id
stringlengths
3
6
url
stringlengths
33
779
title
stringlengths
1
95
text
stringlengths
3
190k
1722
https://kn.wikipedia.org/wiki/%E0%B2%95%E0%B3%81%E0%B2%B0%E0%B3%81%E0%B2%95%E0%B3%8D%E0%B2%B7%E0%B3%87%E0%B2%A4%E0%B3%8D%E0%B2%B0
ಕುರುಕ್ಷೇತ್ರ
ಕುರುಕ್ಷೇತ್ರ ಹರಿಯಾಣ ರಾಜ್ಯದಲ್ಲಿರುವ ಒಂದು ನಗರ ಮತ್ತು ಜಿಲ್ಲೆ. ಪಾಂಡವ-ಕೌರವರ ಪೂರ್ವಜ 'ಕುರು' ಎಂಬ 'ಕುರುವಂಶದ ಮೂಲ ಪುರುಷ'ನಿಂದ 'ಕುರುವಂಶ' ಹಾಗೂ 'ಕುರುಕ್ಷೇತ್ರ'ವೆಂಬ ಹೆಸರು ಬರಲು ಕಾರಣ. ಇತಿವೃತ್ತ ನವದೆಹಲಿಯಿಂದ ಉತ್ತರದ ಕಡೆಗೆ ಸಾಗುವಾಗ ೧೬೦ ಕಿಮೀ ದೂರದಲ್ಲಿ ಸೋನಿಪತ್ ಪಾನಿಪತ್ ಅನಂತರ ಪುರಾಣಪ್ರಸಿದ್ಧ ಕುರುಕ್ಷೇತ್ರ ರೈಲುನಿಲ್ದಾಣ ಸಿಗುತ್ತದೆ. ಅದೊಂದು ಪುಟ್ಟ ರೈಲುನಿಲ್ದಾಣ. ಕುರುಕ್ಷೇತ್ರವೆಂದರೆ ಮಹಾಭಾರತಯುದ್ಧ ನಡೆದ ಸ್ಥಳ. ಪುರಾತನ ಧಾರ್ಮಿಕ ಕ್ಷೇತ್ರ. ಇದಕ್ಕೆ 'ಧರ್ಮ ಕ್ಷೇತ್ರ'ವೆಂದು ಹೆಸರು. ಇದು ಪೌರಾಣಿಕ ಸ್ಥಳವೆಂದು ಬೆರಳೆಣಿಕೆಯಷ್ಟು ಯಾತ್ರಾರ್ಥಿಗಳು ಬರುತ್ತಾರೆ ಹೊರತು ಹೇಳಿಕೊಳ್ಳುವಂಥ ದೊಡ್ಡ ಪಟ್ಟಣವೇನಲ್ಲ. ಕುರುಕ್ಷೇತ್ರ ಜಿಲ್ಲೆಯ ಒಟ್ಟು ವಿಸ್ತೀರ್ಣ ೧,೬೮೨ ಚ. ಕಿಮೀ, ಮತ್ತು ೨೦೦೧ ರ ಜನಗಣತಿಯ ಪ್ರಕಾರ ಜನಸ೦ಖ್ಯೆ ೬, ೪೧, ೦೦೦. ಕುರುಕ್ಷೇತ್ರದ ಸುತ್ತ ಮುತ್ತ ಪುಟ್ಟ ರೈಲು ನಿಲ್ದಾಣ, ಕೆಲವು ಬ್ಯಾಂಕುಗಳು, ಅಂಗಡಿಸಾಲು ಹಾಗೂ ಜನಜೀವನ ಇವೆಲ್ಲ ಉತ್ತರ ಇಂಡಿಯಾದ ಬೇರೆಲ್ಲ ಊರುಗಳಂತೆಯೇ ತೋರಿದರೂ ಹಲವಾರು ಧರ್ಮಶಾಲೆಗಳು ಹಾಗೂ ಗುಡಿಗಳು ನಮ್ಮ ಮನಸ್ಸನ್ನು ನಿಧಾನವಾಗಿ ಪುರಾಣಪ್ರಸಿದ್ಧ ಕಾಲವೊಂದಕ್ಕೆ ಕರೆದೊಯ್ಯು ತ್ತವೆ. ಸಿಖ್ ಧರ್ಮದಲ್ಲಿಯೂ ಇದು ಪವಿತ್ರ ಸ್ಥಳ-ಎಲ್ಲ ಹತ್ತು ಸಿಖ್ ಗುರುಗಳೂ ಇಲ್ಲಿಗೆ ಭೇಟಿ ನೀಡಿದ್ದರಿ೦ದ ಈ ಸ್ಥಳಕ್ಕೆ ಸಿಕ್ಖರಲ್ಲಿ ಪವಿತ್ರ ಸ್ಥಾನ ಉ೦ಟು. ಕುರುಕ್ಷೇತ್ರ ಜಿಲ್ಲೆಯಲ್ಲಿ ಥಾನೇಶ್ವರ ಮತ್ತು ಪೆಹೋವ ತಾಲ್ಲೂಕುಗಳಿವೆ. ಥಾನೇಶ್ವರ, ಪೆಹೋವ ಮತ್ತು ಕುರುಕ್ಶೇತ್ರ ಇಲ್ಲಿಯ ಮುಖ್ಯಪಟ್ಟಣಗಳು. ಚಂಧೀಘಡ ಇಲ್ಲಿಂದ ೭೫ ಕಿ.ಮೀ.ದೂರದಲ್ಲಿದೆ. ರಾಷ್ಟ್ರೀಯ ಹೆದ್ದಾರಿ ೧ ಇಲ್ಲಿಂದ ಸಾಗುತ್ತದೆ. ಸನ್ನಿಹತ್ ಸರೋವರ ಸುಪ್ರಸಿದ್ಧ ತೀರ್ಥ ಸ್ಥಳವಾದ,ಸನ್ನಿಹಿತ್ ಸರೋವರ ಇಲ್ಲಿದೆ. ೧,೫೦೦ ಅಡಿ ಉದ್ದ,೫೦ ಅಡಿ ಅಗಲವಿರುವ ಈ ಸರೋವರದ ಸುತ್ತಲೂ ಸ್ನಾನದ ಕಟ್ಟೆಗಳು ಇದ್ದು ನದಿಗೆ ಹೋಗಲು ಮೆಟ್ಟಿಲುಗಳಿವೆ. ಕೆರೆಯ ಹತ್ತಿರ, ಧ್ರುವನಾರಾಯಣ, ಮಾತಾ ದುರ್ಗೆ, ಮತ್ತು ಹನುಮಾನ್ ಮಂದಿರಗಳಿವೆ. 'ಏಳು ಪವಿತ್ರ ಸರಸ್ವತಿಯರ ಸಂಗಮ ಸ್ಥಾನ'ವೆಂಬ ನಂಬಿಕೆ ಜನರಲ್ಲಿದೆ. ಅಮಾವಾಸ್ಯೆ, ಮತ್ತು ಗ್ರಹಣದ ದಿನಗಳಲ್ಲಿ ಇಲ್ಲಿ ಸ್ನಾನಮಾಡುವುದರಿಂದ ಸಕಲ ಪಾಪಗಳೂ ಪರಿಹಾರವಾಗುವುದೆಂಬ ನಂಬಿಕೆ ಇದೆ. ಬ್ರಹ್ಮ ಸರೋವರ ಬೃಹದಾಕಾರದ ಬ್ರಹ್ಮಸರೋವರವು ಯಾತ್ರಾರ್ಥಿಗಳಿಗೆ ತಂಗುದಾಣ, 'ಸ್ನಾನಘಟ್ಟ', 'ದೋಣಿವಿಹಾರ', 'ನಡುಗಡ್ಡೆ' ಮುಂತಾದವುಗಳಿಂದ ಸುಸಜ್ಜಿತವಾಗಿದೆ. ಸರೋವರದ ಎದುರಿಗಿನ ವಿದ್ಯಾಪೀಠದಲ್ಲಿ ಕುರುಕ್ಷೇತ್ರ ಯುದ್ಧವನ್ನು ಜೀವಂತಿಕೆಯಿಂದ ತೋರಿಸುವ 'ಗೊಂಬೆ ಗ್ಯಾಲರಿ' ಇದೆ. ಅಲ್ಲಿಂದ ಪಂಚಪಾಂಡವರ ಮಂದಿರ ದಾಟಿಕೊಂಡು ಮುಂದೆ ಹೋದರೆ ಬಿರ್ಲಾ ಮಂದಿರವಿದ್ದು ಅದರ ಆವರಣದಲ್ಲಿರುವ ಅಮೃತಶಿಲೆಯ ಶ್ರೀಕೃಷ್ಣರಥವು ಕಣ್ಮನ ಸೆಳೆಯುತ್ತದೆ. ಮಹಾಭಾರತ ಯುದ್ಧದಲ್ಲಿ ಪ್ರಾಣತೆತ್ತ ಹದಿನೆಂಟು ಅಕ್ಷೋಹಿಣಿ ಸೈನಿಕರಿಗೆ ಒಮ್ಮೆಗೇ ತರ್ಪಣ ಬಿಟ್ಟ ಸ್ಥಳವೆಂದು 'ಸೂರಜ್‌ಕುಂಡ್' ಪ್ರಸಿದ್ಧವಾಗಿದೆ. ಗೀತೋಪದೇಶದ ಸ್ಥಾನ ಮಹಾಭಾರತದ ಯುದ್ಧದಲ್ಲಿ ನಡೆದ ಅತಿ ಮುಖ್ಯವಾದ ಘಟನೆ ಗೀತೋಪದೇಶ. ಕುರುಕ್ಷೇತ್ರದ ಊರ ಹೊರಗೆ ಹೊರಟರೆ ನಾಲ್ಕು ಕಿಲೋಮೀಟರು ದೂರದಲ್ಲಿ ಜೋತಿಸರ ಎಂಬಲ್ಲಿ ಒಂದು ಪ್ರದೇಶವನ್ನು ಈ ಗೀತೋಪದೇಶದ ತಾಣವೆಂದು ಗುರುತಿಸಲಾಗಿದೆ. ಆ ಜಾಗದಲ್ಲಿ ಒಂದು ರಥವನ್ನೂ ಅದರ ಚಾಲಕಸ್ಥಾನದಲ್ಲಿ ಕೃಷ್ಣನ ಮೂರ್ತಿಯನ್ನೂ, ಅರ್ಜುನನ ಮೂರ್ತಿಯನ್ನೂ ನಿಲ್ಲಿಸಲಾಗಿದೆ. ಸನಿಹದಲ್ಲೇ ಒಂದು ಪುರಾತನ ಆಲದ ಮರವಿದ್ದು ಗೀತೋಪದೇಶಕ್ಕೆ ಸಾಕ್ಷಿಯಾದ ಮರವೆಂದು ಅದನ್ನು ಪೂಜಿಸಲಾಗುತ್ತಿದೆ. ಈ ಜಾಗವನ್ನೂ ಹತ್ತಿರದ ಗುಡಿಗಳು ಹಾಗೂ ಸನಿಹದ ಸರೋವರವನ್ನೂ ಸಂಯೋಜಿಸಿ ರಾತ್ರಿ ಹೊತ್ತಿನಲ್ಲಿ ಪ್ರದರ್ಶಿಸುವ ಧ್ವನಿಬೆಳಕಿನ ಕಾರ್ಯಕ್ರಮವು ನೋಡಲು ಚೆನ್ನಾಗಿರುತ್ತದೆ. ಬಾಣ ಗಂಗ ಕುರುಕ್ಷೇತ್ರದ ಇನ್ನೊಂದು ಮುಖ್ಯವಾದ ಸ್ಥಳ ಬಾಣಗಂಗಾ. ಕುರುಕ್ಷೇತ್ರ ಯುದ್ಧದಲ್ಲಿ ಧರೆಗುರುಳಿದ ಇಚ್ಛಾಮರಣಿ ಭೀಷ್ಮನಿಗೆ ನೀರಡಿಕೆಯಾದಾಗ ಬಿಲ್ಗಾರ ಅರ್ಜುನನು ಭೂಮಿಗೆ ಬಾಣ ಹೂಡಿ ನೀರು ಚಿಮ್ಮಿಸಿದನೆನ್ನಲಾದ ತಾಣವಿದು. ಈ ಸ್ಥಳದಲ್ಲಿ ಒಂದು ಬಾವಿಯಿದ್ದು ಇದರ ಜಲವನ್ನು ಜನರು ಶ್ರದ್ಧಾಭಕ್ತಿಗಳಿಂದ ತಲೆಯ ಮೇಲೆ ಪ್ರೋಕ್ಷಿಸಿಕೊಳ್ಳುತ್ತಾರೆ. ಕುರುಕ್ಷೇತ್ರ ವಿಶ್ವವಿದ್ಯಾಲಯ ಇವೇ ಪುರಾಣ ದೃಶ್ಯಗಳನ್ನು ಮತ್ತೆ ನೋಡಲೆಂದೇ ಇರುವ ಪ್ಯಾನೋರಮಾ ಮತ್ತು ವಿಜ್ಞಾನಕೇಂದ್ರವು ಕುರುಕ್ಷೇತ್ರ ಯುದ್ಧವರ್ಣನೆಯನ್ನು ವಿವರಿಸುವ ವಿನೂತನ ತಂತ್ರಜ್ಞಾನದ ಸ್ಥಿರಚಿತ್ರಶಾಲೆ. ಕುರುಕ್ಷೇತ್ರದ ನೆಲದಲ್ಲಿ ಕಾಲೂರಿ ಕುರುಕ್ಷೇತ್ರದ ಕಾಲಕ್ಕೆ ಜಾರುತ್ತಾ ಅಂದಿನ ಮಹಾಭಾರತ ಯುದ್ಧವನ್ನು ಕಣ್ಣಾರೆ ಕಾಣುವ ಅವಕಾಶ ಒದಗಿಸುತ್ತದೆ ಈ ಕಲಾಕೇಂದ್ರ. 'ಕೃಷ್ಣ ವಸ್ತುಸಂಗ್ರಹಾಲಯ'ವೂ ಪಕ್ಕದಲ್ಲಿಯೇ ಇದ್ದು ಮಹಾಭಾರತವನ್ನು ಕಣ್ಣಿಗೆ ಕಟ್ಟುವಂತೆ ಮಾಡುತ್ತದೆ. ಇಷ್ಟಲ್ಲದೆ ಕುರುಕ್ಷೇತ್ರದಲ್ಲಿ ವಿಶ್ವವಿದ್ಯಾಲಯವಿದೆ, ಕಲ್ಪನಾ ಚಾವ್ಲಾ ತಾರಾಲಯವಿದೆ. ಇವೆಲ್ಲ ಆಧುನಿಕತೆಯ ನಡುವೆ ಎತ್ತ ನೋಡಿದರತ್ತ ಗಲೀಜು, ಕಾವಿಧಾರಿ ಭಿಕ್ಷುಕರ ಸಾಲು, ಬೀಡಾಡಿ ವೃದ್ಧರ ದಯನೀಯ ಚಿತ್ರಗಳು ನಮ್ಮ ಇಂಡಿಯಾದ ಪುರಾಣ ಮತ್ತು ನವ್ಯತೆಯ ನಡುವಿನ ಕೊಂಡಿಗಳಾಗಿ ಉಳಿಯುತ್ತವೆ. ಉಲ್ಲೇಖಗಳು ಹಿಂದೂ ಧರ್ಮದ ಪುಣ್ಯ ಕ್ಷೇತ್ರಗಳು ಮಹಾಭಾರತ ಹರಿಯಾಣ
1729
https://kn.wikipedia.org/wiki/%E0%B2%B8%E0%B2%B0%E0%B3%8B%E0%B2%9C%E0%B2%BF%E0%B2%A8%E0%B2%BF%20%E0%B2%A8%E0%B2%BE%E0%B2%AF%E0%B3%8D%E0%B2%A1%E0%B3%81
ಸರೋಜಿನಿ ನಾಯ್ಡು
ಸರೋಜಿನಿ ನಾಯ್ಡು “ಭಾರತದ ಕೋಗಿಲೆ” ಎನ್ನುವ ಹೆಸರಿನಿಂದಲೇ ಪ್ರಸಿದ್ಧಿಯಾಗಿದ್ದಾರೆ. ಚಿಕ್ಕಂದಿನಲೇ ಪ್ರಸಿದ್ಧಿ ಹೊಂದಿದ್ದ ಇವರು ಭಾರತದ ಸ್ವಾತಂತ್ರ್ಯ ಹೋರಾಟಗಾರರು, ಕವಯತ್ರಿ. ಇವರು ರಾಷ್ಟ್ರೀಯ ಭಾರತದ ಕಾಂಗ್ರೇಸ್‍‍ನ ಮೊದಲನೆಯ ಮಹಿಳಾ ಅಧ್ಯಕ್ಷರಾದವರು ಮತ್ತು ಉತ್ತರ ಪ್ರದೇಶದ ಮೊದಲನೆಯ ಮಹಿಳಾ ರಾಜ್ಯಪಾಲರಾದವರು.. ಜನನ, ಜೀವನ ಸರೋಜಿನಿ ನಾಯ್ಡು (ಜನನ: ೧೩ನೇ ಫೆಬ್ರುವರಿ ೧೮೭೯- ಮರಣ: ೨ನೇ ಮಾರ್ಚ್ ೧೯೪೯.) ಇವರ ತಂದೆ ವಿಜ್ಞಾನಿ ಮತ್ತು ತತ್ವಜ್ಞಾನಿಗಳಾಗಿದ್ದ ಅಗೋರೆನಾಥ್ ಚಟ್ಟೋಪಾಧ್ಯರು ಮತ್ತು ತಾಯಿ ಬಂಗಾಳಿ ಕವಿಯಿತ್ರಿಯಾದ ಬರಾಡ ಸುಂದರಿ ದೇವಿ. ಸರೋಜಿನಿ ನಾಯ್ಡುರವರು ಅವರ ತಂದೆ-ತಾಯಿಯರ ಎಂಟು ಮಕ್ಕಳಲ್ಲಿ ಮೊದಲನೆಯವಾಗಿದ್ದರು. ಇವರ ಒಬ್ಬ ಸಹೋದರನಾದ ಬಿರೇಂದ್ರನಾಥ್ ಚಳುವಳಿಗಾರರಾಗಿದ್ದವರು ಮತ್ತೊಬ್ಬ ಸಹೋದರ ಹರಿನಾಥ್ ಕವಿ, ನಾಟಕಗಾರ ಮತ್ತು ನಟನೆಯನ್ನು ಮಾಡುತ್ತಿದ್ದವರು. ಸರೋಜಿನಿ ನಾಯ್ಡುರವರು ಬುದ್ಧಿವಂತ ವಿದ್ಯಾರ್ಥಿನಿಯಾಗಿದ್ದರು. ಉರ್ದು, ತೆಲುಗು, ಇಂಗ್ಲೀಷ್, ಬೆಂಗಾಳಿ ಮತ್ತು ಪರ್ಷಿಯನ್ ಭಾಷೆಗಳನ್ನು ನಿರರ್ಗಳವಾಗಿ ಮಾತಾನಾಡುತ್ತಿದ್ದರು. ಇವರು ಹನ್ನೆರಡನೇ ವಯಸ್ಸಿನಲ್ಲಿಯೇ ಮದ್ರಾಸ್ ವಿಶ್ವವಿದ್ಯಾನಿಲಯದ ಮೆಟ್ರಿಕ್ಯುಲೇಷನ್ ಪರೀಕ್ಷೆ ಯಲ್ಲಿ ಮೇಲ್ದರ್ಜೆಯಲ್ಲಿ ಪಾಸಾಗಿ ರಾಷ್ಟ್ರಮಟ್ಟದಲ್ಲಿ ಕೀರ್ತಿಯನ್ನು ಪಡೆದರು. ಇವರ ತಂದೆ ಇವರು ಗಣಿತ ತಜ್ಞೆ (ಮ್ಯಾಥಮ್ಯಾಟೀಷಿಯನ್) ಅಥವಾ ವಿಜ್ಞಾನಿಯಾಗಲಿ ಎಂದು ಬಯಸಿದ್ದರು ಆದರೆ ಸರೋಜಿನಿಯವರು ಕವಿಯಿತ್ರಿಯಾಗಲು ಇಷ್ಟಪಟ್ಟಿದ್ದರು. ಇವರು ಆಂಗ್ಲಭಾಷೆಯಲ್ಲಿ ಕವಿತೆಗಳನ್ನು ಬರೆಯಲು ಪ್ರಾರಂಭಿಸಿದರು. ಹೈದರಾಬಾದಿನ ನಿಜಾಮರು ಇವರ ಕವಿತೆಗಳಿಂದ ಸ್ಫೂರ್ತಿಗೊಂಡು ವಿದೇಶದಲ್ಲಿ ಕಲಿಯಲು ವಿದ್ಯಾರ್ಥಿವೇತನವನ್ನು ಕೊಟ್ಟರು. ೧೬ನೇ ವಯಸ್ಸಿನಲ್ಲಿ ಇವರು ಮೊದಲು ಇಂಗ್ಲೇಂಡಿನ ಕಿಂಗ್ಸ್ ಕಾಲೇಜಿನಲ್ಲಿ ಮತ್ತು ಆಮೇಲೆ ಕ್ಯಾಬ್ರಿಂಜ್ಡನ ಗಿರ್ಟನ್ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮಾಡಿದರು. ಅಲ್ಲಿ ಇವರು ಆ ಕಾಲದಲ್ಲಿ ಪ್ರಸಿದ್ಧರಾಗಿದ್ದ ಆರ್ಥರ್ ಸೈಮೊನ್ಸ್ ಮತ್ತು ಎಡ್ಮಂಡ್ ಗೋಸೆಯವರನ್ನು ಭೇಟಿ ಮಾಡಿದರು. ಗೋಸೆಯವರು ಸರೋಜಿನಿಯವರನ್ನು ಭಾರತದಲ್ಲಿರುವ ಬೆಟ್ಟ-ಗುಡ್ಡಗಳು, ನದಿಗಳು, ದೇವಸ್ಥಾನಗಳು, ಜನರ ಜೀವನ ಕ್ರಮ ಮುಂತಾದ ವಿಷಯಗಳ ಮನದಲ್ಲಿಟ್ಟುಕೊಂಡು ತಮ್ಮ ಕವಿತೆಗಳನ್ನು ರಚಿಸಿದರೆ ಚೆನ್ನಾಗಿರುತ್ತದೆ ಎಂದು ಮನದಟ್ಟು ಮಾಡಿಕೊಟ್ಟರು. ಅದರಂತೆ ಸರೋಜಿನಿ ಯವರು ಸಮಕಾಲೀನ ಇಂಡಿಯಾ ದೇಶದ ಜನರ ಜೀವನಕ್ರಮಗಳನ್ನು ತಮ್ಮ ಕವಿತೆಗಳಲ್ಲಿ ವರ್ಣಿಸಿದರು. ದಿ ಗೋಲ್ಡನ್ ತ್ರೆಶೋಲ್ದ್ (೧೯೦೫) The Golden Threshold, ದಿ ಬರ್ಡ್ ಆಫ್ ಟೈಮ್ (೧೯೧೨) The Bird of Time ಮತ್ತು ದಿ ಬ್ರೊಕನ್ ವಿಂಗ್ (೧೯೧೨) The Broken Wing ಎನ್ನುವ ಸಂಗ್ರಹಗಳು ಭಾರತದ ಸಾಕಷ್ಟು ಓದುಗಾರರನ್ನು ಮತ್ತು ಆಂಗ್ಲಭಾಷೆಯ ಓದುಗಾರರನ್ನು ಆಕರ್ಷಿಸಿತು. ಇವರು ತಮ್ಮ ಹದಿನೈದನೇ ವಯಸ್ಸಿನಲ್ಲಿ ವೃತ್ತಿಯಲ್ಲಿ ಡಾಕ್ಟರ್ ಆಗಿದ್ದ ಡಾ|| ಗೋವಿಂದರಾಜು ನಾಯ್ಡುರವರನ್ನು ಭೇಟಿಯಾದರು. ನಂತರ ಅವರನ್ನು ಪ್ರೇಮಿಸಿದರು. ಇವರು ತಮ್ಮ ವಿದ್ಯಾಭ್ಯಾಸಗಳನ್ನು ಮುಗಿಸಿ ತಮ್ಮ ೧೯ನೇ ವರ್ಷದಲ್ಲಿ ಗೋವಿಂದರಾಜು ನಾಯ್ಡುರವರನ್ನು ಅಂತರ್ಜಾತಿಯ ಮದುವೆಗಳು ನಡೆಯಲು ಅವಕಾಶವಿಲ್ಲದಿದ್ದ ಕಾಲದಲ್ಲೇ ಮದುವೆಯಾದರು. ಇದು ಇವರು ತೆಗೆದುಕೊಂಡ ಕ್ರಾಂತಿಕಾರಕ ಕ್ರಮವಾಗಿತ್ತು ಆದರೆ ಇವರ ಈ ಪ್ರಯತ್ನಕ್ಕೆ ಇವರ ತಂದೆಯ ಸಂಪೂರ್ಣ ಉತ್ತೇಜನವಿತ್ತು. ಇವರ ಈ ಮದುವೆಯು ಸಂತೋಷಕರದಿಂದ ಕೂಡಿತ್ತು. ಇವರಿಗೆ ಜಯಸೂರ್ಯ, ಪದ್ಮಿನಿ, ರಣಧೀರ್ ಮತ್ತು ಲೈಲಾಮಣಿ ಎನ್ನುವ ನಾಲ್ಕು ಜನ ಮಕ್ಕಳಾದರು. ಭಾರತದ ರಾಷ್ಟ್ರೀಯ ಚಳುವಳಿಯಲ್ಲಿ ಭಾಗವಹಿಸುವಿಕೆ ಬಂಗಾಳದ ವಿಭಾಗವನ್ನು ತಡೆಯಲು ಸರೋಜಿನಿಯವರು ೧೯೦೫ರಲ್ಲಿ ಭಾರತದ ರಾಷ್ಟ್ರೀಯ ಚಳುವಳಿಯಲ್ಲಿ ಭಾಗವಹಿಸಿದರು. ಆ ಸಮಯದಲ್ಲಿ ಇವರು ಗೋಪಾಲ್ ಕೃಷ್ಣ ಗೋಖಲೆ, ರವೀಂದ್ರನಾಥ ಟ್ಯಾಗೂರ್, ಮಹಮದ್ ಆಲಿ ಜಿನ್ನ, ಆನಿಬೆಸೆಂಟ್, ಸಿ.ಪಿ. ರಾಮಸ್ವಾಮಿ ಐಯರ್, ಮಹಾತ್ಮ ಗಾಂಧಿ ಮತ್ತು ಜವಾಹರಲಾಲ್ ನೆಹರೂರವರನ್ನು ಭೇಟಿ ಮಾಡಿದರು. ಮಹಿಳೆಯರು ಅಡಿಗೆಮಾಡಲು ಮಾತ್ರ ಸೀಮಿತವಾಗಿಲ್ಲವೆಂದು ಇವರು ಭಾರತದ ಮಹಿಳೆಯರನ್ನು ಎಚ್ಚರಗೊಳಿಸಿದರು. ಅವರನ್ನು ಅಡಿಗೆ ಮನೆಯ ಆಚೆಗೂ ಇರುವ ಪ್ರಪಂಚವನ್ನು ನೋಡಲು ಹೊರ ಬರುವಂತೆ ಪ್ರೇರೇಪಿಸಿದರು. ರಾಜ್ಯ-ರಾಜ್ಯಗಳಲ್ಲಿರುವ, ಒಂದೊಂದು ಜಿಲ್ಲೆಗಳಲ್ಲೂ ಸಂಚರಿಸಿ ಮಹಿಳಾ ಸ್ವಾತಂತ್ರ್ಯದ ಹಕ್ಕಿನ ಬಗ್ಗೆ ಹೇಳಿದರು. ಭಾರತದಲ್ಲಿ ಮಹಿಳೆಯರು ಸ್ವ-ಗೌರವವನ್ನು ಪಡೆಯುವಂತೆ ಮಾಡಿದರು. ೧೯೨೫ರಲ್ಲಿ ಸರೋಜಿನಿಯವರು ಕಾನ್ಪುರದಲ್ಲಿ ನಡೆದ ಭಾರತದ ರಾಷ್ಟ್ರೀಯ ಕಾಂಗ್ರೇಸ್‍ನ ವಾರ್ಷಿಕ ಅಧಿವೇಶನದ ಅಧ್ಯಕ್ಷರಾಗಿದ್ದರು. ಸಿವಿಲ್ ಅವಿಧೇಯತೆಯ ಮೂಮೆಂಟ್ಸ್‍ನ ಚಳುವಳಿಯಲ್ಲಿ ಭಾಗವಹಿಸಿ ಗಾಂಧೀಜಿ ಮುಂತಾದ ಚಳುವಳಿಗಾರರೊಂದಿಗೆ ಜೈಲಿಗೆ ಹೋದರು. ೧೯೪೨ರಲ್ಲಿ ’ಕ್ವಿಟ್ ಇಂಡಿಯಾ’ ಚಳುವಳಿಯಲ್ಲಿ ಭಾಗವಹಿಸಿ ೨೧ ತಿಂಗಳ ಕಾಲ ಗಾಂಧೀಜಿ ಮುಂತಾದ ನಾಯಕರೊಂದಿಗೆ ಜೈಲಿನಲ್ಲಿ ಕಳೆದರು. ಇವರು ಗಾಂಧೀಜಿಯೊಂದಿಗೆ ನಿಕಟವಾದ ಸಂಬಂಧವನ್ನು ಹೊಂದಿದ್ದರು ಮತ್ತು ಅವರನ್ನು ಮಿಕ್ಕಿ ಮೌಸ್ ಎಂದು ಕರೆಯುತ್ತಿದ್ದರು. ಸ್ವಾತಂತ್ರ್ಯ ಬಂದ ನಂತರ ಸರೋಜಿನಿಯವರು ಉತ್ತರ ಪ್ರದೇಶದ ರಾಜ್ಯಪಾಲರಾದರು. ಇವರು ಮೊದಲನೆಯ ಮಹಿಳಾ ರಾಜ್ಯಪಾಲರು. ಸರೋಜಿನಿಯವರು ತಮ್ಮ ಕಛೇರಿಯಲ್ಲಿ ೨ನೇ ಮಾರ್ಚ್ ೧೯೪೯ರಲ್ಲಿ ನಿಧನರಾದರು. ಇವರ ಕೆಲವು ಕವಿತೆಗಳು ೧೯೦೫- ದಿ ಗೋಲ್ಡನ್ ತ್ರೆಷೋಲ್ಡ್, ಯು.ಕೆ.ಯಲ್ಲಿ ಪಬ್ಲಿಷ್ ಆಯಿತು.(ಅಂತರ್ಜಾಲದಲ್ಲೂ ಇದು ಲಭ್ಯವಿದೆ). ೧೯೧೨- ದಿ ಬರ್ಡ್ ಆಫ್ ಟೈಮ್: ಜೀವನದಲ್ಲುಸಾದ, ಸಾವಿನ ಹಾಡು. ಲಂಡನ್ನಲ್ಲಿ ಪ್ರಕಟಿತವಾಯಿತು. ೧೯೧೭-ದಿ ಬ್ರೋಕನ್ ವಿಂಗ್ - ಜೀವನ ಪ್ರೀತಿಯ, ಸಾವಿನ ಮತ್ತು ಜೀವನದುಲ್ಲಾಸದ ಹಾಡು; ದಿ ಗಿಪ್ಟ್ ಆಫ್ ಇಂಡಿಯಾ (ಮೊದಲ ಬಾರಿಗda ೧೯೧೫ರಲ್ಲಿ ಸಾರ್ವಜನಿಕರಲ್ಲಿ ಓದಲಾಯಿತು). ೧೯೧೬: ಮಹಮದ್ ಜಿನ್ನಃ: ಒಗ್ಗಟ್ಟಿನ ರಾಯಭಾರಿ. ೧೯೪೩- ದಿ ಸೆಪ್ಟ್ರೆಡ್ ಪ್ಲೂಟ್: ಇಂಡಿಯಾದ ಹಾಡುಗಳು, ಇವರ ಮರಣಾನಂತರ ಪ್ರಕಟನೆಗೊಂಡಿತು. ೧೯೬೧- ದಿ ಫೆದರ್ ಆಫ್ ಡಾನ್, ಇವರ ಮರಣಾನಂತರ ಇವರ ಮಗಳಾದ ಪದ್ಮಜ ನಾಯ್ಡುವಿನಿಂದ ಪ್ರಕಟಣೆ ಮತ್ತು ಮುದ್ರಣಗೊಂಡಿತು. ೧೯೬೦ ರಿಂದ ೧೯೭೧- ಇಂಡಿಯನ್ ವೀವರ್. ಬಿರುದು/ ಗೌರವ ಇವರು ಮೊದಲನೆಯ ಮಹಿಳಾ ರಾಜ್ಯಪಾಲರು. ಭಾರತದ ನೈಟಿಂಗೇಲ್ ಎಂಬ ಬಿರುದು ಇವರಿಗಿದೆ. 'ಭಾರತದ ಕೋಗಿಲೆ' ಎಂಬ ಬಿರುದು ಇವರಿಗಿದೆ ಉಲ್ಲೇಖ ಸ್ವಾತಂತ್ರ್ಯ ಹೋರಾಟಗಾರರು ಕವಿಗಳು
1730
https://kn.wikipedia.org/wiki/%E0%B2%86%E0%B2%B0%E0%B3%8D.%E0%B2%95%E0%B3%86.%E0%B2%A8%E0%B2%BE%E0%B2%B0%E0%B2%BE%E0%B2%AF%E0%B2%A3%E0%B3%8D
ಆರ್.ಕೆ.ನಾರಾಯಣ್
ರಾಶಿಪುರಂ ಕೃಷ್ಣಸ್ವಾಮಿ ನಾರಾಯಣ್ (ಅಕ್ಟೋಬರ್ ೧೦, ೧೯೦೬ - ಮೇ ೧೩, ೨೦೦೧) ಭಾರತದ ಪ್ರಸಿದ್ಧ ಕಾದಂಬರಿಕಾರರಲ್ಲಿ ಒಬ್ಬರು. ಆಂಗ್ಲ ಭಾಷೆಯಲ್ಲಿ ಬರೆದ ನಾರಾಯಣ್ ಅವರ ಕಾದಂಬರಿಗಳು ಪಾತ್ರಗಳ ನೈಜತೆ, ಸರಳತೆ ಮತ್ತು ಮೃದು ಹಾಸ್ಯಕ್ಕೆ ಹೆಸರಾಗಿವೆ. ಅವರ ಬಹುಪಾಲು ಕಥೆಗಳು "ಮಾಲ್ಗುಡಿ" ಎಂಬ ಕಾಲ್ಪನಿಕ ದಕ್ಷಿಣ ಭಾರತದ ಸ್ಥಳದಲ್ಲಿ ನಡೆಯುತ್ತವೆ. ನಾರಾಯಣ್ ಅವರ ಮೊದಲ ಕಾದಂಬರಿ ಸ್ವಾಮಿ ಮತ್ತು ಗೆಳೆಯರು. ಮೊದಲಿಗೆ ಯಾವ ಪ್ರಕಾಶಕರೂ ಇದನ್ನು ಪ್ರಕಟಿಸಲು ಒಪ್ಪಿರಲಿಲ್ಲ. ನಂತರ ಇದರ ಹಸ್ತಪ್ರತಿಯನ್ನು ಬ್ರಿಟಿಷ್ ಲೇಖಕ ಗ್ರಹಾಂ ಗ್ರೀನ್ ಗೆ ಕಳಿಸಿದಾಗ ಅವರು ಅದನ್ನು ಇಷ್ಟಪಟ್ಟು ಅದರ ಪ್ರಕಟಣೆಗೆ ಕಾರಣರಾದರು. ಆನಂತರ ಗ್ರಹಾಂ ಗ್ರೀನ್ ನಾರಾಯಣ್ ಅವರ ಜೀವನಪರ್ಯಂತ ಆಪ್ತ ಮಿತ್ರರೂ ಮತ್ತು ಅಭಿಮಾನಿಯೂ ಆಗುಳಿದರು. ಈ ಮೊದಲ ಪುಸ್ತಕದ ನಂತರ ನಾರಾಯಣ್ ಅನೇಕ ಕಾದಂಬರಿಗಳನ್ನು ಬರೆದರು. ಇವರು ಕೆಲ ಕಾದಂಬರಿಗಳಲ್ಲಿ ತಮ್ಮ ಜೀವನದ ಅಂಶಗಳನ್ನೂ ಸೇರಿಸಿದ್ದಾರೆ - ಉದಾಹರಣೆಗೆ ದಿ ಇಂಗ್ಲಿಷ್ ಟೀಚರ್. ನಾರಾಯಣ್ ರ ಬಹುಪಾಲು ಕೃತಿಗಳು ದೈನಂದಿನ ಜೀವನವನ್ನು ಕುರಿತವು. ಭಾರತೀಯ ಪುರಾಣಗಳ ಬಗ್ಗೆಯೂ ಕೆಲವು ಪುಸ್ತಕಗಳನ್ನು ಬರೆದಿದ್ದಾರೆ. ಪದ್ಮಭೂಷಣ, ಪದ್ಮವಿಭೂಷಣ, ಎ.ಸಿ.ಬೆನ್‌ಸನ್ ಮೆಡಲ್, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾದ ಪ್ರಶಸ್ತಿಗಳಿಂದ ಪುರಸ್ಕೃತರಾದ ದಿವಂಗತ ಆರ್.ಕೆ.ನಾರಾಯಣ್ ಅವರ ಮೈಸೂರಿನ ಮನೆಯನ್ನು ಪಾರಂಪರಿಕ ಕಟ್ಟಡ ಎಂದು ಸರ್ಕಾರ ಘೋಷಿಸಿದೆ. ಖ್ಯಾತ ಆಂಗ್ಲಭಾಷಾ ವ್ಯಂಗ್ಯಚಿತ್ರಕಾರ ಆರ್.ಕೆ.ಲಕ್ಷ್ಮಣ್ ಇವರ ಸಹೋದರರಾಗಿದ್ದಾರೆ. ನಾರಾಯಣ್ ಅವರ ಮುಖ್ಯ ಕಾದಂಬರಿಗಳು ನಿಧನ ಆರ್. ಕೆ. ನಾರಾಯಣ್ ಚೆನ್ನೈ ನಲ್ಲಿ ೨೦೦೧, ರ, ಮೇ ೧೩ ರಂದು ನಿಧನರಾದರು. ಹೊರಗಿನ ಕೊಂಡಿಗಳು ಸ್ವಾಮಿ ಮತ್ತು ಗೆಳೆಯರು - ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದಲ್ಲಿ ಓದಲು ಸಿಗುವ ಕನ್ನಡಪುಸ್ತಕ openlibrary.org.ಆರ್.ಕೆ.ನಾರಾಯಣ್ ಉಲ್ಲೇಖಗಳು ಆಂಗ್ಲ ಭಾಷಾ ಸಾಹಿತಿಗಳು ಸಾಹಿತಿಗಳು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು ಮೈಸೂರಿನ ಬರಹಗಾರರು
1736
https://kn.wikipedia.org/wiki/%E0%B2%92%E0%B2%A8%E0%B2%95%E0%B3%86%20%E0%B2%93%E0%B2%AC%E0%B2%B5%E0%B3%8D%E0%B2%B5
ಒನಕೆ ಓಬವ್ವ
ಒನಕೆ ಓಬವ್ವ ೧೮ನೆಯ ಶತಮಾನದ ಚಿತ್ರದುರ್ಗದ ಕೋಟೆಯ ಪಾಳೆಗಾರನಾಗಿದ್ದ ಮದಕರಿ ನಾಯಕನ ಕೋಟೆಯ ಕಾವಲುಗಾರ ಕಹಳೆ ಮದ್ದಹನುಮಪ್ಪನ ಹೆಂಡತಿ. ಇವರನ್ನು ಕನ್ನಡ ನಾಡಿನ ವೀರವನಿತೆಯರಾದ ಕಿತ್ತೂರು ಚೆನ್ನಮ್ಮ,ರಾಣಿ ಅಬ್ಬಕ್ಕ ರ ಸಾಲಿನಲ್ಲಿ ಪರಿಗಣಿಸಲಾಗುತ್ತದೆ. ಒನಕೆ ಓಬವ್ವ ಹೈದರಾಲಿಯು ಚಿತ್ರದುರ್ಗದ ಮೇಲೆ ಹಟಾತ್ತಾಗಿ ಆಕ್ರಮಣ ಮಾಡಿದಾಗ ಓಬವ್ವೆಯು ತನ್ನ ಒನಕೆಯನ್ನು ಅಸ್ತ್ರವಾಗಿ ಇಟ್ಟುಕೊಂಡು ಶತ್ರುಗಳನ್ನು ಎದುರಿಸಿದ್ದಳು.ನೂರಾರು ಶತ್ರು ಸೈನಿಕರನ್ನು ತನ್ನ ಒನಕೆಯಿಂದಲೇ ಕೊಂದು ಕೊನೆಯಲ್ಲಿ ಎದುರಾಳಿಯು ಬೆನ್ನಹಿಂದೆ ಬಂದದ್ದನ್ನು ಗಮನಿಸಲಾಗದೆ ಶತ್ರುವಿನ ಕತ್ತಿಗೆ ಬಲಿಯಾದರು. ಅಂದಿನಿಂದ ಅವರಿಗೆ ಒನಕೆ ಓಬವ್ವ ಎಂದು ಬಿರುದು ಸಿಕ್ಕಿತು. ಚಿತ್ರದುರ್ಗದಲ್ಲಿನ ಓಬವ್ವ ಸ್ಮರಣೆ ಒನಕೆ ಓಬವ್ವರ ಹೆಸರು ಚಿತ್ರದುರ್ಗದ ಇತಿಹಾಸದಲ್ಲಿ ಮರೆಯಲಾಗದ್ದು. ಅವರನ್ನು ಕರ್ನಾಟಕದ ವೀರವನಿತೆಯರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಚಿತ್ರದುರ್ಗದ ಆಟದ ಕ್ರೀಡಾಂಗಣಕ್ಕೆ ಒನಕೆ ಓಬವ್ವ ಕ್ರೀಡಾಂಗಣ ಎಂದು ಅವರ ಹೆಸರನ್ನಿಟ್ಟು ಗೌರವಿಸಲಾಗಿದೆ. ಚಿತ್ರದುರ್ಗದ ಕೋಟೆಯಲ್ಲಿ ಓಬವ್ವ ಹೈದರಾಲಿಯ ಸೈನಿಕರನ್ನು ಸೋಲಿಸಿದ ಕಿಂಡಿಯನ್ನು ಒನಕೆ ಓಬವ್ವನ ಕಿಂಡಿ ಅಥವಾ ಒನಕೆ ಕಿಂಡಿ ಎಂದು ಕರೆಯಲಾಗುತ್ತದೆ. ಕನ್ನಡ ಚಿತ್ರರಂಗದಲ್ಲಿ ಓಬವ್ವ ಸ್ಮರಣೆ ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಚಿತ್ರದಲ್ಲಿನ ಪ್ರಸಿದ್ಧ ಹಾಡಿನಲ್ಲಿ ಅವರ ವೀರೋಚಿತ ಪ್ರಯತ್ನವನ್ನು ಚಿತ್ರಿಸಲಾಗಿದೆ. ಈ ಚಿತ್ರದಲ್ಲಿ ನಟಿ ಜಯಂತಿ (ನಟಿ) ಅವರು ಓಬವ್ವನ ಪಾತ್ರ ಮಾಡಿದ್ದರು. ೨೦೧೯ರಲ್ಲಿ ಚಿತ್ರದುರ್ಗದ ಒನಕೆ ಓಬವ್ವ ಎನ್ನುವ ಸಿನಿಮಾದಲ್ಲಿ ತಾರಾ ಅನುರಾಧಾ ಅವರು ಒನಕೆ ಓಬವ್ವನಾಗಿ ಅಭಿನಯಿಸಿದ್ದಾರೆ. ಇವನ್ನೂ ನೋಡಿ ಕಿತ್ತೂರು ಚೆನ್ನಮ್ಮ ರಾಣಿ ಅಬ್ಬಕ್ಕ ಕರ್ನಾಟಕದ ಇತಿಹಾಸ ಚಿತ್ರದುರ್ಗ ಜಿಲ್ಲೆ [[ವರ್ಗ:ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಾ ಸ್ಪರ್ಧೆಗೆ ವಿಸ್ತರಿಸಿದ ಲೇಖನ]]
1738
https://kn.wikipedia.org/wiki/%E0%B2%AA%E0%B2%82%E0%B2%AA
ಪಂಪ
ಪಂಪ (ಕ್ರಿ.ಶ. ೯೦೨-೯೫೦) ಕನ್ನಡದ ಆದಿ ಮಹಾಕವಿ ಎಂದು ಪ್ರಸಿದ್ಧನಾದವನು. ಇಮ್ಮಡಿ ಅರಿಕೇಸರಿಯ ಆಸ್ಥಾನದ ಕವಿಯಾಗಿದ್ದ ಪಂಪನು, ಗದ್ಯ ಮತ್ತು ಪದ್ಯ ಸೇರಿದ “ಚಂಪೂ” ಶೈಲಿಯಲ್ಲಿ ಕೃತಿಗಳನ್ನು ರಚಿಸಿದ್ದಾನೆ. ಆದಿಕವಿ ಎಂದು ಹೆಸರು ಪಡೆದ ಪಂಪನು ಕನ್ನಡದ ರತ್ನತ್ರಯರಲ್ಲಿ (ಪಂಪ, ಪೊನ್ನ ಮತ್ತು ರನ್ನ) ಒಬ್ಬನು. ಪಂಪನನ್ನು ಯುಗ ಪ್ರವರ್ತಕನೆಂದು ಕನ್ನಡಿಗರು ಗೌರವಿಸಿ ಅವನ ಕಾಲವನ್ನು ‘ಪಂಪಯುಗ’ ವೆಂದು ಕರೆದಿದ್ದಾರೆ. "ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ" ಇವೆರಡೂ, ಪಂಪನ ಎರಡು ಮೇರು ಕೃತಿಗಳು. ಹಿನ್ನೆಲೆ ಪಂಪನು ಗದಗ ಜಿಲ್ಲೆಯ ಅಣ್ಣಿಗೇರಿಯಲ್ಲಿ ಜನಿಸಿದನು. ಇವನ ತಂದೆ ಭೀಮಪ್ಪಯ್ಯ ಮತ್ತು ತಾಯಿ ಅಬ್ಬಣಬ್ಬೆ. ಕ್ರಿ.ಶ.ಸುಮಾರು ೯೦೨ ರಿಂದ ೯೫೫ರ ವರೆಗೆ ಆಳಿದ ವೇಮುಲವಾಡ ಚಾಲುಕ್ಯ ವಂಶದ ಅರಸ ಇಮ್ಮಡಿ ಅರಿಕೇಸರಿಯ ಆಶ್ರಯದಲ್ಲಿದ್ದ. ಪಂಪನ ಪೂರ್ವಜರು ವೆಂಗಿ ಮಂಡಲದವರು. ವೆಂಗಿಮಂಡಲವು ಕೃಷ್ಣಾ ಮತ್ತು ಗೋದಾವರಿ ನದಿಗಳ ನಡುವೆ ಇದ್ದ ಪ್ರದೇಶ. ಇದು ಇಂದಿನ ತೆಲಂಗಾಣ ರಾಜ್ಯದ ಕರೀಂ ನಗರ ಜಿಲ್ಲೆಯ ವೇಮುಲವಾಡ ಎಂಬ ಊರು. ಇದರಲ್ಲಿದ್ದ ಏಳು ಗ್ರಾಮಗಳಲ್ಲಿ ವೆಂಗಿಪಳು ಎಂಬುದು ಪ್ರಸಿದ್ಧ ಅಗ್ರಹಾರ. ಅಲ್ಲಿದ್ದ ಜಮದಗ್ನಿ ಪಂಚಾರ್ಷೇಯ ಪ್ರವರದ ಶ್ರೀವತ್ಸ ಗೋತ್ರಕ್ಕೆ ಸೇರಿದ ಕುಟುಂಬಕ್ಕೆ ಸೇರಿದವನು ಪಂಪ. ಮಾಧವ ಸೋಮಯಾಜಿ ಎಂಬಾತನನ್ನು ಪಂಪನ ಮನೆತನದ ಹಿರಿಯನೆಂದು ಗುರುತಿಸಲಾಗಿದೆ. ಈತ ಪಂಪನ ಮುತ್ತಜ್ಜನ ತಂದೆ. ಮಾಧವ ಸೋಮಯಾಜಿಯ ಮಗ ಅಭಿಮಾನ ಚಂದ್ರ. ಈತ ಈಗಿನ ಗುಂಟೂರು ಸಮೀಪದ ಗುಂಡಿಕಾಕ್ಕೆ ಸೇರಿದ ನಿಡುಗುಂದಿ ಎಂಬ ಅಗ್ರಹಾರದಲ್ಲಿದ್ದ. ಈತ ಪಂಪನ ಮುತ್ತಜ್ಜ. ಅಭಿಮಾನ ಚಂದ್ರನ ಮಗ ಕೊಮರಯ್ಯ. ಈತನ ಕಾಲದಲ್ಲಿ ಈ ಕುಟುಂಬದವರು ಬನವಾಸಿ, ಅಂದರೆ ಕರ್ನಾಟಕದ ಉತ್ತರ ಕನ್ನಡ/ಧಾರವಾಡ ಪ್ರದೇಶಕ್ಕೆ ವಲಸೆ ಬಂದರು. ಕೊಮರಯ್ಯ ಪಂಪನ ಅಜ್ಜ. ಇವನ ಮಗ ಭೀಮಪಯ್ಯ. ಭೀಮಪಯ್ಯನ ಹೆಂಡತಿ ಅಣ್ಣಿಗೇರಿಯ ಜೋಯಿಸ ಸಿಂಘನ ಮೊಮ್ಮಗಳು. ಪಂಪ ಇವರ ಮಗ. ಜಿನವಲ್ಲಭ ಪಂಪನ ತಮ್ಮ. ಪಂಪನ ತಂದೆ ಭೀಮಪ್ಪಯ್ಯ ಯಜ್ಞಯಾಗಾದಿಗಳಲ್ಲಿನ ಹಿಂಸೆಯನ್ನು ವಿರೋಧಿಸಿದ ಜೈನ ಮತವನ್ನು ಸ್ವೀಕರಿಸಿದನು. ದೇವೇಂದ್ರಮುನಿ ಎಂಬಾತ ಪಂಪನ ಗುರು. ಜೀವನ ಪಂಪನು(ಪಂಪ ಅವರ ನಿಜವಾದ ಹೆಸರು ಜಯಂತ್) ದೇಶೀ ಮತ್ತು ಮಾರ್ಗ ಇವುಗಳನ್ನು ಸೇರಿಸಿಕೊಂಡು ಕೃತಿಯನ್ನು ರಚಿಸಿದನು. ಸಂಸ್ಕೃತ ಸಾಹಿತ್ಯದಂತಿರುವುದು ‘ಮಾರ್ಗ’, ಅಚ್ಚಕನ್ನಡದ ಶೈಲಿಯು ’ದೇಶೀ’ ಎನಿಸಿತ್ತು. ತನ್ನ ಕೃತಿಗಳ ರಚನೆಯ ಕಾಲಕ್ಕೆ ಪಂಪ ಅರಿಕೇಸರಿಯ ಆಶ್ರಯದಲ್ಲಿದ್ದ. ಪಂಪ ಅರಿಕೇಸರಿಯ ಯೋಧನಾಗಿ ಅಥವಾ ದಂಡನಾಯಕನಾಗಿದ್ದ ಎಂಬ ಮಾತು ಇದೆ. ಖಡ್ಗವನ್ನು ಹಿಡಿದು ಪರಾಕ್ರಮಿಯಾಗಿ ಯುದ್ಧ ಮಾಡಬಲ್ಲ ಪಂಪನು ಕನ್ನಡ ಭಾಷೆಯಲ್ಲಿ ಅತ್ಯಂತ ಹಿಡಿತ ಉಳ್ಳವನು, ಪ್ರೀತಿಯಿದ್ದವನು. ತನ್ನ ದೇಶಪ್ರೇಮವನ್ನು, “ಆರಂಕುಶವಿಟ್ಟೊಡಂ ನೆನವುದೆನ್ನ ಮನಂ ಬನವಾಸಿ ದೇಶಮಂ” ಎಂದು ಬಣ್ಣಿಸಿ ಪಂಪ ತನ್ನ ತಾಯ್ನಾಡನ್ನು ಹೊಗಳಿದ್ದಾನೆ. ಪಂಪನು ಪುಲಿಗೆರೆಯ 'ತಿರುಳ್ ಗನ್ನಡ'ದಲ್ಲಿ ಕಾವ್ಯ ರಚಿಸಿದ್ದೇನೆ ಎಂದಿದ್ದಾನೆ. ಪಂಪನು ಆದಿಪುರಾಣವನ್ನು ಕ್ರಿ.ಶ. ೯೪೧-೪೨ರಲ್ಲಿ ರಚಿಸಿದ. ಇದು ಗುಣಸೇನಾಚಾರ್ಯನ ಪೂರ್ವಪುರಾಣದಲ್ಲಿ ಬಂದಿರುವ ಪ್ರಥಮ ಜೈನ ತೀರ್ಥಂಕರ ವೃಷಭನಾಥನ ಕಥೆಯನ್ನು ಹೇಳುತ್ತದೆ. ಪಂಪನು ಆದಿಪುರಾಣವನ್ನು ಮೂರು ತಿಂಗಳಿನಲ್ಲಿ ರಚಿಸಿರುವೆನೆಂದು ಹೇಳಿಕೊಂಡಿದ್ದಾನೆ. ಪಂಪನ ಇನ್ನೊಂದು ಕೃತಿ 'ವಿಕ್ರಮಾರ್ಜುನ ವಿಜಯ'ವು ಮಹಾಭಾರತದ ಕಥೆಯನ್ನು ನಿರೂಪಿಸುತ್ತದೆ. ವ್ಯಾಸರ ಮಹಾಭಾರತ ಕತೆಯನ್ನು ಪ್ರಾದೇಶಿಕ ಭಾಷೆಯಲ್ಲಿ, ದೇಶೀಯ ಗುಣಗಳನ್ನು ಮೇಳವಿಸಿ ಬರೆದ ಮೊದಲ ಕೃತಿ. ವ್ಯಾಸ ಮುನೀಂದ್ರರುಂದ್ರ ವಚನಾಮೃತವಾರ್ದಿಯನೀಸುವೆಂ ಕವಿ ವ್ಯಾಸನೆಂಬ ಗರ್ವಮೆನಗಿಲ್ಲ ಎಂದು ವಿನಯದಿಂದ ನುಡಿದಿದ್ದಾನೆ. ತನಗೆ ಆಶ್ರಯ ನೀಡಿದ್ದ ಅರಿಕೇಸರಿಯನ್ನು ಅರ್ಜುನನಿಗೆ ಹೋಲಿಸಿ, ಅವನನ್ನೇ ಕಥಾನಾಯಕನನ್ನಾಗಿ ಮಾಡಿಕೊಂಡಿದ್ದಾನೆ. ಪಂಪನು ವಿಕ್ರಮಾರ್ಜುನ ವಿಜಯವನ್ನು ಆರು ತಿಂಗಳಿನಲ್ಲಿ ಬರೆದನಂತೆ. ಇದು ೧೪ ಆಶ್ವಾಸಗಳನ್ನು, ೧೬೦೯ ಪದ್ಯಗಳನ್ನು ಒಳಗೊಂಡಿದೆ. ಪಂಪ ತನ್ನ ಕೃತಿಗಳಲ್ಲಿ ಹೇಳಿಕೊಂಡಿರುವ ವಿಚಾರಗಳಿಂದ ಮತ್ತು ಅವನ ತಮ್ಮ ಕೂರ್ಕ್ಯಾಲ ಎಂಬ ಗ್ರಾಮದಲ್ಲಿ ನೆಡಿಸಿದ ಶಾಸನದಿಂದ ಈ ವಿವರಗಳು ತಿಳಿದು ಬಂದಿವೆ. ಪಂಪನನ್ನು "ಪಸರಿಪ ಕನ್ನಡಕ್ಕೊಡೆಯನೊರ್ವನೆ ಸತ್ಕವಿ ಪಂಪನಾವಗಂ" ಎಂದು ಪುಣ್ಯಾಸ್ರವದ ಕವಿ ನಾಗರಾಜನೆಂಬುವನ ನುಡಿ ಕನ್ನಡ ಕವಿಗಳು ಪಂಪನಿಗೆ ಸಲ್ಲಿಸಿರುವ ಕಾವ್ಯ ಗೌರವದ ಪ್ರಾತಿನಿಧಿಕ ವಾಣಿಯಾಗಿದೆ. ಅಲ್ಲದೆ ಮುಂದುವರೆದು “ಏಂ ಕಲಿಯೋ, ಸತ್ಕವಿಯೋ? ಕವಿತಾಗುಣಾರ್ಣಭವಂ” ಎಂದು ಕೂಡ ಪಂಪನನ್ನು ಹೊಗಳಿದ್ದಾರೆ. ಪಂಪ ಬರೆದ ಎರಡು ಕೃತಿಗಳು ಹಳಗನ್ನಡದ ಕಾವ್ಯ ರಚನೆಯ ಮೇಲೆ ಅತಿ ಹೆಚ್ಚಿನ ಪ್ರಭಾವವನ್ನು ಬೀರಿದವು. ಪುರಾಣ ಮತ್ತು ಇತಿಹಾಸಗಳನ್ನು ಕಾವ್ಯಕ್ಕೆ ಅಳವಡಿಸಿಕೊಳ್ಳುವ ಮಾದರಿಯೊಂದನ್ನು ನಿರ್ಮಿಸಿದವು. 'ಹಿತಮಿತ ಮೃದುವಚನ' ಎಂದು ಪಂಪ ತನ್ನ ಭಾಷೆಯ ಬಗ್ಗೆ ಹೇಳಿಕೊಂಡಿದ್ದಾನೆ. ಈ ಶಾಸ್ತ್ರೀಯ ಕವಿ ತನ್ನ ಕೃತಿಗಳಲ್ಲಿ ಪರಿಶೀಲಿಸಿದ ಆಶಯಗಳು, ಬಳಸಿದ ರೂಪಕಗಳು ಆಧುನಿಕ ಕನ್ನಡ ಸಾಹಿತ್ಯದ ಕೃತಿಗಳ ಮೇಲೂ ಪರಿಣಾಮ ಬೀರಿವೆ. ವಿಶೇಷವಾಗಿ ಕುವೆಂಪು ಅವರು ಪಂಪನ ಎರಡು ಕಾವ್ಯಗಳ ಆಶಯವನ್ನು ತಮ್ಮ ಕಾದಂಬರಿಗಳಲ್ಲಿ ಹೊಸಬಗೆಯಲ್ಲಿ ಅನ್ವೇಷಿಸಿರುವುದನ್ನು ಕಾಣಬಹುದು. ಕೃತಿಗಳು ಆದಿಪುರಾಣ ವಿಕ್ರಮಾರ್ಜುನ ವಿಜಯ no poems ಪಂಪ ಭಾರತ ಬನವಾಸಿ ವರ್ಣನೆಯ ಪದ್ಯ ಪಂಪನ ಭಾರತಕಾವ್ಯದಲ್ಲಿ ಬರುವ ಬನವಾಸಿಯ ವರ್ಣನೆಯನ್ನು ನೀಡುವು ಪದ್ಯಗಳು ಸೊಗಯಿಸಿ ಬಂದ ಮಾಮರನೆ ತಳ್ತೆಲೆವಳ್ಳಿಯೆ ಪೂತ ಜಾತಿ ಸಂ ಪಗೆಯೆ ಕುಕಿಲ್ವ ಕೋಗಿಲೆಯೆ ಪಾಡುವ ತುಂಬಿಯೆ ನಲ್ಲರೊಳ್ಮೊಗಂ| ನಗೆಮೊಗದೊಳ್ ಪಳಂಚಲೆಯೆ ಕೂಡುವ ನಲ್ಲರೆ ನೋೞ್ಪೊಡಾವ ಬೆ ಟ್ಟುಗಳೊಳಮಾವ ನಂದನವನಂಗಳೊಳಂ ಬನವಾಸಿ ದೇಶದೊಳ್|| ೨೮ (ಚಂಪಕಮಾಲೆ) ಗದ್ಯ ಭಾಗ : ಬನವಾಸಿ ದೇಶದ ಯಾವ ಬೆಟ್ಟಗಳಲ್ಲಿಯೂ ಉದ್ಯಾನವನಗಳಲ್ಲಿಯೂ ನೋಡುವುದಾದರೆ ಸೊಗಸಾಗಿ ಫಲ ಬಿಟ್ಟಿರುವ ಮಾವಿನ ಮರಗಳೇ; ದಟ್ಟವಾಗಿ ಸೇರಿಕೊಂಡಿರುವ ವಿಳ್ಳೆಯದೆಲೆಯ ಬಳ್ಳಿಗಳೇ, ಹೂವನ್ನು ಬಿಟ್ಟಿರುವ ಜಾಜಿ ಮತ್ತು ಸಂಪಗೆ ಗಿಡಗಳೇ; ಸುಸ್ವರವಾಗಿ ಧ್ವನಿಮಾಡುವ ಕೋಗಿಲೆ, ಝೇಂಕರಿಸುವ ದುಂಬಿಗಳೇ, ಪ್ರೇಯಸಿಯರ ಒಳ್ಳೆಯ ಮುಖಗಳೇ, ನಗುಮುಖದಲ್ಲಿ ಪ್ರತಿಭಟಿಸಿ ಕೂಡುವ ನಲ್ಲರೇ. ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗ ಳ್ಗಾಗರವಾದ ಮಾನಸರೆ ಮಾನಸರಂತವರಾಗಿ ಪುಟ್ಟಲೇ| ನಾಗಿಯುಮೇನೊ ತೀರ್ದಪುದೆ ತೀರದೊಡಂ ಮಱದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್|| ೨೯ (ಉತ್ಪಲಮಾಲೆ) ಗದ್ಯಭಾಗ : ಆ ಬನವಾಸಿ ದೇಶದಲ್ಲಿ ತ್ಯಾಗ, ಭೋಗ, ವಿದ್ಯೆ, ಸಂಗೀತ-ಗೋಷ್ಠಿಗಳ ಸಂತೋಷ ಸೌಖ್ಯಕ್ಕೆ ಅನರಾಗಿರುವ ಮನುಷ್ಯರೇ ಮನುಷ್ಯರು. ಅಂತಹ ಅದೃಷ್ಟಶಾಲಿಗಳಾದ ಮನುಷ್ಯರಾಗಿ ಹುಟ್ಟಲು ಏನಾದರೂ ತಾನೇ ಸಾಧ್ಯವೇ? ಹಾಗೆ ಸಾಧ್ಯವಾಗದಿದ್ದರೂ ಆ ಬನವಾಸಿ ದೇಶದ ನಂದನವನಗಳಲ್ಲಿ ಮರಿದುಂಬಿಯಾಗಿಯೋ ಅಥವಾ ಕೋಗಿಲೆಯಾಗಿಯೋ ಹುಟ್ಟಬೇಕು. ತೆಂಕಣ ಗಾಳಿ ಸೋಂಕಿದೊಡಮೊಳ್ನುಡಿಗೇಳ್ದೊಡಮಿಂಪನಾಳ್ದ ಗೇ ಯಂ ಕಿವಿವೊಕ್ಕೊಡಂ ಬಿರಿದ ಮಲ್ಲಿಗೆಗಂಡೊಡಮಾದ ಕೆಂದಲಂ| ಪಂಗೆಡೆಗೊಂಡೊಡಂ ಮಧುಮಹೋತ್ಸವಮಾದೊಡಮೇನನೆಂಬೆನಾ ರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ|| ೩೦ (ಉತ್ಪಲಮಾಲೆ) ಗದ್ಯಭಾಗ - ದಕ್ಷಿಣ ದಿಕ್ಕಿನ ತಂಪಾದ ಗಾಳಿಯ ಸ್ಪರ್ಶವಾದರೂ ಒಳ್ಳೆಯ ಮಾತನ್ನು ಕೇಳಿದರೂ ಇಂಪಾದ ಗಾನವು ಕಿವಿಯನ್ನು ಪ್ರವೇಶಿಸಿದರೂ ಅರಳಿದ ಮಲ್ಲಿಗೆಯ ಹೂವನ್ನು ಕಂಡರೂ ನಿದ್ರಾಮುದ್ರಿತವಾದ ರತಿಸೌಖ್ಯಕ್ಕೆ ಪಾತ್ರವಾದರೂ ವಸಂತೋತ್ಸವ ಪ್ರಾಪ್ತವಾದರೂ ಏನು ಹೇಳಲಿ ಯಾರು (ಬೇಡವೆಂದು ತಡೆದು) ಅಂಕುಶದಿಂದ ತಿವಿದರೂ ನನ್ನ ಮನಸ್ಸು ಬನವಾಸಿ ದೇಶವನ್ನು ನೆನೆಯುತ್ತದೆ. ಗದ್ಯಾನುವಾದ ಹೊರಗಿನ ಸಂಪರ್ಕಗಳು ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿರುವ ಪಂಪನಮನೆ/ ವಂಶದವರ ಮನೆ- ಮತ್ತು ಸ್ಮಾರಕ ನಮ್ಮ ಕರ್ನಾಟಕ ಪುಟದಲ್ಲಿ ಪಂಪ (ಇದು ಕೆಟ್ಟಿದೆ) ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪಂಪ ಉಲ್ಲೇಖ ಕವಿಗಳು ಹಳಗನ್ನಡ ಕವಿಗಳು
1749
https://kn.wikipedia.org/wiki/%E0%B2%9F%E0%B2%BF%E0%B2%AE%E0%B3%8D%20%E0%B2%AC%E0%B2%B0%E0%B3%8D%E0%B2%A8%E0%B2%B0%E0%B3%8D%E0%B2%B8%E0%B3%8D%20%E0%B2%B2%E0%B3%80
ಟಿಮ್ ಬರ್ನರ್ಸ್ ಲೀ
ಸರ್ ಟಿಮೊತಿ ಜಾನ್ "ಟಿಮ್" ಬೆರ್ನರ್ಸ್-ಲೀ (ಜನನ: ಜೂನ್ ೮, ೧೯೫೫ ಲಂಡನ್) ವಿಶ್ವವ್ಯಾಪಿ ಜಾಲದ ಜನಕ. ಹೈಪರ್‌ಟೆಕ್‌ಸ್ಟ್ ಬಗ್ಗೆ ಒಂದಿಷ್ಟು ಮಾಹಿತಿ ನೆಟ್‌ವರ್ಕ್ ಮಾರ್ಕೆಟಿಂಗ್ ಬಗ್ಗೆ ತಿಳಿಯೋಣ ಎಂದು ಅಂತರಜಾಲಕ್ಕೆ (ಇಂಟರ್ನೆಟ್‌ಗೆ) ಲಗ್ಗೆ ಇಡಿ. ಜಗತ್ಪ್ರಸಿದ್ಧ ತಾಣ-ಶೋಧಕ ಗೂಗ್‌ಲ್‌ನಲ್ಲಿ ನೆಟ್‌ವರ್ಕ್ ಮಾರ್ಕೆಟಿಂಗ್ ಎಂದು ಬೆರಳಚ್ಚಿಸಿ ಮೌಸ್ ಗುಂಡಿಯನ್ನು ಕ್ಲಿಕ್ ಮಾಡಿ. ಈಗ ನೋಡಿ. ನೆಟ್‌ವರ್ಕ್ ಮಾರ್ಕೆಟಿಂಗ್, ನೆಟ್‌ವರ್ಕ್, ಮಾರ್ಕೆಟಿಂಗ್, ಹೀಗೆ ಹಲವು ವಿಷಯಗಳ ತಾಣಗಳ ಸೂಚಿ ದೊರೆಯುತ್ತದೆ. ನೆಟ್‌ವರ್ಕ್ ಬಗ್ಗೆ ನೀಡಿರುವ ತಾಣದ ತಂತು (ಲಿಂಕ್) ಮೇಲೆ ಕ್ಲಿಕ್ ಮಾಡಿ ನೋಡಿ. ಅದು ನಿಮ್ಮನ್ನು ಗಣಕಗಳ ಜಾಲ (ನೆಟ್‌ವರ್ಕ್) ಬಗ್ಗೆ ವಿವರ ನೀಡುವ ತಾಣವಾಗಿರುತ್ತದೆ. ಅಲ್ಲಿರುವ ಇನ್ಯಾವುದಾದರೂ ಕೊಂಡಿಯ ಮೇಲೆ ಕ್ಲಿಕ್ ಮಾಡಿ ನೋಡಿ. ನೀವು ಮೂಲ ವಿಷಯ ಬಿಟ್ಟು ಇನ್ನೆಲ್ಲೋ ತಲುಪಿರುತ್ತೀರಾ. ಇಲ್ಲಿ ನೀವು ಗಮನಿಸಬೇಕಾದ ಒಂದು ವಿಷಯ ಎಂದರೆ ಕೊಂಡಿ, ತಂತು ಅಥವಾ ಲಿಂಕ್. ಈ ತಂತು ಮೇಲೆ ಕ್ಲಿಕ್ ಮಾಡಿದಂತೆಲ್ಲಾ ಇನ್ನೊಂದು ಜಾಲತಾಣ (ವೆಬ್‌ಸೈಟ್) ಅಥವಾ ಜಾಲಪುಟ (ವೆಬ್‌ಪೇಜ್) ತೆರೆದುಕೊಳ್ಳುತ್ತದೆ. ಹೀಗೆ ಮಾಹಿತಿಗಳನ್ನು ಕುಣಿಕಾ ಬಂಧನಗೊಳಿಸುವುದಕ್ಕೆ ಹೈಪರ್‌ಟೆಕ್‌ಸ್ಟ್ ಎಂಬ ಹೆಸರಿದೆ. ಅಂತರಜಾಲ ಎಂದರೆ.. ಅಂತರಜಾಲ ಒಂದು ರೀತಿಯಲ್ಲಿ ಸರ್ವಾಂತರ್ಯಾಮಿಯಾಗಿದೆ. ಅದರ ಬಗ್ಗೆ ಕೇಳದವರು ಇಲ್ಲವೇ ಇಲ್ಲವೆಂದರೂ ನಡೆಯುತ್ತದೆ. ಹೆಚ್ಚು ಮಂದಿ ಒಂದಲ್ಲ ಒಂದು ರೀತಿಯಲ್ಲಿ ಅದನ್ನು ಬಳಸುತ್ತಿದ್ದಾರೆ. ಅಂತರಜಾಲ ಎಂದರೆ ಏನು ಎಂದು ಹಲವು ಮಂದಿಯನ್ನು ಕೇಳಿ ನೋಡಿ. ಹೆಚ್ಚಿನವರು ಹೇಳುವ ಉತ್ತರ - www. ಈ www ಎಂದರೆ ಅಂತರಜಾಲ ಅಲ್ಲ ಎಂದು ಎಷ್ಟು ಮಂದಿಗೆ ಗೊತ್ತಿದೆ? ಆಶ್ಚರ್ಯವಾಯಿತೇ? www ಎಂದರೆ ವರ್ಲ್ಡ್ ವೈಡ್ ವೆಬ್ ಎಂಬುದರ ಸಂಕ್ಷಿಪ್ತ ರೂಪ. ಇದು ಅಂತರಜಾಲದ ಒಂದು ಅಂಗವೇ ವಿನಾ ಅದುವೇ ಅಂತರಜಾಲವಲ್ಲ! ಅಂತರಜಾಲದಲ್ಲಿ ವಿಶ್ವವ್ಯಾಪಿ ಜಾಲ (www), ವಿ-ಅಂಚೆ (ಇ-ಮೈಲ್), ಟೆಲ್‌ನೆಟ್, ಎಫ್‌ಟಿಪಿ, ನ್ಯೂಸ್‌ಗ್ರೂಪ್, ಇತ್ಯಾದಿ ಹಲವು ವಿಭಾಗಗಳಿವೆ. ಇವಗಳಲ್ಲಿ ಪ್ರತಿಯೊಂದರ ಬಗೆಗೂ ಹಲವು ಪ್ರತ್ಯೇಕ ಲೇಖನ ಬರೆಯುವಷ್ಟು ವಿಷಯಗಳಿವೆ. ಇನ್ನೂ ಒಂದು ಸ್ವಾರಸ್ಯಕರ ವಿಷಯವೆಂದರೆ ಈ ವಿಶ್ವವ್ಯಾಪಿ ಜಾಲ ಕೇವಲ ಹನ್ನೊಂದು ವರ್ಷಗಳಷ್ಟು ಹಳೆಯದು! ನಾನೀಗ ಹೇಳಹೊರಟಿರುವುದು ವಿಶ್ವವ್ಯಾಪಿ ಜಾಲದ ಬಗ್ಗೆ. ಅಂತರಜಾಲದಲ್ಲಿ ಕೋಟಿಗಟ್ಟಲೆ ತಾಣಗಳಿವೆ. ಈ ತಾಣಗಳೆಲ್ಲ ಒಟ್ಟು ಸೇರಿ ವಿಶ್ವವ್ಯಾಪಿ ಜಾಲವಾಗಿದೆ. ತಾಣದಿಂದ ತಾಣಕ್ಕೆ ತಂತುಗಳ ಮೂಲಕ ಲಂಘನ ಮಾಡಬಹುದು. ಈ ರೀತಿಯ ಸಂಪರ್ಕಕ್ಕೆ ಹೈಪರ್‌ಲಿಂಕಿಂಗ್ ಎನ್ನುತ್ತಾರೆ. ಈ ವಿಶ್ವವ್ಯಾಪಿ ಜಾಲದಲ್ಲಿ ಇರುವ ತಾಣಗಳ ಬಗ್ಗೆ ಹೆಚ್ಚೇನೂ ಹೇಳಬೇಕಾಗಿಲ್ಲ. ಒಂದು ಗುಂಡು ಪಿನ್ನಿನಿಂದ ಹಿಡಿದು ರಾಕೆಟ್ ತನಕದ ಮಾಹಿತಿಗಳನ್ನು ನೀಡುವ ತಾಣಗಳು ಅಲ್ಲಿವೆ. ಸರ್ ಟಿಮೊತಿ ಜಾನ್ "ಟಿಮ್" ಬೆರ್ನರ್ಸ್-ಲೀ ವಿಜ್ಞಾನದ ಬಹುಪಾಲು ಸಂಶೋಧನೆಗಳಂತೆ ಈ ವಿಶ್ವವ್ಯಾಪಿ ಜಾಲದ ಸಂಶೋಧನೆಯೂ ಆಕಸ್ಮಿಕವಾಗಿಯೇ ಆದುದು. ಟಿಮ್ ಬರ್ನರ್ಸ್ ಲೀ (Tim Berners-Lee) ಎಂಬುವರು ೧೯೮೦ರಲ್ಲಿ ಜಿನೇವಾದಲ್ಲಿರುವ ಯುರೋಪಿಯನ್ ಪಾರ್ಟಿಕಲ್ ಫಿಸಿಕ್ಸ್ ಸಂಶೋಧನಾಲಯದಲ್ಲಿ (CERN, ಸರ್ನ್) ಕೆಲಸದಲ್ಲಿದ್ದರು. ಅಲ್ಲಿ ನಡೆಯುತ್ತಿದ್ದ ಹಲವು ಸಂಶೋಧನೆ, ಅವುಗಳಿಗೆ ಸಂಬಂಧಪಟ್ಟ ಆಕರ ಮಾಹಿತಿ ಮತ್ತು ವ್ಯಕ್ತಿಗಳ ಬಗ್ಗೆ ಮಾಹಿತಿಗಳನ್ನು ಗಣಕದಲ್ಲಿ ವ್ಯವಸ್ಥಿತವಾಗಿ ತನಗೆ ಸುಲಭವಾಗಿ ಸಿಗುವಂತೆ ಸಂಗ್ರಹಿಸಿಡಲು ಅವರು ಹೈಪರ್ಟೆಕ್ಸ್ಟ್ ವಿಧಾನವನ್ನು ಪ್ರಥಮ ಬಾರಿ ಬಳಸಿದರು. ಅವರು ಈ ಕೆಲಸಕ್ಕಾಗಿಯೇ ಎನ್‌ಕ್ವೈರ್ ಹೆಸರಿನ ಒಂದು ಗಣಕ ಕ್ರಮವಿಧಿ (ಕಂಪ್ಯೂಟರ್ ಪ್ರೋಗ್ರಾಮ್) ರಚನೆ ಮಾಡಿದರು. ಅದೇನೂ ಪರಿಪೂರ್ಣ ತಂತ್ರಾಂಶವಾಗಿರಲಿಲ್ಲ. ಆದರೆ ಅವರ ಕೆಲಸದ ಅವಧಿ ಮುಗಿದುದರಿಂದ ಅವರು ಹಿಂದಕ್ಕೆ ತೆರಳಿದರು. ಆದರೆ ಅವರು ಪುನಃ ೧೯೮೪ರಲ್ಲಿ ಪೂರ್ಣ ಪ್ರಮಾಣದ ಉದ್ಯೋಗಿಯಾಗಿ ಅಲ್ಲಿಗೇ ಬಂದರು. ತಾವು ಹಿಂದೆ ಬಳಸಿದ ಎನ್‌ಕ್ವೈರ್ ಅವರ ತಲೆಯಲ್ಲಿ ಕೊರೆಯುತ್ತಿತ್ತು. ಹೈಪರ್ಟೆಕ್ಸ್ಟ್ ಮತ್ತು ಅಂತರಜಾಲಗಳು ಈಗಾಗಲೇ ಅಸ್ತಿತ್ವದಲ್ಲಿದ್ದವು. ಸರ್ನ್ನವರ ಸಂಶೋಧನೆಗಳು ಪ್ರಪಂಚಾದ್ಯಂತ ನಡೆಯುತ್ತಿದ್ದವು. ಎಲ್ಲ ಕಡೆಗಳಿಂದ ಸರ್ನ್‌ಗೆ ಸಂಶೋಧನೆಯ ವರದಿಗಳನ್ನು ವಿದ್ಯುನ್ಮಾನ (ಇಲೆಕ್ಟ್ರಾನಿಕ್) ವಿಧಾನದಿಂದ ಕಳುಹಿಸಲು ಒಂದು ನಿಶ್ಚಿತ ಪದ್ಧತಿಯನ್ನು ಪಾಲಿಸಬೇಕಿತ್ತು. ಇದು ಬಹುಮಂದಿ ವಿಜ್ಞಾನಿಗಳಿಗೆ ತಲೆನೋವು ತರುತ್ತಿತ್ತು. ಲೀ ಇದರ ಬಗ್ಗೆ ತಲೆಕೆಡಿಸಿಕೊಂಡರು. ತಾನು ಈಗಾಗಲೇ ಬಳಸುತ್ತಿದ್ದ ಎನ್‌ಕ್ವೈರ್ ಅನ್ನು ತನಗೆ ಮಾತ್ರವಲ್ಲದೆ ಇತರರಿಗೂ ಬಳಸಲು ಅನುಕೂಲವಾಗುವಂತೆ ಪರಿರ್ತಿಸಿದರು. ೧೯೮೯ರಲ್ಲಿ ಲೀ ಅವರು ಮಾಹಿತಿ ಜಾಲವೊಂದರ ವಿನ್ಯಾಸದ ಬಗ್ಗೆ ಸರ್ನ್‌ಗೆ ಒಂದು ಕ್ರಿಯಾ ಯೋಜನೆ ಒಪ್ಪಿಸಿದರು. ಇದರ ಬಗ್ಗೆ ಅವರಿಗೆ ಯಾವುದೇ ಉತ್ತರ ಬರಲಿಲ್ಲ. ಆದರೆ ಅವರು ಅದರ ಬಗ್ಗೆ ಚಿಂತಿಸದೆ ಪ್ರಪಂಚದ ಎಲ್ಲ ಮಾಹಿತಿಗಳನ್ನು ಅಂತರಜಾಲದ ಮೂಲಕ ತಂತುಗಳಲ್ಲಿ ಬೆಸೆಯುವ ತಮ್ಮ ಆಲೋಚನೆಯನ್ನು ಕಾರ್ಯಗತಗೊಳಿಸ ತೊಡಗಿದರು. ಈ ಜಾಲದಲ್ಲಿರುವ ಪ್ರತಿಯೊಂದು ಮಾಹಿತಿ ಕೇಂದ್ರಕ್ಕೂ ಒಂದು ಪ್ರತ್ಯೇಕ ವಿಳಾಸವನ್ನು ಅಭಿವೃದ್ಧಿ ಮಾಡಿದರು. ಇದುವೇ ಇಂದು ನಾವೆಲ್ಲರೂ ಬಳಸುವ ಯುನಿಫಾರ್ಮ್ ರಿಸೋರ್ಸ್ ಲೊಕೇಟರ್ (URL) ಅರ್ಥಾತ್ ತಾಣಸೂಚಿ. ಈ ತಾಣಸೂಚಿಗಳಿಗೆ ಉದಾಹರಣೆ ಬೇಕಿದ್ದರೆ www.vishvakannada.com, www.microsoft.com, www.google.com, ಇತ್ಯಾದಿ. ಲೀ ಅವರು ಬಳಸಿದ ಪ್ರಥಮ ತಾಣಸೂಚಿ - info.cern.ch. ಈ ಜಾಲದಲ್ಲಿ ತಾಣಗಳ ರಚನೆಗೂ ಅವರು ಒಂದು ಸರಳ ಭಾಷೆಯನ್ನು ಹುಟ್ಟು ಹಾಕಿದರು. ಅದುವೇ ಹೈಪರ್ಟೆಕ್ಸ್ಟ್ ಮಾರ್ಕಪ್ ಲಾಂಗ್ವೇಜ್ (HTML). ಇಷೆಲ್ಲಾ ಆದರೂ ಸರ್ನ್‌ನ ನೌಕರಶಾಹಿ ಮಂದಿಗೆ ಇದರ ಮಹತ್ವ ಅರಿವಾಗಲಿಲ್ಲ. ಅವರ ಕ್ರಿಯಾಯೋಜನೆಗೆ ಹಣಕಾಸಿನ ಸಹಾಯವೂ ಬರಲಿಲ್ಲ. ಆದರೆ ಲೀ ತಮ್ಮ ಕೆಲಸ ನಿಲ್ಲಿಸಲಿಲ್ಲ. ಜಗತ್ತಿನಾದ್ಯಂತ ಎಲ್ಲ ಸಂಶೋಧಕರಿಗೆ ವಿ-ಅಂಚೆ (ಇಮೈಲ್) ಕಳುಹಿಸಿ ತಮ್ಮ ಈ ಸಂಶೋಧನೆಯನ್ನು ಬಳಸಲು ಕೇಳಿಕೊಂಡರು. ಇದರ ಮಹತ್ವ ಬಹು ಬೇಗನೆ ಹಲವಾರು ತಂತ್ರಜ್ಞರುಗಳಿಗೆ ಅರಿವಾಗಿ ಅವರೆಲ್ಲ ಅದನ್ನು ಬಳಸತೊಡಗಿದರು. ಇದರ ಫಲವೇ ಇಂದು ಜಗತ್ತಿನಾದ್ಯಂತ ಕೋಟಿಗಟ್ಟಲೆ ಮಂದಿ ಬಳಸುತ್ತಿರುವ ವಿಶ್ವವ್ಯಾಪಿ ಜಾಲ. ಆದರೆ ಸರ್ನ್‌ನ ನೌಕರಶಾಹಿ ಇನ್ನೂ ಗೊರಕೆ ಹೊಡೆಯುತ್ತಿತ್ತು. ಕೊನೆಗೂ ವಿಶ್ವವ್ಯಾಪಿ ಜಾಲವನ್ನು ಮುಂದುವರೆಸಲು ೧೯೯೪ರಲ್ಲಿ ಅಮೇರಿಕಾದ ಎಮ್.ಐ.ಟಿ.ಯಿಂದ ಅವರಿಗೆ ಕರೆಬಂತು. ವಿಶ್ವವ್ಯಾಪಿ ಜಾಲವನ್ನು ನಿಯಂತ್ರಿಸುವ ಸಂಸ್ಥೆಯೊಂದು ಅಸ್ತಿತ್ವಕ್ಕೆ ಬಂತು. ವೆಬ್‌ನ ಜನಕ ಎಂದೇ ಖ್ಯಾತರಾಗಿರುವ ಲೀ ಅವರನ್ನು ಹುಡುಕಿಕೊಂಡು ಬಂದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ಬ್ರಿಟಿಷ್ ಸರಕಾರ ಅವರಿಗೆ “ಸರ್” ಬಿರುದಿತ್ತು ಸನ್ಮಾನಿಸಿದೆ. ಅವರು ಮಾಡಿದ ಸಂಶೋಧನೆಗೆ ಸಮಾನವಾದ ಮೂಲಭೂತ ಸಂಶೋಧನೆಯನ್ನು ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯ - ಈ ಯಾವುದೇ ಕ್ಷೇತ್ರದಲ್ಲಿ ಮಾಡಿದ್ದರೆ ಅವರಿಗೆ ನೋಬೆಲ್ ಪುರಸ್ಕಾರ ದೊರೆಯುತ್ತಿತ್ತು. ಟೈಮ್ ಮ್ಯಾಗಝಿನ್ ಅವರನ್ನು ಜಗತ್ತಿನ ಮೇಲೆ ಪ್ರಭಾವ ಬೀರಿದ ಶತಮಾನದ ೧೦೦ ಖ್ಯಾತ ವಿಜ್ಞಾನಿ ತಂತ್ರಜ್ಞಾನಿಗಳ ಪಟ್ಟಿಯಲ್ಲಿ ಸೇರಿಸಿದೆ. ಐನ್‌ಸ್ಟೈನ್ ಅವರ ಹೆಸರೂ ಈ ಪಟ್ಟಿಯಲ್ಲಿದೆ ಎಂದರೆ ಲೀ ಅವರ ಸಂಶೋಧನೆಯ ಮಹತ್ವ ಅರಿವಾಗುವುದು. ವಿಶ್ವವ್ಯಾಪಿ ಜಾಲವನ್ನು ನಿಯಂತ್ರಿಸುವ ವರ್ಲ್ಡ್ ವೈಡ್ ವೆಬ್ ಕನ್ಸೋರ್ಟಿಯಂನ ಅಧ್ಯಕ್ಷರಾಗಿ ಅವರು ಈಗಲೂ ಹೊಸ ಹೊಸ ಆಲೋಚನೆಗಳನ್ನು ಕಾರ್ಯಗತಗೊಳಿಸುತ್ತಿದ್ದಾರೆ. ಮಾಹಿತಿ ತಂತ್ರಜ್ಞಾನಿಗಳು
1759
https://kn.wikipedia.org/wiki/%E0%B2%A4%E0%B2%B0%E0%B2%82%E0%B2%97
ತರಂಗ
ತರಂಗಗಳು ದ್ರವ್ಯ ಮತ್ತು ಜಾಗದಲ್ಲಿ, ಕಾಲಕ್ಕನುಗುಣವಾಗಿ ಶಕ್ತಿಯ ಸಮ್ಮೋಹನದೊಂದಿಗೆ ಹರಡುವ ತುಮುಲಗಳು. ತರಂಗ ಚಲನೆಯು ಒಂದು ಕಡೆಯಿಂದ ಇನ್ನೊಂದು ಕಡೆಗೆ ಶಕ್ತಿಯನ್ನು ವರ್ಗಾಯಿಸುತ್ತದೆ. ಸಾಮಾನ್ಯವಾಗಿ ಈ ಕ್ರಿಯೆಯಲ್ಲಿ ಅತಿ ಕಡಿಮೆ ಅಥವಾ ಶೂನ್ಯ ದ್ರವ್ಯ ಸ್ಥಳಾಂತರ ನೆಡೆಯುತ್ತದೆ. ಉದಾಹರಣೆಗೆ ಶಾಂತವಾದ ನೀರಿನಲ್ಲಿ ಒಂದು ಸಣ್ಣ ಕಲ್ಲು ಎಸೆದಾಗ ಕಲ್ಲಿನ ಶಕ್ತಿ ನೀರಿನ ಮೇಲ್ಭಾಗದಲ್ಲಿ ತರಂಗಗಳನ್ನು ಉಂಟುಮಾಡುತ್ತದೆ. ತರಂಗ ಚಲನೆಯನ್ನು ಸಮೀಕರಣಗಳ ಮೂಲಕ ವಿಷ್ಲೇಶಿಸುತ್ತಾರೆ. ಈ ಸಮೀಕರಣದ ಗಣಿತ ನಮೂನೆಯು ತರಂಗದ ವಿಧದ ಆಧಾರದ ಮೇಲೆ, ಆ ತರಂಗ ಹೇಗೆ ಕಾಲಕ್ರಮೇಣ ಚಲಿಸುವುದು ಎಂಬುದನ್ನು ವಿವರಿಸುತ್ತದೆ. ತರಂಗಗಳಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ. ಮೊದಲನೆಯದು ಯಾಂತ್ರಿಕ ತರಂಗಗಳು. ಇವು ಚಲನೆಗೆ ಮಾಧ್ಯಮವನ್ನು ಆಧರಿಸಿವೆ. ಉದಾಹರಣೆಗೆ ಶಬ್ದ ತರಂಗ. ಯಾಂತ್ರಿಕ ತರಂಗಗಳು ಪ್ರವಹಿಸುವಾಗ ಮಾಧ್ಯಮವು ವಿರೂಪಗಳ್ಳುತ್ತದೆ. ಆ ಕ್ಷಣದಲ್ಲಿ ಪನಃಸ್ಥಾಪಿತ ಬಲಗಳು ಮಾಧ್ಯಮವನ್ನು ಮೊದಲಿನ ಸ್ಥಿತಿಗೆ ತರುತ್ತವೆ. ಎರಡನೆಯದು ವಿದ್ಯುತ್ ಕಾಂತೀಯ ತರಂಗಗಳು. ಇವುಗಳ ಚಲನೆಗೆ ಮಾಧ್ಯಮಗಳ ಅವಶ್ಯಕತೆಯಿಲ್ಲ. ಇವು ವಿದ್ಯುದಂಶಪೂರಿತ ಕಣಗಳಿಂದ ಸೃಷ್ಟಿಯಾದ ವಿದ್ಯುತ್ ಹಾಗು ಕಾಂತಕ್ಷೇತ್ರದ ಆವರ್ತಕ ಆಂದೋಲನಗಳನ್ನು ಒಳಗೊಂಡಿರುತ್ತವೆ. ಆದ್ದರಿಂದಲೇ ಇವು ನಿರ್ವಾತದಲ್ಲೂ ಚಲಿಸುವ ಶಕ್ತಿಯನ್ನು ಹೊಂದಿವೆ. ಉದಾಹರಣೆಗೆ ರೇಡಿಯೋ ತರಂಗಗಳು, ಸೂಕ್ಷ್ಮ ತರಂಗಗಳು, ರಕ್ತಾತೀತ ತರಂಗಗಳು, ದೃಶ್ಯ ತರಂಗಗಳು, ನೇರಳಾತೀತ ತರಂಗಗಳು, ಕ್ಷ ತರಂಗಗಳು, ಗ್ಯಾಮ ತರಂಗಗಳು. ಈ ತರಂಗಗಳು ತರಂಗಾಂತರದಲ್ಲಿ ಒಂದಕ್ಕಿಂತ ಒಂದು ಭಿನ್ನವಾಗಿವೆ. ಭೌತಶಾಸ್ತ್ರ
1763
https://kn.wikipedia.org/wiki/%E0%B2%95%E0%B2%B8%E0%B3%8D%E0%B2%A4%E0%B3%82%E0%B2%B0%E0%B2%BF
ಕಸ್ತೂರಿ
ಕಸ್ತೂರಿಯು ಗಂಡು ಕಸ್ತೂರಿಮೃಗದ ಉದರ ಮತ್ತು ಜನಕಾಂಗಗಳ ಮಧ್ಯೆ ಸ್ಥಿತವಾಗಿರುವ ಒಂದು ಗ್ರಂಥಿಯಲ್ಲಿ ಉತ್ಪಾದನೆಗೊಳ್ಳುವ ಸುವಾಸನೆ ಉಳ್ಳ ಪದಾರ್ಥ. ಅಂಗಡಿಯಲ್ಲಿ ಮಾರುವ ಕಸ್ತೂರಿ ಎಂಬ ವಸ್ತು ಈ ಪ್ರಾಣಿಯಿಂದಲೇ ಬಂದುದು. ಆದರೆ ಇತರ ಕೆಲವು ಬಗೆಯ ಪ್ರಾಣಿಗಳೂ ಇದೇ ವಾಸನೆಯನ್ನು ಹೊರಸೂಸುತ್ತವೆ.  ಉದಾಹರಣೆಗೆ ಕಸ್ತೂರಿ ದನ, ಕಸ್ತೂರಿ ಇಲಿ, ಕಸ್ತೂರಿ ಬಾತು, ಕಸ್ತೂರಿ ಮೂಗಿಲಿ ಇತ್ಯಾದಿ. ಅಲ್ಲದೆ ಕೆಲವು ಸಸ್ಯಗಳಲ್ಲೂ ಈ ಬಗೆಯ ವಾಸನೆ ಸೂಸುವ ಗ್ರಂಥಿಗಳಿವೆ. ಆ ಸಸ್ಯಗಳನ್ನು ಕಸ್ತೂರಿ ಗಿಡಗಳೆಂದು ಕರೆಯಲಾಗುತ್ತದೆ. ಕಸ್ತೂರಿ ಮೃಗವನ್ನು ಕೊಂದು ಅದರ ಹೊಟ್ಟೆಯಲ್ಲಿನ ಕಸ್ತೂರಿ ಗ್ರಂಥಿಯನ್ನು ಹೊರತೆಗೆದು ಬಿಸಿಲಿನಲ್ಲೋ, ಬಿಸಿ ಎಣ್ಣೆಯಲ್ಲಿ ಅದ್ದಿಯೋ, ಒಣಗಿಸುತ್ತಾರೆ. ಕೆಲವು ಸಾರಿ ಕಸ್ತೂರಿ ಗ್ರಂಥಿಯಿಂದ ಕಸ್ತೂರಿಯನ್ನು ಹೊರತೆಗೆದು ಶುದ್ಧೀಕರಿಸಿ ಮಾರುವುದೂ ಉಂಟು. ಕಸ್ತೂರಿಯಲ್ಲಿ ಮೂರು ಬಗೆಗಳುಂಟು : 1) ಟಾಂಕಿಂಗ್ ಅಥವಾ ಚೀನೀ ಕಸ್ತೂರಿ, 2) ಅಸ್ಸಾಮ್ ಅಥವಾ ನೇಪಾಳದ ಕಸ್ತೂರಿ, 3) ಕಬಾರ್ಡಿನ್ ಅಥವಾ ರಷ್ಯದ ಕಸ್ತೂರಿ. ಟಾಂಕಿಂಗ್ ಕಸ್ತೂರಿಯೇ ಇವುಗಳಲ್ಲೆಲ್ಲ ಶ್ರೇಷ್ಠವಾದುದು, ಹಾಗೂ ಹೆಚ್ಚಿನ ಬೆಲೆಯದು. ಕಸ್ತೂರಿ ಹೊಚ್ಚ ಹೊಸದಾಗಿರುವಾಗ ಮೃದುವಾಗಿಯೂ ಜಿಡ್ಡುಜಿಡ್ಡಾಗಿಯೂ ಇರುತ್ತದೆ. ಅದರ ಬಣ್ಣ ಕೆನ್ನೀಲಿ. ವಾಸನೆ ಸಹಿಸಲಾಗದಷ್ಟು ಕಟು, ರುಚಿ ಕಹಿ. ಕುದಿಯುವ ನೀರಿನಲ್ಲಿ ಸ್ವಲ್ಪ ಕರಗುತ್ತದೆ. ಇದು ಸುಗಂಧ ದ್ರವ್ಯಗಳನ್ನು ತಯಾರಿಸಲು ಉಪಯೋಗಿಸುವ ಶ್ರೇಷ್ಠತಮ ಮೂಲದ್ರವ್ಯವೆಂದು ಹೆಸರಾಗಿದೆ. ಔಷಧೀಯ ಗುಣಗಳು ಕಸ್ತೂರಿಗೆ ಔಷಧೀಯ ಗುಣಗಳೂ ಉಂಟು. ಇದನ್ನು ಉತ್ತೇಜಕ, ಕಾಮೋದ್ದೀಪಕ, ಕಫಹಾರಕ, ಸ್ವೇದಕಾರಿಯಾಗಿ ಉಪಯೋಗಿಸುತ್ತಾರೆ. ಸುಗಂಧದ ಕಾರಣ ಕಸ್ತೂರಿಯ ವೈಶಿಷ್ಟ್ಯಪೂರ್ಣ ಸುಗಂಧಕ್ಕೆ ಕಾರಣ ಅದರಲ್ಲಿನ ಮಸ್ಕೋನ್‍ ಎಂಬ ವಸ್ತು. ವಾಲ್ಬಾಮ್ ಎಂಬಾತ 1906ರಲ್ಲಿ ಮೊದಲ ಬಾರಿಗೆ ಇದನ್ನು ಕಸ್ತೂರಿಯಿಂದ ಬೇರ್ಪಡಿಸಿ ಶುದ್ಧೀಕರಿಸಿದ. ರಾಸಾಯನಿಕವಾಗಿ ಇದು 3-ಮೀಥೈಲ್-ಸೈಕ್ಲೊಪೆಂಟ ಡಿಕಾನೋನ್ ಎಂದು ತಿಳಿದುಬಂದಿದೆ. ಕೃತಕ ಕಸ್ತೂರಿ ಸ್ವಾಭಾವಿಕ ಕಸ್ತೂರಿಯಂಥ ವಾಸನೆಯಿರುವ ಹಲವಾರು ಬಗೆಯ ಸಂಯುಕ್ತಗಳನ್ನು ಕೃತಕವಾಗಿ ಸಂಶ್ಲೇಷಿಸಬಹುದಾಗಿದೆ. (1888) ರಲ್ಲಿ ಬಾರ್ ಎಂಬಾತ ಅಲ್ಯೂಮಿನಿಯಮ್ ಕ್ಲೋರೈಡಿನೊಡನೆ ಟಾಲೀನ್ ಮತ್ತು ಐಸೊಬ್ಯೂಟೈಲ್ ಬ್ರೋಮೈಡುಗಳನ್ನು ಸಂಘನನ (ಕಂಡೆನ್ಸೇಷನ್) ಕ್ರಿಯೆಗೊಳಪಡಿಸಿ ಅದರಿಂದ ಬಂದ ವಸ್ತುವನ್ನು ನೈಟ್ರೀಕರಣ ಮಾಡಿ ಕೃತಕ ಕಸ್ತೂರಿಯನ್ನು ತಯಾರಿಸಿದ. ಇದಕ್ಕೆ ಬಾರ್‍ಮಸ್ಕ್ ಎಂದು ಹೆಸರು. ಇದಲ್ಲದೆ ಕಸ್ತೂರಿಯನ್ನು ಹೋಲುವ ಜ಼ೈಲೀನ್ ಮಸ್ಕ್, ಮಸ್ಕ್‌ಕೀಟೋನ್, ಮಾಸ್ಕೀನ್, ಫ್ಯಾಂಟೋಲಿಡ್ ಎಂಬ ಸಂಯುಕ್ತಗಳನ್ನು ಕೃತಕವಾಗಿ ತಯಾರಿಸಬಹುದಾಗಿದೆ. ಇವೆಲ್ಲವನ್ನು ಸಾಬೂನು ಇತ್ಯಾದಿ ವಸ್ತುಗಳಿಗೆ ಸುವಾಸನೆ ಕೊಡಲು ಬಳಸುತ್ತಾರೆ. ಹೆಚ್ಚಿನ ಓದಿಗೆ Borschberg, Peter, "O comércio europeu de almíscar com a Ásia no inicio da edad moderna - The European Musk Trade with Asia in the Early Modern Period", Revista Oriente, 5 (2003): 90-9. Borschberg, Peter, "Der asiatische Moschushandel vom frühen 15. bis zum 17. Jahrhundert", in Mirabilia Asiatica, edited by J. Alves, C. Guillot and R. Ptak. Wiesbaden and Lisbon: Harrassowitz-Fundação Oriente (2003): 65-84. ಸುಗಂಧದ್ರವ್ಯಗಳು ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
1767
https://kn.wikipedia.org/wiki/%E0%B2%B2%E0%B2%BF%E0%B2%A8%E0%B2%95%E0%B3%8D%E0%B2%B8%E0%B3%8D
ಲಿನಕ್ಸ್
ಲಿನಕ್ಸ್ ಗಣಕಯಂತ್ರದ ಕಾರ್ಯನಿರ್ವಹಣ ಸಾಧನ (Operating System) ಹಾಗೂ ಅದರ ಕರ್ನೆಲ್ (Kernel). ಇದು ಮುಕ್ತ ತಂತ್ರಾಂಶ, ಮುಕ್ತ ಆಕರ ವಿಕಸನೆಯ ಒಂದು ಉತ್ತಮ ಉದಾಹರಣೆ. ಮೂಲವಾಗಿ ಲಿನಕ್ಸ್ ಎಂದಾಗ ಲಿನಕ್ಸ್ 'ಕರ್ನೆಲ್'ಅನ್ನು ಉದ್ದೇಶಿಸಿ ಮಾತನಾಡಲಾಗುತ್ತದೆ. ಅದರೆ ಸಾಮಾನ್ಯವಾಗಿ ಲಿನಕ್ಸ್ 'ಕರ್ನೆಲ್'ಅನ್ನು ಬಳಸಿಕೊಂಡ ಯುನಿಕ್ಸ್ ತರಹದ (ಗ್ನು/ಲಿನಕ್ಸ್ ಎಂದೂ ಶೃತವಾದ) ಆಪರೇಟಿಂಗ್ ಸಿಸ್ಟಮ್ ಗಳನ್ನು ಉಲ್ಲೇಖಿಸಲು ಬಳಸಲಾಗುತ್ತದೆ. ಲಿನಕ್ಸ್ ವಿತರಣೆಗಳು ಮೂಲತಃ ರಚನೆಯ ಜೊತೆಗೆ ಸಾಧಾರಣವಾಗಿ ಹಲವು ವಿಭಿನ್ನ ತಂತ್ರಾಂಶಗಳನ್ನೊಳಗೊಂಡು ಹೊರಬರುತ್ತವೆ. ಫೆಡೊರಾ ಕೋರ್, ಮ್ಯಾಂಡ್ರೇಕ್, ಉಬುಂಟು ಮುಂತಾದವು ಬಹು ಜನಪ್ರಿಯ ಲಿನಕ್ಸ್ ವಿತರಣೆಗಳಲ್ಲಿ ಕೆಲವು. ಮೂಲತಃ ಇಂಟೆಲ್ 386 ಮೈಕ್ರೊಪ್ರಾಸೆಸರ್ ಗಳಿಗೆ ವಿಕಸಿತಗೊಳಿಸಲಾದ ಲಿನಕ್ಸ್ ಈಗ ಹಲವು ಗಣಕ ವಾಸ್ತುಶಿಲ್ಪಗಳಿಗೆ ಅಧಾರ ನೀಡುತ್ತದೆ. ಸ್ವಕೀಯ ಗಣಕ ಯಂತ್ರಗಳಿಂದ ಹಿಡಿದು ಸೂಪರ್ ಕಂಪ್ಯೂಟರ್ ಗಳವರೆಗೂ (Super Computer = ಅತ್ಯುತ್ಕೃಷ್ಟ ಗಣಕ ಯಂತ್ರ) ಇದರ ಉಪಯೋಗ ಪಡೆಯಬಹುದಾಗಿದೆ. ಇದಲ್ಲದೇ, ಮೊಬೈಲ್ ಫೋನ್ ಗಳು, ಸ್ವಕೀಯ ವೀಡಿಯೋ ರೆಕಾರ್ಡರ್ ಗಳಂತಹ ಎಮ್ಬೆಡ್ಡೆಡ್ (Embedded) ರಚನೆಗಳಲ್ಲೂ ಉಪಯೋಗಿಸಲಾಗುತ್ತಿದೆ. ಸ್ವಯಂ ಸೇವಕರು, ಉತ್ಸಾಹಿಗಳಿಂದ ಬಹುವಾಗಿ ವಿಕಸಿತಗೊಳಿಸಲ್ಪಟ್ಟ, ಬಳಸಲ್ಪಟ್ಟ ಲಿನಕ್ಸ್, ಕಾಲಕ್ರಮೇಣ ಐಟಿ ದೈತ್ಯರಾದ ಐ.ಬಿ.ಎಮ್, ಹಿವ್ಲೆಟ್ ಪ್ಯಾಕರ್ಡ್ ನಂತಹ ಕಂಪೆನಿಗಳ ಬೆಂಬಲವನ್ನು ಪಡೆದು, ಸರ್ವರ್ ಮಾರುಕಟ್ಟೆಯಲ್ಲಿ ಇತರೆ ಖಾಸಗಿ ಕಂಪೆನಿಗಳ ಒಡೆತನದ ಯುನಿಕ್ಸ್ ಆವೃತ್ತಿಗಳನ್ನು ಹಾಗೂ ಮೈಕ್ರೊಸಾಫ್ಟ್ ವಿಂಡೋಸ್ ತಂತ್ರಾಂಶವನ್ನು ಸದೆಬಡಿಯುತ್ತಿದೆ. ತತ್ವ ಪ್ರತಿಪಾದಕರು, ಹಾಗೂ ಹಲವು ವಿಶ್ಲೇಷಕರು ಈ ಯಶಸ್ಸಿಗೆ 'ಲಿನಕ್ಸ್'ನ ಸ್ವಾತಂತ್ರ್ಯ, ನಿರ್ವಹಣೆಯ ವೆಚ್ಚ, ಭದ್ರತೆ, ಹಾಗೂ ಭರವಸೆಗಳೇ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ. ಲಿನಕ್ಸ್ ಇತಿಹಾಸ ೧೯೯೧ರಲ್ಲಿ ಫಿನ್ಲಂಡ್ನ ಲೈನಸ್ ಟೋರ್ವಾಲ್ಡ್ಸ್ ಎಂಬ ಗಣಕಶಾಸ್ತ್ರ ಛಾತ್ರನು ಹವ್ಯಾಸವಾಗಿ ಲಿನಕ್ಸ್ ಕರ್ನಲ್ ಬರೆಯಲು ಪ್ರಾರಂಭಿಸಿದನು. ತನ್ನ ಗಣಕಯಂತ್ರಲ್ಲಿದ್ದ ಮಿನಿಕ್ಸ್ ಕಾರ್ಯನಿರ್ವಹಣ ಸಾಧನವು(OS) ಕೆಲವು ಮಿತಿಗಳನ್ನು ಹೊಂದಿದ್ದರಿಂದ, ಅವುಗಳನ್ನು ವಿಸ್ತರಿಸಲೆಂದು ಪ್ರಾರಂಭವಾದ ಹವ್ಯಾಸವು ಆಧುನಿಕ ಆಪರೇಟಿಂಗ್ ಸಿಸ್ಟಮ್ ಗಳಿಗಿಂತ ಬಹುಮುಖ ಸಾಮರ್ಥ್ಯ ಹೊಂದಿದ ಆಪರೇಟಿಂಗ್ ಸಿಸ್ಟಮ್ ಒಂದರ ರಚನೆಗೆ ನಾಂದಿಯಾಗಬಹುದೆಂದು ಸ್ವತಃ ಲೈನಸ್ ಕೂಡ ಆಲೋಚಿಸಿರಲಿಲ್ಲವಂತೆ. ಲಿನಕ್ಸ್ ನ ಹೆಚ್ಚಿನ ಬೆಳವಣಿಗೆಗೆ ಅದರ 'ಮುಕ್ತ ತಂತ್ರಾಂಶ' ನೀತಿಯೇ ಕಾರಣವೆಂದು ಸಾಮಾನ್ಯ ಅಭಿಪ್ರಾಯ. ತಾನು ಬರೆದ ತಂತ್ರಾಂಶವನ್ನು ಎಲ್ಲರೂ ಸ್ವತಂತ್ರವಾಗಿ ಬಳಸಲಿ ಹಾಗೂ ಮುಕ್ತವಾಗಿ ಬೆಳೆಸಲಿ ಎಂದು ಲೈನಸ್ ತನ್ನ ಆಕರವನ್ನು ಸೆಪ್ಟೆಂಬರ್ ೧೯೯೧ರಲ್ಲಿ ಅಂತರ್ಜಾಲದಲ್ಲಿ(Internet) ಮುಕ್ತವಾಗಿ ವಿತರಿಸಿದನು . ಕೆಲವೇ ತಿಂಗಳಲ್ಲಿ ಜಗತ್ತಿನ ಎಲ್ಲೆಡೆಗಳಿಂದ ಹವ್ಯಾಸೀ ಪ್ರೊಗ್ರಾಮರ್ ಗಳು ಅದಕ್ಕೆ ತಮ್ಮ ಜೋಡಣೆಗಳನ್ನು ಸೇರಿಸುತ್ತಾ ಬಂದು ಅದಕ್ಕೆ ಒಂದು ಪರಿಪೂರ್ಣ ರೂಪ ತಂದುಕೊಟ್ಟರು. ಇಂದಿಗೂ ಈ ಪ್ರಗತಿಯು ಸಾಗಿದ್ದು, ಪ್ರತಿಯೊಂದು ಕಾರ್ಯಕ್ಕೆ, ಪ್ರತಿಯೊಬ್ಬರ ಅಭಿರುಚಿಗನುಗುಣವಾಗಿ ಹಲವಾರು ವಿತರಣೆಗಳ ರೂಪದಲ್ಲಿ ಲಿನಕ್ಸ್ ದೊರೆಯುತ್ತಿದೆ. ಕೆಳಗಿನ ಲಿನಕ್ಸ್ ವಿತರಣೆಗಳ ಪಟ್ಟಿಯು ಈ ತತ್ವಕ್ಕೆ ಆಧಾರವಾಗಿರುತ್ತದೆ. ಲಿನಕ್ಸ್ ವಿತರಣೆಗಳು ಪ್ರಮುಖ ಲಿನಕ್ಸ್ ವಿತರಣೆಗಳನ್ನು (linux distributions (distros)) ದರ್ಶಿಸುವ ಚಿತ್ರವು ಬಲಕ್ಕಿದೆ. ವಿತರಣೆಗಳು ವಿವಿಧ ಗುಂಪುಗಳಿಂದ ತಯಾರಿಸಲಾಗಿದ್ದು ತಮ್ಮ ತಮ್ಮ ಆಚಾರಣೆಗಳು, ಮತ್ತು ಉಪಯೋಗಗಳಿಂದಾಗಿ ಬಿನ್ನವಾಗಿವೆ . ಮ್ಯಾಂಡ್ರಿವ (Mandriva) ಮ್ಯಾಂಡ್ರಿವ (ಮ್ಯಾಂಡ್ರೇಕ್ + ಕನೆಕ್ಟಿವ) ವಸ್ತುಶಃ ಅತಿ ಸುಲಭವಾದ ಹಾಗೂ ಲಿನಕ್ಸ್ ಉಪಯೋಗಿಸುವ ಹೊಸಬರಲ್ಲಿ ಬಹಳ ಜನಪ್ರಿಯವಾದ ವಿತರಣೆ. ಫೆಡೊರಾ (Fedora Core) ರೆಡ್ ಹ್ಯಾಟ್ ರವರಿಂದ ಪ್ರಾಯೋಜನೆ ಮಾಡಲಾಗಿ ಪ್ರಾರಂಭವಾದ ಫೆಡೊರಾ ಕೋರ್, ಇಂದು ಸರ್ವವ್ಯಾಪಿ ಕಾರ್ಯ ನಿರ್ವಹಣ ಸಾಧನವನ್ನು ತಯಾರಿಸುವ ಧ್ಯೇಯವನ್ನು ಹೊಂದಿದೆ. ರೆಡ್ ಹ್ಯಾಟ್(Redhat) ರೆಡ್ ಹ್ಯಾಟ್ ಇತರ ಲಿನಕ್ಸ್ ವಿತರಣೆಗಳಿಗಿಂತ ಅತಿ ಹೆಚ್ಚಾಗಿ ಬಳಕೆಯಲ್ಲಿದೆ. ಉಬುಂಟು (Ubuntu) ಉಬುಂಟು, ಡೆಬಿಯನ್ ಆಧರಿಸಿ ತಯಾರಿಸಲಾದ ಒಂದು ವಿತರಣೆ. ಬಹಳಷ್ಟು ಜನರ ಪ್ರಶಂಸೆಗೆ ಒಳಗಾದ ಇದು, ಸದ್ಯದ ಸ್ಥಿತಿಯಲ್ಲಿ ಕನ್ನಡ ಚೆನ್ನಾಗಿ ಮೂಡಿ ಬರುವ ವಿತರಣೆಗಳಲ್ಲೊಂದು. ಡೆಬಿಯನ್(Debian) ಡೆಬಿಯನ್ ವಿತರಣೆಯು ಯುನಿಕ್ಸ್ ಮತ್ತು ಮುಕ್ತ ತಂತ್ರಾಂಶಗಳ ಮಾದರಿಯಾಗಿ ಬೆಳೆದು ಬಂದಿದೆ. "ವಿಶ್ವ ವ್ಯಾಪಿ ಕಾರ್ಯ ನಿರ್ವಹಣ ಸಾಧನ" ತತ್ವವನ್ನು ಅಳವಡಿಸಿಕೊಂಡಿರುವ ಈ ಸಂಸ್ಥೆಯು ಅತಿ ಹೆಚ್ಚಿನ ಉಪಕರಣಗಳಲ್ಲಿ ತಮ್ಮ ನಿರ್ವಹಣ ಸಾಧನವನ್ನು ನಿರ್ವಹಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಸುಸೇ (Suse) ಸುಸೇ ವಿತರಣೆಯುನೊವೆಲ್ ಇನ್ಕ್ ರವರದಾಗಿದ್ದು ಜರ್ಮನಿಯಲ್ಲಿ ತಯಾರಿಸಲಾಗುತ್ತದೆ. ಜೆಂಟೂ (Gentoo) ಲಿನ್ಸ್ಪೈರ್ (Linspire) ಲಿನ್ಸ್ಪೈರ್ ವಿತರಣೆಯು ಡೆಬಿಯನ್ ವಿಸ್ತರಣೆಯನ್ನು ಆಧಾರವಾಗಿರಿಸಿಕೊಂಡಿದೆ . ಮನೆಯಲ್ಲಿ ಉಪಯೋಗಿಸಲೆಂದು ಮಾರುಕಟ್ಟೆಮಾಡಲಾಗುತ್ತಿರುವ ಈ ವಿಸ್ತರಣೆಯು ಲಿನಕ್ಸ್ applicationsಗಳ ಸುಲಭ download ಮತ್ತು ಉಪಯುಕ್ತತೆ ಯನ್ನು ದೊರಕಿಸಿಕೊಡುವ ಧ್ಯೇಯವನ್ನು ಹೊಂದಿದೆ. ಸ್ಲೆಕ್ವೇರ್(Slackware) ಸ್ಲೆಕ್ವೇರ್ ಇತರ ವಿಸ್ತರಣೆಗಳಿಗಿಂತ ಹೆಚ್ಚು ಯುನಿಕ್ಸ್ (UNIX)ಅನ್ನು ಹೋಲುತ್ತದೆ. ಸ್ಲೆಕ್ವೇರ್ ತನ್ನ ವಿಸ್ತರಣೆಯಲ್ಲಿ ಕೇವಲ ಸ್ಥಾಯಿ ಗಳ್ನ್ನುಅಳವಡಿಸುತದೆ. ಝಾಂದ್ರೊಸ್ (Xandros) ೨೦೦೧ ರಲ್ಲಿ ನ್ಯೂ ಯೋರ್ಕ್ ಮತ್ತು ಒಟ್ಟಾವ(ಒಂಟರಿಒ)ದಲ್ಲಿ ಪ್ರಾರಂಭವಾದ ಝಾಂದ್ರೊಸ್ ಕಂಪನಿಯು ಕೋರೆಲ್ ಲಿನಕ್ಸ್ ಎಂಬ ಇನ್ನೊಂದು ವಿಸ್ತರಣೆಯನ್ನಾಧಾರಿಸಿದೆ. ವಿನ್ಡೋಸ್ OSಅನ್ನು ಹೋಲು ವ ಈ ವಿಸ್ತರಣೆಯು ಮನೆ ಮತ್ತು ವ್ಯಾಪಾರ ಎಂಬ ಎರಡು ವಿನ್ಯಾಸಗಳಲ್ಲಿ ಮಾರಲಾಗುತ್ತದೆ. ಲೈಕೋರಿಸ್ (Lycoris) ರೆಡ್ಮನ್ಡ್ ಲಿನಕ್ಸ್ ಕೊರ್ಪ್ ಎಂದು ೨೦೦೦ ದಲ್ಲಿ ಶುರುವಾದ ಲೈಕೋರಿಸ್ ವಿತರಣೆಯು ಸರ್ವರೂ ಸುಲಭವಾಗಿ ಉಪಯೊಗಿಸಲಾಗುವಂತಹ OS ಅನ್ನು ಮಾಡುವ ಧ್ಯೆಯ ಹೊಂದಿತ್ತು . ಇದರ ಲೈಕೋರಿಸ್ ಡೆಸ್ಕ್ಟೊಪ್ ಬಹಳ ಹೆಸರುವಾಸಿಯಾಗಿದೆ. ಲೈಕೋರಿಸ್ ಸಂಸ್ಥೆಯು ಮೆಪಲ್ ವೆಲಿ, ವಾಶಿಂಗ್ಟನ್, ಅಮೆರಿಕದಲ್ಲಿದೆ. ಮೆಪಿಸ್ (MEPIS) ಮೆಪಿಸ್ ಕೆ.ಡಿ.ಇ ಡೆಸ್ಕ್ಟೊಪ್ ಅನ್ನು ಬಳಸುವ ಲಿನಕ್ಸ್ ವಿತರಣೆ. ಇದೂ ಕೂಡ ಡೆಬಿಯನ್ ವಿಸ್ತರಣೆಯನ್ನು ಆಧಾರವಾಗಿರಿಸಿಕೊಂಡಿದೆ . ಆರ್ಚ್ ಲಿನಕ್ಸ್ (Arch linux) ಆರ್ಚ್ ಲಿನಕ್ಸ್ ವಿತರಣೆಯು ಐದು ತತ್ವಗಳಿಗೆ ಬದ್ಧವಾಗಿದೆ. ಈ ತತ್ವಗಳು ಸರಳತೆ, ಆಧುನಿಕತೆ, ವಾಸ್ತವಿಕವಾದ, ಬಳಕೆದಾರ ಕೇಂದ್ರೀಕರಣ, ಹಾಗು ಬಹುಮುಖತೆ. ವಿಸ್ತರಣೆ ಆಧಾರಗಳು ಇತರ ತಾಣಗಳು ಲೈನಸ್ ನ ತಾಣ ಲಿನಕ್ಸ್ ತಾಣ ಫೆಡೋರ ತಾಣ ರೆಡ್ ಹ್ಯಾಟ್ ತಾಣ ಮ್ಯಾಂಡ್ರಿವ ತಾಣ ಜೆಂಟೊ ತಾಣ ಲಿನ್ಸ್ಪೈರ್ ತಾಣ ಝಾಂದ್ರೊಸ್ ಸ್ಲೆಕ್ವೇರ್ ಡೆಬಿಯನ್ ಮೆಪಿಸ್ ತಂತ್ರಜ್ಞಾನ ಲಿನಕ್ಸ್ ವಿತರಣೆಗಳು ಗಣಕಯಂತ್ರ ಕಾರ್ಯನಿರ್ವಹಣ ಸಾಧನ ಮುಕ್ತ ತಂತ್ರಾಂಶಗಳು
1769
https://kn.wikipedia.org/wiki/%E0%B2%A8%E0%B3%8D%E0%B2%AF%E0%B2%BE%E0%B2%A8%E0%B3%8B%E0%B2%A4%E0%B2%82%E0%B2%A4%E0%B3%8D%E0%B2%B0%E0%B2%9C%E0%B3%8D%E0%B2%9E%E0%B2%BE%E0%B2%A8
ನ್ಯಾನೋತಂತ್ರಜ್ಞಾನ
ನ್ಯಾನೋತಂತ್ರಜ್ಞಾನ ಅಥವಾ ನ್ಯಾನೋಟೆಕ್ನಾಲಜಿ ನ್ಯಾನೋಮೀಟರ್ ಪ್ರಮಾಣದಲ್ಲಿ ಮಾಡಲಾಗುವ ಯಾವುದೇ ತಂತ್ರಜ್ಞಾನ ಅಭಿವೃದ್ಧಿಯನ್ನು ಒಳಗೊಂಡಿರುತ್ತದೆ (ಸಾಧಾರಣವಾಗಿ ೦.೧ ರಿಂದ ೧೦೦ ನ್ಯಾ.ಮೀ.). ಒಂದು ನ್ಯಾನೋಮೀಟರ್ ಎಂದರೆ ಒಂದು ಮಿಲ್ಲಿ ಮೀಟರ್‌ ನ ಸಾವಿರದ ಒಂದನೇ ಅಂಶ. ಕೆಲವೊಮ್ಮೆ ಈ ಶಬ್ಧವನ್ನು ಮೈಕ್ರೋಸ್ಕೋಪಿಕ್ ತಂತ್ರಜ್ಞಾನವನ್ನು ಉಲ್ಲೇಖಿಸಲು ಉಪಯೋಗಿಸಲಾಗುತ್ತದೆ. ನ್ಯಾನೊಟೆಕ್ನಾಲಜಿ ( "ನ್ಯಾನೊತಾಂತ್ರಿಕ") ಒಂದು, ಪರಮಾಣು ಆಣ್ವಿಕ ಮತ್ತು ಸುಪ್ರಮೊಲೆಕೂಲರ್ ಪ್ರಮಾಣದಲ್ಲಿ ಮ್ಯಾಟರ್ಗಳನ್ನೂ ಬದಲಾಯಿಸುವ ಒಂದು ವಿಧಿ. ನ್ಯಾನೊತಂತ್ರಜ್ಞಾನದ ಆರಂಭಿಕ ವ್ಯಾಪಕ ವಿವರಣೆ ನಿಖರವಾಗಿ ಅತಿಸೂಕ್ಷ್ಮ ಉತ್ಪನ್ನಗಳ ತಯಾರಿಕೆ ಎಂದು ಹೇಳಲಾಗುವ , ಪರಮಾಣುಗಳ ಮತ್ತು ಕಣಗಳ ನಿರ್ವಹಣೆ ನಿರ್ದಿಷ್ಟ ತಾಂತ್ರಿಕ ಗುರಿ ಎಂದು ಕರೆಯಲಾಗುತಿತ್ತು, ಈಗ ಅಣುಗಳ ನ್ಯಾನೊತಂತ್ರಜ್ಞಾನ ಎಂದು ಕರೆಯಲಾಗುತ್ತದೆ. ನ್ಯಾನೊತಂತ್ರಜ್ಞಾನದ ಒಂದು ಸಾಮಾನ್ಯ ವಿವರಣೆ ತರುವಾಯ ಮ್ಯಾಟರ್ ಕನಿಷ್ಠ ಒಂದು ಆಯಾಮ 1 100 ನ್ಯಾನೋಮೀಟರುಗಳಷ್ಟು ಗಾತ್ರದ ಜೊತೆ ನ್ಯಾನೊತಂತ್ರಜ್ಞಾನದ ವ್ಯಾಖ್ಯಾನಿಸುವ ರಾಷ್ಟ್ರೀಯ ನ್ಯಾನೊಟೆಕ್ನಾಲಜಿ ಇನಿಶಿಯೇಟಿವ್, ಸ್ಥಾಪಿಸಿದರು. ಈ ವ್ಯಾಖ್ಯಾನವು ಕ್ವಾಂಟಂ ಯಾಂತ್ರಿಕ ಪರಿಣಾಮಗಳು ಈ ಪರಿಮಾಣ-ಕ್ಷೇತ್ರದಲ್ಲಿ ಪ್ರಮಾಣದ ಮುಖ್ಯ ಎಂಬುದನ್ನು ಪ್ರತಿಬಿಂಬಿಸುತ್ತದೆ, ಮತ್ತು ಆದ್ದರಿಂದ ವ್ಯಾಖ್ಯಾನ ಸಂಭವಿಸುವ ಮ್ಯಾಟರ್ ವಿಶೇಷ ಗುಣಗಳನ್ನು ವ್ಯವಹರಿಸಲು ಸಂಶೋಧನೆ ಮತ್ತು ತಂತ್ರಜ್ಞಾನಗಳ ಎಲ್ಲಾ ರೀತಿಯ ಸೇರಿದೆ ಸಂಶೋಧನಾ ವರ್ಗದ ಒಂದು ನಿರ್ದಿಷ್ಟ ತಾಂತ್ರಿಕ ಗುರಿ ಬದಲಾಯಿತು ನಿಗದಿತ ಗಾತ್ರದ ಮಿತಿ ಕಮ್ಮಿಯಾಯಿತು.ಅದರ ಸಾಮಾನ್ಯ ಲಕ್ಷಣ ಗಾತ್ರ ಸಂಶೋಧನೆ ಮತ್ತು ಅನ್ವಯಗಳ ವ್ಯಾಪಕ ಉಲ್ಲೇಖಿಸಲು ಈ ಪದವು ಬಹುವಚನದ ರೂಪದಲ್ಲಿ "ನ್ಯಾನೊಟೆಕ್ನಾಲಜೀಸ್" ಹಾಗೂ "ನ್ಯಾನೊಪ್ರಮಾಣದ ತಂತ್ರಜ್ಞಾನಗಳು" ನೋಡಲು ಆದ್ದರಿಂದ ಸಾಮಾನ್ಯವಾಗಿದೆ. ಏಕೆಂದರೆ ಸಂಭಾವ್ಯ ಅನ್ವಯಗಳನ್ನು (ಕೈಗಾರಿಕಾ ಮತ್ತು ಸೇನಾ ಸೇರಿದಂತೆ) ವಿವಿಧ ಸರ್ಕಾರಗಳು ನ್ಯಾನೊತಂತ್ರಜ್ಞಾನ ಸಂಶೋಧನೆಯಲ್ಲಿ ಬಿಲಿಯನ್ಗಟ್ಟಲೆ ಡಾಲರ್ ಬಂಡವಾಳ ತೊಡಗಿಸಿದ್ದಾರೆ. 2012 ರವರೆಗೆ, ತನ್ನ ರಾಷ್ಟ್ರೀಯ ನ್ಯಾನೊಟೆಕ್ನಾಲಜಿ ಇನಿಶಿಯೇಟಿವ್ ಮೂಲಕ, ಅಮೇರಿಕಾ 3.7 ಬಿಲಿಯನ್ ಡಾಲರ್ ಹೂಡಿಕೆ ಮಾಡಿದೆ, ಯುರೋಪಿಯನ್ ಯೂನಿಯನ್ 1.2 ಶತಕೋಟಿ ಹಾಗು ಜಪಾನ್ 750 ಮಿಲಿಯನ್ ಡಾಲರ್ ಹೂಡಿಕೆ. ನ್ಯಾನೊಟೆಕ್ನಾಲಜಿ ಮೇಲ್ಮೈ ಗಾತ್ರ ಅಧಾರಿತವಾಗಿ ಬಹಳ ರೀತಿಯಲ್ಲಿ ವ್ಯಾಖ್ಯಾನಿಸಲಾಗಿದೆ ಅವುಗಳು ವಿಜ್ಞಾನ ಸಾವಯವ ರಸಾಯನಶಾಸ್ತ್ರ, ಅಣು ಜೀವಶಾಸ್ತ್ರ, ಅರೆವಾಹಕ ಭೌತಶಾಸ್ತ್ರ, ಮಿಕ್ರೊಫಬ್ರಿಕಶನ್, ಅಣು ಎಂಜಿನಿಯರಿಂಗ್, ಇತ್ಯಾದಿ ವೈವಿಧ್ಯಮಯ ವಿಜ್ಞಾನದ ಜಾಗ ಸೇರಿದಂತೆ ನೈಸರ್ಗಿಕವಾಗಿ ಬಹಳ ವಿಶಾಲವಾಗಿದೆ ಸಂಬಂಧಿಸಿದ ಸಂಶೋಧನೆ ಮತ್ತು ಅಳವಡಿಕೆಗೆ ಪರಮಾಣು ಮಾಪಕದ ಮ್ಯಾಟರ್ ನಿಯಂತ್ರಣಕ್ಕೆ ನಿರ್ದೇಶನ ನ್ಯಾನೊಪ್ರಮಾಣದ ಮೇಲೆ ಆಯಾಮಗಳನ್ನು ಹೊಸ ವಸ್ತುಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ, ಸಾಂಪ್ರದಾಯಿಕ ಸಾಧನ ಭೌತಶಾಸ್ತ್ರದ ವಿಸ್ತರಣೆಗಳನ್ನು ಅಣುಗಳ ಸ್ವಯಂ ಜೋಡಣೆ ಆಧಾರದ ಮೇಲೆ ಸಂಪೂರ್ಣವಾಗಿ ಹೊಸ ಮಾರ್ಗಗಳನ್ನು ಹಿಡಿದು ಅಭಿವೃದ್ದಿ ಕಾರ್ಯ ನಡೆದಿದೆ. ವಿಜ್ಞಾನಿಗಳು ಪ್ರಸ್ತುತ ನ್ಯಾನೊತಂತ್ರಜ್ಞಾನದ ಭವಿಷ್ಯದ ಪರಿಣಾಮಗಳನ್ನು ಚರ್ಚಿಸುತ್ತಿದ್ದಾರೆ. ನ್ಯಾನೊಟೆಕ್ನಾಲಜಿ ಇಂತಹ ನ್ಯಾನೋಮೆಡಿಸಿನ್, ನಾನೋ ಎಲೆಕ್ಟ್ರಾನಿಕ್ಸ್, ಜೈವಿಕ ಶಕ್ತಿಯ ಉತ್ಪಾದನೆ, ಮತ್ತು ಗ್ರಾಹಕ ಉತ್ಪನ್ನಗಳಲ್ಲಿ ಅನ್ವಯಗಳ ವ್ಯಾಪಕ ಶ್ರೇಣಿಯ ಅನೇಕ ಹೊಸ ವಸ್ತುಗಳನ್ನು ಮತ್ತು ಸಾಧನಗಳನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ. ಮತ್ತೊಂದೆಡೆ, ನ್ಯಾನೊತಂತ್ರಜ್ಞಾನದ ಅದೇ ವಿಷಯಗಳ ಅನೇಕ ಹೊಸ ತಂತ್ರಜ್ಞಾನ, ವಿಷಕಾರಕ ಮತ್ತು ನ್ಯಾನೊವಸ್ತುಗಳ ಪರಿಸರ ಪರಿಣಾಮ, ಬಗ್ಗೆ ಸೇರಿದಂತೆ ಹಲವಾರು ತೊಂದರೆ ಹುಟ್ಟುಹಾಕುತ್ತದೆ ಮತ್ತು ವಿವಿಧ ಪ್ರಳಯ ಸನ್ನಿವೇಶಗಳಲ್ಲಿ ಬಗ್ಗೆ ಊಹಾಪೋಹದ ಜಾಗತಿಕ ಆರ್ಥಿಕತೆ ತಮ್ಮ ಸಂಭಾವ್ಯ ಪರಿಣಾಮಗಳ ಈ ಕಾಳಜಿಗಳು ನ್ಯಾನೊತಂತ್ರಜ್ಞಾನದ ವಿಶೇಷ ನಿಯಂತ್ರಣ ಆಗಬೇಕಿದೆ ಎಂಬುದನ್ನು ಸಮರ್ಥನಾ ಗುಂಪುಗಳು ಮತ್ತು ಸರ್ಕಾರಗಳು ನಡುವೆ ಚರ್ಚೆ ಕಾರಣವಾಗಿವೆ. ಮೂಲ ನ್ಯಾನೊತಂತ್ರಜ್ಞಾನದ ಶ್ರೇಯಾಂಕದ ಕಲ್ಪನೆಗಳನ್ನು ತನ್ನ ಚರ್ಚೆಗೆ ಹೆಸರಾದ ಭೌತವಿಜ್ಞಾನಿ ರಿಚರ್ಡ್ ಫೆನ್ಮನ್ 1959 ರಲ್ಲಿ ಕೆಳಭಾಗದಲ್ಲಿ ಸಾಕಷ್ಟು ಕೋಣೆಗಳು ಇಲ್ಲ ಎಂಬ ಚರ್ಚೆಯಲ್ಲಿ ಚರ್ಚಿಸಿದರು. ಆತ ಪರಮಾಣುಗಳ ನೇರ ಕುಶಲ ನಿರ್ವಹಣೆಯ ಮೂಲಕ ಸಂಶ್ಲೇಷಣೆ ಸಾಧ್ಯತೆಯನ್ನು ವಿವರಿಸಿದ್ದಾರೆ . ಪದ "ನ್ಯಾನೋ ತಂತ್ರಜ್ಞಾನ" ಮೊದಲು 1974 ರಲ್ಲಿ ನೊರಿಒ ತನಿಗುಚಿ ಮೂಲಕ ಆವಿಷ್ಕಾರವಾದರು ಅದು ವ್ಯಾಪಕವಾಗಿ ತಿಳಿದಿರಲಿಲ್ಲ ಆದರೂ ಬಳಸಲಾಯಿತು. ಫೆನ್ಮನ್ನ ಪರಿಕಲ್ಪನೆಗಳು ಸ್ಫೂರ್ತಿ, ಕೆ ಎರಿಕ್ ಡ್ರೆಕ್ಸ್ಲರ್ ಪದ "ನ್ಯಾನೊತಂತ್ರಜ್ಞಾನದ" ಬಳಸಲಾಗುತ್ತದೆ ಸೃಷ್ಟಿ ತನ್ನ 1986 ಪುಸ್ತಕ ಎಂಜಿನ್: ಒಂದು ನ್ಯಾನೊಪ್ರಮಾಣದ "ಅಸೆಂಬ್ಲರ್" ಸ್ವತಃ ಪ್ರತಿಯನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಇದು ಕಲ್ಪನೆಯನ್ನು ಸೂಚಿಸುತ್ತದೆ ನ್ಯಾನೊತಂತ್ರಜ್ಞಾನದ ಬರುವ ಯುಗದ ಮತ್ತು ಪರಮಾಣು ನಿಯಂತ್ರಣ ಅನಿಯಂತ್ರಿತ ಸಂಕೀರ್ಣತೆಯ ಮತ್ತು ಇತರ ವಸ್ತುಗಳ ಉಲ್ಲೇಖ ಮಾಡಲಾಗಿದೆ . 1986 ರಲ್ಲಿ ಸಹ ಡ್ರೆಕ್ಸ್ಲರ್ ಸಾರ್ವಜನಿಕ ಅರಿವು ಮತ್ತು ನ್ಯಾನೊತಂತ್ರಜ್ಞಾನ ಪರಿಕಲ್ಪನೆಗಳು ಮತ್ತು ಪರಿಣಾಮಗಳು ತಿಳುವಳಿಕೆ ಹೆಚ್ಚಿಸಲು ಸಹಾಯ ದೂರದೃಷ್ಟಿ ಇನ್ಸ್ಟಿಟ್ಯೂಟ್ ಸ್ಥಾಪಿಸಲಾಯಿತು. ಹೀಗಾಗಿ, 1980 ರಲ್ಲಿ ಒಂದು ಕ್ಷೇತ್ರವಾಗಿ ನ್ಯಾನೊತಂತ್ರಜ್ಞಾನದ ಹುಟ್ಟು ಅಭಿವೃದ್ಧಿ ಮತ್ತು ನ್ಯಾನೊತಂತ್ರಜ್ಞಾನ ಒಂದು ಕಾಲ್ಪನಿಕ ಚೌಕಟ್ಟಿನಲ್ಲಿ ಜನಪ್ರಿಯಗೊಳಿಸಿದರು ಡ್ರೆಕ್ಸ್ಲರ್ ಸೈದ್ಧಾಂತಿಕ ಮತ್ತು ಲೋಕೋಪಯೋಗಿ, ಒಂದೆಡೆ ಮೂಲಕ ಸಂಭವಿಸಿದೆ, ಮತ್ತು ಉನ್ನತ ಗೋಚರತೆಯನ್ನು ಪರಮಾಣು ನಿಯಂತ್ರಣ ಭವಿಷ್ಯ ಹೆಚ್ಚುವರಿ ವ್ಯಾಪಕ ಗಮನ ಸೆಳೆದರು ಪ್ರಾಯೋಗಿಕ ಬೆಳವಣಿಗೆಗಳು ನಡೆದವು. 1980 ರಲ್ಲಿ, ಎರಡು ಪ್ರಮುಖ ಪ್ರಗತಿಗಳು ಆಧುನಿಕ ಯುಗದಲ್ಲಿ ನ್ಯಾನೊತಂತ್ರಜ್ಞಾನದ ಬೆಳವಣಿಗೆ ಕಿಡಿ ಆಯಿತು. ಮೊದಲ, ಆವಿಷ್ಕಾರ 1981 ರಲ್ಲಿ ಸ್ಕ್ಯಾನಿಂಗ್ ಟನಲಿಂಗ್ ಸೂಕ್ಷ್ಮದರ್ಶಕ ಪ್ರತ್ಯೇಕ ಅಣುಗಳು ಮತ್ತು ಬಂಧಗಳ ಅಭೂತಪೂರ್ವ ದೃಶ್ಯೀಕರಣ ನೀಡುತ್ತದೆ, ಮತ್ತು ಯಶಸ್ವಿಯಾಗಿ 1989 ರಲ್ಲಿ ವೈಯಕ್ತಿಕ ಪರಮಾಣುಗಳಿಗೆ ಕುಶಲತೆಯಿಂದ ಉಪಯೋಗಿಸಲಾಗಿತ್ತು ಸೂಕ್ಷ್ಮದರ್ಶಕದ ಅಭಿವರ್ಧಕರು ಗರ್ಡ್ ಬಿನ್ನಿಂಗ್ ಮತ್ತು ಹೆನ್ರಿಕ್ ಅರ್ನೆಸ್ಟ್ ಐಬಿಎಂ ಜ್ಯೂರಿಚ್ ರೀಸರ್ಚ್ ಲ್ಯಾಬೋರೇಟರಿ ರಲ್ಲಿ ನೋಬೆಲ್ ಪ್ರಶಸ್ತಿಯನ್ನು ಪಡೆದರು 1986 ರಲ್ಲಿ ಭೌತಶಾಸ್ತ್ರದಲ್ಲಿ ಬಿನ್ನಿಂಗ್ , ಕುಅತೆ ಮತ್ತು ಗರ್ಬರ್, ಅದೇ ವರ್ಷ ಹೋಲುವ ಅಣು ಬಲ ಸೂಕ್ಷ್ಮ ಕಂಡುಹಿಡಿದರು. ಉಲ್ಲೇಖಗಳು ಬಾಹ್ಯ ಕೊಂಡಿಗಳು What is Nanotechnology? (A Vega/BBC/OU Video Discussion) ತಂತ್ರಜ್ಞಾನ
1772
https://kn.wikipedia.org/wiki/%E0%B2%AD%E0%B2%BE%E0%B2%B0%E0%B2%A4%E0%B3%80%E0%B2%AF%20%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8%20%E0%B2%B8%E0%B2%82%E0%B2%B8%E0%B3%8D%E0%B2%A5%E0%B3%86
ಭಾರತೀಯ ವಿಜ್ಞಾನ ಸಂಸ್ಥೆ
ಐಐಎಸ್‍ಸಿ ಭಾರತೀಯ ವಿಜ್ಞಾನ ಸಂಸ್ಥೆಯು (Indian Institute of Science(IISc)) ಭಾರತದ ಪ್ರಮುಖ ಸ್ನಾತಕೋತ್ತರ, ಸಂಶೋಧನೆ ಹಾಗೂ ಉಚ್ಚ ಶಿಕ್ಷಣ ಸಂಸ್ಥೆಯಾಗಿ ಹೆಸರುವಾಸಿಯಾಗಿದ್ದು , ಬೆಂಗಳೂರಿನಲ್ಲಿದೆ. ಜಮ್ಷೇಟ್ಜಿ ಟಾಟಾ ಹಾಗೂ ಮೈಸೂರಿನ ಮಹಾರಾಜ ಎಚ್.ಎಚ್ ಶ್ರೀ ಕೃಷ್ಣರಾಜ ಒಡೆಯರ್ ರವರ ಸಕ್ರಿಯ ನೆರವಿನೊಂದಿಗೆ ೧೯೦೯ ರಲ್ಲಿ ಸ್ಥಾಪಿಸಲಾಯಿತು. ಕೃಷ್ಣರಾಜ ಒಡೆಯರ್ ೩೭೧ ಎಕರೆ (೧.೫೦ ಕಿಮೀ ಚದರಡಿ) ಭೂಮಿ ದಾನ ಮಾಡಿದರು. ಹಾಗೇ ಜೆಮ್ಷೇಟ್ಜೀ ಟಾಟಾರವರು ಐಐಎಸ್ಸಿ ಸೃಷ್ಟಿಗೆ ಹಲವಾರು ಕಟ್ಟಡಗಳ ಯೋಜನೆಯನ್ನು ನೀಡಿದರು. ಈ ಸಂಸ್ಥೆಯನ್ನು ಸ್ಥಳೀಯವಾಗಿ "ಟಾಟಾ ಇನ್ಸ್ಟಿಟ್ಯೂಟ್" ಎಂದು ಕರೆಯಲಾಗುತ್ತದೆ. ಸಂಸ್ಥೆಯ ೩೭ ಅಭಿಯಂತ್ರಿಕ/ವಿಜ್ಞಾನ ವಿಭಾಗಗಳಲ್ಲಿ ೨೦೦೦ಕ್ಕೂ ಹೆಚ್ಚು ಸಂಶೋಧಕ ವಿದ್ಯಾರ್ಥಿಗಳು ಸ್ನಾತಕೋತ್ತರ/ ಪಿ.ಎಚ್.ಡಿ ಪದವಿಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ಕರೆಂಟ್ ಸೈನ್ಸ್ (Current Science) ಪತ್ರಿಕೆಯು ಸಂಸ್ಥೆಯ ಸಂಶೋಧನಾ ಕೆಲಸದ ಆಧಾರದ ಮೇರೆಗೆ IISc ಗೆ ಪ್ರಥಮ ಸ್ಥಾನ ನೀಡಿದೆ. ವಿಶ್ವಪ್ರಸಿದ್ಧಿಯ ಹಾದಿಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ 20 Mar, 2017; ಇತ್ತೀಚೆಗೆ ಟೈಮ್ಸ್ ಹೈಯರ್ ಎಜುಕೇಶನ್ ಸರ್ವೆ ನಡೆಸಿದ ಜಾಗತಿಕ ವಿಶ್ವವಿದ್ಯಾಲಯಗಳ ಸಮೀಕ್ಷೆಯಲ್ಲಿ – ಐದು ಸಾವಿರಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ – ಜಗತ್ತಿನ ಅತ್ಯಂತ ಶ್ರೇಷ್ಠ ಸಂಸ್ಥೆಗಳಲ್ಲಿ ಎಂಟನೆಯ ಸ್ಥಾನವನ್ನು ಪಡೆಯುವ ಮೂಲಕ ಸಮಸ್ತ ಭಾರತೀಯರಿಗೂ ಐ.ಐ.ಎಸ್‌ಸಿ.(ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್‌ ಸೈನ್ಸ್ - ಐ.ಐ.ಎಸ್‌ಸಿ. ಅಥವಾ ‘ಟಾಟಾ ಇನ್ಸ್‌ಟಿಟ್ಯೂಟ್’ ಎಂದೇ ಜಾಗತಿಕವಾಗಿ ಚಿರಪರಿಚಿತವಾಗಿರುವ ಸಂಶೋಧನಾ ಸಂಸ್ಥೆ) ಹೆಮ್ಮೆ ತಂದಿದೆ. ಉನ್ನತ ಶಿಕ್ಷಣದ ರ್‍ಯಾಂಕಿಂಗ್ ಮತ್ತದರ ಲಾಭಗಳು ವಿಜ್ಞಾನ-ತಂತ್ರಜ್ಞಾನದ ಹೊಸ ಆವಿಷ್ಕಾರಗಳ ಮೂಲಕ ಮಾನವನ ಮತ್ತು ಜಗತ್ತಿನ ಕಲ್ಯಾಣದ ಸಾಧ್ಯತೆಗಳೇನೆಂಬುದನ್ನು ಇಪ್ಪತ್ತನೆಯ ಶತಮಾನದಲ್ಲಿ ನಾವು ಕಂಡುಕೊಂಡಿದ್ದೇವೆ. ಹಾಗಾಗಿಯೇ ಇಂದು ಜಗತ್ತಿನ ಎಲ್ಲಾ ದೇಶಗಳು ತಮ್ಮ ಅಭಿವೃದ್ಧಿಯಲ್ಲಿ ಉನ್ನತ ಶಿಕ್ಷಣ ಮತ್ತು ಸಂಶೋಧನೆಯನ್ನು ಬಹಳ ಪ್ರಮುಖವಾದ ಸಾಧನವೆಂದು ಗುರುತಿಸಿವೆ. ಜ್ಞಾನದ ಉತ್ಪತ್ತಿ ಮತ್ತು ಪ್ರಸರಣವನ್ನು ಹೆಚ್ಚು ಸಮರ್ಪಕವಾಗಿ ನಿರ್ವಹಿಸಲು ಜಗತ್ತಿನಾದ್ಯಂತ ಅನೇಕ ಸಂಸ್ಥೆಗಳು ಬೋಧನೆ, ಸಂಶೋಧನೆ, ಅದರ ಆನ್ವಯಿಕತೆ, ಮೂಲಭೂತ ವ್ಯವಸ್ಥೆಗಳು ಇತ್ಯಾದಿ ಅನೇಕ ಮಾನದಂಡಗಳನ್ನಿಟ್ಟುಕೊಂಡು ಜಗತ್ತಿನಾದ್ಯಂತ ಜ್ಞಾನ ಹೇಗೆ ಬೆಳೆಯುತ್ತಿದೆ ಎಂಬುದನ್ನು ಅಳತೆ ಮಾಡುತ್ತವೆ. ಉದಾಹರಣೆಗೆ ಅಕಾಡಮಿಕ್ ರ್‍ಯಾಂಕಿಂಗ್ ಆಫ್ ವರ್ಲ್ಡ್ ಯೂನಿವರ್ಸಿಟೀಸ್ (ಶಾಂಘೈ ರ್‍ಯಾಂಕಿಂಗ್), ಸೆಂಟರ್ ಫಾರ್ ವರ್ಲ್ಡ್ ಯೂನಿವರ್ಸಿಟಿ ರ್‍ಯಾಂಕಿಂಗ್್ಸ್, ಗ್ಲೋಬಲ್ ಯೂನಿವರ್ಸಿಟಿ ರ್‍ಯಾಂಕಿಂಗ್ಸ್‌, ಎಚ್‌ಇಇಎಸಿಟಿ, ಲೀಡೆನ್ ರ್‍ಯಾಂಕಿಂಗ್ಸ್‌, ಕ್ಯುಎಸ್ ವರ್ಲ್ಡ್ ಯೂನಿವರ್ಸಿಟೀಸ್, ಟೈಮ್ಸ್ ಹೈಯರ್ ಎಜ್ಯುಕೇಶನ್ ಯೂನಿವರ್ಸಿಟಿ ರ್‍ಯಾಂಕಿಂಗ್್ಸ್ ಇತ್ಯಾದಿ ಅನೇಕ ಸಂಸ್ಥೆಗಳು ವಿಶ್ವವಿದ್ಯಾನಿಲಯಗಳ ಸಮೀಕ್ಷೆಯನ್ನು ಜಾಗತಿಕ ಮಟ್ಟದಲ್ಲಿ ನಡೆಸುತ್ತವೆ. ಈ ಸಮೀಕ್ಷೆಗಳ ವಿಶ್ಲೇಷಣೆ ಮೂಲಕ ನಿರ್ದಿಷ್ಟ ಸಂಸ್ಥೆಯೊಂದು ಯಾವ ಕ್ಷೇತ್ರದಲ್ಲಿ ತನ್ನ ಶಿಕ್ಷಣದ ಗುಣಮಟ್ಟಕ್ಕಾಗಿ ಯಾವ ರೀತಿಯ ಒತ್ತನ್ನು ನೀಡಬೇಕೆಂಬುದನ್ನು ಗುರುತಿಸಿಕೊಳ್ಳಬಹುದು. ಅಂದರೆ ಬೋಧನೆ, ಬೋಧನಾ ಕೌಶಲ, ನಿಯತಕಾಲಿಕೆಗಳಲ್ಲಿ ಪ್ರಕಟಣೆ, ಪೇಟೆಂಟ್ ಇತ್ಯಾದಿಗಳಲ್ಲಿ ಯಾವ ಕ್ಷೇತ್ರದಲ್ಲಿ ಸಂಸ್ಥೆಯೊಂದು ನಿರ್ದಿಷ್ಟವಾಗಿ ಇಂದು ಯಾವ ಸ್ಥಿತಿಯಲ್ಲಿದೆ ಮತ್ತು ಮುಂದೆ ಕ್ರಮಿಸಬೇಕಾದ ಹಾದಿಯೇನು ಎಂದು ಈ ಸಮೀಕ್ಷೆಗಳ ಮೂಲಕ ಸ್ಪಷ್ಟವಾಗುತ್ತದೆ. ಇಂತಹ ಮಾನದಂಡಗಳ ಕುರಿತಾದಂತೆ ತಕರಾರುಗಳೇನೇ ಇದ್ದರೂ ಈ ಸಮೀಕ್ಷೆಗಳು ವಿಶ್ವವಿದ್ಯಾನಿಯಗಳಿಗೆ ಗುಣಾತ್ಮಕವಾಗಿ ಸಂಶೋಧನೆ ಮತ್ತು ಜ್ಞಾನಪ್ರಸರಣೆಯ ಕಾರ್ಯಕ್ಕೆ ದಿಕ್ಸೂಚಿಯನ್ನು ನೀಡುತ್ತವೆ. ಐ.ಐ.ಎಸ್‌ಸಿ.: ಶತಮಾನದ ಹಾದಿ ಟೈಮ್ಸ್ ಸಮೀಕ್ಷೆಯ ಪ್ರಕಾರ ಜಾಗತಿಕವಾಗಿ ಸಣ್ಣ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಈ ವರ್ಷ ಎಂಟನೆಯ ಸ್ಥಾನಕ್ಕೇರಿರುವ ಐ.ಐ.ಎಸ್‌ಸಿ. ತನ್ನ ಅಸ್ತಿತ್ವದ ಶತಮಾನದ ನಂತರವೂ ನಿರಂತರವಾಗಿ ಸಂಶೋಧನೆಯಲ್ಲಿ ತೊಡಗಿದೆ. 19ನೆಯ ಶತಮಾನದ ಕೊನೆಯ ಭಾಗದಲ್ಲಿ ಸ್ವಾಮಿ ವಿವೇಕಾನಂದರ ಅಣತಿಯಂತೆ ಜೆ. ಎನ್. ಟಾಟಾರವರು ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ಸಹಕಾರದಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನೆಗಾಗಿ ಐ.ಐ.ಎಸ್‌ಸಿ.ಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದರು. ಖ್ಯಾತ ರಸಾಯನಶಾಸ್ತ್ರಜ್ಞ ಮೂರಿಸ್ ಟ್ರಾವರ್ಸ್ ಅವರ ನಿರ್ದೇಶನದಲ್ಲಿ 1909ರಲ್ಲಿ ಐ.ಐ.ಎಸ್‌ಸಿ. ಕೆಲಸ ಪ್ರಾರಂಭಿಸಿತು. ಸರ್ ಸಿ.ವಿ. ರಾಮನ್‌ರವರು ಇಲ್ಲಿಂದಲೇ ನೊಬೆಲ್ ಪಾರಿತೋಷಕವನ್ನು ಪಡೆದಿದ್ದಲ್ಲದೆ ಐ.ಐ.ಎಸ್‌ಸಿ.ಯ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದರು. ವಿಜ್ಞಾನಕ್ಷೇತ್ರದ ದಿಗ್ಗಜಗಳಾದ ಹೋಮಿ ಭಾಭಾ, ವಿಕ್ರಂ ಸಾರಾಭಾಯ್, ಸತೀಶ್ ಧನವ್, ಜೆ.ಸಿ. ಘೋಷ್, ಜಿ.ಎನ್. ರಾಮಚಂದ್ರನ್ – ಹೀಗೆ ಹಲವರು ಮೇಧಾವಿಗಳನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದ ಖ್ಯಾತಿ ಈ ಸಂಸ್ಥೆಯದು. ಐ.ಐ.ಎಸ್‌ಸಿ.ಯ ಸಾಧನೆಗಳು ಶತಮಾನಕ್ಕೂ ಹೆಚ್ಚು ಕಾಲ ಸಂಶೋಧನೆಯಲ್ಲಿ ತೊಡಗಿರುವ ಐ.ಐ.ಎಸ್‌ಸಿ.ಯ ಸಾಧನೆಗಳನ್ನು ಪಟ್ಟಿ ಮಾಡಿದರೆ ಮುಗಿಯಲಾರದಷ್ಟು ದೊಡ್ಡದು. ಅದು ಸಾಮಾನ್ಯ ಹಳ್ಳಿಗನಿಗೂ ಹಿಂದೆ ಪರಿಚಿತವಿದ್ದ ಅಸ್ತ್ರ ಒಲೆಯಿಂದ ಹಿಡಿದು ಸೂಪರ್ ಕಂಪ್ಯೂಟರ್, ನ್ಯಾನೋ ಟೆಕ್ನಾಲಜಿವರೆಗಿನ ವಿಜ್ಞಾನದ ವಿವಿಧ ಕ್ಷೇತ್ರಗಳವರೆಗೆ ಹರಡಿದೆ. ಕೇವಲ ಉನ್ನತ ಶಿಕ್ಷಣದ ಸಮೀಕ್ಷೆಗಳ ಹಿನ್ನೆಲೆಯಲ್ಲಿ ಐ.ಐ.ಎಸ್‌ಸಿ.ಯ ಇತ್ತೀಚಿನ ಕೆಲವೇ ವರ್ಷಗಳ ಸಾಧನೆಗಳನ್ನು ಉದಾಹರಣೆಗಾಗಿ ಪಟ್ಟಿ ಮಾಡಬಹುದು. 1) ಟೈಮ್ಸ್ ಹೈಯರ್ ಎಜ್ಯುಕೇಶನ್ ಯೂನಿವರ್ಸಿಟಿ ರ್‍ಯಾಂಕಿಂಗ್ಸ್‌ 2017: ಜಗತ್ತಿನ ಅಗ್ರಗಣ್ಯ ಸಣ್ಣ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಎಂಟನೆಯ ಸ್ಥಾನ. 2) ಕ್ಯುಎಸ್ ವರ್ಲ್ಡ್ ಯೂನಿವರ್ಸಿಟೀಸ್ ರ್‍ಯಾಂಕಿಂಗ್ಸ್‌ 2016: ನಿಯತಕಾಲಿಕೆಗಳಲ್ಲಿ ವೈಜ್ಞಾನಿಕ ಲೇಖನಗಳ ಪ್ರಕಟಣೆ - 11ನೆಯ ಸ್ಥಾನ. 3) ಕ್ಯುಎಸ್ ವರ್ಲ್ಡ್ ಯೂನಿವರ್ಸಿಟೀಸ್ 2015: ಜಾಗತಿಕ ವಿಶ್ವವಿದ್ಯಾಲಯಗಳಲ್ಲಿ 147ನೆಯ ಸ್ಥಾನ. 4) ಟೈಮ್ಸ್ ಹೈಯರ್ ಎಜ್ಯುಕೇಶನ್ ಯೂನಿವರ್ಸಿಟಿ ರ್‍ಯಾಂಕಿಂಗ್ಸ್‌ ಫಾರ್ ಬ್ರಿಕ್ಸ್ ಆಂಡ್ ಎಮರ್ಜಿಂಗ್ ಇಕನಾಮಿಕ್ಸ್: ಆರನೆಯ ಸ್ಥಾನ. 5) ಗ್ಲೋಬಲ್ ಎಂಪ್ಲಾಯಬಲಿಟಿ ಯೂನಿವರ್ಸಿಟಿ ರ್‍ಯಾಂಕಿಂಗ್ಸ್‌, 2015: ಜಾಗತಿಕವಾಗಿ 20ನೇ ಸ್ಥಾನ. 6) ಅಕಾಡಮಿಕ್ ರ್‍ಯಾಂಕಿಂಗ್ಸ್‌ ಆಫ್ ವರ್ಲ್ಡ್ ಯೂನಿವರ್ಸಿಟೀಸ್: 2011ರಲ್ಲಿ ಮೊದಲ ಬಾರಿಗೆ (ಶಾಂಘೈ ರ್‍ಯಾಂಕಿಂಗ್‌ನಲ್ಲಿ) ಜಾಗತಿಕ ಐದುನೂರು ವಿಶ್ವವಿದ್ಯಾಲಯಗಳ ಪಟ್ಟಿಗೆ ಸೇರಿದ ಮೊದಲ ಭಾರತೀಯ ಸಂಸ್ಥೆ. ನಮಗೆಲ್ಲರಿಗೂ ತಿಳಿದಂತೆ ಭಾರತದಲ್ಲಿ ಆಧುನಿಕ ವಿಜ್ಞಾನವನ್ನು ಅತ್ಯಂತ ಕ್ರಮಬದ್ಧವಾಗಿ ಕಲಿಸುವ ಮತ್ತು ನಿರಂತರ ಸಂಶೋಧನೆಯ ಮೂಲಕ ಮುಂದಿನ ತಲೆಮಾರಿಗೆ ಸಮಗ್ರವಾಗಿ ದಾಟಿಸುವ ಕೆಲಸವನ್ನು ಪ್ರಾರಂಭಿಸಿದ ಕೆಲವೇ ಸಂಸ್ಥೆಗಳಲ್ಲಿ ಐ.ಐ.ಎಸ್‌ಸಿ.ಯೂ ಒಂದು. ಒಂದರ್ಥದಲ್ಲಿ ಸಂಶೋಧನಾ ವಾತಾವರಣ ಮತ್ತು ಅದಕ್ಕೆ ಪೂರಕವಾಗಿ ಬೇಕಾಗಿರುವ ಎಲ್ಲ ಸಂಗತಿಗಳ ಕುರಿತು ಪ್ರಯೋಗ ಮಾಡಿ ಅದನ್ನು ಅಭಿವೃದ್ಧಿಗೊಳಿಸಿದ ಕೀರ್ತಿಯಲ್ಲೂ ಐ.ಐ.ಎಸ್‌ಸಿ.ಗೆ ಹೆಚ್ಚಿನ ಪಾಲು ಸಲ್ಲುತ್ತದೆ. ಐ.ಐ.ಎಸ್‌ಸಿ.ಯ ಕಾರ್ಯವ್ಯಾಪ್ತಿಯು ವಿಜ್ಞಾನದ ನಿಯತಕಾಲಿಕೆಗಳಿಂದ ಮೊದಲುಗೊಂಡು ಪ್ರಯೋಗಶಾಲೆಗಳವರೆಗೆ, ತರಬೇತಿಯಿಂದ ಹಿಡಿದು ಸಾಮಾನ್ಯ ಜನರ ಸಮಸ್ಯೆಯವರೆಗೆ, ಎಲ್ಲ ರೀತಿಯಲ್ಲೂ ಯೋಚಿಸಿ, ಅದಕ್ಕೆ ಪೂರಕ ಮೂಲಭೂತ ಸೌಕರ್ಯಗಳನ್ನು ಸಜ್ಜುಗೊಳಿಸುವವರೆಗೆ ಈ ಪ್ರಯತ್ನಗಳು ವಿಸ್ತರಿಸಿವೆ. ಆ ಕಾರಣಕ್ಕಾಗಿಯೇ ಒಂದರ್ಥದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯು ಭಾರತದಲ್ಲಿ ಸಂಶೋಧನೆ ಮಾಡುವ ಸಾಧ್ಯತೆಯ ಬಗ್ಗೆ ನಿರಂತರ ಆಶಾದಾಯಕ ಸ್ಥಿತಿಯನ್ನು ನಿರ್ಮಿಸಿದೆ. ಈಗ ಜಗತ್ತಿನ ಹತ್ತು ಶ್ರೇಷ್ಠ ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ ಭಾರತೀಯರಿಗೆ ಹೊಸ ಸ್ಫೂರ್ತಿಯನ್ನು ಕೊಟ್ಟಿದೆ ಎಂದರೆ ಅತಿಶಯೋಕ್ತಿ ಆಗಲಾರದು. ಸಾಧ್ಯತೆಗಳು ಮತ್ತು ಸವಾಲುಗಳು ಒಂದೆಡೆ ಐ.ಐ.ಎಸ್‌.ಸಿ. ಮತ್ತು ಐ.ಐ.ಟಿ.ಯಂಥ ಸಂಸ್ಥೆಗಳ ಸಾಧನೆಗಳು ನಮಗೆ ಹುರುಪು ತಂದರೆ, ಇನ್ನೊಂದೆಡೆ ಅವು ಅನೇಕ ಪ್ರಶ್ನೆಗಳನ್ನೂ ಸೃಷ್ಟಿಸುತ್ತವೆ. ಇಷ್ಟೆಲ್ಲ ಸಂಸ್ಥೆಗಳಿದ್ದರೂ ಭಾರತದಲ್ಲಿ ಯುವ ಪ್ರತಿಭೆಗಳಿಗೆ ಸಂಶೋಧನೆಯನ್ನು ಒಂದು ವೃತ್ತಿಜೀವನವಾಗಿ ತೋರಿಸಿಕೊಡುವಲ್ಲಿ ವಿಫಲರಾಗಿದ್ದೇವೆ. ಐ.ಟಿ., ಬಿ.ಟಿ., ಕಾರ್ಪೊರೇಟ್ ಉದ್ಯೋಗ ಅಥವಾ ಸಿವಿಲ್ ಸರ್ವೀಸ್‌ಗಳಂತೆ ಸಂಶೋಧನೆಯನ್ನೂ ಆಯ್ಕೆ ಮಾಡಬಹುದಾದ ವೃತ್ತಿಯಾಗಿಸಲು ಇರುವ ತೊಂದರೆಗಳೇನು ಎಂಬುದು ಸ್ಪಷ್ಟವಾಗಿ ತಿಳಿದಿಲ್ಲವೇಕೆ? ಭಾರತದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅವಕಾಶಗಳನ್ನು ಸೃಷ್ಟಿಸಲು ಐ.ಐ.ಎಸ್‌ಸಿ.ಯಂಥದ್ದೇ ಸಂಸ್ಥೆಗಳನ್ನು ಕಟ್ಟುವಲ್ಲಿ ನಾವೇಕೆ ವಿಫಲರಾಗಿದ್ದೇವೆ ಎನ್ನುವುದು ಕೂಡ ಇಂದು ನಮ್ಮ ಮುಂದಿರುವ ಗಂಭೀರವಾದ ಪ್ರಶ್ನೆ. ಐ.ಐ.ಎಸ್‌ಸಿ.ಯ ಸುತ್ತಲೂ ಇರುವ ಕೆಲವು ಜಿಲ್ಲೆಗಳಲ್ಲಿನ ನಾಲ್ಕಾರು ವಿಶ್ವವಿದ್ಯಾಲಯಗಳಲ್ಲಿ ಹೊರಬರುವ ಸಂಶೋಧನೆಗೂ ಐ.ಐ.ಎಸ್‌ಸಿ.ಯ ಸಂಶೋಧನೆಗೂ ಗುಣಾತ್ಮಕವಾಗಿ ಅಜಗಜಾಂತರದಷ್ಟು ವ್ಯತ್ಯಾಸವಿದೆ. ಹಾಗಾದರೆ ಈ ರೀತಿ ಅಪ್ರತಿಮ ಜ್ಞಾನ ಪ್ರಸರಣೆ ಮತ್ತು ಸಂಶೋಧನಾ ಕೌಶಲವನ್ನು ಐ.ಐ.ಎಸ್‌ಸಿ.ಯಿಂದ ಬೇರೆ ಕಡೆಗೂ ಹರಡುವ ಕಾರ್ಯದಲ್ಲಿ ಇರಬಹುದಾದ ತೊಂದರೆ ಏನು ಎಂಬುದು ನಮಗೆ ಅರ್ಥವಾದಂತಿಲ್ಲ. ಬೇರೆ ಬೇರೆ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಯ ನಂತರ ವಿಜ್ಞಾನಸಂಸ್ಥೆಗೆ ಬರುವುದು ಇದುವರೆಗೂ ವಾಡಿಕೆಯಾಗಿತ್ತು. ಈಗ ಐ.ಐ.ಎಸ್‌ಸಿ. ಸ್ವತಃ ಸ್ನಾತಕ ಪದವಿಗಳನ್ನು ಪ್ರಾರಂಭಿಸಿರುವುದು, ಐ.ಐ.ಎಸ್‌ಸಿ.ಗೂ ಇತರ ವಿಶ್ವವಿದ್ಯಾಲಯಗಳಿಗೂ ಇದ್ದ ಸಂಬಂಧವನ್ನು ಮತ್ತಷ್ಟು ಮೊಟಕುಗೊಳಿಸಿದೆ. ಇದಲ್ಲದೆ ಐ.ಐ.ಎಸ್‌ಸಿ. ಇಂದು ಒಂದು ಕಡೆ ಜಗತ್ತಿನ ವಿವಿಧ ಉನ್ನತ ಶಿಕ್ಷಣ ಪಡೆಯಲು ರಹದಾರಿಯಂತೆ ಕಂಡರೆ, ಮತ್ತೊಂದೆಡೆ ವಿದ್ಯಾರ್ಥಿಗಳಿಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಸಂಬಳವನ್ನು ಪಡೆಯುವ ಉದ್ಯೋಗದ ಮಾರ್ಗೋಪಾಯವಾಗಿಯೂ ಕಾಣುತ್ತಿದೆ. ಇದೊಂದು ಕಳವಳಕಾರಿ ಸಂಗತಿ ಎನ್ನುವುದು ವಿಜ್ಞಾನಕ್ಷೇತ್ರದ ಹಲವರು ಗಣ್ಯರ ಅಭಿಪ್ರಾಯವಾಗಿದೆ. ಮಾತ್ರವಲ್ಲ, ಈ ವಿಜ್ಞಾನಸಂಸ್ಥೆ ಮೂಲಭೂತ ವಿಜ್ಞಾನದ ಸಂಶೋಧನೆಗಳಿಂದ ದೂರ ಸರಿದು ಆನ್ವಯಿಕಗಳ ಕಡೆಗೆ ಮುಖ ಮಾಡಿರುವುದು ಕೂಡ ಅತ್ಯಂತ ಕಳವಳಕಾರಿ ಬೆಳವಣಿಗೆ. ಇದರ ಜೊತೆಗೆ, ಭಾರತದಲ್ಲಿ ವಿಜ್ಞಾನ – ತಂತ್ರಜ್ಞಾನ ಕ್ಷೇತ್ರದಲ್ಲಿ ಇಷ್ಟು ಮಹತ್ಸಾಧನೆ ಮಾಡುವುದು ಸಾಧ್ಯವಾಗಿರುವಾಗ ಇದೇ ರೀತಿಯಲ್ಲಿ ಸಮಾಜವಿಜ್ಞಾನ ಮತ್ತು ಮಾನವಿಕಗಳ ಅಧ್ಯಯನದಲ್ಲಿಯೂ ಇಂಥ ಸಾಧನೆ ಆಗದಿರುವುದಕ್ಕೆ ಕಾರಣಗಳನ್ನು ಕೇಳಿಕೊಳ್ಳಬೇಕಾಗುತ್ತದೆ. ಈ ಎಲ್ಲ ಪ್ರಶ್ನೆಗಳ ನಡುವೆಯೂ ಐ.ಐ.ಎಸ್‌ಸಿ.ಯ ಸಾಧನೆ ಅತ್ಯಂತ ಮಹತ್ತರ ಹಾಗೂ ಭಾರತೀಯರೆಲ್ಲರೂ ಸಂಭ್ರಮಿಸಬೇಕಾದ ಸಂಗತಿ. ಐಐಎಸ್‍ಸಿ ದೇಶದ ನಂ1 ಶಿಕ್ಷಣ ಸಂಸ್ಥೆ 3 Apr, 2017; ೨೦೧೬-೧೭ ರ ಶ್ರೇಯಾಂಕ ಪಟ್ಟಿ: ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆ ಎಂಬ ಹಿರಿಮೆಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸತತ ಎರಡನೇ ವರ್ಷವೂ ಪಾತ್ರವಾಗಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಬಿಡುಗಡೆ ಮಾಡಿರುವ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳ ವಾರ್ಷಿಕ ರ್ಯಾಂಕಿಂಗ್‌ ಪಟ್ಟಿಯಲ್ಲಿ ಐಐಎಸ್‌ಸಿ ಮೊದಲ ಸ್ಥಾನಗಳಿಸಿದೆ. ಏಳು ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (ಐಐಟಿ) ಮೊದಲ 10 ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಬನಾರಸ್‌ ಹಿಂದೂ ವಿಶ್ವವಿದ್ಯಾಲಯ (ಬಿಎಚ್‌ಯು) 9ನೇ ಸ್ಥಾನ ಮತ್ತು ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ 10ನೇ ಸ್ಥಾನ ಗಳಿಸಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ ಅವರು ಎರಡನೇ ಆವೃತ್ತಿಯ ರ್ಯಾಂಕಿಂಗ್‌ ಅನ್ನು ೨-೪-೨೦೧೭ ಸೋಮವಾರ ಪ್ರಕಟಿಸಿದ್ದಾರೆ. ಕಳೆದ ತಿಂಗಳು ಮಾರ್ಚಿ ೨೦೧೭ ರಲ್ಲಿ ಬಿಡುಗಡೆಯಾದ ಜಗತ್ತಿನ ಮೊದಲ ಹತ್ತು ಅತ್ಯುನ್ನತ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿಯೂ ಐಐಎಸ್‌ಸಿ ಸ್ಥಾನ ಪಡೆದಿತ್ತು. ಜಾಗತಿಕ ಮಟ್ಟದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ನೀಡಲಾಗುವ ‘ಟೈಮ್ಸ್‌ ಉನ್ನತ ಶಿಕ್ಷಣ ರ್‍ಯಾಂಕಿಂಗ್‌’ನಲ್ಲಿ ಐಐಎಸ್‌ಸಿ ಎಂಟನೇ ಸ್ಥಾನ ಗಳಿಸಿತ್ತು. ಆ ಮೂಲಕ, ಅಮೆರಿಕದ ಕ್ಯಾಲಿಫೋರ್ನಿಯಾ ತಂತ್ರಜ್ಞಾನ ಸಂಸ್ಥೆ, ದಕ್ಷಿಣ ಕೊರಿಯಾದ ಪೊಹಾಂಗ್‌ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ಸೇರಿದಂತೆ ಜಗತ್ತಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಸಾಲಿಗೆ ಅದು ಸೇರಿತ್ತು. ಹೆಚ್ಚು ಅನುದಾನ ಸ್ವಾಯತ್ತೆ: ವಾರ್ಷಿಕ ರ್‍ಯಾಂಕಿಂಗ್‌ನಲ್ಲಿ ಅತ್ಯುತ್ತಮ ಸ್ಥಾನ ಪಡೆದ ಶಿಕ್ಷಣ ಸಂಸ್ಥೆಗಳಿಗೆ ಸಚಿವಾಲಯವು ಹೆಚ್ಚು ಅನುದಾನ, ಹೆಚ್ಚಿನ ಸ್ವಾಯತ್ತೆ ಸೇರಿದಂತೆ ಹಲವು ಪ್ರಯೋಜನಗಳನ್ನು ಒದಗಿಸಲಿದೆ. ಆರು ವಿಭಾಗಗಳಲ್ಲಿ ರ‍್ಯಾಂಕ್ ೨೦೧೭ರ ಈ ವರ್ಷ ಆರು ವಿಭಾಗಗಳಲ್ಲಿ ರ‍್ಯಾಂಕ್ ನೀಡಲಾಗಿದೆ. ಸಮಗ್ರ, ಕಾಲೇಜುಗಳು, ವಿಶ್ವವಿದ್ಯಾಲಯಗಳು, ಮ್ಯಾನೇಜ್‌ಮೆಂಟ್‌, ಎಂಜಿನಿಯರಿಂಗ್‌ ಮತ್ತು ಫಾರ್ಮಸಿ ವಿಭಾಗಗಳಲ್ಲಿ ರ‍್ಯಾಂಕ್ ನೀಡಲಾಗಿದೆ. ಐಐಎಸ್‌ಸಿಯು ಸಮಗ್ರ ಮತ್ತು ವಿಶ್ವವಿದ್ಯಾಲಯ ವಿಭಾಗಗಳಲ್ಲಿ ಮೊದಲ ಸ್ಥಾನ ಗಳಿಸಿದೆ. ಕಳೆದ ವರ್ಷ ವಿವಿ ವಿಭಾಗದಲ್ಲಿ ಮೂರನೇ ಸ್ಥಾನದಲ್ಲಿದ್ದ ಜೆಎನ್‌ಯು ಈ ಬಾರಿ ಎರಡನೇ ಸ್ಥಾನಕ್ಕೆ ಏರಿದೆ. ಸಮಗ್ರ ವಿಭಾಗದಲ್ಲಿ ಆರನೇ ರ‍್ಯಾಂಕ್ ಗಳಿಸಿದೆ. ಆಯ್ಕೆ ಕ್ರಮ ರಾಷ್ಟ್ರೀಯ ಸಾಂಸ್ಥಿಕ ರ‍್ಯಾಂಕಿಂಗ್‌ ಚೌಕಟ್ಟಿನ (ಎನ್‌ಐಆರ್‌ಎಫ್‌) ಅಡಿಯಲ್ಲಿ ರ‍್ಯಾಕಿಂಗ್‌ ನೀಡಲಾಗುತ್ತದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ರಚಿಸಿರುವ ಪ್ರಮುಖರ ಸಮಿತಿ ಮಾಡುವ ಶಿಫಾರಸುಗಳ ಮೇಲೆ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳನ್ನು ಆಯ್ಕೆ ಮಾಡಲಾಗುತ್ತದೆ. ಐಐಎಂಬಿಗೆ 2ನೇ ಸ್ಥಾನ ಮ್ಯಾನೇಜ್‌ಮೆಂಟ್‌ ಶಿಕ್ಷಣ ಸಂಸ್ಥೆಗಳ ವಿಭಾಗದಲ್ಲಿ ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ (ಐಐಎಂಬಿ) ಈ ಬಾರಿ ಎರಡನೇ ಸ್ಥಾನಕ್ಕೆ ಕುಸಿದಿದೆ. ಕಳೆದ ವರ್ಷ 2ನೇ ಸ್ಥಾನದಲ್ಲಿದ್ದ ಅಹಮದಾಬಾದ್‌ನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಮೊದಲ ಸ್ಥಾನ ಗಳಿಸಿದೆ. ಎಂಜಿನಿಯರಿಂಗ್‌ ವಿಭಾಗದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ–ಮದ್ರಾಸ್‌ (ಐಐಟಿ–ಮದ್ರಾಸ್‌) ಈ ಬಾರಿಯೂ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಮಾನದಂಡಗಳು ಶಿಕ್ಷಣ ಸಂಸ್ಥೆಗಳಲ್ಲಿರುವ ಸಂಪನ್ಮೂಲ, ಬೋಧನಾ ವಿಧಾನ ಮತ್ತು ಕಲಿಕಾ ಪ್ರಕ್ರಿಯೆ ಅಧ್ಯಯನ ಮತ್ತು ವೃತ್ತಿಪರ ನಡಾವಳಿಗಳು ವಿದ್ಯಾರ್ಥಿಗಳ ತೇರ್ಗಡೆ ಪ್ರಮಾಣ ಶಿಕ್ಷಣ ಸಂಸ್ಥೆಯ ವ್ಯಾಪ್ತಿ ಮತ್ತು ಒಳಗೊಳ್ಳುವಿಕೆ ಗ್ರಹಿಕೆ ನೋಡಿ ಬೆಂಗಳೂರು ಭಾರತದಲ್ಲಿರುವ ವಿಶ್ವವಿದ್ಯಾಲಯಗಳ ಪಟ್ಟಿ ಕರ್ನಾಟಕದ ವಿಶ್ವವಿದ್ಯಾಲಯಗಳು ಹೊರಗಿನ ಸಂಪರ್ಕಗಳು ಭಾರತೀಯ ವಿಜ್ಞಾನ ಸಂಸ್ಥೆಯ ಅಧಿಕೃತ ತಾಣ ವಿವಾದಾಸ್ಪದ ವಿಷಯಗಳ ಚರ್ಚೆಗೆ ಸೈನ್ಸ್‌ ಕಾಂಗ್ರೆಸ್‌ ವೇದಿಕೆಯಾಗಿಯೇ ಇಲ್ಲ. ಸೈನ್ಸ್ ಕಾಂಗ್ರೆಸ್: ಬದಿಗಿಟ್ಟ ಚರ್ಚೆಗಳು; ಟಿ.ಆರ್. ಅನಂತರಾಮು;: 15 ಡಿಸೆಂಬರ್ 2018 ಉಲ್ಲೇಖ ಶೈಕ್ಷಣಿಕ ಸಂಸ್ಥೆಗಳು ಅಭ್ಯಂತ್ರಿಕ ಸಂಸ್ಥೆಗಳು ಶಿಕ್ಷಣ ಬೆಂಗಳೂರು
1775
https://kn.wikipedia.org/wiki/%E0%B2%AA%E0%B3%8D%E0%B2%B0%E0%B2%AE%E0%B3%81%E0%B2%96%20%E0%B2%A6%E0%B2%BF%E0%B2%A8%E0%B2%97%E0%B2%B3%E0%B3%81
ಪ್ರಮುಖ ದಿನಗಳು
೨೦೦೬ನೆ ಇಸವಿಯ ಪ್ರಮುಖ ದಿನಗಳು: ಮಕರ ಸಂಕ್ರಾಂತಿ :ಜನವರಿ ೧೪ ಗಣರಾಜ್ಯೋತ್ಸವ : ಜನವರಿ ೨೬ ಹುತಾತ್ಮರ ದಿನ : ಜನವರಿ ೩೦ ವಸಂತ ಪಂಚಮಿ : ಫೆಬ್ರವರಿ ೧೩ ಮಹಾಶಿವರಾತ್ರಿ : ಮಾರ್ಚಿ ೮ ಗುಡ್ ಫ್ರೈಡೆ (Good Friday): ಮಾರ್ಚಿ ೨೫ ಹೋಳಿ : ಮಾರ್ಚಿ ೨೬ ಯುಗಾದಿ : ಎಪ್ರಿಲ್ ೦೯ ವೈಸಾಖಿ: ಎಪ್ರಿಲ್ ೧೩ ಡಾ. ಅಂಬೇಡ್ಕರ ಜಯಂತಿ : ಎಪ್ರಿಲ್ ೧೪ ರಾಮ ನವಮಿ : ಎಪ್ರಿಲ್ ೧೭ ಮಹಾವೀರ ಜಯಂತಿ : ಎಪ್ರಿಲ್ ೨೨ ಕಾರ್ಮಿಕರ ದಿನಾಚರಣೆ : ಮೇ ೧ ಬಸವೇಶ್ವರ ಜಯಂತಿ : ಮೇ ೧೧ ಬುಧ್ಧ ಪೂರ್ಣಿಮ : ಮೇ ೧೩ ಸ್ವಾತಂತ್ರ್ಯ ದಿನಾಚರಣೆ : ಅಗಸ್ತ ೧೫ ರಕ್ಷಾ ಬಂಧನ : ಅಗಸ್ತ ೧೯ ವರಮಹಾಲಕ್ಷ್ಮಿ ದಿನ : ಅಗಸ್ತ ೧೯ ಕೃಷ್ಣ ಜನ್ಮಾಷ್ಟಮಿ : ಅಗಸ್ತ ೨೬ ಗಣೇಶ ಚತುರ್ಥಿ : ಸೆಪ್ಟೆಂಬರ್ ೭ ಮಹಾತ್ಮಾ ಗಾಂಧೀ ಜಯಂತಿ : ಅಕ್ಟೋಬರ್ ೨ ಆಯುಧ ಪೂಜೆ : ಅಕ್ಟೋಬರ್ ೧೨ ವಿಜಯದಶಮಿ : ಅಕ್ಟೋಬರ್ ೧೩ ನರಕ ಚತುರ್ದಶಿ : ಅಕ್ಟೋಬರ್ ೩೧ ಕನ್ನಡ ರಾಜ್ಯೋತ್ಸವ : ನವೆಂಬರ್ ೧ ಬಲಿಪಾಡ್ಯಮಿ: ನವೆಂಬರ್ ೨ ರಂಜಾನ್: ನವೆಂಬರ್ ೪ ಗುರುನಾನಕ್ ಜಯಂತಿ : ನವೆಂಬರ್ ೧೫ ಕ್ರಿಸ್ಮಸ್ ಡಿಸೆಂಬರ್ ೨೫ ಅನ್ಯ ಪ್ರಮುಖ ದಿನಗಳು : ಪ್ರೇಮಿಗಳ ದಿನಾಚರಣೆ (Valentine's Day): ಫೆಬ್ರವರಿ ೧೪ ವಿಶ್ವ ಮಹಿಳೆಯರ ದಿನ (Women's Day) : ಮಾರ್ಚಿ ೮ ಭೂಮಿಯ ದಿನ (Earth Day): ಎಪ್ರಿಲ್ ೨೨ ತಾಯಿ ದಿನ (Mother's Day) : ಮೇ ೮ ವಿಶ್ವ ತಂಬಾಕು ನಿಷೇಧ ದಿನ (World No Tobacco Day) : ಮೆ ೩೧ ವಿಶ್ವ ಪರಿಸರ ದಿನ (Environment Day) : ಜೂನ ೫ ತಂದೆ ದಿನ (Father's Day): ಜೂನ ೧೯ ಸಂಯುಕ್ತ ರಾಷ್ಟ್ರ ದಿನ (U.N.Day): ಅಕ್ಟೋಬರ್ ೨೪ ವಿಶ್ವ ಏಡ್ಸ್ ದಿನ (World AIDS Day) : ಡಿಸೆಂಬರ್ ೧ ವಿಕಿಪೀಡಿಯ ಪುಟಗಳು ಪ್ರಮುಖ ದಿನಗಳು
1776
https://kn.wikipedia.org/wiki/%E0%B2%8E%E0%B2%B8%E0%B3%8D.%E0%B2%9C%E0%B3%86.%E0%B2%B8%E0%B2%BF.%E0%B2%87
ಎಸ್.ಜೆ.ಸಿ.ಇ
ಶ್ರೀ ಜಯಚಾಮರಾಜೇಂದ್ರ ಅಭಿಯಂತ್ರಿಕ ವಿದ್ಯಾಲಯವು (ಎಸ್.ಜೆ.ಸಿ.ಇ) ಕರ್ನಾಟಕದ ಪ್ರಮುಖ ಅಭಿಯಂತ್ರಿಕ ಸಂಸ್ಥೆಗಳಲ್ಲಿ ಒಂದಾಗಿರುತ್ತದೆ. ೧೯೬೩ರ ಇಸವಿಯಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರೀಶ್ವರ ರಾಜೇಂದ್ರ ಮಹಾಸ್ವಾಮಿಗಳಿಂದ ಮೈಸೂರಿನಲ್ಲಿ ಸ್ಥಾಪಿಸಲ್ಪಟ್ಟಿತು. ಸಂಸ್ಥೆಯಲ್ಲಿ ೧೩ ವಿಭಾಗಗಳಿದ್ದು, ೧೫೦೦ ವಿದ್ಯಾರ್ಥಿಗಳಿಗೆ ಪದವೀದರ ಮತ್ತು ಸ್ನಾತಕೋತ್ತರ ಶಿಕ್ಷಣ ದೊರಕಿಸಿಕೊಡುತಿರುತ್ತದೆ. ಸಂಸ್ಥೆಯ ಅಭಿಯಂತ್ರಿಕ/ವ್ಯವಸ್ಥಾಪಕ ಶಿಕ್ಷಣ ವಿಭಾಗಗಳು ಯಾಂತ್ರಿಕ ವಿಭಾಗ (Department of Mechanical Engineering) ಔದ್ಯಮಿಕ ಮತ್ತು ಉತ್ಪಾದನಾ ವಿಭಾಗ (Department of Industrial and Production Engineering) ವಿದ್ಯುತ್ ಮತ್ತು ವಿದ್ಯುನ್ಮಾನ ವಿಭಾಗ (Department of Electrical and Electronics Engineering) ವಿದ್ಯುನ್ಮಾನ ಮತ್ತು ಸಂಪರ್ಕ ಶಾಸ್ತ್ರ ವಿಭಾಗ (Department of Electronics and Communication) ಉಪಕರಣ ತಂತ್ರಜ್ಞಾನ (Department of Instrumentation Technology) ಗಣಕಯಂತ್ರ ವಿಜ್ಞಾನ ವಿಭಾಗ (Department of Computer Science and Engineering) ಪರಿಸರ ಮತ್ತು ಜೈವಿಕ ತಂತ್ರಜ್ಞಾನ (Department of Environmental Engineering & Bio Technology) ವಿಜ್ಞಾನ ಮತ್ತು ತಂತ್ರಜ್ಞಾನ (Department of Polymer Science and Technology) ಸಿವಿಲ್ ವಿಭಾಗ (Department of Civil Engineering) ಗಣಿತ ಶಾಸ್ತ್ರ ವಿಭಾಗ (Department of Mathematics) ಭೌತಶಾಸ್ತ್ರ (Department of Physics) ರಸಾಯನ ಶಾಸ್ತ್ರ (Department of Chemistry) ವ್ಯವಸ್ಥಾಪಕ ಶಿಕ್ಷಣ ಕೇಂದ್ರ (Centre of Management Studies) ಶಿಕ್ಷಣ ಸಂಸ್ಥೆಗಳು ಅಭ್ಯಂತ್ರಿಕ ಸಂಸ್ಥೆಗಳು
1784
https://kn.wikipedia.org/wiki/%E0%B2%B8%E0%B2%82%E0%B2%B8%E0%B3%8D%E0%B2%95%E0%B3%83%E0%B2%A4
ಸಂಸ್ಕೃತ
ಸಂಸ್ಕೃತ ಭಾಷೆ ಇಂಡೋ-ಯುರೋಪಿಯನ್ ಭಾಷಾ ಬಳಗಕ್ಕೆ ಸೇರಿದ ಅತಿ ಪ್ರಾಚೀನ ಭಾಷೆಗಳಲ್ಲಿ ಒಂದು ಮತ್ತು ಭಾರತದ ಶಾಸ್ತ್ರೀಯ ಭಾಷೆ. ಭಾರತದಲ್ಲಿ ಸಂಸ್ಕೃತ ಭಾಷೆ ಹೊಂದಿರುವ ಸ್ಥಾನವನ್ನು ಯುರೋಪಿನಲ್ಲಿ ಲ್ಯಾಟಿನ್ ಹಾಗೂ ಗ್ರೀಕ್ ಭಾಷೆಗಳು ಹೊಂದಿವೆ. ಇದು ಭಾರತದ ೨೨ ಅಧಿಕೃತ ಭಾಷೆಗಳಲ್ಲಿ ಒಂದು. ಪುರಾತನ ಭಾರತೀಯ ಸಂಸ್ಕೃತಿ, ಸಾಹಿತ್ಯ, ವಿಜ್ಞಾನ ಹಾಗೂ ತತ್ವಶಾಸ್ತ್ರಗಳಲ್ಲಿ ವಿಪುಲವಾಗಿ ಉಪಯೋಗಿಸಲ್ಪಟ್ಟಿರುವ ಭಾಷೆ ಇದಾಗಿದೆ. ಹಿಂದೂ, ಬೌದ್ಧ ಹಾಗು ಜೈನ ಧರ್ಮಶಾಸ್ತ್ರಗಳ ಪಾರಂಪರಿಕ ಭಾಷೆಯೂ ಇದಾಗಿದೆ. ಇಂದು ಲಭ್ಯವಿರುವ ಬಹಳಷ್ಟು ಸಂಸ್ಕೃತ ಕೃತಿಗಳು ಪ್ರಾಚೀನ ಕಾಲದ್ದಾಗಿವೆ. ಸದ್ಯಕ್ಕೆ ಸಂಸ್ಕೃತವನ್ನು ಮಾತನಾಡುವ ಭಾಷೆಯಾಗಿ ಉಪಯೋಗಿಸಲ್ಪಡುತ್ತಿರುವುದು ತೀರಾ ಕಡಿಮೆ. ಸಂಸ್ಕೃತವನ್ನು 'ದೇವಭಾಷೆ' ಎಂದೂ ಹಿಂದೆ ಕರೆಯುತ್ತಿದ್ದರು. ಕೃತ ಗ್ರಂಥಗಳ ಜಾಡನ್ನೇ ಕನ್ನಡ ಅನುಸರಿಸಿಕೊಂಡು ಬಂತು. ಚರಿತ್ರೆ ಪ್ರಾಚೀನ ಕಾಲದಲ್ಲಿ ಧಾರ್ಮಿಕ ಹಾಗೂ ವೈಜ್ಞಾನಿಕ ಜಿಜ್ಞಾಸೆಗೆ ಉಪಯೋಗಿಸಲ್ಪಡುತ್ತಿದ್ದ ಸಂಸ್ಕೃತ ಆಡುಭಾಷೆಗಳಿಂದ ಸ್ವಲ್ಪ ಭಿನ್ನರೂಪದ್ದಾಗಿತ್ತು ಎಂದು ಚರಿತ್ರಜ್ಞರ ನಂಬಿಕೆ. ಸಂಸ್ಕೃತ ವ್ಯಾಕರಣದ ಮೇಲಿನ ಪುಸ್ತಕಗಳಲ್ಲಿ ಲಭ್ಯವಾಗಿರುವ ಅತ್ಯಂತ ಹಳೆಯದು ಪಾಣಿನಿಯ "ಅಷ್ಟಾಧ್ಯಾಯೀ" (ಸುಮಾರು ಕ್ರಿ.ಪೂ. ಐದನೆಯ ಶತಮಾನ). ವೇದಗಳ ಕಾಲದ ಸಂಸ್ಕೃತ ಮತ್ತು ಅದರ ನಂತರದ ಕೆಲ ಶತಮಾನಗಳ ಸಂಸ್ಕೃತದ ವ್ಯಾಕರಣ ಎನ್ನಬಹುದು. ನಂತರದ ಶತಮಾನಗಳಲ್ಲಿ ಸ್ವತಂತ್ರ ಸಾಹಿತ್ಯಕ್ಕೆ ಸಹ ಉಪಯೋಗಿಸಲಾದ ಸಂಸ್ಕೃತ ಭಾರತೀಯ ಸಾಹಿತ್ಯದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸಿತು. ಆಧುನಿಕ ಭಾರತೀಯ ಭಾಷೆಗಳಲ್ಲಿನ ಅನೇಕ ಪದಗಳು ಸಂಸ್ಕೃತದಿಂದ ಎರವಲು ಪಡೆದವು. ಪ್ರಾಚೀನ ದಾಖಲೆ ಭಾರತದ ಪ್ರಾಚೀನ ಭಾಷೆಗಳಲ್ಲೊಂದಾದ ಸಂಸ್ಕೃತ ಕರ್ನಾಟಕದಲ್ಲಿ ಬಹು ಹಿಂದಿನಿಂದಲೂ ಪ್ರಚಾರದಲ್ಲಿದ್ದು ದೀರ್ಘವಾದ ಇತಿಹಾಸವನ್ನು ಹೊಂದಿದೆ. ಪ್ರತಿಷ್ಠಾನ ನಗರದಲ್ಲಿದ್ದ ಶಾತವಾಹನ ದೊರೆಗೆ ಸಂಬಂಧಿಸಿದ ‘ಮೋದಕಂ ತಾಡಯ’ದ ಕಥೆ ಬಹುಶಃ ದಕ್ಷಿಣ ಭಾರತದಲ್ಲಿ ಸಂಸ್ಕೃತದ ಹರಡುವಿಕೆಯ ಪ್ರಾರಂಭವನ್ನು ಸೂಚಿಸುತ್ತದೆ. ಕರ್ನಾಟಕದ ಪ್ರಾಚೀನತಮ ಸಂಸ್ಕೃತ ಶಾಸನವೆಂದರೆ ಕುಬ್ಜ (ನೋಡಿ) ಬರೆದ ತಾಳಗುಂದ ಶಾಸನ (ಸು.450). ಇದರಲ್ಲಿರುವ ರಚನಾ ಪಾಂಡಿತ್ಯ ಆ ಕಾಲಕ್ಕಾಗಲೇ ಸಂಸ್ಕೃತ ಈ ನಾಡಿನಲ್ಲಿ ಚೆನ್ನಾಗಿ ಬೇರೂರಿರಬೇಕೆಂಬುದನ್ನು ತಿಳಿಸುವುದಲ್ಲದೆ, ಅದೇ ಕಾಲದ ಹಲ್ಮಿಡಿ ಶಾಸನದಿಂದ ಸಂಸ್ಕೃತ ಭಾಷೆ ಕನ್ನಡ ರಚನೆಗಳ ಮೇಲೂ ಪ್ರಭಾವ ಬೀರುವ ಸ್ಥಿತಿಯಲ್ಲಿದ್ದಿತೆಂಬುದನ್ನು ತೋರಿಸುತ್ತದೆ. ಇಲ್ಲಿಂದ ಮುಂದೆ ಸಂಸ್ಕೃತ ಶಿಷ್ಟಭಾಷೆಯಾಗಿ ಬೆಳೆದು ಉನ್ನತ ಸ್ಥಾನವನ್ನು ಗಳಿಸಿ ತತ್ಕಾಲದ ಉನ್ನತ ವರ್ಗಗಳಿಂದ ಪ್ರೋತ್ಸಾಹ ಗಳಿಸಿತು. ನೂರಾರು ಸಂಸ್ಕೃತ ಶಾಸನಗಳು ಕನ್ನಡದಲ್ಲಿ ರಚಿತವಾದವು. ಅನೇಕ ಕವಿಗಳು, ಶಾಸ್ತ್ರಕಾರರು ಈ ನಾಡಿನಲ್ಲಿ ಆಗಿಹೋದರು. ನೂರಾರು ಸಂಸ್ಕೃತ ಗ್ರಂಥಗಳ ರಚನೆಯಾಯಿತು. ಸಂಸ್ಕೃತ ಸಾಹಿತ್ಯಕ್ಕೆ ಕರ್ನಾಟಕದ ಕೊಡುಗೆ ಗಣ್ಯವಾದುದು. ಹಾಗೆಯೇ ಸಂಸ್ಕೃತದ ಶ್ರುತಿ ಸ್ಮೃತಿ ಪುರಾಣ ಇತಿಹಾಸಗಳು ಕರ್ನಾಟಕದಲ್ಲಿ ಹರಡಿ ಅವು ಹಾಗೂ ಇತರ ಸಂಸ್ಕೃತ ಕೃತಿಗಳು ಕನ್ನಡ ದೇಶದ ಸಂಸ್ಕೃತಿ ಹಾಗೂ ನುಡಿಯ ಮೇಲೆ ಅಗಾಧ ಪ್ರಭಾವವನ್ನು ಬೀರುತ್ತ ಬಂದಿವೆ. ಗುಣಾಢ್ಯ ಕರ್ನಾಟಕದ ಭಾಗಗಳನ್ನು ಆಳುತ್ತಿದ್ದ ಸಾತವಾಹನರ ಆಸ್ಥಾನಭಾಷೆ ಪ್ರಾಕೃತವಾಗಿದ್ದರೂ ಅವರು ಸಂಸ್ಕೃತ ಭಾಷೆಯನ್ನು ಕೂಡ ಪ್ರೋತ್ಸಾಹಿಸುತ್ತಿದ್ದಿರಬಹುದು. ಇವರ ಕಾಲದಲ್ಲೇ ರಾಮಾಯಣ ಮಹಾಭಾರತಗಳಷ್ಟು ಕವಿಜನಪ್ರಿಯವಾದ ಬೃಹತ್ಕಥೆ ಪೈಶಾಚೀ ಪ್ರಾಕೃತದಲ್ಲಿ ಗುಣಾಢ್ಯನೆಂಬಾತನಿಂದ ರಚಿತವಾದಂತೆ, ಮಹಾರಾಷ್ಟ್ರೀ ಪ್ರಾಕೃತದಲ್ಲಿ ಏಳುನೂರು ಮುಕ್ತಕಗಳ ಸಂಗ್ರಹವಾದ ಸತ್ತಸ ರಾಜನಾದ ಹಾಲನಿಂದಲೇ ಸಂಗ್ರಹಿತವಾದಂತೆ, ಅವನ ಆಸ್ಥಾನಪಂಡಿತನಾದ ಸರ್ವವರ್ಮನಿಂದ ಕಾತಂತ್ರವೆಂಬ ನೂತನ ಸಂಸ್ಕೃತ ವ್ಯಾಕರಣವೂ ನಿರ್ಮಿತವಾಯಿತು. ಮುಂದೆ ಬೃಹತ್ಕಥೆ ಸಂಸ್ಕೃತಕ್ಕೂ ಮೂರುನಾಲ್ಕು ರೂಪಾಂತರಗಳನ್ನು ಉತ್ತರದ ಕವಿಗಳಿಂದ ಪಡೆದುದನ್ನು ನೋಡುತ್ತೇವೆ. ಆದರೆ ಮೂಲ ಬೃಹತ್ಕಥೆ ದಕ್ಷಿಣದ್ದೇ; ಇದರ ಒಂದು ಅಂಶದ ರೂಪಾಂತರವೇ ಸುಪ್ರಸಿದ್ಧವಾದ ಪಂಚತಂತ್ರ ಕೂಡ. ಈ ಪಂಚತಂತ್ರದ ಒಂದು ಆವೃತ್ತಿಯ ಪ್ರವರ್ತಕ ಕೂಡ ಕರ್ನಾಟಕದ ವಸುಭಾಗಭಟ್ಟ (ಈ ಕೃತಿ ಬೃಹತ್ತರ ಭಾರತದ ಲೇಯಾಸ್ ಹಾಗೂ ಜಾವ ದ್ವೀಪದ ಭಾಷೆಗಳಲ್ಲಿಯೂ ಭಾಷಾಂತರಗೊಂಡಿದೆ). ಭಾಸ ಭಾಸನ (ಸು.2ನೆಯ ಶತಮಾನ) ದ್ವಿತೀಯಾಕ್ಷರ ಪ್ರಾಸಗಳನ್ನು ಅನುಲಕ್ಷಿಸಿ ಆತ ಕನ್ನಡಿಗನಿದ್ದಿರಬೇಕೆಂದು ಯು.ವೆಂಕಟಕೃಷ್ಣರಾವ್ ಊಹಿಸಿದ್ದಾರೆ (ಈ ಊಹೆಗೆ ಹೆಚ್ಚಿನ ಸಮರ್ಥನೆ ಬೇಕಾಗಿದೆ). ಪಾಣಿನಿ ಪೂಜ್ಯಪಾದ (ಅಥವಾ ದೇವನಂದಿ 5 ಅಥವಾ 6ನೆಯ ಶತಮಾನ) ಪಾಣಿನಿಯ ಸೂತ್ರಗಳಿಗೆ ಶಬ್ದಾವತಾರವೆಂಬ ವ್ಯಾಖ್ಯಾನ ರಚಿಸಿದ್ದನೆಂದು ಶಾಸನಗಳಲ್ಲಿ ಹೇಳಲಾಗಿದೆ. ಈತ ಜೈನೇಂದ್ರ ವ್ಯಾಕರಣವೆಂಬ ಹೊಸ ವ್ಯಾಕರಣ ಪಂಥವನ್ನು ನಿರ್ಮಾಣ ಮಾಡಿದ. ಇದರಲ್ಲಿ ಪ್ರಾಯೋಗಿಕ ದೃಷ್ಟಿಯಿಂದ ಪಾಣಿನಿಯ ಸೂತ್ರಗಳನ್ನು ಸಂಗ್ರಹಿಸಲಾಗಿದೆ. ಗಂಗರ ಕಾಲ ಗಂಗರಾಜನಾದ ದುರ್ವಿನೀತ (6ನೆಯ ಶತಮಾನ) ಬೃಹತ್ಕಥೆಯ ಸಂಸ್ಕೃತ ರೂಪಾಂತರಕಾರರಲ್ಲಿ ಒಬ್ಬನೆಂದು ಕೆಲವು ಶಾಸನಗಳು ಹೇಳುತ್ತವೆ. ದುರ್ವಿನೀತನ ಸಮಕಾಲೀನನೂ ಸಂಸ್ಕೃತದ ಪ್ರಸಿದ್ಧ ಮಹಾಕಾವ್ಯವಾದ ಕಿರಾತಾರ್ಜುನೀಯದ ಕರ್ತೃವೂ ಆದ ಭಾರವಿ ದುರ್ವಿನೀತನ ಆಸ್ಥಾನದಲ್ಲಿಯೂ ಕೆಲಕಾಲ ಇದ್ದನೆಂಬ ಐತಿಹ್ಯವನ್ನು ಈಚೆಗೆ ದೊರೆತ ದಂಡಿಯ ಅವಂತಿಸುಂದರೀ ಕಥಾ ಎಂಬ ಗದ್ಯಕೃತಿ ಒಳಗೊಂಡಿದೆ. ದಂಡಿ ಸಹ ಕೆಲವು ಕಾಲ ದುರ್ವಿನೀತನ ಆಸ್ಥಾನದಲ್ಲಿ ಇದ್ದಿರಬೇಕು. ನಾಟಕಕಾರರಲ್ಲಿ ಪ್ರಸಿದ್ಧನಾದ ಮೃಚ್ಫಕಟಿಕಕಾರ ಶೂದ್ರಕನು ಗಂಗರಾಜ ಶಿವಮಾರನಿರಬೇಕೆಂದು ಸಾಲೆತೊರೆ ಎಂಬ ವಿದ್ವಾಂಸರ ಊಹೆ. ಭಾರವಿ ಮತ್ತು ಕಾಳಿದಾಸ ಭಾರವಿ ಮತ್ತು ಕಾಳಿದಾಸ ಮಹಾಕವಿಗಳ ಸ್ಪಷ್ಟ ಶಿಲಾಶಾಸನೋಲ್ಲೇಖ ದೊರೆಯುವುದು ಬಾದಾಮಿ ಚಾಳುಕ್ಯ ವಂಶದ ಇಮ್ಮಡಿ ಪುಲಕೇಶಿಯ ಕಾಲದ ಐಹೊಳೆಯ ಶಾಸನದಲ್ಲಿ (634). ಆ ಶಾಸನದ ಕರ್ತೃ ರವಿಕೀರ್ತಿ ತನ್ನನ್ನು ಆ ಇಬ್ಬರು ಮಹಾಕವಿಗಳಿಗೆ ಸಮನೆಂದು ಹೊಗಳಿಕೊಂಡಿದ್ದಾನೆ. ಈ ಪ್ರಶಸ್ತಿ ಶಾಸನ ಇಮ್ಮಡಿ ಪುಲಕೇಶಿಯ ಪರಾಕ್ರಮಾದಿಗಳನ್ನು ಕಾವ್ಯಮಯ ಶೈಲಿಯಲ್ಲಿ ವರ್ಣಿಸುತ್ತದೆ. ಇದರ ಭಾಷೆ ಸರಾಗವಾಗಿ ಹರಿಯುತ್ತದೆ. ನಾನಾ ಬಗೆಯ ವೃತ್ತಗಳಲ್ಲಿ ರಚಿತವಾದ ಇದರಲ್ಲಿ ಕಾವ್ಯದ ಹಲವು ಲಕ್ಷಣಗಳು ಕಾಣಬರುತ್ತವೆ. ಇದಕ್ಕೂ ಮುಂಚಿನ ಮಂಗಲೀಶನ ಶಾಸನದಲ್ಲಿ (ಸು.600) ಒಂದನೆಯ ಕೀರ್ತಿವರ್ಮನ ದಿಗ್ವಿಜಯವನ್ನು ವರ್ಣಿಸುವಲ್ಲಿ ಕಾಳಿದಾಸನ ರಘುವಂಶದ ರಘು ದಿಗ್ವಿಜಯವನ್ನೇ ಮಾದರಿಯಾಗಿಟ್ಟುಕೊಳ್ಳಲಾಗಿದೆ. ಇಮ್ಮಡಿ ಪುಲಕೇಶಿಯ ಸೊಸೆ, ಚಂದ್ರಾದಿತ್ಯನ ರಾಣಿ ವಿಜಯಾ ಅಥವಾ ಬಿಜ್ಜಾ ಅಥವಾ ಬಿಜ್ಜಿಕಾ (ವಿಜ್ಜಿಕೆ) ಪ್ರೌಢ ಪಾಂಡಿತ್ಯ ಪಡೆದಿದ್ದಳೆಂದು ತಿಳಿದುಬರುತ್ತದೆ. ಕೌಮುದೀ ಮಹೋತ್ಸವವೆಂಬ ನಾಟಕ ಬರೆದವಳು ಇವಳೇ ಎಂದು ವಿದ್ವಾಂಸರ ಅಭಿಪ್ರಾಯ. muddi ಚಾಲುಕ್ಯರ ಕಾಲ ಬಾದಾಮಿಯ ಚಾಳುಕ್ಯರ ಕಾಲದಲ್ಲಿಯೇ ಶಂಕರಾಚಾರ್ಯರ ವೇದಾಂತ ಭಾಷ್ಯಗಳೂ ಹುಟ್ಟಿಕೊಂಡಿರಬಹುದು. ಸಮಂತಭದ್ರನ ತತ್ತ್ವಾರ್ಥ ಸೂತ್ರ ಮಹಾಭಾಷ್ಯ, ಆಪ್ತಮೀಮಾಂಸಾ ಮುಂತಾದ ಉದ್ದಾಮ ಧರ್ಮ ಗ್ರಂಥಗಳೂ ಈ ಕಾಲದಲ್ಲಿ ಬಂದವು. ತತ್ತ್ವಾರ್ಥಾಸೂತ್ರಕ್ಕೆ ಸರ್ವಾರ್ಥಸಿದ್ಧಿ ವ್ಯಾಖ್ಯೆಯನ್ನು ಪುಜ್ಯಪಾದ ರಚಿಸಿದ. ಮತ್ತೊಬ್ಬ ಜೈನ ಪಂಡಿತ ಅಕಲಂಕ ತತ್ತ್ವಾರ್ಥ ರಾಜವಾರ್ತಿಕ, ಅಷ್ಟಶತೀ, ನ್ಯಾಯವಿನಿಶ್ಚಯ ಮುಂತಾದುವನ್ನು ರಚಿಸಿದ್ದಾನೆ. ರಾಷ್ಟ್ರಕೂಟರ ಕಾಲ ರಾಷ್ಟ್ರಕೂಟರ ಕಾಲದಲ್ಲಿ ಸಂಸ್ಕೃತಕ್ಕೆ ವಿಶೇಷ ಪ್ರೋತ್ಸಾಹ ದೊರಕಿತು. ಒಂದನೆಯ ಅಮೋಘ ವರ್ಷ (814-78) ಸ್ವಯಂ ಗ್ರಂಥಕಾರನಾಗಿದ್ದುದಲ್ಲದೆ (ಪ್ರಶ್ನೋತ್ತರ-ರತ್ನಮಾಲಿಕಾ ಇವನ ಕೃತಿಯೆನ್ನುತ್ತಾರೆ) ಜಿನಸೇನಾಚಾರ್ಯರು ಮಹಾಪುರಾಣ, ಪಾಶಾರ್ವ್‌ಭ್ಯುದಯಗಳೆಂಬ ಉದ್ಗ್ರಂಥಗಳನ್ನು ಬರೆಯಲು ನೆರವಾದ. ಶಾಕಟಾಯನ ವ್ಯಾಕರಣವೆಂಬ ನವೀನ ಪ್ರಸ್ಥಾನವೂ ಈಗಲೇ ಉದಿಸಿತು. ಅದರ ವೃತ್ತಿಗೆ ಅಮೋಘ ವೃತ್ತಿಯೆಂದೇ ಹೆಸರಿದೆ. ಮಹಾವೀರನೆಂಬ ಪಂಡಿತ ಜ್ಯೋತಿಶಾಸ್ತ್ರದ ಗಣಿತಸಾರ ಸಂಗ್ರಹವನ್ನು ಬರೆದಿದ್ದಾನೆ. ಅದ್ವೈತವೇದಾಂತ ದೃಷ್ಟಿಯಿಂದ ರಾಷ್ಟ್ರಕೂಟರ ಕಾಲವನ್ನು ಸುವರ್ಣಯುಗವೆಂದು ಕರೆಯಬಹುದು. ಶಂಕರಾಚಾರ್ಯರ ಶಿಷ್ಯರಾದ ಪದ್ಮಪಾದ ಮತ್ತು ಸುರೇಶ್ವರರು ವೇದಾಂತ ಪ್ರಚಾರದಲ್ಲಿ ನಿರತರಾಗಿದ್ದರು. ಸುರೇಶ್ವರರ ಶಿಷ್ಯ ಸರ್ವಜ್ಞಾತ್ಮನ್ ‘ಸಂಕ್ಷೇಪ ಶಾರೀರಕ’ ವನ್ನು ರಚಿಸಿದ. ಇದೇ ಯುಗದಲ್ಲಿ ಯಾಜ್ಞವಲ್ಕ್ಯಸ್ಮೃತಿಗೆ ವಿಶ್ವರೂಪ ಬರೆದ ‘ಬಾಲಕ್ರೀಡಾ ವ್ಯಾಖ್ಯೆ’ ಬಹಳ ಪ್ರಸಿದ್ಧವಾಯಿತು. ಮುಮ್ಮಡಿ ಇಂದ್ರನ ಕಾಲ ಮುಮ್ಮಡಿ ಇಂದ್ರನ (914-29) ಆಸ್ಥಾನ ಕವಿಯಾಗಿದ್ದ ತ್ರಿವಿಕ್ರಮಭಟ್ಟ ನಳಚಂಪು ಮತ್ತು ಮದಾಲಸಾಚಂಪು ಎಂಬ ಎರಡು ಕೃತಿಗಳನ್ನು ರಚಿಸಿದ. ಇವೆರಡು ಸಂಸ್ಕೃತ ಸಾಹಿತ್ಯದ ಚಂಪು ಪ್ರಕಾರದ ಉಪಲಬ್ಧ ಪ್ರಾಚೀನತಮ ಕೃತಿಗಳು. ಇವನ ಚಂಪುಶೈಲಿಯಲ್ಲಿ ಬಾಣನ ಗದ್ಯವೈಭವ ಹಾಗೂ ನಾಟಕಕಾರರ ಪದ್ಯ ಪ್ರಾಗಲ್ಭ್ಯಗಳೆರಡೂ ರಸಮಯವಾಗಿ ಜೊತೆಗೂಡಿವೆ. ಇವನಿಗೆ ಮೊದಲೇ ದಂಡಿ ಚಂಪು ಪ್ರಭೇದವನ್ನು ಹೇಳಿ, ಅದರ ಸ್ವರೂಪವನ್ನು ತಿಳಿಸಿದ್ದನಾದರೂ ತ್ರಿವಿಕ್ರಮನಿಗೆ ಮೊದಲು ಯಾವ ಚಂಪು ಕೃತಿಯೂ ದೊರೆತಿಲ್ಲ. ಮುಮ್ಮಡಿ ಕೃಷ್ಣನೂ (939-67) ಸ್ವತಃ ವಿದ್ವಾಂಸನಾಗಿದ್ದು ಪಿಂಗಲನ ಛಂದಸ್ಸೂತ್ರದ ಮೇಲೆ ವ್ಯಾಖ್ಯಾನ ಬರೆದ. ಇವನ ಆಶ್ರಯದಲ್ಲಿ ಹಲಾಯುಧ ಒಂದು ಕೋಶವನ್ನೂ ಕವಿಗಳಿಗೆ ಉಪಯುಕ್ತವಾದ ಕೃತಿಗಳನ್ನೂ ರಚಿಸಿದ. ಜೈನ ಕವಿಗಳ ಕಾಲ ಸಂಸ್ಕೃತ ಸಾಹಿತ್ಯಕ್ಕೆ ಕರ್ನಾಟಕದ ಜೈನರೂ ಅಮೋಘ ಕಾಣಿಕೆಯನ್ನಿತ್ತಿದ್ದಾರೆ. ವೀರಸೇನ ಮತ್ತು ಜಿನಸೇನರು 1,00,000 ಶ್ಲೋಕಗಳ ವಿಸ್ತಾರವಾದ ಧವಲಾ, ಜಯಧವಲಾ ಮತ್ತು ಮಹಾಧವಲಾ ಎಂಬ ಷಟ್ ಖಂಡಾಗಮ ವ್ಯಾಖ್ಯಾನವನ್ನು ಪುರೈಸಿದರು. ಜಿನಸೇನರು ಆದಿಪುರಾಣ ಮತ್ತು ಪಾಶರ್ವ್‌ನಾಥಪುರಾಣಗಳನ್ನೂ ಬರೆದು ಪ್ರಸಿದ್ಧರಾದರು. ಅಸಗನಿಗೆ ಸಂಸ್ಕೃತ ಕನ್ನಡಗಳೆರಡರಲ್ಲಿಯೂ ಸಮಾನವಾದ ಕವಿತಾ ಸಾಮಥರ್ಯ್‌ವಿತ್ತು. ಸಂಸ್ಕೃತದಲ್ಲಿ ಈತ ವರ್ಧಮಾನಪುರಾಣವನ್ನು ರಚಿಸಿದ್ದಾನೆ. ವಿದ್ಯಾನಂದ ಎಂಬುವನು ಸಮಂತಭದ್ರನ ಆಪ್ತಮೀಮಾಂಸಾ, ಆಪ್ತಪರೀಕ್ಷಾ ಇತ್ಯಾದಿ ಗ್ರಂಥಗಳಿಗೆ ಅಷ್ಟಸಾಹಸ್ರೀ ಎಂಬ ಅದ್ಭುತವಾದ ವ್ಯಾಖ್ಯಾನ ರಚಿಸಿದ್ದಾನೆ. ಚಾಳುಕ್ಯರ ಕಾಲ ವೇಮುಲವಾಡದ ಚಾಳುಕ್ಯರ ಆಶ್ರಯದಲ್ಲಿದ್ದ ಸೋಮದೇವಸೂರಿ (ಸು.959) ಯಶಸ್ತಿಲಕಚಂಪು ಎಂಬ ಕೃತಿಯನ್ನೂ ನೀತಿವಾಕ್ಯಾಮೃತವೆಂಬ ಗ್ರಂಥವನ್ನೂ ರಚಿಸಿದ. ಯಶಸ್ತಿಲಕಚಂಪುವಿನಲ್ಲಿ ಕವಿ ನಾನಾಶಾಸ್ತ್ರದಲ್ಲಿ, ತನಗಿದ್ದ ಪಾಂಡಿತ್ಯ ಹಾಗೂ ಜಾಣ್ಮೆಯನ್ನು ಪ್ರದರ್ಶಿಸಿಕೊಂಡಿದ್ದಾನೆ. ಸಾಂಸ್ಕೃತಿಕ ಇತಿಹಾಸದ ದೃಷ್ಟಿಯಿಂದ ಈ ಕೃತಿ ಅಮೂಲ್ಯವಾದು ದಾಗಿದೆ. ನೀತಿವಾಕ್ಯಾಮೃತ ರಾಜನೀತಿಶಾಸ್ತ್ರದ ಕೈಪಿಡಿಯಂತಿದೆ. ಇದರಲ್ಲಿ ರಾಜಕೀಯ ವ್ಯವಹಾರಗಳ ಸೂಕ್ಷ್ಮ ನಿರೂಪಣೆಯ ಜತೆಗೆ ಜನಸಾಮಾನ್ಯರಿಗೂ ಸಂಬಂಧಿಸಿದ ನೀತಿಗಳನ್ನು ಎಲ್ಲರಿಗೂ ಅರ್ಥವಾಗುವ ಕ್ರಮದಲ್ಲಿ ನಿರೂಪಿಸಿದ್ದಾನೆ. ಸೋಮದೇವಸೂರಿ ಕವಿಯಷ್ಟೇ ಅಲ್ಲ ತತ್ತ್ವಶಾಸ್ತ್ರದಲ್ಲಿಯೂ ನಿಷ್ಣಾತನಾಗಿದ್ದ ‘ಷಣ್ಣವತಿ ಪ್ರಕರಣ’ ಇವನ ಕೊಡುಗೆ. ಕಲ್ಯಾಣದ ಚಾಳುಕ್ಯರ ಕಾಲಕ್ಕೆ ಬಂದರೆ ಎರಡನೆಯ ಜಯಸಿಂಹನ ಆಳಿಕೆಯಲ್ಲಿ (1015-44) ವಾದಿರಾಜನ ಯಶೋಧರಚರಿತ ಮತ್ತು ಪಾಶರ್ವ್‌ನಾಥ ಚರಿತ ಎಂಬ ಸುಂದರ ಕಾವ್ಯಗಳು ಮೂಡಿಬಂದವು. ವಾದಿರಾಜನ ಪಾಂಡಿತ್ಯವನ್ನು ಅನೇಕ ಶಾಸನಗಳು ಕೊಂಡಾಡಿವೆ. ಅಕಲಂಕನ ಮಹಾಗ್ರಂಥವನ್ನು ಕುರಿತ ಸಮಗ್ರ ವ್ಯಾಖ್ಯಾನ ‘ನ್ಯಾಯ ವಿನಿಶ್ಚಯ ಟೀಕೆ’ ವಾದಿರಾಜನ ಮೇರು ಕೃತಿ. ಇವನು ಉತ್ತಮ ಬರೆಹಗಾರನಾಗಿದ್ದ, ಜೊತೆಗೆ ಸಮರ್ಥ ವಾಗ್ಮಿಯಾಗಿದ್ದನೆಂದು ತಿಳಿದುಬರುತ್ತದೆ. ಲಕುಲೀಶ ಪಂಡಿತ ಅಥವಾ ವಾದಿರುದ್ರಗುಣ ಮಹಾವಿದ್ವಾಂಸನೆಂದೂ ಜೈನ ವಾದಿರಾಜನನ್ನು ವಾದದಲ್ಲಿ ಸೋಲಿಸಿದನೆಂದೂ 1036ರ ಶಾಸನವೊಂದು ತಿಳಿಸುತ್ತದೆ. ವಾದಿರಾಜನ ಸಹಪಾಠಿ ಮತ್ತು ಮತಿಸಾಗರನ ಶಿಷ್ಯನಾದ ದಯಪಾಲ ಎಂಬುವನು ಶಾಕಟಾಯನ ವ್ಯಾಕರಣದ ಉಪಯುಕ್ತವಾದ ಪುನರ್ವಿಮರ್ಶಿತ ಕೈಪಿಡಿಯನ್ನು ಸಿದ್ಧಗೊಳಿಸಿದ. ರೂಪಸಿದ್ಧಿಯೆಂದು ಕರೆಯಲಾದ ಇದನ್ನು ಹಲವು ಶಾಸನಗಳಲ್ಲಿ ಹೊಗಳಲಾಗಿದೆ. ಚಂಪೂ ಕಾಲ ಇದೇ ಕಾಲದಲ್ಲಿ ಕಾವ್ಯಾವಲೋಕನದ ಕರ್ತೃ ನಾಗವರ್ಮ ಸಂಸ್ಕೃತ ಕೋಶವೊಂದನ್ನು ರಚಿಸಿದ್ದನೆಂದು ತಿಳಿದುಬರುತ್ತದೆ. ಆದರೆ ಇದು ಉಪಲಬ್ಧವಿಲ್ಲ. ಈ ಕಾಲದಲ್ಲಿ ವಾದೀಭಸಿಂಹನ ಗದ್ಯಚಿಂತಾಮಣಿ, ಕ್ಷತ್ರಚೂಡಾಮಣಿ ಎಂಬ ಗದ್ಯಕಾವ್ಯಗಳು ಬಾಣನ ಮಾದರಿಯಲ್ಲಿ ನಿರ್ಮಿತವಾದವು. ಜಯಕೀರ್ತಿಯ ಛಂದೋನುಶಾಸನವೂ ಇದೇ ಕಾಲದ್ದು. ಚಾಳುಕ್ಯ ಆರನೆಯ ವಿಕ್ರಮಾದಿತ್ಯ (1076-1127), ಕರ್ಣ, ಭೋಜಾದಿಗಳ ಆಸ್ಥಾನಗಳನ್ನೆಲ್ಲ ಸುತ್ತಿ ಬಂದಿದ್ದ ಕಾಶ್ಮೀರದ ಬಿಲ್ಹಣ ಮಹಾಕವಿಗೆ ತನ್ನ ಆಸ್ಥಾನದಲ್ಲಿ ವಿದ್ಯಾಪತಿಯೆಂಬ ಪದವಿಯನ್ನಿತ್ತು ಅವನಿಂದ ವಿಕ್ರಮಾಂಕ ದೇವಚರಿತವೆಂಬ ಮನೋಹರ ಐತಿಹಾಸಿಕ ಕಾವ್ಯವನ್ನು ಬರೆಯಿಸಿದ. ಇದೇ ವಿಕ್ರಮಾದಿತ್ಯನ ಕಾಲದಲ್ಲಿ ವಿಜ್ಞಾನೇಶ್ವರ ಎಂಬ ಪಂಡಿತ ಧರ್ಮಶಾಸ್ತ್ರ ಸಾಹಿತ್ಯದಲ್ಲಿಯೇ ತುಂಬಾ ಮನ್ನಣೆಗಳಿಸಿರುವ ಮಿತಾಕ್ಷರಾ ವ್ಯಾಖ್ಯೆಯನ್ನು ಯಾಜ್ಞವಲ್ಕ್ಯಸ್ಮೃತಿಗೆ ಬರೆದ. ಚಾಳುಕ್ಯ ಅರಸ ಮೂರನೆಯ ಸೋಮೇಶ್ವರ ಭೂಲೋಕಮಲ್ಲ (1127-39) ಅಭಿಲಾಷಿತಾರ್ಥಚಿಂತಾಮಣಿ ಅಥವಾ ಮಾನಸೋಲ್ಲಾಸ ಎಂಬ ವಿಶ್ವಕೋಶವನ್ನು ರಚಿಸಿದ. ಇದರಲ್ಲಿ ಸಂಸ್ಕೃತ ಕಾವ್ಯ, ಶಾಸ್ತ್ರ, ಕಲೆ, ವಿಜ್ಞಾನ, ಧರ್ಮ ಮುಂತಾದ ಸಕಲ ವಿದ್ಯಾಪ್ರಕಾರಗಳೂ ಸಂಕ್ಷಿಪ್ತವಾಗಿ ಹಾಗೂ ಸಪ್ರಮಾಣವಾಗಿ ಅಂತರ್ಗತವಾಗಿವೆ. ವನಸ್ಪತಿಗಳು, ಪ್ರಾಣಿಗಳು, ಪುಷ್ಪರಚನೆ, ಶಕುನಗಳು, ಕಾಮಶಾಸ್ತ್ರ, ಚಿತ್ರ, ಸಂಗೀತ, ರಾಜನೀತಿ, ಭೂಗೋಳ, ಪಾಕಶಾಸ್ತ್ರ ಮುಂತಾದ ಲೌಕಿಕ ವಿದ್ಯೆಗಳಿಗೂ ಇಲ್ಲಿ ಸಮಾವೇಶ ದೊರೆತಿರುವುದು ಈ ಕೃತಿಯ ವೈಶಿಷ್ಟ್ಯವಾಗಿದೆ. ಇಡೀ ಸಂಸ್ಕೃತ ಸಾಹಿತ್ಯದಲ್ಲೇ ಇಂಥ ಗ್ರಂಥ ಮತ್ತೊಂದಿಲ್ಲ. ಈ ದೊರೆಯ ಆಶ್ರಯದಲ್ಲೇ ಇದ್ದ ಪಾಶರ್ವ್‌ದೇವ ಸಂಗೀತ ಸಮಯಸಾರವನ್ನು ರಚಿಸಿದ್ದಾನೆ. ಇಮ್ಮಡಿ ಜಗದೇಕಮಲ್ಲ (1139-49) ಸಂಗೀತಕ್ಕೆ ಸಂಬಂಧಿಸಿದಂತೆ ಸಂಗೀತ ಚೂಡಾಮಣಿ ಎಂಬ ಗ್ರಂಥವನ್ನು ಬರೆದಿದ್ದಾನೆ. ಹೊಯ್ಸಳರ ರಾಜ್ಯದಲ್ಲಿಯ ಎರಡನೆಯ ವೀರಬಲ್ಲಾಳನ ಆಸ್ಥಾನಕವಿ ವಿದ್ಯಾಚಕ್ರವರ್ತಿಯ ರುಕ್ಮೀಣೀಕಲ್ಯಾಣನಾಟಕ ಹಾಗೂ ಅಲಂಕಾರಸರ್ವಸ್ವ ಸಂಜೀವಿನೀ ಮತ್ತು ಕಾವ್ಯಪ್ರಕಾಶ ಸಂಪ್ರದಾಯಪ್ರಕಾಶಿನೀ ಎಂಬ ಅಲಂಕಾರ ಶಾಸ್ತ್ರಗ್ರಂಥಗಳು ಮಹತ್ತ್ವದ್ದಾಗಿದೆ. ಇವನ ಮಗನಾದ ಸಕಲವಿದ್ಯಾಚಕ್ರವರ್ತಿ ಗದ್ಯಕರ್ಣಾಮೃತ ಎಂಬ ಗ್ರಂಥವನ್ನು ಬರೆದಿದ್ದಾನೆ. ಮಧ್ಯಕಾಲೀನ ಕಾಲ ಕರ್ನಾಟಕದಲ್ಲಿಯೇ ಹುಟ್ಟಿಬೆಳೆದ ಮಧ್ವಾಚಾರ್ಯರು ವೇದಾಂತ ಪಂಥವೊಂದನ್ನು ಸ್ಥಾಪಿಸಿ ಉಪನಿಷತ್ತು, ಭಗವದ್ಗೀತೆ, ಬ್ರಹ್ಮಸೂತ್ರಗಳಿಗೆ ಭಾಷ್ಯಗಳನ್ನೂ ರಾಮಾಯಣ, ಮಹಾಭಾರತ, ಭಾಗವತಗಳ ತಾತ್ಪರ್ಯ ನಿರ್ಣಯ ಮೊದಲಾದ 37 ಗ್ರಂಥಗಳನ್ನೂ ರಚಿಸಿದರು. ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಸಂಸ್ಕೃತ ವಾಙ್ಮಯ ಉನ್ನತಿಗೆ ಹೆಚ್ಚಿನ ಪ್ರಚೋದನೆ ನೀಡಿತು. ಸಾಮ್ರಾಜ್ಯ ಸ್ಥಾಪಕರಾದ ಮಾಧವ ವಿದ್ಯಾರಣ್ಯರು ಅವರ ಗುರುಗಳಾದ ಭಾರತೀತೀರ್ಥರು ಹಾಗೂ ಅವರ ತಮ್ಮಂದಿರಾದ ಸಾಯಣ ಮತ್ತು ಭೋಗನಾಥ ಇವರಿಂದ ಸಂಸ್ಕೃತ ವಾಙ್ಮಯದ ಎಲ್ಲ ಪ್ರಕಾರಗಳು ಸಮೃದ್ಧವಾದುವು. ತೈತ್ತೀರೀಯ ಸಂಹಿತೆ ಮುಂತಾದ ನಾಲ್ಕು ವೇದ ಸಂಹಿತೆಗಳು, ಅವುಗಳ ಬ್ರಾಹ್ಮಣಗಳು ಹೀಗೆ 18 ವೇದಗ್ರಂಥಗಳಿಗೆ ಮಾಧವಾಚಾರ್ಯ (ವಿದ್ಯಾರಣ್ಯರ) ನೇತೃತ್ವದಲ್ಲಿ ಅನೇಕರ ನೆರವಿನಿಂದ ಸಾಯಣಾಚಾರ್ಯರು ಭಾಷ್ಯ ರಚಿಸಿದರು. ಇವುಗಳಲ್ಲಿ ಒಂದೊಂದು ಸಂಹಿತೆಯ ಪ್ರಾರಂಭದಲ್ಲಿಯೂ ಪೀಠಿಕೆಯಲ್ಲಿ ವೇದಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಪುರ್ವಮೀಮಾಂಸಾ ಸೂತ್ರಗಳ ಆಧಾರದ ಮೇಲೆ ವಿಸ್ತಾರವಾಗಿ ಚರ್ಚಿಸಲಾಗಿದೆ. ಸಾಯಣರ ಯಜ್ಞತಂತ್ರ ಸುಧಾನಿಧಿ ಮತ್ತು ಪ್ರಯೋಗ ರತ್ನಮಾಲಾ ಗ್ರಂಥಗಳು ಶ್ರೌತಯಜ್ಞಗಳ ಪ್ರಯೋಗವನ್ನು ಸ್ಪಷ್ಟಪಡಿಸುತ್ತವೆ. ಸ್ಮೃತಿ ಕ್ಷೇತ್ರದಲ್ಲಿ ಪರಾಶರ ಸ್ಮೃತಿಗೆ ಮಾಧವೀಯ ವ್ಯಾಖ್ಯೆ ಮತ್ತು ವ್ಯವಹಾರದ ವಿಷಯದಲ್ಲಿ ಪರಾಶರಮಾಧವೀಯ ಗ್ರಂಥಗಳು ಹೊರಬಂದವು. ಪ್ರಾಯಶ್ಚಿತ್ತ ಸುಧಾನಿಧಿಯೂ ಇದೇ ವಿಭಾಗಕ್ಕೆ ಸೇರಿದ ಕೃತಿ. ದೇವಣ್ಣಭಟ್ಟ (ಸು.1145) ನಾನಾ ಸ್ಮೃತಿಗಳ ಆಧಾರದ ಮೇಲೆ ಸ್ಮೃತಿಚಂದ್ರಿಕೆಯನ್ನು ಮತ್ತು ನರಹರಿ ಎಂಬುವನು ಸ್ಮೃತಿಕೌಸ್ತುಭವನ್ನೂ ರಚಿಸಿದರು. ವ್ಯಾಕರಣದಲ್ಲಿ ಮಾಧವೀಯವಾದ ಧಾತುವೃತ್ತಿಯನ್ನು ಗಮನಿಸಬಹುದು. ದರ್ಶನ ಪ್ರಪಂಚದಲ್ಲಿ ಮಾಧವ ವಿದ್ಯಾರಣ್ಯರ ಜೈಮಿನೀಯ ನ್ಯಾಯಮಾಲಾವಿಸ್ತರ ಮತ್ತು ವೈಯಾಸಿಕ ನ್ಯಾಯಮಾಲಾವಿಸ್ತರ ಮತ್ತು ಸಾಯಣಾಚಾರ್ಯರ ಸರ್ವದರ್ಶನಸಂಗ್ರಹ ಇವು ಮುಖ್ಯವಾದವು. ಪದ್ಮಪುರಾಣದ ಸೂತಸಂಹಿತೆಯ ವ್ಯಾಖ್ಯೆ ತಾತ್ಪರ್ಯ ದೀಪಿಕೆಯೂ ಇವರದು. ಅಲಂಕಾರಶಾಸ್ತ್ರಕ್ಕೆ ಸೇರಿದ ಅಲಂಕಾರಸುಧಾನಿಧಿಯೂ ಸಾಯಣರ ಹೆಸರಿನಲ್ಲಿದೆ. ಸಾಯಣರು ಸುಭಾಷಿತಸುಧಾನಿಧಿ ಎಂಬ ಸುಭಾಷಿತ ಸಂಗ್ರಹವನ್ನೂ ಸಿದ್ಧಪಡಿಸಿದರು. ಭೋಗನಾಥ ಉತ್ತಮ ಕವಿಯೆಂದೂ ಹಲವು ಕೃತಿಗಳನ್ನು ರಚಿಸಿದನೆಂದೂ ಉಲ್ಲೇಖವಿದೆ. ಆದರೆ ಆತನ ಕೃತಿಗಳು ಯಾವುವೂ ದೊರೆತಿಲ್ಲ. ತನ್ನ ಪತಿ ಕಂಪಣ ಅಥವಾ ಕಂಪರಾಯ ಮಧುರೆಯನ್ನು ವಶಪಡಿಸಿಕೊಂಡುದನ್ನು ಕಣ್ಣಾರೆ ಕಂಡ ಗಂಗಾದೇವಿ, ಆ ವಿಜಯ ಯಾತ್ರೆಯನ್ನು ಮಧುರಾವಿಜಯ ಅಥವಾ ವೀರಕಂಪಣ ರಾಯಚರಿತವೆಂಬ ಹೆಸರಿನಲ್ಲಿ ಕಾವ್ಯವೊಂದನ್ನು ರಚಿಸಿದ್ದಾಳೆ (ಸು.1360). ವಿಜಯನಗರದ ವಿರೂಪಾಕ್ಷ ನರಕಾಸುರ ವಿಜಯವನ್ನು ರಚಿಸಿದ. ಈ ಕಾಲದಲ್ಲೇ ಮುಂದೆಯೂ ಸಾಲುವಾಭ್ಯುದಯ ಮುಂತಾದ ಅನೇಕ ಕಾವ್ಯಗಳು ರಚಿತವಾದವು. ವಿಜಯನಗರದ ಅನಂತರ ರಾಜಕೀಯ ಕೇಂದ್ರ ಹಂಚಿಹೋದಂತೆ ವಿದ್ಯಾಕೇಂದ್ರಗಳೂ ಹಂಚಿಹೋದವು. ಆದರೆ ಸಂಸ್ಕೃತಕ್ಕಿದ್ದ ಪ್ರೋತ್ಸಾಹ ಕುಂಠಿತವಾದರೂ ಅಳಿಸಿಹೋಗಲಿಲ್ಲ. ಕೆಳದಿಯ ದೊರೆ ಬಸವ ಭೂಪಾಲ ಸ್ವತಃ ಕವಿಯಾಗಿದ್ದ. ಸೋಮದೇವನ ಅಭಿಲಷಿತಾರ್ಥ ಚಿಂತಾಮಣಿಯ ಮಾದರಿಯನ್ನು ಅನುಸರಿಸಿ ಶಿವತತ್ತ್ವ ರತ್ನಾಕರ ಎಂಬ ಗ್ರಂಥವನ್ನು ಈತ ಸಿದ್ಧಪಡಿಸಿದ. ಇದು 108 ಅಧ್ಯಾಯಗಳುಳ್ಳ ಬೃಹದ್ಗ್ರಂಥ. ಇವನದೇ ಇನ್ನೊಂದು ಉದ್ಗ್ರಂಥ ಸುಭಾಷಿತ ಸುರದ್ರುಮ ಎಂಬ ಸೂಕ್ತಿಕೋಶ. ಶ್ರೀರಂಗಪಟ್ಟಣದ ದಳವಾಯಿ ನಂಜರಾಜ ನಂಜರಾಜಯಶೋಭೂಷಣ ಎಂಬ ಅಲಂಕಾರ ಗ್ರಂಥವನ್ನು ಬರೆದ. ಅಲ್ಲಿಯೇ ಪ್ರಧಾನಿಯಾಗಿದ್ದ ವೆಂಕಟಪ್ಪಯ್ಯ ಭೂಪತಿ ಅಥವಾ ವೆಂಕಾಮಾತ್ಯ ಹಲವಾರು ಗ್ರಂಥಗಳನ್ನು ರಚಿಸಿದ. ಇವನ ಅಲಂಕಾರಮಣಿದರ್ಪಣದಲ್ಲಿ ಅದುವರೆಗೆ ಅಲಂಕಾರ ಶಾಸ್ತ್ರದಲ್ಲಿ ನಡೆದ ಚರ್ಚೆಗಳನ್ನು ಸುಲಲಿತವಾಗಿ ಸಂಗ್ರಹಿಸಲಾಗಿದೆ. ಇವನ ಕುಶಲವ ವಿಜಯಚಂಪು ಭಟ್ಟಿಕಾವ್ಯದ ಮಾದರಿಯಲ್ಲಿ ವ್ಯಾಕರಣ ನಿಯಮಗಳಿಗೆ ಉದಾಹರಣೆ ಯಾಗಿರುವಂತೆ ರಚಿಸಲಾದ ಶಾಸ್ತ್ರಕಾವ್ಯ. ಈತ ಇವಲ್ಲದೆ ಹತ್ತು ಬಗೆಯ ರೂಪಕಗಳಿಗೂ ಒಂದೊಂದು ಉದಾಹರಣೆಯಾಗುವಂತೆ ಹತ್ತು ರೂಪಕಗಳನ್ನು ಬರೆದಿದ್ದಾನೆ. ಮುಮ್ಮಡಿ ಕೃಷ್ಣರಾಜರ ಕಾಲ 19ನೆಯ ಶತಮಾನದಲ್ಲಿ ಹುಟ್ಟಿದ ಮುಮ್ಮಡಿ ಕೃಷ್ಣರಾಜ ಒಡೆಯರ ಶ್ರೀತತ್ತ್ವನಿಧಿ ಒಂದು ಸಚಿತ್ರ ಗ್ರಂಥ. ಇದರಲ್ಲಿ ಸಂವತ್ಸರಾಭಿಮಾನಿ ದೇವತೆಗಳು ರಾಗಾಭಿಮಾನಿ ದೇವತೆಗಳೇ ಮೊದಲಾಗಿ ನಾನಾ ದೇವತೆಗಳ, ಶಿವವಿಷ್ಣುವಿನ ನಾನಾ ರೂಪಗಳ ಸಂಸ್ಕೃತದ ಧ್ಯಾನ ಶ್ಲೋಕಗಳೊಡನೆ ಅದಕ್ಕೆ ಅನುಗುಣವಾದ ವರ್ಣರಂಜಿತ ಚಿತ್ರಗಳನ್ನು ಕೊಡಲಾಗಿದೆ. ಸಂಖ್ಯಾರತ್ನಮಾಲಾ ಒಂದು ಬಗೆಯ ಕೋಶ. ಪ್ರಪಂಚದಲ್ಲಿ ಕೆಲವೊಂದು ಪದಾರ್ಥಗಳು ಒಂಟಿಯಾಗಿರಬಹುದು, ಜೊತೆಜೊತೆಯಾಗಿರಬಹುದು. ಇಲ್ಲವೇ ಮೂರು ಅಥವಾ ಅದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿನ ಗುಂಪುಗಳಲ್ಲಿರಬಹುದು. ಅಂಥ ಒಂಟಿ ಪದಾರ್ಥಗಳನ್ನೂ ಎರಡು ಅಥವಾ ಹೆಚ್ಚಿನ ಸಂಖ್ಯೆಯ ಗುಂಪುಗಳಲ್ಲಿ ಸೇರಿದ ವಸ್ತುಗಳ ಹೆಸರುಗಳನ್ನೂ ಆಯಾ ಸಂಖ್ಯೆಯ ಕ್ರಮದಲ್ಲಿ ಕೊಡಲಾಗಿದೆ. ಹೀಗೆ 127 ಕೊನೆಯ ಸಂಖ್ಯೆ ‘ಗ್ರಹಣದರ್ಪಣ’ 1841-1902ರ ವರೆಗಿನ ಅವಧಿಯಲ್ಲಿನ ಗ್ರಹಣದ ಬಗ್ಗೆ ಮಾಹಿತಿ ನೀಡುವ ಗ್ರಂಥ. 19ನೆಯ ಶತಮಾನದಲ್ಲಿ ನಡೆದ ಸಾಹಿತ್ಯ ಚಟುವಟಿಕೆಯಲ್ಲಿ ಇನ್ನೂ ಕೆಲವು ಹೆಸರುಗಳನ್ನು ಸೂಚಿಸಬಹುದು. ಯಾದವ ರಾಘವ ಪಾಂಡವೀಯ (1817) ಎಂಬ ತ್ರಿಸಂಧಾನ ಕಾವ್ಯವನ್ನು ಮೈಸೂರು ಅನಂತಾಚಾರ್ಯ ರಚಿಸಿದ್ದಾರೆ. ಭಾಗವತ, ರಾಮಾಯಣ ಹಾಗೂ ಮಹಾಭಾರತ ಕಥೆಗಳನ್ನು ಒಂದೇ ಬಾರಿಗೆ ಹೇಳುವ ಸಾಹಸ ಈ ಕಾವ್ಯದಲ್ಲಿ ನಡೆದಿದೆ. ಏಕಾಂಬರಶಾಸ್ತ್ರಿ ಎಂಬವರು ವೀರಭದ್ರವಿಜಯಚಂಪು ಎಂಬ ಕಾವ್ಯದಲ್ಲಿ ಬೆಂಗಳೂರು ಕೆಂಪೇಗೌಡನ ವಂಶದ ಚರಿತ್ರೆ ಹೇಳಲು ಅವಕಾಶ ಮಾಡಿಕೊಂಡಿದ್ದಾರೆ. ಮಲ್ಲಾರಿ ಆರಾಧ್ಯರು ಶಿವಲಿಂಗ, ಸೂರ್ಯೋದಯ ಎಂಬ ನಾಟಕವನ್ನು ಪ್ರಬೋಧ ಚಂದ್ರೋದಯದ ಮಾದರಿಯಲ್ಲಿ ರಚಿಸಿದ್ದರೆ, ಲಿಂಗಭಟ್ಟರು ಅಮರಕೋಶಕ್ಕೆ ಸಂಸ್ಕೃತ ಹಾಗೂ ಕನ್ನಡ ವಿವೃತ್ತಿಯನ್ನು ಬರೆದಿದ್ದಾರೆ. ಗುಡಿಬಂಡೆ ಸಮೀಪದ ಮಂಡಿಕಲ್ಲು ರಾಮಶಾಸ್ತ್ರೀ ‘ಮೇಘ ಪ್ರತಿಸಂದೇಶ’ ಎಂಬ ಗ್ರಂಥವನ್ನು ರಚಿಸಿದ್ದಾರೆ. ಸತ್ಯಪ್ರಿಯತೀರ್ಥರು ವ್ಯಾಕರಣ ಮಹಾಭಾಷ್ಯಕ್ಕೆ ವ್ಯಾಖ್ಯಾನ ರಚಿಸಿದ್ದಾರೆ. ಇದರ ಭಾಗಗಳು ಮಾತ್ರ ದೊರೆತಿವೆ. ಮೇಲುಕೋಟೆಯ ಜಗ್ಗೂಆಳ್ವಾರರು ನಿರ್ಮಿಸಿದ ಪ್ರತಿಜ್ಞಾಕೌಟಿಲ್ಯಂ, ಪ್ರಸನ್ನರಾಘವಂ, ಮಹೀಹರಣಂ ಮುಂತಾದ ಅನೇಕ ಕಾವ್ಯಗಳು ಗಮನಾರ್ಹವಾಗಿವೆ. ಸಂಸ್ಕೃತ ಸಾಹಿತ್ಯ ಕೃತಿಗಳನ್ನು ಇಂಗ್ಲಿಷ್, ಕನ್ನಡ, ಹಿಂದೀಗಳಿಗೆ ಅನುವಾದಿಸಿ ಸಂಸ್ಕೃತ ಸಾಹಿತ್ಯವನ್ನು ಅನ್ಯರಿಗೆ ಪರಿಚಯ ಮಾಡಿಕೊಡುವಲ್ಲಿ ವಿದ್ವಾಂಸರಾದ ಕೆ. ಕೃಷ್ಣಮೂರ್ತಿ, ಎನ್. ರಂಗನಾಥಶರ್ಮ ತುಂಬಾ ಶ್ರಮಿಸಿದ್ದಾರೆ. ಇವರಂತೆಯೇ ಅನೇಕ ಆಧುನಿಕ ವಿದ್ವಾಂಸರು ತಮ್ಮದೇ ಆದ ಕೊಡುಗೆಯನ್ನು ಮೂಲ ಸಾಹಿತ್ಯಕ್ಕಾಗಲೀ ಅಥವಾ ಅನುವಾದ ಸಾಹಿತ್ಯಕ್ಕಾಗಲೀ ಅರ್ಪಿಸುತ್ತ ಬಂದಿದ್ದಾರೆ. ಅವುಗಳಲ್ಲಿ ಅನೇಕ ಕೃತಿಗಳು ಮಹತ್ಕೃತಿಗಳಾಗಿವೆ. ಇತ್ತೀಚಿನ ದಿನಗಳಲ್ಲಿ ಹಿಂದು ಸೇವಾ ಪ್ರತಿಷ್ಠಾನದ ಸಂಸ್ಕೃತ ಶಾಖೆ ಸಂಸ್ಕೃತದ ಬೆಳೆವಣಿಗೆಗಾಗಿ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡು ಶ್ರಮಿಸುತ್ತಿದೆ. ವಿಜಯನಗರ ಕಾಲದಾರಭ್ಯ ಆಧುನಿಕ ಕಾಲದ ತನಕ ಸಂಸ್ಕೃತದಲ್ಲಿ ಸೃಜನಾತ್ಮಕ ಕಾರ್ಯ ಎಷ್ಟೊಂದು ಅಗಾಧವಾಗಿ ಸಾಗಿದೆಯೆಂದರೆ ದೊರೆಯುವ ಸಂಸ್ಕೃತ ಹಸ್ತಪ್ರತಿಗಳ ಸಂಖ್ಯೆ ಹತ್ತುಸಾವಿರಕ್ಕೂ ಹೆಚ್ಚಾಗುತ್ತದೆ. ಈ ಗ್ರಂಥಗಳೆಲ್ಲ ಹೆಚ್ಚಾಗಿ ಪುರ್ವ ಮಹಾಕವಿಗಳ, ಸ್ತೋತ್ರಕಾರರ ಮಾದರಿಯಲ್ಲಿ ಬರೆದ ನೂತನ ರಚನೆಗಳು, ಇಲ್ಲವೆ ನಾನಾ ಶಾಸ್ತ್ರಗ್ರಂಥಗಳಿಗೆ ಟೀಕೆಟಿಪ್ಪಣಿಗಳು, ಇಲ್ಲವೆ ಧರ್ಮಶ್ರದ್ಧೆಯಿಂದ ಬರೆದ ಆಚಾರ್ಯ ಪುರುಷರ ದಿಗ್ವಿಜಯಗಳು, ಬಾಲೋಪಯೋಗಿ ಕಥಾನಕಗಳು ಮತ್ತು ಧರ್ಮಾಚರಣೆಗೆ ಉಪಯುಕ್ತವಾದ ಕೈಪಿಡಿಗಳು, ಮಂತ್ರ-ತಂತ್ರ ಪರಿಷ್ಕಾರಗಳು. ಹೊಸಗನ್ನಡ ಕಾಲ 20ನೆಯ ಶತಮಾನದಲ್ಲಿಯೂ ಹಲವು ಕೃತಿಗಳು ಸಂಸ್ಕೃತದಲ್ಲಿ ರಚನೆಗೊಂಡವು. ಸುಂದರವಲ್ಲಿಯ (1900) ರಾಮಾಯಣ ಚಂಪು ಒಂದು ಗಮನಾರ್ಹ ಕೃತಿ. ಚಾಮರಾಜನಗರದ ಶ್ರೀಕಂಠಶಾಸ್ತ್ರೀ ಅವರು ಧಾತುರೂಪ ಪ್ರಕಾಶಿಕೆ ಎಂಬ ಗ್ರಂಥವನ್ನು ಬರೆದರಲ್ಲದೆ, ಯವನಯಾಮಿನೀವಿನೋದ ಕಥಾ ಎಂಬ ಹೆಸರಿನಲ್ಲಿ ಅರೇಬಿಯನ್ ನೈಟ್ಸ್‌ ಕಥೆಗಳನ್ನು ಸಂಸ್ಕೃತಕ್ಕೆ ಅನುವಾದ ಮಾಡಿದ್ದಾರೆ. ಶ್ರೀ ಕೃಷ್ಣಬ್ರಹ್ಮತಂತ್ರ ಪರಕಾಲ ಸ್ವಾಮಿಗಳು ಅಲಂಕಾರಮಣಿಹಾರ ಎಂಬ ಗ್ರಂಥವನ್ನು ರಚಿಸಿದ್ದಾರೆ. ಇದು ಅಲಂಕಾರಗಳನ್ನು ವಿವರಿಸುವ ಗ್ರಂಥ. ಇದರ ಉದಾಹರಣೆಗಳೆಲ್ಲವೂ ಶ್ರೀನಿವಾಸ ದೇವರನ್ನು ಕುರಿತವು. ವೇದಾಂತಾಚಾರ್ಯರು ರಚಿಸಿದ ಕೃತಿ ರಸಾಸ್ವಾದನೆ. ಇದು ಹಂಸಸಂದೇಶದ ವ್ಯಾಖ್ಯೆ. ಲಕ್ಷ್ಮೀಪುರಂ ಶ್ರೀನಿವಾಸಾಚಾರ್ಯರು ಭಗವದ್ಗೀತಾ ಪ್ರಬಂಧ ಮೀಮಾಂಸಾ (1902), ಮೀಮಾಂಸಾ ಭಾಷಾಭೂಷಣ (1928) ಮುಂತಾದ ಹಲವು ಕೃತಿಗಳನ್ನು ರಚಿಸಿದ್ದಾರೆ. ಮೀಮಾಂಸಾ ಭಾಷಾಭೂಷಣ ಕುಮಾರಿಲಭಟ್ಟನ ತತ್ತ್ವಗಳನ್ನು ಪ್ರತಿಪಾದಿಸುವ ಗ್ರಂಥ. ದರ್ಶನೋದಯ (1933) ನಾನಾದರ್ಶನ ಪದ್ಧತಿಗಳ ವಿಷಯದೃಷ್ಟಿ ಮತ್ತು ವಿಮರ್ಶೆಯಿಂದ ಕೂಡಿದ ಲಲಿತ ಹಾಗೂ ಸ್ಪಷ್ಟ ನಿರೂಪಣೆಗಳನ್ನೊಳಗೊಂಡಿದೆ. ಮೇಲುಕೋಟೆಯ ಜಗ್ಗು ವೆಂಕಟಾಚಾರ್ಯರ ಹೆಸರಿನಲ್ಲಿ ಹತ್ತಾರು ಕೃತಿಗಳಿವೆ. ಕಾರ್ಕಳದ ಪಂಡಿತೆ ರಮಾಬಾಯಿ ಅವರು ಸುಲಲಿತ ಸಂಸ್ಕೃತದಲ್ಲಿ ಗ್ರಂಥರಚಿಸಿ ಖ್ಯಾತಿಪಡೆದಿದ್ದಾರೆ. ಮುತ್ತಯ್ಯ ಭಾಗವತರ್ ಹುಟ್ಟುಕನ್ನಡಿಗರಲ್ಲದಿದ್ದರೂ ಅವರ ಸಂಗೀತ ಕೃತಿಗಳ ರಚನೆ ಬಹುತೇಕವಾಗಿ ಮೈಸೂರಿನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ಆಸ್ಥಾನದಲ್ಲಿ ನಡೆಯಿತು. ಇಲ್ಲೇ ಮೈಸೂರಿನ ಪ್ರಸಿದ್ಧ ವಾಗ್ಗೇಯಕಾರರಾದ ವಾಸುದೇವಾಚಾರ್ಯರ ಹೆಸರನ್ನು ಹೇಳಬಹುದು. ಇವರಿಬ್ಬರ ಕೃತಿಗಳೂ ಜನಪ್ರಿಯತೆಯನ್ನೂ ಗಳಿಸಿವೆ. ಮೈಸೂರು ಮಹಾರಾಜರಾಗಿದ್ದ ಜಯಚಾಮರಾಜ ಒಡೆಯರ್ ಅವರ ಆಳ್ವಿಕೆಯಲ್ಲೂ ಸಂಸ್ಕೃತಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆಯಿತು. ಇವರೇ ಸ್ವತಃ ಹಲವು ಶ್ರೇಷ್ಠ ಕೃತಿಗಳನ್ನು ರಚಿಸಿದ್ದಾರೆ. ಇವರು ನಿಯೋಜಿಸಿದ ಪುರಾಣ, ವೇದ, ವೇದಾಂತ ಗ್ರಂಥಗಳನ್ನು ಮೂಲ ಮತ್ತು ಕನ್ನಡ ಅನುವಾದದೊಡನೆ ಪ್ರಕಟಿಸುವ ಮಹಾಯೋಜನೆಯಂತೆ 12 ಮಹಾ ಪುರಾಣಗಳು, 12 ಉಪಪುರಾಣಗಳು, 6 ಆಧ್ಯಾತ್ಮಿಕ ಗ್ರಂಥಗಳು (ಆನಂದ ಅಧ್ಯಾತ್ಮ ರಾಮಾಯಣಗಳು, ಯೋಗವಾಸಿಷ್ಠ, ಪ್ರಸ್ಥಾನತ್ರಯ ಭಾಷ್ಯಗಳು), ಒಂದೆರಡು ತಂತ್ರ ಗ್ರಂಥಗಳ ಋಕ್ಸಂಹಿತೆ, ಐತರೇಯ ಬ್ರಾಹ್ಮಣ ಮತ್ತು ಆರಣ್ಯಕ ಮತ್ತು ನಿರುಕ್ತ-ಈ ಗ್ರಂಥಗಳು ಸುಮಾರು 350 ಸಂಪುಟಗಳಲ್ಲಿ ಶ್ರೀ ಜಯಚಾಮರಾಜೇಂದ್ರ ಗ್ರಂಥಮಾಲೆಯಲ್ಲಿ ಪ್ರಕಾಶಿತವಾಗಿವೆ. ಪುರಾಣಗಳ, ವೇದಾಂತ ಗ್ರಂಥಗಳ ಮೂಲ ಮತ್ತು ಅನುವಾದ ಪ್ರಕಟವಾಗಿದ್ದರೆ, ಸಂಹಿತೆ, ಬ್ರಾಹ್ಮಣ ಗ್ರಂಥಗಳು ಸಾಯಣ ಭಾಷ್ಯ ವಿಸ್ತಾರವಾದ ಕನ್ನಡ ವಿವರಣೆಯೊಂದಿಗೆ ಹೊರಬಂದಿವೆ. ನಿರುಕ್ತಕ್ಕೂ ವಿಸ್ತಾರವಾದ ವಿವರಣೆಯಿದೆ. ವೇದಗ್ರಂಥಗಳಿಗೆ ಇಂಗ್ಲಿಷ್ ಅನುವಾದವನ್ನು ಕೊಡಲಾಗಿದೆ. ಈ ಮಾಲೆಯ ಮೂಲಕ ಕನ್ನಡ ಸಾಹಿತ್ಯಕ್ಕೆ, ಸಂಸ್ಕೃತಿ ಪ್ರಚಾರಕ್ಕೆ, ಸಂಸ್ಕೃತ ಭಾಷಾಧ್ಯಯನಕ್ಕೆ ಒಡೆಯರ್ ಅವರು ಇತ್ತ ನೆರವು ಅಪಾರವಾದುದು. ಇತ್ತೀಚೆಗೆ ಜಯಚಾಮರಾಜೇಂದ್ರರ ಕೃತಿಗಳಾದ ಶ್ರೀತತ್ತ್ವನಿಧಿ ಮೊದಲಾದ 9 ಕೃತಿಗಳು ಮೈಸೂರಿನ ಪ್ರಾಚ್ಯವಿದ್ಯಾ ಸಂಶೋಧನಾಲಯದಿಂದ ಕನ್ನಡ ಇಂಗ್ಲಿಷ್ ಅನುವಾದಗಳೊಂದಿಗೆ ಪ್ರಕಟವಾಗಿವೆ. ವಿದ್ಯಾಭ್ಯಾಸ ಹಾಗೂ ಸಂಸ್ಕೃತ ಪ್ರಚಾರ ಕ್ಷೇತ್ರದಲ್ಲಿಯೂ ಸಾಕಷ್ಟು ಕಾರ್ಯ ಕಳೆದ ಶತಮಾನದ ಕೊನೆಯಿಂದ ನಡೆದು ಬಂದಿದೆ. ಎಚ್. ಸುಬ್ಬರಾವ್ ರಚಿಸಿದ, ‘ವಿದ್ಯಾಭ್ಯಾಸ ಪದ್ಧತಿ’ ಹರ್ಬರ್ಟ್ ಸ್ಪೆನ್ಸರನ ಗ್ರಂಥದ ಅನುವಾದ. ಪೆರಿಸ್ವಾಮಿ ತಿರುಮಲಾಚಾರ್ ಸದ್ವಿದ್ಯಾ ಆಂಗ್ಲೋ-ಸಂಸ್ಕೃತ ಪಾಠಶಾಲೆಯ ಸ್ಥಾಪಕರಲ್ಲೊಬ್ಬರಾಗಿದ್ದು, ಬಾಲಬೋಧಗಳನ್ನು ಸಿದ್ಧಪಡಿಸಿದರು. ಹಿಂದಿನಿಂದಲೂ ಉಡುಪಿ, ಶೃಂಗೇರಿ, ಕೂಡ್ಲಿ, ಸಂಕೇಶ್ವರಗಳಲ್ಲಿಯೂ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲೂ ಸಂಸ್ಕೃತ ಪಾಠಶಾಲೆಗಳಿದ್ದವು. ಪರ್ದಲ, ಕಾರ್ಕಳಗಳಲ್ಲಿ ಮಹಾ ಪಾಠಶಾಲೆಗಳಿದ್ದವು (ಓರಿಯಂಟಲ್ ಕಾಲೇಜು). ಈಚೆಗೆ ಆಧುನಿಕ ವಿದ್ಯಾಭ್ಯಾಸದ ಏರ್ಪಾಡುಗಳಾದಂತೆ ಸಂಸ್ಕೃತ ವಿದ್ಯಾಭ್ಯಾಸ ಪ್ರಗತಿ ಸಾಧಿಸಿದೆ. ಶೃಂಗೇರಿ, ಉಡುಪಿ, ಕಾರ್ಕಳಗಳಲ್ಲಿದ್ದ ಪಾಠಶಾಲೆಗಳು ಸುವ್ಯವಸ್ಥಿತವಾಗಿವೆ. ಮೈಸೂರು, ಬೆಂಗಳೂರುಗಳಲ್ಲಿ ಪ್ರೌಢ ವಿದ್ಯಾಭ್ಯಾಸಕ್ಕೆ ಉನ್ನತ ಮಟ್ಟದ ಸಂಸ್ಕೃತ ಪಾಠಶಾಲೆಗಳನ್ನು ಸ್ಥಾಪಿಸಲಾಗಿದೆ. ಶಾಲೆ, ಕಾಲೇಜು ಮತ್ತು ಸ್ನಾತಕೋತ್ತರ ಪದವಿ ಮಟ್ಟದಲ್ಲಿ ಸಂಸ್ಕೃತ ಶಿಕ್ಷಣಕ್ಕೆ ಅವಕಾಶವಿದೆ. ಸಂಸ್ಕೃತದಲ್ಲಿ ಪತ್ರಿಕೆ, ನಿಯತಕಾಲಿಕೆಗಳು ಪ್ರಕಟವಾಗುತ್ತಿವೆ. ಬೆಳಗಾಂವಿಯಿಂದ ಪ್ರಕಟವಾಗುತ್ತಿದ್ದ ಸಂಸ್ಕೃತ ಚಂದ್ರಿಕಾ ಮತ್ತು ಮಧುರವಾಣೀ ನಿಯತಕಾಲಿಕೆಗಳು ಬಹಳ ಪ್ರಭಾವವನ್ನು ಬೀರಿವೆ. ಇದರ ಏಳ್ಗೆಗಾಗಿ ಪಂಡರೀನಾಥ ಗಲಗಲಿಯವರು ಬಹಳ ಶ್ರಮವಹಿಸಿ ದುಡಿದಿದ್ದಾರೆ. ಅಮರ ಭಾರತೀ ನಿಯತಕಾಲಿಕೆ ವಾರಾಣಸಿಯಲ್ಲಿ ಪ್ರಕಾಶಿತವಾದರೂ ಅದರ ಸಂಪಾದಕರಾದ ನರಸಿಂಹಾಚಾರ್ ಕರ್ನಾಟಕದವರು. ಏಕಮಾತ್ರ ದೈನಿಕವಾದ ಸುಧರ್ಮಾ ಮೈಸೂರಿನಲ್ಲಿ ಕೆ.ಎಸ್.ವರದರಾಜ ಅಯ್ಯಂಗಾರ್ ಅವರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿತ್ತು. ಸಂಸ್ಕೃತ-ಕನ್ನಡ ಭಾಷೆಗಳೆರಡೂ ಸು.2000 ವರ್ಷಗಳಿಂದ ಜೊತೆಯಲ್ಲಿಯೇ ಬೆಳೆಯುತ್ತ ಬಂದಿವೆ; ಪರಸ್ಪರ ಪ್ರಭಾವಿತವಾಗಿವೆ. ಕನ್ನಡ ಭಾಷೆಯ ಪ್ರಭಾವವೂ ಸಂಸ್ಕೃತದ ಮೇಲೆ ಆಗಿದೆ ಎಂಬುದಕ್ಕೆ ಸಂಸ್ಕೃತ ಕನ್ನಡದಿಂದ ಎರವಲು ಪಡೆದಿರಬಹುದಾದ ಒಂದೆರಡು ಪದಗಳನ್ನು ಇಲ್ಲಿ ಉದಾಹರಣೆಗಾಗಿ ಹೇಳಬಹುದು. ಆರ್ಬಟ-ಆರ್ಭಟ, ಗುದ್ದಲಿ-ಕುದ್ದಾಲ, ಗೊಟರು-ಕೋಟಕ. ಹೆಂಟೆ-ಹೆಂಡೆ, ಪಿಂಡು-ಪಿಂಡ ಇತ್ಯಾದಿ. ಸಂಸ್ಕೃತ ಪದಗಳು ಕನ್ನಡದಲ್ಲಿ ಧಾರಾಳವಾಗಿ ಬಳಕೆಯಾಗುತ್ತಾ ಬಂದಿವೆ. ಇಂದಿನ ಪಾರಿಭಾಷಿಕ ಪದಗಳನ್ನು ರೂಪಿಸುವುದರಲ್ಲಿಯೂ ಸಂಸ್ಕೃತದ ಉಪಯೋಗ ಬಹಳಷ್ಟಿದೆ. ಆದರೆ ಸಂಸ್ಕೃತದಿಂದ ಕನ್ನಡಕ್ಕೆ ಬಂದಿರುವುದು ಹೆಚ್ಚು. ಸಂಸ್ಕೃತದಲ್ಲಿದ್ದ ವಿಜ್ಞಾನ, ಕಲೆ ಮತ್ತು ತತ್ತ್ವಶಾಸ್ತ್ರ ಮೊದಲಾದ ವಾಙ್ಮಯ ವಿಭಾಗಗಳ ಬಗೆಗಿನ ಗ್ರಂಥಗಳೆಲ್ಲವನ್ನೂ ಕ್ರಮೇಣ ಕನ್ನಡದಲ್ಲಿಯೂ ಬರೆಯಲಾಯಿತು. ಮೊದಮೊದಲಿಗೆ ವಿಷಯ ನಿರೂಪಣೆಯಲ್ಲಿ ಸಂಸ್ ಸಂಸ್ಕೃತದ ಕವಿಗಳು ಸಂಸ್ಕೃತವನ್ನು ನೂರಾರು ಮಹಾಕವಿಗಳು, ದಾರ್ಶನಿಕರು ಸಮೃದ್ಧಗೊಳಿಸಿದ್ದಾರೆ. ಆ ಪಟ್ಟಿಯಲ್ಲಿ ಮೊದಲು ಬರುವವರು ವಾಲ್ಮೀಕಿ ಮುನಿ. ಅವರಿಂದಲೇ ಸಂಸ್ಕೃತದ ಮೊದಲ ಶ್ಲೋಕ ಹುಟ್ಟಿತು. ಅದು 'ಮಾ ನಿಷಾದ ಪ್ರತಿಷ್ಟಾಂ ತ್ವಮಗಮಃ ಶಾಶ್ವತೀ ಸಮಾಃ. ಯತ್ಕ್ರೌಂಚ ಮಿಥುನಾತ್ ಏಕಮವಧೀಹಿ ಕಾಮಮೋಹಿತಂ' ಎಂಬುದು. ಬೇಡನೊಬ್ಬ ಕಾಮಮೋಹಿತವಾಗಿದ್ದ ಕ್ರೌಂಚ ಪಕ್ಷಿಗಳ ಜೋಡಿಯಲ್ಲಿ ಒಂದನ್ನು ಕೊಂದಾಗ ಅದನ್ನು ನೋಡಿ ಸಿಟ್ಟುಗೊಂಡ ವಾಲ್ಮೀಕಿ ಮುನಿ ತಮಗೇ ಗೊತ್ತಿಲ್ಲದಂತೆ ಈ ಶ್ಲೋಕ ಹೇಳಿ ಬೇಡನಿಗೆ ಶಾಪ ಕೊಟ್ಟರು. ಶೋಕದಲ್ಲಿ ಹುಟ್ಟಿದ ಅದು ಶ್ಲೋಕವೆಂದು ಪ್ರಸಿದ್ಧಿಗೆ ಬಂತು. ಅವರ ಶಿಷ್ಯ ಭರಧ್ವಾಜ ಮುನಿ ಇದನ್ನು ದಾಖಲಿಸಿದ. ಇದೇ ವಾಲ್ಮೀಕಿ ಮುನಿಗಳು ರಾಮಾಯಣವನ್ನೂ ರಚಿಸಿದರು. ನಂತರ ವ್ಯಾಸರಿಂದ ಮಹಾಭಾರತ ರಚಿತವಾಯಿತು. ಇವರಿಬ್ಬರು ಸಂಸ್ಕೃತದ ಮೂಲ ಕವಿಗಳಾದರೆ, ಈ ಭಾಷೆಯ ಆದಿಕವಿ ಎಂದು ಹೆಸರಾದವರು ಕಾಳಿದಾಸ. ಅಭಿಜ್ಞಾನ ಶಾಕುಂತಲಮ್ ನಾಟಕ ಇವರ ಮಹತ್ವದ ಕೃತಿ. ಇದಲ್ಲದೆ ಮಾಲವಿಕಾಗ್ನಿಮಿತ್ರಮ್, ವಿಕ್ರಮೋರ್ವಶೀಯ ಎಂಬ ನಾಟಕಗಳನ್ನೂ, ರಘುವಂಶಮ್ ಮತ್ತು ಕುಮಾರಸಂಭವಮ್ ಎಂಬ ಮಹಾಕಾವ್ಯಗಳನ್ನೂ, ಮೇಘದೂತಮ್ ಮತ್ತು ಋತುಸಂಹಾರಮ್ ಎಂಬ ಖಂಡಕಾವ್ಯಗಳನ್ನೂ ಬರೆದಿದ್ದಾರೆ. ಇವರ ಜೊತೆಗೆ ಭಾಸ, ಭಾರವಿ, ಶ್ರೀಹರ್ಷ, ಬಾಣ ಮುಂತಾದ ಮಹತ್ವದ ಕವಿಗಳು ಸಂಸ್ಕೃತದಲ್ಲಿ ಆಗಿಹೋಗಿದ್ದಾರೆ. ಗಮನಿಸಿ : ಕಾಳಿದಾಸರಿಗೆ ಭಾರತದ ಶೇಕ್ಸ್ ಪಿಯರ್ ಎಂಬ ಅಭಿದಾನವೂ ಇದೆ. ಆದರೆ ಕಾಳಿದಾಸರನ್ನು ಹೀಗೆ ಕರೆಯುವ ಯಾವುದೇ ಅಗತ್ಯವಿಲ್ಲ. ಏಕೆಂದರೆ, ಶೇಕ್ಸ್ ಪಿಯರ ಕಾಲ ಏಪ್ರಿಲ್ ೨೬ ೧೫೬೪, ಹಾಗು ಕಾಳಿದಾಸರ ಕಾಲ ೫ ನೇ ಶತಮಾನ. ಕಾಳಿದಾಸರ ಕಾವ್ಯಗಳು ಎಷ್ಟೋ ಶತಮಾನ ಹಳೆಯದು. ಇನ್ನು ಶೇಕ್ಸ್ ಪಿಯರನ್ನು ಇಂಗ್ಲೆಂಡಿನ ಕಾಳಿದಾಸರೆಂದು ಕರೆಯುವುದರಲ್ಲಿ ಅರ್ಥವಿದೆ. ತಪ್ಪಾದ ಈ ವಾಕ್ಯವನ್ನು ಭಾರತೀಯರು ಎಂದೂ ಒಪ್ಪುವುದಿಲ್ಲ, ಒಪ್ಪುವ ಅಗತ್ಯವೂ ಇಲ್ಲ. ಸಂಸ್ಕೃತ ವಿಕಿಪೀಡಿಯಾ ಸಂಸ್ಕೃತ ವಿಕಿಪೀಡಿಯಾ ೨೦೦೩ ರಲ್ಲಿ ಆರಂಭಿಸಲಾಯಿತು. ಇದುವರೆಗೂ ಸಂಸ್ಕೃತ ವಿಕಿಪೀಡಿಯಾದಲ್ಲಿ ೧೫೦೦೦ ಪುಟಗಳನ್ನು ರಚಿಸಲಾಗಿದೆ. External links Samskrita Bharati Transliterator from romanized to Unicode Sanskrit Sanskrit Voice: Learn, read and promote Sanskrit Sanskrit transliterator with font conversion to Latin and other Indian Languages Sanskrit Alphabet in Devanagari, Gujarati, Bengali, and Thai scripts with an extensive list of Devanagari, Gujarati, and Bengali conjuncts Academic Courses on Sanskrit Around The World Sanskrit Documents Sanskrit Documents : Documents in ITX format of Upanishads, Stotras etc. and a metasite with links to translations, dictionaries, tutorials, tools and other Sanskrit resources. Read online Sanskrit text (PDF) of Mahabharata, Upanishada, Bhagavad-Gita, Yoga-Sutra etc. as well as Sanskrit-English spiritual Dictionary Digital Sanskrit Buddhist Canon GRETIL: Göttingen Register of Electronic Texts in Indian Languages, a cumulative register of the numerous download sites for electronic texts in Indian languages. Gaudiya Grantha Mandira - A Sanskrit Text Repository. This site also provides encoding converter. Sanskrit texts at Sacred Text Archive Clay Sanskrit Library publishes Sanskrit literature with facing-page text and translation. for texts and word-to-word translations for ageold publications for similar old publications Primers Sanskrit Self Study by Chitrapur Math Discover Sanskrit A concise study of the Sanskrit language A Practical Sanskrit Introductory by Charles Wikner. A Sanskrit Tutor Ancient Sanskrit Online from the University of Texas at Austin Grammars An Analytical Cross Referenced Sanskrit Grammar By Lennart Warnemyr. ಭಾರತೀಯ ಭಾಷೆಗಳು ಇಂಡಿಕ್ ಭಾಷೆಗಳು ಶಾಸ್ತ್ರೀಯ ಭಾಷೆಗಳು
1789
https://kn.wikipedia.org/wiki/%E0%B2%B0%E0%B2%A8%E0%B3%8D%E0%B2%A8
ರನ್ನ
ರನ್ನನು (೯೪೯-೧೦೨೦). ಹತ್ತನೆಯ ಶತಮಾನದ ಕನ್ನಡ ಸಾಹಿತ್ಯದ ಕವಿ ರತ್ನತ್ರಯರಲ್ಲಿ ಒಬ್ಬನಾಗಿದ್ದಾನೆ.ಇವನ ಊರು ಬೆಳುಗುಲಿ(ರನ್ನ ಬೆಳಗಲಿ). ಹಳಗನ್ನಡದ ಮಹತ್ತ್ವದ ಕವಿ. ಪಂಪನ ಕಿರಿಯ ಸಮಕಾಲೀನವ . ಅಜಿತತೀರ್ಥಂಕರ ಪುರಾಣತಿಲಕಂ, ಸಾಹಸಭೀಮವಿಜಯ (ಗದಾಯುದ್ಧ) ಎಂಬ ಕಾವ್ಯಗಳ ಕರ್ತೃ. ಶಕ್ತಿಕವಿ ಎಂದೇ ಖ್ಯಾತನಾಗಿದ್ದಾನೆ. ರನ್ನನಿರುವ ಕನ್ನಡಕ್ಕೆ ಅನ್ಯರಿಂದ ಬಹುದೆ ಧಕ್ಕೆ? ಬರಿಯ ಕವಿಯೆ ಸಿಡಿಲ ಚಕ್ಕೆ ಎಂಬ ಹೊಗಳಿಕೆಗೆ ಕುವೆಂಪು ಅವರಿಂದ ಪಾತ್ರನಾಗಿದ್ದಾನೆ.' ಚಾಲುಕ್ಯರ ಎರಡನೆಯ ತೈಲಪ ಚಕ್ರವರ್ತಿ ಆಹವಮಲ್ಲ ಹಾಗೂ ಅವನ ಮಗ ಸತ್ಯಾಶ್ರಯ ಇರವಬೆಡಂಗ ಇವರ ಆಸ್ಥಾನಕವಿಯಾಗಿದ್ದು ಕವಿಚಕ್ರವರ್ತಿ ಎಂಬ ಬಿರುದನ್ನು ಪಡೆದಿದ್ದನು ಬದುಕು ರನ್ನನು ಕ್ರಿ.ಶ.೯೪೯ರಲ್ಲಿ ಬೆಳುಗುಲಿ (ಈಗಿನ ರನ್ನ ಬೆಳಗಲಿ ತಾ|| ಮುಧೋಳ) ಗ್ರಾಮದಲ್ಲಿ ಜನಿಸಿದನು. ತಂದೆ ಜಿನವಲ್ಲಭ , ತಾಯಿ ಅಬ್ಬಲಬ್ಬೆ. ರನ್ನನು ಜೈನ ಮನೆತನದ ಬಳೆಗಾರ ಕುಲದವನು..ಆ ಕಾಲದ ಪ್ರಸಿದ್ಧ ಗುರು ಅಜಿತಸೇನಾಚಾರ್ಯರ ಬಳಿ ರನ್ನನ ವಿದ್ಯಾಭ್ಯಾಸ. ಈತನು ಐದು ಕೃತಿಗಳನ್ನು ರಚಿಸಿದ್ದು ಮೂರು ಕೃತಿಗಳು ಮಾತ್ರ ಲಭ್ಯವಿವೆ: ರನ್ನನ ಜೀವನ ಚರಿತ್ರೆಗೆ ಸಂಬಂಧಿಸಿದ ಅನೇಕ ವಿಚಾರಗಳು ಇವನ ಎರಡೂ ಕೃತಿಗಳಿಂದ ದೊರೆಯುತ್ತವೆ. ಘಟಪ್ರಭಾ ಮತ್ತು ಕೃಷ್ಣಾ ನದಿಗಳು ಹರಿಯುವಲ್ಲಿ ತದ್ದವಾಡಿಗೆ ದಕ್ಷಿಣಕ್ಕೂ ತೊರಗಲಿಗೆ ಉತ್ತರಕ್ಕೂ ಬೆಳುಗಲಿ ದೇಶವಿದೆ. ಈ ಬೆಳುಗುಲಿ 500ರಲ್ಲಿ ಅಗ್ಗಳವೆನಿಸುವ ಜಮಖಂಡಿ ಎಂಬ ಪ್ರಾಂತ್ಯವಿದೆ. ಇದಕ್ಕೆ ತಿಲಕಪ್ರಾಯವಾಗಿ ಪ್ರಸಿದ್ಧಿ ಪಡೆದ ಬೆಳುಗುಲಿ (ಈಗಿನ ರನ್ನ ಬೆಳಗಲಿ) ಎಂಬುದೇ ರನ್ನನ ಜನ್ಮಸ್ಥಳ. ತಾಯಿ ಅಬ್ಬಲಬ್ಬೆ; ತಂದೆ ಜಿನವಲ್ಲಭ; ಅಣ್ಣಂದಿರು ರೇಚಣ ಮತ್ತು ಮಾರಯ್ಯ. ರನ್ನನ ಸಾಂಸಾರಿಕ ಜೀವನ ಕೂಡ ಚೆನ್ನಾಗಿತ್ತು. ಇವನಿಗೆ ಶಾಂತಿ ಮತ್ತು ಜಕ್ಕಿ ಎಂಬ ಇಬ್ಬರು ಹೆಂಡತಿಯರು. ಧರ್ಮದಲ್ಲಿ ನಿಷ್ಠೆಯುಳ್ಳವರೆಂದು ಇವರ ವರ್ಣನೆ. ಇವರಿಗೆ ರಾಯ ಮತ್ತು ಅತ್ತಿಮಬ್ಬೆ ಎಂಬ ಇಬ್ಬರು ಮಕ್ಕಳಿದ್ದರು. ತನ್ನ ಮಕ್ಕಳಿಗೆ ಚಾವುಂಡರಾಯ ಮತ್ತು ಅತಿಮಬ್ಬೆಯರ ಹೆಸರುಗಳನ್ನು ಇಡುವುದರ ಮೂಲಕ ಕವಿ ಅವರ ಉಪಕಾರಕ್ಕೆ ಗೌರವವನ್ನು ತೋರಿದ್ದಾನೆ. ರನ್ನ ಜೈನಧರ್ಮೀಯನಾದರೂ ವೈಶ್ಯ ಪಂಗಡದವನೆಂದು ಹೇಳಲಾಗಿದೆ. ಕವಿ ತನ್ನ ಕಾವ್ಯಗಳಲ್ಲಿ ಪುಟ್ಟಿದ ಬಳೆಗಾರ ಕುಲದೊಳ್ ಎಂದು ಸ್ಪಷ್ಟವಾಗಿ ಹೇಳಿಕೊಂಡಿದ್ದಾನೆ. ಜೊತೆಗೆ ವೈಶ್ಯಧ್ವಜ, ವಣಿಕ್ಕುಳಾರ್ಕ ಎಂಬ ಪದಗಳನ್ನು ಪದೇ ಪದೇ ಬಳಸಿದ್ದಾನೆ. ಇಂತಹ ವರ್ಗವೊಂದರಿಂದ ಬಂದ ವ್ಯಕ್ತಿಯೊಬ್ಬ ಕವಿಯಾದದ್ದು ವಿಶೇಷ. ಆದರೂ ಈ ವರ್ಗಸಂವೇದನೆ ಇವನ ಕಾವ್ಯಗಳಲ್ಲಿ ಇಲ್ಲ. ಅಷ್ಟರಮಟ್ಟಿಗೆ ಜೈನಧರ್ಮ ಇವನನ್ನು ಆವರಿಸಿದೆ.ರನ್ನನಿಗೆ ತಂದೆಯಿಂದ ಬಳುವಳಿಯಾಗಿ ಬಂದದ್ದು ಬಳೆಗಾರವೃತ್ತಿ. ಆದರೆ ರನ್ನ ಪ್ರತಿಕೂಲ ಪರಿಸ್ಥಿತಿಯೊಡನೆ ಹೋರಾಡಿ ಕವಿಯಾದವನು. ಚಿಕ್ಕಂದಿನಿಂದಲೂ ಓದಿನಲ್ಲಿ ಆಸಕ್ತನಾಗಿದ್ದ ಈತ ತನ್ನ ಆಸಕ್ತಿಯನ್ನು ಪೂರೈಸಿಕೊಳ್ಳಲು ದಕ್ಷಿಣದ ಗಂಗರಾಜ್ಯಕ್ಕೆ ಬರಬೇಕಾಯಿತು. ಇದಕ್ಕೆ ಆ ಕಾಲದಲ್ಲಿ ಶ್ರವಣಬೆಳಗೊಳ ಜೈನ ಸಂಸ್ಕøತಿಯ ಕೇಂದ್ರವಾಗುತ್ತಿದ್ದುದ್ದು ಕಾರಣವಿರಬೇಕು. ಜೊತೆಗೆ ಚಾವುಂಡರಾಯನ ವ್ಯಕ್ತಿತ್ವ ಕೀರ್ತಿಗಳೂ ಸೇರಿರಬೇಕು. ಪುಣ್ಯ ವಿಶೇಷದಿಂದ ಇವನಿಗೆ ಗಂಗಮಂತ್ರಿ ಚಾಮುಂಡರಾಯನ ಆಶ್ರಯ ಸಿಕ್ಕಿತು. ಗಂಗರಾಜರ ಗುರುಗಳಾದ ಅಜಿತಸೇನಾಚಾರ್ಯರು ಇವನಿಗೆ ಗುರುಗಳಾಗಿ ದೊರೆತಂದು ಇವನಲ್ಲಿದ್ದ ಧಾರ್ಮಿಕ ಆಸಕ್ತಿ ಬೆಳೆಯಲು ಅನುಕೂಲವಾಯಿತು. ಈ ಸನ್ನಿವೇಶದಲ್ಲಿ ರನ್ನ ಕವಿಯಾಗಿಯೂ ವಿದ್ವಾಂಸನಾಗಿಯೂ ಹೊರಹೊಮ್ಮಲು ಸಾಧ್ಯವಾಯಿತು. ಚಾವುಂಡರಾಯನ ನೆರವಿನಿಂದ ಸಕಲ ವಿದ್ಯಾಪಾರಂಗತನಾದ ರನ್ನ ಗಂಗರಾಜ್ಯದಿಂದ ಹಿಂದಿರುಗಿ ಚಾಳುಕ್ಯ ತೈಲಪನಲ್ಲಿ ಆಶ್ರಯ ಪಡೆದ. ತೈಲಪನ ಮಗನಾದ ಸತ್ಯಾಶ್ರಯ ಇರಿವಬೆಡಂಗ ಈತನಿಗೆ ಆಶ್ರಯ ನೀಡಿದ. ಹೀಗೆ ರನ್ನ ಗಂಗರಾಜ್ಯದಿಂದ ಹಿಂದಿರುಗಲು ಅತ್ತಿಮಬ್ಬೆಯ ಪ್ರಭಾವಿ ವ್ಯಕ್ತಿತ್ವ ಕಾರಣವಿರಬೇಕು. ಅತ್ತಿಮಬ್ಬೆ ಶ್ರವಣಬೆಳಗೊಳಕ್ಕೆ ಬಂದು ಗೊಮ್ಮಟದರ್ಶನ ಪಡೆದ ವಿಚಾರ ಅಜಿತಪುರಾಣದಲ್ಲಿ ಬಂದಿದೆ. ಹಾಗೆ ಬಂದಿದ್ದಾಗ ರನ್ನ ಅವಳ ವ್ಯಕ್ತಿತ್ವಕ್ಕೆ ಆಕರ್ಷಿತನಾಗಿ ತನ್ನ ರಾಜ್ಯಕ್ಕೆ ಮರಳಲು ಮನಸ್ಸುಮಾಡಿರಬೇಕು. ಕವಿ ಇದ್ದಕ್ಕಿದ್ದಂತೆ ಮೇಲೇರಿದವನಲ್ಲ; ಹಂತ ಹಂತವಾಗಿ ಮುಂದೆ ಬಂದವನು. ಇದನ್ನು ತಿಳಿಸುವ ಪದ್ಯವೊಂದು 'ಗದಾಯುದ್ಧ ದಲ್ಲಿದೆ. ಆರಂಭಕ್ಕೆ ಸಾಮಂತರ ನೆರವು ದೊರೆತ್ತಿದ್ದು, ಇವರಾರೆಂಬುದರ ಬಗ್ಗೆ ಚರ್ಚೆಯಿದೆ. ಆದರೆ ಕವಿಗೆ ನೆರವಾದ ಈ ಸಾಮಂತ ರಟ್ಟರಾಜ ಒಂದನೆಯ ಕಾರ್ತವೀರ್ಯನಿರಬೇಕೆಂಬ ಊಹೆಯಿದೆ. ಮುಂದೆ ಅಭ್ಯುದಯಕ್ಕೆ ಕಾರಣನಾದವನು ಮಂಡಲೇಶ್ವರನಾದ ಚಾವುಂಡರಾಯನೆಂಬುದು ಸ್ಪಷ್ಟ. ಗಂಗದಂಡನಾಯಕನಾದ ಚಾವುಂಡರಾಯನಿಂದ ತಾನು 'ರತ್ನವಾಗಿ ರೂಪುಗೊಂಡೆನೆಂದು ಈತನೇ ಹೇಳಿಕೊಂಡಿದ್ದಾನೆ. ಹೀಗೆ ಬೆಳೆದ ರನ್ನ ಚಕ್ರವರ್ತಿ ತೈಲಪನಲ್ಲಿ 'ಮಹಿಮೋನ್ನತಿ'ಯನ್ನೇ ಪಡೆದ. ಅವನಿಂದ 'ಕವಿಚಕ್ರವರ್ತಿ ಎಂಬ ಬಿರುದನ್ನೂ ಗಳಿಸಿದ. 'ಗದಾಯುದ್ಧ ವನ್ನು ದಂಡನಾಯಕ ಕೇಶಿ ತಿದ್ದಿದವನೆಂದು ಹೇಳಿಕೊಂಡಿರುವುದರಿಂದ, ಈ ಕೇಶಿಯೇ ರನ್ನನನ್ನು ಚಕ್ರವರ್ತಿಗೆ ಪರಿಚಯಿಸಿರಬೇಕೆಂದು ತೋರುವುದು. ರನ್ನನ ಪೋಷಕರಲ್ಲಿ ಚಾವುಂಡರಾಯ, ತೈಲಪರಂತೆಯೇ ಅತ್ತಿಮಬ್ಬೆಯೂ ಮುಖ್ಯಳಾಗಿದ್ದಾಳೆ. ಚಕ್ರವರ್ತಿಗಳಲ್ಲಿ ತೈಲಪ ಶ್ರೇಷ್ಠನಾಗಿರುವಂತೆ ದಾನದಲ್ಲಿ ದಾನಚಿಂತಾಮಣಿ ಅತ್ತಿಮಬ್ಬೆ ಹಾಗೆ ಎಂಬುದು ಕವಿಯ ಹೇಳಿಕೆ. ರನ್ನನಿಂದ ಅಜಿತಪುರಾಣವನ್ನು ಹೇಳಿಸಿದವಳು ಅತ್ತಿಮಬ್ಬೆ. ಆದಿಪುರಾಣ, ಶಾಂತಿಪುರಾಣಗಳಿಗೆ ಸಮಾನವಾದ ಈ ಕೃತಿಯನ್ನು 'ಆಶ್ರಿತ ಚಿಂತಾಮಣಿಗತ್ತಿಮಬ್ಬೆಗರ್ತಿಯೆ ಪೇಳ್ದಂ' ಎಂದಿದ್ದಾನೆ. ಕವಿ. ಇದರಿಂದ ಅತ್ತಿಮಬ್ಬೆ ಪರವಾಗಿರುವ ಇವನ ಗೌರವ ವ್ಯಕ್ತವಾಗುತ್ತದೆ. ಹೀಗಾಗಿ ರನ್ನ ಪ್ರತಿಭಾವಂತನಾಗಿದ್ದು, ಅದನ್ನು ಗುರುತಿಸುವ ಜನರ ಸಹವಾಸ ದೊರಕಿದ್ದರಿಂದ ಸುಲಭವಾಗಿ ಮೇಲೇರಲು ಸಾಧ್ಯವಾಯಿತು. ಕವಿ ತಾನು ಸೌಮ್ಯ ಸಂವತ್ಸರದಲ್ಲಿ ಹುಟ್ಟಿದವನೆಂದು ಹೇಳಿಕೊಂಡಿದ್ದಾನೆ. ಇದು 949 ಆಗುತ್ತದೆ. ಆದ್ದರಿಂದ ರನ್ನ ಹುಟ್ಟಿದ್ದು 949ರಲ್ಲಿ ಎನ್ನುವುದು ಖಚಿತ. ರನ್ನನ ಕಾಲವನ್ನು ಸಾಮಾನ್ಯವಾಗಿ 993 ಎಂದು ನಿಗದಿಪಡಿಸುವುದು ವಾಡಿಕೆ. ಇದಕ್ಕೆ ಅಜಿತಪುರಾಣದ ಕಾಲ 993 ಎಂದು ಸ್ಪಷ್ಟವಾಗಿರುವುದೇ ಕಾರಣ. ರನ್ನ ಅಜಿತಪುರಾಣವನ್ನು ಅತ್ತಿಮಬ್ಬೆಯ ಆಶ್ರಯದಲ್ಲಿ ಬರೆದಿರುವನಾದರೂ ಒಂದು ರೀತಿಯಲ್ಲಿ ಬರೆದನೆಂದು ಹೇಳಬಹುದಾಗಿದೆ. ಆದ್ದರಿಂದ ರನ್ನನ ಕಾಲಗ್ರಹಿಕೆಯಲ್ಲಿ ತೈಲಪನ ಆಳ್ವಿಕೆಯ ಕಾಲ ಸಹಜವಾಗಿಯೇ ಗಮನಕ್ಕೆ ಬರುತ್ತದೆ. ಸತ್ಯಾಶ್ರಯವನ್ನು ಸಮೀಕರಿಸಿ ಗದಾಯುದ್ಧವನ್ನು ಬರೆದಿದ್ದರಿಂದ ಈ ಕಾವ್ಯದ ಕಾಲ ಸತ್ಯಾಶ್ರಯನ ಕಾಲಕ್ಕಿಂತ ಬೇರೆಯಾಗುವುದು ಸಾಧ್ಯವಿಲ್ಲ. ಈ ಕಾರಣದಿಂದ ಗದಾಯುದ್ಧದ ಕಾಲವನ್ನು 1005 ಎಂದು ಗುರುತಿಸಲಾಗಿದೆ. ಕವಿ 1020ರಲ್ಲಿ ತೀರಿಕೊಂಡಿರಬೇಕೆಂದು ಅಭಿಪ್ರಾಯವಿದೆ. ರನ್ನನಿಗೆ ಕವಿರತ್ನ, ಕವಿಮುಖಚಂದ್ರ, ಕವಿಚಕ್ರವರ್ತಿ, ಕವಿರಾಜಶೇಖರ, ಕವಿಜನಚೂಡಾರತ್ನ, ಕವಿಚರ್ತುಮುಖ, ಉಭಯಕವಿ ಮೊದಲಾದ ಬಿರುದುಗಳಿವೆ. 'ಉಭಯ ಕವಿನ ಎಂದಿರುವುದರಿಂದ ಸಂಸ್ಕøತದಲ್ಲಿಯೂ ಬರೆದಿರಬಹುದೆ ಎಂಬ ಅನುಮಾನ ಬರುವುದು ಸಹಜ. ಆದರೆ ಅದಕ್ಕೆ ಆಧಾರಗಳಿಲ್ಲ. ರನ್ನ ತನ್ನನ್ನು 'ಉಭಯ ವ್ಯಾಕರಣ ಪಂಡಿತ ಎಂದು ಹೇಳಿಕೊಂಡಿರುವುದರಿಂದ, ಇವನಿಗೆ ವ್ಯಾಕರಣದಲ್ಲಿಯೂ ಪ್ರವೇಶವಿದ್ದಿರಬೇಕೆಂದು ತೋರುವುದು. ರನ್ನನು 'ರನ್ನಂವೈಯಾಕರಣಂ ಎಂದು ಹೇಳಿರುವುದರಿಂದ ಇದು ಮತ್ತಷ್ಟು ಬಲಪಡುವುದು. ಈತ 'ರನ್ನ ನಿಘಂಟು ರಚಿಸಿರುವ ಹಿನ್ನೆಲೆಯಲ್ಲಿ ನೋಡಿದರೆ, ಇಂತಹ ಪ್ರಯೋಗವನ್ನು ಇವನು ಮಾಡಿರಲೂಬಹುದು.' ರನ್ನನ ಕಾವ್ಯ ರನ್ನ ತನ್ನ ಕಾವ್ಯದಲ್ಲಿ ವ್ಯಾಸ ವಾಲ್ಮೀಕಿಯರನ್ನೂ ಕಾಳಿದಾಸ ಬಾಣವನ್ನೂ ನೆನೆದಿದ್ದಾನೆ. 'ಗದಾಯುದ್ಧ ದ ಮೇಲೆ ಪ್ರಭಾವ ಬೀರಿದ ಪಂಪ, ಭಾಸ, ಭಟ್ಟ ನಾರಾಯಣರನ್ನು ನೆನೆಯದಿರುವುದು ಆಶ್ಚರ್ಯ. ಆದರೆ ಅಜಿತಪುರಾಣದಲ್ಲಿ ಪಂಪನ ಸ್ಮರಣೆಯಿದೆ. ಪಂಪ, ಪೊನ್ನ, ರನ್ನ-ಈ ಮೂವರು ಜಿನ ಸಮಯ ದೀಪಕರ್ ಎಂದು ಹೇಳುತ್ತಾನೆ. ಕವಿಗಳಲ್ಲಿ ಪುಣ್ಯವಂತರೂ ಕೃತಾರ್ಹರೂ ಸೊಬಗರೂ ಆದವರು ಇಬ್ಬರೇ; ಕವಿತಾಗುಣಾರ್ಣವ ಮತ್ತು ಕವಿರತ್ನ ಎಂದು ಹೇಳುವಲ್ಲಿಯೂ ಪಂಪನ ಉಲ್ಲೇಖವಿದೆ. ರನ್ನ ತನ್ನ ಕಾವ್ಯಶಕ್ತಿಯನ್ನು ಕುರಿತು ಅನೇಕ ಮಾತುಗಳಲ್ಲಿ ಹೇಳಿಕೊಂಡಿದ್ದಾನೆ. ಅವುಗಳಲ್ಲಿ ವಾಗ್ದೇವಿಯ ಭಂಡಾರದ ಮುದ್ರೆಯ ನೊಡೆದಂಎಂಬುದು ಒಂದು; ತನ್ನ ಕೃತಿಯನ್ನು ಪರೀಕ್ಷಿಪಂಗೆಂಟೆರ್ದೆಯೇ ಎಂಬುದು ಮತ್ತೊಂದು. ಇದು ತನ್ನ ಕಾವ್ಯಶಕ್ತಿಯ ಬಗ್ಗೆ ಪೂರ್ಣ ವಿಶ್ವಾಸವಿರುವ ಕವಿಯ ಸವಾಲು. ರನ್ನ ಬರೆದಿರುವ ಕೃತಿಗಳು ಎಷ್ಟು ಎಂಬ ಬಗ್ಗೆ ಜಿಜ್ಞಾಸೆಯಿದೆ. ಕವಿಯೇ ಹೇಳಿರುವಂತೆ ಪರಶುರಾಮ ಚರಿತೆ, ಚಕ್ರೇಶ್ವರ ಚರಿತೆ, ಅಜಿತಪುರಾಣ, ಸಾಹಸಭೀಮವಿಜಯ, ರನ್ನಕಂದ-ಈ ಐದು ಕೃತಿಗಳನ್ನು ರಚಿಸಿರುವಂತೆ ತೋರುತ್ತದೆ. ಮೊದಲೆರಡು ಕೃತಿಗಳು ದೊರೆಯದಿರುವುದರಿಂದ, ಅನೇಕ ಊಹೆಗಳಿಗೆ ಎಡೆಮಾಡಿ ಕೊಟ್ಟಿದೆ. ಪರಶುರಾಮಚರಿತ, ಚಾವುಂಡರಾಯನನ್ನು (ಸಮರ ಪರಶುರಾಮ ಎಂಬ ಬಿರುದಾಂಕಿತ) ಕುರಿತ ಕೃತಿಯಾಗಿರಬೇಕು. ರನ್ನನಿಗೆ ಮೊದಲು ಆಶ್ರಯ ಕೊಟ್ಟವನು ಚಾವುಂಡರಾಯನಾದುದರಿಂದ, ತನ್ನ ಮೊದಲ ಕೃತಿಯನ್ನು ಅವನ ಪರವಾಗಿ ಬರೆದಿರಬೇಕು. ಇದರಲ್ಲಿ ಚಾವುಂಡರಾಯನ ಚರಿತೆಯಂತೆಯೇ ಪುರಾಣ ಪರಶುರಾಮನ ಕಥೆಯೂ ಸೇರಿರಬೇಕು. 'ಚಕ್ರೇಶ್ವರಚರಿತ ತೈಲಪ ಚಕ್ರವರ್ತಿಯನ್ನು ಕುರಿತದ್ದೆಂಬುದಕ್ಕೆ ಆಧಾರಗಳಿವೆ. ರನ್ನನಿಗೆ ತೈಲಪ ಪ್ರಮುಖ ಆಶ್ರಯದಾತ; 'ಕವಿಚಕ್ರವರ್ತಿ ಬಿರುದನ್ನು ಕೊಟ್ಟವನು. ಆದ್ದರಿಂದ 'ಚಕ್ರೇಶ್ವರ ಚರಿತ ತೈಲಪನನ್ನು ಕುರಿತದ್ದೆಂಬುದು ಸ್ಪಷ್ಟ. ಇದು ಪೂರ್ಣ ಐತಿಹಾಸಿಕ ಕಾವ್ಯವಾಗಿರುವ ಸಾಧ್ಯತೆಯೂ ಇದೆ. 'ರನ್ನಕಂದ ಒಂದು ನಿಘಂಟು. ಪದಗಳಿಗೆ ಅರ್ಥವನ್ನು ಕಂದಪದ್ಯ ರೂಪದಲ್ಲಿ ಬರೆದಿರುವುದ ಇದರ ವಿಶೇಷ. ನಿಘಂಟುಗಳಲ್ಲಿ ಇದು ಪ್ರಾಚೀನವಿರಬೇಕೆಂದು ತೋರುವುದು. ಅಸಮಗ್ರವಾಗಿ ದೊರೆತಿರುವುದರಿಂದ ಕವಿ, ಕೃತಿ ವಿಷಯವಾಗಿ ಹೆಚ್ಚಿನ ವಿಚಾರಗಳು ತಿಳಿಯುವುದಿಲ್ಲ. ದೊರೆತಿರುವ ಪದ್ಯಗಳಲ್ಲಿ ಕವಿರತ್ನ ಎಂದಿರುವುದರಿಂದ ಇದು ರನ್ನನ ಕೃತಿ ಎಂದು ಭಾವಿಸಲು ಯಾವ ಅಡ್ಡಿಯೂ ಇಲ್ಲ. ಅಜಿತತೀರ್ಥಂಕರಪುರಾಣ ಧಾರ್ಮಿಕ ಕಾವ್ಯ. ಎರಡನೆಯ ತೀರ್ಥಂಕರನ ಕಥೆ ಇದರ ವಸ್ತು. ಇದನ್ನು 'ಪುರಾಣ ತಿಲಕ ಎಂದು ಕವಿಯೇ ಹೇಳಿಕೊಂಡಿದ್ದಾನೆ. ಆದಿಪುರಾಣ ಮತ್ತು ಶಾಂತಿಪುರಾಣಗಳಿಗೆ ಸಮಾನವಾದ ಕೃತಿಯೆಂದು ಇದರ ಅಭಿಪ್ರಾಯ. 'ಆದಿಪುರಾಣ' ದ ಕಥಾವೈಭವ ಇದಕ್ಕಿಲ್ಲದಿರುವುದರಿಂದ, ಅದರ ಎತ್ತರಕ್ಕೆ ಏರಲಾರದೆಂದೇ ತೋರುತ್ತದೆ. ಆದರೆ ಪೊನ್ನನ ಶಾಂತಿಪುರಾಣಕ್ಕಿಂತ ಇದು ಉತ್ತಮ ಕೃತಿ ಎಂದು ದೃಢವಾಗಿ ಹೇಳಬಹುದು. ಇದರಲ್ಲಿ ಹನ್ನೆರಡು ಆಶ್ವಾಸಗಳಿದ್ದು, ಮೊದಲನೆಯ ಆಶ್ವಾಸ ಪೂರ್ಣವಾಗಿ ಆಶ್ರಯದಾತೆ ಅತ್ತಿಮಬ್ಬೆಯ ಚಿತ್ರಣಕ್ಕೆ ಮೀಸಲಾಗಿದೆ. ಕೊನೆಯ ಆಶ್ವಾಸದಲ್ಲಿ ಗ್ರಂಥಸಮಾಪ್ತಿ. ಕವಿಕಾವ್ಯ ಆಶ್ರದಾತರ ವಿಚಾರವಿದೆ. ಇನ್ನುಳಿದ ಹತ್ತು ಆಶ್ವಾಸಗಳಲ್ಲಿ ಏಳರಲ್ಲಿ ಅಜಿತತೀರ್ಥಂಕರನ ಕಥೆಯೂ ಆಮೇಲಿನ ಮೂರರಲ್ಲಿ ಸಾಗರ ಚಕ್ರವರ್ತಿಯ ಕಥೆಯೂ ಬಂದಿದೆ. ಭವಾವಳಿಯ ಗೊಂದಲವಿಲ್ಲದಿರುವುದು ಈ ಕೃತಿಯ ವಿಶೇಷ. ಗ್ರಂಥದ ರಸವತ್ತಾದ ಭಾಗಗಳೆಂದರೆ ಅತ್ತಿಮಬ್ಬೆ ಮತ್ತು ಸಾಗರಚಕ್ರವರ್ತಿ ಕಥೆಗಳ ಭಾಗಗಳೆ ಆಗಿವೆ. ಜೈನಧರ್ಮಕ್ಕೆ ಸಂಬಂಧಿಸಿದ ವಿಷಯಗಳನ್ನು ತೊಡಕಿಲ್ಲದೆ ನಿರೂಪಿಸಿರುವುದರಿಂದ ಆ ಕುರಿತು ಒಂದು ಶಾಸ್ತ್ರೀಯ ಗ್ರಂಥವೂ ಆಗಿದೆ. ರನ್ನನ ಕೃತಿಗಳಲ್ಲಿ ಸಾಹಸಭೀಮವಿಜಯ ಅತಿ ಮುಖ್ಯವಾದುದು. ಇವನ ಲೌಕಿಕ ಕೃತಿಗಳಲ್ಲಿ ಉಪಲಬ್ಧವಿರುವಂಥದು ಇದೊಂದೇ. ಗದಾ ಸೌಪ್ತಿಕ ಪರ್ವಗಳ ಕಥೆಯೇ ಇದರ ವಸ್ತು. ಸಂದರ್ಭ ಒದಗಿದಾಗಲೆಲ್ಲಾ ಹಿಂದಿನ ಕಥೆಯನ್ನು ಸೂಚಿಸುವ ವಿಧಾನವನ್ನು ಅನುಸರಿಸುವುದರಿಂದ (ಸಿಂಹಾವಲೋಕನ) ಕಾವ್ಯಕ್ಕೆ ಸಮಗ್ರತೆ ಪ್ರಾಪ್ತವಾಗಿದೆ. ಹತ್ತು ಆಶ್ವಾಸಗಳಲ್ಲಿ ಹರಡಿಕೊಂಡಿರುವ ಈ ಕಾವ್ಯದಲ್ಲಿ ಭೀಮ-ದುರ್ಯೋಧನರ ಗದಾಯುದ್ಧವೇ ಕೇಂದ್ರಬಿಂದು. ಅದರ ಕಾರಣ ಮತ್ತು ಪರಿಣಾಮಗಳನ್ನು ಕೃತಿ ಆದ್ಯಂತ ಸೂಚಿಸುತ್ತದೆ. ಕೃತಿಗೆ 'ಸಾಹಸಭೀಮವಿಜಯ ಎಂದು ಹೆಸರಿದ್ದರೂ ಗದಾಯುದ್ಧ ಎಂದೇ ಇದರ ಖ್ಯಾತಿ. ಮಹಾಭಾರತದ ಭೀಮನೊಡನೆ ಆಶ್ರದಾತನಾದ ಸತ್ಯಾಶ್ರಯ ಚಕ್ರವರ್ತಿಯಾದ ಮೇಲೆಯೇ ರನ್ನ ಈ ಕಾವ್ಯವನ್ನು ಬರೆದಿರಬೇಕೆನಿಸುತ್ತದೆ. ಪುರಾಣಕಥೆಯಲ್ಲಿ ಸಮಕಾಲೀನ ಇತಿಹಾಸವನ್ನು ಸಮೀಕರಿಸುವುದರ ಮೂಲಕ ಕಾವ್ಯದಲ್ಲಿ ಹೊಸಧ್ವನಿಯನ್ನು ಉಂಟುಮಾಡಬೇಕೆಂಬ ರನ್ನನ ಧೋರಣೆಗೆ ಪಂಪನೇ ಆದರ್ಶ. ಕಥಾನಾಯಕ ಭೀಮನಾದರೂ ದುರ್ಯೋಧನನ ಪಾತ್ರವೇ ಹೆಚ್ಚು ಜೀವಂತವಾಗಿ ಚಿತ್ರಣಗೊಂಡಿದೆ. ಈತ ಕಾವ್ಯದಲ್ಲಿ ದುರಂತನಾಯಕನಾಗಿ ಕಂಡರಣೆಗೊಂಡಿದ್ದಾನೆ. ಪಂಪನನ್ನು ಅನುಸರಿಸಿಯೂ ಅವನಿಗೆ ಸಾಕಷ್ಟು ಋಣಿಯಾಗಿಯೂ ರನ್ನ ಮಹತ್ವದ ಕಾವ್ಯ ನಿರ್ಮಿಸಿದ ಎಂಬುದು ಮುಖ್ಯ ವಿಚಾರ. ಬಿರುದುಗಳು ಕವಿಚಕ್ರವರ್ತಿ ಕವಿರತ್ನ ಅಭಿನವ ಕವಿಚಕ್ರವರ್ತಿ ಕವಿ ರಾಜಶೇಖರ ಕವಿಜನ ಚೂಡಾರತ್ನ ಕವಿ ತಿಲಕ ಉಭಯಕವಿ ಮುಂತಾದವುಗಳು.. ಕೃತಿಗಳು ಅಜಿತಪುರಾಣ -೧೨ ಆಶ್ವಾಸಗಳ ಪುಟ್ಟ ಕಾವ್ಯ. ಸಾಹಸಭೀಮ ವಿಜಯಂ (ಮಹಾಕವಿ ರನ್ನನ ಗದಾಯುದ್ಧ) - ಕುರುಕ್ಷೇತ್ರದ ಕೊನೆಯ ದಿನದ ಯುದ್ಧಕ್ಕೆ ಸಂಬಂಧಿಸಿದ ಕಥೆಯಾದರೂ,ಸಿಂಹಾವಲೋಕನ ಕ್ರಮದಲ್ಲಿ ಇಡೀ ಮಹಾಭಾರತದ ಕಥೆ ನಿರೂಪಿತವಾಗಿದೆ. ಚಕ್ರೇಶ್ವರ ಚರಿತ - ಲಭ್ಯವಿಲ್ಲ. ಪರಶುರಾಮ ಚರಿತ - ಲಭ್ಯವಿಲ್ಲ. ರನ್ನಕಂದ - ೧೨ಕಂದಪದ್ಯಗಳ ನಿಘಂಟು. ನೋಡಿ ರನ್ನನ ಗದಾಯುದ್ಧಂ - ಪಠ್ಯದ ಪಯಣದ ಹೆಜ್ಜೆ ಗುರುತುಗಳು;ಪುರುಷೋತ್ತಮ ಬಿಳಿಮಲೆಪ್ರಾಧ್ಯಾಪಕ, ಕನ್ನಡ ಅಧ್ಯಯನ ಪೀಠ, ಜೆ ಎನ್ ಯು; ಕನ್ನಡ ಅಧ್ಯಯನ ಪೀಠ;ಜವಾಹರಲಾಲ ನೆಹರೂ ವಿಶ್ವವಿದ್ಯಾಲಯ, ನವದೆಹಲಿ. ಉಲ್ಲೇಖ ಕವಿಗಳು ಸಾಹಿತಿಗಳು ಹಳಗನ್ನಡ ಕವಿಗಳು
1790
https://kn.wikipedia.org/wiki/%E0%B2%95%E0%B2%A6%E0%B2%82%E0%B2%AC%20%E0%B2%B0%E0%B2%BE%E0%B2%9C%E0%B2%B5%E0%B2%82%E0%B2%B6
ಕದಂಬ ರಾಜವಂಶ
'ಕದಂಬ' ವಂಶವು ಕನ್ನಡದ ಮೊಟ್ಟ ಮೊದಲ ರಾಜ ವಂಶ. ಕನ್ನಡದಲ್ಲಿ ದೊರೆತಿರುವ ಮೊಟ್ಟಮೊದಲ ಶಾಸನವಾದ ಹಲ್ಮಿಡಿ ಶಾಸನವು ಕದಂಬರ ಆಳ್ವಿಕೆಯ ಕಾಲಕ್ಕೆ ಸೇರಿದ್ದಾಗಿದೆ. ಕದಂಬರು (ಕ್ರಿ.ಶ.೩೪೫-೫೪೦) ಇಂದಿನ ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಿಂದ ಆಳುತ್ತಿದ್ದ ಕರ್ನಾಟಕದ ಒಂದು ಪುರಾತನ ರಾಜವಂಶ. ಮುಂದೆ ಚಾಲುಕ್ಯ ಮತ್ತು ರಾಷ್ಟ್ರಕೂಟ ಸಾಮ್ರಾಜ್ಯಗಳ ಸಾಮಂತರಾಗಿ ಆಳ್ವಿಕೆ ಮುಂದುವರಿಸಿದ ಕದಂಬರರ ರಾಜ್ಯ ಗೋವಾ ಮತ್ತುಹಾನಗಲ್ ಗಳಲ್ಲಿ ಶಾಖೆಗಳನ್ನು ಹೊಂದಿತು. ರಾಜಾ ಕಾಕುಸ್ಥವರ್ಮನ ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕದಂಬರ ರಾಜ್ಯ ಕರ್ನಾಟಕದ ಅನೇಕ ಭಾಗಗಳನ್ನೊಳಗೊಂಡಿತ್ತು. ಕದಂಬರ ಪೂರ್ವದ ರಾಜ ವಂಶಗಳಾದ ಮೌರ್ಯರು, ಶಾತವಾಹನರು ಮೂಲತಃ ಕರ್ನಾಟಕದ ಹೊರಗಿನವರಾಗಿದ್ದು, ಅವರ ರಾಜ್ಯದ ಕೇಂದ್ರಬಿಂದು ಕರ್ನಾಟಕದ ಹೊರಗಿತ್ತು. ಕನ್ನಡವನ್ನು ರಾಜ್ಯಭಾಷೆಯಾಗಿ ಬಳಸಿದ ಪ್ರಪ್ರಥಮ ರಾಜವಂಶ ಕದಂಬರು. ಈ ಪ್ರದೇಶದ ಬೆಳವಣಿಗೆಯ ಅಧ್ಯಯನದಲ್ಲಿ , ಬಹಳ ಕಾಲ ಬಾಳಿದ ಸ್ಥಳೀಯ ರಾಜಕೀಯ ಶಕ್ತಿಯಾಗಿ ಮತ್ತು ಕನ್ನಡ ಒಂದು ಪ್ರಮುಖ ಪ್ರಾದೇಶಿಕ ಭಾಷೆಯಾಗಿ ಬೆಳೆದ ಈ ಕಾಲಮಾನ, ಕರ್ನಾಟಕದ ಇತಿಹಾಸದಲ್ಲಿ,ಸರಿಸುಮಾರು ಐತಿಹಾಸಿಕ ಪ್ರಾರಂಭದ ಕಾಲವಾಗಿದೆ. ಕ್ರಿ.ಶ. ೩೪೫ರಲ್ಲಿ ಮಯೂರವರ್ಮನಿಂದ ಸ್ಥಾಪಿಸಲಾದ ಈ ರಾಜ್ಯವು, ಬೃಹತ್ ಸಾಮ್ರಾಜ್ಯವಾಗಿ ಬೆಳೆಯುವ ಲಕ್ಷಣವನ್ನು ಆಗಾಗ ತೋರಿಸುತ್ತಿತ್ತು. ಆಗಿನ ರಾಜರುಗಳ ಬಿರುದು ಬಾವಲಿಗಳೂ ಈ ವಿಷಯಕ್ಕೆ ಪುಷ್ಟಿ ಕೊಡುತ್ತವೆ.ಇದೇ ವಂಶದ ಕಾಕುಸ್ಥವರ್ಮನು ಬಲಾಢ್ಯ ಅರಸನಾಗಿದ್ದು, ಉತ್ತರದ ಗುಪ್ತ ಮಹಾಸಾಮ್ರಾಜ್ಯದ ದೊರೆಗಳು ಇವನೊಂದಿಗೆ ಲಗ್ನ ಸಂಬಂಧ ಇಟ್ಟುಕೊಂಡದ್ದು ಈ ರಾಜ್ಯದ ಘನತೆಯನ್ನು ಸೂಚಿಸುತ್ತದೆ. ಇದೇ ಪೀಳಿಗೆಯ ರಾಜ ಶಿವಕೋಟಿ ಪದೇಪದೇ ನಡೆಯುತ್ತಿದ್ದ ಯುದ್ಧ , ರಕ್ತಪಾತಗಳಿಂದ ಬೇಸತ್ತು ಜೈನ ಧರ್ಮಕ್ಕೆ ಮತಾಂತರಗೊಂಡ.ಕದಂಬರು, ಹಾಗೂ ಅವರ ಸಮಕಾಲೀನರಾಗಿದ್ದ ತಲಕಾಡು ಪಶ್ಚಿಮ ಗಂಗರು ಸಂಪೂರ್ಣ ಸ್ವತಂತ್ರ ರಾಜ್ಯಸ್ಥಾಪನೆ ಮಾಡಿದ ಸ್ಥಳೀಯರಲ್ಲಿ ಮೊದಲಿಗರು. ಇತಿಹಾಸ ಕದಂಬರ ಮೂಲದ ಬಗ್ಗೆ ಹಲವಾರು ಐತಿಹ್ಯಗಳಿವೆ. ಒಂದು ಕಥೆಯ ಪ್ರಕಾರ ಈ ವಂಶದ ಮೂಲಪುರುಷ ತ್ರಿಲೋಚನ ಕದಂಬ (ಹಲಸಿ ಮತ್ತು ದೇಗಾಂವಿಯ ದಾಖಲೆಗಳ ಪ್ರಕಾರ ಇವನ ಹೆಸರು ಜಯಂತ). ಇವನಿಗೆ ಮೂರು ಕಣ್ಣುಗಳೂ ನಾಲ್ಕು ಕೈಗಳೂ ಇದ್ದವು. ಶಿವನ ಬೆವರು ಕದಂಬ ವೃಕ್ಷದ ಕೆಳಗೆ ಬಿದ್ದಾಗ ಹುಟ್ಟಿದವನು ಇವನು (ಎಂದೇ ಕದಂಬ ಎಂಬ ಹೆಸರು). ಇನ್ನೊಂದು ಕಥೆಯ ಪ್ರಕಾರ ಮಯೂರವರ್ಮನೇ ಶಿವ ಮತ್ತು ಭೂದೇವಿಯ ಮಗನಾಗಿ ಹುಟ್ಟಿ ಕದಂಬ ವಂಶವನ್ನು ಸ್ಥಾಪಿಸಿದ. ಇವನಿಗೂ ಮೂರು ಕಣ್ಣುಗಳಿದ್ದವು. ಕನ್ನಡ ಬ್ರಾಹ್ಮಣರ ಇತಿಹಾಸ ವಿವರಿಸುವ ಗ್ರಾಮ ಪದ್ಧತಿ ಎಂಬ ಕನ್ನಡ ಪುಸ್ತಕದ ಪ್ರಕಾರ, ಮಯೂರವರ್ಮನು ಶಿವಪಾರ್ವತಿಗೆ ಸಹ್ಯಾದ್ರಿ ಪರ್ವತಶ್ರೇಣಿಯ ಕದಂಬ ವೃಕ್ಷದ ಕೆಳಗೆ ಹುಟ್ಟಿದವನಾಗಿದ್ದ. ಇದೇ ವಂಶದ ಕುಡಿಯಾದ ನಾಗರಖಾಂಡ ಕದಂಬರೆಂಬ ವಂಶದ ಒಂದು ಶಾಸನದ ಪ್ರಕಾರ, ಈ ವಂಶದ ಮೂಲ ನಂದ ಸಾಮ್ರಾಜ್ಯದವರೆಗೂ ಹೋಗುತ್ತದೆ. ಮಕ್ಕಳಿಲ್ಲದ ರಾಜಾ ನಂದನು , ಮಕ್ಕಳಿಗಾಗಿ ಕೈಲಾಸದಲ್ಲಿ ಶಿವನನ್ನು ಪ್ರಾರ್ಥಿಸಲು, ಅವನಿಗೆ ಎರಡು ಮಕ್ಕಳಾಗುವುದಾಗಿಯೂ, ಅವರಿ ಕದಂಬ ಕುಲ ಎಂಬ ಹೆಸರು ಬರುವುದಾಗಿಯೂ, ಹಾಗೂ ಅವರಿಗೆ ಶಸ್ತ್ರ ವಿದ್ಯೆಯನ್ನು ಕಲಿಸಬೇಕೆಂದೂ ನಭೋವಾಣಿಯಾಯಿತು. ಕದಂಬರ ಮೂಲದ ಬಗ್ಗೆ ಎರಡು ಸಿದ್ಧಾಂತಗಳಿವೆ. ಒಂದು ಕನ್ನಡ ಮೂಲ ಇನ್ನೊಂದು ಉತ್ತರ ಭಾರತ ಮೂಲ. ಆದರೆ ಉತ್ತರ ಭಾರತದ ಮೂಲದ ಬಗ್ಗೆ ಆ ವಂಶಪರಂಪರೆಯ ನಂತರದ ದಾಖಲೆಗಳಲ್ಲಿ ಮಾತ್ರ ಉಲ್ಲೇಖವಿದ್ದು, ಅದನ್ನು ಬರಿಯ ದಂತಕಥೆ ಎಂದು ಪರಿಗಣಿಸಲಾಗುತ್ತದೆ. ಇದರ ಮೊದಲ ಉಲ್ಲೇಖ ೧೦೫೩ ಮತ್ತು ೧೦೫೫ರ ಹರಿಕೇಸರಿ ದೇವನ ಶಾಸನಗಳಲ್ಲಿ ದೊರಕಿದ್ದು , ಮುಂದಿನ ಶಾಸನಗಳು ಇದನ್ನೇ ಮತ್ತೆ ಉಲ್ಲೇಖಿಸಿ, ಮಯೂರಶರ್ಮನು ಹಿಮಾಲಯದ ಮೇಲೆ ಅಧಿಪತ್ಯ ಸ್ಥಾಪಿಸಿದನು ಎಂದು ಬಣ್ಣಿಸುತ್ತವೆ. ಇದನ್ನು ಸಮರ್ಥಿಸುವ ಮತ್ತಾವುದೇ ದಾಖಲೆಗಳು ಕಂಡುಬರದೇ ಇದ್ದಕಾರಣ , ಈ ವಾದ ಹೆಚ್ಚು ವಿಶ್ವಾಸಾರ್ಹವಾಗಿಲ್ಲ. ಕೇವಲ ದಕ್ಷಿಣ ಭಾರತದಲ್ಲಿಯೇ ಕಂಡುಬರುವ ಕದಂಬ ವೃಕ್ಷದ ಹೆಸರು ಈ ವಂಶದ ದಕ್ಷಿಣ ಭಾರತ ಮೂಲವನ್ನು ಸೂಚಿಸುತ್ತದೆ. ಕದಂಬರ ಜಾತಿಯ ಬಗ್ಗೆಯೂ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯವಿದೆ. ತಾಳಗುಂದ ಶಾಸನದ ಪ್ರಕಾರ ಕದಂಬರು ಮೂಲತಃ ಬ್ರಾಹ್ಮಣರಾದರೆ, ಅವರು ಆದಿವಾಸಿ ಜನಾಂಗಕ್ಕೆ ಸೇರಿದವರಾಗಿದ್ದರು ಎಂಬ ಅಭಿಪ್ರಾಯವೂ ಇದೆ. ಕದಂಬರು , ಇಂದಿನ ಕೇರಳ, ತಮಿಳುನಾಡುಪ್ರದೇಶದಲ್ಲಿ ರಾಜ್ಯವಾಳುತ್ತಿದ್ದ ಚೇರ ರಾಜರೊಂದಿಗೆ ಸಂಘರ್ಷದಲ್ಲಿದ್ದ, ಕಡಂಬು ಎಂಬ ಬುಡಕಟ್ಟಿಗೆ ಸೇರಿದವರು ಎಂಬ ಅಭಿಪ್ರಾಯವನ್ನೂ ಮಂಡಿಸಲಾಗಿದೆ. ಸುಬ್ರಹ್ಮಣ್ಯ ಮತ್ತು ಕದಂಬ ವೃಕ್ಷವನ್ನು ಮನೆದೇವರಾಗಿ ಪೂಜಿಸುವವರಾಗಿ ಕಡಂಬುಗಳ ಉಲ್ಲೇಖ ತಮಿಳಿನ ಸಂಗಮ ಸಾಹಿತ್ಯದಲ್ಲಿ ದೊರಕುತ್ತದ ಕೆಲ ಇತಿಹಾಸಕಾರರು ಕದಂಬರ ಬ್ರಾಹ್ಮಣ ಮೂಲ, ಅವರನ್ನು ಉತ್ತರಭಾರತದ ಬೇರನ್ನು ಸೂಚಿಸುತ್ತದೆ ಎಂದು ವಾದಿಸಿದರೂ, ಅದಕ್ಕೆ ಪ್ರತಿಯಾಗಿ ಮಧ್ಯಯುಗದ ಮೊದಮೊದಲು ದ್ರಾವಿಡರನ್ನು ಬ್ರಾಹ್ಮಣ ಪಂಗಡಕ್ಕೆ ಸೇರಿಸಿಕೊಳ್ಳುವ ಪ್ರಕ್ರಿಯೆ ಇತ್ತು ಎಂಬ ವಾದವೂ ಇದೆ. ಅದೇನೇ ಇದ್ದರೂ, ಸ್ಥಳೀಯ ಕನ್ನಡಿಗರಾಗಿದ್ದ ಕದಂಬರು ತಮ್ಮ ರಾಜ್ಯದ ಆಡಳಿತ ಮತ್ತು ರಾಜಕೀಯದಲ್ಲಿ ಕನ್ನಡಕ್ಕೆ ಪ್ರಧಾನ ಸ್ಥಾನ ಕೊಟ್ಟರು. ಇದನ್ನು ಗಮನಿಸಿದರೆ ಕದಂಬರು ಬ್ರಾಹ್ಮಣ ಕುಲಕ್ಕೆ ಬರಮಾಡಿಕೊಂಡ ಕನ್ನಡ ಭಾಷಿಕರಾಗಿದ್ದರು ಎಂದು ಸಿದ್ಧವಾಗುತ್ತದೆ ಎಂದು ಕೆಲ ವಿದ್ವಾಂಸರ ಅಭಿಮತ. ರಾಜಾ ಕೃಷ್ಣವರ್ಮನ ಮೊದಮೊದಲ ಶಾಸನಗಳಲ್ಲಿ ಕಂಡುಬರುವ ಕದಂಬರು ನಾಗರ ಪೀಳಿಗೆಯವರು ಎಂಬ ಉಲ್ಲೇಖ ಕೂಡಾ ಕದಂಬರು ಕರ್ನಾಟಕದವರಾಗಿದ್ದರು ಎಂದು ಖಚಿತಪಡಿಸುತ್ತದೆ. ಕದಂಬರ ಇತಿಹಾಸದ ಮೂಲ ಆಕರಗಳೆಂದರೆ ಕನ್ನಡ ಮತ್ತು ಸಂಸ್ಕೃತದ ಶಾಸನಗಳು. ಮುಖ್ಯವಾಗಿ ತಾಳಗುಂದ, ಗುಂಡನೂರು, ಚಂದ್ರವಳ್ಳಿ, ಹಲಸಿ ಮತ್ತು ಹಲ್ಮಿಡಿ ಶಾಸನಗಳು ಈ ಕನ್ನಡ ವಂಶದ ಬಗ್ಗೆ ಬೆಳಕು ಚೆಲ್ಲುತ್ತವೆ. ಅವರು ಮಾನವ್ಯಗೋತ್ರದವರೂ, ಹರಿತಿಪುತ್ರ ಪೀಳಿಗೆಯವರೂ ಆಗಿದ್ದು, ಬನವಾಸಿಯ ಚುಟು ಎಂಬ ಶಾತವಾಹನರ ಜಹಗೀರುದಾರರ ಸಂಬಂಧಿಕರಾಗಿದ್ದರು. ಕದಂಬರ ನಾಣ್ಯಗಳಲ್ಲಿ ಕನ್ನಡ, ನಾಗರಿ ಮತ್ತು ಗ್ರಂಥ ಲಾಂಛನ ಮತ್ತು ಭಾಷೆಗಳಿವೆ. ಕನ್ನಡದಲ್ಲಿ ದೊರಕಿರುವ ಮೊಟ್ಟಮೊದಲ ಶಾಸನವೆಂದು ಹೆಸರಾಗಿರುವ ಹಲ್ಮಿಡಿ ಶಾಸನ (ಕ್ರಿ.ಶ ೪೫೦) ಕದಂಬರು ಆಡಳಿತಾತ್ಮಕ ಭಾಷೆಯಾಗಿ ಕನ್ನಡವನ್ನು ಉಪಯೋಗಕ್ಕೆ ತಂದುದಕ್ಕೆ ಸಾಕ್ಷಿಯಾಗಿದೆ. ಅವರ ಆಳ್ವಿಕೆಯ ಮೊದಲ ಭಾಗದ ಮೂರು ಶಾಸನಗಳು ಪತ್ತೆಯಾಗಿವೆ. ಸತಾರಾ ಕಲೆಕ್ಟೋರೇಟಿನಲ್ಲಿ ಕದಂಬರ ಆಳ್ವಿಕೆಯ ಮೊದಮೊದಲಲ್ಲಿ ಟಂಕಿಸಿದ ವಿರ ಮತ್ತು ಸ್ಕಂದ ಎಂಬ ಕನ್ನಡ ಲಿಪಿಯಿರುವ ನಾಣ್ಯಗಳು ದೊರಕಿವೆ. ರಾಜಾ ಭಗೀರಥ (ಕ್ರಿ.ಶ. ೩೯೦-೪೧೫) ನ ಕಾಲದ , ಶ್ರೀ ಮತ್ತು ಭಾಗಿ ಎಂಬ ಕನ್ನಡ ಶಬ್ದಗಳಿರುವ ಬಂಗಾರದ ನಾಣ್ಯವೂ ದೊರಕಿದೆ. ಈಚೆಗೆ ಬನವಾಸಿಯಲ್ಲಿ ದೊರಕಿದ ಐದನೆಯ ಶತಮಾನದ ತಾಮ್ರದ ನಾಣ್ಯದಲ್ಲಿಯೂ ಶ್ರೀಮಾನರಾಗಿ ಎಂಬ ಕನ್ನಡ ಶಬ್ದವಿದ್ದು ಕದಂಬರ ಕಾಲದಲ್ಲಿ ಕನ್ನಡ ಆಡಳಿತ ಭಾಷೆಯಾಗಿತ್ತು ಎಂಬುದನ್ನು ಇನ್ನಷ್ಟು ಪುಷ್ಟಿಗೊಳಿಸುತ್ತದೆ. ರಾಜಾ ಶಾಂತಿವರ್ಮನ (ಕ್ರಿ.ಶ. ೪೫೦) ಕಾಲದ ತಾಳಗುಂದದ ಶಾಸನ ಕದಂಬರ ಸಾಮ್ರಾಜ್ಯದ ಹುಟ್ಟಿನ ಬಗ್ಗೆ ಸಂಭವನೀಯ ವಿವರಗಳನ್ನು ನೀಡುತ್ತದೆ. ಅದರ ಪ್ರಕಾರ , ತಾಳಗುಂದ ( ಇಂದಿನ ಶಿವಮೊಗ್ಗ ಜಿಲ್ಲೆಯಲ್ಲಿದೆ)ದ ನಿವಾಸಿ ಮಯೂರವರ್ಮನು , ತನ್ನ ಅಜ್ಜ ಮತ್ತು ಗುರು , ವೀರವರ್ಮನೊಂದಿಗೆ ಕ್ರಿ.ಶ. ೩೪೫ರಲ್ಲಿ ವೈದಿಕ ವಿದ್ಯಾರ್ಜನೆಗೋಸ್ಕರ ಕಂಚಿಗೆ ಹೋಗುತ್ತಾನೆ. ಅಲ್ಲಿ ಪಲ್ಲವರ ಕಾವಲು ಭಟರೊಂದಿಗೆ ಮನಸ್ತಪವಾಗಿ , ಅವರಿಂದ ಅವಮಾನಿತನಾಗುತ್ತಾನೆ. ಇದರಿಂದ ಕೋಪಿತಗೊಂಡು , ಪ್ರತೀಕಾರದ ಪ್ರತಿಜ್ಞೆಗೈದು, ಕಂಚಿಯನ್ನು ಬಿಟ್ಟು ವಾಪಸು ಬರುತ್ತಾನೆ. ತನ್ನ ಬ್ರಾಹ್ಮಣತ್ವಕ್ಕೆ ತಿಲಾಂಜಲಿ ನೀಡಿ ಶಸ್ತ್ರಾಭ್ಯಾಸ ಪ್ರಾರಂಭಿಸುತ್ತಾನೆ. ತನ್ನ ಬಂಟರೊಂದಿಗೆ ಸೈನ್ಯ ಕಟ್ಟಿ ಶ್ರೀಶೈಲದ ಯುದ್ಧದಲ್ಲಿ ಪಲ್ಲವರನ್ನು ಸೋಲಿಸುತ್ತಾನೆ. ಪಲ್ಲವರು ಮತ್ತು ಕೋಲಾರದ ಬೃಹತ್ ಬಾಣರು ಮುಂತಾದ ಕಿರುಆರಸರೊಂದಿಗೆ ದೀರ್ಘಕಾಲದ ಕಿರುಕುಳ ಯುದ್ಧದ ನಂತರ ಕದಂಬರು ಸ್ವತಂತ್ರ ರಾಜ್ಯವನ್ನು ಘೋಷಿಸಿದರು. ಅವರನ್ನು ಹತ್ತಿಕ್ಕಲಾರದೆ ಪಲ್ಲವರು ಅವರ ಸ್ವತಂತ್ರ ಅಂತಸ್ತನ್ನು ಒಪ್ಪಬೇಕಾಗಿ ಬಂತು. ಹೀಗೆ ಅಪಮಾನದ ಸೇಡು ತೀರಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಕರ್ನಾಟಕದ ಮೊಟ್ಟ ಮೊದಲ ರಾಜ್ಯ ಸ್ಥಾಪನೆಯಾಯಿತು. ಮಯೂರವರ್ಮ ವೈದಿಕ ವಿದ್ಯಾಭ್ಯಾಸಕ್ಕಾಗಿ ದೂರದ ಕಂಚಿಗೆ ತೆರಳಿದ್ದು ಆ ಕಾಲದಲ್ಲಿ ಆ ಪ್ರದೇಶದಲ್ಲಿ ವೈದಿಕ್ ಶಿಕ್ಷಣ ಹೆಚ್ಚು ಅಭಿವೃದ್ಧಿವಯಾಗಿರಲಿಲ್ಲ ಎಂಬುದನ್ನು ಸೂಚಿಸುತ್ತದೆ. ಗುಡ್ನಾಪುರದಲ್ಲಿ ಈಚೆಗೆ ಸಿಕ್ಕಿದ ಶಾಸನದ ಪ್ರಕಾರ ಮಯೂರವರ್ಮನ ಅಜ್ಜ ವೀರಶರ್ಮನು ಅವನಿಗೆ ಗುರುಸಮಾನನಾಗಿದ್ದು, ಅವನ ತಂದೆ ಬಂಧುಸೇನನು ಕ್ಷತ್ರಿಯ ವಂಶವನ್ನು ಸ್ವೀಕಾರ ಮಾಡಿದನು. ಮಯೂರವರ್ಮನ ಮಗ ಕಂಗವರ್ಮ ೩೬೫ರಲ್ಲಿ ಪಟ್ಟವೇರಿದ. ವಾಕಟಕ ಪೃಥ್ವೀಸೇನನಿಂದ ಯುದ್ಧದಲ್ಲಿ ಪರಾಜಿತನಾದರೂ ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದ. ಇವನ ಮಗ ಭಗೀರಥನು ತಂದೆ ಕಳೆದುಕೊಂಡ ಪ್ರದೇಶಗಳನ್ನು ಮರಳಿ ಪಡೆದುಕೊಂಡ ಎಂದು ಹೇಳಲಾದರೂ, ವಾಕಟಕ ಶಾಸನಗಳಲ್ಲಿ ಇದರ ಬಗ್ಗೆ ಉಲ್ಲೇಖವಿಲ್ಲ. ಭಗೀರಥನ ಪುತ್ರ ರಘು ಪಲ್ಲವರೊಂದಿಗಿನ ಯುದ್ಧದಲ್ಲಿ ಮಡಿದನು.ಅವನ ನಂತರ ಪಟ್ಟಕ್ಕೆ ಬಂದವನೇ, ಕದಂಬ ವಂಶದಲ್ಲೇ ಅತಿ ಬಲಿಷ್ಟ ಮತ್ತು ಉಗ್ರ ರಾಜ ಎಂದು ಹೆಸರಾದ, ಕಾಕುಸ್ಥವರ್ಮ . ಇವನ ಒಬ್ಬಳು ಮಗಳನ್ನು ಗುಪ್ತ ಸಾಮ್ರಾಜ್ಯದ ಸ್ಕಂದಗುಪ್ತನಿಗೆ ಕೊಟ್ಟು ಮದುವೆಮಾಡಲಾಗಿತ್ತು. ಇನ್ನೊಬ್ಬ ಮಗಳು ವಾಕಟಕ ರಾಜ ನರೇಂದ್ರಸೇನನನ್ನು ವಿವಾಹವಾಗಿದ್ದಳು. ತಾಳಗುಂದ ಶಾಸನದ ಪ್ರಕಾರ ಕಾಕುಸ್ಥವರ್ಮನು ಇದೇ ರೀತಿಯ ವಿವಾಹಸಂಬಂಧಗಳನ್ನು ಭಟಾರಿ, ದಕ್ಷಿಣ ಕನ್ನಡದ ಅಳೂಪರು ಮತ್ತು ಗಂಗವಾಡಿಯ ಪಶ್ಚಿಮ ಗಂಗ ಮನೆತನಗಳೊಂದಿಗೂ ಇಟ್ಟುಕೊಂಡಿದ್ದನು. ಮಹಾಕವಿ ಕಾಳಿದಾಸನು ಇವನ ಆಸ್ಥಾನಕ್ಕೆ ಭೇಟಿ ಕೊಟ್ಟಿದ್ದನು. ಕಾಕುಸ್ಥವರ್ಮನ ನಂತರ ಬಂದವರಲ್ಲಿ, ೪೮೫ರಲ್ಲಿ ಪಟ್ಟವೇರಿದ ರವಿವರ್ಮ ಒಬ್ಬನೇ ಸಾಮ್ರಾಜ್ಯವನ್ನು ವಿಸ್ತರಿಸುವುದರಲ್ಲಿ ಯಶಸ್ವಿಯಾದ. ಅವನ ರಾಜ್ಯಭಾರದ ಕಾಲದಲ್ಲಿ , ಪಲ್ಲವರು ಮತ್ತು ಗಂಗರೊಂದಿಗೆ ಯುದ್ಧಗಳೂ , ಅಂತಃಕಲಹಗಳೂ ಗಮನಾರ್ಹವಾದವುಗಳು. ನರ್ಮದಾ ನದಿಯ ದಂಡೆಯವರೆಗೂ ಹಬ್ಬಿದ್ದ ವಾಕಟಕರನ್ನು ಸೋಲಿಸಿದ್ದು ಇವನ ಹೆಗ್ಗಳಿಕೆ. ಕದಂಬ ರಾಜ್ಯ ಇಂದಿನ ಬಹುತೇಕ ಕರ್ನಾಟಕ, ಗೋವಾ ಮತ್ತು ಇಂದಿನ ಮಹಾರಾಷ್ಟ್ರದ ದಕ್ಷಿಣ ಭಾಗಗಳನ್ನು ಒಳಗೊಂಡಿತ್ತು. ಅಂತಃಕಲಹದಿಂದಾಗಿ , ಇವನ ನಂತರ ಈ ರಾಜವಂಶ ಅವನತಿಯ ಹಾದಿ ಹಿಡಿಯಿತು. ಕದಂಬರ ವಿಷ್ಣುವರ್ಮನ ಬೀರೂರಿನ ಫಲಕದಲ್ಲಿ ಶಾಂತಿವರ್ಮನನ್ನು "ಸಮಸ್ತ ಕರ್ನಾಟಕದ ಒಡೆಯ" ಎಂದು ಸಂಬೋಧಿಸಲಾಗಿದೆ. ಮುಖ್ಯ ಧಾರೆಯಿಂದ ೪೫೫ರಲ್ಲಿ ಬೇರೆಯಾದ ತೃಪಾವರ್ತ ಎಂಬ ಶಾಖೆಯು ಬೆಳಗಾವಿಯ ಹತ್ತಿರದ ಮುರೋಡ್ ಎಂಬಲ್ಲಿ ಸ್ವಲ್ಪಕಾಲ ಆಳಿ ನಂತರ ಹರಿವರ್ಮನ ಕಾಲದಲ್ಲಿ ಬನವಾಸಿಯ ಪ್ರಧಾನ ರಾಜ್ಯದೊಂದಿಗೆ ವಿಲೀನವಾಯಿತು. ಅಂತಿಮವಾಗಿ ಬಾದಾಮಿಯ ಚಾಲುಕ್ಯರಿಂದ ಈ ಸಾಮ್ರಾಜ್ಯದ ಪತನವಾಯಿತು.ಅಲ್ಲಿಂದ ಮುಂದೆ ಬಾದಾಮಿ ಚಾಲುಕ್ಯರ , ಅದರನಂತರ ರಾಷ್ಟ್ರಕೂಟರ ಮತ್ತು ಕಲ್ಯಾಣಿ ಚಾಲುಕ್ಯರ ಸಾಮಾಂತರಾಗಿ ಈ ವಂಶ ಮುಂದುವರಿಯಿತು. ಮಯೂರಶರ್ಮನ ಉತ್ತರಾಧಿಕಾರಿಗಳು ತಮ್ಮ ಕ್ಷತ್ರಿಯ ವಂಶ ಸೂಚಕವಾಹಗಿ "ವರ್ಮ' ಎಂಬ ಹೆಸರನ್ನು ಸ್ವೀಕರಿಸಿದರು. ಆಡಳಿತ ಶಾತವಾಹನರಾಜರುಗಳಂತೆ ಕದಂಬರೂ ತಮ್ಮನ್ನು "ಧರ್ಮಮಹಾರಾಜ" ಎಂದು ಕರೆದುಕೊಳ್ಳುತ್ತಿದ್ದರು. ಶಾಸನಗಳ ಅಧ್ಯಯನದಿಂದ ಆ ಕಾಲದ ಅನೇಕ ಹುದ್ದೆಗಳ ಪತ್ತೆ ಹಚ್ಚಲಾಗಿದೆ. ಪ್ರಧಾನ (ಪ್ರಧಾನ ಮಂತ್ರಿ), ಮನೆವೆರ್ಗಡೆ (ಪರಿಚಾರಕ) , ತಂತ್ರಪಾಲ ಅಥವಾ ಸಭಾಕಾರ್ಯ ಸಚಿವ (ಕಾರ್ಯದರ್ಶಿ), ವಿದ್ಯಾವೃದ್ಧ (ವಿದ್ವಾಂಸ ವೃದ್ಧರು), ದೇಶಾಮಾತ್ಯ (ವೈದ್ಯ), ರಹಸ್ಯಾಧ್ಯಕ್ಷ (ಖಾಸಗೀ ಕಾರ್ಯದರ್ಶಿ ), ಸರ್ವಕಾರ್ಯಕರ್ತ (ಮುಖ್ಯ ಕಾರ್ಯದರ್ಶಿ), ಧರ್ಮಾಧ್ಯಕ್ಷ ( ಮುಖ್ಯ ನ್ಯಾಯಾಧೀಶ),ಭೋಜಕ ಮತ್ತು ಆಯುಕ್ತ ( ಇತರ ಅಧಿಕಾರಿಗಳು)ಇತ್ಯಾದಿ. ಸೇನೆಯಲ್ಲಿ ಜಗದಾಲ, ದಂಡನಾಯಕ ಮತ್ತು ಸೇನಾಪತಿ ಎಂಬ ಹುದ್ದೆಗಳಿದ್ದವು. ರಾಜವಂಶದ ಪಟ್ಟದ ರಾಜಕುಮಾರ ರಾಜನಿಗೆ ಆಡಳಿತದಲ್ಲಿ ನೆರವು ನೀಡುತ್ತಿದ್ದ. ಇತರ ರಾಜಕುಮಾರರುಗಳು ವಿವಿಧ ಪ್ರಾಂತಗಳ ರಾಜ್ಯಪಾಲರುಗಳಾಗಿ ನೇಮಕವಾಗುತ್ತ್ಫಿದ್ದರು. ಕಾಕುಸ್ಥವರ್ಮನು ತನ್ನ ಮಗ ಕೃಷ್ಣನನ್ನು ತ್ರಿಪರ್ವತಾಹ ಎಂಬ ಪ್ರದೇಶದ ರಾಜ್ಯಪಾಲನನ್ನಾಗಿ ನೇಮಿಸಿದ್ದನು. ಮುಂದೆ ಇದು ರಾಜ ವಂಶ ಬೇರೆ ಬೇರೆ ಕವಲುಗಳಾಗಿ ಒಡೆಯಲು ಕಾರಣೀಭೂತವಾಯಿತು. ರಾಜ್ಯವನ್ನು ಮಂಡಲ ಮತ್ತು ದೇಶ ಎಂದು ವಿಭಾಜಿಸಲಾಗಿತ್ತು. ಅನೇಕ ವಿಷಯ( ಜಿಲ್ಲೆ) ಗಳಿಂದ ಒಂದು ಮಂಡಲವಾಗುತ್ತಿತ್ತು. ಒಟ್ಟು ಒಂಭತ್ತು ವಿಷಯಗಳನ್ನು ಗುರುತಿಸಲಾಗಿದೆ. ಮಹಾಗ್ರಾಮ ( ತಾಲೂಕು) ಮತ್ತು ದಶಗ್ರಾಮ ( ಹೋಬಳಿ) ಇತರ ಉಪ ವಿಭಾಗಗಳಾಗಿದ್ದವು. ಕೃಷಿ ಉತ್ಪನ್ನದ ಆರರಲ್ಲೊಂದು ಭಾಗವನ್ನು ಸುಂಕವೆಂದು ವಸೂಲಿಮಾಡಲಾಗುತ್ತಿತ್ತು . ಸುಂಕವನ್ನು ಪೆರ್ಜುಂಕ ( ಹೊರೆಯ ಮೇಲಿನ ಸುಂಕ) , ವಡ್ಡರಾವುಲ ( ರಾಜಮನೆತನದ ಸುರಕ್ಷೆಗಾಗಿ ಸಾಮಾಜಿಕ ಸುಂಕ), ಬಿಲ್ಕೋಡ (ಮಾರಾಟ ತೆರಿಗೆ), ಕಿರುಕುಳ ( ಭೂ ಕಂದಾಯ) , ಪಣ್ಣಾಯ ( ಅಡಿಕೆಯ ಮೇಲಿನ ಸುಂಕ) , ವ್ಯಾಪಾರಿಗಳೇ ಮತ್ತಿತರರ ಮೇಲೆ ವೃತ್ತಿ ಸುಂಕ ಇತ್ಯಾದಿಗಳ ರೂಪದಲ್ಲಿ ವಸೂಲು ಮಾಡಲಾಗುತ್ತಿತ್ತು. ಸಂಸ್ಕೃತಿ ಧರ್ಮ ಕದಂಬರು ವೈದಿಕ ಹಿಂದೂ ಧರ್ಮದ ಅನುಯಾಯಿಗಳಾಗಿದ್ದರು. ಮಯೂರಶರ್ಮ , ಬಹುಶಃ, ಹುಟ್ಟಿನಿಂದ ಬ್ರಾಹ್ಮಣನಾಗಿದ್ದರೂ ಅವರ ಮುಂದಿನವರು , ತಮ್ಮ ಕ್ಷತ್ರಿಯ ಕುಲದ ಲಾಂಛನವಾಗಿ "ವರ್ಮ" ಎಂಬ ಹೆಸರನ್ನು ಧರಿಸಿದರು. ಕೃಷ್ಣವರ್ಮ ಮೊದಲಾದ ಕೆಲ ಕದಂಬ ರಾಜರು ಅಶ್ವಮೇಧ ಯಾಗವನ್ನು ಮಾಡಿದ್ದರು. ಅವರ ತಾಳಗುಂದದ ಶಾಸನವು ಶಿವನ ಪ್ರಾರ್ಥನೆಯೊಂದಿಗೆ ಮೊದಲಾದರೆ, ಹಲ್ಮಿಡಿ ಮತ್ತು ಬನವಾಸಿಗಳಲ್ಲಿ ವಿಷ್ಣುವಿನ ಹೆಸರು ಕಾಣಬರುತ್ತದೆ. ಅವರ ಕುಲದೇವರೆನ್ನಲಾದ ಮಧುಕೇಶ್ವರ ದೇವಾಲಯವನ್ನು ಕಟ್ಟಿದರು. ಕುಡಲೂರು, ಸಿರ್ಸಿ ಇತ್ಯಾದಿಗಳಲ್ಲಿ ಸಿಕ್ಕಿರುವ ಅನೇಕ ದಾಖಲೆಗಳು ವಿದ್ವಜ್ಜನರಿಗೆ ಉಂಬಳಿ ಬಿಟ್ಟ ವಿಷಯವನ್ನು ಹೇಳುತ್ತವೆ. ಬೌದ್ಧ ವಿಹಾರಗಳಿಗೂ ಉಂಬಳಿ ಬಿಡಲಾಗುತ್ತಿತ್ತು. ಜೈನ ಧರ್ಮವನ್ನೂ ಪ್ರೋತ್ಸಾಹಿಸಿದ ಕದಂಬರು ಬನವಾಸಿ, ಬೆಳಗಾವಿ, ಮಂಗಳೂರು ಮತ್ತು ಗೋವಾ ಸುತ್ತಮುತ್ತ ಅನೇಕ ಜೈನ ದೇವಾಲಯಗಳನ್ನು ಕಟ್ಟಿಸಿದರು. ಸಾಹಿತ್ಯ, ಕಲೆಗಳ ಪ್ರೋತ್ಸಾಹಕ್ಕೆ ಹೆಸರಾಗಿದ್ದ ಕದಂಬ ರಾಜ ಮತ್ತು ರಾಣಿಯರು ದೇವಾಲಯ ಮತ್ತು ವಿದ್ಯಾಸಂಸ್ಥೆಗಳಿಗೆ ಧಾರಾಳ ಉಂಬಳಿಯನ್ನು ಬಿಟ್ಟದ್ದಲ್ಲದೆ, ಧನಸಹಾಯವನ್ನೂ ಮಾಡಿದರು. ಆದಿಕವಿ ಪಂಪನು ತನ್ನ ಕೃತಿಗಳಲ್ಲಿ ಕದಂಬರನ್ನು ಹಾಡಿ ಹೊಗಳಿದ್ದಾರೆ. ಅವರ ನುಡಿಗಳಾದ “ ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ” ಮತ್ತು “ ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೋಳ್ ಬನವಾಸಿ ದೇಶದೊಳ್" ಇಂದಿಗೂ ಕನ್ನಡಿಗರ ಮನೆಮಾತಾಗಿದೆ. ಶಿಲ್ಪಕಲೆ ಕದಂಬರು ಕರ್ನಾಟಕದ ಶಿಲ್ಪಕಲಾ ಪರಂಪರೆಗೆ ಗಮನಾರ್ಹ ಕೊಡಿಗೆ ನೀಡಿದರು. ಚಾಲುಕ್ಯ ಮತ್ತು ಪಲ್ಲವ ಶೈಲಿಯನ್ನು ಕೆಲವು ವಿಷಯಗಳಲ್ಲಿ ಹೋಲುವ ಕದಂಬ ಶಿಲ್ಪಕಲೆ ತನ್ನದೇ ಛಾಪನ್ನು ಹೊಂದಿದೆ. ಕದಂಬರು ಶಾತವಾಹನರ ಶಿಲ್ಪಕಲಾ ಶೈಲಿಯನ್ನೂ ಅಳವಡಿಸಿಕೊಂಡರು. ಕದಂಬರ ಶಿಲ್ಪಕಲೆಯ ಮೂಲ ಲಕ್ಷಣ ಕದಂಬ ಶಿಖರ ಎಂದೇ ಕರೆಯಲಾಗುವ ಶಿಖರ. ಮೆಟ್ಟಿಲು ಮಟ್ಟಿಲಾಗಿ ಪಿರಮಿಡಿನಂತೆ ಮೇಲೇರಿ ಕಳಶ (ಅಥವಾ ಸ್ತೂಪಿಕಾ) ದಲ್ಲಿ ಕೊನೆಗೊಳ್ಳುವ ಈ ಶಿಖರದಲ್ಲಿ ಮತ್ತೆ ಯಾವುದೇ ಅಲಂಕಾರಗಳಿಲ್ಲ. ಅನೇಕ ಶತಮಾನಗಳ ನಂತರ ಇದೇ ಶೈಲಿಯ ಶಿಖರಗಳ ಉಪಯೋಗ ದೊಡ್ಡಗದ್ದವಳ್ಳಿಯ ಹೊಯ್ಸಳ ದೇವಾಲಯಮತ್ತು ಹಂಪೆಯ ಮಹಾಕೂಟ ದೇವಾಲಯದಲ್ಲಿ ಕಂಡುಬರುತ್ತದೆ. ಕೆಲ ದೇವಾಲಯಗಳಲ್ಲಿ ಕಲ್ಲಿ ಜಾಲಂಧ್ರಗಳೂ ಕಾಣಸಿಗುತ್ತವೆ. ಮುಂದೆ ಚಾಲುಕ್ಯ- ಹೊಯ್ಸಳ ಶಿಲ್ಪಕಲೆ ಎಂದು ಹೆಸರಾದ ಶೈಲಿಗೆ ಅಡಿಪಾಯ ಕದಂಬರ ಕಾಲದಲ್ಲಿ ಹಾಕಲಾಯಿತು ಎಂದು ನಂಬಲಾಗಿದೆ. ಕದಂಬರ ಕಾಲದ, ಹತ್ತನೆಯ ಶತಮಾನದ , ಅನೇಕ ಬಾರಿ ನವೀಕರಿಸಿದ ಸುಂದರ ಮಧುಕೇಶ್ವರ ದೇವಾಲಯವನ್ನು ಇಂದಿಗೂ ಬನವಾಸಿಯಲ್ಲಿ ನೋಡಬಹುದು. ಇಲ್ಲಿನ ಕಲ್ಲಿನ ಮಂಚ ಪ್ರಧಾನ ಆಕರ್ಷಣೆಗಳಲ್ಲೊಂದು. ಕದಂಬರ ನೆನಪಿನಲ್ಲಿ ಕದಂಬರ ನೆನಪಿನಲ್ಲಿ ಕರ್ನಾಟಕ ಸರ್ಕಾರವು ಪ್ರತಿವರ್ಷ ಬನವಾಸಿಯಲ್ಲಿ ಕದಂಬೋತ್ಸವವೆಂಬ ಸಾಂಸ್ಕೃತಿಕ ಉತ್ಸವವನ್ನು ನಡೆಸುತ್ತದೆ. ಮಯೂರಶರ್ಮನ ಕಥೆಯನ್ನು ಆಧರಿಸಿದ "ಮಯೂರ" ಕನ್ನಡ ಚಲನಚಿತ್ರ ಎಪ್ಪತ್ತರ ದಶಕದಲ್ಲಿ ತೆರೆಕಂಡಿತ್ತು. ಇದರಲ್ಲಿ ಡಾ. ರಾಜಕುಮಾರ್ ರವರು ನಾಯಕ ಪಾತ್ರ ವಹಿಸಿದ್ದರು. ೨೦೦೫ರಲ್ಲಿ ಕಾರವಾರದಲ್ಲಿ ಉದ್ಘಾಟಿತವಾದ , ಭಾರತದ ಅತ್ಯಾಧುನಿಕ ಮಿಲಿಟರಿ ನೌಕಾನೆಲೆಗೆ INS ಕದಂಬ ಎಂದು ಹೆಸರಿಡಲಾಗಿದೆ. ಹೆಚ್ಚಿಗೆ ಓದಲು ಕರ್ನಾಟಕದ ಇತಿಹಾಸ ಕದಂಬೋತ್ಸವ ಉಲ್ಲೇಖಗಳು ಬಾಹ್ಯ ಸಂಪರ್ಕಗಳು ಕದಂಬರು-ಭಾರತದ ಇತಿಹಾಸ ಕದಂಬ ಚಕ್ರವರ್ತಿ – ಮಯೂರ ಕನ್ನಡದ ಮೊಟ್ಟ ಮೊದಲ ರಾಜ ವಂಶ ಲಿಕದಂಬಳಿ ಕದಂಬ ಅರಸು ಶಿಲಾಶಾಸನಕ್ಕೆ ರಕ್ಷಣೆ ಸೌಭಾಗ್ಯ! ಮಧುಕೇಶ್ವರ ದೇವಸ್ಥಾನ, ಬನವಾಸಿ ಕರ್ನಾಟಕದ ಇತಿಹಾಸ ಇತಿಹಾಸ ಕರ್ನಾಟಕದ ರಾಜಮನೆತನಗಳು
1791
https://kn.wikipedia.org/wiki/%E0%B2%B8%E0%B3%87%E0%B2%B5%E0%B3%81%E0%B2%A3
ಸೇವುಣ
ದೇವಗಿರಿಯ ಯಾದವರು ಎಂದೇ ಹೆಸರಾಗಿರುವ ಸೇವುಣರು ಉತ್ತರ ಕರ್ನಾಟಕ, ಮಹಾರಾಷ್ಟ್ರಗಳನ್ನೊಳಗೊಂಡ ಪ್ರದೇಶವನ್ನು ಆಳಿದ ಕನ್ನಡ ರಾಜಮನೆತನ. ರಾಷ್ಟ್ರಕೂಟರ ಸರದಾರರಾಗಿಯೂ, ಮುಂದೆ ಹೊಯ್ಸಳರಂತೆಯೆ ಕಲ್ಯಾಣದ ಚಾಲುಕ್ಯ ದೊರೆಗಳ ಸಾಮಂತರಾಗಿಯೂ ಇದ್ದರು. ಚಾಲುಕ್ಯ ಸಾಮ್ರಾಜ್ಯ ಅವನತಿಯ ಹಾದಿ ಹಿಡಿದಂತೆ ಪ್ರಾಬಲ್ಯಕ್ಕೆ ಏರಿದರು. ಐದನೆಯ ಭಿಲ್ಲಮ ಕಲ್ಯಾಣವನ್ನು ವಶಪಡಿಸಿಕೊಂಡು ತಾನು ಸ್ವತಂತ್ರನೆಂದು ಘೋಷಿಸಿಕೊಂಡ. ದೇವಗಿರಿಯ ಅಭೇದ್ಯ ಕೋಟೆಯನ್ನು ನಿರ್ಮಿಸಿ ರಾಜಧಾನಿಯನ್ನು ಅಲ್ಲಿಗೆ ಸ್ಥಳಾಂತರಿಸಿದ. ಸೇಉಣರು ಹೊಯ್ಸಳರೊಂದಿಗೆ ಅನೇಕ ಯುದ್ದಗಳನ್ನು ನಡೆಸೆದರು. ಕೃಷ್ಣಾ-ತುಂಗಭದ್ರಾ ನದಿ ಮಧ್ಯಪ್ರದೇಶ ಒಬ್ಬರಿಂದೊಬ್ಬರಿಗೆ ಕೈ ಬದಲಾಯಿಸುತ್ತಿತ್ತು. ನಂತರ ಒಂದು ಮಾದರಿಯ ಒಪ್ಪಂದ ಏರ್ಪಟ್ಟು, ಸೇವುಣರು ತುಂಗಭದ್ರೆಯ ಉತ್ತರಕ್ಕೂ, ಹೊಯ್ಸಳರು ದಕ್ಷಿಣಕ್ಕೂ ತಮ್ಮ ಪ್ರಭಾವ ಪ್ರಾಬಲ್ಯಗಳನ್ನು ವಿಸ್ತರಿಸಿದರು. ಒಂದು ಕಾಲದಲ್ಲಿ ಸೇವುಣ ರಾಜ್ಯ ನರ್ಮದೆಯವರೆಗೆ ಹಬ್ಬಿತ್ತು. ಮುಂದೆ ದೆಹಲಿಯ ಸುಲ್ತಾನ ಅಲ್ಲಾಉದ್ದೀನ್‌ ಖಿಲ್ಜಿ ದೇವಗಿರಿಯನ್ನು ಗೆದ್ದು ತನ್ನ ರಾಜ್ಯಕ್ಕೆ ಸೇರಿಸಿಕೊಂಡಾಗ ಸೇವುಣರ ರಾಜ್ಯ ಕೊನೆಗಂಡಿತು. ಛತ್ರಪತಿ ಶಿವಾಜಿಯ ತಾಯಿ ಜೀಜಾಬಾಯಿಯ ತವರು ಮನೆತನ ದೇವಗಿರಿಯ ರಾಜವಂಶಕ್ಕೆ ಸೇರಿದ್ದು. ಸಾಂಸ್ಕೃತಿಕವಾಗಿ ಸೇವುಣರು ಕಲ್ಯಾಣದ ಚಾಲುಕ್ಯರ ಸಂಪ್ರದಾಯವನ್ನು ಮುಂದುವರೆಸಿರದರು. ಗಣಿತಜ್ಞ ಭಾಸ್ಕರಾಚಾರ್ಯ, ಭಾರತೀಯ ಸಂಗೀತಶಾಸ್ತ್ರದ ಪ್ರಮಾಣ ಗ್ರಂಥ "ಸಂಗೀತ ರತ್ನಾಕರ"ವನ್ನು ರಚಿಸಿದ ಶಾರ್ಙ್ಗದೇವ ಸೇವುಣರ ಕಾಲದವರು. ರಾಜವಂಶದ ಹೆಸರು ಸೇವುಣ ರಾಜರನ್ನು “ದೇವಗಿರಿಯ ಯಾದವರು” ಎಂದೂ ಕರೆಯುವುದುಂಟು. ಮಹಾರಾಷ್ಟ್ರದ ವಿಶಾಲ ಭಾಗದಲ್ಲಿ ಆಳಿದ್ದರಿಂದ ಅವರನ್ನು “ಮರಾಠರು” ಎಂದೂ ಕರೆಯಲಾಗುತ್ತದೆ. ಆದರೆ ಈ ರಾಜವಂಶದ ಸರಿಯಾದ ಹೆಸರು ಸೇಉಣ ಅಥವಾ ಸೇವುಣ[2]. ಇವರದೇ ಶಾಸನಗಳಲ್ಲಾಗಲೀ ಅಥವಾ ಅವರ ಸಮಕಾಲೀನ ರಾಜ್ಯಗಳಾಗಿದ್ದ ಹೊಯ್ಸಳ, ಕಾಕತೀಯ ಅಥವಾ ಪಶ್ಚಿಮ ಚಾಲುಕ್ಯರ ಶಾಸನಗಳಲ್ಲಾಗಲೀ ಈ ರಾಜವಂಶವನ್ನು ಸೇಉಣರೆಂದೇ ಸಂಬೋಧಿಸಲಾಗಿದೆ.[3]. ಈ ಹೆಸರಿನ ಮೂಲ ಬಹುಶಃ ಈ ವಂಶದ ಎರಡನೆಯ ರಾಜ ಸೇಉಣಚಂದ್ರನಿಂದ ಬಂದಿರಬಹುದೆಂದು ಊಹೆಯಿದೆ ಮೂಲ ಈ ವಂಶದ ಮೂಲದ ಬಗ್ಯೆ ವಿದ್ವಾಂಸರಲ್ಲಿ ಅನೇಕ ಅಭಿಪ್ರಾಯಗಳಿದ್ದರೂ ಸೇಉಣರು ಕನ್ನಡಿಗರೆಂಬುದಕ್ಕೆ ಬಲವಾದ ಆಧಾರಗಳಿವೆ.. ಕರ್ನಾಟಕದವರು ಡಾ.ಸಿ.ಎಮ್.ಕುಲಕರ್ಣಿ[14], ಕಾಲಿನ್ ಮಸೀಕಾ, ಡಾ. ಶ್ರೀನಿವಾಸ ರಿತ್ತಿ ಮೊದಲಾದ ಸಂಶೋಧಕರು, ಸೇವುಣರು ಮೂಲತಃ ಕನ್ನಡಿಗರಾಗಿದ್ದರು ಎಂದು ಪ್ರತಿಪಾದಿಸುತ್ತಾರೆ. ಭಾಷಾಶಾಸ್ತ್ರಜ್ಞ ಕಾಲಿನ್ ಮಸೀಕಾರ ಪ್ರಕಾರ ಸೇವುಣರು ಕನ್ನಡ ಭಾಷಿಕರಾಗಿದ್ದು , ತಮ್ಮ ಶಾಸನಗಳಲ್ಲಿ ಸಂಸ್ಕೃತದೊಂದಿಗೆ ಕನ್ನಡವನ್ನೂ ಬಳಸಿದ್ದಾರೆ. ಆದರೆ, ಮುಂದೆ ಮುಸ್ಲಿಮರ ಆಕ್ರಮಣದ ಕಾಲದಲ್ಲಿ , ಅವರು ಮರಾಠಿ ಭಾಷೆಗೆ ಪ್ರೋತ್ಸಾಹ ನೀಡಲು ಪ್ರಾರಂಭಿಸಿದ್ದು , ಅವರ ಶಾಸಗಳಲ್ಲಿ ಮರಾಠಿ ಸಾಲುಗಳು ಮತ್ತು ನುಡಿಗಟ್ಟುಗಳು ಕಾಣಬರಲು ತೊಡಗುತ್ತವೆ.[15]. ಡಾ.ಶ್ರೀನಿವಾಸ ರಿತ್ತಿಯವರ ಪ್ರಕಾರ , ಸೇವುಣರು ಮೂಲತಃ ಕನ್ನಡಿಗರಾಗಿದ್ದು , ದಖ್ಖನಿನಲ್ಲಿ ಆಗಿನ ರಾಜಕೀಯ ಪರಿಸ್ಥಿತಿಯಿಂದ ಅವರು ಉತ್ತರಕ್ಕೆ ವಲಸೆ ಹೋಗಿರಬಹುದು. [16] ಅನೇಕ ಸೇವುಣ ರಾಜರುಗಳ ಹೆಸರು ಅಥವಾ ಬಿರುದು ಕನ್ನಡ ಮೂಲದವಾಗಿವೆ. ಉದಾಹರಣೆಗೆ ಧಡಿಯಪ್ಪ, ಭಿಲ್ಲಮ, ರಾಜುಗಿ, ವಾಸುಗಿ. ಕಲಿಯ ಬಲ್ಲಾಳ ಇತ್ಯಾದಿ. ಇನ್ನೂ ಕೆಲ ರಾಜರ ಸಿಂಘಣ , ಮಲ್ಲುಗಿ ಎಂಬ ಹೆಸರುಗಳು ದಕ್ಷಿಣ ಕಲಚೂರ್ಯರ ಹೆಸರುಗಳನ್ನು ಹೋಲುತ್ತವೆ. ದಾಖಲೆಗಳ ಪ್ರಕಾರ ಸೇವೂಣರ ಮೊದಲ ರಾಜರುಗಳಲ್ಲಿ ಒಬ್ಬನಾದ ಎರಡನೆಯ ಸೇವುಣಚಂದ್ರನು , ಸೆಲ್ಲವಿದೇಗ ಎಂಬ ಕನ್ನಡ ಬಿರುದಾಂಕಿತನಾಗಿದ್ದನು. ತಮ್ಮ ರಾಜ್ಯಭಾರದ ಅವಧಿಯುದ್ದಕ್ಕೂ , ಸೇವುಣರು, ಕನ್ನಡ ರಾಜವಂಶಗಳೊಂದಿಗೆ ನಿಕಟ ಲಗ್ನಸಂಬಂಧವನ್ನು ಇಟ್ಟುಕೊಂಡಿರುವುದು ಕಂಡುಬರುತ್ತದೆ. [3]. ಎರಡನೆಯ ಭಿಲ್ಲಮನು ರಾಷ್ಟ್ರಕೂಟ ವಂಶದ ಲಚ್ಚಿಯವ್ವೆಯನ್ನು ಮದುವೆಯಾಗಿದ್ದನು. ರಾಷ್ಟ್ರಕೂಟರ ಸೇನಾಧಿಕಾರಿ ದೋರಪ್ಪನ ಮಗಳು ವಡ್ಡಿಯವ್ವೆಯನ್ನು ವಡ್ಡಿಗನು ವರಿಸಿದ್ದನು. ವೇಸುಗಿ ಮತ್ತು ಮೂರನೆಯ ಭಿಲ್ಲಮನ ಹೆಂಡತಿಯರು ಚಾಲುಕ್ಯ ವಂಶದ ರಾಜಕುಮಾರಿಯರಾಗಿದ್ದರು. ಸೇವುಣರ ರಕ್ತಸಂಬಂಧಿಗಳಾಗಿದ್ದ ಅವರ ಅನೇಕ ದಂಡನಾಯಕರು ಕನ್ನಡ ಭಾಷಿಕರಾಗಿದ್ದರು. ಸೇವುಣರ ಮಾಸವಾಡಿಯು ಇಂದಿನ ಧಾರವಾಡ ಪ್ರದೇಶದಲ್ಲಿತ್ತು. ಡಾ. ಎ.ವಿ. ನರಸಿಂಹಮೂರ್ತಿಯವರ ಪ್ರಕಾರ, ಮಾನ್ಯಖೇಟ (ಇಂದಿನ ಮಾಳಖೇಡ) ದಿಂದ ಆಳುತ್ತಿದ್ದ ರಾಷ್ಟ್ರಕೂಟರ ಆಳ್ವಿಕೆಯ ಉತ್ತರಾರ್ಧದಲ್ಲಿ , ಸೇವುಣ ದಂಡನಾಯಕರುಗಳನ್ನು ನಾಸಿಕ ಪ್ರದೇಶದಲ್ಲಿ ಆಡಳಿತ ನಡೆಸಲು ಕರ್ನಾಟಕದಿಂದ ಕಳುಹಿಸಲಾಯಿತು. [4]. ಅಷ್ಟೇ ಅಲ್ಲ, ಸೇವುಣರ ರಾಜ್ಯದ ಐನೂರಕ್ಕೂ ಹೆಚ್ಚು ಶಿಲಾಶಾಸನಗಳು ಕರ್ನಾಟಕದಲ್ಲಿ ಪತ್ತೆಯಾಗಿವೆ. ಇವುಗಳಲ್ಲಿ ಎರಡನೆಯ ಭಿಲ್ಲಮನ ಕಾಲದ ಶಾಸನ ಅತ್ಯಂತ ಹಳೆಯದಾಗಿದ್ದು, ಈ ಬಹುತೇಕ ಶಾಸನ ಭಾಷೆ ಕನ್ನಡವಾಗಿದೆ. ಇನ್ನೂ ಅನೇಕ ಶಾಸನಗಳ ಭಾಷೆ ದೇವನಾಗರಿ ಲಿಪಿಯಲ್ಲಿ ಬರೆದ ಕನ್ನಡವಾಗಿದೆ[3]. ಸೇವುಣರ ಮೊದಮೊದಲ ನಾಣ್ಯಗಳಲ್ಲಿ ಕನ್ನಡ ಲಾಂಛನಗಳಿವೆ. ಇವೆಲ್ಲವುಗಳ ಆಧಾರದ ಮೇಲೆ, ಡಾ. ಓ.ಪಿ.ವರ್ಮಾ ಮೊದಲಾದ ವಿದ್ವಾಂಸರು, ಸೇವುಣರ ರಾಜ್ಯದಲ್ಲಿ , ಮರಾಠಿ ಮತ್ತು ಸಂಸ್ಕೃತದೊಂದಿಗೆ ಕನ್ನಡವೂ ರಾಜಭಾಷೆಯಾಗಿರುವುದು ಖಂಡಿತ ಎಂಬ ನಿರ್ಧಾರಕ್ಕೆ ಬರುತ್ತಾರೆ. [17]. ಉತ್ತರ ಭಾರತ ಸ್ವತಃ ಸೇವುಣರು ತಮ್ಮನ್ನು ಉತ್ತರ ಭಾರತದ ಚಾಂದ್ರವಂಶಿ ಯಾದವ ಕುಲದವರು ಎಂದು ಕರೆದುಕೊಂಡಿದ್ದಾರೆ[5][6]. ಹೇಮಾದ್ರಿ ಬರೆದ ಸಂಸ್ಕೃತ ಗ್ರಂಥ ವ್ರತಖಂಡದ 21ನೆಯ ಪದ್ಯದಲ್ಲಿ , ಸೇವುಣರು ಮೂಲತಃ ಮಥುರೆಯವರಾಗಿದ್ದು ನಂತರ ದ್ವಾರಕೆಗೆ ಬಂದರು ಎಂದು ಉಲ್ಲೇಖಿಸಲಾಗಿದೆ. ಹೇಮಾದ್ರಿಯು ಅವರನ್ನು ಕೃಷ್ಣಕುಲೋತ್ಪನ್ನ , ಅರ್ಥಾತ್ ಕೃಷ್ಣನ ವಂಶಸ್ಥರು ಎಂದು ಕರೆದಿದ್ದಾನೆ[7]. ಇತರ ಕೆಲ ಶಾಸನಗಳು ಅವರನ್ನು ದ್ವಾರಾವತೀಪುರಾವರಾಧೀಶ್ವರರು (ದ್ವಾರಕೆಯ ಒಡೆಯರು) ಎಂದು ಉಲ್ಲೇಖಿಸಿವೆ. ಸೇವುಣರು ಉತ್ತರ ಭಾರತದಿಂದ ಬಂದವರು ಎಂಬ ವಾದವನ್ನು ಡಾ. ಕೋಲಾರ್ಕರ್ ಮೊದಲಾದ ಅನೇಕ ಆಧುನಿಕ ಸಂಶೋಧಕರು ಸಮರ್ಥಿಸುತ್ತಾರೆ[8]. ಮರಾಠಾ ಪ್ರೊ. ಜಾರ್ಜ್ ಮೊರೇಸ್ [9], ವಿ.ಕೆ.ರಾಜವಾಡೆ, ಸಿ.ವಿ.ವೈದ್ಯ, ಡಾ. ಎ.ಎಸ್. ಅಲ್ಟೇಕರ್ , ಡಾ.ಬಿ.ಆರ್.ಭಂಡಾರ್ಕರ್ ಮತ್ತು ಜೆ. ಡಂಕನ್ ಎಮ್. ಡೆರ್ರೆಟ್ [4], ಮೊದಲಾದ ವಿದ್ವಾಂಸರು,ಸೇವುಣರು ಮರಾಠಾ ಮೂಲದವರಾಗಿದ್ದರು ಎಂದು ಅಭಿಪ್ರಾಯಪಡುತ್ತಾರೆ. ಸೇವುಣರು ಮರಾಠಿ ಭಾಷೆಯ ಪ್ರೋತ್ಸಾಹಕರಾಗಿದ್ದರು[10]. ಈ ನಾ ಯಕರಾಜ್ಯವು ಮೊಟ್ಟಮೊದಲ ಮರಾಠಾ ಸಾಮ್ರಾಜ್ಯ ಎಂದು ದಿಗಂಬರ ಬಾಲಕೃಷ್ಣ ಮೊಕಾಶಿಯವರು ಅನುಮೋದಿಸುತ್ತಾರೆ[11]. ತಮ್ಮ ಪುಸ್ತಕ ಮಧ್ಯಯುಗೀಯ ಭಾರತ (Medieval India)ದಲ್ಲಿ , ಸಿ.ವಿ.ವೈದ್ಯ, ನ'''ನಿಸ್ಸಂದೇಹವಾಗಿಯೂ ಶುದ್ಧ ಮರಾಠಿ ಕ್ಷತ್ರಿಯವಂಶದವರು ಎನ್ನುತ್ತಾರೆ. ನಾಸಿಕದ ಹತ್ತಿರದ ಅಂಜನೇರಿ ಎಂಬಲ್ಲಿ ದೊರಕಿದ ಶಿಲಾಶಾಸನದ ಪ್ರಕಾರ ಯಾದವ ವಂಶದ ಒಂದು ಕಿರು ಶಾಖೆಯು ಅಂಜನೇರಿಯನ್ನು ಮುಖ್ಯ ನಗರವಾಗಿಟ್ಟುಕೊಂಡು , ಸಣ್ಣ ಪ್ರದೇಶವನ್ನು ಆಳುತ್ತಿತ್ತು.. ಇದೇ ಶಾಸನವು, ಈ ಯಾದವ ವಂಶದ ಸೇವುಣದೇವ ಎಂಬ ರಾಜನು ತನ್ನನ್ನು ಮಹಾಸಾಮಂತ ಎಂದು ಕರೆದುಕೊಂಡಿದ್ದಾಗಿಯೂ, ಜೈನ ದೇವಾಲವೊಂದಕ್ಕೆ ದತ್ತಿ ಬಿಟ್ಟದ್ದಾಗಿಯೂ ಹೇಳುತ್ತದೆ. [12]..ಡಾ. ಓ.ಪಿ.ವರ್ಮಾ ಮೊದಲಾದ ವಿದ್ವಾಂಸರ ಪ್ರಕಾರ ಯಾದವರು ಮರಾಠಿ ಭಾಷಿಕರಾಗಿದ್ದು , ಇವರ ಕಾಲವು ಮರಾಠಿ ಇತಿಹಾಸದಲ್ಲಿ ಮಹತ್ವದ ಕಾಲವಾಗಿದೆ. [13]. ಶಿವಾಜಿಯ ತಾಯಿ ಜೀಜಾಬಾಯಿಯು ಯಾದವ ವಂಶಸ್ತರು ಎಂದು ಕರೆದುಕೊಳ್ಳುತ್ತಿದ್ದ ಸಿಂದಖೇಡ ರಾಜರ ಜಾಧವ ಕುಲಕ್ಕೆ ಸೇರಿದವಳಾಗಿದ್ದಳು. ಇತಿಹಾಸ ಸಾಮಂತರಾಗಿ ರಾಷ್ಟ್ರಕೂಟರ ಹಾಗೂ ನಂತರ ಪಶ್ಚಿಮ ಚಾಲುಕ್ಯರ ಸಾಮಂತರಾಗಿದ್ದ[2] ಸೇವುಣರ ರಾಜವಂಶ ಜಾರಿಗೆ ಬಂದದ್ದು ಸುಬಾಹುವಿನ ಮಗ ಧೃತಪ್ರಹಾರನ ಕಾಲದಲ್ಲಿ.. ವ್ರತಖಂಡ ಗ್ರಂಥದ ಪ್ರಕಾರ ಈ ರಾಜ್ಯದ ರಾಜಧಾನಿ ಶ್ರೀನಗರವಾಗಿತ್ತು. ಆದರೆ, ಇನ್ನೊಂದು ಶಿಲಾಶಾಸನದ ಪ್ರಕಾರ ರಾಜಧಾನಿಯು, ಚಂದ್ರಾದಿತ್ಯ ಪುರವಾಗಿತ್ತು ( ಇದು ಇಂದಿನ ನಾಸಿಕ ಜಿಲ್ಲೆಯ ಚಾಂದೋರು) [12]. ಸೇವುಣರಿಗೆ ಆ ಹೆಸರು ಬಂದದ್ದು ಧೃತಪ್ರಹಾರನ ಮಗ ಸೇವುಣಚಂದ್ರನಿಂದ. ಅವನ ರಾಜ್ಯ ಮೂಲತಃ ಸೇವುಣದೇಶ ವೆಂಬ ಪ್ರದೇಶ ( ಇಂದಿನ ಮಹಾರಾಷ್ಟ್ರದ ಖಾಂದೇಶ್ ಭಾಗ) ವಾಗಿತ್ತು. ನಂತರದ ರಾಜ ಎರಡನೆಯ ಭಿಲ್ಲಮನು , ಪರಮಾರರ ದೊರೆ ಮುಂಜ ವಿರುದ್ಧದ ಕದನದಲ್ಲಿ ಮೂರನೆಯ ತೈಲಪನಿಗೆ ನೆರವು ನೀಡಿದನು. ಎರಡನೆಯ ಸೇವುಣಚಂದ್ರನು ಆರನೆಯ ವಿಕ್ರಮಾದಿತ್ಯನಿಗೆ ಸಿಂಹಾಸನವನ್ನು ದಕ್ಕಿಸಿಕೊಳ್ಳಲು ಸಹಾಯ ಮಾಡಿದನು. ಸೇವುಣ ನಾಯಕ‌ ರಾಜಪರಂಪರೆ ಸೇವುಣ ರಾಜರುಗಳಲ್ಲಿ ಸಿಂಧನ, ಕೃಷ್ಣದೇವ, ಮಹಾದೇವ ಮತ್ತು ರಾಮದೇವ ಇವರುಗಳನ್ನು ಸಮರ್ಥ ರಾಜರೆಂದು ಪರಿಗಣಿಸಲಾಗಿದೆ. [8] ಕಲ್ಯಾಣಿ ಚಾಲುಕ್ಯರ ಸರದಾರರಾಗಿ ಧೃತಪ್ರಹಾರ ಸೇವುಣಚಂದ್ರ ಕ್ರಿ.ಶ. 850-874 ಧಡಿಯಪ್ಪ ಕ್ರಿ.ಶ. 874-900 ಭಿಲ್ಲಮ ಕ್ರಿ.ಶ. 900-925 ವಡುಗಿ (ವಡ್ಡಿಗ) ಕ್ರಿ.ಶ. 950-974 ಇಮ್ಮಡಿ ಧಡಿಯಪ್ಪ ಕ್ರಿ.ಶ. 974-975 ಇಮ್ಮಡಿ ಭಿಲ್ಲಮ ಕ್ರಿ.ಶ. 975-1005 (ಕಲ್ಯಾಣಿ ಚಾಲುಕ್ಯರ ದೊರೆ ಎರಡನೆಯ ತೈಲಪನಿಗೆ ಪರಮಾರರ ರಾಜ ಮುಂಜನ ವಿರುಧ್ದ ಯುದ್ಧದಲ್ಲಿ ನೆರವು ನೀಡಿದವನು) ವೇಸುಗಿ ಕ್ರಿ.ಶ.1005-1020 ಮುಮ್ಮಡಿ ಭಿಲ್ಲಮ ಕ್ರಿ.ಶ. 1020-1055 (ನಾಸಿಕದ ಹತ್ತಿರದ ಸಿನ್ನರಿನಲ್ಲಿ ಆಳುತ್ತಿದ್ದವನು. ಪರಮಾರರ ವಿರುದ್ಧ ಚಾಲುಕ್ಯರ ಸೋಮೇಶ್ವರನಿಗೆ ನೆರವು ನೀಡಿದವನು) ಇಮ್ಮಡಿ ವೇಸುಗಿ ಕ್ರಿ.ಶ. 1055-1068 ಮುಮ್ಮಡಿ ಭಿಲ್ಲಮ ಕ್ರಿ.ಶ. 1068 ಇಮ್ಮಡಿ ಸೇವುಣಚಂದ್ರ ಕ್ರಿ.ಶ. 1068-1085 (ಪ್ರಜಾದಂಗೆಯನ್ನು ಹತ್ತಿಕ್ಕಿ, ನಾಲ್ಕನೆಯ ಭಿಲ್ಲಮನನ್ನು ಸೋಲಿಸಿ ದೊರೆಯಾದವನು) ಐರಾಮದೇವ ಕ್ರಿ.ಶ. 1085-1115 ಸಿಂಘಣ ಕ್ರಿ.ಶ.1115-1145 ಮಲ್ಲುಗಿ ಕ್ರಿ.ಶ. 1145-1150 (1173 ರ ವರೆಗೆ ಯಾದವೀ ಕಲಹದ ಅವಧಿ) ಅಮರಗಾಂಗೇಯ ಕ್ರಿ.ಶ.1150-1160 ಗೋವಿಂದರಾಜ ಕ್ರಿ.ಶ. 1160 ಇಮ್ಮಡಿ ಅಮರ ಮಲ್ಲುಗಿ ಕ್ರಿ.ಶ.1160-1165 ಕಲಿಯ ಬಲ್ಲಾಳ ಕ್ರಿ.ಶ. 1165-1173 ಸ್ವತಂತ್ರ ರಾಜರಾಗಿ ಐದನೆಯ ಭಿಲ್ಲಮ ಕ್ರಿ.ಶ. 1173-1192 ಜೈತುಗಿ ಕ್ರಿ.ಶ. 1192-1200 ಇಮ್ಮಡಿ ಸಿಂಘಣ ಕ್ರಿ.ಶ.1200-1247 ಕನ್ನರ ಕ್ರಿ.ಶ. 1247-1261 ಮಹಾದೇವ ಕ್ರಿ.ಶ. 1261-1271 ಅಮನ ಕ್ರಿ.ಶ. 1271 ರಾಮಚಂದ್ರ ಕ್ರಿ.ಶ. 1271-1312 ಖಿಲ್ಜಿ ಸಾಮ್ರಾಜ್ಯದ ಅಧೀನರಾಜರಾಗಿ ಮುಮ್ಮಡಿ ಸಿಂಘಣ ಕ್ರಿ.ಶ. 1312-1313 ಹರಪಾಲದೇವ ಕ್ರಿ.ಶ. 1313-1318 ಮುಮ್ಮಡಿ ಮಲ್ಲುಗಿ ಕ್ರಿ.ಶ.1318-1334 ಬಾಹ್ಯ ಸ೦ಪರ್ಕಗಳು ಉಲ್ಲೇಖಗಳು ಇತಿಹಾಸ ಭಾರತದ ರಾಜಮನೆತನಗಳು ಕರ್ನಾಟಕದ ರಾಜಮನೆತನಗಳು
1795
https://kn.wikipedia.org/wiki/%E0%B2%A6%E0%B2%9F%E0%B3%8D%E0%B2%B8%E0%B3%8D%20%E0%B2%95%E0%B2%A8%E0%B3%8D%E0%B2%A8%E0%B2%A1
ದಟ್ಸ್ ಕನ್ನಡ
ದಟ್ಸ್ ಕನ್ನಡ ಅಂತರ್ಜಾಲದಲ್ಲಿನ ಕನ್ನಡದ ತಾಣಗಳಲ್ಲೊಂದು. ಇಂಡಿಯ ಇನ್ಫೊ ಕಂಪೆನಿಯ ಕನ್ನಡ ವಿಭಾಗವಾಗಿದ್ದ ಈ ಇ-ಪತ್ರಿಕೆ ೨೦೦೬ ರಲ್ಲಿ oneindia.in ರವರ ಒಂದು ವಿಭಾಗವಾಯಿತು. ಈ ಇ-ಪತ್ರಿಕೆ ಬೆಂಗಳೂರಿನಿಂದ ಅಂತರಜಾಲದಲ್ಲಿ ಪ್ರಸಾರವಾಗುತ್ತಿದೆ. ಇದರ ಸಂಪಾದಕರು ಶ್ರೀ ಶಾಮಸುಂದರ್ ಮತ್ತು ಸಹಾಯಕ ಸಂಪಾದಕರು ಪ್ರಸಾದ ನಾಯಕ್. ದಟ್ಸ್ ಕನ್ನಡ ವಾರ್ತೆಗಳನ್ನು ಅಂತರಜಾಲದಲ್ಲಿ ಪ್ರಸಾರ ಮಾಡುತ್ತ ಬಂದಿದೆ. ಈ ಇ-ಪತ್ರಿಕೆಯ ಅಂಕಣ ಬರಹಗಳಲ್ಲಿ ಸಾಹಿತಿ / ಬರಹಗಾರರಾದ ರವಿ ಬೆಳಗೆರೆ, ವಿಶ್ವೇಶ್ವರ ಭಟ್, ಶ್ರೀವತ್ಸ ಜೋಶಿ, ತ್ರಿವೇಣಿ ಶ್ರೀನಿವಾಸರಾವ್ ಮುಂತಾದವರ ಅಂಕಣ ಬರಹಗಳು ಉಂಟು. ಪತ್ರಿಕೆಯಲ್ಲಿ ಕನ್ನಡ ಚಲನಚಿತ್ರರಂಗ ಕುರಿತ ಸುದ್ದಿಗಳು ಪ್ರಕಟಗೊಳ್ಳುತ್ತವೆ. ಹೊರಗಿನ ಸಂಪರ್ಕಗಳು ದಟ್ಸ್ ಕನ್ನಡ ತಾಣ ಅಂತರ ಜಾಲ ತಾಣಗಳು
1796
https://kn.wikipedia.org/wiki/%E0%B2%9A%E0%B2%BF%E0%B2%9F%E0%B3%8D%E0%B2%9F%E0%B3%86
ಚಿಟ್ಟೆ
ಚಿಟ್ಟೆ ಲೆಪಿಡೊಪ್ಟೆರಾ ಆರ್ಡರ್ ಗೆ ಸೇರಿದ ಕೀಟ. ಇದು ಹೆಸ್ಪರಾಯ್ಡಿಯಾ (the skippers) ಹಾಗೂ ಪೆಪಿಲಿಯನಾಯ್ಡಿಯಾ (ಉಳಿದೆಲ್ಲ ಚಿಟ್ಟೆಗಳ) ಜಾತಿಗಳಿಗೆ ಸೇರಿದ್ದು ಹಲವು ಬಣ್ಣಗಳು ಹಾಗೂ ವಿವಿಧ ಆಕಾರಗಳಲ್ಲಿ ಕಾಣಸಿಗುತ್ತವೆ. ಚಿಟ್ಟೆಗಳ ಮೇಲೆ ಅಧ್ಯಯನ ನಡೆಸುವವರನ್ನು ಆಂಗ್ಲ ಭಾಷೆಯಲ್ಲಿ 'ಲೆಪಿಡಾಪ್ಟರಿಸ್ಟ್'ಗಳೆಂದು ಕರೆಯುತ್ತಾರೆ. ಚಿಟ್ಟೆಗಳ ವೀಕ್ಷಣೆ ಜನರಲ್ಲಿ ಒಂದು ಹವ್ಯಾಸವಾಗಿ ಬೆಳೆದಿದೆ. ಜೀವನ ಚಕ್ರ ಒಂದು ಜೀವನ ಚಕ್ರವು ಜೀವಂತ ಜೀವಿಯು ತನ್ನ ಜೀವಿತಾವಧಿಯಲ್ಲಿ ಆರಂಭದಿಂದ ಕೊನೆಯವರೆಗೆ ಹಾದುಹೋಗುವ ಹಂತಗಳಿಂದ ಮಾಡಲ್ಪಟ್ಟಿದೆ. ಚಿಟ್ಟೆ ತನ್ನ ಜೀವನ ಚಕ್ರದಲ್ಲಿ ಸಂಪೂರ್ಣ ಮೆಟಾಮಾರ್ಫಾಸಿಸ್ ಎಂಬ ಪ್ರಕ್ರಿಯೆಗೆ ಒಳಗಾಗುತ್ತದೆ. ಇದರ ಅರ್ಥ, ಚಿಟ್ಟೆ ಅದರ ಆರಂಭಿಕ ಲಾರ್ವಾ ಹಂತದಿಂದ ಸಂಪೂರ್ಣವಾಗಿ ಕ್ಯಾಟರ್ಪಿಲ್ಲರ್ ಆಗಿದ್ದರೆ, ಅಂತಿಮ ಹಂತದವರೆಗೆ ಅದು ಸುಂದರವಾದ ಮತ್ತು ಆಕರ್ಷಕವಾದ ವಯಸ್ಕ ಚಿಟ್ಟೆ ಆಗುತ್ತದೆ. ಚಿಟ್ಟೆ ಜೀವನ ಚಕ್ರವು ನಾಲ್ಕು ಹಂತಗಳನ್ನು ಹೊಂದಿದೆ: ಮೊಟ್ಟೆ, ಲಾರ್ವಾ, ಪೊರೆ ಮತ್ತು ವಯಸ್ಕ. ಮೊಟ್ಟೆಯಿಂದ ಹೊರಬರುವ ಲಾರ್ವಾ ಅಥವಾ ಕ್ಯಾಟರ್ಪಿಲ್ಲರ್ ಜೀವನ ಚಕ್ರದಲ್ಲಿ ಎರಡನೇ ಹಂತವಾಗಿದೆ. ಮರಿಹುಳುಗಳು ಸಾಮಾನ್ಯವಾಗಿ, ಆದರೆ ಯಾವಾಗಲೂ ಅಲ್ಲ, ಹಲವಾರು ಜೋಡಿ ಸುಳ್ಳು ಕಾಲುಗಳು ಅಥವಾ ಪ್ರೊಲೆಗ್ಗಳೊಂದಿಗೆ ಹಲವಾರು ಜೋಡಿ ಕಾಲುಗಳನ್ನು ಹೊಂದಿರುತ್ತವೆ. ಒಂದು ಕ್ಯಾಟರ್ಪಿಲ್ಲರ್ ಪ್ರಾಥಮಿಕ ಚಟುವಟಿಕೆ ತಿನ್ನುತ್ತಿದೆ. ಅವರು ಹೊಟ್ಟೆಬಾಕತನದ ಹಸಿವನ್ನು ಹೊಂದಿದ್ದಾರೆ ಮತ್ತು ನಿರಂತರವಾಗಿ ತಿನ್ನುತ್ತಾರೆ. ಕ್ಯಾಟರ್ಪಿಲ್ಲರ್ ತಿನ್ನುವುದರಿಂದ, ಅದರ ದೇಹವು ಗಣನೀಯವಾಗಿ ಬೆಳೆಯುತ್ತದೆ. ಕಠಿಣ ಹೊರ ಚರ್ಮ ಅಥವಾ ಎಕ್ಸೋಸ್ಕೆಲೆಟನ್, ಆದಾಗ್ಯೂ, ವಿಸ್ತರಿಸಲಾಗದ ಕ್ಯಾಟರ್ಪಿಲ್ಲರ್ ಜೊತೆಗೆ ಬೆಳೆಯುವುದಿಲ್ಲ ಅಥವಾ ವಿಸ್ತರಿಸುವುದಿಲ್ಲ. ಬದಲಾಗಿ, ಹಳೆಯ ಎಕ್ಸೋಸ್ಕೆಲೆಟನ್ನು ಮೊಲ್ಟಿಂಗ್ ಎನ್ನುವ ಪ್ರಕ್ರಿಯೆಯಲ್ಲಿ ಚೆಲ್ಲುತ್ತದೆ ಮತ್ತು ಅದನ್ನು ಹೊಸ, ದೊಡ್ಡದಾದ ಎಕ್ಸೋಸ್ಕೆಲೆಟನ್ ಬದಲಿಸಲಾಗುತ್ತದೆ. ಒಂದು ಮರಿಹುಳುವು ನಾಲ್ಕರಿಂದ ಐದು ಮೊಳಕೆಗಳಷ್ಟು ಹಾದುಹೋಗುವುದಕ್ಕೆ ಮುಂಚೆಯೇ ಹೋಗಬಹುದು. ಜೀವನಚಕ್ರದ ನಾಲ್ಕನೇ ಮತ್ತು ಅಂತಿಮ ಹಂತವು ವಯಸ್ಕವಾಗಿದೆ. ಕ್ರೈಸಲಿಸ್ ಕೇಸಿಂಗ್ ಸ್ಪ್ಲಿಟ್ಸ್ ಒಮ್ಮೆ, ಚಿಟ್ಟೆ ಹೊರಹೊಮ್ಮುತ್ತದೆ. ಇದು ಅಂತಿಮವಾಗಿ ಪುನಃ ಚಕ್ರವನ್ನು ಪ್ರಾರಂಭಿಸಲು ಮೊಟ್ಟೆಗಳನ್ನು ಇಡುತ್ತವೆ. ಹೆಚ್ಚಿನ ವಯಸ್ಕ ಚಿಟ್ಟೆಗಳು ಕೇವಲ ಒಂದು ವಾರ ಅಥವಾ ಎರಡು ದಿನಗಳಲ್ಲಿ ಬದುಕುತ್ತವೆ, ಕೆಲವು ಜಾತಿಗಳು 18 ತಿಂಗಳುಗಳವರೆಗೆ ಬದುಕಬಹುದು. ಈ ವಿಭಾಗದಲ್ಲಿರುವ ಚಿತ್ರಗಳು ಅದರ ಹೋಸ್ಟ್ ಸಸ್ಯಗಳಾದ ಫೆನ್ನೆಲ್ನ ಕಪ್ಪು ಸ್ವಲ್ಲೋಟೈಲ್ನ ಜೀವನಚಕ್ರವನ್ನು ಹೊಂದಿವೆ. ಚಿತ್ರಗಳು ಕೆಂಟುಕಿ ಸಹಕಾರ ವಿಸ್ತರಣೆ ಸೇವೆ ಪ್ರಕಟಣೆ -95 ರಿಂದ ಬಂದಿದ್ದು, ಥಾಮಸ್ ಜಿ. ಬರ್ನೆಸ್ ಅವರಿಂದ ಸ್ಥಳೀಯ ಸಸ್ಯಗಳೊಂದಿಗೆ ಚಿಟ್ಟೆಗಳ ಆಕರ್ಷಣೆ. ಬಟರ್ಫ್ಲೈ ಚಟುವಟಿಕೆಗಳು ಚಿಟ್ಟೆಗಳು ಸಂಕೀರ್ಣ ಜೀವಿಗಳಾಗಿವೆ. ಅವರ ದಿನನಿತ್ಯದ ಜೀವನವನ್ನು ಅನೇಕ ಚಟುವಟಿಕೆಗಳಿಂದ ನಿರೂಪಿಸಬಹುದು. ನೀವು ಅನುಸರಿಸುವವರಾಗಿದ್ದರೆ ನೀವು ಅನುಸರಿಸಬೇಕಾದ ಅನೇಕ ಚಟುವಟಿಕೆಗಳಲ್ಲಿ ಚಿಟ್ಟೆಗಳು ಕಾಣಿಸಿಕೊಳ್ಳುತ್ತವೆ. ಹೈಬರ್ನೇಷನ್ ನಂತಹ ಕೆಲವು ಚಟುವಟಿಕೆಗಳನ್ನು ವೀಕ್ಷಿಸಲು, ಕೆಲವು ಪತ್ತೇದಾರಿ ಕೆಲಸವನ್ನು ಒಳಗೊಂಡಿರಬಹುದು. ಬೇಸ್ಕಿಂಗ್, ಪುಡ್ಲಿಂಗ್ ಅಥವಾ ವಲಸೆ ಮಾಡುವಂತಹ ಇತರ ಚಟುವಟಿಕೆಗಳನ್ನು ವೀಕ್ಷಿಸಲು, ನೀವು ಸರಿಯಾದ ಸಮಯದಲ್ಲಿ ಸೂಕ್ತ ಸ್ಥಳದಲ್ಲಿರಬೇಕು. ಚಟುವಟಿಕೆಯ ಲಾಗ್ ಅನ್ನು ಇರಿಸಿ ಮತ್ತು ಪ್ರತಿ ಚಟುವಟಿಕೆಯಲ್ಲಿ ನೀವು ತೊಡಗಿಸಿಕೊಳ್ಳುವಲ್ಲಿ ಎಷ್ಟು ವಿಭಿನ್ನ ಚಿಟ್ಟೆಗಳಿವೆ ಎಂಬುದನ್ನು ನೋಡಿ. ವೈಯಕ್ತಿಕ ಚಿಟ್ಟೆ ಪುಟಗಳಿಂದ ಬಂದ ಮಾಹಿತಿಯು ಕೆಲವು ಚಟುವಟಿಕೆಗಳನ್ನು ಎಲ್ಲಿ ಸಂಭವಿಸಬಹುದು ಎಂದು (ಅಥವಾ ಯಾವ ಸಸ್ಯಗಳ ಮೇಲೆ) ನಿಮಗೆ ಕೆಲವು ಸುಳಿವುಗಳನ್ನು ನೀಡಬಹುದು. ಆಹಾರ ಲಾರ್ವಾ ಅಥವಾ ಕ್ಯಾಟರ್ಪಿಲ್ಲರ್ ಹಂತ ಮತ್ತು ವಯಸ್ಕ ಚಿಟ್ಟೆಗಳು ವಿಭಿನ್ನ ಆಹಾರದ ಆದ್ಯತೆಗಳನ್ನು ಹೊಂದಿವೆ, ಅವುಗಳ ಬಾಯಿಯ ಭಾಗಗಳಲ್ಲಿನ ವ್ಯತ್ಯಾಸಗಳಿಂದಾಗಿ. ಚಿಟ್ಟೆ ತನ್ನ ಜೀವನ ಚಕ್ರದ ಪೂರ್ಣಗೊಳಿಸಲು ಸಲುವಾಗಿ ಎರಡೂ ವಿಧದ ಆಹಾರಗಳು ಲಭ್ಯವಿರಬೇಕು. ಮರಿಹುಳುಗಳು ಅವರು ತಿನ್ನುವುದರ ಬಗ್ಗೆ ಬಹಳ ನಿರ್ದಿಷ್ಟವಾಗಿರುತ್ತವೆ, ಅದಕ್ಕಾಗಿಯೇ ಸ್ತ್ರೀ ಚಿಟ್ಟೆ ಕೆಲವು ಸಸ್ಯಗಳಲ್ಲಿ ಮಾತ್ರ ತನ್ನ ಮೊಟ್ಟೆಗಳನ್ನು ಇಡುತ್ತದೆ. ಆಕೆಯ ಮೊಟ್ಟೆಗಳಿಂದ ಹೊರಬರುವ ಹಸಿದ ಮರಿಹುಳುಗಳಿಗೆ ಸೂಕ್ತವಾದ ಆಹಾರವಾಗಿ ಸಸ್ಯಗಳು ಯಾವವುಗಳನ್ನು ಸೇವಿಸುತ್ತವೆ ಎಂದು ಅವರು ಸಹಜವಾಗಿ ತಿಳಿದಿದ್ದಾರೆ. ಮರಿಹುಳುಗಳು ಹೆಚ್ಚು ಚಲಿಸುವುದಿಲ್ಲ ಮತ್ತು ತಮ್ಮ ಇಡೀ ಜೀವನವನ್ನು ಒಂದೇ ಸಸ್ಯದಲ್ಲಿ ಅಥವಾ ಅದೇ ಎಲೆಗಳಲ್ಲಿ ಕಳೆಯಬಹುದು! ತಮ್ಮ ಪ್ರಾಥಮಿಕ ಗುರಿ ಅವರು ಎಷ್ಟು ಸಾಧ್ಯವೋ ಅಷ್ಟು ತಿನ್ನಲು ಅವರು pupate ಸಾಕಷ್ಟು ದೊಡ್ಡದಾಗಿದೆ. ಮರಿಹುಳುಗಳು ಎದೆಹಾಲುಗಳು ಎಂದು ಕರೆಯಲ್ಪಡುವ ಬಾಯಿ ಭಾಗಗಳನ್ನು ತಿನ್ನುತ್ತವೆ, ಅವುಗಳು ಎಲೆಗಳು ಮತ್ತು ಇತರ ಸಸ್ಯ ಭಾಗಗಳನ್ನು ತಿನ್ನಲು ನೆರವಾಗುತ್ತವೆ. ಬೆಳೆಗಳಿಗೆ ಹಾನಿ ಮಾಡಿರುವುದರಿಂದ ಕೆಲವು ಮರಿಹುಳುಗಳನ್ನು ಕೀಟಗಳೆಂದು ಪರಿಗಣಿಸಲಾಗುತ್ತದೆ. ಮರಿಹುಳುಗಳು ಹೆಚ್ಚುವರಿ ನೀರಿನ ಕುಡಿಯಲು ಅಗತ್ಯವಿಲ್ಲ ಏಕೆಂದರೆ ಅವು ತಿನ್ನುವ ಸಸ್ಯಗಳಿಂದ ಬೇಕಾಗಿರುವುದನ್ನು ಅವರು ಪಡೆಯುತ್ತಾರೆ. ವಯಸ್ಕರ ಚಿಟ್ಟೆಗಳು ಅವರು ತಿನ್ನುವುದರ ಬಗ್ಗೆ ಸಹ ಆಯ್ದವು. ಮರಿಹುಳುಗಳನ್ನು ಹೋಲುತ್ತದೆ, ಚಿಟ್ಟೆಗಳು ಸುತ್ತಲೂ ಸುತ್ತುತ್ತವೆ ಮತ್ತು ಹೆಚ್ಚು ವಿಶಾಲ ಪ್ರದೇಶದ ಮೇಲೆ ಸೂಕ್ತವಾದ ಆಹಾರವನ್ನು ಹುಡುಕಬಹುದು. ಹೆಚ್ಚಿನ ಸಂದರ್ಭಗಳಲ್ಲಿ, ವಯಸ್ಕ ಚಿಟ್ಟೆಗಳು ವಿವಿಧ ದ್ರವಗಳ ಮೇಲೆ ಮಾತ್ರ ಆಹಾರವನ್ನು ನೀಡುತ್ತವೆ. ಅವರು ಪ್ರೋಬೊಸಿಸ್ ಎಂಬ ಟ್ಯೂಬ್ ತರಹದ ನಾಲಿಗೆ ಮೂಲಕ ಕುಡಿಯುತ್ತಾರೆ. ಇದು ಸಪ್ ದ್ರವ ಆಹಾರಕ್ಕೆ ಸಿಕ್ಕಿಹಾಕಿಕೊಳ್ಳುತ್ತದೆ, ಮತ್ತು ನಂತರ ಚಿಟ್ಟೆ ಆಹಾರವನ್ನು ನೀಡುತ್ತಿರುವಾಗ ಮತ್ತೆ ಸುರುಳಿಯಾಗುತ್ತದೆ. ಹೆಚ್ಚಿನ ಚಿಟ್ಟೆಗಳು ಹೂವಿನ ಮಕರಂದವನ್ನು ಬಯಸುತ್ತವೆ, ಆದರೆ ಇತರವುಗಳು ಮರಗಳನ್ನು ಕೊಳೆಯುವಲ್ಲಿ ಮತ್ತು ಪ್ರಾಣಿ ಸಗಣಿಗಳಲ್ಲಿ ಕೊಳೆಯುತ್ತಿರುವ ಹಣ್ಣುಗಳಲ್ಲಿ ಕಂಡುಬರುವ ದ್ರವಗಳ ಮೇಲೆ ಆಹಾರವನ್ನು ನೀಡುತ್ತವೆ. ಬಿಸಿಲು ಪ್ರದೇಶಗಳು ಬಿಸಿಲಿನ ಪ್ರದೇಶಗಳಲ್ಲಿ ಗಾಳಿಯಿಂದ ರಕ್ಷಿಸಲು ಬಯಸುತ್ತವೆ. ನೋಡಿ Bagworm moth ಕಡ್ಡಿ ಚಿಟ್ಟೆ ಹುಳು ಗೋಲ್ಡನ್ ಬರ್ಡ್ ವಿಂಗ್ ಚಿಟ್ಟೆ- ೩೦-೮-೨೦೧೮ ಉಲ್ಲೇಖ ಲೆಪಿಡೊಪ್ಟೆರಾ ಕೀಟಗಳು
1804
https://kn.wikipedia.org/wiki/%E0%B2%95%E0%B2%B5%E0%B2%BF%E0%B2%B0%E0%B2%BE%E0%B2%9C%E0%B2%AE%E0%B2%BE%E0%B2%B0%E0%B3%8D%E0%B2%97
ಕವಿರಾಜಮಾರ್ಗ
ಕವಿರಾಜಮಾರ್ಗ :- ಕವಿರಾಜಮಾರ್ಗ ಕನ್ನಡದಲ್ಲಿ ಇದುವರೆಗೆ ಲಭ್ಯವಾಗಿರುವ ಗ್ರಂಥಗಳಲ್ಲಿ ಅತ್ಯಂತ ಪ್ರಾಚೀನ. ಇದು ಪಂಪಪೂರ್ವ ಯುಗದಲ್ಲಿ ರಚಿತವಾದುದು. ಇದೊಂದು ಅಲಂಕಾರಿಕ ಲಕ್ಷಣ ಗ್ರಂಥ. ಇದನ್ನು ಕ್ರಿ.ಶ. ೮೫೦ ರ ಆಸುಪಾಸಿನಲ್ಲಿ ರಚಿಸಲಾಗಿದೆ. ಕರ್ತೃ ಶ್ರೀವಿಜಯನೆಂಬುದು ಬಹುತೇಕ ವಿದ್ವಾಂಸರ ಅಭಿಮತವಾಗಿದೆ. ಗ್ರಂಥದ ಮೊದಲಿಗೆ ಅಮೋಘವರ್ಷ ನೃಪತುಂಗ ದೊರೆಯ ಹೆಸರು ಬಂದಿರುವುದರಿಂದ ಇದನ್ನು ಆತನ ಆಳ್ವಿಕೆಯ ಅವಧಿಯಲ್ಲೇ ರಚಿಸಿದ್ದಿರಬಹುದಾಗಿದೆ. ಪರಿಚಯ ಕವಿರಾಜಮಾರ್ಗ(ಕ್ರಿ.ಶ ೮೧೪-೮೭೭) ಎಲ್ಲಾ ದೃಷ್ಟಿಯಿಂದಲೂ ವಿಶಿಷ್ಟ ಗ್ರಂಥ. ಕನ್ನಡದಲ್ಲಿ ತನಗಿಂತ ಮೊದಲು ಆಗಿಹೋದ ಕವಿಗಳನ್ನು ಶ್ರೀವಿಜಯನು ಹೆಸರಿಸಿದ್ದಾನೆ. ಇದರಿಂದಾಗಿ ಕನ್ನಡ ಸಾಹಿತ್ಯವು ಬಹಳ ಶ್ರೀಮಂತವಾಗಿತ್ತು ಎಂಬುದನ್ನು ತಿಳಿಯಬಹುದಾಗಿದೆ. ಕವಿಯು ಕನ್ನಡ ನಾಡಿನ ಬಗ್ಗೆ ಹಾಗೂ ಕನ್ನಡಿಗರ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾನೆ. ಕನ್ನಡದಲ್ಲಿ ಆ ಕಾಲಕ್ಕೆ ಪ್ರಸಿದ್ಧವಾಗಿದ್ದ ದೇಸೀ ಸಾಹಿತ್ಯ ಪ್ರಕಾರಗಳ ಬಗ್ಗೆಯೂ ಮಾತನಾಡಿದ್ದಾನೆ. ಅವುಗಳಲ್ಲಿ, ಬೆದಂಡೆ, ಚೆತ್ತಾಣ, ಹಾಗೂ ಒನಕೆವಾಡುಗಳು ಮುಖ್ಯವಾದುವು.ಕವಿರಾಜಮಾರ್ಗದ ಕರ್ತೃತ್ವದ ವಿಚಾರ ವಿದ್ವಾಂಸರಲ್ಲಿ ಪ್ರಬಲವಾದ ಬಿನ್ನಾಭಿಪ್ರಾಯಗಳು ಇದೆ. ಕವಿರಾಜಮಾರ್ಗದ ಕರ್ತೃ ನೃಪತುಂಗ ಎಂದು ಹಲವಾರು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ನೃಪತುಂಗಣ ಸಭಾಸದನಾದ ಶ್ರೀ ವಿಜಯನೆಂಬ ಕವಿ ತನ್ನ ಹೆಸರನ್ನು ಮರೆಮಾಚಿ ನೃಪತುಂಗನ ಹೆಸರನ್ನು ಮುಂದಿಟ್ಟು ಕೃತಿ ರಚನೆ ಮಾಡಿದ್ದಾನೆ ಎಂದು ವಾದವಿದೆ. ಈ ಗ್ರಂಥವನ್ನು ಮೊದಲು ಸಂಪಾದಿಸಿ ಪ್ರಕಟಿಸಿದವರು ಕೆ.ಬಿ.ಪಾಠಕ್. ಕವಿರಾಜಮಾರ್ಗ ದಂಡಿಯ 'ಕಾವ್ಯಾದರ್ಶ'ವನ್ನು ಆದರ್ಶವಾಗಿಟ್ಟುಕೊಂಡು ಬರೆದ ಸ್ವತಂತ್ರ ಅನುವಾದಿತ ಕೃತಿ. ಕವಿರಾಜಮಾರ್ಗ(ಕ್ರಿ.ಶ.೮೫೦) : - ಕವಿರಾಜಮಾರ್ಗದ ಕರ್ತೃ ಶ್ರೀವಿಜಯ . ಕನ್ನಡದಲ್ಲಿ ಉಪಲಬ್ಧವಾಗಿರುವ ಮೊಟ್ಟ ಮೊದಲ ಗ್ರಂಥ. ಇದು ರಚಿತವಾದ ಕಾಲಾವಧಿ ಪ್ರ.ಶ. ೮೧೫-೭೭. ಇದರ ಕರ್ತೃ ರಾಷ್ಟ್ರಕೂಟ ಅರಸು ನೃಪತುಂಗನೆಂದು ಹೇಳುವುದು ವಾಡಿಕೆಯಾಗಿದೆ. ಆದರೆ ಈ ವಿಷಯದ ಬಗ್ಗೆ ವಿದ್ವಾಂಸರ ನಡುವೆ ಪ್ರಬಲವಾದ ವಾದವಿವಾದಗಳು ನಡೆದಿವೆ. ಅವರಲ್ಲಿ ಮೂರು ಪಕ್ಷಗಳಿವೆ. ಮೊದಲನೆಯ ಪಕ್ಷದವರು ನೃಪತುಂಗನೇ ಈ ಗ್ರಂಥವನ್ನು ರಚಿಸಿದನೆಂದು ಹೇಳುತ್ತಾರೆ. ಎರಡನೆಯ ಪಕ್ಷದವರು ಆತನ ಆಸ್ಥಾನದಲ್ಲಿದ್ದ ಕವೀಶ್ವರನೆಂಬಾತ ಇದರ ಕರ್ತೃವೆಂದು ಅಭಿಪ್ರಾಯಪಡುತ್ತಾರೆ. ನೃಪತುಂಗನ ಸಭಾಸದನಾದ ಶ್ರೀವಿಜಯನೆಂಬುವನು ಈ ಗ್ರಂಥವನ್ನು ಬರೆದನೆಂಬುದು ಮೂರನೆಯ ಪಕ್ಷದವರ ವಾದ. ಇವರಲ್ಲಿ ಮೂರನೆಯ ಪಕ್ಷದವರ ವಾದ ಪ್ರಬಲವಾದ ಸಾಕ್ಷ್ಯಗಳನ್ನು ಹೊಂದಿರುವುದಲ್ಲದೆ ಅದೇ ಸತ್ಯಾಂಶವಾಗಿಯೂ ನಿಲ್ಲಬಹುದೆಂದು ತೋರುತ್ತದೆ. ಕವಿ-ಕೃತಿ ಚಿಂತನೆ ಕವಿರಾಜಮಾರ್ಗದ ಪ್ರತಿ ಪರಿಚ್ಛೇದದ ಕೊನೆಯಲ್ಲಿ 'ನೃಪತುಂಗ ದೇವಾನುಮತಪ್ಪ ಕವಿರಾಜಮಾರ್ಗದೊಳ್' ಎಂದು ಹೇಳುವುದರಿಂದ ಇದು ರಾಷ್ಟ್ರಕೂಟದೊರೆ ಅಮೋಘವರ್ಷ ನೃಪತುಂಗನ (ಕ್ರಿ.ಶ ೮೧೪-೮೭೭)ಕಾಲದಲ್ಲಿ ಹುಟ್ಟಿದುದದೆಂದು ನಿರ್ಧರಿಸಲಾಗಿದೆ. ಕವಿರಾಜಮಾರ್ಗ ಕೃತಿಯಲ್ಲಿ ಮೂರು ಪರಿಚ್ಛೇದಗಳಿವೆ. ಮೊದಲ ಪರಿಚ್ಛೇದದಲ್ಲಿ ಮಂಗಳಾಚರಣೆ, ಪೂರ್ವಕವಿಸ್ತುತಿ ಮೊದಲಾದ ಪೀಠಿಕಾಭಾಗದ ಪದ್ಯಗಳಾದ ಮೇಲೆ ನೃಪತುಂಗ ಕಾವ್ಯಾಭ್ಯಾಸದ ಅವಶ್ಯಕತೆ, ಕವಿತ್ವರಚನಾಶಕ್ತಿಯಿಂದ ಉಂಟಾಗುವ ಮಾರ್ಗ ಮೊದಲಾದ ವಿಷಯಗಳ ಬಗ್ಗೆ ತಿಳಿಸಿದ್ದಾನೆ. ಪರಿಚ್ಛೇದಗಳು ಕವಿರಾಜಮಾರ್ಗ ಕನ್ನಡದ ಆದ್ಯ ಉಪಲಬ್ಧ ಗ್ರಂಥವಾಗಿರುವುದಲ್ಲದೆ ಆದ್ಯ ಲಕ್ಷಣ ಗ್ರಂಥವೂ ಆಗಿದೆ. ಕನ್ನಡದಲ್ಲಿ ಕಾವ್ಯರಚನೆ ಮಾಡಬೇಕೆನ್ನುವ ಕವಿಗಳಿಗೆ ಬರೆದ ಕೈಪಿಡಿಯಿದು. ಇದರಲ್ಲಿ ಮೂರು ಪರಿಚ್ಛೇದಗಳಿವೆ: ದೋಷಾದೋಷಾನುವರ್ಣನ ಶಬ್ದಾಲಂಕಾರವರ್ಣನಿರ್ಣಯ ಅರ್ಥಾಲಂಕಾರಪ್ರಕರಣ. ಗ್ರಂಥದ ಆದಿಯಲ್ಲಿ ಮಂಗಳಪದ್ಯಗಳು, ಸರಸ್ವತೀ ಪ್ರಾರ್ಥನೆ, ಕವೀಶ್ವರರ ಪ್ರಾರ್ಥನೆ, ನೃಪತುಂಗನ ಸಭಾಸದರ ವಿಚಾರ ಹಾಗೂ ಸ್ವವಿಚಾರಗಳಿವೆ. ಅನಂತರ ಕವಿ-ಕಾವ್ಯ, ಗದ್ಯ-ಪದ್ಯ ಮತ್ತು ಚತ್ತಾಣ-ಬೆದಂಡೆಗಳನ್ನು ಕುರಿತು ವಿಚಾರಗಳಿವೆ. ಕನ್ನಡನಾಡು ನುಡಿಗಳ ಬಗೆಗಿನ ಮಾತುಗಳಿವೆ. ಸಮಸಂಸ್ಕೃತ, ಯತಿ, ಕಾರಕ ಮುಂತಾದವುಗಳಿಗೆ ಸಂಬಂಧಿಸಿದ ದೋಷಗಳ ವಿವರಣೆಯಿದೆ. ಹೀಗೆ ಮೊದಲ ಪರಿಚ್ಛೇದದ ವಿಷಯಗಳು ವಿವಿಧವಾಗಿವೆ. ಎರಡನೆಯ ಪರಿಚ್ಛೇದದಲ್ಲಿ ಶಬ್ದಾಲಂಕಾರಗಳ ನಿರೂಪಣೆ ಮತ್ತು ದಕ್ಷಿಣೋತ್ತರ ಮಾರ್ಗಗಳ ಪ್ರಸ್ತಾಪವಿದೆ. ಮೂರನೆಯ ಪರಿಚ್ಛೇದ ಅರ್ಥಾಲಂಕಾರಗಳಿಗೆ ಸಂಬಂಧಿಸಿದೆ. ಇಡೀ ಗ್ರಂಥ ಕಂದಪದ್ಯಗಳಿಂದ ರಚಿತವಾಗಿದ್ದರೂ ಹಲಕೆಲವು ಗೀತಿಕೆಗಳು, ಶ್ಲೋಕಗಳು ಹಾಗೂ ವೃತ್ತಗಳು ನಡುನಡುವೆ ಬರುತ್ತವೆ. ಕವಿರಾಜಮಾರ್ಗದ ಬಗ್ಗೆ ವಿಮರ್ಶೆ ಇದು ಸಂಪೂರ್ಣವಾದ ಸ್ವತಂತ್ರ ರಚನೆಯಲ್ಲ. ಸಂಸ್ಕೃತ ಆಲಂಕಾರಿಕರಲ್ಲಿ ಬಹುಮಟ್ಟಿಗೆ ದಂಡಿಯ ಕಾವ್ಯಾದರ್ಶವನ್ನೂ ಕೆಲವು ವಿಚಾರಗಳಲ್ಲಿ ಭಾಮಹನನ್ನೂ ಅನುಸರಿಸಿರುವುದು ಇಲ್ಲಿ ಕಂಡುಬರುತ್ತದೆ. ಕಾವ್ಯಕ್ಕೆ ಸೊಗಸನ್ನುಂಟುಮಾಡುವುದೆಲ್ಲವೂ ಅಲಂಕಾರವೆಂದು ದಂಡಿಯಂತೆಯೇ ಕವಿರಾಜಮಾರ್ಗಕಾರನೂ ಭಾವಿಸುತ್ತಾನೆ. ಅಲ್ಲದೆ, ದಂಡಿಗೆ ಪರಮಪ್ರಿಯವಾದ ದಶಗುಣಗಳನ್ನು ಹೇಳಿ, ಅವನು ಹೇಳಿರುವ ವೈದರ್ಭ, ಗೌಡಮಾರ್ಗಗಳಿಗೆ ಸಂವಾದಿಯಾಗಿ ದಕ್ಷಿಣೋತ್ತರ ಮಾರ್ಗಗಳನ್ನು ನಿರೂಪಿಸುತ್ತಾನೆ. ಅಲಂಕಾರಗಳ ನಿರೂಪಣೆಯಲ್ಲಿ ಬಹುಮಟ್ಟಿಗೆ ಕಾವ್ಯಾದರ್ಶದ ಅನುಸರಣೆ ಕಂಡು ಬರುತ್ತದೆ. ಇಷ್ಟರಮಟ್ಟಿಗೆ ಕವಿರಾಜಮಾರ್ಗ ಸಂಸ್ಕೃತಕ್ಕೆ ಋಣಿಯಾಗಿದ್ದರೂ ಹಲವು ವಿಚಾರಗಳಲ್ಲಿ ತನ್ನ ಸ್ವಂತಿಕೆಯನ್ನು ಮೆರೆದಿದೆ. ಸಂಸ್ಕೃತಕಾವ್ಯಲಕ್ಷಣಗಳನ್ನು ಕನ್ನಡಕ್ಕೆ ಹೊಂದಿಕೊಳ್ಳುವಂತೆ ಹೇಳುವಲ್ಲಿ ಸ್ವತಂತದೃಷ್ಟಿ ಕಂಡುಬರುತ್ತದೆ. ಕನ್ನಡಕ್ಕೆ ಸಂಬಂಧಪಟ್ಟಂತೆ ಸಮಸಂಸ್ಕೃತ ಪದಗಳನ್ನು ಕನ್ನಡದೊಂದಿಗೆ ಬೆರೆಸುವ ವಿಚಾರ, ಯತಿಭಂಗವನ್ನು ಸಮರ್ಥಿಸಿ ಕನ್ನಡಕ್ಕೆ ಅತಿಶಯವಾದ ಖಂಡಪ್ರಾಸವನ್ನು ಎತ್ತಿ ಹಿಡಿದಿರುವುದು, ಕನ್ನಡದಲ್ಲಿ ಜಾತ್ಯೇಕವಚನದ ವೈಶಿಷ್ಟ್ಯವನ್ನು ಗುರುತಿಸುವುದು, ಶ್ರುತಿ ದುಷ್ಟ, ಅರ್ಥದುಷ್ಟ, ಶ್ರುತಿಕಷ್ಟ, ಕಲ್ಪನೋಕ್ತಿಕಷ್ಟ_ಈ ದೋಷಗಳನ್ನು ತಕ್ಕ ಕನ್ನಡ ಉದಾಹರಣೆಗಳಿಂದ ವಿಶದಪಡಿಸಿರುವುದು ಮತ್ತು ಈ ದೋಷಗಳಿಗೆ ಪಗರಣದಲ್ಲಿ ಅವಕಾಶವಿತ್ತಿರುವುದು, ಕನ್ನಡದಲ್ಲಿ ಕಾರಕದೋಷ ಹೇಗೆ ಸಂಭವಿಸುತ್ತದೆಂಬುದನ್ನು ತಕ್ಕ ನಿದರ್ಶನಗಳಿಂದ ಸ್ಪಷ್ಟಪಡಿಸಿರುವುದು-ಇವೇ ಮುಂತಾದುವು ಸ್ವತಂತ್ರ ಪ್ರಜ್ಞೆಗೆ ನಿದರ್ಶನಗಳಾಗಿವೆ. ದಂಡಿ ಹೇಳಿರುವಂತೆ ರಸವನ್ನು ರಸವದಲಂಕಾರದಲ್ಲಿ ಅಳವಡಿಸಿ ಅಲ್ಲಿ ಉಕ್ತವಾಗಿರುವ ಎಂಟು ರಸಗಳ ಜೊತೆಗೆ ಒಂಬತ್ತನೆಯದಾಗಿ ಶಾಂತರಸವನ್ನು ಇಲ್ಲಿ ಸೇರಿಸಲಾಗಿದೆ. ರಸದ ಚರಿತ್ರೆಯಲ್ಲಿ ಇದು ಗಮನಾರ್ಹವಾದ ಅಂಶ. ಕನ್ನಡ ಕಾವ್ಯ ಮೀಮಾಂಸೆಯಲ್ಲಿ ಮೊಟ್ಟಮೊದಲಿಗೆ ಧ್ವನಿಯ ಪ್ರಸ್ತಾಪ ಬರುವುದು ಇಲ್ಲೇ. ದಂಡಿ ಹೇಳಿರುವ ಮೂವತ್ತೈದು ಅಲಂಕಾರಗಳ ಮಾಲೆಗೆ ಧ್ವನ್ಯಾಲಂಕಾರವನ್ನು ಸೇರಿಸಲಾಗಿದೆ. ಹೀಗಾಗಿ ಕನ್ನಡ ಕಾವ್ಯಮೀಮಾಂಸೆಯ ಬೆಳೆವಣಿಗೆಯಲ್ಲಿ ಕವಿರಾಜಮಾರ್ಗಕ್ಕೊಂದು ವಿಶಿಷ್ಟವಾದ ಸ್ಥಾನವಿದೆ. ಕವಿ ಕಾವ್ಯಗಳ ಬಗ್ಗೆ ಮಾರ್ಗಕಾರನ ಅಭಿಪ್ರಾಯ ಕವಿಕಾವ್ಯಗಳ ಬಗ್ಗೆ ಇಲ್ಲಿ ಹೇಳಿರುವ ಮಾತುಗಳು ತುಂಬ ಸುಂದರವೂ ಉಚಿತವೂ ಆಗಿವೆ. ಕವಿಗಳಲ್ಲಿರುವ ತಾರತಮ್ಯಗಳನ್ನು ನಿರೂಪಿಸುವಲ್ಲಿ ಸ್ವತಂತ್ರ ವಿಚಾರಶಕ್ತಿ ವ್ಯಕ್ತವಾಗಿದೆ. ಆ ಪದ್ಯಗಳನ್ನು ನೋಡಬಹುದು. :"ಕುಱುತಂತು ಪೆಱರ ಬಗೆಯಂ :ತೆರೆದಿರೆ ಪೆರರ್ಗರೆಪಲಾರ್ಪವಂ ಮಾತರೆವಂ. :ಕಿರೆದರೊಳೆ ಪಿರಿದುಮರ್ಥಮ :ನರೆಪಲ್ ನೆರೆವಾತನಂತನಿಂದಂ ನಿಪುಣಂ"|| - ಪದ್ಯ ೧೫ :"ನುಡಿಯಂ ಛಂದದೊಳೊಂದಿರೆ :ತೊಡರ್ಚಲರೆವಾತನಾತನಿಂದಂ ಜಾಣಂ :ತಡೆಯದೆ ಮಹಾಧ್ವ ಕೃತಿಗಳ :ನೊಡರಿಸಲಾರ್ಪಾತ ನೆಲ್ಲರಿಂದಂ ಬಲ್ಲಂ"|| - ಪದ್ಯ ೧೬ ಚಾರಿತ್ರಿಕ ಅಂಶಗಳು ಸಾಹಿತ್ಯಚರಿತ್ರೆಯ ಅಜ್ಞಾತಯುಗದ ಮೇಲೆ ಕವಿರಾಜಮಾರ್ಗ ವಿಶೇಷವಾಗಿ ಬೆಳಕು ಬೀರುತ್ತದೆ. ಕನ್ನಡ ಕಾವ್ಯಗಳಲ್ಲಿ ಗದ್ಯಪದ್ಯಸಂಮಿಶ್ರಿತವಾದ, ಗದ್ಯ ಪ್ರಾಚುರ್ಯ ಹೆಚ್ಚಾದ, ಗದ್ಯಕಥಾಪ್ರಕಾರವೊಂದಿದ್ದಿತು (೧-೨೭), ಚತ್ತಾಣ-ಬೆದಂಡೆ ಎಂಬ ದೇಸಿಗಬ್ಬಪ್ರಕಾರಗಳು ಪ್ರಚುರವಾಗಿದ್ದುವು (೧-೩೩), ವಿಮಳೋದಯ ನಾಗಾರ್ಜುನಾದಿಗಳು ಗದ್ಯಾಶ್ರಮಗುರುತಾಪ್ರತೀತಿಯನ್ನು ಕೈಗೊಂಡಿದ್ದರು (೧-೨೯), ಶ್ರೀವಿಜಯ, ಕವೀಶ್ವರ, ಪಂಡಿತ, ಚಂದ್ರ, ಲೋಕಪಾಲಾದಿಗಳ ವಸ್ತು ವಿಸ್ತರರಚನೆ ‘ಲಕ್ಷ್ಯಂ ತದಾದ್ಯಕಾವ್ಯಕ್ಕೆಂದುಂ’ ಎನ್ನಿಸಿಕೊಂಡಿದ್ದುವು (೧-೩೨), ನೆಲೆಸಿದ ಕಾವ್ಯಂ ಕಾವ್ಯಕ್ಕೆ ಲಕ್ಷಣಂ ಸತತಂ (೧-೪೮), ಆಗಿನ ಕಾಲಕ್ಕೇ ಕನ್ನಡ ಕಾವ್ಯ ಪರಂಪರೆಯೊಂದು ರೂಢಮೂಲವಾಗಿದ್ದಿತು, ಪೂರ್ವದ ಹಳಗನ್ನಡವೊಂದಿದ್ದಿತು-ಇವೇ ಮುಂತಾದ ಅಂಶಗಳಲ್ಲದೆ ಅಲ್ಲಲ್ಲಿ ಬರುವ ಪುರಾಣಕವಿಗಳ್, ಪರಮಕವಿಪ್ರಧಾನರಾಕಾವ್ಯಂಗಳ್, ಪೂರ್ವಕಾವ್ಯರಚನೆಗಳೂ-ಇತ್ಯಾದಿ ಪ್ರಯೋಗಗಳು ಕವಿರಾಜಮಾರ್ಗಕ್ಕಿಂತ ಹಿಂದಿನ ಕಾವ್ಯನಿರ್ಮಾಣೋದ್ಯೋಗದ ಜಾಡಿನ ಹೆಜ್ಜೆಗುರುತುಗಳಾಗಿವೆ. ಕನ್ನಡ - ನಾಡು - ನುಡಿ ಕವಿರಾಜಮಾರ್ಗ ಆ ಕಾಲದ ಕನ್ನಡನಾಡು, ನುಡಿ ಮತ್ತು ಜನರ ಬಗೆಗೆ ತಿಳಿವಳಿಕೆ ನೀಡಿರುವುದು ಅದರ ವಿಶೇಷತೆಯನ್ನು ಹೆಚ್ಚಿಸಿದೆ. ಆ ಕಾಲಕ್ಕೆ ಕನ್ನಡನಾಡಿನ ಸೀಮೆ ಕಾವೇರಿಯಿಂದ ಗೋದಾವರಿಯವರೆಗೆ ಹಬ್ಬಿತ್ತು (೧-೩೬). ಕಿಸುವೊಳಲು, ಕೊಪಣ, ಪುಲಿಗೆರೆ, ಒಂಕುಂದಗಳು ತಿರುಳ್ಗನ್ನಡದ ಪ್ರದೇಶಗಳೆಂದು ಖ್ಯಾತವಾಗಿದ್ದುವು (೧-೩೭). ಕನ್ನಡದಲ್ಲಿ ಅನೇಕ ಉಪಭಾಷೆಗಳು ರೂಢಿಯಲ್ಲಿದ್ದುವು (೧-೪೬) ನಾಡವರ ನುಡಿಬಲ್ಮೆ ಹಾಗೆ ಅಸದಳವಾಗಿತ್ತು. ಅವರು ‘ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳಾಗಿದ್ದರು (೧-೩೮). ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ ವಸುಧಾ ವಲಯ ವಿಲೀನ ವಿಶದ ವಿಷಯ ವಿಶೇಷಂ ಅದರೊಳಗಂ ಕಿಸುವೊಳಲಾ ವಿದಿತ ಮಹಾ ಕೋಪಣ ನಗರದಾ ಪುಲಿಗೆರೆಯಾ ಸಧಭಿಮಸ್ತುತಮಪ್ಪೊಂಕುಂದದ ನಡುವಣ ನಾಡೆ ನಾಡೆ ಕನ್ನಡದ ತಿರುಳ್ ಎರಡನೇ ಪರಿಚ್ಛೇದ ಅಲಂಕಾರಗಳ ಲಕ್ಷಣಗಳನ್ನು ಹೇಳಲು ಮೀಸಲಾಗಿದೆ. ಇದರಲ್ಲಿ ನೃಪತುಂಗ ಪ್ರಾಸದ ವಿಷಯವನ್ನು ಹೇಳತೊಡಗಿ-'ಕನ್ನಡಕ್ಕೆ ಸತತಂ ಪ್ರಾಸಂ' ಎಂದು ನುಡಿದು ಪ್ರಸಭೇದಗಳನ್ನು ವಿವರಿಸಿ ಅವುಗಳಿಗೆ ದೇಷ್ಟಾಂತಗಳನ್ನು ನೀಡಿದ್ದಾನೆ. ಮೂರನೇ ಪರಿಚ್ಛೇದದಲ್ಲಿ ಆ ಕಾಲಕ್ಕೆ ಸಂಸ್ಕೃತದ ಲಾಕ್ಷಣಿಕರು ಪ್ರಚಾರ ಮಾಡಿದ್ದ ಸುಮಾರು.೩೫ ಅಲಂಕಾರಗಳನ್ನು ಹೇಳಿದ್ದಾನೆ. ಕವಿರಾಜಮಾರ್ಗದಲ್ಲಿ ಬಂದಿರುವ ಕನ್ನಡನಾಡಿನ ವರ್ಣನೆ ಇದಾಗಿದೆ.ಕಿಸುವೊಳಲು ಪಟ್ಟದಕಲ್ಲಿಗೆ ಮೊದಲಿದ್ದ ಹೆಸರು. ಪುಲಿಗೆರೆ ಇಂದಿನ ಲಕ್ಷ್ಮೇಶ್ವರ (ಗದಗ ಜಿಲ್ಲೆ). ಕೊಪಣ ಇಂದಿನ ಕೊಪ್ಪಳ. ಒಕ್ಕುಂದ ಬೆಳಗಾವಿ ಜಿಲ್ಲೆಯಲ್ಲಿರುವ ಒಕ್ಕುಂದ. ಶ್ರೀ ವಿಜಯರ ಕವಿಮಾರ್ಗಂ ಭಾವಿಪ ಜನದಮನಕ್ಕೆ ಕನ್ನಡಿಯಂ ಕೆ ಯ್ದೀವಿಗೆಯುಮಾದುವದರುಂ ಶ್ರೀ ವಿಜಯರ ದೇವರನೇ ವಣ್ಣಿಪುದೊ| ಕಂದಮು ಮಳಿನವೃತ್ತಮು ಮೊಂದೊಂದೆಡೆಗೆಒಂಡು ಜಾತಿ ಜಾಣೆಸೆಯೇ ಬೆಡಂ ಗೊಂದಿವರೆಳಮರೆ ಪೇಳಲ್ ಸುಂದರ ರೂಪಿಂ ಬೆದಂಡೆಗಬ್ಬಮದಕ್ಕುಂ ವಿಮಳೋದಯ ನಾಗರ್ಜುನ ಸಮೇತ ಜಯಬಂಧು ದುರ್ವಿನೀತಾದಿಗಳೇ ಕ್ರಮದೋಳ್ ನೆಗಳ್ಚಿ ಗದ್ಯಾ ಶ್ರಮ ಪದಗುರುತಾ ಪ್ರತೀತಿಯಂ ಕೆಯ್ಕೊಂಡರ್ ಮಿಗೆ ಕನ್ನಡಗಬ್ಬಂಗಳೊ ಳಗಣಿತಗುಣಗಣ ಗದ್ಯಪದ್ಯ ಸಮ್ಮಿಶ್ರಿತಮಂ ನಿಗಧಿಸುವರ್ ಗದ್ಯಕಥಾ ಪ್ರ ಗೀತಿಯಂ ತಚ್ಚಿರಂತನಾಚಾರ್ಯರ್ಕಳ್ ಶಾಸ್ತ್ರ ಗ್ರಂಥಗಳೂ ಕವಿರಾಜಮಾರ್ಗ ಶಾಸ್ತ್ರಗ್ರಂಥವಾದರೂ ಅಲ್ಲಲ್ಲಿ ಕವಿತ್ವದ ಸೊಗಸು ಮಿನುಗಿದೆ; ಅಲ್ಲಲ್ಲಿ ಕಂಡುಬರುವ ಉಪಮೆ, ನಾಣ್ಣುಡಿಗಳು ಮನಸೆಳೆಯುವಂತಿವೆ. ಕಲ್ತೊಡನೋದುವುವಲ್ತೆ ಗಿಳಿಗಳುಂ ಪುರುಳಿಗಳುಂ, ಕಾಣದಂತೆಂದುಂ ಕಣ್ಗಳ್ ತಮ್ಮ ಕಾಡಿಗೆಯಂ, ಒತ್ತುಂಗರಡೆಯ ಮದ್ದಳೆಯ ಜರ್ಝರ ಧ್ವನಿಗಳವೊಲ್, ಮಱುಗುವ ಪಾಲ್ಗಳೆಯ ಪನಿಗಳಂ ಬೆರೆಸಿದವೊಲ್, ಕೇಡಡಸಿದಂದು ಬಗೆಯುಂ ಕೂಡದು, ಕೂಸಿನ ತಲೆಯೊಳ್ ಬಿಣ್ಪೊರೆಯನಿಟ್ಟವೋಲ್ ಈ ಮೊದಲಾದವು ಮನೋಹರವಾದ ವರ್ಣನಾಭಾಗಗಳು. ಇದರ ಶೈಲಿ ಲಲಿತವಾಗಿದೆ, ಉಚಿತವಾಗಿದೆ. ಇದರಲ್ಲಿ ನಾಣ್ನುಡಿಯ ಬೆಡಗಿದೆ. ಉದ್ದಕ್ಕೂ ಸ್ವತಂತ್ರವಿಚಾರಮಾರ್ಗವಿದೆ. (ಜೆ.ಎಸ್.ಸಿ.) ಉಲ್ಲೇಖ ಬಾಹ್ಯ ಸಂಪರ್ಕ ಕಣಜ ಜಾಲತಾಣ ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ಸಾಹಿತ್ಯ ಚುಟುಕು
1818
https://kn.wikipedia.org/wiki/%E0%B2%85%E0%B2%82%E0%B2%A4%E0%B2%B0%E0%B2%9C%E0%B2%BE%E0%B2%B2
ಅಂತರಜಾಲ
ಅಂತರಜಾಲ (ಆಂಗ್ಲ: Internet ಇಂಟರ್‌ನೆಟ್) ಎನ್ನುವುದು ಕಂಪ್ಯೂಟರ್ ನೆಟ್‌ವರ್ಕ್‌ಗಳ (ಜಾಲಬಂಧಗಳ) ಒಂದು ನೆಟ್‌ವರ್ಕ್‌ ಆಗಿದೆ. ಇದು ವಿಶ್ವವ್ಯಾಪಕವಾಗಿದ್ದು ಮಿಲಿಯಗಟ್ಟಲೆ ಸಂಖ್ಯೆಯ ಸ್ಥಳೀಯ ಹಾಗೂ ಅಂತರಾಷ್ಟ್ರೀಯ ಕಂಪ್ಯೂಟರ್ ನೆಟ್‌ವರ್ಕ್‌ಗಳ ನಡುವೆ ಪರಸ್ಪರ ಸಂಪರ್ಕ ಕಲ್ಪಿಸುತ್ತದೆ. ಇಂಟರ್‌ನೆಟ್ ಅಥವಾ ಅಂತರಜಾಲ ಕ್ರಿ.ಶ ೧೯೭೦ರ ದಶಕದಲ್ಲಿ ಯು.ಎಸ್.ಎ ಯಲ್ಲಿ ರಚನೆಯಾಯಿತು. ಆದರೆ ಅದು ಜನಸಾಮಾನ್ಯರಿಗೆ ಗೋಚರವಾಗಿದ್ದು ೧೯೯೦ರ ದಶಕದಲ್ಲಿ. ರಚನಾ ವ್ಯವಸ್ಥೆ ಅಂತರಜಾಲವನ್ನು, ಅಂತರಜಾಲದ ಪರಿಕಲ್ಪನೆ ಹಾಗು ತಂತ್ರಜ್ಞಾನಗಳನ್ನು ಬಳಸಿಕೊಂಡು ನಿರ್ಮಿಸಲಾಗುತ್ತದೆ. ಉದಾಹರಣೆಗೆ ಕ್ಲೈಂಟ್-ಸರ್ವರ್ ಗ್ರಾಹಕ ಸೇವಾ ಪರಿಕರ ಕಂಪ್ಯೂಟಿಂಗ್ ಹಾಗು ಇಂಟರ್ನೆಟ್ ಪ್ರೋಟೋಕಾಲ್ ಸೂಟ್(TCP/IP)ಅಂತರಜಾಲ ನಿಯಮಗಳ ಬಳಕೆ ಮಾಡಲಾಗುತ್ತದೆ.ಯಾವುದೇ ಒಂದು ಜನಪ್ರಿಯ ಇಂಟರ್ನೆಟ್ ಪ್ರೋಟೋಕಾಲ್ ಗಳನ್ನೂ ಒಂದು ಅಂತರಜಾಲದಲ್ಲಿ ಪತ್ತೆ ಮಾಡಬಹುದು. ಉದಾಹರಣೆಗೆ HTTP(ಜಾಲ ಸೇವೆಗಳು), SMTP(ಇ-ಮೇಲ್), ಹಾಗು FTP(ಫೈಲ್ ವರ್ಗಾವಣೆ). ಅಂತರಜಾಲ ಮಾಹಿತಿಗಳು ಸಾಮಾನ್ಯವಾಗಿ ತಾಂತ್ರಿಕ ಮಾಹಿತಿಯ ದತ್ತಾಂಶವನ್ನು ಹೊಂದಿರುತ್ತವೆ. ಆಧುನಿಕ ಮಾಹಿತಿ ವ್ಯವಸ್ಥೆಗಳಿಗೆ ಕಾರ್ಪೊರೇಟ್ ವಿವರವನ್ನು ಮುಖಾಮುಖಿ ಯಾಗಿ,ಆಧುನಿಕ ಇಂಟರ್ ಫೇಸ್ ಒದಗಿಸುತ್ತದೆ. ಅಂತರಜಾಲವನ್ನು, ಅಂತರಜಾಲದ ಒಂದು ಖಾಸಗಿ ಆನ್ಯಲಾಗ್(ಸದೃಶವಾದ ವಸ್ತು) ಎಂದು ಅರ್ಥೈಸಿಕೊಳ್ಳಬಹುದು,ಅಥವಾ ಒಂದು ಸಂಸ್ಥೆಗೆ ಸೀಮಿತ ಅಂತರಜಾಲದ ಒಂದು ಖಾಸಗಿ ವಿಸ್ತರಣೆಯೆಂದು ಪರಿಗಣಿಸಬಹುದು. ಮೊದಲ ಬಾರಿಗೆ ಅಂತರಜಾಲ ವೆಬ್ಸೈಟ್ ಗಳು ಹಾಗು ಹೋಂ ಪೇಜಸ್ ಗಳು ೧೯೯೦-೧೯೯೧ ರಲ್ಲಿ ಆಯಾ ಸಂಸ್ಥೆಗಳಲ್ಲಿ, ಕಂಡುಬಂದವು. ಅಧಿಕೃತವಾಗಿ ಗುರುತಿಸಲಾಗಿರದಿದ್ದರೂ, ೧೯೯೨ರಲ್ಲಿ ಅಂತರಜಾಲ ಎಂಬ ಪದವು ಮೊದಲು ಅಳವಡಿಸಿಕೊಂಡವರಲ್ಲಿ ಹೆಚ್ಚಿನ ಪ್ರಾಶಸ್ತ್ಯ ಪಡೆಯಿತು. ಉದಾಹರಣೆಗೆ ವಿಶ್ವವಿದ್ಯಾಲಯಗಳು ಹಾಗು ತಂತ್ರಜ್ಞಾನ ಸಂಸ್ಥೆಗಳು.(Dubious|date=October 2009) ಅಂತರಜಾಲಗಳನ್ನು ಎಕ್ಸಟ್ರಾನೆಟ್ ಗಳೊಂದಿಗೂ ಸಹ ವಿರುದ್ದಾರ್ಥಕವಾಗಿ ಬಳಸಲಾಗುತ್ತದೆ. ಅಂತರಜಾಲಗಳು ಸಾಧಾರಣವಾಗಿ ಸಂಸ್ಥೆಯ ನೌಕರರಿಗೆ ಮಾತ್ರ ಸೀಮಿತವಾಗಿದ್ದರೆ, ಎಕ್ಸ್ಟ್ರಾನೆಟ್ ಗಳನ್ನು ಗ್ರಾಹಕರು, ಸರಬರಾಜುದಾರರು, ಅಥವಾ ಇತರ ಅಂಗೀಕೃತ ಗುಂಪುಗಳೂ ಸಹ ಬಳಕೆಮಾಡಬಹುದು. ಎಕ್ಸ್ಟ್ರಾನೆಟ್ ಗಳು, ಅದಕ್ಕೆ ಆಕ್ಸೆಸ್(ಪ್ರವೇಶ), ಆಥರೈಸೇಶನ್ (ಪ್ರಮಾಣೀಕರಣ), ಹಾಗು ಅಥೆಂಟಿಕೆಶನ್(ದೃಢೀಕರಣ)ದಂತಹ (AAA ಪ್ರೋಟೋಕಾಲ್)ವಿಶೇಷ ಸೌಕರ್ಯವನ್ನು ಅಂತರಜಾಲದ ಮೂಲಕ ಖಾಸಗಿ ನೆಟ್ವರ್ಕ್ ಗೆ ವಿಸ್ತರಿಸುತ್ತವೆ. ಅಂತರಜಾಲಗಳು, ಅಂತರಜಾಲಕ್ಕೆ ಫೈರ್ ವಾಲ್ (ಸಾಫ್ಟ್ವೇರ್ ಮತ್ತು ಹಾರ್ಡ್ ವೇರ್)ನೊಂದಿಗೆ ನೆಟ್ವರ್ಕ್ ಪ್ರವೇಶವನ್ನು ಒದಗಿಸುತ್ತವೆ. ಈ ಮೂಲಕ ಬಾಹ್ಯ, ಅನಧಿಕೃತ ಪ್ರವೇಶದಿಂದ ಅಂತರಜಾಲಕ್ಕೆ ರಕ್ಷಣೆ ಒದಗಿಸುತ್ತವೆ. ಸಾಮಾನ್ಯವಾಗಿ ಪ್ರವೇಶಗಳೂ ಸಹ ಬಳಕೆದಾರನ ದೃಢೀಕರಣ, ಸಂದೇಶಗಳ ಗೋಪ್ಯತೆ ಹಾಗು ಸಾಮಾನ್ಯವಾಗಿ ವರ್ಚ್ಯುವಲ್ ಪ್ರೈವೇಟ್ ನೆಟ್ವರ್ಕ್(VPN) ಕನೆಕ್ಟಿವಿಟಿಯನ್ನು ಕಂಪನಿಯ ಬಗ್ಗೆ ಮಾಹಿತಿ, ಕಂಪ್ಯೂಟರ್ ಸಾಧನಗಳು ಹಾಗು ಆಂತರಿಕ ಸಂವಹನಕ್ಕೆ ಪ್ರವೇಶದ ಅಧಿಕಾರವನ್ನು ಬಾಹ್ಯ ನೌಕರವರ್ಗಕ್ಕೆ ನೀಡುವುದರ ಮೂಲಕ ನಿರ್ವಹಣೆ ಮಾಡುತ್ತವೆ. ಉಪಯೋಗಗಳು ಹೆಚ್ಚಾಗಿ, ಅಂತರಜಾಲಗಳನ್ನು ಸಾಧನೋಪಕರಣ ಹಾಗು ಅಳವಡಿಕೆಗಳನ್ನು ವಿತರಿಸಲು ಬಳಸಲಾಗುತ್ತದೆ. ಉದಾಹರಣೆಗೆ: ಸಹಯೋಗ(ಗುಂಪುಗಳಲ್ಲಿ ಹಾಗು ದೂರವಾಣಿ ಮೂಲಕ ಸಮಾಲೋಚನೆ ಮಾಡುವವರಿಗೆ ಅನುಕೂಲ ಒದಗಿಸುವುದು) ಅಥವಾ ಅತ್ಯಾಧುನಿಕ ಕಾರ್ಪೋರೇಟ್ ನಿರ್ದೇಶಿಕೆಗಳು, ಮಾರಾಟಗಾರ ಹಾಗು ಗ್ರಾಹಕ ಸಂಬಂಧಿತ ನಿರ್ವಹಣಾ ಸಾಧನಗಳು, ಯೋಜನಾ ನಿರ್ವಹಣೆ ಮುಂತಾದವುಗಳನ್ನು ಉತ್ಪಾದಕತೆ ಹೆಚ್ಚಿಸಲು ಬಳಸಲಾಗುತ್ತದೆ. ಅಂತರಜಾಲಗಳನ್ನು ಕಾರ್ಪೋರೇಟ್ ಕಾರ್ಯ-ಚಟುವಟಿಕೆಯ ಸಂಸ್ಕೃತಿ-ಬದಲಾವಣಾ ವೇದಿಕೆಗಳಾಗಿಯೂ ಸಹ ಬಳಸಲಾಗುತ್ತದೆ. ಉದಾಹರಣೆಗೆ, ಅಂತರಜಾಲ ಚರ್ಚಾವೇದಿಕೆಯನ್ನು ಬಳಸಿಕೊಂಡು ದೊಡ್ಡ ಸಂಖ್ಯೆಯ ನೌಕರವರ್ಗವು ಪ್ರಮುಖ ವಿಷಯಗಳನ್ನು ಚರ್ಚಿಸಿದರೆ; ಇದು ನಿರ್ವಹಣೆ, ಉತ್ಪಾದಕತೆ, ಗುಣಮಟ್ಟ ಹಾಗು ಇತರ ಕಾರ್ಪೋರೇಟ್ ವಿವಾದ-ವಿಷಯಗಳಿಗೆ ಸಂಬಂಧಿಸಿದ ಹೊಸ ಯೋಜನೆಗಳಿಗೆ ದಾರಿ ಮಾಡಿಕೊಡಬಹುದು. ದೊಡ್ಡ ಅಂತರಜಾಲಗಳಲ್ಲಿ, ವೆಬ್ಸೈಟ್ ಸೇವಾ ಬಳಕೆಯು ಸಾಮಾನ್ಯವಾಗಿ ಸಾರ್ವಜನಿಕ ವೆಬ್ಸೈಟ್ ಸೇವಾ ಬಳಕೆಗೆ ಸದೃಶವಾಗಿರುತ್ತದೆ. ಅಲ್ಲದೇ ಇದರ ಒಟ್ಟಾರೆ ಚಟುವಟಿಕೆಯನ್ನು ವೆಬ್ ಮೆಟ್ರಿಕ್ ಸಾಫ್ಟ್ ವೇರ್ (ಮಾನದಂಡ)ಮೂಲಕ ಪತ್ತೆ ಮಾಡಿ ಸೂಕ್ತವಾಗಿ ಅರ್ಥೈಸಬಹುದು. ಅಂತರಜಾಲ ವೆಬ್ಸೈಟ್ ಪರಿಣಾಮಕಾರಿತ್ವವನ್ನು ಬಳಕೆದಾರ ಸಮೀಕ್ಷೆಗಳೂ ಸಹ ಉತ್ತಮಪಡಿಸುತ್ತಾರೆ. ದೊಡ್ಡ ಉದ್ದಿಮೆಗಳು, ತನ್ನ ಬಳಕೆದಾರರಿಗೆ ತನ್ನ ಅಂತರಜಾಲದೊಳಗೆ ಫೈರ್ ವಾಲ್ ಸರ್ವರ್ ಗಳ ಮೂಲಕ ಸಾರ್ವಜನಿಕ ಅಂತರಜಾಲಕ್ಕೆ ಪ್ರವೇಶ ಕಲ್ಪಿಸಿಕೊಡುತ್ತವೆ. ಇವುಗಳಿಗೆ ಸಂಪೂರ್ಣ ಭದ್ರತೆಯೊಂದಿಗೆ ಬರುವ ಹಾಗು ಹೋಗುವ ಸಂದೇಶಗಳನ್ನು ಹಿಡಿದಿಟ್ಟು ಪ್ರದರ್ಶಿಸುವ ಸಾಮರ್ಥ್ಯವಿರುತ್ತದೆ. ಅಂತರಜಾಲದ ಒಂದು ಭಾಗದ ಮಾಹಿತಿಯನ್ನು ಗ್ರಾಹಕರಿಗೆ ಹಾಗು ವ್ಯಾಪಾರಕ್ಕೆ ಸಂಬಂಧಿಸದ ಇತರರಿಗೆ ಲಭ್ಯವಾಗುವಂತೆ ಮಾಡಿದರು. ಇದು ಒಂದು ಎಕ್ಸ್ಟ್ರಾನೆಟ್ ನ ಭಾಗವಾಗುತ್ತದೆ. ವ್ಯಾಪಾರ ಸಂಸ್ಥೆಗಳು ಖಾಸಗಿ ಸಂದೇಶಗಳನ್ನು ಸಾರ್ವಜನಿಕ ನೆಟ್ವರ್ಕ್ ಮೂಲಕ, ವಿಶೇಷವಾದ ಸಂದೇಶ ಗೋಪ್ಯತೆ/ಅಸಂಕೇತೀಕರಣವನ್ನು ಬಳಸಿಕೊಂಡು ಕಳುಹಿಸಬಹುದು. ಪ್ರಯೋಜನಗಳು ಕಾರ್ಯತಂಡದ ಉತ್ಪಾದಕತೆ : ಅಂತರಜಾಲಗಳು ಬಳಕೆದಾರರಿಗೆ ಗುರುತಿಸಲು ಹಾಗು ಮಾಹಿತಿಯನ್ನು ಶೀಘ್ರದಲ್ಲಿ ಸಂಗ್ರಹಿಸಲು ಸಹಾಯಮಾಡುತ್ತವೆ. ಅಲ್ಲದೇ ಅವರ ಪಾತ್ರ ಹಾಗು ಜವಾಬ್ದಾರಿಗಳಿಗೆ ಅನುಸಾರವಾಗಿ ಅನ್ವಯಗಳನ್ನು ಬಳಕೆ ಮಾಡಬಹುದು. ವೆಬ್ ಬ್ರೌಸರ್ ಇಂಟರ್ಫೇಸ್ ನ ಸಹಾಯದಿಂದ, ಬಳಕೆದಾರರು, ದತ್ತಾಂಶ ಸಂಗ್ರಹದಲ್ಲಿರುವ ಸಂಸ್ಥೆಗೆ ಬೇಕಾದ ಯಾವುದೇ ದತ್ತಾಂಶವನ್ನು ಯಾವುದೇ ಸಮಯದಲ್ಲಿ ಸುಲಭದಲ್ಲಿ ಪಡೆಯಬಹುದು. ಅಲ್ಲದೇ- ಇದು ಭದ್ರತಾ ನಿಬಂಧನೆಗಳಿಗೆ ಒಳಪಟ್ಟಿರುತ್ತದೆ - ಇದು ಸಂಸ್ಥೆಯ ಯಾವುದೇ ಕಾರ್ಯತಾಣಗಳೊಳಗಿರಬಹುದು. ತಮ್ಮ ಕಾರ್ಯವನ್ನು ಬೇಗನೆ ಮುಗಿಸಲು ನೌಕರರ ಸಾಮರ್ಥ್ಯವನ್ನು ಹೆಚ್ಚು ನಿಖರವಾಗಿ ಹೆಚ್ಚಿಸುವುದು, ಹಾಗು ತಮ್ಮ ಮಾಹಿತಿ ಸರಿಯಾಗಿದೆಯೆಂಬ ಭರವಸೆ ನೀಡುವುದು. ಇದು ಬಳಕೆದಾರರಿಗೆ ಒದಗಿಸಲಾದ ಸೇವೆಗಳನ್ನು ಉತ್ತಮಪಡಿಸಲೂ ಸಹ ಸಹಾಯಮಾಡುತ್ತದೆ. ಸಮಯ : ಅಂತರಜಾಲಗಳು ಸಂಸ್ಥೆಗಳಿಗೆ, ನೌಕರರಿಗೆ ಅಗತ್ಯವಿದ್ದ ಸಮಯದಲ್ಲಿ ಮಾಹಿತಿಯನ್ನು ಹಂಚಿಕೆ ಮಾಡಲು ಅವಕಾಶ ನೀಡುತ್ತದೆ; ನೌಕರರು ಇಲೆಕ್ಟ್ರಾನಿಕ್ ಮೇಲ್ ನ ಮೂಲಕ ಮಾಹಿತಿಯ ಅವ್ಯವಸ್ಥೆಯಿಂದಾಗಿ ಉಂಟಾಗುವ ಗೊಂದಲಕ್ಕಿಂತ, ತಮಗೆ ಅನುಕೂಲವಾಗುವ ರೀತಿಯಲ್ಲಿ ಮಾಹಿತಿಯನ್ನು ಅವರು ಸಂಯೋಜಿಸಬಹುದು. ಸಂವಹನ : ಅಂತರಜಾಲಗಳು ಒಂದು ಸಂಸ್ಥೆಯೊಳಗೆ ಸಮಗ್ರವಾಗಿ ಹಾಗು ಸಮಾನವಾಗಿ ಸಂವಹನದ ಪ್ರಬಲ ಸಾಧನವಾಗಿ ಕಾರ್ಯನಿರ್ವಹಿಸುತ್ತವೆ. ಸಂಪರ್ಕ-ಸಂವಹನದ ದೃಷ್ಟಿಕೋನದಿಂದ, ಅಂತರಜಾಲಗಳು ಸಂಸ್ಥೆಯುದ್ದಕ್ಕೂ ಸಮಗ್ರವಾದ ನಿಲುಕಿನಲ್ಲಿರುವ ಕಾರ್ಯ ನೀತಿಯ ಉಪಕ್ರಮವನ್ನು ಜಾಗತಿಕವಾಗಿ ಅಗತ್ಯ ಮಾಹಿತಿ ತಿಳಿಸಲು ಸಹಕಾರಿಯಾಗಿವೆ.ಸಂಘಟನೆಯ ಸಂಪೂರ್ಣ ಆರಂಭಿಕ ಕಾರ್ಯವಿಧಾನಗಳನ್ನು ಅವು ದೃಢಪಡಿಸಲು ಸಮರ್ಥವಾಗಿವೆ. ಮಾಹಿತಿಯ ಮಾದರಿಯನ್ನು ಸುಲಭವಾಗಿ ತಿಳಿಯಪಡಿಸುವುದು ಉಪಕ್ರಮದ ಉದ್ದೇಶವಾಗಿದೆ. *ಅದು ಉಪಕ್ರಮವು ಏನನ್ನು ಸಾಧಿಸಲು ಉದ್ದೇಶಿಸಿದೆ, ಉಪಕ್ರಮದ ಹಿಂದಿರುವ ಅಂಶಗಳು ಯಾವವು, ಇಲ್ಲಿಯವರೆಗೂ ದೊರೆತ ಫಲಿತಾಂಶ, ಹಾಗು ಹೆಚ್ಚಿನ ಮಾಹಿತಿಗಾಗಿ ಯಾರನ್ನು ಸಂಪರ್ಕಿಸಬೇಕು. ಅಂತರಜಾಲದಲ್ಲಿ ಈ ಮಾಹಿತಿಯನ್ನು ಒದಗಿಸುವ ಮೂಲಕ, ಸಿಬ್ಬಂದಿಯು ಕಾರ್ಯವಿಧಾನದೊಂದಿಗೆ ಇಂದಿನತನಕದ ಮಾಹಿತಿಯನ್ನು ಸಂಗ್ರಹಿಸಿ ಕಲೆಹಾಕುವ ಅವಕಾಶ ದೊರೆಯುತ್ತದೆ. ಸಂವಹನದ ಕೆಲ ಉದಾಹರಣೆಗಳೆಂದರೆ ಚಾಟ್, ಇಮೇಲ್, ಹಾಗು ಅಥವಾ ಬ್ಲಾಗ್ ಗಳು. ಅಂತರಜಾಲವು ಸಂವಹನದಿಂದಾಗಿ ಒಂದು ಸಂಸ್ಥೆಗೆ ನೆರವಾದ ವಾಸ್ತವ ಜಗತ್ತಿನ ಒಂದು ಉತ್ತಮ ಉದಾಹರಣೆಯೆಂದರೆ, ನೆಸ್ಲೆ ಸಂಸ್ಥೆ, ಇದು ಸ್ಕ್ಯಾಂಡಿನೇವಿಯದಲ್ಲಿ ಆರಂಭಿಸಿದ ಹಲವಾರು ಆಹಾರ ಸಂಸ್ಕರಣ ಘಟಕಗಳ ಬಗ್ಗೆ ಅಂತರಜಾಲ ಸಂವಹನದಿಂದ ಹೊರ ಜಗತ್ತಿಗೆ ಇದರ ಬಗ್ಗೆ ಮಾಹಿತಿ ದೊರೆಯಿತು. ಅವರ ಪ್ರಮುಖ ಬೆಂಬಲದ, ನೆರವಿನ ವ್ಯವಸ್ಥೆಯು ಪ್ರತಿ ದಿನ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿ ವ್ಯವಾಹರಿಕ ಸಮಸ್ಯೆಗಳನ್ನು ಬಗೆಹರಿಸಬೇಕಿತ್ತು. ನೆಸ್ಲೆ ಸಂಸ್ಥೆಯು ಅಂತರಜಾಲದ ಮೇಲೆ ತನ್ನ ಬಂಡವಾಳ ಹೂಡಲು ನಿರ್ಧರಿಸಿದಾಗ, ಅದು ಇದರಿಂದ ಆಗುವ ಉಳಿತಾಯವನ್ನು ಬೇಗನೆ ಗುರುತಿಸಿತು. ಮ್ಯಾಕ್ಗೋವರ್ನ್ ಪ್ರಕಾರ ಪ್ರಶ್ನೆಗಳಿಗಾಗಿ ಮಾಡಲಾಗುತ್ತಿದ್ದ ದೂರವಾಣಿ ಕರೆಗಳ ನಂತರ ಉಂಟಾಗುತ್ತಿದ್ದ ಉಳಿತಾಯವು ಅಂತರಜಾಲದ ಮೇಲೆ ಹೂಡಲಾದ ಬಂಡವಾಳಕ್ಕಿಂತ ಮೂಲಭೂತವಾಗಿ ಅಧಿಕವಾಗಿತ್ತು. ವೆಬ್ ಪ್ರಕಟಣೆ , ಹೈಪರ್ ಮೀಡಿಯ ಹಾಗು ವೆಬ್ ತಂತ್ರಜ್ಞಾನಗಳನ್ನೂ ಬಳಸಿಕೊಂಡು ಸಂಸ್ಥೆಯುದ್ದಕ್ಕೂ ಅಡ್ಡಿ ಆತಂಕಗಳೊಂದಿಗೆ ನಿಧಾನ ಗತಿಯ ಕಾರ್ಪೋರೆಟ್ ಜ್ಞಾನ ನಿರ್ವಹಣೆ ಹಾಗು ಸುಲಭವಾಗಿ ತಲುಪಲು ಅವಕಾಶ ನೀಡುತ್ತದೆ. ಉದಾಹರಣೆಗಳಲ್ಲಿ: ನೌಕರರ ಕೈಪಿಡಿ, ಪ್ರಯೋಜನಗಳ ದಾಖಲೆ ಆಧಾರ, ಕಂಪನಿಯ ನೀತಿ-ಸೂತ್ರಗಳು, ವ್ಯಾಪಾರ ಗುಣಮಟ್ಟಗಳು, ನ್ಯೂಸ್ ಫೀಡ್ ಗಳು, ಹಾಗು ತರಬೇತಿಯನ್ನೂ ಸಹ ಒಳಗೊಂಡಿದೆ. ಇವುಗಳನ್ನು ಸಾಮಾನ್ಯವಾದ ಅಂತರಜಾಲ ಗುಣಮಟ್ಟಗಳನ್ನು ಬಳಸಿಕೊಂಡು ಸುಲಭವಾಗಿ ತಲುಪಬಹುದು.(ಆಕ್ರೊಬ್ಯಾಟ್ ಫೈಲುಗಳು, ಫ್ಲ್ಯಾಶ್ ಫೈಲುಗಳು, CGI ಅಪ್ಲಿಕೇಶನ್ ಗಳು). ಪ್ರತಿಯೊಂದು ವ್ಯಾಪಾರ ಘಟಕವು ತನ್ನ ದಾಖಲೆಗಳ ಆಧಾರದ ಆನ್ಲೈನ್ ಪ್ರತಿಯನ್ನು ನವೀಕರಿಸಿಕೊಳ್ಳಬಹುದು. ತೀರ ಇತ್ತೀಚಿನ ರೂಪಾಂತರವು ಸಾಮಾನ್ಯವಾಗಿ ಅಂತರಜಾಲ ಬಳಕೆಮಾಡುವ ನೌಕರರಿಗೆ ದೊರಕುತ್ತದೆ. ವ್ಯಾಪಾರ ಕಾರ್ಯ ಚಟುವಟಿಕೆಗಳ ಪ್ರಕ್ರಿಯೆ ಹಾಗು ನಿರ್ವಹಣೆ : ಅಂತರಜಾಲಗಳನ್ನು ವ್ಯಾಪಾರ ಪ್ರಕ್ರಿಯೆಗಳಿಗೆ ನೆರವಾಗಲು ಹಾಗು ಅಂತರಜಾಲದ ಮೇಲೆ ಕೆಲಸ ಮಾಡುವ ವ್ಯಾಪಾರ ಸಂಸ್ಥೆಯುದ್ದಕ್ಕೂ ಅಭಿವೃದ್ಧಿ ಹೊಂದುತ್ತಿರುವ ಹಾಗು ಪರಿಣಾಮಕಾರಿ ಅನುಷ್ಠಾನ, ಅನ್ವಯಗಳ ವೇದಿಕೆಯಾಗಿಯೂ ಸಹ ಬಳಕೆ ಮಾಡಲಾಗುತ್ತದೆ. ಆಕರ್ಷಕ, ನ್ಯಾಯಸಮ್ಮತ ಪರಿಣಾಮಕಾರಿ-ಬೆಲೆ : ಬಳಕೆದಾರರು ಕಾರ್ಯ-ವಿಧಾನ ಕೈಪಿಡಿಗಳು, ಆಂತರಿಕ ದೂರವಾಣಿ ಪಟ್ಟಿ ಹಾಗು ಕೋರಿಕೆ ಅರ್ಜಿಗಳಂತಹ ದಾಖಲೆಗಳ ಆಧಾರ ಪ್ರಮಾಣಗಳ ನಿರ್ವಹಣೆಗಿಂತ ವೆಬ್ ಬ್ರೌಸರ್ ನ ಮೂಲಕ ಮಾಹಿತಿ ಹಾಗು ಅಗತ್ಯ ದತ್ತಾಂಶ ಸಂಗ್ರಹಿಸಬಹುದು. ಇದು ಮುದ್ರಣ, ಆಧಾರ ದಾಖಲೆ,ಪ್ರಮಾಣಗಳ ನಕಲು ಪ್ರತಿ ಮಾಡಿಸುವುದು ಹಾಗು ಸಾಂದರ್ಭಿಕ ಪರಿಸರದ ಅಗತ್ಯದ ದಾಖಲೆ ಆಧಾರ ಪ್ರಮಾಣದ ನಿರ್ವಹಣೆಗೆ ತಗಲುವ ವೆಚ್ಚವನ್ನು ಸಂಭಾವ್ಯವಾಗಿ ಕಡಿಮೆ ಮಾಡುತ್ತದೆ. ಉದಾಹರಣೆಗೆ, ಪೀಪಲ್ ಸಾಫ್ಟ್ ನಿಂದ ಪಡೆದ "ಅಂತರಜಾಲಕ್ಕೆ HR ಪ್ರಕ್ರಿಯೆಗಳನ್ನು ವರ್ಗಾವಣೆ ಮಾಡುವ ಮೂಲಕ ಗಮನಾರ್ಹ ವೆಚ್ಚ ಉಳಿತಾಯ ಮಾಡಿತು". ಮ್ಯಾಕ್ಗವರ್ನ್, ಪ್ರಯೋಜನಗಳಲ್ಲಿ ಕೈಪಿಡಿಗಾದ ವೆಚ್ಚವು ಪ್ರತಿ ದಾಖಲಾತಿಗೆ USD109.48ರಷ್ಟೆಂದು ಹೇಳುತ್ತಾರೆ. "ಈ ಕಾರ್ಯಚಟುವಟಿಕೆಯ-ಪ್ರಕ್ರಿಯೆಯನ್ನು ಅಂತರಜಾಲಕ್ಕೆ ವರ್ಗಾವಣೆ ಮಾಡಿದಾಗ, ಇದು ಪ್ರತಿ ದಾಖಲಾತಿಗೆ $21.79ನಷ್ಟು ವೆಚ್ಚ ತಗ್ಗಿತು; ಹಾಗೆ ನೋಡಿದರೆ ಇದು ಶೇಖಡ 80ರಷ್ಟು ಉಳಿತಾಯವೆನಿಸುತ್ತದೆ". ವೆಚ್ಚದ ವರದಿಯನ್ನಾಧರಿಸಿ ಗಮನಿಸಿದಾಗ ವೆಚ್ಚ ಪ್ರಮಾಣದ ಮೇಲೆ ಹಣ ಉಳಿತಾಯ ಮಾಡಿದ ಮತ್ತೊಂದು ಸಂಸ್ಥೆಯೆಂದರೆ ಸಿಸ್ಕೋ. "1996ರಲ್ಲಿ, ಸಿಸ್ಕೋ 54,000 ವರದಿಗಳನ್ನು ಸಂಸ್ಕರಿಸುವುದರ ಜೊತೆಗೆ USD 19 ದಶಲಕ್ಷ ಡಾಲರ್ ಉಳಿತಾಯ ಮಾಡಿತು". ಸಹಯೋಗದ ವರ್ಧನೆ : ಎಲ್ಲ ಅಧಿಕೃತ ಬಳಕೆದಾರರ ಮೂಲಕ ಮಾಹಿತಿಯನ್ನು ಸುಲಭವಾಗಿ ಸಂಗ್ರಹಿಸಬಹುದು. ಇದು ಜತೆಯಾಗಿ ತಂಡದಲ್ಲಿ ಕಾರ್ಯನಿರ್ವಹಿಸಲು ಅನುಕೂಲ ಮಾಡಿಕೊಡುತ್ತದೆ. ವಿವಿಧ-ವೇದಿಕೆಗಳ ಸಾಮರ್ಥ್ಯ :ವಿಭಿನ್ನ ಗುಣಮಟ್ಟದ-ಅನುವರ್ತನಾಶೀಲ ವೆಬ್ ಬ್ರೌಸರ್ ಗಳು ವಿಂಡೋಸ್, ಮ್ಯಾಕ್, ಹಾಗು UNIXಗೆ ಲಭ್ಯವಿದೆ. ಒಬ್ಬನೇ ವೀಕ್ಷಕನಿಗಾಗಿ ನಿರ್ಮಿತ ವಿನ್ಯಾಸ : ಹಲವು ಸಂಸ್ಥೆಗಳು ಕಂಪ್ಯೂಟರ್ ನಿರ್ದಿಷ್ಟತೆಗಳನ್ನು ನಿರ್ದೇಶಿಸುತ್ತವೆ. ಇದಕ್ಕೆ ಬದಲಿಯಾಗಿ ಇದು ಅಂತರಜಾಲದ ಅಭಿವರ್ಧಕರಿಗೆ ಒನ್ ಬ್ರೌಸರ್ ನ ಮೇಲೆ ಕಾರ್ಯನಿರ್ವಹಿಸುವಂತೆ ಅಳವಡಿಕೆಗಾಗಿ,ಅಪ್ಲಿಕೇಶನ್ ಗಳನ್ನು ಬರೆಯಲು ಅವಕಾಶ ಮಾಡಿಕೊಡುತ್ತದೆ.(ಯಾವುದೇ ವಿವಿಧ-ಬ್ರೌಸರ್ ನ ಹೊಂದಾಣಿಕೆ ಸಮಸ್ಯೆಗಳು ಉದ್ಭವಿಸುವುದಿಲ್ಲ.) ನಿರ್ದಿಷ್ಟವಾಗಿ ನಿಮ್ಮ "ವೀಕ್ಷಕನನ್ನು" ಸಂಬೋಧಿಸುವ ಸಾಮರ್ಥ್ಯವು ಒಂದು ದೊಡ್ಡ ಪ್ರಯೋಜನವಾಗಿ ಪರಿಣಮಿಸುತ್ತದೆ. ಅಂತರಜಾಲಗಳು ಬಳಕೆದಾರನ-ನಿರ್ದಿಷ್ಟ ಉದ್ದೇಶದ ಮೇಲೆ ಅವಲಂಬಿತವಾಗಿರುವುದರಿಂದ(ಇದರ ಪ್ರವೇಶಕ್ಕೆ ಮುಂಚೆ ದತ್ತಾಂಶ ಸಂಗ್ರಹ/ನೆಟ್ವರ್ಕ್ ದೃಢೀಕರಣದ ಅಗತ್ಯವಿರುತ್ತದೆ.) ನೀವು ಯಾರೊಂದಿಗೆ ಇಂಟರ್ಫೇಸ್ (ಮುಖಾಮುಖಿ)ಮಾಡುತ್ತಿರುವಿರೆಂದು ನಿಮಗೆ ನಿರ್ದಿಷ್ಟವಾಗಿ ತಿಳಿದಿರುತ್ತದೆ. ಅಲ್ಲದೇ ಕೆಲಸದ ಆಧಾರದ ಮೇಲೆ ನಿಮ್ಮ ಅಂತರಜಾಲವನ್ನು ವೈಯಕ್ತಿಕತೆಗೆ ಅಗತ್ಯವಾದ ವೈಶಿಷ್ಟ್ಯವಾಗಿಸಬಹುದು.(ಕೆಲಸದ ಶೀರ್ಷಿಕೆ, ವಿಭಾಗ) ಅಥವಾ ವೈಯಕ್ತಿಕವಾಗಿ("ನಮ್ಮ ಕಂಪನಿಯಲ್ಲಿ ನೀವು ಮೂರು ವರ್ಷ ಪೂರೈಸಿದ್ದಕ್ಕಾಗಿ ನಿಮಗೆ ಹಾರ್ದಿಕ ಅಭಿನಂದನೆಗಳು ಜೇನ್) !"). ಸಾಮಾನ್ಯ ಕಾರ್ಪೋರೆಟ್ ಸಂಸ್ಕೃತಿಗೆ ಉತ್ತೇಜನ : ಪ್ರತಿಯೊಬ್ಬ ಬಳಕೆದಾರನು ಅಂತರಜಾಲದೊಳಗಿರುವ ಒಂದೇ ರೀತಿಯ ಮಾಹಿತಿಯನ್ನು ವೀಕ್ಷಿಸಲು ಸಮರ್ಥನಾಗಿರುತ್ತಾನೆ. ತಕ್ಷಣದ ನವೀಕರಣಗಳು : ಸಾರ್ವಜನಿಕರೊಂದಿಗೆ ಯಾವುದೇ ಸಾಮರ್ಥ್ಯದಲ್ಲಿ ವ್ಯವಹರಿಸಬೇಕಾದರೆ, ಕಾನೂನುಗಳು, ನಿರ್ದಿಷ್ಟತೆಗಳು, ಹಾಗು ಲಕ್ಷಣಗಳು ಬದಲಾಗಬಹುದು. ಅಂತರಜಾಲಗಳು ವೀಕ್ಷಕರಿಗೆ "ನೇರವಾದ" ಜೀವಂತಿಕೆಯ ಬದಲಾವಣೆಗಳನ್ನು ಒದಗಿಸುತ್ತವೆ. ಇದರಿಂದಾಗಿ ಅವರು ಇಂದಿನತನಕದ ಮಾಹಿತಿಯನ್ನು ಪಡೆಯಬಹುದು, ಇದರಿಂದಾಗಿ ಸಂಸ್ಥೆಯ ಜವಾಬ್ದಾರಿಗಳು ಸೀಮಿತಗೊಳ್ಳುತ್ತವೆ. ವಿಂಗಡಣೆಯಾದ ಕಂಪ್ಯೂಟಿಂಗ್ ವಿನ್ಯಾಸ ರಚನೆಗೆ ನೆರವು ನೀಡುತ್ತದೆ : ಅಂತರಜಾಲವನ್ನು ಒಂದು ಸಂಸ್ಥೆಯ ನಿರ್ವಹಣಾ ಮಾಹಿತಿ ವ್ಯವಸ್ಥೆಗೂ ಸಹ ತಳುಕು ಹಾಕಬಹುದು, ಉದಾಹರಣೆಗೆ ಸಮಯ ಪಾಲನಾ ವ್ಯವಸ್ಥೆಯ ವಿಧಾನ. ಯೋಜನೆ ಹಾಗು ರಚನೆ ಹಲವು ಸಂಸ್ಥೆಗಳು, ತಮ್ಮ ಅಂತರಜಾಲದ ಯೋಜನೆ ಹಾಗು ಕಾರ್ಯಗತಗೊಳಿಸುವಿಕೆಗೆ ಗಮನಾರ್ಹ ಸಂಪನ್ಮೂಲವನ್ನು ಮೀಸಲಾಗಿ ಇಡುತ್ತವೆ. ಏಕೆಂದರೆ ಇದು ಸಂಸ್ಥೆಯ ಯಶಸ್ಸಿಗೆ ಸೃಷ್ಟಿಸುವ ಯೋಜನಾ ಪ್ರಾಮುಖ್ಯತೆಯಾಗುತ್ತದೆ. ಯೋಜನೆಯಲ್ಲಿ ಒಳಗೊಳ್ಳುವ ಕೆಲ ವಿಷಯ ಗಳೆಂದರೆ: ಅಂತರಜಾಲದ ಉದ್ದೇಶ ಹಾಗು ಧ್ಯೇಯಗಳು ಕಾರ್ಯಗತಗೊಳಿಸುವಿಕೆ ಹಾಗು ನಿರ್ವಹಣೆಗೆ ಜವಾಬ್ದಾರರಾದ ವ್ಯಕ್ತಿಗಳು ಅಥವಾ ವಿಭಾಗಗಳು ಅಧಿಕೃತ ಯೋಜನೆಗಳು, ಮಾಹಿತಿ ಚೌಕಟ್ಟುಗಳ ರಚನೆ, ಪೇಜ್ ಲೇಔಟ್ ಗಳು,(ಪುಟಗಳ ಸೃಷ್ಟಿ) ವಿನ್ಯಾಸ ಅನುಷ್ಠಾನದ ವಿವರಗಳು ಹಾಗು ಅಸ್ತಿತ್ವದಲ್ಲಿರುವ ವ್ಯವಸ್ಥೆಗಳನ್ನು ನಿಧಾನಗತಿಯಲ್ಲಿ ಹಂತ-ಹಂತವಾಗಿ ಅಂತ್ಯಗೊಳಿಸುವುದು ಅಂತರಜಾಲದ ಭದ್ರತೆಗಳ ನಿರೂಪಣೆ,ವ್ಯಾಖ್ಯಾನ ಹಾಗು ಕಾರ್ಯಗತಗೊಳಿಸುವುದು ಕಾನೂನು ಪರಿಮಿತಿ ಹಾಗು ಇತರ ನಿರ್ಬಂಧದೊಳಗೆ ಹೇಗೆ ಇದನ್ನು ರಕ್ಷಿಸುವುದು ಅಪೇಕ್ಷಿತ ಪರಸ್ಪರ ಕಾರ್ಯಕಾರಿತ್ವದ ಮಟ್ಟ(ಉದಾಹರಣೆಗೆ ವಿಕಿಗಳು, ಆನ್ಲೈನ್ ಮಾದರಿಗಳು) ಹೊಸ ದತ್ತಾಂಶದ ಇನ್ ಪುಟ್ ಹಾಗು ನವೀಕರಣಗೊಂಡ ಅಸ್ತಿತ್ವದಲ್ಲಿರುವ ದತ್ತಾಂಶವನ್ನು ಪ್ರಮುಖವಾಗಿ ನಿಯಂತ್ರಿಸುವುದು ಅಥವಾ ವರ್ಗಾವಣೆ ಮಾಡುವುದು. ಇವೆಲ್ಲವೂ ಹಾರ್ಡ್ ವೇರ್ ಹಾಗು ಸಾಫ್ಟ್ ವೇರ್ ನಿರ್ಣಯಕ್ಕೆ ಜೊತೆಯಾಗಿವೆ.(ವಿಷಯಸೂಚಿ ನಿರ್ವಹಣಾ ವ್ಯವಸ್ಥೆಗಳ ಮಾದರಿಯಲ್ಲಿ), ಪಾಲ್ಗೊಳ್ಳುವಿಕೆಯಲ್ಲಿ ಉಂಟಾಗುವ ಸಮಸ್ಯೆಗಳು(ಉತ್ತಮ ಅಭಿರುಚಿ, ಕಿರುಕುಳ, ಗೋಪ್ಯತೆಗಳ ಮಾದರಿಯಲ್ಲಿ), ಹಾಗು ನೆರವಾಗುವ ವೈಶಿಷ್ಟ್ಯ ಗಳು. ಅಂತರಜಾಲಗಳು ಸಾಮಾನ್ಯವಾಗಿ ಸ್ಥಿರ ಸೈಟ್ ಗಳಾಗಿರುತ್ತವೆ. ಮೂಲತಃ ಇವುಗಳು ಹಂಚಿಕೆಯಾದ ಡ್ರೈವ್ ಗಳಾಗಿರುತ್ತವೆ, ಇವುಗಳು ಆಂತರಿಕ ನಿಯಮಾವಳಿ ಅಥವಾ ಸಂವಹನಗಳೊಂದಿಗೆ ಪ್ರಧಾನವಾಗಿ ಶೇಖರಣೆಯಾದ ದಾಖಲೆ ಆಧಾರ ಪ್ರಮಾಣಗಳಿಗೆ ನೆರವಾಗುತ್ತವೆ.(ಸಾಮಾನ್ಯವಾಗಿ ಒಂದೇ ಕಡೆಯ ಸಂವಹನ). ಆದಾಗ್ಯೂ ಸಂಸ್ಥೆಗಳು ಇತ್ತೀಚಿಗೆ ಹೇಗೆ ಅಂತರಜಾಲಗಳು, ಸಮಾಜೀಕರಿತ ಅಂತರಜಾಲದಲ್ಲಿ ವಿಶೇಷತೆಯನ್ನು ಪಡೆದಿವೆ.ಅದನ್ನು ಆ ಮೂಲದ ಸಂಸ್ಥೆಗಳನ್ನು ಬಳಸಿಕೊಂಡು ಹೇಗೆ ತಮ್ಮ ತಂಡಕ್ಕೆ 'ಸಂವಹನದ ಮಾಹಿತಿ ಕೇಂದ್ರ ವಾಗಬಹುದೆಂದು' ಯೋಜಿಸುತ್ತಿದೆ. ವಾಸ್ತವವಾಗಿಯೂ ಕಾರ್ಯಗತಗೊಳಿಸುವಿಕೆಯು ಈ ಕೆಳಕಂಡ ಹಂತಗಳನ್ನು ಒಳಗೊಂಡಿದೆ: ಹಿರಿತನದ ನಿರ್ವಹಣಾ ನೆರವು ಹಾಗು ಆರ್ಥಿಕ ನಿಧಿ-ಬೆಂಬಲವನ್ನು ಗಳಿಸಿಕೊಳ್ಳುವುದು. ವ್ಯಾಪಾರ ಅವಶ್ಯಕತೆಗಳ ವಿಶ್ಲೇಷಣೆ. ಬಳಕೆದಾರರ ಮಾಹಿತಿ ಅಗತ್ಯಗಳನ್ನು ಗುರುತಿಸಲು ಬಳಕೆದಾರನು ಪಾತ್ರ ವಹಿಸುವುದು. ವೆಬ್ ಸರ್ವರ್ ನ ಅಳವಡಿಕೆ ಹಾಗು ಬಳಕೆದಾರರು ಸುಲಭವಾಗಿ ಪ್ರವೇಶಿಸುವ ನೆಟ್ವರ್ಕ್. ಕಂಪ್ಯೂಟರ್ ಗಳಲ್ಲಿ ಬಳಕೆದಾರನಿಗೆ ಅಗತ್ಯವಿರುವ ಅಪ್ಲಿಕೇಶನ್ ಗಳನ್ನು(ಅನ್ವಯಿಕೆ) ಸಂಸ್ಥಾಪಿಸುವುದು. ರಚಿತವಾಗಬೇಕಿರುವ ವಿಷಯಸೂಚಿಗೆ ದಾಖಲೆಯ ಆಧಾರ ಪ್ರಮಾಣ ಚೌಕಟ್ಟನ್ನು ರೂಪಿಸುವುದು. ಅಂತರಜಾಲ ಪರೀಕ್ಷಿಸುವಾಗ ಬಳಕೆದಾರನ ಪಾತ್ರ ಹಾಗು ಅದರ ಬಳಕೆಯನ್ನು ಉತ್ತೇಜಿಸುವುದು. ಮುಂದುವರೆಯುತ್ತಿರುವ ಮಾಪನ ಹಾಗು ಅರ್ಹತೆ ನಿರ್ಧಾರ, ಇದರಲ್ಲಿ ಇತರ ಅಂತರಜಾಲಗಳ ವಿರುದ್ಧ ನಿಗದಿತ ಮಾನದಂಡವನ್ನು ಅಳೆದು ರೂಪಿಸುವುದು ಸೇರಿದೆ. ಅಂತರಜಾಲದ ವಿಭಾಗ ರಚನೆಯಲ್ಲಿರುವ ಮತ್ತೊಂದು ಉಪಯೋಗಿ ಅಂಶವೆಂದರೆ, ಅಂತರಜಾಲದ ನಿರ್ವಹಣೆಗೆ ಬದ್ಧನಾದ ಒಬ್ಬ ಪ್ರಮುಖ ವ್ಯಕ್ತಿಯ ಜೊತೆಗೆ ಈತನು ವಿಷಯಸೂಚಿಗಳನ್ನು ಪ್ರಚಲಿತದಲ್ಲಿಡಲು ಜವಾಬ್ದಾರನಾಗಿರುತ್ತಾನೆ. ಅಂತರಜಾಲದ ಕುರಿತ ಪ್ರತಿಕ್ರಿಯೆಗಾಗಿ, ಬಳಕೆದಾರರ ಒಂದು ಸಾಮಾಜಿಕ ನೆಟ್ವರ್ಕಿಂಗ್ ಮೂಲಕ ಪಡೆಯಬಹುದು. ಇದರಿಂದ ಬಳಕೆದಾರರಿಗೆ ಏನು ಬೇಕು ಹಾಗು ಅವರು ಏನನ್ನು ಬಯಸುತ್ತಾರೆಂಬುದನ್ನು ಸೂಚಿಸಬಹುದು. ಇವನ್ನೂ ಗಮನಿಸಿ ಎಂಟರ್ಪ್ರೈಸ್ ಪೋರ್ಟಲ್ ಇಂಟ್ರಾನೆಟ್ ಪೋರ್ಟಲ್ ಅಂತರಜಾಲ ಕಾರ್ಯವಿಧಾನಗಳು ಇಂಟ್ರಾವೆಬ್ ಸ್ಥಳೀಯ ವಲಯ ಜಾಲ ವ್ಯಾಪಕ ವಲಯ ಜಾಲ ವೆಬ್ ಪೋರ್ಟಲ್ ಕ್ವಾಂಗ್ಮ್ಯೊಂಗ್ (ಅಂತರಜಾಲ) ಗೂಗಲ್‌ ಕ್ರೋಮ್‌ ಬ್ರೌಸರ್ ಉಲ್ಲೇಖಗಳು ಗಣಕ ನೆಟ್ವರ್ಕ್ ಗಳು (ಕಂಪ್ಯುಟರ್ ಜಾಲಗಳು) ಇಂಟರ್ನೆಟ್ ಗೋಪ್ಯತೆ ಅಂತರ ಜಾಲ ತಾಣಗಳು ಮಾಹಿತಿ ತಂತ್ರಜ್ಞಾನ
1821
https://kn.wikipedia.org/wiki/%E0%B2%AF%E0%B3%81%E0%B2%97%E0%B2%BE%E0%B2%A6%E0%B2%BF
ಯುಗಾದಿ
ಯುಗಾದಿ ಅಥವಾ ಉಗಾದಿ ಚೈತ್ರ ಮಾಸದ ಮೊದಲ ದಿನ. ಭಾರತದ ಅನೇಕ ಕಡೆಗಳಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ. "ಯುಗಾದಿ" ಪದದ ಉತ್ಪತ್ತಿ "ಯುಗ+ಆದಿ" - ಹೊಸ ಯುಗದ ಆರಂಭ ಎಂದು. ಸಾಂಪ್ರದಾಯಿಕ ಆಚರಣೆಗಳು ಯುಗಾದಿ ಹಬ್ಬದ ಸಾಂಪ್ರದಾಯಿಕ ಆಚರಣೆಗಳಲ್ಲಿ ಕೆಲವೆಂದರೆ ಸೂರ್ಯ ನಮಸ್ಕಾರ, ಪಂಚಾಂಗದ ಪೂಜೆ, ಹಾಗೂ ಸರ್ವೇ-ಸಾಮಾನ್ಯವಾಗಿ "ಬೇವು-ಬೆಲ್ಲ." ಜೀವನದ ಸಿಹಿ-ಕಹಿಗಳೆರಡನ್ನೂ ಪಡೆಯಬೇಕೆಂದು ನೆನಪಿಸಲು ಬೇವು-ಬೆಲ್ಲಗಳ ಮಿಶ್ರಣವನ್ನು ತಿನ್ನಲಾಗುತ್ತದೆ. ಯುಗಾದಿಯೆಂದರೆ ಹೊಸವರ್ಷದ ಆರಂಭದ ದಿನವಾದರೂ ಭಾರತದಲ್ಲಿ ಈ ದಿನವನ್ನು ನಿರ್ಧರಿಸುವ ರೀತಿ ಹಲವಾರಿವೆ. ಮುಖ್ಯವಾಗಿ ಚಾಂದ್ರಮಾನ ಹಾಗೂ ಸೌರಮಾನ ಎಂಬ ಎರಡು ಪ್ರಭೇದಗಳಿದ್ದು, ಹಿಂದೂ ಧರ್ಮದ ವೇದಾಂಗ ಜ್ಯೋತಿಷ ಶಾಸ್ತ್ರದಿಂದ ನಿರ್ಣಯಗೊಳ್ಳುತ್ತವೆ. ಚಂದ್ರನ ಚಲನೆಯನ್ನಾಧರಿಸಿ, ದಿನಗಣನೆ ಮಾಡುವುದನ್ನು ಚಾಂದ್ರಮಾನ ಹಾಗೂ ಸೂರ್ಯನ ಗತಿಯಿಂದ ಎಣಿಕೆ ಮಾಡುವುದನ್ನು ಸೌರಮಾನ ಎನ್ನುತ್ತಾರೆ. ಕರ್ನಾಟಕದಲ್ಲಿ ಚಾಂದ್ರಮಾನಪದ್ಧತಿ ಮೊದಲಿನಿಂದ ರೂಢಿಯಲ್ಲಿದೆ. ಭೂಮಿಯಿಂದ ನೋಡಿದಾಗ, ಸೂರ್ಯ, ಚಂದ್ರ, ಗ್ರಹಗಳು ನಕ್ಷತ್ರಮಂಡಲದಿಂದಾದ ರಾಶಿಚಕ್ರದಲ್ಲಿ ದಿನೇ ದಿನೇ ಸ್ವಲ್ಪ ಸ್ವಲ್ಪವಾಗಿ ಸಂಚರಿಸಿದಂತೆ ಕಾಣುತ್ತವೆ. ವೇದಾಂಗ ಜ್ಯೋತಿಷದಂತೆ, ಮೊದಲ ನಕ್ಷತ್ರ ಅಶ್ವಿನಿ - ಅಂದರೆ ಮೇಷ ರಾಶಿಯ ೦ - ೧೩:೨೦ ಭಾಗ (ಡಿಗ್ರಿ). ಅಲ್ಲಿ ಸೂರ್ಯನಿದ್ದಾಗ ಭೂಮಿಯ ಉತ್ತರಾರ್ಧಗೋಳದಲ್ಲಿ ಸಸ್ಯಗಳಲ್ಲಿ ಚಿಗುರು ಕಾಣುತ್ತದೆ; ಅಂದರೆ ಹೊಸಹುಟ್ಟು. ಆದ್ದರಿಂದ ಅಶ್ವಿನೀ ನಕ್ಷತ್ರಕ್ಕೆ ರವಿಯು ಪ್ರವೇಶಿಸುವ ಕಾಲವನ್ನು ಹೊಸವರ್ಷ ಎಂದು ಪರಿಗಣಿಸುತ್ತಾರೆ. ಇದೇ ಸೌರಮಾನ ಯುಗಾದಿ. ಸಾಮಾನ್ಯವಾಗಿ ಈಗ ಇದು ಏಪ್ರಿಲ್ ೧೪ ಅಥವಾ ೧೫ ನೇ ತಾರೀಖಿಗೆ ಬೀಳುತ್ತದೆ. ಆದರೆ ಚಂದ್ರನ ಗತಿ ಅತಿವೇಗವಾದ್ದರಿಂದ ಪ್ರತಿ ಪ್ರದಕ್ಷಿಣೆಗೂ ಒಂದೊಂದು ತಿಂಗಳಾಗಿ, ಹನ್ನೆರಡು ಪ್ರದಕ್ಷಿಣೆಗಳಿಗೆ ಸರಿಯಾಗಿ ಒಂದು ಚಾಂದ್ರಮಾನ ಸಂವತ್ಸರವಾಗುತ್ತದೆ. ರವಿಚಂದ್ರರ ಗತಿಯನ್ನವಲಂಬಿಸಿ, ೧೧ ರಿಂದ ೧೩ ಪೂರ್ಣಿಮೆ/ಅಮಾವಾಸ್ಯೆಗಳಿಗೊಂದು ಚಾಂದ್ರಮಾನ ಯುಗಾದಿಯಾಗುತ್ತದೆ. ಈ ಯುಗಾದಿನಿರ್ಣಯದ ಹಿಂದೆ ವೇದಾಂಗ ಜ್ಯೋತಿಷದ ಮಹತ್ತರ ಸಾಧನೆಗಳೇ ಅಡಗಿವೆ; ಅದರಿಂದ ನಮ್ಮ ಪೂರ್ವಿಕರ ಖಗೋಲಗಣಿತದ ಅಪಾರ ಜ್ಞಾನ ವ್ಯಕ್ತವಾಗುತ್ತದೆ. ಹಬ್ಬದ ಆಚರಣೆಯ ವಿಧಾನ ಈ ಹಬ್ಬವನ್ನು ಹೆಚ್ಚಾಗಿ ಕರ್ನಾಟಕ ,ಆಂಧ್ರ ಮತ್ತು ಮಹಾರಾಷ್ಟ್ರಗಳಲ್ಲಿ ಆಚರಿಸುವರು. ಆಂಧ್ರ ಮತ್ತು ಕರ್ನಾಟಕಗಳಲ್ಲಿ ಇದು ಯುಗಾದಿಯಾದರೆ, ಮಹಾರಾಷ್ಟ್ರದಲ್ಲಿ ಗುಡಿಪಾಡ್ ಪಾಡ್ಯಮಿ ದಿವಸ ಗುಡಿಯನ್ನು ಏರಿಸುವುದೇ ಗುಡಿಪಾಡ್ವ - ಒಂದು ಕೋಲಿಗೆ ವಸ್ತ್ರವನ್ನು ಕಟ್ಟಿ, ಹೂವಿನ ಹಾರವನ್ನು ಏರಿಸಿ 'ಗುಡಿ' ಎಂದು ಮೂಲೆಯಲ್ಲಿ ಇರಿಸುವರು. ಇದು ಹೊಸ ವರುಷದ ಆಗಮನಕ್ಕೆ ಬಾವುಟವನ್ನು ಹಾರಿಸುವುದರ ಸಂಕೇತ. ಹುಣಿಸೇಹಣ್ಣು, ಬೆಲ್ಲ, ಮಾವಿನಕಾಯಿ, ಉಪ್ಪು, ಮೆಣಸು, ಬೇವು ಇತ್ಯಾದಿಗಳ ಮಿಶ್ರಣ ಮಾಡಿ ಯುಗಾದಿ ಪಚ್ಚಡಿ ಎಂಬ ಹೆಸರಿನ ಪದಾರ್ಥವನ್ನು ಸೇವಿಸುವರು. ಅಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಇರುವುದು. ತಳಿರು ತೋರಣವನ್ನು (ಎಳೆಯ ಹಸಿರು ಮಾವಿನೆಲೆ ಮಧ್ಯೆ ಮಧ್ಯೆ ಬೇವಿನ ಎಲೆ ಹೂಗಳ ಗೊಂಚಲು) ಮನೆಗಳ ಮುಂಬಾಗಿಲಿಗೆ ಮತ್ತು ದೇವರ ಮನೆಯ ಬಾಗಿಲಿಗೆ ತಳಿರು ತೋರಣವಾಗಿ ಕಟ್ಟುವರು. ಮನೆಯ ಮುಂದೆ ಬಣ್ಣ ಬಣ್ಣದ ರಂಗೋಲಿಯನ್ನಿಡುವರು. ಮುಂಜಾನೆ ಬೇಗನೆದ್ದು ಅಭ್ಯಂಜನ (ಎಣ್ಣೆ ಸೀಗೇಕಾಯಿಯಿಂದ ತಲೆಯನ್ನು ತೊಳೆದುಕೊಳ್ಳುವುದು) ಮಾಡಿ ಪುಣ್ಯಾಹ ಮಂತ್ರಗಳನ್ನು ಉಚ್ಚರಿಸಿ ಮಾವಿನೆಲೆಯಿಂದ ಮನೆಯ ಎಲ್ಲ ಕಡೆ ಕಳಶದ ನೀರನ್ನು ಸಿಂಪಡಿಸುವರು. ನಂತರ ಹೊಸ ಬಟ್ಟೆ ಧರಿಸಿ ಪಂಚಾಂಗವನ್ನು ಮನೆಯ ಹಿರಿಯರು ಓದುವರು ಮತ್ತೆಲ್ಲರೂ ಅದನ್ನು ಕೇಳುವರು. ಪಂಚಾಂಗ ದಿನಸೂಚಿಯಷ್ಟೆ ಅಲ್ಲದೇ ಆ ವರುಷದಲ್ಲಿ ಮಳೆ ಬೆಳೆ ಹೇಗಿದೆ, ರಾಶಿಫಲ, ಮದುವೆ ಉಪನಯನಗಳಿಗೆ ಒಳ್ಳೆಯ ಮುಹೂರ್ತಗಳು, ಒಟ್ಟರೆ ಜನಜೀವನದ ಸ್ಥಿತಿಯನ್ನು ಸೂಚಿಸಿರುವುದು. ಅಂದು ಹಿರಿಯ ಕಿರಿಯರೆಲ್ಲರೂ ಹೊಸ ಬಟ್ಟೆಗಳನ್ನು ಧರಿಸಿ ಸಂತೋಷದಿಂದ ಹಾಡಿ ನಲಿವರು. ಖಣಿ ಇಡುವುದು : ಕರಾವಳಿಯ ಸೌರಮಾನ ಯುಗಾದಿಯ ವಿಶೇಷತೆ ಖಣಿ ಇಡುವುದು. ಬಾಳೆ ಎಲೆ, ತಟ್ಟೆಯಲಿ ಅಕ್ಕಿ ಹಾಕಿ ಅದರ ಮೇಲೆ ತೆಂಗಿನಕಾಯಿ, ಸೌತೇಕಾಯಿ, ರವಿಕೆ ಕಣ, ಹೊಸ ಬಟ್ಟೆ, ಚಿನ್ನ, ಬತ್ತದ ತೆನೆ, ಹಣ್ಣು, ದೇವರ ಪ್ರತಿಮೆ ಅದರ ಮುಂದೆ ಒಂದು ಕನ್ನಡಿ ಇಟ್ಟು, ಆ ಕನ್ನಡಿಯಲಿ ದೇವರ ಪ್ರತಿಮೆ ಹಾಗೂ ತಟ್ಟೆಯಲಿ ಇಟ್ಟಂತಹ ವಸ್ತುಗಳನ್ನು ಕಾಣುವ ಹಾಗೆ ಇಡುತ್ತಾರೆ. ವನ್ನು ಇಟ್ಟು ದೇವರ ಮುಂದೆ ಹಿಂದಿನ ರಾತ್ರಿ ಮಲಗುವ ಮುನ್ನ ಇಡುತ್ತಾರೆ. ಯುಗಾದಿ ಹಬ್ಬದಂದು ಬೆಳಿಗ್ಗೆ ಬೇಗ ಎದ್ದು ದೇವರ ದೀಪ ಹಚ್ಚಿ ಖಣಿಯಲ್ಲಿನ ಕನ್ನಡಿಯಲಿ ದೇವ ದರ್ಶನ ಪಡೆಯುವುದು ಅಂದಿನ ವಿಶೇಷ. ನಂತರ ಸ್ನಾನ, ಹೋಳಿಗೆ ಚಿತ್ರಾನ್ನದೂಟ, ದೇಗುಲಕ್ಕೆ ಹಾಗೂ ಹಿರಿಯರ ಭೇಟಿ, ಪಂಚಾಂಗ ಶ್ರವಣ. ಅಂದಿನ ವಿಶೇಷ ತಿನಿಸು ಒಬ್ಬಟ್ಟು ಅಥವಾ ಹೋಳಿಗೆ. ತೆಂಗಿನಕಾಯಿ ಹೂರಣದಲ್ಲಿ ಮಾಡಿದ ಹೋಳಿಗೆ ಬಹಳ ದಿನ ಇರದೇ ಕೆಡುವುದೆಂದು ಕಡಲೆ ಅಥವಾ ತೊಗರೀ ಬೇಳೆಯ ಹೂರಣದಲ್ಲಿ ಮಾಡುವರು. *ಇದನ್ನೇ ಮರಾಠಿಯಲ್ಲಿ ಪೂರಣ ಪೋಳಿ ಎಂದು ಕರೆವರು. ಸಂಜೆಯ ವೇಳೆಯಲ್ಲಿ ಗುರು ಹಿರಿಯರ ಮನೆಗಳಿಗೆ ಹೋಗಿ ಅವರಿಗೆ ಕಾಲುಮುಟ್ಟಿ ನಮಸ್ಕರಿಸಿ ಅವರ ಆಶೀರ್ವಾದ ಪಡೆವರು. ಮನೆಯ ಹೆಂಗಸರು ಹೊಸದಾಗಿ ಬರುವ ಮಾವಿನಕಾಯಿಯಿಂದ ಉಪ್ಪಿನಕಾಯಿಯನ್ನು ಮಾಡುವರು. ಬೇವು-ಬೆಲ್ಲ ಯುಗಾದಿಯ ದಿನ ಸುಖದ ಸಂಕೇತವಾದ ಬೆಲ್ಲವನ್ನೂ ಮತ್ತು ಕಷ್ಟದ ಸಂಕೇತವಾದ ಬೇವನ್ನೂ ಸಮನಾಗಿ ಸ್ವೀಕರಿಸುವರು. ತಿಂದ ಮೇಲೆ ಬೆಲ್ಲವು ಹೊಟ್ಟೆಯೊಳಗೆ ಉರಿಯ ಅಥವಾ ಶಾಖವನ್ನು ಉಂಟು ಮಾಡಿದರೆ ಬೇವು ಆ ಉರಿಯ ಶಮನಕಾರಿ. ಬೇವು - ಬೆಲ್ಲದ ಮಿಶ್ರಣವನ್ನು ತಿನ್ನುವಾಗ ಹೇಳುವ ಒಂದು ಶ್ಲೋಕ ಹೀಗಿದೆ: ಶತಾಯು: ವಜ್ರದೇಹಾಯ ಸರ್ವಸಂಪತ್ಕರಾಯಚ| ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ|| - ಅದರರ್ಥ ಹೀಗಿದೆ - ನೂರು ವರುಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇನೆ.* ಯುಗಾದಿ ಕವಿತೆ ದ.ರಾ.ಬೇಂದ್ರೆಯವರ ಯುಗಾದಿ ಬಗೆಗಿನ ಈ ಕವಿತೆ ಸುಪ್ರಸಿದ್ಧವಾದುದು. "ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತ್ತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ಹೊಂಗೆ ಹೂವ ತೊಂಗಲಲಿ ಭೃಂಗದ ಸಂಗೀತ ಕೇಳಿ ಮತ್ತೆ ಕೇಳಿ ಬರುತ್ತಿದೆ ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವ ಕಳೆಯ ತರುತಿದೆ ವರುಷಕೊಂದು ಹೊಸತು ಜನ್ಮ ವರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆ ಒಂದೆ ಒಂದು ಜನ್ಮದಲ್ಲಿ ಒಂದೆ ಬಾಲ್ಯ ಒಂದೆ ಹರಯ ನಮಗದಷ್ಟೆ ಏತಕೋ ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ ನಮಗೆ ಏಕೆ ಬಾರದೋ"||ಯುಗ ಯುಗಾದಿ ಕಳೆದರು||ಪ್ರತಿ ಜೀವಕ (Antibiotic) ನೂರು ವರುಷ ಧೀರ್ಘ ಆಯುಷ್ಯ ಸದೃಢ ದೇಹ ಮನಸಿನ ಆರೋಗ್ಯ ಸ್ವಾಸ್ಥ್ಯ ಸಂಪತ್ತಿನ ಪ್ರಾಪ್ತಿಗಾಗಿಯೂ ಸಕಲ ಅರಿಷ್ಟ ನಿವಾರಣೆಗಾಗಿಯೂ ಪ್ರತಿದಿನ ಬೇವು ಬೆಲ್ಲ ಸೇವನೆ ಮಾಡಿ ಸೌಂದರ್ಯ ವರ್ಧಕವೂ ಹೌದು ಚರ್ಮ ವ್ಯಾಧಿ ನಿವಾರಕವೂ ಹೌದು ರೋಗ ನಿರೋಧಕ ಶಕ್ತಿ ಪ್ರತೀಕವು ಪ್ರಭಲ ಬ್ಯಾಕ್ಟಿರಿಯ ಪ್ರತಿ ಜೀವಕವು ಔಷಧೀಯ ಗುಣವುಳ್ಳ ಈ ಕಹಿ ಬೇವು ನೈಸರ್ಗಿಕ ಮಧುಮೇಹ ನಿಯಂತ್ರಕ ವಿಷದಂತ ಬಿಳಿ ಸಕ್ಕರೆ ಪರ್ಯಾಯಕ ಖನಿಜ ಪೋಷಕಾಂಶಗಳ ಆಗರವಂತೆ ಶ್ವಾಸಕೋಶ ಕರುಳ ಸ್ವಚ್ಚತೆ ಕಾರ್ಯವಂತೆ ಬೆಲ್ಲ ಸೇವನೆಯಿಂದ ಇವೆಲ್ಲವೂ ಲಭ್ಯವಂತೆ ವೈಜಾನಿಕ ಹಿನ್ನೆಲೆಯುಳ್ಳ ಆಚರಣೆ ನಮ್ಮ ಹಿಂದೂ ಸಂಸ್ಕೃತಿಯ ಪ್ರತೀಕ ದೀಪವನು ನಂದಿಸಿ ಕೇಕು ಕತ್ತರಿಸಿ ಕುಡಿದು ತಿಂದು ಮಜಾ ಮಾಡುವ ಪಾಶ್ಚತ್ಯರ ಅನುಸರಣೆ ಅಂತ್ಯವಾಗಲಿ ಕರಗಿ ಹೋಗಲಿ ಈ ರೋಗ ರುಜಿನ ಚಿಗುರಿ ಹಸನಾಗಲಿ ಎಲ್ಲರ ಜೀವನ ಹೊಸ ವರ್ಷದ ಆದಿ ಇಲ್ಲಿಂದ ಸಾಗಲಿ ಸಹ ಬಾಳ್ವೆಗೆ ಯುಗಾದಿ ನಾಂದಿಯಾಗಲಿ ನವ ವರುಷ ಬದುಕಿಗೆ ಹರುಷವನ್ನು ತರಲಿ ವಿನೋದ್ ವಾಲ್ಮೀಕಿ ಸೊರಬ. ಓದಿ ಯುಗಾದಿ ಪರ್ವದಲ್ಲಿ ‘ಪಂಚಾಂಗ ಶ್ರವಣ’;ಉಮಾ ಅನಂತ್‌;28 Mar, 2017 ಉಲ್ಲೇಖಗಳು
1824
https://kn.wikipedia.org/wiki/%E0%B2%B0%E0%B3%86%E0%B2%A1%E0%B3%8D%20%E0%B2%B9%E0%B3%8D%E0%B2%AF%E0%B2%BE%E0%B2%9F%E0%B3%8D
ರೆಡ್ ಹ್ಯಾಟ್
ರೆಡ್ ಹ್ಯಾಟ್ ಮುಕ್ತ ತಂತ್ರಾಂಶಕ್ಕೆ ಮೀಸಲಾದ ಕೆಲಸಗಳನ್ನು ಕೈಗೊಳ್ಳುವ ಅತಿ ದೊಡ್ಡ ಮತ್ತು ಅತಿ ಗುರುತಿಸಲ್ಪಟ್ಟ ಸಂಸ್ಥೆಗಳಲ್ಲಿ ಒಂದು. ೧೯೯೩ ರಲ್ಲಿ ಆರಂಭಿಸಲ್ಪಟ್ಟ ಈ ಸಂಸ್ಥೆ ೭೦೦ ಕೆಲಸಗಾರರನ್ನು ಪ್ರಪಂಚದ ೨೨ ಸ್ಥಳಗಳಲ್ಲಿ ಹೊಂದಿದೆ. ಇದರ ಮುಖ್ಯ ಕಛೇರಿ ಇರುವುದು ಅಮೆರಿಕಾದ ರಾಲೀ, ನಾರ್ತ್ ಕೆರೊಲೈನಾ ದಲ್ಲಿ. ಮುಖ್ಯವಾಗಿ ಲಿನಕ್ಸ್ ಕಾರ್ಯಾಚರಣ ವ್ಯವಸ್ಥೆ, ಅದರ ಅಭಿವೃದ್ಧಿ, ನಿರ್ವಹಣೆ ಮತ್ತು ಅಂತರಜಾಲ ವಿಷಯಗಳಿಗೆ ಸಂಬಂಧಪಟ್ಟ ಮುಕ್ತ ತಂತ್ರಾಂಶಗಳ ಬೆಳವಣಿಗೆ ಈ ಸಂಸ್ಥೆಯ ಕ್ಷೇತ್ರಗಳು. ಚರಿತ್ರೆ ಮಾರ್ಕ್ ಈವಿಂಗ್ ರಿಂದ ೧೯೯೩ ರಲ್ಲಿ ರೆಡ್ ಹ್ಯಾಟ್ ಸ್ಥಾಪಿಸಲ್ಪಟ್ಟಿತು. ೧೯೯೫ ರಲ್ಲಿ ಕೆನಡಾ ದ ಎಸಿಸಿ ಕಾರ್ಪೊರೇಷನ್ ನೊಂದಿಗೆ ರೆಡ್ ಹ್ಯಾಟ್ ಸೇರಿದ ನಂತರ, ಬಾಬ್ ಯಂಗ್ ೧೯೯೯ ರ ವರೆಗೆ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ೧೯೯೯ ರಲ್ಲಿ ೬೦ ಲಕ್ಷ ಶೇರುಗಳನ್ನು ಮಾರುಕಟ್ಟೆಗೆ ಬಿಟ್ಟ ಸಂಸ್ಥೆ ೧೯೯೯ ರಲ್ಲಿ ಸಿಗ್ನಸ್ ಸೊಲೂಷನ್ಸ್ ಎಂಬ ಇನ್ನೊಂದು ಸಂಸ್ಥೆಯೊಂದಿಗೆ ಸೇರಿತು. ತಂತ್ರಾಂಶಗಳು ರೆಡ್ ಹ್ಯಾಟ್ ಲಿನಕ್ಸ್ ಕಾರ್ಯಾಚರಣ ವ್ಯವಸ್ಥೆ ಈ ಸಂಸ್ಥೆಯ ಮುಖ್ಯ ತಂತ್ರಾಂಶ. ಇದರ ಅಭಿವೃದ್ಧಿ ಹಾಗೂ ವಿತರಣೆ ಅನೇಕ ವರ್ಷಗಳಿಂದ ನಡೆದಿದೆ. ಇತ್ತೀಚೆಗೆ, ರೆಡ್ ಹ್ಯಾಟ್ ಲಿನಕ್ಸ್ ನ ೯ ನೇ ಆವೃತ್ತಿಯ ನಂತರ, ಫೆದೋರಾ ಲಿನಕ್ಸ್ ನ ಜೊತೆಗೂ ರೆಡ್ ಹ್ಯಾಟ್ ಕೆಲಸ ಮಾಡುತ್ತಿದೆ. ಫೆದೋರಾ ಲಿನಕ್ಸ್ ನ ಇನ್ನೊಂದು ವಿತರಣೆಯಾಗಿದ್ದು "ಫೆದೋರಾ ಪ್ರಾಜೆಕ್ಟ್" ಇದನ್ನು ನಿಭಾಯಿಸುತ್ತದೆ. ರೆಡ್ ಹ್ಯಾಟ್ ಈ ಪ್ರಾಜೆಕ್ಟ್ ನ ಸಹಾಯಕ ಸಂಸ್ಥೆಗಳಲ್ಲಿ ಒಂದು. ಬಾಹ್ಯ ಸಂಪರ್ಕಗಳು ರೆಡ್ ಹ್ಯಾಟ್ ಅಧಿಕೃತ ತಾಣ ಫೆಡೊರಾ ಪ್ರಾಜೆಕ್ಟ್ ತಂತ್ರಜ್ಞಾನ ಲಿನಕ್ಸ್ ವಿತರಣೆಗಳು
1828
https://kn.wikipedia.org/wiki/%E0%B2%AC%E0%B2%BE%E0%B2%A6%E0%B2%BE%E0%B2%AE%E0%B2%BF
ಬಾದಾಮಿ
ಭಾರತದ ಪ್ರಾಚೀನ ಸಂಸ್ಕೃತಿ ಮತ್ತು ಕರಕುಶಲತೆಯ ಮೂಲಕ ನಡೆಯಲು ಕರ್ನಾಟಕ ಯಾವಾಗಲೂ ಸರಿಯಾದ ಧ್ವನಿಯನ್ನು ಹೊಂದಿಸಿದೆ. ಅಂತಹ ಮಹತ್ವದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯ ಸ್ಥಳಗಳಲ್ಲಿ ಒಂದು ಬಾದಾಮಿ (ವಾತಾಪಿ). ಈ ಲೇಖನವು ಚಾಲುಕ್ಯರ ರಾಜಧಾನಿಯಾಗಿದ್ದ ಬಾದಾಮಿ ಸ್ಥಳದ ಬಗ್ಗೆ. ಗುಡ್ಡದ ಬದಿಯನ್ನು ಕೊರೆದು ನಿರ್ಮಿಸಿದ ಬಾದಾಮಿಯ ಗುಹಾಲಯಗಳು ವಿಶ್ವವಿಖ್ಯಾತವಾಗಿವೆ. ಈ ಗುಡ್ಡದ ಬುಡದಲ್ಲಿರುವ ಕೆರೆಯ ಪಶ್ಚಿಮ ತೀರದಲ್ಲಿ ಊರು ಹಬ್ಬಿದೆ. ಗುಡ್ಡದ ಮೇಲೆ ಕೋಟೆಯೂ ಚಾಲುಕ್ಯರ ಕಾಲದ ದೇವಾಲಯಗಳೂ ಕಟ್ಟಡಗಳೂ ಇವೆ. ಕೆರೆಯ ಉತ್ತರದ ದಡದ ಮೇಲೆ ಬಂಡೆಯೊಂದರ ಮೇಲೆ ಕಪ್ಪೆ ಅರಭಟ್ಟನ ಶಾಸನವನ್ನು ಕಾಣಬಹುದು. ಹತ್ತಿರದಲ್ಲೆ ಇನ್ನೊಂದು ಬಂಡೆಯ ಮೇಲೆ ಮುನ್ನಿದ್ದ ಶಾಸನವನ್ನು ಅಳಿಸಿ ಕೆತ್ತಲಾಗಿರುವ ಪಲ್ಲವ ನರಸಿಂಹವರ್ಮನ ಜಯಶಾಸನವನ್ನೂ ಕಾಣಬಹುದು. ಭಾರತೀಯ ದೇವಸ್ಥಾನ ನಿರ್ಮಾಣ ಕಲೆಯ ತೊಟ್ಟಿಲೆಂದೆನಿಸಿರುವ ಐಹೊಳೆ (ಐವಳಿ) ಪಟ್ಟದಕಲ್ಲುಗಳೂ, ಚಾಲುಕ್ಯರ ಪೂರ್ವ ರಾಜಧಾನಿಯಾಗಿದ್ದಿರಬಹುದಾದ ಮಹಾಕೂಟವೂ ಬಾದಾಮಿಗೆ ಅನತಿ ದೂರದಲ್ಲಿಯೆ ಇವೆ. ಇತಿಹಾಸ ಚಾಳುಕ್ಯ ಮಹಾಸಾಮ್ರಾಜ್ಯದ ರಾಜಧಾನಿಯಾಗಿ ಮೆರೆದ ಇತಿಹಾಸ ಪ್ರಸಿದ್ಧ ಬಾದಾಮಿ ಇಂದು ಬಾಗಲಕೋಟೆ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಕನ್ನಡಿಗರ ಮೊಟ್ಟ ಮೊದಲ ಸಾಮ್ರಾಜ್ಯವಾದ ಕದಂಬರ ಆಳ್ವಿಕೆಯಲ್ಲಿ ದಂಡಾಧಿಕಾಕಾರಿಯಾಗಿದ್ದ ಜಯಸಿಂಹನೆಂಬುವನು ಕ್ರಿ ಶ ೫೦೦ ರಲ್ಲಿ ಸಿಡಿದುಹೋಗಿ ಹೊಸ ತಂಡವೊಂದನ್ನು ಕಟ್ಟಿ, ಈಗಿನ ಬಾದಾಮಿ ಪ್ರದೇಶದಲ್ಲಿ ಹೊಸ ರಾಜ್ಯ ಸ್ಥಾಪಿಸಿದ. ಇದೇ ಮುಂದೆ ಇತಿಹಾಸದಲ್ಲಿ ಚಾಳುಕ್ಯ ರಾಜ ಮನೆತನವೆಂದು ಪ್ರಸಿದ್ಧವಾಯಿತು. ಅಂದರೆ ಚಾಳುಕ್ಯರು ಕದಂಬ ವಂಶಸ್ಥರೇ ಆಗಿದ್ದು ಕದಂಬರ ಆಡಳಿತದ ಮುಂದುವರಿದ ಭಾಗವೆಂದು ಹೇಳಬಹುದು. ಬಾದಾಮಿಯಲ್ಲಿ ಸಿಕ್ಕ ಶಾಸನದಲ್ಲಿ ಉಲ್ಲೇಖಿಸಿರುವಂತೆ ಚಾಳುಕ್ಯರು ಮಾನವ್ಯ ಗೋತ್ರದ ವಂಶಜರು. ಕದಂಬರೂ ಕೂಡ ಇದೇ ವಂಶಕ್ಕೆ ಸೇರಿದವರು. ಆದ್ದರಿಂದ ಇವರದ್ದೂ ಕದಂಬರ ಕುಲವೇ ಆಗಿದೆ. ಅಲ್ಲದೆ ಚಾಳುಕ್ಯ ಎಂಬುದು ಸಲಿಕೆ, ಚಲಿಕೆ ಶಬ್ದಗಳಿಂದ ನಿಷ್ಪತ್ತಿಯಾಗಿದೆಯೆಂದು ಅಭಿಪ್ರಾಯಪಡಲಾಗಿದೆ.ಇವುಗಳು ಅಚ್ಚ ಕನ್ನಡ ಪದಗಳಾಗಿದ್ದು ವ್ಯವಸಾಯದಲ್ಲಿ ಉಪಯೋಗಿಸುವ ವಸ್ತುಗಳಾಗಿವೆ. ಆದ್ದರಿಂದ ಚಾಳುಕ್ಯರು ಕನ್ನಡಿಗರೇ ಹೊರತು ಬೇರೆಲ್ಲಿಂದಲೋ ಬಂದು ಆಕ್ರಮಣ ಮಾಡಿ ರಾಜ್ಯಸ್ಥಾಪನೆ ಮಾಡಿದವರಲ್ಲ ಎಂಬುದು ಇತಿಹಾಸಜ್ಞರ ಒಟ್ಟಾರೆ ಅಭಿಪ್ರಾಯವಾಗಿದೆ. ಇವರ ರಾಜಲಾಂಛನ ವರಾಹ! ಮೂಲತ: ವೈಷ್ಣವ ಮತಾವಲಂಬಿಗಳಾಗಿದ್ದ ಇವರು ೧ನೇ ವಿಕ್ರಮಾದಿತ್ಯನ ಕಾಲದಿಂದ 'ಶಿವಮಂಡಲ ದೀಕ್ಷೆ' ಪಡೆದು ಶೈವ ಸಂಪ್ರದಾಯವನ್ನು ಅನುಸರಿಸಲು ಶುರುಮಾಡಿದರು.ಕದಂಬರ ಆಡಳಿತದಲ್ಲಿ ದಂಡಾಧೀಶನಾಗಿ ಈ ಪ್ರಾಂತದಲ್ಲಿ ನಿಯುಕ್ತನಾಗಿದ್ದ ಜಯಸಿಂಹನೆಂಬುವವ ಮೊತ್ತಮೊದಲು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಶುರು ಮಾಡುತ್ತಾನೆ. ಇವನೇ ಚಾಳುಕ್ಯರ ಮೂಲವಂಶಸ್ಥ. ನಂತರದಲ್ಲಿ ರಣರಾಗ, ೧ನೇ ಪುಲಿಕೇಶಿ, ೧ನೇ ಕೀರ್ತಿವರ್ಮ ಹೀಗೆ ವಂಶ ಮುಂದುವರಿಯುತ್ತದೆ. ಕೀರ್ತಿವರ್ಮ ಕ್ರಿ ಶ 597ರಲ್ಲಿ ನಡೆದ ಪಲ್ಲವರೊಂದಿಗಿನ ಯುದ್ಧದಲ್ಲಿ ಮಡಿದಾಗ 2ನೇ ಪುಲಿಕೇಶಿಯೂ ಸೇರಿದಂತೆ ಅವನ ಮಕ್ಕಳೆಲ್ಲ ಚಿಕ್ಕವರಿದ್ದರು. ಆದ್ದರಿಂದ ಕೀರ್ತಿವರ್ಮನ ತಮ್ಮನಾದ ಮಂಗಳೇಶನು ಸುಮಾರು 12ವರ್ಷ ರಾಜ್ಯವಾಳಿದ. 2ನೇ ಪುಲಿಕೇಶಿ ವಯಸ್ಸಿಗೆ ಬಂದಾಗ ಕೀರ್ತಿವರ್ಮ ರಾಜಧರ್ಮದ ಶಿಷ್ಟಾಚಾರದಂತೆ ಅವನಿಗೆ ರಾಜ್ಯ ಒಪ್ಪಿಸಲು ಹಿಂದೇಟು ಹಾಕಿ ತನ್ನ ಮಕ್ಕಳಿಗೆ ಅಧಿಕಾರ ಹಸ್ತಾಂತರಿಸುವ ಹುನ್ನಾರ ಮಾಡಿದ. ಆಗ 2ನೇ ಪುಲಕೇಶಿಯು ಚಿಕ್ಕಪ್ಪನನ್ನು ಕೊಂದು ಅಧಿಕಾರ ಕಿತ್ತುಕೊಂಡ. ಚಾಲುಕ್ಯರಲ್ಲಿ ಅತ್ಯಂತ ಪ್ರಬಲ ಆಡಳಿತ ನೀಡಿದ ಕಣ್ಣು ಕೋರೈಸುವ ಶೂರ ದೊರೆ ಈತ ಎಂದೂ ಪ್ರಸಿದ್ಧನಾಗಿದ್ದಾನೆ. ಇವನ ನಂತರ ಈ ವಂಶದ ಹೆಸರಿಸಬಹುದಾದ ರಾಜರುಗಳೆಂದರೆ ೧ನೇ ವಿಕ್ರಮಾದಿತ್ಯ, ವಿನಯಾದಿತ್ಯ, ವಿಜಯಾದಿತ್ಯ ಹಾಗು ೨ನೇ ವಿಕ್ರಮಾದಿತ್ಯ. ೨ನೇ ವಿಕ್ರಮಾದಿತ್ಯ ತನ್ನ ಮುತ್ತಾತನಂತೆ ಅತ್ಯಂತ ಶೂರ ದೊರೆಯಾಗಿದ್ದು ತಮ್ಮ ಪಾರಂಪರಿಕ ವೈರಿಗಳಾಗಿದ್ದ ಪಲ್ಲವರನ್ನು ಅವರದ್ದೇ ನೆಲದಲ್ಲಿ ಸೋಲಿಸಿ ಕಂಚಿಯ ಕೈಲಾಸನಾಥರ್ ದೇವಾಲಯದಲ್ಲಿ ಕನ್ನಡ ಶಾಸನೊವೊಂದನ್ನು ನೆಡೆಸುತ್ತಾನೆ. ಇಂಥ ಹೆಮ್ಮೆಯ ಸಾಮ್ರಾಜ್ಯ ಕ್ರಿ ಶ 753ರಲ್ಲಿ ಕೀರ್ತಿವರ್ಮನಿಂದ ಕೊನೆಯಾಗುತ್ತದೆ. ತಮ್ಮ ಕೈಕೆಳಗೆ ಮಾಡಲೀಕರಾಗಿದ್ದ ರಾಷ್ಟ್ರಕೂಟರ ದಂತಿವರ್ಮನಿಗೆ ಸೋಲುವ ಮೂಲಕ ಚಾಲುಕ್ಯರು ಆಳ್ವಿಕೆ ತಾತ್ಕಾಲಿಕವಾಗಿ ಕೊನೆಯಾಗುತ್ತದೆ. ನಂತರ ರಾಷ್ಟ್ರಕೂಟರು ಸುಮಾರು 250 ವರ್ಷ ಆಡಳಿತ ನಡೆಸುತ್ತಾರೆ. ಇತಿಹಾಸದ ಕಾಲಚಕ್ರ ಉರುಳುತ್ತದೆ. ಕ್ರಿ ಶ 973ರಲ್ಲಿ ಮತ್ತೆ ಚಾಲುಕ್ಯರು 2ನೇ ತೈಲಪನು ರಾಷ್ಟ್ರಕೂಟರ 2ನೇ ಕರ್ಕನನ್ನು ಸೋಲಿಸುವ ಮೂಲಕ ಆಡಳಿತವನ್ನು ಹಿಂದಕ್ಕೆ ಪಡೆಯುತ್ತಾನೆ. ಇಲ್ಲಿಯವರೆಗೆ ಅಳಿದುಳಿದ ಚಾಲುಕ್ಯರು ಈಗಿನ ಬೀದರ್ ನ ಬಸವಕಲ್ಯಾಣವನ್ನು ಕೇಂದ್ರವನ್ನಾಗಿ ಮಾಡಿಕೊಂಡು ಆಡಳಿತ ನಡೆಸಿದ್ದರಿಂದ ಇಲ್ಲಿಂದ ಮುಂದೆ ಈ ಗುಂಪನ್ನು ಇತಿಹಾಸದಲ್ಲಿ "ಕಲ್ಯಾಣ ಚಾಳುಕ್ಯ"ರು ಎಂದು ಗುರುತಿಸಲಾಗುತ್ತದೆ ಅಲ್ಲದೇ ಬಾದಾಮಿಯನ್ನು ವಶಪಡಿಸಿಕೊಂಡ ನಂತರವೂ ಅಲ್ಲಿಂದಲೇ ಆಡಳಿತವನ್ನು ಮುಂದುವರಿಸುತ್ತಾರೆ. ಈ ಆಳ್ವಿಕೆ ಕ್ರಿ ಶ 12ನೇ ಶತಮಾನದವರೆಗೆ ಮುಂದುವರಿಯುತ್ತದೆ. ಈಗಿನ ತೆಲಂಗಾಣದ ಅಲಂಪುರ ಪ್ರದೇಶದಲ್ಲಿ "ವೆಂಗಿ ಚಾಳುಕ್ಯ"ರು ಎಂದು ಗುರುತಿಸಲ್ಪಡುವ ಇನ್ನೊಂದು ಗುಂಪು ಆಡಳಿತ ನಡೆಸಿದ್ದು ಕಂಡುಬರುತ್ತದೆ. ಇದು ಕೂಡ ಚಾಲುಕ್ಯರ ವಂಶಾಡಳಿತವೆ. ಕ್ರಿ ಶ 616ರಲ್ಲಿ 2ನೇ ಪುಲಿಕೇಶಿ ತನ್ನ ಶೌರ್ಯ-ಸಾಹಸಗಳಿಂದ ಆಂಧ್ರಪ್ರದೇಶದ ಕೆಲ ಭಾಗಗಳನ್ನು ಗೆದ್ದುಕೊಂಡ. ಅಲ್ಲಿನ ಆಡಳಿತ ನೋಡಿಕೊಳ್ಳಲು ತನ್ನ ಸೋದರನಾದ ಕುಬ್ಜ ವಿಷ್ಣುವರ್ಧನನನ್ನು ರಾಜಪ್ರತಿನಿಧಿಯನ್ನಾಗಿ ನೇಮಿಸಿದ. ಇವನು ಅಣ್ಣನ ಮರಣದ ನಂತರ ಸ್ವತಂತ್ರ ಆಡಳಿತ ನಡೆಸುವ ಮೂಲಕ ವೆಂಗಿ ಚಾಳುಕ್ಯ ವಂಶದ ಉದಯಕ್ಕೆ ಕಾರಣನಾಗುತ್ತಾನೆ. ಇಡೀ ಭಾರತದ ಚರಿತ್ರೆ ಸಂಸ್ಕೃತಿಗಳ ಮೇಲೆ ತಮ್ಮ ಅಚ್ಚೊತ್ತಿದ ಚಾಲುಕ್ಯರ ಬಾದಾಮಿಯು ಸರ್ವಥಾ ಪ್ರೇಕ್ಷಣೀಯ, ಸರ್ವಥಾ ಆದರಣೀಯ. ಅದರಲ್ಲೂ ಭಾರತೀಯ ದೇವಾಲಯ ವಾಸ್ತುವಿನ "ತೊಟ್ಟಿಲು" ಎಂದು ಪ್ರಸಿದ್ಧವಾದ ಪಟ್ಟದಕಲ್ಲು ಚಾಳುಕ್ಯ ಅರಸರೆಲ್ಲರೂ ಪಟ್ಟಾಭಿಷಿಕ್ತರಾಗುತ್ತಿದ್ದ ಸ್ಥಳ. ಇಲ್ಲಿ ಸುತ್ತ-ಮುತ್ತಲಿರುವ ಐಹೊಳೆ,ಪಟ್ಟದಕಲ್ಲು ಹಾಗು ಮಹಾಕೂಟಗಳಲ್ಲೆಲ್ಲ ಚಾಳುಕ್ಯರ ಬಿಟ್ಟುಹೋಗಿರುವ ಐತಿಹಾಸಿಕ ಅವಶೇಷಗಳನ್ನು ಕಾಣಬಹುದು. ಬಾದಾಮಿಯು ಚಾಳುಕ್ಯರ ವಂಶಾಡಳಿತಕ್ಕೆ ನಾಂದಿ ಹಾಡಿದ ಸ್ಥಳ. ಇತಿಹಾಸದಲ್ಲೇ ಇಷ್ಟೊಂದು ಭವ್ಯ,ಬೃಹತ್ ಹಾಗು ಕಲಾನೈಪುಣ್ಯತೆಯಿಂದ ಕೂಡಿದ ಗುಹಾಲಯ ಇನ್ನೊಂದಿಲ್ಲ. ಇಲ್ಲಿ ಒಟ್ಟು ೪ ಗುಹಾಲಯಗಳಿದ್ದು ಅವು ಅನುಕ್ರಮವಾಗಿ ಶೈವ, ವೈಷ್ಣವ,ಜೈನ ಹಾಗು ಬೌದ್ಧ ಧರ್ಮವನ್ನು ಬಿಂಬಿಸುತ್ತವೆ. ಇಲ್ಲಿ ಬೃಹತ್ ಬೆಟ್ಟವನ್ನು ಬೆಣ್ಣೆಯಂತೆ ಕೊರೆದು ಕಲಾಸಿರಿಯನ್ನು ತುಂಬಿರುವುದು ಎಂಥವರನ್ನೂ ಚಕಿತರನ್ನಾಗಿಸುತ್ತದೆ. ಅಪಾರ ಶ್ರಮ, ಸಹನೆ ಹಾಗು ಸಂಪತ್ತನ್ನು ಬೇಡುವ ಈ ಕೆಲಸ ಚಾಳುಕ್ಯರ ಮಹತ್ವಾಕಾಂಕ್ಷೆಯಲ್ಲಿ ಅರಳಿ ನಿಂತಿರುವುದು ಕಂಡುಬರುತ್ತದೆ. ಇಲ್ಲಿನ ೧ನೇ ಗುಹಾಲಯ ಶೈವ ಸಂಪ್ರದಾಯಕ್ಕೆ ಸೇರಿದೆ. ಇದನ್ನು ೫ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ೧ನೇ ಪುಲಿಕೇಶಿಯ ಕಾಲದಲ್ಲಿ ನಿರ್ಮಿಸಲಾಗಿರುವ ಇದರಲ್ಲಿ ಹರಿಹರ, ಅರ್ಧನಾರೀಶ್ವರ, ವಾತಾಪಿ ಗಣಪತಿ, ಕಾರ್ತಿಕೇಯ ಹಾಗು ನಟರಾಜ ಶಿಲ್ಪಗಳಿವೆ. ಸಭಾಮಂಟಪದಲ್ಲಿನ ಚೌಕಾಕಾರದ ಬೃಹತ್ ಕಂಬಗಳೂ, ಅದರ ಮೇಲೆ ಮೂಡಿಸಿರುವ ಮಣಿ ಕೆತ್ತನೆಗಳು ಅಲ್ಲಿನದೇ ಛತ್ತನಲ್ಲಿ ಆಕಾಶದಲ್ಲಿ ತೇಲಾಡುತ್ತಿರುವಂತೆ ಕೆತ್ತಿರುವ ಗಂಧರ್ವ ಪ್ರೇಮಿಗಳ ಶಿಲ್ಪಗಳು ಆಕರ್ಷಕವಾಗಿವೆ. ಇಲ್ಲಿರುವ ಪ್ರತಿಯೊಂದು ಶಿಲ್ಪವೂ ತನ್ನದೇ ಆದ ವೈವಿಧ್ಯತೆಯಿಂದ ವಿವರಪೂರ್ಣವಾಗಿವೆ. ಅದರಲ್ಲೂ 18ಕೈಗಳ ನಟರಾಜ, ಅದರ ಪ್ರತಿಯೊಂದು ಕೈಯಲ್ಲಿ ಹಿಡಿದ ವಿವಿಧ ಆಯುಧಗಳು, ಅದರ ನರ್ತನದ ವಿಶೇಷ ಭಂಗಿ ಮೋಹಕವಾಗಿದೆ. ಇಷ್ಟೊಂದು ಬಾಹುಗಳುಳ್ಳ ನಟರಾಜನ ಶಿಲ್ಪ ಪ್ರಪಂಚದಲ್ಲಿ ಮತ್ತೆಲ್ಲೂ ಕಾಣಸಿಗುವುದಿಲ್ಲ. ಅಲ್ಲಿನ ಇನ್ನೊಂದು ವಿಶೇಷ ಶಿಲ್ಪ ಅರ್ಧನಾರೀಶ್ವರನದ್ದು ಇದರಲ್ಲಿನ ಪಾರ್ವತಿ ಭಾಗದಲ್ಲಿನ ಕಿರೀಟ, ಕರ್ಣಕುಂಡಲ, ಬಳೆಗಳು, ತೋಳ್ಬಂದಿ ಮುಂತಾದವುಗಳು ಹಾಗು ಶಿವನ ಭಾಗದಲ್ಲಿನ ಜಟಾಮುಕುಟ, ನಾಗಪರಶು, ಅರ್ಧಚಕ್ರ ಹಾಗು ನಂದಿಯ ಕೆತ್ತನೆಗಳು ಆಕರ್ಷಕವಾಗಿವೆ. ಅಲ್ಲೇ ಬುಡದಲ್ಲಿ ಶಿವನ ಈ 'ಅರ್ಧನಾರೀಶ್ವರ'ನ ರೂಪಕ್ಕೆ ಕಾರಣನಾದ ಅಸ್ಥಿಪಂಜರದ ಭೃಂಗಋಷಿಯ ಕೆತ್ತನೆಯನ್ನು ವಿಶೇಷವಾಗಿ ಗಮನಿಸಬೇಕು. ಮತ್ತೊಂದು ಗಮನ ಸೆಳೆಯುವ ಶಿಲ್ಪವೆಂದರೆ ಲಕ್ಷ್ಮಿ-ಪಾರ್ವತಿ ಸಹಿತನಾಗಿರುವ ಹರಿ-ಹರನ ಶಿಲ್ಪ. ಇದರಲ್ಲೂ ಶಿವನ ಭಾಗದಲ್ಲಿರುವ ಜಟಾಮುಕುಟ, ಸರ್ಪಕುಂಡಲ, ಸರ್ಪಯಜ್ಞೋಪವೀತಗಳು ಗಮನ ಸೆಳೆಯುತ್ತವೆ. ಇದಲ್ಲದೇ ಇಲ್ಲಿನ ತ್ರಿಶೂಲಧಾರಿ ದ್ವಾರಪಾಲಕರು, ಐದುಹೆಡೆಯ ನಾಗರಾಜ, ವಿದ್ಯಾಧರ ದಂಪತಿಗಳು, ಪಾರ್ವತಿ ಕಲ್ಯಾಣ, ಭಿಕ್ಷಾಟನಾ ಶಿವ, ಸ್ತ್ರೀ-ಪುರುಷರ ಮಿಥುನ ಶಿಲ್ಪಗಳು ಆಕರ್ಷಕವಾಗಿವೆ. ೨ನೇ ಗುಹಾಲಯ ವೈಷ್ಣವ ಗುಹಾಲಯ. ಇದನ್ನು ಚಾಲುಕ್ಯ ದೊರೆ ಕೀರ್ತಿವರ್ಮನ ಕಾಲದಲ್ಲಿ ನಿರ್ಮಿಸಲಾಗಿದೆ. ಇದು ಗರ್ಭಗೃಹ, ಸಭಾಮಂಟಪ ಹಾಗು ಮುಖ ಮಂಟಪಗಳನ್ನು ಹೊಂದಿದ್ದು ಪ್ರವೇಶದ್ವಾರದ ಎಡ-ಬಲ ಬದಿಯಲ್ಲಿ ಬೃಹತ್ ದ್ವಾರಪಾಲಕರು ಸ್ವಾಗತಿಸುತ್ತಾರೆ. ಇಲ್ಲಿನ ಭೂವರಾಹ ಮೂರ್ತಿ, ವಿರಾಟ್ ರೂಪದ ವಾಮನ-ತ್ರಿವಿಕ್ರಮನ ಶಿಲ್ಪ, ಶುಕ್ರಾಚಾರ್ಯರು ವಿಷ್ಣುವಿಗೆ ಅರ್ಘ್ಯ ಸಮರ್ಪಿಸಿತ್ತಿರುವುದು, ಬಲಿಚಕ್ರವರ್ತಿಯ ಸಂಹಾರ ಮುಂತಾದವುಗಳು ಗಮನ ಸೆಳೆಯುತ್ತವೆ. ೩ನೇ ಗುಹಾಲಯ ಮತ್ತೊಂದು ವೈಷ್ಣವ ಗುಹಾಲಯ. ಇದನ್ನು ಚಾಲುಕ್ಯ ದೊರೆ ಮಂಗಳೇಶನು ತನ್ನ ಸಹೋದರ ಕೀರ್ತಿವರ್ಮನ ಪಟ್ಟಾಭಿಷೇಕದ ನೆನಪಿಗೆ ನಿರ್ಮಿಸಿದ್ದಾನೆ. ಇದು ಇಲ್ಲಿರುವ ಎಲ್ಲ ಗುಹಾಲಯಗಳಲ್ಲಿ ಅತಿ ದೊಡ್ಡದು. ಇಲ್ಲೂ ಕೂಡ ಗರ್ಭಗೃಹ, ಸಭಾಮಂಟಪ ಹಾಗು ಮುಖ ಮಂಟಪಗಳು ಇವೆ. ಇಲ್ಲಿನ ೮ ಕೈಗಳ ವಿಷ್ಣುವಿನ ಬೃಹತ್ ಶಿಲ್ಪ, ಆ ಕೈಗಳಲ್ಲಿ ಹಿಡಿದಿರುವ ವಿವಿಧ ಆಯುಧಗಳ ವಿವರಪೂರ್ಣ ಕೆತ್ತನೆ, ಹಾಗು ಇದರ ಎದುರಲ್ಲೇ ವಾಮನಾವತಾರದ ಬೃಹತ್ ಶಿಲ್ಪ ಮೋಹಕವಾಗಿವೆ. ಇಷ್ಟೇ ಅಲ್ಲದೆ ಶೇಷಶಯನ ವಿಷ್ಣು, ಬೃಹದಾಕಾರದ ಭೂವರಾಹ ಶಿಲ್ಪಗಳು, ನರಸಿಂಹ, ಹರಿಹರ ಹಾಗು ವಿಷ್ಣುಪುರಾಣದ ಕಥಾನಕದ ದೃಶ್ಯಾವಳಿಯ ಕೆತ್ತನೆಗಳನ್ನು ಕಾಣಬಹುದು. ೪ನೇ ಗುಹಾಲಯ ಜೈನ ಮತಾವಲಂಬದ್ದು. ಇಲ್ಲಿನ ಗರ್ಭಗೃಹದಲ್ಲಿ ಮಹಾವೀರನ ಮೂರ್ತಿ ಇದೆ. ಮುಖ ಮಂಟಪದಲ್ಲಿ ಪಾರ್ಶ್ವನಾಥ-ಬಾಹುಬಲಿಯರ ಬೃಹತ್ತ ಶಿಲ್ಪಗಳಿವೆ. ಇಲ್ಲಿರುವ ಬಾಹುಬಲಿಯ ಮೂರ್ತಿ ದಕ್ಷಿಣ ಭಾರತದಲ್ಲೇ ಅತ್ಯಂತ ಪುರಾತನ ಮೂರ್ತಿಯೆಂಬ ಖ್ಯಾತಿ ಇದೆ. ಇದಲ್ಲದೇ ಇಲ್ಲಿ ಜಂಬುಲಿಂಗ ದೇವಾಲಯ, ಕೆಳಗಿನ ಶಿವಾಲಯ ಹಾಗು ಮೇಲಿನ ಶಿವಾಲಯ ಹಾಗು ಭೂತನಾತ ದೇವಾಲಯಗಳಲ್ಲದೇ ಅಲ್ಲಲ್ಲಿ ಚಿಕ್ಕ-ಪುಟ್ಟ ಅಸಂಖ್ಯ ಗುಡಿ-ಗುಂಡಾರಗಳಿವೆ. ಅವುಗಳ ಮಧ್ಯದಲ್ಲೇ ಐತಿಹಾಸಿಕ ಮಹತ್ವದ ಕಪ್ಪೆಅರೆಭಟ್ಟನ ಶಾಸನವಿದೆ. ಜನಸಂಖ್ಯೆ ೨೦೦೧ ರ ಜನಗಣತಿಯ ಪ್ರಕಾರ ಬಾದಾಮಿ ಪಟ್ಟಣದ ಜನಸಂಖ್ಯೆ 25847 (೨೦೦೧ ರ ಜನಗಣತಿ ಪ್ರಕಾರ) ಇಲ್ಲಿನ ಸಾಕ್ಷರತೆ ಪ್ರಮಾಣ ೬೦%. ಶೈಕ್ಷಣಿಕ ಪ್ರಮುಖ ವಿದ್ಯಾಸಂಸ್ಥೆಗಳು ಶ್ರೀ ವೀರಪುಲಿಕೇಶಿ ವಿದ್ಯಾವರ್ಧಕ ಸಂಸ್ಥೆ, ಬಾದಾಮಿ. ಶ್ರೀ ಕಾಳಿದಾಸ ವಿದ್ಯಾವರ್ಧಕ ಸಂಸ್ಥೆ, ಬಾದಾಮಿ ಶ್ರೀ ವೀರಶೈವ ಶಾಲೆ, ಬಾದಾಮಿ ಸ್ವಾಮಿ ವಿವೇಕಾನಂದ ಶಾಲೆ, ಬಾದಾಮಿ ಪ್ರಮುಖ ಬೆಳೆಗಳು ಜೋಳ, ಸಜ್ಜೆ, ಶೇಂಗಾ, ಸೂರ್ಯಪಾನ (ಸೂರ್ಯ ಕಾಂತಿ), ಉಳ್ಳಾಗಡ್ಡಿ(ಈರುಳ್ಳಿ). ಪ್ರಮುಖ ಆಹಾರ ಧಾನ್ಯ ಜೋಳ ಜೊತೆಗೆ ಗೋಧಿ, ಬೇಳೆಕಾಳುಗಳು. ಹವಾಮಾನ ಬೇಸಿಗೆ-ಚಳಿಗಾಲ- ಜಿಲ್ಲೆಯ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಅಂದರೆ ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ಡಿಗ್ರಿವರೆಗೆ (ಡಿಸೆಂಬರನಲ್ಲಿ) ಉಷ್ಣತೆ ಇರುತ್ತದೆ. ಬೇಸಿಗೆ - °C-೩೯°C , ಚಳಿಗಾಲ - °C-°C ಮಳೆ - ಪ್ರತಿ ವರ್ಷ ಮಳೆ ಸರಾಸರಿ ಮಿಮಿ ಗಳಷ್ಟು ಆಗಿರುತ್ತದೆ. ಗಾಳಿ -ಗಾಳಿ ವೇಗ ಕಿಮಿ/ಗಂ (ಜೂನ), ಕಿಮಿ/ಗಂ (ಜುಲೈ)ಹಾಗೂ ಕಿಮಿ/ಗಂ (ಅಗಸ್ಟ) ಇರುತ್ತದೆ. ಸಮೀಪದ ಸ್ಥಳಗಳು ‍* ಪಟ್ಟದಕಲ್ಲು ಶಿವಯೋಗಮಂದಿರ ಐಹೊಳೆ ಮಹಾಕೂಟ ಕೂಡಲ ಸಂಗಮ ಪ್ರವಾಸ ಮಲ್ಲಿಕಾರ್ಜುನ ದೇವಾಲಯ ಬಾದಾಮಿಗೆ ಭೇಟಿ ನೀಡುವ ಪ್ರವಾಸಿಗರು ಅಲ್ಲಿನ ಮರಳುಗಲ್ಲಿನಿಂದ ನಿರ್ಮಿತ ಗುಹೆ ದೇವಾಲಯಗಳನ್ನು ನೋಡಬಹುದು. ಇವು ತಮ್ಮಪುರಾತನ ಮತ್ತು ಧಾರ್ಮಿಕ ಆಚರಣೆಗಳು ಹಾಗು ವಿಷಯಗಳನ್ನು ಕ್ರಿಯಾಶೀಲ ಕೆತ್ತನೆಗಳ ಮೂಲಕ ವಿವರಿಸುತ್ತವೆ. ನಾಲ್ಕು ಗುಹೆಗಳುಳ್ಳ ದೇವಾಲಯದಲ್ಲಿ ಅತ್ಯಂತ ಹಳೆಯದು 5ನೇ ಶತಮಾನದ ಗುಹೆ ದೇವಾಲಯ. ಈ ದೇವಾಲಯದಲ್ಲಿ ಶಿವನ ಅರ್ಧನಾರೀಶ್ವರ ಮತ್ತು ಹರಿಹರ ಅವತಾರಗಳ ಕೆತ್ತನೆಗಳಿದ್ದು ನಟರಾಜನ ಅವತಾರದಲ್ಲಿ ತಾಂಡವ ನೃತ್ಯದಲ್ಲಿ ತೊಡಗಿರುವ ಕೆತ್ತನೆಯನ್ನು ಕಾಣಬಹುದಾಗಿದೆ. ಪರಮ ಶಿವನನ್ನು ಹರಿಹರನ ಬಲಕ್ಕೆ ಮತ್ತು ವಿಷ್ಣುವನ್ನು ಎಡಭಾಗದಲ್ಲಿ ಇರಿಸಲಾಗಿದೆ. ಈ ಗುಹೆಗೆ ಭೇಟಿ ಕೊಟ್ಟಾಗ ಮಹಿಷಾಸುರಮರ್ಧಿನಿ ಮತ್ತು ಗಣಪತಿ, ಶಿವಲಿಂಗ ಹಾಗೂ ಷಣ್ಮುಖರನ್ನೂ ಕಾಣಬಹುದು. ಎರಡನೇ ಗುಹೆ ಎರಡನೇ ಗುಹೆ ಸ್ವಾಮಿ ವಿಷ್ಣುವಿಗೆ ಸಮರ್ಪಿಸಲಾಗಿದ್ದು ಇಲ್ಲಿನ ವರಾಹ ಮತ್ತು ತ್ರಿವಿಕ್ರಮರ ಅವತಾರಗಳಲ್ಲಿ ಬಿಂಬಿಸಲಾಗಿದೆ. ಪುರಾಣದಲ್ಲಿ ಹೇಳಿರುವ ವಿಷ್ಣು ಮತ್ತು ಆತನ ಗರುಡ ಅವತಾರವನ್ನು ಈ ದೇವಾಲಯದ ಛಾವಣಿಯಲ್ಲಿ ಕಾಣಬಹುದು. 100 ಅಡಿ ಆಳವಿರುವ ಈ ಮೂರನೇ ಗುಹೆಯಲ್ಲಿ ತ್ರಿವಿಕ್ರಮ ಹಾಗೂ ನರಸಿಂಹರ ಅವತಾರದಲ್ಲಿ ವಿಷ್ಣುವಿನ 3 ಕಲಾಕೃತಿಗಳಿವೆ. ಇದರ ಜೊತೆಗೆ ಪ್ರವಾಸಿಗರು ಶಿವ ಮತ್ತು ಪಾರ್ವತಿಯರ ಕಲ್ಯಾಣ ಮಹೋತ್ಸವದ ದೃಶ್ಯಗಳನ್ನು ಈ ದೇವಾಲಯದ ಗೋಡೆಗಳ ಮೇಲೆ ಕಲಾಕೃತಿಗಳ ರೂಪದಲ್ಲಿ ಕಾಣಬಹುದು. ನಾಲ್ಕನೇ ಗುಹೆ ದೇವಾಲಯ ಜೈನ ಧರ್ಮಕ್ಕೆ ಸಮರ್ಪಿತವಾಗಿದ್ದು ಮಹಾವೀರನು ಕುಳಿತಿರುವ ಭಂಗಿಯ ಕಲಾಕೃತಿ ಮತ್ತು ತೀರ್ಥಂಕರ ಪಾರ್ಶ್ವನಾಥರ ಪ್ರತಿಮೆಯನ್ನು ಗುಹೆಯ ಜೊತೆಯಲ್ಲೇ ನಿರ್ಮಿಸಿರುವುದನ್ನು ಕಾಣಬಹುದು. ಭೂತನಾಥ ದೇವಾಲಯ ಭೂತನಾಥ ದೇವಾಲಯಗಳ ಸಮೂಹದ ಒಂದು ಭಾಗವಾಗಿಹ ಮಲ್ಲಿಕಾರ್ಜುನ ದೇವಾಲಯವು ಗುಂಪಿನ ಎರಡನೇ ಮಹತ್ವದ ದೇವಾಲಯವಾಗಿದೆ. ಅಗಸ್ತ್ಯ ಪುಷ್ಕರಿಣಿಯ ಈಶಾನ್ಯ ದಿಕ್ಕಿನಲ್ಲಿರುವ ಈ ದೇವಾಲಯವು ಕಲ್ಯಾಣ ಚಾಲುಕ್ಯರ ಸಹಜ ವಾಸ್ತು ಶೈಲಿಯ ವಿಶೇಷತೆಯಾದ ಎತ್ತರಿಸಿದ ಬೃಹತ್ ನಿರ್ಮಾಣವಾಗಿದೆ. ದೇವಾಲಯವು ಸಮಾಂತರವಾದ ವೇದಿಕೆಗಳು, ಬೃಹತ್ ಚೌಕ ಗೋಪುರಾಕೃತಿ ಮತ್ತು ಸಾದಾ ಗೋಡೆಗಳು ಮತ್ತು ಕೋನವಾದ ಛಾವಣಿಗಳುಳ್ಳ ತೆರೆದ ಮಂಟಪಗಳನ್ನು ಹೊಂದಿದೆ. ಬಾದಾಮಿಯನ್ನು ಪ್ರವಾಸಿಸುವವರು ನೋಡಬೇಕಾದ ಸ್ಥಳಗಳ ಪಟ್ಟಿಯಲ್ಲಿ ಮಲ್ಲಿಕಾರ್ಜುನ ದೇವಾಲಯವನ್ನು ಸೇರಿಸಿಕೊಳ್ಳಬಹುದು. ಪುರಾತನ ವಸ್ತುಸಂಗ್ರಹಾಲಯ ಬಾದಾಮಿಯನ್ನು ನೋಡಲು ಹೋಗುವ ಪ್ರವಾಸಿಗರು ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲೊಂದಾದ ಪುರಾತನ ವಸ್ತುಸಂಗ್ರಹಾಲಯಕ್ಕೆ ಒಮ್ಮೆ ಭೇಟಿ ನೀಡಲೇಬೇಕು. ಈ ವಸ್ತು ಸಂಗ್ರಹಾಲಯವನ್ನು 1979ರಲ್ಲಿ ಭಾರತದ ಪುರಾತತ್ವ ಇಲಾಖೆ ನಿರ್ಮಿಸಿದ್ದು ಆ ಸಮಯದಲ್ಲಿನ ಶಾಸನಗಳನ್ನು, ಕೆತ್ತನೆಗಳನ್ನು ಹಾಗೂ ಸಂಶೋಧಿತ ವಸ್ತುಗಳನ್ನು ಸಂರಕ್ಷಿಸಲು ಬಳಸಲಾಗುತಿತ್ತು. ಆದರೆ 1982 ರಷ್ಟರಲ್ಲಿ ಇದನ್ನು ವಿಶಿಷ್ಟವಾದ ಸ್ಥಳೀಯ ಕೆತ್ತನೆಗಳನ್ನು ಪ್ರದರ್ಶಿಸುವಂತಹ ಸಂಗ್ರಹಾಲಯವಾಗಿ ಮಾರ್ಪಾಡು ಮಾಡಲಾಯಿತು. ಈ ಸಂಗ್ರಹಾಲಯವನ್ನು ಸಂದರ್ಶಿಸುವ ಸಮಯದಲ್ಲಿ ಪ್ರವಾಸಿಗರು ಸಮೃದ್ಧಿ ಗೆ ಹೆಸರಾದ ಲಜ್ಜಾ ಗೌರಿ ಆಕೃತಿಗಳು ಮತ್ತು 6ನೇ ಶತಮಾನದಿಂದ 16ನೇ ಶತಮಾನಗಳ ಅವಧಿಯಲ್ಲಿ ನಿರ್ಮಿಸಿದ ಪ್ರಾಚೀನ ಶಾಸನಗಳನ್ನು ಕಾಣಬಹುದು. ಈ ಸಂಗ್ರಹಾಲಯದಲ್ಲಿ 4 ಪ್ರದರ್ಶನಾ ಘಟಕಗಳಿದ್ದು ಅವುಗಳಲ್ಲಿ ಶಿವ, ವಿಷ್ಣುವಿನ ವಿವಿಧ ಅವತಾರಗಳು, ಗಣಪತಿ ಹಾಗೂ ಭಗವದ್ಗೀತೆಯನ್ನು ಬಿಂಬಿಸುವ ಹಲವು ದೃಶ್ಯಾವಳಿಗಳನ್ನು ಪ್ರದರ್ಶಿಸುತ್ತವೆ. ಶಿವನ ವಾಹನವಾದ ಸುಂದರವಾದ ನಂದಿಯ ವಿಗ್ರಹವನ್ನು ಸಂಗ್ರಹಾಲಯದ ಪ್ರವೇಶದಲ್ಲಿ ಇರಿಸಲಾಗಿದೆ. ಈ ಸಂಗ್ರಹಾಲಯದಲ್ಲಿ ನಾಲ್ಕು ಪ್ರದರ್ಶನಾಗೂಡುಗಳಿದ್ದು ಮುಂಭಾಗದಲ್ಲಿ ಮತ್ತು ವರಾಂಡದಲ್ಲಿಯೂ ಸಹ ತೆರೆದ ಪ್ರದರ್ಶನಾ ಗೂಡುಗಳಿವೆ. ಇಲ್ಲಿನ ಪ್ರದರ್ಶನಗೂಡುಗಳಲ್ಲಿ ಒಂದರಲ್ಲಿರುವ ಶಿಡ್ಲಫಡಿ ಗುಹೆಯೂ ಪ್ರಾಚೀನ ಕಾಲದ ಕಲ್ಲಿನ ನೆಲೆಗೆ ಸಾಕ್ಷಿಯಾಗಿದೆ. ಕಲ್ಲಿನ ಕಲಾಕೃತಿಗಳೊಂದಿಗೆ ಈ ಪ್ರದರ್ಶನಾಗೂಡು ಪ್ರಾಚೀನ ಕಲೆ ಹಾಗೂ ಹಲವು ಶಾಸನಗಳನ್ನು ಪ್ರದರ್ಶಿಸುತ್ತದೆ. ಅಲ್ಲಿರುವ ತೆರೆದ ವರಾಂಡ ಪ್ರದರ್ಶನಾಗೂಡಿನಲ್ಲಿ ಪ್ರವಾಸಿಗರು ವೀರಗಲ್ಲುಗಳನ್ನು, ದ್ವಾರಪಾಲಕ ಜೋಡಿಯ ಆಕರ್ಷಕ ಚಿತ್ರಕಲೆ ಮತ್ತು ಶಾಸನಗಳನ್ನು ನೋಡಬಹುದು. ಸಂಗ್ರಹಾಲಯದ ಹೊಸ ಪ್ರದರ್ಶನಾಗೂಡಿನಲ್ಲಿ ಹಲವು ಶಿಲಾಶಾಸನ ವಿವರಗಳು ಮತ್ತು ವಾಸ್ತುಶಿಲ್ಪಗಳನ್ನು ಪ್ರದರ್ಶಿಸಲಾಗಿದೆ. ರಸ್ತೆ ಸಾರಿಗೆ ವಾಯವ್ಯ .ಕ.ರಾ.ಸಾ.ಸಂಸ್ಥೆ ವಿಭಾಗ ಬಾದಾಮಿ ಪಟ್ಟಣ ಸಾರಿಗೆ ಸಂಪರ್ಕ ಹೊಂದಿದೆ. ಸರಕಾರೇತರ ಮತ್ತು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಸಾರಿಗೆ ವಾಹನಗಳು (ಬಸ್ ಗಳು) ಜಿಲ್ಲೆಯಾದ್ಯಂತ ಸಂಚರಿಸುತ್ತವೆ. ನಗರ ಆಡಳಿತ ವಾರ್ಡ್ ಗಳು ನಗರದಲ್ಲಿ ಒಟ್ಟು [೨೨] ವಾರ್ಡ್ ಗಳು ಇರುತ್ತವೆ. ಬಾದಾಮಿ ಪ್ರಮುಖ ಬಡಾವಣೆಗಳು ಚಾಲುಕ್ಯ ನಗರ, ವಿದ್ಯಾ ನಗರ, ಆನಂದ ನಗರ, ಬ್ಯಾಂಕ ಕಾಲೊನಿ, ಮೆಣಬಸದಿ ರಸ್ತೆ, ಉಳ್ಳಾಗಡ್ಡಿ ಓಣಿ, ತಟಕೋಟಿ, ಕೀಲ್ಲಾ ಓಣಿ, ತಲವಾರ ಓಣಿ, ಗಾಂಧಿ ನಗರ, ಸಿನಿಮಾ ಚಿತ್ರ ಮಂದಿರಗಳು ಶ್ರೀ ಮಹಾಕೂಟೆಶ್ವರ, ಶ್ರೀ ಕುಮಾರೆಶ್ವರ, ಶೀತಲ್ ಖಾದ್ಯ ರೊಟ್ಟಿ , ಪಲ್ಯ, ಚಪಾತಿ, ಹೋಳಿಗಿ, ಕಡುಬು, ಸಿರಾ, ಉಪ್ಪಿಟ್ಟು, ಅವಲಕ್ಕಿ ವಗ್ಗರಣೆ, ಬಜ್ಜಿ, ಚೂಡಾ, ಇತ್ಯಾದಿ. ಬಾಹ್ಯ ಸಂಪರ್ಕಗಳು ಬಾಗಲಕೋಟೆ ಜಿಲ್ಲೆಯ ಅಧಿಕೃತ ಸರ್ಕಾರಿ ತಾಣಗಳು ಬಾಗಲಕೋಟೆಯ ನಕ್ಷೆ ಉಲ್ಲೇಖಗಳು ಟಿಪ್ಪಣಿಗಳು ೧. The Chalukyas of Badami Ed. Dr. M. S. Nagaraja Rao, The Mythic Society, Bangalore 1978 ೨. ಪಲ್ಲವ ಸೈನಿಕರು ಬಾದಾಮಿಯಿಂದ ಕೊಂಡೊಯ್ದ ಗಣಪನ ಪ್ರತಿಮೆಯೊಂದನ್ನು ಕಂಚಿಯ ದೇವಾಲಯದ ಪ್ರಾಕಾರದಲ್ಲಿ ಪ್ರತಿಷ್ಠಾಪಿಸಲಾಯಿತು. ಇದುವೆ ವಾತಾಪಿ ಗಣಪತಿ. ಮುತ್ತುಸ್ವಾಮಿ ದೀಕ್ಷಿತರು ತಮ್ಮ ಪ್ರಸಿದ್ಢ ಕೃತಿಯಲ್ಲಿ ಭಜಿಸಿದ್ದು ಈ ಗಣಪನನ್ನೆ. ವಾತಾಪಿಯೆಂದರೆ ಬಾದಾಮಿಯೆ. ಬಾಗಲಕೋಟೆ ಜಿಲ್ಲೆ ಬಾಗಲಕೋಟೆ ಜಿಲ್ಲೆಯ ತಾಲೂಕುಗಳು ನಿಸರ್ಗ ಪ್ರವಾಸ ಪ್ರವಾಸೋದ್ಯಮ ಕರ್ನಾಟಕದ ಪ್ರಮುಖ ಸ್ಥಳಗಳು ಇತಿಹಾಸ ಬಾದಾಮಿ ತಾಲೂಕಿನ ಪ್ರವಾಸಿ ತಾಣಗಳು ಭಾರತದ ಹಿಂದಿನ ರಾಜಧಾನಿ ನಗರಗಳುಭಾರತದ ಹಿಂದಿನ ರಾಜಧಾನಿ ನಗರಗಳು
1832
https://kn.wikipedia.org/wiki/%E0%B2%B6%E0%B3%8D%E0%B2%B0%E0%B3%80%20%E0%B2%B0%E0%B2%BE%E0%B2%AE%20%E0%B2%A8%E0%B2%B5%E0%B2%AE%E0%B2%BF
ಶ್ರೀ ರಾಮ ನವಮಿ
ಶ್ರೀ ರಾಮನವಮಿ ಹಿಂದೂ ದೇವರಾದ ರಾಮನ ಹುಟ್ಟಿದ ದಿನ. ಶ್ರೀ ರಾಮ ರಾಮಾಯಣದ ಕಥಾ ನಾಯಕ ಹಾಗೂ ಆದಿಕಾಲದ ಭಾರತದ ಅಯೋಧ್ಯೆಯ ರಾಜ. ದಶರಥ ಮಹಾ ರಾಜ ಶ್ರೀ ರಾಮನ ತಂದೆ. ಹಿಂದೂ ಸಂಪ್ರದಾಯದಲ್ಲಿ ರಾಮನನ್ನು ವಿಷ್ಣುವಿನ ಅವತಾರವಾಗಿ ಪೂಜಿಸಲಾಗುತ್ತದೆ. ಶ್ರೀ ರಾಮನವಮಿ ಯುಗಾದಿಯ ಎಂಟು ದಿನಗಳ ನಂತರ ಚೈತ್ರ ಮಾಸದ ಶುಕ್ಲ ಪಕ್ಷದಲ್ಲಿ ಆಚರಿಸಲಾಗುತ್ತದೆ. ಈ ದಿನವನ್ನು ರಾಮನ ಕಥಾ ವಾಚನಗೋಷ್ಠಿಗಳು , ಹಿಂದೂ ಪವಿತ್ರ ಮಹಾಕಾವ್ಯವಾದ ರಾಮಾಯಣ ಸೇರಿದಂತೆ ರಾಮನ ಕಥೆಗಳನ್ನು ಓದಿ ಅನುಸರಿಸಲಾಗಿದೆ. ಈ ದಿನದಂದು ಕೆಲವು ವೈಷ್ಣವ ಹಿಂದೂಗಳು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ, ಇತರರು ತಮ್ಮ ಮನೆಯಲ್ಲಿಯೇ ಪ್ರಾರ್ಥಿಸುತ್ತಾರೆ ಮತ್ತು ಕೆಲವರು ಪೂಜೆ ಮತ್ತು ಆರತಿಯ ಭಾಗವಾಗಿ ಸಂಗೀತದೊಂದಿಗೆ ಭಜನೆ ಅಥವಾ ಕೀರ್ತನೆಯಲ್ಲಿ ಭಾಗವಹಿಸುತ್ತಾರೆ. ಕೆಲವು ಭಕ್ತರು ಶಿಶು ರಾಮನ ಸಣ್ಣ ಪ್ರತಿಮೆಗಳನ್ನು ತೆಗೆದುಕೊಂಡು ಅದಕ್ಕೆ ಅಭಿಷೇಕವನ್ನು ಮಾಡಿ, ವಸ್ತ್ರವನ್ನು ತೊಡಿಸಿ ನಂತರ ಅದನ್ನು ತೊಟ್ಟಿಲಲ್ಲಿ ಇರಿಸುವ ಮೂಲಕ ಪೂಜಿಸುತ್ತಾರೆ. ದತ್ತಿ ಕಾರ್ಯಕ್ರಮಗಳು ಮತ್ತು ಹಲವು ಸಮುದಾಯಗಳಲ್ಲಿ ಭೋಜವನ್ನೂ ಆಯೋಜಿಸಲಾಗುತ್ತದೆ. ಈ ಹಬ್ಬವು ಅನೇಕ ಹಿಂದೂಗಳಿಗೆ ನೈತಿಕ ಪ್ರತಿಬಿಂಬದ ಒಂದು ಸಂದರ್ಭವಾಗಿದೆ. ಕೆಲವರು ಈ ದಿನದಂದು ವ್ರತ (ಉಪವಾಸ) ಮಾಡುತ್ತಾರೆ. ಈ ದಿನದ ಪ್ರಮುಖ ಆಚರಣೆಗಳು ಅಯೋಧ್ಯೆ ಮತ್ತು ಸೀತಾ ಸಮಾಹಿತ್ ಸ್ಥಲ್ (ಉತ್ತರ ಪ್ರದೇಶ), ಸೀತಮಾರ್ಹಿ (ಬಿಹಾರ), ಜನಕ್ಪುರ್ಧಮ್ (ನೇಪಾಳ), ಭದ್ರಾಚಲಂ (ತೆಲಂಗಾಣ), ಕೋದಂಡರಾಮ ದೇವಸ್ಥಾನ, ವೊಂಟಿಮಿಟ್ಟಾ (ಆಂಧ್ರಪ್ರದೇಶ) ಮತ್ತು ರಾಮೇಶ್ವರಂ(ತಮಿಳುನಾಡು)ನಲ್ಲಿ ಕಾಣಬಹುದು. ರಥಯಾತ್ರೆಗಳು , ರಥದ ಶೋಭ ಯಾತ್ರೆ ಎಂದೂ ಕರೆಯಲ್ಪಡುವ ರಥದ ಮೆರವಣಿಗೆಗಳಲ್ಲಿ ಸೀತೆ , ಅವರ ಸಹೋದರ ಲಕ್ಷ್ಮಣ ಮತ್ತು ಹನುಮಾನ್ ಇವರನ್ನು ಹಲವಾರು ಸ್ಥಳಗಳಿಗೆ ಕರೆದೊಯ್ಯಲಾಗುತ್ತದೆ. ಅಯೋಧ್ಯೆಯಲ್ಲಿ, ಅನೇಕರು ಪವಿತ್ರವಾದ ಸರಯು ನದಿಯಲ್ಲಿ ಸ್ನಾನ ಮಾಡಿ ನಂತರ ರಾಮನ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಆಚರಣೆ ರಾಮನವಮಿಯಂದು ದಕ್ಷಿಣ ಭಾರತದ ಮನೆಗಳಲ್ಲಿ, ಮುಖ್ಯವಾಗಿ ಕರ್ನಾಟಕದಲ್ಲಿ, ಪಾನಕ ಹಾಗೂ ಕೋಸಂಬರಿಗಳನ್ನು ಬಂದವರಿಗೆ ನೀಡಿ ಆಚರಿಸಲಾಗುತ್ತದೆ. ರಾಮ ಮಂದಿರಗಳಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಲಾಗುತ್ತದೆ. ಈಗಿನ ಅಯೋಧ್ಯೆಯಲ್ಲಿ, ತಮಿಳುನಾಡಿನ ರಾಮೇಶ್ವರಂನಲ್ಲಿ ಈ ದಿನದಂದು ಶ್ರೀ ರಾಮನ ಪೂಜೆಗಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಒಂದು ದಿನದ ಉಪವಾಸ, ಭಗವಾನ್ ರಾಮನನ್ನು ಪೂಜಿಸುವುದು ಸೇರಿದಂತೆ ಮಹಾಕಾವ್ಯ ರಾಮಾಯಣವನ್ನು ಆಲಿಸುವುದು ದಿನದ ವಿಶೇಷ. ಇವೆಲ್ಲದರ ನಡುವೆ ಭಗವಾನ್ ರಾಮ ಮತ್ತು ಸೀತಾ ದೇವಿಯ ವಿಧ್ಯುಕ್ತ ವಿವಾಹವನ್ನು ನಡೆಸುವುದು ರಾಮ ನವಮಿ ಮೆರವಣಿಗೆ ನಡೆಸುವುದು ವಾಡಿಕೆ. ಕರ್ನಾಟಕಾದ್ಯಂತ ಕರ್ನಾಟಕ ಸಂಗೀತ ಮತ್ತು ಹಿಂದುಸ್ತಾನಿ ಸಂಗೀತ ಕಛೇರಿಗಳು ಆಯೋಜಿಸಲ್ಪಡುತ್ತವೆ. ಇದರಲ್ಲಿ ಕರ್ನಾಟಕದ ಹಾಗೂ ಇತರೆ ರಾಜ್ಯಗಳಿಂದ ಸಂಗೀತ ವಿದ್ವಾಂಸರು ಬಂದು ಪಾಲ್ಗೊಳುತ್ತಾರೆ. ಪೂರ್ವ ಭಾರತದ ರಾಜ್ಯಗಳಾದ ಒಡಿಶಾ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ, ಜಗನ್ನಾಥ ದೇವಾಲಯಗಳು ಮತ್ತು ಪ್ರಾದೇಶಿಕ ವೈಷ್ಣವ ಸಮುದಾಯದವರು ರಾಮ ನವಮಿಯನ್ನು ಆಚರಿಸುತ್ತಾರೆ ಮತ್ತು ಬೇಸಿಗೆಯಲ್ಲಿ ತಮ್ಮ ವಾರ್ಷಿಕ ಜಗನ್ನಾಥ ರಥಯಾತ್ರೆಗೆ ಸಿದ್ಧತೆಗಳು ಪ್ರಾರಂಭವಾಗುವ ದಿನವೆಂದು ಪರಿಗಣಿಸುತ್ತಾರೆ. ಇಸ್ಕಾನ್‌ಗೆ ಸಂಬಂಧಿಸಿದ ಭಕ್ತರು ಹಗಲಿನ ಹೊತ್ತಿನಲ್ಲಿ ಉಪವಾಸ ಮಾಡುತ್ತಾರೆ. ಬೆಳೆಯುತ್ತಿರುವ ಸ್ಥಳೀಯ ಹಿಂದೂ ಸಭೆಯ ಅಗತ್ಯತೆಗಳನ್ನು ತಿಳಿಸುವ ಉದ್ದೇಶದಿಂದ ಹಲವಾರು ಇಸ್ಕಾನ್ ದೇವಾಲಯಗಳು ರಜೆಯ ಸಂದರ್ಭದಲ್ಲಿ ಪ್ರಮುಖ ಆಚರಣೆಯನ್ನು ಪರಿಚಯಿಸಿದವು. ರಾಮನವಮಿಯ ಮಹತ್ವ ಉತ್ಸವದ ಮಹತ್ವವು ದುಷ್ಟರ ಮೇಲೆ ಒಳ್ಳೆಯತನದ ವಿಜಯ , ಅಧರ್ಮವನ್ನು ಸೋಲಿಸಿ ಧರ್ಮದ ಸ್ಥಾಪನೆಯನ್ನು ಮಾಡಿದ ಕಾರ್ಯವನ್ನು ಸೂಚಿಸುತ್ತದೆ. ಶ್ರಿರಾಮನನ್ನು ಸೂರ್ಯದೇವನ ಪೂರ್ವಜನೆಂದೂ ಜನ ನಂಬುತ್ತಾರೆ. ಸಂತ ರಾಂಪಾಲ್ ಜಿ ಅವರ ಭಕ್ತರು ಆದಿ ರಾಮ (ಸುಪ್ರೀಂ ರಾಮ) ಬಗ್ಗೆ ಕಬೀರ್ ಸಾಹಿಬ್ ಅವರ ಬನಿಸ್ ಪಠಣ ಮಾಡುವ ಮೂಲಕ ಈ ದಿನವನ್ನು ಕಳೆಯುತ್ತಾರೆ. ಇವರನ್ನು ಅವರು ಸರ್ವೋಚ್ಚ ಸೃಷ್ಟಿಕರ್ತ ಎಂದು ಪರಿಗಣಿಸುತ್ತಾರೆ. ಭಾರತದ ಹಲವೆಡೆ ರಾಮ ನವಮಿ ಆಚರಣೆ ಉತ್ತರ ಪ್ರದೇಶ, ಬಿಹಾರ , ಜಾರ್ಖಂಡ್, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ನೆಲೆಸಿರುವ ಭಾರತೀಯ ಹಿಂದೂ ವಲಸಿಗರು ಆಚರಿಸುವ ಹಿಂದೂ ಹಬ್ಬಗಳಲ್ಲಿ ರಾಮ ನವಮಿಯೂ ಒಂದು. ರಾಮನವಮಿಗೆ ಮಾಡುವ ವಿಶೇಷ ಆಹಾರ ಪದಾರ್ಥಗಳು ಪಾನಕ. ತಮಿಳುನಾಡಿನಲ್ಲಿ ನೀರ್ ಮೋರ್ (ಮಜ್ಜಿಗೆ). ಕೋಸಂಬರಿ . ಫಲಾಹಾರ . ತೆಂಗಿನಕಾಯಿಯ ಲಡ್ಡೂ . ಕಾಜು ಬರ್ಫಿ . ತೊಗರಿಬೇಳೆಯ ಹಲ್ವಾ. ಪಂಚಾಮೃತಂ. ಸಬ್ಬಕ್ಕಿಯ ಪಾಯಸ. ಎಳ್ಳುಂಡೆ. ಅಪ್ಪ . ಉಲ್ಲೇಖಗಳು ಹಿಂದೂ ಧರ್ಮದ ಹಬ್ಬಗಳು ರಾಮಾಯಣ
1834
https://kn.wikipedia.org/wiki/%E0%B2%B8%E0%B3%81%E0%B2%B8%E0%B3%87
ಸುಸೇ
ಸುಸೇ ಲಿನಕ್ಸ್ ಕಾರ್ಯಾಚರಣ ವ್ಯವಸ್ಥೆಯ ಮುಖ್ಯ ವಿತರಣೆಗಳಲ್ಲಿ ಒಂದು. ಜರ್ಮನಿಯಲ್ಲಿ ನಿರ್ಮಿಸಲಾಗುವ ಸುಸೇ ನಾವೆಲ್ ಸಂಸ್ಥೆಯ ಒಂದು ಭಾಗ. ಸುಸೇ ಲಿನಕ್ಸ್ ಮೊದಲಿಗೆ ಲಿನಕ್ಸ್ ನ ಸ್ಲ್ಯಾಕ್‍ವೇರ್ ವಿತರಣೆಯನ್ನು ಆಧರಿಸಿ ನಿರ್ಮಿಸಲಾದದ್ದು. ೧೯೯೨ ರಲ್ಲಿ ಪೀಟರ್ ಮ್ಯಾಕ್‍ಡೊನಾಲ್ಡ್ ಲಿನಕ್ಸ್ ನ ಎಸ್‍ಎಲ್‍ಎಸ್ ವಿತರಣೆಯನ್ನು ಸ್ಥಾಪಿಸಿದರು. ಇದು ಎಕ್ಸ್-ವಿಂಡೋಸ್ ವ್ಯವಸ್ಥೆಯನ್ನು ಒಳಗೊಂಡ ಮೊದಲ ಸಂಪೂರ್ಣ ಲಿನಕ್ಸ್ ವಿತರಣೆಯಾಗಿತ್ತು. ನಂತರ ನಿರ್ಮಿಸಲಾದ ಸ್ಲ್ಯಾಕ್‍ವೇರ್ ಎಸ್‍ಎಲ್‍ಎಸ್ ಅನ್ನು ಆಧರಿಸಿದ್ದು. ೧೯೯೨ ರ ಕೊನೆಯಲ್ಲಿ ಸ್ಥಾಪಿಸಲಾದ ಸುಸೇ ಸಂಸ್ಥೆ ಮೊದಲಿಗೆ ಎಸ್‍ಎಲ್‍ಎಸ್ ಮತ್ತು ಸ್ಲ್ಯಾಕ್‍ವೇರ್ ವಿತರಣೆಗಳನ್ನು ಬಿಡುಗಡೆಗೊಳಿಸುತ್ತಿತ್ತು, ನಂತರ ಲಿನಕ್ಸ್ ನ ಜುಂಕ್ಸ್ ವಿತರಣೆಯೊಂದಿಗೆ ಸೇರಿ ೧೯೯೬ ರಲ್ಲಿ ತನ್ನ ಮೊದಲ ವಿಶಿಷ್ಟ ವಿತರಣೆಯಾದ ಸುಸೇ ೪.೬ ಅನ್ನು ೧೯೯೬ ರಲ್ಲಿ ಬಿಡುಗಡೆ ಮಾಡಿತು. ೨೦೦೩ ರಲ್ಲಿ ನಾವೆಲ್, ಇಂಕ್ ಸುಸೇ ಯನ್ನು ಕೊಂಡುಕೊಂಡಿತು. ಸುಸೇ ಲಿನಕ್ಸ್ ನ ಇತ್ತೀಚಿನ ಆವೃತ್ತಿ ಸುಸೇ ೧೧. ಬಾಹ್ಯ ಸಂಪರ್ಕಗಳು ಸುಸೇ ಅಧಿಕೃತ ತಾಣ ಗಣಕಯಂತ್ರ ಲಿನಕ್ಸ್ ವಿತರಣೆಗಳು ಕಾರ್ಯನಿರ್ವಹಣ ಸಾಧನ ಮುಕ್ತ ತಂತ್ರಾಂಶಗಳು ru:Дистрибутивы SUSE Linux
1837
https://kn.wikipedia.org/wiki/%E0%B2%B8%E0%B2%BF%20%E0%B2%85%E0%B2%B6%E0%B3%8D%E0%B2%B5%E0%B2%A4%E0%B3%8D%E0%B2%A5%E0%B3%8D
ಸಿ ಅಶ್ವತ್ಥ್
ಸಿ ಅಶ್ವತ್ಥ್ - (೧೯೩೯) ಹೆಸರಾಂತ ಸಂಗೀತ ನಿರ್ದೇಶಕರು, ಕಲಾವಿದರು. ಕನ್ನಡ ರಂಗಭೂಮಿ, ಸಿನೆಮಾ ಹಾಗೂ ಸುಗಮ ಸಂಗೀತ ಕ್ಷೇತ್ರಗಳಲ್ಲಿ ಹೆಸರುವಾಸಿಯಾಗಿರುವ ಇವರು ಜನಿಸಿದ್ದು ಡಿಸೆಂಬರ್ ೨೯, ೧೯೩೯ರಲ್ಲಿ. ಇವರು ವ್ಯಾಸಂಗ ಮಾಡಿದ್ದು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ. ಐ ಟಿ ಐ ನಲ್ಲಿ ೨೭ ವರ್ಷಗಳ ಕಾಲ ಸೇವೆ ಸಲ್ಲಿಸಿ ಕೊನೆಗೆ ೧೯೯೨ರಲ್ಲಿ ನಿವೃತ್ತಿ ಪಡೆದರು. ಚಿಕ್ಕವರಿದ್ದಾಗಲೇ ಸಂಗೀತದಲ್ಲಿ ಆಸಕ್ತಿ ಹೊಂದಿದ ಇವರು ಹಿಂದೂಸ್ಥಾನೀ ಸಂಗೀತವನ್ನು ದೇವಗಿರಿ ಶಂಕರರಾವ್ ಅವರ ಬಳಿ ಕಲಿತು, ನಂತರ ನಾಟಕಗಳಿಗೆ ಸಂಗೀತ ನೀಡಿದರು. ಕಾಕನಕೋಟೆ ಚಿತ್ರದ ಮೂಲಕ ಚಿತ್ರ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟರು ಮೂತ್ರಪಿಂಡ ಹಾಗೂ ಪಿತ್ತಕೋಶದ ತೊಂದರೆಯಿಂದ ಬಳಲುತ್ತಿದ್ದ ಇವರು ಡಿಸೆಂಬರ್ ೨೯, ೨೦೦೯ ರಂದು, ತಮ್ಮ ೭೧ನೇ ಜನ್ಮದಿನದಂದೇ ಕೊನೆಯುಸಿರೆಳೆದರು. ಇವರ ಕೆಲವು ಪ್ರಖ್ಯಾತ ಧ್ವನಿಸುರುಳಿಗಳು ಮೈಸೂರು ಮಲ್ಲಿಗೆ ( ಕವಿ - ಕೆ.ಎಸ್.ನರಸಿಂಹಸ್ವಾಮಿ) ಶ್ರಾವಣ (ಕವಿ - ದ.ರಾ.ಬೇಂದ್ರೆ) ಶಿಶಿನಾಳ ಶರೀಫ್ ಸಾಹೇಬರ ಗೀತೆಗಳು (ಕವಿ - ಶರೀಫ) ದೀಪಿಕಾ(ಕವಿ - ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ) ಸುಬ್ಬಾ ಭಟ್ಟರ ಮಗಳೇ (ಕವಿ - ಬಿ.ಆರ್.ಲಕ್ಷ್ಮಣರಾವ್) ಕೆಂಗುಲಾಬಿ (ವಿವಿಧ ಕವಿಗಳು) ಕೈಲಾಸಂ ಗೀತೆಗಳು (ಕವಿ - ಟಿ.ಪಿ.ಕೈಲಾಸಂ) ತೂಗುಮಂಚ (ಕವಿ - ಎಚ್.ಎಸ್.ವೆಂಕಟೇಶಮೂರ್ತಿ) ನನ್ನವಳು (ಕವಿ - ಬಿ.ಆರ್.ಲಕ್ಷ್ಮಣರಾವ್) ಡಾ. ರಾಜ್ ಕುಮಾರ್ ಹಾಡಿರುವ 'ಎಲ್ಲಾದರೂ ಇರು, ಎಂತಾದರೂ ಇರು' (ಕವಿ - ಕುವೆಂಪು) ನೇಸರ ನೋಡು (ಹವ್ಯಾಸಿ ರಂಗಭೂಮಿಯ ರಂಗಗೀತೆಗಳು) ಮಾವು ಬೇವು (ಡಾ||ದೊಡ್ಡರಂಗೇಗೌಡ) ಹೊರಗಿನ ಸಂಪರ್ಕಗಳು ಸಿ ಅಶ್ವಥ್‍ರವರ ಅಂತರಜಾಲ ಪುಟ C. Ashwath resigns from shishunala shariff award committee 'Kannadave Satya' - a program for a cause by C. Ashwath Story on Hindu with C Ashwath's photo ಸಿ. ಅಶ್ವಥ್ ಪರಿಚಯ ಮತ್ತು ಸಂದರ್ಶನ (೧೯೯೭) ಸಿ.ಅಶ್ವಥ್ ಅಭಿಮಾನಿ ಬಳಗ ಸಂಗೀತ ನಿರ್ದೇಶಕರು ಕಲಾವಿದರು ಸುಗಮ ಸಂಗೀತ ೧೯೩೯ ಜನನ ೨೦೦೯ ನಿಧನ
1840
https://kn.wikipedia.org/wiki/%E0%B2%B7%E0%B2%B9%20%E0%B2%9C%E0%B2%B9%E0%B2%BE%E0%B2%A8%E0%B3%8D
ಷಹ ಜಹಾನ್
ಷಹ ಜಹಾನ್ (ಜನವರಿ ೫, ೧೫೯೨ - ಜನವರಿ ೨೨, ೧೬೬೬) ಭಾರತದ ದೇಶದಲ್ಲಿ ಮೊಘಲ್ ಸಾಮ್ರಾಜ್ಯವನ್ನಾಳಿದ ಸುಲ್ತಾನ. ಇವನ ಆಳ್ವಿಕೆ ೧೬೨೭ ರಿಂದ ೧೬೫೮ ರವರೆಗೆ ನಡೆಯಿತು. 'ಶೆಹೆಝಾದ ಖುರ್ರಮ್' ಎಂಬ ಜನನ ನಾಮವಿದ್ದ ಇವನು ಮೊಘಲ್ ದೊರೆ ಜಹಾಂಗೀರ್ ನ ಮೂರನೇ ಮಗ. ಗದ್ದುಗೆಗಾಗಿ ತನ್ನ ಒಡಹುಟ್ಟಿದವರೊಡನೆ ಯುದ್ಧ ಮಾಡಿ ಅಧಿಕಾರ ವಶಪಡಿಸಿಕೊಂಡನು ತನ್ನ ಪ್ರೇಯಸಿ ಮುಮ್ತಾಜ್ ಮಹಲ್ ನ ಗೋರಿಯಾಗಿ ತಾಜ್ ಮಹಲ್ ಕಟ್ಟಿಸಿದನು. ಆದರೆ ತನ್ನ ಜೀವನದ ಕೊನೆಯ ೫ ವರ್ಷಗಳನ್ನು ಔರಂಗಜೇಬನ ಆಳ್ವಿಕೆಯಲ್ಲಿ ಕಾರಾವಾಸದಲ್ಲಿ ಕಳೆದನು. ಇವನನ್ನು ಔರಂಗಜೇಬನ ಆಜ್ಞೆಯಂತೆ ಆಗ್ರಾ ಕೋಟೆಯಲ್ಲಿ ಕೂಡಿಹಾಕಲಾಯಿತು. ಬಂಧನ ಷಹ ಜಹಾನನಿಗೆ ತನ್ನ ಪತ್ನಿಯ ಗೋರಿಯನ್ನು ನೋಡಲನುವಾಗುವಂತೆ ಮಾಡಲಾಗಿತ್ತೆಂದು ಇತಿಹಾಸ ತಜ್ಞರು ಅಭಿಪ್ರಾಯ ಪಡುತ್ತಾರೆ. ಷಹ ಜಹಾನನ್ನು ಮರಣದ ತರುವಾಯ ಮುಮ್ತಾಜ್ ಜೊತೆಗೇ ತಾಜ್ ಮಹಲ್ ನಲ್ಲಿ ಸಮಾಧಿ ಮಾಡಲಾಯಿತು. ಉಲ್ಲೇಖಗಳು ಬಾಹ್ಯ ಸಂಪರ್ಕಗಳು Shah Jehan in Christian Art Shah Jahan's 353rd death anniversary observed at Taj Mahal at TwoCircles.net History of Islam in India at IndiaNest.com A Handbook to Agra and the Taj – Sikandra, Fatehpur-Sikri and the Neighbourhood by E. B. Havel (Project Gutenberg) Indian & Mughal History Discussions at History Forum 'The Man Of Marble' – Outlook India http://www.gutenberg.org/catalog/world/readfile?fk_files=55696 ಮೊಘಲ್ ಸಾಮ್ರಾಜ್ಯ ಭಾರತದ ಇತಿಹಾಸ
1842
https://kn.wikipedia.org/wiki/%E0%B2%A6%E0%B3%86%E0%B2%B9%E0%B2%B2%E0%B2%BF
ದೆಹಲಿ
ದೆಹಲಿ ಸ್ಥಳೀಯವಾಗಿ ದಿಲ್ಲಿ ಎಂದೇ ಹೆಸರಾಗಿರುವ ಮತ್ತು ಅಧಿಕೃತವಾಗಿ ನ್ಯಾಷನಲ್ ಕ್ಯಾಪಿಟಲ್ ಟೆರಿಟರಿ ಆಫ್ ಡೆಲ್ಲಿ (ಎನ್‌.ಸಿ.ಟಿ) ಎಂದು ಕರೆಯಲ್ಪಡುವ ರಾಷ್ಟ್ರೀಯ ರಾಜಧಾನಿ ನಗರವು ಪ್ರಾದೇಶಿಕವಾಗಿ ಭಾರತದಲ್ಲೇ ಅತಿ ದೊಡ್ಡ ಮಹಾನಗರ ಮತ್ತು ಜನಸಂಖ್ಯೆಯಲ್ಲಿ ಎರಡನೇ ಅತಿ ದೊಡ್ಡ ಮಹಾನಗರವಾಗಿದೆ. ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ೧೨.೨೫ ದಶಲಕ್ಷಕ್ಕೂ ಮಿಕ್ಕಿ ನಿವಾಸಿಗಳು ಮತ್ತು ೧೫.೯ ದಶಲಕ್ಷ ನಗರವಾಸಿಗಳನ್ನು ಹೊಂದಿರುವ ದೆಹಲಿ ಜನಸಂಖ್ಯೆಯಲ್ಲಿ ಜಗತ್ತಿನಲ್ಲೇ ಎಂಟನೇ ದೊಡ್ಡ ನಗರವಾಗಿದೆ. (ಇದರಲ್ಲಿ ನೋಯ್ಡಾ, ಗುರ್‌ಗಾಂವ್‌, ಫರಿದಾಬಾದ್ ಮತ್ತು ಘಜೀಯಾಬಾದ್‌ ಸೇರಿವೆ). NCTಗೆ ಸಮೀಪವಿರುವ ಕೆಲವು ನಗರಗಳು ಮತ್ತು NCT ವ್ಯಾಪ್ತಿಯಲ್ಲಿ ಬರುವ ಭಾರತದ ರಾಜಧಾನಿ ನವ ದೆಹಲಿಯನ್ನೂ ಆಗಿಂದಾಗ್ಗೆ ದೆಹಲಿಯೆಂದೇ ಕರೆಯುವುದುಂಟು. NCT ಎನ್ನುವುದು ಒಕ್ಕೂಟ ವ್ಯವಸ್ಥೆಯ ಕೇಂದ್ರಾಡಳಿತ ಪ್ರದೇಶ. ದೆಹಲಿಯು ಯಮುನಾ ನದಿಯ ದಂಡೆಯಲ್ಲಿದ್ದು, ಕನಿಷ್ಟ ಪಕ್ಷ ಕ್ರಿ.ಪೂ 6ನೇ ಶತಮಾನದಿಂದಲೇ ನಿರಂತರವಾಗಿ ವಾಸಕ್ಕೆ ಬಳಕೆಯಾಗಿದೆ. ದೆಹಲಿ ಸುಲ್ತಾನರು ತಲೆ ಎತ್ತಿದ ನಂತರ, ದೆಹಲಿಯು ರಾಜಕೀಯ, ಸಾಂಸ್ಕೃತಿಕ ಮತ್ತು ವಾಣಿಜ್ಯ ನಗರವಾಗಿ ಪ್ರಾಮುಖ್ಯತೆಗೆ ಬಂದಿತು, ಜೊತೆಗೆ ವಾಯವ್ಯ ಭಾರತ ಮತ್ತು ಇಂಡೋ-ಗಂಗಾ ಬಯಲು ಪ್ರದೇಶಗಳ ಮಧ್ಯೆ ವ್ಯಾಪಾರ ಮಾರ್ಗಗಳೂ ಬೆಳೆದವು. ಪ್ರಾಚೀನ ಮತ್ತು ಮದ್ಯಕಾಲೀನದ ಹಲವು ಸ್ಮಾರಕಗಳು, ಪುರಾತತ್ವ ಸ್ಥಳಗಳು ಹಾಗೂ ಹೀಗೆ ಇನ್ನೂ ಹಲವು ದೆಹಲಿಯಲ್ಲಿವೆ. ೧೬೩೯ರಲ್ಲಿ ದೆಹಲಿಯನ್ನು ಆಳಿದ ಮೊಘಲ್ ಚಕ್ರವರ್ತಿ ಷಹಜಹಾನ್ ಹೊಸ ಸುಭದ್ರ ನಗರವನ್ನು ನಿರ್ಮಿಸಿದನು, ಅದು ೧೬೪೯ ರಿಂದ ೧೮೫೭ರವರೆಗೆ ಮೊಘಲ್ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪೆನಿಯು 18ನೇ ಮತ್ತು 19ನೇ ಶತಮಾನಗಳಲ್ಲಿ ಭಾರತದ ಹೆಚ್ಚಿನ ಪ್ರದೇಶಗಳ ಮೇಲೆ ನಿಯಂತ್ರಣವನ್ನು ಸಾಧಿಸಿದ ನಂತರ, ೧೯೧೧ರಲ್ಲಿ ಜಾರ್ಜ್ ವಿ ದೆಹಲಿಯನ್ನೇ ರಾಜಧಾನಿಯೆಂದು ಮತ್ತೆ ಘೋಷಿಸುವವರೆಗೆ ಕಂಪೆನಿ ಆಡಳಿತ ಮತ್ತು ಬ್ರಿಟೀಷ್ ರಾಜ್ಯ ಹೀಗೆ ಎರಡಕ್ಕೂ ಕಲ್ಕತ್ತಾವೇ ರಾಜಧಾನಿಯಾಗಿತ್ತು. 1920ರ ದಶಕದಲ್ಲಿ ಹಳೇ ನಗರದ ದಕ್ಷಿಣಕ್ಕೆ ಹೊಸ ರಾಜಧಾನಿ ನಗರ ನವ ದೆಹಲಿಯನ್ನು ನಿರ್ಮಿಸಲಾಯಿತು. ೧೯೪೭ರಲ್ಲಿ ಭಾರತಕ್ಕೆ ಬ್ರಿಟೀಷ್ ಆಡಳಿತದಿಂದ ಸ್ವಾತಂತ್ರ್ಯ್ಯ ಸಿಕ್ಕಾಗ, ನವದೆಹಲಿಯನ್ನು ದೇಶದ ರಾಜಧಾನಿ ಮತ್ತು ಸರ್ಕಾರ ಪೀಠವೆಂದು ಘೋಷಿಸಲಾಯಿತು. ಭಾರತದ ಸಂಸತ್ತು ಸೇರಿದಂತೆ ಸಂಯುಕ್ತ ಸರ್ಕಾರದ ಹಲವು ಪ್ರಮುಖ ಕಛೇರಿಗಳಿಗೆ ನವ ದೆಹಲಿ ಮನೆಯಾಗಿದೆ. ದೇಶದೆಲ್ಲೆಡೆಯಿಂದ ಬರುವ ವಲಸಿಗರಿಂದಾಗಿ ದೆಹಲಿ ಕಾಸ್ಮೊಪಾಲಿಟನ್‌ ಮಹಾನಗರವಾಗಿ ಬೆಳೆದಿದೆ. ತುಲನಾತ್ಮಕವಾಗಿ ಹೆಚ್ಚು ಆದಾಯವುಳ್ಳ ಸರಾಸರಿ ಜನಸಂಖ್ಯೆ, ತ್ವರಿತ ಅಭಿವೃದ್ಧಿ ಮತ್ತು ನಗರೀಕರಣದಿಂದಾಗಿ ಇಂದು ದೆಹಲಿ ಬದಲಾಗಿದೆ. ದೆಹಲಿಯಿಂದು ಭಾರತದ ಪ್ರಮುಖ ಸಾಂಸ್ಕೃತಿಕ, ರಾಜಕೀಯ ಮತ್ತು ವಾಣಿಜ್ಯ ಕೇಂದ್ರ. ಜಗತ್ತಿನಲ್ಲಿ ಅತೀ ಹೆಚ್ಚು ಜನರು ಇರುವ ನಗರ­ಗ­ಳಲ್ಲಿ ದೆಹಲಿ ಎರಡನೇ ಸ್ಥಾನ ಪಡೆದು­ಕೊಂಡಿದೆ. 1990ರಿಂದ 2014ರ ಅವಧಿ­ಯಲ್ಲಿ ಜನಸಂಖ್ಯೆ ದ್ವಿಗುಣಗೊಂ­ಡಿದ್ದು ಈಗಿನ ದೆಹಲಿಯ ಜನಸಂಖ್ಯೆ 2.5 ಕೋಟಿ ಎಂದು ವಿಶ್ವ ಸಂಸ್ಥೆಯ ವರದಿ ಹೇಳಿದೆ. ಮೊದಲ ಸ್ಥಾನದಲ್ಲಿ ಜಪಾನ್‌ ರಾಜಧಾನಿ ಟೋಕಿಯೊ (೩.೭೮ ಕೋಟಿ) ಇದೆ.(೧೨-೭-೨೦೧೪ ಪ್ರಜಾವಾಣಿ ೧೨-೭-೨೦೧೪) ಜನಸಂಖ್ಯೆಯ ದಟ್ಟನೆಯ ನಗರಗಳು ದೆಹಲಿಗೆ ಜಗತ್ತಿನ ಜನದಟ್ಟನೆಯ ನಗರಗಳಲ್ಲಿ ಎರಡನೆಯ ಸ್ಥಾನ. ವಿಶ್ವ ಸಂಸ್ಥೆಯ ವರದಿ (ಪ್ರಜಾವಾಣಿ ೧೨-೭-೨೦೧೪) : ಉತ್ಪತ್ತಿ ಶಾಸ್ತ್ರ "ದೆಹಲಿ" ಶಬ್ದದ ಉತ್ಪತ್ತಿ ಬಗ್ಗೆ ಏನನ್ನೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಹಲವು ಸಾಧ್ಯತೆಗಳು ಅಸ್ತಿತ್ವದಲ್ಲಿವೆ. ಈ ನಾಮದಾತದ ಕುರಿತು ಸಾಮಾನ್ಯ ಅಭಿಪ್ರಾಯವೆಂದರೆ, ಮೌರ್ಯ ರಾಜವಂಶದ ದೊರೆ ದಿಲ್ಲು ಅಥವಾ ದಿಲು ನಗರದ ಮೂಲ ಪುರುಷನಾಗಿದ್ದು, ಈತ ೫೦ BC ಯಲ್ಲಿ ನಗರವನ್ನು ನಿರ್ಮಿಸಿ ತನ್ನ ಹೆಸರನ್ನಿಟ್ಟುಕೊಂಡ. ಥಾರ್‌ ರಜಪೂತರು ನಗರವನ್ನು ಕರೆಯುವಾಗ ಹಿಂದಿ/ಪ್ರಾಕೃತ್‌ ಪದ ದಿಲಿ ("ಬಂಧಮುಕ್ತ")ಯನ್ನು ಬಳಸಿದರು, ಏಕೆಂದರೆ ರಾಜಾ ಧಾವ ಕಟ್ಟಿಸಿದ ಕಬ್ಬಿಣದ ಕಂಬದ ಅಡಿಪಾಯ ಬಲಹೀನವಾಗಿತ್ತು ಮತ್ತು ಅದನ್ನು ನಂತರ ಬದಲಾಯಿಸಲಾಯಿತು. ರಜಪೂತರ ಅವಧಿಯಲ್ಲಿ ಈ ಪ್ರಾಂತದಲ್ಲಿ ಪರಿಚಲನೆಯಲ್ಲಿದ್ದ ನಾಣ್ಯಗಳನ್ನು ದೆಹಲಿವಾಲ್ ಎಂದು ಕರೆಯಲಾಗುತ್ತದೆ. ಇನ್ನು ಕೆಲವು ಇತಿಹಾಸಜ್ಞರ ಪ್ರಕಾರ, ದೆಹಲೀಜ್‌ ಅಥವಾ ದೆಹಲಿ ಪದ ಭಾಷಾಮಾಲಿನ್ಯಗೊಂಡು ಉಂಟಾದ ದಿಲ್ಲಿ ಯಿಂದ ದೆಹಲಿ ಪದ ಹುಟ್ಟಿಕೊಂಡಿದೆ, ದಿಲ್ಲಿ ಎಂದರೆ ಹಿಂದಿಯಲ್ಲಿ ಹೊಸ್ತಿಲು ಎಂಬರ್ಥ-ಮತ್ತು ಇಂಡೋ-ಗಂಗಾನದಿ ಬಯಲು ಪ್ರದೇಶಗಳಿಗೆ ಹೆಬ್ಬಾಗಿಲಿ ನಂತಿರುವ ಸಾಂಕೇತಿಕ ನಗರ. ನಗರದ ಮೂಲ ಹೆಸಲು ದಿಲ್ಲಿಕಾ ಎಂದು ಇನ್ನೊಂದು ವಾದ ಹೇಳುತ್ತದೆ. ಇತಿಹಾಸ ] ] BC ಅಂದರೆ ಕ್ರಿಸ್ತಪೂರ್ವ ಎರಡು ಸಾವಿರ ವರ್ಷ ಮತ್ತು ಅದಕ್ಕಿಂತಲೂ ಹಿಂದೆ, ದೆಹಲಿ ಮತ್ತು ಅದರ ಸುತ್ತಮುತ್ತ ಮಾಹೊಸ ವಸತಿಗಳಿದ್ದವು. ಅಲ್ಲದೆ ಕನಿಷ್ಟ ಪಕ್ಷ ಕ್ರಿ.ಪೂ 6ನೇ ಶತಮಾನದಿಂದ ಅದು ನಿರಂತರವಾಗಿ ವಾಸಕ್ಕೆ ಬಳಕೆಯಾಗಿರುವ ಬಗ್ಗೆ ಪುರಾವೆಗಳಿವೆ. ಭಾರತೀಯ ಮಹಾಪುರಾಣ ಮಹಾಭಾರತದಲ್ಲಿ ಬರುವ ಪಾಂಡವರ ಪುರಾಣ ಪ್ರಸಿದ್ಧ ರಾಜಧಾನಿ ಇಂದ್ರಪ್ರಸ್ಥವೇ ಈಗಿನ ದೆಹಲಿ ಎಂದು ನಂಬಲಾಗಿದೆ. ಮೌರ್ಯ ಸಾಮ್ರಾಜ್ಯದ ಅವಧಿಯಲ್ಲಿ ಹೊಸ ವಸಾಹತುಗಳು ಬೆಳೆದವು(c. ೩೦೦ BC). ಏಳು ಪ್ರಮುಖ ನಗರಗಳ ಅವಶೇಷಗಳನ್ನು ದೆಹಲಿಯಲ್ಲಿ ಪತ್ತೆ ಹಚ್ಚಲಾಗಿದೆ. ತೋಮರ ವಂಶಜರು ೭೩೬ adಯಲ್ಲಿ ಲಾಲ್ ಕೋಟ್ ನಗರವನ್ನು ಸ್ಥಾಪಿಸಿದರು. ೧೧೮೦ರಲ್ಲಿ ಅಜ್ಮೀರ್‌ನ ರಜಪೂತ ಚೌಹಾಣರು ಲಾಲ್ ಕೋಟ್‌ಅನ್ನು ವಶಪಡಿಸಿಕೊಂಡು ಕಿಲಾ ರೈ ಪಿಥೋರ ಎಂಬ ಹೆಸರನ್ನಿಟ್ಟರು. ೧೧೯೨ರಲ್ಲಿ ಅಪ್ಘಾನ್‌ನ ಮಹಮದ್ ಘೋರಿಯು ಚೌಹಾಣ ರಾಜ ಮೂರನೇ ಪ್ರಥ್ವಿರಾಜ ಚೌಹಾಣ್‌ನನ್ನು ಸೋಲಿಸಿದನು. ೧೨೦೬ರಲ್ಲಿ, ಗುಲಾಮಿ ಸಂತತಿಯ ಮೊದಲ ದೊರೆ ಕುತುಬ್ದೀನ್‌ ಐಬಕ್‌ ದೆಹಲಿ ಸುಲ್ತಾನರ ಸಾಮ್ರಾಜ್ಯವನ್ನು ಸ್ಥಾಪಿಸಿದನು. ಇದೇ ವೇಳೆ ಕುತುಬ್‌ ಮಿನಾರ್‌ ಮತ್ತು ಖುವಾಟ್-ಅಲ್-ಇಸ್ಲಾಂ (ಇಸ್ಲಾಂ ಶಕ್ತಿ) ಅನ್ನು ಕಟ್ಟಲು ಕುತುಬ್ದೀನ್‌ ಆರಂಭಿಸಿದನು. ಇದು ಈಗಲೂ ಭಾರತದಲ್ಲಿರುವ ಅತ್ಯಂತ ಹಳೇಯ ಮಸೀದಿಗಳಲ್ಲಿ ಒಂದಾಗಿದೆ. ಗುಲಾಮಿ ಸಂತತಿಯ ಪತನದ ನಂತರ, ಮಧ್ಯಯುಗದ ಅಂತ್ಯದವರೆಗೂ ದೆಹಲಿಯನ್ನು ಆಳಿದ ತುರ್ಕಿ ಮತ್ತು ಅಫ್ಘಾನ್‌ನ ರಾಜವಂಶಗಳಾದ ಖಿಲ್ಜಿ ಸಂತತಿ, ತುಘಲಕ್‌ ಸಂತತಿ, ಸಯ್ಯಿದ್‌ ಸಂತತಿ ಮತ್ತು ಲೋಧಿ ಸಂತತಿಯ ದೊರೆಗಳು ಸರಣಿಯಲ್ಲಿ ಕೋಟೆ ಮತ್ತು ನಿವೇಶನಗಳನ್ನು ನಿರ್ಮಿಸಿದರು. ಅವುಗಳನ್ನು ದೆಹಲಿಯ ಏಳು ನಗರಗಳಲ್ಲಿ ಕಾಣಬಹುದು. ದೆಹಲಿಯ ಮುಸ್ಲಿಂ ಸುಲ್ತಾನರು ತಮ್ಮ ಹಿಂದೂ ಪ್ರಜೆಗಳ ಬಗ್ಗೆ ಅತಿ ಸಹಿಷ್ಣುತೆ ಹೊಂದಿದ್ದಾರೆಂದು ಭಾವಿಸಿ ೧೩೯೮ರಲ್ಲಿ ತಿಮೂ ಲೆಂಕ್‌ ಭಾರತದ ಮೇಲೆ ಆಕ್ರಮಣ ನಡೆಸಿದನು. ದೆಹಲಿಯನ್ನು ಪ್ರವೇಶಿಸಿದ ತಿಮೂರ್ ನಗರವನ್ನು ದೋಚಿ, ನಾಶಪಡಿಸಿ ಅವಶೇಷಗಳನ್ನು ಮಾತ್ರ ಬಿಟ್ಟು ಹೋದನು. ಸುಲ್ತಾನರ ಅವಧಿಯಲ್ಲಿ ದೆಹಲಿ ಸೂಫಿ ತತ್ವದ ಪ್ರಮುಖ ಕೇಂದ್ರವಾಗಿತ್ತು. ೧೫೨೬ರಲ್ಲಿ ನಡೆದ ಮೊದಲ ಪಾಣಿಪತ್‌ ಕದನದಲ್ಲಿ ಜಾಹಿರುದ್ದೀನ್ ಬಾಬರ್ ಕೊನೆಯ ಲೋಧಿ ಸುಲ್ತಾನನನ್ನು ಸೋಲಿಸಿ ಮೊಘಲ್ ಸಾಮ್ರಾಜ್ಯವನ್ನು ಸ್ಥಾಪಿಸಿದನು. ಅಂದಿನಿಂದ ದೆಹಲಿ, ಆಗ್ರಾ ಮತ್ತು ಲಾಹೋರ್‌ನಿಂದ ಮೊಘಲ್ ಸಾಮ್ರಾಜ್ಯದ ಆಳ್ವಿಕೆ ನಡೆಯುತ್ತಿತ್ತು. ೧೫೪೦ರಿಂದ ೧೫೫೬ರವರೆಗಿನ ಷೇರ್‌ ಷಹಾ ಸೂರಿಯ ೧೬ ವರ್ಷಗಳ ಆಳ್ವಿಕೆ ಹೊರತುಪಡಿಸಿದರೆ ಮೊಘಲ್ ಸಾಮ್ರಾಜ್ಯ ಉತ್ತರ ಭಾರತವನ್ನು ಸುಮಾರು ಮೂರು ಶತಮಾನಗಳಿಗೂ ಮಿಕ್ಕಿ ಆಳಿತು. ೧೫೫೩–೧೫೫೬ ವೇಳೆ, ಹೇಮುವು ಮೊಘಲ್ ದೊರೆ ಹೂಮಾಯೂನ್‌ನ ಸೇನಾಪಡೆಯನ್ನು ಆಗ್ರಾ ಮತ್ತು ದೆಹಲಿಯಲ್ಲಿ ಸೋಲಿಸಿ ದೆಹಲಿ ಗದ್ದುಗೆ ಏರಿದನು. ಆದಾಗ್ಯೂ, ಎರಡನೇ ಪಾಣಿಪತ್ ಕದನದಲ್ಲಿ ಅಕ್ಪರ್‌ನ ನೇತೃತ್ವದ ಮೊಘಲರ ಸೇನಾಪಡೆ, ಹೇಮು ಪಡೆಯನ್ನು ಸದೆಬಡಿದು ದೆಹಲಿಯಲ್ಲಿ ತನ್ನ ಸಾಮ್ರಾಜ್ಯವನ್ನು ಪುನರ್ ಸ್ಥಾಪಿಸಿತು. ನಂತರ ಷಾಹ್ ಜಹಾನ್‌ ದೆಹಲಿಯಲ್ಲಿ ಏಳನೇ ನಗರವನ್ನು ಕಟ್ಟಿ ತನ್ನ ಹೆಸರನ್ನಿಟ್ಟನು(ಷಹಜಹಾನಬಾದ್‌ ), ಮತ್ತು ಇದು ಸಾಮಾನ್ಯವಾಗಿ "ಹಳೇ ನಗರ" ಅಥವಾ "ಹಳೆದೆಹಲಿ" ಎಂದು ಪ್ರಸಿದ್ಧವಾಗಿದೆ. ೧೬೩೮ರ ನಂತರ ಈ ಹಳೇ ನಗರ ಮೊಘಲ್ ಸಾಮ್ರಾಜ್ಯದ ರಾಜಧಾನಿಯಾಗಿ ಕಾರ್ಯನಿರ್ವಹಿಸಿತು. ೧೬೮೦ರ ಬಳಿಕ, ಹಿಂದೂ ಮರಾಠರು ಪ್ರಾಮುಖ್ಯತೆಗೆ ಬರುತ್ತಿದ್ದಂತೆ ಮೊಘಲ್ ದೊರೆಗಳ ಪ್ರಭಾವ ಗಮನಾರ್ಹವಾಗಿ ತಗ್ಗಿತು. ಬಲಹೀನವಾಗಿದ್ದ ಮೊಘಲ್ ಸಾಮ್ರಾಜ್ಯ ಕರ್ನಾಲ ಕದನದಲ್ಲಿ ಸೋತಿತಲ್ಲದೆ, ವಿಜಯೀ ನಾದಿರ್ ಷಾನ ಪಡೆಗಳು ದೆಹಲಿಗೆ ನುಗ್ಗಿ ನವಿಲಿನ ಸಿಂಹಾಸನ ಸೇರಿದಂತೆ ಬೊಕ್ಕಸವನ್ನು ಕೊಳ್ಳೆ ಹೊಡೆದವು. ೧೭೫೨ರಲ್ಲಿ ಸಹಿ ಹಾಕಲಾದ ಒಪ್ಪಂದದ ಪ್ರಕಾರ, ಮೊಘಲ ಗದ್ದುಗೆಯ ರಕ್ಷಣೆಯ ಹೊಣೆ ಮರಾಠರ ಹೆಗಲಿಗೆ ಬಿತ್ತು. ೧೭೬೧ರಲ್ಲಿ, ಮೂರನೇ ಪಾಣಿಪತ್ ಕದನದಲ್ಲಿ ಮರಾಠರು ಸೋತ ನಂತರ ಅಹಮದ್ ಷಾ ಅಬ್ದಾಲಿಯು ದೆಹಲಿ ಮೇಲೆ ಆಕ್ರಮಣ ನಡೆಸಿದನು. ೧೮೦೩ರಲ್ಲಿ, ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪೆನಿಯ ಸೇನಾಪಡೆ ದೆಹಲಿ ಬಳಿ ಮರಾಠ ಸೇನೆಯನ್ನು ಸದೆಬಡಿದು ನಗರದಲ್ಲಿ ಮೊಘಲರ ಆಳ್ವಿಕೆಯನ್ನು ಕೊನೆಗೊಳಿಸಿತು. ೧೮೫೭ರ ಭಾರತೀಯ ದಂಗೆಯ ನಂತರ, ದೆಹಲಿಯು ಬ್ರಿಟೀಷ್ ರಾಣಿಯ ನೇರ ಆಳ್ವಿಕೆಗೆ ಒಳಪಟ್ಟಿತು ಮತ್ತು ದೆಹಲಿಯನ್ನು ಪಂಜಾಬ್‌ನ ಜಿಲ್ಲಾ ಪ್ರಾಂತವನ್ನಾಗಿ ಮಾಡಲಾಯಿತು. ೧೯೧೧ರಲ್ಲಿ, ಬ್ರಿಟೀಷ್ ಭಾರತದ ರಾಜಧಾನಿಯನ್ನು ಕಲ್ಕತ್ತಾದಿಂದ ದೆಹಲಿಗೆ ವರ್ಗಾಯಿಸಲಾಯಿತು. ಸ್ವಾತಂತ್ರ್ಯದ ನಂತರ ಸರ್ಕಾರಿ ಕಟ್ಟಡಗಳನ್ನು ನಿರ್ಮಿಸುವ ಸಲುವಾಗಿ ಎಡ್ವಿನ್ ಲ್ಯುಟೈನ್ಸ್ ನೇತೃತ್ವದ ಬ್ರಿಟೀಷ್ ವಾಸ್ತುಶಿಲ್ಪಿಗಳ ತಂಡ ನವ ದೆಹಲಿಯೆಂಬ ಹೊಸ ರಾಜಕೀಯ ಮತ್ತು ಆಡಳಿತಾತ್ಮಕ ಪ್ರದೇಶವನ್ನು ವಿನ್ಯಾಸಗೊಳಿಸಿತು. ೧೯೪೭ ಆಗಸ್ಟ್ ೧೫ರಂದು ದೇಶ ಸ್ವಾತಂತ್ರ್ಯ ಪಡೆದ ಬಳಿಕ ಲ್ಯುಟೈನ್ಸ್' ದೆಹಲಿ ಎಂದೇ ಹೆಸರಾದ ನವದೆಹಲಿಯನ್ನು ಭಾರತದ ಒಕ್ಕೂಟದ ರಾಜಧಾನಿ ಎಂದು ಘೋಷಿಸಲಾಯಿತು. ಭಾರತದ ವಿಭಜನೆ ವೇಳೆ ಪಶ್ಚಿಮ ಪಂಜಾಬ್‌ ಮತ್ತು ಸಿಂಧ್‌ನ ಸಾವಿರಾರು ಹಿಂದೂ ಮತ್ತು ಸಿಖ್ ನಿರಾಶ್ರಿತರು ದೆಹಲಿಗೆ ಪಲಾಯನ ಮಾಡಿದರು. ಅಂತೆಯೇ ನಗರದ ಮುಸ್ಲಿಂ ನಿವಾಸಿಗಳು ಪಾಕಿಸ್ತಾನಕ್ಕೆ ವಲಸೆ ಹೋದರು. ಆಗಿನ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರನ್ನು ಅವರ ಸಿಖ್ ಅಂಗರಕ್ಷಕರು ಹತ್ಯೆಗೈದ ಬಳಿಕ, ಅಕ್ಟೋಬರ್‌ ೩೧, ೧೯೮೪ರಿಂದ ಆರಂಭವಾಗಿ ನಾಲ್ಕು-ದಿನಗಳ ಕಾಲ ನಡೆದ ಸಿಖ್‌ ವಿರೋಧಿ ಗಲಭೆಯಲ್ಲಿ ಸುಮಾರು ಮೂರು ಸಾವಿರ ಸಿಖ್ಖರು ಸಾವನ್ನಪ್ಪಿದರು. ಭಾರತದ ಇತರೆ ಭಾಗಗಳಿಂದ ದೆಹಲಿಗೆ ವಲಸೆ ಬರುವುದು ಈಗಲೂ ಮುಂದುವರಿದಿದೆ. ಇದರಿಂದಾಗಿ ದೆಹಲಿಯ ಜನಸಂಖ್ಯೆ ಏರುತ್ತಿದ್ದು, ಜನನ ಪ್ರಮಾಣ ಇಳಿಯುತ್ತಿದೆ. ೧೯೯೧ರ ಸಂವಿಧಾನ(69ನೇ ತಿದ್ದುಪಡಿ) ಕಾಯಿದೆಯು ದೆಹಲಿ ಕೇಂದ್ರಾಡಳಿತ ಪ್ರದೇಶವನ್ನು ಅಧಿಕೃತವಾಗಿ ರಾಷ್ಟ್ರೀಯ ರಾಜಧಾನಿ ಪ್ರದೇಶ ದೆಹಲಿಯೆಂದು ಘೋಷಿಸಿತು. ಸೀಮಿತ ಅಧಿಕಾರದೊಂದಿಗೆ ತನ್ನದೇ ಆದ ಶಾಸನ ಸಭೆಯನ್ನು ರಚಿಸಲು ದೆಹಲಿಗೆ ಈ ಕಾಯಿದೆ ಅನುವು ಮಾಡಿಕೊಟ್ಟಿತು. ಡಿಸೆಂಬರ್ ೨೦೦೧ರಂದು, ಸಶಸ್ತ್ರ ಉಗ್ರರು ಭಾರತದ ಸಂಸತ್ ಕಟ್ಟಡದ ಮೇಲೆ ದಾಳಿ ನಡೆಸಿದ ಪರಿಣಾಮ ಆರು ಮಂದಿ ಭದ್ರತಾ ಸಿಬ್ಬಂದಿ ಹತರಾದರು. ಈ ದಾಳಿಯ ಹಿಂದೆ ಪಾಕಿಸ್ತಾನ-ಮೂಲದ ಉಗ್ರಗಾಮಿ ತಂಡಗಳ ಕೈವಾಡವಿರುವ ಬಗ್ಗೆ ಭಾರತ ಶಂಕೆ ವ್ಯಕ್ತಪಡಿಸಿದ್ದರಿಂದಾಗಿ ಉಭಯ ದೇಶಗಳ ನಡುವೆ ಭಾರಿ ದೊಡ್ಡ ರಾಜತಾಂತ್ರಿಕ ಬಿಕ್ಕಟ್ಟು ಉದ್ಭವಿಸಿತು.ಅಕ್ಟೋಬರ್‌ 2005 ಮತ್ತು ಸೆಪ್ಟೆಂಬರ್ 2008ರಲ್ಲಿ ದೆಹಲಿ ಮೇಲೆ ಮತ್ತೆ ಉಗ್ರಗಾಮಿ ದಾಳಿಗಳು ನಡೆದು ಕ್ರಮವಾಗಿ ೬೨ ಮತ್ತು ೩೦ ನಾಗರಿಕರು ಸಾವನ್ನಪ್ಪಿದರು. ದೆಹಲಿ ಆಡಳಿತ ಸಮಸ್ಯೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಆಡಳಿತಕ್ಕೆ ಒಳಪಟ್ಟಿರುವ ದೆಹಲಿ, ಅತ್ತ ಕೇಂದ್ರಾಡಳಿತ ಪ್ರದೇಶವೂ ಅಲ್ಲ, ಇತ್ತ ಪೂರ್ಣ ಪ್ರಮಾಣದ ರಾಜ್ಯವೂ ಆಗಿಲ್ಲ. ಕೇಂದ್ರಾಡಳಿತ ಪ್ರದೇಶಗಳ ಸಂಪೂರ್ಣ ಆಡಳಿತದ ಹೊಣೆಯು ಕೇಂದ್ರ ಸರ್ಕಾರಕ್ಕೆ ಸೇರಿ­ದ್ದರೆ, ರಾಜ್ಯಗಳ ಆಡಳಿತವು ಚುನಾಯಿತ ಪ್ರತಿನಿಧಿಗಳ (ಶಾಸಕರ) ಸರ್ಕಾರದ ನಿಯಂತ್ರಣ­ದಲ್ಲಿ ಇರುತ್ತದೆ. ದೆಹಲಿ­ಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಡಳಿತ ಇದೆ. ಇದೇ ಕಾರಣಕ್ಕೆ ದೆಹಲಿಗೆ ಪೂರ್ಣ ಪ್ರಮಾಣದ ರಾಜ್ಯದ ಸ್ಥಾನ­ಮಾನ ಸಿಗಬೇಕು ಎನ್ನುವ ಕೂಗು ಕೇಳಿ ಬರುತ್ತದೆ. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರವು 2003ರಲ್ಲಿಯೇ ದೆಹಲಿಗೆ ಪೂರ್ಣ ಪ್ರಮಾಣದ ರಾಜ್ಯ ಸ್ಥಾನಮಾನ ನೀಡಲು ಉದ್ದೇಶಿಸಿತ್ತು. ಈ ಸಂಬಂಧ ಲೋಕಸಭೆಯಲ್ಲಿ ಮಸೂದೆಯನ್ನೂ ಮಂಡಿಸ­ಲಾಗಿತ್ತು. ಸಂಸತ್ತಿನ ಸ್ಥಾಯಿ ಸಮಿತಿ ಪರಾಮರ್ಶೆಗೆ ಒಪ್ಪಿಸಿರುವ ಈ ಮಸೂದೆ ಇದುವರೆಗೂ ನೆನೆಗುದಿಗೆ ಬಿದ್ದಿದೆ. ಬ್ರಿಟಿಷರು ಕೋಲ್ಕತ್ತಾ ಬದಲಿಗೆ ದೆಹಲಿಯನ್ನು ದೇಶದ ರಾಜಧಾನಿ­ಯನ್ನಾಗಿ 1911ರಲ್ಲಿ ಘೋಷಿಸಿದ್ದರು. 2011ರಲ್ಲಿ ರಾಜಧಾನಿ ಘೋಷಣೆಗೆ 100 ವರ್ಷ ತುಂಬಿದ ಸಂದರ್ಭದಲ್ಲಿ ಲೋಕಸಭೆಯಲ್ಲಿ ಸಂಸ­ದರು ಪಕ್ಷಭೇದ ಮರೆತು ದೆಹಲಿಗೆ ಪೂರ್ಣ ಪ್ರಮಾಣದ ರಾಜ್ಯ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದ್ದರು. ಕೇಂದ್ರಾಡಳಿತ ಪ್ರದೇಶ 1991ರ ಮುಂಚೆ ದೆಹಲಿ ಕೇಂದ್ರಾ­ಡಳಿತ ಪ್ರದೇಶವಾಗಿತ್ತು. ಮೆಟ್ರೊ­ಪಾಲಿಟನ್ ಮಂಡಳಿಯು ಇದರ ಆಡಳಿತದ ಹೊಣೆಗಾರಿಕೆ ಹೊಂದಿತ್ತು. ಈ ಮಂಡಳಿಗೆ ಸೀಮಿತ ಅಧಿಕಾರ ಇತ್ತು. ಆನಂತರ ಸಂವಿಧಾನದ 69ನೆ ತಿದ್ದು­ಪಡಿ ಅನ್ವಯ ಈ ವ್ಯವಸ್ಥೆ ಕೈಬಿಟ್ಟು ದೆಹಲಿಯ ಹೆಸರನ್ನೂ ಬದಲಾ­ಯಿಸಿ, ದೆಹಲಿಯ ರಾಷ್ಟ್ರೀಯ ರಾಜ­ಧಾನಿ ಪ್ರದೇಶ ಎಂದು ಕರೆಯ­ಲಾಯಿತು. ಈ ಪ್ರದೇಶದ ಆಡಳಿತ ಉಸ್ತುವಾರಿ ಹೊಣೆ­ ವಿಧಾನ ಸಭೆಗೆ ಒಪ್ಪಿಸ­ಲಾಯಿತು. ಮಂತ್ರಿ­ಮಂಡಳ, ಅದ­ಕ್ಕೊಬ್ಬ ಮುಖ್ಯಮಂತ್ರಿ ಇರಬೇಕು ಎಂದು ನಿಗದಿಪಡಿಸ­ಲಾಯಿತು. ವಿಧಾನ­ಸಭೆಗೆ ಇರುವ ವಿಶೇಷ ಅಧಿಕಾರವನ್ನು ದೆಹಲಿಗೆ ಅನ್ವಯಿಸಲಿಲ್ಲ. ಹೀಗಾಗಿ ದೆಹಲಿ ವಿಶೇಷ ದರ್ಜೆಯ ಕೇಂದ್ರಾಡಳಿತ ಪ್ರದೇಶ­ವಾಯಿತು. ದೆಹಲಿಯಂತೆಯೇ ಪುದುಚೆರಿ ಕೂಡ ಕೇಂದ್ರಾಡಳಿತ ಮತ್ತು ರಾಜ್ಯದ ಸ್ಥಾನಮಾನ ಹೊಂದಿದೆ. ವಿಧಾನಸಭೆ ಚುನಾವಣೆ 1993ರಲ್ಲಿ ಮೊದಲ ಬಾರಿಗೆ ದೆಹಲಿ ರಾಜ್ಯ ವಿಧಾನಸಭೆಗೆ ಚುನಾ-­ವಣೆ ನಡೆಯಿತು. ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದಿತು. ನಂತರ ನಡೆದ ಮೂರು ಚುನಾವಣೆ­ಗಳಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರದ ರುಚಿ ಅನುಭವಿ­ಸಿತು. 2013ರಲ್ಲಿ ನಡೆದ ಚುನಾವಣೆ­ಯಲ್ಲಿ ಆಮ್ ಆದ್ಮಿ ಪಕ್ಷ ಮೊದಲ ಬಾರಿಗೆ ಸ್ಪರ್ಧಿಸಿ ಎರಡನೆ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿತು. 49 ದಿನಗಳವರೆಗೆ ಅಧಿಕಾರ ನಡೆಸಿತು. ದೆಹಲಿಯು ಪೂರ್ಣ ಪ್ರಮಾಣದ ರಾಜ್ಯದ ಸ್ಥಾನಮಾನ ಪಡೆಯಲು ಹಲವು ಅಡಚಣೆಗಳಿವೆ. ಡಿಡಿಎ ನಿಯಂತ್ರಣದಲ್ಲಿ ಭೂಮಿ ದೆಹಲಿ ವ್ಯಾಪ್ತಿಯ ಭೂಮಿಯು ದೆಹಲಿ ಅಭಿವೃದ್ಧಿ ಪ್ರಾಧಿಕಾರದ (ಡಿಡಿಎ) ನಿಯಂತ್ರಣದಲ್ಲಿ ಇದೆ. ಈ ಪ್ರಾಧಿಕಾರವು ಭೂಮಿ ವಶಪಡಿಸಿ­ಕೊಳ್ಳುವ ಸಂಪೂರ್ಣ ಅಧಿಕಾರ ಹೊಂದಿದೆ. ಕೇಂದ್ರ ನಗರಾಭಿವೃದ್ಧಿ ವ್ಯವಹಾರ ಸಚಿವಾಲಯದ ನಿಯಂತ್ರ­ಣ­­ದಡಿ ‘ಡಿಡಿಎ’ ಕಾರ್ಯನಿರ್ವ­ಹಿಸುತ್ತದೆ. ಕಾಯ್ದೆ–ಸುವ್ಯವಸ್ಥೆ ಹೊಣೆಗಾರಿಕೆ ದೆಹಲಿಯಲ್ಲಿ ಕಾಯ್ದೆ ಸುವ್ಯವಸ್ಥೆ ನೋಡಿಕೊಳ್ಳುವ ಹೊಣೆಗಾರಿಕೆಯು ರಾಜ್ಯ ಸರ್ಕಾರದ ಮೇಲೆ ಇಲ್ಲ. ಕೇಂದ್ರ ಗೃಹ ಸಚಿವಾಲಯವು ದೆಹಲಿ ಪೊಲೀಸ್ ವ್ಯವಸ್ಥೆಯ ಉಸ್ತುವಾರಿ ನೋಡಿಕೊ­ಳ್ಳುತ್ತದೆ. ಇಲ್ಲಿಯ ಮೆಟ್ರೊ­ಪಾಲಿಟನ್ ಪೊಲೀಸ್ ಪಡೆಯು ವಿಶ್ವದಲ್ಲಿಯೇ ಅತಿದೊಡ್ಡ ಮೆಟ್ರೊ­ಪಾಲಿಟನ್ ಪಡೆ­ಯಾಗಿದೆ. ದೆಹಲಿಯ ಆಡಳಿತದ ನಿರ್ವಹ­ಣೆಯು ಸಾಕಷ್ಟು ಸಂಕೀರ್ಣ­ವಾಗಿದೆ. ನಾಗರಿಕ ಸೇವೆಗಳಾದ ಸ್ವಚ್ಛತೆ, ರಸ್ತೆಗಳ ನಿರ್ವಹಣೆ, ಕೆಲವು ತೆರಿಗೆ, ಮೂಲ­ಸೌಕರ್ಯ, ಮುಂತಾದವುಗಳ ಹೊಣೆ­ಗಾ­ರಿಕೆ­ಯನ್ನು ಮುನ್ಸಿಪಲ್ ಕಾರ್ಪೊ­ರೇಷನ್ ನಿರ್ವಹಿಸುತ್ತದೆ. 1992­ರಲ್ಲಿ ಸಂವಿಧಾನದ 74ನೆ ತಿದ್ದುಪಡಿ ಅನ್ವಯ, ದೆಹಲಿ ಮುನ್ಸಿಪಲ್ ಕಾರ್ಪೊ­ರೇಷನ್ ಪುನರ್ ರಚನೆಗೊಂಡಿತು. 272 ಸದಸ್ಯರ ಈ ಮಹಾನಗರ ಪಾಲಿಕೆಯಲ್ಲಿ 1997­ರಲ್ಲಿ ಬಿಜೆಪಿ ಅಧಿಕಾರ ನಡೆಸಿತು. 2002ರಲ್ಲಿ ಕಾಂಗ್ರೆಸ್ ಅಧಿಕಾರದ ರುಚಿ ನೋಡಿ­ದರೆ, 2007ರಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದಿತು. 2012ರಲ್ಲಿ ಇದನ್ನು ಮೂರು ಪಾಲಿಕೆಗಳಾಗಿ (ಉತ್ತರ, ದಕ್ಷಿಣ ಮತ್ತು ಪೂರ್ವ) ವಿಭಜಿಸಲಾಯಿತು. ಈ ಮೂರೂ ಪಾಲಿಕೆಗಳು ಈಗಲೂ ಬಿಜೆಪಿಯ ನಿಯಂತ್ರಣದಲ್ಲಿ ಇವೆ. ಪಾಲಿಕೆಯ ವೆಚ್ಚದ ಬಹುಭಾಗವನ್ನು ರಾಜ್ಯ ಸರ್ಕಾರವೇ ಭರಿಸುತ್ತದೆ. ಪೌರ ಸಂಸ್ಥೆಗಳು ದೆಹಲಿಯ ಲ್ಯೂಟಿಯೆನ್ಸ್ ದೆಹಲಿ ಪ್ರದೇಶದ ಮೇಲೆ ಯಾವುದೇ ಅಧಿಕಾರ ಹೊಂದಿಲ್ಲ. ಈ ಪ್ರದೇಶದಲ್ಲಿ ಕೇಂದ್ರ ಸಚಿವರು, ಸಂಸದರು, ರಾಜತಾಂತ್ರಿಕರು ನೆಲೆಸಿ­ದ್ದಾರೆ. ಈ ಪ್ರದೇಶದ ನಿರ್ವಹಣೆ­ಯನ್ನು ಚುನಾಯಿತರಲ್ಲದ ಸದಸ್ಯರು ಇರುವ ನವದೆಹಲಿ ಮುನ್ಸಿಪಲ್ ಮಂಡಳಿ ನಿಭಾಯಿಸುತ್ತದೆ. ಸೇನಾ ಪಡೆಗಳ ಕಚೇರಿಗಳು ಮತ್ತು ಸಿಬ್ಬಂದಿಯ ವಸತಿ ಪ್ರದೇಶವನ್ನು ಚುನಾಯಿತ ಕಂಟೋನ್‌ಮೆಂಟ್ ಮಂಡಳಿಯು ನಿಭಾಯಿಸುತ್ತದೆ. ಭೂಗೋಳ ರಾಷ್ಟ್ರೀಯ ರಾಜಧಾನಿ ಪ್ರದೇಶ ದೆಹಲಿಯು, ನಿರ್ದಿಷ್ಟವಾಗಿ ಗ್ರಾಮೀಣ ಮತ್ತು ನಗರಗಳನ್ನು ಒಳಗೊಂಡು ವಿಶಾಲವಾಗಿ ವ್ಯಾಪಿಸಿಕೊಂಡಿದೆ.ದೆಹಲಿಯು ಗರಿಷ್ಠ ಉದ್ದ ಮತ್ತು ವಿಸ್ತಾರವನ್ನು ಹೊಂದಿದೆ. ದೆಹಲಿಯಲ್ಲಿ ಮೂರು ಸ್ಥಳೀಯ ಸಂಸ್ಥೆಗಳಿವೆ(ಕಾನೂನು ಸಮ್ಮತ ಪಟ್ಟಣಗಳು) ಅವುಗಳೆಂದರೆ, ದೆಹಲಿ ಪುರಸಭೆ(ಪ್ರದೇಶವು, ನವದೆಹಲಿ ಪುರಸಭೆ ಸಮಿತಿ ಮತ್ತು ದೆಹಲಿ ಸೇನಾವಸತಿ ಮಂಡಳಿ. ದೆಹಲಿ ವಿಕಸನಶೀಲನ ಪ್ರದೇಶವಾಗಿದ್ದು, ಉತ್ತರದ ತುದಿಯಲ್ಲಿ ಸರೂಪ್ ನಗರವಿದ್ದರೆ, ದಕ್ಷಿಣದಲ್ಲಿ ರಾಜೋರ್ಕಿವರೆಗೂ ವ್ಯಾಪಿಸಿದೆ. ಪಶ್ಚಿಮ ತುದಿಯಲ್ಲಿ ನಜಾಫ್‌ಘರ್ ಇದ್ದು, ಮತ್ತು ಪೂರ್ವ ತುದಿಯಲ್ಲಿ ಯಮುನಾ ನದಿಯಿದೆ.(ಇಲ್ಲಿ ಹೆಚ್ಚುಕಡಮೆ ಸಂಪ್ರದಾಯವಾದಿಗಳೇ ಇದ್ದಾರೆ). ಶಾಹ್ದಾರಾ ಮತ್ತು ಭಜನ್ಪುರ ಮುಂತಾದ ಸ್ಥಳಗಳು ಪೂರ್ವ ತುದಿಯಲ್ಲಿದ್ದು, ಇವು ದೆಹಲಿಯ ಪ್ರಮುಖ ವ್ಯಾಪಾರ ಕೇಂದ್ರಗಳೂ ಹೌದು.ದಕ್ಷಿಣ ಮತ್ತು ಪೂರ್ವದ ಗಡಿಗಳೆನ್ನಲಾದ ನೋಯ್ಡಾ ಮತ್ತು DLFಅನ್ನು NCR ಆವರಿಸಿಕೊಂಡಿದೆ. ವಿಚಿತ್ರವೇನೆಂದರೆ, ದೆಹಲಿಯ ಮುಖ್ಯ ಹರವು ನಿರ್ದಿಷ್ಟ ಭೌಗೋಳಿಕ ಲಕ್ಷಣಗಳಿಗೆ ಅನುಗುಣವಾಗಿಲ್ಲ (ಉದಾಹರಣೆಗೆ, ಲಂಡನ್‌ಗಿಂತ ವ್ಯತಿರಿಕ್ತವಾಗಿದೆ. ಅಲ್ಲಿ ಥೇಮ್ಸ್ ನದಿ ಮಧ್ಯಭಾಗದಲ್ಲಿದ್ದು, ಹ್ಯಾಪ್‌ಸ್ಟೆಡ್ ಹೀತ್ ಬೆಟ್ಟ ಉತ್ತರದ ಮೊದಲ ಗಡಿಯಾಗಿದ್ದರೆ, ದಕ್ಷಿಣದ ಗಡಿಯು ನದಿ ಬಳಿ ಯಿದೆ. ಅಂತೆಯೇ ಪಶ್ಚಿಮದ ಗಡಿಯು ಪ್ಯಾಡ್ಡಿಂಗ್ಟನ್-ಜಲಾನಯನ ಪ್ರದೇಶದ ಕೆಳತುದಿಯಲ್ಲಿದೆ) ದೆಹಲಿಯ ಮುಖ್ಯ ನಗರ ಪ್ರದೇಶ ದಕ್ಷಿಣದ ಸಾಕೆಟ್‌ನಲ್ಲೇ ಮುಕ್ತಾಯವಾಗುವುದಿಲ್ಲ, ಸುಲಭವಾಗಿ ಹೇಳುವುದಿದ್ದರೆ ಉತ್ತರದ ಗಡಿ ಹಿಂದೆ ಕಾನ್ಹಾಟ್ ಪ್ಲೇಸ್ ಆಗಿತ್ತು, ಅಂತೆಯೇ ಪಶ್ಚಿಮದ ಗಡಿ NH೮ ಆಗಿತ್ತು. ದೆಹಲಿ ಭೂಪ್ರದೇಶವು ಯದ್ವಾತದ್ವಾ ವಿಸ್ತಾರವಾಗಿದೆ. ಉತ್ತರದ ಬಯಲು ಕೃಷಿ ಭೂಮಿಯಿಂದ ಆರಂಭವಾಗಿ ಒಣ ಭೂಮಿಯಲ್ಲಿ ಕೊನೆಗೊಳ್ಳುತ್ತದೆ, ಅಂತೆಯೇ ದಕ್ಷಿಣದಲ್ಲಿ ನಿರ್ಜಲ ಬೆಟ್ಟಗಳಿವೆ(ರಾಜಸ್ಥಾನದ ಅರಾವಳಿ ಬೆಟ್ಟಗಳ ಇನ್ನೊಂದು ಮಗ್ಗುಲು).ನಗರದ ದಕ್ಷಿಣ ಭಾಗಗಳಲ್ಲಿ ನೈಸರ್ಗಿಕವಾದ ಬೃಹತ್ ಸರೋವರಗಳಿದ್ದ ಕಾಲವೊಂದಿತ್ತು. ಆದರೆ ಈಗ ಅವು ಗಣಿಗಾರಿಕೆಯಿಂದಾಗಿ ಬತ್ತಿ ಹೋಗಿವೆ. ನಗರದ ಗಡಿ ಯಮುನಾ ನದಿ. ದೆಹಲಿ ನಗರದ ಭಾಗವಾಗಿರದ ನದಿಯ ಪೂರ್ವಕ್ಕಿರುವ ಪ್ರದೇಶಗಳೊಂದಿಗೆ ನಗರಕ್ಕೆ ಉತ್ತಮ ಸಂಪರ್ಕವಿದ್ದಾಗ್ಯೂ, ಅನೇಕ ಸೇತುವೆಗಳು ಮತ್ತು ಮೆಟ್ರೋ ಸುರಂಗಮಾರ್ಗಗಳು ನಗರವನ್ನು ಪ್ರತ್ಯೇಕಿಸುತ್ತವೆ. ನವ ದೆಹಲಿ ಸೇರಿದಂತೆ ನಗರದ ಒಟ್ಟು ಸಮಗ್ರತೆಯು ನದಿಯ ಪಶ್ಚಿಮ ಭಾಗಕ್ಕಿದೆ. ನದಿಯ ಪೂರ್ವ ಭಾಗ ಈಗಲೂ NCRನ್ನೇ ಮುಂದುವರಿಸಿದ್ದರೂ, ಅದು ದೆಹಲಿಯಲ್ಲ. ದೆಹಲಿಯುಭಾರತದ ಉತ್ತರ ಭಾಗದಲ್ಲಿದೆ. ಇದು ಪೂರ್ವದಲ್ಲಿ ಉತ್ತರ ಪ್ರದೇಶ ಮತ್ತು ಪಶ್ಚಿಮ, ಉತ್ತರ ಮತ್ತು ದಕ್ಷಿಣದಲ್ಲಿ ಹರಿಯಾಣ ಎಂಬ ಭಾರತೀಯ ರಾಜ್ಯಗಳಿಂದ ಸುತ್ತುವರಿಯಲ್ಪಟ್ಟಿದೆ. ದೆಹಲಿಯ ಸರಿಸುಮಾರು ಭಾಗವು ಗಂಗಾನದಿಯ ಬಯಲು ಪ್ರದೇಶಗಳಲ್ಲಿದೆ. ಯಮುನಾ ನದಿ ಬಯಲು ಪ್ರದೇಶ ಮತ್ತು ದೆಹಲಿಯ ಪರ್ವತ ಶ್ರೇಣಿಗಳು ದೆಹಲಿಯ ಎರಡು ಪ್ರಮುಖ ಭೌಗೋಳಿಕ ಲಕ್ಷಣವಾಗಿದೆ. ಕೆಳಮಟ್ಟದಲ್ಲಿರುವ ಯಮುನಾ ನದಿ ಬಯಲು ಪ್ರದೇಶವು ಕೃಷಿಗೆ ಸೂಕ್ತವಾದ ಮೆಕ್ಕಲು ಮಣ್ಣನ್ನು ಒದಗಿಸುತ್ತದೆ. ಆದರೂ ಈ ನದಿ ಬಯಲು ಪ್ರದೇಶಗಳು ಪದೇ ಪದೇ ಪ್ರವಾಹಕ್ಕೆ ತುತ್ತಾಗುವ ಪ್ರವೃತ್ತಿ ಹೊಂದಿವೆ. ೩೧೮ ಮೀಟರ್‌ (೧,೦೪೩ ಅಡಿ) ಎತ್ತರವಿರುವ ಇಲ್ಲಿನ ಪರ್ವತಶ್ರೇಣಿಗಳು ಈ ಪ್ರದೇಶದ ಅತ್ಯಂತ ಪ್ರಭಾವಿ ಭೌಗೋಳಿಕ ಲಕ್ಷಣವನ್ನು ರೂಪಿಸಿವೆ. ಅರಾವಳಿ ಪರ್ವತ ಶ್ರೇಣಿಯು ನಗರದ ದಕ್ಷಿಣ ಭಾಗದಿಂದ ಆರಂಭಗೊಂಡು ಪಶ್ಚಿಮ, ಈಶಾನ್ಯ ಮತ್ತು ವಾಯುವ್ಯ ಭಾಗಗಳನ್ನು ಸುತ್ತುವರಿದಿದೆ. ಹಿಂದೂ ಧರ್ಮದ ಪವಿತ್ರ ನದಿಯಾಗಿರುವ ಯಮುನಾ ನದಿಯು ದೆಹಲಿಯಲ್ಲಿ ಹರಿಯುವ ಪ್ರಮುಖ ನದಿಯಾಗಿದೆ. ಇಲ್ಲಿ ಹರಿಯುವ ಇನ್ನೊಂದು ನದಿಯಾದ ಹಿಂದೊನ್‌ ನದಿಯು ಘಜೀಯಾಬಾದ್‌ನಿಂದ ದೆಹಲಿಯ ಪೂರ್ವ ಭಾಗ ವನ್ನು ಬೇರ್ಪಡಿಸುತ್ತದೆ. ದೆಹಲಿಯು ಭೂಕಂಪ ಪ್ರದೇಶ-IV ವ್ಯಾಪ್ತಿಯಲ್ಲಿರುವುದರಿಂದ, ಅದು ಪ್ರಮುಖ ಭೂಕಂಪಗಳಿಗೆ ಗುರಿಯಾಗಬಹುದು. ವಾಯುಗುಣ ದೆಹಲಿಯಲ್ಲಿ ಏಪ್ರಿಲ್‌ ತಿಂಗಳ ಆರಂಭದಿಂದ ಅಕ್ಟೋಬರ್‌ನ ಮಧ್ಯದವರೆಗೂ ದೀರ್ಘಾವಧಿ ಬೇಸಿಗೆಯಿದ್ದು, ವಿಪರೀತವಾದ ಉಷ್ಣ ಹವೆಯಿರುತ್ತದೆ. ಈ ನಡುವೆ ಮುಂಗಾರು ಮಾರುತವೂ ಬಂದು ಹೋಗುತ್ತದೆ. ಮಾರ್ಚ್‌ ತಿಂಗಳ ಆರಂಭದಲ್ಲಿ ಗಾಳಿಯು ಹಿಮ್ಮುಖವಾಗಿ ಬೀಸುತ್ತದೆ. ಅಂದರೆ ವಾಯುವ್ಯ ದಿಕ್ಕಿನಿಂದ ನೈರುತ್ಯ ದಿಕ್ಕಿನಡೆಗೆ ಬೀಸುತ್ತದೆ. ಜೊತೆಗೆ ಇದು ರಾಜಸ್ಥಾನದಿಂದ ಬಿಸಿಗಾಳಿ ಮತ್ತು ಮರಳನ್ನು ತರುತ್ತದೆ. ಇದು ದೆಹಲಿಯ ಬೇಸಿಗೆಯ ಲಕ್ಷಣ. ಇದನ್ನು ಲೂ ಎಂದು ಕರೆಯುತ್ತಾರೆ. ದೆಹಲಿಯಲ್ಲಿ ಮಾರ್ಚ್‌ನಿಂದ ಮೇ ತಿಂಗಳವರೆಗಿನ ಅವಧಿಯಲ್ಲಿ ವಿಪರೀತ ಉಷ್ಣ ಹವಾಗುಣವಿರುತ್ತದೆ. ಜೂನ್‌ನ ಕೊನೆಯಲ್ಲಿ ಮುಂಗಾರು ಮಾರುತ ಬರುವುದರಿಂದ ಬಿಸಿಲಿನಿಂದ ಸ್ವಲ್ಪ ಮಟ್ಟಿನ ಬಿಡುವು ಸಿಗುತ್ತದೆ. ಆದರೆ ಅದೇ ಸಮಯದಲ್ಲಿ ಆದ್ರತೆ ಹೆಚ್ಚಾಗುತ್ತದೆ. ಚಳಿಗಾಲವು ಡಿಸೆಂಬರ್‌ನ ಕೊನೆಯಲ್ಲಿ ಆರಂಭಗೊಂಡು, ಜನವರಿಯ ಹೊತ್ತಿಗೆ ಭಾರಿ ಹಿಮದೊಂದಿಗೆ ಕ್ರೂರವಾಗುತ್ತದೆ. ಗರಿಷ್ಠ ತಾಪಮಾನದ ವ್ಯಾಪ್ತಿಯು −೦.೬ °C (೩೦.೯ °F) ಯಿಂದ ೫೫ವರೆಗೆ ಇರುತ್ತದೆ. ವಾರ್ಷಿಕ ತಾಪಮಾನ ೨೫ °C (೭೭ °F) ಆಗಿದ್ದು, ಮಾಸಿಕ ತಾಪಮಾನದ ವ್ಯಾಪ್ತಿಯು ೧೩ °Cಯಿಂದ ೩೨ °Cವರೆಗೆ (೫೬ °F ಯಿಂದ ೯೦ °F) ಇರುತ್ತದೆ. ವಾರ್ಷಿಕ ಸರಾಸರಿ ಮಳೆಯ ಪ್ರಮಾಣವು ೭೧೪ ಮಿಲಿ ಮೀಟರ್‌ನಷ್ಟಿದ್ದು (೨೮.೧ ಅಂಗುಲಗಳು), ಈ ಪೈಕಿ ಜುಲೈ ಮತ್ತು ಆಗಸ್ಟ್‌ನಲ್ಲಿ ಹೆಚ್ಚಿನ ಮಳೆಯಾಗುತ್ತದೆ. ದೆಹಲಿಗೆ ಮುಂಗಾರು ಮಾರುತ ಸರಾಸರಿಯಾಗಿ ಜೂನ್‌ ೨೯ರಂದು ಆಗಮಿಸುತ್ತದೆ. ಪೌರಾಡಳಿತ ಜುಲೈ ೨೦೦೭ರ ಹೊತ್ತಿಗೆ ರಾಷ್ಟ್ರೀಯ ರಾಜಧಾನಿ ಪ್ರದೇಶವಾದ ದೆಹಲಿಯನ್ನು ಒಂಬತ್ತು ಜಿಲ್ಲೆಗಳು, ೨೭ ತೆಹ್ಸಿಲ್‌ಗಳು, ೫೯ ಗಣತಿ ನಗರಗಳು, ೧೬೫ ಗ್ರಾಮಗಳು ಮತ್ತು ಮೂರು ಕಾನೂನು ಸಮ್ಮತ ನಗರಗಳಾದ ದೆಹಲಿಯ ಪುರಸಭೆ(MCD), ನವ ದೆಹಲಿ ಪುರಸಭೆ ಸಮಿತಿ (NDMC) ಮತ್ತು ದೆಹಲಿ ಸೇನಾವಸತಿ ಮಂಡಳಿ (DCB) ಸಂಕ್ಷಿಪ್ತಗೊಳಿಸಲಾಗಿತ್ತು. ದೆಹಲಿ ಮಹಾನಗರ ಪ್ರದೇಶ ರಾಷ್ಟ್ರೀಯ ರಾಜಧಾನಿ ಪ್ರದೇಶ ದೆಹಲಿಯೊಳಗಿದೆ (NCT). NCT ಈ ಮುಂದಿನ ಮೂರು ಸ್ಥಳೀಯ ಪುರಸಭಾ ಸಂಸ್ಥೆಗಳನ್ನು ಹೊಂದಿದೆ: ದೆಹಲಿಯ ಪುರಸಭೆ (MCD), ನವ ದೆಹಲಿ ಪುರಸಭೆ ಸಮಿತಿ (NDMC) ಮತ್ತು ದೆಹಲಿ ಸೇನಾವಸತಿ ಮಂಡಳಿ. ಸುಮಾರು ೧೩.೭೮ ದಶಲಕ್ಷ ಜನರಿಗೆ ಪೌರ ಸೌಕರ್ಯವನ್ನು ಒದಗಿಸುತ್ತಿರುವ MCDಯು, ವಿಶ್ವದ ಅತಿ ದೊಡ್ಡ ಪುರಸಭಾ ಸಂಸ್ಥೆಗಳಲ್ಲಿ ಒಂದಾಗಿದೆ. ಭಾರತದ ರಾಜಧಾನಿಯಾಗಿರುವ ನವದೆಹಲಿಯು NDMC ಆಡಳಿತದಡಿಯಲ್ಲಿ ಬರುತ್ತದೆ. NDMC ಅಧ್ಯಕ್ಷರನ್ನು ದೆಹಲಿಯ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಭಾರತ ಸರಕಾರ ನೇಮಿಸುತ್ತದೆ. ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ ಹೊರಗಡೆ ದೆಹಲಿಯ ನಾಲ್ಕು ಮುಖ್ಯ ಉಪನಗರಗಳಿವೆ. ಅವುಗಳೆಂದರೆ ಗುರ್‌ಗಾಂವ್‌, ಫರಿದಾಬಾದ್‌ (ಹರಿಯಾಣದಲ್ಲಿರುವ), ಉತ್ತರ ಪ್ರದೇಶದಲ್ಲಿರುವ ನೋಯ್ಡಾ ಮತ್ತು ಘಜೀಯಾಬಾದ್‌. ದೆಹಲಿಯನ್ನು ಒಂಬತ್ತು ಜಿಲ್ಲೆಗಳಾಗಿ ವಿಭಾಗಿಸಲಾಗಿದೆ. ಪ್ರತಿ ಜಿಲ್ಲೆಗೆ (ವಿಭಾಗ) ಸಹಾಯಕ ಕಮೀಷನರ್‌ ಮುಖ್ಯ ಅಧಿಕಾರಿ, ಮತ್ತು ಜಿಲ್ಲೆಯನ್ನು ಮೂರು ಉಪವಿಭಾಗಗಳಾಗಿ ವಿಂಗಡಿಸಲಾಗಿದೆ. ಉಪವಿಭಾಗ ನ್ಯಾಯಾಧೀಶರು ಪ್ರತಿ ಉಪವಿಭಾಗದ ಮುಖ್ಯ ಅಧಿಕಾರಿಯಾಗಿರುತ್ತಾರೆ. ಎಲ್ಲಾ ಸಹಾಯಕ ಕಮೀಷನರ್‌ಗಳು ವಿಭಾಗೀಯ ಕಮೀಷನರ್‌ರಿಗೆ ವರದಿ ಸಲ್ಲಿಸಬೇಕಾಗುತ್ತದೆ. ದೆಹಲಿಯ ಜಿಲ್ಲಾ ಆಡಳಿತವು ಎಲ್ಲಾ ರೀತಿಯ ರಾಜ್ಯ ಮತ್ತು ಕೇಂದ್ರ ಸರಕಾರದ ನೀತಿಗಳನ್ನು ಕಾರ್ಯಗತಗೊಳಿಸುವ ಮತ್ತು ಸರಕಾರದ ಹಲವು ಕಾರ್ಯಗಳ ಮೇಲ್ವಿಚಾರಣೆಯನ್ನು ನೋಡಿಕೊಳ್ಳುವ ಸಂಸ್ಥೆಯಾಗಿದೆ. ದೆಹಲಿಯ ನ್ಯಾಯನಿರ್ವಹಣೆಯು ದೆಹಲಿ ಉಚ್ಚ ನ್ಯಾಯಾಲಯದ ವ್ಯಾಪ್ತಿಗೆ ಬರುತ್ತದೆ. ದೆಹಲಿ ಕೆಳಮಟ್ಟದ ನ್ಯಾಯಾಲಯಗಳನ್ನೂ ಹೊಂದಿದೆ: ಅವುಗಳೆಂದರೆ ಪೌರ ಸಂಬಂಧಿ ಪ್ರಕರಣಗಳಿಗೆ ಚಿಕ್ಕ ಪ್ರಕರಣಗಳ ನ್ಯಾಯಾಲಯ ಮತ್ತು ಅಪರಾಧಕ್ಕೆ ಸಂಬಂಧಿಸಿದ ಪ್ರಕರಣಗಳಿಗೆ ಸೆಷನ್ಸ್‌ ನ್ಯಾಯಾಲಯ. ಪೊಲೀಸ್ ಕಮೀಷನರ್‌ ನೇತೃತ್ವದ ದೆಹಲಿ ಪೊಲೀಸ್‌ ಪಡೆಯು ವಿಶ್ವದ ಅತ್ಯಂತ ದೊಡ್ಡ ಮಹಾನಗರ ಪೊಲೀಸ್ ಪಡೆಗಳ ಪೈಕಿ ಒಂದು. ದೆಹಲಿಯನ್ನು ಆಡಳಿತಾತ್ಮಕವಾಗಿ ಒಂಬತ್ತು ಪೊಲೀಸ್‍-ವಲಯಗಳಾಗಿ ವಿಂಗಡಿಸಲಾಗಿದ್ದು, ಮತ್ತು ಅದನ್ನು ೯೫ ಸ್ಥಳೀಯ ಪೊಲೀಸ್‌ ಕಛೇರಿಗಳಾಗಿ ವಿಭಾಗಿಸಲಾಗಿದೆ. ಆಡಳಿತ ಮತ್ತು ರಾಜಕೀಯ ಈ ಹಿಂದೆ ವಿಶೇಷ ಕೇಂದ್ರಾಡಳಿತ ಪ್ರದೇಶ ಎಂದು ಕರೆಯಲ್ಪಟ್ಟಿದ್ದ, ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶವು ತನ್ನದೇ ಆದ ಶಾಸನ ಸಭೆ, ಲೆಫ್ಟಿನೆಂಟ್‌ ಗವರ್ನರ್‌, ಮಂತ್ರಿ ಮಂಡಲ ಮತ್ತು ಮುಖ್ಯಮಂತ್ರಿಯನ್ನು ಹೊಂದಿದೆ. ಶಾಸನ ಸಭೆ ಸ್ಥಾನಗಳನ್ನು NCTನಲ್ಲಿನ ಪ್ರಾದೇಶಿಕ ಕ್ಷೇತ್ರಗಳಿಂದ ನೇರವಾಗಿ ಆಯ್ಕೆಮಾಡುವುದರಿಂದ ಭರ್ತಿಗೊಳಿಸಲಾಗುತ್ತದೆ. ಆದರೂ ಭಾರತದ ಕೇಂದ್ರ ಸರಕಾರ ಮತ್ತು ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ ಸರಕಾರ ಜಂಟಿಯಾಗಿ ನವದೆಹಲಿಯ ಆಡಳಿತವನ್ನು ನಡೆಸುತ್ತವೆ. ದೆಹಲಿಯ ಒಂದು ನಗರವಾದ ನವದೆಹಲಿಯು ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ ಮತ್ತು ಭಾರತ ಸರಕಾರ ಎರಡರ ಶಾಸನ ಸಭೆಯಲ್ಲೂ ಸದಸ್ಯತ್ವ ಹೊಂದಿದೆ. ಸಾರಿಗೆ ಮತ್ತು ಇತರ ಸೇವೆಗಳ ನಿರ್ವಹಣೆಯನ್ನು ದೆಹಲಿ ಸರಕಾರ ವಹಿಸಿಕೊಂಡರೆ, ಪೊಲೀಸ್‌ನಂತಹ ಸೇವೆಗಳ ಜವಬ್ದಾರಿಯನ್ನು ನೇರವಾಗಿ ಕೇಂದ್ರ ಸರಕಾರ ವಹಿಸಿಕೊಳ್ಳುತ್ತದೆ. ೧೯೫೬ಯ ನಂತರ ಮೊದಲ ಬಾರಿಗೆ ೧೯೯೩ರಲ್ಲಿ ನೇರ ಸಂಯುಕ್ತ ಒಕ್ಕೂಟ ನಿಯಮದ ಅನುಸಾರ ಶಾಸನ ಸಭೆಯನ್ನು ಮರುಸ್ಥಾಪಿಸಲಾಯಿತು. ಹೆಚ್ಚುವರಿಯಾಗಿ ದೆಹಲಿಯ ಪುರಸಭೆ ಮಂಡಳಿಯು (MCD) ಪಂಜಾಯತಿ ರಾಜ್‌ ಕಾಯಿದೆಯ ಭಾಗದ ಅನುಸಾರ ನಗರದ ಪೌರಾಡಳಿತವನ್ನು ನಿರ್ವಹಿಸುತ್ತಿದೆ. ದೆಹಲಿಯ ನಗರ ಪ್ರದೇಶವಾದ ನವ ದೆಹಲಿಯು ದೆಹಲಿ ರಾಜ್ಯ ಸರಕಾರ ಮತ್ತು ಭಾರತ ಸರಕಾರ ಎರಡರ ಶಾಸನ ಸಭೆಯಲ್ಲೂ ಸದಸ್ಯತ್ವ ಹೊಂದಿದೆ. ಭಾರತದ ಸಂಸತ್ತು, ರಾಷ್ಟ್ರಪತಿ ಭವನ (ಅಧ್ಯಕ್ಷರ ಅಧಿಕೃತ ಮನೆ) ಮತ್ತು ಭಾರತದ ಸರ್ವೋಚ್ಚ ನ್ಯಾಯಾಲಯ ನವದೆಹಲಿಯಲ್ಲಿದೆ. ದೆಹಲಿಯಲ್ಲಿ ಒಟ್ಟು ೨೭೩ ಶಾಸನ ಸಭೆ ಸ್ಥಾನಗಳು ಮತ್ತು ಹತ್ತು ಲೋಕ ಸಭಾ (ಭಾರತೀಯ ಸಂಸತ್ತಿನ ಕೆಳಮನೆ) ಸ್ಥಾನಗಳಿವೆ. ದೆಹಲಿಯು ಭಾರತ ರಾಷ್ಟ್ರೀಯ ಕಾಂಗ್ರೆಸ್‌‌ನ ಸಾಂಪ್ರದಾಯಿಕ ಅಭೇದ್ಯವಾದ ಕೋಟೆಯಾಗಿದೆ, ಇದಕ್ಕೆ ಕಾಂಗ್ರೆಸ್ ಪಕ್ಷವೆಂಬ ಹೆಸರೂ ಇದೆ.೧೯೯೦ರ ದಶಕದಲ್ಲಿ ಮದನ್‌ ಲಾಲ್‌ ಖುರಾನರ ನಾಯಕತ್ವದಲ್ಲಿ ಭಾರತೀಯ ಜನತಾ ಪಕ್ಷ (BJP) ಅಧಿಕಾರಕ್ಕೆ ಬಂದಿತ್ತು. ಆದಾರೂ, ೧೯೯೮ರಲ್ಲಿ ಹಾಲಿ ಮುಖ್ಯಮಂತ್ರಿಯಾಗಿರುವ ಶೀಲಾ ದೀಕ್ಷಿತ್‌ರ ನಾಯಕತ್ವದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರವನ್ನು ಪಡೆಯಿತು. ಕಾಂಗ್ರೆಸ್ ೨೦೦೩ ಮತ್ತು ೨೦೦೮ ಚುನಾವಣೆಗಳಲ್ಲೂ ಅಧಿಕಾರವನ್ನು ಉಳಿಸಿಕೊಂಡಿತು. ಅರ್ಥ ವ್ಯವಸ್ಥೆ ಸಾಮಾನ್ಯ ದರದಲ್ಲಿ ರೂ. ೧,೧೮೨ ಶತಕೋಟಿ (US$೨೪.೫ ಶತಕೋಟಿ) ಮತ್ತು PPP ದರದಲ್ಲಿ ರೂ. ೩,೩೬೪ ಶತಕೋಟಿ (US$೬೯.೮ ಶತಕೋಟಿ) ರಾಜ್ಯದ ಸ್ಥಳೀಯ ಉತ್ಪನ್ನದೊಂದಿಗೆ (FY ೨೦೦೭) ದೆಹಲಿಯು ಉತ್ತರ ಭಾರತದಲ್ಲಿ ಅತಿ ದೊಡ್ಡ ವಾಣಿಜ್ಯ ಕೇಂದ್ರವಾಗಿದೆ. ೨೦೦೭ರಲ್ಲಿ ದೆಹಲಿಯು ಪ್ರಸಕ್ತ ದರದಲ್ಲಿ ರೂ. ೬೬,೭೨೮ (US$೧,೪೫೦)ರಷ್ಟು ತಲಾ ಆದಾಯವನ್ನು ಹೊಂದಿದ್ದು, ಭಾರತದಲ್ಲಿ ಚಂಡೀಗಡ್‌ ಮತ್ತು ಗೋವಾ ನಂತರದ ಮೂರನೆಯ ಸ್ಥಾನವನ್ನು ಪಡೆದಿದೆ. ದೆಹಲಿಯ ಒಟ್ಟು SDPಯ ೭೦.೯೫%ರಷ್ಟು ಪ್ರಾದೇಶಿಕ ವಲಯದಿಂದ ಬರುತ್ತದೆ, ದ್ವೀತಿಯ ಮತ್ತು ಪ್ರಾಥಮಿಕ ವಲಯಗಳಿಂದ ಅನುಕ್ರಮವಾಗಿ ೨೫.೨% ಮತ್ತು ೩.೮೫%ರಷ್ಟು ಆದಾಯ ಬರುತ್ತದೆ. ದೆಹಲಿಯ ಕಾರ್ಮಿಕ ವರ್ಗವು ಒಟ್ಟು ಜನಸಂಖ್ಯೆಯ ೩೨.೮೨%ರಷ್ಟಿದ್ದು, ೧೯೯೧ ಮತ್ತು ೨೦೦೧ನ ನಡುವೆ ೫೨.೫೨%ರಷ್ಟು ಏರಿಕೆ ಕಂಡುಬಂದಿದೆ. ದೆಹಲಿಯ ನಿರುದ್ಯೋಗ ದರವು ೧೯೯೯–೨೦೦೦ರಲ್ಲಿ ೧೨.೫೭%ರಷ್ಟಿದ್ದು, ಇದು ೨೦೦೩ರಲ್ಲಿ ೪.೬೩%ಕ್ಕೆ ಇಳಿದಿದೆ. ೨೦೦೪ರ ಡಿಸೆಂಬರ್‌ನಲ್ಲಿ ದೆಹಲಿಯಲ್ಲಿ ೬೩೬,೦೦೦ ಜನರು ವಿವಿಧ ಉದ್ಯೋಗ ವಿನಿಮಯ ಕಾರ್ಯಕ್ರಮಗಳೊಂದಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ೨೦೦೧ರಲ್ಲಿ ಎಲ್ಲಾ ಸರಕಾರಿ (ಕೇಂದ್ರ ಮತ್ತು ರಾಜ್ಯ) ಮತ್ತು ಅರೆಸರಕಾರಿ ವಲಯದ ಕಾರ್ಮಿಕರ ಸಂಖ್ಯೆ ೬೨೦,೦೦೦ರಷ್ಟಿತ್ತು. ಹಾಗೆಯೇ ಸಂಘಟಿತ ಖಾಸಗಿ ಕಾರ್ಮಿಕರ ಸಂಖ್ಯೆಯು ೨೧೯,೦೦೦ರಷ್ಟಿತ್ತು. ಪ್ರಮುಖ ಸೇವಾ ಉದ್ಯಮಗಳಲ್ಲಿ ಮಾಹಿತಿ ತಂತ್ರಜ್ಞಾನ, ದೂರಸಂಪರ್ಕ, ಹೋಟೆಲ್‌, ಬ್ಯಾಂಕಿಂಗ್‌, ಮಾಧ್ಯಮ ಮತ್ತು ಪ್ರವಾಸೋದ್ಯಮಗಳು ಸೇರಿವೆ. ಹಲವು ಗ್ರಾಹಕ ಸರಕು ಉದ್ಯಮಗಳಂತೆ ಅಭಿವೃದ್ಧಿ ಹೊಂದುತ್ತಿರುವ ದೆಹಲಿಯ ಉತ್ಪಾದನಾ ಉದ್ಯಮವು ದೆಹಲಿಯೊಳಗೆ ಮತ್ತು ಸುತ್ತಮುತ್ತ ಉತ್ಪಾದನಾ ಘಟಕಗಳು ಮತ್ತು ಕೇಂದ್ರಗಳನ್ನು ಹೊಂದಿದೆ. ದೆಹಲಿಯ ದೊಡ್ಡ ಗಾತ್ರದ ಗ್ರಾಹಕ ಮಾರುಕಟ್ಟೆ, ಅದರೊಂದಿಗೆ ಪರಿಣಿತ ಕಾರ್ಮಿಕರ ಲಭ್ಯತೆಯಿಂದಾಗಿ ದೆಹಲಿಯು ವಿದೇಶಿ ಬಂಡಾವಾಳವನ್ನು ಆಕರ್ಷಿಸುತ್ತಿದೆ. ೨೦೦೧ರಲ್ಲಿ ಉತ್ಪಾದನಾ ವಲಯವು ೧೨೯,೦೦೦ರಷ್ಟು ಕೈಗಾರಿಕಾ ಘಟಕವನ್ನು ಹೊಂದಿದ್ದು, ೧,೪೪೦,೦೦೦ರಷ್ಟು ಕಾರ್ಮಿಕರನ್ನು ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳುತ್ತಿದೆ. ನಿರ್ಮಾಣ, ಶಕ್ತಿ ಮೂಲ, ದೂರ ಸಂಪರ್ಕ, ಆರೋಗ್ಯ ಮತ್ತು ಸಮುದಾಯ ಸೇವೆಗಳು ಮತ್ತು ರಿಯಲ್ ಎಸ್ಟೇಟ್‌ ಪ್ರಕಾರಗಳು ದೆಹಲಿ ಅರ್ಥವ್ಯವಸ್ಥೆಯ ಏಕೀಕೃತ ಭಾಗವಾಗಿದೆ. ದೇಶದಲ್ಲೇ ಅತಿ ದೊಡ್ಡ ಮತ್ತು ಅತಿ ವೇಗದಲ್ಲಿ ಅಭಿವೃದ್ಧಿಗೊಳ್ಳುತ್ತಿರುವ ಚಿಲ್ಲೆರೆ ವ್ಯಾಪಾರ ಉದ್ಯಮಗಳು ದೆಹಲಿಯಲ್ಲಿವೆ. ಇದರಿಂದಾಗಿ ಭೂಮಿದರವು ತೀವ್ರಗತಿಯಲ್ಲಿ ಏರುತ್ತಿದೆ ಮತ್ತು ಪ್ರಸ್ತುತ ದೆಹಲಿ ಪ್ರತಿ ಚದರ ಅಡಿಗೆ $೧೪೫.೧೬ ದರದೊಂದಿಗೆ ವಿಶ್ವದ ದುಬಾರಿ ಕಛೇರಿ ನಿರ್ಮಾಣ ಸಾಧ್ಯತೆಯ ಸ್ಥಳದಲ್ಲಿ ೭ನೇ ಸ್ಥಾನವನ್ನು ಪಡೆದಿದೆ. ಭಾರತದ ಇತರೆಡೆಯಿರುವಂತೆ, ತ್ವರಿತಗತಿಯಲ್ಲಿ ಬೆಳವಣಿಗೆ ಯಾಗುತ್ತಿರುವ ಚಿಲ್ಲರೆ ವ್ಯಾಪಾರ ವ್ಯವಸ್ಥೆಯು ಸಾಂಪ್ರದಾಯಿಕ ಅಸಂಘಟಿತ ಚಿಲ್ಲರೆ ವ್ಯಾಪಾರ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದೆಂದು ನಿರೀಕ್ಷಿಸಲಾಗಿದೆ. ನಿತ್ಯೋಪಯೋಗಿ ಸೇವೆಗಳು ದೆಹಲಿಯಲ್ಲಿ ನೀರು ಸರಬರಾಜು ಕಾರ್ಯವನ್ನು ದೆಹಲಿ ಜಲ ಮಂಡಳಿ (DJB) ನಿರ್ವಹಿಸುತ್ತದೆ. ೨೦೦೬ರಲ್ಲಿ ಅದು ೬೫೦ MGD (ಪ್ರತೀ ದಿನಕ್ಕೆ ದಶಲಕ್ಷ ಗ್ಯಾಲನ್‌ಗಳು) ನೀರು ಪೂರೈಸಿತ್ತು. ೨೦೦೫-೦೬ರಲ್ಲಿ ನೀರಿನ ಬೇಡಿಕೆ ೯೬೩ MGD ಗ್ಯಾಲನ್‌ಗಳಷ್ಟಿದೆ ಎಂದು ಅಂದಾಜಿಸಲಾಗಿತ್ತು. ನೀರಿನ ಉಳಿದ ಬೇಡಿಕೆಗಳನ್ನು ಖಾಸಗಿ ಮತ್ತು ಸಾರ್ವಜನಿಕ ಕೊಳವೆ ಬಾವಿಗಳು ಮತ್ತು ಕೈಪಂಪುಗಳು ಪೂರೈಸುತ್ತವೆ. DJBಗೆ ೨೪೦ MGDಯಷ್ಟು ನೀರು ಪೂರೈಸುತ್ತಿರುವ ಭಾಕ್ರಾ ಸಂಗ್ರಹವೇ ಬಹುದೊಡ್ಡ ನೀರಿನ ಆಕರವಾಗಿದೆ, ಉಳಿದ ನೀರನ್ನು ಯಮುನಾ ಮತ್ತು ಗಂಗಾ ನದಿಗಳು ಪೂರೈಸುತ್ತವೆ.ಅಂತರ್ಜಲ ಮಟ್ಟ ಕುಸಿತ ಹಾಗೂ ಜನಸಾಂದ್ರತೆಯ ಹೆಚ್ಚಳದಿಂದಾಗಿ ದೆಹಲಿಯು ನೀರಿನ ಕೊರತೆಯನ್ನು ಅನುಭವಿಸುತ್ತಿದ್ದು, ಗಂಭೀರ ಸ್ಥಿತಿಯಲ್ಲಿದೆ. ದೆಹಲಿಯು ಪ್ರತೀದಿನ ೮೦೦೦ ಟನ್‌ಗಳಷ್ಟು ಘನತ್ಯಾಜ್ಯಗಳನ್ನು ಉತ್ಪಾದಿಸುತ್ತದೆ ಮತ್ತು ಅವುಗಳನ್ನು MCDಯು ತ್ಯಾಜ್ಯ ವಸ್ತುಗಳನ್ನು ಹೂತುಹಾಕುವ ಪ್ರದೇಶಗಳಲ್ಲಿ ಮೂರು ರಾಶಿಹಾಕುತ್ತದೆ. ಪ್ರತೀ ದಿನದ ಗೃಹಬಳಕೆಯಿಂದ ಉತ್ಪತ್ತಿಯಾಗುವ ತ್ಯಾಜ್ಯ ನೀರಿನ ಮಟ್ಟ ೪೭೦  MGDಗಳಷ್ಟಿದೆ ಮತ್ತು ಕೈಗಾರಿಕಾ ತ್ಯಾಜ್ಯ ನೀರಿನ ಮಟ್ಟ ೭೦ MGDಗಳಷ್ಟಿದೆ. ಚರಂಡಿ ನೀರಿನ ಹೆಚ್ಚಿನ ಭಾಗವು ಸಂಸ್ಕರಣೆಯಾಗದೆ ಯಮುನಾ ನದಿಗೆ ನೇರವಾಗಿ ಹರಿಯುತ್ತದೆ. ನಗರದ ತಲಾ ವಿದ್ಯುತ್ ಬಳಕೆಯು ಸುಮಾರು ೧,೨೬೫ kWhರಷ್ಟಿದೆ, ಆದರೆ ನಿಜವಾದ ಬೇಡಿಕೆ ಅದಕ್ಕಿಂತ ಹೆಚ್ಚಿದೆ. MCD ನಿರ್ವಹಿಸುತ್ತಿದ್ದ ದೆಹಲಿ ವಿದ್ಯುತ್ ಪೂರೈಕೆ ಜವಾಬ್ದಾರಿಯನ್ನು ೧೯೯೭ರಲ್ಲಿ ದೆಹಲಿ ವಿದ್ಯುತ್ ಬೋರ್ಡ್(DVB) ವಹಿಸಿಕೊಂಡಿತು. ನಗರದ ಬೇಡಿಕೆಗೆ ಸಾಕಾಗುವಷ್ಟು ವಿದ್ಯುತ್‌ ಉತ್ಪಾದಿಸುವುದು DVBಗೆ ಸಾಧ್ಯವಾಗದ ಹಿನ್ನೆಲೆಯಲ್ಲಿ, ಭಾರತದ ಉತ್ತರ ವಲಯದ ವಿದ್ಯುತ್‌ವಾಹಕ ತಂತಿಗಳ ಜಾಲದಿಂದ ಅದನ್ನು ಪಡೆದುಕೊಳ್ಳುತ್ತಿದೆ. ಇದರಿಂದಾಗಿ ದೆಹಲಿಯು ವಿದ್ಯುತ್ ಕೊರತೆ ಅನುಭವಿಸುತ್ತಿದೆ, ಆಗಿಂದಾಗ್ಗೆ ವಿಶೇಷ ವಾಗಿ ವಿದ್ಯುತ್ ಬೇಡಿಕೆ ಹೆಚ್ಚಾಗಿರುವ ಬೇಸಿಗೆ ಕಾಲದಲ್ಲಿ ಪೂರ್ಣ ವಿದ್ಯುತ್‌ ಖೋತಾ ಮತ್ತು ಅರೆ ವಿದ್ಯುತ್‌ ಖೋತಾಗಳನ್ನು ಮಾಡಲಾಗುತ್ತದೆ. ಸದಾ ಅಡ್ಡಿಪಡಿಸುವ ಮತ್ತು ಆಗಿಂದಾಗ್ಗೆ ವಿದ್ಯುತ್ ಕಡಿತದ ಹಿನ್ನೆಲೆಯಲ್ಲಿ ದೆಹಲಿಯ ಅನೇಕ ಕೈಗಾರಿಕಾ ಘಟಕಗಳು ವಿದ್ಯುತ್ ಬೇಡಿಕೆಯ ಪೂರೈಕೆಗಾಗಿ ತಮ್ಮದೇ ಆದ ವಿದ್ಯುತ್ ಜನರೇಟರ್‌ಗಳನ್ನು ಅವಲಂಬಿಸಿವೆ. ಕೆಲವು ವರ್ಷಗಳ ಹಿಂದೆ ದೆಹಲಿಯ ವಿದ್ಯುತ್ ಕ್ಷೇತ್ರವನ್ನು ಖಾಸಗಿ ಕಂಪೆನಿಗಳಿಗೆ ಹಸ್ತಾಂತರಿಸಲಾಯಿತು. ವಿದ್ಯುತ್ ಹಂಚಿಕೆಯ ಜವಾಬ್ದಾರಿಯನ್ನು ಟಾಟಾ ಪವರ್ ಮತ್ತು ರಿಲೈಯನ್ಸ್ ಎನರ್ಜಿ ನಡೆಸುವ ಕಂಪೆನಿಗಳು ವಹಿಸಿಕೊಂಡವು. ದೆಹಲಿ ಅಗ್ನಿಶಾಮಕ ಸೇವೆಯು ೪೩ ಅಗ್ನಿಶಾಮಕ ಕೇಂದ್ರಗಳನ್ನು ಹೊಂದಿದೆ. ಅವು ವರ್ಷಕ್ಕೆ ೧೫,೦೦೦ ಬೆಂಕಿ ಅನಾಹುತ ಮತ್ತು ರಕ್ಷಣೆಯ ಕರೆಗಳನ್ನು ಸ್ವೀಕರಿಸುತ್ತವೆ. ಸರ್ಕಾರಿ ಸ್ವಾಮ್ಯದ ಮಹಾನಗರ ದೂರವಾಣಿ ನಿಗಮ ಲಿಮಿಟೆಡ್ (MTNL) ಮತ್ತು ಖಾಸಗಿ ಸಂಸ್ಥೆಗಳಾದ ವೊಡಾಫೋನ್ ಎಸ್ಸಾರ್, ಏರ್‌ಟೆಲ್, ಐಡಿಯ ಸೆಲ್ಯುಲರ್, ರಿಲಯನ್ಸ್ ಇನ್ಫೊಕಾಮ್, ಮತ್ತು ಟಾಟಾ ಇಂಡಿಕಾಮ್ ಮೊದಲಾದವುಗಳು ನಗರಕ್ಕೆ ದೂರವಾಣಿ ಮತ್ತು ಸಂಚಾರಿ ದೂರವಾಣಿ ಸೇವೆಯನ್ನು ಒದಗಿಸುತ್ತಿವೆ. ೨೦೦೮ರ ಮೇನಲ್ಲಿ, ಏರ್‌ಟೆಲ್ ಸಂಸ್ಥೆ ದೆಹಲಿಯಲ್ಲಿ ಸರಿಸುಮಾರು ೪ ದಶಲಕ್ಷ ಸಂಚಾರಿ ದೂರವಾಣಿ ಚಂದಾದಾರರನ್ನು ಹೊಂದಿತ್ತು. ಈ ಸಂಚಾರಿ ದೂರವಾಣಿ ವ್ಯಾಪ್ತಿಯು ಬಹು ವಿಸ್ತಾರವಾದುದು ಹಾಗೂ GSM ಮತ್ತು CDMA (ರಿಲಯನ್ಸ್ ಮತ್ತು ಟಾಟಾ ಇಂಡಿಕಾಮ್‌ನ) ಎರಡೂ ಸೇವೆಗಳು ಲಭ್ಯವಿದೆ. ಕೈಗೆಟಕುವ ದರದಲ್ಲಿ ಬ್ರಾಡ್‌ಬ್ಯಾಂಡ್ ಅಂತರ್ಜಾಲ ಸಂಪರ್ಕ ನೀಡುತ್ತಿರುವ ಸಂಸ್ಥೆಗಳ ಸಂಖ್ಯೆ ಕೂಡ ನಗರದಲ್ಲಿ ಬೆಳೆಯುತ್ತಿದೆ. ಸಾರಿಗೆ ] ] ದೆಹಲಿಯಲ್ಲಿ ಬಸ್‌ಗಳು, ಆಟೊ ರಿಕ್ಷಾಗಳು ಮತ್ತು ಮೆಟ್ರೋ ರೈಲು ವ್ಯವಸ್ಥೆಯು ಸಾರ್ವಜನಿಕ ಸಾರಿಗೆಯನ್ನು ಒದಗಿಸುತ್ತಿವೆ. ಬಸ್‌ಗಳು ಹೆಚ್ಚು ಜನಪ್ರಿಯ ಸಾರಿಗೆ ವ್ಯವಸ್ಥೆಯಾಗಿದ್ದು, ಒಟ್ಟು ಬೇಡಿಕೆಯ ಸುಮಾರು ೬೦%ರಷ್ಟನ್ನು ಪೂರೈಸುತ್ತಿವೆ. ಸರ್ಕಾರಿ ಸ್ವಾಮ್ಯದ ದೆಹಲಿ ಸಾರಿಗೆ ಸಂಸ್ಥೆಯು (DTC) ನಗರಕ್ಕೆ ಬಸ್ ಸೇವೆಯನ್ನು ಒದಗಿಸುತ್ತಿರುವ ಪ್ರಮುಖ ಸಂಸ್ಥೆ. DTCಯು ವಿಶ್ವದಲ್ಲೇ ಅತಿ ದೊಡ್ಡ ಪರಿಸರ-ಸ್ನೇಹಿ CNG ಬಸ್‌ಗಳ ವ್ಯವಸ್ಥೆಯನ್ನು ನಡೆಸುತ್ತಿದೆ. ಕ್ಷಿಪ್ರ ಬಸ್ ಪ್ರಯಾಣ ಜಾಲವು ಅಂಬೇಡ್ಕರ್ ನಗರ ಮತ್ತು ದೆಹಲಿ ಗೇಟ್ ಮಧ್ಯೆ ಸಾಗುತ್ತದೆ. ದೆಹಲಿ ಮೆಟ್ರೋ ರೈಲು ಸಂಸ್ಥೆ (DMRC) ರೂಪಿಸಿ, ನಡೆಸುತ್ತಿರುವ ಸಾಮೂಹಿಕ ಕ್ಷಿಪ್ರ ಪ್ರಯಾಣ ವ್ಯವಸ್ಥೆಯಾದ ದೆಹಲಿ ಮೆಟ್ರೋ ನಗರದ ಅನೇಕ ಕಡೆಗಳಲ್ಲಿ ಸೇವೆ ಸಲ್ಲಿಸುತ್ತಿದೆ. ೨೦೦೭ರ ವೇಳೆಗೆ ದೆಹಲಿ ಮೆಟ್ರೋ ಒಟ್ಟು ೬೫ ಕಿ.ಮೀ (೪೦ ಮೈಲುಗಳು) ಉದ್ದ ಮತ್ತು ೫೯ ನಿಲ್ದಾಣಗಳನ್ನು ಹೊಂದಿರುವ ಮೂರು ಮಾರ್ಗಗಳನ್ನು ಹೊಂದಿತ್ತು, ಮತ್ತು ಇತರೆ ಹಲವು ಮಾರ್ಗಗಳು ನಿರ್ಮಾಣ ಹಂತದಲ್ಲಿದ್ದವು. ಮಾರ್ಗ ೧ ರಿಥಲ ಮತ್ತು ಶಾಹ್ದರ ಮಧ್ಯೆ, ಮಾರ್ಗ ೨ ಜಹಾಂಗಿರಿ ಹಾಗೂ ಸೆಂಟ್ರಲ್ ಸೆಕ್ರೆಟರಿಯೇಟ್ ಮಧ್ಯೆ ಭೂಮಿಯಡಿಯಲ್ಲಿ ಮತ್ತು ಮಾರ್ಗ ೩ ಇಂದ್ರಪ್ರಸ್ಥ, ಬಾರಖಂಬ ರೋಡ್ ಮತ್ತು ದ್ವಾರಕ ಉಪನಗರ ನಡುವೆ ಹಾದುಹೋಗುತ್ತದೆ. ಮೆಟ್ರೋ ರೈಲು ಜಾಲದ IIನೇ ಹಂತದ ಕಾರ್ಯವು ನಿರ್ಮಾಣ ಹಂತದಲ್ಲಿದ್ದು, ಅದು ಒಟ್ಟು ೧೨೮ ಕಿಮೀ ಉದ್ದವಿರುತ್ತದೆ. ಇದರ ನಿರ್ಮಾಣ ಕಾಮಗಾರಿ ೨೦೧೦ರೊಳಗೆ ಪೂರ್ಣಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ. ಹಂತ-I US$೨.೩ ಶತಕೋಟಿ ದರದಲ್ಲಿ ಪೂರ್ಣಗೊಂಡಿದೆ ಮತ್ತು ಹಂತ-IIಕ್ಕೆ ಹೆಚ್ಚುವರಿಯಾಗಿ US$೪.೩ ಶತಕೋಟಿ ವೆಚ್ಚವಿದೆ. ಹಂತ-III ಮತ್ತು IV ಅನುಕ್ರಮವಾಗಿ ೨೦೧೫ ಮತ್ತು ೨೦೨೦ರೊಳಗೆ ಪೂರ್ಣಗೊಳ್ಳಬೇಕು, ಹೀಗಾದಲ್ಲಿ ಲಂಡನ್ ಭೂಗತಮಾರ್ಗಕ್ಕಿಂತ ಉದ್ದವಾಗಿರುವ ೪೧೩.೮ ಕಿಮೀ ಉದ್ದದ ಜಾಲವನ್ನು ಅದು ನಿರ್ಮಿಸಿದಂತಾಗುತ್ತದೆ. ಟ್ಯಾಕ್ಸಿಗಳಿಗಿಂತ ಕಡಿಮೆ ಬಾಡಿಗೆ ಇರುವುದರಿಂದ ಆಟೋ ರಿಕ್ಷಾಗಳು ದೆಹಲಿಯಲ್ಲಿ ಹೆಚ್ಚು ಜನಪ್ರಿಯ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿದೆ. ಹೆಚ್ಚಿನವುಗಳು ಕುಗ್ಗಿಸಿದ ನೈಸರ್ಗಿಕ ಅನಿಲದಿಂದ (CNG) ಚಲಿಸುತ್ತವೆ ಹಾಗೂ ಹಳದಿ ಮತ್ತು ಹಸಿರು ಬಣ್ಣದಲ್ಲಿವೆ. ಟ್ಯಾಕ್ಸಿಗಳು ಸುಲಭವಾಗಿ ಲಭ್ಯವಿದ್ದರೂ, ದೆಹಲಿ ಸಾರ್ವಜನಿಕ ಸಾರಿಗೆಯ ಅವಿಭಾಜ್ಯ ಅಂಗವಲ್ಲ. ಹೆಚ್ಚಿನ ಟ್ಯಾಕ್ಸಿಗಳನ್ನು ಖಾಸಗಿ ಚಾಲಕರೇ ಚಲಾಯಿಸುತ್ತಾರೆ. ಟ್ಯಾಕ್ಸಿ ಹಿಡಿಯುವುದಕ್ಕಾಗಿ ಅಕ್ಕಪಕ್ಕದಲ್ಲೇ ಟ್ಯಾಕ್ಸಿ ನಿಲುಗಡೆಗಳಿರುತ್ತವೆ. ಹೆಚ್ಚುವರಿಯಾಗಿ, ಕೇಂದ್ರ ಸಂಖ್ಯೆಗೆ ಕರೆಮಾಡುವ ಮೂಲಕ ಆದೇಶಿಸಬಹುದಾದ ಹವಾನಿಯಂತ್ರಿತ ರೇಡಿಯೊ ಟ್ಯಾಕ್ಸಿಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಅವು ಪ್ರತೀ ಕಿಲೋಮೀಟರ್‌ಗೆ ೧೫ ರೂಪಾಯಿಷ್ಟು ದರ ಹೇಳುತ್ತವೆ. ದೆಹಲಿ ಪ್ರಮುಖ ರೈಲು ನಿಲ್ದಾಣ ಭಾರತದ ರೈಲಿನ ನಕ್ಷೆ, ಮಾತ್ರವಲ್ಲದೆ ಉತ್ತರ ರೇಲ್ವೆಯ ಮುಖ್ಯ ಕಾರ್ಯಾಲಯವೂ ಹೌದು. ನಗರದ ನಾಲ್ಕು ಪ್ರಮುಖ ರೈಲು ನಿಲ್ದಾಣಗಳೆಂದರೆ - ಹಳೆ ದೆಹಲಿ, ನಿಜಾಮುದ್ದಿನ್ ರೈಲು ನಿಲ್ದಾಣ, ಸರೈ ರೋಹಿಲ್ಲ ಮತ್ತು ನವ ದೆಹಲಿ ರೈಲು ನಿಲ್ದಾಣ. ದೆಹಲಿಯು ಅನೇಕ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್ ಹೆದ್ದಾರಿಗಳ ಮೂಲಕ ಇತರ ನಗರಗಳೊಂದಿಗೆ ಸಂಪರ್ಕವನ್ನು ಹೊಂದಿದೆ. ಶ್ರೀಮಂತ ಮತ್ತು ವಾಣಿಜ್ಯ ಉಪ ನಗರಗಳೊಂದಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ದೆಹಲಿ ಪ್ರಸ್ತುತ ಮೂರು ಎಕ್ಸ್‌ಪ್ರೆಸ್ ಹೆದ್ದಾರಿಗಳನ್ನು ಹೊಂದಿದೆ ಮತ್ತು ಇನ್ನು ಮೂರು ನಿರ್ಮಾಣ ಹಂತದಲ್ಲಿದೆ. ದೆಹಲಿ-ಗುರ್‌ಗಾಂವ್ ಎಕ್ಸ್‌ಪ್ರೆಸ್ ಹೆದ್ದಾರಿಯು ದೆಹಲಿಯನ್ನು ಗುರ್‌ಗಾಂವ್ ಮತ್ತು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದೊಂದಿಗೆ ಸಂಪರ್ಕಿಸುತ್ತದೆ. DND ಫ್ಲೈವೇ ಮತ್ತು ನೋಯಿಡಾ-ಗ್ರೇಟರ್ ನೋಯಿಡಾ ಎಕ್ಸ್‌ಪ್ರೆಸ್ ಹೆದ್ದಾರಿಯು ದೆಹಲಿಯನ್ನು ಎರಡು ಶ್ರೀಮಂತ ಉಪನಗರಗಳೊಂದಿಗೆ ಸಂಪರ್ಕಿಸುತ್ತದೆ. ಬೃಹತ್ ನೋಯಿಡಾದಲ್ಲಿ ಹೊಸ ವಿಮಾನ ನಿಲ್ದಾಣ ವಾಗಬೇಕಿದೆ. ಅಲ್ಲದೆ ನೋಯಿಡಾ ಭಾರತೀಯ ಗ್ರ್ಯಾಂಡ್ ಪ್ರಿಕ್ಸ್ ಆಗಬೇಕಿದೆ. ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು (DEL) ದೆಹಲಿಯ ಪಶ್ಚಿಮ ಭಾಗದಲ್ಲಿದೆ. ಅದು ನಗರದ ಸ್ಥಳೀಯ ಮತ್ತು ಅಂತರರಾಷ್ಟ್ರೀಯ ನಾಗರಿಕ ಬಾಹ್ಯಾಕಾಶ ವ್ಯವಹಾರಕ್ಕೆ ಪ್ರಮುಖ ಪ್ರವೇಶ ದ್ವಾರವಾಗಿ ಕೆಲಸ ಮಾಡುತ್ತದೆ. ೨೦೦೬–೦೭ರಲ್ಲಿ ಈ ವಿಮಾನ ನಿಲ್ದಾಣ ೨೩ ದಶಲಕ್ಷಕ್ಕಿಂತಲೂ ಹೆಚ್ಚು ಪ್ರಯಾಣಿಕರ ದಟ್ಟಣೆಯಿಂದ ಇತಿಹಾಸ ನಿರ್ಮಿಸಿತು. ಇದರಿಂದಾಗಿ ದಕ್ಷಿಣ ಏಷ್ಯಾದಲ್ಲೇ ಹೆಚ್ಚು ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದು ಎಂಬ ಖ್ಯಾತಿಯನ್ನೂ ಈ ನಿಲ್ದಾಣ ಪಡೆಯಿತು. US$೧.೯೩ ಶತಕೋಟಿ ವೆಚ್ಚದಲ್ಲಿ ೩ನೇ ಹೊಸ ನಿಲ್ದಾಣ ಪ್ರಸ್ತುತ ನಿರ್ಮಾಣ ಹಂತದಲ್ಲಿದ್ದು, ಇದು ೨೦೧೦ರ ವೇಳೆಗೆ ವಾರ್ಷಿಕವಾಗಿ ಹೆಚ್ಚುವರಿ ೩೪ ದಶಲಕ್ಷ ಪ್ರಯಾಣಿಕರನ್ನು ನಿರ್ವಹಿಸಲಿದೆ. ಮುಂದಿನ ವಿಸ್ತರಣಾ ಯೋಜನೆಗಳ ಪ್ರಕಾರ ೨೦೨೦ರೊಳಗೆ ವಾರ್ಷಿಕವಾಗಿ ೧೦೦ ದಶಲಕ್ಷಕ್ಕೂ ಮಿಕ್ಕಿ ಪ್ರಯಾಣಿಕರನ್ನು ನಿರ್ವಹಿಸುವ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗುತ್ತದೆ. ಸಾಮಾನ್ಯ ವಾಯುಯಾನಕ್ಕಾಗಿ ದೆಹಲಿಯಲ್ಲಿರುವ ಇನ್ನೊಂದು ಸಫ್ದರ್ಜಂಗ್ ವಿಮಾನ ನಿಲ್ದಾಣವನ್ನು ಬಳಸಲಾಗುತ್ತಿದೆ. ಖಾಸಗಿ ವಾಹನಗಳು ಸಾರಿಗೆಯ ಒಟ್ಟು ಬೇಡಿಕೆಯ ೩೦%ರಷ್ಟನ್ನು ಪೂರೈಸುತ್ತವೆ. ೧೯೨೨.೩೨ ಕಿ.ಮೀ ಉದ್ದದ ರಸ್ತೆಯಲ್ಲಿ ಪ್ರತೀ ೧೦೦ km² ರಸ್ತೆಗೆ, ದೆಹಲಿಯು ಭಾರತದಲ್ಲೇ ಅತಿಹೆಚ್ಚು ರಸ್ತೆ ಜನದಟ್ಟಣೆಯನ್ನು ಹೊಂದಿದೆ. ಐದು ರಾಷ್ಟ್ರೀಯ ಹೆದ್ದಾರಿಗಳು ದೆಹಲಿಯನ್ನು ಭಾರತದ ಇತರ ಭಾಗಗಳೊಂದಿಗೆ ಜೋಡಿಸುತ್ತವೆ: NH ೧, ೨, ೮, ೧೦ ಮತ್ತು ೨೪. ದೆಹಲಿಯ ರಸ್ತೆಗಳನ್ನು MCD (ದೆಹಲಿ ಪುರಸಭೆ), NDMC, ದೆಹಲಿ ಸೇನಾವಸತಿ ಮಂಡಳಿ, ಸಾರ್ವಜನಿಕ ಕೆಲಸ-ಕಾರ್ಯಗಳ ಇಲಾಖೆ (PWD) ಮತ್ತು ದೆಹಲಿ ಅಭಿವೃದ್ಧಿ ಪ್ರಾಧಿಕಾರ ನಿರ್ವಹಿಸುತ್ತದೆ. ದೆಹಲಿಯ ಜನಸಂಖ್ಯಾ ಬೆಳವಣಿಗೆಯ ವೇಗದ ಪ್ರಮಾಣದೊಂದಿಗೆ, ಆರ್ಥಿಕ ಅಭಿವೃದ್ಧಿಯ ವೇಗದ ಪ್ರಮಾಣ ಸೇರಿ ಕೊಂಡಿರುವುದರಿಂದಾಗಿ, ಸಾರಿಗೆಯ ಬೇಡಿಕೆ ಏರುತ್ತಾ ಹೋಗಿ ನಗರದಲ್ಲಿ ಅಸ್ತಿತ್ವದಲ್ಲಿರುವ ಸಾರಿಗೆ ವ್ಯವಸ್ಥೆಯ ಮೇಲೆ ಹೆಚ್ಚಿನ ಒತ್ತಡ ಬಿದ್ದಿದೆ. ೨೦೦೮ರಲ್ಲಿ, ಮಹಾನಗರ ದೆಹಲಿ NCRನಲ್ಲಿರುವ ವಾಹನಗಳ ಸಂಖ್ಯೆ ೧೧೨ ಲಕ್ಷಗಳು (೧೧.೨ ದಶಲಕ್ಷ). ೨೦೦೮ರಲ್ಲಿ ದೆಹಲಿಯಲ್ಲಿ ಪ್ರತೀ ೧,೦೦೦ ನಿವಾಸಿಗಳಿಗೆ ೮೫ ಕಾರುಗಳಿದ್ದವು. ದೆಹಲಿಯಲ್ಲಿ ಸಾರಿಗೆ ಬೇಡಿಕೆಯನ್ನು ಪೂರೈಸಲು, ರಾಜ್ಯ ಮತ್ತು ಕೇಂದ್ರ ಸರಕಾರ ಜಂಟಿಯಾಗಿ ದೆಹಲಿ ಮೆಟ್ರೋವನ್ನು ಒಳಗೊಂಡ ಸಾಮೂಹಿಕ ಕ್ಷಿಪ್ರ ಪ್ರಯಾಣದ ವ್ಯವಸ್ಥೆಯ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದವು. ಎಲ್ಲಾ ಸಾರ್ವಜನಿಕ ಸಾರಿಗೆ ವಾಹನಗಳು ಡೀಸೆಲ್ ಮತ್ತು ಇತರ ಹೈಡ್ರೊ-ಕಾರ್ಬನ್‌ಗಳ ಬದಲಿಗೆ ಕುಗ್ಗಿಸಿದ ನೈಸರ್ಗಿಕ ಅನಿಲವನ್ನು (CNG) ಇಂಧನವಾಗಿ ಬಳಸಬೇಕೆಂದು ಭಾರತದ ಸರ್ವೋಚ್ಚ ನ್ಯಾಯಾಲಯ ೧೯೯೮ರಲ್ಲಿ ಆದೇಶಿಸಿತು. ಜನಗಣತಿ ದೆಹಲಿಯಲ್ಲಿನ ಅನೇಕ ಜನಾಂಗೀಯ ಗುಂಪುಗಳು ಮತ್ತು ಸಂಸ್ಕೃತಿಗಳು ಅದನ್ನು ಕಾಸ್ಮೊಪಾಲಿಟನ್ (ಲೋಕಮಿತ್ರ) ನಗರವನ್ನಾಗಿ ಮಾಡಿವೆ. ಉತ್ತರ ಭಾರತದ ರಾಜಕೀಯ ಮತ್ತು ಆರ್ಥಿಕ ಕೇಂದ್ರವಾಗಿರುವ ದೆಹಲಿಯು ಬ್ಲೂ ಕಾಲರ್ ಮತ್ತು ವೈಟ್ ಕಾಲರ್ ಎರಡೂ ರೀತಿಯ ನೌಕರರನ್ನು ದೇಶದ ಎಲ್ಲಾ ಭಾಗಗಳಿಂದ ತನ್ನ ಸೆಳೆದುಕೊಂಡು ಇನ್ನಷ್ಟು ವೈವಿಧ್ಯವಾಗಿ ಬೆಳೆಯುತ್ತಿದೆ. ರಾಜತಾಂತ್ರಿಕ ಕೇಂದ್ರ, ೧೬೦ ರಾಷ್ಟ್ರಗಳ ರಾಯಭಾರಿ ಕಛೇರಿಗಳ ನಿವಾಸವಾಗಿರುವ ದೆಹಲಿಯು ದೊಡ್ಡಪ್ರಮಾಣದ ವಿದೇಶವಾಸಿ ಜನರನ್ನೂ ಹೊಂದಿದೆ. ೨೦೦೧ರ ಭಾರತದ ಜನಗಣತಿಯ ಪ್ರಕಾರ, ದೆಹಲಿಯ ಆ ವರ್ಷದ ಜನಸಂಖ್ಯೆ ೧೩,೭೮೨,೯೭೬. ಇದಕ್ಕೆ ಅನುಗುಣವಾದ ಜನಸಂಖ್ಯಾ ಸಾಂದ್ರತೆಯು ಪ್ರತೀ km²ಗೆ ೯,೨೯೪ ಜನರು, ಲಿಂಗಾನುಪಾತ ಪ್ರತೀ ೧೦೦೦ ಪುರುಷರಿಗೆ ೮೨೧ ಮಹಿಳೆಯರು ಮತ್ತು ೮೧.೮೨%ಸಾಕ್ಷರತಾ ದರವಿತ್ತು. ೨೦೦೪ರ ಹೊತ್ತಿಗೆ ಅಂದಾಜು ಮಾಡಲಾದ ಜನಸಂಖ್ಯೆಯು ೧೫,೨೭೯,೦೦೦ಗೆ ಏರಿತು. ಆ ವರ್ಷ ಜನನ ಪ್ರಮಾಣ, ಮರಣ ಪ್ರಮಾಣ ಮತ್ತು ಶಿಶು ಮರಣ ಪ್ರಮಾಣವು (೧೦೦೦ ಜನರಿಗೆ) ಅನುಕ್ರಮವಾಗಿ ೨೦.೦೩, ೫.೫೯ ಮತ್ತು ೧೩.೦೮ ಆಗಿತ್ತು. ೨೦೦೭ರ ಹೊತ್ತಿಗೆ ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದ ಜನಸಂಖ್ಯೆ ೨೧.೫ ದಶಲಕ್ಷವನ್ನು ಮೀರಿ ಬೆಳೆದು ಮುಂಬಯಿಯನ್ನೂ ಹಿಂದಿಕ್ಕಿ ದೇಶದ ಅತಿ ದೊಡ್ಡ ಮಹಾನಗರವಾಗಬಹುದು ಎಂದು ಅಂದಾಜಿಸಲಾಗಿದೆ. ೧೯೯೯–೨೦೦೦ರ ಒಂದು ಅಂದಾಜಿನ ಪ್ರಕಾರ, ದೆಹಲಿಯಲ್ಲಿ ಪ್ರತೀ ತಿಂಗಳಿಗೆ $೧೧ ಅಥವಾ ಅದಕ್ಕಿಂತ ಕಡಿಮೆ ವೆಚ್ಚದಲ್ಲಿ ಬಡತನ ರೇಖೆಗಿಂತ ಕೆಳಗೆ ಜೀವನ ನಡೆಸುವ ಜನರ ಒಟ್ಟು ಸಂಖ್ಯೆ ೧,೧೪೯,೦೦೦(ಅದು ಒಟ್ಟು ಜನಸಂಖ್ಯೆಯ ೮.೨೩%, ಇಡೀ ಭಾರತಕ್ಕೆ ಹೋಲಿಸಿದರೆ ೨೭.೫%)ಇರಬಹುದು. ೨೦೦೧ರಲ್ಲಿ ದೆಹಲಿಯ ಜನಸಂಖ್ಯೆಯು ವಲಸೆಯಿಂದಾಗಿ ೨೮೫,೦೦೦ ಮತ್ತು ಪ್ರಕೃತಿ ಸಹಜ ಜನಸಂಖ್ಯೆ ಏರಿಕೆಯಿಂದಾಗಿ ೨೧೫,೦೦೦ರಷ್ಟು ಹೆಚ್ಚಿತು. ಇದು ದೆಹಲಿಯನ್ನು ಪ್ರಪಂಚದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳ ಪಟ್ಟಿಗೆ ಸೇರಿಸಿದೆ. ೨೦೧೫ರ ವೇಳೆಗೆ ಟೋಕಿಯೊ ಮತ್ತು ಮುಂಬಯಿಯ ನಂತರ ದೆಹಲಿಯು ಪ್ರಪಂಚದಲ್ಲೇ ಮೂರನೇ ಅತೀದೊಡ್ಡ ಜನನಿಬಿಡ ಪ್ರದೇಶವಾಗುವ ನಿರೀಕ್ಷೆಯಿದೆ. ದ್ವಾರಕವು ಏಷ್ಯಾದ ಅತಿದೊಡ್ಡ ವಾಸಯೋಗ್ಯ ಬಡಾವಣೆಯಾಗಿದ್ದು, ಇದು ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿದೆ. ದೆಹಲಿಯ ೮೨% ಮಂದಿ ಹಿಂದೂ ಧರ್ಮವನ್ನು ಅನುಸರಿಸುತ್ತಿದ್ದಾರೆ. ನಗರದಲ್ಲಿ ಮುಸ್ಲಿಂ (೧೧.೭%), ಸಿಖ್‌‌ (೪.೦%), ಜೈನ (೧.೧%) ಮತ್ತು ಕ್ರೈಸ್ತರ (೦.೯%) ದೊಡ್ಡ ಸಮುದಾಯಗಳೇ ಇವೆ. ಪಾರ್ಸಿಗಳು, ಆಂಗ್ಲೋ-ಭಾರತೀಯರು, ಬೌದ್ಧ ಧರ್ಮದವರು ಮತ್ತು ಯಹೂದಿ‌ಗಳೂ ಇಲ್ಲಿ ಅಲ್ಪಸಂಖ್ಯೆಯಲ್ಲಿದ್ದಾರೆ. ನಗರದ ಪ್ರಮುಖ ಮಾತನಾಡುವ ಭಾಷೆ ಹಿಂದೂಸ್ಥಾನಿ ಭಾಷೆ ಹಾಗೂ ಲಿಖಿತ ಭಾಷೆ ಇಂಗ್ಲೀಷ್. ನಗರದಲ್ಲಿ ಸಾಮಾನ್ಯವಾಗಿ ಮಾತನಾಡುವ ಇತರ ಭಾಷೆಗಳೆಂದರೆ ಹಿಂದಿ, ಪಂಜಾಬಿ ಮತ್ತು ಉರ್ದುವಿನ ಉಪಭಾಷೆಗಳು. ಭಾರತಾದ್ಯಂತದ ಇತರೆ ಭಾಷಿಕ ಗುಂಪುಗಳು ಈ ನಗರದಲ್ಲಿ ಯಥೇಚ್ಛವಾಗಿ ಗುರುತಿಸಲ್ಪಟ್ಟಿವೆ; ಅವುಗಳಲ್ಲಿ ಪ್ರಮುಖವಾದವು ಪಂಜಾಬಿ, ಹರಿಯಾಣಿ, UP, ಬಿಹಾರಿ, ಬಂಗಾಳಿ, ತಮಿಳು, ರಾಜಸ್ಥಾನಿ, ತೆಲುಗು, ಈಶಾನ್ಯ, ಕನ್ನಡ, ಮಲಯಾಳಂ, ಮರಾಠಿ ಮತ್ತು ಗುಜರಾತಿ. ಒಂದು ಶತಕೋಟಿ ಅಥವಾ ಅದಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತದ ೩೫ ನಗರಗಳಿಗೆ ಹೋಲಿಸಿದರೆ ೨೦೦೫ರಲ್ಲಿ ದೆಹಲಿಯಲ್ಲಿ ಅತಿ ಹೆಚ್ಚು ಪ್ರತಿಶತ (೧೬.೨%) ಅಪರಾಧಗಳು ವರದಿಯಾಗಿವೆ. ರಾಷ್ಟ್ರದಲ್ಲಿ ಅತಿ ಹೆಚ್ಚು ಮಹಿಳಾಪರಾಧ (೨೭.೬ ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ ಪ್ರತೀ ೧೦೦,೦೦೦ಗೆ ೧೪.೧) ಮತ್ತು ಬಾಲಾಪರಾಧ (೬.೫ ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ ಪ್ರತೀ ೧೦೦,೦೦೦ಗೆ ೧.೪)ಗಳನ್ನೂ ನಗರ ಕಂಡಿದೆ. ಸಂಸ್ಕೃತಿ ಭಾರತದ ರಾಜಧಾನಿ ದೆಹಲಿಯ ಸಂಸ್ಕೃತಿಯ ಮೇಲೆ ಅದರ ದೀರ್ಘಕಾಲೀನ ಇತಿಹಾಸ ಮತ್ತು ಐತಿಹಾಸಿಕ ಸಾಂಗತ್ಯವು ಪ್ರಭಾವ ಬೀರಿದೆ. ಇದನ್ನು ನಗರದಲ್ಲಿ ಕಂಡುಬರುವ ಅನೇಕ ಪ್ರಮುಖ ದಾಖಲೆಗಳ ನಿದರ್ಶನದ ಮೂಲಕ ನಿರೂಪಿಸಬಹುದು; ಭಾರತದ ಪುರಾತತ್ವಶಾಸ್ತ್ರ ಸಮೀಕ್ಷೆಯು ದೆಹಲಿಯಲ್ಲಿ ೧೨೦೦ ಪುರಾತನ ಕಟ್ಟಡಗಳನ್ನು ಮತ್ತು ೧೭೫ ಸ್ಮಾರಕಗಳನ್ನು ಪತ್ತೆಹಚ್ಚಿದೆ. ಇದು ದೆಹಲಿಯನ್ನು ರಾಷ್ಟ್ರೀಯ ಪುರಾತನ ಪ್ರದೇಶವನ್ನಾಗಿ ಮಾಡಿದೆ. ಹಳೆ ನಗರದಲ್ಲಿ ಮೊಘಲರು ಮತ್ತು ಟರ್ಕಿಯ ಆಡಳಿತಗಾರರು ಜಾಮ ಮಸೀದಿ (ಭಾರತದ ಅತಿ ದೊಡ್ಡ ಮಸೀದಿ) ಮತ್ತು ಕೆಂಪು ಕೋಟೆಯಂತಹ ಅನೇಕ ವಾಸ್ತುಶಿಲ್ಪ ಅದ್ಭುತಗಳನ್ನು ನಿರ್ಮಿಸಿದ್ದಾರೆ. ಮೂರು ವಿಶ್ವ ಪುರಾತನ ಪ್ರದೇಶಗಳಾದ ಕೆಂಪು ಕೋಟೆ, ಕುತುಬ್‌ ಮಿನಾರ್‌ ಮತ್ತು ಹೂಮಾಯುನ್‌ನ ಸಮಾಧಿಗಳು ದೆಹಲಿಯಲ್ಲಿವೆ. ಇತರ ಸ್ಮಾರಕಗಳೆಂದರೆ - ಇಂಡಿಯಾ ಗೇಟ್‌, ಜಂತರ್ ಮಂತರ್ (೧೮ನೇ ಶತಮಾನದ ಖಗೋಳ ಸಂಬಂಧದ ವೀಕ್ಷಣಾಲಯ) ಮತ್ತು ಪುರಾಣ ಖಿಲಾ (೧೬ನೇ ಶತಮಾನದ ಕೋಟೆ). ಲಕ್ಷ್ಮಿನಾರಾಯಣ ದೇವಾಲಯ, ಅಕ್ಷರಧಾಮ ಮತ್ತು ಬಹಾ ಕಮಲ ದೇವಾಲಯ ಮೊದಲಾದವುಗಳು ಆಧುನಿಕ ವಾಸ್ತುಶಿಲ್ಪಕ್ಕೆ ಉದಾಹರಣೆಗಳು. ರಾಜ್‌ ಘಾಟ್‌ ಮತ್ತು ಅದಕ್ಕೆ ಹೊಂದಿಕೊಂಡಂತೆ ಇರುವ ಸ್ಮಾರಕಗಳು ಮಹಾತ್ಮಾ ಗಾಂಧಿ ಮತ್ತು ಇತರ ಗಣ್ಯ ವ್ಯಕ್ತಿಗಳ ಸ್ಮಾರಕಗಳಿಗೆ ಸ್ಥಳಾವಕಾಶ ಮಾಡಿಕೊಟ್ಟಿದೆ. ನವ ದೆಹಲಿಯು ಬ್ರಿಟೀಷ್ ವಸಹಾತು ಶೈಲಿಯ ವಾಸ್ತುಶಿಲ್ಪವನ್ನು ನೆನಪಿಸುವ ಅನೇಕ ಸರಕಾರಿ ಕಟ್ಟಡಗಳಿಗೆ ಮತ್ತು ಅಧಿಕೃತ ನಿವಾಸಗಳಿಗೆ ಮನೆಯಾಗಿದೆ. ರಾಷ್ಟ್ರಪತಿ ಭವನ, ಆಡಳಿತ ಕಛೇರಿ, ರಾಜ್‌ಪಥ್, ಭಾರತದ ಸಂಸತ್ತು ಮತ್ತು ವಿಜಯ್ ಚೌಕ್ ಮೊದಲಾದ ಪ್ರಮುಖ ಕಟ್ಟಡಗಳೂ ಇಲ್ಲಿವೆ. ಸಫ್ದರ್ಜಂಗ್‌ನ ಸಮಾಧಿಯು ಮೊಘಲ್ ಉದ್ಯಾನ ಶೈಲಿಗೆ ಉದಾಹರಣೆಯಾಗಿದೆ. ದೆಹಲಿಯ ಸಾಂಗತ್ಯ ಮತ್ತು ರಾಜಧಾನಿ ನವ ದೆಹಲಿಗೆ ಭೌಗೋಳಿಕವಾಗಿ ಹತ್ತಿರವಿರುವುದು ರಾಷ್ಟ್ರೀಯ ದಿನಾಚರಣೆಗಳು ಮತ್ತು ರಜಾದಿನಗಳ ಪ್ರಾಮುಖ್ಯತೆಯನ್ನು ಹೆಚ್ಚಿಸಿದೆ. ಗಣರಾಜ್ಯ ದಿನ, ಸ್ವಾತಂತ್ರ್ಯ ದಿನ ಮತ್ತು ಗಾಂಧಿ ಜಯಂತಿ (ಗಾಂಧಿಯವರ ಜನ್ಮದಿನ) ಮೊದಲಾದ ರಾಷ್ಟ್ರೀಯ ದಿನಾಚರಣೆಗಳನ್ನು ದೆಹಲಿಯಲ್ಲಿ ಹೆಚ್ಚು ಸಂಭ್ರಮದಿಂದ ಆಚರಿಸಲಾಗುತ್ತದೆ. ಭಾರತ ಸ್ವಾತಂತ್ರ್ಯ ದಿನದಂದು (೧೫ ಆಗಸ್ಟ್) ಭಾರತದ ಪ್ರಧಾನ ಮಂತ್ರಿಯವರು ಕೆಂಪು ಕೋಟೆಯಲ್ಲಿ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುತ್ತಾರೆ. ದೆಹಲಿಯ ಹೆಚ್ಚಿನ ನಿವಾಸಿಗಳು ಸ್ವಾತಂತ್ರ್ಯದ ಸಂಕೇತವಾದ ಗಾಳಿಪಟಗಳನ್ನು ಹಾರಿಸುವ ಮೂಲಕ ಈ ದಿನವನ್ನು ಆಚರಿಸುತ್ತಾರೆ. ಗಣರಾಜ್ಯ ದಿನದ ಪಥಸಂಚಲನವು ಭಾರತದ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಮಿಲಿಟರಿಯನ್ನು ಪ್ರದರ್ಶಿಸುವ ಅತಿ ದೊಡ್ಡ ಸಾಂಸ್ಕೃತಿಕ ಮತ್ತು ಸೇನಾ ಮೆರವಣಿಗೆಯಾಗಿದೆ. ಶತಮಾನಗಳಿಂದಲೇ ದೆಹಲಿಯು ಅದರ ಸಮ್ಮಿಶ್ರ ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಫೂಲ್ ವಾಲೋ ಕಿ ಸೈರ್‌ ಎಂಬ ಪ್ರತೀವರ್ಷ ಸೆಪ್ಟೆಂಬರ್‌ನಲ್ಲಿ ಆಚರಿಸಲ್ಪಡುವ ಒಂದು ಆಚರಣೆಯು ಇದಕ್ಕೆ ನಿಜವಾದ ಸಂಕೇತವಾಗಿದೆ. ಹೂವುಗಳನ್ನು ಮತ್ತು ಹೂಗಳಿಂದ ಅಲಂಕರಿಸಿದ ಬೀಸಣಿಗೆಗಳನ್ನು (ಇದನ್ನು ಪಂಖ ಎನ್ನುತ್ತಾರೆ) ೧೩ನೇ ಶತಮಾನದ ಸೂಫಿ ಸಂತ ಕ್ವಾಜಾ ಭಕ್ತಿಯಾರ್ ಕಾಕಿಯ ಪವಿತ್ರ ಸ್ಮಾರಕಕ್ಕೆ ಮತ್ತು ಮೆಹ್ರೌಲಿಯಲ್ಲಿರುವ ಯೋಗ್ಮಾಯ ದೇವಾಲಯಕ್ಕೆ ಆ ದಿನದಂದು ಅರ್ಪಿಸಲಾಗುತ್ತದೆ. ದೀಪಾವಳಿ (ಬೆಳಕಿನ ಹಬ್ಬ), ಮಹಾವೀರ ಜಯಂತಿ, ಗರುನಾನಕರ ಜನ್ಮದಿನ, ದುರ್ಗಾ ಪೂಜಾ, ಹೋಳಿ, ಲೋಹ್ರಿ, ಮಹಾ ಶಿವರಾತ್ರಿ, ಈದ್-ಉಲ್-ಫಿತರ್ ಮತ್ತು ಬುದ್ಧ ಜಯಂತಿ ಮೊದಲಾದವುಗಳು ನಗರದ ಇನ್ನಿತರ ಧಾರ್ಮಿಕ ಹಬ್ಬಗಳು. ಕುತುಬ್ ಉತ್ಸವವು ಒಂದು ಸಾಂಸ್ಕೃತಿಕ ದಿನಾಚರಣೆ. ಕುತುಬ್‌ ಮಿನಾರ್‌ ಹಿನ್ನೆಲೆಯನ್ನು ಹೇಳುವ ಈ ದಿನಾಚರಣೆಯ ದಿನದಂದು ರಾತ್ರಿಯಿಡೀ ಭಾರತದ ಖ್ಯಾತ ಸಂಗೀತಗಾರರ ಮತ್ತು ನೃತ್ಯಗಾರರ ಪ್ರದರ್ಶನಗಳು ನಡೆಯುತ್ತವೆ. ಗಾಳಿಪಟ ಹಾರಿಸುವ ಹಬ್ಬ, ಅಂತರರಾಷ್ಟ್ರೀಯ ಮಾವಿನ ಹಣ್ಣಿನ ಉತ್ಸವ ಮತ್ತು ವಸಂತ ಪಂಚಮಿ (ವಸಂತಕಾಲ ಹಬ್ಬ) ಮೊದಲಾದ ದಿನಾಚರಣೆಗಳನ್ನು ದೆಹಲಿಯಲ್ಲಿ ಪ್ರತೀವರ್ಷ ಆಚರಿಸಲಾಗುತ್ತದೆ. ಏಷ್ಯಾದ ಅತೀದೊಡ್ಡ ಆಟೋ ಪ್ರದರ್ಶನ ಆಟೋ ಎಕ್ಸ್‌ಪೋ ಎರಡು ವರ್ಷಕ್ಕೊಮ್ಮೆ ದೆಹಲಿಯಲ್ಲಿ ನಡೆಯುತ್ತದೆ. ವಿಶ್ವ ಪುಸ್ತಕ ಉತ್ಸವವು ಪ್ರಗತಿ ಮೈದಾನದಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುತ್ತದೆ. ಸುಮಾರು ೨೩ ರಾಷ್ಟ್ರಗಳು ಭಾಗವಹಿಸುವ ಈ ಉತ್ಸವವು ಪ್ರಪಂಚದಲ್ಲೇ ಎರಡನೇ ಅತಿ ದೊಡ್ಡ ಪುಸ್ತಕ ಪ್ರದರ್ಶನವಾಗಿದೆ. ದೆಹಲಿಯು ಹೆಚ್ಚು ಸಂಖ್ಯೆಯ ಓದುಗರನ್ನು ಹೊಂದಿರುವುದರಿಂದ ಅದನ್ನು ಭಾರತದ "ಪುಸ್ತಕಗಳ ರಾಜಧಾನಿ" ಎಂದೂ ಕರೆಯುತ್ತಾರೆ. ಕಬಾಬ್ ಮತ್ತು ಬಿರಿಯಾನಿಯಂತಹ ಪಂಜಾಬಿ ಮತ್ತು ಮೊಘಲ್ ರುಚಿ ತಿನಿಸುಗಳು ದೆಹಲಿಯಲ್ಲಿ ಸುಪ್ರಸಿದ್ಧ. ಪ್ರಪಂಚದ ಎಲ್ಲೆಡೆಯಿಂದ ಬಂದವರಿಂದಾಗಿ ಹಾಗೂ ವಲಸಿಗರಿಂದಾಗಿ ದೆಹಲಿಯಲ್ಲಿ, ರಾಜಸ್ಥಾನಿ, ಮಹಾರಾಷ್ಟ್ರಿಯನ್, ಬಂಗಾಳಿ, ಹೈದರಾಬಾದಿ ಅಡುಗೆ ಪದ್ಧತಿಗಳು ಮತ್ತು ಇಡ್ಲಿ, ಸಾಂಬಾರ್ ಮತ್ತು ದೋಸೆಯಂತಹ ದಕ್ಷಿಣ ಭಾರತ ಆಹಾರ ತಿನಿಸುಗಳೆಲ್ಲವೂ ಲಭ್ಯವಿದೆ. ಸ್ಥಳೀಯ ತಿನಿಸುಗಳೆಂದರೆ ಚಾಟ್‌ ಮತ್ತು ದಹಿ-ಪಾಪ್ರಿ . ಇಟಾಲಿಯನ್, ಜಪಾನೀಸ್, ಮತ್ತು ಚೈನೀಸ್ ಶೈಲಿಗಳ ಅಂತರರಾಷ್ಟ್ರೀಯ ಅಡುಗೆಯನ್ನು ಬಡಿಸುವ ಅನೇಕ ಚಿಕ್ಕ ಆಹಾರ ಮಳಿಗೆಗಳು ದೆಹಲಿಯಲ್ಲಿವೆ. ದೆಹಲಿ ಐತಿಹಾಸಿಕವಾಗಿ ಯಾವತ್ತೂ ಉತ್ತರ ಭಾರತದ ಪ್ರಮುಖ ವ್ಯಾಪಾರ ಕೇಂದ್ರವಾಗಿ ಉಳಿದಿದೆ. ಶ್ರೀಮಂತ ಮೊಘಲ್‌ ಗತಕಾಲದ ಆಸ್ತಿಯು ಹಳೆ ದೆಹಲಿಯಲ್ಲಿ ಇನ್ನೂ ಇದೆ. ಅದನ್ನು ಹಳೆ ನಗರದ ಗೋಜಲುಗೋಜಲಾದ ಓಣಿಗಳಲ್ಲಿ ಮತ್ತು ಕಿಕ್ಕಿರಿದು ತುಂಬಿರುವ ಬಜಾರುಗಳಲ್ಲಿ ಕಾಣಬಹುದು. ಹಳೆ ನಗರದ ಮಲಿನ ಮಾರುಕಟ್ಟೆಗಳು ಎಲ್ಲ ಶ್ರೇಣಿಯ ಸಾರಸಂಗ್ರಹ ಉತ್ಪನ್ನಗಳನ್ನು ಹೊಂದಿವೆ. ಕೊಳಚೆ ಪ್ರದೇಶದ ಮಾವಿನಕಾಯಿ, ನಿಂಬೆ ಮತ್ತು ಬಿಳಿಬದನೆಯ ಉಪ್ಪಿನಕಾಯಿಯಿಂದ ಹಿಡಿದು ಸಕ್ಕರೆ-ಲೇಪನದ ಔಷಧಿ ಗುಟುಕಗಳು, ಬೆಳ್ಳಿ ಆಭರಣಗಳು, ಮದುವೆ ಹೆಣ್ಣಿನ ಉಡುಪುಗಳು, ಕತ್ತರಿಸದ ಮತ್ತು ನಾರಿನ ಬಟ್ಟೆಗಳು, ಸಂಬಾರ ಪದಾರ್ಥಗಳು, ಸಿಹಿತಿನಿಸುಗಳವರೆಗೆ ಎಲ್ಲಾ ರೀತಿಯ ವಸ್ತುಗಳೂ ಇಲ್ಲಿ ಲಭ್ಯವಿವೆ. ಕೆಲವು ಹಳೆ ರಾಜಯೋಗ್ಯ ಹಾವೆಲಿಸ್ (ಭವ್ಯ ಮಹಲುಗಳು) ಹಳೆ ನಗರದಲ್ಲಿ ಇನ್ನೂ ಇವೆ. ದೆಹಲಿಯಲ್ಲಿನ ಮೂರು-ಶತಮಾನ-ಹಳೆಯ ವ್ಯಾಪಾರ ಕೇಂದ್ರ ಚಾಂದನಿ ಚೌಕ್ ಆಭರಣ ಮತ್ತು ಝರಿ ಸೀರೆಗಳಿಗೆ ಹೆಚ್ಚು ಹೆಸರುವಾಸಿಯಾದ ವ್ಯಾಪಾರ ಕೇಂದ್ರವಾಗಿದೆ. ಜರ್ದೋಜಿ (ಚಿನ್ನದ ಎಳೆಗಳಿಂದ ಮಾಡಿದ ಕಸೂತಿ ಕೆಲಸ) ಮತ್ತು ಮೀನಕರಿ (ಗಾಜಿನ ಕಲಾಕೃತಿಗಳು) ಮೊದಲಾದವುಗಳನ್ನು ದೆಹಲಿಯ ಕಲೆ ಮತ್ತು ಕರಕುಶಲ ಕೆಲಸಗಳಲ್ಲಿ ಪ್ರಮುಖವಾಗಿ ಕಾಣಬಹುದು. ದಿಲ್ಲಿ ಹಾತ್‌, ಹೌಜ್ ಖಾಸ್‌, ಪ್ರಗತಿ ಮೈದಾನದಲ್ಲಿ ವಿವಿಧ ರೀತಿಯ ಭಾರತೀಯ ಕರಕುಶಲ ಮತ್ತು ಕೈಮಗ್ಗದ ವಸ್ತುಗಳನ್ನು ಮಾರಾಟಕ್ಕಿಡಲಾಗಿದೆ. ಒಟ್ಟಾರೆ ಹೇಳುವುದಾದರೆ ದೆಹಲಿಯು ಕ್ರಮೇಣವಾಗಿ ಇಡೀ ದೇಶದ ಬಹುಸಂಖ್ಯಾತ ಮಾನವಕುಲವನ್ನು ತನ್ನಲ್ಲಿ ಅಂತರ್ಗತ ಮಾಡಿಕೊಂಡಿದೆ, ಅಲ್ಲದೆ ವಿವಿಧ ಸಾಂಸ್ಕೃತಿಕ ಶೈಲಿಗಳ ಅಪರೂಪದ ಸಮುದಾಯಗಳನ್ನು ರೂಪಿಸಿದೆ. ದೆಹಲಿಯು ಈ ಕೆಳಗಿನ ಸೋದರ ನಗರಗಳನ್ನು ಹೊಂದಿದೆ: ಚಿಕಾಗೊ , ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಕ್ವಾಲ ಲಂಪುರ್‌ , ಮಲೇಷಿಯಾ ಲಂಡನ್ , ಇಂಗ್ಲೆಂಡ್ ಮೊಸ್ಕೊ , ರಷ್ಯಾ ಟೋಕಿಯೊ , ಜಪಾನ್ ಉಲಾನ್‌ ಬತೂರ್‌ , ಮೊಂಗೋಲಿಯ ಶಿಕ್ಷಣ ದೆಹಲಿಯ ಶಾಲೆಗಳು ಮತ್ತು ಉನ್ನತ ಶೈಕ್ಷಣಿಕ ಸಂಸ್ಥೆಗಳು ಶಿಕ್ಷಣ ನಿರ್ದೇಶನ ಮಂಡಳಿ, NCT ಸರಕಾರ, ಅಥವಾ ಖಾಸಗಿ ಸಂಸ್ಥೆಗಳಿಂದ ನಿರ್ವಹಿಸಲ್ಪಡುತ್ತದೆ. ೨೦೦೪–೦೫ರ ವೇಳೆಗೆ ದೆಹಲಿಯಲ್ಲಿ ೨,೫೧೫ ಪ್ರಾಥಮಿಕ, ೬೩೫ ಮಾಧ್ಯಮಿಕ, ೫೦೪ ಪ್ರೌಢ ಮತ್ತು ೧,೨೦೮ ಹಿರಿಯ ಪ್ರೌಢ ಶಾಲೆಗಳಿದ್ದವು. ಆ ವರ್ಷದಲ್ಲಿ ನಗರದಲ್ಲಿನ ಉನ್ನತ ಶೈಕ್ಷಣಿಕ ಸಂಸ್ಥೆಗಳು ೧೬೫ ಕಾಲೇಜುಗಳನ್ನು ಸೇರಿಸಿಕೊಂಡವು. ಅವುಗಳಲ್ಲಿ ಐದು ವೈದ್ಯಕೀಯ ಕಾಲೇಜುಗಳು ಮತ್ತು ಎಂಟು ಇಂಜಿನಿಯರಿಂಗ್ ಕಾಲೇಜುಗಳು , ಆರು ವಿಶ್ವವಿದ್ಯಾಲಯಗಳು—DU, JNU, JMI, GGSIPU, IGNOU ಮತ್ತು ಜಾಮಿಯಾ ಹಂದರ್ದ್ ಹಾಗೂ ಒಂಬತ್ತು ಸ್ವಾಯತ್ತ ವಿಶ್ವವಿದ್ಯಾಲಯಗಳು. ಅದರಲ್ಲಿ GGSIPU ಒಂದು ಮಾತ್ರ ರಾಜ್ಯ ವಿಶ್ವವಿದ್ಯಾಲಯ; IGNOU ತೆರೆದ ವಿಶ್ವವಿದ್ಯಾಲಯ; ಉಳಿದೆಲ್ಲವೂ ಕೇಂದ್ರ ವಿಶ್ವವಿದ್ಯಾಲಯಗಳು. ಇಂಗ್ಲೀಷ್ ಅಥವಾ ಹಿಂದಿ ಭಾಷಾ ಮಾಧ್ಯಮವಾಗಿರುವ ದೆಹಲಿಯ ಖಾಸಗಿ ಶಾಲೆಗಳು ಎರಡು ನಿರ್ವಹಣಾ ಘಟಕಗಳಲ್ಲಿ ಒಂದಕ್ಕೆ ಒಳಪಟ್ಟಿರುತ್ತವೆ. ಆ ಘಟಕಗಳೆಂದರೆ - ಕೌನ್ಸಿಲ್‌ ಫಾರ್‌ ದಿ ಇಂಡಿಯನ್‌ ಸ್ಕೂಲ್ ಆಫ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್‌ (CISCE) ಮತ್ತು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (CBSE). ೨೦೦೪–೦೫ರಲ್ಲಿ ದೆಹಲಿಯಲ್ಲಿ ಸುಮಾರು ೧೫.೨೯ ಲಕ್ಷ (೧.೫೨೯ ದಶಲಕ್ಷ) ವಿದ್ಯಾರ್ಥಿಗಳು ಪ್ರಾಥಮಿಕ ಶಾಲೆಗಳಿಗೆ, ೮.೨೨ ಲಕ್ಷ (೦.೮೨೨ ದಶಲಕ್ಷ) ವಿದ್ಯಾರ್ಥಿಗಳು ಮಾಧ್ಯಮಿಕ ಶಾಲೆ ಗಳಿಗೆ ಮತ್ತು ೬.೬೯ ಲಕ್ಷ (೦.೬೬೯ ದಶಲಕ್ಷ) ಪ್ರೌಢಶಾಲೆಗಳಿಗೆ ದಾಖಲಾಗಿದ್ದರು. ಒಟ್ಟು ದಾಖಲಾತಿಯಲ್ಲಿ ೪೯% ವಿದ್ಯಾರ್ಥಿನಿಯರಾಗಿದ್ದರು. ಅದೇ ವರ್ಷ ದೆಹಲಿ ಸರಕಾರ ರಾಜ್ಯದ ಸ್ಥಳೀಯ ಒಟ್ಟು ಉತ್ಪನ್ನದ ೧.೫೮ % ರಿಂದ ೧.೯೫%ರವರೆಗಿನ ಉತ್ಪನ್ನವನ್ನು ಶಿಕ್ಷಣಕ್ಕಾಗಿ ಖರ್ಚು ಮಾಡಿತು. 10+2+3 ಯೋಜನೆ ಅಡಿಯಲ್ಲಿ ಹತ್ತು-ವರ್ಷದ ಪ್ರೌಢಶಿಕ್ಷಣವನ್ನು ಮುಗಿಸಿದ ವಿದ್ಯಾರ್ಥಿಗಳು ಅವರ ನಂತರದ ಎರಡು ವರ್ಷಗಳನ್ನು ಪದವಿ ಪೂರ್ವ ಕಾಲೇಜುಗಳಲ್ಲಿ ಅಥವಾ ಹಿರಿಯ ಪ್ರೌಢ ಸೌಲಭ್ಯಗಳಿರುವ ಶಾಲೆಗಳಲ್ಲಿ ಕಳೆಯುತ್ತಿದ್ದರು. ಆ ಸಂದರ್ಭದಲ್ಲಿ ಅವರ ಶಿಕ್ಷಣವು ಹೆಚ್ಚು ಕೇಂದ್ರೀಕೃತವಾಗಿತ್ತು. ಅವರು ಶಿಕ್ಷಣ ಹರಿವು - ಉದಾರ ಕಲಾ ವಿಭಾಗ, ವಾಣಿಜ್ಯ, ವಿಜ್ಞಾನ, ಅಥವಾ ಕೆಲವೊಮ್ಮೆ ವೃತ್ತಿಪರ ವಿಭಾಗಗಳನ್ನು ಆರಿಸಿಕೊಳ್ಳುತ್ತಿದ್ದರು. ಇದನ್ನು ಪೂರ್ಣಗೊಳಿಸಿ, ಮುಂದೆ ಓದಲು ಬಯಸುವವರು ಕಾಲೇಜಿನಲ್ಲಿ ಮೂರು-ವರ್ಷದ ಪದವಿ ಶಿಕ್ಷಣಕ್ಕಾಗಿ ಅಥವಾ ಕಾನೂನು, ಇಂಜಿನಿಯರಿಂಗ್, ಅಥವಾ ವೈದ್ಯಶಾಸ್ತ್ರದಲ್ಲಿ ವೃತ್ತಿಪರ ಪದವಿಗಳಿಗಾಗಿ ಓದುತ್ತಿದ್ದರು. ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ, ಲೇಡಿ ಹಾರ್ಡಿಂಗ್ ವೈದ್ಯಕೀಯ ಕಾಲೇಜು, Dr. ರಾಮ್ ಮನೋಹರ್ ಲೋಹಿಯ ಆಸ್ಪತ್ರೆ & PGIMER, ಭಾರತೀಯ ತಾಂತ್ರಿಕ ಶಿಕ್ಷಣ ಸಂಸ್ಥೆ ದೆಹಲಿ, ನೇತಾಜಿ ಸುಭಾಸ್ ತಾಂತ್ರಿಕ ಶಿಕ್ಷಣ ಸಂಸ್ಥೆ, ದೆಹಲಿ ಇಂಜಿನಿಯರಿಂಗ್ ಕಾಲೇಜು, ಗುರು ಗೋವಿಂದ ಸಿಂಗ್ ಇಂದ್ರಪ್ರಸ್ಥ ವಿಶ್ವವಿದ್ಯಾಲಯ, ವ್ಯವಸ್ಥಾಪನಾ ಅದ್ಯಯನ ಶಾಖೆ, ಭಾರತೀಯ ಕಾನೂನು ಶಿಕ್ಷಣ ಸಂಸ್ಥೆ, ದೆಹಲಿ ಅರ್ಥಶಾಸ್ತ್ರ ಶಿಕ್ಷಣ ಸಂಸ್ಥೆ, ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ಮತ್ತು ಭಾರತೀಯ ವಿದೇಶಿ ವ್ಯಾಪಾರ ಶಿಕ್ಷಣ ಸಂಸ್ಥೆ ಮೊದಲಾದವುಗಳು ದೆಹಲಿಯಲ್ಲಿರುವ ಪ್ರಮುಖ ಉನ್ನತ ಶಿಕ್ಷಣ ಅಥವಾ ಸಂಶೋಧನಾ ಸಂಸ್ಥೆಗಳು. ೨೦೦೮ರ ಸಮೀಕ್ಷೆಯ ಪ್ರಕಾರ ದೆಹಲಿಯ ಒಟ್ಟು ನಿವಾಸಿಗಳಲ್ಲಿ ಸುಮಾರು ೧೬% ಜನರು ಕನಿಷ್ಠ ಕಾಲೇಜು ಪದವಿಯನ್ನು ಹೊಂದಿದ್ದರು. ಮಾಧ್ಯಮ ಭಾರತದ ರಾಜಧಾನಿ ನವ ದೆಹಲಿಯು ಸಂಸತ್ತು ಅಧಿವೇಶನದ ನಿರಂತರ ದೂರದರ್ಶನ ಪ್ರಸಾರ ಸೇರಿದಂತೆ, ರಾಜಕೀಯ ವರದಿಗಳ ಕೇಂದ್ರ ಬಿಂದು. ಸರ್ಕಾರಿ ಸ್ವಾಮ್ಯದ ಪ್ರೆಸ್‌ ಟ್ರಸ್ಟ್ ಆಫ್‌ ಇಂಡಿಯಾ ಮತ್ತು ದೂರದರ್ಶನ ಮೊದಲಾದ ಅನೇಕ ದೇಶವ್ಯಾಪಿ ಮಾಧ್ಯಮ ಸಂಸ್ಥೆಗಳು ಈ ನಗರದಲ್ಲಿವೆ. ಎರಡು ಉಚಿತ ಭೂ-ದೂರದರ್ಶನ ಚಾನೆಲ್‌ಗಳನ್ನು ದೂರದರ್ಶನ ಪ್ರಸಾರ ಮಾಡುತ್ತದೆ. ಅಂತೆಯೇ ಅನೇಕ ಹಿಂದಿ, ಇಂಗ್ಲೀಷ್ ಮತ್ತು ಪ್ರಾದೇಶಿಕ ಭಾಷೆಗಳು ಮತ್ತು ಕೇಬಲ್ ಚಾನೆಲ್‌ಗಳನ್ನು ಬಹು ವ್ಯವಸ್ಥೆ ನಿರ್ವಾಹಕರು ಪ್ರಸಾರ ಮಾಡುತ್ತಾರೆ. ಉಪಗ್ರಹ ಟೆಲಿವಿಷನ್ ನಗರದಲ್ಲಿ ಇನ್ನೂ ಹೆಚ್ಚು-ಪ್ರಮಾಣದ ಚಂದಾದಾರರನ್ನು ಪಡೆದುಕೊಳ್ಳಬೇಕಿದೆ. ಪತ್ರಿಕೋದ್ಯಮವು ದೆಹಲಿಯಲ್ಲಿ ಪ್ರಸಿದ್ಧ ಸುದ್ದಿ ಮಾಧ್ಯಮವಾಗಿದೆ. ೨೦೦೪–೦೫ರ ಸಂದರ್ಭದಲ್ಲಿ ನಗರದಲ್ಲಿ ೧೩ ಭಾಷೆಗಳ ೧೦೨೯ ವಾರ್ತಾಪತ್ರಿಕೆಗಳು ಪ್ರಕಟಿಸಲ್ಪಟ್ಟಿದ್ದವು. ಅವುಗಳಲ್ಲಿ ೪೯೨ ಹಿಂದಿ ಭಾಷೆಯ ವಾರ್ತಾಪತ್ರಿಕೆಗಳು. ಅದರಲ್ಲಿ ಪ್ರಮುಖವಾದವುಗಳೆಂದರೆ - ನವಭಾರತ್ ಟೈಮ್ಸ್‌ , ಹಿಂದೂಸ್ಥಾನ್ ದೈನಿಕ್‌ , ಪಂಜಾಬ್‌ ಕೇಸರಿ , ದೈನಿಕ್ ಜಾಗರಣ್‌ , ದೈನಿಕ್ ಭಾಸ್ಕರ್‌ ಮತ್ತು ದೈನಿಕ್ ದೇಶಬಂಧು . ಇಂಗ್ಲೀಷ್ ಭಾಷೆ ವಾರ್ತಾಪತ್ರಿಕೆಗಳಲ್ಲಿ ಒಂದಾಗಿರುವ ದಿ ಹಿಂದುಸ್ಥಾನ್‌ ಟೈಮ್ಸ್‌ ಅತಿ ದೊಡ್ಡ ದೈನಿಕವಾಗಿತ್ತು, ಮತ್ತು ಇದರ ದಶಲಕ್ಷದಷ್ಟು ಪ್ರತಿಗಳು ಮಾರಾಟವಾಗುತ್ತಿದ್ದವು. ಇತರ ಪ್ರಮುಖ ಇಂಗ್ಲೀಷ್ ವಾರ್ತಾಪತ್ರಿಕೆಗಳೆಂದರೆ - ಇಂಡಿಯನ್‌ ಎಕ್ಸ್‌ಪ್ರೆಸ್‌ , ಬ್ಯುಸಿನೆಸ್‌ ಸ್ಟ್ಯಾಂಡರ್ಡ್‌ , ಟೈಮ್ಸ್‌ ಆಫ್‌ ಇಂಡಿಯಾ , ದಿ ಹಿಂದು , ದಿ ಪೈಯನೀರ್‌ , ಏಷಿಯನ್‌ ಏಜ್‌ ಮತ್ತು ಏಷಿಯನ್ ಎಜೆಂಡ್ ಮತ್ತು ಮಲಯಾಳ ಮನೋರಮಾ ಮುಂತಾದ ಪ್ರಾದೇಶಿಕ ದೈನಿಕಗಳು. ದೆಹಲಿಯಲ್ಲಿ ರೇಡಿಯೊ ಸ್ವಲ್ಪ ಕಡಿಮೆ ಪ್ರಚಲಿತದಲ್ಲಿರುವ ಪ್ರಸಾರ ಮಾಧ್ಯಮ. ಆದರೂ, ೨೦೦೬ರಲ್ಲಿ ಅನೇಕ ಹೊಸ FM ಚಾನೆಲ್‌ಗಳು ಪ್ರಾರಂಭವಾದುದರಿಂದ FM ರೇಡಿಯೊ ತನ್ನ ಸ್ಥಿತಿಯನ್ನು ಬಲಪಡಿಸಿಕೊಳ್ಳುತ್ತಿದೆ.bbc.co.uk/worldservice /trust/pdf/india _sex_ selection/Chapter4.pdf|title=Chapter4: Towards a Mass Media Campaign: Analysing the relationship between target audiences and mass media|accessdate=2007-01-08|last=Naqvi| first= Farah|date=14 November 2006|format=PDF|work=Images and icons: Harnessing the Power of Mass Media to Promote Gender Equality and Reduce Practices of Sex Selection|publisher=BBC World Service Trust|pages=26–36 }}</ref>. ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿಯ ಅನೇಕ ರೇಡಿಯೊ ಸ್ಟೇಷನ್‌ಗಳು ದೆಹಲಿಯಿಂದ ಪ್ರಸಾರವಾಗುತ್ತವೆ. ಪ್ರಪಂಚದಲ್ಲೇ ಅತೀದೊಡ್ಡ ರೇಡಿಯೊ ಸೇವೆ ಒದಗಿಸುವ ಆಲ್ ಇಂಡಿಯಾ ರೇಡಿಯೊ (AIR) ಇವುಗಳಲ್ಲಿ ಪ್ರಮುಖವಾದುದು. ಇದು ಹತ್ತು ಭಾಷೆಗಳಲ್ಲಿ ಆರು ರೇಡಿಯೊ ಚಾನೆಲ್‌ಗಳನ್ನು ಒದಗಿಸುತ್ತದೆ. "ಆಜ್ ತಕ್", "ರೇಡಿಯೊ ಸಿಟಿ(೯೧.೧ MHz)", "ಬಿಗ್ FM(೯೨.೭ MHz)", "ರೆಡ್ FM(೯೩.೫MHz)", "ರೇಡಿಯೊ ಒನ್(೯೪.೩ MHz)", "ಹಿಟ್ FM(೯೫ MHz)", "ಅಪ್ನ ರೇಡಿಯೊ", "ರೇಡಿಯೊ ಮಿರ್ಚಿ(೯೮.೩ MHz)", "FM ರೈನ್‍‌ಬೊ(೧೦೨.೪ MHz)", "ಫೀವರ್ FM(೧೦೪ MHz)", "ಮ್ಯೊ FM(೧೦೪.೮ MHz)", "FM ಗೋಲ್ಡ್(೧೦೬.೪ MHz)" ಮೊದಲಾದವುಗಳು ಇತರ ಪ್ರಾದೇಶಿಕ ರೇಡಿಯೊ ಸ್ಟೇಷನ್‌ಗಳು. ವಿವಿಧ ಸುದ್ದಿಗಳ ಮತ್ತು ಸಾಮಾನ್ಯ ಆಸಕ್ತಿಯ ಪತ್ರಿಕೆಗಳೂ ದೆಹಲಿಯಿಂದ ಪ್ರಕಟಿತವಾಗುತ್ತವೆ. ಅವುಗಳೆಂದರೆ ಇಂಡಿಯಾ ಟುಡೆ, ಔಟ್‌ಲುಕ್, COVERT ಮತ್ತು ಇತ್ಯಾದಿ. ಕ್ರೀಡೆ ಕ್ರಿಕೆಟ್ ದೆಹಲಿಯ ಹೆಚ್ಚು ಜನಪ್ರಿಯ ಕ್ರೀಡೆ. ನಗರದಾದ್ಯಂತ ಅನೇಕ ಕ್ರಿಕೆಟ್ ಮೈದಾನಗಳಿವೆ (ಅಥವಾ ಮೈದಾನಗಳು ). ಪಿರೋಜ್‌ ಷಾ ಕೋಟ್ಲಾ ಕ್ರೀಡಾಂಗಣವು ಭಾರತದಲ್ಲಿ ಹಳೆಯ ಕ್ರಿಕೆಟ್ ಮೈದಾನಗಳಲ್ಲಿ ಒಂದಾಗಿದ್ದು, ಇಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ನಡೆಯುತ್ತವೆ. ದೆಹಲಿ ಕ್ರಿಕೆಟ್‌ ತಂಡವು ರಣಜಿ ಟ್ರೋಫಿಯಲ್ಲಿ ನಗರವನ್ನು ಪ್ರತಿನಿಧಿಸುತ್ತದೆ. ಇದು ಒಂದು ಸ್ಥಳೀಯ ಪ್ರಥಮ-ದರ್ಜೆ ಕ್ರಿಕೆಟ್ ಚಾಂಪಿಯನ್‌ಶಿಪ್. IPL ತಂಡ ದೆಹಲಿ ಡೇರ್‌ಡೆವಿಲ್ಸ್‌, ಮತ್ತು ICL ತಂಡ ದೆಹಲಿ ಜೈಂಟ್ಸ್‌ (ಆರಂಭದ ಹೆಸರು ದೆಹಲಿ ಜೆಟ್ಸ್‌) ಮೊದಲಾದವುಗಳಿಗೂ ನಗರವು ನೆಲೆಯಾಗಿದೆ. ಇತರ ಕ್ರೀಡೆಗಳಾದ ಮೈದಾನದ ಹಾಕಿ, ಫುಟ್‌ಬಾಲ್ (ಕಾಲ್ಚೆಂಡಾಟ), ಬಾಸ್ಕೆಟ್‌ಬಾಲ್, ಟೆನ್ನಿಸ್, ಗಾಲ್ಫ್, ಬ್ಯಾಡ್ಮಿಂಟನ್, ಈಜುಗಾರಿಕೆ, ಕಾರ್ಟ್ ರೇಸಿಂಗ್, ಭಾರ ಎತ್ತುವಿಕೆ ಮತ್ತು ಟೇಬಲ್ ಟೆನ್ನಿಸ್ ಕೂಡ ನಗರದಲ್ಲಿ ಪ್ರಸಿದ್ಧವಾದವುಗಳು. ಜವಹರ್‌ಲಾಲ್‌ ನೆಹರು ಕ್ರೀಡಾಂಗಣ ಮತ್ತು ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣಗಳು ದೆಹಲಿಯಲ್ಲಿರುವ ಇತರ ಕ್ರೀಡಾಂಗಣಗಳು. ಹಿಂದೆ ದೆಹಲಿಯು ಅನೇಕ ಸ್ಥಳೀಯ ಮತ್ತು ಮೊದಲನೇ ಮತ್ತು ಒಂಭತ್ತನೇ ಏಷಿಯನ್ ಗೇಮ್ಸ್‌ ಮೊದಲಾದ ಅಂತರರಾಷ್ಟ್ರೀಯ ಕ್ರೀಡಾಕೂಟ ಆತಿಥ್ಯವಹಿಸಿದೆ. ಈಗ ದೆಹಲಿಯು 2010ರ ಕಾಮನ್‌ವೆಲ್ತ್‌ ಗೇಮ್ಸ್‌‌‌ ಆತಿಥ್ಯವಹಿಸಲು ಸಿದ್ಧಗೊಳ್ಳುತ್ತಿದೆ. ಇದುವರೆಗೆ ನಗರದಲ್ಲಿ ನಡೆದುದುರಲ್ಲೇ ಇದು ಅತಿ ದೊಡ್ಡ ಬಹು-ಕ್ರೀಡಾಕೂಟವಾಗಿದೆ. ದೆಹಲಿಯು 2014ರ ಏಷಿಯನ್ ಗೇಮ್ಸ್‌ ಆಹ್ವಾನವನ್ನು ಹರಾಜಿನಲ್ಲಿ ಕಳೆದುಕೊಂಡಿತ್ತು, ಆದರೆ 2020ರ ಒಲಿಂಪಿಕ್ ಗೇಮ್ಸ್‌ಗೆ ಆಹ್ವಾನವನ್ನು ಪಡೆದಿದೆ. ಅಲ್ಲದೆ ೨೦೧೦ರ ಮೊದಲ ಭಾರತೀಯ ಗ್ರ್ಯಾಂಡ್‌ ಪ್ರಿಕ್ಸ್‌‌‌ನ ಆತಿಥ್ಯವಹಿಸಲು ದೆಹಲಿ ಆಯ್ಕೆಯಾಗಿದೆ. ೨೦೧೩ ರ ವಿಧಾನ ಸಭೆ ಚುನಾವಣೆ ೮-೧೨-೨೦೧೩ -ಎಣಿಕೆ ನಂತರ ಮುಖ್ಯ ಮಂತ್ರಿ (ಮೂರು ಚುನಾವಣೆ ಗೆದ್ದಿದ್ದ ) ಶೈಲಾ ದೀಕ್ಷಿತ್ ರಾಜೀನಾಮೆ ಸಲ್ಲಿಸಿದರು. ಶ್ರೀ ಅರವಿಂದ ಕೇಜರೀವಾಲ ಎಎಪಿ ಪಕ್ಷದ ಮುಖ್ಯಸ್ಥ ದಿ. ೨೮-೧೨-೨೦೧೩ ಶನಿವಾರ ದೆಹಲಿ ರಾಮಲೀಲಾ ಮೈದಾನದಲ್ಲಿ ದೆಹಲಿ ಸರ್ಕಾರದ ಮುಖ್ಯ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ನಂತರ ಆರು ಜನ ವಿಧಾನ ಸಭಾ ಸದ್ಯರನ್ನು ತಮ್ಮ ಮಂತ್ರಿ ಮಂಡಲಕ್ಕೇ ಸೇರಿಸಿ ಕೊಂಡು ಖಾತೆಗಳನ್ನ ಹಂಚಿದರು. (ಒಟ್ಟು ೭ ಜನರ ಮಂತ್ರಿ ಮಂಡಲ) ೨೦೧೪ರ ಫೆಬ್ರವರಿ ೧೪ (February 14, 2014 he resigned) ರಂದು ಅವರ ಜನ ಲೋಕಪಾಲ ಮಸೂದೆಯ ಕರಡನ್ನು ವಿಧನಸಭೆಯಲ್ಲಿ ಮಂಡಿಸಲು ಆಗದೇ ಇದ್ದರಿಂದ ತಾವು ರಾಜೀನೇಮೇ ನೀಡುವುದಾಗಿ ಹೇಳಿ ದೆಹಲಿಯ ಲೆ. ಗೌರ್ನರಿಗೆ ರಾಜೀನಾಮೆ ಸಲ್ಲಿಸಿದರು. ಒಂದುವಾರ ಕಾಲ ರಾಜ್ಯಪಾಲರು ಎರಡನೇ ಅಧಿಕ ಸ್ಥಾನ ಪಡೆದ (ಮೊದಲ ಆಧಿಕ ಸ್ಥಾನ) ಬಿ.ಜೆ.ಪಿ. ಸರ್ಕಾರ ರಚಿಸಲು ಬಾರದೇಇದ್ದುದರಿಂದ ರಾಷ್ತ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದರು.(ಟೈ.ಆ.ಇಂ.) ಪ - {| class="wikitable sortable" !ವರ್ಣ !ಪಾರ್ಟಿ !style="background-color:#E9E9E9" align=center|ಬಾವುಟ (Flag) !style="background-color:#E9E9E9" |ಅಭ್ಯರ್ಥಿಗಳು (Candidates) !style="background-color:#E9E9E9" |ಗೆಲವು(Seats Won) !style="background-color:#E9E9E9" |ಲಾಭ/ನಷ್ಟ(Net Change)in seats !style="background-color:#E9E9E9" |% (of Seats) !style="background-color:#E9E9E9" |% .ಶೇ. ಮತ ಗಳಿಕೆ(of Votes) !style="background-color:#E9E9E9" |(Change in) %of vote |- ||||66||31||8||44||33%|| |- || ||69||28(New)||28||30%||30.4%(?) |- |||70||08||35||11.5||25%|| |- ||||-||1||1||1.5||0.6%|| |- ||||4||1||1||1.5||1%|| |- ||||||1||0||1.5||10%|| |- |- class="unsortable" !colspan=2 style="background-color:#E9E9E9"|Total!!style="background-color:#E9E9E9"|'!!style="background-color:#E9E9E9"|810!!style="background-color:#E9E9E9"|70!!style="background-color:#E9E9E9"|Turnout!!style="background-color:#E9E9E9"| 100%!!style="background-color:#E9E9E9"|Voters!!style="background-color:#E9E9E9"|76,99,800 |} ದೆಹಲಿ ೨೦೧೩/2013ರ ಚುನಾವಣಾ ಫಲಿತಾಂಶ ೬-೯-೨೦೧೪(timesofindia) 67 MLAs :ಬಿಜಪಿ = 31-3=28 MLAs;; ಆಮ್ ಆದ್ಮಿ =27 ;;ಕಾಂಗ್ರೆಸ್ -8 ;;ಶಿ.ಅಕಾಲಿದಳ -1;;JDU -1;ಪಕ್ಷೇತರ -2 ( ದೆಹಲಿ ಸರ್ಕಾರದ ಮಂತ್ರಿಗಳು ದೆಹಲಿ ಸರ್ಕಾರದ ಮಂತ್ರಿಗಳ ಪಟ್ಟಿ . ೨೮-೧೨-೨೦೧೩(ಪ್ರಮಾಣ ವಚನ ಸ್ವೀಕಾರ) ಅರವಿಂದ ಕೇಜ್ರಿವಾಲ ಮುಖ್ಯ ಮಂತ್ರಿ .ದಿ. ೧೪-೨-೨೦೧೪ (ಫೆಬ್ರವರಿ 14, 2014ರಂದು ದೆಹಲಿ ರಾಜ್ಯಪಾಲ ಅವರಿಗೆ ದೆಹಲಿ ಮುಖ್ಯಮಂತ್ರಿ ಆದ ಕೇಜರಿವಾಲರು ತಮ್ಮ ರಾಜೀನಾಮೇ ಸಲ್ಲಿಸಿದ್ದಾರೆ. ದೆಹಲಿ ರಾಜ್ಯಪಾಲ ಲೆ. ನಜೀಬ್ ಜಂಗ ಅವರ ಶಿಫಾರಸಿನಂತೆ ದೆಹಲಿ- ರಾಜ್ಯಕ್ಕೆ ೧೭-೨-೨೦೧೪ ರಿಂದ ರಾಷ್ತ್ರಪತಿ ಆಡಳಿತ ಘೋಷಣೆ ಆಗಿದೆ. ಅರವಿಂದ ಕೇಜರಿವಾಲರು ಅಸೆಂಬ್ಲಿ ವಿಸರ್ಜಿಜಸದೆ ರಾಷ್ತ್ರಪತಿ ಆಡಳಿತ ಘೋಷಣೆ ಮಾಡಿದ ಬಗ್ಗೆ ಸುಪ್ರೀಂ ಕೋರ್ಟಿಗೆ ತಕರಾರು ಅರ್ಜಿ ಹಾಕಿದ್ದಾರೆ. (the press release issued by lieutenant governor Najeeb Jung's office on Monday.New Delhi, Feb 17 (PTI): Central rule was today imposed in Delhi and the Legislative Assembly kept in suspended animation after President Pranab Mukherjee ..) (DNA News) | ಪುನಹ ದೆಹಲಿ ಚುನಾವಣೆ ಆಮ್‌ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್‌ ಅವರು ಮುಖ್ಯಮಂತ್ರಿಯಾಗಿ 49 ದಿನಗಳ ಅಧಿಕಾರ ನಡೆಸಿ ರಾಜೀನಾಮೆ ನೀಡಿದ ಬಳಿಕ ದಿಲ್ಲಿಯಲ್ಲಿ 2014ರ ಫೆಬ್ರವರಿಯಿಂದ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿದೆ. ದಿಲ್ಲಿ ವಿಧಾನಸಭೆ ಚುನಾವಣೆ 2015ರ ಫೆಬ್ರವರಿ 7ರಂದು (ಶನಿವಾರ) ನಡೆಯಲಿದ್ದು, ಮತ ಎಣಿಕೆ ಅದೇ ಫೆ.10ರಂದು (ಮಂಗಳವಾರ) ನಡೆಯಲಿದೆ ಎಂದು ಚುನಾವಣೆ ಆಯೋಗ ಪ್ರಕಟಿಸಿದೆ. ಮುಖ್ಯ ಚುನಾವಣೆ ಆಯುಕ್ತ ವಿ.ಎಸ್‌. ಸಂಪತ್‌, 1.30 ಕೋಟಿ ಮತದಾರರು ರಾಷ್ಟ್ರೀಯ ರಾಜಧಾನಿಯ 70 ಕ್ಷೇತ್ರಗಳ ಪ್ರತಿನಿಧಿಗಳನ್ನು ಆಯ್ಕೆ ಮಾಡಲಿದ್ದಾರೆ. 11.763 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು. 2015 ಜನವರಿ 14ರಂದು ಚುನಾವಣೆ ಅಧಿಸೂಚನೆ ಹೊರಡಿಸಲಾಗುವುದು. ನಾಮಪತ್ರ ಸಲ್ಲಿಸಲು 2015 ಜನವರಿ 21 ಕಡೆಯ ದಿನವಾಗಿದ್ದು, ನಾಮಪತ್ರಗಳ ಪರಿಶೀಲನೆ ಜ.22ರಂದು ನಡೆಯಲಿದೆ. ನಾಮಪತ್ರಗಳನ್ನು ಹಿಂಪಡೆಯಲು 2015 ಜ.24 ಕೊನೆಯ ದಿನವಾಗಿದೆ'' ಎಂದು ಸಂಪತ್‌ ಪ್ರಕಟಿಸಿದರು.(ವಿಜಯ ಕರ್ನಾಟಕ Jan 12, 2015,) ಫಲಿತಾಂಶ ಮತದಾನ 7-2-2015;ಎಣಿಕೆ 10-2-2015 ಮಂಗಳವಾರ: ಚಲಾವಣೆ ಮತದಾನ 67.21% ಒಟ್ಟು ೭೦ ಸ್ಥಾನಗಳು 70/70 ಫಲಿತಾಂಶ/ ಬಿ.ಜೆ.ಪಿ - :೦3 (-29) ಚರ್ಚೆ ಮುಖ್ಯ ಮಂತ್ರಿ ಕೇಜ್ರಿವಾಲ್‌ ದಿ.14-2-2015 ,ಶನಿವಾರ ಬೆಳಗ್ಗೆ 12.15ರ ಸುಮಾರಿಗೆ ಉಪರಾಜ್ಯಪಾಲ ನಜೀಬ್‌ ಜಂಗ್‌, ನೂತನ ಮುಖ್ಯ ಮಂತ್ರಿ ಕೇಜ್ರಿವಾಲ್‌ಗೆ ಗೋಪ್ಯತಾ ವಿಧಿ ಬೋಧಿಸಿದರು. ಜನಲೋಕಪಾಲ ವಿಧೇಯಕ ಅಂಗೀಕಾರವಾಗದ ಕಾರಣಕ್ಕೆ 2014ರ ಫೆ.14ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕೇಜ್ರಿವಾಲ್‌, ಸರಿಯಾಗಿ ಒಂದು ವರ್ಷದ ನಂತರ, ಅದೇ ದಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.. ಸಿಸೋಡಿಯಾ ಡಿಸಿಎಂ: ಬಳಿಕ ದಿಲ್ಲಿಯ ಉಪಮುಖ್ಯಮಂತ್ರಿಯಾಗಿ ಕೇಜ್ರಿವಾಲ್‌ ಬಲಗೈ ಬಂಟ ಎನಿಸಿಕೊಂಡಿರುವ ಮನೀಶ್‌ ಸಿಸೋಡಿಯಾ ಪ್ರಮಾಣವಚನ ಸ್ವೀಕರಿಸಿದರು. ಅವರ ಬಳಿಕ ಆಸೀಮ್‌ ಅಹಮದ್‌ಖಾನ್‌, ಸಂದೀಪ್‌ ಕುಮಾರ್‌, ಸತ್ಯೇಂದ್ರ ಜೈನ್‌, ಗೋಪಾಲ್‌ ರಾಯ್, ಜಿತೇಂದ್ರ ಸಿಂಗ್‌ ತೋಮರ್‌ ಅವರಿಗೂ ಉಪರಾಜ್ಯಪಾಲ ನಜೀಬ್‌ ಜಂಗ್ ಗೋಪ್ಯತಾ ವಿಧಿ ಬೋಧಿಸಿದರು. . ನೋಡಿ->ದೆಹಲಿ ಅಸೆಂಬ್ಲಿ ಚುನಾವಣೆ ದೆಹಲಿ ಗೌರ್ನರ್ ೨೯-೧೨=೨೦೧೬ ಬೆಂಗಳೂರು ಮೆಟ್ರೊ ರೈಲು ನಿಗಮದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಅನಿಲ್‌ ಬೈಜಲ್‌ ಅವರು ದೆಹಲಿಯ ನೂತನ ಲೆಫ್ಟಿನೆಂಟ್ ಗವರ್ನರ್‌ ಆಗಿ ನೇಮಕಗೊಂಡಿದ್ದಾರೆ. ಕೇಂದ್ರದ ಗೃಹ ಇಲಾಖೆಯ ಮಾಜಿ ಕಾರ್ಯದರ್ಶಿಗಳೂ ಆಗಿದ್ದ 70 ವರ್ಷದ ಬೈಜಲ್‌ ನೇಮಕವನ್ನು ರಾಷ್ಟ್ರಪತಿ ಪ್ರಣವ್‌ ಅಂಗೀಕರಿಸಿದ್ದಾರೆ. ಡಿಸೆಂಬರ್‌ 30ರಂದು ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮಹಾನಗರಪಾಲಿಕೆಗಳ ಚುನಾವಣೆ ೨೦೧೭ 26 Apr, 2017 ದೇಶದ ರಾಜಧಾನಿ ದೆಹಲಿಯ ಮೂರು ಮಹಾನಗರಪಾಲಿಕೆಗಳ ೨೦೧೭ ರ ಚುನಾವಣೆ ಫಲಿತಾಂಶ: ಉತ್ತರ ದೆಹಲಿಯ 103 ವಾರ್ಡ್ ಗಳಲ್ಲಿ ಬಿಜೆಪಿ 66, ಎಎಪಿ 20, ಕಾಂಗ್ರಸ್‌ 15 ಮತ್ತು ಇತರರು 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಪೂರ್ವ ದೆಹಲಿಯ 63 ವಾರ್ಡ್ ಗಳಲ್ಲಿ ಬಿಜೆಪಿ 48, ಎಎಪಿ 10, ಕಾಂಗ್ರಸ್‌ 3 ಮತ್ತು ಇತರರು 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ದಕ್ಷಿಣ ದೆಹಲಿಯ 104 ವಾರ್ಡ್ ಗಳಲ್ಲಿ ಬಿಜೆಪಿ 70, ಎಎಪಿ 16, ಕಾಂಗ್ರಸ್‌ 12 ಮತ್ತು ಇತರರು 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಇದನ್ನೂ ನೋಡಿರಿ ಭಾರತ ೨೦೧೪ ಭಾರತದ ಸಾರ್ವತ್ರಿಕ ಲೋಕಸಭಾ ಚುನಾವಣೆ ಮತ್ತು ಫಲಿತಾಂಶ ಭಾರತದ ಸಾರ್ವತ್ರಿಕ ಚುನಾವಣೆ ೨೦೧೪ ಭಾರತದ ಸಾರ್ವತ್ರಿಕ ಚುನಾವಣೆ, ೨೦೦೯- (ನೋಡಿ) ದೆಹಲಿಯಲ್ಲಿರುವ ಆಕರ್ಷಣೀಯ ಸ್ಥಳಗಳು ೨೦೧೩ ರ ಭಾರತದ ಸಾರ್ವತ್ರಿಕ ಚುನಾವಣಾ ಫಲಿತಾಂಶ ಆಕರಗಳು ಹೆಚ್ಚಿನ ಓದಿಗಾಗಿ ದೆಹಲಿಯ ಆರ್ಥಿಕ ಸಮೀಕ್ಷೆ 2005–2006 . ಯೋಜನಾ ಇಲಾಖೆ. ರಾಷ್ಟ್ರೀಯ ರಾಜಧಾನಿ ಪ್ರದೇಶದ ದೆಹಲಿ ಸರಕಾರ. ೧೨ ಫೆಬ್ರುವರಿ ೨೦೦೭ಯಲ್ಲಿ ಪುನರ್ ಸಂಪಾದಿಸಲಾಯಿತು. ಸ್ಯಾಮ್ ಮಿಲ್ಲರ್‌ರವರು (ಬರಹಗಾರರು ಮತ್ತು ಪತ್ರಕರ್ತರು) ಬರೆದದೆಹಲಿ: ಎಡ್ವೆಂಚರ್ಸ್‌ ಇನ್‌ ಎ ಮೆಗಾಸಿಟಿ ದೆಹಲಿಯಲ್ಲಿ ಕನ್ನಡ ಭಾಷೆಯೂ ಪ್ರಾಮುಖ್ಯತೆ ಪಡೆದಿದೆ.ದೆಹಲಿಯಲ್ಲಿ ಕರ್ನಾಟಕ ಭವನವೂ ಇದೆ.ಕನ್ನಡಿಗರನ್ನು ಒಗ್ಗೂಡಿಸುವ ಸಲುವಾಗಿ ಬಹಳ ಉಪಯುಕ್ತವಾಗಿದೆ.ಈ ಮೂಲಕ ಕನ್ನಡವನ್ನು ಇಂಡಿಯಾದ ಮೂಲೆ ಮೂಲೆಗೂ ತಲುಪಿಸಬಹುದಾಗಿದೆ. ದಿಲ್ಲಿ ಮೊದಲ ಕೊರೊನಾ ರೋಗಿ 14 ದಿನಗಳ ಚಿಕಿತ್ಸೆ ನಂತರ ಗುಣಮುಖ…ಕುತೂಹಲದ ಪ್ರಶ್ನೆಗೆ ಉತ್ತರ!-ಉದಯವಾಣಿ d; 16 ಮಾರ್ಚ್ 2020 ಹೊರಗಿನ ಕೊಂಡಿಗಳು ಸರ್ಕಾರ ಭಾರತೀಯ ಸರಕಾರಿ ಜಾಲ ವಿಳಾಸಗಳ ನಿರ್ದೇಶಿಕೆ, ದೆಹಲಿ ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ ಸರಕಾರ ದೆಹಲಿಯ ಪುರಸಭೆ ಮಂಡಳಿ ನವ ದೆಹಲಿ ಪುರಸಭೆ ಮಂಡಳಿ ಇತರೆ ಲೋನ್ಲಿ ಪ್ಲಾನೆಟ್ ಗೈಡ್ ದೆಹಲಿ ಮೆಟ್ರೋ ರೈಲು ನಿಗಮ ದೆಹಲಿ ರಾಜಧಾನಿ ಜಿಲ್ಲೆಗಳು ಮತ್ತು ಪ್ರದೇಶಗಳು ಭಾರತದಲ್ಲಿರುವ ನಗರಗಳು ಮತ್ತು ಪಟ್ಟಣಗಳು ದೆಹಲಿ ರೈಲು ವಿಭಾಗ ಭಾರತೀಯ ರೈಲು ವಿಭಾಗ ಕಾಮನ್‌ವೆಲ್ತ್‌ ಗೇಮ್ಸ್‌ನ ಆತಿಥ್ಯ ವಹಿಸುವ ನಗರಗಳು ಭಾರತೀಯ ಕೇಂದ್ರಾಡಳಿತ ಪ್ರದೇಶದ ರಾಜಧಾನಿಗಳು ಉತ್ತರ ರೈಲು (ಭಾರತ) ವಲಯ 1857ರ ಭಾರತೀಯ ದಂಗೆಯೆದ್ದ ಸ್ಥಳಗಳು ಭಾರತದಲ್ಲಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಭಾರತದ ಕೇಂದ್ರಾಡಳಿತ ಪ್ರದೇಶಗಳು ಭಾರತದ ಮೆಟ್ರೋ ನಗರಗಳು ರಾಜಧಾನಿಗಳು ಭಾರತದ ಪಟ್ಟಣಗಳು ಭಾರತದ ಇತಿಹಾಸ
1843
https://kn.wikipedia.org/wiki/%E0%B2%86%E0%B2%97%E0%B3%8D%E0%B2%B0%E0%B2%BE
ಆಗ್ರಾ
ಆಗ್ರಾ ನಗರ ಭಾರತ ದೇಶದ ಉತ್ತರ ಪ್ರದೇಶ ರಾಜ್ಯದಲ್ಲಿರುವ ಒಂದು ಪ್ರಸಿದ್ಧ ಪ್ರವಾಸಿ ಸ್ಥಳ. ವಿಶ್ವ ವಿಖ್ಯಾತ ತಾಜ್ ಮಹಲ್ ಇರುವ ಈ ಊರು ಜಗತ್ತಿನಾದ್ಯಂತ ಹೆಸರುವಾಸಿ. ಇತಿಹಾಸ ಆಗ್ರಾವು 1526 ರಿಂದ 1628ರವರೆಗೆ ಮೊಘಲ್ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಕಾಲದಲ್ಲಿ ಎಲ್ಲರ ಗಮನವನ್ನು ತನ್ನತ್ತ ಸೆಳೆಯಿತು. ಮೊಘಲ್ ಸಾಮ್ರಾಟ ಬಾಬರ್ 1526 ರಲ್ಲಿ ಆಗ್ರಾವನ್ನು ಈ ಸಾಮ್ರಾಜ್ಯದ ರಾಜಧಾನಿಯನ್ನಾಗಿ ಮಾಡಿದನು. ಮೊಘಲ್ ಸಾಮ್ರಾಟರು ಕಟ್ಟಡಗಳನ್ನು ನಿರ್ಮಿಸುವುದರಲ್ಲಿ ನಿಷ್ಣಾತರು. ಈ ನಗರವನ್ನು ಆಳಿದ ನಿಕಟ ಪೂರ್ವ ರಾಜ, ರಾಣಿಯರ ಅಥವಾ ಅಧಿಕಾರಿಗಳ ಹೆಸರಿನಲ್ಲಿ ಇವರು ನಿರ್ಮಿಸಿದ ಅತ್ಯಂತಭವ್ಯವಾದ ವೈಭವಯುತ ಸ್ಮಾರಕಗಳು, ಇಂದಿಗು ವಾಸ್ತುಶಿಲ್ಪದ ಹೆಗ್ಗುರುತುಗಳಾಗಿ ಉಳಿದುಕೊಂಡು, ಅವರ ನೈಪುಣ್ಯತೆಯನ್ನು ಇಂದಿನವರಿಗು ಸಾರಿ ಸಾರಿ ಹೇಳುತ್ತಿವೆ. ಅದರಲ್ಲಿಯೂ ಚಕ್ರವರ್ತಿ ಶಾ ಜಹಾನ್ ತನ್ನ ಪ್ರೀತಿ ಪಾತ್ರ ಮಡದಿಗಾಗಿ ನಿರ್ಮಿಸಿದ, ಸರಿಸಾಟಿಯಿಲ್ಲದ ಪ್ರೀತಿಯ ಧ್ಯೋತಕವಾಗಿ ವಿಶ್ವದೆಲ್ಲೆಡೆ ಗುರುತಿಸಲ್ಪಟ್ಟಿರುವ ತಾಜ್ ಮಹಲ್ ಗೋರಿಯು ಅಪರಿಮಿತ ಖ್ಯಾತಿಯನ್ನು ತನ್ನ ಮುಡಿಗೇರಿಸಿಕೊಂಡು ನಿಂತಿದೆ. ಇದರ ಜೊತೆಗೆ ಅಕ್ಬರ್ ಚಕ್ರವರ್ತಿಯು ಆಗ್ರಾ ನಗರದ ಹೊರಭಾಗದಲ್ಲಿ ಆಗ್ರಾ ಕೋಟೆ ಮತ್ತು ಫತೇಪುರ್ ಸಿಕ್ರಿಗಳನ್ನು ನಿರ್ಮಿಸಿ ಈ ಊರಿಗೆ ಮತ್ತಷ್ಟು ಮೆರಗು ನೀಡಿದನು. ಹವಾಮಾನ ಆಗ್ರಾ ಶುಷ್ಕ ಹವಾಮಾನ ಹೊಂದಿದೆ. ಸಾಧಾರಣ ಚಳಿ, ದೀರ್ಘವಾದ, ಶುಷ್ಕ ಬೇಸಗೆ ಮತ್ತು ಕಡಿಮೆ ಅವಧಿಯ ಮಾನ್ಸೂನ್ ಇಲ್ಲಿಯ ಹವಾಮಾನ ವೈಶಿಷ್ಟ್ಯ. ಇಲ್ಲಿಯ ಮಾನ್ಸೂನ್ ದೇಶದ ಉಳಿದೆಡೆಯಂತೆ ತೀಕ್ಷ್ಣವಾಗಿಲ್ಲ. ಜನಸಂಖ್ಯೆ ೨೦೧೧ರ ಜನಗಣತಿಯಂತೆ ಆಗ್ರಾದ ಜನಸಂಖ್ಯೆ ೧೭,೭೫,೧೩೪. ೫೩% ಪುರುಷರು ಮತ್ತು ೪೭% ಮಹಿಳೆಯರು. ಸಾಕ್ಷರತೆಯ ಪ್ರಮಾಣ ೮೧%. ಹಿಂದೂ, ಇಸ್ಲಾಂ ಮತ್ತು ಜೈನ ಧರ್ಮಗಳು ಮುಖ್ಯ ಧರ್ಮಗಳು. ಚರಿತ್ರೆ ಆಗ್ರಾದ ಪ್ರದೇಶದ ಉಲ್ಲೇಖವು ಮಹಾಭಾರತ ಗ್ರಂಥದಲ್ಲಿದ್ದರೂ ೧೫೦೪ ರಲ್ಲಿ ದೆಹಲಿಯ ಸುಲ್ತಾನನಾದ ಸಿಕಂದರ್ ಲೋಧಿಯು ಸ್ಥಾಪಿಸಿದ ಎಂಬುದು ಈಗ ದೊರೆಯುವ ಸಾಕ್ಷ್ಯ. ಅವನ ಮಗ ಇಬ್ರಾಹಿಂ ಲೋಧಿಯು ಇದನ್ನು ಮೊದಲನೆಯ ಪಾಣಿಪತ್ ಯುದ್ಧ ದಲ್ಲಿ ಬಾಬರನಿಗೆ ಸೋಲುವವರೆಗೆ ಎಂದರೆ ೧೫೨೬ರ ವರೆಗೆ ರಾಜಧಾನಿಯನ್ನಾಗಿ ಮಾಡಿಕೊಂಡು ಆಳಿದ. ೧೫೩೦ರಲ್ಲಿ ಬಾಬರ್‍ನ ನಿಧನದ ನಂತರ ಅವನ ಮಗ ಹುಮಾಯೂನ್ ಶೇರ್ ಶಾಹ್‍ನಿಂದ ಭಾರತದ ಹೊರಗೆ ಓಡಿಸಲ್ಪಟ್ಟು ನಂತರ ವಿಜಯಿಯಾಗಿ ಪಟ್ಟವನ್ನೇರುವಾಗ ಅವನು ದೆಹಲಿಯನ್ನು ರಾಜಧಾನಿಯನ್ನಾಗಿಸಿಕೊಂಡ. ಹುಮಾಯೂನನ ಮಗ ಅಕ್ಬರ್ ಪುನಃ ರಾಜಧಾನಿಯನ್ನು ಆಗ್ರಾಕ್ಕೆ ಸ್ಥಳಾಂತರಿಸಿದ. ಈ ರೀತಿ ಸ್ಥಳಾಂತರಿಸುವಾಗ ಹಳೆಯ ಆಗ್ರಾವನ್ನು ಬಿಟ್ಟು ಯಮುನಾ ನದಿಯ ಬಲದಂಡೆಯಲ್ಲಿ ಹೊಸ ನಗರವನ್ನು ನಿರ್ಮಿಸಿದ. ಆದುದರಿಂದ ಈ ನಗರಕ್ಕೆ ಅಕ್ಬರಾಬಾದ್ ಎಂಬ ಹೆಸರೂ ಇದೆ. ಇದರ ನಂತರ ಆಗ್ರಾದ ಸುವರ್ಣ ಯುಗ. ಅಕ್ಬರ್,ಜಹಾಂಗೀರ್, ಷಾ ಜಹಾನ್ ನಂತಹ ಚಕ್ರವರ್ತಿಗಳು ಈ ನಗರದಿಂದ ದೇಶವನ್ನು ಆಳಿದರು. ಮುಂದೆ ಔರಂಗಜೇಬ ೧೬೫೩ರಲ್ಲಿ ಔರಂಗಾಬಾದ್ ಗೆ ಸ್ಥಳಾಂತರಿಸುವವರೆಗೆ ಇದು ಭಾರತದ ರಾಜಧಾನಿಯಾಗಿತ್ತು. ಮೊಘಲರ ಅವನತಿಯ ನಂತರ ಈ ಪ್ರದೇಶ ೧೮೦೩ ರ ವರೆಗೆ ಮರಾಠರ ಸ್ವಾಧೀನವಿದ್ದು ಇದರ ಹೆಸರು ಪುನಃ ಆಗ್ರಾ ಎಂದು ಬದಲಾಯಿತು. ಮುಂದೆ ಇದು ಬ್ರಿಟಿಷರ ವಶವಾಯಿತು.ಇಲ್ಲಿರುವ ತಾಜ್ ಮಹಲ್, ಆಗ್ರಾ ಕೋಟೆ ಹಾಗೂ ಫತೇಪುರ್ ಸಿಕ್ರಿ ವಿಶ್ವ ಪರಂಪರೆಯ ತಾಣಗಳಾಗಿ ಘೋಷಿತವಾಗಿವೆ. ಆಗ್ರಾ ಪ್ರವಾಸೋದ್ಯಮ ಆಗ್ರಾವು ಆಗ್ರಾ , ಜೈಪುರ್ ಮತ್ತು ದೆಹಲಿಗಳನ್ನು ಒಳಗೊಂಡಿರುವ ಸುವರ್ಣ ತ್ರಿಕೋನದ ಒಂದು ಭಾಗವಾಗಿದೆ. ದೆಹಲಿಗೆ ಇದು ಹತ್ತಿರವಿರುವುದರಿಂದಾಗಿ ಹಲವಾರು ಪ್ರವಾಸಿಗರು ಒಂದು ದಿನದ ಪ್ರವಾಸದ ಸಲುವಾಗಿ ಇಲ್ಲಿಗೆ ಆಗಮಿಸುತ್ತಿರುತ್ತಾರೆ. ತಾಜ್ ಮಹಲ್ ಜೊತೆಗೆ ಮತ್ತಷ್ಟು ಸ್ಥಳಗಳನ್ನು ನೋಡಲು ಬರುವ ಪ್ರವಾಸಿಗರಿಗಾಗಿ ಇಲ್ಲಿ ಹಲವಾರು ಹೋಟೆಲ್ ಮತ್ತು ಲಾಡ್ಜ್ ಗಳು ಇಲ್ಲಿವೆ. ಸಮೀಪದಲ್ಲಿರುವ ಫತೇಪುರ್ ಸಿಕ್ರಿ ಮತ್ತು ಮಥುರಾಗಳಿಗೆ ಇಲ್ಲಿ ಸ್ಥಳ ವೀಕ್ಷಣಾ ಪ್ರವಾಸಗಳು ಲಭ್ಯವಿವೆ. ಈ ನಗರದಲ್ಲಿ ತನ್ನದೇ ಆದ ಪ್ರತ್ಯೇಕತೆಯನ್ನು ಹೊಂದಿರುವ ಒಂದು ಮಾರುಕಟ್ಟೆಯಿದೆ. ಇದರಲ್ಲಿ ಪ್ರವಾಸಿಗರು ತಮಗೆ ಬೇಕಾದ ಆಭರಣಗಳು ಮತ್ತು ಸ್ಥಳೀಯ ಕರಕುಶಲ ವಸ್ತುಗಳನ್ನು ಕೊಂಡು ಕೊಳ್ಳಬಹುದು. ಇದರ ಜೊತೆಗೆ ಇಲ್ಲಿನ ದಲ್ಲಾಳಿಗಳು, ರಿಕ್ಷಾದವರು ಮತ್ತು ಅನಧಿಕೃತ ಮಾರ್ಗದರ್ಶಿಗಳನ್ನು ನಿಭಾಯಿಸಲು ತಯಾರಾಗಿರಿ. ಆಗ್ರಾ ಮತ್ತು ಅದರ ಸುತ್ತ ಮುತ್ತ ಇರುವ ಪ್ರವಾಸಿ ಸ್ಥಳಗಳು ಆಗ್ರಾದಲ್ಲಿರುವ ಐತಿಹಾಸಿಕ ಕಟ್ಟಡಗಳು ನಿಸ್ಸಂಶಯವಾಗಿ ಇಲ್ಲಿನ ಪ್ರಮುಖ ಆಕರ್ಷಣೆಯಾಗಿವೆ. ಪ್ರವಾಸಿಗರು ತಾಜ್ ಮಹಲ್ ಜೊತೆಗೆ ಯಮುನಾ ನದಿಯ ದಂಡೆಯ ಮೇಲೆ ನೆಲೆಗೊಂಡಿರುವ ಆಗ್ರಾ ಕೋಟೆ ಮತ್ತು ಅಕ್ಬರನ ಸಮಾಧಿಗೆ ಭೇಟಿ ನೀಡಬಹುದು. ಚೀನಿ ಕಾ ರೌಝಾ, ದಿವಾನ್- ಇ-ಅಮ್ ಮತ್ತು ದಿವಾನ್- ಇ-ಖಾಸ್ ಕಟ್ಟಡಗಳು ಮೊಘಲರ ಕಾಲದ ವಾಸ್ತುಶಿಲ್ಪ ವೈಭವದ ಒಳನೋಟವನ್ನು ಒದಗಿಸುತ್ತವೆ. ಇತ್‍ಮಡ್- ಉದ್- ದೌಲಾಹ್ ಸಮಾಧಿ, ಮರಿಯಂ ಝಮಾನಿ ಸಮಾಧಿ, ಜಸ್ವಂತ್ ಕಿ ಛಾತ್ರಿ, ಚೌಸತ್ ಖಂಬ ಮತ್ತು ತಾಜ್ ವಸ್ತು ಸಂಗ್ರಹಾಲಯ ಇಲ್ಲಿ ನೋಡಬೇಕಾಗಿರುವ ಆಕರ್ಷಣೆಗಳ ಪಟ್ಟಿಯಲ್ಲಿ ಸೇರಿವೆ. ಭಾರತದ ಇತರ ನಗರಗಳಂತೆ ಆಗ್ರಾವು ಸಹ ಧಾರ್ಮಿಕ ಸಹಿಷ್ಣುತೆಯನ್ನು ಪ್ರತಿಬಿಂಬಿಸುತ್ತಿದೆ. ಇಲ್ಲಿರುವ ಜಾಮಾ ಮಸೀದಿಯು ಪ್ರಖ್ಯಾತ ಹಿಂದೂ ದೇವಾಲಯವಾದ ಬಾಗೇಶ್ವರ್ ದೇವಾಲಯದೊಂದಿಗೆ ಸ್ಥಳವನ್ನು ಹಂಚಿಕೊಂಡಿದೆ. ಬೇರೆ ನಗರಗಳಲ್ಲಿರುವಂತೆ ಆಗ್ರಾದಲ್ಲಿ ಸಹ ನಯನ ಮನೋಹರ ತಾಣಗಳು, ವಾಸನೆಗಳು ಮತ್ತು ಗೌಜು ಗದ್ದಲಗಳನ್ನು ತನ್ನಲ್ಲಿ ಒಳಗೊಂಡಿದೆ. ಇದರ ಜೊತೆಗೆ ಸೋಮಿ ಬಾಗ್ ಮತ್ತು ಮೆಹ್ತಾಬ್ ಬಾಗ್‍ನಂತಹ ಪ್ರಶಾಂತವಾದ ಉದ್ಯಾನವನಗಳನ್ನು ನಾವಿಲ್ಲಿ ಕಾಣಬಹುದು. ಇಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತಗಳು ನೋಡಲು ತುಂಬಾ ಸೊಗಸಾಗಿರುತ್ತವೆ. ಅಲ್ಲದೆ ತಾಜ್ ಮಹಲ್ ಸಹ ಜನರ ಗೌಜು ಗದ್ದಲದಿಂದ ದೂರದಲ್ಲಿ ನೆಲೆಗೊಂಡಿದೆ. ಆಗ್ರಾಗೆ ಕೇವಲ ಪ್ರವಾಸಿಗರು ಮಾತ್ರ ಆಕರ್ಷಿತರಾಗುತ್ತಾರೆ ಎಂದು ತಿಳಿಯಬೇಡಿ. ಇಲ್ಲಿರುವ ಕೀತಂ ಕೆರೆ ಮತ್ತು ಸುರ್ ಸರೋವರ್ ಪಕ್ಷಿಧಾಮಕ್ಕೆ ವಿದೇಶಿ ಹಕ್ಕಿಗಳಾದ ಹೆರ್ಜಾಲೆ, ಸೈಬಿರಿಯನ್ ಕೊಕ್ಕರೆ, ಸರಸ್ ಕೊಕ್ಕರೆಗಳು, ಬ್ರಾಹ್ಮಣಿ ಬಾತುಕೋಳಿಗಳು, ಗೀಸ್ ಮತ್ತು ಗಡ್‍ವಲ್ ಹಾಗು ಹಂಸಗಳು ಸಹ ಆಕರ್ಷಿತಗೊಂಡು ಭೇಟೀ ನೀಡುತ್ತವೆ. ಪ್ರಮುಖ ಸ್ಥಳಗಳು ತಾಜ್ ಮಹಲ್ ಇದು ಪ್ರಪಂಚದ ಪ್ರಸಿದ್ಧ ಕಟ್ಟಡಗಳಲ್ಲಿ ಒಂದು. ಮುಸಲ್ಮಾನ ಶಿಲ್ಪಕಲೆಯ ಉತ್ಕೃಷ್ಟ ಉದಾಹರಣೆ.೧೬೫೩ರಲ್ಲಿ ನಿರ್ಮಾಣಗೊಂಡ ತಾಜ್ ಮಹಲ್ ಷಾ ಜಹಾನ್ ನಿಂದ ನಿರ್ಮಿಸಲ್ಪಟ್ಟಿತು.ಪೂರ್ಣವಾಗಿ ಅಮೃತಶಿಲೆಯಿಂದ ನಿರ್ಮಿತವಾದ ಇದರ ನಿರ್ಮಾಣ ಸಮಯ ಸುಮಾರು ೨೨ ವರ್ಷಗಳು.(೧೬೩೦ -೧೬೫೨). ಸುಮಾರು ೨೦ ಸಾವಿರ ಜನರ ಶ್ರಮದಿಂದ ಇದನ್ನು ನಿರ್ಮಿಸಲಾಗಿದೆ. ಆಗ್ರಾ ಕೋಟೆ ೧೫೫೬ರಲ್ಲಿ ಅಕ್ಬರನಿಂದ ಕಟ್ಟಲ್ಪಟ್ಟಿತು.ಷಾ ಜಹಾನನ ಕಾಲದಲ್ಲಿ ಇದನ್ನು ಅರಮನೆಯನ್ನಾಗಿ ಪರಿವರ್ತಿಸಲಾಗಿತ್ತು.ಕೋಟೆಯ ಒಳಗಡೆ ಮೋತಿ ಮಸ್ಜಿದ್,ದಿವಾನ್-ಈ-ಆಮ್,ದಿವಾನ್-ಈ-ಖಾಸ್,ಜಹಾಂಗೀರನ ಅರಮನೆ,ಖಾಸ್ ಮಹಲ್,ಶೀಷ್ ಮಹಲ್ ಮುಂತಾದವುಗಳು ಮುಖ್ಯವಾಗಿವೆ.ಕೋಟೆಯ ಒಟ್ಟು ಸುತ್ತಳತೆ ಸುಮಾರು ೨.೪ ಕಿ.ಮೀ. ಫತೇಪುರ್ ಸಿಕ್ರಿ ಇದು ಅಕ್ಬರನಿಂದ ಕಟ್ಟಲ್ಪಟ್ಟಿತ್ತು. ಅಕ್ಬರನು ಇದನ್ನು ತನ್ನ ರಾಜಧಾನಿಯನ್ನಾಗಿ ಮಾಡುವ ಉದ್ಧೇಶದಿಂದ ಕಟ್ಟಿದನಾದರೂ ಬಳಿಕ ನೀರಿನ ಕೊರೆತೆಯಿಂದ ಇದನ್ನು ತ್ಯಜಿಸಿ ಪುನಃ ಅಗ್ರಾಕ್ಕೆ ತನ್ನ ರಾಜಧಾನಿಯನ್ನು ಸ್ಥಳಾಂತರಿಸಿದನು. ಉಲ್ಲೇಖಗಳು ಭೂಗೋಳ ವಿಶ್ವ ಪರಂಪರೆಯ ತಾಣಗಳು ಭಾರತದ ಪ್ರವಾಸಿ ತಾಣಗಳು
1845
https://kn.wikipedia.org/wiki/%E0%B2%B9%E0%B3%81%E0%B2%AC%E0%B3%8D%E0%B2%AC%E0%B2%B3%E0%B3%8D%E0%B2%B3%E0%B2%BF
ಹುಬ್ಬಳ್ಳಿ
ಹುಬ್ಬಳ್ಳಿ (ಹುಬ್ಳಿ) (ಗಂಡು ಮೆಟ್ಟಿದ ನಾಡು) ಕರ್ನಾಟಕದ ಉತ್ತರ ಭಾಗದಲ್ಲಿರುವ ಪ್ರಮುಖ ವಾಣಿಜ್ಯ ನಗರ.ಹುಬ್ಬಳ್ಳಿ ನಗರವು ಧಾರವಾಡ ಜಿಲ್ಲೆಯಲ್ಲಿದೆ. ಬೆಂಗಳೂರು - ಪುಣೆ ರಾಷ್ಟ್ರೀಯ ಹೆದ್ದಾರಿ- 4 ರಲ್ಲಿ, ಬೆಂಗಳೂರಿನಿಂದ ಸುಮಾರು 410 ಕಿ.ಮೀ ಹಾಗೂ ಪುಣೆಯಿಂದ ಸುಮಾರು 430 ಕಿ.ಮೀ ದೂರದಲ್ಲಿದೆ. 2011ರ ಭಾರತದ ಜನಗಣತಿಯ ಪ್ರಕಾರ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ಜನಸಂಖ್ಯೆ 943,788.ಅದರಲ್ಲಿ 474,518 ಪುರುಷರು ಮತ್ತು 469,270 ಮಹಿಳೆಯರಿದ್ದಾರೆ. ಧಾರವಾಡದಿಂದ ಹುಬ್ಬಳ್ಳಿಗೆ ಹೋಗುವ ಹೆದ್ದಾರಿಯಲ್ಲಿ ಉಣಕಲ್ ಕೆರೆ ಇದೆ, ಇದು ಒಂದು ಪ್ರವಾಸಿಗರ ತಾನವಾಗಿದೆ. ಕೆರೆಯ ಕೆಳಗೆ 100 ಬಾವಿಗಳು ಇವೆ ಎಂದು ಪ್ರತೀತಿ ಇದೆ. ಮತ್ತು ಹುಬ್ಬಳ್ಳಿಯಲ್ಲಿ ಇರುವ ರೈಲ್ವೇ ನಿಲ್ದಾಣವು ವಿಶ್ವದ ಅತೀ ಉದ್ದನೆಯ ಪ್ಲಾಟ್ಫಾರ್ಮ್. ಇತಿಹಾಸ ಹುಬ್ಬಳ್ಳಿ, (ಕನ್ನಡ: ಹುಬ್ಬಳ್ಳಿ) ಭಾರತದ ಕರ್ನಾಟಕ ರಾಜ್ಯದ ಒಂದು ಪ್ರಮುಖ ನಗರ. ಹೆಸರು ಹುಬ್ಬಳ್ಳಿ ಅಕ್ಷರಶಃ ಕನ್ನಡ "ಹೂಬಿಡುವ ಬಳ್ಳಿ" ಎಂದರ್ಥ. ಒಟ್ಟಾಗಿ "ಹುಬ್ಬಳ್ಳಿ-ಧಾರವಾಡ" ಎಂದು ಹುಬ್ಬಳ್ಳಿ ಮತ್ತು ಧಾರವಾಡ ಅವಳಿ ನಗರಗಳು,, ಬೆಂಗಳೂರು ನಂತರ ಕರ್ನಾಟಕದ ಎರಡನೇ ಅತಿ ದೊಡ್ಡ ನಗರಕೂಡಾ ಆಗಿದೆ. ಧಾರವಾಡ ಸುಮಾರು 20 ಕಿ ಧಾರವಾಡ ಆಗ್ನೇಯ ಇದೆ ಆಡಳಿತ ಪ್ರಧಾನ ಹುಬ್ಬಳ್ಳಿ ನಗರವು ಆದರೆ, ವಾಣಿಜ್ಯ ಸೆಂಟರ್ ಮತ್ತು ಉತ್ತರ ಕರ್ನಾಟಕದ ವ್ಯಾಪಾರ ಕೇಂದ್ರವಾಗಿದೆ. ಹತ್ತಿ ಮತ್ತು ನೆಲಗಡಲೆ ರೀತಿಯ ಬೆಳೆಗಳು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಹೇರಳವಾಗಿ ಬೆಳೆಸಿ, ಹುಬ್ಬಳ್ಳಿ ಎರಡೂ ಉತ್ಪನ್ನಗಳಿಗೆ ಪ್ರಮುಖ ವ್ಯಾಪಾರ ಕೇಂದ್ರವಾಗಿ ಇರುತ್ತದೆ. ಇದು ದಕ್ಷಿಣ ಪಾಶ್ಚಾತ್ಯ ರೈಲ್ವೆ ವಲಯ ಮತ್ತು ಹುಬ್ಬಳ್ಳಿ ರೈಲ್ವೆ ವಿಭಾಗ ಪ್ರಧಾನ ಕೇಂದ್ರವಾಗಿದೆ ಎಂದು ಕೂಡ ಭಾರತೀಯ ರೈಲ್ವೆಯ ಪ್ರಮುಖ. ಜನಸಂಖ್ಯೆ ಅದರ ನಗರ ಜನಸಂಖ್ಯೆ೧೦ ,೪೯ ,೫೬೩ . ೨೦೦೧ ರ ಜನಗಣತಿಯ ಪ್ರಕಾರ ಮತ್ತು ತಾತ್ಕಾಲಿಕ ಜನಗಣತಿ ೨೦೧೧ ಪ್ರಕಾರ ಅವಳಿ ನಗರಗಳ ಜನಸಂಖ್ಯೆ, ೭೮೬ .೦೦೦. ಪುರಸಭೆ ನಡುವಿನ ೨೧ .೨ % ರಷ್ಟು ೧೯೧ ಕಿಮೀ ² ಸೂಚಿಸುತ್ತದೆ. ಹುಬ್ಬಳ್ಳಿ-ಧಾರವಾಡ ಬೆಂಗಳೂರು ಮತ್ತು ಪುಣೆ ನಡುವಿನ ರಾಷ್ಟ್ರೀಯ ಹೆದ್ದಾರಿ 4 ರಂದು, ಬೆಂಗಳೂರು 425 ಕಿ ವಾಯುವ್ಯ ಇದೆ. ಸಿಟಿ ಚುನಾಯಿತ ಪರಿಷತ್ ಹೊಂದಿರುವ ಹುಬ್ಬಳ್ಳಿ-ಧಾರವಾಡ ಪುರಸಭೆ ನಿರ್ವಹಿಸುತ್ತದೆ. ಕನ್ನಡ, ಮರಾಠಿ, ಹಿಂದಿ ಮಾತನಾಡುವ ಪ್ರಮುಖ ಭಾಷೆ, ಕೊಂಕಣಿ ಸಹ ಇಲ್ಲಿ ಮಾತನಾಡುತ್ತಾರೆ. ಜನಗಣತಿಯ ಪ್ರಕಾರ ಮತ್ತು ತಾತ್ಕಾಲಿಕ ಜನಗಣತಿ ೨೦೧೧ ಪ್ರಕಾರ ಅವಳಿ ನಗರಗಳ ಜನಸಂಖ್ಯೆ, ೭೮೬.೦೦೦ ಇದೆ. ಹುಬ್ಬಳ್ಳಿ-ಧಾರವಾಡ ಜನಸಂಖ್ಯೆ ೫೨೭ .೧೦೮ ರಿಂದ ೬೪೮ .೨೯೮ ಗೆ, ೧೯೮೧ ಮತ್ತು ೧೯೯೧ ನಡುವೆ ೨೨ ,೯೯ % ರಷ್ಟು ಮತ್ತು ೧೯೯೧ ಮತ್ತು ೨೦೦೧. ಹವಾಮಾನ ಹುಬ್ಬಳ್ಳಿ-ಧಾರವಾಡ ಉಷ್ಣವಲಯದ ತೇವ ಮತ್ತು ಒಣ ಹವೆ ಹೊಂದಿದೆ. ಬೇಸಿಗೆ ಆರಂಭದಲ್ಲಿ ಜೂನ್ ಕೊನೆಯಲ್ಲಿ ಫೆಬ್ರವರಿ ಬಿಸಿ ಮತ್ತು ಶುಷ್ಕ, ಶಾಶ್ವತವಾದ ಇವೆ. ಅವರು ಮಧ್ಯಮ ಉಷ್ಣತೆ ಮತ್ತು ಮಳೆಯ ದೊಡ್ಡ ಪ್ರಮಾಣದ, ಮಾನ್ಸೂನ್ ಅನುಸರಿಸಲ್ಪಡುತ್ತದೆ. ತಾಪಮಾನವು ವಾಸ್ತವವಾಗಿ ಮಳೆ, ಅಕ್ಟೋಬರ್ ಕೊನೆಯ ಹಿಂದಿನ ಫೆಬ್ರವರಿ ವಾಸ್ತವವಾಗಿ ಸೌಮ್ಯವಾಗಿರುತ್ತದೆ. ಈ ಹುಬ್ಬಳ್ಳಿ ಸೂಕ್ತ ಕಾಲ. ಹುಬ್ಬಳ್ಳಿ ಸರಾಸರಿ ಸಮುದ್ರ ಮಟ್ಟದಿಂದ ಎತ್ತರ ೬೨೬,೯೮ ಮೀಟರ್. ಸರಾಸರಿ ವಾರ್ಷಿಕ ಮಳೆ ೮೩೮ ಮಿಮೀ. ಇತಿಹಾಸ 'ಎಳೆಯ ಪುರವಾದ ಹಳ್ಳಿ' ಅಥವಾ 'ಪುರ್ಬಲ್ಲಿ ' ಎಂದು ಸಹ ರಾಯರ ಹುಬ್ಬಳ್ಳಿ, ಒಂದು ಭವಾನಿ ಶಂಕರ ದೇವಸ್ಥಾನ ಮತ್ತು ಜೈನ ಬಸ್ತಿ ಅಲ್ಲಿ ಹಳೆಯ ಹುಬ್ಬಳ್ಳಿ ಆಗಿತ್ತು. ವಿಜಯನಗರ ರಾಯ್ಸ್ ಕೆಳಗೆ, ರಾಯರ ಹುಬ್ಬಳ್ಳಿ ಹತ್ತಿ ವ್ಯಾಪಾರ, ಸ್ಫಟಿಕೀಯ ಉಪ್ಪು ಮತ್ತು ಕಬ್ಬಿಣದ ಪ್ರಸಿದ್ಧವಾಗಿದೆ, ವಾಣಿಜ್ಯ ಕೇಂದ್ರವಾಗಿ ಬೆಳೆಯಿತು. ಇದು ಅಡಿಲ್ಲಶಹಿಸ್ ಬಂದಿತು ಬ್ರಿಟಿಷ್ ಇಲ್ಲಿ ಕಾರ್ಖಾನೆ ತೆರೆದರು. ಛತ್ರಪತಿ ಶಿವಾಜಿ ಮಹಾರಾಜರು ೧೬೭೩ ರಲ್ಲಿ ಕಾರ್ಖಾನೆ ನುಗ್ಗಿ ಮೊಘಲರ ವಶಪಡಿಸಿದ ಮತ್ತು ಸ್ಥಳದಲ್ಲಿ ಮಜಿದ್ಪುರ ಮತ್ತು ವ್ಯಾಪಾರಿ ಬಸಪ್ಪ ಶೆಟ್ಟಿ ಎಂಬ ಹೊಸ ವಿಸ್ತರಣೆ ದುರ್ಗದಬೈಲ್ ಸುತ್ತ ಹೊಸ ಹುಬ್ಬಳ್ಳಿ (ಕೋಟೆ ಮೈದಾನದಲ್ಲಿ) ನಿರ್ಮಿಸಿದ. ಸವನುರ್ ನವಾಬ್ ಅಲ್ಲಿ ಪ್ರಸಿದ್ಧ ಮೂರುಸಾವಿರ ಮಠ, ಮತ್ತು ಮಠ ಅಧಿಕಾರಿಗಳು ಅದು ಬಸವೇಶ್ವರ ತಂದೆಯ ಅವಧಿಯ ಒಂದು ಶರಣ ಪ್ರಾರಂಭಿಸಲ್ಪಟ್ಟ ಎಂದು ಹೇಳಿಕೊಳ್ಳುತ್ತಾರೆ. ಹುಬ್ಬಳ್ಳಿ ೧೭೫೫-೫೬ ರಲ್ಲಿ ಸವನುರ್ ನವಾಬ್ ರಿಂದ ಮರಾಠರು ಗೆಲ್ಲಲ್ಪಟ್ಟಿತು. ನಂತರ ಹೈದರ್ ಅಲಿ ವಶಪಡಿಸಿದ. ಆದರೆ ೧೭೯೦ ರಲ್ಲಿ ಮರಾಠರ ವಶಪಡಿಸಿಕೊಂಡಿದೆ, ಮತ್ತು ಹಳೆಯ ಪಟ್ಟಣಕ್ಕೆ ಸಾಂಗ್ಲಿ ಪಟವರ್ಧನ್ ಮೂಲಕ ಪೇಶ್ವೆ ಮತ್ತು ನ್ಯೂ ಟೌನ್ ಅಡಿಯಲ್ಲಿ ಒಂದು ಫಧಕೆ ಜಾರಿಗೊಳಿಸಿತು. ಬ್ರಿಟಿಷ್ ೧೮೧೭ ಹಳೆಯ ಹುಬ್ಬಳ್ಳಿ ತೆಗೆದುಕೊಂಡಿತು ಮತ್ತು ೪೭ ಇತರ ಹಳ್ಳಿಗಳ ಹೊಸ ಪಟ್ಟಣದ ೧೮೨೦ ರಲ್ಲಿ ಸಹಾಯಧನದ ಬದಲಾಗಿ ಸಾಂಗ್ಲಿ ಪಟವರ್ಧನ್ ಬ್ರಿಟಿಷ್ ಹಸ್ತಾಂತರಿಸಬೇಕಾಯಿತು. ಹುಬ್ಬಳ್ಳಿ ಶ್ರೀಮಂತ ಕೈಮಗ್ಗ ನೇಯ್ಗೆ ಸೆಂಟರ್ ಮತ್ತು ಜವಳಿ ಘಟಕ ಹೊಂದಿದೆ. ರೈಲ್ವೆ ವರ್ಕ್ಷಾಪ್ ೧೮೮೦ ರಲ್ಲಿ ಇಲ್ಲಿ ಆರಂಭವಾಯಿತು, ಇದು ರೆಕನಬ್ಲೆ ಕೈಗಾರಿಕಾ ಸೆಂಟರ್ ಮಾಡಿದರು. ಹಳೆಯ ಹುಬ್ಬಳ್ಳಿ ಭವಾನಿಶಂಕರ್ ದೇವಸ್ಥಾನ ಮತ್ತು ಉಣಕಲ್ ರಲ್ಲಿ ಪ್ರಭಾವಶಾಲಿ ಚಂದ್ರಮುಲೇಶ್ವರ / ಚತುರ್ಲಿಂಗ ದೇವಸ್ಥಾನ ಚಾಲುಕ್ಯರ ಬಾರಿ ಮಾಡಲಾಗಿದೆ. ಕುಂದ್ಗೊಲ್ , ೧೫ ಕಿ. ಹುಬ್ಬಳ್ಳಿ ದಕ್ಷಿಣ, ಚಾಲುಕ್ಯರ ಕಾಲದ ದೊಡ್ಡ ಶಂಭು ಲಿಂಗ ದೇವಾಲಯವನ್ನು ಹೊಂದಿದೆ. ಇಂಡಸ್ಟ್ರಿಯಲ್ & ವ್ಯವಹಾರ ಅಭಿವೃದ್ಧಿ ಹುಬ್ಬಳ್ಳಿ ಮೂಲತಃ ಹುಬ್ಬಳ್ಳಿ ಮತ್ತು ತಾರಿಹಲ್ ಪ್ರದೇಶಗಳಲ್ಲಿ ಗೋಕುಲ್ ರೋಡ್ ಇರುವ ಈಗಾಗಲೇ ಸ್ಥಾಪಿತವಾದ ಹೆಚ್ಚು ೧೦೦೦ ಮೈತ್ರಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಜೊತೆ, ಬೆಂಗಳೂರು ನಂತರ ಕರ್ನಾಟಕದ ಅಭಿವೃದ್ಧಿ ಹೊಂದುತ್ತಿರುವ ಕೈಗಾರಿಕಾ ಕೇಂದ್ರ. ಯಂತ್ರೋಪಕರಣಗಳ ಕೈಗಾರಿಕೆಗಳು, ಎಲೆಕ್ಟ್ರಿಕಲ್, ಸ್ಟೀಲ್ ಪೀಠೋಪಕರಣಗಳು, ಆಹಾರ ಉತ್ಪನ್ನಗಳು, ರಬ್ಬರ್ ಮತ್ತು ಚರ್ಮದ ಕೈಗಾರಿಕೆಗಳು ಮತ್ತು ಸಂಸ್ಕರಣ ಕೈಗಾರಿಕೆಗಳು ಇವೆ. ವಿವಿಧ ಕೈಗಾರಿಕೆಗಳು, ಸಂಸ್ಥೆಗಳು ಮತ್ತು ವ್ಯಾಪಾರ ಮನೆ ಒಟ್ಟಾರೆ ಆರ್ಥಿಕ ಅಭಿವೃದ್ಧಿ ಪ್ರಚಾರಕ್ಕಾಗಿ "ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಕರ್ನಾಟಕ ಚೇಂಬರ್" ರಚಿಸಲಾಯಿತು, ಇದು ಹುಬ್ಬಳ್ಳಿ ಪ್ರದೇಶದಲ್ಲಿ ಸಂಭಾವ್ಯ ಬೆಳವಣಿಗೆ ಮತ್ತು ಅಭಿವೃದ್ಧಿಯು ಸಾಧಿಸಿದ ಗತಿ ಗಳಿಸಿದ ಬಂದಿದೆ ಪ್ರೀಮಿಯರ್ ಅಸೋಸಿಯೇಷನ್, ಒಂದು ತಂದೆಯ . ಮತ್ತು ಹುಬ್ಬಳ್ಳಿ-ಧಾರವಾಡ ಫಾರ್ ಕೈಗಾರೀಕರಣ ಒಂದು ಕೀಯನ್ನು ಅಂಶವು ಹಲವಾರು ಕೃಷಿ ಸಂಬಂಧಿತ ಸರಕು ಮತ್ತು ಸರಕುಗಳ ನಿಯಂತ್ರಿತ ಹಾಗೂ ಉತ್ತೇಜಿಸಿದೆ ಉತ್ಪಾದನೆ ಸ್ಥಾಪಿಸುವುದು. ರೈತರ ಹೋರಾಟ ಮುಕ್ತ ಮಾರುಕಟ್ಟೆ ನಿಯಮಗಳು ಒದಗಿಸುತ್ತದೆ ಇದು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಅಡಿಪಾಯ . ಹೊಸ ಪೀಳಿಗೆಯ ಡೀಸೆಲ್ ತಂದೆಯ ಯಾ ರಚನೆ ಭಾರತೀಯ ರೈಲ್ವೆಯಿಂದ ನಗರದಲ್ಲಿ ಷೆಡ್ . ಈ ಭಾರತೀಯ ಇತಿಹಾಸದಲ್ಲಿ ಈ ರೀತಿಯ ಮೊದಲ ಈ ಪ್ರದೇಶದಲ್ಲಿ ಕೈಗಾರಿಕೆಗಳ ಅಭಿವೃದ್ಧಿ ಮತ್ತೊಂದು ಪ್ರಮುಖ ವರ್ಧಕ, ಇದು ಡಿಪ್ಲೊಮಾ ಹಾಗೂ ವೃತ್ತಿಯಲ್ಲವೆಂದು ಅವಕಾಶಗಳ ಬಹಳಷ್ಟು ಸೃಷ್ಟಿಸಿದೆ ಈ ಪ್ರದೇಶದ ಎಂಜಿನಿಯರಿಂಗ್ ವಿದ್ಯಾರ್ಥಿಗಳು. ಹುಬ್ಬಳ್ಳಿ ಸಾಫ್ಟ್ವೇರ್ ಐಟಿ ಪಾರ್ಕ್ ನಗರದ ಹೃದಯ ಭಾಗದಲ್ಲಿದೆ ಮತ್ತು ಐಟಿ ಇಲಾಖೆ ಮತ್ತು ಕೆಒನಿಕ್ಸ ಅಡಿಯಲ್ಲಿ ಭಾರತದ ಪಾರ್ಕ್ .ಹುಬ್ಬಳ್ಳಿ STPI-ಹುಬ್ಬಳ್ಳಿ ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ಸ್ (ಸಂಸ್ಥೆ ನಿರ್ವಹಿಸುವುದು ಮತ್ತು ಅದರ ಮಾರಾಟ ಮಾದರಿ ಸಂಸ್ಥೆ ಕಾರ್ಯ ನಿರ್ವಹಿಸು ತ್ತದೆ ಕರ್ನಾಟಕ ಸರ್ಕಾರ ಬಡ್ತಿ ಇದೆ ಐಟಿ ಆಫ್ ಡಿಪಾರ್ಟ್ಮೆಂಟ್, ಭಾರತ ಸರ್ಕಾರದ) ಮೇ ೨೦೦೧ ರಿಂದ ಕಾರ್ಯಾರಂಭ ಮಾಡಿದೆ ಮತ್ತು ಐಟಿ / ಐಟಿಇಎಸ್ ಉದ್ಯಮಕ್ಕೆ ಮಾಹಿತಿ ಸಂವಹನ, ಕೈಗಾರಿಕೆ ಅಭಿವೃದ್ಧಿ ಮತ್ತು ಕಾವು ಕೊಡುವಿಕೆಯು ಸೇವೆಗಳನ್ನು ಒದಗಿಸುವ, ಐಟಿ ಪಾರ್ಕ್ ೪ ನೇ ಮಹಡಿ ಇದೆ . ಹುಬ್ಬಳ್ಳಿ-ಧಾರವಾಡ ಪುರಸಭ ಹುಬ್ಬಳ್ಳಿ-ಧಾರವಾಡ ಮುನಿಸಿಪಲ್ ಕಾರ್ಪೊರೇಷನ್ (ಹ್ ಡ್ಹಿ ಮ್ ಸೀ) ೨೦ ಕಿಲೋಮೀಟರ್ ದೂರ ಬೇರ್ಪಟ್ಟ ಎರಡು ನಗರಗಳು ಸಂಯೋಜಿಸುವ ಮೂಲಕ ೧೯೬೨ ರಲ್ಲಿ ರಚನೆಯಾಯಿತು. ನಿಗಮ ಆವರಿಸಿರುವ ಕ್ಷೇತ್ರವು ೧೮೧,೬೬ ಕಿ ² ಆಗಿದೆ. ೪೫ ಆದಾಯ ಹಳ್ಳಿಗಳ ಹಬ್ಬಿತು. ೧೯೯೧ ರ ಜನಗಣತಿಯ ಪ್ರಕಾರ ನಗರದ ಜನಸಂಖ್ಯೆ ೭ ಲಕ್ಷ ಮಾಡಲಾಯಿತು. ಪ್ರಸ್ತುತ ಜನಸಂಖ್ಯೆ ಸುಮಾರು ೧೨ ಲಕ್ಷ ಆಗಿದೆ. ಹುಬ್ಬಳ್ಳಿ: ೧೮೫೦ ಭಾರತದ ಆಕ್ಟ್ ಸರ್ಕಾರದ ಅಡಿಯಲ್ಲಿ, ಹುಬ್ಬಳ್ಳಿ-ಮುನ್ಸಿಪಲ್ ಕೌನ್ಸಿಲ್ ಆಗಸ್ಟ್ ೧೫, ೧೮೫೫ ರಂದು ಸ್ಥಾಪಿಸಲಾಯಿತು. ಧಾರವಾಡ: ಧಾರವಾಡ ಮುನ್ಸಿಪಲ್ ಕೌನ್ಸಿಲ್ ಪ್ರಥಮ ಜನವರಿ ೧, ೧೮೫೬ ರಂದು ಅಸ್ತಿತ್ವಕ್ಕೆ ಬಂದಿತು. ಕೌನ್ಸಿಲ್ ಮೊದಲ ಅಲ್ಲದ ಅಧಿಕೃತ ಅಧ್ಯಕ್ಷ ಸುರೇಶ್ ಮಾಡಲಾಯಿತು. ೧೯೦೭ ರಲ್ಲಿ ರೊದ್ದ ಮತ್ತು ಶ್ರೀ ಎಸ್.ವಿ. ಮೆನಶಿನ್ಕೈ, ಮುಂದಿನ ವರ್ಷ ನಾಮಕರಣಗೊಂಡಿತು. ಆದರೆ ಮೊದಲ ಚುನಾಯಿತ ಅಧ್ಯಕ್ಷ ಎಂಬ ಕ್ರೆಡಿಟ್ ೧೯೨೦ ರಲ್ಲಿ ಅಧಿಕಾರ ವಹಿಸಿಕೊಂಡ ಶ್ರೀ ಯ್ಯೆ.ಸ್. ಕರದಿಗುದರಿ ಅದರು. ಹುಬ್ಬಳ್ಳಿ ಹಾಗೂ ವಾಣಿಜ್ಯ ಹಾಗೆಯೇ ಧಾರವಾಡ ಕಲಿಕೆಯ ಸ್ಥಾನವನ್ನು ಅಲ್ಲಿ ಕೈಗಾರಿಕೆ ಕೇಂದ್ರ, ಎಂದು. ಜನಪ್ರಿಯವಾಗಿ ಇದು ರಾಜ್ಯ ಸರ್ಕಾರದ ಎರಡು ನಗರಗಳ ಸಂಯೋಜಿಸಲ್ಪಟ್ಟಿತು ಈ ವೈವಿಧ್ಯತೆ ಮತ್ತು ಭೌಗೋಳಿಕ ಸ್ಥಾನಗಳು ಎಂದು ನಂಬಿದ್ದರು. ಅವಳಿ-ನಗರದ ನಿಗಮದ ಕರ್ನಾಟಕ ರಾಜ್ಯ ವಿಶೇಷ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತದೆ. ಬೆಂಗಳೂರು ರಾಜಧಾನಿ ನಂತರ, ಈ ರಾಜ್ಯ ಅತಿ ದೊಡ್ಡ ನಗರ ಕಾರ್ಪೊರೇಷನ್. ವಾಣಿಜ್ಯ ನಗರದ ಮಲೆನಾಡು ಮತ್ತು ಡೆಕ್ಕನ್ ಪ್ರಸ್ಥಭೂಮಿಯ ನಡುವೆ ವಿಭಜಿತ ಸಾಲಿನಲ್ಲಿ ಇದೆ. ಮಲೆನಾಡು ಇದರ ಕಾಡುಗಳು ಮತ್ತು ಅರಣ್ಯ ಆಧಾರಿತ ಉದ್ಯಮಗಳು ಹೆಸರಾಗಿದೆ ಮತ್ತು ಇತರ ಮೂರು ಕಡೆ ಪ್ರದೇಶದಲ್ಲಿ ಹತ್ತಿ, ಶೇಂಗಾ, ಎಣ್ಣೆಬೀಜಗಳು ಮ್ಯಾಂಗನೀಸ್ ಅದಿರು ಮತ್ತು ಗ್ರಾನೈಟ್ ಕಲ್ಲುಗಳು ರೀತಿಯಲ್ಲಿ ತಮ್ಮ ಕೃಷಿ ಉತ್ಪನ್ನಗಳ ಕರೆಯಲಾಗುತ್ತದೆ. ಹುಬ್ಬಳ್ಳಿ ಹತ್ತಿ ಮಾರುಕಟ್ಟೆ ಭಾರತದ ಅತ್ಯಂತ ದೊಡ್ಡ ನಡುವೆ ಒಂದು. ಸಾರಿಗೆ ಹುಬ್ಬಳ್ಳಿ ರಸ್ತೆ, ರೈಲು ಮತ್ತು ವಾಯು ಸಂಪರ್ಕ ಸಾಧಿಸಿದೆ. ಉತ್ತರ ವೆಸ್ಟ್ ಕರ್ನಾಟಕ ರಸ್ತೆ ಸಾರಿಗೆ ಕಾರ್ಪೋರೇಷನ್) ಗೋಕುಲ್ ರಸ್ತೆ, ಹುಬ್ಬಳ್ಳಿ ನಲ್ಲಿ ಪ್ರಮುಖ ಆಫೀಸ್ ರಾಜ್ಯ ರನ್ ನಿಗಮವಾಗಿದೆ. ಉತ್ತರ ವೆಸ್ಟ್ ಕರ್ನಾಟಕ ರಸ್ತೆ ಸಾರಿಗೆ ಕಾರ್ಪೋರೇಷನ್ ಮತ್ತು ಬೆಂದ್ರೆ ನಗರ ಸಾರಿಗೆ(ಖಾಸಗಿ ಬಸ್-ಮಾಲೀಕರ ಒಕ್ಕೂಟವು) ಎಂದು ಹುಬ್ಬಳ್ಳಿ ಮತ್ತು ಧಾರವಾಡ ನಡುವಿನ ಅತ್ಯುತ್ತಮ ನಗರಗಳ ನಡುವೆ ಸಾರಿಗೆ ಆರೋಗ್ಯಕರ [ಸಾಕ್ಷ್ಯಾಧಾರ ಬೇಕಾಗಿದೆ] ಹುಬ್ಬಳ್ಳಿ ಮತ್ತು ಧಾರವಾಡ ದೈನಂದಿನ ನಡುವೆ ಪ್ರಯಾಣಿಕರು ದೊಡ್ಡ ಸಂಖ್ಯೆಯ ಒದಗಿಸಲು ಪೈಪೋಟಿ ಇದೆ. ಅವಳಿ-ನಗರಗಳಲ್ಲಿ ಬಸ್ ಸೇವೆಗಳು ಕರ್ನಾಟಕ ಮತ್ತು ನೆರೆಯ ರಾಜ್ಯಗಳು ಮತ್ತು ಇತರೆ ಜನಪ್ರಿಯ ತಾಣಗಳಲ್ಲಿ ಪ್ರತಿ ಭಾಗ ಅಸ್ತಿತ್ವದಲ್ಲಿವೆ. ಹುಬ್ಬಳ್ಳಿ ಮತ್ತು ಬೆಂಗಳೂರು, ಮಂಗಳೂರು, ಪುಣೆ, ಮುಂಬಯಿ, ಹೈದರಾಬಾದ್ ನಡುವೆ ರಾತ್ರಿ ಪ್ರಯಾಣ ಸೇವೆಗಳನ್ನು ನಿರೂಪಿಸಲು ಅನೇಕ ಖಾಸಗಿ ಬಸ್ ನಿರ್ವಾಹಕರು. ಹುಬ್ಬಳ್ಳಿ ಮತ್ತು ಬೆಂಗಳೂರು ದೈನಂದಿನ ನಡುವೆ ಸಂಚರಿಸುತ್ತವೆ. ಹಲವಾರು ಎಕ್ಸ್ಪ್ರೆಸ್ ಹಾಗೂ ಪ್ರಯಾಣಿಕರ ರೈಲುಗಳು. ಪ್ರಮುಖ ರೈಲ್ವೆ ಜಂಕ್ಷನ್ ಎಂದು ಹುಬ್ಬಳ್ಳಿ ಚೆನೈ, ಹೌರಾ ಮತ್ತು ತಿರುವನಂತಪುರಮ್ ಗೆ ಗದಗ್ , ಬಾಗಲಕೋಟೆ, ಬಿಜಾಪುರ, ಸೋಲಾಪುರ್, ಬಳ್ಳಾರಿ, ಬೆಳಗಾವಿ, ಬೆಂಗಳೂರು, ಮುಂಬಯಿ, ಪುಣೆ, ದೆಹಲಿ, ಹೈದರಾಬಾದ್, ಅಹಮದಾಬಾದ್, ವಿಜಯವಾಡ, ಮೈಸೂರು, ತಿರುಪತಿ ಮತ್ತು ಸಾಪ್ತಾಹಿಕ ಸೇವೆಗಳು ಪ್ರತಿದಿನ ರೈಲುಗಳು ಹೊಂದಿದೆ. ಕಿಂಗ್ಫಿಶರ್ ಏರ್ಲೈನ್ಸ್ ಬೆಂಗಳೂರು, ಹೈದರಾಬಾದ್ ಮತ್ತು ಮುಂಬಯಿ ಪ್ರತಿದಿನ ವಿಮಾನಗಳು ಒದಗಿಸುತ್ತದೆ. ಪ್ರವಾಸೋದ್ಯಮ ಚಂದ್ರಮೌಳೇಶ್ವರ ದೇವಸ್ಥಾನ, ಹುಬ್ಬಳ್ಳಿ, ಉತ್ತರ ಕರ್ನಾಟಕ ಚಂದ್ರಮೌಳೇಶ್ವರ ದೇವಾಲಯ: ಅತ್ಯಾಕರ್ಷಕ ವಾಸ್ತುಶಿಲ್ಪ ದೇವರನ್ನು ಚಂದ್ರಮೌಳೇಶ್ವರ (ಶಿವ ಮತ್ತೊಂದು ಹೆಸರು) ಮೀಸಲಾಗಿರುವ ಚಾಲುಕ್ಯ ಬಾರಿ ಒಂದು ದೇವಸ್ಥಾನ, ಹುಬ್ಬಳ್ಳಿ ಕಾಣಬಹುದು. ಭವಾನಿಶಂಕರ್ ದೇವಾಲಯ: ಶ್ರೀ ನಾರಾಯಣ ಚಿತ್ರಣವನ್ನು ಈ ಚಾಲುಕ್ಯ ದೇವಸ್ಥಾನ ವಿಷ್ಣುವಿನ ಹತ್ತು ಅವತಾರಗಳಲ್ಲಿ ಸುತ್ತುವರೆಯಲ್ಪಟ್ಟು ಆಗಿದೆ. ಅಸರ್ : ಇದು ನ್ಯಾಯದ ಹಾಲ್ ಸೇವೆ ಸುಮಾರು ೧೬೪೬ ರಲ್ಲಿ ಮೊಹಮ್ಮದ್ ಅಲಿ ಶಾ ನಿರ್ಮಿಸಿದ. ಕಟ್ಟಡ ಬಹುಶಃ ಪ್ರವಾದಿ ತಂದೆಯ ಗಡ್ಡ ರಿಂದ ಗೃಹ ಎರಡು ಪವಿತ್ರ ಕೂದಲಿನ ಬಳಸಲಾಗುತ್ತದೆ. ಪ್ರತಿ ವರ್ಷ ಈದ್ದ್ ಮಿಲಾದ್ ಅನ್ ನಬಿ ಹಬ್ಬವನ್ನು ಹುಬ್ಬಳ್ಳಿ ಸುನ್ನಿ ಮುಸ್ಲಿಮರು ಆಚರಿಸುತ್ತಾರೆ ನೃಪತುಂಗ ಬೆಟ್ಟ :ಈ ರಸ್ತೆ ಈ ಬೆಟ್ಟದ ತುದಿಯನ್ನು ತಲುಪಲು ಕಟ್ಟಲಾಯಿತು ನಂತರ ೧೯೭೪ ರಿಂದ ನಗರದ ಪಿಕ್ನಿಕ್ ತಾಣವಾಗಿದೆ. ಇದು ನವೀಕರಿಸಿ ಸಾರ್ವಜನಿಕ ಮನರಂಜನಾ ಉದ್ಯಾನ ಒಳಗೆ ಮಾಡಲಾಗಿದೆ. ಪ್ರದೇಶದಲ್ಲಿ ಜನರು ಬೆಳಿಗ್ಗೆ ವಾಕಿಂಗ್ ಗೆ ಬೆಟ್ಟದ ಬಳಸಿ. ಸೈಯದ್ ಫತೇಹ್ ಷಾ ವಾಲಿ: ಮಹಾನ್ ಸೂಫಿ ಸಂಗೀತ ಆಫ್ ಶ್ರೈನ್, ಹಿಂದೂ ಮತ್ತು ಹುಬ್ಬಳ್ಳಿ ಧಾರವಾಡ ಮುಸ್ಲಿಮರು ಎರಡೂ ಪೂಜಾ ಸ್ಥಳ. ಶ್ರೀ ಪಿ ಅಬ್ದುಲ್ ಗಣಿ ಪ್ರಖ್ಯಾತ ನಾಗರಿಕ ಗುತ್ತಿಗೆದಾರ ಮತ್ತು ಸಾಮಾಜಿಕ ಕಾರ್ಯಕರ್ತ ಸೈಯದ್ ಫತೇಹ್ ಷಾ ವಾಲಿ ದರ್ಗಾ ಮತ್ತು ಮಸೀದಿಯ ಆವರಣದಲ್ಲಿ ಸುಧಾರಿಸಲು ೧೯೭೫ ರಲ್ಲಿ ನಿರ್ವಹಣಾ ಸಮಿತಿ ರಚಿಸಿದರು. ಅವರು ನಿರ್ಮಾಣ ಬಹಳಷ್ಟು ಮಾಡಲಿಲ್ಲ ಮತ್ತು ನಿರ್ವಹಣೆಗಾಗಿ ಆದಾಯ ಮೂಲ ಸೃಷ್ಟಿಸಿತು. ಅವರು ದರ್ಗಾ ಪ್ರಮೇಯಗಳಲ್ಲಿ ಹುಡುಗಿಯರಿಗೆ ಒಂದು ಪ್ರಾಥಮಿಕ ಶಾಲೆ ಮತ್ತು ಒಂದು ಪ್ರೌಢಶಾಲಾ ತೆರೆಯಿತು. ಶ್ರೀ ಸಿದ್ಧಾರೋಧ ಮಠ:ಇದು ಶ್ರೇಷ್ಠ ಧಾರ್ಮಿಕ ಸಂಸ್ಥೆ ಎಂದು ಸಂತ ಸಿದ್ಧಾರೋಧ ಮೂಲಕ ಬೋಧಿಸುವ ಅದ್ವೈತ ತತ್ವಶಾಸ್ತ್ರದ ಕೇಂದ್ರವಾಗಿದೆ. ಸಿದ್ಧಾರೋಧ ಮ್ಯಾಥ್ ಹಳೆಯ ಹುಬ್ಬಳ್ಳಿ. ಇದು ನಗರದ ಹೊರವಲಯದಲ್ಲಿ ಇದೆ. ಸಂತ ಸಿದ್ಧಾರೋಧ ಆಫ್ ಭಕ್ತರು ದೊಡ್ಡ ಸಂಖ್ಯೆಯ ಮಹಾ ಶಿವರಾತ್ರಿ ರಂದು ನಡೆದ ವಾರ್ಷಿಕ ಕಾರು ಹಬ್ಬದ ಮಠ ಕೇಂದ್ರದಲ್ಲಿ ಒಂದುಗೂಡುತ್ತಾರೆ. ಉಣಕಲ್ ಲೇಕ್: ಒಂದು ಭವ್ಯವಾದ ಸೂರ್ಯಾಸ್ತದ ದೃಷ್ಟಿಯಿಂದ ಒಂದು ಸಚಿತ್ರ ನೀರಿನ ಸ್ಪಾಟ್, ನಿಖರವಾದ ಪಿಕ್ನಿಕ್ ಸರೋವರದ ದೂರ ಹುಬ್ಬಳ್ಳಿ ರಿಂದ ೩ ಕಿಮೀ ಹಸಿರು ತೋಟದ ಮಕ್ಕಳಿಗೆ ಮನರಂಜನಾ ಸೌಲಭ್ಯಗಳು, ಬೋಟಿಂಗ್ ಸೌಲಭ್ಯಗಳು, ಇತ್ಯಾದಿ ಹೊಂದಿದೆ. ಇಂದಿರಾ ಗಾಂಧಿ ಗ್ಲಾಸ್ ಹೌಸ್ ಗಾರ್ಡನ್:ಈ ನಗರದ ಪುರಸಭೆ ನಿರ್ವಹಿಸುತ್ತದೆ ಮನರಂಜನಾ ಸೌಕರ್ಯಗಳನ್ನು ಒಂದು ಸಾರ್ವಜನಿಕ ಗಾರ್ಡನ್ ಆಗಿದೆ. ಇದು ಬೆಂಗಳೂರು ಲಾಲ್ಬಾಗ್ ಇದೇ ರೀತಿಯ ರಚನೆಯನ್ನು ಹೋಲುವ ದೊಡ್ಡ ಗಾಜಿನ ಕಟ್ಟಡದ ಮನೆ. ಬನಶಂಕರಿ ದೇವಸ್ಥಾನ ಅಮರಗೋಳ ಹುಬ್ಬಳ್ಳಿ ಮತ್ತು ಧಾರವಾಡ ನಡುವೆ, ಸಂರಕ್ಷಣೆ ಮತ್ತು ಪುನಃಸ್ಥಾಪನೆ ಪ್ರಗತಿಯಲ್ಲಿದೆ. ನುಗ್ಗಿಕೇರಿ ದೂರ ಧಾರವಾಡ ೫ ಕಿಮೀ ಸಮೀಪವಿರುವ ದೇವಸ್ಥಾನದ ಪ್ರಸ್ತುತ ನಾನು ಬಳಿಯಿರುವ ಒಂದು ಸರೋವರವು ಹನುಮಾನ್ ಒಂದು ದೇವಸ್ಥಾನ ಹುಬ್ಬಳ್ಳಿಯ ಇತಿಹಾಸವು ರಾಷ್ಟ್ರಕೂಟರ ಕಾಲದಷ್ಟು ಹಿಂದಿನದೆಂದು ಹೇಳಬಹುದು. ಈಗ ಹುಬ್ಬಳ್ಳಿಯೆಂದು ಕರೆಯಲ್ಪಡುವ ಪ್ರದೇಶದಲ್ಲಿ ಸುಮಾರು ಕ್ರಿ.ಶ ೮೦೦ ರ ಸಮಯದಲ್ಲಿ ಜನವಸತಿ ಇದ್ದದ್ದು ಇಲ್ಲಿ ಸಿಕ್ಕಿರುವ ಎರಡು ಶಾಸನಗಳಿಂದ ತಿಳಿದು ಬರುತ್ತದೆ. ಈ ಶಾಸನಗಳಲ್ಲಿ ರಾಷ್ಟ್ರಕೂಟ ದೊರೆಗಳಾದ ಮೂರನೆಯ ಇಂದ್ರ (ಕ್ರಿ.ಶ ೯೧೫ - ೯೨೮) ಮತ್ತು ಆಮೋಘವರ್ಷ ಕರ್ಕ(ಕ್ರಿ.ಶ ೯೭೩)ರ ಉಲ್ಲೇಖವಿದೆ. ಇಲ್ಲಿನ ಭವಾನಿಶಂಕರ ಆಲಯವು ಚಾಲುಕ್ಯ ವಾಸ್ತುಶಿಲ್ಪ ಶೈಲಿಯಲ್ಲಿದೆ. ಈ ಆಲಯದಲ್ಲಿ ಸಿಕ್ಕಿರುವ ಶಾಸನದಲ್ಲಿ ಚಾಲುಕ್ಯ ದೊರೆ ಎರಡನೇ ಸೋಮೇಶ್ವರನ(ಕ್ರಿ.ಶ.೧೦೬೮ - ೧೦೭೮) ಉಲ್ಲೇಖವಿದೆ. ಹುಬ್ಬಳ್ಳಿಯ ಸುತ್ತಮುತ್ತಲಿನ ಪುರಾತನ ಜಿನಾಲಯಗಳಲ್ಲಿ ಅನಂತನಾಥ ತೀರ್ಥಂಕರ, ಬ್ರಹ್ಮದೇವ, ಪದ್ಮಾವತಿಯರ ಮೂರ್ತಿಗಳಿವೆ. ಇಲ್ಲಿನ "ಪ್ಯಾಟಿ ಬಾವಿ" ಎಂದು ಕರೆಯಲ್ಪಡುವ ಬಾವಿಯ ಸುತ್ತಮುತ್ತ ಪುರಾತನ ಚಾಲುಕ್ಯ ಆಲಯವೊಂದರ ಅವಶೇಷಗಳಿವೆ. ಈ ಅವಶೇಷಗಳಲ್ಲಿ ಸಿಕ್ಕಿರುವ ಉಲ್ಲೇಖದಿಂದ ಈ ಆಲಯವು ಚಾಲುಕ್ಯ ಚಕ್ರವರ್ತಿ ವಿಕ್ರಮಾದಿತ್ಯನ ಕಾಲದ್ದೆಂದು ತಿಳಿಯುತ್ತದೆ. ಚಾಲುಕ್ಯರ ನಂತರ ಹೊಯ್ಸಳ ರಾಜವಂಶದ ಎರಡನೇ ವೀರಬಲ್ಲಾಳನು ಉತ್ತರ ಕರ್ನಾಟಕವನ್ನು ಜಯಿಸಿದಾಗ ಹುಬ್ಬಳ್ಳಿಯು ಆತನ ಅಧೀನಕ್ಕೆ ಒಳಪಟ್ಟಿತು. ನಂತರ ವಿಜಯನಗರ ಸಾಮ್ರಜ್ಯದ ಕಾಲದಲ್ಲಿ ಹುಬ್ಬಳ್ಳಿ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಪ್ರಸಿದ್ಧಿ ಪಡೆಯಿತು. ಹುಬ್ಬಳ್ಳಿಯಿಂದ ಆರು ಕಿ.ಮೀ ದೂರದ ಸಿರಗುಪ್ಪಿಯೆಂಬ ಹಳ್ಳಿಯಲ್ಲಿ ದೊರೆತಿರುವ ಶಾಸನವೊಂದು ವಿಜಯನಗರ ಸಾಮ್ರಜ್ಯದ ಹೆಸರಾಂತ ಚಕ್ರವರ್ತಿ ಶ್ರೀಕೃಷ್ಣದೇವರಾಯನನ್ನು ಉಲ್ಲೇಖಿಸುತ್ತದೆ. ಈಗಲೂ ಕೆಲವೊಮ್ಮೆ ಹುಬ್ಬಳ್ಳಿಯನ್ನು "ರಾಯರ ಹುಬ್ಬಳ್ಳಿ" ಎಂದು ಜನರು ಕರೆಯುತ್ತಾರೆ. ವಿಜಯನಗರ ಸಾಮ್ರಾಜ್ಯದೊಂದಿಗೆ ವಾಣಿಜ್ಯ ವ್ಯವಹಾರಗಳನ್ನು ಹೊಂದಿದ್ದ ಪೊರ್ಚುಗೀಸ್ ವ್ಯಾಪಾರಿಗಳು ಮತ್ತು ಪ್ರವಾಸಿಗರು ತಮ್ಮ ಕ್ರಿ.ಶ ೧೫೪೭ ರಲ್ಲಿ ಬರೆಯಲ್ಪಟ್ಟ ದಾಖಲೆಗಳಲ್ಲಿ ಹುಬ್ಬಳ್ಳಿಯನ್ನು "ಒಬೇಲಿ" ಎಂದು ಕರೆದಿದ್ದಾರೆ. ವಿಜಯನಗರ ಸಾಮ್ರಾಜ್ಯದ ಪತನಾನಂತರ ಹುಬ್ಬಳ್ಳಿಯು ಬಿಜಾಪುರದ ಆದಿಲ್ ಷಾಹಿ ದೊರೆಗಳ ವಶಕ್ಕೆ ಬಂದಿತು. ಹದಿನೇಳನೆಯ ಶತಮಾನದಲ್ಲಿ ಇಲ್ಲಿನ ವಾಣಿಜ್ಯ ವಹಿವಾಟು ಇನ್ನೂ ಬೆಳೆದು ಸಾಕಷ್ಟು ಪ್ರಸಿದ್ಧಿಯನ್ನು ಪಡೆಯಿತು. ಬಹಳಷ್ಟು ಶ್ರೀಮಂತ ವ್ಯಾಪಾರಿಗಳಿಂದ ತುಂಬಿತ್ತು. ಇದರಿಂದ ಆಕರ್ಷಿತರಾದ ಬ್ರಿಟಿಷರು ಇಲ್ಲೊಂದು ಜವಳಿ ಕಾರ್ಖಾನೆಯನ್ನು ತೆರೆದರು. ಈ ಸಮಯದಲ್ಲಿ ಹುಬ್ಬಳ್ಳಿಯ ಸಮೃದ್ಧಿ ಎಷ್ಟಿತ್ತೆಂದರೆ ಮಹಾರಾಷ್ಟ್ರದಿಂದ ಛತ್ರಪತಿ ಶಿವಾಜಿ ಮಹಾರಾಜರು ಕ್ರಿ.ಶ ೧೬೭೧ ದಲ್ಲಿ ಹುಬ್ಬಳ್ಳಿಯ ಮೇಲೆ ದಂಡೆತ್ತಿ ಬಂದು ಊರನ್ನು ಕೊಳ್ಳೆಹೊಡೆದನು. ಕ್ರಿ.ಶ ೧೬೭೫ ರಲ್ಲಿ ದಿಲ್ಲಿ ಸುಲ್ತಾನ್ ಔರಂಗಜೇಬನು ಹುಬ್ಬಳ್ಳಿಯನ್ನು ತನ್ನ ವಶಕ್ಕೆ ತಂದು ಕೊಂಡನು. ನಂತರದ ಸ್ವಲ್ಪಕಾಲ ಹುಬ್ಬಳ್ಳಿಯು ಸವಣೂರಿನ ನವಾಬರ ಹಿಡಿತದಲ್ಲಿತ್ತು. ಕ್ರಿ.ಶ ೧೭೨೭ ರಲ್ಲಿ ಸವಣೂರು ನವಾಬರ ವಂಶಸ್ಥನಾದ ಅಬ್ದುಲ್ ಮಜೀದ್ ಖಾನ್ ಹಳೇ ಹುಬ್ಬಳ್ಳಿಯ ಪಕ್ಕದಲ್ಲಿ ಇನ್ನೊಂದು ಜನವಸತಿ ಪ್ರದೇಶವನ್ನು ಸ್ಥಾಪಿಸಿದನು. ಆತನ ನೆನಪಿಗಾಗಿ ಈಗಲೂ ಆ ಭಾಗವನ್ನು "ಮಜೀದ್ ಪುರ" ಎಂದು ಕರೆಯಲಾಗುತ್ತದೆ. ನಂತರ ಮಾಧವ ರಾವ್ ಪೇಶ್ವೆಯ ಕಾಲದಲ್ಲಿ ಹುಬ್ಬಳ್ಳಿಯು ಮರಾಠರ ವಶಕ್ಕೆ ಹೋಯಿತು. ಕ್ರಿ.ಶ ೧೮೧೮ ರಲ್ಲಿ ಆಗಿಹೋದ ಮೂರನೆಯ ಬ್ರಿಟಿಷ್-ಮರಾಠಾ ಯುದ್ಧ ದಲ್ಲಿ, ಬ್ರಿಟಿಷರು ಜನೆರಲ್ ಮನ್ರೋ ಎಂಬುವನ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲೇ ಕ್ಯಾಂಪ್ ಹಾಕಿದ್ದರು. ಆ ಸಮಯದಲ್ಲಿ ಕೆಲವು ನೂರು ಬ್ರಿಟಿಷ್ ಸೈನಿಕರು ಕಾಲರಾ ವ್ಯಾಧಿಯಿಂದ ಸತ್ತರು. ಆ ಸೈನಿಕರ ಸಮಾಧಿಗಳನ್ನು ಈಗಲೂ ಹುಬ್ಬಳ್ಳಿಯ ಅಹೋಬಲಪುರದಲ್ಲಿ ಕಾಣಬಹುದು. ಮೂರನೆಯ ಬ್ರಿಟಿಷ್-ಮರಾಠಾ ಯುಧ್ಧದಲ್ಲಿ ಮರಾಠರು ಸೋತ ಪರಿಣಾಮವಾಗಿ ಹುಬ್ಬಳ್ಳಿಯು ಬ್ರಿಟಿಷರ ವಶಕ್ಕೆ ಬಂದಿತು ಮತ್ತು ಬ್ರಿಟಿಷ್ ಇಂಡಿಯಾದ ಮುಂಬಯಿ ಪ್ರೆಸಿಡೆನ್ಸಿಯ ಭಾಗವಾಯಿತು. ಭಾರತದ ಸ್ವಾತಂತ್ರ್ಯಾನಂತರವೂ ಮುಂಬಯಿ ರಾಜ್ಯದ ಭಾಗವಾಗಿತ್ತು. ನಂತರ ೧೯೫೭ ರ ಕರ್ನಾಟಕ ಏಕೀಕರಣದ ಫಲವಾಗಿ ಕರ್ನಾಟಕ ರಾಜ್ಯದ ಭಾಗವಾಗಿ ಸೇರ್ಪಡೆಯಾಯಿತು. ಕೃಷಿ ಹುಬ್ಬಳ್ಳಿ-ಧಾರವಾಡ ನಗರಗಳು, ಕರ್ನಾಟಕದಲ್ಲಿ ಬೆಂಗಳೂರಿನ ನಂತರ ಎರಡನೇಯ ದೊಡ್ಡ ನಗರವಾಗಿದೆ. ಹುಬ್ಬಳ್ಳಿಯ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮೆಣಸಿನಕಾಯಿ (ಬ್ಯಾಡಗಿ), ಹತ್ತಿ ಮತ್ತು ಶೇಂಗಾ ಬೆಳೆಗಳು ವ್ಯಾಪಕವಾಗಿ ಬೆಳೆಯಲ್ಪಡುತ್ತವೆ. ಇವುಗಳಿಗೆ ಹುಬ್ಬಳ್ಳಿ ದೊಡ್ಡ ಮಾರುಕಟ್ಟೆಯಾಗಿದೆ. ಅಮರಗೋಳದ ಹತ್ತಿರವಿರುವ ಶ್ರೀ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆಯು ಭಾರತದಲ್ಲಿಯೆ ಅತಿ ದೊಡ್ಡ ಮಾರುಕಟ್ಟೆ ಪ್ರಾಂಗಣವನ್ನು ಹೊಂದಿದೆ. ರೈಲ್ವೆ ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೆ ವಲಯದ ಮುಖ್ಯ ಕಚೇರಿಯಿದೆ ಹಾಗೂ ಒಂದು ಶತಮಾನಕ್ಕೂ ಹಳೆಯದಾದ ರೈಲ್ವೆ ಕಾರ್ಯಾಗಾರವನ್ನು ಹೊಂದಿದೆ. ಅಮೇರಿಕದ ಜನರಲ್ ಮೋಟರ್ಸ್ ಕಂಪನಿಯಿಂದ ಆಮದು ಮಾಡಿಕೊಂಡಿರುವ ರೈಲ್ವೆ ಇಂಜಿನ್ನುಗಳ ನಿರ್ವಹಣೆ ಮತ್ತು ದುರಸ್ತಿಯ ಅತ್ಯಾಧುನಿಕ ಕಾರ್ಯಾಗಾರವನ್ನು ಸಹ ಹೊಂದಿದೆ. ಕೈಗಾರಿಕೆ ಹುಬ್ಬಳ್ಳಿಯು ಮುಖ್ಯವಾದ ಕೈಗಾರಿಕಾ ಕೇಂದ್ರವಾಗಿದೆ. ಕಿರ್ಲೋಸ್ಕರ ಎಲೆಕ್ಟ್ರಿಕ್ ಕಂಪನಿ, ಬಿಡಿಕೆ, ಕೆ ಎಮ್ ಎಫ್ ಮತ್ತು ಎನ್ ಜಿ ಈ ಎಫ್ ಇವುಗಳು ಇಲ್ಲಿರುವ ಕೆಲವು ಪ್ರಮುಖ ಉದ್ದಿಮೆಗಳಾಗಿವೆ. ತಾರಿಹಾಳ, ಗೋಕುಲ ರಸ್ತೆ ಮತ್ತು ರಾಯಾಪುರದಲ್ಲಿರುವ ಉದ್ದಿಮೆ ವಸಾಹತಿನಲ್ಲಿ ಸುಮಾರು ೧೦೦೦ಕ್ಕೂ ಹೆಚ್ಚು ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ದಿಮೆಗಳಿವೆ. ಜೂನ್ ೨೦೦೬ರಲ್ಲಿ ನಡೆದ ಐಟಿ ಮೇಳದ ಪರಿಣಾಮವಾಗಿ ಭಾರತದ ಕೆಲವು ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಕಂಪನಿಗಳಾದ ಟಿ. ಸಿ. ಎಸ್., ಇನ್ಫೋಸಿಸ್ ಮತ್ತು ಇನ್ನು ಅನೇಕರು ಹುಬ್ಬಳ್ಳಿ ಧಾರವಾಡದಲ್ಲಿ ತಮ್ಮ ಕಂಪನಿಯ ಶಾಖೆಗಳನ್ನು ತೆರೆಯುವ ಭರವಸೆ ನೀಡಿದ್ದಾರೆ. ಧಾರ್ಮಿಕ ಹುಬ್ಬಳ್ಳಿಯಲ್ಲಿ ಅನೇಕ ಮಠಗಳಿದ್ದು ಅವುಗಳಲ್ಲಿ ಮೂರುಸಾವಿರ ಮಠ, ಸಿದ್ಧಾರೂಢ ಮಠ ಕರ್ನಾಟಕದಾದ್ಯಂತ ಪ್ರಸಿದ್ಧವಾಗಿವೆ. ಹೊಸ ಹುಬ್ಬಳ್ಳಿಯ ಕಿಲ್ಲೆಯಲ್ಲಿರುವ ರಾಘವೇಂದ್ರ ಸ್ವಾಮಿಗಳ ಮಠ, ಜಗದ್ಗುರು ಶಂಕರಾಚಾರ್ಯರ ಮಠ, ಹಳೇ ಹುಬ್ಬಳ್ಳಿಯ ಶ್ರೀ ಕೃಷ್ಣೇಂದ್ರ ಸ್ವಾಮಿಗಳ ಮಠ ಮತ್ತು ಶ್ರೀ ಸತ್ಯಭೋಧ ಸ್ವಾಮಿಗಳ ಮಠಗಳು ಅನೇಕ ಭಕ್ತರನ್ನು ಆಕರ್ಷಿಸುತ್ತಿವೆ. ಹುಬ್ಬಳ್ಳಿಯಲ್ಲಿ ಕಳೆದ ಒಂದು ಶತಮಾನದಿಂದ ಸಾರ್ವಜನಿಕ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಪ್ರತಿ ವರ್ಷವೂ ಗಣೇಶನ ವಿವಿಧ ಭಂಗಿಯ ಮೂರ್ತಿಗಳನ್ನು ಸಾರ್ವಜನಿಕ ಮಂಡಳಿಗಳು ಪ್ರತಿಷ್ಟಾಪಿಸುತ್ತವೆ. ಈ ಗಣೇಶನ ವಿಗ್ರಹಗಳನ್ನು ವೀಕ್ಷಿಸಲು ಸುತ್ತಲಿನ ಊರುಗಳಿಂದ ಅನೇಕ ಜನರು ಬರುತ್ತಾರೆ. ಶೈಕ್ಷಣಿಕ ಹುಬ್ಬಳ್ಳಿ ನಗರದಲ್ಲಿ ಅನೇಕ ಹೆಸರಾಂತ ವಿದ್ಯಾಲಯ ಹಾಗೂ ಮಹಾವಿದ್ಯಾಲಯಗಳಿವೆ. ನಗರದಲ್ಲಿ ಎರಡು ಅಭಿಯಾಂತ್ರಿಕ ಮಹಾವಿದ್ಯಾಲಯಗಳು, ಒಂದು ವೈದ್ಯಕೀಯ ಮಹಾವಿದ್ಯಾಲಯ, ಆಯುರ್ವೇದ ಮಹಾವಿದ್ಯಾಲಯಗಳಿವೆ. ಬಿ.ವಿ.ಭೂಮರಡ್ಡಿ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯವು ಕರ್ನಾಟಕದಲ್ಲಿರುವ ಹಳೆಯ ಅಭಿಯಾಂತ್ರಿಕ ಮಹಾವಿದ್ಯಾಲಯಗಳಲ್ಲಿ ಒಂದು. ಇದನ್ನು ೧೯೪೭ರಲ್ಲಿ ಶ್ರೀ ಬಸಪ್ಪ ವೀರಪ್ಪ ಭೂಮರಡ್ಡಿಯವರ ದಾನದ ಸಹಾಯದಿಂದ ಸ್ಥಾಪಿಸಲಾಯಿತು. ಈ ವಿದ್ಯಾಲಯವು, ಶ್ರೀಮತಿ ಸುಧಾ ಮೂರ್ತಿ ಸೇರಿದಂತೆ, ಅನೇಕ ಪ್ರತಿಭಾವಂತ ಅಭಿಯಂತರರನ್ನು ತಯಾರು ಮಾಡಿ ದೇಶಕ್ಕೆ ಸಮರ್ಪಿಸಿದೆ. ಶ್ರೀ ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯವು ಕೂಡ ೧೯೪೭ರಲ್ಲಿ ಪ್ರಾರಂಭವಾಗಿದ್ದು, ವಾಣಿಜ್ಯ ಕ್ಷೇತ್ರದಲ್ಲಿ ಮುಂದುವರೆಯುವವರಿಗೆ ಒಳ್ಳೆಯ ಮಾರ್ಗದರ್ಶನ ಕೇಂದ್ರವಾಗಿದೆ. ಕರ್ನಾಟಕ ಸರಕಾರದ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಸಂಸ್ಥೆ ೪೦ ವರ್ಷಕ್ಕೂ ಹಳೆಯದಾದ ವೈದ್ಯಕೀಯ ವಿದ್ಯಾಲಯವಾಗಿದ್ದು, ಅನೇಕ ಪ್ರತಿಭಾವಂತ ವೈದ್ಯರು ಇಲ್ಲಿಂದ ವಿದ್ಯೆ ಪಡೆದು ರೋಗಿಗಳ ಶೂಶ್ರುಷೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಮತ್ತು ರಾಷ್ಟ್ರ ಮತ್ತು ಅಂತಾರಾಷ್ಟೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಹಳೇ ಹುಬ್ಬಳ್ಳಿಯಲ್ಲಿರುವ ನ್ಯೂ ಇಂಗ್ಲೀಷ ಶಾಲೆಯು ೨೦೦೮ರಲ್ಲಿ ತನ್ನ ಶತಮಾನೋತ್ಸವವನ್ನು ಆಚರಿಸಿಕೊಂಡಿತು. ಸರ್ಕಾರೇತರ ಸಂಸ್ಥೆ ಇಲ್ಲಿ ಅನೇಕ ಸರ್ಕಾರೇತರ ಸಂಸ್ಥೆಗಳಿದ್ದು ನಗರದ ದೇಶಪಾಂಡೆ ಫೌಂಡೇಶನ್ ಹಾಗೂ ದೇಶಪಾಂಡೆ ಶಿಕ್ಷಣ ಪ್ರತಿಷ್ಠಾನ ಇವರ ಅಡಿಯಲ್ಲಿ ದೇಶಪಾಂಡೆ ಫೆಲೋಶಿಪ್ ಪ್ರೋಗ್ರಾಂ ಸಹ ಅನೇಕ ನಿರುದ್ಯೋಗಿಗಳಿಗೆ ವಿವಿಧ ಕೌಶಲ್ಯ ತರಬೇತಿ ನೀಡಿ ಸಾಕಷ್ಟು ಉದ್ಯೋಗಾವಕಾಶ ಕಲ್ಪಿಸಿದೆ. ಪ್ರಮುಖ ವ್ಯಕ್ತಿಗಳು ಶಾಂತಾ ಹುಬ್ಳೀಕರ್ - ೧೯೩೦-೪೦ರ ದಶಕಗಳಲ್ಲಿ ಹಿಂದಿ ಮತ್ತು ಮರಾಠಿಯಲ್ಲಿ ಖ್ಯಾತರಾಗಿದ್ದ ನಟಿ ಮತ್ತು ಗಾಯಕಿ; ಹುಟ್ಟಿದ್ದು ಹುಬ್ಬಳ್ಳಿ ಬಳಿಯ ಅದರಗುಂಚಿಯಲ್ಲಿ. ಗಂಗೂಬಾಯಿ ಹಾನಗಲ್, ಹಿಂದೂಸ್ತಾನಿ ಶಾಸ್ತ್ರೀಯ ಗಾಯಕಿ ಮತ್ತು ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತರು ಭೀಮಸೇನ ಜೋಷಿ, ಹಿಂದುಸ್ತಾನಿ ಸಂಗೀತ ಪದ್ಧತಿಯ ಅತಿ ಪ್ರಸಿದ್ಧ ಗಾಯಕರಲ್ಲಿ ಒಬ್ಬರು ಹಾಗೂ ಭಾರತ ರತ್ನ ಪ್ರಶಸ್ತಿ ಪುರಸ್ಕೃತರು ಪ್ರಹ್ಲಾದ ಜೋಶಿ, ಕೇಂದ್ರ ಸಂಸದೀಯ ಸಚಿವ ಸಿದ್ದಪ್ಪ ಕಂಬಳಿ, ಕರ್ನಾಟಕ ಎಕಿಕರ್ಣ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ ರಾಜಕಾರಣಿ ಸುಧಾ ಮೂರ್ತಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಭಾರತೀಯ ಎಂಜಿನಿಯರಿಂಗ್ ಶಿಕ್ಷಕಿ ಹಾಗೂ ಇನ್ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷೆ ನಂದನ್ ನಿಲೇಕಣಿ, ಭಾರತೀಯ ಉದ್ಯಮಿ, ರಾಜಕಾರಣಿ ಖಾದ್ಯ ಧಾರವಾಡ ಪೇಡ ಹುಬ್ಬಳ್ಳಿ-ಧಾರವಾಡಗಳಲ್ಲಿ ಧಾರವಾಡ ಪೇಡವು ಪ್ರಸಿದ್ಧವಾದ ಸಿಹಿ ತಿಂಡಿಯಾಗಿದೆ. ಈ ಸಿಹಿಯು ದೇಶಾದ್ಯಂತ ಪ್ರಸಿದ್ಧವಾಗಿದೆ. ಹುಬ್ಬಳ್ಳಿಯಲ್ಲಿ ಈ ಸಿಹಿಯು ಉತ್ತಮ ದರ್ಜೆಯಲ್ಲಿ ಠಾಕೂರರ ಪೇಡ ಅಂಗಡಿಯಲ್ಲಿ ದೊರೆಯುತ್ತದೆ. ಬಾಹ್ಯ ಸಂಪರ್ಕ ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆ ಎಸ್ಟಿಪಿಐ-ಹುಬ್ಬಳ್ಳಿ ಧಾರವಾಡ ಜಿಲ್ಲೆ ಕರ್ನಾಟಕದ ಜಿಲ್ಲೆಗಳು ಕರ್ನಾಟಕದ ಪ್ರಮುಖ ಸ್ಥಳಗಳು
1846
https://kn.wikipedia.org/wiki/%E0%B2%86%E0%B2%97%E0%B3%8D%E0%B2%B0%E0%B2%BE%20%E0%B2%95%E0%B3%8B%E0%B2%9F%E0%B3%86
ಆಗ್ರಾ ಕೋಟೆ
ಆಗ್ರಾ ಕೋಟೆ ಭಾರತ ದೇಶದ ಆಗ್ರಾ ನಗರದಲ್ಲಿದೆ. ಈ ಕೋಟೆಗೆ 'ಲಾಲ್ ಖಿಲಾ' ಎಂದೂ ಕೂಡ ಕರೆಯುತ್ತಾರೆ. ಇದು ತಾಜ್ ಮಹಲ್ ನಿಂದ ಸುಮಾರು ೨.೫ ಕಿ.ಮೀ ದೂರದಲ್ಲಿದೆ. ಈ ಕೋಟೆಯನ್ನು ಅರಮನೆಗಳ ನಗರವೆಂದೇ ಕರೆಯುವುದುಂಟು. ಛಾಯಾಂಕಣ ಮಾಹಿತಿಗೆ 2004ರಲ್ಲಿ ಆಗ್ರಾ ಕೋಟೆಯು ತನ್ನ ವಾಸ್ತುಶಿಲ್ಪಕ್ಕಾಗಿ ಅಗಾ ಖಾನ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದರ ಸ್ಮರಣಾರ್ಥ ಭಾರತದ ಕೇಂದ್ರ ಸರ್ಕಾರವು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು. ಸರ್ ಆರ್ಥರ್ ಕಾನನ್ ಡಾಯ್ಲ್ ಅವರ ಷರ್ಲಾಕ್ ಹೋಮ್ಸ್ - ಮಿಸ್ಟರಿ ದಿ ಸೈನ್ ಆಫ್ ದಿ ಫೋರ್ ನಲ್ಲಿ ಆಗ್ರಾ ಕೋಟೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈಜಿಪ್ಟಿನ ಪಾಪ್ ತಾರೆ ಹಿಶಾಮ್ ಅಬ್ಬಾಸ್ ಅವರ ಹಿಟ್ ಹಾಡು ಹಬೀಬಿ ದಾಹ್ ನ ಮ್ಯೂಸಿಕಲ್ಆ ವೀಡಿಯೋದಲ್ಲಿ ಆಗ್ರಾ ಕೋಟೆಯನ್ನು ತೋರಿಸಲಾಗಿದೆ. ದಿವಾನ್-ಇ-ಖಾಸ್‌ನಲ್ಲಿ ಔರಂಗಜೇಬನನ್ನು ಭೇಟಿಯಾಗಲು ಜೈ ಸಿಂಗ್ I ನೊಂದಿಗೆ ಮಾಡಿಕೊಂಡ "ಪುರಂದರ ಒಪ್ಪಂದ (1665)" ಪ್ರಕಾರ ಶಿವಾಜಿ 1666 ರಲ್ಲಿ ಆಗ್ರಾಕ್ಕೆ ಬಂದಿದ್ದರು. ಇದನ್ನೂ ಓದಿ ತಾಜ್ ಮಹಲ್ ಇತಿಹಾಸ ಐತಿಹಾಸಿಕ ಸ್ಮಾರಕಗಳು ca:Fort d'Agra cs:Pevnost Ágra da:Agra Fort de:Rotes Fort (Agra) dv:އާގްރާ ފޯރޓް en:Agra Fort eo:Fortikaĵo Agra es:Fuerte de Agra eu:Agrako gotorlekua fa:قلعه آگره fi:Agran linnoitus fr:Fort rouge d'Āgrā gu:આગ્રાનો કિલ્લો he:מצודת אגרה hi:आगरा का किला hr:Utvrda Agra hu:Vörös Erőd (Agra) id:Benteng Agra it:Forte rosso di Agra ja:アーグラ城塞 ka:აგრას ციხე ko:아그라 성 lt:Agros fortas ml:ആഗ്ര കോട്ട mn:Агра бэхлэлт mr:आग्‍ऱ्याचा किल्ला ms:Kubu Agra nl:Fort van Agra no:Agra Fort pa:ਆਗਰਾ ਦਾ ਕਿਲਾ pl:Czerwony Fort (Agra) pnb:قلعہ آگرہ pt:Forte de Agra ru:Красный форт (Агра) sa:आग्रादुर्गम् sa:रक्तदुर्गम् (आग्रा) sh:Utvrda Agra sk:Ágrá ká kilá sr:Тврђава у Агри sv:Röda fortet i Agra ta:ஆக்ரா கோட்டை te:ఆగ్రా కోట uk:Червоний форт (Аґра) ur:قلعہ آگرہ vi:Pháo đài Agra xmf:აგრაშ ჯიხა zh:阿格拉堡
1849
https://kn.wikipedia.org/wiki/%E0%B2%9B%E0%B2%A4%E0%B3%8D%E0%B2%B0%E0%B2%AA%E0%B2%A4%E0%B2%BF%20%E0%B2%B6%E0%B2%BF%E0%B2%B5%E0%B2%BE%E0%B2%9C%E0%B2%BF
ಛತ್ರಪತಿ ಶಿವಾಜಿ
ಛತ್ರಪತಿ ಶಿವಾಜಿ ಮಹಾರಾಜ ಅಥವಾ ಶಿವಾಜಿರಾಜೆ ಶಹಾಜಿರಾಜೆ ಭೋಂಸ್ಲೆ (ಫೆಬ್ರುವರಿ ೧೯, ೧೬೩೦/ಫೆಬ್ರುವರಿ ೧೯, ೧೬೨೭ - ಏಪ್ರಿಲ್ ೩, ೧೬೮೦) ಹಿಂದೂ ಸ್ವರಾಜ್ಯದ ಸ್ಥಾಪಕರು.ಇವರು ೧೬೩೦ರಲ್ಲಿ ಮಹಾರಾಷ್ಟ್ರ ರಾಜ್ಯದ ಪುಣೆಯ ಹತ್ತಿರವಿರುವ ಶಿವನೇರಿಎಂಬಲ್ಲಿ ಜನಿಸಿದರು.ಇವರು ೧೬೭೪ ರಲ್ಲಿ ಸ್ಥಾಪಿಸಿದ ಮರಾಠಾ ರಾಜ್ಯವು ೧೮೧೮ರ ವರೆಗೂ ರಾರಾಜಿಸಿತು. ಸ್ವಾಭಿಮಾನಿ ರಾಷ್ಟ್ರನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರು ಹಿಂದೂಸ್ಥಾನವನ್ನು ಒಗ್ಗೂಡಿಸಲು ಬಹುವಾಗಿ ಶ್ರಮಿಸಿದರು.ಕೊಂಕಣ ಭಾಗದಲ್ಲಿದ್ದ ಅನೇಕ ಕೋಟೆಗಳನ್ನು ಗೆದ್ದು ಕ್ರಮೇಣ ಇಡೀ ಪಶ್ಚಿಮಭಾರತವನ್ನು ತಮ್ಮ ಆಳ್ವಿಕೆಗೆ ತಂದರು.ಶಿವಾಜಿಯ ಶೌರ್ಯ, ಸಾಹಸ ರಾಷ್ಟ್ರಭಕ್ತ ಆಡಳಿತಗಾರರಿಗೆ ಎಂದೆಂದಿಗೂ ಪ್ರೇರಣಾದಾಯಿ. ಛತ್ರಪತಿ ಶಿವಾಜಿ ಮಹಾರಾಜರ ಹೆಸರು ಭಾರತದ ಚರಿತ್ರೆಯಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವಂತದ್ದು. ಮಹಾರಾಷ್ಟ್ರದ ಅಸ್ಮಿತೆ ಶಿವಾಜಿ ಭೋಂಸ್ಲೆ ಅವರ ಕುಟುಂಬದ ತಾಯಿಬೇರು ಕನ್ನಡನಾಡಿನಲ್ಲಿದೆ.ಕರ್ನಾಟಕಕ್ಕೂ ಮರಾಠರಿಗೂ ರಾಜಕೀಯ ಒಡನಾಟ ಆರಂಭವಾಗಿದ್ದು ೧೭ನೇ ಶತಮಾನದ ಮೊದಲರ್ಧದಲ್ಲಿ.ರಾಜ್ಯ ವಿಸ್ತರಣೆಯಲ್ಲಿ ಮೊಗಲರಿಗೂ ವಿಜಾಪುರದ ಆದಿಲ್ ಶಾಹಿಗಳಿಗೂ ಕರಾರು ಏರ್ಪಟ್ಟು(೧೬೩೬) ಕರ್ನಾಟಕದ ದಕ್ಷಿಣ ಭಾಗ ಹಾಗೂ ತಮಿಳುನಾಡಿನ ಕೆಲವು ಭಾಗಗಳ ಮೇಲೆ ಹಿಡಿತ ಸಾಧಿಸಲು ಹವಣಿಸುತ್ತಿದ್ದರು.ಇದರಿಂದಾಗಿ ವಿಜಾಪುರದ ಸುಲ್ತಾನರು ಈ ಪ್ರದೇಶಗಳಲ್ಲಿ ಆಗಿಂದ್ದಾಗ್ಗೆ ದಂಡಯಾತ್ರೆಗಳನ್ನು ನಡೆಸುತ್ತಲೇ ಇದ್ದರು.ಇಂತಹ ದಂಡಯಾತ್ರೆಗಳಲ್ಲಿ ಮರಾಠಿ ಸರದಾರರು ಮುಂಚೂಣಿಯಲ್ಲಿದ್ದು ಬಹುತೇಕ ಗೆಲುವುಗಳಿಗೆ ಕಾರಣರಾಗಿದ್ದರು.ಇಂತಹ ಧೈರ್ಯಶಾಲಿ ಮರಾಠಿ ಸರದಾರರದಲ್ಲಿ ಮಾಲೋಜಿ ಭೋಂಸ್ಲೆಯ ಮಗ ಶಹಾಜಿ ಭೋಂಸ್ಲೆ ಅವರೂ ಒಬ್ಬರು. ವಿಜಾಪುರದ ಅಣತಿಯಂತೆ ಸೈನ್ಯ ಮುನ್ನಡೆಸುತ್ತಿದ್ದ ಶಹಾಜಿ ಹಾಗೂ ರಣದುಲ್ಲಾ ಖಾನ್​ರು ಬೆಂಗಳೂರು ಕೆಂಪೇಗೌಡರ ಸೈನ್ಯದೊಡನೆ ಮುಖಾಮುಖಿಯಾಗಿದ್ದು ೧೬೩೮ರ ಡಿಸೆಂಬರ್ ಮಾಹೆಯಲ್ಲಿ.ಜೋರು ಕಾಳಗದ ಬಳಿಕ ಸಂಧಿ ಏರ್ಪಟ್ಟು ಕೆಂಪೇಗೌಡ ತನ್ನ ರಾಜಧಾನಿಯನ್ನು ಮಾಗಡಿಗೆ ಸ್ಥಳಾಂತರಿಸಿದಾಗ ಬೆಂಗಳೂರು ಕೋಟೆ ವಿಜಾಪುರ ಸುಲ್ತಾನರ ಕೈವಶವಾಯಿತು.ಆಗ ಬೆಂಗಳೂರನ್ನು ಮಹಮ್ಮದ್ ಆದಿಲ್ ಷಾನಿಂದ ಜಹಗೀರು ಪಡೆದರು ಶಹಾಜಿ ಭೋಂಸ್ಲೆ.ಛತ್ರಪತಿ ಶಿವಾಜಿ ಸತ್ತ ಸ್ಥಳ ಚಿತ್ರದುರ್ಗದ ಬೊಮ್ಮಸಮುದ್ರ. ಬಾಲ್ಯ ಬಹುಪಾಲು ಸಮಯವನ್ನು ಯುದ್ಧಗಳಲ್ಲಿಯೇ ಕಳೆಯುತ್ತಿದ್ದ ಶಹಾಜಿ ಅವರು ಜೀಜಾಬಾಯಿಯ ಲಗ್ನವಾಗಿದ್ದರು. ಇವರ ಮಗನಾಗಿ ಶಿವಾಜಿ ಹುಟ್ಟಿದ್ದು ಪುಣೆಯ ಸಮೀಪದ ಶಿವನೇರಿ ದುರ್ಗದಲ್ಲಿ. ಬೆಂಗಳೂರನ್ನು ಜಹಗೀರಾಗಿ ಪಡೆದು ಅದನ್ನು ಮುಖ್ಯ ಸೇನಾನೆಲೆಯನ್ನಾಗಿ ಮಾಡಿಕೊಂಡು ದ್ವಿತೀಯ ಪತ್ನಿ ಸುಧಾಬಾಯಿಯೊಡನೆ ವಾಸಿಸುತ್ತಿದ್ದರು. ಇಲ್ಲಿ ಶಹಾಜಿ ಜಾಗೀರುದಾರರಾಗಿದ್ದರೂ ಸ್ವತಂತ್ರ ರಾಜರಂತೆಯೇ ಆಡಳಿತ ನಡೆಸುತ್ತಿದ್ದರು. ತಮ್ಮದೇ ಆದ ನಾಣ್ಯಗಳನ್ನು ಠಂಕಿಸುತ್ತಿದ್ದರು. ಕೋಟೆ ಪ್ರದೇಶದಲ್ಲಿ ಗೌರಿ ಮಹಲ್ ಎಂಬ ಸುಸಜ್ಜಿತ ಮನೆಯನ್ನು ನಿರ್ವಿುಸಿದ್ದರು. ನಂದಿಬೆಟ್ಟ ಆಗಲೇ ಶಹಾಜಿ ಬೇಸಿಗೆ ರಾಜಧಾನಿಯಾಗಿತ್ತು. ಶಿವಾಜಿಯ ಮೊದಲ ಮಗ ಸಂಬಾಜಿ ಕೋಲಾರ- ದೊಡ್ಡಬಳ್ಳಾಪುರ ಪ್ರದೇಶಗಳ ಆಡಳಿತ ವ್ಯವಸ್ಥೆ ನೋಡಿಕೊಳ್ಳುತ್ತಿದ್ದರು. ಯುದ್ಧಕಲೆ ತನ್ನ ೧೨ನೇ ವಯಸ್ಸಿನವರೆಗೆ ಬೆಂಗಳೂರಿನಲ್ಲೇ ವಾಸವಿದ್ದ ಶಿವಾಜಿಗೆ ಆರಂಭಿಕ ಶಿಕ್ಷಣವನ್ನು ಕೊಟ್ಟವರು ಅಣ್ಣ ಸಂಬಾಜಿ. ನಂತರ ಶಿವನೇರಿ ದುರ್ಗಕ್ಕೆ ಹಿಂತಿರುಗಿದ ಶಿವಾಜಿಗೆ ಪೂರ್ಣಪ್ರಮಾಣದ ಯುದ್ಧ ಕೌಶಲವನ್ನು ಧಾರೆ ಎರೆದವರು ದಾದಾಜಿ ಕೊಂಡದೇವ. ಕತ್ತಿವರಸೆ,ಕುದುರೆ ಸವಾರಿ, ಯುದ್ಧಕಲೆಗಳನ್ನು ಕರಗತ ಮಾಡಿಕೊಂಡ ಶಿವಾಜಿ ೧೭ನೇ ವಯಸ್ಸಿಗೆ ತೋರಣದುರ್ಗ ವಶಪಡಿಸಿಕೊಂಡು ಮಹತ್ವಾಕಾಂಕ್ಷೆಯ ಹೆಜ್ಜೆಗಳನ್ನು ಇಡಲು ಆರಂಭಿಸಿದ್ದರು. ಎಳೆಯ ವಯಸ್ಸಿನಿಂದಲೇ ತಾಯಿ ಜೀಜಾಬಾಯಿಯಿಂದ ಜೀವನ ಮೌಲ್ಯಗಳ ಶಿಕ್ಷಣ ಪಡೆದಿದ್ದ ಶಿವಾಜಿ ಸಂತ ರಾಮದಾಸರ ಪರಮಭಕ್ತರಾಗಿದ್ದರು. ಶಹಾಜಿ ಜಾಗೀರು ನೋಡಿಕೊಳ್ಳುತ್ತಿದ್ದ ದಾದಾಜಿ ಕೊಂಡದೇವ ಅವರಿಂದ ಪರಿಪೂರ್ಣ ಸೈನಿಕ ಶಿಕ್ಷಣ ಪಡೆದಿದ್ದ ಶಿವಾಜಿ ಕಾಡುಮೇಡುಗಳಲ್ಲಿ ಸುತ್ತಾಡಿ ಅನುಭವ ಪಡೆದರು. ಪಶ್ಚಿಮ ಘಟ್ಟಗಳ ಮಾವಳರೆಂಬ ಗಿರಿಜನರನ್ನು ಕಂಡ ಶಿವಾಜಿ ಅವರ ಧೈರ್ಯ ಸಾಹಸಗಳನ್ನು ನೋಡಿ ಅವರನ್ನೆಲ್ಲಾ ಸೇರಿಸಿ ಬಲವಾದ ಪಡೆ ಕಟ್ಟಲು ಆರಂಭಿಸಿದರು. ಪ್ರಮುಖ ಮರಾಠ ನಾಯಕರೂ ಇವರೊಡನೆ ಕೈ ಜೋಡಿಸಿದರು. ತಂದೆ ಜಹಗೀರಾದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಸಂದರ್ಭದಲ್ಲೆ ಅದೇ ಪ್ರದೇಶಕ್ಕೆ ಸನಿಹವಿದ್ದ ಮರೆಯಲಾಗದ ಮಹಾಸಾಮ್ರಾಜ್ಯವಾದ ವಿಜಯನಗರವನ್ನು(ಆ ವೇಳೆಗೆ ಪತನವಾಗಿತ್ತು) ಅದರ ಅವಶೇಷಗಳನ್ನು ಕಂಡು ಬಂದಿದ್ದರು ಯುವಕ ಶಿವಾಜಿ. ವಿವಾಹ ತಾಯಿ ಜೀಜಾಬಾಯಿ ಹಾಗೂ ಗುರು ಕೊಂಡದೇವರೊಂದಿಗೆ ಬೆಂಗಳೂರಿಗೆ ಬಂದ ಶಿವಾಜಿ ವಿವಾಹ ನೆರವೇರಿದ್ದು ೧೬೪೦-೪೨ರ ಸುಮಾರಿಗೆ. ಆಗ ಬೆಂಗಳೂರು ಕೋಟೆಯೊಳಗೆ ಇದ್ದ ಗೌರಿಮಹಲ್​ನಲ್ಲಿ ಶಿವಾಜಿ ಮೊದಲ ವಿವಾಹ ನಿಂಬಾಳ್ಕರ್ ಮನೆತನದ ಸಾಯಿಬಾಯಿ ಜೊತೆಗೆ ವಿಜೃಂಭಣೆಯಿಂದ ಜರುಗಿತು. ಪರದೇಶಿಗಳ ಆಳ್ವಿಕೆಯಿಂದ ನಲುಗಿಹೋಗಿದ್ದ ಹಿಂದೂಸ್ಥಾನವನ್ನು ಒಗ್ಗೂಡಿಸುವ ಮಹತ್ವದ ನಿರ್ಧಾರಕ್ಕೆ ಬಂದ ಶಿವಾಜಿ ಮೊದಲಿಗೆ ಕೊಂಕಣ ಭಾಗದಲ್ಲಿದ್ದ ಅನೇಕ ಕೋಟೆಗಳನ್ನು ಗೆದ್ದರು. ಯುದ್ಧಕೌಶಲದಿಂದ ಹಲವಾರು ಯುದ್ಧಗಳಲ್ಲಿ ವಿಜಯ ಸಾಧಿಸಿ ೧೬೭೪ರಲ್ಲಿ ಮರಾಠ ರಾಜ್ಯಕ್ಕೆ ನಾಂದಿಹಾಡಿದರು. ಕಿರೀಟಧಾರಣೆ ೧೬೭೪ರಲ್ಲಿ ರಾಯಘಡದಲ್ಲಿ ಕಿರೀಟಧಾರಣೆಯ ಬಳಿಕ ಛತ್ರಪತಿ ಶಿವಾಜಿ ಮಹಾರಾಜ್ ಇಡೀ ಪಶ್ಚಿಮಭಾರತವನ್ನು ತಮ್ಮ ಆಳ್ವಿಕೆಗೆ ತಂದರು. ಸ್ವಾಭಿಮಾನಿ ರಾಷ್ಟ್ರನಿರ್ವಣಕ್ಕೆ ಹೋರಾಡಿದ ಶಿವಾಜಿ ೧೬೮೦ಲ್ಲಿ ಕಾಲವಾದರೂ ಅವರು ಸ್ಥಾಪಿಸಿದ ಮರಾಠರಾಜ್ಯ ೧೮೧೮ರವರೆಗೆ ಉಜ್ವಲವಾಗಿ ಬೆಳಗಿತು. ಗುರುಕಾಣಿಕೆ ೧೭ನೇ ಶತಮಾನದಲ್ಲಿ, ಶಿವಾಜಿ ಪೂರ್ವ ಭಾರತದಲ್ಲಿ ರಾಜ್ಯಭಾರ ಮಾಡುತ್ತಿದ್ದರು. ಅವರ ತಾಯಿ ಜೀಜಾಮಾತೆಯು ಶಿವಾಜಿಗೆ ಸಣ್ಣ ವಯಸ್ಸಿನಿಂದಲೂ ನಾಮಜಪವನ್ನು ಮಾಡಿಸುತ್ತಿದ್ದಳು. ಒಬ್ಬ ರಾಜನಿಗೆ ಬೇಕಾದ ಎಲ್ಲ ಯುದ್ಧಕಲೆಗಳನ್ನೂ ಜೀಜಾಮಾತೆಯು ಶಿವಾಜಿಗೆ ಕಲಿಸಿದ್ದಳು. ಜೀಜಾಮಾತೆ ಮತ್ತು ಗುರು ರಾಮದಾಸ ಸ್ವಾಮಿಗಳ ಮಾರ್ಗದರ್ಶನದಲ್ಲಿ ಶಿವಾಜಿಯು ಆದರ್ಶ ರಾಜನಾದನು. ಶಿವಾಜಿಯು ಧೈರ್ಯದಿಂದ ಮರಾಠರನ್ನು ಮೊಗಲರ ವಿರುದ್ಧ ಮುನ್ನಡೆಸಿದನು. ಶಿವಾಜಿಯು ಆದರ್ಶ ರಾಜ್ಯವನ್ನು ಸ್ಥಾಪಿಸಿದನು. ಶಿವಾಜಿಯು ರಾಜ್ಯವನ್ನು ಧೈರ್ಯ,ಸಹನೆ ಮುಂತಾದ ಆಧ್ಯಾತ್ಮಿಕ ಗುಣಗಳ ಬಲದಲ್ಲಿ ಸ್ಥಾಪಿಸಿದ್ದನು. ಮರಣ ಶಿವಾಜಿ ಮಹಾರಾಜರು 1680 ಏಪ್ರಿಲ್ 03 ರಂದು ಮರಣ ಹೊಂದಿದರು. ಭಾರತೀಯ ಇತಿಹಾಸದ ಪ್ರಮುಖರು ರಾಜರು
1853
https://kn.wikipedia.org/wiki/%E0%B2%97%E0%B3%8A%E0%B2%B0%E0%B3%82%E0%B2%B0%E0%B3%81%20%E0%B2%B0%E0%B2%BE%E0%B2%AE%E0%B2%B8%E0%B3%8D%E0%B2%B5%E0%B2%BE%E0%B2%AE%E0%B2%BF%20%E0%B2%85%E0%B2%AF%E0%B3%8D%E0%B2%AF%E0%B2%82%E0%B2%97%E0%B2%BE%E0%B2%B0%E0%B3%8D
ಗೊರೂರು ರಾಮಸ್ವಾಮಿ ಅಯ್ಯಂಗಾರ್
ಗೊರೂರು ರಾಮಸ್ವಾಮಿ ಅಯ್ಯಂಗಾರ್ (ಜುಲೈ ೪, ೧೯೦೪ - ಸೆಪ್ಟೆಂಬರ್ ೨೮, ೧೯೯೧) ತಮ್ಮ ಪ್ರಬಂಧ ಲೇಖನಗಳಿಂದ ಕನ್ನಡ ಸಾಹಿತ್ಯದಲ್ಲಿ ಛಾಪು ಮೂಡಿಸಿದವರು. ಆರ್.ಕೆ.ನಾರಾಯಣ್ ಓದುಗರಿಗೆ ಮಾಲ್ಗುಡಿಯನ್ನು ಪರಿಚಯಿಸುವುದಕ್ಕೆ ಮುನ್ನವೇ ತಮ್ಮ ಕೃತಿಗಳ ಮೂಲಕ ರಾಮಸ್ವಾಮಿ ಅಯ್ಯಂಗಾರ್ ರವರು ಗೊರೂರು ಗ್ರಾಮವನ್ನು ಪರಿಚಯಿಸಿದ್ದರು. ಕಾವ್ಯನಾಮ - ಸೀತಾತನಯ . ಸ್ವಾತಂತ್ರ್ಯ ಚಳುವಳಿ, ಮೈಸೂರಿನಲ್ಲಿ ಪ್ರಜಾ ಸರ್ಕಾರಕ್ಕಾಗಿ ಚಳುವಳಿ, ಕರ್ನಾಟಕ ಏಕೀಕರಣ ಚಳುವಳಿಗಳಲ್ಲಿ ಹೋರಾಡಿ ಹರಿಜನೋದ್ಧಾರ ಮತ್ತು ಗ್ರಾಮೊದ್ಧಾರಕ್ಕಾಗಿ ಶ್ರಮಿಸಿದ ಅವರೊಬ್ಬ ಅಪ್ರತಿಮ ಗಾಂಧಿವಾದಿ ಶಿಕ್ಷಣ/ಜೀವನ ಮತ್ತು ಹೋರಾಟ ಡಾ.ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು 1904ರ ಜುಲೈ 4ರಂದು ಹಾಸನ ಜಿಲ್ಲೆಯ ಗೊರೂರು ಗ್ರಾಮದಲ್ಲಿ ಜನಿಸಿದರು . ಅವರ ತಂದೆ ಶ್ರೀನಿವಾಸ ಅಯ್ಯಂಗಾರ್, ತಾಯಿ ಲಕ್ಷಮ್ಮ. ತಮ್ಮ ಹಳ್ಳಿಯಲ್ಲಿ ಲೋಯರ್ ಸೆಕೆಂಡರಿ ಶಿಕ್ಷಣವನ್ನು ಮುಗಿಸಿದ ಗೊರೂರರು ಹಾಸನದ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಗಾಂಧೀಜಿಯವರ ಅಸಹಕಾರ ಚಳುವಳಿಯಿಂದ ಆಕರ್ಷಿತರಾಗಿ ಶಿಕ್ಷಣಕ್ಕೆ ವಿದಾಯ ಹೇಳಿದರು. ಅನಂತರ ಅವರು ಗಾಂಧೀಜಿಯ ಆಶ್ರಮವನ್ನು ಸೇರಿ, ಗುಜರಾತಿನ ವಿದ್ಯಾಪೀಠದ ವಿದ್ಯಾರ್ಥಿಯಾದರು. ಬಳಿಕ ಮದ್ರಾಸಿನ ‘ಲೋಕಮಿತ್ರ’ ಮತ್ತು ‘ಭಾರತಿ’ ಪತ್ರಿಕೆಗಳ ಕನ್ನಡ ಸಮಾಚಾರ ಲೇಖಕರಾಗಿ ಸ್ವಲ್ಪಕಾಲ ಕೆಲಸಮಾಡಿ, ಕೆಂಗೇರಿಯ ಗುರುಕುಲಾಶ್ರಮವನ್ನು ಸೇರಿದರು. ಹರಿಜನೋದ್ಧಾರ ಅದರ ಮುಖ್ಯ ಕಾರ್ಯವಾಗಿತ್ತು. ಅದನ್ನು ಗೊರೂರರು ಶ್ರದ್ಧೆಯಿಂದ ನಿರ್ವಹಿಸಿದರು. ಆಮೇಲೆ ಬೆಂಗಳೂರಿನ ಅಖಿಲ ಭಾರತ ಚರಕ ಸಂಘದ ಖಾದಿ ವಸ್ತ್ರಾಲಯದ ಸಂಚಾಲಕರಾದರು. ಅಲ್ಲಿಯೇ ಅವರ ಸಾಹಿತ್ಯ ಸೇವೆ ಮೊದಲಾಯಿತು. 1933ರಲ್ಲಿ ಗೊರೂರರು ತಮ್ಮ ಗ್ರಾಮಕ್ಕೆ ಮರಳಿ, ಮೈಸೂರು ಗ್ರಾಮ ಸೇವಾಸಂಘವನ್ನು ಸ್ಥಾಪಿಸಿ, ಖಾದಿ ಪ್ರಚಾರ, ಹರಿಜನೋದ್ಧಾರ, ವಯಸ್ಕರ ಶಿಕ್ಷಣ, ಗ್ರಾಮ ಕೈಗಾರಿಕೆಗಳು ಮುಂತಾದ ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿದರು. 1942ರ ‘ಚಲೇ ಜಾವ್’ ಚಳವಳಿಯಲ್ಲಿ ಅವರು ಭಾಗವಹಿಸಿ, ತುರಂಗವಾಸವನ್ನು ಅನುಭವಿಸಿದರು. ಸ್ವಾತಂತ್ರ್ಯ ಬಂದ ಮೇಲೆ ಮೈಸೂರಿನಲ್ಲಿ ಪ್ರಜಾ ಸರ್ಕಾರ ಸ್ಥಾಪನೆಗಾಗಿ ನಡೆದ ಚಳವಳಿಯಲ್ಲೂ ಭಾಗವಹಿಸಿದರು. ಅದು ಸ್ಥಾಪಿತವಾದ ಮೇಲೆ ಸುಮಾರು ಹನ್ನೆರಡು ವರ್ಷಗಳ ಕಾಲ ರಾಜ್ಯದ ವಿಧಾನಪರಿಷತ್ತಿನ ಸದಸ್ಯರಾಗಿದ್ದರು. ಈ ಅವಧಿಯಲ್ಲಿ ಕರ್ನಾಟಕದ ಏಕೀಕರಣಕ್ಕಾಗಿ ಅವರು ದುಡಿದರು. .. ಕರ್ನಾಟಕ ಏಕೀಕರಣ ಚಳುವಳಿ ಸ್ವಾತಂತ್ರ್ಯ ಹೋರಾಟ ಹಾಗೂ ಕರ್ನಾಟಕ ಏಕೀಕರಣ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ತುಮಕೂರಿನ ವಿದ್ಯಾರ್ಥಿಗಳು 1941ರಲ್ಲಿ ಸ್ಥಾಪಿಸಿಕೊಂಡಿದ್ದ ಸಂಘಟನೆ - ಸನ್ಮಿತ್ರ ಸಂಘ. 16ನೆಯ ಡಿಸೆಂಬರ್ 1945, ಭಾನುವಾರ ಸಂಜೆ ತುಮಕೂರಿನ ಕೃಷ್ಣರಾಜ ಪುರಭವನದಲ್ಲಿ ನಡೆದ ಸನ್ಮಿತ್ರ ಸಂಘದ ಸಭೆಯಲ್ಲಿ ಗೊರೂರು ಅನುಮೋದಿಸಿದ ಗೊತ್ತುವಳಿ ಇಂತಿದೆ: ಕನ್ನಡ ನಾಡಿನ ಏಕೀಕರಣಕ್ಕೆ ಸೇರಿರುವ ಈ ಸಭೆಯು, ಸಮಸ್ತ ಕನ್ನಡಿಗರೂ ಕರ್ನಾಟಕ ಏಕೀಕರಣವು ಕಾರ್ಯಕಾರಿಯಾಗಿ ರೂಪುಗೊಳ್ಳುವಂತೆ ಪೂರ್ಣ ಪ್ರಯತ್ನ ಮಾಡಬೇಕೆಂದು ಕನ್ನಡಿಗರನ್ನು ಬೇಡುತ್ತದೆ. ಕಾಂಗ್ರೆಸ್ಸಿನಿಂದ ಅಂಗೀಕೃತವಾದ ಈ ತತ್ತ್ವವನ್ನು ಕೂಡಲೇ ಕಾರ್ಯಕಾರಿಯಾಗಿ ಮಾಡಬೇಕೆಂದು ಬ್ರಿಟಿಷ್ ಸರ್ಕಾರವನ್ನು ಒತ್ತಾಯಪಡಿಸುತ್ತದೆ. ಸಾಹಿತ್ಯ ಸೇವೆ ಡಾ.ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಸಾಹಿತ್ಯ ಸೃಷ್ಟಿ ಸಮೃದ್ಧವಾದುದು. ಪ್ರಬಂಧ, ಕಥೆ, ಕಾದಂಬರಿ, ಪ್ರವಾಸ ಕಥನ, ವಿಮರ್ಶೆ, ಜೀವನ ಚಿತ್ರ, ಭಾಷಾಂತರ – ಹೀಗೆ ಅನೇಕ ಪ್ರಕಾರಗಳಿಗೆ ಅವರ ಕೊಡುಗೆ ಸಂದಿದೆ. ಆದರೂ ಗೊರೂರರ ಸಿದ್ಧಿ, ಪ್ರಸಿದ್ಧಿಗಳಿಗೆ ಮುಖ್ಯವಾದ ಆಧಾರ, ಅವರ ಪ್ರಬಂಧಗಳು. ಅವು ಹಲವು ದಶಕಗಳಿಂದ ಕನ್ನಡಿಗರಿಗೆ ಶುದ್ಧ ಸಂತೋಷವನ್ನೀಯುತ್ತಿವೆ. ಇಂದಿಗೂ ಅವುಗಳ ಸ್ವಾರಸ್ಯ ಬತ್ತಿಲ್ಲ. ತಮ್ಮ ಪ್ರಬಂಧ ಸಾಹಿತ್ಯದಿಂದ ನಾಡನ್ನು ನಗಿಸಿ ನಲಿಸಿದ್ದಾರೆ ಗೊರೂರರು. ಹಾಗೆ ನೋಡಿದರೆ ನಮ್ಮ ಜನತೆಗೆ ನಗೆಯನ್ನು ಕಲಿಸಿದವರಲ್ಲಿ ಅವರು ಪ್ರಮುಖರು ಎನ್ನಬಹುದು. ಗೊರೂರು ಗ್ರಾಮ, ಹೇಮಾವತಿ ನದಿ – ಈ ಎರಡೂ ಗೊರೂರರ ಸಾಹಿತ್ಯದಿಂದ ಅಮರವಾದವು. ‘ಹೇಮಾವತಿ’, ಆ ಸಾಹಿತ್ಯ ಸಮಸ್ತಕ್ಕೂ ಸ್ಪೂರ್ತಿ. ಹೀಗೆ ಒಂದು ಊರಿನೊಡನೆ, ನದಿಯೊಡನೆ ಅಭಿನ್ನತೆ ಸಾಧಿಸಿದ ಲೇಖಕರು ವಿರಳವೇ. ಇದರಿಂದ ಗೊರೂರರ ವಾಙ್ಮಯಕ್ಕೆ ಪ್ರಾದೇಶಿಕ ಸ್ವರೂಪ ಪ್ರಾಪ್ತವಾಗಿದ್ದರೂ ಅವರು ಕೊಡುವ ಜೀವನ ಚಿತ್ರಣ ಪ್ರಾದೇಶಿಕವಾಗಿರುವಂತೆ ಪ್ರಾತಿನಿಧಿಕವೂ ಆಗಿದೆ. ಗಾಂಧೀವಾದಿ ಗೊರೂರರ ಜಾನಪದ ಪ್ರಜ್ಞೆ ಅದ್ಭುತವಾದುದು. ಅವರು ಹೇಳುತ್ತಾರೆ: “ನಾನು ಸಾಹಿತಿಗಿಂತ ಹೆಚ್ಚಾಗಿ ಜನಸಾಮಾನ್ಯರ ಮನುಷ್ಯ”, ಇದು ಅವರ ನಂಬಿಕೆ: “ಜಾನಪದ ಗುಣಗಳನ್ನೂ, ಶಕ್ತಿಯನ್ನೂ ಹೆಚ್ಚು ಹೆಚ್ಚು ನೋಡಿದಂತೆ, ಭಾರತವನ್ನು ಆಧುನಿಕ ನಾಗರೀಕತೆಯ ಸರ್ವನಾಶದಿಂದ ತಪ್ಪಿಸಬಲ್ಲಂತದ್ದು ಜಾನಪದವೊಂದೆ ಎಂಬ ನಂಬಿಕೆ ದೃಢವಾಗುತ್ತದೆ”. ಈ ಜಾನಪದ ಮತ್ತು ಜನಪರ ದೃಷ್ಟಿಯ ಹಿನ್ನೆಲೆಯಲ್ಲಿ ಗೊರೂರರ ಹಾಸ್ಯಪ್ರಜ್ಞೆ ಯಶಸ್ವಿಯಾಗಿ ಕೆಲಸ ಮಾಡಿದೆ. ಗೊರೂರರು ತಮ್ಮ ಬರಹಗಳಲ್ಲಿ ಈಗ ಕಾಣಸಿಗದ ಅಥವಾ ತ್ವರಿತವಾಗಿ ಮರೆಯಾಗುತ್ತಿರುವ ಹಳ್ಳಿಯ ಬದುಕನ್ನು ಅದರ ಎಲ್ಲ ಮುಖಗಳೊಡನೆ ಚಿತ್ರಿಸುವಲ್ಲಿ ಸಫಲರಾಗಿದ್ದಾರೆ. ಗ್ರಾಮೀಣ ಜೀವನದಲ್ಲಿ ಅವರು ಒಂದಾಗಿ ಬಾಳಿದ್ದರಿಂದ ಇದು ಸಾಧ್ಯವಾಗಿದೆ. ಅವರ ಕೃತಿಗಳಲ್ಲಿ ಕಂಡು ಬರುವ ಪಾತ್ರ ವೈವಿಧ್ಯ ಅಪಾರವಾದುದು; ಅಲ್ಲಿ ಗ್ರಾಮದ ಎಲ್ಲ ವೃತ್ತಿಗಳ, ಎಲ್ಲ ಜಾತಿಗಳ ಜನರೂ ಇದ್ದಾರೆ – ಹಾರುವರಿಂದ ಹರಿಜನರ ತನಕ.(‘ನಮ್ಮ ಎಮ್ಮೆಗೆ ಮಾತು ತಿಳಿಯುವುದೇ?’ ಎಂಬ ಪ್ರಬಂಧದಲ್ಲಿ ಪ್ರಾಣಿ ಪಾತ್ರವೂ ಉಂಟು.) ಆದರೆ ಜಾತಿ-ಮತ-ಭೇದಗಳನ್ನು ಮೀರಿ ಎಲ್ಲರನ್ನೂ ಒಗ್ಗೂಡಿಸುವ ಕೆಲವು ಸೂತ್ರಗಳನ್ನು ಗೊರೂರರು ಗುರುತಿಸಿ, ಅವುಗಳಿಗೆ ಒತ್ತು ಕೊಡುವುದರ ಮೂಲಕ ಸಾಮರಸ್ಯಯುತವಾದ ಒಂದು ಸಮಷ್ಟಿಯ ಚಿತ್ರವನ್ನು ಮೂಡಿಸುತ್ತಾರೆ. ಅವರ ಲೆಕ್ಕಣಿ ಚಲನ ಛಾಯ ಬಿಂಬಗ್ರಾಹಿಯೂ ಆಗಿ, ಗ್ರಾಮಜೀವನದಲ್ಲಿ ಮಹತ್ವದ ಪಾತ್ರವಹಿಸುವ ಉತ್ಸವಗಳು, ಹಬ್ಬ ಹರಿದಿನಗಳು, ಜನಪದ ಕಲೆಗಳು, ಜನತೆಯಲ್ಲಿ ರೂಢವಾಗಿರುವ ಆಚಾರ ವಿಚಾರ, ನಂಬಿಕೆ ನಡಾವಳಿಗಳು ಎಲ್ಲವನ್ನೂ ಯಥಾವತ್ತಾಗಿ, ಸಜೀವವಾಗಿ ಸೆರೆ ಹಿಡಿದಿವೆ. ಗ್ರಾಮೀಣ ಸಂಸ್ಕೃತಿಯ ವಿಶ್ವರೂಪವನ್ನೇ ಅಲ್ಲಿ ಕಾಣಬಹುದು. “ಗೊರೂರರ ಕೃತಿಗಳು ಬರು ಬರುತ್ತ ಹಳ್ಳಿಗಳ ಮಹಾಭಾರತಗಳೇ ಆಗುತ್ತಿವೆ” ಎಂಬ ವಿ.ಕೃ. ಗೋಕಾಕರ ಮಾತೊಂದು ಉಲ್ಲೇಖನೀಯವಾಗಿದೆ. ಗೊರೂರರ ಹಾಸ್ಯಮನೋಧರ್ಮದ ವ್ಯಕ್ತಿತ್ವದಲ್ಲಿ ಬಾಳಿನ ಬಗೆಗೆ ಉತ್ಸಾಹವಿದೆ, ನಿಷ್ಠೆಯಿದೆ; ಅವರ ಬರಹಗಳು ಈ ಗುಣಗಳನ್ನು ಓದುಗರಲ್ಲೂ ಪ್ರೇರಿಸುತ್ತವೆ. “ಬೈಲಹಳ್ಳಿ ಸರ್ವೆ’ಯ ಕಥೆಯಲ್ಲಿ, ಸರ್ವೆ ಮುಗಿದ ಮೇಲೆ ಊರಿಗೆ ಹೋದ ಮೋಜಿನಿದಾರರು ನಾಣಿಗೆ ಬರೆದ ಪತ್ರದಲ್ಲಿ ಕೊನೆಯಲ್ಲಿ ಹೀಗೆನ್ನುತ್ತಾರೆ: “ನನ್ನ ಇಷ್ಟು ವರ್ಷದ ಅನುಭವದಲ್ಲಿ ನೂರಾರು ಹಳ್ಳಿಗಳನ್ನು ನೋಡಿದ್ದೇನೆ, ಅಳೆದಿದ್ದೇನೆ. ಎಲ್ಲಾ ಕಡೆಯೂ ಒಂದೇ ಸಮ, ಒಂದೇ ಗೋಳು, ಒಂದೇ ದಾರಿದ್ರ್ಯ, ಒಂದೇ ಕೊಳಕು, ಅಜ್ಞಾನ, ಬೈಲಹಳ್ಳಿಯಲ್ಲೂ ಅದೇ ಅಜ್ಞಾನ, ಅದೇ ಗೋಳು. ಆದರೆ ನಿಮ್ಮ ಉತ್ಸಾಹದಿಂದ ಆ ಗೋಳು ತಲೆ ತಗ್ಗಿಸಿತು. ಅಳುವುದಕ್ಕೆ ಸಾವಿರ ಕಾರಣವಿದ್ದೂ ನಗುವುದಕ್ಕೆ ಒಂದು ಕಾರಣವಿದ್ದರೆ ಆ ಕಾರಣವನ್ನೇ ನೀವು ಬಲಪಡಿಸಿ ನಗುತ್ತಿದ್ದೀರಿ. ನೋವು ಗೋಳುಗಳ ಹಿಂದೆ ಹೊಂಚುಹಾಕುತ್ತಿರುವ ನಗೆಯನ್ನು ಹಿಡಿಯುವುದೇ ಜೀವನದ ತಿರುಳು. ಅದೇ ನಮ್ಮ ಮುಂದಲ ಉತ್ಸಾಹಕ್ಕೆ ಕಾರಣ.” ಇದು ಗೊರೂರರ ನಿಲುವೂ ಹೌದು. ‘ಗರುಡಗಂಬದ ದಾಸಯ್ಯ’ ಕೃತಿಯ ಮುನ್ನುಡಿಯಲ್ಲಿ ದ.ರಾ ಬೇಂದ್ರೆ ಹೀಗೆಂದಿದ್ದಾರೆ. “ಒಬ್ಬ ಅರಸುಗಳೆ, ಹಜಾಮರೆ, ಹಾರುವರೆ, ತುರುಕರೆ, ದಾಸಯ್ಯಗಳೆ, ಬಯಲಾಟದವರೆ, ಸುಭೇಧಾರರೆ, ಶಾನುಭೋಗರೆ, ಹೊಲೆಯರೆ – ಇವರೆಲ್ಲರನ್ನೂ ಒಂದು ಮಾಲೆಯಲ್ಲಿ ಪೋಣಿಸಿದ ವಿಕಟ ಕವಿತ್ವವು ಪ್ರಶಂಸನೀಯವಾದುದೆಂದು ಯಾರು ಹೇಳಲಿಕ್ಕಿಲ್ಲ?” ವರಕವಿಗಳ ಈ ಮಾತು ಗೊರೂರರ ಸಾಹಿತ್ಯಕ್ಕೆಲ್ಲಾ ಅನ್ವಯಿಸಬಹುದಾದ ಹೇಳಿಕೆಯಂತಿದೆ. ಒಟ್ಟಿನಲ್ಲಿ ಕನ್ನಡಕ್ಕೆ ಗೊರೂರರ ಮುಖ್ಯವಾದ ಕೊಡುಗೆಯೇನು? ಅದನ್ನು ಕುವೆಂಪು ಅವರ ನುಡಿಗಳಲ್ಲಿ ಹೀಗೆ ಸಂಗ್ರಹಿಸಬಹುದು: “ಚಾರ್ಲ್ಸ್ ಡಿಕನ್ಸ್, ಆಲಿವರ್ ಗೋಲ್ಡ್ ಸ್ಮಿತ್, ಎ.ಜಿ. ಗಾರ್ಡಿನರ್ ಮುಂತಾದ ಇಂಗ್ಲಿಷ್ ಲೇಖಕರ ಬರವಣಿಗೆಯನ್ನು ಓದಿ, ಅಲ್ಲಿನ ವಿವಿಧ ರೀತಿಯ ಹಾಸ್ಯವನ್ನು ಚಪ್ಪರಿಸಿದ್ದ ನಮಗೆ ಕನ್ನಡದಲ್ಲಿ ಅಂಥ ಹಾಸ್ಯದ ಅರಕೆ ದೊಡ್ಡ ಕೊರಗನ್ನೇ ಉಂಟುಮಾಡಿತ್ತು. ಆ ಅರಕೆಯನ್ನು ಹೋಗಲಾಡಿಸಿದ ಕೆಲವೇ ಲೇಖಕರಲ್ಲಿ ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರರು ನಿಶ್ಚಯವಾಗಿಯೂ ಅಗ್ರಸ್ಥಾನದಲ್ಲಿದ್ದಾರೆ.” ಕೃತಿಗಳು ಕಾದಂಬರಿಗಳು ಹೇಮಾವತಿ (ಚಲನಚಿತ್ರ) ಪುನರ್ಜನ್ಮ. ಮೆರವಣಿಗೆ. ಊರ್ವಶಿ ಕನ್ಯಾಕುಮಾರಿ ಮತ್ತು ಇತರ ಕತೆಗಳು. ರಾಜನರ್ತಕಿ ಕಥೆಗಳು ಭೂತಯ್ಯನ ಮಗ ಅಯ್ಯು ಕೋರ್ಟಿನಲ್ಲಿ ಗೆದ್ದ ಎತ್ತು ಅನುವಾದಗಳು ಮಲೆನಾಡಿನವರು ಭಕ್ತಿಯೋಗ ಭಗವಾನ್ ಕೌಟಿಲ್ಯ ಸಂಕಲನ ಹೊಸಗನ್ನಡ ಪ್ರಬಂಧ ಸಂಕಲನ ಪ್ರಶಸ್ತಿ, ಗೌರವಗಳು ೧೯೭೪ರಲ್ಲಿ ಮೈಸೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿತು. ೧೯೮೦ರಲ್ಲಿ ಅಮೇರಿಕಾದಲ್ಲಿ ಗೊರೂರು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಲಭಿಸಿತು. ೧೯೮೨ರಲ್ಲಿ ಸಿರ್ಸಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಅಧ್ಯಕ್ಷತೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೧೯೯೫ರಲ್ಲಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯ ಅತ್ಯುತ್ತಮ ಕಥಾಲೇಖಕ ಪ್ರಶಸ್ತಿ – ಊರ್ವಶಿ ಚಿತ್ರಕ್ಕಾಗಿ ದೇವರಾಜ ಬಹದ್ದೂರ್ ಪ್ರಶಸ್ತಿ ಅಭಿಮಾನಿಗಳು ಅರ್ಪಿಸಿದ ಗ್ರಂಥ- ಗೊರೂರು ಗೌರವ ಗ್ರಂಥ, ಸಂಸ್ಮರಣ ಗ್ರಂಥ , ಹೇಮಾವತಿಯ ಚೇತನ. ನಿಧನ ಗೊರೂರರ ಬರವಣಿಗೆ ಅಪರೂಪದ್ದು ಮತ್ತು ಅವರಿಗೇ ಅನುರೂಪವಾದದ್ದು. ಗೊರೂರರು ಸೆಪ್ಟೆಂಬರ್ ೨೮, ೧೯೯೧ರಂದು ನಿಧನರಾದರು. ಮತ್ತೊಬ್ಬ ಗೊರೂರರು ನಮ್ಮಲ್ಲಿಲ್ಲ; ಅವರು ಚಿತ್ರಿಸಿದಂಥ ಸಮಾಜವೂ ಈಗ ಉಳಿದಿಲ್ಲ. ಆದರೆ ಅವರು ಉಳಿಸಿ ಹೋಗಿರುವ ಅನುಭವ ಶ್ರೇಷ್ಠತೆ ನಮಗೆ ಆಸ್ತಿಯಾಗಿ ಉಳಿದಿದೆ. ಮಾಹಿತಿ ಆಧಾರ ಸಾಲು ದೀಪಗಳು ಕೃತಿಯಲ್ಲಿ ಡಾ. ಸಿ. ಪಿ. ಕೃಷ್ಣಕುಮಾರ್ ಅವರ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕುರಿತ ಲೇಖನ ಉಲ್ಲೇಖಗಳು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ೧೯೦೪ ಜನನ ೧೯೯೧ ನಿಧನ
1855
https://kn.wikipedia.org/wiki/%E0%B2%A8%E0%B2%B5%E0%B2%BF%E0%B2%B2%E0%B3%81
ನವಿಲು
ನವಿಲು ಫಾಸಿನಿಡೆ ಕುಟುಂಬಕ್ಕೆ ಸೇರಿದ ಒಂದು ಹಕ್ಕಿ. ಇದು ಭಾರತದ ರಾಷ್ಟ್ರೀಯ ಪಕ್ಷಿ (National Bird) . ಹಾವೇರಿ ಜಿಲ್ಲೆಯ ಬಂಕಾಪುರದಲ್ಲಿ ನವಿಧಾಮವಿದೆ ನವಿಲುಗಳಲ್ಲಿ ಮೂರು ವಿಧ ಭಾರತೀಯ ನವಿಲು, Pavo cristatus ಹಸಿರು ನವಿಲು, Pavo muticus ಕಾಂಗೋ ನವಿಲು, Afropavo congolensis. : ನವಿಲುಗಳು ಭಾರತದ ಮತ್ತು ಆಗ್ನೇಯ ಏಷಿಯಾದ ಕಾಡುಗಳಲ್ಲಿ ಕಂಡು ಬರುತ್ತವೆ. ಗಂಡುಗಳಿಗೆ ಬಾಲದ ಗರಿಗಳು ಹೊಳೆಯುವ ಬಣ್ಣದಿಂದ ಕೂಡಿದ್ದು, ನೋಡಲು ಆಕರ್ಷಕ ವಾಗಿರುತ್ತವೆ. ಲಕ್ಷಣಗಳು ಗಂಡು ನವಿಲು ಕಾಮನ ಬಿಲ್ಲಿನ ಬಣ್ಣಗಳಂತೆ ಆಕರ್ಷಕವಾದ ಗರಿಗಳನ್ನು ಹೊಂದಿರುತ್ತದೆ. ಅವುಗಳಲ್ಲಿ ಮುಖ್ಯವಾಗಿ ನೀಲಿ ಹಸಿರು ಮಿಶ್ರಿತ ಅಥವಾ ಹೊಳಪಿನ ಹಸಿರು ಬಣ್ಣದ ಗರಿ ಗಳನ್ನು ಹೊಂದಿರುತ್ತದೆ. ಉದ್ದನೆಯ ಗರಿಗಳ ಗುಚ್ಛವು ಹೃದಯದ ಆಕಾರದಲ್ಲಿ ಕೊನೆಗೊಂಡಿರುತ್ತದೆ. ಅಲ್ಲದೆ ಅದರ ಮಧ್ಯದಲ್ಲಿ ಕಣ್ಣಿನ ಚಿತ್ರವಿದೆ ಇಲ್ಲವೇ ಮಿಲನದ ಸಮಯದಲ್ಲಿ ಬೇರೆ ಹೆಣ್ಣುಗಳನ್ನು ಗದರಿಸಿ ಓಡಿಸಲೂ ಬಳಸುತ್ತದೆ. ಭಾರತೀಯ ನವಿಲು ಮುಖ್ಯವಾಗಿ ಹೊಳಪಿನ ನೀಲಿ ಬಣ್ಣದ ಗರಿಗಳನ್ನು ಹೊಂದಿರುತ್ತದೆ. ಅಲ್ಲದೆ ಗರಿಗಳು ತುದಿಯಲ್ಲಿ ಡೊಂಕಾಗಿರುವ ತಂತಿಯಾಕಾರದಲ್ಲಿರುತ್ತವೆ. ಹೆಣ್ಣು ನವಿಲು ಹಸಿರು ಬಣ್ಣದ ಕುತ್ತಿಗೆ ಹಾಗೂ ಮಸುಕು ಕಂದು ಬಣ್ಣದ ಚಿಕ್ಕ ಗರಿಗಳ ಗುಚ್ಛವನ್ನು ಹೊಂದಿರುತ್ತದೆ. ನೋಡಲು ಹಸಿರು ನವಿಲು ಭಾರತೀಯ ನವಿಲಿಗಿಂತ ಬೇರೆಯಾಗಿರುತ್ತದೆ. ಗಂಡು ಹಸಿರು ನವಿಲು ಹಸಿರು ಮತ್ತು ಬಂಗಾರದ ಬಣ್ಣಗಳಿರುವ ಗರಿಗಳನ್ನು ಹೊಂದಿದ್ದು, ನೆಟ್ಟಗಿರುವ ಮುಕುಟವನ್ನು ಹೊಂದಿರುತ್ತದೆ. ಅಲ್ಲದೆ ಸಣ್ಣ ಗರಿಗಳನ್ನು ಹೊರತು ಪಡಿಸಿದರೆ ಹೆಣ್ಣು ನವಿಲು ಗಂಡು ನವಿಲಂತೆಯೇ ಇರುತ್ತದೆ. ಮತ್ತು ಹೆಣ್ಣು ನವಿಲಿನ ಗರಿಗಳ ಬಣ್ಣದ ತೀಕ್ಷ್ಣತೆ ಗಂಡು ನವಿಲಿಗಿಂತಾ ಕಡಿಮೆ ಇರುತ್ತದೆ. ಆದರೆ ಗಂಡು ಮರಿ ನವಿಲು ಮತ್ತು ಬೆಳೆದ ಹೆಣ್ಣು ನವಿಲು ಒಂದೇ ತೆರನಾಗಿ ಕಾಣುತ್ತವೆ. ಕಾಂಗೋ ನವಿಲು ಗಾಢವಾದ ನೀಲಿ, ಅದಿರಿನ ಹಸಿರು ಮತ್ತು ಸ್ವಲ್ಪ ನೇರಳೆ ಬಣ್ಣಗಳ ಮಿಶ್ರಣವಿರುವ ಗರಿಗಳ ಗುಚ್ಛವನ್ನು ಹೊಂದಿರುತ್ತದೆ. ಕೆಂಬಣ್ಣದ ಕತ್ತು, ಬೂದು ಬಣ್ಣದ ಕಾಲು ೧೪ ಸಣ್ಣ ಕಪ್ಪು ಗರಿಗಳ ಗುಚ್ಛವನ್ನೂ ಹೊಂದಿರುತ್ತದೆ. ಅಲ್ಲದೆ ನೇರವಾದ ಬಿಳಿಯ ಕೂದಲಿನಂತಹಾ ಮುಕುಟವನ್ನು ಹೊಂದಿರುತ್ತದೆ. ಹೆಣ್ಣು ನವಿಲು ಸಾಧಾರಣವಾಗಿ ಕಂದು ಬಣ್ಣವಿದ್ದು, ಕಪ್ಪಾದ ಹೊಟ್ಟೆಯನ್ನು ಹೊಂದಿರುತ್ತದೆ. ಅದಿರು ಹಸಿರಿನ ಬೆನ್ನು ಮತ್ತು ಸಣ್ಣ ಬಾದಾಮಿಯಾಕಾರದ ಕಂದು ಮುಕುಟವನ್ನು ಹೊಂದಿರುತ್ತದೆ. ಬೇರೆ ನವಿಲುಗಳಿಗಿಂತ ಕಾಂಗೋ ನವಿಲುಗಳು ತುಂಬಾ ಆಕರ್ಷಣೀಯವಾಗಿರುತ್ತವೆ. ಆವಾಸ ಹೆಚ್ಚಾಗಿ ಪರ್ಣಪಾತಿ ಕಾಡುಗಳು, ಕುರುಚಲು ಕಾಡು, ಮೈದಾನ ಪ್ರದೇಶಗಳಲ್ಲಿ ಕಂಡು ಬರುತ್ತವೆ. ನೆಲ ಹಾಗೂ ಮರಗಳಲ್ಲಿ ವಾಸಿಸುತ್ತವೆ. ನೆಲಮಟ್ಟದ ಪೊದೆಗಳಲ್ಲಿ ಗೂಡು ಕಟ್ಟುತ್ತವೆ.ಹಾಗು ಇದರ ಮೊಟ್ಟೆ ದೊಡ್ಡದಾಗಿರುತ್ತದೆ.ಇವುಗಳು ಹಾರಾಡ ಬಲ್ಲವು. ಸಂತಾನೋತ್ಪತ್ತಿ ಜನವರಿಯಿಂದ ಆಕ್ಟೋಬರ್ ನಡುವೆ. ೪ರಿಂದ ೭ ಕೆನೆಬಣ್ಣದ ಮೊಟ್ಟೆ ಗಳನ್ನಿಡುತ್ತವೆ. ಸುಮಾರು ೨೯ ದಿನ ಕಾವುಕೊಟ್ಟು ಮರಿ ಮಾಡುತ್ತವೆ . . ಚಿತ್ರಶಾಲೆ ಹೆಚ್ಚಿನ ಓದಿಗೆ ನೋಡಿ ಉಲ್ಲೇಖ ಪಕ್ಷಿಗಳು ಭಾರತದ ಪಕ್ಷಿಗಳು. av:ТӀавус es:Pavo
1862
https://kn.wikipedia.org/wiki/%E0%B2%B9%E0%B3%88%E0%B2%A6%E0%B2%B0%E0%B2%BE%E0%B2%B2%E0%B2%BF
ಹೈದರಾಲಿ
ಸಯ್ಯದ್ ವಲ್ ಶರೀಫ್ ಹೈದರ್ ಅಲಿ ಖಾನ್ ಅಥವಾ ಹೈದರ್ ಅಲಿ (ಕ್ರಿ. ಶ. 1722 - 7 ಡಿಸೆಂಬರ್ 1782) ದಕ್ಷಿಣ ಭಾರತದ ಮೈಸೂರು ರಾಜ್ಯವನ್ನಾಳುತ್ತಿದ್ದ ಸುಲ್ತಾನ. ಇವನು ಟಿಪ್ಪು ಸುಲ್ತಾನನ ತಂದೆ. ಶ್ರೀರಂಗಪಟ್ಟಣವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡು ಆಳಿದ. ಮೊದಲು ಇವನು ಮೈಸೂರು ರಾಜರ ದಿಂಡಿಗಲ್‌ನ ಫೌಜುದಾರನಾಗಿದ್ದ. ತನ್ನ ಸೈನಿಕ ಕಾರ್ಯಾಚರಣೆಗಳಿಂದಾಗಿ ಮೈಸೂರು ಒಡೆಯರಾಗಿದ್ದ ಚಿಕ್ಕಕೃಷ್ಣರಾಜ ಒಡೆಯರ್‌ ರವರ ದಳವಾಯಿ ಸ್ಥಾನಕ್ಕೇರಿದ. ಕ್ರಮೇಣ 1761 ರಲ್ಲಿ ಮೈಸೂರಿನ ಸರ್ವಾಧಿಕಾರಿಯಾಗಿಯೂ, 1766 ರಲ್ಲಿ ಅವರ ಮರಣಾನಂತರ ಮೈಸೂರಿನ ವಾಸ್ತವ ಸುಲ್ತಾನನಾಗಿಯೂ ಅಧಿಕಾರ ವಹಿಸಿಕೊಂಡ. ಆರಂಭಿಕ ಜೀವನ ಹೈದರನ ಜನ್ಮವರ್ಷದ ಬಗೆಗೆ ಇತಿಹಾಸಕಾರರಲ್ಲಿ ಒಮ್ಮತವಿಲ್ಲ. 1717-1721 ರ ನಡುವಿನ ಅವಧಿಯಲ್ಲಿ ಅವನು ಜನಿಸಿರಬಹುದೆಂದು ಹೇಳಲಾಗಿದೆ ಹೈದರನ ಪೂರ್ವಿಕರು ಅರೇಬಿಯಾದ ಕುರೈಷ್‌ ಬುಡಕಟ್ಟು ಜನಾಂಗಕ್ಕೆ ಸೇರಿದ್ದು ಇರಾನ್‌, ಇರಾಕ್‌ಗಳ ಮೂಲಕ ಭಾರತಕ್ಕೆ ವಲಸೆ ಬಂದು ದೆಹಲಿಯಲ್ಲಿ ನೆಲೆಸಿದ್ದರು. ದೆಹಲಿಯಿಂದ ಗುಲ್ಬರ್ಗಾ ನಂತರ ಬಿಜಾಪುರಗಳಲ್ಲಿ ನೆಲೆನಿಂತರು. ಬಿಜಾಪುರ ಮೊಘಲರ ವಶವಾದಾಗ ಕೋಲಾರಕ್ಕೆ ಬಂದು ನೆಲೆಸಿದರು. ತಂದೆ ಫತೇ ಮಹಮ್ಮದ್‌ ಶಿರಾ ಮತ್ತು ಆರ್ಕಾಟಿನ ನವಾಬನ ಸೇವೆಯಲ್ಲಿದ್ದ. ಹೈದರ್ ಕೋಲಾರ ಸಮೀಪದ ಬೂದಿಕೋಟೆಯಲ್ಲಿ ಫತ್‌ ಮಹಮ್ಮದ್‌ ಮತ್ತು ಲಾಲ್‌ ಬಾಯಿ ದಂಪತಿಯ ಎರಡನೇ ಮಗನಾಗಿ ಜನಿಸಿದ‌. ಇವನ ಆರಂಭಿಕ ಜೀವನದ ಕುರಿತು ಅಷ್ಟು ಹೆಚ್ಚಿನ ಮಾಹಿತಿಗಳು ದೊರೆಯುವುದಿಲ್ಲ; ತಂದೆಯ ಮರಣಾನಂತರ ತನ್ನ ಸಹೋದರ ಷಹಬಾಜ್‌ ಜೊತೆಗೂಡಿ ಆರ್ಕಾಟಿನ ನವಾಬನ ಸೇನೆಯಲ್ಲಿ ಸೇವೆ ಸಲ್ಲಿಸಿದ. ಕಾರಣ ಶಿಕ್ಷಣ ವಂಚಿತನಾಗಿ ಬೆಳೆಯಬೇಕಾಯಿತು. ಮುಂದೆ ಶ್ರೀರಂಗಪಟ್ಟಣಕ್ಕೆ ಬಂದು ಚಿಕ್ಕಪ್ಪ ಇಬ್ರಾಹಿಂ ಸಾಹಿಬ್‌ ಸಹಾಯದಿಂದ ಮೈಸೂರಿನ ಚಿಕ್ಕಕೃಷ್ಣರಾಜ ಒಡೆಯರ ಸೇನೆಯಲ್ಲಿ ಸಹೋದರನೊಂದಿಗೆ 300 ಕಾಲಾಳುಗಳು ಮತ್ತು 70 ಕುದುರೆಗಳಿದ್ದ ತುಕಡಿಯ ಮುಖ್ಯಸ್ಥನಾಗಿ ನೇಮಕಗೊಂಡ. ಅಭ್ಯುದಯ ಹೈದರ್‌ ಮೈಸೂರಿನ ಸೇನೆ ಪ್ರವೇಶಿಸಿದ ಸಂದರ್ಭದಲ್ಲಿ ಚಿಕ್ಕದೇವರಾಜ ಒಡೆಯರನ್ನು ನೆಪಮಾತ್ರಕ್ಕೆ ಸಿಂಹಾಸನದಲ್ಲಿ ಕೂರಿಸಿ ದಳವಾಯಿ ದೇವರಾಜನೂ, ಸರ್ವಾಧಿಕಾರಿ ನಂಜರಾಜನೂ ಅಧಿಕಾರ ಚಲಾಯಿಸುತ್ತಿದ್ದರು. 1749 ರಲ್ಲಿ ದೇವನಹಳ್ಳಿ ಕೋಟೆಯ ಮುತ್ತಿಗೆಯಲ್ಲಿ ಇವನು ತೋರಿದ ಸಾಹಸಗಳಿಂದಾಗಿ ಬಹುಬೇಗ ಉನ್ನತ ಹುದ್ದೆಗೇರಿದ. ಕರ್ನಾಟಿಕ್‌ ಯುದ್ಧಗಳು 1749ರಲ್ಲಿ ಆರಂಭವಾದ ಎರಡನೇ ಕರ್ನಾಟಿಕ್‌ ಕದನಕ್ಕೆ ತಿರುಚನಾಪಲ್ಲಿಯನ್ನು ಪಡೆಯುವ ಆಸೆಯಿಂದ ನಂಜರಾಜ ಹೈದರನ ನೇತೃತ್ವದಲ್ಲಿ ಮೈಸೂರು ಸೇನೆಯನ್ನು ಆರ್ಕಾಟಿನ ನವಾಬ ಮಹಮ್ಮದ್‌ ಅಲಿಯ ನೆರವಿಗೆ ಕಳಿಸಿದ್ದ. ಫ್ರೆಂಚರೊಡಗೂಡಿ ಮೈಸೂರಿನ ಸೇನೆ ಇಂಗ್ಲೀಷರ ವಿರುದ್ಧ ಹೋರಾಡಿತು. ಈ ಕಾರ್ಯಾಚರಣೆಯಲ್ಲಿ 4 ವರ್ಷಗಳಿಗೂ ಹೆಚ್ಚಿನ ಅವಧಿ ಪಾಲ್ಗೊಂಡು ಅಪಾರ ಯುದ್ಧಾನುಭವವನ್ನೂ, ಹಿಂದಿರುಗುವಾಗ ಫ್ರೆಂಚರ ಆಧುನಿಕ ತುಪಾಕಿ, ಯುದ್ಧಸಾಮಾಗ್ರಿಗಳನ್ನೂ, ಚಿನ್ನವನ್ನೂ ತನ್ನ ಸಂಗಡ ಹೊತ್ತೊಯ್ದ. ಕರ್ನಾಟಿಕ್‌ ಯುದ್ಧಗಳಿಂದ ಹೈದರ್‌ ತಂದಿದ್ದ ಅಪಾರ ಸಂಪತ್ತು ಅವನಲ್ಲೇ ಉಳಿದಿತ್ತೇ ವಿನಃ ನಂಜರಾಜನಿಗೆ ಸೇರಲಿಲ್ಲ. ಅದನ್ನು ಮೈಸೂರು ಸೈನಿಕರ ವೇತನ ಬಾಕಿ ನಿರ್ವಹಿಸಲು ಬಳಸಿಕೊಂಡು ಸೈನಿಕರ ಸಂಪೂರ್ಣ ವಿಶ್ವಾಸ ಗಳಿಸಿಕೊಂಡನಲ್ಲದೇ, ನಂಜರಾಜನಿಗೆ ಒದಗಿದ್ದ ಆರ್ಥಿಕ ಸಂಕಷ್ಟ ಪರಿಹರಿಸಿ ಅವನಿಂದ ದಿಂಡಿಗಲ್ಲಿನ ಫೌಜುದಾರಿಕೆಯನ್ನು ಪಡೆದುಕೊಂಡ. ಈ ವೇಳೆಗೆ ಹೈದರನ ಕೈಯಡಿ 1500 ಕುದುರೆಗಳೂ, 300 ಪದಾತಿದಳವೂ, 2000 ಜವಾನರೂ ಇದ್ದರು. ಶ್ರೀರಂಗಪಟ್ಟಣದ ಮೇಲೆ ಹಿಡಿತ 1757ರಲ್ಲಿ ಮರಾಠರು ಮತ್ತು ಹೈದರಾಬಾದಿನ ನಿಜಾಮರ ದಾಳಿಗಳ ಭಯದಿಂದಾಗಿ ನಂಜರಾಜನು ಇವನನ್ನು ಶ್ರೀರಂಗಪಟ್ಟಣಕ್ಕೆ ಕರೆಸಿಕೊಂಡ. ಈ ವೇಳೆಗೆ ಮೈಸೂರು ಸೈನಿಕರು ವೇತನ ಬಾಕಿಯಿಂದ ನೊಂದು ನಂಜರಾಜನ ವಿರುದ್ದ ದಂಗೆ ಏಳುವ ಪರಿಸಥಿತಿಯಲ್ಲಿದ್ದುದನ್ನು ಗಮನಿಸಿದ ಹೈದರ್‌ ಅವರ ಬಾಕಿಗಳನ್ನು ತೀರಿಸಿದನಲ್ಲದೇ, ದಂಗೆ ಏಳಲು ಪ್ರೇರೇಪಿಸಿದವರನ್ನು ಬಂಧಿಸಿದ. ಇದರಿಂದ ಮೈಸೂರು ಸೈನಿಕರ ಸಂಪೂರ್ಣ ವಿಶ್ವಾಸವನ್ನು ಗಳಿಸಿಕೊಂಡ. ಕಲ್ಲಿಕೋಟೆಯ ಮೆಲೆ ದಂಡೆತ್ತಿ ಹೋದದ್ದು ಮಲಬಾರ್‌ ತೀರ ಪ್ರದೇಶಗಳನ್ನಾಳುತ್ತಿದ್ದ ನಾಯಿರ್‌ ಗಳ ಮೇಲೆ ದಂಡಯಾತ್ರೆಯನ್ನು ಕೈಗೊಂಡು ಯಶಸ್ವಿಯಾಗಿ, ಸಂಪತ್ತಿನೋಂದಿಗೆ ಹಿಂದಿರುಗಿದ. ಈ ಕಾರ್ಯಸಾಧನೆಗಾಗಿ ದೇವರಾಜನಿಂದ ಬೆಂಗಳೂರಿನ ಜಹಗೀರು ಪಡೆದ. 1758 ರಲ್ಲಿ ದಳವಾಯಿ ದೇವರಾಜ ಮೃತಪಟ್ಟ ಹಾಗೂ ಅರಮನೆಯ ಅಂತಃಕಲಹಗಳು ಮಹಾರಾಜರ ವಂಶಸ್ಥರು ನಂಜರಾಜನನ್ನು ಪದಚ್ಯುತಗೊಳಿಸಲು ಎದಿರುನೋಡುತ್ತಿದ್ದರು. ಹೈದರನ್ನು ಇದಕ್ಕೆ ಬಳಸಿಕೊಂಡು ಕೆಲವು ಗ್ರಾಮಗಳನ್ನು ನಂಜರಾಜನಿಗೆ ಉಂಬಳಿಯನ್ನಿತ್ತು ಅವನನ್ನೂ ಅಧಿಕಾರದಿಂದ ದೂರ ಮಾಡಲಾಯಿತು. ಅಲ್ಲಿಗೆ ಮೈಸೂರು ಅರಮನೆಯ ಎರಡು ಪಿಡುಗುಗಳು ದೂರವಾದವು. ಹೈದರ್‌ ಮೈಸೂರಿನ ಸರ್ವಾಧಿಕಾರಿಯಾದ. 1758-1761 ರ ವರೆಗಿನ ಮೂರು ವರ್ಷಗಳ ಅವಧಿಯನ್ನು ಸ್ವಲ್ಪ ಮಟ್ಟಿಗೆ ರಾಜ್ಯ ವಿಸ್ತಾರಕ್ಕೂ, ಮೈಸೂರು ರಾಜ್ಯದ ಮೇಲೆ ಹಿಡಿತ ಸಾಧಿಸುವುದಕ್ಕೂ ಬಳಸಿಕೊಂಡ. ಬೆಂಗಳೂರಿನ ಮುತ್ತಿಗೆ ಮರಾಠರು ಬೆಂಗಳೂರು, ಚನ್ನಪಟ್ಟಣ ಮೊದಲಾದ ಪ್ರದೇಶಗಳನ್ನು ವಶಪಡಿಸಿಕೊಂಡು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲಾರಂಭಿಸಿದರು. 1758 ರಲ್ಲಿ ಹೈದರ್‌ ಮರಾಠರನ್ನು ಬೆಂಗಳೂರು ಮತ್ತು ಚೆನ್ನಪಟ್ಟಣಗಳಿಂದ ಹೊರದೂಡುವಲ್ಲಿ ಯಶಸ್ವಿಯಾದ. 1759ರ ಹೊತ್ತಿಗೆ ಹೈದರ್‌ ಸಂಪೂರ್ಣ ಮೈಸೂರು ಸೇನೆಯ ಅಧಿಪತಿಯಾಗಿದ್ದ. ಮೈಸೂರಿನ ನವಾಬನಾಗಿ ಚಿಕ್ಕಕೃಷ್ಣರಾಜರು ಹೈದರನ ಶೌರ್ಯ-ಸಾಹಸಗಳಿಗೆ ಅವನಿಗೆ ಫತೇ ಹೈದರ್‌ ಬಹದ್ದೂರ್‌ ಎಂಬ ಬಿರುದನ್ನಿತ್ತು ಗೌರವಿಸಿದರು. ಅದೇ ವೇಳೆಗೆ ನಂಜರಾಜನನ್ನೂ ಅಧಿಕಾರದಿಂದ ಪದಚ್ಯುತಗೊಳಿಸಲಾಗಿತ್ತು. ಹೈದರ್‌ 1759ರ ವೇಳೆಗೆ ನವಾಬ್‌ ಹುದ್ದೆಗೇರಿದ ಮೈಸೂರಿನ ಮೊದಲಿಗನಾದ. ಖಂಡೇರಾಯನ ಬಂಡಾಯ ಮೈಸೂರು ರಾಜಮಾತೆಯೂ, ಸೈನಿಕ ಕಾರ್ಯದರ್ಶಿ ಖಂಡೇರಾಯನೂ ಕ್ರಮೇಣ ಹೈದರ್‌ ಮುಸಲ್ಮಾನನೆಂದೂ, ಅವನ ಏಳಿಗೆಯನ್ನು ಸಹಿಸಲಾರದೆಯೂ ಒಳಸಂಚು ರೂಪಿಸಿ, 1760 ಆಗಸ್ಟ್‌ ನಲ್ಲಿ ಮರಾಠರು ಶ್ರೀರಂಗಪಟ್ಟಣದ ಮೇಲೆ ದಾಳಿ ಮಾಡುತ್ತಾರೆಂದು ತಿಳಿದಿದ್ದ ಖಂಡೇರಾಯ 12ನೇ ಆಗಸ್ಟ್‌ 1760 ಹೈದರನ ಶಿಭಿರದ ಮೇಲೆಯೇ ಶ್ರೀರಂಗಪಟ್ಟಣ ಕೋಟೆಯಿಂದ ಗುಂಡು ಹಾರಿಸಲು ಶುರು ಮಾಡಿದ್ದ. ಆದರೆ ಹೈದರ್‌ ಇದರಿಂದ ತಪ್ಪಿಸಿಕೊಂಡು ಸೇನೆಯನ್ನೂ ರಕ್ಷಿಸಿದ. ಇನ್ನೊಂದೆಡೆ ಖಂಡೇರಾಯನ ನಿರೀಕ್ಷೆಯಂತೆ ಮರಾಠರೂ ದಾಳಿ ಮಾಡಲಿಲ್ಲ. ಆ ಸಂದರ್ಭ ಹೈದರ್‌ ಅಪಾಯದಿಂದ ಪಾರಾಗಲು ತಾತ್ಕಾಲಿಕ ಒಪ್ಪಂದವೊಂದನ್ನು ಖಂಡೇರಾಯನೊಂದಿಗೆ ಮಾಡಿಕೊಂಡ. ಮುಂದುವರಿದು, ಚದುರಿದ್ದ ಸೇನೆಯನ್ನು ಸಂಘಟಿಸಿ, ಫ್ರೆಂಚ್‌ ಸೇನಾ ನೆರವನ್ನೂ ಪಡೆದು ಗಡಿಯಂಚಿನ ಪ್ರದೇಶಗಳನ್ನು ವಶಪಡಿಸಿಕೊಳ್ಲುವಲ್ಲಿ ನಿರತನಾದ. ಕೊಯಮತ್ತೂರು ಮತ್ತು ಸೇಲಂ ಪ್ರದೇಶಗಳನ್ನು ಗೆದ್ದುಕೊಂಡ. ಆದರೂ ಖಂಡೇರಾಯನನ್ನು ಎದುರಿಸಲು ಹೈದರ್‌ ಶಕ್ತನಾಗಿರಲಿಲ್ಲ. ಕೊನೆಗೆ ನಿವೃತ್ತ ಸರ್ವಾಧಿಕಾರಿ ನಂಜರಾಜನ ನೆರವನ್ನು ಪಡೆದು ದಾಳಿಯೆಸಗಿ ಶ್ರೀರಂಗಪಟ್ಟಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಹಾಗೂ ಮೈಸೂರಿನ ಸುಲ್ತಾನನಾದ. ಮೈಸೂರಿನ ಸುಲ್ತಾನನಾಗಿ ಖಂಡೇರಾಯನ ಬಂಡಾಯವನ್ನು ಸಮರ್ಥವಾಗಿ ಅಡಗಿಸಿದ ಹೈದರ್‌ ಮೈಸೂರು ರಾಜ್ಯದ ಸಂಪೂರ್ಣ ಹಿಡಿತ ಕೈಗೆತ್ತಿಕೊಂಡ. ಈ ಮಧ್ಯೆ 1761 ರ ಮೂರನೇ ಪಾಣಿಪತ್‌ ಕದನದಲ್ಲಿ ಮರಾಠಾ ಒಕ್ಕೂಟ ಅಹ್ಮದ್‌ ಷಾ ಅಬ್ದಾಲಿಯ ಸೇನೆಯೆದುರು ಸಂಪೂರ್ಣವಾಗಿ ಸೋತುಹೊಗಿತ್ತು. ಇನ್ನೊಂದೆಡೆ 1764ರ ಬಕ್ಸಾರ್‌ ಕದನದಲ್ಲಿ ಮೀರ್‌ ಖಾಸಿಂ ನೆರವಿಗೆ ನಿಂತು ಸೋತಿದ್ದ ಮೊಘಲ್‌ ದೊರೆ ಎರಡನೇ ಷಾ ಆಲಂ 1765ರ ಒಪ್ಪಂದದಂತೆ ಇಂಗ್ಲೀಷ್‌ ಈಸ್ಟ್‌ ಇಂಡಿಯಾ ಕಂಪನಿಯ ಕೈಗೊಂಬೆಯಾಗಿದ್ದ. ಕುಸಿದ ಪ್ರಭಲ ಸಾಮ್ರಾಜ್ಯಗಳ ಲಾಭ ಪಡದ ಹೈದರ್‌ 1761 ರಲ್ಲಿ ದಖ್ಖನ್ನಿನ ಮೊಘಲ್‌ ರಾಜಧಾನಿ ಶಿರಾವನ್ನೂ, ಮುಂದುವರಿದು ಶಿರಾದ ಸುತ್ತಮುತ್ತಲ ಪ್ರಾಂತ್ಯಗಳನ್ನೂ (ಹೊಸಕೋಟೆ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಪೆನುಕೊಂಡ ಮಡಕಶಿರಾ, ನಂದಿದುರ್ಗ, ಹರಪನಹಳ್ಳಿ ಮತ್ತು ಚಿತ್ರದುರ್ಗ) ಜಯಿಸಿದ. ಅಪಾರ ಪ್ರಾಕೃತಿಕ ಸಂಪನ್ಮೂಲಗಳನ್ನು ಹೊಂದಿದ್ದ ಬಿದನೂರು ವಿಜಯ ಇವನ ವಿಜಯಗಳಲ್ಲೇ ಅತೀ ಪ್ರಮುಖವಾದದ್ದು. ಹೊನ್ನಾವರದಿಂದ ಪಶ್ಚಿಮ ತೀರಕ್ಕೂ, ಗೋವೆಯ ವರೆಗೂ ಸಾಮ್ರಾಜ್ಯ ವಿಸ್ತರಿಸಿಕೊಂಡ. ಡಚ್ಚರ ನೆರವನ್ನು ಪಡೆದು ನೌಕಾಪಡೆಯನ್ನು ಬಲಗೊಳಿಸಿ ನಾಯರ್ ಗಳಿಂದ ಮಲಬಾರ್‌ ವಶಪಡಿಸಿಕೊಂಡ. ಪ್ರಥಮ ಆಂಗ್ಲೋ-ಮೈಸೂರು ಯುದ್ಧ ಬಕ್ಸಾರ್‌ ಕದನದ ವಿಜಯದ ನಂತರ ಹೆಕ್ಟೇರ್‌ ಮನ್ರೋ ನೇತೃತ್ವದ ಈಸ್ಟ್‌ ಇಂಡಿಯಾ ಕಂಪನಿ ಎರಡನೇ ಷಾ ಆಲಂ ಮತ್ತು ಮೈಸೂರಿನ ನವಾಬನನ್ನು ಮಣಿಸಲು ಮರಾಠ ಒಕ್ಕೂಟಕ್ಕೆ ನೆರವನ್ನು ನೀಡಲು ಮುಂದಾಯಿತು. ಅಲ್ಲದೇ ಮೈಸೂರು-ಮರಾಠರ ಸೆಣೆಸಾಟಗಳು, ತನ್ನ ವೈರಿ ಫ್ರೆಂಚ್‌ ಸೇನಾ ನೆರವಿನೊಂದಿಗೆ ದಖ್ಖನ್ನಿನಲ್ಲಿ ಪ್ರಬಲನಾಗಿ ಬೆಳೆಯುತ್ತಿದ್ದ ಹೈದರ್ ಏಳಿಗೆಯು ಬ್ರಿಟೀಷ್ ವ್ಯಾಪಾರಿ ಕಂಪನಿಯ‌ ಯುದ್ಧಪ್ರವೇಶಕ್ಕೆ ನಾಂದಿ ಹಾಡಿದವು. ಮೈಸೂರಿನ ಸಾಂಪ್ರದಾಯಿಕ ವೈರಿ ಮರಾಠರು ಮತ್ತು ಹೈದರಾಬಾದಿನ ನಿಜಾಮನೊಂದಿಗೆ ಒಕ್ಕೂಟ ರಚಿಸಿಕೊಂಡ ಬ್ರಿಟೀಷರು 1766 ರಲ್ಲಿ ಹೈದರನ ವಿರುದ್ಧ ದಾಳಿಯೆಸಗಿದರು. ಆದರೆ ಚಾಣಾಕ್ಷತೆಯಿಂದ ಒಕ್ಕೂಟವನ್ನು ಒಡೆದು ಬ್ರಿಟೀಷರನ್ನು ಮಣಿಸಿದ ಹೈದರ್‌ 1770 ರಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವಂತೆ ಆದೇಶಿಸಿದನು. ವಿಧಿಯಿಲ್ಲದೇ ಬ್ರಿಟೀಷರು ಮದ್ರಾಸ್‌ ಒಪ್ಪಂದಕ್ಕೆ 1770 ರಲ್ಲಿ ಸಹಿ ಹಾಕಬೇಕಾಯಿತು. ಇದು ಬ್ರಿಟೀಷರಿಗೆ ಅವಮಾನಕರವೂ, ಹೈದರನಿಗೆ ಪ್ರಖ್ಯಾತಿಯನ್ನೂ ತಂದುಕೊಟ್ಟ ಒಪ್ಪಂದವಾಗಿತ್ತು. ಮರಾಠಾ ಒಕ್ಕೂಟದ ವಿರುದ್ಧ ಯುದ್ಧ ಮೊದಲನೇ ಆಂಗ್ಲೋ ಮೈಸೂರು ಯುದ್ಧದಿಂದ ಮರಾಠರಿಗೇನೂ ಲಾಭವಾಗಲಿಲ್ಲ. ಬದಲಾಗಿ ಮೈಸೂರಿನ ಮೇಲಿನ ಹಗೆತನ ಇನ್ನಷ್ಟು ಹೆಚ್ಚಾಯಿತು. 1770 ರ ಜನವರಿಯಲ್ಲಿ ಮರಾಠರು ಹೈದರನ ವಿರುದ್ಧ ದಂಡೆತ್ತಿ ಬಂದಾಗ ಮದ್ರಾಸು ಒಪ್ಪಂದದ ಕರಾರಿನಂತೆ ಇವನಿಗೆ ಬ್ರಿಟೀಷರು ಸೇನಾ ನೆರವನ್ನು ನೀಡಲಿಲ್ಲ. ಆದರೂ ಮರಾಠರನ್ನು ಯಶಸ್ವಿಯಾಗಿ ಸೋಲಿಸಿ, ಕೃಷ್ಣಾನದಿಯ ತನಕ ತನ್ನ ಎಲ್ಲೆಯನ್ನು ವಿಸ್ತರಿಸುವಲ್ಲಿ ಯಶಸ್ವಿಯಾದ ಹಾಗೂ ಕೊಡಗನ್ನು ವಶಕ್ಕೆ ಪಡೆದುಕೊಂಡ. ದ್ವಿತೀಯ ಆಂಗ್ಲೋ-ಮೈಸೂರು ಯುದ್ಧ ಮರಾಠರ ದಾಳಿಗಳ ಸಂದರ್ಭ ಮದ್ರಾಸು ಒಪ್ಪಂದದಂತೆ, ದಾಳಿಗಳ ಸಂದರ್ಭ ನೀಡಬೇಕಿದ್ದ ಯಾವುದೇ ಸೇನಾ ನೆರವನ್ನು ಬ್ರಿಟೀಷರು ಹೈದರಾಲಿಗೆ ನೀಡಲಿಲ್ಲ. ಅಲ್ಲದೇ ಗುಂಟೂರು ಆಕ್ರಮಣದಿಂದಾಗಿ ಹೈದರಾಬಾದಿನ ನಿಜಾಮನ ಮೇಲೂ, ಒಪ್ಪಂದಗಳ ಉಲ್ಲಂಘನೆಗಾಗಿ ಮರಾಠಾ ಒಕ್ಕೂಟ ಮೇಲೂ ಬ್ರಿಟೀಷರು ಕೊಪಗೊಂಡಿದ್ದರು. ಈ ವೇಳೆಗೆ ಮೊದಲ ಆಂಗ್ಲೋ ಮರಾಠ ಯುದ್ಧ ಆಂರಂಭವಾಗಿತ್ತು(1775). ಬ್ರಿಟೀಷರನ್ನು ಮಣಿಸಲು ಮರಾಠರು ಹೈದರನಿಗೆ ಬೆಂಬಲವಿತ್ತರು. ನಿಜಾಮನ ಬೆಂಬಲವನ್ನೂ ಪಡೆದುಕೊಂಡ ಹೈದರ್‌ ಒಕ್ಕೂಟ ರಚಿಸಿಕೊಂಡು ತಮಿಳುನಾಡಿಗೆ ಕ್ಷಿಪ್ರದಾಳಿಯಿತ್ತು ಬ್ರಿಟೀಷರ ವಿರುದ್ಧ ಘಟಿಸಿದ ಯುದ್ಧದಲ್ಲಿ ಜಯಗಳಿಸಿದ ಮತ್ತು ಆರ್ಕಾಟ್ ಅನ್ನು ಆಕ್ರಮಿಸಿದ. ಮುಂದುವರಿದು ಹೈದರ್‌ ಮತ್ತು ಟಿಪ್ಪು ನೇತೃತ್ವದ ಸೇನೆಗಳು ಪೊಲ್ಲಿಲೂರು ಕದನದಲ್ಲಿ ಬೇಲಿ ನೇತೃತ್ವದ ಕಂಪನಿ ಸೇನೆಯನ್ನು ಸೋಲಿಸಿ ಸೆರೆಹಿಡಿದವು. ನಂತರ ಐರ್ ಕೂಟನ ವಿರುದ್ಧ ನಡೆದ ಯುದ್ಧಗಳಲ್ಲಿ (ಪೋರ್ಟೊ ನೋವೋ ಕದನ) ಹೈದರ್‌ ಸೋಲನುಭವಿಸಬೇಕಾಯಿತು ಆದರೂ ತಂಜಾವೂರಿನ ಮುತ್ತಿಗೆಯಲ್ಲಿ ಯಶಸ್ವಿಯಾದ. ಮರಣ ಬ್ರಿಟೀಷರೊಂದಿಗಿನ ಸೆಣೆಸಾಟಗಳು ಮುಗಿಯುವ ಮೊದಲೇ ಹೈದರ್‌ ವಿಪರೀತ ಬೆನ್ನುಹುರಿ ಹುಣ್ಣಿನಿಂದ(ಬೆನ್ನುಫಣಿ ರೋಗ)) ಬಳಲಬೇಕಾಯಿತು. ಅದು ಡಿ.7 1782 ರಲ್ಲಿ ಅವನನ್ನು ಚಿತ್ತೂರು ಬಳಿಯ ಸೇನಶಿಬಿರದಲ್ಲಿ ಬಲಿಪಡೆದುಕೊಂಡಿತು. ಹೈದರನನ್ನು ಶ್ರೀರಂಗಪಟ್ಟಣದಲ್ಲಿ ಸಮಾಧಿಮಾಡಲಾಯಿತು ಮತ್ತು 1782-84 ರ ಅವಧಿಯಲ್ಲಿ ಅವನ ಮಗ ಟಿಪ್ಪು ಸುಲ್ತಾನ್ ಗುಂಬಜ್ ನಿರ್ಮಿಸಿದ. ನೋಡಿ ಟಿಪ್ಪು ಸುಲ್ತಾನ್ ಉಲ್ಲೇಖಗಳು ಭಾರತೀಯ ಇತಿಹಾಸದ ಪ್ರಮುಖರು ಭಾರತದ ಇತಿಹಾಸ ಕರ್ನಾಟಕದ ಇತಿಹಾಸ .
1866
https://kn.wikipedia.org/wiki/%E0%B2%B5%E0%B2%BF%E0%B2%A8%E0%B2%BE%E0%B2%AF%E0%B2%95%20%E0%B2%A6%E0%B2%BE%E0%B2%AE%E0%B3%8B%E0%B2%A6%E0%B2%B0%20%E0%B2%B8%E0%B2%BE%E0%B2%B5%E0%B2%B0%E0%B3%8D%E0%B2%95%E0%B2%B0%E0%B3%8D
ವಿನಾಯಕ ದಾಮೋದರ ಸಾವರ್ಕರ್
ವಿನಾಯಕ ದಾಮೋದರ ಸಾವರ್ಕರ್ ತಮ್ಮ ಸಂಪೂರ್ಣ ಜೀವನವನ್ನೇ ಭಾರತದ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟ ಮಹಾನ್ ವಾಗ್ಮಿ, ವಿವಿಧ ವಿಷಯಗಳ ಬಗ್ಯೆ ನಿರರ್ಗಳವಾಗಿ ಬರೆಯಬಲ್ಲ ಲೇಖಕ, ಇತಿಹಾಸಕಾರ, ಕವಿ, ತತ್ವಶಾಸ್ತ್ರಜ್ಞ, ಮತ್ತು ಸಮಾಜಸೇವಕ. ಅವರನ್ನು ಕೆಲವರು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಅತಿ ದೊಡ್ಡ ಕ್ರಾಂತಿಕಾರಿ ಎಂದು ಪರಿಗಣಿಸಿದರೆ, ಇನ್ನು ಕೆಲವರು, ಅವರನ್ನು ಕೋಮುವಾದಿಯಾಗಿಯೂ, ಚಾಣಕ್ಯನೀತಿಯವರಾಗಿಯೂ ಭಾವಿಸುತ್ತಾರೆ. ಸ್ವಾತಂತ್ರ್ಯ ಅಂದೋಲನದ ಇತಿಹಾಸದ ಅತ್ಯಂತ ವಿವಾದಾತ್ಮಕ ವ್ಯಕ್ತಿಗಳಲ್ಲಿ ಸಾವರ್ಕರ್ ಪ್ರಮುಖರು. ಹಿನ್ನೆಲೆ ವಿನಾಯಕರು ಮೇ ೨೮, ೧೮೮೩ ರಲ್ಲಿ ಜನಿಸಿದರು. ಸಂಸ್ಕೃತ ವಿದ್ವಾಂಸರ ಪೀಳಿಗೆಯಲ್ಲಿ ಹುಟ್ಟಿದ ಸಾವರ್ಕರರಿಗೆ ಇತಿಹಾಸ, ರಾಜನೀತಿ, ಸಾಹಿತ್ಯ, ಭಾರತಿಯ ಸಂಸ್ಕೃತಿಗಳಲ್ಲಿ ಅತ್ಯಂತ ಆಸಕ್ತಿ. ಅವರು ಬರೆದ ಪುಸ್ತಕ “ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ - 1857” ಅಸಂಖ್ಯಾತ ಸ್ವಾತಂತ್ರ್ಯ ಯೋಧರಿಗೆ ಸ್ಪೂರ್ತಿದಾಯಕವಾಗಿತ್ತು. ದಾಮೋದರಪಂತ ಮತ್ತು ರಾಧಾಬಾಯಿಯ ನಾಲ್ಕು ಮಕ್ಕಳಲ್ಲಿ ಒಬ್ಬರಾದ ವಿನಾಯಕ ಹುಟ್ಟಿದ್ದು ಮಹಾರಾಷ್ಟ್ರದ ನಾಸಿಕ ಪಟ್ಟಣದ ಹತ್ತಿರದ ಭಾಗೂರು ಎಂಬಲ್ಲಿ. ನಾಸಿಕದ ಶಿವಾಜಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವಾಯಿತು. *ಒಂಭತ್ತನೆಯ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡು, ತಂದೆಯ ಪೋಷಣೆಯಲ್ಲಿ ಬೆಳೆದ ವಿನಾಯಕ ಬ್ರಿಟಿಷರ ವಿರುಧ್ಧದ ಸ್ವಾತಂತ್ರ್ಯ ಹೋರಾಟದತ್ತ ಆಕರ್ಷಿತನಾದ. 1899ರಲ್ಲಿ ದೇಶವನ್ನು ಮುತ್ತಿದ ಪ್ಲೇಗ್ ಪಿಡುಗಿಗೆ ಅವನ ತಂದೆ ತುತ್ತಾದರು. 1901ರಲ್ಲಿ ಯಮುನಾಬಾಯಿಯೊಂದಿಗೆ ಮದುವೆಯಾಯಿತು. 1902ರಲ್ಲಿ ಪುಣೆಯ ಫರ್ಗ್ಯೂಸನ್ ಕಾಲೇಜನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಸೇರಿದರು. ಜೂನ್ 1906ರಲ್ಲಿ ಶಿಷ್ಯವೃತ್ತಿ ದೊರೆತದ್ದರಿಂದ , ಕಾನೂನು ಶಾಸ್ತ್ರ ವ್ಯಾಸಂಗಕ್ಕಾಗಿ ಲಂಡನ್ ತೆರಳಿದರು. ಸ್ವಾತಂತ್ರ್ಯ ವೀರ ಸಾವರ್ಕರ್ ವಿದ್ಯಾರ್ಥಿಯಾಗಿದ್ದಾಗ ಸ್ವದೇಶಿ ಚಳುವಳಿಯಲ್ಲಿ ಭಾಗವಹಿಸಿದ್ದರು. ನಂತರ ಅವರು ತಿಲಕ್ರ ಸ್ವರಾಜ್ಯ ಪಕ್ಷದ ಸದಸ್ಯರಾದರು. ಲಂಡನ್ನಿನಲ್ಲಿದ್ದಾಗ “ಸ್ವತಂತ್ರ ಭಾರತ ಸಮಾಜ” (Free India Society)ವನ್ನು ಸ್ಥಾಪಿಸಿದರು. ಈ ಸಂಸ್ಥೆ ಭಾರತೀಯ ಪಂಚಾಂಗ ದ ಹಬ್ಬಗಳೇ ಮೊದಲಾದ ಮುಖ್ಯ ತಿಥಿಗಳನ್ನು , ಸ್ವಾತಂತ್ರ್ಯ ಸಂಗ್ರಾಮದ ಮೈಲಿಗಲ್ಲುಗಳನ್ನೂ ಆಚರಿಸುತ್ತಿತ್ತು. ಭಾರತದ ಸ್ವಾತಂತ್ರ್ಯದ ಬಗ್ಯೆ ಮಾತುಕತೆಗಳಿಗಾಗಿ ಮುಡಿಪಾಗಿದ್ದ ಈ ಸಂಸ್ಥೆಯ ಮೇಲೆ ಬ್ರಿಟಿಷ್ ಸತ್ತೆಯ ಕೆಂಗಣ್ಣು ಬೀಳಲು ತಡವಾಗಲಿಲ್ಲ. “ಬ್ರಿಟಿಷ್ ಅಧಿಕಾರಿಗಳ ಬಗೆಗೇ ಆಗಲಿ, ಅವರ ಕಾನೂನುಗಳ ಬಗೆಗೆ ಆಗಲಿ, ಗೊಣಗುವುದರಲ್ಲಿ ಅರ್ಥವಿಲ್ಲ. ಅದಕ್ಕೆ ಕೊನೆಯೂ ಇಲ್ಲ. ನಮ್ಮ ಚಳುವಳಿ ಯಾವುದೇ ನಿರ್ದಿಷ್ಟ ಕಾನೂನನ್ನು ವಿರೋಧಿಸುವುದಕ್ಕಷ್ಟೇ ಸೀಮಿತವಾಗದೆ, ಆ ಕಾನೂನುಗಳನ್ನು ರಚಿಸಿ, ಜಾರಿಗೆ ತರುವ ಹಕ್ಕಿಗಾಗಿ ಇರಬೇಕು. ಅರ್ಥಾತ್, ಸಂಪೂರ್ಣ ರಾಜಕೀಯ ಸ್ವಾತಂತ್ರ್ಯವೇ ನಮ್ಮ ಗುರಿಯಾಗಬೇಕು” ಎಂದು ಸಾವರ್ಕರರು ಹೇಳಿದ್ದರೆಂದು ನಂಬಲಾಗಿದೆ. 1908ರಲ್ಲಿ “ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ- 1857 ” ಬರೆದಾಗ, ಬ್ರಿಟಿಷ್ ಸರಕಾರವು ತಕ್ಷಣವೇ ಭಾರತ ಮತ್ತು ಬ್ರಿಟನ್ನುಗಳಲ್ಲಿ ಅದರ ಪ್ರಕಾಶನವನ್ನು ನಿರ್ಬಂಧಿಸಿತು. ಮುಂದೆ ಭಿಕಾಜಿ ಕಾಮಾ ಅದನ್ನು ಹಾಲೆಂಡಿನಲ್ಲಿ ಪ್ರಕಾಶಿಸಿದರು. ಅಲ್ಲಿಂದ ಅದನ್ನು ಗುಪ್ತವಾಗಿ ಭಾರತಕ್ಕೆ ಸಾಗಿಸಿ ಬ್ರಿಷರ ವಿರುಧ್ಧ ಸಕ್ರಿಯರಾಗಿದ್ದ ಕ್ರಾಂತಿಕಾರಿಗಳಿಗೆ ಹಂಚಲಾಯಿತು. 1909ರಲ್ಲಿ , ಸಾವರ್ಕರರ ನಿಕಟ ಅನುಯಾಯಿ, ಮದನಲಾಲ್ ಧಿಂಗ್ರಾ, ಆಗಿನ ವೈಸರಾಯ್ ಲಾರ್ಡ್ ಕರ್ಜನ್ನನ ವಧೆಯ ಪ್ರಯತ್ನ ವಿಫಲವಾದ ನಂತರ, ಸರ್ ವಾಯ್ಲೀ ಎಂಬ ಅಧಿಕಾರಿಯನ್ನು ಗುಂಡಿಕ್ಕಿ ಕೊಂದ. ಇದರ ಫಲವಾಗಿ ಉಂಟಾದ ರಾಜಕೀಯ ಗೊಂದಲದಲ್ಲಿ, ಸಾವರ್ಕರ್ ಈ ಘಟನೆಯನ್ನು ಖಂಡಿಸಲು ನಿರಾಕರಿಸಿ , ಎದ್ದು ಕಾಣಿಸಿಕೊಂಡರು. ನಾಸಿಕ್ ಪಟ್ಟಣದ ಕಲೆಕ್ಟರ್ ಎ.ಎಂ.ಟಿ. ಜಾಕ್ಸನ್ ಯುವಕನೊಬ್ಬನ ಗುಂಡಿಗೆ ಬಲಿಯಾದಾಗ, ಸಾವರ್ಕರ್ ಕೊನೆಗೂ ಬ್ರಿಟಿಷ್ ಅಧಿಕಾರಿಗಳ ಬಲೆಯಲ್ಲಿ ಸಿಕ್ಕಿದರು. ಇಂಡಿಯಾ ಹೌಸ್ ನೊಂದಿಗೆ ಸಾವರ್ಕರರ ಸಂಪರ್ಕವನ್ನೇ ನೆಪಮಾಡಿ ಅವರನ್ನು ಈ ಕೊಲೆಯಲ್ಲಿ ಅಪರಾಧಿ ಎಂದು ನಿರ್ಣಯಿಸಲಾಯಿತು. 13ನೇ ಮಾರ್ಚ್ 1910ರಂದು ಅವರ ವಿರುದ್ಧ ಬಂಧನದ ವಾರಂಟ್ ಹೊರಡಿಸಿ, ನಂತರ ಪ್ಯಾರಿಸಿನಲ್ಲಿ ಅವರನ್ನು ಬಂಧಿಸಲಾಯಿತು. ಮಾರ್ಸೇಲ್ಸ್ ನಿಂದ ಪರಾರಿಯಾಗುವ ಅವರ ಧೀರ ಪ್ರಯತ್ನ ವಿಫಲವಾಯಿತು. ಅವರನ್ನು ಹಿಡಿದು ಮುಂಬಯಿಗೆ “ ಎಸ್.ಎಸ್.ಮೊರಿಯಾ” ಹಡಗಿನಲ್ಲಿ ತಂದು, ಯೆರವಡಾ ಜೈಲಿನಲ್ಲಿ ಬಂಧಿಸಲಾಯಿತು. ಅವರ ವಿರುದ್ಧದ ಮೊಕದ್ದಮೆಯಲ್ಲಿ , ಆಗಿನ್ನೂ 27ರ ತರುಣನಾಗಿದ್ದ ಅವರಿಗೆ, ಕುಪ್ರಸಿದ್ಧ ಅಂಡಮಾನಿನ ಜೈಲಿನಲ್ಲಿ 50 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲಾಯಿತು. ನಾಲ್ಕು ಜುಲೈ, 1911ರಂದು, ಅವರನ್ನು ಅಂಡಮಾನಿಗೆ ಸಾಗಿಸಲಾಯಿತು. ಸಾವರ್ಕರ್ 1911ರಲ್ಲಿ , ಮತ್ತೆ 1913ರಲ್ಲಿ, ಸರ್ ರೆಜಿನಾಲ್ಡ್ ಕ್ರಾಡ್ಡಾಕ್ ನ ಭೇಟಿಯ ಸಮಯದಲ್ಲಿ ಕ್ಷಮೆಗಾಗಿ ಬ್ರಿಟಿಷ್ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದರು. ಆಗಿನ ಬ್ರಿಟಿಷ್ ಆಡಳಿತ ರಾಜಕೀಯ ಖೈದಿಗಳಿಗೆ ಸೆರೆಮನೆಯಲ್ಲಿ ನೀಡುತ್ತಿದ್ದ ಚಿತ್ರಹಿಂಸೆ ಹಾಗೂ ಸಾವರ್ಕರರ ಕೆಡುತ್ತಿದ್ದ ಆರೋಗ್ಯ ಈ ಹಿನ್ನೆಲೆಯಲ್ಲಿ ಸಾವರ್ಕರರ ಕ್ಷಮಾ ಅರ್ಜಿಯನ್ನು ನೋಡಬೇಕು ಎಂದು ಅವರ ಸಮರ್ಥಕರು ಅಭಿಪ್ರಾಯಪಡುತ್ತಾರೆ. ಮತ್ತೆ ಭಾರತದ ಭೂಮಿಗೆ ಹಿಂದಿರುಗಿ , ಬ್ರಿಟಿಷರ ವಿರುದ್ಧ ಹೋರಾಟಕ್ಕೆ ತೊಡಗುವ ಚಾಣಾಕ್ಷ ಉದ್ದೇಶದಿಂದ ಅವರು ಕ್ಷಮೆ ಕೇಳಿರಬಹುದು ಎಂಬ ಅಭಿಪ್ರಾಯವೂ ಇದೆ. ಇದಕ್ಕೆ ವಿರುದ್ಧವಾಗಿ, ಈ ಕ್ರಿಯೆ ಬ್ರಿಟಿಷರ ವಿರುದ್ಧ ಸಾವರ್ಕರರ ಶರಣಾಗತಿ ಎಂದು ಅವರ ಟೀಕಾಕಾರರು ಭಾವಿಸುತ್ತಾರೆ. ಅದು ಹೇಗೇ ಇದ್ದರೂ, ಸಾವರ್ಕರರ ಈ ಕ್ರಮ ಮುಂದೆ ಬಹಳಷ್ಟು ಕಾಲದವರೆಗೆ ವಿವಾದವನ್ನು ಸೃಷ್ಟಿಸಿದ ವಿಷಯಗಳಲ್ಲಿ ಮೊದಲನೆಯದಾಗಿತ್ತು. 1920ರಲ್ಲಿ ವಿಠ್ಠಲಭಾಯಿ ಪಠೇಲ್, ಮಹಾತ್ಮ ಗಾಂಧಿ, ಬಾಲ ಗಂಗಾಧರ ತಿಲಕ ಮುಂತಾದ ಹಿರಿಯ ಧುರೀಣರು ಕೇಂದ್ರೀಯ ಸಂಸತ್ತಿನಲ್ಲಿ ಸಾವರ್ಕರ್ ಹಾಗೂ ಅವರ ಬಿಡುಗಡೆಗಾಗಿ ಒತ್ತಾಯಿಸಿದರು. ಮೇ 12, 1921ರಂದು ಸಾವರ್ಕರರನ್ನು ರತ್ನಾಗಿರಿ ಜೈಲಿಗೆ, ಮತ್ತೆ ಅಲ್ಲಿಂದ ಯೆರವಡಾ ಜೈಲಿಗೆ, ಸಾಗಿಸಲಾಯಿತು. ಅವರು “ಹಿಂದುತ್ವ” ಕೃತಿ ಬರೆದದ್ದು ರತ್ನಾಗಿರಿಯ ಜೈಲಿನಲ್ಲಿದ್ದಾಗ. ಅವರ ಚಟುವಟಿಕೆಗಳಿಗೆ ಹಾಗೂ ತಿರುಗಾಟಕ್ಕೆ ತೀವ್ರ ನಿರ್ಬಂಧಗಳನ್ನು ಹಾಕಿ, ಜನವರಿ 6,1924ರಂದು ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು. ರಾಜಕಾರಣಿ ಸಾವರ್ಕರ್ ಸ್ವತಃ ನಾಸ್ತಿಕರಾಗಿದ್ದರೂ ಕೂಡಾ, ಇಷ್ಟವಿಲ್ಲದಿದ್ದರೂ ಹಿಂದೂ ಮಹಾಸಭೆಯ ಅಧ್ಯಕ್ಷ ಪದವನ್ನು ಒಪ್ಪಿಕೊಳ್ಳಬೇಕಾಯಿತು. ಅವರು ಆ ಪದವಿಯಲ್ಲಿ ಇದ್ದ ಏಳು ವರ್ಷಗಳಲ್ಲಿ , ಮಹಾಸಭೆಯನ್ನು ಸ್ವತಂತ್ರ ರಾಜಕೀಯ ಪಕ್ಷವನ್ನಾಗಿ ಬೆಳೆಸಲು ಅಗಾಧ ಕೊಡುಗೆ ನೀಡಿದರು. ಬ್ರಿಟಿಷರು ಜರ್ಮನಿಯ ಮೇಲೆ ಯುದ್ಧ ಹೂಡಿ ಅದರಲ್ಲಿ ಭಾರತವನ್ನೂ ಎಳೆದುಕೊಂಡಾಗ, ಸಾವರ್ಕರ್ “ ಮಾನವ ಸ್ವಾತಂತ್ರ್ಯದ ಹಕ್ಕನ್ನು ಕಾಪಾಡುವುದಾಗಿ ಹೇಳಿಕೊಳ್ಳುವ ಬ್ರಿಟಿಷರ ನೀತಿ ಅರ್ಥಹೀನ” ಎಂದರು. ಆದಾಗ್ಯೂ, ಬ್ರಿಟಿಷರಿಗೆ ಜರ್ಮನಿ ಮತ್ತು ಜಪಾನಿನ ವಿರುದ್ಧದ ಯುದ್ಧದಲ್ಲಿ ಸಹಾಯ ಮಾಡುವಂತೆ ಅವರು ಹಿಂದೂ ಸಮಾಜಕ್ಕೆ ಕರೆ ಕೊಟ್ಟರು. ಅವರ ಸಮರ್ಥಕರು ಈ ಕ್ರಮವನ್ನು ಹಿಂದೂ ಸಮಾಜಕ್ಕೆ ಮಿಲಿಟರಿ ತರಬೇತಿ ದೊರಕಿಸಿಕೊಂಡು ಮುಂದೆ ಬ್ರಿಟಿಷರ ಮೇಲೆ ಬೀಳುವ ಉದ್ದೇಶದಿಂದ ತೆಗೆದುಕೊಂಡದ್ದಾಗಿತ್ತು ಎಂದು ಅರ್ಥೈಸಿದರೂ, ಅವರ ವಿರೋಧಿಗಳು ಇದನ್ನು ಬ್ರಿಟಿಷ್ ಹಿತಾಸಕ್ತಿಗಳಿಗೆ ಹೊಂದಿಕೊಳ್ಳುವ ಸಾವರ್ಕರರ ಮತ್ತೊಂದು ಉದಾಹರಣೆಯಾಗಿ ಕಂಡರು. ಸಾವರ್ಕರರ ಅಧ್ಯಕ್ಷತೆಯಲ್ಲಿ ಮಹಾಸಭಾ, 1942 ರ ಭಾರತ ಬಿಟ್ಟು ತೊಲಗಿ ಅಂದೋಲನವನ್ನು ಬೆಂಬಲಿಸಲಿಲ್ಲ. ಕಮ್ಯೂನಿಸ್ಟ್ ಪಾರ್ಟಿ ಹಾಗೂ ಮುಸ್ಲಿಮ್ ಲೀಗ್ ಕೂಡಾ ಈ ಅಂದೋಲನವನ್ನು ಸಮರ್ಥಿಸಲಿಲ್ಲ. ಸ್ವಾತಂತ್ರ್ಯೋತ್ತರ ಭಾರತವು, ಸುಧೃಢವಾಗಿಯೂ, ಒಗ್ಗಟ್ಟಿನಿಂದಲೂ ಹಾಗೂ ಸ್ವಾವಲಂಬಿಯೂ ಆಗಿರಬೇಕೆಂಬ ಅಪೇಕ್ಷೆ ಅವರಿಗಿತ್ತು. ಲೇಖಕರಾಗಿ ಅವರ ಮರಾಠಿ ಕೃತಿಗಳಲ್ಲಿ “ಕಮಲಾ”, “ನನ್ನ ಜೀವಾವಧಿ ಶಿಕ್ಷೆ”, ಹಾಗೂ ಅತ್ಯಂತ ಪ್ರಸಿದ್ಧವಾದ “1857- ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ” ( ಇದನ್ನು ಬ್ರಿಟಿಷರು ತಮಗನುಕೂಲವಾಗಿ “ಸಿಪಾಯಿ ದಂಗೆ” ಎಂದು ಕರೆದಿದ್ದರು) ಸೇರುತ್ತವೆ. ಸಾವರ್ಕರರಿಂದಾಗಿ “ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ” ಎಂದೇ ಈ ಘಟನೆ ಪ್ರಸಿದ್ಧವಾಯಿತು. ಅಂಡಮಾನಿನ ಜೈಲಿನಲ್ಲಿ ಭಾರತೀಯ ಖೈದಿಗಳ ಪಾಡನ್ನು ಪ್ರತಿಬಿಂಬಿಸುವ “ಕಾಳಾ ಪಾಣಿ” (ಅಂಡಮಾನಿನ ಕಾರಾಗೃಹದ ಕರಿನೀರಿನ ಶಿಕ್ಷೆ) ಎಂಬುದು ಅವರ ಇನ್ನೊಂದು ಗಮನಾರ್ಹ ಕೃತಿ. *ಭಾರತದ ಇತಿಹಾಸ ಒಂದಾದ ಮೇಲೊಂದು ಸೋಲುಗಳ ಸರಮಾಲೆ ಎಂದು ಆಗ ಪ್ರಚಲಿತವಾಗಿದ್ದ ಅಭಿಪ್ರಾಯವನ್ನು ಬದಲಾಯಿಸಲು , ಅವರು ಭಾರತದ ಇತಿಹಾಸದ ಕೆಲ ಸುವರ್ಣಾವಧಿಗಳನ್ನು ಕುರಿತ “ ಬಂಗಾರದ ಆರು ಪುಟಗಳು” ಎಂಬ ಸ್ಪೂರ್ತಿದಾಯಕ ಪುಸ್ತಕವನ್ನು ಬರೆದರು. ಸೆರೆಮನೆಯಲ್ಲಿದ್ದಾಗ ಅವರು ಅನೇಕ ಪುಸ್ತಕಗಳನ್ನು ಬರೆದರು.ರತ್ನಗಿರಿ ಜೈಲಿನಲ್ಲಿದ್ದಾಗ ಬರೆದ ಪುಸ್ತಕಗಳಲ್ಲೊಂದು “ಹಿಂದುತ್ವ”. ಭಾರತ ರಾಷ್ಟ್ರ ಹಾಗೂ ಹಿಂದೂ ಧರ್ಮ ಎಂಬ ಪರಿಕಲ್ಪನೆಗಳನ್ನು ಹಿಂದೂ ರಾಷ್ಟ್ರೀಯತಾವಾದದ ದೃಷ್ಟಿಕೋನದಿಂದ ನೋಡಿದ ಈ ಪುಸ್ತಕ ಅತ್ಯಂತ ಪ್ರಭಾವಿಯಾಗಿತ್ತು.. ಸಾವರ್ಕರ್ ಸ್ವತಃ ನಿರೀಶ್ವರವಾದಿಯಾಗಿದ್ದು, ಭಾರತದ ಭೂಖಂಡದಲ್ಲಿ ಬೇರು ಬಿಟ್ಟು, ಇಲ್ಲಿನ ಜೀವನದ ಪ್ರತಿಯೊಂದು ಅಂಗದಲ್ಲೂ ಹಾಸುಹೊಕ್ಕಾಗಿರುವ, ವಿಶೇಷ ಜೀವನಧರ್ಮ ಎಂದು ಹಿಂದುತ್ವದ ಪರಿಕಲ್ಪನೆಯನ್ನು ಅರ್ಥೈಸಿದ್ದಾರೆಂಬುದನ್ನು ಗಮನಿಸಬೇಕು. ಅವರ ಇತರ ಕೃತಿಗಳೆಂದರೆ “ಹಿಂದೂ ಪದಪಾದಶಾಹಿ” ಮತ್ತು “ನನ್ನ ಅಜೀವ ಸಾಗಾಟ” (My Transportation for Life). ಆಗಲೇ ಭಾರತದಲ್ಲಿ ಧಾರ್ಮಿಕ ಆಧಾರದ ಮೇಲೆ ಬಿರುಕುಗಳು ಗೋಚರವಾಗತೊಡಗಿತ್ತು. “ಮಾಪಿಳ್ಳೆಗಳ ಬಂದ್” (Muslims' Strike) ಎಂಬ ಪುಸ್ತಕದಲ್ಲಿ ಕೇರಳದಲ್ಲಿ ಹಿಂದೂಗಳ ಮೇಲೆ ಅವರು ಕಂಡ ಬ್ರಿಟಿಷರ ಹಾಗೂ ಮುಸ್ಲಿಮರ ದೌರ್ಜನ್ಯವನ್ನು ಮತ್ತು “ಗಾಂಧೀ ಗೊಂದಲ” (Gandhi's Nonsense), ಎಂಬ ಪುಸ್ತಕದಲ್ಲಿ ಗಾಂಧಿಯವರ ರಾಜಕೀಯ ಧೋರಣೆಗಳ ಬಗ್ಯೆ ಟೀಕೆಯನ್ನೂ ಅವರು ಮಾಡಿದರು. *ಈಗಾಗಲೇ ಸಾವರ್ಕರರು ಭಾರತದ ಭವಿಷ್ಯದ ಬಗ್ಯೆ ಗಾಂಧಿಯವರ ಯೋಜನೆಗಳ ಬದ್ಧ ಟೀಕಾಕಾರರಾಗಿ ಹೋಗಿದ್ದರು. ಅವರ ಬೆಂಬಲಿಗರಷ್ಟೇ ಅಲ್ಲ, ಅವರ ಕೆಲವರು ಟೀಕಾಕಾರರು ಕೂಡಾ, ಮರಾಠಿ ಸಾಹಿತ್ಯದ ಅತ್ಯಂತ ಹೃದಯಸ್ಪರ್ಶೀ ಹಾಗೂ ಸ್ಪೂರ್ತಿದಾಯಕ ಕೃತಿಗಳಲ್ಲಿ ಪರಿಗಣಿಸುವ “ಸಾಗರಾ.. ಪ್ರಾಣ ತಳಮಳಲಾ..” ಮತ್ತು “ ಜಯೋಸ್ತುತೆ” (ಸ್ವಾತಂತ್ರ್ಯದ ಸ್ತುತಿ) ಎಂಬ ಮರಾಠೀ ಗೀತೆಗಳನ್ನು ಅವರು ಬರೆದರು. ಇವು ಜನಪ್ರಿಯವಾಗಿದ್ದು, ಇಂದಿಗೂ ಮಹಾರಾಷ್ಟ್ರದಲ್ಲಿ ಕೇಳಸಿಗುತ್ತವೆ. ಅಂಡಮಾನಿನ ಜೈಲಿನಲ್ಲಿದ್ದ ದೀರ್ಘಕಾಲದಲ್ಲಿ, ಅವರಿಗೆ ಪೆನ್ ಹಾಗೂ ಕಾಗದವನ್ನು ನಿಷೇಧಿಸಲಾಗಿತ್ತು. ಸಾವರ್ಕರ್ ತಮ್ಮ ಗೀತೆಗಳನ್ನು ಜೈಲಿನ ಗೋಡೆಗಳ ಮೇಲೆ ಮುಳ್ಳಿನಿಂದ, ಕಲ್ಲುತುಂಡುಗಳಿಂದ ಕೊರೆದರು. ಬಾಕಿ ಸೆರೆಯಾಳುಗಳು ಬಿಡುಗಡೆಯಾಗಿ ಭಾರತಕ್ಕೆ ಬರುವಾಗಿ ತಮ್ಮೊಂದಿಗೆ ತರುವವರೆಗೂ, ಹತ್ತು ಸಾವಿರಕ್ಕೂ ಹೆಚ್ಚಿನ ಪಂಕ್ತಿಗಳನ್ನು ವರ್ಷಾವಧಿ ನೆನಪಿಟ್ಟುಕೊಂಡಿದ್ದರು. ಹಿಂದಿ ಭಾಷೆಯ ಅನೇಕ ನವ ಪದಪುಂಜಗಳನ್ನು ಹುಟ್ಟು ಹಾಕಿದ ಖ್ಯಾತಿ ಅವರಿಗಿದೆ. ಕೆಲವು ಉದಾಹರಣೆಗಳೆಂದರೆ ದಿಗ್ದರ್ಶಕ (ಸರಿಯಾದ ದಾರಿ ತೋರಿಸುವವನು), ಸಾಪ್ತಾಹಿಕ (ವಾರಕ್ಕೊಮ್ಮೆ ಬರುವಂಥಾದ್ದು , ಪತ್ರಿಕೆ ಇತ್ಯಾದಿ) ಹಾಗೂ ಸಂಸದ್ (ಭಾರತದ ಪಾರ್ಲಿಮೆಂಟ್) ಕೃತಿಗಳು ಕಮಲಾ ನನ್ನ ಜೀವಾವಧಿ ಶಿಕ್ಷೆ 1857- ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಕಾಳಾ ಪಾಣಿ(ಅಂಡಮಾನಿನ ಕಾರಾಗೃಹದ ಕರಿನೀರಿನ ಶಿಕ್ಷೆ) ಬಂಗಾರದ ಆರು ಪುಟಗಳು ಹಿಂದೂ ಪದಪಾದಶಾಹಿ ನನ್ನ ಅಜೀವ ಸಾಗಾಟ ಮಾಪಿಳ್ಳೆಗಳ ಬಂದ್ ಗಾಂಧೀ ಗೊಂದಲ ಸಮಾಜ ಸೇವಕ ಹಿಂದೂ ಮಹಾಸಭೆಯ ಮೂಲಕ , ಸಾವರ್ಕರ್ ಅಲ್ಪಸಂಖ್ಯಾತರ ಹಿತಾಸಕ್ತಿಗಳಿಗಾಗಿ ಬಹಳ ಕಷ್ಟಪಟ್ಟರು ಎಂದು, ಹೇಳಲಾಗಿದೆ. ಹಿಂದೂ ಹಬ್ಬಗಳ ಆಚರಣೆಯ ಸಂಧರ್ಭಗಳಲ್ಲಿ, ಸೌಹಾರ್ದತೆಯನ್ನು ಬೆಳೆಸುವ ಉದ್ದೇಶದಿಂದ ಸಾವರ್ಕರ್ ಮುಸ್ಲಿಮರ ಹಾಗೂ ಕ್ರೈಸ್ತರ ಮನೆಗಳಿಗೆ ಭೇಟಿ ನೀಡುತ್ತಿದ್ದರು ಎಂದೂ ,ಅಂತರ್ಜಾತೀಯ ವಿವಾಹಗಳನ್ನು ಪ್ರೋತ್ಸಾಹಿಸಿ , ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಬಿ.ಆರ್.ಅಂಬೇಡ್ಕರರಿಗೆ ಸಹಾಯ ಮಾಡಿದರು ಎಂದೂ ಹೇಳಲಾಗಿದೆ. (ಅಸ್ಪೃಶ್ಯರಿಗೆ ದೇವಾಲಯ ಪ್ರವೇಶ ನಿಷಿದ್ಧವಾದ ಆ ಕಾಲದಲ್ಲಿ , ಅದರ ವಿರುದ್ಧವಾಗಿ ಮುಂದೆ ನಿಂತು ಪ್ರವೇಶಕ್ಕೆ ದಾರಿ ಮಾಡಿಕೊಟ್ಟ, ಪತಿತ ಪಾವನ ಮಂದಿರವನ್ನು ಇಂದಿಗೂ ರತ್ನಾಗಿರಿಯಲ್ಲಿ ನೋಡಬಹುದು). ಸಾವರ್ಕರರ ಇತರ ವಿಷಯಗಳಂತೆ , ಇದೂ ಕೂಡಾ ವಿವಾದಾಸ್ಪದವಾಗಿದ್ದು, ಕೆಳ ವರ್ಗಗಳನ್ನು ಪ್ರತಿನಿಧಿಸುವ ರಾಜಕೀಯ ಪಂಗಡಗಳು ಇವನ್ನು ಪ್ರಶ್ನಿಸಿವೆ. ಹಿಂದಿಯನ್ನು ಮಾತೃಭಾಷೆಯಾಗಿ ಉಪಯೋಗಿಸಬೇಕೆಂದೂ, ದೇವನಾಗರಿ ಲಿಪಿಯನ್ನು ಮುದ್ರಣಕ್ಕೆ ಸಹಾಯವಾಗುವಂತೆ ಸುಧಾರಿಸಬೇಕೆಂದೂ ಅವರು ಕರೆ ಕೊಟ್ಟಿದ್ದರು. ಗಾಂಧಿ ಹತ್ಯೆ ಪ್ರಕರಣದ ಆರೋಪ ಸ್ವಾತಂತ್ರ್ಯ ಬರುವ ಹಾಗೂ ಬಂದ ನಂತರದ ಅವಧಿಯಲ್ಲಿ, ಭಾರತ ಹಾಗೂ ಪಾಕಿಸ್ತಾನಗಳ ನಡುವೆ ಆಗಬೇಕಾಗಿದ್ದ ಆಸ್ತಿ ವಿಭಜನೆಯ ವಿಷಯದಲ್ಲಿ ಮಹಾತ್ಮಾ ಗಾಂಧಿಯವರು ತೆಗೆದುಕೊಂಡ ನಿಲುವು ಭಾರತದಾದ್ಯಂತ ತೀವ್ರ ವಿವಾದವನ್ನು ಸೃಷ್ಟಿಸಿತು. ಈಗಾಗಲೇ ಗಾಂಧಿಯವರ ಕಟು ಟೀಕಾಕಾರರಲ್ಲಿ ಒಬ್ಬರಾಗಿದ್ದ ಸಾವರ್ಕರ್ , ಗಾಂಧಿಯವರ ನಿಲುವನ್ನು ತೀವ್ರವಾಗಿ ವಿರೋಧಿಸಿದರು. ಮುಂದೆ ನಾಥೂರಾಮ್ ಗೋಡ್ಸೆ ಗಾಂಧಿಯವರಿಗೆ ಗುಂಡಿಕ್ಕಿದಾಗ, ಈ ಕಾರಸ್ಥಾನದ ಮುಖ್ಯಶಿಲ್ಪಿ ಸಾವರ್ಕರ್ ಎಂಬ ಆರೋಪಗಳು ಬಹುವಾಗಿ ಕೇಳಿಬಂದವು. ಗೋಡ್ಸೆ ಹಿಂದೂ ಮಹಾಸಭೆಯ ಸದಸ್ಯರಾಗಿದ್ಧು, ಸಾವರ್ಕರ್ ಅಧ್ಯಕ್ಷತೆಯಲ್ಲಿ ನಡೆಸುತ್ತಿದ್ದ ಮಹಾಸಭೆಯ ಸಭೆಗಳಲ್ಲಿ ಆತ ಭಾಗವಹಿಸುತ್ತಿದ್ದದ್ದೂ,. ಗಾಂಧಿ ಹತ್ಯೆ ಪ್ರಕರಣದಲ್ಲಿ ಮುಖ್ಯ ಆಪಾದಿತರಾಗಿದ್ದ ಗೋಡ್ಸೆ ಹಾಗೂ ನಾರಾಯಣ ಆಪ್ಟೆ ಸಾವರ್ಕರರಿಗೆ ಪರಿಚಿತರಾಗಿದ್ದು, ಅವರನ್ನು ಆಗಾಗ ಭೇಟಿಯಾಗುತ್ತಿದ್ದದ್ದೂ, ಈ ಆರೋಪಗಳಿಗೆ ಮೂಲವಾಗಿತ್ತು. ಗಾಂಧಿ ಹತ್ಯೆಗೆ ಹೋರಟ ಗೋಡ್ಸೆಗೆ ಸಾವರ್ಕರ್ “ ಯಶಸ್ವಿಯಾಗಿ ಬಾ” ಎಂದು ಹರಸಿದರು ಎಂಬ ಊಹಾಪೋಹ , ಗೋಡ್ಸೆ ಇದನ್ನು ಮುಂದೆ ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ ಸಂಪೂರ್ಣವಾಗಿ ಅಲ್ಲಗೆಳೆದರೂ, ಕೇಳಿಬಂತು. ಗಾಂಧಿ ಹತ್ಯೆಯ ನಂತರ ದೊಂಬಿ ಗುಂಪು ಗಳು ಮುಂಬಯಿಯ ಸಾವರ್ಕರ್ ಮನೆಯ ಮೇಲೆ ( ಅವರು ರತ್ನಾಗಿರಿಯಿಂದ ಮನೆಯನ್ನು ಮುಂಬಯಿಗೆ ಬದಲಾಯಿಸಿದ್ದರು) ಕಲ್ಲುತೂರಾಟ ನಡೆಸಿದರು. ಭಾರತ ಸರ್ಕಾರ ಸಾವರ್ಕರರನ್ನು ಹತ್ಯೆ ಸಂಬಂಧದ ಆರೋಪದ ಮೇಲೆ ಬಂಧಿಸಿದರೂ, ಸರ್ವೋಚ್ಛ ನ್ಯಾಯಾಲಯವು, ಸಾಕ್ಷ್ಯಾಧಾರಗಳಿಲ್ಲದ್ದರಿಂದ, ಅವರನ್ನು ಬಿಡುಗಡೆ ಮಾಡಿತು. “ಸಾಕ್ಷ್ಯಾಧಾರಗಳಿಲ್ಲದ್ದರಿಂದ ಸಾವರ್ಕರರನ್ನು ನಿರ್ದೋಷಿ ಎಂದು ಘೋಷಿಸಿ ಬಿಡುಗಡೆ ಮಾಡಲಾ ಯಿತು” ಎಂದು ಆಗಾಗ ಹೇಳಲಾಗುತ್ತಿದೆ. ಆದರೂ, ಈ ಪ್ರಕರಣವನ್ನು ಆಲಿಸಿದ ನ್ಯಾಯಮೂರ್ತಿ ಆತ್ಮ ಚರಣರು , ತಪ್ಪೊಪ್ಪಿಕೊಂಡ ( approver) ದಿಗಂಬರ ಬಡಗೆಯ ಸಾಕ್ಷ್ಯ ಈ ವಿಷಯದಲ್ಲಿ “ನೇರವೂ, ನಿಚ್ಚಳವೂ ಆಗಿತ್ತು” ಎಂದು ಕಂಡುಕೊಂಡಿದ್ದಾರೆ. ಆದರೆ ಈ ವಿಷಯವನ್ನು ಸಮರ್ಥಿಸಲು 1948-49ರ ವಿಚಾರಣೆಯ ಕಾಲದಲ್ಲಿ ಸ್ವತಂತ್ರ ಅಭಿಪ್ರಾಯ ಲಭ್ಯವಿರಲಿಲ್ಲ. ಅದು ಲಭ್ಯವಾದದ್ದು 1966ರಲ್ಲಿ ಸಾವರ್ಕರ್ ತೀರಿಕೊಂಡ ನಂತರ. ಅವರ ಸೆಕ್ರೆಟರಿ ಗಜಾನನ ವಿಷ್ಣು ದಾಮ್ಲೆ ಹಾಗೂ ಅಂಗರಕ್ಷಕ ಅಪ್ಪಾ ರಾಮಚಂದ್ರ ಕಾಸರ , ನ್ಯಾಯಮೂರ್ತಿ ಕಪೂರ್ ರ ಮುಂದೆ “ಗೋಡ್ಸೆ ಮತ್ತು ಆಪ್ಟೆ , ಸಾವರ್ಕರರನ್ನು ಜನವರಿ 17ರಂದು ಭೇಟಿಯಾಗಿದ್ದಷ್ಟೇ ಅಲ್ಲ, ದೆಹಲಿಯಿಂದ ಹಿಂತಿರುಗಿದ ನಂತರ , ಜನವರಿ 23 / 24 ರಂದು ಮತ್ತೆ ಭೇಟಿಯಾಗಲು ಬಂದಿದ್ದರು” ಎಂದು ಹೇಳಿಕೆ ಕೊಟ್ಟರು. ಇದಾದ ಕೆಲವೇ ದಿನಗಳಲ್ಲಿ ಗಾಂಧಿಯವರ ಹತ್ಯೆಯಾಯಿತು. 'Frontline' ಪತ್ರಿಕೆಯ ಎ.ಜಿ.ನೂರಾನಿ ಈ ವಿಷಯದಲ್ಲಿ ವಿವರವಾದ ತನಿಖಾತ್ಮಕ ವರದಿಗಳನ್ನು ಮಾಡಿದ್ದಾರೆ. ಸಾವರ್ಕರ್ ಮರಣದ ನಂತರ, 1967ರಲ್ಲಿ ಪ್ರಕಟವಾದ , “ಗಾಂಧಿ ಹತ್ಯಾ ಆಣಿ ಮಿ” ( ಗಾಂಧಿ ಹತ್ಯೆ ಮತ್ತು ನಾನು) ಎಂಬ ಮರಾಠಿ ಪುಸ್ತಕದಲ್ಲಿ ಅವರ ತಮ್ಮ ಗೋಪಾಲ್, ಈ ಗಾಢ ಸಂಬಂಧದ ಬಗ್ಯೆ ಬೆಳಕು ಚೆಲ್ಲುತ್ತಾರೆ. ಈ ವಿಷಯದ ತನಿಖೆಯ ಜವಾಬ್ದಾರಿ ಹೊತ್ತಿದ್ದ ನ್ಯಾಯಮೂರ್ತಿ ಕಪೂರ್ ಆಯೋಗ “ (ಗಾಂಧಿ) ಹತ್ಯೆಯ ಷಡ್ಯಂತ್ರದಲ್ಲಿ ಸಾವರ್ಕರ್ ಮತ್ತು ಇತರರ ಪಾತ್ರದ ಹೊರತಾದ ಎಲ್ಲಾ ವಿಚಾರಧಾರೆಗಳನ್ನೂ ಈ ಎಲ್ಲ ತಥ್ಯಗಳು ನಾಶ ಮಾಡುತ್ತವೆ” ಎಂದು ಅಭಿಪ್ರಾಯ ಪಟ್ಟರು. ಆರೋಪಿಗಳ ಪಟ್ಟಿ ಮಹಾತ್ಮಾ ಗಾಂಧಿ ಹತ್ಯೆ ಪ್ರಯತ್ನ ಮತ್ತು ಹತ್ಯೆ ಪ್ರಕರಣಗಳಲ್ಲಿ ಆರೋಪಿಗಳಾದವರು ಮತ್ತು ಹತ್ಯೆ ಪ್ರಯತ್ನದ ಆರೋಪಿಗಳು : ನಾಥೂರಾಮ್ ವಿನಾಯಕ ಗೋಡ್ಸೆ ನಾರಾಯಣ ದತ್ತಾತ್ರೇಯ ಆಪ್ಟೆ ವಿಷ್ಣು ರಾಮಕೃಷ್ಣ ಕರ್ಕರೆ ಮದನಲಾಲ್ ಕಶ್ಮೀರೀಲಾಲ್ ಪಾಹ್ವಾ ಶಂಕರ್ ಕಿಶ್ಟೈಯ್ಯ ಗೋಪಾಲ ವಿನಾಯಕ ಗೋಡ್ಸೆ ದಿಗಂಬರ ರಾಮಚಂದ್ರ ಬಡಗೆ ವಿನಾಯಕ ದಾಮೋದರ ಸಾವರ್ಕರ್ ದತ್ತಾತ್ರೇಯ ಸದಾಶಿವ ಪರಚುರೆ ಗಂಗಾಧರ ದಂಡವತೆ ಗಂಗಾಧರ ಜಾಧವ್ ಸೂರ್ಯದೇವ ಶರ್ಮ ಹಿಂದುತ್ವದ ಬಗ್ಗೆ ಹಿಂದುತ್ವದ ಪರಿಕಲ್ಪನೆಯನ್ನು ಸಾವರ್ಕರ್ ಮೊಟ್ಟಮೊದಲು ಜಾಹೀರು ಮಾಡಿ, ಅದರ ವಿಷಯವಾಗಿ ಬಹಳಷ್ಟು ಬರೆದರು. ಸಾವರ್ಕರ್ "ಯಾರು ಸಿಂಧೂ ನದಿಯಿಂದ, ಸಾಗರದವರೆಗಿನ ಈ ಭರತವರ್ಷವನ್ನು ತನ್ನ ಪಿತೃದೇಶ ಎಂದೂ, ಹಾಗೂ ತನ್ನ ಧರ್ಮದ ತೊಟ್ಟಿಲಾಗಿರುವ ಪವಿತ್ರ ಭೂಮಿ ಎಂದೂ ಪರಿಗಣಿಸುತ್ತಾರೆಯೋ ಅವರೇ ಹಿಂದೂಗಳು" ಎಂದು ವ್ಯಾಖ್ಯಿಸುತ್ತಾರೆ. ಮತ್ತಷ್ಟು ಮಾಹಿತಿ ಪಡೆಯಲು ಭಾಷಣಗಳಲ್ಲಿ ಇರಬೇಕಾದ ಎಚ್ಚರ; ಸಾವರ್ಕರ್ ಮುಚ್ಚಿ ನೀಡಿದ ಗುಂಡು, ಗೋಡ್ಸೆ ಕೈಯಲ್ಲಿ ಸಿಡಿಯಿತು. ಆದರೆ ಗುಂಡು ನೀಡಿದವರಿಗೆ ಶಿಕ್ಷೆಯಾಗಲಿಲ್ಲ. ;ಡಾ. ರಾಜೇಗೌಡ ಹೊಸಹಳ್ಳಿ;11 Jun, 2018 ಆತ್ಮಾಹುತಿ - ಸಾವರ್ಕರರ ಜೀವನದ ಕುರಿತು ಕನ್ನಡದಲ್ಲಿ ಕಾದಂಬರಿ. AG Noorani, Savarkar and Hindutva: The Godse Connection, LeftWord, New Delhi, 2002, paperback, 159 pages, ISBN 81-87496-28-2; hardcover, Manohar Publishers, 2003, ISBN 81-87496-28-2 Vinayak Damodar Savarkar, Savarkar Samagra: Complete Works of Vinayak Damodar Savarkar in 10 volumes, ISBN 81-7315-331-0 ಇತಿಹಾಸ ಸ್ವಾತಂತ್ರ್ಯ ಹೋರಾಟಗಾರರು
1894
https://kn.wikipedia.org/wiki/%E0%B2%90%E0%B2%B9%E0%B3%8A%E0%B2%B3%E0%B3%86
ಐಹೊಳೆ
ಭಾರತೀಯ ಶಿಲ್ಪಕಲೆಯ ತೊಟ್ಟಿಲು ಎನಿಸಿರುವ ಐಹೊಳೆಯು, ಬೆಂಗಳೂರಿನಿಂದ ೪೮೩ ಕಿ. ಮೀ ಹಾಗೂ ಹುನಗುಂದ ದಿಂದ ೩೫ ಕಿ.ಮಿ ಗಳ ದೂರದಲ್ಲಿ ಮಲಪ್ರಭಾ ನದಿಯ ದಂಡೆಯಲ್ಲಿದೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿಗೆ ಸೇರಿದ ಐಹೊಳೆ ಬಾದಾಮಿ ಚಾಲುಕ್ಯ ವಾಸ್ತುಶಿಲ್ಪ ಶೈಲಿಯ ಒಂದು ದೊಡ್ಡ ಕೇಂದ್ರವಾಗಿದೆ. ಇತಿಹಾಸ ಐಹೊಳೆಯು ಬಾದಾಮಿ ಚಾಲುಕ್ಯರ ಮೊದಲ ರಾಜಧಾನಿಯಾಗಿದ್ದಿತು. ಈ ಸ್ಥಳದ ದೇವಾಲಯಗಳು ಹಾಗೂ ದೇವಾಲಯದ ಶಿಲ್ಪಗಳು ಅತಿ ಹೆಚ್ಚು ಪ್ರಾಚೀನವಾದವುಗಳಾಗಿವೆ. ಇದು ಚಾಲುಕ್ಯರ ಕಾಲದಲ್ಲಿ ವಿದ್ಯಾಕೇಂದ್ರವಾಗಿತ್ತು. ಐಹೊಳೆ ಒಂದು "ಅಧಿ ಷ್ಠಾನ". ಅಂದರೆ ಸರಕಾರದ ಆಡಳಿತಾಕಾರದ ಒಂದು ಕೇಂದ್ರ ಅಥವಾ ರಾಜಧಾನಿನಗರವಾಗಿತ್ತು. ಐಹೊಳೆಯ ಹೆಸರು ಶಾಸನಗಳಲ್ಲಿ ಆರ್ಯಪುರ ಎಂದು ಉಲ್ಲೇಖಿಸಲ್ಪಟ್ಟಿದೆ. ಆರ್ಯಪುರವಾಗಿದ್ದ ಸ್ಥಳ ಕಾಲಾನುಕ್ರಮದಲ್ಲಿ ಆಡುಭಾಷೆಯಲ್ಲಿಐಹೊಳೆ ಯಾಯಿ ತು. ಐಹೊಳೆ ಅತ್ಯಂತ ಪ್ರಾಚೀನ ಗ್ರಾಮ. ಐಹೊಳೆಗೆ ಭಾರತೀಯ ಇತಿಹಾಸದಲ್ಲಿ ತುಂಬ ಮಹತ್ವದ ಸ್ಥಾನವಿದೆ. ಇದನ್ನು ದೇವಾಲಯ ವಾಸ್ತು ನಿರ್ಮಾಣದ ತೊಟ್ಟಿಲು ಎಂದು ಕರೆಯುತ್ತಾರೆ. 6ರಿಂದ 8ನೇ ಶತಮಾನದವರೆಗೆ ಗುಹಾಲಯ ಹಾಗು ದೇವಾಲಯಗಳ ನಿರ್ಮಾಣದಲ್ಲಿ ಅನೇಕ ರೀತಿಯ ಪ್ರಯೋಗಗಳು ನಡೆದದ್ದನ್ನು ಕಾಣುತ್ತೇವೆ. ಶಾಸನದಲ್ಲಿ ಈ ಸ್ಥಳವನ್ನು ಅಯ್ಯವೊಳೆ-ಆಯಿವೊಳೆ-ಐಯಾವೊಳಿ-ಆರ್ಯಪುರ ಮುಂತಾಗಿ ಉಲ್ಲೇಖಿಸಲಾಗಿದ್ದು ಬರುಬರುತ್ತ ಐಹೊಳೆ ಆಗಿರುವ ಸಾಧ್ಯತೆ ಇದೆ. ಇದಲ್ಲದೇ ಐನೂರು ಪಂಡಿತರು ಇದ್ದದ್ದರಿಂದ ಐಹೊಳೆ ಎಂದಾಯ್ತೆಂತಲೂ ಪರುಶುರಾಮನು ಕ್ಷತ್ರಿಯರನ್ನು ನಿರ್ನಾಮ ಮಾಡಿ ರಕ್ತ ಸಿಕ್ತ ಪರಶುವನ್ನು ಇಲ್ಲಿನ ಹೊಳೆಯೊಂದರಲ್ಲಿ ತೊಳೆದಾಗ ಇಡೀ ನದಿ ನೀರೆ ಕೆಂಪಾಯ್ತತಂತೆ. ಇದನ್ನು ಕಂಡು ಊರಿನ ಮಹಿಳೆಯರು 'ಅಯ್ಯಯ್ಯೋ ಹೊಳಿ' ಎಂದು ಉದ್ಗರಿಸಿದ್ದೇ ಮುಂದೆ ಬರುಬರುತ್ತ ಐಹೊಳೆಯಾಯ್ತೆಂಬ ಪೌರಾಣಿಕ ಐತಿಹ್ಯಗಳೂ ಈ ಊರಿನ ಹೆಸರಿನೊಂದಿಗೆ ತಳಕು ಹಾಕಿಕೊಂಡಿವೆ. ಇಲ್ಲಿ ಕ್ರಿ.ಪೂ. ೬-೭ನೇ ಶತಮಾನದಲ್ಲಿ ಅಂದರೆ 'ಕಬ್ಬಿಣದ ಯುಗ'ದಲ್ಲೇ ಇಲ್ಲಿ ಜನವಸತಿ ಇತ್ತೆಂದು ಪ್ರಾಗೈತಿಹಾಸಿಕ ಸಂಶೋಧಕರು ಅಂದಾಜು ಮಾಡಿದ್ದಾರೆ. ಇಲ್ಲಿ ಉಸಗು ಕಲ್ಲಿನಿಂದ ಮತ್ತು ಕತ್ತರಿಸಿದ ಬಂಡೆಗಳನ್ನು ಗಾರೆ, ಮಣ್ಣಿನ ನೆರವಿಲ್ಲದೆ ಒಂದರ ಮೇಲೊಂದು ಇಟ್ಟು ನಿರ್ಮಿಸಿದ ಕೋಟೆಯಿದೆ. ಇದನ್ನು ಸುಮಾರು ಕ್ರಿ.ಶ. ೬ನೇ ಶತಮಾನದಲ್ಲಿ ನಿರ್ಮಿಸಿರಬಹುದು ಎಂದು ಹೇಳಲಾಗಿದ್ದು ಕರ್ನಾಟಕದಲ್ಲಿ ಉಳಿದಿರುವ ಶಿಲಾಕೋಟೆಗಳ ಪೈಕಿ ಇದು ಅತ್ಯಂತ ಪ್ರಾಚೀನವಾದದ್ದಾಗಿದೆ. ಕೋಟೆಯ ಸುತ್ತ ಕಂದಕ ಇರುವುದನ್ನು ಈಗಲೂ ಗುರುತಿಸಬಹುದಾಗಿದ್ದು, ಕೋಟೆಯ ಅವಶೇಷಗಳನ್ನು ಕಾಣಬಹುದು. ವಾಸ್ತುಶಿಲ್ಪ ವಾಸ್ತುಶಿಲ್ಪ: ಇಲ್ಲಿ ಸುಮಾರು 120 ದೇವಾಲಯ ಹಾಗು 4 ಗುಹಾಲಯಗಳನ್ನು ಕಾಣಬಹುದು. ಇವನ್ನೆಲ್ಲ ಬೇರೆ ಬೇರೆ ಕಾಲಘಟ್ಟಗಳಲ್ಲಿ ನಿರ್ಮಿಸಲಾಗಿದ್ದು ಪ್ರತಿಯೊಂದರ ವಾಸ್ತು ಭಿನ್ನವಾಗಿವೆ. ಇವನ್ನು ಸ್ಥಳೀಯವಾಗಿ ಸಿಗುವ ಕೆಂಪು ಮರಳು ಶಿಲೆಯಲ್ಲಿ ನಿರ್ಮಿಸಿದ್ದರಿಂದ ಅನೇಕ ದೇವಾಲಯಗಳು ಕಾಲನ ಹೊಡೆತಕ್ಕೆ ಸಿಕ್ಕು ಹಾಳಾಗಿವೆ. ಅಲ್ಲದೇ ಮುಸ್ಲಿಂ ದಾಳಿಯಿಂದ ಹಾಗು ಜನರಲ್ಲಿರುವ ಇತಿಹಾಸ ಪ್ರಜ್ಷೆಯ ಕೊರತೆಯಿಂದ ಮತ್ತು ನಿಧಿಯ ಆಶೆಯಿಂದಲೂ ಅನೇಕ ದೇವಾಲಯಗಳು ಹಾಳಾಗಿರುವ ಕನ್ನಡ ಸಾಹಿತ್ಯ. ಹಾಗೂ ಇಲ್ಲಿ ಅನೇಕ ಜನರು ಈ ಕಟ್ಟಡಗಳನ್ನು ನೋಡಲು ಬಂದಾಗಲೂ ಶಿಲೆಗಳನ್ನು ಮುಟ್ಟಿ ಹಾಳಾಗಿವೆ, ಎಂದು ಹೇಳಲಾಗಿದೆ. ದೇವಾಲಯಗಳು ಇಲ್ಲಿನ ದೇವಾಲಯಗಳ ನಿರ್ಮಾಣದಲ್ಲಿ ಔತ್ತರೇಯ ಪದ್ಧತಿಯ ಪ್ರಭಾವವು ಕಂಡು ಬರುತ್ತದೆ. ಐಹೊಳೆಯ ದೇವಾಲಯಗಳನ್ನು ಪುರಾತತ್ವ ಸರ್ವೇಕ್ಷಣ ಇಲಾಖೆ ೨೨ ವಿಭಾಗಳಾಗಿ ವಿಂಗಡಿಸಿದೆ. ಇದರಲ್ಲಿ ಹುಚ್ಚಿಮಲ್ಲಿಗುಡಿ, ಲಡಖಾನ್ ಗುಡಿ, ಹುಚ್ಚಪ್ಪಯ್ಯಮಠ, ಗಳಗನಾಥ, ರಾವಲ್ ಪಹಡಿ, ಗುಹಾಂತರ ದೇವಾಲಯ, ಜೈನರ ಮೇಗುತಿ ದೇವಾಲಯ, ಎರಡು ಅಂತಸ್ತಿನ ಜೈನ ದೇವಾಲಯ ಪ್ರಮುಖ ಆಕರ್ಷಣೆ. ಇಲ್ಲಿನ ದೇವಾಲಯಗಳ ವಿಚಿತ್ರ ಹೆಸರುಗಳಿಗೆ ಐತಿಹಾಸಿಕವಾಗಿ ಯಾವ ಸಮರ್ಥನೆಯೂ ಸಿಗುವುದಿಲ್ಲ. ಬಹುಶ: ಬ್ರಿಟಿಷರ ಕಾಲದಲ್ಲಿ ಸರ್ವೇ ಮಾಡಲು ಪ್ರಾರಂಭಿಸಿದಾಗ ಆಯಾ ದೇವಾಲಯಗಳಲ್ಲಿ ಆಗ ವಾಸವಾಗಿದ್ದ ವ್ಯಕ್ತಿಗಳಿಂದ ಇಂಥ ಹೆಸರುಗಳು ಬಂದಿರುವ ಸಾಧ್ಯತೆ ಇದೆ. ೧. ಇಲ್ಲಿನ ದೇವಾಲಯಗಳಲ್ಲಿ ದುರ್ಗಾ ದೇವಾಲಯ ಅತ್ಯಂತ ಪ್ರಮುಖವಾದದ್ದು. ಇದು ಮೂಲತ: ಸೂರ್ಯದೇವಾಲಯವಾಗಿದ್ದು ಕೋಟೆ ಅಂದರೆ ದುರ್ಗಕ್ಕೆ ಹತ್ತಿರವಿರುವುದರಿಂದ ದುರ್ಗ ದೇವಾಲಯವೆಂದು ಪ್ರಸಿದ್ಧವಾಗಿದೆ. ಕ್ರಿ ಶ 742ರಲ್ಲಿ 2ನೇ ವಿಕ್ರಮಾದಿತ್ಯನ ಅಳಿಯ ಕೋಮಾರಸಿಂಗ ಎಂಬುವವ ಇದನ್ನು ಕಟ್ಟಿಸಿದ. ಎತ್ತರದ ಜಗತಿ ಮೇಲೆ ಕಟ್ಟಲಾಗಿದ್ದು ಗಜಪೃಷ್ಠಾಕಾರದಲ್ಲಿ ಇರುವುದು ಇದರ ವಿಶೇಷತೆ. ಇದರ ಅಸಂಖ್ಯ ಕಲ್ಲಿನ ಕಂಬಗಳು ಹಾಗು ಇಂಗ್ಲೀಷ ಅಕ್ಷರದ U ಆಕಾರದ ವಿಶಿಷ್ಠ ರಚನೆಯಿಂದ ಹೊರನೋಟಕ್ಕೆ ದೆಹಲಿಯ ಸಂಸತ್ ಭವನವನ್ನು ನೆನಪಿಸುತ್ತದೆ. ಐಹೊಳೆಯ ಕೋಟೆಯನ್ನು ಉತ್ತರ ರಸ್ತೆಯಿಂದ ಪ್ರವೇಶಿಸುತ್ತಿದ್ದಂತೆಯೇ ಕಾಣುವ ಕ್ರಿ.ಶ ೫ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಸುಂದರ ಹಾಗೂ ಮನಮೋಹಕ ಕೆತ್ತನೆಗಳಿಂದ ಕಂಗೊಳಿಸುವ ದುರ್ಗೆಯ ಮಂದಿರ ಮನಸೆಳೆಯುತ್ತದೆ. ದೇವಾಲಯದ ಮುಖಮಂಟಪದ ಭಿತ್ತಿಯ ಅಡ್ಡಪಟ್ಟಿಕೆಗಳಲ್ಲಿ ರಾಮಲಕ್ಷ್ಮಣ ಸೀತಾಮಾತೆಯನ್ನು ಗುಹ -ನಾವೆಯ ನೆರವಿನಿಂದ ನದಿ ದಾಟಿಸಿದ ಸುಂದರ ಉಬ್ಬುಶಿಲ್ಪವಿದೆ. ಪುರಾಣ, ಪುಣ್ಯಕಥೆಗಳ ಹಲವು ಕಥಾನಕಗಳು ಇಲ್ಲಿವೆ. ೨. ಕ್ರಿ.ಶ.೪೫೦ರಲ್ಲಿ ನಿರ್ಮಿತವಾದ ಲಾಡಖಾನ್ದ್ದೇ ಇಲ್ಲಿನ ಪ್ರಾಚೀನ ದೇವಾಲಯ. ವಿಷ್ಣುವಿಗೆ ಸಮರ್ಪಿತವಾಗಿದ್ದ ದೇವಾಲಯದ ರಚನೆಯಲ್ಲಿ ಗುಪ್ತ ಸಂಪ್ರದಾಯದ ಪ್ರಭಾವವು ಕಂಡು ಬರುತ್ತದೆ. ಏಕೆಂದರೆ ಪೂರ್ಣ ಕಲಶ ಮತ್ತು ನಿಂತ ನಿಲುವಿನ ಗಂಗೆ-ಯಮುನೆಯರ ಆಕೃತಿಗಳು ಇಲ್ಲಿವೆ. ಇದರ ಹೆಸರಿಗೂ ದೇವಾಲಯಕ್ಕೂ ಯಾವುದೇ ಸಂಬಂಧವಿಲ್ಲ. ಬಹುಶ: ಮುಸ್ಲಿಂ ಸಂತನೊಬ್ಬ ಇಲ್ಲಿ ವಾಸವಾಗಿದ್ದರಿಂದ ಈ ಹೆಸರು ಬಂದಿರಬಹುದು. ಪೂರ್ವದಲ್ಲಿ ಇದೊಂದು ಸಮುದಾಯ ಭವನಾಗಿದ್ದು ನಂತರದ ಕಾಲಘಟ್ಟದಲ್ಲಿ ಗರ್ಭಗುಡಿಯನ್ನು ಸೇರಿಸಿದಂತಿದೆ. ಇಲ್ಲಿನ ಕಂಬವೊಂದರ ಮೇಲೆ ಚಳುಕ್ಯರ ರಾಜ ಲಾಂಛನ, ಕಲ್ಲಿನ ಏಣಿ ಹಾಗು ವಿವಿಧ ಚಿತ್ತಾರದ ಜಾಲಂಧ್ರಗಳು ಗಮನ ಸೆಳೆಯುತ್ತವೆ ೩. ಕ್ರಿ.ಶ.೬೩೪ರಲ್ಲಿ ೨ನೆಯ ಪುಲಿಕೇಶಿಯ ಕಾಲದಲ್ಲಿ ಅವನ ಆಶ್ರಯದಲ್ಲಿದ್ದ ರವಿಕೀರ್ತಿಯಿಂದ ಮೇಗುಟಿ(ಮೇಗುಡಿ ಅಂದರೆ ಮೇಲಿನ ಗುಡಿ) ದೇವಾಲಯವು ನಿರ್ಮಾಣವಾಯಿತು. ಎತ್ತರವಾದ ಸ್ಥಳದಲ್ಲಿರುವ ಕಾರಣ ದೇವಾಲಯಕ್ಕೆ ಈ ಹೆಸರು ಬಂದಿದೆ.ಜಿನನಿಗೆ ಸಮರ್ಪಿತ ವಾಗಿದ್ದ ಈ ಗುಡಿಯು ಗರ್ಭಗೃಹ ಮತ್ತು ನವರಂಗಗಳನ್ನು ಹೊಂದಿದೆ. ಇದು ಬೆಟ್ಟದ ಮೇಲಿದ್ದು ಎತ್ತರದ ಅಧಿಷ್ಠಾನದ ಮೇಲೆ ಕಟ್ಟಲಾಗಿದೆ. ಇದನ್ನು ಇಮ್ಮಡಿ ಪುಲಿಕೇಶಿಯ ಆಸ್ಥಾನದಲ್ಲಿದ್ದ ರವಿಕೀರ್ತಿ ಎಂಬ ಕವಿ ಕಟ್ಟಿಸಿದ. ಇಲ್ಲಿನ ಮುಖಮಂಟಪದ ಹೊರಭಿತ್ತಿಯ ಮೇಲೆ ಚಾಳುಕ್ಯ ಅರಸರ ವಂಶಾವಳಿ ಹಾಗು ಉತ್ತರ ಭಾರತದ ವಿಷ್ಣುವರ್ಧನ ಹಾಗು ಇಮ್ಮಡಿ ಪುಲಕೇಶಿ ನಡುವೆ ನಡೆದ ಯುದ್ಧದ ವಿವರಣಾತ್ಮಕ ಶಾಸನವಿದೆ. ಇಲ್ಲಿ ಮಹಡಿ ಮೇಲೊಂದು ಗರ್ಭಗುಡಿ ಇರುವುದು ವಿಶೇಷ. ಮೇಲಿರುವ ಗರ್ಭಗೃಹಕ್ಕೆ ಹೋಗಲು ಅಂತರಾಳದಲ್ಲಿ ಮೆಟ್ಟಿಲುಗಳಿವೆ. ಇದು ಕರ್ನಾಟಕದ ಅತ್ಯಂತ ಪುರಾತನ ಜಿನಾಲಯವಾಗಿದ್ದು ಅಧ್ಯನದ ದೃಷ್ಟಿಯಿಂದ ಮಹತ್ವದ್ದಾಗಿದೆ. ೪. ಕೊಂಟಿಗುಡಿ' (ಕೊಂಟ ಅಥವಾ ತ್ರಿಶೂಲವನ್ನು ಸದಾ ಹೊಂದಿದವನೊಬ್ಬನು ವಾಸಿಸುತ್ತಿದ್ದ ಕಾರಣ ಈ ಹೆಸರು) ಎಂದು ಹೆಸರು ಪಡೆದ ದೇವಾಲಯದ ೪ ಕಂಭಗಳಿಗೆ ಆಧಾರವೇ ಇಲ್ಲ ;ಅವು ಅಡಿಯಿಂದ ಗುಂಡಾದ ಬೋದಿಗೆಯವರೆಗೆ ಚೌಕಾಕಾರವಾಗಿವೆ. ಛಾಯಾಂಕಣ ಬಾಗಲಕೋಟೆ ಜಿಲ್ಲೆ ಚಾಲುಕ್ಯ ವಂಶ ಬಾದಾಮಿ ತಾಲೂಕಿನ ಪ್ರವಾಸಿ ತಾಣಗಳು ಕರ್ನಾಟಕದ ಇತಿಹಾಸ ಕರ್ನಾಟಕದ ಪ್ರವಾಸಿ ತಾಣಗಳು
1905
https://kn.wikipedia.org/wiki/%E0%B2%B8%E0%B2%B0%E0%B3%8D%E0%B2%B5%E0%B3%86%E0%B2%AA%E0%B2%B2%E0%B3%8D%E0%B2%B2%E0%B2%BF%20%E0%B2%B0%E0%B2%BE%E0%B2%A7%E0%B2%BE%E0%B2%95%E0%B3%83%E0%B2%B7%E0%B3%8D%E0%B2%A3%E0%B2%A8%E0%B3%8D
ಸರ್ವೆಪಲ್ಲಿ ರಾಧಾಕೃಷ್ಣನ್
ಪರಿಚಯ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ , (ಜನನ ೫ ಸೆಪೆಂಬರ್‌ ೧೮೮೮ - ಮರಣ ೧೭, ಎಪ್ರಿಲ್‌ ೧೯೭೫) ಇವರು ಶಿಕ್ಷಣದ ಬಗ್ಗೆ ಅತ್ಯಂತ ಗೌರವ, ಪ್ರೀತಿ, ನಿಷ್ಠೆಯನ್ನು ಹೊಂದಿದ್ದರು. ಸ್ವತಃ ಶಿಕ್ಷಕರಾಗಿ ಹಲವಾರು ವರ್ಷಗಳ ಕಾಲ ಸೇವೆಗೈದಿರುವ ಡಾ.ರಾಧಾಕೃಷ್ಣನ್, ಭಾರತ ಕಂಡ ಅಗ್ರಗಣ್ಯ ಶಿಕ್ಷಕರಲ್ಲಿ ಪ್ರಮುಖರಾಗಿದ್ದಾರೆ. ಅವರು ಮದ್ರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ (೧೯೦೫-೧೯೦೬) ಶಿಕ್ಷಣ ಪಡೆದಿದ್ದರು. ಶಿಕ್ಷಕರಾಗಿದ್ದ 'ಡಾ. ಸರ್ವಪಲ್ಲಿ ರಾಧಾಕೃಷ್ಣನ್' ೧೯೬೨ ರಲ್ಲಿ ಭಾರತದ ರಾಷ್ಟ್ರಪತಿಯಾಗಿದ್ದರು. ಇವರು ಒಬ್ಬ ಶಿಕ್ಷಕರಾಗಿಯೂ ಸೇವೆಯನ್ನು ಸಲ್ಲಿಸಿದ್ದರು. ಜನನ/ ಬಾಲ್ಯ ಹಾಗೂ ವಿದ್ಯಾಭ್ಯಾಸ 'ಸರ್ವೆಪಲ್ಲಿ ರಾಧಾಕೃಷ್ಣನ್' ಜನಿಸಿದ್ದು ದಕ್ಷಿಣ ಭಾರತದ ತಮಿಳುನಾಡಿನ 'ತಿರುತ್ತಣಿ' ಎಂಬಲ್ಲಿ ಸೆಪ್ಟೆಂಬರ್ ೫, ೧೮೮೮ ರಲ್ಲಿ. ಸರ್ವಪಲ್ಲಿ ಎನ್ನುವುದು ಮನೆತನದ ಹೆಸರಾದರೆ, 'ರಾಧಾಕೃಷ್ಣನ್' ಎನ್ನುವುದು ಅವರ ತಂದೆ-ತಾಯಿ ಇಟ್ಟ ಮುದ್ದಿನ ಹೆಸರು. ತಂದೆ ಸರ್ವಪಲ್ಲಿ ವೀರಸ್ವಾಮಿ ತಾಯಿ ಸೀತಮ್ಮ. ಇವರು ಜಮೀನ್ದಾರರ ಬಳಿ ರೆವಿನ್ಯೂ ನೌಕರರಾಗಿ ಸೇವೆಗೈಯುತ್ತಾ ಮಗನ ಶ್ರೇಯೋಭಿವೃದ್ಧಿಗೆ ಶ್ರಮಿಸಿದವರು. ರಾಧಾಕೃಷ್ಣನ್ ಅವರ ತಂದೆಗೆ ತಮ್ಮ ಮಗನನ್ನು ಪುರೋಹಿತನನ್ನಾಗಿ ಮಾಡುವ ಹಂಬಲವಿತ್ತು. 'ಸ್ಕಾಲರ್‌ಶಿಪ್ ಹಣ'ದಲ್ಲಿಯೇ ಎಲ್ಲ ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢಶಾಲೆಯ ಶಿಕ್ಷಣವನ್ನು ಮುಗಿಸಿದ ರಾಧಾಕೃಷ್ಣನ್, ಮದ್ರಾಸ್‌ (ಈಗಿನ ಚೆನ್ನೈ) ಕ್ರಿಶ್ಚಿಯನ್ ಕಾಲೇಜ್‌ ನಲ್ಲಿ 'ತತ್ವಜ್ಞಾನ' ವಿಷಯದ ಮೇಲೆ 'ಬಿ.ಎ' ಮತ್ತು 'ಎಂ.ಎ. ಪದವಿ'ಗಳನ್ನು ಪಡೆದು ಕೊಂಡರು. 'ಸ್ನಾತಕೋತ್ತರ ಪದವಿ'ಯಲ್ಲಿ ರಾಧಾಕೃಷ್ಣನ್ ಮಂಡಿಸಿದ ಪ್ರಬಂಧ 'ದಿ ಎಥಿಕ್ಸ್ ಆಫ್ ವೇದಾಂತ' ಅವರ ಬದುಕಿನ ದಿಕ್ಕನ್ನೇ ಬದಲಾಯಿಸಿತು. ಕೇವಲ ೨೦ ವರ್ಷದ ಬಾಲಕನ ತಲೆಯಲ್ಲಿದ್ದ 'ಹಲವು ಬಗೆಯ ಸಿದ್ಧಾಂತಗಳು', 'ವೇದಾಂತ ವಿಚಾರಗಳು' ಮುಂದೊಂದು ದಿನ ಅವರನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುತ್ತವೆ, ಎಂದು ಅವರ ಕಾಲೇಜು ಶಿಕ್ಷಕರು ಆಗಲೇ ಗುರುತಿಸಿದ್ದರು. ವಿವಾಹ ವೆಲ್ಲೂರಿನಲ್ಲಿರುವಾಗಲೇ ಕೇವಲ ೧೬ ನೇ ವಯಸ್ಸಿನಲ್ಲಿ ಶಿವಕಾಮಮ್ಮ ಎಂಬುವವರನ್ನು ಬಾಳಸಂಗಾತಿಯನ್ನಾಗಿಸಿಕೊಂಡ ರಾಧಾಕೃಷ್ಣನ್, ೧೯೦೯ ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಹಾಯಕ ಉಪನ್ಯಾಸಕರಾಗಿ ಅಚ್ಚುಮೆಚ್ಚಿನ ಶಿಕ್ಷಕ ಸೇವೆ ಯನ್ನಾರಂಭಿಸಿದರು. ಮಹಾ ಶಿಕ್ಷಕನಾಗಿ ಭಾರತದ ಸನಾತನ ಧರ್ಮವಾದ ಹಿಂದೂ ಧರ್ಮದ ಸಾರ, ವೇದ, ಉಪನಿಷತ್, ಜೈನ ತತ್ವಜ್ಞಾನ, ಶಂಕರ ರಾಮಾನುಜ, ಮಧ್ವ, ಪ್ಲೇಟೋ, ಪ್ಲಾಟಿನಸ್, ಕಾಂತ್, ಬ್ರ್ಯಾಡ್ಲೆ ಮುಂತಾದ ಮಹನೀಯರ ತತ್ವಜ್ಞಾನವನ್ನು ಆಳವಾಗಿ ಅಧ್ಯಯನ ಕೈಗೊಂಡರು. ಸತತ ಅಧ್ಯಯನ ಮತ್ತು ಕಠಿಣ ಪರಿಶ್ರಮದಿಂದ ಹಂತ ಹಂತವಾಗಿ ಮೇಲೇರುತ್ತಾ ಮುನ್ನಡೆದರು. ರಾಧಾಕೃಷ್ಣನ್ 1918ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನಲ್ಲಿ, ತತ್ವಜ್ಞಾನ ವಿಭಾಗದ ಉಪನ್ಯಾಸಕರಾಗಿ ಆಯ್ಕೆಯಾದರು. ದೇಶ ವಿದೇಶಗಳ ವಿವಿಧ ತತ್ವಜ್ಞಾನ ಪತ್ರಿಕೆಗಳಲ್ಲಿ ತಮ್ಮ ಆಳ ಮತ್ತು ಹರಿತವಾದ ವಿಚಾರಗಳನ್ನು ಹೊಂದಿದ್ದ ಲೇಖನಗಳನ್ನು ಬರೆಯುತ್ತಾ ಸಾಗಿದ ರಾಧಾಕೃಷ್ಣನ್, 'ದಿ ಫಿಲಾಸಫಿ ಆಫ್ ರವೀಂದ್ರನಾಥ್ ಠ್ಯಾಗೋರ್' ಎಂಬ ಮೊದಲ ಪುಸ್ತಕ ಬರೆದರು. ಇವರು ತೆಲುಗಿನಲ್ಲಿ ತಮ್ಮ ಸಹಿಯನ್ನು "ರಾಧಾಕ್ರಿಶ್ಣಯ್ಯ"ಎಂದು ಹಾಕುತಿದ್ದರು. ಮೈಸೂರಿನಲ್ಲಿ ಇವರ ಹೆಸರಿನ ರಸ್ತೆಯೊಂದಿದೆ. ತತ್ವಶಾಸ್ತ್ರದಲ್ಲಿ ಅನುಪಮ ಕೊಡುಗೆ ಭಾರತೀಯ ಪುಸ್ತಕೋದ್ಯಮದಲ್ಲಿ ಮಿಂಚುತ್ತಾ ಸಾಗಿದ ಇವರು, ಮುಂದೆ 'ಜಿನೀನ್ ಮೆನಿಫೆಸ್ಟೇಷನ್ ಆಫ್ ಇಂಡಿಯನ್ ಸ್ಪಿರಿಟ್' ಮತ್ತು 'ದಿ ರೀಜನ್ ಆಫ್ ರಿಲಿಜಿಯನ್ ಇನ್ ಕಾಂಟೆಂಪರರಿ ಫಿಲಾಸಫಿ' ಎನ್ನುವ ಪುಸ್ತಕಗಳನ್ನು ಸಹ ಬರೆದಿದ್ದಾರೆ. ತಮ್ಮ ಅಪಾರವಾದ ಪಾಂಡಿತ್ಯದಿಂದಾಗಿ ದೇಶ ವಿದೇಶಗಳಲ್ಲಿ ಮನೆಮಾತಾಗಿದ್ದರು. ಇವರ ತತ್ವಜ್ಞಾನಕ್ಕೆ ಶರಣಾದ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ 'ಧರ್ಮ ಮತ್ತು ನೀತಿಶಾಸ್ತ್ರ' ಎನ್ನುವ ವಿಷಯದ ಮೇಲೆ ಉಪನ್ಯಾಸ ನೀಡುವಂತೆ ಆಹ್ವಾನಿಸಿತು. ಸಪ್ತಸಾಗರಗಳಾಚೆ ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದು, ಭಾರತೀಯ ಸ್ವಾತಂತ್ರ್ಯಕ್ಕಾಗಿಯೂ ಹೋರಾಡಿದ ರಾಧಾಕೃಷ್ಣನ್, ಭಾರತೀಯ ಸನಾತನ ಧರ್ಮ, ತತ್ವಜ್ಞಾನ ಕುರಿತು ವಿದೇಶಿಯರಿಗೆ ಮನಮುಟ್ಟುವಂತೆ ಮನವರಿಕೆ ಮಾಡಿಕೊಟ್ಟು ಬಂದರು. ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಗಳು ೧೯೩೧ ರಲ್ಲಿ ಆಂಧ್ರ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಆಯ್ಕೆಯಾದ ರಾಧಾಕೃಷ್ಣನ್, ಐದು ವರ್ಷಗಳ ಕಾಲ ತಾವೊಬ್ಬ ಉತ್ತಮ ಶಿಕ್ಷಣ ಸುಧಾರಕರೂ ಹೌದು ಎಂಬುದನ್ನು ತಮ್ಮ ಸೇವಾವಧಿಯಲ್ಲಿ ತೋರಿಸಿಕೊಟ್ಟರು. ಇವರ ಅವಧಿಯಲ್ಲಿ ವಿಶ್ವವಿದ್ಯಾಲಯ ಅನೇಕ ಶಿಕ್ಷಣ ಮತ್ತು ಶಿಕ್ಷಣೇತರ ಸುಧಾರಣೆಗಳನ್ನು ಕಂಡಿತು. ೧೯೩೯ ರಲ್ಲಿ ಬನಾರಸ್ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಆಯ್ಕೆಯಾದರು. ಅಲ್ಲಿಯೂ ತಮ್ಮ ಅನುಭವವನ್ನು ಧಾರೆ ಎರೆಯುವ ಮೂಲ ದಕ ವಿಶ್ವವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ರಾಧಾಕೃಷ್ಣನ್ ಅವರನ್ನು, ೧೯೪೮ ರಲ್ಲಿ ವಿಶ್ವವಿದ್ಯಾಲಯ ಶಿಕ್ಷಣ ಆಯೋಗದ ಮುಖ್ಯಸ್ಥರನ್ನಾಗಿ ಸರಕಾರ ನೇಮಿಸಿತು. ೧೯೪೯ ರಲ್ಲಿ ಸೋವಿಯತ್ ರಷ್ಯಾಕ್ಕೆ ಭಾರತದ ರಾಯಭಾರಿಯಾಗಿ ನೇಮಕಗೊಂಡ ರಾಧಾಕೃಷ್ಣನ್, ಸ್ಟಾಲಿನ್‌ನಂತಹ ಮೇಧಾವಿಗಳ ಸರಿಸಮನಾಗಿ ನಿಲ್ಲುವ ವ್ಯಕ್ತಿತ್ವವನ್ನು ಬೆಳೆಸಿಕೊಂಡರು. 1951-52 ರಲ್ಲಿ ಭಾರತದ ಶಿಕ್ಷಕನೊಬ್ಬ ಮೊಟ್ಟಮೊದಲ ಉಪರಾಷ್ಟ್ರಪತಿಯಾಗಿ ನೇಮಕಗೊಂಡ 'ರಾಧಾಕೃಷ್ಣನ್', ರಾಜ್ಯಸಭೆಯಲ್ಲಿ ಸಂಸ್ಕೃತ ಶ್ಲೋಕಗಳ ಮೂಲಕ ಎಲ್ಲ ಸಂಸತ್ ಸದಸ್ಯರ ಗಮನ ಸೆಳೆಯುತ್ತಿದ್ದರು. 'ರಾಧಾಕೃಷ್ಣನ್' ಅವರ ಅಪಾರ ಸೇವೆಯನ್ನು ಗುರುತಿಸಿ ಗೌರವಿಸಿದ ಭಾರತ ಸರಕಾರ ಉಪರಾಷ್ಟ್ರಪತಿ ಹುದ್ದೆಯಲ್ಲಿದಾಗಲೇ ಅವರಿಗೆ ೧೯೫೪ ರಲ್ಲಿ ಪ್ರತಿಷ್ಠಿತ 'ಭಾರತ ರತ್ನ ಪ್ರಶಸ್ತಿ' ನೀಡಿ ಗೌರವಿಸಿತು. ಆಗ ರಾಧಾಕೃಷ್ಣನ್ ಅವರು ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನಲ್ಲಿ ತತ್ತ್ವಶಾಸ್ತ್ರ ವಿಭಾಗದಲ್ಲಿ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಮ್ಮ ಗುರು ಉಪರಾಷ್ಟ್ರಪತಿಯಾಗಿ ದೆಹಲಿಗೆ ಹೊರಡುವ ಸಂದರ್ಭದಲ್ಲಿ ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳು, ಅವರನ್ನು ಕಳುಹಿಸಿ ಕೊಡಲು ಸಾರೋಟನ್ನು ತಂದು ಅಲಂಕರಿಸಿ, ಕುದುರೆಯ ಬದಲು ತಾವೇ ಕುದುರೆಗಳಂತೆ, ರಾಧಾಕೃಷ್ಣನ್ ಅವರು ಕುಳಿತ ಸಾರೋಟನ್ನು ಪ್ರೀತಿಪೂರ್ವಕವಾಗಿ ರೈಲ್ವೆ ನಿಲ್ದಾಣದವರೆಗೂ ಎಳೆದು ಕೊಂಡು ಹೋಗಿ, ಭಾವಪೂರ್ಣ ವಿದಾಯ ಹೇಳಿದ್ದರು. ಈ ಸನ್ನಿವೇಶವನ್ನು ಕಂಡು ರಾಧಾಕೃಷ್ಣನ್ ಅವರು ಭಾವುಕರಾಗಿದ್ದರಂತೆ. ಅವರು ಆಗಾಗ ಈ ಸಂದರ್ಭವನ್ನು ನೆನೆಸಿಕೊಳ್ಳುತ್ತಿದ್ದರು. ಇದೇ ಸಂದರ್ಭದಲ್ಲಿ ರಾಧಾಕೃಷ್ಣನ್ ಕುರಿತು ಅಮೆರಿಕಾದಲ್ಲಿ 'ಫಿಲಾಸಫಿ ಆಫ್ ಡಾ.ಸರ್ವಪಲ್ಲಿ ರಾಧಾಕೃಷ್ಣನ್' ಪುಸ್ತಕ ಬಿಡುಗಡೆಗೊಂಡಿತು. 'ಡಾ. ರಾಜೇಂದ್ರ ಪ್ರಸಾದ್' ನಂತರ, ೧೯೬೨ ರಲ್ಲಿ ಭಾರತದ ಎರಡನೇ ರಾಷ್ಟ್ರಪತಿಯಾಗಿ ಆಯ್ಕೆಯಾದ ರಾಧಾಕೃಷ್ಣನ್, ತಮ್ಮ ಅಧಿಕಾರಾವಧಿಯಲ್ಲಿ ದೇಶದ ಸರ್ವತೋಮುಖ ಏಳಿಗೆಗೆ ಅವಿರತ ಶ್ರಮಿಸಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸಂಬಂಧಗಳನ್ನು ಉನ್ನತೀಕರಣಗೊಳಿಸುತ್ತಾ, ದೇಶದೊಳಗಿನ ಆಂತರಿಕ ಕಲಹಗಳಿಗೆ ತಿಲಾಂಜಲಿ ನೀಡುತ್ತಾ, ದೇಶವನ್ನು ಸುಭಿಕ್ಷವಾಗಿಸಿದ ಕೀರ್ತಿ 'ಡಾ.ರಾಧಾ ಕೃಷ್ಣನ್' ಅವರಿಗೆ ಸಲ್ಲುತ್ತದೆ. ' ಶಿಕ್ಷಕರ ದಿನಾಚರಣೆಯ ದಿನ' ಭಾರತೀಯ ಶಿಕ್ಷಣ ಕ್ಷೇತ್ರಕ್ಕೊಂದು ಅರ್ಥವತ್ತಾದ ಚೌಕಟ್ಟನ್ನು ನೀಡುವ ಮೂಲಕ, ಶಿಕ್ಷಣ ಕ್ಷೇತ್ರ, ತತ್ವಜ್ಞಾನ, ದೇಶದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್, ಭಾರತೀಯರ ಮನದಲ್ಲಿ ಅಚ್ಚಳಿಯದ ಛಾಪೊತ್ತಿದ್ದಾರೆ. ಇವರು ಓರ್ವ ಶ್ರೇಷ್ಠ ಶಿಕ್ಷಣ ತಜ್ಞರಾಗಿದ್ದರು. ಇವರ ಜನ್ಮದಿನವಾದ [ಸೆಪ್ಟೆಂಬರ್ ೫]ರಂದು ಪ್ರತಿ ವರ್ಷ ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ಆಗ ರಾಧಾಕೃಷ್ಣನ್ ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನಲ್ಲಿ ತತ್ತ್ವಶಾಸ್ತ್ರ ವಿಭಾಗದಲ್ಲಿ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಮ್ಮ ಗುರು ಉಪರಾಷ್ಟ್ರಪತಿಯಾಗಿ ದೆಹಲಿಗೆ ಹೊರಡುವ ಸಂದರ್ಭದಲ್ಲಿ ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳು, ಅವರನ್ನು ಕಳುಹಿಸಿ ಕೊಡಲು ಸಾರೋಟನ್ನು ತಂದು ಅಲಂಕರಿಸಿ, ಕುದುರೆಯ ಬದಲು ತಾವೇ ಕುದುರೆಗಳಂತೆ, ರಾಧಾಕೃಷ್ಣನ್ ಅವರು ಕುಳಿತ ಸಾರೋಟನ್ನು ಪ್ರೀತಿಪೂರ್ವಕವಾಗಿ ರೈಲ್ವೆ ನಿಲ್ದಾಣದವರೆಗೂ ಎಳೆದು ಕೊಂಡು ಹೋಗಿ, ಭಾವಪೂರ್ಣ ವಿದಾಯ ಹೇಳಿದ್ದರು. ಈ ಸನ್ನಿವೇಶವನ್ನು ಕಂಡು ರಾಧಾಕೃಷ್ಣನ್ ಅವರು ಭಾವುಕರಾಗಿದ್ದರಂತೆ. ಅವರು ಆಗಾಗ ಈ ಸಂದರ್ಭವನ್ನು ನೆನೆಸಿಕೊಳ್ಳುತ್ತಿದ್ದರು. ಇದೇ ಸಂದರ್ಭದಲ್ಲಿ ರಾಧಾಕೃಷ್ಣನ್ ಕುರಿತು ಅಮೆರಿಕಾದಲ್ಲಿ 'ಫಿಲಾಸಫಿ ಆಫ್ ಡಾ.ಸರ್ವಪಲ್ಲಿ ರಾಧಾಕೃಷ್ಣನ್' ಪುಸ್ತಕ ಬಿಡುಗಡೆಗೊಂಡಿತು. 'ಡಾ. ರಾಜೇಂದ್ರ ಪ್ರಸಾದ್' ನಂತರ, ೧೯೬೨ ರಲ್ಲಿ ಭಾರತದ ಎರಡನೇ ರಾಷ್ಟ್ರಪತಿಯಾಗಿ ಆಯ್ಕೆಯಾದ ರಾಧಾಕೃಷ್ಣನ್, ತಮ್ಮ ಅಧಿಕಾರಾವಧಿಯಲ್ಲಿ ದೇಶದ ಸರ್ವತೋಮುಖ ಏಳಿಗೆಗೆ ಅವಿರತ ಶ್ರಮಿಸಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸಂಬಂಧಗಳನ್ನು ಉನ್ನತೀಕರಣಗೊಳಿಸುತ್ತಾ, ದೇಶದೊಳಗಿನ ಆಂತರಿಕ ಕಲಹಗಳಿಗೆ ತಿಲಾಂಜಲಿ ನೀಡುತ್ತಾ, ದೇಶವನ್ನು ಸುಭಿಕ್ಷವಾಗಿಸಿದ ಕೀರ್ತಿ 'ಡಾ.ರಾಧಾ ಕೃಷ್ಣನ್' ಅವರಿಗೆ ಸಲ್ಲುತ್ತದೆ. ಆಯ್ಕೆಯಾದ ರಾಧಾಕೃಷ್ಣನ್, ಐದು ವರ್ಷಗಳ ಕಾಲ ತಾವೊಬ್ಬ ಉತ್ತಮ ಶಿಕ್ಷಣ ಸುಧಾರಕರೂ ಹೌದು ಎಂಬುದನ್ನು ತಮ್ಮ ಸೇವಾವಧಿಯಲ್ಲಿ ತೋರಿಸಿಕೊಟ್ಟರು. ಇವರ ಅವಧಿಯಲ್ಲಿ ವಿಶ್ವವಿದ್ಯಾಲಯ ಅನೇಕ ಶಿಕ್ಷಣ ಮತ್ತು ಶಿಕ್ಷಣೇತರ ಸುಧಾರಣೆಗಳನ್ನು ಕಂಡಿತು. ೧೯೩೯ ರಲ್ಲಿ ಬನಾರಸ್ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಆಯ್ಕೆಯಾದರು. ಅಲ್ಲಿಯೂ ತಮ್ಮ ಅನುಭವವನ್ನು ಧಾರೆ ಎರೆಯುವ ಮೂಲಕ ವಿಶ್ವವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ರಾಧಾಕೃಷ್ಣನ್ ಅವರನ್ನು, ೧೯೪೮ ರಲ್ಲಿ ವಿಶ್ವವಿದ್ಯಾಲಯ ಶಿಕ್ಷಣ ಆಯೋಗದ ಮುಖ್ಯಸ್ಥರನ್ನಾಗಿ ಸರಕಾರ ನೇಮಿಸಿತು. ೧೯೪೯ ರಲ್ಲಿ ಸೋವಿಯತ್ ರಷ್ಯಾಕ್ಕೆ ಭಾರತದ ರಾಯಭಾರಿಯಾಗಿ ನೇಮಕಗೊಂಡ ರಾಧಾಕೃಷ್ಣನ್, ಸ್ಟಾಲಿನ್‌ನಂತಹ ಮೇಧಾವಿಗಳ ಸರಿಸಮನಾಗಿ ನಿಲ್ಲುವ ವ್ಯಕ್ತಿತ್ವವನ್ನು ಬೆಳೆಸಿಕೊಂಡರು. ಬಿರುದುಗಳು ಬ್ರಿಟನ್ ಆಕ್ಸ್ ಫಾರ್ಡ್ ವಿ.ವಿ. ಗೌರವ ಡಾಕ್ಟರೇಟ್ (೧೯೫೨ ), ಅಮೇರಿಕ ಹಾರ್ವರ್ಡ್ ವಿ.ವಿ. ಗೌರವ ಡಾಕ್ಟರೇಟ್ (೧೯೫೩ ), ಲಂಡನ್ ಪ್ರವಾಸದಲ್ಲಿದ್ದಾಗ "ಆರ್ಡರ್ ಆಫ್ ಮೆರಿನ್"ಪ್ರಶಸ್ತಿ, ವ್ಯಾಟಿಕನ್ ಸಿಟಿ ಪೋಪ್ ಜಾನ್ ರಿಂದ "ನೈಟ್ ಆಫ್ ದ ಆರ್ಮಿ. ಕೇಂದ್ರ ಸಾಹಿತ್ಯ ಅಕಾಡೆಮಿ ಫೆಲೋಶಿಪ್ -೧೯೬೮ , ಭಾರತೀಯ ವಿದ್ಯಾಭವನ "ಬ್ರಹ್ಮ ವಿದ್ಯಾ ಭಾಸ್ಕರ "ಬಿರುದು, "ಟೆಂಪಲ್ಟನ್"ಪ್ರಶಸ್ತಿ ೧೯೭೩ರಲ್ಲಿ. "೧೯೫೪ ರಲ್ಲಿ ಪ್ರತಿಷ್ಠಿತ 'ಭಾರತ ರತ್ನ ಪ್ರಶಸ್ತಿ' ಗೌರವ ನಿಧನ ತಮ್ಮ 'ರಾಷ್ಟ್ರಪತಿ ಹುದ್ದೆ'ಯ ಅಧಿಕಾರಾವಧಿ ಮುಗಿದ ನಂತರ ೧೯೬೭ ರಲ್ಲಿ ತಮ್ಮ 'ನಿವೃತ್ತಿ ಜೀವನ'ವನ್ನು ಮದ್ರಾಸಿನ 'ಮೈಲಾಪುರ'ದಲ್ಲಿರುವ ತಮ್ಮ ಅಧಿಕೃತ ನಿವಾಸ 'ಗಿರಿಜಾ'ದಲ್ಲಿ ಕಳೆದ ರಾಧಾಕೃಷ್ಣನ್, ೧೯೭೫ ರ ಏಪ್ರಿಲ್ ೧೭ ರಂದು ಇಹಲೋಕ ತ್ಯಜಿಸಿದರು ಉಲ್ಲೇಖಗಳು ಬಾಹ್ಯ ಕೊಂಡಿಗಳು http://www.uramamurthy.com/srk_phil.html https://www.youtube.com/watch?v=UjwhXOqfBJY www.youtube.com www.uramamurthy.com/srk_phil.html ಭಾರತದ ರಾಷ್ಟ್ರಪತಿಗಳು ಭಾರತ ರತ್ನ ಪುರಸ್ಕೃತರು ವಿದ್ವಾಂಸರು
1908
https://kn.wikipedia.org/wiki/%E0%B2%AC%E0%B3%87%E0%B2%B2%E0%B3%82%E0%B2%B0%E0%B3%81
ಬೇಲೂರು
ಬೇಲೂರು - ಹಾಸನ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳಲ್ಲೊಂದು. ಶಿಲಾಬಾಲಿಕೆಯರ ಬೇಲೂರು ಎಂದು ಪ್ರಸಿದ್ಧವಾಗಿರುವ ಬೇಲೂರು, ಶಿಲ್ಪಕಲೆಗೆ ಖ್ಯಾತಿ ಪಡೆದಿದೆ. ಹಳೇಬೀಡು, ಸೋಮನಾಥಪುರದ ಜೊತೆಗೆ ಬೇಲೂರು, ಹೊಯ್ಸಳ ಸಾಮ್ರಾಜ್ಯದ ಶಿಲ್ಪಕಲೆಯ ದೇವಾಲಯಗಳೆಂದು ಪ್ರಸಿದ್ಧವಾಗಿವೆ.ಬೇಲೂರಿನ ಶ್ರೀ ಚೆನ್ನಕೇಶವ ದೇವಾಲಯವು ಸಹಸ್ರಾರು ಪ್ರವಾಸಿಗರನ್ನು ತನ್ನೆಡೆಗೆ ತನ್ನ ಶಿಲ್ಪಕಲೆಗಳ ಮೂಲಕ ಸೆಳೆಯುತ್ತದೆ.ಪ್ರತಿ ವರ್ಷ ಚಂದ್ರಮಾನ ಯುಗಾದಿಯ ದಿನದಿಂದ ಒಂದು ತಿಂಗಳ ವರೆಗೂ ಶ್ರೀ ಚನ್ನಕೇಶವ ಸ್ವಾಮಿಯವರಿಗೆ ಅನೇಕ ಉತ್ಸವಗಳು ಜರುಗುತ್ತವೆ. ಯುಗಾದಿಯ ಹನ್ನೊಂದನೇ ನೇ ದಿನ ಮತ್ತು ಹನ್ನೆರಡನೇ ದಿನ ರಥೋತ್ಸವ ನೆಡೆಯುತ್ತದೆ.ಸ್ವಾಮಿಯ ದರ್ಶನಕ್ಕೆ ಲಕ್ಷಾಂತರ ಭಕ್ತಾದಿಗಳು ಹರಿಸಿ ಬರುತ್ತಾರೆ. ಬಹಳ ವಿಜೃಂಭಣೆಯಿಂದ ನೆಡೆಯುವ ಈ ಹಬ್ಬ ನಮ್ಮ ಬೇಲೂರಿನ ಹೆಮ್ಮೆಯಾಗಿದೆ..ನಮ್ಮ ಬೇಲೂರು ಶಿಲ್ಪಕಲೆಗಳ ಬೀಡು ಶಿಲ್ಪ ಕಲೆಗಳ ತವರೂರು ನಮ್ಮ ಈ ಬೇಲೂರು ನಮ್ಮ ಹೆಮ್ಮೆಯ ಊರು. ಹಳೇಬೀಡಿಗೆ ಮುನ್ನ ಬೇಲೂರು ಹೊಯ್ಸಳ ಸಾಮ್ರಾಜ್ಯದ ರಾಜಧಾನಿಯಾಗಿತ್ತು. [8/30, 14:28] ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಬೇಲೂರು ಹಾಸನ ಜಿಲ್ಲೆಯಲ್ಲಿರುವ ಅತ್ಯಂತ ಪ್ರಸಿದ್ಧ ದೇವಾಲಯದ ಪಟ್ಟಣವಾಗಿದೆ. ವಿಷ್ಣುವಿನ ಅವತಾರ ಚೆನ್ನಕೇಶವನಿಗೆ ಅರ್ಪಿತವಾದ ಭವ್ಯವಾದ ದೇವಸ್ಥಾನಕ್ಕೆ ಬೇಲೂರು ಹೆಸರುವಾಸಿಯಾಗಿದ್ದು, ಬೆಂಗಳೂರು ಬಳಿ ಭೇಟಿ ನೀಡುವ ಅತ್ಯಂತ ಜನಪ್ರಿಯ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಬೇಲೂರು ಚೆನ್ನಕೇಶವ ದೇವಸ್ಥಾನವು 10-14ನೇ ಶತಮಾನದ ಕರ್ನಾಟಕದ ಆಡಳಿತಗಾರರಾದ ಹೊಯ್ಸಳರ ರಾಜಧಾನಿಯಾಗಿದೆ. ಅವರು ತಮ್ಮ ಸುಂದರವಾದ ದೇವಾಲಯದ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಬೇಲೂರು ಕರ್ನಾಟಕದ ಹಾಸನ ಜಿಲ್ಲೆಯ ಒಂದು ಸಣ್ಣ ಪಟ್ಟಣವಾಗಿದೆ. ಇದು ಯಗಚಿ ನದಿಯ ದಡದಲ್ಲಿ ಸೊಂಪಾದ ಸುತ್ತಮುತ್ತಲಿನ ನಡುವೆ ಇದೆ. ವೇಲಾಪುರ ಎಂದೂ ಕರೆಯಲ್ಪಡುವ ಇದು ಪ್ರಾಚೀನ ಮತ್ತು ಪ್ರಮುಖ ಪಟ್ಟಣವಾಗಿದೆ. ಹೊಯ್ಸಳರು ಪ್ರಾಥಮಿಕವಾಗಿ ಪಶ್ಚಿಮ ಘಟ್ಟಗಳ ಮಲೆನಾಡು ಎಂಬ ಪ್ರದೇಶದಿಂದ ಬಂದವರು. ಯುದ್ಧ ತಂತ್ರಗಳಲ್ಲಿ ಪಾರಂಗತರಾಗಿದ್ದರು. ಅವರು ಚಾಲುಕ್ಯರು ಮತ್ತು ಕಲಚೂರಿ ರಾಜವಂಶದ ನಡುವೆ ನಡೆಯುತ್ತಿರುವ ಆಂತರಿಕ ಯುದ್ಧಗಳ ಲಾಭವನ್ನು ಪಡೆದರು ಮತ್ತು ಇಂದಿನ ಕರ್ನಾಟಕದ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಂಡರು. 13 ನೇ ಶತಮಾನದ ವೇಳೆಗೆ ಅವರು ಕರ್ನಾಟಕದ ಹೆಚ್ಚಿನ ಭಾಗಗಳನ್ನು ತಮಿಳುನಾಡಿನ ಸಣ್ಣ ಭಾಗಗಳನ್ನು ಮತ್ತು ಪಶ್ಚಿಮ ಆಂಧ್ರಪ್ರದೇಶ ಮತ್ತು ತೆಲಂಗಾಣದ ಕೆಲವು ಭಾಗಗಳನ್ನು ಆಳುತ್ತಿದ್ದರು ಬೇಲೂರು ಚೆನ್ನಕೇಶವ ದೇವಸ್ಥಾನವು ಹಾಸನದಿಂದ 38 ಕಿಮೀ ದೂರದಲ್ಲಿದೆ. ಚೆನ್ನಕೇಶವ ದೇವಾಲಯವು ವಿಶ್ವವಿಖ್ಯಾತ ಪ್ರವಾಸಿ ತಾಣವಾಗಿದೆ. ಬೇಲೂರು ಹೊಯ್ಸಳರ ಹಿಂದಿನ ರಾಜಧಾನಿಯಾಗಿತ್ತು ಮತ್ತು ದಂತಕಥೆಗಳಲ್ಲಿ ವಿವಿಧ ಹಂತಗಳಲ್ಲಿ ವೇಲಾಪುರ, ವೇಲೂರು ಮತ್ತು ಬೆಲಹೂರ್ ಎಂದು ಉಲ್ಲೇಖಿಸಲಾಗಿದೆ. ಹೊಯ್ಸಳರ ಕೆಲಸಗಾರಿಕೆಯ ಅತ್ಯುತ್ತಮ ಉದಾಹರಣೆಗಳಲ್ಲಿ ಒಂದಾದ ಚೆನ್ನಕೇಶವ ದೇವಾಲಯಕ್ಕೆ ಪಟ್ಟಣವು ಹೆಸರುವಾಸಿಯಾಗಿದೆ. ಹೊಯ್ಸಳರು ತಮ್ಮ ರಚನೆಗಳಿಗೆ ಮೃದುವಾದ ಸಾಬೂನು ಕಲ್ಲುಗಳನ್ನು ಬಳಸಿದರು ಏಕೆಂದರೆ ಅವುಗಳು ಸಂಕೀರ್ಣವಾದ ಕೆತ್ತನೆಗಳಿಗೆ ಸೂಕ್ತವೆಂದು ಕಂಡುಹಿಡಿದವು. ವಿಜಯನಗರ ವಿನ್ಯಾಸದಲ್ಲಿ ಗೋಪುರವನ್ನು ಹೊಂದಿರುವ ಪ್ರಕಾರದಿಂದ ಸೀಮಿತವಾಗಿರುವ ಈ ದೇವಾಲಯವು ವೇದಿಕೆ ಮೇಲೆ ನಿಂತಿದೆ ಮತ್ತು ದೊಡ್ಡ ಪೆಟ್ಟಿಗೆಯಂತೆ ಕಾಣುತ್ತದೆ. ಈ ಕಲಾಕೃತಿಯಲ್ಲಿ ಗಮನಾರ್ಹವಾದ ಕೆಲಸ ಮತ್ತು ಸಾಮರ್ಥ್ಯವು ಸಂಪೂರ್ಣವಾಗಿ ಉಸಿರುಗಟ್ಟುತ್ತದೆ. ಬೇಲೂರು ಚೆನ್ನಕೇಶವ ದೇವಸ್ಥಾನದ ಇತಿಹಾಸ ಬೇಲೂರು ಚೆನ್ನಕೇಶವ ದೇವಸ್ಥಾನದ ಇತಿಹಾಸ. ಬೇಲೂರು ಚೆನ್ನಕೇಶವ ದೇವಸ್ಥಾನದ ಇತಿಹಾಸ ಬೇಲೂರಿನಲ್ಲಿರುವ ದೇವಾಲಯವನ್ನು ವಿಷ್ಣುವರ್ಧನನು ಕ್ರಿ.ಶ.1117 ರಲ್ಲಿ ನಿರ್ಮಿಸಿದನು. ಈ ವಾಸ್ತುಶಿಲ್ಪದ ಮೇರುಕೃತಿಯನ್ನು ಪೂರ್ಣಗೊಳಿಸಲು ರಾಜಮನೆತನದ ಮೂರು ತಲೆಮಾರಿನವರು 103 ವರ್ಷಗಳನ್ನು ತೆಗೆದುಕೊಂಡರು. ಕಲ್ಲಿನ ಮೇಲೆ ಈ ಅದ್ಭುತವನ್ನು ರಚಿಸಲು 1000 ಕ್ಕೂ ಹೆಚ್ಚು ಕಲಾವಿದರು ತೊಡಗಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತದೆ. ಈ ದೇವಾಲಯವು ಚೆನ್ನಕೇಶವ ಎಂದು ಕರೆಯಲ್ಪಡುವ ವಿಷ್ಣುವಿಗೆ ಸಮರ್ಪಿತವಾಗಿದೆ. ಚೋಳರ ಮೇಲೆ ರಾಜ ವಿಷ್ಣುವರ್ಧನ್ ಅವರು ಮಾಡಿದ ಪ್ರಮುಖ ಮಿಲಿಟರಿ ವಿಜಯದ ನೆನಪಿಗಾಗಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಸ್ಥಳೀಯ ನಂಬಿಕೆಯ ಪ್ರಕಾರ ರಾಜ ವಿಷ್ಣುವರ್ಧನ್ ಜೈನ ಧರ್ಮದಿಂದ ವೈಷ್ಣವಕ್ಕೆ ಮತಾಂತರಗೊಂಡುದನ್ನು ಗುರುತಿಸಲು ಭಗವಾನ್ ವಿಷ್ಣುವಿನ ಗೌರವಾರ್ಥವಾಗಿ ಇದನ್ನು ನಿರ್ಮಿಸಲಾಗಿದೆ. ರಾಜ ವಿಷ್ಣುವರ್ಧನ್ ಅವರು ಜೈನ ಧರ್ಮದವರಾಗಿದ್ದಾಗ ಅವರನ್ನು ಬಿಟ್ಟಿದೇವ್ ಎಂದು ಕರೆಯಲಾಗುತ್ತಿತ್ತು. ಅವರ ಗುರುಗಳಾದ ಶ್ರೀ ರಾಮಾನುಜಾಚಾರ್ಯರ ಪ್ರಭಾವದಿಂದ ಅವರು ಹಿಂದೂ ಧರ್ಮಕ್ಕೆ ಮತಾಂತರಗೊಂಡರು. ಅವನ ರಾಣಿ ಶಾಂತಲಾ ದೇವಿಯು ಕಲೆ ಸಂಗೀತ ಮತ್ತು ನೃತ್ಯಗಳ ಮಹಾನ್ ಪೋಷಕರಾಗಿದ್ದರು. ಅವಳು ಸ್ವತಃ ಬಹುಮುಖ ಭರತನಾಟ್ಯ ನೃತ್ಯಗಾರ್ತಿಯಾಗಿದ್ದಳು ಮತ್ತು ಅವಳನ್ನು ನೃತ್ಯದ ರಾಣಿ ಎಂದೂ ಕರೆಯಲ್ಪಡುತ್ತಿದ್ದಳು. ಸೋಪ್‌ಸ್ಟೋನ್‌ನಿಂದ ನಿರ್ಮಿಸಲಾದ ಚೆನ್ನಕೇಶವ ದೇವಾಲಯವು ವಿಶಿಷ್ಟವಾದ ಹೊಯ್ಸಳ ಶೈಲಿಯ ನೀಲನಕ್ಷೆಯ ಸುತ್ತಲೂ ನಿರ್ಮಿಸಲಾದ ಅತ್ಯಂತ ವಿವರವಾದ ಮುಕ್ತಾಯವನ್ನು ಹೊಂದಿದೆ.ಸಾಮ್ರಾಜ್ಯವು ಮುಖ್ಯವಾಗಿ ಅದರ ಮಿಲಿಟರಿ ವಿಜಯಗಳಿಗಿಂತ ಹೆಚ್ಚಾಗಿ ಅದರ ದೇವಾಲಯದ ವಾಸ್ತುಶಿಲ್ಪಕ್ಕಾಗಿ ನೆನಪಿಸಿಕೊಳ್ಳುತ್ತದೆ. ಈ ಕಾಲದ ನೂರಕ್ಕೂ ಹೆಚ್ಚು ದೇವಾಲಯಗಳು ಕರ್ನಾಟಕದ ವಿವಿಧ ಭಾಗಗಳಲ್ಲಿ ಇಂದಿಗೂ ಇವೆ. ಮೂರು ಅತ್ಯಂತ ಪ್ರಸಿದ್ಧ ಹೊಯ್ಸಳ ದೇವಾಲಯಗಳೆಂದರೆ ಸೋಮನಾಥಪುರದ ಕೇಶವ ದೇವಾಲಯ, ಬೇಲೂರಿನ ಚೆನ್ನಕೇಶವ ದೇವಾಲಯ ಮತ್ತು ಹಳೇಬೀಡುವಿನ ಹೊಯ್ಸಳೇಶ್ವರ ದೇವಾಲಯ. ಬೇಲೂರು ಚೆನ್ನಕೇಶವ ದೇವಾಲಯದ ಕಲೆ ಮತ್ತು ವಾಸ್ತುಶಿಲ್ಪ ಬೇಲೂರು ಚೆನ್ನಕೇಶವ ದೇವಾಲಯದ ಕಲೆ ಮತ್ತು ವಾಸ್ತುಶಿಲ್ಪ ಬೇಲೂರು ಚೆನ್ನಕೇಶವ ದೇವಾಲಯದ ಕಲೆ ಮತ್ತು ವಾಸ್ತುಶಿಲ್ಪ ದೇವಾಲಯದ ಕಂಬಗಳು ಸಂಪೂರ್ಣ ಸಂಕೀರ್ಣದಲ್ಲಿ ಶಿಲ್ಪಕಲೆ ಮತ್ತು ಕಲಾಕೃತಿಯ ಕೆಲವು ಅತ್ಯುತ್ತಮ ವಿವರಗಳನ್ನು ಮತ್ತು ಪೂರ್ಣಗೊಳಿಸುವಿಕೆಯನ್ನು ಪ್ರದರ್ಶಿಸುತ್ತವೆ. ಈ ದೇವಾಲಯದ ಕಂಬಗಳಲ್ಲಿ ನರಸಿಂಹ ಸ್ತಂಭವು ಅತ್ಯಂತ ಜನಪ್ರಿಯವಾಗಿದೆ. ಇಲ್ಲಿ ಒಟ್ಟು 48 ಕಂಬಗಳಿದ್ದು ಎಲ್ಲವನ್ನೂ ವಿಶಿಷ್ಟವಾಗಿ ಕೆತ್ತಲಾಗಿದೆ ಮತ್ತು ಅಲಂಕರಿಸಲಾಗಿದೆ. ಇಲ್ಲಿ ನಾಲ್ಕು ಕೇಂದ್ರ ಸ್ತಂಭಗಳನ್ನು ಕುಶಲಕರ್ಮಿಗಳು ಮತ್ತು ವೈಶಿಷ್ಟ್ಯ ಮದನಿಕಾಗಳು ಅಥವಾ ಆಕಾಶದ ಡ್ಯಾಮ್ಸ್‌ಗಳು ಕೈಯಿಂದ ಕತ್ತರಿಸಿದ್ದರು . ಮದನಿಕರು ವಿಭಿನ್ನ ಭಂಗಿಗಳಲ್ಲಿದ್ದಾರೆ ಮತ್ತು ಪ್ರವಾಸಿಗರು ಮತ್ತು ಕಲಾ ಉತ್ಸಾಹಿಗಳ ಆಕರ್ಷಣೆಯನ್ನು ಗಳಿಸುವ ಕೆಲವು ಜನಪ್ರಿಯವಾದವುಗಳಲ್ಲಿ ಗಿಣಿಯೊಂದಿಗೆ ಮಹಿಳೆ ಮತ್ತು ಬೇಟೆಗಾರ್ತಿ ಸೇರಿದ್ದಾರೆ. ದೇವಾಲಯದ ಗೋಡೆಯ ಶಿಲ್ಪಗಳ ವಿವರಗಳನ್ನು ಅಧ್ಯಯನ ಮಾಡಲು ಉತ್ಸುಕರಾಗಿರುವ ಸಂದರ್ಶಕರು ಮಹಾಭಾರತ ಮತ್ತು ರಾಮಾಯಣದ ಪ್ರಮುಖ ಘಟನೆಗಳ ಅನೇಕ ಉಲ್ಲೇಖಗಳು ಮತ್ತು ಚಿತ್ರಣಗಳನ್ನು ಕಾಣಬಹುದು. ಗೋಡೆಯ ಶಿಲ್ಪಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಪ್ರಾಣಿಗಳಲ್ಲಿ ಕುದುರೆಗಳು, ಆನೆಗಳು ಮತ್ತು ಸಿಂಹಗಳು ಸಹ ನೋಡಬಹುದು. ದೇವಾಲಯದ ಮಂಟಪದ ದ್ವಾರಗಳು ಹೊಯ್ಸಳ ರಾಜನು ಹುಲಿ ಅಥವಾ ಸಿಂಹ ಎಂದು ಇತಿಹಾಸಕಾರರು ನಂಬುವದನ್ನು ಕೊಲ್ಲುವುದನ್ನು ಒಳಗೊಂಡಿದೆ. ಇದು ಚೋಳರ ಸೋಲಿನ ಸಾಂಕೇತಿಕ ನಿರೂಪಣೆಯಾಗಿರಬಹುದು ಎಂದು ನಂಬಲಾಗಿದೆ. ಅವರ ರಾಜ ಲಾಂಛನವು ಹುಲಿಯಾಗಿದೆ. ದೇವಾಲಯದ ವಿಸ್ತಾರವಾದ ಸಂಕೀರ್ಣದಲ್ಲಿ ಇನ್ನೂ ಅನೇಕ ಪ್ರಮುಖ ಶಿಲ್ಪಗಳನ್ನು ನೋಡಬಹುದು. ಗಂಧರ್ವ ನರ್ತಕಿ ಮತ್ತು ಶಾಂತಲಾದೇವಿಯ ಆಕೃತಿಗಳು ಗಮನ ಸೆಳೆಯುತ್ತವೆ ಏಕೆಂದರೆ ಅವರ ಪರಿಕರಗಳು ಚಲಿಸಬಲ್ಲವು. ರಾಣಿಯ ಶಿರಸ್ತ್ರಾಣದ ಮೇಲಿನ ಸಣ್ಣ ಉಂಗುರ ನೈಋತ್ಯ ಸ್ತಂಭ ಮತ್ತು ನರ್ತಕಿಯ ತೋಳಿನ ಮೇಲೆ ಬಳೆ ವಾಯುವ್ಯ ಕಂಬದಲ್ಲಿ ತಿರುಗಬಹುದು ಎಂದು ಹೇಳಲಾಗುತ್ತದೆ. ಚೆನ್ನಕೇಶವನ ದಂತಕಥೆ ಚೆನ್ನಕೇಶವನ ದಂತಕಥೆ ಚೆನ್ನಕೇಶವನ ದಂತಕಥೆ ರಾಜ ವಿಷ್ಣುವರ್ಧನನು ಬಾಬಾ ಬುಡನ್ ಕಾಡಿನಲ್ಲಿ ರಾತ್ರಿ ತಂಗಿದ್ದಾಗ ಭಗವಾನ್ ಕೇಶವನ ಬಗ್ಗೆ ಕನಸು ಕಂಡನು ಮತ್ತು ಬೇಲೂರಿನಲ್ಲಿ ಚನ್ನ ಕೇಶವ ದೇವಾಲಯವನ್ನು ನಿರ್ಮಿಸಲು ನಿರ್ಧರಿಸಿದನು ಎಂದು ನಂಬಲಾಗಿದೆ. ಬಾಬಾ ಬುಡನ್ ಬೆಟ್ಟದಲ್ಲಿ ವಾಸಿಸುತ್ತಿದ್ದ ತನ್ನ ಸಂಗಾತಿಯಿಂದ ಅವನು ತಿಳಿಯದೆ ಭಗವಂತನನ್ನು ಬೇರ್ಪಡಿಸಿದನು. ಭಗವಂತನು ತನ್ನ ಸಂಗಾತಿಯನ್ನು ತೃಪ್ತಿಪಡಿಸಲು ವಾಡಿಕೆಯಂತೆ ಬೆಟ್ಟಗಳಿಗೆ ಹೋಗುತ್ತಾನೆ ಎಂದು ನಂಬಲಾಗಿದೆ. ಆದ್ದರಿಂದ ಸ್ಥಳೀಯ ಚಮ್ಮಾರ ಸಮುದಾಯವು ದೇವಾಲಯದ ಬಲಿಪೀಠದಲ್ಲಿ ಪ್ರತಿದಿನ ತಾಜಾ ಸ್ಯಾಂಡಲ್‌ಗಳನ್ನು ಪ್ರಸ್ತುತಪಡಿಸುತ್ತದೆ. ಭಗವಂತನಿಗೆ ಅರ್ಪಿಸಿದ ನಂತರ ಚಪ್ಪಲಿಗಳು ಮಾಯವಾಗುತ್ತವೆ ಎಂದು ಸ್ಥಳೀಯರು ನಂಬುತ್ತಾರೆ ಬೇಲೂರು ಚೆನ್ನಕೇಶವ ದೇವಸ್ಥಾನವನ್ನು ತಲುಪುವುದು ಹೇಗೆ? ರಸ್ತೆಯ ಮೂಲಕ ತಲುಪಲು NH75 ಬೆಂಗಳೂರು ನಗರವನ್ನು 220 ಕಿಲೋಮೀಟರ್ ದೂರದಲ್ಲಿರುವ ಬೇಲೂರಿಗೆ ಸಂಪರ್ಕಿಸುತ್ತದೆ. ಮೈಸೂರಿನಿಂದ ಪ್ರಯಾಣಿಸುವಾಗ ಪ್ರಯಾಣವು SH 57 ಮೂಲಕ 155 ಕಿಲೋಮೀಟರ್ ದೂರದಲ್ಲಿದೆ. NH73 ಮಂಗಳೂರನ್ನು ಕರಾವಳಿ ನಗರವಾದ ಮಂಗಳೂರಿಗೆ ಸಂಪರ್ಕಿಸುತ್ತದೆ. ಇದು 153 ಕಿಲೋಮೀಟರ್ ದೂರದಲ್ಲಿದೆ. ಹಾಸನ, ಚಿಕ್ಕಮಗಳೂರು, ಬೆಂಗಳೂರು, ಮೈಸೂರು, ಮತ್ತು ಮಂಗಳೂರಿನಿಂದ ಬೇಲೂರಿಗೆ ನಿಯಮಿತ ಬಸ್ಸುಗಳು ಚಲಿಸುತ್ತವೆ. ರೈಲಿನ ಮೂಲಕ ತಲುಪಲು 22 ಕಿಲೋಮೀಟರ್ ದೂರದಲ್ಲಿರುವ ಚಿಕ್ಕಮಗಳೂರು ಬೇಲೂರಿಗೆ ಹತ್ತಿರದ ರೈಲು ನಿಲ್ದಾಣವನ್ನು ಹೊಂದಿದೆ. ಹಾಸನ ರೈಲು ನಿಲ್ದಾಣವು ಬೇಲೂರು ಪಟ್ಟಣದಿಂದ ಸರಿಸುಮಾರು 32 ಕಿಲೋಮೀಟರ್ ದೂರದಲ್ಲಿದೆ. ಈ ಪಟ್ಟಣಗಳ ನಡುವೆ ಹಲವಾರು ಬಸ್ಸುಗಳು ಸಂಚರಿಸುತ್ತವೆ. ವಿಮಾನದ ಮೂಲಕ ತಲುಪಲು : ಬೇಲೂರು ಮಂಗಳೂರು ವಿಮಾನ ನಿಲ್ದಾಣದಿಂದ ಸರಿಸುಮಾರು 130 ಕಿಲೋಮೀಟರ್ ದೂರದಲ್ಲಿದೆ ಮತ್ತು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಸರಿಸುಮಾರು 222 ಕಿಲೋಮೀಟರ್ ದೂರಬೇಲೂರು ಚೆನ್ನಕೇಶವ ದೇವಸ್ಥಾನವು 10-14ನೇ ಶತಮಾನದ ಕರ್ನಾಟಕದ ಆಡಳಿತಗಾರರಾದ ಹೊಯ್ಸಳರ ರಾಜಧಾನಿಯಾಗಿದೆ. ಅವರು ತಮ್ಮ ಸುಂದರವಾದ ದೇವಾಲಯದ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಬೇಲೂರು ಕರ್ನಾಟಕದ ಹಾಸನ ಜಿಲ್ಲೆಯ ಒಂದು ಸಣ್ಣ ಪಟ್ಟಣವಾಗಿದೆ. ಇದು ಯಗಚಿ ನದಿಯ ದಡದಲ್ಲಿ ಸೊಂಪಾದ ಸುತ್ತಮುತ್ತಲಿನ ನಡುವೆ ಇದೆ. ವೇಲಾಪುರ ಎಂದೂ ಕರೆಯಲ್ಪಡುವ ಇದು ಪ್ರಾಚೀನ ಮತ್ತು ಪ್ರಮುಖ ಪಟ್ಟಣವಾಗಿದೆ. ಹೊಯ್ಸಳರು ಪ್ರಾಥಮಿಕವಾಗಿ ಪಶ್ಚಿಮ ಘಟ್ಟಗಳ ಮಲೆನಾಡು ಎಂಬ ಪ್ರದೇಶದಿಂದ ಬಂದವರು. ಯುದ್ಧ ತಂತ್ರಗಳಲ್ಲಿ ಪಾರಂಗತರಾಗಿದ್ದರು. ಅವರು ಚಾಲುಕ್ಯರು ಮತ್ತು ಕಲಚೂರಿ ರಾಜವಂಶದ ನಡುವೆ ನಡೆಯುತ್ತಿರುವ ಆಂತರಿಕ ಯುದ್ಧಗಳ ಲಾಭವನ್ನು ಪಡೆದರು ಮತ್ತು ಇಂದಿನ ಕರ್ನಾಟಕದ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಂಡರು. 13 ನೇ ಶತಮಾನದ ವೇಳೆಗೆ ಅವರು ಕರ್ನಾಟಕದ ಹೆಚ್ಚಿನ ಭಾಗಗಳನ್ನು ತಮಿಳುನಾಡಿನ ಸಣ್ಣ ಭಾಗಗಳನ್ನು ಮತ್ತು ಪಶ್ಚಿಮ ಆಂಧ್ರಪ್ರದೇಶ ಮತ್ತು ತೆಲಂಗಾಣದ ಕೆಲವು ಭಾಗಗಳನ್ನು ಆಳುತ್ತಿದ್ದರು. ಬೇಲೂರು ಚೆನ್ನಕೇಶವ ದೇವಸ್ಥಾನವು ಹಾಸನದಿಂದ 38 ಕಿಮೀ ದೂರದಲ್ಲಿದೆ. ಚೆನ್ನಕೇಶವ ದೇವಾಲಯವು ವಿಶ್ವವಿಖ್ಯಾತ ಪ್ರವಾಸಿ ತಾಣವಾಗಿದೆ. ಬೇಲೂರು ಹೊಯ್ಸಳರ ಹಿಂದಿನ ರಾಜಧಾನಿಯಾಗಿತ್ತು ಮತ್ತು ದಂತಕಥೆಗಳಲ್ಲಿ ವಿವಿಧ ಹಂತಗಳಲ್ಲಿ ವೇಲಾಪುರ, ವೇಲೂರು ಮತ್ತು ಬೆಲಹೂರ್ ಎಂದು ಉಲ್ಲೇಖಿಸಲಾಗಿದೆ. ಹೊಯ್ಸಳರ ಕೆಲಸಗಾರಿಕೆಯ ಅತ್ಯುತ್ತಮ ಉದಾಹರಣೆಗಳಲ್ಲಿ ಒಂದಾದ ಚೆನ್ನಕೇಶವ ದೇವಾಲಯಕ್ಕೆ ಪಟ್ಟಣವು ಹೆಸರುವಾಸಿಯಾಗಿದೆ. ಹೊಯ್ಸಳರು ತಮ್ಮ ರಚನೆಗಳಿಗೆ ಮೃದುವಾದ ಸಾಬೂನು ಕಲ್ಲುಗಳನ್ನು ಬಳಸಿದರು ಏಕೆಂದರೆ ಅವುಗಳು ಸಂಕೀರ್ಣವಾದ ಕೆತ್ತನೆಗಳಿಗೆ ಸೂಕ್ತವೆಂದು ಕಂಡುಹಿಡಿದವು. ವಿಜಯನಗರ ವಿನ್ಯಾಸದಲ್ಲಿ ಗೋಪುರವನ್ನು ಹೊಂದಿರುವ ಪ್ರಕಾರದಿಂದ ಸೀಮಿತವಾಗಿರುವ ಈ ದೇವಾಲಯವು ವೇದಿಕೆ ಮೇಲೆ ನಿಂತಿದೆ ಮತ್ತು ದೊಡ್ಡ ಪೆಟ್ಟಿಗೆಯಂತೆ ಕಾಣುತ್ತದೆ. ಈ ಕಲಾಕೃತಿಯಲ್ಲಿ ಗಮನಾರ್ಹವಾದ ಕೆಲಸ ಮತ್ತು ಸಾಮರ್ಥ್ಯವು ಸಂಪೂರ್ಣ ವಾಗಿ ಉಸಿರುಗಟ್ಟುತ್ತದೆ ಶಾಸನಗಳ ಪ್ರಕಾರ ಶಾಸನಗಳ ಪ್ರಕಾರ ಈ ನಗರವನ್ನು ವೇಲಾಪುರಿ ಎಂದೂ ಕರೆಯಲಾಗುತಿತ್ತು ಎಂದು ತಿಳಿದುಬರುತ್ತದೆ. ೨೦೦೫ರಲ್ಲಿ ಆರ್ಖಿಯಾಲಾಜಿಕಲ್ ಸರ್ವೆ ಆಫ್ ಇಂಡಿಯದವರು ಶ್ರವಣಬೆಳಗೊಳದ ಗೊಮ್ಮಟನ ಜೊತೆಗೆ ಬೇಲೂರು-ಹಳೇಬೀಡನ್ನೂ ವಿಶ್ವ ಸಂಸ್ಕೃತಿ ನಿಲಯವಾಗಿ ಘೋಷಿಸಲು ನೇಮಿಸಿದ್ದಾರೆ. ಈ ದೇವಾಲಯವನ್ನು ವಿಜಯನಾರಾಯಣಸ್ವಾಮಿ ದೇವಸ್ಥಾನವೆಂದೂ, ಸೌಮ್ಯಕೇಶವಸ್ವಾಮಿ ದೇವಸ್ಥಾನವೆಂದೂ ಕರೆಯುವ ವಾಡಿಕೆ ಇರುವುದಾಗಿ ಸ್ಥಳೀಯ ಜನರಿಂದ ಕಂಡು ಬರುತ್ತದೆ. ಮುಖ್ಯ ಆಕರ್ಷಣೆಗಳು ಬೇಲೂರಿನಲ್ಲಿ ಚೆನ್ನಕೇಶವಸ್ವಾಮಿಯ ದೇವಸ್ಥಾನ ಮತ್ತು ದೇವಸ್ಥಾನದ ಆವರಣವೇ ಮುಖ್ಯ ಆಕರ್ಷಣೆ. ಶಿಲ್ಪಕಲೆಗೇ ನಿದರ್ಶನವಾಗಿರುವ ಈ ದೇವಾಲಯದಲ್ಲಿ ಚೆನ್ನಕೇಶವ ಸ್ವಾಮಿಯ ದೇವಸ್ಥಾನದ ಜೊತೆಗೆ, ಸೌಮ್ಯನಾಯಕಿ ಅಮ್ಮನವರ ದೇವಸ್ಥಾನ, ರಂಗನಾಯಕಿ ಅಮ್ಮನವರ ದೇವಸ್ಥಾನ ಮತ್ತು ಕಪ್ಪೆಚೆನ್ನಿಗರಾಯನ ದೇವಸ್ಥಾನಗಳು ಮುಖ್ಯ ಆಕರ್ಷಣೆಗಳು. ಇದಲ್ಲದೇ ಮುಖ್ಯ ದೇವಸ್ಥಾನದ ಹೊರಭಾಗದಲ್ಲಿರುವ ಶಿಲಾಬಾಲಿಕೆಗಳು, ದೇವಸ್ಥಾನದ ಒಳಾಂಗಣದ ಕಂಬಗಳು ಮತ್ತು ದೇವಾಲಯದ ಗೋಪುರ ನಯನ ಮನೋಹರ. ಐತಿಹಾಸಿಕ ಸ್ಥಳ ಬೇಲೂರು ಒಂದು ಐತಿಹಾಸಿಕ ಸ್ಥಳವಾಗಿದ್ದು, ಇಲ್ಲಿನ ಚೆನ್ನಕೇಶವ ದೇವಾಲಯ ಪ್ರಪಂಚದಲ್ಲಿ ಪ್ರಸಿದ್ಧಿ ಪಡೆದಿದೆ. ಈ ದೇವಾಲಯವನ್ನು ನೋಡಲು ಹೆಚ್ಚು ಹೆಚ್ಚು ದೇಶ ವಿದೇಶಗಳಿಂದ ಜನರು ಬರುತ್ತಾರೆ. ಇದು ಒಂದು ಪ್ರವಾಸಿ ತಾಣವಾಗಿದೆ. ಪ್ರತಿ ವರ್ಷ ಈ ದೇವಾಲಯದಲ್ಲಿ ರಥೋತ್ಸವ ನಡೆಯುತ್ತದೆ. ಇಲ್ಲಿ ಒಂದು ದ್ವಾರಸಮುದ್ರ ಇದೆ. ಇಲ್ಲಿರುವ ಶ್ರೀ ಚೆನ್ನಕೇಶವ ದೇವಾಲಯವೂ ಹೊಯ್ಸಳರ ಕಾಲದಲ್ಲಿ ಪ್ರತಿಷ್ಠಾಪನೆಯಾಯಿತು ಹಾಗೂ ಈ ದೇವಾಲಯವು ನಕ್ಷತ್ರ ಆಕಾರದಲ್ಲಿದೆ. ಈ ದೇವಾಲಯವು ಸೂಕ್ಷ್ಮ ಕೆತ್ತನೆಯಿಂದ ಕೂಡಿದೆ ಹಾಗೂ ಪ್ರೇಕ್ಷಣೀಯ ಸ್ಥಳವಾಗಿದೆ. ಇಲ್ಲಿಗೆ ಬೇರೆ ಬೇರೆ ಕಡೆಯಿಂದ ಹೆಚ್ಚುಹೆಚ್ಚು ಜನ ಬಂದು ಈ ದೇವಾಲಯನ್ನು ವೀಕ್ಷಿಸುತ್ತಾರೆ. ಭೂಗೋಳ ಬೇಲೂರು ಕರ್ನಾಟಕ ರಾಜ್ಯದ ಹಾಸನ ಜಿಲ್ಲಿಯಲ್ಲಿದೆ. ಯಗಚಿ ನದಿಯ ದಡದಲ್ಲಿರುವ ಬೇಲೂರು, ಬೆಂಗಳೂರಿನಿಂದ ೨೨೨ ಕಿ.ಮಿ, ಮೈಸೂರಿನಿಂದ ೧೪೯ ಕಿ.ಮಿ ಮತ್ತು ಜಿಲ್ಲಾ ಕೇಂದ್ರದಿಂದ ೩೭ಕಿ.ಮಿ ದೂರದಲ್ಲಿದೆ. ಇಲ್ಲಿಗೆ ಬರಲು ರಸ್ತೆ ಮಾರ್ಗವೇ ಮುಖ್ಯ ಮಾರ್ಗವಾಗಿದ್ದು, ಹತ್ತಿರದ ಅರಸೀಕೆರೆಗೆ ಅಥವಾ ಬಾಣಾವರಕ್ಕೆ ರೈಲಿನಲ್ಲಿ ಬಂದು, ಅಲ್ಲಿಂದ ಮುಂದಕ್ಕೆ ಬಸ್ಸಿನಲ್ಲಿ ಬರಬಹುದು. ಬಾಣಾವರದದಿಂದ ಹಳೇಬೀಡು ಕೇವಲ ೨೫ ಕಿ.ಮೀ ದೂರದಲ್ಲಿದ್ದು, ಅಲ್ಲಿಂದ ಬೇಲೂರು ಕೇವಲ ೧೫ ಕಿ.ಮೀ ದೂರದಲ್ಲಿರುತ್ತದೆ. ಬೆಂಗಳೂರಿನಿಂದ ರೈಲು ಮಾರ್ಗವಾಗಿ ಬಾಣಾವರದ ರೈಲ್ವೆ ನಿಲ್ದಾಣದಲ್ಲಿ ಇಳಿದರೆ ಅಲ್ಲಿಂದ ಪ್ರತಿ ಅರ್ಧ ಗಂಟೆಗೊಮ್ಮೆ ಬಸ್ಸಿನ ಸೌಲಭ್ಯವಿರುತ್ತದೆ. ಇತಿಹಾಸ ಇದನ್ನು ಹಿ೦ದೆ ವೇಲುಪುರ' ಎ೦ದು ಕರೆಯುತ್ತಿದ್ದರು. ದೇವಾಲಯ ಕಟ್ಟುವ ಕಾರ್ಯ ಹೊಯ್ಸಳ ಚಕ್ರವರ್ತಿಯಾದ ವಿಷ್ಣುವರ್ಧನನ ಆಳ್ವಿಕೆಯಲ್ಲಿ ಪ್ರಾರಂಭವಾಯಿತು. ರಾಜಾ ವಿಷ್ಣುವರ್ಧನನು ತಲಕಾಡಿನಲ್ಲಿ ಚೋಳರ ಮೇಲಿನ ವಿಜಯೋತ್ಸವವನ್ನು ಆಚರಿಸುವ ಸಮಯವಾದ ೧೧೧೭ರಲ್ಲಿ ತನ್ನ ಗುರುಗಳಾದ ಶ್ರೀ ರಾಮಾನುಜಾಚಾರ್ಯರ ಆಶಿರ್ವಾದದೊಂದಿಗೆ ಚೆನ್ನಕೇಶವಸ್ವಾಮಿಯ ವಿಗ್ರಹವನ್ನು ಪ್ರತಿಷ್ಠೆ ಮಾಡಿದನು. ಈ ರೀತಿಯಾಗಿ ಈ ದೇವಸ್ಥಾನಕ್ಕೆ ವಿಜಯನಾರಾಯಣಸ್ವಾಮಿ ದೇವಸ್ಥಾನವೆಂದು ಹೆಸರು ಬಂದಿದೆ. ಸುಮಾರು ೧೦೩ ವರ್ಷಗಳ ಕಾಲ ನಡೆದಂತಹ ಈ ದೇವಾಲಯದ ಕಾರ್ಯ, ವಿಷ್ಣುವರ್ಧನನ ಮೊಮ್ಮಗನಾದ ಇಮ್ಮಡಿ ವೀರ ಬಲ್ಲಳನ ಆಳ್ವಿಕೆಯಲ್ಲಿ ರೂಪಗೊಂಡಿತು. ದೇವಾಲಯಕ್ಕೆ ಒಂದು ವಿಮಾನ ಗೋಪುರವಿದ್ದು, ಈ ಕಾರಣವಾಗಿ ಇದನ್ನು ಹೊಯ್ಸಳದ ಏಕಕೂಟ ಶೈಲಿಯ ದೇವಸ್ಥಾನವೆಂದು ಪರಿಗಣಿಸಲಾಗಿದೆ. ಈ ದೇವಾಲಯದ ಗೋಪುರವು ೭೦ ಅಡಿಗಳಿಗೂ ಎತ್ತರವಾಗಿದ್ದು ಧಾಳಿಕಾರರ ಹಾವಳಿಗೆ ಸಿಕ್ಕಿ ವಿರೂಪಗೊಂಡಿತ್ತು. ಇದನ್ನು ೧೩೯೭ರಲ್ಲಿ ವಿಜಯನಗರದ ಅರಸರಾದ ಕೃಷ್ಣದೇವರಾಯರ ಮುತ್ತಜ್ಜರಾದ ಹರಿಹರ ಮಹಾರಾಜರ ದಂಡಾಧಿಪತಿ ಸಾಲುವ ಗೊಂಡನೆಂಬವರು ಇದರ ಜೀರ್ಣೋದ್ಧಾರ ಕಾರ್ಯವನ್ನು ಕೈಗೊಂಡರು. ಈ ದೇವಾಲಯಕ್ಕೆ ಇನ್ನೊಂದು ಬಾಗಿಲಿದೆ. ಇದಕ್ಕೆ 'ಆನೆ ಬಾಗಿಲು' ಎಂದು ಕರೆಯುತ್ತಾರೆ ಬೇಲೂರೀನಲ್ಲಿ ಅನೇಕ ದೇವಾಲಯಗಳಿವೆ. ಅವುಗಳಲ್ಲಿ ಚನ್ನ ಕೇಶವ ದೇವಾಲಯ ಪ್ರಸಿದ್ದವಾಗಿದೆ. ದೇವಾಲಯದ ಆವರಣದಲ್ಲಿ ಮುಖ್ಯ ದೇವಸ್ಥಾನಗಳು ಗೋಪುರದ ಮೂಲಕ ಒಳಗೆ ಬಂದ ಕೂಡಲೆ ಪ್ರದಕ್ಷಿಣಾಕಾರದಲ್ಲಿ ದೇವಾಲಯವನ್ನು ಸುತ್ತಿದರೆ ಕಾಣುವ ಮುಖ್ಯ ದೇವಸ್ಥಾನಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಚೆನ್ನಕೇಶವಸ್ವಾಮಿ ದೇವಸ್ಥಾನ. ಕಪ್ಪೆ ಚೆನ್ನಿಗರಾಯ ದೇವಸ್ಥಾನ ಸೌಮ್ಯನಾಯಕಿ ಅಮ್ಮನವರ ದೇವಸ್ಥಾನ ಕಲ್ಯಾಣ ಮಂಟಪ ವೀರನಾರಾಯಣ ದೇವಸ್ಥಾನ ರಂಗನಾಯಕಿ ಅಮ್ಮನವರ ದೇವಸ್ಥಾನ ಇದಲ್ಲದೆ ಗೋಪುರದ ಎಡಭಾಗದಲ್ಲಿ ಮಂಟಪ ಸಾಲನ್ನು ಮಾಡಿ ಅಲ್ಲಿ ಚಿಕ್ಕ ಗುಡಿಗಳನ್ನು ಮಾಡಿದ್ದಾರೆ. ಇದರ ನಂತರ ಶ್ರೀ ರಾಮದೇವರ ಗುಡಿ ಇದೆ. ಗೋಪುರದ ಬಲಭಾಗದಲ್ಲಿ ಪುಷ್ಕರಣಿಯನ್ನು ಮಾಡಲಾಗಿದೆ. ಪ್ರಮುಖ ದೇವಸ್ಥಾನವಾದ ಚೆನ್ನಕೇಶವ ದೇವಸ್ಥಾನದ ವಿವರಣೆಯನ್ನು ಮುಂದಿನ ಭಾಗದಲ್ಲಿ ನೀಡಲಾಗಿದೆ. ಇಲ್ಲಿ ದೇವಸ್ಥಾನದ ಮಿಕ್ಕ ಆವರಣವನ್ನು ವಿವರಿಸಲಾಗಿದೆ. ಕಪ್ಪೆ ಚೆನ್ನಿಗರಾಯ ದೇವಸ್ಥಾನ ಈ ಗುಡಿಯು ಮುಖ್ಯ ಗುಡಿಯ ಹಾಗೆ ನಕ್ಷತ್ರಾಕಾರವಾದ/ಶ್ರೀಚಕ್ರದ ಪೀಠದ ಮೇಲೆ ಕಟ್ಟಲ್ಪಟ್ಟಿದೆ. ಸ್ಥಳೀಯ ಕೆಲವು ಜನರಿಂದ ಇದೇ ಮೂಲವಾಗಿ ಪ್ರಧಾನ ದೇವಾಲಯವಾಗಬೇಕಿತ್ತು ಎಂದು ಕೇಳಿ ಬಂದರೂ ಈ ನಕ್ಷತ್ರಾಕಾರದ ಪೀಠವನ್ನು ಬಿಟ್ಟರೆ ಯಾವುದೇ ಸಾಕ್ಷ್ಯಾಧಾರಗಳು ಮೂಡಿ ಬಂದಿಲ್ಲ. ಈ ದೇವಸ್ಥಾನದ ಗರ್ಭಗುಡಿಯಲ್ಲಿ ಕಪ್ಪೆ ಚೆನ್ನಿಗರಾಯನ ವಿಗ್ರಹವಿದೆ. ಈ ವಿಗ್ರಹದ ಹೊಟ್ಟೆಯಲ್ಲಿ ಕಪ್ಪೆಯನ್ನು ಕೆತ್ತಲಾಗಿದೆ. ಈ ಕಪ್ಪೆಯ ಕೆತ್ತನೆಗೆ ಒಂದು ಹಿನ್ನೆಲೆ ಇದೆ ಹಿಂದೆ ಜಕಣಾಚಾರಿಗೂ ಅವರ ಮಗ ಡಂಕಣಾಚಾರ್ಯರಿಗೂ ವಾದ ನಡೆದು, ಡಂಕಣನು ಚೆನ್ನಿಗರಾಯನ ವಿಗ್ರಹದಲ್ಲಿ ದೋಷವಿರುವುದಾಗಿ ಹೇಳಿ, ಅದನ್ನು ನಿರೂಪಿಸಲು ಹೊರಟಾಗ ವಿಗ್ರಹದ ಗರ್ಭದಲ್ಲಿ ಕಪ್ಪೆ ಕಂಡು ಬರಲು, ವಿಗ್ರಹಕ್ಕೆ ಈ ಹೆಸರು ಬಂದಿತೆಂದು ಹೇಳಲಾಗುತ್ತದೆ. ಇದಲ್ಲದೇ ಒಳಾಂಗಣದಲ್ಲಿ ಗೋಪಾಲಕೃಷ್ಣ, ಮಹಿಷಾಸುರಮರ್ದಿನಿ ಮತ್ತು ವಿಷ್ಣು-ಲಕ್ಷ್ಮಿಯರ ಸುಂದರ ಮೂರ್ತಿಗಳಿವೆ. ಸೌಮ್ಯನಾಯಕಿ ಅಮ್ಮನವರ ದೇವಸ್ಥಾನ ಕಪ್ಪೆ ಚೆನ್ನಿಗರಾಯ ದೇವಸ್ಥಾನದ ಎಡಪಾರ್ಶ್ವದಲ್ಲಿರುವ ದೇವಸ್ಥಾನ ರಂಗನಾಯಕಿ ಅಮ್ಮನವರ ದೇವಸ್ಥಾನ. ಚತುರ್ಭುಜಾಧಾರಿಯಾದಿ ಸೌಮ್ಯನಾಯಕಿ ಅಮ್ಮನವರು. ಸೌಮ್ಯನಾಯಕಿ ಅಮ್ಮನವರು ಚೆನ್ನಕೇಶವನ ಮೆಚ್ಚಿನ ಪತ್ನಿಯೆಂದು ಹೇಳುತ್ತಾರೆ. ಕಲ್ಯಾಣ ಮಂಟಪ ಸೌಮ್ಯನಾಯಕಿ ಅಮ್ಮನವರ ದೇವಾಲಯದ ನಂತರ ಸಿಗುವುದೇ ಕಲ್ಯಾಣ ಮಂಟಪ. ಇಲ್ಲಿ ಚೆನ್ನಕೇಶವ ಸ್ವಾಮಿಗೂ ಸೌಮ್ಯನಾಯಕಿ ಅಮ್ಮನವರಿಗೂ ಕಲ್ಯಾಣೋತ್ಸವವನ್ನು ಮಾಡಲಾಗುತ್ತೆ. ಇದರ ಜೊತೆಗೆ ಜಾತ್ರೆಯ ಸಮಯದಲ್ಲಿ ಹೋಮಯಾಗಾದಿಗಳು ನಡೆಯುತ್ತವೆ. ವೀರನಾರಾಯಣ ದೇವಸ್ಥಾನ ಇದು ಕಲ್ಯಾಣ ಮಂಟಪದ ಒಳಭಾಗದಲ್ಲಿದೆ. ಒಳಗೆ ಗರ್ಭಗುಡಿಯಲ್ಲಿರುವ ವಿಗ್ರಹ ಭಿನ್ನವಾಗಿದೆ. ಈ ಕಾರಣವಾಗಿ ಈ ದೇವಸ್ಥಾನದ ಬಾಗಿಲು ಮುಚ್ಚಿರುತ್ತದೆ. ರಂಗನಾಯಕಿ ಅಮ್ಮನವರ ದೇವಸ್ಥಾನ ವೀರನಾರಾಯಣ ದೇವಸ್ಥಾನದ ನಂತರ ಸಿಗುವುದು ಈ ದೇವಸ್ಥಾನ. ರಂಗನಾಯಕಿ ಅಮ್ಮನವರನ್ನು ಚೆನ್ನಕೇಶವಸ್ವಾಮಿಯ ಜೇಷ್ಠ ಪತ್ನಿ ಎಂದು ಹೇಳುತ್ತಾರೆ. ಕಾರಣಾಂತರಗಳಿಂದ ರಂಗನಾಯಕಿ ಅಮ್ಮನವರಿಗೆ ಆಭರಣಗಳನ್ನು ತೊಡಿಸಲಾಗುವುದಿಲ್ಲವೆಂದು ಹೇಳಲಾಗುತ್ತದೆ. ದೇವಸ್ಥಾನದ ಆವರಣದಲ್ಲಿ ಇತರೆ ಆಕರ್ಷಣೆಗಳು ದೇವಸ್ಥಾನದ ಆವರಣದಲ್ಲಿ ಮೇಲ್ಕಂಡ ದೇವಸ್ಥಾನಗಳನ್ನು ಬಿಟ್ಟು ನೋಡಲು ಇನ್ನೂ ಕೆಲವು ಆಕರ್ಷಣೆಗಳಿವೆ. ಯಜ್ಞ ಯಾಗಾದಿಗಳನ್ನು ಮಾಡಲು ಯಾಗಶಾಲೆ, ಅಡಿಗೆ ಮಾಡಲು ಪಾಕಶಾಲೆ, ಪುಷ್ಕರಣಿ ಇತ್ಯಾದಿಗಳ ವ್ಯವಸ್ಥೆ ಇದೆ. ಇವುಗಳನ್ನು ಈ ಕೆಳಗೆ ವಿವರಿಸಲಾಗಿದೆ. ದೀಪಾಲೆ ಕಂಬ ದೇವಸ್ಥಾನವನ್ನು ಗೋಪುರದ ಮೂಲಕ ಪ್ರವೇಶಿಸಿದರೆ ಆವರಣದ ಎಡಭಾಗದಲ್ಲಿ ಸುಮಾರ್ಉ ೪೦ಅಡಿ ಎತ್ತರದ ಒಂದು ಕಂಬ ಕಾಣಿಸುವುದು. ಈ ಕಂಬವನ್ನು ನಕ್ಷತ್ರಾಕಾರದ ಒಂದು ಜಗುಲಿಯ ಮೇಲೆ ನಿರಾಧಾರವಾಗಿ ನಿಲ್ಲ್ಲಿಸಲಾಗಿದೆ. ಕಂಬವು ಈ ಜಗುಲಿಯ ಮಧ್ಯದಲ್ಲಿದ್ದು ಇದರ ಕೆಳಗಡೆ ೪ಸಂದುಗಳನ್ನು ಮಾಡಲಾಗಿದೆ. ಈ ಸಂದುಗಳ ಮೂಲಕ ಒಂದು ಕಡೆ ಇಂದ ಇನ್ನೊಂದು ಕಡೆ ನೋಡಬಹುದು. ಈ ರೀತಿಯಾಗಿ ಈ ಕಂಬವು ಯಾವ ಆಧಾರವೂ ಇಲ್ಲದೆ ನಿಂತಿದೆ ಎಂದು ಖಚಿತವಾಗುತ್ತದೆ. ಜೊತೆಗೆ ವಾಯವ್ಯ ದಿಕ್ಕಿನಿಂದ ಒಂದು ತೆಳುವಾದ ಬಟ್ಟೆ ಅಥವ ಪೇಪರ್ ಚೂರನ್ನು ತುದಿಯಿಂದ ಮಧ್ಯದ ವರೆಗೆ ತಳ್ಳಿದರೆ ಸಲೀಸಾಗಿ ಹೋಗುತ್ತದೆ - ಹೀಗಾಗಿ ಇದು ಮೂರೇ ದಿಕ್ಕುಗಳಲ್ಲಿ ನಿಂತಿದೆ ಎಂದು ಸಾಬೀತಾಗುತ್ತದೆ. ಈ ಕಾರಣಾಂತರಗಳಿಂದ ಇದನ್ನು ಗುರುತ್ವಾಕೇಂದ್ರ ಕಂಬ(ಗ್ರಾವಿಟಿ ಪಿಲ್ಲರ್) ಎಂದು ಕರೆಯುತ್ತಾರೆ.ಈ ತುದಿಯ ಬೆಳಕನ್ನು ಆ ತುದಿಯಿಂದ ನೋಡಬಹುದು. ಆನೆ ಬಾಗಿಲು ದೇವಸ್ಥಾನದ ಇನ್ನೊಂದು ಬಾಗಿಲಿಗೆ ಆನೆಬಾಗಿಲು ಎಂದು ಕರೆಯುತ್ತಾರೆ. ಇದು ಸಾಧಾರಣವಾಗಿ ಮುಚ್ಚಿರುತ್ತದೆ. ಮೂಲ ದ್ವಾರ ಗೋಪುರದ ದ್ವಾರವಾಗಿದ್ದರೂ, ದೇವರಿಗೆ ನಡೆಯುವ ಎಲ್ಲಾ ಉತ್ಸವಗಳು ಈ ದ್ವಾರದ ಮೂಲಕವಾಗಿ ಸಂಚರಿಸುತ್ತದೆ. ಈ ರೀತಿಯಾಗಿ ಇದು ವೈಶಿಷ್ಟತೆಯನ್ನು ಪಡೆದಿದೆ. ಮಂಟಪದ ಸಾಲು ದೇವಸ್ಥಾನದ ಗೋಪುರ ಮತ್ತು ಆನೆಬಾಗಿಲ ನಡುವೆ ಮಂಟಪದ ಸಾಲನ್ನು ಮಾಡಿದ್ದಾರೆ. ಇಲ್ಲಿ ಚಿಕ್ಕ ಗುಡಿಗಳನ್ನು ಮಾಡಲಾಗಿದೆ. ಈ ಗುಡಿಗಳಲ್ಲಿ ರಾಮಾನುಜಾಚಾರ್ಯರು, ಯೋಗನರಸಿಂಹರು, ಕಾಳಿಮರ್ಧನ ಕೃಷ್ಣ, ಆಂಜನೇಯ ಮುಂತಾದ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಇದಲ್ಲದೆ ರಂಗನಾಯಕಿ ಅಮ್ಮನವರ ದೇವಸ್ಥಾನದ ಪಕ್ಕದಲ್ಲೂ ಮಂಟಪದ ಸಾಲು ಇದೆ. ಇಲ್ಲಿ ಅನೇಕ ಶಿಲಾವಿಗ್ರಹಗಳನ್ನು ಸಂಗ್ರಹಿಸಿ ಪ್ರೇಕ್ಷಕರಿಗೆ ನೋಡಲು ಅನುಕೂಲ ಮಾಡಿ ಇಟ್ಟಿದ್ದಾರೆ. ಮೂಲತಃ ದೇವಸ್ಥಾನದ ಆವರಣವನ್ನು ಅಗೆದಾಗ ದೇವಸ್ಥಾನಕ್ಕೆ ಸಂಬಂಧಪಟ್ಟ ವಿಗ್ರಹಗಳನ್ನು ಇಲ್ಲಿ ಇಡಲಾಗಿದೆ. ಈ ಶಿಲೆಗಳಲ್ಲಿ ಸುಮಾರು ೪ ಅಡಿ ಎತ್ತರದ ಗಣಪತಿಯ ವಿಗ್ರಹ, ವಿಷ್ಣು, ಆಂಜನೇಯರ ವಿಗ್ರಹಗಳು ಮತ್ತು ನಾಗ ಕಲ್ಲುಗಳನ್ನು ಕಾಣಬಹುದು. ಮುಖ್ಯವಾಗಿ ಇಲ್ಲಿ ಅನೇಕ ಶಾಸನ ಕಂಬಕಲ್ಲುಗಳನ್ನು ಇಡಲಾಗಿದೆ.ಈ ಶಾಸನಗಳಲ್ಲಿ ದೇವಾಲಯದ ಇತಿಹಾಸ, ದೇವಸ್ಥಾನವನ್ನು ಕಟ್ಟಿದ ಶಿಲ್ಪಿಗಳ ಹೆಸರಿದೆ ಎಂದು ಸ್ಥಳೀಯರಿಂದ ತಿಳಿಯುತ್ತದೆ. ಪಾಕ ಶಾಲೆ ಮತ್ತು ಯಾಗ ಶಾಲೆ ಆನೆ ಬಾಗಿಲಿನ ಪಕ್ಕದಲ್ಲಿರುವುದೇ ಪಾಕಶಾಲೆ. ಇಲ್ಲಿ ಪ್ರತಿ ದಿವಿಸವೂ ದೇವರ ನೈವೇದ್ಯಕ್ಕಾಗಿ ಪ್ರಸಾದವನ್ನು ಮಾಡುತ್ತಾರೆ. ಇದರ ಪಕ್ಕದಲ್ಲೇ ಯಾಗಶಾಲೆ ಉಂಟು. ರಥೋತ್ಸವ ಅಥವ ಉತ್ಸವದ ಸಮಯದಲ್ಲಿ ಇಲ್ಲಿ ಶಾಸ್ತ್ರೀಯವಾಗಿ ನಡೆಯಬೇಕಾದ ಯಜ್ಞ-ಯಾಗಾದಿಗಳನ್ನು ಮಾಡುತ್ತಾರೆ. ಶ್ರೀ ರಾಮದೇವರ ದೇವಸ್ಥಾನ ಮತ್ತು ವಾಹನ ಮಂಟಪ ಯಾಗಶಾಲೆಯ ಪಕ್ಕದಲ್ಲಿ ರಾಮದೇವರ ದೇವಸ್ಥಾನವಿದೆ. ಗರ್ಭಗುಡಿಯಲ್ಲಿ ರಾಮ, ಸೀತೆ, ಲಕ್ಷ್ಮಣ ಮತ್ತು ಮಾರುತಿಯರ ವಿಗ್ರಹಗಳಿದೆ. ಸಾಮಾನ್ಯವಾಗಿ ರಾಮನ ಎಡಭಾಗದಲ್ಲಿರುವ ಸೀತೆ, ಇಲ್ಲಿ ಬಲಭಾಗದಲ್ಲಿರುವುದನ್ನು ಕಾಣಬಹುದು. ರಾಮದೇವರ ದೇವಸ್ಥಾನದ ಪಕ್ಕದಲ್ಲಿ ವಾಹನ ಮಂಟಪವಿದೆ. ಉತ್ಸವಗಳಿಗೆ ಬೇಕಾಗುವ ವಾಹನ ಪ್ರತಿಮೆಗಳನ್ನು ಇಲ್ಲಿ ಇಡಲಾಗಿದೆ. ಸುಮಾರು ೭ ಅಡಿ ಎತ್ತರದ ಹಿತ್ತಾಳೆಯಿಂದ ನಿರ್ಮಿಸಲಾಗಿರುವ ಗರುಡ, ಹಂಸ, ಆನೆ, ಆಂಜನೇಯ, ಕುದುರೆ, ನವಿಲು ಮುಂತಾದ ವಿಗ್ರಹಗಳನ್ನು ಇಲ್ಲಿ ಇಟ್ಟಿರುತ್ತಾರೆ. ಉತ್ಸವದ ಸಮಯದಲ್ಲಿ ದೇವರ ಉತ್ಸವ ಮೂರ್ತಿಗೆ ಚಿನ್ನದ ಆಭರಣಗಳಿಂದ ಅಲಂಕಾರ ಮಾಡಿ, ಈ ವಾಹನಗಳ ಮೇಲೆ ಕೂರಿಸಿ ಊರಿನಲ್ಲಿ ಉತ್ಸವ ಮಾಡುತ್ತಾರೆ. ಗಜಾ ಗುಂಡ ಗೋಪುರದ ಬಲಭಾಗದಲ್ಲಿರುವ ಪುಷ್ಕರಣಿ/ಕಲ್ಯಾಣಿಗೆ ಗಜಾಗುಂಡ ಎಂದು ಹೆಸರು. ಇದನ್ನು ವಾಸುದೇವತೀರ್ಥ ಎಂದೂ ಕರೆಯುತ್ತಾರೆ. ಈ ಕಲ್ಯಾಣಿಯಲ್ಲಿ ಅನೇಕರೀತಿಯ ಮೀನುಗಳನ್ನು ಬಿಟ್ಟಿರುತ್ತಾರೆ. ಈ ಕಲ್ಯಾಣಿಯ ಬಾಗಿಲನ್ನು ಮುಚ್ಚಿರುವುದರಿಂದ ಸಾರ್ವಜನಿಕರಿಗೆ ನೀರಿನ ಹತ್ತಿರ ಹೋಗುವ ಪ್ರವೇಶವಿರುವುದಿಲ್ಲ. ರಾಷ್ಟ್ರಕವಿ ಕುವೆಂಪು ಅವರು ಇಲ್ಲಿಯ ದೇವಾಲಯಗಳನ್ನು ನೋಡಿ "ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು ಸೌಂದರ್ಯ ವಿಪ್ಲವದ ಪಲ್ಲವಿಯು" ಎಂದಿದ್ದಾರೆ. Gallery ನೋಡಿ ಡಿ.ವಿ.ಜಿ. ಕವನಗಳು:ಬೇಲೂರಿನ ಶಿಲಾಬಾಲಿಕೆಯರು- ವಿಕಿ ಸೋರ್ಸ್ ಬೇಲೂರು ದೇವಸ್ಥಾನದ ಕಂಬಗಳ ಮೇಲೆ ಕಾಣಬರುವ ಮದನಿಕೆಗಳು ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೇಲೂರು ಬಾಹ್ಯಪುಟಗಳು ೧. http://www.kamat.com/kalranga/deccan/hoysala/belur.htm ೨. http://www.art-and-archaeology.com/india/belur/bel01.html ೩. http://www.ourkarnataka.com/states/hassan/belur.htm ೪. Karnataka Tourism ೫. https://archive.is/20121127202507/hassan-history.blogspot.com/ ೬. ಹೊಯ್ಸಳ ಟೂರಿಸಮ್ ಉಲ್ಲೇಖ ಪ್ರವಾಸೋದ್ಯಮ ಇತಿಹಾಸ ಕರ್ನಾಟಕದ ಪ್ರಮುಖ ಸ್ಥಳಗಳು ಹಾಸನ ಜಿಲ್ಲೆಯ ತಾಲೂಕುಗಳು ವಿಶ್ವ ಪರಂಪರೆಯ ತಾಣಗಳು
1909
https://kn.wikipedia.org/wiki/%E0%B2%95%E0%B2%BE%E0%B2%B0%E0%B3%8D%E0%B2%AE%E0%B2%BF%E0%B2%95%E0%B2%B0%20%E0%B2%A6%E0%B2%BF%E0%B2%A8%E0%B2%BE%E0%B2%9A%E0%B2%B0%E0%B2%A3%E0%B3%86
ಕಾರ್ಮಿಕರ ದಿನಾಚರಣೆ
ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಕಾರ್ಮಿಕ ಸಂಘಗಳು ಮತ್ತು ಸಮಾಜವಾದಿ ಪಕ್ಷಗಳ ಮುಖ್ಯವಾಗಿ ಆಚರಿಸುವ ಸಂಭ್ರಮದ ಸಾರ್ವಜನಿಕ ಉತ್ಸವ ದಿನ (ಲೇಬರ ಡೇ). ಮೇ ದಿನ ಅಥವಾ ‘ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯನ್ನು ಪ್ರತಿ ವರ್ಷದ ಮೇ ೧ನೇ ತಾರೀಖಿನಂದು ಪ್ರಪಂಚದ ಹಲವು ದೇಶಗಳಲ್ಲಿ ಆಚರಿಸಲಾಗುತ್ತದೆ. ಈ ದಿನದಂದು ಕಾರ್ಮಿಕ ಆಂದೋಲನದ ಸಾಮಾಜಿಕ ಮತ್ತು ಆರ್ಥಿಕ ಸಾಧನೆಗಳನ್ನು ಆಚರಿಸಲಾಗುತ್ತದೆ. ಕಾರ್ಮಿಕರ ಮೆರೆವಣಿಗೆ, ಪ್ರದರ್ಶನ, ಸಭೆ-ಇವು ಆ ದಿನದ ವಿಶೇಷಗಳು. ಹಿನ್ನೆಲೆ ಮತ್ತು ಇತಿಹಾಸ 1886ರ ವರ್ಷದ ಮೇ 4ರಂದು ಚಿಕಾಗೋದ, ಇಲಿನಾಯ್ಸ್ ಪ್ರದೇಶದ ಹೇ ಮಾರ್ಕೆಟ್ ಎಂಬಲ್ಲಿ ಕಾರ್ಮಿಕರ ಮೇಲೆ ನಡೆದ ದಮನಕಾರಿ ಘಟನೆಯನ್ನು ಈ ಆಚರಣೆ ಹಿನ್ನೆಲೆಯಾಗಿ ಇಟ್ಟುಕೊಂಡಿವೆ. ಕಾರ್ಮಿಕ ಪ್ರಭುತ್ವದ ಶುಭಯುಗದ ಉದಯದ ಕುರುಹಾಗಿ ಮೇ 1ರಂದು ಉತ್ಸವಾಚರಣೆ ಮಾಡಬೇಕೆಂದು ರಾಬರ್ಟ್ ಓವೆನ್ ಸೂಚಿಸಿದ್ದ. ಆದರೆ ವಾಸ್ತವವಾಗಿ 1889ಕ್ಕಿಂತ ಮುಂಚೆ ಮೇ ದಿನಾಚರಣೆ ಮಾಡಿದ್ದಕ್ಕೆ ಆಧಾರಗಳು ದೊರಕುವುದಿಲ್ಲ. ಆ ವರ್ಷ ಪ್ಯಾರಿಸಿನಲ್ಲಿ ಸಮಾವೇಶ ಗೊಂಡಿದ್ದ ಸಮಾಜವಾದಿ ಅಂತರರಾಷ್ಟ್ರೀಯದ ಪ್ರಥಮ ಅಧಿವೇಶನದಲ್ಲಿ ಮೇ 1ನೆಯ ದಿನಾಂಕವನ್ನು (ಅದು ವಾರದ ಯಾವ ದಿನವೇ ಬರಲಿ) ವಾರ್ಷಿಕ ಅಂತರ ರಾಷ್ಟ್ರೀಯ ಉತ್ಸವದಿನವೆಂದು ಆಚರಿಸಬೇಕೆಂದು ನಿರ್ಧರಿಸಲಾಯಿತು. ಮೇ 1ರಂದು ಸಾರ್ವಜನಿಕ ರಜಾದಿನವೆಂದು ಘೋಷಿಸಬೇಕೆಂದು ಒತ್ತಾಯಪಡಿಸಲು ನೇರ ಕ್ರಮ ಕೈಗೊಳ್ಳಬೇಕೆಂದೂ ನಿರ್ಣಯಿಸಲಾಯಿತು. ದೇಶವಿದೇಶಗಳಲ್ಲಿ ಆಚರಣೆ ಬಹುತೇಕ ರಾಷ್ಟ್ರಗಳಲ್ಲಿ ಕಾರ್ಮಿಕ ದಿನವನ್ನು ಮೇ ತಿಂಗಳ ಮೊದಲ ದಿನದಂದು ಆಚರಿಸಲಾಗುತ್ತದೆ. ಅಮೆರಿಕ ಸಂಯುಕ್ತಸಂಸ್ಥಾನ ಮತ್ತು ಕೆನಡಗಳಲ್ಲಿ ಅಂದು ಈ ದಿನವನ್ನಾಚರಿಸುವುದಿಲ್ಲ. ಇಟಲಿಯಲ್ಲಿ ಮೇ ದಿನಾಚರಣೆಯನ್ನು ನಿಷೇಧಿಸಲಾಗಿತ್ತಲ್ಲದೆ, ಅದರ ಬದಲು ರೋಮಿನ ಸ್ಥಾಪನೆಯ ದಿನವನ್ನಾಚರಿಸುವ ಏರ್ಪಾಡು ಮಾಡಲಾಗಿತ್ತು. ಸೋವಿಯತ್ ದೇಶದಲ್ಲಿ ಮೇ 1 ಸಾರ್ವಜನಿಕ ರಜಾ ದಿನ. 1890ರ ದಶಕದಿಂದ ಯೂರೋಪಿನ ಅನೇಕ ರಾಷ್ಟ್ರಗಳಲ್ಲಿ ಮೇ ತಿಂಗಳ 1ರಂದು ಕಾರ್ಮಿಕ ದಿನವನ್ನಾಚರಿಸಲಾಗುತ್ತಿದೆ. ಅಂದು ಸಾಮಾನ್ಯವಾಗಿ ಕಾರ್ಮಿಕ ರಜಾದಿನ, ಸೋವಿಯತ್ ದೇಶವೇ ಮುಂತಾದ ಕಮ್ಯೂನಿಸ್ಟ್ ರಾಷ್ಟ್ರಗಳಲ್ಲಿ ಈ ದಿನಾಚರಣೆ ವಿಶಿಷ್ಟವಾದ್ದು. ಮಾಸ್ಕೋದಲ್ಲಿ ನಡೆಯುವ ಮೇ ದಿನದ ಉತ್ಸವ-ಕವಾಯಿತು ವಿಶ್ವವಿಖ್ಯಾತವಾದ್ದು. ಬ್ರಿಟನಿನಲ್ಲಿ ಕಾರ್ಮಿಕ ದಿನವನ್ನು ಮೇ ದಿನದ ಅನಂತರದ ಪ್ರಥಮ ಭಾನುವಾರದಂದು ಆಚರಿಸುವುದು ಸಾಮಾನ್ಯ. ಲಂಡನಿನಲ್ಲಿ ಹೈಡ್ ಪಾರ್ಕಿನಲ್ಲಿ ಉತ್ಸವಸಭೆ ಸೇರುವುದು ಹಿಂದಿನಿಂದ ಬಂದಿರುವ ಸಂಪ್ರದಾಯ. ಬ್ರಿಟನಿನಲ್ಲಿ ಕಾರ್ಮಿಕ ದಿನವನ್ನು ಪ್ರಥಮ ಬಾರಿಗೆ ಆಚರಿಸಿದ್ದು 1892ರಲ್ಲಿ. ಪ್ರಪಂಚದ ಹಲವೆಡೆ ಮೇ ೧ರಂದು ಸರ್ಕಾರಿ ರಜೆಯನ್ನು ಘೋಷಿಸಲಾಗಿದೆ. ಇದರಲ್ಲಿ ಪ್ರಮುಖ ದೇಶಗಳೆಂದರೆ ಅಲ್ಬೇನಿಯ, ಅರ್ಜೆಂಟೀನಾ, ಅರೂಬ, ಆಸ್ಟ್ರಿಯ, ಬಾಂಗ್ಲಾದೇಶ, ಬೆಲಾರುಸ್, ಬೆಲ್ಜಿಯಂ, ಬೊಲಿವಿಯ, ಬೋಸ್ನಿಯ ಮತ್ತು ಹೆರ್ಝೆಗೋವಿನ, ಬ್ರೆಜಿಲ್, ಬಲ್ಗೇರಿಯ, ಕ್ಯಾಮರೂನ್, ಚಿಲಿ, ಕೊಲಂಬಿಯ, ಕೋಸ್ಟ ರಿಕ, ಚೀನ, ಕ್ರೊಯೇಷಿಯ, ಕ್ಯೂಬ, ಸಿಪ್ರಸ್, ಚೆಕ್ ಗಣರಾಜ್ಯ, ಡೆನ್ಮಾರ್ಕ್, ಡೊಮಿನಿಕ ಗಣರಾಜ್ಯ, ಈಕ್ವೆಡಾರ್, ಈಜಿಪ್ಟ್, ಫಿನ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ಗ್ರೀಸ್, ಗ್ವಾಟೆಮಾಲ, ಹೈತಿ, ಹೊಂಡುರಾಸ್, ಹಾಂಗ್ ಕಾಂಗ್, ಹಂಗರಿ, ಐಸ್ಲೆಂಡ್, ಭಾರತ, ಇಂಡೋನೇಷ್ಯ, ಇಟಲಿ, ಜೋರ್ಡನ್, ಕೀನ್ಯ, ಲ್ಯಾಟ್ವಿಯ, ಲಿಥುವೇನಿಯ, ಲೆಬನಾನ್, ಮೆಸಿಡೋನಿಯ, ಮಲೇಶಿಯ, ಮಾಲ್ಟ, ಮಾರಿಷಸ್, ಮೆಕ್ಸಿಕೋ, ಮೊರಾಕೊ, ಮಯನ್ಮಾರ್, ನೈಜೀರಿಯ, ಉತ್ತರ ಕೊರಿಯ, ನಾರ್ವೆ, ಪಾಕಿಸ್ತಾನ, ಪೆರಗ್ವೆ, ಪೆರು, ಪೋಲೆಂಡ್, ಫಿಲಿಫೀನ್ಸ್ ಪೋರ್ಚುಗಲ್, ರೊಮೇನಿಯ, ರಷ್ಯ, ಸಿಂಗಾಪುರ, ಸ್ಲೊವಾಕಿಯ, ಸ್ಲೊವೇನಿಯ, ದಕ್ಷಿಣ ಕೊರಿಯ, ದಕ್ಷಿಣ ಆಫ್ರಿಕ, ಸ್ಪೇನ್, ಶ್ರೀ ಲಂಕ, ಸರ್ಬಿಯ, ಸ್ವೀಡನ್, ಸಿರಿಯ, ಥೈಲ್ಯಾಂಡ್, ಟರ್ಕಿ, ಉಕ್ರೇನ್, ಉರುಗ್ವೆ, ವೆನಿಜುವೆಲಾ, ವಿಯೆಟ್ನಾಂ, ಜಾಂಬಿಯ, ಜಿಂಬಾಬ್ವೆ. ಭಾರತದಲ್ಲಿ ಭಾರತದಲ್ಲಿ ಮೇ ದಿನವೇ ಕಾರ್ಮಿಕ ದಿನ. 20ನೆಯ ಶತಮಾನದ ಎರಡನೆಯ ದಶಕದ ದ್ವಿತೀಯಾರ್ಧದಲ್ಲಿ-ಕಾರ್ಮಿಕ ಸಂಘ ಚಳವಳಿಯ ಪ್ರಭಾವ ಹೆಚ್ಚಿದಾಗಿನಿಂದ-ಇದರ ಆಚರಣೆ ಆರಂಭವಾಯಿತು. ಮೇ ದಿನಾಚರಣೆಯಲ್ಲಿ ಭಾಗವಹಿಸಿದ ಮೊಟ್ಟಮೊದಲಿನ ಭಾರತೀಯ ಕಾರ್ಮಿಕರು ಇಂಗ್ಲೆಂಡಿನಲ್ಲಿದ್ದ ಭಾರತೀಯ ನಾವಿಕರು. ಭಾರತಕ್ಕೆ ಸ್ವಾತಂತ್ರ್ಯ ನೀಡಬೇಕೆಂಬ ಘೋಷಣೆಯನ್ನೊಳಗೊಂಡ ಪ್ರದರ್ಶನಚಿತ್ರಗಳನ್ನು ಹಿಡಿದು ಮೆರವಣಿಗೆಯಲ್ಲಿ ಅವರು ಹೈಡ್ ಪಾರ್ಕಿನ ಮೇ ದಿನದ ಉತ್ಸವಸಭೆಗೆ ಹೋದರು (1925). ಭಾರತದಲ್ಲಿ 1927 ರಿಂದೀಚೆಗೆ ಪ್ರತಿವರ್ಷವೂ ಕಾರ್ಮಿಕರು ಈ ದಿನವನ್ನಾಚರಿಸುತ್ತಿದ್ದಾರೆ. ಭಾರತದಲ್ಲಿ ಈ ಉತ್ಸವದಲ್ಲಿ ಭಾಗವಹಿಸುವವರು ಕಾರ್ಮಿಕ ಸಂಘಗಳವರು, ಸಮಾಜವಾದಿಗಳು ಮತ್ತು ಕೆಲವು ಬುದ್ಧಿ ಜೀವಿಗಳು ಮಾತ್ರ. 1927ರಲ್ಲಿ ಮುಂಬಯಿಯಲ್ಲಿ ನಡೆದ ಉತ್ಸವದಲ್ಲಿ ಅನೇಕ ಕಾರ್ಮಿಕ ಮುಖಂಡರು ಭಾಗವಹಿಸಿದ್ದರು. ಅದೇ ವರ್ಷ ಕಲ್ಕತ್ತದಲ್ಲಿ ಬಂಗಾಳ ಪ್ರದೇಶ ಕಾರ್ಮಿಕ ಸಂಘ ಕಾಂಗ್ರೆಸ್ ಮೇ ದಿನವನ್ನಾಚರಿಸಿದಾಗ ಪೋಲೀಸರು ಅನೇಕ ನಿರ್ಬಂಧಕಾಜ್ಞೆಗಳನ್ನು ವಿಧಿಸಿದರೆಂದು ತಿಳಿದು ಬರುತ್ತದೆ. 1928 ರಿಂದ 1934ರ ವರೆಗೆ ಆ ಉತ್ಸವಾಚರಣೆಯ ದಿನದಂದು ದಿನಾಚರಣೆಯ ಕಾರ್ಮಿಕರ ಅನೇಕ ಮುಷ್ಕರಗಳು ನಡೆದುವು. ಎರಡನೆಯ ಮಹಾಯುದ್ಧಾನಂತರ ಆ ದಿನವನ್ನು ಹೆಚ್ಚು ವ್ಯಾಪಕವಾಗಿ ಆಚರಿಸಲು ಪ್ರಾರಂಭವಾಯಿತು. ಕಾರ್ಮಿಕರೂ ಕಾರ್ಮಿಕ ಸಂಘಗಳೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸತೊಡಗಿದವು. 1969ರಲ್ಲಿ ಭಾರತ ರಾಷ್ಟ್ರೀಯ ಕಾರ್ಮಿಕ ಸಂಘಗಳ ಕಾಂಗ್ರೆಸ್ ಒಂದನ್ನು ಬಿಟ್ಟು ಉಳಿದೆಲ್ಲ ಕಾರ್ಮಿಕ ಸಂಘಗಳೂ ಒಟ್ಟಾಗಿ, ತಮ್ಮ ಹಕ್ಕುಗಳನ್ನು ಸಾಧಿಸಲು ಭಾರಿ ಮೆರವಣಿಗೆಯಲ್ಲಿ ಪಾರ್ಲಿಮೆಂಟ್ ಭವನದ ಬಳಿಗೆ ಮೆರವಣಿಗೆಯಲ್ಲಿ ಹೋಗಿ ಪ್ರದರ್ಶನ ನಡೆಸಿದುವು. ಭಾರತದಲ್ಲಿ ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯನ್ನು ಪ್ರತಿ ವರ್ಷದ ಮೇ ೧ನೇ ತಾರೀಖಿನಂದು ಆಚರಿಸಲಾಗುತ್ತದೆ. ಅಮೇರಿಕದಲ್ಲಿ ಅಮೆರಿಕ ಸಂಯುಕ್ತಸಂಸ್ಥಾನದಲ್ಲಿ ಸೆಪ್ಟೆಂಬರ್ ಮೊದಲನೆಯ ಸೋಮವಾರದಂದು ಕಾರ್ಮಿಕ ದಿನವನ್ನಾಚರಿಸಲಾಗುತ್ತದೆ. ಆ ದಿನವನ್ನಾಚರಿಸಬೇಕೆಂಬ ಚಳವಳಿಯನ್ನು ಅಲ್ಲಿ ಪ್ರಾರಂಭಿಸಿದವರು ನೈಟ್ಸ್ ಆಫ್ ಲೇಬರ್ ಎಂಬ ಕಾರ್ಮಿಕ ಸಂಘಗಳವರು. 1882, 1883 ಮತ್ತು 1884ರಲ್ಲಿ ಅವರು ಕಾರ್ಮಿಕ ದಿನದಂದು ನ್ಯೂಯಾರ್ಕ್ ನಗರದಲ್ಲಿ ಪ್ರದರ್ಶನ ನಡೆಸಿದರು. ಕಾರ್ಮಿಕ ದಿನದ ಆಚರಣೆಯ ಮೂಲ ಇರುವುದು ಅಮೆರಿಕಾದಲ್ಲಿ, 19ನೇ ಶತಮಾನದಲ್ಲಿ ನಡೆದ ಕಾರ್ಮಿಕ ಚಳವಳಿಗಳಲ್ಲಿ. ಕೆಲಸದ ಅವಧಿಯನ್ನು ದಿನಕ್ಕೆ 8 ಗಂಟೆ ನಿಗದಿ ಪಡಿಸಲು, ದುಡಿಯುವ ಪರಿಸರದಲ್ಲಿ ಮೂಲಸೌಕರ್ಯ ಒದಗಿಸಲು ಮತ್ತು ಕಾರ್ಮಿಕರ ಹಿತರಕ್ಷಣೆ ಕಾನೂನುಗಳನ್ನು ರೂಪಿಸಲು ಪಟ್ಟುಹಿಡಿದ ಕಾರ್ಮಿಕ ಒಕ್ಕೂಟದ ಸದಸ್ಯರು, ಸಮಾಜವಾದಿಗಳು ಮತ್ತು ಕಮ್ಯೂನಿಸ್ಟರು ಧರಣಿ ಹೂಡಿದ್ದರು. ದಿನದ 24 ಗಂಟೆಗಳಲ್ಲಿ 8 ಗಂಟೆ ಕೆಲಸಕ್ಕೆ, 8 ಗಂಟೆ ಮನೋಲ್ಲಾಸಕ್ಕೆ ಮತ್ತು 8 ಗಂಟೆ ವಿಶ್ರಾಂತಿಗೆ ಮೀಸಲಿಡಬೇಕು ಎಂಬುದು ಪ್ರತಿಭಟನಾಕಾರರ ಒತ್ತಾಯವಾಗಿತ್ತು ಅಮೆರಿಕಾದಲ್ಲಿ, ಪ್ರತಿವರ್ಷದ ಸೆಪ್ಟೆಂಬರ್ ಮೊದಲನೆಯ ಸೋಮವಾರವನ್ನು ಕಾರ್ಮಿಕ ದಿನವೆಂದು ಪರಿಗಣಿಸಬೇಕೆಂದೂ ಅಂದು ರಜಾ ಘೋಷಿಸಬೇಕೆಂದೂ ಅವರು 1884ರಲ್ಲಿ ನಿರ್ಣಯ ಮಾಡಿದರು. ಈ ಚಳವಳಿಗೆ ರಾಷ್ಟ್ರದ ಎಲ್ಲ ಕಾರ್ಮಿಕ ಸಂಘಗಳು ಬೆಂಬಲ ದೊರಕಿತು. ಮೊಟ್ಟಮೊದಲು ಕಾಲೊರಾಡೂ ರಾಜ್ಯ ಆ ದಿನವನ್ನು ಕಾರ್ಮಿಕ ದಿನವೆಂದು ಮಾನ್ಯ ಮಾಡಲು 1887ರ ಮಾರ್ಚಿ 15ರಂದು ಕಾಯಿದೆಯೊಂದನ್ನು ಅನುಮೋದಿಸಿತು. ಇದೇ ಕ್ರಮವನ್ನು ಇತರ ಕೆಲವು ರಾಜ್ಯಗಳೂ ಅನುಸರಿಸಿದುವು (ನ್ಯೂಯಾರ್ಕ್, ನ್ಯೂ ಜರ್ಸಿ, ಮಸಚುಸೆಟ್ಸ್). ಅಮೆರಿಕಾದ್ಯಂತ ಅಂದು ರಜಾ ದಿನವೆಂದು ಘೋಷಿಸುವ ವಿಧೇಯಕಕ್ಕೆ ಅಮೆರಿಕದ ಕಾಂಗ್ರೆಸ್ 1894ರ ಜೂನ್ 28ರಂದು ಒಪ್ಪಿಗೆ ನೀಡಿತು. ಇದನ್ನು ಕಾರ್ಯರೂಪಕ್ಕೆ ತರಲು ಎಲ್ಲ ರಾಜ್ಯಗಳೂ ಸಮ್ಮತಿಸಿ, ಆ ಪ್ರಕಾರ ಅಗತ್ಯವಾದ ಕಾಯಿದೆ ಮಾಡಿದುವು. ಕೆನಡದಲ್ಲಿ ಬಹುತೇಕ ಪ್ರಾಂತ್ಯಗಳಲ್ಲಿ ಕಾರ್ಮಿಕ ದಿನಾಚರಣೆಗೆ ಕಾನೂನು ರಚಿಸಲಾಗಿದೆ. ಕಾನೂನಿಲ್ಲದ ಪ್ರಾಂತ್ಯಗಳಲ್ಲಿ ಆಯಾ ಗವರ್ನರುಗಳು ಆ ಬಗ್ಗೆ ಘೋಷಣೆ ನೀಡುತ್ತಾರೆ. ಅಮೆರಿಕ ಕೆನಡಗಳಲ್ಲಿ ಎಲ್ಲ ವರ್ಗಗಳ ಜನರೂ ಅದನ್ನು ಆಚರಿಸುತ್ತಾರೆ. ಅಂದು ಬಹುತೇಕ ಎಲ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯನ್ನೂ ಮುಚ್ಚಲಾಗುತ್ತದೆ. ಸಭೆ, ವನಭೋಜನ, ಪ್ರದರ್ಶನ, ಮೆರವಣಿಗೆ, ಭಾಷಣ, ಕ್ರೀಡೆಗಳು- ಇವು ಅಂದು ಸಾಮಾನ್ಯ. ಉಲ್ಲೇಖಗಳು ಪ್ರಮುಖ ದಿನಗಳು ದಿನಾಚರಣೆಗಳು ಮೇನ ದಿನಗಳು
1910
https://kn.wikipedia.org/wiki/%E0%B2%B0%E0%B2%BE%E0%B2%B7%E0%B3%8D%E0%B2%9F%E0%B3%8D%E0%B2%B0%E0%B2%95%E0%B3%82%E0%B2%9F
ರಾಷ್ಟ್ರಕೂಟ
ರಾಷ್ಟ್ರಕೂಟರು ಕ್ರಿ.ಶ. ೮ ರಿಂದ ೧೦ನೇ ಶತಮಾನದವರೆಗೆ ದಖ್ಖನವನ್ನು ಆಳಿದ ರಾಜವಂಶ. ದಂತಿದುರ್ಗನಿಂದ ಮೊದಲುಗೊಂಡ ಇವರ ಮೂಲಸ್ಥಾನ ಲಟ್ಟಲೂರು ಆಗಿದ್ದು, ತದನಂತರ ತಮ್ಮ ರಾಜಧಾನಿ ಮಾನ್ಯಖೇಟದಿಂದ ಆಳ್ವಿಕೆ ನಡೆಸಿದರು. ರಾಷ್ಟ್ರ ಎಂಬುದು ಪ್ರಾಂತ್ಯವಾಚಕ ಪದ. ಈ ಅರ್ಥದಲ್ಲಿ ಇದು ಅಶೋಕನ ಕಾಲದಿಂದ ರಾಜಕೀಯ ವ್ಯವಹಾರದಲ್ಲಿ ಬಳಕೆಯಾಯಿತು. ಅನಂತರ ಪ್ರಾಂತ್ಯಾಧಿಕಾರಿ ಎಂಬ ಅಭಿಪ್ರಾಯದಲ್ಲಿ ರಾಷ್ಟ್ರಕೂಟ ಎಂಬ ಪದವಿಸೂಚಕ ವಿಶಿಷ್ಟ ಪದ ಪ್ರಯೋಗವಾಗತೊಡಗಿತು. ಇಂಥ ಪ್ರಾಂತ್ಯಾಧಿಕಾರಿಗಳ ವಂಶದವರು ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ಊರ್ಜಿತರಾದರು. ಸಮಸ್ತ ಭಾರತದಲ್ಲಿ ಖ್ಯಾತಿವೆತ್ತು ಭವ್ಯ ಪರಂಪರೆಯಿಂದ ಆಳಿದವರು ಮಳಖೇಡದ ರಾಷ್ಟ್ರಕೂಟರು. ಇವರ ಮೂಲಸ್ಥಳ ಹಿಂದೆ ಪ್ರಾಚೀನ ಕರ್ನಾಟಕದಲ್ಲಿ ಸಮಾವೇಶಗೊಂಡಿದ್ದು, ಅನಂತರ ಮಹಾರಾಷ್ಟ್ರದಲ್ಲಿ ಸೇರ್ಪಡೆಯಾದ ಲತ್ತನೂರು ಎಂದರೆ ಲಾತೂರು ಎಂಬ ಪಟ್ಟಣ. ರಾಷ್ಟ್ರಕೂಟ ಎಂಬ ಹೆಸರುವೆತ್ತ ಹಲವು ಅರಸು ಮನೆತನಗಳು ಭಾರತದ ನಾನಾ ಪ್ರದೇಶಗಳಲ್ಲಿ ಆಳಿದುವು. ಅವೆಲ್ಲ ಕರ್ನಾಟಕ ಮೂಲದವೇ ಆಗಿದ್ದುವು ಎಂಬುದು ಕೆಲವು ಇತಿಹಾಸ ಲೇಖಕರ ಅಭಿಪ್ರಾಯ. ರಾಷ್ಟ್ರಕೂಟ ವಂಶ ರಾಷ್ಟ್ರಕೂಟ ವಂಶ - 8ನೆಯ ಶತಮಾನದ ಮಧ್ಯಭಾಗದಿಂದ 10ನೆಯ ಶತಮಾನದ ಕೊನೆಯವರೆಗೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಬಹುಭಾಗವನ್ನು ಆಳಿದ ರಾಜಮನೆತನ., , ಬಾದಾಮಿ ಚಾಳುಕ್ಯರ ರಾಜಕೀಯ ಉತ್ತರಾಧಿಕಾರಿಗಳು ದಕ್ಷಿಣ ಭಾರತದಲ್ಲಷ್ಟೇ ಅಲ್ಲ ಉತ್ತರ ಭಾರತದಲ್ಲಿ ಒಂದು ಕಡೆ ಕನೋಜಿನವರೆಗೂ ಇನ್ನೊಂದೆಡೆ ಮಿಥಿಲೆಯವರೆಗೂ ಇವರ ರಾಜಕೀಯ ಪ್ರಭಾವ ಹಬ್ಬಿತ್ತು. ಎಲ್ಲ ರಾಜಮನೆತನಗಳ ಹಾಗೆ ಈ ಮನೆತನದ ಚರಿತ್ರೆಯಲ್ಲೂ ಏಳುಬೀಳುಗಳಿವೆ; ಶಾಖೋಪಶಾಖೆಗಳಿವೆ. ಇವುಗಳಲ್ಲಿ ಮಾನ್ಯಖೇಟದ ಮನೆತನ ಸಾರ್ವಭೌಮ ಪದವಿಯನ್ನು ಹೊಂದಿದ್ದ ಮುಖ್ಯ ಮನೆತನ ಆಗಿತ್ತು; ಮಿಕ್ಕವು ಸಾಮಂತ ಮನೆತನಗಳು. ರಾಷ್ಟ್ರಕೂಟರ ಯಾದವ ವಂಶದ ಬಳ್ಳಿಯ ಮಾನಪುರದ ರಾಷ್ಟ್ರಕೂಟರು, ಮಾನ್ಯಖೇಟದ ರಾಷ್ಟ್ರಕೂಟರು, ಸೌಂದತ್ತಿಯ ರಾಷ್ಟ್ರಕೂಟರು, ಆಮರ್ದಕಪುರದ ರಾಷ್ಟ್ರಕೂಟರು, ರಟ್ಟಮತಗ್ರಂಥದ ರಾಷ್ಟ್ರಕೂಟರು, ಗುಜರಾತಿನ ರಾಷ್ಟ್ರಕೂಟರು, ವಿದರ್ಭದ ರಾಷ್ಟ್ರಕೂಟರು, ವಾಘರಕೊಟ್ಟ, ಕನೋಜ, ಮಾರ್‍ವಾಡ್, ಬದಯೂನ್, ಜೋಧಪುರ, ಮತ್ತು ಬಿಕಾನೇರ್ ಮುಂತಾದ ಉತ್ತರಭಾರತದ ಹಲವು ರಾಠೋಡ ಮನೆತನಗಳು ಅನೇಕ ಕಡೆಗಳಲ್ಲಿ ಹೀಗೆ ಹಬ್ಬಿಬೆಳೆದಿದೆ. ಕಾಕತೀಯರೂ ಮೂಲತಃ ರಾಷ್ಟ್ರಕೂಟರು ಎಂಬುದಾಗಿ ಇತ್ತೀಚೆಗೆ ಆಂಧ್ರ ಪ್ರದೇಶದಲ್ಲಿ ದೊರೆತ ಬಯ್ಯಾರಮ್ ಚೆರುವು ಶಾಸನದಿಂದ ತಿಳಿದುಬಂದಿದೆ. ರಾಷ್ಟ್ರಕೂಟರ ಚರಿತ್ರೆಯನ್ನು ಶಾಸನ ಹಾಗೂ ಸಾಹಿತ್ಯ ಕೃತಿಗಳ ಮೂಲಕ ಸಂಗ್ರಹಿಸಿಕೊಳ್ಳಬೇಕಾಗಿದೆ. ರಾಷ್ಟ್ರಕೂಟರ ಚರಿತ್ರೆಯ ಬೃಹದ್‍ಗ್ರಂಥ ಇನ್ನೂ ರಚಿಸಲ್ಪಟ್ಟಿಲ್ಲ. ರಾಷ್ಟ್ರಕೂಟ ಎಂಬುದು ಅಧಿಕಾರ ಸೂಚಕ ಪದ. ಸಂಸ್ಕೃತದ ರಾಷ್ಟ್ರ (ದೇಶ-ಪ್ರದೇಶ) ಮತ್ತು ಕೂಟ (ಮುಖ್ಯಸ್ಥ) ಎಂಬ ಪದಗಳಿಂದ ಉಂಟಾದ ನಾಮಪದ. ಗ್ರಾಮ, ಕೂಟ, (ಗಾವುಂಡ, ಗೌಡ) ಗ್ರಾಮಾಧಿಪತಿ ಆಗಿದ್ದಂತೆ ರಾಷ್ಟ್ರಕೂಟ ಒಂದು ಪ್ರದೇಶದ ಅಧಿಪತಿ. ರಾಷ್ಟ್ರಕೂಟ ರಾಷ್ಟ್ರಿಕ, ರಾಟ್ರಿಕ, ರಿಷ್ಟಿಕ, ರಥಿಕ, ರಟ್ಟ/ರಾಟ್ಟ < ವೃಷ್ಟಿ < ವರ್ಷ, ರಾಠೋಡ್, ರಾಠೌಂಡಾ ಮುಂತಾದ ಶಬ್ದಗಳಲ್ಲಿ ಈ ಮನೆತನದ ಹೆಸರಿನ ವ್ಯುತ್ಪತ್ತಿಯನ್ನು ಕಾಣಲು - ನಿರೂಪಿಸಲು ವಿದ್ವಾಂಸರು ಪ್ರಯತ್ನಿಸುತ್ತಿದ್ದಾರೆ. ಮಾನಪುರದ ರಾಷ್ಟ್ರಕೂಟರು ಅವಿಧೇಯನ ಪಂಡರಂಗಪಲ್ಲಿ ಶಾಸನ ವಿಭುರಾಜನ ಹಿಂಗ್ಣಿಭೇರ್ಡಿ ಶಾಸನ ಮುಂತಾದವುಗಳ ಆಧಾರದಿಂದ ಇವರ ವಂಶಾವಳಿಯನ್ನು ಹೀಗೆ ನಿರೂಪಿಸಲಾಗಿದೆ. ಚಿತ್ರ-ಮಾನಪುರದ-ರಾಷ್ಟ್ರಕೂಟರ-ವಂಶಾವಳಿ. ಸತಾರ ಜಿಲ್ಲೆಯ (ಮಹಾರಾಷ್ಟ್ರದ) ಮಾನ್ ತಾಲ್ಲೂಕಿನ ಮಾನಪುರ ಇವರ ರಾಜಧಾನಿಯಾಗಿತ್ತು. ಮಾನಾಂಕ ಈ ವಂಶದ ಮೂಲ ಪುರುಷ. ಕಾವೇರಿಯಿಂದ ಗೋದಾವರೀ ನದಿಯ ತಟಗಳ ಮಧ್ಯದ ಭೂಭಾಗವೆಲ್ಲ ಆಗ ಕರ್ನಾಟಕವಾಗಿತ್ತು. ಮಾನ್ಯಖೇಟದ ರಾಷ್ಟ್ರಕೂಟರು ಮನೆತನದ ಮೂಲಪುರುಷರು ಮೊದಲು ರೇವಾ ಹಾಗೂ ಮಹಾನದಿಗಳ ನಡುವಣ ಪ್ರದೇಶವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡುದುದು ದಂತಿದುರ್ಗನ ಸಾಮನಗಢ ಶಾಸನದಿಂದ ಖಚಿತವಾಗಿದೆ. ಇಲ್ಲಿ ಆಳುತ್ತಿದ್ದ ರಾಷ್ಟ್ರಕೂಟರ ವಂಶಕ್ಕೆ ಒರಿಸ್ಸದ ಸಂಭಲಪುರದ ಬಳಿಯ ವಾಘರಕೊಟ್ಟದಿಂದ ಆಳುತ್ತಿದ್ದ ರಾಷ್ಟ್ರಕೂಟರ ವಂಶ ಸಂಬಂಧಪಟ್ಟಿರಬಹುದು. ಮಾನ್ಯಖೇಟ, ವಿದರ್ಭ ರಾಷ್ಟ್ರಕೂಟರ ಶಾಸನಗಳಲ್ಲಿ ವಿಶೇಷತಃ ಸಂಗಲೂಡಾ, ನಾಗರ್ಧನ, ಮುಲ್ತಾಯಿ ಮತ್ತು ತಿವರಖೇಡ ಶಾಸನಗಳಲ್ಲಿ ಬಂದಿರುವ ಸ್ವಾಮಿಕರಾಜ, ದುರ್ಗರಾಜ, ಗೋವಿಂದರಾಜ ಮತ್ತು ನನ್ನರಾಜ ಇವರುಗಳ ಪರಂಪರೆ ಒಂದೇ ವಂಶದ್ದೋ ಅಥವಾ ಭಿನ್ನಭಿನ್ನ ಶಾಖೆಗಳದ್ದೋ ಎಂಬುದರ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ನಾಗರ್ಧನ, ಅಚಲಪುರ, ಹಾಗೂ ಪದ್ಮನಗರಗಳಿಂದ ಆಳಿದ ಒಂದು ರಾಷ್ಟ್ರಕೂಟ ಶಾಖೆ ಬೇರೆಯೆಂದು ವಿ.ವಿ. ಮಿರಾಶಿಯವರು ಪ್ರತಿಪಾದಿಸಿದ್ದಾರೆ. ಎಂ. ವೆಂಕಟರಾಮಯ್ಯನವರು ಸಂಗಲೂಡಾ ಶಾಸನವನ್ನು ಕುರಿತು ಬರೆಯುತ್ತ ಇವರೆಲ್ಲರೂ ಎ.ಎಸ್. ಅಳ್ತೇಕರರು ನಿರೂಪಿಸಿರುವ ರೀತಿಯಲ್ಲಿ ಮಾನ್ಯಖೇಟದಿಂದ ಆಳಿದ ಮೂಲ ಮನೆತನಕ್ಕೆ ಸಂಬಂಧಪಟ್ಟವರು ಎಂದು ಅಭಿಪ್ರಾಯಪಟ್ಟಿದ್ದಾರೆ. ನಾಮಸಾದೃಶ್ಯತೆ ಇರುವುದು ಗಮನಾರ್ಹವಾದುದು ನಿಜ: ಆದರೆ ಒಂದೆಂದು ಹೇಳಲು ಬೇರೆಯ ಖಚಿತ ಪ್ರಮಾಣಗಳ ಅಭಾವವಿದೆ. ಸು. 570-590 ರ ಮಧ್ಯೆ ಆಳಿದ ದುರ್ಗರಾಜನಿಂದ ಈ ಮನೆತನದ ಇತಿಹಾಸವನ್ನು ಅಳ್ತೇಕರರ ಸೂಚನೆಯಂತೆ ಪ್ರಾರಂಭಿಸಬಹುದೆಂದು ತೋರುತ್ತದೆ. ಕೆಲವರು ದಂತಿವರ್ಮನಿಂದ ಆರಂಭಿಸುತ್ತಾರೆ. ಇವರ ಮನೆಮಾತು ಕನ್ನಡವಾಗಿತ್ತೆಂಬುದನ್ನು ಅಳ್ತೇಕರರು ಸಾಧಾರವಾಗಿ ಸಿದ್ಧಪಡಿಸಿದ್ದಾರೆ. ನಿರವದ್ಯಾನ್ವಯದ ಶ್ರೀವಿಜಯ ರಚಿಸಿದ ಕವಿರಾಜಮಾರ್ಗ ಕೃತಿಯ ಪ್ರಕಾರ ಕನ್ನಡನಾಡು, ಕನ್ನಡನುಡಿ ಇವು ಕಾವೇರಿ ತೀರದಿಂದ ಗೋದಾವರಿ ತೀರದ ಮಧ್ಯದ ಪ್ರದೇಶದಲ್ಲಿ ಇದ್ದುವೆಂಬುದು ಅದರಲ್ಲಿನ ಒಂದು ಪದ್ಯದಿಂದ ಸ್ಪಷ್ಟ: ಕಾವ್ಯದಲ್ಲಿ ಬಳಕೆ ಕಾವೇರಿಯಿಂದಮಾಗೋ ದಾವರಿವರಮಿರ್ದ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ ವಸು ಧಾವಳಯ ವಿಲೀನ ವಿಶದ ವಿಷಯ ವಿಶೇಷಂ (1-36) ರಾಷ್ಟ್ರಕೂಟರು ಆರಂಭದಲ್ಲಿ ಬಾದಾಮಿಯ ಚಾಳುಕ್ಯರ ಸಾಮಂತರಾಗಿದ್ದರು. ಮಧ್ಯಕಾಲೀನ ದೇಶಮುಖ, ದೇಸಾಯಿ ಶಬ್ದಗಳ ಹಾಗೆ ಗ್ರಾಮಕೂಟ, ರಾಷ್ಟ್ರಕೂಟ ಶಬ್ದಗಳು ಆಡಳಿತದಲ್ಲಿಯ ಅಧಿಕಾರವನ್ನು ಸೂಚಿಸುತ್ತವೆ. ಆದರೆ ಈ ಮಂಡಲಗಳ ವ್ಯಾಪ್ತಿ ಆದಾಗ ಸೀಮಾರೇಖೆಗಳ ವಿಸ್ತಾರತೆ ಇಲ್ಲವೇ ಆಕುಂಚನದಿಂದ ಏಕರೀತಿಯಾಗಿರಲಿಲ್ಲ. ರಾಷ್ಟ್ರಕೂಟರು ತಮ್ಮನ್ನು ಯಾದವರೆಂದು ಹೇಳಿಕೊಂಡಿದ್ದಾರೆ. ಗರುಡ (ವಿಷ್ಣುವಿನ ವಾಹನ), ನೇಗಿಲು ಬಲರಾಮನ ಆಯುಧ ಇವರ ಲಾಂಛನಗಳಾಗಿದ್ದವು. ಗರುಡಧ್ವಜ ಇವರ ಬಾವುಟ ಆಗಿತ್ತು. ದಂತಿದುರ್ಗನ ಕಾಲದವರೆಗಿನ ಇತಿಹಾಸ. ಈ ಮನೆತನದ ಒಂದನೆಯ ಇಂದ್ರರಾಜನ ಚಾಳುಕ್ಯ ಭವನಾಗ ಅಥವಾ ಭವಗಣಾ ಎಂಬುವಳನ್ನು ಕೈರಾ (ಗುಜರಾತ್) ಎಂಬಲ್ಲಿಂದ ಎತ್ತಿಕೊಂಡು ಬಂದು ರಾಕ್ಷಸ ರೀತಿಯಲ್ಲಿ ಮದುವೆಯಾದನೆನ್ನುವುದನ್ನು ಬಿಟ್ಟರೆ, ಇನ್ನೂ ಸಂಪೂರ್ಣ ಕತ್ತಲೆಯಲ್ಲಿದೆ. ರಾಷ್ಟ್ರಕೂಟ ಸಾಮ್ರಾಜ್ಯದ ಆಸ್ತಿಭಾರವನ್ನು ಹಾಕಿದ ಮೊದಲ ಮಹಾಪುರುಷ ದಂತಿದುರ್ಗ. ಈತನ ಎಲ್ಲೋರ ಶಾಸನದಲ್ಲಿ ಮೊದಲ ಬಾರಿಗೆ ಪೃಥ್ವೀವಲ್ಲಭ ಎಂಬ ಬಿರುದನ್ನು ತಳೆದಿರುವುದು ಮತ್ತು ಸಾಮನಗಡ ಶಾಸನದಿಂದ ಪೃಥ್ವೀವಲ್ಲಭ, ಮಹಾರಾಜಾಧಿರಾಜ ಪರಮೇಶ್ವರ, ಪರಮಭಟ್ಟಾರಕ, ಖಡ್ಗಾವಲೋಕ ಎಂಬ ಬಿರುದುಗಳನ್ನು ಧರಿಸಿರುವುದು ಕಂಡು ಬರುತ್ತದೆ. ಅನ್ಯರಿಗೆ ಅಸಾಧ್ಯವಾದ ಅಜೇಯವಾದ ಕರ್ಣಾಟಕ ಬಲವನ್ನು ಸೋಲಿಸಿದುದಾಗಿಯೂ ಹೇಳಿರುವುದರ ಜೊತೆಗೆ ವಲ್ಲಭ ದೊರೆಯನ್ನು ಸೋಲಿಸಿದ ಅನಂತರವೇ ಸಾರ್ವಭೌಮತ್ವವನ್ನು ಸೂಚಿಸುವ ರಾಜಾಧಿರಾಜ ಪರಮೇಶ್ವರ ಎಂಬ ಬಿರುದನ್ನು ಹೊಂದಿದ್ದುದಾಗಿಯೂ ಆ ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ. ದಂತಿದುರ್ಗ ಸಾರ್ವಭೌಮರಾದ ಚಾಳುಕ್ಯರನ್ನು ಸೋಲಿಸಿದುದಲ್ಲದೇ ಕಂಚಿ, ಕಳಿಂಗ, ಶ್ರೀಶೈಲ, ಚೋಳ, ಪಾಂಡ್ಯ, ಕೇರಳ, ಕೋಸಲ, ಮಾಲವ, ಲಾಟ, ಸಿಂಹ ಮೊದಲಾದ ದೇಶಗಳನ್ನು ಮತ್ತು ಶ್ರೀಹರ್ಷ, ವಜ್ರಟ ಮೊದಲಾದ ರಾಜರನ್ನೂ ಸೋಲಿಸಿದುದಾಗಿ ತನ್ನ ಪ್ರಶಸ್ತಿಯಲ್ಲಿ ಬರೆಯಿಸಿದ್ದಾನೆ. ದಂತಿದುರ್ಗನ ವಿಸ್ತಾರವಾದ ಪ್ರಶಸ್ತಿ ಎಲ್ಲೋರದ ದಶಾವತಾರ ಗುಹೆಯ ಶಾಸನದಲ್ಲಿ ಬಂದಿದೆ. ದಂತಿದುರ್ಗನಿಂದ ಆರಂಭವಾದ ಆಳ್ವಿಕೆ ಅವಿಚ್ಛಿನ್ನವಾಗಿ ಇಮ್ಮಡಿ ಕರ್ಕನವರೆಗೆ ಸಾಗಿಬಂದಿತು (ಸು. 747 ರಿಂದ 756 ಮಧ್ಯದಲ್ಲಿ ಆರಂಭವಾಗಿ 972-73.) ಒಬ್ಬರಾದ ಮೇಲೆ ಒಬ್ಬರು ಶೂರ ಧೀರ ಪುರುಷರೇ ಆಗಿದ್ದುದರಿಂದ ಸಾಮ್ರಾಜ್ಯದ ಹಿರಿಮೆ ಗರಿಮೆಗಳು ಏರುತ್ತ ನಡೆದವು. ದಂತಿದುರ್ಗನಿಗೆ ಮಕ್ಕಳಿರಲಿಲ್ಲವಾದ ಕಾರಣ ಇವನ ಚಿಕ್ಕಪ್ಪನಾದ ಒಂದನೆಯ ಕೃಷ್ಣ ಪಟ್ಟವನ್ನು ಅಲಂಕರಿಸಿದ. ಈತ ಇನ್ನೂ ಕಿಂಚಿತ್ ಜೀವಹಿಡಿದಿದ್ದ ಬಾದಾಮಿ ಚಾಳುಕ್ಯರ ಸಾಮ್ರಾಜ್ಯತ್ವವನ್ನು 757ರಲ್ಲಿ ಇಮ್ಮಡಿ ಕೀರ್ತಿವರ್ಮನನ್ನು ಮೂಲೋತ್ಪಾಟನೆ ಮಾಡುವುದರ ಸಂಪೂರ್ಣಗೊಳಿಸಿದ. ಶುಭತುಂಗ, ಅಕಾಲವರ್ಷ ಎಂಬ ಬಿರುದುಗಳನ್ನು ಈತ ಧರಿಸಿದ್ದ. ಕೃಷ್ಣನ ಅನಂತರ ಇಮ್ಮಡಿ ಗೋವಿಂದ, ಆತನ ತಮ್ಮ ಧ್ರುವಧಾರಾವರ್ಷ, ಕಲಿವಲ್ಲಭ ಇವರು ಕ್ರಮವಾಗಿ ರಾಜ್ಯವನ್ನಾಳಿದರು. ಧ್ರುವಧಾರಾವರ್ಷನಿಗೆ ಪ್ರಿಯಪುತ್ರನೂ ಅತ್ಯಂತ ಶೂರನೂ ಆದ ಪ್ರಭೂತವರ್ಷ ಮುಮ್ಮಡಿ ಗೋವಿಂದ ಅವನ ಅನಂತರ ಪಟ್ಟಕ್ಕೆ ಬಂದ. ಮುಮ್ಮಡಿ ಗೋವಿಂದನ ಪುತ್ರನೇ ನೃಪತುಂಗ ಅಮೋಘವರ್ಷ. ನೃಪತುಂಗನ ಕಾಲದವರೆಗೆ ರಾಷ್ಟ್ರಕೂಟರ ರಾಜಧಾನಿ ಯಾವುದು ಎಂಬುದು ಇನ್ನೂ ಖಚಿತವಾಗಿಲ್ಲ; ಎಲ್ಲೋರದ ಬಳಿಯ ಸೂಲೂಭಂಜನ ರಾಜಧಾನಿಯಾಗಿದ್ದಿರಬಹುದೆಂಬುದು ಅಳ್ತೇಕರರ ಊಹೆ. ಲಟ್ಟಲೂರ ಪುರವರಾಧೀಶ್ವರ ಎಂಬುದು ಇವರ ಮೂಲ ರಾಜಧಾನಿಯನ್ನು ಸೂಚಿಸಿದರೆ, ಇತ್ತೀಚೆಗೆ ನಾಂದೇಡ ಜಿಲ್ಲೆಯ ಕಂಧಾರದಲ್ಲಿ ದೊರೆತ ಶಾಸನದಿಂದ ಕಂಧಾರ ಮಾನ್ಯಖೇಟಕ್ಕಿಂಥ ಮುಂಚಿನ ರಾಜಧಾನಿಗಳಲ್ಲೊಂದು ಎಂಬುದು ಸುಸ್ಪಷ್ಟವಿದೆ. ನೃಪತುಂಗನ ಕಾಲದಲ್ಲಿ ರಾಜಧಾನಿ ಮಾನ್ಯಖೇಟ ದಿನೇ ದಿನೇ ಪ್ರವರ್ಧಮಾನವಾಗಿ ಬೆಳೆಯಿತು. ತತ್ಪೂರ್ವದಲ್ಲಿ ರಾಜಧಾನಿಯಾದ ಕಂಧಾರ ಪ್ರಾಮುಖ್ಯವನ್ನು ದಿನೇ ದಿನೇ ಕಳೆದುಕೊಂಡಿತು. ವೀರ ನಾರಾಯಣ ಕೃಷ್ಣೇಶ್ವರ, ಜಗತ್ತುಂಗಸಮುದ್ರ, ಮೂರನೆಯ ಗೋವಿಂದ ಹಾಗೂ ಆತನ ಪುತ್ರ ನೃಪತುಂಗನ ದಂಡನಾಯಕನಾಗಿದ್ದ ಬಂಕೆಯನ ಸ್ಮಾರಕ ಬಂಕೇಶ್ವರ ಹಾಗೂ ಚಲ್ಲೇಶ್ವರ, ರಾಜಗೃಹ ಅರ್ಥಾತ್ ಅರಮನೆ ಮತ್ತು ಪ್ರಧಾನ ರಾಜ ವಿಲಾಸಿನಿಪಾಟಕಗಳ ಉಲ್ಲೇಖವಿದ್ದು ಅದು ಒಂದು ರಾಜಧಾನಿಯಾಗಿತ್ತೆನ್ನುವುದರಲ್ಲಿ ಸಂದೇಹವೇ ಇಲ್ಲ. ರಾಷ್ಟ್ರಕೂಟ, ಚಾಳುಕ್ಯ, ಗಂಗ, ಪಲ್ಲವ, ಚೋಳ ಹಾಗೂ ಇತ ರಾಜಮನೆತನಗಳ ನಡುವೆ ಐತಿಹಾಸಿಕ ಸಂಬಂಧಗಳು ಬೆಳೆದು, ಸಿಂಹಾಸನಕ್ಕಾಗಿ e್ಞÁತಿಯುದ್ಧಗಳು ಜರುಗಿದವು. ಮೂರನೆಯ ಗೋವಿಂದ, ಮೂರನೆಯ ಇಂದ್ರ ಹಾಗೂ ಮೂರನೆಯ ಕೃಷ್ಣ ಇವರ ಕಾಲದಲ್ಲಿ ರಾಷ್ಟ್ರಕೂಟರ ಸೈನ್ಯ ಭಾರತಾದ್ಯಂತ ಹಿಮವತ್ ಪ್ರದೇಶದಿಂದ ರಾಮೇಶ್ವರದವರೆಗೆ ಚಲಿಸಿತು. ಇವನ ಆನೆ ಕುದುರೆಗಳು ಗಂಗಾ ಯಮುನಾ ತರಂಗಗಳಲ್ಲಿ ಮೈತೊಳೆದವು. ಸೋತ ರಾಜರು ಶರಣಾಗತರಾಗಿ ನಿಂತರು. ಕೆಲವರು ಈ ರಾಜರ ಮೂರ್ತಿಗಳನ್ನೇ ಮಾಡಿಸಿ ಸ್ಥಾಪಿಸಿದರು. ಮೂರನೆಯ ಕೃಷ್ಣನ ಅನಂತರ ಆತನ ಸಹೋದರ ಇಮ್ಮಡಿ ಕರ್ಕ ಪಟ್ಟಕ್ಕೆ ಬಂದ. ಆತ ಅಣ್ಣನಷ್ಟು ಶಕ್ತಿಶಾಲಿಯಾಗಿರಲಿಲ್ಲ. ಕರ್ಕನ ಮಗ ಕೃಷ್ಣ. ಕರ್ಕನ ತಮ್ಮ ನಿರುಪಮದೇವ ಹಾಗೂ ಮೂರನೆಯ ಕೃಷ್ಣನ ಮೊಮ್ಮಗ ನಾಲ್ಕನೆಯ ಇಂದ್ರ, ಗಂಗರ ಇಮ್ಮಡಿ ಮಾರಸಿಂಹ ಹಾಗೂ ಆತನ ಪ್ರಧಾನ ಚಾವುಂಡರಾಯನ ನೇತೃತ್ವದಲ್ಲಿ ಸಿಂಹಾಸನಕ್ಕಾಗಿ ಯುದ್ಧ ಮಾಡಿದರು. ಇಂಥ ಸಂದರ್ಭಕ್ಕಾಗಿ ಕಾದಿದ್ದ ಪರಮಾರ ಸಿಯ್ಯಕ 972ರಲ್ಲಿ ಮಾನ್ಯಖೇಟದ ಮೇಲೆ ದಾಳಿ ಮಾಡಿ ಆ ನಗರವನ್ನು ಕೊಳ್ಳೆ ಹೊಡೆದ; ತನ್ನ ಸೋಲುಗಳ ಸೇಡನ್ನು ತೀರಿಸಿಕೊಂಡ. ಧನಪಾಲನ ಪಾಇಅಲಚ್ಛೀನಾಮ ಮಾಲಾ ಗ್ರಂಥದ ಪ್ರಕಾರ ಸಿಯ್ಯಕ ಮಾನ್ಯಖೇಟವನ್ನು ದಹಿಸಿದ. ರಾಷ್ಟ್ರಕೂಟರ ಆಳ್ವಿಕೆ ಅಂತಃ ಕಲಹದಲ್ಲಿ ಮುಳುಗಿ ಮಾಯವಾಗುತ್ತಿದ್ದುದನ್ನು ಕಂಡ ಸಾಮಂತ ಚಾಳುಕ್ಯ ಕುಲದ ಇಮ್ಮಡಿ ತೈಲಪ ಆಡಳಿತದ ಕಡಿವಾಣವನ್ನು ಹಿಡಿದು ಚಾಳುಕ್ಯರ ಅಧಿಕಾರವನ್ನು ಸಾಮ್ರಾಜ್ಯ ಪಟ್ಟದಲ್ಲಿ ಪುನಃ ಪ್ರತಿಷ್ಠಾಪಿಸಿದ. ಸು. 757-972ರವರೆಗೆ ಅತ್ಯಂತ ವಿಜೃಂಭಣೆಯಿಂದ ಈ ಮನೆತನ ರಾಜ್ಯಭಾರವನ್ನೆಸಗಿತು. ರಾಷ್ಟ್ರಕೂಟರ ಆಡಳಿತ ರಾಷ್ಟ್ರಕೂಟರ ಆಳ್ವಿಕೆಯಲ್ಲಿ ಆಡಳಿತ ಸುವ್ಯವಸ್ಥಿತ ರೀತಿಯಲ್ಲಿ ಇತ್ತು. ರಾಷ್ಟ್ರಕೂಟರ ಶಾಸನಗಳು ಹಾಗೂ ಸಾಹಿತ್ಯ ಕೃತಿಗಳು ಇವರ ಆಡಳಿತ ವ್ಯವಸ್ಥೆ ಕುರಿತು ಸಾಕಷ್ಟು ಬೆಳಕು ಚೆಲ್ಲುತ್ತದೆ. ರಾಜ, ರಾಣಿ, ಯುವರಾಜ, ಮಂತ್ರಿಮಂಡಲ ಇವುಗಳ ಬಗ್ಗೆಯೂ ವಿವರಗಳು ದೊರೆಯುತ್ತವೆ. ಯುವರಾಜ ಸಾಮಾನ್ಯವಾಗಿ ರಾಜಧಾನಿಯಲ್ಲಿದ್ದು ತಂದೆಗೆ ರಾಜ್ಯಾಡಳಿತದಲ್ಲಿ ಸಹಾಯ ಮಾಡುತ್ತಿದ್ದ. ಮುಂದೆ ರಾಜನಾಗುವ ವ್ಯಕ್ತಿಗೆ ಇದೊಂದು ಪೂರ್ವಭಾವಿ ತರಬೇತಿಯಾಗಿತ್ತು. ರಾಣಿಯರು ರಾಜಕನ್ಯೆಯರು ಒಮ್ಮೊಮ್ಮೆ ರಾಜ್ಯಾಡಳಿತವನ್ನು ನೋಡಿಕೊಂಡುದುಂಟು. ಧ್ರುವಧಾರಾವರ್ಷನ ಹೆಂಡತಿ ಶೀಲಭಟ್ಟಾರಿಕೆ, ನೃಪತುಂಗನ ಪುತ್ರಿ ಚಂದ್ರೋಬಲಬ್ಬೆ (ರಾಯಚೂರು ದೋಅಬ ಕೃಷ್ಣಾಭೀಮ ಮಧ್ಯದ ಪ್ರದೇಶದಲ್ಲಿ) ಆಡಳಿತ ನಡೆಸಿದುದಕ್ಕೆ ದಾಖಲೆಗಳು ದೊರೆತಿವೆ. ಆದರೂ ಆಡಳಿತದ ವಿಶೇಷಭಾರ ಪುರುಷರ ಮೇಲೆಯೆ ಬೀಳುತ್ತಿತ್ತು. ರಾಜಧಾನಿಯಲ್ಲಿ ಸಾಮಾನ್ಯವಾಗಿ ರಾಜನ ಆಸ್ಥಾನ ಇತ್ತು. ಆದರೆ ವಿಜಯಯಾತ್ರೆ ಅಥವಾ ದಂಡಯಾತ್ರೆ ಹೊರಟಾಗ ರಾಜ ಬೀಡುಬಿಟ್ಟಲ್ಲಿ ಆಸ್ಥಾನ ನಡೆಯುತ್ತಿತ್ತು. ಅದನ್ನು ವಿಜಯಕಟಕ ಎಂದು ಕರೆಯಲಾಗುತ್ತಿತ್ತು. ವಿಶೇಷವಾಗಿ ಮಂತ್ರಿಗಳು ದಂಡನಾಯಕರು ಆಗಿರುತ್ತಿದ್ದರು. ಅವರಲ್ಲಿ ಕೆಲವರು ಧ್ರುವನ ಸಂಧಿವಿಗ್ರಹದಲ್ಲಿನ ಹಾಗೆ ಮಂಡಲೇಶ್ವರರೂ ಆಗಿದ್ದರು. ರಾಜ್ಯವನ್ನು ನೇರ ಆಡಳಿತಕ್ಕೊಳಪಟ್ಟ ಹಾಗೂ ಮಾಂಡಲಿಕರ ಆಡಳಿತಕ್ಕೊಳಪಟ್ಟ ವಿಭಾಗಗಳೆಂದು ವಿಭಜಿಸಲಾಗಿತ್ತು. ಮಾಂಡಲಿಕರು ಕಪ್ಪಕಾಣಿಕೆಗಳನ್ನು ತಪ್ಪದೇ ಸಮಯಕ್ಕೆ ಸರಿಯಾಗಿ ಸಲ್ಲಿಸಬೇಕಾಗಿತ್ತು. ಹಾಗೆ ಸಲ್ಲಿಸದಿದ್ದಾಗ ಇಂತವರನ್ನು ತಹಬಂದಿಗೆ ತರಲು ಯುದ್ಧಗಳಾದುದೂ ಉಂಟು. ಮಾಹಾಮಂಡಲೇಶ್ವರರು ಮಾಂಡಲೀಕರ ಮೇಲೆ ಕೆಲವೊಮ್ಮೆ ಆಧಿಪತ್ಯವನ್ನು ಹೊಂದಿದೂ ಕಂಡುಬರುತ್ತದೆ. ಅವರೆಲ್ಲರೂ ಚಕ್ರವರ್ತಿಯ ಜೊತೆಗೆ ಆಗಾಗ್ಗೆ ಸೇನಾ ಚಟುವಟಿಕೆಗಳಲ್ಲಿ ಸಹಭಾಗಿಗಳಾಗಿ ಪಾಲುಗೊಳ್ಳುತ್ತಿದ್ದರು. ರಾಜಾಜ್ಞೆಯನ್ನು ಈಡೇರಿಸಲು ಒಮ್ಮೊಮ್ಮೆ ಸ್ವತಃ ಬಂಕೆಯನ ಹಾಗೆ ದಿಗ್ವಿಜಯಗೆಯ್ದುದೂ ಉಂಟು. ನೇರ ಆಡಳಿತಕ್ಕೆ ಒಳಪಟ್ಟ ಭೂಭಾಗವನ್ನು ರಾಷ್ಟ್ರ, ವಿಷಯ, ಗ್ರಾಮ ಎಂದು ಮೂರು ಭಾಗಗಳಲ್ಲಿ ವಿಭಜಿಸುತ್ತಿದ್ದುದು ಕಂಡುಬಂದಿದೆ. ರಾಷ್ಟ್ರಪತಿ ವಿಷಯಪತಿ, ಗ್ರಾಮಕೂಟ, ಆಯುಕ್ತಕ ಎಂಬ ಅಧಿಕಾರಿಗಳು ಇದ್ದರು. ರಾಷ್ಟ್ರಪತಿಗಳು ಕಂದಾಯವನ್ನು ಸಂಗ್ರಹಿಸುತ್ತಿದ್ದುದು ಸ್ಪಷ್ಟವಾಗಿದೆ. ವಿಷಯ ಎಂಬುದನ್ನು ಮತ್ತೆ ಭುಕ್ತಿ (ಬುಕ್ಕಿ) ಎಂಬ ಕಿರು ಮಂಡಲಗಳಾಗಿ ವಿಭಜಿಸಿ ಆಳುತ್ತಿದ್ದುದೂ ದಾಖಲೆಗಳಲ್ಲಿ ಸ್ಪಷ್ಟವಿದೆ. ಈ ಬಗೆಯ ವಿಭಜನೆ ಹೆಚ್ಚಾಗಿದ್ದುದು ಆ ರಾಜ್ಯದ ಉತ್ತರ ಭಾಗದಲ್ಲಿ. ವಿಷಯಗಳನ್ನು ಪ್ರಾಯಃ 1000 ಹಳ್ಳಿಗಳಿಗೂ ಮಿಕ್ಕಿದಾಗ ಸಾವಿರದ ಪರಿಗಣನೆಯಲ್ಲೀ ಪೂಣಕ 1000 ಕುಹಂಡಿ ( ಕೊಂಡಿ 3000, ಕರಹಾಟ 4000 ಇತ್ಯಾದಿಯಾಗಿ ಘಟಕಗಳನ್ನಾಗಿಸಿ ಹೇಳುತ್ತಿದ್ದರು. ಈ ಒಂದು ರೀತಿಯಲ್ಲಿ ರಟ್ಟಪಾಡಿ ಸಪ್ತಾರ್ಥ ಲಕ್ಷ ಭೂಭಾಗದ ಒಂದು ಘಟಕವಾಗಿ ಏರ್ಪಟ್ಟಿತು. ವಿಷಯಪತಿಗಳು, ಭೋಗಪತಿಗಳು, ನಾಳ್ಗಾವುಂಡರು ನಾಡಿನ ಆಡಳಿತದಲ್ಲಿ ಪಾಲ್ಗೊಂಡರು. ಕಂದಾಯ ಇಲಾಖೆ, ಸೈನ್ಯ ಇಲಾಖೆಗಳು ಜನತೆಯ ಏಳ್ಗೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡವು. ಸೈನ್ಯದಲ್ಲಿ ಎಲ್ಲ ಜಾತಿಯ ಜನರಿಗೂ ಪ್ರವೇಶವಿತ್ತು. ಬ್ರಾಹ್ಮಣರು, ಜೈನರು ಸಹ ಸೈನ್ಯದಲ್ಲಿ ಇದ್ದರು. ಅಹಿಂಸೆ ಎಂಬ ತತ್ತ್ವ ಅದರ ಪೂರ್ಣ ಸ್ವರೂಪದಲ್ಲಿ ಜೈನರಲ್ಲಿ ಮುನಿಪಂಗಡಗಳಿಗೆ ಮಾತ್ರ ಮೀಸಲಾಗಿದ್ದು ತೋರುತ್ತದೆ. ಜೈನರಾದ ಬಂಕೆಯ, ಶ್ರೀ ವಿಜಯ ಮೊದಲಾದವರನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ರಾಜ್ಯದ ಆದಾಯ ಮುಖ್ಯವಾಗಿ ಕಂದಾಯಗಳನ್ನು ಅವಲಂಬಿಸಿತ್ತು. ಅನೇಕ ವಸ್ತುಗಳ ಮೇಲೆ ಕರಗಳನ್ನು ಹಾಕಿದ್ದರು. ಮಾಂಡಲಿಕರು ಭೂಕಂದಾಯ, ಕಪ್ಪಕಾಣಿಕೆಗಳನ್ನು ಸಲ್ಲಿಸುವುದು ಈ ಕಂದಾಯದ ಭಾಗ ಆಗಿದ್ದಿತು. ಅರಣ್ಯಗಳು, ಗಣಿಗಳು, ಗೋಮಾಳಗಳು, ರಾಜ್ಯದ ಆಸ್ತಿಗಳಾಗಿದ್ದವು. ಗೋಮಾಳಗಳು ಕೆಲವೊಮ್ಮೆ ಖಾಸಗಿ ಸ್ವತ್ತುಗಳಾಗಿದ್ದವು. ಭಾಗಕರ ಅಥವಾ ಉದ್ರಂಗ ಒಂದು ಮುಖ್ಯ ಕರವಾಗಿತ್ತು. ಕರಗಳನ್ನು ಬಾಧಾ ಎಂದೂ ಕರೆಯಲಾಗುತ್ತಿತ್ತು. ದೇವಸ್ಥಾನಗಳಿಗೆ ಬ್ರಾಹ್ಮಣರಿಗೆ ದಾನದತ್ತಿಗಳನ್ನು ಸರ್ವಬಾಧಾ ಪರಿಹಾರವಾಗಿ ಕೊಡುತ್ತಿದ್ದರು. ಜೈನ, ಬೌದ್ಧ, ಸಾಂಖ್ಯ, ವೈಶೇಷಿಕ, ಲೋಕಾಯುತ (ಚಾರ್ವಾಕ)-ಧರ್ಮಗಳು ವೈದಿಕ ಧರ್ಮದೊಂದಿಗೆ ಪ್ರಚಲಿತವಾಗಿದ್ದವು. ರಾಜರು, ಸರ್ವಧರ್ಮಗಳ ರಕ್ಷಕರೂ ದುಷ್ಟನಿಗ್ರಹ ಶಿಷ್ಟಪಾಲಕರೂ ಆಗಿದ್ದರು. ಅದು ಅವರ ಮುಖ್ಯ ಕರ್ತವ್ಯಗಳಲ್ಲಿ ಒಂದಾಗಿತ್ತು. ಹಿರಣ್ಯಗರ್ಭ ತುಲಾಪುರುಷ- ಇತ್ಯಾದಿಗಳನ್ನು ಅವರು ನೆರವೇರಿಸಿದ್ದರು. ಸಾಮಾಜಿಕ, ಧಾರ್ಮಿಕ ಜೀವನ ಚತುರ್ವಿಧ ಪುರುಷಾರ್ಥಗಳನ್ನು ಆಶ್ರಯಿಸಿತ್ತು. ಆಗ ಅನುಲೋಮ ವಿವಾಹಗಳು ಆಕಸ್ಮಿಕವಾಗಿದ್ದವು. ಇಸ್ಲಾಮ್ ಧರ್ಮ ಅದೇ ಆಗ ಪಾದಾರ್ಪಣ ಮಾಡಿತ್ತು. ಪಾಶ್ಚಾತ್ಯ ದೇಶಗಳೊಡನೆ ಹೆಚ್ಚು ಸಂಪರ್ಕವಿತ್ತು. ಬ್ರೋಚ್, ಕಲ್ಯಾಣ ನೌಸಾರಿ, ಸೋಪಾರ, ಠಾಣಾ, ಸೈಮೂರ್, ದಾಬೋಲ್, ಜಯಗಡ ಮತ್ತು ದೇವಗಡ ಮುಂತಾದವು ಮುಖ್ಯ ಬಂದರುಗಳಾಗಿದ್ದವು. ಬೆಲೆಬಾಳುವ ರತ್ನ, ವಜ್ರ, ಸುಗಂಧದ್ರವ್ಯ, ನೀಲಿ, ಹತ್ತಿಯ ನೂಲು, ಬಟ್ಟೆ, ಉತ್ತಮ ಮಸ್ಲಿನ್‍ಬಟ್ಟೆ, ಹದಮಾಡಿದಚರ್ಮ, ದಂತದ ವಸ್ತುಗಳು, ಶ್ರೀಗಂಧ, ತೇಗ ಮುಂತಾದ ಮರಗಳ ಗುಡಿಕೈಗಾರಿಕೆಯ ವಸ್ತುಗಳು ರಫ್ತಾಗುತ್ತಿದ್ದವು. ಖರ್ಜೂರ, ದ್ರಾಕ್ಷಾರಸ, ಮದ್ಯ, ಜೇಡ್, ಗಾಜು, ತವರ, ಸೀಸ ಇತ್ಯಾದಿಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ವಸ್ತು ವಿನಿಮಯ ಪದ್ಧತಿಯ ಜೊತೆಗೆ ನಾಣ್ಯಪದ್ಧತಿ ಬಳಕೆಯಲ್ಲಿತ್ತು. ದ್ರಮ್ಮ, ಸುವರ್ಣ, ಪುಷ್ಪ, ಗದ್ಯಾಣ, ಕಾಸು, ಕಳಂಜು, ಮಜಾಡಿ ಮತ್ತು ಅಕ್ಕಂ ಎಂಬ ನಾಣ್ಯಗಳು ಬಳಕೆಯಲ್ಲಿದ್ದ ಉಲ್ಲೇಖಗಳು ದೊರೆತಿವೆ. ಆದರೆ ಇವುಗಳ ಬಗ್ಗೆ ಹೆಚ್ಚುವಿವರಗಳು ಲಭಿಸಿಲ್ಲ. ಸುವರ್ಣ, ಪುಷ್ಪ, ಗದ್ಯಾಣ ಇವು ಚಿನ್ನದ್ದಾಗಿದ್ದುವೆಂದು ತಿಳಿದುಬಂದಿದೆ. ರಾಷ್ಟ್ರಕೂಟರ ಸಾಹಿತ್ಯ, ಧರ್ಮ ರಾಷ್ಟ್ರಕೂಟರ ವೈಭವಪೂರ್ಣ ಆಳ್ವಿಕೆಯಲ್ಲಿ ಶಿಕ್ಷಣ, ಸಾಹಿತ್ಯ, ವಾಸ್ತುಶಿಲ್ಪ ಮುಂತಾಗಿ ಎಲ್ಲವೂ ರಾಜಾಶ್ರಯದಲ್ಲಿ ವಿಪುಲವಾಗಿ ಬೆಳೆಸಿದರು. ನಾಲ್ಕನೆಯ ಗೋವಿಂದ ಚಕ್ರವರ್ತಿ ಅಲ್ಪಕಾಲ ಆಳಿದರೂ ಒಬ್ಬನೇ 400 ಅಗ್ರಹಾರಗಳನ್ನು ಸೃಷ್ಟಿಸಿದನೆಂದರೆ ಮಿಕ್ಕವರ ಕಾಲದ ಬೆಳವಣಿಗೆಯನ್ನು ಊಹಿಸಬಹುದು. ಕನ್ನಡ, ಸಂಸ್ಕೃತ ಹಾಗೂ ಪ್ರಾಕೃತ ಮೂರು ಭಾಷೆಗಳಲ್ಲಿ ಅನೇಕ ಕೃತಿಗಳು ರಚನೆಗೊಂಡು ಸಿದ್ಧಾಂತ ಚಕ್ರವರ್ತಿಗಳೂ ಕವಿಚಕ್ರವರ್ತಿಗಳೂ ಈ ಕಾಲದಲ್ಲಿ ರಾಜರ ಆಸ್ಥಾನವನ್ನು ಅಲಂಕರಿಸಿದರು. ವ್ಯಾಕರಣ, ಕಾವ್ಯ, ನಾಟಕ, ಲೋಕಕಲಾ, ಸಮಯ ಹೀಗೆ ಅನೇಕ ವಿಷಯಗಳಿಗೆ ಸಂಬಂಧಿಸಿದ ವಿದ್ವಾಂಸರು ಈ ರಾಜರ ಆಶ್ರಯದಲ್ಲಿ ಬಾಳಿ ಬದುಕಿದರು. ಸಾಲೊಟಗಿ (ಶಾಲಾಪಾವಿಟ್ಟಿಗೆ) ಎಂಬ ಸ್ಥಳದಲ್ಲಿ ಉನ್ನತ ವಿದ್ಯಾಕೇಂದ್ರದಲ್ಲಿ ವಿದ್ಯಾರ್ಥಿಗಳ ವಸತಿಗೆಂದು 27 ನಿವೇಶನಗಳಿದ್ದವು. ಇಂಥ ಅನೇಕ ವಿದ್ಯಾಕೇಂದ್ರಗಳು ರಾಜ್ಯದ ಅನೇಕ ಭಾಗಗಳಲ್ಲಿದ್ದವು. ರಾಷ್ಟ್ರಕೂಟರ ಕಾಲಕ್ಕೆ ಸಂಬಂಧಿಸಿದಂತೆ ದೊರೆಕಿದ ಅನೇಕ ಶಾಸನಗಳು (ಅದರ ಕವಿಗಳು) ಸಂಬಂಧ ಹಾಗೂ ಬಾಣಭಟ್ಟರ ಶೂಲಿಗಳನ್ನು ಅನುಸರಿಸಿರುವುದು ಅವರ ಪಾಂಡಿತ್ಯಕ್ಕೆ ಕನ್ನಡಿ ಹಿಡಿದಂತಿದೆ. ಕುಮಾರಿಲ, ವಾಚಸ್ಪತಿ, ಲಲ್ಲ, ಕಾತ್ಯಾಯನ, ಆಂಗಿರಸ, ಯಮ, ರಾಜಶೇಖರ, ತ್ರಿವಿಕ್ರಮ, ಹಲಾಯುಧ ಮುಂತಾದ ವೈದಿಕಪಂಥದ ಲೇಖಕರು ಆ ಕಾಲದಲ್ಲಿದ್ದರು. ರಾಜಶೇಖರ ಮೂಲತಃ ಅಂದಿನ ಮಹಾರಾಷ್ಟ್ರವೆನಿಸಿದ ಕರ್ನಾಟಕದವ. ಕರ್ನಾಟಕದಲ್ಲಿ ಪ್ರಾಯಃ ಸ್ಥಾನಗೌರವ ಸಿಕ್ಕಿದ ಆತ ಕನೋಜಕ್ಕೆ ಹೋಗಿ ಪ್ರತಿಭೆಯನ್ನು ಮೆರೆದ. ತ್ರಿವಿಕ್ರಮನ ನಳಚಂಪು ಸಂಸ್ಕೃತದ ಉಪಲಬ್ಧ ಮೊದಲ ಚಂಪೂಕೃತಿ. ಈತ ಎರಡನೆಯ ಇಂದ್ರನ ಬಾಗುಮ್ರಾ ತಾಮ್ರ ಶಾಸನವನ್ನೂ ಬರೆದಿದ್ದಾನೆ. ಹಲಾಯುಧ ಕವಿರಹಸ್ಯ ಎಂಬ ವ್ಯಾಕರಣವನ್ನೂ ಪಿಂಗಳನ ಛಂದಶಾಸ್ತ್ರಕ್ಕೆ ಟೀಕೆಯನ್ನೂ ಬರೆದಿದ್ದಾನೆ. ಇವನೂ ಗೋದಾವರಿ ತೀರದವನೆ. ಈ ಕಾಲದಲ್ಲಿ ಜೈನಧರ್ಮ ಹಾಗೂ ಸಾಹಿತ್ಯ ಎರಡೂ ಅತ್ಯಂತ ಉಚ್ಛ್ರಾಯ ಸ್ಥಿತಿಯಲ್ಲಿ ಇದ್ದವು. ಅಕಲಂಕ, ವಿದ್ಯಾನಂದ ಇವರು ಸ್ವಾಮಿ ಸಮಂತಭದ್ರರ ಆಪ್ತಮೀಮಾಂಸೆ ಎಂಬ ಕೃತಿಗೆ ಅಷ್ಟಶತಿ ಹಾಗೂ ಅಷ್ಟಸಹಸ್ರೀ ಎಂಬ ವ್ಯಾಖ್ಯಾನಗಳನ್ನು ಬರೆದರು. ಮಾಣಿಕ್ಯ ನಂದಿಯ ಪರೀಕ್ಷಾ ಮುಖಶಾಸ್ತ್ರ, ಪ್ರಭಾಚಂದ್ರನ ನ್ಯಾಯಕುಮುದಚಂದ್ರೋದಯ - ಇವು ಜೈನ ನ್ಯಾಯಶಾಸ್ತ್ರಕ್ಕೆ ಸಂಬಂಧಿಸಿದರೆ, ಮಲ್ಲವಾದಿನ್ ಪಂಡಿತನ ಕೃತಿ ನ್ಯಾಯಬಿಂದುಟೀಕಾ ಬೌದ್ಧ ನ್ಯಾಯಕೃತಿಯೊಂದಕ್ಕೆ ಸಂಬಂಧಿಸಿತ್ತು. ಸಿದ್ಧಸೇನ, ಎರಡನೆಯ ಜಿನಸೇನ, ಶಾಕಟಾಯನ, ವೀರಾಚಾರ್ಯ ಗುಣಭದ್ರ ಮುಂತಾದವರನ್ನು ಇಲ್ಲಿ ಸ್ಮರಿಸಬಹುದು. ಹರವಂಶ ಪುರಾಣವನ್ನು ರಚಿಸಿದ ಒಂದನೆಯ ಜಿನಸೇನ ಸಹ ಈ ಕಾಲದಲ್ಲಿದ್ದ (783). ಆತನ ಹರಿವಂಶ ಪುರಾಣ ವರ್ಧಮಾನಪುರದ ನನ್ನರಾಜ ಬಸದಿಯೆಂದು ಪ್ರಸಿದ್ಧವಾದ ಪಾಶ್ರ್ವ ಜಿನಾಲಯದಲ್ಲಿ ಪೂರ್ಣಗೊಂಡಿತು. ಸುಮಾರು ಇದೇ ಕಾಲದಲ್ಲಿ ಭೀಮಾತೀರದ ಸ್ವಯಂಭೂವಾಡ (ಶಂಖೇವಾಡ ಶಂಭುವಾಡ) ಸ್ಥಳದ ಪಉಮಚರಿಉ, ಅರಿಷ್ಟ ನೇಮಿಚರಿವು ಇತ್ಯಾದಿಗಳನ್ನು ರಚಿಸಿದ ಸ್ವಯಂಭೂ, ರಾಷ್ಟ್ರಕೂಟ ಧ್ರುವ ಹಾಗೂ ಎರಡನೆಯ ಗೋವಿಂದನ ಆಸ್ಥಾನದಲ್ಲಿದ್ದನೆಂದು ತಿಳಿದುಬಂದಿದೆ. ರಾಹುಲ ಸಾಂಕೃತ್ಯಾಯನರು ಇವನನ್ನು ಪ್ರಾಕೃತದ ಮಹಾಕವಿಗಳಲ್ಲಿ ಒಬ್ಬನೆಂದು ಗುರುತಿಸಿದ್ದಾರೆ. ಈತ ಪಉಮಚರಿಉ ಗ್ರಂಥವನ್ನು ಪೂರ್ಣಗೊಳಿಸದೇ ತೀರಿಕೊಂಡ. ಅದನ್ನು ಆತನ ಪುತ್ರ ತ್ರಿಭುವನ ಸ್ವಯಂಭೂ ಸಂಪೂರ್ಣಗೊಳಿಸಿದ. ವೀರಸೇನ ಹಾಗೂ ಜಿನಸೇನರು ಇದೇ ಕಾಲದಲ್ಲಿ ಧವಲಾ, ಜಯಧವಲಾ ಗ್ರಂಥಗಳನ್ನು ರಚಿಸಿದರು. ಈ ಜಿನಸೇನರು ಪಾಶ್ರ್ಚಾಭ್ಯುದಯ ಎಂಬ ಕಾವ್ಯವನ್ನು ಕಾಳಿದಾಸನ ಮೇಘದೂತದ ಪಂಕ್ತಿಗಳನ್ನು ಪ್ರತಿಯೊಂದು ಪದ್ಯದಲ್ಲೂ ಬಳಸಿಕೊಂಡು ಬರೆದಿದ್ದಾರೆ. ಅನಂತರ ಮಹಾಪುರಾಣ ಕಾವ್ಯವನ್ನು ಬರೆದರು. ಇದರಲ್ಲಿ ಪೂರ್ವಭಾಗ ಮಾತ್ರ (ಆದಿಪುರಾಣ) ಸಂಪೂರ್ಣವಾಯಿತು. ಅಂತಿಮ ಭಾಗವನ್ನು ಉತ್ತರಪುರಾಣ ಎಂದು ಕರೆಯಲಾಗದೆ. ಈ ಭಾಗ ಗುಣಭದ್ರ ಹಾಗೂ ಲೋಕ ಸೇನರಿಂದ ಸಂಪೂರ್ಣವಾಯಿತು. ಈ ಜಿನಸೇನರು ನೃಪತುಂಗನಿಂದ ಮಾನಿತರಾಗಿದ್ದರು. ಅವನಿಗೆ ಗುರುಸ್ಥಾನದಲ್ಲಿದ್ದರು. ಪಶ್ಯಧರ್ಮತರೋರರ್ಥಃ ಫಲಂ ಕಾಮಸ್ತು ತದ್ರಸಃ 1 ಸತ್ತ್ರಿವರ್ಗ ತ್ರಯಸ್ಯಾಸ್ಯ ಮೂಲಂ ಪುಣ್ಯಕಥಾಶ್ರುತೀ 11 (11.31) ಧರ್ಮತರುವಿಗೆ ಅರ್ಥವೇ ಫಲವಾದರೆ, ಕಾಮವೇ ಫಲದ ರಸವೆಂದು, ಅದುವೇ ಪುಣ್ಯಕಥೆಗೆ ಮೂಲವೆಂದು ತಿಳಿಸಿದ್ದಾರೆ. ಇದನ್ನೇ ಪಂಪ, ಚಾಮುಂಡರಾಯ ಮೊದಲಾದವರು ತಮ್ಮ ಕೃತಿಗಳಿಗೆ ಆಕರವಾಗಿ ಬಳಸಿಕೊಂಡಿದ್ದಾರೆ. ಶಾಕಟಾಯನನ (ಪಾಲ್ಯಕರ್ತಿ) `ಅಮೋಘವೃತ್ತಿ ಎಂಬುದು ವ್ಯಾಕರಣ ಗ್ರಂಥವಾಗಿದೆ. ವೀರಾಚಾರಿಯ ಗಣಿತ ಸಾರಸಂಗ್ರಹ ಕೃತಿ ಗಣಿತಕ್ಕೆ ಸಂಬಂಧಿಸಿದೆ. ಪುಷ್ಪದಂತನು `ಮಹಾಪುರಾಣ' ಸಣಾಯಕುಮಾರಚರಿತ, ಯಶೋಧರ ಚರಿತ ಎಂಬ ಕೃತಿಗಳನ್ನು ರಚಿಸಿದ್ದಾನೆ. ಈತ ಮೂರನೆಯ ಕೃಷ್ಣನ ಮಂತ್ರಿ ಭರತ ಹಾಗೂ ಆತನ ಪುತ್ರನನ್ನು ರಚಿಸಿದ್ದಾನೆ. ಈತ ಮೂರನೆಯ ಕೃಷ್ಣನ ಮಂತ್ರಿ ಭರತ ಹಾಗೂ ಆತನ ಪುತ್ರನನ್ನು ದೇವನಿಂದ ಪೋಷಿಸಲ್ಪಟ್ಟ. ಕನ್ನಡ ಸಾಹಿತ್ಯಕ್ಕಂತೂ ಇದು ಸುಮರ್ಣಯುಗ. ರಾಷ್ಟ್ರಕೂಟರು ಅವರ ಮಾಂಡಲಿಕರೂ ಎಲ್ಲರನ್ನೂ ಪರಿಗಣನೆಗೆ ತೆಗೆದುಕೊಂಡರೆ ರತ್ನತ್ರಯರಾದ ಪಂಪ, ಪೊನ್ನ ಹಾಗೂ ರನ್ನ ಸುಮಾರು ಈ ಕಾಲಖಂಡದಲ್ಲೇ ಇದ್ದರು. ರಾಷ್ಟ್ರಕೂಟರ ಮನೆತನವೊಂದನ್ನೇ ಎತ್ತಿಕೊಂಡರೆ ರುದ್ರಟ (ರುದ್ರ ಭಟ್ಟ) ವತ್ಸರಾಜ, ನಾಕಿಗ, ಕವಿರಾಜರಾಜ, ಸಾಮಿಯಣ್ಣ, ದಾನವುಲಪಾಡ ಶಾಸನವನ್ನು ಬರೆದ ಶ್ರೀವಿಜಯ ನಾರಾಯಣ, ಗಜಾಂಕುಶ, ಪೊನ್ನ ಇವರು ಸುಪ್ರಸಿದ್ಧರು. ಶ್ರೀವಿಜಯನ ಕವಿರಾಜಮಾರ್ಗ, ಪೊನ್ನನ ಕೃತಿಗಳಲ್ಲಿ ಉಪಲಬ್ಧವಾದ ಶಾಂತಿಪುರಾಣ ಇವು ಉದೃತ್‍ಕೃತಿಗಳು. ಪೊನ್ನ ಭುವನೈಕ ರಾಮಾಭ್ಯುದಯ ಎಂಬ ಕಾವ್ಯವನ್ನೂ ಬರೆದ ಹಾಗೆ ಹೇಳಿದ್ದಾನೆ. ಅವನಿಗೆ ಮುಮ್ಮಡಿ ಕೃಷ್ಣ ಕವಿಚಕ್ರವರ್ತಿ ಎಂಬ ಬಿರುದು ನೀಡಿ ಸನ್ಮಾನಿಸಿದ. ವಾಸ್ತುಶಿಲ್ಪ ಕಲೆ ಗುಹಾವಾಸ್ತುಶಿಲ್ಪ ಮೌರ್ಯರ ಕಾಲದಿಂದ ವಿಕಸನ ಹೊಂದುತ್ತ ರಾಷ್ಟ್ರಕೂಟರ ಕಾಲಕ್ಕೆ ಬೆಳವಣಿಗೆಯ ಶಿಖರವನ್ನು ಮುಟ್ಟಿತು. ಆ ರಾಜ್ಯದ ವಿಸ್ತಾರವನ್ನು ಪರಿಶೀಲಿಸಿದರೆ ಅದರ ಔನ್ನತ್ಯವನ್ನು ಗುರುತಿಸಲು ಸಾಧ್ಯ. ಇಂಥ ಬೃಹತ್ ವಿಷಯದ ಅಧ್ಯಯನ ಇನ್ನೂ ಸಮರ್ಪಕವಾಗಿ ಪಡೆದಿಲ್ಲ. ಗುಹಾದೇವಾಲಯಗಳು ಈ ಕಾಲದಲ್ಲಿ ಸೃಜನಗೊಂಡುವು. ಆ ಬಗೆಯ ಶೈಲಿಗೆ ಕಲಶಪ್ರಾಯವಾಗಿದೆ. ಕಣ್ಣಿದ್ದವರು ವೇರೂಳದ (ಎಲ್ಲೋರಾ) ಕೈಲಾಸ ಮಂದಿರವನ್ನು ನೋಡಬೇಕು ಎಂಬ ಮಾತಿದೆ. ಮುಂಬಯಿ ಬಳಿಯ ಎಲಿಫೆಂಟಾ ಗುಹೆಯಲ್ಲಿರುವ ಮಹಾದೇವನ ಶಿಲ್ಪವನ್ನು ಸರಿಗಟ್ಟುವ ಕಲಾಕೃತಿಗಳು ಜಗತ್ತಿನಲ್ಲಿ ವಿರಳ. ಬೌದ್ಧ ಹಾಗೂ ಬಾದಾಮಿಯ ಚಾಳುಕ್ಯರ ಕಾಲದ ಎರಡೂ ಶೈಲಿಗಳು ಬೆರೆತು ಬೆಳೆದು ನಿಂತವು. ಎಲ್ಲೋರ, ಐಹೊಳೆ, ಕಂಧಾರ, ಸಿರವಾಳ, ಕೊಪ್ಪಳ, ನಿಡಗುಂದಿ, ರೋಣ, ಸವಡಿ, ಗದಗ, ಲಕ್ಷ್ಮೀಶ್ವರ ಮುಂತಾಗಿ ಸುಮಾರು ಮೂವತ್ತಕ್ಕೂ ಮೇಲ್ಪಟ್ಟು ಸ್ಥಳಗಳಲ್ಲಿ ರಾಷ್ಟ್ರಕೂಟರ ಕಾಲದ ದೇವಾಲಯಗಳು ಜೈನ ಬಸದಿಗಳು, ಬೌದ್ಧಲೇಣಿಗಳು- ಹೀಗೆ ಹಲವು ಕಟ್ಟಡಗಳು ಗಮನಕ್ಕೆ ಬಂದಿವೆ. ಒಂದನೆಯ ಕೃಷ್ಣನ ಕಾಲಕ್ಕೆ ಕಟ್ಟಲ್ಪಟ್ಟ ಕೈಲಾಸ ದೇವಾಲಯ ದೇವಲೋಕವನ್ನು ಮತ್ರ್ಯಕ್ಕೆ ತಂದಂತಿದೆ. ಅಖಂಡ ಶಿಲೆಯಲ್ಲಿ ಕೊರೆದ ಈ ದೇವಾಲಯಗಳು ಎರಡು ಅಂತಸ್ತಿನಿಂದ ಕೂಡಿದೆ. ಇದು ಪಟ್ಟದಕಲ್ಲಿನಲ್ಲಿರುವ ಲೋಕೇಶ್ವರ ದೇವಾಲಯದ ಪ್ರತಿರೂಪವೇನೊ ಎನ್ನುವಂತಿದೆ. ಭವ್ಯವಾದ ಪ್ರವೇಶದ್ವಾರ, ಆನೆಗಳ ಅಧಿಷ್ಠಾನ ಇಡೀ ದೇವಾಲಯವನ್ನು ಆನೆಗಳೇ ಹೊತ್ತಿದಂತಿದೆ. ಮುಂದೆ ನಂದಿಮಂಟಪ, ದೇವಾಲಯದ ಸಭಾಮಂಟಪಕ್ಕೆ ಮೂರು ಮುಖಮಂಟಪಗಳಿವೆ. ಆ ವಿಶಾಲ ಸಭೆಗೆ ಅಂತರಾಳ ಹಾಗೂ ಗರ್ಭಗೃಹಗಳು ಒಂದರ ನಂತರ ಇನ್ನೊಂದು ಹೀಗೆ ಆನಿಸಿಕೊಂಡಿವೆ. ಗರ್ಭಗೃಹದ ಮೇಲೆ ದ್ರಾವಿಡ ಶೈಲಿಯ ಶಿಖರವಿದೆ. ಪ್ರವೇಶದ್ವಾರದಿಂದ ಗರ್ಭಗುಡಿಯವರೆಗೆ ಒಳಗೂ ಹೊರಗೂ ಶಿವನ ಹಲವಾರು ರೂಪಗಳನ್ನು, ರಾಮಾಯಣ ಹಾಗೂ ಮಹಾಭಾರತ ಮತ್ತು ಪುರಾಣಗಳಲ್ಲಿನ ಮುಖ್ಯ ಘಟನೆಗಳ ಚಿತ್ರಗಳನ್ನು ಕೆತ್ತಿದೆ. ಕೈಲಾಸನಾಥನ ಸೇವೆಗೆ ನಿಂತ ಅಷ್ಟದಿಕ್ಪಾಲಕರು, ಗಂಗೆ, ಯಮುನೆ, ಸರಸ್ವತಿ ಮುಂತಾದ ದೇವತೆಗಳ ಚಿತ್ರಗಳನ್ನು ಬಿಡಿಸಲಾಗಿದೆ. ದೇವಾಲಯದ ಸುತ್ತಲೂ ಪ್ರಕಾರದಲ್ಲಿ ದೇವಕೋಷ್ಠಕಗಳಿದ್ದು ಎಲ್ಲದರಲ್ಲೂ ವಿವಿಧ ಸುಂದರ ಶಿಲ್ಪಗಳಿವೆ. ಅಲೌಕಿಕ ಶಿಲ್ಪಕಲೆಯ ಕುರುಹಾಗಿದೆ ಕೈಲಾಸ. ಹೀಗೆ ಇಲ್ಲಿಯ ಜೈನ ಲೇಣಿಯೂ ಸುಂದರ ಸ್ತಂಭಗಳಿಂದ, ಇಂದ್ರಸಭೆ ಹಾಗೂ ಜಗನ್ನಾಥ ಸಭೆಗಳಿಂದ- ಅಲ್ಲಿನ ಇಂದ್ರ, ಇಂದ್ರಾಣಿ, ಶಾಂತಿನಾಥ ಹಾಗೂ ಪಾಶ್ರ್ವನಾಥ ತೀರ್ಥಂಕರರು, ಜಗನ್ನಾಥ ಸಭೆಯಲ್ಲಿನ ಮಹಾವೀರನ ಭವ್ಯಮೂರ್ತಿ ಇತ್ಯಾದಿಗಳಿಂದ ಚಿತ್ರವಿಚಿತ್ರ ಕೊರೆದ ಚಿತ್ರಗಳಿಂದ ನೋಡಲು ರಮಣೀಯವಾಗಿದೆ. ಇವಲ್ಲದೇ ಇಲ್ಲಿ ಇನ್ನೂ 33 ದೇವಾಲಯಗಳಿವೆ. ಅವುಗಳಲ್ಲಿ 17 ವೈದಿಕಧರ್ಮಕ್ಕೂ ಉಳಿದವು ಜೈನಧರ್ಮಕ್ಕೂ ಸಂಬಧಿಸಿವೆ. ಶಹಾಪುರ ತಾಲ್ಲೂಕಿನಲ್ಲಿ ಭೀಮಾನದಿಯ ದಂಡೆಯಲ್ಲಿರುವ ಶಿರವಾಳದಲ್ಲಿ 15 ದೇವಾಲಯಗಳ ಒಂದು ಸಂಕೀರ್ಣ ಇತ್ತೀಚೆಗೆ ಪತ್ತೆಯಾಗಿದೆ. ಅಲ್ಲಿನ ಒಂದು ದೇವಾಲಯದ ಪ್ರವೇಶದ್ವಾರ ಎರಡು ಸಿಂಹಸ್ತಂಭಗಳಿಂದ ಅತ್ಯಂತ ಸುಂದರವಾಗಿದೆ. ಜೀವಂತಿಕೆ, ಈ ಕಾಲದ ಶಿಲ್ಪಕಲೆಯ ವೈಶಿಷ್ಟ್ಯವಾಗಿದೆ. ಕೆಲವೆಡೆ ಖುರಾಸನ್ ಕಲ್ಲಿನಲ್ಲಿ ದೇವಾಲಯಗಳನ್ನು ಕಟ್ಟಿದರೆ ಮತ್ತೆ ಕೆಲವೆಡೆ ಉತ್ತಮ ಜಾತಿಯ ಕರಿಕಲ್ಲನ್ನು ಬಳಸಿದ್ದಾರೆ. ದೇವಸ್ಥಾನಗಳ ತಳವಿನ್ಯಾಸಗಳಲ್ಲಿ ವೈವಿಧ್ಯತೆ ಇದೆ. ದ್ವಿಕೂಟ, ತ್ರಿಕೂಟಾಚಲ ದೇವಾಲಯಗಳನ್ನೂ ಇದೇ ಕಾಲದಲ್ಲಿ ಕಟ್ಟಿದ್ದು ಕಂಡುಬರುತ್ತದೆ. ಕೆಲವು ಊರುಗಳಲ್ಲಿ ಉಳಿದಿರುವ ತೋರಣಗಳ ಪಳೆಯುಳಿಕೆಗಳು; ತೋರಣಗಳನ್ನು ಕಟ್ಟುತ್ತಿದ್ದರೆಂದು ಸೂಚಿಸುತ್ತವೆ. ಅವುಗಳ ಮೇಲೆ ಅಷ್ಟಮಂಗಲ ಚಿಹ್ನೆಗಳನ್ನು ಕೆತ್ತುತ್ತಿದ್ದರೆಂದು ಕಂಡುಬಂದಿದೆ. ಇಂತಹ ತೋರಣಗಳು ಲಕ್ಷ್ಮೇಶ್ವರ, ಮುಧೋಳಗಳಲ್ಲಿ ಸಾಕ್ಷಿಯಾಗಿ ನಿಂತಿವೆ. ಎರಡು ಎತ್ತರದ ಕಂಬಗಳ ಮೇಲೆ ಅಲಂಕೃತ ಅಡ್ಡಜಂತಿಯನ್ನು ನಿಲ್ಲಿಸಿ ಈ ತೋರಣಗಳನ್ನು ಕಟ್ಟಲಾಗಿದೆ. ದೇವಾಲಯಗಳ ಸಂಖ್ಯೆ ವಿಪುಲ. ಅದನ್ನು ಕಟ್ಟುವಲ್ಲಿ ಅನೇಕ ಬಗೆಯ ವಿನ್ಯಾಸಗಳನ್ನು ನಾವು ಕಾಣುತ್ತೇವೆ. ಮುಸ್ಲಿಮರ ದಾಳಿಯಿಂದಾಗಿ ವಿಶೇಷತಃ ಉತ್ತರ ಕರ್ನಾಟಕ, ಮಹಾರಾಷ್ಟ್ರ ಹಾಗೂ ಆಂಧ್ರದಲ್ಲಿರುವ ರಾಷ್ಟ್ರಕೂಟರ ದೇವಾಲಯಗಳು ನಾಶವಾದವು. ಸಮರಗಳ ಸೆಣಸಾಟಗಳಲ್ಲಿಯೂ ಕೆಲವು ಹಾಳಾದವು (ನಾಂದೇಡ ಜಿಲ್ಲೆಯ ಕಂಧಾರದ ದೇವಾಲಯಗಳು) ಮತ್ತೆ ಕೆಲವು ಧರ್ಮಗಳಿಗೆ ಅನುಸಾರವಾಗಿ ಪರಿವರ್ತಿತಗೊಂಡವು; ನಿಜಾಮಾಬಾದ ಜಿಲ್ಲೆಯ (ಆಂಧ್ರಪ್ರದೇಶ) ಬೋಧನದಲ್ಲಿಯ ದೇವಲ್ ಮಸ್‍ಜಿದ್ (ಇಂದ್ರನಾರಾಯಣ ತ್ರೈಪುರುಷ ದೇವಾಲಯ) ಹಾಗೂ ಧಾರವಾಡ ಜಿಲ್ಲೆಯ ಕೊಣ್ಣೂರಿನ ಪರಮೇಶ್ವರ ದೇವಾಲಯ (ಮೂಲತಃ ಇದು ಜೈನ ಬಸದಿ) ಇವುಗಳನ್ನು ಇಲ್ಲಿ ಉದಾಹರಿಸಬಹುದು. ಒಟ್ಟಿನಲ್ಲಿ ರಾಷ್ಟ್ರಕೂಟರ ಕಾಲದ ಕೊಡುಗೆ ವಾಸ್ತುಶಿಲ್ಪದ ಬೆಳವಣಿಗೆಗೆ ಬಹಳ ಮಹತ್ತ್ವವಾದುದು. ನಕ್ಷತ್ರಾಕೃತಿಯ ತಳವಿನ್ಯಾಸ, ದ್ವಿಕೂಟಾಚಲ, ತ್ರಿಕೂಟಾಚಲ ಶೈಲಿಯ ವೃದ್ಧಿ, ತ್ರೈಪುರಷ ಹಾಗೂ ಪಂಚಲಿಂಗ ದೇವಾಲಯಗಳ ನಿರ್ಮಾಣ, ದೇವಾಲಯಗಳಲ್ಲಿ ಸಭಾ ಮಂದಿರಗಳನ್ನು ಸೇರಿಸಿದುದು. ಜೈನಬದಿಗಳಲ್ಲಿ ಗರ್ಭಗೃಹಕ್ಕೆ ಅನಿಸಿಕೊಂಡು ದ್ಯಾನಗೃಹಗಳ ಜೋಡಣೆ ಮುಂತಾದವು ಕೆಲವು ಮಹತ್ತ್ವದ ಬೆಳವಣಿಗೆಗಳು. ಬನವಾಸಿಯ ರಾಷ್ಟ್ರಕೂಟರು : 897ರಲ್ಲಿ ಬನವಾಸಿ ಮಂಡಲ ಸಂಪೂರ್ಣವಾಗಿ ಚೆಲ್ಲಕೇತನ ವಂಶದ ಅರಸರಿಗೆ ಸೇರಿತ್ತು. ಮುಂದೆ ಅದು 925-26ರಲ್ಲಿ ಬರೆಯಲಾದ ಲಕ್ಷ್ಮೀಪುರದ ಶಾಸನದಲ್ಲಿ (ಧಾರವಾಡ ಜಿಲ್ಲೆ) ಇಬ್ಭಾಗವಾದುದಾಗಿ ಕಂಡುಬರುತ್ತದೆ. ಒಂದು ಭಾಗವನ್ನು ಚೆಲ್ಲಕೇತನ ವಂಶದ ಇಮ್ಮಡಿ ಬಂಕೆಯನಿಗೂ ಇನ್ನೊಂದನ್ನು ರಾಷ್ಟ್ರಕೂಟ ವಂಶದ ಶಂಕರಗಂಡನಿಗೂ ಕೊಟ್ಟುದಾಗಿ ತಿಳಿದುಬಂದಿದೆ. ಈತನಿಗೆ ರಟ್ಟರ ಮೇರು, ಭುವನೈಕರಾಮ, ಜಯಧೀರ ಇತ್ಯಾದಿ ಬಿರುದುಗಳಿದ್ದವು. 964ರಲ್ಲಿ ಈತ ಕೊಪ್ಪಳದಲ್ಲಿ ಜಯಧೀರ ಜಿನಾಲಯವನ್ನು ಕಟ್ಟಿಸಿದ. ಕ್ಯಾಸನೂರು, ಲಕ್ಷ್ಮೀಪುರ, ಹಾವಣಗಿ, ಬಳ್ಳಾರಿ ಜಿಲ್ಲೆಯ ಒಂದು ಶಾಸನ ಮತ್ತು ಇಂದು ಆಂಧ್ರಪ್ರದೇಶದ ಕೊಲನುಪಾದಲ್ಲಿ (ಕೊಲ್ಲಿಪಾಕೆ) ದೊರೆತ ಮೂರು ಶಾಸನಗಳಿಂದ ಒಟ್ಟು ಸದ್ಯ ದೊರೆತ ಎಂಟು ಶಾಸನಗಳಿಂದ, ಈ ಶಾಖೆಯ ವಂಶಾವಳಿಯ ವಿವರ ಹೀಗಿದೆ: ಯಾದವ ವಂಶದ ಪಾಣರಾಜ, ಶಂಕರಗಂಡ, ಅಪ್ಪುವ ರಾಜನ್, ಶಂಖಪ್ಪಯ್ಯನ್, ಗೊಮ್ಮರಸ. ಒಂದನೆಯ ಅಸಗಮರಸ್, ಎರಡನೆಯ ಶಂಕರಗಂಡ, ಅನಂತರ ಸಿಂಗಣದೇವ, ಅಸಗಮರಸ ಮತ್ತು ಶಂಕರಗಂಡ, ಸಿಂಗಣದೇವ 1069ರಲ್ಲಿ ಉಚ್ಚಂಗಿ-30. ಸೂಳುಂಗಲ್-70 (ಚಿತ್ರದುರ್ಗ) ಮಂಡಲಿ-1000 ಮತ್ತು ನಾಲ್ಕುಭಕ್ತ ಗ್ರಾಮಗಳಿಗೆ ಅಧಿಪತಿಯಾಗಿದ್ದ. ಶಂಕರಗಂಡನು ಮೇಲ್ಕಾಣಿಸಿದ ಎಲ್ಲ ಬಿರುದುಗಳೊಂದಿಗೆ ಮಾವನ ಗಂಧವಾರಣ, ಕೊಳ್ಳಿಪಾಕೆಯ ಗೋವ ಮತ್ತು ಪೆಂಜೆ¿õÉ ಗೋವ ಮುಂತಾದ ಇನ್ನೂ ಕೆಲವು ವಿಶಿಷ್ಟ ಬಿರುದುಗಳನ್ನು ಧರಿಸಿದ್ದ. ಸೌಂದತ್ತಿಯ ರಟ್ಟರು ರಾಷ್ಟ್ರಕೂಟ ಸಾಮ್ರಾಜ್ಯದ ಪತನಾನಂತರ ಮತ್ತೆ ಅದು ತಲೆಯೆತ್ತಿ ಪೂರ್ವಸ್ಥಿತಿಯಲ್ಲಿ ಮೆರೆಯಲಿಲ್ಲ. ಆದರೆ ಆ ವಂಶದವರು ಅನೇಕ ಕಡೆ ಸಣ್ಣ ಪುಟ್ಟ ಮಾಂಡಲಿಕರಾಗಿ ಬದುಕಿದರು. ಇಂತಹ ಮನೆತನಗಳಲ್ಲಿ ಸುಗಂಧವರ್ತಿ (ಸೌಂದತ್ತಿ) ( ಸೌದತ್ತಿಯ ರಟ್ಟರದೂ ಒಂದು. ಇವರು ಕೊಂಡಿ-3000 ಪ್ರಾಂತ್ಯಕ್ಕೆ ಅಧಿಪತಿಗಳಾಗಿದ್ದರು. ಸುಗಂಧವರ್ತಿ ಇವರ ರಾಜಧಾನಿ. ಕಲ್ಯಾಣದ ಚಾಳುಕ್ಯರು, ಕಳಚುರಿಯರು ಮತ್ತು ಸೇವುಣ (ದೇವಗಿರಿಯಯಾದವ) ಚಕ್ರವರ್ತಿಗಳಿಗೆ ಇವರು ಮಾಂಡಲಿಕರಾಗಿದ್ದರು. ಈ ಅರಸರಲ್ಲಿಯೂ ಕೆಲವರು ದೊಡ್ಡ ವಿದ್ವಾಂಸರು, ಕಲಾಕಾರರು ಆಗಿದ್ದರು. ಇವರು ಪೋಷಿಸಿದ ಪ್ರಸಿದ್ಧ ವ್ಯಕ್ತಿಗಳಲ್ಲಿ ಲೀಲಾವತಿ ಪ್ರಬಂಧ ಹಾಗೂ ನೇಮಿನಾಥ ಪುರಾಣ ಬರೆದ ಕನ್ನಡ ಕವಿ ನೇಮಿಚಂದ್ರನೂ ಒಬ್ಬ. ಅಮರ್ದಕಪುರದ ರಾಷ್ಟ್ರಕೂಟರು ಸೇವುಣರ ಐದನೆಯ ಭಿಲ್ಲಮನ ಕಾಲದ ನಾಂದೇಡ ಜಿಲ್ಲೆಯ ಅರ್ಧಾಪುರದಲ್ಲಿ ದೊರೆತ ಶಾಸನದಿಂದ ಇವರ ವಿವರಗಳನ್ನು ಮೊದಲ ಬಾರಿಗೆ ಬೆಳಕಿಗೆ ಬಂದವು. ಇವರ ಕಾಲ 1192. ರಟ್ಟಬಲ್ಲಾಳ ಭಿಲ್ಲಮನಿಗೆ ಮಾಂಡಲಿಕನಾಗಿದ್ದ. ದೇವಪಾಲ ಇವರ ಅಜ್ಜ ಹಾಗೂ ವಿಕ್ರಮಾರ್ಕ ಇವನ ತಂದೆ ಎಂದು ತಿಳಿದುಬಂದಿದೆ. ರಟ್ಟಶಾಸ್ತ್ರದ ರಟ್ಟರು ರಟ್ಟಮತ, ರಟ್ಟಶಾಸ್ತ್ರ ಎಂದು ಪ್ರಸಿದ್ಧವಾಗಿದ್ದು ಮಳೆಯ ಶಾಸ್ತ್ರವನ್ನು ಕುರಿತು ಬರೆದ ಕೃತಿಯಲ್ಲಿ ಅದರ ಕರ್ತೃ ಅರ್ಹದ್ವಾಸ (ಸು.1398) ಜಿನನಗರದಲ್ಲಿ ಇದ್ದು ರಾಜ್ಯವಾಳಿದ ರಟ್ಟಮನೆಯೊಂದರ ವಿವರಣೆಯನ್ನು ಕೊಟ್ಟಿದ್ದಾನೆ. ಇಮ್ಮಡಿ ಮಾರಸಿಂಹ (964) ಗಂಗದೊರೆಯ ಕಾಲಕ್ಕೆ ತಲಕಾಡು ಕೋಟೆಯನ್ನು ರಕ್ಷಿಸಿದ ಮಹಾವ್ಯಕ್ತಿ ಕಾಡಮರಸನೆಂಬ ರಟ್ಟ. ಈತನಿಂದ 19ನೆಯ ತಲೆಯ ವ್ಯಕ್ತಿ ಸುಕವಿ ನಿಧಾನ, ರಟ್ಟವೆಡಂಗ, ಅರ್ಹದ್ದಾಸ ಇತ್ಯಾದಿ ಬಿರುದುಗಳನ್ನು ಹೊಂದಿದ ಸೋಮನಾಥ. ಈತ ಶ್ರವಣಬೆಳಗೊಳದಲ್ಲಿಯ ಸಿದ್ಧರ ಬಸದಿಯ ಶಾಸನವೊಂದನ್ನು ಬರೆದಿದ್ದಾರೆ. ಇತರರು ಮಳಖೇಡದ ರಾಷ್ಟ್ರಕೂಟ ರಾಜನಾದ ಧ್ರುವನ (ಪ್ರ.ಶ. ಸು. 380-93) ಮಗ ಇಂದ್ರ. ಈತ ಗುಜರಾತ್ ಮತ್ತು ಮಾಳವ ಪ್ರದೇಶಗಳ ಮೇಲೆ ಪ್ರಾಂತ್ಯಾಧಿಪತ್ಯ ವಹಿಸಿದ. ಈತನ ವಂಶಿಕರು ಗುಜರಾತ್ ಪ್ರಾಂತ್ಯದ ಅಧಿಕಾರ ಪಡೆದು ಸು. 790 ರಿಂದ 890 ವರೇಗೆ ಸುಮಾರು ಒಂದು ಶತಮಾನ ಕಾಲ ರಾಜ್ಯಭಾರ ಮಾಡಿದರು. ಧ್ರುವನ ಮಗ ಸುವರ್ಣವರ್ಷ ಕರ್ಕ ಒಂದನೆಯ ಅಮೋಘವರ್ಷ ನೃಪತುಂಗರಾಜ ಮಳಖೇಡದ ಸಿಂಹಾಸನವೇರಿದಾಗ (814) ಅಲ್ಪವಯಸ್ಸಿನವನಿದ್ದುದರಿಂದ ಆತ ಪ್ರಬುದ್ಧನಾಗುವವರೆಗೆ ರಾಜಪ್ರತಿನಿಧಿಯಾಗಿ ಸಾಮ್ರಾಜ್ಯದ ಕಾರ್ಯನಿರ್ವಹಣೆ ಮಾಡಿದ. ರಾಷ್ಟ್ರಕೂಟರ ಒಂದು ಶಾಖೆಯ ಮಾಂಡಲಿಕ ಅರಸರು ಒರಿಸ್ಸ ರಾಜ್ಯದ ಸಂಬಲಪುರ ಪ್ರದೇಶದಲ್ಲಿ ಹನ್ನೆರಡನೆಯ ಶತಮಾನದಲ್ಲಿ ಬಾಳಿದ್ದರು. ತಮ್ಮ ಮೂಲಸ್ಥಳ ಲತಲೋರ (ಲಾತೂರು) ನಗರವೆಂದು ಇವರು ಹೇಳಿಕೊಂಡಿದ್ದಾರೆ. ಚಮರ ವಿಗ್ರಹ. ಆತನ ಮಗ ಧಂಸಕ. ಅವನ ಮಗ ಪರಚಕ್ರಶಲ್ಯ (ಪ್ರ.ಶ. 1132)-ಇವು ಈ ವಂಶದ ಮೂವರು ರಾಜರ ಹೆಸರುಗಳು. ಮಧ್ಯಭಾರತದ ಭಿಲ್ಸದ ಪಕ್ಕದಲ್ಲಿ ರಾಷ್ಟ್ರಕೂಟರ ಒಂದು ವಂಶ ಬಾಳಿತು (ಸು. 8-9ನೆಯ ಶತಮಾನ). ರಾಷ್ಟ್ರಕೂಟ ವಂಶದ ಅರಸರು ಕನೌಜ್ ಪ್ರಾಂತ್ಯದಲ್ಲಿ 11,12ನೆಯ ಶತಮಾನಗಳಲ್ಲಿ ಊರ್ಜಿತರಾದರು. ರಾಜಸ್ಥಾನದ ಜೋಧಪುರ, ಉದೇಪುರ ಪ್ರದೇಶಗಳಲ್ಲಿ 11-13ನೆಯ ಶತಮಾನಗಳಲ್ಲಿ ರಾಷ್ಟ್ರಕೂಟರು ಉದಯ ಹೊಂದಿದರು. 8-9ನೆಯ ಶತಮಾನಗಳಲ್ಲಿ ರಾಷ್ಟ್ರಕೂಟ ಕುಲದ ಕೆಲವು ನಾಯಕರು ದಂಡಯಾತ್ರೆಯ ನಿಮಿತ್ತದಿಂದ ಭಾರತದ ಉತ್ತರ-ಪುರ್ವ ಪ್ರಾಂತ್ಯಗಳಿಗೆ ಪ್ರಯಾಣ ಮಾಡಿ ಅಲ್ಲಿ ನೆಲಸಿ ರಾಜಕೀಯ ಪ್ರತಿಷ್ಠೆ ಗಳಿಸಿಕೊಂಡರು. ಇಂಥವರಲ್ಲಿ ಕೆಲವರ ವಿಷಯ ತಿಳಿದುಬಂದಿದೆ. ಬಂಗಾಳದ ಧರ್ಮಪಾಲ ರಾಜನ (ಸು. 220-810) ರಾಣಿ ರನ್ನದೇವಿ ರಾಷ್ಟ್ರಕೂಟ ಪರಬಲನೆಂಬ ನಾಯಕನ ಪುತ್ರಿ. ಅದೇ ವಂಶದ ರಾಜ್ಯಪಾಲ (ಸು. 911-35) ರಾಷ್ಟ್ರಕೂಟ ತುಂಗನ ಪುತ್ರಿ ಭಾಗ್ಯ ದೇವಿಯನ್ನು ವಿವಾಹವಾಗಿದ್ದ. ಬಳಿಕ 3ನೆಯ ವಿಗ್ರಹಪಾಲ (ಸು. 1055-81) ಪುರ್ವ ಬಿಹಾರದ ರಾಷ್ಟ್ರಕೂಟ ಮಥನನ ಸೋದರಿಯನ್ನು ಮದುವೆಯಾಗಿದ್ದ. ಇಂಥ ಸಂಬಂಧಗಳ ಫಲವಾಗಿ ಕನ್ನಡ ನಾಡಿನ ಶೂರ ಸೈನಿಕರು ಬಂಗಾಳದ ಸೈನ್ಯದಲ್ಲಿ ಪ್ರವೇಶ ಹೊಂದಿದರು. ಈ ಸೈನಿಕರನ್ನು ಕುರಿತು ಬಂಗಾಳದ ಶಾಸನಗಳಲ್ಲಿ ವಿಪುಲ ನಿರ್ದೇಶನಗಳು ದೊರಕುತ್ತವೆ. ಇತಿಹಾಸ ಸಾಹಿತ್ಯ ಮತ್ತು ಸಂಸ್ಕೃತಿ ರಾಷ್ಟ್ರಕೂಟರ ಕಾಲದಲ್ಲಿ ಕನ್ನಡದಲ್ಲಿ ಹಲವಾರು ರೀತಿಯ ರಚನೆಗಳು ಇದ್ದವೆಂದು ತಿಳಿದು ಬರುವುದು. ಬದಂಡೆ, ಚತ್ರಾಣ, ಮುಂತಾದ ಕಾವ್ಯಭೇದಗಳಿದ್ದವು. ಪ್ರಾಂತದ ಭಾಷೆ ತಿರುಳುಗನ್ನಡವೆಂದು ಹೆಸರು ಪಡೆದಿತ್ತು. ಆ ಸಮಯದಲ್ಲಿ ಮತ್ತು ನೃಪತುಂಗನಿಗಿಂತಲು ಹಿಂದೆ ಅನೇಕ ಕವಿಗಳಿದ್ದರೆಂದು ರಾಜಾ ನೃಪತುಂಗನು ತನ್ನ ’’ಕವಿರಾಜಮಾರ್ಗ’’ ಕೃತಿಯಲ್ಲಿ ತಿಳಿಸಿದ್ದಾನೆ. ರಾಮಾಯಣ, ಮಹಾಭಾರತಗಳ ಸಂಕ್ಷಿಪ್ತ ಕನ್ನಡರೂಪ ಲಭ್ಯವಾಗಿದ್ದವು. ೫ ನೇ ಶತಮಾನದ ಕನ್ನಡದ ಶಾಸನದ ನಂತರದಲ್ಲಿ ಪ್ರಥಮವಾಗಿ ರಚಿತವಾಗಿರುವ ಕವಿರಾಜಮಾರ್ಗದಲ್ಲಿ ಕಾವೇರಿಯಿಂದ ಗೋದಾವರಿಯವರೆಗೆ ಇದ್ದ ನಾಡು ಕನ್ನಡನಾಡು ಎಂದು ತಿಳಿಸಲಾಗಿದೆ. ಆ ಸಮಯದಲ್ಲಿ ಹಲವಾರು ಜೈನ ಕವಿಗಳಿದ್ದರು. ಶಿವಕೋಟಿ ಆಚಾರ್ಯನ ‘’ವಡ್ಡಾರಾಧನೆ’’ ಮೊದಲ ಗದ್ಯಕೃತಿ ರಚಿತವಾಗಿತ್ತು. ರಾಷ್ಟ್ರಕೂಟ ಸಾಮ್ರಾಜ್ಯ ಕರ್ನಾಟಕದ ರಾಜಮನೆತನಗಳು ಕರ್ನಾಟಕದ ಇತಿಹಾಸ ಪ್ರೋಜೆಕ್ಟ್ ಟೈಗರ್-೨ ಸ್ಪರ್ಧೆಗಾಗಿ ವಿಸ್ತರಿಸಿದ ಲೇಖನ ರಾಷ್ಟ್ರಕೂಟರ ಕೊಡುಗೆಗಳು ಆಡಳಿತ ವ್ಯವಸ್ಥೆ: ರಾಷ್ಟ್ರಕೂಟರರಾಜತ್ವವು ವಂಶಪಾರಂಪರ್ಯವಾಗಿತ್ತು.ಅರಸರಿಗೆ ಸಹಾಯ ಮಾಡಲು ಮಂತ್ರಿಮಂಡಲವಿರುತಿತ್ತು. ಮಂತ್ರಿ ಮಂಡಲದಲ್ಲಿ ವಿದೇಶಿ ವ್ಯವಹಾರ ನೋಡಿಕೊಳ್ಳುವ ಮಹಾಸಂದಿ ವಿಗ್ರಹಿಯೆಂಬ ಗಣ್ಯನು ಇದ್ದನು.ಆಡಳೀತದ ಅನುಕೂಲಕ್ಕಾಗಿ ಸಾಮ್ರಾಜ್ಯವನ್ನು ರಾಷ್ಟ್ರ(ಮಂಡಲ),ವಿಷಯ,ನಾಡು,ಗ್ರಾಮಗಳಾಗಿ ವಿಭಜಿಸಲಾಗಿತ್ತು. ಗ್ರಾಮದ ಮುಖ್ಯಸ್ಥನಿಗೆ ಗ್ರಾಮಪತಿ ಅಥವಾ ಪ್ರಭುಗಾವುಂಡ ಎಂದು ಕರೆಯುತ್ತಿದ್ದರು. ಗ್ರಾಮ ಸೈನ್ಯಕ್ಕೆ ಈತನೇ ಮುಖ್ಯಸ್ಥ.ಗ್ರಾಮ ಲೆಕ್ಕಿಗ ಈತನ ಸಹಾಯಕ.ನಾಡುಗಳಲ್ಲಿ ನಾಡಗಾವುಂಡ,ವಿಷಯ ಮತ್ತು ರಾಷ್ಟ್ರಗಳಲ್ಲಿ ವಿಷಯಪತಿ ಮತ್ತು ರಾಷ್ಟ್ರಪತಿ ಎಂಬ ಅದಿಕಾರಿಗಳು ಇದ್ದರು. ಆದಾಯ :ಭೂಕಂದಾಯ,ಸರಕು,ಮನೆ,ಅಂಗಡಿಗಳ ಮೇಲಿನ ಸುಂಕು,ನದಿ ದಾಟಿಸುವಂತಹ ವೃತ್ತಿಗಳ ಮೇಲಿನ ತೆರಿಗೆ ಮೋದಲಾದವು ರಾಜ್ಯದ ಆದಾಯಗಳಾಗಿದ್ದವು. ಉಲ್ಲೇಖ
1911
https://kn.wikipedia.org/wiki/%E0%B2%A4%E0%B3%86%E0%B2%B2%E0%B3%81%E0%B2%97%E0%B3%81
ತೆಲುಗು
ದ್ರಾವಿಡ ಭಾಷೆ ದ್ರಾವಿಡಭಾಷಾವರ್ಗಕ್ಕೆ ಸೇರಿದ ತೆಲುಗನ್ನು ಆಂಧ್ರಭಾಷೆಯೆಂದು ಕರೆಯುವುದು ಅಷ್ಟು ಸರಿಯಲ್ಲದಿದ್ದರೂ ರೂಢಿಯಲ್ಲಿ ಆ ಹೆಸರೂ ನಿಂತು ಬಿಟ್ಟಿದೆ. ಇದಕ್ಕೇನು ಕಾರಣವೆಂದರೆ ಆಂಧ್ರ ಚಕ್ರಾಧಿಪತ್ಯವೂ ತೆಲುಗು ದೇಶವೂ ಸಮಾನವ್ಯಾಪ್ತಿಯುಳ್ಳವಲ್ಲ. ಚಕ್ರಾಧಿಪತ್ಯದ ಒಂದು ಭಾಗವಾದ ಮಹಾರಾಷ್ಟ್ರ ಎಂದಿಗೂ ತೆಲುಗು ದೇಶದ ಒಂದು ಭಾಗವಾಗಲಿಲ್ಲ. ತೆಲುಗು ದೇಶದ ಭಾಗಗಳಾದ ಕಳಿಂಗದ ಮಧ್ಯ ಮತ್ತು ದಕ್ಷಿಣ ಭಾಗಗಳು ಆಂಧ್ರ ಚಕ್ರಾಧಿಪತ್ಯಕ್ಕೆ ಎಂದೂ ಸೇರಿರಲಿಲ್ಲ. ತೆಲುಗು ದೇಶದಲ್ಲಿ ನೂರಾರು ಸಂಸ್ಕೃತ ಮತ್ತು ಪ್ರಾಕೃತ ಪದಗಳು ಬಳಕೆಯಲ್ಲಿವೆ ಮತ್ತು ಇನ್ನೂ ಹೆಚ್ಚಿನ ಪದಗಳು ತೆಲುಗು ಸಾಹಿತ್ಯದಲ್ಲಿ ಪ್ರಯುಕ್ತವಾಗಿವೆ. ಆದರೆ ಈ ಸಾಲ ತೆಗೆದುಕೊಂಡ ಶಬ್ದಗಳಿಂದ, ಇವು ಎಷ್ಟೇ ಇರಲಿ, ನಾಡಿನಲ್ಲಿ ಎಷ್ಟೇ ಹರಡಲಿ, ಭಾಷಾ ಬಾಂಧವ್ಯವನ್ನು ನಿರ್ಧರಿಸಲಾಗದು. ತೆಲುಗು ತೆಲಂಗಾಣದ (ತ್ರಿಲಿಂಗ) ಭಾಷೆ. ಅದು ಈಗಿನ ಆಂಧ್ರ ಪ್ರದೇಶದ ಭಾಷೆಯಾಗಿರುವುದರಿಂದ ಅದರ ಸ್ಥೂಲ ಪರಿಚಯವನ್ನಿಲ್ಲಿ ಮಾಡಿಕೊಡಲಾಗಿದೆ. ಬೆಳವಣಿಗೆ ರಾಜಮಹೇಂದ್ರಿಯಲ್ಲಿದ್ದ ಪೂರ್ವ ಚಾಲುಕ್ಯ ವಂಶದ ರಾಜರಾಜ ನರೇಂದ್ರನ (1033-43) ಆಸ್ಥಾನದಲ್ಲಿದ್ದ ನನ್ನಯನ ಕಾಲಕ್ಕೆ ಹಿಂದೆ ತೆಲುಗು ಭಾಷೆ ಹೇಗೆ ಬೆಳೆಯಿತು ಎಂಬ ವಿಷಯವನ್ನು ನಿರೂಪಿಸಲು ನಮಗೆ ತಕ್ಕಷ್ಟು ಆಧಾರಗಳು ದೊರೆತಿಲ್ಲ. ಬೆಜವಾಡದಲ್ಲಿರುವ (ವಿಜಯವಾಡ) ಒಂದು ಕಂಬದಲ್ಲಿ ಕೊರೆದಿರುವ "ಯುದ್ಧಮಲ್ಲ ಶಾಸನಮು" ಎಂಬ ಶಾಸನ ಮತ್ತು ನನ್ನಯನಿಗೆ ಹಿಂದಿನ ಇತರ ಶಾಸನಗಳಲ್ಲಿ ಪದ್ಯಗಳಿವೆ; ಅವುಗಳ ಭಾಷೆ ನನ್ನಯ ಬಳಸಿರುವ ಭಾಷೆಯ ಹಾಗೆಯೇ ಇದೆ. ತೆಲುಗು ಭಾಷೆ ಅಥವಾ ಸಾಹಿತ್ಯ ಯಾವಾಗ ಹುಟ್ಟಿತ್ತೆಂಬುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಅದು ಕ್ರಿ.ಶ 600ರ ಹೊತ್ತಿಗೆ ದ್ರಾವಿಡ ಭಾಷೆಯ ಒಂದು ಪ್ರತ್ಯೇಕ ಶಾಖೆಯಾಗಿ ಇದ್ದಿತ್ತೆಂಬುದನ್ನು ಆ ಕಾಲದ ಚೋಳ ಮಹಾರಾಜರ ತೆಲುಗು ಶಾಸನವೊಂದರಿಂದ ನಿರ್ದಿಷ್ಟವಾಗಿ ಹೇಳಬಹುದು. ನನ್ನಯ್ಯನ ಕಾಲದಿಂದಾಚೆಗೆ ತೆಲುಗು ಭಾಷೆ ಹೇಗೆ ಬೆಳೆಯಿತು ಎಂಬುದಕ್ಕೆ ತಕ್ಕಷ್ಟು ಸಾಕ್ಷ್ಯಗಳಿವೆ. ತಮಿಳಿನಲ್ಲಿ ದ್ರಾವಿಡಾಂಶ ಹೇರಳವಾಗಿ ನಿಂತುಬಿಟ್ಟಿದೆ. ಸಂಸ್ಕೃತ ಅಥವಾ ಪ್ರಾಕೃತದ ಪ್ರಭಾವಕ್ಕೆ ಅದು ಅಷ್ಟಾಗಿ ಈಡಾಗಲಿಲ್ಲ; ಆದರೆ ಇತರ ಮೂರು ದ್ರಾವಿಡ ಭಾಷೆಗಳು ಸಂಸ್ಕೃತ ಮತ್ತು ಪ್ರಾಕೃತ ಶಬ್ದಗಳನ್ನು ಹೇರಳವಾಗಿ ತೆಗೆದುಕೊಂಡಿದೆ.ಮಲೆಯಾಳ ತನ್ನ ದ್ರಾವಿಡಾಂಶದಲ್ಲಿ ಕನ್ನಡ ತೆಲುಗುಗಳಿಗಿಂತಲೂ ತಮಿಳಿಗೆ ಹೆಚ್ಚು ಸಮೀಪವಾಗಿದೆ. ತೆಲುಗಿಗೂ ಕನ್ನಡಕ್ಕೂ ಸಮಾನಾಂಶಗಳು ಹೆಚ್ಚಾಗಿದ್ದರೂ ತೆಲುಗಿಗಿಂತಲೂ ಕನ್ನಡದಲ್ಲಿ ದ್ರಾವಿಡಾಂಶ ಹೆಚ್ಚು. ಈ ಬಾಂಧವ್ಯಗಳು ಮತ್ತು ವ್ಯತ್ಯಾಸಗಳನ್ನು ಈ ಭಾಷೆಗಳು ಬೆಳೆದ ಕ್ಷೇತ್ರಗಳ ಭೌಗೋಳಿಕ ವೈಲಕ್ಷಣಗಳಿಂದಲೂ ಪ್ರಾಚೀನ ಹಾಗೂ ಮಧ್ಯಕಾಲದ ಭಿನ್ನಭಿನ್ನ ರಾಜಕೀಯ ಪರಿಸ್ಥಿತಿಗಳಿಂದಲೂ ಸುಲಭವಾಗಿ ತರ್ಕಿಸಬಹುದು. ತೆಲುಗು ದೇಶ ದಖನ್ನಿನ ಮಧ್ಯಭಾಗದಲ್ಲಿದೆ. ಓಂಡ್ರ ದೇಶದವರು ಈಶಾನ್ಯದಲ್ಲೂ ಮಧ್ಯಪ್ರದೇಶದ ಹಿಂದಿ ಭಾಷೆಯ ಜನರು ಉತ್ತರದಲ್ಲೂ ಮಹಾರಾಷ್ಟ್ರರು ವಾಯುವ್ಯದಲ್ಲೂ ಕನ್ನಡಿಗರು ಪಶ್ಚಿಮದಲ್ಲೂ ತಮಿಳರು ದಕ್ಷಿಣದಲ್ಲೂ ಅದನ್ನು ಸುತ್ತುವರಿದಿದ್ದಾರೆ. ದಕ್ಷಿಣಕ್ಕೆ ಪ್ರಸರಿಸುವಾಗ ಆರ್ಯಸಂಸ್ಕೃತಿ ಅನಿವಾರ್ಯವಾಗಿ ಮೊದಲು ತೆಲುಗು ದೇಶವನ್ನು ಹಾಯ್ದೇ ದಕ್ಷಿಣ ತುದಿಯನ್ನು ಮುಟ್ಟಬೇಕು. ಆದುದರಿಂದ ತೆಲುಗುಭಾಷೆ ಮತ್ತು ಸಂಸ್ಕೃತಿಗಳು ಆರ್ಯಭಾಷೆ ಮತ್ತು ಸಂಸ್ಕೃತಿಗಳಿಂದ ದಕ್ಷಿಣದ ಇತರ ಪ್ರದೇಶಗಳಿಗಿಂತ ಹೆಚ್ಚಾಗಿ ಪ್ರಭಾವಿತವಾದವು. ತೆಲುಗಿಗಿರುವ ಮತ್ತೊಂದು ಲಾಭಾಂಶವೇನೆಂದರೆ ಮಿಕ್ಕೆಲ್ಲ ದ್ರಾವಿಡ ಭಾಷೆಗಳಿಗಿಂತಲೂ ತೆಲುಗನ್ನು ಆಡುವ ಜನರೇ ಹೆಚ್ಚು ಮಂದಿ (ಸುಮಾರು ಮೂರು ಕೋಟಿ ಅರವತ್ತು ಲಕ್ಷ ಜನ) ಇದ್ದಾರೆ. ತನ್ನ ಮೃದು ಮಧುರ ಧ್ವನಿಗೆ ಅದು ಹೆಸರಾಗಿದೆ. ಪಾಶ್ಚಾತ್ಯ ಪ್ರವಾಸಿಗರು ಇದನ್ನು ಪೂರ್ವದ ಇಟಾಲಿಯನ್ ಎಂದು ಕರೆದಿದ್ದಾರೆ. ತೆಲುಗು ಭಾಷೆ ಪ್ರಾಚೀನ ಕಾಲದಲ್ಲಿ ಹೇಗೆ ಬೆಳೆಯಿತು ಎಂಬುದನ್ನು ನಿರೂಪಿಸುವಾಗ ನನ್ನಯನಿಗಿಂತ ಹಿಂದಿನ ಕಾಲದ ಒಂದು ವಿಶಿಷ್ಟ ಲಕ್ಷಣವನ್ನು ಗಮನಕ್ಕೆ ತೆಗೆದುಕೊಳ್ಳುವುದು ಆವಶ್ಯಕ. ಇತರ ಭಾಷೆಗಳಲ್ಲಿ ಇನ್ನೂ ಉಳಿದುಕೊಂಡಿರುವ ಗಳ್(ಕಳ್) ಎಂಬ ಬಹುವಚನ ಪ್ರತ್ಯಯದ ಸ್ಥಾನವನ್ನು ನನ್ನಯನಿಗೆ ಬಹು ಹಿಂದೆಯೇ - ಲು ಎಂಬುದು ಆಕ್ರಮಿಸಿಕೊಂಡಿತು. ಅದು ಬಹುಕಾಲದಿಂದಲೂ ತೆಲುಗಿನಲ್ಲಿತ್ತೆಂಬುದನ್ನು ತೋರಿಸಲು -ಮ್ರಾ (ನ್) ಕುಲು (ಮರಗಳು) ; ಕೊಲ (ನ್) ಕುಲು (ಕೊಳಗಳು); ಈಗಲು (ನೊಣಗಳು); ಏನುಗಲು (ಆನೆಗಳು) ಎಲುಕಲು (ಇಲಿಗಳು) ಇತ್ಯಾದಿ ಬಹುವಚನ ರೂಪಗಳು ನಿದರ್ಶನವಾಗಿ ಉಳಿದು ಬಂದಿವೆ. ಮುಂದೆ ಬಹುವಚನ ಪ್ರತ್ಯಯ ಲ (ಉ) ಎಂದು ತೆಲುಗರು ಕಂಡುಕೊಂಡಾಗ ಏಕವಚನ ರೂಪಗಳನ್ನು ರಚಿಸಲು ಲು ವನ್ನು ಕಳೆದಿಟ್ಟರು. ಉದಾಹರಣೆಗೆ, ಈಗ, ಏನುಗ, ಏಲುಕ; ತಮಿಳಿನ ಈ ಯಾನೈ, ಮುಂತಾದುವನ್ನು ನೋಡಬಹುದು. ವ್ಯಾಕರಣ ತಮಿಳು ಮತ್ತು ಇತರ ದ್ರಾವಿಡ ಭಾಷೆಗಳಲ್ಲಿರುವಂತೆ ತೆಲುಗು ಸಹ ಬಹುವಚನ ದ್ವಿಲಿಂಗ ಪ್ರತ್ಯಯ [ರ(ಉ)] ವನ್ನು ಉಳಿಸಿಕೊಂಡಿದೆ. ಉದಾರಣೆಗೆ, ವಾರು (ಅವರು), ವೀರು (ಇವರು), ಎವರು (ಯಾರು?), ಮೀರು (ನೀವು), ಆದರೆ ಸರ್ವತ್ರ ಹರಡಿರುವ ಲು ವಿನ ಪ್ರಭಾವ ಎಷ್ಟೆಂದರೆ, ಅದಿಲ್ಲದಿದ್ದರೆ ಬಹುವಚನದ ಭಾವ ಸಮಗ್ರವಾಗಿ ಮನಸ್ಸಿಗೆ ತಟ್ಟುವುದಿಲ್ಲ. ಆದುದರಿಂದ ಕಾಲಕ್ರಮದಲ್ಲಿ ವಾರಲು, ವೀರಲು, ಮೀರಲು, ಮುಂತಾದವುಗಳು ಬೆಳೆದವು. ಇವು ಇಂಗ್ಲೀಷಿನಲ್ಲಿ ಚಿಲ್ರನ್ಸ್, ಮೆನ್ಸ್, ಡೇಟಾಸ್, ಎಂಬ ಹಾಗಿವೆ. ಕೆಲವು ಸಂದರ್ಭಗಳಲ್ಲಿ ದ್ವಿಲಿಂಗೀ ಬಹುವಚನ ಪ್ರತ್ಯಯದ ಸ್ಥಾನವನ್ನು ಸಹ ಲು ಆಕ್ರಮಿಸುತ್ತದೆ. ಉದಾಹರಣೆಗೆ, ವಾಂಡ್ಲು; ವಾಳ್ಳು (ಅವರು); ಕೂತುಂಡ್ಳು, ಕೂತುಳ್ಳು, (ಹೆಣ್ಣು ಮಕ್ಕಳು) ಇತ್ಯಾದಿ. ಅನೇಕಾಕ್ಷರ ರೂಪಗಳನ್ನು ಮೊಟಕುಗೊಳಿಸಿದ ರೂಪಗಳು ನನ್ನಯನ ಕಾಲದಷ್ಟು ಮುಂಚಿನಿಂದಲೇ ತಲೆದೋರುತ್ತದೆ. ಉದಾಹರಣೆಗೆ ಪೂಜಿಂಚಿತೇ? ಎಂಬ ನನ್ನಯ್ಯನ ಪ್ರಯೋಗ ಪೂಜಿಂಚಿತಿವೇ? (ಪೂಜಿಸಿದೆಯಾ) ಎಂಬುದರಿಂದ ಹುಟ್ಟಿದೆ. ಪೂಜಿಂಚಿತಿವೇನಿನ್ (ಪೂಜಿಸಿದ್ದೇ ಆದರೆ) ಎಂಬ ದೀರ್ಘರೂಪ ಕ್ರಮೇಣ ಪೂಜಿಂಚಿತಿವೇನಿ ಎಂದಾಗಿ, ಬಳಿಕ ವೇನ್-ವೇ; ತೇನ್-ತೇ ಮುಂತಾದ್ದಾಗಿ ಈಗಿನ ಪೂಜಿಸ್ತೇ ಎಂಬ ರೂಪಕ್ಕಿಳಿದಿದೆ. ಪೂಜಿಂಚಿತೇನ್ ಎಂಬುದಕ್ಕಿಂತ ಹಿಂದಿನ ಶಬ್ದರೂಪಗಳಲ್ಲಿ `ವಿ ಎಂಬುದಿದ್ದು ಮಧ್ಯಮ ಪುರುಷದ ಏಕವಚನವನ್ನು ನಿರ್ದೇಶಿಸುತ್ತಿತ್ತು. ಆದರೆ ಆ ತರುವಾಯದ ರೂಪಗಳಲ್ಲಿ ವಿ ಅಳಿದುಹೋಗಿ ಆ ರೂಪ ಎಲ್ಲ ಜನಕ್ಕೂ ಏಕವಚನ ಬಹುವಚನಗಳೆರಡಲ್ಲೂ ಪ್ರಯುಕ್ತವಾಗತೊಡಗಿತು. ಹೀಗೆ ಮಟ್ಟ ಸಮ ಮಾಡುವ ಪ್ರವೃತ್ತಿ ಈ ಮಾತುಗಳಲ್ಲಿ ಕಂಡು ಬರುತ್ತದೆ. ಅಂಟಿವೇನಿನ್ ಎಂಬುದರಿಂದ ಅನ್‍ಟೆ (ನೀನು ಹೇಳಿದರೆ); ಐತಿವೇನಿನ್ ಎಂಬುದರಿಂದ ಐತೆ (ನೀನು ಹೀಗಾಗುವುದಾದರೆ) ಇತ್ಯಾದಿ. ಕವಿಗಳು ಈ ಎಲ್ಲ ರೂಪಗಳನ್ನೂ ಛಂದಸ್ಸಿನ ಸೌಕರ್ಯಕ್ಕಾಗಿ ಉಪಯೋಗಿಸುತ್ತಾರೆ. ಕಾವ್ಯಗಳಲ್ಲೂ ಅವುಗಳನ್ನು ಅನುಸರಿಸಿ ಬರೆದ ವ್ಯಾಕರಣಗಳಲ್ಲೂ ಜನರಾಡುವ ಮಾತಿನಲ್ಲಿ ತೋರಿಬರುವ ಬದಲಾವಣೆಗಳು ಕಂಡುಬರುವುದಿಲ್ಲ. ಏಕೆಂದರೆ ಬಹು ಹಿಂದಣ ಕವಿಗಳು ಅನಿವಾರ್ಯವಾಗಿ ತಾವಾಡುತ್ತಿದ್ದ ಭಾಷೆಯನ್ನೇ ತಮ್ಮ ಕಾವ್ಯಗಳಲ್ಲಿ ಬಳಸುತ್ತಿದ್ದರೂ ಮುಂದೆ ಬಂದ ಕವಿಗಳು ಹಿಂದಿನ ಕವಿಗಳ ಭಾಷೆಗೆ ತಮ್ಮ ಕಾಲದ ಆಡುಮಾತಿಗಿಂತಲೂ ಹೆಚ್ಚಿನ ಗಮನವನ್ನು ಕೊಡುತ್ತಿದ್ದರು; ವೈಯಾಕರಣರು ಭಾಷೆ ಒಂದೇ ಸಲಕ್ಕೆ ಸ್ಥಿರರೂಪವನ್ನು ಪಡೆದುಬಿಟ್ಟಿರುವಂತೆ ಭಾವಿಸಿ ಪ್ರಾಚೀನ ಕವಿಗಳ ಪ್ರಯೋಗಗಳನ್ನೇ ಅವಲಂಬಿಸಿ ವ್ಯಾಕರಣ ಸೂತ್ರಗಳನ್ನು ರಚಿಸಿದರು. ಆದರೆ ಕವಿಗಳು ತಿಳಿದೋ ತಿಳಿಯದೆಯೋ ವ್ಯಾಕರಣ ಸೂತ್ರಗಳನ್ನು ಮುರಿಯುತ್ತಿದ್ದರು. ಎಷ್ಟು ಪ್ರಾಚೀನವಾದರೆ ಅಷ್ಟು ಶ್ರೇಷ್ಠ ಎಂಬ ಸೂತ್ರವನ್ನು ಸಂಪ್ರದಾಯ ನಿಷ್ಠ ಕವಿಗಳೂ ವೈಯಾಕರಣರೂ ಭಾಷಾಕ್ಷೇತ್ರದಲ್ಲೂ ಎತ್ತಿ ಹಿಡಿದಿದ್ದರು. ಆದರೆ ಕವಿಗಳು ಹಳೆಯ ವ್ಯಾಕರಣಸೂತ್ರಗಳನ್ನು ಬದಿಗೊತ್ತಿ ಜೀವಂತವಾಗಿರುವ ಆಡುಮಾತನ್ನೇ ಬಳಸಲು ಹಿಂಜರಿಯಲಿಲ್ಲ. ಏಕೆಂದರೆ ಅವು ಅವರ ಭಾವಗಳನ್ನು ಪ್ರಕಟಿಸಲು ಹೆಚ್ಚು ಪರಿಣಾಮಕಾರಿಯಾಗಿದ್ದುವಲ್ಲದೆ ಪ್ರಾಚೀನ ಶಬ್ದಗಳಿಗಿಂತಲೂ ಸುಲಭವಾಗಿ ಅರ್ಥವಾಗುತ್ತಿದ್ದವು. ಆದರೆ ಇಂಥ ಕವಿಗಳು ಬಹು ವಿರಳ. ಅವರು ಆಡುಮಾತುಗಳನ್ನು ಎಚ್ಚರದಿಂದಲೂ ಅಂಜಿಕೆಯಿಂದಲೂ ಪ್ರಯೋಗಿಸುತ್ತಿದ್ದರು. ಶಾಸನಗಳು, ಹಾಡುಗಳು, ಶತಕಗಳು ಮತ್ತು ತಮ್ಮ ತತ್ತ್ವಗಳು ಜನಕ್ಕೆ ತಿಳಿದು ಅವು ಅವರಲ್ಲಿ ಹರಡಬೇಕೆಂಬ ಆಸೆಯುಳ್ಳ ಶೈವ ಕವಿಗಳ ದ್ವೀಪದ ಕಾವ್ಯಗಳು ಆಡುಮಾತುಗಳನ್ನು ಅವುಗಳ ರೂಢಿಯ ಅರ್ಥದಲ್ಲೇ ಹೆಚ್ಚಾಗಿ ಬಳಸುತ್ತಿದ್ದರು. 1700-1850 ರಲ್ಲಿ ಬೆಳೆದ ಗದ್ಯ ಪ್ರಕಾರ ಕಥೆ, ಪ್ರಬಂಧ, ವ್ಯಾಖ್ಯಾನ, ಕಾಗದಗಳು ಮುಂತಾದ ಎಲ್ಲ ಪ್ರಕಾರಗಳ ಲೇಖನಗಳಿಗೂ ಒದಗಿ ಬಂತು. ಈ ಗದ್ಯ ಲೇಖನಗಳ ಬಹುಭಾಗವನ್ನು ಪ್ರಚಲಿತ ಭಾಷೆಯಲ್ಲೇ ಬರೆಯಲಾಗುತ್ತಿತ್ತು; ಅದು ತೆಲುಗು ಭಾಷಾ ಚರಿತ್ರೆಯನ್ನು ವ್ಯಾಸಂಗ ಮಾಡಲು ಬಯಸುವವರಿಗೆ ಆ ಭಾಷೆಯ ಬೆಳವಣಿಗೆಗಳನ್ನು ಗುರುತಿಸಲು ಕಾವ್ಯಗಳ ಭಾಷೆಗಿಂತ ಹೆಚ್ಚು ಸಹಕಾರಿಯಾಗಿದೆ. ಈ ಸಂಪ್ರದಾಯವನ್ನು ಸಿ. ಪಿ. ಬ್ರೌನ್ ಪ್ರೋತ್ಸಾಹಿಸಿದ. ತನ್ನ ಇಂಗ್ಲಿಷ್ ಶಬ್ದಕೋಶಗಳಲ್ಲಿ ಆತ ಪದಗಳ ಅರ್ಥವನ್ನು ವಿವರಿಸಲು ಪ್ರಚಲಿತ ಭಾಷೆಯನ್ನೇ ಉಪಯೋಗಿಸಿದ. ಆದರೆ ಕಾವ್ಯಭಾಷೆಯಲ್ಲಿ ನೀತಿ ಚಂದ್ರಿಕೆ ಎಂಬುದನ್ನು ಬಾಲ ವ್ಯಾಕರಣ ಎಂಬ ವ್ಯಾಕರಣ ಗ್ರಂಥವನ್ನು ಬರೆದ ಪರವಸ್ತು ಚಿನ್ನಯ್ಯಸೂರಿ ಈ ಸಂಪ್ರದಾಯಕ್ಕೆ ತಡೆಹಾಕಿದ. ಆತನ ನೀತಿ ಚಂದ್ರಿಕೆ ಕೃತಕವಾದ ಭಾಷೆಯಲ್ಲಿ ರಚಿತವಾಗಿದೆ. ಬಳಕೆಯಲ್ಲಿಲ್ಲದ ಆಡಂಬರದ ಪದಗಳು, ಅಲಂಕಾರ ನಿಬಿಡದ ಶೈಲಿ, ನಯವಾದ ಬಳಸು ಮಾತಿನ ಸಂಸ್ಕೃತ ಪದಗಳ ಸಮಾಸ ಜಾಲಗಳು- ಇವು ಆ ಭಾಷೆಯ ಲಕ್ಷಣ. ಆತನ ವ್ಯಾಕರಣ ಅಸಮಗ್ರವಾಗಿ ಅಸಂಗತವಾಗಿ ಇದ್ದರೂ ಕಾವ್ಯಗಳ ಭಾಷೆಯನ್ನು ಅವಲಂಬಿಸಿ ರಚಿತವಾಗಿತ್ತು. ಆತನ ಕೃತಿಗಳ ಪರಿಣಾಮವಾಗಿ ತೆಲುಗಿನಲ್ಲಿ ಆರೋಗ್ಯಕರವಾದ ಗದ್ಯದ ಮುನ್ನಡೆ ನಿಂತುಹೋಯಿತು. ಸುಮಾರು ಅರುವತ್ತು ವರ್ಷಗಳವರೆಗೆ ಆತನ ಸಮಕಾಲೀನ ಮತ್ತು ತರುವಾಯ ಬಂದ ತೆಲುಗು ಗದ್ಯ ಲೇಖಕರು ಯಾರೂ ಆತನ ಕೃತಿಗಳ ಮಾದರಿಗೆ ಎದುರು ಮಾತನ್ನೆತ್ತದೆ ಅನುಸರಿಸಿದರು. ಹೀಗೆ ಈತನ ಶೈಲಿಯನ್ನು ಅನುಕರಿಸುವ ಉತ್ಸಾಹದಲ್ಲಿ ಇವರು ಸಾಮಾನ್ಯ ಪದಗಳನ್ನು ಬಿಟ್ಟು ಹಳೆಯ ಶಬ್ದಗಳನ್ನು ಸಂಸ್ಕೃತ ಸಮಾಸಗಳಿಂದ ತುಂಬಿರುವ ಪದಗಳನ್ನೂ ಉಪಯೋಗಿಸತೊಡಗಿದರು. ಚಿನ್ನಯ್ಯಸೂರಿಯ ನೀತಿಚಂದ್ರಿಕೆ ಅಥವಾ ಅಂಥ ಶೈಲಿಯಲ್ಲಿ ಬರೆದ ಇತರ ಗ್ರಂಥಗಳನ್ನು ಶಾಲಾ ಕೊಠಡಿಗಳಲ್ಲಿ ಮಾತ್ರ ಛಾಸರನ ಭಾಷೆಯಲ್ಲಿರುವ ಛಾಸರನ ಪದ್ಯಗಳನ್ನು ಹೇಗೋ ಹಾಗೆ, ಓದಲು ಏರ್ಪಡಿಸಿದ್ದರೆ, ತೆಲುಗು ವಿದ್ಯಾರ್ಥಿಗಳಿಗಾಗಲಿ ತೆಲುಗು ಬರಹಗಾರರಿಗಾಗಲಿ ಯಾವ ಕೆಡುಕೂ ಆಗುತ್ತಿರಲಿಲ್ಲ. ಆದರೆ ಪಂಡಿತರೂ ವಿದ್ಯಾ ಇಲಾಖೆ ಹಾಗೂ ವಿಶ್ವವಿದ್ಯಾನಿಲಯಗಳ ಅಧಿಕಾರಿಗಳೂ ಒಂದು ಹೆಜ್ಜೆ ಮುಂದೆ ಹೋದರು. ಶಾಲೆಗಳಲ್ಲೂ ಆಡುಮಾತನ್ನು ನಿಷೇಧಿಸಿದರು. ಆಡುಮಾತಿನಲ್ಲಿ ತಮ್ಮ ಮನೆಮಾತಿನಲ್ಲಿ ಪ್ರಬಂಧಗಳನ್ನು ಬರೆಯಲು ಮತ್ತು ಪರೀಕ್ಷೆಯ ಪ್ರಶ್ನೆಪತ್ರಿಕೆಗಳಿಗೆ ಉತ್ತರ ಬರೆಯಲು ಅವಕಾಶ ಕೊಡಲಿಲ್ಲ. ಸಾಮಾಜಿಕ ಬದಲಾವಣೆಗಳನ್ನೂ ದಲಿತರ ಉದ್ಧಾರವನ್ನು ಪ್ರತಿಪಾದಿಸುತ್ತಿದ್ದ ವೀರೇಶಲಿಂಗಂ ಪಂತುಲು ಕೂಡ ಮೊದಲು ಚಿನ್ನಯ್ಯಸೂರಿ ಹಾಕಿಕೊಟ್ಟ ಮೇಲು ಪಂಕ್ತಿಯನ್ನೇ ಅನುಸರಿಸಿದರು. ಆದರೆ ಇಂಥ ಮಾದರಿಯ ನಿರುಪಯೋಗಿತೆಯನ್ನು ಬೇಗನೆ ಅರಿತುಕೊಂಡು ವಿದ್ಯಾರ್ಥಿಗಳಿಗೂ ಸಾಮಾನ್ಯ ಓದುಗನಿಗೂ ತಿಳಿಯುವಂತೆ ತನ್ನ ಭಾಷೆಯನ್ನು ಸರಳ ಮಾಡಿಕೊಂಡ. ಜೀವಂತ ಭಾಷೆಯ ಸಾಮರ್ಥ್ಯವನ್ನು ಆತ ಗಮನಕ್ಕೆ ತಂದುಕೊಳ್ಳದಿರಲಿಲ್ಲ; ತನ್ನ ಬರೆಹಗಳು ಸ್ಕೂಲು ಕಾಲೇಜುಗಳಿಗಲ್ಲ ಎಂದುಕೊಂಡು ಆತ ತನ್ನ ಸಾಮಾಜಿಕ ನಾಟಕಗಳಲ್ಲೂ ಪ್ರಹಸನಗಳಲ್ಲೂ ಅದನ್ನು ಬಳಸಿದ. ಆದರೆ ಎರಡು ಅಂಶಗಳು ಆತನ ತಿಳಿವಳಿಕೆಗೆ ಬರಲಿಲ್ಲ; ಒಂದು-ಆಗ ಇದ್ದ ವ್ಯಾಕರಣಗಳು ಕಾವ್ಯದ ಭಾಷೆಗೆ ಮಾತ್ರ ಉಪಯುಕ್ತವಾದುವು ಮತ್ತು ಕಾಲಕಾಲಕ್ಕೆ ಮುಂದಿನ ಕವಿಗಳ ಪ್ರಯೋಗಗಳ ದೃಷ್ಟಿಯಿಂದ ಅವನ್ನು ತಿದ್ದಬೇಕು ಎಂಬಂಶ. ಎರಡು-ಜೀವಂತ ಭಾಷೆಗಳು ಯಾವಾಗಲೂ ಚಲಿಸುತ್ತಲೇ ಇವೆ, ಮುಂಬರಿಯುತ್ತಿವೆ, ಬದಲಾಯಿಸುತ್ತಿವೆ, ಅವನ್ನು ವ್ಯಾಕರಣದಿಂದ ಕಟ್ಟಿ ಹಾಕಲಾಗುವುದಿಲ್ಲ. ವ್ಯಾಕರಣಗಳೆಲ್ಲ ಅವನ್ನು ಹಿಂಬಾಲಿಸಬೇಕು ಎಂಬುದು ಮತ್ತೊಂದಂಶ. ತನ್ನ ಆತ್ಮಚರಿತ್ರೆಯಲ್ಲಿ ಹೇಳಿಕೊಳ್ಳುವಂತೆ ಆಧುನಿಕ ತೆಲುಗು ಚಳವಳಿ ಸಾಧುವೆಂಬುದನ್ನು ವೀರೇಶಲಿಂಗಂ ತುಂಬ ತಡವಾಗಿ ಅರಿತುಕೊಂಡ. ಗಿಡುಗು ರಾಮಮೂರ್ತಿ ಮತ್ತು ಗುರುಜಾಡ ಅಪ್ಪಾರಾವ್ ಎಂಬವರಿಂದ 1910ರಲ್ಲಿ ಪ್ರೇರಿತವಾದ ಈ ಚಳವಳಿ, ಚಿನ್ನಯ್ಯಸೂರಿ ತಡೆ ಹಾಕುವವರೆಗೂ ನಡೆದು ಬಂದಿದ್ದ ಆಡುಮಾತಿನಲ್ಲೇ ತೆಲುಗು ಗದ್ಯವನ್ನು ಬರೆಯಬೇಕೆಂಬ ಪಂಥದವರೊಡನೆ ರಾಮಮೂರ್ತಿ ಹಲವು ವರ್ಷಗಳ ಕಾಲ ಹೋರಾಡಬೇಕಾಯಿತು. 1920ರ ಹೊತ್ತಿಗೆ ಆತ ಜಯಶಾಲಿಯಾದ. ಪತ್ರಿಕಾಕರ್ತರು ಕ್ರಮೇಣ ಜೀವಂತ ಭಾಷೆಯನ್ನೇ ತಮ್ಮ ಸಂಪಾದಕೀಯಗಳಿಗೂ ಇತರ ಲೇಖನಗಳಿಗೂ ಬಳಸತೊಡಗಿದರು. ಸಾವಿರಗಟ್ಟಲೆ ಗ್ರಂಥಗಳು ಜೀವಂತಭಾಷೆಯಲ್ಲೇ 1930-60ರ ಅವಧಿಯಲ್ಲಿ ಪ್ರಕಟವಾಗಿವೆ. ಪದ್ಯದ ಬರವಣಿಗೆಯಲ್ಲಿ ಸಹ, ಆಧುನಿಕ ಕವಿಗಳು ಉಪಯೋಗಿಸುವ ಭಾಷೆಯಲ್ಲಿ ನಿರುಪಯುಕ್ತವಾದ ಹಳೆಯ ಶಬ್ದಗಳಿರುವುದಿಲ್ಲ ಮತ್ತು ಆಧುನಿಕ ಪದಪ್ರಯೋಗಗಳನ್ನೇ ಬಳಸುತ್ತಾರೆ. ಆದರೆ ಹಳೆಯ ಸಂಪ್ರದಾಯವನ್ನೂ ಅನುಸರಿಸುವ ಕವಿಗಳೂ ಇದ್ದಾರೆ. ಅವರು ಹಳೆಯ ವ್ಯಾಕರಣಗಳ ನಿಯಮಗಳಿಗೆ ಅನುಸಾರವಾಗಿ ಬರೆಯಲೂ ಯತ್ನಿಸುತ್ತಿದ್ದಾರೆ. ಆದರೆ ಹೀಗೆ ಬರೆಯುವುದರಲ್ಲಿ ಅವರು ದೋಷಗಳಿಗೆಡೆಗೊಡುವುದೂ ಅನಿವಾರ್ಯವಾಗಿಯೇ ಆಗುತ್ತಿದೆ. ಜಾಗವಿಲ್ಲದ್ದರಿಂದ, ನನ್ನಯನ ಕಾಲದಿಂದಲೂ ಭಾಷೆ ಹೇಗೆ ಬದಲಾಯಿಸುತ್ತ ಬಂದಿದೆ ಎಂಬುದಕ್ಕೆ ಕೆಲವು ಉದಾಹರಣೆಗಳನ್ನು ಮಾತ್ರ ಇಲ್ಲಿ ಕೊಡಲಾಗಿದೆ. ತೆಲುಗಿನಲ್ಲಿ ಕೆಲವು ಸಂಸ್ಕೃತ ಶಬ್ದಗಳಿಗೆ ಬೇರೆ ಅರ್ಥಗಳು ಬಂದಿವೆ. ಉದಾಹರಣೆಗೆ, ಅಭ್ಯಂತರಂ ಎಂಬುದಕ್ಕೆ ಸಂಸ್ಕೃತದಲ್ಲಿ ಒಳಕೋಣೆ ಎಂದು ಅರ್ಥ; ತೆಲುಗಿನಲ್ಲಿ ಇದಕ್ಕೆ ಆಕ್ಷೇಪಣೆ ಎಂಬ ಅರ್ಥ ಬಂದಿದೆ. ಈ ಅರ್ಥದ ಬದಲಾವಣೆ ಹೇಗಾಯಿತೆಂದು ಈಗ ನೋಡೋಣ. ಯಾವನಾದರೊಬ್ಬ ಆಗಂತುಕ ರಹಸ್ಯವಾಗಿ ಮಾತಾಡಲು ಅಪೇಕ್ಷಿಸಿದಾಗ, ಮನೆಯ ಯಜಮಾನ ಆತನನ್ನು ಒಳಕೋಣೆಗೆ ಕರೆದುಕೊಂಡು ಹೋಗುತ್ತಾನೆ. ಮಾತಾಡಲು ಬಂದಾಗ ಯಜಮಾನ ಒಳಕೋಣೆಗೆ ಹೋಗೋಣವೇ ಎಂದು ಕೇಳುತ್ತಾನೆ. ಬಂದವನು, "ಏಕೆ, ಬೇಡ ಬೇಡ ಅದು ಅವಶ್ಯಕವಲ್ಲ ಈ ಮೊಗಸಾಲೆಯಲ್ಲೇ ಹೇಳಬೇಕಾದುದನ್ನು ಹೇಳುತ್ತೇನೆ." ಎನ್ನುತ್ತಾನೆ. ಮುಂದೆ ಇದು ಇಲ್ಲಿಯೇ ಹೇಳಲು ನನ್ನ ಆಕ್ಷೇಪಣೆಯೇನೂ ಇಲ್ಲ ಎಂಬರ್ಥಕ್ಕೆ ತಿರುಗಿತು. ಪ್ರಾಚೀನತಮ ಕವಿಗಳು ಪ್ರಯೋಗಿಸಿರುವ ಕೆಲವು ತೆಲುಗು ಶಬ್ದಗಳನ್ನು ಈಗಲೂ ಉಪಯೋಗಿಸುತ್ತಾರೆ. ಆದರೆ ಬೇರೆ ಅರ್ಥದಲ್ಲಿ. ಉದಾಹರಣೆಗೆ, ಕಂಪು ಎಂಬುದಕ್ಕೆ ಹಿಂದೆ ಯಾವ ಬಗೆಯ ವಾಸನೆಗಾದರೂ ಪ್ರಯುಕ್ತವಾಗುತ್ತಿತ್ತು, ಮುಂದೆ ಅದಕ್ಕೆ 'ನಾತ' ಎಂಬ ಅರ್ಥ ಬಂದಿದೆ. ಚೀರೆಲು ಎಂಬುದನ್ನು ಹದಿಮೂರನೆಯ ಶತಮಾನದ ತಿಕ್ಕನ ರುಮಾಲಿನ ಬಟ್ಟೆ ಎಂಬರ್ಥದಲ್ಲಿ ಪ್ರಯೋಗಿಸಿದ್ದ. ಈಗದಕ್ಕೆ ಹೆಂಗಸರ ಸೀರೆ ಎಂಬರ್ಥ ಬಂದಿದೆ. ರೇಪು ಎಂಬುದಕ್ಕೆ ಮೊದಲು ಪ್ರಾತಃಕಾಲ ಎಂಬರ್ಥವಿದ್ದು ಈಗ ನಾಳೆ ಎಂಬರ್ಥ ಬಂದಿದೆ. ನಡುವಣ ಸ್ವರಗಳನ್ನೋ ಅಕ್ಷರಗಳನ್ನೋ ಬಿಟ್ಟು ಶಬ್ದಗಳನ್ನು ಸಂಕ್ಷೇಪಗೊಳಿಸಲಾಗಿದೆ. ಉದಾಹರಣೆಗೆ, ಚಿಲುಕ>ಚಿಲ್ಕ [ಗಿಳಿ]; ಮೊಲಕ>ಮೊಲ್ಕ [ಚಿಗುರು]; ಕೊಲಂದಿ>ಕೊಲ (ಒ) ದಿ>ಕೊಲ್ಡ>ಕೊದ್ದಿ (ಕೆಲವು, ಸ್ವಲ್ಪ); ಚೇಸಿನದಿ>ಚೇಸಿಂದಿ (ಮಾಡಿದುದು); ಮೂಡ್-ಆಗು-ನಾಡು>ಮೂಡ್-ಅವು-ನಾಡು> ಮೂಡೋನಾಡು [ಮೂರನೆಯದಿನ]; ಇರುವಡಿ>ಇರುವೈ>ಇರವೈ [ಇಪ್ಪತ್ತು] ಅಂತಯುನು>ಅಂತಾನು>ಅಂತಾ(ಎಲ್ಲ); ಅಂತದನಿಕ [ಅಲ್ಲಿಯವರೆಗೆ]> ಅಂತದಾಕ>ಅಂದಾಕ; ವಲುವರು>ವಲುವದು>ವಲದು>ವಲ್‍ದು>ವದುಕ [ಬೇಕಾಗಿಲ್ಲ, ಬೇಡ] ವಚ್ಚುಚು>ವಸ್ತು[ಬರುವುದು]. ಕ್ರಿಯಾಪದಗಳಲ್ಲಿ ಕೆಲವು ಸಂಕ್ಷಿಪ್ತರೂಪಗಳನ್ನು ಹೊಂದಿರುವುದು ಕುತೂಹಲಜನಕವಾಗಿವೆ. ಉದಾಹರಣೆಗೆ, ಚೇಯು (ಮಾಡು); ಚೇಯು ಚುಂಡುಡುನು (ಮಾಡುತ್ತಾ ನಾನಿದ್ದೇನೆ) ಎಂಬುದನ್ನು ನನ್ನಯ್ಯ ಬಳಸಿದ್ದಾನೆ. ತರುವಾಯ ಅದು ಚೇಯು-ಚ-ಉಂಡುನು ಎಂದಾಯಿತು. ಕೊನೆಗೆ ಅದರ ಆಧುನಿಕ ರೂಪ ಚೇಸ್ತು ಉಂಡುನು ಎಂದಾಗಿದೆ ಮತ್ತು ಉಂಡುನು ಎಂಬುದು ಉಂದಟಾನು ಎಂದಾಗಿದೆ. ಇದೇ ರೀತಿಯಲ್ಲಿ ಚೇಯು-ಚ್-ಉಂಡುದುರು ಮತ್ತು ಚೇಯುಚುಂದ್ರು (ಅವರು ಮಾಡುತ್ತಿದ್ದಾರೆ) ಎಂಬ ರೂಪಗಳನ್ನು ಪ್ರಾಚೀನತಮ ಕವಿಗಳು ಬಳಸುತ್ತಿದ್ದರು. ಇವು ಈ ಚೇಸ್ತೂ ಉಂಟುರು ಎಂದು ತೀರದ ಜಿಲ್ಲೆಗಳಲ್ಲೂ ಚೇಸ್ತುಂಡ್ರು ಎಂದು ತೆಲಂಗಾಣದಲ್ಲೂ ಆಗಿದೆ. ಚೇಸಿತಿನಿ (ನಾನು ಮಾಡಿದೆ)>ಚೇಸ್ತಿನಿ>ಚೇಸ್ತಿ ಎಂಬುದು ಸೀಡೆಡ್ (ಬಿಟ್ಟು ಕೊಟ್ಟ) ಜಿಲ್ಲೆಗಳಲ್ಲೂ ತೆಲಂಗಾಣದಲ್ಲೂ ಬಳಕೆಯಲ್ಲಿದೆ. ಆದರೆ ತೀರದ ಜಿಲ್ಲೆಗಳಲ್ಲಿ ಕಣ್ಮರೆಯಾಗಿದೆ. ಅದರ ಜಾಗದಲ್ಲಿ ಚೇಸಿ-ನ-ವಾಡನು ಎಂಬುದು ಪುಲ್ಲಿಂಗದಲ್ಲೂ ಚೇಸಿ-ನ-ದಾನನು ಎಂಬುದು ಸ್ತ್ರೀಲಿಂಗದಲ್ಲೂ ಪ್ರಯುಕ್ತವಾಗುತ್ತಿದೆ. ಇವುಗಳು ಕ್ರಮವಾಗಿ ಅಖ್ಯಾತ ಪ್ರತ್ಯಯಗಳನ್ನು ಹಚ್ಚುವುದರಿಂದ ಆದುವಲ್ಲ. ಮಾಡಿದ್ದನ್ನು ಹೇಳಲು ಉಪಯೋಗಿಸುವ ರೂಪಗಳು ಮೊದಲನೆಯದರ ಪದಶಃ ಅರ್ಥ ಏನೆಂದರೆ ಅದನ್ನು ಮಾಡಿದವನು ನಾನು ಎಂದು. ಎರಡನೆಯದಕ್ಕೆ ಅದನ್ನು ಮಾಡಿದವಳು ನಾನು ಎಂದು. ಇವೆರಡರಲ್ಲಿ ಪ್ರತಿಯೊಂದು ಕಾಲಕ್ರಮೇಣ ಬದಲಾಯಿಸಿದೆ. ಚೇಸಿನವಾಡನು>ಚೇಸಿನಾಡನು>ಚೇಸಿನ್‍ಡ ಅಥವಾ ಚೇಸಿನಾನು>ಚೇಶಾನು; ಚೇಸಿನದಾನನು. ಚೇಸಿನದಾನ ಅಥವಾ ಚೇಸಿನಾನು>ಚೇಶಾನು. ಇವೆರಡು ಸಂದರ್ಭಗಳಲ್ಲೂ ಕೊನೆಯ ರೂಪಗಳು ಚೇಸಿನನು ಮತ್ತು ಚೇಶಾನು ಎಂದಾಗಿ ಲಿಂಗಸೂಚಕವಾದ ಯಾವ ಪ್ರತ್ಯಯಗಳನ್ನೂ ಹೊಂದದೆ ಇವೆ. ಹೀಗೆಮಟ್ಟಸಮಾಡುವ ಪ್ರಕ್ರಿಯೆಯನ್ನು ಆಧುನಿಕರು ಸಮೀಚೀನವಾದ ವಿಕಾಸವೆಂದೂ ಶುದ್ಧಪದ ಪ್ರಿಯರು ಹಸೆಗೆಟ್ಟ ಬದಲಾವಣೆಯೆಂದೂ ಭಾವಿಸುತ್ತಾರೆ. ಪ್ರಾಚೀನತಮ ಲೇಖಕರು ತಪ್ಪದೆ ಬಳಸುತ್ತಿದ್ದ ಅರ್ಧಾನುಸ್ವಾರ (0) ಮತ್ತು ಶಕಟರೇಫ (¾) ಗಳನ್ನು ಆಧುನಿಕರು ಕೈಬಿಟ್ಟಿದ್ದಾರೆ. ಅದನ್ನು ಎಲ್ಲಿ ಉಪಯೋಗಿಸಬೇಕೆಂಬುದನ್ನು ಬರೆಹಗಾರರು ಅರಿತಿದ್ದ ಕಾಲವೊಂದಿತ್ತು. ಏಕೆಂದರೆ ಜನ ಅವನ್ನು ಉಚ್ಚರಿಸುತ್ತಿದ್ದರು. ಕಾಲಕ್ರಮೇಣ ಜನರ ಮಾತಿನ ರೂಢಿ ತೆಲುಗು ದೇಶದ ಅನೇಕ ಭಾಗಗಳಲ್ಲಿ ಅಷ್ಟೋ ಇಷ್ಟೋ ಬದಲಾಯಿಸುತ್ತ ಬಂತು. ನಾಗರಿಕತೆಯಲ್ಲೂ ಮುಂದುವರಿದಿದ್ದ ಮಧ್ಯಭಾಗದ ಜನರಲ್ಲಿ ಮಾತಿನ ಉಚ್ಚಾರಗಳಲ್ಲಿ ವ್ಯತ್ಯಾಸಗಳು ಬೇಗನೆಯೂ ವಿಸ್ತಾರವಾಗಿಯೂ ಹರಡಿದುವು. ದೇಶದ ಕೊನೆ ಮೂಲೆಗಳಲ್ಲಿ ಮಾತ್ರ ಈ ವ್ಯತ್ಯಾಸಗಳು ನಿಧಾನವಾಗಿ ವ್ಯಾಪಿಸಿದವು, ಏಕೆಂದರೆ ಭೌಗೋಳಿಕವಾದ ಅಡಚಣೆಗಳಿಂದ ಆ ಭಾಗದ ಜನರು ಭಾಷೆಯ ಮುಖ್ಯ ಪ್ರವಾಹದ ಸಂಸರ್ಗದಿಂದ ದೂರ ಉಳಿದರು. ನದಿಯಲ್ಲಿ ನೆರೆಯುಕ್ಕಿದಾಗ ನೀರು ಅಕ್ಕಪಕ್ಕದ ಹಳ್ಳ ಕೊಳ್ಳಗಳಿಗೆ ಹರಿದು ಹಿಂಗಿ ಹೋಗುವವರೆಗೂ ಅಥವಾ ಮತ್ತೊಂದು ನೆರೆ ಬಂದಾಗ ಅದರೊಡನೆ ಬೆರೆಯುವವರೆಗೂ ಕೆಲವು ವರ್ಷಗಳ ಕಾಲ ಅಲ್ಲೆ ತಂಗಿರುತ್ತದೆ. ಆದರೆ ನದಿಯ ನೀರು ಮಾತ್ರ ಸತತವಾಗಿ ಬದಲಾಯಿಸುತ್ತಲೇ ಇರುತ್ತದೆ. ಜೀವಂತವಾಗಿರುವ ಭಾಷೆಯ ವಿಚಾರದಲ್ಲೂ ಹೀಗೆಯೇ ಪೂರ್ವದ ಕವಿಗಳು ಉಪಯೋಗಿಸಿರುವ ಹಲವು ಪದಗಳು ನಾಡಿನ ಮಧ್ಯಭಾಗದಲ್ಲಿ ಬಳಕೆಯಲ್ಲಿಲ್ಲದೆ ಹಿಂದೆ ಸರಿದಿವೆ. ಆದರೆ ಕೊನೆ ಮೂಲೆಗಳಲ್ಲಿ ಅವನ್ನು ಜನ ಇನ್ನೂ ಬಳಸುತ್ತಿದ್ದಾರೆ. ಉದಾಹರಣೆಗೆ: ಕುರು (ಸ್ವಲ್ಪ; ಕೊಂಚ); ಕುರು ಮಾಪು ಪುಟ್ಟಂ (ಸ್ವಲ್ಪ ಕೊಳೆಯಾಗಿರುವ ಬಟ್ಟೆ) ಎಂಬುದನ್ನು ನನ್ನಯ್ಯನ ಪ್ರಯೋಗ; ಅದು ತೆಲುಗು ದೇಶದ ಮಧ್ಯಭಾಗದಲ್ಲಿ ಕಣ್ಮರೆಯಾಯಿತು; ಆದರೆ ದೇಶದ ಉತ್ತರ ಭಾಗದ ಕೊನೆಯ ಜಿಲ್ಲೆಯ ಹಳ್ಳಿಗಳ ಜನ ಬಳಸುತ್ತಾರೆ. ಶಬ್ದಕೋಶ ಮಿಕ್ಕೆಲ್ಲ ಭಾಷೆಗಳಂತೆಯೇ ತೆಲುಗು ಸಹ ಸ್ವಂತವಾಗೂ ಪರಭಾಷೆಯಿಂದ ಎರವಲು ಪಡೆದೂ ಶಬ್ದಸಂಪತ್ತನ್ನು ಬೆಳೆಸಿಕೊಂಡಿದೆ. ಕೆಲವು ಶಬ್ದಗಳಿಗೆ ಹೊಸ ಅರ್ಥಗಳು ಬಂದಿವೆ. ಕೆಲವಕ್ಕೆ ಮೂಲ ಅರ್ಥದಿಂದ ಉದ್ಭವವಾದ ಮತ್ತೊಂದು ಅರ್ಥ ಪ್ರಾಪ್ತವಾಗುತ್ತದೆ. ಉದಾಹರಣೆಗೆ, ಮಾಟ (ಮಾತು) ಎಂಬುದನ್ನು ಮೂಲದ ಅರ್ಥಕ್ಕೆ ಸಮೀಪವಾಗಿಯೋ ಅಥವಾ ದೂರವಾಗಿಯೋ ಇರುವ ಅನೇಕ ಭಾವಗಳನ್ನು ಹೇಳಲು ಉಪಯೋಗಿಸುತ್ತಾರೆ. ಸಿ.ಪಿ. ಬ್ರೌನ್ ಈ ಪದಕ್ಕೆ ಮಾತು,(ಪದ) ಮಾತುಗೊಡುವದು, ಸುದ್ದಿ ಎಂಬ ಅರ್ಥ ಕೊಟ್ಟಿದ್ದಾನೆ. ಅಲ್ಲದೆ ಗಮನಾರ್ಹವಾದ ಉದಾಹರಣೆಗಳನ್ನು ಕೊಟ್ಟಿದ್ದಾನೆ; ಮಾಟಾಡು, ಮಾಟಕಾರಿ (ವಾಚಾಳಿ), ಮಾಟಲಕು ಪಟ್ಟುಕೊಂಟೆ ವಿಡವದು (ಮಾತನಾಡಲು ಮೊದಲು ಮಾಡಿದರೆ ಮುಗಿಸಲೇ ಒಲ್ಲೆ), ಮಂಚಿ ಮಾಟ (ಒಳ್ಳೆಯದು), ನಾಕು ತುರುಕ ಮಾಟಲು ರಾವು (ನನಗೆ ತುರುಕು ಮಾತು ತಿಳಿಯದು), ವಾಡಿಕಿ ನಾಕು ಮಾಟಲು ಲೇವು (ನನಗೂ ಅವನಿಗೂ ಮಾತಿಲ್ಲ), ಅತನು ಮಾಟ ತಪ್ಪಲೇದು (ಆತ ಕೊಟ್ಟ ಭಾಷೆಯನ್ನು ತಪ್ಪುವುದಿಲ್ಲ), ನಾ ಮಾಟ ವೇರು, ನೀ ಮಾಟ ವೇರು (ನಾನೊಂದು ಹೇಳುತ್ತೇನೆ, ನೀನೊಂದು ಹೇಳುತೀಯ) ಆಯನ ಮಾಟಕು ಎದುರುಲೇದು (ಆತನ ಮಾತಿಗೆ ಎದುರಿಲ್ಲ), ವೊಕ ಮಾಟ ಯಿಚ್ಚಿಪದಿಮಾಟಲು ತೀಸುಕೊನ್ನಾಡು (ಒಂದು ಮಾತಿಗೆ ಹತ್ತು ಮಾತು ಪಡೆದ), ಆ ಮಾಟ ವಿಂಟೇ ಆಯನ ಯೇಮನುನು? (ಈ ಮಾತು ಕೇಳಿದರೆ ಆತ ಏನೆಂದಾನು?) ಕೆಲವು ಶಬ್ದಗುಚ್ಚಗಳಲ್ಲಿ ಮಾಟ ಎಂಬುದನ್ನು ಭಾಷಾಂತರಿಸುವ ಅವಶ್ಯವಿಲ್ಲ. ಉದಾಹರಣೆಗೆ, ಆಮೆ ತಿರುಗವಸ್ತುವಲ್ಲದೆ ಮಾಟ ತೆಲಿಸಿ (ಅವಳು ಹಿಂದಿರುಗುತ್ತಾಳೆಂದು ತಿಳಿದು); ಆ ಮಾಟೇಯೆರುಗನು (ಆ ವಿಷಯವೇ ತಿಳಿಯದು); ಇಪ್ಪಟ್ಲೋ ವಾನಿ ಮಾಟ ಸಾಗದು (ಈಗ ಅವನ ಮಾತು ನಡೆಯದು); ಯೆಂತ ಮಾಟ! (ಎಂಥ ಮಾತು!) ಮಾಟ ಎಂಬುದನ್ನು ಇನ್ನೂ ಹಲವಾರು ಬಗೆಗಳಲ್ಲಿ ಉಪಯೋಗಿಸುತ್ತಾರೆ. ದೇಸೀ ಪ್ರಯೋಗಗಳನ್ನು ಬೆಳೆಸಿರುವ ಇಂಥ ಹಲವಾರು ಪದಗಳಿವೆ. ಶಬ್ದಾರ್ಥ ನಿರ್ವಚನ ಶಾಸ್ತ್ರಕ್ಕೆ ತೆಲುಗು ಭಾಷೆಯಲ್ಲಿ ಒಳ್ಳೆಯ ಅವಕಾಶವಿದೆ. -ತನಂ (ಸಂಸ್ಕೃತದ ತ್ವಂ ಎಂಬುದರಿಂದ ಪ್ರಾಕೃತದ ಟಣಂ ಎಂಬುದರ ಮೂಲಕ) ಎಂಬ ಪದ ಭಾಷೆಯನ್ನು ಹತ್ತು ಪಡಿ ಸಿರಿವಂತವಾಗಿ ಮಾಡಿದೆ. ಭಾವಾರ್ಥ ಸೂಚಕ ಪ್ರತ್ಯಯವಾಗಿ ಅದನ್ನು ಶಬ್ದಗಳಿಗೆ ಹಚ್ಚುತ್ತಾರೆ. ಉದಾಹರಣೆಗೆ, ಮಂಚಿತನಂ (ಒಳ್ಳೆಯತನ), ಪೆಂಕೆತನಂ (ದುಷ್ಟತನ), ಪೆದ್ದತನಂ (ದೊಡ್ಡತನ), ಪೆತ್ತನಂ (ಮೇಲುಸ್ತುವಾರಿಕೆ), ಪಿರಿಕಿತನಂ (ಹೇಡಿತನ) ಮುಂತಾದುವು. -ಅರಿಕಮು ಎಂಬುದು ಮತ್ತೊಂದು ಪ್ರತ್ಯಯ. ಇದನ್ನು ಯಾವ ಶಬ್ದಕ್ಕೆ ಹಚ್ಚುತ್ತಾರೋ ಅದರ ಭಾವವನ್ನು ಇದು ದ್ಯೋತಿಸುತ್ತದೆ. ಉದಾಹರಣೆಗೆ, ಇಲ್ಲರಿಕಮು (ಮಾವನ ಮನೆಯಲ್ಲಿ ವಾಸವಿರುವದು), ಪೇದರಿಕಮು (ಪಾಪರುತನ / (ಕಡು)ಬಡತನ), ಮೇನರಿಕಮು (ಹೆಂಗಸೊಬ್ಬಳ ಮಗನಿಗೂ ಆಕೆಯ ಅಣ್ಣನ ಮಗಳಿಗೂ ಇರುವ ಬಾಂಧವ್ಯ (ಉದ್ದೇಶವೇನೆಂದರೆ ಇವರಿಬ್ಬರೂ ಮದುವೆ ಮಾಡಿಕೊಳ್ಳಬಹುದು ಎಂಬುದನ್ನು ಸೂಚಿಸುವುದು) ಇತ್ಯಾದಿ. ಇತರ ಭಾಷೆಗಳಿಂದ ತೆಲುಗು ನೂರಾರು ಶಬ್ದಗಳನ್ನು ತೆಗೆದುಕೊಂಡಿದೆ. ಮೊದಲು ಅದು ಸಂಸ್ಕೃತದಿಂದ ನೇರವಾಗಿಯೂ ಪ್ರಾಕೃತದ ಮೂಲಕವೂ ಅನೇಕ ಶಬ್ದಗಳನ್ನು ತೆಗೆದುಕೊಂಡಿತು; ಸಂಸ್ಕೃತದ ತದ್ಭವಗಳನ್ನು ರೂಪಿಸಿಕೊಂಡಿತು. ಉದಾಹರಣೆಗೆ, ಸಂಸ್ಕೃತದ `ಮುಖ'ದಿಂದ ಮೊಗಮುಲು, ಮುಗ್ಧಾ ಎಂಬುದರಿಂದ ಮುದ್ದ-(ರಾಲು), ಯುವತಿಯಿಂದ ಉವಿದ; ಅಗ್ನಿಯಿಂದ ಅಗ್ಗಿ ಮುಂತಾದವು. ಅದು ಸಾಮಾನ್ಯವಾಗಿ ಪ್ರತ್ಯಯರಹಿತ ಶಬ್ದಗಳನ್ನು ತೆಗೆದುಕೊಂಡು ತನ್ನದೇ ಆದ ವಿಭಕ್ತಿ ಮತ್ತು ಅಖ್ಯಾತ ಪ್ರತ್ಯಯಗಳನ್ನು ಸೇರಿಸಿಕೊಳ್ಳುತ್ತದೆ. ಉದಾಹರಣೆಗೆ, ಪುರುಷುಡು, ಪುಷ್ಪಂ, ಗುರುವು, ಸುರಲು, ಜನಿಸ್ತು (ಜನಿಸುವದು), ರಕ್ಷಿಸ್ತು ಇದಕ್ಕೆ ಕೆಲವು ಅಪವಾದಗಳಿವೆ; ಉದಾಹರಣೆಗೆ, ಮನಸಾ, ಕ್ರಮಶಃ ಅಥವಾ ಕ್ರಮೇಣ ಇತ್ಯಾದಿ. ಎರವು ತೆಗೆದುಕೊಂಡ ಪದಗಳನ್ನು ಜೀರ್ಣಿಸಿಕೊಳ್ಳುವ ವಿಧಾನದಲ್ಲಿ ಒಂದು ವಿಶೇಷಾಂಶ ಗೋಚರಿಸುತ್ತದೆ. ಇಂಗ್ಲಿಷಿನ ರೂಲ್ ಎಂಬ ಶಬ್ದಕ್ಕೆ ಅದರ ಬಹುವಚನ ಪ್ರತ್ಯಯವನ್ನು ಸೇರಿಸಿ ಹೇಳುತ್ತಾರೆ. ನೀಕು ರೂಲ್ಸು ತೆಲುಸನಾ? (ನಿನಗೆ ರೂಲ್ಸು ಗೊತ್ತೇ?) ನೀವು ರೂಳ್ಳು ಗೀಯಗವಲಾ? (ನೀನು ಗೆರೆಗಳನ್ನು ಎಳೆಯ ಬಲ್ಲೆಯಾ). ಮನ್ಸ ಮುಂತಾದ ಶಬ್ದಗಳಲ್ಲಿ ಅಂತ್ಯದಲ್ಲಿರುವ `ಸ್ ಎಂಬ ಅಕ್ಷರವನ್ನು ಬಹುವಚನ ಪ್ರತ್ಯಯವಾಗಿ ತೆಲುಗ ನಾಕು ಸಮನು ವಚ್ಚಿಂದಿ ಎನ್ನುತ್ತಾನೆ. ಇದನ್ನು ಬಹುವಚನದಲ್ಲಿ ಉಪಯೋಗಿಸುವಾಗ ಸಮನ್‍ಲು ಎಂದು ಪ್ರಯೋಗಿಸುತ್ತಾನೆ. ಇದು ಅರಗಿಸಿಕೊಳ್ಳುವ ವಿಧಾನವನ್ನು ಸೂಚಿಸುತ್ತದೆ. ಕೆಲವು ಪರಕೀಯ ಶಬ್ದಗಳು ಜನಕ್ಕೆ ಎಷ್ಟು ಪರಿಚಿತವಾಗಿವೆಯೆಂದರೆ ಅವು ತೆಲುಗು ಶಬ್ದಗಳಲ್ಲ ಎಂದು ಅವರಿಗೆ ಹೇಳಿದಾಗ ಅವರು ಅಚ್ಚರಿಗೊಳ್ಳುತ್ತಾರೆ. ಉದಾಹರಣೆಗೆ: ರೈಲು ಬಂಡಿ, ಕಾನಿಸ್ತೇಬಲು, ಪೋಸ್ಟ್ ಆಫೀಸು, ಕವರು, ಇಸ್ಕೂಲು, ಕಾಲೇಜಿ, ಇಸ್ಪೇಟು, ಕಳಾವರು, ಕೋರ್ಟು, ವೋಟು, ಟಿಕೆಟ್ಟು, ಲಾಯರು, ಅಸುಪತ್ರಿ -ಮುಂತಾದುವು. ತೆಲುಗಿನಲ್ಲಿ ಒಗಟುಗಳೂ ಗಾದೆಗಳೂ ತುಂಬ ಇವೆ. ಇವುಗಳಲ್ಲಿ ತಮ್ಮದೇ ಆದ ಅಂತರಪ್ರಾಸ, ಅಂತ್ಯಪ್ರಾಸ, ಛಂದೋಲಯಗಳು ಮುಂತಾದ ಲಕ್ಷಣಗಳು ಇವೆ. ಪೋರಾನಿ ಚೋಟುಲಕುಪೋತೆ, ರಾರಾನಿ ನಿಂದಲು ರಾಕ ಮಾನವು (ಹೋಗಬಾರದ ಜಾಗಕ್ಕೆ ಹೋದರೆ ನೀನು ನಿಂದೆಗೂ ಅವಮಾನಕ್ಕೂ ಪಾತ್ರನಾಗಬೇಕಾಗುತ್ತದೆ); ಮಾಟಲು ಕೋಟಲು ದಾಟುತಾಯ್; ಕಾನಿ ಕಾಳ್ಳು ಗಡಪ ದಾಟಲೇವು (ಮಾತುಗಳು ಕೋಟೆಗಳನ್ನು ದಾಟುತ್ತವೆ; ಕಾಲುಗಳು ಹೊಸಿಲನ್ನು ದಾಟವು- ಬರಿ ಬಾಯಿ ಮಾತಿನವನ್ನು ಕುರಿತು ಹೀಯಾಳಿಕೆ), ಒಕನಾಡು ವಿಂದು ಒಕನಾಡು ಮಂದು (ಒಂದು ದಿನ ಹಬ್ಬ, ಒಂದು ದಿನ ಮದ್ದು), ತಾನು ವಲಚಿಂದಿ ರಂಭ; ತಾನು ಮುನಿಗಿಂದಿ ಗಂಗ (ತಾನೊಲಿದವಳು ರಂಭೆ; ತಾನು ಮಿಂದುದು ಗಂಗೆ); ತಾಡುಲೇನಿ ಕಟ್ಟು; ಕೋಲಲೇನಿ ಪೆಟ್ಟು (ಹಗ್ಗವಿಲ್ಲದ ಕಟ್ಟು, ಬಾಣವಿಲ್ಲದ ಗುರಿ); ಶುಲ್ಕ ಪ್ರಿಯಾಲು, ಶೂನ್ಯ ಹಸ್ತಾಲು (ಶುಲ್ಕ ಹೊಗಳಿಕೆ, ಶೂನ್ಯ ಹಸ್ತ) ಇತ್ಯಾದಿ. ಒಗಟುಗಳೂ ಅಂತಃಪ್ರಾಸ, ಅಂತ್ಯಪ್ರಾಸ ಮತ್ತು ಛಂದಸ್ಸುಗಳಿಂದ ನಿಬದ್ಧವಾಗಿವೆ. ಉದಾಹರಣೆಗೆ ತೆಲ್ಲನಿಮಡಿಲೋ ನಲ್ಲನಿವಿತ್ತುಲು; ಚೇತಿತೊಚಲ್ಲಿನಾಮ್, ನೋಟಿತೋ ಏರಿನಾಂ (ಬಿಳಿ ಹೊಲದಲ್ಲಿ ಕಪ್ಪು ಬೀಜಗಳನ್ನು ನಮ್ಮ ಕೈಯಿಂದ ಬಿತ್ತಿದೆವು, ಬಾಯಿಂದ ಎತ್ತಿದೆವು)- ಬಿಳಿಯ ಕಾಗದದ ಮೇಲೆ ಕಪ್ಪು ಶಾಯಿಯಿಂದ ಬರೆದು ಆಮೇಲೆ ಅದನ್ನು ಓದುವದನ್ನು ಕುರಿತ ಒಗಟೆಯಿದು. ದಾನಿ ಭೋಗಂ ರಾಜ ಭೋಗಂ, ದಾನಿ ಪಾಲು ಪೆಂಟಪಾಲು (ಅದರ ಭೋಗ ರಾಜಭೋಗ, ಅದರ ಪಾಲು ತಿಪ್ಪೆ)- ರಾಜನು ಊಟ ಮಾಡಿದ ಬಾಳೆ ಎಲೆಯ ವರ್ಣನೆ ಇದು. ಬಾಹ್ಯ ಸಂಪರ್ಕಗಳು Hints and resources for learning Telugu English to Telugu online dictionary 'Telugu to English' & 'English to Telugu' Dictionary Dictionary of mixed Telugu By Charles Philip Brಂwn Origins ಂf Telugu Script Online English - Telugu dictionary portal which includes many popular dictionaries Telugu literature online ತೆಲುಗು ಸಾಹಿತ್ಯ ಭಾರತೀಯ ಭಾಷೆಗಳು ಭಾಷೆಗಳು ದ್ರಾವಿಡ ಭಾಷೆಗಳು
1912
https://kn.wikipedia.org/wiki/%E0%B2%AE%E0%B2%B0%E0%B2%BE%E0%B2%A0%E0%B2%BF
ಮರಾಠಿ
ಮರಾಠಿ - ಇಂಡೋಆರ್ಯನ್ ಭಾಷಾವರ್ಗಕ್ಕೆ ಸೇರಿದ ಪ್ರಮುಖಭಾಷೆ. ಮಹಾರಾಷ್ಟ್ರೀ ಅಪಭ್ರಂಶದಿಂದ ವಿಕಾಸಗೊಂಡಿದೆ. ಮಹಾರಾಷ್ಟ್ರ ರಾಜ್ಯದ ಆಡಳಿತ ಭಾಷೆಯಾಗಿರುವ ಇದು 68,022,000(2001) ಜನರ ತಾಯಿನುಡಿಯಾಗಿದ್ದು ಭಾರತೀಯ ಸಂವಿಧಾನ ಮಾನ್ಯತೆ ಪಡೆದಿದೆ. ವ್ಯಾಕರಣ ಈ ಭಾಷೆಯಲ್ಲಿ ಸ್ವರ ವ್ಯಂಜನ ವಿಸರ್ಗ ಎಂಬ ಮೂರು ಬಗೆಯ ಸಂಧಿ ವ್ಯವಸ್ಥೆ ಇದೆ. ನಾಮಪದದಲ್ಲಿ ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕ ಭೇದಗಳೂ ಏಕವಚನ ಬಹುವಚನ ರೂಪುಗಳೂ ಇವೆ. ಪುಲ್ಲಿಂಗ ದೊಡ್ಡಸ್ಥಿಕೆಯನ್ನೂ ಸ್ತ್ರೀಲಿಂಗ ಕೋಮಲತೆಯನ್ನೂ ನಪುಂಸಕಲಿಂಗ ಕ್ಷುದ್ರತೆಯನ್ನೂ ಸೂಚಿಸುತ್ತವೆ. ಎಂಬುದು ಮರಾಠೀ ಜನರ ಭಾವನೆ. ಬಹುವಚನ ರೂಪದ ಸಾಮಾನ್ಯ ಅಂತ್ಯ ಪ್ರತ್ಯಯಗಳೆಂದರೆ-ಏ,-ಯಾ, ಇವು ಪ್ರತ್ಯಯಗಳು ಸೇರಿ ನಾಮಪದಗಳಾಗುತ್ತವೆ. ಪ್ರಥಮಾ; ಪ್ರತ್ಯಯಗಳಿಲ್ಲ; ದ್ವಿತೀಯಾ;-ಸ,-ಲಾ-ತೇ; ತೃತೀಯಾ; -ನೆ,-ಏ,-ಶೀ; ಚತುರ್ಥಿ; -ಸ,-ಲಾ,-ತೇ; ಪಂಚಮೀ; -ಊನ,-ಹೂನ; ಷಷ್ಠಿ;-ಚೌ,-ಚೀ,-ಚೇ; ಸಪ್ತಮೀ; -ತ, ಈ,- ಆ; ಸಂಬೋಧನಾ; -ನೋ (ಬಹುವಚನ), ಪುರುಷಾರ್ಥಕ ಸರ್ವನಾಮಗಳಲ್ಲಿ ಉತ್ತಮ ಪುರುಷ (ಮೀ- ನಾನು, ಆಮೀ- ನಾವು); ಮಧ್ಯಮ ಪುರುಷ(ತೂ-ನೀನು, ತುಮ್ಹೀ-ನೀವು); ಪ್ರಥಮ ಪುರುಷ(ತೋ-ಅವನು, ತೀ-ಅವಳು, ತೇ-ಅದು ತ್ಯಾ-ಅವರು, ತೇ-ಅವು)ರೂಪುಗಳಿವೆ. ಪ್ರಥಮ ಪುರುಷದ ಸರ್ವನಾಮಗಳು ನಿರ್ದೇಶಾತ್ಮಕ ಸರ್ವನಾಮಗಳಾಗಿ ಬಳಕೆಯಾಗುತ್ತವೆ. ವಿಶೇಷಣಗಳು ನಾಮಗಳ ವಿಭಕ್ತಿ ಪ್ರತ್ಯಯಗಳನ್ನು ತೆಗೆದುಕೊಳ್ಳುತ್ತವೆ. ಸರ್ವನಾಮಗಳನ್ನು ವಿಶೇಷಣ ರೂಪದಲ್ಲಿ ಬಳಸುವುದುಂಟು. ತರತಮ ವ್ಯಕ್ತಪಡಿಸಲು-ಪೇಷೌ ಮತ್ತು ಹೊಸಪ್ರತ್ಯಯಗಳನ್ನು ಸೇರಿಸಿ ಹೇಳುತ್ತಾರೆ. ಉದಾಹರಣೆಗೆ ರಾಮಾಪೇಷೌ (ರಾಮನಿಗಿಂತ), ರುಪ್ಯಾಹೂನ (ರೂಪಾಯಿಗಿಂತ). ಅಗದೀ, ಅತಿ, ಅತಿಶಯ, ಮೋಠಾ, ಚಾಂಗಲಾ ಎಂಬ ಕ್ರಿಯಾವಿಶೇಷಣಗಳ ಸಹಾಯದಿಂದಲೂ ತರತಮ ಭಾವ ತೋರಿಸಲು ಸಾಧ್ಯವಿದೆ. ಅತಿಶಯ ಹುಶಾರ (ಬಲು ಬುದ್ಧಿವಂತ) ಅಗದೀ ಲಹಾನ (ಅತೀ ಚಿಕ್ಕದು) ಇತ್ಯಾದಿ. ವಸ್ತುಗಳೊಳಗಿನ ಸಾಮ್ಯವನ್ನು ಇತರಾ, ಏವಢಾ, ಸಾರಖಾ, ಪ್ರಮಾಣೀ ಈ ಶಬ್ದಗಳಿಂದ ಸೂಚಿಸಬಹುದು. ಏವಢಾಗೂಳ (ಇಷ್ಟು ಬೆಲ್ಲ). ಸಿಂಹಾಸಾರಖಾ (ಸಿಂಹದಂತೆ) ಇತ್ಯಾದಿ. ವಿಶೇಷಣ ದ್ವಿರುಕ್ತಿಗಳು ಅನೇಕತ್ವ (ಉಂಚ ಉಂಚ ವೃಕ್ಷೆ-ಎತ್ತರೆತ್ತರ ಮರಗಳು); ಗುಣಾಧಿಕ್ಯ (ತೋರಾಗಾನೇ ಲಾಲ ಲಾಲ ರ್ಛಾಲಾ-ಅವನು ಕೋಪದಿಂದ ಕೆಂಪುಕೆಂಪಾದನು); ಏರಿಳಿತಗಳು (ಸಕಾಳಚೀ ಸಾವಲೀ ಜೂಡ ಆಜೂಡ ಹೋತೇ-ಮುಂಜಾವಿನ ನೆರಳು ಗಿಡ್ಡಾಗಿಡ್ಡಾಗಿರುತ್ತದೆ. ದುಪಾರಜೀ ಲಾಂಬ ಲಾಂಬ ಹೋತ ಜಾತೇ - ಮಧ್ಯಾಹ್ನ ನೆರಳು ಉದ್ದುದ್ದಾಗುತ್ತ ಹೋಗುತ್ತದೆ.); ಪೃಥಕತ್ವ (ಸರ್ವ ಮುಕಾಸ ಏಕ ಲಾಡು ದ್ಯಾ-ಎಲ್ಲ ಮಕ್ಕಳಿಗೂ ಒಂದೊಂದು ಲಡ್ಡು ಕೊಡಿರಿ) ಸೂಚಿಸಲು ಬಳಕೆಯಾಗುತ್ತವೆ. ಕ್ರಿಯಾಪದಗಳಲ್ಲಿ ಎರಡು ವಿಧ. ಪೂರ್ಣ ಮತ್ತು ಅಪೂರ್ಣ. ಸಾರ್ವಕಾಲಿಕ ಅರ್ಥದಲ್ಲಿ ಬಳಕೆಯಾಗುವಂಥವು ಪೂರ್ಣ ಕ್ರಿಯಾಪದಗಳು, ಸಕರ್ಮಕ, ಅಕರ್ಮಕ, ಸಹಾಯಕ, ಭಾವಾತ್ಮಕ ಮೊದಲಾದ ಕ್ರಿಯಾಪದಗಳೂ ಉಂಟು. ಧಾತುಗಳಿಗೆ ಸೇರಿಸುವ ಪ್ರತ್ಯಯಗಳಿಗೆ ಆಖ್ಯಾತ ಪ್ರತ್ಯಯಗಳೆನ್ನುತ್ತಾರೆ. ಇದನ್ನು ಸೇರಿಸಿ ಬೇರೆ ಬೇರೆ ಕ್ರಿಯಾಪದಗಳನ್ನು ರಚಿಸಿಕೊಳ್ಳಬಹುದು. ಉದಾಹರಣೆಗೆ ಅಜ್ಞಾರ್ಥಕ, ನಿಕ್ಷೇದಾರ್ಥಕ, ವಿಧ್ಯರ್ಥಕ, ಸಂಕೇತಾರ್ಥಕ ಇತ್ಯಾದಿ. ಕ್ರಿಯಾಪದಗಳು ಆತ್ಮನೇಪದ ಮತ್ತು ಪರಸ್ಮೈಪದ ಎಂಬುದಾಗಿ ಎರಡು ಗಣಗಳಲ್ಲಿ ನಡೆಯುತ್ತವೆ. ಆತ್ಮಪದದಲ್ಲಿ ಧಾತುಗಳಿಗೆ ಲೋಪಉಂಟಾಗುವುದಿಲ್ಲ ಮತ್ತು ಇದರಲ್ಲಿ ಅಕರ್ಮಕ ಮತ್ತು ಅನಿಯಮಿತ ಧಾತುಗಳಿರುತ್ತವೆ. ಪರಸ್ಮೈಪದದಲ್ಲಿ ಬರುವ ಧಾತುಗಳಿಗೆ-ಇ ಪ್ರತ್ಯಯ ಸೇರಿಸಿ, ಅವುಗಳ ರೂಪಗಳನ್ನು ಸಿದ್ಧಪಡಿಸುತ್ತಾರೆ. ಉದಾಹರಣೆಗೆ ಕರಣೇ(ಮಾಡು), ಮಿ ಕರಿತೋ ಆಹೆ (ನಾನು ಮಾಡುತ್ತಿರುವೆ.) ಕಾಲ ಮತ್ತು ಅರ್ಥವನ್ನೊಳಗೊಂಡ ಏಳು ಬಗೆಯ ಆಖ್ಯಾತ ಪ್ರತ್ಯಯಗಳಿವೆ. ಇವು ಸೇರಿ ಕ್ರಿಯಾಪದ ರೂಪಗಳುಂಟಾಗುತ್ತವೆ. ಇವುಗಳಲ್ಲಿ (1) ಮರಾಠೀ ಸ್ವತಂತ್ರ ಭಾಷೆಯಾಗಿ ಪರಿವರ್ತನೆ ಹೊಂದಿದ ಮೇಲೆ ಸಿದ್ಧವಾದ ಕೆಲವು ಆಖ್ಯಾತಗಳು. ಇವಕ್ಕೆ ಮರಾಠೀ ವ್ಯಾಕರಣ ನಿಯಮಗಳು ಪೂರ್ತಿ ಅನ್ವಯಿಸುತ್ತವೆ. ಇವುಗಳ ರೂಪ ಮೂರು ಬಗೆಯ ಲಿಂಗಗಳಲ್ಲಿ ಇರುತ್ತವೆ. (2) ಕೆಲವು ಪ್ರತ್ಯಯಗಳು ಸಂಸ್ಕøತ ಪ್ರತ್ಯಯಗಳಿಂದ ಬಂದಿವೆ. ಭೂತಕಾಲದ ಪ್ರತ್ಯಯ-ಲಾ,-ಲಾಸ,-ಲೋ, ಭವಿಷ್ಯತ್ಕಾಲದ ಪ್ರತ್ಯಯ,-ಏನ,-ಈನ, ವರ್ತಮಾನ ಕಾಲದ ಪ್ರತ್ಯಯ-ತೋ,-ತೋಸ ಇತ್ಯಾದಿ. ಮೂಲಧಾತುವಿಗೆ-ವ ಸೇರಿಸಿ ಪೇರಣಾರ್ಥಕ ರೂಪಿಸುತ್ತಾರೆ. ಈ ರೂಪಕ್ಕೆ ಮತ್ತೆ ಆಖ್ಯಾತ ಪ್ರತ್ಯಯ ಸೇರಿಸಿ, ಕ್ರಿಯಾಪದ ಸಿದ್ಧಪಡಿಸುತ್ತಾರೆ. ಒಂದಕ್ಷರದ ಮತ್ತು ಇ-ಕಾರಾಂತ ಧಾತುಗಳಿಗೆ-ವವ ಸೇರಿಸುತ್ತಾರೆ. ರೂಪಗಳನ್ನು ರೂಪಿಸುವಾಗ ಪ್ರೇರಣಾರ್ಥಕ ಕ್ರಿಯಾಪದಗಳಿಗೆ ಇ ಪರಸ್ಮೈಪದ ಆದೇಶವಾಗುವುದಿಲ್ಲ. ಈ ಕ್ರಿಯಾಪದಗಳನ್ನು ಕರ್ತರಿ ಪ್ರಯೋಗ-ದಲ್ಲಿ ಬಳಸುವುದಿಲ್ಲ. ವಚನ ಕರ್ತೃವಿನ ಲಿಂಗದಂತೆ ಬದಲಾಗುವುದಿಲ್ಲ. ಸಕರ್ಮಕ ಪ್ರೇರಣಾರ್ಥಕ ಕ್ರಿಯಾಪದಗಳಿಂದ ಕರ್ಮಣಿ ಪ್ರಯೋಗವಾಗುತ್ತದೆ. ಸಕರ್ಮಕ ಮತ್ತು ಅಕರ್ಮಕ ಪ್ರಯೋಗಗಳಲ್ಲಿಯ ಉದ್ದೇಶ ಚರ್ತುಥಿಯಲ್ಲಿ ಅಥವಾ ಪ್ರಾತಿಪದಿಕದ ಷಷ್ಠಿ ರೂಪದಿಂದ ಸಿದ್ಧವಾದ ತೃತೀಯಾದಲ್ಲಿರುತ್ತದೆ. ಪ್ರೇರಣಾರ್ಥಕ ಕ್ರಿಯಾಪದಗಳನ್ನು ಎರಡು ರೀತಿಯಲ್ಲಿ ಸಿದ್ಧಪಡಿಸುತ್ತಾರೆ. ಮೂಲಧಾತುವಿನ-ಅವ ಪ್ರತ್ಯಯ ಸೇರಿಸುವುದು. ಮೂಲಧಾತುವಿನಲ್ಲಿ ವ್ಯತ್ಯಾಸಮಾಡುವುದು. ಅಕಾರಾಂತ ಧಾತುಗಳಿಗೆ ಪ್ರತ್ಯಯ ಪರರೂಪ ಸಂಧಿಯಿಂದ ಇಲ್ಲವೆ. ಸಂಧಿ ನಿಯಮದಿಂದ ಸೇರುತ್ತದೆ. ಉದಾಹರಣೆಗೆ ತರವ, ಬಸವ, ನಿಜವ, ಸಮಜಾವಣಿ ನಿಭಾವಣೀ, ಸನಜವಣೀ ನಿಭವಣೀ ಇತ್ಯಾದಿ. ಅನುಕರಣವಾಚಕ ಧಾತುಗಳಿಗೆ ಸಂಸ್ಕøತದ ಸಾಮಾನ್ಯ ಸಂಧಿನಿಯಮಗಳು ಅನ್ವಯಿಸುತ್ತವೆ. ಕೃದಂತ ಪ್ರತ್ಯಯಗಳಲ್ಲಿ-ಲಾ,-ಲೀಲಾ ಭೂತಕಾಲವನ್ನೂ-ಣಾರ,-ಣಾರಾ, ಭವಿಷ್ಯತ್ಕಾಲವನ್ನೂ-ತ-ತಾ-ತಾನಾ ವರ್ತಮಾನಕಾಲವನ್ನೂ ಸೂಚಿಸುತ್ತವೆ. ನಾಮ ಮತ್ತು ಧಾತುಸಾಧಿತಗಳ ನಡುವೆ ಸಂಯೋಗವಾಗಿ ಸಂಯುಕ್ತ ಕ್ರಿಯಾಪದಗಳಾಗುವುದುಂಟು. ಉದಾಹರಣೆಗೆ ಗೋವಿಂದರಾವಾನೀ ಪುಷ್ಕಳ ಪೈಸಾ ಸಂಪಾದಕ ಕೇಲಾ (ಗೋವಿಂದರಾವನು ಹೆಚ್ಚು ಹಣ ಸಂಪಾದನೆ ಮಾಡಿದನು), ಪರಮೇಶ್ವರಾನೇ ಜಗ ಉತ್ಪನ್ನಕೇಲೇ ಆಹೇ (ಪರಮೇಶ್ವರನು ಜಗತ್ತನ್ನು ಸೃಷ್ಟಿಸಿದ್ದಾನೆ). ಕರ್ತರಿ ಪ್ರಯೋಗದಲ್ಲಿ ಕ್ರಿಯಾಪದ ಕರ್ತೃವಿನಂತೆ ನಡೆಯುತ್ತದೆ. ಕರ್ತೃವಿನಂತೆ ಕ್ರಿಯಾಪದದ ಪುರುಷ ಮತ್ತು ವಚನ ಬದಲಾಗುತ್ತವೆ. ಕರ್ತರಿ ಪ್ರಯೋಗ ಸಕರ್ಮಕ ಮತ್ತು ಅಕರ್ಮಕ ಕರ್ಮಣಿ ಪ್ರಯೋಗದಲ್ಲಿ ಕ್ರಿಯಾಪದ ಕರ್ಮದಂತೆ ನಡೆಯುತ್ತದೆ. ಆಧುನಿಕ ಮರಾಠೀಯಲ್ಲಿ ಅಕರ್ಮಕ ಕ್ರಿಯಾಪದಗಳ ಭೂತಕಾಲದಲ್ಲಿ ವಿಧ್ಯರ್ಥಕ ವಾಕ್ಯಗಳಲ್ಲಿ ಕಮ್ ಪ್ರತ್ಯಯ ರಹಿತವಾಗಿದ್ದರೆ, ಕರ್ಮಣಿ ಪ್ರಯೋಗವಾಗುತ್ತದೆ. ಭಾವೇಪ್ರಯೋಗ ಈ ಭಾಷೆಯ ಒಂದು ವೈಶಿಷ್ಟ್ಯ. ಈ ಪ್ರಯೋಗದಲ್ಲಿ ಮೂಲಕ್ರಿಯೆಯ ಕರ್ಮವನ್ನು ತೋರಿಸುವ ಶಬ್ದ ಸಪ್ರತ್ಯವಾಗಿದ್ದು ಕರ್ತೃತೃತೀಯದಲ್ಲಿರುತ್ತದೆ. ಆದ್ದರಿಂದ ಕರ್ಮದಂತೆ ಕ್ರಿಯಾಪದ ನಡೆಯುವುದಿಲ್ಲ. ಕರ್ಮ ಸಪ್ರತ್ಯವಾಗಿರುವುದರಿಂದ ಅವರ ಪ್ರಭಾವ ಕ್ರಿಯಾಪದದ ಮೇಲೆ ಆಗುವುದಿಲ್ಲ. ಆದ್ದರಿಂದ ವಾಕ್ಯದಲ್ಲಿ ಕ್ರಿಯಾಪದದ ನಪುಂಸಕಲಿಂಗ ಏಕವಚನದ ರೂಪಮಾತ್ರ ಬರುತ್ತದೆ. ಭಾವೇ ಪ್ರಯೋಗದಲ್ಲಿ ಕ್ರಿಯೆಯ ಭಾವವೇ ಕರ್ತೃ, ಮೂಲಧಾತುವಿನ ಭೂತಕಾಲವಾಚಕ ಕೃದಂತದ ಮುಂದೆ ಸಹಾಯಕ `ಅಸ ಧಾತುವಿನ ರೂಪ ಪ್ರಯೋಗವಾಗಬೇಕು. ಆಧುನಿಕ ಮರಾಠೀಯಲ್ಲಿ `ಅಸ ಧಾತು ಲೋಪವಾಗಿ ಮೂಲಭೂತ ಕಾಲವಾಚಕ ಕೃದಂತವೇ ಕ್ರಿಯಾಪದವಾಗಿರುತ್ತದೆ. ಹೀಗಾಗಿ, ಮೂಲಕ್ರಿಯೆಯ ಕರ್ತೃ, ಕರ್ಮ ಮತ್ತು ನಪುಂಸಕಲಿಂಗ ರೂಪವೇ ಕ್ರಿಯಾಪದವೆಂದು ತಿಳಿಯುವುದುಯುಕ್ತ. ಭಾವೇ ಪ್ರಯೋಗ ಸಕರ್ಮಕ ಮತ್ತು ಅಕರ್ಮಕ ಕ್ರಿಯಾಪದಕ್ಕೆ ಆಗುತ್ತದೆ. ಸ್ಥಳವಾಚಕ, ಕಾಲವಾಚಕ ಸಂಖ್ಯಾವಾಚಕ, ಪರಿಣಾಮವಾಚಕ ಮತ್ತು ಕ್ರಿಯಾವಿಶೇಷಣಗಳುಂಟು. ನಾಮಗಳು ಮತ್ತು ಅವುಗಳಂತಿರುವ ಶಬ್ದಗಳೊಡನೆ ವಿಭಕ್ತಿಪ್ರತ್ಯಯದಂತೆ ಸಂಯೋಗ ಹೊಂದುವುದರ ಮೂಲಕ ಶಬ್ದಗಳೊಡನೆ ಸಂಬಂಧ ಕಲ್ಪಿಸುವ ಸ್ವತಂತ್ರ ಶಬ್ದಯೋಗಿ ಅವ್ಯಯಗಳೆನ್ನುತ್ತಾರೆ. ಕೆಲವು ಶಬ್ದಯೋಗೀ ಅವ್ಯಯಗಳು ಕ್ರಿಯಾವಿಶೇಷಣಗಳಾಗಿರುತ್ತವೆ. ಕ್ರಿಯಾಪದಗಳೊಡನೆ ಸ್ವತಂತ್ರ ಸಂಬಂಧವಿದ್ದಾಗ ಇವು ಕ್ರಿಯಾವಿಶೇಷಣಗಳಾಗುತ್ತವೆ. ನೇರವಾಗಿ ನಾಮಗಳೊಡನೆ ಸಂಬಂಧವಿದ್ದಾಗ ಇವು ಶಬ್ದಯೋಗಿ ಅವ್ಯಯಗಳಾಗುತ್ತವೆ. ತದ್ಧಿತ ಶಬ್ದಗಳು ರೂಪಗೊಳ್ಳುವಾಗ ಬಗೆ ಬಗೆಯ ಅಕ್ಷರಗಳು ಆದಿಯಲ್ಲಿ ಬರುತ್ತವೆ. ಸಂಸ್ಕøತದ ಅನೇಕ ಉಪಸರ್ಗಗಳು ಸೇರ್ಪಡೆಯಾಗಿವೆ. ಉದಾಹರಣೆಗೆ ಅತಿ-ಅನ-ಅಭಿ-ಉತ್-ನಿ-ಪರಾ ಇತ್ಯಾದಿ. ಮರಾಠೀಯವೇ ಆದ ಕೆಲವನ್ನು ಇಲ್ಲಿ ಉದಾಹರಿಸಬಹುದು. ಅಡ-(ಅಡಸರ)-ಅಡ-(ಆ0ಡನಾಂವ), ಪಡ-(ಪಡತಾಳಾ), ಭರ-(ಭರಪೂರ), ಘಟ-(ಘಟಫಜಿ ತಿ) ಈ ಭಾಷೆಯಲ್ಲಿ ಸಾಮಾನ್ಯ, ಸಂಯೋಜಿತ, ಮಿಶ್ರ ಎಂಬ ವಾಕ್ಯ ಭೇಧಗಳುಂಟು. ಕರ್ಮಣಿ ಪ್ರಯೋಗದ ವಾಕ್ಯಗಳಲ್ಲಿ ಮಾತ್ರ ಕ್ರಿಯಾಪದ ಕರ್ಮದಂತೆ ಪ್ರಯೋಗವಾಗುತ್ತದೆ. ಈ ಪದ್ಧತಿ ಸಂಸ್ಕೃತ ಮತ್ತು ಪ್ರಾಕೃತ ಭಾಷೆಗಳಿಂದ ಬಂದಿದೆ. ಲಿಪಿ ಇದರ ಉಗಮ ನಾಗರಿ ಲಿಪಿಯಿಂದ ಆಗಿದೆ. ಅಶೋಕನ ಶಿಲಾಲೇಖದ ಬ್ರಾಹ್ಮೀ, ಸಾತವಾಹನ, ಕ್ಷಹರಾತ ಮೊದಲಾದವರ ಶಿಲಾಲೇಖಗಳಲ್ಲಿಯ ಬ್ರಾಹ್ಮೀ, ವಾಕಟಾಕರ ಕಾಲದ ಪೇಟಿಕಾ-ಶೀಷಕ ಹಾಗೂ ಉತ್ತರ ಬ್ರಾಹ್ಮೀ ಲಿಪಿಯ ನಾಗರೀ ರೂಪಗಳನ್ನು ಆಧರಿಸಿ ಈ ಲಿಪಿ ಜನ್ಮ ತಳೆಯಿತು. ಸುಮಾರು 10ನೆಯ ಶತಮಾನದ ಹೊತ್ತಿಗೆ ಮರಾಠೀ ಭಾಷೆ ಮತ್ತು ಬರೆಹ ಜನ್ಮ ತಾಳಿದವೆಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಶ್ರವಣಬೆಳಗೊಳದ ಗೊಮ್ಮಟೇಶ್ವರ ಮೂರ್ತಿಯ ಪಾದ ಪಕ್ಕದಲ್ಲಿರುವ ಶಿಲಾಲೇಖ ಬರೆಹ (ಸುಮಾರು 982) ಚಾವುಂಡರಾಜೇಂ ಕರವೀಯಲೇ ಎಂಬುದು ಮರಾಠೀ ಭಾಷೆಯ ಪ್ರಾಚೀನ ಬರೆಹವೆಂದು ನಂಬಲಾಗಿತ್ತು. ಈ ಶಿಲಾಲಿಪಿ 12ನೆಯ ಶತಮಾನದ್ದೆಂದು ಎಚ್. ಜಿ. ತುಳಪುಳ ಮತ್ತು ಎ.ಎಸ್. ಆಳ್ತೆಕರ್ ಅವರು ನಿರ್ಧರಿಸಿದ್ದಾರೆ. ಶಿಲಹಾರಕೇಶಿದೇವನ ಅಕ್ಷೀಗ್ರಾಮದ ಶಿಲಾಲೇಖವೇ(1012) ಪ್ರಾಚೀನಬರೆಹವೆಂದು ತುಳಪುಳೆ ಅಭಿಪ್ರಾಯ ಪಟ್ಟಿದ್ದಾರೆ. ಎಮ್ ಜಿ. ದೀಕ್ಷಿತ ಎಂಬುವರು ಇದರ ಕಾಲ 1210 ಎಂದಿದ್ದಾರೆ. 1060ರ ದಿವೇ ಅಗರ್ ತಾಮ್ರಪಟ್ಟಿಕೆಯೇ ಪುರಾತನ ಶಿಲಾಲೇಖ ಎಂಬುದಾಗಿ ಅಭಿಪ್ರಾಯ ಪಟ್ಟಿರುವವರೂ ಉಂಟು. ಮುಕುಂದರಾಜನ ವಿವೇಕ ಸಿಂಧು ಎಂಬುದು ಪ್ರಾಚೀನ ಉಪಲಬ್ಧ ಗ್ರಂಥ(12ನೆಯ ಶತಮಾನ). ಅನಂತರದ್ದು ಜ್ಞಾನೇಶ್ವರಿ (1290), ತರುವಾಯದ್ದು ಮಹಾನುಭಾವ ಸಾಹಿತ್ಯ(13ನೆಯ ಶತಮಾನ). ಈ ಲಿಪಿ ಬಳಕೆ ದೇವಗಿರಿಯ ಯಾದವರ ಕಾಲದಲ್ಲಿ ಪ್ರಾಚುರ್ಯಕ್ಕೆ ಬಂದಿತ್ತು. ಇದನ್ನು ಪೃಷ್ಠಮಾತ್ರಾ ಶಿರೋಮಾತ್ರಾ ಮತ್ತು ಮೋಡಿ ಎಂಬುದಾಗಿ ವರ್ಗೀಕರಿಸಲಾಗಿದೆ. ಮರಾಠೀ ಮೊತ್ತ ಮೊದಲ ಬರಹಗಳನ್ನು ಪೃಷ್ಠ ಮಾತ್ರಾಶಿರೋಮಾತ್ರಾ ಇಲ್ಲವೇ ಇವೆರಡು ಮಿಶ್ರಣ ರೂಪದಲ್ಲಿ ಬರೆಯಲಾಗಿದೆ. ಕನ್ನಡ ಲಿಪಿಯಲ್ಲೂ ಬರೆದಿರುವ ನಿರ್ದೇಶನ ಉಂಟು ಉದಾಹರಣೆಗೆ ಶಾ.ಶ. 1271ರ ಕ್ರಿಶ. 1349) ವಿಮ್ನಮಂತ್ತಿಯ ಖಾಟೇಗ್ರಾಮದ ಮರಾಠೀ ತಾಮ್ರಪಟ. ಶತಮಾನಗಳು ಕಳೆದಂತೆ ಈ ಲಿಪಿಯ ಒಂದೊಂದು ಅಕ್ಷರವೂ ತನ್ನ ಸ್ವರೂಪದಲ್ಲಿ ವ್ಯತ್ಯಾಸ ಪಡೆದಿದೆ. ಆ, ಇ, ಏ, ಓ, ಗಮನಾರ್ಹ ಬೆಳವಣಿಗೆ ಪಡೆದ ಅಕ್ಷರಗಳು (ಇ) ಮತ್ತು ತ್ರಿಕೋನಾಕೃತಿಯ ಏ ಅಕ್ಷರ ಯಾವುದಾದರೂ ದಾಖಲೆಯಲ್ಲಿದ್ದಾರೆ ಅವು ಲಿಪಿಯ ಪ್ರಾಚೀನತೆಯನ್ನು ಸೂಚಿಸುತ್ತವೆ. ಚ,ಛ,ಜ,ಣ,ಥ,ಧ,ಬ.ಭ,ರ,ಸ ಅಕ್ಷರಗಳ ಚಾಕ್ಷುಷರೂಪಗಳು ಪ್ರಸ್ತುತ ಬಳಕೆಯಲ್ಲಿರುವ ಲಿಪಿಗೆ ಹತ್ತಿರವೇ ಆದ ರೂಪಗಳನ್ನು ಪಡೆದಿದ್ದುವು,ಶ-ಸ,ಲ-ಳ, ಇವು ಉಚ್ಚಾರಣಾ ಸಾಮ್ಯದಿಂದ ಒಂದರ ಸ್ಥಳದಲ್ಲಿ ಇನ್ನೊಂದು ಸಹಜವಾಗಿ ಪ್ರಯೋಗವಾಗುತ್ತಿದ್ದುವು. ಚ-ವ, ಪ-ಯ, ಧ-ಬ, ಉ-ಡ, ಇವು ಚಾಕ್ಷುಷ ರೂಪಸಾದೃಶ್ಯ ಪಡೆದಿದ್ದುವು. ಅನುಸ್ವಾರವನ್ನು ಅರ್ಧಚಂದ್ರಾಕೃತಿಯಲ್ಲಿ ಬರೆಯಲಾಗುತ್ತಿತ್ತು. ಕ್ರಿ.ಶ. ಸು. 14-15ನೆಯ ಶತಮಾನದಲ್ಲಿ ಮೋಡೀ ಲಿಪಿ ಬಳಕೆಗೆ ಬಂದಿರಬಹುದು. ಬಹುಮನೀ ಸುಲ್ತಾನ್ ಮುಜಾಹಿದ್ ದೊರೆಯ ಕಾಲದ(1375-78) ಒಂದು ತಾಮ್ರಪಟ ಸದ್ಯ ಪ್ರಾಚೀನ ದಾಖಲೆ. ಆಂಧ್ರಪ್ರದೇಶ ಸರ್ಕಾರದ ಪುರಾತತ್ತ್ವ ಇಲಾಖೆಯಲ್ಲಿರುವ ಈ ದಾಖಲೆಯನ್ನು ಭುಸಾರೆ ಸಂಪಾದಿಸಿದ್ದಾರೆ. ಮೋಡೀಲಿಪಿಯನ್ನು ಮೊದಲು ಹೇಮಾದ್ರಿ ಮಂತ್ರಿ (13ನೆಯ ಶತಮಾನ) ಬಳಕೆಯಲ್ಲಿ ತಂದನು. ತ್ವರಿತವಾಗಿ ಬರೆಯಲು ಮೋಡೀ ಲಿಪಿಯನ್ನು ಬಳಸುತ್ತಿದ್ದುದರಿಂದ ಚಿರಸ್ಮಾರಕಗಳಾದ ಶಿಲಾಲೇಖಗಳಲ್ಲಿ ಅದನ್ನು ಬಳಸಲಿಲ್ಲವೆಂದು ತೋರುತ್ತದೆ. ಆದರೂ ಅದರ ಪ್ರಭಾವ ಬರೆವಣಿಗೆಯ ಮೇಲೆ ಸಾಕಷ್ಟು ಆಗಿದೆ. ಪಂಕ್ತಿಯ ಆರಂಭದಿಂದ ಅಂತ್ಯದವರೆಗೆ ಎಲ್ಲಿಯೂ ನಿಲ್ಲಿಸದೆ ಏಕಪ್ರಕಾರವಾಗಿ ಬರೆದುಕೊಂಡುಹೋಗುವ ಒಂದು ಕ್ಲಿಷ್ಟ ಬರೆವಣಿಗೆ ಮೋಡೀ ಲಿಪಿಯದು ಎನ್ನಬಹುದು. ಇದನ್ನೂ ನೋಡಿ ಮರಾಠಿ ಸಾಹಿತ್ಯ ಉಲ್ಲೇಖಗಳು ಬಾಹ್ಯ ಸಂಪರ್ಕಗಳು भारतीय भाषा ज्योति: मराठी —a textbook for learning Marathi through Hindi from the Central Institute of Indian Languages Dictionaries Molesworth, J. T. (James Thomas). A dictionary, Marathi and English. 2d ed., rev. and enl. Bombay: Printed for government at the Bombay Education Society's press, 1857. Vaze, Shridhar Ganesh. The Aryabhusan school dictionary, Marathi-English. Poona: Arya-Bhushan Press, 1911. Tulpule, Shankar Gopal and Anne Feldhaus. A dictionary of old Marathi. Mumbai: Popular Prakashan, 1999. Marathi Wordnet Learn Marathi through English. Learn Marathi through Hindi. Learn Marathi through English. Learn Marathi through Hindi. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ಭಾರತೀಯ ಭಾಷೆಗಳು ಇಂಡಿಕ್ ಭಾಷೆಗಳು ಭಾಷೆಗಳು
1916
https://kn.wikipedia.org/wiki/%E0%B2%A4%E0%B3%8D%E0%B2%B0%E0%B2%BF%E0%B2%B5%E0%B3%87%E0%B2%A3%E0%B2%BF
ತ್ರಿವೇಣಿ
ತ್ರಿವೇಣಿ ಎಂಬ ಬರಹನಾಮದಿಂದ ಪ್ರಸಿದ್ಧರಾದವರು ಶ್ರೀಮತಿ ಅನಸೂಯ ಶಂಕರ್. ಇವರು ಕನ್ನಡದ ಪ್ರಮುಖ ಕಾದಂಬರಿಕಾರರಲ್ಲೊಬ್ಬರು. ಹಲವಾರು ಜನಪ್ರಿಯ ಕಾದಂಬರಿಗಳ ಮೂಲಕ ಪ್ರಸಿದ್ಧಿಯಾಗಿದ್ದಾರೆ. ಕನ್ನಡ ಸಾಹಿತ್ಯದ ಪ್ರಮುಖ ಬರಹಗಾರ್ತಿಯಾಗಿ ಗುರುತಿಸಲ್ಪಟ್ಟಿದ್ದಾರೆ. ಪರಿಚಯ ತ್ರಿವೇಣಿಯವರು ಸೆಪ್ಟಂಬರ್ ೧, ೧೯೨೮ರಂದು ಮಂಡ್ಯದಲ್ಲಿ ಜನಿಸಿದರು. ತಂದೆ ಬಿ.ಎಮ್.ಕೃಷ್ಣಸ್ವಾಮಿ ಪ್ರಸಿದ್ಧ ವಕೀಲರು, ತಾಯಿ ತಂಗಮ್ಮ. ಇವರ ಹೈಸ್ಕೂಲ್‍ವರೆಗಿನ ಶಿಕ್ಷಣ ಮಂಡ್ಯದಲ್ಲಿ ಆಯಿತು. ಕಾಲೇಜು ಶಿಕ್ಷಣ ಮೈಸೂರಿನಲ್ಲಿ ಆಯಿತು. ೧೯೪೭ರಲ್ಲಿ ಮಹಾರಾಣಿ ಕಾಲೇಜಿನಿಂದ ಮನಃಶಾಸ್ತ್ರದಲ್ಲಿ ಸಿದ್ದೇಗೌಡ ಚಿನ್ನದ ಪದಕದೊಂದಿಗೆ ಬಿ.ಎ.ಪದವಿ ಪಡೆದರು. ನಂತರ ಮೈಸೂರಿನಿಂದ ಮಂಡ್ಯಕ್ಕೆ ಬಂದು ಅಲ್ಲಿ ಪ್ರೌಢಶಾಲೆಯಲ್ಲಿ ಅಧ್ಯಾಪಕಿಯಾಗಿ ಸೇವೆ ಆರಂಭಿಸಿದರು. ಕನ್ನಡದ ಕಣ್ವ ಬಿ.ಎಂ.ಶ್ರೀಯವರು ಇವರ ದೊಡ್ಡಪ್ಪ. ಹೆಸರಾಂತ ಕಾದಂಬರಿಗಾರ್ತಿ ಆರ್ಯಾಂಬಾ ಪಟ್ಟಾಭಿ ಇವರ ತಂಗಿ. ಮತ್ತೊಬ್ಬ ಪ್ರಸಿದ್ಧ ಕಾದಂಬರಿಗಾರ್ತಿ 'ವಾಣಿ' (ಬಿ.ಎಸ್.ಸುಬ್ಬಮ್ಮ) ಇವರ ಚಿಕ್ಕಮ್ಮ. ಉತ್ತಮ ಕತೆಗಾರ 'ಅಶ್ವತ್ಥ' ರವರು ತ್ರಿವೇಣಿಯವರ ಪತಿಯ ಭಾವ. ಹೀಗೆ ಹತ್ತಿರದ ಬಂಧುಗಳು ಕನ್ನಡ ಸಾಹಿತ್ಯದಲ್ಲಿ ಹೆಸರು ಮಾಡಿದವರು. ತ್ರಿವೇಣಿಯವರ ಜನ್ಮನಾಮ ಭಾಗೀರಥಿ. ಶಾಲೆಯಲ್ಲಿ ದಾಖಲಾದ ಹೆಸರು 'ಅನಸೂಯ'. ಅವರನ್ನು ಹತ್ತಿರದವರು 'ಅಂಚು' ಎಂದು ಕರೆಯುತ್ತಿದ್ದರು. 'ತ್ರಿವೇಣಿ' ಹೆಸರಿನಲ್ಲಿ ತಮ್ಮ ಮೊದಲ ಕಥೆಯನ್ನು ಪತ್ರಿಕೆಗೆ ಕಳಿಸಿದರು. ನಂತರ ಸಂಪಾದಕರಿಗೆ ಇವರ ನಿಜ ಹೆಸರು ತಿಳಿದರೂ 'ತ್ರಿವೇಣಿ' ಹೆಸರೇ ಚೆನ್ನಾಗಿದೆ ಅದನ್ನೇ ಮುಂದುವರಿಸಿ ಎಂದು ಹೇಳಿದರು. ಹಾಗೆ ಅನುಸುಯಾ ಅವರಿಗೆ ಕಾವ್ಯನಾಮ 'ತ್ರಿವೇಣಿ' ಎಂಬ ಹೆಸರೇ ಪ್ರಸಿದ್ಧವಾಯಿತು. ಮೊದಲು ತ್ರಿವೇಣಿಯವರು ಬರೆದ ಕಥೆಗಳನ್ನು ಹಾಗೆಯೇ ಇಡುತ್ತಿದ್ದರು. ಒಮ್ಮೆ ಅವರ ತಾಯಿ ಅದನ್ನು ನೋಡಿ ಓದಿ ಪತ್ರಿಕೆಗಳಿಗೆ ಕಳಿಸಲು ಒತ್ತಾಯಿಸಿದರು. ಹಾಗೆ ಅವರು ಕಳಿಸಿದ ಕಥೆಗಳು ಪ್ರಕಟಗೊಂಡಾಗ ಆನಂದಪಟ್ಟರು. ಸಂಪಾದಕರೂ ಇವರನ್ನು ಪ್ರೋತ್ಸಾಹಿಸಿದರು. ತ್ರಿವೇಣಿಯವರ ವಿವಾಹ ೧೯೫೦ರಲ್ಲಿ ಮೈಸೂರಿನ ಶಾರದಾವಿಲಾಸ ಮಹಾವಿದ್ಯಾಲಯದ ಇಂಗ್ಲಿಷ್ ಪ್ರಾಧ್ಯಾಪಕ ಎನ್. ಶಂಕರ್ ಅವರೊಡನೆ ಆಯಿತು. ಅವರು ಇವರ ಬರವಣಿಗೆಗೆ ಪ್ರೋತ್ಸಾಹ ಕೊಟ್ಟರಲ್ಲದೆ, ಇವರು ಅಧ್ಯಾಪಕ ವೃತ್ತಿಗೆ ರಾಜಿನಾಮೆ ಕೊಟ್ಟು ಬರವಣಿಗೆಯನ್ನು ಮುಂದುವರಿಸಿದರು. ಮನಃಶಾಸ್ತ್ರದ ಪದವೀಧರೆಯಾದ ತ್ರಿವೇಣಿಯವರ ಅನೇಕ ಕೃತಿಗಳು ಮನಃಶಾಸ್ತ್ರಕ್ಕೆ ಸಂಬಂಧಪಟ್ಟವು. ಮನಃಶಾಸ್ತ್ರದ ಅಧ್ಯಯನಕ್ಕೆ ಸಂಬಂಧಪಟ್ಟ ಸನ್ನಿವೇಶಗಳು ಹಾಗೂ ಉದಾಹರಣೆಗಳು ಅವರ ಅನೇಕ ಸಣ್ಣ ಕಥೆಗಳು ಹಾಗೂ ಕಾದಂಬರಿಗಳಲ್ಲಿ ಕಂಡುಬರುತ್ತವೆ. ಕನ್ನಡಕ್ಕೆ ಈ ಹೊಸಬಗೆಯ ಕಥಾವಸ್ತು ವಿರುವ ಕಥೆಗಳು ಕಾದಂಬರಿಗಳು ಬಹಳ ಜನಪ್ರಿಯವಾದವು. ಕೃತಿಗಳು ಕಾದಂಬರಿಗಳು ಹಣ್ಣೆಲೆ ಚಿಗುರಿದಾಗ ಬೆಳ್ಳಿಮೋಡ ಶರಪಂಜರ ಮುಕ್ತಿ ಹೂವು ಹಣ್ಣು ಕಾಶಿಯಾತ್ರೆ ದೂರದ ಬೆಟ್ಟ ಬೆಕ್ಕಿನ ಕಣ್ಣು ಬಾನು ಬೆಳಗಿತು ಹೃದಯಗೀತೆ ಕೀಲುಗೊಂಬೆ ಅಪಸ್ವರ ಅಪಜಯ ತಾವರೆಯ ಕೊಳ ಸೋತು ಗೆದ್ದವಳು ಕಂಕಣ ಮುಚ್ಚಿದ ಬಾಗಿಲು ಮೊದಲ ಹೆಜ್ಜೆ ಅವಳ ಮನೆ ವಸಂತಗಾನ ಅವಳ ಮಗಳು (ಈ ಕಾದಂಬರಿಯು ಅರ್ಧವಾಗಿದ್ದಾಗ ತ್ರಿವೇಣಿಯವರು ನಿಧನರಾದರು. ಶ್ರೀಮತಿ ಎಮ್.ಸಿ.ಪದ್ಮಾ ಇದನ್ನು ಪೂರ್ಣಗೊಳಿಸಿದ್ದಾರೆ.) ಕಥಾಸಂಕಲನಗಳು ಸಮಸ್ಯೆಯ ಮಗು ಎರಡು ಮನಸ್ಸು ಹೆಂಡತಿಯ ಹೆಸರು ಅನುವಾದಗೊಂಡ ಕೃತಿಗಳು "ಅಪಸ್ವರ"ಮತ್ತು "ಅಪಜಯ" ಕಾದಂಬರಿಗಳನ್ನು ಮತ್ತು "ತ್ರಿವೇಣಿ ಸಪ್ತಕ್" ಎಂಬ ಹೆಸರಿನಲ್ಲಿ ಏಳು ಸಣ್ಣ ಕತೆಗಳನ್ನು ಹಿಂದಿಗೆ ಎಸ್.ಎಮ್.ರಾಮಸ್ವಾಮಿ ಅವರು ಅನುವಾದ ಮಾಡಿದ್ದಾರೆ. ಮೀರಾ ನರ್ವೆಕರ್ ಎನ್ನುವವರು "ಶರಪಂಜರ"ವನ್ನು "The Mad Woman" ಎಂಬ ಹೆಸರಿನಲ್ಲಿ ಇಂಗ್ಲಿಷ್ ಗೆ ಅನುವಾದಿಸಿದ್ದಾರೆ. "ಬೆಕ್ಕಿನ ಕಣ್ಣು " ಕಾದಂಬರಿಯನ್ನು ಶರ್ವಾಣಿಯವರು ತೆಲುಗಿಗೆ ಅನುವಾದಿಸಿದ್ದಾರೆ. ಚಲನಚಿತ್ರಗಳಾದ ಕೃತಿಗಳು ತ್ರಿವೇಣಿಯವರ 6 ಕಾದಂಬರಿಗಳು ಚಲನಚಿತ್ರಗಳಾಗಿವೆ. ಹಣ್ಣೆಲೆ ಚಿಗುರಿದಾಗ (೧೯೬೮) ಬೆಳ್ಳಿಮೋಡ (೧೯೭೦) ಶರಪಂಜರ (೧೯೭೧) ಮುಕ್ತಿ ಹೂವು ಹಣ್ಣು (೧೯೯೩) ಕಂಕಣ (೧೯೭೫) ಬೆಕ್ಕಿನ ಕಣ್ಣು ಕಾದಂಬರಿಯನ್ನು ಚಲಚ್ಚಿತ್ರವನ್ನಾಗಿ ನಿರ್ದೇಶಿಸಲು ಶ್ರೀ ಪುಟ್ಟಣ್ಣ ಕಣಗಾಲ್'ರು ಬಯಸಿದ್ದರು. ಆದರೆ ಕಾರಣಾಂತರದಿಂದ ಅದನ್ನು ಕನ್ನಡದಲ್ಲಿ ಮಾಡದೆ ಮಲಯಾಳಂನಲ್ಲಿ "ಪೂಚಕಣ್ಣಿ" ಎಂಬ ಹೆಸರಿನಲ್ಲಿ ನಿರ್ದೇಶಿಸಿದರು. ಪ್ರೇಮ್ ನಜೀರ್, ಅಡೂರ್ ಭಾಸಿ, ತಿಕ್ಕುರಿಸಿ ಸುಕುಮಾರನ್ ನಾಯರ್ ಮೊದಲಾದವರು ಅಭಿನಯಿಸಿದ ಈ ಚಿತ್ರ ೧೯೬೬ರಲ್ಲಿ ಬಿಡುಗಡೆಯಾಗಿ ಬಹಳ ಜನಪ್ರಿಯತೆಯನ್ನು ಗಳಿಸಿತ್ತು. ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದಲ್ಲಿ ಲಭ್ಯವಿರುವ ಕೃತಿಗಳು ಮೊದಲ ಹೆಜ್ಜೆ ಬಾನು ಬೆಳಗಿತು ಸೋತು ಗೆದ್ದವಳು ಕಿರುತೆರೆ ಧಾರವಾಹಿಗಳಾಗಿ ತ್ರಿವೇಣಿ ಕಾದಂಬರಿಗಳು ತ್ರಿವೇಣಿ ಅವರ ಕಾದಂಬರಿ ಮತ್ತು ಕತೆಗಳನ್ನು ಆಧರಿಸಿ ನಟ ಶ್ರೀನಿವಾಸ ಮೂರ್ತಿ ಅವರು ಈ ಟೀವಿಗಾಗಿ ಧಾರಾವಾಹಿ ಸರಣಿ ಮಾಡಿದ್ದಾರೆ. ತ್ರಿವೇಣಿ ಅವರ 'ಅವಳ ಮನೆ', 'ಅಪಸ್ವರ', 'ಅಪಜಯ' ಮುಂತಾದ ಕಾದಂಬರಿಗಳನ್ನು ದೂರದರ್ಶನ ಮಾಧ್ಯಮಕ್ಕೆ ಅಳವಡಿಸಿದ್ದಾರೆ. ಈ ಧಾರಾವಾಹಿ ಜನವರಿ ೨೯ ೨೦೦೭ ರಿಂದ ಪ್ರಸಾರವಾದವು. ಪುರಸ್ಕಾರ ಅವಳ ಮನೆ ಕಾದಂಬರಿಗೆ ೧೯೬೦ರಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ ಸಣ್ಣಕತೆಗಳ ಸಂಕಲನವಾದ ಸಮಸ್ಯೆಯ ಮಗು ಪುಸ್ತಕಕ್ಕೆ ೧೯೬೨ರಲ್ಲಿ 'ದೇವರಾಜ್ ಪ್ರಶಸ್ತಿ' . ನಿಧನ ತ್ರಿವೇಣಿಯವರು ತಮ್ಮ ಮೂವತ್ತೈದನೆಯ ವಯಸ್ಸಿನಲ್ಲಿಯೇ ಜುಲೈ ೨೯, ೧೯೬೩ರಂದು ತಮ್ಮ ಹನ್ನೊಂದು ದಿನದ ಹೆಣ್ಣು ಮಗುವನ್ನು ಬಿಟ್ಟು ನಿಧನರಾದರು. ಈಗ ತ್ರಿವೇಣಿಯವರ ಕೃತಿಗಳ ಹಕ್ಕುಗಳು ಅವರ ಮಗಳಾದ ಮೀರಾ ಕುಮಾರ್ ಅವರಲ್ಲಿವೆ. ಉಲ್ಲೇಖ ೧೯೨೮ ಜನನ ೧೯೬೩ ನಿಧನ ಕನ್ನಡ ಸಾಹಿತ್ಯ ತ್ರಿವೇಣಿ ತ್ರಿವೇಣಿ ಕನ್ನಡ ಲೇಖಕಿಯರು ಮೈಸೂರಿನ ಬರಹಗಾರರು
1919
https://kn.wikipedia.org/wiki/%E0%B2%AC%E0%B2%B8%E0%B2%B5%20%E0%B2%9C%E0%B2%AF%E0%B2%82%E0%B2%A4%E0%B2%BF
ಬಸವ ಜಯಂತಿ
ವೈಶಾಖ ಶುದ್ಧ ತದಿಗೆಯಂದು, ಲಿಂಗಾಯತ ಮತದ ಸ್ಥಾಪಕರಾದ ಬಸವಣ್ಣನವರ ಜನ್ಮದಿನವಾದ ಬಸವ ಜಯಂತಿಯನ್ನು ಆಚರಿಸಲಾಗುತ್ತದೆ. ಬಸವ ಜಯಂತಿಯು ಲಿಂಗಾಯತರ ಹಾಗೂ ಸರ್ವಧರ್ಮೀಯರ ಅತ್ಯಂತ ಪ್ರಮುಖ ಹಬ್ಬ. ಕರ್ನಾಟಕದಾದ್ಯಂತ ಇದನ್ನು ಬಹಳ ವೈಭವ ಹಾಗೂ ಉಲ್ಲಾಸದಿಂದ ಆಚರಿಸಲಾಗುತ್ತದೆ. ಹನ್ನೆರಡನೆಯ ಶತಮಾನದಲ್ಲಿ ಕರ್ನಾಟಕ ರಾಜ್ಯದಲ್ಲಿ ನಡೆದ ಸಾಮಾಜಿಕ ಕ್ರಾಂತಿಯ ರೂವಾರಿ ಬಸವಣ್ಣನವರು. ಅಲ್ಲಮಪ್ರಭು, ಅಕ್ಕಮಹಾದೇವಿ, ಮಡಿವಾಳಮಾಚಯ್ಯ, ನೂಲಿನ ಚಂದಯ್ಯ ಮುಂತಾದ ಶಿವಶರಣರ ಕಾಲದಲ್ಲಿಯೇ ಜೀವಿಸಿದ್ದ ಜಗಜ್ಯೋತಿ ಬಸವಣ್ಣನವರ ಪ್ರಭಾವದ ಕಾರಣ ಆ ಕಾಲವನ್ನು ಬಸವಯುಗವೆಂದೇ ಕರೆಯುತ್ತಾರೆ. ಲಿಂಗಾಯತ
1922
https://kn.wikipedia.org/wiki/%E0%B2%92%E0%B2%B0%E0%B2%BF%E0%B2%B8%E0%B3%8D%E0%B2%B8%E0%B2%BE
ಒರಿಸ್ಸಾ
ಒಡಿಶಾ - ಭಾರತದ ಆಗ್ನೇಯ ತೀರದಲ್ಲಿರುವ ರಾಜ್ಯ. ಈ ರಾಜ್ಯದ ರಾಜಧಾನಿ ಭುವನೇಶ್ವರ. ಮಹಾಭಾರತದ ಕಾಲದಲ್ಲಿ "ಕಳಿಂಗ" ಎಂದು ಪ್ರಖ್ಯಾತವಾದ ನಾಡು ಇಂದಿನ ಒಡಿಶಾ. ಒಡಿಶಾ ಬ್ರಿಟೀಷ್ ಇಂಡಿಯಾದ ಒಂದು ಪ್ರಾಂತ್ಯವಾಗಿ ೧ ಎಪ್ರಿಲ್ ೧೯೩೬ರಲ್ಲಿ ರಚಿಸಲಾಯಿತು ಮತ್ತು ಮುಖ್ಯವಾಗಿ ಒಡಿಯಾ ಮಾತಾಡುವ ಜನರಿಂದ ಕೂಡಿತ್ತು. ಆದ್ದರಿಂದ ೧ ಎಪ್ರಿಲ್ ಅನ್ನು ಉತ್ಕಲ ದಿವಸವನ್ನಾಗಿ ಆಚರಿಸಲಾಗುತ್ತದೆ. ಒಡಿಶಾ ವಿಸ್ತೀರ್ಣದಲ್ಲಿ ಭಾರತದ ಒಂಬತ್ತನೆಯ ಅತಿ ದೊಡ್ಡ ರಾಜ್ಯವಾಗಿದೆ ಹಾಗು ಜನಸಂಖ್ಯೆಯಲ್ಲಿ ಹನ್ನೊಂದನೆಯ ಅತಿ ದೊಡ್ಡ ರಾಜ್ಯವಾಗಿದೆ. ಒಡಿಯಾ ರಾಜ್ಯದ ಆಡಳಿತ ಭಾಷೆಯಾಗಿದೆ ಹಾಗು ಅತಿ ಹೆಚ್ಚು ಉಪಯೋಗಿಸಲ್ಪಡುವ ಭಾಷೆಯಾಗಿದೆ. ಒಡಿಶಾ ತುಲನಾತ್ಮಕವಾಗಿ ಸಮತಟ್ಟಾದ ಕರಾವಳಿಯನ್ನು (ಸುಮಾರು ೪೮೦ ಕಿ.ಮೀ.) ಹೊಂದಿದೆ ಪಾರಾದೀಪ್ ನಲ್ಲಿ ಪ್ರಮುಖ ಬಂದರನ್ನು ಹೊಂದಿದೆ. ಕಡಿಮೆಯಗಲದ ಸಮತಟ್ಟಾದ ಕರಾವಳಿಯು ಹಾಗು ಮಹಾನದಿಯ ಮುಖಜ ಭೂಮಿಯು ಬಹುಪಾಲು ಜನಸಂಖ್ಯೆಗೆ ಆಶ್ರಯವಾಗಿದೆ. ಒಡಿಶಾದ ಒಳನಾಡು ಗುಡ್ಡಗಾಡುಗಳಿಂದ ಕೂಡಿದ್ದು ನಿಬಿಡವಲ್ಲದಾಗಿದೆ. ರಾಜ್ಯದ ಅತಿ ಎತ್ತರದ ಸ್ಥಳ ದೇವಮಾಲಿಯಾಗಿದೆ. ಜಗತ್ತಿನ ಅತಿ ಉದ್ದವಾದ ಅಣೆಕಟ್ಟುಗಳಲ್ಲಿ ಒಂದಾದ ಹಿರಾಕುಡ್ ಅಣೆಕಟ್ಟು ಒಡಿಶಾದಲ್ಲಿದೆ. ಒಡಿಶಾ ತೀವ್ರವಾದ ಚಂಡಮಾರುತಗಳಿಗೀಡಾಗಿದೆ. ನೋಡಿ ಹೆಸರು ೨೦೧೧ ನವಂಬರ್ ೪ ರಂದು ಹಿಂದೆ ಇದ್ದ ಒಡಿಶಾ ಎಂಬ ಹೆಸರನ್ನು ಒಡಿಶಾ ಎಂದು ಬದಲಾಯಿಸಲಾಯಿತು.ಒಡಿಶಾ ಎಂಬ ಹಸರು ಸಂಸ್ಕತದ ಒಡ್ರ ದೇಶ ಎಂಬ ಶಬ್ದದಿಂದ ಉತ್ಪತ್ತಿಯಾಗಿದೆ. ಇತಿಹಾಸ ಇತಿಹಾಸ ಪೂರ್ವದಿಂದಲೂ ಒಡಿಶಾದಲ್ಲಿ ಒಡ್ಡೆರಾಜು ಕ್ಷತ್ರಿಯ ರಾಜರು ಹಾಗೂ ಆ ರಾಜವಂಶಸ್ಥರು ಇದ್ದರು. ಇವರ ನಂತರ ಬುಡಕಟ್ಟು ಜನಾಂಗ ವಾಸವಾಗಿದ್ದರು.ಅಧಿಕೃತವಾಗಿ ಒಡಿಸ್ಸಾಕ್ಕೆ ಸುಮಾರು ೫೦೦೦ ವರ್ಷಗಳ ಇತಿಹಾಸವಿದೆ. ಕಳಿಂಗ ಪೂರ್ವದಲ್ಲಿ ಇದನ್ನು ಓಡ್ರ ದೇಶ ಎಂದು ಕರೆಯುತ್ತಿದ್ದರು. ಆ ಸಂದರ್ಭದಲ್ಲಿ ಇದು ಮುಖ್ಯವಾಗಿ ಮಹಾನದಿಯ ಕಣಿವೆ ಪ್ರದೇಶಕ್ಕೆ ಸೀಮಿತವಾಗಿದ್ದಿತು.ಈ ಪ್ರದೇಶವು ಕಳಿಂಗ,ಕೋಶಲ,ಉತ್ಕಲ ಮುಂತಾದ ವಂಶದವರಿಂದ ಆಳಲ್ಪಟ್ಟಿತ್ತು. ಇದರಲ್ಲಿ ಕಳಿಂಗ ವಂಶದ ಬಗ್ಗೆ ವೇದ ಕಾಲದ ಬರಹಗಾರರಿಂದಲೂ ಉಲ್ಲೇಖಿಸಲ್ಪಟ್ಟಿತ್ತು. . ಕ್ರಿಸ್ತಪೂರ್ವ ೬ನೆಯ ಶತಮಾನದಲ್ಲಿ ಬೋದಾಯನ ಋಷಿಯು ಕಳಿಂಗವು ವೈದಿಕ ಸಂಸ್ಕೃತಿಯಿಂದ ಹೊರಗಿದ್ದುದನ್ನು ಉಲ್ಲೇಖಿಸುತ್ತಾರೆ. . ಒಡಿಶಾವು ಪ್ರಪಂಚದ ಇತಿಹಾಸದಲ್ಲಿ ಪ್ರಾಮುಖ್ಯವಾದ ಒಂದು ಘಟನೆಗೆ ಸಾಕ್ಷಿಯಾಗಿದೆ. ಅದುವೇ ಕಳಿಂಗ . ಯುದ್ಧ. ಕ್ರಿಸ್ತಪೂರ್ವ ೨೬೧ರಲ್ಲಿ ನಡೆದ ಈ ಯುದ್ಧದ ಪರಿಣಾಮ ಚಕ್ರವರ್ತಿ ಅಶೋಕನು ಹಿಂಸೆಯನ್ನು ತ್ಯಜಿಸಿ ಬೌದ್ಧಧರ್ಮವನ್ನು ಅನುಸರಿಸಿದ. ಮುಂದಿನ ದಿನಗಳಲ್ಲಿ ಬೌದ್ದಧರ್ಮವು ಭಾರತದಿಂದಾಚೆಗೂ ಪಸರಿಸಲು ಪ್ರೇರಕನಾದ. ಏಪ್ರಿಲ್-ಮೇ-೨೦೧೪ರಲ್ಲಿ ಒಡಿಶಾ ರಾಜ್ಯದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಂದ ಫಲಿತಾಂಶದ ವಿವರ ಈ ಕೆಳಗಿನಂತಿದೆ. ೧೪೭ ಕ್ಷೇತ್ರಗಳಲ್ಲಿ ಪಕ್ಷಗಳು ಪಡೆದ ಸ್ಥಾನಗಳು ಈ ಕೆಳಕಂಡ ಹಾಗೆ ಇವೆ. ಭಾರತೀಯ ಜನತಾ ಪಾರ್ಟಿ- ೧೦ ಸ್ಥಾನಗಳು. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ) - ೧ಸ್ಥಾನ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್- ೧೬ ಸ್ಥಾನಗಳು. ಬಿಜು ಜನತಾದಳ - ೧೧೭ಸ್ಥಾನಗಳು. ಸಮತಾ ಕ್ರಾಂತಿ ದಳ - ೧ ಸ್ಥಾನ. ಸ್ವತಂತ್ರ ಅಭ್ಯರ್ಥಿಗಳು - ೨ ಸ್ಥಾನಗಳು. ಒಟ್ಟು ಸ್ಥಾನಗಳು - ೧೪೭ ಉಲ್ಲೇಖಗಳು ಇದನ್ನೂ ನೋಡಿ ಒಡಿಶಾದ ನೃತ್ಯ ಸಂಪ್ರದಾಯ ಒಡಿಶಾದ ಇತಿಹಾಸ ಒಡಿಶಾದ ಪ್ರಾಗಿತಿಹಾಸ ಒಡಿಶಾದ ವಾಸ್ತುಶಿಲ್ಪ ಒಡಿಶಾದ ಶಾಸನಗಳು ಮತ್ತು ನಾಣ್ಯಗಳು ೨೦೦೯ ಸಾರ್ವತ್ರಿಕ ಚುನಾವಣಾ ಫಲಿತಾಂಶ ಬಾಹ್ಯ ಸಂಪರ್ಕಗಳು ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಒಡಿಶಾ
1923
https://kn.wikipedia.org/wiki/%E0%B2%AC%E0%B2%B8%E0%B2%B5%E0%B2%95%E0%B2%B2%E0%B3%8D%E0%B2%AF%E0%B2%BE%E0%B2%A3
ಬಸವಕಲ್ಯಾಣ
ಬಸವಕಲ್ಯಾಣ ನಗರವು ಕರ್ನಾಟಕ ರಾಜ್ಯದ ಬೀದರ ಜಿಲ್ಲೆಯಲ್ಲಿದೆ. ಬೀದರ್ ನಗರದಿಂದ ಸುಮಾರು 80 ಕಿಲೊಮೀಟರ್ ದೂರದಲ್ಲಿ ಇರುವ ಇದು ರಾಜ್ಯದ ಅತ್ಯಂತ ಐತಿಹಾಸಿಕ ನಗರಗಳಲ್ಲಿ ಒಂದು. ಬಸವಕಲ್ಯಾಣ ತಾಲೂಕಿನ ಸಾಹಿತಿಗಳು ಪೂಜ್ಯ.ಶ್ರೀ.ಷ.ಬ್ರ.ಡಾ.ಚೆನ್ನವೀರ ಶಿವಾಚಾರ್ಯರು ಶರಣಯ್ಯಾ ಕಲ್ಯಾಣ ರೇವಣಸಿದ್ದಪ್ಪ ವಾಂಜರಖೇಡೆ ಮಾತೆ ಸುಜ್ಞಾನಿದೇವಿ ಪಿ.ಬಸವರಾಜ ಚಂದ್ರಕಾಂತ ಪೊಸ್ತೆ ಸರಸ್ವತಿ ವಿ.ಪಾಟೀಲ್ ಡಾ.ಬಾಬುರಾವ ಮುಡಬಿ ಡಾ.ಬಂಡೆಪ್ಪ ಕಾಳಗಿ ಪ್ರೊ.ಸೂರ್ಯಕಾಂತ ಶೀಲವಂತ ಲಕ್ಷ್ಮಣ ಬಾಬಶೆಟ್ಟಿ ಡಾ.ಮಾಯಾದೇವಿ ಜಿ ಮಾಲಿಪಾಟೀಲ್ ದಿ.ಶ್ರೀಕಾಂತ ಪಾಟೀಲ್ ದಿ.ಹಣಮಂತರಾವ ವಿಸಾಜಿ ಎಂ.ಡಿ.ಕಾಡಾದಿ ಜಿ.ಎಸ್.ಮಾಲಿ ಪಾಟೀಲ್ ಮಲ್ಲಿಕಾರ್ಜುನ ಎಂ.ಪಂಚಾಳ ಮಾಣಿಕರೆಡ್ಡಿ ಕೌಡಾಳೆ ಡಾ.ಕೆ.ಎಂ.ಮೇತ್ರಿ ಡಾ.ವಿಜಯಲಕ್ಷ್ಮಿ ಗಡ್ಡೆ ಡಾ.ಚಿತ್ಕಳಾ ಜಿ.ಮಠಪತಿ ಡಾ.ರೋಳೆಕರ ನಾರಾಯಣ ನಾರಾಯಣ ರಾಂಪೂರೆ. ರುಕ್ಮೊದಿನ್ ಇಸ್ಲಾಂಪೂರ ನಾಗೇಂದ್ರ ಆರ್ ಬಿರಾದಾರ ಮಲ್ಲಿನಾಥ ಕೆ.ಹಿರೇಮಠ ಡಾ.ಸತೀಶಕುಮಾರ ಹೊಸಮನಿ ಡಾ.ವೆಂಕಟರೆಡ್ಡಿ ರಾಮರೆಡ್ಡಿ ಭೀಮಶೇನ್ ಗಾಯಕವಾಡ ಡಾ.ರವೀಂದ್ರನಾಥ ನಾರಾಯಣಪುರ ಸೂರ್ಯಕಾಂತ ಸಸಾನೆ. ಪ್ರಭುಲಿಂಗಯ್ಯಾ ಬಿ.ಟಂಕಸಾಲಿಮಠ ಮಾಣಿಕ ಭುರೆ. ದಿ.ಕವಿತಾ ಮಲ್ಲಪ್ಪ ವೀರಣ್ಣ ಮಂಠಾಳಕರ್. ಈಶ್ವರ ತಡೋಳಾ ಡಾ.ಜಯದೇವಿ ಗಾಯಕವಾಡ ಡಾ.ಸಾರಿಕಾದೇವಿ ಕಾಳಗಿ ಎಂ.ಆರ್.ಶ್ರೀಕಾಂತ ಮಚ್ಚೇಂದ್ರ ಪಿ ಅಣಕಲ್ ಲಕ್ಷ್ಮೀಕಾಂತ ಸಿ.ಪಂಚಾಳ ಮೇನಕಾ ಪಾಟೀಲ್ ದೇವೆಂದ್ರ ಕಟ್ಟಿಮನಿ ಅರವಿಂದ ಚಾಂದೆ ನೀತಿನ್ ನೀಲಕಂಠೆ ಬಸವೇಶ್ವರಿ ಕೆ.ದೇಗಲೂರೆ. ವಿವೇಕಾನಂದ ಸಜ್ಜನ ಕೃಪೆ: ' ಬೀದರ ಜಿಲ್ಲಾ ಸಾಹಿತಿಗಳ ಪರಿಚಯ' ಎಂಬ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ. ಲೇಖಕರು: ಮಚ್ಚೇಂದ್ರ ಪಿ ಅಣಕಲ್. ಪ್ರವಾಸೋದ್ಯಮ ಮಚ್ಚೇಂದ್ರ ಅಣಕಲ್ ೩೩ EDITS ವಿಕಿಪೀಡಿಯ ಖಾಸಗಿ ಮಾಹಿತಿಯ ಬಗ್ಗೆ ನಿಲುವು ಬಳಕೆಯ ನಿಬಂಧನೆಗಳುಡೆಸ್ಕ್‌ಟಾಪ್ ಚರಿತ್ರೆ ಹನ್ನೆರಡನೇ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಯ ಪಟ್ಟಣವೇ ಇಂದಿನ ಬಸವ ಕಲ್ಯಾಣ. ಬೀದರ ಜಿಲ್ಲೆಯ ತಾಲ್ಲೂಕು ಕೇಂದ್ರವಾಗಿರುವ ಈ ಊರಿನ ಜನಸಂಖ್ಯೆ ೫೮,೭೪೨ (೨೦೦೧ರ ಭಾರತದ ಜನಗಣತಿಯ ಪ್ರಕಾರ).ಕಲ್ಯಾಣ ಚಾಲುಕ್ಯರ ರಾಜಧಾನಿಯಾಗಿ ಮೆರೆದಿದ್ದ ಕಲ್ಯಾಣದಿ೦ದ ಸುಮಾರು ೨೫೦ ವರುಷಗಳವರೆಗೆ ಆಳ್ವಿಕೆ ನಡೆಸಿದರು. ಉಮಾಪೂರ ಮಂದಿರ ಇದು ಕೂಡ ಬಸವಕಲ್ಯಾಣದಿಂದ 15 ಕಿ.ಮೀ. ದೂರ ಪಶ್ಚಿಮ ದಿಕ್ಕಿಗಿದೆ. ಇಲ್ಲಿ ಉಮಾಮಹೇಶ್ವರ ದೇಗುಲದ ಸಂಕೀರ್ಣವು ಕಾಣಬಹುದಾಗಿದ್ದು ಪೂರ್ತಿ ಜರ್ಝರಿತವಾಗಿದೆ. ಇದು ಕೂಡ ಕಲಾಶಿಲ್ಪ ವೈಭವಕ್ಕೆ ಸಾಕ್ಷಿಯಾಗಿದೆ. (ಶಿಲ್ಪ ಕಲಾ ವೈಭವಕ್ಕೆ ಸಾಕ್ಷಿಯಾಗಿ ನಿಂತಿರು ಉಮಾಮಹೇಶ್ವರ ದೇಗುಲ ಸಂಕೀರ್ಣ ) ಬಸವೇಶ್ವರ ದೇವಾಲಯ ಬಸವಣ್ಣನವರು ಮಾಂಡಲಿಕ ಬಿಜ್ಜಳನೊಂದಿಗೆ ಮಂಗಳವೇಡೆಯಿಂದ ಕಲ್ಯಾಣಪುರಕ್ಕೆ ಬಂದು ಅದನ್ನು ತಮ್ಮ ಕರ್ಮಭೂಮಿಯನ್ನಾಗಿಸಿ ಕೊಂಡರು. ಸಾಮಾಜಿಕ, ಧಾರ್ಮಿಕ ಕ್ರಾಂತಿಯನ್ನು ನಡೆಸಿದರು. ಕಲ್ಯಾಣ ಶರಣರ ನಾಡು, ಭಕ್ತಿಯ ಬೀಡು ಆಯಿತು. ಬಲದೇವ ಮಂತ್ರಿಯ ನಂತರ ಬಸವಣ್ಣನವರಿಗೆ ಪ್ರಧಾನಿ ಹುದ್ದೆಯನ್ನು ನೀಡಲಾಯಿತು. ಅವರು ಬಿಜ್ಜಳ ಅರಸರ ಭಾಂಡಾರಿಯಷ್ಟೇ ಆಗಿರದೆ ಭಕ್ತಿ ಭಾಂಡಾರಿಯೂ ಆದರು. ನೆಲ ಪಾವನವಾಯಿತು. ಜನಮನ ನೆಲೆ ಕಂಡಿತು. ಈ ಆಧುನಿಕ ದೇವಾಲಯ ಸಾಂಸ್ಕೃತಿಕ ಕೇಂದ್ರವೂ ಆಗಿದೆ. (ಚಿತ್ರದಲ್ಲಿ ಕಾಣುತ್ತಿರುವದು ಬೊಮ್ಮಗೊಂಡೇಶ್ವರ ಕೆರೆ) ಪರುಷಕಟ್ಟೆ ಬಸವೇಶ್ವರ ದೇವಾಲಯದ ಸಮೀಪ ಇರುವ ಈ ಸ್ಮಾರಕ ಕಟ್ಟೆಯೊಂದರ ರೂಪದಲ್ಲಿದೆ. ಇದರ ಸಂಬಂಧ ಬಸವಣ್ಣನವರೊಂದಿಗೆ ಇದ್ದಿತೆಂದು ತಿಳಿದುಬರುತ್ತದೆ. ಬಸವಣ್ಣನವರ ಅರಿವಿನ ಮನೆ ಬಸವ ಕಲ್ಯಾಣದ ಹೊರವಲಯದಲ್ಲಿರುವ ಇದು ಸ್ಮಾರಕ ಗುಹೆಯ ಮಾದರಿಯಲ್ಲಿದೆ. ಬಸವಣ್ಣನವರ ಮಹಾಮನೆ ಎಂದೇ ಜನರು ಇದನ್ನು ಕಾಣುತ್ತಾರೆ. ಹಡಪದ ಅಪ್ಪಣನವರ ಗುಹೆ ಅರಿವಿನ ಮನೆಯ ಪಕ್ಕದಲ್ಲಿಯೇ ಈ ಗುಹೆ ಇದ್ದು , ತಂಪಾದ ನೆಲೆಯಾಗಿದೆ. ಹಡಪದ ಅಪ್ಪಣನವರು ಬಸವಣ್ಣನವರ ನಿಕಟವರ್ತಿಗಳಾಗಿದ್ದರು. ತಾಂಬೂಲವನ್ನು ಸಲ್ಲಿಸುವ ಕಾಯಕ ಅವರದ್ದಾಗಿತ್ತೆಂದು ತಿಳಿದುಬರುತ್ತದೆ. ಅಕ್ಕ ನಾಗಮ್ಮ - ನೀಲಮ್ಮನವರ ಗವಿಗಳು ಈ ಎರಡೂ ಗವಿಗಳು ಅಕ್ಕಪಕ್ಕದಲ್ಲಿವೆ. ಚೆನ್ನಬಸವಣ್ಣನವರು ತಮ್ಮ ಬಾಲ್ಯದ ದಿನಗಳನ್ನು ಕಳೆದದ್ದು ಇಲ್ಲಿಯೇ ಎಂಬುದು ಅಭಿಪ್ರಾಯ. ಈ ಗವಿಗಳು ಹನ್ನೆರಡನೇ ಶತಮಾನದ ಮಹಿಳೆಯರ ಆಧ್ಯಾತ್ಮಿಕ ಸಾಧನೆಯ ಕುರುಹುಗಳು.ಐತಿಹಾಸಿಕ ಬಸವಕಲ್ಯಾಣ ಉಲ್ಲೇಖಗಳು ಬೀದರ್ ಜಿಲ್ಲೆಯ ತಾಲೂಕುಗಳು ಲಿಂಗಾಯತ
1924
https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF
ವಿಕಿಪೀಡಿಯ
ವಿಕಿಪೀಡಿಯ (ಇಂಗ್ಲಿಷ್: Wikipedia' ) ಒಂದು ಅಂತರ್ಜಾಲ-ಆಧಾರಿತ ಬಹುಭಾಷೀಯ ವಿಶ್ವಕೋಶವಾಗಿದೆ. ಹಾಗೆಯೇ ಇದು ಒಂದು ವಿಶ್ವಕೋಶೀಯ ಜಾಲತಾಣವು ಸಹ ಆಗಿದೆ. ಇದು ಪ್ರಸ್ತುತ ವಿಕಿಮೀಡ ಫೌ಼ಂಡೇಷನ್ (wikimedia foundation) ಎಂಬ ಅಮೆರಿಕದ ಸ್ಯಾನ್‌ಫ್ರ್ಯಾ಼ನ್ಸಿಸ್ಕೊ ನಗರದಲ್ಲಿ ತನ್ನ ಕೇಂದ್ರಕಾರ್ಯಲಯವನ್ನು ಹೊಂದಿರುವ ಒಂದು ಲಾಬೋದ್ದೇಶರಹಿತ ಹಾಗೂ ದಾನಶೀಲ ಸಂಘಟನೆಯ ಮೇಲ್ವಿಚಾರಣೆಗೆ ಒಳಪಟ್ಟಿದೆ. ಇದರ ಸೇವೆಯು ಉಚಿತವಾಗಿದ್ದು, ಅಂತರಜಾಲ ಸಂಪರ್ಕವನ್ನು ಹೊಂದಿರುವ ಯಾರು ಬೇಕಾದರೂ ಸೇವೆಯನ್ನು ಪಡೆಯಬಹುದಾಗಿದೆ. ಪ್ರಸ್ತುತ ಇದು ಏಳನೇ ಅತಿ ಪ್ರಸಿದ್ಧ ಜಾಲತಾಣವಾಗಿದೆ (ಜನವರಿ ೨೦೧೫ ಕ್ಕೆ ಇದ್ದಂತೆ). ವ್ಯುತ್ಪತ್ತಿ 'ವಿಕಿಪೀಡಿಯ' ಎಂಬ ಪದವು ಒಂದು ಮಿಶ್ರಪದ (Portmanteau word) ಆಗಿದ್ದು, ಹವಾಯಿ ಭಾಷೆಯ 'ವಿಕಿ' (ಅಂದರೆ 'ಶೀಘ್ರ' ಎಂದರ್ಥ) ಹಾಗು ಇಂಗ್ಲಿಷ್‌ನ 'ಎನ್‌ಸೈಕ್ಲೊಪೀಡಿಯ' ಎಂಬ ಎರಡು ಪದಗಳು ಸೇರಿ ರಚನೆಯಾಗಿದೆ. ಚರಿತ್ರೆ ವಿಕಿಪೀಡಿಯವು ಮೂಲತಃ ನ್ಯುಪೀಡಿಯ (Nupedia) ಎಂಬ ಇನ್ನೊಂದು ಇಂಗ್ಲಿಷ್ ವಿಶ್ವಕೋಶೀಯ ಜಾಲತಾಣದ ಯೋಜನೆಯಿಂದ ಮೂಡಿಬಂದಿತು. ಜಿಮ್ಮಿ ವೇಲ್ಸ್ (Jimmy Wales) ಮತ್ತು ಲ್ಯಾರಿ ಸ್ಯಾಂಗರ್ (Larry Sanger) ಎಂಬುವವರು ಇದನ್ನು ಜನವರಿ ೧೫, ೨೦೦೧ ರಂದು ಆರಂಭಿಸಿದರು. ಪ್ರಸ್ತುತ ಇದು ವಿಕಿಮೀಡಿಯ ಫೌಂಡೇಷನ್ ಎಂಬ ಒಂದು ಲಾಭೋದ್ದೆಶರಹಿತ ಸಂಸ್ಥೆಯ ಮೇಲ್ವಿಚಾರಣೆಗೆ ಒಳಪಟ್ಟಿದೆ. ವೈಶಿಷ್ಟ್ಯಗಳು ವಿಕಿಪೀಡಿಯವು ಒಂದು ಬಹುಭಾಷೀಯ ವಿಶ್ವಕೋಶವಾಗಿದ್ದು, ಇದರಲ್ಲಿನ ಲೇಖನಗಳು ಜಗತ್ತಿನ ೨೦೦ ಕ್ಕಿಂತಲು ಹೆಚ್ಚಿನ ಭಾಷೆಗಳಲ್ಲಿ ಲಭ್ಯವಿದೆ. ಇದು ಇತರ ಇಂಗ್ಲಿಷ್ ಅಂತರಜಾಲ-ಆಧಾರಿತ ವಿಶ್ವಕೋಶಗಳ ಪೈಕಿ ಗಾತ್ರದಲ್ಲಿ ಅತ್ಯಂತ ದೊಡ್ಡದಾಗಿದೆ. ಪ್ರಸ್ತುತ ಇದರ ಇಂಗ್ಲಿಷ್ ಆವೃತ್ತಿಯಲ್ಲಿ ೪.೭ ದಶಲಕ್ಷಕ್ಕಿಂತಲೂ ಹೆಚ್ಚಿನ ಲೇಖನಗಳು ಲಭ್ಯವಿದೆ. ಇದರ ಅತಿ ಪ್ರಮುಖ ವೈಶಿಷ್ಟ್ಯವೆಂದರೆ ಇದು ಮುಖ್ತವಾಗಿದ್ದು, ಅಂತರಜಾಲ ಸಂಪರ್ಕವನ್ನು ಹೊಂದಿರುವ ಯಾರು ಬೇಕಾದರೂ ಇದರಲ್ಲಿನ ಲೇಖನಗಳನ್ನು ಪರಿಷ್ಕರಿಸಬಹುದಾಗಿದೆ ಹಾಗೆಯೇ ಹೊಸದಾಗಿ ಲೇಖನಗಳನ್ನು ಸೇರಿಸಲು ಬಹುದಾಗಿದೆ. ಈ ರೀತಿಯ ಬಹಿರಂಗ ವ್ಯವಸ್ಥೆಯ ಕಾರಣದಿಂದ ಇಂದು ಜಗತ್ತಿನ ಹಲವು ವಿಷಯಗಳ ಮಾಹಿತಿಯ ಲೇಖನಗಳು ಇಲ್ಲಿ ಲಭ್ಯವಾಗಲು ಸಾಧ್ಯವಾಗಿದೆ. ವಿಕಿಪೀಡಿಯದಲ್ಲಿನ ಲೇಖನಗಳು ಒಂದಕ್ಕೊಂದು ಬೆಸುಗೆಗೊಂಡಿದ್ದು ಅವು ಪಾರಸ್ಪರಿಕ ಆಕರಗಳನ್ನು ಹೊಂದಿರುತ್ತವೆ. ಗಣಕಯಂತ್ರದ ಮೂಷಿಕವನ್ನು ಯಾವುದಾದರೂ ಬೆಸುಗೆಯ (Link) ಮೇಲೆ ಇರಿಸಿದಾಗ ಆ ಬೆಸುಗೆಯು ಯಾವ ಲೇಖನದ ಬಗ್ಗೆ ಮಾಹಿತಿಗಳನ್ನು ನೀಡಬಲ್ಲದೆಂದು ಸೂಚಿಸುತ್ತದೆ. ಪ್ರತಿಯೊಂದು ಲೇಖನದ ಅಂತ್ಯದಲ್ಲಿಯೂ ಹಲವಾರು ಪ್ರತ್ಯೇಕ ಬೆಸುಗೆಗಳಿದ್ದು, ಅವು ಇತರ ಕುತೂಹಲಕಾರಿ ಲೇಖನಗಳು ಅಥವಾ ಸೂಕ್ತ ಬಾಹ್ಯ ಜಾಲತಾಣಗಳು, ಪುಟಗಳು, ಆಕರ ವಿಷಯಗಳು ಅಥವಾ ನಿರ್ದಿಷ್ಟ ಜ್ಞಾನಕ್ಷೇತ್ರದ ವ್ಯವಸ್ಥಿತ ವಿಭಾಗಗಳ ಬಗ್ಗೆ ಮಾಹಿತಿ ಯನ್ನು ನೀಡಬಲ್ಲವು. ಯಾವುದಾದರೂ ಕೆಲವು ನಿರ್ದಿಷ್ಟ ಬೆಸುಗೆಗಳು ಅಲಭ್ಯವಾಗಿದ್ದಲ್ಲಿ ಅವುಗಳನ್ನು ಸೇರಿಸಲೂ ಸಹ ಇಲ್ಲಿ ಅವಕಾಶವಿದೆ. ಇದರಲ್ಲಿ ಪರಿಷ್ಕರಿಸಿದ ಲೇಖನಗಳು ಓದುಗರಿಗೆ ತಕ್ಷಣವೇ ಕಾಣ ಸಿಗುತ್ತವೆ. ಅಲ್ಲದೆ ಒಂದು ವಿಷಯವನ್ನು ಪ್ರತಿ ಬಾರಿ ಪರಿಷ್ಕರಿಸಿದಾಗಲೂ ಆ ವಿಷಯ ಪುಟದ ಬದಲಾವಣೆಗಳು 'ಇತಿಹಾಸ' ಪುಟದಲ್ಲಿ ದಾಖಲಾಗುತ್ತದೆ. ಇದರಿಂದಾಗಿ ಯಾವುದೇ ಹಿಂದಿನ ಮತ್ತು ಅದರ ನಂತರದ ಆವೃತ್ತಿಯ ಬದಲಾವಣೆಗಳನ್ನು ನೋಡಬಹುದು ಹಾಗು ಅವಶ್ಯವಿಲ್ಲದ ಬದಲಾವಣೆಗಳನ್ನು ತೆಗೆದುಹಾಕಬಹುದು. 'ಚರ್ಚೆ' ಪುಟಗಳು ಹಲವು ಸಂಪಾದಕರ ಕೆಲಸಗಳನ್ನು ಸರಿಯಾಗಿ ರಚಿಸಲು ಸಹಕರಿಸುತ್ತವೆ. ವಿಶ್ವಾಸಾರ್ಹತೆ ವಿಕಿಪೀಡಿಯದಲ್ಲಿನ ದಾಖಲೆಗಳು ಮತ್ತು ಮಾಹಿತಿಗಳನ್ನು ಅವು ಸ್ವಯಂ ಪರಿಪೂರ್ಣವೆಂದು ಭಾವಿಸಬಾರದು. ಅವುಗಳನ್ನು ನಿರಂತರವಾಗಿ ಪರಿಷ್ಕರಣೆ ಹಾಗೂ ಸುಧಾರಣೆಗೆ ಒಳಪಡಿಸಲಾಗುತ್ತಿರುತ್ತದೆ. ಇದರಿಂದ ಕ್ರಮೇಣ ಅವುಗಳ ದರ್ಜೆ ಮತ್ತೆ ಗುಣಮಟ್ಟಗಳ ಮೌಲ್ಯವರ್ಧನೆಗೆ ಸಹಾಯ ವಾಗುತ್ತದೆ. ಇಲ್ಲಿನ ಎಲ್ಲ ಮಾಹಿತಿಗಳೂ ಪ್ರಾರಂಭದಲ್ಲಿಯೇ ಮಾಹಿತಿಕೋಶಿಯ ದರ್ಜೆಯವೆಂದು ಬಳಕೆದಾರರು ಭಾವಿಸಬಾರದು. ಇಲ್ಲಿ ದೊರೆಯುವ ಹಲವಾರು ಮಾಹಿತಿಗಳು ಸತ್ಯದೂರ ಅಥವಾ ಚರ್ಚಾಸ್ಪದ ವಿಷಯಗಳಾಗಿರುವ ಸಾಧ್ಯತೆಗಳಿವೆ. ವಾಸ್ತವವಾಗಿ ಅನೇಕ ಮಾಹಿತಿಗಳು ಕೇವಲ ಒಂದು ದೃಷ್ಟಿಕೋನವನ್ನು ಮಾತ್ರ ಪ್ರತಿನಿಧಿಸಬಹುದು. ವಾದ ವಿವಾದಗಳು ಮತ್ತು ಚರ್ಚೆಗಳಿಂದ ಕೂಡಿದ ಸುದೀರ್ಘ ವೈಚಾರಿಕ ಪ್ರಕ್ರಿಯೆಯ ನಂತರವೇ ಒಂದು ಒಮ್ಮತದ ಮತ್ತು ಅಲಿಪ್ತ ದೃಷ್ಟಿಕೋನವನ್ನು ನಿರ್ಧರಿಸಲಾಗುವುದು. ಅಲ್ಲದೆ ತಜ್ಞ ಪರಿಷ್ಕರಣಕಾರರು ಯಾವುದೇ ಒಂದು ಲೇಖನದ ವಿಷಯ ಅಥವಾ ವಿಧಾನಗಳ ಬಗ್ಗೆ ಅಭಿಪ್ರಾಯ ಭೇದವನ್ನು ತೋರಿದರೆ ಅಂತಹ ಸಂದರ್ಭಗಳಲ್ಲಿ ಅವರು ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಅವರಿಗೆ ನೆರವಾಗಲು ವಿಕಿಪೀಡಿಯಾ ಹಲವಾರು ಆಂತರಿಕ ವಿವಾದ ನಿವಾರಣಾ ಪ್ರಕ್ರಿಯೆಗಳನ್ನು ವ್ಯವಸ್ಥೆಗೂಳಿಸಿದೆ. ವಿಕಿಪೀಡಿಯದಲ್ಲಿನ ಲೇಖನಗಳು ಕೆಲವು ಆದರ್ಶ ಲಕ್ಷಣಗಳನ್ನು ಹೊಂದಿರುತ್ತವೆ. ಅವು ಉತ್ತಮ ಶಬ್ದ ಸಂಪತ್ತಿನಿಂದ ಕೂಡಿದ್ದು ಸಮತೋಲಿತ, ತಟಸ್ಥ ಹಾಗೂ ಮಾಹಿತಿಕೋಶಿಯ ದರ್ಜೆಯ ಮಾಹಿತಿಗಳನ್ನು ಹೊಂದಿರುತ್ತವಲ್ಲದೆ ಅವು ವ್ಯಾಪಕ ಹಾಗೂ ಪುರಾವೆಗಳನ್ನು ಒದಗಿಸಲು ಸಮರ್ಥವಾದ ದಾಖಲೆಗಳಾಗಿರುತ್ತವೆ. ವಿಕಿಪೀಡಿಯದಲ್ಲಿ ಕಂಡು ಬರುವ ಮಾಹಿತಿಗಳನ್ನು ಸಂಶೋಧನ ಆಕರಗಳನ್ನಾಗಿ ಬಳಸಬೇಕಾದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕಾದುದು ಅವಶ್ಯಕ. ಏಕೆಂದರೆ ಇಲ್ಲಿನ ಹಲವಾರು ಲೇಖನಗಳು ಸ್ವಾಭಾವಿಕವಾಗಿ ತಮ್ಮ ಪ್ರಬುದ್ಧತೆ ಮತ್ತು ಬೌದ್ಧಿಕ ದರ್ಜೆಗಳಲ್ಲಿ ಗಣನೀಯ ಪ್ರಮಾಣದ ಏರುಪೇರುಗಳನ್ನು ತೋರಿಸಬಹುದು. ಸಂಶೋಧಕರು ಈ ಬಗ್ಗೆ ಜಾಗೃತರಾಗುವಂತೆ ನೆರವಾಗಲು ಹಲವಾರು ಮಾರ್ಗಸೂಚಿಗಳು ಮತ್ತು ಸೂಚನಾಪುಟಗಳನ್ನು ವ್ಯವಸ್ಥೆಗೂಳಿಸಲಾಗಿದೆ. ವಿಕಿಪೀಡಿಯದಲ್ಲಿನ ಮಾಹಿತಿಗಳನ್ನು ಯಾರು ಬೇಕಾದರೂ ಪರಿಷ್ಕರಿಸಲು ಸಾಧ್ಯವಿರುವುದರಿಂದ ಕೆಲವು ತಪ್ಪು ಮಾಹಿತಿಗಳು ಸೇರ್ಪಡೆಯಾಗುವ ಹಾಗೂ ಸೇರ್ಪಡೆಯಾಗಿರುವ ಸಾಧ್ಯತೆಗಳೂ ಉಂಟು. ಹಾಗಾಗಿ ಅಂತಹ ಮಾಹಿತಿಗಳನ್ನು ತಗೆದುಕೊಳ್ಳುವಾಗ ಎಚ್ಚರಿಕೆ ವಹಿಸಬೇಕಾಗುತ್ತದೆ. ಆಗಾಗ್ಗೆ ತಲೆದೋರಬಹುದಾದ ದುರ್ಬಳಕೆ ಅಥವಾ ವಿವಾದಗಳನ್ನು ಪರಿಹರಿಸಲು ವಿಕಿಪೀಡಿಯಾ ಸಮೃದ್ಧವಾದ ವಿಧಾನಗಳನ್ನು ಹೂಂದಿದೆ. ಆ ವಿಧಾನಗಳನ್ನು ತೀವ್ರ ಪರೀಕ್ಷೆಗಳಿಗೆ ಒಳಪಡಿಸಲಾಗಿದ್ದು, ಅವುಗಳ ವಿಶ್ವಾಸಾರ್ಹತೆ ಅತಿ ಉನ್ನತ ಮಟ್ಟದ್ದಾಗಿದೆ. ವಿಕಿಪೀಡಿಯಾದಲ್ಲಿರುವ ಮಾಹಿತಿಗಳ ವಿವರ ವಿಕಿಪೀಡಿಯಾದಲ್ಲಿರುವ ಮಾಹಿತಿಗಳನ್ನು ವಗೀ‍ಕರಿಸಿದಾಗ ಅವುಗಳಲ್ಲಿ ಸಂಸ್ಕ್ರತಿ ಮತ್ತು ಕಲೆ - ೩೦% ವ್ಯಕ್ತಿಗಳ ಚರಿತ್ರೆ - ೧೫% ಬೌಗೋಳಿಕ ಮತ್ತು ಸ್ಥಳ ಮಾಹಿತಿ -14% ಸಮಾಜ ಮತ್ತು ಸಮಾಜ ವಿಜ್ಞಾನ - ೧೨ % ಐತಿಹಾಸಿಕ ಘಟನೆಗಳು - ೧೧% ನೈಸರ್ಗಿಕ ಮತ್ತು ಬೌತ ವಿಜ್ಞಾನ - ೯% ತಂತ್ರಜ್ಞಾನ ಮತ್ತು ಅನ್ವಯಿಕ ವಿಜ್ಞಾನ - ೪% ಧರ್ಮ ಮತ್ತು ನಂಬಿಕೆ - ೨% ಆರೋಗ್ಯ - ೨% ಗಣಿತ ಮತ್ತು ಅದರ ತಂತ್ರಗಳು - ೧% ಚಿಂತನೆಗಳು ಮತ್ತು ತತ್ವಶಾಸ್ತ್ರ - ೧% ಉಲ್ಲೇಖಗಳು
1928
https://kn.wikipedia.org/wiki/%E0%B2%AA%E0%B3%81%E0%B2%A3%E0%B3%86
ಪುಣೆ
ಪುಣೆ ಭಾರತದ ಮಹಾರಾಷ್ಟ್ರ ರಾಜ್ಯದ ಒಂದು ಪ್ರಮುಖ ನಗರ. ಮಹಾರಾಷ್ಟ್ರದ ಪಶ್ಚಿಮ ಭಾಗದಲ್ಲಿ, ಮುಳಾ ಮತ್ತು ಮುಠಾ ಎಂಬ ನದಿಗಳ ದಂಡೆಯಲ್ಲಿರುವ ಈ ನಗರವು ಪುಣೆ ಜಿಲ್ಲೆಯ ಜಿಲ್ಲಾ ಕೇಂದ್ರವೂ ಆಗಿದೆ. ಪುಣೆ ಮಹಾರಾಷ್ಟ್ರದ ಎರಡನೆಯ ಹಾಗೂ ಭಾರತದ ಏಳನೆಯ ಅತಿದೊಡ್ಡ ನಗರ. ಅನೇಕ ಪ್ರಸಿದ್ಧ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಗಳು ಇಲ್ಲಿರುವ ಕಾರಣ ಇದನ್ನು " ಪೂರ್ವದ ಆಕ್ಸ್‍ಫರ್ಡ್" ಎಂದೂ ಕರೆಯಲಾಗುತ್ತದೆ. ಅನೇಕ ವಾಹನ ಹಾಗೂ ಇಂಜಿನಿಯರಿಂಗ್ ಸಂಬಂಧಪಟ್ಟ ದೊಡ್ಡ ಕೈಗಾರಿಕೆಗಳಿಗೆ ನೆಲೆಯಾಗಿರುವ ಪುಣೆ ದೊಡ್ಡ ಔದ್ಯಮಿಕ ಕೇಂದ್ರವೂ ಹೌದು. ಕಳೆದ ಒಂದೆರಡು ದಶಕಗಳಲ್ಲಿ ಪುಣೆ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಉದ್ಯಮಕ್ಕಾಗಿಯೂ ಹೆಸರಾಗಿದೆ. ೨೦೦೧ರ ಜನಗಣತಿಯ ಪ್ರಕಾರ ಪುಣೆಯ ಜನಸಂಖ್ಯೆ ೪೫ ಲಕ್ಷ. ಬಹಳ ಹಳೆಯ ಇತಿಹಾಸವಿರುವ ಪುಣೆ ಮಹಾರಾಷ್ಟ್ರದ ಸಾಂಸ್ಕೃತಿಕ ರಾಜಧಾನಿ ಎಂದೂ ಹೆಸರಾಗಿದೆ. ಇಲ್ಲಿಯ ಮುಖ್ಯ ಭಾಷೆ ಮರಾಠಿ. ಹೆಸರಿನ ಮೂಲ ಪುಣೆ ನಗರದ ಹೆಸರು ಪುಣ್ಯನಗರಿ ಎಂಬ ಶಬ್ದದಿಂದ ಬಂದಿರಬೇಕು ಎಂದು ನಂಬಲಾಗಿದೆ. ಕ್ರಿ.ಶ. ೮ನೆಯ ಶತಮಾನದಲ್ಲಿ ಈ ಊರನ್ನು ಪುನ್ನಕ (ಅಥವಾ ಪುಣ್ಯಕ) ಎಂಬ ಹೆಸರಿನಿಂದ ಉಲ್ಲೇಖಿಸಿರುವುದು ದಾಖಲೆಗಳಲ್ಲಿ ಕಾಣಬರುತ್ತದೆ. ಕ್ರಿ.ಶ.೧೧ನೆಯ ಶತಮಾನದಲ್ಲಿ ಕಸಬೇ ಪುಣೆ ಮತ್ತು ಪುನವಾಡಿ ಎಂಬ ಉಲ್ಲೇಖವೂ ಕಾಣಬರುತ್ತದೆ. ಮರಾಠಾ ಸಾಮ್ರಾಜ್ಯದ ಕಾಲದಲ್ಲಿ ಇದನ್ನು ಪುಣೆ ಎಂದು ಸಂಭೋದಿಸಲಾಗುತ್ತಿತ್ತು. ಮುಂದೆ ಬ್ರಿಟಿಷರ ಬಾಯಲ್ಲಿ ಇದು ಪೂನಾ ಎಂದಾಯಿತು. ಪುಣೆ ಈಗಿನ ಅಧಿಕೃತ ಹೆಸರು . ಇತಿಹಾಸ ಈ ನಗರದ ಬಗ್ಯೆ ಮೊಟ್ಟಮೊದಲ ಉಲ್ಲೇಖ ಕ್ರಿ.ಶ. ೭೫೮ರ ರಾಷ್ಟ್ರಕೂಟರ ಆಳ್ವಿಕೆಯ ಕಾಲದಲ್ಲಿ ಕಾಣಬರುತ್ತದೆ. ಇಂದಿಗೂ ಪುಣೆಯ ಜಂಗಲೀ ಮಹಾರಾಜ ರಸ್ತೆಯಲ್ಲಿರುವ ಪಾತಾಳೇಶ್ವರ ಗುಹಾ ದೇವಾಲಯ ೭ನೆಯ ಶತಮಾನದಷ್ಟು ಹಳೆಯದು. ೧೭ನೆಯ ಶತಮಾನದವರೆಗೆ ಈ ಪಟ್ಟಣವು ನಿಜಾಮ ಶಾಹಿ, ಆದಿಲ ಶಾಹಿ, ಮುಘಲರು ಇತ್ಯಾದಿ ರಾಜ್ಯಗಳ ಅಧೀನದಲ್ಲಿತ್ತು. ೧೭ನೆಯ ಶತಮಾನದಲ್ಲಿ ಸತಾರಾದ ಶಹಾಜಿರಾಜೆ ಭೋಸ್ಲೇಗೆ ಪುಣೆ ನಗರವನ್ನು ನಿಜಾಮ ಶಹಾನು ಜಹಗೀರು ಕೊಟ್ಟನು. ಈ ಜಹಗೀರಿನಲ್ಲಿ ಶಹಾಜಿಯ ಹೆಂಡತಿ ಜೀಜಾಬಾಯಿಯು ನೆಲೆಸಿದ್ದಾಗ, ೧೬೨೭ರಲ್ಲಿ ಶಿವನೇರಿ ಕೋಟೆಯಲ್ಲಿ ಶಿವಾಜಿರಾಜೆ ಭೋಸ್ಲೆಯ ಜನನವಾಯಿತು. ತನ್ನ ಸಂಗಡಿಗರೊಂದಿಗೆ ಪುಣೆ ನಗರದ ಆಸುಪಾಸಿನಲ್ಲಿ ಪ್ರವರ್ಧಮಾನಕ್ಕೆ ಬಂದ ಶಿವಾಜಿಯು ಮುಂದೆ ಮರಾಠಾ ಸಾಮ್ರಾಜ್ಯವನ್ನು ಸ್ಥಾಪಿಸಿದ. ಮುಂದೆ ಪೇಶವಾಗಳ ಕಾಲದಲ್ಲಿ ಛತ್ರಪತಿಯ ರಾಜಧಾನಿ ಸತಾರಾಕ್ಕೆ ಬದಲಾದರೂ, ಪುಣೆಯು ಆಡಳಿತಾತ್ಮಕ ರಾಜಧಾನಿಯಾಗಿ ಮುಂದುವರೆಯಿತು. ಪೇಶವಾಯಿಯ ಕಾಲದಲ್ಲಿ ಪುಣೆ ನಗರ ಭರದಿಂದ ಬೆಳೆಯಿತು. ಮರಾಠಾ ಸಾಮ್ರಾಜ್ಯ ಶಿವಾಜಿ ಮಹಾರಾಜನ ಜೀವನದಲ್ಲಿ ಹಾಗೂ ಮರಾಠಾ ಇತಿಹಾಸದಲ್ಲಿ ಪುಣೆ ನಗರಕ್ಕೆ ಮಹತ್ವದ ಸ್ಥಾನವಿದೆ. ಕ್ರಿ.ಶ. ೧೬೩೫-೩೬ರ ಸುಮಾರಿನಲ್ಲಿ ಜೀಜಾಬಾಯಿಯು ಪುಣೆಯಲ್ಲಿ ನೆಲೆಸಲು ಬಂದಾಗಿನಿಂದ ಪುಣೆಯ ಇತಿಹಾಸದಲ್ಲಿ ಹೊಸ ಪರ್ವವೇ ಪ್ರಾರಂಭವಾಯಿತು. ಪುಣೆಯ ಲಾಲ್ ಮಹಲ್ ಎಂಬ ಅರಮನೆಯಲ್ಲಿ ಶಿವಾಜಿ ಮತ್ತು ಜೀಜಾಬಾಯಿಯ ವಾಸ್ತವ್ಯವಿತ್ತು. ಪುಣೆಯ ಊರದೇವರು - ಕಸಬಾ ಗಣಪತಿಯನ್ನು ಸ್ಥಾಪಿಸಿದವಳು ಜೀಜಾಬಾಯಿ. ೧೭ನೆಯ ಶತಮಾನದಲ್ಲಿ ಛತ್ರಪತಿ ಶಾಹು ಮಹಾರಾಜನ ಪ್ರಧಾನಮಂತ್ರಿ, ಪೇಶವೇ ಬಾಜೀರಾಯನು, ಮುಠಾ ನದಿಯ ದಂಡೆಯಲ್ಲಿ ಶನಿವಾರವಾಡೆಯನ್ನು ಕಟ್ಟಿ ಅಲ್ಲಿಯೇ ನೆಲೆಸಿದ. ಖರಡಾದ ಐತಿಹಾಸಿಕ ಕೋಟೆಯಲ್ಲಿ ೧೭೯೫ರಲ್ಲಿ ನಿಜಾಮನಿಗೂ ಮರಾಠರಿಗೂ ಯುದ್ಧವಾಯಿತು. ೧೮೯೭ರ ಖಡಕಿ ಯುದ್ಧದಲ್ಲಿ ಮರಾಠರು ಬ್ರಿಟಿಷರೊಂದಿಗಿನ ಯುದ್ಧದಲ್ಲಿ ಪರಾಜಿತರಾದ ಮೇಲೆ ಪುಣೆ ನಗರವು ಬ್ರಿಟಿಷರ ಕೈ ಸೇರಿತು. ಪುಣೆಯ ಮಹತ್ವವನ್ನು ಮನಗಂಡ ಬ್ರಿಟಿಷರು ಖಡಕಿಯಲ್ಲಿ ಸೇನಾ ಕಂಟೋನ್ಮೆಂಟ್ ಅನ್ನು ಸ್ಥಾಪಿಸಿದರು. ೧೮೫೮ರಲ್ಲಿ ಪುಣೆ ನಗರಪಾಲಿಕೆ ಸ್ಥಾಪನೆಯಾಯಿತು. ೧೯ನೆಯ ಶತಮಾನದ ಉತ್ತರಾರ್ಧದಲ್ಲಿ ಪುಣೆಯಲ್ಲಿ ಅನೇಕ ಶೈಕ್ಷಣಿಕ ಸಂಸ್ಥೆಗಳು ಪ್ರಾರಂಭವಾಗಿ ಪುಣೆ ಶಿಕ್ಷಣ ಕೇಂದ್ರವಾಗಿ ಹೆಸರಾಗಲು ಅಡಿಪಾಯ ಹಾಕಿದವು. ಸ್ವಾತಂತ್ರ ಹೋರಾಟದಲ್ಲಿ ಭಾರತದ ಸ್ವಾತಂತ್ರ ಹೋರಾಟ ಮತ್ತು ಸಮಾಜಸುಧಾರಣೆಗಳಲ್ಲಿ ಪುಣೆಯ ಸ್ಥಾನ ವಿಶಿಷ್ಟವಾದದ್ದು. ಲೋಕಮಾನ್ಯ ತಿಲಕ್ ಮತ್ತು ಸಾವರಕರರು ಸುಮಾರು ಏಳು ದಶಕಗಳ ಕಾಲ ತಮ್ಮ ರಾಜಕೀಯ ಚಟುವಟಿಕೆಗಳಿಂದ ಪುಣೆಯ ಮಹತ್ವವನ್ನು ಉಳಿಸಿ, ಬೆಳೆಸಿದರು. ಮಹಾದೇವ ಗೋವಿಂದ ರಾನಡೆ, ರಾ.ಗ.ಭಂಡಾರ್ಕರ್, ವಿಠ್ಠಲ ರಾಮಜೀ ಶಿಂದೆ, ಗೋಪಾಲ ಕೃಷ್ಣ ಗೋಖಲೆ, ಮಹಾತ್ಮಾ ಫುಲೆ ಇತ್ಯಾದಿ ಸಮಾಜ ಸುಧಾರಕರ ಮತ್ತು ರಾಷ್ಟ್ರ ಮಟ್ಟದ ನಾಯಕರ ಕಾರ್ಯಕೇಂದ್ರವೂ ಪುಣೆಯಾಗಿತ್ತು. ಭೂಗೋಳ ಪುಣೆ ನಗರದ ಮಧ್ಯಬಿಂದು (Zero milestone) ನಗರದ ಜಿ.ಪಿ.ಓ ಹೊರಗಿದೆ. ಸಹ್ಯಾದ್ರಿ ಪರ್ವತಶ್ರೇಣಿಯ ಪೂರ್ವದಲ್ಲಿ , ಸಮುದ್ರಮಟ್ಟದಿಂದ ೫೬೦ ಮೀಟರ್ (೧೮೩೭ ಅಡಿ) ಎತ್ತರದಲ್ಲಿರುವ ಪುಣೆ, ಭೀಮಾ ನದಿಯ ಉಪನದಿಗಳಾದ ಮುಳಾ ಮತ್ತು ಮುಠಾ ನದಿಗಳ ದಂಡೆಯಮೇಲಿದೆ. ಪವನಾ ಮತ್ತು ಇಂದ್ರಾಯಣಿ ನದಿಗಳು ಈ ನಗರದ ಉತ್ತರ - ಪಶ್ಚಿಮ ದಿಕ್ಕಿನಲ್ಲಿ ಹರಿಯುತ್ತವೆ. ಸಮುದ್ರಮಟ್ಟದಿಂದ ೮೦೦ ಮೀಟರ್ ಎತ್ತರದಲ್ಲಿರುವ ವೇತಾಳ ಟೇಕಡಿ ನಗರದ ಅತಿ ಎತ್ತರದ ತಾಣ. ಶಿವಾಜಿಯ ಇತಿಹಾಸದ ಅವಿಭಾಜ್ಯ ಅಂಗ , ೧೩೦೦ ಮೀಟರ್ ಎತ್ತರದಲ್ಲಿರುವ , ಸಿಂಹಗಡ ಕೋಟೆಯು ಪುಣೆಯ ಸಮೀಪದಲ್ಲಿದೆ. ಕೊಯ್ನಾ ಭೂಕಂಪವಲಯದ ವ್ಯಾಪ್ತಿಯಲ್ಲಿ ಬರುವ ಪುಣೆಯಲ್ಲಿ ಮಧ್ಯಮ ಸ್ತರದ ಹಾಗೂ ಲಘು ಭೂಕಂಪಗಳು ಆದದ್ದುಂಟು. ಕಾತ್ರಜದಲ್ಲಿ ೨೦೦೪ರ ಮೇ ೧೭ರಂದು ರಿಚ್ಟರ್ ಮಾಪನದಲ್ಲಿ ೩.೨ರಷ್ಟಿದ್ದ ಭೂಕಂಪವಾಗಿತ್ತು. ಪೇಟೆ ಪುಣೆ "ಪೇಟೆ"ಗಳ ನಗರ. ನದಿಯ ದಡದಲ್ಲಿ ಹರಡಿಕೊಂಡಿದ್ದ ನಗರವು , ಹೊಸಹೊಸ ಪೇಟೆಗಳ ಹೆಸರು ಹೊತ್ತು ಬೆಳೆಯತೊಡಗಿತು. ಈ ಪೇಟೆಗಳ ಹೆಸರು ವಾರದ ದಿನಗಳಿಂದ, ಐತಿಹಾಸಿಕ ಕಾರಣಗಳಿಂದ ಹೆಸರು ಪಡೆದುಕೊಂಡಿವೆ. ಪುಣೆಯ ಪೇಟೆಗಳ ಪಟ್ಟಿ ಇಂತಿದೆ. ಕಸಬಾ ಪೇಟೆ ರವಿವಾರ ಪೇಟೆ ಸೋಮವಾರ ಪೇಟೆ ಮಂಗಳವಾರ ಪೇಟೆ ಬುಧವಾರ ಪೇಟೆ ಗುರುವಾರ ಪೇಟೆ ಶುಕ್ರವಾರ ಪೇಟೆ ಶನಿವಾರ ಪೇಟೆ ಗಂಜ ಪೇಟೆ (ಮಹಾತ್ಮಾ ಫುಲೆ ಪೇಟೆ) ಸದಾಶಿವ ಪೇಟೆ ನವೀ ಪೇಟೆ ನಾರಾಯಣ ಪೇಟೆ ಭವಾನಿ ಪೇಟೆ ನಾನಾ ಪೇಟೆ ರಾಸ್ತಾ ಪೇಟೆ ಗಣೇಶ ಪೇಟೆ ವೇತಾಳ ಪೇಟೆ ( ಈಗಿಲ್ಲ) ಸೇನಾದತ್ತ ಪೇಟೆ ಉಪನಗರಗಳು ಪುಣೆಯ ಉಪನಗರಗಳು ಕೋಥರೂಡ್ ಕಾತ್ರಜ್ ಔಂಧ್ ಕೋರೆಗಾಂವ್ ಪಾರ್ಕ್ ಯೆರವಡಾ ಧನಕವಾಡಿ ಬಿಬ್ವೇವಾಡಿ ಕ್ಯಾಂಪ್ ಕೋಂಢ್ವಾ ವಾರಜೇ ಮಾಳವಾಡಿ ದಾಪೋಡೀ ಖಡಕೀ ಪಾಷಾಣ ಬಾಣೇರ್ ಖರಾಡಿ ಹವಾಮಾನ ನಗರದಲ್ಲಿ ಮಳೆಗಾಲ, ಬೇಸಿಗೆ ಮತ್ತು ಚಳಿಗಾಲ ಪ್ರಧಾನವಾಗಿ ಅನುಭವಕ್ಕೆ ಬರುತ್ತವೆ. ಬೇಸಿಗೆಕಾಲ ಮಾರ್ಚಿನಿಂದ ಮೇವರೆಗೆ ಇದ್ದು ಉಷ್ಣಾಂಶ ಸುಮಾರು ೨೫ ರಿಂದ ೨೯ ಡಿಗ್ರಿ ಸೆಂಟಿಗ್ರೇಡು ಇರುತ್ತದೆ. ಏಪ್ರಿಲ್ಲಿನಲ್ಲಿ ಬಿಸಿಲಿನ ಧಗೆ ಅತಿಹೆಚ್ಚಿರುತ್ತದೆ.ಪುಣೆಯಲ್ಲಿ ರಾತ್ರಿಯ ಉಷ್ಣಾಂಶ ಸಾಕಷ್ಟು ಕಡಿಮೆಯಿರುತ್ತದೆ. ಜೂನಿನಲ್ಲಿ ಅರಬೀ ಸಮುದ್ರದ ಕಡೆಯಿಂದ ಬರುವ ಮುಂಗಾರಿನಿಂದ ಮಳೆಗಾಲ ಆರಂಭವಾಗುತ್ತದೆ. ವರ್ಷಕ್ಕೆ ಸರಾಸರಿ ೭೨೨ ಮಿಲಿಮೀಟರ್ ಮಳೆ ಸುರಿಯುತ್ತದೆ. ಮಳೆಯ ಪ್ರಮಾಣ ಅತಿ ಹೆಚ್ಚಿಲ್ಲದಿದ್ದರೂ ಕೆಲವೊಮ್ಮೆ ಪುಣೆ ನಗರದ ಜನಜೀವನವನ್ನು ಅಸ್ತವ್ಯಸ್ತ ಮಾಡುವುದು ಅಪರೂಪವಲ್ಲ.ಮಳೆಗಾಲದ ಉಷ್ಣಾಂಶ ೨೦ ರಿಂದ ೨೮ ಡಿಗ್ರಿ ಸೆಂಟಿಗ್ರೇಡು ಇರುತ್ತದೆ. ಅಕ್ಟೋಬರ್ ಸುಮಾರಿಗೆ ಹಗಲಿನ ಉಷ್ಣಾಂಶ ಹೆಚ್ಚಿದ್ದು ರಾತ್ರಿ ತಂಪಾಗುತ್ತದೆ. ನವೆಂಬರಿನಿಂದ ಪ್ರಾರಂಭವಾಗುವ ಚಳಿಗಾಲ ಫೆಬ್ರುವರಿಯವರೆಗೂ ಇರುತ್ತದೆ. ಪುಣೆ ಪ್ರವಾಸಕ್ಕೆ ಇದು ಪ್ರಶಸ್ತ ಕಾಲ. ಹಗಲು ೨೯ ಡಿಗ್ರಿ ಸೆಂಟಿಗ್ರೇಡಿನಷ್ಟು ಬಿಸಿಯಿದ್ದು, ರಾತ್ರಿ ಇದು ೧೦ ಡಿಗ್ರಿ ಸೆಂಟಿಗ್ರೇಡಿಗಿಂತಲೂ ಕಡಿಮೆಯಾಗುತ್ತದೆ. ಡಿಸೆಂಬರ್, ಜನವರಿಯಲ್ಲಂತೂ ಉಷ್ಣಾಂಶ ೫-೬ ಡಿಗ್ರಿ ಸೆಂಟಿಗ್ರೇಡಿಗೆ ಇಳಿಯುತ್ತದೆ. ಪುಣೆಯಲ್ಲಿ ಅತಿ ಹೆಚ್ಚು ತಾಪಮಾನ ೪೩.೩ ಡಿಗ್ರಿ ಸೆಂಟಿಗ್ರೇಡು ಏಪ್ರಿಲ್ ೨೦, ೧೯೮೭-೮೮ರಂದು ದಾಖಲಾಗಿತ್ತು. ಅಂತೆಯೇ ಅತಿ ಕಡಿಮೆ ತಾಪಮಾನ ೧.೭ ಡಿಗ್ರಿ ಸೆಂಟಿಗ್ರೇಡು ಜನವರಿ ೧೭ ೧೯೩೫ರಲ್ಲಿ ದಾಖಲಾಗಿತ್ತು. ಈಚೆಗೆ ಅಂದರೆ ೧೯೯೧ರ ಜನವರಿಯಲ್ಲಿ ಉಷ್ಣಾಂಶ ೨.೮ ಡಿಗ್ರಿ ಸೆಂಟಿಗ್ರೇಡಿಗೆ ಕುಸಿದಿತ್ತು. ಜೀವವೈವಿಧ್ಯ ಪುಣೆ ನಗರದ ೨೫ ಕಿ.ಮೀ. ಆಸುಪಾಸಿನಲ್ಲಿ ಸುಮಾರು ೧,೦೦೦ ಹೂಬಿಡುವ ಸಸ್ಯವರ್ಗವೂ, ೨೦೪ ಚಿಟ್ಟೆಯಂಥಾ ಪ್ರಾಣಿಗಳೂ, ೩೫೦ ಪಕ್ಷಿಗಳೂ, ಮತ್ತು ೬೪ ಸಸ್ತನಿಗಳ ಪ್ರಬೇಧಗಳು ಕಾಣಸಿಗುತ್ತವೆ. ಉದ್ಯಮ ಮಹಾರಾಷ್ಟ್ರದಲ್ಲಿ ಮುಂಬೈಯನ್ನು ಬಿಟ್ಟರೆ , ಪುಣೆ ಅತಿ ದೊಡ್ಡ ಔದ್ಯಮಿಕ ಕೇಂದ್ರ. ಪ್ರಪಂಚದಲ್ಲಿ ಅತಿ ಹೆಚ್ಚು ದ್ವಿಚಕ್ರ ವಾಹನಗಳನ್ನು ತಯಾರಿಸುವ ಬಜಾಜ್ ಆಟೋ, ಭಾರತದಲ್ಲಿಯೇ ಅತಿ ಹೆಚ್ಚು ಪ್ರವಾಸೀ ಮತ್ತು ಔದ್ಯೋಗಿಕ ವಾಹನಗಳನ್ನು ತಯಾರಿಸುವ ಟಾಟಾ ಮೋಟರ್ಸ್ ಇವುಗಳ ಕಾರ್ಖಾನೆಗಳಿರುವುದು ಪುಣೆಯಲ್ಲಿ. ಇದಲ್ಲದೆ ಕೈನೆಟಿಕ್, ಡೈಮ್ಲರ್- ಕೈಸ್ಲರ್ , ಫೋರ್ಸ್ ಮೋಟರ್ಸ್ ಇತ್ಯಾದಿ ದೊಡ್ಡ ವಾಹನ ಉದ್ಯಮಗಳಿಗೂ ಪುಣೆ ನೆಲೆಯಾಗಿದೆ. ಪುಣೆ ಇಂಜಿನಿಯರಿಂಗ್ ಉದ್ಯಮಕ್ಕೂ ಹೆಸರುವಾಸಿಯಾಗಿದೆ. ಜಗತ್ತಿನಲ್ಲಿಯೇ ಎರಡನೇ ಅತಿ ದೊಡ್ಡ ಫೋರ್ಜಿಂಗ್ ಕಂಪನಿ - ಭಾರತ್ ಫೋರ್ಜ್, ಕಮಿನ್ಸ್ ಎಂಜಿನ್ಸ್, ಅಲ್ಫಾ ಲಾವಲ್, ಥರ್ಮ್ಯಾಕ್ಸ್, ಸ್ಯಾಂಡ್ವಿಕ್ ಏಶಿಯಾ, ಥೈಸನ್ ಕ್ರುಪ್ (ಮೊದಲಿನ ಬಖಾವ್ ವೂಲ್ಫ್) , ಕೆಎಸ್‍ಬಿ ಪಂಪ್ಸ್, ಫೋರ್ಬ್ಸ್ ಮಾರ್ಶಲ್ ಇವೇ ಮೊದಲಾದ ನಾಮಾಂಕಿತ ಉದ್ಯಮಗಳೂ ಪುಣೆಯಲ್ಲಿವೆ. ವಿದ್ಯುತ್ ಮತ್ತು ಗೃಹೋಪಯೋಗಿ ಉಪಕರಣಗಳನ್ನು ನಿರ್ಮಿಸುವ ವರ್ಲ್‍ಪೂಲ್ ಮತ್ತು ಎಲ್.ಜಿ., ಖಾದ್ಯ ಪದಾರ್ಥಗಳನ್ನು ತಯಾರಿಸುವ ಫ್ರಿಟೋ ಲೇಸ್ (ಕೋಕಾ ಕೋಲಾ ಕಂಪನಿ) ಇತ್ಯಾದಿ ಇತರ ಉದ್ಯೋಗಗಳು ಪುಣೆಯಲ್ಲಿವೆ. ಇವಲ್ಲದೆ ಮಧ್ಮ ಮತ್ತು ಲಘು ಉದ್ಯಮಗಳೂ ವಿಪುಲವಾಗಿವೆ. ೧೯೯೦ ದಶಕದಲ್ಲಿ ಪ್ರಾಂಭವಾದ ಹಿಂಜವಾಡಿಯ ರಾಜೀವ ಗಾಂಧಿ ಐ.ಟಿ. ಪಾರ್ಕ್ , ಮಗರಪಟ್ಟಾದ ಸೈಬರ್ ಸಿಟಿ, ತಳವಡೆಯ ಎಮ್.ಐ.ಡಿ.ಸಿ ಸಾಫ್ಟ್‍ವೇರ್ ಪಾರ್ಕ್, ಕಲ್ಯಾಣಿ ನಗರದ ಮೆರಿಸಾಫ್ಟ್ ಐ.ಟಿ. ಪಾರ್ಕ್ ಇವೇ ಮೊದಲಾದವುಗಳಿಂದ ಸಾಫ್ಟ್‍ವೇರ್ ರಂಗದಲ್ಲಿಯೂ ಪುಣೆ ಭರದಿಂದ ಬೆಳೆಯತೊಡಗಿದೆ. ಭಾರತದ ಪ್ರಸಿದ್ಧ ಕಂಪನಿಗಳಾದ ಇನ್ಫೋಸಿಸ್, ವಿಪ್ರೋ, ಟೀ.ಸಿ.ಎಸ್, ಟೆಕ್ ಮಹೀಂದ್ರ, ಸತ್ಯಮ್, ಐಫ್ಲೆಕ್ಸ್ , ಇವಲ್ಲದೆ ಬಹುರಾಷ್ಟ್ರೀಯ ಕಂಪನಿಗಳಾದ ಐ.ಬಿ.ಎಮ್, ಸೀಮನ್ಸ್, ರೆಡ್ ಹ್ಯಾಟ್, ಏ.ಡಿ.ಎಸ್, ಮೊದಲಾದವುಗಳು ತಮ್ಮ ಕಾರ್ಯಶಾಖೆಗಳನ್ನು ಪುಣೆಯಲ್ಲಿ ತೆರೆದಿವೆ. ಇಂಗ್ಲೀಷ್ ಮಾತನಾಡಬಲ್ಲ ವಿದ್ಯಾವಂತರ ಸಂಖ್ಯೆ ವಿಪುಲವಾಗಿರುವ ಕಾರಣ ಬಿ.ಪಿ.ಓ. ಉದ್ಯೋಗದಲ್ಲಿಯೂ ಪುಣೆ ಮುಂದಿದೆ. ಕನ್ವರ್ಜಿಸ್, ಡಬ್ಲ್ಯು.ಎನ್.ಎಸ್, ಇನ್ಫೋಸಿಸ್, ವಿಪ್ರೋ ಇತ್ಯಾದಿಗಳು ಪುಣೆಯಲ್ಲಿರು ಈ ಉದ್ಮದ ಕೆಲ ನಾಮವಂತ ಕಂಪನಿಗಳು. ವಾಣಿಜ್ಯ ಮಾರ್ಕೆಟ್ ಯಾರ್ಡ್ ಮತ್ತು ಮಹಾತ್ಮಾ ಫುಲೆ ತರಕಾರಿ ಮಂಡಿ ಕೃಷಿಕರಿಗೆ ಮುಖ್ಯವಾದ ಪೇಟೆಗಳು. ಅಂತೆಯೇ ರವಿವಾರ ಪೇಟೆ ಗ್ರಾಹಕೋಪಯೋಗಿ ವಸ್ತುಗಳ ಸಗಟು ವ್ಯಾಪಾರಕ್ಕೆ. ಬುಧವಾರ ಪೇಟೆ ವಿದ್ಯುತ್ ಹಾಗೂ ಕಂಪ್ಯೂಟರ್ ಉಪಕರಣಗಳು, ಚಳಿಗಾಲದ ದಿರುಸುಗಳು, ಪುಸ್ತಕಗಳು, ಇತ್ಯಾದಿಗಳ ಚಿಲ್ಲರೆ ಹಾಗೂ ಸಗಟು ವ್ಯವಹಾರಕ್ಕೆ ಪ್ರಸಿದ್ಧಿಯಾಗಿವೆ. ಬುಧವಾರ ಪೇಟೆಯ ಅಂಗವಾದ ತುಳಶೀಬಾಗ್ ಮತ್ತು ಡೆಕ್ಕನ್ನಿನ ಹಾಂಗ್ ಕಾಂಗ್ ಲೇನ್ ಮಹಿಳೆಯರಿಗೆ ಪ್ರಿಯವಾದ ದೈನಂದಿನ ವಸ್ತುಗಳ ಚಿಲ್ಲರೆ ವ್ಯಾಪಾರಕೇಂದ್ರಗಳು. ಇದೇ ಭಾಗದ ಅಪ್ಪಾ ಬಳವಂತ ಚೌಕದಲ್ಲಿ ಮಕ್ಕಳ ಶಾಲಾ ಪುಸ್ತಕಗಳ ಮಾರುಕಟ್ಟೆಯಿದೆ. ಲಕ್ಷ್ಮೀ ರೋಡು ಬಟ್ಟೆ ಮತ್ತು ಬಂಗಾರದ ಆಭರಣಗಳಿಗೆ ಪ್ರಸಿದ್ಧವಾಗಿದೆ. ಕ್ಯಾಂಪಿನ ಮಹಾತ್ಮಾ ಗಾಂಧಿ ಮತ್ತು ಈಸ್ಟ್ ರಸ್ತೆಗಳು ಪಾಶ್ಚಿಮಾತ್ಯ ಜೀವನಶಯಲಿಯ ಉಪಕರಣಗಳ ವ್ಯಾಪಾರಕೆಂದ್ರ. ಅಂತೆಯೇ ಜಂಗಲೀ ಮಹಾರಾಜ ರಸ್ತೆ, ಫರ್ಗ್ಯುಸನ್ ರಸ್ತೆ, ಕರ್ವೆ ರಸ್ತೆ ಇವುಗಳಲ್ಲಿ ವಿವಿಧ ವಸ್ತುಗಳ ಚಿಲ್ಲರೆ ವ್ಯಾಪಾರದ ಮಾರುಕಟ್ಟೆಗಳು ಬೆಳೆಯುತ್ತಿವೆ. ನಗರಾಡಳಿತ ಪುಣೆ ನಗರದ ಆಡಳಿತ ವ್ಯವಸ್ಥೆ ಪುಣೆ ನಗರಪಾಲಿಕೆಯ ಕೈಯಲ್ಲಿದೆ. ಮೂಲಭೂತ ಸೌಕರ್ಯಗಳು ಮತ್ತು ನಗರದ ಆಡಳಿತದ ಮೇಲುಸ್ತುವಾರಿಯನ್ನು ನಗರಪಾಲಿಕೆ ನೋಡಿಕೊಳ್ಳುತ್ತದೆ. ಆಡಳಿತಾತ್ಮಕ ಮುಖ್ಯಸ್ಥರಾದ ಮಹಾರಾಷ್ಟ್ರ ಸರಕಾರದಿಂದ ನೇಮಿತರಾದ ಐ.ಎ.ಎಸ್. ಅಧಿಕಾರಿ, ಪುಣೆಯ ಕಮೀಷನರ್ (ಆಯುಕ್ತ) ಕೈಯಲ್ಲಿ ಬಹುತೇಕ ಅಧಿಕಾರ ಕೇಂದ್ರೀಕೃತವಾಗಿದೆ. ನಗರಪಾಲಿಕೆ ಚುನಾವಣೆಯಲ್ಲಿ ಜನರಿಂದ ಆಯ್ದುಬಂದ ನಗರಸೇವಕರು ( ಕಾರ್ಪೋರೇಟರುಗಳು) ನಗರಪಾಲಿಕೆಯ ಅಂಗವಾಗಿದ್ದು ಇವರ ನೇತೃತ್ವ ಮಹಾಪೌರ (ಮೇಯರ್) ವಹಿಸುತ್ತಾರೆ. ಮೇಯರ್ ಪದವಿಯು ಕೇವಲ ನಾಮಮಾತ್ರದ್ದಾಗಿದ್ದು ಆಡಳಿತಾತ್ಮಕ ಅಧಿಕಾರ ಬಹಳ ಸೀಮಿತವಾಗಿದೆ. ಪುಣೆ ನಗರಪಾಲಿಕೆಯಲ್ಲಿ ೪೮ ಉಪವಿಭಾಗಗಳಿದ್ದು, ಪ್ರತಿಯೊಂದು ಉಪವಿಭಾಗವನ್ನೂ ಸಹಾಯಕ ಆಯುಕ್ತರು ನೋಡಿಕೊಳ್ಳುತ್ತಾರೆ. ಪೋಲೀಸ್ ವ್ಯವಸ್ಥೆ ಪುಣೆ ನಗರದ ಪೋಲೀಸ್ ಮುಖ್ಯಾಧಿಕಾರಿ (ಉಪಾಯುಕ್ತ) ರಾಜ್ಯದ ಗೃಹ ಮಂತ್ರಿಗಳಿಂದ ನಿಯಮಿಸಲ್ಪಟ್ಟ ಐ.ಪಿ.ಎಸ್. ಅಧಿಕಾರಿಯಾಗಿರುತ್ತಾರೆ. ಇಲ್ಲಯ ಪೋಲೀಸ್ ವ್ಯವಸ್ಥೆಯ ನಿರ್ವಹಣೆ ಮತ್ತು ಜವಾಬುದಾರಿ ರಾಜ್ಯದ ಗೃಹಖಾತೆಯ ಮೇಲಿದೆ. ಸಂಚಾರ ವ್ಯವಸ್ಥೆ ಭಾರತದ ಇತರ ನಗರಗಳೊಂದಿಗೆ ಪುಣೆ ನಗರ ರಸ್ತೆ, ರೈಲು ಮತ್ತು ವಿಮಾನಗಳ ಮೂಲಕ ಚೆನ್ನಾಗಿ ಸಂಪರ್ಕ ಹೊಂದಿದೆ. ಇಲ್ಲಿಯ ವಿಮಾನ ನಿಲ್ದಾಣ ಮೊದಲು ಬರಿಯ ದೇಶೀ ಸ್ಥಾನಗಳ ವಿಮಾನಗಳಿಗಾಗಿ ಇದ್ದದ್ದು, ಈಚೆಗೆ ದುಬೈ ಹಾಗೂ ಸಿಂಗಪುರದಂತಹ ವಿದೇಶೀ ನಗರಗಳಿಗೂ ನೇರ ಸಂಪರ್ಕ ಕಲ್ಪಿಸುತ್ತಿದೆ. ಹೊಚ್ಚ ಹೊಸ ಅಂತರರಾಷ್ಟ್ರೀಯ ವಿಮಾನನಿಲ್ದಾಣವನ್ನು ಪುಣೆಯಿಂದ ಸುಮಾರು ೪೦ ಕಿ.ಮೀ. ದೂರದಲ್ಲಿ ಚಾಕಣ ಮತ್ತು ರಾಜಗುರುನಗರ ಗ್ರಾಮಗಳ ನಡುವೆ ಸ್ಥಾಪಿಸುವ ಮಹಾರಾಷ್ಟ್ರ ಸರಕಾರದ ಯೋಜನೆಯಿದೆ. ಇದರ ನಿರ್ವಹಣೆಯ ಜವಾಬ್ದಾರಿ ಮಹಾರಾಷ್ಟ್ರ ರಾಜ್ಯ ಔದ್ಯೋಗಿಕ ಮಹಾಮಂಡಲಕ್ಕೆ ವಹಿಸಲಾಗಿದೆ. ಪುಣೆ ಮತ್ತು ಶಿವಾಜಿನಗರ ರೈಲ್ವೆ ಸ್ಟೇಷನ್ನುಗಳಲ್ಲಿ ಪ್ರಮುಖವಾದವುಗಳು. ಪುಣೆ ಸ್ಟೇಷನ್ನಿನಲ್ಲಿ ಎಲ್ಲಾ ರೈಲುಗಳೂ ನಿಲ್ಲುತ್ತವೆ. ಪುಣೆ ಸ್ಟೇಷನ್ ಮತ್ತು ಲೋನಾವಳಾ ಮಧ್ಯೆ ಲೋಕಲ್ ರೈಲುಗಳು ಸಂಚರಿಸುತ್ತವೆ. ಇದರ ಮೂಲಕ ಪಿಂಪ್ರಿ, ಖಡಕೀ ಮತ್ತು ಚಿಂಚವಡದಂಥಹಾ ಉಪನಗರಗಳನ್ನು ಪುಣೆ ನಗರದೊಂದಿಗೆ ಬೆಸೆಯಲು ಸಾಧ್ಯವಾಗಿದೆ. ಪುಣೆಯಿಂದ ಲೋನಾವಳಾದವರೆಗೆ ಲೋಕಲ್ ಸಂಚರಿಸಿದರೆ, ಅತ್ತ ಮುಂಬಯಿ ಲೋಕಲುಗಳು ಕರ್ಜತ್ ಸ್ಟೇಷನ್ ವರೆಗೂ ಬರುತ್ತವೆ. ರೈಲ್ವೆ ಆಡಳಿತವು ಲೋನಾವಳಾದ ರೈಲನ್ನು ಕರ್ಜತ್ / ಖೋಪೋಲಿಯವರೆಗೆ ವಿಸ್ತರಿಸುವ ಯೋಜನೆಯನ್ನು ಪರಿಶೀಲಿಸುತ್ತಿದೆ (೨೦೦೭). ಈ ಯೋಜನೆ ಕೈಗೂಡಿದಲ್ಲಿ ಪುಣೆ ಮುಂಬಯಿ ಮಧ್ಯೆ ಎಲ್ಲಾ ನಿಲ್ದಾಣಗಳಿಗೂ ಲೋಕಲಿನ ಸಂಪರ್ಕ ಬಂದಂತಾಗುತ್ತದೆ. ಕರ್ಜತ್ ಪನವೇಲ್ ನಡುವಿನ ರೈಲು ಮಾರ್ಗ ಪೂರ್ತಿಗೊಂಡಿದ್ದು, ಇದರಿಂದಾಗಿ ಮುಂಬಯಿ ಪುಣೆ ನಡುವಿನ ಅಂತರ ೨೯ಕಿ.ಮೀ.ನಷ್ಟು ಕಡಿಮೆಯಾಗಲಿದೆ. ೧೯೯೦ರ ದಶಕದಲ್ಲಿ ಪೂರ್ತಿಗೊಳಿಸಲಾದ ಮುಂಬಯಿ ಪುಣೆ ದ್ರುತಗತಿ ಹೆದ್ದಾರಿ (Express way) ಯಿಂದಾಗಿ ಇವೆರಡು ನಗರಗಳ ನಡುವಿನ ಸಂಚಾರ ಹೆಚ್ಚು ಆರಾಮದಾಯಕವೂ, ಶೀಘ್ರಗತಿಯದೂ ಆಗಿದೆ. ಮುಂಬಯಿ ಪುಣೆ ನಡುವಿನ ಸುಮಾರು ೧೯೨ ಕಿ.ಮೀ. ಅಂತರವನ್ನು ಈಗ ಕೇವಲ ಎರಡೂವರೆಯಿಂದ ಮೂರು ತಾಸಿನಲ್ಲಿ ಕ್ರಮಿಸಬಹುದು. ಮುಂಬಯಿ ಪುಣೆ ನಡುವೆ ಸುಮಾರು ಪ್ರತಿ ೧೫-೨೦ ನಿಮಿಷಕ್ಕೊಮ್ಮೆ ಬಸ್ಸು ಹೊರಡುತ್ತದೆ. ಸರಕಾರೀ ಮತ್ತು ಖಾಸಗೀ ಬಸ್ಸುಗಳು ಪುಣೆಯಿಂದ ದೂರದ ಬೆಂಗಳೂರು, ಹೈದರಾಬಾದುಗಳಿಗೂ ನೇರ ಸಂಪರ್ಕ ಕಲ್ಪಿಸುತ್ತವೆ. ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ಮಹಾರಾಷ್ಟ್ರದ ಮೂಲೆಮೂಲೆಗಳಿಗೂ ಇಲ್ಲಿಂದ ಸಂಚರಿಸುತ್ತವೆ. ೨೦೧೦ರ ಸುಮಾರಿಗೆ ಪುಣೆ ಐ.ಟಿ. ಉದ್ಯೋಗದ ದೊಡ್ಡ ಕೇಂದ್ರವಾಗಿ ಬೆಳೆಯುವ ಲಕ್ಷಣಗಳಿವೆ. ಪುಣೆಯ ನೌಕರಿ ಮಾಡುವವರ ಸಂಖ್ಯೆ ಭರದಿಂದ ಬೆಳೆಯುತ್ತಿದೆ. ಅದರೊಂದಿಗೇ ಕಾರುಗಳು ಮತ್ತು ದ್ವಿಚಕ್ರವಾಹನಗಳ ಸಂಖ್ಯೆಯೂ ಏರುತ್ತಿದೆ. ಒಂದು ಸಮೀಕ್ಷೆಯ ಪ್ರಕಾರ ೨೦೦೫ರಲ್ಲಿ ಇಲ್ಲಿ ೨ ಲಕ್ಷ ಕಾರುಗಳೂ, ೧೦ ಲಕ್ಷ ದ್ವಿಚಕ್ರವಾಹನಗಳೂ ಇದ್ದವೆಂದು ಅಂದಾಜಿದೆ. ಈ ವಾಹನಗಳ ಹೆಚ್ಚಳದಿಂದ ರಸ್ತೆಯಲ್ಲಿ ವಾಹನದಟ್ಟಣೆ ಹೆಚ್ಚುಹೆಚ್ಚಾಗುತ್ತಿದೆ. ರಸ್ತೆಗಳ ಅಗಲೀಕರಣ, ಫ್ಲೈ ಓವರುಗಳ ನಿರ್ಮಾಣ ಇವುಗಳು ಯೋಜನೆಯಲ್ಲಿದ್ದರೂ, ಕಾರ್ಯಗತವಾಗಲೂ ವಿಳಂಬವಾಗುತ್ತಿದೆ. ಪಾರ್ಕಿಂಗಿಗೆ ಜಾಗ ಸಿಗುವುದು ದುಸ್ತರವಾಗುತ್ತಿದೆ. ಪುಣೆಯ ಉಪನಗರಗಳಾದ ಕಲ್ಯಾಣಿನಗರ, ವಿಮಾನನಗರ, ಮಗರಪಟ್ಟಾ, ಪಿಂಪ್ರಿ, ಚಿಂಚವಾಡ, ಬಾಣೇರ್, ವಾಕಡ್, ಔಂಧ್, ಹಿಂಜೆವಾಡಿ, ಬಿಬ್ವೇವಾಡಿ, ವಾನವಡಿ, ನಿಗಡಿ ಇವೆಲ್ಲಾ ಬಿರುಸಿನಿಂದ ಬೆಳೆಯುತ್ತಿವೆ. ಪಿ.ಎಮ್.ಟಿ ಮತ್ತು ಪಿ.ಸಿ.ಎಮ್.ಟಿ ಇವು ಕ್ರಮವಾಗಿ ಪುಣೆ ಮತ್ತು ಪಿಂಪ್ರಿ-ಚಿಂಚವಾಡ ನಗರಪಾಲಿಕೆಗಳು ನಡೆಸುವ ಸಾರಿಗೆ ಸಂಸ್ಥೆಗಳು. ಸಾರ್ವಜನಿಕ ಸಾರಿಕೆ ವ್ಯವಸ್ಥೆಯಿದ್ದರೂ, ಅದು ಏರುತ್ತಿರುವ ಜನಸಂಖ್ಯೆಯ ಅಗತ್ಯಗಳನ್ನು ಪೂರೈಸಲು ಅಸಮರ್ಥವಾಗಿದೆ.ಇದಲ್ಲದೆ ಆಟೋರಿಕ್ಷಾಗಳೂ ಲಭ್ಯವಿವೆ. ಜನಜೀವನ ೨೦೦೧ರ ಜನಗಣತಿಯ ಪ್ರಕಾರ ಪುಣೆ ನಗರ ಪ್ರದೇಶದ ಜನಸಂಖ್ಯೆ ೪೪,೮೫,೦೦೦. ಇದರಲ್ಲಿ ಪಿಂಪ್ರಿ ಚಿಂಚವಾಡ ಅವಳಿ ನಗರಗಳೂ ಸೇರಿವೆ. ಭರದಿಂದ ಬೆಳೆಯುತ್ತಿರುವ ವಾಹನಗಳು ಮತ್ತು ಸಾಫ್ಟ್‍ವೇರ್ ಉದ್ಯಮಗಳಿಂದಾಗಿ ಪರಪ್ರಾಂತೀಯರ ವಲಸೆಯಾಗುತ್ತಿದ್ದು , ಜನಸಂಖ್ಯೆ ಏರುತ್ತಿದೆ. ೨೦೦೩ರಿಂದ ಕಟ್ಟಡ ಉದ್ಯಮದಲ್ಲಿಯೂ ಪ್ರಗತಿ ಕಾಣುತ್ತಿದೆ. ಜನಸಂಖ್ಯೆಯಲ್ಲಿ ಪುಣೆ ಭಾರತದಲ್ಲಿ ಏಳನೆಯ ಸ್ಥಾನದಲ್ಲಿದೆ. ಪುಣೆಯ ತಲಾ ಉತ್ಪನ್ನ (per capita income) ಭಾರತದಲ್ಲಿಯೇ ಅಗ್ರ ಸ್ಥಾನದಲ್ಲಿದ್ದು, ಬಡವ-ಶ್ರೀಮಂತರ ನಡುವಿನ ಅಂತರವೂ ಬಹಳ ಕಡಿಮೆಯಿದೆ. ಪುಣೆ ವಾಸಿಗಳಿಗೆ ಪುಣೇಕರ್ ಎಂದು ಸಂಬೋಧಿಸುವುದುಂಟು. ನಗರ ಮುಖ್ಯ ಭಾಷೆ ಮರಾಠಿಯಾಗಿದ್ದು , ಇಂಗ್ಲೀಷ್ , ಕನ್ನಡ, ಹಿಂದಿಗಳೂ ಕೇಳಿಬರುತ್ತವೆ. ತಿಂಡಿ ತಿನಿಸು ಕಾಕಾ ಹಲವಾಯಿಯವರ ಸಿಹಿ ತಿಂಡಿಗಳು, ಚಿತಳೆ ಬಂಧುರವರ ಬಾಕರವಡಿ, ಅಂಬಾ ಬರ್ಫಿ , ಸುಜಾತಾ ಮತ್ತು ಕಾವರೆ ಇಲ್ಲಿಯ ಮಸ್ತಾನಿ, ಬುಧಾಣಿಯವರ ಆಲೂ ವೇಫರ್ಸ್, ಲಷ್ಮೀನಾರಾಯಣ ಚಿವಡಾ ಇವು ಪುಣೆಯ ವೈಶಿಷ್ಟ್ಯಗಳಲ್ಲಿ ಕೆಲವು. ಜಂಗಲೀ ಮಹಾರಾಜ ರಸ್ತೆ, ಕ್ಯಾಂಪಿನಲ್ಲಿಯ ಮಹಾತ್ಮಾ ಗಾಂಧೀ ಮತ್ತು ಈಸ್ಟ್ ರಸ್ತೆಗಳು, ಫರ್ಗ್ಯುಸನ್ ರಸ್ತೆ, ಇವು ಖಾದ್ಯ ಪ್ರಿಯರ ವಿಶೇಷ ತಾಣಗಳು. ಫರ್ಗ್ಯುಸನ್ ರಸ್ತೆಯ ವೈಶಾಲಿ ಹೋಟೆಲು ಸಾಕಷ್ಟು ಪ್ರಸಿಧ್ದವಾಗಿದೆ. ಅಮೃತತುಲ್ಯ ಎಂಬ ಚಹಾದ ಅಂಗಡಿ ಪುಣೆಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಇನ್ನು ಬಾಕೀ ಮಹಾರಾಷ್ಟ್ರೀಯ ನಗರಗಳಂತೆ ಇಲ್ಲಿಯೂ ಮಿಸಳ್, ವಡಾ ಪಾವ್ ಇತ್ಯಾದಿ ಗಲ್ಲಿ ಗಲ್ಲಿಗಳಲ್ಲಿಯೂ ದೊರೆಯುತ್ತದೆ. ಪುಣೆಯ ಮತ್ತೊಂದು ವೈಶಿಷ್ಟ್ಯವೆಂದರೆ ಡೈನಿಂಗ್ ಹಾಲುಗಳು. ಅಗ್ಗವಾದರೂ "ಅನ್ ಲಿಮಿಟೆದ್" ಊಟ ಇವುಗಳ ಹೆಗ್ಗಳಿಕೆ. ರಸ್ತೆಯ ಕೈಗಾಡಿಗಳಲ್ಲಿ ಸಿಗುವ , ಕಛ್ಛೀ ದಾಬೇಲಿ, ಭೇಳ್ ( ಮಂಡಕ್ಕಿಯ ಪ್ರಕಾರಗಳು), ಪಾಣಿಪುರೀ ಇತ್ಯಾದಿಗಳು ಇಲ್ಲಿ ಪ್ರಸಿದ್ಧವಾಗಿವೆ. ನಗರ ಹಳೆಯ ಪ್ರದೇಶಗಳಲ್ಲಿ ಕೊಲ್ಹಾಪುರೀ ಪದ್ಧತಿಯ ಊಟ ಜನಪ್ರಿಯವಾಗಿದೆ. ಪ್ರಸಾರಮಾಧ್ಯಮಗಳು ಸಕಾಳ, ಲೋಕಸತ್ತಾ, ಫುಢಾರಿ ಮತ್ತು ಕೇಸರೀ ಮೊದಲಾದ ಮರಾಠೀ ಪತ್ರಿಕೆಗಳೂ, ಇಂಡಿಯನ್ ಎಕ್ಸ್ ಪ್ರೆಸ್ , ಟೈಮ್ಸ್ ಆಫ್ ಇಂಡಿಯಾ ಮತ್ತು ಮಹಾರಾಷ್ಟ್ರ ಹೆರಾಲ್ಡ್ ಮೊದಲಾದ ಇಂಗ್ಲೀಷ್ ಪತ್ರಿಕೆಗಳೂ ಇಲ್ಲಿ ಜನಪ್ರಿಯ. ಆಕಾಶವಾಣಿ, ರೇಡಿಯೋ ಮಿರ್ಚಿ ಮತ್ತು ಪುಣೆ ವಿದ್ಯಾಪೀಠದವರ ವಿದ್ಯಾವಾಣಿ ಇವುಗಳ ಬಾನುಲಿ ಕೇಂದ್ರಗಳು ಪುಣೆಯಲ್ಲಿ ಕೇಳಲು ಸಿಗುತ್ತವೆ. ಝೀ ಮರಾಠಿ, ಈ ಟಿವಿ ಮರಾಠಿ ಮತ್ತು ಸಹ್ಯಾದ್ರಿ ಇವು ಮರಾಠಿ ವೀಕ್ಷಕರ ಮೆಚ್ಚಿನ ಟಿವಿ ವಾಹಿನಿಗಳು. ಇವಲ್ಲದೆ ಬಾಕೀ ನಗರಗಳಲ್ಲಿಯಂತೆ ಅನೇಕ ಇಂಗ್ಲೀಷ್ , ಹಿಂದಿ, ಕನ್ನಡ ಮತ್ತು ಇತರ ಭಾರತೀಯ ಭಾಷೆಗಳ ಕೇಬಲ್ ವಾಹಿನಿಗಳೂ ಇಲ್ಲಿ ಲಭ್ಯವಿವೆ. ಸಂಸ್ಕೃತಿ ಪುಣೆಯನ್ನು ಮಹಾರಾಷ್ಟ್ರದ ಸಾಂಸ್ಕೃತಿಕ ರಾಜಧಾನಿ ಎಂದೇ ಪರಿಗಣಿಸಲಾಗಿದೆ. ಪುಣೆಯಲ್ಲಿ ಆಡುವ ಮರಾಠಿ ಭಾಷೆ ಮಾದರಿ ಮರಾಠಿ ಎಂದು ಮನ್ನಿಸಲಾಗುತ್ತದೆ. ರಸಿಕರಾದ ಪುಣೆ ವಾಸಿಗಳಿಗಾಗಿ ವರ್ಷಪೂರ್ತಿ ಸಂಗೀತ, ಸಾಹಿತ್ಯ , ನಾಟಕ ಇತ್ಯಾದಿ ಒಂದಲ್ಲ ಒಂದು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಲೇ ಇರುತ್ತವೆ. ಗಣೇಶೋತ್ಸವ ೧೮೯೪ರಲ್ಲಿ ಲೋಕಮಾನ್ಯ ತಿಲಕರಿಂದ ಸಾರ್ವಜನಿಕ ಗಣೇಶೋತ್ಸವ ಪ್ರಾರಂಭವಾಯಿತು. ಮಹಾರಾಷ್ಟ್ರದ ಎಲ್ಲೆಡೆಯಲ್ಲಿಯೂ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದರೂ, ಪುಣೆಯಲ್ಲಿ ಈ ಹಬ್ಬದ ಸೊಗಸೇ ವಿಶಿಷ್ಟವಾದದ್ದು. ಭಾದ್ರಪದ ಶುಕ್ಲ ಚತುರ್ಥಿಯಿಂದ (ಸಾಧಾರಣ ಆಗಸ್ಟ್ ಇಲ್ಲ ಸೆಪ್ಟೆಂಬರಿನಲ್ಲಿ ಬರುತ್ತದೆ) ಹಿಡಿದು ಮುಂದಿನ ಹತ್ತು ದಿನಗಳ ತನಕ , ಅಂದರೆ, ಅನಂತ ಚತುರ್ದಶಿಯವರೆಗೆ ಸಂಪೂರ್ಣ ಪುಣೆ ನಗರದಲ್ಲಿ ಹಬ್ಬದ ವಾತಾವರಣವಿರುತ್ತದೆ. ಈ ಉತ್ಸವವನ್ನು ನೋಡಿ ಆನಂದಿಸಲು ದೇಶ ವಿದೇಶಗಳಿಂದ ಜನ ಆಗಮಿಸುತ್ತಾರೆ. ಓಣಿಓಣಿಗಳ್ಲಿಯೂ ಗಣೇಶ ಮಂಡಳಗಳ ಅಬ್ಬರ ಕೇಳಿಬರುತ್ತದೆ. ಕಳೆದ ಕೆಲವು ವರ್ಷಗಳಿಂದ ಮಹಾರಾಷ್ಟ್ರ ಪ್ರವಾಸೀ ಮಹಾಮಂಡಳವು ಇದೇ ಸಂಧರ್ಭದಲ್ಲಿ ಪುಣೆ ಫೆಸ್ಟಿವಲ್ ಎಂಬ ಹೆಸರಿನಲ್ಲಿ ದೊಡ್ಡ ಮೇಳವನ್ನು ಏರ್ಪಡಿಸುತ್ತದೆ. ಇದರಲ್ಲಿ ಸಂಗೀತ, ನೃತ್ಯ, ನಾಟಕ ಮತ್ತು ಕ್ರೀಡಾ ಪ್ರಕಾರಗಳ ಖ್ಯಾತನಾಮರಿಂದ ಕಾರ್ಯಕ್ರಮಗಳಾಗುತ್ತವೆ. ಅನಂತ ಚತುರ್ದಶಿಯಂದು ವಿಸರ್ಜನೆಯೊಂದಿಗೆ ಈ ಹಬ್ಬ ಮುಕ್ತಾಯಗೊಳ್ಳುತ್ತದೆ. ಅಂದಿನ ಮುಂಜಾನೆಯಿಂದ ಪ್ರಾರಂಭವಾಗುವ ವಿಸರ್ಜನೆಯು ಮಾರನೆ ದಿನ ಮುಂಜಾನೆಯವೆರಗೂ ನಡೆದಿರುತ್ತದೆ. ಈ ಮೆರವಣಿಗೆಯಲ್ಲಿ ಈ ಐದು ನಿರ್ದಿಷ್ಡ ಗಣಪತಿ ಮಂಡಳಿಗಳಿಗೆ ಮೊದಲ ಪಟ್ಟ ಕೊಡಲಾಗಿದೆ. ಕಸಬಾ ಗಣಪತಿ - ಪುಣೆಯ ಊರದೇವರು ತಾಂದಡೀ ಜೋಗೇಶ್ವರಿ ಗುರುಜಿ ತಾಲೀಮು ತುಳಸೀಬಾಗ್ ಕೇಸರೀ ವಾಡಾ ಪ್ರಾಣ ಪ್ರತಿಷ್ಟಾಪನೆ ಮಾಡಿದ ಮೂರ್ತಿಯನ್ನು ವಿಸರ್ಜಿಸಿ ಉತ್ಸವಮೂರ್ತಿಯನ್ನು ಮರಳಿ ತರುತ್ತಾರೆ. ಮೆರವಣಿಗೆಯಲ್ಲಿ ಮಹಾರಾಷ್ಟ್ರದ ಪ್ರಾತಿನಿಧಿಕ ಕಲೆಗಳಾದ ಡೋಲು, ಲೇಝಿಮ್ ಇತ್ಯಾದಿಗಳ ಪ್ರದರ್ಶನವನ್ನೂ ನೋಡಬಹುದು. ಅನೇಕ ಶಾಲೆಗಳೂ ತಮ್ಮ ವಿದ್ಯಾರ್ಥಿಗಳಿಂದ ಉತ್ಸಾಹದಿಂದ ಇಂಥಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಸವಾಯಿ ಗಂಧರ್ವ ಸಂಗೀತ ಮಹೋತ್ಸವ ಡಿಸೆಂಬರಿನಲ್ಲಿ ಸವಾಯಿ ಗಂಧರ್ವ ಸಂಗೀತ ಮಹೋತ್ಸವ ಎಂಬ ದೊಡ್ಡ ಸಮಾರಂಭ ನಡೆಯುತ್ತದೆ. ಮೂರು ರಾತ್ರಿ ನಡೆಯುವ ಈ ಸಮಾರಂಭದಲ್ಲಿ ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತದ ದಿಗ್ಗಜಗಳು ಪಾಲ್ಗೊಳ್ಲುತ್ತಾರೆ. ಸಂಗೀತ ಪ್ರೇಮಿಗಳಿಗೆ ಇದೊಂದು ವಾರ್ಷಿಕ ಹಬ್ಬ. ರಂಗಭೂಮಿ ಪುಣೆ ಮರಾಠಿ ಬುದ್ಧಿಜೀವಿಗಳ ನಗರವಾಗಿದೆ. ರಂಗಭೂಮಿ ಮರಾಠಿ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಸಾಂಪ್ರದಾಯಿಕ, ಪ್ರಾಯೋಗಿಕ ಅಥವಾ ವ್ಯಾವಸಾಯಿಕ ಯಾವುದೇ ಪೈಕಿಯದಾದರೂ ಪುಣೆಯ ಜನ ಅವನ್ನು ನೋಡಿ ಪ್ರೋತ್ಸಾಹಿಸುತ್ತಾರೆ. ಟಿಳಕ ಸ್ಮಾರಕ ಮಂದಿರ, ಬಾಲಗಂಧರ್ವ ರಂಗಮಂದಿರ, ಭರತ ನಾಟ್ಯ ಮಂದಿರ, ಯಶವಂತರಾವ್ ಚವಾಣ್ ನಾಟ್ಯಗೃಹ, ಸುದರ್ಶನ ರಂಗಮಂಚ ಮತ್ತು ಪಿಂಪ್ರಿ ಚಿಂಚವಡ ನಾಟ್ಯಗೃಹ ಇವು ಮಹತ್ವದ ನಾಟಕಮಂದಿರಗಳು. ಚಲನಚಿತ್ರರಂಗ ಪುಣೆಯಲ್ಲಿರು ಅನೇಕ ಮಲ್ಟಿಪ್ಲೆಕ್ಸುಗಳು ಹಿಂದಿ, ಮರಾಠಿ ಹಾಗೂ ಹಾಲಿವುಡ್ಡಿನ ಚಿತ್ರಗಳನ್ನು ಪ್ರದರ್ಶಿಸುತ್ತವೆ. ಪುಣೆ ನಿಲ್ದಾಣದ ಸಮೀಪದಲ್ಲಿರು ಐನಾಕ್ಸ್, ವಿದ್ಯಾಪೀಠ ರಸ್ತೆಯಲ್ಲಿರುವ ಈ-ಸ್ಕ್ವೆಯರ್ , ಸತಾರಾ ರಸ್ತೆ ಮತ್ತು ಕೋಥರೂಡಿನಲ್ಲುರವ ಸಿಟಿಪ್ರೈಡ್ , ಕಲ್ಯಾಣಿನಗರದ ಗೋಲ್ಡ್ ಅಡ್ಲ್ಯಾಬ್ಸ್ ಮತ್ತು ಆಕುರ್ಡಿಯ ಫೇಮ್ ಗಣೇಶ್ ವಿಷನ್ ಇವು ಕೆಲವು ಖ್ಯಾತ ಚಿತ್ರಮಂದಿರಗಳು. ಧರ್ಮ ಆಧ್ಯಾತ್ಮ ಚತುಃಶೃಂಗಿ ಮಂದಿರ ನಗರದ ಉತ್ತರ-ಪಶ್ಚಿಮದ ಗುಡ್ಡದ ಇಳಿಜಾರಿನಲ್ಲಿದೆ. ನವರಾತ್ರಿಯಲ್ಲಿ ಇಲ್ಲಿ ವಿಶೇಷ ಜನದಡ್ಡಣೆಯಿರುತ್ತದೆ. ನಗರದ ಪರ್ವತಿ ದೇವಸ್ಥಾನವೂ ಪ್ರಸಿದ್ಧವಾಗಿದೆ. ಪುಣೆಯ ಸಮೀಪದಲ್ಲಿರು ಆಳಂದಿ ಮತ್ತು ದೇಹೂ ಇಲ್ಲಿಯೂ ಪ್ರಸಿದ್ಧ ದೇವಾಲಯಗಳಿವೆ. ಆಳಂದಿಯಲ್ಲಿ ಸಂತ ಜ್ಞಾನೇಶ್ವರನ ಮತ್ತು ದೇಹೂ ಇಲ್ಲಿ ಸಂತ ತುಕಾರಾಮನ ಸಮಾಧಿಗಳಿವೆ. ಪ್ರತಿವರ್ಷ ವಾರಕರಿ ಸಂಪ್ರದಾಯದ ಭಕ್ತರುಗಳು ಇಲ್ಲಿಂದ ಈ ಸಂತರುಗಳ ಪಲ್ಲಕ್ಕಿಗಳನ್ನು ಹೊತ್ತು ಪಂಢರಪುರದವರೆಗೆ ಕಾಲುನಡಿಗೆಯಲ್ಲಿ ಪ್ರವಾಸ ಮಾಡುತ್ತಾರೆ. ಆಷಾಢದ ಏಕಾದಶಿಯಂದು ಈ ಭಕ್ತರುಗಳು ಪಂಢರಪುರದಲ್ಲಿ ಸೇರುತ್ತಾರೆ. ಪುಣೆಯಲ್ಲಿ ಯಹೂದಿಗಳ (ಬೆನೆ ಇಸ್ರೇಲ್) ದೊಡ್ಡ ಜನವಸತಿಯಿದೆ. ಇಲ್ಲಿರುವ ಓಹೇಲ್ ಡೇವಿಡ್ ಎಂಬ ಇವರ ಸಿನೆಗಾಗ್ (ಯಹೂದಿಗಳ ಪ್ರಾರ್ಥನಾ ಸ್ಥಳ) ಏಶಿಯಾದಲ್ಲಿಯೇ ಅತಿ ದೊಡ್ಡದು. ಪುಣೆ ಮೆಹೆರಬಾಬಾ ಎಂಬ ಸಂತರ ಜನ್ಮಸ್ಥಾನ. ಆಚಾರ್ಯ ರಜನೀಶರ ಆಶ್ರಮ ಪುಣೆಯ ಕೋರೆಗಾಂವ್ ಪಾರ್ಕಿನಲ್ಲಿದೆ. ದೇಶ ವಿದೇಶಗಳ ಪ್ರವಾಸಿಗಳು ಭೇಡಿ ನೀಡುವ ಈ ಆಶ್ರಮದಲ್ಲಿ ಭಕ್ತರಿಗೆ ಬೇಕಾದ ಎಲ್ಲ ಸೌಕರ್ಯಗಳೂ, ಬೃಹತ್ ಧ್ಯಾನಗೃಹವೂ ಸೇರಿದಂತೆ, ಇವೆ. ಶಿಕ್ಷಣ ಭಾರತದ ಸ್ವಾತಂತ್ರದ ನಂತರ ಪುಣೆ ಶಿಕ್ಷಣ ಮತ್ತು ಸಂಶೋಧನೆಗೆ ಹೆಸರಾಯಿತು. ಪುಣೆ ವಿದ್ಯಾಪೀಠ, ರಾಷ್ಟ್ರೀಯ ರಾಸಾಯನಿಕ ಪ್ರಯೋಗಶಾಲೆ (National Chemical Laboratory), ರಾಷ್ಟ್ರೀಯ ಸಂರಕ್ಷಣ ಪ್ರಬೋಧಿನಿ (National Defence Academy) ಈ ಸಂಸ್ಥೆಗಳ ಸ್ಥಾಪನೆಯೂ ಈ ಹೆಸರು ಬರಲಿಕ್ಕೆ ಕಾರಣವಾಯಿತು. ಫರ್ಗ್ಯುಸನ್ ಕಾಲೇಜು, ಸ.ಪ. ಮಹಾವಿದ್ಯಾಲಯ, ಸರಕಾರೀ ಇಂಜಿನಿಯರಿಂಗ್ ಕಾಲೇಜು ಈ ಹಳೆಯ ಸಂಸ್ಥೆಗಳಂತೂ ೧೯೦೦ರಿಂದಲೇ ಪ್ರಸಿದ್ಧವಾಗಿದ್ದವು. ಇವಲ್ಲದೇ ಇನ್ನೂ ಅನೇಕ ಶಿಕ್ಷಣ ಸಂಸ್ಥೆಗಳೂ ಇಲ್ಲಿದ್ದು ವಿದ್ಯಾಭ್ಯಾಸಕ್ಕೆಂದು ದೇಶ ವಿದೇಶಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಆಗಮಿಸುತ್ತಾರೆ. ಪುಣೆ ವಾಸಿಗಳೂ ಸಹ ಉಚ್ಚ ಶಿಕ್ಷಣ - ಸಂಶೋಧನೆಯಲ್ಲಿ ಅಪಾರ ಆಸಕ್ತಿ ಇಟ್ಟುಕೊಂಡಿದ್ದಾರೆ. ಇದೆಲ್ಲದರಿಂದ, ಹಿಂದೆ ಜವಹರಲಾಲ್ ನೆಹರೂ "ಪೂರ್ವದ ಆಕ್ಸ್‍ಫರ್ಡ್" ಎಂದು ಹೆಸರು ಕೊಟ್ಟದ್ದು ಈಗಲೂ ಅನ್ವರ್ಥವಾಗಿದೆ. ಪ್ರಾಥಮಿಕ ಮತ್ತು ವಿಶೇಷ ಶಿಕ್ಷಣ ಪುಣೆ ನಗರಪಾಲಿಕೆಯು ಅನೇಕ ಶಾಲೆಗಳನ್ನು ನಡೆಸುತ್ತದೆ. ಆದರೆ ಖಾಸಗೀ ಆಡಳಿತದಲ್ಲಿ ನಡೆಸಲ್ಪಡುವ ಶಾಲೆಗಳು ಜನಪ್ರಿಯವಾಗಿವೆ. ಪುಣೆಯ ಶಾಲೆಗಳಲ್ಲಿಯ ಬಹುತೇಕ ಮಹಾರಾಷ್ಟ್ರ ರಾಜ್ಯ ಸರಕಾರದ ಪಠ್ಯಕ್ರಮವನ್ನು ಅನುಸರಿಸಿದರೂ ಕೇಂದ್ರೀಯ ಪಠ್ಯಕ್ರಮಗಳಾದ ಐ ಸಿ ಎಸ್ ಇ ಮತ್ತು ಸಿ ಬಿ ಎಸ್ ಇ ಯನ್ನು ಅನುಸರಿಸುವ ಶಾಲೆಗಳೂ ಬೇಕಾದಷ್ಟಿವೆ. ಜಪಾನಿ ಭಾಷಾ ಶಿಕ್ಷಣದಲ್ಲಿ ಪುಣೆ ಭಾರತದಲ್ಲಿಯೇ ಅಗ್ರ ಸ್ಥಾನದಲ್ಲಿದೆ. ಪುಣೆ ವಿದ್ಯಾಪೀಠವಷ್ಟೇ ಅಲ್ಲದೆ ಅನೇಕ ಸಂಸ್ಥೆಗಳೂ ಜಪಾನಿ ಭಾಷೆಯ ಶಿಕ್ಷಣವನ್ನು ನೀಡುತ್ತಿವೆ. ಇದಲ್ಲದೆ ಜರ್ಮನ್ (ಮ್ಯಾಕ್ಸ್ ಮ್ಯುಲ್ಲರ್ ಭವನ), ಫ್ರೆಂಚ್ ( ಆಲಿಯಾಂಸ್ ಫ್ರಾಂಸೆ ದ ಪೂನಾ) ಈ ಭಾಷೆಗಳಲ್ಲು ಕಲಿಯುವ ಅವಕಾಶವಿದೆ. ಕೆಲವು ಶಾಲೆಗಳಲ್ಲಿ ಎಂಟನೆಯ ತರಗತಿಯೀಮದಲೇ ರಶಿಯನ್, ಜರ್ಮನ್ ಭಾಷೆಗಳನ್ನು ಕಲಿಯುವ ಸೌಲಭ್ಯವಿದೆ. ಉಚ್ಚ ಶಿಕ್ಷಣ ಪುಣೆಯ ಬಹುತೇಕ ಕಾಲೇಜುಗಳು ಪುಣೆ ವಿದ್ಯಾಪೀಠದ ಅಧೀನದಲ್ಲಿವೆ. ವಿದ್ಯಾರ್ಥಿಗಳ ಸಂಖ್ಯೆಯ ಪ್ರಕಾರ ಪುಣೆ ವಿದ್ಯಾಪೀಠವು ಪ್ರಪಂಚದಲ್ಲಿಯೇ ಅತಿ ದೊಡ್ಡ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿದೆ. ಇದಲ್ಲದೇ ಕೆಲವು ಸ್ವಾಯತ್ತ ಮಹಾವಿದ್ಯಾಲಯಗಳೂ ಇಲ್ಲಿವೆ. ಪುಣೆಯ ಹೆಸರಾಂತ ಶಿಕ್ಷಣ ಸಂಸ್ಥೆಗಳಲ್ಲಿ ಕೆಲವು ಫರ್ಗ್ಯುಸನ್ ಕಾಲೇಜು ಸರಕಾರೀ ಇಂಜಿನಿಯರಿಂಗ್ ಕಾಲೇಜು ಬಿ.ಜೆ. ಮೆಡಿಕಲ್ ಕಾಲೇಜು ಸಿಂಬಯೋಸಿಸ್ ರಾಷ್ಟ್ರೀಯ ವಿಮಾ ಅಕಾಡಮಿ (National Insurance Academy) ನೂತನ ಮಹಾ ವಿದ್ಯಾಲಯ ಬೃಹನ್ ಮಹಾರಾಷ್ಟ್ರ ಕಾಲೇಜ್ ಆಫ್ ಕಾಮರ್ಸ್ ಇಂದಿರಾ ಇನ್ಸ್ಟಿಟ್ಯೂಟ್, ವಾಕಡ್ ಐ ಎಲ್ ಎಸ್ ವಿಧೀ ಮಹಾವಿದ್ಯಾಲಯ ಸಾಧನಾ ವಿದ್ಯಾಲಯ, ಹಡಪ್ಸರ್ ಆಬಾಸಾಹೇಬ್ ಗರವಾರೇ ಮಹಾವಿದ್ಯಾಲಯ ಭಾರತೀ ವಿದ್ಯಾಪೀಠ ನಡೆಸುವ ಇಂಜಿನಿಯರಂಗ್, ಮೆಡಿಕಲ್ ಕಾಲೇಜುಗಳು ಪುಣೆ ವಿದ್ಯಾಪೀಠ ನಡೆಸುವ ಪುಂಬಾ ಕಾಲೇಜು (ಪುರಾತತ್ವ ಮತ್ತು ಭಾಷಾಶಾಸ್ತ್ರ) ನೌರೋಜ್ಜೀ ವಾಡಿಯಾ ಕಾಲೇಜು ಟಿಳಕ ಮಹಾರಾಷ್ಟ್ರ ಮಹಾವಿದ್ಯಾಲಯ ( ಸಂಸ್ಕೃತ) ಸ.ಪ. ಮಹಾವಿದ್ಯಾಲಯ ಗೋಖಲೆ ಇನ್ಸ್ಟಿಟ್ಯೂಟ್ ಆಫ್ ಪಾಲಿಟಿಕ್ಸ್ ಮತ್ತು ಸೋಶಿಯಲ್ ಸೈನ್ಸಸ್ ಪುಣೆಯೊಂದರಲ್ಲಿಯೇ ಸುಮಾರು ಹತ್ತು ಸಾವಿರ ವಿದ್ಯಾರ್ಥಿಗಳು ಪ್ರತಿ ವರ್ಷ ಇಂಜಿನಿಯರಿಂಗ್ ಪದವಿ ಪಡೆದುಕೊಳ್ಳುತ್ತಾರೆ ಎಂದು ಒಂದು ಅಂದಾಜಿದೆ. ಸಂಶೋಧನಾ ಸಂಸ್ಥೆಗಳು ಪುಣೆ ವಿದ್ಯಾಪೀಠವಲ್ಲದೆ ಅನೇಕ ಪ್ರಸಿದ್ಧ ಸಂಶೋಧನಾ ಸಂಸ್ಥೆಗಳೂ ಪುಣೆಯಲ್ಲಿವೆ. ಅವುಗಳಲ್ಲಿ ಕೆಲವೆಂದರೆ ರಾಷ್ಟ್ರೀಯ ರಾಸಾಯನಿಕ ಪ್ರಯೋಗಶಾಲೆ ರಾಷ್ಟ್ರೀಯ ರೆಡಿಯೋ ಖಗೋಳಭೌತಶಾಸ್ತ್ರ ಕೇಂದ್ರ (National Centre for Radio Astrophysics) ರಾಷ್ಟ್ರೀಯ ಜೀವಕೋಶ ವಿಜ್ಞಾನ ಕೇಂದ್ರ (National Center for Cell Science) ರಾಷ್ಟ್ರೀಯ ಜಲ ಶಕ್ತಿ ಸಂಶೋಧನಾ ಕೇಂದ್ರ (Central Water and Power Research Station) ಭಾರತೀಯ ಹವಾಮಾನ ಸಂಸ್ಥೆ ಆಟೋಮೋಟಿವ್ ಸಂಶೋಧನಾ ಸಂಸ್ಥೆ ಆರ್.ಜಿ.ಭಂಡಾರ್ಕರ್ ಸಂಶೋಧನಾ ಸಂಸ್ಥೆ ಮಿಲಿಟರಿ ಶಿಕ್ಷಣ ಮಿಲಿಟರಿ ನಡೆಸುವ ಅನೇಕ ಶಿಕ್ಷಣ / ಸಂಶೋಧನಾ ಸಂಸ್ಥೆಗಳೂ ಇಲ್ಲಿವೆ. ಅವುಗಳೆಂದರೆ ರಾಷ್ಟ್ರೀಯ ಸಂರಕ್ಷಣ ಪ್ರಬೋಧಿನಿ ( NDA – National Defence Academy) ಕಾಲೇಜ್ ಆಫ್ ಮಿಲಿಟರಿ ಎಂಜಿನಿಯರಿಂಗ್ ಆರ್ಮಿ ಇನ್ಸ್ಟಿಟ್ಯೂಟ್ ಆಫ್ ಫಿಸಿಕಲ್ ಟ್ರೈನಿಂಗ್ ಸೇನಾ ಮೆಡಿಕಲ್ ಕಾಲೇಜು ( AFMC – Armed Forces Medical College) ಡಿಫೆನ್ಸ್ ಇನ್ಸ್ಟಿಟ್ಯೂಟ್ ಆಫ್ ಆರ್ಮಮೆಂಟ್ ಟೆಕ್ನಾಲಜಿ ಆರ್ಮಮೆಂಟ್ ರಿಸರ್ಚ್ ಮತ್ತು ಡೆವಲಪ್ಮೆಂಟ್ ಎಸ್ತಾಬ್ಲಿಷ್ಮೆಂಟ್ ಎಕ್ಸ್‍ಪ್ಲೋಸಿವ್ ರಿಸರ್ಚ್ ಮತ್ತು ಡೆವಲಪ್ಮೆಂಟ್ ಲ್ಯಾಬೋರೇಟರಿ ಡಿಫೆನ್ಸ್ ರಿಸರ್ಚ್ ಮತ್ತು ಡೆವಲಪ್ಮೆಂಟ್ ಆರ್ಗನೈಸೇಷನ್ (DRDO) ಆರ್ಮಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ. ಕ್ರೀಡೆ ಪುಣೆಯ ಅತಿ ಜನಪ್ರಿಯ ಕ್ರೀಡೆ ಕ್ರಿಕೆಟ್. ಇದಲ್ಲದೆ ಹಾಕಿ, ಫುಟ್ಬಾಲ್, ಟೆನಿಸ್ ಮತ್ತು ಕಬಡ್ಡಿ ಸಹಾ ಸಾಕಷ್ಟು ಲೋಕಪ್ರಿಯವಾಗಿವೆ. ಪ್ರತಿವರ್ಷ ಪುಣೆಯಲ್ಲಿ ಅಂತರರಾಷ್ಟ್ರೀಯ ಮೆರಥಾನ್ ಓಟದ ಸ್ಪರ್ಧೆ ಏರ್ಪಡಿಸುತ್ತಾರೆ. ಮಹಾರಾಷ್ಟ್ರ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ನಿನ ಕೇಂದ್ರ ಕಛೇರಿ ಇಲ್ಲಿಯ ನೆಹರೂ ಸ್ಟೇಡಿಯಮ್ಮಿನಲ್ಲಿದೆ. ಡೆಕ್ಕನ್ ಜಮಖಾನಾದಲ್ಲಿ ಅನೇಕ ಕ್ರೀಡೆಗಳ ಸೌಲಭ್ಯವಿದೆ. ೧೯೯೪ರ ರಾಷ್ಟ್ರೀಯ ಕ್ರೀಡೆಗಳು ನಡೆದದ್ದು ಬಾಲೇವಾಡಿಯ ಶಿವಛತ್ರಪತಿ ಕ್ರೀಡಾ ಸಂಕುಲದಲ್ಲಿ. ಇದೇ ಸಂಕುಲದಲ್ಲಿ ೨೦೦೮ರ ಕಾಮನ್ವೆಲ್ತ್ ಕ್ರೀಡೆಗಳು ಜರುಗಲಿವೆ. ಪುಣೆಯ ಕೆಲವು ಖ್ಯಾತನಾಮ ಕ್ರೀಡಾ ಪಟುಗಳೆಂದರೆ ಹೇಮಂತ ಮತ್ತು ಹೃಷೀಕೇಷ ಕಾನೇಟಕರ್, ರಾಧಿಕಾ ತುಳಪುಳೆ ಮತ್ತು ನಿತಿನ್ ಕೀರ್ತನೆ. ಭಾರತೀಯ ಒಲಿಂಪಿಕ್ ಅಸೋಸಿಯೇಷನ್ನಿನ ಅಧ್ಯಕ್ಷ ಸುರೇಶ್ ಕಲ್ಮಾಡಿ ಪುಣೆಯನ್ನು ಪ್ರತಿನಿಧಿಸುವ ಸಂಸತ್ ಸದಸ್ಯ. ಪ್ರೇಕ್ಷಣೀಯ ಸ್ಥಳಗಳು ಪುಣೆಯ ಮುಖ್ಯ ಪ್ರವಾಸಿ ತಾಣಗಳೆಂದರೆ ಪರ್ವತೀ, ಸಿಂಹಗಡ ಕೋಟೆ, ಶನಿವಾರ ವಾಡೆ, ಖಡಕವಾಸಲಾ ಆಣೆಕಟ್ಟು, ರಾಜಾ ದಿನಕರ್ ಕೇಳ್ಕರ್ ಸಂಗ್ರಹಾಲಯ, ಪಾನಶೇಟ್ ಆಣೆಕಟ್ಟು, ಬಾಲಗಂಧರ್ವ ರಂಗಮಂದಿರ, ಲಾಲ್ ಮಹಲ್, ಆಗಾಖಾನ್ ಅರಮನೆ, ಪುಣೆಯ ಅವಳಿ ನಗರಗಳು ಈ ಕೆಳಕಂಡ ನಗರಗಳನ್ನು ಪುಣೆಯ ಅವಳಿ ನಗರಗಳೆಂದು ಪರಿಗಣಿಸಲಾಗುತ್ತದೆ ಟ್ರೋಮ್ಸೋ, ನಾರ್ವೆ ಬ್ರೆಮೆನ್, ಜರ್ಮನಿ ಸ್ಯಾನ್ ಹೋಸೆ, ಅಮೆರಿಕಾ ಸಂಯುಕ್ತ ಸಂಸ್ಥಾನ ಫೇರ್ಬಾಕ್ಸ್, ಅಲಾಸ್ಕಾ, ಅಮೆರಿಕಾ ಸಂಯುಕ್ತ ಸಂಸ್ಥಾನ ಬಾಹ್ಯ ಸಂಪರ್ಕಗಳು DiscoverPune.Com Government of India website for Pune City and District Pune's Prime Web Portal Online Information on Pune City Pune Community Portal Pune Municipal Corporation E-Governance Pune at Wikimapia ಮಹಾರಾಷ್ಟ್ರದ ಪಟ್ಟಣಗಳು ಭಾರತದ ಪಟ್ಟಣಗಳು
1929
https://kn.wikipedia.org/wiki/%E0%B2%98%E0%B2%9F%E0%B2%AA%E0%B3%8D%E0%B2%B0%E0%B2%AD%E0%B2%BE
ಘಟಪ್ರಭಾ
ಘಟಪ್ರಭಾ ಕೃಷ್ಣಾ ನದಿಯ ಉಪನದಿ. ಉಗಮ ಘಟಪ್ರಭಾ ನದಿಯು ಸಹ್ಯಾದ್ರಿ ಪರ್ವತಶ್ರೇಣಿಯಲ್ಲಿ, ಸಮುದ್ರ ಮಟ್ಟದಿಂದ ೮೮೪ ಮೀಟರ ಎತ್ತರದಲ್ಲಿ ಜನಿಸುತ್ತದೆ. ೨೮೩ ಕಿಮೀ ದೂರದಷ್ಟು ಹರಿದ ಬಳಿಕ ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದಿಂದ ಈಶಾನ್ಯ ದಿಕ್ಕಿಗೆ ೩೫ ಕಿ.ಮೀ ದೂರದಲ್ಲಿ ಕೃಷ್ಣಾ ನದಿಯನ್ನು ಸಂಗಮಿಸುತ್ತದೆ. ಘಟಪ್ರಭಾ ನದಿಯ ಜಲಾನಯನ ಪ್ರದೇಶವು ೮೮೨೯ ಚದುರು ಕಿ.ಮೀ ವಿಸ್ತಾರವಾಗಿದೆ. ಉಪನದಿಗಳು ಹಿರಣ್ಯಕೇಶಿ ಹಾಗು ತಾಮ್ರಪರ್ಣ ಮಾರ್ಕಂಡೇಯ ನದಿಗಳು ಘಟಪ್ರಭಾದ ಉಪನದಿಗಳಾಗಿವೆ. ಆಣೆಕಟ್ಟುಗಳು ಘಟಪ್ರಭಾ ನದಿಗೆ ಗೋಕಾಕ ತಾಲೂಕಿನ ಧೂಪದಾಳ ಗ್ರಾಮದ ಹತ್ತಿರ ೧೮೯೭ ನೆಯ ಇಸವಿಯಲ್ಲಿ ಒಂದು ತಡೆಗೋಡೆಯನ್ನು (wier) ನಿರ್ಮಿಸಲಾಗಿದೆ. ಈ ತಡೆಗೋಡೆಯಿಂದ ೭೧ ಕಿಮೀ ಉದ್ದದ ಕಾಲುವೆ ಮಾಡಲಾಗಿದ್ದು, ಇದರಿಂದ ೪೨,೫೦೦ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸಲಾಗುತ್ತಿದೆ. ಸ್ವಾತಂತ್ರ್ಯಾನಂತರ ಕರ್ನಾಟಕ ಸರಕಾರವು ಈ ಕಾಲುವೆಯನ್ನು ೧೦೯ ಕಿ.ಮೀ ವರೆಗೆ ನಿರ್ಮಾಣ ಮಾಡಿದೆ. ಹಾಗು ಹಿಡಕಲ್ ಗ್ರಾಮದ ಹತ್ತಿರ ಕಟ್ಟಲಾದ ಜಲಾಶಯದಿಂದ ೬೫೯ ದಶಲಕ್ಷ ಘನಮೀಟರುಗಳಷ್ಟು ನೀರನ್ನು ಸಂಗ್ರಹಿಸಲಾಗುತ್ತಿದೆ. ಇದರಿಂದಾಗಿ ನೀರಾವರಿ ಪ್ರದೇಶದ ಒಟ್ಟು ವಿಸ್ತೀರ್ಣವು ೧,೩೯,೬೧೪ ಹೆಕ್ಟೇರ್‍ನಷ್ಟು ವಿಸ್ತಾರವಾಗಿದೆ. ಮುಂದಿನ ಯೋಜನೆ ಹಿಡಕಲ್ ಜಲಾಶಯದ ಎತ್ತರವನ್ನು ಹೆಚ್ಚಿಸುವ ಯೋಜನೆಯನ್ನು ಎತ್ತಿಕೊಳ್ಳಲಾಗಿದೆ. ಇದರಿಂದ ೧೪೪೮ ದಶಲಕ್ಷ ಘನ ಮೀಟರುಗಳಷ್ಟು ಸಂಗ್ರಹವನ್ನು ಮಾಡುವ ಯೋಜನೆಯಿದ್ದು ೨೦೨ ಕಿಮೀ ಉದ್ದದ ಬಲದಂಡೆ ಕಾಲುವೆಯನ್ನು ನಿರ್ಮಿಸಲಾಗುತ್ತಿದೆ. ಇವೆಲ್ಲ ಕಾರ್ಯಕ್ರಮಗಳ ಮೂಲಕ ಘಟಪ್ರಭಾ ನದಿಯಿಂದ ಒಟ್ಟು ೩,೩೧,೦೦೦ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸಲಾಗುವುದು. ಜಲಪಾತ ಗೋಕಾಕ ಪಟ್ಟಣದಿಂದ ೧೦ ಕಿ.ಮೀ ದೂರದಲ್ಲಿ ಘಟಪ್ರಭಾ ನದಿಯು ೫೩ ಮೀಟರು ಆಳಕ್ಕೆ ಧುಮುಕುತ್ತ ಸುಂದರ ಜಲಪಾತವನ್ನು ನಿರ್ಮಿಸಿದೆ. ಜಲಪಾತದ ಮೇಲ್ಗಡೆ ಒಂದು ಹಳೆಯ ತೂಗುಸೇತುವೆ ಇದ್ದು ಪ್ರವಾಸಿಗರಿಗೆ ಆಕರ್ಷಕವಾಗಿದೆ. ಈ ಜಲಪಾತದ ಸಹಾಯದಿಂದ ಅಲ್ಪ ಪ್ರಮಾಣದಲ್ಲಿ ವಿದ್ಯುತ್ ಶಕ್ತಿಯನ್ನು ಸಹ ಉತ್ಪಾದಿಸಲಾಗುತ್ತಿದೆ. ಪಕ್ಕದಲ್ಲಿಯೆ ಒಂದು ಅತ್ಯಂತ ಹಳೆಯ ಅರಳೆ ಗಿರಣಿ ಇದೆ. ಭೂಗೋಳ ಜಲಸಮೂಹಗಳು ನದಿಗಳು ಭಾರತದ ನದಿಗಳು ಕರ್ನಾಟಕದ ನದಿಗಳು
1930
https://kn.wikipedia.org/wiki/%E0%B2%95%E0%B2%A8%E0%B3%8D%E0%B2%A8%E0%B2%A1%20%E0%B2%B8%E0%B2%BE%E0%B2%B9%E0%B2%BF%E0%B2%A4%E0%B3%8D%E0%B2%AF%20%E0%B2%AA%E0%B3%8D%E0%B2%B0%E0%B2%95%E0%B2%BE%E0%B2%B0%E0%B2%97%E0%B2%B3%E0%B3%81
ಕನ್ನಡ ಸಾಹಿತ್ಯ ಪ್ರಕಾರಗಳು
ಕನ್ನಡ ಸಾಹಿತ್ಯ ಅನೇಕ ಪ್ರಕಾರಗಳಿಂದ ಶ್ರೀಮಂತವಾಗಿದೆ. ಸಾಹಿತ್ಯ ಪ್ರಕಾರದ ಸ್ವರೂಪ(nature), ರಚನೆ(structure) ಆಧಾರದ ಮೇಲೆ ಈ ಕೆಳಕಂಡಂತೆ ವಿಂಗಡಿಸಬಹುದು. ಕನ್ನಡ ಸಾಹಿತ್ಯವೇ ಬೇರೆ -ಕನ್ನಡ ಸಾಹಿತ್ಯ ಪ್ರಕಾರಗಳೇ ಬೇರೆ ಆದ್ದರಿಂದ ಕನ್ನಡ ಸಾಹಿತ್ಯಕ್ಕೆ ಬೇರೆ ಶೀರ್ಷಿಕೆ ಕೊಡುವುದೇ ಉಚಿತ. ಸಾಹಿತ್ಯದ ವಿಷಯ ದೊಡ್ಡದು. ಅದರಲ್ಲಿ ಪ್ರಾಚೀನ ಸಾಹಿತ್ಯದಿಂದ ಅರ್ವಾಚೀನ ಸಾಹಿತ್ಯ ಎಲ್ಲಾ ವಿಷಯಗಳನ್ನು ಹಾಕಬಹುದು. ತಕ್ಕ ಮಟ್ಟಿಗೆ ಸಾಹಿತ್ಯದ -ಅದರ ಪ್ರಕಾರಗಳ ವಿವರಣೆ ಪೂರ್ವಾಗ್ರವಿಲ್ಲದ ವಿಮರ್ಶೆಯೂ ಇದರಲ್ಲಿ ಸೇರಬೇಕು. ಕಾವ್ಯ (ನೋಡಿ:ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆ--*ಕನ್ನಡ ಸಾಹಿತ್ಯ ಚರಿತ್ರೆ) ಮಹಾಕಾವ್ಯ, ಕಾವ್ಯ, ಕವನ | ಗೀತೆ ಭಾವಗೀತೆ | ದೇಶಭಕ್ತಿ ಗೀತೆ | ಭಕ್ತಿ ಗೀತೆ ಗದ್ಯ ಕಾವ್ಯ-ರಾಮಾಶ್ವಮೇಧ, ಚಂಪೂ ಕಾವ್ಯ ಆಧುನಿಕ ಕಾವ್ಯ ಕನ್ನಡದಲ್ಲಿ ನವ್ಯಕಾವ್ಯ -ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕನ್ನಡದಲ್ಲಿ ನವ್ಯಕಾವ್ಯ ಬಂಡಾಯ ಕಾವ್ಯ - ಬಂಡಾಯ ಸಾಹಿತ್ಯ ನವೋದಯ ಕಾವ್ಯ|ನವ್ಯ |ನವ್ಯ ಕಾವ್ಯ | ಬಂಡಾಯ ಕಾವ್ಯ | ದಲಿತ ಕಾವ್ಯ- [×] ದಲಿತ ಮತ್ತು ಬಂಡಾಯ‎ ಸಾಹಿತ್ಯ ರಮ್ಯ ಕಾವ್ಯ - ಕನ್ನಡದಲ್ಲಿ ಭಾವಗೀತೆ-ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕನ್ನಡದಲ್ಲಿ ಭಾವಗೀತೆ ತಾತ್ವಿಕ ಕಾವ್ಯ ಜಾನಪದ ಕಾವ್ಯ|ಜಾನಪದ ಸಾಹಿತ್ಯ ನವ್ಯ ೨೦ನೇ ಶತಮಾನದ ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆ ವಚನ ವಚನ ಎಂಬ ಪದಕ್ಕೆ ಮಾತು ಎಂಬ ಸಾಮಾನ್ಯ ಅರ್ಥವಿದೆ, ಶರಣನಾದವನು ಶಿವಾನುಭವದಿಂದ ಪರಿಪಕ್ವವಾದ ಮನದಿಂದ ನುಡಿಯುವ ಪ್ರತಿಮಾತುಗಳು, ಸಂಭಾಷಣೆಗಳು ಸಾಹಿತ್ಯದ ರೂಪತಳೆದಿವೆ. ಶರಣರ ದೃಷ್ಟಿಯಲ್ಲಿ ವಚನ ಎಂಬ ಪದಕ್ಕೆ ಮೀರಲಾಗದ ಮಾತು, ಭಾಷೆಯರೂಪದ ಮಾತು ಎಂಬ ಅರ್ಥವಿದೆ. ಕೆಲವು ಪ್ರಮುಖ ವಚನಕಾರರು- ಬಸವಣ್ಣ ಅಲ್ಲಮಪ್ರಭು ಜೇಡರ ದಾಸಿಮಯ್ಯ ಅಕ್ಕಮಹಾದೇವಿ ಕಗ್ಗ ಡಿ.ವಿ.ಜಿ. ಹನಿಗವನ ಭಾವಗೀತೆ (ಲೇರ್) ಎಂಬ ತಂತಿ ವಾದ್ಯದೊಡನೆ ಅಥವಾ ಇತರ ಯಾವುದೇ ವಾದ್ಯದೊಡನೆ ಹಾಡಲು ಬರುವಂತೆ ರಚಿತವಾಗಿರುವ, ವೈಯಕ್ತಿಕ ಭಾವನೆಗಳನ್ನು ಅಭಿವ್ಯಕ್ತಿಸುವ ಕಿರುಗವನ.->ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಭಾವಗೀತೆ ಕೀರ್ತನೆ ದೇವರ ಹಾಡು ಮತ್ತು ವಚನಗಳನ್ನು ಶಾಸ್ತ್ರೀಯ ಸಂಗೀತದಲ್ಲಿ ಹಾಡುವ ಒಂದು ಪ್ರಕಾರ. ಉದಾಹರಣೆ ಪುರಂದರದಾಸರ, ಕನಕದಾಸರ ಕೀರ್ತನೆಗಳು. ಕಾದಂಬರಿ ಒಂದು ವಸ್ತು ವಿಷಯವನ್ನು ಇಟ್ಟುಕೊಂಡು, ವಿಸ್ತಾರವಾಗಿ ಬರೆಯುತ್ತಾ ಹೋಗುವ ಪ್ರಕಾರ. ಇದು ಸಾಹಿತ್ಯದ ಬಹು ಮುಖ್ಯ ಪ್ರಕಾರ. ಕಾದಂಬರಿಯ ವಿಧಗಳು ಪೌರಾಣಿಕ ಕಾದಂಬರಿ ಐತಿಹಾಸಿಕ ಕಾದಂಬರಿ ಸಾಮಾಜಿಕ ಕಾದಂಬರಿ ಧಾರ್ಮಿಕ ಕಾದಂಬರಿ ಕನ್ನಡದಲ್ಲಿ ಕಾದಂಬರಿ ಸಾಹಿತ್ಯ ಕಥೆ ಸಣ್ಣಕಥೆ Bulleted list item ಒಂದು ಚಿಕ್ಕ ಘಟನೆ ಅಥವಾ ವಿಷಯವನ್ನು ವಿಸ್ತರಿಸಿ ಸ್ವಾರಸ್ಯವಾಗಿ ನಿರೂಪಿಸುವ, ಮುಕ್ತಾಯಗೊಳಿಸುವ ಸಾಹಿತ್ಯ ಪ್ರಕಾರ. ನೀಳ್ಗಥೆ ಸಣ್ಣ-ಪುಟ್ಟ ಘಟನೆಗಳಿಂದ ಅಥವಾ ಕಲ್ಪನೆಗಳಿಂದ ಆಧಾರಿತವಾದ ಉದ್ದವಾದ ಅಥವಾ ವಿಸ್ತಾರವಾದ ಕಥೆ. ನಾಟಕ ನಟನಾ ಪ್ರದಶನಕ್ಕಾಗಿ ರಚಿತವಾದ ಒಂದು ಸಾಹಿತ್ಯ ಪ್ರಕಾರ. (ಪ್ರಾಕಾರ ಎಂದರೆ ಗೋಡೆ) ಸುಖಾಂತ ನಾಟಕಗಳು ದುರಂತ ನಾಟಕಗಳು.- ಸಾಮಾಜಿಕ ನಾಟಕಗಳು; ಪೌರಾಣಿಕ ನಾಟಕಗಳು; ಐತಿಹಾಸಿಕ ನಾಟಕಗಳು. ಗೀತ ನಾಟಕಗಳು , ಗದ್ಯ ನಾಟಕಗಳು , ಗದ್ಯ ಪದ್ಯ ಮಿಶ್ರವಾದ ಸಂಗೀತ ನಾಟಕಗಳು. ಏಕಾಂಕ ನಾಟಕಗಳು ಮತ್ತು ಅನೇಕ ಅಂಕಗಳಿರುವ ನಾಟಕಗಳು ಹೀಗೆ ವಿಂಗಡಣೆಗಳಿವೆ ಹಾಸ್ಯ ವಿಶ್ವವಿದ್ಯಾನಿಲಯ ವಿಶ್ವಕೋಶ/ಕನ್ನಡದಲ್ಲಿ ಹಾಸ್ಯ ಸಾಹಿತ್ಯ ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕನ್ನಡದಲ್ಲಿ ವಿಡಂಬನೆ ಸಾಹಿತ್ಯ ಹಾಸ್ಯದಲ್ಲಿ ಅನೇಕ ಪ್ರಕಾರಗಳಿವೆ. ಉದಾಹರಣೆಗೆ : ಕಟಕಿ- ಬಿರುನುಡಿ, ಕಿರುನುಡಿ, ವ್ಯಂಗ್ಯ , ಲಘುಹಾಸ್ಯ, ಸರಸ, ವಕ್ರೋಕ್ತಿ , ಜಾಣ್ನುಡಿ , ಪರಿಹಾಸ ಎಂದು ವಿಂಗಡಿಸಬಹುದು. ವಿಡಂಬನ ಸಾಹಿತ್ಯ ಇವುಗಳಲ್ಲಿ ಲಘು ಹಾಸ್ಯ ಪ್ರಬಂಧಗಳು ಅಥವಾ ಲಲಿತ ಪ್ರಬಂಧಗಳು ಕೂಡ ಹಾಸ್ಯದ ಪರಿಧಿಗೆ ಸೇರುತ್ತವೆ. ಲಘು ಹಾಸ್ಯ ಪ್ರಬಂಧಗಳು ಲಲಿತ ಪ್ರಬಂಧಗಳು ನಿದ್ದೆಯ ಬಹುರೂಪಗಳು ಮತ್ತು ಪುರುಷ ವಿಮೋಚನಾ ಚಳುವಳಿಯ ಆದಿ ಮತ್ತು ಅಂತ್ಯ. ಪ್ರಬಂಧಗಳು ಲಲಿತ ಪ್ರಬಂಧಗಳು ಲಘು ಪ್ರಬಂಧಗಳು , ವಿಮರ್ಶಾತ್ಮಕ ಪ್ರಬಂಧಗಳು, ವೈಜ್ಞಾನಿಕ ಪ್ರಬಂಧಗಳು, ವೈಚಾರಿಕ ಪ್ರಬಂಧಗಳು ಹಾಸ್ಯ ಪ್ರಬಂಧಗಳು ನಿರೂಪಣಾ ಪ್ರಬಂಧ (ನ್ಯರೇಟಿವ್ ಎಸ್ಸೇಸ್) ಪ್ರಬಂಧ ರಚನೆ - ಪ್ರಬಂಧಗಳ ವಿಧಗಳು ಮತ್ತು ಅವುಗಳ ರಚನೆಯ ಕ್ರಮವನ್ನು ವಿವರಿಸುವುದು. ವೈಜ್ಞಾನಿಕ ಗ್ರಂಥಗಳು ವೈದ್ಯಕೀಯ ಗ್ರಂಥಗಳು ವಿಜ್ಞಾನ ಕುರಿತ ಗ್ರಂಥಗಳು ಹಾಸ್ಯ ಪ್ರಬಂಧಗಳು ಲಲಿತ ಪ್ರಬಂಧಗಳು ಮರೆಗುಳಿತನದ ಇತಿಹಾಸ ಮಕ್ಕಳ ಸಾಹಿತ್ಯ ಚರ್ಚೆಪುಟ:ಮಕ್ಕಳ ಕಥೆ - ಕಾಗಕ್ಕ ಗುಬ್ಬಕ್ಕನ ಕಥೆ ಚುಟುಕು | ಚುಟುಕು ಕವನ ಮಕ್ಕಳ ಕವನ- ಊಟದ ಆಟ, ಹತ್ತು ಹತ್ತು ಇಪ್ಪತ್ತು, ಬಣ್ಣದ ತಗಡಿನ ತುತ್ತೂರಿ 'ನಾಗರ ಹಾವೆ, ನಮ್ಮ ಮನೆಲೊಂದು ಪಾಪನಿರುಉದು , ಕಂದನು ಬಂದ - ಗೋವಿನ ಹಾಡು (ಪುಣ್ಯಕೋಟಿ ಯ ಕಥೆ ) ಮಕ್ಕಳ ನಾಟಕ ಒಗಟು ಪ್ರವಾಸ ಸಾಹಿತ್ಯ ಪ್ರವಾಸ ಲೇಖನಗಳು , ಪ್ರವಾಸ ಗ್ರಂಥಗಳು (ಅಪೂರ್ವ ಪಶ್ಚಿಮ- ಕೋಶಿ ಕಾರಂತ ) ಜಾನಪದ ಜಾನಪದ ಕಾವ್ಯ ಜೀವನ ಚರಿತ್ರೆ ಆತ್ಮ ಚರಿತ್ರೆ, [[ಕನ್ನಡ ಸಾಹಿತ್ಯ ಅನೇಕ ಪ್ರಕಾರಗಳಿಂದ ಶ್ರೀಮಂತವಾಗಿದೆ. ಸಾಹಿತ್ಯ ಪ್ರಕಾರದ ಸ್ವರೂಪ, ರಚನೆ(structure) ಆಧಾರದ ಮೇಲೆ ಈ ಕೆಳಕಂಡಂತೆ ವಿಂಗಡಿಸಬಹುದು.ಕನ್ನಡ ಸಾಹಿತ್ಯವೇ ಬೇರೆ -ಕನ್ನಡ ಸಾಹಿತ್ಯ ಪ್ರಕಾರಗಳೇ ಬೇರೆ ಆದ್ದರಿಂದ ಕನ್ನಡ ಸಾಹಿತ್ಯಕ್ಕೆ ಬೇರೆ ಶೀರ್ಷಿಕೆ ಕೊಡುವುದೇ ಉಚಿತ. ಸಾಹಿತ್ಯದ ವಿಷಯ ದೊಡ್ಡದು. ಅದರಲ್ಲಿ ಪ್ರಾಚೀನ ಸಾಹಿತ್ಯದಿಂದ ಅರ್ವಾಚೀನ ಸಾಹಿತ್ಯ ಎಲ್ಲಾ ವಿಷಯಗಳನ್ನು ಹಾಕಬಹುದು. ತಕ್ಕ ಮಟ್ಟಿಗೆ ಸಾಹಿತ್ಯದ -ಅದರ ಪ್ರಕಾರಗಳ ವಿವರಣೆ ಪೂರ್ವಾಗ್ರವಿಲ್ಲದ ವಿಮರ್ಶೆಯೂ ಸೇರಬಹದು /ಸೇರಬೇಕು. ದುರಂತ ಸಾಹಿತ್ಯ ಅಂದರೆ ಒಂದು ಕೆಟ್ಟ ಘಟನೆಯನ್ನು, ಮನಕ್ಕೆ ನೋವು ಕೊಡುವಂತಹ ಘಟನೆಯನ್ನು ವಿವರಿಸುವ ಪ್ರಕಾರವೆ ದುರಂತ ಸಾಹಿತ್ಯ. ವಿಮರ್ಶೆ/ಸಂಶೋಧನೆ ವಿಮರ್ಶಾಸಾಹಿತ್ಯವು ಕನ್ನಡ ಸಾಹಿತ್ಯದ ಮತ್ತೊಂದು ಪ್ರಮುಖ ಪ್ರಕಾರ. ಸಾಹಿತ್ಯ ಉದ್ಭವವಾದ ಬಳಿಕ ಅದನ್ನು ಒರೆ ಹಚ್ಚಿ ನೋಡುವುದು; ಅದರ ಹಿರಿಮೆಯನ್ನು ಎತ್ತಿ ಹಿಡಿಯುವ ಜೊತೆಗೆ ಅದರ ಕೊರತೆಗಳನ್ನೂ, ಮಿತಿಯನ್ನೂ ಗುರುತಿಸುವುದು ವಿಮರ್ಶಾಸಾಹಿತ್ಯದ ಪ್ರಮುಖ ಲಕ್ಷ್ಮಣ. ಕನ್ನಡದ ಮಟ್ಟಿಗೆ ಹಲವಾರು ಸಾಹಿತಿಗಳು ಈ ಕ್ಷೇತ್ರದಲ್ಲಿ ಗಮನೀಯ ಕೆಲಸ ಮಾಡಿದ್ದಾರೆ. ಪ್ರಮುಖವಾಗಿ ಕೀರ್ತಿನಾಥ ಕುರ್ತಕೋಟಿ, ಸಿ. ಎನ್. ರಾಮಚಂದ್ರನ್, ನರಹಳ್ಳಿ ಬಾಲಸುಬ್ರಹ್ಮಣ್ಯಂ, ಚಂದ್ರಶೇಖರ ವಿ. ನಂಗಲಿ ಮುಂತಾದವರು ಪ್ರಮುಖರು. ಸಂಶೋಧನಾ ಸಾಹಿತ್ಯವು ಜಾನಪದ, ಭಾಷೆ ಮತ್ತು ಶಾಸನಗಳನ್ನು ತನ್ನ ಪ್ರಮುಖ ಆಕರಗಳನ್ನಾಗಿಸಿಕೊಂಡ ಪ್ರಕಾರವಾಗಿದೆ. ಅಲ್ಲದೆ ಇದು ಆಧುನಿಕ ಸಾಹಿತ್ಯದ ವಿವಿಧ ಆಯಾಮಗಳನ್ನು ಶೋಧಿಸಿ ಮುನ್ನೆಲೆಗೆ ತರುವ ಪ್ರಕಾರವೂ ಆಗಿದೆ. ಜೀ. ಶಂ. ಪರಮಶಿವಯ್ಯ, ಟಿ. ವಿ. ವೆಂಕಟಾಚಲ ಶಾಸ್ತ್ರಿ, ಹಾ. ಮಾ. ನಾಯಕ, ದೇಜಗೌ, ಹಂ. ಪ. ನಾಗರಾಜಯ್ಯ ಮುಂತಾದವರು ಪರಿಪುಷ್ಟಿಗೊಳಿಸಿದ ಈ ಕ್ಷೇತ್ರದಲ್ಲಿ ಇಂದು ಕುಪ್ನಳ್ಳಿ ಎಂ. ಬೈರಪ್ಪ ಸೇರಿದಂತೆ ಹಲವಾರು ಹೊಸ ತಲೆಮಾರಿನ ಸಾಹಿತಿಗಳು ಗಮನಾರ್ಹ ಕೃಷಿ ಮಾಡುತ್ತಿದ್ದಾರೆ. ಇದನ್ನೂ ನೋಡಿ ಕನ್ನಡ ಸಾಹಿತ್ಯ |ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆ ಉಲ್ಲೇಖ ದಲಿತ ಮತ್ತು ಬಂಡಾಯ ಮಕ್ಕಳ ಸಾಹಿತ್ಯ ಶಿಶು ಸಾಹಿತ್ಯ ಕನ್ನಡ ಸಾಹಿತ್ಯ ಸಾಹಿತ್ಯ
1933
https://kn.wikipedia.org/wiki/%E0%B2%AE%E0%B2%B2%E0%B3%86%E0%B2%97%E0%B2%B3%E0%B2%B2%E0%B3%8D%E0%B2%B2%E0%B2%BF%20%E0%B2%AE%E0%B2%A6%E0%B3%81%E0%B2%AE%E0%B2%97%E0%B2%B3%E0%B3%81
ಮಲೆಗಳಲ್ಲಿ ಮದುಮಗಳು
ರಾಷ್ಟ್ರಕವಿ ಕುವೆಂಪುರವರ ಕಾದಂಬರಿ. ೧೯೬೭ರಲ್ಲಿ ಮೊದಲು ಪ್ರಕಟಗೊಂಡಿತು. ಕಾದಂಬರಿಯಲ್ಲಿ ಬರುವ ಪಾತ್ರವರ್ಗ, ಸ್ಥಳಗಳು, ಜಾತಿ/ಪಂಗಡಗಳ ವಿವರಣೆ: ಇದನ್ನು ಸಹ ನೋಡಿ ಕಾನೂರು ಹೆಗ್ಗಡಿತಿ ಕನ್ನಡ ಕಾದಂಬರಿಗಳು ಕುವೆಂಪುರವರ ಕೃತಿಗಳು
1939
https://kn.wikipedia.org/wiki/%E0%B2%96%E0%B2%A1%E0%B2%95%E0%B3%8D%E2%80%8D%E0%B2%B5%E0%B2%BE%E0%B2%B8%E0%B3%8D%E0%B2%B2%E0%B2%BE
ಖಡಕ್‍ವಾಸ್ಲಾ
ಖಡಕ್‍ವಾಸ್ಲಾ ಪುಣೆಯಿಂದ ೧೭ ಕಿ.ಮೀಗಳ ದೂರದಲ್ಲಿ ಇರುವ ಸ್ಥಳ. ರಾಷ್ಟ್ರೀಯ ರಕ್ಷಣಾ ಅಕಾಡೆಮಿ (National Defence Academy) ಇಲ್ಲಿದೆ. ಅಲ್ಲದೆ, ಸರ್ ಎಂ.ವಿಶ್ವೇಶ್ವರಯ್ಯನವರಿಂದ ನಿರ್ಮಿಸಲ್ಪಟ್ಟ ಅಣೆಕಟ್ಟು ಇಲ್ಲಿದೆ. ಭೂಗೋಳ ಪ್ರವಾಸೋದ್ಯಮ
1940
https://kn.wikipedia.org/wiki/%E0%B2%98%E0%B2%9F%E0%B2%B6%E0%B3%8D%E0%B2%B0%E0%B2%BE%E0%B2%A6%E0%B3%8D%E0%B2%A7
ಘಟಶ್ರಾದ್ಧ
ಮೂಲತ: ಶ್ರೀ ಯು.ಆರ್.ಅನಂತಮೂರ್ತಿಯವರ ಸಣ್ಣಕತೆಯಾದ ಘಟಶ್ರಾದ್ಧ ಪ್ರತಿಭಾನ್ವಿತ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ ನಿರ್ದೇಶನದಲ್ಲಿ ಚಲನಚಿತ್ರವಾಗಿ ಸ್ವರ್ಣ ಕಮಲವನ್ನು ಪಡೆದಿದೆ. ವರ್ಷ-೧೯೭೭ ಕನ್ನಡಚಿತ್ರಗಳು ಕಾದಂಬರಿ ಆಧಾರಿತ ಕನ್ನಡ ಚಿತ್ರಗಳು
1941
https://kn.wikipedia.org/wiki/%E0%B2%B8%E0%B3%8A%E0%B2%B2%E0%B3%8D%E0%B2%B2%E0%B2%BE%E0%B2%AA%E0%B3%81%E0%B2%B0
ಸೊಲ್ಲಾಪುರ
ಕರ್ನಾಟಕದ ಬಿಜಾಪುರ ಜಿಲ್ಲೆಗೆ ಹೊಂದಿಕೊಂಡಿರುವ, ಮಹಾರಾಷ್ಟ್ರದ ಜಿಲ್ಲೆ ಸೊಲ್ಲಾಪುರ. ಹಿಂದೆ 'ಸೊನ್ನಲಿಗೆ'ಯಾಗಿದ್ದ ಸೊಲ್ಲಾಪುರ ಕರ್ಮಯೋಗಿ ಸಿದ್ಧರಾಮೇಶ್ವರರ ಕರ್ಮಭೂಮಿ.ಸೊಲ್ಲಾಪುರ (ಮರಾಠಿಯಲ್ಲಿ ಸೋಲಾಪುರ್‍) ಮಹಾರಾಷ್ಟ್ರ ರಾಜ್ಯದ ದಕ್ಷಿಣ ಪೂರ್ವದಲ್ಲಿ ಕರ್ನಾಟಕದ ಗಡಿಯಲ್ಲಿರುವ ನಗರ , ಮತ್ತು ಅದೇ ಹೆಸರಿನ ಜಿಲ್ಲೆಯ ಕೇಂದ್ರ. ಉತ್ತರ ದಕ್ಷಿಣ ರೈಲುದಾರಿಯಲ್ಲಿ ಇದೊಂದು ಪ್ರಮುಖ ಜಂಕ್ಷನ್. ಅನೇಕ ಸಣ್ಣ ಮತ್ತು ಮಧ್ಯಮ ಸ್ಥರದ ಉದ್ಯಮಗಳು ಇಲ್ಲಿವೆ. ವಿದ್ಯುತ್ ಮಗ್ಗಗಳು ಹಾಗೂ ಹತ್ತಿ ಗಿರಣಿಗಳ ಮುಖ್ಯ ಕೇಂದ್ರವೂ ಇದಾಗಿದೆ. ಸೊಲ್ಲಾಪುರದ ಚಾದರಗಳು (ಬೆಡ್ ಶೀಟುಗಳು) ತಮ್ಮ ಹೊಸ ಹೊಸ ವಿನ್ಯಾಸಗಳಿಗೆ ಮತ್ತು ತಾಳಿಕೆಯಿಂದಾಗಿ ಮನೆಮಾತಾಗಿವೆ. ಇಲ್ಲಿಯ ಊರದೈವ ಶ್ರೀ ಸಿದ್ಧೇಶ್ವರ. ಮಕರಸಂಕ್ರಾಂತಿಯಂದು ನಡೆಯುವ ನಂದಿಧ್ವಜದ ಮೆರವಣಿಗೆಯಲ್ಲಿ ಲಕ್ಷಾಂತರ ಜನ ಪಾಲ್ಗೊಳ್ಳುತ್ತಾರೆ. ಮಹಾರಾಷ್ಟ್ರದ ಬೀಡಿ ಉದ್ಯಮದಲ್ಲಿಯೂ ಸೊಲ್ಲಾಪುರ ಜಿಲ್ಲೆ ಮುಂದಿದೆ. ಇಲ್ಲಿಯ ಹುತಾತ್ಮರ ಸ್ಮಾರಕಕ್ಕೆ ದಿನವೂ ಅನೇಕರು ವಂದಿಸುತ್ತಾರೆ. ಕೂಡಲಸಂಗಮ, ಕರ್ಮಾಲಾ, ಮತ್ತು ಬಾರ್ಶಿ ಶಿಕ್ಷಣ ಮತ್ತು ಔದ್ಯೋಗೀಕರಣದಿಂದ ಪ್ರಗತಿಪಥದಲ್ಲಿವೆ. ಅಕ್ಕಲಕೋಟೆಯ ಸ್ವಾಮಿ ಮಹಾರಾಜರ ಮಠಕ್ಕೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಬೃಹತ್ ಸಂಖ್ಯೆಯ ಭಕ್ತರು ನಡೆದುಕೊಳ್ಳುತ್ತಾರೆ. ಹೆಸರಿನ ಮೂಲ ಸೊಲ್ಲಾಪುರ ಜಿಲ್ಲೆ ಪುರಾತನ ಕಾಲದಿಂದಲೂ ಚಾಲುಕ್ಯರು, ರಾಷ್ಟ್ರಕೂಟರು, ಯಾದವರು ಮತ್ತು ಬಹಮನಿ ಸುಲ್ತಾನ ಇತ್ಯಾದಿ ರಾಜರುಗಳ ಆಳ್ವಿಕೆಗೆ ಒಳಪಟ್ಟಿತ್ತು. ಸೊಲ್ಲಾಪುರ ಎಂಬ ಹೆಸರು ಸೋಳಾ ( ಹದಿನಾರು) ಮತ್ತು ಪುರ ( ಹಳ್ಳಿ) ಎಂಬ ಪದಗಳಿಂದ ಬಂದಿರಬೇಕು ಅನ್ನುತ್ತಾರೆ. ಈಗಿನ ಸೊಲ್ಲಾಫುರದಲ್ಲಿ ಆದಿಲಪುರ, ಅಹಮದ್ ಪುರ, ಚಪಲದೇವ, ಫತೇಹ್ ಪುರ, ಜಾಮದಾರವಾಡಿ, ಕಲಜಾಪುರ, ಖದರಪುರ, ಖಂಡೇರ್‍ವಕಿವಾಡಿ, ಮುಹಮ್ಮದ್ ಪುರ, ರಾನಾಪುರ, ಸಂದಾಲಪುರ, ಶೇಕ್ ಪುರ, ಸೋಲಾಪುರ, ಸೋನಲಗಿ, ಸೋನಾಪುರ ಮತ್ತು ವೈದಕ್ ವಾಡಿ ಎಂಬ ಹದಿನಾರು ಹಳ್ಳಿಗಳು ಅಡಕವಾಗಿವೆ. ಆದರೆ ಈಚೆಗಿನ ಸಂಶೋಧನೆಯ ಪ್ರಕಾರ ಈ ನಂಬಿಕೆ ನಿರಾಧಾರವಾದದ್ದು. ಕಾಮಟಿ ಎಂಬಲ್ಲಿ ಸಿಕ್ಕಿರುವ, ಶಕೆ ೧೨೩೮ರ, ಯಾದವರ ಪತನದ ನಂತರದ ಕಾಲದ, ಒಂದು ಸಂಸ್ಕೃತ ಶಾಸನದ ಪ್ರಕಾರ ಈ ಊರಿನ ಹೆಸರು ಸೋನಾಲಿಪುರ. ಸೊಲ್ಲಾಪುರ ಕೋಟೆಯೊಳಗಿನ ಒಂದು ಶಾಸನದ ಪ್ರಕಾರ , ಈ ಊರನ್ನು ಸೋನಾಲಪುರ ಎಂದು ಕರೆಯಲಾಗುತ್ತಿತ್ತು. ಕೋಟೆಯ ಬಾವಿಯಮೇಲಿನ ಬರಹದ ಪ್ರಕಾರ ಊರಿನ ಹೆಸರು ಸಂದಾಲಪುರ ಎಂದಿತ್ತು. ಮುಸ್ಲಿಮ್ ಆಡಳಿತದಕಾಲದಲ್ಲಿಯೂ ಇದು ಸಂದಾಲಪುರವಾಗಿತ್ತು. ಆದ್ದರಿಂದ ಸೋನಾಲಪುರ ಕಾಲಕ್ರಮೇಣ ತನ್ನ ನ ಕಾರವನ್ನು ಕಳೆದುಕೊಂಡು ಸೋಲಾಪುರ ಎಂದಾಗಿರಬಹುದು ಎಂದು ಊಹಿಸಲು ಕಾರಣಗಳಿವೆ. ಮುಂದೆ ಬ್ರಿಟಿಶರ ಬಾಯಲ್ಲಿ ಇದು ಶೋಲಾಪುರವಾಗಿ , ಈಗಲೂ ಶೋಲಾಪುರ ಎಂಬ ಹೆಸರನ್ನೂ ಉಪಯೋಗಿಸಲಾಗುತ್ತದೆ. ಇತಿಹಾಸ ಈಗಿನ ಸೋಲಾಪುರ ಜಿಲ್ಲೆ ಮೊದಲು ಅಹಮದ್ ನಗರ, ಪುಣೆ ಮತ್ತು ಸತಾರಾ ಜಿಲ್ಲೆಗಳಲ್ಲಿ ಹಂಚಿಹೋಗಿತ್ತು. ೧೮೩೮ರಲ್ಲಿ ಇದು ಅಹಮದ್ ನಗರದ ಉಪ-ಜಿಲ್ಲೆಯಾಯಿತು. ಇದರಲ್ಲಿ ಬಾರ್ಶಿ, ಮೋಹೋಲ್,ಮಧಾ, ಕರ್ಮಾಲಾ, ಇಂಡಿ, ಹಿಪ್ಪರಗಿ ಮತ್ತು ಮುದ್ದೇಬಿಹಾಳ ಉಪವಿಭಾಗಳು ಸೇರಿದ್ದವು. ೧೮೬೪ರಲ್ಲಿ ಈ ಉಪ-ಜಿಲ್ಲೆಯನ್ನು ರದ್ದುಗೊಳಿಸಲಾಯಿತು. ೧೮೭೧ರಲ್ಲಿ ಇದನ್ನು ಸೊಲ್ಲಾಪುರ,ಬಾರ್ಶಿ, ಮೋಹೋಲ್, ಮಧಾ ಮತ್ತು ಕರ್ಮಾಲಾ ಅಲ್ಲದೆ ಸತಾರಾ ಜಿಲ್ಲೆಯ ಎರಡು ಉಪ-ವಿಭಾಗಗಳಾದ ಪಂಢರಪುರ ಮತ್ತು ಸಂಗೋಳಾ ಸೇರಿದಂತೆ ಒಂದು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಲಾಯಿತು. ೧೮೭೫ರಲ್ಲಿ ಇದಕ್ಕೆ ಮಾಲ್ಶಿರಸ್ ಉಪ-ವಿಭಾಗವನ್ನು ಸೇರಿಸಲಾಯಿತು. ೧೯೫೬ರ ರಾಜ್ಯಗಳ ಪುನರ್‍ರಚನೆಯ ಸಂದರ್ಭದಲ್ಲಿ ಸೊಲ್ಲಾಪುರ ಮಹಾರಾಷ್ಟ್ರಕ್ಕೆ ಸೇರಿತು. ಸ್ವಾತಂತ್ರ ಹೋರಾಟದಲ್ಲಿ ಪಾತ್ರ ಭಾರತ ಸ್ವತಂತ್ರವಾಗುವ ಮೊದಲೇ ಸ್ವತಂತ್ರವಾಗಿದ್ದು ಸೊಲ್ಲಾಪುರದ ವೈಶಿಷ್ಟ್ಯ. ೧೯೩೦ರ ಮೇ ೯ರಿಂದ ೧೧ರವರೆಗೆ ಇಲ್ಲಿಯ ಜನಗಳಿಗೆ ಸ್ವಾತಂತ್ರ್ಯ ಲಭಿಸಿತ್ತು. ಈ ವಿಶಿಷ್ಟ ಕಥೆ ಇಂತಿದೆ.ಮೇ ೧೯೩೦ರಲ್ಲಿ ಮಹಾತ್ಮಾ ಗಾಂಧಿಯವರ ಬಂಧನದೊಂದಿಗೆ ದೇಶಾದ್ಯಂತ ಬ್ರಿಟಿಶರ ವಿರುದ್ಧ ಪ್ರತಿಭಟನೆ ಪ್ರಾರಂಭವಾಯಿತು. ಅದು ಸೊಲ್ಲಾಪುರಕ್ಕೂ ಹಬ್ಬಿ ಅಲ್ಲಿಯೂ ಮೆರವಣಿಗೆ, ಪ್ರತಿಭಟನೆಗಳಾದವು. ಪೋಲೀಸರ ಗುಂಡೇಟಿನಲ್ಲಿ ಅನೇಕರು ಮಡಿದರು. ಇದರಿಂದ ರೊಚ್ಚಿಗೆದ್ದ ಜನಜಂಗುಳಿ ಪೋಲೀಸ್ ಠಾಣೆಗೆ ನುಗ್ಗಿದರು. ಅಲ್ಲಿದ್ದ ಪೋಲೀಸರು ಮತ್ತಿತರ ಅಧಿಕಾರಿಗಳು ಸೊಲ್ಲಾಪುರದಿಂದ ಪಲಾಯನ ಹೂಡಿದರು. ಈ ಸನ್ನಿವೇಶದಲ್ಲಿ ಊರಿನ ಕಾನೂನು ಪಾಲನೆ , ಶಾಂತಿ ಕಾಪಾಡುವ ಜವಾಬ್ದಾರಿ ಕಾಂಗ್ರೆಸ್ ಪಕ್ಷದ ಮೇಲಿತ್ತು. ಅಂದಿನ ನಗರ ಕಾಂಗ್ರೆಸ್ ಅಧ್ಯಕ್ಷ ಶ್ರೀ ರಾಮಕೃಷ್ಣ ಜಾಜು , ಇತರೆ ಕಾಂಗ್ರೆಸ್ಸಿಗರೊಂದಿಗೆ ೯ರಿಂದ ೧೧ರವರೆಗೆ ಈ ಜವಾಬ್ದಾರಿಯನ್ನು ನಿಭಾಯಿಸಿದರು. ಅಂತೆಯೇ, ಭಾರತದ ಮುನಿಸಿಪಾಲಿಟಿಗಳಲ್ಲಿಯೇ ಮೊದಲಬಾರಿಗೆ ಮುನಿಸಿಪಾಲಿಟಿ ಕಟ್ಟಡದ ಮೇಲೆ ರಾಷ್ಟ್ರಧ್ವಜ ಹಾರಿಸಿದ ಹೆಗ್ಗಳಿಕೆಯೂ (೧೯೩೦ರಲ್ಲಿ) ಈ ಊರಿನದು. ಗಾಂಧಿಯವರ ದಾಂಡಿ ಉಪ್ಪಿನ ಸತ್ಯಾಗ್ರಹದಿಂದ ಸ್ಪೂರ್ತಿಗೊಂಡ ಸೊಲ್ಲಾಪುರದ ಕೆಲ ತರುಣರು ಸೊಲ್ಲಾಪುರದ ಮುನಿಸಿಪಾಲಿಟಿ ಕಟ್ಟಡದ ಮೇಲೆ ರಾಷ್ಟ್ರಧ್ವಜ ಹಾರಿಸಲು ತೀರ್ಮಾನಿಸಿದರು. ಅ ಯೋಜನೆಯ ಪ್ರಕಾರ ಪುಣೆಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶ್ರೀ. ಅಣ್ಣಾಸಾಹೇಬ ಭೋಪಟ್ಕರ್‍ ೧೯೩೦ರ ಏಪ್ರಿಲ್ ೬ನೆ ತಾರೀಖು ಮುನಿಸಿಪಾಲಿಟಿಯ ಮೇಲೆ ಧ್ವಜ ಹಾರಿಸಿದರು. ಇದರಿಂದ ತ್ರಸ್ತರಾದ ಬ್ರಿಟಿಶರು ಸೊಲ್ಲಾಫುರದಲ್ಲಿ ಮಾರ್ಶಿಯಲ್ ಲಾ ಜಾರಿ ಮಾಡಿ, ಅನೇಕ ಮುಂದಾಳುಗಳನ್ನು ಹಾಗೂ ನಾಗರೀಕರರನ್ನು ಬಂಧಿಸಿದರು. ಮಲ್ಲಪ್ಪ ಧನಶೆಟ್ಟಿ, ಕುರ್ಬಾ ನ್ ಹುಸೇನ್ , ಜಗನ್ನಾಥ ಶಿಂದೆ ಮತ್ತು ಕಿಸನ್ ಸಾರ್ದಾ ಇವರನ್ನು ಮಂಗಳವಾರ ಪೋಲೀಸ್ ಠಾಣೆಯ ಇಬ್ಬರು ಪೋಲಿಸರನ್ನು ಕೊಂದ ಆರೋಪದ ಮೇಲೆ ಬಂಧಿಸಲಾಯಿತು. ಕೆಳ ನ್ಯಾಯಾಲಯದಲ್ಲಿ ಇವರಿಗೆ ವಿಧಿಸಲಾದ ಗಲ್ಲು ಶಿಕ್ಷೆ, ಮುಂದೆ ಉಚ್ಚ ನ್ಯಾಯಾಲಯದಲ್ಲಿಯೂ ಖಾಯಮ್ ಆಗಿ , ಈ ನಾಲ್ವರನ್ನು ೧೯೩೧ರ ಜನವರಿ ೧೨ರಂದು ಗಲ್ಲಿಗೇರಿಸಲಾಯಿತು. ಈ ನಾಲ್ವರು ಹುತಾತ್ಮರ ಸ್ಮರಣಾರ್ಥ ನಗರಮಧ್ಯದಲ್ಲಿ ಇವರ ಮೂರ್ತಿಗಳನ್ನು ಪ್ರತಿಷ್ಟಾಪಿಸಿ , ಈ ಜಾಗವನ್ನು ಹುತಾತ್ಮಾ ಚೌಕ ಎಂದು ಹೆಸರಿಸಲಾಗಿದೆ. ಇಲ್ಲಿಯ ಊರದೇವರು ಶ್ರೀ ಸಿದ್ಧರಾಮೇಶ್ವರ. ೧೨ನೆಯ ಶತಮಾನದ ಈ ಐತಿಹಾಸಿಕ ವ್ಯಕ್ತಿಯ ಕರ್ಮಯೋಗ ದಿಂದ ದೈವತ್ವಕ್ಕೇರಿದ. ಸಿದ್ಧರಾಮ ವೀರಶೈವ ಧರ್ಮಕ್ಕೆ ಅಪಾರ ಕೊಡುಗೆ ನೀಡಿದ್ದು, ವೀರಶೈವರ ಆಚಾರ್ಯ ಪಂಥಕ್ಕೆ ಸೇರಿದವನು, ಅದ್ಬುತ ವಚನಕಾರ. ಉಭಯಕವಿ ಕಮಲರವಿ ಎಂದು ಬಿರುದಾಂಕಿತನಾದ ರಾಘವಾಂಕನು ಸಿದ್ದರಾಮ ಚರಿತೆಯನ್ನು ಷಟ್ಪದಿಯಲ್ಲಿ ರಚಿಸಿ ,ಸಿದ್ದರಾಮನ ಮೇರುವ್ಯಕ್ತಿತ್ವ ವನ್ನು ಅಭಿವ್ಯಕ್ತಗೊಳಿಸಿದ್ದಾನೆ. ಬರಗಾಲಪೀಡಿತ ಸೊಲ್ಲಾಪುರದಲ್ಲಿ ಕುಡಿಯುವ ನೀರಿನ ಕೊರತೆಯನ್ನು ನೀಗಿಸಲು ಸಿದ್ಧರಾಮೇಶ್ವರನು ೪೦೦೦ ಶಿವಶರಣರೊಂದಿಗೆ , ಕೆರೆಯನ್ನು ತೋಡಿದನು ಮತ್ತು ದೇವಾಲಯಗಳನ್ನು ನಿರ್ಮಿಸಿದನು. ಆತ ಸೊಲ್ಲಾಪುರದಲ್ಲಿಯೇ ಸಜೀವ ಸಮಾಧಿಗೇರಿದನು.ಅವನ ವಚನಗಳನ್ನು ಡಾ.ಎಲ್.ಬಸವರಾಜುರವರು ಸಂಪಾದಿಸಿ 'ಸೋನ್ನಲಾಪುರದ ಸಂತ ಸಿದ್ದರಾಮನ ನಿಜ ವಚನಗಳು ', ಎಂಬ ಪುಸ್ತಕದಲ್ಲಿ ಹೊರತಂದಿದ್ದಾರೆ . ಪ್ರವಾಸ ಸೊಲ್ಲಾಪುರ ಮುಂಬಯಿಯಿಂದ ೪೩೩ ಕಿ.ಮೀ, ಪುಣೆಯಿಂದ ೨೪೪ ಕಿ.ಮೀ ದೂರದಲ್ಲಿದೆ. ಸೊಲ್ಲಾಪುರ ದೆಹಲಿ, ಹೈದರಾಬಾದು, ಬೆಂಗಳೂರು ಮೊದಲಾದ ನಗರಗಳಿಗೆ ರೈಲು ಮತ್ತು ರಸ್ತೆಯ ನೇರ ಸಂಪರ್ಕ ಹೊಂದಿದೆ. ಸೊಲ್ಲಾಫುರದಿಂದ ೧೮ ಕಿ.ಮೀ ದೂರದಲ್ಲಿರುವ ನಾನಜ್ Great Indian Bustardಗೆ ನೆಲೆಯಾಗಿದೆ. (ಸ್ಥಳೀಯ ಹೆಸರು ಮಳ್ಧೋಕ್).ಈ ಕಾರಣದಿಂದ ಇದು ಒಂದು ಅಂತರರಾಷ್ಟ್ರೀಯ ಪರಿಸರ ಪ್ರವಾಸಿಗಳ ಆಕರ್ಷಣೆಯಾಗಿದೆ. ಮಹಾರಾಷ್ಟ್ರದ ಅತಿ ಪ್ರಸಿದ್ಧ ಧಾರ್ಮಿಕ ಸ್ಥಳಗಳಲ್ಲಿ ಒಂದಾದ ಪಂಢರಪುರ ಇಲ್ಲಿಂದ ೭೦ ಕಿ.ಮೀ ದೂರದಲ್ಲಿದೆ. ಇಲ್ಲಿ ಚಂದ್ರಭಾಗಾ ನದಿಯ ತೀರದಲ್ಲಿ ವಿಠೋಬ -ರಖುಮಾಯಿಯ ಮಂದಿರವಿದೆ. ಪುರಂದರದಾಸರ ಆರಾಧ್ಯದೈವ ಪಂಢರಪುರದ ವಿಠ್ಠಲ. ಇಲ್ಲಿಂದ ೩೮ ಕಿ.ಮೀ ದೂರದ ಅಕ್ಕಲಕೋಟೆ ಮಠ ಮತ್ತು ಸ್ವಾಮಿಗಳಿಂದ ಭಕ್ತರ ಮನಸ್ಸನ್ನು ಸೆಳೆಯುತ್ತದೆ. ಸೊಲ್ಲಾಪುರ (ಮರಾಠಿಯಲ್ಲಿ ಸೋಲಾಪುರ್‍) ಮಹಾರಾಷ್ಟ್ರ ರಾಜ್ಯದ ದಕ್ಷಿಣ ಪೂರ್ವದಲ್ಲಿ ಕರ್ನಾಟಕದ ಗಡಿಯಲ್ಲಿರುವ ನಗರ , ಮತ್ತು ಅದೇ ಹೆಸರಿನ ಜಿಲ್ಲೆಯ ಕೇಂದ್ರ. ಉತ್ತರ ದಕ್ಷಿಣ ರೈಲುದಾರಿಯಲ್ಲಿ ಇದೊಂದು ಪ್ರಮುಖ ಜಂಕ್ಷನ್. ಇಲ್ಲಿ ಅನೇಕ ಸಣ್ಣ ಮತ್ತು ಮಧ್ಯಮ ಸ್ಥರದ ಉದ್ಯಮಗಳು ಇಲ್ಲಿವೆ. ವಿದ್ಯುತ್ ಮಗ್ಗಗಳು ಹಾಗೂ ಹತ್ತಿ ಗಿರಣಿಗಳ ಮುಖ್ಯ ಕೇಂದ್ರವೂ ಇದಾಗಿದೆ. ಸೊಲ್ಲಾಪುರದ ಚಾದರಗಳು (ಬೆಡ್ ಶೀಟುಗಳು) ತಮ್ಮ ಹೊಸ ಹೊಸ ವಿನ್ಯಾಸಗಳಿಗೆ ಮತ್ತು ತಾಳಿಕೆಯಿಂದಾಗಿ ಮನೆಮಾತಾಗಿವೆ. ಇಲ್ಲಿಯ ಊರದೈವ ಶ್ರೀ ಸಿದ್ಧೇಶ್ವರ. ಮಕರಸಂಕ್ರಾಂತಿಯಂದು ನಡೆಯುವ ನಂದಿಧ್ವಜದ ಮೆರವಣಿಗೆಯಲ್ಲಿ ಲಕ್ಷಾಂತರ ಜನ ಪಾಲ್ಗೊಳ್ಳುತ್ತಾರೆ. ಮಹಾರಾಷ್ಟ್ರದಬೀಡಿ ಉದ್ಯಮದಲ್ಲಿಯೂ ಸೊಲ್ಲಾಪುರ ಜಿಲ್ಲೆ ಮುಂದಿದೆ. ಇಲ್ಲಿಯ ಹುತಾತ್ಮರ ಸ್ಮಾರಕಕ್ಕೆ ದಿನವೂ ಅನೇಕರು ವಂದಿಸುತ್ತಾರೆ. ಕೂಡಲಸಂಗಮ, ಕರ್ಮಾಲಾ, ಮತ್ತು ಬಾರ್ಶಿ ಶಿಕ್ಷಣ ಮತ್ತು ಔದ್ಯೋಗೀಕರಣದಿಂದ ಪ್ರಗತಿಪಥದಲ್ಲಿವೆ. ಅಕ್ಕಲಕೋಟೆಯ ಸ್ವಾಮಿ ಮಹಾರಾಜರ ಮಠಕ್ಕೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಬೃಹತ್ ಸಂಖ್ಯೆಯ ಭಕ್ತರು ನಡೆದುಕೊಳ್ಳುತ್ತಾರೆ. ಜನಸಂಖ್ಯೆ ೨೦೦೧ರ ಜನಗಣತಿಯ ಪ್ರಕಾರ ಇಲ್ಲಿಯ ಜನಸಂಖ್ಯೆ ೮೭೩,೦೩೭. ಇದರಲ್ಲಿ ಪುರುಷರು ೫೧% ಮತ್ತು ಸ್ತ್ರೀಯರು ೪೯%. ಇಲ್ಲಿಯ ಸರಾಸರಿ ಸಾಕ್ಷರತೆಯ ಪ್ರಮಾಣ ೬೭% ಇದ್ದು ಇದು ಭಾರತದ ಸರಾಸರಿ ಸಾಕ್ಷರತಾ ಪ್ರಮಾಣ (೫೯.೫%)ಕ್ಕಿಂತ ಹೆಚ್ಚಾಗಿದೆ. ಪುರಷರ ಸಾಕ್ಷರರು ೭೫% ಮತ್ತು ಸ್ತ್ರೀ ಸಾಕ್ಷರರು ೫೮% ಇದ್ದಾರೆ. ೬ ವರ್ಷಕ್ಕಿಂತ ಸಣ್ಣ ಮಕ್ಕಳು ೧೩% ಇದ್ದಾರೆ. ಮರಾಠಿ ಮುಖ್ಯಭಾಷೆಯಾಗಿದ್ದರೂ, ಕನ್ನಡ ಮಾತನಾಡುವವರೂ ವಿಪುಲವಾಗಿದ್ದಾರೆ. ಪ್ರೇಕ್ಷಣೀಯ ಸ್ಥಳಗಳು ಶ್ರೀ ಸಿದ್ಧರಾಮೇಶ್ವರ ದೇವಾಲಯ ಹಿಪ್ಪರಗಿ ಕೆರೆ ಕಂಬಾರ ಕೆರೆ ( ಹೊಸ ಹೆಸರು - ಸಂಭಾಜಿ ಕೆರೆ) ಭುಯಿ - ಕೋಟ್ ಕೋಟೆ - ೧೫ನೆಯ ಶತಮಾನದಲ್ಲಿ ಬಹಮನಿ ಸುಲ್ತಾನರ ಕಾಲದಲ್ಲಿ ಕಟ್ಟಲ್ಪಟ್ಟದ್ದು. ಹುತಾತ್ಮಾ ಉದ್ಯಾನವನ ಪಂಢರಪುರ ( ೭೦ ಕಿ.ಮೀ ದೂರ) ಅಕ್ಕಲಕೋಟೆ - ಸ್ವಾಮಿ ಸಮರ್ಥ ( ೩೫ ಕಿ.ಮೀ ದೂರ) ನಾನಜ ಪಕ್ಷಿ ಅಭಯಧಾಮ (೨೫ ಕಿ.ಮೀ ದೂರ) ತುಳಜಾಪುರ -ತುಳಜಾಭವಾನಿ ದೇವಾಲಯ (೪೫ ಕಿ.ಮೀ ದೂರ) ಭೀಮಾನದಿ ತೀರ ನಲದುರ್ಗ ಕೋಟೆ ( ಸುಮಾರು ೪೫ ಕಿ.ಮೀ ದೂರ) ಶಿಕ್ಷಣ ಸಂಸ್ಥೆಗಳು ಸರಕಾರೀ ಪಾಲಿಟೆಕ್ನಿಕ್ ಸೊಲ್ಲಾಪುರ ವಿಶ್ವವಿದ್ಯಾನಿಲಯ ಫಾರ್ಮಸಿ ಕಾಲೇಜು ಭಾರತರತ್ನ ಇಂದಿರಾಗಾಂಧಿ ಇಂಜಿನಿಯರಿಂಗ್ ಕಾಲೇಜು ವಾಲ್ಚಂದ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಡಾ. ವೈಶಂಪಾಯನ ಮೆಮೋರಿಯಲ್ ಸರಕಾರಿ ಮೆಡಿಕಲ್ ಕಾಲೇಜು ಪಂಡಿತ್ ದೀನದಯಾಳ್ ಉಪಾಧ್ಯಾಯ ದಂತವಿಜ್ಞಾನ ಕಾಲೇಜು ವಾಸ್ತುಶಿಲ್ಪ ಕಾಲೇಜು ದಯಾನಂದ್ ಸಂಸ್ಥೆಗಳು - ೧೯೪೦ರಲ್ಲಿ ಸ್ಥಾಪಿಸಲಾದ ಇವುಗಳಲ್ಲಿ ಸೊಲ್ಲಾಫುರ ವಿಶ್ವವಿದ್ಯಾಲಯದ ಅತಿ ಹಳೆಯ ಕಾಲೇಜು ಸಹಾ ಒಂದು. ಪ್ರಸಿದ್ಧ ವ್ಯಕ್ತಿಗಳು ಹಿಂದಿ ಚಿತ್ರನಟಿ ಶಶಿಕಲಾ ಹಿಂದಿ ಚಿತ್ರ ನಟ ಫೈಯ್ಯಾಜ್ ಎಮ್.ಎಫ್. ಹುಸೇನ್ ( ಪಂಢರಪುರ ದಲ್ಲಿ ಜನ್ಮ) ಸುಶೀಲ್ ಕುಮಾರ್ ಶಿಂಧೆ - ರಾಜಕಾರಣಿ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಪ್ರಸ್ತುತ ಗೃಹಮಂತ್ರಿ ಶಿವರಾಜ ಪಾಟೀಲ್ - ರಾಜಕಾರಣಿ ಕ್ರಿಕೆಟರ್‍ ಪಾಲಿ ಉಮ್ರೀಗರ ನಾಟಕಕಾರ ಡಾ. ಜಬ್ಬಾರ್‍ ಪಟೇಲ್ ಉಲ್ಲೇಖಗಳು ಲಿಂಗಾಯತ ಭಾರತದ ಪಟ್ಟಣಗಳು ಪ್ರವಾಸೋದ್ಯಮ ಮಹಾರಾಷ್ಟ್ರದ ಪಟ್ಟಣಗಳು
1943
https://kn.wikipedia.org/wiki/%E0%B2%AD%E0%B2%BE%E0%B2%B0%E0%B2%A4%E0%B2%A6%20%E0%B2%B8%E0%B3%8D%E0%B2%B5%E0%B2%BE%E0%B2%A4%E0%B2%82%E0%B2%A4%E0%B3%8D%E0%B2%B0%E0%B3%8D%E0%B2%AF%20%E0%B2%A6%E0%B2%BF%E0%B2%A8%E0%B2%BE%E0%B2%9A%E0%B2%B0%E0%B2%A3%E0%B3%86
ಭಾರತದ ಸ್ವಾತಂತ್ರ್ಯ ದಿನಾಚರಣೆ
ಭಾರತ ದೇಶ ೧೯೪೭ ಆಗಸ್ಟ್ ೧೫ ರಂದು ಸ್ವತಂತ್ರವಾಯಿತು. ಪ್ರತಿ ವರ್ಷ ಭಾರತದಾದ್ಯಂತ ಈ ದಿನವನ್ನು ಸ್ವಾತಂತ್ರ್ಯ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಈ ದಿನ ಇಡೀ ದೇಶದಲ್ಲಿ ರಾಷ್ಟ್ರೀಯ ರಜಾದಿನವನ್ನಾಗಿ ಆಚರಿಸಲಾಗುತ್ತದೆ. ದೇಶದ ಹಲವೆಡೆ |ತ್ರಿವರ್ಣ ಧ್ವಜವನ್ನು ಹಾರಿಸಿ ಸಿಹಿ ಹಂಚಲಾಗುತ್ತದೆ. ಈ ಆಚರಣೆಯ ಪ್ರಮುಖ ಸಮಾರಂಭ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯತ್ತದೆ. ಈ ಸಮಾರಂಭದಲ್ಲಿ, ಭಾರತದ ಪ್ರಧಾನ ಮಂತ್ರಿಗಳು ರಾಷ್ಟ್ರೀಯ ಧ್ವಜವನ್ನು ಹಾರಿಸಿ ಭಾರತದ ರಾಷ್ಟ್ರಗೀತೆ "ಜನ ಗಣ ಮನ"ವನ್ನು ಹಾಡ ನಂತರ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ. ಈ ಭಾಷಣದಲ್ಲಿ ದೇಶದ ಸಾಧನೆ, ದೇಶದ ಮುಂದಿರುವ ಪ್ರಮುಖ ಸವಾಲುಗಳ ಬಗ್ಗೆ ಮಾತನಾಡಿ, ಕೆಲವು ಪ್ರಗತಿ ಯೋಜನೆಗಳನ್ನು ಪ್ರಕಟಿಸಲಾಗುತ್ತದೆ. ಈ ದಿನದಂದು ದೇಶದ ಸ್ವಾತ್ರಂತ್ರ್ಯಕ್ಕೆ ಮಡಿದ ನಾಯಕರನ್ನು ಸ್ಮರಿಸಲಾಗುತ್ತದೆ. ಇತಿಹಾಸ ಯುರೋಪಿಯನ್ ವ್ಯಾಪಾರಿಗಳು 17 ನೇ ಶತಮಾನದ ಅಂತ್ಯದ ವೇಳೆಗೆ ಭಾರತೀಯ ಉಪಖಂಡದಲ್ಲಿ ಹೊರಠಾಣೆಗಳನ್ನು ಸ್ಥಾಪಿಸಿದ್ದರು. ಅಗಾಧವಾದ ಮಿಲಿಟರಿ ಶಕ್ತಿಯ ಮೂಲಕ, ಈಸ್ಟ್ ಇಂಡಿಯಾ ಕಂಪನಿಯು ಸ್ಥಳೀಯ ಸಾಮ್ರಾಜ್ಯಗಳನ್ನು ಹೋರಾಡಿ ಮತ್ತು ಸ್ವಾಧೀನಪಡಿಸಿಕೊಂಡಿತು ಮತ್ತು 18 ನೇ ಶತಮಾನದ ವೇಳೆಗೆ ತಮ್ಮನ್ನು ಪ್ರಬಲ ಶಕ್ತಿಯಾಗಿ ಸ್ಥಾಪಿಸಿತು . 1857 ರ ಭಾರತೀಯ ದಂಗೆಯ ನಂತರ, 1858 ರ ಭಾರತ ಸರ್ಕಾರದ ಕಾಯಿದೆಯು ಬ್ರಿಟಿಷ್ ಕ್ರೌನ್ ಭಾರತದ ನೇರ ನಿಯಂತ್ರಣವನ್ನು ವಹಿಸಿಕೊಳ್ಳಲು ಕಾರಣವಾಯಿತು. ನಂತರದ ದಶಕಗಳಲ್ಲಿ, ನಾಗರಿಕ ಸಮಾಜವು ಭಾರತದಾದ್ಯಂತ ಕ್ರಮೇಣವಾಗಿ ಹೊರಹೊಮ್ಮಿತು, ಅದರಲ್ಲೂ ಮುಖ್ಯವಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು 1885 ರಲ್ಲಿ ರೂಪುಗೊಂಡಿತು., :ಪುಟ 123 ಮೊದಲನೆಯ ಮಹಾಯುದ್ಧದ ನಂತರದ ಅವಧಿಯು ವಸಾಹತುಶಾಹಿ ಸುಧಾರಣೆಗಳಾದ ಮಾಂಟಾಗು-ಚೆಲ್ಮ್ಸ್‌ಫೋರ್ಡ್ ಸುಧಾರಣೆಗಳಿಂದ ಗುರುತಿಸಲ್ಪಟ್ಟಿತು, ಆದರೆ ಇದು ಜನಪ್ರಿಯವಲ್ಲದ ರೌಲಟ್ ಕಾಯಿದೆಯ ಜಾರಿಗೆ ಮತ್ತು ಭಾರತೀಯ ಕಾರ್ಯಕರ್ತರಿಂದ ಸ್ವ-ಆಡಳಿತಕ್ಕಾಗಿ ಕರೆ ನೀಡಿತು. ಈ ಅವಧಿಯ ಅಸಮಾಧಾನವು ಮೋಹನ್ ದಾಸ್ ಕರಮಚಂದ್ ಗಾಂಧಿಯವರ ನೇತೃತ್ವದಲ್ಲಿ ಅಸಹಕಾರ ಮತ್ತು ನಾಗರಿಕ ಅಸಹಕಾರದ ರಾಷ್ಟ್ರವ್ಯಾಪಿ ಅಹಿಂಸಾತ್ಮಕ ಚಳುವಳಿಗಳಾಗಿ ಹರಳುಗಟ್ಟಿತು.:ಪುಟ 167   1930 ರ ದಶಕದಲ್ಲಿ, ಸುಧಾರಣೆಯನ್ನು ಕ್ರಮೇಣ ಬ್ರಿಟಿಷರು ಶಾಸನಬದ್ಧಗೊಳಿಸಿದರು; ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ.: ಪುಟ 195–197 ಮುಂದಿನ ದಶಕವು ರಾಜಕೀಯ ಪ್ರಕ್ಷುಬ್ಧತೆಯಿಂದ ಸುತ್ತುವರಿದಿತ್ತು: ಎರಡನೆಯ ಮಹಾಯುದ್ಧದಲ್ಲಿ ಭಾರತೀಯ ಭಾಗವಹಿಸುವಿಕೆ, ಅಸಹಕಾರಕ್ಕಾಗಿ ಕಾಂಗ್ರೆಸ್‌ನ ಅಂತಿಮ ತಳ್ಳುವಿಕೆ ಮತ್ತು ಅಖಿಲ ಭಾರತ ಮುಸ್ಲಿಂ ಲೀಗ್ ನೇತೃತ್ವದ ಮುಸ್ಲಿಂ ರಾಷ್ಟ್ರೀಯತೆಯ ಉನ್ನತಿ. ಹೆಚ್ಚುತ್ತಿರುವ ರಾಜಕೀಯ ಉದ್ವಿಗ್ನತೆಯನ್ನು 1947 ರಲ್ಲಿ ಸ್ವಾತಂತ್ರ್ಯದ ಮೂಲಕ ಮುಚ್ಚಲಾಯಿತು. ವಸಾಹತುಶಾಹಿ ಭಾರತವನ್ನು ಭಾರತ ಮತ್ತು ಪಾಕಿಸ್ತಾನಗಳಾಗಿ ರಕ್ತಸಿಕ್ತ ವಿಭಜನೆಯಿಂದ ಹದಗೊಂಡು ಹತೋಟಿಗೆ ಬಂತು.:ಪುಟ 203 ಸ್ವಾತಂತ್ರ್ಯದ ಮೊದಲು ಸ್ವಾತಂತ್ರ್ಯ ದಿನ 1929 ರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ, ಪೂರ್ಣ ಸ್ವರಾಜ್ ಘೋಷಣೆ ಅಥವಾ "ಭಾರತದ ಸ್ವಾತಂತ್ರ್ಯದ ಘೋಷಣೆ" ಯನ್ನು ಘೋಷಿಸಲಾಯಿತು, ಮತ್ತು 26 ಜನವರಿಯನ್ನು 1930 ರಲ್ಲಿ ಸ್ವಾತಂತ್ರ್ಯ ದಿನವೆಂದು ಘೋಷಿಸಲಾಯಿತು. ಭಾರತವು ಸಂಪೂರ್ಣ ಸ್ವಾತಂತ್ರ್ಯವನ್ನು ಪಡೆಯುವವರೆಗೆ ನಾಗರಿಕ ಅಸಹಕಾರಕ್ಕೆ ತಮ್ಮನ್ನು ತಾವು ಪ್ರತಿಜ್ಞೆ ಮಾಡಲು ಮತ್ತು ಕಾಲಕಾಲಕ್ಕೆ ನೀಡಿದ ಕಾಂಗ್ರೆಸ್ ಸೂಚನೆಗಳನ್ನು ಪಾಲಿಸಲು ಕಾಂಗ್ರೆಸ್ ಜನರಿಗೆ ಕರೆ ನೀಡಿತು. ಅಂತಹ ಸ್ವಾತಂತ್ರ್ಯ ದಿನಾಚರಣೆಯನ್ನು ಭಾರತೀಯ ನಾಗರಿಕರಲ್ಲಿ ರಾಷ್ಟ್ರೀಯತೆಯ ಉತ್ಸಾಹವನ್ನು ಹುಟ್ಟುಹಾಕಲು ಮತ್ತು ಸ್ವಾತಂತ್ರ್ಯವನ್ನು ನೀಡುವುದನ್ನು ಪರಿಗಣಿಸಲು ಬ್ರಿಟಿಷ್ ಸರ್ಕಾರವನ್ನು ಒತ್ತಾಯಿಸಲು ಕಲ್ಪಿಸಲಾಗಿತ್ತು.:ಪುಟ19  ಕಾಂಗ್ರೆಸ್ 1930 ಮತ್ತು 1946 ರ ನಡುವೆ 26 ಜನವರಿಯನ್ನು ಸ್ವಾತಂತ್ರ್ಯ ದಿನವನ್ನಾಗಿ ಆಚರಿಸಿತು., ಆಚರಣೆಯು ಸಭೆಗಳಿಂದ ಗುರುತಿಸಲ್ಪಟ್ಟಿದೆ, ಅಲ್ಲಿ ಹಾಜರಾದವರು "ಸ್ವಾತಂತ್ರ್ಯದ ಪ್ರತಿಜ್ಞೆಯನ್ನು" ತೆಗೆದುಕೊಂಡರು.: ಪುಟ19–20 ಜವಾಹರಲಾಲ್ ನೆಹರು ತಮ್ಮ ಆತ್ಮಚರಿತ್ರೆಯಲ್ಲಿ ಅಂತಹ ಸಭೆಗಳು ಶಾಂತಿಯುತ, ಗಂಭೀರ "ಯಾವುದೇ ಭಾಷಣಗಳು ಅಥವಾ ಉಪದೇಶವಿಲ್ಲದವು" ಎಂದು ವಿವರಿಸಿದ್ದಾರೆ. ".....ಸಭೆಗಳ ಹೊರತಾಗಿ, ಕೆಲವು ರಚನಾತ್ಮಕ ಕೆಲಸಗಳನ್ನು ಮಾಡುವುದರಲ್ಲಿ, ಅಥವಾ 'ಅಸ್ಪೃಶ್ಯರ' ಸೇವೆ, ಅಥವಾ ಹಿಂದೂಗಳು ಮತ್ತು ಮುಸಲ್ಮಾನರ ಪುನರ್ಮಿಲನ, ಅಥವಾ ನಿಷೇಧದ ಕೆಲಸ, ಅಥವಾ ಇವೆಲ್ಲವನ್ನೂ ಒಟ್ಟಾಗಿ ಮಾಡುವುದು" ಎಂದು ಗಾಂಧಿ ಊಹಿಸಿದರು. 1947 ರಲ್ಲಿ ನಿಜವಾದ ಸ್ವಾತಂತ್ರ್ಯದ ನಂತರ, ಭಾರತದ ಸಂವಿಧಾನವು 26 ಜನವರಿ 1950 ರಿಂದ ಜಾರಿಗೆ ಬಂದಿತು; ಅಂದಿನಿಂದ ಜನವರಿ 26 ಅನ್ನು ಗಣರಾಜ್ಯ ದಿನವನ್ನಾಗಿ ಆಚರಿಸಲಾಗುತ್ತದೆ. ತಕ್ಷಣದ ಹಿನ್ನೆಲೆ 1946 ರಲ್ಲಿ, ಬ್ರಿಟನ್‌ನಲ್ಲಿನ ಲೇಬರ್ ಸರ್ಕಾರ, ಇತ್ತೀಚೆಗೆ ಮುಕ್ತಾಯಗೊಂಡ ಎರಡನೇ ಮಹಾಯುದ್ಧದಿಂದ ದಣಿದಿದೆ, ಹೆಚ್ಚುತ್ತಿರುವ ಪ್ರಕ್ಷುಬ್ಧ ಭಾರತದಲ್ಲಿ ನಿಯಂತ್ರಣವನ್ನು ಮುಂದುವರಿಸಲು ತನಗೆ ಸ್ವದೇಶದಲ್ಲಿ ಜನಾದೇಶ, ಅಂತರರಾಷ್ಟ್ರೀಯ ಬೆಂಬಲ ಅಥವಾ ಸ್ಥಳೀಯ ಶಕ್ತಿಗಳ ವಿಶ್ವಾಸಾರ್ಹತೆ ಇಲ್ಲ ಎಂದು ಅರಿತುಕೊಂಡಿತು.:ಪುಟ 203 , , 20 ಫೆಬ್ರವರಿ 1947 ರಂದು, ಪ್ರಧಾನ ಮಂತ್ರಿ ಕ್ಲೆಮೆಂಟ್ ಅಟ್ಲೀ ಬ್ರಿಟೀಷ್ ಸರ್ಕಾರವು ಜೂನ್ 1948 ರೊಳಗೆ ಬ್ರಿಟಿಷ್ ಭಾರತಕ್ಕೆ ಸಂಪೂರ್ಣ ಸ್ವ-ಆಡಳಿತವನ್ನು ನೀಡುತ್ತದೆ ಎಂದು ಘೋಷಿಸಿದರು. ಹೊಸ ವೈಸರಾಯ್, ಲಾರ್ಡ್ ಮೌಂಟ್ ಬ್ಯಾಟನ್, ಅಧಿಕಾರ ಹಸ್ತಾಂತರದ ದಿನಾಂಕವನ್ನು ಮುಂದಿಟ್ಟರು, ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ನಡುವಿನ ನಿರಂತರ ವಿವಾದವು ಮಧ್ಯಂತರ ಸರ್ಕಾರದ ಪತನಕ್ಕೆ ಕಾರಣವಾಗಬಹುದು ಎಂದು ನಂಬಿದ್ದರು. ಎರಡನೆಯ ಮಹಾಯುದ್ಧದಲ್ಲಿ ಜಪಾನ್ ಶರಣಾಗತಿಯ ಎರಡನೇ ವಾರ್ಷಿಕೋತ್ಸವವನ್ನು ಅವರು ಆಗಸ್ಟ್ 15 ಅನ್ನು ಅಧಿಕಾರ ವರ್ಗಾವಣೆಯ ದಿನಾಂಕವಾಗಿ ಆರಿಸಿಕೊಂಡರು. ಬ್ರಿಟಿಷ್ ಸರ್ಕಾರವು 3 ಜೂನ್ 1947 ರಂದು ಬ್ರಿಟಿಷ್ ಭಾರತವನ್ನು ಎರಡು ರಾಜ್ಯಗಳಾಗಿ ವಿಭಜಿಸುವ ಕಲ್ಪನೆಯನ್ನು ಒಪ್ಪಿಕೊಂಡಿದೆ ಎಂದು ಘೋಷಿಸಿತು; ಉತ್ತರಾಧಿಕಾರಿ ಸರ್ಕಾರಗಳಿಗೆ ಡೊಮಿನಿಯನ್ ಸ್ಥಾನಮಾನವನ್ನು ನೀಡಲಾಗುವುದು ಮತ್ತು ಬ್ರಿಟಿಷ್ ಕಾಮನ್‌ವೆಲ್ತ್‌ನಿಂದ ಪ್ರತ್ಯೇಕಗೊಳ್ಳಲು ಸೂಚ್ಯ ಹಕ್ಕನ್ನು ಹೊಂದಿರುತ್ತದೆ. ಯುನೈಟೆಡ್ ಕಿಂಗ್‌ಡಮ್‌ನ ಸಂಸತ್ತಿನ ಭಾರತೀಯ ಸ್ವಾತಂತ್ರ್ಯ ಕಾಯಿದೆ 1947 (10 & 11 ಜಿಯೋ 6 ಸಿ. 30) 15 ಆಗಸ್ಟ್ 1947 ರಿಂದ ಜಾರಿಗೆ ಬರುವಂತೆ ಬ್ರಿಟಿಷ್ ಭಾರತವನ್ನು ಭಾರತ ಮತ್ತು ಪಾಕಿಸ್ತಾನದ (ಈಗಿನ ಬಾಂಗ್ಲಾದೇಶವನ್ನು ಒಳಗೊಂಡಂತೆ) ಎರಡು ಹೊಸ ಸ್ವತಂತ್ರ ಪ್ರಭುತ್ವಗಳಾಗಿ ವಿಭಜಿಸಿತು ಮತ್ತು ಹೊಸ ದೇಶಗಳ ಆಯಾ ಘಟಕ ಸಭೆಗಳ ಮೇಲೆ ಸಂಪೂರ್ಣ ಶಾಸಕಾಂಗ ಅಧಿಕಾರವನ್ನು ನೀಡಿತು. ಈ ಕಾಯಿದೆಯು 18 ಜುಲೈ 1947 ರಂದು ರಾಯಲ್ ಸಮ್ಮತಿಯನ್ನು ಪಡೆಯಿತು. ಸ್ವಾತ್ರಂತ್ರ್ಯದ ಹಾದಿ ಜೂನ್ ೩,೧೯೪೭ ರಂದು ಅಂದಿನ ಗವರ್ನರ್ ಜನರಲ್ ಆಗಿದ್ದ ಲಾರ್ಡ್ ಮೌಂಟ್‌ಬ್ಯಾಟನ್, ಬ್ರಿಟಿಷ್ ಭಾರತ ಸಾಮ್ರಾಜ್ಯವನ್ನು ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ರಾಷ್ಟ್ರಗಳಾಗಿ ವಿಭಜಿಸುವುದಾಗಿ ಘೋಷಿಸಿದನು. ಇದರ ನಂತರ ಭಾರತದ ಸ್ವಾತ್ರಂತ್ರ್ಯ ಕಾಯಿದೆ ೧೯೪೭ ರ ಅನ್ವಯ ಆಗಸ್ಟ್ ೧೫, ೧೯೪೭ ರಂದು ಭಾರತವನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಘೋಷಿಸಲಾಯಿತು. ಅಂದಿನ ಮದ್ಯರಾತ್ರಿ,(12.15ರ) ನಂತರ ಜವಾಹರ್‌ಲಾಲ್ ನೆಹರು ಅವರು ದೇಶದ ಪ್ರಥಮ ಪ್ರಧಾನ ಮಂತ್ರಿ ಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಂದು ಅವರು ರಾಷ್ಟ್ರವನ್ನುದ್ದೇಶಿಸಿ, ಟ್ರಿಸ್ಟ್ ವಿಥ್ ಡೆಸ್ಟಿನಿ ಭಾಷಣ ( 'ಭಾಗ್ಯದೊಡನೆ ಒಪ್ಪಂದ' ಭಾಷಣ) ಮಾಡಿದರು. ಪ್ರಧಾನಮಂತ್ರಿ ನೆಹರು ಮತ್ತು ಉಪಪ್ರಧಾನಮಂತ್ರಿ ಸರ್ದಾರ್ ವಲ್ಲಭಭಾಯ್ ಪಟೇಲ್ ರು ಲಾರ್ಡ್ ಮೌಂಟ್ ಬ್ಯಾಟನ್ನರನ್ನು ಭಾರತದ ಗವರ್ನರ್ ಜನರಲ್ ಆಗಿ ಮುಂದುವರೆಯಲು ಕೋರಿದರು. ಜೂನ್ ೧೯೪೮ ರಲ್ಲಿ ಅವರ ಸ್ಥಾನಕ್ಕೆ ಚಕ್ರವರ್ತಿ ರಾಜಗೋಪಾಲಾಚಾರಿ ಅವರು ಬಂದರು. ಪಟೇಲರು ೫೬೫ ರಾಜಸಂಸ್ಥಾನಗಳ ಭಾರತದ ರಾಜಕೀಯ ಏಕೀಕರಣ ದ ಜವಾಬ್ದಾರಿಯನ್ನು ವಹಿಸಿಕೊಂಡರು, ಜುನಾಗಢ, ಜಮ್ಮು ಮತ್ತು ಕಾಶ್ಮೀರ, ಮತ್ತು ಹೈದರಾಬಾದ್ ಸಂಸ್ಥಾನ ಗಳನ್ನು ಭಾರತಕ್ಕೆ ಸೇರ್ಪಡೆ ಮಾಡುವಲ್ಲಿ ಸೈನಿಕ ಬಲವನ್ನು ಉಪಯೋಗಿಸಿ "ರೇಷ್ಮೆ ಕೈಗವಸಿನಲ್ಲಿ ಉಕ್ಕಿನ ಮುಷ್ಠಿ" ತಂತ್ರವನ್ನು ಉಪಯೋಗಿಸಿದರು. ಸಂವಿಧಾನ ರಚನಾಸಭೆಯು ಸಂವಿಧಾನದ ಕರಡ ಸಭೆಯನ್ನು 26 ನವೆಂಬರ್ 1949; ರಂದು ಸಿದ್ಧಗೊಳಿಸುವ ಕಾರ್ಯವನ್ನು ಸಂಪೂರ್ಣಗೊಳಿಸಿತು . 26 ಜನವರಿ 1950 ರಂದು ಭಾರತೀಯ ಗಣರಾಜ್ಯ ವನ್ನು ಅಧಿಕೃತವಾಗಿ ಘೋಷಿಸಲಾಯಿತು. ಸಂವಿಧಾನ ರಚನಾಸಭೆಯು ಡಾ. ರಾಜೇಂದ್ರಪ್ರಸಾದರನ್ನು ದೇಶದ ಪ್ರಥಮ ರಾಷ್ಟ್ರಪತಿ ಯನ್ನಾಗಿ ಚುನಾಯಿಸಿತು . ಅವರು ಗವರ್ನರ್ ಜನರಲ್ ರಾಜಗೋಪಾಲಾಚಾರಿಯವರಿಂದ ಅಧಿಕಾರವನ್ನು ಸ್ವೀಕರಿಸಿದರು .ನಂತರ ಸ್ವತಂತ್ರ ಸಾರ್ವಭೌಮ ಭಾರತವು ಇನ್ನೆರಡು ಪ್ರದೇಶಗಳನ್ನು ತನ್ನಲ್ಲಿ ಸೇರಿಸಿಕೊಂಡಿತು . ಅವು 1961ರಲ್ಲಿ ಪೋರ್ಚುಗೀಸ್ ನಿಯಂತ್ರಣದಿಂದ ವಿಮೋಚನೆಗೊಳಿಸಿದ ಗೋವಾ ಮತ್ತು ಫ್ರೆಂಚರು ೧೯೫೪ರಲ್ಲಿ ಒಪ್ಪಿಸಿದ ಪಾಂಡಿಚೇರಿ . ೧೯೫೨ ರಲ್ಲಿ ಭಾರತವು ತನ್ನ ಮೊದಲ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಿತು . ಶೇ. ೬೨ ಕ್ಕೂ ಹೆಚ್ಚು ಮತದಾರರು ಅದರಲ್ಲಿ ಭಾಗವಹಿಸಿದರು. ಅದರಿಂದಾಗಿ ಭಾರತವು ವಾಸ್ತವದಲ್ಲಿ ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವವಾಯಿತು . Tryst with destiny ವಿಭಜನೆ ಮತ್ತು ಸ್ವಾತಂತ್ರ್ಯ ಲಕ್ಷಾಂತರ ಮುಸ್ಲಿಂ, ಸಿಖ್ ಮತ್ತು ಹಿಂದೂ ನಿರಾಶ್ರಿತರು ಸ್ವಾತಂತ್ರ್ಯದ ಸುತ್ತಮುತ್ತಲಿನ ತಿಂಗಳುಗಳಲ್ಲಿ ಹೊಸದಾಗಿ ಚಿತ್ರಿಸಿದ ಗಡಿಗಳನ್ನು ಚಾರಣ ಮಾಡಿದರು. ಪಂಜಾಬ್‌ನಲ್ಲಿ, ಗಡಿಗಳು ಸಿಖ್ ಪ್ರದೇಶಗಳನ್ನು ಅರ್ಧ ಭಾಗಗಳಾಗಿ ವಿಂಗಡಿಸಿದಾಗ, ಬೃಹತ್ ರಕ್ತಪಾತವು ಅನುಸರಿಸಿತು; ಮಹಾತ್ಮ ಗಾಂಧಿಯವರ ಉಪಸ್ಥಿತಿಯು ಕೋಮು ಕೋಪವನ್ನು ಶಮನಗೊಳಿಸಿದ ಬಂಗಾಳ ಮತ್ತು ಬಿಹಾರದಲ್ಲಿ ಹಿಂಸಾಚಾರವನ್ನು ತಗ್ಗಿಸಲಾಯಿತು. ಒಟ್ಟಾರೆಯಾಗಿ, ಹೊಸ ಗಡಿಗಳ ಎರಡೂ ಬದಿಗಳಲ್ಲಿ 250,000 ಮತ್ತು 1,000,000 ಜನರು ಹಿಂಸಾಚಾರದಲ್ಲಿ ಸತ್ತರು. ಇಡೀ ರಾಷ್ಟ್ರವು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿರುವಾಗ, ಗಾಂಧಿಯವರು ಕಲ್ಕತ್ತಾದಲ್ಲಿ ಹತ್ಯಾಕಾಂಡವನ್ನು ತಡೆಯುವ ಪ್ರಯತ್ನದಲ್ಲಿ ತಂಗಿದ್ದರು. 14 ಆಗಸ್ಟ್ 1947 ರಂದು, ಪಾಕಿಸ್ತಾನದ ಸ್ವಾತಂತ್ರ್ಯ ದಿನದಂದು, ಪಾಕಿಸ್ತಾನದ ಹೊಸ ಡೊಮಿನಿಯನ್ ಅಸ್ತಿತ್ವಕ್ಕೆ ಬಂದಿತು; ಮುಹಮ್ಮದ್ ಅಲಿ ಜಿನ್ನಾ ಅವರು ಕರಾಚಿಯಲ್ಲಿ ಅದರ ಮೊದಲ ಗವರ್ನರ್ ಜನರಲ್ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ಭಾರತದ ಸಂವಿಧಾನ ಸಭೆಯು ತನ್ನ ಐದನೇ ಅಧಿವೇಶನಕ್ಕಾಗಿ ಆಗಸ್ಟ್ 14 ರಂದು ರಾತ್ರಿ 11 ಗಂಟೆಗೆ ನವದೆಹಲಿಯ ಸಂವಿಧಾನ ಭವನದಲ್ಲಿ ಸಭೆ ಸೇರಿತು. ಅಧ್ಯಕ್ಷ ರಾಜೇಂದ್ರ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಈ ಅಧಿವೇಶನದಲ್ಲಿ ಜವಾಹರಲಾಲ್ ನೆಹರು ಅವರು ಭಾರತದ ಸ್ವಾತಂತ್ರ್ಯವನ್ನು ಘೋಷಿಸುವ ಟ್ರಿಸ್ಟ್ ವಿತ್ ಡೆಸ್ಟಿನಿ ಭಾಷಣವನ್ನು ಮಾಡಿದರು. ಸಂಭ್ರಮದಲ್ಲಿ ಆಚರಣೆ ಆಗಸ್ಟ್ 15 ಭಾರತದ ರಾಷ್ಟೀಯ ರಜಾದಿನವಾಗಿದೆ. ರಾಜಧಾನಿ ನವದೆಹಲಿ ಯಲ್ಲಿ ಬಹ್ವಂಶ ಸರಕಾರಿ ಕಚೇರಿಗಳು ವಿದ್ಯುದ್ದೀಪಗಳಿಂದ ಬೆಳಗುತ್ತವೆ ಎಲ್ಲಾ ರಾಜ್ಯ ರಾಜಧಾನಿಗಳಲ್ಲಿ ಧ್ವಜಾರೋಹಣ ಮತ್ತು ಸಾಂಸ್ಕೃತಿಕ ಸಮಾರಂಭಗಳು ಜರುಗುತ್ತವೆ. ದೇಶದಾದ್ಯಂತ ನಗರಗಳಲ್ಲಿ ಧ್ವಜಾರೋಹಣವನ್ನು ಆಯಾ ಕ್ಷೇತ್ರಗಳ ರಾಜಕೀಯ ಧುರೀಣರು ನೆರವೇರಿಸುತ್ತಾರೆ . ಖಾಸಗಿ ಸಂಸ್ಥೆಗಳಲ್ಲಿ ಧ್ವಜಾರೋಹಣವನ್ನು ಆಯಾ ಸಂಸ್ಥೆಯ ಹಿರಿಯ ಅಧಿಕಾರಿಗಳು ಮಾಡುತ್ತಾರೆ . ಶಾಲೆಕಾಲೇಜುಗಳು ತಮ್ಮ ಆವರಣದಲ್ಲಿ ಧ್ವಜಾರೋಹಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಬಂಧುಮಿತ್ರರು ಭೋಜನಕೂಟ ಮತ್ತು ಪ್ರವಾಸಗಳಿಗೆಂದು ಸೇರುತ್ತಾರೆ. ಹೌಸಿಂಗ್ ಕಾಲನಿಗಳು , ಸಾಂಸ್ಕೃತಿಕ ಸಂಘ-ಸಂಸ್ಥೆಗಳು ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಮನರಂಜನಾ ಕಾರ್ಯಕ್ರಮಗಳನ್ನೂ, ಸ್ಪರ್ಧೆಗಳನ್ನೂ ಏರ್ಪಡಿಸುತ್ತಾರೆ. ಬೆಳಗ್ಗೆ 08.30  ಸರ್ಕಾರಿ ಭವನದಲ್ಲಿ09.40 ಪೂರ್ವಾಹ್ನ ಗವರ್ನರ್ ಜನರಲ್ ಮತ್ತು ಮಂತ್ರಿಗಳ ಪ್ರಮಾಣ ವಚನ ಸ್ವೀಕಾರ. ಸಂವಿಧಾನ ಸಭೆಗೆ ಮಂತ್ರಿಗಳ ಮೆರವಣಿಗೆ09.50 ಪೂರ್ವಾಹ್ನ. ಸಂವಿಧಾನ ಸಭೆಗೆ ರಾಜ್ಯ ಚಾಲನೆ09.55 ಪೂರ್ವಾಹ್ನ. ಗವರ್ನರ್ ಜನರಲ್ ಅವರಿಗೆ ರಾಯಲ್ ಸೆಲ್ಯೂಟ್10.30 ಪೂರ್ವಾಹ್ನ. ಸಂವಿಧಾನ ಸಭೆಯಲ್ಲಿ ರಾಷ್ಟ್ರಧ್ವಜಾರೋಹಣ10.35 ಪೂರ್ವಾಹ್ನ. ಸರ್ಕಾರಿ ಭವನಕ್ಕೆ ರಾಜ್ಯ ಚಾಲನೆ06.00 ಅಪರಾಹ್ನ. ಇಂಡಿಯಾ ಗೇಟ್‌ನಲ್ಲಿ ಧ್ವಜ ಸಮಾರಂಭ07.00 ಅಪರಾಹ್ನ. ಇಲ್ಯುಮಿನೇಷನ್ಸ್07.45 ಅಪರಾಹ್ನ. ಪಟಾಕಿ ಪ್ರದರ್ಶನ08.45 ಅಪರಾಹ್ನ. ಸರ್ಕಾರಿ ಭವನದಲ್ಲಿ ಅಧಿಕೃತ ಭೋಜನ10.15 ಅಪರಾಹ್ನ. ಸರ್ಕಾರಿ ಕಚೇರಿಯಲ್ಲಿ ಸ್ವಾಗತ. ಗಾಳಿಪಟಗಳ ಹಾರಾಟ ಭಾರತದ ಅನೇಕ ಪ್ರದೇಶಗಳಲ್ಲಿ ಸ್ವಾತಂತ್ರ್ಯದಿನದಂದು ಗಾಳಿಪಟಗಳನ್ನು ಹಾರಿಸುವ ಪದ್ದತಿ ಜನಪ್ರಿಯವಾಗಿದೆ . ಅಕಾಶವು ನೂರಾರು ಬಣ್ಣ ಬಣ್ಣದ ಪಟಗಳಿಂದ ಕಂಗೊಳಿಸುವುದು. ಜನರು ಗಾಳಿಪಟಗಳನ್ನು ಹಾರಿಸುವ ಸ್ಪರ್ಧೆಗಳಲ್ಲಿ ತೊಡಗುವರು ಕಟ್ಟಡಗಳ ಬಾಲ್ಕನಿಗಳು ಮತ್ತು ಮನೆಗಳ ಮಾಳಿಗೆಗಳಿಂದ ಜನರು ಗಾಳಿಪಟಗಳನ್ನು ಬಾನಿಗೆ ಹಾರಬಿಡುವರು.ಸಂಜೆಯ ವೇಳೆ ಗಾಳಿಪಟಗಳು ಮುಗಿಲ ಮುಟ್ಟುವಂತೆ ಮೇಲೇರುತ್ತಿದ್ದಂತೆ ಮಕ್ಕಳ ಹರ್ಷೋಲ್ಲಾಸದ ಧ್ವನಿಗಳು ಎಲ್ಲೆಲ್ಲೂ ಕೇಳಬರುತ್ತವೆ . ಸಾಹಿತ್ಯದಲ್ಲಿ ಸ್ವಾತಂತ್ರ್ಯದಿನ ಸ್ವಾತಂತ್ರ್ಯದ ಮಾಂತ್ರಿಕ ಕ್ಷಣವನ್ನು ಕವಿ ಪ್ರದೀಪ್ ರು ಜಾಗೃತಿ (1954) ಚಿತ್ರದಲ್ಲಿ ಹೀಗೆ ಚಿತ್ರಿಸಿದ್ದಾರೆ. ಸ್ವಾತಂತ್ರ್ಯೋತ್ಸವದ ಛಾಯಾಂಕಣ ಬಾಹ್ಯ ಕೊಂಡಿಗಳು ಆಗಸ್ಟ್ 14ರ ಮಧ್ಯರಾತ್ರಿಯ ವೇಳೆಗೆ ನಡೆದುಹೋದರೆ ಎರಡೂ ಕಡೆಯವರಿಗೂ ಸಮಾಧಾನ ಆಗುತ್ತದೆ. ಉಲ್ಲೇಖಗಳು ಸ್ವಾತಂತ್ರ್ಯ ಹೋರಾಟಗಳು ಭಾರತದ ಇತಿಹಾಸ
1951
https://kn.wikipedia.org/wiki/%E0%B2%89%E0%B2%AC%E0%B3%81%E0%B2%82%E0%B2%9F%E0%B3%81
ಉಬುಂಟು
ಉಬುಂಟು ಎಂಬುದು ಆಫ್ರಿಕಾದ ಜನಪದದಲ್ಲಿ ಮೂಡಿ ಬರುವ ಶಬ್ಧ. 'ಇತರರೆಡೆಗೆ ಮಾನವೀಯತೆ' ಎಂಬಂತಹ ನೀತಿಗೆ ಉಬುಂಟು ಎಂದು ಕರೆಯುವ ಪ್ರತೀತಿ. ಉಬುಂಟು ಲಿನಕ್ಸ್, ಡೆಬಿಯನ್ ವಿತರಣೆಯನ್ನಾಧರಿಸಿ ತರಲಾದ ಒಂದು ಲಿನಕ್ಸ್ ವಿತರಣೆ. ದಕ್ಷಿಣ ಆಫ್ರಿಕಾದ ಕೆನಾನಿಕಲ್ ಕಂಪೆನಿಯು ಈ ಯೋಜನೆಯನ್ನು ಪ್ರಾಯೋಜಿಸುತ್ತಿದೆ. (ಕೆನಾನಿಕಲ್ ಕಂಪೆನಿಯ ಮಾಲೀಕ ಮಾರ್ಕ್ ಷಟ್ಟಲ್ ವರ್ತ್). ಪ್ರತಿ ಆರು ತಿಂಗಳಿಗೆ ಹೊಸ ಬಿಡುಗಡೆಗಳನ್ನೊಳಗೊಂಡ ಕಾರ್ಯನೀತಿಯನ್ನು ರೂಡಿಸಿಕೊಂಡಿರುವ ಈ ವಿತರಣೆಯ ಸಮುದಾಯ, ಆಕರವನ್ನು ಹಾಗೂ ಬೈನರಿಗಳನ್ನೂ ಮುಕ್ತವಾಗಿ ನೀಡುತ್ತದೆ. ಉಚಿತವೂ ಹೌದು. ಅಲ್ಲದೇ ಅಂತರಜಾಲದಿಂದ ಇದನ್ನು ಪಡೆಯಲಾಗದವರಿಗೆ ಉಬುಂಟು ಉಚಿತವಾಗಿ ಸಿಡಿಗಳನ್ನು ಮನೆಯ ಬಾಗಿಲಿಗೆ ತಲುಪಿಸುತ್ತದೆ. ಆವೃತ್ತಿಗಳ ಪಟ್ಟಿ ಚಿತ್ರಾವಳಿ ಇವನ್ನೂ ನೋಡಿ ರೆಡ್ ಹ್ಯಾಟ್ವ್ ಸುಸೇ ಡೆಬಿಯನ್ ಫೆಡೋರಾ ಬಾಹ್ಯ ಸಂಪರ್ಕಗಳು ಉಬುಂಟು ಅಧಿಕೃತ ತಾಣ ಗಣಕಯಂತ್ರ ಲಿನಕ್ಸ್ ವಿತರಣೆಗಳು ಕಾರ್ಯನಿರ್ವಹಣ ಸಾಧನ ಮುಕ್ತ ತಂತ್ರಾಂಶಗಳು
1981
https://kn.wikipedia.org/wiki/%E0%B2%8E.%E0%B2%AA%E0%B2%BF.%E0%B2%9C%E0%B3%86.%E0%B2%85%E0%B2%AC%E0%B3%8D%E0%B2%A6%E0%B3%81%E0%B2%B2%E0%B3%8D%20%E0%B2%95%E0%B2%B2%E0%B2%BE%E0%B2%82
ಎ.ಪಿ.ಜೆ.ಅಬ್ದುಲ್ ಕಲಾಂ
ಅಬ್ದುಲ್ ಕಲಾಂರವರು ಒಬ್ಬ ಭಾರತೀಯ ವಿಜ್ಞಾನಿ ಹಾಗೂ ಭಾರತದ ೧೧ನೆಯ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು. ಇವರು ಹುಟ್ಟಿ ಬೆಳೆದದ್ದು ತಮಿಳುನಾಡಿನ ರಾಮೇಶ್ವರಂನಲ್ಲಿ. ಇವರು ಭೌತಶಾಸ್ತ್ರ ಮತ್ತು ಅಂತರಿಕ್ಷಯಾನ ಇಂಜಿನಿಯರಿಂಗ್ ಅಧ್ಯಯನ ಮಾಡಿದ್ದರು. ಅಧ್ಯಯನ ನಂತರ ನಾಲ್ಕು ದಶಕಗಳ ಕಾಲ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ.ಅರ್.ಡಿ.ಓ) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದಲ್ಲಿ ವಿಜ್ಞಾನಿ ಮತ್ತು ವಿಜ್ಞಾನ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿದರು.ಭಾರತದ ನಾಗರಿಕ ಬಾಹ್ಯಾಕಾಶ ಕಾರ್ಯಕ್ರಮ ಮತ್ತು ಕ್ಷಿಪಣಿ ಅಭಿವೃದ್ಧಿ ಪ್ರಯತ್ನಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಕ್ಷಿಪಣಿ ಮತ್ತು ಉಡಾವಣಾ ತಂತ್ರಜ್ಞಾನದ ಅಭಿವೃದ್ಧಿಯ ಅಧ್ಯಯನದಿಂದ, ಇವರು ಭಾರತದ ಕ್ಷಿಪಣಿ ಮಾನವ ಎಂಬ ಹೆಸರಿನಿಂದ ಚಿರಪರಿಚಿತರಾಗಿದ್ದರು. ೧೯೯೮ರಲ್ಲಿ ನೆಡೆದ ಭಾರತದ ಪೋಖ್ರಾನ್-೨ ಪರಮಾಣು ಪರೀಕ್ಷೆಯಲ್ಲಿ ಸಾಂಸ್ಥಿಕವಾಗಿ, ತಾಂತ್ರಿಕವಾಗಿ ಮತ್ತು ರಾಜಕೀಯವಾಗಿ ಒಂದು ಪ್ರಮುಖ ಪಾತ್ರ ವಹಿಸಿದರು. ಅವರು ಸ್ಇಎಕ್ಸ್ದು ಮಾದು ೯೭೪ರಲ್ಲಿ ನಡೆದ ಮೂಲ ಪರಮಾಣು ಪರೀಕ್ಷೆಯ ನಂತರ ನೆಡೆದ ಮೊದಲ ಪರಮಾಣು ಮಾಡುಯತಿದ ಎಮ್ದ್ದ 51 ನ್ನು xಗಿದೆ. ಕಲಾಂ ಅವರು ೨೦೦೨ ರಲ್ಲಿ, ಆಡಳಿತ ಪಕ್ಷ ಭಾರತೀಯ ಜನತಾ ಪಕ್ಷ ಮತ್ತು ವಿರೋಧ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಎರಡು ಪಕ್ಷಗಳ ಬೆಂಬಲದೊಂದಿಗೆ ರಾಷ್ಟ್ರಪತಿಯಾಗಿ ಆಯ್ಕೆಯಾದರು.ಐದು ವರುಷಗಳ ಅವಧಿ ಪೂರೈಸಿದ ನಂತರ, ಅವರು ಶಿಕ್ಷಣ, ಬರವಣಿಗೆ ಮತ್ತು ಸಾರ್ವಜನಿಕ ಸೇವೆಯ ಜೀವನಕ್ಕೆ ಮರಳಿದರು. ಅವರು ಭಾರತದ ಅತ್ಯುನ್ನತ ನಾಗರಿಕ ಗೌರವ ಭಾರತ ರತ್ನ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರು ಅವಿವಾಹಿತರಾಗಿದ್ದರು. ಅಬ್ದುಲ್ ಕಲಾಂ ಅವರನ್ನ ಭಾರತದ ಮಿಸೈಲ್ ಮ್ಯಾನ್ ಆಫ್ ಇಂಡಿಯ ಎಂದು ಕರೆಯುತ್ತಾರೆ ಬಾಲ್ಯ ಜೀವನ ಮತ್ತು ವಿದ್ಯಾಭ್ಯಾಸ ಅವುಲ್ ಫಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂ ಅವರು  ತಮಿಳುನಾಡು ರಾಜ್ಯದ ರಾಮೇಶ್ವರಂನಲ್ಲಿ, ೧೫ ಅಕ್ಟೋಬರ್ ೧೯೩೧ ರಂದು ತಮಿಳು ಮುಸ್ಲಿಂ ಕುಟುಂಬದಲ್ಲಿ ಜನಿಸಿದರು. ಅವರ ತಂದೆಯ ಹೆಸರು ಜೈನುಲಬ್ದೀನ್, ಅವರು ದೋಣಿ ಮಾಲೀಕರಾಗಿದ್ದರು. ತಾಯಿ ಅಶಿಮಾ ಗೃಹಿಣಿಯಾಗಿದ್ದರು. ಕಲಾಂ ಅವರ ತಂದೆ, ಈಗ ನಿರ್ನಾಮವಾದ ಧನುಷ್ಕೋಡಿ ಮತ್ತು ರಾಮೇಶ್ವರಂ ನಡುವೆ ತಮ್ಮ ದೋಣಿಯಲ್ಲಿ ಹಿಂದು ಭಕ್ತಾದಿಗಳನ್ನು ಕರೆದುಕೊಂಡು ಹೋಗುತ್ತಿದ್ದರು. *ಕಲಾಂ ಅವರು ಕುಟುಂಬದ ನಾಲ್ಕು ಜನ ಸಹೋದರರು ಮತ್ತು ಒಬ್ಬ ಸಹೋದರಿಯಲ್ಲಿ ಅತ್ಯಂತ ಕಿರಿಯರಾಗಿದ್ದರು. ಅವರು ಬಡ ಹಿನ್ನೆಲೆಯಿಂದ ಬಂದವರು ಮತ್ತು ತನ್ನ ಕುಟುಂಬಕ್ಕೆ ಆರ್ಥಿಕವಾಗಿ ಬೆಂಬಲಿಸುವ ಸಲುವಾಗಿ, ಕಿರಿಯ ವಯಸ್ಸಿನಲ್ಲೇ ಕೆಲಸ ಆರಂಭಿಸಿದರು. ತಮ್ಮ ತಂದೆ ಗೆ ಆರ್ಥಿಕವಾಗಿ ಸಹಾಯ ಮಾಡಲು, ಅವರು ಶಾಲೆಯ ನಂತರ ತಮ್ಮ ಸಂಸೂದ್ದಿನ ಕಲಾಂ ಜೊತೆಗೆ ಪತ್ರಿಕೆಗಳನ್ನು ವಿತರಣೆ ಮಾಡುತ್ತಿದ್ದರು. ಇವರ ಬಾಲ್ಯವು ಬಹಳ ಬಡತನದಿಂದ ಕೂಡಿತ್ತು. ಮುಂಜಾನೆ ೪:೦೦ ಘಂಟೆಗೆ ಎದ್ದು ದಿನದ ಪಾಠಗಳನ್ನು ಓದಿ ಶಾಲೆಗೆ ಹೋಗುತ್ತಿದ್ದರು. ಅವರು ಶಾಲೆಯಲ್ಲಿದ್ದಾಗ ಒಬ್ಬ ಸಾಧಾರಣ ವಿಧ್ಯಾರ್ಥಿಯಾಗಿದ್ದರು, ಆದರೆ ಚುರುಕಾದ ಮತ್ತು ಕಠಿಣ ಪರಿಶ್ರಮ ಪಡುವ ವಿಧ್ಯಾರ್ಥಿಯಾಗಿದ್ದರು. ಅವರಿಗೆ ಗಣಿತದಲ್ಲಿ ವಿಶೇಷ ಆಸಕ್ತಿ ಇತ್ತು. ಅವರು ಗಣಿತವನ್ನು ಗಂಟೆಗಳ ಅಧ್ಯಯನ ಮಾಡುತ್ತಿದ್ದರು. ಅವರು ರಾಮನಾಥಪುರಂ ಶ್ವಾರ್ಟ್ಜ್ ಮೆಟ್ರಿಕ್ಯುಲೇಷನ್ಶಾ ಶಾಲೆಯಲ್ಲಿ ಶಿಕ್ಷಣ ಮುಗಿಸಿದ ನಂತರ ತಿರುಚಿರಾಪಳ್ಳಿಯಲ್ಲಿ ಕಲಾಂ ಸೇಂಟ್ ಜೋಸೆಫ್ಸ್ ಕಾಲೇಜಿಗೆ ಸೇರಿಕೊಂಡರು. ೧೯೫೪ರಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರದಲ್ಲಿ ಪದವಿಯನ್ನು ಪಡೆದರು. ಕೋರ್ಸ್ ಕೊನೆಯಲ್ಲಿ ಅವರಿಗೆ ವಿಷಯದ ಬಗ್ಗೆ ಉತ್ಸಾಹ ಕಡಿಮೆಯಾಗುತ್ತಾ ಬಂತು ಮತ್ತು ವಿಷಯವನ್ನು ನಾಲ್ಕು ವರುಷಗಳ ಕಾಲ ಅಧ್ಯಯನ ಮಾಡಿದಕ್ಕೆ ಆಮೇಲೆ ಪಶ್ಚಾತಾಪ ಪಟ್ಟರು. ಅವರು ಮದ್ರಾಸ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಂತರಿಕ್ಷಯಾನ ಇಂಜಿನಿಯರಿಂಗ್ ಓದಲು ಮದ್ರಾಸ್ಗೆ ತೆರಳಿದರು. ಕಲಾಂ ಅವರು ಕೆಲಸ ಮಾಡುತ್ತಿದ್ದಾಗ ಹಿರಿಯ ವರ್ಗದ ಯೋಜನೆಯ ಪ್ರಗತಿ ಬಗ್ಗೆ ಡೀನ್ ಅವರು ಅತೃಪ್ತಿ ವ್ಯಕ್ತಪಡಿಸಿ, ಇನ್ನೂ ಮೂರು ದಿನಗಳಲ್ಲಿ ಯೋಜನೆ ಮುಗಿಸದಿದ್ದರೆ, ಅವರ ವಿದ್ಯಾರ್ಥಿವೇತನ ರದ್ದು ಮಾಡುವ ಬೆದೆರಿಕೆ ಹಾಕಿದರು, ಕಲಾಂ ಅವರು ಡೀನ್ ಕೊಟ್ಟ ಗಡುವಿನಲ್ಲಿ ಯೋಜನೆ ಪೂರೈಸಿದರು. ಅವರ ಕೆಲಸದಿಂದ ಪ್ರಭಾವಿತರಾದ ಡೀನ್ ಅವರು "ನಾನು ನಿನ್ನ ಮೇಲೆ ಹೆಚ್ಚು ಒತ್ತಡ ಹಾಕಿ ಕಠಿಣವಾದ ಗಡುವಿನಲ್ಲಿ ಕೆಲಸ ಪೂರೈಸಲು ಹೇಳಿದ್ದೆ" ಎಂದು ಹೇಳಿದರು. ಎಂಟು ಸ್ಥಾನಗಳು ಖಾಲಿ ಇದ್ದ ಭಾರತೀಯ ವಾಯುಪಡೆಯಾ ಅರ್ಹತಾ ಸುತ್ತಿನಲ್ಲಿ ಒಂಬತ್ತನೆಯ ಸ್ಥಾನ ಪಡೆದದ್ದರಿಂದ, ಯುದ್ದ ವಿಮಾನದ ಚಾಲಕನಾಗುವ ಅವರ ಕನಸಿನ ಅವಕಾಶ ತಪ್ಪಿಹೋಯಿತು. ವೃತ್ತಿಜೀವನ ವಿಜ್ಞಾನಿಯಾಗಿ ೧೯೬೦ರಲ್ಲಿ ಮದ್ರಾಸ್ ತಾಂತ್ರಿಕ ಮಹಾವಿದ್ಯಾಲಯದಿಂದ ಪದವಿ ಪಡೆದ ನಂತರ ಕಲಾಂ ಅವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ.ಅರ್.ಡಿ.ಓ) ನ ವಾಯುಯಾನವಿಜ್ಞಾನ ಅಭಿವೃದ್ಧಿ ವಿಭಾಗಕ್ಕೆ ಒಬ್ಬ ವಿಜ್ಞಾನಿಯಾಗಿ ಸೇರಿಕೊಂಡರು. ಅಲ್ಲಿ ಅವರು ತಮ್ಮ ವೃತ್ತಿ ಜೀವನದ ಪ್ರಾರಂಭದಲ್ಲಿ ಭಾರತದ ಭೂ ಸೇನೆಗೆ ಸಣ್ಣ ಹೆಲಿಕಾಪ್ಟರ್ ಗಳನ್ನು ವಿನ್ಯಾಸ ಮಾಡುತ್ತಿದ್ದರು, ಆದರೆ ಅವರಿಗೆ ತಾವು ಡಿ.ಅರ್.ಡಿ.ಓ ನಲ್ಲಿ ಆಯ್ತುಕೊಂಡ ಕೆಲಸದ ಬಗ್ಗೆ ಅಸಮಾಧಾನ ಇತ್ತು. ಕಲಾಂ ಅವರು ಹೆಸರಾಂತ ಬಾಹ್ಯಾಕಾಶ ವಿಜ್ಞಾನಿ ವಿಕ್ರಂ ಸಾರಾಭಾಯ್ ಅವರ ಅಡಿಯಲ್ಲಿದ್ದ ಇನ್ಕೋಸ್ಪಾರ್ ಸಮಿತಿಯ ಭಾಗವಾಗಿದ್ದರು. ೧೯೬೯ರಲ್ಲಿ ಕಲಾಂ ಅವರನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವರ್ಗಾಯಿಸಲಾಯಿತು. ಅಲ್ಲಿ ಅವರು ರೋಹಿಣಿ ಉಪಗ್ರಹವನ್ನು ೧೯೮೦ರಲ್ಲಿ ಭೂಮಿಯ ಕಕ್ಷೆಯನ್ನು ಸೇರಿಸಿದರು. ಭಾರತದ ಮೊದಲ ಉಪಗ್ರಹ ಉಡಾವಣಾ ವಾಹನ (ಎಸ್.ಎಲ್.ವಿ-೩) ರ ಯೋಜನ ನಿರ್ದೇಶಕರಾದರು. ೧೯೬೫ರಲ್ಲಿಯೇ ಕಲಾಂ ಅವರು ವಿಸ್ತರಿಸಬಲ್ಲ ರಾಕೆಟ್ ಯೋಜನೆಯನ್ನು ಪ್ರತ್ಯೇಕವಾಗಿ ಆರಂಭಿಸಿದರು. ೧೯೬೯ರಲ್ಲಿ ಈ ಯೋಜನೆಗೆ ಸರ್ಕಾರ ಒಪ್ಪಿಗೆ ನೀಡಿತು, ಅವರು ಆಗ ಈ ಯೋಜನೆಯನ್ನು ವಿಸ್ತರಿಸಿ, ಹಲವು ಇಂಜಿನಿಯರ್‍ಗಳನ್ನು ಈ ಯೋಜನೆಗೆ ಸೇರಿಸಿಕೊಂಡರು. ೧೯೬೩-೬೪ರಲ್ಲಿ ಕಲಾಂ ಅವರು ಹ್ಯಾಮ್ಟನ್ ವರ್ಜೀನಿಯಾದ, ನಾಸಾದ ಲ್ಯಾಂಗ್ಲೀ ಸಂಶೋಧನಾ ಕೇಂದ್ರ , ಗ್ರೀನ್ ಬೆಲ್ಟ್ , ಮೇರಿಲ್ಯಾಂಡ್ ನ ಗೊಡಾರ್ಡ್ ಬಾಹ್ಯಾಕಾಶ ಹಾರಾಟ ಕೇಂದ್ರ ಮತ್ತು ವಾಲೋಪ್ಸ್ ಯುದ್ದ ವಿಮಾನ ಫೆಸಿಲಿಟಿಗೆ ಬೇಟಿ ನೀಡಿದ್ದರು. ೧೯೭೦ ಮತ್ತು ೧೯೮೦ ರ ನಡುವೆ ಕಲಾಂ ಅವರು ಪೋಲಾರ್ ಉಪಗ್ರಹ ವಾಹನ (ಪಿ.ಎಸ್.ಎಲ್.ವಿ) ಮತ್ತು ಎಸ್.ಎಲ್.ವಿ-೩ ಯೋಜನೆಗಳನ್ನು ಅಭಿವೃದ್ಧಿ ಪಡಿಸುವ ಪ್ರಯತ್ನ ಮಾಡಿದರು. ಮುಂದಿನ ದಿನಗಳಲ್ಲಿ ಈ ಯೋಜನೆಗಳು ಯಶಸ್ವಿಯಾದವು. ದೇಶದ ಮೊದಲ ಪರಮಾಣು ಪರೀಕ್ಷೆ 'ನಗುವ ಬುದ್ಧ' ಯೋಜನೆಯ ಅಭಿವೃದ್ದಿಯಲ್ಲಿ ಕಲಾಂ ಅವರು ಭಾಗಿಯಾಗಿರಲಿಲ್ಲ. ಆದರೂ ಸಹ ಪರಮಾಣು ಪರೀಕ್ಷೆಯನ್ನು ಟಿ.ಅರ್.ಬಿ.ಎಲ್. ಪ್ರತಿನಿಧಿಯಾಗಿ ವೀಕ್ಷಿಸಲು ಡಾ. ರಾಜಾರಾಮಣ್ಣನವರು ಆಹ್ವಾನಿಸಿದರು. 1958 ರಲ್ಲಿ ಮದ್ರಾಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನೋಲಜಿಯಿಂದ ವೈಮಾನೀಕ ಇಂಜಿನೀಯರ್‍ನಲ್ಲಿ ಪದವಿಯನ್ನು ಪಡೆದರು. ಹಾಗೆಯೇ ಪಿ.ಎಚ್.ಡಿ., ಎಮ್ ಟೆಕ್ ಪದವಿಯನ್ನು ಪಡೆದಿದ್ದಾರೆ. ಡಿ.ಆರ್.ಡಿ.ಓ ಹಾಗೂ ಇಸ್ರೋಗಳಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸಿರುವ ಇವರು ಭಾರತದ ಅಣುಬಾಂಬು ಹಾಗೂ ಕ್ಷಿಪಣಿಗಳ ಜನಕ ಎಂದೇ ಪ್ರಸಿದ್ಧರು. ಸನ್ 1998 ರಲ್ಲಿ ಪೋಖ್ರನ್-2 ನ್ಯೂಕ್ಲಿಯರ್ ಪರೀಕ್ಷೆಯಲ್ಲಿ, ತಾಂತ್ರಿಕವಾಗಿ,ರಾಜಕೀಯವಾಗಿ ಪ್ರಧಾನ ಪಾತ್ರವನ್ನು ವಹಿಸಿದರು. ಆದರೂ ಇವರು ಅಪವಾದಗಳಿಂದ ದೂರವಿರಲ್ಲಿಲ್ಲ, ಕೇವಲ ಹೋಮಿ ಜಹಂಗೀರ್ ಭಾಬಾ ಮತ್ತು ವಿಕ್ರಮ್ ಸಾರಾಭಾಯಿಯವರ ಕೆಲಸವನ್ನು ಮುಂದುವರಿಸಿದರೆಂದು ಹಾಗು ನ್ಯೂಕ್ಲಿಯರ್ ವಿಜ್ಞಾನದಲ್ಲಿ ಪ್ರಾವೀಣ್ಯವಿಲ್ಲ ಎಂದು ಕೆಲವರು ಅಭಿಪ್ರಾಯಪಟ್ಟರು. ರಾಷ್ಟ್ರಪತಿ ಆಗುವುದಕ್ಕೂ ಮುನ್ನ ಇವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಜೇಷನ್ : ಡಿ.ಆರ್.ಡಿ.ಓ.) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ(ಇಸ್ರೋ)ದಲ್ಲಿ ವೈಮಾನಿಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದರು. ಇವರು ಭಾರತಕ್ಕೆ ಕ್ಷಿಪಣಿ ಹಾಗೂ ರಾಕೆಟ್ ತಾಂತ್ರಜ್ಞಾನವನ್ನು ತಯಾರಿಸಿರುವ ಕಾರಣ ,ಕ್ಷಿಪಣಿಗಳ ಜನಕ (ಮಿಸೈಲ್ ಮ್ಯಾನ್ ಆಫ್ ಇಂಡಿಯ)ಎಂದು ಕರೆಯಲ್ಪಡುತ್ತಾರೆ. ಅಣ್ಣಾ ವಿಶ್ವವಿದ್ಯಾಯಲಯ(ಚೆನ್ನೈ), ಜೆ.ಎಸ್.ಎಸ್ ವಿಶ್ವವಿದ್ಯಾಲಯ (ಮೈಸೂರು) ಮತ್ತು ಅನೇಕ ಸಂಶೋಧನಾಲಯದಲ್ಲಿ ವೈಮಾನಿಕ ಪ್ರಾದ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರು 2011ರ ಮೇನಲ್ಲಿ ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತಿದ್ದರು. ಕಲಾಮ್ ಓರ್ವ ವಿಜ್ಞಾನಿಯು, ತಮಿಳು ಕವಿಯು ಹಾಗೂ ವೀಣಾ ವಾದಕರೂ ಆಗಿದ್ದಾರೆ. ತಮ್ಮ ಕೊನೆಯ ದಿನಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಐ.ಐ.ಎಮ್, ಅಹಮದಾಬಾದ್ ಮತ್ತು ಐ.ಐ.ಎಮ್, ಇಂದೋರಿನಲ್ಲಿ ಸೇವೆ ಸಲ್ಲಿಸುತ್ತಿದ್ದರು. . ರಾಷ್ಟ್ರಪತಿಯಾಗಿ ಕಲಾಂರವರು ಭಾರತದ 11ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು. 2002ರ ರಾಷ್ಟ್ರಪತಿ ಚುನಾವಣೆಯಲ್ಲಿ ಲಕ್ಷ್ಮೀ ಸೆಹೆಗಲ್ ವಿರುದ್ಧ ೧೦೭,೩೬೬ ಮತಗಳ ಮುನ್ನಡೆಯಲ್ಲಿ ಗೆದ್ದರು. 22 ಜುಲೈ 2002ರಿಂದ 22 ಜುಲೈ 2007ರವರೆಗೆ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು.ಅ ಸರಳತೆ, ಪ್ರಾಮಾಣಿಕತೆ, ಮತ್ತು ಮೇಧಾವಿತನದ ಸಾಕಾರದಂತಿರುವ ಕಲಾಂ ಅವರು ರಾಷ್ಟ್ರಪತಿ ಹುದ್ದೆಯ ಘನತೆಯನ್ನು ಹೆಚ್ಚಿಸಿದರು. ಜನಸಾಮಾನ್ಯರ ರಾಷ್ಟ್ರಪತಿ ಎಂಬ ಕೀರ್ತಿಗೆ ಪಾತ್ರರಾದರು. ಸ್ವತಃ ಬ್ರಹ್ಮಚಾರಿ ಆದ ಇವರಿಗೆ ಮಕ್ಕಳೆಂದರೆ ಬಹು ಪ್ರೀತಿ. ಮಕ್ಕಳೊಂದಿಗೆ ಬೆರೆತು ಉಪಯುಕ್ತ ಸಲಹೆ ಸೂಚನೆ ನೀಡುವುದು ಇವರ ಪ್ರಿಯ ಹವ್ಯಾಸ. ಲೇಖಕರಾಗಿ ರಾಷ್ಟ್ರಪತಿ ಹುದ್ದೆಯಿಂದ ವಿರಮಿಸಿದ ಅನಂತರವೂ ಇವರು ಜನಪ್ರಿಯ ಧುರೀಣರು ಮತ್ತು ವಿಜ್ಞಾನಿಯಾಗಿ ಕಂಗೊಳಿಸುತ್ತಿದ್ದಾರೆ. ಇವರು ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಹತ್ತಾರು ಗ್ರಂಥಗಳನ್ನು ರಚಿಸಿದ್ದಾರೆ. ‘ವಿಂಗ್ಸ್‌ ಆಫ್ ಫೈರ್’ ಎಂಬುದು ಇವರ ಆತ್ಮಕಥೆ. ಇವರು ತಮ್ಮ ‘ಇಂಡಿಯಾ ಮೈ ಡ್ರೀಮ್’, ‘ಇಂಡಿಯಾ ೨೦೨೦’ ಎಂಬ ಗ್ರಂಥಗಳಲ್ಲಿ ಭವ್ಯ ಭಾರತ ನಿರ್ಮಾಣದ ಬಗ್ಗೆ ರೂಪುರೇಷೆಗಳನ್ನು ಹಾಕಿಕೊಟ್ಟಿದ್ದಾರೆ. ‘ಮೈ ಜರ್ನಿ’, ‘ಟಾರ್ಗೆಟ್ ತ್ರಿ ಬಿಲಿಯನ್’- ಇವು ಇವರ ಇತ್ತೀಚಿನ ಕೃತಿಗಳು. ಅಪ್ರತಿಮ ದೇಶಭಕ್ತರೂ ಉತ್ತಮ ವಾಗ್ಮಿಯೂ ಆಗಿರುವ ಕಲಾಂ ಅವರು ದೇಶ ವಿದೇಶಗಳಲ್ಲಿ ಸಂಚರಿಸುತ್ತ ಜ್ಞಾನ-ವಿಜ್ಞಾನ ಪ್ರಸಾರದಲ್ಲಿ ತಮ್ಮ ಸಹಾಯಹಸ್ತ ನೀಡುತ್ತಿದ್ದಾರೆ. ಪ್ರಶಸ್ತಿಗಳು ಮತ್ತು ಗೌರವಗಳು ಇವರ ಪುಸ್ತಕಗಳು ಡೆವೆಲಪ್ಮೆಂಟ್ಸ್ ಇನ್ ಫ್ಲುಯಿಡ್ ಮೆಖಾನಿಕ್ಸ್ ಅಂಡ್ ಸ್ಪೇಸ್ ಟೆಕ್ನಾಲಜಿ-ರೊಡ್ಡಂ ನರಸಿಂಹರವರ ಜತೆ ಬರೆದಿರುವ ವೈಜ್ಞಾನಿಕ ಪುಸ್ತಕ. ವಿಂಗ್ಸ್ ಆಫ್ ಫೈಯರ್ (ಕನ್ನಡ ಅನುವಾದ - ಅಗ್ನಿಯ ರೆಕ್ಕೆಗಳು)-ಅರುಣ್ ತಿವಾರಿಯವರ ಜತೆ ಬರೆದ ಈ ಪುಸ್ತಕವು ಇವರ ಆತ್ಮಕಥೆಯಾಗಿದ್ದು, ಇವರ ಸರಳ ಹಾಗೂ ಮಾದರಿ ಜೀವನದ ಅನೇಕ ಘಟನೆಗಳನ್ನು ಓದುಗರಿಗೆ ತೆರೆದಿಡುತ್ತದೆ. ಇಂದಿನ ಯುವ ಪೀಳಿಗೆಗೆ ಇದೊಂದು ಅನುರೂಪವಾದ ಮಾರ್ಗದರ್ಶಿ. ಇಂಡಿಯಾ 2020- ಈ ಪುಸ್ತಕದಲ್ಲಿ ಕಲಾಮ್ ರವರು 2020 ನೇ ಇಸವಿಯಲ್ಲಿ ಭಾವಿ ಭಾರತವು ಹೇಗಿರಬೇಕೆಂದು ತಮ್ಮ ಕನಸನ್ನು ಬಿಚ್ಚಿಡುತ್ತಾರೆ. ಯುವ ಜನಾಂಗಕ್ಕೆ ಸ್ಪೂರ್ತಿಯಾಗಬಲ್ಲಂತಹ ಕೃತಿ. ಇಗ್ನೈಟೆಡ್ ಮೈಂಡ್ಸ್- ಮಕ್ಕಳಿಗಾಗಿ ಬರೆದಿರುವ ಈ ಪುಸ್ತಕವು ಅವರು ಮುಂದಿನ ನಾಗರೀಕರಾಗಿದ್ದು ದೇಶವನ್ನು ಹೇಗೆ ಬೆಳಸಬಹುದು ಎಂದು ಹೇಳುತ್ತದೆ. ಎನ್ವಿಶನಿಂಗ್ ಅನ್ ಎಂಪವರ್ಡ್ ನೇಷನ್-ಸಾಮಾಜಿಕ ಬದಲಾವಣೆಗಾಗಿ ತಂತ್ರಜ್ಞಾನದ ಬಗ್ಗೆ ಎ.ಶಿವತನು ಪಿಳ್ಳೈರವರ ಜತೆ ಬರೆದಿರುವ ಪುಸ್ತಕ. ಮೈ ಜರ್ನೀ- ಇದು ಅವರ ಎರಡನೇ ಆತ್ಮಕಥೆ. ಇಲ್ಲಿ ಅವರ ಜೀವನದ ಇಷ್ಟ-ಕಷ್ಟಗಳ ಬಗ್ಗೆ ಹೇಳಿದ್ದಾರೆ. ಇದನ್ನು ವಿ.ಸತ್ಯನಾರಾಯಣ ಮೂರ್ತಿ ಪ್ರಕಟಿಸಿದ್ದಾರೆ. ದಿ ಲೈಫ್ ಟ್ರೀ - ಕಲಾಂ ಅವರು ಬರೀ ವಿಜ್ಞಾನಿಯಲ್ಲದೆ ಒಳ್ಳೆಯ ಕವಿಯೂ ಆಗಿದ್ದಾರೆ. ದಿ ಲೈಫ್ ಟ್ರೀ ಅವರ ಕವನ ಸಂಕಲನವಾಗಿದ್ದು ವಿಜ್ಞಾನ ಮತ್ತು ಸಾಹಿತ್ಯವನ್ನು ಒಂದು ಮಾಡುವ ಪುಸ್ತಕ ಇದು. ಇವರ ಕವನಗಳು ಇವರ ದೇಶಭಕ್ತಿ ಹಾಗು ಮಾತೃಭಕ್ತಿಯನ್ನು ತೋರಿಸುತ್ತದೆ ಮತ್ತು ದೇವರ ಮೇಲೆ ಇವರಿಗಿರುವ ಶ್ರದ್ಧಾ ಭಕ್ತಿಯನ್ನು ತೋರಿಸುತ್ತದೆ. ಚಿಲ್ರೆನ್ ಆಸ್ಕ್ ಕಲಾಂ-ಮಕ್ಕಳು ಕಲಾಂರವರಿಗೆ ಬರೆದ ಪತ್ರಗಳ ಪ್ರಶ್ನೆಗಳಿಗೆ ಪ್ರತ್ಯುತ್ತರ ಪತ್ರಗಳ ಸಂಕಲನ ಈ ಪುಸ್ತಕ. ಇದರಲ್ಲಿ ಮಕ್ಕಳ ವಿಷಯಗಳು, ಭಾರತೀಯತೆ, ವಿದ್ಯಾಭ್ಯಾಸ, ಸಾಮಾನ್ಯ ವಿಷಯಗಳು, ವಿಜ್ಞಾನ ಮತ್ತು ಆಧ್ಯಾತ್ಮದ ಬಗ್ಗೆ ಮಕ್ಕಳಿಗೆ ತಿಳಿಸುತ್ತದೆ. ಮರಣ ಡಾ.ಅಬ್ದುಲ್ ಕಲಾಂರವರು, ಜುಲೈ 27, 2015 ರಂದು ಶಿಲ್ಲಾಂಗ್ ನಲ್ಲಿ ಉಪನ್ಯಾಸ ನೀಡುವ ಸಂದರ್ಭದಲ್ಲಿ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದರು. ನಂತರ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಕೊನೆಯ ಉಸಿರು ಇರುವವರೆಗೂ ಅವರು ಸೇವೆಯಲ್ಲಿ ನಿರತರಾಗಿದ್ದು, ಇಡೀ ದೇಶದ ಜನತೆಗೆ ಮಾದರಿಯ ವ್ಯಕ್ತಿತ್ವ ಹೊಂದಿದವರಾಗಿದರು. ೩೦,ಜುಲೈ, ೨೦೧೫ ರಂದು, ಡಾ.ಕಲಾಂ ಹುಟ್ಟಿಬೆಳೆದ ತಮಿಳುನಾಡಿನ ರಾಮೇಶ್ವರಂ ಊರಿನಲ್ಲಿ ಅವರ ಅಂತಿಮಕ್ರಿಯೆ, ಸಕಲ ರಾಷ್ಟ್ರೀಯ ಗೌರವಗಳೊಂದಿಗೆ ನಡೆಯಿತು. ಡಾ.ಕಲಾಂ ಬಗ್ಗೆ ಬರೆದಿರುವ ಪುಸ್ತಕಗಳು ಕಲಾಂ ಮೇಷ್ಟ್ರು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ಮಕ್ಕಳಿಗಾಗಿ ರಚಿಸಿದ, ಒಂದು ಬಹುಮೂಲ್ಯ ಕೃತಿ. ಅದನ್ನು ರಚಿಸಿದವರು. ಪ್ರೊ. ಎಚ್. ಆರ್. ರಾಮಕೃಷ್ಣರಾವ್. : ISBN : 81-7713-199-0. ಇದರ ೧,೦೦೦ ಪ್ರತಿಗಳು ಮಾರಾಟವಾಗಿವೆ. ಉಲ್ಲೇಖಗಳು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು ಭಾರತದ ರಾಷ್ಟ್ರಪತಿಗಳು ಭಾರತ ರತ್ನ ಪುರಸ್ಕೃತರುby Kevin
1985
https://kn.wikipedia.org/wiki/%E0%B2%86%E0%B2%B0%E0%B3%8D.%20%E0%B2%B5%E0%B3%86%E0%B2%82%E0%B2%95%E0%B2%9F%E0%B2%B0%E0%B2%BE%E0%B2%AE%E0%B2%A8%E0%B3%8D
ಆರ್. ವೆಂಕಟರಾಮನ್
ರಾಮಸ್ವಾಮಿ ವೆಂಕಟರಾಮನ್ (4 ಡಿಸೆಂಬರ್ 1910 – 27 ಜನವರಿ 2009)ವಕೀಲ, ಸ್ವಾತಂತ್ರ್ಯ ಹೋರಾಟಗಾರ, ಕೇಂದ್ರ ಸಚಿವರಾಗಿದ್ದರು. ಇವರು ೧೯೮೭ರಿಂದ ೧೯೯೨ರವರೆಗೆ ಭಾರತದ ರಾಷ್ಟ್ರಪತಿಗಳಾಗಿದ್ದರು. ರಾಷ್ಟ್ರಪತಿಯಾಗಿ ಸೇವೆಯ ಅವಧಿ: ೨೫.೦೭.೧೯೮೭ ರಿಂದ ೨೪.೦೭.೧೯೯೨ ಬಾಲ್ಯ ಮತ್ತು ಶಿಕ್ಷಣ ೧೯೧೦ರ ಡಿಸೆಂಬರ್ ೪ ರಂದು ತಮಿಳು ನಾಡಿನ ತಂಜಾವೂರ್ ಜಿಲ್ಲೆಯ ರಾಜಮಡಮ್ ಹಳ್ಳಿಯಲ್ಲಿ ವೆಂಕಟರಾಮನ್ ಅವರ ಜನನ. ತಂದೆ ರಾಮಸ್ವಾಮಿ ಅಯ್ಯರ್ ವಕೀಲರು. ಸುಸಂಸ್ಕೃತ ವ್ಯಕ್ತಿ ದೇಶ ಸೇವೆಯ ಮೊದಲ ಪಾಠಗಳು ಕುಟುಂಬದ ಹಿರಿಯರಿಂದಲೇ ವೆಂಕಟರಾಮನ್ ಅವರಿಗೆ ಲಭಿಸಿತ್ತು. ವಿಶ್ವವಿದ್ಯಾಲಯದವರೆಗಿನ ಶಿಕ್ಷಣವನ್ನು ತಮ್ಮ ಜಿಲ್ಲೆಯಲ್ಲಿ ಮುಗಿಸಿ, ಮದರಾಸ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎ.ಹಾಗೂ ಕಾನೂನಿನಲ್ಲಿ ಬಿ.ಎಲ್.ಪದವಿಗಳನ್ನು ಪಡೆದರು. ಬ್ರಿಟಿಷ್ ಸರ್ಕಾರದ ಗುಲಾಮನಾಗಲು ಇಷ್ಟವಿಲ್ಲದೆ, ೧೯೩೫ರಲ್ಲಿ ಮದರಾಸ್, ಉಚ್ಚನ್ಯಾಯಲಯದಲ್ಲಿ ವಕೀಲರಾದರು. ೧೯೩೮ರಲ್ಲಿ ಜಾನಕಿದೇವಿ ಅವರೊಂದಿಗೆ ವಿವಾಹವಾಯಿತು. ಮುಂದೆ, ೧೯೫೧ರಲ್ಲಿ ಭಾರತದ ಶ್ರೇಷ್ಠ ನ್ಯಾಯಲಯದಲ್ಲಿ ನ್ಯಾಯವಾದಿಯಾದರ. ವಕೀಲ ವೃತ್ತಿಯನ್ನು ಆರಂಭಿಸಿದ ದಿನಗಳಿಂದಲೂ ಅವರು ತೋರಿದ ಅಸಾಧಾರಣ ಪ್ರತಿಭೆ ಮತ್ತು ಜಾಣ್ಮೆಗಳು ರಾಜಾಜಿಯವರಿಂದಲೂ ಪ್ರಶಂಸೆ ಗಳಿಸಿದ್ದವು. ವೃತ್ತಿ ಕಾರ್ಮಿಕ ಸಂಘಟನೆಯ ವಕೀಲ, ಅದರ ಅಧ್ಯಕ್ಷ, ಕಾಂಗ್ರೆಸ್ ಸಂಸ್ಥೆಯ ಸಾಮಾನ್ಯ ಕೆಲಸಗಾರ, ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯ, ಸಂಯುಕ್ತ ರಾಷ್ಟ್ರ ಸಂಸ್ಥೆಯಲ್ಲಿ ಭಾರತದ ಪ್ರತಿನಿಧಿ, ಅದೇ ಸಂಸ್ಥೆಯ ಆಡಳಿತ ನ್ಯಾಯಮಂಡಳಿಯ (Administarative Tribunal) ಅಧ್ಯಕ್ಷ, ಸಂಸತ್ ಸದಸ್ಯ, ತಮಿಳು ನಾಡು ಹಾಗು ಕೇಂದ್ರ ಸಂಪುಟಗಳಲ್ಲಿ ಮಂತ್ರಿ, ಉಪರಾಷ್ಟ್ರಪತಿ, ರಾಷ್ಟ್ರಪತಿ-ಹೀಗೆ ವೈವಿಧ್ಯಪೂರ್ಣ ಸಾರ್ವಜನಿಕ ಸೇವೆಯ ಅನುಭವ ಅವರದು. ಸಮರ್ಥನ್ಯಾಯವಾದಿ, ಅರ್ಥಿಕರಂಗದ ಅಪಾರ ಜ್ಞಾನವುಳ್ಳವರು, ರಾಜಕೀಯ ಕ್ಷೇತ್ರದ “ಸೂಕ್ಷ್ಮಗಳನ್ನು ಅರಿತವರು. ಆಡಳಿತದಲ್ಲಿ ಸಿದ್ಧಹಸ್ತರು , ನಡೆನುಡಿಯಲ್ಲಿ ವಿನಯ, ಶುದ್ಧಚಾರಿತ್ರ್ಯ, ನ್ಯಾಯಪರತೆ ಇವುಗಳಿಂದ ಎಲ್ಲರ ಪ್ರೀತಿ, ವಿಶ್ವಾಸ, ಗೌರವ ಗಳಿಸಿಕೊಂಡವರು ವೆಂಕಟರಾಮನ್ ೧೯೪೨ರ “ಭಾರತ ಬಿಟ್ಟು ತೊಲಗಿ” ಆಂದೋಳನದಲ್ಲಿ ಭಾಗವಹಿಸಿ ಎರಡು ವರ್ಷ ಸೆರೆಮನೆವಾಸ ಅನುಭವಿಸಿದರು. ವಕೀಲ ವೃತ್ತಿ ಆರಂಭಿಸಿದಾಗಿನಿಂದಲೂ ಕಾರ್ಮಿಕರಿಗೆ ಸಂಬಂಧಿಸಿದ ಕಾನೂನುಗಳಲ್ಲಿ ಅವರಿಗೆ ವಿಶೇಷ ಆಸಕ್ತಿ. ಸೆರೆಮನೆಯಿಂದ ಬಿಡುಗಡೆಯಾದ ಕೂಡಲೆ ಅವರು ಮಾಡಿದ ಮೊದಲ ಕೆಲಸ, ತಮಿಳು ನಾಡು ಕಾಂಗ್ರೆಸ್ಸಿನ ಕಾರ್ಮಿಕ ವಿಭಾಗದ ಸಂಘಟನೆ. ಕಾರ್ಮಿಕರ ಉಪಯೋಗಕ್ಕಾಗಿ Labour Law Journal ಎಂಬ ನಿಯತಕಾಲಿಕೆಯನ್ನು ಆರಂಭಿಸಿದರು. ಪ್ಲಾಂಟೇಷನ್, ಎಸ್ಟೇಟ್, ಬಂದರು, ರೈಲ್ವೆ, ಪತ್ರಿಕೋದ್ಯಮ- ಈ ಎಲ್ಲ ಕ್ಷೇತ್ರಗಳ ಕಾರ್ಮಿಕರನ್ನು ಸಂಘಟಿಸುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ೧೯೫೦ರಲ್ಲಿ ತಾತ್ಕಾಲಿಕ ಸಂಸತ್ತಿಗೆ ಆಯ್ಕೆಯಾದ ವೆಂಕಟರಾಮನ್ ಮುಂದೆ ನಾಲ್ಕು ಬಾರಿ ಲೋಕಸಭೆಗೆ ಆಯ್ಕೆಯಾದರು. ಆದರೆ ೧೯೫೭ರಲ್ಲಿ ಮಾತ್ರ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ತಮಿಳುನಾಡಿ ಸರ್ಕಾರದಲ್ಲಿ ಕೈಗಾರಿಕೆ,ಕಾರ್ಮಿಕ ಶಾಖೆ ಮತ್ತಿತರ ಪ್ರಮುಖ ಖಾತೆಗಳ ಮಂತ್ರಿಯಾಗಿ ದುಡಿದು, ತಮ್ಮ ರಾಜ್ಯವನ್ನು ಒಂದು ಪ್ರಮುಖ ಕೈಗಾರಿಕಾ ಕೇಂದ್ರವಾಗಿ ರೂಪಸಿದರು. ಕೇಂದ್ರ ಯೋಜನಾ ಆಯೋಗದ ಸದಸ್ಯತ್ವ, ಸಾರ್ವಜನಿಕ ಲೆಕ್ಕಪತ್ರಗಳ ಪರಿಶೀಲನಾ ಸಮಿತಿಯ ಅಧ್ಯಕ್ಷತೆ(Public Accounts Committee), ಕೇಂದ್ರ ಸಂಪುಟದ ರಾಜಕೀಯ ಹಾಗೂ ಆರ್ಥಿಕ ವ್ಯವಹಾರಗಳ ಸಮಿತಿಗಳ ಸದಸ್ಯತ್ವ, International Monetary Fund (IMF),The International Bank of Rconstruction and Development (IBRD) ಮತ್ತು Asian Developmetn Bank (ADB)- ಇವುಗಳ ಗವರ್ನರ್ ಪದವಿ ಇತ್ಯಾದಿ ವೆಂಕಟರಾಮನ್ ನಿವಹಿಸಿದ ಕೆಲವು ಉನ್ನತ ಹುದ್ದೆಗಳು. ೧೯೮೦ರಲ್ಲಿ ಕೆಂದ್ರ ವಿತ್ತಮಂತ್ರಿಯಾಗಿ, ನಂತರ ರಕ್ಷಣಾ ಮಂತ್ರಿಯಾಗಿ ೧೯೮೪ರವರೆಗೆ ಸೇವೆ ಸಲ್ಲಿಸಿದ್ದಾರೆ. ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ವೆಂಕಟರಾಮನ್ ಅವರಿಗಿದ್ದ ಅಪಾರ ಜ್ಞಾನದಿಂದ ಲಾಭವನ್ನು ಪಡೆಯಲು, ಅಂದಿನ ಪ್ರಧಾನಿ ನೆಹರೂ ಅವರು, ಸಂಯುಕ್ತ ರಾಷ್ಟ್ರ ಸಂಸ್ಥೆಯಲ್ಲಿ ಭಾರತವನ್ನು ಪ್ರತಿನಿಧಿಸಲು ವೆಂಕಟರಾಮನ್ ಅವರನ್ನು ಆರಿಸಿದ್ದರು.೧೯೫೩ ರಿಂದ ೧೯೬೧ ರ ಅವಧಿಯಲ್ಲಿ ಅವರು ಹಾಗೆ ಏಳು ಬಾರಿ ಪ್ರತಿನಿಧಿಸಿದ್ದಾರೆ.ಅಂತಾರ್ರಾಷ್ಟ್ರೀಯ ಕಾರ್ಮಿಕ ಹಾಗೂ ಸಂಸದೀ. ಉಲ್ಲೇಖಗಳು ಭಾರತದ ರಾಷ್ಟ್ರಪತಿಗಳು
1988
https://kn.wikipedia.org/wiki/%E0%B2%A8%E0%B3%80%E0%B2%B2%E0%B2%82%20%E0%B2%B8%E0%B2%82%E0%B2%9C%E0%B3%80%E0%B2%B5%20%E0%B2%B0%E0%B3%86%E0%B2%A1%E0%B3%8D%E0%B2%A1%E0%B2%BF
ನೀಲಂ ಸಂಜೀವ ರೆಡ್ಡಿ
ನೀಲಂ ಸಂಜೀವ ರೆಡ್ಡಿ ೧೯೭೭ - ೧೯೮೨ ಅವಧಿಯಲ್ಲಿ ಭಾರತದ ರಾಷ್ಟ್ರಪತಿಗಳಾಗಿದ್ದರು. ಇವರು ಭಾರತದ ಆರನೇ ರಾಷ್ಟ್ರಪತಿಗಳು, ಇವರು ಅವಿರೋಧವಾಗಿ ರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆಯಾದ ಭಾರತದ ಏಕೈಕ ವ್ಯಕ್ತಿ. ಇವರು ಆಂಧ್ರ ಪ್ರದೇಶ ರಾಜ್ಯದ ಅನಂತಪುರ ಜಿಲ್ಲೆಯ ಇಲ್ಲೂರು ಹಳ್ಳಿಯಲ್ಲಿ ಹುಟ್ಟಿದರು. ೧೯೬೪ರಲ್ಲಿ ಕೇಂದ್ರ ಸರಕಾರದ ಮಂತ್ರಿ ಮಂಡಲದಲ್ಲಿ ಉಕ್ಕು ಮತ್ತು ಗಣಿ ಖಾತೆಯ ಸಚಿವರಾದರು. ಮುಂದೆ ೧೯೬೬ ರಲ್ಲಿ ಸಾರಿಗೆ. ನಾಗರಿಕ ವಿಮಾನಯಾನ, ಪ್ರವಾಸೋದ್ಯಮ ಮತ್ತು ನೌಕಾ ಸಾರಿಗೆಯ ಸಚಿವರಾಗಿದ್ದರು. ೧೯೬೭ ರಲ್ಲಿ ಲೋಕಸಭೆಯ ಸಭಾಪತಿಯಾಗಿ ಸೇವೆ ಸಲ್ಲಿಸಿ ಅಭೂತಪೂರ್ವ ಮೆಚ್ಚುಗೆಯನ್ನು ಗಳಿಸಿದರು..  1969 ರಲ್ಲಿ, ಅಂದಿನ ಭಾರತದ ರಾಷ್ಟ್ರಪತಿಯಾದ ಡಾ.ಜಾಕೀರ್ ಹುಸೇನರ ಸಾವಿನ ನಂತರ ಸಂಜೀವ ರೆಡ್ಡಿಯವರನ್ನು ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಹೆಸರಿಸಲಾಯಿತು. ಪಕ್ಷದ ಅಭ್ಯರ್ಥಿಯಾಗಿ ಮತ್ತೊಂದು ಹುದ್ದೆಗಾಗಿ ಸ್ಪರ್ಧಿಸುವಾಗ, ಸದ್ಯ ಇರುವ ಹುದ್ದೆಯ ಲಾಭ ಪಡೆಯಬಾರದೆಂದು ತಮ್ಮ ಲೋಕಸಭಾ ಸಭಾಪತಿ ಪದವಿಗೆ ಚುನಾವಣೆಯ ಮೊದಲೇ ರಾಜೀನಾಮೆ ಕೊಟ್ಟರು. ಆದರೆ ಇಂದಿರಾ ಗಾಂಧಿ, ಸಂಜೀವ ರೆಡ್ಡಿ ತನ್ನ ಮಾತಿನಂತೆ ನಡೆಯದ ತುಂಬಾ ಸ್ವತಂತ್ರ ಮನೋಭಾವದ ವ್ಯಕ್ತಿ ಎಂದು ತಿಳಿದು, ಪಕ್ಷದ ಮತದಾರರನ್ನು ಪಕ್ಷದ ಅಭ್ಯರ್ಥಿಗೆ ಮತ ಹಾಕುವಂತೆ ಕೇಳುವ ಬದಲು, ತಮ್ಮ ಆತ್ಮ ಸಾಕ್ಷಿಯ ಪ್ರಕಾರ ಮತದಾನ ಮಾಡಲು ಅವಕಾಶ ನೀಡುವ ನಿಲುವು ತೆಗೆದುಕೊಂಡರು. ಇದರ ಅರ್ಥ ವಾಸ್ತವವಾಗಿ ವಿ.ವಿ.ಗಿರಿ ಅವರಿಗೆ ತನ್ನ ಬೆಂಬಲವನ್ನು ಸೂಚಿಸುವುದಾಗಿತ್ತು. ಆ ಸಂದರ್ಭದಲ್ಲಿ ಸಂಜೀವ ರೆಡ್ಡಿ ಚುನಾವಣೆಯಲ್ಲಿ ಸೋತರು. ಅವರು ಸಕ್ರಿಯ ರಾಜಕೀಯದಿಂದ ನಿವೃತ್ತಿ ಹೊಂದಿ ತಮ್ಮ ಗ್ರಾಮಕ್ಕೆ ಮರಳಿ ತಮ್ಮ ತಂದೆಯ ಉದ್ಯೋಗವಾದ ಕೃಷಿಯಲ್ಲಿ ತೊಡಗಿದರು. ಅವರು ೧೯೭೫ ರಲ್ಲಿ ಶ್ರೀ ಜಯಪ್ರಕಾಶ್ ನಾರಾಯಣ್ ಜೊತೆಗೆ ಮತ್ತೆ ಸಕ್ರಿಯ ರಾಜಕೀಯಕ್ಕೆ ಮರಳಿದರು. ಮಾರ್ಚ್ ೧೯೭೭ ರಲ್ಲಿ, ಅವರು ಜನತಾ ಪಕ್ಷದ ಅಭ್ಯರ್ಥಿಯಾಗಿ ಆಂಧ್ರ ಪ್ರದೇಶದ ನಂದ್ಯಾಲ ಕ್ಷೇತ್ರದಿಂದ ಲೋಕ ಸಭೆಗೆ ಸ್ಪರ್ಧಿಸಿದರು. ಅವರು ಆಂಧ್ರ ಪ್ರದೇಶದಿಂದ ಆಯ್ಕೆಯಾದ ಏಕೈಕ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಅವರು ಸರ್ವಾನುಮತ ದಿಂದ ೨೬ ಮಾರ್ಚ್ ೧೯೭೭ ರಂದು ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆಯಾದರು. ಅವರನ್ನು ಈವರೆಗೆ ಭಾರತೀಯ ಸಂಸತ್ತಿನ ಲೋಕಸಭೆ ಕಂಡ ಅತ್ಯುತ್ತಮ ಸ್ಪೀಕರ್ ಎಂದು ಬಣ್ಣಿಸಲಾಗಿದೆ. ಅವರು ಜುಲೈ ೧೯೭೭ ರಲ್ಲಿ ರಾಷ್ಟ್ರಪತಿಯಾಗಿ ಆಯ್ಕೆಯಾದರು. ಅವರು ಅತ್ಯಂತ ಕಿರಿಯ ವಯಸ್ಸಿನ ರಾಷ್ಟ್ರಪತಿಯೂ ಭಾರತದ ಈವರೆಗಿನ ಇತಿಹಾಸದಲ್ಲಿ ಅವಿರೋಧವಾಗಿ ಆಯ್ಕೆಯಾದ ಏಕೈಕ ರಾಷ್ಟ್ರಪತಿಯೂ ಹೌದು. ಅವರು ೧೯೯೬ ರಲ್ಲಿ ಬೆಂಗಳೂರಿನಲ್ಲಿ ತೀರಿಕೊಂಡರು. ಉಲ್ಲೇಖಗಳು ಬಾಹ್ಯ ಕೊಂಡಿಗಳು President Neelam Sanjiva Reddy's broadcast to India on Republic Day, 1979 (Audio) Neelam Sanjiva Reddy - The Office of Speaker Lok Sab ಭಾರತದ ರಾಷ್ಟ್ರಪತಿಗಳು ಲೋಕಸಭೆಯ ಸಭಾಪತಿ
1995
https://kn.wikipedia.org/wiki/%E0%B2%AC%E0%B2%BE%E0%B2%AC%E0%B3%81%20%E0%B2%B0%E0%B2%BE%E0%B2%9C%E0%B3%87%E0%B2%82%E0%B2%A6%E0%B3%8D%E0%B2%B0%20%E0%B2%AA%E0%B3%8D%E0%B2%B0%E0%B2%B8%E0%B2%BE%E0%B2%A6%E0%B3%8D
ಬಾಬು ರಾಜೇಂದ್ರ ಪ್ರಸಾದ್
ಡಾ. ರಾಜೇಂದ್ರ ಪ್ರಸಾದ್ (ಡಿಸೆಂಬರ್ ೩ ೧೮೮೪ - ಫೆಬ್ರವರಿ ೨೮ ೧೯೬೩) ಭಾರತದ ಮೊದಲನೆಯ ರಾಷ್ಟ್ರಪತಿ. ಭಾರತದ ಸ್ವಾತಂತ್ರ್ಯ ಹೋರಾಟಗಾರರಾಗಿ ಸಮಾಜಸೇವಕರಾಗಿ ಅವರು ಮಹತ್ವದ ಸೇವೆ ನೀಡಿದವರು. “ನನ್ನ ಕೈಯಿಂದ ವಿಷದ ಬಟ್ಟಲನ್ನಾದರೂ ಸ್ವೀಕರಿಸಲು ಹಿಂಜರಿಯದ ವ್ಯಕ್ತಿಯೊಬ್ಬನಿದ್ದಾನೆ. ಆತನೇ ರಾಜೇಂದ್ರ ಪ್ರಸಾದ್” ಗಾಂಧೀಜಿಯವರು ಆಡಿದ ಈ ಮಾತು ಬಾಬು ರಾಜೇಂದ್ರ ಪ್ರಸಾದರ ಬಗ್ಗೆ. ಅವರು ಗಾಂಧೀಜಿಯವರ ವ್ಯಕ್ತಿತ್ವ, ನೈತಿಕ ಸ್ಥೈರ್ಯ, ಕಾರ್ಯ ವಿಧಾನ ಹಾಗೂ ಆದರ್ಶಗಳಲ್ಲಿ ಇಟ್ಟಿದ್ದ ಅನನ್ಯ ವಿಶ್ವಾಸಕ್ಕೆ ಸಾಕ್ಷಿ. ಹಾಗೆಂದ ಮಾತ್ರಕ್ಕೆ ಪ್ರಸಾದರು ಗಾಂಧೀಜಿಯವರ ವ್ಯಕ್ತಿಪೂಜಕರಾಗಿದ್ದರು ಎಂದರ್ಥವಲ್ಲ. ಭಿನ್ನಾಭಿಪ್ರಾಯ ಬಂದಾಗ ತಮ್ಮ ನಿಲುವನ್ನು ಸ್ಪಷ್ಟಪಡಿಸಲು ಪ್ರಸಾದರು ಹಿಂಜರಿಯುತ್ತಿರಲಿಲ್ಲ. ಆದರೆ ಒಮ್ಮೆ ಗಾಂಧೀಜಿ ಒಂದು ನಿರ್ಧಾರ ತೆಗೆದುಕೊಂಡಮೇಲೆ, ಅವರಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದರು. ಜೀವನ ೧೮೮೪ರ ಡಿಸೆಂಬರ್ ೩ನೇ ತಾರೀಖು ಬಿಹಾರದ ಜೇರಡ್ಡೆ ಎಂಬ ಹಳ್ಳಿಯಲ್ಲಿ ಪ್ರಸಾದರು ಜನಿಸಿದರು. ತಂದೆ ಮಹದೇವ ಸಹಾಯ್; ಸಂಸ್ಕೃತ ಮತ್ತು ಫಾರಸಿ ವಿದ್ವಾಂಸರು; ಅಲ್ಲದೆ ವೈದ್ಯರು. ತಾಯಿ ಕಮಲೇಶ್ವರಿ ದೇವಿ; ಸಂಪ್ರದಾಯಸ್ಥರು, ದೈವಭಕ್ತೆ, ಪ್ರತಿದಿನವೂ ರಾಮಾಯಣದ ಕತೆಗಳನ್ನು ಮಗನಿಗೆ ಹೇಳುವರು. ಇಬ್ಬರು ಗಂಡು ಮತ್ತು ಮೂವರು ಹೆಣ್ಣು ಮಕ್ಕಳ ಕುಟುಂಬ. ಬಡವ – ಬಲ್ಲಿದ, ಹಿಂದೂ- ಮುಸ್ಲಿಂ ಮುಂತಾದ ಯಾವ ಭೇದ ಭಾವವೂ ಇಲ್ಲದ ಆಡಂಬರಹಿತವಾದ ಗ್ರಾಮೀಣ ಜನರ ಒಡನಾಟದಲ್ಲಿ ಬೆಳೆದ ಪ್ರಸಾದರು ಉಚ್ಚ ಆದರ್ಶ, ನೈತಿಕ ನಡೆವಳಿಕೆ ಮತ್ತು ಋಜು ಸ್ವಭಾವವನ್ನು ಮೈಗೂಡಿಸಿಕೊಂಡರು. ಕೇವಲ ೧೨ನೇ ವಯಸ್ಸಿನಲ್ಲೇ ರಾಜ ಬನ್ಸಿದೇವಿಯವರೊಂದಿಗೆ ವಿವಾಹವೂ ಆಯಿತು. ಆಗಿನ ಪದ್ಧತಿಯಂತೆ, ಪ್ರಸಾದರ ಮೊದಲ ಶಿಕ್ಷಣ ಪರ್ಷಿಯನ್ ಭಾಷೆಯಲ್ಲಿ, ಒಬ್ಬ ಮುಸಲ್ಮಾನ್ ಮೌಲ್ವಿಯಿಂದ. ಪ್ರತಿಭಾಶಾಲಿಯಾಗಿದ್ದ ಪ್ರಸಾದರು ಶಾಲಾ ಕಾಲೇಜುಗಳಲ್ಲಿ ಅತ್ಯಂತ ಮೇಧಾವಿ ವಿದ್ಯಾರ್ಥಿ ಎನ್ನಿಸಿಕೊಂಡಿದ್ದರು. ಕಲ್ಕತ್ತಾ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಯಿಂದ ಹಿಡಿದು ಬಿ.ಎ., ಎಂ.ಎ. ಹಾಗೂ ಕಾನೂನು ಪರೀಕ್ಷೆಗಳಲ್ಲಿ ಅವರಿಗೇ ಪ್ರಥಮಸ್ಥಾನ. ಚರ್ಚೆ ಮತ್ತು ಪ್ರಬಂಧ ಸ್ಪರ್ಧೆಗಳಲ್ಲಿ ಬಹುಮಾನಗಳು ಇವರಿಗೆ ಕಟ್ಟಿಟ್ಟದ್ದು. ಪ್ರಸಾದರ ಸಮಾಜ ಸೇವಾ ಕಾರ್ಯಗಳಿಗೆ ವಿದ್ಯಾರ್ಥಿ ದೆಸೆಯಲ್ಲೇ ಅಡಿಪಾಯ ಹಾಕಲಾಗಿತ್ತು ತಮ್ಮ ಅಣ್ಣ ಮಹೇಂದ್ರ ಪ್ರಸಾದರಿಂದ “ಸ್ವದೇಶಿ”ಯ ಪಾಠ ಕಲಿತಿದ್ದ ಪ್ರಸಾದರು ಸೋದರಿ ನಿವೇದಿತಾ, ಸುರೇಂದ್ರನಾಥ ಬ್ಯಾನರ್ಜಿ ಮುಂತಾದ ದೇಶ ಪ್ರೇಮಿಗಳ ಭಾಷಣಗಳಿಂದ ಪ್ರಭಾವಿತರಾಗಿದ್ದರು. ವಿದ್ಯಾರ್ಥಿ ವೃಂದದಲ್ಲಿ ಇವರು ಜನಪ್ರಿಯ ನಾಯಕ. 1906ರಲ್ಲಿ ಬಿಹಾರಿ ವಿದ್ಯಾರ್ಥಿಗಳನ್ನು ಒಂದುಗೂಡಿಸಿ “ಬಿಹಾರಿ ವಿದ್ಯಾರ್ಥಿಗಳ ಸಮಾವೇಶ" ಎಂಬ ಸಂಘವನ್ನು ಕಟ್ಟಿದರು. ಪ್ರಸಾದರ ವೃತ್ತಿ ಜೀವನ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಆರಂಭಗೊಂಡಿತು. ಆನಂತರ ಅವರು ಕಲ್ಕತ್ತಾ ಮತ್ತು ಪಾಟ್ನಾಗಳಲ್ಲಿ ವಕೀಲ ವೃತ್ತಿ ನಡೆಸಿದರು. ಪಾಟ್ನಾ ವಿಶ್ವ ವಿದ್ಯಾಲಯದ ಸೆನೆಟ್ ಮತ್ತು ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡಿದ್ದರು. ಮಹಾನ್ ಸಮಾಜ ಸೇವಕ, ಸ್ವಾತಂತ್ರ್ಯ ಹೋರಾಟಗಾರ ಅಂದಿನ ಕಾಲದಲ್ಲಿ ಇಡೀ ದೇಶವೇ ಒಂದು ಹೊಸ ಚೈತನ್ಯವನ್ನು ಪಡೆದಿತ್ತು. ಅಂದಿನ ವಾತಾವರಣವೇ ಒಂದು ಹೊಸ ಬಾಳಿನ ನಿರೀಕ್ಷೆ ಮತ್ತು ಆದರ್ಶದ ಅಲೆಗಳಿಂದ ತುಂಬಿತ್ತು ಎಂದು ಪ್ರಸಾದರು ಹೇಳುತ್ತಾರೆ. ಬಂಗಾಲದ ವಿಭಜನೆ, ವಿದೇಶಿ ವಸ್ತುಗಳ ನಿರಾಕರಣೆ, ಸ್ವದೇಶಿ ಚಳುವಳಿ ಮುಂತಾದ ಅನೇಕ ವಿಷಯಗಳು ಎಲ್ಲೆಡೆಯೂ ಚರ್ಚಿತವಾಗುತ್ತಿದ್ದವು. ಬಿಹಾರದ ಸ್ಥಿತಿಗತಿಗಳನ್ನು ಸುಧಾರಿಸಲು ಪ್ರಸಾದರು ನಡೆಸುತ್ತಿದ್ದ ಚಟುವಟಿಕೆಗಳು ಗೋಪಾಲಕೃಷ್ಣ ಗೋಖಲೆಯವರ ಗಮನಕ್ಕೆ ಬಂತು. ಆಗ ತಾನೇ ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ್ದ ಗಾಂಧೀಜಿಯವರ ಗಮನವನ್ನೂ ಸೆಳೆಯಿತು. ಗಾಂಧೀಜಿಯವರನ್ನು ಪ್ರಸಾದರು ೧೯೧೫ರ ವರ್ಷದಲ್ಲಿ ಮೊದಲು ಭೇಟಿಯಾದರು. ಆದರೆ ಈ ಭೇಟಿಗಳು ಅಷ್ಟೇನೂ ಪರಿಣಾಮ ಬೀರಿರಲಿಲ್ಲ. ಗಾಂಧೀಜಿಯವರ ವ್ಯಕ್ತಿತ್ವ ಮತ್ತು ಕ್ರಿಯಾಶಕ್ತಿಗಳ ಪರಿಚಯವಾದದ್ದು ಚಂಪಾರಣ್‌ದಲ್ಲಿ. ಪ್ರಸಾದರು ಅಲ್ಲಿಂದ ಮುಂದೆ ಗಾಂಧೀಜಿಯವರ ಅನುಯಾಯಿಯಾದರು. ಕೈತುಂಬ ವರಮಾನ ತರುತ್ತಿದ್ದ ವಕೀಲ ವೃತ್ತಿಯನ್ನು ತ್ಯಜಿಸಿದರು. ಜನರ ಹಿತಕ್ಕೆ ಮಾರಕವಾದ ಕಾನೂನುಗಳೆಲ್ಲವನ್ನೂ ವಿರೋಧಿಸಿದರು. ಈ ಅಸಹಕಾರಗಳಿಂದ ಸರ್ಕಾರದ ದೃಷ್ಟಿಯಲ್ಲಿ ದೇಶದ್ರೋಹಿ ಎನಿಸಿಕೊಂಡರು. ಸೆರೆಮನೆವಾಸ, ಸ್ವಂತ ಗಳಿಕೆ ಇಲ್ಲದ್ದರಿಂದ ಕಷ್ಟಕಾರ್ಪಣ್ಯಗಳು, ಎಡೆಬಿಡದೆ ಕಾಡುತ್ತಿದ್ದ ಅಸ್ತಮಾ ಇವು ಯಾವುವೂ ಅವರ ಕಾರ್ಯಚಟುವಟಿಕೆಗಳಿಗೆ ಅಡ್ಡಿಬರಲಿಲ್ಲ. ಸದಾ ಭಾರತದ ಸ್ವಾತಂತ್ರ್ಯಕ್ಕಾಗಿ ಹಂಬಲಿಸುತ್ತಿದ್ದರು. ಭಾಷಣ ಮತ್ತು ಲೇಖನಗಳ ಮೂಲಕ ಜನ ಜಾಗೃತಿ ಮೂಡಿಸಲು ಶ್ರಮಿಸುತ್ತಿದ್ದರು. ೧೯೩೪ರ ಜನವರಿ ೧೫ರಂದು ಸಂಭವಿಸಿದ ಭಯಂಕರ ಭೂಕಂಪ ಹಾಗೂ ಪ್ರವಾಹಗಳಿಂದ ಇಡೀ ಬಿಹಾರವೇ ತತ್ತರಿಸಿತ್ತು. ಅದರ ಮರುದಿನವೇ ಸೆರೆಮನೆಯಿಂದ ಬಿಡುಗಡೆ ಹೊಂದಿದ ಪ್ರಸಾದರು, ತಮ್ಮ ತೀವ್ರ ಅನಾರೋಗ್ಯವನ್ನೂ ಲೆಕ್ಕಿಸದೆ ಬಹುದೊಡ್ಡ ಪ್ರಮಾಣದಲ್ಲಿ ಸಂತ್ರಸ್ತರಿಗೆ ನೆರವು ನೀಡುವ ಕಾರ್ಯವನ್ನು ಸಂಘಟಿಸಿದರು. ಮರುವರ್ಷವೇ ಕ್ವೆಟ್ಟಾದಲ್ಲಿ ಸಂಭವಿಸಿದ ಭೂಕಂಪದಲ್ಲಿ ಸಂತ್ರಸ್ತರಾದವರಿಗೂ ನೆರವು ಕಳಿಸಲು ಶ್ರಮಿಸಿದರು. ಸರ್ಕಾರದ ಕಾರ್ಯಕ್ರಮಕ್ಕಿಂತ ಯಶಸ್ವಿಯಾದ ಅವರ ಕಾರ್ಯಕ್ರಮ ಅವರ ಸಂಘಟನಾ ಚಾತುರ್ಯಕ್ಕೆ ಹಾಗೂ ಕ್ರಿಯಾಶಕ್ತಿಗೆ ಸಾಕ್ಷಿಯಾಗಿದ್ದವು. ಅವರ ಈ ಎಲ್ಲ ಜನಹಿತ ಕಾರ್ಯಗಳಿಂದಾಗಿ ರಾಜೇಂದ್ರ ಪ್ರಸಾದರು ಜನರ ಪ್ರೀತಿಯ “ರಾಜೆನ್ ಬಾಬು” ಆದರು. ೧೯೩೪ರಲ್ಲಿ ಮುಂಬಯಿ (ಈಗಿನ ಮುಂಬಯಿ) ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ; ೧೯೨೯ ಹಾಗೂ ೧೯೩೬ರಲ್ಲಿ ಬಿಹಾರದ ಪ್ರಾಂತೀಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷತೆ, ಅಖಿಲ ಭಾರತ ಕಾಂಗ್ರೆಸ್‌ನ ಅಧ್ಯಕ್ಷ ಪದವಿ – ಇವು ಅವರು ಅಲಂಕರಿಸಿದ ಕೆಲವು ಪ್ರಮುಖ ಹುದ್ದೆಗಳು. ೧೯೩೫ರ ಭಾರತ ಸರ್ಕಾರ ಕಾಯಿದೆ ಪ್ರಕಾರ ೧೯೩೭ರಲ್ಲಿ ಚುನಾವಣೆ ನಡೆದು, ಮಂತ್ರಿ ಮಂಡಲಗಳು ರಚನೆಯಾಗುವ ಕಾಲಕ್ಕೆ ಸಕ್ರಿಯ ಪಾತ್ರ ವಹಿಸಿದ ಕಾಂಗ್ರೆಸ್ ಸಂಸದೀಯ ಸಮಿತಿಯ ಒಬ್ಬ ಪ್ರಮುಖ ಸದಸ್ಯರು ರಾಜೇಂದ್ರ ಬಾಬು. 1946ರಲ್ಲಿ ಭಾರತದ ತಾತ್ಕಾಲಿಕ ಸರ್ಕಾರದಲ್ಲಿ ಆಹಾರ ಮತ್ತು ಕೃಷಿ ಖಾತೆಗಳ ಮಂತ್ರಿಯಾಗಿ ಗಣನೀಯ ಸಾಧನೆ ಮಾಡಿದರು. ಅದೇ ವರ್ಷ ಭಾರತದ ಸಂವಿಧಾನವನ್ನು ರೂಪಿಸಲು ಹಾಗೂ ತಾತ್ಕಾಲಿಕ ಸಂಸತ್ತಾಗಿ ಕಾರ್ಯ ನಿರ್ವಹಿಸಲು ರಚಿತವಾದ ಸಂವಿಧಾನ ಸಭೆಯ ಅಧ್ಯಕ್ಷರಾಗಿ ಆಯ್ಕೆಯಾದರು. ಭಾರತೀಯ ಸಂವಿಧಾನ ನಿರ್ಮಾಣದಲ್ಲಿ ರಾಜೀನ್‌ಬಾಬು ಅವರ ಕಾಣಿಕೆಯು ಅಮೂಲ್ಯವಾದುದು. ರಾಷ್ಟ್ರಪತಿಗಳಾಗಿ ೧೯೫೦ರ ಜನವರಿ ೨೬ರಂದು ಭಾರತವು ಗಣರಾಜ್ಯವಾದಾಗ ಸ್ವತಂತ್ರ ಭಾರತದ ಮೊಟ್ಟ ಮೊದಲ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ೧೯೫೨ ಮತ್ತು ೧೯೫೭ರಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದ ಮೇಲೂ ರಾಜೆನ್ ಬಾಬು ಅವರೇ ರಾಷ್ಟ್ರಪತಿಯಾಗಿ ಆಯ್ಕೆಯಾದರು. ಒಟ್ಟು ೧೨ ವರ್ಷಗಳ ಕಾಲ ರಾಷ್ಟ್ರಪತಿಗಳಾಗಿದ್ದ ರಾಜೆನ್ ಬಾಬು ಆ ಸ್ಥಾನಕ್ಕೆ ಒಂದು ಅನನ್ಯ ಗೌರವ ತಂದುಕೊಟ್ಟರು. ಕಡೆಯ ವರ್ಷಗಳು ೧೯೬೨ರಲ್ಲಿ ರಾಷ್ಟ್ರಪತಿ ಸ್ಥಾನದಿಂದ ನಿವೃತ್ತರಾಗಿ, ತಾವೇ ಪಾಟ್ನಾದಲ್ಲಿ ಸ್ಥಾಪಿಸಿದ ಸದಾಕತ್ ಆಶ್ರಮದಲ್ಲಿ ನೆಲೆಸಿದರು. ಕಡೆಯ ದಿನಗಳಲ್ಲಿ ರಾಜೇಂದ್ರ ಪ್ರಸಾದರು ತುಂಬ ದುಃಖ ಅನುಭವಿಸಿದರು. ಪತ್ನಿ ಹಾಗೂ ಪ್ರೀತಿಯ ಅಕ್ಕ ಇವರ ಮರಣ, ಚೀನಾ ದೇಶ ಭಾರತದ ಮೇಲೆ ನಡೆಸಿದ ಆಕ್ರಮಣ ಇವೆಲ್ಲವೂ ಅವರನ್ನು ತುಂಬ ದುಃಖಕ್ಕೀಡು ಮಾಡಿದವು. ಕೇವಲ ಒಂದು ವರ್ಷದೊಳಗೇ ೧೯೬೩ರ ಫೆಬ್ರವರಿ ೨೮ರಂದು ನಿಧನರಾದರು ಸರಳತೆ ದೇಶದ ಅತ್ಯುಚ್ಛ ಪದವಿಯನ್ನಲಂಕರಿಸಿದರೂ, ಆ ಪದವಿಗೆ ತಕ್ಕ ವೈಭವವೆಲ್ಲವೂ ಅವರನ್ನು ಸುತ್ತುವರಿದಿದ್ದರೂ ಕೃತಿಗಳು ರಾಜೇಂದ್ರ ಪ್ರಸಾದರಿಗೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಸಮಾನ ಪ್ರಭುತ್ವವಿತ್ತು. ಈ ಎರಡರಲ್ಲಿಯೂ ಪುಸ್ತಕಗಳನ್ನು ಬರೆದಿದ್ದಾರೆ. ಪ್ರಶಸ್ತಿ ಗೌರವಗಳು ಅಲಹಾಬಾದ್ ಹಾಗೂ ದಿಲ್ಲಿ ವಿಶ್ವವಿದ್ಯಾಲಯಗಳು ಅವರಿಗೆ ಗೌರವ ಡಾಕ್ಟರೇಟ್ ನೀಡಿದ್ದವು. ೧೯೬೨ರಲ್ಲಿ “ಭಾರತ ರತ್ನ” ಪ್ರಶಸ್ತಿಯನ್ನು ಅವರಿಗೆ ನೀಡಲಾಯಿತು. ಆಕರಗಳು ಕಣಜದಲ್ಲಿ ರಾಜೇಂದ್ರಭವಾನ್ ಟ್ರಸ್ಟ್ ಹಿಂದಿನ ರಾಷ್ಟ್ರಪತಿಗಳು - ರಾಷ್ಟ್ರಪತಿ ರಾಜೇಂದ್ರಪ್ರಸಾದ್ ಇಂಗ್ಲಿಷ್ ವಿಕಿಪೀಡಿಯ ಉಲ್ಲೇಖಗಳು ಭಾರತ ರತ್ನ ಪುರಸ್ಕೃತರು ಭಾರತದ ರಾಷ್ಟ್ರಪತಿಗಳು ೧೮೮೪ ಜನನ ೧೯೬೩ ನಿಧನ
1999
https://kn.wikipedia.org/wiki/%E0%B2%AC%E0%B2%BF.%E0%B2%A1%E0%B2%BF.%E0%B2%9C%E0%B2%A4%E0%B3%8D%E0%B2%A4%E0%B2%BF
ಬಿ.ಡಿ.ಜತ್ತಿ
ಬಸಪ್ಪ ದಾನಪ್ಪ ಜತ್ತಿ(ಬಿ.ಡಿ.ಜತ್ತಿ) (ಸೆಪ್ಟೆಂಬರ್ 10,1912 - ಜೂನ್ 7, 2002) - ಭಾರತದ ಮಾಜಿ ಉಪರಾಷ್ಟ್ರಪತಿಗಳಲ್ಲೊಬ್ಬರು ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಲ್ಲೊಬ್ಬರು. ಸ್ವಲ್ಪ ದಿನಗಳ ಕಾಲ ಹಂಗಾಮಿ ರಾಷ್ಟ್ರಪತಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. ಕರ್ನಾಟಕದ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮ ಪಂಚಾಯತಿಯಿಂದ ದೇಶದ ಹಂಗಾಮಿ ರಾಷ್ಟ್ರಪತಿ ಹುದ್ದೆಯವರೆಗೆ ತಲುಪಿದ ಏಕೈಕ ರಾಜಕಾರಣಿ ಬಿ.ಡಿ.ಜತ್ತಿ. ಜನನ ಕರ್ನಾಟಕದ ಬಾಗಲಕೋಟೆ ಜಿಲ್ಲೆ(ಹಳೆಯ ವಿಜಯಪುರ)ಯ ಜಮಖಂಡಿ ತಾಲ್ಲೂಕಿನ ಸಾವಳಗಿ ಹತ್ತಿರದ ಕುರಗೊಡ(ತಾಯಿಯ ಊರು) ಎಂಬ ಚಿಕ್ಕ ಗ್ರಾಮದಲ್ಲಿ 1912ರ ಸೆಪ್ಟಂಬರ್ 10ರಂದು ಜನಿಸಿದರು. ತಂದೆ ದಾನಪ್ಪ ಜತ್ತಿ, ತಾಯಿ ಭಾಗವ್ವ. ದಾನಪ್ಪ ಜತ್ತಿಯವರು ಒಬ್ಬ ವ್ಯಾಪಾರಿ, ಅವರ ಮೂವರು ಗಂಡುಮಕ್ಕಳಲ್ಲಿ ಬಸಪ್ಪನವರು ಒಬ್ಬರು.ಗ್ರಾಮವು ಅಂದು ಮುಂಬೈ ಪ್ರಾಂತದ ಜಮಖಂಡಿ ಸಂಸ್ಥಾನಕ್ಕೆ ಸೇರಿತ್ತು. ತಂದೆ ದಾನಪ್ಪ, ತಾಯಿ ಭಾಗವ್ವ- ಇಬ್ಬರೂ ಶ್ರಮ ಜೀವಿಗಳು, ದೈವ ಭಕ್ತರು, ಗುರು ಹಿರಿಯರಲ್ಲಿ ಅಪಾರ ಗೌರವುಳ್ಳವರು. ಇವರ ಸದ್ಗುಣಗಳು ಬಸಪ್ಪನವರಿಗೆ ಬಳುವಳಿಕೆಯಾಗಿ ಬಂದವು. ವಿದ್ಯಾಭ್ಯಾಸ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆಗಳಲ್ಲಿ ಅಭ್ಯಾಸದ ಅನಂತರ ಕೊಲ್ಲಾಪುರದ ರಾಜಾರಾಂ ಕಾಲೇಜಿನಲ್ಲಿ ವ್ಯಾಸಂಗಮಾಡಿ ಆಟ್ರ್ಸ್ ಪದವಿಯನ್ನೂ ಸೈಕ್ಸ್ ಲಾ ಕಾಲೇಜಿನಲ್ಲಿ ಎಲ್‍ಎಲ್.ಬಿ. ಪದವಿಯನ್ನೂ ಗಳಿಸಿ (1940) ಜಮಖಂಡಿಯಲ್ಲಿ ವಕೀಲರಾಗಿ ಜೀವನ ಆರಂಭಿಸಿದರು (1940-45). 1948ರಲ್ಲಿ ಜಮಖಂಡಿಯು ಮುಂಬಯಿಗೆ ಸೇರಿದ ನಂತರ ಮತ್ತೆ ಕಾನೂನು ವೃತ್ತಿಗೆ ವಾಪಸಾದರು ವೃತ್ತಿ ಜೀವನ ೧೯೪೦ರಲ್ಲಿ ನ್ಯಾಯವಾದಿಯಾಗಿ ಬದುಕು ಆರಂಭಿಸಿದ ಅವರು ರಾಜಕಾರಣಿಯಾಗಿ ಜೀವನವನ್ನು ಸಮಾಜ ಸೇವೆಗೆ ಅರ್ಪಿಸಿಕೊಂಡರು. ಬಸಪ್ಪನವರು 10 ವರ್ಷದ ಬಾಲಕನಾಗಿದ್ದಾಗಲೇ 5 ವರ್ಷದ ಬಾಲಕ ಸಂಗವ್ವಳೊಂದಿಗೆ ವಿವಾಹವಾಯಿತು. ತಂದೆಯ ಮರಣದ ನಂತರ ಕುಟುಂಬ ನಿರ್ವಹಣೆಯ ಹೊಣೆ ತಮ್ಮ ಮೇಲೆ ಬಿದ್ದುದರಿಂದ, ಬಸಪ್ಪನವರು ಕಾನೂನು ಶಿಕ್ಷಣವನ್ನು ಕೈಬಿಟ್ಟು ಸ್ವಗ್ರಾಮಕ್ಕೆ ಮರಳಿದರು. ಕುಟುಂಬದ ಹೊಣೆಯ ಜೊತೆಗೆ ತಮ್ಮ ಹಳ್ಳಿಯ ಸಾರ್ವಜನಿಕ ಸಮಸ್ಯೆಗಳನ್ನು ಬಿಡಿಸುವ ಹೊಣೆಯನ್ನೂ ವಹಿಸಿಕೊಂಡರು.ಗ್ರಾಮ ಪಂಚಾಯಿತಿ ಸ್ಥಾಪಿಸಿ, ಅದರ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ಮೂರೂವರೆ ವರ್ಷ ಅದನ್ನು ಮುನ್ನಡೆಸಿದರು. ಇದು ಅವರ ಸಮಾಜ ಸೇವಾ ಕಾರ್ಯದ ಮೊದಲ ಹಂತ. ಗಾಂಧೀಜಿಯವರ ಆದರ್ಶಗಳಿಂದ ತುಂಬ ಪ್ರಭಾವಿತರಾಗಿದ್ದ ಬಸಪ್ಪನವರು ರಾಜಕೀಯ ಬೆಳವಣಿಗೆಗಳ ಬಗ್ಗೆ ಸದಾ ಜಾಗರೂಕರಾಗಿರುತ್ತಿದ್ದರು. ಸುಧೀರ್ಘ ರಾಜಕೀಯ ಮುಂಬಯಿ ರಾಜ್ಯ ಶಾಸನ ಸಭೆಗೆ ಅವರನ್ನು ನಾಮ ನಿರ್ದೇಶನ ಮಾಡಲಾಗಿತ್ತು. ಒಂದೇ ವಾರದಲ್ಲಿ ಅವರನ್ನು ಸಂಸದೀಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು. 1952ರ ಸಾರ್ವತ್ರಿಕ ಚುನಾವಣೆಯಾದ ನಂತರ ಜತ್ತಿಯವರನ್ನು ಮುಂಬಯಿ ಸರ್ಕಾರದಲ್ಲಿ ಆರೋಗ್ಯ ಮತ್ತು ಕಾರ್ಮಿಕ ಮಂತ್ರಿಯನ್ನಾಗಿ ನೇಮಿಸಲಾಯಿತು. ಭಾಷಾವಾರು ಪ್ರಾಂತ್ಯಗಳು ರಚನೆಯಾದ ನಂತರ ಜತ್ತಿಯವರು ಮೈಸೂರಿ ಶಾಸನಸಭೆಯ ಅಧ್ಯಕ್ಷರೂ ಮತ್ತು ಭೂ ಸುಧಾರಣಾ ಸಮಿತಿಯ ಅಧ್ಯಕ್ಷರೂ ಆಗಿದ್ದರು. ಕರ್ನಾಟಕದ ಮುಖ್ಯಮಂತ್ರಿಯಾಗಿ 1958ರಲ್ಲಿ ನೇಮಕಗೊಂಡು 1962ರ ತನಕ ಆಡಳಿತ ನಡೆಸಿದರು. 3ನೇ ಸಾರ್ವತ್ರಿಕ ಚುನಾವಣೆಯಲ್ಲಿ ಜಮಖಂಡಿ ಕ್ಷೇತ್ರದಿಂದ ಮರು ಚುನಾಯಿತರಾದರು. 1962ರಲ್ಲಿ ನಿಜಲಿಂಗಪ್ಪನವರ ಸಚಿವ ಸಂಪುಟದಲ್ಲಿ ಹಣಕಾಸು ಮಂತ್ರಿಯಾದರು. ಅದೇ ಕ್ಷೇತ್ರದಿಂದ ನಾಲ್ಕನೆಯ ಶಾಸನಸಭೆಗೆ ಮರು ಚುನಾವಣೆಯಲ್ಲಿ ಆಯ್ಕೆ ಯಾದರು ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಂತ್ರಿಯಾದರು. ನಂತರ ಅವರು ರಾಷ್ಟ್ರ ರಾಜಕಾರಣಕ್ಕೆ ತೊಡಗಿಸಿಕೊಂಡು 1968ರಲ್ಲಿ ಪಾಂಡಿಚೆರಿಯ ಲೆಫ್ಟಿನೆಂಟ್‌ ಗವರ್ನರ್‌ ಆಗಿ ನೇಮಕಗೊಂಡರು. 1973ರಲ್ಲಿ ಒರಿಸ್ಸಾದ ರಾಜ್ಯಪಾಲರಾಗಿ, ನಂತರ 1974ರಲ್ಲಿ ಭಾರತದ ಉಪರಾಷ್ಟ್ರಾಧ್ಯಕ್ಷರಾಗಿ 1980ರ ವರೆಗೆ ಸೇವೆ ಸಲ್ಲಿಸಿದರು. ರಾಜ್ಯದಲ್ಲಿ ಸಚಿವರಾಗಿ, ನಂತರ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿ, ಪಾಂಡಿಚೇರಿಯಲ್ಲಿ ಲೆ.ಗೌವರನರ್ ಆಗಿ ಸೇವೆ ಸಲ್ಲಿಸಿ, ಮುಂದೆ ಉಪರಾಷ್ಟ್ರಪತಿ ಮತ್ತು ಫಕ್ರುದ್ದಿನ್ ಅಹ್ಮದ್ ಅವರ ಅಕಾಲ ಮೃತ್ಯುವಿನ ನಂತರ ಕೆಲಕಾಲ ಹಂಗಾಮಿ ರಾಷ್ಟ್ರಪತಿಯಾಗಿ ಇವರು ಸೇವೆ ಸಲ್ಲಿಸಿದರು. ಉತ್ತಮ ಆಡಳಿತಗಾರ, ಸರಳ ಜೀವಿ ಮತ್ತು ರಾಜಕೀಯ "ಜಟ್ಟಿ"ಎಂದು ಜತ್ತಿ ಹೆಸರು ಗಳಿಸಿದ್ದಾರೆ. ಜಮಖಂಡಿಯ ಪೌರಸಭೆಯ ಸದಸ್ಯರಾಗಿ ಎರಡುಬಾರಿ ಆಯ್ಕೆ ಹೊಂದಿದರಲ್ಲದೆ ಅದರ ಅಧ್ಯಕ್ಷರಾಗಿಯೂ ಇದ್ದರು (1940-45). ಜಮಖಂಡಿ ಸಂಸ್ಥಾನದ ಪ್ರಜಾ ಪರಿಷತ್ತಿನ ಪ್ರಮುಖ ಕಾರ್ಯಕರ್ತರಲ್ಲಿ ಇವರೂ ಒಬ್ಬರಾಗಿದ್ದರು. ಜಮಖಂಡಿಯಲ್ಲಿ ಪ್ರಜಾಪ್ರತಿನಿಧಿ ಸರ್ಕಾರ ಸ್ಥಾಪನೆಯಾದಾಗ ಮಂತ್ರಿಮಂಡಳ ರಚಿಸುವ ಹೊಣೆ ಇವರದಾಯಿತು. 1947ರಲ್ಲಿ ಭಾರತ ಸ್ವತಂತ್ರವಾದಾಗ ಸಂಸ್ಥಾನಗಳ ಭವಿಷ್ಯದ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ದಕ್ಷಿಣ ಸಂಸ್ಥಾನಗಳ ಒಕ್ಕೂಟರಚನೆಯ ಪ್ರಯತ್ನಗಳು ನಡೆದಿದ್ದುವು. ಜತ್ತಿಯವರು ಜಮಖಂಡಿ ಸಂಸ್ಥಾನಿಕರ ಮನವೊಲಿಸಿ ಭಾರತ ಒಕ್ಕೂಟದಲ್ಲಿ ಆ ಸಂಸ್ಥಾನ ವಿಲೀನಗೊಳ್ಳುವಂತೆ ಮಾಡಲು ಶ್ರಮಿಸಿದರು. ವಿಲೀನಗೊಂಡ ಪ್ರದೇಶಗಳ ಪ್ರನಿನಿಧಿಯಾಗಿ ಜತ್ತಿಯವರು ಮುಂಬಯಿ ವಿಧಾನಸಭೆಗೆ ನಾಮಕರಣ ಹೊಂದಿದರು ಮತ್ತು ಅಲ್ಲಿಯ ಮುಖ್ಯಮಂತ್ರಿ ಬಿ.ಜಿ ಖೇರರ ಸಂಸದೀಯ ಕಾರ್ಯದರ್ಶಿಯಾಗಿ ನೇಮಕಗೊಂಡರು (1948). 1952ರ ಚುನಾವಣೆಯಲ್ಲಿ ಮುಂಬಯಿ ವಿಧಾನಸಭೆಗೆ ಚುನಾಯಿತರಾಗಿ ಆ ರಾಜ್ಯದ ಆರೋಗ್ಯ ಮತ್ತು ಕಾರ್ಮಿಕ ಉಪಮಂತ್ರಿಯಾದರು. 1956ರಲ್ಲಿ ರಾಜ್ಯ ಪುನರ್ರಚನೆಯಾದ ಅನಂತರ ಜತ್ತಿಯವರು ನೂತನ ಮೈಸೂರು ರಾಜ್ಯದ (ಈಗ ಕರ್ನಾಟಕ) ಭೂಸುಧಾರಣಾ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡರು. ರಾಜ್ಯದ ಭೂಸುಧಾರಣಾ ಕಾಯಿದೆಗಳಿಗೆ ಜತ್ತಿ ಸಮಿತಿಯ ವರದಿ ತಳಹದಿಯಾಯಿತು. 1957 ಮತ್ತು 1967ರ ಚುನಾವಣೆಗಳಲ್ಲಿ ಅವರು ರಾಜ್ಯವಿಧಾನಸಭೆಗೆ ಆಯ್ಕೆಯಾದರು. ಮುಖ್ಯಮಂತ್ರಿ 1958ರ ಜತ್ತಿಯವರು ಮೈಸೂರಿನ ವಿಧಾನ ಮಂಡಲ ಕಾಂಗ್ರೆಸ್ ಪಕ್ಷದ ನಾಯಕರಾಗಿ ಆಯ್ಕೆಯಾಗಿ ರಾಜ್ಯದ ಮುಖ್ಯಮಂತ್ರಿಯಾದರು. ಅನಿರೀಕ್ಷಿತವಾಗಿ ಬಂದ ಹೊಣೆಯನ್ನು ಜತ್ತಿಯವರು ದಕ್ಷತೆಯಿಂದ ನಿರ್ವಹಿಸಿದರು. 1962ರ ಚುನಾವಣೆಗಳ ಅನಂತರ ರಚಿತವಾದ ನಿಜಲಿಂಗಪ್ಪ ಮಂತ್ರಿಮಂಡಲದಲ್ಲಿ ಜತ್ತಿಯವರು ಹಣಕಾಸಿನ ಮಂತ್ರಿಯಾದರು-1965ರ ವರೆಗೆ ಆ ಹುದ್ದೆಯಲ್ಲಿದ್ದರು. ಅನಂತರ 1968ರ ವರೆಗೆ ಅವರು ಆಹಾರ ಮಂತ್ರಿಯಾಗಿದ್ದರು. ರಾಜ್ಯಪಾಲ ಅವರು ಪುದುಚೇರಿಯ ಲೆ.ಗೌವರನರಾಗಿ ನೇಮಕವಾದ್ದು 1968ರಲ್ಲಿ. 1973ರಲ್ಲಿ ಅವರು ಒರಿಸ್ಸದ ರಾಜ್ಯಪಾಲರಾದರು. 1973-74ರಲ್ಲಿ ಆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬಂದಾಗ ಜತ್ತಿಯವರು ಅದರ ಆಡಳಿತವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಉಪರಾಷ್ಟ್ರಪತಿ ಮತ್ತು ಹಂಗಾಮಿ ರಾಷ್ಟ್ರಪತಿ 1977 ಫೆಬ್ರವರಿ 11ರಿಂದ ಜುಲೈ 25 1977ರ ವರೆಗೂ ಭಾರತದ ಹಂಗಾಮಿ ರಾಷ್ಟ್ರಪತಿಗಳಾಗಿದ್ದರು ಹಾಗೂ 5ನೇ ಉಪ ರಾಷ್ಟ್ರಪತಿಗಳಾಗಿದ್ದರು. ತುರ್ತು ಪರಿಸ್ಥಿತಿಯ ನಂತರ ನೆಡೆದ ಚುನಾವಣೆಯಲ್ಲಿ ಜನತಾ ಪಕ್ಷ ಬಹುಮತದಿಂದ ಜಯಗೊಳಿಸಿದರೂ, ಮುರಾರ್ಜಿ ದೇಸಾಯಿಯವರನ್ನು ಪ್ರಧಾನಿ ಮಂತ್ರಿ ಹುದ್ದೆ ಸ್ವೀಕರಿಸಲು ಆಹ್ವಾನಿಸಲು, ಆಗ ಹಂಗಾಮಿ ರಾಷ್ಟ್ರಪತಿಗಳಾಗಿದ್ದ ಜತ್ತಿಯವರು ತಡ ಮಾಡಿದರೆಂದು ಅವರ ವಿರುದ್ಧ ದೆಹಲಿಯಲ್ಲಿ ಭಾರಿ ಪ್ರತಿಭಟನೆ ನೆಡೆದಿತ್ತು.ಇದರಿಂದಾಗಿ, ನಿಜಲಿಂಗಪ್ಪನವರು ರಾಷ್ಟ್ರಪತಿಯಾಗಲು ನಿರಾಕರಿಸಿದ ನಂತರ ಬಹುದಿನಗಳ ನಂತರ ಜತ್ತಿಯವರಿಗೆ ದೊರೆತಿದ್ದ ರಾಷ್ಟ್ರಪತಿ ಹುದ್ದೆ ಅವಕಾಶವು ಕೊನೆಗೆ ನೀಲಂ ಸಂಜೀವ ರೆಡ್ಡಿಯವರ ಪಾಲಾಯಿತೆಂದು ಆಗ ರಾಜಕೀಯ ಚರ್ಚೆ ನೆಡೆದಿತ್ತು. ಅದರ ಸತ್ಯಾಸತ್ಯತೆಗಳೇನೇ ಇರಲಿ, ಕನ್ನಡಿಗರಿಗೆ ರಾಷ್ಟ್ರಪತಿಯಾಗುವ ಅವಕಾಶ ದೂರವಾಗಿದ್ದು ಮಾತ್ರ ಸತ್ಯವಾಗಿದೆ. ಅಧ್ಯಾತ್ಮ ಬಸವೇಶ್ವರರ ಉಪದೇಶ ಮತ್ತು ವಿಚಾರಗಳ ಪ್ರಚಾರದ ಉದ್ದೇಶದಿಂದ ರಚಿತವಾಗಿರುವ ಬಸವ ಸಮಿತಿಗೆ ಜತ್ತಿಯವರು ಪ್ರಾರಂಭದಿಂದಲೂ ಅಧ್ಯಕ್ಷರಾಗಿದ್ದಾರೆ. ಸಣ್ಣ ವಯಸ್ಸಿನಿಂದಲೂ ಅವರು ಆಧ್ಯಾತ್ಮದಲ್ಲಿ ಒಲವು ಬೆಳೆಸಿಕೊಂಡಿದ್ದಾರೆ. ಬಸವ ಸಮಿತಿಯು ೧೯೬೪ರಲ್ಲಿ ಭಾರತದ ಮಾಜಿ ರಾಷ್ಟ್ರಪತಿ ಡಾ. ಬಿ.ಡಿ. ಜತ್ತಿ ಅವರಿಂದ ಸ್ಥಾಪನೆಗೊಂಡು, ೧೨ನೇ ಶತಮಾನದ ಬಸವಣ್ಣವರ ಹಾಗು ಅವರ ಸಮಕಾಲೀನ ಶರಣರ ತತ್ವ ಸಂದೇಶಗಳನ್ನು ಪ್ರಪಂಚದಾದ್ಯಂತ ಸಾರುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಭಾರತದ ಮಾಜಿ ರಾಷ್ಟ್ರಪತಿ ಡಾ|| ಬಸಪ್ಪ ದಾನಪ್ಪ ಜತ್ತಿ ಅವರು ಬಸವಣ್ಣವರ ಹಾಗೂ ಶರಣರ ತತ್ವಗಳನ್ನು, ಶರಣ ಸಂಸ್ಕೃತಿಯನ್ನು ಶರಣರ ಸಮಾನತೆಯ ತತ್ವವನ್ನು ಸಾರುವ ಉದ್ದೇಶದಿಂದ ೧೯೬೪ರಲ್ಲಿ ಬಸವ ಸಮಿತಿಯನ್ನು ಸ್ಥಾಪಿಸಿದರು. ಅಂದಿನಿಂದ ಇಂದಿನವರೆಗೆ ಪಕ್ಷ, ಜಾತಿ ಭೇದವಿಲ್ಲದೆ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತ ಬಸವ ಸಂದೇಶಗಳನ್ನು ಹಾಗೂ ಶರಣರ ತತ್ವಗಳನ್ನು ಪ್ರಚಾರ ಮಾಡುತ್ತಿದೆ. ಬಸವ ಸಮಿತಿಯು ಶರಣರ ಸಂಸ್ಕೃತಿಯನ್ನು ಪ್ರಚಾರ ಮಾಡುವ ಮತ್ತು ಎಲ್ಲಾ ಮಾನವರ ಕಲ್ಯಾಣಕ್ಕಾಗಿ (ಉದ್ಧಾರಕ್ಕಾಗಿ) ಶರಣರ ಕೊಟ್ಟ ಸಂದೇಶಗಳನ್ನು ಕಲುಷಿತಗೊಳಿಸದೆ ಇಂದಿನ ಆಧುನಿಕ ಸಮಾಜಕ್ಕೆ ಒಪ್ಪುವಂತೆ ನವೀಕರಿಸುವ ಉದ್ದೇಶ ಹೊಂದಿದೆ. ಅನ್ನದಾನಯ್ಯ ಪುರಾಣಿಕ,ಕೆ.ಎಂ.ನಂಜಪ್ಪ,ವೈ.ಸಿ.ಬಸಪ್ಪ,ಗಂಗಪ್ಪ,ಬಿ.ಎಸ್.ಶಂಕರಪ್ಪಶೆಟ್ಟಿ, ಪಾವಟೆ ಮೊದಲಾದ ಗಣ್ಯರ ಜೊತೆಗೂಡಿ, ಬೆಂಗಳೂರಿನಲ್ಲಿ ಅಖಿಲ ಭಾರತ ಬಸವ ಸಮಿತಿ ಸ್ಥಾಪಿಸಿದರು. ಬಸವತತ್ವ ಪ್ರಚಾರಕ್ಕಾಗಿ ಮೀಸಲಾದ ಈ ಸಂಸ್ಥೆಯ ಅಭಿವೃದ್ಧಿಗಾಗಿ ಅಧ್ಯಕ್ಷರಾಗಿ ಜತ್ತಿ ಮತ್ತು 27 ವರ್ಷಗಳ ಕಾಲ ಗೌರವ ಕಾರ್ಯದರ್ಶಿಯಾಗಿ ಅನ್ನದಾನಯ್ಯ ಪುರಾಣಿಕನಿರಂತರ ಮತ್ತು ನಿಸ್ಪಾರ್ಥ ಸೇವೆ ಸಲ್ಲಿಸಿದ್ದಾರೆ. ನಿರ್ವಹಿಸಿದ ಪ್ರಮುಖ ಹುದ್ದೆಗಳು ಅವರು ಹೊಂದಿದ್ದ ಪ್ರಮುಖ ಹುದ್ದೆಗಳಲ್ಲಿ ಕೆಲವು: ಸಾವಳಗಿಯ ಗ್ರಾಮ ಪಂಚಾಯ್ತಿ ಸದಸ್ಯ (೧೯೪೩) ಮುಂಬಯಿ ವಿಧಾನಸಭೆಯ ಶಾಸಕ (೧೯೪೯) ಮುಂಬಯಿ ರಾಜ್ಯದ ಉಪ ಮುಖ್ಯಮಂತ್ರಿ (೧೯೫೫) ಭೂಸುಧಾರಣಾ ಮಂಡಲದ ಅಧ್ಯಕ್ಷ (೧೯೫೭) ರಾಜ್ಯ ಪುನರ್ ವಿಂಗಡಣೆಯ ಬಳಿಕ ಕರ್ನಾಟಕದ ಮುಖ್ಯಮಂತ್ರಿ (೧೯೫೮) ಮೈಸೂರ ರಾಜ್ಯದ ೫ನೇಯ ಮುಖ್ಯಮಂತ್ರಿ (ಮೇ ೧೬, ೧೯೫೮ ರಿಂದ ಮಾರ್ಚ್ ೯,೧೯೬೨) ನಿಜಲಿಂಗಪ್ಪ ಮಂತ್ರಿಮಂಡಲದಲ್ಲಿ ಜತ್ತಿಯವರು ಹಣಕಾಸಿನ ಮಂತ್ರಿ-1965 ಮೈಸೂರ ರಾಜ್ಯ ಆಹಾರ ಮಂತ್ರಿ ಪಾಂಡಿಚೇರಿಯ ಲೆಫ್ಟಿನೆಂಟ್ ಗವರ್ನರ್ (೧೯೬೮-೧೯೭೨) ಒಡಿಶಾ ರಾಜ್ಯದ ರಾಜ್ಯಪಾಲ (೧೯೭೨ - ೧೯೭೭) ಭಾರತದ ೫ನೇಯ ಉಪರಾಷ್ಟ್ರಪತಿ (ಅಗಸ್ಟ ೩೧, ೧೯೭೪ ರಿಂದ ಅಗಸ್ಟ ೩೦, ೧೯೭೯) ಭಾರತದ ಹಂಗಾಮಿ ರಾಷ್ಟ್ರಪತಿ (೧೧-೦೨-೧೯೭೭ ರಿಂದ ೨೫-೦೭-೧೯೭೭) ಆತ್ಮಕತೆ ಬಿ.ಡಿ.ಜತ್ತಿಯವರ ಆತ್ಮಕತೆ - ನನಗೆ ನಾನೇ ಮಾದರಿ. ೧೯೧೨ ಜನನ ಭಾರತದ ರಾಷ್ಟ್ರಪತಿಗಳು ಭಾರತದ ಉಪರಾಷ್ಟ್ರಪತಿಗಳು ಕರ್ನಾಟಕದ ಮುಖ್ಯಮಂತ್ರಿಗಳು ಭಾರತದ ಪ್ರಸಿದ್ಧ ವ್ಯಕ್ತಿಗಳು ರಾಜಕಾರಣಿಗಳು ಭಾರತದ ಪ್ರಮುಖ ರಾಜಕಾರಣಿಗಳು ಕರ್ನಾಟಕದ ವಿಧಾನಸಭಾ ಸದಸ್ಯರುಕರ್ನಾಟಕ ರಾಜಕಾರಣಿಗಳು
2004
https://kn.wikipedia.org/wiki/%E0%B2%95%E0%B3%86%20%E0%B2%86%E0%B2%B0%E0%B3%8D%20%E0%B2%A8%E0%B2%BE%E0%B2%B0%E0%B2%BE%E0%B2%AF%E0%B2%A3%E0%B2%A8%E0%B3%8D
ಕೆ ಆರ್ ನಾರಾಯಣನ್
ಕೊಚೇರಿಲ್ ರಾಮನ್ ನಾರಾಯಣನ್ ಜುಲೈ ೨೫, ೧೯೯೭ - ಜುಲೈ ೨೪, ೨೦೦೨ರ ವರಗೆ ಭಾರತದ ರಾಷ್ಟ್ರಪತಿಯಾಗಿದ್ದರು. ಬಾಲ್ಯ ತಿರುವಾಂಕೂರು ರಾಜ್ಯದ ಪೆರುಂಥನಂ ಹಳ್ಳಿಯಲ್ಲಿ ೨೭ ಅಕ್ಟೋಬರ್ ೧೯೨೦ರಂದು ಜನಿಸಿದ ನಾರಾಯಣನ್ ವೈದ್ಯರಾದ ರಾಮನ್ ವೈದ್ಯರ್ ಮತ್ತು ಪಾಪಿಯಮ್ಮ ದಂಪತಿಗಳಿಗೆ೪ನೆಯ ಕೂಸು. ೪ ಫ಼ೆಬ್ರವರಿ ೧೯೨೧ರಂದು ಜನಿಸಿದ್ದರೂ, ಶಾಲಾ ದಾಖಲೆಗಳಲ್ಲಿ ೨೭ ಅಕ್ಟೋಬರ್ ೧೯೨೦ ಎಂದು ನಮೂದಿಸಲ್ಪಟ್ಟಿದೆ. ಶಿಕ್ಷಣ ಉಳವನೂರು ಸರ್ಕಾರಿ ಶಾಲೆ, ಕೊಟ್ಟಾಯಂ ಕಾಲೇಜುಗಳಲ್ಲಿ ಓದಿದ ನಾರಾಯಣನ್, ತಿರುವಾಂಕೂರು ವಿಶ್ವವಿದ್ಯಾಲಯದಲ್ಲಿ ಮೊದಲ ದರ್ಜೆಯಲ್ಲಿ ಇಂಗ್ಲೀಷ್ ಎಂ ಎ ಪದವಿ ಪಡೆದರು. ಮೊದಲ ದಲಿತ ಪದವೀಧರ ಎಂಬ ಹೆಗ್ಗಳಿಕೆ ನಾರಾಯಣನ್‌ರದ್ದು.ದಿಲ್ಲಿಯಲ್ಲಿ ಹಿಂದೂ ಪತ್ರಿಕೆಗೆ ವರದಿಗಾರನಾಗಿಯೂ (೧೯೪೪-೪೫) ಕೆಲಸಗೈದರು. ವಿದೇಶದಲ್ಲಿ ಓದು ಇವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿದ್ಯಾರ್ಥಿವೇತನ ನೆರವಿನಿಂದ ರಾಜ್ಯಶಾಸ್ತ್ರ ಅಧ್ಯಯನ ಮಾಡುವಾಗ ಹೆರಾಲ್ಡ್ ಲಾರ್ಸ್ಕಿರ ನೆಚ್ಚಿನ ಶಿಷ್ಯರಾಗಿದ್ದರು. ನಾರಾಯಣನ್‌ರಿಗೆ ೧೯೪೮ರಲ್ಲಿ ಲಾರ್ಸ್ಕಿ ಅಭಿಮಾನಪೂರ್ವಕವಾಗಿ ನೆಹರೂರಿಗೆ ಪರಿಚಯಪತ್ರವನ್ನು ಇತ್ತರು. ಅದನ್ನು ಓದಿ ಪ್ರಭಾವಿತರಾದ ನೆಹರೂ, ನಾರಾಯಣನ್‌ರನ್ನು ನೇರವಾಗಿ ಭಾರತೀಯ ವಿದೇಶಾಂಗ ಸೇವೆಗೆ ನೇಮಕ ಮಾಡಿದರು. ಭಾರತೀಯ ವಿದೇಶಾಂಗ ಸೇವೆ ಆರಂಭಿಸಿದರು ತನ್ನ ನೆಹರು ಆಡಳಿತದಲ್ಲಿ ಭಾರತೀಯ ವಿದೇಶಾಂಗ ಸೇವೆ ಸದಸ್ಯರಾಗಿ ಭಾರತದಲ್ಲಿ ವೃತ್ತಿ. ಜಪಾನ್, ಯುನೈಟೆಡ್ ಕಿಂಗ್ಡಮ್, ಥೈಲ್ಯಾಂಡ್, ಟರ್ಕಿ, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ರಾಯಭಾರಿಯಾಗಿ ಕಾರ್ಯ ಮತ್ತು "ದೇಶದ ಅತ್ಯುತ್ತಮ ರಾಯಭಾರಿ" ಎಂದು ನೆಹರೂ ಉಲ್ಲೇಖಿಸಲಾಗುತ್ತದೆ. ರಾಜಕೀಯ ನಾರಾಯಣನ್‌ ಇಂದಿರಾಗಾಂಧಿಯ ಮನವಿಯ ರಾಜಕೀಯಕ್ಕೆ ಪ್ರವೇಶಿಸಿ ಲೋಕಸಭೆಗೆ ಮೂರು ಸತತ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅಡಿಯಲ್ಲಿ ಕೇಂದ್ರ ಸಂಪುಟ ರಾಜ್ಯ ಸಚಿವ ಕಾರ್ಯನಿರ್ವಹಿಸಿದರು. ದಲಿತ ಸಮುದಾಯದ ಸದಸ್ಯ, ಹುದ್ದೆಗೆ -೧೯೯೨ ರಲ್ಲಿ ಒಂಬತ್ತನೇ ಉಪಾಧ್ಯಕ್ಷ ಆಯ್ಕೆಯಾದರು, ನಾರಾಯಣನ್ ಮೇಲೆ ೧೯೯೭ ರಲ್ಲಿ ಅಧ್ಯಕ್ಷಯಾಗಿ ಆಯ್ಕೆಯಾದರು. - ರಾಷ್ಟ್ರಪತಿ ನಾರಾಯಣನ್ ಹಲವಾರು ಆಧಾರಗಳ ಮತ್ತು ಹೆಚ್ಚಿನ ಸಾಂವಿಧಾನಿಕ ಕಚೇರಿ ವ್ಯಾಪ್ತಿಯನ್ನು ವಿಸ್ತರಿಸಿ ಸ್ವತಂತ್ರ ಮತ್ತು ಪ್ರತಿಷ್ಠಾಪನೆಯ ಅಧ್ಯಕ್ಷ ಪರಿಗಣಿಸಲಾಗಿದೆ. ಅವರು "ಸಂವಿಧಾನದ ನಾಲ್ಕು ಮೂಲೆಗಳಲ್ಲಿ ಒಳಗೆ" ಕೆಲಸ ಮಾಡಿದ ಒಂದು "ಕೆಲಸ ಅಧ್ಯಕ್ಷ" ಎಂದು ಬಣ್ಣಿಸಿಕೊಂಡಿದ್ದಾರೆ; ಮಿಡ್ವೇ ನೇರ ಶಕ್ತಿ ಮತ್ತು ಪ್ರಶ್ನೆ ಅಥವಾ ವಿವೇಚನೆ ಇಲ್ಲದೆ ಸರ್ಕಾರದ ನಿರ್ಧಾರಗಳನ್ನು ಸೂಚಿಸಿತು ಒಬ್ಬ "ರಬ್ಬರ್ ಸ್ಟ್ಯಾಂಪ್ಗಳನ್ನು ಅಧ್ಯಕ್ಷ" ಹೊಂದಿರುವ ಒಂದು "ಕಾರ್ಯನಿರ್ವಾಹಕ ಅಧ್ಯಕ್ಷ" ನಡುವೆ ಏನೋ. ಅವರು ಅಧ್ಯಕ್ಷರಾಗಿ ತಮ್ಮ ವಿವೇಚನೆಗೆ ಅಧಿಕಾರವನ್ನು ಬಳಸಲಾಗುತ್ತದೆ ಮತ್ತು ಸೇರಿದಂತೆ ಅನೇಕ ಸಂದರ್ಭಗಳಲ್ಲಿ ಸಮಾವೇಶ ಹಾಗೂ ಪೂರ್ವನಿದರ್ಶನವನ್ನು ವಿಪಥವಾಗಿವೆ - ಆದರೆ ಸೀಮಿತವಾಗಿಲ್ಲ - ರಾಜ್ಯ ಸರಕಾರವು ಔಟ್ ಮತ್ತು ಸಲಹೆ ಇಲ್ಲ ರಾಷ್ಟ್ರಪತಿ ಆಡಳಿತ ಹೇರುವ, ಒಂದು ತೂಗುಯ್ಯಾಲೆಯ ಸಂಸತ್ತನ್ನು ಪ್ರಧಾನಿ ನೇಮಕ ಕೇಂದ್ರ ಸಚಿವ ಸಂಪುಟ ಮತ್ತು ಕಾರ್ಗಿಲ್ ಸಂಘರ್ಷದ ಸಂದರ್ಭದಲ್ಲಿ. ಭಾರತೀಯ ಸ್ವಾತಂತ್ರ್ಯ ಗೋಲ್ಡನ್ ಜುಬಿಲಿ ಆಚರಣೆಯ ಅಧ್ಯಕ್ಷತೆ ಮತ್ತು ೧೯೯೮ ದೇಶದ ಸಾರ್ವತ್ರಿಕ ಚುನಾವಣೆಯಲ್ಲಿ, ಅವರು ಮತ್ತೊಂದು ಹೊಸ ದೃಷ್ಟಾಂತವಾಗಿ, ಯಾವಾಗ ಕಛೇರಿಯಲ್ಲಿ ಮೊಟ್ಟ ಮೊದಲ ಭಾರತೀಯ ಅಧ್ಯಕ್ಷರಾದರು. ಉಲ್ಲೇಖಗಳು ರಾಯಭಾರಿಗಳು ೧೯೯೭ ಜನನ ೨೦೦೨ ನಿಧನ
2019
https://kn.wikipedia.org/wiki/%E0%B2%85%E0%B2%B2%E0%B3%86%E0%B2%A8%E0%B3%8D%20%E0%B2%9F%E0%B3%8D%E0%B2%AF%E0%B3%82%E0%B2%B0%E0%B2%BF%E0%B2%82%E0%B2%97%E0%B3%8D
ಅಲೆನ್ ಟ್ಯೂರಿಂಗ್
ಆಲನ್ ಟ್ಯುರಿಂಗ್ ೨೦ನೆ ಶತಮಾನದ ಮೊದಲ ಭಾಗದಲ್ಲಿ ಇಂಗ್ಲಾಂಡ್ ನಲ್ಲಿ ನೆಲೆಸಿದ್ದ ಗಣಿತ ಶಾಸ್ತ್ರಜ್ನ. ೧೯೦೦ ರಲ್ಲಿ ಜರ್ಮನಿಯ ಡೇವಿಡ್ ಹಿಲ್ಬರ್ಟ್ ಎಂಬಾತನ "ನಿರ್ಣಯ ಪ್ರಶ್ನೆ" (decision problem, Entscheidungsproblem) ಗೆ ಉತ್ತರ ನೀಡುವಂತೆ ೧೯೩೬ ರಲ್ಲಿ ಟ್ಯುರಿಂಗ್ ತನ್ನ "ಟ್ಯುರಿಂಗ್ ಯಂತ್ರ" ವನ್ನು ನಿರ್ಮಿಸಿದ. ಈಗ ಟ್ಯುರಿಂಗ್ ಯಂತ್ರವನ್ನು "ಗಣೀಕೃತಗೊಳಿಸಬಲ್ಲ ಸೂತ್ರ" (computable algorithms)ಗಳ ಆಧಾರ ಎಂದು ಭಾವಿಸಲಾಗಿದೆ. ಯಾವುದೆ ಸಮಸ್ಯೆಯನ್ನು ಒಂದು ಗಣಕ ಯಂತ್ರದ ಮೂಲಕ ಬಿಡಿಸಬಹುದಾದರೆ, ಅದಕ್ಕೆ ಒಂದು ಸೂಕ್ತ ಟ್ಯುರಿಂಗ್ ಯಂತ್ರವನ್ನು ಸಹ ಸೃಷ್ಟಿಸಬಹುದು. ಟ್ಯುರಿಂಗ್ ಯಂತ್ರ ಯಾವ ಸಮಸ್ಯೆಯನ್ನು ಬಿಡಿಸಲಾಗದೊ, ಆ ಸಮಸ್ಯೆಯನ್ನು ಯಾವುದೇ ಗಣಕ ಯಂತ್ರದಿಂದ ಸಹ ಬಿಡಿಸಲು ಅಸಾಧ್ಯ. ಇಂತಹ ಸಮಸ್ಯೆ ಗಳನ್ನು "ಅನಿರ್ಣಾಯಕ ಸಮಸ್ಯೆ" (undecidable problems) ಎಂದು ಕರೆಯಲಾಗುತ್ತದೆ. ನಿಮ್ಮ ಗಣಕ ಯಂತ್ರ ಎಷ್ಟೇ ಬಲಶಾಲಿಯಾಗಿರಲಿ, ಅನಿರ್ಣಾಯಕ ಸಮಸ್ಯೆಗಳನ್ನು ಬಿಡಿಸಲು ಅಸಾಧ್ಯ. ಮರಣ 8 ಜೂನ್ 1954, ಟ್ಯೂರಿಂಗ್ ತಂದೆಯ ಶುದ್ಧ ಅವನನ್ನು ಮೃತ; ತಾನು ಹಿಂದಿನ ದಿನ ನಿಧನರಾದರು. ಒಂದು ಗಣಕಯಂತ್ರ ಗಣಕಯಂತ್ರ ಅಗ್ರಗಾಮಿಗಳು [[ವರ್ಗ:ಗಣಿತಜ್ಞರು]
2021
https://kn.wikipedia.org/wiki/%E0%B2%AF%E0%B3%81%E0%B2%A8%E0%B2%BF%E0%B2%95%E0%B3%8D%E0%B2%B8%E0%B3%8D
ಯುನಿಕ್ಸ್
ಯುನಿಕ್ಸ್ ಗಣಕಯಂತ್ರದ ಒಂದು ಕಾರ್ಯನಿರ್ವಹಣ ಸಾಧನ(Operating System). ಇದನ್ನು ೧೯೬೯ನಲ್ಲಿ ಎಟಿ ಏಂಡ್ ಟಿ ಕಂಪನಿಯ ಕಾರ್ಮಿಕರ ಒಂದು ತಂಡ ಅಮೆರಿಕಾದ ಬೆಲ್ ಲಾಬ್ ನಲ್ಲಿ ರಚಿಸಿದರು. ಈ ತಂಡದ ಪ್ರಮುಖರು ಕೆನ್ ಥಾಮ್ಸನ್, ಡೆನ್ನಿಸ್ ರಿಚ್ಚಿ, ದೊಗ್ಲೆಸ್ ಮೆಕ್ಲ್ ರಾಯ್ ಮತ್ತು ಜೊಒಸ್ಸನ್ನ. ಯುನಿಕ್ಸ್ ವ್ಯವಸ್ಥೆಯು ಅಂದಿನಿಂದ ಹಲವು ಬೆಳವಣಿಗೆಯನ್ನು ಕಂಡು ಇಂದು ಪ್ರಪಂಚದ ಪ್ರಮುಖ ಕಾರ್ಯಕಾರೀ ವ್ಯವಸ್ಥೆಯಾಗಿದೆ. ಯುನಿಕ್ಸ್ ಟ್ರೇಡ್ ಮಾರ್ಕ್ ಇಂದು "ದ ಓಫನ್ ಗ್ರೂಪ್" ಎಂಬ ತಂಡದ ಆಸ್ತಿ. "Single Unix Specification" ವಿವಿಧ ಯುನಿಕ್ಸ್ ವ್ಯವಸ್ಥೆಗಳನ್ನು ಪರಿಶೀಲಿಸಿ ಅವುಗಳಿಗೆ ಟ್ರೇಡ್ ಮಾರ್ಕ್ ಬಳಸುವ ಸ್ವಾತಂತ್ರ್ಯ ನೀಡುತ್ತದೆ. ಲೈನೆಕ್ಸ್ ಎಂಬುದು ಯುನಿಕ್ಸ್ ನ ಉಚಿತ ವಿತರಣೆ. ಲೈನೆಕ್ಸ್ ಇಂದು ಅಧ್ಯಯನಕ್ಕಾಗಿ ಬಳಸಲಾಗುತ್ತಿದೆ. ಯುನಿಕ್ಸ್ ಸರ್ವರ್ ಮತ್ತು ವರ್ಕ್ ಸ್ಟೇಷನ್ ಗಳಲ್ಲಿಯೂ ಸಮರ್ಥವಾಗಿ ಚಲಿಸಬಲ್ಲದು. ಗಣಕಯಂತ್ರ ಕಾರ್ಯನಿರ್ವಹಣ ಸಾಧನ
2023
https://kn.wikipedia.org/wiki/%E0%B2%97%E0%B3%82%E0%B2%97%E0%B2%B2%E0%B3%8D
ಗೂಗಲ್
ಗೂಗಲ್ ಇಂಕ್ ಇಂಟರ್ನೆಟ್ ಸಂಬಂಧಿತ ಸೇವೆಗಳನ್ನು ಮತ್ತು ಉತ್ಪನ್ನಗಳನ್ನು ಒದಗಿಸುವ ವಿಶೇಷ ಅಮೆರಿಕನ್ ಬಹುರಾಷ್ಟ್ರೀಯ ನಿಗಮವಾಗಿದೆ. ಈ ಸಂಸ್ಥೆಯು ಹುಡುಕಾಟ, ಕ್ಲೌಡ್ ಕಂಪ್ಯೂಟಿಂಗ್, ತಂತ್ರಾಂಶ ಮತ್ತು ಆನ್ಲೈನ್ ಜಾಹೀರಾತು ತಂತ್ರಜ್ಞಾನಗಳು ಒಳಗೊಂಡಿವೆ. ಇದರ ಲಾಭ ಬಹಳಷ್ಟು ಆಡ್ ವರ್ಡ್ಸ್ ನಿಂದ ಪಡೆಯಲು ಅವರು ಡಿ ಸಮಯದಲ್ಲಿ ಗೂಗಲ್ ಲ್ಯಾರಿ ಪೇಜ್ ಮತ್ತು ಸರ್ಜೆ ಬ್ರಿನ್ ಸ್ಥಾಪಿಸಿದರು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು. ಒಟ್ಟಾಗಿ ಅವರು ತನ್ನ ಪಾಲನ್ನು 16 ರಷ್ಟು ಸ್ವಂತ. ಅವರು ಸೆಪ್ಟೆಂಬರ್ 4, 1998 ರಂದು ಒಂದು ಖಾಸಗಿ ಕಂಪನಿ ಗೂಗಲ್ ಸಂಘಟಿತ. ಆರಂಭಿಕ ಸಾರ್ವಜನಿಕ ಷೇರು ಬಿಡುಗಡೆ ಆಗಸ್ಟ್ 19, 2004 ರಂದು ಆರಂಭಿಸಲಾಯಿತು. ಪ್ರಾರಂಭದಿಂದಲೇ ತನ್ನ ಧ್ಯೇಯವು "ವಿಶ್ವದ ಮಾಹಿತಿ ಸಂಘಟಿಸಲು ಮತ್ತು ಇದು ಸಾರ್ವತ್ರಿಕವಾಗಿ ಸುಲಭವಾಗಿ ಮತ್ತು ಉಪಯುಕ್ತ ಮಾಡಲು", ಮತ್ತು ಅದರ ಅನಧಿಕೃತ ಘೋಷಣೆ "ದುಷ್ಟ ಬೇಡಿ" ಎಂಬುದಾಗಿತ್ತು. 2006ರಲ್ಲಿ ಗೂಗಲ್ ಕ್ಯಾಲಿಫೋರ್ನಿಯಾದ ಮೌಂಟನ್‌ವ್ಯೂ‌ನಲ್ಲಿ ಪ್ರಧಾನ ತೆರಳಿದರು. ಏಕೀಕರಣಕ್ಕಾಗಿ ರಿಂದ ಕ್ಷಿಪ್ರ ಬೆಳವಣಿಗೆಯನ್ನು ಉತ್ಪನ್ನಗಳು, ಸ್ವಾಧೀನಗಳು, ಮತ್ತು ಗೂಗಲ್ನ ಪ್ರಮುಖ ಹುಡುಕಾಟ ಎಂಜಿನ್ ಮೀರಿ ಪಾಲುದಾರಿಕೆ ಒಂದು ಸರಣಿ ಹಾಕಿತು. ಇದು ಇಮೇಲ್, ಒಂದು ಆಫೀಸ್ ಸೂಟ್, ಮತ್ತು ಸಾಮಾಜಿಕ ನೆಟ್ವರ್ಕಿಂಗ್ ಸೇರಿದಂತೆ ಆನ್ಲೈನ್ ಉತ್ಪಾದನೆ ಸಾಫ್ಟ್ವೇರ್ ನೀಡುತ್ತದೆ. ಡೆಸ್ಕ್ಟಾಪ್ ಉತ್ಪನ್ನಗಳು ವೆಬ್ ಬ್ರೌಸಿಂಗ್, ಸಂಘಟಿಸುವ ಹಾಗೂ ಸಂಪಾದಿಸುವ ಫೋಟೋಗಳನ್ನು, ಮತ್ತು ಇನ್ಸ್ಟೆಂಟ್ ಮೆಸೇಜಿಂಗ್ ಅರ್ಜಿಗಳನ್ನು ಸೇರಿವೆ. ಕಂಪನಿ ಆಂಡ್ರಾಯ್ಡ್ ಮೊಬೈಲ್ ಆಪರೇಟಿಂಗ್ ವ್ಯವಸ್ಥೆಯ ಅಭಿವೃದ್ಧಿ ಮತ್ತು ಒಂದು Chromebook ಎಂದು ನೆಟ್ಬುಕ್ ಒಂದು ವಿಶೇಷ ಮಾದರಿ ಬ್ರೌಸರ್ ಕೇವಲ ಗೂಗಲ್ ಕ್ರೋಮ್ ಒಎಸ್ ಕಾರಣವಾಗುತ್ತದೆ. ಗೂಗಲ್ ಸಂಪರ್ಕ ಯಂತ್ರಾಂಶ ನೊಳಕ್ಕೆ ಸಾಗಿದ್ದು, ಅದರ ಉನ್ನತ ನೆಕ್ಸಸ್ ಸಾಧನಗಳ ಉತ್ಪಾದನೆಯಲ್ಲಿ ಪ್ರಮುಖ ಎಲೆಕ್ಟ್ರಾನಿಕ್ಸ್ ತಯಾರಕರೊಂದಿಗೆ ಪಾಲುದಾರರು ಮತ್ತು ಮೇ 2012 ರಲ್ಲಿ ಮೊಟೊರೊಲಾ ಮೊಬಿಲಿಟಿ ಸ್ವಾಧೀನಪಡಿಸಿಕೊಂಡಿತು. 2012 ರಲ್ಲಿ, ಒಂದು ಫೈಬರ್ ಆಪ್ಟಿಕ್ ಮೂಲಸೌಕರ್ಯ ಒಂದು ಗೂಗಲ್ ಫೈಬರ್ ಬ್ರಾಡ್ಬ್ಯಾಂಡ್ ಸೇವೆ ಸುಲಭಗೊಳಿಸಲು ಕಾನ್ಸಾಸ್ ಸಿಟಿ ರಲ್ಲಿ ಸ್ಥಾಪಿಸಲಾಯಿತು. ನಿಗಮದ ವಿಶ್ವದಾದ್ಯಂತ ದಶಮಾಂಶ ಕೇಂದ್ರಗಳಲ್ಲಿ ಒಂದಕ್ಕಿಂತ ಹೆಚ್ಚು ಮಿಲಿಯನ್ ಸರ್ವರ್ಗಳನ್ನು ಚಾಲನೆ ಮಾಡಲು ಅಂದಾಜಿಸಲಾಗಿದೆ ಮತ್ತು ಪ್ರತಿ ದಿನ ಬಳಕೆದಾರ ರಚಿಸಿದ ದತ್ತಾಂಶದ ಬಿಲಿಯನ್ ಮೇಲೆ ಹುಡುಕಾಟ ವಿನಂತಿಗಳನ್ನು ಮತ್ತು ಸುಮಾರು ಇಪ್ಪತ್ತನಾಲ್ಕು ಪೇಟಬೈಟ್ಗಳು ಪ್ರಕ್ರಿಯೆಗೊಳಿಸಲು. ವಿಶ್ವದಲ್ಲೇ ಅತಿ ಹೆಚ್ಚು ಸಂದರ್ಶಿತ ವೆಬ್ಸೈಟ್ ಮಾಹಿತಿ ಡಿಸೆಂಬರ್ 2012 ಅಲೆಕ್ಸಾ ಪಟ್ಟಿ google.com ರಲ್ಲಿ. ಟಾಪ್ ನೂರು ಇತರ ಭಾಷೆಗಳು ಆಕೃತಿ, ಹಲವಾರು ಗೂಗಲ್ ಸೈಟ್ಗಳಲ್ಲಿ ನಂತಹ ಯೂಟ್ಯೂಬ್ ಮತ್ತು ಬ್ಲಾಗರ್ ಹಲವಾರು ಇತರ ಗೂಗಲ್ ಸ್ವಾಮ್ಯದ ತಾಣಗಳು ಹಾಗೆ. ಗೂಗಲ್ BrandZ ಬ್ರ್ಯಾಂಡ್ ಇಕ್ವಿಟಿ ಡೇಟಾಬೇಸ್ ಎರಡನೇ ಸ್ಥಾನದಲ್ಲಿದೆ. ಇದರ ಮಾರುಕಟ್ಟೆಯ ಪ್ರಭುತ್ವವನ್ನು ಹಕ್ಕುಸ್ವಾಮ್ಯ, ಸೆನ್ಸಾರ್ಶಿಪ್, ಮತ್ತು ಗೌಪ್ಯತೆ ಸೇರಿದಂತೆ ಸಮಸ್ಯೆಗಳನ್ನು ಪ್ರತಿ ಟೀಕೆಗೆ ಕಾರಣವಾಗಿದೆ.ಆದರೆ ಇತ್ತೀಚೆಗಷ್ಟೇ www.ಗೂಗಲ್.com ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯ ಪ್ರವೀಣ್ ಪಟೇಲ್ ಎಂಬುವವರಿಗೆ ಸೇರಿದೆ. ಗೂಗಲ್ ಇತಿಹಾಸ ಕ್ಯಾಲಿಫೋರ್ನಿಯಾದ ಸ್ಟ್ಯಾನ್ಫೋರ್ಡ್ ವಿದ್ಯಾರ್ಥಿಗಳಾದ ಲ್ಯಾರಿ ಪೇಜ್ ಮತ್ತು ಸರ್ಜೆ ಬ್ರಿನ್ ಎಂಬ ಪಿ.ಹೆಚ್.ಡಿ. ವಿದ್ಯಾರ್ಥಿಗಳ ಸಂಶೋಧನೆಯ ಫಲವಾಗಿದೆ. ಇವರ ಈ ಪ್ರೊಜೆಕ್ಟ್ 2002 ರ ಮಾರ್ಚ್ ನಲ್ಲಿ ಆರಂಭವಾಯಿತು. ಸಾಂಪ್ರದಾಯಿಕ ಹುಡುಕಾಟ ಎಂಜಿನ್ ಹುಡುಕಾಟ ಪದಗಳನ್ನು ಪುಟ ಕಾಣಿಸಿಕೊಂಡರು ಎಷ್ಟು ಬಾರಿ ಎಣಿಸುವ ಮೂಲಕ ಫಲಿತಾಂಶಗಳನ್ನು ಸ್ಥಾನ, ಎರಡು ಜಾಲತಾಣಗಳಲ್ಲಿ ಸಂಬಂಧಗಳನ್ನು ವಿಶ್ಲೇಷಿಸಿ ಒಂದು ಉತ್ತಮ ವ್ಯವಸ್ಥೆ ಬಗ್ಗೆ ಸಿದ್ಧಾಂತ. ಈ ಹೊಸ ತಂತ್ರಜ್ಞಾನವನ್ನು ಪೇಜ್ರ್ಯಾಂಕ್ ಎಂದು; ಇದು ಪುಟಗಳ ಸಂಖ್ಯೆಯಿಂದ ಒಂದು ವೆಬ್ಸೈಟ್ ಪ್ರಸ್ತುತತೆ ನಿರ್ಧರಿಸುತ್ತದೆ, ಮತ್ತು ಆ ಪುಟಗಳು ಪ್ರಾಮುಖ್ಯತೆಯನ್ನು, ಮೂಲ ಸೈಟ್ ಮರಳಿ ಸಂಪರ್ಕಿಸುತ್ತದೆ. ರಾಬಿನ್ ಲಿ ವಿನ್ಯಾಸಗೊಳಿಸಿದ IDD ಮಾಹಿತಿ ಸೇವೆಗಳು ನಿಂದ "ರಾಂಕ್ ಡೆಕ್ಸ್" ಎಂಬ ಒಂದು ಸಣ್ಣ ಹುಡುಕಾಟ ಎಂಜಿನ್ ಈಗಾಗಲೇ ಸೈಟ್ ಅಂಕ ಮತ್ತು ಪುಟ ಶ್ರೇಣೀಕೃತವಾಗಲು ಇದೇ ತಂತ್ರ ಅನ್ವೇಷಿಸುವ, 1996 ರಿಂದ, ಆಗಿತ್ತು. ಲಿ ಚೀನಾ ರಲ್ಲಿ ಬೈದು ಸ್ಥಾಪಿಸಿದಾಗ ರಾಂಕ್ ಡೆಕ್ಸ್ ತಂತ್ರಜ್ಞಾನ ನಂತರ ಪೇಟೆಂಟ್ ಮತ್ತು ಬಳಸಲಾಗುತ್ತದೆ. ವ್ಯವಸ್ಥೆಯ ಒಂದು ಸೈಟ್ ಪ್ರಾಮುಖ್ಯತೆಯನ್ನು ಅಂದಾಜು ಮಾಡಲು ಬ್ಯಾಕ್ಲಿಂಕ್ ಪರೀಕ್ಷಿಸಿದ್ದು ಏಕೆಂದರೆ ಪೇಜ್ ಮತ್ತು ಬ್ರಿನ್ ಮೂಲತಃ, ತಮ್ಮ ಹೊಸ ಸರ್ಚ್ ಇಂಜಿನ್ "ಬ್ಯಾಕ್ರಬ್" ಅಡ್ಡಹೆಸರು. ಅಂತಿಮವಾಗಿ, ಅವರು "ಗೂಗಾಲ್" ಮಾಹಿತಿಯನ್ನು ಪ್ರಮಾಣದಲ್ಲಿ, ಅಂದರೆ ಪದದ ತಪ್ಪು ಹುಟ್ಟಿದೆ, ಗೂಗಲ್ಗೆ ಹೆಸರು ಬದಲಾಯಿಸಲಾಯಿತು. ಮೂಲತಃ, ಗೂಗಲ್ ಡೊಮೇನ್ಗಳ google.stanford.edu ಮತ್ತು z.stanford.edu ಜೊತೆ, ಸ್ಟ್ಯಾನ್ಫೋರ್ಡ್ ಯೂನಿವರ್ಸಿಟಿ ವೆಬ್ಸೈಟ್ ಅಡಿಯಲ್ಲಿ ನಡೆಯಿತು. ಗೂಗಲ್ ಡೊಮೇನ್ ಹೆಸರನ್ನು ಸೆಪ್ಟೆಂಬರ್ 15, 1997 ರಂದು ನೋಂದಾಯಿಸಲಾಗುತ್ತಿತ್ತು ಮತ್ತು ಕಂಪನಿ ಸೆಪ್ಟೆಂಬರ್ 4, 1998 ರಲ್ಲಿ ಸಂಘಟಿತವಾಯಿತು. ಇದು ನೆಲೆಗೊಂಡಿತ್ತು ಒಂದು ಸ್ನೇಹಿತನ (ಸೂಸನ್ Wojcicki) ಮೆನ್ಲೋ ಪಾರ್ಕ್, ಕ್ಯಾಲಿಫೋರ್ನಿಯಾದ ಗ್ಯಾರೇಜ್. ಕ್ರೆಗ್ ಸಿಲ್ವರ್ಸ್ಟೇನ್ ಸ್ಟಾನ್ಫೋರ್ಡ್ ಒಂದು ಸಹವರ್ತಿ ಪಿಎಚ್ಡಿ ವಿದ್ಯಾರ್ಥಿ, ಮೊದಲ ಉದ್ಯೋಗಿ ನೇಮಕಗೊಂಡನು. ಮೇ 2011 ರಲ್ಲಿ, ಗೂಗಲ್ ಗೆ ಮಾಸಿಕ ವಿಶಿಷ್ಟ ಸಂದರ್ಶಕರ ಸಂಖ್ಯೆ ಮೊದಲ ಬಾರಿಗೆ ಒಂದು ಶತಕೋಟಿ, ಮೇ 2010 ರಿಂದ 8.4 ಪ್ರತಿಶತ ಏರಿಕೆ (931 ಮಿಲಿಯನ್) ಮೀರಿಸಿತು. ಜನವರಿ 2013 ರಲ್ಲಿ, ಗೂಗಲ್, 2012 ರ ವರ್ಷದಲ್ಲಿ ವಾರ್ಷಿಕ ಆದಾಯ $ 50 ಬಿಲಿಯನ್ ಗಳಿಸಿದ ಘೋಷಿಸಿತು. ಈ $ 38 ಬಿಲಿಯನ್ ತಮ್ಮ 2011 ಒಟ್ಟು ಅಗ್ರ ಕಂಪನಿಯು ಈ ಸಾಧನೆ ತಲುಪಿತು ಮೊದಲ ಬಾರಿಗೆ. ಕೇಂದ್ರ ಕಚೇರಿ :- ಕ್ಯಾಲಿಫೋರ್ನಿಯಾದ ಸ್ಟ್ಯಾನ್ಫೋರ್ಡ್. ಸ್ಥಾಪನೆ :- ಸೆಪ್ಟೆಂಬರ್ ೪, ೧೯೯೮ ಸ್ಥಾಪಕರು :- ಲಾರಿ ಪೇಜ್, ಸರ್ ಜೇ ಬ್ರಿನ್ ಈತ ಹುಟ್ಟಿದ್ದು ಮಾಚ್೯ 26, 1973ರಂದು. ಈತ ಗಣಕಯಂತ್ರ ವಿಜ್ಞಾನಿ ಮತ್ತು ಅಂತರ್ ಜಾಲ ಉದ್ಯಮಿ. ಇವರು ೧೯೯೮ರ ಸಪ್ಟೇಮರ್ ೪ರಂದು ಗೂಗಲ್ ಸ್ಥಾಪನೆ ಮಾಡಿದರು. ಉದ್ಯೋಗಿಗಳು :- ೫೩೫೪೬(೨೦೧೨/೪) ಉತ್ಪನ್ನಗಳು ಮತ್ತು ಸೇವೆಗಳು ಶೋಧಕ ಯಂತ್ರ ಗೂಗಲ್ ಹುಡುಕಾಟ, ಅಂತರಜಾಲ ಹುಡುಕಾಟ ಯಂತ್ರ, ಕಂಪನಿಯ ಅತ್ಯಂತ ಜನಪ್ರಿಯ ಸೇವೆಯಾಗಿದೆ. ನವೆಂಬರ್ 2009 ರಲ್ಲಿ ಕಾಮ್ಸ್ಕೋರ್ ಪ್ರಕಟಿಸಿದ ಮಾರುಕಟ್ಟೆ ಸಂಶೋಧನೆ ಪ್ರಕಾರ, ಗೂಗಲ್ 65.6% ನಷ್ಟಿರುವ ಒಂದು ಮಾರುಕಟ್ಟೆ ಪಾಲನ್ನು ಹೊಂದಿದೆ, ಯುನೈಟೆಡ್ ಸ್ಟೇಟ್ಸ್ ಮಾರುಕಟ್ಟೆಯಲ್ಲಿ ಪ್ರಬಲ ಸರ್ಚ್ ಎಂಜಿನ್ ಆಗಿದೆ. ಬಳಕೆದಾರರು ಅವರು ಕೀವರ್ಡ್ಗಳನ್ನು ಮತ್ತು ನಿರ್ವಾಹಕರು ಬಳಕೆಯ ಮೂಲಕ ಆಸೆ ಮಾಹಿತಿ ಹುಡುಕಬಹುದು ಆದ್ದರಿಂದ ಗೂಗಲ್ ಸೂಚಿಕೆಗಳನ್ನು ವೆಬ್ ಪುಟಗಳ ಶತಕೋಟಿ. ಅದರ ಜನಪ್ರಿಯತೆಯ ಹೊರತಾಗಿಯೂ, ಇದು ಸಂಸ್ಥೆಗಳ ಸಂಖ್ಯೆ ಟೀಕೆಗೊಳಗಾದನು. 2003 ರಲ್ಲಿ, ನ್ಯೂಯಾರ್ಕ್ ಟೈಮ್ಸ್ ತನ್ನ ಸೈಟ್ ವಿಷಯವನ್ನು Google ನ ಹಿಡಿದಿಟ್ಟುಕೊಳ್ಳುವ ವಿಷಯವನ್ನು ತನ್ನ ಹಕ್ಕುಸ್ವಾಮ್ಯ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಗೂಗಲ್ನ ಅನುಕ್ರಮಣಿಕೆ ಬಗ್ಗೆ ದೂರು. ಈ ಸಂದರ್ಭದಲ್ಲಿ, ನೆವಾಡಾ ಯುನೈಟೆಡ್ ಸ್ಟೇಟ್ಸ್ ಡಿಸ್ಟ್ರಿಕ್ಟ್ ಕೋರ್ಟ್ ಫೀಲ್ಡ್ ವಿ ಗೂಗಲ್ ಮತ್ತು ಪಾರ್ಕರ್ ವಿ ಗೂಗಲ್ ಗೂಗಲ್ ಪರವಾಗಿ ಆಳ್ವಿಕೆ. ಇದಲ್ಲದೆ, ಪ್ರಕಟಣೆ 2600: ಹ್ಯಾಕರ್ ಕ್ವಾರ್ಟರ್ಲಿ ವೆಬ್ ದೈತ್ಯ ಹೊಸ ತ್ವರಿತ ಹುಡುಕಾಟ ವೈಶಿಷ್ಟ್ಯವನ್ನು ಅನೂಶೋಧಿಸಲು ಆಗುವುದಿಲ್ಲ ಎಂದು ಪದಗಳ ಪಟ್ಟಿ ಮಾಡಿದ್ದಾನೆ. ಗೂಗಲ್ ವಾಚ್ ಅವರು ಹೊಸ ವೆಬ್ಸೈಟ್ಗಳು ಮತ್ತು ಪರವಾಗಿ ಸ್ಥಾಪಿಸಲಾಯಿತು ಸೈಟ್ಗಳು ಭೇದಭಾವವನ್ನು ಎಂದು, ಗೂಗಲ್ ಪೇಜ್ರ್ಯಾಂಕ್ ಕ್ರಮಾವಳಿ ಟೀಕಿಸಿದ್ದಾರೆ. ಸೈಟ್ ಗೂಗಲ್ ಮತ್ತು ನ್ಯಾಷನಲ್ ಸೆಕ್ಯುರಿಟಿ ಏಜೆನ್ಸಿ (NSA) ಮತ್ತು ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ (CIA) ನಡುವಿನ ಸಂಬಂಧಗಳು ಇವೆ ಎಂದು ಬಂದಿದೆ. ಈ ಟೀಕೆಯ ಹೊರತಾಗಿಯು, ಮೂಲ ಹುಡುಕಾಟ ಎಂಜಿನ್ ಒಂದು ಇಮೇಜ್ ಹುಡುಕಾಟ ಎಂಜಿನ್, ಗೂಗಲ್ ನ್ಯೂಸ್ ಹುಡುಕು ಸೈಟ್, ಗೂಗಲ್ ನಕ್ಷೆಗಳು, ಮತ್ತು ಹೆಚ್ಚು ಸೇರಿದಂತೆ, ಜೊತೆಗೆ ನಿಗದಿತ ಸೇವೆಗಳನ್ನು ಹರಡಿತು. 2006 ರ ಆರಂಭದಲ್ಲಿ, ಕಂಪನಿಯ ಬಳಕೆದಾರರು ಅಪ್ಲೋಡ್ ಮಾಡಲು ಅವಕಾಶ ಇದು ಗೂಗಲ್ ವೀಡಿಯೊ, ಹುಡುಕು, ಬಿಡುಗಡೆ ಮತ್ತು ಇಂಟರ್ನೆಟ್ ವೀಡಿಯೊಗಳನ್ನು ವೀಕ್ಷಿಸಲು. ಗೂಗಲ್ ಸೇವೆಯ ಹುಡುಕಾಟ ವಿಷಯದ ಮೇಲೆ ಹೆಚ್ಚು ಗಮನ ಪರದೆಯಿಂದ 2009 ರಲ್ಲಿ, ಆದರೆ, ಗೂಗಲ್ ವೀಡಿಯೊ ಅಪ್ಲೋಡ್ ನಿಲ್ಲಿಸಲಾಯಿತು. ಕಂಪನಿಯನ್ನು ಗೂಗಲ್ ಡೆಸ್ಕ್ಟಾಪ್, ಒಬ್ಬರ ಕಂಪ್ಯೂಟರ್ಗೆ ಸ್ಥಳೀಯ ಕಡತಗಳನ್ನು ಹುಡುಕಲು ಬಳಸುವ ಎ ಡೆಸ್ಕ್ಟಾಪ್ ಹುಡುಕಾಟ ಅಪ್ಲಿಕೇಶನ್ ಅಭಿವೃದ್ಧಿ ಆದರೆ ಇದು 2011 ರಲ್ಲಿ ನಿಲ್ಲಿಸಲಾಯಿತು. ಹುಡುಕಾಟ ಗೂಗಲ್ನ ಅತ್ಯಂತ ಇತ್ತೀಚಿನ ಅಭಿವೃದ್ಧಿ ಯುನೈಟೆಡ್ ಸ್ಟೇಟ್ಸ್ ಪೇಟೆಂಟ್ ಮತ್ತು ಪೇಟೆಂಟ್ ಮತ್ತು ಟ್ರೇಡ್ ಮಾರ್ಕ್ ಬಗ್ಗೆ ಮಾಹಿತಿ ಉಚಿತ ಪ್ರವೇಶವನ್ನು ಒದಗಿಸುತ್ತದೆ ಗೂಗಲ್ ಸ್ವಾಮ್ಯಗಳು, ರಚಿಸಲು ಟ್ರೇಡ್ಮಾರ್ಕ್ ಆಫೀಸ್ ತನ್ನ ಸಹಯೋಗವನ್ನು ಹೊಂದಿದೆ. ಹೆಚ್ಚು ವಿವಾದಾತ್ಮಕ ಹುಡುಕು ಸೇವೆಗಳು ಗೂಗಲ್ ಆತಿಥೇಯರು ಒಂದು ಗೂಗಲ್ ಪುಸ್ತಕಗಳು. ಕಂಪನಿ ಅವಕಾಶ ಅಲ್ಲಿ ತನ್ನ ಹೊಸ ಪುಸ್ತಕ ಹುಡುಕಾಟ ಎಂಜಿನ್ ಒಳಗೆ, ಪುಸ್ತಕಗಳು ಮತ್ತು ಅಪ್ಲೋಡ್ ಸೀಮಿತ ಮುನ್ನೋಟಗಳು, ಮತ್ತು ಪೂರ್ಣ ಪುಸ್ತಕಗಳು ಸ್ಕ್ಯಾನಿಂಗ್ ಆರಂಭಿಸಿದರು. ಲೇಖಕರು ಗಿಲ್ಡ್, 8,000 ಅಮೇರಿಕಾದ ಲೇಖಕರು ಪ್ರತಿನಿಧಿಸುವ ಎ ಗುಂಪು, ಈ ಸೇವೆಯನ್ನು 2005 ರ ಗೂಗಲ್ ವಿರುದ್ಧ ನ್ಯೂಯಾರ್ಕ್ ಸಿಟಿ ಫೆಡರಲ್ ನ್ಯಾಯಾಲಯದಲ್ಲಿ ಎ ಕ್ಲಾಸ್ ಆಕ್ಷನ್ ದಾವೆಯನ್ನು ಹೂಡಿತು. ಗೂಗಲ್ ಪುಸ್ತಕಗಳು ಬಗ್ಗೆ ಹಕ್ಕುಸ್ವಾಮ್ಯ ಕಾನೂನುಗಳು ಎಲ್ಲಾ ಅಸ್ತಿತ್ವದಲ್ಲಿರುವ ಮತ್ತು ಐತಿಹಾಸಿಕ ಅನ್ವಯಗಳೊಂದಿಗೆ ಅನುಸರಣೆ ಎಂದು ಉತ್ತರಿಸಿದರು. ಗೂಗಲ್ ಅಂತಿಮವಾಗಿ ಅಮೇರಿಕಾದ, ಬ್ರಿಟನ್, ಆಸ್ಟ್ರೇಲಿಯಾ, ಮತ್ತು ಕೆನಡಾದಿಂದ ಪುಸ್ತಕಗಳು ತನ್ನ ಸ್ಕ್ಯಾನ್ ಸೀಮಿತಗೊಳಿಸಲು 2009 ರಲ್ಲಿ ಎ ಪರಿಷ್ಕೃತ ಒಪ್ಪಂದಕ್ಕೆ.. ಇದಲ್ಲದೆ, ಪ್ಯಾರಿಸ್ ಸಿವಿಲ್ ನ್ಯಾಯಾಲಯವು ತನ್ನ ದತ್ತಸಂಚಯದಿಂದ ಲಾ ಮಾರ್ಟಿನೇರ್ (ಎಡಿಶನ್ಸ್ ಡು ಸೆವಿಲ್) ಕೃತಿಗಳಲ್ಲಿ ತೆಗೆದು ಅದನ್ನು ಕೇಳುವ, 2009 ರ ಕೊನೆಯಲ್ಲಿ ಗೂಗಲ್ ವಿರುದ್ಧ ಆಳ್ವಿಕೆ. Amazon.com ಜೊತೆಗೆ ಸ್ಪರ್ಧೆಯಲ್ಲಿ, ಗೂಗಲ್ ಹೊಸ ಪುಸ್ತಕಗಳ ಡಿಜಿಟಲ್ ಆವೃತ್ತಿಗಳನ್ನು ಮಾರುತ್ತದೆ. ಜುಲೈ 21, 2010 ರಂದು, ಹೊಸದಾಗಿ ಬಿಂಗ್ ಪ್ರತಿಕ್ರಿಯೆಯಾಗಿ, Google ನಲ್ಲಿ ಗುರುತಿಸಿದಾಗ ದೊಡ್ಡದು ಎಂದು ಚಿಕ್ಕಚಿತ್ರಗಳನ್ನು ಒಂದು ಸ್ಟ್ರೀಮಿಂಗ್ ಸರಣಿಯನ್ನು ಪ್ರದರ್ಶಿಸಲು ತನ್ನ ಇಮೇಜ್ ಹುಡುಕಾಟ ಅಪ್ಡೇಟ್ಗೊಳಿಸಲಾಗಿದೆ. ವೆಬ್ ಹುಡುಕಾಟ ಇನ್ನೂ ಜುಲೈ 23, 2010 ರಂದು, ಪುಟ ರೂಪದಲ್ಲಿ ಪ್ರತಿ ಬ್ಯಾಚ್ ಕಂಡುಬರುವ ಸಹ, ಕೆಲವು ಇಂಗ್ಲೀಷ್ ಪದಗಳನ್ನು ನಿಘಂಟು ವ್ಯಾಖ್ಯಾನಗಳು ವೆಬ್ ಹುಡುಕಾಟಕ್ಕಾಗಿ ಸಂಪರ್ಕ ಫಲಿತಾಂಶಗಳು ಮೇಲೆ ಕಾಣಿಸಿಕೊಳ್ಳಲು ಪ್ರಾರಂಭಿಸಿದವು. ಗೂಗಲ್ನ ಗಣನೆಯು ಬಹುಶಃ ಸ್ಪನ್ ವಿಷಯವನ್ನು ತೆಗೆದುಹಾಕಲು N-ಗ್ರಾಂ ಬಳಕೆಯಿಂದ ಅಧಿಕ ಗುಣಮಟ್ಟದ ವಿಷಯಕ್ಕೆ ಹೆಚ್ಚು ಒತ್ತು ನೀಡುವ, ಮಾರ್ಚ್ 2011 ರಲ್ಲಿ ಬದಲಾಯಿಸಲಾಯಿತು. ಉಲ್ಲೇಖಗಳು ಅಂತರಜಾಲತಾಣ ಕಂಪನಿಗಳು ಅಂತರ್ಜಾಲ
2032
https://kn.wikipedia.org/wiki/%E0%B2%B8%E0%B3%81%E0%B2%A8%E0%B2%BF%E0%B2%B2%E0%B3%8D%20%E0%B2%A6%E0%B2%A4%E0%B3%8D
ಸುನಿಲ್ ದತ್
ಸುನಿಲ್ ದತ್ (ಜೂನ್ ೬, ೧೯೨೯ – ಮೇ ೨೫, ೨೦೦೫) ಭಾರತೀಯ ನಟ, ರಾಜಕಾರಣಿ. ಬಾಲಿವುಡ್ ಎಂದೇ ಖ್ಯಾತವಾದ ಹಿಂದಿ ಚಿತ್ರರಂಗದಲ್ಲಿ ನಾಯಕ ನಟನಾಗಿ ಹಲವು ಚಿತ್ರಗಳಲ್ಲಿ ನಟಿಸಿದವರು. ಪ್ರಸ್ತುತ ಮನಮೋಹನ್ ಸಿಂಗ್ ನಾಯಕತ್ವದ ಸರಕಾರದಲ್ಲಿ ಕೇಂದ್ರ ಮಂತ್ರಿಯಾಗಿ ಕ್ರೀಡೆ ಹಾಗೂ ಯುವಜನ ಖಾತೆಯನ್ನು ವಹಿಸಿಕೊಂಡಿದ್ದರು. ಜೀವನ ೧೯೨೯ರಲ್ಲಿ ಖರ್ಡ್ ಹಳ್ಳಿಯಲ್ಲಿ (ಇಂದಿನ ಪಾಕಿಸ್ತಾನ, ಅಂದಿನ ಭಾರತ) ಹುಟ್ಟಿದ ಇವರು ೧೯೪೭ರಲ್ಲಿ ಭಾರತದ ವಿಭಜನೆಯಾದ ನಂತರ ಹುಟ್ಟೂರನ್ನು ತೊರೆದರು. ಇವರು ವಿದ್ಯಾಭ್ಯಾಸ ಮಾಡಿದ್ದು ಮುಂಬೈನ ಜಯ್ ಹಿಂದ್ ಕಾಲೇಜಿನಲ್ಲಿ. ಹಿಂದಿ ಚಿತ್ರರಂಗದಲ್ಲಿ ಅಪಾರ ಯಶಸ್ಸು ಪಡೆದಿದ್ದ ನಟಿ ನರ್ಗಿಸ್ ಜೊತೆ "ಮದರ್ ಇಂಡಿಯಾ" ಚಿತ್ರದಲ್ಲಿ ಆಕೆಯ ಮಗನ ಪಾತ್ರದಲ್ಲಿ ಸುನಿಲ್ ದತ್ ನಟಿಸಿದರು. ಸುನಿಲ್ ದತ್ ಮತ್ತು ನರ್ಗಿಸ್ ೧೧-೦೩-೧೯೫೮ರಂದು ವಿವಾಹವಾದರು. ಇವರಿಗೆ ಇಬ್ಬರು ಮಕ್ಕಳು. ಮಗ ಸಂಜಯ್ ದತ್ ಕೂಡ ಬಾಲಿವುಡ್ ತಾರೆ. ಸುನಿಲ್ ದತ್ ೨೫-೦೫-೨೦೦೫ರಂದು ಬಾಂದ್ರಾ, ಮುಂಬೈನಲ್ಲಿ ಹೃದಯಾಘಾತದಿಂದ ನಿದ್ರೆಯಲ್ಲಿಯೇ ಮರಣ ಹೊಂದಿದರು. ಬಾಲಿವುಡ್ ಆಕಾಶವಾಣಿಯಲ್ಲಿ ಕೆಲಸ ಪ್ರಾರಂಭಿಸಿದ ಇವರು ಹಿಂದಿ ಸಿನೆಮಾಗಳಲ್ಲಿ ನಟಿಸಲು ಪ್ರಾರಂಭಿಸಿದರು. ೧೯೫೬ರ ಹೊತ್ತಿಗೆ ಯಶಸ್ವಿ ನಟರಾದರು. ಮದರ್ ಇಂಡಿಯಾ ಚಿತ್ರದಲ್ಲಿ ಶ್ರೀಮಂತ ಜಮೀನುದಾರನ ವಿರುದ್ಧ ಬಂಡಾಯ ಹೂಡುವ ಬಡರೈತನ ಮಗನಾಗಿ ಕಾಣಿಸಿಕೊಂಡರು. ತಮ್ಮ ಪಾತ್ರದಲ್ಲಿ ಅತ್ಯಂತ ಸಹಜವಾಗಿ ನಟಿಸಿ ಎಲ್ಲರ ಗಮನ ಸೆಳೆದರು. ಮುಂದೆ ಅನೇಕ ಯಶಸ್ವಿ ಚಿತ್ರಗಳಲ್ಲಿ ನಟಿಸಿ ಜನಪ್ರಿಯ ನಟರಾದರು. "ಪಡೋಸನ್" ಚಿತ್ರದಲ್ಲಿ ಹಾಸ್ಯ ಪಾತ್ರದಲ್ಲಿ ನಟಿಸಿ ಜನಮನವನ್ನು ಗೆದ್ದರು. "ರೇಷ್ಮಾ ಔರ್ ಶೇರಾ" ಚಿತ್ರದಲ್ಲಿ ಬಹಳ ಗಂಭೀರ ಪಾತ್ರವನ್ನೂ ಅಷ್ಟೇ ಸಹಜವಾಗಿ ನಿರ್ವಹಿಸಿದರು. ಪ್ರಖ್ಯಾತ ಬಾಲಿವುಡ್ ನತಿಯರಾದ ಆಶಾ ಪರೇಖ್, ವಹೀದಾ ರಹಮಾನ್, ಸಾಧನಾ, ಸಾಯಿರಾ ಬಾನು ಮೊದಲಾದವರ ಜೊತೆ ನಟಿಸಿದ್ದಾರೆ. ರಾಜಕೀಯ ೧೯೮೪ರಲ್ಲಿ ಇವರು ಕಾಂಗ್ರೆಸ್ (ಐ) ಪಕ್ಷವನ್ನು ಸೇರಿದರು, ಹಾಗೂ ಮುಂಬೈನ ವಾಯುವ್ಯ ಚುನಾವಣಾ ಕ್ಷೇತ್ರದಿಂದ ನಾಲ್ಕು ಬಾರಿ ಗೆಲುವು ಸಾಧಿಸಿ ಬಂದರು. ಸಿನೆಮಾಗಳು ರೈಲ್ವೆ ಪ್ಲಾಟ್ ಫಾರ್ಮ್ ಏಕ್ ಹೀ ರಿಷ್ತಾ (೧೯೫೬) ಮದರ್ ಇಂಡಿಯಾ (ಭಾರತ ಮಾತೆ) (೧೯೫೬) ಸಾಧನಾ (೧೯೫೮) ಸುಜಾತಾ (೧೯೫೯) ಮೇ ಚುಪ್ ರಹೂಂಗೀ (೧೯೬೨) ಗುಮ್ರಾಹ್ (೧೯೬೩) ಮುಜೆ ಜೀನೇ ದೋ (೧೯೬೩) ಯೇ ರಾಸ್ತೇ ಹೆ ಪ್ಯಾರ್ ಕೇ (೧೯೬೩) ಯಾದೇನ್ (೧೯೬೪) ವಕ್ತ್ (೧೯೬೫) ಹಮ್ರಾಝ್ (೧೯೬೭) ಮೆಹೆರ್ಬಾ (೧೯೬೭) ಮಿಲನ್ (೧೯೬೭) ಪಡೋಸನ್ (೧೯೬೮) ರೇಶ್ಮಾ ಔರ್ ಶೇರಾ (೧೯೭೧) ಝಕ್ಮೀ (೧೯೭೫) ಜಾನೀ ದುಶ್ಮನ್ (೧೯೭೮) ಮುನ್ನಾಭಾಯಿ ಎಂ ಬೀ ಬಿ ಎಸ್ (೨೦೦೩) ಸಮಕಾಲೀನ ನಟರು: ನರ್ಗೀಸ್, ಜಾನಿ ವಾಲ್ಕರ್, ವಹೀದಾ ರಹ್ಮಾನ್, ಸಾಧನಾ, ಮೀನಾ ಕುಮಾರಿ, ನೂತನ್ ೨೦೦೫ ನಿಧನ ಕಲಾವಿದರು ಸಿನಿಮಾ ತಾರೆಗಳು ಬಾಲಿವುಡ್
2037
https://kn.wikipedia.org/wiki/%E0%B2%B7%E0%B2%9F%E0%B3%8D%E0%B2%AA%E0%B2%A6%E0%B2%BF
ಷಟ್ಪದಿ
ಷಟ್ಪದಿ ಎಂಬುದು ಛಂದಸ್ಸಿನ ಒಂದು ಪ್ರಕಾರ. ಪದ್ಯವೊಂದರಲ್ಲಿ ಆರು ಪಾದಗಳಿದ್ದರೆ ಅದು ಷಟ್ಪದಿ ಎನಿಸುತ್ತದೆ. ಪಾದಗಳ ಗಣ/ಮಾತ್ರಾ/ಅಕ್ಷರ ವಿನ್ಯಾಸಗಳನ್ನು ಹಿಡಿದು ಬೇರೆ ಬೇರೆ ರೀತಿಯ ಪಾದಗಳುಳ್ಳಟ್ಪದಿಗಳಿವೆ. ಆರು ಪಾದಗಳುಳ್ಳ ಪದ್ಯವು ಷಟ್ಪದಿಯೆನಿಸಿಕೊಳ್ಳುತ್ತದೆ. ಇದರ ೧, ೨, ೪ ಮತ್ತು ೫ನೇ ಪಾದಗಳು ಪರಸ್ಪರ ಸಮನಾಗಿರುತ್ತದೆ. ೩ನೆಯ ಮತ್ತು ೬ನೆಯ ಪಾದಗಳು ಪರಸ್ಪರ ಸಮನಾಗಿರುತ್ತವೆ. ೩ನೆಯ ಪಾದವು ೧ನೆಯ ಪಾದದ ಒಂದೂವರೆಯಷ್ಟಿದ್ದು, ಕೊನೆಯಲ್ಲಿ ಒಂದು ಗುರುವಿನಿಂದ ಕೂಡಿರುತ್ತದೆ. ಉದ್ದಂಡ ಷಟ್ಪದಿ ಎಲ್ಲಾ ಷಟ್ಪದಿಗಳಿಂದ ಬೇರೆಯಾಗಿದೆ. ಕನ್ನಡ ಸಾಹಿತ್ಯದಲ್ಲಿ ಷಟ್ಪದಿ ಕನ್ನಡ ಕಾವ್ಯದಲ್ಲಿ ಷಟ್ಪದಿಗಳನ್ನು ಪ್ರಥಮವಾಗಿ ರಾಘವಾಂಕನು ಬಳಕೆಗೆ ತಂದನು. ಹಳಗನ್ನಡ ಸಾಹಿತ್ಯದಲ್ಲಿ ಕಂದ, ಖ್ಯಾತ ಕರ್ನಾಟಕ ವೃತ್ತಗಳು, ಹೇರಳವಾಗಿದ್ದರೆ ನಡುಗನ್ನಡ ಕಾಲದ ಸಾಹಿತ್ಯದಲ್ಲಿ ಷಟ್ಪದಿಗೆ ಮೊದಲ ಸ್ಥಾನ. ಕುಮಾರವ್ಯಾಸನ 'ಗದುಗಿನ ಭಾರತ'ವೆಂದೆ ಪ್ರಸಿದ್ಧವಾಗಿರುವ ಕರ್ಣಾಟ ಭಾರತ ಕಥಾಮಂಜರಿ, ಲಕ್ಷ್ಮೀಶಕವಿಯ ಜೈಮಿನಿ ಭಾರತ ಇವೆರಡೂ ಷಟ್ಪದಿ ಕಾವ್ಯಗಳೆ. ಮುದ್ದಣ ವಿರಚಿತ ಶ್ರೀರಾಮ ಪಟ್ಟಾಭಿಷೇಕ ಇರುವುದು ವಾರ್ಧಕ ಷಟ್ಪದಿಯಲ್ಲಿ. ಕನ್ನಡ ಸಾಹಿತ್ಯದಲ್ಲಿ ಬಳಕೆಯಲ್ಲಿದ್ದ ಷಟ್ಪದಿಗಳು ಇವು. ಶರ ಕುಸುಮ ಭೋಗ ಭಾಮಿನಿ ಪರಿವರ್ಧಿನೀ ವಾರ್ಧಕ ಉದ್ದಂಡ ಇವುಗಳಲ್ಲಿ ಭಾಮಿನೀ ಷಟ್ಪದಿ ಜನಪ್ರಿಯ. ಗದುಗಿನ ಭಾರತವಿರುವುದು ಈ ಛಂದಸ್ಸಿನಲ್ಲಿಯೆ. ಭಾಮಿನೀ ಷಟ್ಪದಿಯ ಪದ್ಯವೊಂದರಲ್ಲಿ ಆರು ಪಾದ(ಅಂದರೆ ಸಾಲು)ಗಳಿರುತ್ತವೆ. ಮೂರನೆಯ, ಆರನೆಯ ಸಾಲುಗಳಲ್ಲಿ ೭ ಮಾತ್ರೆಗಳ(೩+೪) ಮೂರುಗಣಗಳೂ ಮತ್ತು ಒಂದು ಗುರು ಇರುತ್ತವೆ. ಮಿಕ್ಕ ಸಾಲುಗಳಲ್ಲಿ ೭ ಮಾತ್ರೆಗಳ(೩+೪) ಎರಡು ಗಣಗಳಿರುತ್ತವೆ. ಉದಾಹರಣೆಯಾಗಿ ಗದುಗಿನ ಭಾರತದ ಈ ಪ್ರಸಿದ್ಧ ಪದ್ಯವನ್ನು ನೋಡಿ: ವೇದ| ಪುರುಷನ | ಸುತನ| ಸುತನ ಸ ಹೋದ|ರನ ಹೆ|ಮ್ಮಗನ| ಮಗನ ತ ಳೋದ|ರಿಯ ಮಾ|ತುಳನ| ಮಾವನ|ನತುಳ|ಭುಜಬಲ|ದಿ ಕಾದು| ಗೆಲಿದನ|ನಣ್ಣ|ನವ್ವೆಯ ನಾದಿ|ನಿಯ ಜಠ|ರದಲಿ| ಜನಿಸಿದ ನಾದಿ| ಮೂರುತಿ | ಸಲಹೊ| ಗದುಗಿನ | ವೀರ|ನಾರಯ|ಣ '|' ಸಂಜ್ಞೆ ಗಣವಿಭಾಗವನ್ನು ತೋರಿಸುತ್ತದೆ. ಷಟ್ಪದಿಗಳೂ ಸೇರಿದಂತೆ ಹಲವಾರು ಛಂದೋಪ್ರಕಾರಗಳ ಲಕ್ಷಣಗಳ ಕೈಗೆಟುಕುವಂತಹ ವಿವರಣೆಯನ್ನು ಅ. ರಾ. ಮಿತ್ರರ 'ಛಂದೋಮಿತ್ರ' ದಲ್ಲಿ ಕಾಣಬಹುದು. ಷಟ್ಪದಿಗಳ ಉಗಮ ವಿಕಾಸಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಸೇಡಿಯಾಪು ಕೃಷ್ಣಭಟ್ಟರ, ಟಿ.ವಿ. ವೆಂಕಟಾಚಲ ಶಾಸ್ತ್ರಿಗಳ ಗ್ರಂಥಗಳಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಾಣಬಹುದು. ಷಟ್ಪದಿ - ವಿವರ ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಷಟ್ಪದಿ ಷಟ್ಪದಿ ಛಂದಸ್ಸಿನ ಪ್ರಮುಖ ಮಟ್ಟುಗಳಲ್ಲೊಂದು. ದೇಶ್ಯಕಾವ್ಯ ಪ್ರಕಾರಗಳಲ್ಲಿ ಹೆಚ್ಚು ಪ್ರಸಿದ್ಧವಾದದ್ದು. ಷಟ್ಪದ, ಷಟ್ಪದಿ, ಷಟ್ಪದಿಕಾ ಎಂಬ ಹೆಸರುಗಳಿಂದ ಉಲ್ಲೇಖಗೊಂಡಿದೆ. ಅಮ್ಮಿನಬಾವಿ ಶಾಸನ, ಸುಕುಮಾರ ಚರಿತ ಹಾಗೂ ತೆಲುಗಿನ ಛಂದೋಗ್ರಂಥಗಳಲ್ಲಿ ಷಟ್ಪದ ಎಂದು ಬಳಕೆಗೊಂಡಿದ್ದರೆ ಛಂದೋಂಬುಧಿಯ ಪ್ರಚಲಿತ ಪಾಠದಲ್ಲಿ, ಸಂಗೀತರತ್ನಾಕರ, ಮಾನಸೋಲ್ಲಾಸ, ಬೃಹದ್ದೇಶೀಗಳಲ್ಲಿ ಷಟ್ಪದಿ ಎಂದು ಬಳಕೆಗೊಂಡಿದೆ. ಜಯಕೀರ್ತಿ ಇದನ್ನೇ ಷಟ್ಪದಿಕಾ ಎಂದು ಕರೆದಿದ್ದಾನೆ. ವಿದ್ವಾಂಸರ ಅಭಿಪ್ರಾಯದಂತೆ ಷಟ್ಪದ, ಷಟ್ಪದಿಗಳು ಜತೆಜತೆಯ ಪ್ರಯೋಗಗಳಾಗಿ ಸಾಹಿತ್ಯ ಕೃತಿಗಳಲ್ಲಿಯೂ ಲಕ್ಷಣಾದಿ ಗ್ರಂಥಗಳಲ್ಲಿಯೂ ಬಳಕೆಗೊಂಡಿವೆ. ಈ ಎರಡು ರೂಪಗಳೂ ಅಂಶಗಣಾತ್ಮಕವಾಗಿದ್ದ ಕಾಲದಲ್ಲಿ ಪದ್ಯಜಾತಿಗೆ ಬಳಕೆಯಾಗುತ್ತಿದ್ದುವು. ಮಾತ್ರಾಗಣಾತ್ಮಕವಾಗಿ ಪರಿವರ್ತಿತವಾದ ಮೇಲೆ ಷಟ್ಪದಿ ಎಂಬುದು ಬಳಕೆಯಲ್ಲಿ ಸ್ಥಿರವಾಗಿ ಉಳಿಯಿತು. ಗಣ ಪ್ರಾಚೀನ ಕಾಲದಲ್ಲಿ ಅಂಶಗಣಘಟಿತವಾದ ಒಂದೇ ಒಂದು ಷಟ್ಪದಿ ಇತ್ತೆನ್ನಲಾಗಿದೆ. ಅಂಶ ಷಟ್ಪದಿಯ ಲಕ್ಷಣ: 6 ಪಾದಗಳು; 1-2ನೆಯ ಮತ್ತು 4-5ನೆಯ ಪಾದಗಳಲ್ಲಿ 2-2 ವಿಷ್ಣುಗಣಗಳು, 3-6ನೆಯ ಪಾದಗಳಲ್ಲಿ 2-2 ವಿಷ್ಣುಗಣಗಳೊಂದಿಗೆ 1-1 ರುದ್ರಗಣ ಇರುತ್ತದೆ. ಪದ್ಯಾರ್ಥದ ಕೊನೆಗೆ ಯತಿ. 12ನೆಯ ಶತಮಾನದ ಮಧ್ಯಭಾಗದಲ್ಲಿ ಕಾಣಿಸಿಕೊಳ್ಳುವ ವೀರಶೈವ ವಚನಕಾರರು ಹಾಗೂ ಅನಂತರದ ಭಕ್ತಿ ಪಂಥದವರು ಮಾಡಿದ ಸಾಹಿತ್ಯ ಕ್ರಾಂತಿಗಳಲ್ಲಿ ದೇಶ್ಯಛಂದಸ್ಸಿನ ಪುನರುಜ್ಜೀವನ ಮತ್ತು ನವೀಕರಣವೂ ಪ್ರಮುಖ ವಿಚಾರಗಳಾಗಿವೆ. ಈ ಕಾಲದಲ್ಲಿ ಪರಂಪರಾಗತವಾಗಿದ್ದ ಅಂಶಷಟ್ಪದಿ ಮಾತ್ರಾಗಣಾತ್ಮಕ ವಾಗಿ ಮಾತ್ರಾಷಟ್ಪದಿಯಾಯಿತು. ಪೋಲಾಳ್ವ ದಂಡನಾಥ (1224), ರಾಘವಾಂಕ (ಸು.1230), ಕುಮುದೇಂದು (1275)-ಈ ಕೆಲವರು ಮಾತ್ರಾಷಟ್ಪದಿಯ ಆದ್ಯ ಕೃಷಿಕರು. ವಿಧ ನತ್ತು ಗಣ ನಡುಗನ್ನಡ ಕಾಲದಲ್ಲಿ ಮಾತ್ರಾಷಟ್ಪದಿ ಶರ, ಕುಸುಮ, ಭೋಗ, ಭಾಮಿನೀ, ಪರಿವರ್ಧಿನೀ ಹಾಗೂ ವಾರ್ಧಕ ಷಟ್ಪದಿಗಳೆಂಬ ಆರು ಬಗೆಯಲ್ಲಿ ಕಾಣಿಸಿಕೊಂಡು ಜನಪ್ರಿಯವಾಗಿದೆ. ಇವುಗಳ ಲಕ್ಷಣಗಳನ್ನು ಹೀಗೆ ಗುರುತಿಸಲಾಗಿದೆ: ೧. ಶರಷಟ್ಪದಿ : ನಾಲ್ಕು ಮಾತ್ರೆಯ ಗಣ. ಒಂದು, ಎರಡು, ನಾಲ್ಕು ಮತ್ತು ಐದನೆಯ ಪಾದಗಳಲ್ಲಿ ಎರಡೆರಡೂ ಮೂರು, ಆರನೆಯ ಪಾದಗಳಲ್ಲಿ ಮೂರು ಮೂರೂ ಒಂದು ಗುರುವೂ ಬರಬೇಕು. U-U ಈ ಗಣ ನಿಷಿದ್ಧ. ೨. ಕುಸುಮಷಟ್ಪದಿ : ಒಂದು, ಎರಡು, ನಾಲ್ಕು ಮತ್ತು ಐದನೆಯ ಪಾದಗಳಲ್ಲಿ ಐದು ಮಾತ್ರೆಯ ಗಣಗಳು ಎರಡೆರಡೂ ಮೂರು, ಆರನೆಯ ಪಾದಗಳಲ್ಲಿ ಮೂರು ಮೂರೂ ಒಂದು ಗುರುವೂ ಬರಬೇಕು. U - UU, U - - ಈ ಗಣಗಳು ನಿಷಿದ್ಧ. ೩. ಭೋಗಷಟ್ಪದಿ : ಒಂದು, ಎರಡು, ನಾಲ್ಕು ಮತ್ತು ಐದನೆಯ ಪಾದಗಳಲ್ಲಿ ಮೂರು ಮಾತ್ರೆಯ ಗಣ ನಾಲ್ಕು ನಾಲ್ಕೂ ಮೂರು, ಆರನೆಯ ಪಾದಗಳಲ್ಲಿ ಆರಾರೂ ಒಂದು ಗುರುವೂ ಬರಬೇಕು. ೪. ಭಾಮಿನೀಷಟ್ಪದಿ : ಮೂರು ಮಾತ್ರೆಯ ಗಣದ ಮುಂದೆ ನಾಲ್ಕು ಮಾತ್ರೆಯ ಗಣ ಬರುವ ಹಾಗೆ ಈ ಗಣಗಳು ಒಂದು, ಎರಡು, ನಾಲ್ಕು ಮತ್ತು ಐದನೆಯ ಪಾದಗಳಲ್ಲಿ ಎರಡೆರಡೂ ಮೂರು, ಆರನೆಯ ಪಾದಗಳಲ್ಲಿ ಮೂರು ಮೂರೂ ಒಂದು ಗುರುವೂ ಬರಬೇಕು. ಇದರಲ್ಲಿ U -, U-U ಈ ಗಣಗಳು ನಿಷಿದ್ಧ. ೫. ಪರಿವರ್ಧಿನೀ ಷಟ್ಪದಿ : ಒಂದು, ಎರಡು, ನಾಲ್ಕು ಮತ್ತು ಐದನೆಯ ಪಾದಗಳಲ್ಲಿ ಚತುರ್ಮಾತ್ರಾಗಣ ನಾಲ್ಕು, ನಾಲ್ಕೂ ಮೂರು, ಆರನೆಯ ಪಾದಗಳಲ್ಲಿ ಆರಾರೂ ಒಂದು ಗುರುವೂ ಬರಬೇಕು. U-U ಗಣ ನಿಷಿದ್ಧ. ೬. ವಾರ್ಧಕ ಷಟ್ಪದಿ : ಒಂದು, ಎರಡು, ನಾಲ್ಕು ಮತ್ತು ಐದನೆಯ ಪಾದಗಳಲ್ಲಿ ಪಂಚಮಾತ್ರಾಗಣ ನಾಲ್ಕು ನಾಲ್ಕೂ ಮೂರು, ಆರನೆಯ ಪಾದಗಳಲ್ಲಿ ಆರಾರೂ ಒಂದು ಗುರುವೂ ಬರಬೇಕು. U-UU, U - - ಈ ಗಣಗಳು ನಿಷಿದ್ಧ. ನೋಡಿ ಕನ್ನಡ ವ್ಯಾಕರಣ ಛಂದಸ್ಸು ಗದುಗಿನ ಭಾರತವು ಷಟ್ಪದಿಯಲ್ಲಿ ರಚಿತವಾಗಿದೆ ಕನ್ನಡ ಭಾರತ, ಗದುಗಿನ ಭಾರತ, ಕುಮಾರವ್ಯಾಸ ಭಾರತ ಎಂಬ ಹೆಸರನ್ನು ಹೊಂದಿರುವ ಕರ್ನಾಟಕ ಭಾರತ ಕಥಾಮಂಜರಿ ಎಂಬ ಕಾವ್ಯವನ್ನು ಬರೆದು ಖ್ಯಾತನಾದ ಕುಮಾರವ್ಯಾಸ ಅಥವಾ ಗದುಗಿನ ನಾರಣಪ್ಪ. ಈತ ಐರಾವತ ಎಂಬ ಕೃತಿಯನ್ನು ರಚಿಸಿದನೆಂದು ತಿಳಿದುಬಂದಿದೆ. ಉಲ್ಲೇಖಗಳು ಕನ್ನಡ ಸಾಹಿತ್ಯ ಕನ್ನಡ ವ್ಯಾಕರಣ ಛಂದಸ್ಸು
2049
https://kn.wikipedia.org/wiki/%E0%B2%AE%E0%B3%88%E0%B2%95%E0%B3%8D%E0%B2%B0%E0%B3%8B%E0%B2%B8%E0%B2%BE%E0%B2%AB%E0%B3%8D%E0%B2%9F%E0%B3%8D%20%E0%B2%B5%E0%B2%BF%E0%B2%82%E0%B2%A1%E0%B3%8B%E0%B2%B8%E0%B3%8D
ಮೈಕ್ರೋಸಾಫ್ಟ್ ವಿಂಡೋಸ್
ಮೈಕ್ರೊಸಾಫ್ಟ್ ವಿಂಡೋಸ್ () ಮೈಕ್ರೋಸಾಫ್ಟ್ ಕೃತ ಹಲವು ಕಾರ್ಯಕಾರಿ ವ್ಯವಸ್ಥೆಗಳ ಸರಮಾಲೆ. ಇದರಲ್ಲಿ ಮೊದಲಿಗ, ೧೯೮೫ರಲ್ಲಿ ಬಳಕೆಗೆ ತಂದ "ವಿಂಡೋಸ್" ವ್ಯವಸ್ಥೆ. ಅಂದು "ವಿಂಡೋಸ್" MS-DOSಗೆ ವಿಂಡೋಸ್ ಒಂದು ಕಾರ್ಯಾಚರಣ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಮ್) - ಗಣಕದ ಕಾರ್ಯವನ್ನು ನಿಯಂತ್ರಿಸುವ, ಸಮ್ಮೇಳಿಸುವ ತಂತ್ರಾಂಶ). ಇದು ಮೈಕ್ರೋಸಾಫ್ಟ್ ಕಂಪೆನಿಯ ತಂತ್ರಾಂಶಗಳಲ್ಲೊಂದು. ೧೯೮೫ ರಲ್ಲಿ ಮೊದಲ ಬಾರಿಗೆ ಈ ತಂತ್ರಾಂಶ ಬಿಡುಗಡೆಯಾಯಿತು. ಅಲ್ಲಿಂದೀಚೆಗೆ ಅನೇಕ ಆವೃತ್ತಿಗಳು ಬಿಡುಗಡೆಗೊಂಡಿವೆ. ಎಲ್ಲಕ್ಕಿಂತ ಇತ್ತೀಚಿನ 'ಆವೃತ್ತಿಗೆ ವಿಂಡೋಸ್ ೮' ಎಂದು ಹೆಸರು. ವಿಂಡೋಸ್‌ನ ವಿವಿಧ ಆವೃತ್ತಿಗಳು ಹೀಗಿವೆ: ವಿಂಡೋಸ್ ೩.೧ ವಿಂಡೋಸ್ ೯೫ ವಿಂಡೋಸ್ ೯೮ ವಿಂಡೋಸ್ ೯೮-೨ನೇ ಆವೃತ್ತಿ ವಿಂಡೋಸ್ ಮಿಲೇನಿಯಮ್ ವಿಂಡೋಸ್ ೨೦೦೦ ವಿಂಡೋಸ್ ಎಕ್ಸ್ ಪಿ ವಿಂಡೋಸ್ ವಿಸ್ತಾ ವಿಂಡೋಸ್ ೭ ವಿಂಡೋಸ್ ೮ ವಿಂಡೋಸ್‌ನಲ್ಲಿ ಕನ್ನಡ ವಿಂಡೋಸ್‌ನ ಎಕ್ಸ್‌ಪಿ ಆವೃತ್ತಿಯಲ್ಲಿ ಪ್ರಥಮ ಬಾರಿಗೆ ಕನ್ನಡವನ್ನು ಅಳವಡಿಸಲಾಯಿತು. ವಿಂಡೋಸ್‌ನಲ್ಲಿ ಕನ್ನಡವನ್ನು ಯುನಿಕೋಡ್ ಸಂಕೇತೀಕರಣದ ಮೂಲಕ ಅಳವಡಿಸಲಾಗಿದೆ. ಪ್ರಾರಂಭದ ಆವೃತ್ತಿಯಲ್ಲಿ ಅಂದರೆ ವಿಂಡೋಸ್‌ ಎಕ್ಸ್‌ಪಿಯಲ್ಲಿ ಕನ್ನಡದ ಅಳವಡಿಕೆ ಮಾಡಿದಾಗ ಕೆಲವು ನ್ಯೂನತೆಗಳಿದ್ದವು. ಅದರಲ್ಲಿ ಕನ್ನಡಕ್ಕಾಗಿ ಬಳಸಿದ ತುಂಗ ಹೆಸರಿನ ಫಾಂಟ್‌ನಲ್ಲಿ ಕೆಲವು ಅಕ್ಷರಗಳು ತಪ್ಪಾಗಿ ಮೂಡಿಬರುತ್ತಿದ್ದವು. ಕನ್ನಡದ ಅಕಾರಾದಿ ವಿಂಗಡಣೆಯಲ್ಲೂ ತಪ್ಪುಗಳಿದ್ದವು. ಈ ಎಲ್ಲ ತಪ್ಪುಗಳನ್ನು ಮುಂದಿನ ಆವೃತ್ತಿಗಳಲ್ಲಿ ಸರಿಪಡಿಸಲಾಗಿದೆ. ಉಲ್ಲೇಖಗಳು ನೋಡಿ ಲಿನಕ್ಸ್ ವಿತರಣೆಗಳು: ಉಬುಂಟು ಫೆಡೋರಾ (ಲಿನಕ್ಸ್ ವಿತರಣೆ) ಲಿನಕ್ಸ್ ರೆಡ್ ಹ್ಯಾಟ್ ಸುಸೇ ಕಾರ್ಯನಿರ್ವಹಣ ಸಾಧನ: ಯುನಿಕ್ಸ್ ಸೊಲಾರಿಸ್ ಮೈಕ್ರೋಸಾಫ್ಟ್ ಬಾಹ್ಯ ಸಂಪರ್ಕಗಳು Microsoft Developer Network Windows Client Developer Resources Microsoft Windows History Timeline Pearson Education, InformIT – History of Microsoft Windows Microsoft Windows 7 for Government ಗಣಕಯಂತ್ರ ಕಾರ್ಯನಿರ್ವಹಣ ಸಾಧನ ಮಾಹಿತಿ ತಂತ್ರಜ್ಞಾನ
2050
https://kn.wikipedia.org/wiki/%E0%B2%AE%E0%B3%8D%E0%B2%AF%E0%B2%BE%E0%B2%95%E0%B3%8D%20%E0%B2%93%E0%B2%8E%E0%B2%B8%E0%B3%8D%20X
ಮ್ಯಾಕ್ ಓಎಸ್ X
ಆಪಲ್ ಕಂಪ್ಯೂಟರ್ಸ್ ಸಂಸ್ಥೆಯಿಂದ ನಿರ್ಮಿಸಲ್ಪಟ್ಟಿರುವ ಗಣಕಯಂತ್ರ ಕಾರ್ಯನಿರ್ವಹಣ ಸಾಧನ. ಸುಂದರವಾದ ಚಿತ್ರಾತ್ಮಕ ಸಂಪರ್ಕ ಸಾಧನ. GUI (ಆಂಗ್ಲದಲ್ಲಿ) ಅಳವಡಿಸಲಾಗಿರುವ ಈ ಸಾಧನವು ಬಿ.ಎಸ್.ಡಿ ಯೂನಿಕ್ಸ್ ಅಡಿಪಾಯದ ಮೇಲೆ ನಿರ್ಮಿತವಾಗಿದೆ. ಇತಿಹಾಸ ೧೯೮೫ರಲ್ಲಿ ಸ್ಟೀವ್ ಜಾಬ್ಸ್ ಆಪಲ್ ತ್ಯಜಿಸಿ ನೆಕ್ಷ್ಟ್ ಸಂಸ್ಥೆಯನ್ನು ನಿರ್ಮಿಸಿದರು. ಅಲ್ಲಿ ಮ್ಯಾಖ್ ಕರ್ನಲ್ (ಆಂಗ್ಲದಲ್ಲಿ kernel) ಮತ್ತು ಬಿ.ಎಸ್.ಡಿ ಯೂನಿಕ್ಸ್ ಅಳವಡಿಸಿಕೊಂಡು ನೆಕ್ಟ್ ಸ್ಟೆಪ್ (ಆಂಗ್ಲದಲ್ಲಿ NEXTSTEP) ಎಂಬ ವಸ್ತು-ನಿಷ್ಟ ಕಾರ್ಯನಿರ್ವಹಣ ಸಾಧನವನ್ನು (ಆಂಗ್ಲದಲ್ಲಿ Objected Oriented Operating System) ನಿರ್ಮಿಸಲಾಯಿತು. ಈ ಮಧ್ಯೆ ಸ್ಟೀವ್ ಜಾಬ್ಸ್ ಇಲ್ಲದಿರುವ ವರ್ಷಗಳಲ್ಲಿ ಆಪಲ್ ಸಂಸ್ಥೆಯು ತನ್ನದೇ ಆದ ಹೊಸ ತಲೆಮಾರಿನ ಕಾರ್ಯನಿರ್ವಹಣ ಸಾಧನಗಳನ್ನು ತಯಾರಿಸಲು ಪ್ರಯತ್ನಿಸಿತಾದರೂ ಅಂತಹ ಯಶಸ್ಸು ಕಾಣಲಿಲ್ಲ. ನಂತರ ತನ್ನ ಮುಂದಿನ ಕಾರ್ಯನಿರ್ವಹಣ ಸಾಧನದ ಅಡಿಪಾಯಕ್ಕೆ ಆಪಲ್ ಸಂಸ್ಥೆಯು ನೆಕ್ಟ್ ಸ್ಟೆಪ್ ನ ಓಪೆನ್ ಸ್ಟೆಪ್ ಅನ್ನು ಆಯ್ದುಕೊಂಡಿತು, ಹಾಗೆಯೇ ನೆಕ್ಟ್ ಸ್ಟೆಪ್ ‍ಅನ್ನು ತನ್ನೊಳಗೆ ವಿಲೀನಗೊಳಿಸಿತು. ಸ್ಟೀವ್ ಜಾಬ್ಸ್ ಮತ್ತುಮ್ಮೆ ಆಪಲ್ ನೇತೃತ್ವ ವಹಿಸಿಕೊಂಡು, ಅಲ್ಲಿಯವರೆಗೆ ಕೇವಲ ಗಣಕತಂತ್ರಜ್ಞರು ಬಳಸುವಂತಿದ್ದ ಓಪೆನ್ ಸ್ಟೆಪ್ ಅನ್ನು ಗೃಹಪಯೋಗಿ ಗಣಕಗಳಲ್ಲಿ ಅಳವಡಿಸುವಂತಹ ಕಾರ್ಯನಿರ್ವಹಣ ಸಾಧನವನ್ನಾಗಿ ಬದಲಿಸಲು ರಾಪ್ಸಡಿ ಎಂಬ ಕಾರ್ಯ ಪ್ರಾರಂಭಿಸಿದರು. ಕೆಲವು ಪ್ರಾರಂಭದ ತೊಡಕುಗಳನ್ನು ನಿವಾರಿಸಿ, ಹಳೆಯ ಮ್ಯಾಕ್ ಓಎಸ್ ಅವತರಣಿಕೆಗಳಿಂದ ಸುಲಲಿತವಾಗಿ ಮಾರ್ಪಾಡು ಮಾಡಲು ಸಹಾಯಕವಾಗುವಂತಹ ರೀತಿಯಲ್ಲಿ ರಾಪ್ಸಡಿಯಿಂದ ಮ್ಯಾಕ್ ಓಎಸ್ X ನಿರ್ಮಾಣಗೊಂಡಿತು. ಮ್ಯಾಕ್ ಓಎಸ್ X ತನ್ನ ಮುಂದಿನ ಅವತರಣಿಕೆಗಳಲ್ಲಿ ಹಳೆಯ ಸಾಧನಗಳಿಗೆ ಹೊಂದಿಕೊಂಡಂತಿರಬೇಕಾದ ಧ್ಯೇಯವನ್ನು ಬದಿಗುತ್ತಿ, "ಡಿಜಿಟಲ್ ಜನಜೀವನ"ಕ್ಕೆ ಉಪಯುಕ್ತವಾಗುವಂತಹ ಚಿತ್ರ, ಸಂಗೀತ, ಚಲನಚಿತ್ರ ಕ್ಷೇತ್ರಗಳಲ್ಲಿ ಹೆಚ್ಚು ಬಳಕೆಯಾಗುವಂತಹ ತಂತ್ರಾಂಶಗಳಿಗೆ ಸಹಾಯಕವಾಗುವ ದಿಸೆಯಲ್ಲಿ ವಿಕಾಸಗುಳ್ಳುತ್ತಾ ಬಂದಿತು. ಹೆಸರಿನ ವಿಶೇಷತೆ ಓಎಸ್ X ಹೆಸರಲ್ಲಿ X ಎಂಬುದು ರೋಮನ್ ಸಂಖ್ಯೆ (ಇಂಗ್ಲಿಷ್ ಅಕ್ಷರ ಎಕ್ಸ್ ಅಲ್ಲ). ಹಳೆಯ ಮ್ಯಾಕಿನ್ತೋಶ್(ಮ್ಯಾಕ್) ಕಾರ್ಯನಿರ್ವಹಣ ಸಾಧನಗಳಾದ ೮, ೯ ಇದೇ ಕ್ರಮದಲ್ಲಿ ಇದು ೧೦ನೆಯ ಅವತರಣಿಕೆ. ಆದರೆ ಇದನ್ನು ಎಕ್ಸ್ ಎಂದು ತಪ್ಪಾಗಿ ಬಳಸುವುದು ಕೂಡ ಸಾಮಾನ್ಯವಾಗಿದೆ. ಹಾಗೆಯೇ ಮ್ಯಾಕ್ ಓಎಸ್ X ನ ಎಲ್ಲ ಉಪ ಅವತರಣಿಕೆಗಳ ಒಂದು ವಿಶೇಷವೇನೆಂದರೆ ಬೆಕ್ಕಿನ ಪ್ರಭೇದದ ಪ್ರಾಣಿಗಳ ಹೆಸರನ್ನು ಬಳಸಿರುವುದು. ಆವೃತ್ತಿಗಳು ೧೦.೧ -ಮ್ಯಾಕ್ ಓಎಸ್ ಫ್ಯೂಮಾ ೧೦.೨ - ಮ್ಯಾಕ್ ಓಎಸ್ ಜಾಗ್ವಾರ್ ೧೦.೩ -ಮ್ಯಾಕ್ ಓಎಸ್ ಪ್ಯಾಂಥರ್ ೧೦.೪ -ಮ್ಯಾಕ್ ಓಎಸ್ ಟೈಗರ್ ೧೦.೫ -ಮ್ಯಾಕ್ ಓಎಸ್ ಲೆಪರ್ಡ್ ೧೦.೬ -ಮ್ಯಾಕ್ ಓಎಸ್ ಸ್ನೋ ಲೆಪರ್ಡ್ ೧೦.೭ -ಮ್ಯಾಕ್ ಓಎಸ್ ಲಯನ್(ಸಿಂಹ) ೧೦.೮-ಮ್ಯಾಕ್ ಓಎಸ್ ಮೌಂಟನ್ ಲಯನ್(ಬೆಟ್ಟದ ಸಿಂಹ) ತಂತ್ರಾಂಶ ಮ್ಯಾಕ್ ಓಎಸ್ X ತಂತ್ರಾಂಶ ಬರವಣಿಗೆಗೆ ಕೊಕೊ(Cocoa) ಫ್ರೇಮ್ ವರ್ಕ ಉಪಯೋಗಿಸಲಾಗುತ್ತದೆ. ಕೊ(Cocoa) ಫ್ರೇಮ್ ವರ್ಕ ಅನ್ನು ಆಬಜೆಕ್ಟೀವ್-ಸಿ(objective-c) ಭಾಷೆಯಲ್ಲಿ ಬರೆಯಲಾಗಿದೆ. ಯಂತ್ರಾಂಶ ಮ್ಯಾಕ್ ಓಎಸ್ ೧೦.೩ ವರೆಗಿನ ಕಾರ್ಯನಿರ್ವಹಣ ಸಾಧನ ppc ಯಂತ್ರಾಂಶದ ಮೇಲೆ ಕಾರ್ಯನಿರ್ವಹಿಸುತ್ತದೆ. ಮ್ಯಾಕ್ ಓಎಸ್ ೧೦.೪ ನಂತರದ ಆವೃತ್ತಿಗಳು ppc ಹಾಗೂ ಇಂಟೆಲ್ನ x86 ಯಂತ್ರಾಂಶದ ಮೇಲೆ ಕಾರ್ಯನಿರ್ವಹಿಸುತ್ತದೆ. ಉಲ್ಲೇಖಗಳು ಗಣಕಯಂತ್ರ ಕಾರ್ಯನಿರ್ವಹಣ ಸಾಧನ ತಂತ್ರಜ್ಞಾನ
2052
https://kn.wikipedia.org/wiki/%E0%B2%86%E0%B3%8D%E0%B2%AF%E0%B2%AA%E0%B2%B2%E0%B3%8D
ಆ್ಯಪಲ್
ಸೇಬಿನ ಹಣ್ಣಿನ ಬಗ್ಗೆ ಲೇಖನಕ್ಕಾಗಿ ಇಲ್ಲಿ ನೋಡಿ. ಆಪಲ್, ಅಮೇರಿಕಾದ ಒಂದು ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪನಿಯಾಗಿದೆ ಇದು ಗ್ರಾಹಕ ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸಾಫ್ಟ್ವೇರ್, ಮತ್ತು ಆನ್ಲೈನ್ ಸೇವೆಗಳನ್ನು ಒದಗಿಸುತ್ತದೆ. ಇದರ ಪ್ರಧಾನ ಕಚೇರಿ ಕ್ಯಾಲಿಫೋರ್ನಿಯಾದ ಅಮೇರಿಕಾದ ಕ್ಯುಪರ್ಟಿನೋ ದಲ್ಲಿದೆ. ಹಿನ್ನಲೆ ಏಪ್ರಿಲ್ 1976 ರಲ್ಲಿ ಸ್ಟೀವ್ ಜಾಬ್ಸ್, ಸ್ಟೀವ್ ವೋಜ್ನಿಯಾಕ್, ಮತ್ತು ರೋನಾಲ್ಡ್ ವೇಯ್ನ್ ರವರಿಂದ ಆಪಲ್ ಸ್ಥಾಪಿಸಲಾಯಿತು ಇದರ ಉದ್ದೇಶ ಕಂಪ್ಯೂಟರ್ಗಳ ಅಭಿವೃದ್ಧಿ ಮತ್ತು ಮಾರಾಟ ಮಾಡುವದಾಗಿತ್ತು . ಇದು ಜನವರಿ 1977 ರಲ್ಲಿ ಆಪಲ್ ಕಂಪ್ಯೂಟರ್, ಇಂಕ್ ಸಂಯೋಜಿಸಲ್ಪಟ್ಟಿತ್ತು, ಜನವರಿ 2007 ರಲ್ಲಿ ಆಪಲ್ ಇಂಕ್ ಎಂದು ಮರುನಾಮಕರಣ ಮಾಡಲಾಯಿತು. ಉತ್ಪನ್ನಗಳು ಐಫೋನ್ ಸ್ಮಾರ್ಟ್ ಫೋನ್, ಐಪ್ಯಾಡ್ ಟ್ಯಾಬ್ಲೆಟ್ ಕಂಪ್ಯೂಟರ್, ಮ್ಯಾಕ್ ವೈಯಕ್ತಿಕ ಕಂಪ್ಯೂಟರ್, ಐಪಾಡ್ ಪೋರ್ಟಬಲ್ ಮೀಡಿಯಾ ಪ್ಲೇಯರ್, ಆಪಲ್ ವಾಚ್ . . ಆಪಲ್ ಡಿಜಿಟಲ್ ಟಿವಿ ಮೀಡಿಯಾ ಪ್ಲೇಯರ್. ಆಪಲ್ನ ಸಾಫ್ಟ್ವೇರ್, ಮ್ಯಾಕ್ ಓಸ್ ಮತ್ತು ಐಒಎಸ್ ಐಟ್ಯೂನ್ಸ್ ಮೀಡಿಯಾ ಪ್ಲೇಯರ್, ಸಫಾರಿ ವೆಬ್ ಬ್ರೌಸರ್, ಮತ್ತು ಐಲೈಫ್ ಮತ್ತು ಐವರ್ಕ್ . ಆನ್ಲೈನ್ ಸೇವೆಗಳು ಐಟ್ಯೂನ್ಸ್, ಐಒಎಸ್ ಆಪ್ ಸ್ಟೋರ್ ಮ್ಯಾಕ್ ಆಪ್ ಸ್ಟೋರ್, ಆಪಲ್ ಸಂಗೀತ, ಐಕ್ಲೌಡ್ ಉಲ್ಲೇಖಗಳು ಬಾಹ್ಯ ಸಂಪರ್ಕಗಳು ಗಣಕಯಂತ್ರ ಮಾಹಿತಿ ತಂತ್ರಜ್ಞಾನ ಕಂಪನಿಗಳು
2053
https://kn.wikipedia.org/wiki/%E0%B2%AC%E0%B2%BF%E0%B2%B2%E0%B3%8D%20%E0%B2%97%E0%B3%87%E0%B2%9F%E0%B3%8D%E0%B2%B8%E0%B3%8D
ಬಿಲ್ ಗೇಟ್ಸ್
ವಿಲಿಯಂ ಹೆನ್ರಿ "ಬಿಲ್‌" ಗೇಟ್ಸ್‌ III (ಅಕ್ಟೋಬರ್‌ 28, 1955ರಲ್ಲಿ ಜನನ) ರವರು ಅಮೆರಿಕದ ಪ್ರಭಾವಿ ಉದ್ಯಮಿ , ಪರೋಪಕಾರಿ ಮತ್ತು ಪಾಲ್‌ ಅಲೆನ್‌ ಜೊತೆಗೂಡಿ ತಾವೇ ಸ್ಥಾಪಿಸಿದ ಮೈಕ್ರೋಸಾಫ್ಟ್‌ ಎಂಬ ಸಾಫ್ಟ್‌ವೇರ್‌ ಕಂಪನಿಯ ಅಧ್ಯಕ್ಷ. ಇವರು ವಿಶ್ವದ ಅತಿದೊಡ್ಡ ಸಿರಿವಂತರಲ್ಲಿ ಒಬ್ಬರೆಂಬ ಸ್ಥಾನವನ್ನು ಹಲವು ವರ್ಷಗಳಿಂದ ಸ್ಥಿರವಾಗಿ ಉಳಿಸಿಕೊಂಡು ಬಂದಿದ್ದಾರೆ ಮತ್ತು ಒಟ್ಟಾರೆಯಾಗಿ 2009 ರವರೆಗಿನ ವಿಶ್ವದ ಅತಿದೊಡ್ಡ ಸಿರಿವಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೈಕ್ರೋಸಾಫ್ಟ್‌ ಸಂಸ್ಥೆಯಲ್ಲಿನ ತಮ್ಮ ವೃತ್ತಿಜೀವನದಲ್ಲಿ, CEO ಹಾಗೂ ಮುಖ್ಯ ಸಾಫ್ಟ್‌ವೇರ್‌ ವಿನ್ಯಾಸಕನಂತಹ ಉನ್ನತ ಸ್ಥಾನಗಳಲ್ಲಿ ಇವರು ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಕಂಪನಿಯ ಸಾಮಾನ್ಯ ಸ್ಟಾಕ್‌ನ ಪೈಕಿ ಶೇ 8ಕ್ಕಿಂತ ಹೆಚ್ಚಿನ ಷೇರುಗಳನ್ನು ಹೊಂದಿರುವ ಮೈಕ್ರೋಸಾಫ್ಟ್‌ನ ಅತಿಡೊಡ್ಡ ಏಕವ್ಯಕ್ತಿ ಷೇರುದಾರರೆನಿಸಿಕೊಂಡಿದ್ದಾರೆ. ಹಲವಾರು ಪುಸ್ತಕಗಳಿಗೆ ಅವರು ಲೇಖಕ ಇಲ್ಲವೇ ಸಹ-ಲೇಖಕರಾಗಿದ್ದಾರೆ. ಪರ್ಸನಲ್‌ ಕಂಪ್ಯೂಟರ್‌ ಕ್ರಾಂತಿಯ ವಿಶ್ವಪ್ರಸಿದ್ಧ ಉದ್ಯಮಿಗಳಲ್ಲಿ ಬಿಲ್‌ ಗೇಟ್ಸ್‌ ಒಬ್ಬರು.ಹಲವರು ಇವರನ್ನು ಮೆಚ್ಚಿಕೊಂಡಿದ್ದಾರಾದರೂ, ಇವರ ವ್ಯಾಪಾರಿ ಕಾರ್ಯತಂತ್ರಗಳು ಸ್ಪರ್ಧಾಕ್ಮತೆಯ-ವಿರೋಧಿ ಎಂದು ಉದ್ಯಮದೊಳಗಿನ ಬಹಳಷ್ಟು ಮಂದಿ ಟೀಕಿಸುತ್ತಾರೆ. ಈ ಅಭಿಪ್ರಾಯವನ್ನು ಕೆಲವೊಂದು ಪ್ರಕರಣಗಳಲ್ಲಿ ನ್ಯಾಯಾಲಯಗಳು ಎತ್ತಿ ಹಿಡಿದಿವೆ ಮೈಕ್ರೋಸಾಫ್ಟ್‌ನ ಕುರಿತಾದ ಟೀಕೆಯನ್ನು ನೋಡಿ). ತಮ್ಮ ವೃತ್ತಿಜೀವನದ ನಂತರದ ಘಟ್ಟಗಳಲ್ಲಿ, ಬಿಲ್‌ & ಮೆಲಿಂಡ ಗೇಟ್ಸ್‌ ಪ್ರತಿಷ್ಠಾನದ ಮೂಲಕ ಹಲವು ದತ್ತಿ ಪ್ರತಿಷ್ಠಾನಗಳಿಗೆ ಮತ್ತು ವೈಜ್ಞಾನಿಕ ಸಂಶೋಧನೆಗಳಿಗೆ ದೊಡ್ಡ ಪ್ರಮಾಣದಲ್ಲಿ ಧನ ಸಹಾಯ ಮಾಡುವ ಮೂಲಕ ಹಲವು ಪರೋಪಕಾರಿ ಸಾಹಸಗಳಲ್ಲಿ ಗೇಟ್ಸ್‌ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 2000ರ ಜನವರಿಯಲ್ಲಿ ಬಿಲ್‌ ಗೇಟ್ಸ್‌ ಮೈಕ್ರೋಸಾಫ್ಟ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹುದ್ದೆಯಿಂದ ಕೆಳಗಿಳಿದರು. ಇದರ ನಂತರ ಕೇವಲ ಅಧ್ಯಕ್ಷರಾಗಿ ಉಳಿದ ಇವರು ಮುಖ್ಯ ಸಾಫ್ಟ್‌ವೇರ್ ವಿನ್ಯಾಸಕ ಎಂಬ ನೂತನ ಹುದ್ದೆಯನ್ನು ಸೃಷ್ಟಿಸಿದರು. ತಾವು ಮೈಕ್ರೋಸಾಫ್ಟ್‌ನ ಪೂರ್ಣಕಾಲಿಕ ಹುದ್ದೆಯಿಂದ ಅರೆಕಾಲಿಕ ಕೆಲಸದಲ್ಲಿ ತೊಡಗಿಕೊಳ್ಳುವುದಾಗಿ ಹಾಗೂ ಬಿಲ್‌ & ಮೆಲಿಂಡ ಗೇಟ್ಸ್ ಪ್ರತಿಷ್ಠಾನ‌ದಲ್ಲಿ ತಮ್ಮನ್ನು ಪೂರ್ಣಕಾಲಿಕವಾಗಿ ತೊಡಗಿಸಿಕೊಳ್ಳುವುದಾಗಿ 2006ರ ಜೂನ್‌ನಲ್ಲಿ ಗೇಟ್ಸ್‌ ಪ್ರಕಟಿಸಿದರು. ಇವರು ಕ್ರಮೇಣವಾಗಿ ತಮ್ಮ ಜವಾಬ್ದಾರಿಗಳನ್ನು ಮುಖ್ಯ ಸಾಫ್ಟ್‌ವೇರ್ ವಿನ್ಯಾಸಕರಾಗಿದ್ದ ರೇ ಓಝೀಹಾಗೂ ಸಂಶೋಧನೆ ಮತ್ತು ಕಾರ್ಯತಂತ್ರಗಳ ಮುಖ್ಯಾಧಿಕಾರಿಯಾದ್ದ ಕ್ರೇಗ್ ಮುಂಡೀಯವರಿಗೆ ವರ್ಗಾಯಿಸಿದರು. 2008ರ ಜೂನ್‌ 27 ಮೈಕ್ರೋಸಾಫ್ಟ್‌ನಲ್ಲಿನ ಬಿಲ್‌ ಗೇಟ್ಸ ತಮ್ಮ ಪೂರ್ಣಕಾಲಿಕ ದುಡಿಮೆಗೆ ವಿದಾಯ ಹೇಳಿದರು. ಈಗ ಅವರು ಮೈಕ್ರೋಸಾಫ್ಟ್‌ನ ಅಕಾರ್ಯಕಾರಿ ಅಧ್ಯಕ್ಷರಾಗಷ್ಟೇ ಉಳಿದಿದ್ದಾರೆ. ಬಾಲ್ಯ ಜೀವನ ಇಂಗ್ಲಿಷ್, ದಲ್ಬೈಒದ್ ಜರ್ಮನ್, ಐರಿಷ್, ಸ್ಕಾಟಿಷ್ ತಲೆಮಾರಿನ ವಿಲಿಯಂ ಎಚ್. ಗೇಟ್ಸ್, Sr. ಮತ್ತು ಮೇರಿ ಮ್ಯಾಕ್ಸ್‌ವೆಲ್‌ ಗೇಟ್ಸ್‌ ದಂಪತಿಗಳ ಮಗನಾಗಿ ವಾಷಿಂಗ್ಟನ್‌ನ ಸಿಯಾಟಲ್‌ನಲ್ಲಿ ಗೇಟ್ಸ್‌ ಜನಿಸಿದರು. ಇವರದು ಮೇಲ್ಮಧ್ಯಮ ವರ್ಗದ ಕುಟುಂಬ; ಇವರ ತಂದೆ ಪ್ರಖ್ಯಾತ ವಕೀಲರಾಗಿದ್ದರು ಮತ್ತು ಇವರ ತಾಯಿ ಫಸ್ಟ್‌ ಇಂಟರ್‌ಸ್ಟೇಟ್ ಬ್ಯಾಂಕ್‌ಸಿಸ್ಟಮ್‌ ಮತ್ತು ಯುನೈಟೆಡ್‌ ವೇ ಸಂಸ್ಥೆಗಳ ನಿರ್ದೇಶಕರ ಮಂಡಳಿಯಲ್ಲೊಬ್ಬರಾಗಿ ಸೇವೆ ಸಲ್ಲಿಸಿದ್ದರು. ಆಕೆಯ ತಂದೆ ಜೆ. ಡಬ್ಲ್ಯು. ಮ್ಯಾಕ್ಸ್‌ವೆಲ್, ನ್ಯಾಷನಲ್‌ ಬ್ಯಾಂಕ್‌ನ ಅಧ್ಯಕ್ಷರಾಗಿದ್ದರು. ಗೇಟ್ಸ್‌ಗೆ ಕ್ರಿಸ್ಟಿ (ಕ್ರಿಸ್ಟಿಯಾನ್ನೆ) ಎಂಬ ಹೆಸರಿನ ಒಬ್ಬರು ಅಕ್ಕ ಮತ್ತು ಲಿಬ್ಬಿ ಎಂಬ ಹೆಸರಿನ ಒಬ್ಬರು ತಂಗಿ ಇದ್ದಾರೆ. ಇವರು ತಮ್ಮ ಕುಟುಂಬದಲ್ಲಿನ ಗೇಟ್ಸ್‌ ಹೆಸರಿನ ನಾಲ್ಕನೇ ವ್ಯಕ್ತಿಯಾಗಿದ್ದರೂ ಸಹ, ವಿಲಿಯಂ ಗೇಟ್ಸ್‌ III ಅಥವಾ "ಟ್ರೇ" ಎಂದೇ ಅವರನ್ನು ಕರೆಯಲಾಗುತ್ತಿತ್ತು. ಏಕೆಂದರೆ ಅವರ ತಂದೆ ತಮ್ಮದೇ ಹೆಸರಿನ ಮುಂದಿದ್ದ III ಎಂಬ ಉತ್ತರ ಪ್ರತ್ಯಯವನ್ನು ಕೈಬಿಟ್ಟಿದ್ದರು. ಇವರು ಬಾಲ್ಯದಲ್ಲಿದ್ದಾಗ ತಮ್ಮ ಮಗ ಕಾನೂನು ಕ್ಷೇತ್ರದಲ್ಲಿ ವೃತ್ತಿಜೀವನ ನಡೆಸಬೇಕೆಂಬುದು ಗೇಟ್ಸ್ ಪೋಷಕರ ಬಯಕೆಯಾಗಿತ್ತು. ಇವರು ತಮ್ಮ 13ನೇ ವಯಸ್ಸಿನಲ್ಲಿ ಲೇಕ್‌ಸೈಡ್‌ ಸ್ಕೂಲ್‌ ಎಂಬ ಒಂದು ಮೀಸಲು ಪ್ರಾಥಮಿಕ ಶಾಲೆಗೆ ದಾಖಲಾದರು. ಇವರು ಎಂಟನೇ ತರಗತಿಯಲ್ಲಿದ್ದಾಗ ಶಾಲೆಯ ಮದರ್ಸ್‌ ಕ್ಲಬ್‌, ಲೇಕ್‌ಸೈಡ್‌ ಕೊಕ್ಕ್ಗ್ಕ್ಗುಜರಿ ಮಾರಾಟದಿಂದ ಬಂದ ಆದಾಯವನ್ನು ಶಾಲೆಯ ಮಕ್ಕಳಿಗೆ ASR-33 ಟೆಲಿಪ್ರಿಂಟರ್‌ ಸಾಧನ‌ ಮತ್ತು ‌ಜನರಲ್ ಎಲೆಕ್ಟ್ರಿಕ್(GE) ಕಂಪ್ಯೂಟರ್‌ನ, ಕಂಪ್ಯೂಟರ್‌ ಸಮಯದ ಒಂದು ವಿಭಾಗವನ್ನು ಕೊಳ್ಳಲು ಬಳಸಿಕೊಂಡಿತು. ಗೇಟ್ಸ್‌ BASICನಲ್ಲಿ GE ಸಿಸ್ಟಮ್‌ನ್ನು ಪ್ರೋಗ್ಯ್ರಾಮ್‌ ಮಾಡಲು ಆಸಕ್ತಿ ವಹಿಸಿದರು. ಇದನ್ನು ಸಾಧಿಸಲು ಇವರಿಗೆ ಗಣಿತ ತರಗತಿಗಳಿಂದ ವಿಯಾಯಿತಿ ದೊರೆಯಿತು. ಇದೇ ಯಂತ್ರದ ಮೇಲೆ ಗೇಟ್ಸ್‌ ತಮ್ಮ ಮೊದಲ ಕಂಪ್ಯೂಟರ್‌ ಪ್ರೊಗ್ರಾಮ್‌ ಅನ್ನು ಬರೆದರು. ಇದು ಟಿಕ್‌-ಟ್ಯಾಕ್‌-ಟೋ ಎಂಬ ವಿಶಿಷ್ಟ ಚೌಕದಾಟದ ಅಳವಡಿಕೆಯಾಗಿದ್ದು, ಕಂಪ್ಯೂಟರ್‌ಗೆ ಎದುರಾಗಿ ಕುಳಿತು ಬಳಕೆದಾರರು ಆಟಗಳನ್ನಾಡಲು ಇದು ಅವಕಾಶ ಒದಗಿತು. ಈ ಯಂತ್ರದಿಂದ ಮತ್ತು ತಂತ್ರಾಂಶದ ಸಂಕೇತಗಳನ್ನು (ಸಾಫ್ಟ್‌ವೇರ್‌ ಕೋಡ್‌ಗಳನ್ನು) ಎಲ್ಲ ಸಮಯದಲ್ಲೂ ಕರಾರುವಾಕ್ಕಾಗಿ ಕಾರ್ಯರೂಪಕ್ಕೆ ತರುವ ಇದರ ಕಾರ್ಯಕ್ಷಮತೆಯ ಪರಿಯಿಂದ ಗೇಟ್ಸ್‌ರವರು ಮೋಡಿಗೊಳಗಾಗಿದ್ದರು. ತನ್ನ ವಿಚಾರ ಮಂಥನದಿಂದ ಆ ಕ್ಷಣಕ್ಕೆ ಹಿಂದಕ್ಕೆ ಬಂದ ಅವರು ಆ ಕುರಿತು ವರ್ಣಿಸುತ್ತಾ, "ಈ ಯಂತ್ರದಲ್ಲಿ ಅಚ್ಚುಕಟ್ಟುತನದಿಂದ ಕೂಡಿರುವಂಥಾದ್ದೇನೋ ಇತ್ತು" ಎಂದು ಉದ್ಗರಿಸಿದರು. ಮದರ್ಸ್ ಕ್ಲಬ್‌ನ ದೇಣಿಗೆ ಖಾಲಿಯಾದ ಮೇಲೆ, ಗೇಟ್ಸ್‌ ಮತ್ತು ಇತರೆ ವಿದ್ಯಾರ್ಥಿಗಳು DEC [[ಪ್ರೋಗ್ಯ್ರಾಮ್‌ ಮಾಡಲಾದ ದತ್ತಾಂಶ ಸಂಸ್ಕಾರಕ |PDP]] ಮಿನಿಕಂಪ್ಯೂಟರ್‌ಗಳನ್ನು ಒಳಗೊಂಡಂತೆ ವಿವಿಧ ವಿನ್ಯಾಸದ ಕಂಪ್ಯೂಟರ್‌ಗಳಿಗೆ ಸಮಯವನ್ನು ವಿನಿಯೋಗಿಸುತ್ತಾ ಬಂದರು. ಈ ಸಿಸ್ಟಮ್‌ಗಳಲ್ಲೊಂದಾದ PDP-10, ಕಂಪ್ಯೂಟರ್ ಸೆಂಟರ್‌ ಕಾರ್ಪೊರೇಷನ್‌ (CCC)ಸಂಸ್ಥೆಗೆ ಸೇರಿತ್ತು. ಈ ಕಂಪನಿಯು ಲೇಕ್‌ಸೈಡ್‌ ಸ್ಕೂಲ್‌ನ ನಾಲ್ವರು ವಿದ್ಯಾರ್ಥಿಗಳಾದ ಗೇಟ್ಸ್‌, ಪಾಲ್‌ ಅಲೆನ್‌, ರಿಕ್ ವೀಲ್ಯಾಂಡ್‌, ಮತ್ತು ಕೆಂಟ್‌ ಇವಾನ್ಸ್‌ರವರ ಮೇಲೆ ಬೇಸಿಗೆಯ ಅವಧಿಗೆ ಬಹಿಷ್ಕಾರ ಹೇರಿತ್ತು. ಉಚಿತವಾದ ಕಂಪ್ಯೂಟರ್‌ ಕಾಲಾವಕಾಶವನ್ನು ಪಡೆಯಲು ಕಂಪ್ಯೂಟರ್‌ನಲ್ಲಿ ಆಪರೇಟಿಂಗ್‌ ಸಿಸ್ಟಂನಲ್ಲಿದ್ದ ನ್ಯೂನತೆಗಳ ಪ್ರಯೋಜನವನ್ನು ಪಡೆಯುತ್ತಿದ್ದ ಕಾರಣಕ್ಕಾಗಿ ಕಂಪನಿಯು ಅವರನ್ನು ಹಿಡಿದುಹಾಕಿದ ನಂತರ ಈ ಬಹಿಷ್ಕಾರವನ್ನು ಹೇರಿತ್ತು. ನಿಷೇಧದ ಅವಧಿ ಕೊನೆಯಾಗುವ ಹೊತ್ತಿಗೆ, ತಮಗೆ ಬೇಕಿರುವ ಕಂಪ್ಯೂಟರ್‌ನ ಕಾಲಾವಕಾಶಕ್ಕೆ ಪ್ರತಿಯಾಗಿ CCCಯ ತಂತ್ರಾಂಶದಲ್ಲಿರುವ ನ್ಯೂನತೆಗಳನ್ನು ಕಂಡುಹಿಡಿದುಕೊಡುವ ಪ್ರಸ್ತಾವವನ್ನು ಈ ನಾಲ್ವರು ವಿದ್ಯಾರ್ಥಿಗಳು ಮುಂದಿಟ್ಟರು. ಟೆಲಿಪ್ರಿಂಟರ್‌ ಮೂಲಕವಾಗಿ ಸಿಸ್ಟಮ್‌ ಅನ್ನು ಬಳಸುವುದಕ್ಕೆ ಬದಲು, CCCಯ ಕಚೇರಿಗಳಿಗೆ ತೆರಳಿದ ಗೇಟ್ಸ್‌, ಸಿಸ್ಟಮ್‌ನ್ನು ನಡೆಸುತ್ತಿದ್ದ ವಿವಿಧ ಪ್ರೋಗ್ರ್ಯಾಮ್‌ಗಳ ಮೂಲ ಸಂಕೇತಗಳನ್ನು (ಸೋರ್ಸ್‌ ಕೋಡ್‌) ಅಧ್ಯಯನ ಮಾಡಿದರು. ಈ ಪ್ರೋಗ್ರ್ಯಾಮ್‌ಗಳಲ್ಲಿ FORTRAN, LISP ಹಾಗೂ ಯಂತ್ರಭಾಷೆ (ಮೆಷೀನ್‌ ಲಾಂಗ್ವೇಜ್‌)ಯಲ್ಲಿನ ಪ್ರೋಗ್ರ್ಯಾಮ್‌ಗಳೂ ಸೇರಿದ್ದವು. CCC ಸಂಸ್ಥೆಯೊಂದಿಗಿನ ಇವರ ಸಂಬಂಧವು ಕಂಪನಿ ಉದ್ಯಮದಿಂದ ಹೊರಗುಳಿಯುವವರೆಗೂ, ಅಂದರೆ, 1970ರವರೆಗೂ ಮುಂದುವರಿಯಿತು. ಇದರ ನಂತರದ ವರ್ಷದಲ್ಲಿ, ಇನ್‌ಫರ್ಮೇಷನ್‌ ಸೈನ್ಸಸ್‌ ಇಂಕ್‌ ಎಂಬ ಸಂಸ್ಥೆಯು ಲೇಕ್‌ಸೈಡ್‌ ಸ್ಕೂಲ್‌ನ ಈ ನಾಲ್ಕು ವಿದ್ಯಾರ್ಥಿಗಳನ್ನು ಕೆಲಸಕ್ಕೆ ತೆಗೆದುಕೊಂಡು, COBOLನಲ್ಲಿ ಸಂಬಳದಾರರ ಪಟ್ಟಿಯ (ಪೇ ರೋಲ್‌) ಪ್ರೋಗ್ಯ್ರಾಮ್‌ ಒಂದನ್ನು ರಚಿಸಲು ಅವಕಾಶನೀಡುವುದರ ಜೊತೆಗೆ, ಕಂಪ್ಯೂಟರ್‌ ಕಾಲಾವಕಾಶ ಹಾಗೂ ರಾಯಧನವನ್ನೂ ಅವರಿಗೆ ನೀಡಿತು.ಪ್ರೋಗ್ರ್ಯಾಮ್‌ ಬರೆಯುವುದಕ್ಕೆ ಸಂಬಂಧಿಸಿದಂತೆ ಗೇಟ್ಸ್‌ ಹೊಂದಿದ್ದ ಸಾಮರ್ಥ್ಯವು ಸಂಸ್ಥೆಯ ಆಡಳಿತಗಾರರ ಅರಿವಿಗೆ ಬಂದನಂತರ, ತಮ್ಮ ಶಾಲೆಯ ತರಗತಿಗಳಲ್ಲಿನ ವಿದ್ಯಾರ್ಥಿಗಳನ್ನು ಪಟ್ಟಿಮಾಡುವುದಕ್ಕೆ ಗೇಟ್ಸ್‌ ಶಾಲೆಯ ಕಂಪ್ಯೂಟರ್‌ ಪ್ರೋಗ್ರ್ಯಾಮ್‌ನ್ನು ಬರೆದರು.ಬಹುತೇಕ ಹುಡುಗಿಯರೇ ತುಂಬಿದ್ದ ತರಗತಿಗಳಲ್ಲಿ ತಮ್ಮನ್ನು ಕೂರಿಸಲೆಂಬ ಉದ್ದೇಶದಿಂದ ಅವರು ಸಂಕೇತಗಳನ್ನು ಮಾರ್ಪಡಿಸಿದರು. ಈ ಕುರಿತು ಅವರು ನಂತರ ಮಾತಾಡುತ್ತಾ, "ನಾನು ಸುಸ್ಪಷ್ಟವಾಗಿ ಯಶಸ್ಸನ್ನು ಪ್ರದರ್ಶಿಸಿದ ಯಂತ್ರವೊಂದರಿಂದ ಒಲ್ಲದ ಮನಸ್ಸಿನಿಂದ ದೂರ ಸರಿಯಲು ತುಂಬಾ ಕಷ್ಟವಾಗಿತ್ತು" ಎಂದು ಅಭಿಪ್ರಾಯಪಟ್ಟರು. ತಮ್ಮ 17ನೇ ವಯಸ್ಸಿನಲ್ಲಿ ಗೇಟ್ಸ್‌, ಇಂಟೆಲ್ 8008 ಪ್ರೊಸೆಸರ್‌ ಅನ್ನು ಆಧರಿಸಿ ಟ್ರಾಫಿಕ್‌ ಕೌಂಟರ್‌ಗಳನ್ನು ರೂಪಿಸಲು ಸ್ನೇಹಿತ ಅಲೆನ್‌ ಜೊತೆ ಸೇರಿ ಟ್ರ್ಯಾಫ್‌-ಓ-ಡಾಟ ಎಂಬ ಹೊಸ ಸಾಹಸಕ್ಕೆ ಕೈಹಾಕಿದರು. 1973ರ ಆರಂಭಿಕ ದಿನಗಳಲ್ಲಿ U.S.ನ ಹೌಸ್‌ ಆಫ್ ರೆಪ್ರೆಸೆಂಟೇಟಿವ್ಸ್‌‌ನಲ್ಲಿ ಕಾಂಗ್ರೆಸ್ಸಿನ ದೂತನಾಗಿ ಗೇಟ್ಸ್‌ ಸೇವೆ ಸಲ್ಲಿಸಿದರು. ಗೇಟ್ಸ್‌‌ 1973ರಲ್ಲಿ ಲೇಕ್‌ಸೈಡ್‌ ಸ್ಕೂಲ್‌ನಿಂದ ಪದವಿ ಪಡೆದರು. ಇವರುSAT ಪರೀಕ್ಷೆಯಲ್ಲಿ 1600ಕ್ಕೆ 1590 ಅಂಕ ಗಳಿಸಿದರು. ತರುವಾಯ ಉನ್ನತ ವಿದ್ಯಾಭ್ಯಾಸಕ್ಕಾಗಿ 1973ರ ಅಂತ್ಯದ ವೇಳೆಗೆ ಹಾರ್ವರ್ಡ್ ಕಾಲೇಜ್‌ಗೆ ಸೇರಿದರು. 1990ರ ದಶಕದ ಮಧ್ಯ ಭಾಗಕ್ಕೂ ಮುಂಚೆ SAT ಪರೀಕ್ಷೆಯಲ್ಲಿ 1590 ಅಂಕ ಗಳಿಸಿದರೆ, ಅಂತಹವರ IQ ಅಂದಾಜು 170 ಎಂದು ಭಾವಿಸಲಾಗಿತ್ತು. ಈ ಅಂಶ ಆಗಿನ ಮಾಧ್ಯಮಗಳಲ್ಲಿ ಆಗಿದಾಂಗ್ಗೆ ಪ್ರಕಟವಾಗುತ್ತಲೇ ಇತ್ತು. ಹಾರ್ವರ್ಡ್‌‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ಗೇಟ್ಸ್‌, ಸ್ಟೀವ್‌ ಬಾಲ್ಮರ್‌ ಎಂಬ ಹೆಸರಿನ ತಮ್ಮ ಭವಿಷ್ಯದ ವ್ಯವಹಾರದ ಪಾಲುದಾರರನ್ನು ಭೇಟಿಯಾದರು. ಇವರೇ ಮುಂದೆ ಮೈಕ್ರೋಸಾಫ್ಟ್‌ನ CEO ಆಗಿ ನೇಮಕವಾದರು. ಕಂಪ್ಯೂಟರ್‌ ವಿಜ್ಞಾನಿ ಕ್ರಿಸ್ಟೋಸ್‌‌ ಪ್ಯಾಪಡಿಮಿಟ್ರಿಯೊ ಎಂಬುವವರರನ್ನೂ ಇದೇ ಹಾರ್ವರ್ಡ್‌ನಲ್ಲಿ ಭೇಟಿಯಾದರು. ಗೇಟ್ಸ್ ಮುಂದೆ ಪ್ಯಾನ್‌ಕೇಕ್‌ ಸಾರ್ಟಿಂಗ್‌ ಎಂದು ಹೇಳಲಾಗುವ ವಿಶಿಷ್ಟ ಸಮಸ್ಯಾ ಪರಿಹಾರಕ ಸೂತ್ರದ ಕುರಿತಾದ ಒಂದು ಪತ್ರಿಕೆಯಲ್ಲಿ ಇವರ ಜೊತೆಗೂಡಿ ಕೆಲಸ ಮಾಡಿದರು. ಇವರು ಹಾರ್ವರ್ಡ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ಒಂದು ನಿಶ್ಚಿತವಾದ ಅಧ್ಯಯನದ ಯೋಜನೆಯನ್ನು ಹೊಂದಿರಲಿಲ್ಲ. ಅಲ್ಲದೆ ಶಾಲೆಯ ಕಂಪ್ಯೂಟರ್‌ಗಳನ್ನು ಬಳಸುವುದರಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದರು. ಪಾಲ್‌ ಅಲೆನ್‌ರೊಂದಿಗೆ ಸಂಪರ್ಕ ಉಳಿಸಿಕೊಂಡಿದ್ದ ಗೇಟ್ಸ್‌, 1974ರ ಬೇಸಗೆಯಲ್ಲಿ ಹನಿವೆಲ್‌ನಲ್ಲಿ ಅವರನ್ನು ಸೇರಿಕೊಂಡರು. ಇದರ ನಂತರದ ವರ್ಷದಲ್ಲಿ ಇಂಟೆಲ್‌ 8080 CPU ಆಧಾರಿತ MITS ಆಲ್ಟೇರ್‌ 8800 ಬಿಡುಗಡೆಯಾಯಿತು. ಇದನ್ನು ನೋಡಿದ ಗೇಟ್ಸ್ ಮತ್ತು ಅಲೆನ್‌, ತಮ್ಮದೇ ಸ್ವಂತ ಕಂಪ್ಯೂಟರ್‌ ಸಾಫ್ಟ್‌ವೇರ್‌ ಕಂಪನಿಯನ್ನು ಸ್ಥಾಪಿಸಲು ಇದು ಸಕಾಲ ಎಂದು ತೀರ್ಮಾನಿಸಿದರು. ಈ ನಿರ್ಧಾರದ ಬಗ್ಗೆ ಗೇಟ್ಸ್ ತನ್ನ ಹೆತ್ತವರೊಂದಿಗೆ ಚರ್ಚಿಸಿದರು. ತನ್ನದೇ ಸಂಸ್ಥೆ ಸ್ಥಾಪಿಸುವ ವಿಚಾರದಲ್ಲಿ ಗೇಟ್ಸ್‌ ಅವರಿಗಿದ್ದ ಬಯಕೆಯನ್ನು ಕಣ್ಣಾರೆ ಕಂಡಿದ್ದ ಅವರು ತಮ್ಮ ಮಗನ ಕೆಲಸಕ್ಕೆ ಬೆಂಬಲ ಸೂಚಿಸಿದರು. ಮೈಕ್ರೋಸಾಫ್ಟ್ BASIC ] ಪಾಪುಲರ್ ಎಲೆಕ್ಟ್ರಾನಿಕ್ಸ್ ಪತ್ರಿಕೆಯು ತನ್ನ 1975ರ ಜನವರಿ ಸಂಚಿಕೆಯಲ್ಲಿ ಆಲ್ಟೇರ್‌ 8800 ಬಗ್ಗೆ ವಿವರವಾಗಿ ಬರೆದಿತ್ತು. ಇದನ್ನು ಓದಿದ ಗೇಟ್ಸ್‌, ಹೊಸ ಮೈಕ್ರೋಕಂಪ್ಯೂಟರ್ ಸೃಷ್ಟಿಸಿದ ಮೈಕ್ರೋ ಇನ್‌ಸ್ಟ್ರುಮೆಂಟೇಷನ್‌ ಅಂಡ್‌ ಟೆಲಿಮೆಟ್ರಿ ಸಿಸ್ಟಮ್ಸ್‌ (MITS) ಸಂಸ್ಥೆಯನ್ನು ಸಂಪರ್ಕಿಸಿ, ತಾವು ಮತ್ತು ತಮ್ಮ ಸ್ನೇಹಿತರು ಅದೇ ನೆಲೆಗಟ್ಟಿಗಾಗಿ BASIC ಇಂಟರ್‌ಪ್ರಿಟರ್ ಒಂದರ ಮೇಲೆ ಈಗಾಗಲೇ ಕೆಲಸ ಮಾಡಲು ಆರಂಭಿಸಿದ್ದುದನ್ನು ತಿಳಿಸಿದರು. ವಾಸ್ತವದಲ್ಲಿ ಗೇಟ್ಸ್‌ ಮತ್ತು ಅಲೆನ್‌ ಬಳಿ ಆಲ್ಟೇರ್‌ ಇರಲೇ ಇಲ್ಲ. ಜೊತೆಗೆ ಇದಕ್ಕಾಗಿ ಯಾವುದೇ ಸಂಕೇತವನ್ನೂ ಬರೆದಿರಲಿಲ್ಲ. MITSನ ಆಸಕ್ತಿಯನ್ನು ಅಳೆಯುವ ಉದ್ದೇಶದಿಂದಷ್ಟೇ ಅವರಿಬ್ಬರೂ ಈ ರೀತಿ ಹೇಳಿದ್ದರು. MITS ಅಧ್ಯಕ್ಷ ಎಡ್‌ ರಾಬರ್ಟ್ಸ್ ಇವರನ್ನು ಭೇಟಿ ಮಾಡಲು ಒಪ್ಪಿ ಪ್ರಯೋಗಾರ್ಥ ಪ್ರದರ್ಶನಕ್ಕಾಗಿ ಇವರನ್ನು ಆಹ್ವಾನಿಸಿದರು. ಕೆಲವು ವಾರಗಳ ನಂತರ ಇವರು ಮಿನಿಕಂಪ್ಯೂಟರ್‌ನಲ್ಲಿ ಚಾಲನೆಯಾಗುವ ಆಲ್ಟೇರ್‌ ಎಮ್ಯುಲೇಟರ್‌ ಎಂಬ ಸೂತ್ರವನ್ನು ಮತ್ತು ಇದರ ನಂತರ BASIC ಇಂಟರ್‌ಪ್ರಿಟರ್‌ ಅನ್ನು ಆಭಿವೃದ್ಧಿಪಡಿಸಿದರು. ಅಲ್ಬುಕರ್ಕ್‌ನಲ್ಲಿರುವ MITSನ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಪ್ರಯೋಗಾರ್ಥ ಪ್ರದರ್ಶನದಲ್ಲಿ ಗೇಟ್ಸ್‌ಗೆ ಅಮೋಘ ಯಶಸ್ಸು ದೊರೆಯಿತಲ್ಲದೆ, ಇಂಟರ್‌ಪ್ರಿಟರ್‌ಗಳನ್ನು ಆಲ್ಟೇರ್‌ BASIC ಸ್ವರೂಪದಲ್ಲಿ ವಿತರಿಸುವ ಕುರಿತು MITSನೊಂದಿಗೆ ಒಡಂಬಡಿಕೆ ಏರ್ಪಟ್ಟಿತು. ಪಾಲ್‌ ಅಲೆನ್‌ ಅವರನ್ನು ಉದ್ಯೋಗಿಯಾಗಿ MITS ನೇಮಿಸಿಕೊಂಡಿತು. ಹಾಗೂ ಗೇಟ್ಸ್‌‌ ಅಲ್ಬುಕರ್ಕ್‌ನಲ್ಲಿನ MITS ಕಚೇರಿಯಲ್ಲಿ ಅಲೆನ್‌ನೊಂದಿಗೆ ಕೆಲಸ ಮಾಡಲು ಹಾರ್ವರ್ಡ್‌ನಿಂದ 1975ರ ನವೆಂಬರ್‌ನಲ್ಲಿ ಗೈರುಹಾಜರಿ ರಜೆ‌ಯನ್ನು ಪಡೆದರು. ಗೇಟ್ಸ್‌ ಮತ್ತು ಅಲೆನ್‌ ತಮ್ಮ ಪಾಲುದಾರಿಕೆಯನ್ನು "ಮೈಕ್ರೋ-ಸಾಫ್ಟ್‌" ಎಂದು ಹೆಸರಿಸಿ, ತಮ್ಮ ಮೊದಲ ಕಚೇರಿಯನ್ನು ಅಲ್ಬುಕರ್ಕ್‌ನಲ್ಲಿ ತೆರೆದರು. ಒಂದೇ ವರ್ಷದಲ್ಲಿ ಕಂಪನಿಯ ಹೆಸರಿನ ನಡುವೆ ಇದ್ದ ಅಡ್ಡಗೆರೆಯನ್ನು(-) ಕೈಬಿಡಲಾಯಿತು. ಅಲ್ಲದೆ 1976ರ ನವೆಂಬರ್‌‌ 25ರಂದು "ಮೈಕ್ರೋಸಾಫ್ಟ್‌" ಹೆಸರಿನ ವ್ಯಾಪಾರನಾಮವನ್ನು ಸೆಕ್ರೆಟರಿ ಆಫ್‌ ಸ್ಟೇಟ್‌ ಆಫ್‌ ನ್ಯೂ ಮೆಕ್ಸಿಕೋ ಕಚೇರಿಯಲ್ಲಿ ನೋಂದಾಯಿಸಲಾಯಿತು. ಇದಾದ ನಂತರ, ಅರ್ಧಕ್ಕೆ ನಿಲ್ಲಿಸಿದ್ದ ವ್ಯಾಸಂಗವನ್ನು ಪೂರ್ಣಗೊಳಿಸಲು ಗೇಟ್ಸ್‌ರವರು ಮತ್ತೆ ಹಾರ್ವರ್ಡ್‌ಗೆ ಹಿಂದಿರುಗಲೇ ಇಲ್ಲ. ಕಂಪ್ಯೂಟರ್‌ ಹವ್ಯಾಸಿಗಳಲ್ಲಿ ಮೈಕ್ರೋಸಾಫ್ಟ್ನ BASIC ಸಾಕಷ್ಟು ಜನಪ್ರಿಯವಾಯಿತು. ಆದರೆ ಮಾರುಕಟ್ಟೆ ಮಾಡುವುದಕ್ಕೆ ಮುಂಚಿನ ನಕಲೊಂದು ಬಳಕೆದಾರರ ಮಧ್ಯೆ ಸೋರಿಕೆಯಾಗಿ, ಅನಧಿಕೃತ ರೀತಿಯಲ್ಲಿ ವ್ಯಾಪಕವಾಗಿ ವಿತರಣೆಯಾಗುತ್ತಿದೆ ಎಂಬುದನ್ನು ಗೇಟ್ಸ್‌ ಪತ್ತೆ ಹಚ್ಚಿದರು. 1976ರ ಫೆಬ್ರವರಿಯಲ್ಲಿ ಗೇಟ್ಸ್‌ MITS ಸುದ್ದಿಪತ್ರದಲ್ಲಿ ಹವ್ಯಾಸಿಗಳಿಗೊಂದು ಮುಕ್ತ ಪತ್ರ ವನ್ನು ಬರೆದರು. ಹಣ ಪಾವತಿಯಾಗದೆ MITS ಸಂಸ್ಥೆಯು ಸಾಫ್ಟ್‌ವೇರ್‌ನ ಉತ್ಪಾದನೆ, ವಿತರಣೆಯನ್ನು ಮುಂದುವರೆಸಲು ಸಾಧ್ಯವಿಲ್ಲ ಹಾಗೂ ಸಾಫ್ಟ್‌ವೇರ್‌ನ ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಸಾಧ್ಯವಾಗುವುದಿಲ್ಲ ಎಂಬ ವಿಷಯವನ್ನು ಆ ಪತ್ರ ಒಳಗೊಂಡಿತ್ತು. ಈ ಮುಕ್ತ ಪತ್ರ ಅನೇಕ ಕಂಪ್ಯೂಟರ್‌ ಹವ್ಯಾಸಿಗಳ ನಡುವೆ ಅಪಖ್ಯಾತಿಗೆ ಗುರಿಯಾಯಿತು. ಆದರೆ ಸಾಫ್ಟ್‌ವೇರ್‌ ಅಭಿವೃದ್ಧಿ ಮಾಡುವವರು ತಮ್ಮ ಉತ್ಪನ್ನಗಳಿಗೆ ಸಲ್ಲಬೇಕಾದ ಪಾವತಿಯನ್ನು ಕೇಳುವ ಸಾಮರ್ಥ್ಯ ಹೊಂದಿರಬೇಕು ಎಂದು ಗೇಟ್ಸ್‌ ದೃಢವಾಗಿ ನಂಬಿದ್ದರು. ಮೈಕ್ರೋಸಾಫ್ಟ್ 1976ರ ಉತ್ತರಾರ್ಧದಲ್ಲಿ MITS ಕಂಪನಿಯಿಂದ ಹೊರಬಂದು ಸ್ವತಂತ್ರವಾಯಿತು. ಅಲ್ಲದೆ ವಿವಿಧ ಸಿಸ್ಟಮ್‌ಗಳಿಗೆ ಪ್ರೋಗ್ಯ್ರಾಮಿಂಗ್‌ ಭಾಷೆ ತಂತ್ರಾಂಶವನ್ನು ಅಭಿವೃದ್ಧಿಪಡಿಸುವ ಕೆಲಸವನ್ನು ಮುಂದುವರಿಸಿತು. 1979ರ ಜನವರಿ 1ರಂದು ಅಲ್ಬುಕರ್ಕ್‌ನಿಂದ ವಾಷಿಂಗ್ಟನ್‌ನ ಬೆಲ್ಲೆವ್ಯೂ ನಗರದಲ್ಲಿನ ಹೊಸ ಕಚೇರಿಗೆ ಕಂಪನಿಯು ಸ್ಥಳಾಂತರಗೊಂಡಿತು. ಮೈಕ್ರೋಸಾಫ್ಟ್‌‌ನ ಆರಂಭಿಕ ವರ್ಷಗಳಲ್ಲಿ ಕಂಪನಿಯ ವ್ಯವಹಾರಕ್ಕೆ ಸಂಬಂಧಿಸಿ ಎಲ್ಲ ಉದ್ಯೋಗಿಗಳೂ ವ್ಯಾಪಕ ಹೊಣೆಗಾರಿಕೆಯನ್ನು ಹೊಂದಿದ್ದರು. ಸಾಫ್ಟ್‌ವೇರ್‌ ಸಂಕೇತಗಳನ್ನು ಬರೆಯುವ ಕೆಲಸವನ್ನು ಗೇಟ್ಸ್‌ ಮುಂದುವರಿಸಿದರಲ್ಲದೆ, ಕಂಪನಿಯ ವ್ಯವಹಾರದ ಮೇಲ್ವಿಚಾರಣೆಯನ್ನೂ ನೋಡಿಕೊಂಡರು. ಆರಂಭದ ಐದು ವರ್ಷಗಳಲ್ಲಿ ಕಂಪನಿ ಬರೆಯುವ ಎಲ್ಲ ಕೋಡ್‌ಗಳನ್ನು ಇವರೇ ಸ್ವತಃ ಪರೀಕ್ಷಿಸಿದರು. ಅಲ್ಲದೆ ಅಗತ್ಯ ಕಂಡುಬಂದಾಗಲೆಲ್ಲಾ ಅದರ ಕೆಲವು ಭಾಗಗಳನ್ನು ಮರು ರಚಿಸುತ್ತಿದ್ದರು. IBM ಪಾಲುದಾರಿಕೆ 1980ರಲ್ಲಿ IBM ಕಂಪನಿಯು ತನ್ನ ಮುಂಬರುವ IBM PC ಎಂಬ ಹೆಸರಿನ ಪರ್ಸನಲ್‌ ಕಂಪ್ಯೂಟರ್‌ಗೆ BASIC ಇಂಟರ್‌ಪ್ರಿಟರ್‌ ಬರೆದುಕೊಡುವಂತೆ ಮೈಕ್ರೋಸಾಫ್ಟ್‌ ಕಂಪನಿಯಲ್ಲಿ ಪ್ರಸ್ತಾವನೆ ಸಲ್ಲಿಸಿತು. ತಮಗೆ ಒಂದು ಆಪರೇಟಿಂಗ್ ಸಿಸ್ಟಮ್‌ನ ಅಗತ್ಯವಿದೆ ಎಂದು IBMನ ಪ್ರತಿನಿಧಿಗಳು ಹೇಳಿದಾಗ, ಅಗಿನ ಕಾಲದಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿದ್ದ CP/M ಆಪರೇಟಿಂಗ್‌ ಸಿಸ್ಟಮ್‌ನ ತಯಾರಕರಾಗಿದ್ದ ಡಿಜಿಟಲ್‌ ರಿಸರ್ಚ್(DRI) ಕಂಪನಿಯ ಹೆಸರನ್ನು ಗೇಟ್ಸ್‌ ಸೂಚಿಸಿದರು. ಡಿಜಿಟಲ್‌ ರಿಸರ್ಚ್‌ ಕಂಪನಿಯೊಂದಿಗಿನ IBM ಮಾತುಕತೆಗಳು ನಿರೀಕ್ಷಿತ ಮಟ್ಟದಲ್ಲಿರದಿದ್ದುದರಿಂದ, ಪರವಾನಗಿಯ ಒಪ್ಪಂದವು ಅವರ ಕೈಗೆ ಸಿಗಲಿಲ್ಲ. IBM ಪ್ರತಿನಿಧಿಯಾಗಿದ್ದ ಜಾಕ್‌ ಸ್ಯಾಮ್ಸ್‌, ಗೇಟ್ಸ್‌ರೊಂದಿಗಿನ ತಮ್ಮ ಮುಂದಿನ ಭೇಟಿಯಲ್ಲಿ ಪರವಾನಗಿ ಪಡೆಯುವಲ್ಲಿನ ತೊಂದರೆಗಳನ್ನು ವಿವರಿಸಿ, ಸ್ವೀಕಾರಾರ್ಹ ಆಪರೇಟಿಂಗ್‌ ಸಿಸ್ಟಮ್‌ ಒಂದನ್ನು ಅಭಿವೃದ್ಧಿಪಡಿಸಿಕೊಡುವಂತೆ ಕೇಳಿಕೊಂಡರು.ಕೆಲವು ವಾರಗಳ ನಂತರ, ಗೇಟ್ಸ್‌ CP/Mಗೆ ಸಮಾನವಾಗಿದ್ದ 86-DOS (QDOS) ಎಂಬ ಆಪರೇಟಿಂಗ್‌ ಸಿಸ್ಟಮ್‌ ಒಂದನ್ನು ಬಳಸಿಕೊಳ್ಳಲು ಉದ್ದೇಶಿಸಿದರು. ಇದನ್ನು PCಯ ರೀತಿಯಲ್ಲೇ ಇದ್ದ ಯಂತ್ರಾಂಶವೊಂದಕ್ಕೆ ಒಂದಕ್ಕೆ ಸಿಯಾಟಲ್‌ ಕಂಪ್ಯೂಟರ್‌ ಪ್ರಾಡಕ್ಟ್ಸ್‌(SCP)ನ ಟಿಮ್‌ ಪೀಟರ್ಸನ್‌ ಎಂಬುವವರು ಅಭಿವೃದ್ಧಿಪಡಿಸಿದ್ದರು. SCP ಕಂಪನಿಯೊಂದಿಗೆ ಮೈಕ್ರೋಸಾಫ್ಟ್‌ ಒಪ್ಪಂದ ಮಾಡಿಕೊಂಡು, ಅವರ ಏಕೈಕ ಪರವಾನಗಿ ಏಜೆಂಟ್‌ ಆಯಿತು. ತದನಂತರ 86-DOSನ ಪೂರ್ಣ ಮಾಲೀಕತ್ವವನ್ನು ತಾನೇ ಪಡೆಯಿತು. PCಗೆ ಆಪರೇಟಿಂಗ್ ಸಿಸ್ಟಮ್‌ ಅನ್ನು ಅಳವಡಿಸಿದ ನಂತರ ಮೈಕ್ರೋಸಾಪ್ಟ್‌ ಅದನ್ನು IBMಗೆ PC-DOS ಎಂಬ ಹೆಸರಿನಲ್ಲಿ ವಿತರಣೆ ಮಾಡಿ, ಒಂದೇ ಸಲಕ್ಕೆ 50,000$ ಶುಲ್ಕವನ್ನು ಪಡೆದುಕೊಂಡಿತು. ಆದರೆ ಆಪರೇಟಿಂಗ್‌ ಸಿಸ್ಟಮ್ ಮೇಲಿನ ಹಕ್ಕುಸ್ವಾಮ್ಯವನ್ನು ಮಾತ್ರ ಗೇಟ್ಸ್‌ ಹಸ್ತಾಂತರ ಮಾಡಲಿಲ್ಲ. ಏಕೆಂದರೆ, ಇತರ ಯಂತ್ರಾಂಶ ಮಾರಾಟಗಾರರು IBM ಸಿಸ್ಟಮ್‌ ಅನ್ನು ಸ್ವತಃ ಹುಟ್ಟುಹಾಕಬಹುದು ಎಂಬ ನಂಬಿಕೆ ಗೇಟ್ಸ್‌ಗಿತ್ತು. ಅವರು ಅದನ್ನು ಸಾಧಿಸಿಯೇಬಿಟ್ಟರು ಮತ್ತು MS-DOSನ ಮಾರಾಟದಿಂದಾಗಿ ಮೈಕ್ರೋಸಾಫ್ಟ್‌ ಕಂಪನಿಯು ಐಟಿ ಉದ್ಯಮದ ದೈತ್ಯ ಸಂಸ್ಥೆಯಾಗಿ ಹೊರಹೊಮ್ಮಿತು. 2== ವಿಂಡೋಸ್‌ == 1981ರ ಜೂನ್‌ 25ರಂದು ಮೈಕ್ರೋಸಾಫ್ಟ್ ಕಂಪನಿಯನ್ನು ಪುನರ್ರಚಿಸಲಾಯಿತು. ಇದರ ಮೇಲ್ವಿಚಾರಣೆಯನ್ನು ಗೇಟ್ಸ್‌ ವಹಿಸಿದ್ದರು. ಇದರನ್ವಯ ವಾಷಿಂಗ್ಟನ್‌ನಲ್ಲಿ ಕಂಪನಿಯು ಮರುಸಂಘಟಿತಗೊಂಡು, ಗೇಟ್ಸ್‌‌ ಅವರನ್ನು ಮೈಕ್ರೋಸಾಫ್ಟ್‌ನ ಅಧ್ಯಕ್ಷ ಹಾಗೂ ಮಂಡಳಿಯ ಸಭಾಧ್ಯಕ್ಷ ಎಂದು ಘೋಷಿಸಿತು. ಮೈಕ್ರೋಸಾಫ್ಟ್ ಕಂಪನಿ ತನ್ನ ಮೈಕ್ರೋಸಾಫ್ಟ್‌ ವಿಂಡೋಸ್‌ನ ಮೊದಲ ಬಿಡಿ ಆವೃತ್ತಿಯನ್ನು 1985ರ ನವೆಂಬರ್‌ 20ರಂದು ಬಿಡುಗಡೆ ಮಾಡಿತು ಹಾಗೂ ಆಗಸ್ಟ್‌ನಲ್ಲಿ OS/2 ಹೆಸರಿನ ಪ್ರತ್ಯೇಕ ಆಪರೇಟಿಂಗ್ ಸಿಸ್ಟಮ್‌ ಅಭಿವೃದ್ಧಿಪಡಿಸಲು IBMನೊಂದಿಗೆ ಒಡಂಬಡಿಕೆ ಮಾಡಿಕೊಂಡಿತು. ಎರಡೂ ಸಂಸ್ಥೆಗಳು ಹೊಸ ಸಿಸ್ಟಮ್‌ನ ಮೊದಲ ಆವೃತ್ತಿಯನ್ನು ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾದರೂ, ಇವುಗಳ ನಡುವೆ ಏರುತ್ತಲೇ ಇದ್ದ ಸೃಜನಾತ್ಮಕ ಭಿನ್ನಾಭಿಪ್ರಾಯಗಳಿಂದ ಈ ಸಂಸ್ಥೆಗಳ ಪಾಲುದಾರಿಕೆ ಒಳಗೊಳಗೇ ಹಾಳಾಯಿತು. 1991ರ ಮೇ 16ರಂದು ಆಂತರಿಕ ಜ್ಞಾಪನಾಪತ್ರವೊಂದನ್ನು ವಿತರಿಸಿದ ಗೇಟ್ಸ್‌, OS/2 ಪಾಲುದಾರಿಕೆ ಅಂತ್ಯಗೊಂಡಿದ್ದು ಮೈಕ್ರೋಸಾಫ್ಟ್ ತನ್ನೆಲ್ಲ ಪ್ರಯತ್ನಗಳನ್ನು ವಿಂಡೋಸ್‌ NT ಕೆರ್ನೆಲ್‌ನ ಅಭಿವೃದ್ಧಿಗೆ ವರ್ಗಾಯಿಸಲಿದೆ ಎಂದು ತಮ್ಮ ಉದ್ಯೋಗಿಗಳಿಗೆ ಪ್ರಕಟಿಸಿದರು. ಆಡಳಿತ ವೈಖರಿ 1975ರಲ್ಲಿ ಮೈಕ್ರೋಸಾಫ್ಟ್ ಹುಟ್ಟಿದಂದಿನಿಂದ 2006ವರೆಗೆ, ಕಂಪನಿಯ ಉತ್ಪಾದನಾ ಕಾರ್ಯತಂತ್ರಕ್ಕೆ ಸಂಬಂಧಿಸಿದ ಪ್ರಮುಖ ಹೊಣೆಗಾರಿಕೆಗಳನ್ನು ಗೇಟ್ಸ್‌ ತಾವೇ ನಿರ್ವಹಿಸಿದರು. ದೃಢವಾದ ಅತ್ಮವಿಶ್ವಾಸದಿಂದ ಕಂಪನಿಯ ಉತ್ಪನ್ನ ಶ್ರೇಣಿಯನ್ನು ಇವರು ವಿಸ್ತರಿಸಿದ್ದೇ ಅಲ್ಲದೆ, ಮೈಕ್ರೋಸಾಫ್ಟ್ ಪ್ರಬಲ ಸ್ಥಾನವನ್ನು ಗಳಿಸಿದಾಗಲೆಲ್ಲಾ ಹುರುಪಿನೊಂದಿಗೆ ಅದನ್ನು ಕಾಪಾಡಿಕೊಳ್ಳುತ್ತಾ ಹೋದರು. ಕಾರ್ಯಕಾರಿ ಅಧಿಕಾರಿಯಾಗಿದ್ದ ಗೇಟ್ಸ್‌ ಮೈಕ್ರೋಸಾಫ್ಟ್‌ನ ಹಿರಿಯ ವ್ಯವಸ್ಥಾಪಕರನ್ನು ಮತ್ತು ಪ್ರೋಗ್ರ್ಯಾಮ್‌ ವ್ಯವಸ್ಥಾಪರನ್ನು ನಿಯಮಿತವಾಗಿ ಭೇಟಿ ಮಾಡುತ್ತಿದ್ದರು. ಈ ಸಭೆಗಳ ಸಾಕ್ಷಾತ್‌ ವಿವರಣೆಗಳು ಇವರನ್ನು ವರ್ಣಿಸುವ ರೀತಿಯಲ್ಲಿಯೇ ಹೇಳವುದಾದರೆ, ಗೇಟ್ಸ್‌ ಪದತಃ ಕಲಹಪ್ರಿಯರಾಗಿದ್ದರು. ವ್ಯವಸ್ಥಾಪಕರ ವ್ಯವಹಾರದ ಕಾರ್ಯತಂತ್ರಗಳಲ್ಲಿ ಅಥವಾ ಪ್ರಸ್ತಾವನೆಗಳಲ್ಲಿ ಕಂಪನಿಯ ದೀರ್ಘಕಾಲೀನ ಹಿತಾಸಕ್ತಿಗಳನ್ನು ಅಪಾಯಕ್ಕೆ ಸಿಲುಕಿಸುವಂತಹ ನ್ಯೂನತೆಗಳು ಕಂಡುಬಂದರೆ ಗೇಟ್ಸ್‌ ಅವರಿಗೆ ಛೀಮಾರಿ ಹಾಕುತ್ತಿದ್ದರು. ವಿಷಯವೊಂದರ ನಿರೂಪಣೆ ನಡೆಯುತ್ತಿರುವಾಗ ಮಧ್ಯೆ ಬಾಯಿ ಹಾಕುತ್ತಿದ್ದ ಅವರು, "ಇಂಥಾ ಅವಿವೇಕದ ಕೆಲಸವನ್ನು ನಾನೆಂದಿಗೂ ನೋಡಿಲ್ಲ" ಎಂದು ಟೀಕಿಸಿಬಿಡುತ್ತಿದ್ದರು. ತಮ್ಮ ವಾಗ್ದಾಳಿಯನ್ನು ಮುಂದುವರಿಸುತ್ತಾ, "ನಿಮ್ಮ ಕೆಲಸಗಳನ್ನು ಬಿಟ್ಟು ನೀವೇಕೆ ಶಾಂತಿ ಪಡೆಯನ್ನಾದರೂ ಸೇರಬಾರದು?" ಎಂದು ಗೇಟ್ಸ್‌ ಗದರಿಕೊಳ್ಳುತ್ತಿದ್ದರು. ಗೇಟ್ಸ್‌ರ ಕೋಪಕ್ಕೆ ಗುರಿಯಾದವರು, ಅವರಿಗೆ ಸಂಪೂರ್ಣವಾಗಿ ತೃಪ್ತಿಯಾಗುವವರೆಗೂ ತಮ್ಮ ಪ್ರಸ್ತಾವನೆಯನ್ನು ಸಮರ್ಥಿಸಿಕೊಂಡು ವಿವರವಾಗಿ ಹೇಳಬೇಕಾಗುತ್ತಿತ್ತು. ತಮ್ಮ ಅಧೀನದಲ್ಲಿನ ಅಧಿಕಾರಿಗಳು ಅನಗತ್ಯವಾಗಿ ತಮ್ಮ ಕಾರ್ಯದಲ್ಲಿ ವಿಳಂಬ ಮಾಡುವುದು ಅಥವಾ ಮುಂದೂಡುವುದು ಕಂಡುಬಂದರೆ "ನಾನಿದನ್ನು ವಾರಾಂತ್ಯದೊಳಗೆ ಮಾಡುತ್ತೇನೆ" ಎಂದು ವ್ಯಂಗ್ಯವಾಗಿ ಟೀಕಿಸುವುದಕ್ಕೆ ಗೇಟ್ಸ್‌ ಹೆಸರುವಾಸಿಯಾಗಿದ್ದರು. ಮೈಕ್ರೋಸಾಫ್ಟ್‌ನ ಇತಿಹಾಸದುದ್ದಕ್ಕೂ, ಪ್ರಮುಖವಾಗಿ ಅದರಲ್ಲಿನ ಆಡಳಿತ ಮತ್ತು ಕಾರ್ಯಕಾರಿ ಕೆಲಸಕ್ಕೆ ಸಂಬಂಧಿಸಿದಂತೆ ಗೇಟ್ಸ್‌ರವರ ಪಾತ್ರವಿತ್ತು. ಆದರೂ ಇವರು ಕಂಪನಿಯ ಆರಂಭಿಕ ವರ್ಷಗಳಲ್ಲಿ, ನಿರ್ದಿಷ್ಟವಾಗಿ ಪ್ರೋಗ್ರ್ಯಾಮಿಂಗ್‌ ಭಾಷೆಗೆ ಸಂಬಂಧಿಸಿದ ಕಂಪನಿಯ ಉತ್ಪನ್ನಗಳಲ್ಲಿ ಇದರ ಸಕ್ರಿಯ ಸಾಫ್ಟ್‌ವೇರ್‌ ಅಭಿವೃದ್ದಿಕಾರರಾಗಿದ್ದರು. ಇವರು TRS-80 ಮಾಡೆಲ್‌ 100 ಲೈನ್‌ ಮೇಲೆ ಕೆಲಸ ಮಾಡುತ್ತಿದ್ದುದರಿಂದ, ಅಭಿವೃದ್ಧಿ ತಂಡದಲ್ಲಿ ಅಧಿಕೃತವಾಗಿ ತೊಡಗಿಸಿಕೊಂಡಿರಲಿಲ್ಲ. ಆದರೆ ಕಂಪನಿಯ ಉತ್ಪನ್ನಗಳನ್ನು 1989ರಲ್ಲಿ ವಿಶ್ವದೆಲ್ಲೆಡೆ ವಿತರಿಸುವ ತನಕವೂ ಸಂಕೇತಗಳನ್ನು ಬರೆದರು. ಲೋಕೋಪಕಾರಕ್ಕೆ ತಮ್ಮ ಹೆಚ್ಚಿನ ಸಮಯ ಮೀಸಲಿಡುವುದಕ್ಕೋಸ್ಕರ ಮುಂದಿನ ಎರಡು ವರ್ಷಗಳಲ್ಲಿ ತಮ್ಮ ದಿನನಿತ್ಯದ ಜವಾಬ್ಧಾರಿಗಳಿಂದ ಬೇರೊಂದು ಪಾತ್ರಕ್ಕೆ ವರ್ಗಾವಣೆ ಹೊಂದುವುದರ ಕುರಿತಾದ ನಿರ್ಧಾರವನ್ನು 2006ರ ಜೂನ್‌ 15ರಂದು ಗೇಟ್ಸ್‌ ಪ್ರಕಟಿಸಿದರು. ಇಬ್ಬರು ಉತ್ತರಾಧಿಕಾರಿಗಳ ನಡುವೆ ಗೇಟ್ಸ್‌ ತಮ್ಮ ಜವಾಬ್ದಾರಿಗಳನ್ನು ಹಂಚಿದರು. ದೈನಂದಿನ ಅಡಳಿತ ಹೊಣೆಗಾರಿಕೆಯನ್ನು ರೇ ಓಝೀಯವರಿಗೆ ಮತ್ತು ದೀರ್ಘಕಾಲೀನ ಉತ್ಪನ್ನ ಕಾರ್ಯತಂತ್ರದ ಹೊಣೆಗಾರಿಕೆಯನ್ನು ಕ್ರೇಗ್‌ ಮುಂಡೀಯವರಿಗೆ ಒಪ್ಪಿಸಿದರು. ಟ್ರಸ್ಟ್‌ ವಿರೋಧಿ ದಾವೆ ಮೈಕ್ರೋಸಾಫ್ಟ್‌ನ ವ್ಯವಹಾರ ಪದ್ಧತಿಗಳಮೇಲಿನ ಟ್ರಸ್ಟ್‌‌ ವಿರೋಧಿ ದಾವೆ ಹೂಡುವಿಕೆಗೆ ಕಾರಣವಾಗಿದ್ದ ಹಲವು ತೀರ್ಮಾನಗಳಿಗೆ ಗೇಟ್ಸ್‌ರವರ ಅನುಮೋದನೆಯಿತ್ತು.1998ರ ಯುನೈಟೆಡ್‌ ಸ್ಟೇಟ್ಸ್‌ v. ಮೈಕ್ರೋಸಾಫ್ಟ್ ಪ್ರಕರಣದಲ್ಲಿ ಪ್ರಮಾಣ ಮಾಡಿಕೊಟ್ಟ ಹೇಳಿಕೆಯ ಕೈಫಿಯತ್ತನ್ನು ಗೇಟ್ಸ್ ಪುರಾವೆಯಾಗಿ ಸಲ್ಲಿಸಿದಾಗ, ಇದೊಂದು ನುಣುಚಿಕೊಳ್ಳುವ ಪ್ರಯತ್ನ ಎಂದು ಹಲವು ಪತ್ರಕರ್ತರು ಬರೆದರು. ವರದಿಯಲ್ಲಿನ "ಸ್ಪರ್ಧಿಸು", "ಸಂಬಂಧಪಟ್ಟ" ಮತ್ತು "ನಾವು" ಎಂಬ ಪದಗಳ ಸಾಂದರ್ಭಿಕ ಅರ್ಥವನ್ನು ಕುರಿತಾಗಿ ಪರೀಕ್ಷಕ ಡೇವಿಡ್‌ ಬೋಯೀಸ್‌ರೊಂದಿಗೆ ಗೇಟ್ಸ್‌ ವಾಗ್ವಾದ ನಡೆಸಿದರು.ಬಿಸಿನೆಸ್‌ವೀಕ್‌ ಇದನ್ನು ವರದಿ ಮಾಡಿತ್ತು. ತಮ್ಮ ಪದಗಳ ಮತ್ತು ಕಾರ್ಯಗಳ ಅರ್ಥವನ್ನು ತಪ್ಪಾಗಿ ಚಿತ್ರಿಸಲು ಪ್ರಯತ್ನಿಸಿದ್ದ ಬೋಯೀಸ್‌ರ ಪ್ರಯತ್ನವನ್ನಷ್ಟೇ ತಾವು ತಡೆದದ್ದು ಎಂದು ನಂತರ ಗೇಟ್ಸ್‌ ಹೇಳಿದರು. ಕೈಫಿಯತ್ತನ್ನು ಸಲ್ಲಿಸುವ ಸಂದರ್ಭದಲ್ಲಿನ ತಮ್ಮ ವರ್ತನೆಗೆ ಸಂಬಂಧಿಸಿದಂತೆ, "ನಾನು ಬೋಯಿಸ್‌ನನ್ನು ದೂರ ಮಾಡಿದೆನಾ?... ನಾನು ನನ್ನ ತಪ್ಪೊಪ್ಪಿಕೊಳ್ಳುತ್ತೇನೆ. ಬೋಯೀಸ್‌ ಮೇಲೆ ಕೀಳುಮಟ್ಟದ ಒರಟುತನವನ್ನು ಪ್ರದರ್ಶಿಸಿದ್ದಕ್ಕಾಗಿ ಅದೆಷ್ಟು ದಂಡ ವಿಧಿಸಬೇಕೋ ಅಷ್ಟನ್ನು ನನ್ನ ಮೇಲೆ ವಿಧಿಸಬಹುದು" ಎಂದು ಅವರು ಹೇಳಿಕೊಂಡಿದ್ದರು. ಗೇಟ್ಸ್ ನಿರಾಕರಣೆಯ ಹೊರತಾಗಿಯೂ ನ್ಯಾಯಾಧೀಶರು, ಮೈಕ್ರೋಸಾಫ್ಟ್‌ ಕಂಪನಿಯು ಸ್ಪರ್ಧೆಯನ್ನು ನಿರ್ಬಂಧಿಸುವ ಮೂಲಕ ಏಕಸ್ವಾಮ್ಯತ್ವ ಮತ್ತು ನಿರ್ಬಂಧ ವಿಧಿಸುವಿಕೆಯನ್ನು ಕೈಗೊಂಡಿದ್ದು, ಇದು ಶರ್ಮನ್‌ ಟ್ರಸ್ಟ್‌ ವಿರೋಧಿ ಕಾಯಿದೆಯನ್ನು ಉಲ್ಲಂಘಿಸಿದಂತಾಗಿದೆ ಎಂದು ತೀರ್ಪು ನೀಡಿದರು. ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದು ಮೈಕ್ರೋಸಾಫ್ಟ್‌ ಉತ್ಪನ್ನಗಳನ್ನು ಉತ್ತೇಜಿಸುವ ಜಾಹೀರಾತು ಸರಣಿಯಲ್ಲಿ ಕನಿಷ್ಟ ಒಂದರಲ್ಲಾದರೂ ತಾವು ಕಾಣಿಸಿಕೊಳ್ಳಬೇಕೆಂದು ಗೇಟ್ಸ್‌ 2008ರಲ್ಲಿ ನಿರ್ಧರಿಸಿದರು. ಈ ಜಾಹೀರಾತಿನಲ್ಲಿ ಜೆರ್ರಿ ಸಿನ್‌ಫೆಲ್ಡ್‌ ಸಹತಾರೆಯಾಗಿ ನಟಿಸಿದ್ದರು. ಸಿನ್‌ಫೆಲ್ಡ್‌ ಮಾಲ್‌ ರಿಯಾಯಿತಿ ಪಾದರಕ್ಷೆ ಅಂಗಡಿ (ಶೂ ಸರ್ಕಸ್‌)ಯೊಂದರ ಮೆಟ್ಟಿಲೇರಿ ಹೋಗುತ್ತಿರುವಾಗ, ಗೇಟ್ಸ್‌ ಪಾದರಕ್ಷೆಯನ್ನು ಖರೀದಿ ಮಾಡುತ್ತಿರುವುದನ್ನು ಗಮನಿಸುತ್ತಾರೆ. ಈ ಅಪರಿಚಿತರ ನಡುವೆ ನಡೆಯುವ 90 ಸೆಕೆಂಡ್‌ಗಳ ಮಾತುಕತೆಯೇ ಈ ಜಾಹೀರಾತು. ಮಾರಾಟಗಾರ, ಗೇಟ್ಸ್ ಅವರಿಗೆ ಗಾತ್ರದಲ್ಲಿ ಅತಿ ದೊಡ್ಡದಾದ ಪಾದರಕ್ಷೆಗಳನ್ನು ಮಾರಲು ಪ್ರಯತ್ನಿಸುತ್ತಿರುತ್ತಾನೆ. ಗೇಟ್ಸ್‌ ಪಾದರಕ್ಷೆಗಳನ್ನು ಕೊಳ್ಳುತ್ತಿರುವಾಗ, ಅವರು 1977ರಲ್ಲಿ ನ್ಯೂ ಮೆಕ್ಸಿಕೋದಲ್ಲಿ ಸಂಚಾರಿ ನಿಯಮವನ್ನು ಉಲ್ಲಂಘಿಸಿದ್ದಕ್ಕೆ ಬಂಧಿಸಿದಾಗ ತೆಗೆದ ಚಿತ್ರದ ಸ್ವಲ್ಪ ಪರಿಷ್ಕರಿಸಿದ ಆವೃತ್ತಿಯಾಗಿ ಬಳಸಿಕೊಂಡಿದ್ದ ತಮ್ಮ ರಿಯಾಯಿತಿ ಕಾರ್ಡ್ ಅನ್ನು ಮೇಲೆತ್ತುತ್ತಾರೆ, ಅವರು ಮಾಲ್‌ನಿಂದ ಹೊರಬರುತ್ತಿರುವಂತೆ, ನೀವು ನಿಮ್ಮ ಬುದ್ಧಿಯನ್ನು ಇತರೆ ಡೆವಲಪರ್‌ಗಳೊಂದಿಗೆ ಒಗ್ಗೂಡಿಸುವ ಉದ್ದೇಶ ಹೊಂದಿರುವಿರಾ ಎಂದು ಗೇಟ್ಸ್‌ ಅವರನ್ನು ಸ್ಟಿನ್‌ಫೆಲ್ಡ್‌ ಕೇಳುತ್ತಾರೆ. ಗೇಟ್ಸ್ ಅದಕ್ಕೆ ಹೌದು ಎಂದಾಗ, ಸಿನ್‌ಫೆಲ್ಡ್‌ ಮತ್ತೊಮ್ಮೆ, ಬಳಕೆಯೋಗ್ಯ ಕಂಪ್ಯೂಟರ್‌ ಅನ್ನು ನಿರ್ಮಿಸುವ ಪಥದಲ್ಲಿ ಕೆಲಸ ನಡೆಯುತ್ತಿದೆಯೇ ಎಂದು ಕೇಳಿದಾಗ, ಹೌದು ಎನ್ನುವ ಉತ್ತರ ಸಿಗುತ್ತದೆ. ಇದು ಸಿನ್‌ಫೆಲ್ಡ್‌ನದೇ ಆಗಿರುವ "ನಥಿಂಗ್‌" (ಸಿನ್‌ಫೆಲ್ಡ್‌ ) ಎನ್ನುವ ಪ್ರದರ್ಶನದ ಬಗ್ಗೆ ತೋರುತ್ತಿರುವ ಗೌರವಾರ್ಪಣೆ ಎಂದು ಕೆಲವರು ಹೇಳುತ್ತಾರೆ. ಈ ಸರಣಿಯ ಎರಡನೇ ಜಾಹೀರಾತುನಲ್ಲಿ, ಗೇಟ್ಸ್‌ ಮತ್ತು ಸ್ಟಿನ್‌ಫೆಲ್ಡ್‌ ಸಾಮಾನ್ಯ ಕುಟುಂಬವೊಂದರ ಮನೆಯಲ್ಲಿದ್ದು, ಸಾಮಾನ್ಯ ಜನರೊಂದಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿರುವ ದೃಶ್ಯವಿದೆ.ಅದು ಕೂಡ ಸತ್ತ್ಯ ಮೈಕ್ರೋಸಾಫ್ಟ್‌ನ ನಂತರದ ದಿನಗಳು ಮೈಕ್ಟೋಸಾಫ್ಟ್‌ ಸಂಸ್ಥೆಯನ್ನು ಬಿಟ್ಟನಂತರ, ಗೇಟ್ಸ್‌ ತಮ್ಮ ಪರೋಪಕಾರಿ ಸೇವೆಗಳನ್ನು ಮತ್ತು ಇತರೆ ಯೋಜನೆಗಳನ್ನು ಮುಂದುವರಿಸಿಕೊಂಡು ಬಂದಿದ್ದಾರೆ. 1964ರಲ್ಲಿ ಕಾರ್ನೆಲ್‌ ವಿಶ್ವವಿದ್ಯಾಲಯದಲ್ಲಿ ರಿಚರ್ಡ್ ಫೆನ್‌ಮನ್ ಎನ್ನುವರು ದಿ ಕ್ಯಾರೆಕ್ಟರ್‌ ಆಫ್‌ ಫಿಸಿಕಲ್‌ ಲಾ‌ ಎನ್ನುವ ಶಿರೋನಾಮೆಯ ಪ್ರಚಾರ ಉಪನ್ಯಾಸ ಮಾಲೆಯನ್ನು ನೀಡಿದ್ದರು. ಇದನ್ನು BBC ಧ್ವನಿಮುದ್ರಿಸಿಕೊಂಡಿತ್ತು. ಈ ವಿಡಿಯೋ ಹಕ್ಕುಗಳನ್ನು ಕೊಂಡುಕೊಂಡ ಗೇಟ್ಸ್‌ ಅದನ್ನು ಮೈಕ್ರೋಸಾಫ್ಟ್‌ನ ಟುವ ಯೋಜನೆಯಲ್ಲಿ ಆನ್‌ಲೈನ್‌ ಮೂಲಕ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿದರು. ವೈಯಕ್ತಿಕ ಜೀವನ ಗೇಟ್ಸ್‌,ದಲ್ಲಾಸ್‌ನವರಾದ ಮೆಲಿಂಡ ಫ್ರೆಂಚ್‌ ಅವರನ್ನು 1994ರ ಜನವರಿ 1ರಂದು ಟೆಕ್ಸಾಸ್‌ನಲ್ಲಿ ವಿವಾಹವಾದರು. ಇವರಿಗೆ ಜೆನ್ನಿಫರ್‌ ಕ್ಯಾಥರಿನ್‌ (1996), ರೋರಿ ಜಾನ್‌ (1999) ಮತ್ತು ಫೋಬೆ ಅಡೆಲೆ (2002) ಎಂಬ ಮೂವರು ಮಕ್ಕಳಿದ್ದಾರೆ. ಗೇಟ್ಸ್‌ ದಂಪತಿಗಳ ಮನೆಯು ಮಣ್ಣಿನ ಛಾವಣಿಯ ಮನೆಯಾಗಿದ್ದು, ಇದರ ಪಕ್ಕದಲ್ಲಿ ಬೆಟ್ಟವೊಂದಿದೆ. ಈ ಬೆಟ್ಟವು ವಾಷಿಂಗ್ಟನ್‌ನ ಮೆಡಿನನಗರದದಲ್ಲಿರುವ ವಾಷಿಂಗ್ಟನ್‌ ಸರೋವರವನ್ನು ಮೇಲಿನಿಂದ ನೋಡುವಂತಿದೆ. ಕಿಂಗ್‌ ಕೌಂಟಿ ಸಾರ್ವಜನಿಕ ದಾಖಲೆಗಳ ಪ್ರಕಾರ, 2006ರಲ್ಲಿದ್ದಂತೆ ಈ ಆಸ್ತಿಯ (ಜಮೀನು ಮತ್ತು ಮನೆ ) ಒಟ್ಟು ನಿರ್ಧಾರಿತ ಮೌಲ್ಯವು 125 ದಶಲಕ್ಷ$ ಹಾಗೂ ಇದರ ವಾರ್ಷಿಕ ಆಸ್ತಿ ತೆರಿಗೆ 991,000$ನಷ್ಟಿದೆ. 66,000 ಚದರ ಅಡಿಗಳ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಇವರ ಎಸ್ಟೇಟ್‌ 60 ಅಡಿಯ ಒಂದು ಈಜುಕೊಳ, ಇದರ ಅಡಿಯಲ್ಲಿ ಸಂಗೀತ ವ್ಯವಸ್ಥೆ, 2500 ಚದರ ಅಡಿ ವ್ಯಾಯಾಮ ಕೊಠಡಿ ಮತ್ತು 1000 ಚದರ ಅಡಿಗಳ ಊಟದ ಕೊಠಡಿಗಳನ್ನು ಒಳಗೊಂಡಿದೆ. ಗೇಟ್ಸ್‌ ಅವರ ಖಾಸಗಿ ಸಂಪಾದನೆಯಲ್ಲಿ ಲಿಯೋನಾರ್ಡೋ ಡಾ ವಿಂಚಿ ಬರಹಗಳ ಸಂಗ್ರಹವಾಗಿರುವ ಕೋಡೆಕ್ಸ್‌ ಲೆಸ್ಟರ್‌ಕೂಡ ಒಂದು. ಇದನ್ನು 1994ರ ಹರಾಜಿನಲ್ಲಿ 30.8 ದಶಲಕ್ಷ $ಗೆ ಗೇಟ್ಸ್‌ ಖರೀದಿಸಿದ್ದರು. ಗೇಟ್ಸ್‌ ಅತ್ಯಾಸಕ್ತಿಯ ಓದುಗ ಎಂದು ಹೆಸರಾಗಿದ್ದಾರೆ. ಅಲ್ಲದೆ ಇವರ ಮನೆಯ ಒಳಮಾಳಿಗೆಯಲ್ಲಿ ಬೃಹತ್ತಾದ ಗ್ರಂಥಾಲಯವಿದ್ದು, ಇದನ್ನು ದಿ ಗ್ರೇಟ್‌ ಗ್ಯಾಟ್ಸ್‌ಬೈ ಕೃತಿಯಿಂದ ಆಯ್ದ ಉಕ್ತಿಯ ಕೆತ್ತನೆಯಿಂದ ಅಲಂಕರಿಸಲಾಗಿದೆ. ಬ್ರಿಡ್ಜ್‌, ಟೆನ್ನಿಸ್ ಮತ್ತು ಗಾಲ್ಫ್‌ ಆಟಗಳನ್ನು ಆಡುವ ಮೂಲಕ ಅವರು ಸಂತೋಷವನ್ನು ಕಂಡುಕೊಂಡಿದ್ದಾರೆ. "ಫೋರ್ಬ್ಸ್ 400" ಪಟ್ಟಿಯಲ್ಲಿ 1993ರಿಂದ 2007ರವರೆಗೆ ಗೇಟ್ಸ್‌ ಮೊದಲ ಸ್ಥಾನದಲ್ಲಿದ್ದರು. ಅಲ್ಲದೆ ಫೋರ್ಬ್ಸ್ ಬಿಡುಗಡೆ ಮಾಡುವ "ವಿಶ್ವದ ಅತ್ಯಂತ ದೊಡ್ಡ ಸಿರಿವಂತರ" ಪಟ್ಟಿಯಲ್ಲಿ 1995 ರಿಂದ 2007ರವರೆಗೆ ಮತ್ತು 2009ರಲ್ಲಿ ಅವರು ಮೊದಲ ಸ್ಥಾನದಲ್ಲಿದ್ದರು. 1999ರಲ್ಲಿ ಗೇಟ್ಸ್‌ ಅವರ ಸಂಪತ್ತಿನ ಒಟ್ಟು ಮೌಲ್ಯ 101 ಬಿಲಿಯನ್ $ನ್ನು ಮೀರಿತ್ತು. ಇದರಿಂದ ಮಾಧ್ಯಮಗಳು ಇವರನ್ನು "ಸೆಂಟಿಬಿಲಿಯನೇರ್‌" ಎಂದು ಕರೆದವು. ಡಾಟ್‌ ಕಾಮ್‌ ಗುಳ್ಳೆ ಒಡೆದ ನಂತರ ಮೈಕ್ರೋಸಾಫ್ಟ್‌ನ ಷೇರು ಬೆಲೆ ಕುಸಿದಿದ್ದರಿಂದಾಗಿ ಹಾಗೂ ಹಲವು ಶತಕೋಟಿ ಡಾಲರ್‌ಗಳಷ್ಟು ಹಣವನ್ನು ಗೇಟ್ಸ್‌ ದತ್ತಿ ಪ್ರತಿಷ್ಠಾನಗಳಿಗೆ ದಾನವಾಗಿ ನೀಡಿದ ಕಾರಣದಿಂದಾಗಿ, 2000ನೇ ಇಸವಿಯಿಂದ ಇವರ ಮೈಕ್ರೋಸಾಫ್ಟ್‌ ಹಿಡುವಳಿಯ ನಾಮಮಾತ್ರ ಮೌಲ್ಯವು ಕುಸಿಯಿತು. 2006ರ ಮೇ ತಿಂಗಳಲ್ಲಿ ಬಂದ ಸಂದರ್ಶನವೊಂದರಲ್ಲಿ, ತಾವು ವಿಶ್ವದ ಅತಿ ದೊಡ್ಡ ಶ್ರೀಮಂತ ಆಗಬಾರದಿತ್ತು; ಏಕೆಂದರೆ ಇದು ವಿಶ್ವದ ಗಮನವನ್ನು ತನ್ನ ಕಡೆ ಸೆಳೆಯಿತು, ಇದು ನನಗೆ ಇಷ್ಟವಿರಲಿಲ್ಲ ಎಂದು ಗೇಟ್ಸ್‌ ಹೇಳಿದ್ದರು. ಮೈಕ್ರೋಸಾಫ್ಟ್ ಕಂಪನಿಯ ಹೊರಗೂ ಗೇಟ್ಸ್‌ ಕೆಲವು ಹೂಡಿಕೆಗಳನ್ನು ಹೊಂದಿದ್ದಾರೆ. ಇವು 2006ರಲ್ಲಿ ಇವರಿಗೆ 616,667 $ನಷ್ಟು ಸಂಬಳ ಮತ್ತು 350,000 $ನಷ್ಟು ಬೋನಸ್‌ ಸೇರಿ ಒಟ್ಟು 966,667 $ನಷ್ಟು ಹಣವನ್ನು ಗೇಟ್ಸ್‌ಗೆ ತಂದುಕೊಟ್ಟವು.ಕೋರ್ಬಿಸ್‌ ಎಂಬ ಡಿಜಿಟಲ್‌ ಇಮೇಜಿಂಗ್‌ ಸಂಸ್ಥೆಯನ್ನು ಇವರು 1989ರಲ್ಲಿ ಸ್ಥಾಪಿಸಿದರು. ಇವರ ಬಹುದಿನಗಳ ಸ್ನೇಹಿತ ವಾರೆನ್‌ ಬಫೆಟ್‌ರವರು ಮು‌ಖ್ಯಸ್ಥರಾಗಿದ್ದ ಬರ್ಕ್‌ಷೈರ್‌ ಹಾಥ್‌ವೇ ಎಂಬ ಒಂದು ಹೂಡಿಕಾ ಕಂಪನಿಗೆ 2004ರಲ್ಲಿ ಗೇಟ್ಸ್‌ ನಿರ್ದೇಶಕರಾಗಿ ನೇಮಕಗೊಂಡರು. ೩, ಮೇ, ೨೦೨೧ ರಂದು ವಿಧ್ಯುಕ್ತವಾಗಿ ಹೇಳಿಕೆ ಕೊಟ್ಟ ಬಿಲ್ ಗೇಟ್ಸ್ ಹಾಗೂ ಅವರ ಪತ್ನಿ, ಮೆಲಿಂಡ ಗೇಟ್ಸ್ ೨೭ ವರ್ಷಗಳ ಬಳಿಕ ತಮ್ಮ ವೈವಾಹಿಕ ಜೀವನಕ್ಕೆ ಡಿವೋರ್ಸ್ ಘೋಷಿಸಿದ್ದಾರೆ. ಲೋಕೋಪಕಾರ ಇವರ ಸಂಪತ್ತಿನಲ್ಲಿ ಬಹು ಭಾಗವನ್ನು ದಾನವಾಗಿ ನೀಡಬಹುದೆಂದು ಸಾರ್ವಜನಿಕ ಅಭಿಪ್ರಾಯ ಸಂಚಯಗೊಳ್ಳುತ್ತಾ ಹೋದಾಗ, ಇತರರು ತಮ್ಮ ಬಗ್ಗೆ ಹೊಂದಿದ್ದ ನಿರೀಕ್ಷೆಗಳನ್ನು ಗೇಟ್ಸ್‌ ಅರ್ಥ ಮಾಡಿಕೊಳ್ಳಲು ಆರಂಭಿಸಿದರು. ಆಂಡ್ಯ್ರೂ ಕಾರ್ನೆಗೀ ಮತ್ತು ಜಾನ್‌ ಡಿ. ರಾಕ್‌ಫೆಲ್ಲರ್‌ ಅವರ ಲೋಕೋಪಕಾರಿ ಕಾರ್ಯಗಳನ್ನು ಅಧ್ಯಯನ ಮಾಡಿದ ಗೇಟ್ಸ್‌, ವಿಲಿಯಂ ಎಚ್‌. ಗೇಟ್ಸ್ ಪ್ರತಿಷ್ಠಾನ‌ ಸ್ಥಾಪಿಸಲು 1994ರಲ್ಲಿ ಮೈಕ್ರೋಸಾಫ್ಟ್‌ನ ಷೇರುಗಳ ಒಂದಷ್ಟು ಭಾಗವನ್ನು ಮಾರಿದರು. 2000ರಲ್ಲಿ ಗೇಟ್ಸ್‌ ಮತ್ತು ಅವರ ಪತ್ನಿ ಮೆಲಿಂಡ ಗೇಟ್ಸ್‌ ಮೂರು ಕುಟುಂಬಗಳ ಪ್ರತಿಷ್ಠಾನಗಳನ್ನು ಒಗ್ಗೂಡಿಸಿ ಬಿಲ್‌ & ಮೆಲಿಂಡ ಗೇಟ್ಸ್ ಫೌಂಡೇಷನ್‌ ಎಂಬ ದತ್ತಿ ಪ್ರತಿಷ್ಠಾನವನ್ನು ಸ್ಥಾಪಿಸಿದರು. ಇದು ಪಾರದರ್ಶಕವಾಗಿಕಾರ್ಯನಿರ್ವಹಿಸುತ್ತಿರುವ ವಿಶ್ವದ ಬೃಹತ್‌ ದತ್ತಿ ಪ್ರತಿಷ್ಠಾನ ಎಂಬ ಹೆಗ್ಗಳಿಕೆ ಪಡೆದಿದೆ. ಪ್ರತಿಷ್ಠಾನದ ಹಣವು ವೆಲ್‌ಕಮ್‌ ಟ್ರಸ್ಟ್‌ನಂತಹ ಇತರೆ ಪ್ರಮುಖ ದತ್ತಿ ಸಂಸ್ಥೆಗಳಿಂತ ಭಿನ್ನವಾಗಿ ಹೇಗೆ ವ್ಯಯವಾಗುತ್ತದೆ ಎನ್ನುವುದನ್ನು ದಾನಿಗಳು ತಿಳಿಯಲಿ ಎಂಬ ಕಾರಣಕ್ಕೆ ಪ್ರತಿಷ್ಠಾನವನ್ನು ಸ್ಥಾಪಿಸಲಾಯಿತು. ಡೇವಿಡ್‌ ರಾಕ್‌ಫೆಲ್ಲರ್‌ ಅವರ ಔದಾರ್ಯ ಮತ್ತು ಅತೀವವಾದ ಪರೋಪಕಾರಿ ಗುಣ ಇವರ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ಗೇಟ್ಸ್‌ ಹಾಗೂ ಅವರ ತಂದೆ, ರಾಕ್‌ಫೆಲ್ಲರ್‌ ಅವರನ್ನು ಹಲವು ಬಾರಿ ಭೇಟಿ ಮಾಡಿ, ರಾಕ್‌ಫೆಲ್ಲರ್‌ ಕುಟುಂಬದ ಪರೋಪಕಾರಿ ಉದ್ದೇಶಗಳ ಮಾದರಿಯಲ್ಲಿಯೇ ತಮ್ಮ ದಾನದ ಸ್ವರೂಪವನ್ನೂ ರೂಪಿಸಿಕೊಂಡರು. ಅಂದರೆ ಸರ್ಕಾರಗಳು ಮತ್ತು ಇತರೆ ಸಂಸ್ಥೆಗಳು ನಿರ್ಲಕ್ಷಿಸಿರುವ ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ರೂಪುರೇಷೆಯನ್ನು ತಯಾರಿಸಿದರು. 2007ರವರೆಗೆ ಇದ್ದಂತೆ, ಬಿಲ್‌ ಮತ್ತು ಮೆಲಿಂಡ ಗೇಟ್ಸ್‌ ಅಮೆರಿಕದ ಉದಾರ ಪರೋಪಕಾರಿಗಳು ಎಂದು ಕರೆಸಿಕೊಂಡಿದ್ದು, ಇವರು 28 ಶತಕೋಟಿ $ಗೂ ಹೆಚ್ಚಿನ ಹಣವನ್ನು ದಾನವಾಗಿ ನೀಡಿದ್ದಾರೆ. ಪ್ರತಿಷ್ಠಾನವು ಟೀಕೆಗಳನ್ನೂ ಎದುರಿಸಿದೆ. ತನ್ನ ಹೂಡಿಕೆಯ ಮೇಲಿನ ಲಾಭವನ್ನು ಹೆಚ್ಚಿಸುವ ಏಕೈಕ ಉದ್ದೇಶದಿಂದ, ಪ್ರತಿಷ್ಠಾನವು ತನ್ನ ವಿತರಣೆಯಾಗಿಲ್ಲದ ಆಸ್ತಿಯನ್ನು ಹೂಡಿಕೆ ಮಾಡುತ್ತದೆ ಎಂಬುದು ಇದರ ಹಿಂದಿನ ಕಾರಣ. ಇದರ ಪರಿಣಾಮವಾಗಿ, ಈಗಾಗಲೇ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಬಡತನ ಮತ್ತಷ್ಟು ಹೆಚ್ಚಲು ಕಾರಣವಾಗಿವೆ ಎಂದು ಟೀಕೆಗೆ ಗುರಿಯಾಗಿರುವ ಕಂಪನಿಗಳನ್ನು ಪ್ರತಿಷ್ಠಾನದ ಹೂಡಿಕೆಗಳು ಒಳಗೊಂಡಿವೆ. ದುರಂತವೆಂದರೆ ಇದೇ ದೇಶಗಳಲ್ಲಿ ಪ್ರತಿಷ್ಠಾನ ಬಡತನವನ್ನು ನೀಗಿಸಲು ಪ್ರಯತ್ನಪಡುತ್ತಿದೆ. ಅಂತಹ ಕಂಪನಿಗಳೆಂದರೆ ಪರಿಸರವನ್ನು ವ್ಯಾಪಕವಾಗಿ ಹಾಳುಗೆಡವುತ್ತಿರುವ ಕಂಪನಿಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ತನ್ನ ಉತ್ಪನ್ನಗಳನ್ನು ಮಾರದ ಔಷಧಿ ಸಂಸ್ಥೆಗಳು. ಮಾಧ್ಯಮಗಳ ಟೀಕೆಗಳಿಗೆ ಪ್ರತಿಕ್ರಿಯಿಸಿದ ಪ್ರತಿಷ್ಠಾನವು 2007ರಲ್ಲಿ, ಸಾಮಾಜಿಕ ಜವಾಬ್ಧಾರಿಯನ್ನು ಮೌಲ್ಯಮಾಪನ ಮಾಡಲು ತನ್ನ ಹೂಡಿಕೆಗಳ ಪರಿಶೀಲನೆ ಮಾಡುವುದಾಗಿ ಘೋಷಿಸಿತು. ಇದು ತರುವಾಯ ಪರಿಶೀಲನೆಯನ್ನು ರದ್ದುಪಡಿಸಿತಲ್ಲದೆ ಕಂಪನಿಯ ಪದ್ಧತಿಗಳನ್ನು ಪ್ರಭಾವಿಸುವ ಮತ ಚಲಾವಣೆ ಹಕ್ಕನ್ನು ಬಳಸುವಾಗ ಹೆಚ್ಚಿನ ಲಾಭ ತರುವಲ್ಲಿ ಹೂಡಿಕೆ ಮಾಡುವ ತನ್ನ ನಿಯಮಕ್ಕೆ ಬದ್ಧವಾಗಿ ಹಾಗೆಯೇ ಉಳಿಯಿತು. ಮಾನ್ಯತೆ ಟೈಮ್‌ ನಿಯತಕಾಲಿಕವು ಗೇಟ್ಸ್‌ ಅವರನ್ನು 20ನೇ ಶತಮಾನವನ್ನು ಅತಿಯಾಗಿ ಪ್ರಭಾವಿಸಿದ ವಿಶ್ವದ 100 ಜನರಲ್ಲಿ ಒಬ್ಬರು ಎಂದು ಗುರ್ತಿಸಿದೆ. ಅಲ್ಲದೆ 2004, 2005, ಮತ್ತು 2006ರಲ್ಲಿನ 100 ಅತ್ಯಂತ ಪ್ರಭಾವಿ ವ್ಯಕ್ತಿಗಳ ಪೈಕಿ ಒಬ್ಬರು ಎಂದೂ ಹೆಸರಿಸಿದೆ. ಗೇಟ್ಸ್‌, ಇವರ ಪತ್ನಿ ಮೆಲಿಂಡ ಮತ್ತು U2 ರಾಕ್‌ ಬ್ಯಾಂಡ್‌ನ ಹಾಡುಗಾರ ಬೊನೊ ಇವರನ್ನು ಇವರ ಜನೋಪಕಾರಿ ಕೆಲಸಗಳಿಗಾಗಿ 2005ರ ವರ್ಷದ ವ್ಯಕ್ತಿಗಳು ಎಂದು ಟೈಮ್‌ ನಿಯತಕಾಲಿಕವು ಗೌರವಿಸಿದೆ. 2006ರ‍ಲ್ಲಿ, "ನಮ್ಮ ಕಾಲದ ಹೀರೋಗಳು" ಎಂಬ ಪಟ್ಟಿ ಸಿದ್ಥಪಡಿಸಲು ನಡೆದ ಮತದಾನದಲ್ಲಿ ಗೇಟ್ಸ್‌ ಎಂಟನೇ ಸ್ಥಾನ ಗಳಿಸಿದ್ದರು. ಸಂಡೆ ಟೈಮ್ಸ್‌ ನ 1999ರ ಪವರ್‌ ಲಿಸ್ಟ್‌ನಲ್ಲಿ ಇವರು ಸೇರ್ಪಡೆಗೊಂಡಿದ್ದರು. ಚೀಫ್‌ ಎಕ್ಸಿಕ್ಯೂಟಿವ್‌ ಆಫೀಸರ್ಸ್ ಮ್ಯಾಗಜಿನ್‌ 1994ರಲ್ಲಿ ಇವರನ್ನು ವರ್ಷದ CEO ಎಂದು ಆಯ್ಕೆ ಮಾಡಿತ್ತು. ಟೈಮ್‌ 1998ರಲ್ಲಿ ಪ್ರಕಟಿಸಿದ "ಟಾಪ್‌ 50 ಸೈಬರ್‌ ಇಲೈಟ್‌" ಪಟ್ಟಿಯಲ್ಲಿ ಇವರು ಪ್ರಥಮ ಸ್ಥಾನವನ್ನು ಪಡೆದಿದ್ದರು. 1999ರಲ್ಲಿ ಅಪ್‌ಸೈಡ್‌ ಇಲೈಟ್‌ 100ರಲ್ಲಿ ಎರಡನೇ ಸ್ಥಾನ ಪಡೆದಿದ್ದರು. ದಿ ಗಾರ್ಡಿಯನ್‌ ಯು 2001ರಲ್ಲಿ ಪತ್ರಿಕೆ ಬಿಡುಗಡೆ ಮಾಡಿದ "ಮಾಧ್ಯಮದಲ್ಲಿನ 100 ಅತಿ ಪ್ರಭಾವಶೀಲ ಜನ"ರ ಪಟ್ಟಿಯಲ್ಲಿ ಇವರು ಒಬ್ಬರಾಗಿದ್ದರು. 2000ದಲ್ಲಿ ನೆದರ‍್ಲ್ಯಾಂಡ್ಸ್‌ನ ಬ್ರೂಕೆಲೆನ್‌ನಲ್ಲಿರುವ ನೆನ್ರೋಡ್‌ ಬಿಸಿನೆಸ್‌ ಯೂನಿವರ್ಸಿಟೀಟ್‌; 2002ರಲ್ಲಿ ಸ್ವೀಡನ್‌ನ ಸ್ಟಾ‌ಕ್‌ಹೋಮ್‌‌ನಲ್ಲಿರುವ ರಾಯಲ್‌ ಇನ್‌ಸ್ಟಿಟ್ಯೂಟ್ ಆಫ್‌ ಟೆಕ್ನಾಲಜಿ; 2005ರಲ್ಲಿ ಜಪಾನ್‌ನ ಟೋಕ್ಯೋದಲ್ಲಿರುವ ವಾಸೆಡ ವಿಶ್ವವಿದ್ಯಾಲಯ; 2007ರ ಏಪ್ರಿಲ್‌ನಲ್ಲಿ ಚೀನಾದ ಬೀಜಿಂಗ್‌ನಲ್ಲಿರುವ ಸಿಂಘುವಾ ವಿಶ್ವವಿದ್ಯಾಲಯ; 2007ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯ; ಜನವರಿ 2008ರಲ್ಲಿ ಸ್ಟಾಕ್‌ಹೋಮ್‌‌ನಲ್ಲಿರುವ ಕರೋಲಿನ್ಸ್ಕಾ ಇನ್‌ಸ್ಟಿಟ್ಯೂಟೆಟ್‌ ಮತ್ತು ಜೂನ್‌ 2009ರಲ್ಲಿ ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯಗಳು ಗೇಟ್ಸ್ ಅವರಿಗೆ ಗೌರವ ಡಾಕ್ಟರೇಟ್ ಪದವಿಗಳನ್ನು‌ ನೀಡಿ ಗೌರವಿಸಿವೆ. ಇವರು ಪೆಕಿಂಗ್‌ ವಿಶ್ವವಿದ್ಯಾಲಯದ ಗೌರವ ಟ್ರಸ್ಟೀ ಆಗಿ 2007ರಲ್ಲಿ ಆಯ್ಕೆಯಾದರು. ಇಷ್ಟೇ ಅಲ್ಲದೆ 2005ರಲ್ಲಿ ರಾಣಿ ಎಲಿಜೆಬೆತ್‌ II ಅವರಿಂದ ಗೌರವಪೂರ್ವಕವಾದ ನೈಟ್‌ ಕಮ್ಯಾಂಡರ್‌ ಆಫ್‌ ದಿ ಆರ್ಡರ್‌ ಆಪ್‌ ದಿ ಬ್ರಿಟಿಷ್‌ ಎಂಪೈರ್‌ (KBE) ಆಗಿಯೂ ಗೇಟ್ಸ್‌ ನೇಮಕಗೊಂಡರು. ಇಷ್ಟೇ ಅಲ್ಲದೇ, ಕೀಟಶಾಸ್ತ್ರಜ್ಞರು ಎರಿಸ್ಟಾಲಿಸ್‌ ಗೇಟ್ಸಿ ಎಂಬ ಹೂವಿನ ನೊಣಕ್ಕೆ ಬಿಲ್‌ ಗೇಟ್ಸ್‌ ಅವರ ಹೆಸರನ್ನು ಗೌರವಸೂಚಕವಾಗಿ ಇರಿಸಿದ್ದಾರೆ. ವಿಶ್ವದಾದ್ಯಂತ, ವಿಶೇಷವಾಗಿ ಮೆಕ್ಸಿಕೋದಲ್ಲಿನ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹಾಗೂ ನಿರ್ದಿಷ್ಟವಾಗಿ "ಅನ್‌ ಪೇಸ್‌ ಡೆ ಲೆಕ್ಟೋರೆಸ್‌ " ಎಂಬ ಯೋಜನೆಯಲ್ಲಿ ಅವರು ಕೈಗೊಂಡ ಪರೋಪಕಾರಿ ಕೆಲಸಗಳಿಗಾಗಿ 2006ರ ನವೆಂಬರ್‌ನಲ್ಲಿ ಗೇಟ್ಸ್‌ ಮತ್ತು ಅವರ ಪತ್ನಿಗೆ ಆರ್ಡರ್‌ ಆಫ್‌ ದಿ ಆಝ್‌ಟೆಕ್‌ ಈಗಲ್‌ ಎಂಬ ಪ್ರಶಸ್ತಿ ನೀಡಲಾಯಿತು. ಹೂಡಿಕೆಗಳು ಸಂಯುಕ್ತ ಸಂಸ್ಥಾನಗಳಲ್ಲಿ ನೆಲೆಗೊಂಡಿರುವ ಖಾಸಗಿ ಹೂಡಿಕೆ ಸಂಸ್ಥೆಯಾಗಿರುವ ಮತ್ತು ಹಿಡುವಳಿ ಕಂಪನಿಯಾಗಿರುವ ಕ್ಯಾಸ್ಕೇಡ್‌ ಇನ್‌ವೆಸ್ಟ್‌ಮೆಂಟ್‌ LLCಯನ್ನು ಬಿಲ್‌ ಗೇಟ್ಸ್ ನಿಯಂತ್ರಿಸುತ್ತಾರೆ. ಇದು ಕಿರ್ಕ್‌ಲ್ಯಾಂಡ್‌, WAನಲ್ಲಿ ತನ್ನ ಕೇಂದ್ರ ಕಚೇರಿಯನ್ನು ಹೊಂದಿದೆ. bgC3ಎಂಬ ಹೊಸ ಚಿಂತನಾ-ಚಿಲುಮೆಯ ಕಂಪನಿಯನ್ನು ಬಿಲ್‌ ಗೇಟ್ಸ್ ಸ್ಥಾಪಿಸಿದ್ದಾರೆ. ಕೋರ್ಬಿಸ್‌ ಎಂಬ ಡಿಜಿಟಲ್‌ ಇಮೇಜ್‌ ಪರವಾನಗಿ ಮತ್ತು ಹಕ್ಕುಗಳ ಸೇವೆಗಳನ್ನು ಒದಗಿಸುವ ಕಂಪನಿಯನ್ನು ಗೇಟ್ಸ್‌ ಹೊಂದಿದ್ದಾರೆ. ಗ್ರಂಥಸೂಚಿ ಗೇಟ್ಸ್‌ ಎರಡು ಪುಸ್ತಕಗಳನ್ನು ಬರೆದಿದ್ದಾರೆ: ದಿ ರೋಡ್‌ ಅಹೆಡ್‌ (1995) ಬಿಸೆನೆಸ್‌ @ ದಿ ಸ್ಪೀಡ್‌ ಆಫ್‌ ಥಾಟ್‌ (1999) ಟಿಪ್ಪಣಿಗಳು ಚೈತನ್ಯ ಇನ್ಫೋ-ಸಿಸ್ ಕಂಪ್ಯೂಟರ್ ಸೆಂಟರ್ ಮುದ್ಗಲ್ ಆಕರಗಳು ಹೆಚ್ಚಿನ ಓದಿಗಾಗಿ ಬಿಲ್‌ ಗೇಟ್ಸ್‌ನ ಅರ್ಥ: ಮೈಕ್ರೋಸಾಫ್ಟ್‌ನಲ್ಲಿ ಅವರ ಅಧಿಪತ್ಯ ಕೊನೆಗೊಳ್ಳುತ್ತಾ ಬಂದಿರುವ ಹಾಗೆ ಅವರ ಪ್ರಾಬಲ್ಯದ ಯುಗವೂ ಅಂತ್ಯವಾಗುತ್ತಾ ಬಂದಿದೆ", ದಿ ಎಕನಾಮಿಸ್ಟ್‌ , ಜೂನ್‌ 28, 2008 ಉಲ್ಲೇಖಗಳು ಹೊರಗಿನ ಕೊಂಡಿಗಳು Microsoft.com ನಲ್ಲಿರುವ ಬಿಲ್‌‌ಗೇಟ್ಸ್‌ ಅವರ ಜೀವನಚರಿತ್ರೆ ಫೋರ್ಬ್ಸ್: ವಿಶ್ವದ ಅತ್ಯಂತ ದೊಡ್ಡ ಸಿರಿವಂತರು ಬಿಲ್ & ಮೆಲಿಂಡ ಗೇಟ್ಸ್ ಪ್ರತಿಷ್ಠಾನ ಹೌ ಐ ವರ್ಕ್: ಬಿಲ್‌ ಗೇಟ್ಸ್‌ TED ಮಾತುಕತೆಗಳು: ಜಗತ್ತನ್ನು ಪರಿವರ್ತಿಸಲು ಬಿಲ್‌ ಗೇಟ್ಸ್‌ ಇದೀಗ 2009ರಲ್ಲಿ TEDನಲ್ಲಿ ಪ್ರಯತ್ನಿಸುತ್ತಿರುವುದು. ಬಿಲ್‌ ಗೇಟ್ಸ್‌ ಮತ್ತು ಅವರ ಸಾಧನೆಗೆ ಅರ್ಪಣೆಗೊಂಡಿರುವ ಸೃಜನಶೀಲತೆ. ಅಮೆರಿಕದ ಪರೋಪಕಾರಿಗಳು ಅಮೆರಿಕದ ಶತಕೋಟ್ಯಾಧಿಪತಿಗಳು ಅಮೆರಿಕಾದ ಉದ್ಯಮಿಗಳು ಅಮೆರಿಕದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಅಮೆರಿಕದ ಕಂಪ್ಯೂಟರ್‌ ಪ್ರೋಗ್ರಾಮರ್‌ಗಳು ಅಮೆರಿಕದ ತಂತ್ರಜ್ಞಾನ ಲೇಖಕರು ಬಿಲ್‌ & ಮೆಲಿಂಡ ಗೇಟ್ಸ್‌ ಪ್ರತಿಷ್ಠಾನ‌ದ ಜನರು ಬಿಲ್‌ ಗೇಟ್ಸ್‌ ಸಾಫ್ಟ್‌ವೇರ್‌ ಕ್ಷೇತ್ರದ ಉದ್ಯಮಿಗಳು ಹಾರ್ವರ್ಡ್‌ ವಿಶ್ವವಿದ್ಯಾಲಯದ ಜನರು ಆನರರಿ ನೈಟ್ಸ್‌ ಕಮ್ಯಾಂಡರ್‌ ಆಫ್‌ ದಿ ಆರ್ಡರ್‌ ಆಫ್‌ ದಿ ಬ್ರಿಟಿಷ್‌ ಎಂಪೈರ್‌ ಯುನೈಟೆಡ್‌ ಸ್ಟೇಟ್ಸ್‌ ನ್ಯಾಷನಲ್‌ ಅಕ್ಯಾಡೆಮಿ ಆಫ್‌ ಇಂಜಿನಿಯರಿಂಗ್‌ನ ಸದಸ್ಯರು ಮೈಕ್ರೋಸಾಫ್ಟ್ ಉದ್ಯೋಗಿಗಳು ಮೈಕ್ರೋಸಾಫ್ಟ್ ಇತಿಹಾಸ ತಂತ್ರಜ್ಞಾನ ಗ್ರಾಹಕರ ರಾಷ್ಟ್ರೀಯ ಪಾರಿತೋಷಕ ಸಿಯಾಟಲ್‌ ಜನತೆ, ವಾಷಿಂಗ್ಟನ್‌ ಕಿಂಗ್‌ ಕೌಂಟಿ ಜನತೆ, ವಾಷಿಂಗ್ಟನ್‌ ಟೈಮ್‌ ನಿಯತಕಾಲಿಕದ ವರ್ಷದ ವ್ಯಕ್ತಿಗಳು ವಿಂಡೋಸ್‌ ಜನತೆ ಬ್ರಿಟಿಷ್‌ ಕಂಪ್ಯೂಟರ್ ಸೊಸೈಟಿಯ ಸದಸ್ಯರು ಸ್ಕಾಟಿಷ್‌ ಅಮೆರಿಕನ್ನರು 1955ರ ಪೀಳಿಗೆ ಜೀವಂತ ಜನರು ಉದ್ಯಮಿಗಳು ಸಮಾಜಸೇವಕರು
2054
https://kn.wikipedia.org/wiki/%E0%B2%AE%E0%B3%88%E0%B2%95%E0%B3%8D%E0%B2%B0%E0%B3%8B%E0%B2%B8%E0%B2%BE%E0%B2%AB%E0%B3%8D%E0%B2%9F%E0%B3%8D
ಮೈಕ್ರೋಸಾಫ್ಟ್
ಮೈಕ್ರೋಸಾಫ್ಟ್ ಅಮೆರಿಕದಲ್ಲಿ ಕೇಂದ್ರೀಕೃತವಾದ ಬಹುರಾಷ್ಟ್ರೀಯ ಗಣಕಯಂತ್ರ ತಂತ್ರಜ್ಞಾನ ಸಂಸ್ಥೆ. ಗಣಕಯಂತ್ರ, ಮೊಬೈಲ್ ಫೋನ್ ಮತ್ತಿತರ ಸಾಧನಗಳಲ್ಲಿ ಉಪಯೋಗಿಸಬಹುದಾದ ವಿವಿಧ ರೀತಿಯ ತಂತ್ರಾಂಶಗಳನ್ನು ಈ ಸಂಸ್ಥೆ ವಿಕಸನಗೊಳಿಸಿ ಮಾರಾಟ ಮಾಡುತ್ತದೆ. ಇದರ ಅತ್ಯಂತ ಯಶಸ್ವಿ ತಂತ್ರಾಂಶಗಳೆಂದರೆ ವಿಂಡೋಸ್ ಕಾರ್ಯಾಚರಣ ವ್ಯವಸ್ಥೆ ಮತ್ತು ಮೈಕ್ರೋಸಾಫ್ಟ್ ಆಫೀಸ್ ಗುಂಪಿನ ತಂತ್ರಾಂಶಗಳು. ಈ ಸಂಸ್ಥೆಯನ್ನು ಸ್ಥಾಪಿಸಿದವರು ಬಿಲ್ ಗೇಟ್ಸ್. ಚರಿತ್ರೆ ೧೯೭೫-೧೯೮೫: ಸ್ಥಾಪನೆ ಆಲ್ಟೇರ್ ೮೮೦೦ ಗಣಕಯಂತ್ರದ ಬಿಡುಗಡೆಯ ನಂತರ, ಆ ಯಂತ್ರದ ಮೇಲೆ ಬೇಸಿಕ್ ಭಾಷೆಯನ್ನು ಉಪಯೋಗಿಸಲು ತಂತ್ರಾಂಶವೊಂದನ್ನು ಬಿಲ್ ಗೇಟ್ಸ್ ಪ್ರದರ್ಶಿಸಿದರು. ಈ ಗಣಕಯಂತ್ರವನ್ನು ತಯಾರಿಸುತ್ತಿದ್ದ ಸಂಸ್ಥೆ ಈ ತಂತ್ರಾಂಶವನ್ನು ಮಾರಾಟ ಮಾಡಲು ಒಪ್ಪಿಗೆಯಿತ್ತ ನಂತರ ಬಿಲ್ ಗೇಟ್ಸ್ ಹಾರ್ವರ್ಡ್ ವಿಶ್ವವಿದ್ಯಾಲಯವನ್ನು ಬಿಟ್ಟು ಮೈಕ್ರೋಸಾಫ್ಟ್ ಸಂಸ್ಥೆಯನ್ನು ಸ್ಥಾಪಿಸಿದರು. ಮೈಕ್ರೋಸಾಫ್ಟ್ ಸಂಸ್ಥೆಯ ಮೊದಲ ಯಶಸ್ಸು "ಡಾಸ್" ಕಾರ್ಯಾಚರಣ ವ್ಯವಸ್ಥೆ. ಐಬಿಎಮ್ ಸಂಸ್ಥೆಯ ಗಣಕಯಂತ್ರಗಳಿಗೂ ಈ ಕಾರ್ಯಾಚರಣ ವ್ಯವಸ್ಥೆಯನ್ನು ವಿಸ್ತರಿಸಿದ ಮೇಲೆ ಮೈಕ್ರೋಸಾಫ್ಟ್ ದೊಡ್ಡ ಸಂಸ್ಥೆಯಾಗಿ ಬೆಳೆಯಿತು. ೧೯೮೫-೧೯೯೫: ಒಎಸ್/೨ ಮತ್ತು ವಿಂಡೋಸ್ ಆಗಸ್ಟ್ ೧೯೮೫ ರಲ್ಲಿ ಮೈಕ್ರೋಸಾಫ್ಟ್ ಮತ್ತು ಐಬಿಎಮ್ ಸೇರಿ ಒಎಸ್/೨ ಎಂಬ ಕಾರ್ಯಾಚರಣ ವ್ಯವಸ್ಥೆಯನ್ನು ಹೊರತಂದರು. ಇದೇ ವರ್ಷದಲ್ಲಿ ಮೈಕ್ರೋಸಾಫ್ಟ್ ತನ್ನ ಪ್ರಸಿದ್ಧ ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯನ್ನೂ ಬಿಡುಗಡೆ ಮಾಡಿತು. ಮಾರ್ಚ್ ೧೩, ೧೯೮೬ ರಂದು ತನ್ನ ಷೇರುಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತು. ೧೯೮೯ ರಲ್ಲಿ ಮೈಕ್ರೋಸಾಫ್ಟ್ ಆಫೀಸ್ ಎಂಬ ತಂತ್ರಾಂಶ ಸಲಕರಣೆಗಳ ಸಮೂಹವನ್ನು ಬಿಡುಗಡೆ ಮಾಡಿತು. ಇದು ಇತರ ಸಂಸ್ಥೆಗಳ ಇಂಥದೇ ತಂತ್ರಾಂಶಗಳಿಗಿಂತ ಹೆಚ್ಚು ಯಶಸ್ವಿಯಾಯಿತು. ೧೯೯೦ ರಲ್ಲಿ ವಿಂಡೋಸ್ ೩.೦, ೧೯೯೩ ರಲ್ಲಿ ವಿಂಡೋಸ್ ಎನ್ ಟಿ, ೧೯೯೫ ರಲ್ಲಿ ವಿಂಡೋಸ್ ೯೫ ಬಿಡುಗಡೆಯಾದವು. ೧೯೯೫-೨೦೦೫: ಅಂತರಜಾಲ ಮತ್ತು ಕಾನೂನಿನ ತೊಡಕುಗಳು ೯೦ ರ ದಶಕದ ಮಧ್ಯದಲ್ಲಿ ಮೈಕ್ರೋಸಾಫ್ಟ್ ಅಂತರಜಾಲಕ್ಕೆ ಸಂಬಂಧಪಟ್ಟ ತಂತ್ರಾಂಶಗಳನ್ನು ಸಹ ಮಾರಾಟ ಮಾಡಲಾರಂಭಿಸಿತು. ಎಮ್ ಎಸ್ ಎನ್ ಎಂಬ ಪ್ರಮುಖ ಅಂತರಜಾಲ ಸೇವೆಯನ್ನು ಆರಂಭಿಸಿತು. ೧೯೯೬ ರಲ್ಲಿ ಎನ್ ಬಿ ಸಿ ಸಂಸ್ಥೆಯಂದಿಗೆ ಸೇರಿ ಎಮ್ ಎಸ್ ಎನ್ ಬಿ ಸಿ ಎಂಬ ಕೇಬಲ್ ಟಿವಿ ಚಾನಲ್ ಅನ್ನು ಆರಂಭಿಸಲಾಯಿತು. ಪಿಡಿಎ, ಮೊಬೈಲ್ ಫೋನ್ ಮೊದಲಾದ ಕಿರು ಯಂತ್ರಗಳ ಮೇಲೆ ಕೆಲಸ ಮಾಡಬಲ್ಲ ವಿಂಡೋಸ್ ಸಿಇ ಎಂಬ ಕಾರ್ಯಾಚರಣ ವ್ಯವಸ್ಥೆಯನ್ನು ಬಿಡುಗಡೆ ಮಾಡಲಾಯಿತು. ಅಂತರಜಾಲದಲ್ಲಿ ತಾಣಗಳನ್ನು ಭೇಟಿ ನೀಡಲು ಮೈಕ್ರೋಸಾಫ್ಟ್ ನ ತಂತ್ರಾಂಶವಾದ ಇಂಟರ್ನೆಟ್ ಎಕ್ಸ್ಪ್ಲೋರರ್ ಅನ್ನು ವಿಂಡೋಸ್ ಮತ್ತು ಮ್ಯಾಕ್ - ಈ ಎರಡೂ ಕಾರ್ಯಾಚರಣ ವ್ಯವಸ್ಥೆಗಳಿಗೆ ಬಿಡುಗಡೆ ಮಾಡಲಾಯಿತು. ತನ್ನ ಸ್ಪರ್ಧಾಳು ತಂತ್ರಾಂಶ ನೆಟ್ ಸ್ಕೇಪ್ ಗಿಂತ ಇದು ಹೆಚ್ಚು ಯಶಸ್ವಿಯಾಗಲಾರಂಭಿಸಿತು. ಇದಕ್ಕೆ ಸಂಬಂಧಪಟ್ಟಂತೆ ೧೯೯೪ ರ ಒಂದು ಒಪ್ಪಂದವನ್ನು ಮೈಕ್ರೋಸಾಫ್ಟ್ ಮೀರಿತ್ತು ಎಂದು ೧೯೯೭ ರಲ್ಲಿ ಅಮೆರಿಕದ ನ್ಯಾಯ ಇಲಾಖೆ ದೂರು ದಾಖಲಿಸಿಕೊಂಡಿತು. ಏಪ್ರಿಲ್ ೩, ೨೦೦೦ ದಂದು ಅಮೆರಿಕದ ಸರ್ವೋಚ್ಚ ನ್ಯಾಯಾಲಯ ಮೈಕ್ರೋಸಾಫ್ಟ್ ಸಂಸ್ಥೆ ಗ್ರಾಹಕರ ಹಿತರಕ್ಷಣೆಗಾಗಿ ಇಬ್ಭಾಗವಾಗಬೇಕೆಂಬ ತೀರ್ಪು ನೀಡಿತು. ೧೯೯೮ ರಲ್ಲಿ ಬಿಲ್ ಗೇಟ್ಸ್ ಮೈಕ್ರೋಸಾಫ್ಟ್ ನ ಅಧ್ಯಕ್ಷ ಸ್ಥಾನವನ್ನು ಸ್ಟೀವ್ ಬಾಮರ್ ಅವರಿಗೆ ಬಿಟ್ಟುಕೊಟ್ಟರು; ಆದರೆ ಸಂಸ್ಥೆಯ ಚೇರ್ಮನ್ ಆಗಿ ಮುಂದುವರೆದರು. ೧೯೯೮ ರಲ್ಲಿ ವಿಂಡೋಸ್ ೯೮, ೨೦೦೧ ರಲ್ಲಿ ವಿಂಡೋಸ್ ಎಕ್ಸ್ ಪಿ ಬಿಡುಗಡೆಯಾದವು. ಎಕ್ಸ್ ಬಾಕ್ಸ್ ಎಂಬ ಟಿವಿ ಆಟಗಳನ್ನಾಡುವ ಯಂತ್ರದ ಬಿಡುಗಡೆಯ ನಂತರ ಮೈಕ್ರೋಸಾಫ್ಟ್ ಗೇಮಿಂಗ್ ಮಾರುಕಟ್ಟೆಯನ್ನೂ ಪ್ರವೇಶಿಸಿತು. ೨೦೦೬ ರಿಂದ ಮುಂದೆ ಮೈಕ್ರೋಸಾಫ್ಟ್ ನ ಕಾರ್ಯಾಚರಣ ವ್ಯವಸ್ಥೆ ವಿಂಡೋಸ್ ವಿಸ್ಟಾ, ಜನವರಿ ೨೦೦೭ ರಲ್ಲಿ ಬಿಡುಗಡೆಯಾಯಿತು. ಮೈಕ್ರೋಸಾಫ್ಟ್ ನ ಕಾರ್ಯಾಚರಣ ವ್ಯವಸ್ಥೆ ವಿಂಡೋಸ್ ೭, ಜುಲೈ ೨೦೦೯ ರಲ್ಲಿ ಬಿಡುಗಡೆಯಾಯಿತು. ಮೈಕ್ರೋಸಾಫ್ಟ್ ನ ಸ್ಮಾರ್ಟ್‌‌ಫೋನ್ ಕಾರ್ಯಾಚರಣ ವ್ಯವಸ್ಥೆ ವಿಂಡೋಸ್ ಫೋನ್, ನವಂಬರ್ ೨೦೧೦ ರಲ್ಲಿ ಬಿಡುಗಡೆಯಾಯಿತು. ಮೈಕ್ರೋಸಾಫ್ಟ್ ನ ಕಾರ್ಯಾಚರಣ ವ್ಯವಸ್ಥೆ ವಿಂಡೋಸ್ ೮, ಅಕ್ಟೋಬರ್ ೨೦೧೨ ರಲ್ಲಿ ಬಿಡುಗಡೆಯಾಯಿತು. ಫೆಬ್ರವರಿ ೧, ೨೦೦೮ ರಂದು ಮೈಕ್ರೋಸಾಫ್ಟ್ ಅಂತರಜಾಲ ಸಂಸ್ಥೆ ಯಾಹೂ ಅನ್ನು ೪೪.೬ ಶತಕೋಟಿ ಡಾಲರ್ ಕೊಟ್ಟು ಕೊಳ್ಳಲು ಮುಂದಾಯಿತು. ಆದರೆ ಈ ಪ್ರಸ್ತಾಪವನ್ನು ಯಾಹೂ ತಿರಸ್ಕರಿಸಿತು. ನಂತರ ಮೈಕ್ರೋಸಾಫ್ಟ್ ತನ್ನ ಪ್ರಸ್ತಾಪವನ್ನು ಹಿಂತೆಗೆದುಕೊಂಡಿತು. ಕಾರ್ಯನಿರ್ವಾಹಕರು ಮೈಕ್ರೋಸಾಫ್ಟ್‌ನಲ್ಲಿ ಕನ್ನಡ ಮೈಕ್ರೋಸಾಫ್ಟ್‌ ತನ್ನ ವಿಂಡೋಸ್ ಎಕ್ಸ್‌ಪಿ ಕಾರ್ಯಾಚರಣ ವ್ಯವಸ್ಥೆಯಲ್ಲಿ ಪ್ರಥಮ ಬಾರಿಗೆ ಕನ್ನಡವನ್ನು ಅಳವಡಿಸಿತು. ಈ ಅಳವಡಿಕೆಯಲ್ಲಿ ಯುನಿಕೋಡ್ ಕನ್ನಡ ಪಠ್ಯದ ತೋರುವಿಕೆ (ರೆಂಡರಿಂಗ್), ಇನ್‌ಸ್ಕ್ರಿಪ್ಟ್ ಕೀಲಿಮಣೆ, ಕನ್ನಡದಲ್ಲಿ ಫೈಲ್‌ಗಳಿಗೆ ಹೆಸರು ನೀಡುವ ಸೌಲಭ್ಯ, ಕನ್ನಡದ ಅಕಾರಾದಿ ವಿಂಗಡಣೆ, ಎಲ್ಲ ಇದ್ದವು. ಕನ್ನಡ ಪಠ್ಯವನ್ನು ಪರದೆಯಲ್ಲಿ ತೋರಲು ಬಳಸಿದ ಕನ್ನಡ ಯುನಿಕೋಡ್ ಆಧಾರಿತ ಓಪನ್‌ಟೈಪ್ ಫಾಂಟ್ ತುಂಗ. ಅದರಲ್ಲಿ ಕನ್ನಡದ ಕೆಲವು ಅಕ್ಷರಗಳಲ್ಲಿ, ಉದಾ "ಮೋ", ದೋಷಗಳಿದ್ದವು. ಮೈಕ್ರೋಸಾಫ್ಟ್ ಈ ದೋಷಗಳನ್ನು ೨೦೦೩ರಲ್ಲಿ ವಿಂಡೋಸ್ ಸರ್ವರ‍್ ೨೦೦೩ ಆವೃತ್ತಿಯಲ್ಲಿ ಸರಿಪಡಿಸಿತು. ನಂತರದ ವಿಸ್ತ, ವಿಂಡೋಸ್ ೭ ಮತ್ತು ೮ ಆವೃತ್ತಿಗಳಲ್ಲಿ ಕನ್ನಡದ ಅಳವಡಿಕೆಯಲ್ಲಿ ಯಾವ ದೋಷವೂ ಇಲ್ಲ. ಮೈಕ್ರೋಸಾಫ್ಟ್ ಕಂಪೆನಿ ತನ್ನ ಭಾಷಾಇಂಡಿಯ ತಾಣದ ಮೂಲಕ ಇನ್ನಷ್ಟು ಕೀಲಿಮಣೆ ವಿನ್ಯಾಸಗಳನ್ನು ನೀಡಿದೆ. ನೋಡಿ ಲಿನಕ್ಸ್ ವಿತರಣೆಗಳು: ಉಬುಂಟು ಫೆಡೋರಾ (ಲಿನಕ್ಸ್ ವಿತರಣೆ) ಲಿನಕ್ಸ್ ರೆಡ್ ಹ್ಯಾಟ್ ಸುಸೇ ಕಾರ್ಯನಿರ್ವಹಣ ಸಾಧನ: ಯುನಿಕ್ಸ್ ಸೊಲಾರಿಸ್ ಮೈಕ್ರೋಸಾಫ್ಟ್ ಉಲ್ಲೇಖಗಳು ಗಣಕಯಂತ್ರ ಮಾಹಿತಿ ತಂತ್ರಜ್ಞಾನ ಕಂಪನಿಗಳು ಕಾರ್ಯನಿರ್ವಹಣ ಸಾಧನ
2056
https://kn.wikipedia.org/wiki/%E0%B2%B8%E0%B3%8D%E0%B2%9F%E0%B3%80%E0%B2%B5%E0%B3%8D%20%E0%B2%B5%E0%B2%BE%E0%B2%9C%E0%B3%8D%E0%B2%A8%E0%B3%88%E0%B2%95%E0%B3%8D
ಸ್ಟೀವ್ ವಾಜ್ನೈಕ್
ಎಪ್ಪಲ್ ಕಂಪನಿಯ ಸ್ಥಾಪಕ. ಉಲ್ಲೇಖಗಳು ಬಾಹ್ಯ ಸಂಪರ್ಕಗಳು woz.org Wozniak's official site "Apple Computer The Early Days A Personal Perspective" by Paul Laughton Interview with Steve Wozniak by Jessica Livingston Apple-1 Computer blog by John Calande Videos In Search of the Valley A 2006 documentary on Silicon Valley featuring Steve Wozniak iWoz: From Computer Geek to Culture Icon: How I Invented the Personal Computer, Co-Founded Apple, and Had Fun Doing It Steve Wozniak’s talk on his iWoz book at MIT in 2006 Steve Wozniak’s talk on his iWoz book at Google in 2006 Steve Wozniak’s talk on his iWoz book at Oxford in 2008 (audio recording) Woz on Innovation and Motivation April 10, 2013 ತಂತ್ರಜ್ಞಾನ ಗಣಕಯಂತ್ರ ಗಣಕಯಂತ್ರ ಅಗ್ರಗಾಮಿಗಳು ಮಾಹಿತಿ ತಂತ್ರಜ್ಞಾನ ಕಂಪನಿಗಳು
2057
https://kn.wikipedia.org/wiki/%E0%B2%B8%E0%B3%8A%E0%B2%B2%E0%B2%BE%E0%B2%B0%E0%B2%BF%E0%B2%B8%E0%B3%8D
ಸೊಲಾರಿಸ್
ಸನ್ ಮೈಕ್ರೊಸಿಸ್ಟಮ್ಸ್ ಕಂಪನಿಯ ಗಣಕಯಂತ್ರ ಕಾರ್ಯನಿರ್ವಹಣ ಸಾಧನ(Operating System) ಉಲ್ಲೆಖಗಳು ಬಾಹ್ಯ ಸಂಪರ್ಕಗಳು ತಂತ್ರಜ್ಞಾನ ಗಣಕಯಂತ್ರ ಕಾರ್ಯನಿರ್ವಹಣ ಸಾಧನ
2061
https://kn.wikipedia.org/wiki/%E0%B2%A8%E0%B2%B5%E0%B3%86%E0%B2%82%E0%B2%AC%E0%B2%B0%E0%B3%8D
ನವೆಂಬರ್
ನವೆಂಬರ್ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ಹನ್ನೊಂದನೆಯ ತಿಂಗಳು. ಈ ತಿಂಗಳಿನಲ್ಲಿ ಮೂವತ್ತು ದಿನಗಳು ಇರುತ್ತವೆ. ಹಿಂದೆ ಆಚರಣೆಯಲ್ಲಿ ಇತ್ತೆಂದು ಹೇಳಲಾದ ರೋಮನ್ ತಾರೀಕು ಪಟ್ಟಿಯಲ್ಲಿ ಇದನ್ನು ಒಂಬತ್ತನೆಯ ತಿಂಗಳೆಂದು ಕಾಣಿಸಲಾಗಿತ್ತು. ರೋಮನರ ವರ್ಷ ಮಾರ್ಚಿಯಲ್ಲಿ ಮೊದಲುಗೊಂಡು ಡಿಸೆಂಬರಿನಲ್ಲಿ ಅಂತ್ಯವಾಗುವ ಹತ್ತು ತಿಂಗಳ ಅವಧಿಯದಾಗಿದ್ದುದೇ ಇದರ ಕಾರಣ. ಕ್ರಿ.ಪೂ. 153ರಲ್ಲಿ ಇದನ್ನು ಹನ್ನೊಂದನೆಯ ತಿಂಗಳಾಗಿ ಪರಿಗಣಿಸಲಾಯಿತು. 1914ರಲ್ಲಿ ಆರಂಭವಾದ ಒಂದನೆಯ ಮಹಾಯುದ್ಧ 1918ರ ನವೆಂಬರ್ 11ರಂದು ಕೊನೆಗೊಂಡ ಕಾರಣ ಆ ತಾರೀಕಿನ ಜ್ಞಾಪಕಾರ್ಥವಾಗಿ ಪ್ರತಿವರ್ಷವೂ ಅದನ್ನು ಯುದ್ಧವಿರಾಮ ದಿವಸವಾಗಿ ಆಚರಿಸುವುದು ರೂಢಿ. ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ನವೆಂಬರ್ ತಿಂಗಳ ನಾಲ್ಕನೆಯ ಗುರುವಾರವನ್ನು ರಾಷ್ಟ್ರೀಯ ರಜಾದಿವಸವಾಗಿ ಆಚರಿಸುವುದಿದೆ. ಇದೇ ಕೃತಜ್ಞತಾ ಸಮರ್ಪಣ ದಿನ ಆಚರಣೆಗಳು ನವೆಂಬರ್ ೧ - ಕನ್ನಡ ರಾಜ್ಯೋತ್ಸವ (ಕರ್ನಾಟಕ ರಾಜ್ಯೋತ್ಸವ) ನವೆಂಬರ್ ತಿಂಗಳುಗಳು
2070
https://kn.wikipedia.org/wiki/%E0%B2%AE%E0%B2%BF%E0%B2%A8%E0%B2%BF%E0%B2%95%E0%B3%8D%E0%B2%B8%E0%B3%8D
ಮಿನಿಕ್ಸ್
ಖ್ಯಾತ ಗಣಕ ಸಂಶೋಧಕರಾದ ಎಂಡ್ರಿವ್ ಎಸ್ ಟೆನೆಂನ್ಬೊಂರವರು ಬರೆದ ಲಘು ಕಾರ್ಯನಿರ್ವಹಣ ಸಾಧನ. ಮಿನಿಕ್ಸ್ ಆಧಾರಿಸಿ ಲಿನ್ಸಕ್ಸ್ ಬರೆಯಲಾಯಿತು ಬಾಹ್ಯ ಸಂಪರ್ಕಗಳು History of MINIX from Andrew Tanenbaum ಗಣಕಯಂತ್ರ ಕಾರ್ಯನಿರ್ವಹಣ ಸಾಧನ
2071
https://kn.wikipedia.org/wiki/%E0%B2%8E%E0%B2%82%E0%B2%A1%E0%B3%8D%E0%B2%B0%E0%B2%BF%E0%B2%B5%E0%B3%8D%20%E0%B2%8E%E0%B2%B8%E0%B3%8D%20%E0%B2%9F%E0%B3%86%E0%B2%A8%E0%B3%86%E0%B2%82%E0%B2%A8%E0%B3%8D%E0%B2%AC%E0%B3%8A%E0%B2%82
ಎಂಡ್ರಿವ್ ಎಸ್ ಟೆನೆಂನ್ಬೊಂ
ಖ್ಯಾತ ಗಣಕ ಸಂಶೋಧಕರು ಗಣಕಯಂತ್ರ ಗಣಕಯಂತ್ರ ಅಗ್ರಗಾಮಿಗಳು
2073
https://kn.wikipedia.org/wiki/%E0%B2%B2%E0%B3%88%E0%B2%A8%E0%B2%B8%E0%B3%8D%20%E0%B2%9F%E0%B3%8B%E0%B2%B0%E0%B3%8D%E0%B2%B5%E0%B2%BE%E0%B2%B2%E0%B3%8D%E0%B2%A1%E0%B3%8D%E0%B2%B8%E0%B3%8D
ಲೈನಸ್ ಟೋರ್ವಾಲ್ಡ್ಸ್
ಲೈನಸ್ ಟೋರ್ವಾಲ್ಡ್ಸ್ (ಹುಟ್ಟು: ಡಿಸೆಂಬರ್ ೨೮, ೧೯೬೯) ಫಿನ್ಲ್ಯಾಂಡ್ ದೇಶದ ಖ್ಯಾತ ತಂತ್ರಾಂಶ ಬರಹಗಾರ. ಇವರು ಗಣಕಯಂತ್ರ ಕಾರ್ಯನಿರ್ವಹಣಾ ಸಾಧನ ಲಿನಕ್ಸ್ಅನ್ನು ಪ್ರಾರಂಭಿಸಿದವರು. ಬಾಹ್ಯ ಸಂಪರ್ಕಗಳು ಲೈನಸ್ನ ತಾಣ ಅನಧಿಕೃತ ಲೈನಸ್ ಟೋರ್ವಾಲ್ಡ್ಸ್ ಪ್ರಶ್ಣೋತ್ತರ ಪಟ್ಟಿ ಮುಕ್ತ ವಿಶ್ವದ ನಾಯಕ - (ವಯರ್ಡ್ ವಾರ್ತೆಗಳು) ಲಿನಕ್ಸ್ ನ ಪ್ರರಂಭದ ಬಗ್ಗೆ ಎಂಡ್ರಿವ್ ಎಸ್ ಟೆನೆಂನ್ಬೊಂ (೨೦೦೪) ಸಂದರ್ಶನಗಳು ಲಿನಕ್ಸ್ ಜರ್ನಲ್ - ೧, ಮಾರ್ಚ್, ೧೯೯೪ ಲಿನಕ್ಸ್ ಜರ್ನಲ್ - ೧, ನವೆಂಬರ್, ೧೯೯೯ ವಯರ್ಡ್ ಮ್ಯಗಝೀನ್ - ಜುಲೈ ೨೦೦೩ "ಬಿಸ್ನೆಸ್ ವೀಕ್" - ೧೮, ಅಗಸ್ಟ್, ೨೦೦೪ ಮೈಕ್ರೊಸೊಫ್ಟ್ ಜ್ಞಾಪಕ ಪತ್ರ ಗಣಕಯಂತ್ರ ಅಗ್ರಗಾಮಿಗಳು ತಂತ್ರಾಂಶಗಳು
2075
https://kn.wikipedia.org/wiki/%E0%B2%AE%E0%B2%B9%E0%B2%BE%E0%B2%B0%E0%B2%BE%E0%B2%B7%E0%B3%8D%E0%B2%9F%E0%B3%8D%E0%B2%B0
ಮಹಾರಾಷ್ಟ್ರ
ಮಹಾರಾಷ್ಟ್ರ ಭಾರತದ ಪಶ್ಚಿಮದ ರಾಜ್ಯಗಳಲ್ಲಿ ಒಂದಾಗಿದೆ. ಮಹಾರಾಷ್ಟ್ರವು ಜನಸಂಖ್ಯೆಯಲ್ಲಿ ಭಾರತದ ಎರಡನೆಯ ಅತಿ ದೊಡ್ಡ ರಾಜ್ಯವಾಗಿದೆ ಮತ್ತು ವಿಸ್ತೀರ್ಣದಲ್ಲಿ ಮೂರನೆಯ ಅತಿ ದೊಡ್ಡ ರಾಜ್ಯವಾಗಿದೆ. ಮಹಾರಾಷ್ಟ್ರವು ಪಶ್ಚಿಮದಲ್ಲಿ ಅರಬೀ ಸಮುದ್ರದಿಂದ, ವಾಯವ್ಯದಲ್ಲಿ ಗುಜರಾತ್ ಹಾಗೂ ದಾದ್ರಾ ಮತ್ತು ನಗರ ಹವೇಲಿಯಿಂದ, ಈಶಾನ್ಯದಲ್ಲಿ ಮಧ್ಯಪ್ರದೇಶದಿಂದ, ಪೂರ್ವದಲ್ಲಿ ಛತ್ತೀಸಘಡದಿಂದ, ದಕ್ಷಿಣದಲ್ಲಿ ಕರ್ನಾಟಕದಿಂದ, ಆಗ್ನೇಯದಲ್ಲಿ ತೆಲಂಗಾಣದಿಂದ ಹಾಗೂ ನೈಋತ್ಯದಲ್ಲಿ ಗೋವಾದಿಂದ ಸುತ್ತುವರಿಯಲ್ಪಟ್ಟಿದೆ. ಉತ್ಪತ್ತಿ ಆಧುನಿಕ ಮರಾಠಿ ಭಾಷೆ ಮಹಾರಾಷ್ಟ್ರ ಪ್ರಾಕೃತ ದಿಂದ ಅಭಿವೃದ್ಧಿಗೊಂಡಿದೆ, ಮತ್ತು ಮಹಾರಾಷ್ಟ್ರ ಜೈನ ಸಾಹಿತ್ಯದಲ್ಲಿ ಮರ್ಹಟ್ಟಾ (ನಂತರ ಮರಾಠರಿಗೆ ಬಳಸಲಾಗುತ್ತದೆ) ಎಂಬ ಪದವು ಕಂಡುಬರುತ್ತದೆ. ಮಹಾರಾಷ್ಟ್ರ, ಮಹಾರಾಷ್ಟ್ರಿ, ಮರಾಠಿ ಮತ್ತು ಮರಾಠಾ ಪದಗಳು ಒಂದೇ ಮೂಲದಿಂದ ಹುಟ್ಟಿಕೊಂಡಿರಬಹುದು. ಆದಾಗ್ಯೂ, ಅವರ ನಿಖರವಾದ ವ್ಯುತ್ಪತ್ತಿ ಅನಿಶ್ಚಿತವಾಗಿದೆ. ಭಾಷಾ ವಿದ್ವಾಂಸರಲ್ಲಿ ಹೆಚ್ಚು ವ್ಯಾಪಕವಾಗಿ ಅಂಗೀಕರಿಸಲ್ಪಟ್ಟ ಸಿದ್ಧಾಂತವೆಂದರೆ ಮರಾಠಾ ಮತ್ತು ಮಹಾರಾಷ್ಟ್ರ ಪದಗಳು ಅಂತಿಮವಾಗಿ ಮಹಾ ಮತ್ತು ರಾಷ್ಟ್ರೀಯ , ಡೆಕ್ಕನ್ ಪ್ರದೇಶದಲ್ಲಿ ಆಳುವ ಸಣ್ಣ ಮುಖ್ಯಸ್ಥರ ಬುಡಕಟ್ಟು ಅಥವಾ ರಾಜವಂಶದ ಹೆಸರು. ಮತ್ತೊಂದು ಸಿದ್ಧಾಂತವೆಂದರೆ, ಈ ಪದವು ಮಹಾ ("ಶ್ರೇಷ್ಠ") ಮತ್ತು ರಥ / ರಥಿ ಪದಗಳಿಂದ ಬಂದಿದೆ. ಪರ್ಯಾಯ ಸಿದ್ಧಾಂತವು ಈ ಪದವು "ಮಹಾ" ("ಶ್ರೇಷ್ಠ") ಮತ್ತು "ರಾಷ್ಟ್ರ" ("ರಾಷ್ಟ್ರ / ಪ್ರಭುತ್ವ") ಪದದಿಂದ ಬಂದಿದೆ ಎಂದು ಹೇಳುತ್ತದೆ. ಆದಾಗ್ಯೂ, ಈ ಸಿದ್ಧಾಂತವು ಆಧುನಿಕ ವಿದ್ವಾಂಸರಲ್ಲಿ ಸ್ವಲ್ಪ ವಿವಾದಾಸ್ಪದವಾಗಿದೆ, ಇದು ನಂತರದ ಬರಹಗಾರರ ಸಂಸ್ಕೃತೀಕೃತ ವ್ಯಾಖ್ಯಾನವೆಂದು ನಂಬುತ್ತಾರೆ. ಛಾಯಾಂಕಣ ಬಾಹ್ಯ ಸಂಪರ್ಕಗಳು ಮಹಾರಾಷ್ಟ್ರದ ನಕ್ಷೆ ಉಲ್ಲೇಖಗಳು ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
2078
https://kn.wikipedia.org/wiki/%E0%B2%95%E0%B3%87%E0%B2%B0%E0%B2%B3
ಕೇರಳ
ಕೇರಳ (ಮಲಯಾಳಂ:കേരളം) - ನೈರುತ್ಯ ಭಾರತದ ಕರಾವಳಿಯಲ್ಲಿರುವ ಒಂದು ರಾಜ್ಯ. ಇದು ಪೂರ್ವ ಮತ್ತು ಈಶಾನ್ಯಗಳಲ್ಲಿ ತಮಿಳುನಾಡು ಮತ್ತು ಕರ್ನಾಟಕಗಳಿಂದಲೂ, ಪಶ್ಚಿಮದಲ್ಲಿ ಅರಬ್ಬೀ ಸಮುದ್ರದಿಂದಲೂ ಸುತ್ತುವರಿಯಲ್ಪಟ್ಟಿದೆ. ಇದು ಭಾಷಾ ಸಾಂಸೃತಿಕ ಪ್ರದೇಶವೆಂದು ಕರೆಯಲ್ಪಡುವ ದಕ್ಷಿಣ ಭಾರತದ ರಾಜ್ಯಗಲ್ಲಿ ಒಂದು. ಮಲಯಾಳಂ ಇಲ್ಲಿನ ಪ್ರಧಾನ ಆಡುಭಾಷೆ. ವಿಸ್ತೀರ್ಣದಲ್ಲಿ ೨೧ನೇ ಸ್ಥಾನವನ್ನು ಪಡೆದಿರುವ ಕೇರಳವು ಜನಸಂಖ್ಯೆಯಲ್ಲಿ ೧೨ನೇ ಸ್ಥಾನವನ್ನು ಪಡೆದಿದೆ. ಮಲಯಾಳಂ ಭಾಷೆ ಮಾತನಾಡುವ ಜನರು ವಾಸಿಸುವ (ನಾಗರ ಕೊವಿಲ್, ಕನ್ಯಾಕುಮಾರಿ ತಾಲೂಕುಗಳನ್ನು ಹೊರತುಪಡಿಸಿ ) ತಿರುವಿದಾಕೂಂರು, ಕೊಚ್ಚಿ, ಮಲಬಾರ್, ದಕ್ಷಿಣ ಕನ್ನಡ ಜಿಲ್ಲೆಯಾದ ಕಾಸರಗೋಡು ತಾಲೂಕು ಎಂಬೀ ಪ್ರದೇಶಗಳನ್ನು ಸೇರಿಸಿ 1956ರಲ್ಲಿ ಭಾಷಾವಾರು ಪ್ರಾಂತ್ಯವಾಗಿ ಕೇರಳಂ ರಾಜ್ಯ ರಚನೆಯಾಯಿತು. ಸರ್ಕಾರ ರಾಜ್ಯಪಾಲರ ನೇಮಕ ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಪಳನಿಸ್ವಾಮಿ ಸದಾಶಿವಂ ಅವರನ್ನು ಕೇರಳ ರಾಜ್ಯಪಾಲರನ್ನಾಗಿ ನೇಮಿಸಿದೆ. ಅವರು ದಿ. ೫-೯-೨೦೧೪/5-9-2014ರಂದು ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸಿದರು.(ವಾರದ ಹಿಂದೆ ಕಾಂಗ್ರೆಸ್ ನಾಯಕಿ ದಿಲ್ಲಿ ಮಾಜಿ ಸಿಎಂ ಶೀಲಾ ದೀಕ್ಷಿತ್ ಅವರು ಕೇರಳ ರಾಜ್ಯಪಾಲ ಹುದ್ದೆಗೆ ನೀಡಿದ್ದ ರಾಜೀನಾಮೆಯನ್ನು ರಾಷ್ಟ್ರಪತಿ ಭವನ ಅಂಗೀಕರಿಸಿದೆ. ಇವರಿಂದ ತೆರವಾದ ಈ ಸ್ಥಾನಕ್ಕೆ ಸದಾಶಿವಂ ಅವರ ನೇಮಕವಾಗಿದೆ. ಇವರು ಕಳೆದ ಏಪ್ರಿಲ್‌ನಲ್ಲಿ ಸಿಜೆಐ ಹುದ್ದೆಯಿಂದ ನಿವೃತ್ತಿ ಹೊಂದಿದ್ದರು.} ಕೇರಳ ವಿಧಾನಸಭೆಯ ಅವಧಿ ಮೇ 31, 2016 ರಂದು ಮುಕ್ತಾಯಗೊಳ್ಳುತ್ತದೆ. ಮುಂದಿನ ವಿಧಾನಸಭಾ ಚುನಾವಣೆ,16 ಮೇ 2016 ರಂದು ನಡೆಯಲಿದೆ. ೨೦೧೬ ಎಡರಂಗ ಅಧಿಕಾರಕ್ಕೆ ಕೇರಳದ 12ನೇ ಮುಖ್ಯಮಂತ್ರಿಯಾಗಿ ಬಹುಮತ ಪಡೆದ ಎಡರಂಗದ ನಾಯಕ, ಪಿಣರಾಯಿ ವಿಜಯನ್‌ ಅವರು 2016 ಮೇ 24ಮಂಗಳವಾರ ಸಂಜೆ ಪ್ರಮಾಣ ವಚನ ಸ್ವೀಕರಿಸಿದರು. ವಿಜಯನ್‌ ಅವರ ಜತೆಗೆ 19 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ತಿರುವನಂತಪುರದ ಸೆಂಟ್ರಲ್‌ ಸ್ಟೇಡಿಯಂನಲ್ಲಿ ಸಂಜೆ 4 ಗಂಟೆಗೆ ನಡೆದ ಸಮಾರಂಭದಲ್ಲಿ ಕೇರಳದ ರಾಜ್ಯಪಾಲ ಪಿ. ಸದಾಶಿವಂ ಅವರು ಪ್ರಮಾಣ ವಚನ ಬೋಧಿಸಿದರು. 18 ಸಚಿವರು: ಪಿಣರಾಯಿ ತಮ್ಮ ಸಂಪುಟದಲ್ಲಿ 13 ಮಂದಿ ಹೊಸಬರು ಸೇರಿದಂತೆ 18 ಸಚಿವರಿಗೆ ಸ್ಥಾನ ನೀಡಿದ್ದಾರೆ. ಸಿಪಿಎಂನ 11, ಸಿಪಿಐನ ನಾಲ್ಕು, ಕಾಂಗ್ರೆಸ್‌ (ಸೆಕ್ಯುಲರ್‌), ಜೆಡಿಎಸ್‌ ಮತ್ತು ಎನ್‌ಸಿಪಿಯ ತಲಾ ಒಬ್ಬರು ಇದರಲ್ಲಿ ಸೇರಿದ್ದಾರೆ. ಇಬ್ಬರು ಮಹಿಳೆಯರಿಗೆ ಸಂಪುಟದಲ್ಲಿ ಸ್ಥಾನ ದೊರೆತಿದೆ. ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಕೇರಳ ವಿಧಾನಸಭಾ ಚುನಾವಣೆಯಲ್ಲಿ 140 ಸ್ಥಾನಗಳಲ್ಲಿ 91 ಸ್ಥಾನಗಳನ್ನು ಪಡೆದು ಅಧಿಕಾರಕ್ಕೇರಿದೆ. ಇವುಗಳನ್ನೂ ನೋಡಿ ಕೇರಳದ ಇತಿಹಾಸ ಪದ್ಮನಾಭಸ್ವಾಮಿ ದೇವಸ್ಥಾನ ಕೇರಳದ ಜಿಲ್ಲೆಗಳು ಉಲ್ಲೇಖಗಳು ಬಾಹ್ಯ ಕೊಂಡಿಗಳು ಪ್ರಜಾಪ್ರಭುತ್ವದಲ್ಲಿ ರಾಜರ ರಾಜ್ಯಗಳ ವಿಲೀನ ಭಾರತದ ಚುನಾವಣೆಗಳು 2016 ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
2079
https://kn.wikipedia.org/wiki/%E0%B2%B9%E0%B2%BF%E0%B2%82%E0%B2%A6%E0%B2%BF
ಹಿಂದಿ
|nation=|agency=ಕೇಂದ್ರೀಯ ಹಿಂದಿ ನಿರ್ದೇಶನಾಲಯ|iso1=hi|iso2=hin|iso3=hin|image=Hindi.svg|map=Hindi 2011 Indian Census by district.svg|notice=Indic}} ಆಧುನಿಕ ಗುಣಮಟ್ಟದ ಹಿಂದಿ (ದೇವನಾಗರಿ: मानक हिन्दी ಮನಕ್ ಹಿಂದೀ), ಸಾಮಾನ್ಯವಾಗಿ ಹಿಂದಿ ಎಂದು ಉಲ್ಲೇಖಿಸಲಾಗುತ್ತದೆ (ದೇವನಾಗರಿ: हिन्दी, ಹಿಂದಿ), ಇದು ಉತ್ತರ ಭಾರತದಲ್ಲಿ ಮುಖ್ಯವಾಗಿ ಮಾತನಾಡುವ ಇಂಡೋ-ಆರ್ಯನ್ ಭಾಷೆಯಾಗಿದೆ ಮತ್ತು ಉತ್ತರ, ಮಧ್ಯ, ಪೂರ್ವ ಮತ್ತು ಪಶ್ಚಿಮ ಭಾರತದ ಹಿಂದಿ ಭಾಷೆಯ ಭಾಗಗಳನ್ನು ಒಳಗೊಳ್ಳುವ ಭಾಷೆಯಾಗಿ ಕಾರ್ಯನಿರ್ವಹಿಸುತ್ತದೆ. . ಹಿಂದಿಯನ್ನು ಪ್ರಮಾಣೀಕೃತ ಮತ್ತು ಸಂಸ್ಕೃತೀಕರಿಸಿದ ರಿಜಿಸ್ಟರ್ ಹಿಂದೂಸ್ತಾನಿ ಭಾಷೆ, ಇದನ್ನ ಪ್ರಾಥಮಿಕವಾಗಿ ದೆಹಲಿ ಮತ್ತು ಉತ್ತರ ಭಾರತದ ನೆರೆಯ ಪ್ರದೇಶಗಳ ಖರಿಬೋಲಿ ಉಪಭಾಷೆಯೆಂದು ವಿವರಿಸಲಾಗಿದೆ. ದೇವನಾಗರಿ ಲಿಪಿಯಲ್ಲಿ ಬರೆಯಲಾದ ಹಿಂದಿ, ಇಂಗ್ಲಿಷ್ ಜೊತೆಗೆ ಭಾರತ ಸರ್ಕಾರದ ಎರಡು ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. ಹಿಂದಿಯನ್ನು ಒಂಬತ್ತು ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಧಿಕೃತ ಭಾಷೆಯಾಗಿದೆ ಮತ್ತು ಮೂರು ಇತರ ರಾಜ್ಯಗಳಲ್ಲಿ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾತನಾಡುತ್ತಾರೆ. ಭಾರತ ಗಣರಾಜ್ಯದ 22 ಅನುಸೂಚಿತ ಭಾಷೆಗಳಲ್ಲಿ ಹಿಂದಿ ಕೂಡ ಒಂದು. ಹಿಂದಿ ಎಂಬುದು ಹಿಂದಿ ಬೆಲ್ಟ್‌ನ ಸಂಪರ್ಕ ಭಾಷೆಯಾಗಿದೆ . ಇದನ್ನು ಸ್ವಲ್ಪ ಮಟ್ಟಿಗೆ, ಭಾರತದ ಇತರ ಭಾಗಗಳಲ್ಲಿ (ಸಾಮಾನ್ಯವಾಗಿ ಬಜಾರ್ ಹಿಂದೂಸ್ತಾನಿ ಅಥವಾ ಹಫ್ಲಾಂಗ್ ಹಿಂದಿಯಂತಹ ಸರಳೀಕೃತ ಅಥವಾ ಪಿಡ್ಜಿನೈಸ್ಡ್ ವೈವಿಧ್ಯದಲ್ಲಿ) ಮಾತನಾಡುತ್ತಾರೆ. ಭಾರತದ ಹೊರಗೆ, ಹಲವಾರು ಇತರ ಭಾಷೆಗಳನ್ನು ಅಧಿಕೃತವಾಗಿ "ಹಿಂದಿ" ಎಂದು ಗುರುತಿಸಲಾಗಿದೆ ಆದರೆ ಅವಧಿ ಮತ್ತು ಭೋಜ್‌ಪುರಿ ಮುಂತಾದ ಇತರ ಉಪಭಾಷೆಗಳಿಂದ ವಂಶವೆಂದು ವಿವರಿಸಿರುವ ಪ್ರಮಾಣಿತ ಹಿಂದಿ ಭಾಷೆಯನ್ನು ಉಲ್ಲೇಖಿಸುವುದಿಲ್ಲ. ಅಂತಹ ಭಾಷೆಗಳಲ್ಲಿ ಫಿಜಿ ಹಿಂದಿ ಸೇರಿಕೊಂಡಿದ್ದು, ಫಿಜಿಯಲ್ಲಿ ಹಿಂದಿ ಅಧಿಕೃತ ಸ್ಥಾನಮಾನವನ್ನು ಹೊಂದಿದೆ, ಮತ್ತು ಕೆರಿಬಿಯನ್ ಹಿಂದೂಸ್ತಾನಿಯನ್ನು ಸುರಿನಾಮ್, ಟ್ರಿನಿಡಾಡ್ ಮತ್ತು ಟೊಬಾಗೊ ಮತ್ತು ಗಯಾನಾದಲ್ಲಿ ಮಾತನಾಡುತ್ತಾರೆ. ಸ್ಕ್ರಿಪ್ಟ್ ಮತ್ತು ಔಪಚಾರಿಕ ಶಬ್ದಕೋಶದ ಹೊರತಾಗಿ, ಪ್ರಮಾಣಿತ ಹಿಂದಿಯು ಪ್ರಮಾಣಿತ ಉರ್ದು ಜೊತೆಗೆ ಪರಸ್ಪರ ಗ್ರಹಿಸಬಲ್ಲದು, ಮತ್ತೊಂದು ಮಾನ್ಯತೆ ಪಡೆದ ರಿಜಿಸ್ಟರ್ ಹಿಂದೂಸ್ತಾನಿಯು ಎರಡೂ ಸಾಮಾನ್ಯ ಆಡುಮಾತಿನ ನೆಲೆಯನ್ನು ಹಂಚಿಕೊಳ್ಳುತ್ತದೆ. ಹಿಂದಿಯು ಮ್ಯಾಂಡರಿನ್, ಸ್ಪ್ಯಾನಿಷ್ ಮತ್ತು ಇಂಗ್ಲಿಷ್ ನಂತರ ವಿಶ್ವದಲ್ಲಿ ಹೆಚ್ಚು ಮಾತನಾಡುವ ನಾಲ್ಕನೇ ಭಾಷೆಯಾಗಿದೆ. ಪರಸ್ಪರ ಅರ್ಥವಾಗುವ ಉರ್ದು ಜೊತೆಗೆ ಗಮನಿಸಿದರೆ, ಮ್ಯಾಂಡರಿನ್ ಮತ್ತು ಇಂಗ್ಲಿಷ್ ನಂತರ ಇದು ವಿಶ್ವದ ಮೂರನೇ ಅತಿ ಹೆಚ್ಚು ಮಾತನಾಡುವ ಭಾಷೆಯಾಗಿದೆ. ಎಥ್ನೋಲಾಗ್ (2022, 25 ನೇ ಆವೃತ್ತಿ) ವರದಿಗಳ ಪ್ರಕಾರ ಹಿಂದಿ ಮೊದಲ ಮತ್ತು ಎರಡನೇ ಭಾಷೆ ಮಾತನಾಡುವವರು ಸೇರಿದಂತೆ ವಿಶ್ವದ ಮೂರನೇ ಅತಿ ಹೆಚ್ಚು ಮಾತನಾಡುವ ಭಾಷೆಯಾಗಿದೆ. ವ್ಯುತ್ಪತ್ತಿ ಹಿಂದಿ ಎಂಬ ಪದವನ್ನು ಮೂಲತಃ ಇಂಡೋ-ಗಂಗಾ ಬಯಲಿನ ನಿವಾಸಿಗಳನ್ನು ಉಲ್ಲೇಖಿಸಲು ಬಳಸಲಾಗುತ್ತಿತ್ತು. ಇದನ್ನು ಶಾಸ್ತ್ರೀಯ ಪರ್ಷಿಯನ್ ಎರವಲು ಪಡೆಯಲಾಗಿದೆ. ಹಿಂದಿ ( ಇರಾನಿಯನ್ ಪರ್ಷಿಯನ್ ಉಚ್ಚಾರಣೆ: ಹೆಂಡಿ ), ಅಂದರೆ " ಹಿಂದ್ (ಭಾರತ)" (ಆದ್ದರಿಂದ, "ಭಾರತೀಯ"). ಇನ್ನೊಂದು ಹೆಸರು ಹಿಂದವಿ ( ) ಅಥವಾ Hinduī ( ) (ಪರ್ಷಿಯನ್ ಭಾಷೆಯಿಂದ "ಹಿಂದೂ/ಭಾರತೀಯತೆಗೆ ಸೇರಿದವರು") ಅನ್ನು ಹಿಂದೆ ಹೆಚ್ಚಾಗಿ ಬಳಸಲಾಗುತ್ತಿತ್ತು, ಉದಾಹರಣೆಗೆ ಅಮೀರ್ ಖುಸ್ರೋ ಅವರ ಕಾವ್ಯದಲ್ಲಿ ಉಲ್ಲೇಖವಿದೆ. "ಹಿಂದಿ" ಮತ್ತು "ಹಿಂದೂ" ಪದಗಳು ಹಳೆಯ ಪರ್ಷಿಯನ್‌ಗೆ ಹಿಂದಿನದು, ಈ ಹೆಸರುಗಳನ್ನು ಸಿಂಧು ( ಎಂಬ ಸಂಸ್ಕೃತ ಹೆಸರಿನಿಂದ ಪಡೆಯಲಾಗಿದೆ. ), ಸಿಂಧೂ ನದಿಯನ್ನು ಉಲ್ಲೇಖಿಸುತ್ತದೆ. ಅದೇ ಪದಗಳ ಗ್ರೀಕ್ ಸಂಜ್ಞೆಗಳು "ಸಿಂಧೂ " (ನದಿಗೆ) ಮತ್ತು " ಭಾರತ " (ನದಿಯ ಭೂಮಿಗೆ) ಎಂದು ಉಲ್ಲೇಖವಾಗಿದೆ. ಇತಿಹಾಸ ಮಧ್ಯ ಇಂಡೋ-ಆರ್ಯನ್ ನಿಂದ ಹಿಂದಿ ಇತರ ಇಂಡೋ-ಆರ್ಯನ್ ಭಾಷೆಗಳಂತೆ, ಹಿಂದಿಯು ವೈದಿಕ ಸಂಸ್ಕೃತದ ಆರಂಭಿಕ ರೂಪದ ನೇರ ವಂಶವಾಗಿದ್ದು, ಶೌರಸೇನಿ ಪ್ರಾಕೃತ ಮತ್ತು ಶೌರಸೇನಿ ಅಪಭ್ರಂಶ (ಸಂಸ್ಕೃತ ಅಪಭ್ರಂಶದಿಂದ "ಭ್ರಷ್ಟ") ಮೂಲಕ 7 ನೇ ಶತಮಾನದಲ್ಲಿ ಹೊರಹೊಮ್ಮಿತು. ಮಧ್ಯ ಇಂಡೋ-ಆರ್ಯನ್‌ನಿಂದ ಹಿಂದಿಗೆ ಪರಿವರ್ತನೆಯಾಗುವ ಧ್ವನಿ ಬದಲಾವಣೆಗಳು: ಜೊಡಿ ವ್ಯಂಜನಗಳ ಹಿಂದಿನ ಸ್ವರಗಳ ಹಿಂದಿನ ಉದ್ದೀಕರಣ, ಕೆಲವೊಮ್ಮೆ ಸ್ವಯಂಪ್ರೇರಿತ ನಾಸೀಕರಣ: ಸಂ. ಹಸ್ತ "ಕೈ" > ಪ್ರಾ. ಹತ್ತ > ಹತ್ ಎಲ್ಲಾ ಪದ-ಅಂತಿಮ ಸ್ವರಗಳ ನಷ್ಟ: ರಾತ್ರಿ "ರಾತ್ರಿ" > ರಾಟ್ಟಿ > ರಾತ್ ಉಚ್ಚಾರಣೆಯಿಲ್ಲದ ಅಥವಾ ಒತ್ತಡವಿಲ್ಲದ ಸಣ್ಣ ಸ್ವರಗಳ ನಷ್ಟ ( ಶ್ವಾ ಅಳಿಸುವಿಕೆಯಲ್ಲಿ ಪ್ರತಿಫಲಿಸುತ್ತದೆ): ಸುಸ್ಥಿರ "ಸಂಸ್ಥೆ" > ಸುಸ್ಥಿರ > ಸೂತ್ರ ಪಕ್ಕದ ಸ್ವರಗಳ ಕುಗ್ಗುವಿಕೆ (ವಿರಾಮದಿಂದ ಬೇರ್ಪಟ್ಟು ಸೇರಿದಂತೆ: ಅಪರಾ "ಇತರ" > ಔರ > ಔರ್ ಅಂತಿಮ -ಎಂ ನಿಂದ -ṽ : ಗ್ರಾಮ "village" > ಗಾಮ > ಗಾಂವ್ ಅಂತರ್ ಸ್ವರ -ḍ- to -ṛ- ಅಥವಾ -l- : taḍāga "ಕೊಳ" > talāv, naḍa "reed" > nal . v > b : ವಿವಾಹ "ಮದುವೆ" > byāh ಹಿಂದೂಸ್ತಾನಿ ದೆಹಲಿ ಸುಲ್ತಾನರ ಅವಧಿಯಲ್ಲಿ, ಇಂದಿನ ಉತ್ತರ ಭಾರತ, ಪೂರ್ವ ಪಾಕಿಸ್ತಾನ, ದಕ್ಷಿಣ ನೇಪಾಳ ಮತ್ತು ಬಾಂಗ್ಲಾದೇಶ ಮತ್ತು ಹಿಂದೂ ಮತ್ತು ಮುಸ್ಲಿಂ ಸಂಸ್ಕೃತಿಗಳ ಸಂಪರ್ಕದ ಪರಿಣಾಮವಾಗಿ, ಹಳೆಯ ಹಿಂದಿಯ ಸಂಸ್ಕೃತ ಮತ್ತು ಪ್ರಾಕೃತ ಮೂಲವು ಎರವಲು ಪದಗಳಿಂದ ಸಮೃದ್ಧವಾಯಿತು. ಪರ್ಷಿಯನ್, ಹಿಂದೂಸ್ತಾನಿಯ ಪ್ರಸ್ತುತ ರೂಪಕ್ಕೆ ವಿಕಸನಗೊಳ್ಳುತ್ತಿದೆ. ಹಿಂದೂಸ್ತಾನಿ ಆಡುಭಾಷೆಯು ಭಾರತೀಯ ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಭಾರತೀಯ ರಾಷ್ಟ್ರೀಯ ಏಕತೆಯ ಅಭಿವ್ಯಕ್ತಿಯಾಯಿತು, ಮತ್ತು ಉತ್ತರ ಭಾರತ ಉಪಖಂಡದ ಜನರ ಸಾಮಾನ್ಯ ಭಾಷೆಯಾಗಿ ಮಾತನಾಡುವುದನ್ನು ಮುಂದುವರೆಸಿದೆ, ಹಿಂದಿ ಬಾಲಿವುಡ್ ಚಲನಚಿತ್ರಗಳು ಮತ್ತು ಹಾಡುಗಳು ಹಿಂದೂಸ್ತಾನಿ ಶಬ್ದಕೋಶದಲ್ಲಿ ಪ್ರತಿಫಲಿಸುತ್ತಿದೆ. ಉಪಭಾಷೆಗಳು ಆಧುನಿಕ ಪ್ರಾಮಾಣಿತ ಹಿಂದಿಯು ದೆಹಲಿ ಉಪಭಾಷೆಯನ್ನು ಆಧರಿಸಿದೆ, ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶದ ಆಡುಭಾಷೆಯಾದ ಅವಧಿ ಮತ್ತು ಬ್ರಜ್‌ನಂತಹ ಪ್ರತಿಷ್ಠೆಯಿಂದ ಹಿಂದಿ ಭಾಷೆಯನ್ನು ಬದಲಿಸಿಕೊಂಡಿದೆ. ಇದು ಅರೇಬಿಕ್ ಪದಗಳ ಖರಿಬೋಲಿ ಮತ್ತು ಪರ್ಷಿಯನ್ ನಿಂದ ಹೊರಹೊಮ್ಮಿದೆ. 19 ನೇ ಶತಮಾನದ ಆರಂಭದಲ್ಲಿ ದೇವನಾಗರಿ ಲಿಪಿಯಲ್ಲಿ ಪ್ರಕಟವಾದ ಪ್ರೇಮ್ ಸಾಗರ್ ಅವರ ಲಲ್ಲು ಜಿ ಲಾಲ್, ಬಟಿಯಾಲ್ ಪಚೀಸಿ ಅವರ ಸದಲ್ ಮಿಶ್ರಾ ಮತ್ತು ಇನ್ಶಾ ಅಲ್ಲಾ ಖಾನ್ ಅವರ ರಾಣಿ ಕೇಟಕಿ ಕೀ ಕಹಾನಿ ಉದಾಹರಣೆಗಳನ್ನು ಕಾಣಬಹುದು. ಉರ್ದು - ಹಿಂದೂಸ್ತಾನಿಯ ಇನ್ನೊಂದು ರೂಪವೆಂದು ಪರಿಗಣಿಸಲಾಗಿದೆ - ಮೊಘಲ್ ಅವಧಿಯ (1800 ರ ದಶಕದ) ಉತ್ತರಾರ್ಧದಲ್ಲಿ ಭಾಷಾ ಪ್ರತಿಷ್ಠೆಯನ್ನು ಪಡೆದುಕೊಂಡಿತು ಮತ್ತು ಗಮನಾರ್ಹವಾದ ಪರ್ಷಿಯನ್ ಪ್ರಭಾವಕ್ಕೆ ಒಳಗಾಯಿತು. ಆಧುನಿಕ ಹಿಂದಿ ಮತ್ತು ಅದರ ಸಾಹಿತ್ಯ ಸಂಪ್ರದಾಯವು 18 ನೇ ಶತಮಾನದ ಅಂತ್ಯದ ವೇಳೆಗೆ ವಿಕಸನಗೊಂಡಿತು. ಕಾಲಾನಂತರದಲ್ಲಿ ಉರ್ದುವನ್ನು ಪ್ರತ್ಯೇಕ ಭಾಷೆಯಾಗಿ ಘೋಷಿಸಲಾಯಿತು, ಆದರೆ ಪ್ರಮುಖ ಉರ್ದು ಬರಹಗಾರರು 19 ನೇ ಶತಮಾನದ ಆರಂಭದವರೆಗೂ ತಮ್ಮ ಭಾಷೆಯನ್ನು ಹಿಂದಿ ಅಥವಾ ಹಿಂದವಿ ಎಂದು ಉಲ್ಲೇಖಿಸುವುದನ್ನು ಮುಂದುವರೆಸಿದರು. ಗುಲಾಮ್ ಹಮ್ದಾನ್ ಮುಶಾಫಿ ತನ್ನ ಕವಿತೆಯಲ್ಲಿ ಬರೆದಂತೆ:- ಮತ್ತು ಮಿರ್ ತಾಕಿ ಮಿರ್ ತನ್ನ ಶಾಯರಿಯಲ್ಲಿ ಬರೆದಿದ್ದಾರೆ:- ಜಾನ್ ಗಿಲ್‌ಕ್ರಿಸ್ಟ್ ಅವರು ಮುಖ್ಯವಾಗಿ ಹಿಂದೂಸ್ತಾನಿ ಭಾಷೆಯ ಅಧ್ಯಯನಕ್ಕೆ ಹೆಸರುವಾಸಿಯಾಗಿದ್ದರು, ಇದನ್ನು ಉತ್ತರ ಭಾರತದ (ಈಗಿನ ಪಾಕಿಸ್ತಾನವನ್ನು ಒಳಗೊಂಡಂತೆ) ಬ್ರಿಟಿಷ್ ವಸಾಹತುಶಾಹಿಗಳು ಮತ್ತು ಸ್ಥಳೀಯ ಜನರಿಂದ ಭಾಷಾಂತರಿಸಲಾಗಿದೆ. ಅವರು ಆಂಗ್ಲ-ಹಿಂದೂಸ್ತಾನಿ ಡಿಕ್ಷನರಿ, ಎ ಗ್ರಾಮರ್ ಆಫ್ ದಿ ಹಿಂದೂಸ್ತಾನೀ ಲಾಂಗ್ವೇಜ್, ದಿ ಓರಿಯೆಂಟಲ್ ಲಿಂಗ್ವಿಸ್ಟ್, ಮತ್ತು ಇನ್ನೂ ಅನೇಕವನ್ನು ಸಂಕಲಿಸಿದ್ದಾರೆ ಮತ್ತು ಬರೆದಿದ್ದಾರೆ. ಅವರ ಹಿಂದೂಸ್ತಾನಿ ಶಬ್ದಕೋಶವನ್ನು ಪರ್ಸೋ-ಅರೇಬಿಕ್ ಲಿಪಿ, ನಾಗರೀ ಲಿಪಿ ಮತ್ತು ರೋಮನ್ ಲಿಪ್ಯಂತರಣದಲ್ಲಿ ಪ್ರಕಟಿಸಲಾಯಿತು. ಲಂಡನ್‌ನ ಯೂನಿವರ್ಸಿಟಿ ಕಾಲೇಜ್‌ನ ಪ್ರತಿಷ್ಠಾನದಲ್ಲಿ ಮತ್ತು ಗಿಲ್‌ಕ್ರಿಸ್ಟ್ ಎಜುಕೇಷನಲ್ ಟ್ರಸ್ಟ್‌ನ ದತ್ತಿಗಳ ನೆಲೆಯಲ್ಲಿ ಅವರು ಹೆಸರುವಾಸಿಯಾಗಿದ್ದಾರೆ. 19 ನೇ ಶತಮಾನದ ಉತ್ತರಾರ್ಧದಲ್ಲಿ, ಉರ್ದುವಿನಿಂದ ಪ್ರತ್ಯೇಕವಾದ ಹಿಂದೂಸ್ತಾನಿಯ ಪ್ರಮಾಣಿತ ರೂಪವಾಗಿ ಹಿಂದಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಚಳುವಳಿ ರೂಪುಗೊಂಡಿತು. 1881 ರಲ್ಲಿ, ಬಿಹಾರವು ಹಿಂದಿಯನ್ನು ತನ್ನ ಏಕೈಕ ಅಧಿಕೃತ ಭಾಷೆಯಾಗಿ ಅಂಗೀಕರಿಸಿತು, ಉರ್ದುವನ್ನು ಬದಲಿಸಿತು ಮತ್ತು ಈ ಮೂಲಕ ಹಿಂದಿಯನ್ನು ಅಳವಡಿಸಿಕೊಂಡ ಭಾರತದ ಮೊದಲ ರಾಜ್ಯವಾಯಿತು. ಆದರೆ, 2014ರಲ್ಲಿ ರಾಜ್ಯದಲ್ಲಿ ಉರ್ದು ಭಾಷೆಗೆ ಎರಡನೇ ಅಧಿಕೃತ ಭಾಷಾ ಸ್ಥಾನಮಾನ ನೀಡಲಾಯಿತು. ಸ್ವತಂತ್ರ ಭಾರತ ಸ್ವಾತಂತ್ರ್ಯದ ನಂತರ, ಭಾರತ ಸರ್ಕಾರವು ಈ ಕೆಳಗಿನ ಸಮಾವೇಶಗಳನ್ನು ಸ್ಥಾಪಿಸಿತು:  ವ್ಯಾಕರಣದ ಪ್ರಮಾಣೀಕರಣ: 1954 ರಲ್ಲಿ, ಭಾರತ ಸರ್ಕಾರವು ಹಿಂದಿಯ ವ್ಯಾಕರಣವನ್ನು ತಯಾರಿಸಲು ಸಮಿತಿಯನ್ನು ಸ್ಥಾಪಿಸಿತು; ಸಮಿತಿಯ ವರದಿಯನ್ನು 1958 ರಲ್ಲಿ ಎ ಬೇಸಿಕ್ ಗ್ರಾಮರ್ ಆಫ್ ಮಾಡರ್ನ್ ಹಿಂದಿ ಎಂದು ಬಿಡುಗಡೆ ಮಾಡಲಾಯಿತು. ಬರವಣಿಗೆಯಲ್ಲಿ ಏಕರೂಪತೆಯನ್ನು ತರಲು ಶಿಕ್ಷಣ ಮತ್ತು ಸಂಸ್ಕೃತಿ ಸಚಿವಾಲಯದ ಕೇಂದ್ರ ಹಿಂದಿ ನಿರ್ದೇಶನಾಲಯವು ದೇವನಾಗರಿ ಲಿಪಿಯನ್ನು ಬಳಸಿಕೊಂಡು ಅಕ್ಷರಶಾಸ್ತ್ರದ ಪ್ರಮಾಣೀಕರಣ, ಕೆಲವು ದೇವನಾಗರಿ ಅಕ್ಷರಗಳ ಆಕಾರವನ್ನು ಸುಧಾರಿಸಲು ಮತ್ತು ಇತರ ಭಾಷೆಗಳಿಂದ ಶಬ್ದಗಳನ್ನು ವ್ಯಕ್ತಪಡಿಸಲು ಡಯಾಕ್ರಿಟಿಕ್ಸ್ ಅನ್ನು ಪರಿಚಯಿಸಿತು. 14 ಸೆಪ್ಟೆಂಬರ್ 1949 ರಂದು, ಭಾರತದ ಸಂವಿಧಾನ ಸಭೆಯು ದೇವನಾಗರಿ ಲಿಪಿಯಲ್ಲಿ ಬರೆಯಲ್ಪಟ್ಟ ಉರ್ದುವಿನ ಹಿಂದಿನ ಬಳಕೆಯ ಬದಲಿಗೆ ಭಾರತೀಯ ಸಾಮ್ರಾಜ್ಯದಲ್ಲಿಹಿಂದಿಯನ್ನು ಭಾರತೀಯ ಗಣರಾಜ್ಯದ ಅಧಿಕೃತ ಭಾಷೆಯಾಗಿ ಅಂಗೀಕರಿಸಿತು. ಈ ನಿಟ್ಟಿನಲ್ಲಿ, ಹಲವಾರು ದಿಗ್ಗಜರು ಹಿಂದಿಯ ಪರವಾಗಿ ಭಾರತವನ್ನು ಒಟ್ಟುಗೂಡಿಸಿದರು ಮತ್ತು ಲಾಬಿ ಮಾಡಿದರು, ಮುಖ್ಯವಾಗಿ ಬಿಯೋಹರ್ ರಾಜೇಂದ್ರ ಸಿಂಹ ಹಜಾರಿ ಪ್ರಸಾದ್ ದ್ವಿವೇದಿ, ಕಾಕಾ ಕಾಲೇಲ್ಕರ್, ಮೈಥಿಲಿ ಶರಣ್ ಗುಪ್ತ್ ಮತ್ತು ಸೇಠ್ ಗೋವಿಂದ್ ದಾಸ್ ಅವರೊಂದಿಗೆ ಈ ವಿಷಯದ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಸಿದರು. ಅದರಂತೆ, 14 ಸೆಪ್ಟೆಂಬರ್ 1949 ರಂದು ಬೆಯೋಹರ್ ರಾಜೇಂದ್ರ ಸಿಂಹ ಅವರ 50 ನೇ ಜನ್ಮದಿನದಂದು, ಹಿಂದಿಯನ್ನು ಅಧಿಕೃತ ಭಾಷೆಯಾಗಿ ಅಳವಡಿಸಿಕೊಂಡ ನಂತರ ಪ್ರಯತ್ನಗಳು ಫಲಪ್ರದವಾದವು. ಈಗ ಅದನ್ನು ಹಿಂದಿ ದಿನ ಎಂದು ಆಚರಿಸಲಾಗುತ್ತದೆ. ಅಧಿಕೃತ ಸ್ಥಿತಿ ಭಾರತ ಭಾರತೀಯ ಸಂವಿಧಾನದ XVII ಭಾಗವು ಭಾರತೀಯ ಕಾಮನ್‌ವೆಲ್ತ್‌ನ ಅಧಿಕೃತ ಭಾಷೆಯೊಂದಿಗೆ ವ್ಯವಹರಿಸುತ್ತದೆ. ಆರ್ಟಿಕಲ್ 343 ರ ಅಡಿಯಲ್ಲಿ, ಒಕ್ಕೂಟದ ಅಧಿಕೃತ ಭಾಷೆಗಳನ್ನು ಸೂಚಿಸಲಾಗಿದೆ, ಇದು ದೇವನಾಗರಿ ಲಿಪಿಯಲ್ಲಿ ಹಿಂದಿ ಮತ್ತು ಇಂಗ್ಲಿಷ್ ಅನ್ನು ಒಳಗೊಂಡಿರುತ್ತದೆ: (1) ಒಕ್ಕೂಟದ ಅಧಿಕೃತ ಭಾಷೆಯು ದೇವನಾಗರಿ ಲಿಪಿಯಲ್ಲಿ ಹಿಂದಿ ಆಗಿರಬೇಕು. ಒಕ್ಕೂಟದ ಅಧಿಕೃತ ಉದ್ದೇಶಗಳಿಗಾಗಿ ಬಳಸಬೇಕಾದ ಅಂಕಿಗಳ ರೂಪವು ಭಾರತೀಯ ಅಂಕಿಗಳ ಅಂತರರಾಷ್ಟ್ರೀಯ ರೂಪವಾಗಿರುತ್ತದೆ. (2) ಷರತ್ತು (1) ರಲ್ಲಿ ಏನೇ ಇದ್ದರೂ, ಈ ಸಂವಿಧಾನದ ಪ್ರಾರಂಭದಿಂದ ಹದಿನೈದು ವರ್ಷಗಳ ಅವಧಿಯವರೆಗೆ, ಇಂಗ್ಲಿಷ್ ಭಾಷೆಯನ್ನು ಅಂತಹ ಪ್ರಾರಂಭದ ಮೊದಲು ತಕ್ಷಣವೇ ಬಳಸಲಾಗುತ್ತಿರುವ ಒಕ್ಕೂಟದ ಎಲ್ಲಾ ಅಧಿಕೃತ ಉದ್ದೇಶಗಳಿಗಾಗಿ ಬಳಸುವುದನ್ನು ಮುಂದುವರಿಸಬೇಕು. ಅಲ್ಲದೆ, ಅಧ್ಯಕ್ಷರು ಹೇಳಿದ ಅವಧಿಯಲ್ಲಿ, ಯಾವುದೇ ಅಧಿಕೃತ ಉದ್ದೇಶಗಳಿಗಾಗಿ, ಆಂಗ್ಲ ಭಾಷೆಯ ಜೊತೆಗೆ ಹಿಂದಿ ಭಾಷೆಯ ಬಳಕೆಯನ್ನು ಮತ್ತು ಭಾರತೀಯ ಅಂಕಿಗಳ ಅಂತರಾಷ್ಟ್ರೀಯ ರೂಪದ ಜೊತೆಗೆ ದೇವನಾಗರಿ ರೂಪದ ಅಂಕಿಗಳ ಬಳಕೆಯನ್ನು ಒಕ್ಕೂಟ ಆದೇಶದ ಮೂಲಕ ಅಧಿಕೃತಗೊಳಿಸಬಹುದು.</blockquote>ಭಾರತೀಯ ಸಂವಿಧಾನದ 351 ನೇ ವಿಧಿ ಹೇಳುತ್ತದೆ:ಹಿಂದಿ ಭಾಷೆಯ ಹರಡುವಿಕೆಯನ್ನು ಉತ್ತೇಜಿಸುವುದು, ಅದನ್ನು ಅಭಿವೃದ್ಧಿಪಡಿಸುವುದು, ಅದು ಭಾರತದ ಸಂಯೋಜಿತ ಸಂಸ್ಕೃತಿಯ ಎಲ್ಲಾ ಅಂಶಗಳಿಗೆ ಅಭಿವ್ಯಕ್ತಿಯ ಮಾಧ್ಯಮವಾಗಿ ಕಾರ್ಯನಿರ್ವಹಿಸುವುದು ಮತ್ತು ಮಧ್ಯಪ್ರವೇಶಿಸುವುದು, ಅದರ ಪುಷ್ಟೀಕರಣವನ್ನು ಭದ್ರಪಡಿಸುವುದು ಒಕ್ಕೂಟದ ಕರ್ತವ್ಯವಾಗಿದೆ. ಅದರ ಪ್ರತಿಭೆ, ರೂಪಗಳು, ಶೈಲಿ ಮತ್ತು ಅಭಿವ್ಯಕ್ತಿಗಳನ್ನು ಹಿಂದೂಸ್ತಾನಿ ಮತ್ತು ಎಂಟನೇ ಪರಿಚ್ಛೇದದಲ್ಲಿ ನಿರ್ದಿಷ್ಟಪಡಿಸಿದ ಭಾರತದ ಇತರ ಭಾಷೆಗಳಲ್ಲಿ ಮತ್ತು ಅದರ ಶಬ್ದಕೋಶಕ್ಕಾಗಿ, ಪ್ರಾಥಮಿಕವಾಗಿ ಸಂಸ್ಕೃತ ಮತ್ತು ಎರಡನೆಯದಾಗಿ ಇತರ ಭಾಷೆಗಳ ಮೇಲೆ ಚಿತ್ರಿಸುವ ಮೂಲಕಬಳಸಲಾಗಿದೆ.1965 ರ ವೇಳೆಗೆ ಹಿಂದಿಯು ಕೇಂದ್ರ ಸರ್ಕಾರದ ಏಕೈಕ ಕಾರ್ಯ ಭಾಷೆಯಾಗಲಿದೆ ಎಂದು ಊಹಿಸಲಾಗಿತ್ತು ಆರ್ಟಿಕಲ್ 344 (2) ಮತ್ತು ಆರ್ಟಿಕಲ್ 351 ರ ನಿರ್ದೇಶನಗಳ ಪ್ರಕಾರ, ರಾಜ್ಯ ಸರ್ಕಾರಗಳು ತಮ್ಮ ಸ್ವಂತ ಆಯ್ಕೆಯ ಭಾಷೆಯಲ್ಲಿ ಕಾರ್ಯನಿರ್ವಹಿಸಲು ಮುಕ್ತವಾಗಿರುತ್ತವೆ. ಆದರೂ ಸ್ಥಳೀಯರಲ್ಲದ ಭಾಷಿಕರ ಮೇಲೆ ಹಿಂದಿ ಹೇರಿಕೆಗೆ ವ್ಯಾಪಕ ಪ್ರತಿರೋಧವು, ವಿಶೇಷವಾಗಿ ದಕ್ಷಿಣ ಭಾರತದಲ್ಲಿ ( ತಮಿಳುನಾಡಿನಲ್ಲಿ) 1963 ರ ಅಧಿಕೃತ ಭಾಷೆಗಳ ಕಾಯಿದೆಯ ಅಂಗೀಕಾರಕ್ಕೆ ಕಾರಣವಾಯಿತು, ಇದು ಎಲ್ಲರಿಗೂ ಅನಿರ್ದಿಷ್ಟವಾಗಿ ಇಂಗ್ಲಿಷ್ ಅನ್ನು ಮುಂದುವರೆಸಲು ಒದಗಿಸಿತು. ಅಧಿಕೃತ ಉದ್ದೇಶಗಳಿಗಾಗಿ, ಹಿಂದಿಯ ಹರಡುವಿಕೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಸಾಂವಿಧಾನಿಕ ನಿರ್ದೇಶನವನ್ನು ಉಳಿಸಿಕೊಂಡಿದೆ ಮತ್ತು ಅದರ ನೀತಿಗಳನ್ನು ಬಲವಾಗಿ ಪ್ರಭಾವಿಸಿದೆ. ಆರ್ಟಿಕಲ್ 344 (2b) ಹಿಂದಿ ಭಾಷೆಯ ಪ್ರಗತಿಪರ ಬಳಕೆಗಾಗಿ ಕ್ರಮಗಳನ್ನು ಶಿಫಾರಸು ಮಾಡಲು ಮತ್ತು ಕೇಂದ್ರ ಸರ್ಕಾರದಿಂದ ಇಂಗ್ಲಿಷ್ ಭಾಷೆಯ ಬಳಕೆಯ ಮೇಲೆ ನಿರ್ಬಂಧಗಳನ್ನು ಹೇರಲು ಪ್ರತಿ ಹತ್ತು ವರ್ಷಗಳಿಗೊಮ್ಮೆ ಅಧಿಕೃತ ಭಾಷಾ ಆಯೋಗವನ್ನು ರಚಿಸಬೇಕು ಎಂದು ಷರತ್ತು ವಿಧಿಸುತ್ತದೆ. ಪ್ರಾಯೋಗಿಕವಾಗಿ, ಅಧಿಕೃತ ಭಾಷಾ ಆಯೋಗಗಳು ಹಿಂದಿಯನ್ನು ಉತ್ತೇಜಿಸಲು ನಿರಂತರವಾಗಿ ಪ್ರಯತ್ನಿಸುತ್ತಿವೆ, ಆದರೆ ಕೇಂದ್ರ ಸರ್ಕಾರದ ಅಧಿಕೃತ ಬಳಕೆಯಲ್ಲಿ ಇಂಗ್ಲಿಷ್ ಮೇಲೆ ನಿರ್ಬಂಧಗಳನ್ನು ಹೇರುತ್ತಿಲ್ಲ. ರಾಜ್ಯ ಮಟ್ಟದಲ್ಲಿ, ಹಿಂದಿಯು ಈ ಕೆಳಗಿನ ಭಾರತೀಯ ರಾಜ್ಯಗಳ ಅಧಿಕೃತ ಭಾಷೆಯಾಗಿದೆ: ಬಿಹಾರ, ಛತ್ತೀಸ್‌ಗಢ, ಹರಿಯಾಣ, ಹಿಮಾಚಲ ಪ್ರದೇಶ, ಜಾರ್ಖಂಡ್, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ್. ಹಿಂದಿ ಗುಜರಾತಿ ಜೊತೆಗೆ ಗುಜರಾತ್‌ನ ಅಧಿಕೃತ ಭಾಷೆಯಾಗಿದೆ. ಇದು ಜನಸಂಖ್ಯೆಯ 10% ಕ್ಕಿಂತ ಹೆಚ್ಚು ಹಿಂದಿ ಮಾತನಾಡುವ ಬ್ಲಾಕ್‌ಗಳು ಮತ್ತು ಉಪ-ವಿಭಾಗಗಳಲ್ಲಿ ಪಶ್ಚಿಮ ಬಂಗಾಳದ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಕಾರ್ಯನಿರ್ವಹಿಸುತ್ತದೆ. ಅಂತೆಯೇ, ಈ ಕೆಳಗಿನ ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಿಂದಿಗೆ ಅಧಿಕೃತ ಭಾಷೆಯ ಸ್ಥಾನಮಾನವನ್ನು ನೀಡಲಾಗಿದೆ: ದೆಹಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು . ಸಂವಿಧಾನದಲ್ಲಿ ಯಾವುದೇ ರಾಷ್ಟ್ರೀಯ ಭಾಷೆಯ ನಿರ್ದಿಷ್ಟತೆ ಇಲ್ಲದಿದ್ದರೂ, ಹಿಂದಿ ಭಾರತದ ರಾಷ್ಟ್ರೀಯ ಭಾಷೆ ಎಂಬುದು ವ್ಯಾಪಕ ನಂಬಿಕೆಯಾಗಿದೆ. ಇದು ಆಗಾಗ್ಗೆ ಘರ್ಷಣೆ ಮತ್ತು ವಿವಾದಾತ್ಮಕ ಚರ್ಚೆಯ ಮೂಲವಾಗಿದೆ. 2010 ರಲ್ಲಿ, ಗುಜರಾತ್ ಹೈಕೋರ್ಟ್ ಹಿಂದಿಯನ್ನು ಭಾರತದ ರಾಷ್ಟ್ರೀಯ ಭಾಷೆಯಲ್ಲ ಎಂದು ಸ್ಪಷ್ಟಪಡಿಸಿತು, ಏಕೆಂದರೆ ಸಂವಿಧಾನವು ಅದನ್ನು ಉಲ್ಲೇಖಿಸಿಲ್ಲ. 2021 ರಲ್ಲಿ, ಗಂಗಮ್ ಸುಧೀರ್ ಕುಮಾರ್ ರೆಡ್ಡಿ ಅವರನ್ನು ಒಳಗೊಂಡಿರುವ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ (NDPS) ಆಕ್ಟ್ ಪ್ರಕರಣದಲ್ಲಿ, ಬಾಂಬೆ ಹೈಕೋರ್ಟ್ ರೆಡ್ಡಿ ಜಾಮೀನು ನಿರಾಕರಿಸುವ ಸಂದರ್ಭದಲ್ಲಿ ಸ್ಥಳೀಯ ತೆಲುಗು ಭಾಷಿಕರು ಹಿಂದಿಯಲ್ಲಿ ಓದುವ ಶಾಸನಬದ್ಧ ಹಕ್ಕುಗಳ ವಿರುದ್ಧ ವಾದಿಸಿದ ನಂತರ, ಹಿಂದಿಯನ್ನು ರಾಷ್ಟ್ರ ಭಾಷೆ ಎಂದು ಪ್ರತಿಪಾದಿಸಿತು. ರೆಡ್ಡಿ ಅವರು ಬಾಂಬೆ ಹೈಕೋರ್ಟ್‌ನ ವೀಕ್ಷಣೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ವಿಶೇಷ ತರವಿಗಾಗಿ ಅರ್ಜಿಯನ್ನು ಸಲ್ಲಿಸಿದ್ದಾರೆ ಮತ್ತು ಭಾರತದಲ್ಲಿ ಹಿಂದಿ ರಾಷ್ಟ್ರೀಯ ಭಾಷೆಯಲ್ಲ ಎಂದು ಪ್ರಶಂಸಿಸಲು ವಿಫಲವಾಗಿದೆ ಎಂದು ವಾದಿಸಿದ್ದಾರೆ. 2021 ರಲ್ಲಿ, ಭಾರತೀಯ ಆಹಾರ ವಿತರಣಾ ಕಂಪನಿ ಝೊಮಾಟೊ ವಿವಾದಕ್ಕೆ ಸಿಲುಕಿತು, ಗ್ರಾಹಕ ಕಾಳಜಿಯ ಕಾರ್ಯನಿರ್ವಾಹಕರು ತಮಿಳುನಾಡಿನ ಅಪ್ಲಿಕೇಶನ್ ಬಳಕೆದಾರರಿಗೆ, "ನಿಮ್ಮ ಕುಲದ ಮಾಹಿತಿಗಾಗಿ ಹಿಂದಿ ನಮ್ಮ ರಾಷ್ಟ್ರೀಯ ಭಾಷೆಯಾಗಿದೆ" ಎಂದು ಹೇಳಿದರು. ಉದ್ಯೋಗಿಯನ್ನು ವಜಾ ಮಾಡುವ ಮೂಲಕ ಝೊಮಾಟೊ ಪ್ರತಿಕ್ರಿಯಿಸಿತು, ನಂತರ ಆಕೆಯನ್ನು ವಾಗ್ದಂಡನೆಗೆ ಒಳಪಡಿಸಲಾಯಿತು ಮತ್ತು ಸ್ವಲ್ಪ ಸಮಯದ ನಂತರ ಮರುಸ್ಥಾಪಿಸಲಾಯಿತು. 2018 ರಲ್ಲಿ, ಹಿಂದಿ ಆವೃತ್ತಿ ಮತ್ತು ಇಂಗ್ಲಿಷ್ ಆವೃತ್ತಿಯಲ್ಲಿ ವ್ಯತ್ಯಾಸವಿದ್ದಲ್ಲಿ ಶಾಸನದ ಜಾರಿಯಿಂದ ಹಿಂದಿ ಆವೃತ್ತಿಯು ಮೇಲುಗೈ ಸಾಧಿಸುತ್ತದೆ ಎಂದು ಮಧ್ಯಪ್ರದೇಶ ಹೈಕೋರ್ಟಿನ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿತು. ತೀರ್ಪಿನಲ್ಲಿ ಹಿಂದಿಗಿಂತ ಇಂಗ್ಲಿಷ್‌ಗೆ ಪ್ರಾಮುಖ್ಯತೆ ನೀಡುವುದರಿಂದ ಹಿಂದಿಗಿಂತ ಇಂಗ್ಲಿಷ್‌ನ ಸಾಮಾಜಿಕ ಮಹತ್ವವನ್ನು ಒತ್ತಿಹೇಳುತ್ತದೆ. ಫಿಜಿ ಏಷ್ಯಾದ ಹೊರಗೆ, ಅವಧಿ ಭಾಷೆ (ಪೂರ್ವ ಹಿಂದಿ ಉಪಭಾಷೆ) ಪ್ರಭಾವದೊಂದಿಗೆ ಫಿಜಿಯಲ್ಲಿ ಭೋಜ್‌ಪುರಿ, ಬಿಹಾರಿ ಭಾಷೆಗಳು, ಫಿಜಿಯನ್ ಮತ್ತು ಇಂಗ್ಲಿಷ್‌ನ್ನು ಮಾತನಾಡುತ್ತಾರೆ. ಫಿಜಿಯ 1997 ರ ಸಂವಿಧಾನದ ಪ್ರಕಾರ ಫಿಜಿಯಲ್ಲಿ ಅಧಿಕೃತ ಭಾಷೆಯಾಗಿದೆ, ಅಲ್ಲಿ ಅದನ್ನು "ಹಿಂದುಸ್ತಾನಿ" ಎಂದು ಉಲ್ಲೇಖಿಸಲಾಗಿದೆ; ಆದರೂ 2013 ರ ಫಿಜಿಯ ಸಂವಿಧಾನದಲ್ಲಿ ಇದನ್ನು ಅಧಿಕೃತ ಭಾಷೆಯಾಗಿ " ಫಿಜಿ ಹಿಂದಿ " ಎಂದು ಕರೆಯಲಾಗುತ್ತದೆ. ಫಿಜಿಯಲ್ಲಿ 380,000 ಜನರು ಹಿಂದಿ ಮಾತನಾಡುತ್ತಾರೆ. ನೇಪಾಳ 2011 ನೇಪಾಳ ಜನಗಣತಿಯ ಪ್ರಕಾರ ನೇಪಾಳದಲ್ಲಿ ಸುಮಾರು 77,569 ಜನರು ಹಿಂದಿಯನ್ನು ಮೊದಲ ಭಾಷೆಯಾಗಿ ಮಾತನಾಡುತ್ತಾರೆ ಮತ್ತು 12,25,950 ಜನರು ಎರಡನೇ ಭಾಷೆಯಾಗಿ ಮಾತನಾಡುತ್ತಾರೆ. ಹಿಂದಿ ಪ್ರತಿಪಾದಕ, ಭಾರತೀಯ ಮೂಲದ ಪರಮಾನಂದ ಝಾ ನೇಪಾಳದ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಅವರು ಜುಲೈ 2008 ರಲ್ಲಿ ಅಧಿಕಾರ ಸ್ವೀಕರಿಸುವಾಗ ಹಿಂದಿಯಲ್ಲಿ ಪ್ರಮಾಣವಚನ ಮಂಡಿಸಿದರು. ಇದರಿಂದಾಗಿ 5 ದಿನಗಳ ಕಾಲ ಬೀದಿಗಳಲ್ಲಿ ಪ್ರತಿಭಟನೆಗಳನ್ನು ಸೃಷ್ಟಿಸಿತು; ವಿದ್ಯಾರ್ಥಿಗಳು ಅವರ ಪ್ರತಿಕೃತಿಗಳನ್ನು ದಹಿಸಿದರು; 22 ಜಿಲ್ಲೆಗಳಲ್ಲಿ ಸಾರ್ವತ್ರಿಕ ಮುಷ್ಕರ ನಡೆಯಿತು. ನೇಪಾಳದ ಸರ್ವೋಚ್ಚ ನ್ಯಾಯಾಲಯವು 2009 ರಲ್ಲಿ ಅವರು ಹಿಂದಿಯಲ್ಲಿ ಮಾಡಿದ ಪ್ರಮಾಣವಚನ ಅಸಿಂಧು ಎಂದು ತೀರ್ಪು ನೀಡಿತು ಮತ್ತು ಅವರನ್ನು ಉಪಾಧ್ಯಕ್ಷತೆಯಿಂದ "ನಿಷ್ಕ್ರಿಯ" ಗೊಳಿಸಲಾಯಿತು. "ಕೋಪಗೊಂಡ" ಝಾ "ಈಗ ನೇಪಾಳಿಯಲ್ಲಿ ಪ್ರಮಾಣವಚನ ಸ್ವೀಕರಿಸಲು ನನ್ನನ್ನು ಒತ್ತಾಯಿಸಲಾಗುವುದಿಲ್ಲ. ನಾನು ಅದನ್ನು ಇಂಗ್ಲಿಷ್‌ನಲ್ಲಿ ತೆಗೆದುಕೊಳ್ಳಬಹುದು" ಎಂದು ಹೇಳಿದರು. ದಕ್ಷಿಣ ಆಫ್ರಿಕಾ ದಕ್ಷಿಣ ಆಫ್ರಿಕಾದಲ್ಲಿ ಹಿಂದಿ ಸಂರಕ್ಷಿತ ಭಾಷೆಯಾಗಿದೆ. ದಕ್ಷಿಣ ಆಫ್ರಿಕಾದ ಸಂವಿಧಾನದ ಪ್ರಕಾರ, ಪ್ಯಾನ್ ದಕ್ಷಿಣ ಆಫ್ರಿಕಾದ ಭಾಷಾ ಮಂಡಳಿಯು ಇತರ ಭಾಷೆಗಳ ಜೊತೆಗೆ ಹಿಂದಿಯನ್ನು ಉತ್ತೇಜಿಸಿತು ಮತ್ತು ಗೌರವಿಸಿತು. 1985 ರಲ್ಲಿ ರಾಜೇಂದ್ ಮೇಸ್ತ್ರಿಯವರ ಡಾಕ್ಟರೇಟ್ ಪ್ರಬಂಧದ ಪ್ರಕಾರ, ಹಿಂದಿ ಮತ್ತು ಇತರ ಭಾರತೀಯ ಭಾಷೆಗಳು ದಕ್ಷಿಣ ಆಫ್ರಿಕಾದಲ್ಲಿ ಕಳೆದ 125 ವರ್ಷಗಳಿಂದ ಅಸ್ತಿತ್ವದಲ್ಲಿದ್ದರೂ, ದಕ್ಷಿಣ ಆಫ್ರಿಕಾದಲ್ಲಿ ಅವುಗಳ ಬಳಕೆ, ಅವುಗಳ ವಿಕಸನ ಮತ್ತು ಪ್ರಸ್ತುತ ಕುಸಿತದ ಬಗ್ಗೆ ಯಾವುದೇ ಶೈಕ್ಷಣಿಕ ಅಧ್ಯಯನಗಳಿಲ್ಲ. ಸಂಯುಕ್ತ ಅರಬ್ ಎಮಿರೇಟ್ಸ್ ಅಬುಧಾಬಿ ಎಮಿರೇಟ್‌ನಲ್ಲಿ ಹಿಂದಿಯನ್ನು ಮೂರನೇ ಅಧಿಕೃತ ನ್ಯಾಯಾಲಯ ಭಾಷೆಯಾಗಿ ಅಳವಡಿಸಿಕೊಳ್ಳಲಾಗಿದೆ. ಇದರ ಪರಿಣಾಮವಾಗಿ, ಯುಎಇ ಯಲ್ಲಿನ ಭಾರತೀಯ ಉದ್ಯೋಗಿಗಳು ತಮ್ಮ ದೂರುಗಳನ್ನು ತಮ್ಮ ಮಾತೃಭಾಷೆ ಹಿಂದಿಯಲ್ಲಿ ದೇಶದ ಕಾರ್ಮಿಕ ನ್ಯಾಯಾಲಯಗಳಿಗೆ ಸಲ್ಲಿಸಬಹುದು. ಭೌಗೋಳಿಕ ವಿತರಣೆ ಹಿಂದಿಯು ಉತ್ತರ ಭಾರತದ ಸಂಪರ್ಕ ಭಾಷೆಯಾಗಿದೆ (ಇದು ಹಿಂದಿ ಬೆಲ್ಟ್ ಅನ್ನು ಒಳಗೊಂಡಿದೆ), ಜೊತೆಗೆ ಇಂಗ್ಲಿಷ್ ಭಾರತ ಸರ್ಕಾರದ ಅಧಿಕೃತ ಭಾಷೆಯಾಗಿದೆ. ಈಶಾನ್ಯ ಭಾರತದಲ್ಲಿ ಹಫ್ಲಾಂಗ್ ಹಿಂದಿ ಎಂದು ಕರೆಯಲ್ಪಡುವ ಪಿಡ್ಜಿನ್ ಅಸ್ಸಾಂನ ಹಫ್ಲಾಂಗ್‌ನಲ್ಲಿ ವಾಸಿಸುವ ಜನರಿಗೆ ಇತರ ಭಾಷೆಗಳನ್ನು ಸ್ಥಳೀಯವಾಗಿ ಮಾತನಾಡುವ ಸಂಪರ್ಕ ಭಾಷೆಯಾಗಿ ಅಭಿವೃದ್ಧಿಪಡಿಸಿದೆ. ಅರುಣಾಚಲ ಪ್ರದೇಶದಲ್ಲಿ, ಸ್ಥಳೀಯವಾಗಿ 50 ಉಪಭಾಷೆಗಳನ್ನು ಮಾತನಾಡುವ ಸ್ಥಳೀಯರಲ್ಲಿ ಹಿಂದಿ ಸಂಪರ್ಕ ಭಾಷೆಯಾಗಿ ಹೊರಹೊಮ್ಮಿತು. ಉರ್ದು ಮಾತನಾಡುವ ಅನೇಕ ಪಾಕಿಸ್ತಾನಿಗಳಿಗೆ ಹಿಂದಿ ಅರ್ಥಮಾಡಿಕೊಳ್ಳಲು ತುಂಬಾ ಸುಲಭ, ಇದು ಹಿಂದಿಯಂತೆ ಹಿಂದೂಸ್ತಾನಿ ಭಾಷೆಯ ಪ್ರಮಾಣಿತ ದಾಖಲೆಯಾಗಿದೆ; ಹೆಚ್ಚುವರಿಯಾಗಿ, ಭಾರತೀಯ ಮಾಧ್ಯಮಗಳನ್ನು ಪಾಕಿಸ್ತಾನದಲ್ಲಿ ವ್ಯಾಪಕವಾಗಿ ವೀಕ್ಷಿಸಲಾಗುತ್ತದೆ. ಅಫ್ಘಾನಿಸ್ತಾನದಲ್ಲಿ, ವಿಶೇಷವಾಗಿ ಕಾಬೂಲ್‌ನಲ್ಲಿ ಗಣನೀಯ ಜನಸಂಖ್ಯೆಯು, ಈ ಪ್ರದೇಶದಲ್ಲಿನ ಬಾಲಿವುಡ್ ಚಲನಚಿತ್ರಗಳು, ಹಾಡುಗಳು ಮತ್ತು ನಟರ ಜನಪ್ರಿಯತೆ ಮತ್ತು ಪ್ರಭಾವದಿಂದಾಗಿ ಹಿಂದಿ-ಉರ್ದು ಭಾಷೆಯನ್ನು ಮಾತನಾಡುತ್ತಾರೆ ಮತ್ತು ಅರ್ಥಮಾಡಿಕೊಳ್ಳುತ್ತಾರೆ. ನೇಪಾಳದ ಮಾದೇಶಿಗರು (ಉತ್ತರ-ಭಾರತದಲ್ಲಿ ಬೇರುಗಳನ್ನು ಹೊಂದಿರುವ ಆದರೆ ನೂರಾರು ವರ್ಷಗಳಿಂದ ನೇಪಾಳಕ್ಕೆ ವಲಸೆ ಬಂದಿರುವ ಜನರು) ಹೆಚ್ಚಿನ ಜನಸಂಖ್ಯೆಯಲ್ಲಿದ್ದು ಹಿಂದಿಯನ್ನು ಮಾತನಾಡುತ್ತಾರೆ. ಇದರ ಹೊರತಾಗಿ, ಭಾರತೀಯ ಡಯಾಸ್ಪೊರಾದಲ್ಲಿ ಹಿಂದಿಯನ್ನು ದೊಡ್ಡ ಪ್ರಮಾಣದಲ್ಲಿ ಮಾತನಾಡುತ್ತಾರೆ, ಅದು ಭಾರತದ "ಹಿಂದಿ ಬೆಲ್ಟ್" ನಿಂದ ಬಂದಿದೆ ಅಥವಾ ಅದರ ಮೂಲವನ್ನು ಹೊಂದಿದೆ. ಗಣನೀಯವಾಗಿ ಉತ್ತರ ಭಾರತೀಯ ವಲಸೆಗಾರರು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ, ಯುನೈಟೆಡ್ ಕಿಂಗ್ಡಮ್, ಯುನೈಟೆಡ್ ಅರಬ್ ಎಮಿರೇಟ್ಸ್, ಟ್ರಿನಿಡಾಡ್ ಮತ್ತು ಟೊಬಾಗೊ, ಗಯಾನಾ, ಸುರಿನಾಮ್, ದಕ್ಷಿಣ ಆಫ್ರಿಕಾ, ಫಿಜಿ ಮತ್ತು ಮಾರಿಷಸ್ ಮುಂತಾದ ದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ವಾಸಿಸುತ್ತಿದ್ದಾರೆ, ಅಲ್ಲಿ ಇದನ್ನು ಸ್ಥಳೀಯವಾಗಿ ಮನೆಯಲ್ಲಿ ಮತ್ತು ಸ್ವಂತ ಹಿಂದೂಸ್ತಾನಿ ಮಾತನಾಡುವ ಸಮುದಾಯಗಳು ಅವರ ನಡುವೆ ಮಾತನಾಡುತ್ತಾರೆ. ಭಾರತದ ಹೊರಗೆ, ಹಿಂದಿ ಮಾತನಾಡುವವರ ಸಂಖ್ಯೆ ನೇಪಾಳದಲ್ಲಿ 8 ಮಿಲಿಯನ್; ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ 863,077; ಮಾರಿಷಸ್‌ನಲ್ಲಿ 450,170; ಫಿಜಿಯಲ್ಲಿ 380,000;ದಕ್ಷಿಣ ಆಫ್ರಿಕಾದಲ್ಲಿ 250,292; ಸುರಿನಾಮ್‌ನಲ್ಲಿ 150,000; ಉಗಾಂಡಾದಲ್ಲಿ 100,000; ಯುನೈಟೆಡ್ ಕಿಂಗ್‌ಡಂನಲ್ಲಿ 45,800; ನ್ಯೂಜಿಲೆಂಡ್‌ನಲ್ಲಿ 20,000; ಜರ್ಮನಿಯಲ್ಲಿ 20,000; ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿ 26,000; ಸಿಂಗಾಪುರದಲ್ಲಿ 3,000 ಜನರು ವಾಸಿಸುತ್ತಿದ್ದಾರೆ. ಆಧುನಿಕ ಪ್ರಮಾಣಿತ ಉರ್ದು ಜೊತೆ ಹೋಲಿಕೆ ಭಾಷಿಕವಾಗಿ, ಒಂದೇ ಭಾಷೆಯ ಎರಡು ದಾಖಲೆಗಳು ಮತ್ತು ಪರಸ್ಪರ ಅರ್ಥಗರ್ಭಿತವಾದವು ಹಿಂದಿ ಮತ್ತು ಉರ್ದು. ಹಿಂದಿ ಮತ್ತು ಉರ್ದು ಎರಡೂ ಸ್ಥಳೀಯ ಪ್ರಾಕೃತ ಮತ್ತು ಸಂಸ್ಕೃತ ಮೂಲದ ಪದಗಳ ಮೂಲ ಶಬ್ದಕೋಶವನ್ನು ಹಂಚಿಕೊಳ್ಳುತ್ತವೆ. ಆದರೂ ಹಿಂದಿಯನ್ನು ದೇವನಾಗರಿ ಲಿಪಿಯಲ್ಲಿ ಬರೆಯಲಾಗಿದೆ ಮತ್ತು ಉರ್ದುಗಿಂತ ಹೆಚ್ಚು ಸಂಸ್ಕೃತ ಮೂಲದ ಪದಗಳನ್ನು ಒಳಗೊಂಡಿದೆ, ಆದರೆ ಉರ್ದುವನ್ನು ಪರ್ಸೋ-ಅರೇಬಿಕ್ ಲಿಪಿಯಲ್ಲಿ ಬರೆಯಲಾಗಿದೆ ಮತ್ತು ಹಿಂದಿಗೆ ಹೋಲಿಸಿದರೆ ಹೆಚ್ಚು ಅರೇಬಿಕ್ ಮತ್ತು ಪರ್ಷಿಯನ್ ಎರವಲು ಪದಗಳನ್ನು ಬಳಸುತ್ತದೆ. ಈ ಕಾರಣದಿಂದಾಗಿ, ಎರಡು ಭಾಷೆಗಳು ಒಂದೇ ರೀತಿಯ ವ್ಯಾಕರಣವನ್ನು ಹಂಚಿಕೊಳ್ಳುತ್ತವೆ, ಭಾಷಾಶಾಸ್ತ್ರಜ್ಞರ ಅವುಗಳು ಒಂದೇ ಭಾಷೆಯ ಎರಡು ಪ್ರಮಾಣೀಕೃತ ರೂಪಗಳೆಂಬ ಒಮ್ಮತವಿದೆ, ಹಿಂದೂಸ್ತಾನಿ ಅಥವಾ ಹಿಂದಿ-ಉರ್ದು ಎಂದು ಪರಿಗಣಿಸುತ್ತದೆ. ಹಿಂದಿ ಭಾರತದಲ್ಲಿ ಸಾಮಾನ್ಯವಾಗಿ ಬಳಸುವ ಅಧಿಕೃತ ಭಾಷೆಯಾಗಿದೆ. ಉರ್ದು ಪಾಕಿಸ್ತಾನದ ರಾಷ್ಟ್ರೀಯ ಭಾಷೆ ಮತ್ತು ಸಂಪರ್ಕ ಭಾಷೆಯಾಗಿದೆ ಮತ್ತು ಇದು ಭಾರತದ 22 ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ, ಇದು ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ದೆಹಲಿ, ತೆಲಂಗಾಣ, ಆಂಧ್ರ ಪ್ರದೇಶ ಮತ್ತು ಬಿಹಾರದಲ್ಲಿ ಅಧಿಕೃತ ಸ್ಥಾನಮಾನವನ್ನು ಹೊಂದಿದೆ. ಲಿಪಿ ಅಬುಗಿಡಾದಲ್ಲಿ ಹಿಂದಿಯನ್ನು ದೇವನಾಗರಿ ಲಿಪಿಯಲ್ಲಿ ಬರೆಯಲಾಗಿದೆ. ದೇವನಾಗರಿ 11 ಸ್ವರಗಳು ಮತ್ತು 33 ವ್ಯಂಜನಗಳನ್ನು ಒಳಗೊಂಡಿದೆ ಮತ್ತು ಎಡದಿಂದ ಬಲಕ್ಕೆ ಬರೆಯಲಾಗಿದೆ. ಸಂಸ್ಕೃತದಂತೆ, ದೇವನಾಗರಿ ಹಿಂದಿಗೆ ಸಂಪೂರ್ಣವಾಗಿ ಧ್ವನಿಮಾತ್ಮಕವಲ್ಲ, ವಿಶೇಷವಾಗಿ ಮಾತನಾಡುವ ಪ್ರಮಾಣಿತ ಹಿಂದಿಯಲ್ಲಿ ಸ್ಕ್ವಾ ಅಳಿಸುವಿಕೆಯನ್ನು ಗುರುತಿಸಲು ವಿಫಲವಾಗಿದೆ. ರೋಮನೀಕರಣ ಭಾರತ ಸರ್ಕಾರವು ಲ್ಯಾಟಿನ್ ಲಿಪಿಯಲ್ಲಿ ಹಿಂದಿಯನ್ನು ಬರೆಯುವ ಅಧಿಕೃತ ವ್ಯವಸ್ಥೆಯಾಗಿ ಹಂಟೇರಿಯನ್ ಲಿಪ್ಯಂತರವನ್ನು ಬಳಸುತ್ತದೆ. IAST, ITRANS ಮತ್ತು ISO 15919 ನಂತಹ ಹಲವಾರು ಇತರ ವ್ಯವಸ್ಥೆಗಳು ಸಹ ಅಸ್ತಿತ್ವದಲ್ಲಿವೆ. ರೋಮನೀಕರಿಸಿದ ಹಿಂದಿ, ಇದನ್ನು ಹಿಂಗ್ಲಿಷ್ ಎಂದೂ ಕರೆಯುತ್ತಾರೆ, ಇದು ಹಿಂದಿ ಆನ್‌ಲೈನ್‌ನ ಪ್ರಬಲ ರೂಪವಾಗಿದೆ. ಯೂಟ್ಯೂಬ್ ಕಾಮೆಂಟ್‌ಗಳ ವಿಶ್ಲೇಷಣೆಯಲ್ಲಿ, ಪಾಲಕೊಡೆಟಿ ಎಟ್ ಅಲ್ 52% ಕಾಮೆಂಟ್‌ಗಳು ರೋಮನೈಸ್ಡ್ ಹಿಂದಿಯಲ್ಲಿ, 46% ಇಂಗ್ಲಿಷ್‌ನಲ್ಲಿ ಮತ್ತು 1% ದೇವನಾಗರಿ ಹಿಂದಿಯಲ್ಲಿವೆ ಎಂದು ಗುರುತಿಸಿದ್ದಾರೆ. ಧ್ವನಿಶಾಸ್ತ್ರ ಶಬ್ದಕೋಶ ಸಾಂಪ್ರದಾಯಿಕವಾಗಿ, ಹಿಂದಿ ಪದಗಳನ್ನು ಅವುಗಳ ವ್ಯುತ್ಪತ್ತಿಯ ಪ್ರಕಾರ ಐದು ಪ್ರಮುಖ ವರ್ಗಗಳಾಗಿ ವಿಂಗಡಿಸಲಾಗಿದೆ: ತತ್ಸಂ ( ) ಪದಗಳು: ಇವುಗಳನ್ನು ಹಿಂದಿಯಲ್ಲಿ ಸಂಸ್ಕೃತದಂತೆಯೇ ಉಚ್ಚರಿಸಲಾಗುತ್ತದೆ (ಅಂತಿಮ ಪ್ರಕರಣದ ವಿಭಕ್ತಿಗಳ ಅನುಪಸ್ಥಿತಿಯನ್ನು ಹೊರತುಪಡಿಸಿ). ಅವು ಮಾರ್ಪಾಡುಗಳಿಲ್ಲದೆ ಉಳಿದುಕೊಂಡಿರುವ ಪ್ರಾಕೃತದ ಮೂಲಕ ಸಂಸ್ಕೃತದಿಂದ ಆನುವಂಶಿಕವಾಗಿ ಪಡೆದ ಪದಗಳನ್ನು ಒಳಗೊಂಡಿವೆ (ಉದಾ ಹಿಂದಿ ನಾಮ / ಸಂಸ್ಕೃತ ನಾಮ, "ಹೆಸರು"; ಹಿಂದಿ ಕರ್ಮ / ಸಂಸ್ಕೃತ ಕರ್ಮ, "ಕರ್ಮ, ಕ್ರಿಯೆ; ಕರ್ಮ"), ಹಾಗೆಯೇ ಆಧುನಿಕ ಕಾಲದಲ್ಲಿ ಸಂಸ್ಕೃತದಿಂದ ನೇರವಾಗಿ ಎರವಲು ಪಡೆದ ರೂಪಗಳು (ಉದಾ ಪ್ರಾರ್ಥನಾ, "ಪ್ರಾರ್ಥನೆ"). ಆದರೂ ಉಚ್ಚಾರಣೆಯು ಹಿಂದಿ ರೂಢಿಗಳಿಗೆ ಅನುಗುಣವಾಗಿರುತ್ತದೆ ಮತ್ತು ಶಾಸ್ತ್ರೀಯ ಸಂಸ್ಕೃತದಿಂದ ಭಿನ್ನವಾಗಿರಬಹುದು. ನಾಮಪದಗಳಲ್ಲಿ, ತತ್ಸಂ ಪದವು ಸಂಸ್ಕೃತವಲ್ಲದ ಪದ-ಕಾಂಡವಾಗಿರಬಹುದು ಅಥವಾ ಸಂಸ್ಕೃತದ ನಾಮಮಾತ್ರದ ಅವನತಿಯಲ್ಲಿ ನಾಮಕರಣದ ಏಕವಚನ ರೂಪವಾಗಿದೆ. ಅರ್ಧತತ್ಸಂ ( ) ಪದಗಳು: ಅಂತಹ ಪದಗಳು ಸಾಮಾನ್ಯವಾಗಿ ಸಂಸ್ಕೃತದಿಂದ ಹಿಂದಿನ ಎರವಲು ಪದಗಳಾಗಿವೆ, ಅವುಗಳು ಎರವಲು ಪಡೆದ ನಂತರ ಧ್ವನಿ ಬದಲಾವಣೆಗಳಿಗೆ ಒಳಗಾಗಿವೆ. (ಉದಾ ಹಿಂದಿ ಸಂಸ್ಕೃತದಿಂದ ಸೂರ್ಯ ಸೂರ್ಯ ) ತದ್ಭವ ( ) ಪದಗಳು: ಇವುಗಳು ಧ್ವನಿಶಾಸ್ತ್ರದ ನಿಯಮಗಳಿಗೆ ಒಳಪಟ್ಟ ನಂತರ ಸಂಸ್ಕೃತದಿಂದ ಪಡೆದ ಸ್ಥಳೀಯ ಹಿಂದಿ ಪದಗಳಾಗಿವೆ (ಉದಾ. ಸಂಸ್ಕೃತ ಕರ್ಮ, "ಕರ್ಮ" ಶೌರಸೇನಿ ಪ್ರಾಕೃತ ಆಗುತ್ತದೆ ಕಮ್ಮ, ಮತ್ತು ಅಂತಿಮವಾಗಿ ಹಿಂದಿ kām, "ಕೆಲಸ") ಮತ್ತು ಸಂಸ್ಕೃತದಿಂದ ವಿಭಿನ್ನವಾಗಿ ಉಚ್ಚರಿಸಲಾಗುತ್ತದೆ. ದೇಶಜ್ ( ) ಪದಗಳು: ಇವು ಎರವಲುಗಳಲ್ಲದ ಪದಗಳಾಗಿವೆ. ಆದರೆ ದೃಢೀಕರಿಸಿದ ಇಂಡೋ-ಆರ್ಯನ್ ಪದಗಳಿಂದಲೂ ಪಡೆಯಲಾಗಿಲ್ಲ. ಈ ವರ್ಗಕ್ಕೆ ಸೇರಿದ ಒನೊಮಾಟೊಪೊಯೆಟಿಕ್ ಪದಗಳು ಅಥವಾ ಸ್ಥಳೀಯ ಇಂಡೋ-ಆರ್ಯನ್ ಅಲ್ಲದ ಭಾಷೆಗಳಿಂದ ಎರವಲು ಪಡೆದ ಪದಗಳಾಗಿವೆ. ವಿದೇಶೀ ( ) ಪದಗಳು: ಇವುಗಳು ಸ್ಥಳೀಯವಲ್ಲದ ಭಾಷೆಗಳ ಎಲ್ಲಾ ಸಾಲ ಪದಗಳನ್ನು ಒಳಗೊಂಡಿವೆ. ಪರ್ಷಿಯನ್, ಅರೇಬಿಕ್, ಇಂಗ್ಲೀಷ್ ಮತ್ತು ಪೋರ್ಚುಗೀಸ್ ಈ ವರ್ಗದಲ್ಲಿ ಹೆಚ್ಚು ಆಗಾಗ್ಗೆ ಮೂಲ ಭಾಷೆಗಳು . ಉದಾಹರಣೆಗಳು ಪರ್ಷಿಯನ್ ನಿಂದ ಕಿಲಾ "ಕೋಟೆ", ಇಂಗ್ಲಿಷ್ ಸಮಿತಿ ಮತ್ತು ಕಾಮೆಟಿ ಅರೇಬಿಕ್ ನಿಂದ ಸಾಬುನ್ "ಸೋಪ್". ಹಿಂದಿಯು ಎರವಲು ಅನುವಾದವನ್ನು(ಕ್ಯಾಲ್ಕ್ವಿಯಿಂಗ್) ಮತ್ತು ಸಾಂದರ್ಭಿಕವಾಗಿ ಇಂಗ್ಲಿಷ್‌ನ ಫೋನೋ-ಶಬ್ದಾರ್ಥ ಹೊಂದಾಣಿಕೆಯನ್ನು ವ್ಯಾಪಕವಾಗಿ ಬಳಸುತ್ತದೆ. ಪ್ರಾಕೃತ ಹಿಂದಿ ಸ್ವಾಭಾವಿಕವಾಗಿ ತನ್ನ ಶಬ್ದಕೋಶದ ಹೆಚ್ಚಿನ ಭಾಗವನ್ನು ಶೌರಸೇನಿ ಪ್ರಾಕೃತದಿಂದ ತದ್ಭವ ಪದಗಳ ರೂಪದಲ್ಲಿ ಪಡೆದುಕೊಂಡಿದೆ. ಈ ಪ್ರಕ್ರಿಯೆಯು ಸಾಮಾನ್ಯವಾಗಿ ಪ್ರಾಕೃತದಲ್ಲಿ ವ್ಯಂಜನ ಸಮೂಹಗಳ ಹಿಂದಿನ ಸ್ವರಗಳ ಪರಿಹಾರದ ಉದ್ದವನ್ನು ಒಳಗೊಂಡಿರುತ್ತದೆ, ಉದಾ. ಸಂಸ್ಕೃತ ತೀಕ್ಷ್ಣ> ಪ್ರಾಕೃತ ತಿಖಾ > ಹಿಂದಿ ತಿಖಾ . ಸಂಸ್ಕೃತ ಆಧುನಿಕ ಗುಣಮಟ್ಟಕ್ಕಾಗಿ ಹಿಂದಿಯಲ್ಲಿ ಹೆಚ್ಚಿನ ಎರವಲು ಶಬ್ದವನ್ನು ಸಂಸ್ಕೃತದಿಂದ ತತ್ಸಂನಿಂದ ಎರವಲುಗಳಾಗಿ ವಿಶೇಷವಾಗಿ ತಾಂತ್ರಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಪಡೆಯಲಾಗಿದೆ. ಪರ್ಷಿಯನ್, ಅರೇಬಿಕ್ ಮತ್ತು ಇಂಗ್ಲಿಷ್ ಶಬ್ದಕೋಶದ ಬಹುಪಾಲು ತತ್ಸಂ ಪದಗಳನ್ನು ಪರ್ಷಿಯನ್, ಅರೇಬಿಕ್ ಮತ್ತು ಇಂಗ್ಲಿಷ್ ಶಬ್ದಕೋಶವನ್ನು ಸಂಯೋಜಿಸುವ ನವಶಾಸ್ತ್ರಗಳಿಂದ ಬದಲಿಸಿದ ಔಪಚಾರಿಕ ಹಿಂದಿಯನ್ನು ಶುದ್ಧ ಹಿಂದಿ (ಶುದ್ಧ ಹಿಂದಿ) ಎಂದು ಕರೆಯಲಾಗುತ್ತದೆ ಮತ್ತು ಹಿಂದಿಯನ್ನು ಇತರ ಆಡುಮಾತಿನ ರೂಪಗಳಿಗಿಂತ ಹೆಚ್ಚು ಪ್ರತಿಷ್ಠಿತ ಉಪಭಾಷೆಯಾಗಿ ನೋಡಲಾಗಿದೆ. ತತ್ಸಂ ಪದಗಳ ಅತಿಯಾದ ಬಳಕೆ ಕೆಲವೊಮ್ಮೆ ಸ್ಥಳೀಯ ಭಾಷಿಕರಿಗೆ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅವರು ಸ್ಥಳೀಯ ಹಿಂದಿಯಲ್ಲಿ ಅಸ್ತಿತ್ವದಲ್ಲಿಲ್ಲದ ಸಂಸ್ಕೃತ ವ್ಯಂಜನ ಸಮೂಹಗಳನ್ನು ಹೊಂದುತ್ತಾರೆ, ಇದು ಉಚ್ಚಾರಣೆಯಲ್ಲಿ ತೊಂದರೆಗಳನ್ನು ಉಂಟುಮಾಡುತ್ತದೆ. ಸಂಸ್ಕೃತೀಕರಣದ ಪ್ರಕ್ರಿಯೆಯ ಒಂದು ಭಾಗವಾಗಿ, ವಿದೇಶಿ ಶಬ್ದಕೋಶಕ್ಕೆ ಬದಲಿಯಾಗಿ ಬಳಸಲು ಸಂಸ್ಕೃತ ಘಟಕಗಳನ್ನು ಬಳಸಿಕೊಂಡು ಹೊಸ ಪದಗಳನ್ನು ರಚಿಸಲಾಗಿದೆ. ಸಾಮಾನ್ಯವಾಗಿ ಈ ನವಶಾಸ್ತ್ರಗಳು ಈಗಾಗಲೇ ಮಾತನಾಡುವ ಹಿಂದಿಗೆ ಅಳವಡಿಸಿಕೊಂಡಿರುವ ಇಂಗ್ಲಿಷ್ ಪದಗಳ ದ್ವಿವರ್ಣಗಳಾಗಿವೆ . ದುರ್ಭಾಷ್ "ದೂರವಾಣಿ", ಅಕ್ಷರಶಃ "ದೂರ-ಮಾತು" ಮತ್ತು ದೂರದರ್ಶನ "ದೂರದರ್ಶನ", ಅಕ್ಷರಶಃ "ದೂರ-ದೃಷ್ಟಿ" ಯಂತಹ ಕೆಲವು ಪದಗಳು ಇಂಗ್ಲಿಷ್ ಎರವಲುಗಳ (ಟೆಲಿ)ಫೋನ್ ಮತ್ತು ಟಿವಿಗಳ ಸ್ಥಳದಲ್ಲಿ ಔಪಚಾರಿಕ ಹಿಂದಿಯಲ್ಲಿ ಕೆಲವು ಚಲಾವಣೆಗಳನ್ನು ಗಳಿಸಿವೆ. ಪರ್ಷಿಯನ್ ಹಿಂದಿಯು ಗಮನಾರ್ಹವಾದ ಪರ್ಷಿಯನ್ ಪ್ರಭಾವವನ್ನು ಹೊಂದಿದೆ, ಇದನ್ನು ಮಾತನಾಡುವ ಹಿಂದೂಸ್ತಾನಿಯಿಂದ ಪ್ರಮಾಣೀಕರಿಸಲಾಗಿದೆ.  12 ನೇ ಶತಮಾನದ ಮಧ್ಯಭಾಗದಿಂದ ಆರಂಭವಾದ ಆರಂಭಿಕ ಸಾಲಗಳು ಇಸ್ಲಾಂಗೆ ನಿರ್ದಿಷ್ಟವಾಗಿದ್ದವು (ಉದಾ;ಮುಹಮ್ಮದ್, ಇಸ್ಲಾಂ ) ಮತ್ತು ಆದ್ದರಿಂದ ಪರ್ಷಿಯನ್ ಅರೇಬಿಕ್‍ಗೆ ಕೇವಲ ಮಧ್ಯವರ್ತಿಯಾಗಿತ್ತು. ನಂತರ, ದೆಹಲಿ ಸುಲ್ತಾನೇಟ್ ಮತ್ತು ಮೊಘಲ್ ಸಾಮ್ರಾಜ್ಯದ ಅಡಿಯಲ್ಲಿ, ಪರ್ಷಿಯನ್ ಹಿಂದಿ ಹೃದಯಭಾಗದಲ್ಲಿ ಪ್ರಾಥಮಿಕ ಆಡಳಿತ ಭಾಷೆಯಾಯಿತು. ಪರ್ಷಿಯನ್ ಎರವಲುಗಳು 17 ನೇ ಶತಮಾನದಲ್ಲಿ ಉಚ್ಛ್ರಾಯ ಸ್ಥಿತಿಯನ್ನು ತಲುಪಿದವು, ಇದು ಜೀವನದ ಎಲ್ಲಾ ಅಂಶಗಳನ್ನು ವ್ಯಾಪಿಸಿದೆ. ಇಝಾಫತ್ ಎಂಬ ವ್ಯಾಕರಣ ರಚನೆಗಳನ್ನು ಸಹ ಹಿಂದಿಗೆ ಸಂಯೋಜಿಸಲಾಯಿತು. ಪರ್ಷಿಯನ್ ಭಾಷೆಯ ಸ್ಥಿತಿ ಮತ್ತು ಅದರ ಪ್ರಭಾವವು ಹಿಂದಿ ಗಾದೆಗಳಲ್ಲಿಯೂ ಗೋಚರಿಸುತ್ತದೆ:   ವಿಭಜನೆಯ ನಂತರ ಭಾರತ ಸರ್ಕಾರವು ಸಂಸ್ಕೃತೀಕರಣದ ನೀತಿಯನ್ನ ಹಿಂದಿಯಲ್ಲಿ ಪರ್ಷಿಯನ್ ಅಂಶದ ಅಂಚಿನಲ್ಲಿದೆು ಪ್ರತಿಪಾದಿಸಿತು. ಆದರೂ ಅನೇಕ ಪರ್ಷಿಯನ್ ಪದಗಳು (ಉದಾ ಮುಸ್ಕಿಲ್ "ಕಷ್ಟ", ಬಾಸ್ "ಸಾಕಷ್ಟು", ಹವಾ "ಗಾಳಿ", x(a)yāl "ಚಿಂತನೆ", ಕಿತಾಬ್ "ಪುಸ್ತಕ", ಖುದ್ "ಸ್ವಯಂ") ಆಧುನಿಕ ಗುಣಮಟ್ಟದ ಹಿಂದಿಯಲ್ಲಿ ಭದ್ರವಾಗಿ ಉಳಿದಿವೆ ಮತ್ತು ದೇವನಾಗರಿ ಲಿಪಿಯಲ್ಲಿ ಬರೆಯಲಾದ ಉರ್ದು ಕಾವ್ಯಗಳಲ್ಲಿ ಇನ್ನೂ ಹೆಚ್ಚಿನ ಮೊತ್ತವನ್ನು ಬಳಸಲಾಗುತ್ತದೆ. ಅರೇಬಿಕ್ ಆಗಾಗ್ಗೆ ಪರ್ಷಿಯನ್ ಮೂಲಕ ಕೆಲವೊಮ್ಮೆ ನೇರವಾಗಿ ಅರೇಬಿಕ್ ಹಿಂದಿಯಲ್ಲಿ ಪ್ರಭಾವವನ್ನು ಬೀರಿದೆ. ಮಾಧ್ಯಮ ಸಾಹಿತ್ಯ ಹಿಂದಿ ಸಾಹಿತ್ಯವನ್ನು ವಿಶಾಲವಾಗಿ ನಾಲ್ಕು ಪ್ರಮುಖ ರೂಪಗಳು ಅಥವಾ ಶೈಲಿಗಳಾಗಿ ವಿಂಗಡಿಸಲಾಗಿದೆ, ಭಕ್ತಿ (ಭಕ್ತಿ - ಕಬೀರ್, ರಸ್ಖಾನ್); ಶ್ರೀಂಗರ್ (ಸೌಂದರ್ಯ - ಕೇಶವ್, ಬಿಹಾರಿ); ವಿಗತ (ಮಹಾಕಾವ್ಯ); ಮತ್ತು ಆಧುನಿಕ್ (ಆಧುನಿಕ). ಮಧ್ಯಕಾಲೀನ ಹಿಂದಿ ಸಾಹಿತ್ಯವು ಭಕ್ತಿ ಚಳುವಳಿಯ ಪ್ರಭಾವ ಮತ್ತು ದೀರ್ಘ, ಮಹಾಕಾವ್ಯಗಳ ಸಂಯೋಜನೆಯಿಂದ ಗುರುತಿಸಲ್ಪಟ್ಟಿದೆ. ಇದನ್ನು ಪ್ರಾಥಮಿಕವಾಗಿ ಹಿಂದಿಯ ಇತರ ಪ್ರಭೇದಗಳಲ್ಲಿ ನಿರ್ದಿಷ್ಟವಾಗಿ ಅವಧಿ ಮತ್ತು ಬ್ರಜ್ ಭಾಷಾ ಬರೆಯಲಾಗಿದೆ, ಆದರೆ ಆಧುನಿಕ ಹಿಂದಿಗೆ ಆಧಾರವಾಗಿರುವ ಡೆಲ್ಹವಿಯಲ್ಲಿಯೂ ಸಹ ಗುಣಮಟ್ಟದಲ್ಲಿ ಬರೆಯಲಾಗಿದೆ. ಬ್ರಿಟಿಷರ ಕಾಲದಲ್ಲಿ ಹಿಂದೂಸ್ತಾನಿ ಪ್ರತಿಷ್ಠಿತ ಉಪಭಾಷೆಯಾಯಿತು. 1888 ರಲ್ಲಿ ದೇವಕಿ ನಂದನ್ ಖತ್ರಿ ಬರೆದ <i id="mwA6I">ಚಂದ್ರಕಾಂತ</i>, ಆಧುನಿಕ ಹಿಂದಿಯಲ್ಲಿ ಗದ್ಯದ ಮೊದಲ ಅಧಿಕೃತ ಕೃತಿ ಎಂದು ಪರಿಗಣಿಸಲಾಗಿದೆ. ಹಿಂದಿ ಗದ್ಯ ಸಾಹಿತ್ಯದಲ್ಲಿ ವಾಸ್ತವಿಕತೆಯನ್ನು ತಂದ ವ್ಯಕ್ತಿ ಮುನ್ಷಿ ಪ್ರೇಮಚಂದ್, ಹಿಂದಿ ಕಾದಂಬರಿ ಮತ್ತು ಪ್ರಗತಿಪರ ಚಳುವಳಿಯ ಜಗತ್ತಿನಲ್ಲಿ ಅತ್ಯಂತ ಗೌರವಾನ್ವಿತ ವ್ಯಕ್ತಿ ಎಂದು ಪರಿಗಣಿಸಲಾಗಿದೆ. ಸಾಹಿತ್ಯ, ಅಥವಾ ಸಾಹಿತ್ಯಿಕ, ಹಿಂದಿಯನ್ನು ಸ್ವಾಮಿ ದಯಾನಂದ ಸರಸ್ವತಿ, ಭರತೇಂದು ಹರಿಶ್ಚಂದ್ರ ಮತ್ತು ಇತರರ ಬರಹಗಳಿಂದ ಜನಪ್ರಿಯಗೊಳಿಸಲಾಯಿತು. ಹೆಚ್ಚುತ್ತಿರುವ ದಿನಪತ್ರಿಕೆಗಳು ಮತ್ತು ನಿಯತಕಾಲಿಕೆಗಳು ಹಿಂದೂಸ್ತಾನಿಯನ್ನು ವಿದ್ಯಾವಂತ ಜನರಲ್ಲಿ ಜನಪ್ರಿಯಗೊಳಿಸಿದವು. ಹಿಂದಿ ಸಾಹಿತ್ಯದಲ್ಲಿ ದ್ವಿವೇದಿ ಯುಗ್ ("ದ್ವಿವೇದಿಯ ಯುಗ") 1900 ರಿಂದ 1918 ರವರೆಗೆ ನಡೆಯಿತು. ಕಾವ್ಯದಲ್ಲಿ ಆಧುನಿಕ ಗುಣಮಟ್ಟದ ಹಿಂದಿಯನ್ನು ಸ್ಥಾಪಿಸುವಲ್ಲಿ ಮತ್ತು ಹಿಂದಿ ಕಾವ್ಯದ ಸ್ವೀಕಾರಾರ್ಹ ವಿಷಯಗಳನ್ನು ಸಾಂಪ್ರದಾಯಿಕವಾದ ಧರ್ಮ ಮತ್ತು ಪ್ರಣಯ ಪ್ರೇಮದಿಂದ ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಾವೀರ ಪ್ರಸಾದ್ ದ್ವಿವೇದಿಯವರ ಹೆಸರನ್ನು ಇಡಲಾಗಿದೆ. 20 ನೇ ಶತಮಾನದಲ್ಲಿ, ಹಿಂದಿ ಸಾಹಿತ್ಯವು ಒಂದು ಭಾವುಕ ಉನ್ನತಿಯನ್ನು ಕಂಡಿತು. ಇದನ್ನು ಚಾಯವಾದ್ ( ಶೇಡೊ-ಇಸಂ ) ಎಂದು ಕರೆಯಲಾಗುತ್ತದೆ ಮತ್ತು ಈ ಶಾಲೆಗೆ ಸೇರಿದ ಸಾಹಿತ್ಯಿಕ ವ್ಯಕ್ತಿಗಳನ್ನು ಛಾಯಾವಾದಿ ಎಂದು ಕರೆಯಲಾಗುತ್ತದೆ. ಜೈಶಂಕರ್ ಪ್ರಸಾದ್, ಸೂರ್ಯಕಾಂತ್ ತ್ರಿಪಾಠಿ 'ನಿರಾಲಾ', ಮಹಾದೇವಿ ವರ್ಮಾ ಮತ್ತು ಸುಮಿತ್ರಾನಂದನ್ ಪಂತ್, ನಾಲ್ಕು ಪ್ರಮುಖ ಛಾಯಾವಾದಿ ಕವಿಗಳು. ಉತ್ತರ ಆಧುನಿಕ್ ಹಿಂದಿ ಸಾಹಿತ್ಯದ ಆಧುನಿಕತೆಯ ನಂತರದ ಅವಧಿಯಾಗಿದೆ, ಇದು ಪಾಶ್ಚಿಮಾತ್ಯ ಮತ್ತು ಚಾಯಾವಾದಿ ಚಳುವಳಿಯ ಅತಿಯಾದ ಅಲಂಕರಣವನ್ನು ನಕಲು ಮಾಡಿದ ಆರಂಭಿಕ ಪ್ರವೃತ್ತಿಗಳ ಪ್ರಶ್ನೆಯಿಂದ ಗುರುತಿಸಲ್ಪಟ್ಟಿದೆ ಮತ್ತು ಸರಳ ಭಾಷೆ ಮತ್ತು ನೈಸರ್ಗಿಕ ವಿಷಯಗಳಿಗೆ ಮರಳಿದೆ. ಇಂಟರ್ನೆಟ್ ಹಿಂದಿ ಸಾಹಿತ್ಯ, ಸಂಗೀತ ಮತ್ತು ಚಲನಚಿತ್ರ ಎಲ್ಲವನ್ನೂ ಅಂತರ್ಜಾಲದ ಮೂಲಕ ಪ್ರಸಾರ ಮಾಡಲಾಗಿದೆ. 2015 ರಲ್ಲಿ, ಗೂಗಲ್ ವರ್ಷದಿಂದ ವರ್ಷಕ್ಕೆ ಹಿಂದಿ-ವಿಷಯ ಬಳಕೆಯಲ್ಲಿ 94% ಹೆಚ್ಚಳವನ್ನು ವರದಿ ಮಾಡಿದೆ, ಭಾರತದಲ್ಲಿ 21% ಬಳಕೆದಾರರು ಹಿಂದಿಯಲ್ಲಿ ವಿಷಯವನ್ನು ಬಯಸುತ್ತಾರೆ. ಅನೇಕ ಹಿಂದಿ ಪತ್ರಿಕೆಗಳು ಡಿಜಿಟಲ್ ಆವೃತ್ತಿಗಳನ್ನು ಸಹ ನೀಡುತ್ತವೆ. ಮಾದರಿ ಪಠ್ಯ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ (ವಿಶ್ವಸಂಸ್ಥೆಯಿಂದ) ಆರ್ಟಿಕಲ್ 1 ರ ಹೈ ಹಿಂದಿ ಭಾಷೆಯಲ್ಲಿ ಈ ಕೆಳಗಿನವು ಮಾದರಿ ಪಠ್ಯವಾಗಿದೆ: ದೇವನಾಗರಿ ಲಿಪಿಯಲ್ಲಿ ಹಿಂದಿ ಅನುವಾದ( ISO ) Anucchēd 1 (ēk): Sabhī manuṣya janma sē svatantra tathā maryādā aur adhikārō̃ mē̃ samān hōtē haĩ. Vē tark aur vivēk sē sampanna haĩ tathā unhē̃ bhrātr̥tva kī bhāvanā sē paraspar kē pratī kārya karnā cāhiē. ಪ್ರತಿಲೇಖನ ( ಐಪಿಎ ) ಹೊಳಪು (ಪದದಿಂದ ಪದಕ್ಕೆ) ಲೇಖನ 1 (ಒಂದು) - ಎಲ್ಲಾ ಮಾನವರು ಸ್ವತಂತ್ರ ಮತ್ತು ಘನತೆ ಮತ್ತು ಸಮಾನ ಹಕ್ಕುಗಳಿಂದ ಹುಟ್ಟಿದ್ದಾರೆ. ಅವರು ದತ್ತಿಯಿಂದ ತರ್ಕ ಮತ್ತು ಆತ್ಮಸಾಕ್ಷಿಯನ್ನು ಹೊಂದಿದ್ದಾರೆ ಮತ್ತು ಅವರು ಕೆಲಸದ ಕಡೆಗೆ ಪರಸ್ಪರರ ಆತ್ಮದಲ್ಲಿ ಭ್ರಾತೃತ್ವವನ್ನು ಹೊಂದಿರಬೇಕು. ಅನುವಾದ (ವ್ಯಾಕರಣ) ಲೇಖನ 1 - ಎಲ್ಲಾ ಮಾನವರು ಸ್ವತಂತ್ರವಾಗಿ ಮತ್ತು ಘನತೆ ಮತ್ತು ಹಕ್ಕುಗಳಲ್ಲಿ ಸಮಾನವಾಗಿ ಜನಿಸುತ್ತಾರೆ. ಅವರು ತರ್ಕ ಮತ್ತು ಆತ್ಮಸಾಕ್ಷಿಯನ್ನು ಹೊಂದಿದ್ದಾರೆ ಮತ್ತು ಅವರು ಭ್ರಾತೃತ್ವದ ಉತ್ಸಾಹದಲ್ಲಿ ಪರಸ್ಪರ ಕೆಲಸ ಮಾಡಬೇಕು. ಸಹ ನೋಡಿ ಹಿಂದಿ ಬೆಲ್ಟ್ ಬಂಗಾಳಿ ಭಾಷಾ ಚಳುವಳಿ (ಮಂಭುಮ್) ಹಿಂದಿ ದಿವಸ್ - ಹಿಂದಿಯನ್ನು ಒಂದು ಭಾಷೆಯಾಗಿ ಆಚರಿಸುವ ಅಧಿಕೃತ ದಿನ. ಭಾರತದ ಭಾಷೆಗಳು ಭಾರತದಲ್ಲಿ ಅಧಿಕೃತ ಸ್ಥಾನಮಾನ ಹೊಂದಿರುವ ಭಾಷೆಗಳು ಹೆಚ್ಚು ಮಾತನಾಡುವ ನಿಗದಿತ ಭಾಷೆಗಳ ಮೂಲಕ ಭಾರತೀಯ ರಾಜ್ಯಗಳು ಹಿಂದಿ ಅಥವಾ ಉರ್ದು ಮೂಲದ ಇಂಗ್ಲಿಷ್ ಪದಗಳ ಪಟ್ಟಿ ಯುರೋಪ್‌ನಲ್ಲಿ ಹಿಂದಿ ಚಾನೆಲ್‌ಗಳ ಪಟ್ಟಿ (ಪ್ರಕಾರದ ಪ್ರಕಾರ) ಭಾರತದಲ್ಲಿ ಸ್ಥಳೀಯ ಮಾತನಾಡುವವರ ಸಂಖ್ಯೆಯ ಪ್ರಕಾರ ಭಾಷೆಗಳ ಪಟ್ಟಿ ಹಿಂದಿಯಲ್ಲಿ ಸಂಸ್ಕೃತ ಮತ್ತು ಪರ್ಷಿಯನ್ ಮೂಲಗಳ ಪಟ್ಟಿ ವಿಶ್ವ ಹಿಂದಿ ಸಚಿವಾಲಯ ಗ್ರಂಥಸೂಚಿ Grierson, G. A. Linguistic Survey of India Vol I-XI, Calcutta, 1928, (searchable database). Taj, Afroz (2002) A door into Hindi. Retrieved 8 November 2005. Tiwari, Bholanath ([1966] 2004) हिन्दी भाषा (Hindī Bhasha), Kitab Pustika, Allahabad, . ನಿಘಂಟುಗಳು . Academic Room Hindi Dictionary Mobile App developed in the Harvard Innovation Lab (iOS, Android and Blackberry) ಹೆಚ್ಚಿನ ಓದುವಿಕೆಗೆ https://referenceworks.brillonline.com/entries/encyclopaedia-of-islam-3/hindi-COM_30475?s.num=4&s.f.s2_parent=s.f.book.encyclopaedia-of-islam-3&s.q=dynasty+india Bhatia, Tej K. A History of the Hindi Grammatical Tradition. Leiden, Netherlands & New York, NY: E.J. Brill, 1987. ಬಾಹ್ಯ ಕೊಂಡಿಗಳು The Union: Official Language Official Unicode Chart for Devanagari (PDF) ಉಲ್ಲೇಖಗಳು ಭಾಷೆಗಳು ಭಾಷೆ ಭಾಷಾ ಕುಟುಂಬಗಳು ಭಾಷಾ ವಿಜ್ಞಾನ ಭಾರತ ಭಾರತದ ಸಂವಿಧಾನ ಭಾರತೀಯ ಭಾಷೆಗಳು ದ್ರಾವಿಡ ಭಾಷೆಗಳು
2082
https://kn.wikipedia.org/wiki/%E0%B2%92%E0%B2%A1%E0%B2%BF%E0%B2%AF%E0%B2%BE
ಒಡಿಯಾ
ಒರಿಯಾ ಒಂದು ಭಾರತೀಯ ಭಾಷೆ.ಒಡಿಶಾ (ಹಿಂದಿನ ಒರಿಸ್ಸಾ) ರಾಜ್ಯದ ಅಧಿಕೃತ ಭಾಷೆ ಇದು ಇಂಡೋ-ಯುರೋಪಿಯನ್ ಭಾಷಾ ಕುಟುಂಬಕ್ಕೆ ಸೇರಿದ್ದು, ಇಂಡೋ-ಆರ್ಯನ ಶಾಖೆಯಲ್ಲಿದೆ. ಒರಿಯ ಭಾಷೆ ಒರಿಸ್ಸ ರಾಜ್ಯದ ಜನರ ಭಾಷೆ. ಭಾರತ ಸಂವಿಧಾನದಿಂದ ಮಾನ್ಯತೆ ಪಡೆದಿರುವ 22 ಭಾಷೆಗಳಲ್ಲಿ ಒಂದು. ಆರ್ಯಭಾಷಾ ಪರಿವಾರದ ಮುಖ್ಯ ಭಾಷೆಗಳಲ್ಲೊಂದಾಗಿದ್ದು ಮಾಗಧ ಅಪಭ್ರಂಶದಿಂದ ಬೆಳೆದು ಬಂದ ಬಂಗಾಳಿ, ಅಸ್ಸಾಮೀ ಭಾಷೆಗಳೊಂದಿಗೆ ನಿಕಟ ಸಂಬಂಧ ಪಡೆದಿದೆ. ಮೂವತ್ತೆರಡು ಸಾವಿರ ಚದರ ಮೈಲಿ ಪ್ರದೇಶವನ್ನು ಹೊಂದಿದೆ. ಇಲ್ಲಿ ಶೇ. 81.4ರಷ್ಟು (2002) ಜನ ಈ ಭಾಷೆಯನ್ನಾಡುತ್ತಾರೆ. ಭಾರತದ ಬಂಗಾಲ ಕೊಲ್ಲಿಯ ತೀರದಲ್ಲಿ ಪ್ರಚಾರದಲ್ಲಿರುವ ಈ ಭಾಷೆ ಉತ್ತರದಲ್ಲಿ ಬಂಗಾಳಿ, ವಾಯವ್ಯದಲ್ಲಿ ಬಿಹಾರ, ದಕ್ಷಿಣದಲ್ಲಿ ತೆಲುಗು ಭಾಷೆಗಳಿಂದಲೂ ನೈಋತ್ಯದಲ್ಲಿ ಮರಾಠಿಯ ಹಾಲ್ವಿ ಮತ್ತು ಭತ್ರಿ ಉಪಭಾಷೆಗಳು ಮತ್ತು ಪುರ್ವೀ ಹಿಂದಿಯ ಛತ್ತೀಸ್ಗಡಿ ಉಪಭಾಷೆಗಳಿಂದಲೂ ಆವರಿಸಲ್ಪಟ್ಟಿದೆ. ಭಾಷೆಯ ಹೆಸರು ಆಂಗ್ಲಭಾಷೆಯಲ್ಲಿ ಕ್ಯಾನರೀಸ್ ಎಂದು ಕರೆಯುವ ಭಾಷೆಯ ನಿಜವಾದ ಹೆಸರು ಕನ್ನಡವಾಗಿರುವಂತೆಯೇ ಆಂಗ್ಲಭಾಷೆಯಲ್ಲಿ ಒರಿಯ ಎನ್ನಿಸಿಕೊಂಡ ಭಾಷೆಯ ಸರಿಯಾದ ಹೆಸರು ಒಡಿಯ. ಶಬ್ದದ ಉತ್ಪತ್ತಿಯನ್ನು ನೋಡಿದರೆ ಒರಿಸ್ಸ ಶಬ್ದ ಒರಿಸು ಎನ್ನುವ (ಒಕ್ಕಲಿಗ, ರೈತ) ಶಬ್ದದಿಂದಲೂ ಒಡಿಯ ಜನ ಎಂಬ ಶಬ್ದ ಓಢ್ರ ಎಂಬ ಒರಿಸ್ಸದ ಪ್ರಾಚೀನ ನಿವಾಸಿಗಳ ಹೆಸರಿನಿಂದಲೂ ಬಂದಿವೆಯೆಂದು ಊಹಿಸಬಹುದು. ಈಗಲೂ ಎಷ್ಟೊ ಜನ ಈ ಶಬ್ದವನ್ನು ಉರಿಯ ಎಂದು ತಪ್ಪಾಗಿ ಉಚ್ಚರಿಸುತ್ತಾರೆ. ಕಳೆದ ಶತಮಾನದ ಇಂಡಿಯನ್ ಸಿವಿಲ್ ಸರ್ವಿಸಿಗೆ ಸೇರಿದ ಕೆಲವು ಭಾಷಾವಿಜ್ಞಾನಿ ಒರಿಯ ಶಬ್ದವನ್ನು ಉಪಯೋಗಿಸುತ್ತಿದ್ದುದರಿಂದ ಅದೇ ಹೆಸರು ಬಳಕೆಗೆ ಬಂದಿರಬೇಕು. ಲಿಪಿ ಒರಿಯ ಭಾಷೆಗೆ ತನ್ನದೇ ಆದ ವಿಶಿಷ್ಟವಾದ ಲಿಪಿಯಿದೆ. ಈ ಲಿಪಿ ಬ್ರಾಹ್ಮೀಲಿಪಿ ಯಿಂದಲೇ ಬೆಳೆದುಬಂದುದಾಗಿದ್ದು, ದೇವನಾಗರಿಯ ಸೋದರ ಲಿಪಿಯೆನಿಸಿಕೊಂಡಿದೆ ಯಾದರೂ ದೇವನಾಗರಿಯಿಂದ ತೀರ ಭಿನ್ನವಾಗಿದೆ. ಉತ್ತರ ಭಾರತದ ಮತ್ತು ದಕ್ಷಿಣ ಭಾರತದ ಲಿಪಿಗಳನ್ನು ಹೋಲುವ ಈ ಲಿಪಿ ಎರಡೂ ವರ್ಗದ ಲಿಪಿಗಳಿಗೆ ಮಧ್ಯವರ್ತಿ ಯಾಗಿದೆಯೆನ್ನಬಹುದು. ದಕ್ಷಿಣ ಲಿಪಿಗಳೊಡನೆ ಇದರ ಸಾಮ್ಯ ಹೆಚ್ಚೆಂದು ಹೇಳಬಹುದು. ಒರಿಯ ಅಕ್ಷರಗಳ ಈಗಿನ ರೂಪ ತೆಲುಗು, ಮಲಯಾಳ, ತಮಿಳು, ಸಿಂಹಳಿ ಮತ್ತು ಬರ್ಮೀ ಭಾಷೆಯ ಅಕ್ಷರಗಳನ್ನು ಬಹುಮಟ್ಟಿಗೆ ಹೋಲುತ್ತದೆ. ಒರಿಯದ ಪ್ರತಿ ಅಕ್ಷರದ ಮೇಲ್ಭಾಗದಲ್ಲಿ ಒಂದೇ ರೀತಿಯ ಅರ್ಧವೃತ್ತಾಕಾರವಿರುವುದರಿಂದ ಎಲ್ಲ ಅಕ್ಷರಗಳೂ ಒಂದೇ ಬಗೆಯಾಗಿರುವಂತೆ ಭಾಸವಾಗುತ್ತದೆ. ಕೆಲವು ವಿದೇಶೀಯರಂತೂ ನೋಡಿದೊಡನೆ ಎಲ್ಲ ಅಕ್ಷರಗಳೂ ಒಂದೇ ರೀತಿಯ ವೃತ್ತಾಕಾರಗಳಾಗಿವೆಯೆಂದು ಭಾವಿಸುತ್ತಾರೆ. ಆ ವೃತ್ತಾಕಾರಗಳ ಒಳಗೆ ಇನ್ನು ಕೆಲವು ಆಕಾರಗಳಿವೆಯೆಂಬುದನ್ನು ಕಾಣಲು ಅವರು ಇನ್ನಷ್ಟು ಸೂಕ್ಷ್ಮವಾಗಿ ಪರಿಶೀಲಿಸಿ ನೋಡಬೇಕಾಗುತ್ತದೆ. ಪ್ರಾಯಶಃ ತಾಳ ಪತ್ರದಲ್ಲಿ ಕಬ್ಬಿಣದ ಕಂಠದಿಂದ ಬರೆಯುತ್ತಿದ್ದುದರಿಂದ ಈ ರೀತಿ ಗುಂಡುಗುಂಡಾದ ಅಕ್ಷರಗಳು ಪ್ರಚಾರಕ್ಕೆ ಬಂದಿರಬೇಕು. ಇತ್ತೀಚೆಗೆ ಒಬ್ಬಿಬ್ಬರು ನೀಳವಾದ ತಲೆ ಕಟ್ಟುಗಳನ್ನು ಕೊಟ್ಟು ದೇವನಾಗರಿಯ ರೀತಿಯಲ್ಲಿ ಇದನ್ನು ಬರೆಯುವ ಪ್ರಯತ್ನ ಮಾಡಿದ್ದಾರಾದರೂ ಅದು ಫಲಕಾರಿಯಾಗಲಿಲ್ಲ. ಈಗ ಒರಿಸ್ಸ ಸರ್ಕಾರ ಲಿಪಿ ಸುಧಾರಣೆಯ ಸಾಧ್ಯತೆಯನ್ನು ಪರಿಶೀಲಿಸುತ್ತಿದೆ. ಲಿಖಿತ ರೂಪಗಳು ಕಳಿಂಗ ರಾಜನಾದ ಅನಂತವರ್ಮ ವಜ್ರಹಸ್ತದೇವನ ಶಿಲಾಶಾಸನವೇ (1051) ಒರಿಯದಲ್ಲಿ ಈವರೆಗೆ ದೊರೆತ ಅತಿ ಪ್ರಾಚೀನ ಶಾಸನ. ಇದಲ್ಲದೆ ಪ್ರ.ಶ.ಪು. 3ನೆಯ ಶತಮಾನದ ಅಶೋಕನ ಮತ್ತು ಪ್ರ.ಶ.ಪು. ಮೊದಲ ಶತಮಾನದ ಖಾರವೇಲನ ಶಿಲಾಶಾಸನಗಳು ಕೂಡ ಒರಿಸ್ಸದಲ್ಲಿ ಸಿಕ್ಕಿವೆ. ಈ ಶಾಸನಗಳಿಂದ ಆ ಕಾಲದಲ್ಲಿ ಪಾಲಿ ಭಾಷೆ ಪ್ರಚಾರದಲ್ಲಿದ್ದುದು ಕಂಡುಬರುತ್ತದೆ. ಈ ಶಾಸನಗಳ ಮತ್ತು ನಮಗೆ ದೊರೆತ ಅತಿ ಪ್ರಾಚೀನ ಸಾಹಿತ್ಯಕೃತಿಗಳ ನಡುವಣ ಯುಗದಲ್ಲಿ ಓಢ್ರ ಎನ್ನುವ ಉಪಭಾಷೆಯ ಹೆಸರೂ ಕೇಳಿಬರುತ್ತದೆ. ಪಾಲಿ, ಪ್ರಾಕೃತಗಳ ಪ್ರಭಾವದಿಂದ ಬೆಳೆದುಬಂದ ಈ ಭಾಷೆಯನ್ನು ಬೌದ್ಧರು ಉಪಯೋಗಿಸುತ್ತಿದ್ದರು. ಎರಡನೆಯ ಶತಮಾನದ ಭರತನ ನಾಟ್ಯಶಾಸ್ತ್ರದಲ್ಲಿಯೂ 7ನೆಯ ಶತಮಾನದ ಹೂಯೆನ್ತ್ಸಾಂಗನ ಬರೆಹಗಳಲ್ಲಿಯೂ ಇದರ ಉಲ್ಲೇಖವಿದೆ. ಒರಿಯ ರಾಜ್ಯದ ಗಡಿಯೊಳಗೆ ಪ್ರಚಾರದಲ್ಲಿದ್ದ ಸಂಸ್ಕೃತ ಮತ್ತು ದ್ರಾವಿಡ ಭಾಷೆಗಳಲ್ಲಿ ಬರುವ ಒರಿಯ ಶಬ್ದ ಮತ್ತು ನುಡಿಗಟ್ಟುಗಳಿಂದಲೂ ಏಳನೆಯ ಮತ್ತು 9ನೆಯ ಶತಮಾನದ ಶಿಲಾಶಾಸನಗಳಿಂದಲೂ ಒರಿಯ ಭಾಷೆಯ ಚಾರಿತ್ರಿಕ ಪ್ರಗತಿಯನ್ನು ಊಹಿಸಬಹುದು. 13ನೆಯ ಶತಮಾನದ ಭುವನೇಶ್ವರ ದೇವಸ್ಥಾನದ ಶಾಸನದಿಂದ ಒರಿಯ ಭಾಷೆ ಆ ವೇಳೆಗಾಗಲೆ ಕೆಲವು ಶತಮಾನಗಳಿಂದ ಅಭಿವೃದ್ಧಿಗೊಳ್ಳುತ್ತಿತ್ತೆಂದು ಸ್ಪಷ್ಟವಾಗಿ ತಿಳಿದುಬರುತ್ತದೆ. 10-12ನೆಯ ಶತಮಾನಗಳ ಮಧ್ಯದಲ್ಲಿ ರಚಿಸಲಾಗಿದೆಯೆಂದು ಊಹಿಸಬಹುದಾದ ಸಾರಳಾದಾಸ ಕವಿಯ ಮಹಾಭಾರತವೇ ಉಪಲಬ್ಧ ಒರಿಯ ಗ್ರಂಥಗಳಲ್ಲಿ ಅತ್ಯಂತ ಪ್ರಾಚೀನವಾದುದು. ಈ ಗ್ರಂಥದ ನಿಜವಾದ ಕಾಲನಿಷ್ಕರ್ಷೆಯ ಬಗ್ಗೆ ವಾದವಿವಾದಗಳಿದ್ದು ಕೆಲವರು ಇದನ್ನು 15ನೆಯ ಶತಮಾನದ ಕೃತಿಯೆಂದು ಊಹಿಸುತ್ತಾರೆ. ಭಾಷಾ ಪ್ರಭೇದಗಳು ಕಟಕ್ ಮತ್ತು ಪುರಿ ಪ್ರದೇಶಗಳಲ್ಲಿನ ಆಡುನುಡಿ ಈ ಭಾಷೆಯ ಮುಖ್ಯ ಪ್ರಭೇದವೆಂದೂ ಒರಿಯ ಮಾತಾಡುವ ಎಲ್ಲ ಜನರೂ ಈ ಪ್ರಭೇದವನ್ನು ಅರ್ಥಮಾಡಿಕೊಳ್ಳಬಲ್ಲರೆಂದೂ ಹೇಳಬಹುದು. ಒರಿಯದ ಉಪಭಾಷಾಪರಿವೀಕ್ಷಣೆ ಈ ವರೆಗೆ ನಡೆದಿಲ್ಲ. ಹೀಗಾಗಿ ಉಪಭಾಷೆಗಳ ವಿತರಣೆಗೆ ಸಂಬಂಧಿಸಿದಂತೆ ಯಾವ ಸಾಹಿತ್ಯವೂ ನಮಗೆ ದೊರೆಯುವುದಿಲ್ಲ. ಆದರೂ ಸ್ಥೂಲವಾಗಿ ಕೆಲವು ಪ್ರಧಾನ ಪ್ರಭೇದಗಳನ್ನು ಗುರುತಿಸಬಹುದು. ಸಂಬಲ್ಪುರ ಮತ್ತು ಅದರ ಆಸುಪಾಸಿನ ಜಿಲ್ಲೆಗಳ ಜನರ ಆಡುನುಡಿಯಾದ ಸಂಬಲ್ಪುರಿ ಈ ಭಾಷೆಯ ಪ್ರಧಾನ ಪ್ರಭೇದಗಳಲ್ಲಿ ಒಂದು. ಇದು ಛತ್ತೀಸ್ಗಢಿ ಮತ್ತು ಹಿಂದಿಯಿಂದ ಪ್ರಭಾವಿತವಾಗಿದೆ. ಇನ್ನೊಂದು ಪ್ರಭೇದ ಉತ್ತರ ಭಾಗದಲ್ಲಿ ಬಂಗಾಳದ ಗಡಿ ಪ್ರದೇಶದಲ್ಲಿ ಪ್ರಚಾರದಲ್ಲಿದೆ. ಇದು ಬಂಗಾಳಿಯಿಂದ ಎಷ್ಟು ಪ್ರಭಾವಿತವಾಗಿದೆಯೆಂದರೆ ಗ್ರಿಯರ್ಸನ್ನನ ಮಾತಿನಲ್ಲಿ ಹೇಳುವುದಾದರೆ ಈ ಭಾಗದ ಜನರ ಆಡುಮಾತಿನಲ್ಲಿ ಒರಿಯದಲ್ಲಿ ಪ್ರಾರಂಭವಾದ ವಾಕ್ಯ ಬಂಗಾಳಿಯಲ್ಲಿ ಕೊನೆಗೊಳ್ಳುತ್ತದೆ. ರಾಜ್ಯದ ಉತ್ತರ ಭಾಗದಲ್ಲಿ ಕೆಲವೆಡೆಯಂತೂ ಒರಿಯ ಪುಸ್ತಕಗಳು ಬಂಗಾಳಿ ಲಿಪಿಯಲ್ಲಿ ಅಧಿಕ ಸಂಖ್ಯೆಯಲ್ಲಿ ಮುದ್ರಿತವಾಗಿ ಸಾಮಾನ್ಯ ಜನತೆಯಲ್ಲಿ ಪ್ರಚಾರದಲ್ಲಿವೆ. ದಕ್ಷಿಣದ ಗಂಜಾಂ ಮತ್ತು ಕೋರಾಪುಟ್ ಜಿಲ್ಲೆಗಳಲ್ಲಿನ ಆಡುಮಾತು ತೆಲುಗು ಭಾಷೆಯಿಂದ ಪ್ರಭಾವಿತವಾಗಿದೆ. ಈ ಪ್ರಭೇದವನ್ನು ದಕ್ಷಿಣೀ ಎಂದು ಕರೆಯುತ್ತಾರೆ. ಕೋರಾಪುಟ್ ಜಿಲ್ಲೆಯ ಗಿರಿಜನರಲ್ಲಿ ಪ್ರಚಾರದಲ್ಲಿರುವ ಆಡುನುಡಿ ದಕ್ಷಿಣೀ ಭಾಷೆಯಿಂದ ಭಿನ್ನವಾಗಿದ್ದು ದೇಶೀಯ ಎನ್ನಿಸಿಕೊಳ್ಳುತ್ತದೆ. ಶಬ್ದಸಂಪತ್ತು ಹಲವು ಶತಮಾನಗಳವರೆಗೆ ಒರಿಸ್ಸ ರಾಜ್ಯ ತೆಲಿಂಗ ರಾಜರ ಅಧೀನದಲ್ಲಿತ್ತು. 20ನೆಯ ಶತಮಾನದಲ್ಲೂ ಹಲವು ಕಾಲ ಅದರ ಒಂದು ಭಾಗ ಮದ್ರಾಸ್ ಸರಕಾರದ ಆಳ್ವಿಕೆಗೊಳಗಾಗಿತ್ತು. ಹೀಗಾಗಿ ಅನೇಕ ತಮಿಳು ಮತ್ತು ತೆಲುಗು ಶಬ್ದಗಳು ಒರಿಯ ಭಾಷೆಯಲ್ಲಿ ಸೇರಿಕೊಂಡಿವೆ. ಸು. ಐವತ್ತು ವರ್ಷಗಳ ಕಾಲ ಒರಿಸ್ಸ ರಾಜ್ಯ ನಾಗಪುರದ ಭೋನ್ಸ್ಲೆ ರಾಜರ ವಶದಲ್ಲಿತ್ತು. ಹೀಗಾಗಿ ಒರಿಯ ಮರಾಠಿ ಶಬ್ದಗಳನ್ನೂ ಸ್ವೀಕರಿಸಿದೆ. ಒರಿಸ್ಸ ರಾಜ್ಯದ ಐದನೆಯ ಒಂದು ಪಾಲು ಜನಸಂಖ್ಯೆ ಗಿರಿಜನರಿಂದ ಕೂಡಿರುವುದರಿಂದ ಕೋಂಡ್, ಕೋಲ್ಹ, ಕುಯಿ, ಹೊ, ಸವರ, ಜುವಂಗ್ ಮುಂತಾದ ಭಾಷೆಗಳ ಶಬ್ದಗಳೂ ಒರಿಯದ ಭಂಡಾರಕ್ಕೆ ಸೇರಿಕೊಂಡಿವೆ. ಇವುಗಳ ಜೊತೆ ಸಂಸ್ಕೃತದ ತತ್ಸಮ ಮತ್ತು ತದ್ಭವ ಶಬ್ದಗಳು, ಅರೇಬಿಕ್ ಮತ್ತು ಪರ್ಷಿಯನ್ ಶಬ್ದಗಳೂ ಗಣನೀಯ ಪ್ರಮಾಣದಲ್ಲಿ ಸೇರಿಕೊಂಡಿವೆ. ಪೋರ್ಚುಗೀಸ್ ಮತ್ತು ಇತರ ವಿದೇಶೀ ಶಬ್ದಗಳು ನೇರವಾಗಿ ಅಥವಾ ಇತರ ಭಾರತೀಯ ಭಾಷೆಗಳ ಮೂಲಕ ಒರಿಯ ಶಬ್ದಭಂಡಾರಕ್ಕೆ ಬಂದು ಸೇರಿವೆ. ಇಂಗ್ಲಿಷ್ ಶಬ್ದಗಳಂತೂ ಆಬಾಲವೃದ್ಧರ ಆಡುನುಡಿಯಲ್ಲಿ ದಿನದಿನಕ್ಕೂ ಅಧಿಕ ಸಂಖ್ಯೆಯಲ್ಲಿ ಬಂದು ನೆಲೆಯೂರುತ್ತಿವೆ. ಧ್ವನಿ ವ್ಯವಸ್ಥೆ ಆನುವಂಶಿಕವಾಗಿ ಒರಿಯ ಭಾಷೆ ಬಂಗಾಳಿ ಮತ್ತು ಅಸ್ಸಾಮೀಗಳಿಗೆ ಸಮೀಪವಾಗಿದ್ದರೂ ಲಿಪಿ ಮತ್ತು ಧ್ವನಿವ್ಯವಸ್ಥೆಯಲ್ಲಿ ಈ ಭಾಷೆ ಅವಕ್ಕಿಂತ ಭಿನ್ನವಾಗಿದೆ. ಇದರ ಒಂದು ಪ್ರಧಾನವಾದ ಮತ್ತು ಮೂಲಭೂತವಾದ ವೈಶಿಷ್ಟ್ಯವೆಂದರೆ ಅಕ್ಷರಗಳು ಸ್ವರಾಂಗತವಾಗಿರುವುದು. ಒರಿಯದ ಶಬ್ದಗಳೂ ಸ್ವರದಲ್ಲಿ ಕೊನೆಗೊಳ್ಳುತ್ತವೆ (ಅಜಂತಗಳಾಗಿವೆ). ಸೋದರಭಾಷೆಗಳಲ್ಲಿ ಅಜಂತಗಳಲ್ಲದ ಶಬ್ದಗಳು ಒರಿಯದಲ್ಲಿ ಓ ಎಂಬ ವಿಶಿಷ್ಟವಾದ ವಿವೃತ ಒ ಕಾರದಲ್ಲಿ (ಎ) ಕೊನೆಗೊಳ್ಳುತ್ತವೆ. ಹಿಂದಿ ಮತ್ತು ಬಂಗಾಳಿಯ ಘರ್ ಎನ್ನುವ ಹಲಂತ ಶಬ್ದ ಒರಿಯದಲ್ಲಿ ಘೊರೊ (ghoಡಿo) ಎಂದು ಅಜಂತವಾಗುತ್ತದೆ. ಇದರಿಂದಾಗಿಯೆ ಗ್ರಿಯರ್ಸನ್ ಒರಿಯ ಭಾಷೆಯಲ್ಲಿ, ಬರೆವಣಿಗೆ ಮತ್ತು ಉಚ್ಚಾರಣೆ ಒಂದೇ ರೀತಿಯಾಗಿವೆಯೆಂದು ಹೇಳಿದ್ದಾನೆ. ಸ್ವರಗಳ ಹ್ರಸ್ವ ದೀರ್ಘ ರೂಪಗಳು ಪ್ರತ್ಯೇಕ ಸ್ವನಿಮಯಗಳಾಗಿಲ್ಲ. ಸಂಸ್ಕೃತ ಶಬ್ದಗಳಲ್ಲಿನ ದೀರ್ಘಸ್ವರಗಳು ಹ್ರಸ್ವ ಸ್ವರಗಳಾಗಿ ಉಚ್ಚರಿಸಲ್ಪಡುತ್ತವೆ. ಇನ್ನೆರಡು ವಿಚಾರಗಳಲ್ಲಿಯೂ ಒರಿಯ ಹಿಂದಿ ಮತ್ತು ಬಂಗಾಳಿಯಿಂದ ಭಿನ್ನವಾಗಿದೆ. ಹಿಂದಿ ಮತ್ತು ಬಂಗಾಳಿಯಲ್ಲಿಲ್ಲದ ಣ ಮತ್ತು ಳ ಒರಿಯದಲ್ಲಿದೆ. ಸ, ಶ, ಷ ಗಳೆಂಬ ಮೂರು ಊಷ್ಮಧ್ವನಿಗಳ ಸ್ಥಾನದಲ್ಲಿ ಬಂಗಾಳಿ ಭಾಷೆ ಶಕಾರವನ್ನು ಮಾತ್ರ ಬಳಸಿದರೆ ಒರಿಯ ಸಕಾರವನ್ನು ಮಾತ್ರ ಬಳಸುತ್ತದೆ. ಬರೆಹದಲ್ಲಿ ಬಕಾರ ಮತ್ತು ವಕಾರ ಪ್ರತ್ಯೇಕವಾಗಿ ಕಂಡುಬಂದರೂ ಉಚ್ಚಾರಣೆಯಲ್ಲಿ ಈ ಎರಡರ ಸ್ಥಾನದಲ್ಲಿ ಓಷ್ಠ್ಯ, ಬಕಾರ ಮಾತ್ರ ಬಳಕೆಯಲ್ಲಿದೆ. ಪದಾಘಾತ ಮತ್ತು ಸ್ವರವನ್ನು ಈ ತನಕ ಯಾರೂ ಅಧ್ಯಯನ ಮಾಡದಿದ್ದರೂ ಅವುಗಳ ವಿಚಾರವಾಗಿ ಒಂದೆರಡು ಮಾತುಗಳನ್ನು ಹೇಳಬಹುದು. ಶಬ್ದದ ಪ್ರಥಮಾಕ್ಷರಕ್ಕೆ ಆಘಾತವಿರುತ್ತದೆ. ಬಹ್ವಕ್ಷರೀ ಶಬ್ದಗಳಲ್ಲಿ ಪ್ರಥಮಾಕ್ಷರಕ್ಕೆ ಆಘಾತವಿಲ್ಲ. ವಾಕ್ಯದ ಕೊನೆಯಲ್ಲಿ ವಾಕ್ಯಸ್ವರ ಇಳಿಮುಖವಾಗುತ್ತದೆ. ವ್ಯಾಕರಣ ಒರಿಯದಲ್ಲಿ ಏಕ, ಬಹು ಎಂಬ ಎರಡು ವಚನಗಳಿವೆ. ಬಹುತ್ವವನ್ನು ದ್ಯೋತಿಸುವ ಶಬ್ದಗಳನ್ನು ಏಕವಚನ ರೂಪಕ್ಕೆ ಸೇರಿಸಿ ಬಹುವಚನ ರೂಪಗಳನ್ನು ಪಡೆಯಬಹುದು. ಸಂಸ್ಕೃತದ ಗುಣ, ಕುಳ ಮತ್ತು ದ್ರಾವಿಡ ಭಾಷೆಗಳ ಗಳ್ ಇವುಗಳಿಂದ ಸಿದ್ಧಿಸಿದ ಗುಡಿ, ಗುಡಿಕ ಅಥವಾ ಗುಡಕ ಶಬ್ದಗಳು ಬಹುವಚನ ಸಾಧಕಗಳು. ಉದಾ. ಲೋಕ=ಮನುಷ್ಯ; ಲೋಕಗುಡಿಕ, ಲೋಕಗುಡಕ=ಮನುಷ್ಯರು. ಹಾಗೆಯೇ ಮನೆ, ಎ ಮುಂತಾದ ಪ್ರತ್ಯಯಗಳನ್ನು ಸೇರಿಸಿಯೂ ಲೋಕಮನೆ, ಲೋಕೆ ಮುಂತಾದ ಬಹುವಚನ ರೂಪಗಳನ್ನು ಪಡೆಯಬಹುದು. ಒರಿಯ ವ್ಯಾಕರಣದಲ್ಲಿ ಲಿಂಗ ವಿವಕ್ಷೆಯಿಲ್ಲ. ನೈಸರ್ಗಿಕ ಲಿಂಗ ವ್ಯವಸ್ಥೆಯ ಆಧಾರದ ಮೇಲೆ ಪುಲ್ಲಿಂಗ ಶಬ್ದಗಳಿಂದ ಸ್ತ್ರೀಲಿಂಗ ರೂಪಗಳನ್ನು ಸುಲಭವಾಗಿ ಸಾಧಿಸಬಹುದು. ನೈಸರ್ಗಿಕ ಲಿಂಗಭೇದಕ್ಕನುಸಾರವಾಗಿ ಸಜೀವ ವಾಚಕ ಶಬ್ದಗಳು ಸ್ತ್ರೀಲಿಂಗ ಪುಲ್ಲಿಂಗಗಳೆಂದು ವಿಭಾಗಿಸಲ್ಪಟ್ಟಿವೆ. ಪುಲ್ಲಿಂಗ ಶಬ್ದದಿಂದ ಸ್ತ್ರೀಲಿಂಗ ರೂಪ ಪಡೆಯಲು ಹಲವು ವಿಧಾನಗಳಿವೆ. ಗಂಡು ಮತ್ತು ಹೆಣ್ಣು ಶಬ್ದಗಳನ್ನು ಆ ಶಬ್ದದ ಮುಂದೆ ಜೋಡಿಸುವುದು: ಒಂಡಿರಾ ಛೇಟಿ=ಹೋತ, ಮಾಯಿ ಛೇಟಿ=ಆಡು; ಅಥವಾ ಸ್ತ್ರೀಲಿಂಗ ವಾಚಕವಾದ ಪ್ರತ್ಯೇಕ ಶಬ್ದವೊಂದನ್ನು ಬಳಸುವುದುಂಟು. ಕಾಕ=ಚಿಕ್ಕಪ್ಪ, ಖುಡಿ=ಚಿಕ್ಕಮ್ಮ ಇತ್ಯಾದಿ. ಸಾಮಾನ್ಯವಾಗಿ ಬರುವ ಸ್ತ್ರೀಲಿಂಗ ಪ್ರತ್ಯಯಗಳೆಂದರೆ ಇ, ಅಣಿ ಮತ್ತು ಉಣಿ. ಬುಢಾ=ಮುದುಕ, ಬುಢೀ=ಮುದುಕಿ, ಬಾಯ=ಹುಚ್ಚ, ಬಾಯಾಣಿ=ಹುಚ್ಚಿ, ಬಾಘೊ=ಹುಲಿ, ಬಾಘುಣಿ=ಹೆಣ್ಣು ಹುಲಿ-ಇತ್ಯಾದಿ. ಒರಿಯದಲ್ಲಿ ಐದು ವಿಭಕ್ತಿಗಳಿವೆ. ಈ ವಿಭಕ್ತಿಗಳು ಪ್ರತ್ಯಯರೂಪದಲ್ಲಿರದೆ ಪರಸರ್ಗ ರೂಪದಲ್ಲಿವೆ. ದ್ವಿತೀಯ ಮತ್ತು ಚತುರ್ಥೀ ವಿಭಕ್ತಿಗಳಿಗೆ ಕು ಎನ್ನುವ ಒಂದೇ ರೂಪವಿದೆ. ಕ್ರಿಯಾಪದಗಳಲ್ಲಿ ಮೂರು ಕಾಲಭೇದಗಳಿವೆ. ವರ್ತಮಾನ, ಭೂತ, ಭವಿಷ್ಯದ್ ರೂಪಗಳು ಒಚ್ಛ್‌, ಲ ಮತ್ತು ಬ ಎನ್ನುವ ಪ್ರತ್ಯಯಗಳಿಂದ ಸಿದ್ಧಿಸುತ್ತವೆ. ಖಾವುಚ್ಛಿ=ತಿನ್ನುತ್ತಾನೆ, ಖಾಯಿಲಾ=ತಿಂದನು, ಖಾಯಿಬೊ=ತಿನ್ನುವನು-ಇತ್ಯಾದಿ. ಗ್ರಿಯರ್ಸನ್ನನ ಅಭಿಪ್ರಾಯದಂತೆ ಒರಿಯದ ಕ್ರಿಯಾಪದ ರೂಪಗಳು ತುಂಬ ಸರಳವಾಗಿಯೂ ವ್ಯವಸ್ಥಿತವಾಗಿಯೂ ಇವೆ. ಕಾಲಭೇದಗಳು ಬಹಳ ಇದ್ದರೂ ಅವು ತರ್ಕಬದ್ಧವಾಗಿದ್ದು ಅವುಗಳಲ್ಲಿ ಅಡಗಿರುವ ವ್ಯವಸ್ಥೆ ಬೇರೆ ಬೇರೆ ಕೃದಂತ ನಾಮಗಳಲ್ಲಿಯೂ ಕಂಡುಬರುತ್ತದೆ. ಸಾಹಿತ್ಯ ಸಾಹಿತ್ಯಭಾಷೆಯಾಗಿ ಒರಿಯ ಎಷ್ಟು ಸಮೃದ್ಧವಾಗಿ ಬೆಳೆದಿದೆಯೆನ್ನುವುದನ್ನು ಸೂಕ್ಷ್ಮವಾಗಿ ತೋರಿಸುವ ಸಲುವಾಗಿ ಮಾತ್ರ ಇಲ್ಲಿ ಸಾಹಿತ್ಯ ಭಾಗವನ್ನು ಸಂಗ್ರಹವಾಗಿ ಕೊಟ್ಟಿದೆ. ವಿವರಗಳಿಗೆ (ನೋಡಿ- ಒರಿಯಾ ಸಾಹಿತ್ಯ). ಒರಿಯ ಭಾಷೆಯ ಸಾಹಿತ್ಯ ತುಂಬ ಸಮೃದ್ಧವಾಗಿದೆ. ಅದು ಸಾಮಾನ್ಯ ಜನತೆಯ ಸಾಹಿತ್ಯ. ಈ ರಾಜ್ಯದಲ್ಲಿ ನೆಲೆನಿಂತ ಆಂಧ್ರರು, ಮರಾಠರು, ಬಂಗಾಳಿಗಳು, ಮುಸ್ಲಿಮರು, ಆದಿವಾಸಿಗಳು-ಎಲ್ಲರೂ ಇದಕ್ಕೆ ತಮ್ಮ ಕಾಣಿಕೆಗಳನ್ನರ್ಪಿಸಿದ್ದಾರೆ. ಜಗನ್ನಾಥ ದೇವರನ್ನು ವರ್ಣಿಸಿದ ಸಾಲಬೆಗ ಎನ್ನುವ ಮುಸ್ಲಿಂ ಕವಿ, ಮಧ್ಯಕಾಲೀನ ವೈಷ್ಣವ ಸಾಹಿತ್ಯವನ್ನು ಬೆಳೆಸಿದ ಚೈತನ್ಯ ಮಹರ್ಷಿಯ ಶಿಷ್ಯರಾದ ಬಂಗಾಳಿ ವೈಷ್ಣವರು ಜನತೆಯ ನಾಲಗೆಯಲ್ಲಿ ನಲಿದಾಡುವಂಥ ಸಂಗೀತ ರೂಪಕಗಳನ್ನು ರಚಿಸಿದ ಕುರುಡನಾದ ಖೊಂಡಕವಿ-ಇವರೆಲ್ಲ ಈ ಸಾಹಿತ್ಯಕ್ಕೆ ಅಪುರ್ವವಾದ ಕಾಣಿಕೆಯನ್ನು ಸಲ್ಲಿಸಿದ್ದಾರೆ. ರಾಧಾನಾಥ ರೇ, ಆನಂದಶಂಕರ ರೇ ಮುಂತಾದ ಪ್ರತಿಭಾವಂತ ಬಂಗಾಳಿ ಕವಿಗಳು ಒರಿಯದಲ್ಲಿ ಗ್ರಂಥಗಳನ್ನು ರಚಿಸಿದ್ದಾರೆ. ಶತಮಾನಗಳುರುಳಿದಂತೆ, ರಾಜವಂಶಗಳು ಬದಲಾದಾಗ ಧಾರ್ಮಿಕ ವಿಶ್ವಾಸಗಳು ಬದಲಾದಂತೆ, ಸಾಹಿತ್ಯ ಸ್ವರೂಪವೂ ಮಾರ್ಪಾಟಾದುದು ಕಂಡುಬರುತ್ತದೆ. ಮೊದಲು ಜೈನ್, ಆಮೇಲೆ ಬೌದ್ಧ, ತರುವಾಯ ಶೈವ ಮತ್ತು ಶಾಕ್ತಮತಗಳು ಪ್ರಭಾವಶಾಲಿಯಾಗಿದ್ದುವು. ಆಮೇಲೆ ಜನತೆಯ ಮೇಲೆ ತೀವ್ರ ಪರಿಣಾಮವನ್ನುಂಟುಮಾಡಿ ಅವರ ಮನಸ್ಸಿನಲ್ಲಿ ಬೇರೂರಿನಿಂತ ಧಾರ್ಮಿಕ ಸಂಪ್ರದಾಯವೆಂದರೆ ರಾಮಭಕ್ತಿ ಮತ್ತು ಕೃಷ್ಣಭಕ್ತಿ ಸಂಪ್ರದಾಯ. ಒರಿಯ ಸಾಹಿತ್ಯ ಇದರಿಂದ ತುಂಬ ಸಮೃದ್ಧವಾಗಿದೆ. ಒರಿಯದಲ್ಲಿ ಕಡಿಮೆಯೆಂದರೆ ಮೂವತ್ತು ರಾಮಾಯಣಗಳೂ ನಾಲ್ಕೈದು ಮಹಾಭಾರತಗಳೂ ಇವೆ. ಎಲ್ಲ ಪುರಾಣಗಳೂ ಇವೆ. ಮಧ್ಯಕಾಲದ ಅಲಂಕಾರಶಾಸ್ತ್ರಸಾಹಿತ್ಯವೂ ಸಾಕಷ್ಟು ಸಮೃದ್ದವಾಗಿದೆ. ಪುರಾಣಗ್ರಂಥಗಳು ತಮ್ಮ ಕಥಾಪ್ರೌಢಿಮೆಯಿಂದಲೂ ಅಲಂಕಾರಗ್ರಂಥಗಳು ತಮ್ಮ ಭಾಷೆ, ಭಾವ ಮತ್ತು ಶಬ್ದಾರ್ಥಸೌಂದರ್ಯದಿಂದಲೂ ಜನರ ಮನಸ್ಸನ್ನು ಸೂರೆಗೊಂಡಿವೆ. ಜನತೆಯ ಹೃದಯವನ್ನು ಆಕರ್ಷಿಸುವುದರಲ್ಲಿ ಪ್ರಾಚೀನ ಸಾಹಿತ್ಯದಷ್ಟು ಆಧುನಿಕ ಸಾಹಿತ್ಯ ಸಫಲವಾಗಿಲ್ಲ ಎಂದು ಹೇಳಬಹುದು. ಆದರೂ ಭಾಷೆ ಮತ್ತು ಕಲ್ಪನೆಗಳಲ್ಲಿ ಹೊಸ ಪ್ರಯೋಗಗಳನ್ನು ಮಾಡುತ್ತಿರುವ ಒರಿಯ ಸಾಹಿತ್ಯ ತನ್ನ ಆಧುನಿಕ ಬರೆವಣಿಗೆಗಳಲ್ಲಿ ಪರಿಪಕ್ವತೆಯನ್ನು ಹೊಂದಿದೆ. ಇದರ ಕೆಲವು ಅತ್ಯುತ್ತಮ ಗ್ರಂಥಗಳು ಭಾರತದ ಇತರ ಭಾಷೆಗಳಲ್ಲಿನ ಅತ್ಯುತ್ತಮ ಗ್ರಂಥಗಳ ಸಾಲಿನಲ್ಲಿ ನಿಲ್ಲಬಲ್ಲವಾಗಿವೆ. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ಭಾರತೀಯ ಭಾಷೆಗಳು ಇಂಡಿಕ್ ಭಾಷೆಗಳು ಒರಿಸ್ಸಾ
2084
https://kn.wikipedia.org/wiki/%E0%B2%AA%E0%B2%82%E0%B2%9C%E0%B2%BE%E0%B2%AC%E0%B2%BF
ಪಂಜಾಬಿ
ಪಂಜಾಬಿ ಒಂದು ಇಂಡೋ ಆರ್ಯ ಭಾಷೆ ಮತ್ತು ಇದನ್ನು ಜಗತ್ತಿನಾದ್ಯಂತ ಸುಮಾರು ೧೦ ಕೋಟಿ ಜನರು ಮಾತನಾಡುತ್ತಾರೆ. ಇದು ಅತಿ ಹೆಚ್ಚು ಭಾಷಿಗರ ಪಟ್ಟಿಯಲ್ಲಿ ೧೦ನೇ ಸ್ಥಾನದಲ್ಲಿದೆ. ಐತಿಹಾಸಿಕ ಪಾಕಿಸ್ತಾನ ಮತ್ತು ಭಾರತಗಳ ಪಂಜಾಬ್ ಪ್ರದೇಶದ ಸ್ಥಳೀಯರು ಮಾತನಾಡುವ ಭಾಷೆ. ಪಾಕಿಸ್ತಾನದಲ್ಲಿ ಪಂಜಾಬಿ ಅತಿ ಹೆಚ್ಚು ಜನರು ಮಾತನಾಡುವ ಭಾಷೆ, ಭಾರತದಲ್ಲಿ ಇದರ ಭಾಷಿಗರ ಸಂಖ್ಯೆಯಲ್ಲಿನ ಸ್ಥಾನ ೧೧. ಇದು ಭಾರತೀಯ ಉಪಖಂಡದಲ್ಲಿನ ಮೂರನೆಯ ಅತಿ ಹೆಚ್ಚು ಜನರು ಮಾತನಾಡುವ ಭಾಷೆ. ಯುನೈಡ್‌ ಕಿಂಗ್‌ಡಮ್‌ನಲ್ಲಿ ೪ನೆಯ ಅತಿಹೆಚ್ಚು ಜನರು ಮಾತನಾಡುವ ಭಾಷೆಯಾದರೆ ಕೆನಡದಲ್ಲಿನ ಅದರ ಸ್ಥಾನ ಮೂರನೆಯದು (ಇಂಗ್ಲೀಶ್ ಮತ್ತು ಪ್ರೆಂಚ್ ನಂತರದ ಸ್ಥಾನ). ಇದನ್ನು ಯುನೈಟೆಡ್ ಅರಬ್ ಎಮಿರೇಟ್ಸ್, ಅಮೆರಿಕ ಸಂಯುಕ್ತ ಸಂಸ್ಥಾನ, ಸೌದಿ ಅರೇಬಿಯಾ ಮತ್ತು ಆಸ್ಟ್ರೇಲಿಯಾದಲ್ಲಿ ಗಣನೀಯ ಸಂಖ್ಯೆಯ ಜನರು ಮಾತನಾಡುತ್ತಾರೆ. ಪ್ರಮಾಣಕ ಉಪಭಾಷೆ ಅಮೃತಸರ ಮತ್ತು ಲಾಹೋರ್ ಸುತ್ತಮುತ್ತಲು ಮಾತನಾಡುವ ಮಾಝಿ ಉಪಭಾಷೆ ಪ್ರತಿಷ್ಠೆ ಪಡೆದಿದೆ. ಈ ಉಪಭಾಷೆಯನ್ನು ಪಂಜಾಬ್‌ನ ಹೃದಯ ಪ್ರದೇಶವಾದ ಮಾಝದಲ್ಲಿ ಮಾತನಾಡುತ್ತಾರೆ. ಈ ಪ್ರದೇಶವು ಲಾಹೋರ್, ಅಮೃತಸರ, ಗುರುದಾಸ್ಪುರ್, ಕಸೂರ್, ತರನ್ ತಾರನ್, ಫೈಸಲಾಬಾದ್, ನಾನ್‌ಕನ ಸಾಹಿಬ, ಪಠಾಣ್‌ಕೋಟ್, ಓಕರ, ಪಾಕ್‌ಪಟ್ಟನ, ಸಾಹಿವಾಲ, ನರೊವಾಲ, ಶೇಖುಪುರ, ಸಿಯಾಲ್‌ಕೋಟ, ಚಿನೊಟ, ಗುಜ್ರನವಾಲ, ಮತ್ತು ಗುಜರಾತ್ (ಪಾಕಿಸ್ತಾನ ಮತ್ತು ಭಾರತದ ಜಿಲ್ಲೆಗಳು) ಜಿಲ್ಲೆಗಳನ್ನು ಒಳಗೊಂಡಿದೆ. ಪಾಕಿಸ್ತಾನದಲ್ಲಿ ಬಳಸುವ ಮಾಝಿಯ ಪದಕೋಶವು ಹೆಚ್ಚು ಪರ್ಸಿಯೀಕರಣವಾಗಿದೆ. ಇತಿಹಾಸ ಇಂಡೊ ಆರ್ಯ ಭಾಷೆಯಾದ ಪಂಜಾಬಿಯು ಮಧ್ಯಕಾಲಿನ ಉತ್ತರ ಭಾರತದ ಪ್ರಮುಖ ಭಾಷೆಯಾದ ಶೌರಸೇನಿಯಿಂದ ಬಂದಿದೆ. ಪರಿದುದ್ದೀನ್ ಗಂಜ್‌ಶಕರ ಅದರ ಮೊದಲ ಪ್ರಮುಖ ಕವಿ ಎಂದು ಸಾಮಾನ್ಯವಾಗಿ ಗುರುತಿಸಲಾಗಿದೆ. ೧೫ನೆಯ ಶತಮಾನದಲ್ಲಿ ಪಂಜಾಬ್ ಪ್ರಾಂತದಲ್ಲಿ ಸಿಖ್ ಧರ್ಮ ಹುಟ್ಟಿತು ಮತ್ತು ಸಿಖ್ಖರು ಮಾತನಾಡುವ ಪ್ರಮುಖ ಭಾಷೆ ಪಂಜಾಬಿ. ಗುರು ಗ್ರಂಥ ಸಾಹಿಬ್‌ನ ಬಹು ಭಾಗಗಳನ್ನು ಗುರುಮುಖಿಯಲ್ಲಿ ಬರೆಯಲಾಗಿದೆ ಆದರೆ ಸಿಖ್ ಧರ್ಮಗ್ರಂಥಗಳಲ್ಲಿ ಪಂಜಾಬಿಯಷ್ಟೇ ಬಳಕೆಯಾಗಿಲ್ಲ. ಜನಮ್‌ಸಾಕ್ಷಿ ಗುರುನಾನಕ್‌ರ (೧೪೬೯-೧೫೩೯) ಜೀವನ ಮತ್ತು ಐತಿಹ್ಯಗಳನ್ನು ಹೇಳುವ ಕಥೆಗಳು ಪಂಜಾಬಿ ಗದ್ಯದ ಆರಂಭಿಕ ಉದಾಹರಣೆಗಳು. ೧೬ ರಿಂದ ೧೮ನೆಯ ಶತಮಾನದ ಬುಲೇ ಷಾನಂತಹ (೧೬೮೦-೧೭೫೭) ಹಲವು ಮುಸ್ಲಿಂಮರು ಸೂಪಿ ಕಾವ್ಯ ಬೆಳವಣಿಗೆಗೆ ಕಾರಣರಾದರು. ಪಂಜಾಬಿಯ ಸೂಫಿ ಕಾವ್ಯ ಪಂಜಾಬಿ ಸಾಹಿತ್ಯಿಕ ಸಂಪ್ರದಾಯವನ್ನು ಸಹ ಪ್ರಭಾವಿಸಿದೆ. ವಿಶೇಷವಾಗಿ ದುರಂತ ಪ್ರೇಮದ ಪ್ರಕಾರವಾದ ಪಂಜಾಬಿ ಕಿಸ್ಸಾ ಇದಕ್ಕೆ ಉದಾಹರಣೆ. ಭಾರತೀಯ, ಪರ್ಶಿಯಾದ, ಕುರಾನಿನ ಮೂಲಗಳಿಂದಲೂ ಪ್ರಭಾವಿತವಾದ ಈ ಪ್ರಕಾರದ ವಾರಿಸ್ ಶಾನ (೧೮೦೨-೧೮೯೨) ಹಿರ್ ರಾಂಝ ಜನಪ್ರಿಯವಾಗಿದೆ. ಆಧುನಿಕ ಪಂಜಾಬಿ ಪ್ರಮಾಣಕ ಪಂಜಾಬಿಯು ಪಾಕಿಸ್ತಾನ ಮತ್ತು ಭಾರತಗಳೆರಡರಲ್ಲಿಯೂ ಮಾಳವೈ ಪಂಜಾಬಿಯ ಬರವಣಿಗೆಯ ಪ್ರಮಾಣಕ. ಪಾಕಿಸ್ತಾನದಲ್ಲಿ ಪಂಜಾಬಿಯನ್ನು ಸಾಮಾನ್ಯವಾಗಿ ಶಾಮುಖಿ ಲಿಪಿಯಲ್ಲಿ ಬರೆಯಲಾಗುತ್ತದೆ. ಇದು ಪರ್ಶಿಯಾದ ಮಾರ್ಪಡಿಸಿದ ರೂಪ. ಭಾರತದಲ್ಲಿ ಬಹಳಷ್ಟು ಕಡೆ ಲಿಪಿ ಗುರುಮುಖಿಯಲ್ಲಿರುತ್ತದೆ. ಭಾರತದ ಕೇಂದ್ರ ಮಟ್ಟದಲ್ಲಿ ಎರಡು ಪ್ರಮುಖ ಅಧಿಕೃತ ಭಾಷೆಗಳಾದ ಹಿಂದಿ ಮತ್ತು ಇಂಗ್ಲೀಶ್ ಪ್ರಭಾವದಲ್ಲಿ ಕೆಲವೊಮ್ಮೆ ದೇವನಾಗರಿ ಅಥವಾ ಲ್ಯಾಟಿನ್ ಲಿಪಿಯಲ್ಲಿಯೂ ಬರೆಯುವುದು ಕಂಡುಬರುತ್ತದೆ. ಭಾರತದಲ್ಲಿ ಪಂಜಾಬಿ ೨೨ ಎಂಟನೆಯ ಪರಿಚ್ಛೇದದಲ್ಲಿರುವ ಭಾಷೆಗಳಲ್ಲಿ ಒಂದು ಮತ್ತು ಪಂಜಾಬ್ ರಾಜ್ಯದ ಮೊದಲ ಅದಿಕೃತ ಭಾಷೆ. ವಾಸ್ತವದಲ್ಲಿ ಪಂಜಾಬಿ ಪಾಕಿಸ್ತಾನದ ಬಹುಸಂಖ್ಯಾತರು ಮಾತನಾಡುವ ಭಾಷೆಯಾಗಿದ್ದಾಗ್ಯೂ ಅಲ್ಲಿ ಯಾವ ಪ್ರಾಂತೀಯ ಭಾಷೆಗಳನ್ನು ಕೇಂದ್ರದಲ್ಲಿ ಗುರುತಿಸಿಲ್ಲ, ಪಾಕಿಸ್ತಾನದ ಎರಡು ರಾಷ್ಟ್ರೀಯ ಸಂಪರ್ಕ ಭಾಷೆಗಳು ಉರ್ದು ಮತ್ತು ಇಂಗ್ಲೀಶ್. ಆದರೆ ಅದು ಪಾಕಿಸ್ತಾನದ ಪಂಜಾಬ್ ಪ್ರಾಂತದ ಅಧಿಕೃತ ಭಾಷೆ. ಈ ಪ್ರಾಂತವು ಎರಡನೆ ಅತಿದೊಡ್ಡ ಮತ್ತು ಜನಸಂಖ್ಯೆಯಲ್ಲಿ ಮೊದಲನೆಯ ದೊಡ್ಡ ಪ್ರಾಂತ. ಭೌಗೋಳಿಕ ಹಂಚಿಕೆ ಪಾಕಿಸ್ತಾನ ಪಾಕಿಸ್ತಾನದಲ್ಲಿ ಪಂಜಾಬಿ ಅತಿಹೆಚ್ಚು ಜನರು ಮಾತನಾಡುವ ಭಾಷೆ ಮತ್ತು ಪಾಕಿಸ್ತಾನದ ಪಂಜಾಬ್ ಪ್ರಾಂತದ ಅಧಿಕೃತ ಭಾಷೆ. ಪಂಜಾಬಿಯನ್ನು ಸ್ಥಳೀಯ ಭಾಷೆಯಾಗಿ ಶೇ ೪೪.೧೫ಗೂ ಹೆಚ್ಚು ಪಾಕಿಸ್ತಾನೀಯರು ಮಾತನಾಡುತ್ತಾರೆ. ಸುಮಾರು ಶೇ ೭೦ರಷ್ಟು ಪಾಕಿಸ್ತಾನಿಯರು ಪಂಜಾಬಿಯನ್ನು ಮೊದಲ ಅಥವಾ ಎರಡನೆಯ ಭಾಷೆಯಾಗಿ ಮಾತನಾಡುತ್ತಾರೆ ಮತ್ತು ಕೆಲವೊಂದು ಜನರಿಗೆ ಅದು ಮೂರನೆಯ ಭಾಷೆ. ಪಾಕಿಸ್ತಾನ ಪಂಜಾಬಿನ ರಾಜಧಾನಿಯಾದ ಲಾಹೋರ್‌ನಲ್ಲಿ ಶೇ೮೬ರಷ್ಟು ಈ ಭಾಷೆ ಮಾತನಾಡುತ್ತಾರೆ. ಇದು ಜಗತ್ತಿನಲ್ಲೇ ಅತಿಹೆಚ್ಚು ಸ್ಥಳೀಯ ಪಂಜಾಬಿ ಭಾಷಿಕರಿರುವ ನಗರ. ಫೈಸಲಾಬಾದ್‌ನಲ್ಲಿ ಈ ಸಂಖ್ಯೆ ಶೇ ೭೬ ಮತ್ತು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಶೇ ೭೧. ಇವೆರಡು ಅತಿ ಹೆಚ್ಚು ಸ್ಥಳೀಯ ಪಂಜಾಬಿ ಭಾಷಿಕರಿರುವ ನಗರಗಳ ಸ್ಥಾನದಲ್ಲಿ ಎರಡನೆಯ ಮತ್ತು ಮೂರನೆಯ ಸ್ಥಾನ ಪಡೆದಿವೆ. ಕರಾಚಿ ನಗರದಲ್ಲಿನ ಪಂಜಾಬಿ ಭಾಷಿಕರ ಸಂಖ್ಯೆ ಸಹ ದೊಡ್ಡದು. ಗಮನಿಕೆ: ೧೯೮೧ರ ಪಾಕಿಸ್ತಾನದ ರಾಷ್ಟ್ರೀಯ ಜನಗಣತಿ ಪಶ್ಚಿಮ ಪಂಜಾಬಿನ ಉಪಭಾಷೆಗಳಾದ ಸರೈಕ, ಪೊಥೊಹರಿ ಮತ್ತು ಹಿಂಡಕೊಗಳಿಗೆ ಭಿನ್ನ ಭಾಷೆಯ ಸ್ಥಾನ ಕೊಟ್ಟಿತು. ಇದು ಪಂಜಾಬಿ ಭಾಷಿಗರ ಸಂಖ್ಯೆಯ ಕುಗ್ಗುವಿಕೆಯನ್ನು ವಿವರಿಸುತ್ತದೆ. ಭಾರತ ಭಾರತದಲ್ಲಿ ಪಂಜಾಬಿಯು ಸುಮಾರು ೩ ಕೋಟಿ ಜನರ ಸ್ಥಳೀಯ ಭಾಷೆ, ಎರಡನೆಯ ಅಥವಾ ಮೂರನೆಯ ಭಾಷೆ. ಪಂಜಾಬಿಯು ಭಾರತದ ಪಂಜಾಬ್, ಹರಿಯಾಣ ಮತ್ತು ದೆಹಲಿ ರಾಜ್ಯಗಳ ಅಧಿಕೃತ ಭಾಷೆ. ಪಂಜಾಬಿ ಭಾಷಿಕರು ಇರುವ ಕೆಲವು ಪ್ರಮುಖ ನಗರ ಕೇಂದ್ರಗಳು ಅಂಬಾಲ, ಲುದಿಯಾನ, ಅಮೃತಸರ, ಚಂಡೀಗರ್, ಜಲಂಧರ್ ಮತ್ತು ದೆಹಲಿ. ಟಿಪ್ಪಣಿಗಳು ಉಲ್ಲೇಖಗಳು ಪಂಜಾಬ್ ಭಾರತದ ಭಾಷೆಗಳು
2085
https://kn.wikipedia.org/wiki/%E0%B2%AA%E0%B2%B6%E0%B3%8D%E0%B2%9A%E0%B2%BF%E0%B2%AE%20%E0%B2%AC%E0%B2%82%E0%B2%97%E0%B2%BE%E0%B2%B3
ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳ ಪೂರ್ವ ಭಾರತದ ರಾಜ್ಯಗಳಲ್ಲೊಂದು. ಪಶ್ಚಿಮ ಬಂಗಾಲ - ಭಾರತ ಗಣರಾಜ್ಯದ ಒಂದು ರಾಜ್ಯ. ದೇಶದ ಈಶಾನ್ಯ ಭಾಗದಲ್ಲಿ, ಉ,ಅ. 21( 38'-27(10' ಮತ್ತು ಪೂ. ರೇ. 85(50'-89(50' ನಡುವೆ ಇದೆ. ಕರ್ಕಾಟಕದ ಸಂಕ್ರಾಂತಿ ವೃತ್ತ ಈ ರಾಜ್ಯದ ನಡುವೆ ಹಾದುಹೋಗುತ್ತದೆ. ರಾಜ್ಯದ ಉತ್ತರದಲ್ಲಿ ಸಿಕ್ಕಿಂ ಮತ್ತು ಭೂತಾನ್, ದಕ್ಷಿಣದಲ್ಲಿ ಬಂಗಾಲ ಕೊಲ್ಲಿ, ಪೂರ್ವದಲ್ಲಿ ಅಸ್ಸಾಂ ಮತ್ತು ಬಾಂಗ್ಲಾ ದೇಶ, ಪಶ್ಚಿಮದಲ್ಲಿ ಒರಿಸ್ಸ, ಬಿಹಾರ ಮತ್ತು ನೇಪಾಲ ಇವೆ ಇದರ ವಿಸ್ತೀರ್ಣ 88,752 ಚದರ ಕಿಮೀ. ಜನ ಸಂಖ್ಯೆ 8,02,21,171 (2001). ಜನಸಂಖ್ಯೆಯಲ್ಲಿ ಈ ರಾಜ್ಯದ್ದು ಭಾರತದ ರಾಜ್ಯಗಳ ಪೈಕಿ ನಾಲ್ಕನೆಯ ಸ್ಥಾನ, ರಾಜಧಾನಿ ಕೊಲ್ಕತ್ತ. 1947 ರಲ್ಲಿ ಭಾರತ ವಿಭಜನೆಯಾದಾಗ ಆಗಿನ ಬಂಗಾಲ ಪ್ರಾಂತ್ಯವನ್ನು ಪೂರ್ವ ಮತ್ತು ಪಶ್ಚಿಮ ಬಂಗಾಲಗಳಾಗಿ ವಿಂಗಡಿಸಲಾಯಿತು. ಪೂರ್ವ ಬಂಗಾಲಪೂರ್ವ ಪಾಕಿಸ್ತಾನವಾಯಿತು. ಪಶ್ಚಿಮ ಬಂಗಾಲ ಭಾರತದಲ್ಲಿ ಉಳಿಯಿತು. ಈ ರಾಜ್ಯವನ್ನು ವಿಚಿತ್ರವಾದ ಆಕಾರ. ಇದರ ಅಗಲ ಒಂದೆಡೆಯಲ್ಲಿ 320 ಕಿಮೀ. ಇದ್ದರೆ ಇನ್ನೊಂದಡೆಯಲ್ಲಿ ಕೇವಲ 16 ಕಿಮೀ. ಭಾರತದ ರಕ್ಷಣಾ ದೃಷ್ಟಿಯಿಂದ ಇದರದು ಆಯಕಟ್ಟಿನ ಸ್ಥಾನ. ಬಾಂಗ್ಲಾದೇಶದೊಂದಿಗೆ ಸುಮಾರು 2,160 ಕಿಮೀ. ಉದ್ದದ ಗಡಿ ಇದಕ್ಕಿದೆ. ಮೇಲ್ಮೈ ಲಕ್ಷಣ ಪಶ್ಚಿಮ ಬಂಗಾಲ ಬಹುತೇಕ ಮೆಕ್ಕಲು ಬಯಲು ಪ್ರದೇಶ. ಇದರ ಬಹುಭಾಗ ಗಂಗಾನದಿಯ ಮುಖಜ ಭೂಮಿ. ಒಟ್ಟು ಪ್ರದೇಶ ಶೇಕಡ ಒಂದು ಭಾಗ ಮಾತ್ರ ಪರ್ವತ ಪ್ರದೇಶ ಈ ರಾಜ್ಯವನ್ನು ಎರಡು ವಿಭಾಗಗಳಾಗಿ ವಿಂಗಡಿಸಬಹುದು: 1 ಉತ್ತರದಲ್ಲಿರುವ ಹಿಮಾಲಯ ಮತ್ತು ಅದರ ತಪ್ಪಲಿನ ಪ್ರದೇಶ, 2 ದಕ್ಷಿಣದ ಮೆಕ್ಕಲು ಮಣ್ಣಿನ ಬಯಲು, ರಾಜ್ಯದ ಉತ್ತರ ಗಡಿಯಲ್ಲಿ ಜಗತ್ತಿ ಅತ್ಯಂತ ಎತ್ತರದ ಹಿಮಾಲಯ ಪರ್ವತ ಶ್ರೇಣಿಯ ಏರು ಇದೆ. ಈ ಸೀಮೆ ಡಾರ್ಜಿಲಿಂಗ್ ಜಿಲ್ಲೆಯನ್ನು ಒಳಗೊಳ್ಳುತ್ತದೆ. ಈ ಜಿಲ್ಲೆ ಸಮುದ್ರಮಟ್ಟದಿಂದ ೩,೬೫೮ಮೀ. ಎತ್ತರದಲ್ಲಿದೆ. ಕಾಂಚನಗಂಗ ಶಿಖರ ಇದಕ್ಕೆ ಸಮೀಪದಲ್ಲಿದೆ. ಮೋಡವಿಲ್ಲದ ದಿನಗಳಲ್ಲಿ ಗೌರೀಶಂಕರ ಶಿಖರ ಇಲ್ಲಿಗೆ ಕಾಣುತ್ತದೆ. ಹಿಮಾಲಯ ತಪ್ಪಲಿನ ಹರವು ಜಲಪೈಗುರಿ ಮತ್ತು ಕೂಚ್‍ಬಿಹಾರ್ ಜಿಲ್ಲೆಗಳಲ್ಲಿ ಹಬ್ಬಿದೆ. ತಗ್ಗುನೆಲವಿರುವ ಈ ಪ್ರದೇಶವನ್ನು ತರೈ ಎನ್ನುತ್ತಾರೆ. ಒಂದು ಕಾಲದಲ್ಲಿ ಇಲ್ಲಿ ಮಲೇರಿಯ, ಕಾಲಾ ಆಚಾರ್ ರೋಗಗಳು ಹಬ್ಬಿದ್ದು, ಇದು ಅನಾರೋಗ್ಯಕರ ಪ್ರದೇಶವಾಗಿತ್ತು. ಈಗ ಇಲ್ಲಿಯ ಜಲೋತ್ಸಾರಣ ವ್ಯವಸ್ಥೆಯಿಂದಾಗಿ ಅನಾರೋಗ್ಯದ ಪರಿಸ್ಥಿತಿ ತಪ್ಪಿದೆಯಲ್ಲದೆ ನೆಲವನ್ನು ಸಾಗುವಳಿಗೆ ಒಳಪಡಿಸಲಾಗಿದೆ. ಭಾರತದ ಕೆಲವು ಉತ್ಕೃಷ್ಟ ಚಹ ತೋಟಗಳು ಇಲ್ಲಿವೆ. ಈ ಭಾಗದ ನದಿಗಳು ಮಳೆಗಾಲದಲ್ಲಿ ತುಂಬಿ ರಭಸವಾಗಿ ಹರಿಯುತ್ತವೆ. ತಿಷ್ಟ, ಟೊರ್ಸ್, ಜಾಲ್ದಾಕ್, ರಣಜಿತ್ ಮೊದಲಾದ ನದಿಗಳು ಬೆಟ್ಟದ ಕೊರಕಲುಗಳಿಂದ ಇಳಿದು ಬರುವಾಗ ಕಲ್ಲು, ಮರಳು ಮತ್ತು ಮೆಕ್ಕಲನ್ನು ಹೆಚ್ಚಾಗಿ ತಂದು ಹರಡುತ್ತವೆ. ವಿಶಾಲವಾದ ಮೆಕ್ಕಲು ಬಯಲು ಉತ್ತರದ ಜಲಪೈಗುರಿ ಮತ್ತು ಸಿಲಗುರಿಯಿಂದ ಹಿಡಿದು ದಕ್ಷಿಣದ ಸುಂದರಬನ ಖಾರಿಯ ವರೆಗೆ ಹರಡಿಕೊಂಡಿದೆ. ಮಾಲ್ಡಾ ಜಿಲ್ಲೆಯನ್ನು ಒಳಗೊಳ್ಳುವ ಮಹಾನದಿ ಬಯಲು ಅನೇಕ ಸಣ್ಣ ತೊರೆಗಳಿಂದ ಕೂಡಿದ ಎತ್ತರದ ಮೆಕ್ಕಲು ಪ್ರದೇಶ, ಬೀರ್‍ಭೂಮ್, ಬದ್ರ್ವಾನ್, ಬಂಕುರ, ಮಿಡ್ನಾಪುರ ಮತ್ತು ಪುರುಲಿಯ ಜಿಲ್ಲೆಗಳನ್ನು ಒಳಗೊಳ್ಳುವ ಪ್ರಸ್ಥಭೂಮಿಯ ಅಂಚುನೆಲ ಅಲ್ಲಲ್ಲಿ ಗುಡ್ಡಬೆಟ್ಟಗಳಿಂದ ಕೂಡಿರುವ, ವಿರಳವಾದ ಕಾಡುಗಳನ್ನುಳ್ಳ ಕೆಂಪು ಮಣ್ಣಿನ ಪ್ರದೇಶ, ಗಂಗಾ ನದಿಯ ದಕ್ಷಿಣಕ್ಕೆ ಇರುವ ಬಯಲು ಭಾಗೀರಥಿ ಹೂಗ್ಲಿ ನದಿಯಿಂದಾಗಿ ಇಬ್ಭಾಗವಾಗಿದೆ. ಆಗ್ನೇಯ ಬಯಲು ದಾಮೋದರರ ಮೊದಲಾದ ನದಿಗಳ ಪ್ರವಾಹ ತಂದ ಮೆಕ್ಕಲುಮಣ್ಣಿನಿಂದ ಉಂಟಾದ್ದು, ಅರಣ್ಯನಾಶ, ಸಡಿಲಮಣ್ಣು ಮೊದಲಾದ ಕಾರಣಗಳಿಂದಾಗಿ ಮಣ್ಣಿನ ಸವೆತ ಉಂಟಾಗಿ, ನದಿಗಳಲ್ಲಿ ನೀರು ಅಪಾರವಾಗಿ ಹರಿದು ಸಾಗರದ ಪಾಲಾಗುತ್ತಿದೆ. ನೈಋತ್ಯ ಬಯಲು ಅಸಂಖ್ಯಾತ ಸರೋವರಗಳಿಂದಲೂ ಜೌಗು ಪ್ರದೇಶಗಳಿಂದಲೂ ಕೂಡಿದೆ. ಇನ್ನೂ ದಕ್ಷಿಣಕ್ಕೆ ಸುಂದರ ಬನವೆಂದು ಹೆಸರಾದ ವೈವಿಧ್ಯಪೂರ್ಣ ಜಲ-ಭೂಸಂಕೀರ್ಣವಿದೆ. ಕಾಂತಿ ಕರಾವಳಿಯಲ್ಲಿ ಮರಳುರಾಶಿ ಹಾಗೂ ಉಪ್ಪು ಮಣ್ಣಿನ ಜೌಗು ನೆಲಗಳಿವೆ. ವ್ಯಾಪಕವಾದ ಭತ್ತದ ಗದ್ದೆಗಳಿಂದಲೂ ಮಾವು ತೆಂಗು ಬಾಳೆ ತೋಪುಗಳಿಂದಲೂ ತುಂಬಿರುವ ದಕ್ಷಿಣದಲ್ಲಿ ದಟ್ಟ ಜನಸಂದಣಿ ಇದೆ. ಅನೇಕ ಪ್ರಮುಖ ನದಿಗಳ ಪ್ರಭಾವದಿಂದಾಗಿ ದಕ್ಷಿಣದ ಮೆಕ್ಕಲು ಬಯಲು ಉಂಟಾಗಿದೆ. ನದಿಗಳಲ್ಲಿ ಮುಖ್ಯವಾದವೆಂದರೆ ಭಾಗೀರಥಿ ಹಾಗೂ ಅದರ ಉಪನದಿಗಳಾದ ಮಯೂರಾಕ್ಷಿ, ದಾಮೋದರ, ಕಂಗ್ರಾಬತಿ ಮತ್ತು ರೂಪ ನಾರಾಯಣ್, ಸಾಗರಕ್ಕೆ ಸೇರಲಿರುವ ಭಾಗೀರಥಿಯ ಕೊನೆಯ ಭಾಗವನ್ನು ಹೂಗ್ಲಿ ಎನ್ನುತ್ತಾರೆ, ಇದು ಗಂಗಾನದಿಯ ಶಾಖೆಯೇ, ಹೂಗ್ಲಿ ನದಿಯಿಂದ ಕಲ್ಕತ್ತಕ್ಕೆ ಸಾಗರಸಂಪರ್ಕ ಏರ್ಪಟ್ಟಿದೆ. ಮಣ್ಣು 1965ರಲ್ಲಿ ರಾಜ್ಯ ಸರ್ಕಾರ ನಡೆಸಿದ ಸರ್ವೇಕ್ಷಣೆಯಲ್ಲಿ ಇಲ್ಲಿಯ ಮಣ್ಣನ್ನು ಏಳು ವರ್ಗಗಳಾಗಿ ವಿಂಗಡಿಸಲಾಗಿದೆ : 1 ಕೆಂಪು ಜೇಡುಮಣ್ಣು 14,70,000 ಎಕರೆ ; 4 ತರೈ ಮಣ್ಣು 16,20,000 ಎಕರೆ ; ಈ ಮಣ್ಣು ಪಶ್ಚಿಮ ಬಂಗಾಲಕ್ಕೆ ವಿಶಿಷ್ಟವಾದ್ದು : 5 ಕರಾವಳಿಯ ಉಪ್ಪು ಮಣ್ಣು 28,50,000 ಎಕರೆ ; 6 ಮರಳುಕಲ್ಲಿನ ಮಣ್ಣು 32,80,000 ಎಕರೆ ; 7 ಕಂದು ಕಾಡು ಮಣ್ಣು 4,80,000 ಎಕರೆ. ವಾಯುಗುಣ ಉತ್ತರದ ಎತ್ತರ ಪ್ರದೇಶಗಳನ್ನು ಬಿಟ್ಟರೆ, ಪಶ್ಚಿಮ ಬಂಗಾಲದಲ್ಲಿ ಮೂಲಭೂತವಾಗಿ ಉಷ್ಣವಲಯದ ವಾಯುಗುಣವಿದೆ. ಇಲ್ಲಿ ಹೆಚ್ಚು ಆದ್ರ್ರತೆ ಹಾಗೂ ತಕ್ಕಮಟ್ಟಿಗೆ ಅಧಿಕ ಉಷ್ಣತೆ ಇರುತ್ತದೆ. ೧. ಬೇಸಗೆ (ಮಾರ್ಚಿಯಿಂದ ಜೂನ್ ಆರಂಭದ ವರೆಗೆ); ೨. ಮಳೆಗಾಲ (ಜೂನ್ ಮಧ್ಯದಿಂದ ಸೆಪ್ಟಂಬರ್ ವರೆಗೆ); ೩. ಚಳಿಗಾಲ (ಅಕ್ಟೋಬರಿನಿಂದ ಫೆಬ್ರವರಿಯ ವರೆಗೆ); ಉಷ್ಣತೆಯಲ್ಲಿ ಅತಿಯಾದ ಏರಿಳಿತಗಳಿರುವುದಿಲ್ಲ. ಮೇ-ಜೂನ್ ತಿಂಗಳುಗಳಲ್ಲಿ ತೀವ್ರ ಧಗೆ ಇರುತ್ತದೆ; ನವೆಂಬರ್ ಡಿಸೆಂಬರ್‍ಗಳಲ್ಲಿ ಚಳಿ, ಜೂನ್‍ನಲ್ಲಿ ಮಳೆಗಾಲ ಆರಂಭವಾಗುತ್ತದೆ. ಆಗ್ನೇಯ ಮಾನ್ಸೂನ್ ಮಾರುತಗಳು ಮಳೆ ತರುತ್ತವೆ. ಬಂಗಾಲ ಕೊಲ್ಲಿಯ ಸಾಗರಪ್ರವಾಹ ಮತ್ತು ಅವನಮನಗಳ (ಡಿಪ್ರೆಷನ್) ಸಂಭಾವ್ಯತೆ ಹಾಗೂ ಅವುಗಳ ಚಲನೆಗಳನ್ನು ಮಳೆತೀವ್ರತೆ ಅವಲಂಬಿಸುತ್ತದೆ. ಪಶ್ಚಿಮ ಬಂಗಾಲ ಹೆಚ್ಚು ಮಳೆ ಬೀಳುವ ಪ್ರದೇಶ. ರಾಜ್ಯದ ಸರಾಸರಿ ಮಳೆ ಸುಮಾರು ೧೭೫ ಸೆಂ.ಮೀ. ಇದರಲ್ಲಿ ೧೨೫ ಸೆಂ.ಮೀ. ಗಳಷ್ಟು ಮಳೆ ಬೀಳುವುದು ಮಳೆಗಾಲದ ನಾಲ್ಕು ತಿಂಗಳುಗಳಲ್ಲಿ, ದಕ್ಷಿಣದಲ್ಲಿ ೧೨೦ ಸೆಂ.ಮೀ.ಗಳಿಂದ ಹಿಡಿದು ಉತ್ತರದಲ್ಲಿ ೪೦೦ ಸೆಂಮೀ.ಗಳ ವರೆಗೂ ಮಳೆ ವ್ಯತ್ಯಾಸವಾಗುತ್ತದೆ. ಉತ್ತರದ ಜಿಲ್ಲೆಗಳಲ್ಲಿ ೩೦೦ ಸೆಂ.ಮೀ. ಗಳಿಗೂ ಹೆಚ್ಚು ಮಳೆಯಾಗುತ್ತದೆ. ನದೀ ಬಯಲು, ಸುಂದರಬನ, ಕಾಂತಿ ಕರಾವಳಿ-ಇಲ್ಲಿ ಸುಮಾರು ೨೦೦ ಸೆಂ.ಮೀ. ಮಿಡ್ನಾಪುರ, ಹೌರ, ಹೂಗ್ಲಿ, ನದಿಯ ಜಿಲ್ಲೆಗಳಲ್ಲಿ ೧೪ರಿಂದ ೧೬೦ ಸೆಂ.ಮೀ. ಮಳೆಯಾಗುತ್ತದೆ. ಅತ್ಯಂತ ಕಡಿಮೆ ಮಳೆ ಬೀಳುವ ಜಿಲ್ಲೆಯಾದ ಬಂಕುರದಲ್ಲಿ ಬೀಳುವ ಮಳೆ ಸುಮಾರು ೧೧೮ ಸೆಂ.ಮೀ. ಆಗಿದೆ. ಸಸ್ಯಪ್ರಾಣಿ ಜೀವನ ಪಶ್ಚಿಮ ಬಂಗಾಲದಲ್ಲಿ ವಾಯುಗುಣ ಮತ್ತು ಮಣ್ಣಿಗೆ ಅನುಗುಣವಾದ ಸಸ್ಯವರ್ಗವಿದೆ. ರಾಜ್ಯದ ಒಟ್ಟು ಭೌಗೋಳಿಕ ಪ್ರದೇಶದ ಶೇಕಡ ೧೩.೪ ರಷ್ಟು ನೆಲ ಅರಣ್ಯಾವೃತವಾಗಿದೆ. ಜನಸಾಂದ್ರತೆ ಹೆಚ್ಚುತ್ತಿರುವುದರಿಂದ ಹೆಚ್ಚು ಹೆಚ್ಚು ಭೂಮಿಯನ್ನು ಸಾಗುವಳಿಗೆ ತರಲಾಗುತ್ತಿದೆ. ಇದರಿಂದ ಪಶ್ಚಿಮ ಬಂಗಾಲದ ನೈಸರ್ಗಿಕ ಸಸ್ಯಸಂಪತ್ತು ನಶಿಸುತ್ತಿದೆ. ಸಾಮಾನ್ಯವಾಗಿ ಇಲ್ಲಿ ಮೂರು ಬಗೆಯ ಅರಣ್ಯಗಳನ್ನು ಗುರುತಿಸಬಹುದು : ೧. ಪರ್ವತಪ್ರದೇಶದ ಸಮಶೀತೋಷ್ಣ ಕಾಡು, ೨. ಪರ್ವತ ತಪ್ಪಲಿನ ಪರ್ಣಪಾತಿ ಕಾಡು, ೩. ಸುಂದರಬನದ ಉಷ್ಣವಲಯ ಕಾಡು, ಉತ್ತರದಲ್ಲಿ ಪರ್ವತ ಇಳಿಜಾರುಗಳಲ್ಲಿ ಚಹ ತೋಟಗಳು ಹಾಗೂ ದೇವದಾರು ಅರಣ್ಯಗಳು ಹಬ್ಬಿಕೊಂಡಿವೆ. ತಪ್ಪಲು ಪ್ರದೇಶದ ವಿರಳ ಕಾಡುಗಳಲ್ಲಿ ಸಾಲವೃಕ್ಷ, ಮಾಹುವ, ಪಾರಾಶ, ಸಂಪಿಗೆ, ಬೀಟೆ ಮುಂತಾದ ಮರಗಳನ್ನು ಕಾಣಬಹುದು. ಬಯಲಿನ ಕಾಡುಗಳಲ್ಲಿ ಬೆಲೆಬಾಳುವ ಮರಮುಟ್ಟು ನೀಡುವ ವೃಕ್ಷಗಳಿವೆ. ಬೊಂಬು ಮತ್ತು ನೀಳ ಹುಲ್ಲು ವಿಪುಲವಾಗಿ ಬೆಳೆಯುತ್ತವೆ. ಕಾಂತಿ ಕರಾವಳಿಯಲ್ಲಿ ಸಮುದ್ರದ ಕೊರೆತವನ್ನು ತಪ್ಪಿಸಲು ಸರ್ವೆಮರಗಳ ಕಾಡನ್ನು ಬೆಳೆಸಲಾಗುತ್ತಿದೆ. ಶೀಘ್ರವಾಗಿ ಬೆಳೆಯುವ ಜಪಾನೀ ಮರ ಕುಡ್ಜುವನ್ನು ನೆಡಲಾಗುತ್ತಿದೆ. ಈ ಭಾಗದ ನೈಸರ್ಗಿಕ ಸಸ್ಯವೆಂದರೆ ಕೆಯಾ ಪೊದೆ. ಇದರ ಸುವಾಸನೆಯ ಹೂಗಳನ್ನು ಸಂಗ್ರಹಿಸಿ ಪ್ರಸಿದ್ಧ ಕೆವ್ರಾ ಸುಗಂಧವನ್ನು ಉತ್ಪಾದಿಸುತ್ತಾರೆ, ಸಾಲದವೃಕ್ಷಗಳು ಮರಳು ಮಣ್ಣಿನಲ್ಲಿ ಬೆಳೆಯುತ್ತವೆ. ಇತರ ವೃಕ್ಷಗಳು ಜೌಗುನೆಲದಲ್ಲಿ ಹೇರಳವಾಗಿ ಬೆಳೆಯುತ್ತವೆ. ಮಾವು, ಹಲಸು ಹಾಗೂ ಬಾಳೆ ಪಶ್ಚಿಮ ಬಂಗಾಲದ ಪ್ರಮುಖ ಫಲವೃಕ್ಷಗಳು. ಉತ್ತರದ ಜಿಲ್ಲೆಗಳ ಕಾಡುಗಳಲ್ಲಿ ಹುಲಿ, ಚಿರತೆ, ಆನೆ, ಕಾಡೆಮ್ಮೆ, ನೀರಾನೆ ಮತ್ತು ಇತರ ಹಲವು ಪ್ರಾಣಿಗಳಿವೆ. ಉರಗ ಹಾಗೂ ಪಕ್ಷಿಗಳ ವಿವಿಧ ಜಾತಿಗಳು ಇಲ್ಲಿ ಇವೆ. ಜಾಲ್ದಾಕಾ ನದಿ ಕಣಿವೆಯಲ್ಲಿ ಒಂದು ಪ್ರಾಣಿನಾಮವಿದೆ. ಜನ ಪಶ್ಚಿಮ ಬಂಗಾಲದ ಜನಸಂಖ್ಯೆಯಾದ 9,13,47,736 .(2011) ಇಲ್ಲಿಯ ಜನಸಂಖ್ಯೆ 38,074 ಹಳ್ಳಿಗಳಲ್ಲಿ ಮತ್ತು 223 ಪಟ್ಟಣಗಳಲ್ಲಿ ಹಂಚಿಕೆಯಾಗಿದೆ. ಒಂದು ಲಕ್ಷಕ್ಕೂ ಮೀರಿದ ಜನಸಂಖ್ಯೆಯುಳ್ಳ ನಗರಗಳು 15. ಐದು ಸಾವಿರಕ್ಕಿಂತ ಹೆಚ್ಚು ಮತ್ತು ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯುಳ್ಳ ಪಟ್ಟಣಗಳು 123. ಕೈಗಾರಿಕಾ ಸಂಕೀರ್ಣಗಳಿಂದ ಬೃಹತ್ತಾಗಿ ಬೆಳೆದು ಸಮುದಾಯವಾಗಿರುವ ನಾಲ್ಕು ಮಹಾನಗರವಲಯಗಳಿವೆ. ಇವುಗಳ ಪೈಕಿ ಕೊಲ್ಕತ್ತ ಮಹಾನಗರ ಅತ್ಯಂತ ದೊಡ್ಡದು. ಹೂಗ್ಲಿ ನದಿಯ ಇಕ್ಕೆಲಗಳ 76 ಪಟ್ಟಣ ಬಡಾವಣೆಗಳು ಇದರಲ್ಲಿ ಸೇರಿವೆ. ಎರಡನೆಯದೆಂದರೆ 13 ಪಟ್ಟಣಗಳುಳ್ಳ ಆಸನ್‍ಸೋಲ್-ದುರ್ಗಾಪುರ ವಲಯ. ಭಾಗೀರಥಿಯ ಇಕ್ಕೆಲದ ಎಂಟು ಪಟ್ಟಣಗಳ ಮುರ್ಷಿದಾಬಾದ್ ವಲಯ ಮೂರನೆಯದು. ನಾಲ್ಕನೆಯದು ಮಿಡ್ನಾಪುರ ಜಿಲ್ಲೆಯ ಉತ್ತರದಲ್ಲಿದೆ. ಇದರಲ್ಲಿ ಹಾಲ್ದಿಯವೂ ಸೇರಿದಂತೆ 6 ಪಟ್ಟಣಗಳಿವೆ. ಈ ನಾಲ್ಕು ವಲಯಗಳ ಒಟ್ಟು ಜನಸಂಖ್ಯೆ 83,30,000 (1971). ಬಂಗಾಳದ ಸೇ 16ರಷ್ಟು ಜನರು ಭಾರತದ ಅತ್ಯಂತ ಬೃಹತ್ ನಗರವಾದ ಕೊಲ್ಕತ್ತದಲ್ಲಿ ನೆಲಸಿದ್ದಾರೆ. 1912ರ ವರೆಗೆ ಭಾರತ ಸರ್ಕಾರದ ರಾಜಧಾನಿಯಾಗಿದ್ದ ಈ ನಗರ ಈಗ ಭಾರತದ ವಾಣಿಜ್ಯ ರಾಜಧಾನಿಯಾಗಿದೆ. ವಿವಿಧ ಮತಗಳ ಜನಸಮುದಾಯವಿರುವ ಈ ರಾಜ್ಯದಲ್ಲಿ ಹಿಂದುಗಳು ಒಟ್ಟು ಜನಸಂಖ್ಯೆಯ ಸೇ. 79ರಷ್ಟು ಮಂದಿ ಮುಸ್ಲಿಮರು, ಉಳಿದ ಸೇಕಡ ಒಂದರಷ್ಟು ಜನಸಂಖ್ಯೆಯಲ್ಲಿ ಕ್ರೈಸ್ತರು, ಬೌದ್ಧರು, ಜೈನರು ಹಾಗೂ ಸಿಖ್ಖರು ಸೇರಿದ್ದಾರೆ. ಪಶ್ಚಿಮ ಬಂಗಾಲದಲ್ಲಿ ಮಾನ್ಯತೆ ಪಡೆದ 41 ಬುಡಕಟ್ಟು ಸಮುದಾಯಗಳಿವೆ. ಇವುಗಳಲ್ಲಿ ಪ್ರಸಿದ್ಧವಾದವು ಬಯಲುಸೀಮೆಯಲ್ಲಿ ಸಂತಾಲ, ಒರಾವೂ ಮತ್ತು ಮುಂಡ, ಹಿಮಾಲಯ ಪ್ರದೇಶಗಳಲ್ಲಿ ಲೆಪ್ಚಾ ಹಾಗೂ ಭೂತಿಯ, ಬುಡಕಟ್ಟು ಜನರ ಸಂಖ್ಯೆ ಒಟ್ಟು ಜನಸಂಖ್ಯೆಯ ಸೇ. 6. ರಾಜ್ಯದ ಮುಖ್ಯ ಭಾಷೆ ಬಂಗಾಲಿ, ಜನಸಂಖ್ಯೆಯ ಶೇ, 84ರಷ್ಟು ಮಂದಿ ಬಂಗಾಲಿ ಮಾತನಾಡುತ್ತಾರೆ. ಇತರ ಭಾಷೆಗಳು ಹಿಂದಿ (ಸೇ.5), ಸಂತಾಲಿ (ಸೇ. 3). ಉರ್ದು (ಸೇ.2) ಮತ್ತು ನೇಪಾಲಿ (ಸೇ.1) ಒರಾವೂ ಮತ್ತು ಇಂಗ್ಲಿಷ್ ಭಾಷೆಗಳೂ ಪ್ರಚಾರದಲ್ಲಿವೆ. 1971 ರ ಜನಗಣತಿಯ ಪ್ರಕಾರ ವ್ಯವಸಾಯ ವೃತ್ತಿಯಲ್ಲಿರುವವರು 72,22,108 : ಕಾರ್ಖಾನೆ ಕಾರ್ಮಿಕರು 8,43,300 ; ಕಲ್ಲಿದ್ದಲು ಗಣಿ ಕೆಲಸಗಾರರು 1,16,460 ; ಪ್ಲಾಂಟೇಷನ್ ಕೆಲಸಗಾರರು 2,15,000 ; ರಾಜ್ಯ ಸರ್ಕಾರದ ಸೇವೆಯಲ್ಲಿರುವವರು 2,89,000 ; ಕೇಂದ್ರ ಸರ್ಕಾರದ ಸೇವೆಯಲ್ಲಿರುವವರು 4,13,000 ; ಭಾಗಶಃ ಸರ್ಕಾರಿ ಸೇವೆಗಳಲ್ಲಿರುವವರು 32,200 ; ಇತರ ಕೆಲಸಗಾರರು 4,58,000. ಆಡಳಿತ ಪಶ್ಚಿಮ ಬಂಗಾಲದ ಸರ್ಕಾರ ವ್ಯವಸ್ಥೆ ಭಾರತ ಗಣರಾಜ್ಯದ ಇತರ ರಾಜ್ಯಗಳವುಗಳಂತೆಯೇ ಇದೆ. ರಾಷ್ಟ್ರಪತಿಯಿಂದ ನೇಮಕ ಹೊಂದಿದ ರಾಜ್ಯಪಾಲ ರಾಜ್ಯದ ಮುಖ್ಯ. ಆದರೆ ಅಧಿಕಾರ ಚಲಾವಣೆ ಇವರ ಕೈಯಲ್ಲಿರುವುದಿಲ್ಲ. ವಿಧಾನ ಸಭೆಯ ಬಹುಮತ ಪಕ್ಷದ ಸದಸ್ಯ ಪ್ರತಿನಿಧಿಗಳು ಸರ್ಕಾರ ರಚಿಸುತ್ತಾರೆ. ಮುಖ್ಯ ಮಂತ್ರಿ ಮತ್ತು ಆತನ ಸಂಪುಟ ಸದಸ್ಯರು ವಿಧಾನ ಮಂಡಲಕ್ಕೆ ಉತ್ತರವಾದಿಗಳಾಗಿರುತ್ತಾರೆ. ರಾಜ್ಯದ ನ್ಯಾಯವ್ಯವಸ್ಥೆ ಉಚ್ಚ ನ್ಯಾಯಾಲಯದ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ. ಮುಖ್ಯ ನ್ಯಾಯಾಧೀಶ ಹಾಗೂ ಇತರ ನ್ಯಾಯಾಧೀಶರನ್ನು ರಾಷ್ಟ್ರಪತಿ ನೇಮಕ ಮಾಡುತ್ತಾರೆ. ಜಿಲ್ಲೆಯ ಮತ್ತು ಅದಕ್ಕಿಂತ ಕೆಳಗಿನ ಸೆಷನ್ಸ್ ನ್ಯಾಯಲಯಗಳ ನ್ಯಾಯಾಧೀಶರ ನೇಮಕ ರಾಜ್ಯಪಾಲರಿಂದ. ಪ್ರೆಸಿಡೆನ್ಸಿ. ಬದ್ರ್ವಾನ್ ಹಾಗೂ ಜಲ್ ಪೈಗುರಿ-ಇವು ರಾಜ್ಯದ ಆಡಳಿತ ವಿಭಾಗಗಳು, ಇವುಗಳ ಕೇಂದ್ರ ಕಛೇರಿಗಳು ಅನುಕ್ರಮವಾಗಿ ಕಲ್ಕತ್ತ, ಚಿನ್‍ಸುರ ಮತ್ತು ಜಲಪೈಗುರಿಗಳಲ್ಲಿವೆ. ಪ್ರತಿ ವಿಭಾಗಕ್ಕೂ ಒಬ್ಬ ವಿಭಾಗಾಧಿಕಾರಿ ಇರುತ್ತಾನೆ. ಪ್ರತಿಯೊಂದು ವಿಭಾಗದಲ್ಲೂ ಹಲವು ಜಿಲ್ಲೆಗಳಿರುತ್ತವೆ. ರಾಜ್ಯದ ಜಿಲ್ಲೆಗಳ ಸಂಖ್ಯೆ ೨೩ ಜಿಲ್ಲೆಗಳ ವಿವರಗಳನ್ನು ಕೋಷ್ಟಕ 1ರಲ್ಲಿ ನೀಡಿದೆ. ಜಿಲ್ಲೆಯ ಅಧಿಕಾರಿ ಕಲೆಕ್ಟರ್. ಆತ ಜಿಲ್ಲಾದಂಡಾಧೀಶನೂ ಹೌದು. ಪ್ರತಿಯೊಂದು ಜಿಲ್ಲೆಯೂ ಮತ್ತೆ ಹಲವು ಥಾನಾಗಳಾಗಿ ವಿಭಾಗವಾಗುತ್ತವೆ. ಒಟ್ಟು ಇಂಥ 48 ಉಪವಿಭಾಗಗಳಿವೆ. ಪ್ರಸ್ತುತ ಪಶ್ಚಿಮ ಬಂಗಾಲದಲ್ಲಿ ೨೩ ಜಿಲ್ಲೆಗಳಿವೆ . ಪ್ರತಿಯೊಂದು ಉಪವಿಭಾಗದಲ್ಲೂ ಉಪವಿಭಾಗಾಧಿಕಾರಿ ಮತ್ತು ಹಲವಾರು ಪೋಲಿಸ್ ಠಾಣೆಗಳಿರುತ್ತವೆ. ಪ್ರತಿ ಪೋಲಿಸ್ ಠಾಣೆಯ ಆಡಳಿತವ್ಯಾಪ್ತಿಯಲ್ಲಿ ಹಲವಾರು ಗ್ರಾಮಗಳು ಇರುತ್ತವೆ. ಗ್ರಾಮ ಸ್ವಯಮಾಡಳತವನ್ನು ಅಭಿವೃದ್ಧಿಗೊಳಿಸುವ ದೃಷ್ಟಿಯಿಂದ ಹಲವು ಗ್ರಾಮಗಳು ಸೇರಿದ ಗ್ರಾಮಗಳು ಸೇರಿದ ಗ್ರಾಮಪಂಚಾಯಿತಿಗಳ ಅಸ್ತಿತ್ವವನ್ನು 1956ರ ಪಶ್ಚಿಮ ಬಂಗಾಲ ಪಂಚಾಯಿತಿ ಅಧಿನಿಯಮದ ಮೂಲಕ ಘೋಷಿಸಲಾಯಿತು. ಊರಿನ ನೈರ್ಮಲ್ಯೀಕರಣ, ರಕ್ಷಣೆ, ಗ್ರಾಮ ಪೋಲಿಸ್ ಮೇಲ್ವಿಚಾರಣೆ, ಗೃಹಕೈಗಾರಿಕೆಗಳ ಅಭಿವೃದ್ಧಿ- ಇವು ಪಂಚಾಯಿತಿಗಳ ಮೂಲ ಕರ್ತವ್ಯ, ಪಶ್ಚಿಮ ಬಂಗಾಲದಲ್ಲಿ ಸುಮಾರು 20,000 ಗ್ರಾಮ ಪಂಚಾಯಿತಿಗಳೂ, ಸುಮಾರು 3.000 ಅಂಚಲ್ ಪಂಚಾಯಿತಿಗಳೂ ಇವೆ. ಶಿಕ್ಷಣ 1971ರಲ್ಲಿ ಪಶ್ಚಿಮ ಬಂಗಾಲದಲ್ಲಿ ಸಾಕ್ಷರತೆ ಸೇ 33.05. ಸೇ 43 ಪರುಷರು ಮತ್ತು ಸೇ 22 ಸ್ತ್ರೀಯರು ಅಕ್ಷರಸ್ಥರು, 1968-69ರಲ್ಲಿ ಉಚಿತ ಹಾಗೂ ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನು ಜಾರಿಗೆ ತರಲಾಯಿತು. 1972-73ರಲ್ಲಿ ರಾಜ್ಯದಲ್ಲಿ 39.400 ಪ್ರಾಥಮಿಕ ಶಾಲೆಗಳು 2,946 ಮಾಧ್ಯಮಿಕ ಶಾಲೆಗಳು, 2,147 ಪ್ರೌಢ ಶಾಲೆಗಳು, 283 ಕಾಲೇಜುಗಳು, 29 ಪಾಲಿಟೆಕ್ನಿಕ್ ಶಾಲೆಗಳು, 6 ವೈದ್ಯಕೀಯ ಕಾಲೇಜುಗಳು ಇದ್ದುವು. ಕಲ್ಕತ್ತ, ಬದ್ರ್ವಾನ್, ಜಾದವ್‍ಪುರ್, ಕಲ್ಯಾಣಿ, ಉತ್ತರಬಂಗಾಲ, ರವೀಂದ್ರಭಾರತಿ ಮತ್ತು ವಿಶ್ವಭಾರತಿ ವಿಶ್ವವಿದ್ಯಾಲಯಗಳಿವೆ. ಸುಮಾರು 50 ತಾಂತ್ರಿಕ ಶಿಕ್ಷಣ ಸಂಸ್ಥೆಗಳಿವೆ. 5.000 ಕ್ಕೂ ಹೆಚ್ಚು ವಯಸ್ಕರ ಶಿಕ್ಷಣ ಕೇಂದ್ರಗಳಿವೆ. ರಾಜ್ಯದಲ್ಲಿ ಕೇಂದ್ರ ಗ್ರಂಥಾಲಯವೂ 18 ಜಿಲ್ಲಾ ಗ್ರಂಥಾಲಯಗಳೂ 44 ಪ್ರಾದೇಶಿಕ ಗ್ರಂಥಾಲಯಗಳೂ 500ಕ್ಕೂ ಹೆಚ್ಚು ಗ್ರಾಮಂತರ ಗ್ರಂಥಾಲಯಗಳೂ ಇದ್ದವು. ಆರೋಗ್ಯ 1974ರಲ್ಲಿ ರಾಜ್ಯದಲ್ಲಿ 300 ಆಸ್ಪತ್ರೆಗಳು 679 ಕ್ಲಿನಿಕ್‍ಗಳು, 47 ಆರೋಗ್ಯಕೇಂದ್ರಗಳು ಮತ್ತು 441 ಡಿಸ್ಪೆನ್ಸರಿಗಳು ಇದ್ದುವು. ರಾಜ್ಯದ ವೈದ್ಯಕೀಯ ಕಾಲೇಜುಗಳಿಂದ ವರ್ಷಕ್ಕೆ ಸುಮಾರು 1,000 ಮಂದಿ ವೈದ್ಯ ಪದವೀಧರರು ಹೊರಬರುತ್ತಾರೆ. ಕುಟಂಬಯೋಜನಾ ಸೇವೆಯನ್ನು 18 ಜಿಲ್ಲಾ ಕೇಂದ್ರಗಳಲ್ಲಿ ಮತ್ತು ನಗರ ಹಾಗೂ ಗ್ರಾಮ ಕೇಂದ್ರಗಳಲ್ಲಿ ಒದಗಿಸಲಾಗುತ್ತದೆ. 1974ರಲ್ಲಿ ಗ್ರಾಮಾಂತರ ಪ್ರದೇಶದಲ್ಲಿ 335, ಮತ್ತು ನಗರಗಳಲ್ಲಿ 105 ಕುಟುಂಬ ಯೋಜನಾ ಕೇಂದ್ರಗಳು ಇದ್ದವು. ರಾಜ್ಯ ಯೋಜನೆಯ ಅಡಿಯಲ್ಲಿ 8,60,000ಕ್ಕೂ ಹೆಚ್ಚು ಕಾರ್ಮಿಕರಿಗೆ ಆರೋಗ್ಯ ಉದ್ಯೋಗ, ರಕ್ಷಣೆ ಹಾಗೂ ಮಾತೃತ್ವ ವಿಮೆಯ ಸೌಲಭ್ಯ ನೀಡಲಾಗಿದೆ. ಅಲ್ಲದೆ. 800ಕ್ಕೂ ಹೆಚ್ಚೂ ವೈದ್ಯರ ಮೂಲಕ ಉಚಿತ ವೈದ್ಯಕೀಯ ಸೌಲಭ್ಯ ನೀಡಲಾಗುತ್ತಿದೆ. ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ, ಕೈಗಾರಿಕೆ ಮತ್ತು ಕೃಷಿ ಇವೆಲ್ಲವುಗಳಲ್ಲಿ ಮೇಲಿನ ಅಂಕಿ ಅಂಶಗಳನ್ನು ಮೀರಿಸಿ ಈಗ ಪ್ರಗತಿಯಾಗಿರುವುದನ್ನು ಮನದಟ್ಟು ಮಾಡಿಕೊಳ್ಳಬೇಕು. ಸಮಾಜ ಕಲ್ಯಾಣ 1970ರ ದಶಕದ ಆರಂಭದಲ್ಲಿ ಸಾರ್ವಜನಿಕ ಕಲ್ಯಾಣ ನಿರ್ದೇಶನಾಲಯ ವಿವಿಧ ಸಮಾಜಕಲ್ಯಾಣ ಸೇವೆಗಳನ್ನು ಕೈಗೊಂಡಿತು. ಅನಾಥರು, ನಿರ್ಗತಿಕರು, ಅಲೆಮಾರಿಗಳು, ಮಾನಸಿಕವಾಗಿ ಹಾಗೂ ಭೌತಿಕವಾಗಿ ವಿಕಲರಾದವರು, ಬಾಲಾಪರಾಧಿಗಳು ಇವರ ಕಡೆಗೆ ತೀವ್ರ ಗಮನವಿತ್ತು. ಸರ್ಕಾರದ ಸಮಾಜಕಲ್ಯಾಣ ಸೇವೆಗೆ ಪೂರಕವಾಗಿ ಅನೇಕ ಖಾಸಗಿ ಸಂಸ್ಥೆಗಳೂ ಕ್ರಿಯಾಶೀಲವಾದುವು. ಇವುಗಳಲ್ಲಿ ಅತ್ಯಂತ ಪ್ರಮುಖವಾದ್ದೆಂದರೆ ಸ್ವಾಮಿ ವಿವೇಕಾನಂದರಿಂದ 1897ರಲ್ಲಿ ಸ್ಥಾಪಿತವಾದ ಶ್ರೀ ರಾಮಕೃಷ್ಣಶ್ರಮ. ಶ್ರೀ ರಾಮಕೃಷ್ಣ ಸಂಸ್ಥೆಯು ಕ್ರೈಸ್ತ ಸಂಸ್ಥೆಗಳೂ ಅನೇಕ ಶಾಲೆಗಳನ್ನು ಆಸ್ಪತ್ರೆಗಳನ್ನೂ ನಡೆಸುತ್ತಿವೆ. ಕೃಷಿ ಪಶ್ಚಿಮ ಬಂಗಾಲದ ಜನರ ಮುಖ್ಯ ಕಸುಬು ವ್ಯವಸಾಯ. ಸೇ. 57.5 ಮಂದಿ ಕೃಷಿಯನ್ನು ಅವಲಂಬಿಸಿದ್ದಾರೆ. ರಾಜ್ಯದ ನೆಲದ ಸೇ 60 ರಷ್ಟು ಭಾಗ ಸಾಗುವಳಿಗೆ ಒಳಪಟ್ಟಿದೆ. ರಾಜ್ಯದ ಮುಖ್ಯ ಬೆಳೆ ಬತ್ತ. ಒಟ್ಟು ಸಾಗುವಳಿ ಪ್ರದೇಶದ ಸೇ 70ರಷ್ಟು ಇದಕ್ಕೆ ಮೀಸಲು ಇತ್ತೀಚೆಗೆ ಅಹಾರ ಬೆಳೆ ಉತ್ಪಾದನೆಯ ವಿನ್ಯಾಸ ತೀವ್ರವಾಗಿ ಬದಲಿಸುತ್ತಿದೆ. ಗೋಧಿಯೂ ಒಂದು ಪ್ರಮುಖ ಬೆಳೆಯಾಗುತ್ತಿದೆ. ಬಾರ್ಲಿ ಮತ್ತು ಜೋಳ ಗಾಣ ಬೆಳೆಗಳೂ ಬೆಳೆಯುತ್ತವೆ. ರಾಷ್ಟ್ರದ ಒಟ್ಟು ಆಹಾರ ಉತ್ಪಾದನೆಯಲ್ಲಿ ಈ ರಾಜ್ಯದ ಪಾಲು ಸೇ 7 ಈ ವಿಚಾರದಲ್ಲಿ ರಾಜ್ಯದ್ದು 4ನೆಯ ಸ್ಥಾನ. ಇಲ್ಲಿಯ ವಾಣಿಜ್ಯ ಬೆಳೆಗಳಲ್ಲಿ ಮುಖ್ಯವಾದವು. ಸೆಣಬು. ಚಹ ಮತ್ತು ವೀಳೆಯದೆಲೆ, ಭಾರತದ ಒಟ್ಟು ಸಣಬು ಉತ್ಪಾದನೆಯಲ್ಲಿ ಸೇ 50ರಷ್ಟು ಇಲ್ಲಿ ಬೆಳೆಯುತ್ತದೆ. ಚಹ ಪ್ರಮುಖ ಪ್ಲಾಂಟೇಷನ್ ಬೆಳೆ. ಅಸ್ಸಾಮನ್ನು ಬಿಟ್ಟರೆ ಈ ರಾಜ್ಯವೇ ಅತ್ಯಂತ ಹೆಚ್ಚು ಚಹ ಬೆಳೆಯುವ ರಾಜ್ಯ. ಅತ್ಯಂತ ರುಚಿಕರ ಹಿಮಾಲಯದ ಚಹ ಇಲ್ಲಿಯದು. ಪರ್ವತ ಶ್ರೇಣಿಗಳ ಇಳುಕಲುಗಳಲ್ಲಿ ಚಹ ತೋಟಗಳು ಸಮೃದ್ಧವಾಗಿವೆ. ಮಗ್ಗಲಲ್ಲಿಯೇ ಚಹ ಕಾರ್ಖಾನೆಗಳುಂಟು ಸಂಸ್ಕರಣ ಹೊಂದಿದ ಕಪ್ಪು ಚಹ ಪುಡಿಯನ್ನು ಕಲ್ಕತ್ತೆಯ ಮಾರುಕಟ್ಟೆಗೆ ಸಾಗಿಸುತ್ತಾರೆ. ಇಲ್ಲಿಯ ಸೆಣಬು ಮತ್ತು ಚಹ ಭಾರತದ ವಿದೇಶಿ ವಿನಿಮಯ ಸಂಪಾದನೆಯ ಸರಕುಗಳು, ರಾಜ್ಯದಲ್ಲಿ ಸಾಗುವಳಿಯಾಗುತ್ತಿರುವ ಪ್ರಮುಖ ಜಮೀನಿನ ಸೇ 2ರಷ್ಟು ಪ್ರದೇಶದಲ್ಲಿ ಎಣ್ಣೆ ಬೀಜಗಳನ್ನು ಬೆಳೆಯುತ್ತಾರೆ. ರಾಜ್ಯದ ಅಗತ್ಯವನ್ನು ಇಲ್ಲಿಯ ಬೆಳೆ ಭಾಗಶಃ ಪೂರೈಸುತ್ತದೆ. ಎಣ್ಣೆ ಬೀಜಗಳಲ್ಲಿ ಸಾಸುವೆ ಪ್ರಮುಖವಾದ್ದು. ಬಂಗಾಲದಲ್ಲಿ ಅಡುಗೆಗೆ ಸಾಸುವೆ ಎಣ್ಣೆಯನ್ನೇ ಹೆಚ್ಚಾಗಿ ಉಪಪ್ರಮುಖವಾದ್ದು. ಬಂಗಾಲದಲ್ಲಿ ಅಡುಗೆಗೆ ಸಾಸುವೆ ಎಣ್ಣೆಯನ್ನೇ ಹೆಚ್ಚಾಗಿ ಉಪಯೋಗಿಸುತ್ತಾರೆ. ಅಲ್ಲದೆ ಈ ಎಣ್ಣೆಯನ್ನು ಮೈಗೂ ತಿಕ್ಕಿಕೊಳ್ಳಲು ಬಳಸುತ್ತಾರೆ. ಹತ್ತಿ, ತಂಬಾಕು ಮತ್ತು ಕಬ್ಬು ಇತರ ಮುಖ್ಯ ಬೆಳೆಗಳು, ಡಾರ್ಜಿಲಿಂಣ್ ಶ್ರೇಣಿಗಳಲ್ಲಿ ಸೇಬು ಮೊದಲಾದ ಹಣ್ಣುಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಇವುಗಳ ಬೆಳೆಯಿಂದ ಸುತ್ತಣ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಸಹಾಯವಾಗುವ ನಿರೀಕ್ಷೆ ಇದೆ. ಗ್ರಾಮಾಂತರ ಪ್ರದೇಶಗಳಲ್ಲಿ ಬಾಳೆ, ಪರಂಗಿ, ಮಾವು, ಹಲಸು, ಅನಾನಸುಗಳನ್ನು ಬೆಳೆಯುತ್ತಾರೆ. 2002-2003 ರ ಸಾಲಿನಲ್ಲಿ 14,389.2 ಸಾವಿರ ಟನ್ನುಗಳ ಬತ್ತವನ್ನು 887.4 ಸಾವಿರ ಟನ್ನುಗಳ ಗೋಧಿಯನ್ನೂ 167.9 ಸಾವಿರ ಟನ್ನುಗಳ ದ್ವಿದಳ ಧಾನ್ಯಗಳನ್ನೂ, 475.8 ಸಾವಿರ ಟನ್ನುಗಳ ತೈಲ ಬೀಜಗಳನ್ನೂ 6,902.5 ಸಾವಿರ ಟನ್ನುಗಳ ಆಲೂಗಡ್ಡೆಯನ್ನು ಬೆಳೆಯಲಾಗಿತ್ತು. 2001-02 ರ ಸಾಲಿನಲ್ಲಿ 8,505 ಸಾವಿರ ಬೇಲುಗಳ ಸೆಣಬನ್ನೂ ಬೆಳೆಯಲಾಗಿತ್ತು. ನೀರಾವರಿ ಪಶ್ಚಿಮ ಬಂಗಾಲ ಹೆಚ್ಚು ಮಳೆ ಬೀಳುವ ಪ್ರದೇಶವಾದ್ದರಿಂದ ನೀರಾವರಿಗೆ ಅಂಥ ಪ್ರಾಮುಖ್ಯವಿಲ್ಲ. ರಾಜ್ಯದ ಒಟ್ಟು ಸಾಗುವಳಿ ನೆಲದ ಶೇ 38ರಷ್ಟು ಪ್ರದೇಸ ನೀರಾವರಿಗೆ ಒಳಪಟ್ಟಿದೆ. (ಪೂರ್ಣವಾಗಿ ನೀರಾವರಿಗೆ ಒಳಪಟ್ಟಿರುವ ನೆ ಸೇ 11 : ಭಾಗಶಃ ನೀರಾವರಿ ಇರುವ ನೆಲ ಶೇ. 27) ಸರ್ಕಾರದಿಂದ ನಿಯಂತ್ರಿತವಾದ ನಾಲೆಗಳು ಮತ್ತು ಕೆರೆಗಳು ಸಹಾಯದಿಂದ ಪ್ರಮುಖ. ಗೌಣ ಹಾಗೂ ಸಾಧಾರಣ ನೀರಾವರಿ ಯೋಜನೆಗಳ ಮೂಲಕ ಸುಮಾರು ಹತ್ತು ಲಕ್ಷ ಹೆಕ್ಟೇರ್ ಜಮೀನು ಸಾಗುವಳಿಯಾಗುತ್ತದೆ. ಸ್ವಾತಂತ್ರ್ಯಾನಂತರ ಅನೇಕ ವಿವಿಧೋದ್ದೇಶ ಯೋಜನೆಗಳನ್ನು ಕಾರ್ಯಗತಗೊಳಿಸಲಾಗಿದೆ. ಮುಖ್ಯವಾದವು ದಾಮೋದರ ಕಣೆವೆ ಹಾಗೂ ಮಯೂರಾಕ್ಷಿ ಯೋಜನೆಗಳು ಖಂಡೆಲ್ ಶಾಖವಿದ್ಯುತ್ ಕೇಂದ್ರ ಹಾಗೂ ದುರ್ಗಾಪುರ ವಿದ್ಯುತ್ ಕೇಂದ್ರ ಇವೆ. ಜಾನುವಾರು ಸಂಪತ್ತು ಇಡೀ ರಾಷ್ಟ್ರದ ಜಾನುವಾರುಗಳಲ್ಲಿ ಸೇ 56ರಷ್ಟು ಇಲ್ಲಿವೆ. ಜಾನುವಾರು ಸಾಂದ್ರತೆ ಕಿಲೋ ಮೀಟರಿಗೆ 200, ಹೈನಿನ ಹಸು ಎಮ್ಮೆಗಳು ಕಲ್ಕತ್ತ ನಗರದ ಸುತ್ತ ಸಾಂದ್ರಿಕೃತವಾಗಿವೆ. ಕ್ಷೀರೋತ್ಪಾದನಾ ಕೈಗಾರಿಕೆಯೊಂದಿಗೆ ಉಪ ಉತ್ಪಾದನೆಯಾಗಿ ಧರ್ಮ ಕೈಗಾರಿಕೆ ಅಭಿವೃದ್ಧಿಗೊಳ್ಳುತ್ತಿದೆ. ಸರ್ಕಾರ ಅನೇಕ ರೇಷ್ಮೆ ಫಾರಂಗಳನ್ನು ಸ್ಥಾಪಿಸಿದೆ. ಜೇನು ಸಾಕುವುದಕ್ಕೂ ಪ್ರೋತ್ಸಾಹವಿದೆ. ಕೋಳಿ ಮೊಟ್ಟೆಗಳ ಉತ್ಪಾದನೆಯಲ್ಲೂ ಈ ರಾಜ್ಯ ಅಗ್ರಸ್ಥಾನದಲ್ಲಿದೆ. ಮತ್ಸ್ಯೋದ್ಯಮ ಬಂಗಾಲಿಗಳ ಆಹಾರದಲ್ಲಿ ಮೀನೂ ಪ್ರಮುಖವಾದ್ದು ಸಿಹಿನೀರಿನ ಮೀನುಗಾರಿಕೆಯಲ್ಲಿ ಈ ರಾಜ್ಯಕ್ಕೆ ಭಾರತದಲ್ಲಿ ಅಗ್ರಸ್ಥಾನ. ಸುಂದರಬನಗಳಲ್ಲಿ ಮತ್ತು ನದಿಗಳಿವೆ. ಪ್ರದೇಶದಲ್ಲಿ ಗಣನೀಯವಾಗಿ ಮೀನು ಬೆಳೆ ತೆಗೆಯಲಾಗುತ್ತದೆ. ಜೊತೆಗೆ ಕರಾವಳಿ ಮೀನು ಉತ್ಪಾದನೆಯೂ ಬೆಳೆದಿವೆ. ಆಳ ಕಡಲು ಮೀನುಗಾರಿಕೆಯನ್ನೂ ಅಭಿವೃದ್ಧಿಪಡಿಸಲಾಗುತ್ತಿದೆ. ಆದರೂ ರಾಜ್ಯದ ಬೇಡಿಕೆಯನ್ನು ಪೂರೈಸುವಷ್ಟು ಮೀನು ಉತ್ಪಾದನೆಯಾಗುತ್ತಿಲ್ಲ ಸಾಮಾನ್ಯವಾಗಿ ಮನೆಮನೆಯಲ್ಲೂ ಮೀನುಕೊಳಗಳಿರುತ್ತವೆ. ಮೀನುಸಾಕಣೆ ಕೇಂದ್ರಗಳು ವಾಣಿಜ್ಯಮಟ್ಟದಲ್ಲಿ ಅಭಿವೃದ್ಧಿಗೊಳ್ಳುತ್ತಿವೆ. ಖನಿಜ ಬಿಹಾರವನ್ನು ಬಿಟ್ಟರೆ ಪಶ್ಚಿಮ ಬಂಗಾಲವೇ ಅತ್ಯಂತ ಹೆಚ್ಚು ಖನಿಜಗಳನ್ನು ಉತ್ಪಾದಿಸುವ ರಾಜ್ಯ. ರಾಷ್ಟ್ರದಲ್ಲಿ ಉತ್ಪಾದನೆಯಾಗುವ ಖನಿಜಗಳಲ್ಲಿ ಐದನೆಯ ಒಂದು ಭಾಗ ಪಶ್ಚಿಮ ಬಂಗಾಲದಲ್ಲಾಗುತ್ತದೆ. ಕಲ್ಲಿದ್ದಲು ಪ್ರಮುಖ ಖನಿಜ. ರಾಜ್ಯದ ಒಟ್ಟು ಖನಿಜೋತ್ಪಾದನೆಯ ಶೇ 99 ಭಾಗ ಕಲ್ಲಿದ್ದಲು, ಭಾರತದ ಒಟ್ಟು ಕಲ್ಲಿದ್ದಲು ಉತ್ಪಾದನೆಯ ಶೇ 30ರಷ್ಟು ಇಲ್ಲಿಯದು. ಜೇಡಿಮಣ್ಣು ಇನ್ನೊಂದು ಪ್ರಮುಖ ಖನಿಜ. ಡೊಲಮೈಟ್ ವಿಪುಲವಾಗಿ ದೊರೆಯುತ್ತದೆ. ಕ್ವಾಟ್ರ್ಸ್ ಮತ್ತು ಟಂಗ್‍ಸ್ಟನ್‍ಗಳೂ ದೊರೆಯುತ್ತವೆ. ಮಿಡ್ನಾಪುರದ ಬಳಿ ಮ್ಯಾಂಗನೀಸ್ ಅದುರು ನಿಕ್ಷೇಪಗಳಿವೆ. ಕಿÁರ್ಜಿಲಿಂಣ್ ಬಳಿ ಸ್ವಲ್ಪ ಪ್ರಮಾಣದಲ್ಲಿ ಆರ್ಸೆನಿಕ್ ದೊರೆಯುತ್ತದೆ. ರಾಣಿಗಂಜ್ ಕಲ್ಲಿದ್ದಲ ಗಣಿಯ ಸಮೀಪದಲ್ಲಿ ಕಬ್ಬಿಣದ ಅದುರು ನಿಕ್ಷೇಪಗಳಿವೆ. ಕೈಗಾರಿಕೆ ಪಶ್ಚಿಮ ಬಂಗಾಲ ಮೊದಲಿನಿಂದಲೂ ಕೈಗಾರಿಕಾ ಬೆಳವಣಿಗೆಯ ಮುಂಚೂಣಿಯಲ್ಲಿದೆ. ಹಿಂದಿನ ಬಂಗಾಲದ ವಿಭಜನೆಯಾದ ಮೇಲೆ ಇಲ್ಲಿ ಆರ್ಥಿಕ ಅವ್ಯವಸ್ಥೆ ಉಂಟಾಗಿ ಎರಡು ಪ್ರಮುಖ ಉದ್ಯಮಗಳಿಗೆ ಧಕ್ಕೆಯಾಯಿತು. ಇಲ್ಲಿ ಸೆಣಬು ಕೈಗಾರಿಕೆ ಪೂರ್ವ ಪಾಕಿಸ್ತಾನದಲ್ಲಿ ಬೆಳೆಯುವ ಕಚ್ಚಾ ಸಣಬನ್ನೂ ಅವಲಂಬಿಸಿತ್ತು. ಉತ್ತರದ ಪ್ಲಾಂಟೇಷನ್‍ಗಳಿಂದ ಚಹವನ್ನು ಪೂರ್ವ ಪಾಕಿಸ್ತಾನದ ಮೂಲಕ ಹಾದುಹೋಗುವ ರೈಲು ಹಾಗೂ ಜಲಮಾರ್ಗಗಳ ಮೂಲಕ ಸಾಗಿಸಲಾಗುತ್ತಿತ್ತು. ಈ ಅಸ್ತವ್ಯಸ್ತತೆಯನ್ನು ನಿವಾರಿಸಿಕೊಂಡು ಹೊಸ ಉದ್ಯಮಗಳನ್ನು ಅಭಿವೃದ್ಧಿಗೊಳಿಸುವುದು ರಾಜ್ಯದ ಪ್ರಮುಖ ಆರ್ಥಿಕ ಗುರಿಯಾಯಿತು. ಸಣಬು ಮತ್ತು ಚಹ ಕೈಗಾರಿಕೆಗಳು ರಾಜ್ಯದಲ್ಲಿ ಪ್ರಮುಖವಾಗಿವೆ. ಕಾಗದ ಮತ್ತು ಉಕ್ಕು ಕಾರ್ಖಾನೆಗಳನ್ನು ಆರಂಭಿಸಿದ ಪ್ರಥಮ ರಾಜ್ಯ ಇದು. ರಾಣಿಗಂಜ್ ಬಳಿ ಕಲ್ಲಿದ್ದಲ ಪತ್ತೆಯಾದ್ದು ಭಾರತದಲ್ಲಿ ಕೈಗಾರಿಕಾ ಕ್ರಾಂತಿಗೆ ಕಾರಣವಾಯಿತು. ರಾಜ್ಯದಲ್ಲಿ ಎರಡು ಉಕ್ಕು ಸ್ಥಾವರಗಳಿವೆ. ದುರ್ಗಾಪುರದ ಕಾರ್ಖಾನೆ ಸರ್ಕಾರಿ ವಲಯದ್ದ; ಬರ್ನ್‍ಪುರದ ಕಾರ್ಖಾನೆ ಖಾಸಗಿ ವಲಯದ್ದು, ರೈಲ್ವೆ ಎಂಜಿನ್, ಕೇಬಲ್, ರಸಗೊಬ್ಬರ ಮತ್ತು ನೌಕಾ ನಿರ್ಮಾಣ ಇವು ಇತರ ಕೆಲವು ದೊಡ್ಡ ಕೈಗಾರಿಕೆಗಳು. ಹಾಲ್ದಿಯ ಬಳಿ ಭಾರತೀಯ ರಸಗೊಬ್ಬರ ಕಂಪನಿ ತನ್ನ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದೆ. ಅಲ್ಲದೆ ಇಲ್ಲಿ ತೈಲಸಂಸ್ಕರಣ ಕೇಂದ್ರ ಹಾಗೂ ಬಂದರು ನಿರ್ಮಾಣವಾಗುತ್ತವೆ. ಹೂಗ್ಲಿ ಜಲಾನಯನದ ಸುತ್ತ ಅನೇಕ ಹತ್ತಿ ಗಿರಣಿಗಳಿವೆ. ಕಲ್ಕತ್ತ ನಗರದಲ್ಲಿ ಪ್ರಮುಖ ಬಟ್ಟೆ ಗಿರಣಿಗಳಿವೆ. ಇಲ್ಲಿಯ ಇತರ ಕೆಲವು ಉದ್ಯಮಗಳೆಂದರೆ ಮೋಟಾರು ವಾಹನ, ಸೈಕಲ್, ಹಡಗು ಮತ್ತು ಮೋಟಾರು ದೋಣಿಗಳ ತಯಾರಿಕೆ, ಲಘು ಎಂಜಿನಿಯರಿಂಗ್, ಅಲ್ಯೂಮಿನಿಯಮ್, ಕಾಗದ, ರಾಸಾಯನಿಕ, ಪಾದರಕ್ಷೆ, ಸಿಮೆಂಟ್, ಸ್ಕೂಟರ್, ವಿದ್ಯುದುಪಕರಣಗಳು ಮತ್ತು ಮಿನಿ ಉಕ್ಕು ಸ್ಥಾವರಗಳು ಹೊಸ ಕೈಗಾರಿಕೆಗಳು. ಸಾರಿಗೆ 1947ರ ವಿಭಜನೆಯ ಫಲವಾಗಿ ಪೂರ್ವ ಪಾಕಿಸ್ತಾನದ ಮೂಲಕ ಸಾಗುತ್ತಿದ್ದ ರಸ್ತೆ ಮಾರ್ಗಗಳೆಲ್ಲವೂ ಕಡಿದುಹೋಗಿ. ಉತ್ತರ ಬಂಗಾಲ ಮತ್ತು ಅಸ್ಸಾಮಿಗೆ ರೈಲು ಹಾಗೂ ಜಲಸಾರಿಗೆಗಳನ್ನು ಕಲ್ಪಿಸುವ ಅನಿವಾರ್ಯ ಅಗತ್ಯ ಉಂಟಾಯಿತು. 1968ರ ಹೊತ್ತಿಗೆ ಸುವ್ಯವಸ್ಥಿತ ಸಾರಿಗೆ ಸೌಕರ್ಯಗಳನ್ನು ಮಾಡಲಾಯಿತು. 1974ರಲ್ಲಿ ಇದ್ದ ರಸ್ತೆಗಳ ಒಟ್ಟು ಉದ್ದ 52,896 ಕಿಮೀ. ಪಶ್ಚಿಮ ಬಂಗಾಲದ ಉತ್ತರಭಾಗಕ್ಕೆ ಹಾಗೂ ಅಸ್ಸಾಮಿಗೆ ವಿಮಾನ ಸಾರಿಗೆ ಸೌಲಭ್ಯ ಚೆನ್ನಾಗಿದೆ. ಕಲ್ಕತ್ತ ಪ್ರಮುಖ ಅಂತರರಾಷ್ಟ್ರೀಯ ವಿಮಾನ ಮಾರ್ಗಗಳ ಕೇಂದ್ರ. ಕಲ್ಕತ್ತದ ಬಂದರು ಭಾರತದ ಸುಮಾರು ಸೇ. 20ರಷ್ಟು ವಾಣಿಜ್ಯ ವ್ಯವಹಾರಗಳನ್ನು ನಿರ್ವಹಿಸುತ್ತದೆ. 1999 ಮಾರ್ಚ್ 31ರ ಅಂಕಿ ಅಂಶದ ಪ್ರಕಾರ 1715 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಸೇರಿ ಒಟ್ಟು 90,184 ಕಿ.ಮೀ ರಸ್ತೆಯಿತ್ತು. ರಾಜ್ಯ ಹೆದ್ದಾರಿ 3354 ಕಿ.ಮೀ. ಜಿಲ್ಲಾ ರಸ್ತೆಗಳು 41,278 ಕಿ.ಮೀ. ಇತ್ತು. 2002-03ರಲ್ಲಿ 3696.86 ಕಿ.ಮೀ. ರೈಲು ಮಾರ್ಗವಿತ್ತು. ಸಾಂಸ್ಕೃತಿಕ ಜೀವನ ಬಂಗಾಲಿಗಳು ಬುದ್ಧಿಜೀವಿಗಳು, ಕಲಾಪ್ರೇಮಿಗಳು ಎಂದು ಹೆಸರಾಗಿದ್ದಾರೆ. ಸಾಹಿತ್ಯ, ಕಲೆ, ಸಂಗೀತ ಹಾಗೂ ನಾಟಕಗಳಿಗೆ ಪ್ರೋತ್ಸಾಹ ನೀಡುತ್ತಾರೆ. 19ನೆಯ ಶತಮಾನದ ಆರಂಭದಿಂದಲೇ ಪಾಶ್ಚಾತ್ಯ ಸಂಪರ್ಕದಿಂದಾಗಿ ಬಂಗಾಲಿ ಸಾಹಿತ್ಯದಲ್ಲಿ ಅತ್ಯುತ್ತಮ ಸಾಹಿತ್ಯ ಸೃಷ್ಟಿಯಾಯಿತು. ಇದು ಭಾರತದ ಇತರ ಭಾಷಾ ಸಾಹಿತ್ಯಗಳ ಮೇಲೆ ಪ್ರಭಾವ ಬೀರಿದೆ. ನೊಬೆಲ್ ಪಾರಿತೋಷಕ ಪಡೆದ ರವೀಂದ್ರನಾಥ ಠಾಕೂರರಲ್ಲದೆ ಬಂಕಿಮಚಂದ್ರ, ಶರಚ್ಚಂದ್ರ ಮುಂತಾದ ಯುಗಪ್ರವರ್ತಕ ಸಾಹಿತಿಗಳು ಬಂಗಾಲಿಯಲ್ಲಿ ಕೃತಿರಚನೆ ಮಾಡಿದ್ದಾರೆ. ಬಂಗಾಲಿ ರಂಗಭೂಮಿ ಜನಪ್ರಿಯವಾಗಿದೆ. ವೃತ್ತಿ ಹಾಗೂ ಹವ್ಯಾಸೀ ಎರಡೂ ರಂಗಭೂಮಿಗಳು ಪ್ರಚಲಿತವಾಗಿವೆ. ಇಲ್ಲಿ ಸಾಮಾನ್ಯವಾಗಿ ಪೌರಾಣಿಕ ಹಾಗೂ ಐತಿಹಾಸಿಕ ವಸ್ತುಗಳೇ ಪ್ರಧಾನವಾದರೂ ಇವು ಇತ್ತೀಚೆಗೆ ಆಧುನಿಕ ವಸ್ತುಗಳಿಂದಲೂ ಆಕರ್ಷಿತವಾಗಿವೆ. ಗ್ರಾಮ ಕವಿಗಳ ನಡುವೆ ನಡೆಯುವ ಆಶು ಸಂಗೀತ ಕಾವ್ಯ ಸ್ಪರ್ಧೆ ಜನಪ್ರಿಯವಾಗಿದೆ. ಇನ್ನೊಂದು ಗ್ರಾಮಾಂತರ ಮನೋರಂಜನೆ ಎಂದರೆ ಪರಂಪರಾಗತವಾಗಿ ಬಂದ ಕಥಾಕೂಟ ಎಂಬ ಹರಿಕಥೆ. ಜನರಿಗೆ ಸಾರ್ವತ್ರಿಕವಾಗಿ ಮನೋರಂಜನೆ ನೀಡುವ ಪ್ರಮುಖ ಉದ್ಯಮ ಚಲನಚಿತ್ರ. ಬಂಗಾಲಿ ಚಿತ್ರಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿ ಗಳಿಸಿವೆ. ಅವುಗಳಲ್ಲಿಯ ಭಾರತೀಯ ಸಮಾಜ ನಿರೂಪಣೆಯ ಕುಶಲತೆ ಮೆಚ್ಚುಗೆ ಗಳಿಸಿದೆ. ನಿರ್ದೇಶಕ ಸತ್ಯಜಿತ್‍ರಾಯ್‍ರ ಕೃತಿಗಳು ಗಮನಾರ್ಹ. ಸಾಂಪ್ರದಾಯಿಕ ಸಂಗೀತದ ರೂಪಗಳು ಭಕ್ತಿ ಹಾಗೂ ಸಾಂಸ್ಕೃತಿಕ ಗೀತೆಗಳಲ್ಲಿ ವಿಕಾಸಗೊಂಡಿವೆ. ರವೀಂದ್ರನಾಥ ಠಾಕೂರರು ರಚಿಸಿ ರಾಗ ಸಂಯೋಜಿಸಿದ ಗೀತೆಗಳು ರವೀಂದ್ರ ಸಂಗೀತವೆಂದು ಹೆಸರಾಗಿವೆ. ಶುದ್ಧ ಭಾರತೀಯ ಸಂಗೀತ ಹಾಗೂ ಪರಂಪರಾಗತ ಜನಪದ ಸಂಗೀತ ಮೂಲಗಳಿಂದ ಹಕ್ಕಿ ರಾಗ ಸಂಯೋಜಿಸಿರುವ ರವೀಂದ್ರ ಸಂಗೀತ ಬಂಗಾಲಿ ಸಾಂಸ್ಕøತಿಕ ಜೀವನದ ಮೇಲೆ ಪ್ರಬಲ ಪ್ರಭಾವಬೀರಿದೆ. ಜೇಡಿಮಣ್ಣಿನ ಹಾಗೂ ಕೆಂಪುಮಣ್ಣಿನ ಮೂರ್ತಿಗಳು ಹಾಗೂ ಅಲಂಕಾರಿಕ ಚಿತ್ರಕಲೆ ಇವು ಜನಪ್ರಿಯವಾಗಿವೆ. ಕಲ್ಕತ್ತದ ಇಂಡಿಯನ್ ಅಸೋಸಿಯೇಷನ್ ಫಾರ್ ದಿ ಕಲ್ಟಿವೇಶನ್ ಆಫ್ ಸೈನ್ಸ್, ಬೋಸ್ ಸಂಶೋಧನ ಕೇಂದ್ರ ಮತ್ತು ಕಲ್ಕತ್ತ ವಿಶ್ವವಿದ್ಯಾಲಯದ ವಿಜ್ಞಾನ ಪ್ರಯೋಗಾಲಯಗಳು ವಿಜ್ಞಾನಕ್ಕೆ ಗಮನಾರ್ಹ ಕೊಡುಗೆ ನೀಡಿವೆ. ಅತ್ಯಂತ ಪ್ರಸಿದ್ಧ ಇತಿಹಾಸ ಸಂಶೋಧನ ಸಂಸ್ಥೆಯಾದ ಏಷ್ಯಾಟಿಕ್ ಸೊಸೈಟಿ ಆಫ್ ಬೆಂಗಾಲ್ ಇಲ್ಲಿದೆ. ಶಾಂತಿನಿಕೇತನದಲ್ಲಿ ರವೀಂದ್ರನಾಥ ಠಾಕೂರರು ಸ್ಥಾಪಿಸಿದ ವಿಶ್ವಭಾರತಿ ವಿಶ್ವವಿದ್ಯಾಲಯ ಭಾರತದ ಪುರಾತತ್ವ ಹಾಗೂ ಅಂತರರಾಷ್ಟ್ರೀಯ ಸಾಂಸ್ಕøತಿಕ ಸಂಬಂಧಗಳನ್ನು ಅಧ್ಯಯನ ಮಾಡುವ ಜಗತ್ಪ್ರಸಿದ್ಧ ಕೇಂದ್ರ. ಈ ರಾಜ್ಯದಿಂದ ಹೊರಡುವ ದೈನಿಕ ಪತ್ರಿಕೆಗಳಲ್ಲಿ ಪ್ರಮುಖವಾದವು ಅಮೃತಬಜಾರ್ ಪತ್ರಿಕೆ. ಹಿಂದೂಸ್ತಾನ್ ಸ್ಟ್ಯಾಂಡರ್ಡ್ ಮತ್ತು ಸ್ಟೇಟ್ಸ್‍ಮನ್ (ಇಂಗ್ಲಿಷ್) ಆನಂದ ಬಜಾರ್ ಪತ್ರಿಕೆ ಮತ್ತು ಜುಗಾಂತರ (ಬಂಗಾಲಿ); ಹಾಗೂ ಸನ್ಮಾರ್ಗ (ಹಿಂದಿ). ಇತಿಹಾಸ ಪ್ರಾಗಿತಿಹಾಸ ಸಂಸ್ಕøತಿಗಳು ಪಶ್ಚಿಮ ಬಂಗಾಲದ ಇತಿಹಾಸಪೂರ್ವ ಸಂಸ್ಕøತಿಗಳು ಅಲ್ಲಿಯ ಭೌಗೋಲಿಕ ವೈವಿಧ್ಯಕ್ಕೆ ಅನುಗುಣವಾಗಿ ವೈವಿಧ್ಯಮಯವಾಗಿವೆ. ನೈಋತ್ಯ ಭಾಗದ ಪ್ರಾಚೀನ ಮೆಕ್ಕಲು ಮಣ್ಣಿನ ಪ್ರದೇಶ ಛೋಟಾನಾಗಪುರ ಪ್ರಸ್ಥಭೂಮಿಯ ಭಾಗವಾಗಿದ್ದು ಪ್ರಾಚೀನತಮ ಶಿಲಾಪದರಗಳಿಂದ ಆವೃತವಾಗಿದೆ. ಈ ಪ್ರದೇಶದಲ್ಲಿ ಪ್ಲೀಸ್ಟೊಸೀನ್ ಯುಗದ ನದಿ ಮಟ್ಟಗಳಲ್ಲಿ ಶಿಲಾಯುಗ ಸಂಸ್ಕøತಿಗಳಿಗೆ ಅವಶ್ಯಕವಾಗಿದ್ದ ಕಲ್ಲುಗಳು ಇವೆ. ಆ ಪ್ರದೇಶದಲ್ಲಿ ಈವರೆಗೆ ಹೆಚ್ಚಿನ ಭೂಶೋಧನೆಗಳು ನಡೆದಿಲ್ಲವಾದರೂ ಮಧ್ಯಶಿಲಾಯುಗ ಮತ್ತು ಅನಂತರಕಾಲದ ಅವಶೇಷಗಳು ಅಲ್ಲಲ್ಲಿ ಕಂಡುಬಂದಿದೆ. ಶಿಲಾಯುಗದ ಸಂಸ್ಕøತಿಗಳ ದೃಷ್ಟಿಯಿಂದ ಮುಖ್ಯವಾದ ಉತ್ತರ ಭಾಗದಲ್ಲೂ ಪ್ರಾಚೀನ ಶಿಲಾಪದರಗಳಿವೆ. ಅಲ್ಲಿ ಕೆಲವು ಮುಖ್ಯ ಶಿಲಾಯುಗ ನೆಲೆಗಳು ಕಂಡುಬಂದಿವೆ. ಬಂಕುರಾ, ಪುರುಲಿಯಾ, ಬೀರ್‍ಭೂಮ್ ಮತ್ತು ಮಿಡ್ನಾಪುರ ಜಿಲ್ಲೆಗಳಲ್ಲಿ ಆದಿ ಶಿಲಾಯುಗದ ವಿವಿಧ ಹಂತಗಳಿಗೆ ಸೇರುವ ಕೈಗೊಡಲಿ ಮತ್ತು ಕ್ಲೀವರ್ ಕೊಡಲಿ, ಕ್ಲಾಕ್ಟೋನಿಯನ್ ಮತ್ತು ಲೆವಾಲ್ವಾಸಿಯನ್ ರೀತಿಯ ಚಕ್ಕೆ ಕಲ್ಲಿನ ಆಯುಧಗಳು ಸಿಕ್ಕಿವೆ. ಆದಿಮಾನವ ಭಾರತದ ಇತರ ಪ್ರದೇಶಗಳಲ್ಲಿದ್ದಂತೆ ಅಲ್ಲೂ ವಾಸಮಾಡುತ್ತಿದ್ದನೆಂದು ಅದರಿಂದ ತಿಳಿದುಬರುತ್ತದೆ. ಅನಂತರ ಕಾಲದ ಮಧ್ಯಶಿಲಾಯುಗ ಸಂಸ್ಕøತಿಗೆ ಸೇರುವ, ಚಕ್ಕೆ ಕಲ್ಲಿನ ಆಯುಧಗಳು ಬೀರ್‍ಭೂಮ್ ಮತ್ತು 24 ಪರಗಣ ಜಿಲ್ಲೆಯ ಕೆಲವು ನೆಲೆಗಳಲ್ಲಿ ಕಂಡುಬಂದಿವೆ. ಅದಿ ಮತ್ತು ಮಧ್ಯಶಿಲಾಯುಗಗಳ ಅವಶೇಷಗಳು ಇಲ್ಲಿಯ ನದಿ ಪದರಗಳಲ್ಲಿ ಅನಂತರಕಾಲದ ಅವಶೇಷಗಳನ್ನೊಳಗೊಂಡಿರುವ ಪದರಗಳ ಕೆಳಗೆ ದೊರಕಿರುವುದರಿಂದಲೂ ಭಾರತದ ಇತರ ಪ್ರದೇಶಗಳಲ್ಲಿ ಅಂಥ ಅವಶೇಷಗಳೊಂದಿಗೆ ಸಿಕ್ಕಿರುವ ಪ್ರಾಣಿಗಳ ಪಳೆಯುಳಿಕೆಗಳ ಅಧ್ಯಯನದಿಂದಲೂ ಅಂಥ ಅವಶೇಷಗಳನ್ನು ಅನುಕ್ರಮವಾಗಿ ಮಧ್ಯ ಮತ್ತು ಅಂತ್ಯ ಪ್ಲೀಸ್ಟೋಸೀನ್ ಕಾಲಕ್ಕೆ ನಿರ್ದೇಶಿಸಬಹುದು. ಪಶ್ಚಿಮ ಬಂಗಾಲದ ಶಿಲಾಯುಗಮಾನವನ ಪರಿಸರ ಮತ್ತು ಸಾಂಸ್ಕøತಿಕ ಸಿದ್ಧತೆ ಇವುಗಳ ದೃಷ್ಟಿಯಿಂದ ಇವರ ಜೀವನ ರೀತಿನೀತಿಗಳು ಆಗಿನ ಭಾರತದ ಇತರ ಪ್ರದೇಶಗಳಲ್ಲಿ ವಾಸಿಸುತ್ತಿದ್ದವರನ್ನು ಹೋಲುತ್ತಿದ್ದುವೆಂದು ನಿಸ್ಸಂದೇಹವಾಗಿ ಹೇಳಬಹುದು. ಹೊಲೊಸೀನ್ ಯುಗದ ಪ್ರಾರಂಭದ ಕಾಲಕ್ಕೆ ಸೇರುವ ಅಂತ್ಯಶಿಲಾಯುಗ ಅಥವಾ ಸೂಕ್ಷ್ಮಶಿಲಾಯುಧ ಸಂಸ್ಕøತಿಯ ಅವಶೇಷಗಳ ಬರ್ದ್‍ವಾನ್ ಜಿಲ್ಲೆಯಲ್ಲಿ ದಾಮೋದರ ನದಿ ಕಣಿವೆಯ ಕೆಲವೆಡೆಗಳಲ್ಲಿ ಕಂಡುಬಂದಿವೆ. ಅವುಗಳಲ್ಲಿ ಪ್ರಮುಖ ನೆಲೆ ದುರ್ಗಾಪುರದ ಬಳಿ ಇರುವ ಬೀರ್‍ಭಾನ್‍ಪುರ. 1937ರಲ್ಲಿ ಎನ್.ಜೆ. ನುಜುಲ್‍ದಾರ್ ಅಲ್ಲಿ ಸೂಕ್ಷ್ಮಶಿಲಾಯುಧಗಳನ್ನು ಪತ್ತೆ ಹಚ್ಚಿದರು. 1954 ಮತ್ತು 1957ರಲ್ಲಿ ಬಿ.ಬಿ.ಲಾಲ್ ಅಲ್ಲಿ ಸಂಶೋಧನೆಗಳನ್ನು ನಡೆಸಿ ಆ ಸಂಸ್ಕøತಿಯ ವಿವರಗಳನ್ನು ದೊರಕಿಸಿದ್ದಾರೆ. ಪ್ರಾಚೀನ ನದಿ ಮಟ್ಟದ ಮೇಲೆ ಹಳ್ಳದಿಬ್ಬಗಳಿಂದ ಕೂಡಿದ ಪ್ರದೇಶದಲ್ಲಿ ವಾಸಿಸುತ್ತಿದ್ದ ಮಾನವರು ಕೊರಲಗು ಫಲಕಗಳನ್ನೂ (ಬ್ಲೇಡ್ಸ್) ಮುಕ್ಕೋಣಾಕಾರದ, ಅರ್ಧಚಂದ್ರಾಕೃತಿಯ ಮತ್ತು ಚೂಪಾದ ತುದಿಗಳಿದ್ದ ಆಯುಧಗಳನ್ನೂ ಹೆರೆಯುವ ಮತ್ತು ಕೊರೆಯುವ ಸಲಕರಣೆಗಳನ್ನೂ ಬಳಸುತ್ತಿದ್ದರು. ಅವರ ಗುಡಿಸಿಲುಗಳ ಆಕಾರ, ಆಗಿನ ವಾತಾವರಣದ ಪರಿಸ್ಥಿತಿ ಇವುಗಳ ಬಗ್ಗೆಯೂ ಕೆಲವು ಮಾಹಿತಿಗಳು ದೊರಕಿವೆ. ಸಂತಾಲ್ ಪರಗಣ, ಬಂಕುರಾ ಮತ್ತು ಬರ್ದ್‍ವಾನ್ ಜಿಲ್ಲೆಯ ಹಲವೆಡೆಗಳಲ್ಲಿ ಈ ಸಂಸ್ಕøತಿಯ ನೆಲೆಗಳು ಕಂಡುಬಂದಿವೆ. ಈ ಸಂಸ್ಕøತಿಯ ಕಾಲವನ್ನು ಕ್ರಿ.ಪೂ. ಸುಮಾರು 4000-1500 ಎಂದು ನಿರ್ಣಯಿಸಲಾಗಿದೆ. ನವಶಿಲಾಯುಗ-ತಾಮ್ರಶಿಲಾಯುಗ ಸಂಸ್ಕøತಿಗಳು ಪಶ್ಚಿಮ ಬಂಗಾಲದ ಬಂಕುರಾ, ಬೀರ್‍ಭೂಮ್, ಪುರುಲಿಯಾ ಮತ್ತು ಮಿಡ್ನಾಪುರ ಜಿಲ್ಲೆಗಳಲ್ಲಿ ಪ್ರಸರಿಸಿದ್ದುವು. ಅಲ್ಲಿ ಈ ಸಂಸ್ಕøತಿಗಳು ಭಾರತದ ಇತರ ಪ್ರದೇಶಗಳಲ್ಲಿ ಕಂಡುಬಂದಿರುವ ಅಂಥ ಸಂಸ್ಕøತಿಗಳಿಗಿಂತ ಸ್ವಲ್ಪ ಭಿನ್ನವಾಗಿದ್ದುವು. ಆಂಧ್ರ ಕರ್ನಾಟಕಗಳ ನವಶಿಲಾ ಯುಗ ಮತ್ತು ಪಶ್ಚಿಮ ಮಧ್ಯಭಾರತದ ತಾಮ್ರಶಿಲಾಯುಗ ಸಂಸ್ಕøತಿಗಳು ದೂರದ ಈ ಗಡಿ ಪ್ರದೇಶಕ್ಕೆ ತಲುಪುವುದರಲ್ಲಿ ಹಲವಾರು ಪ್ರಾದೇಶಿಕ ಪ್ರಭಾವಗಳಿಗೆ ಸಿಕ್ಕಿದ್ದು ಈ ಭಿನ್ನತೆಗೆ ಕಾರಣ. ಬಹುಶಃ ಅದೇ ಕಾರಣದಿಂದ ಅವು ಸ್ವಲ್ಪ ಈಚಿನ ಕಾಲಕ್ಕೆ ಸೇರುತ್ತವೆ. ಬರ್ದ್‍ವಾನ್ ಜಿಲ್ಲೆಯ ಪಾಂಡುರಾಜರ್ ಧೀಬಿಯಲ್ಲಿ ಆ ಸಂಸ್ಕøತಿಯ ಕಾಲದಲ್ಲಿ ಬತ್ತದ ಬೇಸಾಯ ಪ್ರಮುಖ ಆಹಾರೋತ್ಪಾದನ ಚಟುವಟಿಕೆಯಾಗಿದ್ದ, ಮತ್ತು ಆ ಜನರು ಚೀನ ಮತ್ತು ಆಗ್ನೇಯ ಏಷ್ಯ ಪ್ರದೇಶಗಳೊಂದಿಗೆ ಸಂಪರ್ಕ ಪಡೆದಿದ್ದ ಸಂಗತಿಗಳು ಅಲ್ಲಿ ನಡೆದ ಸಂಶೋಧನೆಗಳಿಂದ ವ್ಯಕ್ತಪಟ್ಟಿವೆ. ನಾಯಕರ ಹಿಡಿತದಲ್ಲಿದ್ದ ಸಣ್ಣ ಪಂಗಡಗಳಲ್ಲಿ ಅವರು ವಾಸಿಸುತ್ತಿದ್ದಿರಬಹುದು. ಬೀರ್‍ಭೂಮ್ ಜಿಲ್ಲೆಯ ಮಹಿಸ್‍ದಲ್, ನಾನೂರ್ ಮತ್ತು ಹರಿಯಾಪುರ, ಬಂಕುರಾ ಜಿಲ್ಲೆಯ ತುಳಸಿಪುರ ಮತ್ತು ಕೆಲವು ನೆಲೆಗಳು, ಮಿಡ್ನಾಪುರ ಪರಿಸರ-ಇವುಗಳಲ್ಲಿ ಆ ಸಂಸ್ಕøತಿಯ ಮಾಹಿತಿಗಳು ದೊರಕಿವೆ. ಇಡೀ ಪ್ರದೇಶದ ಸಾಂಸ್ಕøತಿಕ ಲಕ್ಷಣಗಳು ಮೂಲತಃ ಒಂದೇ ರೀತಿಯವಾಗಿದ್ದರೂ ಆಯುಧ ರೀತಿ ಮತ್ತು ಸಲಕರಣೆಗಳಲ್ಲಿ ಅಲ್ಲಲ್ಲಿ ಕೆಲವು ವ್ಯತ್ಯಾಸಗಳಿದ್ದವು. ಉದಾಹರಣೆಗೆ ವರ್ಣಚಿತ್ರಿತ ಅಥವಾ ಅಲಂಕಾರರಹಿತವಾದ ಕಪ್ಪು ಮತ್ತು ಕೆಂಪು ಬಣ್ಣದ ಹೊಳೆಯುವ ಕೆಂಪು ಬಣ್ಣದ ಮತ್ತು ಜಾರು ನಳಿಕೆಯ ಸುಟ್ಟ ಮಣ್ಣಿನ ಪಾತ್ರೆಗಳು, ನಯಗೊಳಿಸಿದ ಕಲ್ಲಿನ ಆಯುಧಗಳು ಮೊದಲಾದ ಸಲಕರಣೆಗಳು ಎಲ್ಲೆಡೆಗಳಲ್ಲೂ ಕಂಡುಬಂದರೂ, ಪ್ರತಿ ಪಂಗಡದ ಅನುವಂಶಿಕ ವೈವಿಧ್ಯದಿಂದಾಗಿ ಅವುಗಳ ಸಾಂಸ್ಕøತಿಕ ಜೀವನದಲ್ಲಿ ಕೆಲವು ಭಿನ್ನತೆಗಳು ಕಂಡುಬರುತ್ತವೆ. ಪಾಂಡುರಾಜರ್ ಧೀಬಿ ನೆಲೆಯಲ್ಲಿ ಈ ಜನರು ಗಟ್ಟಿಸಿದ ನೆಲಗಟ್ಟು ಮತ್ತು ಕೆಸರು ಬಳಿದ ತಡಿಕೆ ಗೋಡೆಗಳಿದ್ದ ಗುಡಿಸಿಲುಗಳಲ್ಲಿ ವಾಸಿಸುತ್ತಿದ್ದರು. ಸಗಣಿ ಮತ್ತು ಸುಣ್ಣವನ್ನು ಸಹ ತಡಿಕೆ ಗೋಡೆಗಳಿಗೆ ಲೇಪಿಸಿದ್ದುದಕ್ಕೆ ಮಾಹಿತಿಗಳಿವೆ. ಮರದ ಕಂಬಗಳ ಆಧಾರದ ಮೇಲೆ ನಿಂತಿದ್ದ ಚಾವಣೆಗೆ ಹುಲ್ಲು ಅಥವಾ ಸಣ್ಣ ಹೆಂಚುಗಳನ್ನು ಹೊದಿಸಲಾಗುತ್ತಿತ್ತು. ಮನೆಗಳಲ್ಲಿ ಅಡುಗೆ ಒಲೆಗಳ ಅವಶೇಷಗಳನ್ನು ಗುರುತಿಸಲಾಗಿದೆ. ಒಂದೇ ಕೋಣೆಯ ಗುಡಿಸಿಲುಗಳಲ್ಲಿ ವಾಸಿಸುತ್ತಿದ್ದ ಈ ಜನರು ಹಲವು ರೀತಿಯ ಮಡಕೆಕುಡಿಕೆಗಳನ್ನು ಬಳಸುತ್ತಿದ್ದರು. ಬತ್ತದ ಹೊಟ್ಟನ್ನು ಜೇಡಿಮಣ್ಣಿನೊಂದಿಗೆ ಕಲೆಸಿ ಕೈಯಿಂದ ರೂಪಿಸಿದ, ದಪ್ಪ, ಬೂದು ಬಣ್ಣದ ಇಲ್ಲವೇ ಕುಂಬಾರ ಚಕ್ರದ ಮೇಲೆ ತಯಾರಿಸಿದ, ಅಲಂಕಾರರಹಿತವಾದ ತೆಳ್ಳನೆಯ, ತಿಳಿಕೆಂಪಿನ ಮತ್ತು ಕಪ್ಪು-ಕೆಂಪು ಬಣ್ಣದ ಪಾತ್ರೆಗಳನ್ನು ಮೊದಲಿಗೆ ಬಳಸುತ್ತಿದ್ದರು. ಕುಂಬಾರ ಚಕ್ರದ ಮೇಲೆ ನಾಜೂಕಾಗಿ ತಯಾರಿಸಿದ ವರ್ಣಚಿತ್ರಮಯವಾದ ವಿವಿಧ ಆಕಾರಗಳ ಮಡಿಕೆಕುಡಿಕೆಗಳ, ಜಾರುನಳಿಕೆಯ ಮತ್ತು ತಳಭಾಗದಲ್ಲಿ ರಂಧ್ರಗಳಿದ್ದ ಪಾತ್ರೆಗಳು ಇವನ್ನು ಅವರು ಅನಂತರ ಬಳಸುತ್ತಿದ್ದರು. ಇವು ಅವರ ಸಂಪದ್ಯುಕ್ತಧಾರ್ಮಿಕ ಜೀವನ ಮತ್ತು ಆಹಾರ ತಯಾರಿಕಾ ಪದ್ಧತಿಗಳ ಬಗ್ಗೆ ಮಾಹಿತಿಗಳನ್ನು ನೀಡುತ್ತವೆ. ಅವರು ಪಾತ್ರೆಗಳ ವರ್ಣಮಯ ಚಿತ್ರಗಳಿಗೆ ಸರಳ ರೇಖಾವಿನ್ಯಾಸಗಳನ್ನು ಬಳಸುತ್ತಿದ್ದರು. ತಾಮ್ರದ ಸರಳ ಅಥವಾ ಅಲಂಕೃತ ಬಳೆಗಳು, ಬೆರಳುಂಗುರ, ಉಗುರು ಕತ್ತರಿ, ಕಾಡಿಗೆ ಕಡ್ಡಿ, ಮಣಿಗಳು, ಬಾಣದ ಮೊನೆಗಳು, ಈಟಿಮೊನೆ, ಚಪ್ಪಟೆಯಾದ ಬಾಚಿ ಅಥವಾ ಮಚ್ಚುಕತ್ತಿ ಮೊದಲಾದ ಸಲಕರಣೆಗಳು ಆ ಕಾಲದ ಉತ್ತರಾರ್ಧದಲ್ಲಿ ಬಳಕೆಯಲ್ಲಿದ್ದುದರಿಂದ ಅವರಿಗೆ ಲೋಹಗಾರಿಕೆಯಲ್ಲಿದ್ದ ಪರಿಶ್ರಮವನ್ನು ಊಹಿಸಬಹುದು. ಸೂಕ್ಷ್ಮ ಶಿಲಾಯುಧಗಳೂ ವೈವಿಧ್ಯಪೂರ್ಣವಾಗಿವೆ. ಕಲ್ಲಿನ ನಯಗೊಳಿಸಿದ ಆಯುಧಗಳು ದೊರಕಿವೆಯಾದರೂ ಅವು ಅನಂತರ ಕಾಲದವೆಂದು ಶಂಕಿಸಲಾಗಿದೆ. ಮೂಳೆಯಿಂದ ತಯಾರಿಸಿದ ಆಯುಧಗಳೂ ಆಗ ಬಳಕೆಯಲ್ಲಿದ್ದುವು. ಅಕ್ಕಿ, ಮೀನು, ಕಾಡು ಹಸು, ಜಿಂಕೆ ಮತ್ತು ಹಂದಿಗಳನ್ನು ಅವರು ಆಹಾರವಾಗಿ ತಿನ್ನುತ್ತಿದ್ದರು. ಈ ಸಂಸ್ಕøತಿಗಳನ್ನು ಕ್ರಿ.ಪೂ 1200-ಕ್ರಿ,ಪೂ 800ರ ಕಾಲಕ್ಕೆ ನಿರ್ದೇಶಿಲಾಗಿದೆ. ಕಬ್ಬಿಣದ ಯುಗ ಕಬ್ಬಿಣ ಯುಗದ ಕಾಲದಲ್ಲಿ ಆ ಮೊದಲಿಗಿಂತಲೂ ಜೀವನ ರೀತಿ ಬಹುಮಟ್ಟಿಗೆ ಸುಧಾರಿಸಿತು. ಪಾಂಡುರಾಜರ್ ಧಿ. ಬಿ. ಮಹಿಸ್‍ದಲ್ ಮುಂತಾದೆಡೆಗಳಲ್ಲಿ ನಡೆದಿರುವ ಉತ್ಖನನಗಳಲ್ಲಿ ತಾಮ್ರ ಮತ್ತು ಕಬ್ಬಿಣದ ಅದುರನ್ನು ಕರಗಿಸಲು ಉಪಯೋಗಿಸುತ್ತಿದ್ದ ಕುಲುಮೆಗಳೂ ದೊರಕಿವೆ. ಅಲ್ಲಿಯ ಗೃಹೋಪಯೋಗಿ ವಸ್ತುಗಳು ಹೆಚ್ಚು ಪ್ರಗತಿಪರವಾಗಿವೆ. ವ್ಯವಸಾಯಕ್ರಮದಲ್ಲಿ, ಗೃಹನಿರ್ಮಾಣ ವಿಧಾನಗಳಲ್ಲಿ ಸುಧಾರಣೆಗಳು ಕಂಡುಬರುತ್ತವೆ. ಸತ್ತವರ ದೇಹಗಳನ್ನು ಗುಳಿಗಳಲ್ಲಿ ಪೂರ್ಣವಾಗಿ ಅಥವಾ ಆಂಶಿಕವಾಗಿ, ಅಥವಾ ಶವಜಾಡಿಗಳಲ್ಲಿ ಹೂಳೂತ್ತಿದ್ದರು. ಆ ಸುಮಾರಿಗೆ ಬರವಣಿಗೆ ಮತ್ತು ನಾಣ್ಯ ಪದ್ಧತಿ ರೂಢಿಗೆ ಬಂದು, ಸುವ್ಯವಸ್ಥಿತ ರಾಜ್ಯಪದ್ಧತಿ ನೆಲೆಸಿತ್ತು. ಕಬ್ಬಿಣ ಯುಗದ ಸಂಸ್ಕøತಿ ಕ್ರಿ,ಪೂ 700ರಿಂದ ಪ್ರಾರಂಭವಾಯಿತೆಂದು ಹೇಳಲಾಗಿದೆ. ಇತಿಹಾಸ : ವೇದೋಪನಿಷತ್ತುಗಳ ಕಾಲದ ಪಶ್ಚಿಮ ಬಂಗಾಲದ ಇತಿಹಾಸದ ಬಗ್ಗೆ ನಮಗೆ ಮಾಹಿತಿಗಳು ಲಭ್ಯವಾಗಿಲ್ಲ. ಆ ಸಮಯದ ಜನಜೀವನ ರೀತಿಯನ್ನು ಆಗಿನ ಪ್ರಾಗೈತಿಹಾಸಿಕ ಸಂಸ್ಕøತಿಗಳ ಸಮೀಕ್ಷೆಯಿಂದ ತಿಳಿಯಬಹುದು. ಕ್ರಿ.ಪೂ 7ನೆಯ ಶತಮಾನದ ವೇಳೆಗೆ ಆ ಪ್ರದೇಶದಲ್ಲಿ ಗೌಡ ರಾಜ್ಯ ಅಸ್ತಿತ್ವಕ್ಕೆ ಬಂದಿತ್ತು. ಕ್ರಿ.ಪೂ 5-4ನೆಯ ಶತಮಾನಗಳಲ್ಲಿ ಪಶ್ಚಿಮ ಬಂಗಾಲ ಮಗಧ ಸಾಮ್ರಾಜ್ಯದಲ್ಲಿ ಸೇರಿತ್ತು. ತರುವಾಯ ಅದು ಮೌರ್ಯ ಸಾಮ್ರಾಜ್ಯದಲ್ಲಿ ಅಡಕವಾಯಿತು. ಮತ್ತೆ ಕ್ರಿ,ಶ 4ನೆಯ ಶತಮಾನದ ಆದಿಭಾಗದಲ್ಲಿ ಗುಪ್ತ ಸಾಮ್ಯಾಜ್ಯದೊಂದಿಗೆ ಸೇರುವವರೆಗಿನ ಬಂಗಾಲದ ಇತಿಹಾಸ ಗೊತ್ತಿಲ್ಲ. ಗುಪ್ತ ಸಾಮ್ರಾಜ್ಯ ಸಮುದ್ರಗುಪ್ತ ಬಂಕುರಾ ಜಿಲ್ಲೆಯಲ್ಲಿ ಆಳುತ್ತಿದ್ದ ಚಂದ್ರವರ್ಮನನ್ನು ಸೋಲಿಸಿ ಅದನ್ನು ತನ್ನ ಆಧಿಪತ್ಯಕ್ಕೆ ಸೇರಿಸಿಕೊಂಡ ಮೇಲೆ ಆ ಪ್ರದೇಶ ಗುಪ್ತ ದೊರೆಗಳ ವಶದಲ್ಲಿ ಮುಂದುವರಿಯಿತು. ಮತ್ತೆ 507ರ ಸುಮಾರಿಗೆ ಗೋಪಚಂದ್ರ ಒಂದು ಸ್ವತಂತ್ರ ರಾಜ್ಯವನ್ನು ಸ್ಥಾಪಿಸಿದುದಾಗಿ ತಿಳಿದುಬರುತ್ತದೆ. ಆ ವಂಶದ ಗೋಪಚಂದ್ರ, ಧರ್ಮಾದಿತ್ಯ ಮತ್ತು ಸಮಾಚಾರದೇವ ಇವರು ಮಹಾರಾಜಾಧಿರಾಜ ಎಂಬ ಬಿರುದು ಧರಿಸಿದ್ದರು. 550ರವರೆಗೆ ಆಳಿದ ಆ ವಂಶದವರು ಗುಪ್ತರ ನಾಣ್ಯಗಳ ಅನುಕರಣೆಯ ಚಿನ್ನದ ನಾಣ್ಯಗಳನ್ನು ಚಲಾವಣೆಗೆ ತಂದಿದ್ದರು. ಉತ್ತರಕಾಲೀನ ಗುಪ್ತ ಚಕ್ರವರ್ತಿ 6ನೆಯ ಶತಮಾನದಂತ್ಯದಲ್ಲಿ ಅಧಿಕಾರ ಕಳೆದುಕೊಂಡಾಗ ಗೌಡ ದೇಶದಲ್ಲಿ ಪ್ರಸಿದ್ಧಿಗೆ ಬಂದ ಶಶಾಂಕ ಬಂಗಾಲದ ಇತಿಹಾಸದಲ್ಲಿ ಹೆಸರಾದ ದೊರೆ. ಅವನ ರಾಜಧಾನಿ ಕರ್ಣಸುವರ್ಣ (ಈಗಿನ ಮುರ್ಷಿದಾಬಾದ್ ಜಿಲ್ಲೆಯ ರಂಗಮಾತಿ). ಬಂಗಾಲದ ಹೆಚ್ಚು ಭಾಗ, ಮಗಧ ಮತ್ತು ಒರಿಸ್ಸಾದ ಹಲವು ಪ್ರದೇಶಗಳು ಅವನ ವಶದಲ್ಲಿದ್ದುವು. ಪೂರ್ವದಲ್ಲಿ ಕಾಮರೂಪದ ಭಾಸ್ಕರವರ್ಮ ಮತ್ತು ಪಶ್ಚಿಮದಲ್ಲಿ ಕನೌಜಿನ ದೊರೆ ಮೌಖರಿ ವಂಶದ ಗ್ರಹವರ್ಮ ಅವನ ಮುಖ್ಯ ಶತ್ರುಗಳು. ಈ ಕಾರಣದಿಂದ ಅವನು ಮಾಲ್ವದ ದೇವಗುಪ್ತನೊಂದಿಗೆ ಮೈತ್ರಿ ಬೆಳೆಸಿದ. ಶಶಾಂಕ ಮತ್ತು ದೇವಗುಪ್ತರು ಕೂಡಿ ಯುದ್ಧದಲ್ಲಿ ಗ್ರಹವರ್ಮನನ್ನು ಕೊಂದಾಗ, ಗ್ರಹವರ್ಮನೊಂದಿಗೆ ವಿವಾಹ ಸಂಬಂಧ ಹೊಂದಿದ ಸ್ಥಾಣೇಶ್ವರದ ಪುಷ್ಯಭೂತಿ ಮನೆತನದೊಂದಿಗೆ ಶಶಾಂಕನ ಹಗೆತನ ಬೆಳೆಯಿತು. ತನ್ನ ಭಾವನ ಸಹಾಯಕ್ಕೆ ಧಾವಿಸಿ, ಆ ವಂಶದ, ರಾಜ್ಯವರ್ಧನನನ್ನು ಮೋಸದಿಂದ ಶಶಾಂಕ 666ರಲ್ಲಿ ಕೊಲ್ಲಿಸಿದನೆಂದು ಹೇಳಲಾಗಿದೆ. ತನ್ನ ಅಣ್ಣನ ಕೊಲೆಯ ಸೇಡು ತೀರಿಸಿಕೊಳ್ಳಲು ಹರ್ಷವರ್ಧನ ಪ್ರತಿಜ್ಞೆ ಮಾಡಿದುದಾಗಿ ಹೇಳಲಾಗಿದ್ದರೂ ಹರ್ಷ ಮತ್ತು ಶಶಾಂಕರ ನಡುವೆ ನೇರ ಹೋರಾಟ ನಡೆದ ಬಗ್ಗೆ ಮಾಹಿತಿಗಳಿಲ್ಲ. ಶಶಾಂಕ 619ರ ವರೆಗೆ ಆಳುತ್ತಿದ್ದುದಾಗಿ ತಿಳಿದುಬಂದಿದೆ. ಅವನು ಬಹುಶಃ 636-37ರ ವರೆಗೂ ಗೌಡಾಧಿಪನಾಗಿದ್ದನೆಂದು ಹ್ಯುಯೆನ್ ತ್ಸಾಂಗನ ಬರವಣಿಗೆಗಳಿಂದ ಊಹಿಸಲಾಗಿದೆ. ಆದರೆ ಅದು ಸಂದೇಹಾಸ್ಪದ, ಬಂಗಾಲವನ್ನು ಸ್ವತಂತ್ರಗೊಳಿಸಿದುದಲ್ಲದೆ, ಬಿಹಾರ ಒರಿಸ್ಸಗಳಲ್ಲೂ ತನ್ನ ಪ್ರಭಾವ ಬೀರಿದ ಕೀರ್ತಿ ಅವನಿಗೆ ಸಲ್ಲುತ್ತದೆ. ಅವನ ತರುವಾಯ ಪಶ್ಚಿಮ ಬಂಗಾಲದಲ್ಲಿ ಕರ್ಣಸುವರ್ಣ, ತಾಮ್ರಲಿಪ್ತಿ ಮತ್ತು ಪುಂಡ್ರವರ್ಧನ ಎಂಬ ಸ್ವತಂತ್ರರಾಜ್ಯಗಳಿದ್ದುವು. ಆದರೆ ಆಂತರಿಕ ಕಲಹಗಳು ಹೆಚ್ಚಿದ್ದುವು. ಅರಾಜಕತೆ ವ್ಯಾಪಕವಾಗಿತ್ತು. ತರುವಾಯ ಜಯನಾಗನೆಂಬುವನು ಒಂದು ಸ್ವತಂತ್ರ ರಾಜ್ಯ ಸ್ಥಾಪಿಸಿದ. ಅವನ ಕಾಲಮಾನ ನಿರ್ದಿಷ್ಟವಲ್ಲದಿದ್ದರೂ ಕಾಮರೂಪದ ಭಾಸ್ಕರವರ್ಮನ ಮರಣಾನಂತರ ಅವನು ಅಧಿಕಾರಕ್ಕೆ ಬಂದಿರಬೇಕು. ತನ್ನ ರಾಜಧಾನಿಯಾದ ಕರ್ಣಸುವರ್ಣದಿಂದ ಹೊರಡಿಸಿದ ಶಾಸನದಿಂದ ಅವನಿಗೆ ಮಹಾರಾಜಾಧಿರಾಜನೆಂಬ ಬಿರುದಿದ್ದ ಸಂಗತಿ ತಿಳಿಯುತ್ತದೆ. ಅವನು ಚಿನ್ನದ ನಾಣ್ಯಗಳನ್ನು ಅಚ್ಚುಹಾಕಿಸಿದ್ದ. ಅವನು ಸಮರ್ಥ ದೊರೆಯಾಗಿದ್ದರೂ ಅವನ ಉತ್ತರಾಧಿಕಾರಿಗಳ ಮತ್ತು ರಾಜ್ಯವಿಸ್ತಾರದ ಬಗ್ಗೆ ಏನೂ ತಿಳಿದಿಲ್ಲ. 725-735ರ ನಡುವೆ ಯಶೋವರ್ಮನೆಂಬ ಸಮರ್ಥ ದೊರೆ ಆ ಪ್ರದೇಶದಲ್ಲಿ ಆಳುತ್ತಿದ್ದುದಾಗಿ ತಿಳಿದುಬಂದಿದೆ. ತರುವಾಯ ಪಶ್ಚಿಮಬಂಗಾಲ ಕಾಶ್ಮೀರದ ಲಲಿತಾದಿತ್ಯನ ವಶವಾಯಿತು. ಕಾಶ್ಮೀರದ ಜಯಾಪೀಡ ಸ್ವಲ್ಪ ಕಾಲಾನಂತರ ರಾಜ್ಯ ಕಳೆದುಕೊಂಡು ಪುಂಡ್ರವರ್ಧನಕ್ಕೆ ಬಂದು ಅಲ್ಲಿಯ ದೊರೆ ಜಯಂತನ ಮಗಳನ್ನು ವಿವಾಹವಾಗಿ, ಅವನ ರಾಜ್ಯ ವಿಸ್ತರಣೆಗೆ ಸಹಾಯ ನೀಡಿದ. ಪಾಲ ವಂಶ ಅಂಥ ಅನಿಶ್ಚಿತ ಪರಿಸ್ಥಿತಿಯಿಂದ 750ರ ಪಾಲವಂಶದ ದೊರೆಗಳು ಬಂಗಾಲವನ್ನು ರಕ್ಷಿಸಿದರು. ತಮ್ಮ ನಾಡಿನ ಅನಾಯಕ ಪರಿಸ್ಥಿತಿಗಳನ್ನು ಕೊನೆಗೊಳಿಸಿ ಅದರ ಪುರೋಭಿವೃದ್ಧಿಗೆ ಶ್ರಮಿಸುವ ಉದ್ದೇಶದಿಂದ ಆ ಪ್ರದೇಶದ ಸಣ್ಣ ರಾಜರು ಒಗ್ಗೂಡಿ ಸಮರ್ಥನೂ ಧೀರನೂ ಆದ. ಪುಂಡ್ರವರ್ಧನದಲ್ಲಿ ಹುಟ್ಟಿ ವಂಗರಾಜ್ಯವನ್ನಾಳುತ್ತಿದ್ದ, ಗೋಪಾಲನನ್ನು (750-770) ತಮ್ಮ ಅಧಿರಾಜನನ್ನಾಗಿ ಆರಿಸಿದರು. ಅ ವಂಶದ ಅರಸರು 1155ರ ವರೆಗೂ ಆಳಿ, ಹಲವಾರು ಏರುಪೇರುಗಳನ್ನನುಭವಿಸಬೇಕಾಗಿ ಬಂದರೂ, ಬಂಗಾಲದ ಕೀರ್ತಿಧ್ವಜವನ್ನು ಎತ್ತಿಹಿಡಿದರು. ಧರ್ಮಪಾಲ (770-810) ಮತ್ತು ದೇವಪಾಲ (810-850) ಆ ವಂಶದ ಪ್ರಸಿದ್ಧ ದೊರೆಗಳು. ಅವರು ತಮ್ಮ ರಾಜ್ಯವನ್ನು ವಿಸ್ತಾರಗೊಳಿಸಿದರಲ್ಲದೆ ಇಡೀ ಉತ್ತರ ಭಾರತದ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುವ ಸಾಮಥ್ರ್ಯಗಳಿಸಿದ್ದರು. ಮೌಲ್ವದ ಪ್ರತೀಹಾರ ದೊರೆ ವತ್ಸರಾಜ ಮತ್ತು ರಾಷ್ಟ್ರಕೂಟ ಧ್ರುವನಿಂದ ಧರ್ಮಪಾಲ ಸೋತನಾದರೂ, ರಾಷ್ಟ್ರಕೂಟರಿಂದ ವತ್ಸರಾಜ ಸೋಲನ್ನನುಭವಿಸಿದ್ದರ ಫಲವಾಗಿ ಧರ್ಮಪಾಲ ಉತ್ತರಭಾರತದಲ್ಲಿ ಹೆಚ್ಚು ಪ್ರಭಾವ ಬೀರಲು ಸಾಧ್ಯವಾಯಿತು. ಧರ್ಮಪಾಲ ವತ್ಸರಾಜನ ಮಿತ್ರನಾದ ಇಂದ್ರಾಯುಧನನ್ನು ಕನೌಜಿನ ಸಿಂಹಾಸನದಿಂದ ಇಳಿಸಿ ತನ್ನ ಆಶ್ರಿತನಾದ ಚಕ್ರಾಯುಧನಿಗೆ ಸಿಂಹಾಸನ ಕೊಡಿಸಿದ. ಅವನತಿಕಾಲದಲ್ಲಿ ವತ್ಸರಾಜನ ಮಗ 2ನೆಯ ನಾಗಭಟ ಚಕ್ರಾಯುಧನನ್ನೂ ಅವನ ಸಹಾಯಕ್ಕೆ ಬಂದ ಧರ್ಮಪಾಲನನ್ನೂ ಸೋಲಿಸಿದ. ರಾಷ್ಟ್ರಕೂಟ 3ನೆಯ ಗೋವಿಂದ ಮತ್ತೆ ಉತ್ತರ ಭಾರತದ ರಾಜಕೀಯದಲ್ಲಿ ಪ್ರವೇಶಿಸಿ ನಾಗಭಟನನ್ನು ಸೋಲಿಸಿದ. ಧರ್ಮಪಾಲ ಮತ್ತು ಚಕ್ರಾಯುಧರು ಅವನಿಗೆ ಶರಣಾದರು. ದೂರದ ದಖನ್ನಿನ ರಾಷ್ಟ್ರಕೂಟರ ಸಾರ್ವಭೌಮತ್ವವನ್ನೊಪ್ಪಿಕೊಂಡಿದ್ದರಿಂದ ಧರ್ಮಪಾಲನಿಗೆ ನಿಜಕ್ಕೂ ಯಾವ ತೊಂದರೆಯೂ ಉಂಟಾಗಲಿಲ್ಲ. ದೇವಪಾಲ ಸಿಂಹಾಸನವನ್ನೇರಿದ ಅನಂತರ ಅಸ್ಸಾಮ್, ಒರಿಸ್ಸ, ಹಿಮಾಲಯ ಪರ್ವತ ಪ್ರದೇಶಗಳು ಮತ್ತು ವಾಯವ್ಯಭಾರತದ ಕೆಲವು ಭಾಗಗಳನ್ನು ಗೆದ್ದು ತನ್ನ ರಾಜ್ಯವನ್ನು ವಿಸ್ತರಿಸಿದ. ಅವನು ದಕ್ಷಿಣದ ಪಾಂಡ್ಯ ಶ್ರೀಮಾರ ಶ್ರೀವಲ್ಲಭನನ್ನು ಸೋಲಿಸಿದನೆಂದು ಹೇಳಲಾಗಿದ್ದರೂ ಆ ಸಂಗತಿ ನಂಬಲರ್ಹವಲ್ಲ. ದೇವಪಾಲನ ಆಸ್ಥಾನಕ್ಕೆ ಸುಮಾತ್ರದ ಶೈಲೇಂದ್ರ ದೊರೆ ಬಾಲಪುತ್ತದೇವ ತನ್ನ ದೂತರನ್ನು ಕಳಿಸಿ ತಾನು ನಾಲಂದದಲ್ಲಿ ಕಟ್ಟಿಸಿದ್ದ ಬೌದ್ಧ ವಿಹಾರಕ್ಕೆ ಕೆಲವು ದತ್ತಿಗಳನ್ನು ಪಡೆದುಕೊಂಡ ಸಂಗತಿ ಅಲ್ಲಿಯ ಶಾಸನದಿಂದ ತಿಳಿದುಬರುತ್ತದೆ. ಧರ್ಮಪಾಲ ಮತ್ತು ದೇವಪಾಲ ಬೌದ್ಧಧರ್ಮಕ್ಕೆ ಹೆಚ್ಚು ಪ್ರೋತ್ಸಾಹ ನೀಡಿದುದಲ್ಲದೆ ವಿಕ್ರಮಶಿಲಾ ವಿದ್ಯಾಲಯವನ್ನು ಸ್ಥಾಪಿಸಿ ವೃದ್ಧಿಪಡಿಸಿದರು. ದೇವಪಾಲನ ತರುವಾಯ ಪಾಲವಂಶ ಸ್ವಲ್ಪಕಾಲ ದುಃಸ್ಥಿತಿಗೊಳಗಾಗಿದ್ದು ಮತ್ತೆ 908ರಲ್ಲಿ ಚೇತರಿಸಿಕೊಂಡಿತು. 860ರ ಸುಮಾರಿನಲ್ಲಿ ರಾಷ್ಟ್ರಕೂಟರು ಮತ್ತೆ ಬಂಗಾಲದ ಮೇಲೆ ದಾಳಿ ನಡೆಸಿದರು. ಪ್ರತೀಹಾರರು ಕೆಲವು ಪ್ರದೇಶಗಳನ್ನು ಆಕ್ರಮಿಸಿಕೊಂಡರು. ಕೆಲವು ಸಾಮಂತರಾಜರು ಸ್ವಾತಂತ್ರ್ಯ ಘೋಷಿಸಿಕೊಂಡರು. ಅಂಥ ಪರಿಸ್ಥಿತಿಯಲ್ಲಿ ರಾಷ್ಟ್ರಕೂಟ 2ನೆಯ ಕೃಷ್ಣ ಪ್ರತೀಹಾರರ ಬಲವನ್ನು ನಾಶಪಡಿಸಿದಾಗ ನಾರಾಯಣಪಾಲ ರಾಷ್ಟ್ರಕೂಟರ ಮೈತ್ರಿ ಬೆಳೆಸಿದ. ಕೃಷ್ಣನ ಮೊಮ್ಮಗಳನ್ನು ತನ್ನ ಮಗ ರಾಜ್ಯಪಾಲನಿಗೆ ವಿವಾಹಮಾಡಿ ಆ ಮೈತ್ರಿಯನ್ನು ಬಲಗೊಳಿಸಿದ. ಮತ್ತೆ ಬಲಹೀನಗೊಂಡ ಪಾಲರಾಜ್ಯವನ್ನು 1021ರಲ್ಲಿ ಚೋಳ 1ನೆಯ ರಾಜೇಂದ್ರ ಆಕ್ರಮಿಸಿ ಬಲಹೀನಗೊಂಡ ಪಾಲರಾಜ್ಯವನ್ನು 1021ರಲ್ಲಿ ಚೋಳ 1ನೆಯ ರಾಜೇಂದ್ರ ಆಕ್ರಮಿಸಿ ಮಹೀಪಾಲನನ್ನು ಸೋಲಿಸಿದ. 1068ರಲ್ಲಿ ಚಾಲುಕ್ಯ ವಿಕ್ರಮಾದಿತ್ಯ ವಿಗ್ರಹಪಾಲನನ್ನು ಸೋಲಿಸಿದರೂ ರಾಮಪಾಲನ (1077-1120) ಕಾಲದಲ್ಲಿ ಚೇತರಿಸಿಕೊಂಡ ಈ ವಂಶ 1155ರ ವರೆಗೂ ಬಂಗಾಲದ ಕೆಲವು ಭಾಗಗಳಲ್ಲಿ ಆಳುತ್ತಿತ್ತು. ಪಾಲ ದೊರೆಗಳು ಬೌದ್ಧಮತಕ್ಕೆ ಪ್ರೋತ್ಸಾಹ ನೀಡಿ ನಾಲಂದ ಮತ್ತು ವಿಕ್ರಮ ಶಿಲಾ ವಿದ್ಯಾಲಯಗಳನ್ನು ವೃದ್ಧಿಗೊಳಿಸಿದರು. ಪ್ರಸಿದ್ಧ ಬೌದ್ಧ ಪಂಡಿತ ದೀಪಂಕರ ಶ್ರೀಜ್ಞಾನ ಅತಿಸ್ಸ ನಯಪಾಲನ ಕಾಲದಲ್ಲಿ ವಿಕ್ರಮ ಶಿಲೆಯ ಪ್ರಾಚಾರ್ಯನಾಗಿದ್ದು ಟಿಬೆಟ್ಟಿನ ದೊರೆಯ ಆಮಂತ್ರಣದ ಮೇರೆಗೆ ಆ ದೇಶಕ್ಕೆ ಹೋಗಿ ನೆಲೆಸಿ ಬೌದ್ಧ ಪ್ರಸಾರಕ್ಕೆ ಕಾರಣನಾದ. ಪಾಲ ದೊರೆಗಳು ಕಲೆಗೆ ಅಮಿತ ಪ್ರೋತ್ಸಾಹ ನೀಡಿದರು. ಸೇನರು 1095ರಿಂದ ಪಾಲದೊರೆಗಳ ಸಾಮಂತರಾಗಿ ಪಶ್ಚಿಮ ಬಂಗಾಲದಲ್ಲಿ ಕ್ರಮೇಣ ಪ್ರಬಲರಾಗುತ್ತಿದ್ದರು. ಆ ವಂಶದ ಮೂಲ ಪುರುಷನಾದ ಸಾಮಂತಸೇನ ಕರ್ನಾಟಕದಿಂದ ಹೋಗಿ ರಾಢಾ ಪ್ರಾಂತ್ಯದಲ್ಲಿ ಸಣ್ಣ ರಾಜ್ಯ ಸ್ಥಾಪಿಸಿದ. ಅವನ ಮಗ ಹೇಮಂತಸೇನನ ಕಾಲದಲ್ಲಿ ಅವರ ಅಧಿಕಾರ ಬೆಳೆಯಿತು. 1095ರಲ್ಲಿ ಆ ಮನೆತನದ ಮೂರನೆಯ ದೊರೆ ವಿಜಯಸೇನ ಪಾಲದೊರೆ ರಾಮಪಾಲನನ್ನು ಸೋಲಿಸಿ ಬಂಗಾಲದ ಬಹುಭಾಗವನ್ನು ವಶಪಡಿಸಿಕೊಂಡ. ಮಾಲ್ವ, ಮಿಥಿಲಾ ಮತ್ತು ಕಾಮರೂಪಗಳು ಅವನ ದಾಳಿಗೆ ತುತ್ತಾದುವು. ಅವನ ದೀರ್ಘ ಆಳ್ವಿಕೆಯ ಅನಂತರ 1158ರಲ್ಲಿ ಸಿಂಹಾಸನವನ್ನೇರಿದ ವಲ್ಲಾಳಸೇನ ಉತ್ತಮ ಯೋಧ ಮತ್ತು ವಿದ್ಯಾಭಿಮಾನಿ; ಸ್ವತಃ ಎರಡು ಗ್ರಂಥಗಳನ್ನು ರಚಿಸಿದನೆಂದು ಹೇಳಲಾಗಿದೆ. ಇವನು ಚಾಲುಕ್ಯ ವಿಕ್ರಮಾದಿತ್ಯನ ಮಗಳು ರಾಮದೇವಿಯನ್ನು ವಿವಾಹವಾಗಿದ್ದ. ಮುಪ್ಪಿನಲ್ಲಿ ರಾಜ್ಯವನ್ನು ಮಗ ಲಕ್ಷ್ಮಣಸೇನನಿಗೆ ವಹಿಸಿ, ಪತ್ನಿಯೊಂದಿಗೆ ಧಾರ್ಮಿಕ ಜೀವನದಲ್ಲಿ ಕಾಲ ಕಳೆದನೆಂದು ಹೇಳಲಾಗಿದೆ. 1178ರಲ್ಲಿ ರಾಜ್ಯಭಾರ ವಹಿಸಿಕೊಂಡ ಲಕ್ಷ್ಮಣಸೇನ ಗಾಹಡವಾಲ ಚಂದ್ರನನ್ನು 1183-92ರ ನಡುವೆ ಹಲವು ಬಾರಿ ಸೋಲಿಸಿ ವಾಯವ್ಯ ಭಾರತದಲ್ಲಿ ತನ್ನ ಅಧಿಕಾರ ಸ್ಥಾಪಿಸಿದನಲ್ಲದೆ ಕಳಿಂಗ ದೇಶವನ್ನು ಗೆದ್ದನೆಂದು ಅವನ ಶಾಸನಗಳಿಂದ ತಿಳಿದುಬಂದಿದೆ. ಆದರೆ 1202ರಲ್ಲಿ ಇಖ್ತಿಯಾರ್-ಉದ್-ದೀನ್ ಮಹಮ್ಮದ್ ಖಿಲ್ಜಿಯ ನೇತೃತ್ವದಲ್ಲಿ ಬಂದ ಮುಸ್ಲಿಮರ ಸೈನ್ಯ ರಾಜಧಾನಿ ನದಿಯಾವನ್ನು ಆಕ್ರಮಿಸಿದಾಗ ಪೂರ್ವ ಬಂಗಾಲಕ್ಕೆ ಹಿನ್ನಡೆದು ಸ್ವಲ್ಪಕಾಲದ ಅನಂತರ ತೀರಿಕೊಂಡ. ಸೇನ ದೊರೆಗಳು ಸಂಸ್ಕೃಂತ ಸಾಹಿತ್ಯಕ್ಕೆ ಆಶ್ರಯ ಕೊಟ್ಟಿದ್ದರು. ಕವಿ ಜಯದೇವ ಮತ್ತು ನ್ಯಾಯಶಾಸ್ತ್ರ ಪಂಡಿತ ಹಲಾಯುಧ ಇವರು ಸೇನ ದೊರೆಗಳ ಆಶ್ರಿತರು. ಮುಸಲ್ಮಾನರ ಆಳ್ವಿಕೆ ಇಖ್ತಿಯಾರ್-ಉದ್-ದೀನ್ ಮಹಮ್ಮದ್ ಖಲ್ಜಿ(1202-1206) ಪಶ್ಚಿಮ ಬಂಗಾಲವನ್ನು ವಶಪಡಿಸಿಕೊಂಡ ಅನಂತರ ದೆಹಲಿ ಸುಲ್ತಾನರ ಅಧೀನನಾಗಿ ಆಳುತ್ತಿದ್ದಾಗ 1205ರಲ್ಲಿ ಟಿಬೆಟ್ಟಿನ ಮೇಲೆ ನಡೆಸಿದ ದಾಳಿ ವಿಫಲಗೊಂಡಿತು; 1206ರಲ್ಲಿ ಅವನು ತೀರಿಕೊಂಡ. ಅವನ ತರುವಾಯದ ಪ್ರಾಂತ್ಯಾಧಿಕಾರಿಗಳು ಆಗಾಗ್ಗೆ ದೆಹಲಿಯ ವಿರುದ್ಧ ಬಂಡೇಳುತ್ತಿದ್ದರು. 1280ರಲ್ಲಿ ತಘ್ರಿಲನ ನೇತೃತ್ವದಲ್ಲಿ ನಡೆದ ದಂಗೆಯನ್ನು ಸುಲ್ತಾನ್ ಬಲ್ಬನ್ ನಿಷ್ಕರುಣೆಯಿಂದ ಹತ್ತಿಕ್ಕಿದ. ಆದರೂ ಅವನತಿ ಕಾಲದಲ್ಲೇ ಬುಘ್ರಾಖಾನನ ದಂಗೆ ಫಲಕಾರಿಯಾಗಿ, ಅವನು ನಸೀರುದ್ದೀನ್ ಎಂಬ ಹೆಸರಿನಿಂದ ಸ್ವತಂತ್ರನಾಗಿ ಪಶ್ಚಿಮ ಬಂಗಾಲದ ಲಖ್ನೌತಿಯಿಂದ (ಮಾಲ್ಡಾ ಜಿಲ್ಲೆ) ಆಳತೊಡಗಿದ. 1291ರಲ್ಲಿ ರುಕ್ನುದ್ದೀನ್ ಕೈಕಾಉಸ್, 1301ರಲ್ಲಿ ಶಂಶುದ್ದೀನ್ ಫಿರೂಜ್ ಷಾ ಅಧಿಕಾರಕ್ಕೆ ಬಂದರು. ಫಿರೂಜ್ ಷಾನ ಕಾಲದಲ್ಲಿ ಪಾಂಡುವ ನಗರದ ಸ್ಥಾಪನೆಯಾಯಿತು. ಘಿಯಾಸ್-ಉದ್-ದೀನ್ ಬಹದೂರ್ ಷಾ 1322ರಲ್ಲಿ ಅಧಿಕಾರಕ್ಕೆ ಬಂದ. ಇವನು 1324ರಲ್ಲಿ ದೆಹಲಿಯ ತುಗಲಕ್ ಮಹಮದನ ಬಂದಿಯಾಗಿದ್ದು ಸ್ವಲ್ಪ ಕಾಲಾನಂತರ ಬಿಡುಗಡೆ ಹೊಂದಿ ದೆಹಲಿಯಿಂದ ಮರಳಿ ತನ್ನ ಅಧಿಕಾರವನ್ನು ಮತ್ತೆ ಪಡೆದ. 1366ರಲ್ಲಿ ಫಕ್ರುದ್ದೀನ್ ಮುಂಬಾರಕ್ ಷಾನ ನೇತೃತ್ವದಲ್ಲಿ ಪಶ್ಚಿಮ ಬಂಗಾಲ ಸ್ವತಂತ್ರವಾಯಿತು. ಇಲಿಯಾಸ್ ಶಾಹಿ ಮನೆತನ ಬಂಗಾಲದಲ್ಲಿ 1345ರಿಂದ 1487ರ ವರೆಗೆ ಅಧಿಕಾರದಲ್ಲಿತ್ತು. ಶಂಶುದ್ದೀನ್ ಇಲಿಯಾಸ್ ಷಾ (1345-57) ಪೂರ್ವ ಬಂಗಾಲ, ತಿರ್ಹುತ್, ಒರಿಸ್ಸ ಮತ್ತು ವಾರಣಾಸಿ ಪ್ರದೇಶಗಳನ್ನು ವಶಪಡಿಸಿಕೊಂಡ. ಸಿಕಂದರ್ ಷಾ (1357-91) ಎರಡು ಬಾರಿ ದೆಹಲಿಯ ಸುಲ್ತಾನ ಫಿರೂಜ್ ಷಾ ಗುಗಲಕನ ವಿರುದ್ಧ ಹೋರಾಡಬೇಕಾದರೂ ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಂಡ. ಅವನ ಕಾಲದ ಅದೀನ ಮಸೀದಿ (1368) ಪಶ್ಚಿಮ ಬಂಗಾಲದ ಉತ್ತಮ ವಾಸ್ತು ನಿರ್ಮಾಣ. ಘಿಯಾಸುದ್ಧೀನ್ ಅಜರ್ಮ ಷಾನಿಂದ 1415ರಲ್ಲಿ ಹಿಂದೂ ಸರದಾರ ರಾಜಾ ಗಣೇಶ ಅಧಿಕಾರ ಕಸಿದುಕೊಂಡು ತನ್ನ ಮಗನನ್ನು ಸಿಂಹಾಸನಕ್ಕೆ ತಂದ. ಆದರೆ ಆ ಹೊಸ ರಾಜ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿ ಜಲಾಲುದ್ದೀನ್ ಎಂಬ ಹೆಸರಿನಿಂದ 1431ರ ವರೆಗೆ ಆಳಿದ. ಇಲಿಯಾಸ್ ಷಾಹಿ ವಂಶದ ನಸಿರುದ್ದೀನ್ ಮಹಮ್ಮದ್ ಷಾ (1437-1459) ಮತ್ತೆ ತನ್ನ ವಂಶವನ್ನು ಅಧಿಕಾರಕ್ಕೆ ತಂದ. ಆ ವಂಶದವರು 1487ರ ವರೆಗೆ ಆಳಿದರು. ಅನಂತರ ಅಧಿಕಾರಕ್ಕೆ ಬಂದ ಸಯ್ಯಿದ್ ಮನೆತನದಲ್ಲಿ (1493-1538) ಅಲ್ಲಾಉದ್ದೀನ್ ಹುಸೇನ್ ಷಾ ಪ್ರಮುಖ. ಆ ಸಮರ್ಥ ಸುಲ್ತಾನನ ಕಾಲದಲ್ಲಿ ರಾಜ್ಯದ ಸಂಪದಭಿವೃದ್ಧಿಯಾಯಿತು. ರಾಜ್ಯವಿಸ್ತಾರದೊಂದಿಗೆ ಸಾಹಿತ್ಯ ಸಾಂಸ್ಕøತಿಕ ಚಟುವಟಿಕೆಗಳಿಗೂ ಪ್ರೋತ್ಸಾಹ ದೊರಕಿತು. ವೈಷ್ಣವ ಸಂತ ಚೈತನ್ಯನಿಗೆ ಆಶ್ರಯ ಸಿಕ್ಕಿತು. ಮೊಗಲ್ ವಂಶದ ಸ್ಥಾಪಕ ಪಕ ಬಾಬರ್ 1526ರಲ್ಲಿ ಬಂಗಾಲವನ್ನು ವಶಪಡಿಸಿಕೊಂಡರೂ ಮತ್ತೆ ಅಲ್ಲಿ ಅನಾಯಕತ್ವದ ಪರಿಸ್ಥಿತಿ ಉಂಟಾಯಿತು. 1538ರಲ್ಲಿ ಹುಮಾಯೂನ್ ಬಂಗಾಲದ ಮೇಲೆ ದಾಳಿ ಮಾಡಿದಾಗ ಇದು ಕೊನೆಗೊಂಡಿತು. ಆದರೆ ಮರುವರ್ಷವೇ ಪಶ್ಚಿಮ ಬಂಗಾಲ ಸೇರಿದಂತೆ ಮೊಗಲ್ ಸಾಮ್ಯಾಜ್ಯವನ್ನು ಸೂರ್ ಮನೆತನದ ಷೇರ್ ಷಾ ಆಕ್ರಮಿಸಿಕೊಂಡ. ಸುಲೇಮಾನ್ ಕರ್ನಾನಿ 1564ರಲ್ಲಿ ಪಶ್ಚಿಮ ಬಂಗಾಲವನ್ನು ಸೂರ್ ಮನೆತನದಿಂದ ಗೆದ್ದುಕೊಂಡು ಹೆಸರಿಗೆ ಮಾತ್ರ ದೆಹಲಿ ಅಧಿಪತ್ಯವನ್ನು ಒಪ್ಪಿಕೊಂಡು ಸ್ವತಂತ್ರನಾದ. ಅಕ್ಬರ್ 1576ರಲ್ಲಿ ಪಶ್ಚಿಮ ಬಂಗಾಲವನ್ನು ಮೊಗಲರ ನೇರ ಆಡಳಿತಕ್ಕೆ ಸೇರಿಸಿಕೊಂಡ. ಮೊಗಲರ ಆಳ್ವಿಕೆಯಲ್ಲಿ ಆ ಪ್ರದೇಶದಲ್ಲಿ ಶಾಂತಿ ಸುವ್ಯವಸ್ಥೆಗಳು ನೆಲಸಿದ್ದುವು. ಅದೇ ಸಮಯದಲ್ಲಿ ಯೂರೋಪಿನ ವರ್ತಕರು ಅಲ್ಲಿ ತಮ್ಮ ವ್ಯಾಪಾರ ಸಂಸ್ಥೆಗಳನ್ನು ಸ್ಥಾಪಿಸಿದರು. ದೆಹಲಿಯ ಆಡಳಿತ ಬಲಹೀನಗೊಂಡಾಗ ಅಲಿವರ್ದಿ ಖಾನ್ 1740ರಿಂದ ಹೆಚ್ಚು ಕಡಿಮೆ ಸ್ವತಂತ್ರನಾದ. ದಕ್ಷ ಮತ್ತು ಸಮರ್ಥ ಆಡಳಿತಗಾರನಾದ ಅಲಿವರ್ದಿವಿದೇಶಿ ವರ್ತಕರನ್ನು ಹಿಡಿತದಲ್ಲಿಟ್ಟುಕೊಂಡಿದ್ದ. ಅವರಲ್ಲಿ ಪೈಪೋಟಿಗೆ ಅವಕಾಶ ನೀಡಲಿಲ್ಲ. ಆ ವೇಳೆಗೆ ಮರಾಠರು ದಾಳಿ ಮಾಡಿದ್ದರು. ಅವರಿಗೆ ಅಧಿಕ ಹಣವನ್ನೂ ಒರಿಸ್ಸದ ಕೆಲವು ಭಾಗಗಳನ್ನೂ ಕೊಡಬೇಕಾಯಿತು. ಅವನ ಮಗ ಸಿರಾಜುದ್ದೌಲ (1756-1757) ಸಿಂಹಾಸನವನ್ನೇರಿದಾಗ ಇಂಗ್ಲಿಷರು ಪ್ರಬಲರಾದರು. ಇಂಗ್ಲಿಷರ ಸೈನ್ಯ ರಾಬರ್ಟ್ ಕ್ಲೈವ್ ಮತ್ತು ವಾಟ್ಸನರ ನೇತೃತ್ವದಲ್ಲಿ 1757ರ ಜನವರಿಯಲ್ಲಿ ಕಲ್ಕತ್ತೆಯನ್ನು ವಶಪಡಿಸಿಕೊಂಡಿತು. ಜೂನ್ 23ರಂದು ಪ್ಲಾಸಿ ಕದನಾನಂತರ ಸಿರಾಜುದ್ದೌಲನ ಶಿರಶ್ಛೇದ ಮಾಡಿತು, ಮೀರ್ ಜಾಫರ್ ಹೆಸರಿಗೆ ನವಾಬನಾದ. ಇಂಗ್ಲಿಷರು ಸರ್ವಾಧಿಕಾರಿಗಳಾದರು. ಅವರು 1765ರಲ್ಲಿ ಮೊಗಲ್ ಚಕ್ರವರ್ತಿ 2ನೆಯ ಷಾ ಆಲಮನಿಂದ ಬಂಗಾಲದ ದಿವಾನಿ ಹಕ್ಕನ್ನು ಪಡೆದರು. ಕ್ಲೈವ್ ಬಂಗಾಲದ ಗವರ್ನರಾದ. ಇಂಗ್ಲಿಷರ ಆಳ್ವಿಕೆಯಲ್ಲಿ 1770ರಲ್ಲಿ ಸಂಭವಿಸಿದ ಭೀಕರ ಕ್ಷಾಮದಲ್ಲಿ ಬಂಗಾಲದ 1/3 ರಷ್ಟು ಮಂದಿ ಸಾವಿಗೀಡಾದರು. 1772ರಲ್ಲಿ ವಾರನ್ ಹೇಸ್ಟಿಂಗ್ಸ್ ಗವರ್ನರಾದ. 1773ರಲ್ಲಿ ಅವನನ್ನು ಭಾರತದಲ್ಲಿ ಬ್ರಿಟಿಷರ ಆಡಳಿತಕ್ಕೆ ಸೇರಿದ ಎಲ್ಲ ಪ್ರದೇಶಗಳಿಗೂ ಗವರ್ನರ್-ಜನರಲ್ ಆಗಿ ನೇಮಿಸಲಾಯಿತು. ಕಲ್ಕತ್ತ ಅವನ ರಾಜಧಾನಿಯಾಯಿತು. ಇಂಗ್ಲಿಷರ ಆಳ್ವಿಕೆಯಲ್ಲಿ ಆಡಳಿತ ದೃಷ್ಟಿಯಿಂದ ಹಲವಾರು ಬದಲಾವಣೆಗಳನ್ನು ಮಾಡಲಾಯಿತು. ಗವರ್ನರ್ ಜನರಲ್ಲನ ನೇರ ಆಡಳಿತದಲ್ಲಿದ್ದ ಬಂಗಾಲವನ್ನು 1854ರಲ್ಲಿ ಲೆಫ್ಟೆನಂಟ್-ಗವರ್ನರನ ಆಡಳಿತಕ್ಕೆ ಒಳಪಡಿಸಲಾಯಿತು. ಕರ್ಜನನ ಕಾಲದಲ್ಲಿ 1905ರಲ್ಲಿ ನಡೆದ ಬಂಗಾಲ ವಿಭಜನೆಯನ್ನು ಸುರೇಂದ್ರನಾಥ ಬ್ಯಾನರ್ಜಿಯವರ ನೇತೃತ್ವದಲ್ಲಿ ಜನರು ವಿರೋಧಿಸಿ ಸ್ವದೇಶಿ ಚಳವಳಿಯನ್ನಾರಂಭಿಸಿದರು. ಇಂಗ್ಲಿಷರು ಅದನ್ನು ಹತ್ತಿಕ್ಕಲು ಮಾಡಿದ ಪ್ರಯತ್ನಗಳ ವಿರುದ್ಧ ಬಾರಿ ಚಳವಳಿ ನಡೆಯಿತು. ಇಡೀ ಭಾರತವೇ ಇದನ್ನು ಪ್ರತಿಭಟಿಸಿತು. 1911ರಲ್ಲಿ ಬ್ರಿಟಿಷರು ವಿಭಜನೆಯನ್ನು ಕೊನೆಗೊಳಿಸಿದರು. 1947ರಲ್ಲಿ ಭಾರತ ಸ್ವತಂತ್ರವಾದಾಗ ಮತ್ತೆ ಬಂಗಾಲದ ವಿಭಜನೆಯಾಗಿ, ಪಶ್ಚಿಮ ಬಂಗಾಲ ಭಾರತದಲ್ಲಿ ಸೇರಿತು. ಅದು ಈಗ ಭಾರತ ಒಕ್ಕೂಟದ ಒಂದು ರಾಜ್ಯವಾಗಿದೆ. ವಾಸ್ತುಶಿಲ್ಪ ಪಶ್ಚಿಮ ಬಂಗಾಲದ ಪ್ರಾಕೃತಿಕ ಸನ್ನಿವೇಶ ಮತ್ತು ವಾಯುಗುಣದ ಸ್ವಭಾವದಿಂದ ಪ್ರಾಚೀನ ನಿರ್ಮಾಣಗಳು ಹೆಚ್ಚಾಗಿ ಉಳಿದುಬಂದಿಲ್ಲ. ಮೊದಲಿನ ಇಟ್ಟಿಗೆ ಕಟ್ಟಡಗಳು ಪೂರ್ಣವಾಗಿ ಅಳಿದುಹೋಗಿವೆ. ಆದರೆ ಒರಿಸ್ಸ ವಾಸ್ತುಶೈಲಿಯಿಂದ ಪ್ರೇರಿತವಾದ ಕೆಲವು ಕಲ್ಲಿನ ಕಟ್ಟಡಗಳನ್ನು ಬಂಕುರಾ ಮತ್ತು ಬರ್ದವಾನ್ ಜಿಲ್ಲೆಗಳಲ್ಲಿ ಕಾಣಬಹುದು. ಅನಂತರ ಕಾಲದಲ್ಲಿ ಜಾನಪದ ಶೈಲಿಯಿಂದ ಪ್ರೇರಿತವಾದ ಸ್ಥಾನಿಕ ಮಾದರಿಯ ಕಟ್ಟಡಗಳು ನಿರ್ಮಾಣವಾದುವು. ಮೊದಲ ರೀತಿಯ ಕಟ್ಟಡಗಳು ಎತ್ತರವಾದ ಶಿಖರವುಳ್ಳ ಒಂದು ಕೋಣೆಯ ಕಲ್ಲಿನ ಗುಡಿಗಳು; ಭುವನೇಶ್ವರದ ಮಂದಿರಗಳ ಮಾದರಿಯ ಸಣ್ಣ ನಿರ್ಮಾಣಗಳು. ಅವುಗಳ ಎತ್ತರ ಚತುರಸ್ರತಳ ಪ್ರಮಾಣದ ಮೂರೂವರೆಯಷ್ಟಿರುತ್ತಿತ್ತು. ಶಖರದ ಎರಡಂತಸ್ತುಗಳನ್ನು ಜೋಡು ಕಪೋತಗಳಿಂದ ಪ್ರತ್ಯೇಕಿಸಿರಲಾಗುತ್ತಿತ್ತು. ಲಂಬಾಕೃತಿಯ ಶಿಖರಗಳ ಮೇಲಿನ ಅಡ್ಡಗಲದ ಕಪೋತಗಳು ವೈದೃಶ್ಯ ಸೌಂದರ್ಯವನ್ನು ಹೆಚ್ಚಿಸುತ್ತಿದ್ದುವು. ಬರ್ದವಾನ್ ಜಿಲ್ಲೆಯ ಬರಾಕರ್ ಎಂಬಲ್ಲಿ ಅಂಥ ಹಲವು ಗುಡಿಗಳಿವೆ. ಬಹೂಲರಾದ ಸಿದ್ಧೇಶ್ವರ ದೇವಾಲಯ ಆ ಶೈಲಿಯ ಉತ್ತಮ ನಿದರ್ಶನ. 10ನೆಯ ಶತಮಾನದ ಆ ಕಟ್ಟಡದ ಇಟ್ಟಿಗೆ ಗೋಡೆಗಳ ಮೇಲ್ಭಾಗವನ್ನು ಸುಟ್ಟ ಮಣ್ಣಿನ ಫಲಕಗಳ ಮೇಲಿನ ಉಬ್ಬುಶಿಲ್ಪಗಳಿಂದ ಅಲಂಕರಿಸಲಾಗಿತ್ತು. ಶಿಲ್ಪಗಳು ಅಧಿಕಸಂಖ್ಯೆಯಲ್ಲಿದ್ದರೂ ಅತ್ಯಲಂಕರಣಭಾವವನ್ನು ಉಂಟುಮಾಡುವುದಿಲ್ಲ; ಅದರ ರಮ್ಯತೆಯನ್ನು ಹೆಚ್ಚಿಸಿವೆ. ಅನಂತರ ಕಾಲದ ಜಾನಪದ ಶೈಲಿಯ ಕಟ್ಟಡಗಳಿಗೆ ಅಲ್ಲಿ ಹೇರಳವಾಗಿ ಸಿಕ್ಕುವ ಜಂಬುಕಲ್ಲನ್ನು ಅಥವಾ ಇಟ್ಟಿಗೆಗಳನ್ನು ಬಳಸಲಾಗಿತ್ತು. ಅವು ಜೋಪಡಿಯಾಕಾರದಲ್ಲಿವೆ. ಕಾಲಾನುಕ್ರಮವಾಗಿ ಮರದ ಗೋಡೆಗಳ ಮತ್ತು ಬಿದಿರು ಚಾವಣಿಯ ನಿರ್ಮಾಣಶೈಲಿ ಮುಂದುವರಿಯಿತು. ಆ ನಿರ್ಮಾಣಗಳು ಆ ಪ್ರದೇಶದ ಅರಣ್ಯವಾಸಿ ಪೂರ್ವಜರ ಕುಟೀರಗಳನ್ನು ಹೋಲುತ್ತಿದ್ದುವು. ಅವುಗಳ ಇಳಿಜಾರಾದ ಚಾವಣಿ ಮತ್ತು ಬಾಗಿದಕಪೋತಗಳು ಜಾನಪದ ಶೈಲಿಗಿಂತ ಪ್ರಗತಿ ಪರವಾದರೂ ಉನ್ನತ ಮಟ್ಟಕ್ಕೇರಲಿಲ್ಲ. ಚತುರಸ್ರವಾದ ಕಟ್ಟಡಗಳ ಗೋಡೆಗಳು ನೇರವಾಗಿದ್ದು, ಮೇಲ್ಭಾಗದಲ್ಲಿ ಬಾಗಿದ ಚಾವಣಿ ಇರುತ್ತಿತ್ತು. ಹಾಗಾಗಿ ಚಾವಣಿ ಮತ್ತು ಕಪೋತಗಳು ಪರವಲಯಕಾರದವು. ಅಧಿಕ ಮಳೆಯನೀರು ಸುಲಭವಾಗಿ ಹರಿದುಹೋಗಲು ಅದು ಸಹಾಯಕವಾಗುತ್ತಿತ್ತು. ಬಾಗಿದ ಚಾವಣಿಗಳ ಮೇಲಿನ ಶಿಖರಗಳ ವಿಭಿನ್ನ ಸಂಖ್ಯೆಗೆ ಅನುಗುಣವಾಗಿ ಏಕರತ್ನ ತ್ರಿರತ್ನ ಪಂಚರತ್ನ ಗುಡಿಗಳೆಂದು ಅವನ್ನು ಪರಿಗಣಿಸಲಾಗುತ್ತಿತ್ತು. ಮುಂಭಾಗದಲ್ಲಿ ಮೂರು ಕಮಾನುಗಳೂ ಪ್ರತಿಕಮಾನಿನ ಕೆಳಗೆ ಕಂಬಗಳಿಂದ ಕೂಡಿದ ಬಾಗಿಲುಗಳೂ ಇರುತ್ತಿದ್ದುವು. ಸೂಚಿಯ ಆಕಾರದ ಕಮಾನುಗಳಲ್ಲಿ ಕಂಬಗಳಿಂದ ಕೂಡಿದ ಬಾಗಿಲುಗಳು ಇರುತ್ತಿದ್ದವು. ಆ ಕಮಾನುಗಳಲ್ಲಿ ಚಾಚಿದ ಕೋಡುಗಳಿರುತ್ತಿದ್ದುವು. ಒಳಭಾಗದಲ್ಲಿರುತ್ತಿದ್ದ ವಿಶಾಲ ಹಜಾರದ ಸುತ್ತಲೂ ಮೇಲಂತಸ್ತಿನಲ್ಲಿ ಉಪ್ಪರಿಗೆಯ ಮೊಗಸಾಲೆಯಿರುತ್ತಿತ್ತು. ಗೋಡೆಗಳ ಮೇಲೆ ಸುಟ್ಟ ಮಣ್ಣಿನ ಉಬ್ಬುಚಿತ್ರಫಲಕಗಳ ಅಲಂಕರಣವಿರುತ್ತಿತ್ತು. ಆ ಶಿಲ್ಪಗಳಲ್ಲಿ ರಾಮಾಯಣ ಮಹಾಭಾರತ ಮತ್ತು ಸಾಮಾನ್ಯ ಜನಜೀವನಕ್ಕೆ ಸಂಬಂಧಿಸಿದ ದೃಶ್ಯಗಳ ನಿರೂಪಣೆಯಿರುತ್ತಿತ್ತು. ಬಂಕುರಾ ಜಿಲ್ಲೆಯ ವಿಷ್ಣಪುರದಲ್ಲಿ ಮಲ್ಲರಾಜನ ಮನೆತನದ ದೊರೆಗಳು ಕಟ್ಟಿಸಿದ ದೇವಾಲಯಗಳು ಈ ರೀತಿಯವು. ಅಲ್ಲಿರುವ ಜಂಬುಕಲ್ಲಿನ ಏಕಶಿಖರದ ಲಾಲ್ಜುಯಿ (1 58), ಇಟ್ಟಿಗೆಯ ಏಕಶಿಖರದ ಮದನ ಮೋಹನ (1694), ಇಟ್ಟಿಗೆಯ ಪಂಚರತ್ನ ರೀತಿಯ ಶ್ಯಾಮರಾಯ (1643) ಮತ್ತು ಜಂಬುಕಲ್ಲಿನ ಪಂಚರತ್ನರೀತಿಯ ಮದನಗೋಪಾಲ (1665) ಮಂದಿರಗಳು, ಇವು 17ನೆಯ ಶತಮಾನದವಾದರೂ ಹಿಂದಿನ ಶೈಲಿಯ ನಿಜವಾದ ಪ್ರತೀಕಗಳಾಗಿವೆ. ಇದೇ ಶೈಲಿಯ ಎರಡು ಗುಡಿಗಳುಳ್ಳ ಜೋಡ್ ಬಂಗ್ಲಾ ಮಂದಿರಗಳಲ್ಲಿ ಮುಂಭಾಗದಲ್ಲಿ ಎರಡು ಗುಡಿಸಿಲುಗಳನ್ನು ಸೇರಿಸಿದ್ದಂತೆ ಕಂಡರೂ ಒಳಭಾಗದ ಮಧ್ಯದಲ್ಲಿ ಒಂದು ಥಾಕುರ್ ಬಡಿ ಮತ್ತು ಬದಿಗಳಲ್ಲಿ ಎರಡು ಕೋಣೆಗಳು ಇರುತ್ತಿದ್ದುವು. ಅವುಗಳಲ್ಲೊಂದರಲ್ಲಿರುತ್ತಿದ್ದ ಸೋಪಾನಪಂಕ್ತಿ ಮೇಲಿನ ಮೊಗಸಾಲೆಗೆ ಒಯ್ಯುತ್ತಿತ್ತು. ಗುಪ್ತಪಾರಾದ ಚೈತನ್ಯಮಂದಿರ ಮತ್ತು ವಿಷ್ಣುಪುರದ ಕೆಸ್ತರಾಯ (1726) ಈ ಮಾದರಿಯವು. ಮತ್ತೊಂದು ಮಾದರಿಯು ಪೌರಸ್ತ್ಯ ಶೈಲಿಯ ಸುಂದರ ಸತ್ತ್ವಪೂರ್ಣ ಕಟ್ಟಡಗಳು ಲಖ್ನೌತಿಯಲ್ಲಿ ಪಾಲ-ಸೇನರ ಆಶ್ರಯದಲ್ಲಿ ನಿರ್ಮಾಣಗೊಂಡುವು. ಅವನ್ನು ನೆರೆಯ ರಾಜಮಹಲ್ ಬೆಟ್ಟಗಳಲ್ಲಿ ಸಿಕ್ಕುವ ಕಪ್ಪು ಬಸಾಲ್ಟ್ ಕಲ್ಲಿನಲ್ಲಿ ಕಟ್ಟಲಾಗಿದೆ. ಈಗ ಆ ಕಟ್ಟಡಗಳು ನಾಶವಾಗಿದ್ದರೂ ಅನಂತರಕಾಲದ ಮುಸ್ಲಿಮ್ ವಾಸ್ತುಗಳಲ್ಲಿ ಅವುಗಳ ಕಲ್ಲುಗಳನ್ನು ಬಳಸಿಕೊಂಡಿರುವುದರಿಂದ ಆ ಹಿಂದೂ ಕಟ್ಟಡಗಳ ವಾಸ್ತುಲಕ್ಷಣಗಳನ್ನು ತಿಳಿಯಬಹುದು. ಆ ಹಿಂದೂ ದೇವಾಲಯಗಳಲ್ಲಿ ಅಲಂಕಾರ ಪೂರ್ಣವಾದ ಎತ್ತರವಾದ ಅಂತಸ್ತುಗಳಿದ್ದ ಶಿಖರಗಳು ಮತ್ತು ತ್ರಿಪತ್ರಕ (ಟ್ರಿಫಾಯಲ್) ಕಮಾನುಗಳಿರುತ್ತಿದ್ದುವು. ಅವು ಹೆಚ್ಚು ಕಡಿಮೆ ಬೋಧ್ ಗಯೆಯ ದೇವಾಲಯವನ್ನು ಹೋಲುತ್ತಿದ್ದುವು. ಗೌರ್ ಮತ್ತು ಪಾಂಡುವ ಪಟ್ಟಣಗಳಲ್ಲಿರುವ ಮಸೀದಿಗಳಲ್ಲಿ ಉಪಯೋಗಿಸಿರುವ ಶಿಲ್ಪ ಕೆತ್ತನೆಗಳು ಮೊದಲಿಗೆ ಆ ದೇವಾಲಯಗಳಿಗೆ ಸೇರಿದುವು. ಅವು ಪಶ್ಚಿಮ ಬಂಗಾಲದ ಅತ್ಯುತ್ತಮ ಕಲಾಕೃತಿಗಳು. ಅದೀನ ಮಸೀದಿಯ ಹಿಂದಿನ ಬಾಗಿಲಿನ ಚೌಕಟ್ಟು ಮೊದಲಿಗೆ ಲಖ್ನೌತಿಯ ವಿಷು ್ಣದೇವಾಲಯಕ್ಕೆ ಸೇರಿತ್ತು. ಅದರ ಇಬ್ಬದಿಗಳ ಕಂಬಗಳಿಗೆ ಹಗ್ಗದಂತೆ ಸುತ್ತಿಕೊಂಡಿರುವ ಶೇಷ, ತಳಭಾಗದಲ್ಲಿರುವ ಶೇಷನ ಸುರಳಿಗಳನ್ನು ಹೋಲುವ ಕಂಬದ ಪೀಠ, ಬಾಗಲುವಾಡದ ಮೇಲಿರುವ ಕಪೋತ ಇವು ಉತ್ತಮ ಕಲಾಕೃತಿಗಳು. ಗುಪ್ತರ ಶಿಲ್ಪಗಳಲ್ಲಿ ಕಾಣುವ ಭಾಂಡದೊಳಗಿಂದ ಹೊರ ಹೊಮ್ಮುವ ಲತಾಗುಚ್ಚಗಳು ಇವಕ್ಕೆ ಸ್ಫೂರ್ತಿಯಾಗಿವೆ. ಆ ಕಾಲದ ಅರಮನೆ, ಕೋಟೆ, ಕೊತ್ತಲಗಳು ಉಳಿದು ಬಂದಿಲ್ಲವಾದರೂ, ವಲ್ಲಾಳಸೇನನ ಅರಮನೆ ಕೊತ್ತಲಗಳ ಕಲ್ಲುಗಳನ್ನು ಬಳಸಿ ಆ ಸ್ಥಳದಲ್ಲಿ ಕಟ್ಟಿರುವ ಮಸೀದಿಯಲ್ಲಿರುವ ಕಂಬಗಳು ಅಂಥ ವಾಸ್ತು ನಿರ್ಮಾಣಗಳಿಗೆ ಸಾಕ್ಷಿ. ದುಂಡಾದ ಚತುರಸ್ರ ಅಥವಾ ಅಷ್ಟಮುಖ ಕಂಬಗಳು ಸಾಮಾನ್ಯವಾಗಿ 2.7 ಮೀ ಎತ್ತರ ಮತ್ತು 0,9 ಮೀ ಅಗಲ ಇವೆ. ಈ ಮೇಲೆ ವರ್ಣಿಸಿದ ಕಣ್ಮರೆಯಾದ ವಾಸ್ತುನೈಪುಣ್ಯವನ್ನು ಹೂಗ್ಲಿ ಜಿಲ್ಲೆಯ ಸತ್‍ಗಾಂವ್‍ನಲ್ಲಿ (ಸಂಸ್ಕೃತದ ಸಪ್ತಗ್ರಾಮ; ಈಗಿನ ತ್ರಿಬೇಣಿ) ಕಾಣಬಹುದು. ಅಲ್ಲಿರುವ ಆ ಶೈಲಿಯ ಎರಡು ಹಿಂದೂ ಕಟ್ಟಡಗಳಲ್ಲಿ ಒಂದನ್ನು ಮುಸ್ಲಿಮ್ ಸಮಾಧಿಯಾಗಿಯೂ ಮತ್ತೊಂದನ್ನು ಮಸೀದಿಯಾಗಿಯೂ ಪರಿವರ್ತಿಸಲಾಗಿದೆ. ಸಮಾಧಿ ಕಟ್ಟಡದಲ್ಲಿರುವ ಎರಡು ಕೋಣೆಗಳು ಮೊದಲಿಗೆ ವೈಷ್ಣವ ಮಂದಿರದ ಅಂತರಾಳ ಮತ್ತು ಸಭಾಮಂಟಪಗಳಾಗಿದ್ದುವು. ಅಲ್ಲಿದ್ದ ಹಿಂದೂ ಶಿಲ್ಪಗಳನ್ನು ಒಡೆದು ಹಾಕಲಾಗಿದೆ. ಅದಕ್ಕೆ ನಾಲ್ಕು ದಿಕ್ಕುಗಳಿಂದಲೂ ಬಾಗಿಲುಗಳಿವೆ. ಅವುಗಳ ಸರಳವಾದ ಸೊಬಗು ಗಮನಾರ್ಹ. ಪಶ್ಚಿಮಬಂಗಾಲ 1202ರಲ್ಲಿ ಮುಸ್ಲಿಮರ ವಶವಾದರೂ ಬಹಳ ಕಾಲದವರೆಗೆ ಅಲ್ಲಿ ಇಸ್ಲಾಮೀ ವಾಸ್ತುಶೈಲಿಯ ನಿರ್ಮಾಣಗಳು ಕಂಡುಬರಲಿಲ್ಲ. ಕ್ರಮೇಣ ಮಸೀದಿ ಮತ್ತು ಸಮಾಧಿಗಳ ನಿರ್ಮಾಣ ಪ್ರಾರಂಭವಾಯಿತು. ಇಸ್ಲಾಮೀ ಶೈಲಿಯ ಕಟ್ಟಡಗಳು ಬಹಳಮಟ್ಟಿಗೆ ಮಾಲ್ಡಾ ಜಿಲ್ಲೆಯಲ್ಲಿರುವ, ಹಲವು ಬಾರಿ ರಾಜಧಾನಿಗಳಾಗಿದ್ದ, ಲಖ್ನೌತಿ, ಗೌರ್ ಮತ್ತು ಪಾಂಡುವ ನಗರಗಳಲ್ಲಿ ಕೇಂದ್ರೀಕೃತವಾಗಿದ್ದುವು. ಅಲ್ಲಿ ಅನೇಕ ಕೋಟೆಕೊತ್ತಲಗಳ, ಅರಮನೆಗಳ, ಸೇತುವೆಗಳ, ದೇವಾಲಯಗಳ, ಮಸೀದಿಗಳ ಮತ್ತು ಸಮಾಧಿಗಳ ಅಧ್ಯಯನದಿಂದ ಪಶ್ಚಿಮಬಂಗಾಲದ ಇಸ್ಲಾಮೀ ವಾಸ್ತುಶೈಲಿಯ ಉಗಮ ಮತ್ತು ವಿಕಾಸಗಳನ್ನು ತಿಳಿಯಬಹುದು. ಆ ವಾಸ್ತುನಿರ್ಮಾಣಗಳನ್ನು 1200ರಿಂದ 1340ರ ವರೆಗಿನ, ಗೌರ್ ರಾಜಧಾನಿಯಾಗಿದ್ದ ಕಾಲದ ಅವಶೇಷಗಳು, 1340-1430ರ ನಡುವೆ ಪಾಂಡುವ ರಾಜಧಾನಿಯಾದಾಗಿನಿಂದ ಎಕ್ಲಾಖಿ ಸಮಾಧಿ ನಿರ್ಮಾಣದ ವರೆಗಿನ ಅವಶೇಷಗಳು, ಮತ್ತು 1442-1576ರಲ್ಲಿ ಮತ್ತೆ ಗೌರ್ ರಾಜಧಾನಿಯಾಗಿದ್ದ ಕಾಲದಲ್ಲಿ ಅವಶೇಷಗಳು, ಎಂದು ವಿಭಜಿಸಲಾಗಿದೆ. ಮೊದಲನೆಯ ವಿಭಾಗದ ಕಟ್ಟಡಗಳು ಬಹಳಮಟ್ಟಿಗೆ ನಾಶವಾಗಿದ್ದರೂ ತ್ರಿಬೇಣಿ ಮತ್ತು ಪಾಂಡುವಗಳಲ್ಲಿ ಕೆಲಮಟ್ಟಿಗೆ ಉಳಿದಿವೆ. ಪಾಂಡುವದ ಜೀರ್ಣವಾದ ಮಸೀದಿಯ ಗೋಡೆ ಮತ್ತು ಕಮಾನುಗಳನ್ನು ಇಟ್ಟಿಗೆಯಲ್ಲಿ ಕಟ್ಟಲಾಗಿದೆ. ಆದರೆ ಹಿಂದೂ ದೇವಾಲಯಗಳಿಂದ ಕಿತ್ತು ತಂದ ಬಸಾಲ್ಟ್ ಕಲ್ಲಿನ ಕಂಬಗಳನ್ನು ಬಳಸಲಾಗಿದೆ. ಅದರ ಮಧ್ಯದಲ್ಲಿರುವ ಮುಖ್ಯ ಮಿಹ್ರಾಬದ ಬಲಕ್ಕೆ ಕಲ್ಲಿನ ಉಪದೇಶ ವೇದಿಕೆ ಇದೆ. ಆ ಮಸೀದಿ ಪಾಂಡುವದ ಅನಂತರಕಾಲದ ದೊಡ್ಡ ಅದೀನ ಮಸೀದಿಗೆ ಮಾದರಿಯಾಗಿದೆ. ಪಶ್ಚಿಮ ಬಂಗಾಲದ ಚತುರಸ್ರತಳಹದಿಯ ಅನೇಕ ಗುಮ್ಮಟಗಳ ಮಸೀದಿಗಳಲ್ಲಿ ಅದು ಪ್ರಾಚೀನತಮವಾದುದು. ಅದರ ಬಳಿಯಲ್ಲಿ ಸಂತ ಷಾ ಪುರಿಯುದ್ದೀನ್ ಕಟ್ಟಿಸಿದ ಸ್ಮಾರಕಸ್ತಂಭವಿದೆ. ದೆಹಲಿಯ ಕುತ್ಬ್ ಮಿನಾರ್ ಮಾದರಿಯ ಅನೇಕ ಅಂತಸ್ತುಗಳು, ಪಾಶ್ರ್ವಮುಖಗಳು ಮತ್ತು ಪಟ್ಟಿಕೆಗಳು ಅಲಂಕರಣ ಗಮನಾರ್ಹವಾದರೂ ಅದು ಗುಜ್ಜಾಗಿದ್ದು ಒಟ್ಟು ನೋಟಕ್ಕೆ ಅಷ್ಟು ಸುಂದರವಾಗಿಲ್ಲ. 1298ರಲ್ಲಿ ನಿರ್ಮಿಸಿದ ತ್ರಿಬೇಣಿಯ ಮಸೀದಿ 16ನೆಯ ಶತಮಾನದಲ್ಲಿ ಬಹಳ ರಿಪೇರಿಗಳಿಗೆ ಗುರಿಯಾಗಿದೆ. ಅದರ ಬಳಿಯಿರುವ ಜಾಫರ್‍ಖಾನ್ ಘಾಜಿûಯ ಸಮಾಧಿ ಇನ್ನೂ ಪ್ರಾಚೀನವಾದುದಾದರೂ ಈಗ ಪಾಳುಬಿದ್ದಿದೆ. ಮೊದಲು ಕೃಷ್ಣ ದೇವಾಲಯವಾಗಿದ್ದ ಈ ಕಟ್ಟಡವನ್ನು ಪುನನಿರ್ಮಿಸಿದಾಗ ಬಸಾಲ್ಟ್ ಕಂಬಗಳ ನಡುವೆ ಇಟ್ಟಿಗೆಯ ಕಮಾನುಗಳನ್ನು ಸೇರಿಸಲಾಗಿದೆ. ಹಿಂದೂ ಕಟ್ಟಡಗಳನ್ನು ಮುಸ್ಲಿಮರು ತಮ್ಮ ಉಪಯೋಗಕ್ಕೆ ಪರಿವರ್ತಿಸಿಕೊಂಡ ರೀತಿಯನ್ನು ತಿಳಿಯಲು ಅದು ಉತ್ತಮ ನಿದರ್ಶನ. ಎರಡನೆಯ ವಿಭಾಗದ ಕಟ್ಟಡಗಳಲ್ಲಿ ಅತಿ ಮುಖ್ಯವಾದ ಆದೀನ ಮಸೀದಿ ಲಖ್ನೌತಿಯಿಂದ 17ಮೈಲಿ ದೂರದಲ್ಲಿರುವ ಹೊಸ ರಾಜಧಾನಿ ಪಾಂಡುವದಲ್ಲಿದೆ. ಸಿಕಂದರ್ ಷಾ (1358-1389) ತನ್ನ ಸ್ವಾತಂತ್ರ್ಯದ ಮತ್ತು ವೈಭವದ ಕುರುಹಾಗಿ ತನ್ನದೇ ಆದ ಹೊಸ ಶೈಲಿಯಲ್ಲಿ ಅದನ್ನು ಕಟ್ಟಿಸಿದ. ರಾಜಧಾನಿಯ ಹಲವು ಸಾವಿರ ಜನ ಮುಸ್ಲಿಮರು ಒಟ್ಟಿಗೆ ನಮಾಜು ಮಾಡಲು ಸಾಧ್ಯವಾಗುವಂಥ 122 ಮೀ ಘಿ 40 ಮೀ. ವಿಸ್ತಾರವಾದ ಪ್ರಾಂಗಣ. ಅದರ ಸುತ್ತಲೂ 260 ಕಂಬಗಳಿಂದ ಕೂಡಿದ ಮೊಗಸಾಲೆ ಇರುವ ಆ ಬೃಹತ್ ಮಸೀದಿಯ ನಿರ್ಮಾಣ 1364ರಲ್ಲಿ ಆಯಿತು. ನಾಲ್ಕು ದಿಕ್ಕುಗಳಲ್ಲೂ ಹಲವಾರು ಕಮಾನುಗಳಿದ್ದುವು. ಪಶ್ಚಿಮ ದಿಕ್ಕಿನ ಮಧ್ಯಭಾಗದಲ್ಲಿ ಬಹಳ ಉನ್ನತವಾದ ಗುಮ್ಮಟವಿತ್ತು. ಪ್ರಾಂಗಣದ ಸುತ್ತ 88 ಕಮಾನುಗಳನ್ನೊಳಗೊಂಡ 6.7 ಮೀ ಎತ್ತರದ ಕೈಪಿಡಿ ಗೋಡೆಯಿತ್ತು. ಮೊಗಸಾಲೆಯ ಚಾವಣಿಯ ಮೇಲೆ ಎದ್ದು ಕಾಣುವ 306 ಗುಮ್ಮಟಗಳಿದ್ದುವು. ಪ್ರಾಂಗಣದ ಆಗ್ನೇಯ ಮೂಲೆಯಲ್ಲಿದ್ದ ಮೂರು ಕಮಾನು ಬಾಗಿಲುಗಳಲ್ಲಿ ಒಂದು ಕೆಳ ಅಂತಸ್ತಿನ ಒಳಕೋಣೆಗೂ ಮತ್ತೆರಡು ಮೇಲಂತಸ್ತಿನ ಬಾದಷಾ-ಕಿ-ತಖ್ತ್ ಅಥವಾ ಸುಲ್ತಾನನ ಗದ್ದುಗೆಯಿದ್ದ ಕೋಣೆಗೆ ಪ್ರವೇಶ ನೀಡುವ ಸೋಪಾನಪಂಕ್ತಿಗಳಿಗೂ ಪ್ರವೇಶ ನೀಡುತ್ತಿದ್ದುವು. ಅಲ್ಲಿರುವ ಕಂಬಗಳು ವೈಶಿಷ್ಟ್ಯಪೂರ್ಣವಾದವು. ಇಂಥವು ಬಂಗಾಲದ ಹೊರಗೆಲ್ಲೂ ಕಾಣಬರುವುದಿಲ್ಲ. ಮಸೀದಿಯ ಪಶ್ಚಿಮದ ಒಳಗೋಡೆಯಲ್ಲಿ ಪ್ರತಿ ಅಂಕಣದ ಮಧ್ಯದಲ್ಲೂ ಸುಂದರ ಕೆತ್ತನೆ ಮತ್ತು ಶಿಲ್ಪಗಳಿಂದ ಅಲಂಕೃತವಾದ ಮುನ್‍ಚಾಚಿದ ಕಮಾನುಗೂಡುಗಳಲ್ಲಿ 32 ಮಿಹ್ರಾಬ್‍ಗಳಿದ್ದವು. ಮಸೀದಿಯ ಗುಡಿಯ ಭಾಗದ ಮಧ್ಯದಲ್ಲಿ 21 ಮೀ ಘಿ 10 ಮೀ ವಿಸ್ತೀರ್ಣದ ಮತ್ತು 15 ಮೀ ಎತ್ತರದ ಹಜಾರವಿತ್ತು. ಅದರ ಇಬ್ಬದಿಗಳಲ್ಲಿ ಸಮಕೋನದಲ್ಲಿ ಅಡ್ಡನಾಗಿ ಐದೈದು ಹಜಾರಗಳು ಇದ್ದುವು. ಹಜಾರಗಳ ಮುಖಭಾಗದಲ್ಲಿದ್ದ 15ಮೀ ಅಗಲ ಮತ್ತು 18ಮೀ ಎತ್ತರದ ಅಡ್ಡ ಗೋಡೆಯಲ್ಲಿ 15 ಮೀ ಎತ್ತರ ಮತ್ತು 10ಮೀ ಅಗಲವುಳ್ಳ ಅದ್ಭುತವಾದ ಕಮಾನು ಬಾಗಿಲಿತ್ತು. ಅದರ ಇಬ್ಬದಿಗಳಲ್ಲಿರುವ ಸಣ್ಣ ಬಾಗಿಲುಗಳಿಂದ ಪ್ರಾರ್ಥನಾ ಸಮಯದ ಘೋಷಕ ಮ್ಯುಎಜಿನ್ ಮೇಲಂತಸ್ತಿನ ಮಿನಾರತ್ತಿಗೆ ಹೋಗಬಹುದಿತ್ತು. ಹಜಾರದ ಹಿಂದಿನ ಗೋಡೆಯನ್ನು ಬಹಳ ಕಲಾತ್ಮಕವಾಗಿ ಶೃಂಗರಿಸಲಾಗಿದೆ. ಈ ಭವ್ಯ ಸುಂದರ ವಿಶಾಲ ಮಸೀದಿಯ ಕೆಳಗಿನರ್ಧವನ್ನು ಹಿಂದೂ ದೇವಾಲಯಗಳಿಂದ ಕಿತ್ತು ತಂದ ಕಲ್ಲುಗಳಿಂದಲೂ ಮೇಲಿನ ಕಮಾನು ಮತ್ತು ಗುಮ್ಮಟಗಳನ್ನು ಇಟ್ಟಿಗೆಗಳಿಂದಲೂ ಕಟ್ಟಲಾಗಿದೆ. ಈ ಶೈಲಿಗೆ ಸೇರಿದ ಗೌರ್‍ನಲ್ಲಿರುವ ಅಖಿ ಸೂರಜುದ್ದೀನನ ಮಸೀದಿ ಮತ್ತು ಸಮಾಧಿ, ಊರಿನ ದಕ್ಷಿಣಕ್ಕಿರುವ ಕೊತ್ವಾಲಿ ದರ್ವಾಝಾ ಉಲ್ಲೇಖಾರ್ಹವಾದರೂ ಆದೀನದಷ್ಟು ಭವ್ಯವಾಗಿಲ್ಲ. ಮೂರನೆಯ ವಿಭಾಗದ ಕಟ್ಟಡಗಳು ಇಸ್ಲಾಮೀ ವಾಸ್ತುಪದ್ಧತಿಯಲ್ಲಿ ಹೊಸ ಪ್ರಾದೇಶಿಕ ಶೈಲಿಯ ಪ್ರಾದುರ್ಭಾವದ ಪ್ರತೀಕಗಳು. ಈವರೆಗೆ ತಮ್ಮ ವಿಶಿಷ್ಟ ಶೈಲಿಯನ್ನು ಬಳಸಿದ ಮುಸ್ಲಿಮರು ಭೌಗೋಳಿಕ ಪರಿಸರ ಮತ್ತು ಅಧಿಕಮಳೆಯ ಪ್ರಭಾವಗಳಿಂದ ತಮ್ಮ ಕಟ್ಟಡಗಳಿಗೆ ಒದಗುವ ಹಾನಿಯನ್ನು ನಿವಾರಿಸುವ ಸಲುವಾಗಿ ಆ ಮೊದಲು ಹಿಂದೂಗಳು ಬಳಸುತ್ತಿದ್ದ ಇಳಿಜಾರು ಚಾವಣಿಯ ಕಟ್ಟಡಶೈಲಿಗೆ ಶರಣಾದರು. ಆ ಶೈಲಿಯ ಕಟ್ಟಡಗಳಿಗೆ ಮಾದರಿಯಾಗಿರುವ ಎಕ್ಲಾಖಿ ಸಮಾಧಿ (1425) ಪಾಂಡುವದಲ್ಲಿದೆ. ವಿಶಿಷ್ಟ ವಾಸ್ತುಲಕ್ಷಣದಿಂದ ಕೂಡಿದ ಈ ಸಮಾಧಿ ಆ ಶೈಲಿಯ ವಿಕಾಸದ ಪ್ರಥಮ ಹಂತವಾಗಿದೆ. ಅನಂತರದ ಆ ಶೈಲಿಯ ಕಟ್ಟಡಗಳಿಗೆ ಮಾದರಿಯಾಗಿದೆ. ಈ ದೃಷ್ಟಿಯಿಂದ ಇದು ಗಮನಾರ್ಹವಾದ್ದಾಗಿದೆ. 23 ಮೀ ಚತುರಸ್ರ ತಳಹದಿಯ ಆ ಕಟ್ಟಡದ ಎತ್ತರ 7.5 ಮೀ. ಅದರ ಮೂರು ತಿರುವುಗಳ ಸೂರು 14 ಮೀ ವ್ಯಾಸದ ಗುಮ್ಮಟ, ಮೂಲೆಗಳಲ್ಲಿರುವ ಸಣ್ಣ ಅಷ್ಟಸ್ತ್ರ ಗೋಪುರಗಳು-ಇವು ಆ ಕಟ್ಟಡದ ಮುಖ್ಯ ಲಕ್ಷಣಗಳು. ಮುಖಭಾಗದ ಗೋಡೆಯಲ್ಲಿ ಎದ್ದುಕಾಣುವ ಇಟ್ಟಿಗೆವರಸೆ, ಅದು ಎರಡು ಅಂತಸ್ತುಗಳ ಕಟ್ಟಡವೆಂಬ ಭ್ರಮೆಯನ್ನುಂಟು ಮಾಡುತ್ತದೆ. ನಾಲ್ಕು ದಿಕ್ಕುಗಳಲ್ಲಿ ಹಿಂದೂ ಕಟ್ಟಡಗಳಿಂದ ತಂದು ಸೇರಿಸಿದ ಕಲ್ಲಿನ ಬಾಗಿಲುಗಳ ಮೇಲೆ ಇಟ್ಟಿಗೆಯ ಕಮಾನುಗಳನ್ನು ರಚಿಸಲಾಗಿದೆ. ಸಮಾಧಿಕೋಣೆ ಅಷ್ಟಸ್ರವಾಗಿದ್ದು 14ಮೀ ವ್ಯಾಸವುಳ್ಳದ್ದಾಗಿದೆ. ಗೌರ್ ನಗರದ ಕೋಟೆಯ ದಖಿಲ್ ದರ್ವಾeóÁ (1465)ವಿಜಯಸ್ಮಾರಕವಾಗಿ ಇಟ್ಟಿಗೆಯಲ್ಲಿ ಕಟ್ಟಿದ ವಿಶಿಷ್ಟ ಕಟ್ಟಡ. 34.5 ಮೀ. ಉದ್ದ, 23 ಮೀ ಅಗಲ ಮತ್ತು 18 ಮೀ ಎತ್ತರದ ಕಮಾನು ಹೆಬ್ಬಾಗಿಲಿನ ಇಬ್ಬದಿಗಳಲ್ಲಿ ಕಾವಲುಗಾರರ ಕೋಣೆಗಳಿದ್ದುವು. ಗೋಡೆಗಳ ಮೇಲಿನ ಸುಟ್ಟ ಮಣ್ಣಿನ ಶಿಲ್ಪ ಫಲಕಗಳು ಕಟ್ಟಡದ ಸೌಂದರ್ಯವನ್ನು ಹೆಚ್ಚಿಸಿದ್ದುವು. ಮುಂದಿನ 75 ವರ್ಷಗಳಲ್ಲಿ ಎಕ್ಲಾಖಿ ಸಮಾಧಿಯ ಮಾದರಿಯ ಹಲವು ಮಸೀದಿಗಳು ಸಮಾಧಿಗಳಲ್ಲಿ ವಿವಿಧ ಸ್ಥಳಗಳಲ್ಲಿ ನಿರ್ಮಿತವಾದವು. ಕೆಲವು ಮಸೀದಿಗಳಲ್ಲಿ ತೆರೆದ ಒಳ ಪ್ರಾಂಗಣದ ಬದಲು, ಮಳೆಯಿಂದ ರಕ್ಷಣೆ ಪಡೆಯಲು ಚಾವಣಿಯಿಂದ ಕೂಡಿದ, ಕಂಬಗಳಿಂದ ಬೇರ್ಪಡಿಸಿದ ಅಂಕಣಗಳಿದ್ದ ವಿಶಾಲ ಹಜಾರಗಳನ್ನು ನಿರ್ಮಿಸಲಾಯಿತು. ಹಜಾರಗಳಿಗೆ ಮುಂಭಾಗದಿಂದ 10-12 ಬಾಗಿಲುಗಳೂ ಬದಿಗಳಿಂದ 2-3 ಬಾಗಿಲುಗಳೂ ಇರುತ್ತಿದ್ದುವು. ಗೋಡೆಗಳ ಮೇಲ್ಭಾಗವನ್ನು ಆಯಾಕಾರದ ಫಲಕಗಳಾಗಿ ವಿಭಾಗಿಸಿ ಅವುಗಳಲ್ಲಿ ಕೆತ್ತನೆಯ ಅಲಂಕಾರ ಮಾಡಲಾಗುತ್ತಿತ್ತು. ಹಜಾರದ ಹಿಂಬದಿಯ ಗೋಡೆಗಳಲ್ಲಿದ್ದ ಮುನ್‍ಚಾಚಿದ ಕಮಾನುಗೂಡುಗಳಲ್ಲಿ ಮಿಹ್ರಾಬ್‍ಗಳಿರುತ್ತಿದ್ದವು. ಗೌರ್‍ನ ತಂತಿಪಾರಾ ಮಸೀದಿ (1475), ಬಗೇರ್ಲಟ್‍ನ ಸಾತ್ ಗುಂಬeóï (1470) ಗೌರ್‍ನ ಚಮ್‍ಖಾನ್ ಮಸೀದಿ (1475), ದಾರಸ್‍ಬಾರಿ ಮತ್ತು ಲೋಟಾನ್ ಮಸೀದಿಗಳು (1480), ಗುಣ್ಮಂತ್ ಮಸೀದಿ (1484), ಛೋಟಾ ಸೊನಾ ಮಸೀದಿ (1510), ಬಡಾ ಸೋನಾ ಮಸೀದಿ (1526) ಮತ್ತು ಕದಮ್ ರಸೂಲ್ ಮಸೀದಿ (1530) ಇವು ಈ ಶೈಲಿಯ ಇತರ ಕಟ್ಟಡಗಳು. ಇವುಗಳಲ್ಲಿ ದೊಡ್ಡದಾದ ಬಡಾ ಸೋನಾ ಮಸೀದಿಯ ವ್ಯಾಸ 61ಮೀ. ಮೂರು ದಿಕ್ಕುಗಳಲ್ಲಿ ಇದಕ್ಕೆ ದೊಡ್ಡ ಕಮಾನು ಬಾಗಿಲುಗಳಿವೆ. ಇಟ್ಟಿಗೆಯ ಆಯಾಕಾರದ ಮಂದಿರದ ವಿಸ್ತಾರ 51 ಮೀ ಘಿ 22ಮೀ ಎತ್ತರ 6 ಮೀ ತುದಿಗಳಲ್ಲಿರುವ ಸಣ್ಣ ಗೋಪುರಗಳ ನಡುವೆ 11 ಕಮಾನುಗಳಿದ್ದುವು. ಒಳಗಿನ ಪ್ರತಿ ಅಂಕಣದಲ್ಲೂ ಮಿಹ್ರಾಬ್‍ಗಳಿವೆ. ಕುತ್ಬ್ ಮಿನಾರ್ ಮಾದರಿಯ ಐದು ಅಂತಸ್ತುಗಳ ಫಿರೋಜ್ ಮಿನಾರ್ (1488) ಮೊದಲಿಗೆ ವಿಜಯಸ್ತಂಭವಾಗಿತ್ತು. ಈಗ ಮ್ಯುಎಜಿನ್ ಅದನ್ನು ಬಳಸುತ್ತಿದ್ದಾನೆ. ಅದರ ಕೆಳಗಿನ ಮೂರಂತಸ್ತುಗಳಿಗೆ 12 ಪಾರ್ಶ್ವಗಳಿವೆ. ಮೇಲಿನ ಎರಡು ಅಂತಸ್ತುಗಳು ವೃತ್ತಾಕಾರದಲ್ಲಿವೆ. ಸುಟ್ಟ ಮಣ್ಣಿನ ಫಲಕಗಳೊಂದಿಗೆ ನೀಲಿ ಮತ್ತು ಬಿಳಿಯ ಲೇಪದ ಗಾಜಿನ ಹೆಂಚುಗಳ ಅಲಂಕರಣ ಅದರ ಸೊಬಗನ್ನು ಹೆಚ್ಚಿಸಿದೆ. ಮೂರ್ತಿಶಿಲ್ಪ ಪಶ್ಚಿಮ ಬಂಗಾಲದಲ್ಲಿ ಮೌರ್ಯಪೂರ್ವ ಅಥವಾ ಮೌರ್ಯಕಾಲದ ಯಾವ ಶಿಲ್ಪಗಳೂ ದೊರಕಿಲ್ಲ. ಮಹಾಸ್ತಾನದಲ್ಲಿ ಸಿಕ್ಕಿರುವ ಕುಷಾಣಪೂರ್ವದ ಸುಟ್ಟಮಣ್ಣಿನ ಕೆಲವು ಗೊಂಬೆಗಳನ್ನು ಬರಿಗೈಯಿಂದ ಅಥವಾ ಅಚ್ಚುಗಳಲ್ಲಿ ರೂಪಿಸಲಾಗಿದೆ. ಅವುಗಳಲ್ಲಿ ಹೆಚ್ಚಿನ ಕಲಾವಂತಿಕೆಯಿಲ್ಲ. ಕುಮಾರಪುರ ಮತ್ತು ನಿಯಾಮತ್‍ಪುರಗಳ ಸೂರ್ಯ, ಮತ್ತು ಹಂಕ್ರೈಲ್‍ನ ವಿಷ್ಣ ಗಮನಾರ್ಹ ಶಿಲ್ಪಗಳು. ಅವುಗಳ ವಸ್ತುಗಳ ನಿರೂಪಣೆ ಮತ್ತು ಶೈಲಿಯಿಂದ ಅವನ್ನು ಕುಷಾಣರ ಕಾಲಕ್ಕೆ ನಿರ್ದೇಶಿಸಲಾಗಿದೆ. ಕುಮಾರಪುರದ ಸೂರ್ಯ ಏಳು ಕುದುರೆಗಳ ರಥದಲ್ಲಿ ಇಬ್ಬರು ಸೇವಕರ ನಡುವೆ ಪೀಠದ ಮೇಲೆ ಎರಡು ಕೈಗಳಲ್ಲಿ ಕಮಲಗಳನ್ನು ಹಿಡಿದು ನಿಂತಿದ್ದಾನೆ. ಉದ್ದನೆಯ ಅಂಗಿಯನ್ನು ತೊಟ್ಟ, ವಿಶಾಲದೇಹದ, ದುಂಡು ಕಣ್ಣುಗಳ ಈ ಶಿಲ್ಪದ ತಲೆಯ ಮೇಲೆ ಕಿರೀಟವಿದೆ. ಇದನ್ನು ಹೋಲುವ ನಿಯಾಮತ್‍ಪುರದ ಶಿಲ್ಪದಲ್ಲಿ ಅಂಗಿಯ ಮೇಲೆ ಸೊಂಟಪಟ್ಟಿಯನ್ನು ತೋರಿಸಲಾಗಿದೆ. ಹಂಕ್ರೈಲ್‍ನ ಚತುರ್ಭುಜ ವಿಷ್ಣುವಿನ ಎರಡು ಕೈಗಳು ಮುರಿದಿವೆ. ಉಳಿದಿರುವ ಬಲದ ಮೇಲ್ಕೈಯಲ್ಲಿ ಪದ್ಮ, ಎಡ ಮೇಲ್ಕೈಯಲ್ಲಿ ಶಂಖ, ಮತ್ತು ತಲೆಯ ಮೇಲೆ ಕಿರೀಟ ಮುಕುಟ ಇವೆ. ನಡುವಿಗೆ ಧೋತ್ರವನ್ನು ಸುತ್ತಲಾಗಿದೆ. ಗುಪ್ತಕಾಲದ ಶಿಲ್ಪಗಳಲ್ಲಿ ಸುಲ್ತಾನ್‍ಗಂಜ್‍ನ ತಾಮ್ರದ ಬ್ರಹತ್ ವಿಗ್ರಹ ಅಷ್ಟು ಸುಂದರವಾಗಿಲ್ಲ. ಅದರ ಮುಖದ ಮೇಲೆ ಕಂಡುಬರುವ ದೈವೀಲಾಸ್ಯ ಗಮನಾರ್ಹ. ಪಹಾಡ್‍ಪುರದಲ್ಲಿ ಸಿಕ್ಕಿರುವ ಅಧಿಕ ಸಂಖ್ಯೆಯ ಮೂರ್ತಿಶಿಲ್ಪಗಳು ಬಂಗಾಲ ಶಿಲ್ಪ ಕಲೆಯ ಉತ್ತಮ ನಿದರ್ಶನಗಳು. ಗುಪ್ತ ಮತ್ತು ಪಾಲ-ಸೇನ ಶಿಲ್ಪ ಶೈಲಿಗಳ ಮಧ್ಯದ ಹಂತವನ್ನು ಸೂಚಿಸುವ ಈ ಕೃತಿಗಳು ಪಾಲಶಿಲ್ಪಿಗಳಿಗೆ ಪ್ರೇರಕ, ಇವುಗಳಲ್ಲಿ ಕೆಲವು ಗುಪ್ತ ಶೈಲಿಯನ್ನು ಪ್ರತಿಬಿಂಬಿಸುತ್ತವೆ. ರಾಧಾಕೃಷ್ಣಮೂತಿಯದು ಕೃಶವಾದ ಲಾಲಿತ್ಯಮಯ ದೇಹ. ಮುಂದಿನ ಹಂತದ ಯಮುನೆಯ ಶಿಲ್ಪದಲ್ಲಿ ಕೆಲವು ಮಾರ್ಪಾಡುಗಳಾಗಿವೆ. ಅದಕ್ಕೂ ಮುಂದಿನ ಹಂತದ ಶಿಲ್ಪಗಳು ಭಾರವಾದ ದೇಹಗಳುಳ್ಳವಾಗಿಯೂ ಸಡಿಲವಾಗಿಯೂ ಉಬ್ಬಿಕೊಂಡು ಇರುವುವಲ್ಲದೆ ಕೆಲವು ಭಾರಿ ಪೆಡಸಾಗಿರುತ್ತವೆ. ಇಂದ್ರ ಮತ್ತು ಬೃಹಸ್ಪತಿ ಶಿಲ್ಪಗಳು ಇವಕ್ಕೆ ಉತ್ತಮ ನಿದರ್ಶನ. ಅತ್ಯಂತ ಭಾರವಾದ ಶಲಾಕೆಯಂತೆ ಪೆಡಸಾದ ದೇಹವುಳ್ಳ ಅಂಥ ಶಿಲ್ಪಗಳು ಮುಂದಿನ ಹಂತದಲ್ಲಿ ಕಲಾಭಿರುಚಿಯಲ್ಲಿ ಉಂಟಾದ ಅವನತಿಯನ್ನು ಪ್ರತಿಬಿಂಬಿಸುತ್ತವೆ. ಅವುಗಳ ನಿರೂಪಣೆ ಬಹಳ ಒರಟು. ವಾಲಿ ಸುಗ್ರೀವರ ಕಾಳಗ, ಸಂಜೀವಿನಿ ಪರ್ವತವನ್ನು ಹೊತ್ತ ಹನುಮಾನ್ ಇವು ಈ ರೀತಿಯ ಶಿಲ್ಪಗಳು. ಬೋಗ್ರಾ ಜಿಲ್ಲೆಯ ದೇವೋರಾದ ಸೂರ್ಯಶಿಲ್ಪ ಬಂಗಾಲ ಶೈಲಿಯ ಭಾವಾವೇಶದ ಪ್ರತೀಕ. ದುಂಡಾದ ಪ್ರಭಾ ಮಂಡಲದ ಕೆಳಗೆ ದಂಡಿ, ಪಿಂಗಳ, ಉಷಾ ಮತ್ತು ಪ್ರತ್ಯುಷಾ ಇವರಿಂದ ಆವೃತನಾಗಿ ನಿಂತ ಸೂರ್ಯನ ಕೈಗಳಲ್ಲಿ ಕಮಲಗಳಿವೆ. ಅವನು ಕಿರೀಟ, ಕಂಠಹಾರ, ಕೈಕಡಗಗಳು ಮತ್ತು ಪಾದರಕ್ಷೆಗಳನ್ನು ಧರಿಸಿದ್ದಾನೆ. ಪೀಠದ ಮೇಲೆ ಸಪ್ತಾಶ್ವಗಳನ್ನೂ ಅರುಣನನ್ನೂ ತೋರಿಸಲಾಗಿದೆ. ಈ ಶಿಲ್ಪ ಮತ್ಸ್ಯಪುರಾಣದ ವರ್ಣನೆಗೆ ಅನುಸಾರವಾಗಿದೆ. ಮಹಾಸ್ತಾನದ, ಚಿನ್ನದ ಲೇಪವುಳ್ಳ, ಕಂಚಿನ ಸರಳಸುಂದರ ಭಾವಪೂರ್ಣ ಮಂಜುಶ್ರೀ ಶಿಲ್ಪದ ಕೈಗಳು ವರದ ಮತ್ತು ವಿತರ್ಕ ಮುದ್ರೆಗಳಲ್ಲಿವೆ. ಧೋತ್ರ, ನಡುಪಟ್ಟಿ, ಉತ್ತರೀಯ, ಯಜ್ಞೋಪವೀತ, ಕರ್ಣಕುಂಡಲಗಳು ಮತ್ತು ಬೆಳ್ಳಿಯ ಕಣ್ಣುಗಳನ್ನು ತೊಡಿಸಲಾಗಿದೆ. ಇದು ಚಿನ್ನದ ಲೇಪವುಳ್ಳ ಕಂಚಿನ ವಿಗ್ರಹಪದ್ಧತಿಯ ಮೊದಲ ನಿದರ್ಶನ. ಅನಂತರ ಕಾಲದಲ್ಲಿ ಟಿಬೆಟ್ ಮತ್ತು ಪೂರ್ವಭಾರತಗಳಲ್ಲಿ ಈ ಪದ್ಧತಿ ಪ್ರಸಾರವಾಯಿತು. ಚುದ್ದ ಗ್ರಾಮದ ರಾಣಿ ಪ್ರಭಾವತಿ ಮಾಡಿಸಿದ ಎಂಟು ಕೈಗಳ ಸರ್ವಾಣಿ ಮತ್ತು ಕಲ್ಕತ್ತೆಯ ವಸ್ತುಸಂಗ್ರಹಾಲಯದಲ್ಲಿರುವ ಶಿವ-ಈ ಕಂಚು ಶಿಲ್ಪಗಳು ಗುಪ್ತಶೈಲಿಯ ಸಾಧಾರಣ ಕೃತಿಗಳು. ಎಲ್ಲ ತಾಮ್ರ-ಕಂಚು ಶಿಲ್ಪಗಳನ್ನು 6-7ನೇ ಶತಮಾನಗಳಿಗೆ ನಿರ್ದೇಶಿಸಬಹುದು. ಪಾಲ-ಸೇನರ ಕಾಲದ (750-1206) ಪಶ್ಚಿಮ ಬಂಗಾಲದ ಮೂರ್ತಿಶಿಲ್ಪ ಕಲೆ ವೈವಿಧ್ಯಪೂರ್ಣವಾದ್ದು. ಆಗಿನ ಶಿಲ್ಪಗಳು ರಾಜಮಹಲ್ ಬೆಟ್ಟಗಳಲ್ಲಿ ದೊರಕುವ ಕಪ್ಪು ಛಾಯೆಯ ಬಳಪದ ಕಲ್ಲಿನಲ್ಲಿ ಗುಪ್ತಶಿಲ್ಪಗಳ ಅನುಕರಣೆಯ, ಬೊಜ್ಜುದೇಹದ ಒರಟು ಶಿಲ್ಪಗಳನ್ನು ಮೊದಲು ತಯಾರಿಸಿದರು. ಫಲಕಗಳಲ್ಲಿರುವ ಉಬ್ಬುಶಿಲ್ಪಗಳು ಸರಳವಾಗಿಯೂ ಚಲನಾತ್ಮಕವಾಗಿಯೂ ಇದೆ. 10ನೆಯ ಶತಮಾನದ ವೇಳೆಗೆ ಉಡುಪುಗಳು, ಆಭರಣಗಳು ಮತ್ತು ಹಿನ್ನೆಲೆ ಸಂಪದ್ಭರಿತವೂ ಆಕರ್ಷಕವೂ ಆದುವು. ಶಕ್ತಿಯುತ ಕೃಶದೇಹ ಮತ್ತು ನೀಳ ಸ್ನಗ್ಧವದನದಿಂದ ಕೂಡಿದ ಮೂರ್ತಿಗಳು ಸತ್ವಪೂರ್ಣವಾಗಿವೆ. 11ನೆಯ ಶತಮಾನದ ವೇಳೆಗೆ ಮೇಲ್ನೋಟದ ಸೊಬಗಿಗೆ ಪ್ರಾಧಾನ್ಯದೊರಕಿ, ಶಿಲ್ಪಗಳು ನಿಸ್ಸತ್ತ್ವವಾದುವು. ಇವು ಅತಿ ನೀಳದೇಹ, ಅಸಹಜ ಸ್ನಿಗ್ಧತೆ, ಸೋಗಿನ ಚಲನೆ, ಅತ್ಯಲಂಕಾರದ ಉಡುಪು ಮತ್ತು ಆಭರಣಗಳಿಂದ ಕೂಡಿವೆ. ಪ್ರಾರಂಭದಲ್ಲಿ, ಅಕೃತ್ರಿಮ ಧಾರ್ಮಿಕ ಭಾವನೆಗಳಿಂದ ಪ್ರೇರಿತವಾದ ಶಿಲ್ಪಕಲೆ ಕ್ರಮೇಣ ಮತೀಯ ದೃಷ್ಟಿಯಲ್ಲಿ ಶುದ್ಧವಾಗಿದ್ದರೂ ಅಂತಸ್ಸತ್ವರಹಿತವಾಗಿ ರಾಜಾಸ್ಥಾನ ಸಹಜ ವಿಷಯಲಂಪಟತೆಯನ್ನು ಸೂಚಿಸುತ್ತವೆಂದರೆ ತಪ್ಪಾಗಲಾರದು. ಈಗ ಬಾಸ್ಟನ್ ಸಂಗ್ರಹಾಲಯದಲ್ಲಿರುವ ಬುದ್ಧವಿಗ್ರಹ ಮೊದಲನೆಯ ಶೈಲಿಯ ಉತ್ತಮ ನಿದರ್ಶನ. ವಿಶ್ವಪದ್ಮಾಸನದ ಮೇಲೆ, ಭೂಮಿಸ್ಪರ್ಶಮುದ್ರೆಯಲ್ಲಿ ಕುಳಿತಿರುವ ಧ್ಯಾನಿಬುದ್ಧನ ಕಿರೀಟ. ಕಂಠಹಾರ, ಕರ್ಣಕುಂಡಲ ಮುಂತಾದ ಆಭರಣಗಳು ಅಸಹಜವಾದರೂ, ಮಹಾಯಾನ ಪಂಥದಲ್ಲಿ ನಡೆದ ಬುದ್ಧನ ದೈವೀಕರಣದ ಪ್ರಯತ್ನದಲ್ಲಿ ವಿಶ್ವಸಮ್ರಾಟನ ನಿರೂಪಣೆ ಸಹಜವಾಗಿದೆ. ಆ ಶಿಲ್ಪದ ಪ್ರಭಾವಳಿಯಲ್ಲಿ ಗೌತಮನ ಜನನ, ಮಹಾಪರಿನಿರ್ವಾಣ, ಮೊದಲಾದ ಕೆಲವು ಘಟನೆಗಳನ್ನೂ ಪೀಠದ ಮೇಲೆ ಭಕ್ತರ ಮತ್ತು ಯಕ್ಷರ ಮೂರ್ತಿಗಳನ್ನೂ ಕಡೆಯಲಾಗಿದೆ. ಕಲ್ಕತ್ತೆಯ ವಂಗೀಯ ಸಾಹಿತ್ಯ ಪರಿಷತ್ತಿನ ಸಂಗ್ರಹಾಲಯದಲ್ಲಿರುವ, ವಿಶ್ವಪದ್ಮಾಸನದ ಮೇಲೆ ಸಮಪಾದ ಸ್ಥಾನಕ ಭಂಗಿಯಲ್ಲಿ ನಿಂತ ಬುದ್ಧಶಿಲ್ಪದ ಪೀಠದ ಮೇಲೆ 9ನೆಯ ಶತಮಾನದ ಅಕ್ಷರಗಳಲ್ಲಿ `ಯೇ ಧರ್ಮಃ ಹೇತು ಪ್ರಭವಾ. . . .ಮಹಾಶ್ರವಣಃ ಎಂಬ ಬೌದ್ಧತತ್ತ್ವದ ಬರಹವಿದೆ. ಅದರ ಪ್ರಭಾವಳಿಯ ಮೇಲೆ ಅಪೂರ್ವವಾದ ಯೋಗಾಸನ ಮುದ್ರೆಯಲ್ಲಿ ಕುಳಿತ ಬುದ್ಧನ ತೊಡೆಗಳ ಮೇಲೆ ಸೇರಿಸಲಾದ ಕೈಗಳಲ್ಲಿ ಭಿಕ್ಷಾಪಾತ್ರೆಯನ್ನಿಡಲಾಗಿದೆ. ಪೀಠದ ಮೇಲೆ ಒಂದು ಮಂಗ ಮರದ ಮೇಲಿನ ಜೇನುಗೂಡಿನಿಂದ ಜೇನನ್ನು ತಂದು ಪಾತ್ರೆಯಲ್ಲಿ ಹಾಕುತ್ತಿರುವಂತೆ ರೂಪಿಸಲಾಗಿದೆ. ಮಿಡ್ನಾಪುರ ಜಿಲ್ಲೆಯ ಬಾರಾಭೂಮ್‍ನಲ್ಲಿ ಸಿಕ್ಕಿದ, ಈಗ ಇಂಡಿಯನ್ ಸಂಗ್ರಹಾಲಯದಲ್ಲಿರುವ, ಋಷಭನಾಥನ ಶಿಲ್ಪ 10ನೆಯ ಶತಮಾನದ್ದು. ಗುಡಿಯ ಆಕಾರದ ಫಲಕದ ಮಧ್ಯದಲ್ಲಿ ಧ್ಯಾನಾಸಕ್ತನಾದ ಋಷಭನಾಥನ ಸುತ್ತ 23 ಜಿನಬಿಂಬಗಳಿವೆ. ಇಬ್ಬದಿಗಳಲ್ಲಿ ಚಾಮರಧಾರಿಗಳನ್ನೂ ಹಾರುತ್ತಿರುವ ಮಾಲಾಧಾರಿ ವಿದ್ಯಾಧರರನ್ನೂ ಪೀಠದ ಮೇಲೆ ಎರಡು ಸಿಂಹಗಳನ್ನೂ ಕೆಳಭಾಗದಲ್ಲಿ ವೃಷಭ ಮತ್ತು ಭಕ್ತದಂಪತಿಗಳನ್ನೂ ಅಂದವಾಗಿ ಕೆತ್ತಲಾಗಿದೆ. ಕಾಯೋತ್ಸರ್ಗ ಮುದ್ರೆಯಲ್ಲಿ ನಿಂತಿರುವ ಪಾಶ್ರ್ವನಾಥ ಮತ್ತು ಶಾಂತಿನಾಥರ ಶಿಲ್ಪಗಳ ಮೇಲೆ ನವಗ್ರಹಗಳನ್ನು ಕೆತ್ತಿರುವ 10-11ನೆಯ ಶತಮಾನದ ಶಿಲ್ಪಗಳು ಹಲವು ಎಡೆಗಳಲ್ಲಿ ದೊರಕಿವೆ. ಈ ಕಾಲಕ್ಕೆ, ಸೇರುವ, ಪಶ್ಚಿಮ ಬಂಗಾಲದಲ್ಲಿ ದೊರಕಿರುವ, ಶಿವ-ಪಾರ್ವತಿಯರ ನಿರೂಪಣೆಯ ಅಥವಾ ಕಲ್ಯಾಣ ಸುಂದರ ಶಿಲ್ಪಗಳು ದಕ್ಷಿಣ ಭಾರತದ ಅಂಥ ಮೂರ್ತಿಗಳಷ್ಟು ರಮಣೀಯವಾಗಿಲ್ಲವಾದರೂ ಸ್ಥಳೀಯ ವೈವಾಹಿಕ ಪದ್ಧತಿಗಳನ್ನು ತಿಳಿಯಲು ಸಹಾಯಕವಾಗಿವೆ. 10 ಅಥವಾ 12 ಕೈಗಳುಳ್ಳ, ಪರಿವಾರಗಣಗಳಿಂದ ಸುತ್ತುವರಿಯಲ್ಪಟ್ಟ ನಟರಾಜ ತನ್ನ ವಾಹನವಾದ ನಂದಿಯ ಮೇಲೆ ನೃತ್ಯವಾಡುತ್ತಿರುವಂತೆ ತೋರಿಸುವ ಸತ್ತ್ವಪೂರ್ಣಶಿಲ್ಪಗಳು ಹಲವಾರು ಸಿಕ್ಕಿವೆ. ಕರಾಳರೂಪಿ ವಿರೂಪಾಕ್ಷನ ಮೂರ್ತಿ, ಸೇನ ದೊರೆಗಳ ಇಷ್ಟದೈವವಾದ ಪಂಚಮುಖಿ ದಶಬಾಹು ಸದಾಶಿವ ಈ ಸುಂದರಶಿಲ್ಪಗಳು ಸೇನರ ಕಾಲದವು. 11-12ನೆಯ ಶತಮಾನಗಳಿಗೆ ಸೇರಿದ ಚತುರ್ಭುಜ, ಗಜಲಕ್ಷ್ಮಿ, ಸರಸ್ವತಿ, ಸಿಂಹವಾಹಿನಿ, ದುರ್ಗೆ, ಆಸೀನ ಮಹಾಲಕ್ಷ್ಮಿ. ಲಿಂಗೋದ್ಭವಳಾದ, ಧ್ಯಾನಮುದ್ರೆಯಲ್ಲಿರುವ ಮಹಾಮಾಯೆ, ಚಾಮುಂಡಿ ಮುಂತಾದ ದೇವೀಮೂರ್ತಿಗಳು ಅನೇಕ ಸ್ಥಳಗಳಲ್ಲಿ ಸಿಕ್ಕಿವೆ. ವಿವಿಧ ಪ್ರದೇಶಗಳಲ್ಲಿ ದೊರಕಿರುವ, ಪಶ್ಚಿಮ ಬಂಗಾಲದ ಅವನತಮುಖ ಶಿಲ್ಪ ಕಲೆಯನ್ನು ಪ್ರತಿಬಿಂಬಿಸುವ, ಮೂಷಿಕವಾಹನ ಷಡ್ಭುಜ ಗಣೇಶ, ಹೇರಂಬ ಗಣಪತಿ, ಸೂರ್ಯ, ಸೂರ್ಯನಾರಾಯಣ, ನವಗ್ರಹಗಳು ಮೊದಲಾದ ಶಿಲ್ಪಕೃತಿಗಳು ಇಂಡಿಯನ್ ವಸ್ತುಸಂಗ್ರಹಾಲಯದಲ್ಲಿವೆ. 8-13ನೆಯ ಶತಮಾನಗಳ ಪಶ್ಚಿಮ ಬಂಗಾಲದ ಶಿಲ್ಪಕಲೆಯ ಸೌಮ್ಯತೆ-ಲಾವಣ್ಯಗಳು ಯಾಂತ್ರಿಕವಾದರೂ ಅವುಗಳಲ್ಲಿ ತಾಂತ್ರಿಕ ಕೌಶಲವನ್ನು ಕಾಣಬಹುದು. ನಾಣ್ಯ ಪದ್ಧತಿ ಪಶ್ಚಿಮ ಬಂಗಾಲದಲ್ಲಿ ನಾಣ್ಯಗಳ ಬಳಕೆ ಕ್ರಿ.ಪೂ 3ನೆಯ ಶತಮಾನದಲ್ಲಿ ಪ್ರಾರಂಭವಾಗಿರಬಹುದೆಂದು ಕಾಣುತ್ತದೆ. ಮಹಾಸ್ತಾನ ಶಾಸನದಲ್ಲಿ 4 ಕವಡೆಗಳ ಮೌಲ್ಯದ ಗಂಡಕ ಮತ್ತು ಕಾರ್ಷಾಪಣದ 1/64 ಭಾಗವಾದ ಕಾಕನಿಕ ನಾಣ್ಯಗಳು ಉಲ್ಲೇಖವಿದೆ. ಮೌರ್ಯರ ಕಾಲದ ಬೆಳ್ಳಿಯ ಮುದ್ರಾಂಕಿತ ನಾಣ್ಯಗಳು 2.54 ಸೆಂಮೀ ವ್ಯಾಸದ ತೆಳ್ಳನೆಚಿiÀು ವೃತ್ತಾಕಾರದವು. ಅವುಗಳ ಮೇಲೆ ರೇಖಾವಿನ್ಯಾಸ, ಪ್ರಾಣಿ, ಕದಿರುಬಿಲ್ಲೆ ಮತ್ತು ಆರು ಬಾಹುಗಳ ಚಿಹ್ನೆಗಳಿರುತ್ತಿದ್ದುವು. ಅವು 50ರಿಂದ 54 ಗ್ರೇನ್‍ಗಳಷ್ಟು ತೂಕವಾಗಿರುತ್ತಿದ್ದುವು. ವಿರಳವಾದರೂ ತಾಮ್ರದ ಮುದ್ರಾಂಕಿತ ನಾಣ್ಯಗಳೂ ಬಳಕೆಯಲ್ಲಿದ್ದುವು. ಕುಷಾಣರ ಚಿನ್ನದ ಮತ್ತು ತಾಮ್ರದ ಮುದ್ರಾಂಕಿ ನಾಣ್ಯಗಳೂ ಬಳಕೆಯಲ್ಲಿದ್ದುವು. ಕುಷಾಣರ ಚಿನ್ನದ ಮತ್ತು ತಾಮ್ರದ ನಾಣ್ಯಗಳೂ ದೊರಕಿವೆ. ಪೆರಿಪ್ಲಸ್ ಗ್ರಂಥದಲ್ಲಿ ಹೇಳಿರುವ ಕಾಲ್ಟಿಸ್ ಬಹುಶಃ ಕುಷಾಣರ ಚಿನ್ನದ ನಾಣ್ಯ. ಆ ಪ್ರದೇಶದಲ್ಲಿ ಗುಪ್ತರ ಕಾಲದಲ್ಲಿ ಅವರ ಚಿನ್ನದ ನಾಣ್ಯಗಳ ಬಳಕೆ ಹೆಚ್ಚಾಗಿತ್ತು. ಗುಪ್ತರ ಮೊದಲ ನಾಣ್ಯಗಳು ಕುಷಾಣರ ಅನುಕರಣೆಯವಾಗಿದ್ದರೂ ಕ್ರಮೇಣ ಅವರು ಕಲಾತ್ಮಕವಾದ ಅನೇಕ ಹೊಸ ರೀತಿಯ ನಾಣ್ಯಗಳನ್ನು ಹೊರಡಿಸಿದರು. ಅವರ 17-18 ಬಗೆಯ ನಾಣ್ಯಗಳ ಪೈಕಿ ಬಿಲ್ಲುಗಾರ ನಾಣ್ಯವನ್ನು ಎಲ್ಲ ದೊರೆಗಳೂ ಹೊರಡಿಸಿದರು. ಅವರ ನಾಣ್ಯಗಳ ಹಿಮ್ಮುಖದಲ್ಲಿ, ಕುಳಿತ ಅಥವಾ ನಿಂತ ದೇವಿಯ ಚಿತ್ರ ಸಾಮಾನ್ಯವಾಗಿರುತ್ತಿತ್ತು. ಕ್ಷತ್ರಪರ ಅನುಕರಣೆಯ ಬೆಳ್ಳಿಯ ನಾಣ್ಯಗಳನ್ನು 2ನೆಯ ಚಂದ್ರಗುಪ್ತ ಮೊದಲಿಗೆ ಹೊರಡಿಸಿದನಾದರೂ ಬಂಗಾಲದಲ್ಲಿ ಅವು ಸ್ಕಂಧಗುಪ್ತನ ತರುವಾಯ ರೂಢಿಗೆ ಬಂದರುವು. ಗುಪ್ತರ ತಾಮ್ರದ ನಾಣ್ಯಗಳು ಈ ಪ್ರದೇಶದಲ್ಲಿ ವಿರಳ. ಆ ಕಾಲದ ಬಂಗಾಲದ ಶಾಸನಗಳಲ್ಲಿ ದೀನಾರ ಮತ್ತು ಬೆಳ್ಳಿಯ ರೂಪಕ ನಾಣ್ಯಗಳ ಉಲ್ಲೇಖಗಳಿವೆ. ಒಂದು ದೀನಾರ 16 ರೂಪಕಗಳಿಗೆ ಸಮವೆಂದು ತಿಳಿಸಲಾಗಿದೆ. 6ನೆಯ ಶತಮಾನದ ಉತ್ತರಾರ್ಧದಲ್ಲಿ ಗುಪ್ತನಾಣ್ಯಗಳ ಅನುಕರಣೆಯ ಚಿನ್ನದ ನಾಣ್ಯಗಳು-ಮುಖ್ಯವಾಗಿ ಬಿಲ್ಲುಗಾರ ಮಾದರಿ-ಬಂಗಾಲದಲ್ಲಿ ಚಲಾವಣೆಗೆ ಬಂದುವು. ಸಮಾಚಾರದೇವ ಮತ್ತು ಜುಗುಪ್ತರ ಅಂಥ ನಾಣ್ಯಗಳ ಹಿಂಬದಿಯಲ್ಲಿ ಲಕ್ಷ್ಮಿ ಅಥವಾ ಗಜಲಕ್ಷ್ಮಿಯವರ ಚಿತ್ರಗಳಿವೆ. ಸಮಾಚಾರದೇವನ ಕೆಲವು ನಾಣ್ಯಗಳ ಮುಮ್ಮುಖದಲ್ಲಿ ದೊರೆ ರಾಜಲೀಲಾ ಮುದ್ರೆಯಲ್ಲಿ ಕುಳಿತಂತೆಯೂ ಹಿಮ್ಮುಖದಲ್ಲಿ ಕುಳಿತ ಸರಸ್ವತಿಯ ಚಿತ್ರವೂ ಇವೆ. ಶಶಾಂಕನ ಕಾಲದಲ್ಲಿ ಬಳಕೆಗೆ ಬಂದ ಬೆರಕೆ ಚಿನ್ನದ ನಾಣ್ಯಗಳ ಮುಮ್ಮುಖದಲ್ಲಿ ಮೇಲೆ ಒರಗಿನಿಂತ ಶಿವನ, ಮತ್ತು ಹಿಮ್ಮುಖದಲ್ಲಿ ಕುಳೀತ ಗಜಲಕ್ಷ್ಮಿಯ ಚಿತ್ರಗಳಿದ್ದುವು. ಈ ಬೆರಕೆ ಚಿನ್ನದ ನಾಣ್ಯಗಳು 7-8ನೆಯ ಶತಮಾನಗಳಲ್ಲಿ ಹೆಚ್ಚು ಬಳಕೆಯಲ್ಲಿದ್ದುವು. ಅವುಗಳ ಮುಮ್ಮುಖದಲ್ಲಿ ಧನುರ್ಧಾರಿಯಾಗಿ ನಿಂತ ಅರಸ, ಹಿಮ್ಮುಖದಲ್ಲಿ ನಿಂತ ದೇವಿ ಮತ್ತು ಇಬ್ಬದಿಗಳಲ್ಲೂ ಕೆಲವು ಅಸ್ಪಷ್ಟ ಶಾಸನಗಳು ಇರುತ್ತಿದ್ದುವು. 8ನೆಯ ಶತಮಾನದ ಒಂದು ನಾಣ್ಯದ ಮುಂಬದಿಯಲ್ಲಿ ಅವಲೋಕಿತೇಶ್ವರನ ಮುಂದೆ ಅಂಜಲಿ ಹಸ್ತನಾದ ದೊರೆಯ ಚಿತ್ರವೂ ಹಿಂಬದಿಲಯಲ್ಲಿ ಗಜಧ್ವಜದ ಚಿತ್ರವೂ ಶ್ರೀವಿಂಧ್ಯಶಕ್ತಿ ಎಂಬ ಬರಹವೂ ಇವೆ. 9ನೆಯ ಶತಮಾನದ ದೇವಪಾಲನ ನಾಣ್ಯಗಳ ಮೇಲೆ ಧನುರ್ಬಾಣಧಾರಿ ದೊರೆಯ ಮತ್ತು ಹಿಂಬದಿಯಲ್ಲಿ ಲಕ್ಷ್ಮಿಯ ಚಿತ್ರಗಳಿವೆ. ಶ್ರೀವಿಗ್ರ ಅಥವಾ ವಿಗ್ರ ಎಂಬ ಶಾಸನವುಳ್ಳ ತಾಮ್ರ ಮತ್ತು ಬೆಳ್ಳಿಯ ನಾಣ್ಯಗಳು ವಿಗ್ರಹ ಪಾಲನವಿರಬಹುದು. ಪಾಲರ ಶಾಸನಗಳಲ್ಲಿ ದ್ರಮ್ಮನಾಣ್ಯದ ಉಲ್ಲೇಖವಿದೆ. ಸೇನರ ಶಾಸನಗಳಲ್ಲಿ ಉಲ್ಲೇಖಿಸಿರುವ ಪುರಾಣ ಮತ್ತು ಕಪರ್ದಕ ಪುರಾಣಗಳು ಕವಡೆಯ ಬೆಲೆಯವೆಂದೂ, ನಾಕಾಯಾನದ ತೆರ ಕೊಡಲು ಇವನ್ನು ಬಳಸಲಾಗುತ್ತಿತ್ತೆಂದೂ ಹೇಳಲಾಗಿದೆ. ಪುರಾಣ ಮತ್ತು ಕಪರ್ದಕ ಪುರಾಣಗಳು ಬೆಳ್ಳಿಯ ನಾಣ್ಯಗಳೆಂದು ಭಂಡಾರ್ಕರ್ ಭಾವಿಸಿದ್ದಾರೆ. ಅವು ನಾಣ್ಯಗಳಲ್ಲ, ಕವಡೆಯ ಬೆಲೆಯಲ್ಲಿ ಸೂಚಿಸುತ್ತಿದ್ದ ಮೌಲ್ಯಮಾಪನವೆಂಬುದಾಗಿ ಎಸ್.ಕೆ.ಚಟರ್ಜಿ ವಾದಿಸಿದ್ದಾರೆ. ದೆಹಲಿಯ ಸುಲ್ತಾನರ ಆಳ್ವಿಕೆಯಲ್ಲಿ ಬಂಗಾಲವೂ ಸೇರಿದಂತೆ ಇಡೀ ರಾಜ್ಯದಲ್ಲಿ ಏಕರೂಪದ ನಾಣ್ಯಪದ್ಧತಿಯನ್ನು ಜಾರಿಗೆ ತಂದರು. ಆದರೆ ಕೆಲವು ಬಾರಿ ದೆಹಲಿಯ ಸುಲ್ತಾನರು ಪಶ್ಚಿಮ ಬಂಗಾಲದ ಟಂಕಸಾಲೆಯಲ್ಲಿ ನಾಣ್ಯಗಳನ್ನು ತಯಾರಿಸುತ್ತಿದ್ದರು; ಅಥವಾ ಅವರು ಬಂಗಾಲಕ್ಕಾಗಿ ವಿಶಿಷ್ಟವಾದ ನಾಣ್ಯಗಳನ್ನು ಹೊರಡಿಸುತ್ತಿದ್ದುದುಂಟು. ಅಲ್ಲದೆ ಆಗಾಗ್ಗೆ ಸ್ವತಂತ್ರ ಬಂಗಾಲದ ನವಾಬರು ತಮ್ಮ ಪ್ರತ್ಯೇಕ ನಾಣ್ಯಗಳನ್ನು ಬಳಸುತ್ತಿದ್ದರು. ಗುಲಾಮೀ ಸಂತತಿಯ ರಜಿûಯಾ ಬೇಗಮಳ ಕಾಲದಲ್ಲಿ ಲಖ್ನೌತಿಯ ಹೆಸರಿನಲ್ಲಿ ಮುದ್ರಿಸಿದ ನಾಣ್ಯಗಳು ದೊರಕಿವೆ. ತುಗಲಕ್ ಮಹಮ್ಮದನ ಕಾಲದಲ್ಲೂ ಲಖ್ನೌತಿಯ ಹೆಸರಿನಲ್ಲಿ ಮುದ್ರಿಸಿದ ನಾಣ್ಯಗಳು ದೊರಕಿವೆ. ತುಗಲಕ್ ಮಹಮ್ಮದನ ಕಾಲದಲ್ಲೂ ಲಖ್ನೌತಿಯ ಟಂಕಸಾಲೆಯಲ್ಲಿ ಚಿನ್ನದ, ಬೆಳ್ಳಿಯ ಮತ್ತು 1329ರ ಅನಂತರ ತಾಮ್ರದ, ನಾಣುಗಳನ್ನು ಹೊರಡಿಸಲಾಗಿತ್ತು. ಮೊದಲ ನಾಣ್ಯಗಳ ಮೇಲೆ ಅಂದವಾದ ಅಲ್ ಶಹೀದ್ ಘಿಯಾಸುದ್ದೀನ್ ತುಗಲಕ್ ಎಂಬ, ಮತ್ತು ಅನಂತರಕಾಲದ ನಾಣ್ಯಗಳ ಮೇಲೆ ಕಲಿಮಾದ, ಬರಹ ಇರುತ್ತಿತ್ತು. ಮೊದಲ ನಾಣ್ಯಗಳ ತೂಕ 170 ಗುಂಜಿಗಳು. ಅನಂತರಕಾಲದ ನಾಣ್ಯಗಳು 201.5 ಗುಂಜಿ ತೂಕವಿರುತ್ತಿದ್ದುವು. ಬೆಳ್ಳಿಯ ನಾಣ್ಯಗಳ ತೂಕ 144 ಗುಂಜಿಗಳು. 1327ರ ಅನಂತರ ಬೆರಕೆ ಬೆಳ್ಳಿಯ ಟಂಕನಾಣ್ಯಗಳನ್ನು ಹೊರಡಿಸಲಾಯಿತು. ಮುಮ್ಮುಖದಲ್ಲಿ ಕಲಿಮಾ ಮತ್ತು ಕಲೀಫರ ಹೆಸರ ಮತ್ತು ಹಿಂಬದಿಯಲ್ಲಿ ತನ್ನ ಹೆಸರು, ಟಂಕಸಾಲೆಯ ಹೆಸರು, ನಾಣ್ಯ ಹೊರಡಿಸಿದ ವರ್ಷದ ಉಲ್ಲೇಖ ಇದ್ದ ಬೆರಕೆ ಬೆಳ್ಳಿಯ ಮತ್ತು ತಾಮ್ರದ ನಾಣ್ಯಗಳನ್ನು ಷೇರ್ ಷಾ ಪಾಂಡುವ ಟಂಕಸಾಲೆಯಿಂದ ಹೊರಡಿಸಿದ. 180 ಗುಂಜಿ ತೂಕದ ಆ ಬೆಳ್ಳಿಯ ರುಪಿಯಾಗಳು ಭಾರತದ ಮೊದಲ ರೂಪಾಯಿಗಳು. ಅವನ ತಾಮ್ರದ ಪೈಸಾಗಳು ಭಾರತದ ಮೊದಲ ಪೈಸೆ. ಪಶ್ಚಿಮ ಬಂಗಾಲದ ಸ್ವತಂತ್ರರಾದ. ಅಥವಾ ಹೆಸರಿಗೆ ದೆಹಲಿ ದರ್ಬಾರಿಗೆ ಅಧೀನರಾಗಿದ್ದ, ನವಾಬರಲ್ಲಿ ಘಿಯಾಸುದ್ದೀನ್ ಇವಾeóï (1211-1226), ಮುಘಿಸುದ್ದೀನ್ ಯುeóïಬಾಕ್ (1246-1258), ರುಕ್ನುದ್ದೀನ್ ಕಾಯಿಕುಸ್ (1291-1302), ಷಂಷುದ್ದೀನ್ ಫಿರೋeóï ಷಾ (1302-1318), ಷಿಹಾಬುದ್ದೀನ್ ಬುಘ್ರಾ ಷಾ (131) ಮತ್ತು ಘಿಯಾಸುದ್ದೀನ್ ಬಹದೂರ್ ಷಾ (1310-23) ಇವರು ತಮ್ಮ ಪ್ರತ್ಯೇಕ ಬೆಳ್ಳಿ ನಾಣ್ಯಗಳನ್ನು ಹೊರಡಿಸಿದ್ದರು. ಷಂಷುದ್ದೀನ್ ಫಿರೋeóï ಷಾನ ಕೆಲವು ಚಿನ್ನದ ನಾಣ್ಯಗಳೂ ಸಿಕ್ಕಿವೆ. ಮೊದಲಿಬ್ಬರ ನಾಣ್ಯಗಳ ಮುಮ್ಮುಖದಲ್ಲಿ ಕಲಿಮಾ ಮತ್ತು ವರ್ಷ ಹಿಂಬದಿಯಲ್ಲಿ ನವಾಬನ ಹೆಸರು ಮತ್ತು ಬಿರುದು ಇರುತ್ತಿದ್ದುವು. ಕಲಿಮಾದ ಬದಲು ಕಲೀಫರ ಮತ್ತು ಅಲ್ ಮುಸ್ಟಸಿಮ್ ಬರಹಗಳನ್ನು ಕೊನೆಯ ನಾಲ್ವರು ಬಳಸಿದ್ದರು. ಇಲಿಯಾಸ್ ಷಾಹಿ ನವಾಬರ ಕಾಲದಿಂದ 1556ರ ವರೆಗೆ ಆಳಿದ ಆರು ಮನೆತನಗಳ ನವಾಬರು ದೆಹಲಿಯ ನಾಣ್ಯ ಪದ್ಧತಿಯನ್ನು ಅನುಸರಿಸಿದರೂ ಅವರ ನಾಣ್ಯಗಳ ಅಂಚುಗಳಲ್ಲಿದ್ದ ಚಿಹ್ನೆಗಳು ಬೇರೆಯಾಗಿದ್ದುವು. ಮುಂಬದಿಯಲ್ಲಿ ಕಲೀಫರ ಹೆಸರು ಮತ್ತು ಇಸ್ಲಾಮಿಗೆ ಸಂಬಂಧಿಸಿದ ಬರಹಗಳಿರುತ್ತಿದ್ದುವು. ಜಲಾಲುದ್ದೀನನ ನಾಣ್ಯಗಳ ಮೇಲೆ ಕಲಿಮಾ, ಅದರ ಕೆಳಗೆ ಟಂಕಸಾಲೆಯ ಅಂಕಿತ ಮತ್ತು ವರ್ಷದ ಉಲ್ಲೇಖ ಇರುತ್ತಿದ್ದುವು. ಹುಸೇನ್ ಷಾಹ ಮತ್ತು ಅವನ ಉತ್ತರಾಧಿಕಾರಿಗಳು ತಮ್ಮ ನಾಣ್ಯಗಳ ಇಬ್ಬದಿಗಳಲ್ಲೂ ತಮ್ಮ ಬಿರುದುಗಳನ್ನು ಅರಬ್ಬಿ ಭಾಷೆಯಲ್ಲಿ ಬರೆಸುತ್ತಿದ್ದರು. ರಾಜಾ ಗಣೇಶ ಮತ್ತಿತರ ಹಿಂದೂ ದೊರೆಗಳ ನಾಣ್ಯಗಳ ಮೇಲೆ ಬಂಗಾಲಿ ಬರಹ ಮತ್ತು ಶಕವರ್ಷ ಇರುತ್ತಿದ್ದುವು. ಅವುಗಳ ತೂಕ-166-170 ಗುಂಜಿಗಳು. ಪಶ್ಚಿಮ ಬಂಗಾಲ 1556ರಲ್ಲಿ ಅಕ್ಬರನ ವಶವಾದ ಮೇಲೆ ಮೊಗಲ್ ನಾಣ್ಯಪದ್ಧತಿ ರೂಢಿಗೆ ಬಂತು. ಆದರೆ ಷಾಹಜಹಾನನ ಮಗ ಷಾ ಷೂಜಾ ಅಲ್ಲಿಯ ಪ್ರಾಂತ್ಯಾಧಿಕಾರಿಯಾಗಿದ್ದಾಗ (1656-57) ಅಲ್ಲಿಯ ಅಕ್ಬರ್ ನಗರದಿಂದ ಒಂದು ಕಡೆ ಕಲಿಮಾ ಮತ್ತು ಕಲೀಫನ ಹೆಸರು, ಮತ್ತೊಂದು ಕಡೆ ತನ್ನ ಹೆಸರು ಮತ್ತು ಬಿರುದುಗಳು ಇದ್ದ ಪ್ರತ್ಯೇಕ ಚೌಕಾಕಾರದ ನಾಣ್ಯಗಳನ್ನು ಹೊರಡಿಸಿದ್ದನೆಂದು ತಿಳಿದುಬರುತ್ತದೆ. ಭಾರತಕ್ಕೆ ಬಂದ ಯೂರೋಪಿಯನ್ ವರ್ತಕರು ಪಶ್ಚಿಮ ಬಂಗಾಲದಲ್ಲಿ ತಮ್ಮ ವ್ಯಾಪಾರದ ಕೋಠಿಗಳನ್ನು ಸ್ಥಾಪಿಸಿ ತಮ್ಮ ನಾಣ್ಯಗಳನ್ನು ಬಳಸಲಾರಂಭಿಸಿದರು. ಪೋರ್ಚುಗೀಸರು ಚಿನ್ನದ ಮೆನೊಯಲ್, ಬೆಳ್ಳಿಯ ಎಸ್ಪೆರ, ಬಸ್ತಿಯದ್ ಅಥವಾ ಸೆರಾಫಿಮ್ ಮತ್ತು ಟಂಗ ನಾಣ್ಯಗಳನ್ನು ಬಳಸುತ್ತಿದ್ದರು. 1611ರ ಅನಂತರ ತಾಮ್ರದ ಬುeóÁ ರುಕ್ಕೋಸ್ ನಾಣ್ಯಗಳನ್ನು ಹೊರಡಿಸಿದರು. ಡಚ್ಚರು ತಮ್ಮ ವಸಾಹತುಗಳಲ್ಲಿ ಮುಂಬದಿಯಲ್ಲಿ ಖಡ್ಗಧಾರಿ ಕುದುರೆ ಸವಾರನ ಚಿತ್ರ, ಹಿಂಬದಿಯಲ್ಲಿ ಎರಡು ಸಿಂಹಗಳ ಮೇಲೆ ರಾಜಚಿಹ್ನೆ ಮತ್ತು ಕೆಲವು ಬರಹಗಳು ಇದ್ದ ಬೆಳ್ಳಿಯ ಡುಕಾಟೂನ್ಸ್ ನಾಣ್ಯಗಳನ್ನು ಬಳಸುತ್ತಿದ್ದರು. ಡೇನರು ಸೀಸ ಮತ್ತು ತಾಮ್ರದ 10.2 ಮತ್ತು 1 ಕಾಸುಗಳನ್ನು ಬೆಳ್ಳಿಯ ಪಣಮ್ ಮತ್ತು ಚಿನ್ನದ ಪಗೋಡಗಳನ್ನು ಮತ್ತು ತಮ್ಮ ಮಾತೃಭೂಮಿಯಲ್ಲಿ ಚಲಾವಣೆಯಲ್ಲಿದ್ದ ಚಿನ್ನದ ಡುಕಾಟ್ಸ್ ನಾಣ್ಯಗಳನ್ನು ಬಳಸುತ್ತಿದ್ದರು. ಫ್ರೆಂಚರು ಚಂದ್ರನಗರ್‍ನಿಂದ ತಮ್ಮ ನಾಣ್ಯಗಳನ್ನು ಹೊರಡಿಸುತ್ತಿದ್ದರೆಂದು ಹೇಳಲಾಗಿದ್ದರೂ ಅವು ಈವರೆಗೆ ಸಿಕ್ಕಿಲ್ಲ. ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿ ಮೊದಲಿಗೆ ಸ್ಥಳೀಯ ನಾಣ್ಯಗಳನ್ನು ಬಳಸುತ್ತಿತ್ತು. 1764ರ ಅನಂತರ ಕಲ್ಕತ್ತದ ಮುರ್ಷಿದಾಬಾದ್ ಟಂಕಸಾಲೆಯನ್ನು ಸ್ಥಾಪಿಸಿ ಅಲ್ಲಿಂದ ಸ್ವಂತ ನಾಣ್ಯಗಳನ್ನು ಹೊರಡಿಸಲಾರಂಭಿಸಿತು. 1835ರಿಂದ ಇಡೀ ಭಾರತ ಬ್ರಿಟಿಷ್ ಪ್ರದೇಶಗಳಲ್ಲಿ ಏಕರೂಪದ ನಾಣ್ಯಪದ್ಧತಿ ಜಾರಿಗೆ ಬಂತು. 1947ರ ಅನಂತರ ಸ್ವತಂತ್ರ ಭಾರತದ ನಾಣ್ಯಪದ್ಧತಿ ಜಾರಿಯಲ್ಲಿದೆ. ಪಶ್ಚಿಮ ಬಂಗಾಳ ಸರ್ಕಾರ ಮುಖ್ಯ ಮಂತ್ರಿ : ಮಮತಾ ಬ್ಯಾನರ್ಜಿ-ಅಧಿಕಾರ ಸ್ವೀಕಾರ= 22 ಮೇ, 2009 –ಅವಧಿ = 19 ಮೇ, 2011 ವರೆಗೆ ೨೦೧೧ ರ ವಿಧಾನ ಸಭೆ ಚುಣಾವಣೆ ಪಕ್ಷಗಳ ಬಲಾಬಲ- 294 ಸದಸ್ಯ ಬಲದ ವಿಧಾನಸಭೆಯಲ್ಲಿ ತೃಣಮೂಲ ಕಾಂಗ್ರೆಸ್‌ 184, ಎಡ ಪಕ್ಷಗಳ ಒಕ್ಕೂಟ 65, ಕಾಂಗ್ರೆಸ್‌ 42 ಸ್ಥಾನಗಳನ್ನು ಗೆದ್ದಿವೆ. ಇತರೆ: 3 ಸ್ಥಾನಗಳು. ಟಿಎಂಸಿ ಶೇ 38.93, ಸಿಪಿಎಂ ಶೇ 30.8ರಷ್ಟು ಮತ ಗಳಿಸಿವೆ. ಆದರೆ, 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಶಕ್ತಿ ಹೆಚ್ಚಿಸಿಕೊಂಡಿದೆ. ಶೇ 17ರಷ್ಟು ಮತಗಳನ್ನು ಪಡೆದು, ಎರಡು ಸ್ಥಾನಗಳನ್ನು ಪಡೆದಿದೆ. ಪಶ್ಚಿಮ ಬಂಗಾಳ ವಿಧಾನಸಭೆಯ ಅವಧಿ ಮೇ 29, 2016 ರಂದು ಮುಕ್ತಾಯಗೊಳ್ಳುತ್ತದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಆರು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತ, ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಡೆಯಲಿದೆ. ಎರಡು ಮತದಾನ ದಿನಾಂಕ ಹೊಂದಿರುತ್ತದೆ - ಏಪ್ರಿಲ್ 4 ಮತ್ತು ಏಪ್ರಿಲ್ 11. ಇತರ ಹಂತಗಳು ಪ್ರಿಲ್ 17, 21, 25, 30 ಮತ್ತು ಮೇ 5 ರಂದು ನಡೆಯಲಿದೆ. ಮಮತಾ ಬ್ಯಾನರ್ಜಿ ಪುನಃ ಮುಖ್ಯಮಂತ್ರಿ ದಿ.27-05-2016 ರಂದು 12.45pmನಲ್ಲಿ ತೃಣಮೂಲ ಕಾಂಗ್ರೆಸ್‌ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಸತತ ಎರಡನೇ ಅವಧಿಗೆ ಪಶ್ಚಿಮ ಬಂಗಾಲದ ಮುಖ್ಯಮಂತ್ರಿಯಾಗಿ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದರು.ಕೋಲ್ಕತ್ತದ ರೆಡ್‌ ರೋಡ್‌ನಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಮತಾ ಅವರಿಗೆ ರಾಜ್ಯಪಾಲ ಕೇಸರಿನಾಥ ತ್ರಿಪಾಠಿ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣವಚನ ಬೋಧಿಸಿದರು. ಅವರ ಜೊತೆಯಲ್ಲಿ 42 ಸಚಿವರು ಸಹ ಪ್ರಮಾಣವಚನ ಸ್ವೀಕರಿಸಿದರು. ತಮ್ಮ ಪಕ್ಷಕ್ಕೆ ಬಹುಮತ ಕೊಟ್ಟದ್ದಕ್ಕಾಗಿ ಜನರಿಗೆ ಅವರು ಧನ್ಯವಾದಗಳನ್ನು ಹೇಳಿದರು. 294 ಸ್ಥಾನಗಳ ಪಶ್ಚಿಮ ಬಂಗಾಲ ವಿಧಾನಸಭೆಯಲ್ಲಿ ಟಿಎಂಸಿ 211 ಸ್ಥಾನಗಳನ್ನು ಪಡೆದಿದೆ. 42 ಸಚಿವರನ್ನೊಳಗೊಂಡ ಮಮತಾ ಅವರ ಸಂಪುಟದಲ್ಲಿ 18 ಮಂದಿ ಹೊಸಬರಿಗೆ ಅವಕಾಶ ಕೊಡಲಾಗಿದೆ. ಆರ್ಥಿಕ ಸುಧಾರಣೆಗಳ ಮಾಹಿತಿ ರೈತರ ದುಸ್ಥಿತಿಗೆ- ನೋಡಿ ಭಾರತದ ಚುನಾವಣೆಗಳು 2016‎ ಉಲ್ಲೇಖಗಳು ಬಾಹ್ಯ ಸಂಪರ್ಕಗಳು Official West Bengal Government Web Portal Department of Tourism, Government of West Bengal Directorate of Commercial Taxes, Government of West Bengal West Bengal Information Commission Other West Bengal Encyclopædia Britannica entry ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಭಾರತ
2088
https://kn.wikipedia.org/wiki/%E0%B2%85%E0%B2%B8%E0%B3%8D%E0%B2%B8%E0%B2%BE%E0%B2%82
ಅಸ್ಸಾಂ
ಪೀಠಿಕೆ (ಬ್ಲಾಗ್ ಮಾದರಿಯ ಪ್ರಬಂಧ ?) ತನ್ನಲ್ಲಿ ಅದ್ಭುತ ಸಾಹಿತ್ಯ,ಸಂಸ್ಕೃತಿ,ಪ್ರಾಕೃತಿಕ ಸಂಪತ್ತು ಇದ್ದರೂ ಅಸ್ಸಾಮ್ ತನ್ನದೇ ಆದ ಸಮಸ್ಯೆಗಳಲ್ಲಿ ಮುಳುಗಿದೆ,ಇದರಿಂದ ಈ ರಾಜ್ಯ ಮುಂಚೂಣಿಗೆ ಬರಲಾಗುತ್ತಿಲ್ಲ.ಇದೇ ಸಮಸ್ಯೆ ಉಳಿದ ಈಶಾನ್ಯ ರಾಜ್ಯಗಳಾದ ಮೇಘಾಲಯ, ತ್ರಿಪುರ, ಮಿಜೋರಾಮ್, ಮಣೀಪುರ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶಗಳನ್ನೂ ಕಾಡುತ್ತಿದೆ. ಸಪ್ತ ಸೋದರಿಯರ ನಾಡು ಎಂದೇ ಹೆಸರಾದ ಈ ರಾಜ್ಯಗಳ ಸಮಸ್ಯೆಗಳಲ್ಲಿಈ ಸಾಮ್ಯತೆ ಇದೆ. ಅಸ್ಸಾಮ್ ಈ ಎಲ್ಲಾ ತೊಂದರೆಗಳ ನಡುವೆ ತನ್ನ ಸಾಹಿತ್ಯ ಸಂಸ್ಕೃತಿಗಳನ್ನು ಪೋಷಿಸಿಕೊಂಡು ಬಂದಿದೆ. ಅಸ್ಸಾಮ್ ನಲ್ಲಿ ಉಳಿದ ಎಲ್ಲಾ ರಾಜ್ಯಗಳಿಗಿಂತಾ ಹೆಚ್ಚು ಬುಡಕಟ್ಟು ಜನಾಂಗದ ಜನತೆ ಇದ್ದಾರೆ. ಈ ಸಮೂಹವನ್ನು ಆರ್ಯನರು,ಅನಾರ್ಯರು ಅಥವಾ ಮಂಗೋಲಾಯ್ಡ್ ಮತ್ತು ಇಂಡೋ-ಇರಾನಿಯನ್ ಎಂದು ವಿಭಜಿಸಲಾಗುತ್ತದೆ. ಇದರೊಂದಿಗೆ ಬೋಡೋ, ಕಾರ್ಬಿ, ರಾಜಬನ್ಸಿ,ಮಿರಿ,ಮಿಶಿಮ ಮತ್ತು ರಭ ಮುಂತಾದ ಬುಡಕಟ್ಟುಗಳೂ ಇವೆ. ಇಂದಿನ ಪ್ರಖ್ಯಾತ ಟೆನ್ನಿಸ್ ಆಟಗಾರ ಸೋಮ್ದೇವ ದೇವ್ ವರ್ಮನ್ ಗೌಹಾಟಿಯಲ್ಲಿ ೧೯೮೫ ರಲ್ಲಿ ಹುಟ್ಟಿದರು. ಈತ ಏಷ್ಯನ್ ಗೇಮ್ಸ್ ಮತ್ತು ಕಾಮನ್ವೆಲ್ತ್ ಆಟಗಳಲ್ಲಿ ಅನೇಕ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಈತ ಅಸ್ಸಾಂ ರಾಜ್ಯದ ಐಕಾನ್ ಇದ್ದಂತೆ. ಅಸ್ಸಾಂ ಎಂದರೆ ನೆನಪಾಗುವ ಮತ್ತೊಂದು ಅಂಶ ನಮ್ಮ ಮಿಲಿಟರಿಯ ಅಸ್ಸಾಂ ರೈಫಲ್ ಮತ್ತು ಅಸ್ಸಾಂ ರೆಜಿಮೆಂಟ್' ಇವು ಬ್ರಿಟಿಶರ ಕಾಲದಲ್ಲೇ ಸ್ಥಾಪಿಸಲ್ಪಟ್ಟು ಈಗ ತಮ್ಮ ಕೇಂದ್ರವನ್ನು ಶಿಲ್ಲಾಂಗನಲ್ಲಿ ಹೊಂದಿವೆ. ಅಸ್ಸಾಮ್ ಪುರಾತನ ದೇವಾಲಯಗಳ ನಾಡು. ಎಲ್ಲಿ ನೋಡಿದರೂ ಶಿವನ ದೇವಾಲಯಗಳೇ ಇವೆ. ಇವು ತಮ್ಮ ಗಾತ್ರ ಮತ್ತು ಸೌಂದರ್ಯದಿಂದ ಹೆಸರಾಗದಿದ್ದರೂ ತಮ್ಮ ಐತಿಹ್ಯಗಳಿಗೆ ಪ್ರಸಿದ್ದವಾಗಿವೆ. ಉದಾಹರಣೆಗೆ ಕಾಮಾಕ್ಯಾ ದೇವಾಲಯದ ಶಕ್ತಿ ದೇವತೆ ’ಬಹಿಷ್ಟೆಯಾಗುವ ಭಗವತಿ’ಎಂದು ಹೆಸರಾಗಿದ್ದಾಳೆ. ಇದರೊಂದಿಗೆ ರಾಷ್ಟ್ರಿಯ ಪಾರ್ಕ್,ಅಭಯಾರಣ್ಯಗಳು ಸಾಕಷ್ಟಿವೆ. ಅಸ್ಸಾಮ್ ಇವೇ ಕಾರಣಕ್ಕಾಗಿ ಪ್ರಸಿದ್ಧ. ಈಶಾನ್ಯ ರಾಜ್ಯಗಳನ್ನು ರಹಸ್ಯಗಳ ನಾಡು ಎಂದು ಇತಿಹಾಸಕಾರರು ಕರೆದಿದ್ದಾರೆ. ಈ ಏಳೂ ರಾಜ್ಯಗಳ ಗುಚ್ಚವನ್ನು ’ಸಿಲಿಗುರಿ ಕಾರಿಡಾರ್’ ಅಥವಾ ’ಚಿಕನ್ ನೆಕ್’ ಎಂದು ಕರೆಯುತ್ತಾರೆ. ಏಕೆಂದರೆ ಈ ಏಳೂ ರಾಜ್ಯಗಳನ್ನು ಭೂಪಟದಲ್ಲಿ ನೋಡಿದಾಗ ಕೋಳಿಯ ಕತ್ತಿನಂತೆ ಚಾಚಿಕೊಂಡಿರುವುದನ್ನು ಕಾಣಬಹುದು. ಇಲ್ಲಿನ ಪ್ರಮುಖ ಭಾಷೆಗಳು ಮಣಿಪುರಿ, ಖಾಸಿ, ಕಾಕೋ, ಹಮರ್, ಕುಕಿ ಮತ್ತು ಜೆಮೆನಾಗ. ಇಡೀ ರಾಜ್ಯದಲ್ಲಿ ಎಲ್ಲೆಲ್ಲೂ ಶಿವ ದೇವಾಲಯ ಮತ್ತು ಕಾಮಾಕ್ಯಾ ದೇವಾಲಯ ಇದ್ದು ಅಸ್ಸಾಮ್ ಕಾಮಾಕ್ಯಾ ಮಾತೆಯ ಮಡಿಲಂತೆ ಇದೆ. ಇಲ್ಲಿ ಪ್ರವಾಸ ಮಾಡಲು ಇಚ್ಚಿಸುವ ಜನ ಗೌಹಾಟಿ, ತೇಜ್ಪುರ ಮತ್ತು ದಿಬ್ರೂಗಡಗಳನ್ನು ಕೇಂದ್ರವಾಗಿರಿಸಿಕೊಂಡು ಸುತ್ತಬಹುದು. ಇತಿಹಾಸ ಅಸ್ಸಾಂನ ಇತಿಹಾಸ ಕ್ರಿಸ್ತ ಪೂರ್ವದಿಂದ ಆರಂಭವಾದ ಬಗ್ಗೆ ಸಾಕಷ್ಟು ಉಲ್ಲೇಖಗಳು ಇತಿಹಾಸದಲ್ಲಿ ನಮಗೆ ದೊರೆಯುತ್ತವೆ. ನಿಯೋಲಿಥಿಕ್ ಆದಿಮಾನವರ ಕೆಲ ಕುರುಹುಗಳು ಇಲ್ಲಿನ ರೋಂಗ್ರಾಮ್ ಬೆಟ್ಟ-ಗುಡ್ಡಗಳಲ್ಲಿ ದೊರೆತಿವೆ. ಅಸ್ಸಾಂ ಎಂಬ ಪದದ ಮೂಲದ ಬಗ್ಗೆ ಸಾಕಷ್ಟು ವಾದಗಳಿವೆ.ಈ ಪದ ಅಸ್ಸಾಂ ರಾಜ್ಯವನ್ನು ಆಳಿದ"ಅಹೋಂ" ವಂಶಸ್ಥರಿಂದ ಬಂದಿತು ಎಂದು ಹೇಳಲಾಗುತ್ತದೆ. ಅಸ್ಸಾಂ ರಾಜ್ಯವು ಏರು-ತಗ್ಗುಗಳಿಂದ ಕೂಡಿದ ರಾಜ್ಯವಾದುದರಿಂದ ’ಅಸಮ’ಎಂದು ಕರೆಯಲ್ಪಟ್ಟು ನಂತರ ಅಸ್ಸಾಂ ಆಯಿತೆಂದು ಹೇಳಲಾಗುತ್ತದೆ. ನಂತರ ಮಧ್ಯ ಏಷ್ಯಾದಿಂದ ಬಂದ ಆರ್ಯನರು ಇಲ್ಲಿ ನೆಲೆನಿಂತು ಹಿಂದೂ ಧರ್ಮವನ್ನು ಇಲ್ಲಿ ಹರಡಿದರು.ನಂತರ ಬಂದ ಮಂಗೋಲಿಯನರು, ದ್ರಾವಿಡರು, ಇರಾನಿಯರು, ಮುಸ್ಲಿಮರು, ಬೌದ್ಧರು ಹಾಗೂ ಕ್ರೈಸ್ತರು ಈ ರಾಜ್ಯದಲ್ಲಿ ನೆಲೆ ನಿಂತು ಇಲ್ಲಿನ ಸಂಸ್ಕೃತಿಯಲ್ಲಿ ಬೆರೆತು ಹೋದರೂ ತಮ್ಮ ಅಸ್ಥಿತ್ವವನ್ನು ಉಳಿಸಿಕೊಂಡು ಅಸ್ಸಾಂ ಸಂಸ್ಕೃತಿಗೆ ತಮ್ಮ ಕೊಡುಗೆ ನೀಡಿದ್ದಾರೆ. ಪೌರಾಣಿಕ ಭಾರತದ ಮಹಾಕಾವ್ಯವಾದ ಮಹಾಭಾರತದಲ್ಲಿ ಕಾಮರೂಪ ರಾಜ್ಯದ ಉಲ್ಲೇಖ ಬರುತ್ತದೆ.ವರ್ಮ ವಂಶಸ್ಥರು ಅಂದು ಅಸ್ಸಾಂ ರಾಜ್ಯವನ್ನು ಆಳುತ್ತಿದ್ದರು. ಅಂದು ಪ್ರಾಗ್ಜ್ಯೋತತಿಷ್ಯಪುರ ಅವರ ರಾಜಧಾನಿಯಾಗಿತ್ತು.ಈ ಪ್ರಾಗ್ಜ್ಯೋೊತಿಷ್ಯಪುರವೇ ಇಂದಿನ ಗೌಹಾತಿ ನಗರ ಎಂದು ಹೇಳಲಾಗುತ್ತದೆ.ವರ್ಮ ವಂಶಸ್ಥರ ನಂತರ ಶಲಸ್ಥಂಭ,ಪಾಲ ಮತ್ತು ತಾಯ್-ಶನ್ ವಂಶಸ್ಥರು ಒಟ್ಟು ಒಂದು ಸಾವಿರ ವರ್ಷಗಳ ಕಾಲ ರಾಜ್ಯಭಾರ ನಡೆಸುತ್ತಾರೆ.ಈ ಅವಧಿಯಲ್ಲಿ ಅಸ್ಸಾಂನಲ್ಲಿ ಹಿಂದೂ ಧರ್ಮ ವ್ಯಾಪಕವಾಗಿ ಹರಡುತ್ತದೆ.ಇವರು ವಿಷ್ಣು ಪೂಜಕರು. ಮಧ್ಯ ಕಾಲೀನ ೧೩ನೇ ಶತಮಾನದಲ್ಲಿ ಅಹೋಂ ವಂಶದ ಆಳ್ವಿಕೆಯ ಕಾಲದಲ್ಲಿ ಈ ಪ್ರದೇಶ ಉನ್ನತಿಗೆ ಬಂತು.ಬ್ರಹ್ಮಪುತ್ರ ಕಣಿವೆಯ ಮಾಲೀಕತ್ವಕ್ಕಾಗಿ ಸ್ಥಳೀಯರಾದ ಕಚೂರಿ,ಚುತಿಯಾ ಇತರ ಕುಲದವರೊಂದಿಗೆ ಅಹೋಮರ ಹೋರಾಟ ನಡೆಯಿತು.ಗೆಲುವು ಸಾಧಿಸಿದ ಅಹೋಮರು ಮುಂದಿನ ೬೦೦ ವರ್ಷಗಳು ಇಲ್ಲಿ ಆಳ್ವಿಕೆ ನಡೆಸುತ್ತಾರೆ. ಈ ಅರಸರನ್ನು ಹೊರತು ಪಡಿಸಿ ೧೫ ನೇ ಶತಮಾನದ ಸಾಂಸ್ಕೃತಿಕ ಹರಿಕಾರ ಶ್ರೀ ಮಾತ ಶಂಕರದೇವ ಹಿಂದೂ ಧರ್ಮದ ಏಳಿಗೆಗೆ ತನ್ನದೇ ಆದ ಕೊಡುಗೆ ನೀಡಿದ್ದಾನೆ.ಈತನ ಸಾಂಸ್ಕೃತಿಕ ಪ್ರಚಾರ ’ಸತ್ರ’ಗಳ (ಅಸ್ಸಾಮಿ ’ಕ್ಸೋತ್ರೋ’) ಮೂಲಕ ನಡೆಯಿತು.ಈ ಕ್ಸತ್ರಗಳು ಅಸ್ಸಾಮ್ನಣ ಜನಜೀವನದ ಒಂದು ಭಾಗವಾಗಿ ಹೋಗಿವೆ. ಮುಂದೆ ಮೊಘಲರ ಮತ್ತು ಮುಸಲ್ಮಾನ್ ಅರಸರ ಆಳ್ವಿಕೆಗೆ ಒಳಗಾಗದೆ ಉಳಿದ ಈ ರಾಜ್ಯ ಸುಮಾರು ೧೮೨೪ ರಲ್ಲಿ ಟೀ ತೋಟಗಳ ಮಾಲೀಕರಾಗಿ ಆಗಮಿಸಿದ ಬ್ರಿಟೀಶರ ಪ್ರಭಾವಕ್ಕೆ ಒಳಗಾಯಿತು.ಆಂಗ್ಲ ಸಂಸ್ಕೃತಿ ಇಲ್ಲಿ ನೆಲೆಯೂರಿತು.ಇವರ ಹಿಂದೆ ಬಂದ ಕ್ರೈಸ್ತ ಮಿಶನರಿಗಳು ಇವರನ್ನು ವಿದ್ಯಾಭ್ಯಾಸದ ಮೂಲಕ ನಾಗರೀಕರನ್ನಾಗಿ ಮಾಡಲು ಶ್ರಮಿಸಿದರು.ಮಿಶನರಿಗಳ ಆಸ್ಪತ್ರೆಗಳು ಮತ್ತು ಅವರ ಸೇವಾ ಮನೋಭಾವ ಜನರ ಮನ ಗೆದ್ದವು. ೧೯ ಮತ್ತು ೨೦ ನೇ ಶತಮಾನದ ಸಾಂಸ್ಕೃತಿಕ ಬೆಳವಣಿಗೆಗೆ ಇವರ ಕೊಡುಗೆ ಮೂಲಾಧಾರವಾಗಿದೆ. ಅಸ್ಸಾಮರ ಮೂಲ ಸಂಸ್ಕೃತಿಯಿಂದ ಬಂದ ಕೆಲವು ಆಚರಣೆಗಳು ಗಮನಾರ್ಹವಾಗಿವೆ. ಮೊದಲನೆಯದಾಗಿ ಅಸ್ಸಾಮರು ಅಡಿಕೆ,ಗಮೋಸ ವಸ್ತ್ರ ಎಂಬ ಸಾಂಪ್ರದಾಯಿಕ ರೇಶ್ಮೆ ಬಟ್ಟೆಗೆ ಹಾಗೂ ಕ್ಸೋರೈ ಎಂಬ ಪಾತ್ರೆಗೆ ಹೆಚ್ಚು ಗೌರವ ಸಲ್ಲಿಸುತ್ತಾರೆ.’ತಮುಲಪಾನ’ ಅಥವಾ ಅಡಿಕೆ ಮತ್ತು ವೀಳ್ಯ ಗೌರವದ ಸಂಕೇತವಾಗಿ ಪರಿಗಣಿಸಲ್ಪಡುತ್ತದೆ.ಇದರ ವಿನಿಮಯದಿಂದ ಗೌರವ, ಸ್ನೇಹ ಮತ್ತು ಸಂಸ್ಕೃತಿ ವೃದ್ದಿಸುತ್ತದೆ ಎಂದು ಭಾವಿಸಲಾಗುತ್ತದೆ. ಗಮೋಸಾ ಎಂಬ ವಸ್ತ್ರ ಮೂರು ಬದಿ ಕೆಂಪು ಅಂಚುಗಳನ್ನು, ನಾಲ್ಕನೆ ಬದಿ ಅಲಂಕಾರಿಕ ಎಳೆಗಳನ್ನು ಹೊಂದಿರುತ್ತದೆ.ಇದನ್ನು ಹೆಗಲಮೇಲೆ ವಿಶೇಷ ಸಂಧರ್ಭಗಳಲ್ಲಿ ಧರಿಸಲಾಗುತ್ತದೆ.ಇದನ್ನು ಧರಿಸುವುದರಿಂದ ಮತ್ತು ಇತರರಿಗೆ ಅರ್ಪಿಸುವುದರಿಂದ ಅವರಿಗೆ ಉನ್ನತ ಗೌರವ ಸಲ್ಲಿಸಿದಂತೆ ಎಂದು ಭಾವಿಸಲಾಗುತ್ತದೆ.ಗಮೋಸಾ ಪದದ ಮೂಲ ಕಾಮರೂಪದಿಂದ ಬಂದಿದೆ, ಗಾಮ ಎಂದರೆ ’ಚಾದರ್’ ಎಂಬರ್ಥವಿದೆ. ’ಕ್ಸೊರೈ’ ಎಂಬುದು ಮತ್ತೊಂದು ಪ್ರಾತಿನಿಧಿಕ ವಸ್ತು.ಇದನ್ನು ಲೋಹದಿಂದ ತಯಾರಿಸಲಾಗುತ್ತಿದ್ದು ಹೂದಾನಿ ಆಕಾರದಲ್ಲಿರುತ್ತದೆ ಮೇಲೆ ತಟ್ಟೆಯಾಕಾರವಿರುತ್ತದೆ. ಇದೇ ರೀತಿಯ ಮೂರುಕಾಲುಗಳ ಚಿಕ್ಕ ಸ್ಟೂಲನ್ನು ಕರ್ನಾಟಕದ ವೀರಶೈವರು ನೈವೇದ್ಯದ ತಟ್ಟೆಯನ್ನಿಡಲು (ತವಗೆ ಮಣೆ) ಬಳಸುತ್ತಾರೆ. ವೀಳ್ಯ ಮತ್ತು ಗಮೋಸವನ್ನು ಇದರಲ್ಲಿಟ್ಟು ಅತಿಥಿಗಳಿಗೆ ಮತ್ತು ದೇವರಿಗೆ ಅರ್ಪಿಸುವ ವಾಡಿಕೆ ಇದೆ.ಇದು ಅವರ ಅತ್ಯುನ್ನತ ಗೌರವದ ಸಂಕೇತ. ಜಾಪಿ ಅಸ್ಸಾಮಿ ಹ್ಯಾಟ್ ಧರಿಸುವಿಕೆಯೂ ಚಾಲ್ತಿಯಲ್ಲಿದೆ. ೨೦ನೇ ಶತಮಾನ-ಜನ ಜೀವನ ೧೯೪೭ ರಲ್ಲಿ ಭಾರತ ಗಣರಾಜ್ಯಕ್ಕೆ ಸೇರ್ಪಡೆಯಾದ ಅಸ್ಸಾಮ್ನ ಲ್ಲಿ ೨೦೦೧ರ ಜನಗಣತಿಯಂತೆ ೨.೬೬ ಕೋಟಿ ಜನರಿದ್ದಾರೆ. ಈ ರಾಜ್ಯದ ಒಟ್ಟು ವಿಸ್ತೀರ್ಣ ೭೮೫೨೩ ಚದರ ಕಿ.ಮಿ. ಈ ರಾಜ್ಯದಲ್ಲಿ ತಿನ್ಸುನಖಿಯಾ, ದಿಬ್ರುಘರ್, ಶಿಬ್ಸಾಾಗರ್, ಧೇಮ್ಜಿದ, ಜೋರ್ಹಟ್, ಲಖಿಮ್ಪುುರ, ಗೋಲಾಘಾಟ್, ಸೋನಿತ್ಪುಿರ, ಕಾರ್ಬಿ ಆಂಗ್ಲಾಂಾಗ್,ನಾಗಾಂವ್,ಡುರಾಂಗ್,ಕಾಮರೂಪ,ನಲಬಾರಿ,ಬಾರ್ ಪೇಟ,ಬೊಂಗಾಯ್ ಗಾಂವ್,ಗೋಲಪಾರ,ಕೋಕ್ರಜಾರ್,ಧುಬ್ರಿ,ಉತ್ತರ ಕಾಚಾರ್ ಹಿಲ್ಸ್, ಕಾಚಾರ್, ಹೈಲಕಂಡಿ,ಕರೀಂಗಂಜ್,ಕಾಮರೂಪ ಮೆಟ್ರೊ,ಬಕ್ಸಾ, ಉದಾಲ್ಗು್ರಿ, ಮತ್ತು ಚಿರಾಂಗ್ ಮುಂತಾದ ೨೭ ಜಿಲ್ಲೆಗಳಿವೆ.ಇಲ್ಲಿನ ಜನ ಸಂಖ್ಯೆಯ ಶೇ.೮೯ ಗ್ರಾಮ ವಾಸಿಗಳು. ಈ ರಾಜ್ಯದಲ್ಲಿ ಪ್ರತಿ ಚದರ ಕಿ.ಮಿಗೆ ಜನ ಸಾಂದ್ರತೆ ೩೪೦ ಇದೆ. ಸ್ತ್ರಿ-ಪುರುಷರ ಅನುಪಾತ ೯೩೨:೧೦೦೦ ಇದೆ.ಈ ರಾಜ್ಯದಲ್ಲಿ ಈ ವರೆಗೆ ೧೯ ಜನ ಮುಖ್ಯ ಮಂತ್ರಿಗಳು ಕಾರ್ಯ ನಿರ್ವಹಿಸಿದ್ದು ತರುಣ್ ಗೋಗೊಯ್ ಈಗಿನ ಮುಖಮಂತ್ರಿ. ಪ್ರಸ್ತುತ ಅಸ್ಸಾಂ ರಾಜ್ಯದ ಮಹಾ ಚುನಾವಣೆ ನಡೆಯ ಬೇಕಿದೆ.ಇಲ್ಲಿ ೧೨೬ ಅಸೆಂಬ್ಲಿ ಕ್ಷೇತ್ರಗಳಿವೆ,ಲೋಕಸಭೆಗೆ ೧೪ ಕ್ಷೇತ್ರಗಳು ಮತ್ತು ರಾಜ್ಯ ಸಭೆಗೆ ೭ ಸ್ಥಾನಗಳು ಇವೆ. ಭಾರತ ರಾಷ್ಟ್ರಿಯ ಕಾಂಗ್ರೆಸ್,ಅಸ್ಸಾಂ ಗಣ ಪರಿಷತ್ ಮತ್ತು ಬಿಜೆಪಿ ಪ್ರಮುಖ ರಾಜಕೀಯ ಪಕ್ಷಗಳು.ಅಸ್ಸಾಮ್ನಲ್ಲಿ ಸುಮಾರು ೪೫ ಭಾಷೆ-ಉಪ ಭಾಷೆಗಳಿವೆ. ಅಸ್ಸಾಮ್ನಅ ದೇಸಿ ನೃತ್ಯ ಬಿಹು, ರಾಜ್ಯ ಪುಷ್ಪ ಕೊಪೋ ಪೂಲ್,ರಾಜ್ಯದ ಮರ ಹೋಲೋಂಗ್, ರಾಜ್ಯ ಪಕ್ಷಿ ಬಿಳಿ ಕೊಕ್ಕಿನ ಮರ ಕುಟುಕ, ನಾಡಗೀತೆ-’ಓ ಮೋರ್ ಆಪೋನಾರ್ ದೇಸ್...’ ಇಲ್ಲಿ ಸಾಕಷ್ಟು ಸಂಖ್ಯೆಯ ಮ್ಯುಸಿಯಂಗಳು,ಲಲಿತ ಕಲಾ ಭವನಗಳು,ಸಂಗೀತ-ನಾಟಕ ಕಲಾ ಕೇಂದ್ರಗಳು,ಹೆರಿಟೇಜ್ ಪಾರ್ಕ್ಗ್ಳು, ಜ಼ೂಗಳು ಮತ್ತು ಪ್ಲಾನೆಟೇರಿಯಂ‍ಗಳು ಸಾಕಷ್ಟಿವೆ.ಈ ರಾಜ್ಯದಲ್ಲಿ ಗೌಹಾತಿ,ಬಾಲಿಪುರ ಮತ್ತು ತೇಜ್ಪುಗರ ಸೇರಿದಂತೆ ಒಟ್ಟು ಮೂರು ವಿಮಾನ ನಿಲ್ದಾಣಗಳಿವೆ. ಗೌಹಾತಿ ರಾಜ್ಯದ ದೊಡ್ಡ ನಗರ. ಅಸ್ಸಾಮ್ ನ ಬೋಡೋ ಜನರು ಪ್ರತ್ಯೇಕ ಬೋಡೋ ಲ್ಯಾಂಡ್ಗಾಾಗಿ ಬೋಡೋ ಲಿಬರೇಶನ್ ಟೈಗರ್ ಗುಂಪು ಕಟ್ಟಿಕೊಂಡು ಇನ್ನೂ ಹೋರಾಟ ನಡೆಸುತ್ತಿದ್ದಾರೆ. ಈಗ ಕೋಕ್ರಜಾರ್ ಜಿಲ್ಲೆಯಲ್ಲಿ ಬೋಡೋಗಳಿಗಾಗಿ ಸಾಕಷ್ಟು ಪರಿಹಾರ ಕಾರ್ಯ ಕೈಗೊಳ್ಳಲಾಗಿದೆ. ಉಲ್ಫಾ ಅಥವಾ ಯುನೈಟೆಡ್ ಲಿಬರೇಶನ್ & ಬೋಡೋಲ್ಯಾಂಡ್ ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಂಗ/National Democratic Front of Bodoland ಅಸ್ಸಾಂ ನ ಒಂದು ಪ್ರಮುಖ ಸಂಘಟನೆ ಎಂದು ಗುರುತಿಸುವಷ್ಟು ಮಟ್ಟಿಗೆ ಶಕ್ತಿಯುತವಾಗಿದೆ. ಆದಿವಾಸಿಗಳನ್ನು ಕನಿಷ್ಟವಾಗಿ ಕಾಣಲಾಗುತ್ತಿದೆ ಆದುದರಿಂದ ಪ್ರತ್ಯೇಕ ರಾಜ್ಯ ಕೊಡಿ ಎಂಬುದು ಇವರ ಬೇಡಿಕೆ.ಇವರ ಅಟಾಟೋಪಗಳಿಂದ ಜನಜೀವನ ಆಗಾಗ ಅಸ್ಥವ್ಯಸ್ಥವಾಗುವುದುಂಟು. ಸನ್ನಿವೇಶ-ಪ್ರಕೃತಿ ಅಸ್ಸಾಂನ ಗಡಿ ಭೂತನ್ ದೇಶಕ್ಕೆ ಹೊಂದಿಕೊಂಡಿದೆ.ಚೀನ ಆಗಾಗ ಇಲ್ಲಿ ಗಡಿಯಲ್ಲಿ ತಂಟೆ ಮಾಡುವುದುಂಟು. ಸ್ವಲ್ಪ ಭಾಗ ಬಾಂಗ್ಲಾ ಗಡಿ.ಈ ಸಪ್ತ ಸೋದರಿಯರ ನಾಡಿನಲ್ಲಿ ಅರುಣಾಚಲ ಪ್ರದೇಶ ಚೀನದ ಭೀತಿಯಲ್ಲಿ, ಮೇಘಾಲಯ ಮತ್ತು ತ್ರಿಪುರ ಕಳ್ಳ ವಲಸೆಗಾರರ ಸಮಸ್ಯೆಯಲ್ಲಿ, ಮಿಜೋರಾಂ ,ಮಣಿಪುರ ಮತ್ತು ನಾಗಾಲ್ಯಾಂಡ್ ಆಂತರಿಕ ಉಗ್ರಗಾಮಿಗಳ ನೋವಿನಲ್ಲಿವೆ.ಈ ಬಡ ಸೋದರಿಯರ ಕಡೆಗೆ ಭಾರತ ಅಷ್ಟೆನೂ ಪ್ರೀತಿಯಿಂದ ನೋಡದೇ ಅವಗಣನೆಗೆ ತುತ್ತಾಗಿವೆ. ಇದರೊಂದಿಗೆ ಆಗಾಗ ಸಂಭವಿಸುವ ಭೂಕಂಪ ಮತ್ತು ಪ್ರವಾಹ ಸಹಾ ಈ ರಾಜ್ಯಗಳ ಸಮಸ್ಯೆ. ಬ್ರಹ್ಮಪುತ್ರಾ ನದಿ ಅಸ್ಸಾಂನಲ್ಲಿ ಹರಿಯುತ್ತಿದ್ದು ಇಡೀ ದೇಶದಲ್ಲೇ ಪುರುಷನ ಹೆಸರಿನಲ್ಲಿರುವ ಏಕೈಕ ನದಿ ಇದು. ಈ ನದೀ ತಟದಲ್ಲಿ ವ್ಯವಸಾಯ,ಪಶುಪಾಲನೆ ನಡೆಯುತ್ತಿದ್ದು ಜಲ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಅಸ್ಸಾಂ ರಾಜ್ಯಕ್ಕೆ ವಾರ್ಷಿಕವಾಗಿ ೭೦ ರಿಂದ ೧೨೫ ಇಂಚು ಮಳೆಯಾಗುತ್ತದೆ. ಇದರಿಂದ ಈ ರಾಜ್ಯದ ಕಾಡುಗಳಲ್ಲಿ ಸುಮಾರು ೭೫ ಜಾತಿಯ ಮರ-ಮುಟ್ಟುಗಳು ಇವೆ. ಕಾಡುಗಳಲ್ಲಿ ಘೇಂಡಾಮೃಗ,ಆನೆಗಳಂತಹ ಭಾರಿ ಪ್ರಾಣಿಗಳು,ಬಾರಸಿಂಗ ಜಿಂಕೆ,ಕೋತಿಗಳು ಇತ್ಯಾದಿ ಪ್ರಾಣಿ ವರ್ಗ ಹಾಗೂ ನೂರಾರು ಜಾತಿಯ ಆರ್ಕಿಡ್ಗಳಳು ಕಂಡುಬರುತ್ತವೆ. ಘೇಂಡಾಮೃಗಗಳಿಗಾಗಿ ಇರುವ ಪ್ರಸಿದ್ದ ರಾಷ್ಟ್ರೀಯ ಉದ್ಯಾನವನ ಕಾಜಿರಂಗ ಇಲ್ಲಿದೆ. ಸಂಸ್ಕೃತಿ-ಧರ್ಮ ಅಸ್ಸಾಮ್ ವೈವಿಧ್ಯತೆಯಲ್ಲಿ ಏಕತೆಯನ್ನು ಕಂಡಿರುವ ರಾಜ್ಯ.ಮಧ್ಯ ಏಶ್ಯಾದಿಂದ ಬಂದ ಆರ್ಯನರು,ಇರಾನಿ ಜನರು,ಬುಡ ಕಟ್ಟು ಜನಾಂಗ ಒಂದಾಗಿ ಬೆರೆತು ಅಸ್ಸಾಂ‍ನ ಹೊಸ ಜನಾಂಗ ರೂಪಿತವಾಗಿದೆ.ಅಸ್ಸಾಂ‍ನ ಸಂಸ್ಕೃತಿಯಲ್ಲಿ ಶ್ರೀ ಮಾತ ಶಂಕರದೇವನ ಪಾತ್ರ ದೊಡ್ಡದು. ಆತ ಸ್ಥಾಪಿಸಿದ ಸತ್ರಗಳು ಸಂಸ್ಕೃತಿಯ ಪ್ರಚಾರಕ್ಕೆ ದೊಡ್ಡ ಕೊಡುಗೆಯನ್ನೇ ನೀಡಿವೆ. ೧೪೪೯ ರಲ್ಲಿ ನಾಗೊವ್ ನಲ್ಲಿ ಜನಿಸಿದ ಈತ ಅಸ್ಸಾಂ‍ನ ಬಸವಣ್ಣನಿದ್ದಂತೆ. ಅಸ್ಪೃಶ್ಯತೆಯನ್ನು ವಿರೋಧಿಸಿ ಶ್ರೀ ಕೃಷ್ಣನನ್ನು ತನ್ನ ಆರಾಧ್ಯ ದೈವವನ್ನಾಗಿ ಮಾಡಿಕೊಂಡ. ಸತ್ರಗಳೆಂಬ ಧರ್ಮ ಪ್ರಚಾರ ಕೇಂದ್ರಗಳನ್ನು ಸ್ಥಾಪಿಸಿ ಕ್ಸಾತ್ರಿಯ ನೃತ್ಯ ಎಂಬ ಹೊಸ ನೃತ್ಯ ಪ್ರಕಾರವೊಂದನ್ನು ಕಂಡು ಹಿಡಿದ.ವಿಶೇಷವಾದ ಉಡುಪು,ಆಭರಣಗಳನ್ನು ಧರಿಸಿ ಸಂಗೀತ ಉಪಕರಣ ಮತ್ತು ಆಂಗಿಕ ಆಭಿನಯದೊಂದಿಗೆ ಅನೇಕ ಪ್ರಸಂಗಗಳನ್ನು ಅಭಿನಯಿಸಲಾಗುತ್ತದೆ. ಶ್ರೀ ಮಾತ ಶಂಕರದೇವ ೧೫೬೭ ರಲ್ಲಿ ನಿಧನ ಹೊಂದಿದ. ಈತನ ಸತ್ರಗಳು ಶಾಖೆಗಳನ್ನು ಹೊಂದಿದ್ದು ಈ ಮುಂದಿನವು ಪ್ರಮುಖವಾದವು. ಮೋದ್ಪುೆರ ಸತ್ರ,ಶ್ರೀ ದುಹತ್ ಬೆಲಗುರಿ ಸತ್ರ,ಪತ್ ಚಶಿ ಸತ್ರ,ಗಣಕ್ಕುಚಿ ಸತ್ರ,ಜನಿಯಾ ಸತ್ರ, ಸುಂದರಿದಿಯಾ ಸತ್ರ,ಬಾರ್ ಪೇಟ ಸತ್ರ, ಬರಾಡಿ ಸತ್ರ ಮತ್ತು ಸತ್ರ ಕನಾರ ಪ್ರಮುಖವಾದವು. ಅಸ್ಸಾಮಿಯರು ಧರಿಸುವ ಕೆಲವು ಸಾಂಪ್ರದಾಯಿಕ ಆಭರಣಗಳೆಂದರೆ ದುಗದುಗಿ, ಕೆರುಮೊನಿ,ತುರಿಯಾ,ಗಾಮ್ ಖಾರು, ಮತಿ ಖಾರು,ಧೋಲ್ ಬಿರಿ ಇತ್ಯಾದಿ. ಅಸ್ಸಾಂ‍ನಲ್ಲಿ ಬ್ರಾಹ್ಮಣರ ಸಂಖ್ಯೆ ಆದಿವಾಸಿಗಳಿಗೆ ಹೋಲಿಸಿದರೆ ಕಡಮೆ.ಇವರು ಹೆಚ್ಚಾಗಿ ಜೋರ್ಹಟ್,ಗೊಲಾಪಾರ ಮತ್ತು ಗೌಹಾಟಿ ಸುತ್ತಾಮುತ್ತಾ ವಾಸ ಮಾಡುತ್ತಾರೆ.ಇವರ ಉಪನಾಮಗಳು ಶರ್ಮಾ, ಬರುವಾ,ಚಕ್ರವರ್ತಿ ಇತ್ಯಾದಿ.ಇವರು ಹೆಚ್ಚಾಗಿ ತಮ್ಮನ್ನು ಗೋತ್ರಗಳ ಮೂಲಕ ಗುರುತಿಸಿಕೊಳ್ಳುತ್ತಾರೆ.ಜ್ನಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಬೀರೇಂದ್ರ ಕುಮಾರ ಭಟ್ಟಾಚಾರ್ಯ ಅಸ್ಸಾಮಿ ಬ್ರಾಹ್ಮಣರು. ಹಬ್ಬಗಳು ಅಸ್ಸಾಂ ಬಹುತೇಕ ಹಿಂದೂ ಧರ್ಮೀಯರನ್ನು ಹೊಂದಿದ ರಾಜ್ಯ.ಇಲ್ಲಿ ಸ್ಥಳೀಯ ಹಬ್ಬಗಳನ್ನು ಬಹಳ ವೈಶಿಷ್ಟ್ಯಪೂರ್ಣವಾಗಿ ಆಚರಿಸಲಾಗುತ್ತದೆ.ಇಲ್ಲಿನ ಹಬ್ಬಗಳಲ್ಲಿ ಪ್ರಮುಖವಾದದ್ದು ಬಿಹು ಹಬ್ಬ.ಇದನ್ನು ನಮ್ಮ ಸುಗ್ಗಿ ಹಬ್ಬಕ್ಕೆ ಹೋಲಿಸಬಹುದು. ಬಿಹು ಮೂರು ಘಟ್ಟಗಳಲ್ಲಿ ಆಚರಿಸಲ್ಪಡುತ್ತದೆ.ಬೇಸಾಯಗಾರರ ಹಬ್ಬವಾದ ಇದು ಮೊದಲಿಗೆ ರೊಂಗಾಲಿ ಅಥವಾ ಬೊಹಾಗ್ ಎಂಬ ಘಟ್ಟದಿಂದ ವಸಂತನ ಆಗಮನವನ್ನು ಸ್ವಾಗತಿಸುವುದರೊಂದಿಗೆ ಆರಂಭವಾಗುತ್ತದೆ.ಬಿಹು ಗೀತೆಗಳನ್ನು ಹಾಡಿ ವಸಂತ ತಮಗೆ ಒಳಿತನ್ನು ಮಾಡಲಿ ಎಂದು ಪ್ರಾರ್ಥಿಸಿ ಬೆಳೆಯ ನಾಟಿ ಮಾಡಲಾಗುತ್ತದೆ.ಎರಡನೇ ಘಟ್ಟ ಕೊಂಗಾಲಿ ಅಥವಾ ಕಾಟಿ.ಈ ಸಂದರ್ಭದಲ್ಲಿ ಹೊಲಗಳು ಬೆಳೆಗಳಿಂದ ತುಂಬಿರುತ್ತವೆ.ಒಳ್ಳೆ ಬೆಳೆಯ ನಿರೀಕ್ಷೆಯಿಂದ ದೇವರನ್ನು ಪ್ರಾರ್ಥಿಸುತ್ತಾರೆ. ಕೊನೆಯ ಹಂತ ಭೋಗಾಲಿ ಅಥವಾ ಮಘ.ಉತ್ತಮ ಬೆಳೆ ಬಂದು ಕಣಜ ತುಂಬಿರುತ್ತದೆ ಅದಕ್ಕಾಗಿ ದೇವರಿಗೆ ಕೃತಜ್ನತೆ ಸಲ್ಲಿಸಲು ಹಾಡುಗಳು ಮತ್ತು ನೃತ್ಯಗಳೊಂದಿಗೆ ಹಬ್ಬ ಆಚರಿಸಲಾಗುತ್ತದೆ. ಪ್ರತೀ ಘಟ್ಟದ ಆರಂಭದ ಮೊದಲ ದಿನವನ್ನು ’ಉರುಕಾ’ ಎಂದು ಕರೆಯಲಾಗುತ್ತದೆ.ರೊಂಗಾಲಿ ಬಿಹುವಿನ ಮೊದಲ ದಿನವನ್ನು’ಗೋರು ಕಾ ಬಿಹು’ ಎಂದು ಕರೆಯಲಾಗುತ್ತದೆ.ಅಂದು ಹಸುಗಳನ್ನು ನದಿಗೆ ಕರೆದೊಯ್ದು ಸ್ನಾನ ಮಾಡಿಸಿ ಅಲಂಕಾರ ಮಾಡಿ ಪೂಜಿಸಲಾಗುತ್ತದೆ.ಹಸು ಅಸ್ಸಾಮಿಯರಿಗೆ ಪವಿತ್ರ ಪ್ರಾಣಿಯಾಗಿದೆ. ಅಸ್ಸಾಮಿಯರು ದುರ್ಗಾ ಪೂಜೆ,ಡೋಲ್ ಜಾತ್ರಾ ಅಥವಾ ಫ಼ಕುವಾ,ಜನ್ಮಾಷ್ಟಮಿ ಮತ್ತು ಮುಸ್ಲಿಮ್ ಹಬ್ಬಗಳನ್ನು ಆಚರಿಸುತ್ತಾರೆ. ಇವರ ಇತರೆ ಹಬ್ಬಗಳೆಂದರೆ ಮೆಡಂ ಮಧೆ,ಅಲೀ ಆಯ್ ಲಿಗಾಂಗ್,ಕೋರೈ,ಗಾರ್ಜಾ,ಹಾಪ್ಸ ಹಾತಮೈ,ಜಾನೈ ,ಸ್ವರಕ್, ರಂಗ್ ಕೇರ್,ಹಾಜಾ ಕೇಕನ್, ಪೋರನ್ ಇತ್ಯಾದಿ.ಇವುಗಳೊಂದಿಗೆ ಟೀ ಹಬ್ಬ, ಅಂಬುಬಾಸಿ ಮೇಳ,ಜೋನ್ ಬೀಲ್,ಬೈಶಾಗು,ಬೊಹಾಗ್ಗಿಯೋ ಬಿಶು, ಬೈಕೋ,ಅಲಿ ಅಯ್ ಲಿಗಾಂಗ್ ಇತ್ಯಾದಿಗಳನ್ನು ಆಚರಿಸಲಾಗುತ್ತದೆ. ನಾಟಕ-ಸಿನೆಮಾ ಅಸ್ಸಾಂನಲ್ಲಿ ನಾಟಕಗಳ ಸ್ಥಾನ ದೊಡ್ಡದು.ಇದು ಒಂದು ಪ್ರಮುಖ ಅಭಿವ್ಯಕ್ತಿ ಕಲೆಯಾಗಿ ಪ್ರಾರಂಭವಾದದ್ದು ಶ್ರೀಮಾತ ಶಂಕರದೇವನ ಕಾಲದಲ್ಲಿ. ಧರ್ಮ ಪ್ರಚಾರಕ್ಕಾಗಿ ಪುರಾಣ ಪ್ರಸಂಗಗಳನ್ನು ಆರಿಸಿಕೊಂಡು ಅವನ್ನು ವಿಶೇಷ ಉಡುಪು,ಆಭರಣ ಮತ್ತು ನೃತ್ಯಗಳೊಂದಿಗೆ ಅಭಿನಯಿಸುತ್ತಿದ್ದರು.ಈ ಪ್ರಕಾರ ಇಂದಿಗೂ ಉಳಿದು,ಬೆಳೆದು ಬಂದಿದೆ. ಅಸ್ಸಾಂ‍ನಲ್ಲಿ ಮೊಬೈಲ್ ಥಿಯೇಟರ್ ಚಳುವಳಿ ಬಹಳ ಪ್ರಮುಖವಾದದ್ದು. ಇದು ಸುಮಾರು ೨೫-೩೦ ವರ್ಷಗಳಿಂದ ಬೆಳೆದು ಬಂದಿದೆ.ಇದನ್ನು ಸ್ಥಳೀಯವಾಗಿ ’ಬ್ರೆಮಮನ್’ ಎಂದು ಕರೆಯಲಾಗುತ್ತದೆ.ಬದಲಿಸಬಲ್ಲ ದೃಶ್ಯಗಳು,ಹಿನ್ನೆಲೆಗಳು ಇವುಗಳ ವೈಶಿಷ್ಟ್ಯ. (ಕರ್ನಾಟಕದಲ್ಲಿ ಚಲಿಸುವ ಸೀನರಿಗಳನ್ನು ಸುಮಾರು ೫೦ ವಷಗಳ ಹಿಂದೆಯೇ ಪ್ರಸಿದ್ದ ರಂಗ ಕಲಾವಿದ ಶ್ರೀ.ಗುಬ್ಬಿ ವೀರಣ್ಣ ಬಳಸಲು ಆರಂಭಿಸಿದ್ದರು).ಇಲ್ಲಿ ಅಭಿನಯಿಸಲು ಕೇವಲ ಪೌರಾಣಿಕ ಘಟನೆಗಳನ್ನು ಮಾತ್ರವಲ್ಲದೆ ಹಾಲಿವುಡ್ ನ ಪ್ರಖ್ಯಾತ ಚಲನಚಿತ್ರಗಳಾದ ಟೈಟಾನಿಕ್,ಸೂಪರ್ ಮ್ಯಾನ್, ಅನಕೊಂಡಾ,ಹಿಂದಿಯ ಶೋಲೆ, ಧೂಮ್-೨,ಡಾನ್,ಒಸಾಮ ಬಿನ್ ಲಾಡೆ‍ನ ಕಥೆಗಳು ಇಲ್ಲಿ ರಂಗದಮೇಲೆ ಬರುತ್ತವೆ.ಬಹಳಷ್ಟು ಬಾರಿ ಅಸ್ಸಾಮಿ ಚಲನಚಿತ್ರ ಕಲಾವಿದರು ಈ ನಾಟಕಗಳಲ್ಲಿ ಅಭಿನಯಿಸುವುದುಂಟು. ಈ ಮೊಬೈಲ್ ಥಿಯೇಟರ್ ವಹಿವಾಟು ವಾರ್ಷಿಕ ಸುಮಾರು ರೂ.೧೦ ಕೋಟಿ ಮೀರುತ್ತದೆ. ಫಣೀ ಶರ್ಮ,ಬಹಾರುಲ್ ಇಸ್ಲಾಮ್ ಪ್ರಮುಖ ಕಲಾವಿದರು.ಇಲ್ಲಿ ಸುಮಾರು ೧೪ ಪ್ರಮುಖ ಮೊಬೈಲ್ ಥಿಯೇಟರ್ ತಂಡಗಳಿವೆ. ಭಗವತಿ ಥಿಯೇಟರ್,ಬಿನಪಾಣಿ ಥಿಯೇಟರ್ ೨೫ ವರ್ಷಗಳಿಗೂ ಹಳೆಯವು. ಅಸ್ಸಾಂ ರಂಗ ಕಲಾಭ್ಯಾಸ ಈ ಮೊಬೈಲ್ ಥಿಯೇಟರುಗಳ ಉಲ್ಲೇಖವಿಲ್ಲದೆ ಪೂರ್ಣವಾಗುವುದಿಲ್ಲ. ಅಸ್ಸಾಮ್ ಚಿತ್ರ ರಂಗವನ್ನು ’ಜಾಲಿವುಡ್’ ಎಂದು ಕರೆಯಲಾಗುತ್ತದೆ.ಅಸ್ಸಾಂನ ಮೊದಲ ಚಲನಚಿತ್ರ ’ಜೋತಿಮತಿ’ ೧೯೩೫ ರಲ್ಲಿ ಬಿಡುಗಡೆಯಾಯಿತು.ಕೇವಲ ರೂ.೬೦೦೦-೦೦ ವೆಚ್ಚದಲ್ಲಿ ತಯಾರಾದ ಈ ಚಿತ್ರ ಯಶಸ್ವಿಯಾಗಲಿಲ್ಲ.೧೯೫೫ ರಲ್ಲಿ ತಯಾರಾದ ’ಪಿಯಾಲಿ ಪುಕನ್’ ರಾಷ್ಟ್ರೀಯ ಪ್ರಶಸ್ತಿ ಗೆದ್ದಿತು.ಅಸ್ಸಾಮ್ ಚಲನಚಿತ್ರ ರಂಗಕ್ಕೆ ರಂಗು ತಂದವರು ೧೯೫೯ ರಲ್ಲಿ ಚಿತ್ರ ನಟನಾಗಿ ಬಂದ ಶ್ರೀ.ಭೂಪೆನ್ ಹಜಾರಿಕಾ. ಅನೇಕ ರಾಷ್ಟ್ರೀಯ ಮತ್ತು ಅಂತರ ರಾಷ್ಟೀಯ ಪ್ರಶಸ್ತಿಗಳನ್ನು ಗೆದ್ದಿರುವ ಇವರು ಇಂದಿಗೂ ಅಸ್ಸಾಂನಲ್ಲಿ ಜನಪ್ರಿಯ.ಇವರು ೧೯೫೯ ರಲ್ಲಿ ಚಿತ್ರರಂಗ ಪ್ರವೇಶಿಸಿ ಅಪಾರ ಜನಪ್ರಿಯತೆ ಪಡೆದು ೧೯೬೭ ರಿಂದ ೧೯೭೨ ರ ವರೆಗೆ ಶಾಸಕರಾಗಿದ್ದರು.ಅಸ್ಸಾಂ‍ನಲ್ಲಿ ಮೊದಲ ಸ್ಟುಡಿಯೋ ಸ್ಥಾಪನೆ ಮಾಡಿದರು. ೧೯೩೯ ರಲ್ಲಿ ಬಾಲನಟನಾಗಿ ’ಇಂದ್ರ ಮಾಲತಿ’ ಚಲನಚಿತ್ರದಿಂದ ರಂಗ ಪ್ರವೇಶ ಮಾಡಿದ ಇವರು ನಟನೆ,ನಿರ್ದೇಶನ,ಸಂಗೀತ ನಿರ್ದೇಶನ, ಗಾಯನ, ನಿರ್ಮಾಣ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡ ಆಲ್ ರೌಂಡರ್.೧೯೬೦,೧೯೬೪ ಮತ್ತು ೧೯೬೭ ರಲ್ಲಿ ಕ್ರಮವಾಗಿ ’ತಮ ಶಕುಂತಲಾ’, ’ಪ್ರತಿದ್ವನಿ’ ಮತ್ತು ’ಲೋಟಿ ಪೋಟಿ’ ಚಿತ್ರಗಳ ನಿರ್ಮಾಣಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದರು.೧೯೮೧ ರಿಂದ ೧೯೯೦ ರವರೆಗೆ ಕೇಂದ್ರೀಯ ಸೆನ್ಸಾರ್ ಬೋಡ೯ನ ಚೇರಮೆನ್ ಆಗಿದ್ದರು. ಸಾಕಷ್ಟು ಬೆಂಗಾಲಿ ಚಿತ್ರಗಳಿಗೇ ಅಲ್ಲದೆ ಹಿಂದಿ ಚಿತ್ರವೊಂದಕ್ಕೂ ಸಂಗೀತ ನೀಡಿದ್ದಾರೆ (ರುಡಾಲಿ). ಭೂಪೇನ್ ಹಜಾರಿಕಾ ಅಸ್ಸಾಮ್ ಲಾವಣಿ ಮತ್ತು ಸ್ಥಳೀಯ ಜನಪದ ಗೀತೆಗಳನ್ನು ಸುಶಾವ್ಯವಾಗಿ ಹಾಡಬಲ್ಲರು.ಸ್ಥಳೀಯ ಕಲಾವಿದರನ್ನು ಬಳಸಿ ಸಾಕಷ್ಟು ಕಾರ್ಯಕ್ರಮಗಳನ್ನೂ ನೀಡಿದ್ದಾರೆ.ಇವರ ಪ್ರಮುಖ ಚಲನಚಿತ್ರಗಳು ಸಂಧ್ಯಾರಾಗ (೧೯೭೭), ಅನಿರ್ಬನ್ (೧೯೮೧), ಅಗ್ನಿ ಸ್ನಾನ್ (೧೯೮೫),ಕೋಲಾಹಲ್ (೧೯೮೮), ಸರೋತಿ (೧೯೯೧), ಅಬರ್ಟನ್ (೧೯೯೩),ಇತಿಹಾಸ್ (೧೯೯೫), ಹಾಗೂ ಕಾಲ್ ಸಂಧ್ಯಾ(೧೯೯೭). ೧೯೭೭ ರಲ್ಲಿ ಪದ್ಮಶ್ರೀ ಪ್ರಶಸ್ತಿ ಮತ್ತು ದಾದಾ ಸಾಹೇಬ್ ಫ಼ಾಲ್ಕೆಪ್ರಶಸ್ತಿ ಪಡೆದಿದ್ದಾರೆ.ನೂರಾರು ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. ಪ್ರಸ್ತುತ ಇವರ ಆರೋಗ್ಯ ಹದಗೆಟ್ಟಿದ್ದು ಆಸ್ಪತ್ರೆಯಿಂದ ಬಂದು ವಿಶ್ರಾಂತಿಯಲ್ಲಿದ್ದಾರೆ.ಭಗವಂತ ಈ ಹಿರಿಯ ಕಲಾಜೀವಿಗೆ ಹೆಚ್ಚು ಅಯುಸ್ಸು ನೀಡಲಿ. ೧೯೭೫ ರಲ್ಲಿ ಹಜಾರಿಕಾರ ಸಂಗೀತಕ್ಕೆ ’ಚಮೇಲೆ ಮೇಮ್ಸಾತಬ್’ ಚಿತ್ರದಿಂದ ರಾಷ್ಟ್ರೀಯ ಪ್ರಶಸ್ತಿ ದೊರಕಿತು.೧೯೯೧ ರಲ್ಲಿ ಮಲಯಾ ಗೋಸ್ವಾಮಿ ಉತ್ತಮ ನಟಿ ಪ್ರಶಸ್ತಿ ಪಡೆದರು. ಡಾ.ಭಬೇಂದ್ರನಾಥ ಸೈಕಿಯಾ,ಜಾಹ್ನು ಬರುವಾ,ಮಲಯಾ ಗೋಸ್ವಾಮಿ,ಬಿಜು ಪುಕುವ್,ತಪನ್ದಾಗಸ್,ಪ್ರಸ್ತುತಿ ಪರಾಶರ್ ಸಿನೆಮಾ ಕ್ಷೇತ್ರದ ಪ್ರಮುಖ ಹೆಸರುಗಳು. ಗೌಹಾತಿಯಲ್ಲಿ ೯ ಚಲನಚಿತ್ರ ಮಂದಿರಗಳಿವೆ.ಹೆಚ್ಚಾಗಿ ಅಸ್ಸಾಮಿ ಚಿತ್ರಗಳು, ನಂತರ ಬೆಂಗಾಲಿ,ಹಿಂದಿ ಹಾಗೂ ಆಂಗ್ಲ ಚಿತ್ರಗಳು ಪ್ರದರ್ಶನಗೊಳ್ಳುತ್ತವೆ. ಅಸ್ಸಾಮಿನಲ್ಲಿ ನಾಲ್ಕೈದು ಟಿವಿ ಚಾನಲಗಳಿವೆ.ಎನ್ಇ, ಟೀವಿ, ನ್ಯೂಸ್ ಲೈವ್,ಡಿವೈ ೩೬೫, ನ್ಯೂಸ್ ಟೈಮ್ ಅಸ್ಸಾಂ, ಮತ್ತು ಡಿಡಿ ನಾರ್ತ್ ಈಸ್ಟ್. ನೃತ್ಯ-ಸಂಗೀತ ಅಸ್ಸಾಂನ ಸಾಂಸ್ಕೃತಿಕ ಪರಂಪರೆಯಲ್ಲಿ ನೃತ್ಯ ಮತ್ತು ಸಂಗೀತ ಪ್ರಮುಖ ಸ್ಥಾನ ಪಡೆದಿವೆ. ನೃತ್ಯದಲ್ಲಿ ಆದಿವಾಸಿ ನೃತ್ಯ ಜಾನಪದ ನೃತ್ಯ ಮತ್ತು ಶಾಸ್ತ್ರೀಯ ನೃತ್ಯ ಪ್ರಮುಖವಾದವುಗಳಾಗಿವೆ. ಆದಿವಾಸಿ ನೃತ್ಯದಲ್ಲಿ ಬಿಹು ನೃತ್ಯ,ಬುಗುರುಂಬಾ (ಬೋಡೋ ನೃತ್ಯ),ದಿಯೋರಾನಿ (ಸರ್ಪದೇವತೆ ನೃತ್ಯ) ಪ್ರಮುಖವಾದವುಗಳಾಗಿವೆ. ಜಾನಪದ ನೃತ್ಯದಲ್ಲಿ ’ಜೂಮರ್’ ಟೀ ತೋಟದ ಕೆಲಸಗಾರರಿಂದ ಅಭಿನಯಿಸಲ್ಪಡುವ ನೃತ್ಯ ಪ್ರಾಕಾರ. ಮತ್ತೊಂದು ಸತ್ರಿಯ ನೃತ್ಯ ಅಥವಾ ಶಾಸ್ತ್ರಿಯ ನೃತ್ಯ. ಇದು ಭರತನ ನಾಟ್ಯ ಶಾಸ್ತ್ರಕ್ಕೆ ಅನುಗುಣವಾಗಿದ್ದು ಇಲ್ಲಿ ಶ್ರೀಮಾತ ಶಂಕರದೇವನ ಸತ್ರಿಯ ನೃತ್ಯವನ್ನು ಅಭಿನಯಿಸಲಾಗುತ್ತದೆ.ಅಸ್ಸಾಂನ ಶಾಸ್ತ್ರಿಯ ನೃತ್ಯವು ಸವಾಗುವ ಮತ್ತು ರಂಗ್ಗುರವ,ಓಜಾಪಲಿ ನೃತ್ಯ ಹಾಗೂ ದೇವಘರಾ ಮತ್ತು ದೇವನಾಟರ್ ನೃತ್ಯ ಪ್ರಕಾರಗಳನ್ನು ಹೊಂದಿದೆ. ಸಂಗೀತ ಪ್ರಕಾರದಲ್ಲಿ ಜಾನಪದ ಮತ್ತು ಭಕ್ತಿ ಸಂಗೀತ ಪ್ರಮುಖವಾದವುಗಳು.ಜಾನಪದ ಪ್ರಕಾರದಲ್ಲಿ ಕಾಮರೂಪ.ಗೋಲ್ಪುರರಿಯ,ಓಜಾಪಲಿ,ಜುಮುರ್ ಮತ್ತು ಬಿಹು ಗೀತೆಗಳು ಪ್ರಮುಖವಾದವು.ಈ ಹಾಡುಗಳನ್ನು ಅಯಾಯ ಹಬ್ಬಗಳಲ್ಲಿ ಹಾಡಲಾಗುತ್ತದೆ. ಭಕ್ತಿ ಸಂಗೀತಕ್ಕೆ ಶ್ರೀಮಾತ ಶಂಕರದೇವನ ಕೊಡುಗೆ ಅನನ್ಯವಾದದ್ದು.ಈತನ ಸತ್ರಿಯ ಗಾಯನ ಮತ್ತು ನೃತ್ಯ ಅಸ್ಸಾಮ್ನ್ ಅವಿಭಾಜ್ಯ ಅಂಗವಾಗಿದೆ. ಈ ಸಂಗೀತವನ್ನು ಸ್ಥಳೀಯ ಸಂಗೀತ ಸಾಧನಗಳಾದ ಡೋಲ್, ಫ಼ೆಪ,ತಾಲ್,ಗೊಗೋವ,ಟೋಕಾ ಇತ್ಯಾದಿಗಳನ್ನು ಬಳಸಿ ಹಾಡಲಾಗುತ್ತದೆ. ಸತ್ರಿಯಾ ನೃತ್ಯವು ಪ್ರಮುಖವಾಗಿ ಭಜನೆಗಳು ಮತ್ತು ಪುರಾಣ ದೃಶ್ಯಗಳ ಅಭಿನಯವನ್ನು ಒಳಗೊಂಡಿರುತ್ತದೆ. ಈ ನೃತ್ಯವನ್ನು ವಾದ್ಯಗಳೊಂದಿಗೆ ವಿಶೇಷ ಉಡುಪು ಧರಿಸಿ ಅಭಿನಯಿಸಲಾಗುತ್ತದೆ. ಡೋಲು. ತಾಳ, ಕೊಳಲು,ವಯಲಿನ್,ಹಾರ್ಮೋನಿಯಂ,ಘಂಟೆ,ಶಂಖ ಇತ್ಯಾದಿಗಳು ಬಳಕೆಯಾಗುತ್ತವೆ. ಸತ್ರಿಯ ನೃತ್ಯಕ್ಕೆ ಬಳಸುವ ಉಡುಪುಗಳು ವೈವಿಧ್ಯವಾದವು.ಲೊಹಂಗಾ ಎಂಬ ಕೆಳ ಉಡುಪು,ಕಸೋಲಿ ಎಂಬ ಶಲ್ಯ, ತಂಗ್ಲಿ ಎಂಬ ತಲೆಗೆ ಧರಿಸುವ, ಎರಡೂ ಭುಜದ ಮೇಲೆ ಬರುವ ಉಡುಪು,ಪಾಗುರಿ ಎಂಬ ಪೇಟ,ಸದರ್ ಎಂಬ ಮೇಲುಡುಪು ಧರಿಸಲಾಗುತ್ತದೆ.ಇದರೊಂದಿಗೆ ಕಪಾಲಿ ಎಂಬ ತಲೆಗೆ ಧರಿಸುವ ಆಭರಣ,ಗೋಲ್ಪೊಿಟ,ಜೂನ್ ಬರಿ,ದುಗದುಗಿ ಎಂಬ ನೆಕ್ಲೇಸ್ಗ್ಳು, ಲುಕಪಾರೊ, ಕೇರು.ತುರಿಯಾ,ಸೋನಾ ಎಂಬ ಕಿವಿಯ ಅಭರಣಗಳು,ಗಾಮ್ಖೋರು,ಮುತಿಖರು ಎಂಬ ಬಳೆಗಳು,ಜುಮಕಾ ಎಂಬ ಕಾಲ್ಗೆಜ್ಜೆ ಧರಿಸಲಾಗುತ್ತದೆ. ಇವನ್ನು ಧರಿಸಿದ ವ್ಯಕ್ತಿ ಬಹುತೇಕ ನಮ್ಮ ಪೌರಾಣಿಕ ನಾಟಕಗಳಲ್ಲಿನ ಪಾತ್ರಧಾರಿಯಂತೆ ಕಾಣುತ್ತಾನೆ.ತುಮಕೂರು ಸುತ್ತ ಮುತ್ತಲಲ್ಲಿ ಪ್ರಚಲಿತವಿರುವ ವೀರಗಾಸೆ ನೃತ್ಯ, ನೃತ್ಯಗಾರರ ಉಡುಪಿಗೆ ಬಹಳ ಹೋಲಿಕೆ ಕಂಡು ಬರುತ್ತದೆ. ಈ ನೃತ್ಯವನ್ನು ಐದು ಭಂಗಿಗಳಲ್ಲಿ, ೪೪ ವಿಧದ ಲಕ್ಷಣಗಳಲ್ಲಿ, ೭ ವಿಧದ ತಾಳಗಳೊಂದಿಗೆ ಅಭಿನಯಿಸಲಾಗುತ್ತದೆ.ಪೌರಾಣಿಕ ಪ್ರಸಂಗಗಳಾದ ಪತ್ನಿ ಪ್ರಸಾದ,ಕಾಳಿದಮನ,ಕೇಳಿ ಗೋಪಾಲ,ರುಕ್ಮಿಣೀ ಹರಣ,ಪಾರಿಜಾತ ಹರಣ,ಶ್ರೀ ರಾಮ ವಿಜಯ ಮುಂತಾದ ಪ್ರಸಂಗಗಳನ್ನು ಈ ನಾಟಕ-ನೃತ್ಯ ಪ್ರಕಾರಗಳಲ್ಲಿ ಅಭಿನಯಿಸಲಾಗುತ್ತದೆ. ಸಾಹಿತ್ಯ ಸುಮಾರು ೧೪ನೇ ಶತಮಾನದಿಂದ ಬೆಳೆದು ಬಂದಿರುವ ಅಸ್ಸಾಂ ಸಾಹಿತ್ಯ ಪ್ರಕಾರ ಅಲ್ಲಿನ ಜನಪದ ಗೀತೆಗಳು, ಧಾರ್ಮಿಕ ಹಾಡುಗಳು, ಲಾವಣಿಗಳು ಮತ್ತು ಹಬ್ಬದ ಹಾಡುಗಳಿಂದ ಸಮೃದ್ದವಾಗಿದೆ. ಸಾಹಿತ್ಯದ ಕೃಷಿ ಮೊದಲಿಗೆ ಮಾಧವ ಕಂದಲಿ,ಹೇಮಾ ಸರಸ್ವತಿ ಮತ್ತುಹರಿವರ ಬಿಪ್ರ ಇವರ ಕೃತಿಗಳಿಂದ ಪ್ರಾರಂಭವಾಯಿತು.ಮೊದಲ ಸಾಹಿತ್ಯ ಕೃತಿಗಳು ಎಪಿಕ್ಗರಳು ಮತ್ತು ಪೌರಾಣಿಕ ಕಥನಗಳಾಗಿದ್ದವು.ಇಲ್ಲಿ ಶ್ರೀಮಾತ ಶಂಕರದೇವ ಮತ್ತು ಮಾಧವ ದೇವ ಇವರ ಕೊಡುಗೆ ಗಣನೀಯವಾಗಿದೆ. ಅಸ್ಸಾಂ ಸಾಹಿತ್ಯದ ಮೂಲ ಭಾಷೆಯಾಗಿ ಸಂಸ್ಕೃತ ಇದ್ದು ನಂತರ ಬ್ರಜವಳಿ ಎಂಬ ಭಾಷೆ ಚಾಲ್ತಿಗೆ ಬಂತು.ಈ ಭಾಷೆ ನಂತರ ಮರೆಯಾದರೂ ಅಸ್ಸಾಂ ಸಾಹಿತ್ಯದ ಮೇಲೆ ತನ್ನ ನೆರಳನ್ನು ಉಳಿಸಿ ಹೋಗಿದೆ. ಅಹೋಮರ ಇತಿಹಾಸವನ್ನು ’ಬುರಂಜಿ’ ಎಂದು ಕರೆಯಲಾಗುತ್ತದೆ.ಬುರಾಂಜಿಯನ್ನು ಮೊದಲಿಗೆ ’ತಾಯ್’ ಭಾಷೆಯಲ್ಲಿ ರಚಿಸಿದ್ದು ಇದನ್ನು ಓದಿದವರನ್ನು ಗೌರವದಿಂದ ಕಾಣಲಾಗುತ್ತದೆ. ಅಸ್ಸಾಂ ಸಾಹಿತ್ಯವನ್ನು ಆರನೇ ಶತಮಾನದಿಂದ ಹದಿನೈದನೇ ಶತಮಾನದವರೆಗೆ ಪುರಾತನ ಅಸ್ಸಾಮಿ ಎಂದೂ,೧೭ ನೇ ಶತಮಾನದಿಂದ ೧೯ ನೇ ಶತಮಾನದ ವರೆಗೆ ಮಧ್ಯಕಾಲೀನ ಅಸ್ಸಾಮಿ ಎಂದೂ ೧೯ ನೆ ಶತಮಾನದ ನಂತರ ಅಧುನಿಕ ಅಸ್ಸಾಮಿ ಸಾಹಿತ್ಯ ಕಾಲ ಎಂದು ಗುರುತಿಸಬಹುದು. ೧೮೪೬ ರಲ್ಲಿ ’ಅರುಣೋದಯ’ ಎಂಬ ಪತ್ರಿಕೆಯನ್ನು ಮಿಶನರಿಗಳು ಪ್ರಾರಂಭ ಮಾಡುತ್ತಾರೆ.ಹಾಗಾಗಿ ಇದು ಅರುಣೋದಯ ಕಾಲ ಎಂದೇ ಹೆಸರಾಗಿದೆ.ಸಾಹಿತ್ಯದ ಪೂರ್ವ ಕಾಲವಾದ ಅಂದು ಆನಂದ ರಾಮ ದೇಬಿಯಾಲ್, ಲಕ್ಷ್ಮಿಕಾಂತ್ ಬೇಜ್ಬದರುವ,ಹೇಮಚಂದ್ರ ಗೋಸ್ವಾಮಿ ಮುಂತಾದವರು ಪ್ರಮುಖ ಬರಹಗಾರರು. ಸಾಹಿತ್ಯದ ಹೊಸ ಚಿಂತನೆಗಳು ಅಂದು ಆರಂಭವಾದವು. ೨೦ ನೆ ಶತಮಾನದ ನಂತರದ ಕಾಲವನ್ನು ಜಾನಕಿ ಕಾಲ ಎಂದು ಕರೆಯಲಾಗುತ್ತದೆ.ಆಗ ಆರಂಭವಾದ ಜಾನಕಿ ಎಂಬ ಪತ್ರಿಕೆ ಸಾಹಿತ್ಯಕ್ಕೆ ಬೆನ್ನೆಲುಬಾಗಿ ನಿಂತಿತ್ತು. ಅಸ್ಸಾಂನ ಪ್ರಮುಖ ದಿನಪತ್ರಿಕೆಗಳು-ಅಸ್ಸಾಮಿಯ ಪ್ರತಿದಿನ್,ಅಸ್ಸಾಮಿಯ ಖಬರ್,ಅಗ್ರದೂತ್ ಹಾಗೂ ಟ್ರಿಬ್ಯೂನ್( ಆಂಗ್ಲ ಪತ್ರಿಕೆ). ಪ್ರಮುಖ ಮ್ಯಾಗಜಿನ್ಗರಳು- ಬಿಸ್ಮೊಯಯ್, ಪ್ರಾಂತಿಕ್,ಮಾಯ ತ್ರಿಶೂಲ್ ಇತ್ಯದಿ. ಅಸ್ಸಾಂ ಸಾಹಿತ್ಯ ಸಭೆ ಹಾಗೂ ಬೋಡೋ ಸಾಹಿತ್ಯ ಸಭಾ ಸಾಹಿತ್ಯದ ಬೆಳವಣಿಗೆಗೆ ಸಾಕಷ್ಟು ಶ್ರಮಿಸುತ್ತಿದ್ದು ಇಂದಿನ ನವೋದಯ ಬರಹಗಾರರಿಗೆ ಪ್ರೋತ್ಸಾಹ ನೀಡುತ್ತಿದೆ. ವಿವಾಹ ವಿವಾಹ ಮತ್ತು ಅದರ ಪೂರ್ವೋತ್ತರಗಳು ಭಾರತದ ಎಲ್ಲಾ ರಾಜ್ಯಗಳ ಹಿಂದೂ ಸಂಸ್ಕೃತಿಯಲ್ಲಿ ಬಹುತೇಕ ಸಾಮಾನ್ಯವಾಗಿವೆ. ರಾಜ್ಯಗಳಲ್ಲಿ ವಿಭಿನ್ನ ಆಚರಣೆಗಳು ಕಂಡುಬಂದರೂ ಅವುಗಳ ಮೂಲ ಉದ್ದೇಶ ಒಂದೇ ಆಗಿರುತ್ತದೆ.ಅಸ್ಸಾಂ‍ನ ವಿವಾಹ ಭಾರತೀಯ ಹಿಂದೂ ಸಂಸ್ಕೃತಿಯ ವಿವಾಹವನ್ನು ಹೋಲಿದರು ತನ್ನದೇ ಆದ ವಿಶಿಷ್ಟ ಆಚರಣೆಗಳನ್ನು ಹೊಂದಿದೆ.ಅಸ್ಸಾಮೀಯರ ವಿವಾಹ ಆಚರಣೆ ಎರಡು ಅಥವಾ ಮೂರು ದಿನಗಳ ಅವಧಿ ಹೊಂದಿರುತ್ತದೆ. ಮೊದಲ ಹಂತದಲ್ಲಿ ವರನ ತಾಯಿ ವಧುವಿನ ಮನೆಗೆ ಭೇಟಿ ನೀಡಿ ಚಿನ್ನದ ಒಡವೆಯೊಂದನ್ನು ಸೊಸೆಗೆ ನೀಡಿ ಹರಸಿ ವಧುವಿನ ಬೈತಲೆಗೆ ಕುಂಕುಮ ಇಡುವುದರೊಂದಿಗೆ ವಿವಾಹ ಆಚರಣೆ ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ವಧುವಿಗೆ ಮದುವೆಯ ವಿಶೇಷ ಉಡುಗೆಯೊಂದನ್ನು ನೀಡಲಾಗುತ್ತದೆ.ಇದನ್ನು ’ಜುರಾನ್’ ಎಂದು ಕರೆಯಲಾಗುತ್ತದೆ. ’ತೇಲ್ ದಿಯ’ ಎರಡನೇ ಹಂತ.ವರನ ತಾಯಿ ವಧುವಿಗೆ ಮೂರುಬಾರಿ ಎಣ್ಣೆ ಎರೆಯುತ್ತಾಳೆ.ನಂತರ ಪವಿತ್ರ ಸ್ನಾನ. ಮದುವೆಯ ದಿನ ವಧುವಿನ ಮನೆಗೆ ಮೊಸರಿನ ಕುಡಿಕೆ ಕಳುಹಿಸಲಾಗುತ್ತದೆ. ಈ ಆಚರಣೆ ’ದೈಯಾನ್ ದಿಯ’. ವಧು ಆ ಮೊಸರಿನಲ್ಲಿ ಅರ್ಧ ತಿಂದು ವರನ ಮನೆಗೆ ವಾಪಸ್ ಕಳುಹಿಸುತ್ತಾಳೆ.ನಂತರ ವರ ಮತ್ತು ವಧುವಿಗೆ ಸಾಂಪ್ರದಾಯಿಕ ಸ್ನಾನ ಮಾಡಿಸಲಾಗುತ್ತದೆ. ವಿವಾಹ ಸಂದರ್ಭದಲ್ಲಿ ವಧು ’ಮೆಖಲಾ ಚಾದರ್’ ಎಂಬ ವಿಶೇಷ ಉಡುಗೆ ಧರಿಸುತ್ತಾಳೆ. ವರ ರೇಷ್ಮೆ ಕುರ್ತಾ ಮತ್ತು ಧೋತಿ ಧರಿಸುತ್ತಾನೆ. ವಿವಾಹಕ್ಕೆ ಮೊದಲು ಆರತಕ್ಷತೆ ಇರುತ್ತದೆ.ವಿವಾಹ ಸಮಾರಂಭಕ್ಕೆ ಬಂದವರಿಗೆ ಮೀನು ಮತ್ತು ಮಾಂಸದ ಊಟ ಹಾಗೂ ಅಕ್ಕಿಯಿಂದ ತಯಾರಿಸಿದ ಬಿಯರ್ ನೀಡಲಾಗುತ್ತದೆ. ನಂತರ ವರನಿಗೆ ವಧುವಿನತಾಯಿ ಆರತಿ ಬೆಳಗಿ ಸ್ವಾಗತಿಸುತ್ತಾಳೆ.ವರ ವಧುವಿನ ತಂಗಿಗೆ ಭಾರಿ ವಧು ದಕ್ಷಿಣೆಯನ್ನು ನೀಡುತ್ತಾನೆ.ವಧುವಿನ ತಂಗಿ ವರನ ಕಾಲುಗಳನ್ನು ತೊಳೆದು ಗೌರವಿಸುತ್ತಾಳೆ. ಮುಂದೆ ವಿವಾಹ ಸಮಾರಂಭ. ವರನನ್ನು ವಧುವಿನ ಸೋದರ ತನ್ನ ತೋಳುಗಳಲ್ಲಿ ಎತ್ತಿ ತಂದು ಮಂಟಪದಲ್ಲಿ ಕೂರಿಸುತ್ತಾನೆ. ನಂತರ ಮಂಟಪಕ್ಕೆ ಬರುವ ವಧು ತುಪ್ಪ, ಜೇನು,ಮೊಸರು,ಹಾಲು ,ಸಕ್ಕರೆ ಒಳಗೊಂಡ ’ಅಮೃತ’ ಎಂಬ ರಸಾಯನ ಸೇವಿಸುತ್ತಾಳೆ. ಆಕೆಯನ್ನು ಅವಳ ಸೋದರ ಮಾವ ತನ್ನ ತೋಳುಗಳಲ್ಲಿ ಎತ್ತಿ ತಂದು ಮಂಟಪದಲ್ಲಿ ಕೂರಿಸುತ್ತಾನೆ. ಪವಿತ್ರ ಅಗ್ನಿಯ ಮುಂದೆ ಪಂಡಿತರು ಮಂತ್ರಗಳನ್ನು ಹೇಳುವುದರೊಂದಿಗೆ ಹಾರಗಳನ್ನು ವಧು ವರರು ಬದಲಾಯಿಸಿಕೊಳ್ಳುತ್ತಾರೆ. ನಂತರ ವರ ಮಂಗಳ ಸೂತ್ರವನ್ನು ವಧುವಿನ ಕೊರಳಿಗೆ ತೊಡಿಸುತ್ತಾನೆ. ಇಲ್ಲಿಗೆ ವಿವಾಹ ಸಮಾರಂಭ ಮುಕ್ತಾಯವಾಗಿ ವಧು ವರನ ಮನೆ ಸೇರುತ್ತಾಳೆ. ಈ ಪದ್ದತಿಗಳು ಭಾರತದ ಎಲ್ಲೆಡೆ ಒಂದೇ ರೀತಿ ಇರುವುದು ವಿಶೇಷ. ಇಂತಹ ವಿಶೇಷಗಳಿಂದಲೇ ಭಾರತೀಯ ವಿವಾಹಗಳು ಶಾಶ್ವತವಾಗಿ ಉಳಿಯುವುದು. ವಿದ್ಯಾಭ್ಯಾಸ ಅಸ್ಸಾಂ ರಾಜ್ಯದಲ್ಲಿ ಸಾಕ್ಷರತಾ ಪ್ರಮಾಣ ಶೇ.೬೫ ಇದೆ.ಇದಕ್ಕೆ ಕಾರಣ ಅಲ್ಲಿನ ಸರ್ಕಾರ ೧೪ ವರ್ಷದವರೆಗಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣದ ಆದೇಶ ಹೊರಡಿಸಿದೆ.ಪ್ರಸ್ತುತ ಅಸ್ಸಾಂ ರಾಜ್ಯದಲ್ಲಿ ೪೦ ಸಾವಿರಕ್ಕೂ ಹೆಚ್ಚು ಶಾಲೆಗಳಿವೆ.ಈ ಶಾಲೆಗಳಲ್ಲಿ ಬಹುತೇಕ ಬೆಂಗಾಲೀ ಮತ್ತು ಆಂಗ್ಲ ಭಾಷೆ ಶೈಕ್ಷಣಿಕ ಮಾಧ್ಯಮವಾಗಿದೆ.ಕೇಂದ್ರ ಸರ್ಕಾರದ ಕೇಂದ್ರಿಯ ವಿದ್ಯಾಲಯಗಳು ಸಾಕಷ್ಟಿವೆ. ಹಿಂದೆ ಮತ್ತು ಈಗ ಮಿಶನರಿಗಳು ಸ್ಥಾಪಿಸಿದ ಅನೇಕ ಶಾಲಾ ಕಾಲೇಜುಗಳು ಆಂಗ್ಲ ವಿದ್ಯಾಭ್ಯಾಸವನ್ನು ಪರಿಚಯಿಸಿ ಅಸ್ಸಾಂ ಮಕ್ಕಳಿಗೆ ಹೊಸ ಮನ್ವಂತರವನ್ನೇ ತೆರೆದಿವೆ. ಉನ್ನತ ವಿದ್ಯಾಭ್ಯಾಸಕ್ಕೂ ಸಾಕಷ್ಟು ಅವಕಾಶ ಇದ್ದು ಇಲ್ಲಿ ಗೌಹಾತಿ ವಿಶ್ವವಿದ್ಯಾಲಯ ೧೯೪೮ ರಲ್ಲಿ ಪ್ರಾರಂಭವಾಯಿತು. ಈ ವಿಶ್ವವಿದ್ಯಾಲಯದ ಅಡಿ ಸುಮಾರು ೨೦೦ ಕ್ಕೂ ಹೆಚ್ಚು ಕಾಲೇಜುಗಳು ಕಾರ್ಯ ನಿರ್ವಹಿಸುತ್ತವೆ. ದಿಬ್ರೂಘರ್ ಮತ್ತು ತೇಜ್ಪುಿರಗಳಲ್ಲಿ ವಿಶ್ವವಿದ್ಯಾಲಯಗಳು ಆರಂಭವಾಗಿದ್ದು ಇವುಗಳ ಅಧೀನದಲ್ಲಿನ ಪದವಿ ಕಾಲೇಜುಗಳಲ್ಲಿ ಕಲೆ, ವಿಜ್ಞಾನ, ವಾಣಿಜ್ಯ, ಕಾನೂನು ಮತ್ತು ಎಂಜಿನೀರಿಂಗ್ ಹಾಗು ವೈದ್ಯಕೀಯ ಶಿಕ್ಷಣ ನೀಡಲಾಗುತ್ತಿದೆ. ಅಸ್ಸಾಂ‍ನಲ್ಲಿ ಈಗ ೪ ಮೆಡಿಕಲ್ ಮತ್ತು ೪ ಎಂಜಿನೀರಿಂಗ್ ಕಾಲೇಜುಗಳು ಇವೆ. ಗೌಹಾತಿ ನಗರದಲ್ಲಿ ಪ್ರತಿಷ್ಟಿತ ಐ.ಐ.ಟಿ ಸಂಸ್ಥೆ ಇದೆ.೧೯೦೧ ರಲ್ಲಿ ಪ್ರಾರಂಭವಾದ ಕಾಟನ್ ಕಾಲೇಜ್ ಹಳೆಯ ವಿದ್ಯಾ ಸಂಸ್ಥೆ. ಸಿಲ್ಚಾನರ್ ನಲ್ಲಿ ಎನ್ಐ.ಟಿ ಸಂಸ್ಥೆ ಸಹಾ ಇದೆ. ಜೋರ್ಹಟ್ನನಲ್ಲಿ ಕೃಷಿ ವಿಶ್ವ ವಿದ್ಯಾಲಯ,ರೋಹಾದಲ್ಲಿ ಮೀನುಗಾರಿಕಾ ಕಾಲೇಜು ಕಾರ್ಯ ನಿರ್ವಹಿಸುತ್ತಿವೆ. ಅಸ್ಸಾಂನಲ್ಲೂ ಸಹ ಶಾಲೆ ಬಿಡುವ ಮಕ್ಕಳ ಸಂಖ್ಯೆ ೧೦ ನೇ ತರಗತಿ ನಂತರ ಶೇ.೭೫ ಇದೆ. ಕಾಡು-ಕೃಷಿ-ವಾಣಿಜ್ಯ ಬ್ರಹ್ಮಪುತ್ರಾ ನದಿ ಅಸ್ಸಾಮ್ನಿ ಜೀವನದಿ.ಇದು ರಾಜ್ಯದ ಉತ್ಪನ್ನವನ್ನು ಹೆಚ್ಚಿಸಿದಂತೆ ಅಲ್ಲಿನ ಸಮಸ್ಯೆಗಳಿಗೂ ಕಾರಣವಾಗಿದೆ.ಮಳೆಗಾಲದಲ್ಲಿ ಪ್ರವಾಹ ಸಾಮಾನ್ಯ. ಉಕ್ಕಿ ಹರಿಯುವ ಬ್ರಹ್ಮಪುತ್ರ ಜನರನ್ನು ಕಂಗೆಡಿಸುತ್ತದೆ. ಈ ನದಿಗೆ ಸಾಕಷ್ಟು ವ್ಯವಸಾಯ ಪ್ರದೇಶ ಇದೆ. ಇದರಿಂದ ಬೇಸಾಯ ಮತ್ತು ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಅಸ್ಸಾಂ‍ನಲ್ಲಿ ಸುಮಾರು ೪.೭೭ ಲಕ್ಷ ಹೆಕ್ಟೆರುಗಳಷ್ಟು ವ್ಯವಸಾಯ ಭೂಮಿ ಇದೆ. ಇಲ್ಲಿನ ಪ್ರಮುಖ ಆಹಾರ ಬೆಳೆ ಗೋಧಿ, ಭತ್ತ, ಹಣ್ಣು, ತರಕಾರಿ. ವಾಣಿಜ್ಯ ಬೆಳೆಗಳಾಗಿ ಅಡಕೆ,ಎಣ್ಣೆ ಕಾಳು, ಸಣಬು, ಕೊಬರಿ ಇದೆ. ಅಸ್ಸಾಂ ಇಡಿ ದೇಶದಲ್ಲಿ ಹೆಚ್ಚು ಅಡಕೆ ಬೆಳೆಯುವ ೩ ನೇ ರಾಜ್ಯ. ಟೀ ಬೆಳೆ ಇಲ್ಲಿನ ಪ್ರಮುಖ ಆದಾಯದ ಮೂಲ. ಆದರೆ ಟೀ ತೋಟಗಳ ಮಾಲಿಕತ್ವ ಸ್ಥಳೀಯರಿಗಿಂತಾ ಹೆಚ್ಚಾಗಿ ಕಂಪನಿಗಳ ಕೈಯಲ್ಲಿ ಇದೆ. ಜನ ಈ ತೋಟಗಳಲ್ಲಿ ಕೂಲಿ ಕಾರ್ಮಿಕರಾಗಿ ತಮ್ಮ ಜೀವನೋಪಾಯ ಕಂಡುಕೊಂಡಿದ್ದಾರೆ. ವ್ಯಾಪಾರ ವಹಿವಾಟಿನಲ್ಲಿ ಅಸ್ಸಾಂ ಹಿಂದುಳಿದಿದೆ. ಇವರ ಇತರೇ ಆದಾಯದ ಮೂಲ ಗೃಹ ಮತ್ತು ಗುಡಿ ಕೈಗಾರಿಕೆ. ಬೊಂಬಿನ ಕುಶಲ ಕಲೆಗಳಿಗೆ ಮತ್ತು ತಾಮ್ರ ಹಾಗು ಇತರ ಲೋಹಗಳ ಸಲಕರಣೆ ತಯಾರಿಕೆಗೆ ಅಸ್ಸಾಮ್ ಹೆಸರುವಾಸಿಯಾಗಿದೆ. ಇಲ್ಲಿ ರೇಷ್ಮೆ ಉದ್ಯಮ ಸಹಾ ಇದೆ. ಇಲ್ಲಿ ಉತ್ಪಾದನೆಯಾಗುವ ವಿಶಿಷ್ಟ ರೇಷ್ಮೆ ’ಮುಗ’ ವಿಶ್ವದ ಬೇರೆಲ್ಲೂ ಬೆಳೆಯಲ್ಪಡುವುದಿಲ್ಲ. ನವಿರಾದ ಎಳೆಗಳನ್ನು ಹೊಂದಿದ ಇದು ವಿಶ್ವ ವಿಖ್ಯಾತ. ಎರಿ, ಟಸ್ಸಾರ್,ಮತ್ತು ಮಲಬಾರಿ ಇತರೆ ಜಾತಿಯವು. ಇಷ್ಟೆಲ್ಲ ಇದ್ದರೂ ಇಲ್ಲಿನ ತಲಾ ಆದಾಯ ದೇಶದ ಸರಾಸರಿಗಿಂತಾ ಕಡಮೆ ಇದೆ. ಕೈಗಾರಿಕಾ ಬೆಳವಣಿಗೆ ಹೆಚ್ಚಿನ ಮಟ್ಟದಲ್ಲಿ ಇಲ್ಲ. ಇಲ್ಲಿನ ದೊಡ್ಡ ಕೈಗಾರಿಕೆ ತೈಲೋತ್ಪಾದನೆ. ೧೮೮೯ ರಲ್ಲಿ ಪ್ರಾರಂಭವಾದ ದಿಗ್ಬೋಬಯ್ ಹಳೆಯ ತೈಲೋತ್ಪಾದನಾ ಘಟಕ. ಬೊಂಗಾಯ್ಗಾಷವ್ ಮತ್ತು ನುಮಲಿಘರ್‌ನಲ್ಲಿ ಮತ್ತೆರಡು ಘಟಕಗಳಿವೆ.ಭಾರತೀಯ ತೈಲ ನಿಗಮ ಇಲ್ಲಿ ಸುಮಾರು ರೂ.೨೬೦೦ ಕೋಟಿವಹಿವಾಟು ನಡೆಸುತ್ತದೆ. ಇಲ್ಲಿ ತೈಲ ಬಾವಿಗಳಲ್ಲಿ ಉತ್ಪಾದನೆಯಾಗುವ ಉಪ ಉತ್ಪನ್ನಗಳಾದ ಗ್ಯಾಸ್, ಕಲ್ಲಿದ್ದಲು ಇಲ್ಲಿನ ವಾಣಿಜ್ಯಕ್ಕೆ ಕೊಡುಗೆಯನ್ನೇನೂ ನೀಡಿಲ್ಲ. ಅಸ್ಸಾಂ‍ನ ವ್ಯಾಪಾರದ ತೆರಿಗೆ ಆದಾಯ ವ್ಯಾಟ್ ೨೦೦೯-೧೦ ರಲ್ಲಿ ರೂ.೪.೪೦ ಕೋಟಿ ಮಾತ್ರಾ. ಕರ್ನಾಟಕದ ವಾರ್ಷಿಕ ವ್ಯಾಟ್ ತೆರಿಗೆ ಆದಾಯ ವಾರ್ಷಿಕ ರೂ.೨೨,೦೦೦ ಕೋಟಿ. ಅಸ್ಸಾಂ‍ನ ಕಾಡುಗಳು ಸ್ಥಳೀಯರಿಗೆ ಆದಾಯದ ಮೂಲಗಳಾಗಿವೆ. ಇಲ್ಲಿ ಬೆಳೆಯುವ ಮರ-ಮುಟ್ಟು,ಔಷದೀಯ ಸಸ್ಯಗಳು ಹೊರ ರಾಜ್ಯಗಳಿಗೆ ಮಾರಾಟವಾಗುತ್ತವೆ. ಅಸ್ಸಾಂ‍ನಲ್ಲಿ ಆಯುರ್ವೇದ ಸಸ್ಯಗಳ ಬಳಕೆ ಬಹಳ. ತುಳಸಿ, ಕಂಟಕಾರಿ, ಭಂಗಿ ಸೊಪ್ಪು, ಇತ್ಯಾದಿಗಳು ಬಹಳ ಬಳಕೆಯಾಗುತ್ತವೆ. ಇವುಗಳ ರಸ ಮತ್ತು ತೈಲಗಳನ್ನು ಫಿಸಿಯೋಥೆರಪಿಗೆ ಬಳಸಲಾಗುತ್ತದೆ. ಇದು ಈಗ ಒಂದು ಉದ್ಯಮವಾಗಿ ಬೆಳೆದಿದೆ. ಹಾಗೆಂದೇ ಇಂದು ಕರ್ನಾಟಕದ ಬಹುತೇಕ ಫಿಸಿಯೋಥೆರಪಿ ಕಾಲೇಜುಗಳ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಅಸ್ಸಾಮಿಯರೇ ಆಗಿದ್ದಾರೆ. ಅಸ್ಸಾಮ್ ಕಾಡುಗಳು ವಿಶಿಷ್ಟ ಏಕದಂತ ಘೇಂಡಾ ಮೃಗಗಳು, ಆನೆಗಳು, ಹುಲಿಗಳು ಮತ್ತು ಅನೇಕ ವಿಶಿಷ್ಟ ಪಕ್ಷಿಗಳಿಗೆ ಆಶ್ರಯ ತಾಣವಾಗಿವೆ. ಇಲ್ಲಿನ ಮಳೆ ಪ್ರಮಾಣ ವಾರ್ಷಿಕ ಸುಮಾರು ೩೦೫ ಇಂಚು. ಅಭಯಾರಣ್ಯಗಳು ಅಸ್ಸಾಂ ಅಭಯಾರಣ್ಯಗಳ ನಾಡು.ಅವುಗಳಲ್ಲಿ ಪ್ರಮುಖವಾದವನ್ನು ಇಲ್ಲಿ ಹೆಸರಿಸಲಾಗಿದೆ. ಇಲ್ಲಿ ೧೭ ಅಭಯಾರಣ್ಯಗಳು, ೯ ರಾಷ್ಟ್ರೀಯ ಉದ್ಯಾನವನಗಳು (ಕಾಜಿರಂಗ, ಮಾನಸ, ದಿಬ್ರು, ನಮೇರಿ, ಒರಾಂಗ್ ರಾಜೀವ್ ಗಾಂಧಿ ಪಾರ್ಕ್, ಪೊಬಿತಾರ, ಗಿಬ್ಬನ್, ಗರಂಪಾನಿ ಮತ್ತು ಚಕ್ರಶಿಲಾ), ೩ ಹುಲಿ ಅಭಯಾರಣ್ಯಗಳು (ಮಾನಸ,ನಮೇರಿ ಮತ್ತು ಕಾಜಿರಂಗ), ೫ ಆನೆ ಅಭಯಾರಣ್ಯಗಳು ಮತ್ತು ೩೩ ಸಾಮಾಜಿಕ ಅರಣ್ಯ ಪಾರ್ಕ್ಗಾಳು ಇವೆ. ಅಸ್ಸಾಂನ ಪ್ರಸಿದ್ದ ರಾಷ್ಟ್ರೀಯ ಉದ್ಯಾನವನ ಕಾಜಿರಂಗ. ಈ ಪಾರ್ಕ್ ಗೌಹಾತಿಯಿಂದ ೨೧೭ ಕಿಮಿ ಮತ್ತು ಜೋರ್ಹಟ್ ವಿಮಾನ ನಿಲ್ದಾಣದಿಂದ ೯೬ ಕಿಮಿ ದೂರವಿದೆ. ಇಲ್ಲಿಗೆ ಭೇಟಿ ನೀಡಲು ನವೆಂಬರ್'ನಿಂದ ಏಪ್ರಿಲ್ ಉತ್ತಮ ಕಾಲ. ಇಲ್ಲಿ ಈ ಕಾಲದಲ್ಲಿ ಬರುವ ಪ್ರವಾಸಿಗರಿಗಾಗಿ ಜೀಪ್ ಸಫಾರಿ,ಆನೆ ಸಫಾರಿ ಏರ್ಪಡಿಸಲಾಗುತ್ತದೆ. ಉಳಿದುಕೊಳ್ಳಲು ಸರ್ಕಾರಿ ಟೂರಿಸ್ಟ್ ಲಾಡ್ಜ್ಗಿಳಿವೆ. ಇದು ಅಂತರ ರಾಷ್ಟ್ರೀಯ ಮಾನ್ಯತೆ ಹೊಂದಿದ್ದು ಇಲ್ಲಿ ಅಳಿವಿನ ಅಂಚಿನಲ್ಲಿರುವ ಪ್ರಾಣಿ-ಪಕ್ಷಿಗಳ ಸಂರಕ್ಷಣೆಗೆ ಪ್ರಯತ್ನಿಸಲಾಗುತ್ತಿದೆ. ಇಲ್ಲಿ ಸುಮಾರು ೭೫ ಕ್ಕೂ ಹೆಚ್ಚು ವಿಧದ ಮರ-ಮುಟ್ಟುಗಳು, ೧೧೫ ಕ್ಕೂ ಹೆಚ್ಚು ಪ್ರಾಣಿ ವೈವಿಧ್ಯಗಳು ಮತ್ತು ನೂರಾರು ಪಕ್ಷಿ ಜಾತಿಗಳು ವಾಸ ಮಾಡುತ್ತಿವೆ. ಈ ಉದ್ಯಾನವನವು ಸುಮಾರು ೮೫೮.೯೮ ಚದರ ಕಿ.ಮಿ. ದೊಡ್ಡದು. ಇಲ್ಲಿ ವಿಶ್ವದಲ್ಲೇ ಅಪರೂಪವಾದ ಒಂಟಿ ಕೊಂಬಿನ ಘೇಂಡಾಮೃಗ ವಾಸಿಸುತ್ತದೆ. ಸುಮಾರು ೨ ಮೀಟರು ಉದ್ದ, ೨-೩ ಟನ್ ತೂಕದ ಈ ಪ್ರಾಣಿ ಸುಮಾರು ೫೦ ವರ್ಷಗಳವರೆಗೆ ಜೀವನ ನಡೆಸುತ್ತದೆ. ಈಗ ವಿಶ್ವದಲ್ಲಿ ಕೆಲವೇ ಸಾವಿರ ಒಂಟಿಕೊಂಬಿನ ಘೇಂಡಾಮೃಗಗಳು ಇದ್ದು ಅದರಲ್ಲಿನ ಮೂರನೇ ಎರಡು ಭಾಗದಷ್ಟು ಇಲ್ಲಿವೆ. ಅವುಗಳ ರಕ್ಷಣೆಗೆ ಸರ್ಕಾರ ಈ ರಾಷ್ಟ್ರೀಯ ಪಾರ್ಕ್'ನ್ನು ಸ್ಥಾಪನೆ ಮಾಡಿದೆ. ಈ ಪ್ರಾಣಿಗಳನ್ನು ಕೊಲ್ಲುವುದು ಅಪರಾಧ ಎಂದು ಕಾನೂನು ಮಾಡಿದ್ದರೂ ಸಹ ಈ ಪ್ರಾಣಿಯ ಕೊಂಬು ಪುರುಷತ್ವವನ್ನು ಹೆಚ್ಚಿಸುತ್ತದೆ ಎಂಬ ಮೂಢ ನಂಬಿಕೆಯಿಂದ ಇವನ್ನು ಕಳ್ಳ ಬೇಟೆಗಾರರು ಕೊಲ್ಲುತ್ತಿದ್ದಾರೆ. ಹಾಗಾಗಿ ಇವುಗಳ ಸಂತತಿ ಕಡಮೆಯಾಗುತ್ತಿದೆ. ಆನೆಗಳು ಇಲ್ಲಿನ ಮತ್ತೊಂದು ಆಕರ್ಷಣೆ.ಸ್ವಾಂಪ್ ಜಿಂಕೆ ಮತ್ತೊಂದು ವಿಶಿಷ್ಟ ಪ್ರಾಣಿ.೧೫೦ ಕೇಜಿ ತೂಗುವ ಇವುಗಳ ತುಪ್ಪಳ ಮತ್ತು ಕೊಂಬುಗಳೇ ಇವುಗಳ ಜೀವಕ್ಕೆ ಎರವಾಗುತ್ತಿವೆ. ಇವನ್ನು ಬಾರಾಸಿಂಗ ಎಂದೂ ಕರೆಯಲಾಗುತ್ತದೆ. ವಿಶ್ವದಲ್ಲೇ ವಿರಳವಾಗಿರುವ ಪಿಗ್ಮಿ ಹಾರ್ ಎಂಬ ಹಂದಿ ಜಾತಿಯ ಪ್ರಾಣಿ ಇಲ್ಲಿವೆ.ಕೆಂಪು ಕೂದಲಿನ ಗೋಲ್ಡನ್ ಲಂಗೂರ್ ಕೋತಿಗಳು ಅಸ್ಸಾಂ ಭೂತಾನ್ ಗಡಿಯಲ್ಲಿ ವಾಸಿಸುತ್ತವೆ. ಗಿಬ್ಬನ್ ಜಾತಿಯ ಕೋತಿಗಳೂ ಸಹಾ ಈ ಉದ್ಯಾನವನದಲ್ಲಿವೆ. ಸ್ಟಾರ್ಕ್,ಮಂಗಟ್ಟೆ (ಗ್ರೇಟ್ ಇಂಡಿಯನ್ ಹಾರ್ನ್ಬಿಜಲ್) ಮುಂತಾದ ಅಳಿವಿನಂಚಿನಲ್ಲಿರುವ ಪಕ್ಷಿಗಳು ಇಲ್ಲಿ ವಾಸಿಸುತ್ತವೆ. ನೋಡಲು ಸುಂದರವಾದ ಈ ಪಕ್ಷಿಗಳ ಜೊತೆಗೆ ಪ್ರತೀ ವರ್ಷ ಸೈಬೀರಿಯಾದಿಂದ ವಲಸೆ ಬರುವ ಅನೇಕ ಪಕ್ಷಿಗಳು ಇಲ್ಲಿ ನೋಡಲು ಸಿಗುತ್ತವೆ. ಮಾನಸ್ ಉದ್ಯಾನ ಗೌಹತಿಯಿಂದ ೧೭೬ ಕಿಮಿ ದೂರವಿದೆ. ಇಲ್ಲೂ ಸಹ ಘೇಂಡಾಮೃಗಗಳು,ಆನೆಗಳು ಮತ್ತಿತರ ಪ್ರಾಣಿಗಳಿವೆ. ನಮೇರಿ ರಾಷ್ಟ್ರೀಯ ಉದ್ಯಾನವನ ಗೌಹಾತಿಯಿಂದ ೩೫ ಕಿಮಿ ದೂರವಿದೆ.ಭಾಲುಕ್ ಪಂಗ್ ಇಲ್ಲಿನ ಪ್ರಮುಖ ಪ್ರಾಣಿ. ಇಲ್ಲಿಗೆ ಬರಲು ನವೆಂಬರ್‌ನಿಂದ ಮಾರ್ಚ್ ಉತ್ತಮ ಕಾಲ. ದಿಬ್ರು ರಾಷ್ಟ್ರೀಯ ಉದ್ಯಾನವನ ಗೌಹಾಟಿಯಿಂದ ೪೮೩ ಕಿಮಿ ದೂರವಿದೆ. ಇಲ್ಲಿ ಸುಮಾರು ೨೫೦ ವಿಧಗಳ ಪಕ್ಷಿ ಜಾತಿಗಳು ವಾಸ ಮಾಡುತ್ತವೆ. ಓರಂಗ್ ರಾಜೀವ್'ಗಾಂಧಿ ಪಾರ್ಕ್ ಗೌಹಾಟಿಯಿಂದ ೧೫೦ ಕಿಮಿ ದೂರವಿದೆ.ಇಲ್ಲೂ ಸಹ ಪ್ರವಾಸಿಗಳಿಗೆ ಸಾಕಷ್ಟು ಅನುಕೂಲಗಳನ್ನು ಕಲ್ಪಿಸಲಾಗಿದೆ. ಆಹಾರ-ಅಭ್ಯಾಸ ಬಹುತೇಕ ಅಸ್ಸಾಮಿಗಳು ಮಾಂಸಾಹಾರಿಗಳು. ಇವರ ಆಹಾರ ಪದಾರ್ಥದಲ್ಲಿ ಮಸಾಲೆಗಳ ಬಳಕೆ ಕಡಮೆ. ಆದರೆ ಗಿಡಮೂಲಿಕೆಗಳನ್ನು ತಮ್ಮ ಆಹಾರದ ಒಂದು ಭಾಗವನ್ನಾಗಿ ಮಾಡಿಕೊಂಡಿದ್ದಾರೆ. ಮೀನು ಮತ್ತು ಹಂದಿ ಮಾಂಸದ ಬಳಕೆ ಜಾಸ್ತಿ. ರೋಹು, ಇಲ್ಲಿಶ್ ಮತ್ತು ಚಿತಲ್ ಜಾತಿಯ ಮೀನುಗಳು ಇಲ್ಲಿ ದೊರೆಯುತ್ತವೆ. ಪ್ರಮುಖ ಮೀನು ಪದಾರ್ಥ ’ತೆಂಗಾ’. ಊಟದೊಂದಿಗೆ ಹುರಿದ ಹಂದಿ ಮಾಂಸದ ಬಳಕೆ ಇದೆ. ಅನ್ನವನ್ನು ಬೇಯಿಸಿ , ಹುರಿದು ತಿನ್ನಲಾಗುತ್ತದೆ. ಹಾಲು ಮತ್ತು ಮೊಸರು ಬಳಸುತ್ತಾರೆ. ಸ್ಥಳೀಯವಾಗಿ ಅಕ್ಕಿಯಿಂದ ತಯಾರಿಸಿದ ಬಿಯರ್ ಬಳಕೆ ಸಾಮಾನ್ಯ. ಕಾಲಿಫ್ಲವರ್, ಬೀಟ್ರೂಗಟ್, ಕೂಲ್ದಿಲ್(ಬಾಳೆ ಹೂ), ಬಾಳೆ ಕಂದು, ಕುಂಬಳ, ಸೋರೆಕಾಯಿ (ಜಲಿಲಾನ್), ಪಡುವಲಕಾಯಿ (ದುಂದುಲಿ), ಬೂದುಗುಂಬಳ (ಕೋಮೋರ), ಹಾಗಲ (ಖೆರಲ), ಬೆಂಡೆ, ಕ್ಯಾರಟ್, ಟೊಮೋಟೋ, ಪಪ್ಪಾಯ ಮತ್ತು ಬೇಳೆಕಾಳುಗಳನ್ನು ಬಳಸಲಾಗುತ್ತದೆ. ಸೇಬನ್ನು ಅಪೀಲ್’ಎಂದು, ಬಾಳೆಯನ್ನು ಕೋಲ್ ಎಂದೂ, ಬೆಳ್ಳುಳ್ಳಿಗೆ ನಹಾರೋ, ಸೀಬೆಗೆ ಮಧುರಿಮ್ ಮತ್ತು ಕಡಲೇಬೀಜಕ್ಕೆ ಮೋಟುರ್ ಎಂದು ಕರೆಯುತ್ತಾರೆ. ಎರಿಪೋಲು ಎಂಬ ಪದಾರ್ಥ ಇಲ್ಲಿ ಬಹಳ ಪ್ರಸಿದ್ದ.ಇದನ್ನು ಇಲ್ಲಿನ ವಿಶೇಷ ರೇಶ್ಮೆ ’ಎರಿ’ಯ ಗೂಡಿನಿಂದ ನೂಲು ತೆಗೆದ ನಂತರ ಉಳಿಯುವ ಪ್ಯೂಪದಿಂದ ಹುರಿದು ತಯಾರಿಸಲಾಗುತ್ತದೆ. ಇದು ಇಲ್ಲಿನ ಸಾಂಪ್ರದಾಯಿಕ ಆಹಾರ. ಇಲ್ಲಿ ಟೀ ಬಳಕೆ ಜಾಸ್ತಿ ಇದೆ. [೧][೨][೩][೪] ಜಿಲ್ಲೆಗಳು ಅಸ್ಸಾಮ್ನುಲ್ಲಿ ಒಟ್ಟು ೨೭ ಜಿಲ್ಲೆಗಳು ಇವೆ.ಇವುಗಳನ್ನು ಸ್ಥೂಲವಾಗಿ ಕೇಂದ್ರ ಅಸ್ಸಾಂ ಜಿಲ್ಲೆಗಳು,ಪಶ್ಚಿಮ ಅಸ್ಸಾಂ ಜಿಲ್ಲೆಗಳು, ಉತ್ತರ ಅಸ್ಸಾಂ ಜಿಲ್ಲೆಗಳು ಮತ್ತು ದಕ್ಷಿಣ ಅಸ್ಸಾಂ ಜಿಲ್ಲೆಗಳು ಎಂದು ವಿಭಾಗಿಸಬಹುದು. ಧೇಮ್ಜಿ್ ಜಿಲ್ಲೆ ಪಶ್ಚಿಮ ಅಸ್ಸಾಮ್ನಜಲ್ಲಿ ಬರುವ ಈ ಜಿಲ್ಲೆರಾಜ್ಯದ ರಾಜಧಾನಿ ಡಿಸ್ಪುರರದಿಂದ ೫೦೦ ಕಿಮಿ ದೂರವಿದೆ.ಗೇರುಕಾ ಮುಖ್ ಎಂಬ ಸ್ಥಳ ಜಿಲ್ಲಾ ಕೇಂದ್ರದಿಂದ ೪೪ ಕಿಮಿ ದೂರವಿದೆ.ಇದು ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ಸ್ಥಳ.ಇಲ್ಲಿ ಜಲ ವಿದ್ಯುದಾಗಾರವೊಂದಿದೆ. ಮಾಲಿನಿ ಥಾನ್ ಧೇಮ್ ಜಿಯಿಂದ ೪೨ ಕಿಮಿ ದೂರವಿದೆ.ಇಲ್ಲಿ ಮಾಲಿನಿ ದೇವಿಯ ಪುರಾತನ ಮಂದಿರವಿದೆ.ಪುರಾತನ ಇತಿಹಾಸದ ಪಳೆಯುಳಿಕೆಗಳು ಉತ್ಖನನದಿಂದ ದೊರೆತಿವೆ. ಗುಗುಹಾ ಧೋಲ್ ಜಿಲ್ಲಾ ಕೇಂದ್ರದಿಂದ ೨೫ ಕಿಮಿ ದೂರವಿದೆ. ಅಹೋಂ ಅರಸ ಗೌರಿನಾಥ ಸಿಂಘಾ ನಿರ್ಮಿಸಿದನೆಂದು ಹೇಳಲಾದ ಕಟ್ಟಡ ಇದೆ. ಇದರೊಂದಿಗೆ ರಾಜ್ಘತರ್,ಘರಾಕಿಯಾ ಥಾನ್ ಮತ್ತು ರಾಜ್ ಘರ್ ಆಲಿ ನೋಡಬಹುದಾದ ಸ್ಥಳಗಳು. ತೀನ್ಸುಲಖಿಯಾ ಜಿಲ್ಲೆ ಗೌಹಾತಿಯಿಂದ ೫೦೦ ಕಿಮಿ ದೂರವಿರುವ ಈ ಪಟ್ಟಣ ಕೈಗಾರಿಕಾ ನಗರ ಎಂದು ಹೆಸರಾಗಿದೆ.ಇಲ್ಲಿ ಟೀ ವ್ಯಾಪಾರ ಹೆಚ್ಚಾಗಿ ನಡೆಯುತ್ತದೆ. ಕಿತ್ತಳೆ ಬೆಳೆಗೆ ಹೆಸರುವಾಸಿ.ಪ್ರವಾಸಿಗರಿಗಾಗಿ ದಹಿಂಗ್ ಪಟ್ಕಾಯ ಟೀ ಹಬ್ಬವನ್ನು ಪ್ರತೀ ವರ್ಷ ಜನವರಿ ತಿಂಗಳಲ್ಲಿ ಆಚರಿಸಲಾಗುತ್ತದೆ. ಹಬ್ಬದ ಅಚರಣೆಯ ಸ್ಥಳ ತೀನ್ಸುರಖಿಯಾದಿಂದ ೭೦ ಕಿಮಿ ದೂರವಿದೆ.ರಸ್ತೆ ಮತ್ತು ರೈಲು ಪ್ರಯಾಣದಿಂದ ಇಲ್ಲಿಗೆ ತಲುಪಬಹುದು.ಇಲ್ಲಿ ಶಿವಧಾಮ ಮತ್ತು ಮಾರುಕ್ ನಂದನ್ ಕಾನನ್ ಪಾರ್ಕ್ ನೋಡಬಹುದು.ತಂಗಲು ಉತ್ತಮ ಹೋಟೆಲುಗಳಿವೆ.ತೀನ್ಸುತಖಿಯಾದ ಬಳಿ ಟಿಬೆಟ್ ನಿರಾಶ್ರಿತರಿಗಾಗಿ ಒಂದು ಕ್ಯಾಂಪ್ ಇದ್ದು ಇಲ್ಲಿ ಬಹಳ ಸುಂದರವಾದ ಕಾರ್ಪೆಟ್ಗವಳನ್ನು ತಯಾರಿಸಲಾಗುತ್ತದೆ. ದಿಬ್ರು ಸೈಕೋವ ರಾಷ್ಟ್ರೀಯ ಪಾರ್ಕ್ ತೀನ್ಸುಯಖಿಯಾದಿಂದ ೧೪ ಕಿಮಿ ದೂರವಿದೆ.ತೀರ ಜೌಗು ಪ್ರದೇಶವಾಗಿದ್ದು ಕಾಡು ಕುದುರೆಗಳು,ಆನೆಗಳು,ವುಡ್ ಡಕ್,ಕಾಡೆಮ್ಮೆ,ಗಿಬ್ಬನ್ ಕೋತಿಗಳು ವಾಸಿಸುತ್ತವೆ.ಬೇರ್ಜಾನ್-ಬೋರ್ಜಾನೀ ಅಭಯಾರಣ್ಯ ತೀನ್ಸುಸಖಿಯಾದಿಂದ ೬ ಕಿಮಿ ದೂರವಿದೆ.ಇಲ್ಲಿ ಗಿಬ್ಬನ್ ಕೋತಿಗಳು ವಾಸಿಸುತ್ತವೆ. ಘಂಟೆ ದೇವಾಲಯತೀನ್ಸುನಖಿಯದಿಂದ ೧೭ ಕಿಮಿ ದೂರವಿದೆ.ಇಲ್ಲಿ ಭಾರಿ ಗಾತ್ರದ ಹಳೆಯ ಅರಳಿ ಮರವೊಂದಿದೆ.ಭಕ್ತರು ಈ ದೇವಾಲಯಕ್ಕೆ ಬಂದು ತಮ್ಮ ಹರಕೆಯನ್ನು ಹೇಳಿಕೊಂಡು ಶಿವನಿಗೆ ಘಂಟೆಯೊಂದನ್ನು ಅರ್ಪಿಸಿ ಅದನ್ನು ಇಲ್ಲಿನ ಮರಕ್ಕೆ ಕಟ್ಟಿದರೆ ಅವರ ಆಸೆ ಈಡೇರುತ್ತದೆ ಎಂಬ ನಂಬಿಕೆ ಇದೆ. ದಿಗ್ಬೋ್ಯ್ ೧೮೮೯ ರಲ್ಲಿ ಮೊದಲನೇ ಎಣ್ಣೆ ಭಾವಿಯನ್ನು ಇಲ್ಲಿ ತೋಡಲಾಯ್ತು.ಬ್ರಿಟೀಷರು ಇಲ್ಲಿಗೆ ಬಂದು ತೈಲ ನಿಕ್ಷೇಪವನ್ನು ಕಂಡು ಹಿಡಿದು ಸ್ಥಳೀಯರಿಗೆ 'ಡಿಗ್ ಬಾಯ್, ಡಿಗ್’ ಎಂದು ಅಗೆಯಲು ಹೇಳಿದ ಕಾರಣ ಆ ಪದ ಅಪಭ್ರಂಶವಾಗಿ ದಿಗ್ಬೋತಯ್ ಆಯಿತೆಂದು ಹೇಳಲಾಗುತ್ತದೆ. ಎಣ್ಣೆ ಭಾವಿಗಾಗಿ ಬ್ರಿಟೀಷರು ಮತ್ತು ಬರ್ಮೀಯರ ನಡುವೆ ಯುದ್ದ ನಡೆದು ಅದು ಆಂಗ್ಲೊ-ಬರ್ಮಾ ಯುದ್ಧ ಎಂದು ಹೆಸರಾಗಿದೆ.ಈ ಯುದ್ಧ ಸ್ಮಾರಕ ವೊಂದು ಇಲ್ಲಿದೆ. ಸಾದಿಯ ತೀನ್ಸು್ಖಿಯಾದಿಂದ ೭೫ ಕಿಮಿ ದೂರವಿದೆ.ಈ ಸ್ಥಳ ಮೊದಲು ಆದಿವಾಸಿಗಳ ಸರಕಿನ ಮಾರ್ಕೆಟ್ ಆಗಿತ್ತು. ಪರಶುರಾಮ ಕುಂಡ ತೀನ್ಸುಮಖಿಯಾದಿಂದ ೧೫೦ ಕಿಮಿ ದೂರವಿದೆ.ಈ ಕೊಳದಲ್ಲಿ ಪ್ರತೀ ವರ್ಷ ಸಂಕ್ರಾಂತಿಯಂದು ನೂರಾರು ಭಕ್ತರು ಬಂದು ಸ್ನಾನ ಮಾಡಿ ತಮ್ಮ ಪಾಪಗಳನ್ನು ಕಳೆದುಕೊಂಡ ತೃಪ್ತಿ ಪಡೆಯುತ್ತಾರೆ. ಮಾರ್ಗರೀಟಾಟೀ ತೋಟಗಳ ನಡುವೆ ಇರುವ ಈ ಸ್ಥಳ ತನ್ನ ದೈವೀಕ ಸೌಂದರ್ಯಕ್ಕೆ ಹೆಸರಾಗಿದೆ.ಇಲ್ಲಿ ಕುದುರೆಗಳ ಮೇಲೆ ಕುಳಿತು ಸುತ್ತಬಹುದು. ಮಾರ್ಗರೀಟದಲ್ಲಿ ಪ್ಲೈ-ವುಡ್ ತಯಾರಿಕಾ ಘಟಕವಿದೆ. ಪಂಗ್ನೌೀ ಪಾಸ್ ತೀನ್ಸುೀಖಿಯಾದಿಂದ ೧೩೦ ಕಿಮಿ ದೂರವಿದ್ದು ಮೈನ್ಮಾರ್ ದೇಶದ ಗಡಿ ಬಳಿಇದೆ.ಇಲ್ಲಿಗೆ ತಲುಪಲು ತೀರಾ ಕಷ್ಟಸಾಧ್ಯವಾದ ಹಾದಿ ಇದೆ.ಈ ಪ್ರದೇಶದಲ್ಲಿ ರಹಸ್ಯವಾದ ’ಲೇಕ್ ಆಫ಼್ ನೋ ರಿಟರ್ನ್’ ಎಂಬ ಸ್ಥಳವಿದೆ.ಇದು ಮೈ‍ನ್ಮಾರ್ ನಲ್ಲಿದ್ದು ಇಲ್ಲಿಗೆ ಭೇಟಿ ನೀಡಲು ಪ್ರತಿ ತಿಂಗಳ ೧೫ ಮತ್ತು ೩೦ ರಂದು ಅನುಮತಿಸಲಾಗುತ್ತದೆ. ಈ ಸ್ಥಳದಲ್ಲಿ ಹಿಂದೆ ವಿಮಾನವೊಂದು ರಹಸ್ಯವಾಗಿ ಕಣ್ಮರೆ ಆಯಿತೆಂದು ಹೇಳಲಾಗುತ್ತದೆ. ಶಿಬ್‍ಸಾಗರ್ ಜಿಲ್ಲೆಜೋರ್ಹಟ್ನಿಂ್ದ ೫೫ ಕಿಮಿ ದೂರವಿದೆ.ಸಿಮಲ್ಗು್ರಿ ರೈಲು ನಿಲ್ದಾಣದಿಂದ ೧೬ ಕಿಮಿ ಇದೆ.ಈ ಪ್ರದೇಶ ಬಹಳ ಹಿಂದೆ ಆದಿವಾಸಿಗಳ ಆಡಳಿತದಲ್ಲಿತ್ತು.ಈ ನಗರದಲ್ಲಿ ೧೦೪ ಅಡಿ ಎತ್ತರದ ಶಿವನ ವಿಗ್ರಹ ಇದೆ. ಇಲ್ಲಿಗೆ ಭೇಟಿ ನೀಡಲು ಸೆಪ್ಟೆಂಬರ್‌ನಿಂದ ಏಪ್ರಿಲ್ ಉತ್ತಮ ಕಾಲ.ಇಲ್ಲಿ ೧೭೦೩ ರಲ್ಲಿ ನಿರ್ಮಿಸಲಾದ ಏಕಶಿಲಾ ಸೇತುವೆ ಇದೆ.ಇದು ಇಂದಿಗೂ ಸುಸ್ಥಿಯಲ್ಲಿದ್ದು ಈಗಲೂ ಇದರ ಮೇಲೆ ರಾಷ್ಟ್ರೀಯ ಹೆದ್ದಾರಿ-೩೭ ಸಾಗುತ್ತದೆ. ರಂಗ್ ಘರ್ ೧೭೪೬ ರಲ್ಲಿ ಅಹೋಂ ಅರಸರಿಂದ ನಿರ್ಮಿಸಲ್ಪಟ್ಟ ಎರಡು ಅಂತಸ್ತಿನ ಕಟ್ಟಡ ಮತ್ತು ಆಟದ ಮೈದಾನ ಇದೆ. ಕರೆಂಗ್ ಘರ್ ಮತ್ತು ತಾತಾಲ್ ಘರ್೧೭೦೦ ರಲ್ಲಿ ಈ ಅರಮನೆಗಳು ಅಹೋಂ ಅರಸರಿಂದ ನಿರ್ಮಿಸಲ್ಪಟ್ಟವು.ಈ ಅರಮನೆಗಳಿಂದ ಭೂಗತ ದಾರಿಗಳಿವೆ ಎಂದು ಹೇಳಲಾಗುತ್ತದೆ.ಸರಕು ದಾಸ್ತಾನಿಗೆ ನೆಲಮಾಳಿಗೆಗಳಿವೆ. ಚಾರೈಡಿಯೋ ಇದು ಅಹೋಂ ಅರಸರ ಸಮಾಧಿ ಸ್ಥಳ. ಇಲ್ಲಿ ಅವರ ಪವಿತ್ರಾತ್ಮಗಳಿವೆ ಎಂದು ನಂಬಲಾಗುತ್ತದೆ.ಇಲ್ಲಿ ೧೭೩೪ ರಲ್ಲಿ ೧೨೯ ಎಕರೆಗಳಷ್ಟು ವಿಸ್ತಾರವಾದ ಕೆರೆಯೊಂದನ್ನು ನಿರ್ಮಿಸಲಾಯ್ತು.ಈ ಕೆರೆಯ ದಂಡೆಯ ಮೇಲೆ ಶಿವನ ದೇವಾಲಯವೊಂದಿದೆ. ಜೋಯ್ಸಾಯಗರ್ ಕೆರೆ೩೧೮ ಎಕರೆಗಳಷ್ಟು ವಿಸ್ತಾರವಾಗಿರುವ ಇದು ಮಾನವ ನಿರ್ಮಿತವಾದದ್ದು.ಗೌರೀ ಸಾಗರ ಮತ್ತು ರುದ್ರ ಸಾಗರ ಕೆರೆಗಳು ನೋಡ ತಕ್ಕವು. ಆಜನ್ ಪೀರ್ ದರ್ಗಾ ಶರೀಫ್ ಶಿವಸಾಗರದಿಂದ ೨೨ ಕಿಮಿ ದೂರವಿದ್ದು ಮುಸಲ್ಮಾನ ಸಂತ ಆಜನ್ ಪೀರ್‌ನ ಸಮಾಧಿ ಸ್ಥಳವಾಗಿದೆ.ಇಲ್ಲಿಗೆ ಮುಸ್ಲೀಮರು ಬಂದು ಈ ಸಂತನನ್ನು ಪ್ರಾರ್ಥಿಸುತ್ತಾರೆ. ದಿಬ್ರುಘರ್ ಜಿಲ್ಲೆಅರುಣಚಲ ಪ್ರದೇಶದ ಪಕ್ಕ ಇರುವ ಈ ಜಿಲ್ಲೆಯನ್ನು ಟೀ ತೋಟಗಳು ಸುತ್ತುವರೆದಿವೆ. ಹಿಮಾಲಯದ ಹಿನ್ನೆಲೆ ಹೊಂದಿದ ಈ ಜಿಲ್ಲೆ ಪ್ರಕೃತಿ ಸೌಂದರ್ಯಕ್ಕೆ ಹೆಸರಾಗಿದೆ.ರಾಷ್ಟ್ರಿಯ ಹೆದ್ದಾರಿ-೩೭ ಇಲ್ಲಿಗೆ ತಲುಪುತ್ತದೆ.ರೈಲು ಅನುಕೂಲ ಸಾಕಷ್ಟಿದೆ.ಕೋಲ್ಕತ್ತದಿಂದ ವಿಮಾನ ಸೌಲಭ್ಯ ಇದೆ.ದಿಬ್ರೂಘರ್‌ನಲ್ಲಿ ಒಂದು ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಇದೆ. ಕೋಲಿ ಆಯಿ ಮಂದಿರ ಕೋಲಿ ಆಯಿ ಎಂಬಾಕೆ ದಿಬಾರು ಸತ್ರದ ಮುಖ್ಯ ಪೂಜಾರಿಯ ಮಗಳು. ಈಕೆಗೆ ಭವಿಷ್ಯ ಹೇಳುವ ವಿಶೇಷ ಶಕ್ತಿ ಇತ್ತೆಂದು ಹೇಳಲಾಗುತ್ತದೆ.ಈಕೆಯ ಮರಣಾನಂತರ ದೇವಾಲಯ ನಿರ್ಮಿಸಿ ಆಕೆಯ ಸಮಾಧಿಗೆ ಪೂಜೆ ಸಲ್ಲಿಸಲಾಗುತ್ತದೆ.ಇಲ್ಲಿಗೆ ಪ್ರತೀ ವರ್ಷ ಸಹಸ್ರಾರು ಅಸ್ಸಾಮಿಯರು ಭೇಟಿ ನೀಡುತ್ತಾರೆ.ದಿನೋಯ್ ಸತ್ರ,ದೆಹಿಂಘ್ ನಾಮ್ಟಿ್ ಸತ್ರ,ದಿನ್ ಜೋಯ್ ಸತ್ರ,ಮೊಡರ್ ಕಾಲ್ ಸತ್ರ,ಘರ್ ಪಾರ ಸತ್ರ ಮುಂತಾದುವುಗಳಿವೆ. ಜೋರ್‌ಹಟ್ ಜಿಲ್ಲೆ ಜೋರ್‌ಹಟ್ ಅಹೋಂ ಅರಸರ ಕೊನೆಯ ರಾಜಧಾನಿಯಾಗಿತ್ತು.ಇಲ್ಲಿ ಸುಮಾರು ೧೩೫ ಕ್ಕೂ ಹೆಚ್ಚು ಟೀ ತೋಟಗಳಿವೆ.ಈ ಜಿಲ್ಲೆಯಲ್ಲಿ ಸುಮಾರು ೧.೫ ಲಕ್ಷ ಜನಸಂಖ್ಯೆ ಇದೆ.೧೮೫೬ ರಲ್ಲಿ ಸ್ಥಾಪಿತವಾದ ಈಸ್ಟ್ರನ್ ಥಿಯೋಲಾಜಿಕಲ್ ಕಾಲೇಜ್ ಮತ್ತು ೧೯೪೮ ರಲ್ಲಿ ಸ್ಥಾಪಿತವಾದ ಅಸ್ಸಾಮ್ ಕೃಷಿ ಕಾಲೇಜು ಇದೆ. ಅರಸರ ಕಾಲದಲ್ಲಿ ಆನೆಗಳನ್ನು ಹಿಡಿಯಲು ನಿರ್ಮಿಸಿದ್ದ ಖೆಡ್ಡಾ ಈಗಲೂ ಗಾಜ್ಪುರರದಲ್ಲಿದೆ. ಈ ಜಿಲ್ಲೆಯಲ್ಲಿರುವ ಅಸ್ಸಂ‍ನ ಪ್ರಸಿದ್ದ ಸಿನ್ನಮೋರ್ ಟೀ ತೋಟ ೧೮೫೦ ರಿಂದ ಪ್ರಸಿದ್ದಿಯಾಗಿದೆ. ಮಜುಲಿ ಮಜುಲಿ ಬ್ರಹ್ಮಪುತ್ರ ನದಿಯಿಂದ ಸುತ್ತುವರೆದು ದ್ವೀಪದಂತಾಗಿದೆ.ಇದು ವೈಷ್ಣವರಿಗೆ ಪವಿತ್ರವಾದ ಸ್ಥಳ.ಇಲ್ಲಿ ಅವರಿಗೆ ಪವಿತ್ರವಾದ ನಾಲ್ಕು ಸತ್ರಗಳಿವೆ.ಆಯುನಿಯಾತಿ, ದಕ್ಷಿಣಾಪಥ, ಘರಾಮುರ್,ಮತ್ತು ಕಮಲಬಾರಿ ಇವು ಶ್ರೀಮಾತ ಶಂಕರದೇವನ ಕಾಲದಲ್ಲಿ ಸ್ಥಾಪಿತವಾಗಿ ಸಾಂಸ್ಕೃತಿಕ ಬೆಳವಣಿಗೆಗೆ ಸಹಕಾರಿಯಾಗಿವೆ.ಇಲ್ಲಿ ಕೃಷ್ಣನ ಜೀವನಕ್ಕೆ ಸಂಬಂಧಿಸಿದ ಪ್ರಸಂಗಗಳನ್ನು ಅಭಿನಯಿಸಲಾಗುತ್ತದೆ. ಬಿಲ್ಲೇಶ್ವರ ಶಿವದೇವಾಲಯ, ಬುರಿ ಗೋಸಾಯ್ ದೇವಾಲಯಗಳು ನೋಡತಕ್ಕ ಸ್ಥಳಗಳು. ಬಂಗಾಲ ಪುಕುರಿ ಕೆರೆ ರೂಪ್ ಸಿಂಗ್ ಬಂಗಾಲನಿಂದ ನಿರ್ಮಿತವಾಯ್ತು.ರೂಪ್ ಸಿಂಗ್ ಈ ಕೆರೆ ನಿರ್ಮಿಸಲು ತಾನು ಮಾಡಿದ ಕೊಲೆಗೆ ಪ್ರತಿಫ಼ಲವಾಗಿ ಪಡೆದ ಹಣದಿಂದ ನಿರ್ಮಿಸಿದ ಎಂಬ ಕಾರಣಕ್ಕಾಗಿ ಇಂದಿಗೂ ಜನ ಇದರ ನೀರನ್ನು ಬಳಸುವುದಿಲ್ಲ. ಗೋಲಾಘಾಟ್ ಜಿಲ್ಲೆ ಈ ಜಿಲ್ಲೆಯಲ್ಲೆ ಪ್ರಸಿದ್ದ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಇದೆ. ೧೯೦೮ ರಲ್ಲಿ ಸ್ಥಾಪಿತವಾದ ಈ ಪಾರ್ಕ್ ೧೯೮೫ ರಲ್ಲಿ ವಿಶ್ವ ಸಂಸ್ಥೆಯಿಂದ ಸಂರಕ್ಷಿತ ಪ್ರದೇಶ ಎಂದು ಗುರುತಿಸಲ್ಪಟ್ಟಿದೆ. ಈ ಪಾರ್ಕನ್ನು ಮೇ ತಿಂಗಳಿನಿಂದ ಅಕ್ಟೋಬರ್‌ವರೆಗೆ ಮುಚ್ಚಲಾಗಿರುತ್ತದೆ. ಇಲ್ಲಿಗೆ ಭೇಟಿ ನೀಡಲು ನವೆಂಬರ್‌ನಿಂದ ಮಾರ್ಚ್ ಉತ್ತಮ ಕಾಲ. ಈ ಪಾರ್ಕ್‌ನಲ್ಲಿ ಜೀಪ್ ಸಫ಼ಾರಿ,ಆನೆ ಸಫ಼ಾರಿ ಇದೆ.ತಂಗಲು ಅಸ್ಸಾಮ್ ಸರಕಾರದ ಟೂರಿಸ್ಟ್ ಲಾಡ್ಜ್ ಇದೆ. ಗೋಲಾಘಾಟ್‌ನಿಂದ ೧೮ ಕಿಮಿ ದೂರದಲ್ಲಿ ಬಿಸಿನೀರ ಬುಗ್ಗೆ ಇದೆ. ಇದನ್ನು ಅಸ್ಸಾಮಿಯರು ಗರಂ ಪಾನಿ ಎಂದು ಕರೆಯುತ್ತಾರೆ.ಇದು ದಿಮಾಪುರ ರಸ್ತೆಯ ರಾಷ್ಟ್ರೀಯ ಹೆದ್ದಾರಿ-೩೯ ರ ಬಳಿಯೆ ಇದೆ.ಇದಕ್ಕೆ ತುಸು ದೂರದಲ್ಲಿ ಒಂದು ಶಿವ ದೇವಾಲಯವಿದೆ. ಬಾರ್ಡೊವಾ,ಬಾರ್‌ಪೇಟ,ಮಾದುಪುರಗಳಲ್ಲಿ ವೈಷ್ನವ ಸತ್ರಗಳಿವೆ.ನುಮಿಲಿ ಘರ್‌ನ ಶಿವದೇವಾಲಯ ಅಹೋಂ ಅರಸರಿಂದ ನಿರ್ಮಿತವಾದದ್ದು.ಇಲ್ಲಿ ಸಾವಿರಾರು ಸಂಖ್ಯೆಯ ಕೋತಿಗಳಿವೆ. ನಲಬಾರಿ ಜಿಲ್ಲೆ ಇದು ಗೌಹಾತಿಯಿಂದ ೯೫ ಕಿಮಿ ದೂರವಿದೆ.ಇಲ್ಲಿ ಮುಬಾರಿ ದಾಸ ಹಬ್ಬವನ್ನು ಅಚರಿಸಲಾಗುತ್ತಿದ್ದು ಇದು ಸಾಮಾಜಿಕ ಮತ್ತು ಸಾಂಸ್ಕೃತಿಕ ಹಬ್ಬ.ಇಲ್ಲಿ ಶ್ರೀ ಕೃಷ್ಣನ ರಾಸ ಲೀಲಾ ದೃಶ್ಯಗಳನ್ನು ಶ್ರದ್ದೆ ಮತ್ತು ಭಕ್ತಿಗಳಿಂದ ಆಚರಿಸಲಾಗುತ್ತದೆ. ಹರಿ ದೇವಾಲಯದ ಅಂಗಳದಲ್ಲಿ ನವೆಂಬರ್ ತಿಂಗಳಲ್ಲಿ ಈ ಹಬ್ಬ ನಡೆಯುತ್ತದೆ. ವಾಸುದೇವ ದೇವಾಲಯ,ಕಾಲ ಭೈರವ ಲಿಂಗರಾಜ ಮಂದಿರ,ಬಾಗೇಶ್ವರಿ,ಗೌರಿ ದೇವಾಲಯ,ಹರಿ ಮಂದಿರ,ಬಿಲ್ಲೇಶ್ವರ ಮಂದಿರ,ಅಡಬಾರಿ ಕಾಳಿ ದೇವಾಲಯ ನೋಡತಕ್ಕ ಸ್ಥಳಗಳು. ಗೋ ಹೈ ಕಮಾಲ್ ಅಲಿ ರಸ್ತೆಯು ಕೋಚ್ ಅರಸ ಕಮಾಲ್ ನಿಂದ ನಿರ್ಮಿಸಲ್ಪಟ್ಟಿತು.ಕೂಚ್ ಬಿಹಾರ ಮತ್ತು ಉತ್ತರ ಲಖಿಂಪುರಗಳನ್ನು ಸಂಪರ್ಕಿಸುವ ಈ ರಸ್ತೆಯ ನಿರ್ಮಾಣ ಅದ್ಭುತವಾಗಿದೆ. ಬಾರ್‌ಪೇಟಾ ಜಿಲ್ಲೆ ಬಾರ್‌ಪೇಟ ಪಟ್ಟಣವು ರಾಜಧಾನಿಯಿಂದ ೧೪೦ ಕಿಮಿ ದೂರವಿದೆ. ಈ ಪಟ್ಟಣದಿಂದ ರಾಷ್ಟ್ರೀಯ ಹೆದ್ದಾರಿ-೩೧ ಹಾದುಹೋಗುತ್ತದೆ.ಇಲ್ಲಿನ ಹೋಳಿಹಬ್ಬ ಅಥವಾ ದೌಲಿ ಜಾತ್ರೆ ಪ್ರಸಿದ್ದವಾಗಿದೆ.ಇದನ್ನು ವಸಂತ ಹಬ್ಬ ಎಂದೂ ಕರೆಯಬಹುದು.ವಸಂತನ ಆಗಮನವನ್ನು ಸ್ವಾಗತಿಸುವ ಸಲುವಾಗಿ ನೃತ್ಯಗಳು ಮತ್ತು ಹೋಳಿ ಹಾಡುಗಳನ್ನು ಹಾಡುತ್ತಾರೆ.ಇದೇ ಸಂದರ್ಭಗಳಲ್ಲಿ ಇಲ್ಲಿನ ಸತ್ರಗಳಾದ ಬಾರ್‌ಪೇಟ ಸತ್ರ,ಸೌಂದರಿಯ ಸತ್ರ ಮತ್ತು ಗಣಕ್ಕುಚಿ ಸತ್ರಗಳಲ್ಲಿ ದಶಾವತಾರದ ನೃತ್ಯಗಳನ್ನು ಅಭಿನಯಿಸಲಾಗುತ್ತದೆ.ಇಲ್ಲಿನ ಸತ್ರಗಳು ಮತ್ತು ಅವುಗಳ ಶಾಖೆಗಳಲ್ಲಿ ಜಾನಪದ ಲೋಕಸಂಗೀತ, ಲಾವಣಿ ಮತ್ತು ಧಾರ್ಮಿಕ ಹಾಗೂ ಸಾಂಸ್ಕೃತಿಕ ಗೀತೆಗಳನ್ನು ಹಾಡಿ ಅಭಿನಯಿಸಲಾಗುತ್ತದೆ.ಇಲ್ಲಿ ಹಿತ್ತಾಳೆ ಕರಕುಶಲ ವಸ್ತುಗಳನ್ನು ತಯಾರಿಸಲಾಗುತ್ತದೆ. ಅಷ್ಟೇನು ಮುಂದುವರೆಯದ ಇಲ್ಲಿ ವಿಶೇಷಗಳೇನೂ ಇಲ್ಲ. ಪಾಠಶಾಲ ಇದನ್ನು ಅಸ್ಸಾಮಿನ ಹಾಲಿವುಡ್ ಎಂದು ಕರೆಯ ಬಹುದು.ಇದು ಬಾರ್‌ಪೇಟದಿಂದ ೩೭ ಕಿಮಿ ದೂರವಿದೆ.ಇಲ್ಲಿ ಸಾಕಷ್ಟು ರಂಗ ಚಟುವಟಿಕೆಗಳು ಸದಾಕಾಲ ನಡೆಯುತ್ತಿರುತ್ತವೆ. ಮಾನಸ್ ರಾಷ್ಟ್ರೀಯ ಪಾರ್ಕ್ ಇದೆ. ಬೊಂಗಾಯ್ಗಾಾವ್ ಜಿಲ್ಲೆ ಜೋಗಿ ಗೋಪಾ ಒಂದು ಐತಿಹಾಸಿಕ ಪ್ರಸಿದ್ದ ಸ್ಥಳ.ಈ ಪ್ರದೇಶಕ್ಕೆ ಹಿಂದೆ ಅಭಯಪುರಿ ಎಂದು ಕರೆಯಲಾಗುತ್ತಿತ್ತು.ಇಲ್ಲಿ ಅಶೋಕ ಅಷ್ಟಮಿಯ ದಿನ ಸಹಸ್ರಾರು ಭಕ್ತರು ನೆರೆದು ಪ್ರಾರ್ಥಿಸುತ್ತಾರೆ. ಬಾಗೇಶ್ವರಿ ಬೆಟ್ಟ ಬೊಂಗಾಯ್ಗಾಾವ್ನಿಂುದ ೧ ಕಿಮಿ ದೂರವಿದೆ.ಈ ಪ್ರದೇಶ ಬಿಜೋರ ಟೀ ತೋಟದಿಂದ ಸುತ್ತುವರೆದಿದೆ.ಇಲ್ಲಿರುವ ಶಿವ ದೇವಾಲಯಕ್ಕೆ ಪ್ರತೀ ಶಿವರಾತ್ರಿಯಂದು ಸಹಸ್ರಾರು ಭಕ್ತರು ಭೇಟಿ ನೀಡಿ ಶಿವನ ಧ್ಯಾನದಲ್ಲಿ ತೊಡಗುತ್ತಾರೆ.ಇಲ್ಲಿ ಅನೇಕ ಕಲ್ಲಿನ ಗುಹೆಗಳು ಇದ್ದು ಇವು ಮಾನವ ನಿರ್ಮಿತ ಗುಹೆಗಳಂತೆ ಕಾಣುತ್ತವೆ.ಇವೆ ಬಹುಶಃ ಸಲಸ್ಥಂಭರ ಕಾಲದಲ್ಲಿ ನಿರ್ಮಿತವಾಗಿರಬಹುದೆಂದು ಹೇಳಲಾಗುತ್ತದೆ. ಗೋಲಾಪಾರ ಜಿಲ್ಲೆ ತುಕ್ರೇಶ್ವರಿ ದೇವಾಲಯ: ಇದು ಬಹಳ ಹಿಂದೆ ಸತ್ತ ಪತಿಯೊಂದಿಗೆ ಸತೀ ಹೋದ ಪತಿವ್ರತೆಯೋರ್ವಳ ಸ್ಮರಣಾರ್ಥ ಇಲ್ಲಿನ ಬೆಟ್ಟದ ಮೇಲೆ ನಿರ್ಮಿಸಿದ ದೇವಾಲಯ.ಇದು ಗೋಲಾಪರದಿಂದ ೧೫ ಕಿಮಿ ದೂರವಿದೆ.ಮದುವೆಯಾದ ಹೆಣ್ಣು ಮಕ್ಕಳು ಇಲ್ಲಿ ಬಂದು ತಮ್ಮ ಗಂಡನ ಆರೋಗ್ಯ ಮತ್ತು ತಮ್ಮ ಮುತೈದೆತನಕ್ಕಾಗಿ ತುಕ್ರೇಶ್ವರಿಯನ್ನು ಪ್ರಾರ್ಥಿಸುತ್ತಾರೆ. ನಂದೇಶ್ವರ ದೇವಾಲಯ:ಇದು ೧೦-೧೧ ನೇ ಶತಮಾನದಲ್ಲಿ ನಿರ್ಮಿತವಾದ ಶಿವ ದೇವಾಲಯ. ಶಿವರಾತ್ರಿಯಂದು ನೂರಾರು ಭಕ್ತರು ಆಗಮಿಸಿ ಶಿವನಿಗೆ ಪೂಜೆ ಸಲ್ಲಿಸುತ್ತಾರೆ. ಶ್ರೀ ಜೋಯಬಂ ಕಾಮಾಕ್ಯ ದೇವಾಲಯ: ಗೋಲಾಪಾರದಿಂದ ೫೦ ಕಿಮಿ ದೂರವಿರುವ ಈ ದೇವಾಲಯ ಭಾರತ ದೇಶದ ೫೧ ಶಕ್ತಿ ಸ್ಥಳಗಳಲ್ಲಿ ಒಂದೆಂದು ಹೆಸರಾಗಿದೆ.ಬೆಟ್ಟದ ಮೇಲೆ ಇರುವ ಈ ದೇವಾಲಯವು ೧೭ ನೇ ಶತಮಾನದಲ್ಲಿ ಉಂಟಾದ ಭಾರಿ ಭೂಕಂಪದಿಂದ ಹಾನಿಗೊಳಗಾಗಿತ್ತು. ನಂತರ ಇದನ್ನು ಜೀರ್ಣೋದ್ದಾರ ಮಾಡಲಾಯಿತು. ಸೂರ್ಯ ಪಹಾಡ್: ಇದು ಪುರಾತನ ಸೂರ್ಯ ದೇವಾಲಯ.ಇಲ್ಲಿ ಪ್ರಾಕ್ತನ ಶಾಸ್ತ್ರಜ್ನರು ಸದಾ ಉತ್ಖನನದಲ್ಲಿ ತೊಡಗಿರುತ್ತಾರೆ. ಮೊದಲು ಇಲ್ಲಿ ೧ ಲಕ್ಷ ಶಿವಲಿಂಗಗಳು ಇದ್ದವೆಂದು ಹೇಳಲಾಗುತ್ತದೆ. ಧುಬ್ರಿ ಜಿಲ್ಲೆ ಧುಬ್ರಿ ರಾಜಧಾನಿಯಿಂದ ೨೯೫ ಕಿಮಿ ದೂರವಿದೆ.ಧುಬ್ರಿಯನ್ನು ಅಸ್ಸಾಮಿನ ಹೆಬ್ಬಾಗಿಲು ಎಂದು ಕರೆಯಲಾಗುತ್ತದೆ.ವಿವಿಧ ಸಂಸ್ಕೃತಿ,ಭಾಷೆಗಳ ಜನತೆ ಇಲ್ಲಿ ನೆಲಸಿರುವುದರಿಂದ ಈ ಸ್ಥಳ ವಿಶಿಷ್ಟಗಳ ಸಂಗಮವಾಗಿದೆ.ಇಲ್ಲಿನ ಪ್ರಮುಖ ಭಾಷೆ ಗೋಲ್ಪೋರಿಯ. ಚಕ್ರಶಿಲಾ ಪ್ರಾಣಿಧಾಮ ಧುಬ್ರಿಯಿಂದ ೬೮ ಕಿಮಿ ದೂರ ಮತ್ತು ಗೌಹಾಟಿಯಿಂದ ೨೧೯ ಕಿಮಿ ದೂರವಿದೆ.ಇದನ್ನು ೧೯೯೪ ರಲ್ಲಿ ಸ್ಥಾಪಿಸಲಾಯ್ತು.೪೫೫೬ ಹೆಕ್ಟೇರ್ ಪ್ರದೇಶ ಒಳಗೊಂಡ ಈ ಪ್ರಾಣಿಧಾಮ ಲಂಗೂರ್ ಕೋತಿ,ಚಿರತೆ,ಪ್ಯಾಂಗೋಲಿನ್,ಹಾರುವ ಅಳಿಲು ಮತ್ತು ಅನೇಕ ಜಾತಿಯ ಪಕ್ಷಿಗಳನ್ನು ಒಳಗೊಂಡಿದೆ. ಇನ್ನುಳಿದಂತೆ ಸಿಖ್ ಗುರುದ್ವಾರ,ಪಾಂಚ್ಪೀವರ್ ದರ್ಗಾ,ದುಭಾನಿಘಾಟ್,ದೂಧ್ನಾಗಥ್ ಮಂದಿರ,ರಂಗ್ಮಳತಿ ಮಸೀದಿ,ರಾಮ್ ರಾಯ್ ಕುಟಿ ಸತ್ರ (೪೫ ಕಿಮಿ),ಮೀರ್‌ಜುಮ್ಲಾ ಟೂಂಬ್ (೫೫ ಕಿಮಿ) ನೋಡುವಂತಹ ಸ್ಥಳಗಳು. ಕಾಮರೂಪ ಮತ್ತು ಕಾಮರೂಪ ಮೆಟ್ರೋ ಜಿಲ್ಲೆ ಇಲ್ಲಿ ಆಡಳಿತದ ಅನುಕೂಲಕ್ಕಾಗಿ ಎರಡು ಜಿಲ್ಲೆಗಳಿದ್ದರೂ ಎರಡಕ್ಕೂ ಗೌಹಾಟಿ ಜಿಲ್ಲಾ ಕೇಂದ್ರ.ಈ ಸ್ಥಳ ಬಹಳ ಪುರಾತನವಾದದ್ದು. ಕಾಮರೂಪದ ಉಲ್ಲೇಖ ಪುರಾಣ ಮತ್ತು ಇತಿಹಾಸಗಳಲ್ಲಿ ಬರುತ್ತದೆ. ಈ ಪ್ರದೇಶವನ್ನು ಮೊದಲಿಗೆ ಪ್ರಾಗ್ಜ್ಯೋ್ತಿಷ್ಯಪುರ ಎಂದು ಕರೆಯಲಾಗುತ್ತಿತ್ತು.ಪುರಾಣ ಕಥೆಗಳಂತೆ ಈಶ್ವರ ಪಾರ್ವತಿಯನ್ನು ಕಳೆದುಕೊಂಡು ದುಃಖದಲ್ಲಿದಾಗ ಆತನನ್ನು ಸಂತೋಷಪಡಿಸಲು ದೇವತೆಗಳು ಕಾಮನನ್ನು ಕಳುಹಿಸುತ್ತಾರೆ.ಕಾಮದೇವ ಶಿವನಮೇಲೆ ಮದನ ಬಾಣವನು ಬಿಟ್ಟಾಗ ಸಿಟ್ಟಿಗೆದ್ದ ಶಿವ ಅವನನ್ನು ತನ್ನ ಮೂರನೇ ಕಣ್ಣಿನಿಂದ ಸುಡುತ್ತಾನೆ.ಇದು ಕಾಮದಹನ.ಕಾಮನ ರೂಪವನ್ನು ಸುಟ್ಟದ್ದರಿಂದ ಈ ಪ್ರದೇಶ ಕಾಮರೂಪ ಎಂದು ಹೆಸರಾಗಿದೆ.ಕಾಮನ ಸ್ಮರಣಾರ್ಥ ಮದನ ಕಾಮದೇವ ದೇವಾಲಯ ಇಲ್ಲಿದ್ದು ಇದು ೧೦-೧೨ ನೇ ಶತಮಾನದಲ್ಲಿ ನಿರ್ಮಾಣವಾಗಿದೆ.ಈ ದೇವಾಲಯ ಗೌಹಾಟಿಯಿಂದ ೪೦ ಕಿಮಿ ದೂರವಿದೆ.ಈ ಜಿಲ್ಲೆ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತದೆ. ಗೌಹಾತಿ ನಗರ ಅಸ್ಸಾಮ್ ರಾಜ್ಯದಲ್ಲಿ ದೊಡ್ಡನಗರ. ಸುಮಾರು ೯ ಲಕ್ಷ ಜನಸಂಖ್ಯೆ ಉಳ್ಳ ಈ ನಗರ ಎಲ್ಲ ರಾಜ್ಯಗಳ ರಾಜಧಾನಿಯಂತೆ ಇದೆ.ಇದು ಪುರಾತನ ನಗರವಾದುದರಿಂದ ಚಿಕ್ಕ ಚಿಕ್ಕ ರಸ್ತೆಗಳು ಜಾಸ್ತಿ. ಈ ರಸ್ತೆಗಳಲ್ಲಿ ಭರಿಸಲಾಗದ ಅತೀ ಟ್ರಾಫ಼ಿಕ್,ಕಿರುಗುಟ್ಟುವ ಆಟೋಗಳು, ಅಡ್ಡಿಮಾಡುವ ಸೈಕಲ್ ರಿಕ್ಷಾಗಳು ಮತ್ತು ಮೇಲೇ ಬರುವ ಸಿಟಿ ಬಸ್ಸುಗಳು ತುಂಬಿವೆ.(ಬೆಂಗಳೂರಿನ ಕಲಾಸಿಪಾಳ್ಯ!) ಇಲ್ಲಿ ಸಾರ್ವಜನಿಕ ಸಾರಿಗೆ ಇದ್ದು ಅದನ್ನು ಅಸ್ಸಾಂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಿರ್ವಹಿಸುತ್ತದೆ.ಲೋಕಪ್ರಿಯ ಗೋಪೀನಾಥ ಬಾರ್ಡೋಯ್ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವಿದೆ.ಇಲ್ಲಿ ನೋಡತಕ್ಕ ಸ್ಥಳಗಳು ಪಾನ್ ಬಜಾರ್,ಫ಼್ಯಾನ್ಸಿ ಬಜಾರ್,ಪಲ್ತಾನ್ ಬಜಾರ್.ಸುತ್ತಲು ಆಟೋ ಮತ್ತು ಬಸ್ ಸೌಕರ್ಯವಿದೆ.ಸಾಕಷ್ಟು ಲಾಡ್ಜ್ಗಬಳಿವೆ.ಈ ನಗರದಲ್ಲಿ ಈಕ್ವೆಸ್ಟ್ರಿಯನ್ ಕುದುರೆ ಸವಾರಿ ಮತ್ತು ಮೋಟಾರ್ ಸೈಕಲ್ ಪ್ರವಾಸಕ್ಕೆ ಅವಕಾಶವಿದೆ.ಇದನ್ನು ಏರ್ಪಡಿಸುವ ಸಾಕಷ್ಟು ಪ್ರವಾಸಿ ಸಂಸ್ಥೆಗಳು ಇಲ್ಲಿವೆ.ಗೌಹಾತಿ ಬಳಿಯ ಕಾಮಾಕ್ಯ ಮಾತೆಯ ದೇವಾಲಯ ಸುಪಸಿದ್ದ.ಇದು ಸದಾ ಭಕ್ತರಿಂದ ತುಂಬಿರುತ್ತದೆ. ಭಸ್ಮಾಚಲ ಇಲ್ಲಿ ಒಂದು ಶಿವ ದೇವಾಲಯವಿದೆ.ಶಿವನನ್ನು ಇಲ್ಲಿ ಹುಣ್ಣಿಮೆಯ ದಿನದಂದು ಪೂಜಿಸಲಾಗುತ್ತದೆ.ಇಲ್ಲಿ ಇಂದ್ರಲೋಕದ ಅಪ್ಸರೆ ಊರ್ವಶಿ ಶಿವನಿಗಾಗಿ ಜೇನು ತುಪ್ಪವನ್ನು ತಂದಳೆಂದು ಹೇಳಲಾಗುತ್ತದೆ.ಹಾಗಾಗಿ ಇದನ್ನು ಊರ್ವಶಿ ದ್ವೀಪ ಎಂದೂ ಕರೆಯಲಾಗುತ್ತದೆ. ಇಲ್ಲಿ ಅನೇಕ ಅದ್ಭುತ ದೇವಾಲಯಗಳಿವೆ. ನವಗ್ರಹ ದೇವಾಲಯ ಅದರಲ್ಲಿ ಪ್ರಮುಖವಾದದ್ದು.ಎಲ್ಲ ಗ್ರಹಗಳನ್ನು ಇಲ್ಲಿ ಒಂದೆಡೆ ಪೂಜಿಸುವ ಅನುಕೂಲ ಮಾಡಲಾಗಿದೆ.ಇದು ಹಳೆಯ ದೇವಾಲಯ.ಜನರು ಸದಾಇಲ್ಲಿ ತುಂಬಿರುತ್ತಾರೆ.ಉಮಾನಂದ ದೇವಾಲಯ, ಶ್ರೀ ಕೃಷ್ನನ ಹೆಜ್ಜೆ ಗುರುತಿದೆ ಎಂದು ಹೇಳಲಾಗುವ ರುದ್ರೇಶ್ವರ ದೇವಾಲಯಗಳಿವೆ.ಬುರಬುರಿ ದೇವಾಲಯ,ಚೈತನ್ಯ ಗೌಡಿಯ ಮಠ,ಶಾಮರಾಯ ಸತ್ರ,ಪೀರ್ ಮಜಹರ್ ಸಮಾಧಿ,ಹಜ಼ರತ್ ಸೈಯದ್ ಆಲಿಯ ದರ್ಗಾ ನೋಡತಕ್ಕ ಇತರ ಸ್ಥಳಗಳು. ಸರಾಯ್ಘಾತಟ್ ಯುದ್ಧ ಸ್ಮಾರಕ ೧೬೭೧ ರಲ್ಲಿ ಅಹೋಮರು ಮತ್ತು ಮುಘಲರ ನಡುವೆ ನಡೆದ ಯುದ್ಧದ ಸ್ಮರಣಾರ್ಥ ಕಟ್ಟಡವೊಂದನ್ನು ನಿರ್ಮಿಸಲಾಗಿದೆ ಸುವಲ್ಕುತಚ್ಚಿ ಇದು ಒಂದು ಚಿಕ್ಕ ಗ್ರಾಮವಾಗಿದ್ದು ಇಲ್ಲಿ ಅಸ್ಸಾಂ ರೇಷ್ಮೆ ನೇಯ್ಗೆ ಕೇಂದ್ರವಿದೆ.ಅದ್ಭುತ ಕಲಾಕಾರಿಕೆ ಉಳ್ಳ ಅಳಿವಿನ ಅಂಚಿನಲ್ಲಿರುವ ಈ ರೇಷ್ಮೆ ನೇಯ್ಗೆ ಉದ್ಯಮವನ್ನು ಉಳಿಸಿಕೊಳ್ಳಲು ಸರಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ.೧೯೮೬ ರಲ್ಲಿ ನ್ಯಾಶನಲ್ ಇನ್ಸ್ಟಿುಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ ಸ್ಥಾಪನೆಯಾಗಿದ್ದು ಈ ಸಂಸ್ಥೆಯ ಮೂಲಕ ಸುಮಾರು ರೂ.೬೫೦ ಕೋಟಿ ವೆಚ್ಚ ಮಾಡಲು ಉದ್ದೇಶಿಸಲಾಗಿದೆ. ಹಯಗ್ರೀವ ಮಾಧವ ದೇವಾಲಯ,ಅಶ್ವಕ್ರಾಂತ ದೇವಾಲಯ.ಜನಾರ್ಧನ ದೇವಾಲಯ,ಉಗ್ರತಾರ ದೇವಾಲಯ ಮತ್ತು ದಿರ್ಗೇಶ್ವರದೇವಾಲಯಗಳು ತಮ್ಮ ಸ್ಥಳ ಪುರಾಣ ಮತ್ತು ಶಿಲ್ಪ ಕಲೆಗಳಿಗೆ ಹೆಸರುವಾಸಿಯಾಗಿವೆ.ಗೌಹಾತಿ ಬಳಿ ಬಾಲಾಜಿ ದೇವಾಲಯವೊಂದಿದ್ದು ಈ ದೇವಾಲಯವನ್ನು ತಿರುಪತಿಯಲ್ಲಿರುವ ವೆಂಕಟೇಶ್ವರನ ದೇವಾಲಯದಂತೆಯೇ ನಿರ್ಮಿಸಲಾಗಿದೆ.ಬಾಲಾಜಿಯ ವಿಗ್ರಹ ೯ ಟನ್ ತೂಕವಿದೆ. ರಾಜಕೀಯ ಮತ್ತು ಸರ್ಕಾರ ಆಗಸ್ಟ್ 2015 ರಲ್ಲಿ ರಾಜ್ಯದ ಲ್ಲಿ 32 ಆಡಳಿತಾತ್ಮಕ ಜಿಲ್ಲೆಗಳಿವೆ.. ಆಗಸ್ಟ್ 15, 2015 ರಂದು, ಹಿಂದಿನ 27 ಜಿಲ್ಲೆಗಳು ಜೊತೆಗೆ ಐದು ಹೊಸ ಜಿಲ್ಲೆಗಳು ರೂಪುಗೊಂಡವು. ಐದು ಹೊಸ ಜಿಲ್ಲೆಗಳಲ್ಲಿ ವಿಸ್ವನಾಥ ಜಿಲ್ಲೆ ಸೋನಿತಪುರದಿಂದ, ಚರೈದೇವೊ ಜಿಲ್ಲೆ ಶಿವಸಾಗರದಿಂದ, ಹೊಜಾಯ್ ಜಿಲ್ಲೆ ನಾಗಾವ್ ನಿಂದ ದಕ್ಷಿಣ ಸಲಮಾರಾ ಮಂಕಚರ್ ಧೂಬ್ರಿ ಯಿಂದ, ಪಶ್ಚಿಮ ಕರ್ಬಿ ಅಂಗಲಾಮಗ್’ ಕರ್ಬಿ ಅಂಗಲಾಮಗ್ ನಿಂದ ಒಡೆದು ಹೊಸ 5 ಜಿಲ್ಲೆಗಲನ್ನು ರಚಿಲಾಯಿತು. ಈ ಜಿಲ್ಲೆಗಳು ಉಪವಿಭಾಗ 54 "ಉಪ-ವಿಭಾಗ" ಅಥವಾ ಮೊಖುಮಾ ಗಳನ್ನಾಗಿ ವಿಭಾಗಿಸಿದೆ. ಪ್ರತಿ ಜಿಲ್ಲೆಯು ಜಿಲ್ಲಾಧಿಕಾರಿ, ಜಿಲ್ಲಾ ಮ್ಯಾಜಿಸ್ಟ್ರೇಟ್, ಜಿಲ್ಲಾ ಪಂಚಾಯತ್ ಕಚೇರಿ, ಮತ್ತು ಜಿಲ್ಲಾ ನ್ಯಾಯಾಲಯ ಕಚೇರಿ, ಆಡಳಿತವು ಸಾಮಾನ್ಯವಾಗಿ ಜಿಲ್ಲೆಯ ಕೇಂದ್ರ ದಲ್ಲಿ ಇದೆ. ಜಿಲ್ಲೆಗಳಲ್ಲಿ ಹಿಂದಿನ ಜಿಲ್ಲೆಗಳ ಉಪ ವಿಭಾಗಗಳಿವೆ. ನದಿಗಳು, ಬೆಟ್ಟಗಳ, ಕಾಡುಗಳು, ಮತ್ತು ಇತ್ಯಾದಿ ವೈಶಿಷ್ಟ್ಯಗಳ ಆಧಾರದ ಮೇಲೆ ಬಹುತೇಕ ಹೊಸದಾಗಿ ವಿಭಾಗಿಸಲಾಗಿದೆ. ಇತರ ಸರಾಜ್ಯಗಳಂತೆ, ಅಸ್ಸಾಂ ಸರ್ಕಾರ ಭಾರತದ ಗಣರಾಜ್ಯದಲ್ಲಿ ಅಸ್ಸಾಂ ರಾಜ್ಯದ ಪ್ರಾಂತೀಯ ಆಡಳಿತಾತ್ಮಕ ಅಧಿಕಾರವನ್ನು ಹೊಂದಿದೆ. ಇತರ ರಾಜ್ಯಗಳಂತೆ, ಅಸ್ಸಾಂ ಭಾರತ ಸರ್ಕಾರದಿಂದ ನಾಮನಿರ್ದೇಶನ ಮಾಡಲ್ಪಡುವ (ನೇಮಿಸಲ್ಪಟ್ಟ) ಗವರ್ನರ್’ನ್ನು ಒಳಗೊಂಡಿದೆ. ರಾಜ್ಯದ ಮುಖ್ಯಸ್ಥ, ಅಸ್ಸಾಂ ವಿಧಾನಸಭೆಯಲ್ಲಿ 126-ಸದಸ್ಯರ ಬಹುಮತ ಗುಂಪಿನ ಬೆಂಬಲವುಳ್ಳವನು ನಾಯಕ ಸರ್ಕಾರದ ಮುಖ್ಯಸ್ಥ ಮತ್ತು ಮುಖ್ಯಮಂತ್ರಿ . ಶಾಸನಸಭೆಯು ಏಕಸಭೆಯ, ಶಾಸಕಾಂಗ ಆಗಿದೆ. ಅಸ್ಸಾಂ ಶಾಸನಸಭೆಯಅವಧಿ ಗರಿಷ್ಠ 5 ವರ್ಷಗಳ ಕಾಲ. ಅದರ ಸದಸ್ಯರನ್ನು ವಯಸ್ಕ ಮತದಾರರ ಮೂಲಕ ಆಯ್ಕೆ ಮಾಡಲಾಗುತ್ತದೆ. ಮುಖ್ಯಮಂತ್ರಿಗೆ ಮಂತ್ರಿಮಂಡಳ ಸಹಾಯ ಮಾಡುತ್ತದೆ. ಮಂತ್ರಿಮಂಡಳದ ಗಾತ್ರ ನಿರ್ಬಂಧಿಸಲ್ಪಟ್ಟಿದೆ. ೨೦೧೧ ರಿಂದ ೨೦೧೬ ರ ಅವಧಿಯ ಸರ್ಕಾರ ಭಾರತದ ಅಸ್ಸಾಂನ 13ನೆಯ ವಿಧಾನಸಭೆಯ 126 ಕ್ಷೇತ್ರಗಳಿಂದ ಸದಸ್ಯರನ್ನು ಚುನಾಯಿಸುವ ಚುನಾವಣೆ, 4 ಮತ್ತು 11 ಏಪ್ರಿಲ್, 2011 ರಂದು ಎರಡು ಹಂತಗಳಲ್ಲಿ ನಡೆಯಿತು. ಫಲಿತಾಂಶವನ್ನು ಮೇ 13 ರಂದು ಪ್ರಕಟಿಸಲಾಯಿತು. [1] ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಇದರ ಹಾಲಿ ಮುಖ್ಯಮಂತ್ರಿಯಾಗಿರುವ ತರುಣ್ ಗೊಗೋಯ್ ಪ್ರಚಂಡ ಬಹುಮತವನ್ನು ಪಡೆದು (79 ಸ್ಥಾನಗಳು) ಚುನಾವಣೆಯಲ್ಲಿ ಮೂರನೇ ನೇ ಬಾರಿಗೆ ಪ್ರಮಾಣವಚನವನ್ನು ಸ್ವೀಕರಿಸಿದರು. ಅಸ್ಸಾಂಗೆ ಬಾಂಗ್ಲಾ ವಲಸಿಗರ ಸಮಸ್ಯೆ ಬಾಂಗ್ಲಾ ವಲಸಿಗರ ಸಮಸ್ಯೆಗೆ ದೊಡ್ಡ ಇತಿಹಾಸವಿದೆ. ಬ್ರಿಟಿಷ್‌ ವಸಾಹತು­ಶಾಹಿಗಳು ಮೊದಲಿಗೆ ಅಸ್ಸಾಂನಲ್ಲಿ ಚಹಾ ತೋಟ ಮಾಡಿದಾಗ, ಕೂಲಿ ಕೆಲಸಕ್ಕೆ ಬಾಂಗ್ಲಾದಿಂದ ಮುಸ್ಲಿಮರನ್ನು ಕರೆತಂದಿದ್ದಾರೆ. ಆಗಿನ್ನೂ ದೇಶ ಸ್ವಾತಂತ್ರ್ಯ­ಗೊಂಡಿರಲಿಲ್ಲ. ಭಾರತ, ಪಾಕಿಸ್ತಾನ ಪ್ರತ್ಯೇಕವಾಗಿರಲಿಲ್ಲ. 47ರ ದೇಶ ವಿಭಜನೆ ಬಳಿಕವೂ ಪೂರ್ವ ಪಾಕಿಸ್ತಾನ­ದಿಂದ ವಲಸೆ ಮುಂದುವರಿದಿತ್ತು. 71ರಲ್ಲಿ ಪಾಕಿಸ್ತಾನದಿಂದ ಬಾಂಗ್ಲಾ ಬೇರೆಯಾದ ನಂತರವೂ ಅಸ್ಸಾಂಗೆ ಜನ ಬರುವುದು ನಿರಂತರವಾಗಿ ಮುಂದುವರಿದಿದೆ. ಅಸ್ಸಾಮಿನಲ್ಲಿ ಸ್ಥಳೀಯ ಬುಡಕಟ್ಟುಗಳು ಮತ್ತು ವಲಸಿಗರ ನಡುವೆ ತಿಕ್ಕಾಟ ನಡೆಯುತ್ತಿದೆ. ಭೂಮಿ ಮೇಲಿನ ಒಡೆತನ. ಭಾಷೆ– ಸಂಸ್ಕೃತಿ ಉಳಿಸಿಕೊಳ್ಳಲು ಜನ ಆರಂಭಿಸಿರುವ ಹೋರಾಟವು ಕ್ರಮೇಣ ಮತೀಯವಾದದ ರೂಪ ಪಡೆದಿದೆ. ‘ಅಕ್ರಮವಾಗಿ ನುಸುಳಿರುವ ಮುಸ್ಲಿಮರು ಭೂಮಿ ಹಕ್ಕು ಕಸಿದುಕೊಳ್ಳುತ್ತಿದ್ದಾರೆ. ನಮ್ಮ ಭಾಷೆ– ಸಂಸ್ಕೃತಿ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ’ ಎಂಬ ಭಾವನೆ ಸ್ಥಳೀಯರಲ್ಲಿದೆ. ಹಿಂದೆ ಇದೇ ಕಾರಣಕ್ಕೆ ಬೋಡೊ ಚಳವಳಿ ಹುಟ್ಟಿಕೊಂಡಿದ್ದು. ಅನಂತರ ಬೋಡೊ ಕೌನ್ಸಿಲ್‌ ಸ್ಥಾಪನೆಯಾಗಿದ್ದು. 1971ರ ಬಳಿಕ ನಡೆದಿರುವ ಪ್ರತಿ ಚುನಾವಣೆಯಲ್ಲೂ ವಲಸಿಗರ ಸಮಸ್ಯೆಗೆ ಸಿಕ್ಕಾಪಟ್ಟೆ ಪ್ರಾಮುಖ್ಯತೆ ಸಿಕ್ಕಿದೆ. ವಲಸೆ ಸಮಸ್ಯೆ ವಿರುದ್ಧ ಹೋರಾಡಿದ್ದ ‘ಅಖಿಲ ಅಸ್ಸಾಂ ವಿದ್ಯಾರ್ಥಿ ಸಂಘ’ (ಎಎಎಸ್‌ಯು)ದ ನಾಯಕರು ಸ್ಥಾಪಿಸಿದ ‘ಅಸ್ಸಾಂ ಗಣ ಪರಿಷತ್‌’ (ಎಜಿಪಿ) ಮೂರು ದಶಕದ ಹಿಂದೆ ರಾಜ್ಯದ ಪ್ರಬಲ ರಾಜಕೀಯ ಶಕ್ತಿಯಾಗಿ ಮೆರೆಯಿತು. ವಲಸೆ ಸಮಸ್ಯೆ ವಿರುದ್ಧ ಹೋರಾಡಿದ್ದ ಎಜಿಪಿ 1985ರಲ್ಲಿ ಮೊದಲ ಸಲ ಅಧಿಕಾರಕ್ಕೆ ಬಂದಿತು. ಅಸ್ಸಾಂನ ಮತಾಧಾರಿತ ಜನಸಂಖ್ಯೆಯ ವಿಂಗಡಣೆ 2011 ರ ಜನಗಣತಿಯ ಪ್ರಕಾರ, 61.5% ರಷ್ಟು ಹಿಂದೂಗಳಾಗಿದ್ದು, 34.22% ಮುಸ್ಲಿಮರಾಗಿದ್ದಾರೆ. ಕ್ರಿಶ್ಚಿಯನ್ ಅಲ್ಪಸಂಖ್ಯಾತರನ್ನು (3.7%) ಪರಿಶಿಷ್ಟ ಪಂಗಡ ಜನಸಂಖ್ಯೆಯ ನಡುವೆ ಕಾಣಬಹುದು. ಅಸ್ಸಾಂನ ಪರಿಶಿಷ್ಟ ಪಂಗಡದ ಜನಸಂಖ್ಯೆ ಸುಮಾರು 13%. ಇದರಲ್ಲಿ ಬೋಡೋಗಳು 40% ನಷ್ಟು. ಇತರೆ ಧರ್ಮಗಳು: ಜೈನ ಧರ್ಮ (0.1%), ಬೌದ್ಧ (0.2%), ಸಿಖ್ ಧರ್ಮ (0.1%) ಮತ್ತು ಪಶುಪತಿ? (ಖಮ್ತಿ ನಡುವೆ, ಫಾಕೆ, ಅಯಿತೊನ್ ಇತ್ಯಾದಿ ಸಮುದಾಯಗಳು) ಸೇರಿವೆ. ಭಾರತದ 2011 ರ ಜನಗಣತಿಯ ಪ್ರಕಾರ ಅಸ್ಸಾಂನ 32 ಜಿಲ್ಲೆಗಳಲ್ಲಿ, 9 ಮುಸ್ಲಿಂ ಬಾಹುಳ್ಯ ಹೊಂದಿವೆ. ಅವು, ಧುಬ್ರಿ, ಗೊಅಲಾಪುರ, ಬರಾಪೇತ, ಮೋರಿಗಾಂ, ನಾಗೋಂನ್, ಕರೀಂಗಂಜ್, ಹೈಲಿಖಂಡಿ, ದರ್ರಾಂಗ ಮತ್ತು ಬೊಂಗೈಗಾಂವ್. ಭಾಷೆ ಬಂಗಾಳಿಯು ಬರಾಕ್ ವ್ಯಾಲಿಯ ಮೂರು ಜಿಲ್ಲೆಗಳಲ್ಲಿ ಅಧಿಕೃತ ಸ್ಥಾನಮಾನ ಹೊಂದಿದೆ, ಮತ್ತು ರಾಜ್ಯದ (27.5%) ಎರಡನೇ ಅತ್ಯಂತ ವ್ಯಾಪಕವಾಗಿ ಮಾತನಾಡುವ ಭಾಷೆಯಾಗಿದೆ. ಹಾಗೆಯೇ ಅಸ್ಸಾಮಿ ಮತ್ತು ಬೋಡೋ ಪ್ರಮುಖ ಸ್ಥಳೀಯ ಮತ್ತು ಅಧಿಕೃತ ಭಾಷೆಗಳಾಗಿವೆ. ಪ್ರಾಚೀನ ಕಾಮರೂಪ ಮತ್ತು ಕಮತಪುರ, ಕಚಾರಿ, ಸುತಿಯ,ಬೊರಾಹಿ, ಅಹೋಮಾ ಮತ್ತು ಕೋಚ್ ಮಧ್ಯಕಾಲೀನ ರಾಜ್ಯಗಳಲ್ಲಿ - ಸಾಂಪ್ರದಾಯಿಕವಾಗಿ ಅಸ್ಸಾಮಿ ಸಾಮಾನ್ಯ ಭಾಷೆ (ಭಾಷೆಯು ಆಸ್ಟ್ರೊ, ಟಿಬೆಟೊ-ಬರ್ಮನ್ ಪ್ರಾಕೃತ ಸಮ್ಮಿಶ್ರ ಮೂಲದ್ದು) ಮತ್ತು ಒಂದು ಪ್ರಮುಖ ಭಾಷೆಯಾಗಿದೆ. ಭಾಷೆ ಕುರುಹುಗಳು ಚರ್ಯಪದ (ಸಿ. 7 ನೇ -8 ನೇ ಶತಮಾನದ AD) ಲಯಿಪ, ಸರಹಪ, ಇತ್ಯಾದಿ ಹಲವಾರು ಕವನಗಳು ಕಂಡುಬರುತ್ತದೆ. ಆಧುನಿಕ ಭಾಷೆಗಳಲ್ಲಿ ಕಾಮಪುರಿ, ಗೊಅಲ್ಪರಿಯ ಇತ್ಯಾದಿ ಅವಶೇಷಗಳಾಗಿವೆ. ಬೋಡೊ ಅಸ್ಸಾಂನ ಪುರಾತನ ಭಾಷೆ. ಜನಾಂಗೀಯ ಸಾಂಸ್ಕೃತಿಕ ಗುಂಪುಗಳ, ಪ್ರಾದೇಶಿಕ ವಿಭಾಗ, ಸಾಂಸ್ಕೃತಿಕ ಲಕ್ಷಣಗಳು, ಬೊಡೊ-ಕಚಾರಿ ಪದಗಳು, ಮತ್ತು ಉತ್ತರ ಪೂರ್ವ ವಲಯದಲ್ಲಿ ಎಲ್ಲ ನದಿಗಳ ಹೆಸರುಗಳು ಈಭಾಷೆಯವು. ಅಸ್ಸಾಂ ರಾಜ್ಯದಲ್ಲಿ ಪ್ರತ್ಯೇಕ ‘ಆಡಳಿತದ ರಾಜ್ಯ’ ಬೋಡೊಲ್ಯಾಂಡ್ Bodoland ಪ್ರತ್ಯೇಕ ರಾಜ್ಯ ಅಥವಾ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಕ್ಕಾಗಿ ಅನೇಕ ದಶಕಗಳಿಂದ (೧೯೨೯ ರಿಂದ) ಬೋಡೊ ಜನರು ನಡೆಸುತ್ತಿದ್ದ ಸಶಸ್ತ್ರ ಮತ್ತು ಶಸ್ತ್ರರಹಿತ ಹೋರಾಟಕ್ಕೆ ೨೦೨೦ ರ ‘ಬೋಡೊ ಅಕಾರ್ಡ್‌’ ಮೂಲಕ ಕೊನೆಗೊಂಡಿದೆ. ಈಗ ಅಸ್ತಿತ್ವದಲ್ಲಿದ್ದ ಅರೆಸ್ವಾಯತ್ತ ಬೋಡೊ ಜಿಲ್ಲೆಗಳಿಗೆ, ಮತ್ತಷ್ಟು ಅಧಿಕಾರವನ್ನು ‘ಬೋಡೊ ಅಕಾರ್ಡ್‌’ ನೀಡುತ್ತದೆ. ಪ್ರತ್ಯೇಕ ಬೋಡೊಲ್ಯಾಂಡ್‌ ಹೋರಾಟಕ್ಕೆ ಈ ಒಪ್ಪಂದವು ಕೊನೆ ಹಾಕಿದೆ. ಪ್ರತ್ಯೇಕ ರಾಜ್ಯವೊಂದಕ್ಕೆ ನೀಡಲಾಗುವ ಬಹುಪಾಲು ಅಧಿಕಾರವನ್ನು ಸ್ವಾಯತ್ತ ಬೋಡೊಲ್ಯಾಂಡ್‌ಗೆ ಈ ಒಪ್ಪಂದವು ನೀಡುತ್ತದೆ. ಈ ಒಪ್ಪಂದವು ಪ್ರತ್ಯೇಕ ಬೋಡೊಲ್ಯಾಂಡ್‌ನತ್ತ ದೊಡ್ಡ ಹೆಜ್ಜೆ ಎಂದು ಭಾವಿಸಲಾಗಿದೆ. ರಾಜಕೀಯ ಪ್ರಾತಿನಿಧ್ಯ ಹೆಚ್ಚಳ: ಈಗ ಬಿಟಿಎಡಿಯ ಆಡಳಿತವನ್ನು ನೋಡಿಕೊಳ್ಳುತ್ತಿರುವ ಬೋಡೊಲ್ಯಾಂಡ್‌ ಭೌಗೋಳಿಕ ಸಮಿತಿ (ಬಿಟಿಸಿ) 40 ಸದಸ್ಯರ ಬಲ ಹೊಂದಿದೆ. ಬಿಟಿಎಡಿಗಿಂತಲೂ ಬಿಟಿಆರ್‌ನ ವ್ಯಾಪ್ತಿ ಹೆಚ್ಚುವುದರಿಂದ ಬಿಟಿಸಿ ಸದಸ್ಯರ ಸಂಖ್ಯೆ 40ರಿಂದ 60ಕ್ಕೆ ಏರಿಕೆ ಆಗಲಿದೆ. ಬಿಟಿಆರ್‌ ವ್ಯಾಪ್ತಿಯಲ್ಲಿ ಬರುವ ಸ್ಥಳೀಯ ಸಂಸ್ಥೆಗಳ ಆಡಳಿತ ಕ್ಷೇತ್ರಗಳು, ವಿಧಾನಸಭಾ ಕ್ಷೇತ್ರಗಳು ಮತ್ತು ಲೋಕಸಭಾ ಕ್ಷೇತ್ರಗಳನ್ನು ಮರುವಿಂಗಡನೆ; ಈ ವ್ಯಾಪ್ತಿಯಲ್ಲಿ ಬರುವ ಸ್ಥಳೀಯ ಸಂಸ್ಥೆಗಳು ಮತ್ತು ರಾಜ್ಯ ವಿಧಾನಸಭೆಯ ಕ್ಷೇತ್ರಗಳಲ್ಲಿ ಶೇ 65ರಷ್ಟು ಸ್ಥಾನಗಳನ್ನು ಬೋಡೊ ಬುಡಕಟ್ಟು ಜನರಿಗೆ ಮೀಸಲಿಡುವುದು; ಬಿಟಿಆರ್‌ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಲೋಕಸಭಾ ಕ್ಷೇತ್ರಗಳನ್ನು ಬೋಡೊ ಬುಡಕಟ್ಟು ಸಮುದಾಯಗಳಿಗೆ ಮೀಸಲಿರಿಸಲಿಡುವುದು ಯೋಜನೆಯಲ್ಲಿದೆ. ನೋಡಿ ಭಾರತದ ಚುನಾವಣೆಗಳು ೨೦೧೬ ಅಸ್ಸಾಂ ವಿಧಾನ ಸಭೆ ಅಸ್ಸಾಂ ವಿಧಾನಸಭೆ ಚುನಾವಣೆ ೨೦೧೬| ಅಸ್ಸಾಂ ವಿಧಾನಸಭೆ ಚುನಾವಣೆ ೨೦೧೧ ಭಾರತದಲ್ಲಿ ವಿಧಾನಸಭೆ ಚುನಾವಣೆಗಳು ತಮಿಳುನಾಡು-ಪಶ್ಚಿಮ ಬಂಗಾಳ-ಕೇರಳ-ಪುದುಚೇರಿ-ಅಸ್ಸಾಂ State Assembly elections in India ವಲಸಿಗರು ಮತ್ತು ರಾಷ್ಟ್ರೀಯ ಪೌರತ್ವದ ಸಮಸ್ಯೆ;೬-೮-೨೦೧೮ ಆಧಾರ ೧.Barpujari, H. K. (ed.) (1990), The Comprehensive History of Assam, 1st edition, Guwahati, India: Assam Publication Board ೨.Tej Ram Sharma,1978,"Personal and geographical names in the Gupta inscriptions. (1.publ.)", Page 254, ೩.Barua Gunaviram Assam Buranji or A History of Assam 2008 ೪.Census 2011 http://www.iloveindia.com/states/assam/economy.html ೫.Government of Assam, website http://assam.gov.in/ ಉಲ್ಲೇಖ ???? ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
2090
https://kn.wikipedia.org/wiki/%E0%B2%97%E0%B3%81%E0%B2%9C%E0%B2%B0%E0%B2%BE%E0%B2%A4%E0%B2%BF%20%E0%B2%AD%E0%B2%BE%E0%B2%B7%E0%B3%86
ಗುಜರಾತಿ ಭಾಷೆ
ಗುಜರಾತಿ ಭಾಷೆ ಒಂದು ಇಂಡೋ -ಆರ್ಯನ್ ಶಾಖೆಗೆ ಸೇರಿದ ಭಾಷೆ. ಇದು ಗುಜರಾತ್ ರಾಜ್ಯದ ಅಧಿಕೃತ ಭಾಷೆಯಷ್ಟೇ ಅಲ್ಲದೆ ಕೇಂದ್ರಾದೀನ ಪ್ರದೇಶಗಳಾದ ದಾದ್ರ ಮತ್ತು ನಗರಹವೇಲಿ ಮತ್ತು ದಿಯು ಮತ್ತು ದಾಮನ್ ಗಳ ಅಧಿಕೃತ ಭಾಷೆಯೂ ಹೌದು. ಭಾರತ ರಾಜ್ಯಾಂಗದಲ್ಲಿ ನಮೂದಾಗಿರುವ 15 ಭಾರತೀಯ ಭಾಷೆಗಳಲ್ಲಿ ಒಂದು; ಗುಜರಾತಿನ ಪ್ರಾಂತಭಾಷೆ. ಗುಜರಾತ್ ರಾಜ್ಯದಲ್ಲೂ ಗುಜರಾತಿ ಸಮುದಾಯಗಳು ನೆಲೆಸಿರುವ ಭಾರತದ ವಿವಿಧ ಭಾಗಗಳಲ್ಲೂ ಭಾರತದ ಹೊರಗೆ ಏಷ್ಯ, ಅಫ್ರಿಕಗಳಲ್ಲೂ ಈ ಭಾಷೆಯನ್ನಾಡುವ ಜನ ನೆಲೆಸಿದ್ದಾರೆ. ಗುಜರಾತಿ ಮಾತನಾಡುವವರ ಸಂಖ್ಯೆ ೫೪.೬ ಲಕ್ಷ . ಗುಜರಾತಿ ಇಂಡೋ-ಆರ್ಯನ್ ಭಾಷೆಗಳಲ್ಲೊಂದು. ಇದರ ಪೂರ್ವ ಮತ್ತು ಈಶಾನ್ಯ ಗಡಿಯಲ್ಲಿ ರಾಜಸ್ಥಾನಿ ಇದೆ. ಸಹಜವಾಗಿ ಇವೆರಡು ಭಾಷೆಗಳೂ ಕ್ರಮೇಣ ಬೆರೆಯುತ್ತ ಬಂದಿವೆಯಾಗಿ ಎಲ್ಲೆಕಟ್ಟಿನ ಭಾಗಗಳಲ್ಲಿ ಉಪಭಾಷೆಗಳು ಯಾವ ಮೂಲದಿಂದ ಬಂದಿವೆಯೆಂಬುದನ್ನು ನಿರ್ಧರಿಸುವುದು ಕಷ್ಟ. ಸಾಹಿತ್ಯ ವಾಂಙ್ಮಯ ಮತ್ತು ವೈಚಾರಿಕ ಗದ್ಯ ಸಾಹಿತ್ಯದ ದೃಷ್ಟಿಯಿಂದ ಆಧುನಿಕ ಗುಜರಾತಿ ಸಾಹಿತ್ಯ ಸಮೃದ್ಧವಾಗಿವೆ. ಇದರ ಸಾಹಿತ್ಯಿಕ ಪರಂಪರೆಯ ಇತಿಹಾಸ ಸುಮಾರು ಒಂದು ಸಾವಿರ ವರ್ಷಗಳಷ್ಟು ಹಿಂದಕ್ಕೆ ಹೋಗುತ್ತದೆ. ಉಪದೇಶಾತ್ಮಕ ಗದ್ಯ ಹಾಗೂ ಭಾವಗೀತಾತ್ಮಕ ಮತ್ತು ಪ್ರಶಂಸಾತ್ಮಕ (ಅಥವಾ ಮಾಗಧ) ಪದ್ಯ ರೂಪದ ರಚನೆಗಳು ಈ ಹಂತದಲ್ಲಿ ಕಾಣದೊರೆಯುತ್ತವೆ. ಲಿಪಿ ಗುಜರಾತಿ ಲಿಪಿ ದೇವನಾಗರಿ ಲಿಪಿಯ ಸುತ್ತು ಬರಹದ ರೂಪದ್ದಾಗಿದ್ದು, ಕಳೆದ ಆರೇಳು ಶತಮಾನಗಳಿಂದಲೂ ಪಶ್ಚಿಮ ಭಾರತದಲ್ಲಿ (ವಿಶೇಷವಾಗಿ ಗುಜರಾತ್ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ) ಬಳಕೆಯಲ್ಲಿತ್ತು. ಇದನ್ನು ಮಹಾಜನಿ ಎಂದು ಕರೆಯುತ್ತಾರೆ. ಇದರ ವರ್ಣಮಾಲೆ ಸಂಸ್ಕೃತಜನ್ಯವಾಗಿದ್ದು, ಅಕ್ಷರಗಳ ಆಕಾರ ದೇವನಾಗರಿಯನ್ನು ತುಂಬ ನಿಕಟವಾಗಿ ಹೋಲುತ್ತದೆ. ಭಾಷಾವರ್ಗ ಗುಜರಾತಿನ ಇಂಡೋ-ಯೂರೋಪಿಯನ್ (ಭಾರೋಷೀಯ) ಭಾಷಾ ಪರಿವಾರದ ಇಂಡೋ-ಇರಾನಿಯನ್ (ಭಾರತೀಯ ಇರಾನಿ) ಉಪವರ್ಗದ ಇಂಡೋ-ಆರ್ಯನ್ (ಭಾರತೀಯ-ಆರ್ಯ) ಶಾಖೆಗೆ ಸೇರಿದ. ಇಂಡೋ-ಆರ್ಯನ್ ಶಾಖೆಯ ಎರಡು ಮುಖ್ಯಕವಲುಗಳು (ಉತ್ತರದ ಕವಲು-ಪಹಾಡಿ. ಪಂಜಾಬಿ, ಲಹಂದ, ಸಿಂಧಿ, ಕಚ್ಛಿ; ಪೂರ್ವದ ಕವಲು-ಬಂಗಾಳಿ ಅಸ್ಸಾಮಿ ಮತ್ತು ಒರಿಯ) ಬೇರ್ಪಟ್ಟ ತರುವಾಯ ಪಶ್ಚಿಮ, ದಕ್ಷಿಣ ಮತ್ತು ನಡುವಣ ಶಾಖೆಗಳು ಮತ್ತೆ ಕವಲೊಡೆದವು. ದಕ್ಷಿಣದ ಭಾಷೆಗಳ (ಮರಾಠಿ-ಕೊಂಕಣಿ) ಬೇರ್ಪಡೆಯನ್ನು ಹಿಂಬಾಲಿಸಿ, ಪಶ್ಚಿಮದ ಭಾಷೆಗಳೂ (ಗುಜರಾತಿ, ರಾಜಸ್ಥಾನಿ, ಭೀಲಿ) ನಡುವಣ ವಲಯದ (ಪಶ್ಚಿಮ ಹಿಂದಿ) ಭಾಷೆಗಳಿಂದ ಬೇರ್ಪಟ್ಟವು. ನಡುವಣ ವಲಯದಲ್ಲಿ ನಾಮವಾಚೀ ಏಕವಚನ ಪುಲ್ಲಿಂಗದ ಆ ಕಾರಾಂತ್ಯದ ರೂಪದಲ್ಲೂ ಪಶ್ಚಿಮ ವಲಯದಲ್ಲಿ ಓ ಕಾರಾಂತ್ಯದ ರೂಪದಲ್ಲೂ ಈ ಬೇರ್ಪಡೆ ಎದ್ದು ಕಾಣುತ್ತದೆ. ಹೀಗಾಗಿ ಪಶ್ಚಿಮ ಮಲಯದಲ್ಲಿ ಘೋಡ (ಕುದುರೆ) ರೂಪವೂ ಗುಜರಾತಿಯಲ್ಲಿ ಘೋಡೊ ರೂಪವೂ ಕಾಣದೊರೆಯುತ್ತವೆ. ಪಶ್ಚಿಮ ಮತ್ತು ದಕ್ಷಿಣ ವರ್ಗದ ಭಾಷೆಗಳೂ ನಪುಂಸಕ ಲಿಂಗವನ್ನು ಉಳಿಸಿಕೊಂಡಿವೆ. ಪಶ್ಚಿಮ ವಲಯದ ಭಾಷೆಗಳಲ್ಲಿ ಮೊದಲಿಗೆ ಭೀಲಿಯೂ ಅನಂತರದಲ್ಲಿ ಗುಜರಾತಿ ಹಾಗೂ ರಾಜಸ್ಥಾನದ ಉಪಭಾಷೆಗಳೂ ಬೇರ್ಪಡುತ್ತವೆ. ಧ್ವನಿ ವ್ಯವಸ್ಥೆ ಗುಜರಾತಿ ಧ್ವನಿಮಾವ್ಯವಸ್ಥೆಯ ವಿಶಿಷ್ಟ ಲಕ್ಷಣಗಳೆಂದರೆ ಎಂಟು ಸ್ತರಗಳ - ಇ, ಎ ( ಉ ಓ ( ಅಆ-ವ್ಯವಸ್ಥೆ ಮತ್ತು ನ ಹಾಗೂ ಣ ಗಳ ಮತ್ತು ಲ ಮತ್ತು ಳ ಗಳ ಸ್ಪಷ್ಟ ಧ್ವನಿಘಟಕಗಳು. ಆರು ಸ್ವರಗಳೂ - ಇ (, ಉ (, ಆ, ಆ - ಅನುನಾಸಿಕಗಳಾಗಿಯೂ ಬರಬಹುದು. ಎಲ್ಲ ಸ್ವರಗಳೂ ಘೋಷ ಅಥವಾ ಆರ್ಧಘೋಷ ಸ್ವರಗಳಾಗಿರಬಹುದು. ಹೀಗಾಗಿ, ಬಾರ್ (ಹನ್ನೆರಡು) ಬಾರ್ (ಹೊರಗೆ) (ಅಕ್ಷರದ ಕೆಳಗಿನ ಕಿರುಗೀಟು ಅರ್ಧಘೋಷ ಸ್ವರವನ್ನು ಸೂಚಿಸುತ್ತವೆ) ಮತ್ತು ಭಾರ್ (ಹೊರೆ) ನಂಥ ಶಬ್ದಗಳಲ್ಲಿ ಬಾರ್‍ನಲ್ಲಿ ಬರುವ ಅರ್ಧಘೋಷಸ್ವರ ಬಾರ್ ಮತ್ತು ಭಾರ್‍ನಲ್ಲಿ ಬರುವ ಸಾಮಾನ್ಯ ದೀರ್ಘ ಸ್ವರವಾದ ಆ ಕ್ಕಿಂತ ಭಿನ್ನವಾಗಿದೆ. ಸ್ವರಗಳ ಮಾತ್ರೆಗೆ ಗುಜರಾತಿಯಲ್ಲಿ ಅಂಥ ಮಹತ್ತ್ವವಿಲ್ಲ. ಲಿಪಿಯಲ್ಲೇನೋ ಇ, ಉ, ಕಾರಗಳ ಹ್ವಸ್ವ ಮತ್ತು ದೀಘ ಸ್ವರಗಳನ್ನೇ ಸೂಚಿಸುವ ಪ್ರತ್ಯೇಕ ವರ್ಣಗಳಿವೆ; ( ಮತ್ತು ( ಕಾರಗಳಿಗೆ (ದೇವನಾಗರಿ ಸಂಪ್ರದಾಯದಂತೆ) ಪ್ರತ್ಯೇಕ ವರ್ಣಗಳಿಲ್ಲ. ವ್ಯಾಕರಣ ನಾಮರೂಪಗಳಲ್ಲಿ ಗುಜರಾತಿ ಮೂರು ಲಿಂಗಗಳನ್ನೂ ಎರಡು ವಚನಗಳನ್ನೂ ಹೊಂದಿದೆ. ವಿಶೇಷ್ಯ, ವಿಶೇಷಣ ಮತ್ತು ಕೃದಂತ ರೂಪಗಳನ್ನು ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕ ಲಿಂಗಗಳಲ್ಲಿಯೂ ಏಕ ಮತ್ತು ಬಹು ವಚನಗಳಲ್ಲಿಯೂ ಸಾಧಿಸಬಹುದು. ವಿಭಕ್ತಿ ರೂಪಕ್ಕೆ ಸಂಬಂಧಿಸಿದಂತೆ ಹೆಚ್ಚೆಂದರೆ ಮೂರು ವಿಭಕ್ತಿ ರೂಪಗಳನ್ನು ಸ್ಪಷ್ಟವಾಗಿ ಗುರುತಿಸಬಹುದು: ಪ್ರತ್ಯಕ್ಷ ಏಕವಚನ, ಪ್ರತ್ಯಕ್ಷ ಬಹುವಚನ ಮತ್ತು ಪರೋಕ್ಷ ರೂಪ. ಈ ಬಗೆಗಳಲ್ಲಿ ಪುಲ್ಲಿಂಗ ನಾಮಪದಗಳು ಎರಡು ರೂಪಗಳನ್ನು ನಪುಂಸಕ ಲಿಂಗನಾಮಪದಗಳು ಮೂರು ರೂಪಗಳನ್ನು ಹೊಂದಿರುತ್ತವೆ. ಸಬಲ ನಾಮಪದಗಳಿಗೆ ಹಾಗೂ ಸ್ತ್ರೀಲಿಂಗ ನಾಮಪದಗಳಿಗೆ ವಿಭಕ್ತಿ ಪ್ರತ್ಯಯಗಳಾವುವೂ ಇರುವುದಿಲ್ಲ. ದಿಕ್ರೋ ನಂಥ ( ಪುಲ್ಲಿಂಗದ ನಾಮಪದ ಹಾಗೂ ಮಾಥೂನಂಥ ನಪುಂಸಕ ನಾಮಪದಗಳಿಗೆ ಈ ರೀತಿ ಪ್ರತ್ಯಯಗಳನ್ನು ಹಚ್ಚಬಹುದು. ಹಾಥೀ (ಆನೆ) ಮತ್ತು ಮಚ್ಛರ್ (ಸೊಳ್ಳೆ) ಯಂಥ ಸಬಲ ನಾಮಪದಗಳಿಗೆ ವಿಭಕ್ತಿರೂಪಗಳನ್ನು ಹಚ್ಚುವುದಿಲ್ಲ. ಅಂತೆಯೇ, ದಿಕ್ರಿ (ಮಗಳು), ತಮಾಕು (ಹೊಗೆಸೊಪ್ಪು), ಬೋ (ರಿಬ್ಬನ್), ಸತ್ತಾ (ಅಧಿಕಾರ) ದಂಥ ಸ್ತ್ರೀಲಿಂಗ ನಾಮಪದಗಳಿಗೆ ವಿಭಕ್ತಿ ಪ್ರತ್ಯಯಗಳನ್ನಾಗಲೀ ವಚನ ಪ್ರತ್ಯಯಗಳನ್ನಾಗಲೀ ಹಚ್ಚುವುದಿಲ್ಲ. ಪ್ರಾಚೀನ ವಿಭಕ್ತಿ ಪ್ರತ್ಯಯಗಳಿಗೆ ಬದಲಾಗಿ ಅನೇಕ ಅಬೆಯ ಪರಪ್ರತ್ಯಯಗಳನ್ನು ಬಳಸಲಾಗುತ್ತದೆ. ಓ ಎಂಬ ಹೊಸ ಬಹುವಚನ ಪ್ರತ್ಯಯವನ್ನು (18 ನೆಯ ಶತಮಾನದಿಂದ ಈಚೆಗೆ) ಬಳಸಲಾಗುತ್ತಿದೆ ಐಚ್ಛಿಕವಾಗಿ ವಿಭಕ್ತಿ ಪ್ರತ್ಯಯ ಸಹಿತವಾದ ಬಹುವಚನ ರೂಪದಲ್ಲಿ ಆ ಪ್ರತ್ಯಯವನ್ನೂ ಬಳಸಲಾಗುತ್ತಿದೆ. ಉದಾ: ದಿಕ್ರ್ + ಆ ( ದಿಕ್ರ್ + ಆ + ಓ (ಮಕ್ಕಳು), ( ( ( ಮಾಥ್ + ಆ ಮಾಥ್ + ಆ + ಓ (ತಲೆಗಳು) ಗುಜರಾತಿನ ಪುರುಷವಾಚಕ ಸರ್ವನಾಮಗಳಲ್ಲಿ ಲಿಂಗವಿವಕ್ಷೆಯಿಲ್ಲ. ಉತ್ತಮ ಪುರುಷ ಬಹುವಚನದಲ್ಲಿ ಸಮಾವೇಶಿ ಮತ್ತು ಅಸಮಾವೇಶಿ ಸರ್ವನಾಮಗಳಿಗೆ ಪ್ರತ್ಯೇಕ ರೂಪಗಳಿವೆ: ಅಮೆ (ನಾವು-ಅಸಮಾವೇಶಿ), ಆಪ್‍ಣೆ (ನಾವು-ಸಮಾವೇಶಿ). ಕ್ರಿಯಾರೂಪದಲ್ಲಿ ಗುಜರಾತಿ ಪುರುಷ ಮತ್ತು ವಚನ ರೂಪ ನಿದರ್ಶನವನ್ನು ಹೊಂದಿದೆ. ಪರಪ್ರತ್ಯಯಗಳನ್ನು ಹಚ್ಚುವುದರ ಮೂಲಕ ಕಾಲ ಮತ್ತು ಅವಸ್ಥಾ ವಿಶೇಷಗಳನ್ನು ಅಥವಾ ಕ್ರಿಯಾರೂಪಗಳನ್ನು (ಮೂಡ್ಸ್) ಸೂಚಿಸಲಾಗುತ್ತದೆ. ಹೋ (ಇರು) ಎಂಬ ಸಹಾಯಕ ಕ್ರಿಯಾಪದಯುಕ್ತವಾದ ಬಹುಪದ ರಚನೆಗಳ ಮೂಲಕ ಪೂರ್ಣಕಾಲಗಳನ್ನು ಸೂಚಿಸಲಾಗುತ್ತದೆ. ತಾತ್ಕಾಲಿಕ ವರ್ತಮಾನಕಾಲ. ಭೂತಕಾಲ ಮತ್ತು ಪೂರ್ವಕಾಲಿಕ ರೂಪಗಳು ಕೃದಂತಗಳಾಗಿದ್ದು, ನಾಮಪದಗಳಂತೆಯೇ ಅವುಗಳಿಗೆ ವಿಭಕ್ತಿ ಪ್ರತ್ಯಯಗಳನ್ನು ಹಚ್ಚಲಾಗುತ್ತದೆ. ಕಾರಕ ರೂಪಗಳಂತೆಯೇ ಧಾತುರೂಪಗಳನ್ನೂ ನಡೆಸಬಹುದು. ಏಕವಚನದಲ್ಲಿ ಎರಡು, ಬಹುವಚನದಲ್ಲಿ ಎರಡು-ಹೀಗೆ ಕ್ರಿಯಾರೂಪನಿದರ್ಶನದಲ್ಲಿ ಅಥವಾ ಕ್ರಿಯಾರೂಪ ಕಾಲಿಕೆಯಲ್ಲಿ ಹೆಚ್ಚೆಂದರೆ ನಾಲ್ಕು ರೂಪಗಳನ್ನು ಸ್ಪಷ್ಟವಾಗಿ ಗುರುತಿಸಬಹುದು. ಉಪ ಭಾಷೆಗಳು ದಕ್ಷಿಣ, ಮಧ್ಯ ಹಾಗೂ ಉತ್ತರ ಗುಜರಾತ್ ಮತ್ತು ಸೌರಾಷ್ಟ್ರ ಪರ್ಯಾಯದ್ವೀಪ-ಇವು ಗುಜರಾತಿಯ ನಾಲ್ಕು ಪ್ರಮುಖ ಉಪಭಾಷಾ ವಲಯಗಳು. ಸೌರಾಷ್ಟ್ರದ ಉಪಭಾಷೆಗಳು ಪ್ರಾಚೀನವಾದುವಾಗಿದ್ದು ಕೆಲವು ಪ್ರಾಚೀನತರ ರೂಪಗಳನ್ನು ಉಳಿಸಿಕೊಂಡಿವೆ. ಅವುಗಳಲ್ಲಿ ಕೆಲವು ಆರು ಸ್ವರ (( ಮತ್ತು ( ಗಳನ್ನು ಬಿಟ್ಟು) ವ್ಯವಸ್ಥೆಯನ್ನು ಹೊಂದಿವೆ. ( ಉತ್ತರದ ಉಪಭಾಷೆಗಳು ನೆರೆಯ ಪ್ರದೇಶದ ಭೀಲಿ ಭಾಷೆಯ ಕೆಲವು ಲಕ್ಷಣಗಳನ್ನು ಒಳಗೊಂಡಿವೆ. ಅನುನಾಸಿಕ ( ಅಥವಾ ಇ ಇ ಅನುನಾಸಿಕ ವ್ಯಂಜನಗಳ ಸನಿಹದಲ್ಲಿದ್ದಾಗ ವಿವೃತ ( ಅಥವಾ ( ಆಗಿಯೂ ಬದಲಾಗುವುದು ಹಾಗೂ ಕ ಕಾರ ಗ ಕಾರಗಳು ಇ, ಏ ಅಥವಾ ( ಯ ಕಾರದ ಎದುರಿನಲ್ಲಿ ಚಕಾರ ಜ ಕಾರಗಳಾಗಿ ತಾಲವ್ಯೀಕರಣಕ್ಕೊಳಗಾಗುವುದು-ಇವು ಉತ್ತರ ಹಾಗೂ ಮಧ್ಯ ಗುಜರಾತಿ ಉಪಭಾಷೆಗಳ ವಿಶಿಷ್ಟ ಲಕ್ಷಣ. ಮುಂದಿನ ವರ್ಣದಲ್ಲಿಯ ಕಾರವಿದ್ದರೆ ವರ್ಣವ್ಯತ್ಯಯವಾಗುವುದು ದಕ್ಷಿಣದ ಉಪಭಾಷೆಗಳ ವಿಶಿಷ್ಟ ಲಕ್ಷಣ. ಹೀಗಾಗಿ ಶಿಷ್ಟ ಆಪ್ಯೋ ರೂಪ ದಕ್ಷಿಣದ ಭಾಷಾಶೈಲಿಯಗಳಲ್ಲಿ ಗಮನಾರ್ಹವಾದುವೆಂದರೆ ಸೌರಾಷ್ಟ್ರ ಹಾಗೂ ಹಾಗೂ ದಕ್ಷಿಣ ಗುಜರಾತಿನ ಕರಾವಳಿಯ ಬೆಸ್ತರ ಮಾತು. ಸೌರಾಷ್ಟ್ರದ ವಂದಿಮಾಗಧೀಯ ಹಾಗೂ ಹುಲ್ಲುಗಾವಲಿನ ಜನಸಮುದಾಯಗಳ ಮಾತು. ಸೌರಾಷ್ಟ್ರದ ಇಸ್ಮಾಯಿಲೀ ಖೋಜಾಗಳ ಮಾತು ಮತ್ತು ದಕ್ಷಿಣ ಗುಜರಾತಿನ ಪಾರ್ಸಿಗಳ ಮಾತು. ಒಟ್ಟಿನಲ್ಲಿ ಮಧ್ಯ ಹಾಗೂ ಉತ್ತರ ಗುಜರಾತಿನ ಉಪಭಾಷೆಗಳು ಆವಿಷ್ಕಾರಕ ಉಪಭಾಷೆಗಳು. ಸುಶಿಕ್ಷಿತ, ಮೇಲು ಜಾತಿಯ ಜನಸಮುದಾಯದ ಮಾತೇ ಆಧುನಿಕ ಶಿಷ್ಟ ಗುಜರಾತಿಗೆ ಆಧಾರವಾಗಿದೆ. ಉಲ್ಲೇಖಗಳು ಭಾರತೀಯ ಭಾಷೆಗಳು ಇಂಡಿಕ್ ಭಾಷೆಗಳು en:Gujarathi
2093
https://kn.wikipedia.org/wiki/%E0%B2%A4%E0%B3%81%E0%B2%B3%E0%B3%81
ತುಳು
ತುಳು() ಪಂಚ ದ್ರಾವಿಡ ಭಾಷೆಗಳಲ್ಲಿ ಒಂದು ಭಾಷೆ. ಭಾರತದ ಕರ್ನಾಟಕ ರಾಜ್ಯದ ಪಶ್ಚಿಮ ತೀರದಲ್ಲಿರುವ ದಕ್ಷಿಣ ಕನ್ನಡ, ಉಡುಪಿ ಮತ್ತು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಗಳಲ್ಲಿ ಇದು ಹೆಚ್ಚಾಗಿ ಚಾಲ್ತಿಯಲ್ಲಿದೆ. ತುಳು ಮಾತಾಡುವವರನ್ನು ತುಳುವರು (ತುಳುವಿನಲ್ಲಿ ತುಳುವೆರ್) ಎಂದು ಕರೆಯುತ್ತಾರೆ. ಸುಮಾರು ೧೦ನೇ ಶತಮಾನದಲ್ಲಿ ತುಳು ಬ್ರಾಹ್ಮಣರು ದಕ್ಷಿಣ ಭಾರತದ ಭಾಗಗಳಲ್ಲಿ ವಿಕಾಸವಾದ ತಿಗಳಾರಿ ಲಿಪಿ ಎಂಬ ಬ್ರಾಹ್ಮಿ ಆಧಾರಿತ ಲಿಪಿಯನ್ನು ಉಪಯೋಗಿಸುತ್ತಿದರು. ತುಳುವ ಪ್ರದೇಶಗಳಲ್ಲಿ ಬಳಕೆಯಲ್ಲಿದ್ದ ಈ ಲಿಪಿಯನ್ನು ತುಳು ಲಿಪಿ ಎಂದು ಕರೆಯಲಾಗಿದೆ. ಈ ಲಿಪಿಯನ್ನು ಸಂಸ್ಕೃತ ದ ಶ್ಲೋಕಗಳನ್ನು ಬರೆದಿಟ್ಟುಕೊಳ್ಳಲು ಬಳಸುತಿದ್ದರು. ಆದರೆ ಅದರ ವ್ಯಾಪಕ ಬಳಕೆ ಇಲ್ಲದಿದ್ದ ಕಾರಣ ಕಾಲಕ್ರಮೇಣ ಲಿಪಿ ಬಳಕೆ ನಶಿಸಿ ಹೋಗಿದೆ. ಇತ್ತಿಚೆನ ದಿನಗಳಲ್ಲಿ ಹಳೆಯ ಈ ಲಿಪಿಯ ಪುನರುಜ್ಜೀವನಕ್ಕಾಗಿ ಹಲವಾರು ಪ್ರಯತ್ನಗಳು ನಡೆದಿವೆ. ಪುರಾತನ ತಿಗಳಾರಿ ಲಿಪಿ ಮಲೆಯಾಳಂ ಲಿಪಿಯನ್ನು ಹೋಲುತ್ತದೆ. ಪ್ರಸ್ತುತ ತುಳುಭಾಷೆಯನ್ನು ಬರೆಯಲು ಕನ್ನಡ ಲಿಪಿಯನ್ನು ಬಳಸುತ್ತಾರೆ. ತುಳುಭಾಷೆಯಲ್ಲಿ ರಚಿತವಾಗಿರುವ ಕೃತಿಗಳ ಲಭ್ಯತೆ ಕಡಿಮೆ ಇರುವುದರಿಂದ ತುಳು ಭಾಷೆಯ ಪ್ರಾಚೀನತೆಯನ್ನು ಅಂದಾಜು ಮಾಡುವುದು ಕಷ್ಟ. ಆದರೂ ತುಳು ಭಾಷೆಯ ಪ್ರಾಚೀನತೆಯನ್ನು ತುಳುವ ಜನ ಜೀವನದಲ್ಲಿ ಅಡಕವಾಗಿರುವ ವಿಶಿಷ್ಟ ಸಂಸ್ಕೃತಿ ಹಾಗೂ ಪಾಡ್ದನ ಎಂಬ ಜಾನಪದ ಸಾಹಿತ್ಯಗಳಿಂದ ನಿಷ್ಕರ್ಷೆ ಮಾಡಬಹುದು. ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ಬಹುಪಾಲು ಜನರು ತುಳು ಭಾಷೆ ಮಾತನಾಡುತ್ತಾರೆ. ಈ ಜಿಲ್ಲೆಗಳನ್ನು ಒಳಗೊಂಡ ಪ್ರದೇಶವನ್ನು ಚಾರಿತ್ರಿಕವಾಗಿ ತುಳುನಾಡು ಎಂದು ಕರೆಯಲಾಗುತ್ತದೆ. ಹಾಗೆಯೇ ಮುಂಬಯಿ ಪಟ್ಟಣ, ಗುಜರಾತ್ ರಾಜ್ಯದ ಕೆಲ ಭಾಗಗಳಲ್ಲಿ ತುಳುವರು ಇದ್ದಾರೆ. ಸುಮಾರು ೨ ದಶಲಕ್ಷ ಜನರು ತುಳು ಭಾಷೆ ಮಾತಾಡುತ್ತಾರೆ. ಪ್ರಮುಖ ಬರಹಗಳು ಮಾಧ್ವ ಮತದ ತಿಗಳಾರಿ ಸರ್ವಮೂಲ ಗ್ರಂಥಗಳು ತುಳು ಲಿಪಿಯಲ್ಲಿ ದೊರಕಿವೆ, ೭೦೦ ವರ್ಷಗಳ ಇತಿಹಾಸವಿರುವ ಈ ಗ್ರಂಥಗಳೇ ತುಳು ಭಾಷೆಯ ಮೂಲ ಲಿಪಿ ಹುಡುಕಲು ಸಹಾಯವಾಗಿವೆ, ಇದನ್ನು ಶ್ರೀ ಪಲಿಮಾರು ಮಠದ ಹೃಷಿಕೇಶ ತೀರ್ಥರು ಪ್ರಕಟಿಸಿದ ಸರ್ವಮೂಲ ಗ್ರಂಥಮಾಲಿಕೆ ಯಲ್ಲಿ ಕಾಣಬಹುದು. ಉಡುಪಿ ಜಿಲ್ಲೆಗೆ ಸೇರಿದ ಒಬ್ಬ ಬ್ರಾಹ್ಮಣ ತಿಗಳಾರಿ ಲಿಪಿಯನ್ನು ಬಳಸಿ 'ಭಾಗವತ'ವನ್ನು(ಅಪೂರ್ಣವಾಗಿ) ಬರೆದಿರುವ ಆಧಾರವಿದೆ. ಮಂದಾರ ಕೇಶವ ಭಟ್ಟರು 'ಮಂದಾರ ರಾಮಾಯಣ' ಎಂಬ ಆಧುನಿಕ ತುಳು ಮಹಾಕಾವ್ಯವನ್ನು ಬರೆ ದಿದ್ದಾರೆ.ತುಳುವಿನಲ್ಲಿ ನಂತರ ಬರೆದಿರುವ ಮಹನೀಯರಲ್ಲಿ ಅ.ಬಾಲಕೃಷ್ಣ ಶೆಟ್ಟಿ, ಕೆದಂಬಾಡಿ ಜತ್ತಪ್ಪ ರೈ, ಕಯ್ಯಾರ ಕಿಂಞಣ್ಣ ರೈ, ಡಾ.ಅಮೃತ ಸೋಮೇಶ್ವರ, ಪ್ರೊ.ಬಿ.ಎ.ವಿವೇಕ್ ರೈ, ಕೆ. ಚಿನ್ನಪ್ಪ ಗೌಡ, ಡಾ.ಶಿವರಾಮಶೆಟ್ಟಿ, ಪ್ರೊ. ಅಭಯಕುಮಾರ್, ಶ್ರೀಮತಿ ಜಾನಕಿ ಬ್ರಹ್ಮಾವರ,ನಾ.ದಾಮೋದರ ಶೆಟ್ಟಿ, ಡಾ.ಮಾಧವ ಪೆರಾಜೆ, ಡಾ.ಮಹಾಲಿಂಗ ಭಟ್, ಶ್ರೀ ಪ್ರಭಾಕರ ನೀರುಮಾರ್ಗ ಪ್ರಮುಖರು. ತುಳು ಭಾಷೆ ತುಳು ಭಾಷೆಯು ದ್ರಾವಿಡ ಭಾಷೆಗಳಲ್ಲಿ ಒಂದಾಗಿದೆ. ಅಲ್ಲದೆ ಭಾರತದ ಪ್ರಾಚೀನ ಭಾಷೆಗಳಲ್ಲೊಂದು ಎಂಬ ಸ್ಥಾನವನ್ನು ಪಡೆದಿದೆ. ತುಳು ಮಾತನಾಡುವ ಪ್ರದೇಶಗಳಲ್ಲಿ ದಕ್ಷಿಣದಿಂದ ಉತ್ತರಕ್ಕೆ ಮಾತನಾಡುವ ಶೈಲಿಯು ಬದಲಾಗುತ್ತದೆ. ಮಾತನಾಡುವ ಶೈಲಿಗೆ ಅನುಸಾರವಾಗಿ ತುಳು ಭಾಷೆಯನ್ನು ಮುಖ್ಯವಾಗಿ ೪ ವಿಧವಾಗಿ ವಿಂಗಡನೆ ಮಾಡಬಹುದು: - ಬ್ರಾಹ್ಮಣ, ಸಾಮಾನ್ಯ, ಜೈನ, ಹಾಗೂ ಬುಡಕಟ್ಟು. ಬ್ರಾಹ್ಮಣ : ಶಿವಳ್ಳಿ, ಪಧಾರ್ಥಿ ಮತ್ತು ಸ್ಥಾನಿಕ ಬ್ರಾಹ್ಮಣರು ಮಾತಾಡುವ ಶೈಲಿ ಜೈನ : ಉತ್ತರ ತುಳುನಾಡಿನ ಜೈನರು ಮಾತಾಡುವ ಶೈಲಿ ಸಾಮಾನ್ಯ : ತುಳುನಾಡಿನ ಹೆಚ್ಚಿನ ಜನರು ಮಾತಾಡುವ ಶೈಲಿ. ಈ ಶೈಲಿಯನ್ನು ವಾಣಿಜ್ಯ, ಕಲೆ, ಮತ್ತು ಸಾಮಾನ್ಯ ಬಳಕೆಯಲ್ಲಿ ಉಪಯೋಗಿಸುಲಾಗುತ್ತದೆ ಬುಡಕಟ್ಟು : ಬುಡಕಟ್ಟಿನ ಜನರು ಮಾತಾಡುವ ಶೈಲಿ. ಈ ಶೈಲಿಯು ಸಾಮಾನ್ಯ ಶೈಲಿಯನ್ನು ತುಂಬಾ ಹೋಲುತ್ತದೆ. ಭೌಗೋಳಿಕ ವಿತರಣೆ ಮಲಯಾಳಂ ಕೃತಿ ಕೇರಳೊತ್ಪತ್ತಿ , ಸಂಗಮ ಸಾಹಿತ್ಯದ ಕೆಲವು ಹಾಗೂ ತುಳು ಜನಪದ ಪಾಡ್ದನ ಹಾಡುಗಳ ಪ್ರಕಾರ, ಚಾರಿತ್ರಿಕವಾಗಿ ತುಳುನಾಡಿನ ವಿಸ್ತಾರವು ಕಾಸರಗೋಡಿನ ಚಂದ್ರಗಿರಿ ನದಿಯಿಂದ (ಈಗಿನ ಕೇರಳ) ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದವರೆಗೆ ಇತ್ತು ಎಂದು ತಿಳಿಯಲಾಗಿದೆ. ಆದರೆ ಈಗಿನ ತುಳುನಾಡು ದಕ್ಷಿಣ ಕನ್ನಡ ಹಾಗೂ ಉಡುಪಿ (ಕುಂದಾಪುರ ತಾಲೂಕು ಬಿಟ್ಟು) ಜಿಲ್ಲೆಗಳಿಗೆ ಹಾಗೂ ಕೇರಳ ದಲ್ಲಿರುವ ಕಾಸರಗೋಡು ಜಿಲ್ಲೆಗೆ ಸೀಮಿತವಾಗಿದ್ದರೂ, ಮಹಾರಾಷ್ಟ್ರದ ಮುಂಬಯಿ ಹಾಗೂ ಥಾಣೆಗಳಲ್ಲಿ ಬಹಳಷ್ಟು ತುಳುವರು ಇದ್ದಾರೆ. ಲಿಪಿ ಹಿಂದೆ ತುಳು ಬ್ರಾಹ್ಮಣರು ತುಳು ಭಾಷೆ ಬರೆಯಲು ತಿಗಳಾರಿ ಲಿಪಿಯನ್ನು ಉಪಯೋಗಿಸುತ್ತಿದ್ದರು. ಇದನ್ನೇ ತುಳು ಲಿಪಿ ಎಂದು ಪರಿಗಣಿಸಲಾಗಿದೆ. ಈ ಲಿಪಿಯನ್ನು ಸಂಸ್ಕೃತದ ಶ್ಲೋಕಗಳನ್ನು ಬರೆದಿಟ್ಟುಕೊಳ್ಳಲು ಉಪಯೋಗಿಸುತ್ತಿದ್ದರು. ತದನಂತರ, ತುಳುಲಿಪಿಯಲ್ಲಿ ಬರೆಯಲಾದ ಹಲವು ಗ್ರಂಥಗಳ ಹಸ್ತಪ್ರತಿಗಳು ಲಭಿಸಿವೆ. ಪ್ರಸ್ತುತವಾಗಿ ತುಳು ಬರೆಯಲು ವ್ಯಾಪಕವಾಗಿ ಕನ್ನಡ ಲಿಪಿಯನ್ನು ಬಳಸುತ್ತಾರೆ. ತುಳು ವಿಕಿಪೀಡಿಯಾ ಕೂಡಾ ಕನ್ನಡ ಲಿಪಿಯಲ್ಲಿದೆ. ಕಳೆದ ಕೆಲವು ವರ್ಷಗಳಿಂದ ಕರ್ನಾಟಕ ರಾಜ್ಯದ ಶಾಲೆಗಳಲ್ಲಿ ತುಳು ಲಿಪಿಗಳನ್ನು ಕಲಿಸಲಾಗುತ್ತಿದ್ದು, ಕೆಲವು ಸಂಸ್ಥೆ ಸಂಘಟನೆಗಳು, ತುಳು ಲಿಪಿ ಕಲಿಸುವ ಅಭಿಯಾನಗಳನ್ನು ಹಮ್ಮಿಕೊಳ್ಳುತ್ತಿದೆ. ವಿಶ್ವ ತುಳು ಸಮ್ಮೇಳನ ಮೊತ್ತ ಮೊದಲಿಗೆ ಮಂಗಳೂರಿನ ಪ್ರಸಿದ್ದ ವಕೀಲರಾದ ಶ್ರೀ ದಿವಂಗತ ಎಸ್.ಅರ್ ಹೆಗ್ಡೆಯವರು ಇವರು ೪.೧.೧೯೭೦ರಲ್ಲಿ ಮಂಗಳೂರು ತುಳುಕೂಟವನ್ನು ಸ್ಥಾಪಿಸಿದರು.ಈ ತುಳುಕೂಟದ ವತಿಯಿಂದ ೧೯೯೪ರಲ್ಲಿ ಮೂಲ್ಕಿಯಲ್ಲಿ ಪ್ರೂ. ಅಮೃತ ಸೋಮೇಶ್ವರವರ ಅಧ್ಯಕ್ಷತೆಯಲ್ಲಿ ಪ್ರಪ್ರಥಮ ವಿಶ್ವ ತುಳು ಸಮ್ಮೇಳನ ನಡೆಯಿತು. ಈ ವಿಶ್ವ ತುಳು ಸಮ್ಮೇಳನದಲ್ಲಿ ಸರ್ಕಾರದ ವತಿಯಿಂದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸುವಂತೆ ಸರ್ಕಾರವನ್ನು ಕೇಳುವ ನಿರ್ಣಯ ಕೈಗೊಳ್ಳಲಾಯಿತು. ತುಳುವರು ತುಳುಕೂಟ ಮತ್ತಿತರ ಸಂಘ ಸಂಸ್ಥೆಗಳ ನಿರಂತರ ಹೋರಾಟದ ಫಲವಾಗಿ ೧೯೯೪ ರಲ್ಲಿ ಶ್ರೀ ಎಂ. ವೀರಪ್ಪ ಮೊಯ್ಲ್ಲಿಯವರು ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಯಾಗಿದ್ದಾಗ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸ್ಥಾಪನೆಗೊಂಡಿತು. ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ.ಬಿ.ಎ.ವಿವೇಕ ರೈಯವರು ಮೊದಲ ಅಧ್ಯಕ್ಷರಾದರು ೨೦೦೯ ರ ಡಿಸೆಂಬರ್ ೧೦ ರಿಂದ ೧೩ ರ ವರೆಗೆ ವಿಶ್ವ ತುಳು ಸಮ್ಮೇಳನ ಉಜಿರೆಯಲ್ಲಿ ನಡೆಯಿತು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಸಮ್ಮೇಳನದ ಪ್ರಮುಖ ಆಯೋಜಕರಾಗಿದ್ದರು. ೩ ದಿನಗಳ ಕಾಲ ನಡೆದ ಸಮ್ಮೇಳನದಲ್ಲಿ ತುಳು ಗ್ರಾಮದ ಮಾದರಿಯನ್ನು ರಚಿಸಲಾಗಿತ್ತು. ತುಳು ಗ್ರಾಮದಲ್ಲಿ ೬೦ ವರ್ಷ ಹಿಂದೆ ತುಳುನಾಡಿನ ಹಳ್ಳಿಗಳು ಹೇಗೆ ಇದ್ದವು ಎಂಬ ಬಗ್ಗೆ ಕಟ್ಟಡಗಳು, ಗುತ್ತಿನಮನೆ, ದೇವಸ್ಥಾನ, ಭಜನಾ ಮಂದಿರ, ಬೀದಿ, ದೈವಸ್ಥಾನ, ನಾಗನಕಟ್ಟೆ , ದೋಣಿ ವಿಹಾರ, ಅವಲಕ್ಕಿ, ಕಬ್ಬಿನ ಗಾಣ, ಕಬ್ಬಿಣದ, ಮರದ ಕೆಲಸ, ಪಂಡಿತರ, ಪಟೇಲರ ಮನೆ ಮೊದಲಾದ್ದನ್ನು ನಿರ್ಮಿಸಲಾಗಿತ್ತು . ತುಳು ಸಿನಿಮಾ ೧೯೭೧ನೇ ಇಸವಿಯಲ್ಲಿ ತುಳು ಸಿನಿಮಾಲೋಕ ಉದ್ಘಾಟನೆಯಾಗಿ ಮೊದಲ ತುಳು ಸಿನಿಮಾ ಎನ್ನ ತಂಗಡಿ ಬಿಡುಗಡೆಯಾಯಿತು. ಮುಂದೆ ತುಳುವಿನಲ್ಲಿ ಸುಮಾರು ೪೦ ಸಿನಿಮಾಗಳು ತಯಾರಾದವು. ಎನ್ನ ತಂಗಡಿ. ದಾರೆದ ಬುಡೆದಿ. ಪಗೆತ್ತ ಪುಗೆ. ಬಿಸತ್ತಿ ಬಾಬು. ಉಡಲ್ದ ತುಡರ್. ಕೋಟಿ-ಚೆನ್ನಯ. ಕಾಸ್ದಾಯೆ ಕಂಡನಿ. ಯಾನ್ ಸನ್ಯಾಸಿ ಆಪೆ. ಏರ್ ಮಲ್ತಿನ ತಪ್ಪು. ಬಯ್ಯ ಮಲ್ಲಿಗೆ. ಸಾವಿರೋಡೋರ್ತಿ ಸಾವಿತ್ರಿ. ನ್ಯಾಯೋಗು ಜಿಂದಾಬಾದ್. ತುಳುನಾಡ ಸಿರಿ . ಬೊಳ್ಳಿದೋಟ. ಸಂಗಮ ಸಾಕ್ಷಿ. ಕರಿಯಣಿ ಕಟ್ಟಂದಿ ಕಂಡನಿ. ನ್ಯಾಯೋಗಾದ್ ಎನ್ನ ಬದುಕ್. ಬಾಗ್ಯವಂತೆದಿ. ಬದ್ಕರೆ ಬುಡ್ಲೆ. ದಾರೆದ ಸೀರೆ . ಪೆಟ್ಟಾಯಿ ಪಿಲಿ. ಬದುಕೊಂಜಿ ಕಬಿತೆ. ಸತ್ಯ ಓಲುಂಡು. ರಾತ್ರೆ ಪಗೆಲ್. ಬಂಗಾರ್ ಪಟ್ಲೆರ್. ಸೆಪ್ಟೆಂಬರ್-೮. ಬದ್ಕುದ ಬಿಲೆ. ಮಾರಿ ಬಲೆ . ಕಾಲ. ಒಂತೆ ಎಜ್ಜೆಸ್ಟ್ ಮಲ್ಪಿ. ತುಡರ್. ಕೋಟಿ-ಚೆನ್ನಯ -೨. ಕಡಲ ಮಗೆ . ಬಿರ್ಸೆ.. ದೇವೆರ್. ಕಂಚಿಲ್ದ ಬಾಲೆ. ಒರಿಯರ್ದೊರಿ ಅಸಲ್. ಬಂಗಾರ್ದ ಕುರಲ್. ಆಮೆಟ್ ಅಸಲ್ ಈಮೆಟ್ ಕುಸಲ್ ಸೋಂಪ ರಿಕ್ಷಾ ಡ್ರೈವರ್ ಪಕ್ಕಿಲು ಮೋಜಿ ಬರ್ಕೆ ನಿರೆಲ್ ಚಾಲಿ ಪೋಲಿಲು ರಂಗ್ ಮದಿಮೆ ಎಕ್ಕ ಸಕ ಬರ್ಕೆ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಚಂಡಿ ಕೋರಿ ಧಾಂಡ್ ಸೂಮ್ಬೆ ಸೂಪರ್ ಮರ್ಮಾಯೆ ಒರಿಯನ್ ತೂಂಡ ಒರಿಯಗಾಪುಜ್ಜಿ ರೈಟ್ ಬೊಕ್ಕ ಲೆಫ್ಟ್ ಕುಡ್ಲ ಕೆಫೆ ಬರ್ಸ ಶಟರ್ ದುಲಾಯಿ ರಂಬಾರೂಟಿ ಪಿಲಿಬೈಲ್ ಯಮುನಕ್ಕ ದಬಕ್ ದಬಾ ಐಸಾ ಮದಿಪು ಅರೆ ಮರ್ಲೆರ್ ಪತ್ತನಾಜೆ ಗುಡ್ಡೆದ ಭೂತ ಅರ್ಜುನ್ ವೆಡ್ಸ್ ಅಮೃತಾ ಏಸಾ ನೇಮದ ಬೂಳ್ಯ ಪತ್ತನಾಜೆ ಅಂಬರ್ ಕ್ಯಾಟರರ್ಸ್ ಬಿಡುಗಡೆ ಆಗದಿರುವ ಸಿನಿಮಾಗಳು ೪ ನಮ್ಮ ಭಾಗ್ಯ ಸರ್ಪ ಸಂಕಲೆ ತುಳು ಯಕ್ಷಗಾನ ಪೀಠಿಕೆ ಯಕ್ಷಗಾನದಲ್ಲಿ ಭಾಷೆ,ಪ್ರಸಂಗ ಮತ್ತು ವೇಷಭೂಷಣಗಳಲ್ಲಿ ವೈಶಿಷ್ಟ್ಯತೆಗಳನ್ನು ಮೈಗೂಡಿಸಿಕೊಂಡಿರುವ ತುಳು ಯಕ್ಷಗಾನ ಪರಂಪರೆಯನ್ನು ವಿದ್ವಾಂಸರು "ತುಳುತಿಟ್ಟು" ಎಂದು ಗುರುತಿಸಿಕೊಂಡಿದ್ದಾರೆ. ಇದು ತೆಂಕುತಿಟ್ಟು ಯಕ್ಷಗಾನದ ಪ್ರಭೇದವಾಗಿ ವ್ಯವಸಾಯಿ ಮೇಳವಾಗಿ ಬೆಳೆದು ಬಂತು.ತುಳು ಯಕ್ಷಗಾನವು ತುಳುನಾಡಿನಲ್ಲಿ ಉಗಮವಾದರೂ,ಅದರ ಮಾಧ್ಯಮ ಕನ್ನಡವೇ ಆಗಿದ್ದಿತು. ಹಿಂದಿನ ದಿನಗಳಲ್ಲಿ ಕನ್ನಡ ಭಾಷೆಯೇ ಪ್ರಧಾನವಾಗಿದ್ದರಿಂದ ತುಳು ಭಾಷೆಯ ಪ್ರಸಂಗಗಳು-ಪ್ರದಶ‌‌ನಗಳು ವಿಫುಲವಾಗಿ ಕಂಡು ಬರುತ್ತದೆ. ತುಳು ಯಕ್ಷಗಾನ ಬೆಳೆದು ಬಂದ ರೀತಿ ೧೮೮೭ರಲ್ಲಿ ಬಾಯಾರು ಪೆರುವಡಿ ಸಂಕಯ್ಯ ಭಾಗವತರು ರಚಿಸಿದ "ಪಂಚವಟಿ-ವಾಲಿಸುಗ್ರೀವೆರೆ ಕಾಳಗೊ" ಎಂಬುದು ತುಳು ಭಾಷೆಯಲ್ಲಿ ದೊರಕಿದ ಮೊದಲ ಉಪಲಬ್ದ ಪ್ರಸಂಗ ಕೃತಿ. ಅನಂತರ ಮೂವತ್ತರ ದಶಕದಲ್ಲಿ "ಕೃಷ್ಣ ಸಂಧಾನ","ಅಂಗದ ಸಂಧಾನ"ಮೊದಲಾದ ಪ್ರಸಂಗ ಕೃತಿಗಳು ರಚನೆಯಾದವು. ೧೯೨೯ರಲ್ಲಿ ಪಂದಬೆಟ್ಟು ವೆಂಕಟರಾಯರು ಕೋಟಿ-ಚೆನ್ನಯ ಎಂಬ ಅವಳಿ ಪುಣ್ಯಪುರುಷರ ಸಾಹಸಗಾಧೆಯನ್ನು ತುಳು ಯಕ್ಷಗಾನ ಪ್ರಸಂಗಕ್ಕೆ ಅಳವಡಿಸಿದ ಮೊದಲ ಪ್ರಯತ್ನವಾಗಿದೆ. ಪ್ರಾರಂಭದ ದಿನಗಳಲ್ಲಿ ಕನ್ನಡ ಯಕ್ಷಗಾನಗಳು ಜನಪ್ರೀಯಗೊಂಡರೂ ತುಳುನಾಡಿನ ಜನತೆ ತುಳು ಭಾಷೆಯ ಯಕ್ಷಗಾನಕ್ಕೆ ಒಲವು ತೋರಿಸಿದ್ದರ ಪರಿಣಾಮವಾಗಿ ಜಾನಪದ,ಐತಿಹಾಸಿಕ,ಕಾಲ್ಪನಿಕ ಪ್ರಸಂಗಗಳ ಟೆಂಟ್ ಮೇಳಗಳು ಹುಟ್ಟಿಕೊಂಡವು. ತುಳು ಯಕ್ಷಗಾನ ಪ್ರಸಂಗಗಳು ತುಳುನಾಡಸಿರಿ ಕಾಡಮಲ್ಲಿಗೆ ತುಳುನಾಡ ಬಲಿಯೇಂದ್ರ ಕೋಟಿ-ಚೆನ್ನಯ ನಾಗಸಂಪಿಗೆ ಬಹ್ಮಮೊಗೆರರು ಕೋಡ್ದಬ್ಬು ಕಲ್ಕುಡ-ಕಲ್ಲುಟಿ ಗೆಜ್ಜೆದ-ಪೂಜೆ ಅಮರ್ ಬೊಳ್ಳಿಲು ಬಾರಗ ಕಾಂತಬಾರೆ-ಬೂದಾಬಾರೆ ದೇವುಪೂಂಜ ಪ್ರತಾಪ ಬ್ರಹ್ಮ-ಬಲಾಂಡಿ ಸತ್ಯದಪ್ಪೆ ಚೆನ್ನಮ್ಮ ಬನತ್ತ ಬಂಗಾರ್ ಬನತ್ತ ಬೊಬ್ಬರ್ಯೆ ಕಚ್ಚೂರ ಮಾಲ್ದಿ ಬಾಲೆ ಭಾಗ್ಯವಂತೆ ಸಿರಿ ದೇವಿ ಮಹಾತ್ಮೆ ಬೊಳ್ಳಿದ ಬೊಲ್ಗುಡೆ ತುಳು ಯಕ್ಷಗಾನ ಮೇಳಗಳು ಶ್ರೀ ಸೋಮನಾಥೇಶ್ವರ ಮೇಳ ಇರಾ ಸುರತ್ಕಲ್ ಕನಾ‍ಟಕ ನಾಟಕ ಸಭಾ ಮಂಡಳಿ ಮಂಗಳೂರು ಶ್ರೀ ಮಂಜುನಾಥೇಶ್ವರ ಯಕ್ಷಗಾನ ಮಂಡಳಿ ಕದ್ರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಮಂಡಳಿ ಕುಂಬಳೆ ಬಪ್ಪನಾಡು ಮೇಳ ಸುಬ್ರಹ್ಮಣ್ಯ ಮೇಳ ಮಂಗಳಾದೇವಿ ಮೇಳ ಕುಂಟಾರು ಮೇಳ ಮಧೂರು ಮೇಳ ಪುತ್ತೂರು ಮೇಳ ಉಲ್ಲೇಖಗಳು ಹೊರಗಿನ ಸಂಪರ್ಕ TULU NADU (Facebook Page) ತುಳು ಭಾಷೆಯ ಬಗ್ಗೆ ಸಮಗ್ರ ಮಾಹಿತಿ ತುಳು ಸಾಹಿತ್ಯ ತುಳು ವಿಕಿಪೀಡಿಯ ಯುನಿಕೋಡ್‌ನಲ್ಲಿ ತುಳು ಸೇರಿಸುವ ಬಗ್ಗೆ ಭಾಷೆಗಳು ಭಾರತೀಯ ಭಾಷೆಗಳು ದ್ರಾವಿಡ ಭಾಷೆಗಳು ಕನ್ನಡ ಲಿಪಿಯಾಧಾರಿತ ಭಾಷೆಗಳು ತುಳು ನಾಡು
2094
https://kn.wikipedia.org/wiki/%E0%B2%97%E0%B3%81%E0%B2%9C%E0%B2%B0%E0%B2%BE%E0%B2%A4%E0%B3%8D
ಗುಜರಾತ್
ಗುಜರಾತ್ (ગુજરાત - ಗುಜರಾತಿ ಭಾಷೆಯಲ್ಲಿ ) ಭಾರತದ ಪ್ರಮುಖ ಕೈಗಾರಿಕೆಗಳನ್ನೊಳಗೊಂಡ ರಾಜ್ಯ. ಈ ರಾಜ್ಯ ಅರಬ್ಬೀ ಸಮುದ್ರ, ಪಾಕಿಸ್ತಾನದ ಸೀಮೆಗೆ ಸಮೀಪದಲ್ಲಿದೆ. ರಾಜ್ಯದ ರಾಜಧಾನಿ ಗಾಂಧಿನಗರ (ಗುಜರಾತ್). ಅಹ್ಮದಾಬಾದ್ ಗುಜರಾತಿನ ವಾಣಿಜ್ಯ ರಾಜಧಾನಿ. ಅರಬ್ಬೀ ಸಮುದ್ರದ ತೀರದಲ್ಲಿ, ಉ. ಅ. 20° 1’ - 24° 7’ ಮತ್ತು ಪು. ರೇ. 68° 4’ - 74° 4’ ನಡುವೆ ಇದೆ. ಉತ್ತರದಲ್ಲಿ ಪಾಕಿಸ್ತಾನ, ಈಶಾನ್ಯದಲ್ಲಿ ರಾಜಸ್ಥಾನ, ಪೂರ್ವದಲ್ಲಿ ಮಧ್ಯಪ್ರದೇಶ ಮತ್ತು ದಕ್ಷಿಣದಲ್ಲಿ ಮಹಾರಾಷ್ಟ್ರ ಪಶ್ಚಿಮ, ನೈರುತ್ಯ ಮತ್ತು ದಕ್ಷಿಣದಲ್ಲಿ ಅರಬ್ಬೀ ಸಮುದ್ರ ಮತ್ತು ಖಂಭತ್ ಹಾಗೂ ಕಚ್ ಖಾರಿ ಸುತ್ತುವರೆದಿವೆ. ಈ ರಾಜ್ಯದ ವಿಸ್ತೀರ್ಣ 1,96,024 ಚ.ಕಿಮೀ. ಜನಸಂಖ್ಯೆ 6,03,83,628 (2011).ಗುಜರಾತಿನ ಒಂದು ವೈಶಿಷ್ಟ್ಯವೆಂದರೆ ಅದರ ಕರಾವಳಿ ಭಾರತದ ಬೇರಾವ ರಾಜ್ಯಕ್ಕೂ ಇಷ್ಟು ಉದ್ದವಾದ ಸಮುದ್ರತೀರವಿಲ್ಲ. ಇದು ಗುಜರಾತಿನ ವಾಯುಗುಣ, ಆರ್ಥಿಕತೆ ಮತ್ತು ಸಾಮಾಜಿಕ ವ್ಯವಸ್ಥೆಗಳ ಮೇಲೆ ಬಹಳ ಹೆಚ್ಚಿನ ಪ್ರಭಾವ ಬೀರಿದೆ. ಭಾರತದ ಒಟ್ಟು ವಿಸ್ತೀರ್ಣದಲ್ಲಿ ಶೇ. 6.1 ರಷ್ಟಿರುವ ಈ ರಾಜ್ಯದ ಜನಸಂಖ್ಯೆ ಭಾರತದ್ದರ ಶೇ.4.8 ರಷ್ಟಿದೆ. ಭೂಲಕ್ಷಣ ಪ್ರಪಂಚದ ಎಂಟು ಸ್ಥಿರಭಾಗಗಳಲ್ಲಿ ಒಂದಾದ ಭಾರತ ಪರ್ಯಾಯದ್ವೀಪ ಭೂಇತಿಹಾಸದ ಯಾವ ಕಾಲದಲ್ಲೂ ಸಂಪುರ್ಣವಾಗಿ ಸಮುದ್ರಾಕ್ರಮಣಕ್ಕೆ ಒಳಪಟ್ಟಿರಲಿಲ್ಲ. ಜುರಾಸಿಕ್, ಕ್ರಿಟೇಷಸ್ ಮತ್ತು ತೃತೀಯ ಭೂಕಾಲ ಯುಗಗಳಲ್ಲಿ ಗುಜರಾತಿನ ಕೆಲವು ಭಾಗಗಳು ಮಾತ್ರ ಸಮುದ್ರಾಕ್ರಮಣಕ್ಕೆ ಒಳಪಟ್ಟಿದ್ದವು. ಆದ್ದರಿಂದ ಗುಜರಾತಿನ ಭೂಇತಿಹಾಸ ಈ ಕಾಲಗಳ ಶಿಲೆಗಳಿಂದ ಮಾತ್ರ ಪ್ರತಿನಿಧಿತವಾಗಿದೆ. ಇವನ್ನು ಹೀಗೆ ವರ್ಗೀಕರಿಸಬಹುದು. ತೃತೀಯ ಭೂಕಾಲ ಯುಗದ ಶಿಲಾವರ್ಗಗಳು - ಡೆಕ್ಕನ್ ಟ್ರ್ಯಾಪ್; ನರ್ಮದಾ ಕಣಿವೆಯ ಬಾಗ್ ಪದರಗಳು - ಕ್ರಿಟೇಷಸ್ ಅಂತ್ಯಕಾಲ; ಕಚ್ಛ್‌ ಪ್ರದೇಶದ ತೀರ ನಿಕ್ಷೇಪಗಳು - ಜುರಾಸಿಕ್ ಮಧ್ಯಕಾಲ ದಿಂದ ಕ್ರಿಟೇಷಸ್ ಆದಿಯವರೆಗೆ; ಚಾಂಪ್ನರ್ ಶಿಲಾವರ್ಗ - ಆರ್ಷೇಯ ಕಲ್ಪ. ಚಾಂಪ್ನರ್ ಶಿಲಾವರ್ಗ: ವಡೋದರಕ್ಕೆ ಸುಮಾರು 65ಕಿಮೀ ಪುರ್ವದಲ್ಲಿ ನೈಸ್ ಶಿಲೆಯಿಂದೊಡಗೂಡಿದ ಅತ್ಯಂತ ಪುರಾತನ ಕಾಲದ ಪದರಶಿಲೆಗಳು ಹೊರಕಂಡಿವೆ. ಡಬ್ಲ್ಯು. ಟಿ. ಬ್ಲ್ಯಾನ್ಫೋರ್ಡ ಎಂಬಾತ ಇವನ್ನು ಚಾಂಪ್ನರ್ ಶಿಲಾವರ್ಗ ಎಂದು ಕರೆದು, ಇವು ರಾಜಸ್ತಾನದ ಆರಾವಳಿ ಶಿಲಾವರ್ಗಕ್ಕೆ ಸಮಕಾಲೀನವಾದವುಗಳೆಂದು ಸ್ಥಾಪಿಸಿದ. ಚಾಂಪ್ನರ್ ಶಿಲಾವರ್ಗಕ್ಕೂ ಈಗ ಕರ್ನಾಟಕದಲ್ಲಿರುವ ಮಾದರಿ ಧಾರವಾಡ ಶಿಲಾವರ್ಗಕ್ಕೂ ಬಹಳ ಸಾಮ್ಯವಿರುವುದರಿಂದ, ಇವೆರಡು ಶಿಲಾವರ್ಗಗಳು ಡೆಕ್ಕನ್ ಟ್ರ್ಯಾಪಿನ ಕೆಳಗೆ ಒಂದಾಗಿವೆ ಎಂಬುದರಲ್ಲಿ ಸಂಶಯವಿಲ್ಲ. ಕಚ್ಛ್‌ ತೀರ ನಿಕ್ಷೇಪಗಳು: ವಿಂಧ್ಯನ್ ಕಾಲದಿಂದಲೂ ಸಮುದ್ರ ನಿಕ್ಷೇಪಗಳನ್ನೇ ಕಾಣದಿದ್ದ ಪರ್ಯಾಯ ದ್ವೀಪಭಾಗ ಜುರಾಸಿಕ್ ಮಧ್ಯಕಾಲದಲ್ಲಿ ಸಮುದ್ರಾಕ್ರಮಣಕ್ಕೆ ಒಳಪಟ್ಟಿತು. ಕಾಠಿಯಾವಾಡದ ಉತ್ತರಭಾಗ ಸಮುದ್ರದ ಅಡಿಯಲ್ಲಿ ಮುಳುಗಿ ಅಲ್ಲಿ ಸುಮಾರು 1829 ಮೀ ದಪ್ಪದ ನಿಕ್ಷೇಪಗಳು ಸಂಚಯನವಾಗಿವೆ. ಇವು ಪೂರ್ವ - ಪಶ್ಚಿಮವಾಗಿ ಹಬ್ಬಿರುವ ಮೂರು ಶೃಂಗಮಡಿಕೆಗಳಾಗಿ ಹೊರಕಂಡಿವೆ. ಈ ಶಿಲಾಪರಂಪರೆಯನ್ನು ಪಚಂ, ಚಾರಿ, ಕಟ್ರೋಲ್ ಮತ್ತು ಉಮಿಯ ಎಂದು ನಾಲ್ಕು ಭಾಗಗಳಾಗಿ ವಿಭಜಿಸಲಾಗಿದೆ. ಇದು ಜುರಾಸಿಕ್ ಯುಗದ ಬಾಕೋನಿಯನ್ ಕಾಲದಿಂದ ಕ್ರಿಟೇಷಸ್ ಯುಗದ ನಿಯೊಕೋಮಿಯನ್ ಅಥವಾ ಅಪ್ಸಿಯನ್ ಕಾಲದವರೆಗಿನ ಶಿಲಾನಿಕ್ಷೇಪಗಳಿಂದ ಕೂಡಿದೆ. ಈ ಶಿಲಾಸಮುದಾಯದ ಮೇಲೆ ಡೆಕ್ಕನ್ ಟ್ರ್ಯಾಪ್ ಅಥವಾ ಇಯೊಸೀನ್ ಯುಗದ ಶಿಲೆಗಳಿವೆ. ಪಚಂ ಶ್ರೇಣಿ ಕಚ್ ಖಾರಿಯಲ್ಲಿರುವ ಪಚಂ ದ್ವೀಪದಲ್ಲಿ ಹೊರಕಂಡಿರುವುದರಿಂದ ಈ ಹೆಸರು ಬಂದಿದೆ. ಈ ಶಿಲೆಗಳ ದಪ್ಪ ಸುಮಾರು 305 ಮೀ. ಭೂಜ್‍ಗೆ ಸುಮಾರು 49 ಕಿಮೀ. ವಾಯವ್ಯದಲ್ಲಿ ಚಾರಿ ಎಂಬ ಹಳ್ಳಿಯ ಹತ್ತಿರ ಪಚಂ ಶ್ರೇಣಿಗಿಂತ ಕಿರಿಯ ಶಿಲೆಗಳು ಹೊರಕಂಡಿವೆ. ಆದ್ದರಿಂದ ಇವನ್ನು ಚಾರಿ ಶ್ರೇಣಿ ಎಂದು ಹೆಸರಿಸಲಾಗಿದೆ. ಕಟ್ರೋಲ್ ಶಿಲಾಶ್ರೇಣಿ ಅನೇಕ ವಿಧದ ಮರಳುಶಿಲೆಗಳು ಮತ್ತು ಜೇಡುಶಿಲೆಗಳಿಂದಾಗಿದೆ. ಇವನ್ನು ಆರೋಹಣ ಕ್ರಮದಲ್ಲಿ ಕಂಟ್ಕೋಟ್ ಮರಳು ಶಿಲೆ, ಕಟ್ರೋಲ್ ಶಿಲೆ ಮತ್ತು ಗಾಜನ್ಸಾರ್ ಪದರಗಳಾಗಿ ವಿಂಗಡಿಸಿದೆ. ಇವು ಆರ್ಗೋವಿಯನ್ ಕಾಲದ ಅಂತ್ಯದಿಂದ ಪೋರ್ಟ್ ಲ್ಯಾಂಡಿಯನ್ ಕಾಲದವು. ಕಂಟ್ಕೋಟ್ ಮರಳು ಶಿಲೆ ವಾಗಡ್ ಸುತ್ತಮುತ್ತ ಹೊರಕಂಡಿದೆ. ಇದರಲ್ಲಿ ಎಪಿಮಾಯೈಟಿಸ್ ಟ್ರಾನ್ಸಿಯನ್ಸ್‌, ಪ್ರಾಸ್ಪೊದಿಸ್ಪಿಂಕ್ಟೆಸ್ ವಿರ್ಗುಲಾಯಿಡ್ಸ್‌, ಟಾರ್ಕುಟಿಸ್ಟಿಂಕ್ಟೆಸ್ ಟಾರ್ಕುಟಿಸ್ ಎಂಬ ಅವಶೇಷಗಳಿವೆ. ಕಟ್ರೋಲ್ ಶಿಲಾಪದರದ ಕೆಳ ಮತ್ತು ಮಧ್ಯಭಾಗಗಳಲ್ಲಿ ಒಪ್ಪಲೈಡ್ಸ್‌, ಕಟ್ರೋಲಿಸೆರಾಸ್, ಅಸ್ಟಿಡೊಸೆರಾಸ್, ಸ್ಟ್ರೆಬ್ಲೈಟಿಸ್ ಮತ್ತು ವಾಗೆನಿಯಗಳ ಅವಶೇಷಗಳಿವೆ. ಕಟ್ರೋಲ್ ಶಿಲಾಶ್ರೇಣಿಯ ಮೇಲ್ಭಾಗ ಅವಶೇಷರಹಿತ ವಾಗಿದೆ. ಗಾಜನ್ಸಾರ್ ಪದರಗಳಲ್ಲಿ ಗ್ಲೋಕಿಸೆರಾಸ್ ಮತ್ತು ಪಿಲ್ಲೊಸೆರಾಸ್ಗಳಿವೆ. ಈ ಶಿಲಾಶ್ರೇಣಿಗಿಂತ ಕಿರಿಯ ಶಿಲೆಗಳು ಭೂಜ್‍ಗೆ ವಾಯವ್ಯಕ್ಕೆ ಸುಮಾರು 80 ಕಿಮೀ ದೂರದಲ್ಲಿರುವ ಉಮಿಯ ಎಂಬ ಹಳ್ಳಿಯ ಹತ್ತಿರ ಉತ್ತಮವಾಗಿ ಹೊರಕಂಡಿವೆ. ಇವುಗಳಿಗೆ ಉಮಿಯ ಶ್ರೇಣಿ ಎಂದು ಹೆಸರು. ಇದರ ದಪ್ಪ ಸುಮಾರು 915 ಮೀಟರುಗಳು. ರಾಜನಾಥ್ ಎಂಬವರು ಈ ಶಿಲಾಶ್ರೇಣಿಯನ್ನು ಉಮಿಯ, ಉಕ್ರ ಮತ್ತು ಭೂಜ್ ಎಂದು ಮೂರು ಶಿಲಾಪಾದಗಳಾಗಿ ವಿಂಗಡಿಸಿದ್ದಾರೆ. ಉಮಿಯ ಪಾದದಲ್ಲಿ ಫಾಸಿಲ್ ಮರಳುಶಿಲೆ ಮತ್ತು ಜೇಡುಶಿಲೆಗಳು ಇವೆ. ಇವುಗಳ ಮಧ್ಯದ ಒಂದು ಪದರದಲ್ಲಿ ಟ್ರೈಗೋನಿಯ ಎಂಬ ಲೆಮಲಿಬ್ರ್ಯಾಂಕಿನ ಅವಶೇಷಗಳಿವೆ. ಇವು ಜುರಾಸಿಕ್ ಅಂತ್ಯದಿಂದ ಕ್ರಿಟೇಷಸ್ ಯುಗದ ಆದಿಕಾಲವನ್ನು ಸೂಚಿಸುತ್ತವೆ. ಉಮಿಯಪಾದದ ಮೇಲಿರುವ ಉಕ್ರಪಾದವೂ ಸಾಗರಜನಿತವಾದುದು. ಇದರಲ್ಲಿರುವ ಅಮ್ಮೊನೈಟುಗಳು ಕೂಡ ಇದೇ ಕಾಲವನ್ನು ಸೂಚಿಸುತ್ತವೆ. ಭೂಜ್ಪಾದದಲ್ಲಿ ಝಮಿಯ ಟೀಲೋಫಿಲ್ಲಂ ಮತ್ತು ಪಾಮೊಕ್ಸೈಲಾನ್ ಮುಂತಾದ ಸಸ್ಯಗಳು ಇವೆ. ಈ ಸಸ್ಯಗಳು ಜುರಾಸಿಕ್ ಅಂತ್ಯಕಾಲವನ್ನು ಸೂಚಿಸುತ್ತವೆ. ಆದರೆ ಇವುಗಳ ಕೆಳಗಿನ ಶಿಲೆಗಳು ಕ್ರಿಟೇಷಸ್ ಆದಿಕಾಲದವುಗಳಾದ್ದರಿಂದ ಇವು ಸಹ ಕ್ರಿಟೇಷಸ್ ಆದಿಕಾಲದವೆಂದು ನಿರ್ಧರಿಸಲಾಗಿದೆ. ಬಾಗ್ ಪದರಗಳು : ನರ್ಮದಾ ನದಿ ಕಣಿವೆಯಲ್ಲಿ ಗ್ವಾಲಿಯರ್ ಹತ್ತಿರವಿರುವ ಬಾಗ್ ಎಂಬ ಪಟ್ಟಣದಿಂದ ಪುರ್ವಪಶ್ಚಿಮವಾಗಿ ಕಾಠಿಯಾವಾಡದವರೆಗೆ ಪರಸ್ಪರ ಬೇರ್ಪಟ್ಟ ನಿಕ್ಷೇಪಗಳು ಅನೇಕ ಕಡೆ ರೂಪುಗೊಂಡಿವೆ. ಚೆರ್ಟ್ ಮತ್ತು ಚಿಪ್ಪುಗಳಿಂದ ಕೂಡಿದ ಅಶುದ್ಧ ಸುಣ್ಣ ಶಿಲೆ, ಬೆಣಚುಶಿಲೆ, ಮತ್ತು ಜೇಡುಶಿಲೆಗಳು ಇಲ್ಲಿನ ಪ್ರಮುಖ ಶಿಲೆಗಳು. ಇವು ಡೆಕ್ಕನ್ ಟ್ರ್ಯಾಪ್ ಶಿಲೆಗಳ ಕೆಳಗಿದ್ದು ಅವು ಶಿಥಿಲೀಕರಿಸಿದ ಮೇಲೆ ಹೊರಕಂಡಿವೆ. ಸಿನಮೇನಿಯನ್ ಕಾಲದಲ್ಲಿ ಟೆತಿಸ್ ಸಾಗರ ನರ್ಮದಾ ನದಿಕಣಿವೆಯನ್ನು ಆಕ್ರಮಿಸಿದಾಗ ಇವು ನಿಕ್ಷೇಪಗೊಂಡವು. ಇವುಗಳಲ್ಲಿ ಫಾಸಿಲುಗಳು ಸುಮಾರು 18-22 ಮೀ ನಷ್ಟು ಶಿಲೆಗಳಲ್ಲಿ ಮಾತ್ರ ಇವೆಯಷ್ಟೆ. ಇವನ್ನು ವರ್ಗೀಕರಿಸಲಾಗಿದೆ. ಬಾಗ್ ಪದರಗಳ ವಿಭಾಗ ನಿಮಾರ್ ಮರಳುಶಿಲೆ ಪಶ್ಚಿಮಕ್ಕೆ ಹೋದಹಾಗೆಲ್ಲ ದಪ್ಪವಾಗುತ್ತದೆ. ಇದು ಉತ್ತಮ ಕಟ್ಟಡ ಶಿಲೆ. ಇದನ್ನು ವಡೋದರ ಹತ್ತಿರದ ಸಾಂಘಿರ್ ಎಂಬಲ್ಲಿ ತೆಗೆಯುತ್ತಾರೆ. ಗಂಟು ಜೇಡು ಮಿಶ್ರ ಸುಣ್ಣಶಿಲೆ ಬಹುಗಟ್ಟಿ. ದಿಯೋಲ ಸುಣ್ಣ ಮಿಶ್ರ ಜೇಡು 3 ಮೀ ದಪ್ಪವಿದ್ದರೂ ಫಾಸಿಲುಗಳು ವಿಶೇಷವಾಗಿವೆ. ಇದರ ಮೇಲೆ ಹವಳದ ಸುಣ್ಣಶಿಲೆ ಇದೆ. ಇದರಲ್ಲಿ ಬ್ರಿಯೊಜೋ಼ವಗಳ ಅವಶೇಷಗಳು ಹೆಚ್ಚಾಗಿವೆ. ಬಾಗ್ ಪದರಗಳಲ್ಲಿರುವ ಫಾಸಿಲುಗಳು ಕ್ರಿಟೇಷಸ್ ಯುಗದ ಸಿನಮೇನಿಯನ್ ಕಾಲದಿಂದ ಸಿನೋನಿಯನ್ ಕಾಲದವರೆಗಿನ ಅವಧಿಯನ್ನು ಸೂಚಿಸುತ್ತವೆ. ಆದರೆ ಈ ಫಾಸಿಲುಗಳು ಸಮೀಪದ ತಿರುಚನಾಪಲ್ಲಿ ಶಿಲಾಸ್ತೋಮಗಳಲ್ಲಿನ ಸಮಕಾಲೀನ ಅವಶೇಷಗಳಿಗಿಂತ ತೀರ ಭಿನ್ನವಾಗಿವೆ; ಬದಲು ಅರೇಬಿಯ ಮತ್ತು ಯುರೋಪಿನ ಕ್ರಿಟೇಷಸ್ ಅವಶೇಷಗಳನ್ನು ಹೋಲುತ್ತವೆ. ಅಂದರೆ ಇವೆರಡು ಪ್ರದೇಶಗಳು ಬೇರೆ ಬೇರೆ ಸಾಗರಗಳ ಆಕ್ರಮಣಕ್ಕೆ ಒಳಪಟ್ಟಿದ್ದುದೇ ಅಲ್ಲದೆ, ಆ ಎರಡು ಸಾಗರಗಳು ಅಗಲವಾದ ಭೂಭಾಗದಿಂದ ಬೇರ್ಪಟ್ಟಿದ್ದುವೆಂದು ಸಹ ಅರಿವಾಗುತ್ತದೆ. ಒಂದು ಟೆತಿಸ್ ಸಾಗರದ ಶಾಖೆ, ಮತ್ತೊಂದು ದಕ್ಷಿಣ ಸಮುದ್ರದ ಶಾಖೆ. ಡೆಕ್ಕನ್ ಟ್ರ್ಯಾಪ್ : ಕ್ರಿಟೇಷಸ್ ಯುಗದ ತರುವಾಯ ಮಹಾ ಭೂ ಪ್ರಳಯವಾಯಿತು. ಆಗ ಮಹತ್ತರ ಬದಲಾವಣೆಗಳಾದವು: ಅಗಾಧ ಪ್ರಮಾಣದ ಭೂ ಚಲನೆಯಾಯಿತು. ಅದುವರೆಗೂ ಅಸ್ಥಿತ್ವದಲ್ಲಿದ್ದ ಗೊಂಡವಾನ ಭೂಭಾಗ ಭಾರತ ಪರ್ಯಾಯದ್ವೀಪ, ಆಸ್ಟ್ರೇಲಿಯ, ಆಫ್ರಿಕ, ದಕ್ಷಿಣ ಅಮೆರಿಕ ಮತ್ತು ಅಂಟಾರ್ಕ್ಟಿಕ್ ಎಂಬ ಖಂಡಗಳಾಗಿ ಬೇರ್ಪಟ್ಟಿತು. ಬೇರ್ಪಟ್ಟ ಭೂಭಾಗಗಳನ್ನೆಲ್ಲ ಹಿಂದೆಂದೂ ಕಂಡರಿಯದ (ನಿರ್ಜೀವಕಲ್ಪವನ್ನುಳಿದು) ಶಿಲಾರಸದ ಉಗುಳುವಿಕೆ ಆಯಿತು. ಆ ಕಾಲದಲ್ಲಿ ಹೊರಹೊಮ್ಮಿದ ಶಿಲಾರಸದಿಂದ ಡೆಕ್ಕನ್ ಟ್ರ್ಯಾಪ್ ಆಯಿತು. ಈ ಶಿಲಾವರ್ಗ ಗುಜರಾತಿನ ಬಹುಭಾಗವನ್ನು ಆಕ್ರಮಿಸಿದೆ. ಶಿಲಾರಸ ಹೊರಹೊಮ್ಮುವಿಕೆ ಸಾಮಾನ್ಯರೀತಿಯ ಅಗ್ನಿಪರ್ವತದಿಂದಾದುದಲ್ಲ. ನೂರಾರು ಮೀಟರ್ ಅಗಲ, ಅನೇಕ ಕಿಲೋಮೀಟರ್ ಉದ್ದದ ಕವಲಾಗಿದ್ದ ಬಿರುಕುಗಳ ಮೂಲಕ ಹೊರಹೊಮ್ಮುವಿಕೆ. ಇದು ಘನೀಭವಿಸಿರುವ ಬಿರುಕುಗಳು ಈಗಲೂ ಬರೂಚ್‍ನ ಸಮೀಪದ ರಾಜಪಿಪ್ಲ ಬೆಟ್ಟಗಳು, ಕಚ್ ಮತ್ತು ಕಾಠಿಯಾವಾಡ ಮತ್ತಿತರ ಪ್ರದೇಶಗಳಲ್ಲಿವೆ. ಇವುಗಳಿಗೆ ಡೈಕುಗಳೆಂದು ಹೆಸರು. ಸೌರಾಷ್ಟ್ರ ಪ್ರದೇಶದ ಅಮ್ರೋಲಿ ಮತ್ತು ಜಾಸ್ಡನ್ ಸುತ್ತಲಿರುವ ಡೈಕುಗಳು ಹೊರಗಾಮಿಯಾಗಿ ಹಂಚಿವೆ. ಗಿರ್ನಾರ್ ಮತ್ತು ಚೊಗತ್ ಚಮರ್ಡಿಗಳಲ್ಲಿ ನಿರ್ದಿಷ್ಟದ್ವಾರದ ಸಾಮಾನ್ಯ ಅಗ್ನಿಪರ್ವತಗಳಿವೆ. ಪುರ್ವಸೌರಾಷ್ಟ್ರ ಮತ್ತು ನರ್ಮದಾ ಕಣಿವೆಗಳಲ್ಲಿಯೂ ಡೈಕುಗಳ ಸಮೂಹಗಳಿವೆ. ಕಚ್ಚ್‌ ಮತ್ತು ಕಾಠಿಯಾವಾಡ ಪ್ರದೇಶದ ಡೆಕ್ಕನ್ ಟ್ರ್ಯಾಪಿನಲ್ಲಿ ಆಮ್ಲೀಯ, ಮಧ್ಯವರ್ತಿ ಮತ್ತು ಪ್ರತ್ಯಾಮ್ಲೀಯ ಶಿಲಾ ವಿಧಗಳಿವೆ. ಇವೆಲ್ಲ ಶಿಲಾರಸ ಪ್ರಭೇದಗೊಳ್ಳುವಿಕೆಯಿಂದಾದವು. ಗಿರ್ನಾರ್ ಮತ್ತು ಔಷಮ್ ಬೆಟ್ಟಗಳಲ್ಲಿ ಸಾಮಾನ್ಯ ಬೆಸಾಲ್ಟ್‌ ವಿಧವಲ್ಲದೆ ಲಿಂಬರ್ಗೈಟ್, ಆಂಡೆಸೈಟ್, ರೈಯೊಲೈಟ್, ಆಬ್ಸಿಡಿಯಾನ್, ಪಿಚ್ಸ್ಟೋನ್ ಮುಂತಾದ ಜ್ವಾಲಾಮುಖಜ ಶಿಲೆಗಳೂ ಲ್ಯಾಂಪ್ರೋಫೈರ್ ಆಲಿವೀನ್, ಗ್ರ್ಯಾಬ್ರೊ, ಮಾನ್ಜೊನೈಟ್, ನೆಫೆಲೀನ್ ಸಯನೈಟ್, ಗ್ರ್ಯಾನೋಫೈರ್ ಮುಂತಾದ ಮಧ್ಯಾಂತರ ಶಿಲೆಗಳೂ ಇವೆ. ನರ್ಮದಾ ಕಣಿವೆಯಲ್ಲಿ ಡೆಕ್ಕನ್ ಟ್ರ್ಯಾಪ್ ಶಿಲೆ ಬಾಗ್ ಪದರಗಳ ಮೇಲೆ ಅನನುರೂಪವಾಗಿರುವುದನ್ನೂ ಸೂರತ್ ಮತ್ತು ಭಡೋಚ ಪ್ರದೇಶದಲ್ಲಿ ಡೆಕ್ಕನ್ ಟ್ರ್ಯಾಪ್ ಮೇಲೆ ನಮ್ಮುಲಿಟಿಕ್ ಸುಣ್ಣಶಿಲೆ ಅನನುರೂಪತೆಯಿಂದ ನಿಕ್ಷೇಪಗೊಂಡಿರುವುದನ್ನೂ ಬ್ಲ್ಯಾನ್ ಫೋರ್ಡ್ ಗುರುತಿಸಿದ (1879). ಕಚ್ಛ್‌ ಪ್ರದೇಶದಲ್ಲಿ ಡೆಕ್ಕನ್ ಟ್ರ್ಯಾಪ್ ಶಿಲೆ ಜುರಾಸಿಕ್ ಕಾಲದ ತೀರನಿಕ್ಷೇಪಗಳ ಮೇಲೆ ಮತ್ತು ನಮ್ಮುಲಿಟಿಕ್ ಸುಣ್ಣಶಿಲೆಯ ಕೆಳಗಿರುವುದನ್ನೂ ವರದಿ ಮಾಡಿದ. ಆದ್ದರಿಂದ ಟ್ರ್ಯಾಪ್ ಶಿಲೆ ಮಧ್ಯ ಕ್ರಿಟೇಷಸ್ ಕಾಲದಿಂದ ಅಂತ್ಯ ಕ್ರಿಟೇಷಸ್ ಕಾಲದ್ದಾಗಿರಬೇಕೆಂದು ಆತನ ಅಭಿಪ್ರಾಯ. ತೃತೀಯ ಭೂಕಾಲಯುಗದ ನಿಕ್ಷೇಪಗಳು : ಸೂರತ್ , ಭಡೋಚ, ನರ್ಮದಾ ಕಣವೆ ಪ್ರದೇಶಗಳಲ್ಲಿ ಇಯೋಸೀನ್ ಕಾಲದ ನಮ್ಮುಲಿಟಿಕ್ ಸುಣ್ಣಶಿಲೆ ಎರಡು ಕಡೆಗಳಲ್ಲಿ ಹೊರಕಂಡಿದೆ. ಇವೆರಡರ ಮಧ್ಯ ಕಿಮ್ ನದಿಯ ಮೆಕ್ಕಲು ನಿಕ್ಷೇಪವಾಗಿದೆ. ಇವೆರಡರಲ್ಲಿ ಕಿಮ್ ಮತ್ತು ನರ್ಮದಾಗಳ ನಡುವೆ ಇರುವುದು ದೊಡ್ಡದು. ಇದರ ಉದ್ದ 48ಕಿಮೀ. ಅಗಲ ಸು. 19ಕಿಮೀ. ಇನ್ನೊಂದು ತಪತಿ ನದಿಯ ಉತ್ತರಕ್ಕೆ 16 ಕಿಮೀ ವಿಸ್ತರಿಸಿದೆ. ಇದರ ಅಗಲ 24 ಕಿಮೀ. ಇವು ಲಾಕಿ ಮತ್ತು ಕಿರ್ತಾರ್ ಶಿಲಾವರ್ಗಗಳಿಗೆ ಸಮದೂಗುತ್ತವೆ. ಈ ಶಿಲೆಗಳ ಮೇಲೆ ಕಾಕಿ ಬಣ್ಣದ ಜೇಡುಶಿಲೆಗಳಿವೆ. ಇವುಗಳ ಮಧ್ಯೆ ಜೇಡು ಮತ್ತು ಸುಣ್ಣಮಿಶ್ರ ಜೇಡು ಪದರಗಳಿವೆ. ಗುಜರಾತಿನಲ್ಲಿ ಇದೇ ಕಾಲದ ಶಿಲೆಗಳು ಮರಳು ಶಿಲೆ, ನೊರಜುಗಳು ಮತ್ತು ಜೇಡುಶಿಲೆಗಳಿಂದ ಕೂಡಿ 1220 - 1525 ಮೀಟರುಗಳಷ್ಟು ದಪ್ಪ ರೂಪುಗೊಂಡಿವೆ. ಇವು ನಾರಿ ಮತ್ತು ಗಾಜ್ (ಆಲಿಗೋಸೀನ್ ಮತ್ತು ಮಯೋಸೀನ್ ಆದಿಕಾಲ) ಶಿಲಾವರ್ಗಗಳಿಗೆ ಸರಿದೂಗುತ್ತವೆ. ಇವುಗಳಲ್ಲಿ ಪೊರಮಿನಿಫೆರಗಳ ಅವಶೇಷಗಳು ಅಧಿಕವಾಗಿವೆ. ಇವು ತೈಲಭರಿತ ಶಿಲೆಗಳು. ಭೂಜ್, ಅಂಕಲೇಶ್ವರ್ ಮುಂತಾದ ಕಡೆಗಳಲ್ಲಿ ತೈಲಬಾವಿಗಳಿವೆ. ಕ್ಯಾಂಬೆ ಮತ್ತು ರಾಜಪಿಪ್ಲಗಳಲ್ಲಿ ಗುಂಡುಶಿಲೆಗಳಲ್ಲಿರುವ ಜಾಸ್ಪರಿನಿಂದ ಸಾಧಾರಣ ರತ್ನ ಶಿಲೆಗಳನ್ನು ತಯಾರಿಸಲಾಗುತ್ತಿದೆ. ಸೌರಾಷ್ಟ್ರದ ಅತ್ಯಂತ ಪಶ್ಚಿಮಭಾಗದಲ್ಲಿ ಗಾಜ್ ಕಾಲದ ಶಿಲೆಗಳ ಮೇಲೆ ಜಿಪ್ಸಂನಿಂದ ಕೂಡಿದ ಜೇಡು ಮತ್ತು ಪೊರಮಿನಿಫೆರಗಳಿಂದ ಕೂಡಿದ ಸುಣ್ಣಶಿಲೆಗಳಿವೆ. ಇವಕ್ಕೆ ದ್ವಾರಕಾಪದರಗಳೆಂದು ಹೆಸರು. ಇವು ಮಯೋಸೀನ್ ಯುಗದ ಮಧ್ಯ ಮತ್ತು ಅಂತ್ಯಕಾಲದವು. ಕ್ಯಾಂಬೆ ಖಾರಿಯಲ್ಲಿರುವ ಪಿರಾಂನಲ್ಲಿ ಮಧ್ಯಶಿವಾಲಿಕ್ ಕಾಲದ ಶಿಲೆಗಳಿವೆ. ಇವುಗಳಲ್ಲಿ ಸಸ್ತನಿಗಳ ಅವಶೇಷಗಳಿವೆ. ಅಹಮದಾಬಾದಿನ ಸಮೀಪದಲ್ಲಿರುವ ತಗ್ಗುಪ್ರದೇಶದಲ್ಲಿ ನೆರಿತಿಯಂ, ಪೊಟಮೈಡಿಸ್ಗಳ ಅವಶೇಷಗಳಿರುವ ನಿಕ್ಷೇಪಗಳಿವೆ. ಆದ್ದರಿಂದ ಈ ಪ್ರದೇಶ ಪ್ಲೀಸ್ಟೊಸೀನ್ ಕಾಲದಲ್ಲಿ ಸಮುದ್ರ ಅಳಿವೆಯಾಗಿತ್ತೆಂದು ಭಾವಿಸಬಹುದು. ಕಾಠಿಯಾವಾಡ ಪುರ್ವಭಾಗದಲ್ಲಿ ಮಿಲಿಯೊಲೈಟ್ ಪೊರಮಿನಿಫೆರಗಳಿಂದ ಕೂಡಿದ ವರ್ತಮಾನಕಾಲದ ಸುಣ್ಣಶಿಲೆ ಇದೆ. ಇದಕ್ಕೆ ಪೋರ್ಬಂದರ್ ಶಿಲೆ ಎಂದು ಹೆಸರು. ಈ ಪ್ರದೇಶ ಇತ್ತಿಚೇಗೆ ಮೇಲೆದ್ದಿರುವುದರ ಕುರುಹು ಈ ಶಿಲೆ. ರಾಜಪುತಾನ ಮರುಭೂಮಿ ನೈಋತ್ಯದಲ್ಲಿ ಒಂದು ವಿಶಾಲವಾದ ತಗ್ಗುಭೂಮಿಯೊಂದಿಗೆ ಸೇರಿಕೊಳ್ಳುತ್ತದೆ. ಇದಕ್ಕೆ ಕಚ್ಛಿನ ರಣ್ ಪ್ರದೇಶ ಎಂದು ಹೆಸರು. ವರ್ಷದ ಕೆಲವು ದಿವಸಗಳಲ್ಲಿ ಇದು ಕೆಸರು ಪ್ರದೇಶವಾಗಿದ್ದು, ಬೇಸಗೆಯಲ್ಲಿ ಒಣಗಿರುತ್ತದೆ. ಹಿಂದೆ ಇದು ಅರಬ್ಬೀ ಸಮುದ್ರದ ಒಂದು ಕೋವೆಯಾಗಿತ್ತು. ಅನೇಕ ಚಿಕ್ಕ ನದಿಗಳು ಮೆಕ್ಕಲನ್ನು ತಂದು ಇದರಲ್ಲಿ ತುಂಬಿ ಕೋವೆಯನ್ನು ಮುಚ್ಚಿವೆ. ಮೇಲ್ಮೈಲಕ್ಷಣ ಗುಜರಾತ್ ರಾಜ್ಯವನ್ನು ಸ್ಥೂಲವಾಗಿ ಐದು ಭಾಗಗಳಾಗಿ ವಿಂಗಡಿಸಬಹುದು : ತೀರದ ತಗ್ಗುನೆಲ, ರಣ್ ಪ್ರದೇಶ ಮತ್ತು ಒಳನಾಡಿನ ಸರೋವರಗಳು; ಗುಜರಾತಿನ ಮೈದಾನ; ಸೌರಾಷ್ಟ್ರ ಪ್ರಸ್ಥಭೂಮಿ; ಬೆಟ್ಟಗಳಂಚಿನ ಬರಡು ನೆಲಪಟ್ಟಿ; ಬೆಟ್ಟಗಳ ಪ್ರದೇಶ, ತೀರದ ತಗ್ಗುನೆಲ ಸಾಮಾನ್ಯವಾಗಿ ಜವುಗಿನಿಂದ ಕೂಡಿದ್ದು; ಸಮುದ್ರತಳದಿಂದ ಈಚೆಗೆ ಮೇಲೆದ್ದ ಈ ಪ್ರದೇಶದ ಜಲೋತ್ಸಾರಣ ಇನ್ನೂ ಕ್ರಮಬದ್ಧವಾಗಿಲ್ಲ. ಇಲ್ಲಿಯ ಅನೇಕ ನದಿ ತೊರೆಗಳು ಬಲು ಸಣ್ಣವು. ಕಚ್ಛಿಗೆ ಉತ್ತರದಲ್ಲೂ ಕಚ್ಛಿನ ಮತ್ತು ಗುಜರಾತಿನ ಮುಖ್ಯ ಭೂಮಿಯ ನಡುವೆಯೂ ಇರುವ ರಣ್ಗಳೂ ಕರಾವಳಿಯ ಜವುಗು ನೆಲದಂತೆ ಉದ್ಭವವಾದಂಥವು. ಕಚ್ಛ್‌ ರಣದ ವಿಸ್ತೀರ್ಣ 11,270 ಕಿಮೀ. ಚಿಕ್ಕ ರಣ್ ಕಿರಿದು. ಇದರ ವಿಸ್ತೀರ್ಣ 4,000 ಚ. ಕಿಮೀ ಗಿಂತ ಹೆಚ್ಚಿಲ್ಲ. ಮಳೆಯಿಲ್ಲದಾಗ ಇವೆರಡೂ ಪ್ರದೇಶಗಳೂ ಒಣನೆಲಗಳಾಗಿರುತ್ತವೆ. ಮಳೆಗಾಲದಲ್ಲಿ ಜಲೋತ್ಸಾರಣ ಕ್ರಿಯೆ ಸರಿಯಾಗಿ ನಡೆಯದೆ ಇವು ಜಲಭರಿತವಾಗುತ್ತವೆ. ಕರಾವಳಿಯ ಜವುಗು ನೆಲಕ್ಕೂ ಒಳನಾಡಿನ ಪ್ರಸ್ಥಭೂಮಿ ಮತ್ತು ಪರ್ವತಗಳಿಗೂ ನಡುವೆ ಗುಜರಾತಿನ ಮೈದಾನ ಹಬ್ಬಿದೆ. ಇದು ಸಾಬರ್ಮತೀ, ಮಾಹೀ, ನರ್ಮದಾ, ತಾಪಿ ಮತ್ತು ಅವುಗಳ ಉಪನದಿಗಳಿಂದ ಕೂಡಿದ್ದು. ಮಧ್ಯಭಾರತದ ಎತ್ತರದ ನೆಲದಿಂದ ಥಟ್ಟನೆ ಕೆಳಕ್ಕೆ ಇಳಿಯುವ ನದಿಗಳು ಇಲ್ಲಿ ನಿಧಾನವಾಗಿ, ಅಂಕುಡೊಂಕಾಗಿ, ಅಲ್ಲಲ್ಲಿ ನಿಂತು ಸಾಗುತ್ತವೆ. ನದಿಗಳು ತಂದುಹಾಕಿದ ಮೆಕ್ಕಲು ಮಣ್ಣಿನಿಂದ ಮೈದಾನ ಆವೃತವಾಗಿದೆ. ಇಲ್ಲಿಯ ಮಣ್ಣು ವೈವಿಧ್ಯಮಯ. ಸೌರಾಷ್ಟ್ರ ಪ್ರಸ್ಥಭೂಮಿ 75 ಮೀ ನಿಂದ 300 ಮೀ ವರೆಗೆ ಎತ್ತರವಾಗಿದೆ. ಪಶ್ಚಿಮ ಭಾರತದ ಬಹುಭಾಗವನ್ನು ಒಮ್ಮೆ ಆವರಿಸಿದ್ದ ಲಾವದ ಉಳಿಕೆಯ ನೆಲವಿದು. ಕವಿಚಿಟ್ಟ ಸಕ್ಕರೆ ಪೊಟ್ಟಣದ ರೀತಿಯಲ್ಲಿ ಪ್ರಸ್ಥಭೂಮಿ ಸ್ವಲ್ಪ ಸ್ವಲ್ಪವಾಗಿ ಮೇಲೇರಿ, ಮಧ್ಯ ಭಾಗದಲ್ಲಿ ಬೆಟ್ಟಗುಡ್ಡಗಳಾಗಿ ಪರಿಣಮಿಸಿದೆ. ಇದರ ಉತ್ತರದಲ್ಲಿ ಮಂಡ ಬೆಟ್ಟಗಳೂ ದಕ್ಷಿಣದಲ್ಲಿ ಗಿರ್ ಬೆಟ್ಟಗಳೂ ಇವೆ. ಇವೆರಡನ್ನೂ ಕೂಡಿಸುವ ಕಿರಿದಾದ ಪ್ರದೇಶ ಈ ಪ್ರಸ್ಥಭೂಮಿಯ ಉಳಿದ ಭಾಗಕ್ಕಿಂತ ಎತ್ತರವಾದ್ದು. ಪ್ರಸ್ಥಭೂಮಿಯ ಒಂದು ಮುಖ್ಯ ವೈಶಿಷ್ಟ್ಯವೆಂದರೆ 60 ಮೀ ವರೆಗೆ ಅಗಲವಾಗಿರುವ, 60 ಕಿಮೀ ವರೆಗಿನ ಉದ್ದದ ಡೈಕುಗಳು. ನದಿಗಳು ಮಧ್ಯದ ಎತ್ತರದ ನೆಲದಲ್ಲಿ ಹುಟ್ಟಿ ಎಲ್ಲ ದಿಕ್ಕುಗಳಲ್ಲೂ ಹರಿಯುತ್ತವೆ. ಮಚ್ಫೂ, ಆಜಿ, ಭಾದರ್, ಶತ್ರುಂಜೀ, ಮತ್ತು ಭಗವಾ ಇಲ್ಲಿಯ ಮುಖ್ಯ ನದಿಗಳು. ಕಚ್ಛಿನ ಪ್ರಸ್ಥಭೂಮಿ ಪ್ರದೇಶ ಪುರ್ವದಿಂದ ಪಶ್ಚಿಮದ ಕಡೆಗೆ ಇಳಿಜಾರಾಗಿದೆ. ಇಲ್ಲಿಯ ನದಿಗಳು ಕಚ್ಛ್‌ ಖಾರಿಯೊಳಕ್ಕೆ ಹರಿಯುತ್ತವೆ. ಬೆಟ್ಟಗಳ ಸಾನುಪ್ರದೇಶ 75 ಮೀ. - 150 ಮೀ, ಎತ್ತರದ ಕಿರು ಅಗಲದ ನಡುಪಟ್ಟಿ. ನರ್ಮದಾ ತಾಪಿಗಳ ನಡುವೆ ಕಿರಿದಾಗಿರುವ ಈ ಪ್ರದೇಶ ನರ್ಮದೆಯಿಂದ ಉತ್ತರಕ್ಕೆ 25 ಕಿಮೀ. ಮತ್ತು ಇನ್ನೂ ಹೆಚ್ಚಿನ ಅಗಲವಾಗುತ್ತದೆ. ಈ ಇಳಿಜಾರು ನೆಲದ ಪ್ರದೇಶದಲ್ಲಿ ಮಣ್ಣು ಶೇಖರವಾಗಲು ಅವಕಾಶವಿಲ್ಲ. ಇದು ನುರುಜು ಕಲ್ಲಿನಿಂದ ಕೂಡಿದೆ. ಅಲ್ಲಲ್ಲಿ ಮಾತ್ರ ಹುಲ್ಲೂ ಕಾಡೂ ಉಂಟು. ಬೆಟ್ಟಗಳ ಪ್ರದೇಶದಲ್ಲಿ ವಾಸಿಸುವ ಕೆಲವು ಹಿಂದುಳಿದ ಬುಡಕಟ್ಟುಗಳ ಜನ ಇಲ್ಲಿ ಬೆಳೆಯುವ ಸಾವೆ, ರಾಗಿ ಮುಂತಾದ ಧಾನ್ಯ ವಿನಾ ಬೇರೇನೂ ಇಲ್ಲಿ ಬೆಳೆಯುವುದಿಲ್ಲ. ಗುಜರಾತಿನ ಬೆಟ್ಟಗಳ ಪ್ರದೇಶ ಕಚ್ಛ್‌, ಕಾಠಿಯಾವಾಡ್ಗಳ ಮಧ್ಯಭಾಗಗಳಲ್ಲೂ ರಾಜ್ಯದ ಪೂರ್ವ ಎಲ್ಲೆಯಲ್ಲೂ ಇದೆ. ಇದು 300 ಮೀ.ಗಿಂತ ಎತ್ತರದ ಪ್ರದೇಶ. ಇದು ಬಹುತೇಕ ಶಿಲಾಮಯ; ಹೆಚ್ಚು ಮಳೆ ಬೀಳುವಲ್ಲಿ ಕಾಡುಗಳಿವೆ. ಇದು ದೀರ್ಘಕಾಲದ ಸವೆತಕ್ಕೆ ಒಳಗಾಗಿದೆ. ಕಚ್ಛಿನ ಬೆಟ್ಟಗಳು ಪುರ್ವಪಶ್ಚಿಮವಾಗಿ ಹಬ್ಬಿವೆ. ಇವುಗಳಲ್ಲಿ ಅತ್ಯಂತ ಎತ್ತರವಾದ್ದು ಧಿನೋಧರ್ (388 ಮೀ.) ಇತರ ಬೆಟ್ಟಗಳು ಉಮಿಯ (274 ಮೀ.), ಝುರಾ (316 ಮೀ.), ವರಾದ್ (344 ಮೀ.) ಮತ್ತು ರತ್ನಾಲ್ (349 ಮೀ.). ಕಾಠಿಯಾವಾಡದ ಉನ್ನತ ಪ್ರದೇಶದ ಉತ್ತರ ಭಾಗದಲ್ಲಿ ಮಂಡ ಬೆಟ್ಟಗಳೂ ದಕ್ಷಿಣದಲ್ಲಿ ಗಿರ್ ಶ್ರೇಣಿಯೂ ಇವೆ. ದಕ್ಷಿಣದ ಶ್ರೇಣಿ ಹೆಚ್ಚು ಎತ್ತರ. ಇದರ ಉನ್ನತ ಬೆಟ್ಟ ಸರ್ಕಲ (643 ಮೀ.). ನಂದಿವೇಲ 529 ಮೀ. ಎತ್ತರವಾಗಿದೆ. ಗಿರ್ ಶ್ರೇಣಿ ಅರಣ್ಯಮಯ. ಇಲ್ಲಿ ಸಿಂಹಗಳಿವೆ (ನೋಡಿ- ಗಿರ್ ಅರಣ್ಯ). ಗುಜರಾತಿನ ಅತ್ಯುನ್ನತ ಬೆಟ್ಟ ಗಿರ್ನಾರ್ . ಇದರ ಗರಿಷ್ಠ ಎತ್ತರ 1,117 ಮೀ. (ಗೋರಖ್ ನಾಥ್ ಶಿಖರ). ಇದು ಜುನಾಗಢದ ಬಳಿ ಇದೆ. ಪೋರ್‍ಬಂದರ್‍ಗೆ ಪುರ್ವದಲ್ಲಿರುವ ಬಾರ್ದ, ಅದಕ್ಕೂ ಪುರ್ವದ ಅಲೆಚ್ ಇವು ಇತರ ಬೆಟ್ಟಗಳು. ಸೂರತ್ ಕೋಟೆ ರಾಜ್ಯದ ಉತ್ತರ, ಈಶಾನ್ಯ ಮತ್ತು ಪುರ್ವ ಗಡಿಗಳನ್ನು ಬಳಸಿರುವ ಶ್ರೇಣಿಗಳು ಉನ್ನತವಾದವು. ಇವು ಗಡಿಯಾಚೆಗಿನ ಶ್ರೇಣಿಗಳ ಅಂಚಿನ ಭಾಗಗಳು. ಸಬರಕಂತಾ, ಪಂಚಮಹಲ, ವಡೋದರ, ಸೂರತ್ ಮತ್ತು ಭಡೋಚ ಜಿಲ್ಲೆಗಳಲ್ಲಿ ಇವು ಚಾಚಿವೆ. ಉತ್ತರದ ಬೆಟ್ಟಗಳು ಆರಾವಳಿಯ ಭಾಗ. ಇವು ಹಿಮ್ಮತ ನಗರದಿಂದ ಉತ್ತರಕ್ಕೆ ಕ್ರಮಕ್ರಮವಾಗಿ ಏರುತ್ತ ನಡೆಯುತ್ತವೆ. ರಾಜ್ಯದಿಂದ ಹೊರಕ್ಕೆ ಅಬು ಶಿಖರದ ಗುಂಪಿನಲ್ಲಿ ಗುರುಶಿಖರ ಅತ್ಯಂತ ಎತ್ತರವಾದ್ದು. ಸಸ್ಯ ರಹಿತವಾದ ಈ ಪ್ರದೇಶದ ಮುಖ್ಯ ಬೆಟ್ಟಗಳು ರತನ್ಮಲ್ ಮತ್ತು ಪಾವಗಢ ಪಶ್ಚಿಮ ಭಾಗದಲ್ಲಿ ಬನಾಸ್ ನದಿಯೂ ಪುರ್ವದಲ್ಲಿ ಸಾಬರ್ಮತಿಯೂ ಹುಟ್ಟುತ್ತವೆ. ಛೋಟಾ ಉದಯಪುರಕ್ಕೆ ದಕ್ಷಿಣಕ್ಕಿರುವ ಶ್ರೇಣಿ ನರ್ಮದಾ ಮತ್ತು ತಾಪಿ ನದಿಗಳ ಉಗಮದ ಪ್ರದೇಶ. ನರ್ಮದೆಯ ಉತ್ತರದ ಪ್ರದೇಶ ವಿಂಧ್ಯಪರ್ವತಗಳ ಭಾಗ. ಅದಕ್ಕೆ ವನಮಾಲಾ ಬೆಟ್ಟಗಳೆಂಬ ಹೆಸರಿದೆ. ನರ್ಮದೆಗೆ ದಕ್ಷಿಣದಲ್ಲಿರುವುದು ಸಾತ್ಪುರ ಬೆಟ್ಟಗಳ ಪಶ್ಚಿಮದ ಚಾಚು. ಇದು ರಾಜಪಿಪ್ಲ ಎನಿಸಿಕೊಂಡಿದೆ. ತಾಪಿಗೆ ದಕ್ಷಿಣದ್ದು ಸಹ್ಯಾದ್ರಿಯ ಅಂಚು. ಇಲ್ಲಿಂದ ಹಲವು ಸಣ್ಣ ನದಿಗಳು ಹರಿದು ಬಂದು ನೆಟ್ಟಗೆ ಸಮುದ್ರ ಸೇರುತ್ತವೆ. ಇವುಗಳ ಪೈಕಿ ಪುರ್ಣಾ,ಅಂಬಿಕಾ, ಪಾರ್ ಮತ್ತು ದಮಣಗಂಗಾ ಮುಖ್ಯವಾದವು. ಗುಜರಾತಿನ ಸಹಜ ಜಲೋತ್ಸಾರಣ ವ್ಯವಸ್ಥೆ ಏಕಮುಖವಾದ್ದಲ್ಲ. ಕಚ್ಚಿನಲ್ಲಿ ನದಿಗಳು ಮಧ್ಯದ ಎತ್ತರ ಪ್ರದೇಶದಿಂದ ಉತ್ತರಕ್ಕೂ ದಕ್ಷಿಣಕ್ಕೂ ಹರಿಯುತ್ತವೆ. ದಕ್ಷಿಣಕ್ಕೆ ಹರಿಯುವ ನದಿಗಳಲ್ಲಿ ಮುಖ್ಯವಾದವು ಮತೀ, ನಯೀರಾ, ಕನಕಮತೀ ಮತ್ತು ರುಕ್ಮಮತೀ. ಇವಕ್ಕೆ ಉಪನದಿಗಳು ಹೆಚ್ಚಾಗಿಲ್ಲ. ಪ್ರತಿಯೊಂದು ತೊರೆಯೂ ರಣನಲ್ಲೋ ಕಚ್ಛ್‌ ಖಾರಿಯಲ್ಲೋ ಕೊನೆಗೊಳ್ಳುತ್ತದೆ. ನದಿಗಳು ಬೇಸಗೆಯಲ್ಲಿ ಒಣಗಿಹೋಗುತ್ತವೆ; ಮಳೆಗಾಲದಲ್ಲಿ ತುಂಬಿ ಹರಿಯುತ್ತವೆ. ಸೌರಾಷ್ಟ್ರದಲ್ಲಿ ಮಧ್ಯದ ದಿಣ್ಣೆನೆಲದಿಂದ ಎಲ್ಲ ದಿಕ್ಕುಗಳಿಗೂ ನದಿಗಳು ಪ್ರವಹಿಸುತ್ತವೆ. ಭಾದರ್ ಅತ್ಯಂತ ಉದ್ದವಾದ ನದಿ (260 ಕಿಮೀ). ಇದು ಪಶ್ಚಿಮಕ್ಕೆ ಹರಿದು ಪೋರ್ಬಂದರಿನ ಬಳಿಯ ನವೀಬಂದರಿನಲ್ಲಿ ಅರಬ್ಬೀ ಸಮುದ್ರವನ್ನು ಸೇರುತ್ತದೆ. ಶತ್ರುಂಜೀ, ಮಚ್ಫೂ ಮತ್ತು ಆಜೀ ಇತರ ಮುಖ್ಯ ನದಿಗಳು. ಶತ್ರುಂಜೀ ನದಿ ಗಿರ್ ಶ್ರೇಣಿಯಲ್ಲಿ ಉಗಮಿಸಿ ಪುರ್ವಾಭಿಮುಖವಾಗಿ ಹರಿದು ಸುಲ್ತಾನ್ಪುರದಲ್ಲಿ ಕ್ಯಾಂಬೇ ಖಾರಿಯನ್ನು ಸೇರುತ್ತದೆ. ಮಚ್ಫೂ ಮತ್ತು ಆಜೀ ನದಿಗಳು ಅನುಕ್ರಮವಾಗಿ ಚಿಕ್ಕ ರಣ್ ಮತ್ತು ಕಚ್ಛ್‌ ಖಾರಿಯನ್ನು ಸೇರುತ್ತವೆ. ಇವುಗಳಲ್ಲದೆ ಹಲವಾರು ಸಣ್ಣ ಹೊಳೆಗಳು ಸೌರಾಷ್ಟ್ರದ ಕರಾವಳಿಯಲ್ಲಿ ಹರಿಯುತ್ತವೆ. ಕಚ್ಛ್‌ ಖಾರಿ ಮತ್ತು ಅರಬ್ಬೀ ಸಮುದ್ರದ ಕರಾವಳಿಗಳೇ ಅಲ್ಲದೆ ಕ್ಯಾಂಬೇ ಖಾರಿಯ ಕರಾವಳಿಯಲ್ಲಿ ಕೂಡ ಜಲೋತ್ಸಾರಣ ಸಮರ್ಪಕವಾಗಿಲ್ಲದೆ ನೀರು ನಿಂತು ಜವುಗುಂಟಾಗಿದೆ. ಗುಜರಾತ್ ಮೈದಾನದ ನದಿಗಳು ದೂರದ ಬೆಟ್ಟಗಳಲ್ಲಿ ಹುಟ್ಟಿ ಹರಿದುಬರುತ್ತವೆ. ಬನಾಸ್, ಸರಸ್ವತಿ ಮತ್ತು ರೂಪೆನ್ ನದಿಗಳು ಚಿಕ್ಕ ರಣ್ ಅನ್ನು ಸೇರುತ್ತವೆ. ಉಳಿದವು ಸಮುದ್ರ ಸೇರುವುದು ಕ್ಯಾಂಬೇ ಖಾರಿಯಲ್ಲಿ. ಚಿಕ್ಕ ರಣ್ ಸೇರುವ ನದಿಗಳು ಬೇಸಗೆಯಲ್ಲಿ ಒಣಗಿರುತ್ತವೆ. ಬೆಟ್ಟದಿಂದ ಹೊತ್ತು ತಂದ ಮಣ್ಣನ್ನು ಹೊರಲಾರದೆ ಮೈದಾನದಲ್ಲಿ ಬಿಟ್ಟು ಹೊರಳುತ್ತವೆ. ಇವುಗಳ ಪಾತ್ರಗಳು ಬಲು ವಿಶಾಲ. ಸಾಬರ್ಮತಿಯ ಉದ್ದ 300 ಕಿಮೀ. ಅಹಮದಾಬಾದಿನಿಂದ ಮುಂದಕ್ಕೆ ನದಿಯ ಪಾತ್ರ ಪದೇ ಪದೇ ಬದಲಾಗುತ್ತಿರುವುದುಂಟು. ಮಾಹೀನದಿ 500 ಕಿಮೀ, ಉದ್ದವಾಗಿದೆ. ಅದು ಗುಜರಾತಿನಲ್ಲಿ 180 ಕಿಮೀ.ಗಿಂತಲೂ ಉದ್ದವಾಗಿ ಹರಿದು ಸಮುದ್ರ ಸೇರುತ್ತದೆ. ಸಾಬರ್ಮತಿ ಮತ್ತು ಮಾಹೀ, ಇವೆರಡೂ ನದಿಗಳ ಉಪನದಿಗಳು ಇವುಗಳ ಎಡ ದಂಡೆಗಳಲ್ಲಿ ಬಂದು ಸೇರುತ್ತವೆ. ಗುಜರಾತಿನ ಅತ್ಯಂತ ಮುಖ್ಯ ನದಿಗಳು ನರ್ಮದಾ ಮತ್ತು ತಾಪಿ. ಗುಜರಾತಿನಲ್ಲಿ ನರ್ಮದಾ ನದಿ ಹರಿಯುವ ದೂರ 150 ಕಿಮೀ. ಇದು ಭಡೋಚದ ಬಳಿ ಕ್ಯಾಂಬೇ ಖಾರಿಯನ್ನು ಸೇರುತ್ತದೆ. ಓರ್ಸಂಗ್, ಕರ್ಜನ್, ಅಮರಾವತಿ, ಭೂಖಿ ಇವು ನರ್ಮದೆಯ ಮುಖ್ಯ ಉಪನದಿಗಳು. ಸಮುದ್ರ ಸಂಗಮದ ಕಡೆಯಿಂದ ಮೇಲಣ ನೂರು ಕಿಮೀ.ಗಳ ದೂರ ಇದು ಗುಜರಾತಿನ ಅತ್ಯಂತ ಫಲವತ್ತಾದ ಮೈದಾನದ ಮೂಲಕ ಹರಿಯುತ್ತದೆ. ನದೀಪಾತ್ರ ಬದಲಿಸಿದ್ದರ ಪರಿಣಾಮವಾಗಿ, ಇದರಲ್ಲಿ ಕೆಲವು ದ್ವೀಪಗಳು ಸಂಭವಿಸಿವೆ. ಭಡೋಚದಿಂದ ಮೇಲಕ್ಕೆ ಸು. 23 ಕಿಮೀ ದೂರದಲ್ಲಿರುವ ಶುಕ್ಲತೀರ್ಥ, ನದೀಮುಖಜ ಭೂಮಿಯಲ್ಲಿರುವ ಆಲಿಯ ಮುಖ್ಯವಾದವು. ತಾಪೀ ನದಿ ನರ್ಮದೆಗಿಂತ ಚಿಕ್ಕದಾದರೂ ಗುಜರಾತಿನಲ್ಲಿ ಇದರ ಹರಿವಿನ ಉದ್ದ ನರ್ಮದೆಯದಕ್ಕಿಂತ ಹೆಚ್ಚು. ಗುಜರಾತಿನಲ್ಲಿ ಅತಿ ಹೆಚ್ಚು ಮಳೆಯಾಗುವ ಪ್ರದೇಶ ಇದರ ಜಲಾನಯನ ಭೂಮಿಯಾದ್ದರಿಂದ ನೀರಾವರಿ ಮತ್ತು ವಿದ್ಯುತ್ತಿನ ದೃಷ್ಟಿಯಲ್ಲಿ ಇದರ ವಿಭವ ಅಧಿಕ. ಪುರ್ವದ ಬೆಟ್ಟಸೀಮೆಯನ್ನು ಕಕ್ರ ಪಾರದ ಬಳಿ ಬಿಟ್ಟು 100 ಕಿಮೀ ದೂರ ಸಾಗಿ ಸೂರತ್ತಿನಿಂದ ಮುಂದೆ ಇದು ಸಮುದ್ರವನ್ನು ಕೂಡಿಕೊಳ್ಳುತ್ತದೆ. ಇದರ ಪಾತ್ರ ನರ್ಮದೆಯದರಷ್ಟು ವಿಶಾಲವಲ್ಲ. ಈ ನದಿಯ ಕೆಳಭಾಗದ ನೆಲ ಹತ್ತಿ ಬೆಳೆಯಬಲ್ಲ ಫಲವತ್ತಾದ ಕಪ್ಪು ಮಣ್ಣಿನಿಂದ ಕೂಡಿದೆ. ಒಟ್ಟಿನಲ್ಲಿ ದಕ್ಷಿಣ ಗುಜರಾತಿನ ನದಿಗಳು ಸಮಾನಾಂತರಗಳಲ್ಲಿ ಹರಿದು ಸಮುದ್ರ ಸೇರುತ್ತವೆ. ಸಾತ್ಪುರಾ ಮತ್ತು ಪಶ್ಚಿಮ ಘಟ್ಟಗಳ ಸಣ್ಣ ಚಾಚುಗಳು ಈ ನದಿಗಳು ಪರಸ್ಪರ ಕೂಡದಂತೆ ಪ್ರತ್ಯೇಕಿಸಿವೆ. ನರ್ಮದಾ, ಕಿಂ, ತಾಪಿ, ಪೂರ್ಣಾ, ಅಂಬಿಕಾ, ಪಾರಾ ಮತ್ತು ದಮಣಗಂಗಾ - ಇವು ಮುಖ್ಯ ನದಿಗಳು. ಸಮುದ್ರದ ಭರತದಿಂದಾಗಿ ಇವುಗಳ ಮುಖಭಾಗಗಳಲ್ಲಿ ಉಪ್ಪು ನೀರು ಒಳಗೆ ನುಗ್ಗುತ್ತದೆ. ಆದ್ದರಿಂದ ಈ ನದಿಗಳ ತಳಭಾಗದ ಬಳಿ ಇರುವ ಪಟ್ಟಣಗಳಿಗೆ ಇವುಗಳ ನೀರು ಕುಡಿಯಲು ಉಪಯುಕ್ತವಾಗಿಲ್ಲ. ಕರಾವಳಿಯ ಬಳಿ ನೆಲ ಬಹಳ ತಗ್ಗಾಗಿರುವುದರಿಂದ ಜಲೋತ್ಸಾರಣಕ್ಕೆ ತಡೆಯುಂಟಾಗಿದೆ. ವಾಯುಗುಣ ಉತ್ತರದಲ್ಲಿ ರಾಜಸ್ತಾನದಿಂದ ದಕ್ಷಿಣದಲ್ಲಿ ಕೊಂಕಣ ಸೀಮೆಯ ವರೆಗೆ ಹಬ್ಬಿರುವ ಗುಜರಾತು ಅತಿ ಹೆಚ್ಚಿನ ಮಳೆ ಪ್ರದೇಶದಿಂದ ಮರುಭೂಮಿಯ ವರೆಗಿನ ನಾನಾ ವಾಯುಗುಣಗಳಿಂದ ಕೂಡಿದ ಭಾಗಗಳನ್ನೊಳಗೊಂಡಿದೆ. ರಾಜ್ಯದ ದಕ್ಷಿಣ ಭಾಗದಲ್ಲಿ 2,000 ಮಿಮೀ ಗಳಷ್ಟು ಮಳೆಯಾದರೆ, ಅತ್ಯಂತ ಉತ್ತರದಲ್ಲಿ, ಬನಾಸ್ಕಾಂತ ಜಿಲ್ಲೆಯ ಕೆಲವು ಭಾಗಗಳಲ್ಲಿ, 300 - 400 ಮಿಮೀ ಗಳಿಗಿಂತ ಹೆಚ್ಚು ಮಳೆಯಿಲ್ಲ. ಇಡೀ ರಾಜ್ಯ ಮಾನ್ಸೂನ್ ವಲಯದಲ್ಲಿದೆ. ಜೂನ್ ನಡುಗಾಲದಿಂದ ಅಕ್ಟೋಬರ್ ನಡುಗಾಲದವರೆಗೆ ಮಳೆ - ನೈಋತ್ಯ ಮಾನ್ಸೂನಿನಿಂದ. ಚಳಿಗಾಲದಲ್ಲಿ ಹವೆ ಶುಷ್ಕವಾಗಿಯೂ ಹಿತವಾಗಿಯೂ ಇರುತ್ತದೆ. ಆದರೆ ಉತ್ತರ ಭಾರತದಲ್ಲಿ ಬೀಸುವ ಶೀತಮಾರುತಗಳು ಗುಜರಾತನ್ನೂ ಒಮ್ಮೊಮ್ಮೆ ಪ್ರವೇಶಿಸುವುದುಂಟು. ವರ್ಷದಲ್ಲಿ ಜನವರಿ ಅತ್ಯಂತ ಶೀತಮಾಸ. ನವೆಂಬರಿನ ಮಧ್ಯದಿಂದ ಫೆಬ್ರವರಿಯ ಮಧ್ಯದವರೆಗೆ ಚಳಿಗಾಲ. ಅಲ್ಲಿಂದ ಮುಂದೆ ಉಷ್ಣತೆ ಏರುತ್ತ ಸಾಗಿ, ಮೇ ತಿಂಗಳಲ್ಲಿ ಗರಿಷ್ಠವಾಗುತ್ತದೆ. ನೈಋತ್ಯ ಮಾನ್ಸೂನಿನ ಆಗಮನದಿಂದಾಗಿ ಜೂನ್ ತಿಂಗಳು ಥಟ್ಟನೆ ತಂಪಾಗುತ್ತದೆ. ಆದರೆ ಮುಖ್ಯವಾಗಿ ಕರಾವಳಿಯಲ್ಲಿ ವಾತಾವರಣದ ತೇವದಿಂದಾಗಿ ಹವೆ ಅಷ್ಟೇನೂ ಹಿತಕರವಾಗಿರುವುದಿಲ್ಲ. ಚಳಿಗಾಲವೇ ಹೆಚ್ಚು ಚೈತನ್ಯದಾಯಕ ಕಾಲ. ರಾಜ್ಯದ ಕೆಲವು ಭಾಗಗಳಲ್ಲಿ ಮೇ ತಿಂಗಳಲ್ಲಿ ಉಷ್ಣತೆ 45.0 ಸೆಂ. ಮುಟ್ಟುವುದುಂಟು. ರಾಜ್ಯದ ಬಹುಭಾಗ 35.0 ಮತ್ತು 42.50 ಸೆಂ. ಸಮಶಾಖರೇಖೆಯ ನಡುವೆ ಬರುತ್ತದೆ. ಕಚ್ಛ್‌, ಸೌರಾಷ್ಟ್ರಗಳ ಕರಾವಳಿಯಲ್ಲಿ ಉಷ್ಣತೆ ಕನಿಷ್ಠ. ಇದು ಕಡಲಿನ ಪ್ರಭಾವ. ಸಮುದ್ರದ ಗಾಳಿ ಒಳನಾಡಿನಲ್ಲಿ 30 - 40 ಕಿಮೀವರೆಗೆ ಬೀಸುವುದುಂಟು. ಜನವರಿಯಲ್ಲಿ ಎಲ್ಲೂ ಗರಿಷ್ಠ ಉಷ್ಣತೆ 30.0 ಸೆಂ.ನ್ನು ದಾಟುವುದಿಲ್ಲ. ದಕ್ಷಿಣಕ್ಕೆ ಬಂದಂತೆ ಉಷ್ಣತೆ ಅಧಿಕವಾಗುತ್ತದೆ. ಗುಜರಾತಿನಲ್ಲಿ ಮಳೆಯ ಪರಿಮಾಣ ಒಂದೆಡೆಯಿಂದ ಇನ್ನೊಂದೆಡೆಗೆ ತೀವ್ರವಾಗಿ ವ್ಯತ್ಯಾಸವಾಗುತ್ತದೆ. ದಕ್ಷಿಣದಲ್ಲಿರುವ ಬಲ್ಸಾರ್ ಜಿಲ್ಲೆಯಲ್ಲಿ 2,000 ಮಿಮೀ. ಮಳೆ. ಉತ್ತರಕ್ಕೆ ಹೋದಂತೆ ಇದು ಥಟ್ಟನೆ ಇಳಿಯುತ್ತದೆ. ಕೇವಲ 100 ಕಿಮೀ. ಉತ್ತರದಲ್ಲೆ (ಉದಾ : ಸೂರತ್) ಇದು 1,040 ಮಿಮೀ. ಅಲ್ಲಿಂದ ಮುಂದಕ್ಕೆ ಕ್ರಮಕ್ರಮವಾಗಿ ಕಡಿಮೆಯಾಗುತ್ತದೆ. ಸೌರಾಷ್ಟ್ರದಲ್ಲಿ 500 ಮಿಮೀ.ಗಿಂತ ಕಡಿಮೆ ಮಳೆ. ಗಿರ್ನಾರಿನಲ್ಲಿ ಮಾತ್ರ 700 ಮಿಮೀ. ಮಳೆಯಾಗುತ್ತದೆ. ಅದು ಹಸಿರು ತುಂಬಿದ ಪ್ರದೇಶ. ಕಚ್ಛ್‌ ಅರೆ - ಮರುಭೂಮಿ. ಅಲ್ಲಿ ಬಹುಭಾಗದಲ್ಲಿ 400 ಮಿಮೀ.ಗಿಂತ ಕಡಿಮೆ ಮಳೆಯಾಗುತ್ತದೆ. ಭುಜನಲ್ಲಿ ಕೇವಲ 340 ಮಿಮೀ. ಗುಜರಾತಿನ ಬಯಲುಸೀಮೆಯಲ್ಲಿ ಉತ್ತರಕ್ಕೆ ಹೋದಂತೆ ಮಳೆ ಕಡಿಮೆ. ವಡೋದರದಲ್ಲಿ 910 ಮಿಮೀ. ಅಹಮದಾಬಾದಿನಲ್ಲಿ 730 ಮಿಮೀ. ಭಾವನಗರದಲ್ಲಿ 500 ಮಿಮೀ. ದೀಸದಲ್ಲಿ 60 ಮಿಮೀ. ಎಲ್ಲೆಲ್ಲಿ ಬೆಟ್ಟಗಳಿವೆಯೊ ಅಲ್ಲಿ ನೆರೆಯ ನೆಲದ್ದಕ್ಕಿಂತ ಹೆಚ್ಚು ಮಳೆಯಾಗುತ್ತದೆ. ಬನಾಸ್ಕಂಟಾದಲ್ಲಿ ಆರಾವಳಿ ಮತ್ತು ಅಬು ಶ್ರೇಣಿಗಳ ನೆರೆಯ ಪ್ರದೇಶದಲ್ಲಿ 800 ಮಿಮೀ ಗಿಂತ ಹೆಚ್ಚು ಮಳೆಯಾಗುತ್ತದೆ. ಮಳೆಯ ದೃಷ್ಟಿಯಿಂದ ಗುಜರಾತ್ ರಾಜ್ಯದ ಮುಖ್ಯ ವಲಯಗಳು ಇವು : ವರ್ಷಕ್ಕೆ 1,000 ಮಿಮೀ ಗಿಂತ ಹೆಚ್ಚು ಮಳೆಯಾಗುವ ಪ್ರದೇಶಗಳು - ಬಲ್ಸಾರ್, ಡಾಂಗ್ಸ್‌ ಜಿಲ್ಲೆಗಳು, ರಾಜಪಿಪ್ಲಾ ಬೆಟ್ಟವೂ ಸೇರಿದಂತೆ ಭಡೋಚ ಜಿಲ್ಲೆಯ ಪೂರ್ವಭಾಗ; ವರ್ಷಕ್ಕೆ 800 - 1,000 ಮಿಮೀ ಮಳೆಯಾಗುವ ಪ್ರದೇಶಗಳು - ವಡೋದರ, ಪಂಚಮಹಲ್, ಖೇಡಾ ಜಿಲ್ಲೆಗಳು, ಅಹಮದಾಬಾದಿನ ಒಂದು ಭಾಗ; ವರ್ಷಕ್ಕೆ 400 - 800 ಮಿಮೀ ಮಳೆ ಬೀಳುವ ಪ್ರದೇಶಗಳು - ಸೌರಾಷ್ಟ್ರ, ಅಹಮದಾಬಾದಿನಿಂದ ಉತ್ತರಕ್ಕಿರುವ ಗುಜರಾತಿನ ಭಾಗ; ವರ್ಷಕ್ಕೆ 400 ಮಿಮೀ ಗಿಂತ ಕಡಿಮೆ ಮಳೆಯಾಗುವ ಪ್ರದೇಶಗಳು - ಕಚ್ಛ್‌, ಸಬರಕಂಟಾ ಜಿಲ್ಲೆಯ ಪಶ್ಚಿಮ ಭಾಗ. ಸ್ವಾಭಾವಿಕ ಸಸ್ಯಸಂಪತ್ತು ಗುಜರಾತಿನ ಸಸ್ಯಸಂಪತ್ತು ಮಳೆಗೆ ಅನುಸಾರವಾಗಿ ವ್ಯತ್ಯಾಸಗೊಳ್ಳುತ್ತದೆ. ಸಾಕಷ್ಟು ಮಳೆಯಾಗಿಯೂ ಕೃಷಿಗೆ ಉಪಯೋಗವಿಲ್ಲದ ಪ್ರದೇಶಗಳಲ್ಲಿ ಕಾಡುಗಳು ಇವೆ. ಗುಜರಾತಿನಲ್ಲಿ ಮೈದಾನಕ್ಕಿಂತ ಬೆಟ್ಟಗಳ ಪ್ರದೇಶದಲ್ಲಿ ಉತ್ತರಕ್ಕಿಂತ ದಕ್ಷಿಣದಲ್ಲಿ ಮಳೆ ಹೆಚ್ಚಾಗಿರುವುದರಿಂದ ರಾಜ್ಯದ ಆಗ್ನೇಯ ಭಾಗದ ಮತ್ತು ಸೌರಾಷ್ಟ್ರದ ಬೆಟ್ಟಗಳಲ್ಲಿ ಕಾಡುಗಳು ಸಾಂದ್ರಿಕರಿಸಿವೆ. ಕಚ್ಛಿನ ಬೆಟ್ಟಗಳು ಉತ್ತರದಲ್ಲಿರುವುದರಿಂದಲೂ ಮಳೆ ಮಾರುತಗಳಿಗೆ ಹೆಚ್ಚಿನ ಅಡಚಣೆ ಒಡ್ಡದಿರುವುದರಿಂದಲೂ ಅಲ್ಲಿ ಕಾಡುಗಳಿಲ್ಲ. ಗುಜರಾತಿನ ಶೇ. 8.99 ಪ್ರದೇಶ ಅರಣ್ಯಗಳಿಂದ ಆವೃತವಾಗಿದೆ. ಪ್ರತಿಯೊಂದು ಜಿಲ್ಲೆಯಲ್ಲೂ ಕಾಡಿನ ಪ್ರದೇಶ ಅಲ್ಪಸ್ವಲ್ಪವಾದರೂ ಇದ್ದೇ ಇರುವುದಾದರೂ ಆರ್ಥಿಕ ದೃಷ್ಟಿಯಿಂದ ಮುಖ್ಯವಾದ ಜಿಲ್ಲೆಗಳು ಇವು : ಡಾಂಗ್ಸ್‌, ಪಂಚಮಹಲ್, ಭಡೋಚ, ಸೂರತ್, ಬಲ್ಸಾರ್, ಜುನಾಗಢ, ಸಬರಕಂಟಾ ಮತ್ತು ಬನಾಸ್ಕಂಟಾ. ದಕ್ಷಿಣದ ಮೂರು ಜಿಲ್ಲೆಗಳಾದ ಡಾಂಗ್ಸ್‌, ಸೂರತ್, ಭಡೋಚಗಳಲ್ಲಿ ರಾಜ್ಯದ ಶೇ. 40 ರಷ್ಟು ಅರಣ್ಯ ಪ್ರದೇಶವಿದೆ. 1,250 ಮಿಮೀ ಗಳಿಗಿಂತ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ತೇಗ, ಮತ್ತಿ, ಮತ್ತು ದಿಂಡಲು ಮುಖ್ಯ ಮರಗಳು. ಮಳೆ ಕಡಿಮೆಯಾದಂತೆ ತೇಗ ಕಡಿಮೆಯಾಗಿ ಎಲಚಿ, ಮುತ್ತುಗ, ಕಾಚು ಮರಗಳು ಬೆಳೆಯುತ್ತವೆ. ಮಳೆ ಇನ್ನೂ ಕಡಿಮೆಯಾಗಿರುವ ಉತ್ತರ ಭಾಗದಲ್ಲಿ ಕರಿಜಾಲಿ, ಬಿಳಿಗೊಬ್ಬಳಿ, ಚಿಪ್ಪುರಿ, ಎಲಚಿ, ಕಳ್ಳಿ ಜಾತಿಯ ಗಿಡಗಳು ಬೆಳೆಯುತ್ತವೆ. ಹೆಚ್ಚು ಅಥವಾ ಸಾಮಾನ್ಯ ಮಳೆಯ ಪ್ರದೇಶಗಳಲ್ಲಿ ಬಿದಿರು ಒಂದು ಮುಖ್ಯ ಸಸ್ಯ. ಗುಜರಾತಿನಲ್ಲಿ ಬಿದಿರು ಕಾಡುಗಳ ಒಟ್ಟು ವಿಸ್ತೀರ್ಣ 1927.5 ಚ.ಕಿಮೀ ಉತ್ತರಕ್ಕಿಂತ ದಕ್ಷಿಣದಲ್ಲಿ ಬಿದಿರು ಕಾಡುಗಳು ಹೆಚ್ಚು. ಗುಜರಾತಿನ ಕಾಡುಗಳ ಪ್ರಯೋಜನವನ್ನು ಸಂಪುರ್ಣವಾಗಿ ಪಡೆದಿಲ್ಲ. ಅವನ್ನು ಸರಿಯಾಗಿ ರಕ್ಷಿಸುವ ಕ್ರಮವನ್ನು ಕೈಗೊಂಡಿಲ್ಲ. ಅರಣ್ಯಗಳ ವಿಸ್ತೀರ್ಣ ಕ್ರಮ ಕ್ರಮವಾಗಿ ಕಡಿಮೆಯಾಗುತ್ತಿದೆ. ಗಿರ್ ಅರಣ್ಯ ಕಳೆದ 140 ವರ್ಷಗಳಲ್ಲಿ ಅರ್ಧಕ್ಕೆ ಕುಗ್ಗಿದೆ. ರಾಜ್ಯದ ವಾರ್ಷಿಕ ಸಾಗುವಾನಿ ಉತ್ಪಾದನೆ 36ಲಕ್ಷ ಘ. ಅಡಿ. ಗುಜರಾತಿನ ಬಿದಿರಿನ ವಿಭವ 2 ಲಕ್ಷ ಟನ್ ಎಂದು ಅಂದಾಜು ಮಾಡಲಾಗಿದೆ. ಅದರಲ್ಲಿ 80,000 ಟನ್ ಬಿದಿರು ಡಾಂಗ್ಸ್‌ ಮತ್ತು ರಾಜಪಿಪ್ಲ ಪ್ರದೇಶದಲ್ಲಿದೆ. ಜನವಸತಿ ಗುಜರಾತಿಗಳು ಹೆಚ್ಚು ಮೈಕಟ್ಟಿನ ಜನರಲ್ಲವಾದರೂ ಸ್ವಭಾವತಃ ಸಜ್ಜನರು, ಸೌಜನ್ಯಶೀಲರು, ಶಾಂತಿಪ್ರಿಯರು, ಧೈರ್ಯ, ಶೌರ್ಯ, ಔದಾರ್ಯ, ದೇಶಭಕ್ತಿ ಮತ್ತು ಅತಿಥಿಸತ್ಕಾರಗಳಿಗಾಗಿ ಹೆಸರಾದವರು. ಉದ್ಯೋಗ ಪ್ರಿಯತೆಯೊಡನೆ ಉಲ್ಲಾ ಪ್ರವೃತ್ತಿಯನ್ನೂ ಹೊಂದಿದವರು. ಸಮುದ್ರದ ಸಾಮೀಪ್ಯ ಮತ್ತು ಆರ್ಥಿಕ ಅನುಕೂಲತೆಗಳಿಗಾಗಿ ಸ್ವಾಭಾವಿಕವಾಗಿಯೇ ಈ ಜನರಲ್ಲೊಂದು ವಿಶೇಷ ಸಾಹಸ ಮತ್ತು ಸಂಚರೋತ್ಸಾಹ ಕಂಡುಬರುತ್ತದೆ 2011ರ ಜನಗಣತಿ ಪ್ರಕಾರ ಈ ರಾಜ್ಯದ 6,03,83,628 ಪ್ರಜೆಗಳಲ್ಲಿ ಪುರಷರು 26,385,577 ಮಂದಿ. ಮಹಿಳೆಯರು 24,285,440 ಮಂದಿ ಇದ್ದಾರೆ. ಚ.ಕಿಮೀ. ಜನಸಾಂದ್ರತೆ 258 ಮಂದಿ. ನಗರವಾಸಿಗಳು ಶೇ 37.4 ಮಂದಿ ಇದ್ದಾರೆ.ಗುಜರಾತ್ ರಾಜ್ಯದಲ್ಲಿ 25 ಜಿಲ್ಲೆಗಳೂ, 242 ಪಟ್ಟಣಗಳೂ 18,539 ಗ್ರಾಮಗಳೂ ಇವೆ. ಗುಜರಾತಿನ ಪ್ರಾದೇಶಿಕ ಭಾಷೆ ಗುಜರಾತಿ. ಬಹುಜನರು ಹಿಂದಿಯನ್ನು ಸುಲಭವಾಗಿ ಮಾತನಾಡಬಲ್ಲರು. ಬಲು ದೀರ್ಘವಾದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯುಳ್ಳ ಇಲ್ಲಿಯ ಜನಜೀವನಕ್ಕೆ ತನ್ನದೇ ಆದ ಮೆರುಗು ಬಂದಿದೆ. ಶ್ರೀಕೃಷ್ಣ, ದಯಾನಂದ ಸರಸ್ವತೀ, ನರಸಿಂಹ ಮೆಹ್ತಾ, ಮಹಾತ್ಮ ಗಾಂಧೀ ಮತ್ತಿತರರ ಜೀವನ ದರ್ಶನ ಸಾಹಿತ್ಯಗಳು ಗುಜರಾತಿನ ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಿಸಲು ಕಾರಣವಾಗಿದೆ. ಶ್ರೀಕೃಷ್ಣನ ಮೊಮ್ಮಗನಾದ ಅನಿರುದ್ಧನ ಮಡದಿ ಉಷಾ ಆರಂಭಿಸಿದ ಲಾಸ್ಯ ಪರಂಪರೆ ಇಂದಿಗೂ ಈ ರಾಜ್ಯದ ಹಬ್ಬಹುಣ್ಣಿಮೆಗಳಲ್ಲಿ, ಮುಖ್ಯವಾಗಿ ನವರಾತ್ರಿ ಹಬ್ಬದಲ್ಲಿ, ಗರ್ಭಾ ನೃತ್ಯದಲ್ಲಿ ಉಳಿದುಬಂದಿದೆ. ಕೃಷಿ ಮತ್ತು ನೀರಾವರಿ ಭಾರತದಲ್ಲಿ ಪ್ರಗತಿಪರ ಬೇಸಾಯಕ್ಕೆ ಹೆಸರಾದ ಪ್ರದೇಶಗಳಲ್ಲಿ ಗುಜರಾತ್ ರಾಜ್ಯವೂ ಒಂದು. ಹತ್ತಿ ಮತ್ತು ನೆಲಗಡಲೆ ಬೆಳೆಗಳಲ್ಲಿ ಇಡಿಯ ರಾಷ್ಟ್ರದಲ್ಲಿ ಈ ರಾಜ್ಯ ಪ್ರಮುಖವಾಗಿದೆ. ಈ ಬೆಳೆಗಳು ರಾಜ್ಯದ ಅನೇಕ ಕೈಗಾರಿಕೆಗಳ ಅಭಿವೃದ್ಧಿಗೂ ತನ್ಮೂಲಕ ರಾಜ್ಯದ ಆರ್ಥಿಕ ಪ್ರಗತಿಗೂ ಬುನಾದಿಯಾಗಿ ಪರಿಣಮಿಸಿದೆ. ಒಟ್ಟು 1,95,93,000 ಹೆಕ್ಟೇರ್ ಭೂವಿಸ್ತಾರವುಳ್ಳ ಈ ರಾಜ್ಯದಲ್ಲಿ 35.15 ಲಕ್ಷ ಹೆಕ್ಟೇರ್ (2003) ಭೂಮಿ ಕೃಷಿಗೆ ಉಪಯುಕ್ತವಾದ್ದು. ಅದರಲ್ಲಿ 16,27,000 ಹೆಕ್ಟೇರ್ ಅರಣ್ಯಪ್ರದೇಶ; 5,37,000 ಹೆಕ್ಟೇರ್ ಬೇಸಾಯವಲ್ಲದ ಇತರ ಉದ್ದೇಶಗಳಿಗೆ ಬಳಸಲಾದ ಜಮೀನು; 43,41,000 ಹೆಕ್ಟೇರ್ ಸಾಗುವಳಿ ಮಾಡಲಾಗದ ಬಂಜರು ಭೂಮಿ; 1,11,000 ಹೆಕ್ಟೇರ್ ಹುಲ್ಲುಗಾವಲು; 22,000 ಹೆಕ್ಟೇರ್ ವಿವಿಧ ಗಿಡಮರಗಳುಳ್ಳ ಪ್ರದೇಶ; 5,08,000 ಹೆಕ್ಟೇರ್ ಸಾಗುವಳಿ ಮಾಡಬಹುದಾದ ಪಾಳುಭೂಮಿ; 685 ಹೆಕ್ಟೇರ್ ಉತ್ತು ಬಿತ್ತದೆ ಬಿಟ್ಟ ನಿರ್ಲಕ್ಷಿತ ಭೂಮಿ. ಸುಮಾರು 1,05,00,000 ಹೆಕ್ಟೇರ್ ಭೂಮಿ ಮಾತ್ರವೇ ನೀರಾವರಿಗೆ ಒಳಪಟ್ಟಿದ್ದು. ಶೇ. 90ರಷ್ಟು ಭೂಮಿ ಮುಂಗಾರು ಮಳೆಯನ್ನೇ ಅವಲಂಬಿಸಿದೆ. ಈ ರಾಜ್ಯದಲ್ಲಿ ನೀರಾವರಿಯ ವಿಶೇಷ ಸೌಲಭ್ಯಗಳಿಲ್ಲದಿದ್ದರೂ ಬೇಸಾಯಕ್ಕೆ ಬಳಸುವ ಶಾಸ್ತ್ರೀಯ ಪದ್ಧತಿಗಳಿಂದಾಗಿ ಆಹಾರಧಾನ್ಯಗಳ ಉತ್ಪಾದನೆಯಲ್ಲಿ ಕಾಲಕಾಲಕ್ಕೆ ಹೆಚ್ಚಳವನ್ನೇ ಸಾಧಿಸಲಾಗಿದೆ.ನೆಲಗಡಲೆ ಮತ್ತು ಹತ್ತಿ ಈ ರಾಜ್ಯದ ಎರಡು ಮುಖ್ಯ ಬೆಳೆಗಳು. ಇಡೀ ದೇಶದಲ್ಲಿ ನೆಲಗಡಲೆಯ ಬೆಳೆಗೆ ಒಳಪಟ್ಟ ಭೂಮಿಯ ಶೇ. 25 ಭಾಗವೂ ಹತ್ತಿಯ ಬೆಳೆಗೊಳಪಟ್ಟ ಭೂಮಿಯ ಶೇ. 21 ಭಾಗವೂ ಈ ರಾಜ್ಯದಲ್ಲಿದೆ. ನೆಲಗಡಲೆ ಮತ್ತು ಹತ್ತಿಯ ಇಡೀ ದೇಶದ ವಾರ್ಷಿಕ ಉತ್ಪನ್ನಗಳಲ್ಲಿ ಅನುಕ್ರಮವಾಗಿ ಶೇ. 23 ಮತ್ತು ಶೇ. 29 ಗುಜರಾತಿನಲ್ಲಿ ಬೆಳೆಯುತ್ತವೆ.ಬೇಸಾಯ ಶಿಕ್ಷಣ ಪ್ರಸಾರಕ್ಕಾಗಿ ಜುನಾಗಢ, ಆನಂದ್, ನವಸಾರಗಳಲ್ಲಿ ವ್ಯವಸಾಯದ ಮಹಾವಿದ್ಯಾಲಯಗಳನ್ನು ತೆರೆಯಲಾಗಿದೆ. ಅಹಮದಾಬಾದಿನಲ್ಲಿ 1972 ರಲ್ಲಿ ಕೃಷಿ ವಿಶ್ವವಿದ್ಯಾಲಯ ಆರಂಭವಾಯಿತು. ರಾಜ್ಯದಲ್ಲಿ 13 ಕೃಷಿ ಶಾಲೆಗಳಿವೆ. ಸೂರತ್, ವಡೋದರ, ಆನಂದ್ ಮತ್ತು ಜುನಾಗಢದಲ್ಲಿ ಗ್ರಾಮ ಸೇವಕರ ತರಬೇತು ಕೇಂದ್ರಗಳಿವೆ.ಅರಳೆ, ಗುಜರಾತಿನ ಒಂದು ಮುಖ್ಯ ಉತ್ಪನ್ನ ಗುಜರಾತಿನಲ್ಲಿ ಬಾವಿ ಕೆರೆಗಳಲ್ಲದೆ ಸುಮಾರು 50 ಮಧ್ಯಮ ಗಾತ್ರದ ನೀರಾವರಿ ಯೋಜನೆಗಳೂ , ದೊಡ್ಡ ಗಾತ್ರದ ನೀರಾವರಿ ಯೋಜನೆಗಳೂ ಉಂಟು. ಯೋಜನೆಗಳಿಂದ ದೊರೆಯುವ ನೀರು ರಾಜ್ಯದ ಒಟ್ಟು ಸಾಗುವಳಿ ಕ್ಷೇತ್ರದ ಶೇ. 11 ಭಾಗವನ್ನು ಮಾತ್ರ ತಣಿಸಬಲ್ಲದು. ರಾಜ್ಯದ ನದಿಗಳಿಂದ ಇನ್ನೂ ಹೆಚ್ಚಿನ ಪ್ರಯೋಜನ ಪಡೆಯುವ ಪ್ರಯತ್ನಗಳಲ್ಲದೆ, ಸಹಸ್ರಾರು ನೀರಾವರಿ ಬಾವಿಗಳನ್ನು ತೋಡಿಸುವ ಕಾರ್ಯ ನಡೆದಿದೆ. ಜೊತೆಗೆ ಒಣ ಬೇಸಾಯದ ವ್ಯವಸ್ಥಿತ ಕ್ರಮಗಳಿಗಾಗಿಯೂ ವಿಶೇಷ ಗಮನ ಕೊಡುವುದು ಅನಿವಾರ್ಯವೆನಿಸಿದೆ. ಅದಕ್ಕಾಗಿ 1949ರಿಂದ ಜಮೀನಿನಲ್ಲಿ ಸಮಪಾತಳೀ ಒಡ್ಡು ರಚಿಸುವ ಯೋಜನೆಯನ್ನಾರಂಭಿಸಿ ಮೊದಲೆರಡು ದಶಕಗಳಲ್ಲಿಯೇ 22 ಲಕ್ಷ ಎಕರೆಗಳ ಜಮೀನಿನಲ್ಲಿ ಇಂಥ ಒಡ್ಡುಗಳನ್ನು ಹಾಕಲಾಯಿತು. ಖೇಡಾ ಜಿಲ್ಲೆಯ ಕೋಠಿಯಖಾಡ ಒಣ ಬೇಸಾಯದ ಪ್ರಾತ್ಯಕ್ಷಿಕಾ ಕೇಂದ್ರದಲ್ಲಿ ಭೂ ಸಂರಕ್ಷಣೆಯ ವಿವಿಧ ಪ್ರಾತ್ಯಕ್ಷಿಕೆಗಳನ್ನು ಕೈಗೊಂಡು ರೈತರಿಗೆ ಮಾರ್ಗದರ್ಶನ ನೀಡಲಾಗುತ್ತದೆ. ಜುನಾಗಢ, ಮಂಗ್ರೋಲ, ಮುಂದ್ರಾ, ಊನಾ, ಕೋಡಿನಾರ್, ಧಾರಿ, ಮಾಹುವಾ, ಮೊಟೇರಾ, ದೇಹಗಾಮ್, ವಡೋದರ, ನವಸಾರಿ, ಗಾಂಡೇವಿ, ಪಾರ್ದಿ, ಪಾರಿಯಗಳಲ್ಲಿರುವ ಸರ್ಕಾರಿ ಸಸಿದೋಟಗಳಿಂದ ಹೂ - ಹಣ್ಣುಗಳು ಸಸಿಗಳನ್ನು ರೈತರಿಗೆ ಹಂಚಲಾಗುತ್ತದೆ. ಅಲ್ಲದೆ ರಾಜ್ಯದ ವಿವಿಧ ಭಾಗಗಳಲ್ಲಿರುವ ಸಂಶೋಧನ ಕೇಂದ್ರಗಳ ಮೂಲಕ ತೋಟಗಾರಿಕೆಯ ಅಭಿವೃದ್ಧಿಯ ಮಾಹಿತಿಯನ್ನು ಪೂರೈಸಲಾಗುತ್ತಿದೆ. ವಿದ್ಯುತ್ ಉತ್ಪಾದನೆ ಈ ರಾಜ್ಯದಲ್ಲಿರುವ ವಿದ್ಯುದುತ್ಪಾದನ ಕೇಂದ್ರಗಳಿವು: ಧುವರನ್ ವಿದ್ಯತ್ ಕೇಂದ್ರ ... 254.0 ಧುವರನ್ ವಿದ್ಯುತ್ ಕೇಂದ್ರ ( 2ನೆಯ ಹಂತ) ... 280.0 ಉಗಿಚಕ್ರ ವಿದ್ಯುತ್ ಕೇಂದ್ರ ... 54.0 ಉತ್ರನ್ ವಿದ್ಯುತ್ ಕೇಂದ್ರ ... 67.5 ಶಹಾಪುರ ... 16.0 ಪೋರ್ಬಂದರ್ ... 15.0 ಸಿಕ್ಕಾ ... 16.0 ಕಾಂಡ್ಲಾ ... 16.0 ಭಾವನಗರ ... 16.0 ಸಾಬರ್ಮತಿ ... 217.5 ತಾರಾಪುರ್ ಪರಮಾಣು ವಿದ್ಯುತ್ ಕೇಂದ್ರ ... 190.0 ಉಕಾಯಿ ಜಲವಿದ್ಯುತ್ ಕೇಂದ್ರ ... 300.00 ರಾಜ್ಯದ ನಗರಗಳಲ್ಲದೆ ಸು. 3,500 ಗ್ರಾಮಗಳಿಗೂ 52,000 ನೀರಿನ ಪಂಪ್‍ಸೆಟ್‍ಗಳಿಗೂ ವಿದ್ಯುತ್ ಪುರೈಕೆಯಾಗಿದೆ. ಲಕ್ಷ ಮನೆಗಳಿಗೆ ವಿದ್ಯುತ್ತನ್ನೊದಗಿಸಲಾಗಿದೆ. ರಾಜ್ಯದಲ್ಲಿ ಉತ್ಪಾದನೆಯಾಗುವ ವಿದ್ಯುತ್ಚ್ಛಕ್ತಿಯ ಅರ್ಧಕ್ಕಿಂತ ಹೆಚ್ಚು ಭಾಗವನ್ನು ಕೈಗಾರಿಕೆಗಳಲ್ಲಿ ಬಳಸಲಾಗುತ್ತಿದೆ. 2005ರಲ್ಲಿ ಒಟ್ಟು 8763 ಮೆ.ವ್ಯಾ. ವಿದ್ಯುತ್ ಉತ್ಪಾದನೆಯಾಗಿತ್ತು. ಮೀನುಗಾರಿಕೆ ಗುಜರಾತಿಗೆ 1,600 ಕಿಮೀ ಕರಾವಳಿ ಇರುವುದರಿಂದ ಮೀನುಗಾರಿಕೆಯ ಅಭಿವೃದ್ಧಿಗೆ ಇಲ್ಲಿ ಸಾಕಷ್ಟು ಅವಕಾಶವುಂಟು. ಒಳನಾಡಿನಲ್ಲಿರುವ ನಾಲ್ಕು ದೊಡ್ಡ ನದಿಗಳೂ ಕೆರೆ ಕಾಲುವೆಗಳೂ ಇದಕ್ಕೆ ಉಪಯುಕ್ತವಾಗಿವೆ. ರಾಜ್ಯದಲ್ಲಿ ವರ್ಷಕ್ಕೆ ಸರಾಸರಿ 2 ಲಕ್ಷ ಟನ್ ಮೀನಿನ ಉತ್ಪಾದನೆಯಾಗುತ್ತದೆ. ಇದರ ಅಭಿವೃದ್ಧಿಗಾಗಿ ವೀರಾವಲ, ಪೋರ್ಬಂದರ್, ಬಲಸಾರ್, ಮಧವಾಡ ಮತ್ತು ಅಂಬರ್ಗಾಂವ್ಗಳಲ್ಲಿ ಸೇವಾಕೇಂದ್ರಗಳನ್ನೂ ಅಂಬರ್ಗಾಂವ್, ವೀರಾವಲ ಮತ್ತು ಬಲ್ಸಾರ್ಗಳಲ್ಲಿ ಆಧುನಿಕ ದೋಣಿಗಳ ನಿರ್ಮಾಣ ಕೇಂದ್ರಗಳನ್ನೂ ತೆರೆಯಲಾಗಿದೆ. ವೀರಾವಲ, ಜಾಫರಾಬಾದ್, ಅಂಬರಗಾಂವ್, ಪೋರ್ಬಂದರ್, ಮಂಗ್ರೋಲ್ ಮತ್ತು ಹೀರಾತೋಟ್ ಬಂದರುಗಳಲ್ಲಿ ಈ ಉದ್ಯಮ ದೊಡ್ಡ ಗಾತ್ರದಲ್ಲಿ ನಡೆಯುತ್ತಿದೆ. ಗುಜರಾತಿನಿಂದ ಹೊರದೇಶಗಳಿಗೆ ಸು.1 ಕೋಟಿ ರೂ. ಮೌಲ್ಯದ ಮೀನು ರಫ್ತಾಗುತ್ತದೆ. ಖನಿಜಗಳು ಗುಜರಾತಿನಲ್ಲಿ ಉಪ್ಪು, ಸುಣ್ಣದಕಲ್ಲು, ಮ್ಯಾಂಗನೀಸ್,ಜಿಪ್ಸಮ್, ಪಿಂಗಾಣಿ ಮಣ್ಣು, ಕ್ಯಾಲ್ಸೈಟ್,ಬಾಕ್ಸೈಟ್, ಪೆಟ್ರೋಲಿಯಂ, ಅಮೂಲ್ಯ ಶಿಲೆ, ಬಣ್ಣಕ್ಕೆ ಬಳಸುವ ಕೆಮ್ಮಣ್ಣು ಅಗೇಟ್ ಶಿಲೆ ಮುಂತಾದ ಖನಿಜಗಳು ವಿಪುಲವಾಗಿ ದೊರೆಯುತ್ತದೆ. ಸೌರಾಷ್ಟ್ರ ಮತ್ತು ಕಚ್ಟ್‌ ಉತ್ತಮ ದರ್ಜೆಯ ಬಾಕ್ಸೈಟ್ ಮತ್ತು ಸುಣ್ಣದ ಕಲ್ಲುಗಳಿಗೆ ಹೆಸರಾಗಿದ್ದರೆ, ವಡೋದರ ಜಿಲ್ಲೆಯ ಛೋಟಾ ಉದಯಪುರದ ಬಳಿ ಪ್ಲುರೈಟ್ ದೊರೆಯುತ್ತದೆ. ವಡೋದರ, ಬನಾಸ್ಕಂಟ, ಭಡೋಚ, ಭಾವನಗರ, ಕಚ್ಛ, ರಾಜಕೋಟೆ ಜಿಲ್ಲೆಗಳಲ್ಲಿ ದೊರೆಯುವ ಬೆಲೆ ಬಾಳುವ ಕಲ್ಲುಗಳು ಗುಜರಾತಿನ ಮುಖ್ಯವಾಗಿ ಖಂಬಾತ್ ಮತ್ತು ಸೂರತಿನ, ಕಲಾವಿದರ ಕೈಗಳಲ್ಲಿ ವಿವಿಧ ಆಕರ್ಷಕ ರೂಪ ತಳೆದು ದೇಶವಿದೇಶಗಳಲ್ಲಿ ವಿಶೇಷ ಬೇಡಿಕೆಗೆ ಪಾತ್ರವಾಗಿದೆ. ಗುಜರಾತಿನ ತೈಲ ಮತ್ತು ಅನಿಲ ಸಂಪತ್ತಿನ ಸರ್ವೇಕ್ಷಣೆ ನಡೆಸಿ ಅದನ್ನು ಹೊರತೆಗೆಯುವ ಕೆಲಸ ನಡೆದಿದೆ. ತೈಲ ಮತ್ತು ನೈಸರ್ಗಿಕ ಅನಿಲ ಆಯೋಗದ ನೇತೃತ್ವದಲ್ಲಿ 530 ಬಾವಿಗಳನ್ನು ತೋಡಲಾಗಿದೆ. ಪ್ರತಿವರ್ಷ 11.275 ಟನ್ ತೈಲ ತೆಗೆಯುವ ಉದ್ದೇಶವಿರಿಸಿಕೊಂಡು ಕಾರ್ಯ ನಡೆದಿದೆ. ಅಂಕಲೇಶ್ವರ, ಕಲೋಲ, ನವಾಗಾಮ್‍ಗಳು ತೈಲೋತ್ಪಾದನೆಯ ಮುಖ್ಯ ಕೇಂದ್ರಗಳು. ಸಹಕಾರ, ಕೈಗಾರಿಕೆ ಸಹಕಾರೀ ಆಂದೋಲನದಲ್ಲೂ ಈ ರಾಜ್ಯ ಸಾಕಷ್ಟು ಪ್ರಗತಿ ಸಾಧಿಸಿದೆ. ಗ್ರಾಮ ಮಟ್ಟದಲ್ಲಿ 28 ಲಕ್ಷ ಸದಸ್ಯರುಳ್ಳ 9.885 ಪ್ರಾಥಮಿಕ ಸಂಘಗಳುಂಟು. 325 ಸಹಕಾರೀ ಬೇಸಾಯ ಸಂಘಗಳೂ. 58 ಸಂಯುಕ್ತ ಸಹಕಾರೀ ಬೇಸಾಯ ಸಂಘಗಳೂ 450 ನೀರೆತ್ತುವ ಸಹಕಾರೀ ಸಂಘಗಳೂ ಕಾರ್ಯನಿರತವಾಗಿವೆ. ಇವಲ್ಲದೆ ವರ್ಷಕ್ಕೆ ಸರಾಸರಿ 1,000-1.250 ದಶಲಕ್ಷ ಟನ್ ಕಬ್ಬಿನಿಂದ ಸಕ್ಕರೆ ತಯಾರಿಸುವ 11 ಸಹಕಾರಿ ಸಕ್ಕರೆ ಕಾರ್ಖಾನೆಗಳುಂಟು. 63 ಪ್ರಾಥಮಿಕ ಮೀನುಗಾರಿಕೆ ಸಂಘಗಳೂ 14 ಒಣ ಮೀನುಗಳ ಮಾರಾಟ ಸಂಘಗಳೂ 8 ತಾಜಾ ಮೀನುಗಳ ಮಾರಾಟ ಸಂಘಗಳೂ ಇವೆ. ಹಾಲಿನ ಉತ್ಪಾದನೆ, ಪುರೈಕೆ, ಗೃಹ ನಿರ್ಮಾಣ ಮತ್ತು ವಸತಿ ವ್ಯವಸ್ಥೆಗಳಿಗಾಗಿ ಈ ರಾಜ್ಯದಲ್ಲಿ ಆಗಿರುವ ಸಹಕಾರೀ ಸಂಘಟನೆ ವಿಶಿಷ್ಟವಾದ್ದು. 2.88.399 ಸದಸ್ಯರುಳ್ಳ 1.552 ಹಾಲುಪುರೈಕೆಯ ಸಹಕಾರೀ ಸಂಘಗಳೂ 1.43.522 ಸದಸ್ಯರುಳ್ಳ 4.215 ಗೃಹನಿರ್ಮಾಣ ಸಂಘಗಳೂ ಈ ರಾಜ್ಯದಲ್ಲಿವೆ. 166 ನೇಕಾರರ ಸಂಘಗಳೂ 779 ಇತರ ಕೈಗಾರಿಕೆಗಳ ಸಂಘಗಳೂ 959 ಗ್ರಾಹಕರ ಸಂಘಗಳೂ, 89 ವ್ಯವಸಾಯೇತರ ಸಂಘಗಳೂ ರಾಜ್ಯದಲ್ಲಿವೆ. ಇಲ್ಲಿ 14.123 ಸಣ್ಣ ಕೈಗಾರಿಕೆಗಳಿವೆ. ಗೃಹ-ಗುಡಿ ಕೈಗಾರಿಕೆಗಳು ಮಾತ್ರವಲ್ಲದೆ ದೊಡ್ಡ ಮತ್ತು ಮಧ್ಯಮ ಗಾತ್ರಗಳ ಕೈಗಾರಿಕೆಗಳಲ್ಲೂ ರಾಜ್ಯ ಮುಂದುವರಿದಿದೆ. ಅಹಮದಾಬಾದ್ ಸೂರತ್, ವಡೋದರ, ಖೇಡಾ, ಭಾವನಗರ, ಸುರೇಂದ್ರ ನಗರ, ರಾಜಕೋಟೆ, ಜಾಮ್ನಗರಗಳಲ್ಲಿ ಕಾರ್ಖಾನೆಗಳು ಹೆಚ್ಚಾಗಿ ಬೆಳೆದಿವೆಯಾದರೂ ಇತರ ಕಡೆಗಳಲ್ಲೂ ಕೆಲವು ಕೈಗಾರಿಕೆಗಳುಂಟು. ಜವಳಿ ಕೈಗಾರಿಕೆ ಅತ್ಯಂತ ಮುಖ್ಯವಾದ್ದು. ಎಂಜಿಯರಿಂಗ್, ರಸಾಯನವಸ್ತು. ಔಷಧಗಳು, ಸಿಮೆಂಟ್, ಕುಂಭ, ಗಾಜು, ಗೊಬ್ಬರ, ಕಾಗದ ಇವು ಇತರ ಕೈಗಾರಿಕೆಗಳು. ವಡೋದರÀದಲ್ಲಿ ಪೆಟ್ರೋಲಿಯಂ ಪರಿಷ್ಕರಣ ಕೇಂದ್ರವಿದೆ. ಭಾರತದ ಔದ್ಯೋಗಿಕ ನಕ್ಷೆಯಲ್ಲಿ ಈ ರಾಜ್ಯಕ್ಕೊಂದು ಮಹತ್ತ್ವದ ಸ್ಥಾನ ಪ್ರಾಪ್ತವಾಗಿದೆ. 2002ರ ಅಂತ್ಯದಲ್ಲಿ 19,696 ಕಾರ್ಯನಿರತ ಕೈಗಾರಿಕಾ ಘಟಕಗಳಿದ್ದವು. ಸೆಪ್ಟೆಂಬರ್ 2003ರಲ್ಲಿ 2.83 ಲಕ್ಷ ಸಣ್ಣ ಕೈಗಾರಿಕೆಗಳಿದ್ದವು. ಸರಾಸರಿ 8.40 ಲಕ್ಷ ಮಂದಿಗೆ ಉದ್ಯೋಗಾವಕಾಶವಿತ್ತು. ಪಂಚಾಯತಿ ರಾಜ್ಯ ಈ ರಾಜ್ಯದಲ್ಲಿ 11.928 ಗ್ರಾಮ ಪಂಚಾಯತಿಗಳೂ 56 ಪಟ್ಟಣ ಪಂಚಾಯತಿಗಳೂ 182 ತಾಲ್ಲೂಕು ಪಂಚಾಯತಿಗಳೂ 17 ಜಿಲ್ಲಾ ಪಂಚಾಯತಿಗಳೂ (ಗಾಂಧೀನಗರ ಮತ್ತು ಡಾಂಗ್ಸ ಜಿಲ್ಲೆಗಳ ಹೊರತಾಗಿ) ಇವೆ. ಗಿರಿಜನರ ಜೀವನಾಭಿವೃದ್ಧಿಗಾಗಿ 53 ವಿಶೇಷ ಅಭಿವೃದ್ದಿ ಘಟಕಗಳನ್ನು ರಾಜ್ಯದಲ್ಲಿ ರಚಿಸಲಾಗಿದೆ. ತಮ್ಮ ಸೇವಾ ಸಿಬ್ಬಂದಿಯನ್ನು ತಾವೇ ಆಯ್ದುಕೊಳ್ಳುವ ಅಧಿಕಾರವನ್ನಲ್ಲದೆ ಆಯಾ ಪ್ರದೇಶಗಳ ಅಭಿವೃದ್ಧಿಗಾಗಿ ನೂರಕ್ಕೆ ನೂರರಷ್ಟು ಭೂಕಂದಾಯವನ್ನು ಬಳಸಿಕೊಳ್ಳುವ ಸವಲತ್ತನ್ನೂ ಈ ಪಂಚಾಯತ್ ರಾಜ್ ಸಂಸ್ಥೆಗಳಿಗೆ ನೀಡಲಾಗಿದೆ. ಸಮಾಜ ಕಲ್ಯಾಣ ಹಿಂದುಳಿದ ಜನಗಳ ಕಲ್ಯಾಣ ದೃಷ್ಟಿಯಿಂದ ರಾಜ್ಯದಲ್ಲಿ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ ಸುಮಾರು 120 ಲಕ್ಷ ಜನ ಹಿಂದುಳಿದ ಸಮಾಜಕ್ಕೆ ಸೇರಿದ್ದು ಅವರಲ್ಲಿ ಸುಮಾರು 36 ಲಕ್ಷ ಜನ ಪರಿಶಿಷ್ಟ ಜಾತಿಯವರೂ 75 ಲಕ್ಷ ಜನ ಪರಿಶಿಷ್ಟ ಜನಾಂಗದವರೂ 4 ಲಕ್ಷ ಜನ ಅಲೆಮಾರಿ ಜನಾಂಗಕ್ಕೆ ಸೇರಿದವರೂ, 4 ಲಕ್ಷ ಜನ ಇತರರೂ ಇದ್ದಾರೆ. ಈ ಜನರ ಶಿಕ್ಷಣ ಆರ್ಥಿಕ ಅಭಿವೃದ್ದಿ. ಆರೋಗ್ಯ ವಸತಿಸೌಕರ್ಯ ಇತ್ಯಾದಿ ಕಾರ್ಯಯೋಜನೆಗಳ ಮೂಲಕ ಸಮಾಜಕಲ್ಯಾಣದ ಪ್ರಯತ್ನಗಳು ನಡೆದಿದೆ. ಹಿಂದುಳಿದ ಜನರ ಮಕ್ಕಳಿಗೆ ಉಚಿತವಾದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ದೊರೆಯುತ್ತದೆ. ಬಾಲಕಿಯರ ಹೆಚ್ಚಿನ ಶಿಕ್ಷಣಕ್ಕಾಗಿ 117 ಆಶ್ರಮ ಶಾಲೆಗಳನ್ನು ತೆರೆಯಲಾಗಿದೆ. ಸರ್ಕಾರಿ ಭೂಮಿಯ ವಿತರಣೆ, ಭೂಸುಧಾರಣೆ ಬೇಸಾಯದ ಸಲಕರಣೆಗಳ ಪುರೈಕೆ ಕೈಗಾರಿಕೆಗಳಲ್ಲಿ ತರಬೇತು ಮತ್ತು ಆರ್ಥಿಕ ನೆರವುಗಳ ಮೂಲಕ ಹಿಂದುಳಿದ ಜನಾಂಗಗಳ ಜನ ಮುಂದುವರಿಯುವಂತೆ ಯತ್ನಿಸಲಾಗುವುದು. ಅವರ ಶಾರೀರಿಕ ದುಡಿಮೆಗೆ ತಕ್ಕ ಫಲ ಸಿಗಬೇಕೆಂಬ ದೃಷ್ಟಿಯಿಂದ ಈ ಜನಾಂಗಗಳ ಜನರುಳ್ಳ ಸಹಕಾರಿ ಸಂಘಗಳ ರಚನೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಅಹಮದಾಬಾದ್ ಸೂರತ್, ರಾಜಕೋಟೆ, ಡಾಹೋದ ವಡೋದರ, ಸುರೇಂದ್ರನಗರ, ಜುನಾಗಢ, ಪೋರ್ಬಂದರ್, ಫಾನ್ಸಾ, ಮೆಹೆಸಾನಾ, ಮಾಂಡವಿ ಮತ್ತು ಭಾವನಗರಗಳಲ್ಲಿರುವ ಅಂಗವಿಕಲರ ಮತ್ತು ಕುರುಡ ಕಿವುಡ-ಮೂಕರ ಶಿಕ್ಷಣ ಸಂಸ್ಥೆಗಳು ಸಮಾಜಕಲ್ಯಾಣ ಕಾರ್ಯಕ್ರಮದಲ್ಲಿ ಮಹತ್ತ್ವದ ಪಾತ್ರವಹಿಸುತ್ತವೆ. ಆರೋಗ್ಯ ಈ ರಾಜ್ಯದ ನಗರಗಳಲ್ಲದೆ ಗ್ರಾಮಾಂತರ ಪ್ರದೇಶದ ಜನರ ಆರೋಗ್ಯ ರಕ್ಷಣೆಗಾಗಿ 60-80 ಸಾವಿರ ಜನಕ್ಕೊಂದರಂತೆ ಪ್ರಾಥಮಿಕ ಆರೋಗ್ಯ ಕೇಂದ್ರ ಗಳನ್ನು ತೆರೆಯಲಾಗಿದೆ. ಒಟ್ಟು 251 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಈ ರಾಜ್ಯದಲ್ಲಿವೆ.ಅಹಮದಾಬಾದ್, ವಡೋದರ, ಜಾಮ್ನಗರ ಮತ್ತು ಸೂರತ್ಗಳಲ್ಲಿ ವೈದ್ಯಕೀಯ ಕಾಲೇಜುಗಳೂ ಜಾಮ್ನಗರದಲ್ಲಿ ಗುಜರಾತ್ ಆಯುರ್ವೇದ ವಿಶ್ವವಿದ್ಯಾಲಯವೂ ಇವೆ. ಜಾಮ್ನಗರದಲ್ಲಿರುವ ಸೂರ್ಯಕಿರಣ ಚಿಕಿತ್ಸಾಕೇಂದ್ರ ರಾಷ್ಟ್ರದಲ್ಲಿಯೇ ಅನನ್ಯಸದೃಶವಾದ್ದು. ಶಿಕ್ಷಣ ಈ ರಾಜ್ಯದಲ್ಲಿ ಕಡ್ಡಾಯ ಪ್ರಾಥಮಿಕ ಶಿಕ್ಷಣ ಕಾಯಿದೆ 1961ರಲ್ಲಿ ಸ್ವೀಕೃತವಾಗಿ 1964ರಿಂದ ಜಾರಿಗೆ ಬಂತು. ರಾಜ್ಯದ ಒಟ್ಟು 21,900 ಪ್ರಾಥಮಿಕ ಶಾಲೆಗಳಲ್ಲಿ 86,000 ಶಿಕ್ಷಕರು ದುಡಿಯುತ್ತಿದ್ದಾರೆ. 2,150 ಮಾಧ್ಯಮಿಕ ಶಾಲೆಗಳೂ 134 ವಿವಿಧೋದ್ದೇಶ ಶಾಲೆಗಳೂ 270 ಉಚ್ಚ ಶಿಕ್ಷಣ ಶಾಲೆಗಳೂ ಇವೆ. ಬೆಳಕಿಯರ ಶಿಕ್ಷಣ ಪ್ರಸಾರಕ್ಕಾಗಿ ಮಾಧ್ಯಮಿಕ ಹಂತದಲ್ಲಿ ವಿಶೇಷ ಸವಲತ್ತುಗಳನ್ನು ನೀಡಲಾಗಿದೆ. ರಾಜ್ಯದ ಮಾಧ್ಯಮಿಕ ಶಿಕ್ಷಣ ಮಂಡಲಿ ಮಾಧ್ಯಮಿಕ ಶಿಕ್ಷಣ ರೂಪರೇಷೆಗಳನ್ನು ಹಾಕುವುದಲ್ಲದೆ ವಿದ್ಯಾರ್ಥಿಗಳ ಪರೀಕ್ಷೆಗಳ ಏರ್ಪಾಡು ಮಾಡುತ್ತದೆ. ಈ ರಾಜ್ಯದಲ್ಲಿ 13 ವಿಶ್ವವಿದ್ಯಾಲಯಗಳಿವೆ. ಅವುಗಳಲ್ಲಿ ಅಹಮದಾಬಾದಿನಲ್ಲಿ ಗಾಂಧಿಯವರು ಸ್ಥಾಪಿಸಿದ ಗುಜರಾತ್ ವಿದ್ಯಾಪೀಠವೂ ಒಂದು. ಗುಜರಾತ್‍ನಲ್ಲಿ 4 ಕೃಷಿ ವಿಶ್ವವಿದ್ಯಾಲಯಗಳಿವೆ. ರಾಜ್ಯದಲ್ಲಿರುವ ಕಾಲೇಜುಗಳ ಸಂಖ್ಯೆ 255 ವಡೋದರ ನಗರದಲ್ಲಿರುವ ಕೇಂದ್ರ ವಾಚನಾಲಯವಲ್ಲದೆ ರಾಜಕೋಟೆ. ಜಾಮ್ನಗರ ಸುರೇಂದ್ರನಗರ. ಜುನಾಗಢ, ಭಾವನಗರ, ಮತ್ತು ಭುಜ್ಗಳಲ್ಲಿರುವ ಸರ್ಕಾರಿ ಜಿಲ್ಲಾ ವಾಚನಾಲಯಗಳೂ ಇನ್ನಿತರ ಸಾರ್ವಜನಿಕ ವಾಚನಾಲಯಗಳೂ ಜನರಿಗೆ ವಾಚನ ಸೌಕರ್ಯ ಒದಗಿಸುತ್ತವೆ. ಈ ರಾಜ್ಯದಲ್ಲಿ ಒಟ್ಟು 34 ನಗರ ವಾಚನಾಲಯಗಳೂ 235 ಪಟ್ಟಣ ವಾಚನಾಲಯಗಳೂ, 40 ಮಹಿಳಾ ವಾಚನಾಲಯಗಳೂ 34 ಬಾಲ ವಾಚನಾಲಯಗಳೂ 4,027 ಗ್ರಾಮ ವಾಚನಾಲಯಗಳು ರಾಜಪಿಪ್ಲಾ ಮತ್ತು ತ್ರಾಪಜಗಳಲ್ಲಿ ಎರಡು ಸರ್ಕಾರಿ ಸಂಚಾರಿ ವಾಚನಾಲಯಗಳೂ ಇವೆ. ಗುಜರಾತ್ ವಾಚನಾಲಯ ಸಮಿತಿ ಮತ್ತು ಗುಜರಾತ್ ವಾಚನಾಲಯ ಸಹಕಾರಿ ಸಂಘಗಳು ಸರ್ಕಾರದ ಸಹಾಯದಿಂದ ರಾಜ್ಯದ ವಾಚನಾಲಯಗಳು ಅಭಿವೃದ್ಧಿಗಾಗಿ ಪ್ರಯತ್ನಿಸುತ್ತಿವೆ. ರಾಜ್ಯದಲ್ಲಿ ಒಟ್ಟು 46 ದಿನಪತ್ರಿಕೆಗಳೂ 132 ವಾರಪತ್ರಿಕೆಗಳೂ 70 ಪಕ್ಷಪತ್ರಿಕೆಗಳೂ 241 ಮಾಸಪತ್ರಿಕೆಗಳು 22 ತ್ರೈಮಾಸಿಕಗಳೂ ಪ್ರಕಟವಾಗುತ್ತಿದ್ದುವು. ಸಾರಿಗೆ ಸಂಪರ್ಕ ಈ ರಾಜ್ಯದಲ್ಲಿ ವಿವಿಧ ಮಾರ್ಗಗಳ ಸೌಕರ್ಯ ಸಾಕಷ್ಟಿದೆ. ರಾಷ್ಟ್ರೀಯ ಮತ್ತು ರಾಜ್ಯದ ಹೆದ್ದಾರಿಗಳನ್ನೊಳಗೊಂಡು 2002-03ರ ಅಂತ್ಯದಲ್ಲಿ ನಗರ ಪಾಲಿಕೆ ರಸ್ತೆಗಳನ್ನು ಬಿಟ್ಟು ಒಟ್ಟು 74,075 ಕಿಮೀ ರಸ್ತೆಯಿದ್ದು ಇದರಲ್ಲಿ 70,743 ಕಿಮೀ ಉತ್ತಮ ರಸ್ತೆಯಿತ್ತು. ರಾಜ್ಯದಲ್ಲಿ 1,134 ಕಿಮೀ ಬ್ರಾಡ್ ಗೇಜ್, 3,381 ಕಿಮೀ ಮೀಟರ್ ಗೇಜ್, 1,141 ಕಿಮೀ ನ್ಯಾರೋ ಗೇಜ್ ರೈಲುಮಾರ್ಗಗಳಿವೆ. ಅಹಮದಾಬಾದ್-ಗಾಂಧಿನಗರಗಳಲ್ಲಿ ಮೆಟ್ರೋ ರೈಲಿನ ಯೋಚನೆಗಳು 2011ರಿಂದ ಪ್ರಾರಂಭವಾಗಿದೆ. ಇಡೀ ದೇಶದ 21 ಮಧ್ಯಮ ಮತ್ತು 150 ಸಣ್ಣ ಬಂದರುಗಳು ಇದೊಂದೇ ರಾಜ್ಯದಲ್ಲಿವೆ. ಕಾಂಡ್ಲಾ ದೊಡ್ಡ ಬಂದರು. ಓಖಾ, ಭಾವನಗರ, ಖೇಡಿ ಸಿಕ್ಕ ವಿರಾವಲ್, ನವಲಾಖಿ, ಪೋರ್ಬಂದರ್, ಭಡೋಚ್, ಸೂರತ್, ಜಾಖಾನ್, ಮುಂದ್ರ ಪುಂಧರ, ದ್ವಾರಕಾ, ಮುಂಗ್ರೋಳ್, ಮಾಧವಾಡ, ಜವಾಬಂದರ್, ರಾಜ್ಪಾರಾ, ಜಾಫರಾಬಾದ್, ರಜುಲಾ, ಮಹುವಾ. ತಲಾಜ, ಘೋಘಾ, ಭಗ್ಡವಾ, ವಾನ್ಸಿ, ವೋರ್ಸಿ, ಬಿಲಿವೋರಾ, ಬಲ್ಸಾರ್, ಉಮರ್ಸಾದಿ, ಕೋಲಾಕ್, ಮರೋಳಿ ಉಮರ್ಗಾಂವ್-ಇವು ಇತರ ಬಂದರುಗಳು. ಅಹಮದಾಬಾದ್, ಭಾವನಗರ, ರಾಜಕೋಟೆ, ಪೋರ್ಬಂದರ್, ಜಾಮ್ನಗರ ಕೇಶೋದ್, ಭುಚ್, ಸೂರತ್, ವಡೋದರ, ಮತ್ತು ಕಾಂಡ್ಲಾಗಳಲ್ಲಿ ವಿಮಾನ ನಿಲ್ದಾಣಗಳಿವೆ. ದೆಹಲಿ ಮುಂಬಯಿಗಳೊಂದಿಗೆ ನೇರ ವಾಯುಸಂಪರ್ಕವೇರ್ಪಟ್ಟಿದೆ. ಮುಖ್ಯ ಸ್ಥಳಗಳು 1411ರಲ್ಲಿ ಸುಲ್ತಾನ್ ಅಹಮ್ಮದ್ ಷಹ ಕಟ್ಟಿಸಿದ ಅಹಮದಾಬಾದ್ ಪಶ್ಚಿಮ ಭಾರತದ ಎರಡನೆಯ ಅತಿ ದೊಡ್ಡ ನಗರ. ಇದು ಬಟ್ಟೆಯ ಉತ್ಪಾದನೆಯ ದೃಷ್ಟಿಯಿಂದ ಭಾರತದ ಮ್ಯಾಂಚೆಸ್ಟರ್ ಎನಿಸಿಕೊಂಡಿದೆ. 1615ರಲ್ಲಿ ಈ ನಗರವನ್ನು ಕಣ್ಣಾರೆ ಕಂಡ ಥಾಮಸ್ ರೋ ಈ ನಗರ ಲಂಡನ್ನಿನಷ್ಟು ದೊಡ್ಡದೆಂದೂ ಹಿಂದೂಸ್ತಾನದಲ್ಲೇ ಅಲ್ಲದೆ ಜಗತ್ತಿನಲ್ಲೆ ಸುಂದರ ನಗರಗಳಲ್ಲೊಂದೆನಿಸಿದೆಯೆಂದೂ ಅಭಿಪ್ರಾಯ ಪಟ್ಟಿದ್ದ. ಇಲ್ಲಿರುವ ಹಿಂದು ಮತ್ತು ಜೈನಮಂದಿರಗಳ ಶಿಲ್ಪಕಲಾ ವೈಭವವನ್ನು ಮೆರೆಸುವ ಮಸೀದಿ ಮತ್ತು ಸ್ಮಾರಕಗಳೂ ನೋಡುವಂತಿವೆ. ಗಾಂಧಿಯವರು ಸ್ಥಾಪಿಸಿದ ಸಾಬರಮತಿ ಆಶ್ರಮ ಬಳಿಯಲ್ಲೇ ಇದೆ. ಬಾಲವನ, ಪ್ರಾಣಿಸಂಗ್ರಹಾಲಯ, ಮತ್ಸ್ಯಾಲಯಗಳಿಂದ ಕೂಡಿದ ಕಂಕರಿಯಾ ಸರೋವರ ಸುಂದರವಾಗಿದೆ. ಇಲ್ಲಿಯ ಜುಮ್ಮಾ ಮಸೀದಿ ಶಹಾ ಅಲಮ್ ಸ್ಮಾರಕ, ಮೊಹಮ್ಮದ್ ಬೇಗ್ದಾ ಮತ್ತು ಗಾಂಜ ಬಕ್ಷರ ಸ್ಮಾರಕಗಳು ಪ್ರೇಕ್ಷಣೀಯ, ಅಹಮದಾಬಾದಿನಿಂದ 80 ಕಿಮೀ ಅಂತರದಲ್ಲಿ ಇರುವ ಲೋಥಾಲ್‍ನಲ್ಲಿ ದೊರೆತ ಅವಶೇಷಗಳು ಗುಜರಾತಿನ ನಾಗರಿಕತೆ ಹರಪ್ಪ ನಾಗರಿಕತೆಯಷ್ಟು ಹಿಂದಿನದಿರಬಹುದೆಂದು ಸೂಚಿಸುತ್ತವೆ. ಈ ಬೆಟ್ಟವನ್ನು ಅಗೆದು ತೆಗೆದ ಸುಯೋಜಿತ ನಗರರಚನೆ ಮತ್ತು ಬಂದರಿನ ವ್ಯವಸ್ಥೆ ಅಖಿಲಭಾರತ ಮಹತ್ತ್ವ ಪಡೆದಿವೆ. ಅಹಮದಾಬಾದಿನಿಂದ 106 ಕಿಮೀ ದೂರದಲ್ಲಿರುವ ಮೊಧೇರದ ಸೂರ್ಯಮಂದಿರ ಸೋಳಂಕಿ ದೊರೆ 1026-27 ರಲ್ಲಿ ಕಟ್ಟಿಸಿದ್ದು. ಇದರ ಶಿಲ್ಪ ಒರಿಸ್ಸದ ಕೊನಾರ್ಕದ ಪ್ರಖ್ಯಾತ ಸೂರ್ಯಮಂದಿರವನ್ನು ಹೋಲುತ್ತದೆ. ಜುನಾಗಢದ ಬಳಿಯ ಗಿರ್ನಾರದಲ್ಲಿ ಜೈನಮಂದಿರಗಳಿವೆ. ಸಿಂಹಗಳಿಂದಾಗಿ ಗಿರ್ ಅರಣ್ಯ ಪ್ರಸಿದ್ಧವಾದ್ದು. ಸೌರಾಷ್ಟ್ರದಲ್ಲಿ ಕೃಷ್ಣಲೀಲೆಯ ಕೇಂದ್ರಗಳಾಗಿದ್ದ ದ್ವಾರಕಾ ಮತ್ತು ವೀರಾವಲಗಳಲ್ಲಿ ಸುಂದರವಾದ ಮಂದಿರಗಳಿವೆ. ಸೋಮನಾಥ ದೇವಾಲಯವು ಸೌರಾಷ್ಟ್ರದ ಆಕರ್ಷಣೆಗಳಲ್ಲೊಂದು. ಗಾಂಧಿಯವರ ಜನ್ಮ ಸ್ಥಳವಾದ ಪೋರ್ಬಂದರ್ ತನ್ನ ಹಳೆಯ ಮತ್ತು ಹೊಸ ನಾಗರಿಕತೆಗಳ ಕುರುಹುಗಳಿಗಾಗಿ ಹೆಸರಾಗಿದೆ. ಪಾಲಿಟಾಣಾ ಜೈನಮಂದಿರಗಳ ನಗರ. ಉತ್ತರ ಗುಜರಾತಿನಲ್ಲಿ ಪಾಟಣ ಮತ್ತು ಸಿದ್ಧಪುರಗಳು ಸಹಸ್ರಲಿಂಗ ದೇವಾಲಯ ಮತ್ತು ರುದ್ರ ಮಹಲುಗಳಿಗಾಗಿ ಪ್ರಸಿದ್ಧವಾದಂಥವು. ವಡೋದರ, ಸೂರತ್, ಜಾಮ್ನಗರ, ಭಾವನಗರ, ಖಂಬಾತ್, ರಾಜಕೋಟೆ, ಜುನಾಗಢ ಮುಂತಾದ ನಗರಗಳು ತಮ್ಮ ಐತಿಹಾಸಿಕ ಪರಂಪರೆಯಿಂದಲೂ ಆಧುನಿಕ ಸಾಧನೆಗಳಿಂದಲೂ ಮಹತ್ತ್ವದ ನಗರಗಳೆನಿಸಿವೆ. ಗಾಂಧೀನಗರ ಆಧುನಿಕ ರೀತಿಯಲ್ಲಿ ನಿರ್ಮಿತವಾದ ರಾಜಧಾನಿ, ನಲ್ ಸರೋವರ ಪಕ್ಷಿಧಾಮ. ಗುಜರಾತಿನ ಜಿಲ್ಲೆಗಳು ಗುಜರಾತಿನಲ್ಲಿ ೨೫ ಜಿಲ್ಲೆಗಳಿವೆ. ಇವು: ೨೦೧೪-ಮುಖ್ಯ ಮಂತ್ರಿ ಆಯ್ಕೆ ಗುಜರಾತ್ ಸರ್ಕಾರದ ಹಿರಿಯ ಸಚಿವೆ ಆನಂದಿ ಬೆನ್ ಪಟೇಲ್ ಅವರು ೨೧-೫-೨೦೧೪,/21/05/2014 ಬುಧವಾರ ಅವಿರೋಧವಾಗಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದು, ೨೨-೫-೨೦೧೪/ 22/05/2014 ಗುರುವಾರ ಗುಜರಾತ್-ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿಯೆಂಬ ಹೆಗ್ಗಳಿಕೆ ಇವರದಾಗಿದೆ.ರಾಜ್ಯ ಕಂದಾಯ ಮಂತ್ರಿಯಾಗಿರುವ 73 ವಯಸ್ಸಿನ ಆನಂದಿ ಅವರು ಮೋದಿ ಅವರ ನಂತರ ,ಅವರ ಉತ್ತರಾಧಕಾರಿಯಾಗಿ ಆಯ್ಕೆಯಾಗಿದ್ದಾರೆ.ಮುಖ್ಯ ಮಂತ್ರಿ ನರೇಂದ್ರ ಮೋದಿ ಭಾರತದ ಪ್ರಧಾನಿಯಾಗಿ ಆಯ್ಕೆಯಾದ್ದರಿಂದ ಅವರ ನಂತರ ಆನಂದಿ ಬೆನ್ ಪಟೇಲ್ ಮುಖ್ಯ ಮಂತ್ರಿಯಾಗಿ ಆಯ್ಕಯಾದರು. ಮುಖ್ಯ ಲೇಖನ ಗುಜರಾತು ಸರ್ಕಾರ ನೋಡಿ ಪ್ರಜಾಪ್ರಭುತ್ವದಲ್ಲಿ ರಾಜರ ರಾಜ್ಯಗಳ ವಿಲೀನ ಗುಜರಾತು ಸರ್ಕಾರ ಬಾಹ್ಯ ಸಂಪರ್ಕಗಳು Government Gujarat Government Website Development Commentary on development in Gujarat Other Map of Gujarat by MapsofIndia.com ಉಲ್ಲೇಖಗಳು ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಗುಜರಾತ್
2095
https://kn.wikipedia.org/wiki/%E0%B2%AD%E0%B2%BE%E0%B2%B0%E0%B2%A4%E0%B2%A6%20%E0%B2%B0%E0%B2%BE%E0%B2%9C%E0%B3%8D%E0%B2%AF%E0%B2%97%E0%B2%B3%E0%B3%81%20%E0%B2%AE%E0%B2%A4%E0%B3%8D%E0%B2%A4%E0%B3%81%20%E0%B2%95%E0%B3%87%E0%B2%82%E0%B2%A6%E0%B3%8D%E0%B2%B0%E0%B2%BE%E0%B2%A1%E0%B2%B3%E0%B2%BF%E0%B2%A4%20%E0%B2%AA%E0%B3%8D%E0%B2%B0%E0%B2%A6%E0%B3%87%E0%B2%B6%E0%B2%97%E0%B2%B3%E0%B3%81
ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
ಭಾರತ ಒಂದು ಸಂಯುಕ್ತ ರಾಜ್ಯಗಳ ಒಕ್ಕೂಟ. ಭಾರತ ಗಣರಾಜ್ಯ ಇದರಲ್ಲಿ ಇಪ್ಪತ್ತೆಂಟು ರಾಜ್ಯಗಳು ಹಾಗು ಎಂಟು ಕೇಂದ್ರಾಡಳಿತ ಪ್ರದೇಶಗಳು ಇವೆ. ರಾಜ್ಯಗಳು ಹಾಗು ಪ್ರಾಂತ್ಯಗಳು ಮತ್ತೆ ಜಿಲ್ಲೆಗಳಾಗಿ ಉಪವಿಭಾಗಿಸಲಾಗಿದೆ. ಇತಿಹಾಸ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ರಾಜ್ಯಗಳು ಕೇಂದ್ರಾಡಳಿತ ಪ್ರದೇಶ ಇವನ್ನೂ ನೋಡಿ ಭಾರತ ಗಣರಾಜ್ಯದ ಇತಿಹಾಸ ಭಾರತಕ್ಕೀಗ ಹೊಸ ಮ್ಯಾಪ್‌: ಇಲ್ಲಿದೆ ನೋಡಿ;ed: 02 ನವೆಂಬರ್ 2019 Subdivisions of Inida List of ರಾಜ್ಯಗಳು ಹಾಗು ಒಕ್ಕೂಟ ಪ್ರಾಂತ್ಯಗಳು of ಭಾರತ by population Emblems of Indian ರಾಜ್ಯಗಳು Aspirant ರಾಜ್ಯಗಳು of ಭಾರತ Autonomous regions of ಭಾರತ ISO 3166-2:IN ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಭಾರತದ ಸಂವಿಧಾನ ಭಾರತದ ರಾಜ್ಯಗಳ ಜನಸಂಖ್ಯೆ ಉಲ್ಲೇಖಗಳು ಬಾಹ್ಯ ಕೊಂಡಿಗಳು ಭಾರತ ಸರ್ಕಾರದ ಅಧಿಕೃತ ಜಾಲತಾಣ ಭಾರತದ ರಾಜ್ಯಗಳು ಮತ್ತು ಪ್ರಾಂತ್ಯಗಳು Subdivisions of ಭಾರತ Lists of country subdivisions Country subdivisions of Asia First-level administrative country subdivisions ಭಾರತಕ್ಕೆ ಸಂಬಂಧಿಸಿದ ಪಟ್ಟಿಗಳು ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
2097
https://kn.wikipedia.org/wiki/%E0%B2%85%E0%B2%B0%E0%B3%81%E0%B2%A3%E0%B2%BE%E0%B2%9A%E0%B2%B2%20%E0%B2%AA%E0%B3%8D%E0%B2%B0%E0%B2%A6%E0%B3%87%E0%B2%B6
ಅರುಣಾಚಲ ಪ್ರದೇಶ
ಅರುಣಾಚಲ ಪ್ರದೇಶ - ಭಾರತದ ಈಶಾನ್ಯ ರಾಜ್ಯಗಳಲ್ಲೊಂದು. ದಕ್ಷಿಣದಲ್ಲಿ ಅಸ್ಸಾಂ, ಆಗ್ನೇಯದಲ್ಲಿ ನಾಗಾಲ್ಯಾಂಡ್, ಪೂರ್ವದಲ್ಲಿ ಮ್ಯಾನ್ಮಾರ್, ಪಶ್ಚಿಮದಲ್ಲಿ ಭೂತಾನ್ ಮತ್ತು ಉತ್ತರದಲ್ಲಿ ಟಿಬೆಟ್‌ನೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಇತಿವೃಏತ್ತ 1962ಕ್ಕಿಂತ ಹಿಂದೆ ಅರುಣಾಚಲ ಪ್ರದೇಶ ರಾಜ್ಯವನ್ನು ಈಶಾನ್ಯ ಗಡಿನಾಡಿನ ಏಜೆನ್ಸಿ ಎಂದು ಕರೆಯಲಾಗುತ್ತಿತ್ತಲ್ಲದೇ ಅಸ್ಸಾಂ ರಾಜ್ಯದ ಒಂದು ಭಾಗವಾಗಿತ್ತು. 1972ರಲ್ಲಿ ಕೇಂದ್ರಾಡಳಿತ ಪ್ರದೇಶವಾಗಿ ಪರಿಗಣಿಸಲ್ಪಡುವುದರ ಜೊತೆಗೆ ಅರುಣಾಚಲಪ್ರದೇಶವೆಂದು ಪುನರ್ ನಾಮಕರಣ ಮಾಡಲಾಯಿತು. 1987 ಫೆಬ್ರವರಿ 20 ರಂದು ಇದು ಭಾರತ ಒಕ್ಕೂಟದ 24ನೆಯ ರಾಜ್ಯವಾಗಿ ಜಾರಿಗೆ ಬಂದಿತು. ಭೌಗೋಳಿಕ ಸನ್ನಿವೇಶ ಮತ್ತು ವಿಸ್ತೀರ್ಣ: ಈ ರಾಜ್ಯ 26ಡಿಗ್ರಿ-28′ ಉತ್ತರ ಅಕ್ಷಾಂಶದಿಂದ 29ಡಿಗ್ರಿ-30′ ಉ.ಅಕ್ಷಾಂಶದವರೆಗೂ ರೇಖಾಂಶಿಕವಾಗಿ 91ಡಿಗ್ರಿ30′ ಪೂ.ರೇ. ದಿಂದ 96ಡಿಗ್ರಿ 30′ ಪೂ.ರೇ. ದವರೆಗೂ ವಿಸ್ತರಿಸಿದೆ. ಈ ರಾಜ್ಯ ಪೂರ್ವದಲ್ಲಿ ಮ್ಯಾನ್ಮಾರ್, ಪಶ್ಚಿಮದಲ್ಲಿ ಭೂತಾನ್, ಉತ್ತರದಲ್ಲಿ ಚೀನ ಮತ್ತು ಟಿಬೆಟ್‍ಗಳ ಅಂತಾರಾಷ್ಟ್ರೀಯ ಗಡಿಗಳನ್ನು ಹೊಂದಿದ್ದರೆ, ದಕ್ಷಿಣದಲ್ಲಿ ಅಸ್ಸಾಂ ಮತ್ತು ನಾಗಾಲ್ಯಾಂಡ್ರಾಜ್ಯಗಳ ಗಡಿಗಳನ್ನು ಹೊಂದಿದೆ. ಈ ರಾಜ್ಯದ ಒಟ್ಟು ಭೌಗೋಳಿಕ ವಿಸ್ತೀರ್ಣ 83,743 ಚ.ಕಿಮೀ. ಇದು 16 ಜಿಲ್ಲೆಗಳನ್ನು ಹೊಂದಿದ್ದು, ಇಟಾನಗರ ಈ ರಾಜ್ಯದ ರಾಜಧಾನಿಯಾಗಿದ್ದು ಸಮುದ್ರಮಟ್ಟದಿಂದ 530 ಮೀ ಎತ್ತರದಲ್ಲಿದೆ. ಜನಸಂಖ್ಯೆ 13,82.611.ಜನಸಂಖ್ಯೆ ಬೆಳವಣಿಗೆಯ ತಖ್ತೆ ಇಲ್ಲಿದೆ. ಮೇಲ್ಮೈ ಲಕ್ಷಣ ಅರುಣಾಚಲ ಪ್ರದೇಶ ಭಾರತದ ಈಶಾನ್ಯ ಗಡಿ ಭಾಗದ ಹಿಮಾಲಯ ಪರ್ವತಗಳ ಭಾಗದಲ್ಲಿರುವ ರಾಜ್ಯವಾಗಿದೆ. ಇದು ನಾಲ್ಕು ಮೇಲ್ಮೈ ಲಕ್ಷಣಗಳಿಂದ ಕೂಡಿದೆ. ಪರ್ವತ ಶ್ರೇಣಿಗಳು ಉಪ ಪರ್ವತ ಪ್ರದೇಶ ನದಿ ಕಣವೆ ಪ್ರದೇಶಗಳು ಪರ್ವತದ ಇಳಿಜಾರುಗಳು. ಹಿಮಾಲಯದ ಶಿವಾಲಿಕ್ ಭಾಗ ಈ ರಾಜ್ಯದಲ್ಲಿ ಹಲವಾರು ಶ್ರೇಣಿಗಳನ್ನು ಹೊಂದಿದೆ. ಶಿವಾಲಿಕ್ ಪ್ರದೇಶಕ್ಕೆ ಹೊಂದಿಕೊಂಡಂತೆ ಹಬ್ಬಿರುವ ಹಲವಾರು ಬೆಟ್ಟ ಸರಣಿಗಳು ಈ ರಾಜ್ಯದಲ್ಲಿ ಉತ್ತರ ದಕ್ಷಿಣಾಭಿಮುಖವಾಗಿ ಹಬ್ಬಿವೆ. ಈ ರಾಜ್ಯದಲ್ಲಿ ಟಿಬೆಟ್‍ನಿಂದ ಭಾರತಕ್ಕೆ ಪ್ರವೇಶಿಸುವ ಬ್ರಹ್ಮ ಪುತ್ರಾ ನದಿ ಪ್ರಮುಖವಾದದ್ದು. ಇಲ್ಲಿನ ನದಿಗಳು ತಮ್ಮ ಪಾತ್ರವನ್ನು ಆಳವಾಗಿ ಕೊರೆದು ಕಣವೆ ಪ್ರದೇಶವನ್ನು ನಿರ್ಮಿಸುವುದರ ಜೊತೆಗೆ, ಅಸ್ಸಾಂ ರಾಜ್ಯದ ಮೈದಾನದಿಂದ ಇವನ್ನು ಪ್ರತ್ಯೇಕಿಸಿವೆ. ಎತ್ತರವಾದ ತಳ ಹಿಮಾಲಯದ (ಶಿವಾಲಿಕ್) ಭಾಗದಿಂದ ತಗ್ಗಾದ ನದಿ ಕಣಿವೆ ಪ್ರದೇಶದ ಕಡೆಗೆ ಈ ರಾಜ್ಯದುದ್ದಕ್ಕೂ ಇಳಿಜಾರು ಪ್ರದೇಶ ಕಂಡುಬರುತ್ತದೆ. ಜಲವ್ಯವವಸ್ಥೆ ಈ ರಾಜ್ಯ ಎತ್ತರವಾದ ಪರ್ವತ ಭಾಗದಿಂದ ಕೂಡಿದ್ದು ಇಳಿಜಾರನ್ನು ಹೊಂದಿ ಹಾಗೂ ವಾರ್ಷಿಕವಾಗಿ 500 ಸೆಂಮೀ ಮಳೆವನ್ನು ಪಡೆಯುವುದರಿಂದ ಇಲ್ಲಿ ಸರೋವರಗಳು ಮತ್ತು ನದಿಗಳು ಉಗಮ ಹೊಂದಿವೆ. ಹಲವಾರು ನದಿಗಳು ತಗ್ಗು ಪ್ರದೇಶದ ಕಡೆಗೆ ಹರಿಯುವುದರ ಜೊತೆಗೆ ಆಳವಾದ ಕಣವೆಯನ್ನು ನಿರ್ಮಿಸಿವೆ. ಇಲ್ಲಿ ಹರಿಯುವ ಪ್ರಮುಖ ನದಿ ಬ್ರಹ್ಮಪುತ್ರ ಇದು ಭಾರತದ ಪ್ರಮುಖ ನದಿಗಳಲ್ಲೊಂದಾಗಿದ್ದು, ಟಿಬೆಟಿನಿಂದ ಹರಿದು ಬಂದು ಅರುಣಾಚಲ ಪ್ರದೇಶ ಹಾಗೂ ಅಸ್ಸಾಂ ರಾಜ್ಯಗಳ ಮೂಲಕ ಹರಿದು ಬಂಗಾಲಕೊಲ್ಲಿಗೆ ಸೇರುವ ಮೊದಲು ಬಾಂಗ್ಲಾದೇಶದ ಮೂಲಕವೂ ಹರಿಯುತ್ತದೆ. ಇಲ್ಲಿ ಕಾಮೆಂಗ್, ಸುಬನ್ ಸಿರಿ, ಸಿಯಾಂಗ್, ಲೋಹಿತ್ ಮತ್ತು ಟೆರಾವ್, ಕಾಮ್ಟ, ಶಿವೂಮ್, ದಿಬಾಂಗ್, ನೋಹಾ - ದಿಹಾಂಗ್, ಕಾಮ್ಟಾಂಗ್ ಮುಂತಾದವು ಪ್ರಮುಖ ನದಿಗಳು. ಮಣ್ಣಿನ ಪ್ರಕಾರಗಳು ಈ ರಾಜ್ಯದ ಪರ್ವತ ಪ್ರದೇಶಗಳು ದಟ್ಟ ಅರಣ್ಯಗಳನ್ನು ಹೊಂದಿದ್ದು, ಹೆಚ್ಚು ಮಳೆಯನ್ನು ಪಡೆಯುವುದರಿಂದ ವಿಭಿನ್ನ ರೀತಿಯ ಮಣ್ಣುಗಳನ್ನು ಹೊಂದಿದೆ. ಇಲ್ಲಿ ನಾಲ್ಕು ವಿಧದ ಮಣ್ಣುಗಳನ್ನು ಕಾಣಬಹುದು: ಅರಣ್ಯ ಮಣ್ಣು: ಇದು ಎತ್ತರವಾದ ಬೆಟ್ಟ ಹಾಗೂ ಪರ್ವತ ಪ್ರದೇಶಗಳಲ್ಲಿ ಕಂಡು ಬರುತ್ತದೆ. ತೆಳು ಕಪ್ಪು ಬಣ್ಣದಿಂದ ಕೂಡಿದ್ದು, ಸಾಕಷ್ಟು ಸಾರಜನಕವನ್ನು ಹೊಂದಿದೆ. ಮರದ ಎಲೆಗಳು ಮಣಿನಲ್ಲಿ ಕೊಳೆತು ಹ್ಯೂಮಸ್ ಅಥವಾ ಜೈವಿಕಾಂಶದ ಪ್ರಮಾಣ ಅಧಿಕವಾಗಿದೆ. ಜೌಗುಮಣ್ಣು: ಬೆಟ್ಟಗಳಿಂದ ಕೂಡಿದ ಇಳಿಜಾರಿನ ತಗ್ಗು ಪ್ರದೇಶಗಳಲ್ಲಿ ಕಂಡು ಬರುವ ಮಣ್ಣವನ್ನು ಜೌಗು ಮಣ್ಣು ಎನ್ನಲಾಗುತ್ತದೆ. ಇಲ್ಲಿ ಸದಾ ನೀರಿನ ಜಿನುಗುವಿಕೆ ಅಧಿಕ ಪ್ರಮಾಣದಲಿದ್ದು, ಜೈವಿಕಾಂಶ ಹೆಚ್ಚಾಗಿರುತ್ತದೆ. ಬತ್ತ ಹಾಗೂ ಅಧಿಕ ನೀರಿನ ಆಶ್ರಯದಲ್ಲಿ ಬೆಳೆಯುವ ಇತರೆ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಜಂಬಿಟ್ಟಿಗೆ ಮಣ್ಣು: ಈ ರಾಜ್ಯದಲ್ಲಿ ಮಳೆ ಯಥೇಚ್ಛವಾಗಿ ಬೀಳುವುದರಿಂದ ಇಳಿಜಾರು ಪ್ರದೇಶಗಳಲ್ಲಿ ಕಂಡು ಬರುವ ಸಿಲಿಕ ಮತ್ತು ಲವಣಾಂಶಗಳೆಲ್ಲವೂ ಕರಗಿ ಮತ್ತು ತೊಳೆಸಲ್ಪಟ್ಟು ಕೇವಲ ಅಲ್ಯೂಮಿನಿಯಂ ಮತ್ತು ಕಬ್ಬಿಣಾಂಶಗಳು ಹಾಗೆಯೇ ಉಳಿದಿರುತ್ತವೆ. ಈ ಮಣ್ಣನ್ನೇ ಜಂಬಿಟ್ಟಿಗೆ ಮಣ್ಣು ಎನ್ನುವರು. ಇದರಲ್ಲಿ ತರಕಾರಿ ಹಾಗೂ ಇತರೆ ಕೆಲವು ತೋಟಗಾರಿಕಾ (ಹಣ್ಣು) ಬೆಳೆಗಳನ್ನು ಬೆಳೆಯಲಾಗುತ್ತಿದೆ. ಮೆಕ್ಕಲು ಮಣ್ಣು: ಪರ್ವತದ ಎತರ ಪ್ರದೇಶ ಹಾಗೂ ಇಳಿಜಾರುಗಳಿಂದ ಅಧಿಕ ಮಳೆಯ ನೀರು ಹಾಗೂ ನದಿಗಳಿಂದ ಸಾಗಿಸಲಟ್ಟು, ನದಿ ಕಣವೆಗಳ ತಗ್ಗುಪ್ರದೇಶಗಳಲ್ಲಿ ಸಂಚಯಿಸಲ್ಪಟ್ಟಿರುವ ಮಣ್ಣನ್ನೇ ಮೆಕ್ಕಲು ಮಣ್ಣು ಎನ್ನುವರು. ಇದು ಹೆಚ್ಚು ಫಲವತ್ತಾಗಿದ್ದು ಬತ್ತ ಹಾಗೂ ಗೋಧಿಗಳಂತಹ ಪಮುಖ ಬೆಳೆಗಳನ್ನು ಇಲ್ಲಿ ಬೆಳೆಯಲಾಗುತ್ತಿದೆ. ವಾಯುಗುಣ ಎತ್ತರಕ್ಕನುಗುಣವಾಗಿ ವ್ಯತ್ಯಾಸವಾಗುತ್ತದೆ. ಈ ರಾಜ್ಯದ ದಕ್ಷಿಣ ಭಾಗ ಉಷ್ಣ ಮತ್ತು ತೇವಯುತ ಉಪ ಉಷ್ಣವಲಯ ವಾಯುಗುಣವನ್ನು ಹೊಂದಿದೆ. ಕೇಂದ್ರ ಭಾಗ ತಂಪಾದ ವಾಯುಗುಣವನ್ನು ಹೊಂದಿದ್ದರೆ, ಇದರ ಉತ್ತರ ಭಾಗ ಆಲ್ಪೈನ್ ವಾಯುಗುಣವನ್ನು ಹೊಂದಿದೆ. ಮಳೆ ಅಸಮಾನವಾಗಿ ಹಂಚಿಕೆಯಾಗಿದ್ದು, ವರ್ಷವಿಡೀ ಮಳೆ ಬೀಳುತ್ತದೆ. ಮೇ ತಿಂಗಳಿನಿಂದ ಸೆಪ್ಟೆಂಬರ್‍ವರೆಗಿನ ಅವಧಿ ಈ ರಾಜ್ಯದಲ್ಲಿನ ಅತಿ ತೇವಯುತ ಋತುವಾಗಿರುತ್ತದೆ. ಸೆಪ್ಟೆಂಬರ್ ತಿಂಗಳ ಮಧ್ಯ ಭಾಗದಿಂದ ಡಿಸೆಂಬರ್ ತಿಂಗಳ ಮಧ್ಯದವರೆಗೆ ಹಾಗೂ ಮಧ್ಯ ಮಾರ್ಚ್‍ನಿಂದ ಮಧ್ಯ ಜೂನ್‍ವರೆಗಿನ ಅವಧಿ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಲು ಒಳ್ಳೆಯ ಅವಧಿಯಾಗಿದ್ದು, ಆಗ ನಿರಭ್ರ ಆಕಾಶವಿರುವುದರ ಜೊತೆಗೆ ಉತ್ತಮ ಹವಾಗುಣವಿರುತ್ತದೆ. ಇಲ್ಲಿ ಮಳೆ 100 - 575 ಸೆಂಮೀವರೆಗೆ ವ್ಯತ್ಯಾಸಗೊಳ್ಳುತ್ತಾ ಹೋಗುತ್ತದೆ. ಸಸ್ಯವರ್ಗ ಇದು ಶ್ರೀಮಂತವಾದ ಸಸ್ಯ ಸಂಪತ್ವನ್ನು ಹೊಂದಿದ್ದು, ಸು. 5000 ಜಾತಿಯ ಮರಗಿಡಗಳಿವೆ. ಇದರಲ್ಲಿ ಸು. 500 ಅಪರೂಪದ ಸಸ್ಯ ಸಂಕುಲಗಳಿವೆ. ಇಲ್ಲಿನ ಸ್ವಾಭಾವಿಕ ಸಸ್ಯ ವರ್ಗ ಈ ರಾಜ್ಯದ ಮಳೆಯ ಹಂಚಿಕೆ, ಎತ್ತರ ಮತ್ತು ಮಣ್ಣಿನ ಲಕ್ಷಣಗಳನ್ನು ಆಧರಿಸಿದಂತೆ ಹಂಚಿಕೆ ಗೊಂಡಿದೆ. ಈ ರಾಜ್ಯದಲ್ಲಿ ಕಂಡು ಬರುವ ಸಸ್ಯವರ್ಗಗಳನ್ನು ಅಗಲ ಎಲೆಯುಳ್ಳ ಐದು ವಿಧದ ಅರಣ್ಯಗಳಾಗಿ ವಿಂಗಡಿಸಲಾಗಿದೆ: ಉಷ್ಣ ವಲಯದ ಅರಣ್ಯಗಳು ಉಪ ಉಷ್ಣ ವಲಯದ ಅರಣ್ಯಗಳು ಪೈನ್ ಅರಣ್ಯಗಳು ಸಮಶೀತೋಷ್ಣ ವಲಯದ ಅರಣ್ಯಗಳು ಆಲೈನ್ ಅರಣ್ಯಗಳು. ಈ ಮೇಲಿನ ಎಲ್ಲಾ ವಿಧದ ಅರಣ್ಯಗಳಲ್ಲೂ ಬಿದಿರು ಮತ್ತು ಇತರೆ ಹುಲ್ಲುಜಾತಿಯ ಸಸ್ಯ ವರ್ಗಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಈ ರಾಜ್ಯದ ಕಣಿವೆಗಳ ತಗ್ಗು ಪ್ರದೇಶಗಳು ಉಷ್ಣ ವಲಯದ ಅರಣ್ಯವನ್ನು ಹೊಂದಿದ್ದು ದಟ್ಟವಾದ ಹಾಗೂ ಗಟ್ಟಿ ಜಾತಿಯ ಮರಗಳು ಕಂಡುಬರುತ್ತವೆ. ಪೈನ್ ಅರಣ್ಯಗಳು ಬೆಟ್ಟಮಯ ಪ್ರದೇಶಗಳಲ್ಲಿದ್ದು, ಮೊನಚಾದ ಎಲೆಗಳನ್ನು ಒಳಗೊಂಡಿರುವ ಮೃದು ಮರಗಳಿಂದ ಕೂಡಿವೆ. ಆಲ್ಫೈನ್ ಅರಣ್ಯಗಳು ಪರ್ವತದ ಅತಿ ಉನ್ನತ ಅಥವಾ ಎತ್ತರ ಪ್ರದೇಶಗಳಲ್ಲಿ ಕಂಡುಬರುತ್ತಿದ್ದು, ಕೇವಲ ಹುಲ್ಲುಜಾತಿಗೆ ಸೇರಿದ ಸಸ್ಯ ವರ್ಗದಿಂದ ಕೂಡಿವೆ. ಪ್ರಾಣಿವರ್ಗ ಈ ರಾಜ್ಯ ವನ್ಯಪ್ರಾಣಿ ಸಂಕುಲ ಹೊಂದಿರುವ ಭಾರತದ ರಾಜ್ಯಗಳಲ್ಲಿ ಶ್ರೀಮಂತವಾದದ್ದು. ಇಲ್ಲಿ ವಿಶಿಷ್ಟ್ಟ ಹಾಗೂ ವಿವಿಧ ಜಾತಿಯ 85 ಪ್ರಾಣಿ ಸಂಕುಲಗಳು ಕಂಡುಬರುತ್ತವೆ. ಇಲ್ಲಿನ ಶಿವಾಲಿಕ್ಮತ್ತು ಮೈದಾನದ ಅಂಚುಗಳಲ್ಲಿ ಆನೆ, ಕಾಡೆಮ್ಮೆಗಳು ಕಂಡುಬರುತ್ತವೆ. ಹುಲಿ, ಚಿರತೆ, ಬಿಳಿಬಣ್ಣದ ಗಿಬ್ಬನ್, ಹಿಮಜಿಂಕೆ, ಕೆಂಪು ಬಣ್ಣದ ಚಿರತೆ, ಹಿಮಾಲಯದ ಕಪ್ಪು ಕರಡಿ ಮುಂತಾದ ಪ್ರಾಣಿಗಳು ಇಲ್ಲಿ ವಾಸಿಸುತ್ತಿವೆ. ಇದಲ್ಲದೇ 500 ವಿವಿಧ ಜಾತಿಯ ಪಕ್ಷಿಗಳು ಇಲ್ಲಿ ವಾಸಿಸುತ್ತಿದ್ದು, ಭಾರತೀಯ ಹಾರ್ನ್‍ಬಿಲ್ ಜಾತಿಯ ಪಕ್ಷಿಗಳಿಗೆ ಈ ರಾಜ್ಯ ತವರಿದ್ದಂತೆ. ಬಿಳಿ ರೆಕ್ಕಗಳಿರುವ ಮರದ ಬಾತುಕೋಳಿ, ಹಸುರು ಪಾರಿವಾಳ, ಬಂಗಾಲದ ಫ್ಲೋರಿಕಾನ್, ಟಿಮ್ನಿನಿಕ್ಸ್, ಸ್ಕ್ಲಾಟರ್ಮಾ ನಾರ್ ಟಿಗೋಡಾನ್‍ಗಳಂತಹ ಪಕ್ಷಿಗಳು ಇಲ್ಲಿವೆ. ಇವುಗಳ ಸಂರಕ್ಷಣೆಗಾಗಿ ಹಲವು ವನ್ಯ ಜೀವಿ ಸಂರಕ್ಷಣಾ ಹಾಗೂ ಪಕ್ಷಿ ಧಾಮ ಗಳು ಈ ರಾಜ್ಯದಲ್ಲಿ ಸ್ಥಾಪನೆ ಗೊಂಡಿವೆ; ಇಲ್ಲಿ ಎರಡು ರಾಷ್ಟ್ರೀಯ ಉದ್ಯಾನವನಗಳಾದ ನಾಮ್ ದಪ್ಹಾ ಮತ್ತು ಮೌಲಿಂಗ್‍ಗಳು ಹಾಗೂ ಈ ರಾಜ್ಯದ ಅರಣ್ಯ ಇಲಾಖೆಯಿಂದ ನಿರ್ವಹಿಸಲಡುತ್ತಿರುವ 8 ವನ್ಯ ಜೀವಿ ಸಂರಕ್ಷಣಾ ಧಾಮಗಳಾದ ಪಾಕಾಯ್, ಇಟಾನಗರ, ಡೇಯಿಂಗ್ ಇರಿಂಗ್, ಮೆಹಾಪೋಕಾನೆ, ಈಗಲ್ಸ್ ನೆಸ್ಟ್, ಕಮ್ಲಾಂಗ್ ಮತ್ತು ದಿಬಾಂಗ್‍ಗಳು ಇವೆ. ಕೃಷಿ ಈ ರಾಜ್ಯದಲ್ಲಿ ವರ್ಗಾವಣೆ ಬೇಸಾಯ ಕ್ರಮ (ಜೂಮಿಂಗ್) ಜಾರಿಯಲ್ಲಿದೆ. ಒಗ್ಗೂಡಿ ಕೃಷಿ ಮಾಡುವ ಪದ್ಧತಿ ಮುಖ್ಯಸ್ಥಾನವನ್ನು ಪಡೆದುಕೊಂಡಿದೆ. ಈ ರಾಜ್ಯದ ಬಹುತೇಕ ಜನ ಈ ಪದ್ಧತಿವನ್ನು ಪ್ರಾಚೀನ ಕಾಲದಿಂದಲೂ ಅನುಸರಿಸುತ್ತಾ ಬಂದಿದ್ದಾರೆ. ಜೂಮಿಂಗ್ ಬೇಸಾಯ ಪದ್ಧತಿಯಲ್ಲಿ (ಕುಂಬ್ರಿ) ಅಲ್ಲಲ್ಲಿ ಅರಣ್ಯದಲ್ಲಿರುವ ಮರಗಳನ್ನು ಕಡಿದು ಕೆಲವು ವರ್ಷಗಳ ಅನಂತರ ಬೆಂಕಿಯಲ್ಲಿ ಸುಟ್ಟು ಹಾಕಿ ಆ ಪ್ರದೇಶವನ್ನು ನೇಗಿಲಿನಂತಹ ಉಪಕರಣದಿಂದ ಉಳುಮೆ ಮಾಡಿ ನೇಗಿಲ ಹಿಂದೆ ಬಿತ್ತನೆ ಬೀಜಗಳನ್ನು ಬಿತ್ತಿ, ಕನಿಷ್ಟ ಪಕ್ಷ ನಾಲ್ಕು ಭಾರಿ ಕಳೆ ತೆಗೆದು, ಬೆಳೆಯುತ್ತಿರುವ ಬೆಳೆಯನ್ನು ಕಾಡು ಪ್ರಾಣಿಗಳು ಮತ್ತು ಪಕ್ಷಿಗಳಿಂದ ಕಾಯುವ ಹಾಗೂ ಸಂರಕ್ಷಿಸುವುದರ ಮೂಲಕ ಅಳಿದುಳಿದ ಮಿಶ್ರ ಫಲವನ್ನು ಪಡೆದುಕೊಳ್ಳುತ್ತಾರೆ. ಇಲ್ಲಿ ಕೆಲಸಗಾರರು ಪುರುಷ, ಮಹಿಳೆ ಹಾಗೂ ಮಕ್ಕಳು ಸು. 5-6 ತಿಂಗಳುಗಳ ಕಾಲ ಇದಕ್ಕಾಗಿ ಶ್ರಮವಹಿಸುವರು. ಬತ್ತ, ತೃಣ ಧಾನ್ಯಗಳು, ಗೋದಿ ಮತ್ತು ಮೆಕ್ಕೆಜೋಳ ಇಲ್ಲಿನ ಪ್ರಮುಖ ಬೆಳೆಗಳು. ಆಲೂಗಡ್ಡೆ, ಬದನೆ, ಶುಂಠಿ, ಮೆಣಸಿನಕಾಯಿ, ಕುಂಬಳ, ಸೌತೆ, ಅನಾನಸ್, ಕಿತ್ತಳೆ, ನಿಂಬೆ ಪರಂಗಿ, ಬಾಳೆ ಇತ್ಯಾದಿ ತರಕಾರಿ ಮತ್ತು ಹಣ್ಣುಗಳನ್ನು ಇಲ್ಲಿ ಬೆಳೆಯಲಾಗುತ್ತಿದೆ. ನೈಸರ್ಗಿಕ ಸಂಪನ್ಮೂಲಗಳು ಈ ರಾಜ್ಯ ಅಪಾರ ಪ್ರಮಾಣದ ಖನಿಜ ಸಂಪನ್ಮೂಲಗಳನ್ನು ಹೊಂದಿದೆ. ಕಲಿದ್ದಲು, ಸುಣ್ಣಕಲ್ಲು ಕಬ್ಬಿಣದ ಅದಿರು, ಗ್ರಾನೈಟ್, ಬೆಣಚು ಶಿಲೆ, ಅಭ್ರಕ, ತಾಮ್ರ, ಡಾಲೋಮೈಟ್, ಕಚ್ಚಾ ತೈಲ, ಸ್ವಾಭಾವಿಕ ಅನಿಲ ಹಾಗೂ ಅಮೃತಶಿಲೆಗಳಂತಹ ಖನಿಜ ಸಂಪನ್ಮೂಲಗಳು ಈ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಹಂಚಿಕೆಯಾಗಿವೆ. ಇದರ ಜೊತೆಗೆ ಜಲವಿದ್ಯುಚ್ಛಕ್ತಿವನ್ನು ಉತ್ಪಾದಿಸಬಲ್ಲ ಸಂಭಾವ್ಯ ಪ್ರದೇಶವಾಗಿದೆ. ಇಲ್ಲಿ 1991 ರಲ್ಲಿ ಅರುಣಾಚಲ ಪ್ರದೇಶ ಖನಿಜ ಅಭಿವೃದ್ಧಿ ಮತ್ತು ವಾಣಿಜ್ಯ ಕಾರ್ಪೋರೇಷನ್ ಲಿಮಿಟೆಡ್ ಅರಂಭವಾಯಿತು. ನಾಮ್‍ಚಿಕ್ ನಾಮ್‍ಹುಕ್ ಪ್ರದೇಶಗಳಲ್ಲಿನ ಕಲಿದ್ದಲು ಕ್ಷೇತ್ರಗಳು ಈ ಸಂಸ್ಥೆಯ ಅಧೀನದಲ್ಲಿವೆ. ಕೈಗಾರಿಕೆಗಳು ಈ ರಾಜ್ಯ ಹೊಂದಿರುವ ಅರಣ್ಯ ಸಂಪನ್ಮೂಲದ ಆಧಾರದ ಮೇಲೆ ಹಲವಾರು ಮಧ್ಯ ಮ ಪ್ರಮಾಣದ ಕೈಗಾರಿಕೆಗಳನ್ನು ಹೊಂದಿದೆ. ಇಲ್ಲಿ ಸಿಮೆಂಟ್ ಉತ್ಪಾದನ ಸ್ಥಾವರಗಳೂ ಹಣ್ಣು ಸಂರಕ್ಷಣಾ ಘಟಕಗಳೂ ತಲೆಯೆತ್ತಿವೆ. ಅಸಂಖ್ಯಾತ ಕರಕುಶಲ ಉತ್ಪನ್ನ ತರಬೇತಿ ಕೇಂದ್ರಗಳಿವೆ. ಇಲ್ಲಿನ ಕೈಮಗ್ಗ ಕೈಗಾರಿಕೆಗಳು ಅತ್ಯುತ್ತಮ ಪ್ರಗತಿಯನ್ನು ಸಾಧಿಸಿವೆ. ಇಲ್ಲಿನ ಜನ ಬೆತ್ತ ಮತ್ತು ಬಿದಿರಿನ ಬುಟ್ಟಿಗಳನ್ನು ಹೆಣೆಯುವುದರಲ್ಲಿ ಪ್ರಾವಿಣ್ಯತೆ ಪಡೆದಿದ್ದಾರೆ. ಮರದ ಕೆತ್ತನೆ, ಕಮ್ಮಾರಿಕೆಗಳಂತಹ ವೃತ್ತಿಗಳೂ ಕೆಲವು ಹಳ್ಳಿಗಳಲ್ಲಿ ಕಂಡು ಬರುತ್ತವೆ. ಗುದ್ದಲಿ, ಹಾರೆ ಇತ್ಯಾದಿ ಕೃಷಿ ಯೋಗ್ಯ ಹಾಗೂ ದೈನಂದಿನ ಚಟುವಟಿಕೆಗಳಿಗೆ ಅಗತ್ಯವೆನಿಸುವ ಉಪಕರಣಗಳನ್ನೂ ತಯಾರಿಸಲಾಗುತ್ತದೆ. ಇಲ್ಲಿ ಸಣ್ಣ ಪ್ರಮಾಣದ ಗುಡಿ ಕೈಗಾರಿಕೆಗಳು, ಪ್ಲೈವುಡ್ ಹಾಗೂ ಮೇಣದ ಬತ್ತಿ ತಯಾರಿಕಾ ಘಟಕಗಳೂ ಸ್ಥಾಪನೆಗೂಂಡಿವೆ. ಸಾರಿಗೆ ಸಂಪರ್ಕ ಈ ರಾಜ್ಯ ಉತ್ತಮ ರಸ್ತೆ ಮತ್ತು ವಾಯುಸಾರಿಗೆ ಸಂಪರ್ಕಗಳನ್ನು ಹೊಂದಿದೆ. ರಾಜ್ಯ ಸಾರಿಗೆ ಸಂಸ್ಥೆ ಕ್ರಮಬದ್ಧವಾಗಿ ಹಾಗೂ ನಿರಂತರವಾಗಿ ರಾಜ್ಯದ ವಿವಿಧ ಪ್ರದೇಶಗಳ ನಡುವೆ ಸಂಪರ್ಕವನ್ನು ಕಲ್ಪಿಸುತ್ತಿರುವುದರ ಜೊತೆಗೆ ನೆರೆ ರಾಜ್ಯಗಳೂಡನೆ ಸಂಪರ್ಕವನ್ನು ಕಲಿಸಿಕೊಟ್ಟಿದೆ. ನಾಹರ್‍ಲಗೂನ್ ಮಾರ್ಗವಾಗಿ ಉತ್ತರ ಲಖಿಂಪುರ ಮತ್ತು ಇಟಾನಗರಗಳ ನಡುವೆ ನೇರ ಸಾರಿಗೆ ಸೇವೆಯನ್ನು ಕಲ್ಪಿಸಲಾಗಿದೆ. ಪ್ರತಿ ನಿತ್ಯವೂ ಇಟಾನಗರದಿಂದ 429 ಕಿಮೀ ದೂರದಲ್ಲಿರುವ ಗುವಾಹಟಿಗೆ ಬಸ್ ಸಂಪರ್ಕವಿದೆ. ಇಟಾನಗರದಿಂದ 33 ಕಿಮೀ ಹಾಗೂ ನಹಾರ್ ಲಗೂನ್‍ ನಿಂದ 23 ಕಿಮೀ ದೂರದಲ್ಲಿರುವ ಅಸ್ಸಾಮಿನ ಹಾರ್ಮುಟಿ ರೈಲ್ವೆ ನಿಲ್ದಾಣ ಈ ರಾಜ್ಯಕ್ಕೆ ಹತ್ತಿರದ ರೈಲು ನಿಲ್ದಾಣ. ಆದರೂ ಇಟಾನಗರದಿಂದ 60 ಕಿಮೀ, ನಹರ್ ಲಗೂನ್‍ನಿಂದ 50 ಕಿಮೀ ದೂರದಲ್ಲಿರುವ ಅಸ್ಸಾಂ ರಾಜ್ಯದ ಉತ್ತರ ಲಖಿಂಪುರ ರೈಲ್ವೆ ನಿಲ್ದಾಣ, ಆಧುನಿಕ ಸೌಲಭ್ಯ ಗಳನ್ನು ಒಳಗೊಂಡಿರುವ ನಿಲ್ದಾಣ. ಇಟಾನಗರದಿಂದ 67 ಕಿಮೀ ನಹರ್‍ಲಗೂನ್‍ನಿಂದ 57 ಕಿಮೀ ದೂರದಲ್ಲಿರುವ ಅಸ್ಸಾಂನ ಉತ್ತರ ಲಖಿಂಪುರದಲ್ಲಿರುವ ಲಿಲಾಬಾರಿಯಲ್ಲಿಯ ವಿಮಾನ ನಿಲ್ದಾಣ ಅತಿ ಸಮೀಪವಾದದ್ದಾಗಿದೆ. ಇಂಡಿಯನ್ ಏರ್‍ಲೈನ್ಸ್ ಸಂಸ್ಥೆ ಪ್ರತೀ ಬುಧವಾರ, ಶುಕ್ರವಾರ ಮತ್ತು ಭಾನುವಾರಗಳಂದು ಕೋಲ್ಕತ್ತದಿಂದ ತೇಜ್‍ಪುರಗಳ ನಡುವೆ (ಇಟಾನಗರದಿಂದ 216 ಕಿಮೀ ದೂರದಲ್ಲಿರುವ) ನೇರ ವಿಮಾನ ಸೇವೆಯನ್ನೂ ಕಲ್ಪಿಸುತ್ತಿದೆ. ಗುವಾಹಟಿಯಿಂದ ನಹರ್ ಲಗೂನ್‍ಗಳ ನಡುವೆ ಹೆಲಿಕಾಪ್ಟರ್ ಸೇವೆಯನ್ನು ಕಲ್ಪಿಸಲಾಗಿದೆ. ವಾಣಿಜ್ಯ ರಾಜ್ಯದಲ್ಲಿ ಹಲವು ಪಟ್ಟಣ, ನಗರ ಮತ್ತು ವಾಣಿಜ್ಯ ಕೇಂದ್ರಗಳಿವೆ. ಸಾಮಾನ್ಯವಾಗಿ ಪವಾಸಿ ಕೇಂದಗಳು ವಾಣಿಜ್ಯ ಕೇಂದ್ರಗಳಾಗಿಯೂ ಕಂಡುಬರುತ್ತವೆ. ತವಾಂಗ್, ಬಾಮ್ಡಿಲಾ, ಟಿಪಿ, ಇಟಾನಗರ, ಝಿರೋ, ಡಾಪೋರಿಜೋ, ಅಲಾಂಗ್, ಪರಶುರಾಮ್‍ರಾಯ್ ಕುಂಡ್, ಮಲಿನಿತನ್, ಲಿಕ್‍ಬಾಲಿ, ನಾಮ್‍ಸಾಯ್, ಮಾಯಾವೋ ಮತ್ತು ಚಾಂಗ್‍ಲಾಂಗ್ ಇಲ್ಲಿನ ಪ್ರವಾಸಿ ತಾಣಗಳು. ಇಲ್ಲಿನ ಮರದ ಕೆತ್ತನೆ, ಬಿದಿರು ಮತ್ತು ಬೆತ್ತದ ಬುಟ್ಟಿ ಮತ್ತು ಕರಕುಶಲ ಉತನ್ನಗಳು ಈ ರಾಜ್ಯವನ್ನು ವಾಣಿಜ್ಯಾತ್ಮಕವಾಗಿ ಖ್ಯಾತಿಗೊಳಿಸಿದೆ. ರಾಜ್ಯದ ಜನಸಂಖ್ಯೆ 10,91,117. ಅದರಲ್ಲಿ 5,73,951 ಪುರುಷರು, 5,17,166 ಸ್ತ್ರೀಯರು. ಇಲ್ಲಿನ ಲಿಂಗಾನುಪಾತ ಪ್ರಮಾಣ 1000 ಪುರುಷರಿಗೆ 901 ಸ್ತ್ರೀಯರು. ಈ ರಾಜ್ಯದ ಸಾಕ್ಷರತೆಯ ಪ್ರಮಾಣ ಶೇ. 54.74. ಇಲ್ಲಿನ ಜನಸಂಖ್ಯೆ ಮುಖ್ಯವಾಗಿ ಬುಡಕಟ್ಟು ಸಮುದಾಯದವರಿಂದ ಕೂಡಿದೆ. ಈ ರಾಜ್ಯ 20 ಮುಖ್ಯ ಬುಡಕಟ್ಟು ಹಾಗೂ ಅವುಗಳ ಅಸಂಖ್ಯಾತ ಉಪಬುಡಕಟ್ಟುಗಳನ್ನು ಹೊಂದಿದೆ. ಮುಖ್ಯವಾದ ಬುಡಕಟ್ಟುಗಳೆಂದರೆ - ಆದೀಸ್, ನಿಶಿ, ಅಪತಾನಿ, ಟಾಗಿನ್, ವಿಸ್ಮಿ, ಖಾಮ್ಟಿ, ನಾಯ್ಟಿ, ವಾಂಖೋ, ಟಾಂಗ್‍ಕಾ, ಸಿಂಗ್‍ಪ್ಹೋ, ಮೊನ್ಹಾ, ಕೆರ್ಡೂಕ್‍ಪೆನ್ ಮತ್ತು ಅಕಾಗಳು. ಇವರು ತಮ್ಮದೇ ಆದ ಭಾಷೆಗಳನ್ನು ಮಾತನಾಡುತ್ತಾರೆ. ಇಲ್ಲಿನ ಪ್ರಮುಖ ಭಾಷೆಗಳು ಮೋದ್ವಾ, ಅಪತಾನಿ, ಹಿಲ್ ಮಿರಿ, ಇಡು, ಟಾಗಿನ್ ಆದಿ, ಕಾಮ್ಟಿ, ಸಿಂಗ್‍ಪ್ಹೋ ಟಾಂಗ್‍ಸಾ, ನೋಕ್ಟೆ, ವಾಂಖೋ, ದಿಗಾರೂ, ಮಿಜಿ. ಪ್ರಮುಖ ನಗರ ಮತ್ತು ಪಟ್ಟಣಗಳು ಇಟಾನಗರ, ನಹರ್‍ಲಗೂನ್, ಟವಾಂಗ್, ಬಾಮ್ಡಿಲಾ, ರೂಪ, ಭಾಲುಕ್ ಪೊಂಗ್, ಸೆಪ್ಪಾ, ದಾಪೋರಿಜೋ, ಅಲಾಂಗ್, ಪಾಸಿಘಾಟ್, ಯಿಂಗ್ ಕಿಯಾಂಗ್ ರೋಯಿಂಗ್, ಟೆಝ, ನಾಮ್‍ಸಾಯ್, ಖೋನ್ಸಾ, ಅದಿನಿ, ಚಾಂಗ್‍ಲಾಂಗ್ ಮುಂತಾದವು. (ಕೆಳಗಿನ ಮೂರೂ ಚುನಾವಣೆಯ ವಿಭಾಗಗಳನ್ನು ಹೊಸ ಪುಟಕ್ಕೆ ಹಾಕಿದೆ:ನೋಡಿ: ಅರುಣಾಚಲ ಪ್ರದೇಶ ವಿಧಾನಸಭೆ ಮತ್ತು ಚುನಾವಣೆಗಳು. ೨೦೧೪ ರಲ್ಲಿ ನೆಡೆದ ಲೋಕ ಸಭೆ ಮತ್ತು ವಿಧಾನ ಸಭೆ ಚುನಾವಣೆ ಫಲಿತಾಂಶ (ಸಂಪಾದಕರು ಇದನ್ನು ಅಳಿಸದಿರಲಿ-ಇಲ್ಲವೇ ಬೇರೆ ಪುಟ ತೆರೆಯಲಿ;ಮಾಹಿತಿ ಅಳಿಸುವುದು ಸರಿಯಲ್ಲ) (ಈಗ ಬೇರೆ ಪುಟ ತೆರೆದಿದೆ:ಅರುಣಾಚಲ ಪ್ರದೇಶ ವಿಧಾನಸಭೆ ಮತ್ತು ಚುನಾವಣೆಗಳುದೊಡ್ಡ ಪಠ್ಯ ಅರುಣಾಚಲ ಪ್ರದೇಶ ವಿಧಾನಸಭೆಯ ಚುನಾವಣೆ 2014 9 ಏಪ್ರಿಲ್ 2014 ರಂದು ಅರುಣಾಚಲ ಪ್ರದೇಶ ವಿಧಾನಸಭೆಯ 60 ಸ್ಥಾನಗಳಿಗೆ ಚುನಾವಣೆ ನಡೆಯಿತು.16 ಮೇ 2014ರಂದು ಮತಗಳನ್ನು ಎಣಿಸಲಾಯಿತು 2014ರ ಸಂಸತ್ ಚುನಾವಣೆ ಜೊತೆಗೆ ನಡೆಯಿತು. [2] ರಾಜ್ಯಪಾಲ: ಜ್ಯೋತಿ ಪ್ರಸಾದ್‌ ರಾಜ್‌ಖೋವಾ ಮುಖ್ಯಮಂತ್ರಿ: ನಬಂ ಟುಕಿ (ಭಾ.ರಾ.ಕಾಂಗ್ರೆಸ್) ಮುಖ್ಯಮಂತ್ರಿ ನಬಂ ಟುಕಿ ಅವರ ಸರ್ಕಾರ ವಜಾ ದಿ.ಜನವರಿ 27, 2016 ರಂದು ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದೆ ರಾಜ್ಯಪಾಲ ಜ್ಯೋತಿ ಪ್ರಸಾದ್‌ ರಾಜ್‌ಖೋವಾ ಅವರು ಆಡಳಿತದ ನಿಯಂತ್ರಣವನ್ನು ತಮ್ಮ ಕೈಗೆ ತೆಗೆದುಕೊಂಡಿದ್ದಾರೆ. ಹಿರಿಯ ಅಧಿಕಾರಿಗಳ ಸಭೆ ಕರೆದ ರಾಜ್ಯಪಾಲರು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ರಾಷ್ಟ್ರಪತಿ ಆಳ್ವಿಕೆಗೆ ಕಾರಣ : 2016 ಡಿಸೆಂಬರ್ 16, ರಂದು ನಿಜವಾದ ಬಿಕ್ಕಟ್ಟು ಆರಂಭವಯಿತು. 21 ವಿಧಾನಸಭಾ, ಬಂಡಾಯ ಕಾಂಗ್ರೆಸ್ ಶಾಸಕರು 11 ಬಿಜೆಪಿ ಸದಸ್ಯರ ಮತ್ತು ಇಬ್ಬರು ಪಕ್ಷೇತರರ ಜೊತೆ ಸೇರಿ, ಅಧಿಕೃತವಲ್ಲದ ತಾತ್ಕಾಲಿಕ ಪ್ರತ್ಯೇಕ ಸ್ಥಳದಲ್ಲಿ ಸಭೆ ಸೇರಿ ಸ್ಪೀಕರ್ ನಬಮ್ ರುಬಿಯಾ ಅವರನ್ನು "ಅಪರಾಧಿಯೆಂದು ವಜಾಮಾಡಲು",ನಿರ್ಣಯ ಮಾಡಿದರು.ಕಅರಣ ಅವರು ವಿಧಾನಸಬೆಯ ಕಟ್ಟಡ/ ಸಭಾಂಗಣಕ್ಕೆ ಬೀಗ ಹಾಕಿಸಿದ್ದರು.ರಾಜ್ಯಪಾಲರು ಮಂತ್ರಿಮಂಡಳದ ಶಿಪಾರಸು ಇಲ್ಲದೆ ನಿಗದಿಗಿಂತ ಮೊದಲೇ ವಿಧಾನಸಭೆ ಸೇರಲು ಕೆರೆದಿದ್ದರು. ಕಾಂಗ್ರೆಸ್ ಸುಪ್ರೀಮ್ ಕೋರ್ಟಿಗೆ ರಾಜ್ಯಪಾಲರ ಆಡಳಿತ ಪ್ರಶ್ನಿಸಿ ಅಪೀಲು ಹಾಕಿದೆ. ರಾಷ್ಟ್ರಪತಿ ಆಳ್ವಿಕೆ ಪ್ರಶ್ನಿಸಿ ಕಾಂಗ್ರೆಸ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಎಸ್‌. ಖೇಹರ್‌ ನೇತೃತ್ವದ ಐವರು ಸದಸ್ಯರ ಪೀಠ, ಅರುಣಾಚಲ ಪ್ರದೇಶ ರಾಜಕೀಯ ಬಿಕ್ಕಟ್ಟು ‘ಗಂಭೀರ ವಿಷಯ’ ಎಂದು ಹೇಳಿದೆ. ನೋಡಿ ಅರುಣಾಚಲ ಪ್ರದೇಶ ವಿಧಾನಸಭೆ ಮತ್ತು ಚುನಾವಣೆಗಳು ಬಾಹ್ಯ ಸಂಪರ್ಕಗಳು Tourism in Arunachal Pradesh (Official) Arunachal Pradesh Territorial Dispute between India and China , Inventory of Conflict and Environment reviewNE – all things North East India STD Codes of Arunachal Pradesh Languages of Arunachal Pradesh (Roger Blench) ಉಲ್ಲೇಖಗಳು ನೋಡಿ ಭಾರತದ ಮುಖ್ಯಮಂತ್ರಿಗಳು ಹುಡುಕುವಿಕೆಗಾಗಿ ಸಲಹೆ ಕೊಡಲು ಈ ಮೇಲಿನ ಎಡ- ಚರ್ಚೆ ಪುಟಕ್ಕೆ ಹೋಗಿ. ಬದಲಾಯಿಸಿಗೆ ಕ್ಲಿಕ್ ಮಾಡಿ ಕೆಳಗಡೆ ಸಲಹೆ ಟೈಪು ಮಾಡಿ ; ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
2098
https://kn.wikipedia.org/wiki/%E0%B2%AC%E0%B2%BF%E0%B2%B9%E0%B2%BE%E0%B2%B0
ಬಿಹಾರ
ಬಿಹಾರ ಉತ್ತರ ಭಾರತದಲ್ಲಿನ ರಾಜ್ಯಗಳಲ್ಲೊಂದು. ಇದರ ಪ್ರಸ್ತುತ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಭಾರತ ಭಾರತ ದ ರಾಜ್ಯ ಬಿಹಾರ, ಪ್ರಸ್ತುತ 38 ಆಡಳಿತಾತ್ಮಕ [ಭಾರತದ ಜಿಲ್ಲೆಗಳು | ಜಿಲ್ಲೆಗಳು]] ಹೊಂದಿದೆ. ಭಾರತೀಯ ರಾಜ್ಯಗಳ ಜಿಲ್ಲೆಯು ಆಡಳಿತಾತ್ಮಕ ಭೌಗೋಳಿಕ ಘಟಕವಾಗಿದ್ದು, ಜಿಲ್ಲೆಯ ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ಅಥವಾ ಇಂಡಿಯನ್ ಅಡ್ಮಿನಿಸ್ಟ್ರೇಟಿವ್ ಸರ್ವೀಸ್ ಗೆ ಸೇರಿದ ಅಧಿಕಾರಿಯಾಗಿದ್ದ ಡೆಪ್ಯೂಟಿ ಕಮಿಷನರ್ ಆಗಿದ್ದಾರೆ. ಜಿಲ್ಲೆಯ ಮ್ಯಾಜಿಸ್ಟ್ರೇಟ್ ಅಥವಾ ಉಪ ಆಯುಕ್ತರು ರಾಜ್ಯದ ಆಡಳಿತಾತ್ಮಕ ಸೇವೆಗಳ ವಿವಿಧ ರೆಕ್ಕೆಗಳಿಗೆ ಸೇರಿದ ಹಲವಾರು ಅಧಿಕಾರಿಗಳಿಂದ ಸಹಾಯ ಮಾಡುತ್ತಾರೆ. ಪೊಲೀಸ್ ಅಧೀಕ್ಷಕ, ಭಾರತೀಯ ಪೊಲೀಸ್ ಸೇವೆಗೆ ಸೇರಿದ ಒಬ್ಬ ಅಧಿಕಾರಿ, ಕಾನೂನು ಮತ್ತು ಸುವ್ಯವಸ್ಥೆ ಮತ್ತು ಸಂಬಂಧಿತ ವಿಷಯಗಳ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಡುತ್ತಾನೆ. 3 ರಿಂದ 5 ಜಿಲ್ಲೆಗಳು ಬಿಹಾರದ ವಿಭಾಗಗಳು ವಿಭಾಗವನ್ನು ರೂಪಿಸುತ್ತವೆ (ಪ್ರಾಂಡ್ಲ್). ಪ್ರತಿಯೊಂದು ಜಿಲ್ಲೆಯನ್ನು ಉಪವಿಭಾಗಗಳಾಗಿ ವಿಂಗಡಿಸಲಾಗಿದೆ (ಅಂಡಮಾಲ್), ಇವುಗಳನ್ನು ಮತ್ತಷ್ಟು ಸಿಡಿ ಬ್ಲಾಕ್ಗಳಾಗಿ ಉಪವಿಭಾಗಗಳಾಗಿ ವಿಂಗಡಿಸಲಾಗಿದೆ (प्रखण्ड). [[ಚಿತ್ರ: ಬಿಹಾರ ಜಿಲ್ಲೆಗಳು | ಹೆಬ್ಬೆರಳು | 500px | ಕೇಂದ್ರ | ಬಿಹಾರ] ಜಿಲ್ಲೆಗಳು ಉಲ್ಲೇಖ
2100
https://kn.wikipedia.org/wiki/%E0%B2%97%E0%B3%8B%E0%B2%B5
ಗೋವ
ಗೋವ - ಭಾರತದ ರಾಜ್ಯಗಳಲ್ಲೊಂದು. ವಿಸ್ತೀರ್ಣದಲ್ಲಿ ಇದು ಭಾರತದ ಅತ್ಯಂತ ಸಣ್ಣ ರಾಜ್ಯ. ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಇದು ಉತ್ತರದಲ್ಲಿ ಮಹಾರಾಷ್ಟ್ರ, ಪೂರ್ವ ಮತ್ತು ದಕ್ಷಿಣದಲ್ಲಿ ಕರ್ನಾಟಕ ಹಾಗೂ ಪಶ್ಚಿಮದಲ್ಲಿ ಅರಬೀ ಸಮುದ್ರದಿಂದ ಸುತ್ತುವರಿಯಲ್ಪಟ್ಟಿದೆ. ವಿಸ್ತೀರ್ಣದಲ್ಲಿ ಗೋವಾ ಭಾರತದ ಅತಿ ಚಿಕ್ಕ ರಾಜ್ಯ ಹಾಗೂ ಜನಸಂಖ್ಯೆಯಲ್ಲಿ ನಾಲ್ಕನೇ ಅತಿ ಸಣ್ಣ ರಾಜ್ಯ. ಇದರ ವಿಸ್ತೀರ್ಣ 3,702. ಚ.ಕಿಮೀ. ಜನಸಂಖ್ಯೆ 15,86,250 (2020). ಗೋವಾದ ರಾಜಧಾನಿ ಪಣಜಿ ಹಾಗೂ ವಾಸ್ಕೋ ಡ ಗಾಮಾ ಅತಿ ದೊಡ್ಡ ನಗರವಾಗಿದೆ. ಪ್ರಸಿದ್ಧ ಹಿಂದು ಮಂದಿರಗಳು ಭಗವಾನ್ ಸರಹುನಾಥ್ ಮಂದಿರ (Lord Sarahunaath Temple, Goa - Margao), (ಅಯ್ಯಪ್ಪಸ್ವಾಮಿ ಮಂದಿರ, ಡೇವ್ರೋಲಿಮ್ನಲ್ಲಿ) ಮೇಲ್ಮೈ ಲಕ್ಷಣ ಗೋವ ಉತ್ತರದಲ್ಲಿ ತೇರೇಖೋಲ್ ನದಿಯಿಂದಾಗಿ ಮಹಾರಾಷ್ಟ್ರದಿಂದ ಪ್ರತ್ಯೇಕಿಸಲ್ಪಟ್ಟಿದೆ. ಸಹ್ಯಾದ್ರಿಯ ಸೆರಗಿನಲ್ಲಿರುವ ಗೋವದ ಪೂರ್ವಭಾಗ ಮಲೆನಾಡು. ಪೂರ್ವದಿಂದ ಪಶ್ಚಿಮಕ್ಕೆ ಹಲವಾರು ನದಿ ತೊರೆಗಳು ಹರಿದು ಅರಬ್ಬೀ ಸಮುದ್ರವನ್ನು ಸೇರುತ್ತವೆ. ಇವುಗಳಲ್ಲಿ ಮುಖ್ಯವಾದವು ಮಾಂಡವೀ, ಜ಼ುವಾರೀ (ಅಘನಾಶಿನೀ), ತೇರೇಖೋಲ್, ಚಪೋರ್ ಮತ್ತು ಬೆತುಲ್. ಇವುಗಳಿಂದ ಒಟ್ಟು ಸು. 270 ಕಿಮೀಗಳಷ್ಟು ಜಲಮಾರ್ಗಗಳು ಏರ್ಪಟ್ಟಿವೆ. ಮಾಂಡವೀ ಗೋವದ ಈಶಾನ್ಯ ಭಾಗದಲ್ಲಿರುವ ಪರ್ವತ ಭೀಮಗಡದಲ್ಲಿ ಹುಟ್ಟಿ ಅಗ್ವಾದ ಕಿಲ್ಲೆಯ ಹತ್ತಿರ ಅರಬ್ಬೀ ಸಮುದ್ರವನ್ನು ಸೇರುತ್ತದೆ. ಜವಾರೀ ನದಿ ಹೇಮಾಡ್ ಬಾರ್ಸೆ ಮತ್ತು ಅಷ್ಟಾಗ್ರಹಾರ ಎಂಬ ಭಾಗದಲ್ಲಿ ಹುಟ್ಟಿ ಮುರ್ಗಾಂವ್ ಕೊಲ್ಲಿಯಲ್ಲಿ ಸಮುದ್ರವನ್ನು ಸೇರುತ್ತದೆ. ತೇರೇಖೋಲ್ ಮೂರನೆಯ ದೊಡ್ಡ ನದಿ. ಮಣೇರಿಯ ಹತ್ತಿರ ಹುಟ್ಟಿ ತೇರೇಖೋಲ್ ಕಿಲ್ಲೆಯ ಹತ್ತಿರ ಸಮುದ್ರವನ್ನು ಸೇರುತ್ತದೆ. ಈ ನದಿಯ ದಡಗಳಲ್ಲಿ ತೆಂಗು ಅಡಿಕೆಗಳ ತೋಟಗಳನ್ನು ವಿಶೇಷವಾಗಿ ಕಾಣಬಹುದು. ಸಹ್ಯಾದ್ರಿಯ ಕವಲುಗಳು ಗೋವದಲ್ಲಿವೆ. ಇವುಗಳಲ್ಲಿ ಪುರ್ವಕ್ಕಿರುವ ಸೊಂಸೋಗಡ ಬೆಟ್ಟ ಪ್ರಸಿದ್ಧವಾಗಿದೆ. ಅದರ ಉತ್ತರಕ್ಕೆ ಸತ್ತರೀ ಮಹಾಲದಲ್ಲಿ ವಾಘೇರಿ ಬೆಟ್ಟವಿದೆ. ಇನ್ನೊಂದು ಬೆಟ್ಟ ಮೋರ್ಲೆಗಡ. ಸಮಪಾತಳಿಯ ಮೇಲೆ ಇರುವ ಚಂದ್ರನಾಥ ಬೆಟ್ಟ ಸೃಷ್ಟಿಸೌಂದರ್ಯ ವೀಕ್ಷಣೆಗೆ ಪ್ರಸಿದ್ಧವೆನಿಸಿದೆ. ಗೋವದ ಶೇ.29 ಪ್ರದೇಶ ಅರಣ್ಯಾವೃತ. ವೈಜ್ಞಾನಿಕವಾಗಿ ಅರಣ್ಯವನ್ನು ರಕ್ಷಿಸುವ ಕಾರ್ಯ ಇತ್ತೀಚಿನವರೆಗೂ ನಡೆದಿರಲಿಲ್ಲ. 1963 ರಿಂದೀಚೆಗೆ ಈ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ. ನೀಲಗಿರಿ, ತೇಗ, ಗೋಡಂಬಿ, ರಬ್ಬರ್, ಬಿದಿರು, ಗಾಳಿಮರ, ಸವಾರ್, ಮಾವು-ಈ ಮರಗಳನ್ನು ಈಗ ಬೆಳೆಸಲಾಗುತ್ತಿದೆ. ಹವಾಮಾನ ಗೋವದ ವಾಯುಗುಣ ತೇವೋಷ್ಣಮಯ. ಉಷ್ಣತೆಯಲ್ಲಿ ಹೆಚ್ಚು ವಾರ್ಷಿಕ ಅಂತರಗಳಿಲ್ಲ. 100 ಮೀಗಿಂತ ಹೆಚ್ಚು ಎತ್ತರವಿಲ್ಲದ ಪೂರ್ವಾರ್ಧ ಭಾಗದಲ್ಲಿ 90”-120” (2,800-3,500ಮಿಮೀ) ಮಳೆಯಾಗುತ್ತದೆ. ಉಷ್ಣತೆ 70° ಫ್ಯಾ. - 90° ಫ್ಯಾ. (22° ಸೆಂ-32° ಸೆಂ). ಹೆಚ್ಚು ಎತ್ತರದ ಪ್ರದೇಶವಾದ (ಗರಿಷ್ಠ ಎತ್ತರ 1,200 ಮೀ) ಪೂರ್ವಭಾಗದಲ್ಲಿ ಹೆಚ್ಚು ಮಳೆಯಾಗುತ್ತದೆ (ಗರಿಷ್ಠ 300”). ಇಲ್ಲಿ ಉಷ್ಣತೆಯ ಅಂತರವೂ ಅಧಿಕ. ಕೃಷಿ ಗೋವದಲ್ಲಿ 1.4 ಲಕ್ಷ ಹೆಕ್ಟೇರು ಪ್ರದೇಶದಲ್ಲಿ ಸಾಗುವಳಿ ಮಾಡಲಾಗುತ್ತಿದೆ. ಭತ್ತ ಇಲ್ಲಿಯ ಮುಖ್ಯ ಬೆಳೆ. ಇತರ ಮುಖ್ಯ ಬೆಳೆಗಳು ಬೇಳೆ ಮತ್ತು ಇತರ ಧಾನ್ಯಗಳು, ಕಬ್ಬು, ತರಕಾರಿ, ತೆಂಗು, ಅಡಿಕೆ, ಗೋಡಂಬಿ ಮತ್ತು ಹಣ್ಣುಗಳು. ಗೋವದ ಮುಖ್ಯ ನೀರಾವರಿ ಯೋಜನೆಗಳು ಇವು : 1 ಸಾಂಗೆ ತಾಲ್ಲೂಕಿನ ಸಾತಾಲಿ ಮತ್ತು ದೂದ್ ಸಾಗರ್. 2 ಬಾರ್ದೇಜ್ ತಾಲ್ಲೂಕಿನಲ್ಲಿ ಅಂಜುನಾ, ಮಹಾರಾಷ್ಟ್ರದೊಂದಿಗೆ ಕೂಡಿ ತಿಲಾರಿ ಯೋಜನೆಯನ್ನು ಹಮ್ಮಿಕೊಂಡಿದ್ದು ಇದರ ಅಂಗವಾಗಿ ತಿಲಾರಿ ಅಣೆಕಟ್ಟನ್ನು ನಿರ್ಮಿಸಲಾಗುತ್ತಿದೆ. 2013ರ ಹೊತ್ತಿಗೆ ಈ ಯೋಜನೆ ಪೂರ್ಣಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬರುವ ನಿರೀಕ್ಷೆಯಿದೆ. ವ್ಯವಸಾಯದ ಜೊತೆಗೆ ಮೀನುಗಾರಿಕೆಯೂ ಇಲ್ಲಿಯ ಜನರ ಒಂದು ಮುಖ್ಯ ಕಸಬು. ಇಲ್ಲಿ 250 ಕಿಮೀ ಉದ್ದದ ಕರಾವಳಿಯೂ ಸು 100 ಹೆಕ್ಟೇರುಗಳಷ್ಟು ವಿಸ್ತಾರವಾದ ಸಿಹಿನೀರಿನ ಸರೋವರಗಳೂ ಇವೆ. ಕಡಲತೀರದ ಮತ್ತು ಒಳನಾಡಿನ ಜಲದಲ್ಲಿ ಮತ್ಸ್ಯಸಂಪತ್ತು ಸಮೃದ್ಧವಾಗಿದೆ. ಬಂಗಡೆ, ಬೈಗೆ, ಕೊರ್ಸುಲ, ಅರ್ಕುಲೈ ಮುಖ್ಯವಾದವು. ಕರಾವಳಿಯಲ್ಲಿ ಮೀನು ಹಿಡಿಯುವ ದೋಣಿಗಳಿಗೆ ರಕ್ಷಣೆಯಾಗಿ ಹಲವಾರು ಕಡಲಚಾಚುಗಳೂ ಅಳಿವೆಗಳೂ ಇವೆ. ಮತ್ಸ್ಯೋದ್ಯಮ ರಾಜ್ಯದ ಆರ್ಥಿಕ ಸಂಪನ್ಮೂಲಗಳಲ್ಲೊಂದು. ಕೈಗಾರಿಕೆ ಪೋರ್ಚುಗೀಸ್ ಆಡಳಿತದಿಂದ ಗೋವದ ವಿಮೋಚನೆಯಾಗುವವರೆಗೂ ಅದರ ಕೈಗಾರಿಕಾಭಿವೃದ್ಧಿಗೆ ಹೆಚ್ಚಿನ ಗಮನ ಸಂದಿರಲಿಲ್ಲ. ಅಕ್ಕಿ, ಹಿಟ್ಟು ಮತ್ತು ಎಣ್ಣೆ ಗಿರಣಿಗಳು, ಮರ ಕೊಯ್ಯುವ ಕಾರ್ಖಾನೆಗಳು, ಗೋಡಂಬಿ ಕಾರ್ಖಾನೆಗಳು ಮತ್ತು ಇಟ್ಟಿಗೆ ತಯಾರಿಕೆ-ಇವು ಅಲ್ಲಿದ್ದ ಕೆಲವು ಸಣ್ಣ ಉದ್ಯಮಗಳು. ದೋಣಿಯ ನಿರ್ಮಾಣ ಮತ್ತು ದುರಸ್ತಿ, ಮಾಂಸ, ಹಣ್ಣು ಮತ್ತು ಮೀನಿನ ರಕ್ಷಣೆ, ಕೈಮಗ್ಗ, ತೆಂಗಿನ ಎಣ್ಣೆ ತಯಾರಿಕೆ-ಇವು ಹಲವರಿಗೆ ಉದ್ಯೋಗ ದೊರಕಿಸಿಕೊಟ್ಟಿವೆ. ಮರಗೆಲಸ, ತೆಂಗಿನ ನಾರಿನ ವಸ್ತುಗಳ ತಯಾರಿಕೆ, ಬಿದಿರಿನ ಕೆಲಸ, ಪಾದರಕ್ಷೆ ತಯಾರಿಕೆ, ಕುಂಬಾರಿಕೆ, ಕುಶಲ ವಸ್ತುಗಳ ತಯಾರಿಕೆ-ಇವು ಹಿಂದಿನಿಂದ ಬಂದಿರುವ ಕೆಲವು ಮುಖ್ಯ ಉದ್ಯೋಗಗಳು. ಗೋವದಲ್ಲಿ ಒಟ್ಟು 60 ಮೆವಾ. ಸ್ಥಾಪಿತ ಸಾಮಥರ್ಯ್‌ದ ಜಲವಿದ್ಯುತ್ ಮತ್ತು ಉಷ್ಣವಿದ್ಯುತ್ ಕೇಂದ್ರಗಳಿವೆ. ನೆರೆಯ ಕರ್ನಾಟಕ, ಮಹಾರಾಷ್ಟ್ರಗಳಿಂದ ಗೋವಕ್ಕೆ ವಿದ್ಯುತ್ ಸರಬರಾಜು ಆಗುತ್ತದೆ. ಖನಿಜ ಸಂಪತ್ತು ಗೋವದಲ್ಲಿ ಖನಿಜಸಂಪತ್ತು ಧಾರಾಳವಾಗಿದೆ. ಕಬ್ಬಿಣದ ಅದಿರು, ಕೆಳಶ್ರೇಣಿಯ ಮ್ಯಾಂಗನೀಸ್ ಅದಿರು, ಬಾಕ್ಸೈಟ್ ಇವು ವಿಶೇಷವಾಗಿ ನಿರ್ಯಾತವಾಗುತ್ತವೆ. ಭಾರತದಿಂದ ರಫ್ತಾಗುವ ಕಬ್ಬಿಣ ಅದಿರಿನಲ್ಲಿ ಸುಮಾರು ಅರ್ಧಭಾಗ ಗೋವದಿಂದ ನಿರ್ಯಾತವಾಗುತ್ತದೆ. ಬಿಚೋಲಿ, ಕುದ್ನೇಮ್, ಪಾಲಿ, ಪೈಲ್ಗಾಂವ್ ಮತ್ತು ಸಿರಿಗಾಂವ್‍ಗಳಲ್ಲಿ ಕಬ್ಬಿಣ ಅದಿರನ್ನೂ ಸಾಂಗೆ ತಾಲ್ಲೂಕಿನಲ್ಲಿ ಮ್ಯಾಂಗನೀಸನ್ನೂ ಕೆಪೆ ತಾಲ್ಲೂಕಿನಲ್ಲಿ ಬಾಕ್ಸೈಟನ್ನೂ ತೆಗೆಯಲಾಗುತ್ತಿದೆ. ಕಬ್ಬಿಣ ಅದಿರಿನ ಕಬ್ಬಿಣ ಅಂಶ ಶೇ.57-ಶೇ.62. ಗೋವದಲ್ಲಿ ದೊರಕುವ ಮ್ಯಾಂಗನೀಸ್ ಅದಿರು ಪೈರೊಲುಸೈಟ್ ಮತ್ತು ಪ್ಸಿಲೊಮಿಲೇನ್. ಭಾರತದ ಇತರೆಡೆಗಳಲ್ಲಿ ದೊರಕುವ ಬಾಕ್ಸೈಟ್ ಅದಿರುಗಳಿಗಿಂತ ಗೋವದ್ದು ಭಿನ್ನವಾದ್ದು. ಇದೊಂದು ಟ್ರೈ ಹೈಡ್ರೇಟ್. ಇದರಲ್ಲಿ ನಾನಾ ದರ್ಜೆಗಳುಂಟು. ಮಧ್ಯಮ ದರ್ಜೆಯ ಅದಿರಿಗೆ ವಿದೇಶಗಳಲ್ಲಿ ಹೆಚ್ಚು ಬೇಡಿಕೆಯಿದೆ. ಸಂಚಾರ ಗೋವದಲ್ಲಿ ರಸ್ತೆ ಮಾರ್ಗವಿದೆ. ರಾಷ್ಟ್ರೀಯ ಹೆದ್ದಾರಿ 224 ಕಿಮೀ, ರಾಜ್ಯ ಹೆದ್ದಾರಿ 232 ಕಿಮೀ, ಜಿಲ್ಲಾ ರಸ್ತೆಗಳು 815 ಕಿಮೀ ಇವೆ. ಇಂದು ಗೋವ ರೈಲು ಮಾರ್ಗ ಬಹಳಷ್ಟು ಸುಧಾರಿಸಿದ್ದು ಮುಂಬಯಿ, ಮಂಗಳೂರು, ತಿರುವನಂತಪುರಗಳಿಗೆ ಕೊಂಕಣ ರೈಲು ಮಾರ್ಗ ಸಂಪರ್ಕ ಕಲ್ಪಿಸಿದೆ. ಮುಂಬಯಿ, ದೆಹಲಿ, ಕೊಚ್ಚಿ, ಚೆನ್ನೈ, ಬೆಂಗಳೂರು ನಗರಗಳಿಗೆ ವಿಮಾನ ಸಂಪರ್ಕವಿದೆ. ಗೋವದ ನದಿಗಳು ದೋಣಿಗಳ ಸಂಚಾರಕ್ಕೆ ಅನುಕೂಲವಾಗಿವೆ. ಮಾಂಡವೀ ಮತ್ತು ಜವಾರೀ ನದಿಗಳು ಈ ದೃಷ್ಟಿಯಿಂದ ಉಪಯುಕ್ತ. ಕಬ್ಬಿಣ ಅದಿರನ್ನು ರಫ್ತು ಮಾಡುವ ಸಲುವಾಗಿ ಮಾರ್ಮಗೋವ ಬಂದರಿಗೆ ಸಾಗಿಸಲು ಇವು ಬಹು ಅನುಕೂಲವಾಗಿವೆ. 100 ಕಿಮೀ ಉದ್ದದ ಕರಾವಳಿಯಿರುವ ಗೋವದ ಮುಖ್ಯ ಬಂದರು ಮಾರ್ಮಗೋವ. ಮುಂಬಯಿ, ಕೊಚ್ಚಿಗಳ ನಡುವಣ ದೊಡ್ಡ ರೇವು ಇದು. ಗೋವದ ಆಯಾತ-ನಿರ್ಯಾತಗಳಲ್ಲಿ ಶೇ. 90ಕ್ಕಿಂತಲೂ ಹೆಚ್ಚು ಭಾಗ ಈ ಬಂದರಿನ ಮೂಲಕ ಸಾಗುತ್ತದೆ. ಸೆಪ್ಟೆಂಬರಿನಿಂದ ಮೇ ವರೆಗೆ ಮುಂಬಯಿಯಿಂದ ಮಾರ್ಮಗೋವಕ್ಕೆ ಪ್ರಯಾಣಿಕ ನೌಕೆಗಳು ಸಂಚರಿಸುತ್ತವೆ. ಚಪೋರ, ಪಣಜಿ, ಬೇತುಲ್, ತಲ್ಪೋರ ಇವು ಇತರ ಬಂದರುಗಳು. ನಗರಗಳು ಗೋವದ ರಾಜಧಾನಿ ಪಣಜಿ. ಮಾಂಡವೀ ನದಿಯ ಎಡದಂಡೆಯ ಮೇಲೆ ಇರುವ ಪಣಜಿಯ ವಿಸ್ತೀರ್ಣ 36 ಚ.ಕಿಮೀ. ಜನಸಂಖ್ಯೆ 1,14,405 (2011). ಹಿಂದೆ ಇದು ಮೀನು ಹಿಡಿಯುವವರ ಹಳ್ಳಿಯಾಗಿತ್ತು. ಈಗ ಇದೊಂದು ಸುಂದರ ನಗರ. ಎಲ್ಲೆಲ್ಲೂ ಹಸುರು ತುಂಬಿದೆ. ಹಳೆಯ ಗೋವ ಬಹುಮಟ್ಟಿಗೆ ಪಾಳುಬಿದ್ದ ನಗರ. ಗತಕಾಲದ ಸ್ಮಾರಕಗಳಾಗಿ ಕೆಲವು ಕಟ್ಟಡಗಳು ಅಲ್ಲಿ ಉಳಿದಿವೆ. 1511ರಲ್ಲಿ ಕಟ್ಟಿ 1623ರಲ್ಲಿ ಜೀರ್ಣೋದ್ಧಾರವಾದ ಕ್ರೈಸ್ತ ಆರಾಧನ ಮಂದಿರ, ಸೇಂಟ್ ಫ್ರಾನ್ಸಿಸ್ ಕ್ರೈಸ್ತ ಸನ್ಯಾಸಿನಿಯರ ಮಠ, ಪ್ರಸಿದ್ಧವೂ ಸುಂದರವೂ ಆದ ಸೇಂಟ್ ಫ್ರಾನ್ಸಿಸನ ಬಾಮ್ ಜೀಸಸ್ ಎಂಬ ಸಮಾಧಿ ಭವನ, 17ನೆಯ ಶತಮಾನದ ಸೇಂಟ್ ಲೋನಿಕಾ ಕ್ರೈಸ್ತ ಸನ್ಯಾಸಿನಿಯರ ಮಠ, ಶಿಥಿಲಾವಸ್ಥೆಯಲ್ಲಿರುವ ಸೇಂಟ್ ಪಾಲ್ ಕಾಲೇಜು-ಇವು ಮುಖ್ಯವಾದವು. ಮಾರ್ಗೋವ ಎರಡನೆಯ ಮುಖ್ಯ ನಗರ. ಇದರ ಜನಸಂಖ್ಯೆ 1,06,528 (2011). ಇದು ದಕ್ಷಿಣ ಗೋವದ ಮುಖ್ಯ ವಾಣಿಜ್ಯ ಕೇಂದ್ರ. ಮಪುಸ 40,487 (2011) ಉತ್ತರ ಗೋವದಲ್ಲಿದೆ. ಗೋವ ರಾಜ್ಯವನ್ನು ಉತ್ತರ ಗೋವ (ವಿಸ್ತೀರ್ಣ 1736 ಚಕಿಮೀ. ದಕ್ಷಿಣ ಗೋವ (ವಿಸ್ತೀರ್ಣ 1,966 ಚ.ಕಿಮೀ) ಎಂದು ಎರಡು ಜಿಲ್ಲೆಗಳಾಗಿ ವಿಂಗಡಿಸಲಾಗಿದೆ. ಪಣಜಿ ಉತ್ತರ ಗೋವದ ಆಡಳಿತ ಕೇಂದ್ರ. ಮಡಗಾಂವ್ ದಕ್ಷಿಣ ಗೋವದ ಆಡಳಿತ ಕೇಂದ್ರ. ಗೋವಾ ಭೂದಾಖಲೆಯನ್ನು ಗಣಕೀಕೃತಗೊಳಿಸಿದ ಭಾರತದ ಪ್ರಥಮ ರಾಜ್ಯವಾಗಿದೆ. ಪ್ರವಾಸೋದ್ಯಮ ಪ್ರಪಂಚದಲ್ಲೇ ಅತ್ಯಂತ ಸುಂದರವಾದ ಕೆಲವು ಬೀಚುಗಳು ಗೋವದಲ್ಲಿವೆ. ಕಲಾಂಗೂಟೆ, ಕೋಲ್ವ, ದೋನಾ ಪಾಲಾ, ಸಿರಿದಾವೊ, ವಾಗತೋರ, ಮಾಂದ್ರೇ ಮತ್ತು ಮೋರ್ಜಿ ಬೀಚುಗಳಿಗೆ ಪ್ರವಾಸಿಗಳು ಅಧಿಕ ಸಂಖ್ಯೆಯಲ್ಲಿ ಬರುತ್ತಾರೆ. ಜನಜೀವನ ಗೋವ ಭಾರತದಲ್ಲೇ ಅತ್ಯಂತ ಶ್ರೀಮಂತ ರಾಜ್ಯವಾಗಿದೆ. ಇಲ್ಲಿಯ ಜಿಡಿಪಿಯು ಭಾರತದ ಸರಾಸರಿ ಜಿಡಿಪಿಗಿಂತ ಎರಡೂವರೆ ಪಟ್ಟು ಹೆಚ್ಚಿದೆ. ಗೋವದ ಐತಿಹಾಸಿಕ ಜನಸಂಖ್ಯೆಯ ಏರಿಕೆಯನ್ನು ಈ ಕೆಳಗಿನ ತಖ್ತೆಯಲ್ಲಿ ಕೊಡಲಾಗಿದೆ. ಮತಗಳು ಹಳೆಯ ಗೋವದಲ್ಲಿ ಕ್ರೈಸ್ತರು ಹೆಚ್ಚು; ಹೊಸ ಗೋವದಲ್ಲಿ (ನೊವ ಗೋವ) ಹಿಂದುಗಳು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಪೋರ್ಚುಗೀಸರ ಅಂತರ ವಿವಾಹಗಳಿಂದ ಸ್ವಲ್ಪಮಟ್ಟಿಗೆ ಸಂಮಿಶ್ರ ಜನಾಂಗದವರಿದ್ದಾರೆ. ಇಲ್ಲಿಯ ಜನರ ಮಾತೃಭಾಷೆ ಕೊಂಕಣಿ. ಸಾಮಾನ್ಯವಾಗಿ ಕ್ರಿಶ್ಚಿಯನರು ಪೋರ್ಚುಗೀಸ್ ಭಾಷೆಯನ್ನೂ ಹಿಂದುಗಳು ಕೊಂಕಣಿ ಭಾಷೆಯನ್ನೂ ಆಡುತ್ತಾರೆ. ಜನಸಾಂದ್ರತೆ ಹಾಗೂ ಪೋರ್ಚುಗೀಸರ ಮಿತಿಮೀರಿದ ತೆರಿಗೆಯಿಂದಾಗಿ ಜನರು ಅನೇಕ ಕಡೆಗಳಿಗೆ ವಲಸೆ ಹೋದರು. ಅನೇಕರು ಆಫ್ರಿಕದತ್ತ ಸಾಗಿ ಮೊಜ಼ಾಂಬಿಕ್ ಹಾಗೂ ನೇಟಾಲ್ಗಳಲ್ಲಿ ನೆಲೆಸಿದರು. ಮುಂಬಯಿಗೆ ತೆರಳಿದ ಗೋವನರೇ ಹೆಚ್ಚು. ಗೋವದಲ್ಲಿ ಹಿಂದೂ ಹಾಗೂ ಕ್ರೈಸ್ತ ಮತಗಳು ಪ್ರಚಾರದಲ್ಲಿವೆ. ಕದಂಬರ ಕಾಲದ ಸಪ್ತಕೋಟೀಶ್ವರ ದೇವಾಲಯ, ಸೇಂಟ್ ಫ್ರಾನ್ಸಿಸ್ ಜೇ಼ವಿಯರನ ಸಮಾಧಿಭವನ ಪ್ರಸಿದ್ಧವಾದವು. ಸಂತ ಜೇ಼ವಿಯರನ ಪಾರ್ಥಿವ ಶರೀರವನ್ನು ಭಕ್ತರಿಗೆ ಹತ್ತು ವರ್ಷಗಳಿಗೊಮ್ಮೆ ಪ್ರದರ್ಶಿಸುತ್ತಾರೆ. ಹಳೆಯ ಗೋವದಲ್ಲಿ ಲೆಂಟ್ ಉಪವಾಸ ದಿನಗಳಲ್ಲಿ ಸಂತರ ವಿಗ್ರಹಗಳನ್ನು ಮೆರೆವಣಿಗೆ ಮಾಡುತ್ತಾರೆ. ಪೋರ್ಚುಗೀಸರು ಬಂದಮೇಲೆ ಗೋವದಲ್ಲಿ ಕ್ರೈಸ್ತಮತ ಪ್ರಚಾರವಾಯಿತು. ಡಾಮಿನಿಕ್ ಪಂಥದ ಕ್ರೈಸ್ತ ಸನ್ಯಾಸಿಗಳು ಗೋವಕ್ಕೆ ಬಂದದ್ದು 1510ರಲ್ಲಿ. 1517ರಲ್ಲಿ ಬಂದ ಫ್ರಾನ್ಸಿಸ್ಕನ್ ಪಾದ್ರಿಗಳು ಕ್ರೈಸ್ತಮತ ಪ್ರಚಾರವನ್ನು ಆರಂಭಿಸಿದರು. ಫ್ರಾನ್ಸಿಸ್ಕನ್ ಪಂಥದ ಸನ್ಯಾಸಿ ಜೊವಾನ್ ದ ಆಲ್ಬುಕರ್ಕ್ 1538ರಲ್ಲಿ ಗೋವದ ಪ್ರಥಮ ಬಿಷಪ್ ಆಗಿ ನೇಮಕವಾದ. 1542ರಲ್ಲಿ ಫ್ರಾನ್ಸಿಸ್ಕ್‌ ಜೇವಿಯರ್ ಸ್ಥಳೀಯ ಮತಪ್ರಚಾರಕರಿಗೆ ತರಬೇತು ನೀಡುವ ಸಾಂತಾಫಿ ಕಾಲೇಜಿನ ಮೇಲ್ವಿಚಾರಕನಾದ. ತರುವಾಯ ಈ ಕಾಲೇಜಿಗೆ ಸೇಂಟ್ ಪಾಲ್ ಕಾಲೇಜು ಎಂದು ಹೆಸರಾಯಿತು. 1557ರ ಫೆಬ್ರವರಿ 4 ಪೋಪ್ ಹೊರಡಿಸಿದ ಆಜ್ಞೆಯ ಪ್ರಕಾರ ಗೋವವೂ ಆರ್ಚ್ಬಿಷಪನ ಅಧಿಕಾರವ್ಯಾಪ್ತಿಯ ಕೇಂದ್ರವೂ ಪ್ರಾಚ್ಯಪ್ರಾಂತಗಳ ರೋಮನ್ ಕೆಥೊಲಿಕ್ ಪಾದ್ರಿಗಳ ಕೇಂದ್ರವೂ ಆಯಿತು. 20ನೆಯ ಶತಮಾನದಲ್ಲಿ ಪೋಪ್ ಹೊರಡಿಸಿದ ಅಧಿಕೃತ ನಿಯಮಗಳ ಪ್ರಕಾರ ಗೋವದ ಆರ್ಚ್ಬಿಷಪ್ ಅಧಿಕಾರ ಇಡೀ ಪೋರ್ಚುಗೀಸ್ ಭಾರತಕ್ಕೆ ಅನ್ವಯಿಸಿತು. ಇಲ್ಲಿಯ ಜನರ ಭಾಷೆ ಮುಖ್ಯವಾಗಿ ಕೊಂಕಣಿ. ಕನ್ನಡ,ಮರಾಠಿ, ಹಿಂದಿ ಭಾಷೆಗಳೂ ಬಳಕೆಯಲ್ಲಿವೆ. ಇತಿಹಾಸ ಗೋವದ ಇತಿಹಾಸ ಪ್ರಾಚೀನವಾದ್ದು. ಹಲವು ಪುರಾಣಗಳಲ್ಲೂ ಶಾಸನಗಳಲ್ಲೂ ಗೋವದ ಉಲ್ಲೇಖಗಳಿವೆ. ಪರಶುರಾಮ ಮಿಥಿಲೆಯಿಂದ ಬ್ರಾಹ್ಮಣ ಕುಟುಂಬಗಳನ್ನು ಕರೆತಂದು ಇಲ್ಲಿ ನೆಲೆಗೊಳಿಸಿದನೆಂದು ಪ್ರತೀತಿಯಿದೆ. ಇತಿಹಾಸಕಾಲದಲ್ಲಿ ಗೋವ ಮೌರ್ಯ ಸಾಮ್ರಾಜ್ಯದ ಭಾಗವಾಗಿತ್ತು. ದಖನಿನಲ್ಲಿ ಸಾಮ್ರಾಜ್ಯ ಸ್ಥಾಪಿಸಿ ದೀರ್ಘಕಾಲ ರಾಜ್ಯವಾಳಿದ ಶಾತವಾಹನರು ತಮ್ಮ ಸಾರ್ವಭೌಮತ್ವವನ್ನು ಗೋವದ ಮೇಲೂ ಸ್ಥಾಪಿಸಿದ್ದರು. ರೋಮನ್ ಸಾಮ್ರಾಜ್ಯಕ್ಕೂ ದಖನ್ ಪ್ರದೇಶಕ್ಕೂ ವ್ಯಾಪಾರ ಸಂಪರ್ಕವಿತ್ತು. ಗೋವ ಪಟ್ಟಣ ಮುಖ್ಯ ವ್ಯಾಪಾರ ಕೇಂದ್ರ ಹಾಗೂ ಪ್ರಮುಖ ಬಂದರು ಆಗಿತ್ತೆಂದು ತಿಳಿದುಬರುತ್ತದೆ.ಶಾತವಾಹನರ ಸಾಮ್ರಾಜ್ಯ ಅವನತಿ ಹೊಂದಿದ ಅನಂತರ ತಲೆಯೆತ್ತಿದ ಬನವಾಸಿ ಕದಂಬ ಮನೆತನ ಗೋವದ ಬಹುಭಾಗದಲ್ಲಿ ತನ್ನ ಅಧಿಕಾರವನ್ನು ಸ್ಥಾಪಿಸಿತ್ತು. ಆರನೆಯ ಶತಮಾನದ ಕೊನೆಯಲ್ಲಿ ಬಾದಾಮಿ ಚಾಳುಕ್ಯ ಮನೆತನ ಪ್ರಬಲವಾಗಿ ಕದಂಬರನ್ನು ಸೋಲಿಸಿತು. ಒಂದನೆಯ ಕೀರ್ತಿವರ್ಮ ಕೊಂಕಣದ ಹಲವು ಪ್ರದೇಶಗಳ ಮೇಲೆ ಚಾಳುಕ್ಯರ ಅಧಿಕಾರವನ್ನು ಸ್ಥಾಪಿಸಿದ. ಇಮ್ಮಡಿ ಪುಲಕೇಶಿ ತನ್ನ ದಿಗ್ವಿಜಯ ಕಾಲದಲ್ಲಿ ಕೊಂಕಣ ಪ್ರದೇಶವನ್ನು ಪುರ್ಣವಾಗಿ ಜಯಿಸಿ ತನ್ನ ಸಾಮ್ರಾಜ್ಯಕ್ಕೆ ಸೇರಿಸಿಕೊಂಡ. ಇವನು ಗೋವದ ಉತ್ತರ ಪ್ರದೇಶದಲ್ಲಿ ಆಳುತ್ತಿದ್ದ ಮೌರ್ಯ ಶಾಖೆಯ ರಾಜನನ್ನು ಸೋಲಿಸಿದ ಸಂಗತಿ ಐಹೊಳೆಯ ಶಾಸನದಿಂದ ತಿಳಿದುಬರುತ್ತದೆ. ಬಾದಾಮಿ ಚಾಳುಕ್ಯ ಸಾಮ್ರಾಜ್ಯ 757ರಲ್ಲಿ ಕೊನೆಗೊಂಡ ಅನಂತರ ಗೋವ ಪ್ರದೇಶ ರಾಷ್ಟ್ರಕೂಟ ಸಾಮ್ರಾಜ್ಯದ ಭಾಗವಾಯಿತು. ಚಾಳುಕ್ಯ ಮತ್ತು ರಾಷ್ಟ್ರಕೂಟ ಸಾಮ್ರಾಟರ ಕಾಲದಲ್ಲಿ ಅರೇಬಿಯ, ಪರ್ಷಿಯ ಮತ್ತು ದಖನ್‍ಗಳ ನಡುವೆ ವ್ಯಾಪಾರ ಸಂಪರ್ಕ ವಿಶೇಷವಾಗಿ ಅಭಿವೃದ್ಧಿ ಹೊಂದಿತ್ತು. ವಿದೇಶೀ ಹಡಗುಗಳು ಗೋವ ಬಂದರಿಗೆ ಬರುತ್ತಿದ್ದುವು. ಗೋವ ಪಟ್ಟಣ ಪಶ್ಚಿಮ ತೀರದ ಮುಖ್ಯ ವ್ಯಾಪಾರ ಕೇಂದ್ರಗಳಲ್ಲೊಂದಾಗಿತ್ತು. ರಾಷ್ಟ್ರಕೂಟರ ಕೊನೆಗಾಲದಲ್ಲಿ ಗೋವ ಪ್ರದೇಶದಲ್ಲಿ ಕದಂಬರು ರಾಜ್ಯ ಸ್ಥಾಪಿಸಿದರು. ಇವರಿಗೆ ಗೋವೆಯ ಕದಂಬರೆಂದೇ ಹೆಸರಾಗಿದೆ. ಗೋವದ ಕದಂಬ ಮನೆತನ ಕದಂಬ ಮನೆತನದ ಉಪಶಾಖೆಗಳಲ್ಲೊಂದಾಗಿತ್ತು. ಗೋವದ ಸಮೀಪದ ಚಂದ್ರಪುರ (ಇಂದಿನ ಚಂದೂರು) ಇವರ ರಾಜಧಾನಿಯಾಗಿತ್ತು. ಈ ಶಾಖೆಯ ಆರಂಭ ಕಾಲದ ಕಂಟಕಾಚಾರ್ಯ, ನಾಗವರ್ಮ, 1ನೆಯ ಗುಹಲದೇವ ಮೊದಲಾದವರು ಅಷ್ಟು ಪ್ರಬಲರಾಗಿರಲಿಲ್ಲ. ಒಂದನೆಯ ಷಷ್ಟದೇವ ಅಥವಾ ಚತುರ್ಭುಜನೆಂಬ ರಾಜ 970ರ ಸುಮಾರಿನಲ್ಲಿ ಪ್ರಬಲನಾಗಿದ್ದುದಲ್ಲದೆ ರಾಷ್ಟ್ರಕೂಟ ಸಾಮ್ರಾಜ್ಯವನ್ನು ಕೊನೆಗಾಣಿಸುವಲ್ಲಿ ಕಲ್ಯಾಣಿ ಚಾಳುಕ್ಯ ತೈಲಪನಿಗೆ ಸಹಾಯ ಮಾಡಿದನೆಂದು ತಿಳಿದುಬಂದಿದೆ. 11ನೆಯ ಶತಮಾನದ ಪ್ರಾರಂಭದಲ್ಲಿ ಆಳುತ್ತಿದ್ದ 2ನೆಯ ಗುಹಿಲದೇವನ ಕಾಲದಲ್ಲಿ ಗೋವ ಪ್ರಸಿದ್ಧವಾದ ವಾಣಿಜ್ಯ ಕೇಂದ್ರವೂ ರೇವು ಪಟ್ಟಣವೂ ಆಗಿತ್ತೆಂದೂ ಆ ವೇಳೆಗೆ ಅರಬ್ ವರ್ತಕರು ಗೋವೆಯಲ್ಲಿ ನೆಲಸಿದ್ದರೆಂದೂ ತಿಳಿದುಬರುತ್ತದೆ. ಅನಂತರ ಆಳಿದ 2ನೆಯ ಷಷ್ಟದೇವ ಇಡೀ ಕೊಂಕಣ ಪ್ರದೇಶದ ಮೇಲೆ ತನ್ನ ಆಳಿಕೆ ಸ್ಥಾಪಿಸಿದ. ಇವನಿಗೆ ಚಟ್ಟಲ ಮತ್ತು ಚಟ್ಟಯ್ಯ ಎಂಬ ಹೆಸರುಗಳಿದ್ದುವು. ಚಾಳುಕ್ಯ ಜಯಸಿಂಹನ ಆಶ್ರಿತನಾಗಿದ್ದ ಇವನ ಆಳಿಕೆಯಲ್ಲಿ ಗೋವ ಪಟ್ಟಣ ವಾಣಿಜ್ಯ ಕೇಂದ್ರವಾಗಿ ವಿಶೇಷ ಪ್ರಸಿದ್ಧಿ ಪಡೆದಿತ್ತು. ಗೋವ ರೇವು ಪಟ್ಟಣ ಭವ್ಯ ಭವನಗಳಿಂದಲೂ ಇಬ್ಬದಿಯ ದೊಡ್ಡ ದೊಡ್ಡ ಮಳಿಗೆಗಳಿಂದ ಕೂಡಿದ ವಿಶಾಲ ಬೀದಿಗಳಿಂದಲೂ ಉದ್ಯಾನಗಳಿಂದಲೂ ಕಂಗೊಳಿಸುತ್ತಿತ್ತೆಂದು ಆ ಕಾಲದ ಶಾಸನಗಳಲ್ಲಿ ವರ್ಣಿಸಲಾಗಿದೆ. ಷಷ್ಟದೇವನ ಅನಂತರ ಅವನ ಮಗನಾದ 1ನೆಯ ಜಯಕೇಶಿ ಗೋವದ ರಾಜನಾದ. ಗೋವ ರಾಜ್ಯ ಇವನ ಆಳಿಕೆಯ ಕಾಲದಲ್ಲಿ ಕಪಾರ್ಡಿಕ ದ್ವೀಪ, ಕೊಂಕಣ, ಹೈವೆ, ಹಲಸೀಗೆ ಮೊದಲಾದ ಪ್ರದೇಶಗಳನ್ನೊಳಗೊಂಡಿತ್ತು. ಪರಾಕ್ರಮಿಯೂ ದೂರದರ್ಶಿಯೂ ಆದ ಈತ ಕಲ್ಯಾಣಿ ಚಾಳುಕ್ಯ ವಿಕ್ರಮಾದಿತ್ಯನಿಗೆ ತನ್ನ ಒಬ್ಬ ಮಗಳನ್ನೂ ಅನಿಲ್ವಾಡದ ಚಾಳುಕ್ಯ ಕರ್ಣನಿಗೆ ತನ್ನ ಮತ್ತೊಬ್ಬ ಮಗಳನ್ನೂ ಕೊಟ್ಟು ವಿವಾಹ ಮಾಡಿ ಗೋವ ಕದಂಬ ಸಂತತಿಯ ಪ್ರಭಾವವನ್ನು ವಿಸ್ತರಿಸಿದ. ಈತ ಗೋವ ಪಟ್ಟಣವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡ. ಅನೇಕ ಸಮಕಾಲೀನ ಶಾಸನಗಳಲ್ಲಿ ಅಂದಿನ ಗೋವ ನಗರದ ಸೌಂದರ್ಯವೂ ಐಶ್ವರ್ಯವೂ ವರ್ಣಿಸಲ್ಪಟ್ಟಿವೆ. ರಾಜಮಾರ್ಗಗಳಲ್ಲಿ ಪಂಡಿತರೂ ಶ್ರೀಮಂತರೂ ಧನಕನಕ ಐಶ್ವರ್ಯಾದಿಗಳೂ ಕಣ್ಮನಗಳಿಗೆ ಹಬ್ಬವನ್ನುಂಟು ಮಾಡುತ್ತ ನಗರ ಅಮರಪುರಿಯಂತೆ ಕಂಗೊಳಿಸುತ್ತದೆ ಎಂಬುದಾಗಿ ಹಲವು ಶಾಸನಗಳಲ್ಲಿ ವರ್ಣಿಸಲಾಗಿದೆ. ಒಂದನೆಯ ಜಯಕೇಶಿಯ ಪ್ರಧಾನಮಂತ್ರಿಯಾಗಿದ್ದ, ಅರಬ್ ಮೂಲದ ಸದನೋ ಎಂಬವನು ಗೋವ ನಗರದ ಮತ್ತು ಪ್ರಜೆಗಳ ಸರ್ವತೋಮುಖ ಅಭಿವೃದ್ಧಿಗೆ ವಿಶೇಷವಾಗಿ ಶ್ರಮಿಸಿದ. ಗೋವ ಬಂದರನ್ನು ಅಭಿವೃದ್ಧಿಪಡಿಸಿ ಸಾಗರೋತ್ತರ ವ್ಯಾಪಾರವನ್ನು ಪ್ರೋತ್ಸಾಹಿಸಿದ. ಗೋವದ ಜನರು ಐಶ್ವರ್ಯ ಮತ್ತು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದರು. *1053ರಲ್ಲಿ ಈ ಮಂತ್ರಿ ಬಡಬಗ್ಗರ ಸಹಾಯಕ್ಕಾಗಿ ಒಂದು ಸಂಸ್ಥೆಯನ್ನು ಸ್ಥಾಪಿಸಿದ. ನಿರ್ಗತಿಕರಿಗೂ ಅಂಗವಿಕಲರಿಗೂ ಉಚಿತ ಊಟ ವಸತಿಯನ್ನು ಒದಗಿಸಿದ. ಈ ಸಂಸ್ಥೆಯ ವೆಚ್ಚಕ್ಕಾಗಿ ಹೊರಗಿನಿಂದ ಗೋವ ಬಂದರಿಗೆ ಬರುತ್ತಿದ್ದ ವ್ಯಾಪಾರಿ ಹಡಗುಗಳ ಮೇಲೆ ನಿಗದಿಯಾದ ಸುಂಕ ವಿಧಿಸಿದ. ಅಲ್ಲದೆ ಗೋವ ರಾಜ್ಯದಲ್ಲಿ ಸಂತಾನವಿಲ್ಲದೆ ಮರಣ ಹೊಂದಿದ ಶ್ರೀಮಂತರ ಆಸ್ತಿ ಈ ಸಂಸ್ಥೆಗೆ ಸೇರತಕ್ಕದ್ದೆಂದು ಕಾನೂನು ಜಾರಿಗೆ ಬಂತು. ಈ ಸಂಸ್ಥೆಯ ಆದಾಯ ಹೇರಳವಾಗಿತ್ತು. ಒಂದನೆಯ ಜಯಕೇಶಿಯ ಆಳಿಕೆಯಲ್ಲಿ ಗೋವ ರಾಜ್ಯ ಸರ್ವತೋಮುಖ ಅಭಿವೃದ್ಧಿ ಹೊಂದಿ ನೆಮ್ಮದಿಯ ಬೀಡಾಗಿತ್ತು. ಇವನ ಅನಂತರ 3ನೆಯ ಗುಹಿಲದೇವ ಮತ್ತು ವಿಜಯಾದಿತ್ಯ ಎಂಬುವರು ಅನುಕ್ರಮವಾಗಿ ಗೋವ ರಾಜ್ಯವನ್ನಾಳಿದರು. ವಿಜಯಾದಿತ್ಯನ ಮರಣಾನಂತರ ಅವನ ಮಗನಾದ 2ನೆಯ ಜಯಕೇಶಿ ರಾಜನಾಗಿ 1104ರಿಂದ 1148ರ ವರೆಗೆ ಆಳಿದ. ಎರಡನೆಯ ಜಯಕೇಶಿಯ ಆಳಿಕೆಯಲ್ಲಿ ಗೋವ ರಾಜ್ಯ ಉನ್ನತಿಯ ಶಿಖರ ಮುಟ್ಟಿತು. ವಿವೇಕಿಯೂ ಪರಾಕ್ರಮಿಯೂ ಆದ ಜಯಕೇಶಿ ಕಲ್ಯಾಣಿ ಚಾಳುಕ್ಯರ ಅಧೀನತೆಯಿಂದ ಸ್ವತಂತ್ರನಾಗಲು ಹವಣಿಸಿ ಕೊಂಕಣ ಚಕ್ರವರ್ತಿ ಎಂಬ ಬಿರುದನ್ನು ಧರಿಸಿದ. ದೂರದರ್ಶಿಯಾದ ಚಾಳುಕ್ಯ ಸಾರ್ವಭೌಮ 6ನೆಯ ವಿಕ್ರಮಾದಿತ್ಯ ತನ್ನ ಮಗಳನ್ನು ಜಯಕೇಶಿಗೆ ಕೊಟ್ಟು ವಿವಾಹ ಮಾಡಿ ಗೋವ ಮತ್ತು ಕಲ್ಯಾಣಿ ಮನೆತನಗಳ ಮಧ್ಯೆ ಮಧುರ ಬಾಂಧವ್ಯವನ್ನು ಏರ್ಪಡಿಸಿದ. ವಿಕ್ರಮಾದಿತ್ಯನ ಮರಣಾನಂತರ ದೋರಸಮುದ್ರದ ಹೊಯ್ಸಳ ವಿಷ್ಣುವರ್ಧನ ಚಾಳುಕ್ಯ ಮಾಂಡಲಿಕರನ್ನು ಸೋಲಿಸಿ ಕೃಷ್ಣಾ ನದಿಯವರೆಗೂ ದಂಡೆತ್ತಿ ಹೋದ. ಅವನು ಜಯಕೇಶಿಯನ್ನು ಸೋಲಿಸಿ ಹಾನಗಲ್, ಹಲಸೀಗೆ ಮೊದಲಾದ ಪ್ರದೇಶಗಳನ್ನು ವಹಿಸಿಕೊಂಡ. ಆದರೆ 1142ರಲ್ಲಿ ವಿಷ್ಣುವರ್ಧನ ಮರಣ ಹೊಂದಿದ ಅನಂತರ ಜಯಕೇಶಿ ತಾನು ಕಳೆದುಕೊಂಡಿದ್ದ ಪ್ರದೇಶವನ್ನು ಪುನಃ ವಶಪಡಿಸಿಕೊಂಡ. ಜಯಕೇಶಿಯ ಆಳಿಕೆಯಲ್ಲಿ ಗೋವ ರಾಜ್ಯದಲ್ಲಿ ವ್ಯವಸ್ಥಿತ ಆಡಳಿತವಿದ್ದು ಜನರು ನೆಮ್ಮದಿಯಿಂದಿದ್ದರು. ಇವನ ಅನೇಕ ಶಾಸನಗಳಲ್ಲಿ ಆಡಳಿತ, ಸಾಮಾಜಿಕ ಜೀವನ ಮತ್ತು ಆರ್ಥಿಕ ಪುರೋಭಿವೃದ್ಧಿಗೆ ಸಂಬಂಧಿಸಿದ ಮಾಹಿತಿಗಳು ದೊರೆಯುತ್ತವೆ. ಎರಡನೆಯ ಜಯಕೇಶಿಯ ಮರಣಾನಂತರ ಅವನ ಮಗ ಪೆರ್ಮಾಡಿದೇವ ರಾಜನಾದ. ಇವನಿಗೆ ಶಿವಚಿತ್ತ, ವಿಷ್ಣುಚಿತ್ತ ಎಂಬ ಹೆಸರುಗಳೂ ಇದ್ದುವು. ಇವನ ರಾಣಿಯಾದ ಕಮಲಾದೇವಿ ಗೋವದಲ್ಲಿ ಅನೇಕ ಅಗ್ರಹಾರಗಳನ್ನು ಸ್ಥಾಪಿಸಿ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಿದಳಲ್ಲದೆ ದೇಗಾಂವೆ ಎಂಬಲ್ಲಿ ಶ್ರೀ ಕಮಲನಾರಾಯಣ ಮತ್ತು ಶ್ರೀ ಮಹಾಲಕ್ಷ್ಮಿ ದೇವಾಲಯಗಳನ್ನು ಕಟ್ಟಿಸಿದಳು. ಗೋವದ ಕದಂಬ ರಾಜರು 1156ರ ವರೆಗೂ ಕಲ್ಯಾಣಿ ಚಾಳುಕ್ಯರ ಸಾಮಂತರಾಗಿದ್ದರು. ಕಲ್ಯಾಣಿಯಲ್ಲಿ ರಾಜ್ಯ ವಿಪ್ಲವ ನಡೆದು ಕಳಚುರಿ ಬಿಜ್ಜಳ ಚಕ್ರವರ್ತಿಯಾದ ಅನಂತರ ಗೋವದ ರಾಜ ಸ್ವತಂತ್ರನಾದ. ಕಳಚುರಿಗಳ ಮತ್ತು ಹೊಯ್ಸಳರ ನಡುವೆ ಅನೇಕ ಯುದ್ಧಗಳು ನಡೆದು ಕಳಚುರಿಗಳ ಪ್ರಭಾವ ಕುಂದಿತು. ಹೊಯ್ಸಳ ವೀರಬಲ್ಲಾಳ 1182ರಲ್ಲಿ ಗೋವದ ರಾಜನನ್ನು ಸೋಲಿಸಿ ಕಪ್ಪಕಾಣಿಕೆ ಸ್ವೀಕರಿಸಿ ಆಶ್ರಿತ ರಾಜನನ್ನಾಗಿ ಮಾಡಿಕೊಂಡ. ಅನಂತರ ಸೇವುಣರಿಗೂ ಹೊಯ್ಸಳರಿಗೂ ದಖನಿನ ಸಾರ್ವಭೌಮತ್ವಕ್ಕಾಗಿ ಹೋರಾಟ ನಡೆಯಿತು. 1214ರ ಅನಂತರ ಗೋವದ ರಾಜನಾದ 3ನೆಯ ಜಯಕೇಶಿ ದೇವಗಿರಿಯ ಸಿಂಗಣನ ಆಶ್ರಿತ ರಾಜನಾದ. 1310ರಲ್ಲಿ ಮಲಿಕ್ ಕಾಫೂರನ ದಂಡಯಾತ್ರೆಯಿಂದ ದೇವಗಿರಿ ಸೇವುಣರ ಆಡಳಿತ ಕೊನೆಗೊಂಡಿತು. ಗೋವದ ರಾಜ ಸ್ವತಂತ್ರವಾಗಿ ಆಳಲು ಪ್ರಾರಂಭಿಸಿದ. ಆದರೆ ಮಲಿಕ್ ಕಾಫೂರನು ಗೋವ ರಾಜ್ಯವನ್ನು ಸೂರೆಮಾಡಿ ರಾಜಧಾನಿಯನ್ನು ಆಕ್ರಮಿಸಿದ. ಅವನು ಹಿಂದಿರುಗಿದ ಅನಂತರ ಗೋವದ ರಾಜ ಚಂದ್ರಪುರವನ್ನು ರಾಜಧಾನಿಯಾಗಿ ಮಾಡಿಕೊಂಡು ಆಳಲುಪಕ್ರಮಿಸಿದ. 1350ರ ವೇಳೆಗೆ ಮಹಮದ್ ಬಿನ್ ತುಗಲಕನ ದಳಪತಿಯೊಬ್ಬ ಚಂದ್ರಪುರವನ್ನು ಮುತ್ತಿ ನಾಶಮಾಡಿದ. ಸಹಸ್ರಾರು ಮಂದಿ ಹಿಂದೂ ಸೈನಿಕರೂ ಗೋವದ ರಾಜಪರಿವಾರದವರೂ ಮರಣ ಹೊಂದಿದ್ದಾಗಿ ಇಬ್ನ್‌ ಬತೂತನ ಬರೆವಣಿಗೆಯಿಂದ ತಿಳಿದುಬರುತ್ತದೆ. ಸುಮಾರು 350 ವರ್ಷಗಳ ಗೋವ ಕದಂಬ ಮನೆತನ ಕೊನೆಗೊಂಡಿತು. ಗೋವ ರಾಜ್ಯ ಬಹುಕಾಲ ಮಹಮ್ಮದೀಯರ ಆಳಿಕೆಯಲ್ಲಿ ಉಳಿಯಲಿಲ್ಲ. ವಿಜಯನಗರದ ಹರಿಹರ ಮತ್ತು ಬುಕ್ಕರು ಗೋವ ಪ್ರಾಂತವನ್ನು ಮಹಮ್ಮದೀಯರ ಆಳಿಕೆಯಿಂದ ವಿಮೋಚನೆಗೊಳಿಸಿ ತಮ್ಮ ರಾಜ್ಯಕ್ಕೆ ಸೇರಿಸಿಕೊಂಡರು. 1470ರ ವರೆಗೂ ಗೋವ ವಿಜಯನಗರ ಸಾಮ್ರಾಜ್ಯದ ಭಾಗವಾಗಿತ್ತು. ಅನಂತರ ಬಿಜಾಪುರದ 2ನೆಯ ಮಹಮ್ಮದನ ಮಂತ್ರಿಯಾದ ಮಹಮದ್ ಗವಾನ ಗೋವವನ್ನು ಗೆದ್ದು ಬಿಜಾಪುರ ರಾಜ್ಯಕ್ಕೆ ಸೇರಿಸಿಕೊಂಡ. ಸ್ವಲ್ಪ ಕಾಲ ಆದಿಲ್ಷಾಹಿ ಆಡಳಿತ ಮುಂದುವರಿಯಿತು. ಅನಂತರ ಅದು ಪೋರ್ಚುಗೀಸರ ವಶವಾಯಿತು. ಆಲ್ಬಕರ್ಕ್ 1510ರಲ್ಲಿ ಗೋವವನ್ನು ಪೋರ್ಚುಗೀಸರ ವಸಾಹತಾಗಿ ಮಾರ್ಪಡಿಸಿದ. ಆದರೆ ಅದೇ ವರ್ಷ ಆಗಸ್ಟ್‌ 15ರ ಸಮಯಕ್ಕೆ ಬಿಜಾಪುರದ ಯೂಸುಫ್ ಆದಿಲ್ಷಹ ಅವನನ್ನು ಸೋಲಿಸಿದ. ಪುನಃ ಆಲ್ಬಕರ್ಕ್ ಸ್ವಲ್ಪ ಕಾಲದಲ್ಲೇ ಗೋವವನ್ನು ವಶಪಡಿಸಿಕೊಂಡು ಪೋರ್ಚುಗೀಸರ ಆಡಳಿತವನ್ನು ಸ್ಥಾಪಿಸಿದ. ಅಂದಿನಿಂದ ಗೋವ ಪೋರ್ಚುಗೀಸರ ವಸಾಹತಾಯಿತು. ಕ್ರಮೇಣ ದೀವ್ ಮತ್ತು ದಮನ್‍ಗಳ ಮೇಲೂ ಪೋರ್ಚುಗೀಸರು ಅಧಿಕಾರ ಸ್ಥಾಪಿಸಿದರು. ಮರಾಠರು ಹಲವು ಸಾರಿ ಗೋವವನ್ನು ಮುತ್ತಿದರು. ಆದರೂ ಗೋವದ ಮೇಲೆ ಪೋರ್ಚುಗೀಸರ ಆಡಳಿತ 450 ವರ್ಷಗಳ ಕಾಲ ಮುಂದುವರಿಯಿತು. ಗೋವದಲ್ಲಿ ಕ್ರೈಸ್ತಮತ ವಿಶೇಷವಾಗಿ ಪ್ರಚಾರವಾಯಿತು. 17ನೆಯ ಶತಮಾನದಲ್ಲಿ ಗೋವವನ್ನು ಸಂದರ್ಶಿಸಿದ್ದ ಪಾಶ್ಚಾತ್ಯ ಪ್ರವಾಸಿಯೊಬ್ಬ ಗೋವ ಪಟ್ಟಣ ಕ್ರೈಸ್ತ ದೇವಾಲಯಗಳಿಂದಲೂ ಮಠಗಳಿಂದಲೂ ಸುಂದರವಾದ ಭವನಗಳಿಂದಲೂ ಐಶ್ವರ್ಯದಿಂದಲೂ ತುಂಬಿತುಳುಕುವ ನಗರಗಳಲ್ಲೊಂದಾಗಿದೆಯೆಂದು ಪ್ರಶಂಸಿಸಿದ್ದ. ಪೋರ್ಚುಗೀಸರ ದಬ್ಬಾಳಿಕೆಯ ವಿರುದ್ಧವಾಗಿ ಅಲ್ಲಿಯ ಜನ ಸುಮಾರು 20 ಸಂದರ್ಭಗಳಲ್ಲಿ ದಂಗೆಯೆದ್ದಿದ್ದರು. ಆದರೆ ಪೋರ್ಚುಗೀಸ್ ಸರ್ಕಾರ ದಂಗೆಯನ್ನು ಉಗ್ರವಾಗಿ ಹತ್ತಿಕ್ಕಿತು. ಹತ್ತೊಂಬತ್ತನೆಯ ಶತಮಾನದಲ್ಲಿ ಪ್ರಾರಂಭವಾದ ರಾಷ್ಟ್ರೀಯ ಚಳವಳಿ ಗೋವವನ್ನೂ ಕ್ರಮೇಣ ಪ್ರವೇಶಿಸಿತು. ಮಹಾತ್ಮ ಗಾಂಧಿ ಭಾರತ ರಾಷ್ಟ್ರೀಯ ಚಳವಳಿಯ ನಾಯಕತ್ವವನ್ನು ವಹಿಸಿದ ಕೂಡಲೇ ಗೋವದಲ್ಲೂ ಚಳವಳಿಗೆ ಕರೆಕೊಟ್ಟರು. 1928ರಲ್ಲಿ ಗೋವದಲ್ಲಿ ಸ್ವಾತಂತ್ರ್ಯ ಚಳವಳಿಗಾಗಿ ಸಮಿತಿಯೊಂದು ಸ್ಥಾಪಿತವಾಯಿತು. 1930ರಲ್ಲಿ ಗೋವ ಕಾಂಗ್ರೆಸ್ ಸಮಿತಿಯನ್ನು ಸ್ಥಾಪಿಸಲಾಯಿತು. ಪೋರ್ಚುಗೀಸ್ ಸರ್ಕಾರ ಗೋವದಲ್ಲಿ ಚಳವಳಿಗಳನ್ನು ಉಗ್ರವಾಗಿ ಹತ್ತಿಕ್ಕಿತು. 1947ರಲ್ಲಿ ಭಾರತ ಸ್ವತಂತ್ರವಾದ ಅನಂತರ ಭಾರತ ಸರ್ಕಾರ ಗೋವ ಪ್ರದೇಶದಿಂದ ಪೋರ್ಚುಗಲ್ ತನ್ನ ಆಡಳಿತವನ್ನು ತೆರವು ಮಾಡಬೇಕೆಂದು ಸೂಚಿಸಿತು. ಆದರೂ ಪೋರ್ಚುಗೀಸ್ ಸರ್ಕಾರ ಬಿಗಿಮುಷ್ಟಿಯ ವಸಾಹತು ನೀತಿಯನ್ನು ಮುಂದುವರಿಸಿತು. ದೆಹಲಿ ಮತ್ತು ಲಿಸ್ಬನ್‍ಗಳ ನಡುವೆ ಅನೇಕ ಸುತ್ತಿನ ಮಾತುಕತೆಗಳು ನಡೆದರೂ ಪ್ರಯೋಜನವಾಗಲಿಲ್ಲ. 1947ರಿಂದ 1954ರ ವರೆಗೆ ನಡೆದ ವಿಮೋಚನಾ ಹೋರಾಟದ ಮುಖಂಡರನ್ನು ಪೋರ್ಚುಗೀಸ್ ಸರ್ಕಾರ ವರ್ಣನಾತೀತ ಶಿಕ್ಷೆಗಳಿಗೆ ಗುರಿ ಮಾಡಿತು. ಪೋರ್ಚುಗಲ್ ಮತ್ತು ಭಾರತದ ಮಧ್ಯೆ ರಾಜತಾಂತ್ರಿಕ ಸಂಬಂಧ 1955ರಲ್ಲಿ ಕಡಿದುಬಿತ್ತು. ಅದೇ ವರ್ಷ ಗೋವ ವಿಮೋಚನೆಗಾಗಿ ಶಾಂತಿಯುತ ಚಳವಳಿ ಪ್ರಾರಂಭವಾಯಿತು. ಚಳವಳಿ 1961ರ ವರೆಗೂ ಸತತವಾಗಿ ಮುಂದುವರಿಯಿತು. ಪೋರ್ಚುಗಲ್ ಸರ್ಕಾರ ಅನೇಕ ಸತ್ಯಾಗ್ರಹಿಗಳನ್ನು ಗುಂಡಿಟ್ಟು ಕೊಂದಿತು. ಮುಖಂಡರನ್ನು ನಾನಾಬಗೆಯ ಚಿತ್ರಹಿಂಸೆಗಳಿಗೆ ಗುರಿಪಡಿಸಿತು. ಸರ್ಕಾರದ ಉಗ್ರನೀತಿ ಮತ್ತು ದಂಡನೆಗಳು ಮುಂದುವರಿದುವು. ಭಾರತ ಸರ್ಕಾರದ ಸಂಯಮವನ್ನು ಪೋರ್ಚುಗಲ್ಲಿನ ವಸಾಹತು ನೀತಿ ಅಲುಗಿಸಿತು. ಪೋರ್ಚುಗೀಸ್ ಸೈನಿಕರು ಗೋವದ ಗಡಿಯಲ್ಲಿ ಭಾರತದ ಹಳ್ಳಿಗಳನ್ನು ಲೂಟಿ ಮಾಡಲುಪಕ್ರಮಿಸಿದರು. ಕೊನೆಗೆ 1961ರ ಡಿಸೆಂಬರ್ 17-18ರ ಮಧ್ಯರಾತ್ರಿಯ ವೇಳೆಗೆ ಪೋರ್ಚುಗೀಸರ ಆಡಳಿತಕೇಂದ್ರವಾದ ಪಣಜಿಯನ್ನು ಭಾರತ ಸೈನ್ಯ ಸುತ್ತುಗಟ್ಟಿತು. ಅಲ್ಲಿದ್ದ ಪೋರ್ಚುಗೀಸ್ ದಳಗಳು ಭಾರತೀಯ ಸೈನ್ಯಕ್ಕೆ ಶರಣಾಗತವಾದುವು. ಕೇವಲ 36 ಗಂಟೆಗಳಲ್ಲಿ ಹೋರಾಟ ಕೊನೆಗೊಂಡಿತು. ಪೋರ್ಚುಗೀಸ್ ಆಳಿಕೆಯಿಂದ ಗೋವ ವಿಮೋಚನೆಗೊಂಡಿತು. ಡಿಸೆಂಬರ್ 20ರಂದು ಗೋವ ಭಾರತದಲ್ಲಿ ವಿಲೀನವಾಯಿತು. ವಾಸ್ತುಶಿಲ್ಪ ಪಶ್ಚಿಮ ಕರಾವಳಿಯಲ್ಲಿದ್ದು ಭೌಗೋಳಿಕವಾಗಿಯೂ ಚಾರಿತ್ರಿಕವಾಗಿಯೂ ವಿಶಿಷ್ಟ ಸ್ಥಾನವನ್ನು ಪಡೆದಿರುವ ಗೋವದ ವಾಸ್ತುಶಿಲ್ಪ ದೇಶೀಯ ಮತ್ತು ವಿದೇಶೀಯ ಪ್ರಭಾವಗಳಿಗೆ ಒಳಗಾಗಿರುವುದು ಸ್ವಾಭಾವಿಕ. ಇಲ್ಲಿಯ ವಾಸ್ತುಶಿಲ್ಪ ಬೆಳೆವಣಿಗೆಯ ಕುರುಹುಗಳು ಅತಿ ಪ್ರಾಚೀನಕಾಲದಿಂದಲೂ ಕಂಡುಬರುತ್ತವೆ. ಆದರೆ 16ನೆಯ ಶತಮಾನದಲ್ಲಿ ಈ ಪ್ರಾಂತವನ್ನಾಕ್ರಮಿಸಿಕೊಂಡ ಪೋರ್ಚುಗೀಸರ ಕಾಲದಲ್ಲಿ ನಡೆದ ಕ್ರೈಸ್ತಮತ ಪ್ರಚಾರದ ಫಲವಾಗಿ ನೂರಾರು ದೇವಾಲಯಗಳು ನೆಲಸಮವಾದವು. ಈ ಸ್ಥಳಗಳಲ್ಲಿ ಚರ್ಚುಗಳು ನಿರ್ಮಿತವಾದವು. ಆದ್ದರಿಂದ ಗೋವದಲ್ಲಿ ಪುರಾತನ ವಾಸ್ತುಶಿಲ್ಪ ಮಾದರಿಗಳು ಕೆಲವೇ ಉಳಿದಿವೆ. ಅಲ್ಲಲ್ಲಿ ಮುರಿದುಬಿದ್ದಿರುವ ಮೂರ್ತಿಗಳು ಮತ್ತು ಇತರ ಶಿಲ್ಪಗಳಿಂದ ಮಾತ್ರ ಅವನ್ನು ತಿಳಿದುಕೊಳ್ಳಲು ಸಾಧ್ಯ. ಪೋರ್ಚುಗೀಸರಿಂದ ನಾಶಗೊಂಡ ಕೆಲವು ದೇವಾಲಯಗಳ ಮೂಲಮೂರ್ತಿಗಳನ್ನು ಬೇರೆಡೆಗೆ ಕೊಂಡೊಯ್ದು ಅವುಗಳಿಗಾಗಿ ಕಟ್ಟಿಸಿದ ದೇವಾಲಯಗಳು ಕೆಲವು ಗೋವದಲ್ಲಿ ಈಚೆಗೆ ಬೆಳೆದುಬಂದ ವಾಸ್ತು ಮಾದರಿಯನ್ನು ಸೂಚಿಸುತ್ತವೆ. ಮುಸ್ಲಿಂ ಶೈಲಿಯ ಕೆಲವು ಕಟ್ಟಡಗಳನ್ನು ಗೋವವನ್ನು ಗೆದ್ದ ಆದಿಲ್ಷಾಹಿ ಮನೆತನದವರು ಕಟ್ಟಿಸಿದರೂ ಪೋರ್ಚುಗೀಸರು ಹಲವು ಕಟ್ಟಡಗಳನ್ನು ನಾಶಮಾಡಿ ಮತ್ತೆ ಕೆಲವನ್ನು ಮಾರ್ಪಡಿಸಿ ಸಚಿವಾಲಯಗಳನ್ನಾಗಿ, ಕಚೇರಿಗಳನ್ನಾಗಿ ಮಾಡಿಕೊಂಡರು. ಪೋರ್ಚುಗೀಸರು ಕಟ್ಟಿಸಿದ ಕೆಲವು ಚರ್ಚುಗಳು ಮತ್ತು ಇತರ ಕಟ್ಟಡಗಳು ಸುಂದರವಾಗಿವೆ; ಗೋವದಲ್ಲಿ ಪ್ರೇಕ್ಷಣೀಯ ಸ್ಮಾರಕಗಳಾಗಿ ನಿಂತಿವೆ. ಪ್ರಸಕ್ತಶಕದ ಆದಿಕಾಲದಲ್ಲೇ ಗೋವದಲ್ಲಿ ವಾಸ್ತುಶಿಲ್ಪ ಆರಂಭವಾದ್ದನ್ನು ಕಾಣಬಹುದು. ಹರವಳೆ ಎಂಬಲ್ಲಿ ಗುಡ್ಡವನ್ನು ಕೊರೆದು ನಿರ್ಮಿಸಿರುವ ಗುಹೆಗಳಿವೆ. ಇವುಗಳಲ್ಲಿ ದೊರೆತ ಬ್ರಾಹ್ಮಿಲಿಪಿಯ ಶಾಸನ 1ನೆಯ ಶತಮಾನಕ್ಕೆ ಸೇರಿದ್ದು. ಇದೇ ಗೋವದ ಅತ್ಯಂತ ಪ್ರಾಚೀನ ಶಾಸನ. ಕೋಲ್ವಲೆಯ ಬಳಿ ಬೌದ್ಧಮೂರ್ತಿಯೊಂದು ದೊರೆತಿದೆ. ಈ ಪ್ರಾಂತದಲ್ಲಿ ಬೌದ್ಧಶಿಲ್ಪ ಇದ್ದದ್ದಕ್ಕೆ ಕುರುಹಾಗಿ ಉಳಿದಿದೆ. ಚಂದ್ರವರ್ಮನೆಂಬ ರಾಜ ಶಿವಪುರದಲ್ಲಿಯ ಬೌದ್ಧ ಮಹಾವಿಹಾರವೊಂದಕ್ಕೆ ದತ್ತಿ ಬಿಟ್ಟುದಾಗಿ 5ನೆಯ ಶತಮಾನದ ಶಾಸನವೊಂದು ತಿಳಿಸುತ್ತದೆ. *ರಾಷ್ಟ್ರಕೂಟರ ಸಾಮಂತರಾಗಿ ವಲಿಪುರದಿಂದ ಆಳುತ್ತಿದ್ದ ಶಿಲಹಾರರು ನೆತರ್ಲೆ ಎಂಬಲ್ಲಿ ಮಹಾಲಕ್ಷ್ಮಿಯ ದೇವಾಲಯವೊಂದನ್ನು ನಿರ್ಮಿಸಿದ್ದರು. ಕಲ್ಯಾಣಿ ಚಾಳುಕ್ಯರ ಸಾಮಂತರಾಗಿ ಮೊದಲು ಚಂದ್ರಪುರದಿಂದಲೂ ಅನಂತರ ಗೋವ ಪಟ್ಟಣ ಅಥವಾ ಗೋವಪುರಿಯಿಂದಲೂ ಆಳುತ್ತಿದ್ದ ಗೋವೆ ಕದಂಬರು ಅನೇಕ ದೇವಾಲಯಗಳನ್ನು ಕಟ್ಟಿಸಿದ್ದರು. ಸವಾಯ್ವೆರೆ ಎಂಬಲ್ಲಿ ಮೂರ್ತಿನಾರಾಯಣನ ದೇವಾಲಯ, ಗೋವಪುರಿಯಲ್ಲಿ ಸರಸ್ವತಿ ದೇವಾಲಯ, ದೇಗಾಂವೆಯಲ್ಲಿ ಕಮಲನಾರಾಯಣ ಮತ್ತು ಮಹಾಲಕ್ಷ್ಮಿ ದೇವಾಲಯಗಳು-ಇವೇ ಮೊದಲಾದವು ಇವರ ಕಾಲದಲ್ಲಿ ನಿರ್ಮಿತವಾದುವು. ಆದರೆ ಬೆಳಗಾಂವಿ ಜಿಲ್ಲೆಯ ದೇಗಾಂವೆಯಲ್ಲಿರುವ ಸುಂದರವಾದ ಕಮಲನಾರಾಯಣ ದೇವಾಲಯವನ್ನು ಬಿಟ್ಟರೆ ಬೇರೆ ದೇವಾಲಯಗಳು ಉಳಿದುಬಂದಿಲ್ಲ. ಸಪ್ತಕೋಟೀಶ್ವರ ಈ ರಾಜರ ಆರಾಧ್ಯದೇವತೆ. ಶ್ರೀಸಪ್ತಕೋಟೀಶಲಬ್ಧವರವೀರ ಎಂಬುದು ಇವರ ಬಿರುದುಗಳಲ್ಲೊಂದು. ದೀವರ್ ದ್ವೀಪದ ಬಳಿ ನಾರ್ವೆಯಲ್ಲಿ ಇವರು ಸಪ್ತಕೋಟೀಶ್ವರ ದೇವಾಲಯವನ್ನು ಕಟ್ಟಿಸಿದ್ದರು. ವಿಜಯನಗರದ ಮಾಧವ ಮಂತ್ರಿ ಈ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ್ದ. ಪೋರ್ಚುಗೀಸರಿಂದ ಇದು ನಾಶವಾದ ಮೇಲೆ ಸಪ್ತಕೋಟೀಶ್ವರಲಿಂಗವನ್ನು ಬಿಳಿಚೊಂನಲ್ಲಿಯ ನಾರ್ವೆಯಲ್ಲಿ ಪ್ರತಿಷ್ಠಾಪಿಸಿದ್ದರು. ಮುಂದೆ ಶಿವಾಜಿ ಈಗ ಇರುವ ದೇವಾಲಯವನ್ನು ನಿರ್ಮಿಸಲು ಕಾರಣನಾದ. ಕದಂಬ ಜಯಕೇಶಿಯ ಆಳಿಕೆಯಲ್ಲಿ ಮಂತ್ರಿಯಾಗಿದ್ದ ಛದಮ ಎಂಬ ಅರಬ್ ವ್ಯಾಪಾರಿ ಗೋವಪುರಿಯಲ್ಲಿ ಒಂದು ಮಸೀದಿಯನ್ನು ಕಟ್ಟಿಸಿದ್ದ. ಯಾದವರ ಕಾಲದಲ್ಲಿ ಹೇಮಾಡ್ಪಂಥ್ ಶೈಲಿಯ ಹಲವು ದೇವಾಲಯಗಳನ್ನು ಗೋವದಲ್ಲಿಯೂ ಕಟ್ಟಿದ್ದಿರಬೇಕು. ಬಹುಶಃ ಈ ಕಾಲದಲ್ಲಿ ನಿರ್ಮಿತವಾಗಿದ್ದು ಇನ್ನೂ ಉಳಿದುಬಂದಿರುವ ಪ್ರಾಚೀನ ದೇವಾಲಯವೆಂದರೆ ತಾಂಬಡಿ-ಸುರ್ಲ ಎಂಬಲ್ಲಿ ದಟ್ಟ ಕಾಡಿನ ನಡುವೆ ನಿಂತಿರುವ ಮಹದೇವ ದೇವಾಲಯ ಒಂದೇ. ಚಾಳುಕ್ಯಶೈಲಿಯಲ್ಲಿ ಸರಳವಾಗಿ ಕಟ್ಟಿರುವ ಈ ದೇವಾಲಯಕ್ಕೆ ಗರ್ಭಗೃಹ, ಅರ್ಧಮಂಟಪ ಮತ್ತು ಭೋಗಮಂಟಪಗಳೂ ಎರಡು ಅಂತಸ್ತುಗಳ ಕಲ್ಲುಗೋಪುರವೂ ಇವೆ. ಇದನ್ನು ಬಿಟ್ಟರೆ ಕೇರಿ ಎಂಬಲ್ಲಿ ಬೇತಾಳ ದೇವಾಲಯದಲ್ಲಿರುವ ಗಜಲಕ್ಷ್ಮೀ, ಪರ್ಸೆಯಲ್ಲಿರುವ ಬ್ರಹ್ಮನ ಮೂರ್ತಿ, ಕೇರಿವೆರೆ ಕಾಡಿನಲ್ಲಿ ಬಿದ್ದಿರುವ ನಾರಾಯಣನ ವಿಗ್ರಹ, ಕುಡ್ನೆಯಲ್ಲಿರುವ ಸೂರ್ಯಬಿಂಬ, ಉಮಾಸಹಿತ ಶಿವ, ಸೇಂಟ್ ಫ್ರಾನ್ಸಿಸ್ ಕತೀಡ್ರಲಿನÀ ವಸ್ತುಸಂಗ್ರಹಾಲಯ ದಲ್ಲಿರುವ ಕೆಲವು ಮೂರ್ತಿಗಳು ಮುಂತಾದವು ಆ ಕಾಲದ ಶಿಲ್ಪದ ಮಾದರಿಗಳಾಗಿ ಉಳಿದುಬಂದಿವೆ. ಪೋರ್ಚುಗೀಸರು ನಾಶಮಾಡಿದ ದೇವಾಲಯಗಳಿಂದ ಮೂರ್ತಿಗಳನ್ನು ಬೇರೆ ಕಡೆಗೆ ಸಾಗಿಸಿ ಕಟ್ಟಿರುವ 16 ನೆಯ ಶತಮಾನದಿಂದೀಚಿನ ಕಟ್ಟಡಗಳಲ್ಲಿ ಕುಶಸ್ಥಲಿಯಲ್ಲಿದ್ದು ಪ್ರಿಯೋಲಿಗೆ ವರ್ಗಾಯಿಸಿದ ಮಂಗೇಶದೇವಾಲಯ, ಕದಲಿವನದಿಂದ ಕವಲೆಗೆ ಬದಲಾಯಿಸಿದ ಶಾಂತದುರ್ಗ ದೇವಾಲಯ, ನಾರ್ವೆಯಲ್ಲಿರುವ ಸಪ್ತಕೋಟೀಶ್ವರ, ಮರ್ದೊಲಿನ ಮಹಾಲಸ ದೇವಿಯ ಆಲಯ, ಕೊಲ್ವದಲ್ಲಿದ್ದು ಬಾಂದೋರಕ್ಕೆ ಬದಲಾಯಿಸಿದ ಮಹಾಲಕ್ಷ್ಮೀ ದೇವಾಲಯ, ಚಂದ್ರನಾಥ ಬೆಟ್ಟದ ಮೇಲಿರುವ ಚಂದ್ರನಾಥ ದೇವಾಲಯ- ಇವನ್ನು ಹೆಸರಿಸಬಹುದು. ಹಲವು ಶೈಲಿಗಳ ಸಂಮಿಶ್ರಣವನ್ನು ಈ ಕಟ್ಟಡಗಳಲ್ಲಿ ಕಾಣಬಹುದು. ಒಳಭಾಗದಲ್ಲಿ ಹಲವು ಕಂಬಗಳಿರುವ ಭೋಗಮಂಟಪ, ಜಗತಿಗಳು, ದೇವಾಲಯದ ಒಳಗೂ ಸುತ್ತಲೂ ಹಾಸುಗಲ್ಲುಗಳನ್ನು ಹಾಕಿಸುವುದು ಮುಂತಾದವುಗಳಲ್ಲಿ ವಿಜಯನಗರದ ಶೈಲಿಯ ಪ್ರಭಾವ ಕಂಡುಬಂದರೆ, ಹಲವು ದೇವಾಲಯಗಳ ಹೊರನೋಟದಲ್ಲಿ ಮುಸ್ಲಿಂ ಶೈಲಿಯ ಪ್ರಭಾವ ಎದ್ದುಕಾಣುತ್ತದೆ. ಈ ಕೆಲವು ದೇವಾಲಯಗಳನ್ನು ಅವುಗಳ ಮೇಲಿನ ಕಲಶಗಳಿಂದ ಮಾತ್ರ ದೇವಾಲಯಗಳೆಂದು ಗುರುತಿಸಬೇಕಾಗುತ್ತದೆ. ಇವೆಲ್ಲಕ್ಕಿಂತ ಹೆಚ್ಚಾಗಿ ಗೋವದ ದೇವಾಲಯಗಳಲ್ಲಿ ಲ್ಯಾಟಿನ್ ಶೈಲಿಯ ಪ್ರಭಾವವನ್ನೂ ವಿಶೇಷವಾಗಿ ಕಾಣಬಹುದು. ದೇವಸ್ಥಾನಗಳ ಮುಂದೆ ಹಲವು ಅಂತಸ್ತುಗಳಲ್ಲಿ ನೇರವಾಗಿ ಮೇಲೆದ್ದಿರುವ ಭವ್ಯವಾದ ಗೋಪುರಗಳಿರುವುದು ಇಲ್ಲಿಯ ದೇವಾಲಯಗಳ ಒಂದು ವಿಶೇಷ. ಮರಾಠಾ ರಾಜನಾದ, ಸಾತಾರೆಯ ಸಾಹು ರಾಜ ಕಟ್ಟಿಸಿದ ಶಾಂತದುರ್ಗ ದೇವಾಲಯದ ಕಂಬಗಳು ಮತ್ತು ಒಳಭಾಗದ ಅಲಂಕರಣಗಳು ಸುಂದರವಾಗಿವೆ. 17 ನೆಯ ಶತಮಾನದ ಆದಿಭಾಗದಲ್ಲಿ ಮರ್ದೊಲಿನಲ್ಲಿ ಕಟ್ಟಿರುವ ಮಹಾಲಸದೇವಿಯ ಆಲಯದಲ್ಲಿರುವ, ಮರದಲ್ಲಿ ಕೆತ್ತಿರುವ ಶಿಲ್ಪ ಅತ್ಯಂತ ಸುಂದರವಾಗಿದೆ. ಮುಸ್ಲಿಂ ಶೈಲಿಯ ಕಟ್ಟಡಗಳಲ್ಲಿ ಅತ್ಯಂತ ಭವ್ಯವಾಗಿದ್ದದ್ದು ಗೋವೆಯ ಆದಿಲ್ಷಹ ಕಟ್ಟಿಸಿದ ರಾಜವಾಡೆ. ಕೆಲವು ಮಾರ್ಪಾಟು ಗಳನ್ನು ಹೊಂದಿ ಡಿ-ಪೆಲೇಶಿಯೊ-ಇದಾಲ್ಶಿಯೊ ಎಂಬ ಹೆಸರಿಂದ ಇಂದಿಗೂ ಅದು ಉಪಯೋಗದಲ್ಲಿದೆ. ಮಸೀದಿಗಳು ಕೆಲವು ಚರ್ಚುಗಳಾಗಿ ಮಾರ್ಪಟ್ಟಿವೆ. ಉಳಿದ ಕಟ್ಟಡಗಳು ನಾಶವಾಗಿವೆ. ಸೆ ಪ್ರಿಮೇಶಿಯಲ್ ಡಿ ಗೋವಾ ಅಥವಾ ಸೆ ಕತೀಡ್ರಲ್ ಎಂಬುದು ಗೋವದ ಚರ್ಚುಗಳಲ್ಲಿ ಪುರಾತನವೂ ಭವ್ಯವೂ ಆದದ್ದು. ಆಲ್ಬಕರ್ಕ್ ಹಳೆಯ ಗೋವೆಯನ್ನು ಗೆದ್ದಾಗ ಸೇಂಟ್ ಕ್ಯಾದರಿನ್ ನೆನಪಿಗಾಗಿ ಕಟ್ಟಲು ಆಲೋಚಿಸಿದ್ದ ಚರ್ಚು ಇದು. ಇದನ್ನು ಕಟ್ಟಿ ಪೂರೈಸಲು 75 ವರ್ಷಗಳಿಗೂ ಹೆಚ್ಚು ಕಾಲವಾಯಿತು. ಭವ್ಯತೆಯಲ್ಲಿ ಇದನ್ನು ಮೀರಿಸಿದ ಕಟ್ಟಡ ಗ್ರೇಟ್ ಬ್ರಿಟನಿನಲ್ಲಿ ಕೂಡ ಇಲ್ಲವೆನ್ನಲಾಗಿದೆ. ಹೊರಭಾಗ ಟಸ್ಕನ್ ಮತ್ತು ಡೋರಿಕ್ ಶೈಲಿಗಳಲ್ಲೂ ಒಳಭಾಗ ಕಾರಿಂತಿಯನ್ ಶೈಲಿಯಲ್ಲೂ ನಿರ್ಮಿತವಾಗಿರುವ ಈ ಕಟ್ಟಡ ಅದರ ಗಾತ್ರ ಮತ್ತು ಅಳತೆಗೆ ಹೆಸರಾದ್ದು. ಇದರ ಒಂದು ಭಾಗದ ಗೋಪುರ ಈಗ ಬಿದ್ದುಹೋಗಿದೆ. ಈ ಚರ್ಚಿನ ಒಳಭಾಗ ಅತ್ಯಂತ ರಮಣೀಯವಾಗಿದೆ. ಇಷ್ಟೇ ರಮಣೀಯವೂ ಭವ್ಯವೂ ಆಗಿರುವ ಸೇಂಟ್ ಕೆಸರನ್ ಚರ್ಚು ರೋಮಿನಲ್ಲಿರುವ ಸೇಂಟ್ ಪೀಟರನ ಬೆಸಿಲಿಕದಂತಿದೆ ; ಇದು ಕಾರಿಂತಿಯನ್ ಶೈಲಿಯಲ್ಲಿದೆ. ಹಳೆಯ ಗೋವದಲ್ಲಿರುವ ಬಾಮ್ ಜೀಸಸ್ ಚರ್ಚು ಅತ್ಯಂತ ಪ್ರಸಿದ್ಧವಾದ್ದು. ಇಲ್ಲೇ ಸೇಂಟ್ ಜೇವಿಯರನ ಸಮಾಧಿಯಿದೆ. ಇಲ್ಲಿಯ ಕಂಚಿನ ಕೆತ್ತನೆ ಆಕರ್ಷಕವಾದ್ದು. ಇದರ ಭಿತ್ತಿಯ ಮೇಲೆ ಜೇ಼ವಿಯರನ ಜೀವನಕ್ಕೆ ಸಂಬಂಧಿಸಿದ ಹಲವು ಚಿತ್ರಗಳಿವೆ. ಗೋವದಲ್ಲಿ ಗಾತಿಕ್ ಶೈಲಿಯಲ್ಲಿ ಕಟ್ಟಿರುವ ಅದ್ಭುತವಾದ ವಾಸ್ತು ಇದು. 1517 ರಲ್ಲಿ ಫ್ರಾನ್ಸಿಸ್ಕನರು ಕಟ್ಟಿಸಿದ ಸೇಂಟ್ ಫ್ರಾನ್ಸಿಸ್ ಕತೀಡ್ರಲ್ ಮೆನುಲಿನ್ ಶೈಲಿಯ ಉತ್ಕೃಷ್ಟ ಶಿಲ್ಪವನ್ನೊಳಗೊಂಡಿದೆ. ಹಿಂದೆ ಪೋರ್ಚುಗೀಸರು ಭಗ್ನಗೊಳಿಸಿದ್ದ ದೇವಾಲಯಗಳಿಂದ ತಂದಿಟ್ಟಿರುವ ಮೂರ್ತಿಗಳು ಇರುವುದು ಈ ಕಟ್ಟಡದಲ್ಲೇ. ಇದು ಒಂದು ವಸ್ತುಸಂಗ್ರಹಾಲಯವಾಗಿ ಮಾರ್ಪಟ್ಟಿದೆ. ಗೋವದಲ್ಲಿ ಅತ್ಯಂತ ಎತ್ತರವಾದ ಕಟ್ಟಡ ಸೇಂಟ್ ಮೋನಿಕ ಕಾನ್ವೆಂಟ್. ಮೂರು ಅಂತಸ್ತುಗಳಿರುವ ಇದರ ಗೋಡೆಗಳ ಮೇಲೆ ಬೈಬಲಿನ ಅನೇಕ ಪ್ರಸಂಗಗಳನ್ನು ಭಿನ್ನಭಿನ್ನ ವರ್ಣಗಳಲ್ಲಿ ಚಿತ್ರಿಸಲಾಗಿದೆ. ಗೋವ ವೆಲ್ಹಾದ ಗುಡ್ಡವೊಂದರ ಮೇಲೆ ಪಿಲಾಡ್ ಮೊನಾಸ್ಟರಿ ಇದೆ. ಇದರ ವಿಶಾಲವಾದ ಒಳ ಅಂಗಳದಲ್ಲಿ ಅತಿ ಸುಂದರವಾಗಿ ಕಂಡರಿಸಿರುವ ಕಂಬವೊಂದು ನಿಂತಿದೆ. 1541 ರಲ್ಲಿ ನಿರ್ಮಿಸಿದ ಉನ್ನತವಾದ ಸೇಂಟ್ ಪಾಲ್ಸ್‌ ಕಾಲೇಜಿನ ಒಂದು ಭಾಗ ಮಾತ್ರ ಬೀಳದೆ ನಿಂತಿದೆ. ಗೋವದ ಮನೆಗಳಲ್ಲೂ ಲ್ಯಾಟಿನ್ ಶೈಲಿಯ ಪ್ರಭಾವವನ್ನು ಗುರುತಿಸಬಹುದು. ಆ ಪಟ್ಟಣವನ್ನು ನೋಡಿದರೆ ಲ್ಯಾಟಿನ್ ನಗರದಂತೆಯೇ ಕಾಣುತ್ತದೆ. ಗೋವಾದ ಹವಾಮಾನ ದತ್ತಾಂಶ ನೋಡಿ ಗೋವಾದ ಜಿಲ್ಲೆಗಳು ಪ್ರಜಾಪ್ರಭುತ್ವದಲ್ಲಿ ರಾಜರ ರಾಜ್ಯಗಳ ವಿಲೀನ ೨೦೦೯ ಸಾರ್ವತ್ರಿಕ ಚುನಾವಣಾ ಫಲಿತಾಂಶ ಭಾರತದ ಸಾರ್ವತ್ರಿಕ ಚುನಾವಣೆ, ೨೦೦೯=೨೦೦೯ ಸಾರ್ವತ್ರಿಕ ಚುನಾವಣಾ ಫಲಿತಾಂಶ ೨೦೦೯ ಸಾರ್ವತ್ರಿಕ ಲೋಕಸಭೆ ಮತ್ತು ವಿಧಾನ ಸಭೆಗಳ ಚುನಾವಣಾ ಫಲಿತಾಂಶ= ಭಾರತದ ಸಾರ್ವತ್ರಿಕ ಚುನಾವಣೆ, ೨೦೦೯ ಅಥವಾ ಭಾರತದ ಸಾರ್ವತ್ರಿಕ ಚುನಾವಣೆ, ೨೦೦೯(ಲೋಕ ಸಭೆ ಮತ್ತು ವಿಧಾನ ಸಭೆ) ಬಾಹ್ಯ ಸಂಪರ್ಕಗಳು Government of Goa official website ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಭಾರತದ ಚುನಾವಣೆಗಳು ಭಾರತ
2103
https://kn.wikipedia.org/wiki/%E0%B2%9C%E0%B2%AE%E0%B3%8D%E0%B2%AE%E0%B3%81%20%E0%B2%AE%E0%B2%A4%E0%B3%8D%E0%B2%A4%E0%B3%81%20%E0%B2%95%E0%B2%BE%E0%B2%B6%E0%B3%8D%E0%B2%AE%E0%B3%80%E0%B2%B0
ಜಮ್ಮು ಮತ್ತು ಕಾಶ್ಮೀರ
ಭೂಮಿಯ ಮೇಲಿರುವ ಸ್ವರ್ಗ ಎಂದರೆ ಅದು ಜಮ್ಮು ಕಾಶ್ಮೀರ. ಅದರಲ್ಲೂ ಲಡಾಖ್ ಇಂಡಸ್ ನದಿ ದಂಡೆಯ ಮೇಲಿರುವ ಅತ್ಯಂತ ಸುಂದರ ತಾಣಗಲ್ಲೊಂದು. ಲಡಾಖ್‌ನಲ್ಲಿ ಒಂದಲ್ಲ ಒಂದು ಬಾಲಿವುಡ್ ಚಿತ್ರಗಳು ಚಿತ್ರೀಕರಣವಾಗುವುದರಿಂದ ಲಡಾಖ್‌ನ ಸುಂದರ ತಾಣಗಳು ಪದೇ ಪದೇ ಪ್ರವಾಸಿಗರ ಮನಸ್ಸಿನ ಪಟದೊಳಗೆ ಇಳಿಯುವ ಚಾನ್ಸೇ ಜಾಸ್ತಿ. ಲಡಾಖ್‌ಗೆ ‘ಕೊನೆಯ ಸಂಗ್ರೀಲಾ’, ‘ಕಿರು ಟಿಬೆಟ್’, ‘ಚಂದ್ರನ ಭೂಮಿ’ ಹಾಗೂ ‘ಚಂದ್ರನ ತುಂಡು’ ಎಂಬ ಹೆಸರುಗಳು ಈ ಪ್ರವಾಸಿ ತಾಣದ ಖ್ಯಾತಿಯನ್ನು ದುಪ್ಪಟ್ಟು ಮಾಡುತ್ತದೆ. ರಾಜಧಾನಿ ಲೇಹ್ ಹೊರತುಪಡಿಸಿದರೆ ಲಡಾಖ್‌ನಲ್ಲಿ ಅತೀ ಹೆಚ್ಚು ನೋಡಬಲ್ಲ ಪ್ರವಾಸಿ ತಾಣಗಳಿವೆ. ಅಲಚಿ, ನೂಬ್ರಾ ಕಣಿವೆ, ಹೇಮಿಸ್, ಲಮ್ಯಾರು, ಜನ್ಸ್‌ಕರ್ ಕಣಿವೆ, ಕರಂಗಲಿ, ಪಂಗೊಂಗ್ ಸೊ, ಸೋ ಕಾರ್ ಹಾಗೂ ಸೊ ಮೋರಿರಿ ಮುಖ್ಯವಾಗಿದೆ. ಆಕರ್ಷಕ ಕೆರೆಗಳು, ಕಣ್ಮನ ಸೆಳೆಯುವ ಪರ್ವತ, ಆಕರ್ಷಕ ಭೂಪ್ರದೇಶ ಹಾಗೂ ಬೆಟ್ಟದ ಆಕರ್ಷಕ ತಪ್ಪಲುಗಳು ಇಲ್ಲಿನ ಜೀವಂತಿಕೆಯನ್ನು ಮತ್ತೆ ಮತ್ತೆ ಎತ್ತಿ ಹಿಡಿದಿವೆ. ಲಡಾಖಿ, ಪುರೀಗ್, ಟಿಬೇಟಿಯನ್, ಹಿಂದಿ ಹಾಗೂ ಇಂಗ್ಲಿಷ್ ಇಲ್ಲಿನ ಪ್ರಮುಖ ಭಾಷೆಗಳಾಗಿ ಪ್ರವಾಸಿಗರಿಗೆ ಎದುರುಗೊಳ್ಳುತ್ತಿದೆ. ಸಮುದ್ರ ಮಟ್ಟದಿಂದ ಲಡಾಖ್ ಇರುವುದು ೩೫೦೦ ಮೀಟರ್ ಎತ್ತರದಲ್ಲಿ. ಹಿಮಾಲಯ ಹಾಗೂ ಕಾರಾಕೋರಂ ಎಂಬೆರಡು ಪರ್ವತ ಶ್ರೇಣಿಗಳ ನಡುವೆ ಇದಿದೆ. ಅಲ್ಲದೇ ಹೆಚ್ಚುವರಿ ಆಕರ್ಷಣೆಯಾಗಿ ಜನ್ಸಕರ್ ಹಾಗೂ ಲಡಾಖ್ ಕಣಿವೆಗಳು ಇದನ್ನು ಸುತ್ತಿವರಿದಿದ್ದು ಇದನ್ನು ಇನ್ನಷ್ಟು ಆಕರ್ಷಕವಾಗಿಸಿದೆ. ನಂಬಿಕೆಗಳ ಪ್ರಕಾರ, ಲಡಾಖ್ ದೊಡ್ಡ ಕೆರೆಯೊಂದರ ಮುಳುಗಿದ ಭಾಗ. ಇದರಿಂದ ಇದು ವರ್ಷದ ಎಲ್ಲಾ ದಿನ ಭೌಗೋಳಿಕ ಬದಲಾವಣೆಯನ್ನು ತೋರಿಸುತ್ತದೆ. ಇದರಿಂದಾಗಿ ಇದು ಲಡಾಖ್ ಒಂದು ಕಣಿವೆ ಪ್ರದೇಶ. ಈ ಭಾಗದಲ್ಲಿ ಬೌದ್ಧ ಧರ್ಮ ಅತ್ಯಂತ ಪ್ರಭಾವಿಯಾಗಿದ್ದು, ತನ್ನ ಪ್ರಭುತ್ವ ಸಾಧಿಸಿದೆ. ಆಶ್ರಮ ಅಥವಾ ಗೋಂಪ್‌ಗಳು ಇಲ್ಲಿ ಹೆಚ್ಚು ಜನರನ್ನು ಆಕರ್ಷಿಸುವ ತಾಣ. ಹೇಮಿಸ್ ಆಶ್ರಮ, ಸಂಕರ ಗೋಂಪಾ, ಮಾಥೂ ಆಶ್ರಮ, ಶೇ ಗೋಂಪಾ, ಸ್ಪಿತುಕ್ ಆಶ್ರಮ ಹಾಗೂ ಸತಂಕ ಆಶ್ರಮಗಳು ಇಲ್ಲಿನ ಅತ್ಯಂತ ಪ್ರಸಿದ್ಧ ಹಾಗೂ ಗುರುತಾದ ಧಾರ್ಮಿಕ ಕೇಂದ್ರಗಳು. ಇವಲ್ಲದೇ ತಿಕ್ಸೆ ಆಶ್ರಮ ಹಾಗೂ ತೆಸ್ಮೋ ಆಶ್ರಮಗಳು ಕೂಡ ಭೇಟಿಗೆ ಯೋಗ್ಯವಾದ ತಾಣಗಳು. ಉತ್ಸವಗಳಿಗೆ ಸೇರುವ ಪ್ರವಾಸಿಗರು ಉತ್ಸವಗಳಲ್ಲಿ ಪ್ರಮುಖವಾಗಿ ಗಾಲ್ಡನ್ ನಮ್ಚೋಟ್, ಬುದ್ಧ ಪೂರ್ಣಿಮೆ, ದೋಸ್‌ಮೋಚೇ ಹಾಗೂ ಲೋಸಾರ್‌ಗಳು ಲಡಾಖ್‌ನಾದ್ಯಂತ ನಡೆಯುವ ಅದ್ದೂರಿ ಆಚರಣೆಗಳು. ಈ ಸಮಯದಲ್ಲಿ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರೂ ಇಲ್ಲಿ ಬಂದು ಸೇರುತ್ತಾರೆ. ದೋಸ್‌ಮೋಚೇ ಉತ್ಸವದಲ್ಲಿ ನೃತ್ಯ, ಪ್ರಾರ್ಥನೆ ಹಾಗೂ ಪ್ರದರ್ಶನ ನಡೆಯುತ್ತದೆ. ಈ ಉತ್ಸವ ಇಲ್ಲಿನ ನಾಗರಿಕರಲ್ಲಿ ಹೊಸ ಉತ್ಸಾಹವನ್ನು ಚಿಮ್ಮಿಸುತ್ತದೆ. ಎರಡು ದಿನಗಳ ಕಾಲ ಈ ಆಚರಣೆ ನಡೆಯುತ್ತದೆ. ಟಿಬೇಟಿಯನ್ ಬೌದ್ಧ ಧರ್ಮೀಯರ ಪಾಲಿಗೆ ಇದೊಂದು ವಿಶೇಷ ಸಮಾರಂಭ. ಸಖಾ ದವಾ ಆಚರಣೆಯು ಗೌತಮ ಬುದ್ಧ ಹುಟ್ಟಿದ ದಿನದ ಸಂಭ್ರಮಕ್ಕೆ ಕೈಗೊಳ್ಳುವ ಉತ್ಸವ. ಅಲ್ಲದೇ ಬುದ್ಧನ ಸಾವಿನ ದಿನವೂ ಇದೇ ಆಗಿದೆ. ಟಿಬೇಟಿಯನ್ ಕ್ಯಾಲೆಂಡರ್‌ನ ನಾಲ್ಕನೇ ತಿಂಗಳ ಹಬ್ಬ ಇದಾಗಿದ್ದು, ಮೇ ಅಥವಾ ಜೂನ್ ತಿಂಗಳಲ್ಲಿ ನಡೆಯುತ್ತದೆ. ಇಡೀ ತಿಂಗಳು ಈ ಆಚರಣೆ ಅಲ್ಲಲ್ಲಿ ನಡೆಯುತ್ತಲೇ ಇರುತ್ತದೆ. ಪ್ರವಾಸಿಗರು ಇಲ್ಲಿ ಓಡಾಡಲು ಬಾಡಿಗೆ ಕಾರು ಅಥವಾ ಬೈಕ್ ಪಡೆಯಬಹುದು. ಸಾಮಾನ್ಯವಾಗಿ ಪ್ರವಾಸಿಗರು ಇಲ್ಲಿಗೆ ಸ್ವಂತ ವಾಹನದಲ್ಲಿ ಆಗಮಿಸುತ್ತಾರೆ. ಇದು ಸಂಚಾರಕ್ಕೂ ಸರಳ. ಪ್ರದೇಶದಲ್ಲಿ ಸಂಚಾರ ಸಾಕಷ್ಟು ದುಸ್ತರವಾಗಿರುವುದರಿಂದ ವಾಹನದೊಂದಿಗೆ ಬರುವವರು ಜತೆಗೆ ಅಗತ್ಯ ಬಿಡಿಭಾಗವನ್ನೂ ತಂದುಕೊಳ್ಳುವುದು ಒಳಿತು ಎನ್ನುವ ಸಲಹೆ ನೀಡಲಾಗುತ್ತದೆ. ತುರ್ತು ಸಂದರ್ಭದಲ್ಲಿ ಇದು ಸಹಾಯಕ್ಕೆ ಆಗುತ್ತದೆ. ಇಲ್ಲಿರುವ ಸಾಕಷ್ಟು ಹೋಟೆಲ್‌ಗಳು, ರೆಸ್ಟೊರೆಂಟ್‌ಗಳು ತುಪ್ಕಾಸ್ ಅಥವಾ ಸೂಪ್ ನೂಡಲ್ಸ್ ಹಾಗೂ ಮೋಮೊಸ್ ಅಥವಾ ಡುಪ್ಲಿಂಗ್‌ಗಳನ್ನು ಆಹಾರ ರೂಪದಲ್ಲಿ ನೀಡುತ್ತವೆ. ಇದು ಈ ಭಾಗದ ಜನಪ್ರಿಯ ತಿಂಡಿ ಕೂಡ. ಪ್ರವಾಸಿಗರು ಲಡಾಖ್‌ಗೆ ವರ್ಷದ ಯಾವುದೇ ಸಮಯದಲ್ಲಿಯೂ ಬರಬಹುದು. ಆದರೆ ಉತ್ತಮ ಸಮಯ, ಮೇ ನಿಂದ ಸೆಪ್ಟೆಂಬರ್ ನಡುವಿನ ಅವಧಿ. ಈ ಸಂದರ್ಭದಲ್ಲಿ ಇಲ್ಲಿನ ವಾತಾವರಣವು ಆಹ್ಲಾದಮಯವಾಗಿರುತ್ತದೆ. ತಾಪಮಾನ ಕೂಡ ೩೩ ಡಿಗ್ರಿ ಸೆಲ್ಶಿಯಸ್‌ಗಿಂತ ಹೆಚ್ಚಿರುವುದಿಲ್ಲ ಅದು ಪ್ರವಾಸಿಗರಿಗೆ ಪ್ಲಸ್ ಪಾಯಿಂಟ್. ನೋಡಲೇಬೇಕಾದ ಸ್ಥಳಗಳು ಅಲ್ಚಿ ಬೌದ್ಧ ಮಠ ಅಲ್ಚಿ ಗ್ರಾಮದಲ್ಲಿ ನೆಲೆಗೊಂಡಿರುವ ಅಲ್ಚಿ ಬೌದ್ಧ ಮಠ ಲಡಾಖ್ ನಲ್ಲಿರುವ ಹಲವು ಪುರಾತನ ಮಠಗಳಲ್ಲಿ ಒಂದು. ಸಿಂಧೂ ನದಿಯ ತಟದ ಮೇಲಿರುವ ಈ ಮಠವನ್ನು ಅಲ್ಚಿ ಚೊಸ್ಖೋರ್ ಹಾಗು ಅಲ್ಚಿ ಗೊಂಪಾ ಎಂಬ ನಾಮಗಳಿಂದಲೂ ಸಂಭೋದಿಸಲಾಗುತ್ತದೆ. ಈ ಮಠವನ್ನು ಸಂಸ್ಕೃತದಲ್ಲಿರುವ ಬೌದ್ಧ ವ್ಯಾಖ್ಯಾನಗಳನ್ನು ಟಿಬೇಟಿಯನ್ ಭಾಷೆಗೆ ಭಾಷಾಂತರಿಸಿದ ಭಾಷಾಂತರಗಾರ ರಿಂಚೆನ್ ಝಾಂಗ್ಪೊ ಎಂಬಾತನು ೯೫೮ ಮಾತು೧೦೫೫ ಮಧ್ಯದ ಅವಧಿಯಲ್ಲಿ ನಿರ್ಮಿಸಿದ ಎಂದು ನಂಬಲಾಗಿದೆ. ಈ ಮಠದ ಒಂದು ಮಹತ್ವವಾದ ಗುಣಲಕ್ಷಣವೆಂದರೆ, ಇದು ಸಮತಟ್ಟಾದ ಭೂಮಿಯಲ್ಲಿ ನಿರ್ಮಿತವಾದುದು. ಈ ಮಠ ಸಂಕೀರ್ಣದಲ್ಲಿ ಮೂರು ದೇವಾಲಯಗಳನ್ನು ನೋಡಬಹುದಾಗಿದ್ದು, ಅವುಗಳೆಂದರೆ ಡು-ಖಾಂಗ್, ಸುಮ್-ಸೆಕ್ ಮತ್ತು ಮಂಜುಶ್ರೀ ದೇವಾಲಯಗಳು. ಕಾರ್ಟೆನ್ಸ್ ಅಥವಾ ಸ್ತೂಪಗಳು ಈ ದೇವಾಲಯದ ಅಂಗಳದಲ್ಲಿರುವ ಮುಖ್ಯವಾದ ರಚನೆಗಳು. ಪ್ರಸ್ತುತ ಲಿಕಿರ್ ಬೌದ್ಧ ಮಠದ ಸನ್ಯಾಸಿಗಳು ಈ ಅಲ್ಚಿ ಮಠದ ನಿರ್ವಹಣೆ ಮಾಡುತ್ತಿದ್ದಾರೆ. ಈ ಮಠದಲ್ಲಿ ಛಾಯಾಚಿತ್ರಣವನ್ನು ನಿಷೇಧಿಸಲಾಗಿದ್ದು, ವಿದ್ಯುತ್ ಸಂಪರ್ಕ ಇನ್ನೂ ಇಲ್ಲದಿರುವ ಕಾರಣ ಪ್ರವಾಸಿಗರು ಟಾರ್ಚ್ ಗಳನ್ನು ಹಿಡಿದು ಪ್ರವೇಶ ಪಡೆಯಬಹುದು. ಹೆಮಿಸ್ ಆಶ್ರಮ ಹೆಮಿಸ್ ಆಶ್ರಮ ಲೇಹ ನಿಂದ ೪೦ ಕಿಮೀ ದೂರದಲ್ಲಿದೆ. ಸತ್ಸಂಗ ರಸ್ಪ ನವಂಗ್ ಗ್ಯಾತ್ಸೋ ಮೊದಲ ಬಾರಿ ದೇಹಧಾರಣೆ ಮಾಡಿದಾಗ ೧೬೩೦ ರಲ್ಲಿ ಈ ಆಶ್ರಮವನ್ನು ಕಟ್ಟಲಾಯಿತು. ೧೬೭೨ ರಲ್ಲಿ ಮಹಾಯೋಗ ತಂತ್ರ ಶಾಲೆಯನ್ನು ತೆರೆಯುವದಕ್ಕೆ ಧಾರ್ಮಿಕ ಶಿಕ್ಷಣ ನೀಡುವುದಕ್ಕೆ ದೊರೆ ಸೆಂಗೆ ನಂಪರ್ ಗ್ಯಾಲ್ವಾ ಅವರಿಂದ ಮರು ಸ್ಥಾಪಿಸಲ್ಪಟ್ಟಿತು. ಹೆಮಿಸ್ ಆಶ್ರಮ ಅಥವಾ ಹೆಮಿಸ್ ಗೊಂಪವನ್ನು ಟಿಬೇಟಿಯನ್ ವಾಸ್ತು ಶೈಲಿಯಲ್ಲಿ ಬೌದ್ದ ಸಂಸ್ಕೃತಿ ಮತ್ತು ಜೀವನ ಶೈಲಿಯನ್ನು ಬಿಂಬಿಸುವಂತೆ ಕಟ್ಟಲಾಗಿದೆ. ಬೌದ್ದ ಧರ್ಮ ಸ್ಥಾಪಕ ಬುದ್ದನ ತಾಮ್ರದ ಮೂರ್ತಿಯು ಈ ಆಶ್ರಮದ ಮುಖ್ಯ ಆಕರ್ಷಣೆ. ಕಾಲಚಕ್ರ ಮತ್ತು ದಿಕ್ಪಾಲಕರ ಚಿತ್ರಕಲೆಗಳು ಗೋಡೆಗಳ ಮೇಲಿವೆ. ದುಃಖಂಗ್ ಮತ್ತು ಶೊಂಗ್ ಖಂಗ್. ಪ್ರಸ್ತುತ್ ಬೌದ್ದ ಧರ್ಮದ ಒಳಪಂಗಡವಾದ ದ್ರುಕ್ಪಾಗೆ ಹೆಮಿಸ್ ಆಶ್ರಮದ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಲಾಗಿದೆ. ಜೂನ್ ಅಥವಾ ಜುಲೈ ತಿಂಗಳಲ್ಲಿ ಹೆಮಿಸ್ ನ ವಾರ್ಷಿಕ ಉತ್ಸವ ಜರುಗುತ್ತದೆ. ಈ ಸಂದರ್ಭದಲ್ಲಿ ಟಿಬೇಟಿಯನ್ ಬೌದ್ದ ಇತಿಹಾಸದಲ್ಲಿನ ಪ್ರಮುಖ ಆಕಾರ ಗುರು ಪದ್ಮಸಂಭವನಿಗೆ ಗೌರವ ಸಲ್ಲಿಸಲು ಲಕ್ಷಾಂತರ ಭಕ್ತರು ಸೇರುತ್ತಾರೆ. ಡು-ಖಾಂಗ್ ಅಲ್ಚಿ ಬೌದ್ಧ ಮಠ ಸಂಕೀರ್ಣದ ಮಧ್ಯಭಾಗದಲ್ಲಿ ಕಂಡುಬರುವ ದೇವಾಲಯ ಡು-ಖಾಂಗ್. ಈ ಮಠ ಸಂಕೀರ್ಣದಲ್ಲೆ ಇದೊಂದು ಪುರಾತನ ಹಾಗು ದೊಡ್ಡದಾದ ದೇವಾಲಯವಾಗಿದ್ದು, ಇದರಲ್ಲೆ ಬೌದ್ಧ ಸನ್ಯಾಸಿಗಳು ಹಲವು ಆಚರಣೆಗಳನ್ನು ಕೈಗೊಳ್ಳುತ್ತಾರೆ. ೧೨ ಹಾಗು ೧೩ ನೇ ಶತಮಾನದಲ್ಲಿ ಈ ದೇವಾಲಯವನ್ನು ಇತರೆ ರಚನೆಗಳೊಂದಿಗೆ ವಿಸ್ತರಿಸಲಾಯಿತು. ಏನಿಲ್ಲವೆಂದರೂ ಬುದ್ಧನ ಸುಮಾರು ೧೦೦೦ ಹಸಿಚಿತ್ರಗಳನ್ನು ಈ ದೇವಾಲಯದ ಇಕ್ಕೆಲಗಳಲ್ಲಿ ರಚಿಸಲಾಗಿದೆ. ಈ ದೇವಾಲಯದ ಹೊರದ್ವಾರದಲ್ಲಿ, ಹಿಂದು ಧರ್ಮದ ವಿನಾಶನದ ಪ್ರತೀಕವಾದ ಮಹಾಕಾಲ್, ಶಿವ ಮತ್ತು ಭಾವಚಕ್ರ ಅಥವಾ ಜೀವನಚಕ್ರ ಆಕೃತಿಗಳನ್ನು ಕಾಣಬಹುದು. ದೇವಾಲಯದ ಗೋಡೆಗಳು ಪಂಚ ತತ್ಘಟಗಳನ್ನು ಪ್ರತಿಫಲಿಸುತ್ತದೆ. ವಜ್ರ ಭೈರವ ದೇಗುಲ ವಜ್ರ ಭೈರವ ದೇಗುಲ ಲೇಹ್‌ನಿಂದ ೧೦ ಕಿ.ಮೀ. ದೂರದಲ್ಲಿದೆ. ಇದನ್ನು ಗೆಲುಗ್ಪಾ ಅಥವಾ ‘ಯಲ್ಲೋವ್ ಹ್ಯಾಟ್’ ಪಂಗಡದ ರಕ್ಷಕ ‘ತಾಂತ್ರಿಕ್’ ದೇವತೆಯ ಗೌರವಾರ್ಥವಾಗಿ ನಿರ್ಮಿಸಲಾಗಿದೆ. ಸಾಮಾನ್ಯ ನಾಗರಿಕರು, ಭಕ್ತರ ಪ್ರವೇಶಕ್ಕೆ ಇಲ್ಲಿ ವರ್ಷಕ್ಕೆ ಒಮ್ಮೆ ಮಾತ್ರ ಅವಕಾಶ ಲಭಿಸುತ್ತದೆ. ಕಾರಣ ಇಲ್ಲಿರುವ ವಿಗ್ರಹವು ಅತೀಂದ್ರೀಯ ಶಕ್ತಿಯನ್ನು ಹೊಂದಿರುವುದಾಗಿದೆ. ಮಿಕ್ಕಂತೆ ಉಳಿದ ಸಮಯದಲ್ಲಿ ಈ ವಿಗ್ರಹವನ್ನು ಆಶ್ರಮದಲ್ಲಿರುವ ಒಂದು ಚೇಂಬರ್ ನಲ್ಲಿ ಇರಿಸಲಾಗಿರುತ್ತದೆ. ಇದರಿಂದ ವರ್ಷಕ್ಕೊಮ್ಮೆ ಮಾತ್ರ ದರ್ಶನ ಎಂದು ಅಭಿಪ್ರಾಯ ವ್ಯಕ್ತವಾಗುತ್ತದೆ. ಈ ದೇಗುಲವು ಅತ್ಯಂತ ಪುರಾತನ ಕಟ್ಟಡ ಎಂಬ ಖ್ಯಾತಿಯನ್ನೂ ಹೊಂದಿದೆ. ಇಲ್ಲಿ ೬೦೦ ವರ್ಷ ಹಳೆಯದಾದ ಚಿತ್ರಕಲೆಗಳು, ಇಲ್ಲಿನ ಕಟ್ಟಡದ ಗೋಡೆಗೆ ಅಲಂಕೃತವಾಗಿವೆ. ಪ್ರವಾಸಿಗರು ಇಲ್ಲಿಗೆ ಟ್ಯಾಕ್ಸಿ ಅಥವಾ ಜೀಪ್ ಪಡೆದು ಆರಾಮವಾಗಿ ತಲುಪಬಹುದು. ಹೆಚ್ಚುವರಿಯಾಗಿ ಹೇಳುವುದಾದರೆ ಇಲ್ಲಿ ಬರುವ ಪ್ರವಾಸಿಗರು ಮಹಾಕಾಲ ದೇವಾಲಯ, ಸ್ಪಿಚ್ಯುವಲ್ ಗೆಸ್ಚರ್, ಸ್ಪಿಚ್ಯುವಲ್ ಆಶ್ರಮವನ್ನೂ ನೋಡಬಹುದು. ಇವು ಈ ಪ್ರದೇಶದ ಆಸುಪಾಸಲ್ಲಿಯೇ ಕಂಡುಬರುತ್ತವೆ. ಸ್ಟಾಕ್ ಪ್ಯಾಲೇಸ್ ಸ್ಟಾಕ್ ಪ್ಯಾಲೇಸ್ ಅನ್ನು ರಾಜಾ ತೇಸ್ಪಾಲ್ ತೊಂದುಪ್ ನಮಂಗ್ಯಾಲಾ ಅವರು ೧೮೨೫ ರಲ್ಲಿ ನಿರ್ಮಿಸಿದರು. ಇಂಡಸ್ ನದಿ ದಂಡೆಯ ಮೇಲಿರುವ ಈ ಪ್ಯಾಲೇಸ್ ನಗರದಿಂದ ೧೫ ಕಿ.ಮೀ. ದೂರದಲ್ಲಿದೆ. ಈ ಪ್ಯಾಲೇಸ್ ೧೦೮ ಕಂಗ್ಯಾರು ಸಂಪುಟವನ್ನು ಒಳಗೊಂಡಿದೆ. ಟಿಬೇಟಿಯನ್ ಬುದ್ಧಿಸಂ ಶಾಲೆಗಳಲ್ಲಿ ಪಠ್ಯರೂಪದ ಆಕರಗಳು ಇಲ್ಲಿವೆ. ಇವನ್ನು ಇಲ್ಲಿನ ಗ್ರಂಥಾಲಯದಲ್ಲಿ ಜೋಪಾನವಾಗಿ ಇರಿಸಲಾಗಿದೆ. ಶ್ರೀಮಂತ ಕುಟುಂಬದ ವಾಸಕ್ಕೆ ಮತ್ತು ರಾಜ ಸೆಂಗ್ಯೆ ನಂಗ್ಯಾಲರ ವಾಸಕ್ಕೆ ಇದು ಮೊದಲು ಬಳಕೆ ಆಗುತ್ತಿತ್ತು. ಇದು ಸಾಂಪ್ರದಾಯಿಕ ಶೈಲಿ ಹಾಗೂ ಆಕರ್ಷಕ ವಾಸ್ತುಶಿಲ್ಪ ಮಾದರಿಯನ್ನು ಒಳಗೊಂಡು ನಿರ್ಮಾಣವಾಗಿದೆ. ಸೂರ್ಯಾಸ್ತ ಹಾಗೂ ಸೂರ್ಯೋದಯ ವೀಕ್ಷಣೆಗೆ ಇದು ಉತ್ತಮ ತಾಣವಾಗಿದೆ. ಇದು ಇಲ್ಲಿನ ಹೆಚ್ಚುವರಿ ವಿಶೇಷತೆಯೂ ಕೂಡ ಹೌದು. ವರ್ಷದಲ್ಲಿ ಒಂದು ನೃತ್ಯ ಉತ್ಸವ ಇಲ್ಲಿನ ಇನ್ನೊಂದು ವೈಶಿಷ್ಟ್ಯಅಂದರೆ ವರ್ಷಕ್ಕೊಮ್ಮೆ ನಡೆಯುವ ನೃತ್ಯ ಉತ್ಸವ. ಇದಕ್ಕೆ ಸಾಕ್ಷಿಯಾಗಲು ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಈ ಸಂದರ್ಭದಲ್ಲಿ, ಪ್ರವಾಸಿಗರು ಇಲ್ಲಿರುವ ಅಪರೂಪದ ನಾಣ್ಯಗಳ ಸಂಗ್ರಹ, ರಾಯಲ್ ವಸ್ತುಗಳು ಹಾಗೂ ಇನ್ನಿತರೆ ಪ್ರಮುಖ ಸಾಮಗ್ರಿಗಳನ್ನು ನೋಡಬಹುದು. ಇಲ್ಲಿ ತಲುಪಿದರೆ ಸುತ್ತಿ ಬರಲು ಕನಿಷ್ಠ ೪ ರಿಂದ ೫ ಘಂಟೆಗಳು ಬೇಕು. ಪ್ಯಾಲೇಸ್ ಸುತ್ತಿ ಎಲ್ಲವನ್ನೂ ನೋಡಿ ಬರಲು ಇಷ್ಟು ಕಾಲ ಅತ್ಯಗತ್ಯ. ಪ್ಯಾಲೇಸ್ ಒಳಗಿರುವ ಸ್ಪಿಟ್ಯುಕ್ ಆಶ್ರಮ ಪ್ರಮುಖ ಆಕರ್ಷಣೆ. ಪ್ಯಾಲೇಸ್ ತಲುಪಲು ಇಚ್ಛಿಸುವ ಪ್ರವಾಸಿಗರು ಸುಲಭವಾಗಿ ಕಾರು, ಜೀಪ್ ಬಾಡಿಗೆ ಪಡೆದು ಬಂದು ತಲುಪಬಹುದಾಗಿದೆ. ಸಾಹಸ ಕ್ರೀಡೆ ಪ್ಯಾರಾಗ್ಲೈಡಿಂಗ್ ಲೇಹ್‌ನಲ್ಲಿ ಅತ್ಯಂತ ಜನಪ್ರಿಯವಾದ ಇನ್ನೊಂದು ಸಾಹಸ ಕ್ರೀಡೆ ಪ್ಯಾರಾಗ್ಲೈಡಿಂಗ್. ಇಂಡಸ್ ನದಿಯ ದಡದ ಮೇಲೆ ಈ ಕ್ರೀಡೆಯನ್ನು ಆಸ್ವಾದಿಸಬಹುದಾಗಿದೆ. ಇದು ಸಾಹಸ ಕ್ರೀಡೆಗೆ ಉತ್ತೇಜನ ನೀಡುವ ತಾಣ. ಇದು ೧೧ ಸಾವಿರ ಅಡಿ ಎತ್ತರದಲ್ಲಿದೆ. ಹೀಗಾಗಿ ಇದು ಪ್ಯಾರಾಗ್ಲೈಡಿಂಗ್‌ಗೆ ಹೇಳಿಮಾಡಿಸಿದಂತಿದೆ. ಅಕ್ಟೋಬರ್‌ನಿಂದ ಜೂನ್ ನಡುವಿನ ಅವಧಿ ಪ್ಯಾರಾಗ್ಲೈಡಿಂಗ್‌ಗೆ ಸಕಾಲ. ಟ್ರೆಕ್ಕಿಂಗ್ ಮಜಾ ನೋಡಬಹುದು ಪ್ರವಾಸಿಗರಿಗೆ ಇಲ್ಲಿನ ಪ್ರಮುಖ ಆಕರ್ಷಣೆ ಟ್ರೆಕ್ಕಿಂಗ್. ಜೂನ್ ತಿಂಗಳಿಂದ ಸೆಪ್ಟೆಂಬರ್ ನಡುವಿನ ಅವಧಿಯಲ್ಲಿ ಇಲ್ಲಿನ ವೀಕ್ಷಣಾ ತಾಣಗಳು ಅತ್ಯಂತ ಮನೋಹರವಾಗಿ ಗೋಚರಿಸುತ್ತವೆ. ಪ್ರವಾಸಿಗರು ಈ ಸಂದರ್ಭದಲ್ಲಿ ಟ್ರೆಕ್ಕಿಂಗ್‌ನ ತರಹೇವಾರಿ ಅನುಭವ ಪಡೆದುಕೊಳ್ಳಬಹುದು. ಹಿಮಾವೃತ್ತವಾದ ಹಿಮಾಲಯ ಪರ್ವತದ ಮೇಲೆ ಟ್ರೆಕ್ಕಿಂಗ್ ತೆರಳುವ ಸುವರ್ಣಾವಕಾಶ ಇಲ್ಲಿ ಸಿಗುತ್ತದೆ. ಅನುಭವಿ ಹಾಗೂ ನುರಿತ ಟ್ರೆಕ್ಕಿಂಗ್ ಪಟುಗಳು ಇಲ್ಲಿ ತೆರಳಲು ತರಬೇತಿ ನೀಡುತ್ತಾರೆ. ಇವರು ಲೇಹ್‌ನ ಸುತ್ತಮುತ್ತ ಸಾಕಷ್ಟು ಸಂಖ್ಯೆಯಲ್ಲಿ ಸಿಗುತ್ತಾರೆ. ಪ್ರವಾಸಿಗರಿಗೆ ಟ್ರೆಕ್ಕಿಂಗ್ ತೆರಳಲು ಮಾರ್ಗದರ್ಶನ ನೀಡುವ ಸಾಕಷ್ಟು ಶಿಕ್ಷಣ ಕೇಂದ್ರಗಳು ಇಲ್ಲಿವೆ. ಜೂನ್ ಹಾಗೂ ಸೆಪ್ಟೆಂಬರ್ ತಿಂಗಳು ಇಲ್ಲಿ ಟ್ರೆಕ್ಕಿಂಗ್ ತೆರಳಲು ಸಕಾಲ. ಮರ್ಖಾ ಕಣಿವೆ ಪ್ರದೇಶ ಮಾರ್ಗ, ಸ್ಪಿತಿಯಿಂದ ಲಡಾಖ್ ನಡುವಿನ ಮಾರ್ಗ, ಲಡಾಖ್ ಜನ್ಸಕರ್ ಮಾರ್ಗ ಹಾಗೂ ನುಬ್ರಾ ಕಣಿವೆ ಮಾರ್ಗ ಮುಂತಾದವು ಕೆಲ ಜನಪ್ರಿಯ ಟ್ರೆಕ್ಕಿಂಗ್ ಮಾರ್ಗಗಳಾಗಿವೆ. ಇದರ ಹೊರತಾಗಿ ಇಂಡಸ್ ನದಿ ಪಾತ್ರದಲ್ಲಿ ನಿರ್ಮಾಣವಾಗಿರುವ ಕಣಿವೆ ಮಾರ್ಗದಲ್ಲಿ ಸಫಾರಿಗೂ ಯೋಜನೆ ಹಾಕಿಕೊಳ್ಳಬಹುದು. (ತಜ್ಞರ ಕೆಲಸ:ಉಲ್ಲೇಖಗಳನ್ನು ಹಾಕದೆ - ವಿಷಯ ತುಂಬಲಾಗಿದೆ) ರಾಜಕೀಯ ಮತ್ತು ಸರ್ಕಾರ ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆ 2014 ಜಮ್ಮು-ಕಾಶ್ಮೀರ ಮತ್ತು ಜಾರ್ಖಂಡ್‌ನಲ್ಲಿ Nov 25, 2014 ಮಂಗಳವಾರ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಉತ್ತಮ ಮತದಾನವಾಗಿದೆ. ಜಮ್ಮು-ಕಾಶ್ಮೀರದ 15, ವಿಧಾನಸಭೆ ಕ್ಷೇತ್ರಗಳಿಗೆನಡೆದ ಚುನಾವಣೆಯಲ್ಲಿ ಶೇ.70 ಮತದಾನವಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ 2008ರ ವಿಧಾನಸಭೆ ಚುನಾವಣೆಯಲ್ಲಿ ಶೇ.52.63 ಮತದಾನವಾಗಿತ್ತು. 7 ಸಚಿವರು ಸೇರಿ 12 ಶಾಸಕರನ್ನು ಒಳಗೊಂಡು ಒಟ್ಟು 123 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 5,49,698 ಪುರುಷರು, 5,00539 ಮಹಿಳೆಯರು , 13 ಮಂಗಳಮುಖಿಯರು ಸೇರಿದಂತೆ 15 ಕ್ಷೇತ್ರಗಳಲ್ಲಿ 10,502,50 ಮತದಾರರಿದ್ದಾರೆ. ಜಮ್ಮು ಮತ್ತು ಕಾಶ್ಮೀರ 23-12-2014 ಫಲಿತಾಂಶ ಜಮ್ಮು ಮತ್ತು ಕಾಶ್ಮೀರದ ಒಟ್ಟು ಸ್ಥಾನಗಳು 87; ಅದರಲ್ಲಿ ಜಮ್ಮು ಭಾಗದಲ್ಲಿ 37, ಲಡಾಖ್ ಭಾಗದಲ್ಲಿ 4, ಮುಸ್ಲಿಮ್ ಬಹುಸಂಖ್ಯಾತ ಭಾಗದಲ್ಲಿ 46 ಸ್ಥಾನಗಳಿವೆ. ಬಿಜೆಪಿಗೆ ಜಮ್ಮು ಭಾಗದಲ್ಲಿಯೇ 25 ಸ್ಥಾನಗಳು ಬಂದಿವೆ. ಉಳಿದ ಕಡೆ ಅದರ ಗಳಿಕೆ ಶೂನ್ಯ.ಆಗನ ಜನಪ್ರತಿನಿಧಿ ಶೇಕ್ ಅಬ್ದುಲ್ಲಾ ಅವರು ಮುಂದಾಲೋಚನೆ ಮಾಡಿ ಕಾಶ್ಮೀರ ಭಾಗಕ್ಕೆ ಯಾವಾಗಲೂ ಬಹುಮತ ಬರುವಂತೆ ವಿಧಾನಸಭೆ ಸ್ಥಾನಗಳನ್ನು ನಿಗದಿಗೋಳಿಸಿದ್ದಾರೆ. ಇನ್ನೂ 11(?)ಕ್ಷೇತ್ರಗಳು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿದೆ. ಜಮ್ಮು ಕಾಶ್ಮೀರದಲ್ಲಿ 2015ಜನವರಿ 08 ರಿಂದ ರಾಜ್ಯಪಾಲರ ಆಡಳಿತ ಜಾರಿಗೆ ಬಂದಿದೆ. (ಸರ್ಕಾರದ ಮೂಲಗಳು TOI-Bharti Jain,TNN|Jan 9, 2015.) ಪೀಪಲ್ಸ್‌ ಡೆಮಾಕ್ರಟಿಕ್‌ ಪಕ್ಷದ(ಪಿಡಿಪಿ) ಮುಖ್ಯಸ್ಥ ಮುಫ್ತಿ ಮೊಹಮ್ಮದ್‌ ಸಯೀದ್‌ ಅವರು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿ 01/03/2015ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ 49 ದಿನಗಳ ರಾಜ್ಯಪಾಲರ ಆಡಳಿತ ತೆರೆ ಕಂಡಿತು. ಸಯೀದ್ ಅವರ ಬಳಿಕ ಬಿಜೆಪಿಯ ನಿರ್ಮಲ್ ಸಿಂಗ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ಪಿಡಿಪಿಯ 12 ಹಾಗೂ ಬಿಜೆಪಿ 11 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.(prajavani.[] ಹೊಸ ಮಂತ್ರಿಮಂಡಲ ರಚನೆ ೪-೪-೨೦೧೬ ಮೂರು ತಿಂಗಳ ಚೌಕಾಸಿ ರಾಜಕೀಯದ ನಂತರ ಜಮ್ಮು ಮತ್ತು ಕಾಶ್ಮೀರದ ಪ್ರಥಮ ಮಹಿಳಾ ಮುಖ್ಯಮಂತ್ರಿಯಾಗಿ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಸೋಮವಾರ 04-04-2016 ರಂದು ಪ್ರಮಾಣ ವಚನ ಸ್ವೀಕರಿಸಿದರು. ಮೆಹಬೂಬಾ ಜತೆ 22 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಈ ಬಾರಿ ಸಂಪುಟದಲ್ಲಿ ಬಿಜೆಪಿಯ ಬಲ ಹೆಚ್ಚಿದೆ. ಕಪ್ಪು ದಿರಿಸಿನಲ್ಲಿ ಇದ್ದ 56 ವರ್ಷದ ಮೆಹಬೂಬಾ ಉರ್ದುವಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ. ಅವರ ಜತೆ ಬಿಜೆಪಿಯ ನಿರ್ಮಲ್ ಸಿಂಗ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮುಫ್ತಿ ಮೊಹಮದ್ ಸಯೀದ್ ನಿಧನದ (ಜನ 7, 2016) ನಂತರ ಅವರ ಮಗಳು ಮೆಹಬೂಬಾ ಅವರು ಸರ್ಕಾರ ರಚಿಸಲು ಮೀನಮೇಷ ಎಣಿಸಿದ್ದರಿಂದ ರಾಷ್ಟ್ರಪತಿ ಆಡಳಿತ ಜಾರಿ ಮಾಡಲಾಗಿತ್ತು. ಸಯೀದ್ ಸರ್ಕಾರದಲ್ಲಿ ಆರು ಸಂಪುಟ ಸಚಿವ ಸ್ಥಾನ ಹೊಂದಿದ್ದ ಬಿಜೆಪಿ ಈ ಬಾರಿ ಎಂಟು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಜತೆಗೆ ಮೂವರು ರಾಜ್ಯ ಸಚಿವರಿದ್ದಾರೆ. ಹಿಂದಿನ ಸರ್ಕಾರದಲ್ಲಿ 11 ಸಂಪುಟ ಸಚಿವ ಸ್ಥಾನ ಹೊಂದಿದ್ದ ಪಿಡಿಪಿ ಈ ಬಾರಿ 9 ಸ್ಥಾನ ಪಡೆದಿದೆ. ಇದರ ಜತೆಗೆ ಮೂವರು ರಾಜ್ಯ ಸಚಿವರಿದ್ದಾರೆ. ಪ್ರತ್ಯೇಕವಾದಿ ಮುಖಂಡರಾಗಿದ್ದ ಅಬ್ದುಲ್ ಗನಿ ಲೋನ್‌ ಅವರ ಪುತ್ರ ಸಜ್ಜದ್ ಗನಿ ಲೋನ್ ಈ ಬಾರಿಯೂ ಬಿಜೆಪಿ ಕೋಟಾದಲ್ಲಿ ಸಚಿವ ಸ್ಥಾನ ಪಡೆದಿದ್ದಾರೆ. ಜಮ್ಮು ಮತ್ತು ಕಾಶ್ಮೀರದ 13ನೇ ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡ ಮೆಹಬೂಬಾ ರಾಜ್ಯದ ಪ್ರಥಮ ಮಹಿಳಾ ಮುಖ್ಯಮಂತ್ರಿ ಹಾಗೂ ದೇಶದ ಎರಡನೇ ಮುಸ್ಲಿಂ ಮಹಿಳಾ ಮುಖ್ಯಮಂತ್ರಿ. 1980ರಲ್ಲಿ ಸೈದಾ ಅನ್ವರಾ ತೈಮೂರ್ ಅವರು ದೇಶದ ಪ್ರಥಮ ಮುಸ್ಲಿಂ ಮಹಿಳಾ ಮುಖ್ಯಮಂತ್ರಿ ಆಗಿ ಅಸ್ಸಾಂನಲ್ಲಿ ಅಧಿಕಾರ ಸ್ವೀಕರಿಸಿದ್ದರು.ಇಬ್ಬರು ಹೆಣ್ಣು ಮಕ್ಕಳ ತಾಯಿಯಾಗಿರುವ ಮೆಹಬೂಬಾ ಕಾಶ್ಮೀರ ವಿವಿಯಿಂದ ಕಾನೂನು ಪದವಿ ಪಡೆದಿದ್ದಾರೆ. 1996 ರಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದರು. 2002ರಲ್ಲಿ ಮತ್ತೆ ಶಾಸಕಿಯಾಗಿ ಆಯ್ಕೆಯಾದರಲ್ಲದೆ, 2004 ರಲ್ಲಿ ಅನಂತ್‌ನಾಗ್‌ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. 2014 ರಲ್ಲಿ ಮತ್ತೆ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಪಡೆದಿದ್ದರು. ಇವರು ದೇಶದ ಮೊದಲು ಕೇಂದ್ರ ಆಡಳಿತದ ಪ್ರದೇಶದ ಮುಖ್ಯ ಮಂತ್ರಿ ಯಾಗಿದ್ದರೆ. ಜಮ್ಮು ಮತ್ತು ಕಾಶ್ಮಿರ ಕೇಂದ್ರಾಡಳಿತ ಪ್ರದೇಶವಾಗಿ ಪುನಾರಚನೆ ವಿಸರ್ಜನೆ:ಆಗಸ್ಟ್ 2019 ರಲ್ಲಿ, ಭಾರತದ ಸಂಸತ್ತಿನ ಉಭಯ ಸದನಗಳು 370 ನೇ ವಿಧಿಯನ್ನು ರದ್ದುಮಾಡಿ ತಿದ್ದುಪಡಿ ಮಾಡಲು ಮತ್ತು ಭಾರತದ ಸಂವಿಧಾನವನ್ನು ಸಂಪೂರ್ಣವಾಗಿ ರಾಜ್ಯಕ್ಕೆ ವಿಸ್ತರಿಸುವ ನಿರ್ಣಯಗಳನ್ನು ಅಂಗೀಕರಿಸಿದವು, ಇದನ್ನು ಭಾರತದ ರಾಷ್ಟ್ರಪತಿಗಳು ಸಾಂವಿಧಾನಿಕ ಆದೇಶದಂತೆ ಜಾರಿಗೆ ತಂದರು. ಅದೇ ಸಮಯದಲ್ಲಿ, ಸಂಸತ್ತು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯ್ದೆ, 2019 ಅನ್ನು ಅಂಗೀಕರಿಸಿತು, ಇದರಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ವಿಸರ್ಜಿಸಿ ಎರಡು ಹೊಸ ಕೇಂದ್ರಾಡಳಿತ ಪ್ರದೇಶಗಳನ್ನು ಸ್ಥಾಪಿಸಲಾಯಿತು: ಜಮ್ಮು ಮತ್ತು ಕಾಶ್ಮೀರದ ನಾಮಸೂಚಕ ಕೇಂದ್ರ ಪ್ರದೇಶ ಮತ್ತು ಲಡಾಖ್. ಮರುಸಂಘಟನೆ ಕಾಯ್ದೆಯನ್ನು ಭಾರತದ ರಾಷ್ಟ್ರಪತಿಗಳು ಒಪ್ಪಿಕೊಂಡರು ಮತ್ತು ಇದು 31 ಅಕ್ಟೋಬರ್ 2019 ರಿಂದ ಜಾರಿಗೆ ಬಂದಿತು. ಈ ಕ್ರಮಗಳಿಗೆ ಮುಂಚಿತವಾಗಿ, ಕೇಂದ್ರ ಸರ್ಕಾರವು ಕಾಶ್ಮೀರ ಕಣಿವೆಯನ್ನು ಲಾಕ್ ಮಾಡಿತು, ಭದ್ರತಾ ಪಡೆಗಳನ್ನು ಹೆಚ್ಚಿಸಿತು, ಅಸೆಂಬ್ಲಿಯನ್ನು ತಡೆಯುವ ಸೆಕ್ಷನ್ 144 ಅನ್ನು ವಿಧಿಸಿತು ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿಯಂತಹ ರಾಜಕೀಯ ನಾಯಕರನ್ನು ಗೃಹಬಂಧನದಲ್ಲಿರಿಸಿತು. ಇಂಟರ್ನೆಟ್ ಮತ್ತು ಫೋನ್ ಸೇವೆಗಳನ್ನು ಸಹ ನಿರ್ಬಂಧಿಸಲಾಯಿತು. ಕಣಿವೆ ರಾಜ್ಯ 'ಜಮ್ಮು ಮತ್ತು ಕಾಶ್ಮೀರ'ವನ್ನು ಕೇಂದ್ರ ಸರ್ಕಾರವು ಅಧಿಸೂಚನೆ ಮೂಲಕ ವಿಭಾಗಿಸಿ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್‍ಗಳನ್ನು ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿದೆ. ಮೊದಲಿನಂತೆ ವಿಧಾನಸಭೆ ಇರುವ ಕೇಂದ್ರಾಡಳಿತ ಪ್ರದೇಶಗಳಲ್ಲಿ ಲೆಫ್ಟಿನೆಂಟ್ ಗವರ್ನರ್ ಇರುತ್ತಾರೆ. ಈ ನಿಯಮ ರದ್ದಾದ ನಂತರ ಕಾಶ್ಮೀರದ ಪ್ರಜೆಗಳೂ ಭಾರತದ ಇತರ ರಾಜ್ಯಗಳ ಪ್ರಜೆಗಳಂತೆಯೇ ಹಕ್ಕು ಪಡೆಯುತ್ತಾರೆ. ವಿಶೇಷ ಹಕ್ಕುಗಳು ಇರುವುದಿಲ್ಲ. ಹಾಗೆಯೇ ಇತರ ರಾಜ್ಯಗಳ ಜನರಿಗೂ ಅಲ್ಲಿ ಎಲ್ಲಾ ಬಗೆಯ ಹಕ್ಕು ಇರುವುದು. ಪೂರ್ವಾನ್ವಯವಾಗಿ ದಿ. 1919 ಅಕ್ಟೋಬರ್‌ 31ರಿಂದ ಜಾರಿಯಾಗುವಂತೆ ಜಮ್ಮು ಕಾಶ್ಮೀರ ಹಾಗೂ ಲಡಾಖ್‌ ಕೇಂದ್ರಾಡಳಿತ ಪ್ರದೇಶಗಳು ಅಸ್ತಿತ್ವಕ್ಕೆ ಬರುವಂತೆ ಜಮ್ಮು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸುವ ಮಸೂದೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು 9-8-2019 ಶುಕ್ರವಾರ ಸಹಿ ಮಾಡಿದ್ದಾರೆ. ಈ ಆಜ್ಞೆಯಂತೆ ಜಮ್ಮು ಮತ್ತು ಕಾಶ್ಮೀರವು ಶಾಸನ ಸಭೆ ಸಹಿತವಾಗಿರುವ ಕೇಂದ್ರಾಡಳಿತ ಪ್ರದೇಶ. 'ಲಡಾಖ್‌' ಪ್ರದೇಶ ಚಂಡಿಗಡದಂತೆ ಶಾಸನಸಭೆ ರಹಿತವಾದ ಕೇಂದ್ರಾಡಳಿತ ಪ್ರದೇಶ. ಈನಂತರ ಜಮ್ಮು ಕಾಶ್ಮೀರದ ಶಾಸನಸಭೆಯು ಗರಿಷ್ಠ 107 ಸದಸ್ಯರನ್ನು ಹೊಂದಿರುತ್ತದೆ. ಕ್ಷೇತ್ರ ಮರು ವಿಂಗಡಣೆಯ ಬಳಿಕ ಆ ಸಂಖ್ಯೆಯನ್ನು 114ಕ್ಕೆ ಹೆಚ್ಚಿಸಲು ಯೋಜಿಸಿದೆ. ಇಲ್ಲಿನ 24 ಕ್ಷೇತ್ರಗಳು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾಗದಲ್ಲಿ ಬರುವುದರಿಂದ ಅವು ಖಾಲಿ ಉಳಿಯುತ್ತವೆ. ಕಾರ್ಗಿಲ್‌ ಮತ್ತು ಲೇಹ್‌ ಜಿಲ್ಲೆಗಳನ್ನು ಲಡಾಖ್‌ ಪ್ರದೇಶ ಒಳಗೊಂಡಿರುತ್ತದೆ. ಇನ್ನು ಲೋಕಸಭೆಯಲ್ಲಿ ಜಮ್ಮು ಕಾಶ್ಮೀರದ ಐವರು ಸದಸ್ಯರು ಹಾಗೂ ಲಡಾಖ್‌ನ ಒಬ್ಬ ಪ್ರತಿನಿಧಿ ಇರುತ್ತಾರೆ ಜಮ್ಮು ಮತ್ತು ಕಾಶ್ಮಿರ ಮತ್ತು ಲಡಾಕ್ ಕೇಂದ್ರಾಡಳಿತ ಪ್ರದೇಶ ಮತ್ತು ಇತರ ಪ್ರದೇಶಗಳು ನೋಡಿ ೨೦೧೮ ರ ಸರ್ಕಾರ:ಅವಕಾಶವಾದದಲ್ಲಿ ಹುಟ್ಟಿ ಸತ್ತ ಒಂದು ಮೈತ್ರಿ ಸರ್ಕಾರದ ಕತೆ; 25 ಜೂನ್ 2018 ಪ್ರಜಾಪ್ರಭುತ್ವದಲ್ಲಿ ರಾಜರ ರಾಜ್ಯಗಳ ವಿಲೀನ ಜಾರ್ಖಂಡ್ ಮತ್ತು ಜಮ್ಮು ಮತ್ತು ಕಾಶ್ಮೀರ 2014ರ ಅಸೆಂಬ್ಲಿ ಚುನಾವಣೆ ಕಾಶ್ಮೀರ 2014 Jammu and Kashmir Legislative Assembly election ಕಾಶ್ಮೀರದ ಗುಪ್ಕರ್ ಒಕ್ಕೂಟ:Explained | What is Gupkar Alliance?The PAGD has several J&K parties as its constituents which are pressing for the restoration of Article 370 and statehood--:The PAGD constitutes of seven political parties that are pressing for the restoration of Article 370 and statehood in Jammu and Kashmir. Besides the PDP and the NC, the alliance comprises the CPI-M, People's Conference, Awami National Conference, the...the CPI and the People's Movement. ಉಲ್ಲೇಖಗಳು ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ರಾಜ್ಯಗಳು
2104
https://kn.wikipedia.org/wiki/%E0%B2%9D%E0%B2%BE%E0%B2%B0%E0%B3%8D%E0%B2%96%E0%B2%82%E0%B2%A1%E0%B3%8D
ಝಾರ್ಖಂಡ್
ಝಾರ್ಖಂಡ್, Jharkhand (Jhārkhaṇḍ, pronounced [ˈdʒʱaːrkʰəɳɖ] ( listen); Hindi: झारखंड) lit. "Bushland"),ಎಂದು ಕರೆಯಲ್ಪಡುತ್ತದೆ. ಜಾರ್ಖಂಡ್ ಪೂರ್ವ ಭಾರತದ ರಾಜ್ಯಗಳಲ್ಲೊಂದು. ೧೫ನೇ ನವೆಂಬರ್, ೨೦೦೦ದಲ್ಲಿ ಬಿಹಾರ ರಾಜ್ಯದ ದಕ್ಷಿಣ ಪ್ರಾಂತ್ಯಗಳನ್ನು ಸೇರಿಸಿ ಇದನ್ನು ರಚಿಸಲಾಯಿತು. ಜೈನರ ಪವಿತ್ರ ಯಾತ್ರಾಸ್ಥಳ ಸಮ್ಮೇದ ಶಿಖರ್ಜಿಯು ಈ ರಾಜ್ಯದಲ್ಲಿದೆ. ಉತ್ತರ ಭಾರತದ ಪೂರ್ವಕ್ಕಿರುವ ಈ ರಾಜ್ಯವನ್ನು ದಕ್ಷಿಣದಲ್ಲಿ ಒರಿಸ್ಸ, ಪಶ್ಚಿಮದಲ್ಲಿ ಛತ್ತೀಸ್‍ಘರ್, ವಾಯುವ್ಯದಲ್ಲಿ ಉತ್ತರ ಪ್ರದೇಶ ಉತ್ತರದಲ್ಲಿ ಬಿಹಾರ ರಾಜ್ಯಗಳು ಸುತ್ತುವರೆದಿವೆ. 32,615 ಗ್ರಾಮಗಳಿಂದ 152 ನಗರ, ಪಟ್ಟಣಗಳಿಂದ ಕೂಡಿರುವ ಈ ರಾಜ್ಯದ ವಿಸ್ತೀರ್ಣ 79,714 ಚ.ಕಿ.ಮೀ. ಈ ರಾಜ್ಯವನ್ನು 22 ಜಿಲ್ಲೆಗಳಾಗಿ ವಿಂಗಡಿಸಿದೆ. ಒಟ್ಟು ಜನಸಂಖ್ಯೆ 2,69,09,428 (2001). ರಾಜಧಾನಿ ರಾಂಚಿ. ಕೃಷಿ ಜಾರ್‍ಖಂಡ್ ರಾಜ್ಯದಲ್ಲಿ 18,423ಚ.ಕಿ.ಮೀ. ಅರಣ್ಯ ಪ್ರದೇಶವಿದೆ. ವ್ಯವಸಾಯ ಮತ್ತು ಅದಕ್ಕೆ ಸಂಬಂಧಿಸಿದ ಉದ್ಯೋಗಗಳೇ ಈ ರಾಜ್ಯದ ಮುಖ್ಯ ಆರ್ಥಿಕ ಚಟುವಟಿಕೆಗಳಿಗೆ ಮೂಲವಾಗಿವೆ. 38ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಕಾರ್ಯ ನಡೆದಿದೆ. ನೀರಾವರಿ ಮತ್ತು ವಿದ್ಯುತ್ ದಾಮೋದರ, ಮೌರಾಕ್ಷಿ, ಬರಕರ್, ಉತ್ತರಕೊಯಲ್, ದಕಿಣ ಕೊಯಲ್, ಶಂಖ್, ಸುವರ್ಣರೇಖಾ, ಕಾರ್‍ಕಾಯ್ ಮತ್ತು ಅಜಯ್ ನದಿಗಳು ಈ ರಾಜ್ಯದ ಮುಖ್ಯ ನೀರಾವರಿಯ ಮೂಲಗಳಾಗಿವೆ. ನೀರಾವರಿಗೆ 1.57ಲಕ್ಷ ಹೆಕ್ಟೇರ್ ಪ್ರದೇಶ ಒಳಪಟ್ಟಿದ್ದು ಇದು ಒಟ್ಟು ಬಿತ್ತನೆಯಾದ ಭೂಪ್ರದೇಶದಲ್ಲಿ ಶೇ.8 ಭಾಗವಾಗಿದೆ. ವಿದ್ಯುದುತ್ಪಾದನೆಯಲ್ಲಿ ಈ ರಾಜ್ಯದ ತೆನುಘಾಟ್ ಕೇಂದ್ರ 420ಮೆ.ವಾ. ಪ್ರಸಿದ್ಧ ದಾಮೋದರ ಕಣಿವೆ ಯೋಜನಾ ಕೇಂದ್ರದಿಂದ 1200ಮೆ.ವಾ. ಉತ್ಪಾದಿಸಲಾಗುತ್ತಿದ್ದ ಒಟ್ಟು 2590ಮೆ.ವಾ. ಮತ್ತೆ ಕೆಲವು ಕೇಂದ್ರಗಳಲ್ಲೂ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಕೈಗಾರಿಕೆ ಮತ್ತು ಖನಿಜಗಳು ಜಾರ್‍ಖಂಡ್ ರಾಜ್ಯದಲ್ಲಿ ಪ್ರಸಿದ್ಧವಾದ ತಾತ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಜೆಮಷೆಡ್‍ಪುರದಲ್ಲಿದೆ ಹಾಗೇ ಬೊಕಾರೊ ಉಕ್ಕು ಸ್ಥಾವರ ಇಲ್ಲಿವೆ. ತಾತ ಎಂಜಿನಿಯರಿಂಗ್ ಮತ್ತು ಲೊಕೊಮೋಟಿವ್ ಕಂಪನಿ, ಟಿಮ್‍ಕೆನ್ ಇಂಡಿಯಾ, ಲಿಮಿಟೆಡ್ (ಜೆಂಷೆಡ್‍ಪುರ) ಭಾರತ ಕುಕಿಂಗ್ ಲಿಮಿಟೆಡ್ (ಧನಬಾದ್), ಖಿಲಾರಿ ಸಿಮೆಂಟ್ ಕಾರ್ಖಾನೆ (ಪಲಮು), ಇಂಡಿಯನ್ ಅಲ್ಯೂಮಿನಿಯಂ (ಮುರಿ), ಎ.ಸಿ.ಸಿ. ಸಿಮೆಂಟ್ (ಚೈಬ್‍ಸ), ಸೆಂಟ್ರಲ್ ಕೋಲ್ ಫೀಲ್ಡ್ ಲಿಮಿಟೆಡ್ (ರಾಂಚಿ), ಉಷಾ ಮಾರ್ಟಿನ್, ಉಷಾ ಬೆಲ್ಟ್ರಾನ್, ಯುರೇನಿಯಂ ಕಾರ್ಪೊರೆಷನ್ ಲಿಮಿಟೆಡ್ (ಜದುಗೊರ) ಹಿಂದುಸ್ತಾನ್ ಕಾಸರ್ ಲಿಮಿಟೆಡ್ (ಮುಸ್ಸಬನಿ), ಟಿನ್ ಪ್ಲೇಟ್ ಕಂಪನಿ ಆಫ್ ಇಂಡಿಯ ಲಿಮಿಟೆಡ್ (ಜೆಂಷೆಡ್‍ಪುರ), ಇಂಡಿಯನ್ ಎಕ್ಸ್‍ಪ್ಲೊಸಿವ್ (ಗೊಮಿಯ) ಮತ್ತು ಲೋಹರ್‍ದಗದಲ್ಲಿರುವ ಹಿಂಡಲ್ಕೊ ಬಾಕ್ಸೈಟ್ ಇವು ಪ್ರಸಿದ್ಧವಾದವು. ಈ ರಾಜ್ಯ ಹೆಚ್ಚು ಖನಿಜ ಸಂಪತ್ತನ್ನು ಹೊಂದಿದೆ. ಇದ್ದಿಲು, ಕಬ್ಬಿಣದ ಅದಿರು, ಸುಣ್ಣಕಲ್ಲು, ತಾಮ್ರ, ಬಾಕ್ಸೈಟ್, ಪೈರೇಟ್, ಚೀನಕ್ಲೆ, ಕೈನೈಟ್, ಫೈನ್‍ಕ್ಲೆ, ಡಾಲೊಮೈಟ್, ಗ್ರಾಫೈಟ್, ಬೆಂಟೊನೈಟ್, ಸೋಪ್‍ಸ್ಟೋನ್, ಕ್ವಾಟ್ರ್ಜ್ ಮರಳು, ಸಿಲಿಕ ಮರಳು ಇವೆಲ್ಲಾ ಹೆಚ್ಚಾಗಿ ದೊರಕುತ್ತವೆ. ಮಯಕ, ಇದ್ದಿಲು ಮುಂತಾದವುಗಳನ್ನು ಸಿಂಗ್‍ಭೂಮ್, ಬೊಕಾರೊ, ಹಜಾರಿಬಾಗ್, ರಾಂಚೆ, ಕೊಡರ್ಮ ಮತ್ತು ಧನಬಾದ್‍ಗಳಲ್ಲಿ ಹೆಚ್ಚಾಗಿ ಗಣಿಗಾರಿಕೆಯಿಂದ ಪಡೆಯಲಾಗುತ್ತಿದೆ. ಸಾರಿಗೆ ಸಂಪರ್ಕ ಜಾರ್‍ಖಂಡ ರಾಜ್ಯದಲ್ಲಿ ಒಟ್ಟು 4311ಕಿ.ಮೀ. ರಸ್ತೆಯಿದೆ. ಇದರಲ್ಲಿ 1500ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಮತ್ತು 2711 ಕಿ.ಮೀ. ರಾಜ್ಯ ಹೆದ್ದಾರಿ ಸೇರಿದೆ. ರೈಲು ಸಂಪರ್ಕ ಮಾರ್ಗವಿದ್ದು ರಾಂಚಿ, ಬೊಕಾರೊ, ಧನಬಾದ್, ಜೆಂಷೆಡ್‍ಪುರ ಮುಂತಾದ ಮುಖ್ಯ ರೈಲು ನಿಲ್ದಾಣಗಳಿದ್ದು ಇತರೇ ಸಾಮಾನ್ಯ ರೈಲು ನಿಲ್ದಾಣಗಳನ್ನು ಹೊಂದಿದೆ. ರಾಜಧಾನಿ ರಾಂಚಿಯಲ್ಲಿ ಮುಖ್ಯ ವಿಮಾನ ನಿಲ್ದಾಣವಿದೆ. ಇಲ್ಲಿಂದ ದೆಹಲಿ, ಪಟ್ನ, ಮುಂಬಯಿ, ಜೆಂಷೆಡ್‍ಪುರ, ಬೊಕಾರೊ, ಗಿರಿಧಿ, ದಿಯೋಗರ್, ಹಜಾರಿಬಾಗ್, ದಾಲ್ಟನ್‍ಗಂಜ್ ಮತ್ತು ಗೋವಾಮುಂಡಿಗಳಿಗೆ ವಿಮಾನ ಸಂಪರ್ಕವಿದೆ. ರಾಜ್ಯದ 22 ಜಿಲ್ಲೆಗಳ ವಿವರ (* - 1991ರ ಜನಸಂಖ್ಯೆ) ಪ್ರವಾಸೋದ್ಯಮ ಜಾರ್‍ಖಂಡ್ ರಾಜ್ಯದಲ್ಲಿ ಅನೇಕ ಪ್ರವಾಸಿ ಆಕರ್ಷಕ ಸುಂದರ ತಾಣಗಳಿವೆ. ಅವುಗಳಲ್ಲಿ ಇಚಾಬಾಗ್, ಉಧವ, ಚಂದ್ರಾಪುರ ಮತ್ತು ತೆನುಘಾಟ್‍ನ ಪಕ್ಷಿಧಾಮಗಳು, ಸಾಹಿಬ್‍ಗಂಜ್‍ನ ಪಥರ ಸರೋವರ, ಕೊಡರಮ ಜಿಲ್ಲೆಯ ತಿಲಾಯ ಜಲಾಶಯದ ಮೊಸಳೆಗಳ ಪಾಲನ ಸ್ಥಳ ಚಚ್ರೋ, ಬೊಕಾರೊದಲ್ಲಿರುವ ಜವಾಹರಲಾಲ್ ನೆಹರೂ ಪ್ರಾಣಿ ಸಂಗ್ರಹಾಲಯ ವನ, ಜೆಂಷೆಡ್‍ಪುರದ ದಾಲ್ಮ ಅರಣ್ಯ ಮೃಗಧಾಮ, ತಾತ ಉಕ್ಕು ಪ್ರಾಣಿ ಸಂಗ್ರಹಾಲಯ, ಗುಮ್ಲ ಜಿಲ್ಲೆಯ ಪಾಲ್ಕೊಟೆ ಅರಣ್ಯ ಮೃಗಧಾಮ, ರಾಜ್ಯದ ರಾಜಧಾನಿ ರಾಂಚಿಯಲ್ಲಿರುವ ಭಗವಾನ್ ಬಿರ್ಸ ಪ್ರಾಣಿವನ, ಮತ್ಸ್ಯಸಂಗ್ರಹಾಲಯ, ಕಾಲ್ಮತಿ ರಾಂಚಿಯಲ್ಲಿರುವ ಬಿರ್ಸ ಜಿಂಕೆಗಳ ಧಾಮ, ಹಜûರಿಬಾಗ್‍ನ ರಾಷ್ಟ್ರೀಯ ಉದ್ಯಾನವನ, ದುಮ್ಕದಲ್ಲಿರುವ ತಕೋಲೈ ಬಿಸಿನೀರ ಬುಗ್ಗೆ ಇವಲ್ಲದೆ ಸರಂದ ಅರಣ್ಯ ಪ್ರದೇಶ, ಮಸಾಂಜೊರೆ ಜಲಾಶಯ ಬಹುಮುಖ್ಯವೆನಿಸಿವೆ. ಜಾರ್‍ಖಂಡ್‍ಧಾಮ್, ಲಗ್ನಟಬಾಲಾ ದೇವಾಲಯ, ಮಾತೆ ಬಿಂದ ವಾಸಿನಿ ದೇವಾಲಯಗಳೂ ಪ್ರಸಿದ್ಧವಾದವು. ಇತಿಹಾಸ ಭಾರತದ 28ನೇ ರಾಜ್ಯವಾಗಿ 2000, ನವಂಬರ್ 15ನೆ ದಿನದಂದು ಈ ರಾಜ್ಯ ಅಸ್ತಿತ್ವಕ್ಕೆ ಬಂತು. ಬ್ರಿಟಿಷರ ಆಳ್ವಿಕೆಯಲ್ಲಿ ಬೆಂಗಾಲ್ ಪ್ರೆಸಿಡೆನ್ಸಿ ವಿಭಾಗಕ್ಕೆ ಸೇರಿತ್ತು. 1912ರಲ್ಲಿ ಬಿಹಾರ, ಒರಿಸ್ಸದೊಡನೆ ಇದು ಹೊರ ಬಂತು. 1965ರಲ್ಲಿ ಸ್ಥಾಪಿಸಲ್ಪಟ್ಟ ಚೋಟಾನಾಗಪುರ್ ಉನ್ನತಿ ಸಮಾಜ್ ಸ್ಥಳೀಯ ಆದಿವಾಸಿಗಳ ಕಲ್ಯಾಣವನ್ನು, ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡಿದ್ದು 1928ರಲ್ಲಿ ಪ್ರಥಮ ಬಾರಿಗೆ ಸೈಮನ್ ಕಮಿಷನ್ ಮುಂದೆ ಪ್ರತ್ಯೇಕ ಜಾರ್‍ಖಂಡ್ ಬೇಡಿಕೆಯನ್ನಿಟ್ಟಿತು. 1933ರಲ್ಲಿ ಚೋಟಾನಾಗಪುರ ಮತ್ತು ಸಂತಾಲ್ ಪರಗಣ ಗೇಣಿಗೆ ಕಾಯಿದೆಯನ್ನು ಸ್ಥಳೀಯ ಗುಡ್ಡುಗಾಡು ಜನರ ಏಳಿಗೆಗಾಗಿ ಜಾರಿಗೆ ತರಲಾಯಿತು. ಮುಂದೆ ಜಾರ್‍ಖಂಡ್ ಮುಕ್ತಿಮೋರ್ಚಾ ಪಕ್ಷ ಭಾರತ ಸರ್ಕಾರದ ಮೇಲೆ ಒತ್ತಡ ಹೇರಿ 2000ರ ನವಂಬರ್ 15ರಂದು ಜಾರ್‍ಖಂಡ್ ರಾಜ್ಯದ ಉದಯಕ್ಕೆ ಕಾರಣವಾಯಿತು. 1928ರಲ್ಲಿ ಹಾಕಿಯಲ್ಲಿ ಭಾರತ ಒಲಂಪಿಕ್ ಸ್ವರ್ಣಪದಕ ಗೆಲ್ಲಲು ಇಲ್ಲಿಯ ಹಾಕಿಪಟು ಜಯಪಾಲ್‍ಸಿಂಗ್ ಮುಂಡ ಹೆಚ್ಚು ಶ್ರಮಿಸಿದ್ದನೆಂಬುದನ್ನು ಭಾರತೀಯರು ಮರೆಯಲಾರರು. ರಾಜಕೀಯ ವಿಧಾನಸಭೆ ಚುನಾವಣೆ 2014 ಜಾರ್ಖಂಡ್‌ನ 13 ವಿಧಾನಸಭೆ ಕ್ಷೇತ್ರಗಳಿಗೆ Nov 25, 2014, ನಡೆದ ಮಂಗಳವಾರ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇ.62ರಷ್ಟು ಮತದಾನವಾಗಿದೆ. ಒಬ್ಬ ಸಚಿವ 10 ಶಾಸಕರು ಸೇರಿದಂತೆ 199 ಅಭ್ಯರ್ಥಿಗಳು ಜಾರ್ಖಂಡ್ ವಿಧಾನಸಭೆ ಕಣದಲ್ಲಿದ್ದಾರೆ. ಈ ಕ್ಷೇತ್ರಗಳಲ್ಲಿ 15,77,090 ಮಹಿಳೆಯರು ಸೇರಿದಂತೆ 33,61,938 ಮತದಾರರಿದ್ದಾರೆ. ಎಲ್ಲ ಹಂತಗಳು ಸೇರಿ ಒಟ್ಟಾರೆ ಈ ಸರ್ತಿ ರಾಜ್ಯದಲ್ಲಿ ಶೇ.65ರಷ್ಟು ಮತದಾರರು ಹಕ್ಕು ಚಲಾಯಿಸಿದ್ದಾರೆ. ಕಣಿವೆಯಲ್ಲಿ ಕಳೆದ 2008ರ ಚುನಾವಣೆಯಲ್ಲಿ ಶೇ.61.42, 2002ರಲ್ಲಿ ಶೇ.43.09ರಷ್ಟು ಮತದಾನವಾಗಿತ್ತು. ಜಾರ್ಖಂಡ್‌ನಲ್ಲಿ ಈ ಬಾರಿ ಎಲ್ಲ ಹಂತಗಳ ಮತದಾನ ಸೇರಿ ಶೇ.66ರಷ್ಟು ಮತದಾನವಾಗಿದೆ. 2004ರ ವಿಧಾನಸಭೆ ಚುನಾವಣೆಯಲ್ಲಿ ಶೇ.54.2ರಷ್ಟು ಮತದಾನವಾಗಿದ್ದು, ಈ ದಾಖಲೆ ಈಗ ಪುಡಿಯಾಗಿದೆ. ಡಿ.23ರಂದು ಉಭಯ ರಾಜ್ಯಗಳ ಮತ ಎಣಿಕೆ ನಡೆಯಲಿದೆ. 81 ಸದಸ್ಯ ಬಲದ ವಿಧಾನಸಭೆಯಲ್ಲಿ ಪಕ್ಷ 37 ಸ್ಥಾನಗಳನ್ನು ಗಳಿಸಿದ ನಂತರ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರನ್ನಾಗಿ ದಾಸ್ ಅವರನ್ನು ಶುಕ್ರವಾರ ಆಯ್ಕೆ ಮಾಡಲಾಯಿತು. 1980ರಲ್ಲಿ ಬಿಜೆಪಿಗೆ ಸೇರಿದ ದಾಸ್ ಎರಡು ಬಾರಿ ರಾಜ್ಯಾಧ್ಯಕ್ಷರಾಗಿದ್ದಾರೆ. ದಿ.28-12-2014 ಭಾನುವಾರ , ಜಾರ್ಖಂಡ್‌ನ 10 ನೇ ಮುಖ್ಯಮಂತ್ರಿಯಾಗಿ ಬಿಜೆಪಿಯ ಹಿರಿಯ ನಾಯಕ ರಘುವರ ದಾಸ್ ಪ್ರಮಾಣ ವಚನ ಸ್ವೀಕರಿಸಿದರು. ಜಾರ್ಖಂಡ್‌ನ ಬುಡಕಟ್ಟಿಗೆ ಸೇರದ ಜಾರ್ಖಂಡ್‌ನ ಮೊದಲ ಮುಖ್ಯಮಂತ್ರಿ ರಘುವರ ದಾಸ್, ಎರಡು ಪಕ್ಷಗಳ ಸಮ್ಮಿಶ್ರ ಸರಕಾರದ ನೇತೃತ್ವ ವಹಿಸಲ್ಲಿದ್ದಾರೆ. ಪದಚ್ಯುತ ಮುಖ್ಯಮಂತ್ರಿ ಹೇಮಂತ್ ಸೋರೆನ್ ವಿರುದ್ಧ ಜಯಸಾಧಿಸಿರುವ ಲೂಯಿಸ್ ಮರಾಂಡಿ ಬಿಜೆಪಿಯ ಸಚಿವರು. ಚಂದ್ರ ಪ್ರಕಾಶ್ ಚೌಧರಿ ಸಂಪುಟದಲ್ಲಿ ಎಜೆಎಸ್‌ಯುವನ್ನು ಪ್ರತಿನಿಧಿಸಲ್ಲಿದ್ದಾರೆ. ರಾಜ್ಯಪಾಲ ಸೈಯದ್‌ ಅಹಮ್ಮದ್‌ ಅವರು ಬಿರ್ಸಾ ಮುಂಡಾ ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 59 ವರ್ಷದ ದಾಸ್‌ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಬಿಜೆಪಿಯ ನೀಲಕಾಂತ್ ಸಿಂಗ್ ಮುಂಡಾ, ಚಂದ್ರೇಶ್ವರ್ ಪ್ರಸಾದ್ ಸಿಂಗ್‌, ಲೂಯಿಸ್‌ ಮರಾಂಡಿ ಮತ್ತು ಎ.ಜೆ.ಎಸ್‌.ಯು ಪಕ್ಷದ ಚಂದ್ರಪ್ರಕಾಶ್‌ ಚೌಧರಿ ಅವರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ತೆಗೆದುಕೊಂಡರು. ರಾಜ್ಯದಲ್ಲಿ ಮುಖ್ಯಮಂತ್ರಿ ಸೇರಿದಂತೆ ಗರಿಷ್ಠ 12 ಸಚಿವರು ಇರಲು ಅವಕಾಶವಿದೆ. 2014ರ ಜಾರ್ಖಂಡ್ ಫಲಿತಾಂಶ ವರ್ಗ : ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
2105
https://kn.wikipedia.org/wiki/%E0%B2%AE%E0%B2%A7%E0%B3%8D%E0%B2%AF%20%E0%B2%AA%E0%B3%8D%E0%B2%B0%E0%B2%A6%E0%B3%87%E0%B2%B6
ಮಧ್ಯ ಪ್ರದೇಶ
ಮಧ್ಯ ಪ್ರದೇಶ ಹೆಸರು ಸೂಚಿಸುವಂತೆ ಮಧ್ಯ ಭಾರತದಲ್ಲಿರುವ ಒಂದು ರಾಜ್ಯ. ಮಧ್ಯ ಪ್ರದೇಶದ ಒಟ್ಟು ವಿಸ್ತೀರ್ಣ ೩೦೮,೨೫೨ ಚ. ಕೀ.(೧೧೯,೦೧೭ ಚ.ಮೈಲಿ) ಇದರ ರಾಜಧಾನಿ ಭೋಪಾಲ. ನವೆಂಬರ್ ೧, ೨೦೦೦ದಲ್ಲಿ ಮಧ್ಯ ಪ್ರದೇಶದಿಂದ ಛತ್ತೀಸ್‍ಘಡವನ್ನು ರಚಿಸುವ ಮೊದಲು, ಕಳೆದ ಶತಮಾನದ ಕೊನೆಯವರೆಗೂ ಇದು ಭಾರತದಲ್ಲಿಯೇ ಅತ್ಯಂತ ದೊಡ್ಡ ರಾಜ್ಯವಾಗಿತ್ತು. ಈಗ ರಾಜಾಸ್ಥಾನ್ಆ ಮನ್ನಣೆಗೆ ಪಾತ್ರವಾಗಿದೆ. ಮಧ್ಯ ಪ್ರದೇಶದ ಕೆಲವು ಕ್ಷೇತ್ರಗಳ ಬಗ್ಗೆ ಪುರಾಣದಲ್ಲಿ ಉಲ್ಲೇಖವಿದೆ. ಮಧ್ಯ ಪ್ರದೇಶದ ರ್ಯಾಸೇನ್ ಜಿಲ್ಲೆಯಲ್ಲಿರುವ ಭೀಮ್ ಬೆಟ್ಕಾ ಗುಹೆಯಲ್ಲಿ ಒಂದು ಲಕ್ಷ ವರ್ಷಕ್ಕೂ ಹಿಂದೆ ಮಾನವ ವಸತೀತ್ತೆಂದು ಸ್ಥಳೀಯರು ನಂಬುತ್ತಾರೆ. ಇಲ್ಲಿರುವ ಅಪೂರ್ವ ಗುಹಾಚಿತ್ರಗಳು ೩೦ ಆವಿರವರ್ಷಕ್ಕೂ ಹಿಂದಿನವು. ವಿಭಾಗಗಳು ಮಧ್ಯ ಪ್ರದೇಶ ರಾಜ್ಯದಲ್ಲಿ ಒಟ್ಟು ೪೫ ಜಿಲ್ಲೆಗಳಿದ್ದು ಅವುಗಳನ್ನು ೮ ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಆ ಎಂಟು ವಿಭಾಗಗಳೆಂದರೆ : ೧. ಭೂಪಾಲ್ : ಭೂಪಾಲ್, ರ್ಯಾಸೆನ್,ರಾಜ್ ಗರ್, ಸೆಹೋರ್, ಮತ್ತು ವಿದಿಶಾ ಜಿಲ್ಲೆಗಳು. ೨. ಗ್ವಾಲಿಯರ್ : ಅಶೋಕನಗರ, ಧಾತಿಯಾ, ಗುಣಾ, ಗ್ವಾಲಿಯರ್, ಮತ್ತು ಶಿವಪುರಿ ಜಿಲ್ಲೆಗಳು. ೩. ಇಂದೋರ್ : ಬಾರ್ವಾನಿ, ಬುರ್ಹಾನ್ ಪುರ್, ಧಾರ್, ಇಂದೋರ್, ಝುಬುವಾ,ಖಾಂಡ್ವಾ, ಆಲಿರಾಜ್ ಪುರ್, ಮತ್ತು ಖಾರ್ಗೋಣೆ ಜಿಲ್ಲೆಗಳು. ೪. ಜಬಲ್ಪುರ್: ಬಾಲ್ ಘಾಟ್, ಛಿಂದ್ ವಾರಾ, ಜಬಲ್ ಪುರ್, ಕಟ್ನಿ, ಮಾಂಡ್ಲಾ, ನರಸಿಂಗ್ ಪುರ್,ಮತ್ತು ಸಿಯೋನಿ ಜಿಲ್ಲೆಗಳು. ೫. ರೇವಾ : ರೇವಾ, ಸತ್ನಾ, ಸೀಧೀ, ಮತ್ತು ಸಿಂಗ್ರೌಲಿ ಜಿಲ್ಲೆಗಳು. ೬. ಸಗರಂದ್ : ಛತ್ತರ್ ಪುರ್, ದಾಮೋಹ್, ಪನ್ನಾ, ಸಾಗರ್, ಮತ್ತು ಟಿಕಮ್ ಗರ್ ಜಿಲ್ಲೆಗಳು. ೭. ಉಜ್ಜಯಿನಿ : ದೇವಾಸ್, ಮಂದ ಸೌರ್, ನೀಮಚ್, ರತ್ಲಾಂ, ಶಾಜಾಪುರ್, ಮತ್ತು ಉಜ್ಜಯಿನಿ ಜಿಲ್ಲೆಗಳು. ೮. ಶಹಡೋಲ್ : ಶಾಹ್ ದೋಲ್, ಅನುಪ್ಪುರ್, ಡಿಂಡೋರಿ, ಮತ್ತು ಉಮಾರಿಯಾ ಜಿಲ್ಲೆಗಳು. ಭಾಷೆ 'ಹಿಂದಿ' ಮಧ್ಯಪ್ರದೇಶದ ಪ್ರಮುಖ ಭಾಷೆ. ಆ ಭಾಷೆಯ ಜನಪದ ರೂಪಗಳೂ ಇಲ್ಲಿ ಪ್ರಚಲಿತವಾಗಿವೆ. ಮಾಲ್ವಾದ ಮಾಲ್ವಿ, ನಿಮಾರ್ ನ ನಿಮಾಡಿ, ಬುಂದೇಲ್ ಖಂಡ್ ನ ಬುಂದೇಲಿ, ಬಾಗೇಲ್ ಖಂಡ್ ನ ಬಾಗೇಲಿ ಮತ್ತು ಅವಧಿ-ಇವೆಲ್ಲಾ ಹಿಂದಿ ಭಾಷೆಯ ರೂಪಾಂತರಗಳು.ಭಿಲೋಡಿ (ಭಿಲ್ ಭಾಷೆ), ಗೊಂಡಿ, ಕೋರ್ಕು, ಕಾಲ್ಟೋ (ನಿಹಾಲಿ)- ಇವು ಮಧ್ಯಪ್ರದೇಶದ ಕೆಲವು 'ಆದಿವಾಸಿ ಭಾಷೆಗಳು'. ಮಧ್ಯ ಪ್ರದೇಶದ ಹಲವು ಭಾಗಗಳಲ್ಲಿ ಎರಡು ಶತಮಾನಕ್ಕೂ ಹೆಚ್ಚು ಕಾಲ ಮರಾಠರು ಆಡಳಿತ ನಡೆಸಿದ್ದ ಕಾರಣ 'ಮರಾಠಿ' ಮಾತಾಡುವ ಜನ ಹೆಚ್ಚಾಗಿದ್ದಾರೆ. ಭೂಪಾಲ್ ನ ಆಸುಪಾಸಿನಲ್ಲೂ 'ಆಫ್ಘಾನಿಸ್ತಾನ', ಮತ್ತು 'ವಾಯವ್ಯ ಪಾಕಿಸ್ತಾನ'ದಿಂದ ವಲಸೆಬಂದು ನೆಲೆಸಿರುವ ಸಾಕಷ್ಟು ಬುಡಕಟ್ಟಿನ ಜನರಿದ್ದಾರೆ. ಅವರು, ’ಸರ್ಯಾಕಿ’ ಮತ್ತು ’ಪಾಶ್ತೋ’ ಭಾಷೆಯನ್ನು ಆಡುತ್ತಾರೆ. ಉಜ್ಜೈನಿ ನಗರದ ವೈಶಿಷ್ಟ್ಯತೆಗಳು ಮಧ್ಯಪ್ರದೇಶದ 'ಉಜ್ಜಯನಿ'ಯಲ್ಲಿ ಪ್ರಸಿದ್ಧ ಸಂಸ್ಕೃತ ಕವಿ, 'ಕಾಳಿದಾಸ'ನು ಜೀವಿಸಿದ್ದನೆಂಬ (ಕ್ರಿ.ಶ ೩೭೫ ರಿಂದ ೪೧೫ ರವರೆಗೆ) ಪ್ರತೀತಿಯಿದೆ. ಪುರಾಣಕಾಲದಲ್ಲಿ ಈ ನಗರಕ್ಕೆ ಆವಂತಿಕಾನಗರವೆಂದು ಹೆಸರಿತ್ತು. ಈ ನಗರಕ್ಕೆ, ಆವಂತಿ, ಆವಂತಿಕಾಪುರಿ, ಆವಂತಿಕಾ, ಕುಶಸ್ತಲಿ, ಭಾಗಾವತಿ, ಕುಮುದ್ವತಿ, ಹಿರಣ್ಯಾವತಿ,ವಿಶಾಲಾ, ಎಂಬೆಲ್ಲಾ ಹೆಸರುಗಳಿದ್ದವು. ಇಲ್ಲಿಯೇ 'ಕೃಷ್ಣ-ಬಲರಾಮ'ರು ಶಿಕ್ಷಣ ಪಡೆದ 'ಸಂದೀಪನಿ ಮಹರ್ಷಿಯ ಆಶ್ರಮ'ವೂ ಇದೆ. 'ಶಿಪ್ರಾನದಿ'ಯ ದಂಡೆಯಮೇಲಿರುವ ಉಜ್ಜೈನ್ ನಲ್ಲಿ ಮಹಾಕಾಲೇಶ್ವರ್ ಮಂದಿರವಿದೆ. ಈಶ್ವರ ಪ್ರತಿರೂಪವಾದ ಇಲ್ಲಿ ಅರ್ಚಿಸಲಾಗುತ್ತದೆ. ಭಾರತದಲ್ಲಿ ಪ್ರಖ್ಯಾತವಾಗಿರುವ ೧೨ ಜ್ಯೋತಿರ್ಲಿಂಗಗಳಲ್ಲಿ 'ಸ್ವಯಂಭು'ವಾಗಿರುವ ಈ ಶಿವಲಿಂಗ ಹೆಚ್ಚು ಶಕ್ತಿಶಾಲಿಯೆಂದು ಭಕ್ತರು ನಂಬಿದ್ದಾರೆ. ಕಾಳಿದಾಸನು ತನ್ನ ಕಾವ್ಯಗಳಲ್ಲಿ ವರ್ಣಿಸಿ ಪ್ರಶಂಸಿರುವುದು ಕಂಡುಬರುತ್ತದೆ. ಈ ಶಿವಲಿಂಗದ ವೈಶಿಷ್ಟ್ಯವೆಂದರೆ, ದಕ್ಷಿಣದಕಡೆ ಮುಖಮಾಡಿಕೊಂಡಿರುವುದು. ಅದೂ ಅಲ್ಲದೆ ಶಿವನ ವಾಹನವಾದ ನಂದಿಯ ವಿಗ್ರಹವೂ ದಕ್ಷಿಣದಿಕ್ಕಿಗಿದೆ. ಅದ್ದರಿಂದ ಈ ಲಿಂಗಕ್ಕೆ 'ದಕ್ಷಿಣಾಮೂರ್ತಿ'ಯೆಂದು ಹೆಸರುಬರಲು ಕಾರಣವಾಯಿತು. ಮಹಾಕಾಲನ ಮಂದಿರ ೫ ಅಂತಸ್ತಿನ ಭವ್ಯ ಮಂದಿರವಾಗಿದ್ದು ವಿಶಾಲ ಪ್ರಾಂಗಣ ಸರೋವರವನ್ನು ಹೊಂದಿದೆ. ನೆಲಾಂತಸ್ತಿನಿಂದ ಕೆಳಭಾಗದ ಲಿಂಗಕ್ಕೆ ಸದಾಕಾಲವೂ ನೀರು ಮತ್ತು ಹಾಲಿನ ಅಭಿಷೇಕ ಮಾಡುತ್ತಿರುತ್ತಾರೆ. ಲಿಂಗದ ಸುತ್ತಲೂ ಸತತವಾಗಿ ಅಗೋಚರ ಕಿರಣಗಳು ಬರುವುದರಿಂದ ಇದರ ಎದುರಿಗೆ ೩ ನಿಮಿಷವೂ ನಿಲ್ಲಲು ಆಗುವುದಿಲ್ಲ. ಪ್ರತಿ ದೀಪಾವಳಿಯ ದಿನ 'ದೀಪೋತ್ಸವ' ಅದ್ಧೂರಿಯಾಗಿ ನಡೆಯುತ್ತದೆ. ೩ ನೆಯ ಅಂತಸ್ತಿನಲ್ಲಿರುವ 'ನಾಗಚಂದ್ರೇಶ್ವರ ಮಂದಿರ' ನಾಗರಪಂಚಮಿಯ ದಿನ ಮಾತ್ರವೇ ಭಕ್ತರಿಗೆ ತೆರೆದಿರುತ್ತದೆ. ಭಕ್ತಗಣವೇ ಸ್ವತಃ ತಮ್ಮ ಕೈನಿಂದ ಅರ್ಚನೆ ಮಾಡಿ ನಮಸ್ಕರಿಸಬಹುದು.ಉಜ್ಜಯನಿಯ ಹರಿಸಿದ್ಧಿಮಂದಿರ್, ೫೨ ಶಕ್ತಿ ಪೀಠಗಳಲ್ಲೊಂದಾಗಿದೆ. 'ಗರುಡಪುರಾಣ'ದಲ್ಲಿ ಭಾರತದ ೭ ಪವಿತ್ರ ಕ್ಷೇತ್ರಗಳಲ್ಲಿ ಒಂದೆಂದು ಗುರುತಿಸಲಾಗಿತ್ತು.(ಅಯೋಧ್ಯೆ, ಮಥುರಾ, ಕಾಶಿ, ಕಾಂಚಿ, ಆವಂತಿಕಾ, ಪುರಿ, ದ್ವಾರಾವತಿ) ಏಪ್ರಿಲ್ ನಿಂದ ಜೂನ್ ವರೆಗೆ ಬೇಸಿಗೆ ಕಾಲ, ೪೫ ಡಿಗ್ರಿ ಉಷ್ಣತೆ ಯಿದ್ದು ಪ್ರವಾಸಕ್ಕೆ ಅನುಕೂಲವಿಲ್ಲ. ಮಳೆಗಾಲ,ಜೂನ್ ನಿಂದ ಸೆಪ್ಟೆಂಬರ್ ವರೆಗೆ, ನವೆಂಬರ್-ಫೆಬ್ರವರಿ ವರೆಗೆ ಚಳಿಗಾಲ, ಹಗಲಿನ ವೇಳೆ, ೨೦ ಡಿಗ್ರಿ ಉಷ್ಣತೆ, ರಾತ್ರಿ ಸೊನ್ನೆ ಡಿಗ್ರಿ ಇರುತ್ತದೆ. ಹಾಗಾಗಿ ಅಲ್ಲಿಗೆ ಭೆಟ್ಟಿಕೊಡಲು ಅತ್ಯುತ್ತಮ ವಾದ ಸಮಯವೆಂದರೆ, ಅಕ್ಟೋಬರ್ ನಿಂದ ಜನವರಿಯವರೆಗೆ, ಪ್ರತಿ ೧೨ ವರ್ಷಗಳಿಗೊಮ್ಮೆ ಮಹಾಕುಂಭಮೇಳ ನಡೆಯುತ್ತದೆ ಆಗ ಲಕ್ಷಾಂತರ ಭಕ್ತಾದಿಗಳು ದೇಶವಿದೇಶಗಳಿಂದ ಬಂದು, ಇಲ್ಲಿನ ಪವಿತ್ರ ನದಿಯಲ್ಲಿ ಸ್ನಾನಮಾಡಿ,ಪುನೀತರಾಗುತ್ತಾರೆ. 'ನಾಗಾಸಾಧುಗಳು' ಹಾಗೂ 'ಅಘೋರಿ'ಗಳು ಇಲ್ಲಿ ನೆರೆದಿರುತ್ತಾರೆ. ನದಿಯ ಇಕ್ಕೆಲೆಗಳಲ್ಲಿ ಕಣ್ಣು ಹಾಯಿಸಿದ ಕಡೆಗಳಲ್ಲೆಲ್ಲಾ ದೇವಾಲಯಗಳ ಸಮೂಹವೇ ಗೋಚರಿಸುತ್ತದೆ. ಈ ನಗರದಲ್ಲಿ ಸಮಯವನ್ನು ಕರಾರುವಾಕ್ಕಾಗಿ ತಿಳಿಸುವ ಸಾಧನಗಳಿರುವುದರಿಂದ ಭಾರತದ ಗ್ರೀನ್ ವಿಚ್ ಎಂದು ಪ್ರಸಿದ್ದಿಯಾಗಿದೆ. 'ಜಂತರ್ ಮಂತರ್' ಎಂಬ ತಾಣದಲ್ಲಿ ಸಮಯವನ್ನು ನಿಖರವಾಗಿ ಮಾಪಿಸಲಾಗುತ್ತದೆ. ಇದೇ ತರಹದ 'ಜಂತರ್ ಮಂತರ್' ಗಳು ದೇಶದ ದೆಹಲಿ, ಜಯಪುರ್, ವಾರಾಣಾಸಿ, ಗಳಲ್ಲಿವೆ. ಜೈಪುರದ ರಾಜ ಈ ತರಹದ ವೀಕ್ಷಣಾಲಯವನ್ನು ನಿರ್ಮಿಸಿದ. 'ಖಗೋಳ ಶಾಸ್ತ್ರ'ದ ಬಗ್ಗೆ ಅರಿಯಲು ಬಯಸುವವರಿಗೆ, ಅಂತರಿಕ್ಷ, ಸೂರ್ಯ ಕಿರಣ, ಚಂದ್ರಬಿಂಬ, ನಕ್ಷತ್ರಗಳ ಚಲನೆ ಮುಂತಾದ ಗತಿವಿಧಿಗಳ ಬಗ್ಗೆ ತಿಳಿಸಲು ಅನೇಕ ಸಾಧನಗಳು ಕಣ್ಣಿಗೆ ಗೋಚರಿಸುತ್ತವೆ. ಇವುಗಳಿಂದ ಸಮಯದ ಪರಿಕಲ್ಪನೆಯನ್ನು ತಿಳಿಯಲು ಅನುಕೂಲ. ಸಾಹಿತ್ಯ ಮಹಾ ಜ್ಯೋತಿಷಿ, 'ವರಾಹ ಮಿಹಿರ' ಸಹಿತ ಉಜ್ಜಯಿನಿಯಲ್ಲಿ ವಾಸಿಸಿದ್ದರು. ಧಾರಾದ ರಾಜ 'ಭೋಜರಾಜನ ಆಸ್ಥಾನ'ದಲ್ಲಿ ಕವಿಗಳಿಗೆ ವಿಶೇಷ ಮನ್ನಣೆಯನ್ನು ಕೊಟ್ಟು ಆಶ್ರಯವನ್ನು ಕೊಡಲಾಗಿತ್ತು. ರಾಜಾ ಭೋಜ ಸ್ವತಃ ಒಬ್ಬ ಶ್ರೇಷ್ಟ ಕವಿಯಾಗಿದ್ದರು. ಹಲವಾರು ಕೃತಿಗಳನ್ನು ರಚಿಸಿದ್ದಾರೆ. 'ಧಾರ ನಗರ'ದಲ್ಲಿ ಭೋಜರಾಜರು ನಿರ್ಮಿಸಿದ 'ಸಂಸ್ಕೃತ ಪಾಠಶಾಲೆ' ಇಂದಿಗೂ ಇದೆ. ಶಾಲೆಯ ಗೋಡೆಗಳ ಮೇಲೆ ಸಂಸ್ಕೃತ ಭಾಷೆಯಲ್ಲಿ ಕೆತ್ತಿದ ಹಲವಾರು ಶ್ಲೋಕಗಳಿವೆ. ಮಧ್ಯಪ್ರದೇಶ ಇನ್ನೂ ಹಲವಾರು ಖ್ಯಾತ ಪಂಡಿತರಿಗೆ ತವರುಮನೆ. ಅವರುಗಳಲ್ಲಿ ಪ್ರಮುಖರು, 'ಧನಪಾಲ', 'ಭರ್ತುಹರಿ', 'ಆಶಾಧಾರ', 'ಮನತುಂಗ', 'ಬ್ರಹ್ಮಗುಪ್ತ', 'ಭಾಸ್ಕರಾಚಾರ್ಯ', ಮುಂತಾದವರು. 'ಚಂದ್ರಗುಪ್ತ ವಿಕ್ರಮಾದಿತ್ಯ ಮಹಾರಾಜ' ನ ಕಾಲದಲ್ಲಿ, 'ಧನ್ವಂತರಿ', 'ಕ್ಷಪಣಕ' (ಸಿದ್ಧಸೇನ) 'ಅಮರ ಸಿಂಹ', 'ಸಂಕು', 'ವೇತಾಲಭಟ್ಟ', 'ಘಟಕರ್ಪರ', 'ಕಾಳಿದಾಸ', 'ವರಾಹಮಿಹಿರ', ಮತ್ತು 'ವರರುಚಿ' ಎಂಬ ನವರತ್ನಗಳಿದ್ದರು. 'ಆಧುನಿಕ ಕಾಲದ ಕೆಲವು ಹೆಸರಾಂತ ಕವಿಗಳು', 'ಮಾಖನ್ ಲಾಲ್', 'ಚತುರ್ವೇದಿ', 'ಶರದ್ ಜೋಶಿ', 'ಗಜಾನನ', 'ಮಾಧವ ಮುಕ್ತಿ', 'ಬೊಧ' ಮತ್ತು 'ವಿನೋದ್ ಕುಮಾರ್', 'ಶುಕ್ಲಾ' ಮುಂತಾದವರು. ನೃತ್ಯ-ಸಂಗೀತ 'ಮಧ್ಯ ಪ್ರದೇಶ' ಆದಿವಾಸಿಗಳ ರಾಜ್ಯ. ಯಾವುದೇ ಪರಕೀಯ ಆಚಾರ, ಸಂಸ್ಕೃತಿಗಳ ಸೋಂಕುತಾಗದೆ ಶತಮಾನಗಳ ಕಾಲದಿಂದಲೂ ತನ್ನ ದೇಶಿ ಸಂಕೃತಿಯ ಸ್ವಂತಿಕೆಯನ್ನು ಮಧ್ಯ ಪ್ರದೇಶ, ಕಾಪಾಡಿಕೊಂಡು ಬಂದಿದೆ. ಈ ಪ್ರದೇಶದ ಹಬ್ಬ ಹರಿದಿನಗಳಲ್ಲಿ ಮತ್ತು ಜಾತ್ರೆಗಳಲ್ಲಿ ಪುರಾತನಕಾಲದ ಅಪೂರ್ವ ಹಾಡು-ಕುಣಿಗಳಲ್ಲಿ ಶತಮಾನದ ಸಂಪ್ರದಯದ ಛಾಯೆಯನ್ನು ಕಾಣಬಹುದು. ಕರ್ಮಾ ನೃತ್ಯ'ಮಧ್ಯ ಪ್ರದೇಶ' ದ, ವಾಯವ್ಯ ಭಾಗದಲ್ಲಿ ನೆಲೆಸಿರುವ ಗೊಂಡ ಜನಸಮುದಾಯ, ಹಾಗೂ ಒರಾಂವ್ ಪಂಗಡ ಗಳ ಕುಣಿತ,'ಮಧ್ಯ ಪ್ರದೇಶ'ದ 'ಅತಿಪ್ರಾಚೀನ ಆದಿವಾಸಿ ನೃತ್ಯ ಪ್ರಕಾರ'ವೆಂದು ಪರಿಗಣಿಸಲ್ಪಟ್ಟಿದೆ. ದೇಶದ ಇತರೆ ಭಾಗಗಳಲ್ಲಿ ಇದರ ಭಿನ್ನ ರೂಪಗಳನ್ನು ಕಾಣಬಹುದು. ಈ ನೃತ್ಯಗಳನ್ನು ನಾವು ಹೆಚ್ಚಾಗಿ ಶರತ್ಕಾಲದ ಆರಂಭದಲ್ಲಿ ಇಲ್ಲವೇ ಮಳೆಗಾಲದ ಕೊನೆಯಲ್ಲಿ ಪ್ರದರ್ಶನಗೊಳ್ಳುವುದನ್ನು ಕಾಣಬಹುದು. ಅರಣ್ಯ ಸಂಪತ್ತು 'ಮಧ್ಯಪ್ರದೇಶ,' ಅಪಾರ ಪ್ರಾಕೃತಿಕ ನಿಸರ್ಗ ಸಂಪನ್ನು ಹೊಂದಿದ ರಾಜ್ಯವಾಗಿದೆ. ಭಾರತದ ೧೨.೪ % ಪ್ರತಿಶತ್ ಅರಣ್ಯ ಇರುವುದು ಈ ರಾಜ್ಯದಲ್ಲೇ. ರಾಜ್ಯದ ೩೧ % ಪ್ರತಿಶತ್, (೯೫,೨೨೧ ಚ.ಕೀ.ಮೀ) ಭಾಗ ಅರಣ್ಯಗಳು ಆಕ್ರಮಿಸಿವೆ. ಮಧ್ಯ, ಪೂರ್ವ, ಮತ್ತು ದಕ್ಷಿಣ ಭಾಗಗಳಲ್ಲಿ ದಟ್ಟ ಅಡವಿಗಳಿದ್ದರೆ, ಉತ್ತರ ಮತ್ತು ಈಶಾನ್ಯ ಭೂಭಾಗಗಳಲ್ಲಿ, ಕುರುಚಲು ಗಿಡಗಳ ಪ್ರದೇಶಗಳಿವೆ. ರಾಷ್ಟ್ರೀಯ ಉದ್ಯಾನಗಳು ಒಟ್ಟು ೯ ರಾಷ್ಟ್ರೀಯ ಉದ್ಯಾನಗಳಿವೆ. ಭಾಂದವ್ ಘರ್, ಕಾನ್ಹಾ, ಸತ್ಪುರಾ, ಸಂಜಯ್, ಮಾಧವ್, ವನ್ ವಿಹಾರ್, ಮಾಂಡ್ಲಾ, ಪನ್ನಾ ಮತ್ತು ಪೆಂಚ್ ರಾಷ್ಟ್ರೀಯ ಉದ್ಯಾನಗಳು. ಇವಲ್ಲದೆ ಹಲವಾರು ಪ್ರಾಕೃತಿಕ ಸಂರಕ್ಷಣಾ ತಾಣಗಳಿವೆ. ಮಂಡ್ಲಾ ರಾಷ್ತ್ರೀಯ ಉದ್ಯಾನ ಸಸ್ಯ ಪಳೆಯುಳಿಕೆಗಳಿಗೆ ಸುಪ್ರಸಿದ್ಧವಾಗಿದೆ. ತೆಂಡು ಎಲೆಗಳ ಕೈಗಾರಿಕೆ 'ಬೀಡಿ ಉದ್ಯಮ'ಕ್ಕೆ ಇವು ಅತ್ಯವಶ್ಯಕ. 'ತೆಂಡು ಎಲೆಗಳು' ಮಧ್ಯಪ್ರದೇಶದ ಅಡವಿಗಳಲ್ಲಿ ವಿಪುಲ ಮಾತ್ರದಲ್ಲಿ ದೊರೆಯುವುದರಿಂದ 'ಬೀಡಿ ಕೈಗಾರಿಕೆ' ಮಂಚೂಣಿಯಲ್ಲಿದೆ. ಮಧ್ಯಪ್ರದೇಶದ ಖಾದ್ಯಗಳು ವಿಶಾಲವಾದ ರಾಜ್ಯಗಳಲ್ಲಿ ಒಂದಾದ 'ಮಧ್ಯಪ್ರದೇಶ'ದ ಖಾದ್ಯಗಳು ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಬದಲಾಗುತ್ತವೆ. ಗೋಧಿ ಮತ್ತು ಮಾಂಸಾಹಾರದ ಖಾದ್ಯಗಳು ಉತ್ತರ ಹಾಗೂ ಪಶ್ಚಿಮಭಾಗದ ಮಧ್ಯಪ್ರದೇಶದಲ್ಲಿ ಹೆಚ್ಚು ಬಳಕೆಯಲ್ಲಿದೆ. ದಕ್ಷಿಣ ಹಾಗೂ ಪೂರ್ವ ಭಾಗಗಳಲ್ಲಿ ಅಕ್ಕಿ ಮತ್ತು ಮೀನಿನ ಆಹಾರಗಳು ಹೆಚ್ಚು ಪ್ರಚಲಿತದಲ್ಲಿವೆ. ಹಾಲು ಮತ್ತು ಹಾಲಿನ ಖಾದ್ಯಗಳು ಗ್ವಾಲಿಯರ್ ಮತ್ತು ಇಂದೂರ್ ನಗರಗಳಲ್ಲಿ ಹೆಚ್ಚು ತಯಾರಿಸಲ್ಪಡುತ್ತವೆ. ಮಾಳ್ವ ಪ್ರದೇಶದ ಅಡುಗೆಯಲ್ಲಿ ಸಸ್ಯಾಹಾರಕ್ಕೆ ಹೆಚ್ಚು ಪ್ರಾಶಸ್ತ್ಯಕೊಡುತ್ತಾರೆ. ಇಲ್ಲಿನ ಖಾದ್ಯಗಳಲ್ಲಿ ರಾಜಾಸ್ತಾನಿ ಮತ್ತು ಗುಜರಾತ್ ರಾಜ್ಯದ ಖಾದ್ಯಗಳ ಶೈಲಿಯ ಮಿಶ್ರಣವಿದೆ. ಜೋಳದೆ ತೆನೆ, ಮತ್ತು ಹಾಲಿನಿಂದ ಸಿದ್ಧವಾದ ಆಹಾರಪದಾರ್ಥಗಳಲ್ಲಿ ಅತಿ ಹೆಸರುವಾಸಿಯಾದ, 'ಭುಟ್ಟೇಕಿ ಕೀಸ್', 'ಗೋಧಿ ಹುಡ್', ಮತ್ತು ಮೊಸರಿನಲ್ಲಿ ತಯಾರಾದ 'ಚಕ್ಕೀ ಕಿ ಶಾಕ್' ಈ ಪ್ರದೇಶದ ಸ್ವಾದಿಷ್ಟ ತಿನಸುಗಳಲ್ಲಿ ಪ್ರಮುಖವಾಗಿ ಪರಿಗಣಿಸಲ್ಪಟ್ಟಿವೆ. ಸಿಹಿತಿಂಡಿಗಳ ಪಟ್ಟಿ ಹೀಗಿದೆ. ಮಾವ ಭಾಟಿ, ಖೋಪ್ರಾ ಪಾಕ್, ಶ್ರೀ ಖಂಡ್, ಮಾಲ್ ಪುವಾ, ಭೂಪಾಲ್ ನಲ್ಲಿ ಮಾಂಸ ಮತ್ತು ಮೀನಿನಿಂದ ತಯಾರಾದ ಖಾದ್ಯಗಳು ಹೆಚ್ಚು ಬೇಡಿಕೆಯಲ್ಲಿವೆ. ರೋಗನ್ ಜೋಶ್, ಭೋಪಾಲೀ ಮುರ್ಗ್ ರೆಜಾಲಾ, ಪನೀರ್ ರೆಜಾಲಾ, ಗೋಷ್ಟ್ ಕೂರ್ಮಾ, ಮುರ್ಗ್ ಹರಾ ಮಸಾಲಾ ಭತ್, ಮುರ್ಗ್ ನಿಜಾಮೀ ಕೂರ್ಮಾ, ಖೀಮಾ, ಬಿರ್ಯಾನಿ ಪಿಲಾಫ್,(ಪುಲಾವ್) ಶಮ್ಮಿ ಕಬಾಬ್, ಸೀಖ್ ಕಬಾಬ್ ಇತ್ಯಾದಿ. ಬಾಫ್ಲಾ ರೊಟ್ಟಿ 'ದಾಲ್' ಜೊತೆಗೆ ಬಡಿಸಿಕೊಂಡು ಮೆಲ್ಲುವ 'ರೊಟ್ಟಿ' ಇಲ್ಲಿನ ವಿಶೇಷ ಊಟಗಳಲ್ಲೊಂದು. 'ಸುಲ್ಸಿ' ಎಂಬ ಬಗೆಯ ಮದ್ಯ 'ಮಹುವಾ ಮರದ ಹೂವು'ಗಳಿಂದ ತಯಾರಾಗುವ ಮದ್ಯವನ್ನು 'ಖರ್ಜೂರ' ಹಣ್ಣಿನಿಂದ ತಯಾರಿಸುತ್ತಾರೆ. 'ಪಾನಪ್ರಿಯ'ರಿಗೆ ಇದೊಂದು ಮುದಕೊಡುವ ಪೇಯವಾಗಿದೆ. ರಸ್ತೆಬದಿಯ ಗಾಡಿಗಳಲ್ಲಿ ತಂದು ಮಾರುವ ಖಾದ್ಯಗಳು 'ಇಂದೂರ್ ನಗರ'ದಲ್ಲಿ ಇಂತಹ ಖಾದ್ಯಗಳನ್ನು ಮಾರುವ ಗಾಡಿಗಳು ಎಲ್ಲೆಡೆ ಲಭ್ಯವಿವೆ. ಈ ನಗರದ 'ಸರಾಫಾ ಬಜಾರ್', 'ಛಪ್ಪನ್ ದೂಕಾನ್',ಮುಂತಾದ ರಸ್ತೆಗಳಲ್ಲಿ 'ಪೋಹಾ ಜಿಲೇಬಿ', 'ಭುಟ್ಟೇ ಕೀ ಕೀಸ್', ಮುಂತಾದ ರುಚಿರುಚಿಯಾದ ಖಾದ್ಯಗಳು ಉಪಲಬ್ಧವಿವೆ. ಸರ್ಕಾರ ಮತ್ತು ರಾಜಕೀಯ ಮಧ್ಯಪ್ರದೇಶದ ವಿಧಾನಸಭೆ ಚುನಾವಣೆಗಳು ಮಧ್ಯಪ್ರದೇಶ 230 ಸ್ಥಾನಗಳುಳ್ಳ ರಾಜ್ಯ ಶಾಸನ ಸಭೆಯನ್ನು ಹೊಂದಿದೆ. ರಾಜ್ಯವು 40 ಸದಸ್ಯರನ್ನು ಭಾರತ ಸಂಸತ್ತಿಗೆ ಕಳುಹಿಸುತ್ತದೆ: 29 ಲೋಕಸಭೆಗೆ (ಕೆಳಮನೆ) ಮತ್ತು 11 ರಾಜ್ಯಸಭೆಗೆ (ಮೇಲ್ಮನೆ) ಆಯ್ಕೆ ಮಾಡಲಾಗುತ್ತದೆ. ರಾಜ್ಯದ ಸಂವಿಧಾನಾತ್ಮಕ ಮುಖ್ಯಸ್ಥರು ಭಾರತದ ಅಧ್ಯಕ್ಷರಿಂದ ನೇಮಕಗೊಂಡ ರಾಜ್ಯಪಾಲರಾಗಿದ್ದಾರೆ. ಮರಣದಂಡನೆ ಅಧಿಕಾರಗಳು ಮುಖ್ಯಮಂತ್ರಿಯೊಂದಿಗೆ ಇವೆ, ಅವರು ರಾಜ್ಯ ಶಾಸನಸಭೆಯ ಚುನಾಯಿತ ನಾಯಕರಾಗಿದ್ದಾರೆ. ಡಿಸೆಂಬರ್ 2018 ರ ಹೊತ್ತಿಗೆ, ಪ್ರಸ್ತುತ ಗವರ್ನರ್ ಅನಂದಿಬೆನ್ ಪಟೇಲ್ ಆಗಿದ್ದಾರೆ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ (ಐಎನ್ಸಿ)ಯ ಕಮಲ್ ನಾಥ್ ೧೭-೮-೨೦೧೮ರಿಂದ ಮುಖ್ಯಮಂತ್ರಿ ಆಗಿದ್ದಾರೆ. ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳು ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್. ನೆರೆಯ ರಾಜ್ಯಗಳಂತೆ, ಸಣ್ಣ ಅಥವಾ ಪ್ರಾದೇಶಿಕ ಪಕ್ಷಗಳು ರಾಜ್ಯ ಚುನಾವಣೆಯಲ್ಲಿ ಹೆಚ್ಚು ಯಶಸ್ಸನ್ನು ಗಳಿಸಿಲ್ಲ. ನವೆಂಬರ್ 2018 ರ ರಾಜ್ಯ ಚುನಾವಣೆಯಲ್ಲಿ, ಬಿಜೆಪಿಯನ್ನು ಸೋಲಿಸಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 114 ಸ್ಥಾನಗಳನ್ನು ಹೊಂದಿರುವ ಏಕೈಕ ಅತಿದೊಡ್ಡ ಪಕ್ಷವಾಯಿತು. ಬಿಜೆಪಿ 109 ಸ್ಥಾನಗಳನ್ನು ಗೆದ್ದಿದೆ. ಬಹುಜನ ಸಮಾಜ ಪಕ್ಷವು ರಾಜ್ಯ ಶಾಸನಸಭೆಯಲ್ಲಿನ ಮೂರನೇ ಪ್ರಮುಖ ಪಕ್ಷವಾಗಿದ್ದು, 2 ಸೀಟುಗಳನ್ನುಪಡೆದಿದ್ದು ಇತರರು 5 ಸ್ಥಾನಗಳನ್ನು ಗೆದ್ದಿದ್ದಾರೆ. ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು; ಮುಖ್ಯಮಂತ್ರಿ ಸ್ಥಾನಕ್ಕೆ ಕಮಲ್ ನಾಥ್ ರಾಜೀನಾಮೆ ಮಧ್ಯ ಪ್ರದೇಶದ ಜಿಲ್ಲೆಗಳು ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
2106
https://kn.wikipedia.org/wiki/%E0%B2%AE%E0%B2%A3%E0%B2%BF%E0%B2%AA%E0%B3%81%E0%B2%B0
ಮಣಿಪುರ
ದೇಶದ ಈಶಾನ್ಯ ಭಾಗದ ಪ್ರವಾಸ ತಾಣಗಳಲ್ಲಿ ಮಣಿಪುರ ರಾಜ್ಯ ನಾನಾ ಕಾರಣಗಳಿಂದ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಎದುರುಗೊಳ್ಳುತ್ತದೆ. ಒಂದು ಪ್ರವಾಸಿ ತಾಣಗಳಿಂದ ಮುದ ನೀಡಿದರೆ ಮತ್ತೊಂದೆಡೆ ತನ್ನೂರಿನ ಹಬ್ಬಗಳಿಂದ ಸದಾ ಕಾಲ ಯಾರಿಗೂ ಗೊತ್ತಿಲ್ಲದೇ ಸುದ್ದಿಯಾಗುತ್ತದೆ. ಪ್ರಶಾಂತ ಭೂ ದೃಶ್ಯಗಳು, ವಿಲಕ್ಷಣ ವನ್ಯ ಜೀವಿಗಳು, ಅಲ್ಲಿನ ಜನರ ಆತಿಥ್ಯ ನೋಡಿದರೆ ಆ ಜಗದ ಪ್ರೀತಿ ಹುಟ್ಟುವುದರಲ್ಲಿ ಸಂಶಯವಿಲ್ಲ. ಇದೇ ಕಾರಣದಿಂದ ಲಕ್ಷ ಗಟ್ಟಲೆ ಹಣ ಸುರಿದು ಸ್ವಿಜರ್‌ಲ್ಯಾಂಡ್‌ಗೆ ಕಣ್ಣ ಹಾಕುವ ಪ್ರವಾಸಿಗರು ಸ್ವಿಟ್ಜರ್ಲ್ಯಾಂಡ್ ಆಫ್ ಇಂಡಿಯಾ ಎಂದು ಕರೆಯಲಾಗುವ ಮಣಿಪುರಕ್ಕಂತೂ ಗ್ಯಾರಂಟಿಯಾಗಿ ಬಂದು ಬಿಡಬಹುದು. ಇದರ ಜತೆಗೆ ಮತ್ತೂ ಪ್ರವಾಸಿಕ್ಕಾಗಿ ಸಮಯ, ಹಣದ ಉಳಿತಾಯವಾದರಂತೂ ಉತ್ತರಕ್ಕೆ ನಾಗಾಲ್ಯಾಂಡ್, ದಕ್ಷಿಣಕ್ಕೆ ಮಿಜೋರಾಂ ಹಾಗೂ ಪಶ್ಚಿಮಕ್ಕೆ ಅಸ್ಸಾಂ ಹಾಗೂ ಪೂರ್ವಕ್ಕೆ ಬರ್ಮಾದ ಅಂತಾರಾಷ್ಟ್ರೀಯ ಗಡಿರೇಖೆ ಇರುವುದರಿಂದ ಅಲ್ಲೂ ಪ್ರವಾಸ ಕೈಗೊಳ್ಳುವ ಅವಕಾಶ ಸಿಗುತ್ತದೆ. ಮಣಿಪುರದಲ್ಲಿ ಸಿಗುವ ಪ್ರವಾಸಿ ತಾಣಗಳು ಇಂಫಾಲ ನಗರದಿಂದ ೧೦ಕಿಮೀ ದೂರದಲ್ಲಿದೆ. ಮಣಿಪುರದ ರಾಜಧಾನಿ ನಗರ. ಇದು ಏಳು ಪರ್ವತಶ್ರೇಣಿಗಳಿಂದ ಸುತ್ತುವರಿದಿದೆ. ಸಾಂಸ್ಕೃತಿಕ ಹಾಗೂ ಕಮರ್ಷಿಯಲ ಚಟುವಟಿಕೆಗಳ ಕೇಂದ್ರ ಬಿಂದು. ಪ್ರಕೃತಿಯ ಸೊಬಗು ಮತ್ತು ವನ್ಯಜೀವಿಗಳಿಗೆ ಹೆಸರುವಾಸಿ. ಪುರಾತನ ಇತಿಹಾಸವಿರುವ ಅನೇಕ ದೇವಾಲಯಗಳು, ಸ್ಮಾರಕಗಳನ್ನು ನೋಡಬಹುದು. ಖ್ವೈರಾಮಬಂದ್ ಬಜರ್ ಇಲ್ಲಿ ಮಹಿಳೆಯರದ್ದೇ ವ್ಯವಹಾರ. ಮಹಿಳೆಯರೇ ನಡೆಸುವ ದೇಶದ ದೊಡ್ಡ ಮಾರ್ಕೆಟ ಇದು. ಇಲ್ಲಿ ನೀವು ಮಣಿಪುರದ ಸಾಂಪ್ರದಾಯಿಕ ಶೈಲಿಯ ಕರಕುಶಲ ವಸ್ತುಗಳನ್ನು ಖರೀದಿಸಬಹುದು. ಶಾಲ, ಬಾಸ್ಕೆಟ, ಬ್ಯಾಗ್, ಉಡುಗೆ, ಗೃಹಪಯೋಗಿ ವಸ್ತುಗಳು ಅಲ್ಲದೇ ಬೆತ್ತ ಹಾಗೂ ಬಿದಿರಿನಿಂದ ಮಾಡಿದ ವಸ್ತುಗಳನ್ನು ಹೆಚ್ಚಾಗಿ ಪ್ರವಾಸಿಗರು ಖರೀದಿಸುತ್ತಾರೆ. ಶ್ರೀ ಗೋವಿಂದಾಜೀ ದೇವಸ್ಥಾನ ಮಣಿಪುರದ ಮಾಜಿ ದೊರೆಗಳ ಅರಮನೆಯ ಪಕ್ಕದಲ್ಲಿ ಈ ದೇವಾಲಯವಿದೆ. ಇದು ವೈಷ್ಣವರ ಪ್ರಮುಖ ಆರಾಧ್ಯ ದೇವಸ್ಥಾನ. ಸಾಮಾನ್ಯ ರಚನೆಯಿಂದ ಕೂಡಿದ್ದು, ಎರಡು ಗುಮ್ಮಟಗಳಿವೆ. ಅದರಲ್ಲೂ ಮುಖ್ಯವಾಗಿ ಈ ದೇವಸ್ಥಾನಕ್ಕೆ ದೇಶ- ವಿದೇಶದ ಪ್ರವಾಸಿಗರು ಬಂದು ಹೋಗುತ್ತಾರೆ. ಮಣಿಪುರದ ಪ್ರವಾಸ ತಾಣಗಳಲ್ಲಿ ಈ ದೇವಳ ಮೊದಲ ಸ್ಥಾನದಲ್ಲಿ ನಿಂತಿದೆ. ಲೋಕ್ತಕ್ ಲೇಕ್ ಹಾಗೂ ಸೇಂದ್ರ ದ್ವೀಪ ಈ ಪ್ರವಾಸಿ ತಾಣವನ್ನು ಪ್ರವಾಸಿಗರು ನೋಡಲೇಬೇಕು. ಇಂಫಾಲ್‌ನಿಂದ ೪೮ ಕಿಮೀ ದೂರದದಲ್ಲಿ ಸೇಂದ್ರ ದ್ವೀಪವಿದೆ. ಇದು ಲೋಕ್ತಕ್ ಸರೋವರದ ಮಧ್ಯಭಾಗದಲ್ಲಿ ಎತ್ತರದ ಪರ್ವತದಂತೆ ಕಾಣುತ್ತದೆ. ಕೇಬುಲ ಲಮ್ಜಾವೋ ರಾಷ್ಟ್ರೀಯ ಉದ್ಯಾನ ಅಪರೂಪದ ಸ್ಥಳೀಯ ಪ್ರಾಂತ್ಯದ ಜಿಂಕೆ ಎಂದು ಕರೆಯಲ್ಪಡುವ ಶಾಂಗೈ ಎಂಬ ವನ್ಯಮೃಗ ಕಾಣಿಸಿಕೊಳ್ಳುತ್ತದೆ. ಇಂಫಾಲ್‌ನಿಂದ ೫೩ ಕಿಮೀ ದೂರದಲ್ಲಿದೆ. ಇದು ನೀರಿನ ಮೇಲೆ ತೇಲುತ್ತಿದೆ. ಇದು ಈ ಪಾರ್ಕ್ ವಿಶಿಷ್ಟತೆಗಳಲ್ಲಿ ಒಂದಾಗಿ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆದು ಬಿಡುತ್ತದೆ. ಇಲ್ಲಿ ಬೋಟಿಂಗ್ ವ್ಯವಸ್ಥೆಯನ್ನು ಕೂಡ ಕಲ್ಪಿಸಲಾಗಿದೆ. ಮೋರೆಹ್ ಇಂಡೋ-ಮಯನ್ಮಾರ್ ಗಡಿರೇಖೆಯನ್ನೇ ಮೋರೆಹ್ ಪಟ್ಟಣ ಎನ್ನುತ್ತಾರೆ. ಇಂಫಾಲ್‌ನಿಂದ ೧೧೦ಕಿಮೀ ದೂರದಲ್ಲಿದೆ. ಈಶಾನ್ಯ ಭಾಗದ ಪ್ರಮುಖ ವಾಣಿಜ್ಯ ನಗರಿ ಕೇಂದ್ರ. ಇಲ್ಲಿ ಕಡಿಮೆ ಬೆಲೆಗೆ ಥಾಯ, ಚೈನೀಸ್ ಹಾಗೂ ಬರ್ಮಾದ ಗ್ಯಾಜೆಟ್, ಉಡುಗೆ, ಕಾರ್ಪೆಟ ಹಾಗೂ ಗೃಹ ಅಲಂಕಾರ ವಸ್ತುಗಳನ್ನು ಖರೀದಿಸಲು ಸೂಕ್ತವಾದ ಪ್ರವಾಸಿ ತಾಣ. ಕಂಗಲಾ ಇದು ಮಣಿಪುರದ ಸಾಂಸ್ಕೃತಿಕ ನಗರಿ ಎಂದೇ ಬಿಂಬಿತ. ೧೮೯೧ರಲ್ಲಿ ಇಲ್ಲಿ ಆಳ್ವಿಕೆ ನಡೆಸಿದ ಮಣಿಪುರಿ ರಾಜಮನತೆನಗಳಿಂದಾಗಿ ಈ ನಗರಿಯನ್ನು ಐತಿಹಾಸಿಕ ದೃಷ್ಟಿಯಿಂದ ಪ್ರವಾಸಿಗರು ನೋಡಬಹುದು. ಇದರ ಜತೆಯಲ್ಲಿ ಯುದ್ದದಲ್ಲಿ ಮಡಿದವರ ಸಮಾಧಿ ಕೂಡ ಕಾಣಬಹುದು. ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ಮಡಿದ ಬ್ರಿಟಿಷ್ ಹಾಗೂ ಭಾರತೀಯ ಸೈನಿಕರ ಸಮಾಧಿ ಇಲ್ಲಿ ನಿರ್ಮಾಣ ಮಾಡಲಾಗಿದೆ. ಡಜೂಕ್ ಕಣಿವೆ ಮಣಿಪುರ ಹಾಗೂ ನಾಗಾಲ್ಯಾಂಡ್ ಬಾರ್ಡರ್‌ನಲ್ಲಿರುವ ಸೇನಾಪಟ್ಟಿ ಜಿಲ್ಲೆಯಲ್ಲಿರುವ ಡಜೂಕ್ ಕಣಿವೆ ಹುಲ್ಲುಗಾವಲುಗಳಿಂದ ಆವೃತ್ತವಾಗಿದೆ. ಮುಖ್ಯವಾಗಿ ಲಿಲ್ಲಿ ಹೂಗಳಿಗೆ ಇದು ಸಾಕಷ್ಟು ಖ್ಯಾತಿಯನ್ನು ಪಡೆದುಕೊಂಡಿದೆ. ಸಾಹಸ ಕ್ರೀಡಾ ಪ್ರೇಮಿಗಳಿಗಂತೂ ಇದು ಮೆಚ್ಚಿನ ತಾಣ. ಮಣಿಪುರ ಮೌಂಟರೇನಿಂಗ್ ಆಂಡ್ ಟ್ರಕ್ಕಿಂಗ್ ಅಸೋಸಿಯೇಶನ್ ವಿಶೇಷ ರೀತಿಯ ಟ್ರಕ್ಕಿಂಗ್‌ಗಳನ್ನು ಆಯೋಜಿಸುತ್ತದೆ. ಇದರ ಜತೆಗೆ ನವೆಂಬರ್ ತಿಂಗಳಲ್ಲಿ ವಿಶೇಷ ಮಣಿಪುರ ಶಾಂಘೈ ಫೆಸ್ಟಿವಲ್‌ವನ್ನು ಕೂಡ ಆಯೋಜನೆ ಮಾಡುತ್ತದೆ. ಈ ಫೆಸ್ಟಿವಲ್ ಸಮಯದಲ್ಲಂತೂ ಸಾವಿರಾರು ಪ್ರವಾಸಿಗರು ಬಂದು ಸೇರುತ್ತಾರೆ. ಐಎನ್‌ಎ ವಾರ್ ಮ್ಯೂಸಿಯಂ ಇಂಫಾಲ್‌ನಿಂದ ೪೫ಕಿಮೀ ದೂರದಲ್ಲಿ ಈ ಮ್ಯೂಸಿಂಯ ನೆಲೆನಿಂತಿದೆ. ಇಂಡಿಯನ್ ನ್ಯಾಷನಲ್ ಆರ್ಮಿಯ ಭಾವುಟ ಸೇರಿದಂತೆ ನೇತಾಜಿ ಸುಭಾಷ್‌ಚಂದ್ರ ಭೋಸ್‌ಗೆ ಸಂಬಂಧ ಪಟ್ಟ ಸಾಕಷ್ಟು ಸಾಮಗ್ರಿಗಳು ಇಲ್ಲಿವೆ. ಹಬ್ಬಗಳೇ ಮಣಿಪುರದ ಖಜಾನೆ ಮಣಿಪುರದಲ್ಲಿ ವರ್ಷಪೂರ್ತಿ ಹತ್ತಾರು ಹಬ್ಬಗಳು ಇಲ್ಲಿಯ ಜನರನ್ನು ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಜತೆಗೆ ಸಾಮಾಜಿಕವಾಗಿ ಗಟ್ಟಿಮಾಡಿದೆ. ಇಲ್ಲಿನ ಜನರ ಭಾವನಾತ್ಮಕ, ಧಾರ್ಮಿಕ ಬದುಕಿಗೆ ಈ ಹಬ್ಬಗಳು ಪ್ರೇರಣೆಯನ್ನು ನೀಡುತ್ತದೆ. ಇದು ತಮ್ಮ ಸೋಲಿನಿಂದ ಎದ್ದು ಬರಲು ಧೈರ್ಯ ತುಂಬುತ್ತದೆ ಎನ್ನುವ ನಂಬಿಕೆ ಮಣಿಪುರಿಗರದ್ದು. ಯೋಶಾಂಗ್(ಹೋಳಿ) ಮಣಿಪುರದಲ್ಲಿರುವ ಹಿಂದೂಗಳು ಆಚರಣೆ ಮಾಡುವ ಹಬ್ಬ ಯೋಶಾಂಗ್ ಇದನ್ನು ಬೇರೆ ರಾಜ್ಯಗಳಲ್ಲಿ ಹೋಳಿಯಾಗಿ ಆಚರಣೆ ಮಾಡುತ್ತಾರೆ. ಫೆಬ್ರವರಿ/ ಮಾರ್ಚ್ ತಿಂಗಳ ಹುಣ್ಣಿಮೆಯ ದಿನದಿಂದ ಆರಂಭವಾಗಿ ಐದು ದಿನಗಳ ಕಾಲ ಹಬ್ಬದ ಆಚರಣೆ ನಡೆಯುತ್ತದೆ. ಇದು ಮಣಿಪುರದ ಆರಂಭದ ಹಬ್ಬ. ಇದರಲ್ಲಿ ಮಣಿಪುರಿ ಹುಡುಗಿಯರು ಹಾಗೂ ಹುಡುಗರು ಕೋಲು ತೆಗೆದುಕೊಂಡು ಕುಣಿಯುತ್ತಾ, ಹಾಡುಗಳನ್ನು ಹಾಡುತ್ತಾ ಮನರಂಜನೆ ನೀಡುತ್ತಾರೆ. ಕುಕೀ ಚಿನ್ ಮಿಜೋ ಮಣಿಪುರದಲ್ಲಿ ನಾನಾ ಬುಡಕಟ್ಟು ಜನಾಂಗದವರು ಭಿನ್ನ ಭಿನ್ನ ರೀತಿಯಲ್ಲಿ ಈ ಹಬ್ಬವನ್ನು ಆಚರಣೆ ಮಾಡುತ್ತಾರೆ. ಇಡೀ ವರ್ಷ ಕಷ್ಟಪಟ್ಟು ದುಡಿದು ಸಂಗ್ರಹ ಮಾಡಿದ ದವಸ ಧಾನ್ಯಗಳಿಂದ ಕೆಲವನ್ನು ಬಳಸಿಕೊಂಡು ಊಟ ಮಾಡುವ ಪರಂಪರೆ ಇದೆ. ಹೆಚ್ಚಾಗಿ ನವೆಂಬರ್ ತಿಂಗಳಲ್ಲಿ ನಡೆಸಲಾಗುತ್ತದೆ. ಕೂಬೀ ನಾಗಾಗಳ ಗಂಗಾ ನಾಗೀ ಹಬ್ಬ ಡಿಸೆಂಬರ್/ಜನವರಿ ತಿಂಗಳಲಿ ಹೆಚ್ಚಾಗಿ ಆಚರಣೆ ಮಾಡಲಾಗುತ್ತದೆ. ಇದು ಐದು ದಿನಗಳ ಕಾಲ ನಡೆಯುತ್ತದೆ. ಕುಣಿತ, ಆಟ, ಉಡುಗೆ-ತೊಡುಗೆ ಬದಲಾವಣೆ ಮೊದಲಾದವುಗಳನ್ನು ಇಲ್ಲಿ ಕಾಣಬಹುದು. ಚೆರ್ರಿಬೋ ಏಪ್ರಿಲ್ ತಿಂಗಳಲ್ಲಿ ಮಣಿಪುರಿ ರಾಜ್ಯ ಹೊಸ ವರ್ಷವನ್ನು ಆಚರಣೆ ಮಾಡುತ್ತದೆ. ಇದನ್ನು ಚೆರ್ರಿಬೋ ಎಂದು ಕರೆಯಲಾಗುತ್ತದೆ. ಮುಖ್ಯವಾಗಿ ವಿಶೇಷ ರೀತಿಯ ಅಡುಗೆ, ಪರ್ವತರೋಹಣ ಮೊದಲಾದವುಗಳನ್ನು ಈ ಹಬ್ಬದ ಸಮಯದಲ್ಲಿ ಮಾಡಲಾಗುತ್ತದೆ. ಇವುಗಳ ಜತೆಗೆ ಕಾಂಗ್ ಮಣಿಪುರಿಗಳ ರಥಯಾತ್ರೆ,ಹೇಕ್ರೂಒಂಟಿಗೋಬಾ, ನಿಂಗೋಳ್ ಚಾಕ್ ಕೋಬಾ, ಲೂಯೀ ನಾಗೀ ನೀ, ಚೂಫಾಸ್ ಹಬ್ಬ ಹೀಗೆ ಹತ್ತಾರು ಹಬ್ಬಗಳಿಂದ ಮಣಿಪುರಿ ರಾಜ್ಯದ ಮಂದಿ ಖುಷಿಯಿಂದ ಬದುಕು ಕಟ್ಟುತ್ತಾರೆ. ಇಲ್ಲಿಗೆ ಭೇಟಿ ಕೊಡುವ ಪ್ರವಾಸಿಗರು ಕೂಡ ಈ ಹಬ್ಬಗಳ ಮೂಲಕ ಅವರಿಗೆ ಹತ್ತಿರವಾಗುತ್ತಾರೆ. ಹೋಗುವುದು ಹೇಗೆ? ಮಣಿಪುರಕ್ಕೆ ಎ ಪ್ರಮುಖ ನಗರಗಳಿಂದ ವಿಮಾನಯಾನ ಸೌಲಭ್ಯವಿದೆ. ಮಣಿಪುರದಲ್ಲಿ ರೈಲು ನಿಲ್ದಾಣವಿಲ್ಲ. ಆದರೆ ಹತ್ತಿರದ ರೈಲು ನಿಲ್ದಾಣ ೨೧೫ಕಿಮೀ. ದೂರದಲ್ಲಿರುವ ಡಿಮಾಪುರದಲ್ಲಿದೆ. ಸ್ಥಳೀಯವಾಗಿ ಸುತ್ತಾಡಲು ಇಂಫಾಲ್‌ನಲ್ಲಿರುವ ಹೋಟೆಲ್‌ಗಳು ಟ್ಯಾಕ್ಸಿ, ಖಾಸಗಿ ವಾಹನಗಳ ವ್ಯವಸ್ಥೆ ಮಾಡುತ್ತದೆ. ಇಂಫಾಲ್‌ದಲ್ಲಿ ಉಳಿದುಕೊಳ್ಳುವುದಕ್ಕೇನೂ ಸಮಸ್ಯೆಯಿಲ್ಲ. ಬಜೆಟ್‌ಗೆ ಅನುಗುಣವಾಗಿ ಊಟ-ವಸತಿ ವ್ಯವಸ್ಥೆ ಲಭ್ಯ. ಇಲ್ಲಿಗೆ ಭೇಟಿ ನೀಡಲು ಸೂಕ್ತ ಕಾಲ ನವೆಂಬರ್‌ನಿಂದ ಏಪ್ರಿಲ ತಿಂಗಳು ಬಹಳ ಸೂಕ್ತ. ರಾಜಕೀಯ ಮತ್ತು ಆಡಳಿತ ಮಣಿಪುರ ವಿಧಾನಸಭೆ ಬಾಹ್ಯ ಸಂಪರ್ಕಗಳು Manipur Government Tourism Website Manipur Government Official Website Manipur News Official Website Understanding the tourism barriers and Manipur ಉಲ್ಲೇಖಗಳು https://www.culturalindia.net/indian-dance/classical/manipuri.html https://en.wikiquote.org/wiki/Manipuri_dance https://www.britannica.com/art/manipuri ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
2107
https://kn.wikipedia.org/wiki/%E0%B2%AE%E0%B2%BF%E0%B2%9D%E0%B3%8B%E0%B2%B0%E0%B2%82
ಮಿಝೋರಂ
ಮಿಝೋರಂ ಈಶಾನ್ಯ ಭಾರತದ ರಾಜ್ಯಗಳಲ್ಲೊಂದು. ೨೦೦೧ದ ಜನಗಣತಿಯ ಪ್ರಕಾರ ಇಲ್ಲಿನ ಜನಸಂಖ್ಯೆ ೮,೮೮,೫೭೩ ಇತ್ತು. ೯೦.೨೭ ಪ್ರತಿಶತ ಸಾಕ್ಷರತೆಯನ್ನು ಹೊಂದಿರುವ ಮಿಝೋರಂ ಸಾಕ್ಷರತೆ ಪ್ರಮಾಣದಲ್ಲಿ ಕೇರಳದ ನಂತರ ಎರಡನೇ ಸ್ಥಾನದಲ್ಲಿದೆ. ಈ ರಾಜ್ಯವನ್ನು ಉತ್ತರದಲ್ಲಿ ಭಾರತದ ಅಸ್ಸಾಮ ಮತ್ತು ಮಣಿಪುರ ರಾಜ್ಯಗಳು, ಪೂರ್ವ ದಕ್ಷಿಣಗಳಲ್ಲಿ ಬರ್ಮ, ಪಶ್ಚಿಮದಲ್ಲಿ ಬಾಂಗ್ಲಾದೇಶ ಮತ್ತು ಭಾರತದ ತ್ರಿಪುರಾ ರಾಜ್ಯ ಸುತ್ತುವರೆದಿವೆ. ಮೀಜೊರಮ್‍ನ ವಿಸ್ತೀರ್ಣ 21,081 ಚ.ಕಿಮೀ. ರಾಜಧಾನಿ ಐಝ್ವಾಲ್. ಭೌತಲಕ್ಷಣ ಮೀಜೊರಮ್ ಬೆಟ್ಟಗಳ ಪ್ರದೇಶ. ಮೀಜೊ ಭಾಷೆಯಲ್ಲಿ ಮೀಜೊರಮ್ ಎಂದರೆ ಬೆಟ್ಟಗಳ (ಜೋ) ಜನ (ಮೀ) ಇರುವ ಪ್ರದೇಶ ಎಂದು ಅರ್ಥ. ಇಲ್ಲಿಯ ಬೆಟ್ಟಗಳ ದಕ್ಷಿಣೋತ್ತರವಾಗಿ ಹಬ್ಬಿವೆ. ಇವುಗಳ ಸರಾಸರಿ ಎತ್ತರ ಸಮುದ್ರ ಮಟ್ಟದಿಂದ 900 ಮೀ. ಅತ್ಯುನ್ನತ ಬ್ಲ್ಯೂಶಿಖರ 2.165 ಮೀ ಎತ್ತರವಾಗಿದೆ. ಮೀಜೊರಮ್‍ನ ಉತ್ತರಭಾಗದಲ್ಲಿ ಹರಿಯುವ ಮುಖ್ಯ ನದಿಗಳು ಧಾಲೇಶ್ವರಿ (ತ್ಲಾವೆಂಗ್) ಸೊನಾಯ್ ಮತ್ತು ತುಯಿವಾವ್ಲ್ ಇವು ಬಾರಾಕ್ ನದಿಯನ್ನು ಸೇರುತ್ತವೆ. ದಕ್ಷಿಣದಲ್ಲಿ ಕೋಲದೀನದಿ ಮತ್ತು ಅದರ ಉಪನದಿಗಳು ಹರಿಯುತ್ತವೆ. ಪಶ್ಚಿಮದ ಮುಖ್ಯ ನದಿ ಕರ್ಣಪುಲಿ. ಇದು ಬಾಂಗ್ಲಾದೇಶದಲ್ಲಿ ಮುಂದುವರಿಯುತ್ತದೆ. ವಾಯುಗುಣ ಮೀಜೊರಮ್‍ನ ಕಣಿವೆಗಳು ಮಳೆಗಾಲದಲ್ಲಿ ನೀರಿನಿಂದ ಕೂಡಿದ್ದು ವಾಸಕ್ಕೆ ಯೋಗ್ಯವೆನಿಸವು ಮತ್ತು ಅನಾರೋಗ್ಯಕರವೆನಿಸಿವೆ. ಇಲ್ಲಿಯ ಎತ್ತರ ಪ್ರದೇಶ ಹಿತಕರವಾದ ವಾಯುಗುಣದಿಂದ ಕೂಡಿದೆ. ಮೀಜೊರಮ್‍ನ ವಾರ್ಷಿಕ ಸರಾಸರಿ ಮಳೆ 254 ಸೆಂಮೀ. ಉತ್ತರದಲ್ಲಿ ಐಜಾವ್ಲ್‍ನಲ್ಲಿ ಬೀಳುವ ಮಳೆ 208 ಸೆಂಮೀ, ದಕ್ಷಿಣದ ಲುಂಗ್ಲೇನಲ್ಲಿ 350 ಸೆಂಮೀ ಮಳೆಯಾಗುತ್ತದೆ. ಆರ್ಥಿಕತೆ ಕೃಷಿ ಇಲ್ಲಿಯ ಮುಖ್ಯ ಅರ್ಥಿಕ ಜೀವಾಳ. ಕಾಡು ಕಡಿದು ಸುಟ್ಟು ಬರಿದಾದ ನೆಲದಲ್ಲಿ ಬೆಳೆ ತೆಗೆಯುವ ಅತ್ಯಂತ ಹಿಂದುಳಿದ `ಜೂಮ್ ಬೇಸಾಯ ಪದ್ದತಿ ಸಾಮಾನ್ಯ. ವೈಜ್ಞಾನಿಕವಾದ ಆಧುನಿಕ ಕೃಷಿ ಪದ್ದತಿಗಳನ್ನು ಜಾರಿಗೆ ತರಲು ಸರ್ಕಾರ ಯತ್ನಿಸುತ್ತಿದೆ, ಬತ್ತ ಪ್ರಮುಖ ಆಹಾರಧಾನ್ಯ. ಮುಸುಕಿನ ಜೋಳ ಶುಂಠಿ ಬೆಳೆಯುತ್ತಾರೆ. ಬೆಟ್ಟಗಳ ಇಳಿಜಾರುಗಳಲ್ಲಿ ಮೆಟ್ಟಲು ಮೆಟ್ಟಲಾಗಿ ನೆಲವನ್ನು ಕಡಿದು ಈ ಬೆಳೆಗಳನ್ನು ಬೆಳೆಯಲಾಗುತ್ತದೆ. ರಬ್ಬರ್, ಕಾಫಿ, ಚಹಾ ಮುಂತಾದ ತೋಟದ ಬೆಳೆಗಳನ್ನು ಬೆಳೆಯಲು ಪ್ರಯತ್ನಗಳು ನಡೆದಿದೆ. ಮೀಜೊರಮ್‍ನಲ್ಲಿ ದೊಡ್ಡ ಕೈಗಾರಿಕೆಗಳು ಇಲ್ಲ. ಕೈಮಗ್ಗ ಮತ್ತು ಕರಕುಶಲ ಕೈಗಾರಿಕೆಗಳಿವೆ. ರೇಷ್ಮೆ ಉದ್ಯಮವೂ ಹಳೆಯದು. ಶುಂಠಿರಸ ತೆಗೆಯುವುದು. ಎಣ್ಣೆ ಉತ್ಪಾದನೆ, ಫಲಸಾರ ಮುದ್ರಣ ಮರಕೊಯ್ಯುವುದು. ಇಟ್ಟಿಗೆ, ಸಾಬೂನು ತಯಾರಿಕೆ ಮುಂತಾದ ಸಣ್ಣ ಕೈಗಾರಿಕೆಗಳಿವೆ. ಆಡಳಿತ ಮೀಜೊರಮ್ ರಾಜ್ಯದ ಜಿಲ್ಲೆಗಳು ಐಜಾವ್ಲಾ ಲುಂಗ್ಲೈ ಮತ್ತು ಛಿಮ್ಟುಟಿಪುಯಿ. ಐಜಾವ್ಲಾ ರಾಜಧಾನಿ. ರಾಜ್ಯದಲ್ಲಿ ಒಟ್ಟು ಎಂಟು ಪಟ್ಟಣಗಳಿವೆ. ಐಜಾವ್ಲಾ ಜಿಲ್ಲೆಯ ವಿಸ್ತೀರ್ಣ 12,589 ಚ.ಕಿಮೀ. ಜನಸಂಖ್ಯೆ 3,40,826 (1981). ಮುಖ್ಯ ಪಟ್ಟಣ ಐಝ್ವಾಲ್.. ಲುಂಗ್ಲೈ ಜಿಲ್ಲೆ 4,536 ಚಕಿಮೀ ವಿಸ್ತಾರವಾಗಿದೆ. ಇದರ ಜನಸಂಖ್ಯೆ 86,511 (1981). ಜಿಲ್ಲೆಯ ಆಡಳಿತ ಕೇಂದ್ರ ಲುಂಗ್ಲೈ. ಛಿಮ್ಟುಟಿಪುಯಿ ಜಿಲ್ಲೆಯ ವಿಸ್ತೀರ್ಣ 3,957 ಚಕಿಮೀ ಜನಸಂಖ್ಯೆ 66,420 (1981). ಆಡಳಿತ ಕೇಂದ್ರ ಛಿಮ್ಟುಟಿಪುಯಿ. ಮೀಜೊರಮ್‍ನ ಭಾಷೆಗಳು ಮೀಜೊ ಮತ್ತು ಇಂಗ್ಲಿಷ್. ಇಲ್ಲಿ ಶೇಕಡಾ 60ರಷ್ಟು ಮಂದಿ ಅಕ್ಷರಸ್ಥರು. ಇತಿಹಾಸ ಮೀಜೊ ಜನಗಳು ಮಂಗೋಲಿಯನ್ ಬುಡಕಟ್ಟಿಗೆ ಸೇರಿದವರು. ಇಲ್ಲಿಗೆ ಬರುವ ಮೊದಲು ಇವರು ಬರ್ಮದ ಷಾನ್ ರಾಜ್ಯದ ಪ್ರದೇಶದಲ್ಲಿ ನೆಲಸಿದ್ದರು. ಬರ್ಮವನ್ನು ಬಿಟ್ಟು ಇವರು ಪಶ್ಚಿಮಾಭಿಮುಖವಾಗಿ ಸಾಗಿ ಲುಷಾಯಿ ಬೆಟ್ಟಗಾಡು ಪ್ರದೇಶವನ್ನು ಆಕ್ರಮಿಸಿಕೊಂಡರು. ಬ್ರಿಟಿಷ್ ಅಡಳಿತ ಇದ್ದಕಾಲದಲ್ಲಿ ಮೀಜೊ ಜನರು ಬ್ರಿಟಿಷ್ ಅಕ್ರಮಿತ ಪ್ರದೇಶಗಳ ಮೇಲೆ ಪದೇ ಪದೇ ಧಾಳಿ ಮಾಡುತ್ತಿದ್ದರು. ಬ್ರಿಟಿಷ್ ಸೇನಾ ನೆಲೆಗಳ ಮೇಲೂ ಏರಿಬರುತ್ತಿದ್ದರು. ಬ್ರಿಟಷ್ ಸೇನೆ ಮೀಜೋಗಳ ಮೇಲೆ ಯುದ್ದ ಮಾಡಿ ಅವರ ನೆಲವನ್ನು ವಶಪಡಿಸಿಕೊಂಡು 1891ರಲ್ಲಿ ಅದನ್ನು ಬ್ರಿಟಿಷ್ ಭಾರತಕ್ಕೆ ಸೇರಿಸಿತು. 1898ರಲ್ಲಿ ಇಡೀ ಮೀಜೋ ಪ್ರದೇಶವನ್ನು ಒಂದು ಜಿಲ್ಲೆಯಾಗಿ ರೂಪಿಸಿ ಮೀಜೊ ಬೆಟ್ಟ ಜಿಲ್ಲೆ ಎಂದು ಕರೆಯಲಾಯಿತು. ಹಾಗೂ ಅಸ್ಸಾಮ್ ಪ್ರಾಂತ್ಯಕ್ಕೆ ಇದನ್ನು ಸೇರಿಸಲಾಯಿತು. ಹೀಗೆ ಮೀಜೊಗಳು ಬ್ರಿಟಿಷ್ ಆಡಳಿತಕ್ಕೆ ಒಳಪಟ್ಟಿದ್ದರೂ ಅವರ ಗ್ರಾಮಾಡಳಿತದಲ್ಲಿ ಬ್ರಿಟಿಷರು ಪ್ರವೇಶಿಸಲಿಲ್ಲ. ಮೀಜೋ ಗುಂಪುಗಳ ನಾಯಕರು ಹಿಂದಿನಿಂದ ಬಂದ ಪದ್ಧತಿಯಲ್ಲೇ ದಿನ ದಿನದ ಆಡಳಿತ ನಡೆಸುತ್ತಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಮೀಜೊರಮ್ ಅಸ್ಸಾಮ್ ರಾಜ್ಯದ ಒಂದು ಜಿಲ್ಲೆಯಾಗಿ ಮುಂದುವರಿಯಿತು. 1964ರಲ್ಲಿ ಸಂಸತ್ತು ಸ್ವೀಕರಿಸಿದ ಒಂದು ಅಧಿನಿಯವಂದ ಪ್ರಕಾರ ಇದರ ಹೆಸರನ್ನು ಲುಷಾಯಿ ಬೆಟ್ಟ ಜಿಲ್ಲೆ ಎಂಬುದರಿಂದ ಮೀಜೊ ಬೆಟ್ಟ ಜಿಲ್ಲೆ ಎಂದು ಬದಲಾಯಿಸಲಾಯಿತು. ಭಾರತ ಸರ್ಕಾರದ ಅಡಿಯಲ್ಲಿ ತಮ್ಮ ಪುರೋಭಿವೃದ್ಧಿ ಆಗುತ್ತಿಲ್ಲವೆಂಬ ಭಾವನೆಯಿಂದ ಅನೇಕ ಮೀಜೊಗಳು ಸ್ವಾತಂತ್ರ್ಯಕ್ಕಾಗಿ ಸಶಸ್ತ್ರ ಹೋರಾಟ ನಡೆಸತೊಡಗಿದ್ದರು. ಇವರಿಗೆ ಅನ್ಯ ದೇಶಗಳ ಬೆಂಬಲ ಪ್ರೋತ್ಸಾಹಗಳು ದೊರಕುತ್ತಿದ್ದುವು. ದಂಗೆಕೋರರನ್ನಡಗಿಸಲು ಸರ್ಕಾರ ಸೈನಿಕ ಕಾರ್ಯಾಚರಣೆ ನಡೆಸಬೇಕಾಯಿತು. ಸರ್ಕಾರ ಇದನ್ನು ಗಲಭೆಗೊಳಗಾದ ಪ್ರದೇಶವೆಂದು ಸಾರಿತು. ಮೀಜೊರಮ್‍ನಲ್ಲಿ ಶಾಂತಿ ಸ್ಥಾಪಿಸಲು ನಡಸಿದ ಯತ್ನಗಳು ಯಶಸ್ವಿಯಾಗಲಿಲ್ಲ. 1972ರಲ್ಲಿ ಇದಕ್ಕೆ ಮೀಜೊರಮ್ ಎಂದು ಹೆಸರು ನೀಡಿ ಕೇಂದ್ರ ಶಾಸಿತ ಪ್ರದೇಶವಾಗಿ ಮಾಡಿ ಅಸ್ಸಾಮಿನಿಂದ ಪ್ರತ್ಯೇಕಗೊಳಿಸಿದರು, ಅದರಿಂದಲೂ ದಂಗೆಕೋರರಿಗೆ ತೃಪ್ತಿಯಾಗಲಿಲ್ಲ. 1986ರ ಜೂನ್ 30ರಂದು ಭಾರತ ಸರ್ಕಾರಕ್ಕೂ ಮೀಜೊ ರಾಷ್ಟ್ರೀಯ ರಂಗಕ್ಕೂ ಶಾಂತಿ ಒಡಂಬಡಿಕೆಯಾಯಿತು. ಎರಡು ದಶಕಗಳಿಗೂ ಹೆಚ್ಚು ಕಾಲದ ಹೋರಾಟ ಕೊನೆಗೊಂಡಿತು. ಮೀಜೊ ಈಗ ಭಾರತದ ಒಂದು ರಾಜ್ಯವಾಗಿದೆ. ಮೀಜೊಗಳಲ್ಲಿ ಲುಷಾಯಿ, ಪಾವಿ, ಸೈಥೆ, ರಾಲ್ಟೆ. ಪಾಂಗ್ ಹ್ಮಾರ್. ಕುಕಿ. ಮರಾ ಲಾಖೆರ್ ಮುಂತಾದ ಅನೇಕ ಬುಡಕಟ್ಟುಗಳಿವೆ. 19ನೆಯ ಶತಮಾನದಲ್ಲಿ ಕ್ರೈಸ್ತ ಮಿಷನರಿಗಳ ಪ್ರಭಾವಕ್ಕೆ ಒಳಪಟ್ಟು ಅನೇಕರು ಕ್ರೈಸ್ತರಾಗಿ ಮತಾಂತರಗೊಂಡಿದ್ದಾರೆ. ಮೀಜೊ ಭಾಷೆಗೆ ಅದರದೇ ಲಿಪಿ ಇರಲಿಲ್ಲ. ಪಾದ್ರಿಗಳು ರೋಮನ್ ಲಿಪಿಯನ್ನು ಬಳಕೆಗೆ ತಂದರಲ್ಲದೆ ಅಲ್ಲಿಯ ಜನಕ್ಕೆ ಇಂಗ್ಲಿಷ್ ಬೋಧಿಸತೊಡಗಿದರು. ಇದರ ಫಲವಾಗಿ ಅಲ್ಲಿ ಅಕ್ಷರಸ್ಥರ ಪ್ರಮಾಣ ಹೆಚ್ಚಿತು. ಇಂದು ಅಲ್ಲಿ ಕ್ರೈಸ್ತರು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಅವರು ಇಂಗ್ಲಿಷ್ ಮೀಜೊ ಎರಡೂ ಭಾಷೆಗಳನ್ನಾಡುತ್ತಾರೆ. ಗಡಿ ಪ್ರದೇಶದಲ್ಲಿರುವ ಚಕ್ಮಾ ಮುಂತಾದ ಬುಡಕಟ್ಟುಗಳ ಜನರು ಬೌದ್ಧರು. ಅವರ ಭಾಷೆ ಬಂಗಾಲಿ. ರಾಜಕೀಯ ಮತ್ತು ಸರ್ಕಾರ ಮಿಜೋರಾಮ್ ಶಾಸನಸಭೆಯ ಮೊದಲ ಚುನಾವಣೆ 16 ಫೆಬ್ರವರಿ 1987 ರಂದು ನಡೆಯಿತು. [26] ಇಂದಿನಿಂದಲೂ ಚುನಾವಣೆಗಳು 5 ವರ್ಷಗಳಲ್ಲಿ ನಡೆಯುತ್ತವೆ. ಇತ್ತೀಚಿನ ಮಿಜೋರಾಂ ಚುನಾವಣೆಯು 28 ನವೆಂಬರ್ 2018 ರಂದು ಶಾಸನ ಸಭೆಯ 40 ಸ್ಥಾನಗಳಿಗೆ ನಡೆಯಿತು. ಮತದಾರರ ಮತದಾನವು 80% ಆಗಿತ್ತು. ಝೊರಾಮ್ತಂಗ ನೇತೃತ್ವದಲ್ಲಿ ಮಿಜೊ ನ್ಯಾಶನಲ್ ಫ್ರಂಟ್ ಅಧಿಕಾರಕ್ಕೆ ಆಯ್ಕೆಯಾದರು. [70] ಶ್ರೀ ಕುಮ್ಮಮಾನಂ ರಾಜಶೇಖರನ್ ಅವರು ಮಿಜೋರಾಮ್ನ ಪ್ರಸ್ತುತ ರಾಜ್ಯಪಾಲರಾಗಿದ್ದಾರೆ. ೨೦೧೩ರ ವಿಧಾನ ಸಭಾ ಚುನಾವಣಾ ಫಲಿತಾಂಶ ಪು ಲಾಲ್ ತನ್ಹವಾಲ ಅರು ನಾಲ್ಕನೇಬಾರಿ ಮುಖ್ಯಮಂತ್ರಿಯಾಗಿ ದಿ.೧೨-೧೨-೨೦೧೩ ರಂದು ಪ್ರಮಾಣವಚನ ಸ್ವೀಕರಿಸಿದರು. ದಿ.೮-೧೨-೨೦೧೩ ರಂದು ಎಣಿಕೆ. ಆವರಣದಲ್ಲಿರುವ ಸಂಖ್ಯೆ ೨೦೦೮ ರ ಫಲಿತಾಂಶ ೨೦೧೮ರ ಚುನಾವಣೆ ಫಲಿತಾಂಶ ಮುಖ್ಯಮಂತ್ರಿ (ಭಾರತ) ಜೋರಂಥಂಗ:ಅವರು ಐಜಾಲ್ ಈಸ್ಟ್-ಐ ಕ್ಷೇತ್ರದ 2018 ರ ಚುನಾವಣೆಯಲ್ಲಿ ಶಾಸಕಸಭೆ ಸದಸ್ಯರಾಗಿ ಪುನಃ ಚುನಾಯಿಸಲ್ಪಟ್ಟರು ಮತ್ತು ಮಿಝೋರಾಮ್‍ನ ಮುಖ್ಯಮಂತ್ರಿಯಾದರು (15 ಡಿಸೆಂಬರ್ 2018 ರಿಂದ). ಮಿಜೋರಾ ರಾಷ್ಟ್ರೀಯ ಮುಂಭಾಗ (ಎಂಎನ್ಎಫ್) ಅಧ್ಯಕ್ಷ ಜೋರಂಥಂಗ ಶನಿವಾರ ಮಿಜೋರಾಮ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.(15th December 2018) ನೋಡಿ ಭಾರತದ ಸಾರ್ವತ್ರಿಕ ಚುನಾವಣೆ, ೨೦೦೯ ೨೦೧೩ ರ ಭಾರತದ ಸಾರ್ವತ್ರಿಕ ಚುನಾವಣಾ ಫಲಿತಾಂಶ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
2108
https://kn.wikipedia.org/wiki/%E0%B2%AE%E0%B3%87%E0%B2%98%E0%B2%BE%E0%B2%B2%E0%B2%AF
ಮೇಘಾಲಯ
ಮೇಘಾಲಯ (ಉಚ್ಚಾರಣೆ ) ಈಶಾನ್ಯ ಭಾರತದಲ್ಲಿರುವ ಒಂದು ಸಣ್ಣ ರಾಜ್ಯ. ಶಾಸ್ತ್ರೀಯವಾಗಿ, "ಮೇಘಾಲಯ " ಎಂಬ ಶಬ್ದವು, ಸಂಸ್ಕೃತ ಮತ್ತು ಇತರೆ ಭಾರತೀಯ ಭಾಷೆಗಳಲ್ಲಿ "ಮೋಡಗಳ ನಿವಾಸ " ಎಂದರ್ಥ. ಮೇಘಾಲಯವು ದೇಶದ ಈಶಾನ್ಯಭಾಗದಲ್ಲಿರುವ ಬೆಟ್ಟ-ಗುಡ್ಡಗಳುಳ್ಳ ಪಟ್ಟೆಯಿದ್ದಂತಿದೆ. ಪೂರ್ವದಿಂದ ಪಶ್ಚಿಮಕ್ಕೆ 300 ಕಿಲೋಮೀಟರ್‌ ಹಾಗೂ 100 ಕಿಲೋಮೀಟರ್‌ ಅಗಲಕ್ಕೆ ವ್ಯಾಪಿಸಿದೆ. ಇದರ ಒಟ್ಟು ವಿಸ್ತೀರ್ಣ 8,700 ಚದರ ಮೈಲ್‌ಗಳು (22,720 ಚದರ ಕಿಲೋಮೀಟರ್‌ಗಳು). ಇಸವಿ 2000ದಲ್ಲಿ ಜನಸಂಖ್ಯೆಯು 2,175,000ದಷ್ಟಿತ್ತು. ರಾಜ್ಯದ ಉತ್ತರ ಭಾಗದಲ್ಲಿ ಆಸ್ಸಾಂ‌ ರಾಜ್ಯ ಹಾಗೂ ದಕ್ಷಿಣ ಭಾಗದಲ್ಲಿ ಬಾಂಗ್ಲಾ ದೇಶವಿದೆ. ಪೂರ್ವದ ಸ್ಕಾಟ್ಲೆಂಡ್‌ ಎಂದು ಕರೆಯಲಾದ ಶಿಲ್ಲಾಂಗ್‌, ಮೇಘಾಲಯದ ರಾಜಧಾನಿ. ಈ ನಗರದ ಜನಸಂಖ್ಯೆ 260,000ದಷ್ಟಿದೆ.ರಾಜ್ಯದ ಮೂರನೆಯ ಒಂದು ಭಾಗವು ಕಾಡುಪ್ರದೇಶವಾಗಿದೆ. ಮೇಘಾಲಯದ ಉಪ-ಉಷ್ಣ ಅರಣ್ಯಗಳ ಪರಿಸರ ವಲಯವು ರಾಜ್ಯಾದ್ಯಂತ ವ್ಯಾಪಿಸಿದೆ. ಇದರ ಬೆಟ್ಟ-ಗುಡ್ಡ ಕಾಡುಗಳು, ಉತ್ತರ ಹಾಗೂ ದಕ್ಷಿಣದಲ್ಲಿರುವ ತಗ್ಗುಪ್ರದೇಶ ಉಷ್ಣವಲಯ ಕಾಡುಗಳಿಗಿಂತಲೂ ಭಿನ್ನವಾಗಿವೆ. ಮೇಘಾಲಯದ ಕಾಡುಗಳು ಸಸ್ತನಿ ಹಾಗೂ ಪಕ್ಷಿವರ್ಗ, ಪ್ರಾಣಿಗಳ ಹಾಗೂ ಸಸ್ಯಗಳ ಜೀವವೈವಿಧ್ಯಕ್ಕೆ ಖ್ಯಾತಿಯಾಗಿದೆ. ಇತಿಹಾಸ ಆಸ್ಸಾಂ‌ ರಾಜ್ಯದ ಮೂರು ಜಿಲ್ಲೆಗಳಾದ ಏಕೀಕೃತ ಖಾಸಿ ಹಿಲ್ಸ್‌, ಜೈನ್ ತಿಯಾಗಳ ಹಿಲ್ಸ್‌ ಹಾಗೂ ಗಾರೊ ಹಿಲ್ಸ್‌ ಜಿಲ್ಲೆಗಳನ್ನು ಜನವರಿ 1972ರಲ್ಲಿ ಬೇರ್ಪಡಿಸುವುದರ ಮೂಲಕ ಮೇಘಾಲಯ ರಾಜ್ಯವನ್ನು ಸ್ಥಾಪಿಸಲಾಯಿತು. ಪೂರ್ಣಪ್ರಮಾಣದ ರಾಜ್ಯವಾಗುವ ಮುಂಚೆ, ಮೇಘಾಲಯಕ್ಕೆ 1970ರಲ್ಲಿ ಅರೆ-ಸ್ವಾಧಿಕಾರದ ಸ್ಥಿತಿ ನೀಡಲಾಗಿತ್ತು.ಖಾಸಿ, ಗಾರೊ ಮತ್ತು ಜೈನ್ ತಿಯಾಗಳು ಬುಟಕಟ್ಟು ಜನಾಂಗಗಳು ತಮ್ಮದೇ ಆದ ಸಾಮ್ರಾಜ್ಯಗಳನ್ನು ಹೊಂದಿದ್ದವು. ಹತ್ತೊಂಬತ್ತನೆಯ ಶತಮಾನದಲ್ಲಿ ಅವು ಬ್ರಿಟಿಷ್‌ ಆಳ್ವಿಕೆಗೆ ಒಳಗಾದವು. ಆನಂತರ, ಬ್ರಿಟಿಷ್‌ ಆಡಳಿತವು 1835ರಲ್ಲಿ ಮೇಘಾಲಯವನ್ನು ಆಸ್ಸಾಂ‌ನೊಂದಿಗೆ ಏಕೀಕರಣಗೊಳಿಸಿತು. ಬ್ರಿಟಿಷ್‌ ಸಾಮ್ರಾಜ್ಯದೊಂದಿಗೆ ಒಪ್ಪಂದದ ಫಲವಾಗಿ, ಈ ವಲಯ ತನ್ನ ಅರೆ-ಸ್ವಾಧಿಕಾರ ಸ್ಥಿತಿಯ ಅನುಕೂಲ ಪಡೆದಿತ್ತು.ಕಳೆದ 16 ಅಕ್ಟೋಬರ್‌ 1905ರಂದು ಲಾರ್ಡ್‌ ಕರ್ಜನ್‌ ಬಂಗಾಳವನ್ನು ಇಬ್ಭಾಗಿಸಿದಾಗ, ಮೇಘಾಲಯವು, 'ಪೂರ್ವ ಬಂಗಾಳ ಹಾಗೂ ಆಸ್ಸಾಂ‌' ಹೊಸ ಪ್ರಾಂತ್ಯದ ಅಂಶವಾಯಿತು. ಆದರೂ, 1912ರಲ್ಲಿ ಬಂಗಾಳವನ್ನು ಪುನಃ ಏಕೀಕರಣರಣಗೊಳಿಸಿದಾಗ, ಮೇಘಾಲಯ ಆಸ್ಸಾಂ‌ ಪ್ರಾಂತ್ಯದ ಅಂಗವಾಯಿತು.ಭಾರತ ಸರ್ಕಾರ ಕಾಯಿದೆ 1919ರ ವಿಧಿ 52Aರಂತೆ, 3 ಜನವರಿ 1921ರಂದು ಪರಿಷತ್ತಿನಲ್ಲಿರುವ ರಾಜ್ಯಪಾಲರು ಖಾಸಿ ರಾಜ್ಯಗಳನ್ನು(ಗುಡ್ಡಗಾಡು ಜನಾಂಗವಿರುವ ಬೆಟ್ಟಪ್ರದೇಶಗಳ) ಹೊರತುಪಡಿಸಿ, ಮೇಘಾಲಯದ ಉಳಿದೆಲ್ಲ ವಲಯಗಳನ್ನು 'ಹಿಂದುಳಿದ ಪ್ರದೇಶಗಳು' ಎಂದು ಘೋಷಿಸಿದರು. ಆದರೂ, ಅಂತಿಮವಾಗಿ, 1935ರಲ್ಲಿ ಜಾರಿಗೊಳಿಸಲಾದ ಭಾರತ ಸರ್ಕಾರ ಕಾಯಿದೆಯಡಿ, ಸರ್ಕಾರವು, ಹಿಂದುಳಿದ ಪ್ರದೇಶಗಳನ್ನು 'ಹೊರತುಪಡಿಸಿದ' ಹಾಗೂ 'ಭಾಗಶಃ ಹೊರತುಪಡಿಸಿದ' ಪ್ರದೇಶಗಳನ್ನಾಗಿ ಮರುವಿಂಗಡಿಸಿತು.ಇಸವಿ 1947ರಲ್ಲಿ ಭಾರತ ಸ್ವತಂತ್ರಗೊಂಡಾಗ, ಇಂದಿನ ಮೇಘಾಲಯದಲ್ಲಿ, ಆಸ್ಸಾಂ‌ನ ಎರಡು ಜಿಲ್ಲೆಗಳಿದ್ದು, ಅಸೊಮ್‌ ರಾಜ್ಯದೊಳಗೇ ಸೀಮಿತ ಸ್ವಾಯತ್ತತೆ ಪಡೆದಿದ್ದವು.ಆಸೊಮ್‌ ಪುನಸ್ಸಂಘಟನಾ ಕಾಯಿದೆ 1969ರಡಿ, ಮೇಘಾಲಯ ರಾಜ್ಯಕ್ಕೆ ಸ್ವಯಮಾಧಿಕಾರ ನೀಡಲಾಯಿತು. ಈ ಕಾಯಿದೆಯು 2 ಏಪ್ರಿಲ್‌ 1970ರಂದು ಜಾರಿಗೆ ಬಂದಿತು. ಆಸ್ಸಾಂ‌ ರಾಜ್ಯದೊಳಗೇ ಮೇಘಾಲಯ ಸ್ವತಂತ್ರ ರಾಜ್ಯವನ್ನಾಗಿ ಸ್ಥಾಪಿಸಲಾಯಿತು. ಸಂವಿಧಾನದ ಆರನೆಯ ಕಲಮ್‌ ಪ್ರಕಾರ ಈ ರಾಜ್ಯವು ಶಾಸನ ಅಧಿಕಾರ ಹೊಂದಿತ್ತು. ಶಾಸನದಲ್ಲಿ 37 ಸದಸ್ಯರಿದ್ದರು.ಈಶಾನ್ಯ ವಲಯದ (ಪುನಸ್ಸಂಘಟನೆ) ಕಾಯಿದೆ 1971ನ್ನು 1971ರಲ್ಲಿ ಸಂಸತ್ತಿನಲ್ಲಿ ಮಂಜೂರು ಮಾಡಲಾಯಿತು. ಇದರಂತೆ ಸ್ವಾಯತ್ತ ರಾಜ್ಯ ಮೇಘಾಲಯಕ್ಕೆ ಪೂರ್ಣಪ್ರಮಾಣದ ಸ್ವತಂತ್ರ ಲಭಿಸಿತು. ದಿನಾಂಕ 21 ಜನವರಿ 1972ರಂದು ಮೇಘಾಲಯ ರಾಜ್ಯತ್ವ ಪಡೆಯಿತು. ತನ್ನದೇ ಆದ ಶಾಸಕಾಂಗವನ್ನೂ ಹೊಂದಿತು. ಜನಸಂಖ್ಯಾಶಾಸ್ತ್ರ ಮೇಘಾಲಯದ ಜನಸಂಖ್ಯೆಯಲ್ಲಿ ಬುಡಕಟ್ಟು ಜನಾಂಗದವರದ್ದೇ ಬಹುಪಾಲು ಆಗಿದೆ. ಅದರಲ್ಲೂ ಖಾಸಿ ಜನಸಮೂಹ ಅತಿದೊಡ್ಡ ಗುಂಪಾಗಿದೆ; ನಂತರ ಗಾರೊಸಮುದಾಯ. ಬ್ರಿಟಿಷರು ಬೆಟ್ಟ-ಗುಡ್ಡದ ಜನಾಂಗದವರು ಎಂದು ಕರೆಯಲಾಗುತ್ತಿದ್ದ ಗುಂಪುಗಳಲ್ಲಿ ಇವೂ ಸಹ ಸೇರಿವೆ. ಜೈನ್ ತಿಯಾರು, ಕೊಚ್‌, ಹಜೋಂಗ್‌, ದಿಮಾಸಾ, ಹ್ಮಾರ್‌, ಕುಕಿ, ಲಖರ್‌, ಮಿಕಿರ್‌, ರಭಾ ಮತ್ತು ನೇಪಾಳಿ ಸೇರಿದಂತೆ ಇತರೆ ಬುಡಕಟ್ಟು ಗುಂಪುಗಳೂ ಸಹ ಮೇಘಾಲಯದಲ್ಲಿ ವಾಸಿಸುತ್ತವೆ. ಭಾರತದಲ್ಲಿ ಕ್ರಿಶ್ಚಿಯನ್‌ ಜನಸಂಖ್ಯೆ ಅಧಿಕ ಇರುವ ಮೂರು ರಾಜ್ಯಗಳಲ್ಲಿ ಮೇಘಾಲಯವವೂ ಒಂದು. ಇಲ್ಲಿನ ಜನಸಂಖ್ಯೆಯ 70.3%ರಷ್ಟು ಕ್ರಿಶ್ಚಿಯನ್‌ ಧರ್ಮದವರಾಗಿದ್ದಾರೆ. ಇತರೆ ಎರಡು ರಾಜ್ಯಗಳೆಂದರೆ ನಾಗಾಲೆಂಡ್‌ ಮತ್ತು ಮಿಜೊರಾಮ್‌. ಇವರಡೂ ರಾಜ್ಯಗಳು ಭಾರತದ ಈಶಾನ್ಯ ಭಾಗದಲ್ಲಿವೆ. ಈ ವಲಯದಲ್ಲಿ ಹಿಂದೂ ಧರ್ಮದವರು ಎರಡನೆಯ ಅತಿಹೆಚ್ಚು ಸಂಖ್ಯೆಯಲ್ಲಿದ್ದಾರೆ. ಜನಸಂಖ್ಯೆಯಲ್ಲಿ ಸುಮಾರು 13.3%ರಷ್ಟು ಹಿಂದೂ ಧರ್ಮದವರಾಗಿದ್ದಾರೆ. ಗಮನಾರ್ಹ ಅಲ್ಪಸಂಖ್ಯಾತ, ಎಂದರೆ ಜನಸಂಖ್ಯೆಯ 11.5%ರಷ್ಟು ಸಾಂಪ್ರದಾಯಿಕ ಅನಿಮಿಸ್ಟ್‌ ಧಾರ್ಮಿಕತೆಯನ್ನು ಅನುಸರಿಸುತ್ತವೆ. (ಜನಗಣತಿ ಪ್ರಕಾರ 'ಇತರೆ' ಎಂದು ವಿಂಗಡಿಸಲಾಗಿದೆ. ಜನಸಂಖ್ಯೆಯಲ್ಲಿ 4.3%ರಷ್ಟು ಮುಸ್ಲಿಮರಿದ್ದಾರೆ. ಇಸವಿ 1991ರಲ್ಲಿ ಮೇಘಾಲಯ ರಾಜ್ಯ ಜನಸಂಖ್ಯೆಯಲ್ಲಿ 65%ರಷ್ಟು ಕ್ರಿಶ್ಚಿಯನ್ನರಿದ್ದಾಗ, 1.1 ದಶಲಕ್ಷ (11 ಲಕ್ಷ) ಜನ ಕ್ರಿಶ್ಚಿಯನ್‌ರು, ಈಶಾನ್ಯ ಭಾರತದ ಈ ರಾಜ್ಯವನ್ನು ಅತಿ ಹೆಚ್ಚು ಕ್ರಿಶ್ಚಿಯನ್ನರು ವಾಸಿಸುವ ವಲಯವನ್ನಾಗಿಸಿದರು. ಆ ಸಮಯದಲ್ಲಿ, ಮಿಜೊರಾಮ್‌ಗಿಂತಲೂ ಮೇಘಾಲಯದಲ್ಲಿ ಹೆಚ್ಚು ಕ್ರಿಶ್ಚಿಯನ್ನರಿದ್ದರು ಇಸವಿ 2001ರಲ್ಲಿ ಭಾರತದ ಜನಗಣತಿಯ ಪ್ರಕಾರ, ರಾಜ್ಯದಲ್ಲಿ ಪ್ರತಿ 1000 ಪುರುಷರಿಗೆ 975 ಸ್ತ್ರೀಯರಿದ್ದು, ರಾಷ್ಟ್ರೀಯ ಸರಾಸರಿ 933ಕ್ಕಿಂತಲೂ ಬಹಳ ಹೆಚ್ಚಾಗಿತ್ತು. ಅದು ಇಸವಿ 1981ರಲ್ಲಿ 954 ಇದ್ದದ್ದು, ನಿಧಾನವಾಗಿ ಬೆಳೆಯುತ್ತಿದೆ. ಸಾಂಪ್ರದಾಯಿಕವಾಗಿ, ಗ್ರಾಮಾಂತರ ಪ್ರಧೇಶಗಳಲ್ಲಿ ಲಿಂಗ ಅನುಪಾತವು ನಗರ ವಲಯಕ್ಕಿಂತಲೂ ಹೆಚ್ಚಾಗಿದೆ. ಆದರೂ, 2001ರ ಜನಗಣತಿ ಪ್ರಕಾರ, ನಗರವಲಯದಲ್ಲಿ ಪ್ರಮಾಣವು 985 ಇದ್ದದ್ದು, ಸಾಮಾನ್ಯ ಅಂತರಕಿಂತಲೂ 972ರಷ್ಟು ಹೆಚ್ಚಾಗಿರುತ್ತದೆ. ಇದರ ಹಿಂದಿನ ಕಾರಣ, ಭಾರತದ ಇತರೆಡೆಗಿಂತಲೂ ಭಿನ್ನವಾಗಿ, ಮೇಘಾಲಯದಲ್ಲಿ ಗಂಡುಮಕ್ಕಳಿಗಾಗಿ ವಿಶೇಷ ಆದ್ಯತೆ ಇಲ್ಲದಿರುವುದು ಎಂದು ಹೇಳಲಾಗಿದೆ. ಭಾಷೆಗಳು ಇಂಗ್ಲಿಷ್ ರಾಜ್ಯದ ಅಧಿಕೃತ ಭಾಷೆಯಾಗಿದ್ದು, ಖಾಸಿ ಮತ್ತು ಗಾರೊ ಮೇಘಾಲಯದಲ್ಲಿನ ಪ್ರಮುಖ ಭಾಷೆಗಳಾಗಿವೆ. ಖಾಸಿ ಭಾಷೆ ಮೇಘಾಲಯದ ಪ್ರಮುಖ ಭಾಷೆಗಳಲ್ಲೊಂದು. Khasia, Khassee, Cossyah ಅಥವಾ Kyi ಎಂದೂ ಅಕ್ಷರಶಃ ಬರೆಯಲಾದ ಖಾಸಿ ಭಾಷೆಯು ಆಸ್ಟ್ರೊ-ಏಷ್ಯಾಟಿಕ್‌ ಗುಂಪಿನ ಮೊನ್‌-ಖ್ಮೆರ್‌ ಕುಟುಂಬದ ಒಂದು ಅಂಗ. ಮೇಘಾಲಯದಲ್ಲಿ ವಾಸಿಸುವ ಸುಮಾರು 900,000 ಜನರು ಈ ಭಾಷೆ ಮಾತನಾಡುತ್ತಾರೆ. ಖಾಸಿ ಭಾಷೆಯಲ್ಲಿ ಬಳಸಲಾದ ಹಲವು ಪದಗಳನ್ನು ಬಂಗಾಳಿ ಮತ್ತು ಅಸೊಮಿಸ್‌ನಂತಹ ಭಾರತೀಯ-ಆರ್ಯನ್‌ ಭಾಷೆಗಳಿಂದ ಎರವಲು ಪಡೆಯಲಾಗಿದೆಯೆನ್ನಲಾಗಿದೆ. ಖಾಸಿ ಭಾಷೆ ತನ್ನ ಆರಂಭಿಕ ದಿನಗಳಿಂದಲೂ ತನ್ನದೇ ಆದ ಅಕ್ಷರಲಿಪಿ ಹೊಂದಿರಲಿಲ್ಲ. ಮೊನ್‌-ಖ್ಮೆರ್‌ ಕುಟುಂಬದಲ್ಲಿ ಭಾರತದಲ್ಲಿ ಉಳಿದಿರುವ ಕೆಲವೇ ಭಾಷೆಗಳಲ್ಲಿ ಖಾಸಿ ಭಾಷೆ ಸಹ ಒಂದು.ಗಾರೊ ಭಾಷೆ ಬೊಡೊ ಭಾಷೆಯೊಂದಿಗೆ ನಿಕಟ ಸಂಬಂಧ ಹೊಂದಿದೆ. ಜನಸಂಖ್ಯೆಯಲ್ಲಿ ಬಹುಪಾಲು ಜನರು ಮಾತನಾಡುವ ಗಾರೊ ಭಾಷೆ, ಆ'ವೆ, ಚಿಸಾಕ್‌, ಆ'ಬೆಂಗ್‌, ಗಾಂಚಿಂಗ್‌, ಕಾಮರೂಪ್‌, ಆ'ಚಿಕ್‌, ಡಾಕಾ ಮತ್ತು ಮಾಟ್ಚಿಯಂತಹ ಹಲವಾರು ಭಾಷಾಪ್ರಬೇಧಗಳನ್ನು ಬಳಸಿ ಮಾತನಾಡಬಹುದಾಗಿದೆ.ಮೇಘಾಲಯದಲ್ಲಿ ಇನ್ನೊಂದು ಭಾಷೆ, ಜೈನ್ ತಿಯಾಗಳು ಹಿಲ್ಸ್‌ ಜನರು ಮಾತನಾಡುವ ಭಾಷೆಯಾಗಿದೆ. ಈ ಭಾಷೆಯು ಸಾಮಾನ್ಯ ಖಾಸಿ ಭಾಷೆಯ ಪರಿವರ್ತಿತ ರೂಪವಾಗಿದೆ. ಖಾಸಿ ಭಾಷೆಯೊಂದಿಗೆ ಜೈನ್ ತಿಯಾ ಭಾಷೆ ಸಹ ಖಿನ್ರಿಯಮ್‌, ಭೊಯಿ, ಪನಾರ್‌ ಮತ್ತು ವಾರ್‌ ಬುಡಕಟ್ಟು ಜನಾಂಗದವರಲ್ಲಿ ಬಳಕೆಯಾಗುತ್ತದೆ. ಸಂಸ್ಕೃತಿ ಮತ್ತು ಸಮಾಜ ಜೈನ್ ತಿಯಾಗಳು, ಖಾಸಿಗಳು ಹಾಗೂ ಗಾರೊಗಳು ಮೇಘಾಲಯದ ಪ್ರಮುಖ ಬುಡಕಟ್ಟು ಜನಾಂಗಗಳು. ಮೇಘಾಲಯದಲ್ಲಿರುವ ಬುಡಕಟ್ಟು ಜನಸಂಖ್ಯೆಯಲ್ಲಿ ಬಹಳಷ್ಟು ಜನರು(ಮಾತೃ ಪ್ರಧಾನ ಸಂಸ್ಕೃತಿ) ಮ್ಯಾಟ್ರಿಲೈನಿಯಲ್‌ ವ್ಯವಸ್ಥೆಯನ್ನು ಅನುಸರಿಸುತ್ತಾರೆ. ಇದರಂತೆ, ವಂಶ ಮತ್ತು ಅನುವಂಶೀಯತೆಗಳನ್ನು ಮಹಿಳೆಯರ ಮೂಲಕ ಗುರುತಿಸಲಾಗುತ್ತದೆ. ಖಾಸಿ ಮತ್ತು ಜೈನ್ ತಿಯಾ ಬುಡಕಟ್ಟು ಜನಾಂಗದವರು ಸಾಂಪ್ರದಾಯಿಕ ಮ್ಯಾಟ್ರಿಲೈನಿಯಲ್‌ ವ್ಯವಸ್ಥೆಯನ್ನು ಅನುಸರಿಸುತ್ತಾರೆ. ಇದರಲ್ಲಿ ಖಾ ಖದುಹ್‌ (ಅತಿ ಕಿರಿಯ ಮಗಳು) ಎಲ್ಲಾ ಸ್ವತ್ತಿನ ವಾರಸುದಾರಳಾಗುತ್ತಾಳೆ, ವೃದ್ಧಾಪ್ಯ ತಲುಪಿರುವ ಹೆತ್ತವರ ಮತ್ತು ವಿವಾಹವಾಗಿಲ್ಲದ ಸಹೋದರ-ಸಹೋದರಿಯರ ಪಾಲನೆ ಮಾಡುತ್ತಾಳೆ. ಆದರೂ, ವಂಶದಲ್ಲಿ ಪುರುಷರು, ಅದರಲ್ಲೂ ವಿಶೇಷವಾಗಿ ತಾಯಿಯ ಸಹೋದರ, ಪಿತ್ರಾರ್ಜಿತ ಆಸ್ತಿಯ ಮೇಲೆ ಪರೋಕ್ಷ ನಿಯಂತ್ರಣ ಮಾಡುತ್ತಾರೆ. ಏಕೆಂದರೆ, ಸ್ವತ್ತಿನ ಮಾರಾಟ ಹಾಗೂ ಇತರೆ ವಿಚಾರಗಳ ಕುರಿತು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಆತನೂ ಒಳಗೊಂಡಿರುತ್ತಾನೆ. ಆದ್ದರಿಂದ, ಮೇಘಾಲಯದ ಬುಡಕಟ್ಟು ಜನಾಂಗದವರು ವಿಶ್ವದಲ್ಲೇ ಅತಿದೊಡ್ಡ ಮ್ಯಾಟ್ರಿಲೈನಿಯಲ್‌ ಸಂಸ್ಕೃತಿಯ ಅಂಗವಾಗಿದ್ದಾರೆ. ಭಾರತದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ, ಮೇಘಾಲಯ ರಾಜ್ಯದಲ್ಲಿ ಹೆತ್ತವರು ಗಂಡು ಮಗುವಾಗಲೆಂದು ಆಶಿಸುವುದು ರಾಷ್ಟ್ರೀಯ ಸರಾಸರಿಗಿಂತಲೂ 73%ರಷ್ಟು ಕಡಿಮೆ. ಆಧ್ಯಾತ್ಮಿಕತೆ ಪುರಾತನ ಕಥೆಗಳ ಪ್ರಕಾರ, 13ನೆಯ ಶತಮಾನದಲ್ಲಿ, ರಾಣೀ ಸಿಂಗಾ ಅಳ್ವಿಕೆಯಲ್ಲಿ, 'ಹತಕೇಶ್ವರತ್‌' ಎನ್ನಲಾದ ಶಿವಲಿಂಗವು ಜೈನ್ ತಿಯಾಗಳು ಹಿಲ್ಸ್‌ನಲ್ಲಿದೆಯೆಂಬುದು ನಂಬಿಕೆ. ಜೈನ್ ತಿಯಾಗಳ ಬುಡಕಟ್ಟು ಜನಾಂಗವು ಕೆಲವೊಮ್ಮೆ ಶಿವರಾತ್ರಿ Night of Lord Shiva ) ಎಂಬ ಹಿಂದೂ ಹಬ್ಬಗಳಲ್ಲಿ ಭಾಗವಹಿಸುತ್ತಾರೆ.<ref>ಪಿ. 132 'ಎ ಟ್ರೈಬ್‌ ಇನ್‌ ಟ್ರಾನ್ಸಿಷನ್‌ ಲೇಖಕರು: ಹಿರಾ ಲಾಲ್‌ ದೇಬ್‌ ರಾಯ್‌</ref> ಪುರಾತನ ಮೇಘಾಲಯ ವಾಸಿಗಳು ಆನಿಮಿಸಮ್‌ ಹಾಗೂ ತಮ್ಮ ಪೂರ್ವಜ-ಪೂಜೆಯ ಅಧ್ಯಾತ್ಮಿಕ ನಂಬಿಕೆಗಳನ್ನು ಹಿಂದೂ ಧರ್ಮದೊಂದಿಗೆ ಸೇರಿಸಿದರು. ಗುಹೆಗಳಲ್ಲಿ ಶಿವ ಹಾಗೂ ದುರ್ಗಾ ವಿಗ್ರಹಗಳು ಕಾಣಸಿಗುತ್ತವೆ. ಭೂಗೋಳಶಾಸ್ತ್ರ ಮೇಘಾಲಯ ರಾಜ್ಯವನ್ನು 'ಮೇಘಾಲಯ ಪ್ರಸ್ಥಭೂಮಿ'ಯೆಂದೂ ಕರೆಯಲಾಗುತ್ತದೆ. ಇದರಲ್ಲಿ ಬಹುಪಾಲು ಆರ್ಷೇಯ ಕಲ್ಪದ ಶಿಲಾ ಬಂಡೆಗಳ ರೂಪಗಳಿವೆ. ಈ ಶಿಲಾ ರೂಪಗಳು ಇದ್ದಿಲು, ಸುಣ್ಣಕಲ್ಲು, ಯುರೆನಿಯಮ್‌ ಹಾಗೂ ಸಿಲಿಮನೈಟ್‌ನಂತಹ ಅಮೂಲ್ಯ ಖನಿಜಗಳ ಸಮೃದ್ಧ ನಿಕ್ಷೇಪಗಳನ್ನು ಹೊಂದಿರುತ್ತವೆ. ಮೇಘಾಲಯದಲ್ಲಿ ಹಲವು ನದಿಗಳಿವೆ. ಇವುಗಳಲ್ಲಿ ಹಲವು ಮಳೆಯನ್ನು ಆಧರಿಸಿರುವ ಕಾರಣ ಕಾಲಕ್ಕನುಗುಣವಾಗಿ ಕಾಣಿಸಿಕೊಳ್ಳುತ್ತವೆ. ಡೇರಿಂಗ್‌, ಸಾಂಡಾ, ಬಾಂದ್ರಾ, ಭೋಗೈ, ಡಾರೆಂಗ್‌, ಸಿಂಸಾಂಗ್‌, ನಿತೈ ಹಾಗೂ ಭೂಪೈ - ಇವು ಗಾರೊ ಹಿಲ್ಸ್‌ ವಲಯದಲ್ಲಿ ಪ್ರಮುಖ ನದಿಗಳು. ಉಮ್‌ಖ್ರಿ, ಉಮಿಯಮ್‌, ಕಿಂಚಿಯಾಂಗ್‌ (ಜಾಡುಕಾಟ), ಮಾವ್ಪಾ, ಉಮಿಯಿವ್‌ (ಅಥವಾ ಬಾರಾಪಾನಿ), ಮೈನ್ಗೋಟ್‌ ಹಾಗೂ ಮೈಂಟ್ಡು, ಪ್ರಸ್ಥಭೂಮಿಯ ಕೇಂದ್ರೀಯ ಮತ್ತು ಪೂರ್ವ ವಿಭಾಗದಲ್ಲಿ ಪ್ರಮುಖ ನದಿಗಳು. ದಕ್ಷಿಣ ಖಾಸಿ ಹಿಲ್ಸ್‌ ವಲಯದಲ್ಲಿ, ಈ ನದಿಗಳು ಆಳವಾದ ಕಂದರಗಳು ಮತ್ತು ಸುಂದರ ಜಲಪಾತಗಳನ್ನು ಸೃಷ್ಟಿಸಿವೆ.ಪ್ರಸ್ಥಭೂಮಿಯ ಉನ್ನತ ಶ್ರೇಣಿಯು 150ರಿಂದ 1961 ಮೀಟರ್‌ಗಳ ವರೆಗೂ ಇದೆ. ಖಾಸಿ ಹಿಲ್ಸ್‌ ಇರುವ ಪ್ರಸ್ಥಭೂಮಿಯ ಕೇಂದ್ರ ಭಾಗವು ಹೆಚ್ಚು ಎತ್ತರ ಹೊಂದಿದೆ. ನಂತರ,ಜೈನ್ ತಿಯಾ ಹಿಲ್ಸ್‌ ವಲಯವಿರುವ ಪೂರ್ವ ವಲಯವು ಎರಡನೆಯ ಅತಿ ದೊಡ್ಡ ಎತ್ತರವೆನಿಸಿದೆ. ಶಿಲಾಂಗ್‌ ಶಿಖರವು ಮೇಘಾಲಯದಲ್ಲಿರುವ ಅತ್ಯುನ್ನತ ಶಿಖರವಾಗಿದೆ. ಖಾಸಿ ಹಿಲ್ಸ್‌ನಲ್ಲಿರುವ ಅದು ಒಂದು ಪ್ರಮುಖ IAF ಕೇಂದ್ರಸ್ಥಾನವನ್ನೂ ಸಹ ಹೊಂದಿದೆ. ಇದು ಶಿಲಾಂಗ್‌ ನಗರಕ್ಕಿಂತಲೂ ಮೇಲ್ಮಟ್ಟದಲ್ಲಿದೆ. ಇದು 1961 ಮೀಟರ್‌ಗಳಷ್ಟು ಎತ್ತರವಿದೆ. ಪ್ರಸ್ಥಭೂಮಿಯ ಪಶ್ಚಿಮ ವಿಭಾಗದಲ್ಲಿರುವ ಗಾರೊ ಹಿಲ್ಸ್‌ ವಲಯವು ಹೆಚ್ಚು ಕಡಿಮೆ ಸಮತಟ್ಟಾಗಿದೆ. ಗಾರೊ ಹಿಲ್ಸ್‌ನ ಅತಿ ಎತ್ತರದ ಸ್ಥಳವು ನೊಕ್ರೆಕ್‌ ಶಿಖರವಾಗಿದ್ದು, ಇದರ ಎತ್ತರ 1516 ಮೀಟರ್‌ಗಳು. ಜಿಲ್ಲೆಗಳು ಮೇಘಾಲಯದಲ್ಲಿ ಸದ್ಯಕ್ಕೆ ಏಳು ಜಿಲ್ಲೆಗಳಿವೆ. ಅವು ಪೂರ್ವ ಗಾರೊ ಹಿಲ್ಸ್‌, ಪೂರ್ವ ಖಾಸಿ ಹಿಲ್ಸ್‌, ಜೈನ್ ತಿಯಾಗಳು ಹಿಲ್ಸ್‌, ರೀ-ಭೊಯಿ, ದಕ್ಷಿಣ ಗಾರೊ ಹಿಲ್ಸ್‌, ಪಶ್ಚಿಮ ಗಾರೊ ಹಿಲ್ಸ್‌ ಹಾಗೂ ಪಶ್ಚಿಮ ಖಾಸಿ ಹಿಲ್ಸ್‌.ಪೂರ್ವ ಗಾರೊ ಹಿಲ್ಸ್‌ ಜಿಲ್ಲೆ 1976ರಲ್ಲಿ ರಚನೆಯಾಯಿತು. ಇಸವಿ 2001ರಲ್ಲಿ ನಡೆಸಿದ ಜನಗಣತಿಯ ಪ್ರಕಾರ ಈ ಜಿಲ್ಲೆಯ ಜನಸಂಖ್ಯೆಯು 247,555ರಷ್ಟಿದೆ. ಇದರ ವಿಸ್ತೀರ್ಣ 2603 ಚದರ ಕಿಲೊಮೀಟರ್‌ಗಳು. ಜಿಲ್ಲೆಯ ಕೇಂದ್ರ ಕಾರ್ಯಸ್ಥಾನವು ವಿಲಿಯಂನಗರದಲ್ಲಿದೆ. (ಅಂದು ಈ ಸ್ಥಳಕ್ಕೆ ಸಿಂಸನ್‌ಗಿರಿ ಎನ್ನಲಾಗಿತ್ತು).ಪೂರ್ವ ಖಾಸಿ ಹಿಲ್ಸ್‌ ಜಿಲ್ಲೆಯನ್ನು 28 ಅಕ್ಟೋಬರ್‌ 1976ರಂದು ಖಾಸಿ ಹಿಲ್ಸ್‌ ಜಿಲ್ಲೆಯಿಂದ ಬೇರ್ಪಡಿಸಿ ರಚಿಸಲಾಯಿತು. ಜಿಲ್ಲೆಯ ವಿಸ್ತೀರ್ಣ 2,748 ಚದರ ಕಿಲೋಮೀಟರ್‌. ಇಸವಿ 2001 ಜನಗಣತಿಯ ಪ್ರಕಾರ ಈ ಜಿಲ್ಲೆಯ ಜನಸಂಖ್ಯೆ 660,923ರಷ್ಟಿದೆ. ಪೂರ್ವ ಖಾಸಿ ಹಿಲ್ಸ್‌ನ ಕೇಂದ್ರ ಕಾರ್ಯಸ್ಥಾನ ಶಿಲಾಂಗ್‌ನಲ್ಲಿದೆ.ಜೈನ್ ತಿಯಾಗಳು ಹಿಲ್ಸ್‌ ಜಿಲ್ಲೆಯು 22 ಫೆಬ್ರವರಿ 1972ರಂದು ರಚನೆಯಾಯಿತು. ಇದರ ಭೌಗೋಳಿಕ ವಿಸ್ತೀರ್ಣ 3819 ಚದರ ಕಿಲೋಮೀಟರ್‌ಗಳು. ಇಸವಿ 2001ರ ಜನಗಣತಿಯ ಪ್ರಕಾರ ಈ ಜಿಲ್ಲೆಯು 295,692ರಷ್ಟು ಜನಸಂಖ್ಯೆ ಹೊಂದಿದೆ. ಜಿಲ್ಲೆಯ ಕೇಂದ್ರ ಕಾರ್ಯಸ್ಥಾನವು ಜೊವೈನಲ್ಲಿದೆ. ಜೈನ್ ತಿಯಾಗಳು ಹಿಲ್ಸ್‌ ರಾಜ್ಯದಲ್ಲಿಯೇ ಅತಿ ಹೆಚ್ಚು ಇದ್ದಿಲು ತಯಾರಿಸುವ ಜಿಲ್ಲೆಯಾಗಿದೆ. ರಾಜ್ಯಾದ್ಯಂತ ಇದ್ದಿಲು ಗಣಿಗಳನ್ನು ಕಾಣಬಹುದಾಗಿದೆ.ದಿನಾಂಕ 4 ಜೂನ್‌ 1992ರಂದು ಪೂರ್ವ ಖಾಸಿ ಹಿಲ್ಸ್‌ ಜಿಲ್ಲೆಯನ್ನು ವಿಭಜಿಸಿ ರಿ-ಭೊಯಿ ಜಿಲ್ಲೆಯನ್ನು ರಚಿಸಲಾಯಿತು. ಇದರ ವಿಸ್ತೀರ್ಣ 2448 ಚದರ ಕಿಲೋಮಿಟರ್‌ಗಳು. ಇಸವಿ 2001ರ ಜನಗಣತಿ ಪ್ರಕಾರ ಜಿಲ್ಲೆಯ ಒಟ್ಟು ಜನಸಂಖ್ಯೆಯು 192,795ರಷ್ಟಿತ್ತು. ಜಿಲ್ಲೆಯ ಕೇಂದ್ರ ಕಾರ್ಯಸ್ಥಾನವು ನೊಂಗ್ಪೊಹ್‌ನಲ್ಲಿದೆ. ಇಲ್ಲಿ ಬೆಟ್ಟ-ಗುಡ್ಡಗಳ ಭೂಪ್ರದೇಶವಿದ್ದು, ಹೆಚ್ಚುಪಾಲು ಕಾಡು ವ್ಯಾಪಿಸಿದೆ. ರಿ-ಭೊಯಿ ಜಿಲ್ಲೆಯು ಅನಾನಸ್‌ ಫಲಗಳಿಗಾಗಿ ಬಹಳ ಖ್ಯಾತವಾಗಿದೆ. ರಾಜ್ಯದಲ್ಲೇ ಅತಿ ಹೆಚ್ಚು ಅನಾನಸ್‌ ಬೆಳೆಯುವ ಸ್ಥಳವಾಗಿದೆ.ಪಶ್ಚಿಮ ಗಾರೊ ಹಿಲ್ಸ್‌ ಜಿಲ್ಲೆಯು 18 ಜೂನ್‌ 1992ರಂದು ವಿಭಜನೆಗೊಂಡು ದಕ್ಷಿಣ ಗಾರೊ ಹಿಲ್ಸ್‌ ಜಿಲ್ಲೆ ರಚನೆಯಾಯಿತು. ಜಿಲ್ಲೆಯ ಒಟ್ಟು ಭೌಗೋಳಿಕ ವಿಸ್ತೀರ್ಣವು 1850 ಚದರ ಕಿಲೊಮೀಟರ್‌ಗಳಷ್ಟಿದೆ. ಇಸವಿ 2001ರ ಜನಗಣತಿಯ ಪ್ರಕಾರ ಜಿಲ್ಲೆಯ ಜನಸಂಖ್ಯೆಯು 99,100ರಷ್ಟಿದೆ. ಜಿಲ್ಲೆಯ ಕೇಂದ್ರ ಕಾರ್ಯಸ್ಥಾನ ಬಾಘ್ಮಾರಾದಲ್ಲಿದೆ.ಪಶ್ಚಿಮ ಗಾರೊ ಹಿಲ್ಸ್‌ ಜಿಲ್ಲೆಯು ರಾಜ್ಯದ ಪಶ್ಚಿಮ ಭಾಗದಲ್ಲಿದೆ. ಇದರ ಭೌಗೋಳಿಕ ವಿಸ್ತೀರ್ಣ 3714 ಚದರ ಕಿಲೋಮೀಟರ್‌ಗಳಷ್ಟಿದೆ. ಇಸವಿ 2001ರ ಜನಗಣತಿಯ ಪ್ರಕಾರ ಈ ಜಿಲ್ಲೆಯ ಜನಸಂಖ್ಯೆ 515,813ರಷ್ಟಿದೆ. ಜಿಲ್ಲೆಯ ಕೇಂದ್ರ ಕಾರ್ಯಸ್ಥಾನ ಟುರಾದಲ್ಲಿದೆ.ಪಶ್ಚಿಮ ಖಾಸಿ ಹಿಲ್ಸ್‌ ಜಿಲ್ಲೆ ರಾಜ್ಯದಲ್ಲಿ ಅತಿದೊಡ್ಡ ಜಿಲ್ಲೆಯಾಗಿದೆ. ಇದರ ಭೌಗೋಳಿಕ ವಿಸ್ತೀರ್ಣವು 5247 ಚದರ ಕಿಲೋಮೀಟರ್‌ಗಳಷ್ಟಿವೆ. ಖಾಸಿ ಹಿಲ್ಸ್‌ ಜಿಲ್ಲೆಯಿಂದ ದಿನಾಂಕ 28 ಅಕ್ಟೋಬರ್‌ 1976ರಂದು ಪಶ್ಚಿಮ ಖಾಸಿ ಹಿಲ್ಸ್‌ ಎಂಬ ಜಿಲ್ಲೆಯನ್ನು ರಚಿಸಲಾಯಿತು. ಜಿಲ್ಲೆಯ ಪ್ರಧಾನ ಕಾರ್ಯಸ್ಥಾನ ನೊಂಗ್‌ಸ್ಟೊಯಿನ್‌ನಲ್ಲಿದೆ. ಹವಾಗುಣ ರಾಜ್ಯದ ಕೆಲವು ವಲಯಗಳಲ್ಲಿ ಸರಾಸರಿ ವಾರ್ಷಿಕ ಮಳೆ 1200 ಸೆಂಟಿಮೀಟರ್‌ಗಳಷ್ಟು ಅಧಿಕವಿರುವ ಕಾರಣ, ಮೇಘಾಲಯವು ಭಾರತದಲ್ಲೇ ಅತಿ ತೇವವಾಗಿರುವ ರಾಜ್ಯವಾಗಿದೆ. ಕಡಿಮೆ ಎತ್ತರವುಳ್ಳ ಗಾರೊ ಹಿಲ್ಸ್‌ ವಲಯವನ್ನು ಹೊಂದಿರುವ ಪ್ರಸ್ಥಭೂಮಿಯ ಪಶ್ಚಿಮ ಭಾಗವು ವರ್ಷದ ಬಹಳಷ್ಟು ಕಾಲ ಹೆಚ್ಚಿನ ಉಷ್ಣಾಂಶ ಹೊಂದಿರುತ್ತವೆ. ಅತಿ ಹೆಚ್ಚು ಎತ್ತರ ಹೊಂದಿರುವ ಶಿಲಾಂಗ್‌ ವಲಯದಲ್ಲಿ ಸಾಮಾನ್ಯವಾಗಿ ಕಡಿಮೆ ಉಷ್ಣಾಂಶ ಇರುತ್ತದೆ. ಈ ವಲಯದಲ್ಲಿ ಗರಿಷ್ಠ ಉಷ್ಣಾಂಶವು 28 ಡಿಗ್ರಿ (ಸೆಲ್ಸಿಯಸ್‌ ಮಾಪನ) ದಾಟುವುದು ಬಹಳ ಅಪರೂಪ. ಚಳಿಗಾಲದಲ್ಲಿ ಉಷ್ಣಾಂಶ ಸೊನ್ನೆಗಿಂತಲೂ ಕೆಳಗಿಳಿಯುವುದು ಸಾಮಾನ್ಯ. ರಾಜಧಾನಿ ಶಿಲಾಂಗ್‌ನ ದಕ್ಷಿಣದ ಖಾಸಿ ಹಿಲ್ಸ್‌ನಲ್ಲಿರುವ ಚೆರಾಪುಂಜಿ ಪಟ್ಟಣವು ಋತುವಿನಲ್ಲಿಯೇ ಅತಿ ಹೆಚ್ಚು ಮಳೆ ಪಡೆವ , ವಿಶ್ವದಾಖಲೆ ಹೊಂದಿದೆ. ಚೆರಾಪುಂಜಿಯಿಂದ 16 ಕಿಲೋಮಿಟರ್‌ ಪಶ್ಚಿಮದಲ್ಲಿರುವ ಮಾಸಿನ್ರಾಮ್‌ ಗ್ರಾಮದಲ್ಲಿ ಅತಿ ಹೆಚ್ಚು ವಾರ್ಷಿಕ ಮಳೆಯಾಗುವ ವಿಶ್ವದಾಖಲೆ ಹೊಂದಿದೆ. ಮೇಘಾಲಯಕ್ಕೆ ಪ್ರವಾಸ ಹೋಗಲು ಸೂಕ್ತ ಕಾಲ ಮಾರ್ಚ್‌ನಿಂದ ಜುಲೈ ತಿಂಗಳ ವರೆಗೆ. ಭಾರತದ ಬಯಲುಸೀಮೆ ಪ್ರದೇಶದಲ್ಲಿ ವಿಪರೀತ ತಾಪಮಾನದಿಂದ ಪಾರಾಗಲು ಬ್ರಿಟಿಷ್‌ ಮತ್ತು ಆಸ್ಸಾಂ‌ ಟೀ ಎಸ್ಟೇಟ್‌ ಮಾಲೀಕರು ಬೇಸಿಗೆ ಕಾಲದಲ್ಲಿ ಮೇಘಾಲಯಕ್ಕೆ ಸ್ಥಳಾಂತರಗೊಳ್ಳುವುದು ಸಾಮಾನ್ಯ. ಆರ್ಥಿಕತೆ ಮೇಘಾಲಯದಲ್ಲಿ ಆರ್ಥಿಕತೆಯು ಪ್ರಮುಖವಾಗಿ ಭೂಸಂಪತ್ತನ್ನು ಅಧರಿಸಿದೆ. ಮೇಘಾಲಯದ ಒಟ್ಟು ಕಾರ್ಮಿಕ ಸಮೂಹದ ಮೂರರಲ್ಲಿ ಇಬ್ಬರು ಕೃಷಿ ಮತ್ತು ಅದಕ್ಕೆ ಸಂಬಂಧಿತ ಚಟುವಟಿಕೆಗಳಲ್ಲಿ ಮಗ್ನರಾಗಿರುತ್ತಾರೆ. ಆದರೆ, ರಾಜ್ಯದ NSDPಗಾಗಿ ಈ ಕ್ಷೇತ್ರದ ಕೊಡುಗೆ ಮೂರನೆಯ ಒಂದು ಭಾಗಕ್ಕಿಂತಲೂ ಕಡಿಮೆ. ರಾಜ್ಯದಲ್ಲಿನ ಕೃಷಿಯು ಬಹಳ ಕಡಿಮೆ ಇಳುವರಿ ಮತ್ತು ಅಸಮರ್ಪಕ ಬೇಸಾಯ ಪದ್ಧತಿಗಳಿಂದ ಕೂಡಿದೆ. ಇದರಿಂದಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ಬಡತನವಿದೆ. ಇದರ ಫಲವಾಗಿ, ಜನಸಂಖ್ಯೆಯಲ್ಲಿ ಹೆಚ್ಚುಪಾಲು ಕೃಷಿಯಲ್ಲಿ ತೊಡಗಿದ್ದರೂ, ಮಾಂಸ, ಮೊಟ್ಟೆ, ದವಸ-ಧಾನ್ಯಗಳು ಇತ್ಯಾದಿಗಾಗಿ ಮೇಘಾಲಯ ಇತರೆ ರಾಜ್ಯಗಳಿಂದ ಆಮುದುಗಳನ್ನು ಅವಲಂಬಿಸಿದೆ. ಮೂಲಭೂತ ಸೌಲಭ್ಯಗಳ ವ್ಯವಸ್ಥೆಯ ನ್ಯೂನತೆಗಳ ಕಾರಣ, ರಾಜ್ಯದ ಆರ್ಥಿಕತೆಯು ದೇಶದ ಇತರೆಡೆಯ ಆರ್ಥಿಕತೆಗಿಂತಲೂ ಹಿಂದುಳಿಯುವಂತಾಗಿದೆ.ಮೇಘಾಲಯ ಪ್ರಕೃತಿಯ ಸಂಪನ್ಮೂಲಗಳ ಸಮೃದ್ಧ ಆಗರವಾಗಿದೆ. ಇವುಗಳಲ್ಲಿ ಇದ್ದಿಲು, ಸುಣ್ಣಕಲ್ಲು, ಸಿಲಿಮೆನೈಟ್‌, ಕವೊಲಿನ್‌ ಹಾಗೂ ಗ್ರಾನೈಟ್‌ ಕಲ್ಲು ಸಹ ಸೇರಿವೆ. ಮೇಘಾಲಯದಲ್ಲಿ ವಿಶಾಲ ಕಾಡುಪ್ರದೇಶ, ಸಮೃದ್ಧ ಜೈವಿಕ ವೈವಿಧ್ಯ ಮತ್ತು ಹಲವು ಕೆರೆ-ಕೋಡಿಗಳಿವೆ. ಕೈಗಾರಿಕೀಕರಣವು ಸೂಕ್ತ ಮಟ್ಟ ತಲುಪಿಲ್ಲ. ಜೊತೆಗೆ, ಕಳಪೆ ಮಟ್ಟದ ಮೂಲಭೂತ ಸೌಲಭ್ಯವು ಈ ಸಮೃದ್ಧ ಪೃಕೃತಿಯ ಸಂಪನ್ಮೂಲಗಳ ಬಳಕೆ ಮತ್ತು ರಾಜ್ಯದ ಆರ್ಥಿಕತೆಗೆ ತೊಡಕಾಗಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಎರಡು ದೊಡ್ಡ ಪ್ರಮಾಣದ ಗಾರೆ ತಯಾರಿಕಾ ಘಟಗಳು ಜೈನ್ ತಿಯಾಗಳು ಹಿಲ್ಸ್‌ ಜಿಲ್ಲೆಯಲ್ಲಿ ಸ್ಥಾಪನೆಯಾಗಿವೆ. ಇವುಗಳ ಉತ್ಪಾದನಾ ಸಾಮರ್ಥ್ಯ 900 MTDಗಿಂತಲೂ ಹೆಚ್ಚು. ಈ ಜಿಲ್ಲೆಯಲ್ಲಿ ಲಭ್ಯವಿರುವ ಉತ್ತಮ ಗುಣಮಟ್ಟದ ಸುಣ್ಣಕಲ್ಲಿನ ಸಮೃದ್ಧ ನಿಕ್ಷೇಪಗಳನ್ನು ಬಳಸಿಕೊಳ್ಳಲು ಇನ್ನಷ್ಟು ಗಾರೆ ತಯಾರಿಕಾ ಘಟಕಗಳ ಆರಂಭಕ್ಕೆ ಕಾರಣವಾಗಬಹುದು. ಮೇಘಾಲಯ ರಾಜ್ಯವು ಪ್ರಾಕೃತಿಕ ಸೌಂದರ್ಯ ಹೊಂದಿದೆ. ಇಲ್ಲಿನ ರಾಜ್ಯ ಸರ್ಕಾರ ಪ್ರವಾಸೋದ್ಯಮವನ್ನು ಉತ್ತೇಜಿಸಲು ಇದನ್ನು ಬಳಸಿಕೊಳ್ಳಲು ಯತ್ನಿಸುತ್ತಿದೆ. ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಭದ್ರತಾ ಸಮಸ್ಯೆಗಳ ಕಾರಣ ಮೇಘಾಲಯ ರಾಜ್ಯದ ಪ್ರವಾಸೋದ್ಯಮದ ಬೆಳವಣಿಗೆಗೆ ತೊಡಕಾಗಿದೆ. ಭಾರಿ ಆರ್ಥಿಕತೆಯ ಪ್ರವೃತ್ತಿಗಳು ಅಂಕಿ-ಅಂಶಗಳು ಮತ್ತು ಯೋಜನೆಯ ಅನುಷ್ಟಾನ ಸಚಿವಾಲಯ ವು ಮಾರುಕಟ್ಟೆ ಬೆಲೆಯಲ್ಲಿ ಅಂದಾಜು ಮಾಡಿರುವ ರಾಜ್ಯದ ಸಮಗ್ರ ಸ್ಥಳೀಯ ಉತ್ಪನ್ನದ ಆಗುಹೋಗುಗಳ ಪಟ್ಟಿ ಕೆಳಕಂಡಂತಿದೆ. ಇಸವಿ 2004ರಲ್ಲಿ ಮೇಘಾಲಯದ ಸಮಗ್ರ ರಾಜ್ಯ ಸ್ಥಳೀಯ ಉತ್ಪನ್ನವು ಇಂದಿನ ದರಗಳಲ್ಲಿ $1.6 ಶತಕೋಟಿ ಎಂದು ಅಂದಾಜು ಮಾಡಲಾಗಿದೆ. ಬಡತನದ ಪ್ರಮಾಣ ಭಾರತ ಸರ್ಕಾರದಡಿ ಸರ್ವೋಚ್ಚ ಯೋಜನಾ ಇಲಾಖೆಯಾಗಿರುವ ಯೋಜನಾ ಆಯೋಗದ ಪ್ರಕಾರ, 2000ರಲ್ಲಿ ರಾಜ್ಯದ ಒಟ್ಟು ಜನಸಂಖ್ಯೆಯ ಮೂರನೆಯ ಒಂದು ಭಾಗದಷ್ಟು ಬಡತನದ ರೇಖೆಯ ಕೆಳಗಿದ್ದಾರೆ, ಎಂದು ಅಂದಾಜು ಮಾಡಲಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಬಡತನ 55%ರಷ್ಟಿದ್ದು, ನಗರವಲಯದಲ್ಲಿನ ಬಡತನಕ್ಕಿಂತಲೂ ಎರಡರಷ್ಟಿದೆ. ಕೃಷಿ ಮೇಘಾಲಯದ ಒಟ್ಟು ಭೌಗೋಳಿಕ ವಲಯದಲ್ಲಿ ಸುಮಾರು 10%ರಲ್ಲಿ ಕೃಷಿ ಚಟುವಟಿಕೆಗಳು ನಡೆಯುತ್ತಿವೆ. ಈ ರಾಜ್ಯದ ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನಗಳ ಬಳಕೆ ಸೀಮಿತ ಹಾಗೂ ಉತ್ಪಾದಕತೆ ಕಡಿಮೆ. ಇದರ ಫಲವಾಗಿ, ಜನಸಂಖ್ಯೆಯ ಬಹುಪಾಲು ಕೃಷಿಯಲ್ಲಿ ಮಗ್ನರಾಗಿದ್ದರೂ, ರಾಜ್ಯದ GDPಗಾಗಿ ಕೃಷಿಯ ಉತ್ಪಾದನೆಯು ಬಹಳ ಕಡಿಮೆ ಹಾಗೂ ಕೃಷಿಕಾರ್ಯದಲ್ಲಿ ತೊಡಗುವ ಜನತೆಯಲ್ಲಿ ಬಹುಪಾಲು ಬಡವರಾಗಿಯೇ ಉಳಿದುಕೊಂಡಿದ್ದಾರೆ. ಕೃಷಿ ಕಾರ್ಯ ನಡೆಯುವ ವಲಯಗಳಲ್ಲಿ ಗಮನಾರ್ಹ ಪಾಲು, ಸಾಂಪ್ರದಾಯಿಕ ಕೃಷಿ ರೀತ್ಯಾ ನಡೆಯುತ್ತದೆ. (ಇದಕ್ಕೆ ಸ್ಥಳೀಯವಾಗಿ [ಭರಾಟೆಯ]ಝೂಮ್‌ ಕೃಷಿ ಎನ್ನಲಾಗಿದೆ). ಮೇಘಾಲಯದಲ್ಲಿ ಆಹಾರ ಧಾನ್ಯಗಳು ಪ್ರಮುಖ ಬೆಳೆಗಳಾಗಿವೆ. ಇವುಗಳನ್ನು ಸುಮಾರು 1,330 ಚದರ ಕಿಲೋಮೀಟರ್‌ಗಳಲ್ಲಿ, ಅರ್ಥಾತ್‌ ರಾಜ್ಯದ ಕೃಷಿಕಾರ್ಯ ಪ್ರದೇಶದ 60%ರಷ್ಟು ಭಾಗದಲ್ಲಿ ಬೆಳೆಯಲಾಗುತ್ತಿದೆ. ಆಹಾರ ಧಾನ್ಯಗಳ ಉತ್ಪಾದನೆಯು 230 ಸಾವಿರ ಟನ್‌ಗಳಿಗಿಂತಲೂ ಹೆಚ್ಚಾಗಿದೆ. ರಾಜ್ಯದಲ್ಲಿ ಉತ್ಪಾದನೆಯಾಗುವ ಧಾನ್ಯ ಉತ್ಪಾದನೆಯಲ್ಲಿ ಅಕ್ಕಿಯದು 80%ರಷ್ಟು ಪಾಲು. ಮೆಕ್ಕೆ ಜೋಳ, ಗೋಧಿ ಮತ್ತು ಇತರೆ ಕೆಲವು ಏಕ-ದಳ ಧಾನ್ಯ-ಬೇಳೆಕಾಳುಗಳು ಸಹ ಈ ರಾಜ್ಯದ ಪ್ರಮುಖ ಖಾದ್ಯ ಫಸಲುಗಳಾಗಿವೆ.ರೇಪ್‌ಸೀಡ್‌, ಸಾಸಿವೆ, ನಾರಗಸೆ, ಸೋಯ್ಬೀನ್‌, ಹರಳುಗಿಡ ಮತ್ತು ಎಳ್ಳು ಎಣ್ಣೆಕಾಳುಗಳನ್ನು ಸುಮಾರು 100 ಚದರ ಕಿಲೋಮೀಟರ್‌ ವಿಸ್ತೀರ್ಣದಲ್ಲಿ ಬೆಳೆಯಲಾಗುತ್ತದೆ. ರೇಪ್‌ಸೀಡ್‌ ಮತ್ತು ಸಾಸಿವೆ ಈ ರಾಜ್ಯದಲ್ಲಿ ಬಹಳ ಪ್ರಮುಖ ಎಣ್ಣೆಬೀಜಗಳಾಗಿವೆ. ಸುಮಾರು 6.5 ಸಾವಿರ ಟನ್‌ಗಳಷ್ಟು ಖಾದ್ಯ ಎಣ್ಣೆಬೀಜ ಉತ್ಪನ್ನದಲ್ಲಿ ಇವೆರಡದ್ದು ಮೂರರಲ್ಲಿ ಎರಡರಷ್ಟು ಪಾಲು. ಕೇವಲ ಹತ್ತಿ, ಜೂಟ್ ಹಾಗೂ ಮೆಸ್ಟಾ ಮಾತ್ರ ಮೇಘಾಲಯ ರಾಜ್ಯದ ವಾಣಿಜ್ಯ ಬೆಳೆಯಾಗಿವೆ. ಈ ಬೆಳೆಗಳನ್ನು ವಿಶಿಷ್ಟವಾಗಿ ಗಾರೊ ಹಿಲ್ಸ್‌ನಲ್ಲಿ ಬೆಳಸಲಾಗುತ್ತವೆ. ಅವುಗಳ ಉತ್ಪನ್ನ ಮತ್ತು ಕೃಷಿಕಾರ್ಯ ನಡೆಸುವ ವಿಸ್ತೀರ್ಣವು ಕಡಿಮೆಯಾಗುತ್ತಿದೆ. ಕೆಲವು ಇಳುವರಿ ಇಲ್ಲದ ಬೆಳೆಗಳು ಜನಪ್ರಿಯತೆ ಕಳೆದುಕೊಳ್ಳುತ್ತಿವೆ.ಮೇಘಾಲಯದಲ್ಲಿರುವ ಹವಾಗುಣ, ಹಣ್ಣು-ತರಕಾರಿ, ಹೂವು, ಮೆಣಸು ಮತ್ತು ಔಷಧ ಗಿಡಗಳು ಸೇರಿದಂತೆ ವಿವಿಧ-ರೀತಿಯ ತೋಟಗಾರಿಕಾ ಬೆಳೆ ಬೆಳೆಯಲು ಅವಕಾಶ ನೀಡುತ್ತದೆ. ಅಧಿಕ ಮೌಲ್ಯದ ಬೆಳೆಗಳು ಎಂದು ಇವನ್ನು ಪರಿಗಣಿಸಲಾಗಿದೆ, ಆದರೆ ಸಾಂಪ್ರದಾಯಿಕ ಮೌಲ್ಯಗಳು ಮತ್ತು ಆಹಾರ ಭದ್ರತಾ ವಿಷಯಗಳು ಇವುಗಳನ್ನು ಬೆಳೆಸುವುದರಲ್ಲಿ ರೈತರಿಗೆ ಕೆಲಮಟ್ಟಿಗೆ ಅಡ್ಡಿಪಡಿಸುತ್ತವೆ.ಮೇಘಾಲಯ ರಾಜ್ಯದಲ್ಲಿ ಬೆಳೆಸಲಾದ ಪ್ರಮುಖ ಫಲಗಳಲ್ಲಿ ನಿಂಬೆಜಾತಿಯ ಹಣ್ಣುಗಳು, ಅನಾನಸ್‌, ಪರಂಗಿಹಣ್ಣು, ಬಾಳೆಹಣ್ಣು ಇತ್ಯಾದಿ ಸೇರಿವೆ. ಮೇಘಾಲಯದಲ್ಲಿ ಬೆಳೆಸಲಾದ ಮ್ಯಾಂಡರಿನ್‌ ಕಿತ್ತಳೆ ಹಣ್ಣುಗಳು ಬಹಳ ಉನ್ನತ ಗುಣಮಟ್ಟದ್ದೆಂದು ಹೇಳಲಾಗಿದೆ. ಇದರ ಜೊತೆಗೆ, ಹೂಕೋಸು, ಎಲೆಕೋಸು ಮತ್ತು ಮೂಲಂಗಿ ಸೇರಿದಂತೆ, ಮೇಘಾಲಯದಲ್ಲಿ ವಿವಿಧ ರೀತಿಯ ತರಕಾರಿಗಳನ್ನು ಬೆಳೆಸಲಾಗುತ್ತದೆ.ರಾಜ್ಯಾದ್ಯಂತ ಅಡಕೆ ತೋಟಗಳನ್ನು ಕಾಣಬಹುದು; ಅದರಲ್ಲೂ ವಿಶಿಷ್ಟವಾಗಿ ಗುವಾಹಾಟಿಯಿಂದ ಶಿಲಾಂಗ್‌ ಕಡೆಗೆ ಹೋಗುವ ಮಾರ್ಗದಲ್ಲಿ ಈ ರೀತಿಯ ತೋಟಗಳು ಹೇರಳವಾಗಿವೆ. ಇತ್ತೀಚೆಗೆ, ಚಹಾ, ಕಾಫಿ ಮತ್ತು ಗೋಡಂಬಿಯಂತಹ ಫಸಲುಗಳನ್ನು ಪರಿಚಯಿಸಲಾಗುತ್ತಿದ್ದು, ಅವು ಜನಪ್ರಿಯಗಾಗುತ್ತಿವೆ. ವಿವಿಧ ರೀತಿಯ ಮೆಣಸು, ಹೂವು, ಔಷಧೀಯ ಸಸ್ಯ ಮತ್ತು ಅಣಬೆಗಳನ್ನೂ ಸಹ ರಾಜ್ಯದಲ್ಲಿ ಬೆಳೆಸಲಾಗುತ್ತದೆ. ಸಾರಿಗೆ ವ್ಯವಸ್ಥೆ ದೇಶದ ಇಬ್ಭಾಗವಾದಾಗಿನಿಂದ ಈಶಾನ್ಯ ವಲಯದಲ್ಲಿ ಮೂಲಭೂತ ಸೌಲಭ್ಯ ಇಲ್ಲದ್ದರಿಂದ ತೀವ್ರ ಸಮಸ್ಯೆಗಳಿಗೆ ಕಾರಣವಾಗಿದೆ. ವಲಯದಲ್ಲಿ ಕೇವಲ 2%ರಷ್ಟು ಮಾತ್ರ ದೇಶದ ಉಳಿದ ಭಾಗಗಳೊಂದಿಗೆ ಸಂಬಂಧ ಹೊಂದಿದೆ. ಈ ವಲಯವು ಸಿಲಿಗುರಿ ಕಾರಿಡಾರ್‌ ಅಥವಾ ಚಿಕನ್ಸ್‌ ನೆಕ್‌ ಎನ್ನಲಾದ ಇಕ್ಕಟ್ಟು ದಾರಿಯ ಮೂಲಕ ಪಶ್ಚಿಮ ಬಂಗಾಳ ರಾಜ್ಯದೊಂದಿಗೆ ಸಂಪರ್ಕ ಹೊಂದಿದೆ. ಮೇಘಾಲಯವು ಸಂಪೂರ್ಣವಾಗಿ ಭೂ ಆವೃತ್ತ ರಾಜ್ಯವಾಗಿದೆ. ದೂರ-ದೂರದ ಬಿಡಿ ಬಿಡಿಯಾದ ಸ್ಥಳಗಳಲ್ಲಿ ಸಣ್ಣ-ಪ್ರಮಾಣದ ಜನವಸತಿಗಳಿವೆ. ರಾಜ್ಯದೊಳಗೆ ರಸ್ತೆ ಸಾರಿಗೆಯೇ ಪ್ರಮುಖ ಸಾರಿಗೆ ವ್ಯವಸ್ಥೆಯಾಗಿದೆ. ರಾಜಧಾನಿ ಶಿಲಾಂಗ್‌ನಲ್ಲಿ ರಸ್ತೆ ವ್ಯವಸ್ಥೆ ಚೆನ್ನಾಗಿದ್ದರೂ, ಇತರೆ ವಲಯಗಳಲ್ಲಿ ವ್ಯವಸ್ಥೆ ಸೂಕ್ತವಾಗಿಲ್ಲ. ರಾಜ್ಯದ ಹೆಚ್ಚಿನ ರಸ್ತೆಗಳಲ್ಲಿ ಡಾಂಬರು ಹಾಕಿಲ್ಲ. ಮೇಘಾಲಯಕ್ಕೆ ಬರುವವರಲ್ಲಿ ಬಹುಪಾಲು ನೆರೆಯ ರಾಜ್ಯ ಆಸ್ಸಾಂ‌ನ ಗುವಾಹಾಟಿ ಕಡೆಯಿಂದ ಬರುತ್ತಾರೆ. ಗುವಾಹಟಿಯು ರಾಜ್ಯದಿಂದ ಸರಿಸುಮಾರು 103 ಕಿಲೋಮೀಟರ್‌ ದೂರದಲ್ಲಿದೆ. ಆಸ್ಸಾಂ‌ ಪ್ರಮುಖ ರೈಲು ನಿಲ್ದಾಣ ಹಾಗೂ ವಿಮಾನ ನಿಲ್ದಾಣ ಹೊಂದಿದೆ. ದೇಶದ ಇತರೆಡೆಗೆ ಇಲ್ಲಿಂದ ಹಲವು ರೈಲು ಹಾಗು ವಿಮಾನ ಮಾರ್ಗಗಳಿವೆ. ರಾಜ್ಯದಲ್ಲಿ ಹಳೆಯ ಮರದ ಸೇತುವೆಗಳು ಇನ್ನೂ ಇವೆ.ಮೇಘಾಲಯದಲ್ಲಿ ಯಾವುದೇ ರೈಲು ಕೊನೆಗೊಳ್ಳುವ ತುತ್ತತುದಿಗಳಿಲ್ಲ. ಶಿಲಾಂಗ್‌ನಿಂದ 40 ಕಿಲೋಮೀಟರ್‌ ದೂರದಲ್ಲಿ, ಗುವಾಹಟಿ ಕಡೆಗೆ ಹೋಗುವ ಹೆದ್ದಾರಿಯಲ್ಲಿರುವ ಉಮ್ರೊಯಿಯಲ್ಲಿ ಸಣ್ಣ ವಿಮಾನ ನಿಲ್ದಾಣವಿದೆ. ವಿಮಾನ ನಿಲ್ದಾಣ ಚಿಕ್ಕದಾಗಿರುವ ಕಾರಣ, ದೊಡ್ಡ ವಿಮಾನಗಳು ಇಲ್ಲಿ ಬಂದಿಳಿಯಲಾಗುವುದಿಲ್ಲ. ಕೋಲ್ಕತ್ತಾ ಹಾಗೂ ನೆರೆಯ ರಾಜ್ಯ ತ್ರಿಪುರಾದ ರಾಜಧಾನಿ ಅಗರ್ತಲಾದಿಂದ ಕೇವಲ ಸಣ್ಣ ವಿಮಾನಗಳು ವಾಯು ಸಾರಿಗೆ ಸೇವೆ ಸಲ್ಲಿಸುತ್ತವೆ. ಸಸ್ಯಸಂಪತ್ತು ಮತ್ತು ಪ್ರಾಣಿ ವೈವಿಧ್ಯ ಇಸವಿ 2003ರಲ್ಲಿ ಭಾರತೀಯ ಅರಣ್ಯ ಸಂಸ್ಥೆ ಪ್ರಕಟಿಸಿದ ರಾಜ್ಯ ಅರಣ್ಯ ವರದಿ ಪ್ರಕಾರ, ಮೇಘಾಲಯದಲ್ಲಿ 9,496 ಚದರ ಕಿಲೋಮೀಟರ್‌ಗಳಷ್ಟು ಅರಣ್ಯವ್ಯಾಪ್ತಿಯಿದೆ. ಇದು ರಾಜ್ಯದ ಒಟ್ಟು ಭೌಗೋಳಿಕ ವಿಸ್ತೀರ್ಣದ 42.34%ದಷ್ಟಿದೆ. ಮೇಘಾಲಯದ ಉಪ-ಉಷ್ಣವಲಯ ಕಾಡುಗಳು ಏಷ್ಯಾದ ಅತಿ ಸಮೃದ್ಧ ಸಸ್ಯತಾಣಗಳಲ್ಲಿ ಒಂದು. ಈ ಕಾಡುಗಳಲ್ಲಿ ಬಹಳಷ್ಟು ಮಳೆಯಾಗಿ, ವಿವಿಧ ರೀತಿಯ ಸಸ್ಯ ಮತ್ತು ಪ್ರಾಣಿ ಜೀವವೈವಿಧ್ಯಕ್ಕೆ ಆಧಾರವಾಗಿವೆ. ಮೇಘಾಲಯದ ಕಾಡು ವಲಯದ ಸಣ್ಣ ಭಾಗವನ್ನು 'ಪವಿತ್ರ ತೋಪುಗಳು' ಎನ್ನಲಾಗಿದೆ. (ಭಾರತದಲ್ಲಿ ಪವಿತ್ರ ತೋಪುಗಳು ನೋಡಿ). ಧಾರ್ಮಿಕ ಮತ್ತು ಸಾಂಸ್ಕೃತಿಕ ನಂಬಿಕೆಗಳ ಆಧಾರದ ಮೇಲೆ, ಹಲವು ಸಮುದಾಯಗಳು ಈ ಪ್ರಾಚೀನ ಕಾಡುಗಳ ಸಣ್ಣ ಗುಂಪುಗಳನ್ನು ನೂರಾರು ವರ್ಷಗಳಿಂದಲೂ ಸಂರಕ್ಷಿಸುತ್ತಾ ಬಂದಿವೆ. ಧಾರ್ಮಿಕ ಕಾರ್ಯಗಳಿಗಾಗಿ ಈ ಕಾಡುಗಳನ್ನು ಸಂರಕ್ಷಿಸಲಾಗಿದ್ದು, ಸಾಮಾನ್ಯವಾಗಿ ಯಾವುದೇ ರೀತಿಯ ನಾಶಮಾಡುವಿಕೆಯಿಂದ ರಕ್ಷಿಸಲಾಗಿವೆ. ಈ ಪವಿತ್ರ ತೋಪುಗಳು ಅಪರೂಪವೆನಿಸಿದ ಹಲವು ಗಿಡ ಮತ್ತು ಪ್ರಾಣಿ ಪ್ರಭೇದಗಳ ತಾಣವಾಗಿವೆ. ಪಶ್ಚಿಮ ಗಾರೊ ಹಿಲ್ಸ್‌ನಲ್ಲಿರುವ ನೊಕ್ರೆಕ್‌ ಜೀವಗೋಳ ಅರಣ್ಯ ಮತ್ತು ಬಲಫಕ್ರಮ್‌ ರಾಷ್ಟ್ರೀಯ ಉದ್ಯಾನಗಳನ್ನು 'ಮೇಘಾಲಯದ ಬಹಳಷ್ಟು ಜೀವವೈವಿಧ್ಯ ಹೊಂದಿದ ಸಮೃದ್ಧ ತಾಣಗಳು' ಎಂದು ಪರಿಗಣಿಸಲಾಗಿದೆ. ಇದರ ಜೊತೆಗೆ, ಮೇಘಾಲಯದಲ್ಲಿ ಮೂರು ವನ್ಯಜೀವಿಧಾಮಗಳಿವೆ. ಇವು ನೊಂಗ್ಖಿಲೆಮ್‌ ಅಭಯಾರಣ್ಯ, ಸಿಜು ಅಭಯಾರಣ್ಯ ಮತ್ತು ಭಾಗ್ಮಾರಾ ಅಭಯಾರಣ್ಯ. ಇವು ಕೀಟಭಕ್ಷಕ ಹೂಜಿ ಗಿಡ ನೆಪೆಂತೆಸ್‌ ಖಾಸಿಯಾನಾ ಗೆ ತಾಣವಾಗಿದೆ. ವೈವಿಧ್ಯಮಯ ಹವಾಗುಣ ಮತ್ತು ಭೂಸ್ವರೂಪ ಹೊಂದಿರುವ ಕಾರಣ, ಮೇಘಾಲಯ ಕಾಡುಗಳು ವಿಶಾಲವಾದ ಸಸ್ಯ ವೈವಿಧ್ಯಕ್ಕೆ ಆಧಾರವಾಗಿವೆ. ಇದರಲ್ಲಿ ಪರಾವಲಂಬಿಗಳು, ಅಧಿಸಸ್ಯಗಳು, ರಸಭರಿತ ಗಿಡಗಳು ಮತ್ತು ಪೊದೆಸಸ್ಯಗಳು ಸೇರಿವೆ. ಪ್ರಮುಖ ಮರಗಳ ವಿಧಗಳಲ್ಲಿ ಶೊರಿಯಾ ರೊಬಸ್ಟಾ ( ) ಮತ್ತು ಟೆಕ್ಟೊನಾ ಗ್ರ್ಯಾಂಡಿಸ್‌ (ಸಾಗುವಾನಿ ಮರ) ಸಹ ಸೇರಿವೆ. ಮೇಘಾಲಯದಲ್ಲಿ ಭಾರಿ ಪ್ರಮಾಣದ ವೈವಿಧ್ಯದ ಹಣ್ಣು-ತರಕಾರಿಗಳು, ಮೆಣಸು ಮತ್ತು ಔಷಧೀಯ ಸಸ್ಯಗಳಿವೆ. ಇಲ್ಲಿರುವ 325 ವಿಧಗಳ ಸೀತೆಹೂವಿನ ಗಿಡಗಳಿಗೂ ಸಹ ಮೇಘಾಲಯ ಖ್ಯಾತಿಯಾಗಿದೆ. ಇವುಗಳಲ್ಲಿ ಅತಿ ದೊಡ್ಡ ಪ್ರಭೇದವು, ಖಾಸಿ ಬೆಟ್ಟಗಳಲ್ಲಿರುವ ಮಾವ್ಸ್‌ಮಾಯಿ, ಮಾವ್‌ಮ್ಲುಹ್‌ ಮತ್ತು ಸೊಹ್ರಾರಿಮ್‌ ಕಾಡುಗಳಲ್ಲಿವೆ.ವಿವಿಧ ಜಾತಿಗಳ ಸಸ್ತನಿಗಳು, ಪಕ್ಷಿಗಳು, ಸರಿಸೃಪಗಳು ಹಾಗೂ ಕೀಟಗಳು ಮೇಘಾಲಯದಲ್ಲಿವೆ. ಪ್ರಮುಖ ಸಸ್ತನಿ ಪ್ರಭೇದಗಳಲ್ಲಿ ಆನೆಗಳು, ಕರಡಿಗಳು, ಪುನುಗು ಬೆಕ್ಕುಗಳು, ಮುಂಗುಸಿಗಳು, ವೀಸೆಲ್‌ಗಳು (ಮುಂಗುಸಿ ಜಾತಿಯ ಚತುಷ್ಪಾದಿ), ದಂಶಕಗಳು,(ಕೋರೆ ಹಲ್ಲಿರುವ ಪ್ರಾಣಿ) ಕಾಡೆತ್ತುಗಳು, ಕಾಡುಕೋಣಗಳು, ಜಿಂಕೆಗಳು, ಕಾಡು ಹಂದಿಗಳು ಹಾಗೂ ಹಲವು ಮಂಗನ ಜಾತಿಗೆ ಸೇರಿದ ಪ್ರಾಣಿಗಳು ಸೇರಿವೆ. ವಿವಿಧ ಬಾವಲಿಗಳೂ ಸಹ ಮೇಘಾಲಯದಲ್ಲಿವೆ. ಸಿಜು ಗುಹೆಗಳೂ ಸೇರಿದಂತೆ ಮೇಘಾಲಯದಲ್ಲಿರುವ ಹಲವು ಸುಣ್ಣದಕಲ್ಲಿನ ಗುಹೆಗಳಲ್ಲಿ ಬಹಳ ಅಪರೂಪ ಪ್ರಭೇದದ ಬಾವಲಿಗಳು ವಾಸಿಸುತ್ತವೆ.ಮಡಿವಾಳ ಹಕ್ಕಿ, ರಾಬಿನ್‌ ಹಕ್ಕಿ, ಬುಲ್ಬುಲ್‌, ಬೆಟ್ಟದ ಮೈನಾ ಸೇರಿದಂತೆ ಪ್ರಮುಖ ಹಕ್ಕಿ ಪ್ರಭೇದಗಳು ಜೋಡಿಯಾಗಿಯೋ ಅಥವಾ ಗುಂಪುಗಳಲ್ಲಿ ಮೇಘಾಲಯದ ಬೆಟ್ಟಕಾಡುಗಳಲ್ಲಿ ವಾಸಿಸುತ್ತವೆ. ಕೊಂಬುಕೊಕ್ಕಿನ ಹಕ್ಕಿಯು ಮೇಘಾಲಯದಲ್ಲಿರುವ ಅತಿದೊಡ್ಡ ಹಕ್ಕಿಯಾಗಿದೆ. ಇತರೆ ಹಕ್ಕಿಗಳಲ್ಲಿ ನವಿಲು ಜೀವಂಜೀವ (ಫೆಸೆಂಟ್‌ ಹಕ್ಕಿ), ದೊಡ್ಡ ಭಾರತೀಯ ಉದ್ದ ತೋಕೆಯ ಸಣ್ಣ ಗಿಳಿ, ಹಸಿರು ಪಾರಿವಾಳ ಹಾಗೂ ಬ್ಲೂ ಜೇ ಹಕ್ಕಿಗಳೂ ಸೇರಿವೆ. ಸುಮಾರು 250ಕ್ಕಿಂತಲೂ ಹೆಚ್ಚು ಪ್ರಭೇದಗಳ ಚಿಟ್ಟೆಗಳು, ಅದರಲ್ಲೂ ವಿಶೇಷವಾಗಿ, ಭಾರತದಲ್ಲಿ ಕಂಡುಬಂದ ಒಟ್ಟು ಪ್ರಭೇದಗಳಲ್ಲಿ ನಾಲ್ಕನೆಯ ಒಂದರಷ್ಟು ಮೇಘಾಲಯದಲ್ಲಿವೆ.ಮೇಘಾಲಯದಲ್ಲಿ ಕಂಡುಬರುವ ಸಾಮಾನ್ಯ ಸರೀಸೃಪಗಳೆಂದರೆ ಹಲ್ಲಿಗಳು, ಮೊಸಳೆಗಳು ಹಾಗೂ ಆಮೆಗಳು. ಹೆಬ್ಬಾವು, ತಾಮ್ರಶೀರ್ಷಿ ಹಾವು, Green Tree Racer, ಭಾರತೀಯ ನಾಗರಹಾವು, ಕಾಳಿಂಗ ಸರ್ಪ, ಹವಳದ ಹಾವು ಹಾಗೂ ಮಂಡಲದ ಹಾವು ಸೇರಿದಂತೆ ಹಲವು ಬಗೆಯ ಹಾವುಗಳು ಮೇಘಾಲಯದಲ್ಲಿವೆ. ಶಿಕ್ಷಣ ಶಿಲಾಂಗ್‌ ನಗರದಲ್ಲಿ ಹಲವು ಪ್ರಸಿದ್ಧ ಶಾಲೆ ಮತ್ತು ಕಾಲೇಜುಗಳಿವೆ. ಈಶಾನ್ಯ ಭಾರತದ ಅಬಿವೃದ್ಧಿ ಯೋಜನೆಯ ಅಂಗವಾಗಿ, ಮಾನವ ಸಂಪನ್ಮೂಲ ಸಚಿವಾಲಯವು ಏಳನೆಯ ಭಾರತೀಯ ಆಡಳಿತ ನಿರ್ವಹಣಾ ಕೌಶಲ್ಯ ಸಂಸ್ಥೆಯ (ಐಐಎಂ) ಏಳನೆಯ ವಿದ್ಯಾಲಯವನ್ನು ಶಿಲಾಂಗ್‌ನಲ್ಲಿ ಆರಂಭಿಸಿತು. ಇದಕ್ಕೆ ರಾಜೀವ್‌ ಗಾಂಧಿ ಭಾರತೀಯ ಆಡಳಿತ ನಿರ್ವಹಣಾ ಸಂಸ್ಥೆ ಎನ್ನಲಾಗಿದೆ. ಈ ವಿದ್ಯಾಲಯವು ಶೈಕ್ಷಣಿಕ ವರ್ಷ 2008ರಿಂದ ವಿದ್ಯಾರ್ಥಿಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭಿಸಿತು. ಪ್ರವಾಸೋದ್ಯಮ ಮುಂಚೆ, ಇಂದಿನ ಮೇಘಾಲಯಕ್ಕೆ ಸೇರಿದ ವಲಯಗಳನ್ನು ಪ್ರವೇಶಿಸಲು ವಿದೇಶೀ ಪ್ರವಾಸಿಗರಿಗೆ ವಿಶೇಷ ಪ್ರವೇಶಾನುಮತಿಯ ಅಗತ್ಯವಿತ್ತು. ಆದರೆ, 1955ರಲ್ಲಿ ಈ ನಿರ್ಬಂಧಗಳನ್ನು ತೆರವುಗೊಳಿಸಲಾಯಿತು. ದೇಶದಲ್ಲಿ ಅತ್ಯಂತ ಸುಂದರ ಪ್ರಕೃತಿ ಭೂಸೌಂದರ್ಯ ಹೊಂದಿರುವ ರಾಜ್ಯಗಳಲ್ಲಿ ಮೇಘಾಲಯವೂ ಒಂದು. ವಿವಿಧ ಅಸಕ್ತಿ ಹೊಂದಿರುವ ಪ್ರವಾಸಿಗರನ್ನು ಆಕರ್ಷಿಸಲು ಮೇಘಾಲಯ ಸಾಕಷ್ಟು ಪ್ರವಾಸೀ ತಾಣಗಳನ್ನು ಹೊಂದಿದೆ. ಪ್ರವಾಸೋದ್ಯಮದ ಅಂಶಗಳು ರಾಷ್ಟ್ರದಲ್ಲಿ ಉಳಿದುಕೊಂಡಿರುವ ಅತ್ಯಂತ ದಟ್ಟ ಕಾಡುಗಳ ಪೈಕಿ ಗಮನಾರ್ಹ ಅಂಶವು ಮೇಘಾಲಯದಲ್ಲಿದೆ. ಇದರಿಂದಾಗಿ ಇದು ರಾಷ್ಟ್ರದಲ್ಲಿನ ಪ್ರಮುಖ ಪರಿಸರೀಯ ಪ್ರವಾಸೀ ತಾಣಗಳಲ್ಲೊಂದು ಎಂದು ಪರಿಗಣಿಸಲಾಗಿದೆ. ಮೇಘಾಲಯದಲ್ಲಿರುವ ಉಪ-ಉಷ್ಣ ಕಾಡುಗಳು ಹಲವು ಬಗೆಯ ಸಸ್ಯ-ವನ್ಯಜೀವಿಗಳಿಗೆ ಆಸರೆಯಾಗಿವೆ. ಮೇಘಾಲಯದಲ್ಲಿ ಎರಡು ರಾಷ್ಟ್ರೀಯ ಉದ್ಯಾನಗಳು ಹಾಗೂ ಮೂರು ಅಭಯಾರಣ್ಯಗಳಿವೆ. ಪರ್ವತಾರೋಹಣ, ಗುಡ್ಡ ಹತ್ತುವುದು, ಟ್ರೆಕಿಂಗ್‌, ಹೈಕಿಂಗ್‌, ಜಲ-ಸಾಹಸ ಕ್ರೀಡೆಗಳು (ವಾಟರ್‌ ಸ್ಪೋರ್ಟ್ಸ್‌) ಇತ್ಯಾದಿ ಸೇರಿದಂತೆ ವಿವಿಧ ಸಾಹಸ-ಪ್ರವಾಸಗಳಿಗೆ ಮೇಘಾಲಯ ಪ್ರಸಿದ್ಧ ತಾಣವಾಗಿದೆ. ಮೇಘಾಲಯ ರಾಜ್ಯದಲ್ಲಿ ಹಲವು ಟ್ರೆಕಿಂಗ್‌ ಮಾರ್ಗಗಳಲ್ಲಿ ಸಾಗುವಾಗ, ಕಾಡುಪಾಪಗಳು (ಸ್ಲೋ ಲೊರಿಸ್‌), ವಿವಿಧ ಬಗೆಯ ಜಿಂಕೆಗಳು ಹಾಗೂ ಕರಡಿಗಳಂತಹ ಅಪರೂಪದ ಪ್ರಾಣಿಗಳನ್ನು ನೋಡಬಹುದಾಗಿದೆ. ಉಮಿಯಮ್‌ ಕೆರೆಯಲ್ಲಿ ಜಲಕ್ರೀಡೆಯ ಅಂಕಣಗಳಿವೆ. ಇಲ್ಲಿ ಮಾನವ-ಚಾಲಿತ ದೋಣಿಗಳು (ರೋ-ಬೋಟ್‌ಗಳು), ಪಾದ-ಚಾಲಿತ ದೋಣಿಗಳು (ಪ್ಯಾಡ್ಲ್‌ ಬೋಟ್‌ಗಳು), ತೇಲುವ ದೋಣಿಗಳು (ಸೇಯ್ಲಿಂಗ್‌ ಬೋಟ್‌ಗಳು), ಸ್ಕೂಟರ್‌-ದೋಣಿಗಳು (ವಾಟರ್‌ ಸ್ಕೂಟರ್‌ಗಳು) ಹಾಗೂ ವೇಗದ ದೋಣಿಗಳ ಸೌಲಭ್ಯಗಳಿವೆ.ಇಡೀ ರಾಜ್ಯಾದ್ಯಂತ ಸುಮಾರು 500 ಸುಣ್ಣದಕಲ್ಲು ಹಾಗೂ ಮರಳುಗಲ್ಲಿನ ಗುಹೆಗಳಿವೆಯೆಂದು ಅಂದಾಜು ಮಾಡಲಾಗಿದೆ. ಇವುಗಳಲ್ಲಿ ಕೆಲವು ಇಡೀ ಉಪಖಂಡದಲ್ಲೇ ಅತಿ ಉದ್ದನೆಯ ಹಾಗೂ ಅತಿ ಆಳವಾದ ಗುಹೆಗಳೂ ಇವೆ. ಕ್ರೆಮ್‌ ಲಿಯಟ್‌ ಪ್ರಾಹ್‌ ಅತಿ ಉದ್ದನೆಯ ಗುಹೆ ಹಾಗೂ ಸಿನ್ರಾಂಗ್‌ ಪಮಿಯಾಂಗ್‌ ಅತಿ ಆಳವಾದ ಗುಹೆಯಾಗಿದೆ. ಇವೆರಡೂ ಗುಹೆಗಳು ಜೈನ್ ತಿಯಾಗಳು ಹಿಲ್ಸ್‌ನಲ್ಲಿವೆ. ಯೂನೈಟೆಡ್‌ ಕಿಂಗ್ಡಮ್‌, ಜರ್ಮೆನಿ, ಆಸ್ಟ್ರಿಯಾ, ಐರ್ಲೆಂಡ್‌ ಹಾಗೂ US ದೇಶಗಳಿಂದ ಆಗಮಿಸುವ ಗುಹೆ ಪ್ರವಾಸಿಗರು, ಸುಮಾರು ಒಂದು ದಶಕದಿಂದಲೂ ಮೇಘಾಲಯಕ್ಕೆ ಭೇಟಿ ನೀಡಿ ಇಲ್ಲಿನ ಗುಹೆಗಳನ್ನು ವೀಕ್ಷಿಸಲು ಬರುವರಿದ್ದಾರೆ. ಇವುಗಳಲ್ಲಿ ಹಲವು ಗುಹೆಗಳನ್ನು ಇನ್ನೂ ಅಭಿವೃದ್ಧಿ ಪಡಿಸುವುದಾಗಲೀ, ಪ್ರಮುಖ ಪ್ರವಾಸೀ ಸ್ಥಳಗಳನ್ನಾಗಿ ಅಭಿವೃದ್ಧಿಪಡಿಸಿಲ್ಲ. ಪ್ರಮುಖ ಪ್ರವಾಸೀ ತಾಣಗಳು ಚೆರಾಪುಂಜಿ ಈಶಾನ್ಯ ಭಾರತದಲ್ಲೇ ಅತಿ ಜನಪ್ರಿಯ ಪ್ರವಾಸೀ ತಾಣವಾಗಿದೆ. ಇದು ರಾಜಧಾನಿ ಶಿಲಾಂಗ್‌ನ ದಕ್ಷಿಣಕ್ಕಿದೆ. ಈ ಪಟ್ಟಣವು ಈಗ ಬಹಳ ಚಿರಪರಿಚಿತವಾಗಿದ್ದು ಯಾವುದೇ ಪರಿಚಯದ ಅಗತ್ಯವಿಲ್ಲ. ರಮಣೀಯ ಭೂಚಿತ್ರಣವುಳ್ಳ, 50 ಕಿಲೋಮೀಟರ್‌ ಉದ್ದದ ರಸ್ತೆಯು ಚೆರಾಪುಂಜಿ ಮತ್ತು ಶಿಲಾಂಗ್‌ ನಗರಗಳ ನಡುವೆ ಸಂಪರ್ಕವೇರ್ಪಡಿಸುತ್ತದೆ.ರಾಜ್ಯದಲ್ಲಿ ಚಿರಪರಿಚಿತ ಜಲಪಾತಗಳ ಪೈಕಿ ಎಲಿಫೆಂಟ್‌ ಫಾಲ್ಸ್‌‌, ಶಾದ್ಥುಮ್‌ ಫಾಲ್ಸ್‌, ವೇಯ್ನಿಯಾ ಫಾಲ್ಸ್‌, ಬಿಷಪ್‌ ಪಾಲ್ಸ್‌, ನೊಹ್ಕಾಲಿಕೇಯ್‌ ಫಾಲ್ಸ್‌, ಲ್ಯಾಂಗ್ಷಿಯಾಂಗ್‌ ಫಾಲ್ಸ್‌ ಹಾಗೂ ಸ್ವೀಟ್‌ ಫಾಲ್ಸ್‌‌ ಸೇರಿವೆ. ಮಾಸಿನ್ರಾಮ್‌ ಬಳಿ ಜಾಕ್ರೆಮ್‌ನ ಬಿಸಿ ನೀರಿನ ಕಾರಂಜಿಗಳು ರೋಗಗಳನ್ನು ವಾಸಿಮಾಡುವ ಹಾಗೂ ಔಷಧೀಯ ಗುಣಗಳನ್ನು ಹೊಂದಿವೆಯೆಂದು ನಂಬಲಾಗಿದೆ.ಮೇಘಾಲಯದಲ್ಲಿ ಹಲವು ನೈಸರ್ಗಿಕ ಹಾಗೂ ಮಾನವನಿರ್ಮಿತ ದೊಡ್ಡಕೆರೆಗಳಿವೆ. ಗುವಾಹಾಟಿ-ಶಿಲಾಂಗ್‌ ರಸ್ತೆಯಲ್ಲಿರುವ ಉಮಿಯಮ್‌ ಕೆರೆಯು 'ಬಡಾ ಪಾನಿ' (ದೊಡ್ಡ ಪ್ರಮಾಣದ ನಿರುಳ್ಳ ಕೆರೆ) ಎಂದು ಖ್ಯಾತವಾಗಿದೆ. ಇದು ಒಂದು ಆಕರ್ಷಕ ಪ್ರವಾಸೀ ತಾಣವಾಗಿದೆ. ಮೇಘಾಲಯದಲ್ಲಿ ಹಲವು ಉದ್ಯಾನಗಳಿವೆ; ಥಂಗ್‌ಖಾರಂಗ್‌ ಉದ್ಯಾನ, ಇಕೊ-ಪಾರ್ಕ್‌, ಸಸ್ಯಶಾಸ್ತ್ರೀಯ ತೋಟ ಹಾಗೂ ಲೇಡಿ ಹೈದರಿ ಉದ್ಯಾನವು ಇವುಗಳಲ್ಲಿ ಹೆಸರುವಾಸಿ. ಶಿಲಾಂಗ್‌ನಿಂದ 96 ಕಿಲೊಮೀಟರ್‌ ದೂರದಲ್ಲಿರುವ ಡಾಕಿ ಪಟ್ಟಣವು ಬಾಂಗ್ಲಾದೇಶದ ಪ್ರವೇಶ ದ್ವಾರವಾಗಿದೆ. ಇದು ಮೇಘಾಲಯದ ಅತ್ಯುನ್ನತ ಪರ್ವತಶ್ರೇಣಿಗಳು ಹಾಗೂ ಬಾಂಗ್ಲಾದೇಶದ ಗಡಿ ನೆಲೆಗಳ ರಮಣೀಯ ಭೂಚಿತ್ರಣ ಹೊಂದಿದೆ. ಸಮಸ್ಯೆಗಳು ಮತ್ತು ಇತಿಮಿತಿಗಳು ರಾಜ್ಯದಲ್ಲಿ ರಸ್ತೆ ಮತ್ತು ಸಂವಹನ ಜಾಲಗಳು ಕಳಪೆ ಮಟ್ಟದ್ದಾಗಿವೆ. ಶಿಲಾಂಗ್‌-ಜೊವಾಯಿ, ಶಿಲಾಂಗ್‌-ಟುರಾ ಮತ್ತು ಶಿಲಾಂಗ್‌-ಸೊಹ್ರಾ ದಂತಹ ಪ್ರಮುಖ ಮಾರ್ಗಗಳ ಗುಣಮಟ್ಟವು ಚೆನ್ನಾಗಿದ್ದರೂ, ಆಂತರಿಕ ರಸ್ತೆ ಜಾಲಗಳು ಬಹಳ ಕಳಪೆ ಮಟ್ಟದ್ದಾಗಿದ್ದು ಅಸಮರ್ಪಕವಾಗಿ ನಿರ್ವಹಿಸಲಾಗಿವೆ. ರಾಜ್ಯದ ರಾಜಧಾನಿ ಶಿಲಾಂಗ್‌ನ ಹೊರಗೆ ಮಾರುಕಟ್ಟೆಗಳಿರುವುದು ಬಹಳ ವಿರಳ. ಬ್ಯಾಂಕಿಂಗ್ ಸೌಲಭ್ಯಗಳು ಸಹ ಬಹಳ ನಿಯಮಿತವಾಗಿದ್ದು, ಕೇವಲ ಕೆಲವೇ ಅಂಗಡಿ ಮಳಿಗೆಗಳಲ್ಲಿ ಮಾತ್ರ ಕ್ರೆಡಿಟ್‌ ಕಾರ್ಡ್‌ಗಳು ಸ್ವೀಕೃತವಾಗುತ್ತವೆ. ರಾಜ್ಯದ ಅತಿ ಪ್ರಮುಖ ಪ್ರವಾಸೀ ತಾಣಗಳು ಗಾರೊ ಹಿಲ್ಸ್‌ನಲ್ಲಿವೆ. ಆದರೂ, ಈ ತಾಣಗಳು ರಾಜ್ಯದ ಇತರೆ ಭಾಗಗಳೊಂದಿಗೆ ಅಷ್ಟು ಸಮರ್ಪಕ ಸಂಪರ್ಕ ಹೊಂದಿಲ್ಲ. ಒಟ್ಟಾರೆ, ಈಶಾನ್ಯ ಭಾರತದಲ್ಲಿ ಹಲವು ವರ್ಷಗಳಿಂದ ಆತಂಕವಾದದ ಸಮಸ್ಯೆ ಹಾಗೂ ಇದರಿಂದಾಗಿರುವ ಭದ್ರತಾ ಸಮಸ್ಯೆಗಳ ಕಾರಣ, ಪ್ರವಾಸೋದ್ಯಮಕ್ಕೆ ಹಾನಿಯಾಗಿದೆ. ಭಾರತ ಪ್ರವಾಸ ಕೈಗೊಳ್ಳುವ ವಿದೇಶೀಯರಿಗೆ ತಮ್ಮ ಸರ್ಕಾರಗಳು ಈಶಾನ್ಯ ಭಾರತದ ಕಡೆ ಪ್ರಯಾಣಿಸಬೇಡಿ, ಎಂದು ಸಲಹೆ ನೀಡಿರುವುದು ಭದ್ರತೆಯ ಕುರಿತ ಪರಿಕಲ್ಪನೆಯನ್ನು ಇನ್ನಷ್ಟು ಬಿಗುವಾಗಿಸಿದೆ. ಆದರೂ, ಮೇಘಾಲಯ ರಾಜ್ಯದ ಮೇಲೆ ಈಶಾನ್ಯ ವಲಯದಲ್ಲಿನ ಆತಂಕವಾದದ ಸಮಸ್ಯೆಯ ಪ್ರಭಾವ ಕಡಿಮೆಯೆಂದು ಹೇಳಲಾಗಿದೆ. ಶಿಲಾಂಗ್‌ನಲ್ಲಿರುವ ಸದ್ಯದ ಸ್ಥಿತಿಯಲ್ಲಿ ಪ್ರವಾಸಿಗರು ಮೇಘಾಲಯಕ್ಕೆ ಬಂದು ಅದರ ಸುಂದರ ಭೂಚಿತ್ರಣವನ್ನು ನೋಡಿ ಆನಂದಿಸಬಹುದು. ಸರ್ಕಾರ ಮತ್ತು ರಾಜಕೀಯ ರಾಜ್ಯ ಸರ್ಕಾರ ಭಾರತದ ಇತರೆ ರಾಜ್ಯಗಳಂತೆ, ಮೇಘಾಲಯದಲ್ಲಿಯೂ ಸಹ ಒಂದೇ ಸಭೆಯುಳ್ಳ ಶಾಸನವಿದೆ. ರಾಜ್ಯ ಶಾಸನ ಸಭೆಯಲ್ಲಿ ಸದ್ಯಕ್ಕೆ 60 ಜನ ಸದಸ್ಯರಿದ್ದಾರೆ. ಮೇಘಾಲಯ ರಾಜ್ಯದಿಂದ ಇಬ್ಬರು ಲೋಕಸಭಾ (ಭಾರತ ಸಂಸತ್ತಿನ ಕೆಳಮನೆ) ಸದಸ್ಯರಿದ್ದಾರೆ. ಶಿಲಾಂಗ್‌ ಮತ್ತು ಟುರಾ ಸಂಸದೀಯ ಕ್ಷೇತ್ರಗಳಿಂದ ತಲಾ ಒಬ್ಬೊಬ್ಬ ಚುನಾಯಿತ ಸಂಸದರಿದ್ದಾರೆ. ಸಂಸತ್ತಿನ ಮೇಲ್ಮನೆ ರಾಜ್ಯಸಭೆಯಲ್ಲಿ ಒಬ್ಬ ಪ್ರತಿನಿಧಿಯಿದ್ದಾರೆ. ಭಾರತ ಸರ್ಕಾರದಿಂದ ಆಯ್ಕೆ ಮಾಡಲಾದ ರಾಜ್ಯಪಾಲರು ರಾಜ್ಯದ ಔಪಚಾರಿಕ ಮುಖ್ಯಸ್ಥರಾಗಿರುತ್ತಾರೆ. ಆದರೆ, ನೈಜ ಸಂಪೂರ್ಣ ಕಾರ್ಯಕಾರೀ ಅಧಿಕಾರ ರಾಜ್ಯದ ಮುಖ್ಯಮಂತ್ರಿಗಳೊಂದಿಗಿರುತ್ತವೆ.ಮೇಘಾಲಯ ತನ್ನದೇ ಆದ ಉಚ್ಚನ್ಯಾಯಾಲಯ ಹೊಂದಿಲ್ಲ. ಮೇಘಾಲಯ ರಾಜ್ಯವು ಗುವಾಹಟಿ ಉಚ್ಚನ್ಯಾಯಾಲಯದ ವ್ಯಾಪ್ತಿಯೊಳಗಿದೆ. ಗುವಾಹಟಿ ಉಚ್ಚ ನ್ಯಾಯಾಲಯದ ಸಂಚಾರೀ ಪೀಠವು ಶಿಲಾಂಗ್‌ ನಗರದಲ್ಲಿ 1974ರಿಂದಲೂ ಕಾರ್ಯ ನಿರ್ವಹಿಸುತ್ತಿದೆ.ಇವನ್ನೂ ಗಮನಿಸಿ' ರಾಜ್ಯದಲ್ಲಿನ ರಾಜಕೀಯ ಪಕ್ಷಗಳ ಪಟ್ಟಿ'' ಸ್ವಾಯತ್ತ ಜಿಲ್ಲಾ ಪರಿಷತ್ತುಗಳು ದೇಶದ ಗ್ರಾಮಾಂತರ ಜನತೆಗೆ ಸ್ವಾಯತ್ತತೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ, ಭಾರತ ಸಂವಿಧಾನದಲ್ಲಿ ನಿಯಮಗಳನ್ನು ಮಾಡಲಾಯಿತು. ಇದರಂತೆ, ಪಂಚಾಯತಿ ರಾಜ್‌ ಸಂಸ್ಥೆಗಳನ್ನು ಸ್ಥಾಪಿಸಲಾಯಿತು. ಆದರೂ, ಮೇಘಾಲಯ ಹಾಗೂ ಈಶಾನ್ಯ ಭಾಗದ ಅಂಶವಾಗಿದ್ದ ಅಂದಿನ ಆಸ್ಸಾಂ‌ ರಾಜ್ಯದಲ್ಲಿ ಅಪೂರ್ವ ಸಂಪ್ರದಾಯಗಳು ಚಾಲ್ತಿಯಲ್ಲಿದ್ದ ಕಾರಣ, ಆಸ್ಸಾಂ‌ನಲ್ಲಿ ಪ್ರತ್ಯೇಕ ರಾಜಕೀಯ ಮತ್ತು ಆಡಳಿತ ರೂಪಕ್ಕೆ ಚಾಲನೆ ನೀಡುವ ಅಗತ್ಯವಿತ್ತು. ಇನ್ನೂ ಹೆಚ್ಚಾಗಿ, ವಲಯದಲ್ಲಿರುವ ಕೆಲವು ಬುಡಕಟ್ಟು ಸಮುದಾಯಗಳೂ ಸಹ ತಮ್ಮದೇ ಸಾಂಪ್ರದಾಯಿಕ ರಾಜಕೀಯ ವ್ಯವಸ್ಥೆಗಳನ್ನಿಟ್ಟುಕೊಂಡಿದ್ದವು. ಹಾಗಾಗಿ ಈ ಪಂಚಾಯತಿ ರಾಜ್‌ ಸಂಸ್ಥೆಗಳು ಈ ಸಾಂಪ್ರದಾಯಿಕ ಪದ್ದತಿಗಳೊಂದಿಗೆ ಘರ್ಷಣೆ ಸಂಭವಿಸಬಹುದಾಗಿತ್ತು. ಗೋಪಿನಾಥ್‌ ಬೊರ್ಡೊಲೊಯಿ ನೇತೃತ್ವದ ಉಪಸಮಿತಿಯೊಂದರ ಶಿಫಾರಸಿನ ಮೇರೆಗೆ, ಬುಡಕಟ್ಟು ಜನಾಂಗದವರಿಗೆ ಸರಳ ಹಾಗೂ ಕಡಿಮೆ ಖರ್ಚಿನ ಸ್ಥಳೀಯ ಸ್ವಾಯತ್ತತೆ ನೀಡಲು, ಸಂವಿಧಾನಕ್ಕೆ ಆರನೆಯ ವಿಧಿಯನ್ನು ಸೇರಿಸಲಾಗಿತ್ತು. ಆರನೆಯ ವಿಧಿಯ ಪ್ರಕಾರ, ಇಂದಿನ ಮೇಘಾಲಯದಲ್ಲಿರುವ ವಲಯಗಳು ಸೇರಿದಂತೆ, ಈಶಾನ್ಯ ಭಾರತದ ಕೆಲವು ವಲಯಗಳಲ್ಲಿ ಸ್ವಯಮಾಧಿಕಾರದ ಜಿಲ್ಲಾ ಪರಿಷತ್‌ಗಳ (ADCಗಳ) ರಚನೆಗಾಗಿ ಅವಕಾಶ ಒದಗಿಸಿತು. ಆರನೆಯ ವಿಧಿಯಡಿ ಈ ಸ್ವಯಮಾಧಿಕಾರದ ಜಿಲ್ಲಾ ಪರಿಷತ್‌ಗಳ (ADCಗಳ) ರಚನೆ ಮತ್ತು ನಿರ್ವಹಣೆಯ ರೀತಿಯನ್ನು ವಿಸ್ತೃತವಾಗಿ ನಮೂದಿಸಿ, ADCಗಳ ಅಧಿಕಾರ ವ್ಯಾಪ್ತಿಯನ್ನು ಸಹ ನಮೂದಿಸಲಾಯಿತು. ಸದ್ಯಕ್ಕೆ ಮೇಘಾಲಯದಲ್ಲಿ ಮೂರು ADCಗಳಿವೆ: ಖಾಸಿ ಹಿಲ್ಸ್‌ ಸ್ವಯಮಾಧಿಕಾರ ಜಿಲ್ಲಾ ಪರಿಷತ್‌, ಗಾರೊ ಹಿಲ್ಸ್‌ ಸ್ವಯಮಾಧಿಕಾರ ಜಿಲ್ಲಾ ಪರಿಷತ್‌ ಹಾಗೂ ಜೈನ್ ತಿಯಾಗಳು ಹಿಲ್ಸ್‌ ಸ್ವಯಮಾಧಿಕಾರ ಜಿಲ್ಲಾ ಪರಿಷತ್‌. ಸಾಂಪ್ರದಾಯಿಕ ರಾಜಕೀಯ ಸಂಸ್ಥೆಗಳು ಮೂರೂ ಪ್ರಮುಖ ಜನಾಂಗೀಯ ಬುಡಕಟ್ಟು ಗುಂಪುಗಳಾದ ಖಾಸಿಗಳು, ಜೈನ್ ತಿಯಾಗಳುಗಳು ಹಾಗೂ ಗಾರೊಗಳು ತಮ್ಮದೇ ಆದ ಸಾಂಪ್ರದಾಯಿಕ ರಾಜಕೀಯ ಸಂಸ್ಥೆಗಳನ್ನು ಹೊಂದಿವೆ. ಇವು ನೂರಾರು ವರ್ಷಗಳಿಂದಲೂ ಚಾಲ್ತಿಯಲ್ಲಿವೆ. ಈ ಮೂರೂ ರಾಜಕೀಯ ಸಂಸ್ಥೆಗಳು ತಕ್ಕ ಮಟ್ಟಿಗೆ ಸಮರ್ಪಕವಾಗಿ ಅಭಿವೃದ್ದಿ ಹೊಂದಿದ್ದು, ಗ್ರಾಮ ಮಟ್ಟ, ಪಂಗಡ ಮಟ್ಟ ಹಾಗೂ ರಾಜ್ಯ ಮಟ್ಟ ಸೇರಿದಂತೆ ಹಲವು ಸ್ತರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. ಖಾಸಿಗಳ ಸಾಂಪ್ರದಾಯಿಕ ರಾಜಕೀಯ ವ್ಯವಸ್ಥೆಯಲ್ಲಿ, ಪ್ರತಿಯೊಂದು ಸಮುದಾಯವು ತನ್ನದೇ ಆದ ಪರಿಷತ್‌ ಹೊಂದಿದೆ. ಇದಕ್ಕೆ 'ದರ್ಬಾರ್‌ ಕುರ್‌ ಎನ್ನಲಾಗಿದೆ. ಮುಖ್ಯಸ್ಥನು ಇದರ ಅಧ್ಯಕ್ಷತೆ ವಹಿಸುತ್ತಿದ್ದನು. ಆ ಪಂಗಡದ ಆಂತರಿಕ ವಿಚಾರಗಳನ್ನು ದರ್ಬಾರ್‌ ಅಥವಾ ಪರಿಷತ್‌ ನಿರ್ವಹಿಸುತ್ತಿತ್ತು. ಇದೇ ರೀತಿ, ಪ್ರತಿಯೊಂದು ಗ್ರಾಮಕ್ಕೂ 'ಡರ್ಬನ್‌ ಷ್ನಾಂಗ್‌' (ಗ್ರಾಮ ದರ್ಬಾರ್‌ ಅಥವಾ ಪರಿಷತ್‌) ಎಂಬ ಒಂದು ಸ್ಥಳೀಯ ಶಾಸನವಿತ್ತು. ಗ್ರಾಮದ ಮುಖ್ಯಸ್ಥರು ಇದರ ಅಧ್ಯಕ್ಷತೆ ವಹಿಸುತ್ತಿದ್ದರು. ಈ ಪರಿಷತ್‌ಗಳು ಅಥವಾ ದರ್ಬಾರ್‌ಗಳು, ನೈರ್ಮಲ್ಯ, ನೀರು ಸರಬರಾಜು, ಆರೋಗ್ಯ, ರಸ್ತೆಗಳು, ಶಿಕ್ಷಣ ಮತ್ತು ವ್ಯಾಜ್ಯಗಳ ಇತ್ಯರ್ಥದಂತಹ ಸಾಮಾನ್ಯ ವಿಚಾರಗಳಲ್ಲಿ ಆಡಳಿತದ ಪಾತ್ರ ಮುಖ್ಯವಾಗಿತ್ತು. ಆದರೂ, ಅಂತರ-ಗ್ರಾಮ ವ್ಯಾಜ್ಯಗಳನ್ನು ಅಕ್ಕಪಕ್ಕದ ಖಾಸಿ ಗ್ರಾಮಗಳನ್ನು ಒಳಗೊಂಡ ಒಂದು ರಾಜಕೀಯ ಘಟಕದ ಮೂಲಕ ಇತ್ಯರ್ಥಗೊಳಿಸಲಾಗುತ್ತಿತ್ತು. ಈ ರಾಜಕೀಯ ಘಟಕಕ್ಕೆ (ಬಲಾಢ್ಯ ಸಂಸ್ಥೆ) ರೇಯ್ಡ್‌ ಎಂದು ಕರೆಯಲಾಗುತ್ತಿತ್ತು. ರೇಯ್ಡ್‌ ತನ್ನದೇ ಆದ ರೇಯ್ಡ್‌ ದರ್ಬಾರ್‌ ಎಂಬ ಪರಿಷತ್ತನ್ನು ಹೊಂದಿತ್ತು. ಬಸನ್‌ರು, ಲಿಂಗ್ಡೊಹ್‌ಗಳು ಅಥವಾ ಸರ್ದಾರ್‌ಗಳು ಎಂಬ ಚುನಾಯಿತ ಮುಖ್ಯಸ್ಥರು ಈ ರೇಯ್ಡ್‌ ದರ್ಬಾರ್‌ನ ಅಧ್ಯಕ್ಷತೆ ವಹಿಸುತ್ತಿದ್ದರು. ರೇಯ್ಡ್‌ಗಿಂತಲೂ ಮೇಲಾಗಿ, ಸಯೀಮ್ಷಿಪ್‌ ಎಂಬ ಸರ್ವೊನ್ನತ ರಾಜಕೀಯ ಪ್ರಾಧಿಕಾರವಿತ್ತು. ಸಯೀಮ್ಷಿಪ್‌ ಹಲವಾರು ರೇಯ್ಡ್‌ಗಳ ಸಮ್ಮಿಲನವಾಗಿತ್ತು. ಸಯೀಮ್‌ (ರಾಜ) ಇದರ ಅಧ್ಯಕ್ಷತೆ ವಹಿಸುವವನಾಗಿದ್ದನು. ಸಯೀಮ್‌ 'ದರ್ಬಾರ್‌ ಹಿಮ' ಎಂಬ ರಾಜ್ಯ ಶಾಸನದ ಮೂಲಕ ಖಾಸಿ ರಾಜ್ಯವನ್ನು ಆಳುತ್ತಿದ್ದರು. ಚುನಾವಣೆ ಬಹುಪಾಲು ವಯಸ್ಕ ಪುರುಷ ಮತದಾರರ ಮೂಲಕ ನಡೆಸಲಾಗುತ್ತಿತ್ತು.ಜೈನ್ ತಿಯಾಗಳುಗಳು ಖಾಸಿಗಳನ್ನು ಭಾಗಶಃ ಹೋಲುವಂತೆ ಮೂರು ಹಂತಗಳ ರಾಜಕೀಯ ವ್ಯವಸ್ಥೆ ಹೊಂದಿದ್ದರು. ಸಯೀಮ್‌ ಇದರ ಸರ್ವೋನ್ನತ ರಾಜಕೀಯ ಪ್ರಾಧಿಕಾರವಾಗಿದ್ದರು. ಈ ರಚನೆಯ ಎರಡನೆಯ ಮಟ್ಟದಲ್ಲಿ 'ರೇಯ್ಡ್‌ಗಳು' ಎಂಬ ಜೈನ್ ತಿಯಾಗಳ ಗ್ರಾಮಗಳ ಸಮ್ಮಿಲನವಿತ್ತು. ಡೊಲೊಯ್‌ಗಳು ಇವುಗಳ ಮುಖ್ಯಸ್ಥರಾಗಿದ್ದರು. ಇವರು ರೇಯ್ಡ್‌ ಮಟ್ಟದಲ್ಲಿ, ಕಾರ್ಯಕಾರಿಯ, ದಂಡಾಧಿಕಾರಿಯ, ಧಾರ್ಮಿಕ ಹಾಗೂ ವಿಧ್ಯುಕ್ತ ಕಾರ್ಯಗಳನ್ನು ನಿರ್ವಹಿಸುತ್ತಿದ್ದರು. ಅತಿ ಕೆಳಗಿನ ಮಟ್ಟದಲ್ಲಿ, ಗ್ರಾಮದ ಮುಖ್ಯಸ್ಥರಿದ್ದರು. ಪ್ರತಿಯೊಂದು ಆಡಳಿತ ಮಟ್ಟವೂ ತನ್ನದೇ ಆದ ಪರಿಷತ್‌ ಅಥವಾ ದರ್ಬಾರ್‌ಗಳನ್ನು ಹೊಂದಿತ್ತು. ಬಹಳಷ್ಟು ಚುನಾವಣೆಗಳನ್ನು ವಯಸ್ಕ ಪುರುಷ ಮತದಾರರ ಮೂಲಕ ನಡೆಸಲಾಗುತ್ತಿತ್ತು.ಗಾರೊಗಳ ಸಾಂಪ್ರದಾಯಿಕ ವ್ಯವಸ್ಥೆಗಳಲ್ಲಿ, ಗಾರೊ ಗ್ರಾಮಗಳ ಸಮೂಹವು ಸೇರಿ ಒಂದು A·king ಆಗಿತ್ತು. ಗಾರೊಗಳ ರಾಜಕೀಯ ಸಂಸ್ಥೆಯಲ್ಲಿ ಏಕೈಕ ರಾಜಕೀಯ ಮತ್ತು ಆಡಳಿತ ಪ್ರಾಧಿಕಾರವಾದ ನೊಕ್ಮಾಗಳ ಮೇಲ್ವಿಚಾರಣೆಯಲ್ಲಿ A·king ಕಾರ್ಯನಿರ್ವಹಿಸುತ್ತಿತ್ತು. ನೊಕ್ಮಾ ನ್ಯಾಯಾಂಗ ಹಾಗೂ ಶಾಸನದ ಕಾರ್ಯ ನಿರ್ವಹಿಸುತ್ತಿದ್ದರು. A·king ಸಂಬಂಧಿತ ವಿಚಾರಗಳನ್ನು ಚರ್ಚಿಸಿ ಬಗೆಹರಿಸಲು ನೊಕ್ಮಾಗಳು ಸಭೆ ಸೇರುತ್ತಿದ್ದರು. ಗಾರೊಗಳಲ್ಲಿ ಸಮರ್ಪಕವಾಗಿ ಸಂಘಟಿತ ಪರಿಷತ್‌ಗಳಾಗಲಿ ದರ್ಬಾರ್‌ಗಳಾಗಲೀ ಇರಲಿಲ್ಲ.ಕಳೆದ 3 ಮಾರ್ಚ್‌ 2008ರಂದು, ದೂರದ ಈಶಾನ್ಯ ಭಾರತದ ರಾಜ್ಯ ಮೇಘಾಲಯದಲ್ಲಿ ನಡೆದ ವಿಧಾನ ಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿದ ವಿಚತ್ರ ಹೆಸರುಗಳುಳ್ಳ ಅಭ್ಯರ್ಥಿಗಳ ಪೈಕಿ ಫ್ರಾಂಕೆನ್ಸ್ಟೀನ್‌ ಮೊಮಿನ್‌, ಬಿಲ್ಲಿ ಕಿಡ್‌ ಸಂಗ್ಮಾ ಹಾಗೂ ಅಡೊಲ್ಫ್‌ ಲು ಹಿಟ್ಲರ್‌ ಮಾರಾಕ್‌ ಎಂಬ ಮೂವರು ಪುರುಷರಿದ್ದರು. ಕಳೆದ, 5 ಫೆಬ್ರವರಿ 2008ರಂದು ವರದಿಯಾದಂತೆ, 60 ಚುನಾವಣಾ ಕ್ಷೇತ್ರಗಳಿಗಾಗಿ 331 ಅಭ್ಯರ್ಥಿಗಳು ಚುನಾವಣೆಯ ಕಣದಲ್ಲಿದ್ದರು. ಇವರಲ್ಲಿ ವಿಚಿತ್ರ ಹೆಸರುಗಳಿಗೆ ಯಾವುದೇ ಬರವಿರಲಿಲ್ಲ. ಹಿಟ್ಲರ್‌, ಫ್ರಾಂಕೆನ್ಸ್ಟೀನ್‌ ಬ್ಯಾಟ್ಲ್‌ ಫಾರ್‌ ವೋಟ್ಸ್‌ ಇನ್‌ ಇಂಡಿಯಾ. ಅಂಕಿ-ಅಂಶಗಳು ವಿಸ್ತೀರ್ಣ: 22,429 ಚದರ ಕಿಲೋಮೀಟರ್‌ಗಳು ಜನಸಂಖ್ಯೆ: 2,175,000 (2000) ಜನಾಂಗೀಯ ಗುಂಪುಗಳು ಖಾಸಿ: 49% ಗಾರೊ: 34% ಬಂಗಾಳಿ: 2.5% ನೇಪಾಳಿ: 4% ಶೇಖ್‌: 2.3% ಕೋಚ್‌: 2.8% ಹಾಜೋಂಗ್‌: 1.8% ಇತರರು: 6.4% ಧರ್ಮಗಳು: ಕ್ರಿಶ್ಚಿಯನ್‌: 70.3% ಆನಿಮಿಸ್ಟ್‌: 11.5% ಹಿಂದೂ: 13.3% ಮುಸ್ಲಿಮ್‌: 4.3% ರಾಜಧಾನಿ: ಶಿಲಾಂಗ್‌ (ಜನಸಂಖ್ಯೆ 260,000) ಆಕರಗಳು ಗೋಪಾಲಕೃಷ್ಣನ್‌ ಆರ್‌, ಮೇಘಾಲಯ - ಲ್ಯಾಂಡ್‌ ಅಂಡ್‌ ಪೀಪಲ್‌, ISBN 81-7117-146-X ಥಾಮಸ್‌ ಯುಜೀನ್‌ ಡಿ. – ಪಾವರ್ಟಿ ಅಂಡ್‌ ರುರಲ್‌ ಡೆವೆಲಪ್ಮೆಂಟ್‌ ಇನ್‌ ಮೇಘಾಲಯ ಪಾವರ್‌ ಟು ದಿ ಪೀಪಲ್‌ ಇನ್‌ ಮೇಘಾಲಯ, ರೀಜೆನ್ಸಿ ಪಬ್ಲಿಷರ್ಸ್‌. ಡಿ.ಟಿ. ಜಿಂಬಾ. - ಜಿಯೊಗ್ರಫಿ ಆಫ್‌ ಮೇಘಾಲಯ ಡಾ. ಎಸ್‌. ಆರ್‌. ಜೋಶಿ ಹಾಗೂ ಶ್ರೀಮತಿ ಎನ್‌. ಜೋಶಿ - ಮ್ಯಾನ್‌ ಅಂಡ್‌ ಹಿಸ್‌ ಎನ್ವಿರಾನ್ಮೆಂಟ್‌ (ಹಿಮಾಲಯ ಬುಕ್‌ ಹೌಸ್‌, ಶಿಲಾಂಗ್‌) ಡಾ. ಬಿ. ಆರ್‌. ಖರ್ಲುಖಿ - ಕಾ ರೀತಿ ಸೈನ್ಷಾರ್‌ ಜೋಂಗ್‌ ಕಾ ರಿ ಇಂಡಿಯಾ. (ಹಿಮಾಲಯ ಬುಕ್‌ ಹೌಸ್‌ ಶಿಲಾಂಗ್‌) ಡಾ. ಕಿನ್ಫಾಮ್‌ ಸಿಂಗ್‌ ನೊನ್ಕಿನ್ರಿಹ್‌ - Ban Sngewthuh ia ka poitri. (ಹಿಮಾಲಯ ಬುಕ್‌ ಹೌಸ್‌ ಶಿಲಾಂಗ್‌) ಡಾ. ಎಸ್‌. ಎಂ. ಸುಂಗೊಹ್‌ - ಎಜುಕೇಷನಲ್‌ ಎವ್ಯಾಲ್ಯುಯೇಷನ್‌ ಅಂಡ್‌ ಟೆಸ್ಟಿಂಗ್‌. (ಹಿಮಾಲಯ ಬುಕ್‌ ಹೌಸ್‌ ಶಿಲಾಂಗ್‌) ಡಾ. ಜೇಯ್ನಾಲ್‌ ಯು. ಅಹ್ಮದ್‌ - ಬ್ಯುಸಿನೆಸ್‌ ಎನ್ವಿರಾನ್ಮೆಂಟ್‌. (ಹಿಮಾಲಯ ಬುಕ್‌ ಹೌಸ್‌ ಶಿಲಾಂಗ್‌) ಡಾ. ಅರ್‌. ಎಂ. ಲಿಂಗ್ದೊಹ್‌ - ka kot pule Shaphang ka Jinghikai ia ka Jingkoit Jingkhiah Bynta (1\2\3\4)(H B H) ಹೊರಗಿನ ಕೊಂಡಿಗಳು ಮೇಘಾಲಯ ಈಶಾನ್ಯ ಭಾರತ ಭಾರತದ ರಾಜ್ಯಗಳು ಮತ್ತು ಪ್ರಾಂತ್ಯಗಳು ಸಪ್ತ ಸಹೋದರೀ ರಾಜ್ಯಗಳು ಇಸವಿ 1972ರಲ್ಲಿ ಸ್ಥಾಪಿಸಲಾದ ರಾಜ್ಯಗಳು ಮತ್ತು ಆಡಳಿತ ಪ್ರದೇಶಗಳು.