0%B2%B8%E0%B2%BF%E0%B2%82%E0%B2%B9%E0%B2%AF%E0%B3%8D%E0%B2%AF
ಎಚ್ ನರಸಿಂಹಯ್ಯ
ಡಾ. ಹೆಚ್.ನರಸಿಂಹಯ್ಯ (ಜೂನ್ ೬, ೧೯೨೦ - ಜನವರಿ ೩೧, ೨೦೦೫) ಬೆಂಗಳೂರಿನ ಹೆಸರಾಂತ ಭೌತಶಾಸ್ತ್ರಜ್ಞರೂ, ಶಿಕ್ಷಣತಜ್ಞರೂ ಆಗಿದ್ದರು. ಇವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಮುಂದೆ ಅಮೇರಿಕ ದೇಶದಲ್ಲಿನ ಓಹಿಯೋ ವಿಶ್ವವಿದ್ಯಾಲಯದಲ್ಲಿ ಪರಮಾಣು ಭೌತಶಾಸ್ತ್ರದಲ್ಲಿ ಪದವಿಯನ್ನು ಪಡೆದರು. ನ್ಯಾಷನಲ್ ಕಾಲೇಜು, ಬೆಂಗಳೂರಿನಲ್ಲಿ ಭೌತಶಾಸ್ತ್ರದ ಅಧ್ಯಾಪಕರಾಗಿ ಸೇರಿಕೊಂಡ ಇವರು, ತದನಂತರ ಕಾಲೇಜಿನ ಪ್ರಾಂಶುಪಾಲರಾದರು. ಜನನ, ಬಾಲ್ಯ ಹಾಗೂ ವಿದ್ಯಾಭ್ಯಾಸ ಡಾ.ಹೆಚ್.ಎನ್ ಎಂದೇ ಜನಪ್ರಿಯರಾದ 'ಹೊಸೂರು, ನರಸಿಂಹಯ್ಯನವರು' ಜೂನ್ ೬, ೧೯೨೦ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ 'ಹೊಸೂರು' ಗ್ರಾಮದಲ್ಲಿ ಒಂದು ಬಡ ಹಿಂದುಳಿದ ಕುಟುಂಬದಲ್ಲಿ ಹುಟ್ಟಿದರು. ತಂದೆ 'ಹನುಮಂತಪ್ಪ', ತಾಯಿ 'ವೆಂಕಟಮ್ಮ', ತಂಗಿ 'ಗಂಗಮ್ಮ'. ಮನೆಯಲ್ಲಿ ಮಾತಾಡುವ ಭಾಷೆ ತೆಲುಗು. ಆದರೆ ಕನ್ನಡವೆಂದರೆ ಹೆಚ್ಚು ಪ್ರೀತಿ, ಹಾಗೂ ಪ್ರಾವೀಣ್ಯತೆ ಇತ್ತು. ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು ಹೊಸೂರಿನಲ್ಲಿ ಮುಗಿಸಿ, ೧೯೩೫ರಲ್ಲಿ ಬೆಂಗಳೂರಿನ ನ್ಯಾಷನಲ್ ಹೈಸೂಲಿಗೆ ಸೇರಿದರು. ಭೌತಶಾಸ್ತ್ರದ ಬಿ.ಎಸ್ಸಿ. (ಹಾನರ್ಸ್) ಮತ್ತು ಎಂ.ಎಸ್ಸಿ., ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಓದಿದರು. ಎಲ್ಲಾ ಪರೀಕ್ಷೆಗಳಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದರು. ಸಾಹಿತ್ಯ ಕೃತಿಗಳು ತೆರೆದ ಮನ ಹೋರಾಟದ ಹಾದಿ(ಆತ್ಮಕಥನ) ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ೧೯೪೬ನೇ ಇಸವಿಯಲ್ಲಿ ಬೆಂಗಳೂರು ಬಸವನಗುಡಿ ಕಾಲೇಜಿನಲ್ಲಿ, ಭೌತಶಾಸ್ತ್ರ ಆಧ್ಯಾಪಕರಾದರು. ಅಲ್ಲಿಯೇ ಪ್ರಾಧ್ಯಾಪಕರಾಗಿ, ನಂತರ ಹನ್ನೆರೆಡು ವರ್ಷಗಳು ಪ್ರಾಂಶುಪಾಲರಾಗಿದ್ದರು. ೧೯೭೨ ರಿಂದ ೧೯೭೭ರ ವರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳು. ಆ ಕಾಲದಲ್ಲಿ ಅನೇಕ ಸುಧಾರಣೆಗಳನ್ನು ಮಾಡಿದರು. ಎಚ್.ಎನ್.ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್‌ ಕರ್ನಾಟಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದವರು. ವಿದ್ಯಾರ್ಥಿ ದೆಸೆಯಲ್ಲಿ ಅವರು ವಿವಿಧ ಉಚಿತ ವಿದ್ಯಾರ್ಥಿನಿಲಯಗಳಲ್ಲಿದ್ದರು. ಅಧ್ಯಾಪಕರಾದ ಮೇಲೂ ೧೯೪೬ರಿಂದ ಕೊನೆವರೆಗೂ ಕಾಲೇಜಿನ ವಿದ್ಯಾರ್ಥಿ ನಿಲಯದಲ್ಲಿಯೇ ವಾಸವಾಗಿದ್ದರು. ಒಟ್ಟು ೫೭ ವರ್ಷಗಳ ವಿದ್ಯಾರ್ಥಿನಿಲಯದಲ್ಲಿಯೇ ನೆಲೆಸಲು ಅವರ ಸರಳ, ಆದರ್ಶಮಯ ಜೀವನವೇ ಕಾರಣವೆಂದು ಹೇಳಲಾಗುತ್ತದೆ. ೧೯೪೨ ನೆಯ ಇಸವಿಯಲ್ಲಿ, ಸೆಂಟ್ರಲ್ ಕಾಲೇಜ್‌ನಲ್ಲಿ ಮೂರನೆಯ ಬಿ.ಎಸ್ಸಿ, ಆನರ್ಸ್ ತರಗತಿಯಲ್ಲಿ ಓದುತ್ತಿದ್ದಾಗ ಗಾಂಧೀಜಿಯವರು ಮೊದಲು ಮಾಡಿದ ಕ್ವಿಟ್ ಇಂಡಿಯಾ ಸ್ವಾತಂತ್ರ ಚಳುವಳಿಯಲ್ಲಿ ಭಾಗವಹಿಸಿದಾಗ ವಿದ್ಯಾಭ್ಯಾಸಕ್ಕೆ ಎರಡು ವರ್ಷ ವಿದಾಯ. ೧೯೪೭ರಲ್ಲಿ ಸ್ವಾತಂತ್ರ್ಯ ಬಂದ ನಂತರ ಮೈಸೂರಿನಲ್ಲಿ ನಡೆದ ಮೈಸೂರು ಚಲೋ ಚಳವಳಿಯಲ್ಲಿಯೂ ಅವರು ತಮ್ಮ ಅಧ್ಯಾಪಕ ವೃತ್ತಿಗೆ ರಾಜೀನಾಮೆ ನೀಡಿ ಭಾಗವಹಿಸಿದರು. ತಮ್ಮ ಸಹೋದ್ಯೋಗಿ ಕೆ.ಶ್ರೀನಿವಾಸನ್, ಟಿ.ಆರ್.ಶ್ಯಾಮಣ್ಣ ಇವರ ಜೊತೆ ಭೂಗತ ಹೋರಾಟ ನಡೆಸಿ ಮೈಸೂರು ಸಂಸ್ಥಾನದಲ್ಲಿ ಜವಾಬ್ದಾರಿ ಸರ್ಕಾರ ಸ್ಥಾಪನೆಗೆ ಬೆಂಬಲ ನೀಡತೊಡಗಿದರು."ಇಂಕ್ವಿಲಾಬ್" ಎಂಬ ಕೈಬರಹದ ಪತ್ರಿಕೆಯನ್ನು ಮಾಡಿ ಪೊಲೀಸರಿಗೆ ಸಿಗದಂತೆ ತಪ್ಪಿಸಿಕೊಳ್ಳುತ್ತಿದ್ದರು."ಇಂಕ್ವಿಲಾಬ್" ಕೈಬರಹದ ಪತ್ರಿಕೆಯ ೩೩ ಸಂಚಿಕೆಗಳು ಹೊರ ಬಂದವು. ಬೆಂಗಳೂರು, ಮೈಸೂರು ಮತ್ತು ಪುಣೆಯ ಯರವಾಡಾ ಜೈಲುವಾಸ. ಅಮೆರಿಕಾದ ಓಹಿಯೋ ರಾಜ್ಯ ವಿಶ್ವವಿದ್ಯಾಲಯದಲ್ಲಿ (Ohio State University) ಮೂರು ವರ್ಷ ಅಭ್ಯಾಸ ಮಾಡಿ ನ್ಯೂಕ್ಲಿಯಾರ್ ಫಿಸಿಕ್ಸ್‌ನಲ್ಲಿ ೧೯೬೦ರಲ್ಲಿ ಡಾಕ್ಟರೇಟ್ ಪದವಿ ಪಡೆದರು. ಅಲ್ಲಿಯ ಪರೀಕ್ಷೆಗಳಲ್ಲಿಯೂ ಉತ್ತಮ ಶ್ರೇಣಿ ಪಡೆದರು. ಏಳು ವರ್ಷಗಳ ನಂತರ ಅಮೇರಿಕಾದ ಸದರನ್ ಇಲ್ಲಿನಾಯ್ ವಿಶ್ವವಿದ್ಯಾಲಯ (Southern Illinois University) ದಲ್ಲಿ ಒಂದು ವರ್ಷ ಕಾಲ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಇವರ ಇಡೀ ಜೀವನ ಶಿಕ್ಷಣಕ್ಕೆ ಮತ್ತು ನಾಲ್ಕು ನ್ಯಾಷನಲ್ ಕಾಲೇಜು, ಐದು ನ್ಯಾಷನ ಲ್ ಹೈಸ್ಕೂಲ್ ಮತ್ತು ಎರಡು ಪ್ರೈಮರಿ ಶಾಲೆಗಳನ್ನೊಳಗೊಂಡ ನ್ಯಾಷನಲ್ ಎಜುಕೇಷನ್ ಸೊಸೈಟಿಗೆ ಮೀಸಲಿಟ್ಟಿದ್ದರು. ಈ ಸಂಸ್ಥೆಗಳ ಉನ್ನತಿಗಾಗಿ ಶ್ರಮಿಸಿದ್ದಾರೆ ಎನ್ನಲಾಗುತ್ತದೆ. ಅಲ್ಲದೆ ಈ ಸಂಸ್ಥೆಗಳಿಗಾಗಿ ಲಕ್ಷಾಂತರ ರೂಪಾಯಿಗಳನ್ನು ಸಾರ್ವಜನಿಕರಿಂದ ಸಂಗ್ರಹ ಮಾಡಿದ್ದಾರೆ. ಈ ಸಂಸ್ಥೆಗಳ ಪೈಕಿ ಆರೇಳು ಸಂಸ್ಥೆಗಳು, ಇವರ ಪ್ರಯತ್ನದ ಫಲವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಸ್ಥಾಪಿಸಲ್ಪಟ್ಟಿವೆ. ವೈಜ್ಞಾನಿಕ ಮನೋಭಾವದ ಬಗ್ಗೆ ಹೆಚ್ಚು ಆದ್ಯತೆ ವಿಜ್ಞಾನದಲ್ಲಿ, ವೈಜ್ಞಾನಿಕ ಮನೋಭಾವದಲ್ಲಿ ಅವರಿಗೆ ಅಚಲವಾದ ನಂಬಿಕೆ. ಮೂಢನಂಬಿಕೆ, ಮೌಢ್ಯದ ವಿರುದ್ಧ ಸತತ ಹೋರಾಟ. ಮೂವತ್ತು ವರ್ಷಗಳ ಹಿಂದೆ ಅವರು ಬೆಂಗಳೂರು ವಿಜ್ಞಾನ ವೇದಿಕೆ (Bangalore Science forum) ಎಂಬ ವಿಜ್ಞಾನವೇದಿಕೆಯನ್ನು ಸ್ಥಾಪಿಸಿ ಅದರ ಅಧ್ಯಕ್ಷರಾದರು. ಸಂಗೀತ, ನಾಟಕ, ನೃತ್ಯ ಮುಂತಾದ ಲಲಿತ ಕಲೆಗಳಿಗೆ ಮೊದಲಿನಿಂದಲೂ ಪ್ರೋತ್ಸಾಹ ನೀಡಿದ್ದರು. ಜಯನಗರದ ನ್ಯಾಷನಲ್ ಕಾಲೇಜಿನಲ್ಲಿರುವ ಬೆಂಗಳೂರು ಲಲಿತಕಲಾ ಪರಿಷತ್ತಿನ ಸ್ಥಾಪಕ ಅಧ್ಯಕ್ಷರಾಗಿದ್ದರು. ಅವರ ವಿಶಿಷ್ಟ ಸೇವೆಗಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ , ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿ, ಗುಲ್ಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರಶಸ್ತಿಗಳು ದೊರೆಕಿವೆ. ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ `ತಾಮ್ರಪತ್ರ` ಪ್ರಶಸ್ತಿ, ಕರ್ನಾಟಕ ರಾಜ್ಯ ನಾಟಕ ಅಕಾಡೆಮಿಯ `ಫೆಲೋ`. ಅತೀಂದ್ರಿಯ ಘಟನೆಗಳನ್ನು ವೈಜ್ಞಾನಿಕವಾಗಿ ಪರೀಕ್ಷಿಸಲು ಅಮೆರಿಕಾದಲ್ಲಿ ಸ್ಥಾಪಿಸಲ್ಪಟ್ಟಿರುವ ಅಂತರ ರಾಷ್ಟ್ರೀಯ ಖ್ಯಾತಿಯ ವಿಜ್ಞಾನಿಗಳು, ಸಮಾಜ ಮತ್ತು ಮನಃಶಾಸ್ತ್ರ ವಿಜ್ಞಾನಿಗಳು, ನೋಬೆಲ್ ಪಾರಿತೋಷಕ ವಿಜೇತರು. `ಫೆಲೋ`ಗಳಾಗಿರುವ `ಕಮಿಟಿ ಫಾರ್ ದಿ ಸೈಂಟಿಪಿಕ್ ಇನ್ವೆಸ್ಟಿಗೇಷನ್ ಆಫ್ ದಿ ಕ್ಲೈಮ್ಸ್ ಆಫ್ ದಿ ಪ್ಯಾರಾನಾಮಲ್` ( Committee for Scientific Investigation of the claims of the Paranomal) ಸಂಸ್ಥೆಯ ಭಾರತದ ಏಕೈಕ `ಫೆಲೋ` ಎಂಬ ಗೌರವ ಪಡೆದಿದ್ದಾರೆ. ಕರ್ನಾಟಕ ರಾಜ್ಯ ವಿಧಾನ ಪರಿಷತ್‌ನಲ್ಲಿ ಶಿಕ್ಷಣ ಮತ್ತು ವಿಜ್ಞಾನವನ್ನು ಪ್ರತಿನಿಧಿಸುವ ನಾಮಕರಣ ಸದಸ್ಯರಾಗಿದ್ದರು. ಮಾನವತಾವಾದಿ, ವಿಚಾರವಾದಿ ಅಧ್ಯಾಪಕ, ಆಡಳಿತಗಾರ, ಸ್ನೇಹಮಯ ಮಾನವತಾವಾದಿ, ವಿಚಾರವಾದಿ, ಮೇಲ್ಮಟ್ಟದ ಹಾಸ್ಯ ಪ್ರಜ್ಞೆ ಅವರದು ಎಂದು ಹೆಚ್.ಎನ್ ಅವರ ನಿಕಟವರ್ತಿಗಳ ಅಭಿಪ್ರಾಯ. ಸರಳ ಜೀವನ ನಡೆಸುತ್ತಿದ್ದರು. ರಾಷ್ಟ್ರೀಯತಾವಾದಿಯಾಗಿದ್ದರು ಮತ್ತು ಖಾದಿ ಬಟ್ಟೆಯನ್ನೇ ಧರಿಸುತ್ತಿದ್ದರು. ಉಪನ್ಯಾಸ ಧರ್ಮ ಮತ್ತು ವೈಚಾರಿಕ ಮನೋಭಾವ ಶ್ರೀ ಸತ್ಯಸಾಯಿಬಾಬಾ ಅವರು ಹೊಂದಿರುವ ಪವಾಡ ಶಕ್ತಿಗಳನ್ನು ಕುರಿತು ದೇಶದಾದ್ಯಂತ ವಿಪುಲವಾದ ಚರ್ಚೆ ನಡೆಯುತ್ತಿದೆ. ಇದು ಈಗ ರಾಷ್ಟ್ರೀಯ ವಿವಾದದ ವಿಷಯವಾಗಿದೆ. ಅನೇಕ ದಿನಪತ್ರಿಕೆಗಳು ಮತ್ತು ನಿಯತಕಾಲಿಕಗಳು ಸಾಕಷ್ಟು ಪುಟಗಳನ್ನು ಈ ವಿಷಯದ ಚರ್ಚೆಗೆ ವಿನಿಯೋಗಿಸಿವೆ. ಹೆಚ್ಚು ಕಮ್ಮಿ ಇದು ಮನೆ ಮಾತಾಗಿದೆ. ಬೆಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ರಚಿತವಾದ ಪವಾಡಗಳು ಮತ್ತು ಮೂಢನಂಬಿಕೆಗಳು ಕುರಿತು ವೈಜ್ಞಾನಿಕವಾಗಿ ತನಿಖೆ ಮಾಡಲು ರಚಿತವಾದ ಸಮಿತಿಯ ಪ್ರಯತ್ನಗಳು ಈ ವಿವಾದಕ್ಕೆ ಅವಕಾಶ ಮಾಡಿಕೊಟ್ಟಿರುವುದು ಮಹಾನ್ ಆಧ್ಯಾತ್ಮವಾದಿಗಳ ನೆನಪು ಈ ವಿಷಯದಲ್ಲಿ ನನಗೆ ಬುದ್ಧ, ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧೀಜಿಯವರಂತಹ ಮಹಾನ್ ಆಧ್ಯಾತ್ಮವಾದಿಗಳ ನೆನಪು ಬರುತ್ತದೆ. ಅವರ ಜೀವನಗಳು ತೆರೆದಿಟ್ಟ ಪುಸ್ತಕಗಳು, ಅವರ ನೆಲೆ 'ತೆರೆದ ಮನಗಳು'. ಸ್ವಾಮಿ ವಿವೇಕಾನಂದರ ಕೊಠಡಿಗೆ ಯಾರೇ ಹೋಗ ಬಹುದಿತ್ತು, ಗಾಂಧೀಜಿಯವರ ಶಿಬಿರವು ಗಾಜಿನಂತೆ ಪಾರದರ್ಶಕವಾಗಿದ್ದು, ಸಾರ್ವಜನಿಕ ಪ್ರದೇಶದಂತೆ ಇತ್ತು. ಭಗವಾನ್ ಬುದ್ಧನ ವಾಸಸ್ಥಳಕ್ಕೆ ಆಕಾಶವೇ ಚಾವಣಿಯಾಗಿತ್ತು. ಅವರುಗಳ ಸರಳವಾದ, ಕಟ್ಟುನಿಟ್ಟಾದ ಬದುಕನ್ನು ಪಾಲಿಸಿದರು. ಯಾರೇ ಯಾವ ಪ್ರಶ್ನೆಯನ್ನೂ ಕೇಳಿದರೂ ಅವರು ಉತ್ತರಿಸಿದರು. ತಮ್ಮನ್ನು ಅಂಧವಾಗಿ ಅನುಕರಿಸಬೇಡಿರೆಂದು ಅವರುಗಳು ಎಲ್ಲರನ್ನೂ ಕೇಳಿಕೊಂಡರು. ಅವರ ಎಲ್ಲ ಹೇಳಿಕೆಗಳೂ ವೈಜ್ಞಾನಿಕ ದೃಷ್ಟಿಕೋಣವನ್ನು ಹೊಂದಿದ್ದವು. ಗಾಂಧೀಜಿಯವರು ತಮ್ಮ ಆತ್ಮ ಚರಿತ್ರೆಯನ್ನು 'ಸತ್ಯದ ಶೋಧನೆ' ಎಂದೇ ಕರೆದಿದ್ದಾರೆ. ತಿರುವಣ್ಣಾ ಮಲೈನ ರಮಣ ಮಹರ್ಷಿಗಳು ಕೂಡ ಶ್ರೇಷ್ಠ ವ್ಯಕ್ತಿಯಾಗಿದ್ದು, ನಮ್ಮ ಗೌರವಕ್ಕೆ ಪಾತ್ರರಾಗಿದ್ದಾರೆ. ಅಂತಿಮ ಸತ್ಯವನ್ನು ಕಂಡುಕೊಳ್ಳುವಲ್ಲಿ ಅವರೆಲ್ಲಾ ವಿನಯ ಮತ್ತು ವೈಚಾರಿಕತೆಯನ್ನು ವ್ಯಕ್ತಪಡಿಸಿದರು. ಸತ್ಯಸಾಯಿಬಾಬಾ ಅವರು ಯಾವುದೇ ಪ್ರಶ್ನೆಗಳಿಗೆ ಉತ್ತರಿಸುವುದು ಅವರ ಕರ್ತವ್ಯ. ತಮ್ಮ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳ ಬೇಕಾದ ಅವರು ತಮಗೆ ಇದೆಯೆಂದು ಹೇಳಿಕೊಳ್ಳುವ ಆಧ್ಯಾತ್ಮಿಕ ಶಕ್ತಿಗಳನ್ನು ಬಹಿರಂಗವಾಗಿ ತೋರ್ಪಡಿಸುವುದು ಅವಶ್ಯಕ. ಅವರ ಬಗ್ಗೆ ಪೂರ್ವಗ್ರಹಪೀಡಿತ ಅಥವಾ ಪೂರ್ವಗ್ರಹವಿಲ್ಲದೆ ಅನುಮಾನಪಡುತ್ತಿರುವ ಸಂಶಯ ಪರಿಹಾರವಾಗುತ್ತದೆ. ಇದು ಸಾರ್ವಜನಿಕರ ದೃಷ್ಟಿಯಿಂದ ಪ್ರಾಮುಖ್ಯವನ್ನು ಪಡೆದುಕೊಂಡಿದೆ. ತಮ್ಮಲ್ಲಿ ನಂಬಿಕೆ ಇರುವವರಿಗಿಂತ ಹೆಚ್ಚಾಗಿ ಇಲ್ಲದೇ ಇರುವವರ ಕಡೆ ಹೆಚ್ಚು ಗಮನ ಹರಿಸಬೇಕಾದ್ದು ಅವರ ಕರ್ತವ್ಯ. ಪ್ರೀತಿ, ನಂಬಿಕೆ ಮತ್ತು ಪೂರ್ವಗ್ರಹಗಳಿಲ್ಲದೆ ತಮ್ಮೆಡೆಗೆ ಬರುವವರಿಗೆ ದರ್ಶನ ಕೊಡುತ್ತೇವೆ ಎಂದು ಅವರು ಹೇಳಿಕೊಳ್ಳುವುದರಲ್ಲಿ ಸಂತೋಷಪಡುತ್ತಾರೆ. ಹಿಂದೆ ಹಾಗೂ ಇತ್ತೀಚಿನ ಕೆಲವು ವಾರಗಳಲ್ಲಿ ಅವರನ್ನು ಕಂಡ ವ್ಯಕ್ತಿಗಳೆಲ್ಲ ಮೇಲಿನ ನಿಯಮಗಳಿಗೆ ಬದ್ಧರಾಗಿದ್ದವರೇ ಎಂದು ನಾನು ಕೇಳಬಯಸುತ್ತೇನೆ. ಅವರ ಭಕ್ತವೃಂದವನ್ನು ಮೇಲುನೋಟಕ್ಕೆ ಗಮನಿಸಿದರೂ ಅವರಲ್ಲಿ ಅನೀತಿವಂತರು, ಭಷ್ಟಾಚಾರಿಗಳು, ವರಮಾನ ತೆರಿಗೆ ತಪ್ಪಿಸಿಕೊಂಡವರೂ, ಸಮಾಜ ದ್ರೋಹಿಗಳು ಬೇಕಾದಷ್ಟು ಜನ ಸಿಗುತ್ತಾರೆ. ವಿಶ್ವವಿದ್ಯಾಲಯ ತನಿಖಾ ಸಮಿತಿಯವರು ಅವರ ಸಂದರ್ಶನಕ್ಕೆ ಅನರ್ಹರೆಂದು ತೋರುತ್ತದೆ. ಸಾಯಿಬಾಬಾ ಅವರ ದೃಷ್ಟಿಯಲ್ಲಿ ನಾವು ಅವರ ಸಹವಾಸಕ್ಕೆ ಯೋಗ್ಯರಲ್ಲಿ. ಅದು ನಿಜವಿದ್ದರೂ ಇರಬಹುದು. ಪ್ರಗತಿ ವಿರೋಧಿಯಾದ ಆರಾಧನಾ ಪದ್ಧತಿ 'ನೀವು ದೇವರೇ' ಎಂಬ ಪ್ರಶ್ನೆಗೆ ಅವರು ' ದೇವರು ಎಲ್ಲರಲ್ಲಿಯೂ ಇದ್ದಾನೆ' ಎಂಬ ಉತ್ತರ ಕೊಟ್ಟರೆಂದು ಪತ್ರಿಕೆಗಳಲ್ಲಿ ವರದಿ ಆಗಿದೆ. ಇಪ್ಪತೈದು ವರ್ಷಗಳಿಂದ ಆಧ್ಯಾಪಕನಾಗಿರುವ ನನಗೆ ಈ ಉತ್ತರ ಅಪ್ರಸ್ತತ ಎಂದು ವಿನಯಪೂರ್ವಕವಾಗಿ ತಿಳಿಸ ಬಯಸುತ್ತೇನೆ. ಇದು ಪ್ರಶ್ನೆಯನ್ನು ಮರೆಸುವ ಪ್ರಯತ್ನ. ತಮ್ಮನ್ನು ಆಕ್ಷೇಪಿಸುವವರು ತಾವು ಮಾಡಿರುವ ಮಾನವೀಯ ಮತ್ತು ಶೈಕ್ಷಣಿಕ ಕಾರ್ಯಗಳನ್ನು ಮರೆಯುತ್ತಾರೆ ಎಂದು ಶ್ರೀ ಸತ್ಯಸಾಯಿಬಾಬಾರವರು ನೊಂದ ದ್ವನಿಯಲ್ಲಿ ಹೇಳುವುದುಂಟು. ನಾವು ಆ ಬಗ್ಗೆ ಇಲ್ಲಿ ಚರ್ಚಿಸುತ್ತಿಲ್ಲ ಎಂದು ತಿಳಿಸಲು ಇಚ್ಛಿಸುತ್ತೇನೆ. ನಾವು ತೆಗೆದುಕೊಂಡಿರುವ ಸಮಸ್ಯೆಯ ಅಂತರಾಳವು ಹೆಚ್ಚಿನ ಪ್ರಾಮುಖ್ಯವನ್ನು ಹೊಂದಿದ್ದು, ಅನೇಕ ಮಹತ್ತರವಾದ ಪರಿಣಾಮಗಳಿಗೆ ಕಾರಣವಾಗಬಲ್ಲದು. ಈ ತನಿಖೆಯು ಯಾವುದೇ ವ್ಯಕ್ತಿಯನ್ನು ಮುಖಭಂಗ ಮಾಡುವ ಉದ್ಧೇಶದಿಂದ ಹೊರಟಿಲ್ಲ. ಆದರೆ ಪ್ರಗತಿ ವಿರೋಧಿಯಾದ ಆರಾಧನಾ ಪದ್ಧತಿಯ ಮನೋಭಾವನ್ನು ಪ್ರಶ್ನಿಸುತ್ತದೆ. ಇದರ ಗುರಿ ' ಸತ್ಯಾನ್ವೇಷಣೆ' ಯಾಗಿದೆ. ನಮ್ಮ ದೇಶವು ಸಾವಿರಾರು ದೇವರುಗಳು, ಬಾಬಾಗಳು ಮತ್ತು ' ಮಿನಿ' ಬಾಬಾಗಳ ಸಂತೆಯಾಗಿದೆ. *ಪರಿಶೀಲನ ಮಾರ್ಗದಿಂದ, ಪ್ರಶ್ನಿಸುವ ರೀತಿಯಿಂದ ಅಸಲು ನಕಲುಗಳನ್ನು ಬೇರ್ಪಡಿಸುವ ಅವಶ್ಯಕತೆಯಿದೆ. ಈಗ ಪ್ರತಚಲಿತವಾಗಿರುವ ಧಾರ್ಮಿಕ ಮತ್ತು ಆಧ್ಯಾತ್ಮಿಕ ರಂಗಗಳನ್ನು ಪರಿಶುದ್ಧಗೊಳಿಸುವುದು ಅತ್ಯವಶ್ಯಕ. ದೇವರು ಮತ್ತು ಧರ್ಮದ ಹೆಸರಿನಲ್ಲಿ ಅನೇಕ ಶತಮಾನಗಳಿಂದ ಈ ದೇಶದಲ್ಲಿ ಅಗಾಧ ಪ್ರಮಾಣದಲ್ಲಿ ಶೋಷಣೆ ನಡೆದಿದೆ. ಬಡವರು ಹಾಗೂ ದಡ್ಡರೂ ನಿರಂತರವಾಗಿ ಮೋಸಕ್ಕೆ ಒಳಪಟ್ಟಿದ್ದಾರೆ. ಈ ಜ್ಞಾನ ಯುಗದಲ್ಲೂ ಕೆಲವು ವಿಜ್ಞಾನಿಗಳು ಇದಕ್ಕೆ ಅಪವಾದವಾಗಿಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ನಮ್ಮ ದೇಶವು ಹೆಚ್ಚಿನ ಪ್ರಗತಿಯನ್ನು ಸಾಧಿಸಿದೆ ಎಂಬುದು ನಿಜ. ವಿಜ್ಞಾನಿಯು ಪ್ರಯೋಗಶಾಲೆಯಲ್ಲಿ ಜೀವವನ್ನು ಸೃಷ್ಟಿಸುವ ಹಂತದಲ್ಲಿ ಇದ್ದಾನೆ. ಪ್ರಕೃತಿಯ ಅನೇಕ ರಹಸ್ಯಗಳನ್ನು ಮನುಷ್ಯನು ತನ್ನ ಪರಿಶೀಲನ ಮನೋಭಾವದಿಂದ, ಅವಿರತ ಶ್ರಮದಿಂದ ಬಿಡಿಸಿದ್ದಾನೆ. ನೆನ್ನೆಯ ದಿನ ಅತಿಮಾನುಷ ಎಂದು ಅಂದುಕೊಂಡ ಸಂಗತಿಯು ಈ ದಿನ ಸಂಪೂರ್ಣ ಸಹಜ ಸಂಗತಿಯಾಗಿದೆ. ಇದು ಸಾಧನೆಯ ಒಂದು ಮುಖ ಮಾತ್ರ. ಈ ಪ್ರಗತಿಯ ಮತ್ತೊಂದು ಭಾಗದ ಚಿತ್ರ ಅತ್ಯಂತ ನಿರಾಶದಾಯಕ. ವಿಜ್ಞಾನಿ ಅಥವಾ ವಿಜ್ಞಾನದ ವಿದ್ಯಾರ್ಥಿ ಪ್ರಯೋಗ ಶಾಲೆಯಲ್ಲಿ ಸಮಸ್ಯೆಗಳನ್ನು ಎದುರಿಸುವಾಗ ವಿಚಾರವಾದಿಯಾಗಿ ಕಂಡುಬರುತ್ತಾನೆ. ಆದರೆ ಇದೇ ವ್ಯಕ್ತಿ ಜೀವನದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಾಗ ಸಂಪೂರ್ಣವಾಗಿ ವೈಚಾರಿಕತೆಯನ್ನು ತ್ಯಜಿಸಿ ಬಿಡುತ್ತಾನೆ. ಅವನ ಯೋಚನಾಶಕ್ತಿ ರಜೆ ತೆಗೆದುಕೊಂಡು ಬಿಡುತ್ತದೆ. ಕೆಲವು ವಿಜ್ಞಾನಿಗಳು ಪವಾಡಗಳನ್ನು ಮಾಡುತ್ತೇವೆ ಎಂದು ಹೇಳುವ ವ್ಯಕ್ತಿಗಳನ್ನು ಅಂಧರಾಗಿ ಅನುಸರಿಸುವುದೂ ಉಂಟು. ವಿಜ್ಞಾನವು ಜೀವನ ನಂಬಿಕೆಯಾಗದೆ ಹೊಟ್ಟೆಪಾಡಿನ ಮಾರ್ಗವಾದಲ್ಲಿ, ಅಂತಹ ವ್ಯಕ್ತಿಗಳು ಹೇಗೆ ತಾನೇ ವೈಜ್ಞಾನಿಕ ಮನೋಭಾವವನ್ನು ವೈಚಾರಿಕತೆಯನ್ನು ಪ್ರಚಾರ ಮಾಡಲು ಸಾಧ್ಯ. ನಮ್ಮ ದೇಶವು ಮೂಢನಂಬಿಕೆಗಳಿಂದ ತುಂಬಿ ತುಳುಕುತ್ತಿದೆ. ಶಿಕ್ಷಣ ಪಡೆಯುತ್ತಿರುವವರಿಗೆ ಸರಿಯಾದ ಶಿಕ್ಷಣ ದೊರೆಯಬೇಕಾಗಿರುವುದು ಈಗ ಅತ್ಯಂತ ಅವಶ್ಯಕ. ಮೂಢನಂಬಿಕೆಯು ಭಯ ಮತ್ತು ಅಜ್ಞಾನಗಳಿಂದ ಉಂಟಾಗುತ್ತದೆ. ಅವು ಆತ್ಮವಿಶ್ವಾಸವನ್ನು ಲೆಕ್ಕ ಹಾಕಲು ಸಾಧ್ಯವಾಗದಷ್ಟು ಪ್ರಮಾಣದಲ್ಲಿ ನಾಶಪಡಿಸುತ್ತವೆ. ಅವು ಸ್ವತಂತ್ರ ಚಿಂತನೆಯನ್ನು, ನಿರ್ಭೀತ ಮನೋಭಾವವನ್ನು ಮೊಟಕುಗೊಳಿಸುತ್ತವೆ. ವಿಜ್ಞಾನದ ಫಲಿತಾಂಶಗಳು ಬಗ್ಗೆ ನಾವು ಹೆಚ್ಚು ಗಮನ ಕೊಟ್ಟಿದ್ದೇವೆ. ಆದರೆ ವಿಜ್ಞಾನದ ಚೈತನ್ಯವು (spirit) ಜನಪ್ರಿಯವಾಗಿಲ್ಲ. ವಿಜ್ಞಾನದ ನಿಜವಾದ ಪ್ರಾಮುಖ್ಯ ಈ ಅಂಶದಲ್ಲಿ ಅಡಗಿದೆ ಎಂಬುದು ನನ್ನ ಅಭಿಪ್ರಾಯ. ನಮ್ಮ ತಿಳುವಳಿಕೆಯಲ್ಲಿ ಎಷ್ಟೆ ಕಂದರಗಳಿದ್ದರೂ, ವಿಜ್ಞಾನಕ್ಕೆ ತನ್ನದೆ ಆದ ಮಿತಿಗಳಿದ್ದರೂ ಸಮಸ್ಯೆಗಳನ್ನು ಪರಿಹರಿಸಿಕೊಳ್ಳವಲ್ಲಿ ವಿಜ್ಞಾನದ ವಿಧಾನಗಳೇ ಹೆಚ್ಚು ಸಮರ್ಪಕ. ಯಾವುದೇ ಹೇಳಿಕೆ ಅಥವಾ ಸೂಕ್ತಿಯನ್ನು ಒಪ್ಪಿಕೊಳ್ಳವುದು ಸರಿಯಲ್ಲ. ಸಾಧ್ಯವಾದಷ್ಟರಮಟ್ಟಿಗೆ ಅವುಗಳನ್ನು ಪ್ರಯೋಗಗಳ ಮೂಲಕ ಪರಿಕ್ಷೀಸಬೇಕು. ಎಲ್ಲ ಪರಿಶೀಲನ ಮಾರ್ಗಗಳಲ್ಲೂ ವಿಚಾರವು ಅಡಿಪಾಯವಾಗಬೇಕು. ಈ ಮನೋಭಾವವನ್ನು ಬೆಳೆಸುವ ದಿಸೆಯಲ್ಲಿ ಎಲ್ಲ ಸಂಸ್ಥೆಗಳು ಮತ್ತು ವಿಶ್ವವಿಧ್ಯಾಲಯಗಳು ಕಾರ್ಯಪ್ರವೃತ್ತರಾಗಬೇಕು. ಪಂಡಿತ ಜವಹರಲಾಲ್ ನೆಹುರೂರವರು ಅಲಹಾಬಾದಿನ ವಿಶ್ವವಿದ್ಯಾಲಯದ ವಿಶೇಷ ಘಟಿಕೋತ್ಸವದ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಉದ್ಧೇಶಗಳನ್ನು ಕುರಿತು ಹೇಳಿದ ಮಾತುಗಳನ್ನು ಬಹುಪಾಲು ವಿಶ್ವವಿದ್ಯಾಲಯಗಳು ಮರೆತು ಬಿಟ್ಟಿವೆ. ವಿಶ್ವವಿದ್ಯಾಲಯವು ಮಾನವತಾವಾದ, ಸಹನೆ, ವೈಚಾರಿಕತೆ, ನಿರ್ದಿಷ್ಟ ಗುರಿಗಾಗಿ ಹೋರಾಡುವ ಸಾಹಸ ಮತ್ತು ಸತ್ಯದ ಅನ್ವೇಷಣೆಯ ಸಂಕೇತ. ವಿಶ್ವವಿದ್ಯಾಲಯಗಳು ಉನ್ನತ ಧ್ಯೇಯಗಳನ್ನು ಹೊಂದಿ ಮನುಷ್ಯನ ಪ್ರಗತಿಯಲ್ಲಿ ಮುನ್ನುಗ್ಗಬೇಕು. ಅವು ತಮ್ಮ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಿದರೆ, ಜನಗಳಿಗೆ ಹಾಗೂ ದೇಶಕ್ಕೆ ಒಳ್ಳೆಯದನ್ನು ಮಾಡಿದಂತೆ ಆಗುತ್ತದೆ, ಎಂದು ನೆಹರೂರವರು ಅಭಿಪ್ರಾಯ ಪಟ್ಟಿದ್ದಾರೆ. ನಮಗೆಲ್ಲ ತಿಳಿದಿರುವಂತೆ ಇತ್ತೀಚೆಗೆ ಸಂವಿಧಾನ ತಿದ್ದುಪಡಿ ಸಮಿತಿಯು ಪ್ರತಿಯೊಬ್ಬ ಪ್ರಜೆಯ ಮೂಲಭೂತವಾದ ಹತ್ತು ಕರ್ತವ್ಯಗಳನ್ನು ಸೂಚಿಸಿದೆ. ಅವುಗಳಲ್ಲಿ ಎಂಟನೆಯ ಕರ್ತವ್ಯವು ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು. ಮಾನವತಾವಾದ, ವೈಚಾರಿಕತೆ, ಪರೀಕ್ಷಾ ಮನೋಭಾವ ಹಾಗೂ ಸುಧಾರಕ ದೃಷ್ಟಿಯನ್ನು ತಿಳಿಸುತ್ತದೆ. ಈ ಕರ್ತವ್ಯವನ್ನು ಪ್ರತಿಯೊಬ್ಬನೂ ಗಂಭೀರವಾಗಿ ತೆಗೆದುಕೊಡು ಕಾರ್ಯರೂಪಕ್ಕೆ ತಂದರೆ ಬಹಳ ಒಳ್ಳೆಂi ಪರಿಣಾಮಗಳಾಗುತ್ತವೆ. ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳು ಈ ರೀತಿಯ ತನಿಖೆಗಳನ್ನು ಕೈಗೊಳ್ಳುವುದಕ್ಕೆ ಸಂವಿಧಾನದ ಒಪ್ಪಿಗೆ ಕೂಡ ದೊರೆತಿದೆ ಎಂಬುದು ಈ ಅಂಶದಿಂದ ತಿಳಿದು ಬರುತ್ತದೆ. ಈಗ ಸತ್ಯಸಾಯಿಬಾಬಾ ಮತ್ತು ಅವರ ಬೆಂಬಲಿಗರು ಉನ್ಮಾದದ ಆವೇಶದ ಮಾತುಗಳ ಕಡೆ ಗಮನ ಹರಿಸೋಣ. ಬಹಳಷ್ಟು ಲೇಖನಗಳನ್ನು ಪ್ರಕಟಿಸುವುದರಿಂದ, ಸಂಶಯದ ಆವರಣದಲ್ಲಿ ಅನೇಕ ವಸ್ತುಗಳನ್ನು ಪ್ರದರ್ಶಿಸುವುದರಿಂದ, ಬೀದಿಯಲ್ಲಿ ನಿಂತು ಕೂಗುವುದರಿಂದ ಆ ಸತ್ಯಸಾಯಿಬಾಬಾರವರು ಶೂನ್ಯದಲ್ಲಿ ವಸ್ತುಗಳನ್ನು ಸೃಷ್ಟಿಸುತ್ತಾರೆ ಎಂಬುದು, ನಿಜವಾಗುವುದಿಲ್ಲ. ಇವೆಲ್ಲವೂ ಅವರ ದೈವೀಶಕ್ತಿಯನ್ನು ರುಜುವಾತು ಮಾಡುವುದಿಲ್ಲ. ಎಲ್ಲಿಯ ತನಕ ಈ ಸಂದಿಗ್ಧತೆ ಮುಂದುವರೆಯಬೇಕು? ಸಾವಿರಾರು ಜನರಿಗೆ ಇದರ ಬಗ್ಗೆ ನಿಜವಾದ ಸಂಶಯಗಳಿವೆ. ಇಷ್ಟು ಸಮಯವಾದರೂ ಈ ಒಗಟು ಪರಿಹಾರವಾಗದೇ ಇರುವುದು ಸರಿಯಲ್ಲ. ದೇಶದ ತುಂಬ ನಡೆಯುತ್ತಿರುವ ಚರ್ಚೆಯು ವ್ಯರ್ಥವಾಗುವುದು ಉಚಿತವಲ್ಲ. ಈ ಹೆಚ್ಚಿನ ವಿವಾದಿಂದ ಏನಾದರೂ ಗಟ್ಟಿಯಾದ ತೀರ್ಮಾನಕ್ಕೆ ಬರುವುದು ಅವಶ್ಯಕ. ಈ ಸಮಸ್ಯೆಯು ಸರಳ ಮತ್ತು ಸ್ಪಷ್ಟ. ಸಂಬಂಧವಿಲ್ಲದ ಸಂಗತಿಗಳನ್ನು ಇದರ ಜೊತೆಯಲ್ಲಿ ತಂದು ಗೊಂದಲ ಮಾಡುವುದು ಸರಿಯಲ್ಲ. ಇದಕ್ಕೆ ಸಂಬಂಧಿಸಿದಂತೆ ನುಣಿಚಿಕೊಳ್ಳವ ಪ್ರಯತ್ನವಾಗಲೀ, ಹಾರಿಕೆಯ ಉತ್ತರವಾಗಲೀ, ವ್ಯರ್ಥಮಾತುಗಳಾಗಲೀ ಅವಶ್ಯಕತೆ ಇಲ್ಲ. ಶ್ರೀ ಸತ್ಯಸಾಯಿಬಾಬಾರವರು ಪ್ರಾಮಾಣಿಕ ವ್ಯಕ್ತಿಯಾಗಿದ್ದರೆ, ನಮ್ಮ ಸಮಿತಿಯು ಅವರನ್ನು ನೋಡುವ ಅವಕಾಶವನ್ನು ಕೊಟ್ಟು ನೈತಿಕ ಧೈರ್ಯವನ್ನು ವ್ಯಕ್ತಪಡಿಸಲಿ. ಅವರೊಡನೆ ಚರ್ಚಿಸಲು ಹಾಗೂ ಬಹಿರಂಗವಾಗಿ ಅವರ ಪವಾಡವನ್ನು ಪರೀಕ್ಷಿಸಲು ಅವಕಾಶವನ್ನು ಮಾಡಿಕೊಟ್ಟು ಅವರು ತಮ್ಮ ಮಾತಿನ ಸತ್ಯವನ್ನು ಸಾಬೀತುಪಡಿಸಲಿ. ವಿಜ್ಞಾನದ ವಿದ್ಯಾರ್ಥಿಯಾಗಿ ಈಗಲೂ ಕೂಡ ನಾನು ವಿಷಯವನ್ನು ಗ್ರಹಿಸುವಲ್ಲಿ ತೆರೆದ ಮನಸ್ಸನ್ನು ಹೊಂದಿದ್ದೇನೆ. ಹೊಸ ಅಂಶಗಳಿಂದ, ಅನುಭವಗಳಿಂದ ನನ್ನ ಅಭಿಪ್ರಾಯಗಳನ್ನು ಮತ್ತು ಪ್ರಾಯೋಗಿಕ ನೆಲೆಯಲ್ಲಿ ಕಂಡುಕೊಂಡಿರುವ ತೀರ್ಮಾನಗಳನ್ನು ಬದಲಾಯಿಸಿಕೊಳ್ಳಲು ಸಿದ್ಧನಿದ್ದೇನೆ. ನಿಧನ ಡಾ. ಹೆಚ್.ನರಸಿಂಹಯ್ಯನವರು ೨೦೦೫ ಜನವರಿ ೩೧ರಂದು ನಿಧನರಾದರು ಉಲ್ಲೇಖಗಳು ಭಾಹ್ಯ ಕೊಂಡಿಗಳು ವೈಚಾರಿಕ ಸಂತ' ಎಚ್.ನರಸಿಂಹಯ್ಯ ಮನೆ; ಈರಪ್ಪ ಹಳಕಟ್ಟಿ Updated: 06 ಜೂನ್ 2020 Champion of pure sciences in an IT hub by A. Narayana Article in the newspaper ದಿ ಹಿಂದೂ 4 April 2004 Biography at Rationalist International Tributes to H.Narasimhaiah H.Narasimhaiah passes into history Past & Present Rationalist and nationalist article by Ramachandra Guha in The Hindu 27 February 2005 The Blitz interview Sathya Sai Baba's September 1976 interview with editor R. K. Karanjia of Blitz News Magazine, containing a rebuttal to Narasimhaiah Dr. HN's Room at National college Hostel on YouTube ಭಾರತ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು ೧೯೨೦ ಜನನ ೨೦೦೫ ನಿಧನ ನಾಡೋಜ ಪ್ರಶಸ್ತಿ ಪುರಸ್ಕೃತರು
1702
https://kn.wikipedia.org/wiki/%E0%B2%B0%E0%B2%BE%E0%B2%9C%E0%B2%BE%20%E0%B2%B0%E0%B2%B5%E0%B2%BF%20%E0%B2%B5%E0%B2%B0%E0%B3%8D%E0%B2%AE
ರಾಜಾ ರವಿ ವರ್ಮ
ರಾಜಾ ರವಿವರ್ಮ( ೨೯, ಏಪ್ರಿಲ್, ೧೮೪೮-೨, ಅಕ್ಟೋಬರ್, ೧೯೦೬ ) - ಭಾರತದ ಸುಪ್ರಸಿದ್ಧ ವರ್ಣಚಿತ್ರಗಾರ. ಆರಂಬಿಕ ಬದುಕು ರಾಜಾ ರವಿವರ್ಮರು ಕಿಳಿಮಾನೂರು ಊರಿನ, ರಾಜವಂಶಕ್ಕೆ ಸೇರಿದವರು. ಈ ಗ್ರಾಮ, ತಿರುವನಂತಪುರದ ಉತ್ತರಕ್ಕೆ, ೨೫ ಮೈಲಿ ದೂರದಲ್ಲಿದೆ. ಕಂಡನೂರು ದೆಶತ್ತ್ ಮತ್ತು ಉಮಾ ಅಂಬಾಬಾಯಿಯವರ ಒಲವಿನ ಮಗನಾಗಿ, ೨೯, ಆಗಸ್ಟ್, ೧೮೪೮ ರಲ್ಲಿ ರವಿವರ್ಮರು ಜನಿಸಿದರು. ತಾಯಿ ಕವಯಿತ್ರಿ, ಮತ್ತು ಸುಸಂಸ್ಕೃತರು. ತಂದೆ, ಸಂಸ್ಕೃತವನ್ನು ಓದಿಕೊಂಡವರು. ಚಿಕ್ಕಂದಿನಿಂದಲೂ ರವಿಯವರು ದೈವಭಕ್ತರು. ಆಚಾರ, ನಿಷ್ಠೆ, ಆತ್ಮಸ್ಥೈರ್ಯ, ಮತ್ತು ಆತ್ಮವಿಶ್ವಾಸಗಳು, ಅವರಿಗೆ ಹುಟ್ಟಿನಿಂದಲೆ ಬಂದಿದ್ದವು. ಪ್ರತಿದಿನ ಬೆಳಿಗ್ಯೆ ಬೇಗ ಎದ್ದು, ನಿತ್ಯಕರ್ಮಗಳನ್ನು ಮುಗಿಸಿ, ಸೌಂದರ್ಯಲಹರಿ, ಸ್ವಯಂವರ, ಮಂತ್ರಗಳನ್ನು ಬಾಯಿಪಾಠವಾಗಿ ಹೇಳುತ್ತಿದ್ದರು. ರವಿ, [ ರವಿವರ್ಮರನ್ನು ಬಾಲ್ಯದಲ್ಲಿ ಗೆಳೆಯರು ಹಾಗೆಯೇ ಕರೆಯುತ್ತಿದ್ದದ್ದು ] ಸಾಹಿತ್ಯ, ವ್ಯಾಕರಣ, ಶಾಸ್ತ್ರೀಯ ಸಂಗೀತ, ಮತ್ತು ವೇದಪುರಾಣಗಳಲ್ಲಿ ಆಸಕ್ತರು. ರಾಮಾಯಣ, ಮಹಾಭಾರತ, ಅವರಿಗೆ ಬಲು ಪ್ರಿಯವಾದ ಗ್ರಂಥಗಳು. ಅಮರಕೋಶ, ಸಿದ್ಧರೂಪ, ಅವರಿಗೆ ೫ ನೆ ವಯಸ್ಸಿನಲ್ಲೇ ಬಾಯಿಪಾಠವಾಗಿತ್ತು. ಅವರ ಮಾವ, ರಾಜರಾಜವರ್ಮರು ಒಳ್ಳೆಯ ಕಲಾಸಾಧಕರು. ಅವರು ಆಗಿನ ತಿರುವಾಂಕೂರಿನ ಮಹಾರಾಜರಾದ, ಆಯಿಲ್ಯಂ ತಿರುನಾಳ್ ರವರಿಗೆ ರವಿಯನ್ನು ಪರಿಚಯಿಸಿದರು. ಆಗ ರವಿಗೆ ಕೇವಲ ೧೪ ವರ್ಷ ವಯಸ್ಸು. ದೊರೆಗಳು ರವಿಗೆ ಆಗಿನಕಾಲದ ಪ್ರಮುಖ ಚಿತ್ರಕಲಾವಿದರು ರಚಿಸಿದ, ಸಚಿತ್ರ ಪುಸ್ತಕವನ್ನು ಕೊಟ್ಟು ಅದನ್ನು ಅಭ್ಯಸಿಸಲು ಹೇಳಿದರು. ಅಳಗಿರಿ ನಾಯ್ಡು ಅವರನ್ನು ಪರಿಚಯಿಸಿ, ಅವರಬಳಿ ತಮ್ಮ ಕಲಾಭ್ಯಾಸವನ್ನು ಮುಂದುವರೆಸಲು ಅನುಮತಿ ನೀಡಲಾಯಿತು. ತಿರುವನಂತಪುರದ ಅರಮನೆಯ ಆಸ್ಥಾನ ಕಲಾವಿದನಾಗಿ ೧೮೬೬ ರಲ್ಲಿ, "ವೀರಶೃಂಖಲೆ ", ಪ್ರಶಸ್ತಿಯ ಜೊತೆಗೆ, ತಿರುವನಂತಪುರದ ಅರಮನೆಯ ಆಸ್ಥಾನಕಲಾವಿದನಾಗಿ, ನೇಮಿಸಲ್ಪಟ್ಟರು ; ತಿಂಗಳಿಗೆ ೫೦ ರೂಗಳ ಮಾಸಾಶನದ ಏರ್ಪಾಡುಮಾಡಲಾಯಿತು. ೧೮೬೮ ರಲ್ಲಿ, ಥಿಯೊಡರ್ ಜೆನ್ಸನ್, ಎಂಬ ಐರೋಪ್ಯ ಚಿತ್ರಕಲಾಕಾರನು ಕೇರಳಕ್ಕೆ ಬಂದಿದ್ದನು. ತನ್ನ ಐರೋಪ್ಯ ಚಿತ್ರಕಲೆಯ ವಿವರಗಳನ್ನು ತೋರಿಸಿ ಅಲ್ಲಿನ ಭಾವ ವೈವಿಧ್ಯತೆಗಳನ್ನು ವಿವರಿಸಿದನು. ತೈಲ ವರ್ಣಚಿತ್ರಗಳ ಸಂಯೋಜನೆಯನ್ನು ಅವನು ರವಿಗೆ ಹೆಳಿಕೊಟ್ಟನು. ಭಾರತೀಯ ಚಿತ್ರಕಲೆಯಲ್ಲಿ ತುಂಬಬೇಕಾದ, ಗಂಭೀರ ವದನ, ಮಹಿಳೆಯಲ್ಲಿ ಇರಬೇಕಾದ ನಾಚಿಗೆ, ವಿಸ್ಮಯ, ಭೀತಿ, ಚಾಂಚಲ್ಯ, ಧೀರತೆ, ಮಂದಹಾಸ, ಇತ್ಯಾದಿಗಳನ್ನು ನಮ್ಮ ದೇಶದ ವರ್ಣಚಿತ್ರಗಳಲ್ಲಿ ಮಾತ್ರ ಕಾಣಬಹುದು. ರವಿಯವರು ಅದನ್ನು ತಾವೇ ವೀಕ್ಷಿಸಿ ಕಲಿತುಕೊಂಡರು. ಮತ್ತು ರವಿ ದೂರದಿಂದ ನೋಡಿಯೇ ಹಲವಾರು ಸೂಕ್ಷ್ಮತೆಗಳನ್ನು ಗಮನಿಸಿ ಮನನಮಾಡಿದರು. ಅರಮನೆಯಲ್ಲಿ ಚಿತ್ರಕಲೆಗಾಗಿಯೇ ಒಂದು ಪ್ರತ್ಯೇಕ ಕೊಠಡಿಯನ್ನು ಮೀಸಲಾಗಿಟ್ಟಿದ್ದರು. ಹಿರಿಯ ಕಲಾವಿದರಾದ, ರಾಮಸ್ವಾಮಿ ನ್ಯಾಕರ್, ಮತ್ತು ಆರ್ಮುಗಂ ಪಿಳ್ಳೆಯವರ ಪ್ರಭಾವವೂ, ರವಿಯವರಮೇಲೆ ಆಯಿತು. ಈ ಗುರುಗಳು ರವಿಯವರಿಗೆ ತಕ್ಕ ಕಲಾಮೂಲ ಅಡಿಪಾಯವನ್ನು ಸುಸ್ಥಿರವಾಗಿ ಹಾಕಿಕೊಟ್ಟಿದ್ದರಿಂದ ಕಲೆಯ ಹೊಸ ಹೊಸ ಪದ್ಧತಿಗಳು, ವಿನ್ಯಾಸಗಳೂ ಬಂದಾಗ, ಪ್ರಾಕಾರಗಳನ್ನು ಅರಿಯಲು ಅವರಿಗೆ ತೊಂದರೆಯೇನೂ ಆಗಲಿಲ್ಲ. ರವಿವರ್ಮರು ತಮ್ಮ ಸ್ವಂತ ಸಹಾಯದ ಕಲಿಕೆಯಿಂದಲೇ ಕಲೆಯನ್ನು ತಮ್ಮದಾಗಿಸಿಕೊಂಡರು. ಕಲೆಗೆ ಪೂರಕವಾದ ಮಾಹಿತಿಗಳನ್ನು ಅವರು, ಪುರಾಣ ಪುಣ್ಯಕಥೆಗಳನ್ನು ಪಠಿಸುವ ಮೂಲಕ ತಮ್ಮ ಕಲಾ-ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಂಡರು. ರವಿಯವರ ವಿವಾಹ, ರಾಜಕುಟುಂಬಕ್ಕೆ ಸೇರಿದ ಪುರೂರು ಟ್ಟಾತಿನಾಳ್ ರಾಣಿ,(ರಾಣಿ ಭಾಗೀರತಿಬಾಯಿ)(ಕೊಚ್ಚು ಪಂಗಿ ಅಮ್ಮ) ಎಂಬ ಕನ್ಯೆಯೊಡನೆ ನೆರವೇರಿತು. ಈಕೆ ಮಾವೇಲಿಕ್ಕರ ಮನೆತನದವಳು. ಈ ದಂಪತಿಗಳಿಗೆ ೩ ಗಂಡುಮಕ್ಕಳು ಹಾಗೂ ೨ ಹೆಣ್ಣು ಮಕ್ಕಳು ಜನಿಸಿದರು. ಚೊಚ್ಚಲು ಮಗ ಕೇರಳವರ್ಮ, ೧೮೭೬ ರಲ್ಲಿ ಜನಿಸಿದನು. ಎರಡನೆಯ ಮಗ ರಾಮವರ್ಮ ೧೮೭೯ ರಲ್ಲಿ ಹುಟ್ಟಿದ . ಮೂರನೆಯ ಮಗನೇ ರಾಜ ರಾಜ ವರ್ಮ. ಮಹಾಪ್ರಭ, ಮತ್ತು ಉಮಬಾಯಿ ಹೆಣ್ಣುಮಕ್ಕಳು. ಮಹಾಪ್ರಭ ತಂದೆಯವರ ೨ ಪ್ರಸಿದ್ಧ ತೈಲಚಿತ್ರಗಳಿಗೆ ರೂಪದರ್ಶಿಯಾಗಿದ್ದರು. ಇವರ ಮಗಳೇ ಮಹರಾಣೀ ಸೇತುಲಕ್ಷ್ಮಿ ಬಾಯಿ. ಈಕೆ ತಿರುವಂತಪುರದ ಮಹಾರಾಜರನ್ನು ಮದುವೆಯಾಡಳು. ಕೇರಳವರ್ಮ ೧೯೧೨ ರಲ್ಲಿ ಎಲ್ಲೋ ಕಾಣೆಯಾದನು. ಅವನ ಯಾವ ಸುಳಿವೂ ತಿಳಿಯಲಿಲ್ಲ. ರಾಮವರ್ಮ, ಬೊಂಬಾಯಿನ ಜೆ. ಜೆ. ಸ್ಕೂಲ್ ಆಫ್ ಆರ್ಟ್ಸ ನಲ್ಲಿ ಚಿತ್ರಕಲಾವಿದ್ಯಾಭ್ಯಾಸಮಾಡಿದನು. ಈತನು ದಿವಾನ್ ಪೀ. ಜಿ. ಎನ್ ಉನ್ನಿಥನ್ ರವರ ಸೋದರಿ, ಗೌರಿ ಕುಂಜಮ್ಮನವರೊಂದಿಗೆ ವಿವಾಹ ಮಾಡಿಕೊಂಡನು. ೧೮೭೦ ರಲ್ಲಿ, ಕೊಲ್ಲೂರಿನ ಮೂಕಂಬಿಕಾ ದೇವಿಸನ್ನಿಧಿಗೆ ಹೋಗಿ, ಅಲ್ಲಿ ೪೧ ದಿನಗಳ ವ್ರತಾಚರಣೆ ಮಾಡಿದರು. ಏಕಾಗ್ರತೆಯಿಂದ ಸರಸ್ವತಿ ದೇವಿಯ ಭಜನೆ, ನಡೆಯುತ್ತಿತ್ತು. ಕೊನೆಗೆ, ಮಂಗಳಕ್ಕೆ ೩ ದಿನ ಮೊದಲು, ಸರ್ವಾಂಗಸುಂದರಿ, ಮೂಕಾಂಬಿಕಾ ಅಮ್ಮನವರು ಕಾಣಿಸಿಕೊಂಡು, ಪ್ರೀತಿವಾತ್ಸಲ್ಯದಿಂದ ತಮ್ಮ ಸ್ನೇಹಹಸ್ತವನ್ನು ಅವರ ಮಸ್ತಕದಮೇಲೆ ಇಟ್ಟು ಹರಸಿದಂತೆ ಕನಸಾಯಿತಂತೆ. ಅಂದಿನಿಂದ ಅವರು ರಚಿಸಲು ಪ್ರಯತ್ನಿಸಿದ ಎಲ್ಲಾ ದೇವಿಯರ ಚಿತ್ರಗಳಿಗೂ, ಅಮ್ಮನವರೇ ರೂಪದರ್ಶಿಯಾಗಿ ಅವರಿಗೆ, ಸ್ಪೂರ್ತಿ ಕೊಟ್ಟರಂತೆ. ಉತ್ತರಭಾರತಕ್ಕೆ ಹೋದಾಗ, ಅಲ್ಲಿನ ವೇಷ-ಭೂಷಣ, ಜೀವನ-ಕ್ರಮವಿಧಾನ, ಆಚಾರ-ವ್ಯವಹಾರ, ಮರ್ಯಾದೆ ಕುಲಂಕುಶವಾಗಿ ನೋಡಿಕೊಂಡು ಬಂದರು. ಹೀಗೆ ಅವರು ತಮ್ಮ ಕಲೆಯ ಅಭಿವ್ಯಕ್ತಿಗಾಗಿ ಅನೇಕ ಏರ್ಪಾಡು, ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಾಯಿತು. ವಿಷ್ಣು ಧರಮೋತ್ತರ ಪುರಾಣದಲ್ಲಿ ವಿವರಿಸಿದ "ಚಿತ್ರಸೂತ್ರ" ಕಲಾ ಆಯಾಮಗಳು ತೀರ ನೀರಸವಾಗಿದ್ದು ಅವುಗಳು ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಲಾರದ ಪ್ರಸಂಗವನ್ನು ಅವರು ತಿರಸ್ಕರಿಸಿ, ನಮ್ಮ ಪುರಾಣಪುರುಷರುಗಳು, ದೇವಿಯರು ಸಾಮಾನ್ಯಮಾನವರಂತೆ ಇರುವ ಚಿತ್ರಗಳನ್ನು ಅವರು ಪ್ರಸಿದ್ದಿಪಡಿಸಿದರು. ಇದು ಆ ಕಾಲದಲ್ಲಿ ರವಿಯವರು ಆಗಲೇ ಪ್ರಸ್ತುತದಲ್ಲಿದ್ದ ಕಲಾ ಪದ್ಧತಿಗೆ ವಿರೋಧವಾಗಿ ಸ್ಪಂದಿಸಿದ ರೀತಿಯಾಗಿತ್ತು. ಕೊನೆಗೆ ಅದೇ ಸರ್ವರ ಮನಗೆದ್ದಿತು. ಊರ್ವಶಿ, ರಂಭೆ, ತಿಲೋತ್ತಮೆ, ಉಷೆ, ಎಂಬನಾಯಿಕೆಯರ ಚಿತ್ರಗಳನ್ನು ರಚಿಸಿದ್ದು ತಮ್ಮ ಪುರಾಣಗಳ ಅಧ್ಯಯನದ ಜ್ಞಾನದಿಂದ. ಮರಾಠಾ, ಗುಜರಾತೀ, ಮಲಬಾರೀ , ರಾಜ್ ಪೂತ್ ವನಿತೆಯರ ಸುಂದರ ಚಿತ್ರಗಳು ಅವರ ಕಲಾಸಂಗ್ರಹದಲ್ಲಿ ಸೇರಿಕೊಂಡವು. ಆಗಿನ ಪ್ರಮುಖ ವ್ಯಕ್ತಿಗಳಾದ ತಿಲಕ್, ರಾನಡೆಯವರ ಚಿತ್ರಗಳನ್ನೂ, ಹಿಮಾಲಯ ಪರ್ವತಶ್ರೇಣಿಯ ಭವ್ಯತೆಯನ್ನೂ, ಮತ್ತು ದೇಶದ ಎಲ್ಲಾ ಗಿರಿಧಾಮಗಳ, ಪ್ರದೇಶಗಳ ಪ್ರಕೃತಿಸಿರಿಯನ್ನೂ ತಮ್ಮ ಕುಂಚದಲ್ಲಿ ಸೆರೆಹಿಡಿದರು. ೧೯೦೪ ರಲ್ಲಿ, ರವಿವರ್ಮರಿಗೆ, ಬ್ರಿಟಿಶ್ ಸರ್ಕಾರ, " ಕೈಸರ್-ಎ ಹಿಂದ್ " ಎಂಬ ಪ್ರಶಸ್ತಿ ಕೊಡಲಾಯಿತು. ಪುದುಕೋಟೈ, ಆಳ್ವಾರ್, ಮೈಸೂರ್, ಬರೋಡ, ಇಂದೋರ್, ಗ್ವಾಲಿಯರ್, ಜೈಪುರ, ಉದಯಪುರಗಳ ರಾಜರ ಆಹ್ವಾನ ಬಂದಿತ್ತು. ಒಬ್ಬ ಆಂಗ್ಲಸಂಸ್ಕೃತ ವಿದ್ವಾಂಸರು, ಪ್ರಕಟಿಸಿದ ಶಾಕುಂತಲ ಮಹಾಕಾವ್ಯದ ಮುಖಪುಟಕ್ಕೆ ತಕ್ಕದಾದ ಚಿತ್ರವನ್ನು ಬರೆದುಕೊಟ್ಟರು. ಈ ಪುಸ್ತಕ ಹೆಸರುವಾಸಿಯಾಗಿದ್ದು, ಕಾವ್ಯ ಸೌಂದರ್ಯಕ್ಕೆ. ಆದರೆ ಹೆಚ್ಚು ಜನಪ್ರಿಯವಾದದ್ದು ಪುಸ್ತಕದ ಹೊರಕವಚದಲ್ಲಿ ಮೂಡಿಸಿದ್ದ ಶಕುಂತಳೆಯ ಮುಗ್ಧ ಸೌಂದರ್ಯಕ್ಕೆ. ಹೀಗೆ ಪುಸ್ತಕದ ಜೊತೆಗೆ, ರವಿವರ್ಮರೂ ವಿಶ್ವದಾದ್ಯಂತ ಹೆಸರುವಾಸಿಯಾದ ವ್ಯಕ್ತಿಯಾದರು. ೧೮೭೬, ರಲ್ಲಿ ಪ್ಯಾರಿಸ್ಸಿನಲ್ಲಿ ಪ್ರದರ್ಶನಗೊಂಡ, "ವಸ್ತುಕಲಾ ಪ್ರದರ್ಶನ," ದಲ್ಲಿ ' " ಮಲೆಯಾಳದ ವನಿತೆ " ಎಂಬ ತೈಲಚಿತ್ರಕ್ಕೆ, ರವಿವರ್ಮರಿಗೆ "ಗೋಲ್ಡ್ ಮೆಡಲ್," ಪ್ರಶಸ್ತಿ ದೊರೆಯಿತು. ಅದೇ ವರ್ಷ ವಿಯನ್ನ ದಲ್ಲಿ ಏರ್ಪಡಿಸಿದ ಪ್ರದರ್ಶನದಲ್ಲೂ, " ಮಲಯಾಳದ ವನಿತೆ", ಗೆ ಬಹುಮಾನ ದೊರೆಯಿತು. ಈ ಪ್ರದರ್ಶನಗಳಿಂದ ರವಿವರ್ಮರಿಗೆ ವಿಶ್ವಮಾನ್ಯತೆ ದೊರೆಯಿತು. ಸೀರೆ ಉಡುಪನ್ನು ಅವರ ಭವ್ಯಕಲಾಕೃತಿಗಳಲ್ಲಿ ಹೆಚ್ಚಾಗಿ ಬಳಸಿಕೊಂಡಿದ್ದಾರೆ. ಆಗಿನಕಾಲದಲ್ಲಿ ಕೇರಳ ಮುಂತಾದ ರಾಜ್ಯಗಳಲ್ಲಿ ಸೀರೆ ಉಡುವ ಪರಂಪರೆ ಇರಲಿಲ್ಲ. ಹಾಗಾಗಿ, ಸೀರೆಉಡುಪನ್ನು ದೇಶದಾದ್ಯಂತ ಪ್ರಸಿದ್ಧಿಪಡಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಬಕಿಂಗ್ ಹ್ಯಾಮ್ ಡ್ಯೂಕರ, ಎತ್ತರದ ನಿಲುವಿನ ತೈಲಚಿತ್ರವನ್ನು ಬರೆದುಕೊಟ್ಟಿದ್ದರು. ಅದನ್ನು ಮದ್ರಾಸ್ ಸರ್ಕಾರ, ತಮ್ಮ ಆಫೀಸಿನ ಮುಖ್ಯದ್ವಾರದಮುಂದೆ ಪ್ರದರ್ಶಿಸಿದ್ದರು. ೧೮೭೭ ರಲ್ಲಿ, ಮದ್ರಾಸ್ ಲಲಿತಕಲಾ ಅಕ್ಯಾಡಮಿಯವರು ಪ್ರಸ್ತುತಪಡಿಸಿದ, ವಸ್ತು ಪ್ರದರ್ಶನದಲ್ಲಿ, ರವಿವರ್ಮರ, " ವೀಣೆನುಡಿಸುವ ತಮಿಳು ಮಹಿಳೆ" ಎಂಬ ತೈಲಚಿತ್ರದ ಪ್ರದರ್ಶನವಾಗಿತ್ತು. ದುಶ್ಯಂತನಿಗೆ ಶಕುಂತಳೆ ಬರೆಯುತ್ತಿರುವ ಪ್ರೇಮ-ಪತ್ರ,ದ ತೈಲಚಿತ್ರಕ್ಕೆ ಬಹುಮಾನ ದೊರೆಯಿತು. ಒಮ್ಮೆ ಆಗಿನ ಬ್ರಿಟಿಷ್ ಗವರ್ನರ್, ತಿರುವನಂತಪುರದ ಅರಮನೆಗೆ ಬಂದವರು, ನೇರವಾಗಿ ಶಕುಂತಲ, ತೈಲಚಿತ್ರವನ್ನು ನೋಡಲು ಹೋದರು. ಅಲ್ಲೇ ನಿಂತಿದ್ದರೂ ಗವರ್ನರ್ ಸಾಹೇಬರು ಆಯಿಲ್ಯಂರವರನ್ನು ವಿಚಾರಿಸದೇ ಹೋದ ಘಟನೆಯಿಂದ ರಾಜರು ತತ್ತರಿಸಿದರು. ಆಯಿಲ್ಯಂ ತಿರುನಾಳ್ ರವರಿಗೆ ಅವಮಾನವಾಗಿ, ಮುಖಭಂಗವಾಯಿತು. ಕೂಡಲೇ ರವಿವರ್ಮರನ್ನು ಅರಮನೆಯಿಂದ ವಜಾ ಮಾಡಿದರು. ೧೮೮೦ ರಲ್ಲಿ ಆಯಿಲ್ಯಂ ತಿರುನಾಳ್ ತೀರಿಕೊಂಡಮೇಲೆ ಹೊಸರಾಜ, ವಿಶಾಖಂ ತಿರು ಆಯಿಲ್ಯರು, ರವಿವರ್ಮರನ್ನು ಪುನಃ ಬರಮಾಡಿಕೊಂಡು ಸನ್ಮಾನಿಸಿದರು. ಬರೋಡ ಮಹಾರಾಜರ ಬಳಿ ೧೮೮೧ ರಲ್ಲಿ, ದಮಯಂತಿ, ಸೈರಂಧ್ರಿ, ಸರಸ್ವತಿ, ಲಕ್ಷ್ಮಿ, ಮೊಘಲ್ ಶೈಲಿ ಮತ್ತು ರಾಜಸ್ಥಾನಿ ಶೈಲಿಗಳನ್ನು ಸ್ವಲ್ಪದಿನ ಅಭ್ಯಾಸಮಾಡಿದರು. ೩ ವರ್ಷಗಳಕಾಲ ಬರೋಡದಲ್ಲೆ ಇದ್ದರು. ಆ ಸಮಯದಲ್ಲಿ ಸೀತಾ-ಪರಿತ್ಯಾಗದ ತೈಲಚಿತ್ರವನ್ನು ರಚಿಸಿ ಅರಸರಿಗೆ ಕೊಟ್ಟಿದ್ದರು. ಮಹಾರಾಜರಿಗೆ ಅತಿಯಾದ ಆನಂದವಾಯಿತು. ಬರೋಡದ ನರೇಶರು ರವಿವರ್ಮರಿಗೆ, ಗೌರವಾರ್ಥವಾಗಿ, ೫೦,೦೦೦ ರೂಪಾಯಿಗಳನ್ನೂ, ಆನೆ, ಧನ-ಕನಕಗಳನ್ನು ಉಡುಗೊರೆಯಾಗಿ ಕೊಟ್ಟರು. ಸ್ವಲ್ಪ ದಿನ ತಮ್ಮ ತಾಯ್ನಾಡಿಗೆ ಹೋಗಿ ತಮ್ಮಕಲಾಭ್ಯಾಸದ ಮನೆಗುರುಗಳಾದ, ಅವರ ಮಾವನವರ ಪಾದಗಳಮೇಲೆ ೫,೦೦೦ ರೂಪಾಯಿಗಳನ್ನು ಸಮರ್ಪಿಸಿ, ನಮಸ್ಕರಿಸಿ, ತಮ್ಮ ಭಕ್ತಿಭಾವವನ್ನು ಪ್ರದರ್ಶಿಸಿದರು. ೧೮೮೭ ರಲ್ಲಿ ಅವರು ಒಂದು ವರ್ಷ ಊರುಬಿಟ್ಟು ಹೋಗಲಿಲ್ಲ. ೧೮೯೧ ರಲ್ಲಿ, ತಾವು ರಚಿಸಿದ್ದ ೧೪ ಪೇಂಟಿಂಗ್ ತೆಗೆದುಕೊಂಡು ರೈಲಿನಲ್ಲಿ ಬರೋಡಾಕ್ಕೆ ಹೋಗುತ್ತಿರುವಾಗ, [ ಉದ್ದ-೫ ಅಡಿ, ೩ ಅಂಗುಲ, ಅಗಲ-೩ ಅಡಿ ೮ ಅಂಗುಲ ಗಾತ್ರದ ದೊಡ್ಡ ತೈಲಚಿತ್ರಗಳು.] ಮಧ್ಯೆ, ಬೊಂಬಾಯಿನಲ್ಲಿ ಉಳಿದುಕೊಂಡರು. ಊರಿನಿಂದ ಬಂದ ತಂತಿವಾರ್ತೆಯಿಂದ ವಿಚಲಿತಗೊಂಡರು. ಊರಿನಲ್ಲಿ ಅವರ ಪ್ರೀತಿಯ ಪತ್ನಿ ತೀರಿಕೊಂಡಿದ್ದರು. ಈ ವಾರ್ತೆ ಸಿಡಿಲಿನಂತೆ ಎರಗಿತು. ಕೂಡಲೇ ವಾಪಸ್ಸು ಹೋಗಿ ೧ ತಿಂಗಳು ಊರಿನಲ್ಲೇ ಇದ್ದು ಮತ್ತೆ ಬರೋಡಾ ಹೋದರು. ಮೈಸೂರು‌ ಮಹಾರಾಜರ ಬಳಿ ಕೃಷ್ಣರಾಜವೊಡೆಯರ ಕಾಲದಲ್ಲಿ ಜಗನ್ಮೋಹನ ಅರಮನೆ ನಿರ್ಮಿಸಲಾಯಿತು. ಆಗ ಮಹಾರಾಜರು ರವಿವರ್ಮರನ್ನು ಕರೆಸಿ, ಅವರ ತೈಲಚಿತ್ರಗಳಿಂದ ಅರಮನೆ ಅಲಂಕೃತವಾಗಬೇಕೆಂದು ಮನವಿ ಮಾಡಿಕೊಂಡರು. ಅವರ ಇಷ್ಟದಂತೆ ರವಿವರ್ಮರು ೯ ಭವ್ಯ ಚಿತ್ರಗಳನ್ನು ರಚಿಚಿದರು. ಜೊತೆಗೆ, ರಾಜಪರಿವಾರದ ಜನರ, ಮತ್ತು ಅರಮನೆಯ ಪರಿಸರದ ಚಿತ್ರಗಳನ್ನೂ ಅತ್ಯಂತ ಸೊಗಸಾಗಿ ಬಿಡಿಸಿಕೊಟ್ಟರು. ಪಾಂಡವರ ದ್ಯೂತ, ಕೌರವನ ಆಸ್ತಾನದಲ್ಲಿ ಪ್ರವೇಶಿಸಿದ ಶ್ರೀ ಕೃಷ್ಣ, ಬಂಧನಕ್ಕಾಗಿ ಸಾಗರದ ಮುಂದೆ, ಬಿಲ್ಲು ಹೂಡಿದ ಶ್ರೀ ರಾಮಚಂದ್ರ. ಇವು ರವಿವರ್ಮರು ರಚಿಸಿದ ಕೆಲವಾರು ಶ್ರೇಷ್ಟಚಿತ್ರಗಳೆಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಇಲ್ಲಿ ದಾಖಲಿಸಬಹುದಾದ ಮತ್ತೊಂದು ಭವ್ಯ ತೈಲಚಿತ್ರವನ್ನು ಬರೆದು ರವಿವರ್ಮರು ಅತ್ಯಂತ ಯಶಸ್ಸನ್ನು ಗಳಿಸಿದರು. ೩ ಜನ ನಂಬಿಕೆಯ ಅನುಚರರೊಡನೆ, ಆಶ್ವಾಸನೆ ಕೊಡಲು ಕೈಯಲ್ಲಿ ಭವಾನಿ ತಾಯಿ ಪ್ರಸಾದಿಸಿದ ಖಡ್ಗವನ್ನು ಝಳಪಿಸುತ್ತಾ ಶಿವನೇರಿದುರ್ಗದ ಬಳಿ, ಅರಿಭಯಂಕರನಾಗಿ ಕುದುರೆಯನ್ನೇರಿ ಬರುತ್ತಿರುವ ಛತ್ರಪತಿ ಶಿವಾಜಿ ಮಹಾರಾಜನ ಚಿತ್ರ. ಬಹುಶಃ ಬಹುತೇಕ ಮಹಾರಾಷ್ಟ್ರದವರ ಮನೆಗಳಲ್ಲಿ ಈ ವರ್ಣಚಿತ್ರವನ್ನು ಕಟ್ಟು ಹಾಕಿಸಿ ಇಟ್ಟುಕೊಂಡಿದ್ದಾರೆ. ರವಿವರ್ಮರು ಚಿತ್ರಿಸಿದ ವರ್ಣಚಿತ್ರಗಳು ಒಟ್ಟು ೮೯. ಅವೆಲ್ಲಾ ಅಚ್ಚಾಗಿ ಮದ್ಯಮವರ್ಗದ ಕಲಾಪ್ರೇಮಿಗಳಿಗೆ ಸಾಂತ್ವನ ನೀಡುವಲ್ಲಿ ಸಹಕಾರಿಯಾದವು. ತಿರುವಾಂಕೂರು ಮಹಾರಾಜರ ಆಸ್ಥಾನದಲ್ಲಿ ಆಸ್ತಾನ ಕಲಾವಿದರಾಗಿ ನೇಮಿತರಾಗಿದ್ದರು. ವಿರಾಟನ ಆಸ್ಥಾನ, ಶಕುಂತಳೆ, ಹಂಸ ದಮಯಂತಿ, ರುಕ್ಮಾಂಗದ ಮತ್ತು ಮೋಹಿನಿ. ಪ್ರತಿ ವರ್ಣಚಿತ್ರಗಳಿಗೂ ತಲಾ ೩,೦೦೦ ರೂ ಪ್ರಶಸ್ತಿ ಕೊಡಲಾಯಿತು. "ಚಿತ್ರ ಆರ್ಟ್ ಗ್ಯಾಲರಿ ಎಂಬ ಸಂಸ್ತೆಯನ್ನು ಸ್ಥಾಪಿಸಲಾಯಿತು. ಅಲ್ಲಿ ರವಿವರ್ಮರ ೧೪ ಭಾರಿ ಎತ್ತರದ ತೈಲಚಿತ್ರಗಳನ್ನು ಸ್ಥಾಪಿಸಲಾಗಿದೆ. ೧೦ ಸಣ್ಣಗಾತ್ರದ ಪೇಂಟಿಂಗ್ ಗಳಿವೆ. ೨ ಅಪೂರ್ಣ ಚಿತ್ರಗಳೂ ಇವೆ. ಬಹುಶಃ ರವಿವರ್ಮರ ಕೊನೆಯದಿನಗಳಲ್ಲಿ ಅವರ ಮಾನಸಿಕಬಲ ಸ್ವಲ್ಪ ಕಡಿಮೆಯಾಗಿತ್ತು. ಹೆಚ್ಚು ಹೊತ್ತು ಕುಳಿತು ಕೆಲಸಮಾಡುವುದು ಸಾಧ್ಯವಿರಲಿಲ್ಲ. ಅವರ ಸೋದರ, ರಾಜರಾಜ ವರ್ಮರು ತೀರಿಕೊಂಡಮೇಲೆ ಅವರಿಗೆ ಎಲ್ಲದರಲ್ಲೂ ಆಸಕ್ತಿ ಕಡಿಮೆಯಾಗಿತ್ತು. ಆರೋಗ್ಯವೂ ಸರಿಯಾಗಿರದೆ ಖಂಡಾಲ ಲೋನಾವಲಗಳಲ್ಲಿ ಸ್ವಲ್ಪದಿನ ಇದ್ದು ಸುಧಾರಿಸಿಕೊಡರು. ಇದೇ ಸಮಯದಲ್ಲಿ ಹೈದರಾಬಾದಿನ ರಾಜಾ ದೀನ ದಯಳರ ಒತ್ತಾಯಾಕ್ಕೆ ಮಣಿದು ಅಲ್ಲಿಗೆ ಹೋಗಿ, ೨ ತಿಂಗಳಿದ್ದು ವರ್ಣಚಿತ್ರಗಳನ್ನು ರಚಿಸಿಕೊಟ್ಟುಬಂದರು. ೧೯೦೬ ರಲ್ಲಿ ತಮ್ಮ ೫೭ ನೆಯ ಹುಟ್ಟಿದ ಹಬ್ಬವನ್ನು ಆಚರಿಸಿಕೊಂಡರು. ರವಿವರ್ಮರ ಚಿತ್ರಕಲಾ ಮುದ್ರಣಾಲಯ ಸಾಮಾನ್ಯ ಜನರಿಗೆ ತೈಲಚಿತ್ರಗಳನ್ನು ಕೊಳ್ಳುವುದು ಸಾಧ್ಯವಿಲ್ಲದಮಾತು. ಅದಕ್ಕಾಗಿ ರವಿವರ್ಮರು, ಒಬ್ಬ ಪಾಲುದಾರನ ಜೊತೆಗೆ, ಒಪ್ಪಂದ ಮಾಡಿಕೊಂಡು ಒಂದು ಮುದ್ರಣಾಲಯವನ್ನು ಬೊಂಬಾಯಿನಲ್ಲಿ ಸ್ಥಾಪಿಸಿದರು. ಅದನ್ನು ನೋಡಿಕೊಳ್ಳಲು ಸದಾ ಅವರು ಅಲ್ಲಿ ಇರಲು ಸಾಧ್ಯವಾಗುತ್ತಿರಲಿಲ್ಲ. ಪಾಲುದಾರ, ಹಣವನ್ನೆಲ್ಲಾ ಲಪಟಾಯಿಸಿದ್ದ. ೧೮೯೪ ರಲ್ಲಿ ಆರ್ಥಿಕ ಮುಗ್ಗಟ್ಟು ಹೆಚ್ಚಿದ್ದರಿಂದ ತಮ್ಮ ಮುದ್ರಣಾಲಯವನ್ನು ಮಾರುವ ಪರಿಸ್ಥಿತಿ ಬಂತು. ಅವರು ಮೊದಲು ಕಾರ್ಲಿ ಎಂಬ ಜಾಗಕ್ಕೆ ಸ್ಥಳಾಂತರಿಸಿದರು. ಅಲ್ಲೂ ವ್ಯಾಪಾರ ಕುದುರದೆ, ಒಬ್ಬ ವಿದೇಶಿಗೆ ೨೫ ಸಾವಿರ ರೂಪಾಯಿಗಳಿಗೆ ಮಾರಿದರು. ನಳ-ದಮಯಂತಿ, ಶಂತನು ಮತ್ತು ಮತ್ಸ್ಯಗಂಧಿ, ರಾಧಾ-ಮಾಧವ, ಶ್ರೀಕೃಷ್ಣ-ದೇವಕಿ, ಅರ್ಜುನ-ಸುಭದ್ರೆ, ದ್ರೌಪದಿ ವಸ್ತ್ರಾಪಹರಣ, ವಿಶ್ವಾಮಿತ್ರ-ಮೇನಕೆ, ಹರಿಶ್ಚಂದ್ರ-ತಾರಾಮತಿ, ಸೀತಾ-ಸ್ವಯಂವರ, ಭರತ, ಸಿಂಹದ ಮರಿಯಜೊತೆ, ಶ್ರೀಕೃಷ್ಣನ ಜನನ, ಕೀಚಕ ಸೈರಂಧ್ರಿ, ಕಂಸಮಾಯೆ, ಶಂತನು ಮತ್ತು ಗಂಗೆ, ಮುಂತಾದ ಒಟ್ಟು ೧೪ ತೈಲಚಿತ್ರಗಳು. ಅಮೆರಿಕದ ಚಿಕಾಗೋ ನಲ್ಲಿ ನಡೆದ ' ವಸ್ತುಕಲಾ ಪ್ರದರ್ಶನ' ಕ್ಕೆ ೧೦ ವರ್ಣಚಿತ್ರಗಳನ್ನು ಭಾರತದಿಂದ ಕಳಿಸಲಾಗಿತ್ತು. ಅದು ರವಿವರ್ಮರದೇ ಎಂದು ಹೇಳಬೇಕಾಗಿಲ್ಲ. ಬರೋಡಾ ಮಹಾರಾಜರು ಕಳಿಸುವ ಏರ್ಪಾಡುಮಾಡಿದ್ದರು. ೨ ಪ್ರಶಸ್ತಿಗಳನ್ನು ರವಿವರ್ಮರು ಗಿಟ್ಟಿಸಿದ್ದರು. ಸ್ವಾಮಿ ವಿವೇಕಾನಂದರು ಆಗ ಅಮೆರಿಕೆಯಲ್ಲಿದ್ದರು. ರವಿವರ್ಮರ ತೈಲ ವರ್ಣಚಿತ್ರಗಳನ್ನು ನೋಡಿ ವಿಸ್ಮಯರಾದ ಅವರು, ಇದನ್ನು ಬರೆದ ಮಹಾಕಲಾಕಾರನನ್ನು ಭೇಟಿಮಾಡುವ ಉತ್ಸುಕತೆ ತೋರಿಸಿದ್ದರು. ಒಮ್ಮೆ ಬೊಂಬಾಯಿಗೆ ಬಂದಾಗ, ರವಿವರ್ಮರ ಮನೆಯಲ್ಲೇ ಒಂದು ದಿನ ಉಳಿದುಕೊಂಡಿದ್ದರಂತೆ. ರಾಜಾ ರವಿವರ್ಮರು ತಮ್ಮ ೫೮ ನೆಯ ಸಣ್ಣ ಪ್ರಾಯದಲ್ಲೇ ೨, ಅಕ್ಟೋಬರ್, ೧೯೦೬ ರಲ್ಲಿ ನಿಧನರಾದರು. ಭಾರತ ಸರ್ಕಾರ ಅವರ ಗೌರವಾರ್ಥವಾಗಿ ಅಂಚೆಚೀಟಿಯನ್ನು ಹೊರಡಿಸಿದ್ದರು. Selected Readings : 1. Photos of Gods, the printed image and Political struggle in India, By Christopher,Pinney, London, Reaktion Book. ಲೇಖಕರು. ಬಿ. ನರಸಿಂಗರಾವ್, ಡಾ. ಎಲ್. ಎಸ್. ಶೇಷಗಿರಿರಾವ್, ರವರ ಕಿರುಪುಸ್ತಕಮಾಲೆ. ಛಾಯಾಂಕನ </gallery> ಬಾಹ್ಯಸಂಪರ್ಕ Raja Ravi Varma Oleographs(Single Largest Collection of Oleorgaphs) Raja Ravi Varma's Paintings Complete collection of oil paintings by Ravi Varma (Incorrectly attributes Glow of hope to Ravi Varma) Ravi Varma's Paintings Brief biography Collection of the Lithographs from the Ravi Varma Press A Large Collection at Kamat.com A LIFE IN OILS Indian Art Circles: Raja Ravi Varma The Hindu: The royal artist by K.K. GOPALAKRISHNAN Chandigarh Museum: Nine Masters Varnam: Ravi Varma's lithographs discovered Early 20th century Ravi Varma postcards ಕಲಾವಿದರು ವರ್ಣಶಿಲ್ಪಿಗಳು ಚಿತ್ರಕಾರರು
1705
https://kn.wikipedia.org/wiki/%E0%B2%AE%E0%B2%B9%E0%B2%BE%E0%B2%AD%E0%B2%BE%E0%B2%B0%E0%B2%A4
ಮಹಾಭಾರತ
ಮಹಾಭಾರತ ಮತ್ತು ರಾಮಾಯಣ ಪ್ರಾಚೀನ ಭಾರತದ ಎರಡು ಪ್ರಮುಖ ಸಂಸ್ಕೃತ ಮಹಾಕಾವ್ಯಾಗಿದ್ದು ಇದ್ದನ್ನು ಹಿಂದೂ ಧರ್ಮದಲ್ಲಿ ಪೂಜಿಸಲ್ಪಡುತ್ತಾವರೆ. ಮಹಾಭಾರತ ಇದು ಕುರುಕ್ಷೇತ್ರ ಯುದ್ಧದ ಘಟನೆಗಳು ಮತ್ತು ನಂತರದ ಘಟನೆಗಳನ್ನು ವಿವರಿಸುತ್ತದೆ, ಇದು ರಾಜಮನೆತನದ ಸೋದರ ಸಂಬಂಧಿಗಳ ಎರಡು ಗುಂಪುಗಳಾದ ಕೌರವರು ಮತ್ತು ಪಾಂಡವರ ನಡುವಿನ ಉತ್ತರಾಧಿಕಾರದ ಯುದ್ಧವಾಗಿದೆ. ಮಹಾಭಾರತ ಭಾರತದ ಧಾರ್ಮಿಕ, ತಾತ್ವಿಕ ಹಾಗೂ ಪೌರಾಣಿಕ ಮಹಾಕಾವ್ಯಗಳಲ್ಲಿ ಒಂದು. ಅಲ್ಲದೇ ಇದನ್ನು ಅತಿ ಉದ್ದವಾದ ಮಹಾಕಾವ್ಯ ಎಂದು ವಿವರಿಸಲಾಗಿದೆ. ಇದು ಹಿಂದೂ ಧರ್ಮದ ಒಂದು ಮುಖ್ಯ ಪಠ್ಯವೂ ಹೌದು. ವಿಶ್ವ ಸಾಹಿತ್ಯದ ಸಾಧನೆಗಳಲ್ಲಿ ಒಂದೆಂದು ಪರಿಗಣಿತವಾಗಿರುವ ಮಹಾಭಾರತ ಭಾರತೀಯ ಜನರ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ. ಮಹಾಭಾರತ ಕಥೆ ಶಂತಮಹಾರಾಜನಿಂದ ಆರಂಭವಾಗುತ್ತದೆ. ಸಂಪೂರ್ಣ ಮಹಾಭಾರತ ಒಂದು ಲಕ್ಷಕ್ಕೂ ಹೆಚ್ಚು ಶ್ಲೋಕಗಳನ್ನು ಒಳಗೊಂಡಿದ್ದು ಗ್ರೀಕ್‍ನ ಜನಪದ ಮಹಾಕಾವ್ಯಗಳಾದ ಇಲಿಯಡ್ ಮತ್ತು ಒಡಿಸ್ಸಿ - ಎರಡನ್ನೂ ಸೇರಿಸಿದರೂ ಮಹಾಭಾರತದ ಏಳನೇ ಒಂದು ಭಾಗದಷ್ಟು ಮಾತ್ರ ಆಗುತ್ತದೆ. ಮಹಾಭಾರತ ೧೮ಪರ್ವ ಮತ್ತು ೧ಲಕ್ಷ ಶ್ಲೋಕಗಳನ್ನು ಒಳಗೊಂಡ ಅದ್ಭುತ ಮಹಾಕಾವ್ಯವಾಗಿದೆ. ಮಹಾಭಾರತದಲ್ಲಿನ ಪ್ರಮುಖ ಕೃತಿಗಳು ಮತ್ತು ಕಥೆಗಳಲ್ಲಿ ಭಗವದ್ಗೀತೆ, ದಮಯಂತಿಯ ಕಥೆ, ಶಕುಂತಲೆಯ ಕಥೆ, ಪುರೂರವ ಮತ್ತು ಊರ್ವಶಿಯ ಕಥೆ, ಸಾವಿತ್ರಿ ಮತ್ತು ಸತ್ಯವಾನ್ ಕಥೆ, ಕಚ ಮತ್ತು ದೇವಯಾನಿಯ ಕಥೆ, ಋಷ್ಯಶೃಂಗನ ಕಥೆ ಮತ್ತು ರಾಮಾಯಣದ ಸಂಕ್ಷಿಪ್ತ ಆವೃತ್ತಿ, ಸಾಮಾನ್ಯವಾಗಿ ತಮ್ಮದೇ ಆದ ಕೃತಿಗಳೆಂದು ಪರಿಗಣಿಸಲಾಗುತ್ತದೆ. ಮಹಾಭಾರತವು ವ್ಯಾಸ ಮುನಿಶ್ರೇಷ್ಠರಿಂದ ಮೂಲವಾಗಿ ರಚಿಸಲ್ಪಟ್ಟಿದೆ ಎಂದು ನಂಬಲಾಗಿದೆ. ಮಹಾಭಾರತವನ್ನು ಪಂಚಮವೇದವೆಂದು ಕರೆಯಲಾಗಿದೆ. ಶ್ರೀ ಕೃಷ್ಣನಿಂದ ಪಾರ್ಥನಾದ ಅರ್ಜುನನಿಗೆ ಉಪದೇಶಿಸಲ್ಪಟ್ಟ ಮಹಿಮಾನ್ವಿತವಾದ ಭಗವದ್ಗೀತೆಯನ್ನು ಮಹಾಭಾರತದ ಆತ್ಮ (ಅಂತರಾತ್ಮ) ಎನ್ನಲಾಗಿದೆ. ಇತಿಹಾಸ/ಹಿನ್ನೆಲೆ ಮಹಾಕಾವ್ಯವನ್ನು ಸಾಂಪ್ರದಾಯಿಕವಾಗಿ ಋಷಿ ವ್ಯಾಸನಿಗೆ ಆರೋಪಿಸಲಾಗಿದೆ, ಅವರು ಮಹಾಕಾವ್ಯದಲ್ಲಿ ಪ್ರಮುಖ ಪಾತ್ರವನ್ನು ಹೊಂದಿದ್ದಾರೆ. ವ್ಯಾಸರು ಇದನ್ನು ಇತಿಹಾಸ (ಅನುವಾದ.  ಇತಿಹಾಸ) ಎಂದು ವಿವರಿಸಿದ್ದಾರೆ. ಮಹಾಭಾರತದ ಮೊದಲ ವಿಭಾಗವು ವ್ಯಾಸರ ಆಜ್ಞೆಯಂತೆ ಗಣೇಶನ್ನು ಬರೆದದ್ದು ಎಂದು ಹೇಳುತ್ತದೆ.ಇದು ಅನೇಕ ಭಾರತೀಯ ಧಾರ್ಮಿಕ ಮತ್ತು ಧಾರ್ಮಿಕೇತರ ಕೃತಿಗಳಲ್ಲಿ ಜನಪ್ರಿಯವಾಗಿದೆ. ಇದನ್ನು ಮೊದಲು ತಕ್ಷಶಿಲೆಯಲ್ಲಿ ವ್ಯಾಸರ ಶಿಷ್ಯರಾದ ವೈಶಂಪಾಯನ ಋಷಿ ಪಾಂಡವ ರಾಜಕುಮಾರ ಅರ್ಜುನನ ಮರಿಮೊಮ್ಮಗನಾಗಿದ್ದ ರಾಜ ಜನಮೇಜಯನಿಗೆ ಪಠಿಸುತ್ತಾರೆ. ಮಹಾಭಾರತ 'ಜಯ' ಎಂಬ ಗ್ರಂಥದಿಂದ ನಿಷ್ಪನ್ನವಾಗಿದ್ದೆಂದು ಕೆಲವರ ಪ್ರತೀತಿ. ಇದರಲ್ಲಿ ಉಲ್ಲೇಖಿಸಿರುವ ಘಟನೆಗಳ ನಿಜವಾದ ಕಾಲ ಸರಿಯಾಗಿ ತಿಳಿದಿಲ್ಲ. ಮಹಾಭಾರತದಲ್ಲಿ ಕಂಡು ಬರುವ ಘಟನೆಗಳು ನಿಜವಾದ ಘಟನೆಗಳನ್ನು ಆಧರಿಸಿ ಬರೆದದ್ದೋ ಅಲ್ಲವೋ ಎಂಬುದು ಕೆಲವರಲ್ಲಿ ಚರ್ಚಾಸ್ಪದ ವಿಷಯ. ಮ್ಯಾಕ್ಸ್ ಮುಲ್ಲರ್ ಪ್ರಕಾರ ಈ ಘಟನೆಗಳು ನಡೆದ ಸಂದರ್ಭ ಸುಮಾರು ಕ್ರಿ.ಪೂ.೧೪೦೦. ಇನ್ನು ಮಹಾಭಾರತದ ಘಟನೆಗಳನ್ನು ಅವಲೋಕಿಸಿ ಭಾರತೀಯ ಪಂಚಾಂಗ ರೀತ್ಯ ಕಾಲನಿರ್ಣಯ ಮಾಡಿದ ಹಲವು ವಿದ್ವಾಂಸರ ಪ್ರಕಾರ ಅದರಲ್ಲಿ ಉಲ್ಲೇಖ ಮಾಡಲಾಗಿರುವ ಅಂತರಿಕ್ಷ ಚಟುವಟಿಕೆಗಳು (ಗ್ರಹಣ ಇತ್ಯಾದಿ) ಸುಮಾರು ಕ್ರಿ.ಪೂ.೩೧೦೦ಕ್ಕೆ ಹೋಲುತ್ತವೆ. ಐತಿಹಾಸಿಕ ಉಲ್ಲೇಖಗಳು ಭಾರತ ಮತ್ತು ಸಂಯುಕ್ತ ಮಹಾಭಾರತದ ಆರಂಭಿಕ ಉಲ್ಲೇಖಗಳು ಪಾಣಿನಿಯ (ಎಫ್‌ಎಲ್‌. ೪ ನೇ ಶತಮಾನ BCE) ಮತ್ತು ಅಶ್ವಲಾಯನ ಗೃಹ್ಯಸೂತ್ರ (೩.೪) ದ ಅಷ್ಠಾಧ್ಯಾಯಿಗೆ (ಸೂತ್ರ ೬.೨.೩೮) ಸೇರಿದೆ. ಇದರರ್ಥ ಭಾರತ ಎಂದು ಕರೆಯಲ್ಪಡುವ ೨೪೦೦೦ ಶ್ಲೋಕಗಳು, ಹಾಗೆಯೇ ವಿಸ್ತೃತ ಮಹಾಭಾರತದ ಆರಂಭಿಕ ಆವೃತ್ತಿಯನ್ನು ೪ನೇ ಶತಮಾನದ ಬಿಸಿಯಿ ಯಿಂದ ರಚಿಸಲಾಗಿದೆ. ಆದಾಗ್ಯೂ, ಪಾಣಿನಿ ಮಹಾಕಾವ್ಯವನ್ನು ಉಲ್ಲೇಖಿಸಿದ್ದಾರೆಯೇ ಎಂಬುದು ಖಚಿತವಾಗಿಲ್ಲ, ಏಕೆಂದರೆ ಭಾರತವನ್ನು ಇತರ ವಿಷಯಗಳನ್ನು ವಿವರಿಸಲು ಬಳಸಲಾಗಿದೆ. ಆಲ್ಬ್ರೆಕ್ಟ್ ವೆಬರ್ ಭರತರ ಋಗ್ವೇದ ಬುಡಕಟ್ಟಿನ ಬಗ್ಗೆ ಉಲ್ಲೇಖಿಸುತ್ತಾನೆ, ಅಲ್ಲಿ ಒಬ್ಬ ಮಹಾನ್ ವ್ಯಕ್ತಿಯನ್ನು ಮಹಾ-ಭಾರತ ಎಂದು ಗೊತ್ತುಪಡಿಸಲಾಗಿದೆ. ಆದಾಗ್ಯೂ, ಪಾಣಿನಿಯು ಮಹಾಭಾರತದಲ್ಲಿ ಪಾತ್ರವಹಿಸುವ ಪಾತ್ರಗಳನ್ನು ಉಲ್ಲೇಖಿಸಿದಂತೆ, ಮಹಾಕಾವ್ಯದ ಕೆಲವು ಭಾಗಗಳು ಅವನ ದಿನದಲ್ಲಿ ಈಗಾಗಲೇ ತಿಳಿದಿರಬಹುದು. ಇನ್ನೊಂದು ಅಂಶವೆಂದರೆ ಪಾಣಿನಿಯು ಮಹಾಭಾರತದ ಉಚ್ಚಾರಣೆಯನ್ನು ನಿರ್ಧರಿಸಿದನು. ಆದಾಗ್ಯೂ, ಮಹಾಭಾರತವನ್ನು ವೈದಿಕ ಉಚ್ಚಾರಣೆಯಲ್ಲಿ ಪಠಿಸಲಾಗಲಿಲ್ಲ. ಮಹಾಭಾರತದೊಳಗಿನ ಹಲವಾರು ಕಥೆಗಳು ಶಾಸ್ತ್ರೀಯ ಸಂಸ್ಕೃತ ಸಾಹಿತ್ಯದಲ್ಲಿ ತಮ್ಮದೇ ಆದ ಪ್ರತ್ಯೇಕ ಗುರುತನ್ನು ಪಡೆದುಕೊಂಡಿದೆ. ಉದಾಹರಣೆಗೆ, ಪ್ರಖ್ಯಾತ ಸಂಸ್ಕೃತ ಕವಿ ಕಾಳಿದಾಸ (c. 400 CE) ಅಭಿಜ್ಞಾನಶಾಕುಂತಲ, ಗುಪ್ತ ರಾಜವಂಶದ ಯುಗದಲ್ಲಿ ವಾಸಿಸುತ್ತಿದ್ದರು ಎಂದು ನಂಬಲಾಗಿದೆ, ಇದು ಮಹಾಭಾರತದ ಪೂರ್ವಭಾವಿ ಕಥೆಯನ್ನು ಆಧರಿಸಿದೆ. ಉರುಭಂಗ, ಕಾಳಿದಾಸನಿಗಿಂತ ಮೊದಲು ಬದುಕಿದ್ದನೆಂದು ನಂಬಲಾದ ಭಾಸ ಬರೆದ ಸಂಸ್ಕೃತ ನಾಟಕ, ಭೀಮನಿಂದ ತೊಡೆಗಳನ್ನು ಸೀಳುವ ಮೂಲಕ ದುರ್ಯೋಧನನ ವಧೆಯನ್ನು ಆಧರಿಸಿದೆ. ೧೮ ಪರ್ವಗಳು ಅಥವಾ ಪುಸ್ತಕಗಳು ಮಹಾಭಾರತವು ಈ ಕೆಳಗಿನ ಸ್ತೋತ್ರದೊಂದಿಗೆ ಪ್ರಾರಂಭವಾಗುತ್ತದೆ ಮತ್ತು ವಾಸ್ತವವಾಗಿ ಪ್ರತಿ ಪರ್ವದ ಆರಂಭದಲ್ಲಿ ಈ ಪ್ರಶಂಸೆಯನ್ನು ಮಾಡಲಾಗಿದೆ: ನಾರಾಯಣಂ ನಮಸ್ಕೃತ್ಯ ನರಂ ಚೈವ ನರೋತ್ತಮಮ್ ದೇವಿಂ ಸರಸ್ವತೀಂ ಚೈವ ತತೋ ಜಯಮುದೀರಯೇತ್ - ವ್ಯಾಸ, ಮಹಾಭಾರತ "ಓಂ! ಅತ್ಯಂತ ಶ್ರೇಷ್ಠ ಪುರುಷನಾದ ನಾರಾಯಣ ಮತ್ತು ನರ (ಅರ್ಜುನ) ಮತ್ತು ಸರಸ್ವತಿ ದೇವಿಗೆ ನಮಸ್ಕರಿಸಿ ಜಯ ಎಂಬ ಪದವನ್ನು ಉಚ್ಚರಿಸಬೇಕು." ನರ-ನಾರಾಯಣರು ಶ್ರೀ ವಿಷ್ಣುವಿನ ಭಾಗವಾಗಿದ್ದ ಇಬ್ಬರು ಪ್ರಾಚೀನ ಋಷಿಗಳು. ನರನು ಅರ್ಜುನನ ಹಿಂದಿನ ಜನ್ಮ ಮತ್ತು ನಾರಾಯಣನ ಸ್ನೇಹಿತ, ಆದರೆ ನಾರಾಯಣನು ಶ್ರೀ ವಿಷ್ಣುವಿನ ಅವತಾರ ಮತ್ತು ಹೀಗೆ ಶ್ರೀ ಕೃಷ್ಣನ ಹಿಂದಿನ ಜನ್ಮ. ೧೮ ಪರ್ವಗಳ ವಿಭಾಗವು ಈ ಕೆಳಗಿನಂತಿದೆ: ಕಥಾವಸ್ತು ಮಹಾಭಾರತದ ಮುಖ್ಯವಾಗಿ ಚಂದ್ರವಂಶದ ರಾಜರುಗಳ ಕಥೆ. ಹಸ್ತಿನಾಪುರದ ಸಿಂಹಾಸನಕ್ಕಾಗಿ ಕುರುವಂಶ (ಚಂದ್ರ ವಂಶ)ದ ಸದಸ್ಯರ ನಡುವೆ ನಡೆಯುವ ಹೋರಾಟವನ್ನು ಕುರಿತದ್ದು ಎಂದು ಹಲವರ ಅಭಿಮತವಾದರೂ ಈ ಹೋರಾಟದ ಕಥೆ ಕುರುಕ್ಷೇತ್ರ ಎನಿಸಿಕೊಳ್ಳುತ್ತದೆ. ಹಸ್ತಿನಾಪುರದ ಸಿಂಹಾಸನಕ್ಕಾಗಿ ಪಾಂಡವರು ಮತ್ತು ಕೌರವರ ನಡುವೆ ನಡೆಯುವ ಈ ಹೋರಾಟ ಕುರುಕ್ಷೇತ್ರದಲ್ಲಿ ನಡೆಯುವ ಹದಿನೆಂಟು ದಿನದ ಕುರುಕ್ಷೇತ್ರ ಯುದ್ದ ನಿರ್ಧಾರವಾಗುತ್ತದೆ. ಮಹಾಭಾರತದ ಕಥೆ ಶಂತ ಮಹಾರಾಜನ ಕಥೆಯಿಂದ ಆರಂಭವಾಗಿ, ಕೃಷ್ಣನ ಅವಸಾನ, ಪಾಂಡವರ ಸ್ವರ್ಗಾರೋಹಣದೊಂದಿಗೆ ಕೊನೆಗೊಳ್ಳುತ್ತದೆ. ಮಹಾಭಾರತದ ಉದ್ದಕ್ಕೂ ಬರುವ ಪಾತ್ರಗಳು ಭಾರತೀಯ ಸಂಸ್ಕೃತಿಯಲ್ಲಿ ಅಚ್ಚೊತ್ತಿರುವ ಪಾತ್ರಗಳು. ಮುಖ್ಯ ಕಥೆಯಲ್ಲದೆ, ಮಹಾಭಾರತದಲ್ಲಿ ಅನೇಕ ಉಪಕಥೆ ಗಳುಂಟು. ಹಾಗೆಯೇ ಭಗವದ್ಗೀತೆಯಂಥ ಸ್ವತಂತ್ರವಾಗಿ ನಿಲ್ಲಬಲ್ಲಂಥ ಗ್ರಂಥಗಳೂ ಮಹಾಭಾರತದ ಭಾಗಗಳಾಗಿ ಭೀಷ್ಮ ಪರ್ವದಲ್ಲಿ ಕಂಡುಬರುತ್ತವೆ. ವ್ಯವಸ್ಥೆಯ ದೃಷ್ಟಿಯಿಂದ, ಮಹಾಭಾರತದಲ್ಲಿ ಹದಿನೆಂಟು ಪರ್ವಗಳಿವೆ. ಸಾರಾಂಶ ಕೃತಿಯ ಮುಖ್ಯ ಕಥೆಯು ಕುರು ವಂಶದ ಆಳ್ವಿಕೆಯ ರಾಜ್ಯವಾದ ಹಸ್ತಿನಾಪುರದ ಸಿಂಹಾಸನಕ್ಕಾಗಿ ರಾಜವಂಶದ ಹೋರಾಟವಾಗಿದೆ. ಹೋರಾಟದಲ್ಲಿ ಭಾಗವಹಿಸುವ ಕುಟುಂಬದ ಎರಡು ಮೇಲಾಧಾರ ಶಾಖೆಗಳೆಂದರೆ ಕೌರವ ಮತ್ತು ಪಾಂಡವ. ಕೌರವರು ಕುಟುಂಬದ ಹಿರಿಯ ಶಾಖೆಯಾಗಿದ್ದರೂ, ಹಿರಿಯ ಕೌರವ ದುರ್ಯೋಧನ, ಹಿರಿಯ ಪಾಂಡವ ಯುಧಿಷ್ಠಿರನಿಗಿಂತ ಕಿರಿಯ. ದುರ್ಯೋಧನ ಮತ್ತು ಯುಧಿಷ್ಠಿರ ಇಬ್ಬರೂ ಸಿಂಹಾಸನವನ್ನು ಆನುವಂಶಿಕವಾಗಿ ಪಡೆಯುವ ಸಾಲಿನಲ್ಲಿ ಮೊದಲಿಗರು ಎಂದು ಹೇಳಿಕೊಳ್ಳುತ್ತಾರೆ. ಈ ಹೋರಾಟವು ಕುರುಕ್ಷೇತ್ರದ ಮಹಾ ಯುದ್ಧದಲ್ಲಿ ಕೊನೆಗೊಳ್ಳುತ್ತದೆ, ಇದರಲ್ಲಿ ಪಾಂಡವರು ಅಂತಿಮವಾಗಿ ವಿಜಯಶಾಲಿಯಾಗುತ್ತಾರೆ. ಕದನವು ರಕ್ತಸಂಬಂಧ ಮತ್ತು ಸ್ನೇಹದ ಸಂಕೀರ್ಣ ಘರ್ಷಣೆಗಳನ್ನು ಉಂಟುಮಾಡುತ್ತದೆ, ಕುಟುಂಬದ ನಿಷ್ಠೆಯ ನಿದರ್ಶನಗಳು ಮತ್ತು ಕರ್ತವ್ಯವು ಸರಿಯಾದದ್ದಕ್ಕಿಂತ ಆದ್ಯತೆಯನ್ನು ತೆಗೆದುಕೊಳ್ಳುತ್ತದೆ, ಜೊತೆಗೆ ಸಂಭಾಷಣೆಯನ್ನು ಉಂಟುಮಾಡುತ್ತದೆ. ಮಹಾಭಾರತವು ಕೃಷ್ಣನ ಮರಣದೊಂದಿಗೆ ಕೊನೆಗೊಳ್ಳುತ್ತದೆ, ಮತ್ತು ಅವನ ರಾಜವಂಶದ ನಂತರದ ಅಂತ್ಯ ಮತ್ತು ಪಾಂಡವ ಸಹೋದರರು ಸ್ವರ್ಗಕ್ಕೆ ಏರಿದರು. ಇದು ಮಾನವಕುಲದ ನಾಲ್ಕನೇ ಮತ್ತು ಅಂತಿಮ ಯುಗವಾದ ಕಲಿಯುಗದ ಹಿಂದೂ ಯುಗದ ಆರಂಭವನ್ನು ಸಹ ಗುರುತಿಸುತ್ತದೆ. ಮುಖ್ಯ ಪಾತ್ರಗಳು ಭೀಷ್ಮ : ಭೀಷ್ಮ ಮಹಾಭಾರತದಲ್ಲಿ ಒಂದು ಪ್ರಮುಖ ಪಾತ್ರ. ಈತ ಶಾಂತನು ಮತ್ತು ಗಂಗೆಯರ ಪುತ್ರ. ಶಾಂತನು ಚಕ್ರವರ್ತಿಗೆ ಗಂಗೆಯಲ್ಲಿ ಜನಿಸಿದ ಎಂಟು ಪುತ್ರರಲ್ಲಿ ಕೊನೆಯವ. ದೇವವ್ರತ/ಸತ್ಯವ್ರತ ಈತನ ಮೊದಲ ಹೆಸರು. ಅಷ್ಟವಸುಗಳಲ್ಲೊಬ್ಬನಾದ ಇವನು ವಸಿಷ್ಠ ಮುನಿಯ ಶಾಪದಿಂದ ಭೂಮಿಯಲ್ಲಿ ಅವತರಿಸುತ್ತಾನೆ. ಈತನು ಶಾಸ್ತ್ರಜ್ಞಾನವನ್ನು ದೇವರ್ಷಿ ಬೃಹಸ್ಪತಿಯಿಂದಲೂ, ಶಸ್ತ್ರ ವಿದ್ಯೆಗಳನ್ನು ಋಷಿ ಭಾರದ್ವಾಜ, ಪರಶುರಾಮರಿಂದಲೂ ಕಲಿತನು. ತನ್ನ ತಂದೆ ಶಂತನುವಿನ ಸುಖಕ್ಕೋಸ್ಕರ ಆಜೀವನ ಬ್ರಹ್ಮಚರ್ಯ ಪಾಲಿಸುವ ಪ್ರತಿಜ್ಞೆ ಮಾಡುತ್ತಾನೆ. ಪಾಂಡವರು: ಪಾಂಡವರು ಪಾಂಡು ಹಾಗೂ ಕುಂತಿಯ ಮಕ್ಕಳು. ಋಷಿಯ ಶಾಪದಿಂದ ಮಕ್ಕಳನ್ನು ಪಾಂಡು ಪಡೆಯಲಾಗದಿದ್ದರೂ, ಕುಂತಿಗೆ ದೊರೆತಿದ್ದ ದೂರ್ವಾಸನ ವರವನ್ನು ಉಪಯೋಗಿಸಿ ಕುಂತಿ ಮತ್ತು ಮಾದ್ರಿ ಪಾಂಡವರನ್ನು ಮಕ್ಕಳಾಗಿ ಪಡೆಯುತ್ತಾರೆ. ಐವರು ಪಾಂಡವರು: ಯುಧಿಷ್ಠಿರ (ಯಮನಿಂದ), ಭೀಮ (ವಾಯುವಿನಿಂದ), ಅರ್ಜುನ (ಇಂದ್ರನಿಂದ), ಮಾದ್ರಿಯಲ್ಲಿ ನಕುಲ ಮತ್ತು ಸಹದೇವ (ಅಶ್ವಿನಿ ದೇವತೆಗಳಿಂದ) ಜನಿಸಿದವರು. ಮಹಾಭಾರತದ ಯುದ್ಧ ಪಾಂಡವರು ಮತ್ತು ಅವರ ದಾಯಾದಿಗಳಾದ ಕೌರವರ ನಡುವೆ ನಡೆಯುತ್ತದೆ. ದ್ರೌಪದಿ:ಭಾರತೀಯ ಸಾಹಿತ್ಯದ ಪ್ರಸಿದ್ಧ ಸ್ತ್ರೀಪಾತ್ರಗಳಲ್ಲಿ ದ್ರೌಪದಿಯ ಪಾತ್ರವೂ ಒಂದು. ಪಾಂಚಾಲ ರಾಜ ದ್ರುಪದನ ಅಗ್ನಿಪುತ್ರಿ. ದ್ರುಷ್ಟ್ಯದ್ಯುಮ್ನನ ತಂಗಿ. ದ್ರೌಪದಿಯು ಐವರೂ ಪಾಂಡವರ ಪತ್ನಿ. ಮಹಾಭಾರತದ ಅತ್ಯಂತ ಸಂಕೀರ್ಣವಾದ ಪಾತ್ರಗಳಲ್ಲಿ ದ್ರೌಪದಿಯ ಪಾತ್ರ ಒಂದು. ಕೌರವರು: ಕೌರವರು ಪಾಂಡುವಿನ ಅಣ್ಣ ಧೃತರಾಷ್ಟ್ರನ ಮಕ್ಕಳು (ಗಾಂಧಾರಿಯಿಂದ); ಒಟ್ಟು ನೂರು ಕೌರವರು - ಇವರಲ್ಲಿ ಹಿರಿಯರು ದುರ್ಯೋಧನ ಮತ್ತು ದುಶ್ಯಾಸನ. ಕೊನೆಯವಳು ದುಶ್ಯೀಲೆ. ಕರ್ಣ: ಕರ್ಣನ ಪಾತ್ರ ಮಹಾಭಾರತದ ದುರಂತ ಪಾತ್ರಗಳಲ್ಲಿ ಒಂದು. ಮದುವೆಗೆ ಮೊದಲು ಸೂರ್ಯನಿಂದ ಕುಂತಿಯ ಮಗನಾಗಿ ಹುಟ್ಟುವ ಕರ್ಣನನ್ನು ಕುಂತಿ ನದಿಯಲ್ಲಿ ತೇಲಿ ಬಿಡುತ್ತಾಳೆ. ಸೂತನೊಬ್ಬನ ಮನೆಯಲ್ಲಿ ಬೆಳೆಯುವ ಕರ್ಣ ಪರಶುರಾಮನಿಂದ ಶಿಕ್ಷಣವನ್ನು ಪಡೆದರೂ ಶಾಪವನ್ನು ಪಡೆಯುತ್ತಾನೆ. ಕರ್ಣನು ದುರ್ಯೋಧನ ಆಪ್ತ ಗೆಳೆಯ. ಅಂಗದ ರಾಜ್ಯದ ದೊರೆ. ಕೊನೆಗೆ ಮಹಾಭಾರತ ಯುದ್ಧದ ಸಮಯದಲ್ಲಿ ಪರಶುರಾಮನ ಶಾಪದ ಕಾರಣ, ತನ್ನ ವಿದ್ಯೆ ಮರೆತುಹೋಗಿ ರಥ ಮಣ್ಣಿನಲ್ಲಿ ಹೂತಿದ್ದಾಗ ಅರ್ಜುನನ ಬಾಣದಿಂದ ಸಾಯುತ್ತಾನೆ. ಉಪಕಥೆಗಳು ಮತ್ತು ಗ್ರಂಥಗಳು ಮಹಾಭಾರತದ ಭಾಗವಾದ ಹಲವು ಪ್ರಮುಖ ಕಥೆಗಳು/ಗ್ರಂಥಗಳು:- ಭಗವದ್ಗೀತೆ (ಭೀಷ್ಮಪರ್ವ): ಹಿಂದೂ ಧರ್ಮ ಮತ್ತು ತತ್ವಶಾಸ್ತ್ರದ ಮುಖ್ಯ ಪಠ್ಯಗಳಲ್ಲಿ ಒಂದಾದ ಭಗವದ್ಗೀತೆ ಹಿಂದೂ ಚಿಂತನೆ ಮತ್ತು ವೈದಿಕ, ಅಧ್ಯಾತ್ಮಿಕ, ಯೋಗಿಕ ಹಾಗೂ ತಾಂತ್ರಿಕ ತತ್ವಶಾಸ್ತ್ರಗಳ ಒಟ್ಟು ಸಮಾಗಮವೆನ್ನಬಹುದು. ನಾಲ್ಕು ಯೋಗಮಾರ್ಗಗಳಾದ ಭಕ್ತಿ, ಜ್ಞಾನ, ಧ್ಯಾನ ಮತ್ತು ಕರ್ಮ(ನೋಡಿ:ಭಗವದ್ಗೀತಾ ತಾತ್ಪರ್ಯ)ಮಾರ್ಗಗಳನ್ನು ಶ್ರೀ ಕೃಷ್ಣ ಅರ್ಜುನನಿಗೆ ತಿಳಿಸುತ್ತಾನೆ. ದಮಯಂತಿ (ಅರಣ್ಯಕಪರ್ವ): ನಳ ಮತ್ತು ದಮಯಂತಿಯರ ಕಥೆ ಮಹಾಭಾರತದ ಪ್ರಸಿದ್ಧ ಉಪಕಥೆಗಳಲ್ಲಿ ಒಂದು. ಸ್ವಯಂವರದಲ್ಲಿ ಇಂದ್ರ, ವರುಣ ಮೊದಲಾದವರನ್ನು ಕಡೆಗಣಿಸಿ ದಮಯಂತಿ ನಳನನ್ನೇ ಮದುವೆಯಾಗುತ್ತಾಳೆ. ಜೂಜಾಡಿ ಎಲ್ಲವನ್ನೂ ನಳ ಕಳೆದುಕೊಂಡ ನಂತರ ಕಾಡಿನಲ್ಲಿ ಇರಬೇಕಾಗುತ್ತದೆ. ದಮಯಂತಿ ತನ್ನ ತಂದೆಯ ಮನೆಗೆ ಹೋಗಲೆಂದು ಅವಳನ್ನು ಬಿಟ್ಟು ಓಡಿ ಹೋಗುವ ನಳ ಅಡಿಗೆ ಭಟ್ಟ ಮತ್ತು ಕುದುರೆ ತರಬೇತುಗಾರನಾಗಿ ರಾಜನೊಬ್ಬನ ಹತ್ತಿರ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಇದರ ಅನುಮಾನ ಬಂದ ದಮಯಂತಿ ಈ ರಾಜನನ್ನು ಇನ್ನೊಂದು ಸ್ವಯಂವರಕ್ಕೆ ಕರೆಸಿ ಅಡಿಗೆಯ ರುಚಿಯಿಂದ ನಳನನ್ನು ಗುರುತು ಹಿಡಿಯುತ್ತಾಳೆ. ನಳ ಮತ್ತೆ ತನ್ನ ಆಸ್ತಿಯೆಲ್ಲವನ್ನೂ ಗೆದ್ದ ನಂತರ ಕಥೆ ಮುಗಿಯುತ್ತದೆ. ಕೃಷ್ಣಾವತಾರ: ಕೃಷ್ಣನ ಸಂಪೂರ್ಣ ಕಥೆ "ಕೃಷ್ಣಾವತಾರ" ಪುರಾಣದಲ್ಲಿ ಮೂಡಿ ಬಂದಿದೆ. ಇದೇ ಕಥೆ ಮಹಾಭಾರತದ ಉದ್ದಕ್ಕೂ ನೇಯಲ್ಪಟ್ಟಿದೆ. ಋಷ್ಯಶೃಂಗ (ಅರಣ್ಯಕಪರ್ವ): ಋಷ್ಯಶೃಂಗ ಋಷಿ, ಪೌರಾಣಿಕವಾಗಿ ವಿಭಾಂಡಕ ಋಷಿಯ ಮಗ. ರೋಮಪಾದ ರಾಜ್ಯದಲ್ಲಿ ಕ್ಷಾಮ ಬಂದಾಗ ಋಷ್ಯಶೃಂಗನೇ ಮಳೆಯನ್ನು ಅಲ್ಲಿಗೆ ತಂದನಂತೆ. ಇಂದಿನ ಕರ್ನಾಟಕ ರಾಜ್ಯದ ಶೃಂಗೇರಿಯ ಮೊದಲ ಹೆಸರು "ಋಷ್ಯಶೃಂಗ ಗಿರಿ" ಆಗಿತ್ತೆಂದು ಹೇಳುತ್ತಾರೆ. (ಅನುಶಾಸನಪರ್ವ): ವಿಷ್ಣು ಸಹಸ್ರನಾಮ ವಿಷ್ಣುವಿನ ೧,೦೦೦ ಹೆಸರುಗಳನ್ನು ಒಳಗೊಂಡ ಸ್ತೋತ್ರ. ಇದು ಮಹಾಭಾರತದ ಅನುಶಾಸನ ಪರ್ವದ ೧೪೯ ನೆ ಅಧ್ಯಾಯದಲ್ಲಿ ಕಂಡು ಬರುತ್ತದೆ. ಯುದ್ಧದ ನಂತರ ಭೀಷ್ಮನ ಬಳಿ ಹೋಗುವ ಯುಧಿಷ್ಠಿರ ಭೀಷ್ಮನನ್ನು ಅನೇಕ ಧರ್ಮಪ್ರಶ್ನೆ ಗಳ ಪರಿಹಾರದ ಬಗ್ಗೆ ಕೇಳುತ್ತಾನೆ. ಹಾಗೆಯೇ, ಪುಣ್ಯಸಂಪಾದನೆಯ ದಾರಿಗಳ ಬಗ್ಗೆ ಕೇಳುತ್ತಾನೆ. ಭೀಷ್ಮ ಉತ್ತರವಾಗಿ ವಿಷ್ಣು ಸಹಸ್ರನಾಮವನ್ನು ತಿಳಿಸುತ್ತಾನೆ. ರಾಮಾಯಣದ ಕಥೆಯೂ ಮಹಾಭಾರತದ ಅರಣ್ಯಪರ್ವದಲ್ಲಿ ಸಂಕ್ಷಿಪ್ತವಾಗಿ ಮೂಡಿಬಂದಿದೆ. ಇದು ವ್ಯಾಸರಾಯರು ಬರೆದ ಕೃತಿಯೆಂದು ಹೇಳಲಾಗುತ್ತದೆ. ತತ್ವಶಾಸ್ತ್ರ ಮಹಾಭಾರತ ವಿಶಾಲವಾದ ತತ್ವಶಾಸ್ತ್ರವನ್ನು ಒಳಗೊಂಡ ಗ್ರಂಥ. ಕೆಲವರು ಇದನ್ನು "ಐದನೆಯ ವೇದ" ಎಂದೇ ಕರೆದಿದ್ದಾರೆ. ಮಹಾಭಾರತದ ತಾತ್ವಿಕ ಬೇರುಗಳು ಇರುವುದು ವೈದಿಕ ತತ್ವಶಾಸ್ತ್ರದಲ್ಲಿ. ಮಹಾಭಾರತದ ಒಂದು ಶ್ಲೋಕ ಹೇಳುವಂತೆ, ಅದರ ಮುಖ್ಯ ಗುರಿ ನಾಲ್ಕು ಪುರುಷಾರ್ಥಗಳನ್ನು ತಿಳಿಸಿಕೊಡುವುದು: ಅರ್ಥ, ಕಾಮ, ಧರ್ಮ ಮತ್ತು ಮೋಕ್ಷ. ಮಹಾಭಾರತದ ಅನೇಕ ಭಾಗಗಳು, ಉಪಕಥೆಗಳು ಮತ್ತು ಉಪಗ್ರಂಥಗಳು ಪ್ರಾಚೀನ ಭಾರತದ ವಿವಿಧ ತತ್ವಶಾಸ್ತ್ರಗಳನ್ನು ವರ್ಣಿಸುತ್ತವೆ. ವೇದಾಂತ, ಸಾಂಖ್ಯ, ಯೋಗ, ಪಂಚರಾತ್ರ, ಯೋಗ ಮೊದಲಾದ ತಾತ್ವಿಕ ಸಂಪ್ರದಾಯಗಳನ್ನು ಒಳಗೊಂಡ ಮಹಾಭಾರತ ಭಾರತೀಯ ತತ್ವಶಾಸ್ತ್ರದ ಮುಖ್ಯ ಆಕರಗಳಲ್ಲಿ ಒಂದೂ ಹೌದು. ವಿವಿಧ ತಾತ್ವಿಕ ನೆಲೆಗಟ್ಟುಗಳ ಮಧ್ಯೆ ಅವುಗಳ ಬಗೆಗಿನ ಸಹಿಷ್ಣುತೆಯೂ ಮಹಾಭಾರತದ ತತ್ವಶಾಸ್ತ್ರದಲ್ಲಿ ಕಂಡುಬರುತ್ತದೆ. ಮಹಾಭಾರತದಲ್ಲಿ ವೈಶಂಪಾಯನ ಜನಮೇಜಯನಿಗೆ ಈ ಕಥೆಯನ್ನು ಹೇಳುತ್ತಾನೆ: "ಓ ವಿವೇಕಿ! ಇವೆಲ್ಲವೂ ಜ್ಞಾನವನ್ನೇ ಪ್ರತಿನಿಧಿಸುತ್ತವೆ ಎಂದು ತಿಳಿ: ಸಾಂಖ್ಯ, ಯೋಗ, ಪಂಚರಾತ್ರ, ಆರಣ್ಯಕ. ಅವುಗಳ ದಾರಿಗಳು ಬೇರೆ, ಆದರೆ ಮೂಲದಲ್ಲಿ ಎಲ್ಲವೂ ಒಂದೇ!" ಮಹಾಭಾರತದಲ್ಲಿ ಅಧ್ಯಾತ್ಮಿಕ ತತ್ವಶಾಸ್ತ್ರವಲ್ಲದೇ ಸಮಾಜಶಾಸ್ತ್ರ, ಅರ್ಥಶಾಸ್ತ್ರ, ರಾಜನೀತಿ, ಯುದ್ಧನೀತಿ, ಖಗೋಳಶಾಸ್ತ್ರ ಮೊದಲಾದ ವಿಷಯಗಳ ಬಗ್ಗೆಯೂ ಬಹಳಷ್ಟು ಮಾಹಿತಿಯುಂಟು. ಕನ್ನಡ ಸಾಹಿತ್ಯದಲ್ಲಿ ಮಹಾಭಾರತ ಮಹಾಭಾರತದಿಂದ ಸ್ಫೂರ್ತಿ ಪಡೆದ ಕನ್ನಡ ಸಾಹಿತ್ಯ ವಿಪುಲವಾಗಿದೆ. ಕನ್ನಡದಲ್ಲಿ ಮಹಾಭಾರತದ ಮೊದಲ ಬರವಣಿಗೆಯ ಕರ್ತೃ ಆದಿಕವಿ ಪಂಪ - ಪಂಪನ ವಿಕ್ರಮಾರ್ಜುನ ವಿಜಯ ಕನ್ನಡದ ಮೇರುಕೃತಿಗಳಲ್ಲಿ ಒಂದೆಂದು ಪರಿಗಣಿತವಾಗಿದೆ. ಗದ್ಯ ಮತ್ತು ಪದ್ಯಮಿಶ್ರಿತವಾದ "ಚಂಪೂ" ಶೈಲಿಯಲ್ಲಿ ಬರೆಯಲ್ಪಟ್ಟಿರುವ ಪಂಪ ಭಾರತ ತನ್ನ ಆಳವಾದ ಮಾನವೀಯ ಮೌಲ್ಯಗಳಿಗೆ ಹೆಸರಾಗಿದೆ. ಸುಮಾರು ಇದೇ ಕಾಲದ ರನ್ನನ "ಗದಾಯುದ್ಧಂ" ಮಹಾಭಾರತ ಯುದ್ಧದ ಭೀಮ-ದುರ್ಯೋಧನರ ಗದಾಯುದ್ಧವನ್ನು ಕುರಿತದ್ದಾದರೂ ಇಡಿಯ ಮಹಾಭಾರತ ಕಥೆಯನ್ನು ಸಿಂಹಾವಲೋಕನ ಕ್ರಮದಲ್ಲಿ ಪರಿಶೀಲಿಸುತ್ತದೆ. ಕನ್ನಡದಲ್ಲಿ ಬಹಳ ಖ್ಯಾತಿ ಪಡೆದ ಮಹಾಭಾರತ, ಕುಮಾರವ್ಯಾಸ ವಿರಚಿತ "ಕರ್ಣಾಟ ಭಾರತ ಕಥಾಮಂಜರಿ"ಯು ಕುಮಾರವ್ಯಾಸ ಭಾರತ ಅಥವಾ "ಗದುಗಿನ ಭಾರತ" ಎಂದು ಕರೆಯಲ್ಪಡುತ್ತದೆ. ಈ ಕೃತಿ ಭಾಮಿನಿ ಷಟ್ಪದಿಯಲ್ಲಿ ಬರೆಯಲ್ಪಟ್ಟಿದ್ದು ತನ್ನ ಪಾತ್ರವೈವಿಧ್ಯತೆ ಹಾಗೂ ಶ್ರೀಮಂತ ರೂಪಕಗಳಿಗೆ ಹೆಸರಾಗಿದೆ. ಕುಮಾರವ್ಯಾಸ ಕೃಷ್ಣನ ಭಕ್ತ .ಕುಮರವ್ಯಾಸನು, ದುರ್ಯೋಧನನ ಅವಸಾನದ ನಂತರ ಶ್ರೀಕೃಷ್ಣನು ಧರ್ಮರಾಜನಿಗೆ ಪಟ್ಟಾಭಿಷೇಕವನ್ನು ಮಾಡಿಸಿ ದ್ವಾರಕೆಗೆ ಹಿಂದಿರುಗುವವರೆಗೆ ಬರೆದಿದ್ದಾನೆ. ಕುಮಾರವ್ಯಾಸನು ಸಂಸ್ಕೃತದ ವ್ಯಾಸರ ಭಾರತವನ್ನು ಅನುಸರಿಸಿದರೂ, ಸ್ವತಂತ್ರ ಕಾವ್ಯವೆಂಬಂತೆ ಮೂಲ ಭಾರತಕ್ಕೆ ಸರಿಮಿಗಿಲಾಗಿ ರಚಿಸಿದ್ದಾನೆ. ಮಹಾಭಾರತದ ಮೊದಲ ಹತ್ತು ಪರ್ವಗಳನ್ನು ಮಾತ್ರ ಕುಮಾರವ್ಯಾಸ ಭಾರತ ಒಳಗೊಂಡಿದೆ. ಭೀಮನ ಕೋಣೆ ಕೇಡಲೇಸರದ ಪರಮದೇವ ಕವಿಯು ವ್ಯಾಸರ ಹದಿನೆಂಟು ಪರ್ವಗಳನ್ನೂ ವಾರ್ಧಿಕ ಷಟ್ಪದಿಯಲ್ಲಿ ರಚಿಸಿದ್ದಾನೆ. ಮಹಾಭಾರತದ ಅಶ್ವಮೇಧ ಪರ್ವ ಮಾತ್ರ ವಾರ್ಧಕ ಷಟ್ಪದಿಯಲ್ಲಿ, ಲಕ್ಷ್ಮೀಶ ಕವಿ ವಿರಚಿತ "ಜೈಮಿನಿ ಭಾರತ"ದಲ್ಲಿ ಮೂಡಿಬ೦ದಿದೆ. ಆಧುನಿಕ ಕನ್ನಡದಲ್ಲಿ ಪ್ರಸಿದ್ಧವಾದ ಮಹಾಭಾರತದ ಆವೃತ್ತಿ ಎ ಅರ್ ಕೃಷ್ಣಶಾಸ್ತ್ರಿಗಳು ಬರೆದ "ವಚನ ಭಾರತ." ಈ ಕೃತಿ ಸರಳವಾದ ಆಧುನಿಕ ಕನ್ನಡದಲ್ಲಿ ಬರೆಯಲ್ಪಟ್ಟಿದೆ. ಆಧುನಿಕ ಕನ್ನಡದಲ್ಲಿ ಮಹಾಭಾರತದ ಇನ್ನೊಂದು ಕೃತಿ "ಪರ್ವ" (ಎಸ್ ಎಲ್ ಭೈರಪ್ಪ). ಮೇಲಿನವು ಮುಖ್ಯ ಮಹಾಭಾರತ ಕಥೆಯನ್ನು ಆಧರಿಸಿ ಬರೆದ ಕೃತಿಗಳಾದರೆ, ಮಹಾಭಾರತದ ವಿವಿಧ ಪಾತ್ರಗಳು ಮತ್ತು ಸನ್ನಿವೇಶಗಳನ್ನು ಆಧರಿಸಿ ಬರೆದ ಕೃತಿಗಳು ಅನೇಕ. ಆಧುನಿಕ ಕನ್ನಡದಲ್ಲಿ ಕುವೆಂಪು ರವರ "ಬೆರಳ್ ಗೆ ಕೊರಳ್" ಮಹಾಭಾರತದ ಏಕಲವ್ಯನ ಪಾತ್ರವನ್ನು ಆಧರಿಸಿ ಬರೆದ ನಾಟಕ. ಹಾಗೆಯೇ ಬಿ ಎಂ ಶ್ರೀ ಅವರ "ಗದಾಯುದ್ಧಂ" ರನ್ನನ ಕಾವ್ಯದ ನಾಟಕ ರೂಪಾಂತರ. ಗಿರೀಶ್ ಕಾರ್ನಾಡ್ ರ "ಯಯಾತಿ" ಮಹಾಭಾರತದ ಉಪಕಥೆಯೊಂದನ್ನು ಆಧರಿಸಿ ಬರೆದ ನಾಟಕ. ಇತ್ತೀಚೆಗೆ ರಾಮಚಂದ್ರ ಭಾವೆಯವರು ಅಂಧಪರ್ವ, ಅಶ್ವಮೇಧ ಕಾದಂಬರಿಗಳನ್ನು ಬರೆದಿದ್ದಾರೆ. ಅವು ಕ್ರಮವಾಗಿ ಸುಧಾ ಮತ್ತು ತರಂಗಗಳಲ್ಲಿ ಪ್ರಕಟವಾಗಿವೆ. ಅಂಧಪರ್ವ ಕಾದಂಬರಿಯಾಗಿ ಹೊರಬಂದಿದೆ. ಅಲ್ಲದೆ ಮಹಾಭಾರತ ಪಾತ್ರಪ್ರಪಂಚ ಎಂಬ ಸಂಕಲನವೂ ಇದೆ. ಮಂಗಳ ಧಾರಾವಾಹಿ ಪ್ರಕಟಿತ ಮಹಾಪತನ ಕಾದಂಬರಿ ಸಂತೋಷಕುಮಾರ ಮೆಹೆಂದಳೆ ಯವರ ಕೃತಿಯಾಗಿದ್ದು, ದುರ್ಯೋಧನನ ಕೇಂದ್ರೀಕೃತ ಆತ್ಮಕಥಾನಕ. ವಿಭಿನ್ನ ಶೈಲಿಯ ಮತ್ತು ಸಂಪೂರ್ಣ ತಾರ್ಕಿಕ ಮೌಲ್ಯಗಳ ಕೃತಿ. ಶಿವರಾಜ್ ನಾಯ್ಕ್,(ಕೆ ಕೆ ತಾಂಡ,ಹಡಗಲಿ) ಮಹಾಭಾರತ* ಮಹಾಭಾರತವನ್ನು ಕೇವಲ ಒಂದು ಪಾತ್ರವನ್ನು ಆಧಾರವಾಗಿಟ್ಟುಕೊಂಡು ನೋಡುವುದಕ್ಕಿಂತ, ಅದರಲ್ಲಿನ ಪ್ರತಿಯೊಂದು ಪಾತ್ರದ ಮೂಲ ಉದ್ದೇಶವನ್ನು ಗ್ರಹಿಸಿ ನೋಡುವುದಾದರೆ ಮಹಾಭಾರತ ನಮಗೆ ಅತ್ಯದ್ಭುತ ಜ್ಞಾನವನ್ನು ಕೊಡುವುದು ಖಂಡಿತ, ಹೀಗೆ ನೋಡಿದರೆ ಪ್ರತಿಯೊಂದು ಪಾತ್ರವೂ ಕೂಡ ನಾಯಕನಂತೆ ಕಾಣುತ್ತದೆ. ಅಲ್ಲದೆ ಮಹಾಭಾರತವನ್ನು ಅದರ ನಿಜ ರೂಪವನ್ನು ತಿಳಿದಿದ್ದೆ ಆದರೆ ಇಂದಿನ ನಮ್ಮ ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಸತ್ಯಾ ಸತ್ಯತೆಗಳು ಅದರಲ್ಲಿ ಅಡಕವಾಗಿವೆ, ಇಂದಿನ ಆಧುನಿಕ ಜಗತ್ತು ತನ್ನ ಹೊಸ ಆವಿಷ್ಕಾರಗಳನ್ನು ಹೊಸದೆಂದು ಹೇಳುತ್ತದೋ ಅದಾಗಲೇ ಮಹಾಭಾರತದಲ್ಲಿ ಉಲ್ಲೇಖವಾಗಿದೆ. ಉದಾ:- ಮೊಬೈಲ್,ವಿಮಾನ, ದೂರದರ್ಶನ ವಿಡಿಯೋ ಕಾನ್ಫರೆನ್ಸ್,ಸಿಜರಿಂಗ್,ತದೃಪ ಸೃಷ್ಟಿ ಮುಂತಾದವು ,,, ಇನ್ನೊಂದು ವಿಷಯ ಹೇಳಲೇ ಬೇಕು ಮಹಾಭಾರತವನ್ನು ನಾವು ಇಂದಿಗೂ ಅದರ ಮೂಲ ಅರ್ಥ ವನ್ನು ತಿಳಿಯುವಲ್ಲಿ ಸೊಲುತ್ತಿದ್ದೇವೆ, ಮಹಾಭಾರತ ದಂತಹ ಕಥಾನಕ ಹುಟ್ಟಿರಲು ಮತ್ತು ಹುಟ್ಟಲು ಅಸಾಧ್ಯ. ಅದರಲ್ಲಿನ ಪ್ರತಿಯೊಂದು ಪಾತ್ರವೂ ಕೂಡ ನಮಗೆ ನಮ್ಮ ಜೀವನದ ಹೆಜ್ಜೆ -ಹೆಜ್ಜೆ ಗಿನ ಬದುಕಿನ ಸತ್ಯವನ್ನು ತೆರೆದಿಡುತ್ತದೆ. ಧನ್ಯವಾದಗಳು,,, ಮಾಧ್ಯಮಗಳಲ್ಲಿ ಮಹಾಭಾರತ ಕನ್ನಡ, ತಮಿಳು, ಹಿಂದಿಗಳಲ್ಲಿ ವರ್ಷ ವರ್ಷವೂ ಮಹಾಭಾರತ ನವೀಕರಣಗೊಂಡು ದೂರದರ್ಶನದಲ್ಲಿ ಪ್ರದರ್ಶನಗೊಳ್ಳುತ್ತಿವೆ. ಕೆಲವು ಉಕ್ತಿಗಳು ಮಹಾಭಾರತದಲ್ಲಿ ಕಂಡು ಬರುವ ಕೆಲವು ಪ್ರಸಿದ್ಧ ವಾಕ್ಯಗಳು "ಇಲ್ಲಿ ಕಂಡು ಬರುವುದು ಬೇರೆ ಕಡೆಗಳಲ್ಲಿ ಸಿಗಬಹುದು, ಆದರೆ ಇಲ್ಲಿ ಇಲ್ಲದಿರುವುದು ಇನ್ನೆಲ್ಲಿಯೂ ಸಿಗುವುದಿಲ್ಲ." -- ಆದಿಪರ್ವ. "ಅತೃಪ್ತಿಯೇ ಪ್ರಗತಿಯ ಮೂಲ." -- ದುರ್ಯೋಧನ. "ಅಧಿಕಾರದ ನಶೆ ಮದ್ಯದ ನಶೆಗಿಂತಲೂ ಕೆಟ್ಟದ್ದು; ಏಕೆಂದರೆ ಅಧಿಕಾರದ ನಶೆ ಇರುವವನಿಗೆ ಆತ ಕೆಳಗೆ ಬೀಳುವವರೆಗೂ ನಶೆ ಇಳಿಯುವುದಿಲ್ಲ." -- ವಿದುರ. "ಸಾಧುಗಳನ್ನು ರಕ್ಷಿಸಲು, ದುಷ್ಟರನ್ನು ಶಿಕ್ಷಿಸಲು, ಧರ್ಮದ ಸಂಸ್ಥಾಪನೆಗಾಗಿ, ಯುಗ ಯುಗಗಳಲ್ಲಿಯೂ ಸಂಭವಿಸುತ್ತೇನೆ." -- ಕೃಷ್ಣ. ಸಂಕ್ಷಿಪ್ತ ವಿಮರ್ಶೆ ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಹಾಭಾರತ - ಸಂಕ್ಷಿಪ್ತ ವಿಮರ್ಶೆ ಬಾಹ್ಯ ಸಂಪರ್ಕಗಳು ಸಂಸ್ಕೃತ ಮಹಾಭಾರತದ ಸಂಪೂರ್ಣ ಪಠ್ಯ: http://www.hindunet.org/mahabharata/ http://bombay.oriental.cam.ac.uk/john/mahabharata/statement.html ಮಹಾಭಾರತ ಮತ್ತು ಸಿಂಧೂ-ಸರಸ್ವತಿ ಸಂಸ್ಕೃತಿ - ಸುಭಾಷ ಕಾಕರ ಲೇಖನ ಮಹಾಭಾರತಕ್ಕೆ ಪರಿಚಯ ಮಹಾಭಾರತದ ಬಗ್ಗೆ ವಿವೇಕಾನಾಂದರ ಹೇಳಿಕೆಗಳು ಕನ್ನಡದಲ್ಲಿ ಮಹಾಭಾರತ ಪ್ರವಚನ MP3 ಉಲ್ಲೇಖಗಳು ಕುರುವಂಶವೃಕ್ಷ ಪರಿವಿಡಿ ಧಾರ್ಮಿಕ ಗ್ರಂಥಗಳು ಪುರಾಣ ಹಿಂದೂ ಧರ್ಮ ವಿಕಿ ಇ-ಲರ್ನಿಂಗ್‍ನಲ್ಲಿ ವಿಸ್ತರಿಸಿದ ಲೇಖನ
1713
https://kn.wikipedia.org/wiki/%E0%B2%9C%E0%B2%AF
ಜಯ
ಜಯ:ಮಹಾಭಾರತ ಗ್ರಂಥ ಜಯ ಎ೦ಬುದು ಪ್ರಾಚೀನ ಭಾರತದಲ್ಲಿ ರಚಿತವಾದ ಒಂದು ಗ್ರ೦ಥ, ಮತ್ತು ಇ೦ದಿನ ಮಹಾಭಾರತ ಗ್ರ೦ಥದ ಪೂರ್ವರೂಪ ಎಂದು ಹಲವು ಚರಿತ್ರಜ್ಞರ ಹೇಳಿಕೆ. ಮಹಾಭಾರತದ ಮೊದಲ ಶ್ಲೋಕ ಹೀಗೆ ಸಾಗುತ್ತದೆ: "ನಾರಾಯಣ೦ ನಮಸ್ಕೃತ್ಯ ನರ೦ ಚೈವ ನರೋತ್ತಮಮ್ | .........................ತತೋ ಜಯಮುದೀರಯೇತ್ ||" ದೇವ-ದೇವತೆಯರನ್ನು ನಮಿಸಿ 'ಜಯ'ವನ್ನು ಓದಲು ಪ್ರಾರ೦ಭಿಸಿ ಎ೦ಬ ಅರ್ಥ ಬರುವ ಶ್ಲೋಕ ಇದು. ಇದನ್ನು ಗಮನಿಸಿ ಮಹಾಭಾರತದ ಹಿ೦ದಿನ ಹೆಸರು 'ಜಯ' ಎಂದು ಇದ್ದೀತೆ೦ದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಇ೦ದಿನ ಮಹಾಭಾರತದಲ್ಲಿ ಒಂದು ಲಕ್ಷಕ್ಕೂ ಮಿಕ್ಕಿ ಶ್ಲೋಕಗಳಿವೆ. ಮಹಾಭಾರತದ ಲೇಖಕರು ವೇದವ್ಯಾಸರು ಎಂದು ಸಾ೦ಪ್ರದಾಯಿಕ ನ೦ಬಿಕೆ. ಆದರೆ ಚರಿತ್ರಜ್ಞರ ಅಭಿಪ್ರಾಯದ೦ತೆ, ಮಹಾಭಾರತಕ್ಕೆ ಒಬ್ಬರೇ ಲೇಖಕರನ್ನು ಆರೋಪಿಸುವುದು ಅಷ್ಟು ಸರಿಯಲ್ಲ. ಬಾಯಿ೦ದ ಬಾಯಿಗೆ ಹರಡುತ್ತಾ, ಶತಮಾನಗಳ ಮೂಲಕ ಮಹಾಭಾರತ ಬೆಳೆಯುತ್ತಾ ಬ೦ದಿದೆ ಎ೦ಬುದು ಆಧುನಿಕ ಅಭಿಪ್ರಾಯ. ಸುಮಾರು ಕ್ರಿ.ಶ. ನಾಲ್ಕನೆ ಶತಮಾನದ ಹೊತ್ತಿಗೆ ಮಹಾಭಾರತ ಇ೦ದಿರುವ ರೂಪಕ್ಕೆ ಬ೦ದಿತ್ತು. ಅಲ್ಲಿನ ವರೆಗೆ ವಿಕಾಸಗೊಳ್ಳುತ್ತ ಬ೦ದ ಗ್ರ೦ಥದ ಅತಿ ಪ್ರಾಚೀನ ರೂಪ "ಜಯ" ಎಂದು ಹೇಳಲಾಗುತ್ತದೆ. ಈ "ಜಯ" ಗ್ರ೦ಥದ ಮೂಲ ಕಥೆ ಇ೦ದಿನ ಮಹಾಭಾರತದ ಕಥೆಯೇ ಆಗಿದ್ದು, ಅದು ಸುಮಾರು ೧೦,೦೦೦ ಶ್ಲೋಕಗಳನ್ನು ಒಳಗೊ೦ಡಿತ್ತು ಎ೦ದೂ ಹೇಳಲಾಗುತ್ತದೆ. ನೋಡಿ ಪರ್ವ ಉತ್ತರಕಾಂಡ ಅಭಿಪ್ರಾಯಗಳು ಪದ್ಮರಾಜ ದಂಡಾವತಿ: ದೇವದತ್ತ ಪಟ್ಟನಾಯಕರ ‘ಜಯ’ ಕೃತಿಯನ್ನು ನಿನ್ನೆ ಬೆಳಿಗ್ಗೆ ಓದಿ ಮುಗಿಸಿದೆ. ಮಹಾಭಾರತದ ಸಚಿತ್ರ ಮರುಕಥನವಾದ ‘ಜಯ’ ಕೃತಿಯನ್ನು ಕನ್ನಡದ ಪ್ರಸಿದ್ಧ ವಿಮರ್ಶಕ ಗಿರಡ್ಡಿ ಗೋವಿಂದರಾಜರು ಅನುವಾದಿಸಿದ್ದಾರೆ. ಮೂಲಕೃತಿಯ ಹಾಗೆಯೇ ಕನ್ನಡದ ಕೃತಿಯನ್ನೂ ಅದೇ ಮುಖಪುಟದೊಡನೆ, ಅದೇ ಗಾತ್ರದಲ್ಲಿ ಮುದ್ರಿಸಿರುವುದು ವಿಶೇಷ. ಧಾರವಾಡದ ಮನೋಹರ ಗ್ರಂಥಮಾಲೆ ಈ ಕೃತಿಯನ್ನು ಪ್ರಕಟಿಸಿದೆ. ದೇವದತ್ತ ಪಟ್ಟನಾಯಕರ ಕೃತಿ ಎಷ್ಟು ಶ್ರೇಷ್ಠವಾಗಿದೆಯೋ ಗಿರಡ್ಡಿಯವರ ಕನ್ನಡ ಅನುವಾದ ಕೂಡ ಅಷ್ಟೇ ಉತ್ಕೃಷ್ಟವಾಗಿದೆ. 350 ಪುಟಗಳಿಗೆ ಮೀರಿದ ಈ ಪುಸ್ತಕದಲ್ಲಿ 108 ಅಧ್ಯಾಯಗಳು ಇವೆ. ಪ್ರತಿಯೊಂದು ಅಧ್ಯಾಯದ ಜೊತೆಗೆ ಪಟ್ಟನಾಯಕರೇ ರಚಿಸಿದ 250ಕ್ಕೂ ಹೆಚ್ಚು ರೇಖಾ ಚಿತ್ರಗಳು ಜೊತೆಗೆ ಇವೆ. ಪ್ರತಿ ಅಧ್ಯಾಯದ ಕೊನೆಯಲ್ಲಿ ಅದನ್ನು ಅರ್ಥೈಸುವ ಪುಟ್ಟ ಪುಟ್ಟ, ಕೆಲವು ಸಾರಿ ದೀರ್ಘ ಟಿಪ್ಪಣಿಗಳು ಇವೆ. ಪಟ್ಟನಾಯಕರ ಕೃತಿ ಭಿನ್ನವಾಗುವುದು ಅಲ್ಲಿ. ಟಿಪ್ಪಣಿಗಳು ಮಹಾಭಾರತವನ್ನು ಭಿನ್ನ ದೃಷ್ಟಿಕೋನದಿಂದ ನೋಡಿವೆ. ಹೊಸ ಅರ್ಥಗಳನ್ನು ಕಟ್ಟಿ ಕೊಟ್ಟಿವೆ. ಉಲ್ಲೇಖ ಧರ್ಮ ಪುರಾಣ ಇತಿಹಾಸ ಭಾರತ
1716
https://kn.wikipedia.org/wiki/%E0%B2%87%E0%B2%B2%E0%B2%BF%E0%B2%AF%E0%B2%A1%E0%B3%8D
ಇಲಿಯಡ್
ಇಲಿಯಡ್ ಪ್ರಾಚೀನ ಗ್ರೀಕ್ ಮಹಾಕಾವ್ಯಗಳಲ್ಲೊಂದು. ಕಾಲ ಸು. ಕ್ರಿ. ಪೂ. 8ನೆಯ ಶತಮಾನ. ರಚಿಸಿದವ ಹೋಮರ್ ಕವಿ ಎಂದು ಪ್ರತೀತಿಯಿದೆ. ಗ್ರೀಕರಿಗೂ ಟ್ರಾಯ್ ನಗರದವರಿಗೂ ನಡೆದ ಯುದ್ಧದ ವರ್ಣನೆ ಇದರ ವಸ್ತು. ಆ ಯುದ್ಧದ ಕಡೆಯ ದಿನಗಳ ಘಟನೆಗಳು ಇದರಲ್ಲಿ ನಿರೂಪಿತವಾಗಿವೆ. ಗ್ರೀಕರ ಅಗ್ರವೀರ ಅಕಿಲೀಸ್ ತಾನು ಯುದ್ಧ ಮಾಡುವುದಿಲ್ಲವೆಂದು ಹೇಳಿ ಬೇರೆಯಾಗಿ ನಿಂತುದರ ಪರಿಣಾಮವಾಗಿ ಗ್ರೀಕರಿಗಾದ ಅನಾಹುತಗಳಲ್ಲೂ ಇದರ ಬಹುಭಾಗವನ್ನು ತೆಗೆದುಕೊಂಡಿವೆ. ಇದರಲ್ಲಿರುವುದು ಒಟ್ಟು ಇಪ್ಪತ್ತನಾಲ್ಕು ಕಾಂಡಗಳು. ಇಲಿಯಡ್ ಷಟ್ಪದಿಯಲ್ಲಿ ರಚಿಸಲ್ಪಟ್ಟಿದ್ದು ಸುಮಾರು ೧೬,೦೦೦ ಸಾಲುಗಳನ್ನು ಒಳಗೊಂಡಿದೆ. ನಂತರದ ಗ್ರೀಕರು ಇದನ್ನು ೨೪ ಅಧ್ಯಾಯಗಳಾಗಿ ವಿಂಗಡಿಸಿದರು. ಇಲಿಯಡ್ ಮತ್ತು ಹೋಮರನ ಇನ್ನೊಂದು ಮಹಾಕಾವ್ಯವಾದ "ಒಡಿಸ್ಸಿ" ಪ್ರಾಚೀನ ಗ್ರೀಕ್ ಕಾವ್ಯದ ಪ್ರಧಾನ ಕೃತಿಗಳೆಂದು ಹೇಳಲಾಗುತ್ತದೆ. ಹೋಮರ್ ಕವಿ ನಿಜವಾದ ವ್ಯಕ್ತಿಯೇ ಅಲ್ಲವೇ, ಅಥವಾ ಹೋಮರ್ ಒಬ್ಬನೇ ವ್ಯಕ್ತಿಯೋ ಅನೇಕ ವ್ಯಕ್ತಿಗಳೋ ಮೊದಲಾದ ಚರ್ಚೆಗಳು ಅನೇಕ ವರ್ಷಗಳಿಂದ ನಡೆದಿವೆ. ಕಥೆ ಇಲಿಯಡ್ ನ ಕಥೆ ಗ್ರೀಸ್ ಮತ್ತು ಟ್ರಾಯ್ ದೇಶಗಳ ನಡುವಿನ ಯುದ್ಧವೊಂದರ ಹತ್ತನೆ ಮತ್ತು ಕೊನೆಯ ವರ್ಷದ ಘಟನೆಗಳನ್ನು ಕುರಿತದ್ದು. ಮುಖ್ಯವಾಗಿ ಅಕೀಲೀಸ್ ಎಂಬ ಗ್ರೀಕ್ ವೀರನ ಸಾಹಸಗಳನ್ನು ತಿಳಿಸುತ್ತದೆ. ಅಕೀಲೀಸ್ ಮತ್ತು ಅಗಮೆಮ್ನಾನ್ ರ ನಡುವಿನಾ ಜಗಳದೊಂದಿಗೆ ಆರಂಭಗೊಂಡು, ಹೆಕ್ಟರ್ ಎಂಬ ಟ್ರಾಯ್ ದೇಶದ ವೀರನ ಮರಣ ಮತ್ತು ಅಂತ್ಯಸಂಸ್ಕಾರದೊಂದಿಗೆ ಕಾವ್ಯ ಕೊನೆಗೊಳ್ಳುತ್ತದೆ. ಟ್ರಾಯ್ ನಗರದ ರಾಜ ಪ್ರಯಮನ ಮಗ ಪ್ಯಾರಿಸ್ ಗ್ರೀಸಿನ ಸ್ಪಾರ್ಟಾದ ಮೆನೆಲಾಸನ ಪತ್ನಿ ಪರಮ ಸುಂದರಿ ಹೆಲೆನಳನ್ನು ಎತ್ತಿಕೊಂಡು ಹೋದುದು ತಮ್ಮ ನಾಡಿಗೇ ಆದ ಅಪಮಾನವೆಂದು ಕೆರಳಿದ ಗ್ರೀಕ್ ರಾಜರು ತಮ್ಮ ತಮ್ಮ ಯೋಧರೊಡನೆ ನೂರಾರು ಹಡಗುಗಳಲ್ಲಿ ಈಜಿಯನ್ ಸಮುದ್ರವನ್ನು ದಾಟಿ ಏಷ್ಯ ಮೈನರಿನ ವಾಯವ್ಯಮೂಲೆಯಲ್ಲಿ ಕಡಲತೀರಕ್ಕೆ ಮೂರು ಮೈಲಿ ದೂರದಲ್ಲಿದ್ದ ಟ್ರಾಯ್ ಕೋಟೆಗೆ ಮುತ್ತಿಗೆ ಹಾಕಿದರು. ಟ್ರಾಯ್ ಜನ (ಟ್ರೋಜನರು) ಕೋಟೆಯ ಬಾಗಿಲನ್ನು ಭದ್ರಪಡಿಸಿ ಒಂಬತ್ತು ವರ್ಷ ಕಳೆದರೂ ಅಲ್ಲಾಡಲಿಲ್ಲ. ಅಷ್ಟು ಕಾಲವೂ ಗ್ರೀಕರು ಸುತ್ತಮುತ್ತಲ ಸಣ್ಣಪುಟ್ಟ ರಾಜ್ಯಗಳಿಗೆ ಮುತ್ತಿಗೆ ಹಾಕಿ ಅವನ್ನು ಗೆದ್ದು ಅಲ್ಲಿನವರನೇಕರನ್ನು ಸೆರೆಯಾಳುಗಳಾಗಿಯೂ, ದಾಸಿಯರಾಗಿಯೂ ಹಿಡಿದು ತಂದರು. ಅಂಥವರಲ್ಲಿ ಒಬ್ಬಳು ಅಕಿಲೀಸನ ದಾಸಿ ಬ್ರಿಸೇಯಿಸ್, ಬ್ರೈಸಿಸ್ ಎಂಬುವನ ಮಗಳು. ಗ್ರೀಕರ ಪ್ರಧಾನ ಸೇನಾಪತಿ ಮೆನೆಲಾಸನ ತಮ್ಮ ಆಗಮೆಮ್ನಾನ್‍ನ ದಾಸಿ ಕ್ರಿಸೇಯಿಸ್ ಕ್ರೈಸಿಸನ ಮಗಳು ಇನ್ನೊಬ್ಬಳು. ಕ್ರೈಸೀಸ್ ಅಪೊಲೊ ದೇವನ ಪೂಜಾರಿ, ಅವನು ತನ್ನ ಮಗಳಿಗುಂಟಾದ ಪಾಡನ್ನು ನೋಡಿ ಆ ದೇವತೆಗೆ ಮೊರೆಯಿಡಲು, ಗ್ರೀಕರನ್ನು ಶಿಕ್ಷಿಸುವ ಸಲುವಾಗಿ ಅಪೊಲೊ ವ್ಯಾಧಿಯೊಂದನ್ನು ಗ್ರೀಕ್ ಸೈನಿಕರಲ್ಲಿ ಹರಡಿದ. ಕಾಲ್ಟಾಸ್ ಎಂಬ ದಿವ್ಯಜ್ಞಾನಿಯಿಂದ ಈ ಪಿಡುಗಿಗೆ ಕಾರಣವನ್ನು ತಿಳಿದುಕೊಂಡ ಗ್ರೀಕರು ಕ್ರಿಸೇಯೀಸಳನ್ನು ಅವಳ ತಂದೆಗೆ ಹಿಂದಿರುಗಿಸಬೇಕೆಂದು ಒತ್ತಾಯ ಮಾಡಿದರು. ಹಾಗೆ ಮಾಡಲೇಬೇಕಾಗಿ ಬಂದಾಗ ಆಗಮೆಮ್ನಾನ್ ತನ್ನ ದಾಸಿ ಹೋದುದರಿಂದ ಅವಳಿಗೆ ಬದಲಾಗಿ ಅಕಿಲೀಸನ ದಾಸಿಯನ್ನು ಬಲವಂತವಾಗಿ ತಂದಿಟ್ಟುಕೊಂಡ. ಇದರಿಂದ ಅಸಮಾಧಾನಗೊಂಡ ಅಕಿಲೀಸ್ ತಾನು ಯುದ್ಧದಲ್ಲಿ ಭಾಗವಹಿಸುವುದಿಲ್ಲವೆಂದು ಹೇಳಿ ತನ್ನ ಅನುಯಾಯಿಗಳಾದ ಮಿರ್ ಮಿಡನ್ನರನ್ನು ಕರೆದುಕೊಂಡು ದೂರನಿಂತ. ಅಕಿಲೀಸನ ತಾಯಿ ಥೆಟಿಸ್ ಎಂಬ ದೇವತೆ. ಅವಳು ತನ್ನ ಮಗನಿಗಾದ ಅಪಮಾನವನ್ನು ಕಂಡು ದುಃಖಿತಳಾಗಿ ದೇವಾಧಿದೇವ ಜ್ಯೂಸನ ಬಳಿಗೆ ಹೋಗಿ ದೂರಿತ್ತಳು. ಗ್ರೀಕರು ಅಕಿಲೀಸನ ಹಿರಿಮೆಯನ್ನು ಅರಿತುಕೊಳ್ಳುವಂತೆ ಮಾಡುವುದಾಗಿ ಜ್ಯೂಸ್ ಮಾತುಕೊಟ್ಟ. ಈ ದಾಸಿಯರ ಪ್ರಸಂಗ ಇಲಿಯಡ್‍ನ ಮೊದಲ ಕಾಂಡದ ಕಥೆ. ಗ್ರೀಕರಿಗೆ ಅಕಿಲೀಸನ ಔನ್ನತ್ಯದ ಅರಿವಾಗಬೇಕಾದರೆ ಯುದ್ಧ ಆರಂಭವಾಗಬೇಕು. ಆದ್ದರಿಂದ ಎರಡನೆ ಕಾಂಡದಲ್ಲಿ ಜ್ಯೂಸ್ ಆಗಮೆಮ್ನಾನಿಗೊಂದು ಕನಸನ್ನು ಕಳುಹಿಸಿ ಯುದ್ಧ ಮಾಡಬೇಕೆಂದು ಸೂಚಿಸುತ್ತಾನೆ. ಆಗಮೆಮ್ನಾನ್ ತನ್ನ ಜನರನ್ನು ಪರೀಕ್ಷಿಸಲು ತಾವೆಲ್ಲ ಸ್ವದೇಶಕ್ಕೆ ಹಿಂದಿರುಗಬೇಕೆಂದು ಹೇಳುತ್ತಾನೆ. ತಕ್ಷಣ ಅವರೆಲ್ಲ ಸಂತೋಷದಿಂದ ಹಡಗುಗಳ ಕಡೆಗೆ ಓಡುತ್ತಾರೆ. ಒಡಿಸ್ಸಿಯಸ್ ಅವರನ್ನು ಹಿಂದಕ್ಕಟ್ಟುತ್ತಾನೆ. ಈ ಸಂದರ್ಭದಲ್ಲಿ ಗ್ರೀಕ್ ಹಡಗುಗಳನ್ನೂ ಗ್ರೀಕ್ ಸೈನ್ಯದ ಪ್ರಮುಖರನ್ನೂ ಕುರಿತ ವಿವರಗಳು ಬರುತ್ತವೆ. ಮೂರನೆಯ ಕಾಂಡದಲ್ಲಿ ಹೆಲೆನಳನ್ನು ಹಾರಿಸಿಕೊಂಡು ಬಂದು ಯುದ್ಧಕ್ಕೆ ಕಾರಣನಾಗಿದ್ದ ಪ್ಯಾರಿಸ್ ಅವಳ ಪತಿ ಮೆನೆಲಾಸ್‍ನೊಡನೆ ದ್ವಂದ್ವಯುದ್ಧದಲ್ಲಿ ತೊಡಗಿ ಸಾಯುತ್ತಾನೆ. ಅವನು ಸಾಯುವ ವೇಳೆಗೆ ಅವನ ಪಕ್ಷಪಾತಿಯಾದ ಸೌಂದರ್ಯಾಧಿದೇವತೆ ಆಫ್ರೋಡಿಟಿ ಅವನನ್ನು ಯುದ್ಧಭೂಮಿಯಿಂದ ಕರೆದೊಯ್ಯುತ್ತಾಳೆ. ನಾಲ್ಕನೆಯ ಕಾಂಡದಲ್ಲಿ ಗ್ರೀಕರ ಪರವಾಗಿರುವ ಅಥೀನದೇವಿ ಟ್ರಾಯ್ ಪಕ್ಷದ ಪ್ಯಾಂಡರಸ್ ಎಂಬಾತನನ್ನು ಮೆನಲಾಸನಿಗೆ ಗುರಿಯಿಟ್ಟು ಬಾಣಪ್ರಯೋಗ ಮಾಡುವಂತೆ ಪ್ರೇರಿಸಿ ಎರಡು ಸೈನ್ಯಗಳಿಗೂ ಮತ್ತೆ ಯುದ್ಧ ಆರಂಭವಾಗುವಂತೆ ಮಾಡುತ್ತಾಳೆ. ಐದನೆ ಕಾಂಡದಲ್ಲಿ ಗ್ರೀಕರ ಡಿಯೋಮಿಡಿಸ್ ವೀರಾವೇಶದಿಂದ ಹೋರಾಡಿ ಪ್ಯಾಂಡರಸನ್ನೂ ಇನ್ನಿತರ ಅನೇಕ ಟ್ರೋಜನರನ್ನೂ ಕೊಲ್ಲುತ್ತಾನೆ. ಟ್ರೋಜನರಿಗೆ ಸಹಾಯ ಮಾಡುವ ಆಫ್ರೋಡಿಟಿ ಮತ್ತು ಐರಿಸ್ ದೇವತೆಗಳೂ ಅವನ ಆಯುಧಗಳ ಸವಿಗಾಣದೆ ಹೋಗುವುದಿಲ್ಲ. ಆರನೆಯ ಕಾಂಡದಲ್ಲಿ ಟ್ರಾಯ್‍ನ ಹಿರಿಯ ರಾಜಕುಮಾರ ಹೆಕ್ಟರ್ ಟ್ರಾಯ್ ನಗರದವರೆಲ್ಲ ಅಥೀನಳಿಗೆ ಪ್ರಾರ್ಥನೆ ಸಲ್ಲಿಸಬೇಕೆಂದು ಸಲಹೆಕೊಟ್ಟು ತನ್ನ ಹೆಂಡತಿ (ಆಂಡ್ರೊಮೆಕೆ) ಮತ್ತು ಪುಟ್ಟಮಗುವನ್ನು ಮನಕರಗುವಂಥ ಸನ್ನಿವೇಶವೊಂದರಲ್ಲಿ ಭೇಟಿ ಮಾಡಿ ಬೀಳ್ಕೊಂಡು ಸಮರಭೂಮಿಗೆ ತೆರಳುತ್ತಾನೆ. ಏಳನೆ ಕಾಂಡದಲ್ಲಿ ಟ್ರೋಜನ್ ವೀರ ಹೆಕ್ಟರನಿಗೂ ಗ್ರೀಕರ ಕಡೆಯ ಏಜ್ಯಾಕ್ಸ್‍ಗೂ ಕಾಳಗ ನಡೆಯುತ್ತದೆ. ದೇವತೆಗಳು ಯಾರೂ ಯುದ್ಧದಲ್ಲಿ ಭಾಗವಹಿಸಕೂಡದೆಂದು ಜ್ಯೂಸ್ ಅಪ್ಪಣೆ ಮಾಡುತ್ತಾನೆ (ಎಂಟನೆ ಕಾಂಡ). ಹೀರಾ ಮತ್ತು ಅಥೀನ ದೇವಿಯರು ಮೊದಮೊದಲು ಇದನ್ನು ಒಪ್ಪದೆ ಇದ್ದರೂ ಆಮೇಲೆ ಸುಮ್ಮನಾಗುತ್ತಾರೆ. ಯುದ್ಧ ಗ್ರೀಕರಿಗೆ ಪ್ರತಿಕೂಲವಾಗಿ ತಿರುಗುತ್ತದೆ. ತತ್ಕಾರಣ (ಒಂಬತ್ತನೆ ಕಾಂಡದಲ್ಲಿ) ಆಗಮೆಮ್ನಾನ್ ಬ್ರಿಸೇಯಿಸಳನ್ನು ಅಕಿಲೀಸಿಗೆ ಹಿಂದಕ್ಕೆ ಕೊಟ್ಟುಬಿಡುವುದಾಗಿಯೂ ಜೊತೆಗೆ ಬೇರೆ ಉಡುಗೊರೆಗಳನ್ನು ಕೊಡುವುದಾಗಿಯೂ ಹೇಳಿಕಳುಹಿಸುತ್ತಾನೆ. ಅಕಿಲೀಸ್ ಈ ಸಂಧಾನಕ್ಕೆ ಒಪ್ಪದೆ ಕೋಪದಿಂದ ಸಿಡಿದೆದ್ದು ಮಾರನೆಯ ದಿನವೇ ಸ್ವದೇಶಕ್ಕೆ ಮರುಳುವುದಾಗಿ ಶಪಥ ಮಾಡುತ್ತಾನೆ. ಹತ್ತನೆಯ ಕಾಂಡದಲ್ಲಿ ಒಡಿಸ್ಸಿಯಸ್ ಮತ್ತು ಡಿಯೊಮೀಡರು ಟ್ರಾಯ್ ಸೈನ್ಯವ್ಯೂಹದಲ್ಲಿ ಗೂಢಚರ್ಯೆ ನಡೆಸಿ ಆ ಕಡೆಯ ಕೆಲವರನ್ನು ಸಂಹರಿಸುತ್ತಾರೆ. ಹನ್ನೊಂದನೆ ಕಾಂಡದಲ್ಲಿ ಆಗಮೆಮ್ನಾನ್, ಒಡಿಸ್ಸಿಯಸ್, ಡಿಯೊಮೀಡಿಸ್ ಮೊದಲಾದವರು ಗಾಯಗೊಳ್ಳುತ್ತಾರೆ. ಅಕಿಲೀಸ್ ಯುದ್ಧ ಹೇಗೆ ಸಾಗುತ್ತದೆಯೆಂದು ನೋಡಿಬರಲು ತನ್ನ ಆಪ್ತ ಸ್ನೇಹಿತ ಪೆಟ್ರಾಕ್ಲಸನನ್ನು ಕಳುಹಿಸಿಕೊಡುತ್ತಾನೆ. ವೃದ್ಧ ನೆಸ್ಟರ್ ಅಕಿಲೀಸ್ ಯುದ್ಧಕ್ಕೆ ಬರುವಂತೆ ಮಾಡಬೇಕೆಂದೂ ಅದಿಲ್ಲದಿದ್ದರೆ ತನ್ನ ಇತರ ಯೋಧರೊಡನೆ ಪೆಟ್ರಾಕ್ಲಿಸನನ್ನಾದರೂ ಕಳುಹಿಸಿಕೊಡಬೇಕೆಂದೂ ಸೂಚಿಸುತ್ತಾನೆ. ಹನ್ನೆರಡರಿಂದ ಹದಿನಾರನೆ ಕಾಂಡಗಳವರೆಗೂ ಯುದ್ಧದಲ್ಲಿ ಒಮ್ಮೆ ಆ ಕಡೆ ಒಮ್ಮೆ ಈ ಕಡೆ ಜಯ ಲಭಿಸುತ್ತದೆ. ಜ್ಯೂಸನ ಆಜ್ಞೆಗೆ ವಿರೋಧವಾಗಿಯೇ ದೇವತೆಗಳು ತಮತಮಗೆ ಬೇಕಾದವರಿಗೆ ಸಹಾಯವೆಸಗುತ್ತಾರೆ. ಕೊನೆಗೆ ಹೆಕ್ಟರ್ ನುಗ್ಗಿ ಬಂದು ಗ್ರೀಕರ ನಾವೆಗಳಿಗೆ ಬೆಂಕಿಯಿಡಲು ಯತ್ನಿಸುತ್ತಾನೆ. ಪೆಟ್ರಾಕಿಸ್ ಅಕಿಲೀಸನನ್ನು ಯುದ್ಧಕ್ಕೆ ಬರಬೇಕೆಂದು ಬೇಡಿಕೊಳ್ಳುತ್ತಾನೆ. ಅಕಿಲೀಸ್ ತಾನು ಹೋಗಲು ಈಗಲು ಇಷ್ಟಪಡುವುದಿಲ್ಲ. ತನ್ನ ಯುದ್ಧ ಕವಚವನ್ನು ಗೆಳೆಯನಿಗೆ ಕೊಟ್ಟು ಅದನ್ನು ಧರಿಸಿಹೋಗಿ ಟ್ರೋಜನರನ್ನು ಹಿಂದಕ್ಕೆ ಬರಬೇಕೆಂದು; ಪೆಟ್ರಾಕ್ಲಿಸನಿಗೆ ಹೇಳುತ್ತಾನೆ. ಅಕಿಲೀಸನ ಕವಚವನ್ನು ಧರಿಸಿ ಹೋಗುವ ಪೆಟ್ರಾಕ್ಲಿಸ್ ಟ್ರೋಜನರನ್ನು ಟ್ರಾಯ್ ಕೋಟಿಯವರೆಗೂ ಅಟ್ಟಿಸಿಕೊಂಡು ಹೋಗುತ್ತಾನೆ. ಅಲ್ಲಿ ಅವನು ಹೆಕ್ಟರಿನಿಂದ ಹತನಾಗುತ್ತಾನೆ. (16ನೆಯ ಕಾಂಡ). ಹದಿನೇಳನೆಯ ಕಾಂಡದಲ್ಲಿ ಹೆಕ್ಟರ್ ಅಕಿಲೀಸನ ಕವಚವನ್ನು ಕಿತ್ತಿಟ್ಟುಕೊಳ್ಳುತ್ತಾನೆ. ಅವನ ಮೃತ ದೇಹವನ್ನು ಮೆನೆಲಾಸ್ ಮೊದಲಾದವರು ಕಷ್ಟಪಟ್ಟು ಉಳಿಸಿಕೊಂಡು ಹೋಗುತ್ತಾರೆ. ಗೆಳೆಯನಿಗಾದ ದುರಂತವನ್ನು ಕಂಡು ಕೋಪೋದ್ರಕ್ತನಾಗುವ ಅಕಿಲೀಸ್ ಸೇಡು ತೀರಿಸಿಕೊಳ್ಳಲೆಂದು ಸಮರಕ್ಕಿಳಿಯುತ್ತಾನೆ. ಈಗ ಹೆಕ್ಟರನ ವಶವಾಗಿರುವ ಅವನ ಕವಚಕ್ಕೆ ಬದಲಾಗಿ ದೇವತೆಗಳ ಕಮ್ಮಾರ ಹೆಫೀಸ್ಟ್ಸ್ ಅವನಿಗೊಂದು ಹೊಸ ಗುರಾಣಿಯನ್ನೂ ಇತರ ಆಯುಧಗಳನ್ನೂ ಮಾಡಿಕೊಡುತ್ತಾನೆ. ಆ ಗುರಾಣಿಯ ಮೇಲೆಲ್ಲ ಗ್ರೀಕರ ಜೀವನದ ಚಿತ್ರಗಳು ವಿಪುಲವಾಗಿ ಚಿತ್ರಿತವಾಗಿರುತ್ತದೆ. ಅವನ್ನು ಧರಿಸಿ ಅಕಿಲೀಸ್ (ತಾನು ಅಲ್ಪಾಯು ಎಂಬ ಭವಿಷ್ಯವಾಣಿಯಿದ್ದರೂ ಲೆಕ್ಕಿಸದೆ) ಮುಂದೆ ನುಗ್ಗಿ ಯುದ್ಧದ ಕಣವನ್ನು ಹೊಕ್ಕು ಹೋರಾಡತೊಡಗುತ್ತಾನೆ. ಅವನಿಲ್ಲದೆ ಗ್ರೀಕರಿಗೆ ಜಯ ದೊರೆಯಕೂಡದೆಂದು ಜ್ಯೂಸ್ ಥೆಟಿಸಳಿಗಿತ್ತಿದ್ದ ಮಾತು ಈಗ ಸತ್ಯವಾಗುತ್ತದೆ. ಜ್ಯೂಸ್ ದೇವನೆ ಈಗ ಒಂದು ಪಕ್ಷ ವಹಿಸುವುದರಿಂದ ಇತರ ಸ್ತ್ರೀಪುರುಷ ದೇವತೆಗಳೆಲ್ಲ ತಮಗೆ ಬೇಕಾದ ಕಡೆ ಸೇರಿ ಬೇಕಾದವರಿಗೆ ಸಹಾಯ ಮಾಡುತ್ತಾರೆ (21ನೆಯ ಕಾಂಡ). ಅಕಿಲೀಸ್ ಟ್ರೋಜನ್ ಸೈನಿಕರನ್ನು ಮಟ್ಟಹಾಕುತ್ತಾನೆ (21ನೆಯ ಕಾಂಡ). ಇಪ್ಪತ್ತೆರಡನೆಯ ಕಾಂಡದಲ್ಲಿ ಹೆಕ್ಟರ್ ಟ್ರಾಯ್ ಕೋಟೆಯ ಗೋಡೆಯ ಬಳಿ ಕಾದು ನಿಂತಿರುತ್ತಾನೆ. ಅಲ್ಲಿಗೆ ಬರುವ ರೋಷಭೀಷಣನಾದ ಅಕಿಲೀಸನನ್ನು ನೋಡಿ ಅವನು ಕಾಲುಕೀಳುತ್ತಾನೆ. ಅದರಿಂದ ಪ್ರಯೋಜನವಾಗುವುದಿಲ್ಲ. ಕಡೆಗೆ ಆತ ಅಕಿಲೀಸನ ಆಯುಧಕ್ಕೆ ತುತ್ತಾಗಿ ಸತ್ತುಬೀಳುತ್ತಾನೆ. ಅವನ ಶವವನ್ನು ತನ್ನ ರಥದ ಗಾಲಿಗೆ ಕಟ್ಟಿ ಮಣ್ಣಿನಲ್ಲಿ ಎಳೆದುಕೊಂಡು ಅಕಿಲೀಸ್ ತನ್ನ ಬಿಡಾರಕ್ಕೆ ಧಾವಿಸುತ್ತಾನೆ. ಹೆಕ್ಟರನ ನೆಂಟರಿಷ್ಟರ ದುಃಖ ಉಕ್ಕಿಬರುತ್ತದೆ. ಇಪ್ಪತ್ತಮೂರನೆಯ ಕಾಂಡದಲ್ಲಿ ಅಕಿಲೀಸ್ ಪೆಟ್ರಾಕ್ಲಿಸನ ಮೃತದೇಹದ ದಹನ ಮಾಡುತ್ತಾನೆ. ಅದರೊಡನೆ ಹನ್ನೆರಡು ಮಂದಿ ಟ್ರೋಜನ್ ಯುವಕರನ್ನು ಸುಡುತ್ತಾನೆ. ಆದರೆ (24ನೆ ಕಾಂಡ) ಹೆಕ್ಟರನ ದೇಹಕ್ಕೆ ಅವನು ಅತ್ಯಂತ ಅಗೌರವವನ್ನು ತೋರಿಸಲು ಜ್ಯೂಸ್ ಥೆಟೆಸಳನ್ನು ಕಳುಹಿಸಿ ಹೀಗೆ ಮಾಡಿದರೆ ಅವನು ದೇವತೆಗಳ ಕೋಪಕ್ಕೆ ಪಾತ್ರನಾಗಬೇಕಾಗುವುದೆಂದು ಹೇಳಿಕಳಿಸುತ್ತಾನೆ. ಹೆಕ್ಟರನ ಮುದಿ ತಂದೆ ಪ್ರಿಯಮ್ ಮಗನ ದೇಹವನ್ನು ಹಿಂದಕ್ಕೆ ತೆಗೆದುಕೊಂಡು ಹೋಗಲು ರಾತ್ರಿಯ ಕತ್ತಲಲ್ಲಿ ಅಕಿಲೀಸನ ಬಿಡಾರಕ್ಕೆ ಬರುತ್ತಾನೆ. ಅವನ್ನು ಕಂಡು ಮರುಕದಿಂದ ಕರಗುವ ಅಕಿಲೀಸ್ ಹೆಕ್ಟರನ ದೇಹವನ್ನು ಹಿಂದಕ್ಕೆ ಕೊಡಲು ಒಪ್ಪುವುದಲ್ಲದೆ ಹೆಕ್ಟರನ ಉತ್ತರಕ್ರಿಯೆಗಳೆಂದು ಕೆಲದಿನ ಯುದ್ಧ ನಿಲ್ಲಿಸುತ್ತಾನೆ. ಹೇಗೆ ಅಕಿಲೀಸನ ಹಿರಿಮೆ ಸ್ಥಾಪಿತವಾಗುತ್ತದೆ. ಇದು ಇಲಿಯಡ್ ಕಾವ್ಯದ ಕಥೆ. ಕಾವ್ಯ ಮತ್ತು ವಾಸ್ತವ ಇಲಿಯಡ್ ಎಂಬುದು ಟ್ರಾಯ್‍ನ ಇನ್ನೊಂದು ಹೆಸರಾದ ಇಲಿಯಮ್‍ನಿಂದ ಬಂದುದು (ಇಲ್ಲಸ್ ಎಂಬುವನು ಅದರ ಸ್ಥಾಪಕನೆಂಬ ನಂಬಿಕೆಯಿತ್ತು. ಇಲಿಯಮ್‍ನಲ್ಲಿ ಅವನ ಹೆಸರಿನ ಸೂಚನೆಯಿದೆ). ಟ್ರೋಜನ್ ಯುದ್ಧ ವಾಸ್ತವವಾಗಿ ನಡೆಯಿತೆಂಬುದಕ್ಕೆ ಭೂ ಸಂಶೋಧಕರಿಗೆ ರುಜುವಾತು ಸಿಕ್ಕಿದೆ. ಕ್ರಿ.ಪೂ. 12ನೆಯ ಶತಮಾನದಲ್ಲಿ ಗ್ರೀಕರಿಗೂ ಟ್ರಾಯ್ ಜನಕ್ಕೂ ಒಂದು ನಿಜವಾದ ಯುದ್ಧ ನಡೆದಿರಬೇಕು;. ಅದರ ಯೋಧರ ಮತ್ತು ವೀರರ ವಿಚಾರವಾಗಿ ಅನೇಕಾನೇಕ ಕಥೆಗಳು ಹುಟ್ಟಿಕೊಂಡು ಬೆಳೆದಿರಬೇಕು. ಕ್ರಿ. ಪೂ. ಎಂಟನೆ ಶತಮಾನದ ಹೊತ್ತಿಗೆ ಇಂಥ ನೂರಾರು ಕಥೆ, ಕವನಗಳು ಜನಗಳಲ್ಲಿ ಬಾಯಿಂದ ಬಾಯಿಗೆ ಹಬ್ಬಿ ಪ್ರಚಾರವಾಗಿದ್ದಿರಬೇಕು. ಹೋಮರ್ ಎಂಬ ಕವಿ ಅವನ್ನು ಸಂಗ್ರಹಿಸಿ ಅವಕ್ಕೆ ಪರಸ್ಪರ ಸಂಬಂಧವನ್ನು ಕಲ್ಪಿಸಿ ಅವನ್ನು ಜೋಡಿಸಿ ಪರಿಷ್ಕರಿಸಿ ಇಲಿಯಡ್ ಕಾವ್ಯವಾಗಿ ಹೆಣೆದಿರಬೇಕು. ಕಾವ್ಯದ ವಸ್ತು, ವಿಮರ್ಶೆ,ಮೌಲ್ಯಾಂಕನ ಈ ಮಹಾಕಾವ್ಯದ ಪ್ರಾರಂಭದ ಪಂಕ್ತಿಗಳೇ ಹೇಳುವಂತೆ ಇದರ ವಸ್ತು 'ಅಕಿಲೀಸನ ಕ್ರೋಧ. ಸತ್ತ ಮಹಾವೀರ ಹೆಕ್ಕಡನ ಶವವನ್ನು ರಥಕ್ಕೆ ಕಟ್ಟಿ ಪ್ರತಿ ಬೆಳಗೂ ಅಕಿಲೀಸ್ ಅದನ್ನು ಮಣ್ಣಿನಲ್ಲಿ ಎಳೆಯುತ್ತಾನೆ. ಕ್ರೋಧವು ಮನುಷ್ಯನನ್ನು ಹೇಗೆ ಮೃಗವನ್ನಾಗಿ ಮಾಡಿ ಬಿಡುವುದೆಂಬ ಚಿತ್ರ ಇಲ್ಲಿದೆ. ಪ್ರಿಯತಮೆ ಅಕಿಲೀಸನ ಗುಡಾರಕ್ಕೆ ಬಂದು ಮಗನ ದೇಹವನ್ನು ಬೇಡುವುದು ಜಗತ್ತಿನ ಸಾಹಿತ್ಯದ ಮರೆಯಲಾಗದ ದೃಶ್ಯಗಳಲ್ಲಿ ಒಂದು. ಅಕಿಲೀಸ್ ಕರಗಿ ಹೋಗಿ, ಪಶುವಾಗಿದ್ದವನು ಮತ್ತೆ ಮನುಷ್ಯನಾಗುತ್ತಾನೆ. ಹೆಕ್ಟರ್ ತನ್ನ ಹೆಂಡತಿಯನ್ನೂ ಮಗುವನ್ನು ನೋಡುವುದು, ಹೆಲೆನ್ ಹೆಕ್ಟರನ ಶವದ ಬಳಿ ದುಃಖಿಸುವುದು ಭಾವಾತಿರೇಕವಿಲ್ಲದೆ ಹೃದಯವನ್ನು ಮುಟ್ಟುವ ದೃಶ್ಯಗಳು. ಈ ಮಹಾಕಾವ್ಯದಲ್ಲಿ ದೇವತೆಗಳ ಚಿತ್ರಣವೂ ಇದೆ. ಬಹುಮಟ್ಟಿಗೆ, ಈ ದೇವತೆಗಳಿಗಿಂತ ಬಹುಮಂದಿ ಮನುಷ್ಯನೇ ಉದಾತ್ತರಾಗಿ, ಗೌರವಾರ್ಹರಾಗಿ ಕಾಣುತ್ತಾರೆ. ದೇವತೆಗಳು ಅಮರರು, ಶಕ್ತಿಶಾಲಿಗಳು, ಅದರಿಂದ ಮನುಷ್ಯರು ಅವರಿಗೆ ತಲೆ ಬಾಗಿ ನಡೆಯಬೇಕು. ಇಲ್ಲಿ ಮನುಷ್ಯನ ಜಗತ್ತಿನ ಅತ್ಯುನ್ನತ ಮೌಲ್ಯಗಳು ಸಾಹಸ ಮತ್ತು ವೀರನೆಂಬ ಶುಭ್ರ ಯಶಸ್ಸು ಇಲ್ಲಿ ಕವಿ ಸುಮಾರು ಕ್ರಿ.ಪೂ. 11-12ನೆಯ ಶತಮಾನದ ಕಂಚಿನ ಯುಗವನ್ನು ಚಿತ್ರಿಸುತ್ತಿದ್ದಾನೆ, ಇದೊಂದು ವೀರಯುಗ. ಹೋಮರನ ಮಹಾಕಾವ್ಯಗಳು ಯೂರೋಪಿನ ಮಹಾಕಾವ್ಯ ಪರಂಪರೆಯನ್ನು ಪ್ರಾರಂಭಿಸಿದವು. ಮಹಾಕಾವ್ಯವು ತನ್ನ (ನಾಯಕನ) ಯುಗದ ಮೌಲ್ಯಗಳ ಸಾಕಾರಮೂರ್ತಿಯಾದ ಅಪ್ರತಿಮ ವೀರನ ಸುತ್ತ ಬೆಳೆದ ದೀರ್ಘ ಕಥೆಯಾಯಿತು, ಮಾನವಾತೀತಿ ಜಗತ್ತು ಇದರಲ್ಲಿ ಸೇರಿಕೊಂಡಿತು, ಇಡೀ ಕಾವ್ಯ ಒಂದು ಮಹತ್ತರ ಘಟನೆಯ ಸುತ್ತ ರೂಪ ತಾಳಿತು, ಹಿನ್ನೋಟದ ಕಥನ (ರಿಟ್ರಾಸ್ಪೆಕ್ಟಿನ್ ನ್ಯಾರೇಷನ್) ಕಥನ ತಂತ್ರದ ಭಾಗವಾಯಿತು. ಮಹೋಪಮೆಯನ್ನು ಮೊದಲು ಬಳಸಿದವನು ಹೋಮರ್, ಆದುದರಿಂದ ಇದಕ್ಕೆ 'ಹೋಮೆರಿಕ್ ಸಿಮಿಲಿ ಎಂದೂ ಹೆಸರು. ಪಾಶ್ಚಾತ್ಯ ವಿಮರ್ಶಕರು ಮಹಾಕಾವ್ಯಗಳಲ್ಲಿ ಎರಡು ಬಗೆ ಎನ್ನುತ್ತಾರೆ. ಮೊದಲನೆಯದು 'ಪ್ರೈಮರಿ ಎಪಿಕ್. ಇದಕ್ಕೆ ಮಾದರಿ ಇಲ್ಲಿ, ಇದೇ ಮುಂದಿನ ಮಹಾಕಾವ್ಯಗಳಿಗೆ ಮಾದರಿ, ಮಹಾಕಾವ್ಯಗಳ ಪರಂಪರೆಯನ್ನು ಪ್ರಾರಂಭಿಸುತ್ತದೆ. ಇದು 'ಪ್ರಿಮಿಟಿನ್ ಎಪಿಕ್ ಸರ್ಕಾರಿ ಹೊರವಲಯ ಮುದ್ರಣಾಲಯ ಹೌದು. ಅನಂತರ ಬರುವವು 'ಸೆರೆಂಡಾ ಎಪಿಕ್‍ಗಳು, ನಾಗರೀಕತೆಯ ಮಹಾಕಾವ್ಯಗಳು. ಇಲಿಯಡ್ ಪ್ರೈಮರಿ ಎಪಿಕ್; ಪಾಶ್ಚಾತ್ಯ ಮಹಾಕಾವ್ಯ ಪರಂಪರೆಯ ಉದ್ಘಾಟನೆಯನ್ನು ಮಾಡಿತು ಹೋಮರ್ ಎಂಬ ವ್ಯಕ್ತಿಯೇ ಇರಲಿಲ್ಲವೆಂಬ ವಾದವೂ ಇದೆ. ಗ್ರೀಕ್ ಭಾಷೆಯಲ್ಲಿ ಆ ಮಾತಿಗೆ ಸಂಗ್ರಾಹಕ ಎಂದು ಅರ್ಥ. ಆದಕಾರಣ ಹಲವರು ರಚಿಸಿದ ಕವಿತೆಗಳನ್ನು ಯಾರೋ ಸಂಗ್ರಹಿಸಿ ಸಂಪಾದಿಸಬೇಕು. ಅವನಿಗೆ ಹೋಮರ್ ಎಂಬ ಅನ್ವರ್ಥನಾಮ ಬಂದಿರಬೇಕು ಎಂದು ಕೆಲವರು ವಿದ್ವಾಂಸರು ಹೇಳುತ್ತಾರೆ. ಆದರೆ ಹೋಮರ್ ಕವಿ ತಮ್ಮವನು, ತಮ್ಮ ಮಡಿಲಲ್ಲಿ ಹುಟ್ಟಿ ಬೆಳೆದವನು ಎಂದು ಈಗಲೂ ಗ್ರೀಕ್ ಪಟ್ಟಣಗಳು ಹೇಳಿಕೊಳ್ಳುತ್ತಿದ್ದುದನ್ನೂ ಈ ಸಂದರ್ಭದಲ್ಲಿ ನೆನಪಿನಲ್ಲಿಟ್ಟುಕೊಂಡಿರಬೇಕು. ಒಬ್ಬನೇ ರಚಿಸಿರಲಿ ಅನೇಕರ ಕೈವಾಡ ಅದರಲ್ಲಿರಲಿ, ಈ ಕಾವ್ಯದಲ್ಲಿ ಎದ್ದು ಕಾಣುವ ಕಲ್ಪನೆಯ ಐಕ್ಯತೆಯನ್ನು ಮಾತ್ರ ಅಲ್ಲಗಳೆಯುವಂತಿಲ್ಲ. ಇದರ ಸರಳತೆ, ನೇರವಾದ ಕಥಾನಿರೂಪಣೆ, ಯುದ್ಧ ಪ್ರಸಂಗಗಳ ವರ್ಣನೆಗಳು, ಪ್ರಾಚೀನ ಗ್ರೀಕರ ಜನಜೀವನದ ಚಿತ್ರಗಳು, ಬಗೆಬಗೆಯ ಪಾತ್ರಗಳು, ಅಲ್ಲಲ್ಲಿ ಬರುವ ತಿಳಿ ಹಾಸ್ಯ, ಮನಕರಗಿಸುವ ದೃಶ್ಯಗಳು, ಮಾನವಸ್ವಭಾವದ ಅರಿವು, ಎಲ್ಲಕ್ಕಿಂತಲೂ ಹೆಚ್ಚಾಗಿ ಮನುಷ್ಯನ ಕ್ರೋಧದ ದುಷ್ಪರಿಣಾಮದ ಸೂಚನೆ-ಇವೇ ಮೊದಲಾದ ಅಂಶಗಳಿಗೆ ಈ ಕೃತಿ ಹೆಸರಾಂತಿದೆ. ಇಲಿಯಡ್ ಕಾವ್ಯ ಗ್ರೀಕ್ ಮಹಾರುದ್ರ ನಾಟಕಗಳಿಗೆ ವಸ್ತುವನ್ನೊದಗಿಸಿತಲ್ಲದೆ ಯೂರೋಪಿನ ಸಾಹಿತ್ಯದಲ್ಲಿ ಮುಂದೆ ಬಂದ ವರ್ಜಿಲ್, ಡಾಂಟೆ, ಟ್ಯಾಸೊ, ಮಿಲ್ಟನ್ ಮೊದಲಾದ ಕವಿಗಳ ಮಹಾಕಾವ್ಯಗಳಿಗೆ ಮಾದರಿಯಾಯಿತು. ಇದರ ರೂಪಲಕ್ಷಣಗಳನೇಕವನ್ನು ಆ ಕವಿಗಳು ಅನುಕರಿಸಿದ್ದಾರೆ. ಅದರ ಛಂದಸ್ಸು ಕೂಡ (ಅಲ್ಪ ಸ್ವಲ್ಪ ಬದಲಾವಣೆಗಳೊಡನೆ) ಐರೋಪ್ಯ ಮಹಾಕಾವ್ಯಗಳ ಕವಿಪ್ರಿಯ ಛಂದಸ್ಸಾಗಿ ಉಳಿದುಬಂದಿದೆ. ನೋಡಿ ಹೋಮರ್ ಒಡಿಸ್ಸಿ ಉಲ್ಲೇಖ ಸಾಹಿತ್ಯ ಇತಿಹಾಸ ಮಹಾಕಾವ್ಯಗಳು
1717
https://kn.wikipedia.org/wiki/%E0%B2%AD%E0%B2%97%E0%B2%B5%E0%B2%A6%E0%B3%8D%E0%B2%97%E0%B3%80%E0%B2%A4%E0%B3%86
ಭಗವದ್ಗೀತೆ
ಶ್ರೀ ಭಗವದ್ಗೀತೆಯು ಮಹಾಭಾರತದಲ್ಲಿನ ಕುರುಕ್ಷೇತ್ರ ಯುಧ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ಕೃಷ್ಣನಿಂದ ಅರ್ಜುನನಿಗೆ ಮಾಡಲ್ಪಟ್ಟ ಉಪದೇಶ. ಹಿಂದೂಗಳ ಪವಿತ್ರ ಗ್ರಂಥಗಳಲ್ಲಿ ಮುಖ್ಯವಾದುದು. ಗೀತೆಯನ್ನು ಪಾಂಡವ ರಾಜಕುಮಾರ ಅರ್ಜುನ ಮತ್ತು ಅವರ ಮಾರ್ಗದರ್ಶಿ ಮತ್ತು ರಥ ಸಾರಥಿ ಶ್ರೀ ಕೃಷ್ಣನ ನಡುವಿನ ಸಂಭಾಷಣೆಯ ನಿರೂಪಣಾ ಚೌಕಟ್ಟಿನಲ್ಲಿ ಹೊಂದಿಸಲಾಗಿದೆ. ಪಾಂಡವರು ಮತ್ತು ಕೌರವರ ನಡುವಿನ ಧರ್ಮ ಯುಧಾ (ನೀತಿವಂತ ಯುದ್ಧ) ದ ಆರಂಭದಲ್ಲಿ, ಅರ್ಜುನನು ತನ್ನ ಸ್ವಂತ ರಕ್ತಸಂಬಂಧಿಗಳ ವಿರುದ್ಧದ ಯುದ್ಧದಲ್ಲಿ ಯುದ್ಧವು ಉಂಟುಮಾಡುವ ಹಿಂಸೆ ಮತ್ತು ಸಾವಿನ ಬಗ್ಗೆ ನೈತಿಕ ಸಂದಿಗ್ಧತೆ ಮತ್ತು ಹತಾಶೆಯಿಂದ ತುಂಬಿರುತ್ತಾನೆ. ಅವರು ತ್ಯಜಿಸಬೇಕೆ ಎಂದು ಅವರು ಆಶ್ಚರ್ಯ ಪಡುತ್ತಾರೆ ಮತ್ತು ಕೃಷ್ಣನ ಸಲಹೆಯನ್ನು ಹುಡುಕುತ್ತಾರೆ, ಅವರ ಉತ್ತರಗಳು ಮತ್ತು ಪ್ರವಚನವು ಭಗವದ್ಗೀತೆಯನ್ನು ಒಳಗೊಂಡಿದೆ. "ನಿಸ್ವಾರ್ಥ ಕ್ರಿಯೆಯ" ಮೂಲಕ "ಧರ್ಮವನ್ನು ಎತ್ತಿಹಿಡಿಯುವ ತನ್ನ ಕ್ಷತ್ರಿಯ (ಯೋಧ) ಕರ್ತವ್ಯವನ್ನು ಪೂರೈಸಲು" ಕೃಷ್ಣನು ಅರ್ಜುನನಿಗೆ ಸಲಹೆ ನೀಡುತ್ತಾನೆ. ಅರ್ಜುನನು ಎದುರಿಸುತ್ತಿರುವ ಯುದ್ಧವನ್ನು ಮೀರಿದ ಸಂದಿಗ್ಧತೆಗಳು ಮತ್ತು ತಾತ್ವಿಕ ಸಮಸ್ಯೆಗಳು. ಪಂಚಮವೇದ ಭಗವದ್ಗೀತೆ ಮಹಾಭಾರತ ಮಹಾಕಾವ್ಯದ ಭೀಷ್ಮಪರ್ವದ ೨೩ ನೇ ಅಧ್ಯಾಯದಿಂದ ೪೦ ನೇ ಅಧ್ಯಾಯದ ನಡುವೆ ಬರುವ ಭಾಗ. ಹಿಂದೂ ಧರ್ಮ ಮತ್ತು ತತ್ವಶಾಸ್ತ್ರದ ಮುಖ್ಯ ಪಠ್ಯಗಳಲ್ಲಿ ಒಂದಾದ ಸುಮಾರು ೭೦೦ ಶ್ಲೋಕಗಳ ಭಗವದ್ಗೀತೆ, ಹಿಂದೂ ಚಿಂತನೆ ಮತ್ತು ವೈದಿಕ, ಅಧ್ಯಾತ್ಮಿಕ, ಯೋಗಿಕ ಹಾಗೂ ತಾಂತ್ರಿಕ ತತ್ವಶಾಸ್ತ್ರಗಳ ಒಟ್ಟು ಸಮಾಗಮವೆನ್ನಬಹುದು. ಕೆಲವೊಮ್ಮೆ ಯೋಗೋಪನಿಷತ್ ಅಥವಾ ಗೀತೋಪನಿಷತ್ ಪಂಚಮವೇದವೆಂದೂ ಭಗವದ್ಗೀತೆಯನ್ನು ಕರೆಯಲಾಗುತ್ತದೆ. ಗೀತೋಪದೇಶ 'ಭಗವದ್ಗೀತೆ' ಆರಂಭವಾಗುವುದು ಮಹಾಭಾರತ ಯುದ್ಧದ ಆರಂಭವಾಗುವ ಮೊದಲು. ತಮ್ಮ ಸೈನ್ಯಕ್ಕೆ ರಣಭೂಮಿಯಲ್ಲಿ ಇದಿರಾದ ಕೌರವರ ಸೇನೆಯಲ್ಲಿ ತನ್ನ ಬಹಳಷ್ಟು ಬಂಧುಗಳನ್ನು ಕಂಡು ಅರ್ಜುನ ಉತ್ಸಾಹ ಕಳೆದುಕೊಂಡು ಮಾರ್ಗದರ್ಶನಕ್ಕಾಗಿ ಕೃಷ್ಣನತ್ತ ತಿರುಗಿದಾಗ. ಆತ್ಮದ ಅಮರತ್ವದ ಬಗ್ಗೆ ಪ್ರಸ್ತಾಪಿಸುತ್ತ ಕೃಷ್ಣ 'ಗೀತೋಪದೇಶ'ವನ್ನು ಆರಂಭಿಸುತ್ತಾನೆ. ಇದರ ನಂತರ ನಾಲ್ಕು ಯೋಗಮಾರ್ಗಗಳಾದ ಭಕ್ತಿ, ಕರ್ಮ, ಧ್ಯಾನ ಮತ್ತು ಜ್ಞಾನ ಮಾರ್ಗಗಳನ್ನು ವಿವರಿಸುತ್ತಾನೆ. ಇದನ್ನು ಶ್ರೀಕೃಷ್ಣನು ಅರ್ಜುನನಿಗೆ ಮಾರ್ಗಶಿರ ಮಾಸದ ಶುಕ್ಲಪಕ್ಷದ ಏಕಾದಶಿಯ ದಿನ ಉಪದೇಶಿಸಿದನು. ಆದುದರಿಂದ ಇದನ್ನು ಗೀತಾ ಜಯಂತಿ ಅಂತ ಕರೆಯಲಾಗಿದೆ. ಆತಿಥ್ಯೆ ಭಾರತದ ೧೪ನೇ ಪ್ರಧಾನಿ ನರೇಂದ್ರ ಮೋದಿ ಅವರು ಭಗವದ್ಗೀತೆಯನ್ನು "ವಿಶ್ವದ ಅತಿದೊಡ್ಡ ಕೊಡುಗೆ" ಎಂದು ಕರೆದರು. ಮೋದಿ ಅದರ ಯು.ಎಸ್. ಭೇಟಿಯ ಸಂದರ್ಭದಲ್ಲಿ ೨೦೧೪ ರಲ್ಲಿ ಅಂದಿನ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾಗೆ ನೀಡಿದರು. ೧೮ನೇ ಶತಮಾನದ ಆರಂಭದಲ್ಲಿ ಪಾಶ್ಚಿಮಾತ್ಯ ವಿದ್ವಾಂಸರು ಅದರ ಅನುವಾದ ಮತ್ತು ಅಧ್ಯಯನದೊಂದಿಗೆ ಭಗವದ್ಗೀತೆ ಹೆಚ್ಚು ಮೆಚ್ಚುಗೆ ಮತ್ತು ಜನಪ್ರಿಯತೆಯನ್ನು ಗಳಿಸಿತು. ಭಾರತೀಯ ಇತಿಹಾಸಕಾರ ಮತ್ತು ಬರಹಗಾರ ಖುಷ್ವಂತ್ ಸಿಂಗ್ ಅವರ ಪ್ರಕಾರ, ರುಡ್ಯಾರ್ಡ್ ಕಿಪ್ಲಿಂಗ್ ಅವರ ಪ್ರಸಿದ್ಧ ಕವಿತೆ "ಇಫ್" " ಇಂಗ್ಲಿಷ್ನಲ್ಲಿ ದಿ ಗೀತಾ ಸಂದೇಶದ ಸಾರ". ಹೊಗಳಿಕೆ ಮತ್ತು ಜನಪ್ರಿಯತೆ ಭಗವದ್ಗೀತೆಯನ್ನು ಮಹಾತ್ಮ ಗಾಂಧಿ ಮತ್ತು ಸರ್ವೆಪಲ್ಲಿ ರಾಧಾಕೃಷ್ಣನ್ ಸೇರಿದಂತೆ ಪ್ರಮುಖ ಭಾರತೀಯರು ಮಾತ್ರವಲ್ಲದೆ ಆಲ್ಡಸ್ ಹಕ್ಸ್ಲೆ, ಹೆನ್ರಿ ಡೇವಿಡ್ ಥೋರೊ, ಜೆ. ರಾಬರ್ಟ್ ಒಪೆನ್ಹೈಮರ್, ರಾಲ್ಫ್ ವಾಲ್ಡೋ ಎಮರ್ಸನ್, ಕಾರ್ಲ್ ಜಂಗ್, ಹರ್ಮನ್ ಹೆಸ್ಸೆ ಮತ್ತು ಬೆಲೆಂಟ್ ಎಸೆವಿಟ್. ಇವನ್ನೂ ನೋಡಿ ಕನ್ನಡ ವಿಕಿಸೊರ್ಸನಲ್ಲಿ ಭಗವದ್ಗೀತೆ ಭಗವದ್ಗೀತಾ ತಾತ್ಪರ್ಯ ಧ್ಯಾನ ಶ್ಲೋಕಗಳು ಉಲ್ಲೇಖಗಳು ಧಾರ್ಮಿಕ ಗ್ರಂಥಗಳು ಹಿಂದೂ ಧರ್ಮ ಮಹಾಭಾರತ
1721
https://kn.wikipedia.org/wiki/%E0%B2%AA%E0%B2%BE%E0%B2%82%E0%B2%A1%E0%B2%B5%E0%B2%B0%E0%B3%81
ಪಾಂಡವರು
ಪಾಂಡವರು ಮಹಾಭಾರತದ ಮಹಾಕಾವ್ಯದ ಪ್ರಮುಖ ಪಾತ್ರಗಳಾದ ಯುಧಿಷ್ಠಿರ, ಭೀಮ, ಅರ್ಜುನ, ನಕುಲ ಮತ್ತು ಸಹದೇವ ಎಂಬ ಐದು ಸಹೋದರರನ್ನು ಉಲ್ಲೇಖಿಸಲಾಗಿದೆ. ಅವರನ್ನು ಕುರು ರಾಜ ಪಾಂಡುವಿನ ಪುತ್ರರೆಂದು ಪರಿಗಣಿಸಲಾಗುತ್ತಿತ್ತು, ಆದರೆ ಪಾಂಡುವಿನ ಮಕ್ಕಳನ್ನು ಹೊಂದಲು ಅಸಮರ್ಥತೆಯಿಂದಾಗಿ ಕುಂತಿ-ಮಾದ್ರಿಯರು ಬೇರೆ ಬೇರೆ ದೇವರುಗಳಿಂದ ಪಾಂಡವರನ್ನು ಪಡೆದರು. ಪಾಂಡವರು ದ್ರೌಪದಿ ಎಂಬ ಹೆಂಡತಿಯನ್ನು ಹಂಚಿಕೊಂಡರು. ಪಾಂಡವರು ತಮ್ಮ ಸೋದರಸಂಬಂಧಿಗಳಾದ ಕೌರವರ ವಿರುದ್ಧ (ದುರ್ಯೋಧನ ಮತ್ತು ಆತನ ಸಹೋದರರು) ಯುದ್ಧ ಮಾಡಿದರು. ಇದನ್ನು ಕುರುಕ್ಷೇತ್ರ ಯುದ್ಧ ಎಂದು ಕರೆಯಲಾಯಿತು. ಯುದ್ಧದಲ್ಲಿ ಪಾಂಡವರು ಗೆದ್ದರು ಮತ್ತು ಕೌರವರು ಸೋತರು. ಪಾಂಡವರನ್ನು ಕುರು ರಾಜ ಪಾಂಡು ಮತ್ತು ಕುಂತಿಯವರ ಪುತ್ರರೆಂದು ಪರಿಗಣಿಸಲಾಗುತ್ತಿತ್ತು, ಆದರೆ ಪಾಂಡುವಿನಿಂದ ಸ್ವಾಭಾವಿಕವಾಗಿ ಮಕ್ಕಳನ್ನು ಗರ್ಭಧರಿಸಲು ಅಸಮರ್ಥತೆಯಿಂದಾಗಿ ಬೇರೆ ಬೇರೆ ದೇವತೆಗಳಿಂದ ಜನಿಸಿದರು. ಪಾಂಡುವಿಗೆ ಋಷಿಯು ನೀಡಿದ ಶಾಪದಿಂದಾಗಿ ಮಕ್ಕಳನ್ನು ಪಡೆಯಲು ಸಾಧ್ಯವಾಗಲಿಲ್ಲ, ಆದ್ದರಿಂದ ಪಾಂಡವರು ಕುಂತಿಗೆ ನೀಡಿದ ಮಂತ್ರವನ್ನು ವರದಾನವಾಗಿ ಬಳಸಿ ಜನಿಸಿದರು. ಯುಧಿಷ್ಠಿರನು ಧರ್ಮ ಮತ್ತು ಸಾವಿನ ದೇವರು ಯಮ, ಗಾಳಿ ಮತ್ತು ಶಕ್ತಿಯ ದೇವರು ವಾಯುವಿನಿಂದ ಭೀಮ, ಬೆಳಕಿನ ದೇವರು ಮತ್ತು ದೇವತೆಗಳ ರಾಜನಾದ ಇಂದ್ರನಿಂದ ಅರ್ಜುನ, ಮತ್ತು ನಕುಲ ಮತ್ತು ಸಹದೇವರು ಅಶ್ವಿನೀ ದೇವತೆಗಳಿಂದ ಜನಿಸಿದರು. ಹೆಚ್ಚುವರಿಯಾಗಿ, ಕುಂತಿ ಕರ್ಣನನ್ನು ತನ್ನ ಮೊದಲ ಮಗುವಾಗಿ ಜನ್ಮ ನೀಡಿದಳು, ಅವನಿಗೆ ಸೂರ್ಯದೇವನು ತಂದೆಯಾದನು. ಕುಂತಿಯು ವರನ ಸಿಂಧುತ್ವವನ್ನು ಪರೀಕ್ಷಿಸುವಾಗ ಮದುವೆಗೆ ಮುಂಚೆ ಕರ್ಣನನ್ನು ಗರ್ಭಧರಿಸಿದಳು ಮತ್ತು ವಿವಾಹದ ಮೊದಲೇ ಹುಟ್ಟಿದ ಕಾರಣ ಕರ್ಣನನ್ನು ಕೈಬಿಟ್ಟಳು. ಇದು ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಮತ್ತಷ್ಟು ಸಂಘರ್ಷವನ್ನು ಸೃಷ್ಟಿಸಿತು, ಏಕೆಂದರೆ ಕರ್ಣನು ನಂತರ ಪಾಂಡವರ ವಿರುದ್ಧ ಕೌರವರ ಸೈನ್ಯವನ್ನು ಮುನ್ನಡೆಸಿದನು. ಧೃತರಾಷ್ಟ್ರನ ಆಜ್ಞೆಯಿಂದಾಗಿ, ಪಾಂಡವರನ್ನು ಗಡಿಪಾರು ಮಾಡಲಾಯಿತು. ಅವರನ್ನು ಬರಡು ಭೂಮಿಗೆ ಓಡಿಸಲಾಯಿತು, ಆದರೆ ಅವರು ಅದನ್ನು ಭವ್ಯವಾದ ಇಂದ್ರಪ್ರಸ್ಥ ನಗರವಾಗಿ ಪರಿವರ್ತಿಸಿದರು. ಹಗೆತನದ ದುರ್ಯೋಧನನು ಯುಧಿಷ್ಠಿರನನ್ನು ದಾಳ ಆಟದಲ್ಲಿ ಜೂಜು ಆಡಲು ಆಹ್ವಾನಿಸಿದನು. ಇದು ಮಹಾಕಾವ್ಯದ ಮಹತ್ವದ ತಿರುವುಗಳಲ್ಲಿ ಒಂದಾಗಿದೆ. ಯುಧಿಷ್ಠಿರನು ತನ್ನ ಜೂಜಿನ ಚಟದಿಂದಾಗಿ ತನ್ನ ಸಂಪತ್ತು, ಸಾಮ್ರಾಜ್ಯ ಮತ್ತು ಆಸ್ತಿಗಳನ್ನು ಕಳೆದುಕೊಂಡನು, ಇದು ಶಕುನಿಯು ದಾಳದ ಆಟದಲ್ಲಿ ಮೋಸ ಮಾಡಿದ್ದು ಕಾರಣವಾಯಿತು. ಆದ್ದರಿಂದ, ಪಾಂಡವರನ್ನು ಹದಿಮೂರು ವರ್ಷಗಳ ಕಾಲ ವನವಾಸಕ್ಕೆ ಕಳುಹಿಸಲಾಯಿತು. ಹನ್ನೆರಡು ವರ್ಷಗಳ ವನವಾಸವನ್ನು ಕಳೆದ ನಂತರ, ಅವರು ಮತ್ಸ್ಯ ಸಾಮ್ರಾಜ್ಯದಲ್ಲಿ ಅಜ್ಞಾತ ವಾಸದಲ್ಲಿ ವಾಸಿಸುತ್ತಿದ್ದರು. ಅನಂತರ ಪಾಂಡವರು ಸೈನ್ಯವನ್ನು ಸಂಗ್ರಹಿಸಿ ಮತ್ತು ಕೌರವರನ್ನು ಎದುರಿಸಲು ಮತ್ತು ಅಂತಿಮವಾಗಿ ಸೋಲಿಸಲು ಕೃಷ್ಣನ ಮಾರ್ಗದರ್ಶನವನ್ನು ಪಡೆದರು. ಪಾಂಡವರು ಹಸ್ತಿನಾಪುರ ಮತ್ತು ಕುರು ಸಾಮ್ರಾಜ್ಯದ ರಾಜನ ಸ್ಥಾನಮಾನವನ್ನು ಮರಳಿ ಪಡೆದರು. ಆದಾಗ್ಯೂ, ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಅವರು ಮಾಡಿದ ತ್ಯಾಗದಿಂದಾಗಿ, ಮತ್ತು ತಮ್ಮ ಅಂತಿಮ ತಪಸ್ಸನ್ನು ಬಳಿಸಿಕೊಳ್ಳುವ ಮೂಲಕ ಮತ್ತು ಅಂತಿಮವಾಗಿ ಹಿಮಾಲಯಕ್ಕೆ ನಡೆದರು. ಪಾಂಡವರು ಮಹಾಭಾರತದಲ್ಲಿ ಕಂಡುಬರುವ ಪಾತ್ರಗಳು - ಪಾಂಡು ಹಾಗೂ ಕುಂತಿ-ಮಾದ್ರಿಯರ ಮಕ್ಕಳು.ಪಾಂಡುವಿನ ಮಕ್ಕಳಾದ್ದರಿಂದ ಪಾಂಡವರೆಂದು ಕರೆಯಲ್ಪಟ್ಟರು.ಪಾಂಡವರು ಐದು ಜನ.ಐದು ಜನಕ್ಕೂ ಒಬ್ಬಳೇ ಪತ್ನಿ ದ್ರೌಪದಿ. ಕುಂತಿಯ ಮಕ್ಕಳು:- ಯುಧಿಷ್ಠಿರ (ಯಮನಿಂದ) ಭೀಮ (ವಾಯುವಿನಿಂದ) ಅರ್ಜುನ (ಇಂದ್ರನಿಂದ) ಮಾದ್ರಿಯ ಮಕ್ಕಳು:- (ಅವಳಿಗಳು) ನಕುಲ (ಅಶ್ವಿನಿ ದೇವತೆಗಳಿಂದ) ಸಹದೇವ (ಅಶ್ವಿನಿ ದೇವತೆಗಳಿಂದ) ಪಾಂಡವರ ಪತ್ನಿ ದ್ರೌಪದಿ. ಮಹಾಭಾರತದ ಕಥೆಯಂತೆ, ಪಾಂಡವರು ಮತ್ತು ಅವರ ದಾಯಾದಿಗಳಾದ ಕೌರವರ ನಡುವೆ ಹಸ್ತಿನಾಪುರದ ಸಿಂಹಾಸನದ ಬಗೆಗಿನ ವಿವಾದ ಏಳುತ್ತದೆ. ಪಗಡೆಯಾಟವೊಂದರಲ್ಲಿ ಸೋತ ನಂತರ ಪಾಂಡವರು ಹನ್ನೆರಡು ವರ್ಷ ವನವಾಸ ಮತ್ತು ಒಂದು ವರ್ಷ ಅಜ್ಞಾತವಾಸ ಅನುಭವಿಸುತ್ತಾರೆ. ಇದರ ನಂತರ ರಾಜ್ಯದ ತಮ್ಮ ಹಕ್ಕನ್ನು ಪಡೆಯಲು ಕುರುಕ್ಷೇತ್ರ ಯುದ್ಧ ಆರಂಭವಾಗಿ ಕೊನೆಗೆ ಕೃಷ್ಣನ ಸಹಾಯದಿಂದ ಪಾಂಡವರು ಗೆಲ್ಲುತ್ತಾರೆ. ಬಾಲ್ಯ ಪಾಂಡವರು ಚಂದ್ರವಂಶದ ರಾಜ ಪಾಂಡುವಿನ ಪುತ್ರರೇ ಪಾಂಡವರೆಂದು ಪ್ರಖ್ಯಾತರು. ಇವರು ಐವರು. ಅಜಾತಶತ್ರುವೆಂದು ಹೆಸರುಗಳಿಸಿದ ಧರ್ಮರಾಜ (ಯುಧಿಷ್ಠಿರ) ಮಹಾಸಾಹಸಿಯಾದ ಭೀಮ, ಅಪ್ರತಿಮ ಬಿಲ್ಗಾರನಾದ ಅರ್ಜುನ ಈ ಮೂವರು ಅನುಕ್ರಮವಾಗಿ ಯಮಧರ್ಮ, ವಾಯುದೇವ, ದೇವೇಂದ್ರ ಈ ದೇವತೆಗಳ ವರದಿಂದ ಹಿರಿಯರಾಣಿ ಕುಂತಿಗೆ ಕುಮಾರರಾಗಿ ಜನಿಸಿದರೆ, ನಕುಲ ಮತ್ತು ದಿವ್ಯಜ್ಞಾನಿ ಸಹದೇವರು ಅಶ್ವಿನಿದೇವತೆಗಳ ಕೃಪೆಯಿಂದ ಕಿರಿಯರಾಣಿ ಮಾದ್ರಿಯ ಪುತ್ರರಾಗಿ ಹುಟ್ಟಿದರು. ತಂದೆ ಪಾಂಡುರಾಜ, ಶತಶೃಂಗ ಪರ್ವತದಲ್ಲಿ ವಿರಕ್ತ ಜೀವನ ಸಾಗಿಸುತ್ತಿದ್ದಾಗಲೇ ಇವರು ಶುಕ್ರಮುನಿಯ ಶಿಷ್ಯರಾಗಿ ಧನುರ್ವಿದ್ಯೆಯ ಅಧ್ಯಯನ ನಡೆಸಿದರು. ತಂದೆ ಮರಣ ಹೊಂದಿದ ಮೇಲೆ ಹಸ್ತಿನಾಪುರಕ್ಕೆ ಬಂದು ಭೀಷ್ಮಾಚಾರ್ಯರ ಆಳ್ವಿಕೆಗೆ ಒಳಗಾಗಿ, ದ್ರೋಣಾಚಾರ್ಯರಲ್ಲಿ ಅಸ್ತ್ರವಿದ್ಯೆಯ ವ್ಯಾಸಂಗ ನಡೆಸಿ ಪಾರಂಗತರಾದರು. ಯೌವನ ಪಾಂಡವರ ತಂದೆ ಪಾಂಡು ವಿಚಿತ್ರವೀರ್ಯನ ಹಿರಿಯ ಮಗನಲ್ಲ. ಆತನಿಗೂ ಹಿರಿಯನಾಗಿದ್ದ ಧೃತರಾಷ್ಟ್ರ ಹುಟ್ಟು ಕುರುಡನಾಗಿದ್ದರಿಂದ, ಆತನಿಗೆ ಸಿಕ್ಕಬೇಕಿದ್ದ ರಾಜ್ಯಾಧಿಕಾರ ಪಾಂಡುವಿಗೆ ದಕ್ಕಿತು. ಆದರೆ ಕುರುವಿನ ಹಿರಿಯ ವಂಶ ಶಾಖೆಯಲ್ಲಿ ಕೌರವನೆನಿಸಿದ ಧೃತರಾಷ್ಟ್ರನ ದುರ್ಯೋಧನಾದಿ ನೂರುಜನ ಮಕ್ಕಳಲ್ಲಿ ದಾಯಾದಿತನದ ದ್ವೇಷ-ಮಾತ್ಸರ್ಯಗಳು ಕಿಡಿಗೊಂಡವು. ಪಾಂಡವರ ಅಸೀಮ ಶಕ್ತಿ-ಸಾಹಸಗಳನ್ನು ಕಂಡು ಧೃತರಾಷ್ಟ್ರನಿಗೂ ಹೆದರಿಕೆ ಉಂಟಾಯಿತು. ಪರಿಣಾಮವಾಗಿ ಧೃತರಾಷ್ಟ್ರ ರಾಜ್ಯವನ್ನು ಎರಡಾಗಿ ವಿಭಜಿಸಿ ತನ್ನ ಮಕ್ಕಳನ್ನು ಹಸ್ತಿನಾವತಿಯಲ್ಲಿಯೇ ಇರಿಸಿಕೊಂಡು ಪಾಂಡವರನ್ನು ವಾರಾಣಾವತಕ್ಕೆ ಕಳುಹಿಸಿದ. ಪಾಂಡವರ ಹಿರಿಯಣ್ಣ ಧರ್ಮರಾಜ ಇಂದ್ರಪ್ರಸ್ಥವನ್ನು ತನ್ನ ರಾಜಧಾನಿಯನ್ನಾಗಿಸಿಕೊಂಡು, ತನ್ನ ಶಾಸನವನ್ನು ಮುಂದುವರಿಸಿ, ಸಂಪದಭಿವೃದ್ಧಿಯನ್ನು ಸಾದಿಸಿದ. ಇದನ್ನು ಕಂಡು ಕರುಬಿದ ದುರ್ಯೋಧನ ಇವರನ್ನು ನಾಶಪಡಿಸಲು ಅನೇಕ ಹೊಂಚು-ಸಂಚುಗಳನ್ನು ಮಾಡಿದನಾದರೂ ಪಾಂಡವರೂ ತಮ್ಮ ಶಕ್ತಿ ಸಾಹಸಗಳಿಂದಲೂ ದೈವೀಕೃಪೆಯಿಂದಲೂ ಅವುಗಳಿಂದ ಪಾರಾಗುತ್ತಲೇ ಹೋದರು. ವನವಾಸ ಈ ಮಧ್ಯೆ ಧರ್ಮರಾಜ ರಾಜಸೂಯ ಯಜ್ಞ ಮಾಡಲನುವಾದ. ಆ ಸಂದರ್ಭದಲ್ಲಿ ಕೃಷ್ಣನಿಗೆ ಸಂದ ಪ್ರಮುಖರೂಪದ ಮಹಾಮನ್ನಣೆಯನ್ನು ನೋಡಿ ದುರ್ಯೋಧನನಿಗೆ ಸಹಿಸಲಾಗಲಿಲ್ಲ. ಪಾಂಡವರ ಸಭೆಯನ್ನು ಕಂಡ ಮೇಲಂತೂ ಆತನ ದ್ವೇಷಾಸೂಯೆ ಇನ್ನೂ ಹೆಚ್ಚು ಉಲ್ಬಣಿಸಿತು. ಕೇಡಾಳಿತನ ಮಸೆದಿತು. ಹೇಗಾದರೂ ಸರಿಯೇ ಪಾಂಡವರನ್ನು ಮುಗಿಸಿಯೇ ಬಿಡಬೇಕೆಂದು ಆತ ಮನಸ್ಸುಮಾಡಿದ. ತನ್ನ ಮಾವ ಶಕುನಿಯ ಸಲಹೆಯಂತೆ ದ್ಯೂತದಲ್ಲಿ ಧರ್ಮರಾಜನನ್ನು ಎರಡು ಬಾರಿ ಸೋಲಿಸಿದ. ಮೊದಲ ಸೋಲಿನ ಪರಿಣಾಮವಾಗಿ ಪಾಂಡವರ ಪತ್ನಿ ದ್ರೌಪದಿ ದುರ್ಯೋಧನನ ರಾಜಸಭೆಯಲ್ಲಿ ಅನ್ಯಾಯದ ಅಪಮಾನಕ್ಕೀಡಾದಳು. ಅದನ್ನು ಕಂಡು ಕ್ರುದ್ಧನಾದ ಭೀಮ ದುರ್ಯೋಧನನ ತೊಡೆಮುರಿವ, ದುಶ್ಯಾಸನನ ನೆತ್ತರು ಕುಡಿಯುವ ಭೀಕರ ಪ್ರತಿಜ್ಞೆ ಮಾಡಿ ಮುಂಬರುವ ಮಹಾಭಾರತದ ಮಾರಣಹೋಮಕ್ಕೆ ನಾಂದಿ ಹಾಡಿದ. ಜೂಜಾಟದಲ್ಲಿಯ ಎರಡನೆಯ ಸೋಲಿನ ಫಲಸ್ವರೂಪವಾಗಿ ಪಾಂಡವರು ಪತ್ನಿ ದ್ರೌಪದಿಯೊಂದಿಗೆ ಹನ್ನೆರಡು ವರ್ಷ ವನವಾಸ ಅನುಭವಿಸಿದ ಮೇಲೆ, ಒಂದು ವರ್ಷ ಅಜ್ಞಾತವಾಸವನ್ನೂ ವಿರಾಟನ ರಾಜಧಾನಿಯಲ್ಲಿ ಕಳೆದರು. ಆಗ ಧರ್ಮರಾಜ ಕಂಕಭಟ್ಟನಾದರೆ, ಭೀಮ ಬಾಣಸಿಗ, ವಲಲನಾದ ಅರ್ಜುನ ಬೃಹನ್ನಳೆಯಾ ಗಿ ನೃತ್ಯ ಶಿಕ್ಷಕನಾದರೆ ನಕುಲ ಸಹದೇವರು ಅನುಕ್ರಮವಾಗಿ ಅಶ್ವಪಾಲಕ-ಗೋಪಾಲಕರಾದರು. ದ್ರೌಪದಿ ಸೈರಂಧ್ರಿಯಾಗಿ ವಿರಾಟಪತ್ನಿಯ ಸೇವೆಯಲ್ಲಿ ನಿಂತಳು. ಮಹಾ ಭಾರತ ಕದನ ಹೀಗೆ ವಚನ ಪರಿಪಾಲನೆಗಾಗಿ ಪಾಂಡವರು ಅಜ್ಞಾತವಾಸದ ಅಗ್ನಿಪರೀಕ್ಷೆಯಲ್ಲಿ ತೇರ್ಗಡೆಯಾಗಿ, ತಮ್ಮ ರಾಜ್ಯವನ್ನು ತಮಗೆ ಹಿಂದಿರುಗಿಸಬೇಕೆಂದು ದುರ್ಯೋಧನನಿಗೆ ಹೇಳಿಕಳಿಸಿದರು. ಆದರೆ ದುರ್ಯೋಧನ ಯುದ್ಧವಿಲ್ಲದೆಯೆ ಒಂದು ಸೂಜಿಯ ಮೊನೆಯಷ್ಟು ಭೂಮಿಯನ್ನು ಕೊಡೆನೆಂದು ಉತ್ತರಿಸಿದ. ಇದರ ಫಲವಾಗಿ ಭೀಕರವಾದ ಮಹಾಭಾರತಸಮರ ಹದಿನೆಂಟು ದಿನಗಳ ಕಾಲ ಕುರುಕ್ಷೇತ್ರದಲ್ಲಿ ನಡೆಯಿತು. ಸಮಕಾಲೀನ ಭರತವರ್ಷದ ಅರಸರೆಲ್ಲರೂ ಬಹುಶಃ ಆ ಯುದ್ಧದಲ್ಲಿ ಒಂದಿಲ್ಲೊಂದು ಪಕ್ಷದ ಪರವಾಗಿ ಪಾಲ್ಗೊಂಡಿದ್ದರು. ಅದರಲ್ಲಿ ಕೌರವರೆಲ್ಲ ಸತ್ತು, ಪಾಂಡವರು ಗೆದ್ದರು. ಆಮೇಲೆ ಪಾಂಡವರ ಹಿರಿಯಣ್ಣ ಧರ್ಮರಾಜ ಹಸ್ತಿನಾವತಿಯ ಗದ್ದುಗೆ ಏರಿ ಅಶ್ವಮೇಧ ಯಾಗಮಾಡಿ ಮೂವತ್ತಾರು ವರ್ಷ ರಾಜ್ಯಭಾರ ನಡೆಸಿದ. ಕೊನೆಗೆ ರಾಜ್ಯಾಧಿಕಾರವನ್ನು ಮೊಮ್ಮಗನಾದ ಪರೀಕ್ಷಿತನಿಗೆ ಒಪ್ಪಿಸಿ, ತಮ್ಮಂದಿರೊಡನೆ ಮಹಾಪ್ರಸ್ಥಾನ ಕೈಗೊಂಡು, ಸ್ವರ್ಗಕ್ಕೆ ಹೋದ. ಉಲ್ಲೇಖ ಪುರಾಣ ಹಿಂದೂ ಧರ್ಮ ಮಹಾಭಾರತ