id
stringlengths
3
6
url
stringlengths
33
779
title
stringlengths
1
95
text
stringlengths
3
190k
3137
https://kn.wikipedia.org/wiki/%E0%B2%85%E0%B2%A3%E0%B3%8D%E0%B2%A3%E0%B2%A8%20%E0%B2%A8%E0%B3%86%E0%B2%A8%E0%B2%AA%E0%B3%81
ಅಣ್ಣನ ನೆನಪು
ಅಣ್ಣನ ನೆನಪು ಪೂರ್ಣಚಂದ್ರ ತೇಜಸ್ವಿಯವರ ಕೃತಿ. ಕುವೆಂಪು ಮಹಾಕವಿ, ಪ್ರಸಿಧ್ಧ ಕನ್ನಡ ಲೇಖಕ, "ರಾಮಾಯಣ ದರ್ಶನಂ" ಕೃತಿಗಾಗಿ ಜ್ಞಾನಪೀಠ ಪಡೆದು ಕನ್ನಡಕ್ಕೆ ಹೆಮ್ಮೆಯನ್ನು ತಂದುಕೊಟ್ಟವರು. ಕುವೆಂಪುರವರನ್ನು ಒಬ್ಬ ತಂದೆಯಾಗಿ, ಉಪ್ಪು ಖಾರ ತಿನ್ನುವ ಮನುಷ್ಯನಾಗಿ ಚಿತ್ರಿಸಿದ ಒಂದು ಅಪರೂಪದ ಕೃತಿ 'ಅಣ್ಣನ ನೆನಪು'. ಪೂರ್ಣಚಂದ್ರ ತೇಜಸ್ವಿಯವರು ಅವರ ತಂದೆಯ ಬಗ್ಗೆ ಬರೆದಿದ್ದಾರೆ. ತೇಜಸ್ವಿಯವರ ಅನುಭವ ಕಥನ ಈ ಪುಸ್ತಕ ತೇಜಸ್ವಿಯವರ ಅನುಭವ ಕಥನಗಳ ಸಂಕಲನ. ಇದರಲ್ಲಿರುವ ಪ್ರತಿಯೊಂದು ಅಧ್ಯಾಯವು ಹಾಸ್ಯಬುಗ್ಗೆಯನ್ನು ತರಿಸುವುದರೊಂದಿಗೆ ಕುವೆಂಪುರವರ ವ್ಯಕ್ತಿತ್ವವನ್ನು ಪರಿಚಯಿಸುತ್ತದೆ. ತೇಜಸ್ವಿ ರಾಷ್ಟ್ರಕವಿ ಕುವೆಂಪು ಅವರಂತಹ ಅದ್ಭುತ ಸಾಹಿತಿಯ ಮಗನಾಗಿಯೂ ತಂದೆಯ ಸಾಹಿತ್ಯದ ನೆರಳಿಂದ ದೂರ ಸಾಗಿ ತಮ್ಮದೇ ಆದ ಪ್ರತ್ಯೇಕ ಶೈಲಿಯಿಂದ, ವೈವಿಧ್ಯಮಯ ಬರಹಗಳಿಂದ ಕನ್ನಡಸಾಹಿತ್ಯಲೋಕದಲ್ಲಿ ಹೆಸರಾದವರು. ಅವರು ಬರೆದ "ಅಣ್ಣನ ನೆನಪು ಯೋಗಿ ಅಣ್ಣ " ನಿಜಕ್ಕೂ ಒಂದು ಸಂಗ್ರಹಯೋಗ್ಯ ಕೃತಿ. ಇದು ಅವರ ಆತ್ಮಕಥೆಯೋ, ಅವರ ಅಣ್ಣನ ನೆನಪೋ, ಕನ್ನಡ ಸಂಸ್ಕೃತಿ ಇತಿಹಾಸದ ಅವಲೋಕನವೋ ಎಂಬ ಗೊಂದಲ ತೇಜಸ್ವಿಯವರಂತೆಯೇ ನಮಗೂ ಕಾಡಿದರೂ ಅದು ಇವೆಲ್ಲವುಗಳ ಮಿಶ್ರಣವಾಗಿದ್ದು, ಓದುಗರನ್ನು ಆ ಕಾಲದಲ್ಲಿ ವಿಹರಿಸುವಂತೆ ಮಾಡುತ್ತದೆ. ಎಲ್ಲೂ ತಂದೆಯ ಗುಣಗಾನ ಮಾಡದೆ , ಅವರ ನೈಜ ವ್ಯಕ್ತಿತ್ವವನ್ನು ಒಬ್ಬ ಸಾಮಾನ್ಯ ಮಗನಂತೆ ಕಟ್ಟಿಕೊಡುತ್ತಾರೆ ತೇಜಸ್ವಿ. ಕುವೆಂಪು ವ್ಯಕ್ತಿತ್ವದಲ್ಲಿದ್ದ ಸಂಕೀರ್ಣತೆಯನ್ನು ವಿವರಿಸುತ್ತಾ ಅವರು ಹೇಳುತ್ತಾರೆ. "ಅವರನ್ನು ಕವಿಯಾಗಿಯೋ ಕಾದಂಬರಿಕಾರರನ್ನಾಗಿಯೊ ತತ್ವ ಮೀಮಾಂಸಕರನ್ನಾಗಿಯೊ ಪರಿಗಣಿಸಿ ಸೂರ್ಯ ಮಾತು ಯೋಗಿ ದಾಗ, ಅಥವಾ ಬಿಡಿಬಿಡಿಯಾಗಿ ಕಥೆ ಕಾವ್ಯವನ್ನವಲೋಕಿಸಿದಾಗ ಸರಳವಾಗಿ ಕಾಣುವ ವ್ಯಕ್ತಿತ್ವ ಒಟ್ಟಂದದಲ್ಲಿ ನೋಡಿದ ಕೂಡಲೆ ಅತ್ಯಂತ ಸಂಕೀರ್ಣವಾಗಿ ಕಾಣುತ್ತದೆ. ಒಂದುಕಡೆ ಇಂಗ್ಲೀಷ್ ಜ್ಞಾನ ಮುಖ್ಯವೆಂದು ಶೂದ್ರರಿಗೆಲ್ಲ ಕರೆಕೊಡುತ್ತಾರೆ. ಕನ್ನಡದ ವಿಷಯಕ್ಕೆ ಬಂದಾಗ ಇಂಗ್ಲಿಷ್ ಅನ್ನು ಪೂತನಿಯೆಂದು ಟೀಕಿಸುತ್ತಾರೆ. ಭಾರತೀಯ ಸನಾತನ ಧರ್ಮದ ಕಟು ವಿಮರ್ಶೆ ಕುವೆಂಪು ಅವರಲ್ಲಿ ಕಾಣಬಹುದು. ಅಂತೆಯೆ ಉಪನಿಷದ್ ದರ್ಶನಗಳ ಆರಾಧನೆಯನ್ನೂ ಅವರಲ್ಲಿ ಕಾಣಬಹುದು . ಅವರ ಜೀವನಾದ್ಯಂತ ಎಂದೂ ಯಾವ ದೇವಸ್ಥಾನಕ್ಕೂ ಕಾಲಿಡಲಿಲ್ಲ. ಆದರೆ ಅಷ್ಟೆ ಗಾಢವಾಗಿ ಧ್ಯಾನ ತಪಸ್ಯೆ ಪ್ರಾರ್ಥನೆಗಳನ್ನು ಪ್ರತಿಪಾದಿಸಿದರು." ಕುವೆಂಪು ವ್ಯಕ್ತಿತ್ವದಲ್ಲಿದ್ದ ಮಾನವೀಯತೆ , ಮುಗ್ದತೆ , ವೈಜ್ಞಾನಿಕ ಮನೋಭಾವ , ನಿಷ್ಟುರತೆಗಳನ್ನು ಅವರು ಅನೇಕ ಪ್ರಸಂಗಗಳ ಮುಖಾಂತರವೇ ತಿಳಿಸುತ್ತಾರೆ. ಸಾರ್ವಜನಿಕವಾಗಿ ತಮ್ಮ ಮಕ್ಕಳು ಮಾಡುವ ಪುಂಡಾಟಿಕೆಯನ್ನು ಸಮರ್ಥಿಸಿಕೊಳ್ಳುವ ಸೆಲೆಬ್ರಿಟಿಗಳಿಂದಲೇ ತುಂಬಿರುವ ಈ ನಮ್ಮ ದೇಶದಲ್ಲಿ ಮಗನ ಮೇಲೆ ವಾರೆಂಟ್ ಬಂದರೂ ತಮ್ಮ ಜನಪ್ರಿಯತೆಯನ್ನು ದುರುಪಯೋಗಪಡಿಸಿಕೊಳ್ಳದೇ ಮಗನಿಗೆ ಬುದ್ಧಿ ಹೇಳುವ ಕುವೆಂಪು ವಿಶೇಷವೆನಿಸುತ್ತಾರೆ. ತಂದೆಯ ವೈಸ್ ಚಾನ್ಸಲರ್ ಹುದ್ದೆ ಅವರ ಬರವಣಿಗೆಗೆ ತೊಂದರೆಕೊಟ್ಟಿತೆಂದೇ ತೇಜಸ್ವಿ ಭಾವಿಸುತ್ತಾರೆ. ಬಹುಶಃ ತನ್ನ ಸ್ವಾತಂತ್ರಕ್ಕೆ ಧಕ್ಕೆ ತರಬಹುದಾದ ಇಂತಹ ಎಲ್ಲಾ ಅಮಿಷಗಳನ್ನು ಮೀರಲೆಂದೇ ಪೇಟೆಯಲ್ಲೇ ಹುಟ್ಟಿಬೆಳೆದ ತೇಜಸ್ವಿ ಹಳ್ಳಿಯಲ್ಲಿ ನೆಲೆಸಿದ್ದರೇನೋ. ವ್ಯಕ್ತಿಯೊಬ್ಬರು ಎಷ್ಟೇ ಪ್ರಸಿದ್ಧರಾದರೂ ಅವರ ಮಕ್ಕಳಿಗೆ ಅಪ್ಪನೇ ಅಲ್ಲವೆ ? ಇದನ್ನು ತೇಜಸ್ವಿಯವರು ತಮ್ಮದೇ ಶೈಲಿಯಲ್ಲಿ ಹೀಗೆ ಹೇಳುತ್ತಾರೆ . "ನಾನು ಕಣ್ಣು ಬಿಟ್ಟಗ ಕಂಡಿದ್ದೇ ಅಣ್ಣ ಅಮ್ಮನನ್ನು , ನನಗಾಗ ಅವರು ಕವಿಯೂ ಅಲ್ಲ ದಾರ್ಶನಿಕರೂ ಅಲ್ಲ. ಗಾಳಿ ಬೆಳಕು ಮಳೆ ಬಿಸಿಲುಗಳ ವಿಸ್ತರಣೆಯಾಗಿ ಅವರು ನನಗೆ ಗೋಚರಿಸುತ್ತಾ ಹೋದರು. "ಅದ್ದರಿಂದಲೇ ಅವರು ಎಲ್ಲರ ಮನೆಯಲ್ಲಿ ನಡೆಯುವಂತ ಸರಳ ಸಂಗತಿಗಳ ನಿರೂಪಣೆಯಿಂದಲೇ ತನ್ನ ಅಪ್ಪನನ್ನು ಚಿತ್ರಿಸುತ್ತಾರೆ. ಅದನ್ನು ಆಕ್ಷೇಪಿಸಿದವರಿಗೆ ಅವರು ಕೊಡುವ ಉತ್ತರವೂ ಸೊಗಸಾಗಿದೆ " ನನಗೆ ತಿಳಿದ ಹಾಗೆ ಅಣ್ಣ ತಮಾಷೆ ವಿನೋದಗಳೊಂದಿಗೆ ಅನ್ನ ತಿನ್ನುವ ನಮ್ಮೆಲ್ಲರಂತೆ ಬದುಕಿದ್ದರು. ಬದುಕನ್ನು ಒಂದು ವ್ರತದಂತೆ ಪರಿಗಣಿಸಿ ವ್ರತನಿಷ್ಟರಂತೆ ಅವಡುಗಚ್ಚಿ ಜೀವಿಸುತ್ತಿದ್ದುದನ್ನು ನಾನಂತೂ ಕಂಡಿಲ್ಲ." ಕೆಲವುಕಡೆ ಇದು ಅವಶ್ಯವಿರಲಿಲ್ಲವೆನ್ನಿಸುವಂತಹ ಪ್ರಸಂಗಗಳ ನಿರೂಪಣೆಯೂ ಇದೆ ಗೆಳೆಯ ಶಾಮಣ್ಣನ ಬೈಕ್ , ಸಂಗೀತ ಕಲಿಯುವ ಉತ್ಸಾಹದ ಬಗ್ಗೆ ಸ್ವಲ್ಪ ಹೆಚ್ಚೇ ಬರೆದಿದ್ದಾರಾದರು ಅದರ ಹಾಸ್ಯಮಯ ಧಾಟಿ ಓದಿಸಿಕೊಂಡು ಹೋಗುವುದರಿಂದ ರಸಭಂಗವಾಗುವುದಿಲ್ಲ. ಇಂಗ್ಲೀಷ್ ಭಾಷೆಯ ಪರೀಕ್ಷೆಯಲ್ಲಿ ಪದೇ ಪದೇ ಫೇಲಾಗುತ್ತಿದ್ದ ತೇಜಸ್ವಿಗೆ "ಭಾಷೆಯ ಬಗ್ಗೇ ಎಂದೂ ಅಂಧಾಬಿಮಾನಕ್ಕೊಳಗಾಗಬಾರದು. ನಮ್ಮ ಭಾಷೆಯಲ್ಲಿ ಏನೂ ಇಲ್ಲ ಎಂದುಕೊಳ್ಳುವುದಕ್ಕಿಂತ ಎಲ್ಲಾ ಇದೆ ಎಂದುಕೊಳ್ಳುವುದು ಅಪಾಯ" ಎಂದು ಹೇಳಿದ ಕುವೆಂಪು ಅವರ ವಿವೇಚನೆಯ ಅಗತ್ಯ ಇಂದು ಎಲ್ಲರಲ್ಲೂ ಮೂಡಬೇಕಿದೆ. ತಮ್ಮ ಬಾಲ್ಯ, ಯೌವ್ವನಕಾಲದ ಘಟನೆಗಳನ್ನು ತುಂಬ ಹಾಸ್ಯಮಯ ಶೈಲಿಯಲ್ಲಿ ನಿರೂಪಿಸುವ ತೇಜಸ್ವಿ , ನಂತರ ಆ ಕಾಲದ ಸಾಹಿತ್ಯಕ ವಿಪ್ಲವಗಳನ್ನು ವಿವರಿಸುವಾಗ ತುಂಬ ಗಂಭೀರವಾದ ಭಾಷಾಪ್ರಯೋಗಕ್ಕಿಳಿಯುತ್ತಾರೆ. ಆ ಕಾಲಘಟ್ಟದಲ್ಲಿ ನಡೆದ ನವ್ಯ , ನವೋದಯಗಳ ನಡುವಿನ ತಿಕ್ಕಾಟದ ಪರಿಚಯವನ್ನೂ ಮಾಡಿಕೊಡುತ್ತಾರೆ ತೇಜಸ್ವಿ . ಆಗಿನ ಕಾಲದಲ್ಲಿ ಸಾಹಿತ್ಯಕವಲಯದಲ್ಲಿ ನಡೆದಿರಬಹುದಾದ ಜಾತೀಯ, ತಾತ್ವಿಕ, ಸಂಘರ್ಷಗಳ ಅರಿವಿರದ ಅದರ ಗೊಡವೆ ಬೇಕಿರದ ನಮ್ಮ ತಲೆಮಾರಿನ ನನ್ನಂತಹ ಸಾಮಾನ್ಯ ಓದುಗರಿಗೆ ಇದು ಸ್ವಲ್ಪ ಗೊಂದಲ ಎನಿಸುತ್ತದೆ. ಈ ಕೃತಿ ವಿಶಿಷ್ಟವೆನಿಸುವುದು , ಇದು ಕುವೆಂಪು ವ್ಯಕ್ತಿತ್ವದ ಜೊತೆಜೊತೆಗೇ ತೇಜಸ್ವಿಯವರ ವ್ಯಕ್ತಿತ್ವದ ಪರಿಚಯವನ್ನೂ ಮಾಡಿಕೊಡುವ ಕಾರಣಕ್ಕಾಗಿ . ಅವರ ವೈವಿಧ್ಯಮಯ ಆಸಕ್ತಿಗಳು, ಸರಳ ಜೀವನ, ತಾನು ನಂಬಿದ ಆದರ್ಶಗಳನ್ನು ಅನುಸರಿಸುವ ಪರಿ, ಅದ್ಭುತ ಚಿಂತಕನಾದರೂ ಸಾಮಾನ್ಯರಿಗೂ ಅರ್ಥವಾಗುವಂತೆ ಬರೆಯಬಲ್ಲ ಸಾಮರ್ಥ್ಯ, ಈ ಕೃತಿಯ ಮುಖಾಂತರ ಹೆಚ್ಚು ಸ್ಪಷ್ಟವಾಗುತ್ತದೆ. ಒಟ್ಟಿನಲ್ಲಿ ಸಾಹಿತ್ಯಾಸಕ್ತರು ಒಮ್ಮೆಯಾದರೂ ಓದಲೇಬೇಕಾದ ಕೃತಿಯಿದು. ಈ ಪುಸ್ತಕ ಪ್ರಕಟವಾಗಿದ್ದು ೧೯೯೬ ರಲ್ಲಿ. ಉಲ್ಲೇಖ ಪೂರ್ಣಚಂದ್ರ ತೇಜಸ್ವಿಯವರ ಕೃತಿಗಳು
3138
https://kn.wikipedia.org/wiki/%E0%B2%AE%E0%B2%BF%E0%B2%B8%E0%B3%8D%E0%B2%B8%E0%B2%BF%E0%B2%82%E0%B2%97%E0%B3%8D%20%E0%B2%B2%E0%B2%BF%E0%B2%82%E0%B2%95%E0%B3%8D
ಮಿಸ್ಸಿಂಗ್ ಲಿಂಕ್
ಪೂರ್ಣಚಂದ್ರ ತೇಜಸ್ವಿಯವರ ಕೃತಿ. ಪೂರ್ಣಚಂದ್ರ ತೇಜಸ್ವಿಯವರ ಕೃತಿಗಳು
3143
https://kn.wikipedia.org/wiki/%E0%B2%A8%E0%B2%BE%E0%B2%97%E0%B2%BE%E0%B2%AD%E0%B2%B0%E0%B2%A3
ನಾಗಾಭರಣ
ಟಿ. ಎಸ್. ನಾಗಾಭರಣ (ತಲಕಾಡು ಶ್ರೀನಿವಾಸಯ್ಯ ನಾಗಾಭರಣ (ಜನನ ೨೩ ಜನವರಿ ೧೯೫೩)) ಕನ್ನಡ ಚಿತ್ರರಂಗದ ನಿರ್ದೇಶಕ, ನಿರ್ಮಾಪಕ, ನಟ ಮತ್ತು ರಂಗಕರ್ಮಿಯಾಗಿದ್ದಾರೆ. ಕನ್ನಡ ಚಿತ್ರರಂಗದ ಪ್ರಖ್ಯಾತ ನಿರ್ದೇಶಕ, ನಿರ್ಮಾಪಕ, ನಟ ಮತ್ತು ರಂಗಕರ್ಮಿ. ಅಖಿಲ ಭಾರತ ಮಟ್ಟದಲ್ಲಿ ಪ್ರಸಿದ್ಧಿಯಾಗಿದ್ದಾರೆ. ಕಲಾತ್ಮಕ ಮತ್ತು ಮುಖ್ಯವಾಹಿನಿ ಚಿತ್ರಗಳೆರಡೂ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಇವರು ತಮ್ಮ ೪೦ ವರ್ಷಗಳ ವೃತ್ತಿಜೀವನದಲ್ಲಿ ನಿರ್ದೇಶಿಸಿದ ೩೬ ಕನ್ನಡ ಚಿತ್ರಗಳಲ್ಲಿ ೧೦ ಚಿತ್ರಗಳಿಗೆ ರಾಷ್ಟ್ರೀಯ, ೨೩ ರಾಜ್ಯ ಮಟ್ಟದ ಪ್ರಶಸ್ತಿಗಳು ಬಂದಿವೆ ಹಾಗು ೮ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಭಾರತೀಯ ಪನಾರೋಮಕ್ಕೆ ಆಯ್ಕೆ ಆಗಿವೆ. ಕನ್ನಡ ರಂಗಭೂಮಿ ಕ್ಷೇತ್ರಕ್ಕೆ ನಾಗಾಭರಣ ಅವರ ಕೊಡುಗೆ ಗಣನೀಯ. ಹೆಸರಾಂತ ರಂಗತಜ್ಞ ಪದ್ಮಶ್ರೀ ಬಿ ವಿ ಕಾರಂತ್ ಅವರ ಶಿಷ್ಯರಾಗಿ ತರಬೇತಿ ಪಡೆದು, ಕಳೆದ ನಲವತ್ತು ವರ್ಷಗಳಲ್ಲಿ ನಟ, ನಿರ್ದೇಶಕ ಮತ್ತು ಲೇಖಕರಾಗಿ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದಾರೆ. ಒಟ್ಟು ೩೬ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಕಿರುತೆರೆಯಲ್ಲಿ, ದೂರದರ್ಶನಕ್ಕೆ ಮೊಟ್ಟಮೊದಲ ಕನ್ನಡ ಧಾರಾವಾಹಿ ನಿರ್ಮಿಸಿ, ನಿರ್ದೇಶಿಸಿದ ಹಿರಿಮೆ ಅವರಿಗಿದೆ. ತದನಂತರ ನಾಗಾಭರಣ ದೂರದರ್ಶನ ಹಾಗು ಇತರ ವಾಹಿನಿಗಳಿಗೆ ಜನಪ್ರಿಯ ಧಾರಾವಾಹಿಗಳನ್ನು ನಿರ್ಮಿಸಿ ನಿರ್ದೇಶಿಸಿದರು. ಮೈಸೂರಿನ ರಂಗಾಯಣ, ಬೆಂಗಳೂರಿನ ಬೆನಕ ನಾಟಕ ತಂಡ ಹಾಗೂ ಇತರ ರೆಪರ್ಟರಿಗಳಿಗೆ ಅವರು ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ನಾಗಾಭರಣ ಅವರು ಅನೇಕ ಪ್ರತಿಷ್ಠಿತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಪ್ರಸ್ತುತ ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದು ಕ್ಯಾಬಿನೆಟ್ ಮಂತ್ರಿ ಪದವಿಯ ಸಮಾನಾಂತರವಾಗಿದೆ. ನಾಗಾಭರಣರವರು ಬೆಂಗಳೂರಿನಲ್ಲಿರುವ ಕರ್ನಾಟಕ ಚಲನಚಿತ್ರ ಅಕಾದೆಮಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು (ರಾಜ್ಯ ಚಲನಚಿತ್ರ ಮಂಡಳಿ). ಅವರ ಕೆಲವು ಜನಪ್ರಿಯ ಚಲನಚಿತ್ರಗಳು ಹಿಂದಿ ಚಲನಚಿತ್ರಗಳಿಗೆ ಪ್ರಮುಖ ಸ್ಫೂರ್ತಿ ಎಂದು ಗುರುತಿಸಲ್ಪಟ್ಟವು. ಅವುಗಳಲ್ಲಿ ಮೈಸೂರು ಮಲ್ಲಿಗೆ ಮತ್ತು ೧೯೪೨: ಎ ಲವ್ ಸ್ಟೋರಿ ಪ್ರಮುಖವಾದವುಗಳು. ಬಾಲ್ಯ ಮತ್ತು ಆರಂಭಿಕ ಜೀವನ ಮೈಸೂರು ಜಿಲ್ಲೆಯ ತಲಕಾಡಿನಲ್ಲಿ ಎ ಶ್ರೀನಿವಾಸಯ್ಯ ಮತ್ತು ರುದ್ರಮ್ಮ ಅವರ ಐದು ಗಂಡುಮಕ್ಕಳಲ್ಲಿ ಎರಡನೆಯವರಾಗಿ ನಾಗಾಭರಣರವರು ೧೯೫೩ರ ಜನವರಿ ೨೩ರಂದು ಜನಿಸಿದರು. ಅವರ ಇಬ್ಬರೂ ತಾತಂದಿರಾದ ಮದ್ದಳೆ ಗಿರಿಗೌಡ ಮತ್ತು ತಿಪ್ಪೆಗೌಡ ರೈತಾಪಿ ಜನಗಳಾಗಿದ್ದರೂ ಯಕ್ಷಗಾನದಲ್ಲಿ ಪರಿಣತಿ ಹೊಂದಿದ್ದರು. ಅವರ ತಂದೆ ಶ್ರೀನಿವಾಸಯ್ಯ ಬೆಂಗಳೂರಿನ ಕೃಷಿ ಇಲಾಖೆಯಲ್ಲಿ ಡೆಪ್ಯುಟಿ ಡೈರೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ನಾಗಾಭರಣರವರು ಆಂಗ್ಲ ಮತ್ತು ಕನ್ನಡ ಸಾಹಿತ್ಯದಲ್ಲಿ ಅಪಾರ ಆಸಕ್ತಿಯುಳ್ಳವರಾಗಿದ್ದು ವಿಜ್ಞಾನ ಮತ್ತು ಕಾನೂನು ವಿಷಯದಲ್ಲಿ ಪದವೀಧರರೂ ಆಗಿದ್ದಾರೆ.ತಲಕಾಡಿನಲ್ಲಿ ಪ್ರಾಥಮಿಕ ಶಿಕ್ಷಣದ ನಂತರ ನಾಗಾಭರಣ ಅವರ ಮುಂದಿನ ಶಿಕ್ಷಣ ಬೆಂಗಳೂರಿನಲ್ಲಿ ನಡೆಯಿತು. ಕಾಲೇಜು ದಿನಗಳಲ್ಲಿದ್ದಾಗಲೆ ನಾಗಾಭರಣ ಅವರು ಖ್ಯಾತ ನಾಟಕರಚನೆಕಾರ ಮತ್ತು ರಂಗತಜ್ಞ ಶ್ರೀರಂಗ ಅವರ ಸಂಪರ್ಕದ ಪ್ರಭಾವಕ್ಕೆ ಒಳಗಾದರು. ವಿದ್ಯಾರ್ಥಿಯಾಗಿದ್ದಾಗಲೇ ನಾಗಾಭರಣರವರು ಏವಂ ಇಂದ್ರಜಿತ್ ಮತ್ತು ಶೋಕ ಚಕ್ರ ನಾಟಕಗಳನ್ನುನಿರ್ದೇಶಿಸಿದರು. ಬೆಂಗಳೂರಿನ ಹವ್ಯಾಸಿ ನಾಟಕ ತಂಡಗಳಲ್ಲಿ ತೊಡಗಿಕೊಂಡು, ಪ್ರಾರಂಭದ ಹಂತದಲ್ಲಿ ರಂಗ ತಂತ್ರಜ್ಞರಾಗಿ ಹಿನ್ನೆಲೆಯಲ್ಲಿ ಕೆಲಸವನ್ನು ಮಾಡಿ ಕ್ರಮೇಣ ನಟ, ಗಾಯಕ ಮತ್ತು ನಿರ್ದೇಶಕರಾದರು. ನಾಗಿಣಿಯವರು ನಾಗಾಭರಣರವರ ಪತ್ನಿ. ಬಾಲ್ಯ, ಶಿಕ್ಷಣ, ಪ್ರಾರಂಭದ ಹಂತ ಮೈಸೂರು ಜಿಲ್ಲೆಯ ತಲಕಾಡಿನಲ್ಲಿ, ಎ ಶ್ರೀನಿವಾಸಯ್ಯ ಮತ್ತು ರುದ್ರಮ್ಮ ಅವರ ಐದು ಗಂಡುಮಕ್ಕಳಲ್ಲಿ ಎರಡನೆಯವರಾಗಿ ನಾಗಾಭರಣ ಅವರು ೨೩ ಜನವರಿ ೧೯೫೩ ರಲ್ಲಿ ಜನಿಸಿದರು. ಅವರ ಇಬ್ಬರೂ ತಾತಂದಿರು ಮದ್ದಳೆ ಗಿರಿಗೌಡ ಮತ್ತು ತಿಪ್ಪೆಗೌಡ ರೈತಾಪಿ ಜನಗಳಾಗಿದ್ದರೂ ಯಕ್ಷಗಾನದಲ್ಲಿ ಪರಿಣತಿ ಹೊಂದಿದ್ದರು. ಬಾಲಕ ನಾಗಾಭರಣ ಅವರ ಮೇಲೆ ಇವರಿಬ್ಬರ ಪ್ರಭಾವ ದಟ್ಟವಾಗಿತ್ತು. ತಂದೆ ಶ್ರೀನಿವಾಸಯ್ಯ ಬೆಂಗಳೂರಿನ ಕೃಷಿ ಇಲಾಖೆಯಲ್ಲಿ ಡೆಪ್ಯುಟಿ ಡೈರೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ತಲಕಾಡಿನಲ್ಲಿ ಪ್ರಾಥಮಿಕ ಶಿಕ್ಷಣದ ನಂತರ ನಾಗಾಭರಣ ಅವರ ಮುಂದಿನ ಶಿಕ್ಷಣ ಬೆಂಗಳೂರಿನಲ್ಲಿ ನಡೆಯಿತು. ಕಾಲೇಜು ದಿನಗಳಲ್ಲೇ ನಾಗಾಭರಣ ಅವರು ಖ್ಯಾತ ನಾಟಕರಚನೆಕಾರ ಮತ್ತು ರಂಗತಜ್ಞ ಶ್ರೀರಂಗ ಅವರ ಸಂಪರ್ಕ ಒದಗಿಬಂದು ಪ್ರಭಾವಕ್ಕೆ ಒಳಗಾದರು. ವಿದ್ಯಾರ್ಥಿಯಾಗಿದ್ದಾಗಲೇ ನಾಗಾಭರಣ ಏವಂ ಇಂದ್ರಜಿತ್ ಮತ್ತು ಶೋಕ ಚಕ್ರ ನಾಟಕಗಳನ್ನು ನಿರ್ದೇಶಿಸಿದರು. ಬೆಂಗಳೂರಿನ ಹವ್ಯಾಸಿ ನಾಟಕ ತಂಡಗಳಲ್ಲಿ ತೊಡಗಿಸಿಕೊಂಡು, ಪ್ರಾರಂಭದ ಹಂತದಲ್ಲಿ ರಂಗ ತಂತ್ರಜ್ಞರಾಗಿ ಹಿನ್ನೆಲೆಯಲ್ಲಿ ಕೆಲಸ ಶ್ರಮಿಸಿ, ಕ್ರಮೇಣ ನಟ, ಗಾಯಕ, ನಿರ್ದೇಶಕರಾದರು. ಈ ರಂಗಾಸಕ್ತಿಯ ದಿನಗಳಲ್ಲೇ, ರಂಗಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ನಾಗಿಣಿ ಅವರ ಪರಿಚಯವಾಗಿ ಅದು ಪ್ರೇಮಕ್ಕೆ ತಿರುಗಿ ಅವರು ೧೦, ಡಿಸೆಂಬರ್ ೧೯೭೯ ರಲ್ಲಿ ಮದುವೆಯಾದರು. ಅಂದಿನಿಂದ ಇಂದಿನವರೆಗೂ ದಂಪತಿಗಳು ಚಿತ್ರ ಹಾಗು ರಂಗಭೂಮಿಯಲ್ಲಿ ಒಟ್ಟಿಗೆ ತೊಡಗಿಕೊಂಡಿದ್ದಾರೆ. ನಾಗಿಣಿ ಭರಣ ಮಕ್ಕಳ ಚಿತ್ರ ನಿರ್ಮಾಣಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ ಮತ್ತು ಕಲ್ಲರಳಿ ಹೂವಾಗಿ ಚಿತ್ರಕ್ಕೆ ಅತ್ಯುತ್ತಮ ವಸ್ತ್ರಾಲಂಕಾರಕ್ಕೆ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ನಾಗಾಭರಣ ದಂಪತಿಗಳ ಮಕ್ಕಳು ಪನ್ನಗ ಭರಣ ಹಾಗು ಶ್ರುತಾ ಭರಣ. ಪನ್ನಗಾ ಭರಣ ಸ್ವತಃ ಚಿತ್ರ ನಿರ್ದೇಶಕರಾಗಿದ್ದು ಶ್ರುತಾ ಭರಣ “ಬಾಪ” ದಲ್ಲಿ ಶಿಕ್ಷಕಿಯಾಗಿ ತೊಡಗಿಕೊಂಡಿದ್ದಾರೆ. ವೃತ್ತಿಜೀವನ ನಾಗಾಭರಣ ಅವರು ಬಿ ಎಸ್ಸಿ ಪದವಿ ಪಡೆಯುವ ಮೊದಲೇ ಗಂಭೀರ ರಂಗ ನಟ ಹಾಗು ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು. ಸಂಗ್ಯಾ ಬಾಳ್ಯ , ಕತ್ತಲೆ ಬೆಳಕು, ಶಕಾರನ ಸಾರೋಟು, ಜೋಕುಮಾರ ಸ್ವಾಮಿ, ಈಡಿಪಸ್, ಸತ್ತವರ ನೆರಳು, ಕೃಷ್ಣ ಪಾರಿಜಾತ, ಟಿಂಗರ ಬುಡ್ಡಣ್ಣ , ಮುಂದೇನಾ ಸಖಿ ಮುಂದೇನಾ, ಹಯವದನ, ನೀಗಿಕೊಂಡ ಸಂಸ, ಬಕ, ಬ್ಲಡ್ ವೆಡ್ಡಿಂಗ್ ಮುಂತಾದ ನಾಟಕಗಳಲ್ಲಿ ಅಭಿನಯ ಮತ್ತು ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದರು. ಬಿಎಸ್ಸಿ ನಂತರ ನಾಗಾಭರಣ ಎಲ್ ಎಲ್ ಬಿ ಪದವಿಗಾಗಿ ಶ್ರೀ ಜಗದ್ಗುರು ರೇಣುಕಾಚಾರ್ಯ ಲಾ ಕಾಲೇಜು ಸೇರಿದರು. ವಿದ್ಯಾರ್ಥಿಯಾಗಿದ್ದಾಗಲೇ ಅವರು ಗಿರೀಶ್ ಕಾರ್ನಾಡ ಅವರ ಕಾಡು ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗಿ ಮತ್ತು ಚೋಮನ ದುಡಿ ಚಿತ್ರಕ್ಕೆ ಬಿ ವಿ ಕಾರಂತ ಅವರಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದರು. ಎರಡೂ ಚಿತ್ರಗಳು ಹಲವಾರು ಪ್ರಶಸ್ತಿ ಪಡೆದವು. ವಿದ್ಯಾರ್ಥಿಯಾಗಿದ್ದಾಗಲೇ ಅವರಿಗೆ ಚಿತ್ರ ನಿರ್ದೇಶಿಸುವ ಹಂಬಲವಾಗಿ ಬಹಳ ಕಷ್ಟಪಟ್ಟು ತಮ್ಮ ಮೊದಲ ಚಿತ್ರ ಗ್ರಹಣ ನಿರ್ದೇಶಿಸಿದರು. ಅದಕ್ಕೆ ೧೯೭೯ ರ ರಾಷ್ಟ್ರೀಯ ಐಕ್ಯತೆಯ ಅತ್ಯುತ್ತಮ ಚಿತ್ರ ಎಂದು ನರ್ಗಿಸ್ ದತ್ ರಾಷ್ಟ್ರಪ್ರಶಸ್ತಿ ಹಾಗು ಅತ್ಯುತ್ತಮ ಚಿತ್ರಕತೆ (ನಾಗಾಭರಣ ಮತ್ತು ಟಿ ಎಸ್ ರಂಗಾ) ಪ್ರಶಸ್ತಿಗಳು ದೊರಕಿದವು. ಜೊತೆಗೆ ೧೯೭೮-೭೯ ರ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯಲ್ಲಿ ಮೊದಲ ಅತ್ಯುತ್ತಮ ಚಿತ್ರ, ಅತ್ಯುತ್ತಮ ಕಪ್ಪುಬಿಳಿ ಛಾಯಾಗ್ರಹಣ - ಎಸ್ ರಾಮಚಂದ್ರ, ನೀಡಲಾಯಿತು. ಅಲ್ಲದೆ ಈ ಚಿತ್ರ ಜರ್ಮನಿಯ ಮ್ಯಾನ್ಹೆಮ್ - ಹೈಡೆಲ್ಬರ್ಗ್ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಯಿತು. ರಂಗಭೂಮಿ ವಿದ್ಯಾರ್ಥಿ ದೆಸೆಯಿಂದಲೇ ನಾಗಾಭರಣ ಅವರಿಗೆ ಪ್ರತಿಷ್ಠಿತ ರಂಗ ತಜ್ಞರಾದ ಶ್ರೀರಂಗ, ಬಿ ವಿ ಕಾರಂತ, ಶಿವರಾಮ ಕಾರಂತ, ಬಾದಲ್ ಸರ್ಕಾರ್ ಮತ್ತು ಜ್ಞಾನಪೀಠ ಪ್ರಶಸ್ತಿ ವಿಜೇತ ಗಿರೀಶ್ ಕಾರ್ನಾಡ ಹಾಗು ಡಾ ಚಂದ್ರಶೇಖರ ಕಂಬಾರ ಮೊದಲಾದವರ ನಿಕಟ ಒಡನಾಟ ಲಭಿಸಿತು. ಮುವತ್ತಾರಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಪ್ರೇಮಾ ಕಾರಂತ್ ಅವರು ಸ್ಥಾಪಿಸಿದ ಬೆನಕ ಮಕ್ಕಳ ರಂಗ ತಂಡಕ್ಕೆ 30 ವರ್ಷಗಳಿಂದ ಅಧ್ಯಕ್ಷರಾಗಿದ್ದು, ಅಂದಿನಿಂದ ಇಂದಿನವರೆಗೆ ಸತತವಾಗಿ ವರ್ಷಕ್ಕೆ ಮೂರು ಮಕ್ಕಳ ನಾಟಕ ನಿರ್ದೇಶಿಸಿದ್ದಾರೆ. ಹಲವಾರು ಬಾರಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಂಗಮಂಚದಲ್ಲಿ ಅಭಿನಯಿಸಿದ್ದಾರೆ. ಕಳೆದ ಮೂವತ್ತೈದು ವರ್ಷಗಳಿಂದ ಸತತವಾಗಿ ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಮಟ್ಟಗಳಲ್ಲಿ ರಂಗ ಕಮ್ಮಟಗಳನ್ನು ನಡೆಸಿದ್ದಾರೆ. ಮೈಸೂರಿನ ರಂಗಾಯಣ, ಬೆಂಗಳೂರಿನ ಬೆನಕ ಹಾಗೂ ಅನೇಕ ರಂಗ ರೆಪರ್ಟರಿಗಳಿಗೆ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಬಿ ವಿ ಕಾರಂತರು ಸ್ಥಾಪಿಸಿದ ಬೆನಕ ಹವ್ಯಾಸಿ ರಂಗ ತಂಡದಲ್ಲಿ ನಲವತ್ತು ವರ್ಷಗಳಿಂದ ಸ್ಥಾಪಕ-ನಟ ರಂಗಭೂಮಿ ಕ್ಷೇತ್ರಕ್ಕೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ. ಹಲವಾರು ಬಾರಿ ಭಾರತ ಸರ್ಕಾರದ ಸಾಂಸ್ಕೃತಿಕ ಸಮಿತಿಗಳಲ್ಲಿ ಸದಸ್ಯತ್ವ ಆಹತ, ಏಕವ್ಯಕ್ತಿ ಪ್ರದರ್ಶನವನ್ನು ನಿರ್ದೇಶಿಸಿ ಅಭಿನಯಿಸಿದ್ದಾರೆ. ಬೆಂಗಳೂರು ನಾಗರತ್ನಮ್ಮ ಅವರ ಬದುಕು ಸಾಧನೆ ಕುರಿತ ಸಂಗೀತ ಪ್ರಧಾನ ನಾಟಕದ ಪರಿಕಲ್ಪನೆ ಮತ್ತು ನಿರ್ದೇಶನ. ಚಲನಚಿತ್ರ ತಮ್ಮ ಚಿತ್ರಗಳಿಂದ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಉದಾಹರಣೆಗೆ ಜನುಮದ ಜೋಡಿ ಚಿತ್ರ ಕರ್ನಾಟಕದಲ್ಲಿ ಅತಿ ಹೆಚ್ಚು ಥಿಯೇಟರ್ ಗಳಲ್ಲಿ ಬೆಳ್ಳಿ ಹಬ್ಬ ಆಚರಿಸಿದ ಚಿತ್ರ. ಕೆಲವು ಥಿಯೇಟರ್ ಗಳಲ್ಲಿ ೩೬೫ ದಿನಗಳಿಗೂ ಹೆಚ್ಚು ಪ್ರದರ್ಶನ ಕಂಡಿತು. ಒಂದು ಅಮೆರಿಕಾದ ವಿಶ್ವವಿದ್ಯಾಲಯದಲ್ಲಿ ಈ ಚಿತ್ರ ಪಠ್ಯ ವಿಷಯವಾಗಿದೆ. ಒಟ್ಟು ೩೬ ಚಿತ್ರಗಳನ್ನು ನಿರ್ದೇಶಿಸಿದ್ದು ಅವುಗಳಲ್ಲಿ ೧೮ ಚಿತ್ರಗಳಿಗೆ ಪ್ರತಿಷ್ಠಿತ ಪ್ರಶಸ್ತಿಗಳು ಸಂದಿವೆ. ನಾಲ್ಕು ಮಕ್ಕಳ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಫಿಲಂ ಫೇರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ೭ ಬಾರಿ. ರಾಷ್ಟ್ರ ಪ್ರಶಸ್ತಿಗಳು ೧೦, ಅದರಲ್ಲಿ ೩ ರಾಷ್ಟ್ರೀಯ ಐಕ್ಯತೆಗಾಗಿ. ರಾಜ್ಯ ಪ್ರಶಸ್ತಿಗಳು ೨೩, ವಿವಿಧ ವಿಭಾಗಗಳಲ್ಲಿ ಅವರ ೮ ಚಿತ್ರಗಳು ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಭಾರತೀಯ ಪನೋರಮಾಗೆ ಆಯ್ಕೆಯಾಗಿವೆ. ರಾಷ್ಟ್ರೀಯ ಚಿತ್ರ ಪ್ರಶಸ್ತಿ ತೀರ್ಪುಗಾರರ ಸಮಿತಿಯಲ್ಲಿ ೪ ಬಾರಿ ಸದಸ್ಯ. ಮ್ಯಾನ್ ಹೇಮ್, ಮಿಲಾನ್, ಇರಾನ್, ಚಿಕಾಗೋ , ಅರ್ಮೇನಿಯಾ ಮತ್ತು ಕಾರ್ಲೋವಿ ವಾರಿ ಅಂತರ ರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ತೀರ್ಪುಗಾರರ ಸಮಿತಿಯಲ್ಲಿ ಭಾರತದ ಪ್ರತಿನಿಧಿ. ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಅವರ ಚಿತ್ರಗಳು ಪ್ರದರ್ಶಿತಗೊಂಡಿವೆ. ಹನ್ನೆರಡನೆಯ ಶತಮಾನದ ಸಂತ ಕವಿ ಅಲ್ಲಮನ ಕುರಿತಾದ ಚಿತ್ರ ಅಂತರರಾಷ್ಟ್ರೀಯ ಯು ಎನ್ ಗಾಂಧೀ ಪದಕಕ್ಕಾಗಿ ಭಾರತದ ಆಯ್ಕೆಯಾಗಿ ಪ್ರದರ್ಶಿತಗೊಂಡಿತು. ಭಾರತ ಸರ್ಕಾರದ ಫಿಲಂಸ್ ಡಿವಿಷನ್ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಗೆ ಸಾಕ್ಷ್ಯಚಿತ್ರಗಳು. ಕರ್ನಾಟಕ ಸರ್ಕಾರದ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ಜೀವಮಾನ ಸಾಧನೆಗಾಗಿ. ಕಿರುತೆರೆ ನಾಗಾಭರಣರವರು ಕೆಲವು ಕಿರುತೆರೆ ಧಾರವಾಹಿಗಳನ್ನೂ ಕೂಡ ನಿರ್ದೇಶಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದ ಧಾರಾವಾಹಿಗಳಾದ ಬೆಂಗಳೂರು ದೂರದರ್ಶನದ ನಮ್ಮ ನಮ್ಮಲ್ಲಿ, ಶ್ರೀಮಾನ್ ಶ್ರೀ ಸಾಮಾನ್ಯ ಮತ್ತು ತಿರುಗುಬಾಣ. ದೂರದರ್ಶನ ರಾಷ್ಟ್ರೀಯ ವಾಹಿನಿ ಡಿ.ಡಿ.೧ರಲ್ಲಿ ತೆನಾಲಿ ರಾಮ (ಕಿರುತೆರೆ ಧಾರಾವಾಹಿ) ಹಾಗೂ ಉದಯ ಟಿವಿಯ ಸಂಕ್ರಾಂತಿ, ಮಹಾಮಾಯಿ, ಅಪ್ಪ ಇತ್ಯಾದಿ ಧಾರವಾಹಿಗಳನ್ನು ನಿರ್ದೇಶಿಸಿದ್ದಾರೆ. ರಾಷ್ಟ್ರೀಯ ನೆಟ್ ವರ್ಕ್ ದೂರದರ್ಶನ ಪ್ರಾರಂಭವಾದಂದಿನಿಂದ ಧಾರಾವಾಹಿಗಳ ನಿರ್ಮಾಣ, ನಿರ್ದೇಶನ ಶಸ್ರಫನ್, ಧಾರಾವಾಹಿ, ಮಾಜಿ ಪ್ರಧಾನಮಂತ್ರಿ ಪಿ ವಿ ನರಸಿಂಹರಾವ್ ಅವರ ರಚನೆ ಸ್ಟೋನ್ ಬಾಯ್, ಇಂಡೋ-ಮರುಷಿಯಸ್ ಕೋ-ಪ್ರೊಡಕ್ಷನ್ ಸಂಸ್ಮರಣ್, ಪ್ರವಾಸಕಥನ, ಗೊರೂರು ರಾಮಸ್ವಾಮಿ ಅಯಂಗಾರ್ ಅವರ ಕೃತಿ, ಅಮೇರಿಕಾದಲ್ಲಿ ಚಿತ್ರೀಕರಣ ತೆನಾಲಿ ರಾಮ, ಆರಾಧನಾ, ಗಾನಯೋಗಿ ಪಂಚಾಕ್ಷರಿ ಧಾರಾವಾಹಿಗಳು ಪ್ರಾಂತೀಯ ನೆಟ್ ವರ್ಕ್ ದೂರದರ್ಶನ, ಉದಯ ಟಿವಿ, ಸನ್ ಟಿವಿ ಮುಂತಾದ ವಾಹಿನಿಗಳಿಗೆ ಧಾರಾವಾಹಿಗಳು ಮತ್ತು ಇತರ ಕಾರ್ಯಕ್ರಮಗಳು. ಓ ನನ್ನ ಬೆಳಕೇ ಮುಸ್ಸಂಜೆ ನಮ್ಮ ನಮ್ಮಲ್ಲಿ ತಿರುಗು ಬಾಣ ಸಂಕ್ರಾಂತಿ (ಮೆಗಾ ಧಾರಾವಾಹಿ) ಗೆಳತೀ ಜೀವನ್ಮುಖಿ ಚಲನಚಿತ್ರಗಳು ನಿರ್ದೇಶಕನಾಗಿ ನಟನಾಗಿ ಅಲಂಕರಿಸಿದ ಸ್ಥಾನಗಳು ತೀರ್ಪುಗಾರ ಸಮಿತಿ ಅಧ್ಯಕ್ಷ, ಬ್ರಿಕ್ಸ್ ಅಂತರ ರಾಷ್ಟ್ರೀಯ ಚಿತ್ರೋತ್ಸವ, ೨೦೧೬ ನಾಲ್ಕು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಿತಿಯ ಸದಸ್ಯ. ಮೂರು ಬಾರಿ ಕರ್ನಾಟಕ ಫಿಲಂ ಚೇಂಬರ್ ಆಫ್ ಕಾಮರ್ಸ್ ನ ಕಾರ್ಯಕಾರಿ ಸಮಿತಿ ಸದಸ್ಯ . ಅಧ್ಯಕ್ಷರು, ಚಲನಚಿತ್ರಗಳ ಸಬ್ಸಿಡಿ ಸಮಿತಿ, ಕರ್ನಾಟಕ ಸರ್ಕಾರ ಅಧ್ಯಕ್ಷರು, ಕರ್ನಾಟಕ ಚಿತ್ರ ನಿರ್ದೇಶಕರ ಸಂಘ CIFEJ, ಅಂತರ ರಾಷ್ಟ್ರೀಯ ಮಕ್ಕಳು ಮತ್ತು ಯುವಜನತೆಯ ಚಿತ್ರ ಕೇಂದ್ರ, ಕಳೆದ ೧೩ ವರ್ಷಗಳಿಂದ ಬೋರ್ಡ್ ಸದಸ್ಯರು. ಪ್ರಿನ್ಸಿಪಾಲ್ ಮತ್ತು ಶಿಕ್ಷಕರು, ಆದರ್ಶ ಫಿಲಂ ಇನ್ಟಿಟ್ಯೂಟ್ , ಬೆಂಗಳೂರು ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ಅಕಾಡಮಿ, ಬೆಂಗಳೂರು ಅಧ್ಯಕ್ಷರು, ಸಂಸ್ಕಾರ ಭಾರತಿ ಕರ್ನಾಟಕ ದಕ್ಷಿಣ ಪ್ರಾಂತ್ಯ , 2012 ರಿಂದ ಇಲ್ಲಿಯವರೆಗೆ ಬೋರ್ಡ್ ಮೆಂಬರ್, ಸೆಂಟ್ರಲ್ ಬೋರ್ಡ್ ಆಫ್ ಫಿಲಂ ಸರ್ಟಿಫಿಕೇಷನ್, ಭಾರತ ಸರ್ಕಾರ. ಪ್ರಶಸ್ತಿಗಳು ಅವರು ಇಲ್ಲಿಯವರೆಗೆ ನಿರ್ದೇಶಿಸಿದ ೩೦ ಚಲನಚಿತ್ರಗಳಲ್ಲಿ, ೧೪ ಚಿತ್ರಗಳು ರಾಜ್ಯ ಹಾಗು ರಾಷ್ಟ್ರ ಮಟ್ಟದಲ್ಲಿ ಪ್ರತಿಷ್ಠಿತ ಪ್ರಶಸ್ತಿಗಳನ್ನು ಗಳಿಸಿದೆ. ಅವರ ನಿರ್ದೇಶನದ ಆರು ಚಿತ್ರಗಳು ಭಾರತೀಯ ಪನೋರಮಾಕ್ಕೆ ಆಯ್ಕೆಯಾಗಿದೆ. ಅವರು ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ಪ್ರಾದೇಶಿಕ ನಿರ್ದೇಶಕ ಪ್ರಶಸ್ತಿಯನ್ನು ಏಳು ಬಾರಿ ಗಳಿಸಿದ್ದಾರೆ. ಗ್ರಹಣ (೧೯೭೮–೭೯) ರಾಷ್ಟ್ರೀಯ ಸಮನ್ವಯತೆಯನ್ನು ಸಾರುವ ಅತ್ಯುತ್ತಮ ಚಿತ್ರ, ಅತ್ಯುತ್ತಮ ಚಿತ್ರಕಥೆ, ಅತ್ಯುತ್ತಮ ಚಿತ್ರ ಚಿನ್ನದ ಪದಕ ಅನ್ವೇಷಣೆ (೧೯೮೨–೮೩) ಕರ್ನಾಟಕ ಸರ್ಕಾರದ ವತಿಯಿಂದ ಮೂರನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಆಸ್ಫೋಟ (೧೯೮೭–೮೮) ರಾಜ್ಯ ಸರ್ಕಾರದ ವತಿಯಿಂದ ಅತ್ಯುತ್ತಮ ಚಲನಚಿತ್ರವೆಂದು ಚಿನ್ನದ ಪದಕ ಬ್ಯಾಂಕರ್ ಮಾರ್ಗಯ್ಯ (೧೯೮೩–೮೪) ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ ಸಂತ ಶಿಶುನಾಳ ಶರೀಫಾ (೧೯೮೯–೯೦) ಭಾರತ ಸರ್ಕಾರದ ವತಿಯಿಂದ ನರ್ಗಿಸ್ ದತ್ತ್ ರಾಷ್ಟ್ರೀಯ ಏಕತಾ ಪ್ರಶಸ್ತಿ ಕಲ್ಲರಳಿ ಹೂವಾಗಿ (೨೦೦೬) ರಾಷ್ಟ್ರೀಯ ಐಕ್ಯತೆಯನ್ನು ಸಾರುವ ಅತ್ಯುತ್ತಮ ಚಲನಚಿತ್ರ ೧೯೭೯ರಲ್ಲಿ ಗ್ರಹಣ ಚಿತ್ರಕ್ಕಾಗಿ ಅತ್ಯುತ್ತಮ ಚಿತ್ರಕಥೆ ರಾಷ್ಟ್ರೀಯ ಪ್ರಶಸ್ತಿ. ಕಾಡು ಚಿತ್ರದ ವಸ್ತ್ರಾಲಂಕಾರಕ್ಕಾಗಿ ಅತ್ಯುತ್ತಮ ವಸ್ತ್ರವಿನ್ಯಾಸಕಾರ ರಾಷ್ಟ್ರೀಯ ಪ್ರಶಸ್ತಿ ಇತರೆ ಶ್ರುತಾಲಯ ಸಂಸ್ಥೆ ಸ್ಥಾಪನೆ - ಚಿತ್ರ ಸಂಬಂಧಿತ ಸಕಲ ಚಟುವಟಿಕೆಗಳ ನಿರ್ವಹಣೆಯ ಸಂಸ್ಥೆ ಭರಣ ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ (BAPA) ಸ್ಥಾಪನೆ ಮತ್ತು ಮ್ಯಾನೇಜಿಂಗ್ ಟ್ರಸ್ಟಿ ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರಗಳ ಪ್ರವಾಸೋದ್ಯಮ ಇಲಾಖೆಗಳಿಗೆ ಮೈಸೂರು, ಹಂಪಿ, ಕಿತ್ತೂರು ಮತ್ತು ಶ್ರೀರಂಗಪಟ್ಟಣಗಳಲ್ಲಿ ಧ್ವನಿ ಬೆಳಕು ( Sound and Light) ಕಾರ್ಯಕ್ರಮದ ನಿರ್ದೇಶನ. ನಾಗಾಭರಣ ಅವರ ಚಿತ್ರಗಳನ್ನು ಕುರಿತ ಅಧ್ಯಯನಕ್ಕೆ ಎನ್ ಕೆ ಪದ್ಮನಾಭ ಅವರಿಗೆ ಡಾಕ್ಟರೇಟ್ ಪದವಿ ನೀಡಲಾಗಿದೆ. ಹಲವಾರು ಸಂದರ್ಭಗಳಲ್ಲಿ ನಾಗಾಭರಣ ಅವರಿಗೆ ಸ್ಮರಣ ಸಂಚಿಕೆಯ ಗೌರವ ಅರ್ಪಿಸಲಾಗಿದೆ. ಹಲವಾರು ಸಂದರ್ಭಗಳಲ್ಲಿ ನಾಗಾಭರಣ ಚಿತ್ರೋತ್ಸವ ಮತ್ತು ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ಉಲ್ಲೇಖಗಳು‌ ಬಾಹ್ಯ ಸಂಪರ್ಕಗಳು ಟಿ.ಎಸ್. ನಾಗಾಭರಣ ನಿರ್ದೇಶಕರು ಕನ್ನಡ ಚಲನಚಿತ್ರ ನಿರ್ದೇಶಕರು ಕಿರುತೆರೆ ನಿರ್ದೇಶಕರು
3144
https://kn.wikipedia.org/wiki/%E0%B2%A8%E0%B2%BE%E0%B2%97%E0%B2%A4%E0%B2%BF%E0%B2%B9%E0%B2%B3%E0%B3%8D%E0%B2%B3%E0%B2%BF%20%E0%B2%9A%E0%B2%82%E0%B2%A6%E0%B3%8D%E0%B2%B0%E0%B2%B6%E0%B3%87%E0%B2%96%E0%B2%B0%E0%B3%8D
ನಾಗತಿಹಳ್ಳಿ ಚಂದ್ರಶೇಖರ್
ಚಿತ್ರ ನಿರ್ದೇಶಕ, ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್ ಬಹುಮುಖ ಪ್ರತಿಭೆ.ಕತೆಗಾರ, ಕಾದಂಬರಿಗಾರ ,ಅಂಕಣಕಾರ, ಅಧ್ಯಾಪಕ, ಸಂಘಟಕ, ಪ್ರಕಾಶಕ ಹೀಗೆ ಬಹುಮುಖ ವ್ಯಕ್ತಿತ್ವದ ಇವರು ಕನ್ನಡ ಸಾಹಿತ್ಯ, ಕನ್ನಡ ಸಮಾಜ ಮತ್ತು ಸಿನಿಮಾ ಕ್ಷೇತ್ರಗಳಲ್ಲಿ ಒಂದು ಮುಖ್ಯ ಹೆಸರು. ಜೀವನ ಮಂಡ್ಯ ಜಿಲ್ಲೆಯ ನಾಗತಿಹಳ್ಳಿ ಎಂಬಲ್ಲಿ ಆಗಸ್ಟ್ ೧೫, ೧೯೫೮ರ ವರ್ಷದಲ್ಲಿ ಚಂದ್ರಶೇಖರ್ ಜನಿಸಿದರು. ತಂದೆ ತಿಮ್ಮಶೆಟ್ಟಿ ಗೌಡರು, ತಾಯಿ ಪಾರ್ವತಮ್ಮ. ಪ್ರಾರಂಭಿಕ ಶಿಕ್ಷಣವನ್ನು ತಮ್ಮ ಊರಾದ ನಾಗತಿಹಳ್ಳಿಯಲ್ಲಿ ಪಡೆದ ಅವರು ಮುಂದೆ ತಮ್ಮ ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿ ನಡೆಸಿದರು. ಸ್ನಾತಕೋತ್ತರ ಪದವಿ ಕನ್ನಡ ಎಂ.ಎ ಯನ್ನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ೮ ಚಿನ್ನದ ಪದಕಗಳು ಮತ್ತು ೨ ನಗದು ಬಹುಮಾನಗಳೊಂದಿಗೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ತಮ್ಮ ಗ್ರಾಮವಾದ ನಾಗತಿಹಳ್ಳಿಯಲ್ಲಿ ‘ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ`ಯನ್ನು ಆರಂಭಿಸಿದರು.ಜೊತೆಗೆ ಪ್ರತಿ ಯುಗಾದಿಯ ಸಂದರ್ಭದಲ್ಲಿ `ನಾಗತಿಹಳ್ಳಿ ಸಾಂಸ್ಕೃತಿಕ ಹಬ್ಬಕ್ಕೆ ಸಹಾ ಚಾಲನೆ ನೀಡಿದರು ಈ ಮೂಲಕ ಗ್ರಾಮೀಣ ಜನರ ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗೃತಿಗೊಳಿಸುವ ಕೆಲಸವನ್ನು ಆರಂಭಿಸಿದರು. ಈ ವೇದಿಕೆಯ ಮೂಲಕ ಗ್ರಾಮದಲ್ಲಿ ಸುಸಜ್ಜಿತ ಗ್ರಂಥಾಲಯ, ರಂಗಮಂದಿರ, ಕಂಪ್ಯೂಟರ್ ಕೇಂದ್ರಗಳನ್ನು, ಕೃಷಿ ಅಧ್ಯಯನ ಪ್ರವಾಸ, ಉಚಿತ ವೈದ್ಯಕೀಯ ಶಿಬಿರಗಳು, ಸಹಕಾರಿ ಸಂಘಗಳ ಸ್ಥಾಪನೆ ಮುಂತಾದ ಗ್ರಾಮಮುಖೀ ಚಿಂತನೆಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ ,. ಈ ವೇದಿಕೆಯು ಗ್ರಾಮೀಣರ ಆರ್ಥಿಕ ಸಮಸ್ಯೆಗಳಿಗೂ ಸ್ಪಂದಿಸುತ್ತಿರುವ ಸಂಗತಿ ನಾಗಮಂಗಲ ತಾಲ್ಲೂಕಿನ ಬಿದರಕೆರೆ, ಯರಗನಹಳ್ಳಿ, ಸಬ್ಬನಕುಪ್ಪೆ ಗ್ರಾಮಸ್ಥರಿಗೂ ಸ್ಫೂರ್ತಿ ನೀಡಿದೆ. ಈ ವೇದಿಕೆಯ ಆಶಯಗಳನ್ನೇ ಸುತ್ತಮುತ್ತಲಿನ ಗ್ರಾಮಸ್ಥರೆಲ್ಲರೂ ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ. ಪ್ರಾಧ್ಯಾಪಕ ಮತ್ತು ಬರಹಗಾರರಾಗಿ ಕನ್ನಡ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸತೊಡಗಿದ ನಾಗತಿಹಳ್ಳಿ ಚಂದ್ರಶೇಖರರು ಕಥಾಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದರು. ಇನ್ನೂ ಎಂಟನೆಯ ತರಗತಿಯಲ್ಲಿ ಓದುತ್ತಿರುವಾಗಲೇ ಅವರು ‘ಆವರ್ತ’ ಎಂಬ ಕಥೆ ಬರೆದರು. ಇದುವರೆಗೆ ಕಥೆ, ಕಾದಂಬರಿ, ಪ್ರವಾಸ ಕಥನಗಳನ್ನು ಒಳಗೊಂಡ ಅವರ ಸುಮಾರು 40 ಪ್ರಕಟಣೆಗಳು ಬೆಳಕು ಕಂಡಿವೆ. ‘ಹದ್ದುಗಳು’, ‘ನನ್ನ ಪ್ರೀತಿಯ ಹುಡುಗನಿಗೆ’, ‘ಮಲೆನಾಡಿನ ಹುಡುಗಿ, ಬಯಲು ಸೀಮೆಯ ಹುಡುಗ’, ‘ಸನ್ನಿಧಿ’, ‘ಪ್ರೇಮ ಕಥಾ ಸಂಪುಟ’, ‘ಅಕಾಲ’, ‘ಛಿದ್ರ’ ನಾಗತಿಹಳ್ಳಿಯವರ ಪ್ರಸಿದ್ಧ ಕಥಾ ಸಂಕಲನ ಗಳು. ‘ಬಾ ನಲ್ಲೆ ಮಧುಚಂದ್ರಕೆ’, ‘ಚುಕ್ಕಿ ಚಂದ್ರಮರ ನಾಡಿನಲ್ಲಿ’, ‘ವಲಸೆ ಹಕ್ಕಿಯ ಹಾಡು’ ಅವರ ಕಾದಂಬರಿಗಳು. ‘ಆಯನ’, ‘ಅಮೆರಿಕ! ಅಮೇರಿಕಾ!!’, ‘ದಕ್ಷಿಣ ಧ್ರುವದಿಂ’, ‘ಹೊಳೆದಂಡೆ’ ಮುಂತಾದವು ಅವರ ಪ್ರವಾಸ ಕಥನಗಳು’. ‘ನನ್ನ ಪ್ರೀತಿಯ ಹುಡುಗಿಗೆ’ ಹಲವು ಸಂಪುಟಗಳಲ್ಲಿ ಮೂಡಿಬಂದಿರುವ ಅವರ ಆತ್ಮಕಥೆಯಾಗಿದೆ. ‘ಶತಮಾನದಂಚಿನಲ್ಲಿ’ ಅವರ ವಿವಿಧ ಲೇಖನಗಳ ಸಂಗ್ರಹ ಸಂಪುಟವಾಗಿದೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕೃತಿಗಳು ಹದ್ದುಗಳು ನನ್ನ ಪ್ರೀತಿಯ ಹುಡುಗನಿಗೆ ಮಲೆನಾಡಿನ ಹುಡುಗಿ, ಬಯಲುಸೀಮೆಯ ಹುಡುಗ ಬಾ ನಲ್ಲೆ ಮಧುಚಂದ್ರಕೆ ಚುಕ್ಕಿ ಚಂದ್ರಮರ ನಾಡಿನಲ್ಲಿ ಸನ್ನಿಧಿ ಅಕಾಲ ಪ್ರೇಮ ಕಥಾ ಸಂಪುಟ ವಲಸೆ ಹಕ್ಕಿಯ ಹಾಡು ಅಮೇರಿಕಾ ! ಅಮೇರಿಕಾ !! ಶತಮಾನದಂಚಿನಲಿ ಛಿದ್ರ ಕಥಾಯಾತ್ರೆ ಅಯನ ನನ್ನ ಗ್ರಹಿಕೆಯ ಅಮೆರಿಕಾ ದಕ್ಷಿಣ ಧ್ರುವದಿಂ ನನ್ನ ಗ್ರಹಿಕೆಯ ಈಜಿಪ್ಟ್ ನನ್ನ ಗ್ರಹಿಕೆಯ ಸಿಕ್ಕಿಂ ನನ್ನ ಗ್ರಹಿಕೆಯ ನೇಪಾಳ ನ್ನ ಗ್ರಹಿಕೆಯಅ ಲಸ್ಕ ನನ್ನ ಪ್ರೀತಿಯ ಹುಡುಗಿಗೆ (ಸಂಪುಟ1,2,3,4,5,6) ತರಳಬಾಳು ಹುಣ್ಣಿಮೆ ಕಾಲಾತೀತ ಅಮೃತಾಕ್ಷರ ನಾನು ಹಡೆದವ್ವ ಹೊಳೆದಂಡೆ ಅಂಕಣಮಾಲೆ (ನೋಟ 1,2,3,4) ರೆಕ್ಕೆ ಬೇರು ಉಂಡೂ ಹೋದ ಕೊಂಡೂ ಹೋದ ಕೊಟ್ರೇಶಿ ಕನಸು ಅಮೃತಧಾರೆ ಈಗ ನಿಮ್ಮ ಮೆಚ್ಚಿನ ಚಿತ್ರಗೀತೆಗಳು ಆತ್ಮಗೀತ ದೃಶ್ಯ ಮಾಧ್ಯಮದಲ್ಲಿ ಹೀಗೆ ಕಥೆ ಹೇಳುವುದರಲ್ಲಿ ಪ್ರೀತಿಯುಳ್ಳ ನಾಗತಿಹಳ್ಳಿ ಚಂದ್ರಶೇಖರರಿಗೆ ಕಥೆ ಹೇಳುವ ದೃಶ್ಯ ಮಾಧ್ಯಮದ ಕಡೆ ಕೂಡಾ ಒಲವು ಹರಿದು ಬಂತು.ಚಂದ್ರಶೇಖರ್ ಸಿನಿಮಾ ಉದ್ಯಮದಲ್ಲಿ ಕಾರ್ಯ ಪ್ರಾರಂಭಿಸಿದ್ದು 'ಕಾಡಿನ ಬೆಂಕಿ' ಚಿತ್ರದ ಸಂಭಾಷಣೆ ಬರೆಯುವುದರ ಮೂಲಕ. ತದನಂತರ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇವರ ಮಾತಾಡ್ ಮಾತಾಡು ಮಲ್ಲಿಗೆ ಚಿತ್ರ ೨೦೦೭ರಲ್ಲಿ ಕ್ಯಾನೆ ಚಿತ್ರೋತ್ಸವದಲ್ಲಿ ತೆರೆ ಕಂಡಿತ್ತು. ಇಂದು ಕನ್ನಡ ಚಿತ್ರರಂಗದಲ್ಲಿ ನಾಗತಿಹಳ್ಳಿ ಚಂದ್ರಶೇಖರರ ಚಿತ್ರಗಳು ವಿಶಿಷ್ಟ ಸ್ಥಾನ ಪಡೆದಿವೆ. ಅವರ ‘ಮಾತಾಡ್ ಮಾತಾಡು ಮಲ್ಲಿಗೆ’ ಸಾಗರಗಳನ್ನು ದಾಟಿ ಕೇನ್ಸ್ ಅಂತಹ ಪ್ರತಿಷ್ಟಿತ ಉತ್ಸವಗಳಲ್ಲಿ ಪ್ರದರ್ಶನ ಕಂಡಿತು. ತಮ್ಮ ಅಧ್ಯಾಪನದ ದಿನಗಳಲ್ಲಿ ಚಿತ್ರಕಥೆ, ಸಂಭಾಷಣೆ, ಗೀತ ರಚನೆಗಳಲ್ಲಿ ಭಾಗಿಯಾಗುತ್ತಿದ್ದ ನಾಗತಿಹಳ್ಳಿ ಚಂದ್ರಶೇಖರ್ ಅವರ ಕಾಯಕಗಳು ‘ಕಾಡಿನ ಬೆಂಕಿ’, ಸಂಕ್ರಾಂತಿ’, ಪ್ರಥಮ ಉಷಾ ಕಿರಣ’, ‘ಉದ್ಭವ’, ‘ಊರ್ವಶಿ’ ಮುಂತಾದ ಪ್ರಸಿದ್ಧ ಚಿತ್ರಗಳಿಗೆ ಮೆರುಗು ನೀಡಿತ್ತು.1991 ರಲ್ಲಿ ಮೂಡಿಬಂದ ‘ಉಂಡು ಹೋದ ಕೊಂಡು ಹೋದ’ ಚಿತ್ರದಿಂದ ಮೊದಲ್ಗೊಂಡಂತೆ, ‘ಬಾ ನಲ್ಲೆ ಮಧು ಚಂದ್ರಕೆ’, ‘ಕೊಟ್ರೇಶಿ ಕನಸು’, ‘ಅಮೆರಿಕ! ಅಮೇರಿಕಾ!!’, ‘ಹೂಮಳೆ’, ‘ನನ್ನ ಪ್ರೀತಿಯ ಹುಡುಗಿ’, ‘ಪ್ಯಾರಿಸ್ ಪ್ರಣಯ’, ‘ಅಮೃತಧಾರೆ’, ‘ಮಾತಾಡ್ ಮಾತಾಡು ಮಲ್ಲಿಗೆ’, ‘ಒಲವೆ ಜೀವನ ಲೆಖ್ಖಾಚಾರ’, ‘ನೂರೂ ಜನ್ಮಕು’ 'ಬ್ರೇಕಿಂಗ್ ನ್ಯೂಸ್', 'ಇಷ್ಟಕಾಮ್ಯ', 'ಇಂಡಿಯಾ VS ಇಂಗ್ಲೆಂಡ್'  ಮುಂತಾದ ಚಿತ್ರಗಳನ್ನು ಅವರು ನಿರ್ದೇಶಿಸಿದ್ದಾರೆ. ಕಲಾತ್ಮಕ ಚಿತ್ರಗಳ ಚಿಂತನಾತ್ಮಕ ಗುಣ, ಸಾಮಾಜಿಕ ಚಿತ್ರಗಳ ಸ್ಪಂದನೆ, ಆಧುನಿಕ ಬದುಕಿನ ವೈವಿಧ್ಯಮಯ ವೈರುಧ್ಯ ಇವುಗಳ ಜೊತೆಗೆ ಹಿತಮಿತದ ಸಂಗೀತ, ದೃಶ್ಯ ವೈಭವ ಇವುಗಳನ್ನೆಲ್ಲ ನಾಗತಿಹಳ್ಳಿ ತಮ್ಮ ಸೃಜನಶೀಲ ಸ್ಪರ್ಶದಲ್ಲಿ ಬೆಳ್ಳಿತೆರೆಯಲ್ಲಿ ಅಭಿವ್ಯಕ್ತಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿನ ಹಲವಾರು ಪ್ರಶಸ್ತಿ, ಗಲ್ಲಾಪೆಟ್ಟಿಗೆಯ ಯಶಸ್ಸುಗಳು ಮತ್ತು ಸೋಲುಗಳನ್ನು ನಾಗತಿಹಳ್ಳಿ ಸಮಭಾವತ್ವದಲ್ಲಿ ಸ್ವೀಕರಿಸಿ ಮುನ್ನಡೆಯುತ್ತಿದ್ದಾರೆ. ಇಂದು ಕನ್ನಡ ಚಿತ್ರರಂಗದಲ್ಲಿ ಪ್ರಸಿದ್ಧ ಸಂಗೀತ ನಿರ್ದೆಶಕರಾಗಿರುವ ಮನೋಮೂರ್ತಿ ಅವರನ್ನು ಅಮೇರಿಕದ ಸಾಫ್ಟ್ವೇರ್ ಕ್ಷೇತ್ರದಿಂದ ಕನ್ನಡ ಚಿತ್ರ ಸಂಗೀತಕ್ಕೆ ಕರೆತಂದ ಕೀರ್ತಿ ಕೂಡಾ ನಾಗತಿಹಳ್ಳಿ ಚಂದ್ರಶೇಖರ್ ಅವರದ್ದು,ಇದೇ ರೀತಿ  ಸ್ಟೀಫನ್ ಪ್ರಯೋಗ್  ಅವರನ್ನು ಸಂಗೀತ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ನಿರ್ದೇಶಿಸಿರುವ ಸಿನಿಮಾಗಳು ಗೀತರಚನೆ ನಿರ್ದೇಶಿಸಿರುವ ಧಾರಾವಾಹಿಗಳು ಪ್ರಶಸ್ತಿ,ಗೌರವಗಳು ಸಾಹಿತ್ಯ ಕ್ಷೇತ್ರ: ೨೦೦೩ - ಶಿವಮೊಗ್ಗದ ಕರ್ನಾಟಕ ಸಂಘದಿಂದ  ಅಂಕಣ ಸಾಹಿತ್ಯಕ್ಕೆ ``ಹಾ.ಮಾ.ನಾ.’’ ಪ್ರಶಸ್ತಿ ೨೦೦೫ - ಧರ್ಮಸ್ಥಳದಲ್ಲಿ ೭೩ನೇ ಸರ್ವಧರ್ಮ ಸಮ್ಮೇಳನದ ಭಾಗವಾಗಿ `ಸಾಹಿತ್ಯ ಸಮ್ಮೇಳನ’ದ ಉದ್ಘಾಟಕ ೨೦೦೮ - ಆಳ್ವಾಸ್ ಮೂಡುಬಿದಿರೆಯಿಂದ `ನುಡಿಸಿರಿ’ ಪ್ರಶಸ್ತಿ ೨೦೧೦ - ಕರ್ನಾಟಕ ಸರ್ಕಾರದಿಂದ `ರಾಜ್ಯೋತ್ಸವ’ ಪ್ರಶಸ್ತಿ ೨೦೧೧ - ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ’ ಸಾಹಿತ್ಯ ಪ್ರಶಸ್ತಿ ೨೦೧೧ - ಮುಂಬೈನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಂಸ್ಕೃತಿಕ ಸಮ್ಮೇಳನದ ಅಧ್ಯಕ್ಷರು ೨೦೧೨ - ಮಂಗಳೂರಿನ `ಎಂ.ಆರ್.ಪಿ.ಎಲ್. ರಾಜ್ಯೋತ್ಸವ’ ಪ್ರಶಸ್ತಿ ೨೦೧೪ - ಕೀನ್ಯಾದಲ್ಲಿ ನಡೆದ `ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ’ದ ಅಧ್ಯಕ್ಷರು ೨೦೧೫ - ಮಂಡ್ಯದ `ಜಿಲ್ಲಾ ಸಾಹಿತ್ಯ ಸಮ್ಮೇಳನ’ದ ಅಧ್ಯಕ್ಷರು ೨೦೧೫ - ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ೨೦೧೭- ಮೂಡುಬಿದಿರೆಯ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನದ ಸರ್ವಾಧ್ಯಕ್ಷರು ಸಿನಿಮಾ ಕ್ಷೇತ್ರ: ಸಾವಿರದೊಂದು ಸಂಚಿಕೆಗಳ ಪ್ರಥಮ ಸುದೀರ್ಘ ಕಿರುತೆರೆಯ ಧಾರಾವಾಹಿ `ವಠಾರ’ ಸೇರಿದಂತೆ ವಿವಿಧ ವಾಹಿನಿಗಳಿಗೆ ಹತ್ತು ಮೆಗಾ ಧಾರಾವಾಹಿಗಳ ಪ್ರಧಾನ ನಿರ್ದೇಶನ. `ಪ್ರತಿಬಿಂಬ’ ವಿದೇಶದಲ್ಲಿ ಚಿತ್ರೀಕರಣಗೊಂಡ ಕನ್ನಡದ ಪ್ರಥಮ ಧಾರಾವಾಹಿ ೨೦೦೭- ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಿತಿಯ ಅಧ್ಯಕ್ಷರು ೨೦೧೩- ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ತೀರ್ಪುಗಾರ ಸಮಿತಿಯ ಸದಸ್ಯರು ೨೦೧೩, ೨೦೧೪, ೨೦೧೫- ರೇಡಿಯೋ ಮಿರ್ಚಿ ಸೌತ್ ಮ್ಯೂಸಿಕ್ ಪ್ರಶಸ್ತಿಯ ತೀರ್ಪುಗಾರ ಸಮಿತಿಯ ಸದಸ್ಯರು ೨೦೧೬- ಕರ್ನಾಟಕ ಸರ್ಕಾರದಿಂದ ಪ್ರತಿಷ್ಠಿತ `ಪುಟ್ಟಣ್ಣ ಕಣಗಾಲ್ ಜೀವಮಾನ ಸಾಧನೆ’ ಪ್ರಶಸ್ತಿ ೨೦೧೮- ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರು ೨೦೧೯- ಭಾರತೀಯ ಚಲನಚಿತ್ರಗಳ `ಆಸ್ಕರ್’ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರು. ಕಳೆದ ಒಂದು ದಶಕದಿಂದ ಬೆಂಗಳೂರಿನಲ್ಲಿ ತಮ್ಮ `ಟೆಂಟ್ ಸಿನಿಮಾ’ ಶಾಲೆಯ ಮುಖಾಂತರ ಹಲವಾರು ಹೊಸ ಕಲಾವಿದರು ಮತ್ತು ತಂತ್ರಜ್ಞರನ್ನು ರೂಪಿಸಿ ಚಲನಚಿತ್ರ ಮತ್ತು ಕಿರುತೆರೆ ಕ್ಷೇತ್ರಕ್ಕೆ ಹೊಸ ಪ್ರತಿಭೆಗಳನ್ನು ನೀಡುತ್ತಿದ್ದಾರೆ ರಾಷ್ಟ್ರ ಪ್ರಶಸ್ತಿ: ಕೊಟ್ರೇಶಿ ಕನಸು ಅಮೇರಿಕಾ ! ಅಮೇರಿಕಾ !! ಹೂಮಳೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಅತ್ಯುತ್ತಮ ಚಿತ್ರ 1994-95: ಕೊಟ್ರೇಶಿ ಕನಸು (ಅತ್ಯುತ್ತಮ ಸಾಮಾಜಿಕ ಚಿತ್ರ) 1996-97: ಅಮೆರಿಕಾ ಅಮೆರಿಕಾ (ಪ್ರಥಮ ಅತ್ಯುತ್ತಮ ಚಿತ್ರ) 1998-99: ಹೂಮಳೆ (ದ್ವಿತೀಯ ಅತ್ಯುತ್ತಮ ಚಿತ್ರ) 2005-06: ಅಮೃತಧಾರೆ (ತೃತೀಯ ಅತ್ಯುತ್ತಮ ಚಿತ್ರ) 2007-08: ಮಾತಾಡ್ ಮಾತಾಡು ಮಲ್ಲಿಗೆ (ತೃತೀಯ ಅತ್ಯುತ್ತಮ ಚಿತ್ರ) ಅತ್ಯುತ್ತಮ ಕಥಾಲೇಖಕ 1988-89: ಸಂಕ್ರಾಂತಿ 1991-92: ಉಂಡೂ ಹೋದ ಕೊಂಡೂ ಹೋದ 1996-97 : ಅಮೆರಿಕಾ ಅಮೆರಿಕಾ ಅತ್ಯುತ್ತಮ ಗೀತರಚನೆ 2002-03: ಪ್ಯಾರಿಸ್ ಪ್ರಣಯ ೨೦೧೯ : ಫಿಲಂ ಫೇರ್ ಪ್ರಶಸ್ತಿ ನನ್ನ ಪ್ರೀತಿಯ ಹುಡುಗಿ ಪ್ಯಾರಿಸ್ ಪ್ರಣಯ ಹೊರಗಿನ ಸಂಪರ್ಕಗಳು Official Website of Nagathihalli Chandrashekhar Nagathihalli back to roots Profile on IMDB Nagathihalli true colors Andrita Blames Nagathihalli Nagathihalli apology to Andrita ಉಲ್ಲೇಖಗಳು ನಿರ್ದೇಶಕರು ಕನ್ನಡ ಚಲನಚಿತ್ರ ನಿರ್ದೇಶಕರು ಚಿತ್ರಸಾಹಿತಿಗಳು
3146
https://kn.wikipedia.org/wiki/%E0%B2%85%E0%B2%82%E0%B2%AC%E0%B2%B0%E0%B3%80%E0%B2%B6%E0%B3%8D
ಅಂಬರೀಶ್
ಅಂಬರೀಶ್ (ಮಳವಳ್ಳಿ ಹುಚ್ಚೇಗೌಡ ಅಮರನಾಥ್) (29 ಮೇ 1952 - 24 ನವೆಂಬರ್ 2018) ಭಾರತೀಯ ಚಲನಚಿತ್ರ ನಟ ಮತ್ತು ಕರ್ನಾಟಕ ರಾಜ್ಯದ ಒಬ್ಬ ರಾಜಕಾರಣಿಯಾಗಿದ್ದರು. ಪುಟ್ಟಣ್ಣ ಕಣಗಾಲ್ ಅವರ ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಿತ್ರ ನಾಗರಹಾವು (1972) ನಲ್ಲಿ ಚೊಚ್ಚಲ ನಟನೆಯ ನಂತರ, ಅವರ ನಟನಾ ವೃತ್ತಿಯು ಕನ್ನಡ ಚಿತ್ರಗಳಲ್ಲಿ ಖಳ ನಟ ಮತ್ತು ಪೋಷಕ ಪಾತ್ರಗಳನ್ನು ಚಿತ್ರಿಸುವ ಒಂದು ಸಂಕ್ಷಿಪ್ತ ಹಂತದೊಂದಿಗೆ ಪ್ರಾರಂಭವಾಯಿತು. ವಾಣಿಜ್ಯಿಕವಾಗಿ ಯಶಸ್ಸು ಗಳಿಸಿದ ಅನೇಕ ಚಿತ್ರಗಳಲ್ಲಿ ಸ್ವತಃ ಪ್ರಮುಖ ಖಳನಟನಾಗಿ ಸ್ಥಾಪನೆಗೊಂಡ ನಂತರ, ಅನೇಕ ಸಿನೆಮಾಗಳಲ್ಲಿ ನಾಯಕನಟನಾಗಿ ನಟಿಸಿದರು. ರೆಬೆಲ್ ಸ್ಟಾರ್, ಮಂಡ್ಯದ ಗಂಡು ಎಂಬ ಉಪನಾಮವನ್ನು ಗಳಿಸಿದರು. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಮತ್ತು ಜನತಾದಳ ಪಕ್ಷದಿಂದ ಸ್ಪರ್ದಿಸಿ ಲೋಕಸಭೆ ಸದಸ್ಯ ಮತ್ತು ಶಾಸಕರಾಗಿದ್ದರು, ಅವರು ಮೇ 2013 ರಿಂದ ಜೂನ್ 2016 ರ ವರೆಗೆ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಕರ್ನಾಟಕ ಸರಕಾರದ ವಸತಿ ಸಚಿವರಾಗಿ ಕಾರ್ಯನಿರ್ವಹಿಸಿದರು. ಅವರ ನಟನಾ ವೃತ್ತಿಜೀವನಕ್ಕಾಗಿ ಅನೇಕ ರಾಜ್ಯ ಸರ್ಕಾರ ಪ್ರಶಸ್ತಿಗಳನ್ನು ಮತ್ತು ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ, ಅಂಬರೀಶ್ ಅವರಿಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು 63 ನೇ ವಾರ್ಷಿಕ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.. ಜನನ, ಬಾಲ್ಯ, ವೈಯಕ್ತಿಕ ಜೀವನ ಇವರು ಮಂಡ್ಯ ಜಿಲ್ಲೆ ದೊಡ್ಡರಸನ ಕೆರೆ ಗ್ರಾಮದಲ್ಲಿ 1952 ಮೇ 29ರಂದು ಜನಿಸಿದರು. ತಂದೆ ಹುಚ್ಚೇಗೌಡ, ತಾಯಿ ಪದ್ಮಮ್ಮ. ಖ್ಯಾತ ಪಿಟೀಲು ವಿದ್ವಾನ್ ಟಿ.ಚೌಡಯ್ಯ ಇವರ ಅಜ್ಜ. ಅಂಬರೀಶ್ ಅವರ ಪತ್ನಿ ಕನ್ನಡ ಚಿತ್ರನಟಿ ಸುಮಲತಾ. ಪುತ್ರನ ಹೆಸರು ಅಭಿಷೇಕ್ ಗೌಡ. ಸಿನೆಮಾ ಜೀವನ ಕನ್ನಡ ಚಲನಚಿತ್ರ ರಂಗಕ್ಕೆ ೧೯೭೩ರಲ್ಲಿ, ಪುಟ್ಟಣ್ಣ ಕಣಗಾಲ್ ನಿರ್ದೇಶನದ "ನಾಗರಹಾವು" ಚಿತ್ರದ (ಜಲೀಲನ ಪಾತ್ರ) ಮೂಲಕ ಪಾದಾರ್ಪಣೆ ಮಾಡಿದರು. ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿದ ಎಚ್.ಕೆ.ಅನಂತರಾವ್ ಅವರ ಕಾದಂಬರಿ ಆಧಾರಿತ ಅಂತ ಚಿತ್ರದ ನಾಯಕನಾಗಿ ಅಭಿನಯಿಸಿದ್ದು ಇವರ ವೃತ್ತಿ ಜೀವನಕ್ಕೆ ಒಂದು ಹೊಸ ಆಯಾಮ ನೀಡಿತು. ಈ ಚಿತ್ರದಲ್ಲಿ ಅನ್ಯಾಯದ ವಿರುದ್ಧ ಸಿಡಿದೇಳುವ ಇನ್ಸ್ಪೆಕ್ಟರ್ ಸುಶೀಲ್ ಕುಮಾರ್ ಪಾತ್ರ ಇವರಿಗೆ 'ರೆಬೆಲ್ ಸ್ಟಾರ್' ಎಂಬ ಇಮೇಜು ನೀಡಿತು. ಅನಂತರ ಇವರು ನಾಯಕ, ಖಳನಾಯಕಪಾತ್ರಗಳಲ್ಲಿ ನಟಿಸಿದರು. ರಂಗನಾಯಕಿ, ಪಡುವಾರಹಳ್ಳಿ ಪಾಂಡವರು, ಮಸಣದ ಹೂವು, ಚಕ್ರವ್ಯೂಹ, ಏಳುಸುತ್ತಿನ ಕೋಟೆ, ಹೃದಯ ಹಾಡಿತು, ಸ್ನೇಹಸಂಬಂಧ, ಬ್ರಹ್ಮಾಸ್ತ್ರ, ಅಮರಜ್ಯೋತಿ ಮೊದಲಾದ ಅನೇಕ ಚಿತ್ರಗಳಲ್ಲಿ ಇವರು ನಟಿಸಿದ್ದಾರೆ. 'ಮಸಣದ ಹೂವು' ಚಿತ್ರದಲ್ಲಿನ ಇವರ ಪಾತ್ರದ ಅಭಿನಯ ಅವಿಸ್ಮರಣೀಯವಾದದ್ದು. 'ಹೃದಯ ಹಾಡಿತು' ಚಿತ್ರ ಇವರ ಚಿತ್ರರಂಗದ ಇಮೇಜನ್ನು ಬದಲಾಯಿಸಿತು. ಚಕ್ರವ್ಯೂಹ ಹಾಗೂ ಮೌನರಾಗ ಚಿತ್ರಗಳು ಇವರಿಗೆ ಜನಪ್ರಿಯತೆ ತಂದುಕೊಟ್ಟವು!. ಜೋ ಸೈಮನ್ ನಿರ್ದೇಶನದಲ್ಲಿ, ೧೯೮೯ರಲ್ಲಿ ಬಿಡುಗಡೆಯಾದ ಹಾಂಕಾಂಗ್‍ನಲ್ಲಿ ಏಜೆಂಟ್ ಅಮರ್ ಇವರ ನೂರನೇ ಚಿತ್ರ. ಇವರು ಇಲ್ಲಿಯವರೆಗೆ ಸುಮಾರು ೨೦೦ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದಾರೆ. ರಾಜಕೀಯ ಜೀವನ ಅಂಬರೀಶ್ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಚುನಾಯಿತರಾಗಿ ಸಂಸತ್ ಸದಸ್ಯರಾಗಿದ್ದರು. ಇವರು ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿದ ಸಂದರ್ಭದಲ್ಲಿ ಮೊದಲಿಗೆ ಜನತಾದಳದಲ್ಲಿದ್ದರು. 1994 ರಲ್ಲಿ ನಡೆದ ವಿಧಾನಸಭೆ ಚುನಾವಣೆಯ ಮುಂದೆ ಅಂಬರೀಶ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಗೆ ಸೇರಿದರು. 1996ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ ನಂತರ ಅವರು ಎರಡು ವರ್ಷಗಳ ನಂತರ ಪಕ್ಷವನ್ನು ತ್ಯಜಿಸಿದರು. ಅಂಬರೀಶ್ ತರುವಾಯ ಜನತಾ ದಳಕ್ಕೆ ಸೇರಿಕೊಂಡರು ಮತ್ತು ಮಂಡ್ಯದಿಂದ 1998 ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿ ಜಯ ಗಳಿಸಿ ಲೋಕಸಭೆಗೆ ಆಯ್ಕೆಯಾದರು. 14 ನೇ ಲೋಕಸಭೆಯಲ್ಲಿ, ಅವರು ಮಾಹಿತಿ ಮತ್ತು ಪ್ರಸಾರ  ರಾಜ್ಯ ಸಚಿವರಾಗಿದ್ದರು. ಅನಂತರ ಕಾವೇರಿ ಚಳವಳಿಯ ಹಿನ್ನೆಲೆಯಲ್ಲಿ ಜನತೆಯ ಅಭಿಪ್ರಾಯಕ್ಕೆ ಮನ್ನಣೆ ನೀಡಿ ತಮ್ಮ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದರು (2002). ಮೇ 2009ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಸೋತರು. ೨೦೧೩ರಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾಗಿರುವ ಅವರು, ಶ್ರೀ ಸಿದ್ಧರಾಮಯ್ಯನವರ ಸಂಪುಟದಲ್ಲಿ ವಸತಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ರಾಜಕೀಯ ವೃತ್ತಿಜೀವನ ಸದಸ್ಯ, 12ನೇ ಲೋಕಸಭೆ: 1998-1999 ಸದಸ್ಯ, 13ನೇ ಲೋಕಸಭೆ: 1999-2004 ಸದಸ್ಯ, 14ನೇ ಲೋಕಸಭೆ: 2004-2009 ಮಾಹಿತಿ ಮತ್ತು ಪ್ರಸಾರ ರಾಜ್ಯ ಸಚಿವ,  24 ಅಕ್ಟೋಬರ್ 2006 ರಿಂದ 2008 ಸದಸ್ಯ, ಕರ್ನಾಟಕ ವಿಧಾನಸಭೆ: 2013-2018, ವಸತಿ ಸಚಿವ ಚಲನಚಿತ್ರಗಳು ಮುಖ್ಯ ಲೇಖನ:ಅಂಬರೀಶ್ ನಟನೆಯ ಚಲನಚಿತ್ರಗಳು ಪ್ರಶಸ್ತಿ ಮತ್ತು ಮನ್ನಣೆಗಳು 1982 ರಲ್ಲಿ 'ಅಂತ'ಗಾಗಿ ಅತ್ಯುತ್ತಮ ನಟನಿಗಾಗಿರುವ ಕರ್ನಾಟಕ ರಾಜ್ಯ ವಿಶೇಷ ಪ್ರಶಸ್ತಿ. ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ಮಸಣದ ಹೂವು' ಚಿತ್ರದಲ್ಲಿ "ಅತ್ಯುತ್ತಮ ಪೋಷಕ ನಟ" (1985-86) ಕರ್ನಾಟಕ ರಾಜ್ಯ ಪ್ರಶಸ್ತಿ ರಾಜೇಂದ್ರ ಬಾಬು ನಿರ್ದೇಶನದ "ಒಲವಿನ ಉಡುಗೊರೆ " ಚಿತ್ರದಲ್ಲಿನ ಅಭಿನಯಕ್ಕಾಗಿ ಫಿಲ್ಮ್ ಫೇರ್ ಅತ್ಯುತ್ತಮ ನಟ ಪ್ರಶಸ್ತಿ. 2005 ರಲ್ಲಿ ಎನ್ ಟಿಆರ್ ರಾಷ್ಟ್ರೀಯ ಪ್ರಶಸ್ತಿ ಪಡೆದರು. ಫಿಲ್ಮ್ ಫೇರ್ ಜೀವಮಾನ ಸಾಧನೆಯ ಪ್ರಶಸ್ತಿ - ದಕ್ಷಿಣ 2009. ಆಂಧ್ರ ಸರ್ಕಾರವು ನಂದಿ ಪ್ರಶಸ್ತಿಯನ್ನು 2009ರಲ್ಲಿ ನೀಡಿ ಗೌರವಿಸಿತು. 90 ರ ದಶಕದಲ್ಲಿ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ತಿರಸ್ಕರಿಸಿದ ನಂತರ, ತಿರುವನಂತಪುರ ಟಿ.ಎನ್.ಬಾಲಕೃಷ್ಣ ಅವರಿಗೆ ನೀಡಲಾಯಿತು ಟಿವಿ 9 ಸ್ಯಾಂಡಲ್ ವುಡ್ ಸ್ಟಾರ್ ಅವಾರ್ಡ್ಸ್ - 2012, ಜೀವಮಾನ ಸಾಧನೆಯ ಪ್ರಶಸ್ತಿ ಕರ್ನಾಟಕ ಸರ್ಕಾರ ಡಾ. ವಿಷ್ಣುವರ್ಧನ್ ಪ್ರಶಸ್ತಿ 2011 ರಲ್ಲಿ 2013 ರಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ SIIMA ಜೀವಮಾನ ಸಾಧನೆ ಪ್ರಶಸ್ತಿ 2012 ನಿಧನ ಅಂಬರೀಶ್ ಅವರು ೨೪ ನವೆಂಬರ್ ೨೦೧೮ರಂದು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ ೬೬ ವರ್ಷ ವಯಸ್ಸಾಗಿತ್ತು. ಉಲ್ಲೇಖಗಳು ಸಿನಿಮಾ ತಾರೆಗಳು ಕನ್ನಡ ಚಿತ್ರರಂಗದ ನಟರು ೧೯೫೧ ಜನನ ೨೦೧೮ ನಿಧನ ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು ಕರ್ನಾಟಕದ ರಾಜಕಾರಣಿಗಳು ಶಾಸಕರು
3152
https://kn.wikipedia.org/wiki/%E0%B2%B5%E0%B2%BF%E0%B2%82%E0%B2%AC%E0%B2%B2%E0%B3%8D%E0%B2%A1%E0%B2%A8%E0%B3%8D
ವಿಂಬಲ್ಡನ್
ವಿಂಬಲ್ಡನ್ ಪ್ರತಿಷ್ಟಿತ ಟೆನಿಸ್ ಟೂರ್ನಮೆಂಟ್. ಪ್ರತಿ ವರ್ಷ ನಡೆಯುವ ಈ ಚ್ಯಾಂಪಿಯನ್ಶಿಪ್ ಲಂಡನ್ನಿನ ವಿಂಬಲ್ಡನ್ನಿನಲ್ಲಿ ನಡೆಯುತ್ತದೆ; ನಡೆಯುವ ಊರಿನಿಂದಲೇ ಟೂರ್ನಿಗೆ ಈ ಹೆಸರು. ಹುಲ್ಲು ಹಾಸಿನ ಮೇಲೆ ನಡೆಯುವ ಏಕೈಕ ಟೆನ್ನಿಸ್ ಟೂರ್ನಮೆಂಟ್ ಇದು. ವಿವರ ಲೇಖನ:ವಿಂಬಲ್ಡನ್‌, ಲಂಡನ್‌ ವಿಂಬಲ್ಡನ್ ಮಹಿಳಾ ಸಿಂಗಲ್ಸ್ ಟೂರ್ನಿ 2016 ಆಲ್‌ ಇಂಗ್ಲೆಂಡ್ ಕ್ಲಬ್‌ನ ಹುಲ್ಲಿನ ಅಂಕಣದಲ್ಲಿ 9-7-2016 ಶನಿವಾರ ರಾತ್ರಿ ವಿಂಬಲ್ಡನ್ ಟ್ರೋಫಿ ಗೆದ್ದ ಅವರು, 22ನೇ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ಗಳಿಸಿದ ದಾಖಲೆಯನ್ನು ಮಾಡಿದರು. ಇದರೊಂದಿಗೆ 17 ವರ್ಷಗಳ ಹಿಂದೆ ಜರ್ಮನಿಯ ಸ್ಟೆಫಿ ಗ್ರಾಫ್ ಅವರು ಮಾಡಿದ್ದ ದಾಖಲೆಯನ್ನು ಸರಿಗಟ್ಟಿದರು. ಎರಡು ತಿಂಗಳ ಹಿಂದೆಯಷ್ಟೆ ಆಸ್ಟ್ರೇಲಿಯಾ ಓಪನ್ ಟೂರ್ನಿ ಫೈನಲ್‌ ನಲ್ಲಿಯೂ ಅವರು ಕೆರ್ಬರ್‍ಗೆ ಸೋತಿದ್ದರು. ಆ ಪಂದ್ಯದಲ್ಲಿ ಗೆದ್ದಿದ್ದ ಜರ್ಮನಿಯ ಏಂಜೆಲಿಕ್ ಕೆರ್ಬರ್ ಅವರನ್ನು ಶನಿವಾರ ವಿಂಬಲ್ಡನ್‌ ಫೈನಲ್‌ನಲ್ಲಿ ಸೆರೆನಾ ಮಣಿಸಿದರು. ವಿಜಯ ಸಾಧಿಸಿದ ಸೆರೆನಾ ಸೆಂಟರ್ ಕೋರ್ಟ್‌ನಲ್ಲಿ ಅಂಗಾತವಾಗಿ ಬಿದ್ದು ಸಂಭ್ರಮ ವ್ಯಕ್ತಪಡಿಸಿದರು. ಕೆಲ ಕ್ಷಣಗಳ ನಂತರ ಎದ್ದು ನಿಂತು ಅಭಿಮಾನಿಗಳತ್ತ ಕೈಬೀಸಿದರು. ಎದುರಾಳಿ ಕೆರ್ಬರ್ ಅವರನ್ನು ಬಿಗಿದಪ್ಪಿಕೊಂಡರು. ಅಮೆರಿಕದ 34 ವರ್ಷದ ಆಟಗಾರ್ತಿ ಸೆರೆನಾ ನಡೆದಿದ್ದ 81 ನಿಮಿಷಗಳ ಹಣಾಹಣಿಯಲ್ಲಿ 7–5, 6–3ರಲ್ಲಿ ಏಂಜೆಲಿಕ್ ವಿರುದ್ಧ ಜಯಿಸಿದರು. ಸೆರೆನಾ ಅವರ ಬಲಶಾಲಿ ಸರ್ವ್‌ಗಳನ್ನು ಮೊದಲ ಸೆಟ್‌ನಲ್ಲಿ ಕೆರ್ಬರ್ ದಿಟ್ಟತನದಿಂದ ಎದುರಿಸಿದ್ದರು. ಈ ಸೆಟ್‌ನಲ್ಲಿ ಹೆಚ್ಚುಕಮ್ಮಿ ಸಮಬಲದ ಹೋರಾಟ ನಡೆಯಿತು. ಆದರೆ ಟೈಬ್ರೇಕರ್‌ನಲ್ಲಿ ಸೆರೆನಾ ತಪ್ಪು ಮಾಡಲಿಲ್ಲ. ನಿಖರ ಹೊಡೆತಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು. ಸೆಟ್‌ ಅನ್ನು ತಮ್ಮದಾಗಿಸಿಕೊಂಡರು. ನಂತರ ಎರಡನೇ ಸೆಟ್‌ನಲ್ಲಿ 34 ವರ್ಷದ ಸೆರೆನಾ ಆರಂಭದಿಂದಲೇ ವೇಗದ ಆಟಕ್ಕೆ ಒತ್ತು ನೀಡಿದರು. ಅವರು ಹಾಕಿದ ಡ್ರಾಪ್‌ಗಳ ಅಂದಾಜು ಸಿಗದೇ ಕೆರ್ಬರ್ ಹತಾಶರಾದರು. ಸೆರೆನಾ ಮಾಡಿದ ನಿಖರ ಸರ್ವ್‌ಗಳಿಗೆ ಉತ್ತರ ಕೊಡುವಲ್ಲಿಯೂ ಎಡವಿದರು ಇದರಿಂದಾಗಿ ಕೆರ್ಬರ್‌ ಅವರಿಗೆ ಮೂರು ಅಂಕಗಳನ್ನು ಗಳಿಸಲು ಮಾತ್ರ ಸಾಧ್ಯವಾಯಿತು. ಪಂದ್ಯದಲ್ಲಿ ಒಟ್ಟು 13 ಏಸ್‌ ಸಿಡಿಸಿದ ಸೆರೆನಾ, 39 ವಿನ್ನರ್‌ಗಳನ್ನು ಹೊಡೆದು ವಿಜೃಂಭಿಸಿದರು. ನಾಲ್ಕನೇ ಶ್ರೇಯಾಂಕದ ಕೆರ್ಬರ್ ಸೆಮಿಫೈನಲ್‌ನಲ್ಲಿ ವೀನಸ್ ವಿಲಿಯಮ್ಸ್ ಅವರನ್ನು ಸೋಲಿಸಿದ್ದರು. ಗೆಲವಿನ ಸಂಭ್ರಮ-ಫೋಟೊ:[] ಮುಖ್ಯಾಂಶಗಳು ತಮ್ಮ ವೃತ್ತಿ ಜೀವನದ 50ನೇ ಪ್ರಶಸ್ತಿ ಗೆದ್ದ ಸೆರೆನಾ ₹17.40 ಕೋಟಿ ಬಹುಮಾನ ಪಡೆದ 34 ವರ್ಷದ ಸೆರೆನಾ ಸೆರೆನಾ ಗ್ರ್ಯಾಂಡ್‌ಸ್ಲಾಮ್ ಸಾಧನೆ (ಸಿಂಗಲ್ಸ್) ಆಸ್ಟ್ರೇಲಿಯಾ ಓಪನ್ – 2003, 2005, 2007, 2009, 2010, 2015 ಫ್ರೆಂಚ್ ಓಪನ್ : 2002, 2013, 2015 ವಿಂಬಲ್ಡನ್: 2002, 2003, 2009, 2010, 2012, 2015, 2016 ಅಮೆರಿಕ ಓಪನ್: 1999, 2002, 2008, 2012, 2013, 2014 ವಿಂಬಲ್ಡನ್ ಗ್ರ್ಯಾಂಡ್‌ ಸ್ಲಾಮ್ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್ 10-7-2016 ಬ್ರಿಟನ್‌ನ ಆ್ಯಂಡಿ ಮರ್ರೆ ♠ X ಕೆನಡಾದ ಮಿಲೊಸ್‌ ರಾಯೊನಿಕ್‌ ಅಂಕಗಳು:6–4, 7–6, 7–6; ಕಠಿಣ ಸವಾಲನ್ನು ಎದುರಿಸಿ ಅತ್ಯುತ್ತಮ ಹೋರಾಟ ತೋರಿದ ಬ್ರಿಟನ್‌ನ ಆ್ಯಂಡಿ ಮರ್ರೆ ವಿಂಬಲ್ಡನ್ ಗ್ರ್ಯಾಂಡ್‌ ಸ್ಲಾಮ್ ಟೆನಿಸ್‌ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್‌ ಆಗಿದ್ದಾರೆ. ಭಾನುವಾರ ನಡೆದ ಪುರುಷರ ವಿಭಾಗದ ಫೈನಲ್‌ ಹಣಾಹಣಿಯಲ್ಲಿ ಆ್ಯಂಡಿ ಮರ್ರೆ 6–4, 7–6, 7–6ರಲ್ಲಿ ಕೆನಡಾದ ಮಿಲೊಸ್‌ ರಾಯೊನಿಕ್‌ ಅವರನ್ನು ಮಣಿಸಿ ಮೂರನೇ ಗ್ರ್ಯಾಂಡ್‌ ಸ್ಲಾಮ್ ಟ್ರೋಫಿ ಎತ್ತಿ ಹಿಡಿದರು. ಮರ್ರೆ ವಿಂಬಲ್ಡನ್‌ನಲ್ಲಿ ಜಯಿಸಿದ ಎರಡನೇ ಪ್ರಶಸ್ತಿ ಇದಾಗಿದೆ. 2013ರಲ್ಲಿ ಇಲ್ಲಿ ಮೊದಲ ಬಾರಿ ಚಾಂಪಿಯನ್‌ ಆಗಿದ್ದರು. 2012ರ ಅಮೆರಿಕ ಓಪನ್‌ ಟೂರ್ನಿಯಲ್ಲಿಯೂ ಟ್ರೋಫಿ ಎತ್ತಿ ಹಿಡಿದಿದ್ದರು. 29 ವರ್ಷದ ಮರ್ರೆ ಇತ್ತೀಚಿನ ಒಂದು ವರ್ಷದಿಂದ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹೋದ ವರ್ಷ ಮತ್ತು ಈ ವರ್ಷ ಆಸ್ಟ್ರೇಲಿಯಾ ಟೂರ್ನಿಯಲ್ಲಿ ರನ್ನರ್ಸ್‌ ಅಪ್‌ ಸ್ಥಾನ ಪಡೆದಿದ್ದರು. ಅಷ್ಟೇ ಏಕೆ ಈ ಟೂರ್ನಿಯಲ್ಲಿ ಐದು ಬಾರಿ ಫೈನಲ್‌ ತಲುಪಿ ನಿರಾಸೆ ಕಂಡಿದ್ದರು. ಆದ್ದರಿಂದ ಅವರು ವಿಂಬಲ್ಡನ್‌ನಲ್ಲಿ ಪ್ರಶಸ್ತಿ ಗೆಲ್ಲುತ್ತಿದ್ದಂತೆ ಭಾವುಕರಾಗಿ ಕಣ್ಣೀರು ಹಾಕಿದರು. ಮರ್ರೆಗೆ ರೂ.17.8 ಕೋಟಿ ಪ್ರಶಸ್ತಿ ಚಾಂಪಿಯನ್‌ ಮರ್ರೆ ಅವರಿಗೆ 20 ಲಕ್ಷ ಬ್ರಿಟನ್‌ ಪೌಂಡ್‌ (ಸುಮಾರು ರೂ.17.8 ಕೋಟಿ) ಲಭಿಸಿತು. ರನ್ನರ್ ಅಪ್‌ ಆದ ರಾಯೊನಿಕ್‌ 10 ಲಕ್ಷ ಪೌಂಡ್‌ (ಸುಮಾರು ರೂ.8.9 ಕೋಟಿ) ಪಡೆದುಕೊಂಡರು. Gallery ನೋಡಿ ಯುರೋ ಫುಟ್ಬಾಲ್ 2016 ರಿಯೊ ಒಲಂಪಿಕ್ಷ್ ೨೦೧೬ ಉಲ್ಲೇಖ ಟೆನ್ನಿಸ್
3154
https://kn.wikipedia.org/wiki/%E0%B2%B5%E0%B3%80%E0%B2%A8%E0%B2%B8%E0%B3%8D%20%E0%B2%B5%E0%B2%BF%E0%B2%B2%E0%B2%BF%E0%B2%AF%E0%B2%82%E0%B2%B8%E0%B3%8D
ವೀನಸ್ ವಿಲಿಯಂಸ್
ವೀನಸ್ ವಿಲಿಯಂಸ್ ಅಮೇರಿಕದ ಟೆನ್ನಿಸ್ ಆಟಗಾರ್ತಿ. ಪೂರ್ವ ವಿಶ್ವ ನಂ ೧ ಆಗಿರುವ ವೀನಸ್ ೨೦೦೫ರ ವಿಂಬಲ್ಡನ್ ಚ್ಯಾಂಪಿಯನ್. ಇವಳ ತಂಗಿ ಸೆರೀನಾ ವಿಲಿಯಂಸ್ ಕೂಡ ಪೂರ್ವ ವಿಶ್ವ ಚ್ಯಾಂಪಿಯನ್. ಟೆನ್ನಿಸ್
3155
https://kn.wikipedia.org/wiki/%E0%B2%9F%E0%B3%86%E0%B2%A8%E0%B3%8D%E0%B2%A8%E0%B2%BF%E0%B2%B8%E0%B3%8D
ಟೆನ್ನಿಸ್
ಟೆನ್ನಿಸ್ - ಹುಲ್ಲಿನ ಮೈದಾನದಲ್ಲಿ ಅಥವಾ ಕಾಂಕ್ರೀಟ್ ಇಲ್ಲವೆ ವಿಶೇಷ ರೀತಿಯಲ್ಲಿ ಸಿದ್ಧಗೊಳಿಸಿದ ಮಣ್ಣಿನ ಆಟದ ಮೈದಾನದಲ್ಲಿ ಇಬ್ಬರು ಅಥವಾ ನಾಲ್ಕು ಜನ ಆಡಬಹುದಾದಂತ ಒಂದು ಹೊರಾಂಗಣ ಆಟ. ಈ ಆಟದಲ್ಲಿ ಆಟಗಾರರು ಸುಮಾರು ಮೂರೂವರೆ ಅಡಿ ಎತ್ತರದ ಒಂದು ಪರದೆಯ ಎರಡು ಬದಿಗಳಲ್ಲಿ ಇದ್ದು ಒಂದು ರ್ಯಾಕೆಟ್ ಸಹಾಯದಿಂದ ರಬ್ಬರ್ ಚೆಂಡನ್ನು ಬೇರೆ ಆಟಗಾರರ ಬದಿಗೆ ಹೊಡೆಯುತ್ತಾರೆ. ಈ ಆಟದ ಉದ್ದೇಶ ಚೆಂಡನ್ನು ಯಾವ ರೀತಿಯಲ್ಲಿ ಆಡಬೇಕೆಂದರೆ ವಿರೋಧಿ ಆಟಗಾರನಿಗೆ ಉತ್ತಮ ವಾಪಸಾತಿ ಆಡಲು ಸಾಧ್ಯವಾಗಬಾರದು. ಇತಿಹಾಸ ಹಿಂದೆ ಈ ಆಟವನ್ನು ರಾಯಲ್ (ರಾಜ-ಮಹಾರಾಜರ) ಟೆನಿಸ್ ಎಂದು ಕರೆಯುತ್ತಿದ್ದುದುಂಟು. ಇಂಗ್ಲೆಂಡಿನಲ್ಲಿ ಇದೇ ನಿಜವಾದ ಟೆನಿಸ್ ಆಟವಾಗಿತ್ತು. ಫ್ರಾನ್ಸಿನಲ್ಲಿ ಇದಕ್ಕೆ ಷೂಓ ಡ ಪಾಮ್ ಎಂದೂ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಕೋರ್ಟ್ ಟೆನಿಸ್ ಎಂದೂ ಹೆಸರಿತ್ತು. ಇದನ್ನು ಲಾನ್ ಟೆನಿಸ್ ಎಂದೂ ಕರೆಯುವುದುಂಟು. ಸ್ಪೇನಿನ ದೊರೆಗಳಿಬ್ಬರ ನಡುವೆ ಜರುಗಿದ ಬಿರುಸಾದ ಟಿನಿಸ್ ಆಟದ ಬಳಿಕ ಇಬ್ಬರೂ ಬಾಯಾರಿಕೆ ಹೋಗಲಾಡಿಸಿಕೊಳ್ಳಲು ತಕ್ಷಣವೇ ತಣ್ಣೀರನ್ನು ಕುಡಿದ ಪರಿಣಾಮವಾಗಿ ಸತ್ತರು ಎಂದು ಪ್ರತೀತಿ. ಟೆನಿಸ್ ಎಂಬ ಪದಕ್ಕೆ ಫ್ರೆಂಚ್‍ನಲ್ಲಿ ಆಟ ಎಂದು ಅರ್ಥ ಇದೆ. ಯೂರೋಪಿನ ದೊರೆಗಳು ತಮ್ಮ ಅರಮನೆಯೊಳಗೆ ಟೆನಿಸ್ ಆಡಲು ಅವಕಾಶ ಕಲ್ಪಿಸಿಕೊಂಡಿದ್ದರು. ವಿಹಾರದ ದೋಣಿಗಳಲ್ಲೂ ಟೆನಿಸ್ ಆಡಲು ಸ್ಥಳವಿರುತ್ತಿತ್ತು. ಸಾಮಾನ್ಯವಾಗಿ ಟೆನಿಸನ್ನು ಹೊರಗಿನ ಬಯಲು ಪ್ರದೇಶದಲ್ಲಿ ಆಡುತ್ತಾರೆಯಾದರೂ ಈಚೆಗೆ ಒಳಾಂಗಣದಲ್ಲಿ ಆಡುವುದೂ ಉಂಟು. ಪುಸಕ್ತ ಲೇಖನ ಲಾನ್ ಟೆನಿಸ್ ಕುರಿತಂತೆ ಇದೆ. ಲಾನ್ ಟೆನಿಸ್ 1874ರಲ್ಲಿ ಪ್ರಾರಂಭವಾಯಿತೆನ್ನಬಹುದು. ಇದನ್ನು ಬ್ರಿಟಿಷ್ ಸೈನ್ಯಾಧಿಕಾರಿ ಮೇಜರ್ ವಾಲ್ಟರ್ ಸಿ. ವಿಂಗ್ ಪೀಲ್ಟ್ ಎಂಬಾತ ರೂಪಿಸಿ ಸ್ಪೈರಿಸ್ಟೈಕ್ ಎಂಬ ಹೆಸರಿನಲ್ಲಿ ತನ್ನ ಸ್ನೇಹಿತರಿಗೆ ಪರಿಚಯ ಮಾಡಿಸಿಕೊಟ್ಟ. ಈ ಆಟ ಜನಪ್ರಿಯವಾದರೂ ಆಟದ ಹೆಸರು ಮಾತ್ರ ಜನರಿಗೆ ಹಿಡಿಸಲಿಲ್ಲ. ಮೊದಲ ಬಾರಿಗೆ ಲಾನಿನ ಮೇಲೆ ಒಂದು ಕೂಟವನ್ನು ಏರ್ಪಡಿಸಿ ಆಟದ ಪರಿಚಯ ಮಾಡಿಸಿಕೊಟ್ಟಿದ್ದರಿಂದ ಈ ಆಟವನ್ನು ಟೆನಿಸ್ ಆನ್ ಲಾನ್ (ಹುಲ್ಲಿನ ಮೈದಾನದ ಮೇಲೆ ಆಡುವ ಟೆನಿಸ್) ಎಂದು ಕರೆಯುವುದು ರೂಢಿಗೆ ಬಂತು. ಟೆನಿಸ್ ಎಂಬ ಪದ ಅಧಿಕೃತವಾಗಿ ಬಳಕೆಗೆ ಬಂದದ್ದು ಬಹಳ ದಿವಸಗಳ ಅನಂತರವೇ. ಈ ಪದದ ಮೂಲ ಫ್ರೆಂಚ್ ಭಾಷೆಯ ಟೆನ್-ಈಸ್û (ಎಂದರೆ ಆಟವಾಡಲು ಪ್ರಾರಂಭಿಸಲು) ಇರಬಹುದು ಎಂಬುದು ಕೆಲವರ ಮತ. ಟೆನಿಸ್ ಆಟ ಇಂಗ್ಲೆಂಡಿನಿಂದ ಮೊದಲು ಬಮ್ರ್ಯೂಡಕ್ಕೆ ಹೋಗಿ ಅನಂತರ ಅಮೆರಿಕದಲ್ಲಿ ವ್ಯಾಪಿಸಿತು. ಬಮ್ರ್ಯೂಡದಿಂದ ಅಮೆರಿಕಕ್ಕೆ ಇದನ್ನು ಒಯ್ದ ಕೀರ್ತಿ ಒಬ್ಬ ಮಹಿಳೆಗೆ ಸಲ್ಲುತ್ತದೆ. ಎಂತಲೇ ಮೊಟ್ಟಮೊದಲು ಅಮೇರಿಕದಲ್ಲಿ ಹೆಂಗಸರೇ ಈ ಆಟವನ್ನು ಆಡುತ್ತಿದ್ದರು. ಅನಂತರ ಗಂಡಸರೂ ಆಟದ ಸವಿಯನ್ನು ಕಂಡುಕೊಂಡರು. ಕ್ರಮೇಣ ಬಹುಜನಪ್ರಿಯವಾದ ಈ ಆಟವನ್ನು ಶಿಷ್ಟಗೊಳಿಸುವ ಉದ್ದೇಶದಿಂದ 1881ರಲ್ಲಿ ಅಮೆರಿಕದಲ್ಲಿ ಅಮೆರಿಕನ್ ಲಾನ್ ಟೆನಿಸ್ ಅಸೋಸಿಯೇಷನ್ ಎಂಬ ಸಂಸ್ಥೆ ಜನ್ಮತಾಳಿತು. ಇಂದು ಈ ಸಂಸ್ಥೆ ಟಿನಿಸ್ ಕ್ಷೇತ್ರದಲ್ಲೇ ಪ್ರಮುಖ ಸ್ಥಾನವನ್ನು ಪಡೆದಿದೆ. ನಿಯಮಗಳು ಈ ಆಟವನ್ನು ಒಬ್ಬರು ಅಥವಾ ಇಬ್ಬರಿರುವ ಎರಡು ತಂಡಗಳು ಆಡಬಹುದು. ಒಬ್ಬರು ಆಡಿದರೆ ಸಿಂಗಲ್ಸ್ ಎಂದೂ ಇಬ್ಬರು ಕೂಡಿ ಆಡುವ ಆಟಕ್ಕೆ ಡಬಲ್ಸ್ ಎಂದೂ ಹೆಸರು. ಸಿಂಗಲ್ಸ್ ಆಟದನಿಯಮಗಳು : ಆಡುವ ಮೈದಾನ ಅಥವಾ ಕೋರ್ಟ್ ಆಯಾಕಾರದಲ್ಲಿದ್ದು ಚಪ್ಪಟೆಯಾದ ಪ್ರದೇಶವಾಗಿರಬೇಕು. ಆಟದ ಕೋರ್ಟಿನ ಉದ್ದ 78', ಅಗಲ 27'. ಅಡ್ಡಗಲದ ಮೂಲಕ ಕೋರ್ಟಿನ ನಡುವೆ ಕಟ್ಟುವ ನೆಟ್ ಅಥವಾ ಬಲೆ ಕೋರ್ಟನ್ನು 39' ಉದ್ದವಾಗಿರುವ ಎರಡು ಸಮಭಾಗಗಳನ್ನಾಗಿ ವಿಂಗಡಿಸುತ್ತದೆ. ಬಲೆಯನ್ನು ಹಗ್ಗ ಅಥವಾ ಉಕ್ಕಿನ ಮಣಿಯಿಂದ ತೂಗಬಿಡಲಾಗುವುದು. ಹಗ್ಗದ (ಅಥವಾ ಮಿಣಿಯ) ವ್ಯಾಸ 1/3"ಗಿಂತ ಹೆಚ್ಚಿರಬಾರದು. ಹಗ್ಗದ ಎರಡೂ ತುದಿಗಳನ್ನು ಕೋರ್ಟಿನ ಇಕ್ಕೆಲಗಳಲ್ಲಿ ಗಡಿಯಿಂದ 3' ಗಳಾಚೆ ನೆಟ್ಟಿರುವ ಎರಡು ಕಂಬಗಳಿಗೆ ಕಟ್ಟಬೇಕು: ಇಲ್ಲವೆ ಹಗ್ಗ ಕಂಬಗಳ ತಲೆಯ ಮೇಲೆ ಹಾದು ಹೋಗುವಂತಿರಬೇಕು. ಕಂಬಗಳ ಎತ್ತರ 3 1/2' ಗಿಂತ ಹೆಚ್ಚಿರಬಾರದು. ಬಲೆಯ ಎತ್ತರ ನಡುಪ್ರದೇಶದಲ್ಲಿ 3' ಇರಬೇಕು. ಈ ಎತ್ತರದಲ್ಲಿ ಬಲೆ ಬಿಗಿಯಾಗಿ ನಿಲ್ಲುವಂತೆ ಮಾಡಲು 2" ಅಗಲದ ಬಟ್ಟೆಪಟ್ಟಿಯನ್ನು ನೆಲದಲ್ಲಿ ಹೂತಿರುವ ಕೊಂಡಿಯೊಂದಕ್ಕೆ ಲಗತ್ತಿಸಿ, ಪಟ್ಟಿಯ ಇನ್ನೊಂದು ತುದಿ ಬಲೆಯ ಮೇಲೆ ಹಾಯ್ದು ಬರುವಂತೆ ಮಾಡಿ ಅದನ್ನೂ ಕೊಂಡಿಗೇ ಸಿಕ್ಕಿಸಿರಲಾಗುವುದು. ಹಗ್ಗ ಹಾಗೂ ಬಲೆಯ ಮೇಲ್ಭಾಗವನ್ನು ಇಕ್ಕೆಲಗಳಲ್ಲಿ 2"ಗೆ ಕಡಿಮೆಯಾಗದ 2 1/4" ಗೆ ಮೀರದ ಅಗಲವಿರುವ ಬಟ್ಟೆಯ ಪಟ್ಟಿಯಿಂದ ಮುಚ್ಚಲಾಗುವುದು. ಕೋರ್ಟಿನ ಎರಡು ತುದಿ ಮತ್ತು ಪಕ್ಕಗಳಿಗೆ ಗಡಿಯಾಗಿರುವ ಗೆರೆಗಳನ್ನು ಅನುಕ್ರಮವಾಗಿ ಬೇಸ್ ಲೈನ್ ಮತ್ತು ಸೈಡ್ ಲೈನ್ ಎಂದು ಕರೆಯಲಾಗಿದೆ. ಬಲೆಯ ಎರಡು ಕಡೆಯಲ್ಲಿ ಅದಕ್ಕೆ 21' ದೂರದಲ್ಲಿ, ಬಲೆಗೆ ಸಮಾಂತರವಿರುವಂತೆ ಎರಡು ಗೆರೆಗಳನ್ನು ಎಳೆಯಲಾಗುವುದು. ಇವು ಸರ್ವಿಸ್ ಲೈನುಗಳು. ಬಲೆಯ ಎರಡು ಕಡೆಯಲ್ಲಿ ಸರ್ವಿಸ್ ಲೈನ್ ಮತ್ತು ಸೈಡ್ ಲೈನುಗಳ ನಡುವಿನ ಪ್ರದೇಶವನ್ನು, ಸೆಂಟರ್ ಸರ್ವಿಸ್ ಗೆರೆಯಿಂದ ಎರಡು ಸಮಭಾಗ ಪ್ರದೇಶಗಳನ್ನಾಗಿ ವಿಂಗಡಿಸಲಾಗುವುದು. ಈ ಗೆರೆ 2" ಅಗಲವಾಗಿರಬೇಕು; ಮತ್ತು ಇದನ್ನು ಸೈಡ್ ಲೈನಿಗೆ ಸಮಾಂತರವಾಗಿ ಮತ್ತು ಅವುಗಳ ನಡುವೆ ಅರ್ಧದೂರದಲ್ಲಿ ಎಳೆಯಬೇಕು. ಸಮಭಾಗವಾಗಿ ವಿಂಗಡಿಸಿದ ಈ ಪ್ರದೇಶಗಳನ್ನು ಸರ್ವಿಸ್ ಕೋರ್ಟುಗಳು ಎಂದು ಕರೆಯಲಾಗಿದೆ. ಸೆಂಟರ್ ಸರ್ವಿಸ್ ಗೆರೆಯನ್ನು ಎರಡೂ ಕಡೆ ಮುಂದುವರಿಸಿದೆ ಎಂದು ಊಹಿಸಿದರೆ ಅದು ಬೇಸ್ ಲೈನುಗಳನ್ನು ಎರಡು ಸಮಭಾಗಗಳಾಗಿ ವಿಂಗಡಿಸುತ್ತದೆ. ಊಹಾಗೆರೆ ಬೇಸ್ ಲೈನನ್ನು ಮುಟ್ಟುವ ಸ್ಥಳದಲ್ಲಿ 4" ಉದ್ದ ಮತ್ತು 2" ಅಗುಲವಿರುವ ಗೆರೆಯನ್ನು ಕೋರ್ಟಿನ ಒಳಭಾಗದಲ್ಲಿ, ಬೇಸ್ ಲೈನಿಗೆ ಲಂಭವಾಗಿ ಮತ್ತು ಅದನ್ನು ಸ್ಪರ್ಶಿಸುವಂತೆ ಎಳೆಯಲಾಗುವುದು. ಉಳಿದೆಲ್ಲ ಗೆರೆಗಳ ಅಗಲ 1"ಗಿಂತ ಕಡಿಮೆಯಾಗಲೀ ಎರಡು ಇಂಚುಗಳಿಗಿಂತ ಹೆಚ್ಚಾಗಲೀ ಇರಬಾರದು. ಬೇಸ್ ಲೈನಿನ ಅಗಲ 4"ಗಳಿಷ್ಟಿರಬಹುದು. ಎಲ್ಲ ಅಳತೆಗಳನ್ನು ಗೆರೆಗಳ ಹೊರಭಾಗದಿಂದಲೇ ಪ್ರಾರಂಭಿಸಲಾಗುತ್ತದೆ. ಚೆಂಡು: ಚೆಂಡಿನ ಹೊರಮೈ ನಯವಾಗಿದ್ದು ಹೊಲಿಗೆಗಳಿಲ್ಲದಿರಬೇಕು. ಅದರ ವ್ಯಾಸ 2 1/2" ಗಿಂತ ಕಡಿಮೆಯಾಗಲೀ 2 8/5" ಗಿಂತ ಹೆಚ್ಚಾಗಲೀ ಇರಬಾರದು. ತೂಕ 2 ಔನ್ಸಿಗಿಂತ ಕಡಿಮೆಯಾಗಲೀ 2 1/16 ಔನ್ಸಿಗಿಂತ ಹೆಚ್ಚಾಗಿಯಾಗಲೀ ಇರಬಾರದು. ಚೆಂಡನ್ನು ರಬ್ಬರಿನಿಂದ ತಯಾರಿಸಿರುತ್ತಾರೆ. ಒಳಾವಕಾಶವನ್ನು ವಾಯುವಿನಿಂದ ಅಧಿಕ ಒತ್ತಡದಲ್ಲಿ ತುಂಬಲಾಗಿರುತ್ತದೆ. ಇದರ ಹೊರ ಮೈಗೆ ಫೆಲ್ಟ್ ಹೊದಿಕೆ ಇರುತ್ತದೆ. ಚೆಂಡಿನ ಒಳಗಿರುವ ವಾಯುವಿನ ಒತ್ತಡ ಸುಮಾರು, 68' ಎಫ್ ಉಷ್ಣತೆಯಲ್ಲಿ 100" ಎತ್ತರದಿಂದ ಕಾಂಕ್ರೀಟ್ ನೆಲದ ಮೇಲೆ ಬಿದ್ದ ಚೆಂಡು 53"ಗಿಂತ ಕಡಿಮೆ ಮತ್ತು 56"ಗಿಂತ ಹೆಚ್ಚಿನ ಎತ್ತರಕ್ಕೆ ಪುಟಿಯದಷ್ಟಿರಬೇಕು. ರ್ಯಾಕೆಟ್ ಟೆನಿಸ್ ಆಟಕ್ಕೆಂದೇ ವಿಶೇಷ ರೀತಿಯಲ್ಲಿ ತಯಾರಿಸಲಾಗುವ ಜಾಲರಿ ಬ್ಯಾಟು. ಮೊದಲಿಗೆ ಕುರಿ, ಕುದುರೆ ಮೊದಲಾದ ಪ್ರಾಣಿಗಳಿಂದ ತೆಗೆದ ಕರುಳಿನ ದಾರವನ್ನು ಉದ್ದನೆಯ ಮರದ ಹಿಡಿಯಿರುವ ಅಂಡಾಕಾರದ ಚೌಕಟ್ಟಿಗೆ ಬಿಗಿದು ಕಟ್ಟಿ ರ್ಯಾಕೆಟ್ಟುಗಳನ್ನು ತಯಾರಿಸಲಾಗುತ್ತಿತ್ತು. ಈಗ ಕರುಳಿಗೆ ಬದಲು ಕೃತಕವಾಗಿ ನಿರ್ಮಿಸಿದ ಗಟ್ಟಿಯಾದ ನೈಲಾನ್ ದಾರವನ್ನು ಬಳಸುತ್ತಾರೆ. ಆಟ ಆಟಗಾರರು ಬಲೆಯ ಎರಡೂ ಕಡೆ ಎದುರು ಬದುರಾಗಿ, ಕೈಯಲ್ಲಿ ರ್ಯಾಕೆಟ್ಟನ್ನು ಹಿಡಿದು, ನಿಲ್ಲಬೇಕು. ಚೆಂಡನ್ನು ಮೊದಲು ಸರ್ವ್ ಮಾಡುವಾತನನ್ನು ಸರ್ವರ್ ಎಂದೂ ಹಿಂದಿರುಗಿಸುವವನನ್ನು ರಿಸೀವರ್ ಎಂದೂ ಕರೆಯುತ್ತಾರೆ. ಮೊದಲು ಸರ್ವ್ ಮಾಡುವವರು ಯಾರು ಎಂಬುದನ್ನು ಸಾಮಾನ್ಯವಾಗಿ ನಾಣ್ಯ ಚಿಮ್ಮಿ ನಿರ್ಧರಿಸಲಾಗುವುದು. ಸರ್ವ್ ಮಾಡುವ ಮುನ್ನ ಸರ್ವರ್ ಬೇಸ್ ಲೈನಿನ ಹಿಂದೆ ಮಧ್ಯದ ಗುರುತು ಮತ್ತು ಸೈಡ್ ಲೈನಿನ್ ನಡುವೆ (ಲೈನುಗಳನ್ನು ಮುಂದುವರಿಸಿದೆ ಎಂದು ಊಹಿಸಿದರೆ) ತನ್ನ ಎರಡೂ ಕಾಲುಗಳನ್ನು ನೆಲದ ಮೇಲೆ ಊರಿ ನಿಲ್ಲಬೇಕು. ಸರ್ವಿಸನ್ನು ಮಾಡುವ ಪರ್ಯಂತವೂ ಆತ ಅಡ್ಡಾಡಿಕೊಂಡು ತನ್ನ ಸ್ಥಾನವನ್ನು ಬದಲಾಯಿಸಬಾರದು; ಕಾಲು ನೆಲದ ಸಂಪರ್ಕದಲ್ಲಿರಬೇಕು. ಮತ್ತು ಎರಡೂ ಕಾಲುಗಳನ್ನೂ ಬೇಸ್ ಲೈನಿನ ಹಿಂದೆಯೇ ಇಟ್ಟಿರಬೇಕು-ಎಂದು ನಿಯಮಗಳಿವೆ. ಒಂದು ಆಟದ ಪರ್ಯಂತ ಸರ್ವಿಸನ್ನು ಮಾಡುವಾಗ ಕೋರ್ಟಿನ ಬಲ ಮತ್ತು ಎಡಗಡೆಯ ಅರ್ಧಗಳಿಂದ, ಒಂದು ಕಡೆಯಿಂದಾದ ಮೇಲೆ ಮತ್ತೊಂದು ಕಡೆಯಿಂದ-ಹೀಗೆ ಬದಲಾಯಿಸುತ್ತ ಆಡಬೇಕು. ಆಟದ ಪ್ರಾರಂಭದಲ್ಲಿ ಸರ್ವಿಸನ್ನು ಬಲಗಡೆಯಿಂದ ಪ್ರಾರಂಭಿಸಬೇಕು. ಸರ್ವ್ ಮಾಡಿದ ಚೆಂಡು, ಎದುರಾಳಿ ಅದನ್ನು ಹಿಂತಿರುಗಿಸುವ ಮೊದಲು, ಬಲೆಯ ಮೇಲೆ ಹಾದು ಎದುರಾಳಿಯ ಬಲಗಡೆಯ ಸರ್ವಿಸ್ ಕೋರ್ಟನ್ನಾಗಲೀ ಅದರ ಗಡಿ ರೇಖೆಗಳನ್ನಾಗಲೀ ಮುಟ್ಟಿ ಪುಟಿಯಬೇಕು. ಈ ನಿಯಮಗಳನ್ನು ಸರ್ವರ್ ಉಲ್ಲಂಘಿಸುವುದು, ಸರ್ವ್ ಮಾಡುವಾಗ ಚೆಂಡಿಗೆ ಹೊಡೆತ ಬೀಳದಿರುವುದು, ಸರ್ವಿಸ್ ಕೋರ್ಟಿಗೆ ಚೆಂಡು ಬೀಳುವ ಮೊದಲು ಬಲೆ, ಹಗ್ಗ ಮತ್ತು ಮಿಣಿಗಳ ವಿನಾ ಇನ್ನಾವುದೇ ಸ್ಥಿರ ನಿಲುವುಗಳಿಗೆ ಹೊಡೆಯುವುದು-ಇವುಗಳಲ್ಲಿ ಯಾವುದೊಂದಾದರೂ ಆ ಸರ್ವಿಸ್ ತಪ್ಪು ಅಥವಾ ಫಾಲ್ಟ್ ಎನ್ನಿಸಿಕೊಳ್ಳುತ್ತದೆ. ಸರ್ವಿಸ್ ತಪ್ಪಾದಾಗ, ಅದು ಮೊದಲನೆಯದಾದರೆ, ಯಾವ ಕೋರ್ಟಿನ ಅರ್ಧದಿಂದ ಸರ್ವಿಸನ್ನು ಮಾಡಲಾಯಿತೋ ಅದೇ ಅರ್ಧದಿಂದ ಮತ್ತೊಂದು ಬಾರಿ ಸರ್ವ್ ಮಾಡಲು ಅವಕಾಶವುಂಟು. ಗೊತ್ತಾದ ಅರ್ಧದಿಂದ ಸರ್ವ್ ಮಾಡದೆ ಮತ್ತೊಂದು ಅರ್ಧದಿಂದ ಸರ್ವಿಸ್ ಮಾಡಿದ ಕಾರಣದಿಂದ ಸರ್ವಿಸ್ ತಪ್ಪಾಗಿದ್ದರೆ, ಸರಿಯಾದ ಅರ್ಧದಿಂದ ಒಂದು ಸರ್ವಿಸನ್ನು ಮಾಡಲು ಅನುಮತಿ ನೀಡಲಾಗುತ್ತದೆ. ಎರಡನೆಯ ಬಾರಿ ಸರ್ವಿಸ್ ಮಾಡಿದ ಅನಂತರ ಈ ಸೌಲಭ್ಯಗಳು ದೊರೆಯುವುದಿಲ್ಲ. ಉಳಿದೆಲ್ಲ ರೀತಿಗಳಲ್ಲಿ ಸರ್ವಿಸ್ ಸರಿಯಾಗಿದ್ದು, ಹಗ್ಗ, ಬಲೆ ಅಥವಾ ಪಟ್ಟಿಯನ್ನು ಚೆಂಡು ಮುಟ್ಟಿದರೆ ಆ ಸರ್ವಿಸನ್ನು ಲೆಟ್ ಎಂದು ಕರೆಯಲಾಗುವುದು. ಇಂಥ ಸರ್ವಿಸ್ ಗಣನೆಗಿಲ್ಲ. ಆದರೆ ಲೆಟ್ ಸರ್ವಿಸ್ ತನ್ನ ಹಿಂದಿನ ತಪ್ಪು ಸರ್ವಿಸನ್ನು ಸರಿಪಡಿಸುವುದಿಲ್ಲ. ಮೊದಲ ಆಟ ಮುಗಿದ ಅನಂತರ ರಿಸೀವರ್ ಹಾಗೂ ಸರ್ವರ್‍ಗಳು ಅದಲು ಬದಲಾಗುತ್ತಾರೆ. ಪಂದ್ಯ ಮುಗಿಯುವವರೆಗೆ ಆಟಗಾರರು ಇದೇ ರೀತಿ ಆಡಲು ಬದಲಾಯಿಸಿಕೊಳ್ಳುತ್ತ ಹೋಗುತ್ತಾರೆ. ಸರ್ವಿಸ್ ಮಾಡಿದ ಕ್ಷಣದಿಂದ (ಲೆಟ್ ಅಥವಾ ತಪ್ಪಾಗದಿದ್ದರೆ) ಪಾಯಿಂಟ್ ಯಾರಿಗೆ ಸೇರಬೇಕು ಎಂಬುದು ನಿರ್ಧಾರವಾಗುವವರೆಗೆ ಚೆಂಡು ಆಟದಲ್ಲಿರುತ್ತದೆ. ಸರ್ವ್ ಮಾಡಿದ ಚೆಂಡು ನೆಲಕ್ಕೆ ಬೀಳುವ ಮುಂಚೆ ರಿಸೀವರನ್ನು ಅಥವಾ ಅವನು ಧರಿಸಿರುವ ಉಡುಪು ಇಲ್ಲವೆ ಅವನ ಕೈಯಲ್ಲಿರುವ ಯಾವುದೇ ವಸ್ತುವನ್ನು ಮುಟ್ಟಿದರೂ ಸರ್ವರಿಗೆ ಪಾಯಿಂಟು ದೊರೆಯುತ್ತದೆ, ಇಲ್ಲವೆ ಮುಂದೆ ತಿಳಿಸಿರುವ ಯಾವುದೇ ರೀತಿಯಲ್ಲಿ ರಿಸೀವರ್ ಪಾಯಿಂಟನ್ನು ಕಳೆದುಕೊಂಡರೂ ಸರ್ವರಿಗೆ ಆ ಪಾಯಿಂಟ್ ದೊರೆಯುತ್ತದೆ. ರಿಸೀವರ್ಗೆ ಪಾಯಿಂಟ್ ದೊರೆಯಬೇಕಾದರೆ ಸರ್ವರ್ ಒಂದಾದ ಮೇಲೊಂದಂರಂತೆ ಎರಡು ಸರ್ವಿಸುಗಳನ್ನು ಲೆಟ್ ರೀತಿಯಲ್ಲಿ ಮಾಡಬೇಕು. ಇಲ್ಲವೆ ಮುಂದೆ ತಿಳಿಸಿರುವ ಯಾವುದೇ ರೀತಿಯಲ್ಲಿ ಸರ್ವರ್, ಪಾಯಿಂಟಿನಿಂದ ವಂಚಿತನಾಗಬೇಕು. ಆಟಗಾರ ಪಾಯಿಂಟನ್ನು ಕಳೆದುಕೊಳ್ಳವ ಸನ್ನಿವೇಶಗಳಿವು: (1) ಆಟದಲ್ಲಿರುವ ಚೆಂಡನ್ನು ಅದು ಎರಡು ಬಾರಿ ಅನುಗತವಾಗಿ ನೆಲವನ್ನು ಮುಟ್ಟುವ ಮೊದಲು ಬಲೆಯ ಮೇಲೆ ನೇರವಾಗಿ ಹಿಂದಿರುಗಿಸದಿದ್ದರೆ, (2) ಎದುರಾಳಿಯ ಕೋರ್ಟಿನ ಹೊರಕ್ಕೆ ಅಥವಾ ಯಾವುದಾದರೂ ಸ್ಥಿರ ನಿಲುವಿಗೆ ಹೊಡೆಯುವಂತೆ ಚೆಂಡನ್ನು ವಾಪಸ್ಸು ಕಳುಹಿಸಿದರೆ, (3) ಕೋರ್ಟಿನೊಳಗೆ ಇರುವಾಗ ಅಥವಾ ಅದರ ಹೊರಗೆ ನಿಂತಾಗ ಎದುರಾಳಿ ಹೊಡೆದ ಚೆಂಡನ್ನು ಅದು ನೆಲಕ್ಕೆ ಬೀಳುವ ಮೊದಲೇ ವಾಪಸ್ಸು ಕಳಿಸುವ ಪ್ರಯತ್ನದಲ್ಲಿ ಅದನ್ನು ಎದುರಾಳಿಯ ಕೋರ್ಟಿನಿಂದ ಹೊರಕ್ಕೆ ಕಳುಹಿಸಿದರೆ, (4) ಆಟದಲ್ಲಿರುವ ಚೆಂಡನ್ನು ಹೊಡೆಯುವಾಗ ರ್ಯಾಕೆಟ್ಟಿನಿಂದ ಒಂದಕ್ಕಿಂತ ಹೆಚ್ಚು ಬಾರಿ ಮುಟ್ಟಿದರೆ, (5) ಚೆಂಡನ್ನು ಹೊಡೆಯುವಾಗ ಅಥವಾ ಚೆಂಡು ಆಟದಲ್ಲಿರುವ ಪರ್ಯಂತ ಅವನಾಗಲೀ, ಅವನು ಧರಿಸಿರುವ ಉಡುಪಾಗಲೀ, ಅವನ ಕೈಯಲ್ಲಿರುವ ಯಾವುದೇ ವಸ್ತುವಾಗಲೀ, ರ್ಯಾಕೆಟ್ಟಾಗಲಿ (ಕೈಯಲ್ಲಿ ಇರಬಹುದು, ಇಲ್ಲದಿರಬಹುದು) ಬಲೆಯನ್ನೋ, ಕಂಬಗಳನ್ನೋ ಹಗ್ಗವನ್ನೋ ಪಟ್ಟೆ ಅಥವಾ ಎದುರಾಳಿಯ ಕೋರ್ಟನ್ನೋ ಮುಟ್ಟಿದರೆ, (6) ಬಲೆಯನ್ನು ದಾಟುವ ಮೊದಲೇ ಚೆಂಡನ್ನು ಬುತ್ತಿ ಹೊಡೆದರೆ (ವಾಲಿಯಿಂಗ್), (7) ಹೊಡೆಯುವಾಗ ಚೆಂಡು ರ್ಯಾಕೆಟ್ಟು ವಿನಾ ಅವನನ್ನಾಗಲೀ ಆತ ಧರಿಸಿರುವ ಅಥವಾ ಹಿಡಿದಿರುವ ಯಾವುದೇ ವಸ್ತುವನ್ನಾಗಲೀ ಮುಟ್ಟಿದಾಗ ಗೆರೆಯ ಮೇಲೆಯೇ ಚೆಂಡು ಬಿದ್ದರೆ ಆಗ ಅದು ಆ ಗೆರೆಯಿಂದ ಸೀಮಿತವಾದ ಕೋರ್ಟಿನಲ್ಲೇ ಬಿದ್ದಂತೆ ಎಂದು ಪರಿಗಣಿಸಲಾಗುವುದು. ಎದುರಾಳಿ ಹೊಡೆದ ಚೆಂಡನ್ನು ಹಿಂದಿರುಗಿಸಿದಾಗ ಅದು (1) ಬಲೆ, ಕಂಬಗಳು ಹಗ್ಗ, ಪಟ್ಟೆ-ಇವನ್ನು ಮುಟ್ಟಿದರೆ, ಎದುರಾಳಿಯ ಕೋರ್ಟಿನೊಳಗೆ ಬಿದ್ದರೆ, (2) ಸರ್ವ್ ಮಾಡಿದ ಅಥವಾ ಹಿಂದಿರುಗಿಸಿದ ಚೆಂಡು ಸರಿಯಾದ ಕೋರ್ಟಿಗೆ ಬಿದ್ದು ಚಿಮ್ಮಿಕೊಂಡೋ ಇಲ್ಲವೆ ಗಾಳಿಯಿಂದ ತೂರಿ ಬಂದೋ ಬಲೆಯ ಮೇಲೆ ವಾಪಸ್ಸು ಬಂದರೆ ಆಗ ಚೆಂಡನ್ನು ಹೊಡೆಯುವ ಸರದಿ ಯಾರದೋ ಆತ ತನ್ನ ಉಡುಪು, ರ್ಯಾಕೆಟ್ಟು, ದೇಹ ಮುಂತಾದವು ಬಲೆಯನ್ನು ಮುಟ್ಟದಂತೆ ಎಚ್ಚರಿಕೆ ವಹಿಸಿ, ಬಲೆಯಿಂದಾಚೆ ಆಡಿ ಚೆಂಡು ಕೋರ್ಟಿನೊಳಕ್ಕೆ ಸರಿಯಾಗಿ ಬೀಳುವಂತಾಗಿಸಿದರೆ, (3) ಹಿಂದಿರುಗಿಸಿದ ಚೆಂಡು ಕಂಬದಿಂದಾಚೆ, ಬಲೆಯ ಮೇಲೆ ಅಥವಾ ಕೆಳಗೆ ಹಾಯ್ದರೂ ವಾಪಸ್ಸು ಬಂದು ಸರಿಯಾಗಿ ಕೋರ್ಟಿನೋಳಕ್ಕೆ ಬಿದ್ದರೆ, (4) ಆಟಗಾರನ ರ್ಯಾಕೆಟ್ಟು, ಹೊಡೆದ ಚೆಂಡು ಬಲೆಯನ್ನು ದಾಟಿದ ಅನಂತರ, ಬಲೆಯ ಮೇಲಿಂದಾಚೆಗೆ ಹಾಯ್ದರೆ, ಚೆಂಡು ಸರಿಯಾಗಿ ವಾಪಸ್ಸು ಕಳಿಸಲ್ಪಟ್ಟಿದೆ ಎಂದು ಪರಿಗಣಿಸುವುದು. ಒಬ್ಬ ಆಟಗಾರ ಮೊದಲ ಪಾಯಿಂಟನ್ನು ಪಡೆದರೆ ಅವನ ಸ್ಕೋರನ್ನು 15 ಎಂದು ಕರೆಯಲಾಗುವುದು. ಪ್ರಾರಂಭದಲ್ಲಿ ಯಾರದೂ ಏನೂ ಸ್ಕೋರ್ ಇಲ್ಲದಿದ್ದಾಗ ಲವ್ ಆಲ್ ಎಂದು ಕರೆಯಲಾಗುವುದು. ಎರಡನೆಯ ಪಾಯಿಂಟನ್ನು ಪಡೆದಾಗ ಆಟಗಾರನ ಸ್ಕೋರ್ 30 ; ಮೂರನೆಯ ಪಾಯಿಂಟನ್ನು ಗೆದ್ದಾಗ ಸ್ಕೋರ್ 40 ಆಗುತ್ತದೆ. ಅದೇ ಆಟಗಾರ ನಾಲ್ಕನೆಯ ಪಾಯಿಂಟನ್ನು ಪಡೆದರೆ ಆತ ಆ ಆಟವನ್ನು ಗೆದ್ದಂತೆಯೇ. ಕೆಲವೊಂದು ಸಂದರ್ಭದಲ್ಲಿ ಮಾತ್ರ ಈ ನಿಯಮ ಅನ್ವಯವಾಗುವುದಿಲ್ಲ. ಇಬ್ಬರು ಆಟಗಾರರ ಸ್ಕೋರ್ 40 ಆದಾಗ, ಎಂದರೆ ಇಬ್ಬರಿಗೂ ಮೂರು ಪಾಯಿಂಟುಗಳು ದೊರೆತಾಗ, ಸ್ಕೋರನ್ನು ಡ್ಯೂಸ್ ಎಂದು ಕರೆಯಲಾಗುವುದು. ಅನಂತರ ಪಾಯಿಂಟನ್ನು ಪಡೆದಾತನಿಗೆ ಅಡ್ವಾಂಟೇಜ್ ಕೊಡಲಾಗುವುದು. ಉದಾಹರಣೆಗೆ, ಸರ್ವಿಸ್ ಮಾಡುವಾತ ಪಾಯಿಂಟನ್ನು ಪಡೆದರೆ ಆಗ ಅದನ್ನು ಅಡ್ವಾಂಟೇಜ್ ಟು ಸರ್ವರ್ ಎಂದು ಕರೆಯುತ್ತಾರೆ. ರಿಸೀವರ್‍ಗೆ ಪಾಯಿಂಟು ದೊರೆತರೆ ಅದು ಅಡ್ವಾಂಟೇಜ್ ಟು ರಿಸೀವರ್ ಎಂದು ಎನಿಸಿಕೊಳ್ಳುತ್ತದೆ. ಯಾರಿಗೆ ಅಡ್ವಾಂಟೇಜ್ ಇದೆಯೋ ಆತನೇ ಮುಂದಿನ ಪಾಯಿಂಟನ್ನು ಪಡೆದರೆ ಆಗ ಆತ ಆ ಆಟವನ್ನು ಗೆದ್ದಂತೆಯೇ; ಪಾಯಿಂಟನ್ನು ಕಳೆದುಕೊಂಡರೆ ಸ್ಕೋರನ್ನು ಮತ್ತೆ ಡ್ಯೂಸ್ ಎಂದು ಕರೆಯಲಾಗುವುದು. ಯಾರಾದರೊಬ್ಬ ಆಟಗಾರ ಅನುಗತವಾಗಿ ಎರಡು ಪಾಯಿಂಟುಗಳನ್ನು ಪಡೆಯುವವರೆಗೆ ಹೀಗೆಯೇ ಸ್ಕೋರ್ ಮಾಡಲಾಗುವುದು. ಆಟ ಡ್ಯೂಸ್ ಆದ ಅನಂತರ ಯಾರು ಎರಡು ಪಾಯಿಂಟುಗಳನ್ನು ಒಂದೇ ಸಮನಾಗಿ ಪಡೆಯುವರೋ ಅವರದಾಗುವುದು. ಮುಂದೆ ತಿಳಿಸಿರುವ ಸಂದರ್ಭದ ವಿನಾ, ಯಾವ ಆಟಗಾರ ಆರು ಆಟಗಳನ್ನು ಗೆಲ್ಲುತ್ತಾನೆಯೋ ಆತ ಸೆಟ್ಟನ್ನು ಗೆದ್ದಂತೆ; ಇಬ್ಬರು ಆಟಗಾರರೂ ಐದು ಆಟಗಳನ್ನು ಗೆದ್ದರೆ, ಸ್ಕೋರನ್ನು ಗೇಮ್ಸ್ ಅಲ್ (ಇಬ್ಬರದೂ ಆಟ) ಎಂದು ಕರೆಯಲಾಗುವುದು. ಮುಂದಿನ ಆಟವನ್ನು ಗೆಲ್ಲುವಾತನೇ ಇನ್ನೊಂದು ಆಟವನ್ನು ಗೆದ್ದರೆ, ಸೆಟ್ಟು ಅವನದಾಗುವುದು; ಹಾಗಿಲ್ಲದೆ ಗೇಮ್ಸ್ ಆಟ ಅದ ಅನಂತರ ಆಡುವ ಎರಡನೆಯ ಆಟವನ್ನು ಪ್ರತಿಸ್ಪರ್ಧಿ ಗೆದ್ದರೆ ಪುನಃ ಗೇಮ್ಸ್ ಆಲ್ ಆಗುವುದು. ಒಬ್ಬ ಆಟಗಾರ ತನ್ನ ಎದುರಾಳಿಗಿಂತ ಎರಡು ಆಟಗಳನ್ನು ಹೆಚ್ಚಿಗೆ ಗೆಲ್ಲುವವರೆಗೆ ಪಂದ್ಯ ನಡೆಯುತ್ತದೆ ಮತ್ತು ಗೆದ್ದವನಿಗೆ ಸೆಟ್ ದೊರೆಯುತ್ತದೆ. ಪ್ರತಿ ಸೆಟ್ಟಿನಲ್ಲಿ ಒಂದು, ಮೂರು, ಐದು-ಹೀಗೆ ಬೆಸಸಂಖ್ಯೆಯ ಆಟಗಳಾದ ಮೇಲೆ ಆಟಗಾರರು ಆಟವಾಡುವ ಕಡೆಯನ್ನು ಅದಲು ಬದಲು ಮಾಡಿಕೊಳ್ಳಬೇಕು. ಸೆಟ್ಟು ಮುಗಿದ ಅನಂತರವೂ ಹೀಗೆ ಬದಲಿಸಿಕೊಳ್ಳಬೇಕು; ಅದರೆ ಮುಗಿದ ಸೆಟ್ಟಿನಲ್ಲಿ ಒಟ್ಟು ಏಳು ಆಟಗಳನ್ನು ಮಾತ್ರ ಆಡಿದ್ದರೆ ಮುಂದಿನ ಸೆಟ್ಟಿನಲ್ಲಿ ಒಂದು ಆಟವಾದ ಅನಂತರ ಬದಲಿಸಬೇಕು. ಒಂದು ಪಂದ್ಯ ಕೊನೆಗಾಣಲು, ಪುರುಷರ ಸಂದರ್ಭದಲ್ಲಿ ಐದು, ಮಹಿಳೆಯರ ಸಂದರ್ಭದಲ್ಲಿ ಮೂರು ಸೆಟ್ಟುಗಳು ಪೂರ್ಣವಾಗಬೇಕು. ಡಬಲ್ಸ್ ಆಟ ಇದರಲ್ಲಿ ಒಂದೊಂದು ಕಡೆಯೂ ಇಬ್ಬಿಬ್ಬರು ಆಟಗಾರರಿರುತ್ತಾರೆ. ಡಬಲ್ಸ್ ಆಟಕ್ಕೆ ಸಿಂಗಲ್ಸ್ ಆಟದ ನಿಯಮಗಳೇ ಅನ್ವಯಿಸಿದರೂ ಕೆಲವೊಂದು ಮಾರ್ಪಾಟುಗಳಿರುತ್ತವೆ. ಡಬಲ್ಸ್ ಕೋರ್ಟಿನ ಅಗಲ 36' ಇರಬೇಕು; ಎಂದರೆ ಸಿಂಗಲ್ ಕೋರ್ಟಿಗಿಂತ ಅದರ ಎರಡು ಕಡೆಯಲ್ಲಿ ಪ್ರತಿಯೊಂದು ಕಡೆ 4 1/2' ಅಗಲವಾಗಿರಬೇಕು. ಎರಡು ಸರ್ವಿಸ್ ಲೈನುಗಳ ಮಧ್ಯೆ ಇರುವ ಸಿಂಗಲ್ಸ್ ಸೈಡ್ ಲೈನುಗಳ ಭಾಗಗಳನ್ನು ಸರ್ವಿಸ್ ಸೈಡ್ ಲೈನುಗಳೆಂದು ಕರೆಯುತ್ತಾರೆ. ಪ್ರತಿಸೆಟ್ಟಿನ ಪ್ರಾರಂಭದ ಆಟದಲ್ಲಿ ಸರ್ವ್ ಮಾಡುವ ಹಕ್ಕನ್ನು ಪಡೆದಿರುವ ಜೋಡಿಗಳ ಪೈಕಿ ಯಾರು ಸರ್ವ್ ಮಾಡಬೇಕು ಎಂಬುದನ್ನು ನಿರ್ಣಯಿಸಿಕೊಳ್ಳಬಹುದು; ಮತ್ತು ಅದೇ ರೀತಿ ಎದುರಾಳಿ ಜೋಡಿ ಸಹ ಎರಡನೆಯ ಆಟದಲ್ಲಿ ಯಾರು ಸರ್ವ್ ಮಾಡಬೇಕು ಎಂಬುದನ್ನು ಗೊತ್ತುಮಾಡಿಕೊಳ್ಳಬಹುದು. ಮೊದಲ ಆಟದಲ್ಲಿ ಸರ್ವ್ ಮಾಡಿದ ಆಟಗಾರನ ಜೊತೆಗಾರ ಮೂರನೆಯ ಆಟದಲ್ಲಿ ಸರ್ವ್ ಮಾಡಬೇಕು; ಎರಡನೆಯ ಆಟದಲ್ಲಿ ಸರ್ವ್ ಮಾಡಿದ ಆಟಗಾರನ ಜೊತೆಗಾರ ನಾಲ್ಕನೆಯ ಆಟದಲ್ಲಿ-ಹೀಗೆ ಸೆಟ್ಟಿನ ಕೊನೆಯವರೆಗೆ ಇದೇ ಕ್ರಮದಲ್ಲಿ ಸರ್ವ್ ಮಾಡಬೇಕು. ಒಂದು ಸೆಟ್ಟು ನಡೆಯುತ್ತಿರುವ ಪರ್ಯಂತ ಸರ್ವಿಸ್ ಮಾಡುವ ಅನುಕ್ರಮದಲ್ಲಿ ವ್ಯತ್ಯಾಸವಾಗಕೂಡದು. ಆದರೆ ಇನ್ನೊಂದು ಹೊಸ ಸೆಟ್ಟಿನ ಪ್ರಾರಂಭದಲ್ಲಿ ಈ ವ್ಯವಸ್ಥೆಯನ್ನು ಬದಲಾಯಿಸಲವಕಾಶವಿದೆ. ಇದೇ ರೀತಿ ಸರ್ವಿಸನ್ನು ಹಿಂದಿರುಗಿಸುವ ರಿಸೀವರ್‍ಗಳು ಸಹ ಸರ್ವಿಸನ್ನು ಹಿಂದಿರುಗಿಸುವ ಸಲುವಾಗಿ ತಮ್ಮ ಸ್ಥಾನಗಳನ್ನು ಅದಲುಬದಲು ಮಾಡುವಂತಿಲ್ಲ. ಆದರೆ ಹೊಸ ಸೆಟ್ಟಿನ ಪ್ರಾರಂಭದಲ್ಲಿ ಅವಶ್ಯವೆನಿಸಿದರೆ ಮಾತ್ರ ಅದಕ್ಕೆ ಅವಕಾಶ ಉಂಟು. ವಿರುದ್ಧ ಬಣದಲ್ಲಿ ಒಬ್ಬಾತ ಹೊಡೆದ ಚೆಂಡನ್ನು ಎದುರು ತಂಡದ ಇಬ್ಬರು ಪೈಕಿ ಯಾರಾದರೊಬ್ಬರು ಹಿಂದಿರುಗಿಸಬಹುದು. ಈ ರೀತಿ ಒಂದು ತಂಡದವರು ಹೊಡೆದ ಚೆಂಡನ್ನು ಇನ್ನೊಂದು ತಂಡದವರು ಹಿಂದಿರುಗಿಸುತ್ತ ಆಟವನ್ನು ಮುಂದುವರಿಸಬೇಕು. ಈ ನಿಯಮಕ್ಕೆ ವಿರುದ್ಧವಾಗಿ ಆಟಗಾರ ಚೆಂಡನ್ನು ತನ್ನ ರ್ಯಾಕೆಟಿನಿಂದ ಮುಟ್ಟಿದರೆ ಅವನ ಎದುರಾಳಿಗಳು ಪಾಯಿಂಟನ್ನು ಗೆದ್ದುಕೊಳ್ಳತ್ತಾರೆ. ಪ್ರಪಂಚದ ಟೆನಿಸ್ ಪಂದ್ಯಗಳು ಟೆನಿಸ್ ಪ್ರಪಂಚದಾದ್ಯಂತ ಮನ್ನಣೆ ಪಡೆದಿರುವಂಥ ಆಟ. ಸಾಮಾನ್ಯವಾಗಿ ಎರಡು ರಾಷ್ಟ್ರಗಳ ನುರಿತ ಟೆನಿಸ್ ಪಟುಗಳ ನಡುವೆ ಸಹಸ್ರಾರು ಪ್ರೇಕ್ಷಕರೆದುರಿಗೆ ನಡೆಯುವ ಟೆನಿಸ್ ಪಂದ್ಯಗಳು ಬಹು ಜನಪ್ರಿಯವಾಗಿವೆ. ಪಂದ್ಯಗಳಲ್ಲಿ ಅಸಾಧಾರಣ ತಂತ್ರಗಳನ್ನು ಪ್ರದರ್ಶಿಸಿ ಯಶಸ್ಸು ಪಡೆಯುವ ಆಟಗಾರರಿಗೆ ಪ್ರಶಸ್ತಿಯನ್ನೂ ಬಹುಮಾನಗಳನ್ನೂ ನೀಡಲಾಗುತ್ತದೆ. ಇಂಗ್ಲೆಂಡಿನ ವಿಂಬಲ್ಡನ್ ಎಂಬಲ್ಲಿ ನಡೆಯುವ ಪಂದ್ಯಗಳು, ಅಮೆರಿಕದ ಫಾರೆಸ್ಟ್ ಹಿಲ್ಸ್ ನಲ್ಲಿ ನಡೆಯುವ ಪಂದ್ಯಗಳು, ಆಸ್ಟ್ರೇಲಿಯ, ಫ್ರಾನ್ಸ್ ಮುಂತಾದೆಡೆಗಳಲ್ಲಿನ ಪಂದ್ಯಗಳು ಲಕ್ಷಾಂತರ ಟೆನಿಸ್ ಪ್ರೇಮಿಗಳಿಗೆ ಉಲ್ಲಾಸವನ್ನುಂಟುಮಾಡಿವೆ. ಇಂಗ್ಲೆಂಡಿನ ಒಬ್ಬ ಟೆನಿಸ್ ಪ್ರೇಮಿ ಡ್ವೈಟ್ ಎಫ್. ಡೇವಿಸ್ ಎಂಬಾತ 1900ರಲ್ಲಿ ಶ್ರೇಷ್ಠಮಟ್ಟದ ಪ್ರಪಂಚದ ರಾಷ್ಟ್ರಗಳ ನಡುವಣ ಟೆನಿಸ್ ಆಟಕ್ಕೆಂದೇ ಕಪ್ಪು (ಬಹುಮಾನದ ಬಟ್ಟಲು) ಒಂದನ್ನು ನೀಡಿದ. ಡೇವಿಸ್ ಕಪ್ ಪಂದ್ಯಗಳು ಎಂಬ ಹೆಸರಿನಿಂದಲೇ ಅನೇಕ ಟೆನಿಸ್ ಪಂದ್ಯಗಳು ನಡೆದಿವೆ. ಇವು ಗಂಡಸರಿಗೆ ಮೀಸಲಾದವು. ಮೊಟ್ಟಮೊದಲಿಗೆ ಅಮೆರಿಕದ ಸಂಯುಕ್ತಸಂಸ್ಥಾನಗಳು ಮತ್ತು ಬ್ರಿಟಿಷ್ ದ್ವೀಪಗಳ ನಡುವೆ ನಡೆದ ಪಂದ್ಯದಲ್ಲಿ ಅಮೆರಿಕವೇ ಡೇವಿಸ್ ಕಪ್ಪನ್ನು ಪಡೆಯಿತು. 1968ರ ಸ್ಪರ್ಧೆಯಲ್ಲಿ ಭಾಗವಹಿಸಿದ 49 ರಾಷ್ಟ್ರಗಳಲ್ಲಿ ಯೂರೋಪ್ ವಲಯದಿಂದ 32, ಪೂರ್ವವಲಯದಿಂದ 8, ಅಮೆರಿಕದ ವಲಯದಿಂದ 9 ರಾಷ್ಟ್ರಗಳು ಭಾಗವಹಿಸಿದ್ದವು. ಹ್ವಿಟ್ ಮನ್ ಕಪ್ ಪಂದ್ಯಗಳು ಮಹಿಳೆಯರಿಗಾಗಿಯೇ ಮೀಸಲಿರುವಂಥವು. ಶ್ರೀಮತಿ ಜಾರ್ಜಾ ಹ್ವಿಟ್ ಮನ್ ಎಂಬುವಳು 1923ರಲ್ಲಿ ಲಾನ್ ಟೆನಿಸ್ ಪಂದ್ಯಗಳಿಗಾಗಿಯೇ ಒಂದು ಕಪ್ಪನ್ನು ನೀಡಿದ್ದಳು. ಅಮೆರಿಕದ ಸಂಯುಕ್ತಸಂಸ್ಥಾನ ಮತ್ತು ಇಂಗ್ಲೆಂಡುಗಳು ಮಹಿಳಾ ಟೆನಿಸ್ ಆಟಗಾರರ ನಡುವೆ ಅಮೆರಿಕದಲ್ಲೇ ಟೆನಿಸ್ ಸ್ಪರ್ಧೆಗಳು ನಡೆದುವು (1909, 1910, 1911). ಹ್ವಿಟ್ ಮನ್ ಕಪ್ಪನ್ನು ಗಳಿಸಲು 1923ರಲ್ಲಿ ಅಮೆರಿಕದ ಫಾರೆಸ್ಟ್ ಹಿಲ್ಸ್ ನಲ್ಲಿ ಟೆನಿಸ್ ಪಂದ್ಯ ನಡೆಯಿತು. ವಾರ್ಷಿಕ ಪಂದ್ಯ ಈ ಎರಡು ರಾಷ್ಟ್ರಗಳಲ್ಲಿ ವರ್ಷಕ್ಕೊಂದು ಸಲ ನಡೆಯುತ್ತದೆ. ಈ ಪಂದ್ಯಗಳಲ್ಲಿ ಐದು ಸಿಂಗಲ್ಸ್ ಪಂದ್ಯಗಳೂ ಎರಡು ಡಬಲ್ಸ್ ಪಂದ್ಯಗಳೂ ಇರುತ್ತವೆ. ಮೊದಲ ಸ್ಪರ್ಧೆಯಲ್ಲಿ ಅಮೆರಿಕ ಜಯ ಗಳಿಸಿತು. ಎರಡನೆಯ ಮಹಾಯುದ್ದದ ಕಾರಣ 1940ರಿಂದ 1945ರ ವರೆಗೆ ಪಂದ್ಯಗಳು ನಡೆಯಲಿಲ್ಲ. ಯುದ್ಧದ ಅನಂತರ 1952ರ ವರೆಗೆ ನಡೆದಿರುವ 24 ಪಂದ್ಯಗಳಲ್ಲಿ 20 ಅಮೆರಿಕ ಗೆದ್ದಂಥವು. ಅಮೆರಿಕ ಸಂಯುಕ್ತಸಂಸ್ಥಾನಗಳಲ್ಲಿ ಲಾನ್ ಟೆನಿಸನ್ನು ಮೊದಲ ಬಾರಿಗೆ ಆಡಿದ್ದು 1875ರಲ್ಲಿ. ಮೊಟ್ಟಮೊದಲ ಸಂಯುಕ್ತ ಸಂಸ್ಥಾನದ ಚಾಂಪಿಯನ್ ಷಿಷ್ ಪಂದ್ಯವಾಗಿದ್ದು 1881ರಲ್ಲಿ. ಅದು ಆದದ್ದು ಇಂಗ್ಲಿಷ್ ನಿಯಮಗಳನುಸಾರ ಮತ್ತು ಇಂಗ್ಲಿಷ್ ಚೆಂಡನ್ನು ಬಳಸಿ. 1875ರ ಹೊತ್ತಿಗೆ ದಕ್ಷಿಣ ಅಮೆರಿಕದ ಬ್ರಜಿûಲ್‍ನಲ್ಲೂ ಭಾರತದಲ್ಲೂ ಈ ಆಟಗಳು ನಡೆದು ಹೆಚ್ಚು ಜನಪ್ರಿಯತೆ ಗಳಿಸಿದವು. ಜರ್ಮನಿಯಲ್ಲಿ ಮೊದಲಿಗೆ 1876ರಲ್ಲೂ ಹ್ಯಾಂಬರ್ಗಿನಲ್ಲಿ ಜರ್ಮನ್ ಚಾಂಪಿಯನ್ ಷಿಪ್ ಪಂದ್ಯಗಳು 1887ರಲ್ಲೂ ಜರುಗಿದವು. ಫ್ರಾನ್ಸಿನಲ್ಲಿ 1886ರಲ್ಲಿ ಇದು ನಡೆಯಿತು. ಆಸ್ಟ್ರೇಲಿಯದ ಮೆಲ್ ಬರ್ನ್ ಕ್ರಿಕೆಟ್ ಕ್ಲಬ್ ನಲ್ಲಿ ಮೊಟ್ಟಮೊದಲು ಆಸ್ಫಾಲ್ಟ್ ಟೆನಿಸ್ ಕೋರ್ಟ್ 1878ರಲ್ಲಿ ನಿರ್ಮಾಣವಾಯಿತು. 1968ರಿಂದೇಚೆಗೆ 78ಕ್ಕೂ ಹೆಚ್ಚಿನ ರಾಷ್ಟ್ರಗಳು ಅಂತರರಾಷ್ಟ್ರೀಯ ಲಾನ್ ಟೆನಿಸ್ ಫೆಡರೇಷನ್ನಿನ ಸದಸ್ಯತ್ವ ಪಡೆದಿವೆ. ಅಂತರರಾಷ್ಟ್ರೀಯ ಲಾನ್ ಟೆನಿಸ್ ಫೆಡರೇಷನ್ ಎಂಬ ಒಂದು ಸಂಸ್ಥೆ 1913ರಲ್ಲಿ ಲಂಡನ್ನಿನಲ್ಲಿ ಸ್ಥಾಪನೆಗೊಂಡು ಆಟದ ಬಗೆಗಿನ ನಿಯಂತ್ರಣವನ್ನೂ ನಿಯಮಾವಳಿಗಳ ಹೊಣೆಗಾರಿಕೆಯನ್ನೂ ಹೊತ್ತುಕೊಂಡಿತು. ಈ ಸಂಸ್ಥೆಯ ಅಧಿಕೃತ ವ್ಯವಹಾರಭಾಷೆ ಫ್ರೆಂಚ್ ಆಗಿದ್ದರೂ ಇಂಗ್ಲಿಷ್ ಅನುವಾದವನ್ನು ಒದಗಿಸಿಕೊಡುವ ಕ್ರಮ ಇದೆ. ಲಾನ್ ಟೆನಿಸಿನ ಅಧಿಕೃತ ನಿಯಮಾವಳಿಗಳು ಮಾತ್ರ ಇಂಗ್ಲಿಷಿನಲ್ಲೇ ಇರತಕ್ಕದ್ದೆಂದು ಒಪ್ಪಿಕೊಳ್ಳಲಾಗಿದೆ. ಭಾರತದಲ್ಲೂ ಟೆನಿಸ್ ಆಟಗಳಿಗೆ ಪ್ರೋತ್ಸಾಹವನ್ನು ಕೊಡುವ ಸಲುವಾಗಿ ರಾಷ್ಟ್ರೀಯ ಲಾನ್ ಟೆನಿಸ್ ಫೆಡರೇಷನ್ ಎಂಬ ಸಂಸ್ಥೆಯೊಂದನ್ನು ಸ್ಥಾಪಿಸಲಾಗಿದೆ. ಇದರ ವತಿಯಿಂದ ರಾಜ್ಯಮಟ್ಟದಲ್ಲಿ ಅನೇಕ ಟೆನಿಸ್ ಪಂದ್ಯಗಳು ಜರುಗಿವೆ. ಲಾನ್ ಟೆನಿಸ್ ಆಟದಲ್ಲಿ ಅಂತರರಾಷ್ಟ್ರೀಯ ಖ್ಯಾತಿಯನ್ನು ಪಡೆದ ವಿದೇಶೀಯರಲ್ಲಿ ಆಸ್ಟ್ರೇಲಿಯದ ಕ್ರೇಮರ್, ಲ್ಯೂ ಹೋಡ್, ನೀಲ್ ಫ್ರೇಸûರ್, ರಾಡ್ ಲೇವರ್, ಜಾನ್ ನ್ಯೂಕೂಂಬ್, ಕೆನ್ ರೋಸ್ ವಾಲ್, ರಾಯ್ ಎಮರ್ಸನ್, ಓವೆನ್ ಡೇವಿಡ್ ಸನ್, ಟೋನಿರೋಷ್, ಜೆಫ್ ಮಾಸ್ಟರ್ಸ್, ಜಾನ್ ಕೂಪರ್, ಇವೋನ್ (ಗೂಲಗಾಂಗ್) ಕಾಲಿ, ಜೇನಟ್ ಯಂಗ್ ಮೊದಲಾದವರನ್ನೂ ಅಮೆರಿಕ ಸಂಯುಕ್ತ ಸಂಸ್ಥಾನದ ಟಾಮ್ ಗೋರ್ಮನ್, ಸ್ಟ್ಯಾನ್ ಸ್ಮಿತ್, ಜಿಮ್ ಕಾನರ್ಸ್, ಆರ್ಥರ್ ಆ್ಯಷ್, ಆಲ್ತಿಯ ಗಿಬ್ ಸನ್, ಮಾರೀನ್ ಕಾನೊಲಿ, ಕ್ರಿಸ್ ಈವರ್ಟ್, ಮಾರ್ಗರೆಟ್ ಕೋರ್ಟ್, ಬಿಲಿ ಜೀನ್ ಕಿಂಗ್ ಮುಂತಾದವರನ್ನೂ ಜೆಕೊಸ್ಲೊವಾಕಿಯದ ಯಾನ್ ಕೋಡೆಸ್, ರೂಮೇನಿಯದ ಈಲಿ ನಾಸ್ ಟಾಸೆ, ರಷ್ಯದ ಅಲೆಕ್ಸಿ ಮೆಟ್ರಿವೆಲಿ, ಸ್ಪೇನಿನ ಮ್ಯಾನುವೆಲ್ ಸಂಟಾನ, ಮೆಕ್ಸಿಕೋದ ಪಾಲ್ ರ್ಯಾಮಿರೆಜ್-ಮೊದಲಾದವರನ್ನೂ ಹೆಸರಿಸಬಹುದು. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಖ್ಯಾತಿಗಳಿಸಿರುವ ಪ್ರಮುಖ ಭಾರತೀಯ ಆಟಗಾರರ ಪೈಕಿ ಬಿ. ನರೇಸ್ ಕುಮಾರ್, ರಾಮನಾಥನ್ ಕೃಷ್ಣನ್, ಜೈದೀಪ್ ಮುಖರ್ಜಿ, ಪ್ರೇಮ್ ಜಿತ್ ಲಾಲ್, ವಿಜಯ್ ಅಮೃತ್ ರಾಜ್, ಆನಂದ್ ಅಮೃತ್ ರಾಜ್, ಆಶೋಕ್ ಅಮೃತ್ ರಾಜ್, ಶಶಿ ಮೆನನ್, ಜಸ್ ಜಿತ್ ಸಿಂಗ್, ಗೌರವ್ ಮಿಶ್ರ, ಚಿರದೀಪ್ ಮುಖರ್ಜಿ, ನಿರುಪಮ ಮಂಕಡ್, ದೇಚು ಅಪ್ಪಯ್ಯ, ಸೂಸನ್ ದಾಸ್, ಉದಯಾ ಕುಮಾರ್ ಮುಂತಾದವರನ್ನು ಹೆಸರಿಸಬಹುದು. (ಎಚ್.ಎಸ್.ಎಸ್.) ಗ್ರ್ಯಾಂಡ್ ಸ್ಲಾಮ್ ಯಾವೊಬ್ಬ ಆಟಗಾರ ಇಲ್ಲವೇ ಆಟಗಾರ್ತಿ ಒಂದು ಹಂಗಾಮಿನಲ್ಲಿ ನಡೆಯುವ ಎಲ್ಲ ಪ್ರಮುಖ ಲಾನ್ ಟೆನಿಸ್ ಪ್ರಪಂಚ ಶರ್ಯತ್ತು ಸ್ಪರ್ಧೆಗಳಲ್ಲಿ ಗಳಿಸುವ ಅಸಾಧಾರಣ ಯಶಸ್ಸನ್ನು ಸೂಚಿಸುವ ಪದ ಇದು. ಒಬ್ಬ ಆಟಗಾರ ಒಂದೇ ವರ್ಷ ಆಸ್ಟ್ರೇಲಿಯ, ಫ್ರಾನ್ಸ್, ಇಂಗ್ಲೆಂಡಿನ ವಿಂಬಲ್ಡನ್ ಹಾಗೂ ಅಮೆರಿಕದ ಫಾರೆಸ್ಟ್ ಹಿಲ್ಸ್ ಮುಂತಾದ ಚಾಂಪಿಯನ್ ಷಿಪ್ ಗಳಲ್ಲಿ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡಲ್ಲಿ ಆತನನ್ನು ಗ್ರ್ಯಾಂಡ್ ಸ್ಲಾಮ್ ಸಾಧಿಸಿದವ ಎನ್ನಲಾಗುತ್ತದೆ. ಪ್ರಪಂಚದ ಲಾನ್ ಟೆನಿಸ್ ಆಟದಲ್ಲಿ ಈ ಸಾಧನೆಮಾಡಿ ಇಲ್ಲಿಯ ವರೆಗೆ ಖ್ಯಾತಿಗಳಿಸಿರುವವರಲ್ಲಿ ಪುರುಷರೂ ಮಹಿಳೆಯರೂ ಇದ್ದಾರೆ. ಪುರುಷರಲ್ಲಿ ಅಮೆರಿಕದ ರೊನಾಲ್ಡ್ ಬಹ್ ಹಾಗೂ ಆಸ್ಟ್ರೇಲಿಯದ ರಾಡ್ ಲೇವರ್ (ಎರಡು ಬಾರಿ), ಮಹಿಳೆಯರಲ್ಲಿ ಅಮೆರಿಕದ ಮಾರೀನ್ ಕಾನೊಲಿ, ಮಾರ್ಗರೆಟ್ ಕೋರ್ಟ್_ಇವರನ್ನು ಹೆಸರಿಸಬಹುದು. ಗ್ರ್ಯಾಂಡ್ ಸ್ಲಾಮ್ ಎಂಬ ಪದವನ್ನು ಬ್ರೆಜ್ ಆಟದಲ್ಲೂ ಬಳಸಲಾಗುತ್ತದೆ. ಒಂದು ತಂಡ ಎದುರಾಳಿಗೆ ಒಂದು ಪಟ್ಟೂ ಕೊಡದೆ ಗೆದ್ದಲ್ಲಿ ಅದಕ್ಕೆ ಆ ತಂಡದ ಗ್ರ್ಯಾಂಡ್ ಸ್ಲಾಮ್ ಎನ್ನಲಾಗುತ್ತದೆ. ಅಗ್ರಸ್ಥಾನ 18 Apr, 2017 2017ರ ಸಾಲಿಗೆ ಬ್ರಿಟನ್‌ನ ಆ್ಯಂಡಿ ಮರ್ರೆ ಮತ್ತು ಜರ್ಮನಿಯ ಏಂಜಲಿಕ್‌ ಕೆರ್ಬರ್‌ ಅವರು ಕ್ರಮವಾಗಿ ಪುರುಷರ ವೃತ್ತಿಪರ ಟೆನಿಸ್‌ ಸಂಸ್ಥೆ (ಎಟಿಪಿ) ಮತ್ತು ಮಹಿಳಾ ಟೆನಿಸ್‌ ಸಂಸ್ಥೆ (ಡಬ್ಲ್ಯುಟಿಎ) ಸೋಮವಾರ ಬಿಡುಗಡೆ ಮಾಡಿರುವ ಸಿಂಗಲ್ಸ್‌ ವಿಭಾಗದ ನೂತನ ವಿಶ್ವ ಕ್ರಮಾಂಕ ಪಟ್ಟಿ ಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಮರ್ರೆ ಅವರ ಖಾತೆಯಲ್ಲಿ 11,600 ಪಾಯಿಂಟ್ಸ್‌ ಇದ್ದು ಅವರು ಎರಡನೇ ಸ್ಥಾನದಲ್ಲಿರುವ ಸರ್ಬಿಯಾದ ನೊವಾಕ್‌ ಜೊಕೊವಿಚ್‌ (7905) ಅವರಿಗಿಂತ 3695 ಪಾಯಿಂಟ್ಸ್‌ ಹೆಚ್ಚು ಹೊಂದಿದ್ದಾರೆ. ಸ್ವಿಟ್ಜರ್‌ಲೆಂಡ್‌ನ ಆಟಗಾರರಾದ ಸ್ಟಾನಿಸ್ಲಾಸ್‌ ವಾವ್ರಿಂಕ ಮತ್ತು ರೋಜರ್‌ ಫೆಡರರ್‌ ಅವರು ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನಗಳಲ್ಲಿ ಕಾಣಿಸಿ ಕೊಂಡಿದ್ದಾರೆ. ಹಿಂದಿನ ಟೂರ್ನಿಗಳಲ್ಲಿ ಸ್ಥಿರ ಸಾಮರ್ಥ್ಯ ತೋರಲು ವಿಫಲವಾಗಿದ್ದ ಸ್ಪೇನ್‌ನ ರಫೆಲ್‌ ನಡಾಲ್‌ ಅವರು ಎರಡು ಸ್ಥಾನ ಕಳೆದುಕೊಂಡಿದ್ದು ಏಳನೇ ಸ್ಥಾನಕ್ಕೆ ಕುಸಿದಿದ್ದಾರೆ. ಜಪಾನ್‌ನ ಕಿ ನಿಶಿಕೋರಿ ಅವರು ಐದನೇ ಸ್ಥಾನಕ್ಕೆ ಬಡ್ತಿ ಹೊಂದಿದ್ದಾರೆ. ಮಹಿಳೆಯರು ಕೆರ್ಬರ್‌ ಸಾಧನೆ: ಕೆರ್ಬರ್‌ 7,335 ಪಾಯಿಂಟ್ಸ್‌ ಹೊಂದಿದ್ದು ಮೊದಲ ಸ್ಥಾನ ಭದ್ರಪಡಿಸಿ ಕೊಂಡಿದ್ದಾರೆ. ಅಮೆರಿಕಾದ ಸೆರೆನಾ ವಿಲಿಯಮ್ಸ್‌ ಎರಡನೇ ಸ್ಥಾನದಲ್ಲಿದ್ದಾರೆ. ಬಲಗೈ ಆಟಗಾರ್ತಿ ಸೆರೆನಾ ಅವರು ಈ ಮೊದಲು ಅಗ್ರ ಪಟ್ಟ ಹೊಂದಿದ್ದರು. ಗಾಯಗೊಂಡಿರುವ ಕಾರಣ ಅವರು ಹಿಂದಿನ ಕೆಲ ಪ್ರಮುಖ ಟೂರ್ನಿಗಳಲ್ಲಿ ಆಡಿರಲಿಲ್ಲ. ನೋಡಿ ಸೆರೆನಾ ವಿಲಿಯಮ್ಸ್ ಸಾನಿಯಾ ಮಿರ್ಜಾ ಏಂಜಲಿಕ್‌ ಕರ್ಬರ್ ಮಾರ್ಟಿನಾ ಹಿಂಗಿಸ್ ಉಲ್ಲೇಖ
3571
https://kn.wikipedia.org/wiki/%E0%B2%92%E0%B2%B2%E0%B2%82%E0%B2%AA%E0%B2%BF%E0%B2%95%E0%B3%8D%20%E0%B2%95%E0%B3%8D%E0%B2%B0%E0%B3%80%E0%B2%A1%E0%B2%BE%E0%B2%95%E0%B3%82%E0%B2%9F
ಒಲಂಪಿಕ್ ಕ್ರೀಡಾಕೂಟ
ಒಲಿಂಪಿಕ್ ಕ್ರೀಡಾಕೂಟ ಒಂದು ಅಂತರರಾಷ್ಟ್ರೀಯ ಕ್ರೀಡಾಕೂಟ. ಇದು ಅನೇಕ ಕ್ರೀಡೆಗಳನ್ನು ಒಳಗೊಂಡಿದೆ. ಈ ಕ್ರೀಡಾಕೂಟವನ್ನು ಬೇಸಗೆಯ ಕ್ರೀಡಾಕೂಟ ಹಾಗೂ ಚಳಿಗಾಲದ ಕ್ರೀಡಾಕೂಟಗಳೆಂದು ವರ್ಗೀಕರಿಸಲಾಗಿದೆ. ಎರಡೂ ಕೂಟಗಳನ್ನು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಆಯೋಜಿಸಲಾಗುವುದು. ೧೯೯೨ರವರೆಗೆ ಎರಡೂ ಕ್ರೀಡಾಕೂಟಗಳನ್ನು ಒಂದೇ ವರ್ಷದಲ್ಲಿ ನಡೆಸಲಾಗುತ್ತಿತ್ತು. ನಂತರ ಇವುಗಳ ಮಧ್ಯೆ ಎರಡು ವರ್ಷಗಳ ಅಂತರವಿರಿಸಲಾಗಿದೆ. ಕ್ರಿ.ಪೂ. ೭೭೬ರಲ್ಲಿ ಗ್ರೀಸ್ ದೇಶದ ಒಲಿಂಪಿಯಾದಲ್ಲಿ ಮೂಲ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ನಂತರ ಕ್ರಿ.ಶ. ೩೯೩ರವರೆಗೆ ಇದು ಮುಂದುವರೆಯಿತು. ಕಾರಣಾಂತರಗಳಿಂದ ನಿಂತುಹೋದ ಈ ಕ್ರೀಡಾಕೂಟವನ್ನು ಮತ್ತೆ ಪುನರಾರಂಭಿಸುವುದರಲ್ಲಿ ಆಸಕ್ತಿ ತೋರಿದವನು ಗ್ರೀಸ್ ದೇಶದ ಕವಿ ಹಾಗೂ ಪತ್ರಿಕಾ ಸಂಪಾದಕನಾಗಿದ್ದ ಪನಾಜಿಯೋಟಿಸ್ ಸೌಟ್ಸಾಸ್ ಎಂಬವನು. ಮುಂದೆ ೧೮೫೯ರಲ್ಲಿ ಇವಾಂಜೆಲಾಸ್ ಝಪ್ಪಾಸ್ ಎಂಬುವವನು ನವೀನಕಾಲದ ಪ್ರಪ್ರಥಮ ಅಂತರರಾಷ್ಟ್ರೀಯ ಒಲಿಂಪಿಕ್ ಕ್ರೀಡಾಕೂಟ ವನ್ನು ಪ್ರಾಯೋಜಿಸಿದನು. ೧೮೯೪ರಲ್ಲಿ ಫ್ರಾನ್ಸ್ ದೇಶದ ಗಣ್ಯನಾದ ಬ್ಯಾರನ್ ಪಿಯರಿ ದ ಕೂಬರ್ತಿಯು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯನ್ನು ಹುಟ್ಟುಹಾಕಿದನು. ಈ ಸಂಸ್ಥೆಯ ವತಿಯಿಂದ ಮೊದಲನೆಯ ಬೇಸಿಗೆ ಒಲಿಂಪಿಕ್ ಕ್ರೀಡಾಕೂಟವನ್ನು ಗ್ರೀಸ್ ದೇಶದ ಅಥೆನ್ಸ್ ನಗರದಲ್ಲಿ ೧೮೯೬ರಲ್ಲಿ ನಡೆಸಲಾಯಿತು.https://www.penn.museum/sites/olympics/olympicorigins.shtml ಅಂದು ಕೆಲವೇ ರಾಷ್ಟ್ರಗಳು ಪಾಲ್ಗೊಂಡಿದ್ದ ಒಲಿಂಪಿಕ್ ಕ್ರೀಡಾಕೂಟ ಇಂದು ಹೆಚ್ಚೊಕಡಿಮೆ ವಿಶ್ವದ ಎಲ್ಲಾ ದೇಶಗಳೂ ಭಾಗವಹಿಸುವಷ್ಟರ ಮಟ್ಟಿಗೆ ಅಗಾಧವಾಗಿ ಬೆಳೆದಿದೆ. ಉಪಗ್ರಹ ಸಂಪರ್ಕದ ವ್ಯವಸ್ಥೆಯಿಂದಾಗಿ ಜಗತ್ತಿನ ಮೂಲೆಮೂಲೆಗಳಿಗೂ ಈ ಕೂಟದ ನೇರಪ್ರಸಾರ ಸಾಧ್ಯವಾಗಿದ್ದು ಒಲಿಂಪಿಕ್ ಕ್ರೀಡಾಕೂಟ ಇಂದು ಅಪಾರಪ್ರಮಾಣದ ಜನಪ್ರಿಯತೆ ಗಳಿಸಿಕೊಂಡಿದೆ. ಅತ್ಯಂತ ಇತ್ತೀಚಿನ ಬೇಸಗೆಯ ಒಲಿಂಪಿಕ್ ಕ್ರೀಡಾಕೂಟ ೨೦೧೨ರಲ್ಲಿ ಲಂಡನ್ ನಗರದಲ್ಲಿ ಹಾಗೂ ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟ ೨೦೧೦ರಲ್ಲಿ ಕೆನಡಾ ದ ವೆನ್‌ಕೂವರ್ ನಗರದಲ್ಲಿ ಆಯೂಜಿಸಲ್ಪಟ್ಟಿದ್ದವು. ಮುಂದಿನ ಬೇಸಗೆ ಕ್ರೀಡಾಕೂಟ ೨೦೧೬ ರಲ್ಲಿ ಬ್ರೆಜಿಲ್ ದೇಶದ ರಿಯೊ ಡಿ ಜನೈರೊ ನಲ್ಲಿ ನಡೆಯಲಿದೆ. ಮುಂದಿನ ಚಳಿಗಾಲದ ಕ್ರೀಡಾಕೂಟ ರಷ್ಯಾ ದೇಶದ ಸೋಚಿ ಯಲ್ಲಿ ೨೦೧೪ ರಲ್ಲಿ ನಡೆಯಲಿದೆ. ಪ್ರಾಚೀನ ಒಲಿಂಪಿಕ್ಸ್ ಪ್ರಾಚೀನ ಒಲಿಂಪಿಕ್ ಕ್ರೀಡಾಕೂಟದ ಬಗ್ಗೆ ಹಲವಷ್ಟು ದಂತಕಥೆಗಳು ಹಾಗೂ ಊಹಾಪೋಹಗಳಿವೆ. ಇವುಗಳ ಪೈಕಿ ಅತಿ ಜನಪ್ರಿಯವಾದ ಕತೆಯೊಂದರ ಪ್ರಕಾರ - ಹೆರಾಕ್ಲಿಸ್ ಪ್ರಾಚೀನ ಒಲಿಂಪಿಕ್ ಕ್ರೀಡಾಕೂಟದ ಸೃಷ್ಟಿಕರ್ತನು. ಇವನು ತನ್ನ ತಂದೆ ಸ್ಯೂಸ್ ನ ಗೌರವಾರ್ಥವಾಗಿ ೧೨ ಕ್ರೀಡಾಂಗಣಗಳನ್ನು ನಿರ್ಮಿಸಿ ಕೂಟವನ್ನು ನಡೆಸಿದನು. ಈ ಕತೆಯ ಪ್ರಕಾರ ಈತನು ನೇರದಾರಿಯಲ್ಲಿ ೪೦೦ ಬಾರಿ ದಾಪುಗಾಲನ್ನಿಟ್ಟು ಕ್ರಮಿಸಿ ಆ ದೂರವನ್ನು ಒಂದು ಸ್ಟೇಡಿಯಸ್ ಎಂದು ಕರೆದನು. ಈ ದೂರವನ್ನೇ ರೋಮನ್ನರು ಸ್ಟೇಡಿಯಮ್ ಹಾಗೂ ಆಂಗ್ಲರು ಸ್ಟೇಜ್ ಎಂದು ಹೆಸರಿಸಿದರು. ಇಂದು ಕೂಡಾ ಆಧುನಿಕ ಕ್ರೀಡಾಂಗಣದ ಟ್ರ್ಯಾಕ್ ನ ಸುತ್ತಳತೆ ೪೦೦ ಮೀ. ಇರುವುದು. ಕ್ರಿ. ಪೂ. ೭೭೬ರ ಮೊದಲನೆಯ ಕ್ರೀಡಾಕೂಟದ ನಂತರ ಗ್ರೀಸ್ ದೇಶದಲ್ಲಿ ಒಲಿಂಪಿಕ್ಸ್ ಜನಪ್ರಿಯತೆ ಹೆಚ್ಚಿಸಿಕೊಂಡು ಕ್ರಿ.ಪೂ. ೬ ನೆಯ ಹಾಗೂ ೫ನೆಯ ಶತಮಾನದಲ್ಲಿ ಉಚ್ಛ್ರಾಯಸ್ಥಿತಿಯನ್ನು ತಲುಪಿದ್ದಿತು. ಮೊದಲಿಗೆ ಕೆಲವೇ ಕ್ರೀಡೆಗಳನ್ನೊಳಗೊಂಡು ಒಂದು ದಿನದಲ್ಲಿಯೇ ಮುಗಿಯುತ್ತಿದ್ದ ಕೂಟವು ಮುಂದೆ ೨೦ರಷ್ಟು ಸ್ಪರ್ಧೆಗಳೊಂದಿಗೆ ಹಲವು ದಿನಗಳವರೆಗೆ ನಡೆಯುತ್ತಿತ್ತು. ಕ್ರೀಡೆಗಳಲ್ಲಿ ವಿಜಯ ಸಾಧಿಸಿದ ಸ್ಪರ್ಧಾಳುಗಳನ್ನು ನಾಡು ಅತ್ಯಭಿಮಾನ ಹಾಗೂ ಆದರದಿಂದ ಕಾಣುತ್ತಿತ್ತು. ಕವನಗಳ ಮತ್ತು ಪ್ರತಿಮೆಗಳ ಮೂಲಕ ಇವರನ್ನು ಅಮರರನ್ನಾಗಿಸಲಾಗುತ್ತಿತ್ತು. ಕ್ರಿ.ಪೂ. ೬ನೆಯ ಶತಮಾನದಲ್ಲಿದ್ದ ಮಿಲೋ ಎಂಬ ಕುಸ್ತಿಪಟುವು ಸತತ ೬ ಒಲಿಂಪಿಕ್ ಕ್ರೀಡಾಕೂಟ ಗಳಲ್ಲಿ ವಿಜಯ ಸಾಧಿಸಿದ್ದನು. ಈ ದಾಖಲೆಯನ್ನು ಇಂದಿನವರೆಗೂ ಸರಿಗಟ್ಟಲಾಗಿಲ್ಲ. ಗ್ರೀಸ್ ದೇಶದ ಮೇಲೆ ರೋಮನ್ನರ ಅಧಿಪತ್ಯವುಂಟಾದ ಮೇಲೆ ಒಲಿಂಪಿಕ್ ಕ್ರೀಡಾಕೂಟವು ಕ್ರಮೇಣ ಅವನತಿಯತ್ತ ಸಾಗಲಾರಂಭಿಸಿತು. ಕ್ರಿಶ್ಚಿಯನ್ ಧರ್ಮವು ರೋಮ್ ಸಾಮ್ರಾಜ್ಯದ ಅಧಿಕೃತ ಧರ್ಮವೆಂದು ಘೋಷಿಸಲ್ಪಟ್ಟ ಮೇಲೆ ಒಲಿಂಪಿಕ್ ಕ್ರೀಡಾಕೂಟವು ಆ ಧರ್ಮದ ನಡವಳಿಕೆಗಳಿಗೆ ಅನುಗುಣವಾಗಿಲ್ಲವೆಂದು ಪರಿಗಣಿಸಲ್ಪಟ್ಟಿತು. ತರುವಾಯ ಕ್ರಿ.ಶ. ೩೯೩ರಲ್ಲಿ ರೋಮನ್ ಸಮ್ರಾಟ ಮೊದಲನೆಯ ಥಿಯೋಡೋರಸ್ ಒಲಿಂಪಿಕ್ ಕ್ರೀಡಾಕೂಟವನ್ನು ಧರ್ಮಬಾಹಿರವೆಂದು ಘೋಷಿಸಿದನು. ಹೀಗೆ ಸುಮಾರು ೧೦೦೦ ವರ್ಷಗಳ ಪರಂಪರೆಯೊಂದು ಕೊನೆಗೊಂಡಿತು. ಪ್ರಾಚೀನ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಕೇವಲ ಯುವಕರಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶವಿದ್ದಿತು. ಕ್ರೀಡಾಕೂಟವು ಮಾನವಶರೀರದ ಸಾಧನೆಯ ದ್ಯೋತಕವೆಂದು ಪರಿಗಣಿಸಲಾಗುತ್ತಿದ್ದುದರಿಂದ ಸ್ಪರ್ಧಾಳುಗಳು ನಗ್ನರಾಗಿಯೇ ಪಾಲ್ಗೊಳ್ಳುತ್ತಿದ್ದರು. ವಿಜಯೀ ಸ್ಪರ್ಧಾಳುಗಳಿಗೆ ಆಲಿವ್ ಎಲೆಗಳಿಂದ ಮಾಡಿದ ಕಿರೀಟವನ್ನು ಉಡುಗೊರೆಯಾಗಿ ನೀಡಲಾಗುತ್ತಿತ್ತು. ಪ್ರಾಚೀನ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಒಲಿಂಪಿಕ್ ಜ್ಯೋತಿಯಾಗಲೀ ಒಲಿಂಪಿಕ್ ವರ್ತುಲಗಳಾಗಲೀ ಬಳಕೆಯಲ್ಲಿರಲಿಲ್ಲ. ಇವು ಮುಂದೆ ಆಧುನಿಕ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಸೇರಿಕೊಂಡವು. ಪುನರುತ್ಥಾನ ಓರ್ವ ಸಿರಿವಂತ ಗ್ರೀಕ್ ದಾನಿ ಇವಾಂಜೆಲಾಸ್ ಝಪ್ಪಾಸನು ಪ್ರಥಮ ಆಧುನಿಕ ಅಂತರರಾಷ್ಟ್ರೀಯ ಒಲಿಂಪಿಕ್ ಕ್ರೀಡಾಕೂಟವನ್ನು ಪ್ರಾಯೋಜಿಸಿದನು. ೧೮೭೦ ಹಾಗೂ ೧೮೭೫ರಲ್ಲಿ ಒಲಿಂಪಿಕ್ ಕ್ರೀಡಾಕೂಟಗಳಿಗೆ ಬಳಸಲಾದ ಪಾನ್ ಅಥೀನಿಯನ್ ಕ್ರೀಡಾಂಗಣವನ್ನು ಈತನು ದುರಸ್ತಿಗೊಳಿಸಿದನು. ಅಲದೆ ಒಲಿಂಪಿಕ್ ಗ್ರಾಮವೊಂದನ್ನು ಸಹ ಇವನು ವ್ಯವಸ್ಥೆಗೊಳಿಸಿದನು. ಮುಂದೆ ಬ್ಯಾರನ್ ಪಿಯರಿ ದ ಕೂಬರ್ತಿಯು ೧೮೯೪ರಲ್ಲಿ ಪ್ಯಾರಿಸ್ ನಗರದಲ್ಲಿ ಜರಗಿದ ಸಮಾವೇಶವೊಂದರಲ್ಲಿ ಒಲಿಂಪಿಕ್ ಕ್ರೀಡಾಕೂಟವನ್ನು ಪುನರಾರಂಭಿಸುವುದರ ಬಗ್ಗೆ ತನ್ನ ಅಭಿಪ್ರಾಯಗಳನ್ನು ಮುಂದಿಕ್ಕಿದನು. ಈ ಸಮಾವೇಶದ ಕೊನೆಯಲ್ಲಿ ಪ್ರಥಮ ಆಧುನಿಕ ಒಲಿಂಪಿಕ್ ಕ್ರೀಡಾಕೂಟವನ್ನು ಅಥೆನ್ಸ್ ನಗರದಲ್ಲಿ ೧೮೯೬ರಲ್ಲಿ ನಡೆಸುವುದೆಂದು ನಿರ್ಣಯಿಸಲಾಯಿತು. ಇದನ್ನು ಆಯೋಜಿಸುವುದರ ಸಲುವಾಗಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯನ್ನು ಹುಟ್ಟುಹಾಕಲಾಯಿತು. ಗ್ರೀಸ್ ದೇಶದ ಡಿಮೆಟ್ರಿಯಸ್ ವಿಕೆಲಾಸ್ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಮೊಟ್ಟಮೊದಲ ಅಧ್ಯಕ್ಷನಾದನು. ಹೀಗೆ ಪ್ರಪ್ರಥಮ ಆಧುನಿಕ ಒಲಿಂಪಿಕ್ ಕ್ರೀಡಾಕೂಟ ಅಥೆನ್ಸ್ ನಗರದ ಪಾನ್ ಅಥೀನಿಯನ್ ಕ್ರೀಡಾಂಗಣದಲ್ಲಿ ೧೮೯೬ರಲ್ಲಿ ನಡೆಯಿತು. ಈ ಕೂಟದಲ್ಲಿ ಕೇವಲ ೧೪ ದೇಶಗಳ ೨೪೧ ಪುರುಷ ಕ್ರೀಡಾಳುಗಳು ಮಾತ್ರ ಪಾಲ್ಗೊಂಡಿದ್ದರು. ಆದರೆ ಆ ಕಾಲದ ಮಟ್ಟಿಗೆ ಇದು ಜಗತ್ತಿನ ಅತಿ ದೊಡ್ಡ ಅಂತರರಾಷ್ಟ್ರೀಯ ಕ್ರೀಡಾಕೂಟವೆಂದು ಪರಿಗಣಿಸಲ್ಪಟ್ಟಿತ್ತು. ನಾಲ್ಕು ವರ್ಷಗಳ ನಂತರ ೧೯೦೦ರಲ್ಲಿ ಪ್ಯಾರಿಸ್ ನಗರದಲ್ಲಿ ನಡೆದ ಕ್ರೀಡಾಕೂಟದಲ್ಲಿ ಮಹಿಳಾ ಕ್ರೀಡಾಪಟುಗಳೂ ಪಾಲ್ಗೊಂಡರು. ಹೀಗೆ ಸಣ್ಣ ಪ್ರಮಾಣದಲ್ಲಿ ಆರಂಭವಾದ ಒಲಿಂಪಿಕ್ ಕ್ರೀಡಾಕೂಟ ೨೦೦೪ರಲ್ಲಿ ಅಥೆನ್ಸ್ ನಲ್ಲಿ ನಡೆದ ಕೂಟದಲ್ಲಿ ೨೦೨ ರಾಷ್ಟ್ರಗಳ ಸುಮಾರು ೧೧೦೦೦ ಕ್ರೀಡಾಳುಗಳು ಪಾಲ್ಗೊಳ್ಳುವ ಮಟ್ಟಿಗೆ ಬೆಳೆಯಿತು. ಬಹಿಷ್ಕಾರಗಳು ಖೇದದ ಸಂಗತಿಯೆಂದರೆ ಮಾನವಭ್ರಾತೃವ್ಯದ ಸಂಕೇತವಾದ ಒಲಿಂಪಿಕ್ ಕ್ರೀಡಾಕೂಟಗಳು ಕೂಡಾ ರಾಜಕೀಯದಿಂದ ಹೊರಗುಳಿಯಲಿಲ್ಲ. ವಿವಿಧ ರಾಜಕೀಯ ಕಾರಣಗಳಿಂದಾಗಿ ಈವರೆವಿಗೆ ಹಲವು ಒಲಿಂಪಿಕ್ ಕ್ರೀಡಾಕೂಟಗಳು ನಾನಾ ದೇಶಗಳಿಂದ ಬಹಿಷ್ಕರಿಸಲ್ಪಟ್ಟವು. ೧೯೫೬ರ ಮೆಲ್ಬರ್ನ್ ಕೂಟ , ೧೯೭೨ರ ಮ್ಯೂನಿಖ್ ಕೂಟ , ೧೯೭೬ರ ಮಾಂಟ್ರಿಯಲ್ ಕ್ರೀಡಾಕೂಟ, ೧೯೮೦ರ ಮಾಸ್ಕೋ ಕೂಟ ಮತ್ತು ೧೯೮೪ರ ಲಾಸ್ ಎಂಜಲಿಸ್ ಒಲಿಂಪಿಕ್ ಕ್ರೀಡಾಕೂಟಗಳು ಈ ರೀತಿಯ ಬಹಿಷ್ಕಾರದ ಕಹಿಯನ್ನು ಅನುಭವಿಸಿದವು. ಉದ್ದೀಪನವಸ್ತುಗಳ ದುರುಪಯೋಗ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಜಯ ಸಾಧಿಸುವುದು ಒಂದು ಭಾರೀ ಪ್ರತಿಷ್ಠೆಯ ಸಂಗತಿ. ಹೀಗಾಗಿ ನಾನಾ ದೇಶಗಳ ಹಲವಷ್ಟು ಕ್ರೀಡಾಳುಗಳು ಒಲಿಂಪಿಕ್ ಕ್ರೀಡಾಕೂಟದಲ್ಲಿ ಗೆಲ್ಲಲು ಅಡ್ಡದಾರಿಗಳನ್ನು ಬಳಸುವರು. ಇವುಗಳಲ್ಲಿ ಉದ್ದೀಪನವಸ್ತುಗಳ ಬಳಕೆ ಇಂದು ಒಲಿಂಪಿಕ್ಸ್ ಗೆ ಒಂದು ದೊಡ್ಡ ಸವಾಲೆನಿಸಿದೆ. ಇತ್ತೀಚಿನ ವರ್ಷಗಳಲ್ಲಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಸಹ ಉದ್ದೀಪನವಸ್ತುಗಳ ಬಳಕೆ ನಡೆಯುತ್ತಲೇ ಇದೆ. ೧೯೮೮ರ ಸಿಯೋಲ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕೆನಡದ ಬೆನ್ ಜಾನ್ಸನ್ ಪುರುಷರ ೧೦೦ ಮೀ. ಓಟದಲ್ಲಿ ವಿಶ್ವದಾಖಲೆಯೊಂದಿಗೆ ಸ್ವರ್ಣಪದಕವನ್ನು ಗೆದ್ದನು. ನಂತರ ಈತನು ಉದ್ದೀಪನವಸ್ತುಗಳನ್ನು ಬಳಸಿದುದು ಪರೀಕ್ಷೆಯಲ್ಲಿ ಸ್ಥಾಪಿತವಾಗಿ ಆತನ ಸ್ವರ್ಣಪದಕವನ್ನು ಹಿಂಪಡೆದುಕೊಂಡು ಆತನನ್ನು ಕ್ರೀಡಾಸ್ಪರ್ಧೆಗಳಿಂದ ನಿಷೇಧಿಸಲಾಯಿತು. ವಿಷಾದದ ಸಂಗತಿಯೆಂದರೆ ಭಾರತದ ಕ್ರೀಡಾಪಟುಗಳೂ ಈ ವಿಷಯದಲ್ಲಿ ಶುದ್ಧರಾಗಿಲ್ಲದಿರುವುದು. ಹಿಂಸಾಚಾರಗಳು ಈವರೆವಿಗೆ ಹಲವು ಒಲಿಂಪಿಕ್ ಕ್ರೀಡಾಕೂಟಗಳು ಹಿಂಸಾಚಾರವನ್ನು ಕಂಡಿವೆ. ಅಮಾನವೀಯ ಘಟನೆಯೊಂದು ೧೯೭೨ರ ಮ್ಯೂನಿಖ್ ಕ್ರೀಡಾಕೂಟದಲ್ಲಿ ಸಂಭವಿಸಿತು. ಇಸ್ರೇಲ್ ದೇಶದ ೧೧ ಕ್ರೀಡಾಳುಗಳನ್ನು ಪ್ಯಾಲೆಸ್ಟಿನ್ ಉಗ್ರಗಾಮಿಗಳು ಒತ್ತೆಯಾಳುಗಳಾಗಿರಿಸಿಕೊಂಡರು. ಇವರನ್ನು ಬಿಡಿಸಿಕೊಳ್ಳಲು ನಡೆಸಲಾದ ವಿಫಲ ಕಾರ್ಯಾಚರಣೆಯಲ್ಲಿ ೯ ಮಂದಿ ಕ್ರೀಡಾಳುಗಳೂ ಸೇರಿದಂತೆ ಒಟ್ಟು ೧೫ ಮಂದಿ ಸಾವನ್ನಪ್ಪಿದರು. ೧೯೯೬ರ ಅಟ್ಲಾಂಟ ಕೂಟದಲ್ಲಿ ಸಂಭವಿಸಿದ ಬಾಂಬ್ ಸ್ಫೋಟವೊಂದರಲ್ಲಿ ಇಬ್ಬರು ಮರಣಿಸಿದರು. ಟೀಕೆಗಳು ಗಮನಿಸಬೇಕಾದ ಸಂಗತಿಯೆಂದರೆ ಈವರೆವಿಗೆನ ಹೆಚ್ಚಿನ ಒಲಿಂಪಿಕ್ ಕ್ರೀಡಾಕೂಟಗಳು ಉತ್ತರ ಅಮೆರಿಕ ಅಥವಾ ಯುರೋಪ್ ನಲ್ಲಿಯೇ ಆಯೋಜಿಸಲ್ಪಟ್ಟಿವೆ. ಕೇವಲ ಕೆಲವು ಬಾರಿ ಮಾತ್ರ ವಿಶ್ವದ ಇತರ ಭಾಗಗಳಿಗೆ ಒಲಿಂಪಿಕ್ ಕ್ರೀಡಾಕೂಟವನ್ನು ನಡೆಸುವ ಅವಕಾಶ ಒದಗಿದೆ. ದಕ್ಷಿಣ ಅಮೆರಿಕ ಮತ್ತು ಆಫ್ರಿಕಾ ಖಂಡಗಳಲ್ಲಿ ಇದುವರೆಗೆ ಒಂದು ಬಾರಿಯೂ ಒಲಿಂಪಿಕ್ ಕ್ರೀಡಾಕೂಟವನ್ನು ನಡೆಸಲಾಗಿಲ್ಲ. ಹೀಗಾಗಿ ಒಲಿಂಪಿಕ್ ಕ್ರೀಡಾಕೂಟಗಳು ಕೇವಲ ಉಳ್ಳವರ ಪ್ರತಿಷ್ಠೆ ಮೆರೆಸುವ ಸಲುವಾಗಿಯೇ ಇವೆ ಎಂಬ ಟೀಕೆ ಸಾಕಷ್ಟು ವ್ಯಾಪಕವಾಗಿದೆ. ಒಲಿಂಪಿಕ್ ಧ್ವಜ ಒಂದಕ್ಕೊಂದು ಹೆಣೆದುಕೊಂಡಿರುವ ಐದು ವರ್ತುಲಗಳು ಒಲಿಂಪಿಕ್ ಚಿಹ್ನೆ. ಈ ಐದು ವರ್ತುಲಗಳು ಪ್ರಪಂಚದ ಐದು ಜನವಸತಿಯುಳ್ಳ ಭೂಖಂಡಗಳನ್ನು ಪ್ರತಿನಿಧಿಸುತ್ತವೆ. ( ಉತ್ತರ ಹಾಗೂ ದಕ್ಷಿಣ ಅಮೆರಿಕ ಖಂಡಗಳನ್ನು ಒಂದಾಗಿ ಪರಿಗಣಿಸಲಾಗಿದೆ). ಶ್ವೇತವರ್ಣದ ಒಲಿಂಪಿಕ್ ಧ್ವಜದಲ್ಲಿ ಈ ೫ ವರ್ತುಲಗಳು ೫ ವರ್ಣಗಳಲ್ಲಿ ಗೋಚರಿಸುತ್ತವೆ. ಕೆಂಪು,ನೀಲಿ,ಹಸಿರು,ಹಳದಿ ಹಾಗೂ ಕಪ್ಪು ಇವೇ ಆ ಐದು ವರ್ಣಗಳು.https://www.quora.com/What-do-the-colors-on-the-Olympics-symbol-mean ಅತಿ ವಿಶಿಷ್ಟ ಸಂಗತಿಯೆಂದರೆ ವಿಶ್ವದ ಪ್ರತಿಯೊಂದು ರಾ9ಷ್ಟ್ರದ ಧ್ವಜದಲ್ಲಿ ಈ ಆರು ವರ್ಣಗಳಲ್ಲಿ ( ಮೇಲಿನ ೫ ಮತ್ತು ಧ್ವಜದ ಬಿಳಿ ವರ್ಣ) ಕನಿಷ್ಠ ಒಂದಾದರೂ ಇದ್ದೇ ಇದೆ. ಒಲಿಂಪಿಕ್ ಧ್ಯೇಯ ಲ್ಯಾಟಿನ್ ಭಾಷೆಯ " ಸಿಟಿಯಸ್ , ಆಲ್ಟಿಯಸ್ , ಫೋರ್ಟಿಯಸ್ " ಅಂದರೆ "ಕ್ಷಿಪ್ರವಾಗಿ , ಎತ್ತರಕ್ಕೆ ಹಾಗೂ ಬಲಿಷ್ಠ" ಎಂಬುದೇ ಒಲಿಂಪಿಕ್ ಧ್ಯೇಯ. ಮೊದಮೊದಲು ಸ್ಪರ್ಧೆಗಳು ಓಟ, ಜಿಗಿತ ಮತ್ತು ಭಾರ ಎತ್ತುವಿಕೆ ಅಥವಾ ಭಾರ ಎಸೆಯುವಿಕೆಗೇ ಸೀಮಿತವಾಗಿದ್ದುದರಿಂದ ಈ ಧ್ಯೇಯ ರಚಿತವಾಯಿತು. ಕೂಬರ್ತಿಯ ಪ್ರಕಾರ " ಹೇಗೆ ಜೀವನದಲ್ಲಿ ಹೋರಾಡುವುದು ಮುಖ್ಯವೇ ಹೊರತು ಜಯಿಸುವುದಲ್ಲವೋ ಹಾಗೆಯೇ ಒಲಿಂಪಿಕ್ಸ್ ನ ಅತಿಮುಖ್ಯ ಸಂಗತಿಯೆಂದರೆ ಪಾಲ್ಗೊಳ್ಳುವುದೇ ವಿನಹ ಗೆಲ್ಲುವುದಲ್ಲ. ಅವಶ್ಯ ವಿಚಾರವೆಂದರೆ ಉತ್ತಮವಾಗಿ ಹೋರಾಡುವುದು. ವಿಜಯ ಸಾಧಿಸುವುದೇ ಗುರಿ ಅಲ್ಲ." ಒಲಿಂಪಿಕ್ ಕ್ರೀಡಾಕೂಟ ಅತೀಥೆಯ ನಗರಗಳು ಗಮನಿಸಿ : ಈ ಪಟ್ಟಿಯು ಅಪೂರ್ಣ, ಮುಂದೆ ಇದನ್ನು ಸರಿಪಡಿಸಲಾಗುವುದು ಒಲಿಂಪಿಕ್ ಜ್ಯೋತಿ ಈಚಿನ ವರ್ಷಗಳಲ್ಲಿ ಒಲಿಂಪಿಕ್ ಜ್ಯೋತಿಯ ಶ್ರೇಷ್ಠ ಪರಂಪರೆಯೊಂದು ಆರಂಭವಾಗಿದೆ. ಪ್ರತಿ ಒಲಿಂಪಿಕ್ ಕ್ರೀಡಾಕೂಟದ ಕೆಲ ಸಮಯದ ಮುನ್ನ ಗ್ರೀಸ್ ದೇಶದ ಒಲಿಂಪಿಯಾದಲ್ಲಿ ಮಸೂರ ಮತ್ತು ಸೂರ್ಯಕಿರಣಗಳ ಸಹಾಯದಿಂದ ದೊಂದಿಯೊಂದನ್ನು ಹಚ್ಚಲಾಗುವುದು. ಇದೇ ಒಲಿಂಪಿಕ್ ಜ್ಯೋತಿ. ಈ ಒಲಿಂಪಿಕ್ ಜ್ಯೋತಿಯನ್ನು ಒಲಿಂಪಿಕ್ ಕ್ರೀಡಾಕೂಟದ ಆತಿಥೇಯ ನಗರದವರೆಗೆ ಭೂಮಿಯ ಬಹುತೇಕ ರಾಷ್ಟ್ರಗಳ ಮೂಲಕ ಹಾಯಿಸಿ ಕೊಂಡೊಯ್ಯಲಾಗುವುದು. ಪ್ರತಿ ರಾಷ್ಟ್ರದ ಮೂಲಕ ಹಾದುಹೋಗುವಾಗ ಆಯಾ ದೇಶದ ಪ್ರಮುಖ ಕ್ರೀಡಾಪಟುಗಳು ಮತ್ತು ಇತರ ಗಣ್ಯರು ರಿಲೇ ಓಟದ ಮೂಲಕ ಜ್ಯೋತಿಯನ್ನು ಸಾಗಿಸುವರು. ಇದರಲ್ಲಿ ಪಾಲ್ಗೊಳ್ಳುವುದು ಒಂದು ಗೌರವದ ಹಾಗೂ ಪ್ರತಿಷ್ಠೆಯ ಸಂಗತಿ. ನಂತರ ಕೂಟದ ಉಧ್ಘಾಟನಾ ಸಮಾರಂಭದಲ್ಲಿ ಮುಖ್ಯ ಕ್ರೀಡಾಂಗಣದಲ್ಲಿ ಒಂದು ದೊಡ್ಡ ಜ್ಯೋತಿಯನ್ನು ಬೆಳಗಲು ಈ ದೊಂದಿಯನ್ನು ಬಳಸಲಾಗುವುದು. ಈ ಮುಖ್ಯ ಜ್ಯೋತಿಯು ಕ್ರೀಡಾಕೂಟವು ಮುಗಿಯವರೆಗೂ ಅವಿರತವಾಗಿ ಬೆಳಗುತ್ತಲೇ ಇರುವುದು. ಒಲಿಂಪಿಕ್ ಕ್ರೀಡಾಕೂಟದ ಮುಕ್ತಾಯ ಸಮಾರಂಭದಲ್ಲಿ ಇದನ್ನು ನಂದಿಸಲಾಗುವುದು. ಸರ್ವ ಶ್ರೇಷ್ಠ ಪ್ರದರ್ಷನ The IOC does not keep an official record of individual medal counts, though unofficial medal tallies abound. These provide one method of determining the most successful Olympic athletes of the modern era. Below are the top ten individual medal winners of the modern Olympics (the gender of the athlete is denoted in the "Sport" column): ಇದನ್ನೂ ನೋಡಿ ಒಲಂಪಿಕ್ - ಕ್ರೀಡೆಗಳು ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ವಿವಿಧ ರಾಷ್ಟ್ರಗಳ ಸಾಧನೆ ಉಲ್ಲೇಖ ಕ್ರೀಡೆ
3604
https://kn.wikipedia.org/wiki/%E0%B2%B8%E0%B2%A4%E0%B3%8D%E0%B2%AF%E0%B3%87%E0%B2%82%E0%B2%A6%E0%B3%8D%E0%B2%B0%E0%B2%A8%E0%B2%BE%E0%B2%A5%20%E0%B2%AC%E0%B3%8B%E0%B2%B8%E0%B3%8D
ಸತ್ಯೇಂದ್ರನಾಥ ಬೋಸ್
ಸತ್ಯೇಂದ್ರನಾಥ ಬೋಸ್ (ಜನವರಿ ೧,೧೮೯೪ - ಫೆಬ್ರವರಿ ೪,೧೯೭೪) ಭಾರತದ ಬಂಗಾಳಿ ಭೌತವಿಜ್ಞಾನಿ. ಜನನ ಸತ್ಯೇಂದ್ರನಾಥ್ ಬೋಸ್ ಜನನ ಕಲ್ಕತ್ತಾದಲ್ಲಿ.ತಂದೆ ಸುರೇಂದ್ರನಾಥ್ ರೈಲ್ವೆ ಇಲಾಖೆಯ ಉದ್ಯೋಗಿ.ತಾಯಿ ಆಮೋದಿನೀ ದೇವಿ.ಚಿಕ್ಕಂದಿನಿಂದಲೂ ಗಣಿತಶಾಸ್ತ್ರದಲ್ಲಿ ಅಪಾರವಾದ ಆಸಕ್ತಿ. ವಿದ್ಯಾಭ್ಯಾಸ,ಉದ್ಯೋಗ ಕಲ್ಕತ್ತೆಯ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿ,೧೯೧೫ರಲ್ಲಿ ಎಂಎಸ್ಸಿ ಪದವಿ ಪಡೆದರು.೧೯೧೬ರಿಂದ ೧೯೨೧ರವರೆಗೂ ಕಲ್ಕತ್ತ ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರದ ಅಧ್ಯಾಪಕರಾಗಿ ಕೆಲಸ ಮಾಡಿದರು.ಮುಂದೆ ಢಾಕಾ ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿ ೨೫ ವರ್ಷಗಳ ಕಾಲ ಸೇವೆ ಸಲ್ಲಿಸಿದರು.೧೯೪೫ರಿಂದ ಕಲ್ಕತ್ತಾ ವಿಶ್ವವಿದ್ಯಾನಿಲಯದ ಪ್ರಾದ್ಯಾಪಕರಾಗಿ ೧೧ ವರ್ಷ ಕೆಲಸ ಮಾಡಿದರು. ಸಂಶೋಧನೆ,ಸಾಧನೆ ಬೋಸರು ಪ್ಲ್ಯಾಂಕನ ನಿಯಮ ಮತ್ತು ಲೈಟ್ ಕ್ವಾಂಟಮ್ ತತ್ವ ಕುರಿತು ಬರೆದ ಲೇಖನವನ್ನು ಪ್ರಸಿದ್ಧ ವಿಜ್ಞಾನಿ ಐನ್‌ಸ್ಟೀನರು ಮೆಚ್ಚಿಕೊಂಡು ಅದನ್ನು ಜರ್ಮನ್ ಭಾಷೆಗ ಅನುವಾದಿಸಿದರು.ಬೋಸರು ಪ್ಯಾರಿಸ್‌ಗೆ ಹೋದಾಗ ಮೇಡಮ್ ಕ್ಯೂರಿಯವರ ಪ್ರಯೋಗಶಾಲೆಯಲ್ಲಿ ಪ್ರಯೋಗಗಳನ್ನು ನಡೆಸಿದರು.ಬರ್ಲಿನ್‌ನಲ್ಲಿ ಐನ್‌ಸ್ಟೀನ್‌ರೊಡನೆ ಕೆಲಸ ಮಾಡಿದರು. ಆಗ ಸಂಶೋಧನೆಗಳಿಗೆ ಭಾರತದಲ್ಲಿ ಹೆಚ್ಚು ಪ್ರೋತ್ಸಾಹವಿಲ್ಲದಿದ್ದರೂ ಐನ್‌ಸ್ಟೀನರ ಸಾಪೇಕ್ಷ ಸಿದ್ಧಾಂತದ ಸಹಾಯದಿಂದ ಅನಿಲಗಳ ಒತ್ತಡ, ಘನ ಅಳತೆ,ಉಷ್ಣತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಂಶೋಧನೆ ನಡೆಸಿದರು. ರೇಖಾಗಣಿತದ ಕೆಲವು ಹೊಸ ಪ್ರಮೇಯಗಳನ್ನು ರೂಪಿಸಿದರು. ಸಂಖ್ಯಾಶಾಸ್ತ್ರದಲ್ಲಿ ಪ್ರತಿಭಾವಂತರಾಗಿದ್ದ ಅವರ ವಿವರಣೆಗಳಿಂದ ಕ್ವಾಂಟಮ್ ಸಂಖ್ಯಾಶಾಸ್ತ್ರ ಅರ್ಥಮಾಡಿಕೊಳ್ಳಲು ಸುಲಭವಾಯಿತು. ಇತರ ಆಸಕ್ತಿ ಬೋಸರ ಆಸಕ್ತಿ, ಭೌತಶಾಸ್ತ್ರಕ್ಕೆ ಮಾತ್ರ ಸೀಮಿತವಾಗಿರದೆ,ಭೂಗರ್ಭವಿಜ್ಞಾನ,ಪ್ರಾಣಿಶಾಸ್ತ್ರ,ರಸಾಯನಶಾಸ್ತ್ರಗಳಿಗೂ ವಿಸ್ತರಿಸಿತ್ತು.ಸಮಾಜ ಸೇವೆಯಲ್ಲೂ ಒಲವಿತ್ತು.ಸಂಗೀತ,ಸಾಹಿತ್ಯದಲ್ಲೂ ಆಸಕ್ತಿ.ತಂತುವಾದ್ಯವನ್ನು ನುಡಿಸುತ್ತಿದ್ದರು.ಬಂಗಾಳಿ,ಇಂಗ್ಲಿಷ್,ಫ್ರೆಂಚ್,ಜರ್ಮನ್ ಭಾಷೆಗಳನ್ನು ಕಲಿತಿದ್ದರು. ೧೯೫೦ರಲ್ಲಿ ರಾಜ್ಯಸಭಾ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು. ಪ್ರಶಸ್ತಿ,ಸನ್ಮಾನ ೧೯೬೪ರಲ್ಲಿ ದೆಹಲಿ ವಿಶ್ವವಿದ್ಯಾನಿಲಯ ಡಿಎಸ್ಸಿ ಪ್ರಶಸ್ತಿ ನೀಡಿತು. ೧೯೭೪ ಜನವರಿಯಲ್ಲಿ ಕ್ವಾಂಟಮ್ ಸಂಖ್ಯಾಶಾಸ್ತ್ರದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಬೋಸರನ್ನು ಸನ್ಮಾನಿಸಲಾಯಿತು. ಉಲ್ಲೇಖಗಳು ಭಾರತದ ವಿಜ್ಞಾನಿಗಳು
3605
https://kn.wikipedia.org/wiki/%E0%B2%AE%E0%B3%87%E0%B2%98%E0%B2%A8%E0%B2%BE%E0%B2%A6%20%E0%B2%B8%E0%B2%BE%E0%B2%B9
ಮೇಘನಾದ ಸಾಹ
ಮೇಘನಾದ ಸಾಹ ಭಾರತದ ಖ್ಯಾತ ವಿಜ್ಞಾನಿಗಳಲ್ಲಿ ಒಬ್ಬರು. ಹಿನ್ನೆಲೆ ಅಕ್ಟೋಬರ್ ೬,೧೮೯೩ರಲ್ಲಿ ಬಂಗಾಲದ ಢಾಕಾಜಿಲ್ಲೆಯ ಶಿಯೋರಟೋಲಿ ಎಂಬ ಹಳ್ಳಿಯಲ್ಲಿ ಜನಿಸಿದರು.ಬಡ ಕುಟುಂಬದಲ್ಲಿ ಜನಿಸಿದ, ಅಸಾಧಾರಣ ಬುದ್ಧಿವಂತರಾದ ಅವರಿಗೆ ಮಾಧ್ಯಮಿಕ ಶಾಲೆಯಲ್ಲೇ ವಿದ್ಯಾರ್ಥಿ ವೇತನವೂ ದೊರೆತು,೧೯೦೯ರಲ್ಲಿ ಎಂಟ್ರೆನ್ಸ್ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.ಕಲ್ಕತ್ತೆಯ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ,ಕಲ್ಕತ್ತಾ ವಿಶ್ವವಿದ್ಯಾನಿಲಯದಲ್ಲಿ ಭೌತವಿಜ್ಞಾನದ ಅಧ್ಯಾಪಕರಾದರು. ಸಾಧನೆ ಮೇಘನಾದ ಸಾಹ ಬೆಳಕಿನ ಒತ್ತಡವನ್ನು ಅಳೆಯುವ ಸೂಕ್ಷ್ಮ ಉಪಕರಣವನ್ನು ಸೃಷ್ಟಿಸಿದರು.ವಿಜ್ಞಾನಿ ಐನ್ ಸ್ಟೀನ್ ರವರ 'ಬೆಳಕಿಗೂ ಭಾರವಿದೆ'ಎಂಬ ವಿಷಯವನ್ನು ಪ್ರಯೋಗಗಳಿಂದ ದೃಢೀಕರಿಸಿದರು.ನಕ್ಷತ್ರಗಳಲ್ಲಿರುವ ವಸ್ತುವನ್ನು ಪತ್ತೆ ಹಚ್ಚಲು 'ಸೂರ್ಯನ ಶಾಖಕ್ಕೆ ಪರಮಾಣುಗಳು ಒಡೆಯುತ್ತವೆ'ಎಂಬ ತತ್ವವನ್ನು ತಮ್ಮ ೨೭ನೇ ವಯಸ್ಸಿನಲ್ಲೇ ಪ್ರಯೋಗ ಮಾಡಿ ತೋರಿಸಿದರು. ತಮ್ಮ ಸಾಧನೆಗಳಿಂದಾಗಿ ಯೂರೋಪು,ಜರ್ಮನಿಗೆ ಹೋಗಿ ಬಂದರು.ಅಲಹಾಬಾದಿನಲ್ಲಿ ರೇಡಿಯೋ ತರಂಗಗಳ ಬಗ್ಗೆ ಅಧ್ಯಯನ ನಡೆಸಿದರು.ನ್ಯೂಕ್ಲಿಯರ್ ಭೌತವಿಜ್ಞಾನ ಹಾಗೂ ಜೀವ ಭೌತವಿಜ್ಞಾನದಲ್ಲಿ ಸಂಶೋಧನೆ ನಡೆಸಲು ೧೯೫೦ರಲ್ಲಿ ಕಲ್ಕತ್ತಾದಲ್ಲಿ 'ಸಾಹ ಇನ್ ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಫಿಸಿಕ್ಸ್'ಎಂಬ ಸಂಸ್ಥೆ ಸ್ಥಾಪನೆಯಾಯಿತು.ವೈಜ್ಞಾನಿಕ ವಿಷಯಗಳ ತಿಳಿವಳಿಕೆಗಾಗಿ 'ಸೈನ್ಸ್ ಅಂಡ್ ಕಲ್ಚರ್'ಎಂಬ ಪತ್ರಿಕೆಯನ್ನು ನಡೆಸಿದರು. ಮೇಘನಾದ ಸಾಹ ಅವರಿಗೆ ವಿಜ್ಞಾನವಲ್ಲದೆ ಹಿಂದೂಧರ್ಮ,ಇತಿಹಾಸ,ಸಂಸ್ಕೃತಿಗಳಲ್ಲಿ ಅಪಾರವಾದ ಆಸಕ್ತಿ ಇತ್ತು.೧೯೫೧ರಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.೧೯೫೬ರ ಫೆಬ್ರುವರಿ ೬ರಂದು ದೆಹಲಿಯ ಸಂಸತ್ ಭವನಕ್ಕೆ ನಡೆದು ಬರುತ್ತಿದ್ದಾಗಲೇ ಕುಸಿದು ಬಿದ್ದು ತೀರಿಕೊಂಡರು. ಭಾರತದ ವಿಜ್ಞಾನಿಗಳು
3606
https://kn.wikipedia.org/wiki/%E0%B2%B9%E0%B3%8B%E0%B2%AE%E0%B2%BF%20%E0%B2%9C%E0%B2%B9%E0%B2%82%E0%B2%97%E0%B3%80%E0%B2%B0%E0%B3%8D%20%E0%B2%AD%E0%B2%BE%E0%B2%AC%E0%B2%BE
ಹೋಮಿ ಜಹಂಗೀರ್ ಭಾಬಾ
ಹೋಮಿ ಜಹಂಗೀರ್ ಭಾಭಾ (ಅಕ್ಟೋಬರ್ ೩೦ ೧೯೦೯ – ಜನವರಿ ೨೪ ೧೯೬೬) ಫಾರ್ಸಿ ಮೂಲದ ಭಾರತೀಯ ಭೌತವಿಜ್ಞಾನಿ. ಭಾರತದ ಅಣುಶಕ್ತಿ ಕಾರ್ಯಕ್ರಮದ ಸ್ಥಾಪನೆ ಹಾಗು ಬೆಳವಣಗೆಯಲ್ಲಿ ಪ್ರಮುಖ ಪಾತ್ರವನ್ನು ಇವರು ವಹಿಸಿದರು. ಇವರು ಸಂಸ್ಥಾಪಕ ನಿರ್ದೇಶಕರಾಗಿ ಭಾರತೀಯ ಪರಮಾಣು ಭೌತಶಾಸ್ತ್ರಜ್ಞರಾಗಿದ್ದರು ಮತ್ತು ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ನಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. "ಭಾರತೀಯ ಪರಮಾಣು ಕಾರ್ಯಕ್ರಮದ ತಂದೆ" ಎಂದು ಆಡುಮಾತಿನಲ್ಲಿ ಹೇಳಲಾಗುತ್ತದೆ, ಭಾಭಾ ಅಟೋಮಿಕ್ ಎನರ್ಜಿ ಎಸ್ಟಾಬ್ಲಿಷ್ಮೆಂಟ್, ಟ್ರೊಂಬೆ (ಎಇಇಟಿ) ಸಂಸ್ಥಾಪಕ ನಿರ್ದೇಶಕರಾಗಿದ್ದರು, ಇದೀಗ ಅವರ ಗೌರವಾರ್ಥ ಭಾಭಾ ಆಟೋಮಿಕ್ ಸಂಶೋಧನಾ ಕೇಂದ್ರ ಎಂದು ಹೆಸರಿಸಲ್ಪಟ್ಟಿದೆ. ಟಿ,ಐ,ಫ಼್,ರ್ ಮತ್ತು ಎ.ಇ.ಇ.ಟಿ ಭಾರತೀಯ ಪರಮಾಣು ಶಸ್ತ್ರಾಸ್ತ್ರಗಳ ಅಭಿವೃದ್ಧಿಯ ಮೂಲಾಧಾರವಾಗಿದೆ, ಇದು ಭಾಭಾ ನಿರ್ದೇಶಕರಾಗಿ ಮೇಲ್ವಿಚಾರಣೆ ನಡೆಸಿತು. ಆರಂಭಿಕ ಜೀವನ ಹೋಮಿ ಜಹಾಂಗೀರ್ ಭಾಭಾ ಶ್ರೀಮಂತ ಮತ್ತು ಪ್ರಮುಖ ಕೈಗಾರಿಕಾ ಕುಟುಂಬದಲ್ಲಿ ೧೯೦೯ ರ ಅಕ್ಟೋಬರ್ ೩೦ ರಂದು ಜನಿಸಿದರು, ಈ ಮೂಲಕ ಅವರು ಉದ್ಯಮಿಗಳು ದಿನ್ಶಾ ಮನೆಕ್ಜಿ ಪೆಟಿಟ್ ಮತ್ತು ಡೊರಾಬ್ಜಿ ಟಾಟಾಗೆ ಸಂಬಂಧಿಸಿರುತ್ತಿದ್ದರು. ಅವರ ತಂದೆ ಜಹಾಂಗೀರ್ ಹೋಮುಸ್ಜಿ ಭಾಭಾ, ಒಬ್ಬ ಪ್ರಸಿದ್ಧ ಪಾರ್ಸಿ ವಕೀಲ ಮತ್ತು ಅವನ ತಾಯಿ ಮೆಹರೆನ್. ಬಾಂಬೆಯ ಕ್ಯಾಥೆಡ್ರಲ್ ಮತ್ತು ಜಾನ್ ಕಾನನ್ ಶಾಲೆಯಲ್ಲಿ ಅವರು ತಮ್ಮ ಆರಂಭಿಕ ಅಧ್ಯಯನವನ್ನು ಸ್ವೀಕರಿಸಿದರು ಮತ್ತು ೧೫ ನೇ ವಯಸ್ಸಿನಲ್ಲಿ ತಮ್ಮ ಹಿರಿಯ ಕೇಂಬ್ರಿಡ್ಜ್ ಪರೀಕ್ಷೆಯನ್ನು ಗೌರವಗಳೊಂದಿಗೆ ಹಾದುಹೋದ ನಂತರ ಎಲ್ಫಿನ್ಸ್ಟೋನ್ ಕಾಲೇಜಿ ಗೆ ಪ್ರವೇಶಿಸಿದರು. ನಂತರ ಅವರು ರಾಯಲ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಗೆ ೧೯೨೭ ರವರೆಗೆ ಕೇಂಬ್ರಿಜ್ ವಿಶ್ವವಿದ್ಯಾನಿಲಯದ ಸೈಯಸ್ ಕಾಲೇಜಿ ಗೆ ಸೇರಿಕೊಂಡರು. ಕೇಂಬ್ರಿಜ್ನಿಂದ ಮೆಕಾನಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದು ಭಾರತಕ್ಕೆ ಹಿಂತಿರುಗಲು ಭಾಭಾಗೆ ಯೋಜನೆ ಹಾಕಿದ ಅವರ ತಂದೆ ಮತ್ತು ಅವರ ಚಿಕ್ಕಪ್ಪ ಡೊರಬ್ ಟಾಟಾ ಅವರ ಒತ್ತಾಯದಿಂದಾಗಿ ಅವರು ಟಾಟಾ ಸ್ಟೀಲ್ ಅಥವಾ ಟಾಟಾ ಸ್ಟೀಲ್ ಮಿಲ್ಸ್ ಜಮ್ಶೆಡ್ಪುರ ನಲ್ಲಿ ಲೋಹವಿಜ್ಞಾನಿಯಾಗಿ ಸೇರುತ್ತಾರೆ. ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮತ್ತು ಸಂಶೋಧನೆ ಭಾಭಾ ಅವರ ತಂದೆ ತನ್ನ ಮಗನ ಸಂಕಟವನ್ನು ಅರ್ಥಮಾಡಿಕೊಂಡನು ಮತ್ತು ಗಣಿತಶಾಸ್ತ್ರದಲ್ಲಿ ತನ್ನ ಅಧ್ಯಯನಗಳಿಗೆ ಹಣಕಾಸು ನೀಡಲು ಅವನು ತನ್ನ ಮೆಕ್ಯಾನಿಕಲ್ ಸೈನ್ಸಸ್ ಟ್ರೈಪಸ್ ಪರೀಕ್ಷೆಯಲ್ಲಿ ಪ್ರಥಮ ದರ್ಜೆ ಪಡೆಯುವಲ್ಲಿ ಒಪ್ಪಿಕೊಂಡರು. ಭಾಬಾ ಅವರು ಜೂನ್ ೧೯೩೦ ರಲ್ಲಿ ಟ್ರಿಪೊಸ್ ಪರೀಕ್ಷೆಯನ್ನು ಪಡೆದರು ಮತ್ತು ಮೊದಲ ದರ್ಜೆಗೆ ವರ್ಗಾಯಿಸಿದರು. ಆನಂತರ, ಮ್ಯಾಥಮ್ಯಾಟಿಕ್ಸ್ ಟ್ರೈಪೊಸ್ ಅನ್ನು ಪೂರ್ಣಗೊಳಿಸಲು ಪಾಲ್ ಡಿರಾಕ್ ಅವರ ಗಣಿತಶಾಸ್ತ್ರದ ಅಧ್ಯಯನದಲ್ಲಿ ಅವರು ಉತ್ಕೃಷ್ಟರಾಗಿದ್ದರು. ಅವರು ಸೈದ್ಧಾಂತಿಕ ಭೌತಶಾಸ್ತ್ರದಲ್ಲಿ ತಮ್ಮ ಡಾಕ್ಟರೇಟ್ ಕಡೆಗೆ ಕೆಲಸ ಮಾಡುವಾಗ ಕ್ಯಾವೆಂಡಿಷ್ ಪ್ರಯೋಗಾಲಯದಲ್ಲಿ ಕೆಲಸ ಮಾಡಿದರು. ಆ ಸಮಯದಲ್ಲಿ, ಪ್ರಯೋಗಾಲಯವು ಹಲವಾರು ವೈಜ್ಞಾನಿಕ ಪ್ರಗತಿಗಳ ಕೇಂದ್ರವಾಗಿತ್ತು. ಜೇಮ್ಸ್ ಚಾಡ್ವಿಕ್ ನ್ಯೂಟ್ರಾನ್, ಜಾನ್ ಕಾಕ್ಕ್ರಾಫ್ಟ್ ಮತ್ತು ಅರ್ನೆಸ್ಟ್ ವಾಲ್ಟನ್ ಲಿಥಿಯಮ್ ಅನ್ನು ಉನ್ನತ ಶಕ್ತಿಯ ಪ್ರೋಟಾನ್ ಗಳೊಂದಿಗೆ ಪರಿವರ್ತಿಸಿದರು ಮತ್ತು ಪ್ಯಾಟ್ರಿಕ್ ಬ್ಲ್ಯಾಕೆಟ್ ಮತ್ತು ಗೈಸೆಪೆ ಒಕ್ಚಿಯಲಿನಿ ಇಲೆಕ್ಟ್ರಾನ್ ಜೋಡಿಗಳ ಉತ್ಪಾದನೆಯನ್ನು ಮತ್ತು ಗಾಮಾ ವಿಕಿರಣದಿಂದ ತುಂತುರುಗಳನ್ನು ಪ್ರದರ್ಶಿಸಲು ಕ್ಲೌಡ್ ಚೇಂಬರ್ಗಳನ್ನು ಬಳಸಿದರು. ೧೯೩೧-೧೯೩೨ರ ಶೈಕ್ಷಣಿಕ ವರ್ಷದಲ್ಲಿ, ಭಾಭಾಗೆ ಎಂಜಿನಿಯರಿಂಗ್ ನಲ್ಲಿ ಸಲೋಮಾನ್ಸ್ ವಿದ್ಯಾರ್ಥಿಶಿಕ್ಷಣ ನೀಡಲಾಯಿತು. ೧೯೩೨ರಲ್ಲಿ, ಅವರು ತಮ್ಮ ಗಣಿತ ಟ್ರಿಪೊಸ್ನಲ್ಲಿ ಪ್ರಥಮ ದರ್ಜೆ ಪಡೆದರು ಮತ್ತು ಗಣಿತಶಾಸ್ತ್ರದಲ್ಲಿ ರೌಸ್ ಬಾಲ್ ಪ್ರಯಾಣ ವಿದ್ಯಾರ್ಥಿಗಳಿಗೆ ನೀಡಲಾಯಿತು. ಈ ಸಮಯದಲ್ಲಿ, ಪರಮಾಣು ಭೌತಶಾಸ್ತ್ರವು ಮಹಾನ್ ಮನಸ್ಸನ್ನು ಆಕರ್ಷಿಸುತ್ತಿದೆ ಮತ್ತು ಸೈದ್ಧಾಂತಿಕ ಭೌತಶಾಸ್ತ್ರಕ್ಕೆ ಹೋಲಿಸಿದರೆ ಅದು ಗಮನಾರ್ಹವಾಗಿ ಉದಯೋನ್ಮುಖ ಕ್ಷೇತ್ರಗಳಲ್ಲಿ ಒಂದಾಗಿತ್ತು, ಸೈದ್ಧಾಂತಿಕ ಭೌತಶಾಸ್ತ್ರದ ವಿರುದ್ಧ, ವಿರೋಧವು ಕ್ಷೇತ್ರವನ್ನು ಆಕ್ರಮಿಸಿತು ಏಕೆಂದರೆ ಪ್ರಯೋಗಗಳ ಮೂಲಕ ನೈಸರ್ಗಿಕ ವಿದ್ಯಮಾನವನ್ನು ಸಾಬೀತುಪಡಿಸುವುದಕ್ಕಿಂತ ಹೆಚ್ಚಾಗಿ ಸಿದ್ಧಾಂತಗಳ ಕಡೆಗೆ ಸಾಕ್ಷಿಯಾಗಿತ್ತು. ಭಾರಿ ಪ್ರಮಾಣದಲ್ಲಿ ವಿಕಿರಣವನ್ನು ಬಿಡುಗಡೆ ಮಾಡಿದ ಕಣಗಳ ಮೇಲೆ ಪ್ರಯೋಗಗಳನ್ನು ನಡೆಸಿ ಭಾಭಾ ಅವರ ಜೀವಿತಾವಧಿಯ ಭಾವೋದ್ರೇಕವಾಗಿತ್ತು, ಮತ್ತು ಅವರ ಪ್ರಮುಖ ಎಡ್ಜ್ (ತುದಿ) ಸಂಶೋಧನೆ ಮತ್ತು ಪ್ರಯೋಗಗಳು ಭಾರತೀಯ ಭೌತವಿಜ್ಞಾನಿಗಳಿಗೆ ವಿಶೇಷವಾಗಿ ತಮ್ಮ ಕ್ಷೇತ್ರಗಳನ್ನು ಪರಮಾಣು ಭೌತಶಾಸ್ತ್ರಕ್ಕೆ ಪಿಯಾರಾ ಸಿಂಗ್ ಗಿಲ್ ಬದಲಾಯಿಸಿದವು. ಪರಮಾಣು ಭೌತಶಾಸ್ತ್ರದಲ್ಲಿ ಕೆಲಸ ಜನವರಿ ೧೯೩೩ ರಲ್ಲಿ, ಭಾಭಾ ತಮ್ಮ ಮೊದಲ ವೈಜ್ಞಾನಿಕ ಕಾಗದದ "ಅಬ್ಸರ್ಪ್ಶನ್ ಆಫ್ ಕಾಸ್ಮಿಕ್ ವಿಕಿರಣ" ವನ್ನು ಪ್ರಕಟಿಸಿದ ನಂತರ ಪರಮಾಣು ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದರು. ಪ್ರಕಟಣೆಯಲ್ಲಿ, ಭಾಭಾ ಕಾಸ್ಮಿಕ್ ಕಿರಣಗಳಲ್ಲಿ ಹೀರಿಕೊಳ್ಳುವ ವೈಶಿಷ್ಟ್ಯಗಳು ಮತ್ತು ಎಲೆಕ್ಟ್ರಾನ್ ಶವರ್ ಉತ್ಪಾದನೆಯ ವಿವರಣೆಯನ್ನು ನೀಡಿದರು. ೧೯೩೪ ರಲ್ಲಿ ಅವರು ಐಸಾಕ್ ನ್ಯೂಟನ್ ವಿದ್ಯಾರ್ಥಿಶಿಕ್ಷಣವನ್ನು ಗೆದ್ದುಕೊಂಡರು, ಅದು ಮುಂದಿನ ಮೂರು ವರ್ಷಗಳಲ್ಲಿ ನಡೆಯಿತು. ನಂತರದ ವರ್ಷ, ಅವರು ರಾಲ್ಫ್ ಹೆಚ್ ಫೌಲರ್ರ ಅಡಿಯಲ್ಲಿ ಸೈದ್ಧಾಂತಿಕ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಅಧ್ಯಯನಗಳನ್ನು ಪೂರ್ಣಗೊಳಿಸಿದರು. ಅವರ ವಿದ್ಯಾರ್ಥಿತ್ವದ ಸಮಯದಲ್ಲಿ, ಕೇಂಬ್ರಿಜ್ನಲ್ಲಿ ಕೆಲಸ ಮಾಡುವ ಸಮಯವನ್ನು ಮತ್ತು ಕೋಪನ್ ಹ್ಯಾಗನ್ ನಲ್ಲಿ ನೀಲ್ಸ್ ಬೋರ್ ಅವರ ಸಮಯವನ್ನು ಅವರು ವಿಭಜಿಸಿದರು. ೧೯೩೫ ರಲ್ಲಿ, ಭಾಭಾ ಪ್ರೊಸೀಡಿಂಗ್ಸ್ ಆಫ್ ದಿ ರಾಯಲ್ ಸೊಸೈಟಿ, ಸರಣಿ ಎ ನಲ್ಲಿ ಒಂದು ಲೇಖನವನ್ನು ಪ್ರಕಟಿಸಿದರು, ಇದರಲ್ಲಿ ಎಲೆಕ್ಟ್ರಾನ್-ಪೊಸಿಟ್ರಾನ್ ಸ್ಕ್ಯಾಟರಿಂಗ್ ನ ಕ್ರಾಸ್ ವಿಭಾಗವನ್ನು ನಿರ್ಧರಿಸಲು ಅವರು ಮೊದಲ ಲೆಕ್ಕಾಚಾರವನ್ನು ಮಾಡಿದರು. ಎಲೆಕ್ಟ್ರಾನ್-ಪಾಸಿಟ್ರಾನ್ ಸ್ಕ್ಯಾಟರಿಂಗ್ ಅನ್ನು ನಂತರ ಭಾಭಾ ಸ್ಕ್ಯಾಟರಿಂಗ್ ಎಂದು ಹೆಸರಿಸಲಾಯಿತು, ಈ ಕ್ಷೇತ್ರದಲ್ಲಿನ ತನ್ನ ಕೊಡುಗೆಗಳ ಗೌರವಾರ್ಥವಾಗಿ. ೧೯೩೬ ರಲ್ಲಿ, ವಾಲ್ಟರ್ ಹೀಟ್ಲರ್ನೊಂದಿಗೆ, ರಾಯಲ್ ಸೊಸೈಟಿಯ ಪ್ರೊಸೀಡಿಂಗ್ಸ್, ಸರಣಿ ಎ ನಲ್ಲಿ "ದಿ ಪ್ಯಾಸೇಜ್ ಆಫ್ ಫಾಸ್ಟ್ ಇಲೆಕ್ಟ್ರಾನ್ಸ್ ಮತ್ತು ಥಿಯರಿ ಆಫ್ ಕಾಸ್ಮಿಕ್ ಷೋಯರ್ಸ್" ಎಂಬ ಲೇಖನವನ್ನು ಅವರು ತಮ್ಮ ಸಿದ್ಧಾಂತವನ್ನು ಹೇಗೆ ವಿವರಿಸಲು ಬಳಸಿದರು ಎಂಬ ಬಗ್ಗೆ ಬಾಹ್ಯಾಕಾಶದಿಂದ ಪ್ರಾಥಮಿಕ ಕಾಸ್ಮಿಕ್ ಕಿರಣಗಳು ನೆಲದ ಮಟ್ಟದಲ್ಲಿ ಕಂಡುಬರುವ ಕಣಗಳನ್ನು ಉತ್ಪಾದಿಸಲು ಮೇಲಿನ ವಾಯುಮಂಡಲದೊಂದಿಗೆ ಸಂವಹನ ನಡೆಸುತ್ತವೆ. ಭಾಭಾ ಮತ್ತು ಹೀಟ್ಲರ್ ನಂತರ ವಿಭಿನ್ನ ಎಲೆಕ್ಟ್ರಾನ್ ದೀಕ್ಷಾ ಶಕ್ತಿಗಳಿಗೆ ವಿವಿಧ ಎತ್ತರಗಳಲ್ಲಿ ಕ್ಯಾಸ್ಕೇಡ್ ಪ್ರಕ್ರಿಯೆಯಲ್ಲಿನ ಎಲೆಕ್ಟ್ರಾನ್ಗಳ ಸಂಖ್ಯೆಗಳ ಸಂಖ್ಯಾತ್ಮಕ ಅಂದಾಜುಗಳನ್ನು ಮಾಡಿದರು. ಕೆಲವು ವರ್ಷಗಳ ಹಿಂದೆ ಬ್ರೂನೋ ರೊಸ್ಸಿ ಮತ್ತು ಪಿಯರೆ ವಿಕ್ಟರ್ ಆಗ್ರಿಂದ ಮಾಡಿದ ಕಾಸ್ಮಿಕ್ ಕಿರಣದ ಪ್ರಾಯೋಗಿಕ ಅವಲೋಕನಗಳೊಂದಿಗೆ ಈ ಲೆಕ್ಕಾಚಾರಗಳು ಒಪ್ಪಿಕೊಂಡಿವೆ. ಭಾಭಾ ನಂತರದಲ್ಲಿ ಅಂತಹ ಕಣಗಳ ಗುಣಲಕ್ಷಣಗಳ ಅವಲೋಕನಗಳು ಆಲ್ಬರ್ಟ್ ಐನ್‍ಸ್ಟೈನ್ ಸಾಪೇಕ್ಷತಾ ಸಿದ್ಧಾಂತದ ನೇರ ಪ್ರಾಯೋಗಿಕ ಪರಿಶೀಲನೆಗೆ ಕಾರಣವಾಗುತ್ತವೆ ಎಂದು ತೀರ್ಮಾನಿಸಿತು. ೧೯೩೭ ರಲ್ಲಿ, ಭಾಭಾಗೆ ೧೮೫೧ ರ ಪ್ರದರ್ಶನದ ಹಿರಿಯ ವಿದ್ಯಾರ್ಥಿಶಿಕ್ಷಣವನ್ನು ನೀಡಲಾಯಿತು, ಇದು ೧೯೩೯ ರಲ್ಲಿ ವಿಶ್ವ ಸಮರ II ರವರೆಗೆ ಕೇಂಬ್ರಿಡ್ಜ್ನಲ್ಲಿ ತನ್ನ ಕೆಲಸವನ್ನು ಮುಂದುವರೆಸಲು ನೆರವಾಯಿತು. ಭಾರತಕ್ಕೆ ಹಿಂತಿರುಗು ಸೆಪ್ಟೆಂಬರ್ ೧೯೩೯ ರಲ್ಲಿ, ಭಾಭಾರವರು ವಿಶ್ವ ಸಮರ II ಪ್ರಾರಂಭವಾದ ಸಂಕ್ಷಿಪ್ತ ರಜಾದಿನಕ್ಕಾಗಿ ಭಾರತದಲ್ಲಿದ್ದರು, ಮತ್ತು ಅವರು ಆ ಸಮಯದಲ್ಲಿ ಇಂಗ್ಲೆಂಡಿ ಗೆ ಹಿಂದಿರುಗಬಾರದೆಂದು ನಿರ್ಧರಿಸಿದರು. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಭೌತಶಾಸ್ತ್ರ ಇಲಾಖೆಯ ರೀಡರ್ ಆಗಿ ಕಾರ್ಯನಿರ್ವಹಿಸಲು ಅವರು ಪ್ರಸ್ತಾಪವನ್ನು ಸ್ವೀಕರಿಸಿದರು, ನಂತರ ಪ್ರಸಿದ್ಧ ಭೌತಶಾಸ್ತ್ರಜ್ಞ ಸಿ. ವಿ. ರಾಮನ್ ಅವರ ನೇತೃತ್ವ ವಹಿಸಿದರು. ಅವರು ಸರ್ ಡೊರಬ್ ಟಾಟಾ ಟ್ರಸ್ಟ್ನಿಂದ ವಿಶೇಷ ಸಂಶೋಧನಾ ಅನುದಾನ ಪಡೆದರು, ಇವರು ಇನ್ಸ್ಟಿಟ್ಯೂಟ್ನಲ್ಲಿ ಕಾಸ್ಮಿಕ್ ರೇ ರಿಸರ್ಚ್ ಯುನಿಟ್ ಅನ್ನು ಸ್ಥಾಪಿಸಿದರು. ಭಾಭಾ ಅವರು ಹರಿಶ್-ಚಂದ್ರ ಸೇರಿದಂತೆ ಕೆಲವು ವಿದ್ಯಾರ್ಥಿಗಳನ್ನು ಅವರೊಂದಿಗೆ ಕೆಲಸ ಮಾಡಲು ಆಯ್ಕೆ ಮಾಡಿದರು. ನಂತರ, ಮಾರ್ಚ್ ೨೦, ೧೯೪೧ ರಂದು ರಾಯಲ್ ಸೊಸೈಟಿಯ ಯಲ್ಲಿ ಆಯ್ಕೆಯಾದರು. ಜೆ. ರ್. ಡಿ. ಟಾಟಾ ಅವರ ಸಹಾಯದಿಂದ ಅವರು ಮುಂಬೈಯ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಅನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ವೃತ್ತಿಜೀವನ ಬ್ರಿಟನ್ನಲ್ಲಿ ತನ್ನ ಪರಮಾಣು ಭೌತಶಾಸ್ತ್ರ ವೃತ್ತಿಜೀವನವನ್ನು ಪ್ರಾರಂಭಿಸಿದ ಭಾಭಾ ಅವರು ೧೯೩೯ ರ ಸೆಪ್ಟೆಂಬರ್ ನಲ್ಲಿ ವಿಶ್ವ ಸಮರ II ರ ಆರಂಭದ ಮೊದಲು ತನ್ನ ವಾರ್ಷಿಕ ವಿಹಾರಕ್ಕೆ ಭಾರತಕ್ಕೆ ಮರಳಿದರು. ಯುದ್ಧವು ಭಾರತದಲ್ಲಿ ಉಳಿಯಲು ಪ್ರೇರೇಪಿಸಿತು ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯ ಭೌತಶಾಸ್ತ್ರದಲ್ಲಿ ಬೆಂಗಳೂರು, ನೊಬೆಲ್ ಪ್ರಶಸ್ತಿ ವಿಜೇತ ಸಿ.ವಿ. ರಾಮನ್. ಈ ಸಮಯದಲ್ಲಿ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರನ್ನು ಮನವರಿಕೆ ಮಾಡುವಲ್ಲಿ ಭಾಭಾ ಪ್ರಮುಖ ಪಾತ್ರವಹಿಸಿದರು, ಮುಖ್ಯವಾಗಿ ಜವಾಹರಲಾಲ್ ನೆಹರು ಅವರು ಮಹತ್ವಾಕಾಂಕ್ಷೆಯ ಪರಮಾಣು ಕಾರ್ಯಕ್ರಮವನ್ನು ಪ್ರಾರಂಭಿಸಲು ಭಾರತದ ಮೊದಲ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದರು. ಈ ದೃಷ್ಟಿಗೋಚರ ಭಾಗವಾಗಿ, ಭಾಭಾ ಸಂಸ್ಥೆಯು ಕಾಸ್ಮಿಕ್ ರೇ ರಿಸರ್ಚ್ ಯುನಿಟ್ ಅನ್ನು ಇನ್ಸ್ಟಿಟ್ಯೂಟ್ನಲ್ಲಿ ಸ್ಥಾಪಿಸಿತು, ಬಿಂದು ಕಣಗಳ ಚಲನೆಯ ಸಿದ್ಧಾಂತದ ಮೇಲೆ ಕೆಲಸ ಮಾಡಲು ಪ್ರಾರಂಭಿಸಿತು, ಆದರೆ ೧೯೪೪ ರಲ್ಲಿ ಸ್ವತಂತ್ರವಾಗಿ ಪರಮಾಣು ಶಸ್ತ್ರಾಸ್ತ್ರಗಳ ಬಗ್ಗೆ ಸಂಶೋಧನೆ ನಡೆಸಿತು. ೧೯೪೫ ರಲ್ಲಿ ಅವರು ಮುಂಬೈಯ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಅನ್ನು ಸ್ಥಾಪಿಸಿದರು ಮತ್ತು ೧೯೪೮ ರಲ್ಲಿ ಅಟಾಮಿಕ್ ಎನರ್ಜಿ ಕಮಿಷನ್ ನ ಮೊದಲ ಅಧ್ಯಕ್ಷರಾಗಿ ನೇಮಿಸಿದರು. ೧೯೪೮ ರಲ್ಲಿ, ನೆಹರು ಅವರು ಭಾಭಾ ಅವರನ್ನು ಅಣ್ವಸ್ತ್ರ ಕಾರ್ಯಕ್ರಮದ ನಿರ್ದೇಶಕರಾಗಿ ನೇಮಕ ಮಾಡಿದರು ಮತ್ತು ಶೀಘ್ರದಲ್ಲೇ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಲು ಭಾಭಾಗೆ ಕೆಲಸ ಮಾಡಿದರು. ೧೯೫೦ ರ ದಶಕದಲ್ಲಿ ಭಾಭಾ ಅವರು ಐಎಇಎ ಸಮಾವೇಶಗಳಲ್ಲಿ ಭಾರತವನ್ನು ಪ್ರತಿನಿಧಿಸಿದರು ಮತ್ತು ೧೯೫೫ ರಲ್ಲಿ ಸ್ವಿಜರ್ಲ್ಯಾಂಡ್ ನ ಜಿನೀವಾದಲ್ಲಿ ಪರಮಾಣು ಶಕ್ತಿಯ ಶಾಂತಿಯುತ ಬಳಕೆಗಳ ಕುರಿತು ವಿಶ್ವಸಂಸ್ಥೆಯ ಅಧಿವೇಶನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಈ ಸಮಯದಲ್ಲಿ ಅವರು ಪರಮಾಣು ಶಸ್ತ್ರಾಸ್ತ್ರಗಳ ಅಭಿವೃದ್ಧಿಗಾಗಿ ತಮ್ಮ ಲಾಬಿ ಮಾಡುವಿಕೆಯನ್ನು ತೀವ್ರಗೊಳಿಸಿದರು. ಸಿನೋ-ಇಂಡೋ ಯುದ್ಧದ ಬಳಿಕ ಭಾಭಾ ಆಕ್ರಮಣಕಾರಿಯಾಗಿ ಮತ್ತು ಸಾರ್ವಜನಿಕವಾಗಿ ಪರಮಾಣು ಶಸ್ತ್ರಾಸ್ತ್ರಗಳನ್ನು ಕರೆಸಿಕೊಳ್ಳಲಾರಂಭಿಸಿದರು. ಭಾಭಾ ಚದುರುವಿಕೆಯೆಂದು ಕರೆಯಲ್ಪಡುವ ಪ್ರಕ್ರಿಯೆ ಎಲೆಕ್ಟ್ರಾನ್ ಗಳಿಂದ ಪೊಸಿಟ್ರಾನ್ಗಳನ್ನು ಹರಡುವ ಸಂಭವನೀಯತೆಗಾಗಿ ಸರಿಯಾದ ಅಭಿವ್ಯಕ್ತಿಯನ್ನು ಪಡೆದ ನಂತರ ಭಾಭಾ ಅಂತರರಾಷ್ಟ್ರೀಯ ಪ್ರಾಮುಖ್ಯತೆ ಪಡೆದರು. ಅವರ ಪ್ರಮುಖ ಕೊಡುಗೆ ಕಾಂಪ್ಟನ್ ಸ್ಕ್ಯಾಟರಿಂಗ್, ಆರ್-ಪ್ರೊಸೆಸರ್, ಮತ್ತು ಪರಮಾಣು ಭೌತಶಾಸ್ತ್ರದ ಪ್ರಗತಿಯ ಕುರಿತು ಅವರ ಕೆಲಸವನ್ನು ಒಳಗೊಂಡಿತ್ತು. ಅವರಿಗೆ ೧೯೫೪ ರಲ್ಲಿ ಭಾರತ ಸರ್ಕಾರವು ಪದ್ಮಭೂಷಣ ಪ್ರಶಸ್ತಿ ನೀಡಿತು. ನಂತರ ಅವರು ಭಾರತೀಯ ಕ್ಯಾಬಿನೆಟ್ ನ ವೈಜ್ಞಾನಿಕ ಸಲಹಾ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದರು ಮತ್ತು ವಿಕ್ರಮ್ ಸಾರಾಭಾಯಿಗೆ ಬಾಹ್ಯಾಕಾಶ ಸಂಶೋಧನೆಗೆ ಭಾರತೀಯ ರಾಷ್ಟ್ರೀಯ ಸಮಿತಿಯನ್ನು ಸ್ಥಾಪಿಸಲು ಪ್ರಮುಖ ಪಾತ್ರವನ್ನು ವಹಿಸಿದರು. ಜನವರಿ ೧೯೬೬ ರಲ್ಲಿ, ಭಾಭಾ ಮಾಂಟ್ ಬ್ಲಾಂಕ್ ಬಳಿ ನಡೆದ ವಿಮಾನ ಅಪಘಾತದಲ್ಲಿ ಮರಣಹೊಂದಿದರು, ಆಸ್ಟ್ರೇಲಿಯಾದ ವಿಯೆನ್ನಾಗೆ ಅಂತರರಾಷ್ಟ್ರೀಯ ಅಟಾಮಿಕ್ ಎನರ್ಜಿ ಏಜೆನ್ಸಿಯ ವೈಜ್ಞಾನಿಕ ಸಲಹಾ ಸಮಿತಿಯ ಸಭೆಗೆ ಹೋಗುತ್ತಿದ್ದಾಗ ಈ ಅಪಘಾತ ವಾಯಿತು. ಭಾರತದಲ್ಲಿ ಪರಮಾಣು ಶಕ್ತಿ ಹೋಮಿ ಜಹಾಂಗೀರ್ ಭಾಭಾ ಅವರು ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ಕೆಲಸ ಮಾಡುತ್ತಿದ್ದಾಗ, ಪರಮಾಣು ಭೌತಶಾಸ್ತ್ರ, ಕಾಸ್ಮಿಕ್ ಕಿರಣಗಳು, ಉನ್ನತ ಶಕ್ತಿ ಭೌತಶಾಸ್ತ್ರ ಮತ್ತು ಭೌತಶಾಸ್ತ್ರದ ಜ್ಞಾನದ ಇತರ ಗಡಿಗಳಲ್ಲಿ ಮೂಲ ಕೆಲಸಕ್ಕೆ ಅಗತ್ಯವಾದ ಸೌಲಭ್ಯಗಳನ್ನು ಹೊಂದಿದ್ದ ಭಾರತದಲ್ಲಿ ಯಾವುದೇ ಸಂಸ್ಥೆ ಇರಲಿಲ್ಲ. ಇದು ೧೯೪೪ ರ ಮಾರ್ಚ್ ನಲ್ಲಿ ಸರ್ ಡೋರ್ಬ್ಜಿ ಟಾಟಾ ಟ್ರಸ್ಟ್ 'ಮೂಲಭೂತ ಭೌತಶಾಸ್ತ್ರದಲ್ಲಿ ತೀವ್ರವಾದ ಸಂಶೋಧನಾ ಶಾಲೆಯನ್ನು' ಸ್ಥಾಪಿಸಲು ಪ್ರಸ್ತಾಪವನ್ನು ಕಳುಹಿಸಲು ಪ್ರೇರೇಪಿಸಿತು. ತಮ್ಮ ಪ್ರಸ್ತಾಪದಲ್ಲಿ ಅವರು ಹೀಗೆ ಬರೆದಿದ್ದಾರೆ: "ಭಾರತದ ಕ್ಷಣದಲ್ಲಿ ದೈಹಿಕ ಮತ್ತು ಪ್ರಾಯೋಗಿಕ ಎರಡೂ ಭೌತಶಾಸ್ತ್ರದ ಮೂಲಭೂತ ಸಮಸ್ಯೆಗಳಲ್ಲಿ ಯಾವುದೇ ದೊಡ್ಡ ಶಾಲಾ ಸಂಶೋಧನೆ ಇದೆ. ಅದು ಸೂಕ್ತವಾದ ನಿರ್ದೇಶನದಲ್ಲಿ ಒಂದೇ ಸ್ಥಳದಲ್ಲಿ ಒಗ್ಗೂಡಿಸಿದರೆ ಅವರು ಮಾಡುತ್ತಿರುವಂತೆಯೇ ಒಳ್ಳೆಯ ಕೆಲಸ ಮಾಡುತ್ತಿಲ್ಲವಾದ್ದರಿಂದ ಅವರು ಭಾರತದಾದ್ಯಂತದ ಎಲ್ಲ ಸಮರ್ಥ ಉದ್ಯೋಗಿಗಳನ್ನು ಹರಡಿದ್ದಾರೆ. ಮೂಲಭೂತ ಭೌತಶಾಸ್ತ್ರದಲ್ಲಿ ಶ್ರದ್ಧಾಭಿಪ್ರಾಯದ ಸಂಶೋಧನಾ ಶಾಲೆಯನ್ನು ಹೊಂದಿರುವ ಭಾರತದ ಆಸಕ್ತಿಗೆ ಇದು ಕಾರಣವಾಗಿದೆ, ಅಂತಹ ಶಾಲೆಗಳು ಭೌತಶಾಸ್ತ್ರದ ಕಡಿಮೆ ಮುಂದುವರಿದ ಶಾಖೆಗಳಲ್ಲಿ ಮಾತ್ರವಲ್ಲದೆ ಉದ್ಯಮದಲ್ಲಿ ತಕ್ಷಣದ ಪ್ರಾಯೋಗಿಕ ಅನ್ವಯಗಳ ಸಮಸ್ಯೆಗಳಲ್ಲೂ ಸಂಶೋಧನೆಯ ಮುಂಚೂಣಿಯಲ್ಲಿದೆ. ಭಾರತದಲ್ಲಿ ಮಾಡಲಾದ ಹೆಚ್ಚಿನ ಅನ್ವಯಿಕ ಸಂಶೋಧನೆಗಳು ಇಂದು ನಿರಾಶಾದಾಯಕ ಅಥವಾ ಅತಿ ಕೆಳಮಟ್ಟದ ಗುಣಮಟ್ಟದ್ದಾಗಿದ್ದರೆ, ಸೂಕ್ತವಾದ ಉತ್ತಮ ಸಂಶೋಧನಾ ಕಾರ್ಯಕರ್ತರ ಅನುಪಸ್ಥಿತಿಯಿಂದಾಗಿ ಉತ್ತಮ ಸಂಶೋಧನೆಯ ಮಾನದಂಡವನ್ನು ಹೊಂದಿದ್ದು, ಸಲಹಾ ಸಾಮರ್ಥ್ಯದ ನಿರ್ದೇಶನ ಮಂಡಳಿಗಳ ಮೇಲೆ ಕಾರ್ಯನಿರ್ವಹಿಸುವುದು ... ಇದಲ್ಲದೆ, ವಿದ್ಯುತ್ ಉತ್ಪಾದನೆಗೆ ಪರಮಾಣು ಶಕ್ತಿಯನ್ನು ಯಶಸ್ವಿಯಾಗಿ ಅನ್ವಯಿಸಿದಾಗ ಒಂದೆರಡು ಹೇಳುತ್ತಾರೆ. ಈಗ ದಶಕಗಳವರೆಗೆ, ಭಾರತ ತನ್ನ ತಜ್ಞರಿಗೆ ವಿದೇಶದಲ್ಲಿ ಕಾಣಬೇಕಾಗಿಲ್ಲ ಆದರೆ ಅವುಗಳನ್ನು ಕೈಯಲ್ಲಿ ಸಿದ್ಧಪಡಿಸುತ್ತದೆ. ಇತರ ದೇಶಗಳಲ್ಲಿನ ವೈಜ್ಞಾನಿಕ ಅಭಿವೃದ್ಧಿಯೊಂದಿಗೆ ಪರಿಚಯವಿರುವ ಯಾರಾದರೂ ನಾನು ಅಂತಹ ಶಾಲೆಗೆ ಭಾರತದಲ್ಲಿ ಅಗತ್ಯವನ್ನು ನಿರಾಕರಿಸುತ್ತಾರೆಂದು ನಾನು ಯೋಚಿಸುವುದಿಲ್ಲ. ಸಂಶೋಧನೆ ಮತ್ತು ಮುಂದುವರಿದ ಬೋಧನೆಯ ವಿಷಯಗಳು ಸೈದ್ಧಾಂತಿಕ ಭೌತಶಾಸ್ತ್ರವಾಗಿದ್ದು, ವಿಶೇಷವಾಗಿ ಮೂಲಭೂತ ಸಮಸ್ಯೆಗಳ ಮೇಲೆ ಮತ್ತು ಕಾಸ್ಮಿಕ್ ಕಿರಣಗಳು ಮತ್ತು ಪರಮಾಣು ಭೌತಶಾಸ್ತ್ರದ ಬಗ್ಗೆ ವಿಶೇಷ ಉಲ್ಲೇಖ, ಮತ್ತು ಕಾಸ್ಮಿಕ್ ಕಿರಣಗಳ ಮೇಲೆ ಪ್ರಾಯೋಗಿಕ ಸಂಶೋಧನೆ. ಕಾಸ್ಮಿಕ್ ಕಿರಣಗಳಿಂದ ಪ್ರತ್ಯೇಕವಾದ ಪರಮಾಣು ಭೌತಶಾಸ್ತ್ರವನ್ನು ಬೇರ್ಪಡಿಸಲು ಅದು ಸಾಧ್ಯವಿಲ್ಲ ಅಥವಾ ಅಪೇಕ್ಷಿಸುವುದಿಲ್ಲ ಏಕೆಂದರೆ ಇಬ್ಬರೂ ಸೈದ್ಧಾಂತಿಕವಾಗಿ ಸಂಪರ್ಕ ಹೊಂದಿದ್ದಾರೆ. ಸರ್ ಡೊರಬ್ಜಿ ಜಮ್ಸೆಟ್ಜಿ ಟ್ರಸ್ಟಿಗಳು. ೧೯೪೪ ರ ಏಪ್ರಿಲ್ ನಲ್ಲಿ ಇನ್ಸ್ಟಿಟ್ಯೂಟ್ ಪ್ರಾರಂಭಿಸಲು ಭಾಭಾ ಅವರ ಪ್ರಸ್ತಾವನೆಯನ್ನು ಮತ್ತು ಹಣಕಾಸಿನ ಜವಾಬ್ದಾರಿಯನ್ನು ಟಾಟಾ ಟ್ರಸ್ಟ್ ಸ್ವೀಕರಿಸಲು ನಿರ್ಧರಿಸಿತು. ಮುಂಬಯಿ ಸರ್ಕಾರವು ಪ್ರಸ್ತಾವಿತ ಸಂಸ್ಥೆಗೆ ಸ್ಥಳವಾಗಿ ಆಯ್ಕೆಯಾಗಿದ್ದು, ಮುಂಬಯಿ ಸರ್ಕಾರವು ಪ್ರಸ್ತಾವಿತ ಸಂಸ್ಥೆಯ ಜಂಟಿ ಸ್ಥಾಪಕರಾಗುವ ಆಸಕ್ತಿಯನ್ನು ತೋರಿಸಿತು. ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಎಂಬ ಹೆಸರಿನ ಇನ್ಸ್ಟಿಟ್ಯೂಟ್ ಅನ್ನು ಅಸ್ತಿತ್ವದಲ್ಲಿರುವ ಕಟ್ಟಡದಲ್ಲಿ ೫೪೦ ಚದರ ಮೀಟರ್ಗಳಷ್ಟು ಬಾಡಿಗೆ ಜಾಗದಲ್ಲಿ ೧೯೪೫ ರಲ್ಲಿ ಉದ್ಘಾಟಿಸಲಾಯಿತು. ೧೯೪೮ ರಲ್ಲಿ ರಾಯಲ್ ಯಾಚ್ ಕ್ಲಬ್ ನ್ನು ಹಳೆಯ ಕಟ್ಟಡಗಳಿಗೆ ಈ ಸಂಸ್ಥೆಯನ್ನು ಸ್ಥಳಾಂತರಿಸಲಾಯಿತು. ಪರಮಾಣು ಶಕ್ತಿಯ ಕಾರ್ಯಕ್ರಮಕ್ಕಾಗಿ ತಾಂತ್ರಿಕ ಅಭಿವೃದ್ಧಿಯನ್ನು ಟಿ.ಐ.ಫ಼್.ರ್ ಒಳಗೆ ಕೈಗೊಳ್ಳಲಾಗುವುದಿಲ್ಲ ಎಂದು ಭಾಭಾ ಅವರು ಅರಿತುಕೊಂಡಾಗ, ಹೊಸ ಉದ್ದೇಶಿತ ಪ್ರಯೋಗಾಲಯವನ್ನು ಈ ಉದ್ದೇಶಕ್ಕಾಗಿ ಸಂಪೂರ್ಣವಾಗಿ ಮೀಸಲಿಡಬೇಕೆಂದು ಅವರು ಸೂಚಿಸಿದರು. ಈ ಉದ್ದೇಶಕ್ಕಾಗಿ, ೧೨೦೦ ಎಕರೆ ಭೂಮಿ ಮುಂಬೈ ಸರ್ಕಾರದಿಂದ ಟ್ರಾಮ್ಬೇನಲ್ಲಿ ಸ್ವಾಧೀನಪಡಿಸಿಕೊಂಡಿತು. ಹೀಗೆ ಅಟಾಮಿಕ್ ಎನರ್ಜಿ ಎಸ್ಟಾಬ್ಲಿಷ್ಮೆಂಟ್ ಟ್ರೊಂಬೆ (ಎಇಇಟಿ) ೧೯೫೪ ರಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ಅದೇ ವರ್ಷದಲ್ಲಿ ಅಟಾಮಿಕ್ ಎನರ್ಜಿ ಇಲಾಖೆ (ಡಿಎಇ) ಸ್ಥಾಪಿಸಲಾಯಿತು. ಅವರು ಅಂತರರಾಷ್ಟ್ರೀಯ ಪರಮಾಣು ಶಕ್ತಿ ವೇದಿಕೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದರು ಮತ್ತು ೧೯೫೫ ರಲ್ಲಿ ಸ್ವಿಜರ್ಲ್ಯಾಂಡ್ ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆಯ ಪರಮಾಣು ಶಕ್ತಿಗಳ ಯುನೈಟೆಡ್ ನೇಷನ್ಸ್ ಸಮಾವೇಶದ ಅಧ್ಯಕ್ಷರಾಗಿದ್ದರು. ಅವರು ೧೯೫೮ ರಲ್ಲಿ ಅಮೆರಿಕನ್ ಅಕಾಡೆಮಿ ಆಫ್ ಆರ್ಟ್ಸ್ ಅಂಡ್ ಸೈನ್ಸ್ ವಿದೇಶಿ ಗೌರವ ಸದಸ್ಯರಾಗಿ ಆಯ್ಕೆಯಾದರು. ಭಾರತದ ಮೂರು ಹಂತದ ಪರಮಾಣು ವಿದ್ಯುತ್ ಕಾರ್ಯಕ್ರಮದ ಹಿಂದೆ ದೃಷ್ಟಿ ಭಾಭಾವನ್ನು ಸಾಮಾನ್ಯವಾಗಿ ಭಾರತೀಯ ಪರಮಾಣು ಶಕ್ತಿಗಳ ತಂದೆ ಎಂದು ಒಪ್ಪಿಕೊಳ್ಳುತ್ತಾರೆ. ಇದಲ್ಲದೆ, ದೇಶದ ಅತಿದೊಡ್ಡ ಯುರೇನಿಯಂ ಮೀಸಲುಗಳಿಗಿಂತ ದೇಶದ ಅತಿದೊಡ್ಡ ಥೋರಿಯಂ ಮೀಸಲುಗಳಿಂದ ವಿದ್ಯುತ್ ಹೊರತೆಗೆಯುವುದರ ಮೇಲೆ ಕೇಂದ್ರೀಕರಿಸುವ ಒಂದು ತಂತ್ರವನ್ನು ರೂಪಿಸುವ ಮೂಲಕ ಆತನಿಗೆ ಸಲ್ಲುತ್ತದೆ. ಈ ಥೋರಿಯಂ ಕೇಂದ್ರೀಕರಿಸಿದ ಕಾರ್ಯತಂತ್ರವು ಪ್ರಪಂಚದ ಇತರ ದೇಶಗಳಿಗೆ ವಿರುದ್ಧವಾಗಿ ಕಂಡುಬಂದಿದೆ. ಈ ಕಾರ್ಯತಂತ್ರದ ಉದ್ದೇಶವನ್ನು ಸಾಧಿಸಲು ಭಾಭಾ ಪ್ರಸ್ತಾಪಿಸಿದ ವಿಧಾನವು ಭಾರತದ ಮೂರು ಹಂತದ ಪರಮಾಣು ವಿದ್ಯುತ್ ಕಾರ್ಯಕ್ರಮವಾಯಿತು. ಭಾಭಾ ಮೂರು ಹಂತದ ವಿಧಾನವನ್ನು ಕೆಳಕಂಡಂತೆ ವಿವರಿಸಿದ್ದಾರೆ: ಭಾರತದಲ್ಲಿ ಥೋರಿಯಂನ ಒಟ್ಟು ನಿಕ್ಷೇಪಗಳು ೫೦೦೦೦೦ ಟನ್ನುಗಳಷ್ಟು ಸುಲಭವಾಗಿ ಸಿಂಪಡಿಸಬಹುದಾದ ರೂಪದಲ್ಲಿವೆ, ಆದರೆ ಯುರೇನಿಯಂನ ಮೀಸಲು ಖರ್ಚುಗಳ ಪೈಕಿ ಹತ್ತನೇ ಭಾಗಕ್ಕಿಂತ ಕಡಿಮೆಯಿದೆ. ಆದ್ದರಿಂದ ಭಾರತದಲ್ಲಿ ದೀರ್ಘ ವ್ಯಾಪ್ತಿಯ ಪರಮಾಣು ವಿದ್ಯುತ್ ಕಾರ್ಯಕ್ರಮದ ಗುರಿ ಯುರೇನಿಯಂ ಬದಲಿಗೆ ಥೋರಿಯಂನಲ್ಲಿ ಸಾಧ್ಯವಾದಷ್ಟು ಬೇಗ ಪರಮಾಣು ವಿದ್ಯುತ್ ಉತ್ಪಾದನೆಯನ್ನು ಆಧರಿಸಿರಬೇಕು ... ನೈಸರ್ಗಿಕ ಯುರೇನಿಯಂ ಆಧಾರಿತ ಮೊದಲ ಪೀಳಿಗೆಯ ಪರಮಾಣು ಶಕ್ತಿ ಕೇಂದ್ರಗಳನ್ನು ಮಾತ್ರ ಪರಮಾಣು ವಿದ್ಯುತ್ ಪ್ರೋಗ್ರಾಮ್ ... ಮೊದಲ ಪೀಳಿಗೆಯ ವಿದ್ಯುತ್ ಕೇಂದ್ರಗಳಿಂದ ಉತ್ಪಾದಿಸಲ್ಪಟ್ಟ ಪ್ಲುಟೋನಿಯಂ ಅನ್ನು ವಿದ್ಯುತ್ ಶಕ್ತಿಯನ್ನು ಉತ್ಪಾದಿಸಲು ಮತ್ತು ಥೋರಿಯಮ್ ಅನ್ನು ಯು-೨೩೩ ಆಗಿ ಪರಿವರ್ತಿಸಲು ವಿನ್ಯಾಸಗೊಳಿಸಿದ ಎರಡನೆಯ ಪೀಳಿಗೆಯ ವಿದ್ಯುತ್ ಕೇಂದ್ರಗಳಲ್ಲಿ ಬಳಸಬಹುದು, ಅಥವಾ ಸಂತಾನೋತ್ಪತ್ತಿಯ ಲಾಭದೊಂದಿಗೆ ಹೆಚ್ಚು ಪ್ಲುಟೋನಿಯಮ್ಗೆ ಯುರೇನಿಯಂ ಅನ್ನು ಖಾಲಿ ಮಾಡಿದೆ ... ಎರಡನೆಯ ಪೀಳಿಗೆಯ ವಿದ್ಯುತ್ ಕೇಂದ್ರಗಳನ್ನು ಮೂರನೆಯ ತಲೆಮಾರಿನ ಬ್ರೀಡರ್ ವಿದ್ಯುತ್ ಕೇಂದ್ರಗಳಿಗೆ ಮಧ್ಯಂತರ ಹಂತವೆಂದು ಪರಿಗಣಿಸಲಾಗುತ್ತದೆ,ಇವುಗಳಲ್ಲಿ ಹೆಚ್ಚಿನವು ಯು-೨೩೮ ಅನ್ನು ಉತ್ಪಾದಿಸುವ ಶಕ್ತಿಯನ್ನು ಉತ್ಪಾದಿಸುವ ಸಮಯದಲ್ಲಿ ಹೆಚ್ಚು ಉಂಟುಮಾಡುತ್ತವೆ. ಪರಂಪರೆ ಅವರ ಮರಣದ ನಂತರ, ಮುಂಬೈಯಲ್ಲಿನ ಅಟಾಮಿಕ್ ಎನರ್ಜಿ ಎಸ್ಟಾಬ್ಲಿಷ್ಮೆಂಟ್ ಅನ್ನು ಅವರ ಗೌರವಾರ್ಥ ಭಾಭಾ ಆಟೋಮಿಕ್ ಸಂಶೋಧನಾ ಕೇಂದ್ರ ಎಂದು ಮರುನಾಮಕರಣ ಮಾಡಲಾಯಿತು. ಒಬ್ಬ ಸಮರ್ಥ ವಿಜ್ಞಾನಿ ಮತ್ತು ನಿರ್ವಾಹಕರಾಗಿರುವುದರ ಜೊತೆಗೆ, ಭಾಭಾ ಒಬ್ಬ ವರ್ಣಚಿತ್ರಕಾರ ಮತ್ತು ಶಾಸ್ತ್ರೀಯ ಸಂಗೀತ ಮತ್ತು ಒಪೆರಾ ಉತ್ಸಾಹಿಯಾಗಿದ್ದು, ಹವ್ಯಾಸಿ ಸಸ್ಯವಿಜ್ಞಾನಿಯಾಗಿದ್ದನು. ಭಾರತವು ಹೊಂದಿದ್ದ ಅತ್ಯಂತ ಪ್ರಮುಖವಾದ ವಿಜ್ಞಾನಿಗಳಲ್ಲಿ ಒಬ್ಬರು. ಎಲೆಕ್ಟ್ರಾನಿಕ್ಸ್, ಬಾಹ್ಯಾಕಾಶ ವಿಜ್ಞಾನ, ರೇಡಿಯೋ ಖಗೋಳಶಾಸ್ತ್ರ ಮತ್ತು ಸೂಕ್ಷ್ಮ ಜೀವವಿಜ್ಞಾನದಲ್ಲಿ ಸಂಶೋಧನೆ ನಡೆಸಿದರು. ಭಾರತದ ಊಟಿಯ ಪ್ರಖ್ಯಾತ ರೇಡಿಯೋ ಟೆಲಿಸ್ಕೋಪ್ ಅವರ ಉಪಕ್ರಮವಾಗಿತ್ತು, ಮತ್ತು ಇದು ೧೯೭೦ ರಲ್ಲಿ ವಾಸ್ತವವಾಯಿತು. ಹೋಮಿ ಭಾಭಾ ಫೆಲೋಶಿಪ್ ಕೌನ್ಸಿಲ್ ೧೯೬೭ ರಿಂದ ಹೋಮಿ ಭಾಭಾ ಫೆಲೋಶಿಪ್ಗಳನ್ನು ನೀಡುತ್ತಿದೆ. ಅವರ ಹೆಸರುಗಳಲ್ಲಿ ಇತರ ಪ್ರಸಿದ್ಧ ಸಂಸ್ಥೆಗಳು ಹೋಮಿ ಭಾಭಾ ನ್ಯಾಶನಲ್ ಇನ್ಸ್ಟಿಟ್ಯೂಟ್, ಇಂಡಿಯನ್ ಡೀಮೆಡ್ ಯೂನಿವರ್ಸಿಟಿ ಮತ್ತು ಹೋಮಿ ಭಾಭಾ ಸೆಂಟರ್ ಫಾರ್ ಸೈನ್ಸ್ ಎಜುಕೇಶನ್, ಮುಂಬಯಿ. ಭಾಭಾ ಅವರ ಮರಣದಲ್ಲಿ, ಮಲಬಾರ್ ಬೆಟ್ಟದ ವಿಸ್ತಾರವಾದ ವಸಾಹತುಶಾಹಿ ಬಂಗಲೆ, ಅವರ ಜೀವನದ ಬಹುಪಾಲು ಖರ್ಚು ಮಾಡಿದ ಅವರ ಎಸ್ಟೇಟ್ ಅನ್ನು ಅವರ ಸಹೋದರ ಜಮ್ಶೆಡ್ ಭಾಭಾ ಅವರು ಪಡೆದಿದ್ದಾರೆ. ಕಲೆ ಮತ್ತು ಸಂಸ್ಕೃತಿಯ ಅತಿದೊಡ್ಡ ಪೋಷಕರಾದ ಜಮ್ಶೆಡ್, ಬಂಗಲೆ ಮತ್ತು ಅದರ ವಿಷಯಗಳನ್ನು ೨೦೧೭ ರಲ್ಲಿ ೩೭೨ ಕೋಟಿ ರೂಪಾಯಿಗಳಿಗೆ ಹರಾಜು ಮಾಡಿದರು. ಇದು ಕೇಂದ್ರದ ಉಸ್ತುವಾರಿ ಮತ್ತು ಅಭಿವೃದ್ಧಿಗಾಗಿ ಹಣವನ್ನು ಸಂಗ್ರಹಿಸಿತ್ತು. ಹೋಮಿ ಭಭಾಗೆ ಸ್ಮಾರಕವಾಗಿ ಸಂರಕ್ಷಿಸಲ್ಪಟ್ಟ ಕೆಲವು ಪ್ರಯತ್ನಗಳ ಹೊರತಾಗಿಯೂ ಗೋಡೆರೆಜ್ ಕುಟುಂಬದ ಮಾಲೀಕರಾದ ಸ್ಮಿತಾ -ಕೃಷ್ಣ ಗೋದ್ರೆಜ್ನಿಂದ ೨೦೧೬ ರ ಜೂನ್ ನಲ್ಲಿ ಈ ಬಂಗಲೆಯು ನೆಲಸಮವಾಯಿತು. ಉಲ್ಲೇಖಗಳು ಭೌತವಿಜ್ಞಾನಿಗಳು ವಿಜ್ಞಾನಿಗಳು
3607
https://kn.wikipedia.org/wiki/%E0%B2%B5%E0%B2%BF%E0%B2%95%E0%B3%8D%E0%B2%B0%E0%B2%AE%E0%B3%8D%20%E0%B2%B8%E0%B2%BE%E0%B2%B0%E0%B2%BE%E0%B2%AD%E0%B2%BE%E0%B2%AF%E0%B2%BF
ವಿಕ್ರಮ್ ಸಾರಾಭಾಯಿ
ವಿಕ್ರಮ್ ಸಾರಾಭಾಯಿ (೧೨ ಆಗಸ್ಟ್ ೧೯೧೯ - ೨೬ ಡಿಸೆಂಬರ್ ೧೯೭೧) ಭಾರತದ ವಿಜ್ಞಾನಿ ಮತ್ತು ಬಾಹ್ಯಾಕಾಶ ಸಂಶೋಧಕರು. ಇವರನ್ನು ಭಾರತದ ಬಾಹ್ಯಾಕಾಶ ವಿಜ್ಞಾನದ ಪಿತಾಮಹ ಎಂದು ಕರೆಯುತ್ತಾರೆ. ಭಾರತದ ವ್ಯೋಮ ಸಂಶೋಧನೆ, ಉದ್ಯಮ ಮತ್ತು ಸಾಮಾಜಿಕ ಕಾರ್ಯಗಳಿಗೆ ಚಾಲನೆ ನೀಡಿದ ಭೌತವಿಜ್ಞಾನಿ. ಖ್ಯಾತ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಇವರು ಮುಂಬಯಿ ಮತ್ತು ಕೇಂಬ್ರಿಜ್‍ಗಳಲ್ಲಿ ಶಿಕ್ಷಣ ಪಡೆದರು. ತದನಂತರ ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್‍ನಲ್ಲಿ ವಿಶ್ವಕಿರಣ, ಭೂಕಾಂತತೆ, ಅಂತರಗ್ರಹ ವ್ಯೋಮ, ಸೂರ್ಯ-ಭೂಮಿ ಸಂಬಂಧ ಮುಂತಾದವುಗಳ ಕುರಿತು ಸಂಶೋಧನೆ ಮಾಡಿದರು. ಇದಕ್ಕೆ ಮಾರ್ಗದರ್ಶನ ಮಾಡಿದವರು ಸಿ. ವಿ. ರಾಮನ್ (1888-1979). ಉಷ್ಣವಲಯದಲ್ಲಿ ವಿಶ್ವಕಿರಣಗಳು ಎಂಬ ವಿಷಯ ಕುರಿತಾದ ಇವರ ಸಂಶೋಧನೆಗೆ ಕೇಂಬ್ರಿಜ್ ವಿಶ್ವವಿದ್ಯಾಲಯ ಪಿಎಚ್.ಡಿ. ಪದವಿ ನೀಡಿತು (1947). ಜನನ ಇವರ ಜನನ ಗುಜರಾತಿನ ಅಹ್ಮದಾಬಾದ್‌ನ ಶ್ರೀಮಂತ ಕುಟುಂಬದಲ್ಲಿ. ತಂದೆ ಅಂಬಾಲಾಲ್ ಸಾರಾಭಾಯ್. ತಾಯಿ ಸರಳಾದೇವಿ. ಚಿಕ್ಕಂದಿನಿಂದಲೇ ಬುದ್ಧಿವಂತನಾಗಿದ್ದ ಬಾಲಕ ಸಾಹಸಪ್ರಿಯ ಕೂಡಾ. ಇವರ ಮನೆಗೆ ಬರುತ್ತಿದ್ದ ಮೋತಿಲಾಲ್ ನೆಹರು, ಜವಾಹರಲಾಲ್ ನೆಹರು, ಸಿ.ವಿ.ರಾಮನ್ ಮುಂತಾದ ಮಹನೀಯರುಗಳ ವ್ಯಕ್ತಿತ್ವ ಈ ಧೀಮಂತ ಬಾಲಕನ ಮೇಲೆ ಸಾಕಷ್ಟು ಪ್ರಭಾವ ಬೀರಿತು. ವಿದ್ಯಾಭ್ಯಾಸ ಭಾರತದಲ್ಲಿ ಕಾಲೇಜು ವಿದ್ಯಾಭ್ಯಾಸ ಮುಗಿಸಿದರು. ತಮ್ಮ ೨೦ನೇ ವಯಸ್ಸಿನಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಿಂದ 'ಪ್ರಕೃತಿವಿಜ್ಞಾನ'ದಲ್ಲಿ ಟ್ರೈಪಾಸ್ ಎಂಬ ಪರೀಕ್ಷೆಯಲ್ಲಿ ಉತ್ತೀರ್ಣರಾದರು.೧೯೪೭ರಲ್ಲಿ ಕೇಂಬ್ರಿದ್ಜ್‌ನಿಂದ ಪಿಹೆಚ್‌ಡಿ ಪದವಿ ಪಡೆದರು. ಸಂಶೋಧನೆ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಲ್ಲಿ ವಿಜ್ಞಾನಿ ಸಿ.ವಿ.ರಾಮನ್‌ರೊಂದಿಗೆ ಸಂಶೋಧನೆಯಲ್ಲಿ ತೊಡಗಿದರು. ವಿಶ್ವ ಕಿರಣಗಳ ತೀಕ್ಷ್ಣತೆಯಲ್ಲುಂಟಾಗುವ ಬದಲಾವಣೆಗಳ ಬಗ್ಗೆ ಸಂಶೋಧನೆ ನಡೆಸಿದರು ಹಾಗೂ ಅವುಗಳ ಕಾಲ ತೀಕ್ಷ್ಣತೆ ದಿನಕ್ಕೆ ೨ ಬಾರಿ ಬದಲಾಗುವುದನ್ನು ಕಂಡುಹಿಡಿದು,ಅದರ ಬಗ್ಗೆ ಪ್ರಬಂಧ ಬರೆದು ಪ್ರಕಟಿಸಿದರು.ಈ ವಿಚಾರ ಬಾಹ್ಯಾಕಾಶ ಸಂಶೋಧನೆಗಳಿಗೆ ಸಹಾಯಕವಾಯಿತು. (ವಸ್ತುಗಳನ್ನು ಒಡೆದಾಗ ದೊರೆಯುವ ಋಣ ವಿದ್ಯುತ್ಕಣ,ಧನ ವಿದ್ಯುತ್ಕಣ,ವಿದ್ಯುತ್‌ ಹೀನಕಣಗಳಲ್ಲದೆ, ಬೇರೆ ರೀತಿಯ ಬೇರೆ ತೂಕದ ಮೆಸಾನ್‌ ಕಣಗಳೂ ಇರುತ್ತವೆ. ಇವು ಕೂಡ ವಿಶ್ವಕಿರಣಗಳಿಂದ ಉತ್ಪತ್ತಿಯಾಗುತ್ತವೆ ಹಾಗೂ ನಿಮಿಷಕ್ಕೆ ೬೦ರಂತೆ ಪ್ರತಿಯೊಬ್ಬನ ದೇಹವನ್ನು ಹಾದು ಹೋಗುತ್ತವೆ.) ಉದ್ಯೋಗ,ಸಾಧನೆ ಅಹಮದಾಬಾದಿನ ಫಿಸಿಕಲ್ ರಿಸರ್ಚ್ ಲ್ಯಾಬೊರೆಟರಿಯಲ್ಲಿ ಪ್ರಾಧ್ಯಾಪಕರಾಗಿ ವೃತ್ತಿಜೀವನವನ್ನು ಆರಂಭಿಸಿದ ಇವರು ಮುಂದೆ ಅದರ ನಿರ್ದೇಶಕರೂ ಆದರು (1965). ಹೈಡ್ರೊಜನಿನ ದೈನಿಕ ವ್ಯತ್ಯಯ ಅಯಾನುಗೋಳದಲ್ಲಿ ಆಗುವ ಬದಲಾವಣೆಗಿಂತಲೂ ಹೆಚ್ಚಾಗಿ ಕಾಂತಗೋಳದಲ್ಲಿ ಆಗುವ ಬದಲಾವಣೆಗಳನ್ನು ಅವಲಂಬಿಸಿದೆ ಎಂದು ಸೂಚಿಸಿದ ಖ್ಯಾತಿ ಇವರದ್ದು. ಮೀಸಾನ್ ದೂರದರ್ಶಕ ರಚನೆ; ಕೊಡೈಕೆನಾಲ್, ತಿರುವನಂತಪುರ ಮತ್ತು ಗುಲ್ಮಾರ್ಗ್‍ಗಳಲ್ಲಿ ಸಂಶೋಧನಾ ಠಾಣ್ಯ ಸ್ಥಾಪನೆ - ಇವು ಇವರ ವಿಶಿಷ್ಟ ಕೊಡುಗೆಗಳು. ಅಹಮದಾಬಾದಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್, ವಸ್ತ್ರೋದ್ಯಮ ಸಂಶೋಧನಸಂಸ್ಥೆ, ನೆಹರೂ ಫೌಂಡೇಶನ್ ಮತ್ತು ಕಮ್ಯೂನಿಟಿ ಸೈನ್ಸ್ ಸೆಂಟರ್‍ನಂಥ ಹಲವು ಸಂಸ್ಥೆಗಳ ಸ್ಥಾಪನೆಗೆ ಕಾರಣೀಭೂತರೂ ಆದರು. ಯುರೇನಿಯಮ್ ಅದುರಿನ ಅನ್ವೇಷಣೆಗೆ ಆದ್ಯತೆ ನೀಡಿಕೆ, ಕಲ್ಪಾಕಮ್‍ನ ಫಾಸ್ಟ್ ಬ್ರೀಡರ್ ರಿಯಾಕ್ಟರ್ ನಿರ್ಮಾಣದ ವೇಗವರ್ಧನೆ ಮತ್ತು ಭಾರತೀಯ ಸಂಪನ್ಮೂಲಗಳಿಂದಲೇ ಕೊಲ್ಕತಾದ ಸೈಕ್ಲೊಟ್ರಾನ್ ಸ್ಥಾಪನೆಗೆ ಚಾಲನೆ - ಇವು ವಿಕ್ರಮ್‍ರವರು ಭಾರತದ ಪರಮಾಣು ಶಕ್ತಿ ಮಂಡಲಿಯ ಅಧ್ಯಕ್ಷರಾದ(1966) ಅನಂತರ ಮಾಡಿದ ಸಾಧನೆಗಳು. ಭಾರತದ ಎಲೆಕ್ಟ್ರಾನಿಕ್ ಆಯೋಗದ ಹಾಗೂ ಸಂಯುಕ್ತ ರಾಷ್ಟ್ರ ಸಂಸ್ಥೆ ಸಂಘಟಿತ ಬಾಹ್ಯ ವ್ಯೋಮದ ಶಾಂತಿಯುತ ಉಪಯೋಗಗಳು ಅಧಿವೇಶನದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದರು. ಊಧ್ರ್ವ ನಿಯಂತ್ರಣವನ್ನೊಳಗೊಂಡ ಅನುಕ್ರಮಶ್ರೇಣಿಯ ಸಾಂಸ್ಥಿಕ ಸಂರಚನೆಗಳು ಭಾರತಕ್ಕೆ ತಕ್ಕದ್ದಲ್ಲ ಎಂದು ದೃಢವಾಗಿ ನಂಬಿದ್ದ ಇವರು ಕ್ಷಿತಿಜೀಯ ನಿಯಂತ್ರಣ ಮತ್ತು ನಿರ್ವಹಣ ವ್ಯವಸ್ಥೆಗಳನ್ನು ಬೆಂಬಲಿಸಿದರು. ವ್ಯೋಮ ಸಂಶೋಧನೆಯಲ್ಲಿ ಭಾರತ ಸಾಧಿಸಿದ ಯಶಸ್ಸಿಗೆ ಅವರು ಸ್ಥಾಪಿಸಿದ ಇಂಥ ನಿರ್ವಹಣ ವ್ಯವಸ್ಥೆ ಕಾರಣವಾಯಿತು. ಭಾರತದ ಆವಶ್ಯಕತೆಗಳಿಗೆ ಪ್ರಸ್ತುತವಾದ ತಂತ್ರವಿದ್ಯಾಯೋಜನೆಯೊಂದನ್ನು ಇವರು ಹಾಕಿದ್ದರು. ಗದ್ದಲದಲ್ಲೂ ಸಂಗೀತವನ್ನು ಕೇಳಬಲ್ಲೆವಾದರೆ ನಾವು ಮಾಡುವ ಕೆಲಸ ಫಲಪ್ರದವಾಗುವುದು ನಿಶ್ಚಿತ ಎಂಬ ಇವರ ಹೇಳಿಕೆ ಇವರ ವೈಯಕ್ತಿಕ ಜೀವನದರ್ಶನದ ತಿರುಳು. ಸಾಮಾನ್ಯವಾಗಿ ಪ್ರತಿ ದಿನ 16-18 ಗಂಟೆಗಳ ಕಾಲ ಕಾರ್ಯನಿರತರಾಗಿರುತ್ತಿದ್ದ ವಿಕ್ರಮ್ ಸಾರಾಭಾಯಿಯವರು ಕಾರ್ಯನಿಮಿತ್ತ ತುಂಬಾ ರಾಕೆಟ್ ಉಡಾವಣಾಕೇಂದ್ರಕ್ಕೆ ತೆರಳಿದ ಸಂದರ್ಭದಲ್ಲಿ ರಾತ್ರಿ ನಿದ್ರಿಸುತ್ತಿದ್ದಾಗ ಹೃದಯಾಘಾತದಿಂದ ನಿಧನರಾದರು (1971 ಡಿಸೆಂಬರ್ 30). ತುಂಬಾದಲ್ಲಿರುವ ವಿಕ್ರಮ್ ಸಾರಾಭಾಯಿ ವ್ಯೋಮಕೇಂದ್ರ ಮತ್ತು ಪುಣೆಯ ಸಮೀಪದ ಆರ್ವಿಯಲ್ಲಿರುವ ವಿಕ್ರಮ್ ಭೂಠಾಣ್ಯ - ಇವು ಈ ಸ್ವದೇಶಪ್ರೇಮೀ ಭಾರತೀಯ ವಿಜ್ಞಾನಿಗೆ ರಾಷ್ಟ್ರ ಸಲ್ಲಿಸಿದ ಕೃತಜ್ಞತೆಯ ಪ್ರತೀಕಗಳು. ೧೯೬೬ರಲ್ಲಿ ಅಣು ಶಕ್ತಿ ಆಯೋಗದ ಅಧ್ಯಕ್ಷರಾಗಿದ್ದ ಹೋಮಿ ಜಹಾಂಗೀರ್ ಭಾಭಾ ನಿಧನ ಹೊಂದಿದಾಗ, ಅವರ ಉತ್ತರಾಧಿಕಾರಿಯಾಗಿ ನೇಮಕಗೊಂಡವರು ವಿಕ್ರಮ್ ಸಾರಾಭಾಯಿ. ಈ ಸ್ಥಾನದಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ ಅವರು ಒಳ್ಳೆಯ ಆಡಳಿತಗಾರರೆಂದು ಹೆಸರು ಪಡೆದರು. ಅಧ್ಯಕ್ಷ ಸ್ಥಾನದಲ್ಲಿದ್ದು ಕೊಂಡೇ ಅಹರ್ನಿಶಿ ಸಂಶೋಧನೆಗಳನ್ನು ಮಾಡಿದರು. ಅಹ್ಮದಾಬಾದಿನಲ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸಿ,ಕೆಲಕಾಲ ಅದರ ನಿರ್ದೇಶಕರಾಗಿದ್ದರು. ೧೯೫೫ರಲ್ಲಿ ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ವಿಶ್ವಕಿರಣಗಳ ಸಂಶೋಧನಾ ಕೇಂದ್ರ ಸ್ಥಾಪಿಸಿದರು. ತಮ್ಮ ೪೦ನೇ ವಯಸ್ಸಿನಲ್ಲಿ ಭಾರತೀಯ ವಿಜ್ಞಾನ ಕಾಂಗ್ರೆಸ್ ನಡೆಸಿದ ಸಮ್ಮೇಳನವೊಂದರಲ್ಲಿ ಭೌತ ವಿಜ್ಞಾನ ವಿಭಾಗದ ಅಧ್ಯಕ್ಷತೆ ವಹಿಸಿದ್ದರು. ಇಷ್ಟೇ ಅಲ್ಲದೆ ಹಲವು ಸಂಘ,ಸಂಸ್ಥೆಗಳನ್ನು ಹುಟ್ಟು ಹಾಕಿದ್ದರು. ಅವು ಹೀಗಿವೆ: ಗ್ರೂಪ್ ಫಾರ್ ಇಂಪ್ರೂವ್‌ಮೆಂಟ್ ಆಫ್ ಸೈನ್ಸ್ ಎಜುಕೇಷನ್ ನೆಹರೂ ಫೌಂಡೇಷನ್ ಕಮ್ಯೂನಿಟಿ ಸೈನ್ಸ್ ಸೆಂಟರ್ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಪುರಸ್ಕಾರಗಳು ೧೯೬೨-ಭಾರತ ಸರ್ಕಾರದ ಭಾಟ್ನಾಗರ್ ಸ್ಮಾರಕ ಪಾರಿತೋಷಕ ೧೯೬೬-ಪದ್ಮಭೂಷಣ ೧೯೭೨-(ಮರಣೋತ್ತರ)ಪದ್ಮವಿಭೂಷಣ ವ್ಯಕ್ತಿತ್ವ ವಿಕ್ರಮ್ ಸಾರಾಭಾಯಿಯವರು ಎಲ್ಲಾ ಮನುಷ್ಯರನ್ನೂ ಸಮಾನವಾಗಿ ನೋಡುವ ವಿಶಾಲ ಮನೋಭಾವ ಹೊಂದಿದ್ದರು. ವ್ಯವಸಾಯ, ಕೈಗಾರಿಕೆ, ಹವಾಮಾನ ವೀಕ್ಷಣೆ, ಖನಿಜ ಶೋಧನೆ-ಹೀಗೆ ಎಲ್ಲಾವುದಕ್ಕೂ ಅಣುಶಕ್ತಿ ಕೇಂದ್ರಗಳು ಉಪಯೋಗವಾಗಬೇಕು ಎಂಬುದು ಇವರ ಅಭಿಪ್ರಾಯ ವಾಗಿತ್ತು. ಹೋಮಿಭಾಭಾ ಕಂಡ ಕನಸನ್ನು ನನಸಾಗಿಸುವಲ್ಲಿ ಅಪಾರ ಪರಿಶ್ರಮ ವಹಿಸಿದ್ದಾರೆ. ಒಟ್ಟಾರೆ ಅವರು ಭಾರತ ದೇಶದ ಒಬ್ಬ ದೊಡ್ಡ ವಿಜ್ಞಾನಿ. ಉಲ್ಲೇಖಗಳು ಭಾರತದ ವಿಜ್ಞಾನಿಗಳು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು ಬಾಹ್ಯಾಕಾಶ ಸಂಶೋಧಕರು
3608
https://kn.wikipedia.org/wiki/%E0%B2%B9%E0%B2%B0%E0%B2%97%E0%B3%8B%E0%B2%AC%E0%B2%BF%E0%B2%82%E0%B2%A6%20%E0%B2%96%E0%B3%81%E0%B2%B0%E0%B2%BE%E0%B2%A8
ಹರಗೋಬಿಂದ ಖುರಾನ
ಹರ್ ಗೋಬಿಂದ್ ಖೊರಾನ (9 ಜನವರಿ 1922 - 9 ನವೆಂಬರ್ 2011) ಒಬ್ಬ ಭಾರತೀಯ ಅಮೇರಿಕನ್ ಜೀವರಸಾಯನಶಾಸ್ತ್ರಜ್ಞರಾಗಿದ್ದರು , ಜೀವಕೋಶದ ಆನುವಂಶಿಕ ಸಂಕೇತವನ್ನು ಸಾಗಿಸುವ ನ್ಯೂಕ್ಲಿಯಿಕ್ ಆಮ್ಲಗಳಲ್ಲಿನ ನ್ಯೂಕ್ಲಿಯೊಟೈಡ್ಗಳ ಕ್ರಮವು ಪ್ರೋಟೀನ್ಗಳ ಕೋಶದ ಸಂಶ್ಲೇಷಣೆಯನ್ನು ನಿಯಂತ್ರಿಸುತ್ತದೆ ಎಂಬ ತಮ್ಮ ಸಂಶೋಧನೆಗೆ 1968 ರ ಶರೀರವಿಜ್ಞಾನ ಅಥವಾ ಮೆಡಿಸಿನ್ ನೊಬೆಲ್ ಪ್ರಶಸ್ತಿಯನ್ನು ಮಾರ್ಷಲ್ ಡಬ್ಲ್ಯು.ನೀರೆನ್ಬರ್ಗ್ ಮತ್ತು ರಾಬರ್ಟ್ ಡಬ್ಲ್ಯೂ ಜೊತೆ ಹಂಚಿಕೊಂಡಿದ್ದಾರೆ . ಖೊರಾನಾ ಅದೇ ವರ್ಷ ಕೊಲಂಬಿಯಾ ವಿಶ್ವವಿದ್ಯಾನಿಲಯದ ಲೂಯಿಸಾ ಗ್ರಾಸ್ ಹೋರ್ವಿಟ್ಜ್ ಪ್ರಶಸ್ತಿಯನ್ನು ಪಡೆದರು. ಜನನ-ವಿದ್ಯಾಭ್ಯಾಸ ಹರಗೋಬಿಂದ ಖುರಾನರವರ ಜನನ ಪಂಜಾಬಿನ ರಾಯಪುರದಲ್ಲಿ. ಸಣ್ಣ ಊರಿನ ಅಕ್ಷರಸ್ಥ ಕುಟುಂಬ ಇವರದ್ದು. ತಂದೆ ಕಂದಾಯ ವಸೂಲಿ ಅಧಿಕಾರಿ. ಇವರ ೧೨ನೇ ವಯಸ್ಸಿನಲ್ಲೇ ತಂದೆಯವರ ಮರಣ. ಕಷ್ಟಪಟ್ಟು ಪ್ರಾರಂಭಿಕ ವಿದ್ಯಾಭ್ಯಾಸ ಮುಗಿಸಿ, ನಂತರ ಲಾಹೋರ್‍‌ನ ಸರ್ಕಾರಿ ಕಾಲೇಜು ಸೇರಿ, ೧೯೪೫ರಲ್ಲಿ ಪಂಜಾಬ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದರು. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಇವರು, ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ದಲಾಲ್ ವಿದ್ಯಾರ್ಥಿವೇತನದ ಸಹಾಯದಿಂದ ಇಂಗ್ಲೆಂಡಿನ ಲಿವರ್‌ಪೂಲ್ ವಿಶ್ವವಿದ್ಯಾನಿಲಯದಲ್ಲಿ ಅಭ್ಯಸಿಸಿ ಪಿಎಚ್‌ಡಿ ಪದವಿ ಪಡೆದರು. ಉದ್ಯೋಗ-ಸಂಶೋಧನೆ ೧೯೪೮-೪೯ರಲ್ಲಿ ಜೂರಿಕ್ನಲ್ಲಿ ಸಂಶೋಧಕರಾಗಿದ್ದರು. ೧೯೫೨ರಲ್ಲಿ ಬ್ರಿಟಿಷ್ ಕೊಲಂಬಿಯ ವಿಶ್ವವಿದ್ಯಾನಿಲಯದಲ್ಲಿ ಸಾವಯವ ರಾಸಾಯನಿಕವಿಜ್ಞಾನ ವಿಭಾಗದ ಮುಖ್ಯಸ್ಥರಾದರು. ನಂತರದಲ್ಲಿ ವಿಸ್ಕಾನ್ಸಿನ್‌ ವಿಶ್ವವಿದ್ಯಾನಿಲಯದ 'ಕಿಣ್ವ ವಿಜ್ಞಾನ' ಸಂಶೋಧನಾಲಯದಲ್ಲಿ ಸಂಶೋಧನೆ ಮುಂದುವರೆಸಿದರು.೧೯೭೦ರಲ್ಲಿ ಮಸ್ಸಾಚುಸೆಟ್ಸ್ ತಂತ್ರಜ್ಞಾನಸಂಸ್ಥೆ ಸೇರಿ,ಜೀವಶಾಸ್ತ್ರ ಮತ್ತು ರಸಾಯನಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ವಂಶವಾಹಿ-ಜೀನ್ಸ್(genes) ಖುರಾನರ ದೊಡ್ಡ ಸಾಧನೆಯೆಂದರೆ, ಕೃತಕವಾಗಿ ವಂಶವಾಹಿಯನ್ನು ಸೃಷ್ಟಿಸಿದ್ದು.ಎಲ್ಲಾ ಜೀವಿಗಳಲ್ಲೂ ಇರುವ ಸೂಕ್ಷ್ಮ ಜೀವಕೋಶಗಳ ಕೋಶಬಿಂದುವಿನಲ್ಲಿ 'ಡಿಅಕ್ಸಿರೈಬೊ ನ್ಯೂಕ್ಲಿಯಿಕ್ ಆಮ್ಲ' ಎಂಬ ರಾಸಾಯನಿಕವಿರುತ್ತದೆ. ಈ ಆಮ್ಲವೇ 'ವಂಶಪಾರಂಪರತೆ' ಅಥವಾ 'ಅನುವಂಶೀಯತೆ'ಯನ್ನು ನಿರ್ಧರಿಸುತ್ತದೆ.ಇದನ್ನು ಡಿಎನ್‌ಎ(DNA) ಎನ್ನುತ್ತಾರೆ. ಪ್ರಶಸ್ತಿ-ಪುರಸ್ಕಾರಗಳು ೧೯೬೦ರಲ್ಲಿ ಖೊರಾನ ಅವರಿಗೆ ಕೆನಡಾ ಸಾರ್ವಜನಿಕ ಸೇವಾಪರಿಣತರ ಸಂಸ್ಥೆಯಿಂದ ಚಿನ್ನದ ಪದಕ ದೊರಕಿತು. ೧೯೬೭ರಲ್ಲಿ ಡ್ಯಾನಿಖೈಮನ್ ಬಹುಮಾನ ದೊರೆಯಿತು. ಖೊರಾನ ಅವರು ರಾಬರ್ಟ್ ಹಾಲಿ ಮತ್ತು ಮಾರ್ಶಲ್ ನೈರೆನ್‌ಬರ್ಗ್ ಅವರೊಂದಿಗೆ ಜಂಟಿಯಾಗಿ ೧೯೬೮ರಲ್ಲಿ ವೈದ್ಯಶಾಸ್ತ್ರದ ನೊಬೆಲ್ ಪ್ರಶಸ್ತಿ ಪಡೆದರು. ೧೯೮೭ರಲ್ಲಿ ಅಮೆರಿಕಾ ಸರ್ಕಾರ ರಾಷ್ಟ್ರಪ್ರಶಸ್ತಿ ನೀಡಿ ಗೌರವಿಸಿದೆ. ನಿಧನ ಡಾ.ಖುರಾನರವರು ನವೆಂಬರ್ ೯, ೨೦೧೧ ರಂದು, ಅಮೆರಿಕದ ಮೆಸ್ಸಾಚುಸೆಟ್ಸ್ ರಾಜ್ಯದ ಕಾನ್ಕಾರ್ಡ್ ನಗರದಲ್ಲಿ ತಮ್ಮ ೮೯ ವರ್ಷ ಪ್ರಾಯದಲ್ಲಿ ನಿಧನರಾದರು. ಅವರಿಗೆ ಪತ್ನಿ ಹಾಗೂ ಜೂಲಿಯ ಮತ್ತು ಡೇವ್ ಎಂಬ ಮಕ್ಕಳು ಇದ್ದಾರೆ. ಉಲ್ಲೇಖಗಳು ಬಾಹ್ಯ ಕೊಂಡಿಗಳು The Khorana Program 33rd Steenbock Symposium Remembering Har Gobind Khorana: University of Wisconsin Biochemistry Newsletter, adapted from article in Cell Har Gobind Khorana materials in the South Asian American Digital Archive (SAADA) PDF ಭಾರತೀಯ ಅಮೆರಿಕನ್ ಭಾರತದ ವಿಜ್ಞಾನಿಗಳು ವೈದ್ಯಶಾಸ್ತ್ರದ ನೊಬೆಲ್ ಪ್ರಶಸ್ತಿ ಪುರಸ್ಕೃತರು ನೊಬೆಲ್ ಪ್ರಶಸ್ತಿ ಪುರಸ್ಕೃತ ಭಾರತೀಯರು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು ೨೦೧೧ ನಿಧನ ೧೯೨೨ ಜನನ
3609
https://kn.wikipedia.org/wiki/%E0%B2%AF%E0%B3%81.%20%E0%B2%86%E0%B2%B0%E0%B3%8D.%20%E0%B2%B0%E0%B2%BE%E0%B2%B5%E0%B3%8D
ಯು. ಆರ್. ರಾವ್
ಡಾ ಯು.ಆರ್.ರಾವ್, ಎಂದೇ ಅವರ ಗೆಳೆಯರಿಗೆ, ಆತ್ಮೀಯರಿಗೆ, ಸಹೋದ್ಯೋಗಿಗಳಿಗೆ ಚಿರಪರಿಚಿತರಾಗಿರುವ ಉಡುಪಿ ರಾಮಚಂದ್ರರಾವ್, 'ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ' (ಇಸ್ರೋ)ಯ ಮಾಜಿ ಮುಖ್ಯಸ್ಥರಾಗಿ ಮಹತ್ವದ ಸಾಧನೆಗಳನ್ನು ಮಾಡಿದ್ದಾರೆ. ರಾಮಚಂದ್ರ ರಾವ್, ಅಂತರ ರಾಷ್ಟ್ರೀಯ ವೈಮಾನಿಕ ಫೆಡರೇಷನ್‌ ಸಂಸ್ಥೆ, ಬಾಹ್ಯಾಕಾಶ ವಿಜ್ಞಾನದಲ್ಲಿ ಅತ್ಯುತ್ತಮ ಸೇವೆಸಲ್ಲಿಸಿದವರಲ್ಲಿ ಪ್ರಮುಖರು. ಜನನ ಉಡುಪಿ ರಾಮಚಂದ್ರರಾವ್ ರವರು ಉಡುಪಿ ಸಮೀಪದ 'ಮಾರ್ಪಳ್ಳಿ'ಯಲ್ಲಿ ಮಾರ್ಚ್ ೧೦, ೧೯೩೨ ರಂದು ಜನಿಸಿದರು. ಇವರ ತಾಯಿ, ಕೃಷ್ಣವೇಣೀಯಮ್ಮ; ತಂದೆ, ಲಕ್ಷ್ಮೀನಾರಾಯಣರಾವ್. ಇವರದು ಕೃಷಿಕ ಕುಟುಂಬ. ವಿದ್ಯಾಭ್ಯಾಸ ರಾಮಚಂದ್ರರಾಯರು, ಉಡುಪಿ, ಅನಂತಪುರ, ಮದ್ರಾಸ, ಬನಾರಸ್ ಮೊದಲಾದ ಸ್ಥಳಗಳಲ್ಲಿ ಅಧ್ಯಯನ ಮಾಡಿದರು. ವಿಕ್ರಮ್ ಸಾರಾಭಾಯಿಯವರ ಮಾರ್ಗದರ್ಶನದಲ್ಲಿ ವಿಶ್ವಕಿರಣಗಳ ಬಗೆಗೆ ಅಧ್ಯಯನ ಮಾಡಿ ಗುಜರಾತ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದರು. ಬಳಿಕ ಅಮೆರಿಕದ ಮೆಸಾಚುಸೆಟ್ಸ್ನಲ್ಲಿ ಉನ್ನತ ವ್ಯಾಸಂಗ ಮಾಡಿದರು. ಟೆಕ್ಸಾಸ ವಿಶ್ವವಿದ್ಯಾಲಯದಲ್ಲಿ ಸಂಶೋಧಕರಾಗಿ, ಉಪನ್ಯಾಸಕರಾಗಿ ದುಡಿದು,೧೯೬೬ ರಲ್ಲಿ ಭಾರತಕ್ಕೆ ಮರಳಿದರು. ವೃತ್ತಿಜೀವನ ಮೊದಲಿಗೆ 'ಅಹಮದಾಬಾದಿನ ಫಿಜಿಕಲ್ ರಿಸರ್ಚ್ ಲೆಬೊರೆಟರಿ'ಯಲ್ಲಿ ಪ್ರಾಧ್ಯಾಪಕರಾಗಿದ್ದ ಪ್ರೊ.ಯು.ಆರ್.ರಾವ್ ಆ ಬಳಿಕ ಇಸ್ರೊದಲ್ಲಿ ಸೇವೆಗೈದರು. ಬಾಹ್ಯಾಕಾಶ ಕಕ್ಷೆಗೆ ಅನೇಕ ಉಪಗ್ರಹಗಳನ್ನುಸೇರಿಸಿದ ಕೀರ್ತಿ ಡಾ.ಯು.ಆರ್.ರಾವ್ ಅವರದು. ಪ್ರಶಸ್ತಿ ಪುರಸ್ಕಾರಗಳು ಭಾರತದ ಎರಡನೇ ಅತಿ ಶ್ರೇಷ್ಠ ಪ್ರಶಸ್ತಿ ಪದ್ಮ ವಿಭೂಷಣ ಪ್ರಶಸ್ತಿ, ೨೦೧೭ 'ಡಾ.ಯು.ಆರ್.ರಾವ್ ಅವರ ಅಂತರಿಕ್ಷ ತಂತ್ರಜ್ಞಾನ ಕೃತಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ' ಲಭಿಸಿದೆ. ೧೯೭೬ರಲ್ಲಿ ಇವರಿಗೆ ಭಾರತ ಸರಕಾರವು 'ಪದ್ಮಭೂಷಣ ಪ್ರಶಸ್ತಿ'ಯನ್ನು ನೀಡಿ ಗೌರವಿಸಿತು. 'ಭಟ್ನಾಗರ ಪ್ರಶಸ್ತಿ', 'ರವೀಂದ್ರ ಪುರಸ್ಕಾರ', ‘ನಾಸಾ ಪುರಸ್ಕಾರ', 'ಗಗಾರಿನ್ ಪದಕ' ಮೊದಲಾದ ಗೌರವ ದೊರಕಿವೆ. ಮೈಸೂರು ವಿಶ್ವವಿದ್ಯಾನಿಲಯ ಸೇರಿ ಅನೇಕ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್ ಲಭಿಸಿವೆ. ಯು.ಆರ್.ರಾವ್ ಇವರು ಶಾಂತಿಗಾಗಿ ಅಂತರಿಕ್ಷ ಯೋಜನೆಯ ವಿಶ್ವಸಂಸ್ಥೆಯ ಮುಖ್ಯ ಕಾರ್ಯದರ್ಶಿಯಾಗಿದ್ದಾರೆ. 'ಪ್ರತಿಷ್ಠಿತ ಸ್ಯಾಟಲೈಟ್ ಹಾಲ್ ಆಫ್ ಫೇಮ್ ಗೌರವ' 'ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ'(ಇಸ್ರೋ) ದ ಮಾಜಿ ಮುಖ್ಯಸ್ಥರಾಗಿರುವ 'ಪ್ರೊ.ಯು.ಆರ್.ರಾವ್' 'ಪ್ರತಿಷ್ಠಿತ ಸ್ಯಾಟಲೈಟ್ ಹಾಲ್ ಆಫ್ ಫೇಮ್' ಗೌರವಕ್ಕೆ ಪಾತ್ರರಾಗಿದ್ದಾರೆ.ಸನ್.೨೦೧೩ ರ,ಮಾರ್ಚ್,೧೯ ರಂದು ವಾಷಿಂಗ್ಟನ್ ನಲ್ಲಿ ನಡೆದ ಸಮಾರಂಭದಲ್ಲಿ ಒಂದು ಸಾವಿರ ಗೌರವಾನ್ವಿತ ಬಾಹ್ಯಾಕಾಶ ವಿಜ್ಞಾನಿಗಳ ಸಮ್ಮುಖದಲ್ಲಿ ಡಾ.ರಾವ್ ರಿಗೆ ಪ್ರಶಸ್ತಿಯನ್ನು ದಯಪಾಲಿಸಲಾಯಿತು. ಡಾ.ರಾವ್ ಈ ತರಹ ಪ್ರಶಸ್ತಿಗಳಿಸಿದ ಪ್ರಥಮ ಭಾರತೀಯರು, ಹಾಗೂ ಈ ಗೌರವ ಪಡೆದ ೫೦ ಜನರ ಗುಂಪಿನಲ್ಲಿ ಅವರೂ ಸೇರಿದರು. 'ವಾಷಿಂಗ್ಟನ್ ನ ಸೊಸೈಟಿ ಆಫ್ ಸೆಟಲೈಟ್ ಪ್ರೊಫೆಷನಲ್ಸ್ ಇಂಟರ್ನ್ಯಾಷನಲ್' ವತಿಯಿಂದ ನೀಡಲಾಗುವ ಪ್ರತಿಷ್ಟಿತ ಗೌರವ ಇದಾಗಿದೆ. ಭಾರತದಲ್ಲಿ 'ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಸಂವಹನ ವಿಸ್ತಾರಕ್ಕೆ ನೀಡಿದ ಕೊಡುಗೆ'ಗಾಗಿ ಪ್ರೊ.ರಾವ್ ರವರಿಗೆ ಪ್ರಶಸ್ತಿ ಲಭಿಸಿದೆ. ೨ನೇ ಹಾಲ್‌ ಆಫ್‌ ಫೇಮ್‌ ಪ್ರಜಾವಾಣಿ:೫ ಅಕ್ಟೋಬರ್, ೨೦೧೬: ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಪ್ರೊ.ಯು.ಆರ್‌.ರಾವ್‌ ಅವರು ಪ್ರತಿಷ್ಠಿತ ‘ಐಎಎಫ್‌ ಹಾಲ್‌ ಆಫ್‌ ಫೇಮ್‌’ ಸೇರ್ಪಡೆ ಗೌರವಕ್ಕೆ ಪಾತ್ರರಾಗಿದ್ದಾರೆ. ಇಂಟರ್‌ನ್ಯಾಷನಲ್‌ ಏರೋನಾಟಿಕಲ್‌ ಫೆಡರೇಷನ್‌ (ಐಎಎಫ್‌) ನೀಡುವ ಈ ಗೌರವ ಅಂತರಿಕ್ಷ ವಿಜ್ಞಾನಿಗಳ ಪಾಲಿಗೆ ಅತ್ಯುನ್ನತವಾದುದು. ೨೦೧೬ ಸೆಪ್ಟೆಂಬರ್ ೩೦ ರಂದು ಮೆಕ್ಸಿಕೊದಲ್ಲಿ ನಡೆದ ಇಂಟರ್‌ ನ್ಯಾಷನಲ್‌ ಏರೋನಾಟಿಕಲ್‌ ಕಾಂಗ್ರೆಸ್‌ ಸಮಾವೇಶದಲ್ಲಿ ರಾವ್‌ ಅವರ ಹೆಸರನ್ನು ಹಾಲ್‌ ಆಫ್‌ ಫೇಮ್ ಗೆ ಸೇರ್ಪಡೆ ಮಾಡಲು ತೀರ್ಮಾನಿಸಲಾಯಿತು ಎಂದು ಇಸ್ರೊ ತಿಳಿಸಿದೆ. ಹಾಲ್‌ ಆಫ್‌ ಫೇಮ್‌ ಎಂದರೆ ಅಂತರ ರಾಷ್ಟ್ರೀಯ ವೈಮಾನಿಕ ಫೆಡರೇಷನ್‌ ಸಂಸ್ಥೆ ಬಾಹ್ಯಾಕಾಶ ವಿಜ್ಞಾನದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ವ್ಯಕ್ತಿಗಳ ಸಾಧನೆ ಬಣ್ಣಿಸುವ ಕಾಯಂ ಗ್ಯಾಲರಿಯನ್ನು ಸ್ಥಾಪಿಸಿದೆ. ಹಾಲ್‌ ಆಫ್‌ ಫೇಮ್‌ ಗೌರವಕ್ಕೆ ಪಾತ್ರರಾಗುವ ವ್ಯಕ್ತಿಗಳ ಕುರಿತ ಬಿನ್ನವತ್ತಳೆ, ಜೀವನಕ್ಕೆ ಸಂಬಂಧಿಸಿದ ಮಾಹಿತಿ ಮತ್ತು ಚಿತ್ರವನ್ನು ಗ್ಯಾಲರಿಯಲ್ಲಿ ಪ್ರಕಟಿಸಲಾಗುತ್ತದೆ. ವೈಯಕ್ತಿಕ ಆಸಕ್ತಿಗಳು ಆತ್ಯುತ್ತಮ ಉಡುಪಿ ಶೈಲಿಯ ಅಡುಗೆ ಮಾಡುವಕಲೆಯನ್ನು ಕರಗತಮಾಡಿಕೊಂಡಿದ್ದ, ರಾವ್ ರಜದದಿನಗಳಲ್ಲಿ ತಾವೇ ಅಡುಗೆ ಮಾಡಿ ತಮ್ಮ ಪರಿವಾರದವರಿಗೆ ಬಡಿಸುತ್ತಿದ್ದರು.ಹಿಂದೂಸ್ತಾನಿ ಸಂಗೀತಾಸಕ್ತ. ಪಂ.ಭೀಮಸೇನ ಜೋಶಿ, ಗಂಗೂಬಾಯಿಹಾನಗಲ್, ಪಂ.ಹರಿಪ್ರಸಾದ್ ಚೌರಸಿಯ,ಪಂ.ಶಿವಕುಮಾರ ಶರ್ಮ, ಮೊದಲಾದವರ ಸಂಗೀತ ಬಹಳ ಇಷ್ಟ. ಕನ್ನಡ, ಸಾಹಿತ್ಯ, ಹಾಗೂ ಇಂಗ್ಲೀಷ್ ಲೇಖಕರ ಕಾದಂಬರಿ ಓದಲು ಇಷ್ಟಪಡುತ್ತಿದ್ದರು. ವೈಜ್ಞಾನಿಕ ಪ್ರಹಸನಗಳು ಅವರಿಗೆ ಪ್ರಿಯ.ಯಕ್ಷಗಾನ, ಬಯಲಾಟ ಮೊದಲಾದ ಪ್ರಾಕಾರಗಳನ್ನು ಸಮಯಸಿಕ್ಕಾಗ ಬಿಡದೆ ವೀಕ್ಷಿಸುತ್ತಿದ್ದರು.ಹಲವಾರು ದೇಶಗಳ ಗೌರವ ಪಿ.ಎಚ್.ಡಿ.ಗಳ ಸಂಖ್ಯೆ ೨೫. ನಿಧನ ಡಾ.ರಾಮಚಂದ್ರರಾಯರು, ೨೦೧೭ ರ, ಜುಲೈ, ೨೪ ರಂದು ಬೆಂಗಳೂರಿನ ತಮ್ಮ ಇಂದಿರಾನಗರದ ಮನೆಯಲ್ಲಿ ಹೃದಯಾಘಾತದಿಂದ ಮರಣ ಹೊಂದಿದರು. ಉಡುಪಿ ರಾಮಚಂದ್ರರಾಯರಿಗೆ 'ಯಶೋದ' ಎಂಬ ಪತ್ನಿ, ಹಾಗೂ 'ಮಾಲಾ' ಎಂಬ ಮಗಳಿದ್ದಾರೆ. ಹೊರಗಿನ ಸಂಪರ್ಕಗಳು ಯು ಆರ್ ರಾವ್ ಬಗ್ಗೆ My Reminiscences of a Legend ಉಲ್ಲೇಖ ಭಾರತದ ವಿಜ್ಞಾನಿಗಳು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು ಕರ್ನಾಟಕದ ವಿಜ್ಞಾನಿಗಳು
3610
https://kn.wikipedia.org/wiki/%E0%B2%B8%E0%B3%81%E0%B2%AC%E0%B3%8D%E0%B2%B0%E0%B2%B9%E0%B3%8D%E0%B2%AE%E0%B2%A3%E0%B3%8D%E0%B2%AF%E0%B2%A8%E0%B3%8D%20%E0%B2%9A%E0%B2%82%E0%B2%A6%E0%B3%8D%E0%B2%B0%E0%B2%B6%E0%B3%87%E0%B2%96%E0%B2%B0%E0%B3%8D
ಸುಬ್ರಹ್ಮಣ್ಯನ್ ಚಂದ್ರಶೇಖರ್
ಸುಬ್ರಹ್ಮಣ್ಯನ್ ಚಂದ್ರಶೇಖರ್ (ಅಕ್ಟೋಬರ್ ೧೯, ೧೯೧೦ - ಆಗಸ್ಟ್ ೨೧, ೧೯೯೫) ಭಾರತೀಯ ಮೂಲದ ಅಮೇರಿಕ ದೇಶದ ನೋಬೆಲ್ ಪ್ರಶಸ್ತಿ ವಿಜೇತ ಭೌತವಿಜ್ಞಾನಿ. ಗೆಳೆಯರೆಲ್ಲರು ಅವರನ್ನು ಪ್ರೀತಿಯಿಂದ 'ಚಂದ್ರ' ಎಂದೇ ಸಂಬೋಧಿಸುತ್ತಿದ್ದರು. ೧೯೮೫ ರಲ್ಲಿ 'ಡಾ. ಚಂದ್ರ' ಮತ್ತು ಅಮೆರಿಕಾದ 'ವಿಲ್ಲಿಫೌಲರ್' ಜಂಟಿಯಾಗಿ 'ನೋಬೆಲ್ ಪ್ರಶಸ್ತಿ'ಯನ್ನು ಹಂಚಿಕೊಂಡರು. ವಿಶ್ವದ ಶ್ರೇಷ್ಟ ವಿಜ್ಞಾನ ಬರಹಗಾರರಲ್ಲಿ ಒಬ್ಬರಾದ 'ಆರ್ಥರ್ ಮಿಲ್ಲರ್' ಹೇಳುವಂತೆ, ಅವರೊಬ್ಬ 'ಖಭೌತ ವಿಜ್ಞಾನಿ'-'ನಕ್ಷತ್ರಲೋಕದ ಅನಭಿಷಕ್ತ ಚಕ್ರವರ್ತಿ'ಯೆಂದು. 'ಚಂದ್ರಾರವರ' ಸ್ಥೂಲಪರಿಚಯ 'ಡಾ.ಚಂದ್ರಾರವರು', ನೊಬೆಲ್ ವಿಜ್ಞಾನಿ ಸರ್ ಸಿ.ವಿ.ರಾಮನ್‌ರ ಸಮೀಪ ಸಂಬಂಧಿ. ಜನನ ಅಕ್ಟೋಬರ್ ೧೯,೧೯೧೦ ಲಾಹೋರ್ನಲ್ಲಿ. ತಂದೆ ಸುಬ್ರಹ್ಮಣ್ಯಂ ಅಯ್ಯರ್ ವಾಯವ್ಯ ರೈಲ್ವೆಯಲ್ಲಿ 'ಸಹಾಯಕ ಆಡಿಟರ್ ಜನರಲ್' ಆಗಿದ್ದರು. ತಂದೆಯವರು ಚೆನ್ನೈಗೆ ವರ್ಗವಾಗಿ ಬಂದಾಗ, 'ಟ್ರಿಪ್ಲಿಕೇನ್‌'ನಲ್ಲಿ 'ಹಿಂದೂ ಹೈಸ್ಕೂಲ್' ಸೇರಿದರು. ಗಣಿತದಲ್ಲಿ ಅಪಾರ ಪ್ರತಿಭೆ, ಮತ್ತು ಅದ್ಭುತ ನೆನೆಪಿನ ಶಕ್ತಿಯನ್ನು ಹೊಂದಿದ್ದರು. ಅದಕ್ಕೆ ಪುಟವಿಟ್ಟಂಥ ವಿಜ್ಞಾನದಲ್ಲಿ ತೀವ್ರವಾದ ಆಸಕ್ತಿ, ಉತ್ಸಾಹ. ೧೯೨೫ರಲ್ಲಿ ಪ್ರೆಸಿಡೆನ್ಸಿ ಕಾಲೇಜ್ ಸೇರಿದಾಗ ಭೌತಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡರು. ೧೯೩೦ರಲ್ಲಿ ಪದವೀಧರರಾದರು. ಇಂಗ್ಲೀಷ್ ಸಾಹಿತ್ಯದಲ್ಲಿ ಅದರಲ್ಲೂ 'ವಿಕ್ಟೋರಿಯನ್ ಯುಗದ ಶೈಲಿಯ ಸುಂದರ-ಇಂಗ್ಲೀಷ್-ಸಾಹಿತ್ಯ'ದಲ್ಲಿ ಅತ್ಯಾಸಕ್ತರು. ಆಗಿನ ಕಾಲದ ಇಂಗ್ಲೀಷ್ ಭಾಷೆಯ ಪ್ರಕಾಂಡ ಪಂಡಿತರ ಸಾಹಿತ್ಯವನ್ನು ಚೆನ್ನಾಗಿ ಅರಗಿಸಿಕೊಂಡ 'ಚಂದ್ರ', ತಮ್ಮ ವೈವಿಜ್ಞಾನಿಕ ಬರಹದಲ್ಲಿ ಸಾಹಿತ್ಯದ ಸೊಗಡನ್ನು ತುಂಬಿಡುತ್ತಿದ್ದರು. ಆಗಿನ ಕಾಲದ 'ನೋಬೆಲ್ ಪ್ರಶಸ್ತಿ ವಿಜೇತ', 'ಹ್ಯಾನ್ಸ್ ಬೇಥ್' ಹೇಳುವಂತೆ-ಚಂದ್ರಾರವರ ಬರಹವೆಂದರೆ, 'ವಿಕ್ಟೋರಿಯನ್ ಯುಗದ ಸೌಂದರ್ಯ'ವೆಲ್ಲವೂ ಅವರ ಸಾಹಿತ್ಯದಲ್ಲಿ ಮೇಳೈಸಿರುತ್ತಿತ್ತು. ವಿದ್ಯಾರ್ಥಿ ದೆಸೆಯಲ್ಲೇ 'ವೈಜ್ಞಾನಿಕ ವಿಷಯಗಳ ಮೇಲೆ ಪ್ರಬಂಧ' ಬರೆದಿದ್ದರು. ವಿವಾಹ ಮದ್ರಾಸ್ ನ 'ಪ್ರೆಸಿಡೆನ್ಸಿ ಕಾಲೇಜಿ'ನಲ್ಲಿ ವಿದ್ಯಾಭ್ಯಾಸಮಾಡುತ್ತಿದ್ದಾಗ, ತಮಗಿಂತಾ ಒಂದು ವರ್ಷ ಜೂನಿಯರ್ ಆಗಿದ್ದ, 'ರಿಸರ್ಚ್ ಫೆಲೊ ಲಲಿತ ದೊರೈಸ್ವಾಮಿ' ಯವರ ಪರಿಚಯವಾಯಿತು. ಅವರಿಬ್ಬರೂ ಪರಸ್ಪರ ಒಪ್ಪಿಕೊಂಡು ಮದುವೆಯಾದರು. ಸಂಶೋಧನೆ,ಉಪನ್ಯಾಸ ೧೯೩೦ರ ಮೇನಲ್ಲಿ ಇಂಗ್ಲೆಂಡಿನಲ್ಲಿ ಸಂಶೋಧನೆ ಮಾಡಲು ಭಾರತ ಸರ್ಕಾರದ ವಿದ್ಯಾರ್ಥಿ ವೇತನ ಮಂಜೂರಾಯಿತು. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾದರು. ೧೯೩೧ರ ಮೇನಲ್ಲಿ ಲಂಡನ್‌ನ ರಾಯಲ್ ಅಸ್ಟ್ರಾನಾಮಿಕಲ್ ಸೊಸೈಟಿಯ ಸಭೆಗಳಲ್ಲಿ ಭಾಗವಹಿಸಿ, ತಮ್ಮ ಪ್ರಬಂಧಗಳನ್ನು ಓದಿದರು. ೧೯೩೧ರ ಜುಲೈನಲ್ಲಿ ಜರ್ಮನಿಗೆ ತೆರಳಿ, ವರ್ಗನಿಯಮ, ಕ್ವಾಂಟಮ್ ಮೆಕ್ಯಾನಿಕ್ಸ್ ಮತ್ತು ನಕ್ಷತ್ರಗಳ ಕುರಿತು ಅಧ್ಯಯನ ಮಾಡಿದರು. ೧೯೩೨ರ ಜನವರಿಯಲ್ಲಿ 'ಮಾದರಿ ದ್ಯುತಿಗೋಳ'ಗಳ ಬಗ್ಗೆ 'ರಾಯಲ್ ಅಸ್ಟ್ರನಾಮಿಕಲ್ ಸೊಸೈಟಿ'ಯಲ್ಲಿ ವಿಶಿಷ್ಟ ಪ್ರಬಂಧ ಮಂಡಿಸಿ, ಎಡಿಂಗ್‌ಟನ್ ಮತ್ತು ಮಿಲ್ಸ್‌ರ ಮೆಚ್ಚುಗೆಗೆ ಪಾತ್ರರಾದರು. 'ಬೆಲ್ಜಿಯಂನ ಲೀಡ್ ವಿಶ್ವವಿದ್ಯಾನಿಲಯ'ದಲ್ಲಿ 'ಖಭೌತಶಾಸ್ತ್ರ'ದ ಬಗ್ಗೆ ನೀಡಿದ ಸರಣಿ ಉಪನ್ಯಾಸಗಳು ಮುಂದೆ 'ಪುಸ್ತಕರೂಪ'ದಲ್ಲಿ ಪ್ರಕಟವಾದವು. ಶ್ವೇತಕುಬ್ಜದ ವಿವರಣೆ ೧೯೩೪ರಲ್ಲಿ ಶ್ವೇತ ಕುಬ್ಜಗಳು (White Dwarf) ಹಾಗೂ ಮಿತಿಯುಳ್ಳ ರಾಶಿ ಕುರಿತು ರಷ್ಯಾದ 'ಪುಲ್ಕೋವೊ ಗ್ರಹವೀಕ್ಷಣಾಲಯ'ದಲ್ಲಿ ಉಪನ್ಯಾಸಗಳನ್ನು ನೀಡಿದರು.ಶ್ವೇತ ಕುಬ್ಜಗಳ ಬಗ್ಗೆ ಅವರು ನಡೆಸಿದ ಸಂಶೋಧನೆ ೧೯೪೪ರ ನಂತರ ಅವರಿಗೆ ಮನ್ನಣೆ ತಂದುಕೊಟ್ಟಿತು. ನಕ್ಷತ್ರಗಳಲ್ಲಿರುವ ಜಲಜನಕವು ವ್ಯಯವಾಗುತ್ತಾ ಹೋದಂತೆ,ಅವುಗಳ ಸ್ಥಾನದಲ್ಲಿ ೧:೪ ರ ಅನುಪಾತದಲ್ಲಿ ಹೀಲಿಯಮ್ ರೂಪುಗೊಂಡು,ನಕ್ಷತ್ರವು ಸಂಕುಚಿತವಾಗುತ್ತಾ ಹೋಗುತ್ತದೆ.ಹೀಗಾಗಿ ದ್ರವ್ಯರಾಶಿ ಸ್ಥಿರವಾಗಿ,ಸಾಂದ್ರತೆ ಹೆಚ್ಚಿ,ನಕ್ಷತ್ರದೊಳಗೆ ಒತ್ತಡವು ಅಧಿಕವಾಗುತ್ತದೆ.ಇದರ ಫಲವಾಗಿ ಪರಮಾಣು ವ್ಯವಸ್ಥೆ ಬಲಹೀನವಾಗಿ,ಎಲೆಕ್ಟ್ರಾನ್ ಹಾಗೂ ನ್ಯೂಕ್ಲಿಯಸ್ ಪ್ರತ್ಯೇಕಗೊಳ್ಳುತ್ತವೆ.ಈ ಪ್ರಕ್ರಿಯೆ ಮುಂದುವರೆದಂತೆ ಶ್ವೇತಕುಬ್ಜಗಳು ರೂಪುಗೊಳ್ಳುತ್ತವೆ.ನಕ್ಷತ್ರಗಳ ಭಾರ ಹೆಚ್ಚಿದರೂ,ಅವುಗಳೊಳಗಿನ ದ್ರವ್ಯರಾಶಿ ಒಂದು ಪರಿಮಿತಿಯಲ್ಲಿರುತ್ತವೆ.ಅಂಥ ನಕ್ಷತ್ರ ಸೂರ್ಯನ ೧.೪೪ ರಷ್ಟಕ್ಕಿಂತ ಹೆಚ್ಚಾಗಿರಲು ಸಾಧ್ಯವಿಲ್ಲವೆಂದು ಚಂದ್ರಶೇಖರ್ ಪ್ರತಿಪಾದಿಸಿದರು.ಅಲ್ಲದೆ ಯಾವುದೇ ನಕ್ಷತ್ರದ ದ್ರವ್ಯರಾಶಿ ಈ ಮಿತಿಗಿಂತ ಹೆಚ್ಚಾಗಿದ್ದರೆ,ಅದು ಸ್ಫೋಟಗೊಂಡು ಸ್ವಲ್ಪಾಂಶ ವಸ್ತುವನ್ನು ವಿಸರ್ಜಿಸಿ,ಶ್ವೇತಕುಬ್ಜವಾಗುತ್ತದೆ ಎಂದು ವಿವರಿಸಿದರು.ಅಂದರೆ ಯಾವುದೇ ಶ್ವೇತಕುಬ್ಜದ ದ್ರವ್ಯರಾಶಿ ೧.೪೪ ರ ಮಿತಿಗಿಂತ ಹೆಚ್ಚಾಗಿರುವುದಿಲ್ಲ.ಈ ಮಿತಿಯನ್ನು "ಚಂದ್ರಶೇಖರ್ ಮಿತಿ" ಎನ್ನುವರು.ಚಂದ್ರಶೇಖರ್ ಈ ಮಿತಿಯನ್ನು ಗಣಿತದ ಲೆಕ್ಕಾಚಾರಗಳಿಂದಲೇ ಕಂಡುಹಿಡಿದರು. ಈ ಮಿತಿಗಿಂತ ಹೆಚ್ಚು ಹಿಗ್ಗುವ ನಕ್ಷತ್ರ ಸಾವಿರಾರು ಅಣುಬಾಂಬ್‌ಗಳು ಏಕಕಾಲದಲ್ಲಿ ಸ್ಫೋಟಿಸುವಂತೆ ಸಿಡಿದು,'ಸೂಪರ್‌ನೋವಾ,' ಎಂಬ ಹೊಳಪಿನ ನಕ್ಷತ್ರವಾಗುತ್ತದೆ. ಪ್ರಾಧ್ಯಾಪಕ,ಸಂಶೋಧಕ ಅಮೆರಿಕಾ ಸಂಯುಕ್ತ ಸಂಸ್ಥಾನದ ವಿಸ್ಕಾನ್ಸಿನ್‌ನಲ್ಲಿಯ 'ಯೆರ್ಕ್ಸ್ ಬಾಹ್ಯಾಕಾಶ ನಿರೀಕ್ಷಣಾಲಯ'ದಲ್ಲಿ ಸಂಶೋಧನಾ ಸಂಯೋಜಕರಾಗಿ ಕೆಲಸ ಮಾಡಲು ಆಹ್ವಾನ ಬಂದಿತು. ಯೆರ್ಕ್ಸ್‌ನಲ್ಲಿ ವಿಶ್ವದ ಅತ್ಯಂತ ದೊಡ್ಡ ವಕ್ರೀಭವನ ದೂರದರ್ಶಕವಿತ್ತು. ಇಲ್ಲಿ ಚಂದ್ರಶೇಖರ್‌ರವರು ಸುಮಾರು ೨೭ ವರ್ಷಗಳ ಕಾಲ ಕೆಲಸ ಮಾಡಿದರು. ಉಪಾಧ್ಯಾಯ ವೃತ್ತಿಯೊಂದಿಗೆ ಸಂಶೋಧನೆಯೂ ಜೊತೆಜೊತೆಗೆ ನಡೆಯಿತು. ೧೯೩೮-೪೪ರವರೆಗೆ ನಕ್ಷತ್ರಗಳ ಚಲನಶಾಸ್ತ್ರ,ಚಲನಘರ್ಷಣೆಯ ಬಗ್ಗೆ ಸಂಶೋಧನ ನಡೆಸಿದರು. ೧೯೪೩ರಲ್ಲಿ ಪ್ರಾಧ್ಯಾಪಕರಾದರು. ೧೯೫೨-೭೧ರವರೆಗೆ 'ಆಸ್ಟ್ರೋ ಫಿಸಿಕಲ್ ಜರ್ನಲ್‌'ನ ವ್ಯವಸ್ಥಾಪಕ ಸಂಪಾದಕರಾಗಿದ್ದರು. ಪ್ರಶಸ್ತಿ,ಪುರಸ್ಕಾರಗಳು ೧೯೪೨ - 'ಕೇಂಬ್ರಿಜ್ ವಿಶ್ವವಿದ್ಯಾನಿಲಯದ ಡಿಎಸ್‌ಸಿ ಪದವಿ' ೧೯೪೪ - 'ಇಂಗ್ಲೆಂಡ್‌ನ ರಾಯಲ್ ಸೊಸೈಟಿಗೆ ಆಯ್ಕೆ' ೧೯೫೦ -ರಲ್ಲಿ ಪ್ರಕಟವಾದ 'ರೇಡಿಯೋ ಆಕ್ಟಿವ್ ಟ್ರಾನ್ಸ್‌ಫರ್' ಪುಸ್ತಕಕ್ಕೆ, ಕೇಂಬ್ರಿಜ್ ವಿಶ್ವವಿದ್ಯಾನಿಲಯದ ಅತ್ಯುನ್ನತ ಪ್ರಶಸ್ತಿಯಾದ 'ಆಡಮ್ ಬಹುಮಾನ' ದೊರಕಿತು. ೧೯೫೨ - ಬ್ರೂಸ್ ಪದಕ ೧೯೫೩ - 'ರಾಯಲ್ ಅಸ್ಟ್ರಾನಾಮಿಕಲ್ ಸೊಸೈಟಿಯ ಚಿನ್ನದ ಪದಕ' ೧೯೫೭ - 'ರಂಫರ್ಡ್ ಪ್ರಶಸ್ತಿ' ೧೯೬೮ - ಭಾರತ ಸರ್ಕಾರದ, 'ಪದ್ಮವಿಭೂಷಣ ಪ್ರಶಸ್ತಿ' ೧೯೮೩ - 'ಶ್ವೇತಕುಬ್ಜಗಳನ್ನು ಕುರಿತ ಸಂಶೋಧನೆಗೆ ನೊಬೆಲ್ ಪ್ರಶಸ್ತಿ' ೧೯೪೦-೧೯೯೫ ಸಂಶೋಧನೆಗಳು ಈ ಸಮಯದಲ್ಲಿ ಡಾ. ಚಂದ್ರ, ನಕ್ಷತ್ರಗಳ ಸಂರಚನೆಯ ಬಗ್ಗೆ ಹೊಸ ಕಾಣಿಕೆಯನ್ನು ಒದಗಿಸಿದವು.ಅದರ ಪರಿಪೂರ್ಣತೆಯ ಬದ್ಧತೆಗೆ೨೦ ಕ್ಕೂ ಮಿಕ್ಕಷ್ಟು ಗ್ರಂಥಗಳು ಹಾಗೂ ನೂರಾರು, ಸಂಶೋಧನಾ ಸಂಬಂಧೀ ಲೇಖನಗಳು ಸಾಕ್ಷಿಯಾಗಿವೆ. ಅತ್ಯಂತ ಉಚ್ಚಮಟ್ಟದ ಶಿಕ್ಷಕರಾಗಿದ್ದ ಚಂದ್ರಶೇಖರ್ ರವರ ಶಿಷ್ಯಮಂಡಳಿಯೂ ಅವರಷ್ಟೇ ಪ್ರಗತಿಯನ್ನು ಸಾಧಿಸಿದರು. ಡಾ.ಚಂದ್ರಶೇಖರ್ ರವರ ಮಾರ್ಗದರ್ಶನದಲ್ಲಿ ೫೦ ಕ್ಕೂ ಮಿಗಿಲಾಗಿ 'ಡಾಕ್ಟೊರೇಟ್ ಪದವಿ' ಗಳಿಸಿದ್ದಾರೆ. 'ಯೇರ್ಕ್ಸ್ ಸಂಶೋಧನಾಲಯ'ದಲ್ಲಿ ಚಂದ್ರರ ಶಿಷ್ಯರಾಗಿದ್ದ 'ಲೀ' ಮತ್ತು 'ಯಾಂಗ್' ಮುಂದೆ ೧೯೫೭ ರಲ್ಲಿ ಗುರುಗಳಿಗಿಂತ ಮೊದಲೇ ಕಣ-ಭೌತವಿಜ್ಞಾನದಲ್ಲಿ ನಡೆಸಿದ ಸಂಶೋಧನೆಗೆ 'ನೋಬೆಲ್ ಪ್ರಶಸ್ತಿ 'ಗಳಿಸಿದ್ದರು. ಇತರ ಆಸಕ್ತಿಗಳು 'ಪ್ರಿನ್ಸಿಪಲ್ಸ್ ಆಫ್ ಸ್ಟೆಲಾರ್ ಡೈನಾಮಿಕ್ಸ್' ಮುಂತಾದ ಗ್ರಂಥಗಳನ್ನು ಬರೆದು ಪ್ರಕಟಿಸಿದರು.೧೯೮೦ರಲ್ಲಿ ಸ್ವಇಚ್ಛೆಯಿಂದಲೇ ಕೆಲಸದಿಂದ ನಿವೃತ್ತಿ ಪಡೆದರು.ಇಳಿವಯಸ್ಸಿನಲ್ಲೂ ತಮ್ಮ ಸಂಶೋಧನೆಗಳನ್ನು ಮುಂದುವರೆಸಿದ್ದರು.ಸಾಹಿತ್ಯದಲ್ಲೂ ಆಸಕ್ತಿ ಇತ್ತು.ಅಮೆರಿಕದಲ್ಲಿದ್ದರೂ ಅವರ ಉಡುಗೆ-ತೊಡುಗೆ ದಕ್ಷಿಣಭಾರತದ ಧೋತಿ,ಮೇಲಂಗಿ ಮಾತ್ರ.ಕೇಳುತ್ತಿದ್ದುದು ಕರ್ನಾಟಕ ಸಂಗೀತ. ಅರವತ್ತೈದು ವರ್ಷಗಳ ಕಾಲ ನಿರಂತರವಾಗಿಸಂಶೋಧನೆಯಲ್ಲಿ ನಿರತರಾಗಿದ್ದ 'ಸುಬ್ರಮಣ್ಯಮ್ ಚಂದ್ರಶೇಖರ್' ೧೯೯೫, ಆಗಸ್ಟ್, ೨೧ ರ ರಾತ್ರಿ, ಮತ್ತೆ ತಿರುಗಿ ಮರಳಿಬಾರದ ನಕ್ಷತ್ರಲೋಕದೆಡೆಗೆ ತೆರಳಿ ಕಣ್ಮರೆಯಾದರು. 100ನೆ ಹುಟ್ಟುಹಬ್ಬ ಆಚರಣೆ ಸನ್, ೨೦೧೦ ರ, ಅಕ್ಟೋಬರ್, ೧೯ ರಂದು ಭಾರತವೂ ಸೇರಿದಂತೆ, ವಿಶ್ವದಾದ್ಯಂತ, 'ಸುಬ್ರಹ್ಮಣ್ಯನ್ ಚಂದ್ರಶೇಖರ್' ರವರ 'ನೂರನೆಯ ಹುಟ್ಟುಹಬ್ಬ'ವನ್ನು ಪ್ರೀತಿಯಿಂದ ಆಚರಿಸಲಾಯಿತು. ಹಲವಾರು ಸಂದರ್ಭಗಳಲ್ಲಿ ಚಂದ್ರಾರವರೇ ತಮ್ಮ 'ವಿಸ್ಮಯದ ಹುಟ್ಟಿದ ತಾರೀಖಿನ ಸಂಗತಿ'ಯನ್ನು ಗೆಳೆಯರೊಂದಿಗೆ ಹಂಚಿಕೊಂಡು ನಗೆಯಾಡಿದ್ದಾರೆ. ೧೯-೧೦-೧೯೧೦, ಅವರಿಗೆ ಬಲು ಖುಷಿಕೊಟ್ಟ ದಿನವಾಗಿತ್ತು. ೧೯೮೩ ರಲ್ಲಿ ಅದೇ ದಿನದಂದು ಅವರಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ 'ನೋಬೆಲ್ ಪ್ರಶಸ್ತಿ' ದೊರೆತಿತ್ತು. ಉಲ್ಲೇಖಗಳು ಭಾರತೀಯ ಅಮೆರಿಕನ್ ಭೌತವಿಜ್ಞಾನಿಗಳು ಭೌತಶಾಸ್ತ್ರದ ನೊಬೆಲ್ ಪುರಸ್ಕೃತರು ಭಾರತದ ವಿಜ್ಞಾನಿಗಳು ನೊಬೆಲ್ ಪ್ರಶಸ್ತಿ ಪುರಸ್ಕೃತ ಭಾರತೀಯರು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು ವಿಜ್ಞಾನಿಗಳು
3612
https://kn.wikipedia.org/wiki/%E0%B2%AF%E0%B2%BE%E0%B2%9C%E0%B3%8D%E0%B2%9E%E0%B2%B5%E0%B2%B2%E0%B3%8D%E0%B2%95%E0%B3%8D%E0%B2%AF
ಯಾಜ್ಞವಲ್ಕ್ಯ
ಯಾಜ್ಞವಲ್ಕ್ಯ ವೈದಿಕೆ ಭಾರತದ ಒಬ್ಬ ಬ್ರಹ್ಮರ್ಷಿ. ಚತುರ್ಮುಖ ಬ್ರಹ್ಮನ ದೇಹದಿಂದ ಜನಿಸಿದನೆಂದು ವಾಯು ಪುರಾಣ ಹೇಳುತ್ತದೆ. ಈತನು ಬರೆದ ಕೃತಿಗಳು ಶತಪಥ ಬ್ರಾಹ್ಮಣ, ಯೋಗಯಾಜ್ಞವಲ್ಕ್ಯ ಸಮ್ಹಿತ ಮತ್ತು ಯಾಜ್ಞವಲ್ಕ್ಯ ಸ್ಮೃತಿ. ಭಾರತೀಯ ಗಣಿತಜ್ಞರು ಹಿಂದೂ ಋಷಿಗಳು ಭಾರತದ ತತ್ವಶಾಸ್ತ್ರಜ್ಞರು
3617
https://kn.wikipedia.org/wiki/%E0%B2%AA%E0%B2%BE%E0%B2%A3%E0%B2%BF%E0%B2%A8%E0%B2%BF
ಪಾಣಿನಿ
ಪಾಣಿನಿ ಸಂಸ್ಕೃತದ ಪ್ರಖ್ಯಾತ ವೈಯಾಕರಣಿ.ವ್ಯಾಕರಣಕ್ಕೆ ಮೂಲಾಧಾರವಾದ ಸೂತ್ರಗಳನ್ನು ಕುರಿತ ಇವನ ಗ್ರಂಥದ ಹೆಸರು "ಅಷ್ಟಾಧ್ಯಾಯಿ".ಇವನು ಶಿವಭಕ್ತನಾದ ಕಾರಣ ಸೂತ್ರಗಳನ್ನು ಭವ,ರುದ್ರ,ಶರ್ವ ಮುಂತಾದ ಈಶ್ವರನ ಹೆಸರುಗಳಲ್ಲಿ ಕರೆದಿದ್ದಾನೆ. ಬಾಲ್ಯ ಪಾಣಿನಿ ಸುಪ್ರಸಿದ್ಧ ಸಂಸ್ಕೃತ ವ್ಯಾಕರಣ ಕರ್ತೃ. ತಾಯಿ ದಾಕ್ಷಾ ಅಥವಾ ದಾಕ್ಷೀ. ತಂದೆ ಶಲಂಕ, ಗಾಂಧಾರದೇಶದ ಶಲಾತುರಗ್ರಾಮದವ. ಆ ಗ್ರಾಮವನ್ನು ಸ್ವತಃ ನೋಡಿ ಬಂದ ಹ್ಯುಯೆನ್ ತ್ಸಾಂಗ್ ಈಗಿನ ಓಹಿಂಡ್ (ಉದ್ಭಾಂಡ) ನಗರದಿಂದ ನಾಲ್ಕು ಮೈಲಿ ದೂರದಲ್ಲಿ ಆ ಗ್ರಾಮ ಇದ್ದುದಾಗಿಯೂ ಅಲ್ಲಿ ಪಾಣಿನಿಯ ಸ್ಮಾರಕವಾಗಿ ಸ್ಥಾಪಿತವಾಗಿದ್ದ ಪ್ರತಿಮೆಯೊಂದನ್ನು ತಾನು ಕಂಡುದಾಗಿಯೂ ಬರೆದಿಟ್ಟಿದ್ದಾನೆ. ಪಾಣಿನಿಯನ್ನು ಅವನ ತಾಯಿಯ ಹೆಸರಿನ ಮೇಲೆ ದಾಕ್ಷಾ (ದಾಕ್ಷೀ) ಪುತ್ರನೆಂದೂ ತಂದೆಯ ಹೆಸರಿನ ಮೇಲೆ ಶಾಲಂಕನೆಂದೂ ಗ್ರಾಮದ ಹೆಸರಿನ ಮೇಲೆ ಶಾಲಾತುರೀಯ ಎಂದೂ ಕರೆಯುತ್ತಿದ್ದುದುಂಟು. ಶಾಲಾ ತುರೀಯ ಎಂಬ ರೂಪವನ್ನು ಪಾಣಿನಿಯೇ ತನ್ನ ಗ್ರಂಥದಲ್ಲಿ ವಿವರಿಸಿದ್ದಾನೆ. ಈತನಿಗೆ ಅಹಿಕ ಎಂಬ ಇನ್ನೊಂದು ಹೆಸರೂ ಇತ್ತು.ಚಂದ್ರಗುಪ್ತನ ತಂದೆ ನಂದನ ಕಾಲದಲ್ಲಿ (ಕ್ರಿ.ಪೂ ೨೧೫-೨೯೧) ಪಾಟಲೀಪುತ್ತದಲ್ಲಿದ್ದ ವರ್ಷ ಎಂಬ ಆಚಾರ್ಯರಲ್ಲಿ ಪಾಣಿನಿ ಶಿಷ್ಯನಾಗಿದ್ದುದಾಗಿ ಕಥಾಸರಿತ್ಸಾಗರದಲ್ಲಿ ಹೇಳಿದೆ. ಪಾಣಿನಿ ಸಿಂಹದ ಬಾಯಿಗೆ ತುತ್ತಾಗಿ ಮರಣಕ್ಕೀಡಾದನೆಂದು ಕಥೆಯೊಂದರಿಂದ ತಿಳಿದುಬರುತ್ತದೆ. ಪಾಣಿನಿಯ ಕಾಲವೂ ನಿರ್ದಿಷ್ಟವಾಗಿ ತಿಳಿದು ಬಂದಿಲ್ಲ. ಕ್ರಿಸ್ತಪೂರ್ವದಲ್ಲಿ ಇದ್ದನೆಂಬುದರಲ್ಲಿ ಅಭಿಪ್ರಾಯಭೇದವಿಲ್ಲವಾದರೂ ಬ್ರಾಹ್ಮಣಗಳ ಕಾಲಕ್ಕಿಂತ ಈಚಿನವನೆಂದೂ ಪ್ರಾಯಃ ಪ್ರಾಚೀನ ಉಪನಿಷತ್ತುಗಳ ಕಾಲದವನಿರಬೇಕೆಂದೂ ಒಬ್ಬರು ಹೇಳಿದರೆ ಗೋಲ್ಡ್ ಸ್ಟಕರ್ ಎಂಬ ಪಾಶ್ಚಾತ್ಯ ಪಂಡಿತ ಬೌದ್ಧರ ಕಾಲಕ್ಕಿಂತ ಹಿಂದೆ ಅಂದರೆ ಕ್ರಿ.ಪೂ ಏಳನೆಯ ಶತಮಾನದವನಿರಬೇಕೆಂದೂ ವೀಬರ್ ಎಂಬಾತ ಅಲೆಗ್ಜಾಂಡರನ ದಂಡಯಾತ್ರೆಗಳಿಗಿಂತ (ಕ್ರಿ.ಪೂ ೩೨೬) ಹಿಂದೆ ಪಾಣಿನಿಯ ವ್ಯಾಕರಣ ರಚಿತವಾಗಿದ್ದಿರಲು ಸಾಧ್ಯವೇ ಇಲ್ಲವೆಂದೂ ಹೇಳುತ್ತಾರೆ. ವೀಬರನ ವಾದ ಹೀಗಿದೆ-ಯವನರ ಲಿಪಿ ಎಂಬರ್ಥದಲ್ಲಿ ಯವನಾನೀ ಎಂಬ ಪದವನ್ನು ಪಾಣಿನಿ ಬಳಸಿದ್ದಾನೆ.ಅಲೆಗ್ಜಾಂಡರನ ದಂಡಯಾತ್ರೆಗಳಿಗಿಂತ ಹಿಂದೆ ಭಾರತೀಯರಿಗೆ ಯವನರ ಪರಿಚಯವಿರಲಿಲ್ಲ. ಪಾಣಿನಿ ಯವನಾನೀ ಪದ ಬಳಸಿರುವುದರಿಂದ ಅವನಿಗೆ ಯವನರ ಮತ್ತು ವಾಯವ್ಯ ಪ್ರಾಂತ್ಯಗಳ ಪರಿಚಯವಿತ್ತೆಂಬುದು ಸ್ಪಷ್ಟವಾಗುತ್ತದೆ. ಇದಕ್ಕೆ ಪೂರಕವಾಗಿ ಪಾಣಿನಿಯ ಗಣಪಾಠದಲ್ಲಿ ಆಂಭಿ, ಭಗಲ ಎಂಬ ಹೆಸರುಗಳೂ ಬರುತ್ತವೆ. ಇದರಿಂದ ಪಾಣಿನಿ ಕ್ರಿ.ಪೂ ನಾಲ್ಕನೆಯ ಶತಮಾನಕ್ಕಿಂತ ಹಿಂದಿನವನೆಂದು ಹೇಳಲು ಸಾಧ್ಯವೇ ಇಲ್ಲ. ಇದೂ ಅಲ್ಲದೆ ಪತಂಜಲಿಯ (ವ್ಯಾಕರಣ) ಮಹಾಭಾಷ್ಯ ಕ್ರಿ.ಪೂ ಎರಡನೆಯ ಶತಮಾನದಲ್ಲಿ ರಚಿತವಾದುದೆಂದು ಸ್ಥಿರಪಟ್ಟಿರುವುದರಿಂದ ಪಾಣಿನಿ ಕ್ರಿಪೂ ೪೦೦ಕ್ಕಿಂತ ಈಚಿನವನಾಗಿರಲೂ ಅವಕಾಶವಿಲ್ಲ. ಸ್ವಲ್ಪ ಹೆಚ್ಚು ಕಮ್ಮಿ ಹೀಗೆಯೇ ವಿಚಾರಮಾಡಿ ಕೀತ್, ವೀಲರ್, ಮ್ಯಾಕ್ಸ್ ಮುಲ್ಲರ್ ಮುಂತಾದವರು ಪಾಣಿನಿಯ ಕಾಲ ಸುಮಾರು ಕ್ರಿ.ಪೂ ೩೫೦ ಇರಬೇಕೆಂದು ಸಿದ್ಧಾಂತ ಮಾಡಿದ್ದಾರಾದರೂ ಗೋಲ್ಡ್ ಸ್ಟಕರ್ ಕ್ರಿ.ಪೂ ಏಳನೆಯ ಶತಮಾನದವನಿರಬೇಕೆಂದೂ ಭಂಡಾರ್ಕರ್ ಕ್ರಿ.ಪೂ ಐದನೆಯ ಶತಮಾನಕ್ಕಿಂತ ಈಚಿನವನಿರಬೇಕೆಂದೂ ಬೆಲ್ವಲ್ಕರ್ ಅವರು ಕ್ರಿ.ಪೂ ೭೦೦ ರಿಂದ ೬೦೦ ರೊಳಗಿರಬೇಕೆಂದೂ ನಾಮಾಶ್ರಯೀ ಅವರು ಕ್ರಿ.ಪೂ ೨೪೦೦ ರಲ್ಲಿದ್ದಿರಬೇಕೆಂದೂ ವಾಸುದೇವ ಶರಣ್ ಅಗ್ರವಾಲಾ ಕ್ರಿ.ಪೂ ೪೮೦ ರಿಂದ ೪೧೦ ರೊಳಗಿರಬೇಕೆಂದೂ ಬೇರೆ ಬೇರೆ ಅಭಿಪ್ರಾಯ ಹೊಂದಿದ್ದಾರೆ. ವ್ಯಾಕರಣ ಗ್ರಂಥ ಪಾಣಿನಿಯ ವ್ಯಾಕರಣ ಸೂತ್ರಾತ್ಮಕವಾಗಿದೆ. ಅದರಲ್ಲಿ ಒಟ್ಟು ೩೯೮೧ ಸೂತ್ರಗಳಿವೆ. ಈ ಎಲ್ಲ ಸೂತ್ರಗಳೂ ಒಂದೊಂದರಲ್ಲಿಯೂ ನಾಲ್ಕು ನಾಲ್ಕು ಪಾದಗಳುಳ್ಳ ಎಂಟು ಅಧ್ಯಾಯಗಳಾಗಿ ವಿಭಾಗಿಸಲ್ಪಟ್ಟಿವೆ. ಆದ್ದರಿಂದ ಈ ವ್ಯಾಕರಣ ಗ್ರಂಥಕ್ಕೆ ಅಷ್ಟಾಧ್ಯಾಯಿ ಎಂಬ ಹೆಸರೇ ಬಳಕೆಯಲ್ಲಿದೆ. ಅಷ್ಟಕ, ಪಾಣಿನೀಯ ವೃತ್ತಿ ಸೂತ್ರ, ಅಕಾಲಕವ್ಯಾಕರಣ, ಶಾಲಾತುರೀಯತಂತ್ರ ಎಂಬುದು ಈ ಅಷ್ಟಾಧ್ಯಾಯಿಯ ಇತರ ಹೆಸರುಗಳು. ವೃದ್ಧಿರಾದೈಚ್ ಎಂಬುದು ಇದರ ಮೊದಲನೆಯ ಸೂತ್ರ. `ಅಅ' ಎಂಬುದು ಕೊನೆಯ ಸೂತ್ರ. ಮಾಹೇಶ್ವರ ಸೂತ್ರಗಳೆಂದು ಕರೆಯಲ್ಪಡುವ `ಅ ಇ ಉಣ್ ಇತ್ಯಾದಿ ಹದಿನಾಲ್ಕು ಸೂತ್ರಗಳೂ ಪಾಣಿನಿಯವೇ. ಇದಲ್ಲದೆ ಅಷ್ಟಾಧ್ಯಾಯಿಗೆ ಅನುಬಂಧವಾಗಿ ಪಾಣಿನಿಯಿಂದಲೇ ಗಣಪಾಠ, ಧಾತುಪಾಠ, ಲಿಂಗಾನುಶಾಸನ ಮತ್ತು ಶಿಕ್ಷಾ-ಇವೂ ರಚಿತವಾಗಿವೆ. ಅಷ್ಟಾಧ್ಯಾಯಿಯ ಪ್ರಥಮಾಧ್ಯಾಯದ ಮೊದಲ ಎರಡು ಪಾದಗಳಲ್ಲಿ ಸಂಜ್ಞಾ ಪರಿಭಾಷಾ, ಮೂರನೆಯ ಪಾದದಲ್ಲಿ ಆತ್ಮನೇಪದಪ್ರಕ್ರಿಯೆ, ನಾಲ್ಕನೆಯ ಪಾದದಲ್ಲಿ ವಿಭಕ್ತಿ ಸಂಜ್ಞೆ, ದ್ವಿತೀಯಾಧ್ಯಾಯದ ಮೊದಲ ಎರಡು ಪಾದಗಳಲ್ಲಿ ಸಮಾಸ, ಮೂರನೆಯ ಪಾದದಲ್ಲಿ ಕಾರಕ, ನಾಲ್ಕನೆಯ ಪಾದದಲ್ಲಿ ಸಮಾಸ ಮತ್ತು ಲುಕ್ ಪ್ರಕ್ರಿಯೆ, ಮೂರನೆಯ ಅಧ್ಯಾಯದಲ್ಲಿ ಧಾತು ಪ್ರತ್ಯಯಗಳು ಮತ್ತು ಕೃದಂತ ನಿಷ್ಪತ್ತಿ, ನಾಲ್ಕನೆಯ ಅಧ್ಯಾಯದಲ್ಲಿ ಸ್ತ್ರೀಪ್ರತ್ಯಯ, ತದ್ಧಿತಸಮಾಸಾಂತಗಳು, ಆರು ಏಳನೆಯ ಅಧ್ಯಾಯಗಳಲ್ಲಿ ಸ್ವರವಿಧಿಗಳು, ಎಂಟನೆಯ ಅಧ್ಯಾಯದಲ್ಲಿ ಸಂಧಿಗಳು-ಮುಂತಾದ ಪದಗಳಿಗೆ ಸಂಬಂಧಿಸಿದ ಪ್ರಕರಣಗಳಿವೆ. ಕೆಲವೇ ಅಕ್ಷರಗಳುಳ್ಳ ಪುಟ್ಟ ಪುಟ್ಟ ಸೂತ್ರಗಳಿಂದ ಮಹತ್ತರವಾದ ವಿಷಯಗಳನ್ನು ಪ್ರತಿಪಾದಿಸಿರುವುದು ಪಾಣಿನಿಯ ವೈಶಿಷ್ಟ್ಯ. ಇದರ ಎಂಟೂ ಅಧ್ಯಾಯಗಳ ಎಲ್ಲ ಸೂತ್ರಗಳನ್ನೂ ಅದೇ ಅನುಪೂರ್ವಿಯಲ್ಲಿ ಕಂಠಪಾಠಮಾಡಿದ್ದಾದರೆ ಸೂತ್ರಾರ್ಥಗಳನ್ನು ಅಷ್ಟು ಕಷ್ಟವಿಲ್ಲದಂತೆ ಗ್ರಹಿಸಬಹುದು. ಪಾಣಿನಿಯ ಪ್ರತ್ಯಾಹಾರ ವಿಧಾನ, ಮುಂದಿನ ಸೂತ್ರಗಳಿಗೆ ಹಿಂದು ಹಿಂದಿನ ಸೂತ್ರಗಳಿಂದ ಪದಗಳನ್ನು ಅನುವರ್ತನ ಮಾಡಿಕೊಳ್ಳುವುದು, ಸ್ವರಜ್ಞಾನಕ್ಕೆ ಚ್ ತ್ ನ್ ಮೊದಲಾದ ಇತ್ ಸಂಜ್ಞೆಗಳು, ಬಹ್ವಕ್ಷರ ಸಂಜ್ಞೆಗಳಿಗೆ ಬದಲಾಗಿ, ಟಿ, ಭ, ಘ ಮೊದಲಾದ ಏಕಾಕ್ಷರ ಸಂಜ್ಞೆಗಳು, ಲಟ್ ಲಿಟ್ ಇತ್ಯಾದಿ ಸಂಜ್ಞೆಗಳು ಕಾಲ ನಾಮಗಳಾಗಿ ಏರ್ಪಟ್ಟಿರುವುದು- ಇಂಥವೆಲ್ಲ ಈ ಶಾಸ್ತ್ರದಲ್ಲಿ ಲಾಘವವನ್ನು ಅಳವಡಿಸಿಕೊಳ್ಳುವುದಕ್ಕಾಗಿ. ಆದರೆ ಇದೆಲ್ಲದರಿಂದ ಈ ಶಾಸ್ತ್ರ ಅಭ್ಯಾಸಿಸುವವರಿಗೆ ಮೊದಮೊದಲು ತುಂಬ ಜಟಿಲವಾಗಿ ಕಾಣುವುದರಲ್ಲಿ ಸಂಶಯವಿಲ್ಲ. ಪಾಣಿನಿಯ ಕಾಲದಲ್ಲಿ ಸಂಸ್ಕೃತ ಆಡುಭಾಷೆಯಾಗಿತ್ತು. ಅಲ್ಲದೆ ಗ್ರಾಂಥಿಕ ಸಂಸ್ಕೃತ ಭಾಷೆಗೂ ವ್ಯಾವಹಾರಿಕ ಸಂಸ್ಕೃತ ಭಾಷೆಗೂ ಅಷ್ಟಾಗಿ ವ್ಯತ್ಯಾಸವಿರಲಿಲ್ಲ. ಈ ಭಾಷೆಗೇ ಲೌಕಿಕ ಭಾಷೆ ಎನ್ನುವುದು. ಇದು ವೇದಗಳ ವೈದಿಕ ಭಾಷೆಗಿಂತ ತುಂಬ ಭಿನ್ನವಾಗಿತ್ತು. ಈ ವೈದಿಕ (ಸಂಸ್ಕøತ) ಮತ್ತು ಲೌಕಿಕ (ಸಂಸ್ಕøತ) ಭಾಷೆಗಳೆರಡಕ್ಕೂ ಅನ್ವಯಿಸುವಂತೆ ಒಂದೆ ವ್ಯಾಕರಣವನ್ನು (ಶಬ್ದಾನುಶಾಸನ) ರಚಿಸಿದ ಕೀರ್ತಿ ಸಲ್ಲುವುದು ಪಾಣಿನಿಯೊಬ್ಬನಿಗೇ. ಅಲ್ಲದೆ ಈವರೆಗೆ ಉಪಲಬ್ಧವಾಗಿರುವ ಶಬ್ದಾನುಶಾಸನಗಳಲ್ಲಿ ಸಮಗ್ರವಾಗಿರುವುದು ಪಾಣಿನಿಯ ಅಷ್ಟಾಧ್ಯಾಯಿಯೊಂದೇ. ಇದರಲ್ಲಿನ ಸಾಂಕೇತಿಕ ಪರಿಶುದ್ಧತೆ ಮತ್ತು ಸೂತ್ರನಿರ್ಮಾಣ ಚಾತುರ್ಯ ಅನ್ಯಾದೃಶವಾದುದು. ಪಾಣಿನಿಯೇ ತನಗಿಂತ ಹಿಂದಿನ ಹತ್ತು ವೈಯಾಕರಣಿಗಳನ್ನೂ ಪ್ರಾಂಚ, ಉದಂಚ, ಎಂಬ ಎರಡೂ ವ್ಯಾಕರಣ ಪದ್ಧತಿಗಳನ್ನೂ ಹೆಸರಿಸಿದ್ದಾನೆ. ಆಪಿಶಲಿ, ಕಾಶಕೃತ್ಸ್ನ ಎಂಬುವರು ಪಾಣಿನಿಗಿಂತ ಹಿಂದೆಯೇ ಪ್ರಸಿದ್ಧಿಪಡೆದಿದ್ದ ಪ್ರಾಂಚ ವೈಯಾಕರಣಿಕಗಳು. ಕಾಶ್ಯಪ, ಗಾಗ್ರ್ಯ, ಗಾಲವ, ಚಾಕ್ರವರ್ಮ, ಭಾರದ್ವಾಜ ಶಾಕಟಾಯನ, ಶಾಕಲ್ಯ, ಸೇನಕ, ಸ್ಫೋಟಾಯನರು ಉದಂಚರು. ಪಾಣಿನಿಗಿಂತ ಹಿಂದಿನವನಾದ ಯಾಸ್ಕನೂ ಔದುಂಬರಾಯಣ, ಔಪಮನ್ಯು, ಶಾಕಟಾಯನ ಮುಂತಾದ ವೈಯಾಕರಣಿಗಳ ಹೆಸರುಗಳನ್ನು ಉಲ್ಲೇಖಿಸಿದ್ದಾನೆ. ಇವರೆಲ್ಲರಲ್ಲಿ ಶಾಕಟಾಯನನೇ ಪ್ರಧಾನನೆನ್ನಬಹುದು. ಆದರೆ ಅವನ ವ್ಯಾಕರಣ ಗ್ರಂಥ ಉಪಲಬ್ಧವಾಗಿಲ್ಲ. ಪಾಣಿನಿಗಿಂತ ಹಿಂದೆಯೇ ಆಪಿಶಲಿ ಮತ್ತು ಕಾಶಕ್ರತ್ಸ್ನರ ವ್ಯಾಕರಣಗಳು ಪ್ರಚಲಿತವಾಗಿದ್ದುವೆಂದು ಹೇಳಿದೆವು. ಕಾಶಕೃತ್ಸ್ನವ್ಯಾಕರಣದಲ್ಲಿ ಮೂರು ಅಧ್ಯಾಯಗಳೂ ಆಪಿಶಲಿ ವ್ಯಾಕರಣದಲ್ಲಿ ಎಂಟು ಅಧ್ಯಾಯಗಳೂ ಇದ್ದುವು. ಆಪಿಶಲಿ ವ್ಯಾಕರಣ ಕ್ಲಿಷ್ಟ, ಕಾಶಕೃತ್ಸ್ನ ವ್ಯಾಕರಣ ಕಾತಂತ್ರವ್ಯಾಕರಣಕ್ಕೆ ಮೂಲವಾಗಿದ್ದಂತೆ, ಆಪಿಶಲಿಯ ಅಷ್ಟಾಧ್ಯಾಯಿ ಪಾಣಿನಿಯ ಅಷ್ಟಾಧ್ಯಾಯಿಗೆ ಮೂಲವೆನಿಸಿಕೊಂಡಿದೆ. ವಿಭಕ್ತ್ಯಂತಂ ಪದಂ ಎಂಬ ಆಪಿಶಲಿಯ ಸೂತ್ರವೇ ಸುಪ್ತಿಙಂತಂ ಪದಂ ಎಂದು ಪಾಣಿನಿಯಿಂದ ರೂಪಾಂತರಗೊಂಡಿರುವುದು. ಆಪಿಶಲಿಯೇ ಪಂಚಪಾದಿ ಉಣಾದಿ ಸೂತ್ರಕರ್ತಾ ಎಂಬುದು ಅಭಿಜ್ಞರ ಮತ. ಪಾಣಿನಿಯ ಪ್ರತ್ಯಾಹಾರಸೂತ್ರಗಳಿಗೂ ಆಪಿಶಲಿಯೇ ಮಾರ್ಗದರ್ಶಿ ಎಂದು ತೋರುತ್ತದೆ. ಹೀಗೆ ಸಂಸ್ಕøತ ವ್ಯಾಕರಣ ಗ್ರಂಥಗಳಲ್ಲಿ ಆಪಿಶಲಿ ಮೂಲವಾದ ಪಾಣಿನೀಯ ಪದ್ಧತಿ ಮತ್ತು ಕಾಶಕೃತ್ಸ್ನ ಮೂಲವಾದ ಕಾತಂತ್ರಪದ್ಧತಿ ಎಂಬ ಎರಡು ಪದ್ಧತಿಗಳು ಕಂಡುಬರುತ್ತವೆ. ಚಾಂದ್ರ, ಜೈನೇಂದ್ರ, ಸರಸ್ವತೀ ಕಂಠಾಭರಣಗಳು ಪಾಣಿನೀಯ ಪದ್ಧತಿಗೂ ಹೈಮ ಶಬ್ಬಾನುಶಾಸನ, ಮುಗ್ಧಬೋಧ, ಸಂಕ್ಷಿಪ್ತಸಾರ, ಸಾರಸ್ವತ, ಸುಪದ್ಮ, ಪ್ರಯೋಗ ರತ್ನಮಾಲಾಗಳು ಕಾತಂತ್ರಪದ್ಧತಿಗೂ ಸೇರಿದುವು. ಕಾಲಕ್ರಮದಲ್ಲಿ ಪಾಣಿನಿಯ ಅಷ್ಟಾಧ್ಯಾಯಿಯಲ್ಲಿ ತಮಗೆ ಕಂಡುಬಂದ ಕೆಲವು ಲೋಪದೋಷಗಳನ್ನು ಕ್ರಮಪಡಿಸುವುದಕ್ಕಾಗಿಯೂ ಕೆಲವು ಕಡೆ ಕ್ಲಿಷ್ಟವಾದ ಸೂತ್ರಗಳ ಅರ್ಥವನ್ನು ವಿವರಿಸುವುದಕ್ಕಾಗಿಯೂ ಅನಾವಶ್ಯಕವಾದುವನ್ನು ಪರಿಹರಿಸುವುದಕ್ಕಾಗಿಯೂ ಹೆಚ್ಚು ಲಾಘವವನ್ನು ಸಾಧಿಸುವುದಕ್ಕಾಗಿಯೂ ಕಾತ್ಯಾಯನ, ಭಾರದ್ವಾಜ, ಸುನಾಗ ಮುಂತಾದವರು ಪಾಣಿನಿಯ ಸೂತ್ರಗಳಿಗೆ ವಾರ್ತಿಕ ಎಂಬ ಅಡಕವಾದ ಟಿಪ್ಪಣಿಗಳನ್ನು ಬರೆದರು. ಇವರಲ್ಲಿ ಕಾತ್ಯಾಯನನೇ (ಕ್ರಿ. ಪೂ. ಮೂರನೆಯ ಶತಮಾನ) ಪ್ರಧಾನ. ಇವನಿಗೆ ವರರುಚಿ ಎಂಬುದು ಅಂಕಿತನಾಮ. ಕಾತ್ಯಾ ಎಂಬ ವಂಶದವನಾದುದರಿಂದ ಕಾತ್ಯಾಯನ ಎಂಬ ಹೆಸರೂ ರೂಢಿಯಲ್ಲಿದೆ. ಇವನನ್ನೇ ವಾರ್ತಿಕಾಚಾರ್ಯ, ವೃತ್ತಿಕಾರ ಎನ್ನುವುದು. ಈ ಕಾತ್ಯಾಯನನ ವಾರ್ತಿಕವನ್ನು ಆಧಾರವಾಗಿಟ್ಟುಕೊಂಡು ಪಾಣಿನಿಯ ಸೂತ್ರಗಳನ್ನು ಮಥಿಸಿ (ವ್ಯಾಕರಣ) ಮಹಾಭಾಷ್ಯವನ್ನು ಅನಂತರ ರಚಿಸಿದವ ಪತಂಜಲಿ. ಈತ ಕ್ರಿ.ಪೂ ೧೪೪-೧೪೨ ರಲ್ಲಿ ಗುಹಾಭಾಷ್ಯ ರಚಿಸಿರಬೇಕೆಂದು ನಂಬಲಾಗಿದೆ. ಸಂಸ್ಕøತ ವ್ಯಾಕರಣದಲ್ಲಿ ಈತನದೇ ಕೊನೆಯ ಮಾತೆಂದು ಈಗಲೂ ಪರಿಗಣಿಸಲಾಗುತ್ತಿದೆ. ಪಾಣಿನಿ, ವರರುಚಿ, ಪತಂಜಲಿ-ಈ ಮೂವರನ್ನೂ ವ್ಯಾಕರಣ ಶಾಸ್ತ್ರದಲ್ಲಿ ಧುರೀಣರಾದ ಮುನಿತ್ರಯರೆಂದು ಭಾವಿಸಲಾಗಿದೆ. ಈ ಮೂವರೂ ಮುನಿಗಳೇ ಆಗಿದ್ದರೆಂಬುದು ಸಾಂಪ್ರದಾಯಿಕ ನಂಬಿಕೆ. ಪಾಣಿನಿಯ ಸೂತ್ರಗಳಿಗೆ ರಚಿತವಾಗಿರುವ ಟೀಕೆಗಳಲ್ಲಿ ಅತ್ಯಂತ ಪ್ರಾಚೀನವೂ ಪ್ರಧಾನವೂ ಆದುದು ಕಾಶಿಕಾವೃತ್ತಿ. ಇದನ್ನು ಜಯಾದಿತ್ಯ, ವಾಮನ ಎಂಬ ಇಬ್ಬರು ಜೈನಪಂಡಿತರು ಕ್ರಿ.ಶ. ಏಳನೆಯ ಶತಮಾನದ ಪೂರ್ವಾರ್ಧದಲ್ಲಿ ರಚಿಸಿದರು. ಪಾಣಿನಿಯ ಅಷ್ಟಾಧ್ಯಾಯಿ ಸೂತ್ರಗಳ ಮೂಲಕ ವ್ಯಾಕರಣಶಾಸ್ತ್ರ ಅಭ್ಯಸಿಸುವುದು ಇತ್ತೀಚಿನವರೆಗೂ ತುಂಬ ಕಷ್ಟಕರವಾಗಿತ್ತು. ಕ್ರಿ.ಶ. ಹದಿನೇಳನೆಯ ಶತಮಾನದಲ್ಲಿ ಭಟ್ಟೋಜಿ ದೀಕ್ಷಿತ ಬೇರೆ ಬೇರೆ ಪ್ರಕರಣಗಳಿಗೆ ಸಂಬಂಧಿಸಿದ ಸೂತ್ರಗಳನ್ನೆಲ್ಲ ಬೇರೆಬೇರೆ ಒಟ್ಟುಗೂಡಿಸಿ ಸಿದ್ಧಾಂತ ಕೌಮುದಿಯನ್ನು ರಚಿಸಿದ ಮೇಲೆ ಅದು ತುಂಬ ಜನಪ್ರಿಯವಾಗಿ ಆಸೇತುಹಿಮಾಚಲದವರೆಗೆ ಅದರ ಮೂಲಕವಾಗಿಯೇ ಶಾಸ್ತ್ರಾಭ್ಯಾಸ ಮಾಡುವ ಕ್ರಮ ಆರಂಭವಾಯಿತು. ಈ ಪಾಣಿನಿಯೂ ಜಾಂಬವತೀ ಪರಿಣಯ ಕರ್ತೃವಾದ ಪಾಣಿನಿಯೂ ಇಬ್ಬರೂ ಒಂದೇ ಎಂಬುದು ಕೆಲವರ ಮತ. ಉಪಜಾತಿ ಛಂದಸ್ಸಿನಲ್ಲಿ ಪಾಣಿನಿ ಸಿದ್ಧಹಸ್ತನಾಗಿದ್ದನೆಂದು ಕ್ಷೇಮೇಂದ್ರ ತನ್ನ ಸುವೃತ್ತತಿಲಕದಲ್ಲಿ ಹೇಳಿದ್ದಾನೆ. ಪಾಣಿನಿಯು ಸಂಸ್ಕೃತದ ವರ್ಣಗಳನ್ನು ತಿಳಿಸಲು ಅವುಗಳನ್ನು ಸೂತ್ರಗಳ ಮೂಲಕ ನಿರ್ದೇಶಿಸಿದ್ದಾನೆ.ಮಹೇಶ್ವರನ ಢಕ್ಕೆಯ ನಿನಾದದಿಂದ ಈ ವರ್ಣಗಳು ಆವಿರ್ಭವಿಸಿದವೆಂದು ಪ್ರತೀತಿಯಿದ್ದು, ಇವಕ್ಕೆ ಮಾಹೇಶ್ವರ ಸೂತ್ರಗಳು ಎಂಬ ಹೆಸರಿದೆ. <big>ನೃತ್ತಾವಸಾನೇ ನಟರಾಜರಾಜೋ ನನಾದ ಢಕ್ಕಾಂ ನವಪಂಚವಾರಂ| ಉದ್ಧರ್ತುಕಾಮಃ ಸನಕಾದಿ ಸಿದ್ಧಾನೇತದ್ವಿಮರ್ಶೇ ಶಿವಸೂತ್ರಜಾಲಮ್ ||<big> ಎಂಬ ನಂದಿಕೇಶ್ವರ ಕಾರಿಕೆಯಲ್ಲಿ ವಿವೃತವಾದ ಈ ಶ್ಲೋಕವು ತಾಂಡವ ನೃತ್ಯ ಕಾಲದಲ್ಲಿ ಪರಶಿವನು ಲೋಕಕಲ್ಯಾಣಕ್ಕಾಗಿ ಡಮರು ಧ್ವನಿಯ ನೆಪದಿಂದ ಇವುಗಳನ್ನು ಉಪದೇಶಿಸಿದನೆಂದರ್ಥ. ಪಾಣಿನಿಯ ಕಾಲ ಸುಮಾರು ಕ್ರಿ.ಪೂ.೪ನೆಯ ಶತಮಾನವಿರಬಹುದೆಂದು ವಿದ್ವಾಂಸರು ಅಂದಾಜು ಮಾಡಿದ್ದಾರೆ. ಉಲ್ಲೇಖಗಳು ಬಾಹ್ಯ ಸಂಪರ್ಕಗಳು PaSSim – Paninian Sanskrit Simulator simulates the Pāṇinian Process of word formation The system of Panini Ganakastadhyayi, a software on Sanskrit grammar, based on Pāṇini's Sutras Forizs, L. Pāṇini, Nāgārjuna and Whitehead – The Relevance of Whitehead for Contemporary Buddhist Philosophy The Astadhyayi of Panini, with the Mahabhashya and Kashika commentaries, along with the Nyasa and Padamanjara commentaries on the Kashika. (PDF) Sanskrit. ಭಾರತೀಯ ಗಣಿತಜ್ಞರು
3621
https://kn.wikipedia.org/wiki/%E0%B2%AC%E0%B3%8D%E0%B2%B0%E0%B2%B9%E0%B3%8D%E0%B2%AE%E0%B2%97%E0%B3%81%E0%B2%AA%E0%B3%8D%E0%B2%A4
ಬ್ರಹ್ಮಗುಪ್ತ
ಭಾರತದ ಒಬ್ಬ ಮಹಾನ್ ಗಣಿತಜ್ಞ ಹಾಗು ಬೀಜಗಣಿತ ಪ್ರತಿಪಾದಕ. ಇವರು ಭಾರತೀಯ ಗಣಿತಶಾಸ್ತ್ರವನ್ನ ಉನ್ನತ ಸ್ಥಾನಕ್ಕೆರಿಸಿದರು. ಹೀಗಾಗಿ ಇವರನ್ನು ಭಾಸ್ಕರಚಾರ್ಯರು ಹನ್ನೆರಡನೇ ಶತಮಾನದ ಗಣಿತ ಚಕ್ರ ಚೂಡಾಮಣಿ ಎಂದು ಕರೆದು, ಇವರ ಗಣಿತ ಪಾಂಡಿತ್ಯವನ್ನ ಹೊಗಳಿದರು. ಬ್ರಹ್ಮಗುಪ್ತರವರು ಉಚ್ಚ ಗಣಿತ ಸಂಖ್ಯಾತ್ಮಕ ವಿಶ್ಲೇಷಣೆ ಶಾಖೆಯ ಸಂಸ್ಥಾಪಕರು. ಇವರು ಭಿನ್ನಲಿ ಎಂಬ ಸ್ಥಳದಲ್ಲಿ ಜನಿಸಿದರು ಎನ್ನಲಾಗುತ್ತದೆ. ಮಾಹಿತಿಗಳ ಪ್ರಕಾರ ಇವರು ಚಾಪವಂಶದ ರಾಜ ವ್ಯಘ್ರಮುಖನ ದರ್ಬಾರಿನಲ್ಲಿ ರಾಜ ಜ್ಯೋತಿಷಿಯಾಗಿದ್ದರು. ಇವರು ರಚಿಸಿದ ಬ್ರಹ್ಮ ಸ್ಪುಟ ಸಿದ್ಧಾಂತ ಮತ್ತು ಕರುಣ ಖಂಡ ಸಂಹಿತೆಗಳು ಪ್ರಖ್ಯಾತಿ ಗಳಿಸಿವೆ. ಸಿದ್ಧಾಂತ ಇವರು ಶೂನ್ಯ ಬಳಕೆಯ ನಿಯಮವನ್ನ ಪ್ರತಿಪಾದಿಸಿದರು. ಈ ನಿಯಮದ ಪ್ರಕಾರ ಶೂನ್ಯದಿಂದ ಯಾವುದೇ ಸಂಖ್ಯೆಯನ್ನ ಕೂಡಿಸಿದರೆ ಅಥವಾ ಕಳೆದರೆ ಆ ಸಂಖ್ಯೆಯಲ್ಲಿ ಯಾವ ಅಂತರವೂ ಬರುವುದಿಲ್ಲ. ಅಷ್ಟೇ ಅಲ್ಲದೆ ಶೂನ್ಯವನ್ನ ಯಾವುದೇ ಸಂಖ್ಯೆಯಿಂದ ಗುಣಿಸಿದರೂ ಶೂನ್ಯವೇ ಆಗುತ್ತದೆ. ಬ್ರಹ್ಮಗುಪ್ತ, ತಮ್ಮ ಬ್ರಹ್ಮ ಸ್ಫುಟ ಸಿದ್ಧಾಂತ ಗ್ರಂಥದಲ್ಲಿ ಜ್ಯೋತಿಷ್ಯ ಹಾಗು ಗಣಿತದ ಬಗ್ಗೆ ವಿವರವಾಗಿ ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲದೆ, ಅಂಕಗಣಿತ ಮತ್ತು ಬೀಜಗಣಿತದ ಅಧ್ಯಯಗಳನ್ನೂ ಈ ಗ್ರಂಥದಲ್ಲಿ ವಿವರಿಸಲಾಗಿದೆ. ಇವರ ಗ್ರಂಥಗಳಲ್ಲಿ ಬೀಜಗಣಿತವೇ ಪ್ರಮುಖವಾಗಿ ವಿವರಿಸಲಾಗಿದೆ. ಇವರು ಬರೆದ ಕರುಣ ಖಂಡ ಗ್ರಂಥಖಗೋಳ ಶಾಸ್ತ್ರದ ಬಗ್ಗೆ ವಿವರಣೆ ನೀಡುತ್ತದೆ. ತಮ್ಮ ಗ್ರಂಥಗಳಲ್ಲಿ ಬ್ರಹ್ಮಗುಪ್ತ, ಜ್ಯೋತಿಷ್ಯದ ಪ್ರಶ್ನೆಗೆ ಪರಿಹಾರ ತಿಳಿಸಲು ಬೀಜಗಣಿತ ಬಳಸಿದ್ದಾರೆ. ವರ್ಗೀಕರಣ ವರ್ಣನೆಯನ್ನ ಮೊದಲಬಾರಿಗೆ ಮಾಡಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ. ಬ್ರಹ್ಮಗುಪ್ತರ ಬೀಜಗಣಿತ ಗ್ರಂಥಗಳನ್ನು, ಆಂಗ್ಲ ವಿದ್ವಾಂಸ ಕೊಲುಬುಕ ಎಂಬಾತ ಆಂಗ್ಲಭಾಷೆಗೆ ಅನುವಾದಿಸಿದ್ದಾನೆ. ಪೈಥಗೊರಸನ ನಿಯಮ ಇವರ ಗ್ರಂಥಗಳಲ್ಲಿ ಕಂಡುಬರುತ್ತದೆ ಹಾಗೂ ಇವರ ಗ್ರಂಥಗಳು ಆಧುನಿಕ ಬೀಜಗಣಿತಕ್ಕೆ ತಳಹದಿಯಾಗಿವೆ. ಗ್ರಂಥಗಳು ಬ್ರಹ್ಮ ಸ್ಫುಟ ಸಿದ್ಧಾಂತ (ಕರುಣ ಖಂಡ ಸಂಹಿತೆ ಬಿರುದುಗಳು ಗಣಿತ ಚಕ್ರ ಚೂಡಾಮಣಿ ಉಲ್ಲೇಖಗಳು ಭಾರತೀಯ ಗಣಿತಜ್ಞರು ಖಗೋಳ ಶಾಸ್ತ್ರಜ್ಞರು ವರ್ಗೀಕರಣ ಅಂಕಗಣಿತ
3625
https://kn.wikipedia.org/wiki/%E0%B2%AE%E0%B2%B9%E0%B2%BE%E0%B2%B5%E0%B3%80%E0%B2%B0%20%28%E0%B2%97%E0%B2%A3%E0%B2%BF%E0%B2%A4%E0%B2%9C%E0%B3%8D%E0%B2%9E%29
ಮಹಾವೀರ (ಗಣಿತಜ್ಞ)
ಮಹಾವೀರ ಕ್ರಿ.ಶ್. ೯ನೇ ಶತಮಾನದ ಭಾರತೀಯ ಗಣಿತಜ್ಞ.ಇವನು ಮೈಸೂರಿನವನು. ಇವನ ಕೃತಿ ಗಣಿತ ಸಾರಸಂಗ್ರಹ.ಇವನನ್ನು ರಾಷ್ಟ್ರಕೂಟ ಪ್ರಭು ಅಮೋಘವರ್ಷಪೋಷಿಸಿದರು.ಇವನು ಗಣಿತವನ್ನು ಜ್ಯೋತಿಷ್ಯದಿಂದ ಬೇರ್ಪಡಿಸಿದನು.ಇದು ಕೇವಲ ಗಣಿತಕ್ಕೇ ಸೀಮಿತವಾದ ಮೊದಲ ಪ್ರಾಚೀನ ಕೃತಿಯೆಂದು ಪರಿಗಣಿತವಾಗಿದೆ .ಇವನು ಖ್ಯಾತ ಗಣಿತಜ್ಞರಾದ ಬ್ರಹ್ಮಗುಪ್ತ ಮತ್ತು ಆರ್ಯಭಟರು ವಾದಿಸಿದ್ದ ಹಲವಾರು ಸಂಗತಿಗಳನ್ನೇ ವಿವರಿಸಿದನಾದರೂ ಇವನ ವಿವರಣೆ ಹೆಚ್ಚು ಸ್ಪುಟವಾಗಿದೆ.ಇವನ ಪ್ರಸಿದ್ಧ ಇಡೀ ದಕ್ಷಿಣ ಭಾರತದಲ್ಲಿ ಪಸರಿಸಿ ಆ ಕಾಲದ ಹಲವಾರು ಗಣಿತಜ್ಞರ ಮೇಲೆ ಪ್ರಭಾವ ಬೀರಿತು. ಪಾವಲೂರಿ ಮಲ್ಲಣ ಇವನ ಕೃತಿಯನ್ನು ಸಾರ ಸಂಗ್ರಹ ಗಣಿತಂ ಎಂಬ ಹೆಸರಿನಲ್ಲಿ ತೆಲುಗು ಭಾಷೆಗೆ ತರ್ಜುಮೆ ಮಾಡಿದನು. ಉಲ್ಲೇಖಗಳು ಭಾರತೀಯ ಗಣಿತಜ್ಞರು ಗಣಿತಜ್ಞರು
3630
https://kn.wikipedia.org/wiki/%E0%B2%AC%E0%B3%8D%E0%B2%B0%E0%B2%B9%E0%B3%8D%E0%B2%AE
ಬ್ರಹ್ಮ
ಅಜ ಇಲ್ಲಿ ಪುನರ್ನಿರ್ದೇಶಿಸುತ್ತದೆ. ಆಡು ಲೇಖನಕ್ಕಾಗಿ ಇಲ್ಲಿ ನೋಡಿ. ಬ್ರಹ್ಮ ಹಿಂದೂ ಧರ್ಮದಲ್ಲಿ ಮೊಟ್ಟ ಮೊದಲು ಬಂದವರು ಎನ್ನಲಾಗುತ್ತದೆ. ಸರಸ್ವತಿಯು ಬ್ರಹ್ಮನ ಹೆಂಡತಿ, ಮತ್ತು ನಾರದರು ಬ್ರಹ್ಮನ ಮಾನಸ ಪುತ್ರರು. ಜಡಜಜ ಎಂಬ ಹೆಸರು ಉಂಟು. ಜಡ ಎಂದರೆ ಚಲನೆ ಇಲ್ಲದ ಎಂದರ್ಥ. ಜಡಕ್ಕೆ ಕೆಸರು ಎಂಬರ್ಥವೂ ಇದೆ. ಹೀಗೆ ಜಡಜ ಎಂದರೆ ಕೆಸರಿನಲ್ಲಿ ಜನಿಸಿದ್ದು ಅಂದರೆ ಕಮಲ ಎಂದರ್ಥ. ಬ್ರಹ್ಮನನ್ನು ಗುಣತ್ರಯ ರಹಿತ, ಉಪಾಧಿರಹಿತ, ಪರಿಚ್ಛೇದಶೂನ್ಯ, ಸಚ್ಚಿದಾನಂದ ಸ್ವರೂಪ, ಪರಾತ್ಪರ, ಪರಮಾತ್ಮ, ಪರಬ್ರಹ್ಮ, ಸರ್ವಲೋಕಪಿತಾಮಹ, ಪ್ರಜಾಪತಿ, ಸ್ವಯಂಭು. ಸರ್ವಲೋಕಪ್ರಭು, ಮಹಾತಪಸ್ವಿ, ಹಿರಣ್ಯಗರ್ಭ ಎಂದು ಮುಂತಾಗಿ ಭಾರತ, ಭಾಗವತ, ರಾಮಾಯಣ ಮತ್ತು ಪುರಾಣಗಳಲ್ಲಿ ಹೊಗಳಲಾಗಿದೆ. ಬ್ರಹ್ಮನಿಗೆ ಸಂಬಂಧಿಸಿದ ಸಂಗತಿಗಳು ಇಂದ್ರಜಿತ್ತು ಇಂದ್ರನನ್ನು ಸೆರೆಹಿಡಿದಾಗ ಬ್ರಹ್ಮ ಅವನನ್ನು ಬಿಡಿಸಿದ. ರಾಮಾಯಣ ರಚಿಸುವುದಕ್ಕೆ ಮೊದಲು ಬ್ರಹ್ಮ ವಾಲ್ಮೀಕಿಯಲ್ಲಿಗೆ ಬಂದು ವರವಿತ್ತು ಅನುಗ್ರಹಿಸಿದ. ಸೀತೆ ಅಗ್ನಿಪ್ರವೇಶ ಮಾಡಿದ ಕಾಲದಲ್ಲಿ ರಾಮನೊಡನೆ ಆಕೆಯ ಸಚ್ಚಾರಿತ್ರ್ಯ ಹೊಗಳಿದ. ಬ್ರಹ್ಮ ತಾನೇ ಸೃಷ್ಟಿಸಿದ ಸರಸ್ವತಿಯನ್ನು ಕಾಮದಿಂದ ನೋಡಲು ಬಯಸಿದ. ಆಗ ಅವಳು ಹೆಣ್ಣು ಜಿಂಕೆಯಾಗಿ ಶಿವನ ಬಳಿ ರಕ್ಷಣೆ ಬೇಡಿದಳು. ಶಿವ ಆ ಜಿಂಕೆಯನ್ನು ತನ್ನ ತೊಡೆಯಮೇಲಿಟ್ಟುಕೊಂಡು ರಕ್ಷಿಸಿ ಬ್ರಹ್ಮನನ್ನು ಬಾಣಗಳಿಂದ ಹೊಡೆದೋಡಿಸಿದ. ಇದರಿಂದ ಶಿವನಿಗೆ ಮೃಗಧರ, ಮೃಗಾಲಯ ಎಂಬ ಹೆಸರು ಬಂತು. ಲಂಕೆಯೊಂದಿಗೆ ಸಂಬಂಧ - ಬ್ರಹ್ಮನ ಮಾನಸಪುತ್ರನಾದ ಪುಲಸ್ತ್ಯನಿಂದ ತೃಣಬಿಂದು ಎಂಬ ರಾಜರ್ಷಿಯ ಮಗಳಾದ ಗೋ ಎಂಬಾಕೆಯಲ್ಲಿ ವಿಶ್ವವಸು ಎಂಬಾತ ಜನಿಸಿದ. ಈ ವಿಶ್ವವಸ್‍ನಿಂದ ಭರದ್ವಾಜ ಮಹರ್ಷಿಯ ಪುತ್ರಿ ದೇವವರ್ಣಿನಿಯಲ್ಲಿ ವೈಶ್ರವಣ ಜನಿಸಿದ. ಈತ ತನ್ನ ತಪಸ್ಸಿನಿಂದ ಬ್ರಹ್ಮನನ್ನು ಮೆಚ್ಚಿಸಿ ಕುಬೇರನಾದ. ಪುಷ್ಪಕವಿಮಾನ ಪಡೆದು ಲಂಕೆಯಲ್ಲಿ ವಾಸಿಸುತ್ತಿದ್ದ. ಇವನ ತಂದೆ ವಿಶ್ವವಸುವಿನಿಂದ ಸುಮಾಲಿ ರಾಕ್ಷಸನ ಮಗಳಾದ ಕೇಕಸಿಯು ರಾವಣ, ಕುಂಭಕರ್ಣ, ಶೂರ್ಪನಖಿ, ವಿಭೀಷಣರೆಂಬ ಮಕ್ಕಳನ್ನು ಪಡೆದಳೂ. ಇದರಿಂದಾಗಿ ಬ್ರಹ್ಮ ರಾವಣ ಕುಂಭಕರ್ಣಾದಿಗಳ ಪ್ರಪಿತಾಮಹ. ಬ್ರಹ್ಮನ ಇನ್ನೊಬ್ಬ ಮಾನಸಪುತ್ರನಾದ ಕುಶನಿಗೆ ವೈದರ್ಭೀಯಲ್ಲಿ ಕುಶಾಂಬ, ಕುಶನಾಭ, ಅಧೂರ್ತ ರಜಸ, ವಸು ಎಂಬ ನಾಲ್ವರು ಮಕ್ಕಳು ಜನಿಸಿದರು. ಇವರಲ್ಲಿ ಕುಶನಾಭನಿಗೆ ಘೈತಾಚಿಯಲ್ಲಿ ನೂರು ಮಂದಿ ಹೆಣ್ಣು ಮಕ್ಕಳು ಜನಿಸಿದರು. ಇವರನ್ನು ಕುಶನಾಭ ಚೂಲಿ ಎಂಬ ಋಷಿಯಿಂದ ಸೋಮದೆಯೆಂಬ ಗಂಧರ್ವಿಯಲ್ಲಿ ಹುಟ್ಟಿದ ಬ್ರಹ್ಮದತ್ತನಿಗೆ ಮದುವೆ ಮಾಡಿಕೊಟ್ಟು ಅನಂತರ ಪುತ್ರಕಾಮೇಷ್ಠಿ ಮಾಡಿದ. ಕೆಲವು ಕಾಲಾನಂತರ ಗಾಧಿಯೆಂಬ ಪುತ್ರ ಜನಿಸಿದ. ಈತನ ಮಗನೇ ವಿಶ್ವಾಮಿತ್ರ. ಈತನಿಗೆ ಕೌಶಿಕನೆಂದು ಮತ್ತೊಂದು ಹೆಸರು. ಇದರಿಂದಾಗಿ ಬ್ರಹ್ಮ ವಿಶ್ವಾಮಿತ್ರನ ತಾತನ ತಾತ ಎಂದು ರಾಮಯಣದಿಂದ ತಿಳಿದುಬರುತ್ತದೆ. ಬ್ರಹ್ಮನ ಹುಟ್ಟು - ವಿಷ್ಣು ಶೇಷಶಾಯಿಯಾಗಿ ಯೋಗನಿದ್ರೆಯಲ್ಲಿದ್ದಾಗ ಸೂರ್ಯನಿಗೆ ಸಮಾನವಾದ ತೇಜಸ್ಸಿನಿಂದ ಕೂಡಿದ್ದ. ಬಹು ಸುಂದರವಾಗಿದ್ದ ಕಮಲಪುಷ್ಪವೊಂದು ಮಹಾವಿಷ್ಣುವಿನ ನಾಭಿಯಿಂದ ಉದಯಿಸಿತು. ಆ ನಾಭಿಕಮಲದಿಂದ ಬ್ರಹ್ಮ ಉದಯಿಸಿದ. ಸರ್ಪಶಯ್ಯೆಯಲ್ಲಿ ವಿಷ್ಣು ಯೋಗನಿದ್ರೆಯಲ್ಲಿ ಮಲಗಿರುವುದನ್ನೂ ಅವನ ನಾಭಿಕಮಲದಿಂದ ನಾಲ್ಕು ತಲೆಗಳುಳ್ಳ ಬ್ರಹ್ಮ ಉದಯಿಸಿರುವುದನ್ನೂ ನೋಡಿದ ಮಧುಕೈಟಭರೆಂಬ ರಾಕ್ಷಸರು ತಮ್ಮ ರಾಕ್ಷಸ ಸ್ವಭಾವಕ್ಕನುಗುಣವಾಗಿ ಬ್ರಹ್ಮನನ್ನು ಹೆದರಿಸಿದರು. ಆತ ನಡುಗಲಾರಂಭಿಸಿದ. ಆಗ ಅವನು ಕುಳಿತಿದ್ದ ನಾಭಿಪದ್ಮದ ದಳಗಳೂ ಸ್ವಾಭಾವಿಕವಾಗಿಯೇ ಕಂಪಿಸಿದವು. ಆದರಿಂದ ವಿಷ್ಣು ಎಚ್ಚರಗೊಂಡು ಆ ಇಬ್ಬರು ರಾಕ್ಷಸರನ್ನು ಸಂಹರಿಸಿದ. ಈ ಮಧುಕೈಟಭರ ಪುತ್ರ ಧುಂಧು ಬ್ರಹ್ಮನನ್ನು ಕುರಿತು ತಪಸ್ಸು ಮಾಡಿದ. ಬ್ರಹ್ಮ ಪ್ರತ್ಯಕ್ಷನಾದಾಗ ಆತ ದೇವ, ದಾನವ, ಯಕ್ಷ, ನಾಗ, ಗಂಧರ್ವ, ರಾಕ್ಷಸರಲ್ಲಿ ಯಾರೊಬ್ಬರೂ ತನ್ನನ್ನು ವಧಿಸಲು ಸಮರ್ಥರಾಗಬಾರದೆಂದು ವರ ಕೇಳಿದ. ಬ್ರಹ್ಮನಿಂದ ವರ ಪಡೆದ ಈತ ದೇವತೆಗಳಿಗೆ ಪೀಡೆಯಾದ. ಆಗ ಬ್ರಹ್ಮದಶ್ವನ ಮಗ ಕುವಲಾಶ್ವ ಆತನನ್ನು ಸಂಹರಿಸಿದ. ವ್ಯಾಸರು ತಮ್ಮ ಮಹಾಭಾರತವನ್ನು ಬರೆದುಕೊಳ್ಳಲು ಸಮರ್ಥ ಲಿಪಿಕಾರನಾರೆಂದು ಚಿಂತಿಸುತ್ತಿರುವಾಗ, ಇದನ್ನು ತಿಳಿದ ಬ್ರಹ್ಮ ತಾನೇ ವ್ಯಾಸರಲ್ಲಿಗೆ ಹೋಗಿ ಗಣಪತಿಯೇ ಸಮರ್ಥ ಲಿಪಿಕಾರನೆಂದು ಸೂಚಿಸಿದ. ಬ್ರಹ್ಮನ ಮಾನಸಪುತ್ರರು - ಬ್ರಹ್ಮನಿಗೆ ಮರೀಚಿ. ಅತ್ರಿ, ಆಂಗಿರಸ್ಸು. ಪುಲಸ್ತ್ಯ, ಪುಲಹ, ಕ್ರತು ಎಂಬುದಾಗಿ ಆರು ಮಂದಿ ಮಾನಸಪುತ್ರರು. ಸನಕ, ಸನಂದನ, ಸನತ್ಕುಮಾರ ಮತ್ತು ಸನತ್ಸುಜಾತರು ಸೃಷ್ಟಿಯ ಆದಿಯಲ್ಲಿ ಬ್ರಹ್ಮನ ಮಾನಸ ಪುತ್ರರು. ಇವರು ಯಾವಾಗಲು ಕೌಮಾರಾವಸ್ಥೆಯಲ್ಲಿಯೇ ಇರತಕ್ಕವರು. ಮಹಾತಪಸ್ವಿಗಳೂ ಜ್ಞಾನಸಂಪನ್ನರೂ ಆದವರು. ಈತನಿಗೆ ಸ್ವಾಯಂಭುವ ಮನ್ವಂತರದಲ್ಲಿ ಮರೀಚಿ, ಅತ್ರಿ, ಆಂಗಿರಸ, ಪುಲಸ್ತ್ಯ, ಪುಲಹ, ಕ್ರತು, ಭೃಗುದಕ್ಷ, ವಸಿಷ್ಠ ಎಂದು ಒಂಬತ್ತು ಜನ ಮಾನಸಪುತ್ರರು ಜನಿಸಿದ ಮೇಲೆ ಕಡೆಯದಾಗಿ ಈತನ ತೊಡೆಯಿಂದ ನಾರದ ಜನಿಸಿದ ಎಂಬುದಾಗಿ ಭಾಗವತದಿಂದ ಗೊತ್ತಾಗುತ್ತದೆ. ಬ್ರಹ್ಮನಿಂದ ಜನಿಸಿದವರು - ಬ್ರಹ್ಮನ ಮತ್ತೊಬ್ಬ ಮಗ ಮನು. ಮನುವಿನ ಮಗ ಪ್ರಜಾಪತಿ. ಬ್ರಹ್ಮನ ಬಲಗಡೆಯ ಸ್ತನವನ್ನು ಭೇದಿಸಿಕೊಂಡು ನಿರೂಪಿಯಾಗಿ ಸಕಲ ಲೋಕ ಸುಖಾವಹನಾದ ಭಗವಾನ್ ಧರ್ಮ ಹೊರಗೆ ಬಂದ. ಮಹಾತಪಸ್ವಿಯಾದ ದಕ್ಷ ಹುಟ್ಟಿದ್ದು ಬ್ರಹ್ಮನ ಬಲಗಾಲಿನ ಅಂಗುಷ್ಟದಿಂದ. ಬ್ರಹ್ಮನ ಎಡಗಾಲಿನ ಅಂಗುಷ್ಠದಿಂದ ದಕ್ಷನ ಭಾರ್ಯೆ ಹುಟ್ಟಿದಳು. ಇವರಿಗೆ ಐವತ್ತು ಜನ ಹೆಣ್ಣು ಮಕ್ಕಳು. ಇವರಲ್ಲಿ ಹತ್ತು ಜನರನ್ನು ಧರ್ಮನಿಗೆ ಮದುವೆ ಮಾಡಿಕೊಟ್ಟ. ಧರ್ಮ ಮೂರ್ತಿಯ ಸಂದರ್ಶನಕ್ಕೆ ಅವನ ಪತ್ನಿಯರಾದ ಕೀರ್ತಿ, ಲಕ್ಮ್ಷೀ, ಧೃತಿ, ಮೇಧಾ, ಪುಷ್ಟಿ, ಶ್ರದ್ಧಾ, ಕ್ರಿಯಾ, ಬುದ್ಧಿ, ಲಜ್ಜಾ, ಮತಿ-ಇವರೇ ಮಾರ್ಗದರ್ಶಕರೆಂದು ಬ್ರಹ್ಮನೇ ನಿಶ್ಚಯಿಸಿದ್ದಾನೆ. ಬ್ರಹ್ಮನ ಹೃದಯವನ್ನು ಭೇದಿಸಿಕೊಂಡು ಭೃಗುಮಹರ್ಷಿ ಹೊರಗೆ ಬಂದ. ಭೃಗುವಿನ ಮಗ ಕವಿ. ಕವಿಯ ಮಗ ಶುಕ್ರ. ಶುಕ್ರ ಬ್ರಹ್ಮನ ನಿರ್ದೇಶನದಂತೆ ಮೂರು ಲೋಕಗಳ ರಕ್ಷಣಾರ್ಥವಾಗಿ ಗ್ರಹವಾಗಿ ಪರಿವರ್ತನೆ ಹೊಂದಿ ಲೋಕದ ಜನರಿಗೆ ಅತಿವೃಷ್ಟಿ ಅನಾವೃಷ್ಟ್ಟಿ ಮತ್ತು ಸುವೃಷ್ಟಿಗಳನ್ನೂ ಭಯ ಮತ್ತು ಅಭಯವನ್ನೂ ಕಾಲಾನುಗುಣವಾಗಿ ನೀಡುತ್ತ ಪ್ರಪಂಚದ ಸುತ್ತಲೂ ತಿರುಗುತ್ತಿದ್ದಾನೆ. ಬ್ರಹ್ಮನಿಗೆ ಧಾತೃ, ವಿಧಾತೃ ಎಂಬ ಮತ್ತಿಬ್ಬರು ಮಕ್ಕಳು. ಆ ಇಬ್ಬರಲ್ಲಿ ಈ ಪ್ರಪಂಚದ ಆಗು ಹೋಗುಗಳು ಅಡಗಿವೆ. ವೈಶ್ರವಣ ತಂದೆಯಾದ ಪುಲಸ್ತ್ಯನೊಡನಿರದೆ ಪಿತಾಮಹನಾದ ಬ್ರಹ್ಮನ ಬಳಿಗೇ ಹೋದ. ಇದರಿಂದ ಕುಪಿತನಾದ ಪುಲಸ್ತ್ಯ ವೈಶ್ರವಣನನ್ನು ಬಾಧೆ ಪಡಿಸುವ ಸಲುವಾಗಿ ಯೋಗಬಲದಿಂದ ದೇಹಾಂತರದಿಂದ ವಿಶ್ರವಸನೆಂಬ ದೇಹಾಂತರ ಪಡೆದ. ತಂದೆಯನ್ನು ಬಿಟ್ಟು ತನ್ನ ಬಳಿಗೆ ಬಂದ ವೈಶ್ರವಣದ ವಿಷಯದಲ್ಲಿ ಬ್ರಹ್ಮ ಸುಪ್ರೀತನಾಗಿ ಅವನಿಗೆ ಅಮರತ್ವವನ್ನೂ ಸಕಲೈಶ್ವರ್ಯಗಳ ಈಶತ್ವವನ್ನೂ ಲೋಕಪಾಲಸ್ಥಾನವನ್ನೂ ಈಶಾನನೊಡನೆ ಸಖ್ಯವನ್ನೂ ನಳಕೂಬರನೆಂಬ ಹೆಸರಿನ ಪುತ್ರನನ್ನೂ ನೀಡಿ ರಕ್ಷೋಗಣಗಳಿಂದ ಪರಿವೃತವಾಗಿದ್ದ ಲಂಕಾರಾಜ್ಯಕ್ಕೆ ಅಧಿಪತಿಯಾಗಿ ಮಾಡಿದ. ಇಚ್ಛೆ ಬಂದಲ್ಲಿಗೆ ಹೋಗಬಹುದಾಗಿದ್ದ ಪುಷ್ಟಕ ವಿಮಾನವನ್ನೂ ಯಕ್ಷರ ನಾಯಕತ್ವವನ್ನೂ ರಾಜರಾಜನೆಂಬ ಅಭಿಧಾನವನ್ನೂ ಬ್ರಹ್ಮ ವೈಶ್ರವಣನಿಗೆ ನೀಡಿದ. ಈ ವೈಶ್ರವಣ ಅಥವಾ ಕುಬೇರ ತಂದೆಯಾದ ಪುಲಸ್ತ್ಯನ ಮತ್ತೊಂದು ಅವತಾರವೇ ವಿಶ್ರವಸನ ಸ್ವರೂಪವೆಂಬುದನ್ನು ತಿಳಿದು ಆತನ ಅನುಗ್ರಹ ಪಡೆಯಲೋಸುಗ ಲಂಕಾಪಟ್ಟಣದಲ್ಲಿ ವಾಸಮಾಡುತ್ತ ಆತನ ಸೇವಾರ್ಥವಾಗಿ ಪುಷ್ಪೋತ್ಕಟೆ, ರಾಕೆ, ಮಾಲಿನಿಯರೆಂಬ ಮೂರು ಮಂದಿ ರಾಕ್ಷಸ ಸ್ತ್ರೀಯರನ್ನು ನೇಮಿಸಿದ. ಇವರು ವಿಶ್ರವಸ್ಸಿನ ರೂಪದ ಪುಲಸ್ತ್ಯನ ಅನುಗ್ರಹಕ್ಕೆ ಪಾತ್ರರಾಗಿ ಪುಷ್ಟೋತ್ಕಟೆ ರಾವಣ ಕುಂಭಕರ್ಣರನ್ನೂ ಮಾಲಿನಿ ಧರ್ಮಾತ್ಮ ವಿಭೀಷಣನನ್ನೂ ರಾಕೆ ಖರ ಮತ್ತು ಶೂರ್ಪನಖಿಯೆಂಬ ಅವಳಿ ಮಕ್ಕಳನ್ನೂ ಪಡೆದರು. ಇದರಿಂದ ಬ್ರಹ್ಮ ರಾವಣ ಕುಂಭಕರ್ಣಾದಿಗಳ ಪಿತಾಮಹನೆಂದು ಮಹಾಭಾರತದಿಂದ ತಿಳಿಯುತ್ತದೆ. ಬ್ರಹ್ಮ ವಿಷ್ಣುವಿನ ನಾಭಿ ಕಮಲದಿಂದ ಜನಿಸಿದ. ಹುಟ್ಟಿದಾಗ ಒಂದೇ ಮುಖವಿತ್ತು. ಆಗ ಬ್ರಹ್ಮ ಕಮಲ ಮಧ್ಯದಲ್ಲಿ ಕುಳಿತು ಶೂನ್ಯನಾಗಿದ್ದ. ಅನಂತರ ನಾಲ್ಕು ದಿಕ್ಕು ನೋಡಿ ನಾಲ್ಕು ಮುಖಗಳನ್ನು ಪಡೆದ. ಅತ್ರಿ ಮುನಿಯ ಪತ್ನಿಯಾದ ಅನಸೂಯಾ ದೇವಿಯಲ್ಲಿ ಚಂದ್ರನಾಗಿ ಅವತರಿಸಿದ. ತ್ರಿಪುರ ಸಂಹಾರ ಸಂದರ್ಭದಲ್ಲಿ ಪರಮೇಶ್ವರನಿಗೆ ಸಾರಥಿಯಾದ. ನಾರಾಯಣನಿಂದ ಭಾಗವತ ಕಥೆ ಕೇಳಿ ಆತನನ್ನು ಸ್ತುತಿಸಿದ. ಲಿಂಗಪುರಾಣದಲ್ಲಿ - ಲಿಂಗಪುರಾಣದಿಂದ ಬ್ರಹ್ಮನ ಬಗ್ಗೆ ಗೊತ್ತಾಗುವ ವಿಷಯವಿದು. ಬ್ರಹ್ಮ ಶಿವನಿಂದ ಯೋಗಮಾಯೆಯಲ್ಲಿ ಜನಿಸಿದ. ಪಾರ್ವತಿ ಶಿವನನ್ನು ಮೆಚ್ಚಿಸುವುದಕ್ಕಾಗಿ ತೀವ್ರ ತಪಸ್ಸನ್ನು ಕೈಕೊಂಡಿರಲು, ಬ್ರಹ್ಮ ಆಕೆಯಲ್ಲಿಗೆ ಬಂದು ನಮಸ್ಕರಿಸಿ ಹೊಗಳಿ ಮಹಾದೇವ ತಪ್ಪದೆ ನಿನ್ನನ್ನು ವರಿಸುತ್ತಾನೆ. ನಾವೆಲ್ಲರೂ ಆತನ ಕಿಂಕರರು ಎಂದು ಹೇಳಿ ಕಣ್ಮರೆಯಾದ. ಶಿವನಿಗಿದ್ದಂತೆ ಬ್ರಹ್ಮನಿಗೂ ಐದು ತಲೆಗಳಿದ್ದುವು. ಬ್ರಹ್ಮ ತ್ರಿಮೂರ್ತಿಗಳಲ್ಲಿ ತಾನೇ ಸರ್ವಶ್ರೇಷ್ಠನೆಂದು ಭಾವಿಸಿ ವೇದಗಳನ್ನು ನಿಂದಿಸಿ ಮಾತನಾಡಿದಾಗ ಶಿವ ಮೈದೋರಿ, ಬ್ರಹ್ಮನಿಂದ ತಿರಸ್ಕೃತನಾಗಿ, ಭೈರವನನ್ನು ಸೃಜಿಸಿ, ಆತನ ಮೂಲಕ ಬ್ರಹ್ಮನ ಐದನೆಯ ತಲೆಯನ್ನು ಕತ್ತರಿಸಿದ. ಆಗ ಭೈರವನಿಗೆ ಬ್ರಹ್ಮಹತ್ಯೆ ಪ್ರಾಪ್ತವಾಯಿತು. ಬ್ರಹ್ಮಕಪಾಲ ಭೈರವನ ಕೈಗೆ ಅಂಟಿಕೊಂಡಿತು. ಭೈರವ ಕಾಪಾಲಿಕನಾಗಿ ತಿರುಗುತ್ತಿದ್ದು ವಿಷ್ಣುವನ್ನು ಸಂದರ್ಶಿಸಿದ. ಭೈರವ ಕಾಶೀ ಕ್ಷೇತ್ರಕ್ಕೆ ಬಂದಾಗ ಬ್ರಹ್ಮಹತ್ಯೆ ಪಾತಾಳಕ್ಕೆ ಕುಸಿಯಿತು. ಬ್ರಹ್ಮನಿಗೆ ಮಾನವಲೋಕದಲ್ಲಿ ದೇವಾಲಯ, ಪೂಜೆ, ರಥೋತ್ಸವಾದಿಗಳು ಇಲ್ಲದಿರುವಂತೆ ಶಿವನೇ ಶಾಪಕೊಟ್ಟನೆಂದು ಶಿವಪುರಾಣ ತಿಳಿಸುತ್ತದೆ. ಹರಿವಂಶದ ಪ್ರಕಾರ - ಬ್ರಹ್ಮನ ಮುಖದಿಂದ ದೇವತೆಗಳೂ ವಕ್ಷದಿಂದ ಪಿತೃಗಳೂ ಕೆಳಗಿನ ಇಂದ್ರಿಯದಿಂದ ಮಾನವರೂ ಬೆನ್ನುಭಾಗದಿಂದ ರಾಕ್ಷಸರೂ ಜನಿಸಿದರೆಂದು ಹರಿವಂಶದಿಂದ ಗೊತ್ತಾಗುತ್ತದೆ. ಬಾಹ್ಯ ಸಂಪರ್ಕಗಳು http://santeknath.org/guru%20parampara.html The Brahma-Samhita – Prayers of Lord Brahma at the start of creation (Brahmasamhita.com) Brahma's Prayers for Creative Energy from the Bhagavata Purana (vedabase.net) Brahma Genealogy Chart ಹಿಂದೂ ದೇವತೆಗಳು
3636
https://kn.wikipedia.org/wiki/%E0%B2%AE%E0%B2%BE%E0%B2%A7%E0%B2%B5
ಮಾಧವ
ಸಂಗಮಗ್ರಾಮದ ಮಾಧವ (೧೩೫೦ - ೧೪೨೫) ಹಳೆಯ ಭಾರತದ ಗಣಿತಜ್ಞ ಹಾಗು ಖಗೋಳಶಾಸ್ತ್ರಜ್ಞ. ಉಲ್ಲೇಖಗಳು ಭಾರತೀಯ ಗಣಿತಜ್ಞರು ಗಣಿತಜ್ಞರು
3656
https://kn.wikipedia.org/wiki/%E0%B2%B9%E0%B2%B0%E0%B3%8D%E0%B2%AD%E0%B2%9C%E0%B2%A8%E0%B3%8D%20%E0%B2%B8%E0%B2%BF%E0%B2%82%E0%B2%97%E0%B3%8D
ಹರ್ಭಜನ್ ಸಿಂಗ್
ಹರ್ಭಜನ್ ಸಿಂಗ್ ಪ್ಲಾಹ.''' (ಜನನ: ಜುಲೈ ೩, ೧೯೮೦) ಭಾರತದ ಒಬ್ಬ ಕ್ರಿಕೆಟಿಗ. ಇವರು ಒಬ್ಬ ತಜ್ಞ ಆಫ್ ಸ್ಪಿನ್ನರ್.ಇವರು ಪಂಜಾಬಿನ ಜಲಂಧರ್ನವರು. ಇವರು ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ನಂತರ ಅತ್ಯಂತ ಹೆಚ್ಚು ವಿಕೆಟ್ ಪಡೆದ ಪ್ರಪಂಚದ ಎರಡನೇ ಬೌಲರ್.ಇವರಿಗೆ ೨೦೦೯ರ ಸಾಲಿನಲ್ಲಿ ಪದ್ಮಶ್ರೀ ಪ್ರಶಸ್ತಿ ದೊರೆತಿದೆ. ಉಲ್ಲೇಖಗಳು ಬಾಹ್ಯ ಸಂಪರ್ಕಗಳು Harbhajan Singh Official Website Harbhajan Singh's Official Blog on BIGADDA Harbhajan Singh takes 400th Test wicket ಭಾರತದ ಕ್ರಿಕೆಟ್ ಕ್ರೀಡಾಪಟುಗಳು ಕ್ರಿಕೆಟ್ ಕ್ರಿಕೆಟ್ ಆಟಗಾರ
3657
https://kn.wikipedia.org/wiki/%E0%B2%95%E0%B2%AA%E0%B2%BF%E0%B2%B2%E0%B3%8D%20%E0%B2%A6%E0%B3%87%E0%B2%B5%E0%B3%8D
ಕಪಿಲ್ ದೇವ್
ಕಪಿಲ್ ದೇವ್ - (೬ ಜನೆವರಿ,೧೯೫೯)-ಭಾರತದ ಪ್ರಮುಖ ಕ್ರಿಕೆಟ್ ಆಟಗಾರರಲ್ಲಿ ಒಬ್ಬರು. ಭಾರತ ತಂಡದ ನಾಯಕರಾಗಿದ್ದರು. ೧೯೮೩ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ ವಿಶ್ವ ಕಪ್ ಗೆದ್ದುಕೊಂಡಿತು. ಕಪಿಲ್ದೇವ್ (ಕಪಿಲ್ ದೇವ್ ರಾಮಲಾಲ್ ನಿಖಂಜ್ )(ಉಚ್ಚಾರಣೆ (ಜನನ1959 6 ಜನವರಿ ), ಎಂದು , ಭಾರತದ ಮಾಜಿ ಕ್ರಿಕೆಟಿಗ. 1983 ಕ್ರಿಕೆಟ್ ವಿಶ್ವ ಕಪ್ ಗೆದ್ದಾಗ ಭಾರತ ಕ್ರಿಕೆಟ್ ತಂಡದ ನಾಯಕತ್ವ ವಹಿಸಿದ್ದರು. 2002 ರಲ್ಲಿ ಶತಮಾನದ ಭಾರತೀಯ ಕ್ರಿಕೆಟಿಗ ವಿಸ್ಡನ್ ಹೆಸರಿಸಿದೆ. ಕಪಿಲ್ದೇವ್ ಸಾರ್ವಕಾಲಿಕ ಶ್ರೇಷ್ಠ ಆಲ್ರೌಂಡರ್ ಆಗಿದ್ದರೆ. ಅವರು ಅಕ್ಟೋಬರ್ 1999 ಮತ್ತು ಆಗಸ್ಟ್ 2000 ನಡುವೆ 10 ತಿಂಗಳು ಭಾರತದ ರಾಷ್ಟ್ರೀಯ ಕ್ರಿಕೆಟ್ ತರಬೇತುದಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಪಿಲ್ ಓರ್ವ ಬಲಗೈ ವೇಗದ ಬೌಲರ್ ತನ್ನ ಆಕರ್ಷಕವಾದ ಆಕ್ಷನ್ ಮತ್ತು ಪ್ರಬಲವಾದ outswinger ಸೆಳೆದಿದೆ, ಮತ್ತು ತನ್ನ ವೃತ್ತಿಜೀವನದಲ್ಲಿ ಬಹುಪಾಲು ಭಾರತದ ಪ್ರಮುಖ ವೇಗಿ . ಅವರು ಟೇಲ್-ಎಂಡರ್ಗಳ ವಿರುದ್ಧ ಅತ್ಯಂತ ಪರಿಣಾಮಕಾರಿಯಾಗಿ ಬಳಸಿದ 1980 ರ ದಶಕದ ಅವಧಿಯಲ್ಲಿ ದಂಡ inswinging ಯಾರ್ಕರ್ ಅಭಿವೃದ್ಧಿ. ಬ್ಯಾಟ್ಸ್ಮನ್, . ಒಂದು ಸ್ವಾಭಾವಿಕವಾದ ಆಕ್ರಮಣಶೀಲ ಆಟಗಾರರಾದ ಅವರನ್ನು ಹೆಚ್ಚಾಗಿ ಭಾರತದಲ್ಲಿನ ಕಷ್ಟ ಸಂದರ್ಭಗಳಲ್ಲಿ ವಿರೋಧ ದಾಳಿ ಮೂಲಕ ನೆರವಾಯಿತು. ಹರಿಯಾಣ ಹರಿಕೇನ್ ಬಣ್ಣಿಸಿದೆ ಅವರು ದೇಶೀಯ ಕ್ರಿಕೆಟ್ನಲ್ಲಿ ಹರ್ಯಾಣ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದರು. ಇವರು ಟೆಸ್ಟ್ ಕ್ರಿಕೆಟ್ನಲ್ಲಿ ವಿಕೆಟ್ ಹೆಚ್ಚಿನವು ವಿಶ್ವ ದಾಖಲೆ ಹಿಡುವಳಿ, 1994 ರಲ್ಲಿ ನಿವೃತ್ತರಾದರು, ದಾಖಲೆ ತರುವಾಯ 2000 ರಲ್ಲಿ ಕರ್ಟ್ನಿ ವಾಲ್ಷ್ ಮುರಿದ ಬಾರಿ, ಅವರು ಕ್ರಿಕೆಟ್, ಟೆಸ್ಟ್ ಮತ್ತು ಏಕದಿನ ಎರಡೂ ಪ್ರಮುಖ ರೂಪಗಳಲ್ಲಿ ಭಾರತದ ಅತ್ಯುನ್ನತ ವಿಕೆಟ್ ಪಡೆದ ಬೌಲರ್ ಕೂಡಾ. ಅವರು ಕ್ರಿಕೆಟ್ ಇತಿಹಾಸದಲ್ಲೇ ಏಕೈಕ ಆಟಗಾರ 400 ಕ್ಕೂ ಹೆಚ್ಚು ವಿಕೆಟ್ (434 ವಿಕೆಟ್) ತೆಗೆದುಕೊಂಡು ಗಳಿಸಿದ್ದು ಶ್ರೇಷ್ಟ ಸರ್ವಾಂಗೀಣ ಎಂದು ಆಡಲಾಗುವ ಗೆ ಒಂದೆನಿಸಿದೆ ಟೆಸ್ಟ್ನಲ್ಲಿ 5,000 ಕ್ಕೂ ಹೆಚ್ಚು ರನ್ ಮಾಡಿದ್ದಾರೆ . ಭಾರತದ ಕ್ರಿಕೆಟ್ ಕ್ರೀಡಾಪಟುಗಳು ಕ್ರೀಡಾಪಟುಗಳು ೧೯೫೯ ಜನನ ಕ್ರಿಕೆಟ್ ಆಟಗಾರ
3661
https://kn.wikipedia.org/wiki/%E0%B2%A6%E0%B2%BF%E0%B2%B2%E0%B3%80%E0%B2%AA%E0%B3%8D%20%E0%B2%B5%E0%B3%86%E0%B2%82%E0%B2%97%E0%B3%8D%E2%80%8D%E0%B2%B8%E0%B2%BE%E0%B2%B0%E0%B3%8D%E0%B2%95%E0%B2%B0%E0%B3%8D
ದಿಲೀಪ್ ವೆಂಗ್‍ಸಾರ್ಕರ್
ದಿಲೀಪ್ ವೆಂಗ್‍ಸಾರ್ಕರ್(ಉಚ್ಛಾರಣೆ: ) - ಭಾರತದ ಕ್ರಿಕೆಟ್ ಆಟಗಾರರಲ್ಲೊಬ್ಬರು. ಇವರು ಮುಂಬಯಿ ತಂಡದ ಪರವಾಗಿ ರಣಜಿ ಮುಂತಾದ ದೇಶಿಯ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ. ಭಾರತದ ಕ್ರಿಕೆಟ್ ಕ್ರೀಡಾಪಟುಗಳು ಕ್ರಿಕೆಟ್ ಆಟಗಾರ
3662
https://kn.wikipedia.org/wiki/%E0%B2%AF%E0%B3%81%E0%B2%B5%E0%B2%B0%E0%B2%BE%E0%B2%9C%E0%B3%8D%20%E0%B2%B8%E0%B2%BF%E0%B2%82%E0%B2%97%E0%B3%8D
ಯುವರಾಜ್ ಸಿಂಗ್
ಯುವರಾಜ್ ಸಿಂಗ್ (1981 ಡಿಸೆಂಬರ್ 12 ರಂದು ಜನಿಸಿದರು) ಒಬ್ಬ ಭಾರತೀಯ ಅಂತಾರಾಷ್ಟ್ರೀಯ ಆಟಗಾರ. ಅವರು ಬಾವಲಿಗಳು ಮಧ್ಯಮ ಕ್ರಮಾಂಕದಲ್ಲಿ ಎಡಗೈ ಮತ್ತು ನಿಧಾನ ಎಡಗೈ ಸಾಂಪ್ರದಾಯಿಕ ಬೌಲ್ ಹಾಕುತ್ತಾನೆ ಆಲ್ರೌಂಡರ್ ಆಗಿದ್ದಾರೆ. ಭಾರತದ ಮಾಜಿ ವೇಗದ ಬೌಲರ್ ಮತ್ತು ಪಂಜಾಬಿ ನಟ ಯೋಗರಾಜ್ ಸಿಂಗ್ರ ಮಗನಾದ ಯುವರಾಜ್ 2000 ರಿಂದ ಏಕದಿನ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ಆಟಗಾರನಾಗಿದ್ದ ಮತ್ತು ಅವರು ಕೊನೆಯ 2008 ರ ಕೊನೆಯವರೆಗೆ-2007 ರಿಂದ ಏಕದಿನ ತಂಡದ ಉಪನಾಯಕ 2003. ಚೊಚ್ಚಲ ಟೆಸ್ಟ್ ಆಡಿದ. ಅವರು ಭಾರತವು ಇವೆರಡೂ 2011 ರ ವಿಶ್ವಕಪ್ ನಲ್ಲಿ ಪಂದ್ಯಾವಳಿಯ ಪುರುಷೋತ್ತಮ, ಮತ್ತು 2007 ರ ಐಸಿಸಿ ವಿಶ್ವ ಟ್ವೆಂಟಿ 20 ಯಲ್ಲಿ ಯಶಸ್ವಿ ಕ್ರಿಕೆಟಿಗರಲ್ಲಿ ಒಬ್ಬರು. ಹಿರಿಯ ಕ್ರಿಕೆಟ್ ಬಗ್ಗೆ ರೂಪದಲ್ಲಿ ಕೇವಲ ಮೂರು ಬಾರಿ ಈ ಮೊದಲು ಪೂರೈಸಿದ ಸಾಧನೆ, ಮತ್ತು ಎಂದಿಗೂ ಎರಡು ಟೆಸ್ಟ್ ಕ್ರಿಕೆಟ್ ತಂಡಗಳ ನಡುವೆ ಅಂತರಾಷ್ಟ್ರೀಯ ಪಂದ್ಯದಲ್ಲಿ - 2007ರ ವರ್ಲ್ಡ್ ಟ್ವೆಂಟಿ20 ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ, ಅವನು ಭರ್ಜರಿಯಾಗಿ ಸ್ಟುವರ್ಟ್ ಬ್ರಾಡ್ ಬೌಲ್ ಒಂದು ಓವರ್ನಲ್ಲಿ ಆರು ಸಿಕ್ಸರ್ ಸಿಡಿಸಿದರು. 2011 ರಲ್ಲಿ, ಯುವರಾಜ್ ಎಡ ಶ್ವಾಸಕೋಶದಲ್ಲಿ ಒಂದು ಕ್ಯಾನ್ಸರ್ಯುಕ್ತ ಗೆಡ್ಡೆಯನ್ನು ಗುರುತಿಸಲಾಯಿತು ಮತ್ತು ಮಾರ್ಚ್ 2012 ಬೋಸ್ಟನ್ ಮತ್ತು Indianapolis.In ಚಿಕಿತ್ಸೆಯ ಚಿಕಿತ್ಸೆಗೆ ಒಳಗಾಗಿದ್ದರು, ಅವರು ಚಿಕಿತ್ಸೆಯ ಮೂರನೇ ಮತ್ತು ಅಂತಿಮ ಸೈಕಲ್ ಮುಗಿದ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು ಮತ್ತು ಏಪ್ರಿಲ್ ಭಾರತಕ್ಕೆ ಮರಳಿದರು. ಅವರು 2012 ವಿಶ್ವ ಟ್ವೆಂಟಿ 20 ಮುನ್ನ ನ್ಯೂಜಿಲ್ಯಾಂಡ್ ವಿರುದ್ಧ ಸೆಪ್ಟೆಂಬರ್ನಲ್ಲಿ ಒಂದು ಟ್ವೆಂಟಿ 20 ಪಂದ್ಯದಲ್ಲಿ ತನ್ನ ಅಂತಾರಾಷ್ಟ್ರೀಯ ಹಿಂದಿರುಗಿದರು. ಬಾಲ್ಯ ಹಾಗೂ ವೈಯಕ್ತಿಕ ಜೀವನದ ಯುವರಾಜ್ ಪೋಷಕರು ಯೋಗರಾಜ್ ಸಿಂಗ್ ಮತ್ತು ಶಬ್ನಮ್ ಸಿಂಗ್. ಅವರ ಪೋಷಕರ ವಿಚ್ಛೇದನ ನಂತರ, ಯುವರಾಜ್ ತನ್ನ ತಾಯಿಯೊಂದಿಗೆ ಉಳಿಯಲು ನಿರ್ಧರಿಸಿದರು. ಟೆನಿಸ್ ಮತ್ತು ರೋಲರ್ ಸ್ಕೇಟಿಂಗ್ ಬಾಲ್ಯದಲ್ಲಿ ಯುವರಾಜ್ ಅಚ್ಚುಮೆಚ್ಚಿನ ಕ್ರೀಡೆಯಾಗಿತ್ತು. ಇವರು ನ್ಯಾಷನಲ್ ಯು-14 ರೋಲರ್ ಸ್ಕೇಟಿಂಗ್ ಚಾಂಪಿಯನ್ಷಿಪ್ ಗೆದ್ದಿದ್ದರು. ಅವರ ತಂದೆ ಪದಕ ದೂರ ಎಸೆದರು ಮತ್ತು ಸ್ಕೇಟಿಂಗ್ ಮರೆತು ಕ್ರಿಕೆಟ್ ಗಮನ ಹರಿಸಿದರು. ಅವರು ಪ್ರತಿದಿನ ತರಬೇತಿ ತೆಗೆದುಕೊಳ್ಳುತ್ತಿದ್ದರು. ಅವರು ಚಂಡೀಗಡ ದಲ್ಲಿ DAV ಪಬ್ಲಿಕ್ ಸ್ಕೂಲ್ ನಲ್ಲಿ ಅಧ್ಯಯನ ಮಾಡಿದರು. ಅವರು ಮೆಹಂದಿ ಸಾಜ್ಡಾ ಡಿ ಮತ್ತು ಪಟ್ ಸರ್ದಾರಾ ರಲ್ಲಿ ಬಾಲ ಎರಡು ಸಣ್ಣ ಪಾತ್ರಗಳನ್ನು ಮಾಡಿದ್ದಾರೆ. ಯುವರಾಜ್ ಮೂಲತಃ ಎಡಗೈ ಬ್ಯಾಟ್ಸ್‍ಮನ್. ಆಗಾಗ ಅಲ್ಪ ಸ್ವಲ್ಪ ಬೌಲಿಂಗ್ ಕೂಡ ಮಾಡುತ್ತಾರೆ. ಇವರು ಸ್ಪಿನ್ ಬೌಲಿಂಗ್‍ಗಿಂತ ವೇಗದ ಬೌಲಿಂಗ್‍ಗೆ, ಚೆನ್ನಾಗಿ ಆಟವಾಡುತ್ತಾರೆ ಎಂಬ ಭಾವನೆ ಇದೆ. ಇವರು ಭಾರತ ತಂಡದ ಅತ್ಯುತ್ತಮ ಕ್ಷೇತ್ರರಕ್ಷಕರುಗಳಲ್ಲಿ ಒಬ್ಬರು. ಯುವರಾಜ್ ಅವರು ಒಂದೇ ಒವರಲ್ಲಿ ೬ ಸಿಕ್ಸರ್ ಬಾರಿಸಿದ್ದಾರೆ ಪ್ರಶಸ್ತಿಗಳು ಯುವರಾಜ್ ಭಾರತದ ಪ್ರಣವ್ ಮುಖರ್ಜಿ ಅಧ್ಯಕ್ಷ 2012 ರಲ್ಲಿ ಅರ್ಜುನ ಪ್ರಶಸ್ತಿ, ಭಾರತದ ಎರಡನೇ ಅತ್ಯುನ್ನತ ಕ್ರೀಡಾ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. 2014 ರಲ್ಲಿ, ಅವರು ಪದ್ಮಶ್ರೀ, ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವ ನೀಡಲಾಯಿತು. ಉಲ್ಲೇಖಗಳು ಭಾರತದ ಕ್ರಿಕೆಟ್ ಕ್ರೀಡಾಪಟುಗಳು ಕ್ರಿಕೆಟ್ ಆಟಗಾರ
3678
https://kn.wikipedia.org/wiki/%E0%B2%9C%E0%B2%BE%E0%B2%95%E0%B2%BF%E0%B2%B0%E0%B3%8D%20%E0%B2%B9%E0%B3%81%E0%B2%B8%E0%B3%87%E0%B2%A8%E0%B3%8D
ಜಾಕಿರ್ ಹುಸೇನ್
ಈ ಲೇಖನವು ಭಾರತದ ಹಿಂದಿನ ರಾಷ್ಟ್ರಪತಿಗಳಲ್ಲೊಬ್ಬರಾದ ಡಾ. ಜಾಕಿರ್ ಹುಸೇನ್ ಅವರ ಬಗ್ಗೆ.ಭಾರತದ ಹೆಸರಾಂತ ತಬಲಾ ವಾದಕ ಜಾಕಿರ್ ಹುಸೇನ್ ಬಗ್ಗೆ ಮಾಹಿತಿಗೆ ಈ ಲೇಖನ ನೋಡಿ ಡಾ.ಜಾಕಿರ್ ಹುಸೇನ್ ಅವರು ಫೆಬ್ರವರಿ ೮, ೧೮೯೭ ರಂದು ಹೈದರಾಬಾದಿನಲ್ಲಿ ಜನಿಸಿದರು. ಅವರು ೧೯೬೨ ರಲ್ಲಿ ಭಾರತ ಗಣರಾಜ್ಯದ ರಾಷ್ಟ್ರಪತಿಯಾಗಿದ್ದರು, ಮತ್ತು ತಮ್ಮ ಸೇವೆಯಲ್ಲಿಯೇ ಮೇ ೩ ೧೯೬೯ ರಲ್ಲಿ ವಿಧಿವಶರಾದರು. ಭಾರತ ಸರಕಾರವು ಅವರಿಗೆ ೧೯೫೪ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಯಿಂದ ಮತ್ತು ೧೯೬೯ ರಲ್ಲಿ ಭಾರತ ರತ್ನ ಪ್ರಶಸ್ತಿಯಿಂದ ಗೌರವಿಸಿದೆ. ಭಾರತದ ರಾಷ್ಟ್ರಪತಿಗಳು ಭಾರತ ರತ್ನ ಪುರಸ್ಕೃತರು
3680
https://kn.wikipedia.org/wiki/%E0%B2%AA%E0%B2%BE%E0%B2%82%E0%B2%A1%E0%B3%81%E0%B2%B0%E0%B2%82%E0%B2%97%20%E0%B2%B5%E0%B2%BE%E0%B2%AE%E0%B2%A8%20%E0%B2%95%E0%B2%BE%E0%B2%A3%E0%B3%86
ಪಾಂಡುರಂಗ ವಾಮನ ಕಾಣೆ
ಡಾ.ಪಾಂಡುರಂಗ ವಾಮನ ಕಾಣೆ (೧೮೮೦-೧೯೭೨) ಹೆಸರಾಂತ ಸಂಸ್ಕೃತ ಹಾಗೂ ಭಾರತ ಶಾಸ್ತ್ರದ (ಇಂಡಾಲಜಿ) ವಿದ್ವಾಂಸ. ಇವರು ಹುಟ್ಟಿದ್ದು ಮಹಾರಾಷ್ಟ್ರದ ರತ್ನಾಗಿರಿಯ ಸಾಂಪ್ರದಾಯಿಕ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ. ಜೀವನ ಧರ್ಮಶಾಸ್ತ್ರದ ಇತಿಹಾಸ - ಭಾರತದಲ್ಲಿ ಪ್ರಾಚೀನ ಮತ್ತು ಮಧ್ಯಯುಗೀಯ ಧರ್ಮಗಳು ಮತ್ತು ಪ್ರಜಾಧರ್ಮ ( ಹಿಸ್ಟರಿ ಆಫ್ ಧರ್ಮಶಾಸ್ತ್ರ - ಏನ್ಷಿಯಂಟ್ ಅಂಡ್ ಮಿಡೀವಲ್ ರಿಲಿಜನ್ಸ್ ಅಂಡ್ ಸಿವಿಲ್ ಲಾ ಇನ್ ಇಂಡಿಯಾ) ಎಂಬ ಇಂಗ್ಲೀಷ್ ಮಹಾಗ್ರಂಥದಿಂದ ಡಾ. ಕಾಣೆ ಪ್ರಸಿದ್ಧರಾಗಿದ್ದಾರೆ. ಪ್ರಾಚೀನ ಮತ್ತು ಮಧ್ಯಕಾಲಗಳಲ್ಲಿ ಧರ್ಮಶಾಸ್ತ್ರದ ವಿಕಾಸ ಕುರಿತು ಈ ಗ್ರಂಥ ಆನೇಕ ಶತಮಾನಗಳಿಂದ ಕಲೆಹಾಕಲ್ಪಟ್ಟ ಗ್ರಂಥಗಳು, ಹಸ್ತಲಿಪಿಗಳು ಇವುಗಳನ್ನು ಸಂಶೋಧಿಸುತ್ತದೆ. ಐದು ಭಾಗಗಳಲ್ಲಿ ಪ್ರಕಾಶನಗೊಂಡ ಈ ಮಹಾಕೃತಿಯ ಮೊದಲನೆಯ ಭಾಗ ೧೯೩೦ರಲ್ಲಿ ಹೊರಬಂದರೆ, ಕೊನೆಯದು ಹೊರಬಂದದ್ದು ೧೯೬೨ರಲ್ಲಿ. ಒಟ್ಟು ೬,೫೦೦ಕ್ಕೂ ಹೆಚ್ಚು ಪುಟಗಳಿವೆ. ಮುಂಬಯಿಯ ಏಶಿಯಾಟಿಕ್ ಸೊಸೈಟಿ ಹಾಗೂ ಪುಣೆಯ ಭಂಡಾರ್ಕರ್ ಓರಿಯಂಟಲ್ ರಿಸರ್ಚ್ ಇನ್ಟಿಟ್ಯೂಟ್ ಮೊದಲಾದ ಪ್ರತಿಷ್ಠಿತ ಸಂಸ್ಥೆಗಳಲ್ಲಯ ಆಕರ ಗ್ರಂಥಗಳನ್ನು ಡಾ. ಕಾಣೆ ಅಧ್ಯಯನ ಮಾಡಿದರು. ಈವರೆಗೂ ಅಸ್ಪಷ್ಟವಾಗಿದ್ದ ಆಕರಗಳನ್ನೂ ಸೇರಿ ಮಹಾಭಾರತ, ಪುರಾಣಗಳು, ಕೌಟಿಲ್ಯ ಇತ್ಯಾದಿ ವಿಶಾಲ ಹರಹಿನ ವಿವಿಧ ವಿಷಯಗಳ ಬಗ್ಯೆ ಆಳವಾದ ಸಂಶೋಧನೆ ಈ ಗ್ರಂಥದ ವೈಶಿಷ್ಟ್ಯ. ಅವರ ಸಂಸ್ಕೃತ ಪಾಂಡಿತ್ಯ ಈ ಪುಸ್ತಕವನ್ನು ಇನ್ನಷ್ಟು ಶ್ರೀಮಂತವಾಗಿಸಿದೆ. ಪುರಾತನ ಗ್ರಂಥಗಳನ್ನು ವೈಭವೀಕರಿಸದೆ ವಸ್ತುನಿಷ್ಟ ದೃಷ್ಟಿಕೋನದಿಂದ ವಿಮರ್ಶಿಸಿರುವುದು ಈ ಕೃತಿಯ ಯಶಸ್ಸಿನ ಗುಟ್ಟು ಎನ್ನಲಾಗಿದೆ. ಕಾಣೆಯವರು ವ್ಯವಹಾರಮಯೂಖ ಎಂಬ ಪುಸ್ತಕ ಬರೆದರು. ಓದುಗರಿಗೆ ಧರ್ಮಶಾಸ್ತ್ರದ ಬಗ್ಯೆ ಪಕ್ಷಿನೋಟ ದೊರಕಿಸುವ ದೃಷ್ಟಿಯಿಂದ ,ಈ ಪುಸ್ತಕಕ್ಕೆ ಮುನ್ನುಡಿಯ ರೂಪದಲ್ಲಿ ಧರ್ಮಶಾಸ್ತ್ರದ ಇತಿಹಾಸವನ್ನು ಬರೆಯಲು ಪ್ರಾರಂಭಿಸಿದರು. ಅದೇ ವಿಸ್ತಾರವಾಗುತ್ತಾ ಹೋಗಿ ಐದು ಸಂಪುಟಗಳ ಮಹದ್ ಗ್ರಂಥ ಸೃಷ್ಟಿಯಾಯಿತು. ಇಷ್ಟಾದರೂ, ಇಂಗ್ಲೀಷಿನಲ್ಲಿ ಧರ್ಮ ಶಬ್ದದ ಸಮಾನಾರ್ಥಕ ಶಬ್ದ ಸಿಗುವುದು ಕಠಿಣ ಎಂದು ಬಲವಾಗಿ ಪ್ರತಿಪಾದಿಸಿದರು. ಸಂಸ್ಕೃತ , ಮರಾಠಿ, ಇಂಗ್ಲೀಷ್ ಭಾಷೆಗಳಲ್ಲಿಯ ಅವರ ಬರವಣಿಗೆ ಒಟ್ಟು ೧೫,೦೦೦ ಪುಟಗಳನ್ನು ಮೀರುತ್ತದೆ. ಪುರಸ್ಕಾರಗಳು ತಮ್ಮ ಅಗಾಧ ವಿದ್ವತ್ತಿನಿಂದ ಡಾ.ಕಾಣೆ, ಮಹಾಮಹೋಪಾಧ್ಯಾಯ ಎಂದು ಆದರಿಸಲ್ಪಟ್ಟರು. ಮುಂಬಯಿ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಅವರು ಸೇವೆ ಸಲ್ಲಿಸಿದರು. ಕುರುಕ್ಷೇತ್ರ ವಿಶ್ವವಿದ್ಯಾಲಯದ ಭಾರತ ಶಾಸ್ತ್ರದ ವಿಭಾಗವನ್ನು ಪ್ರಾರಂಭಿಸಲು ಅವರ ನೆರವನ್ನು ಕೋರಲಾಯಿತು. ೧೯೫೬ರಲ್ಲಿ ಅವರ ಮಹಾಗ್ರಂಥ ನಾಲ್ಕನೆಯ ಸಂಪುಟಕ್ಕೆ, ಸಂಸ್ಕೃತ ಭಾಷಾಂತರದ ಸಂಶೋಧನೆಯ ವಿಭಾಗದಲ್ಲಿ , ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿತು . ಅವರು ಭಾರತೀಯ ವಿದ್ಯಾಭವನದ ಗೌರವ ಸದಸ್ಯರೂ ಆಗಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಅವರ ಮಹತ್ತರ ಕೊಡುಗೆಯನ್ನು ಗೌರವಿಸಿ ಅವರನ್ನು ರಾಜ್ಯಸಭೆಯ ಸದಸ್ರಾಗಿ ನಾಮಕರಣ ಮಾಡಲಾಯಿತು. ಭಾರತದ ಅತ್ಯುಚ್ಚ ನಾಗರಿಕ ಪ್ರಶಸ್ತಿ ಭಾರತ ರತ್ನವನ್ನು ೧೯೬೩ರಲ್ಲಿ ಅವರಿಗೆ ಪ್ರದಾನಮಾಡಲಾಯಿತು. ಇತರೆ ಭಾರತದ ಸಂವಿಧಾನವು ,ತಮಗೆ ಕೇವಲ ಹಕ್ಕುಗಳಷ್ಟೇ ಇವೆ, ಬಾಧ್ಯತೆಗಳಲ್ಲ ಎಂಬ ಹುಸಿ ಅಭಿಪ್ರಾಯವನ್ನು ನಾಗರೀಕರ ಮನಸ್ಸಿನಲ್ಲಿ ಹುಟ್ಟು ಹಾಕಿ, ಭಾರತದ ಸಾಂಪ್ರದಾಯಿಕ ಮೌಲ್ಯಗಳಿಂದ ದೂರ ಸಾಗಿದೆ ಎಂದು ಅವರ ನಂಬಿಕೆಯಾಗಿತ್ತು. ಅವರ ಗ್ರಂಥಗಳ ವಿಶ್ವಕೋಶದೋಪಾದಿಯ ಹರವು ಮತ್ತು ವಿಷಯಗಳ ಅಧಿಕಾರಯುತವಾದ ಮಂಡನೆಯಿಂದ , ಅವುಗಳನ್ನು ರಾಜನೀತಿಯ ಚರ್ಚೆಗಳಲ್ಲಿ ಆಗಾಗ ಉದ್ಧರಿಸಲಾಗುತ್ತದೆ. ಅಟಲ ಬಿಹಾರಿ ವಾಜಪೇಯಿಯವರ ಮಂತ್ರಿಮಂಡಲದ ಕಾಲದಲ್ಲಿ ಪ್ರಾಚೀನ ಭಾರತೀಯರು ಗೋಮಾಂಸ ಭಕ್ಷಕರಾಗಿದ್ದರೇ ಎಂಬ ,ಅದರಲ್ಲಿಯೂ ಹಿಂದೂಗಳು ಗೋವನ್ನು ತಾಯಿಸಮಾನವಾಗಿ ಪೂಜಿಸುವುದರ ಹಿನ್ನೆಲೆಯಲ್ಲಿ, ವಿವಾದ ಉಂಟಾದಾಗ, ಎರಡೂ ಪಕ್ಷದವರೂ ತಮ್ಮ ವಾದಕ್ಕೆ ಸಮರ್ಥನೆಯಾಗಿ , ಕಾಣೆಯವರ ಗ್ರಂಥಗಳಿಂದ ವಿಪುಲವಾಗಿ ಉದ್ಧರಿಸಿದರು. ಇಂಥದೇ ಇನ್ನೊಂದು ವಿವಾದವೆಂದರೆ, ಈಗ ಬರಿಯ ಪುರುಷರಿಗಷ್ಟೇ ಸೀಮಿತವಾಗಿರುವ, ಯಜ್ನೋಪವೀತವನ್ನು ( ಜನಿವಾರ) , ಧರಿಸಲು ಪ್ರಾಚೀನ ಕಾಲದಲ್ಲಿ ಸ್ತ್ರೀಯರಿಗೂ ಅಧಿಕಾರವಿತ್ತೇ ಎಂಬುದು. ಕಾಣೆಯವರ ನೆನಪಿನಲ್ಲಿ ೧೯೭೪ರಲ್ಲಿ ಪೌರಾತ್ಯ ಅಧ್ಯಯನವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ, ಮುಂಬಯಿಯ ಏಶಿಯಾಟಿಕ್ ಸೊಸೈಟಿಯು, ಅವರ ನೆನಪಿನಲ್ಲಿ, ಮಹಾಮಹೋಪಾಧ್ಯಾಯ ಪಿ.ವಿ.ಕಾಣೆ ಸ್ನಾತಕೋತ್ತರ ಸಂಶೋಧನಾ ಕೇಂದ್ರವನ್ನು ಪ್ರಾರಂಭಿಸಿತು. ವೈದಿಕ, ಧರ್ಮಶಾಸ್ತ್ರೀಯ ಅಥವಾ ಅಲಂಕಾರ ಸಾಹಿತ್ಯದಲ್ಲಿ ಅಮೂಲ್ಯ ಕೊಡುಗೆ ನೀಡಿದ ಸ್ನಾತಕರಿಗೆ ಡಾ. ಪಿ.ವಿ. ಕಾಣೆ ಸುವರ್ಣ ಪದಕವನ್ನು ಮೂರು ವರ್ಷದಲ್ಲಿ ಒಮ್ಮೆ ನೀಡಲಾಗುತ್ತಿದೆ. ಭಾರತ ರತ್ನ ಪುರಸ್ಕೃತರು ಮಹಾಮಹೋಪಾಧ್ಯಾಯ ಪುರಸ್ಕೃತರು ರಾಜ್ಯಸಭಾ ನಾಮಾಂಕಿತ ಸದಸ್ಯರು
3686
https://kn.wikipedia.org/wiki/%E0%B2%B5%E0%B2%BF%E0%B2%A8%E0%B3%8B%E0%B2%AC%E0%B2%BE%20%E0%B2%AD%E0%B2%BE%E0%B2%B5%E0%B3%86
ವಿನೋಬಾ ಭಾವೆ
ವಿನೋಬಾ ಭಾವೆ (ವಿನಾಯಕ ನರಹರಿ ಭಾವೆ)ಭೂದಾನ’ ಚಳವಳಿಯ ಹರಿಕಾರ ಎಂದು ಖ್ಯಾತರಾಗಿರುವವರು. ಭಾರತದ ಸ್ವಾತಂತ್ರ್ಯ ಹೋರಾಟಗಾರರು. ಅವರು ಕನ್ನಡದ ಲಿಪಿಯನ್ನು ‘ಲಿಪಿಗಳ ರಾಣಿ’ ಎಂದು ಶ್ಲಾಘಿಸುತ್ತಿದ್ದರು."ಉತ್ತಮ ಗುರು ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ. ಯಾವ ಶಿಷ್ಯ ಗುರುವಿಗಿಂತ ಮುಂದೆ ಹೋಗುತ್ತಾನೋ ಅವನೇ ಉತ್ತಮ ಗುರು" ಎಂದು ಹೇಳುತ್ತಿದ್ದರು. ಜನನ/ಜೀವನ ಭೂದಾನ’ ಚಳವಳಿಯ ಹರಿಕಾರ ಎಂದು ಖ್ಯಾತರಾಗಿರುವವರು ಆಚಾರ್ಯ ವಿನೋಬಾ ಭಾವೆ. ವಿನೋಬಾ ಅವರು ಮಹಾರಾಷ್ಟ್ರದ ಕೋಲಬಾ ಜಿಲ್ಲೆಯ ಗಾಗೋಡೆ ಗ್ರಾಮದಲ್ಲಿ ಸೆಪ್ಟೆಂಬರ್ 11, 1895ರಂದು ಜನಿಸಿದರು. ಇವರ ತಂದೆ ನರಹರಿ ಶಂಭುರಾವ್ ಭಾವೆ. ತಾಯಿ ರುಕ್ಮಿಣಿ ದೇವಿ. ಅವರ ಮೂಲ ಹೆಸರು ವಿನಾಯಕ್ ನರಹರಿ ಭಾವೆ. ಬಾಲ್ಯದಲ್ಲಿಯೇ ವಿವಿಧ ಧರ್ಮಗಳ ಸಾರವನ್ನು ಅಧ್ಯಯನ ಮಾಡಿ ಅರಗಿಸಿಕೊಂಡಿದ್ದರು. ಅವರಿಗೆ ಗಣಿತದಲ್ಲಿ ಅಪಾರ ಆಸಕ್ತಿ ಇತ್ತು. 1916ರಲ್ಲಿ ತಮ್ಮ ಇಂಟರ್ ಮೀಡಿಯೆಟ್ ಪರೀಕ್ಷೆಗಗಾಗಿ ಮುಂಬೈಗೆ ಹೊರಟಿದ್ದ ವಿನೋಬಾ ಭಾವೆ ಅವರಿಗೆ ಮಹಾತ್ಮ ಗಾಂಧಿಯವರ ಬರಹವೊಂದು ಕಣ್ಣಿಗೆ ಬಿದ್ದು, ತಮ್ಮ ಓದು ಬರಹದ ಪ್ರಮಾಣ ಪತ್ರಗಳಿಗೆಲ್ಲ ಬೆಂಕಿಗೆ ಹಚ್ಚಿಬಿಟ್ಟರಂತೆ. ತಮ್ಮ ಇಪ್ಪತ್ತೊಂದನೆಯ ವಯಸ್ಸಿನಲ್ಲಿ ಗಾಂಧೀಜಿಯವರ ಅನುಯಾಯಿಯಾಗುವುದರೊಂದಿಗೆ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಭಾವೆ ಅನಂತರ ತಿರುಗಿ ನೋಡಲಿಲ್ಲ. ಬರಹಗಾರರಾಗಿ ವಿನೋಬಾ ಭಾವೆ ಸಮರ್ಥ ಲೇಖಕರಾಗಿದ್ದರು. 1923 ರಲ್ಲಿ ’ಮಹಾರಾಷ್ಟ್ರ ಧರ್ಮ’ ಪತ್ರಿಕೆಯ ಸಂಪಾದಕರಾದರು. ನಾಗಪುರದ ’ಧ್ವಜಸತ್ಯಾಗ್ರಹ’ ದಲ್ಲಿ ತಿಂಗಳಾನುಗಟ್ಟಲೆ ಬಂಧಿತರಾದರು ಮತ್ತು ಕೇರಳದ ’ವೈಕೋಮ್ ಸತ್ಯಾಗ್ರಹ’ಕ್ಕೆ ಹೊರಟು ನಿಂತರು. ಇವೆಲ್ಲದರ ನಡುವೆಯೂ ನಿರಂತರ ಅಧ್ಯಯನಶೀಲರಾಗಿದ್ದ ಅವರು ಮರಾಠಿಯಲ್ಲಿ ಗೀತಾಭಾಷ್ಯ ಬರೆದರು. ಉಪನಿಷತ್ತುಗಳಿಗೆ ವ್ಯಾಖ್ಯಾನ ಬರೆದರು. ತಿಂಗಳುಗಟ್ಟಲೆ ಜೈಲಿನಲ್ಲಿದ್ದಾಗ ತಮ್ಮ ಸಹ ಖೈದಿಗಳಿಗೆಲ್ಲ ಇವುಗಳ ಬಗ್ಗೆ ಪ್ರವಚನ ಕೊಡಾ ನೀಡುತ್ತಿದ್ದರು. ಕುರಾನ್ ಮತ್ತು ಬೈಬಲ್ಲಿನ ಬೋಧನೆಗಳನ್ನು ಸಹ ಪ್ರಕಟಿಸಿದರಲ್ಲದೆ, ಶಿಕ್ಷಣ, ಸ್ವರಾಜ್ಯ ಶಾಸ್ತ್ರದ ಕುರಿತಾದ ಗ್ರಂಥ ರಚನೆಯನ್ನೂ ಮಾಡಿದರು. ಸತ್ಯಾಗ್ರಹಿಯಾಗಿ ವಿನೋಬಾ ಭಾವೆ ಒಬ್ಬ ಹಠವಾದಿ ಸತ್ಯಾಗ್ರಹಿ. ಅಹಿಂಸಾ ಮಾರ್ಗದಲ್ಲಿ ಅಪ್ರತಿಮ ನಿಷ್ಠೆಯಿರಿಸಿದ್ದರು. ಉಪವಾಸ ಸತ್ಯಾಗ್ರಹದಲ್ಲಿ ಎತ್ತಿದ ಕೈಯಿ. ಜಾತೀಯತೆಯ ಭೇದ ಅಳಿಸಿ ಎಲ್ಲರೂ ಸೌಹಾರ್ದದಿಂದ ಬಾಳಬೇಕೆಂಬ ಕನಸು ಕಟ್ಟಿ ಅದನ್ನು ನೆರವೇರಿಸಲು ಹರಿಜನರೊಡನೆ ವಿವಿಧ ಮತೀಯರೊಡನೆ ದೇವಾಲಯಗಳಿಗೆ ಪ್ರವೇಶಿಸಿ ಮತ್ತೆ ಮತ್ತೆ ಸೆರೆವಾಸ ಅನುಭವಿಸಿದರು. ಅವರ ಈ ಎಲ್ಲ ಪ್ರಯತ್ನಗಳು ಎಲ್ಲರ ಮನ್ನಣೆಗಳಿಸಿ ಹೊಸ ಕ್ರಾಂತಿಗೆ ನಾಂದಿಯಾಯಿತು. ಸಂತರಂತೆ ಬಾಳಿದ್ದ ವಿನೋಬಾರವರ ಅಂತಃಸತ್ತ್ವ ಬಹಳ ಪ್ರಭಾವಶಾಲಿಯಾಗಿತ್ತು, 1960ರಲ್ಲಿ ಚಂಬಲ್ ಕಣಿವೆಯ ಡಕಾಯಿತರು, 1972ರಲ್ಲಿಸಂತರಂತೆ ಬಾಳಿದ್ದ ವಿನೋಬಾರವರ ಅಂತಃಸತ್ತ್ವ ಬಹಳ ಪ್ರಭಾವಶಾಲಿಯಾಗಿತ್ತು, 1960ರಲ್ಲಿ ಚಂಬಲ್ ಕಣಿವೆಯ ಡಕಾಯಿತರು, 1972ರಲ್ಲಿ ವಿವಿಧ ಭಾಗದ ನೂರಾರು ಡಕಾಯಿತರು ಅವರಿಗೆ ಶರಣುಬಂದಿದ್ದು ಅದಕ್ಕೊಂದು ಉದಾಹರಣೆ. ಈ ಡಕಾಯಿತರೆಲ್ಲರೂ ಮುಂದೆ ಭಾವೆಯವರ ಸಹವಾಸದಲ್ಲಿ ಜೀವನ ಕಳೆದರು. 1955ರಲ್ಲಿ ’ಭೂದಾನ ಚಳುವಳಿ’ಗೆ ಚಾಲನೆ ನೀಡಿದ ಭಾವೆ ಅದನ್ನು ವ್ಯಾಪಕಗೊಳಿಸಿ ಅಸಂಖ್ಯ ಭೂದಾನಕ್ಕೆ ಪ್ರೇರಣೆ ನೀಡಿದರು. ದೇಶದ ಉದ್ದಗಲಕ್ಕೂ ಕಾಲ್ನಡಿಗೆಯಲ್ಲಿ ಓಡಾಡಿ ಸಹಸ್ರಾರು ಸಾಮಾಜಿಕ ಕಾರ್ಯಕರ್ತರಿಗೆ ಪ್ರೇರಣೆಯಾಗಿ ನಿಂತರು. ಅವರು ಸಿರಿವಂತರಿಂದ ದಾನ ಸ್ವೀಕರಿಸಿ ಬಡಬಗ್ಗರಿಗಾಗಿ ಹಸ್ತಾಂತರಿಸಿದ ಹಳ್ಳಿಗಳ ಸಂಖ್ಯೆ ಸಾವಿರಕ್ಕೂ ಹೆಚ್ಚು. ಅವುಗಳಲ್ಲಿ ತಮಿಳುನಾಡು ಒಂದರಲ್ಲೇ ಅವರು ಸುಮಾರು 175 ಹಳ್ಳಿಗಳನ್ನು ಸಿರಿವಂತರಿಂದ ಸ್ವೀಕರಿಸಿ ಬಡಜನರಿಗೆ ಹಸ್ತಾಂತರಿಸಿದರು. ಬಹುಭಾಷಾ ಪಂಡಿತರು ಆಚಾರ್ಯ ವಿನೋಬಾ ಅವರು ಬಹುಭಾಷಾ ಪಂಡಿತರಾಗಿದ್ದು ಮರಾಠಿ, ಹಿಂದಿ, ಉರ್ದು, ಇಂಗ್ಲಿಷ್, ಕನ್ನಡ ಭಾಷೆಗಳ ಪರಿಚಯ ಅವರಿಗಿತ್ತು. ಕನ್ನಡ ಭಾಷೆಯ ಲಿಪಿ ಅವರನ್ನು ಮೋಡಿ ಮಾಡಿತ್ತು. ಅವರು ಕನ್ನಡದ ಲಿಪಿಯನ್ನು ‘ಲಿಪಿಗಳ ರಾಣಿ’ ಎಂದು ಶ್ಲಾಘಿಸುತ್ತಿದ್ದರು. 1958ರಲ್ಲಿ ವಿನೋಬಾ ಅವರು ಸಲ್ಲಿಸಿದ ಸಮಾಜ ಸೇವೆಗಾಗಿ ಮ್ಯಾಗ್ಸೆಸೆ ಪ್ರಶಸ್ತಿ ಮತ್ತು 1983ರಲ್ಲಿ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸಲಾಯಿತು. ತುರ್ತುಪರಿಸ್ಥಿತಿ ಘೋಷಿಸಿದ್ದ ದಿನಗಳಲ್ಲೂ ಅವರು ಇಂದಿರಾ ಗಾಂಧಿಯವರ ಆಡಳಿತಕ್ಕೆ ಬೆಂಬಲವಾಗಿ ನಿಂತದ್ದು ವಿವಾದಕ್ಕೆ ಕಾರಣವಾಗಿತ್ತು. ಸಾಮಾಜಿಕ ಸೇವೆ 1948 ರಲ್ಲಿ ಗಾಂಧೀಜಿಯವರ ಹತ್ಯೆಯಾದ ನಂತರ ಆಚಾರ್ಯ ವಿನೋಬಾ ಭಾವೆಯವರಿಗೆ ಆಶ್ರಮದ ಬದುಕು ಸಾಕೆನಿಸಿತು. ತಮ್ಮ ಗುರು ಹಾಕಿಕೊಟ್ಟಿದ್ದ ಸರ್ವೋದಯ ಪರಿಕಲ್ಪನೆಯಲ್ಲಿ ಏನಾದರೂ ಗ್ರಾಮ ಸುಧಾರಣೆ ಮಾಡಲು ಸಾಧ್ಯವೆ? ಎಂದು ಯೋಚಿಸಿದ ಅವರು ಗ್ರಾಮಭಾರತದ ದರ್ಶನಕ್ಕಾಗಿ ಕಾಲ್ನಡಿಗೆ ಪ್ರವಾಸ ಹೊರಟರು. 1951 ಏಪ್ರಿಲ್ 18 ರಂದು ಆಂಧ್ರದ ತೆಲಂಗಾಣ ಪ್ರಾಂತ್ಯದ ಪೂಚಂಪಲ್ಲಿ ಎಂಬಲ್ಲಿ ಭಾಷಣ ಮಾಡುತ್ತಾ, ಶ್ರೀಮಂತ ಜಮೀನ್ದಾರರು ತಮ್ಮಲ್ಲಿರುವ ಜಮೀನುಗಳನ್ನು ಬಡವರಿಗೆ ದಾನ ಮಾಡಬೇಕು. ಇದು ಯಾವ ಕಾರಣಕ್ಕೂ ನಿಮ್ಮ ಮನಸ್ಸಿನಲ್ಲಿ ಭಿಕ್ಷೆ ಎಂಬ ಭಾವನೆ ಮೂಡಕೂಡದು, ಬಡತನ ಹೋಗಲಾಡಿಸಲು ಹಾಗೂ ದುಡಿಯುವ ಕೈಗಳಿಗೆ ಉದ್ಯೋಗ ಕಲ್ಪಿಸುವ ದೀಕ್ಷೆ ಎಂದು ಭಾವಿಸಬೇಕು ಎಂದು ಕರೆಯಿತ್ತರು. ವಿನೋಬಾ ಮಾತುಗಳಿಂದ ಪ್ರಭಾವಿತನಾದ ರಾಮರೆಡ್ಡಿ ಎಂಬ ಜಮೀನ್ದಾರ ಸ್ಥಳದಲ್ಲಿ ನೂರು ಎಕರೆ ಭೂಮಿಯನ್ನು ವಿನೋಬಾರವರಿಗೆ ದಾನ ಮಾಡಿದ. ಈ ಕ್ರಿಯೆಯಿಂದ ವಿನೋಬಾ ತಕ್ಷಣಕ್ಕೆ ವಿಚಲಿತರಾದರು. ಆದರೆ, ಇದು ದೇವರು ತೋರಿದ ದಾರಿ ಎಂದು ತಿಳಿದ ಅವರು ಈ ಕ್ರಿಯೆಗೆ ಭೂದಾನ ಎಂಬ ಹೆಸರಿಟ್ಟು ಜಮೀನುಗಳನ್ನು ಸ್ವೀಕರಿಸುತ್ತಾ ಹೋದರು. ನೀವು ನೀಡುವ ಜಮೀನಿನಲ್ಲಿ ಯಾವ ಕಾರಣಕ್ಕೂ ದೇಗುಲ, ಛತ್ರ, ಅಥವಾ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸುವುದಿಲ್ಲ. ಹಸಿವು ಮತ್ತು ಬಡತನದಿಂದ ಬಳಲುತ್ತಿರುವ ಭಾರತದ ಬಡವರು ನಮ್ಮ ಪಾಲಿನ ನಿಜವಾದ ದೇವರಾಗಿದ್ದಾರೆ. ನೀವು ದಾನ ನೀಡುವ ಜಮೀನು ಅವರಿಗೆ ಸಲ್ಲುತ್ತದ ಎಂದು ಘೋಷಿಸುತ್ತಾ ಹೋದರು. ಮೊದಲ 70 ದಿನಗಳ ಪ್ರವಾಸದಲ್ಲಿ 12 ಸಾವಿರ ಎಕರೆ ಭೂಮಿ ದಾನವಾಗಿ ದೊರೆತರೆ, ನಂತರದ 60 ದಿನಗಳಲ್ಲಿ 18 ಸಾವಿರ ಎಕರೆ ಭೂಮಿ ದೊರೆಯಿತು. ಮೊದಲ ಹಂತದ 800 ಕಿಲೋಮೀಟರ್ ಪಾದಯಾತ್ರೆಯಲ್ಲಿ 30 ಸಾವಿರ ಎಕರೆ ಭೂಮಿಯು ಭೂದಾನವಾಗಿ ವಿನೋಬಾರವರ ಮಡಿಲು ಸೇರಿತ್ತು. 1952 ರಲ್ಲಿ ನೆಹರೂ ರವರು ವಿನೋಬಾ ಅವರನ್ನು ದೆಹಲಿಗೆ ಆಹ್ವಾನಿಸಿ, ಪಂಚವಾರ್ಷಿಕ ಯೋಜನೆಗಳಲ್ಲಿ ಗ್ರಾಮಾಭಿವೃದ್ಧಿಯ ಕುರಿತು ಯಾವ ರೀತಿಯ ಯೋಜನೆಗಳು ಇರಬೇಕೆಂದು ಕೇಳಿದಾಗ ಆಚಾರ್ಯರು ನೀಡಿದ ಉತ್ತರ ಹೀಗಿತ್ತು. “ ಬಡವರ ಹಸಿವನ್ನು ನೀಗಿಸಿಲಾಗದ, ದುಡಿಯುವ ಕೈಗಳಿಗೆ ಕೆಲಸ ನೀಡಲಾಗದ ನಿಮ್ಮ ಪಂಚವಾರ್ಷಿಕ ಯೋಜನೆಗಳನ್ನು ಕಸದ ಬುಟ್ಟಿಗೆ ಬಿಸಾಡಿ. ಮೊದಲು ನೀವು , ನಿಮ್ಮ ಪರಿವಾರ ದೆಹಲಿ ಬಿಟ್ಟು ಹಳ್ಳಿಗಳತ್ತ ಹೊರಡಿ. ಅಲ್ಲಿ ದರ್ಶನವಾಗುವ ನರಕ ಸದೃಶ್ಯ ಬದುಕು ನಿಮಗೆ ದಾರಿ ತೋರಿಸುತ್ತದೆ”. ಪ್ರಶಸ್ತಿ/ಗೌರವ ಪುರಸ್ಕಾರ 1958ರಲ್ಲಿ ವಿನೋಬಾ ಅವರು ಸಲ್ಲಿಸಿದ ಸಮಾಜ ಸೇವೆಗಾಗಿ ಮ್ಯಾಗ್ಸೆಸೆ ಪ್ರಶಸ್ತಿ ಮತ್ತು 1983ರಲ್ಲಿ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸಲಾಯಿತು. ನಿಧನ 1982ರ ವರ್ಷದಲ್ಲಿ ಅವರು ತೀವ್ರ ಅನಾರೋಗ್ಯದಿಂದಿದ್ದರೂ ಯಾವುದೇ ರೀತಿಯ ಔಷದೋಪಚಾರ ಸ್ವೀಕರಿಸಲು ಒಪ್ಪದೆ ನವೆಂಬರ್ 15, 1982ರಂದು ನಿಧನರಾದರು. ಭಾರತೀಯ ಸಮಾಜದ ಸ್ವಾತಂತ್ರ್ಯ ಮತ್ತು ಒಳಿತಿಗಾಗಿ ಶ್ರಮಿಸಿದ ಆಚಾರ್ಯ ವಿನೋಬಾ ಭಾವೆ ಅವರು ಜನಮನದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಹೊರಗಿನ ಸಂಪರ್ಕಗಳು ಭೂದಾನ ಚಳುವಳಿಯ ಹರಿಕಾರ ರಾಷ್ಟ್ರಕವಿ ಕುವೆಂಪುರವರೊಂದಿಗಿರುವ ಚಿತ್ರ : http://www.vinobabhave.org Website to spread the thoughts, philosophy and works of Vinoba Bhave The King of Kindness: Vinoba Bhave and His Nonviolent Revolution Citation for 1958 Ramon Magsaysay Award for Community Leadership Vinoba Bahve - his work on leprosy (with photo 1979) A Man on Foot - Time magazine cover page article dated Monday, May 11, 1953 ಭಾರತರತ್ನ ಪುರಸ್ಕೃತರು ಭಾರತದ ತತ್ವಶಾಸ್ತ್ರಜ್ಞರು ಸ್ವಾತಂತ್ರ್ಯ ಹೋರಾಟಗಾರರು ೧೮೯೫ ಜನನ ೧೯೮೨ ನಿಧನ
3693
https://kn.wikipedia.org/wiki/%E0%B2%A8%E0%B3%86%E0%B2%B2%E0%B3%8D%E0%B2%B8%E0%B2%A8%E0%B3%8D%20%E0%B2%AE%E0%B2%82%E0%B2%A1%E0%B3%87%E0%B2%B2%E0%B2%BE
ನೆಲ್ಸನ್ ಮಂಡೇಲಾ
ನೆಲ್ಸನ್ ಮಂಡೇಲಾ ಅವರು ಜುಲೈ ೧೮, ೧೯೧೮ ರಂದು ದಕ್ಷಿಣ ಆಫ್ರಿಕಾದ ಟ್ರಾನ್‍ಸ್ಕೈ ಪಟ್ಟಣದಲ್ಲಿ ಜನಿಸಿದರು. ಅವರ ತಂದೆ ಟೆಂಬೂ ಬುಡಕಟ್ಟಿನ ನಾಯಕರಾಗಿದ್ದರು. ಮಂಡೇಲಾ ಅವರು ವಿಟ್ವಾಟರ್ಸ್ರಾಂಡ್ ವಿಶ್ವವಿದ್ಯಾನಿಲಯದಲ್ಲಿ ೧೯೪೨ರಲ್ಲಿ ಕಾನೂನು ಪದವಿಯನ್ನು ಪಡೆದರು. ೧೯೪೪ರಲ್ಲಿ ಆಫ್ರಿಕಾದ ರಾಷ್ಟ್ರೀಯ ಕಾಂಗ್ರೆಸ್ ಸೇರಿ 'ನ್ಯಾಷನಲ್ ಪಾರ್ಟಿ' ಸರ್ಕಾರದ ವರ್ಣಬೇಧ ನೀತಿಗಳ ವಿರುದ್ಧ ಹೋರಾಡಿದರು. ಸರ್ಕಾರವನ್ನು ಟೀಕಿಸಿದ ಅಪರಾಧಕ್ಕೆ ಅವರನ್ನು ೧೯೫೬ರಿಂದ ೧೯೬೧ರವರೆಗೆ ಸರ್ಕಾರದ ವಿರುದ್ಧ ಕಾನೂನು ಸಮರ ನಡೆಸಿ, ೧೯೬೧ರಲ್ಲಿ ಜಯಗಳಿಸಿದರು. ಮೊದಲಿಗೆ 'ಅಹಿಂಸಾ ನೀತಿ'ಯನ್ನು ಆಚರಿಸಿದರೂ ನಂತರ ಗೆರಿಲ್ಲಾ ತಂತ್ರಗಳನ್ನು ಅನುಸರಿಸಿ ವಿಶ್ವಾದ್ಯಂತ ಟೀಕೆಗೊಳಗಾದರು. ಆದರೆ ಶೀಘ್ರವಾಗಿ ಜನಪ್ರಿಯರಾದ ಮಂಡೇಲಾ ಅವರು ಜನಾಂಗೀಯ ದ್ವೇಷ'ಕ್ಕೆ ಹೆಸರಾದ ಸರ್ಕಾರದ ವಿರುದ್ದ ಪ್ರಬಲ ಎದುರಾಳಿಯಾದರು. ೧೯೯೦ರವರೆಗಿನ ಅವರ ೨೭ ವರ್ಷದ ಜೀವಾವಧಿ ಸಜೆಯು ಪ್ರಪಂಚದಾದ್ಯಂತ ಜನಜಾಗೃತಿಯನ್ನುಂಟುಮಾಡಿ, ಆಫ್ರಿಕಾದ ಶಾಂತ ಪ್ರಜಾಪ್ರಭುತ್ವಕ್ಕೆ ಕಾರಣವಾಗಿದೆ. ಮಂಡೇಲಾರ ಜೀವನ ಬಾಲ್ಯ ಜೀವನ ವೈವಾಹಿಕ ಜೀವನ ಮಂಡೇಲಾ ಅವರು ಮೂರು ಬಾರಿ ಮದುವೆಯಾಗಿದ್ದಾರೆ. ಅವರಿಗೆ ಒಟ್ಟು ಆರು ಜನ ಮಕ್ಕಳು. ಇಪ್ಪತ್ತು ವೊಮ್ಮಕ್ಕಳು ಹಾಗೂ ಹಲವಾರು ಮರಿಮಕ್ಕಳನ್ನು ಹೊಂದಿದ ತುಂಬು ಸಂಸಾರ. ಇವೆಲಾಯಿನ್ ನಟೊಕೊ ಮಸೇ ನೆಲ್ಸನ್‌ರ ವೊದಲ ಹೆಂಡತಿ ದಕ್ಷಿಣ ಆಫ್ರಿಕಾದ ಟ್ರಾನ್ಸ್‌ಕೆಯವರು. ಇವಳು ವೊಟ್ಟ ವೊದಲಿಗೆ ಜೊಹಾನ್ಸ್ ಬರ್ಗ್‌ನಲ್ಲಿ ಮಂಡೇಲಾ ಅವರನ್ನು ಭೇಟಿ ಆಗಿದ್ದಳು. ಪರಿಚಯವು ಪ್ರಣಯದೊಂದಿಗೆ ಪ್ರಾರಂಭವಾಗಿ ಕೆಲವೇ ದಿನಗಳಲ್ಲಿ ಅವರಿಬ್ಬರಿಗೂ ಮದುವೆಯಾಯಿತು. ನೆಲ್ಸನ್ ಮಂಡೇಲಾರು ಸತತವಾಗಿ ಹಲವಾರು ವರ್ಷಗಳ ಕಾಲ ಸ್ವಾತಂತ್ರ್ಯ ಹೋರಾಟದಲ್ಲಿಯೇ ತಮ್ಮನ್ನು ತೊಡಗಿಸಿ ಕೊಂಡಿದ್ದರಿಂದ ಕುಟುಂಬವನ್ನು ಸರಿಯಾಗಿ ನಿರ್ವಹಿಸಲಾಗದೆ ಸುಮಾರು ೧೩ ವರ್ಷಗಳ ದಾಂಪತ್ಯದ ೧೯೫೭ರಲ್ಲಿ ಸಂಬಂಧ ಮುರಿದು ಬಿತ್ತು. ಈ ಕಾರಣದಿಂದ ಅವರಿಬ್ಬರ ಮಧ್ಯೆ ಯಾವ ಸಂಬಂಧಗಳು ಉಳಿದು ಕೊಳ್ಳಲಿಲ್ಲ. ರಾಜಕೀಯ ತಾಟಸ್ಥ್ಯವನ್ನು ತಾಳುವಂತೆ ಅವರ ಹೆಂಡತಿಯು ಮಂಡೇಲಾ ಅವರಿಗೆ ಹಲವಾರು ಬಾರಿ ಕೇಳಿದರೂ ಅವರು ಹೆಂಡತಿಯನ್ನೇ ಬಿಟ್ಟರೇ ಹೊರತು ತಾವು ನಿಶ್ಚಿಯಿಸಿಕೊಂಡಿದ್ದ ಹೋರಾಟವನ್ನು ಬಿಡಲಿಲ್ಲ. ಇದು ಒಬ್ಬ ನಿಜವಾದ ಹೋರಾಟಗಾರನ ಖಾಸಗಿಯ ಬದುಕು ದುರಂತದಲ್ಲಿ ಪರಿಸಮಾಪ್ತಿಗೊಳ್ಳುವ ನೋವಿನ ಸಂಗತಿಯಾಗಿ ನಿಲ್ಲುತ್ತದೆ. ಮೊದಲ ಹೆಂಡತಿ ಇವೆಲಾಯಿನ್ ನಟೊಕೊ ಮಸೇ ಅವರು ೨೦೦೪ರಲ್ಲಿ ಅನಾರೋಗ್ಯದಿಂದ ತೀರಿಕೊಂಡರು. ಇವರಿಗೆ ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದರು. ಇವರೆಲ್ಲರೂ ಸಹ ತೀರಿ ಹೋಗಿದ್ದಾರೆ. ಕಪ್ಪು ವರ್ಣೀಯ ಸಾಮಾಜಿಕ ಕಾರ್ಯಕರ್ತೆಯಾದ ವಿನ್ನಿ ಮಡಿಕಿಜೇಲಾ ಅವರು ನೆಲ್ಸನ್ ಮಂಡೇಲಾ ಅವರನ್ನು ೧೯೫೭ರಲ್ಲಿ ಮದುವೆಯಾದರು. ಇವರು ಈ ವೊದಲು ಜೋಹಾನ್ಸ್‌ಬರ್ಗ್ ನಗರದ ವೊಟ್ಟಮೊದಲ ಮಹಿಳಾ ಹೋರಾಟಗಾರ್ತಿಯಾಗಿ ನಿರೂಪಿತಗೊಂಡವರು. ಇಬ್ಬರು ಒಂದೇ ಮನೋಭಾವನೆ ಹಾಗೂ ಗುರಿಯನ್ನಿಟ್ಟುಕೊಂಡಿದ್ದರಿಂದ ಈ ವೊದಲಿನಂತೆ ಹೋರಾಟವು ಅವರ ದಾಂಪತ್ಯಕ್ಕೆ ಅಡ್ಡಿಯಾಗಲಿಲ್ಲ. ಇವರಿಗೂ ಸಹ ಎರಡು ಮಕ್ಕಳಿದ್ದೂ ಇವರನ್ನೆಲ್ಲಾ ವಿನ್ನಿ ಮಂಡೇಲಾ ಅವರೇ ಸಾಕಿ ಸಲುಹಿದರು. ಕಾರಣ ಮಕ್ಕಳಿಬ್ಬರ ಬಾಲ್ಯ ಮತ್ತು ಯೌವನದ ಅವಧಿಯಲ್ಲಿ ನೆಲ್ಸನ್ ಮಂಡೇಲಾ ಅವರು ಇಡೀ ತಮ್ಮ ಬದುಕನ್ನು ಜೈಲಿನಲ್ಲಿ ಕಳೆಯುತ್ತಿದ್ದರು. ಇಂಥ ಕಷ್ಟದ ಏಕಾಂಗಿತನವು ಅವರಿಗೆ ಬಹಳ ದೊಡ್ಡ ಅಡೆತಡೆಯಾಗಲಿಲ್ಲ. ಟ್ರಾನ್ಸ್‌ಕೆ ಪ್ರಾಂತದವರಾದ ವಿನ್ನಿ ಮಂಡೇಲಾರ ತಂದೆ ಅಲ್ಲಿನ ಸ್ಥಳೀಯ ಸರಕಾರದಲ್ಲಿ ಕೃಷಿ ಮಂತ್ರಿಯಾಗಿದ್ದರು. ಹೋರಾಟದ ಕಠಿಣ ದಿನಗಳಲ್ಲಿ ಒಂದಾಗಿದ್ದ ವಿನ್ನಿ ಮಂಡೇಲಾ ಹಾಗೂ ನೆಲ್ಸನ್ ಮಂಡೇಲಾರ ಮಧ್ಯೆ ಉಂಟಾಗಿದ್ದ ಮನಸ್ತಾಪಗಳನ್ನು ಸರಿಪಡಿಸಿಕೊಳ್ಳಲಾರದೆ ಅವರು ಕೆಲವು ಕಾರಣಗಳಿಂದ ೧೯೯೨ರಲ್ಲಿ ದಾಂಪತ್ಯ ಬಂಧನದಿಂದ ಬಿಡುಗಡೆಗೊಳ್ಳಲು ನಿರ್ಧರಿಸಿದ್ದು , ೧೯೯೬ರಲ್ಲಿ ವಿವಾಹ ವಿಚ್ಛೇದನ ಪಡೆದರು. ಇವರಿಬ್ಬರಿಗೂ ಹುಟ್ಟಿದ ಝೆಂನನಿಯನ್ನು ಸ್ವಾಜಿಲ್ಯಾಂಡ್‌ನ ರಾಜಕುಮಾರ ಥುಮಾಂಭುಜಿ ದ್ಲಮಿನಿಗೆ ೧೯೭೩ರಲ್ಲಿಯೇ ಮದುವೆ ಮಾಡಿಕೊಡಲಾಗಿತ್ತು. ಇವಳಿಗೂ ಸಹ ತಂದೆಯ ಯಾವ ನೆನಪುಗಳು ಇರಲಿಲ್ಲ. ಹಾಗೂ ಪ್ರಿಟೋರಿಯಾ ಸರಕಾರವು ಸಹ ಈ ಹಿಂದೆ ತಮ್ಮ ತಂದೆಯ್ನನು ಭೇಟಿ ಮಾಡಲು ಯಾವ ಅವಕಾಶ ಕೊಟ್ಟಿರಲಿಲ್ಲ. ದ್ಲಮಿನಿ ದಂಪತಿಗಳು ಪಿಕ್ ಬೋಥೋ ಸರಕಾರದ ಕಿರುಕುಳಕ್ಕೆ ಹೆದರಿ ಅಮೆರಿಕಾ ದೇಶದಲ್ಲಿರುವ ಬೋಸ್ಟನ್ ಪಟ್ಟಣಕ್ಕೆ ಪಲಾಯನಗೈಯುವಂತೆ ಮಾಡಿತು. ಇವರಿಬ್ಬರಿಗೆ ಹುಟ್ಟಿದ ಪ್ರಿನ್ಸ್ ಸೆಡ್ಜಾದ್ಲಮಿನಿಯು ಸಹ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಹಿತರಕ್ಷಣಾ ಸಂಘಟನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಇವರ ಇನ್ನೊಬ್ಬ ಮಗಳಾದ ಜಿಂದಜಿಯು, ಪ್ರಿಟೋರಿಯಾ ಸರಕಾರವು ಮಂಡೇಲಾ ಅವರನ್ನು ಬಿಡುಗಡೆ ಮಾಡುವ ಷರತ್ತು ಬದ್ಧ ವಿಷಯಗಳಿಗೆ ಸಂಬಂಧಿಸಿದಂತೆ ೧೯೮೫ರಲ್ಲಿ ಹೇಳಿಕೆ ನೀಡುವುದರ ಮೂಲಕ ಜಗತ್ಪ್ರಸಿದ್ದಿ ಆದವಳು. ಈವರೆಗೂ ಜೀವಂತವಾಗಿರುವ ಇವರು ತಮ್ಮ ಬದುಕು ನಿರ್ವಹಣೆಗಾಗಿ ವ್ಯಾಪಾರದಲ್ಲಿ ತೊಡಗಿದ್ದಾರೆ. ೧೯೯೬ರಲ್ಲಿ ವಿನ್ನಿಮಂಡೇಲಾ ಅವರಿಂದ ವಿಚ್ಛೇದನ ಪಡೆದಿದ್ದ ನೆಲ್ಸನ್ ಮಂಡೇಲಾ ಅವರು ತಮ್ಮ ೮೦ನೇ ವರ್ಷದಲ್ಲಿ ಗ್ರಾಕ್ ಮಾಕೆಲ್ ನೀ ಸಿಂಬಿನಿ(ಅವಳನ್ನು ಮಂಡೇಲಾ ಅವರು)ಯನ್ನು ವಿವಾಹವಾದರು. ಇವರು ಮೊಜಾಂಬಿಕ್ ದೇಶದ ಮಾಜಿ ಅಧ್ಯಕ್ಷರಾಗಿದ್ದ ಹಾಗೂ ವಿಮಾನ ಅಪಘಾತದಲ್ಲಿ ಮರಣ ಹೊಂದಿದ ಸಮೊರಾ ಮಾಕೆಲ್ ಅವರ ಪತ್ನಿ ಆಗಿದ್ದಳು. ೧೯೯೮ರಲ್ಲಿ ತಮ್ಮ ಇಳಿ ವಯಸ್ಸಿನಲ್ಲಿ ಇವರಿಬ್ಬರ ನಡುವೆ ಮದುವೆ ಜರುಗಿತು. ಆ ದಿನ ನೆಲ್ಸನ್ ಮಂಡೇಲಾರ ಹುಟ್ಟುಹಬ್ಬವೂ ಆಗಿತ್ತು. ಇಳಿ ವಯಸ್ಸಿನಲ್ಲಿ ಮದುವೆಯಾದ ಈ ಸಂಗತಿಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ರಸವತ್ತಾದ ಚರ್ಚೆಗೆ ಗ್ರಾಸವಾಯಿತು. ಜೋಹಾನ್ಸ್‌ಬರ್ಗ್ ಸಮೀಪದ ಕ್ವಿನುನಲ್ಲಿ ಇವರಿಬ್ಬರೂ ದಂಪತಿಗಳಾಗಿ ಈಗಲೂ ವಾಸವಾಗಿದ್ದಾರೆ. ಹೋರಾಟದ ಜೀವನ ನೈಲ್ಸನ್ ಮಂಡೇಲಾ ಜೈಲುವಾಸದ ೨೭ ವರ್ಷಗಳ ಶಿಕ್ಷೆಯಲ್ಲಿ ೧೮ ವರ್ಷಗಳ ಕಾಲ ರಾಬೆನ್ ಐಸ್‌ಲ್ಯಾಂಡ್‌ನ ಕಾರಾಗೃಹದಲ್ಲಿ ಕಳೆದರು. ಅವರು ಅನುಭವಿಸಿದ ಶಿಕ್ಷೆ ಹಾಗೂ ಆ ಸಂದರ್ಭದಲ್ಲಿ ಅವರು ತಳೆದ ಅಭಿಪ್ರಾಯಗಳಿಂದ ಇಡೀ ದಕ್ಷಿಣ ಆಫ್ರಿಕಾದ ಕಪ್ಪು ಜನಾಂಗದ ಅದ್ವಿತೀಯ ಮೇರು ನಾಯಕನಾಗಿ ಪ್ರಸಿದ್ದಿಗೆ ಬಂದರು. ಪ್ರಿಟೋರಿಯಾ ಜೈಲಿನಲ್ಲಿ ಜೈಲಿನ ಕ್ರೂರ ಅಧಿಕಾರಿಗಳು ಕೊಡುವ ಅತೀ ಕಷ್ಟದ ಕೆಲಸವನ್ನು ಅವರು ಮಾಡಬೇಕಿತ್ತು. ಕಠೋರವಾದ ಶಿಕ್ಷೆಗೆ ಒಳಪಡಿಸುತ್ತಿದ್ದುದಲ್ಲದೇ ಜೈಲಿನಲ್ಲಿ ಜನಾಂಗ ಹಾಗೂ ವರ್ಣದ ನೀತಿಗಳ ಮೇಲೆ ತಾರತಮ್ಯವನ್ನು ಅಧಿಕಾರಿಗಳು ಅವ್ಯಾಹತವಾಗಿ ಮಾಡುತ್ತಿದ್ದರು. ಕಪ್ಪು ಜನಾಂಗದವರಿಗೆ ಮಾತ್ರ ಅತೀ ಕಡಿಮೆ ಆಹಾರವನ್ನು ಕೊಡುತ್ತಿದ್ದರು. ಅತೀ ಕಷ್ಟದ ಹಾಗೂ ಹೆಚ್ಚಿನ ಕೆಲಸವನ್ನು ಕಪ್ಪು ಕೈದಿಗಳಿಂದ ಮಾತ್ರ ತೆಗೆದುಕೊಳ್ಳುತ್ತಿದ್ದರು. ಸಾಮಾನ್ಯವಾಗಿ ರಾಜಕೀಯ ಕೈದಿಗಳಿಗೆ ಮತ್ತು ಇತರ ಕೈದಿಗಳಿಗೆ ಪ್ರತ್ಯೇಕ ಸೆಲ್‌ನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಆದರೆ ನೆಲ್ಸನ್ ಮಂಡೇಲಾ ಅವರಿಗೆ "ಡಿ" ದರ್ಜೆಯ ಕೈದಿಗಳಿಗೆ ಕೊಡುವ ಸವಲತ್ತನ್ನು ಮಾತ್ರ ನೀಡಲಾಗಿತ್ತು. ಸರ್ಕಾರ ಬಯಸಿದ್ದಲ್ಲಿ ಒಬ್ಬರು ಮಾತ್ರ ಅವರನ್ನೂ ಭೇಟಿ ಮಾಡಬಹುದಾಗಿತ್ತು. ಹಾಗೂ ಆರು ತಿಂಗಳಿಗೊಮ್ಮೆ ಮಾತ್ರ ಅವರಿಗೆ ಬಂದಿರುವ ಪತ್ರವನ್ನು ಒಟ್ಟಾಗಿ ನೀಡಲಾಗುತ್ತಿತ್ತು. ಅಂಥಹದರಲ್ಲಿಯೂ ಸಹ ಅವರಿಗೆ ಬಂದಿರುವ ಪತ್ರಗಳೆಲ್ಲವುಗಳು ಎಲ್ಲ ಹಂತದಲ್ಲಿಯೂ ವಿಚಾರಣೆಗೊಳಗಾಗುತ್ತಿದ್ದವು. ರಾಬಿನ್ ಐಸ್‌ಲ್ಯಾಂಡ್ ಸೆರೆಮನೆಯಿಂದ ಪಾಲ್ಸ್ ಮೂರ್ ಕಾರಾವಾಸಕ್ಕೆ ನೆಲ್ಸನ್ ಮಂಡೇಲಾ ಅವರನ್ನು ಒಳಗೊಂಡಂತೆ ಎಲ್ಲ ಪ್ರಮುಖ ನಾಯಕರನ್ನು ಸ್ಥಳಾಂತರಿಸಲಾಯಿತು. ಕಾರಣ ವರ್ಣಭೇದ ನೀತಿ ವಿರುದ್ಧದ ಹೋರಾಟದ ಸಂಬಂಧವಾಗಿ ಬಂಧಿಸಲ್ಪಟ್ಟು ಲಕ್ಷಾನು ಸಂಖ್ಯೆಯಲ್ಲಿ ಸಾಗರೋಪಾದಿಯಾಗಿ ಬರುತ್ತಿದ್ದ ಯುವ ಆಫ್ರಿಕಾ ಶಕ್ತಿಯ ಸಂಪರ್ಕದಿಂದ ಜೈಲಿನಲ್ಲಿರುವ ಕ್ರಾಂತಿಕಾರಿಗಳನ್ನು ಬೇರ್ಪಡಿಸುವ ಉದ್ದೇಶವನ್ನು ಸರಕಾರ ಹೊಂದಿತ್ತು. ಈ ಜೈಲಿನ ಕೈದಿಗಳ ಪ್ರಭಾವದಿಂದ ಪ್ರೇರಿತವಾಗಿ ಆಫ್ರಿಕಾ ದೇಶದ ಎಲ್ಲ ಜನಸಾಮಾನ್ಯರು ಹೋರಾಟವನ್ನು ಜೀವಂತವಾಗಿ ಸದಾ ಕಾಪಾಡಿಕೊಂಡು ಬಂದಿರುವ ಸಾಕ್ಷಿಗಳಿದ್ದವು. ಈ ಕಾರಣಕ್ಕಾಗಿ ರಾಬಿನ್ ಐಸ್‌ಲ್ಯಾಂಡ್ ಕಾರಾವಾಸವನ್ನು ‘ಮಂಡೇಲಾ ಯುನಿವರ್‌ಸಿಟಿ’ ಎಂದು ಕರೆಯಲಾಗುತಿತ್ತು. ಅಂದರೆ ರಾಬಿನ್ ಐಸ್‌ಲ್ಯಾಂಡ್ ಕಾರಗೃಹವು ಎಷ್ಟೊಂದು ಪರಿಣಾಮವನ್ನು ಅಲ್ಲಿಯ ಸ್ವಾತಂತ್ರ್ಯ ಹೋರಾಟದ ಮೇಲೆ ಮಾಡಿದ್ದಿರಬಹುದೆಂದು ಊಹಿಸಬಹುದಾಗಿದೆ. ಇಂಥ ಆರೋಪದಿಂದ ಮುಕ್ತಗೊಳ್ಳಲು ಸರಕಾರವು ಬೇರೆ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿತು. ಮಂಡೇಲಾರನ್ನು ಒಳಗೊಂಡು ಇನ್ನಿತರ ಪ್ರಮುಖ ಕೈದಿಗಳ ಸ್ಥಳಾಂತರವು ನ್ಯಾಷನಲ್ ಪಾರ್ಟಿಯ ಸರಕಾರ ಹಾಗೂ ಕಪ್ಪು ಜನಾಂಗದ ಮುಖಂಡರ ನಡುವೆ ರಹಸ್ಯವಾಗಿ ಮಾತುಕತೆ ನಡೆಯುವ ಸಲುವಾಗಿ ಮಾಡಲಾಗಿತ್ತು ವಿನಹ ಮತ್ತಾವ ಉದ್ದೇಶವನ್ನು ಸರ್ಕಾರ ಹೊಂದಿರಲಿಲ್ಲ ಎಂದು ಮಂತ್ರಿಯೊಬ್ಬರು ಅಭಿಪ್ರಾಯಿಸುವ ಮೂಲಕ ತೇಪೆ ಹಚ್ಚುವ ಕೆಲಸ ಮಾಡಲಾಯಿತು. ಇಂಥ ಅನೇಕ ಕಷ್ಟಕಾರ್ಣ್ಯಗಳ ಮಧ್ಯೆ ಅರ್ಧಕ್ಕೆ ನಿಂತು ಹೋಗಿದ್ದ ತಮ್ಮ ವಿದ್ಯಾಭ್ಯಾಸವನ್ನು ಜೈಲಿನಲ್ಲಿದ್ದ ಮುಂದುವರೆಸಿ ಲಂಡನ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿಯನ್ನು ಪೂರೈಸಿದರು. ಜೈಲಿನಲ್ಲಿದ್ದಾಗ ನೆಲ್ಸನ್ ಮಂಡೇಲಾ ಅವರಿಗೆ ತಪ್ಪಿಸಿಕೊಳ್ಳುವ ಅವಕಾಶವನ್ನು ಜೈಲು ಅಧಿಕಾರಿಗಳೇ ಸ್ವತಃ ಸೃಷ್ಟಿಸಿದ್ದರು. ಕಾರಣ ಅವರು ಉತ್ತೇಜನಗೊಂಡು ತಪ್ಪಿಸಿಕೊಳ್ಳುವ ಸಮಯದಲ್ಲಿ ಕುತಂತ್ರದಿಂದ ಶೂಟ್ ಮಾಡಿ ಸಾಯಿಸುವ ತಂತ್ರವನ್ನು ಪ್ರಿಟೋರಿಯ ಆಡಳಿತ ರೂಪಿಸಿತ್ತು ಎಂದು ಗುಪ್ತವರದಿಗಳು ತಿಳಿಯಪಡಿಸಿದವು. ಸಶಸ್ತ್ರ ಹೋರಾಟವನ್ನು ಹಿಂತೆಗೆದುಕೊಳ್ಳುವ ಷರತ್ತಿನ ಮೇಲೆ ನೆಲ್ಸನ್ ಮಂಡೇಲಾ ಅವರನ್ನು ಸೆರೆ ವಾಸದಿಂದ ಮುಕ್ತಗೊಳಿಸಲು ಅಧ್ಯಕ್ಷ ಪಿಕ್ ಡಬ್ಲು ಬೋಥೋ ಒಪ್ಪಿದ್ದರು. ಆದರೆ ಈ ಕೊಡಕೊಳ್ಳುವಿಕೆಯ ಒಪ್ಪಂದದ ಮುಂದಿನ ಪರಿಣಾಮಗಳ ಬಗೆಗೆ ಸರಕಾರ ಹಾಗೂ ಎಎನ್‌ಸಿ ಮಧ್ಯೆ ವಾಗ್ವಾದವಾಗಿ ಮತ್ತೆ ಹೆಚ್ಚಿನ ಬಿರುಕು ಉಂಟು ಮಾಡಿತು. ಸ್ವತಃ ಮಂಡೇಲಾ ಅವರೇ ಇದರ ಬಗೆಗೆ ಹೇಳಿಕೆ ನೀಡುತ್ತಾ, ಯಾವುದೇ ಒಬ್ಬ ವ್ಯಕ್ತಿ ‘ವ್ಯಕ್ತಿ ಸ್ವಾತಂತ್ರ್ಯ’ವನ್ನು ಪಡೆಯುವರೆಗೆ ಬಿಡುಗಡೆ ಹಾಗೂ ಸಂಘಟನೆ ಎಂಬ ಒಪ್ಪಂದದ ಮಾತುಗಳೇ ಇಲ್ಲ ಎಂದು ಖಂಡತುಂಡಾಗಿ ಅಭಿಪ್ರಾಯಸಿದರು. ಹೀಗಾಗಿ ತಾತ್ಕಾಲಿಕವಾಗಿ ಹುಟ್ಟಿಕೊಂಡಿದ್ದ ಗೊಂದಲಗಳಿಗೆ ಸ್ವತಹ ಮಂಡೇಲಾ ಅವರೇ ಹೇಳಿಕೆ ನೀಡುವುದರ ಮೂಲಕ ಪೂರ್ಣ ವಿರಾಮ ಹಾಕಿದರು. ಅನಾರೋಗ್ಯದ ಕಾರಣ ೧೯೮೫ರಲ್ಲಿ ತಾತ್ಕಾಲಿಕ ಬಿಡುಗಡೆಗೆ ಸರಕಾರ ಒಪ್ಪಿತು. ಕೇಪ್ ಟೌನ್‌ನ ಆಸ್ಪತ್ರೆಗೆ ಸೇರಿಸಲಾಯಿತು. ಚಿಕಿತ್ಸೆ ಪಡೆಯುತ್ತಿದ್ದ ನೆಲ್ಸನ್ ಮಂಡೇಲಾ ಅವರನ್ನು ರಾಷ್ಟ್ರೀಯ ಪಕ್ಷದ ಸರಕಾರದಲ್ಲಿದ್ದ ಮಂತ್ರಿ ಕೊಬಿ ಕೊಟ್ಸೇ ಮೊಟ್ಟ ಮೊದಲಿಗೆ ಭೇಟಿ ಮಾಡಿದರು. ಇಂಥ ಬೆಳವಣಿಗೆಯು ಮುಂದಿನ ಮಾತುಕತೆಗಳಿಗೆ ದಾರಿ ಮಾಡಿಕೊಟ್ಟಿತು. ಸುಮಾರು ನಾಲ್ಕು ವರ್ಷಗಳ ಕಾಲ ಗಂಭೀರವಾದ ಚರ್ಚೆಗಳು ಎಎನ್‌ಸಿ ಮತ್ತು ಪ್ರಿಟೋರಿಯಾ ಸರಕಾರದ ನಡುವೆ ನಡೆದವು. ಮಂಡೇಲಾ ಅವರನ್ನು ಸೆರೆವಾಸಕ್ಕೆ ದೂಡಿದ ದಿನದಿಂದ ಹಿಡಿದೂ ೧೯೮೫ರ ವರೆಗಿನ ಕಾಲಾವಧಿಯಲ್ಲಿ ಸ್ಥಳೀಯವಾಗಿ, ಆಫ್ರಿಕಾ ಖಂಡದಲ್ಲಿರುವ ರಾಷ್ಟ್ರಗಳಲ್ಲಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರ ಬಿಡುಗಡೆಗಾಗಿ ಅನೇಕ ತರಹದ ತೀವ್ರತರ ಒತ್ತಡಗಳು ಹಾಗೂ ಹೋರಾಟಗಳು ಜೋರಾಗಿ ನಡೆದವು. ೧೯೮೯ರ ಹೊತ್ತಿಗೆ ಮಾನವಹಕ್ಕುಗಳು ಹಾಗೂ ಸ್ವಾತಂತ್ರ್ಯದ ಬಗೆಗೆ ಸಂಬಂಧಿಸಿದ ವಿಷಯಗಳಲ್ಲಿ ಹೊಣೆಗಾರಿಕೆಯಿಂದ ವರ್ತಿಸುತ್ತಿದ್ದ ಅಂತಾರಾಷ್ಟ್ರೀಯ ಸಂಘಟನೆಗಳು ಹಾಗೂ ಬೇರೆ ಬೇರೆ ದೇಶಗಳ ಪ್ರಜ್ಞಾವಂತರು ಅಧ್ಯಕ್ಷ ಪಿ.ಡಬ್ಲ್ಯೂ.ಬೋಥಾ ಮೇಲೆ ತೀವ್ರವಾದ ಒತ್ತಡ ಹೇರಿದರು. ಈ ಹಿನ್ನೆಲೆಯಲ್ಲಿ ನ್ಯಾಷನಲ್ ಪಾರ್ಟಿ ಸರಕಾರ ವಿಧಿಯಿಲ್ಲದೆ ಮಂಡೇಲಾ ಬಿಡುಗಡೆ ಬಗೆಗಿನ ಮಾತುಕತೆಗಳಿಗೆ ಬಗ್ಗಲೇ ಬೇಕಾಯಿತು. ಆದರೆ ದುರದೃಷ್ಟವಶಾತ್ ಇದೇ ವೇಳೆಗೆ ಅಧ್ಯಕ್ಷ ಬೋಥೊ ಅವರು ಪಾರ್ಶ್ವವಾಯು ಹೊಡೆತದಿಂದ ಅಧಿಕಾರ ತ್ಯಜಿಸಬೇಕಾಯಿತು. ಹೀಗಾಗಿ ಆಫ್ರಿಕಾದ ಹೋರಾಟಗಾರರ ಬಗೆಗೆ ಮೃದು ಧೋರಣೆ ತಾಳಿದ್ದ ನ್ಯಾಷನಲ್ ಪಾರ್ಟಿ ಸರಕಾರ ತನ್ನ ನಿಲುವುಗಳಲ್ಲಿನ ಬದಲಾವಣೆಗೆ ಹಿಂದೇಟು ಹಾಕಿತು. ಆದ್ದರಿಂದ ಬಿಡುಗಡೆಯ ನಿರ್ಧಾರ ಮತ್ತೆ ಒಂದು ವರ್ಷ ಕಾಲ ಮುಂದೊಡಿತು. ಆದರೆ ಬಿಡುಗಡೆಗೆ ಸಂಬಂಧಿಸಿದ ಹೋರಾಟಗಳು ವ್ಯಾಪಕಗೊಂಡು ಪರಿಸ್ಥಿತಿ ತುಂಬ ಬಿಗಡಾಯಿಸಿತು. ತೆರವಾದ ಸ್ಥಾನಕ್ಕೆ ಬಂದ ಎಫ್.ಡಬ್ಲ್ಯೂ.ಡಿ.ಕ್ಲರ್ಕ್ (Frederik willem de Klerlc) ಅವರು ೧೯೯೦ರಲ್ಲಿ ನೆಲ್ಸನ್ ಮಂಡೇಲಾ ಅವರನ್ನು ಬಂಧಮುಕ್ತಗೊಳಿಸುವುದಾಗಿ ಘೋಷಿಸಿದರು. ಕಾರಣ ಸರಕಾರಕ್ಕೆ ಇದು ಅನಿವಾರ್ಯವಾಗಿತ್ತು. ಅಧ್ಯಕ್ಷ ಕ್ಲರ್ಕ್ ಅವರು ೨ನೇ ಫೆಬ್ರವರಿ ೧೯೯೦ರಲ್ಲಿ ಎಎನ್‌ಸಿ ಹಾಗೂ ಉಳಿದ ಎಲ್ಲ ಸಂಘಟನೆಗಳ ಮೇಲೆ ಹೇರಿದ್ದ ದಿಗ್ಬಂಧನವನ್ನು ತೆರವುಗೊಳಿಸಿದರು. ಅಲ್ಲದೇ ೧೯೯೦ನೆಯ ಫೆಬ್ರವರಿ ೧೧ರಂದು ಕಾರಾಗ್ರಹ ವಾಸದಿಂದ ನೆಲ್ಸನ್ ಮಂಡೇಲಾ ಅವರಿಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವ ಅವಕಾಶ ನೀಡಲಾಯಿತು. ಈ ಸಂದರ್ಭದಲ್ಲಿ ಅವರು ಹೋರಾಟಗಾರರನ್ನು ಉದ್ದೇಶಿಸಿ ಮಾತನಾಡುತ್ತಾ ನಮ್ಮ ಸಶಸ್ತ್ರ ಹೋರಾಟ ಬಿಳಿಯ ಸರಕಾರ ಮಾಡುತ್ತಿರುವ ವರ್ಣಭೇದ ತಾರತಮ್ಯಗೋಸ್ಕರ ನಿಲುವಿಗೆ ವಿರುದ್ಧವಾಗಿ ಹೊರತು ದೇಶದಲ್ಲಿ ಅಶಾಂತಿ ಹಾಗೂ ಭಯವನ್ನು ಹುಟ್ಟಿಸುವುದಲ್ಲವೆಂದು ಮತ್ತೆ ಪ್ರತಿಪಾದಿಸಿದರು. ಇಂಥ ಆಯ್ಕೆಯ ಹೊರತು ನಮಗೆ ಬೇರೆ ಯಾವ ದಾರಿಗಳಿಲ್ಲ. ಇದನ್ನು ತಪ್ಪಿಸಲು(ಹಿಂಸಾತ್ಮಕ ಹೋರಾಟ) ಬಹುಮತದಿಂದ ಆಯ್ಕೆಗೊಂಡ ಸರಕಾರ ದೇಶದ ಆಡಳಿತವನ್ನು ನಿರ್ವಹಿಸಬೇಕಾಗಿರುವುದು ಅತ್ಯಾವಶ್ಯಕವೆಂದು ದಿಟವಾಗಿ ನುಡಿದರು. ಇದೇ ವೇಳೆಗೆ ಕಪ್ಪು ಜನಾಂಗ ಮಾಡುತ್ತಿದ್ದ ಹೋರಾಟ ಕುರಿತು ಶಾಂತಿಯಿಂದ ಇರುವಂತೆ ಮನವಿ ಮಾಡಿಕೊಂಡರು. ಅಲ್ಲದೇ ಮುಂದಿನ ದಿನಗಳಲ್ಲಿ ನಡೆಯಬಹುದಾದ ಚುನಾವಣೆಗಳಲ್ಲಿ ಎಲ್ಲ ಜನರಿಗೂ ಯಾವ ಭೇದವಿಲ್ಲದೇ ಮತದಾನದ ಪರಮಾಧಿಕಾರ ನೀಡಬೇಕೆಂದು ಒತ್ತಾಯ ಪೂರ್ವಕ ಆಗ್ರಹ ಮಾಡಿದರು. ವೈಯಕ್ತಿಯ ಜೀವನ ಕೊನೆಯ ದಿನಗಳು ಪ್ರಶಸ್ತಿಗಳು ಮಂಡೇಲಾರು ತಮ್ಮ ಜೀವನದಲ್ಲಿ ಪಡೆದ ಪ್ರಶಸ್ತಿಗಳು -೧೯೯೧ರಲ್ಲಿ ಭಾರತ ರತ್ನ ಪ್ರಶಸ್ತಿ -೧೯೯೩ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ -೨೦೦೧ರಲ್ಲಿ ಅಂತರ ರಾಷ್ಟ್ರೀಯ ಗಾಂಧಿ ಶಾಂತಿ ಪುರಸ್ಕಾರ ನೆಲ್ಸನ್ ಮಂಡೇಲಾ ನೆಲ್ಸನ್ ಮಂಡೇಲಾ ನೆಲ್ಸನ್ ಮಂಡೇಲಾ ದಕ್ಷಿಣ ಆಫ್ರಿಕಾದ ೧೧ನೇ ರಾಷ್ಟ್ರಪತಿ ಅಧಿಕಾರದ ಅವಧಿ ಏಪ್ರಿಲ್ ೨೭, ೧೯೯೪ – ೧೯೯೯ ಉಪ ರಾಷ್ಟ್ರಪತಿ ಫ್ರೆಡೆರಿಕ್ ವಿಲ್ಲೆಮ್ ಡೆ ಕ್ಲೆರ್ಕ್ ಥಾಬೊ ಮ್‍ಬೇಕಿ ಪೂರ್ವಾಧಿಕಾರಿ ಫ್ರೆಡೆರಿಕ್ ವಿಲ್ಲೆಮ್ ಡೆ ಕ್ಲೆರ್ಕ್ (State President of South Africa) ಉತ್ತರಾಧಿಕಾರಿ ಥಾಬೊ ಮ್‍ಬೇಕಿ ಜನನ ಜುಲೈ ೧೮, ೧೯೧೮ ಕೂನು, ಮ್‍ಥಾಥ, ಟ್ರಾನ್ಸ್ಕೀ ರಾಜಕೀಯ ಪಕ್ಷ ಆಫ್ರಿಕಾದ ರಾಷ್ಟ್ರೀಯ ಕಾಂಗ್ರೆಸ್ ಯುವಕ ನೆಲ್ಸನ್ ಮಂಡೇಲಾ ನೆಲ್ಸನ್ ಮಂಡೇಲಾ ಅವರು ಜುಲೈ ೧೮, ೧೯೧೮ ರಂದು ದಕ್ಷಿಣ ಆಫ್ರಿಕಾದ ಟ್ರಾನ್‍ಸ್ಕೈ ಪಟ್ಟಣದಲ್ಲಿ ಜನಿಸಿದರು. ಅವರ ತಂದೆ ಟೆಂಬೂ ಬುಡಕಟ್ಟಿನ ನಾಯಕರಾಗಿದ್ದರು. ಮಂಡೇಲಾ ಅವರು ವಿಟ್ವಾಟರ್ಸ್ರಾಂಡ್ ವಿಶ್ವವಿದ್ಯಾನಿಲಯದಲ್ಲಿ ೧೯೪೨ರಲ್ಲಿ ಕಾನೂನು ಪದವಿಯನ್ನು ಪಡೆದರು. ೧೯೪೪ರಲ್ಲಿ ಆಫ್ರಿಕಾದ ರಾಷ್ಟ್ರೀಯ ಕಾಂಗ್ರೆಸ್ ಸೇರಿ 'ನ್ಯಾಷನಲ್ ಪಾರ್ಟಿ' ಸರ್ಕಾರದ ವರ್ಣಬೇಧ ನೀತಿಗಳ ವಿರುದ್ಧ ಹೋರಾಡಿದರು. ಸರ್ಕಾರವನ್ನು ಟೀಕಿಸಿದ ಅಪರಾಧಕ್ಕೆ ಅವರನ್ನು ೧೯೫೬ರಿಂದ ೧೯೬೧ರವರೆಗೆ ಸರ್ಕಾರದ ವಿರುದ್ಧ ಕಾನೂನು ಸಮರ ನಡೆಸಿ, ೧೯೬೧ರಲ್ಲಿ ಜಯಗಳಿಸಿದರು. ಮೊದಲಿಗೆ 'ಅಹಿಂಸಾ ನೀತಿ'ಯನ್ನು ಆಚರಿಸಿದರೂ ನಂತರ ಗೆರಿಲ್ಲಾ ತಂತ್ರಗಳನ್ನು ಅನುಸರಿಸಿ ವಿಶ್ವಾದ್ಯಂತ ಟೀಕೆಗೊಳಗಾದರು. ಆದರೆ ಶೀಘ್ರವಾಗಿ ಜನಪ್ರಿಯರಾದ ಮಂಡೇಲಾ ಅವರು ಜನಾಂಗೀಯ ದ್ವೇಷ'ಕ್ಕೆ ಹೆಸರಾದ ಸರ್ಕಾರದ ವಿರುದ್ದ ಪ್ರಬಲ ಎದುರಾಳಿಯಾದರು. ೧೯೯೦ರವರೆಗಿನ ಅವರ ೨೭ ವರ್ಷದ ಜೀವಾವಧಿ ಸಜೆಯು ಪ್ರಪಂಚದಾದ್ಯಂತ ಜನಜಾಗೃತಿಯನ್ನುಂಟುಮಾಡಿ, ಆಫ್ರಿಕಾದ ಶಾಂತ ಪ್ರಜಾಪ್ರಭುತ್ವಕ್ಕೆ ಕಾರಣವಾಗಿದೆ. ಪರಿವಿಡಿ [ಅಡಗಿಸು] ೧ ಮಂಡೇಲಾರ ಜೀವನ ೧.೧ ಬಾಲ್ಯ ಜೀವನ ೧.೨ ವೈವಾಹಿಕ ಜೀವನ ೧.೩ ಹೋರಾಟದ ಜೀವನ ೧.೪ ವೈಯಕ್ತಿಯ ಜೀವನ ೧.೫ ಕೊನೆಯ ದಿನಗಳು ೨ ಪ್ರಶಸ್ತಿಗಳು ೩ ಮಂಡೇಲಾರ ನುಡಿಗಳು ೪ ಮಂಡೇಲಾರ ಬಗ್ಗೆ ಮಾಹಿತಿ ೫ ಲಾಂಗ್ ವಾಕ್ ಟು ಫ್ರೀಡಮ್ ೬ ಮಂಡೇಲಾರ ನಿಧನಕ್ಕೆ ಗಣ್ಯರ ಕಂಬನಿ ೭ ನೆಲ್ಸನ್ ಮಂಡೇಲಾರ ಚಿತ್ರಗಳು ಮಂಡೇಲಾರ ಜೀವನ[ಬದಲಾಯಿಸಿ] ಬಾಲ್ಯ ಜೀವನ[ಬದಲಾಯಿಸಿ] ವೈವಾಹಿಕ ಜೀವನ[ಬದಲಾಯಿಸಿ] ಮಂಡೇಲಾ ಅವರು ಮೂರು ಬಾರಿ ಮದುವೆಯಾಗಿದ್ದಾರೆ. ಅವರಿಗೆ ಒಟ್ಟು ಆರು ಜನ ಮಕ್ಕಳು. ಇಪ್ಪತ್ತು ವೊಮ್ಮಕ್ಕಳು ಹಾಗೂ ಹಲವಾರು ಮರಿಮಕ್ಕಳನ್ನು ಹೊಂದಿದ ತುಂಬು ಸಂಸಾರ. ಇವೆಲಾಯಿನ್ ನಟೊಕೊ ಮಸೇ ನೆಲ್ಸನ್‌ರ ವೊದಲ ಹೆಂಡತಿ ದಕ್ಷಿಣ ಆಫ್ರಿಕಾದ ಟ್ರಾನ್ಸ್‌ಕೆಯವರು. ಇವಳು ವೊಟ್ಟ ವೊದಲಿಗೆ ಜೊಹಾನ್ಸ್ ಬರ್ಗ್‌ನಲ್ಲಿ ಮಂಡೇಲಾ ಅವರನ್ನು ಭೇಟಿ ಆಗಿದ್ದಳು. ಪರಿಚಯವು ಪ್ರಣಯದೊಂದಿಗೆ ಪ್ರಾರಂಭವಾಗಿ ಕೆಲವೇ ದಿನಗಳಲ್ಲಿ ಅವರಿಬ್ಬರಿಗೂ ಮದುವೆಯಾಯಿತು. ನೆಲ್ಸನ್ ಮಂಡೇಲಾರು ಸತತವಾಗಿ ಹಲವಾರು ವರ್ಷಗಳ ಕಾಲ ಸ್ವಾತಂತ್ರ್ಯ ಹೋರಾಟದಲ್ಲಿಯೇ ತಮ್ಮನ್ನು ತೊಡಗಿಸಿ ಕೊಂಡಿದ್ದರಿಂದ ಕುಟುಂಬವನ್ನು ಸರಿಯಾಗಿ ನಿರ್ವಹಿಸಲಾಗದೆ ಸುಮಾರು ೧೩ ವರ್ಷಗಳ ದಾಂಪತ್ಯದ ೧೯೫೭ರಲ್ಲಿ ಸಂಬಂಧ ಮುರಿದು ಬಿತ್ತು. ಈ ಕಾರಣದಿಂದ ಅವರಿಬ್ಬರ ಮಧ್ಯೆ ಯಾವ ಸಂಬಂಧಗಳು ಉಳಿದು ಕೊಳ್ಳಲಿಲ್ಲ. ರಾಜಕೀಯ ತಾಟಸ್ಥ್ಯವನ್ನು ತಾಳುವಂತೆ ಅವರ ಹೆಂಡತಿಯು ಮಂಡೇಲಾ ಅವರಿಗೆ ಹಲವಾರು ಬಾರಿ ಕೇಳಿದರೂ ಅವರು ಹೆಂಡತಿಯನ್ನೇ ಬಿಟ್ಟರೇ ಹೊರತು ತಾವು ನಿಶ್ಚಿಯಿಸಿಕೊಂಡಿದ್ದ ಹೋರಾಟವನ್ನು ಬಿಡಲಿಲ್ಲ. ಇದು ಒಬ್ಬ ನಿಜವಾದ ಹೋರಾಟಗಾರನ ಖಾಸಗಿಯ ಬದುಕು ದುರಂತದಲ್ಲಿ ಪರಿಸಮಾಪ್ತಿಗೊಳ್ಳುವ ನೋವಿನ ಸಂಗತಿಯಾಗಿ ನಿಲ್ಲುತ್ತದೆ. ವೊದಲ ಹೆಂಡತಿ ಇವೆಲಾಯಿನ್ ನಟೊಕೊ ಮಸೇ ಅವರು ೨೦೦೪ರಲ್ಲಿ ಅನಾರೋಗ್ಯದಿಂದ ತೀರಿಕೊಂಡರು. ಇವರಿಗೆ ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದರು. ಇವರೆಲ್ಲರೂ ಸಹ ತೀರಿ ಹೋಗಿದ್ದಾರೆ. ಕಪ್ಪು ವರ್ಣೀಯ ಸಾಮಾಜಿಕ ಕಾರ್ಯಕರ್ತೆಯಾದ ವಿನ್ನಿ ಮಡಿಕಿಜೇಲಾ ಅವರು ನೆಲ್ಸನ್ ಮಂಡೇಲಾ ಅವರನ್ನು ೧೯೫೭ರಲ್ಲಿ ಮದುವೆಯಾದರು. ಇವರು ಈ ವೊದಲು ಜೋಹಾನ್ಸ್‌ಬರ್ಗ್ ನಗರದ ವೊಟ್ಟಮೊದಲ ಮಹಿಳಾ ಹೋರಾಟಗಾರ್ತಿಯಾಗಿ ನಿರೂಪಿತಗೊಂಡವರು. ಇಬ್ಬರು ಒಂದೇ ಮನೋಭಾವನೆ ಹಾಗೂ ಗುರಿಯನ್ನಿಟ್ಟುಕೊಂಡಿದ್ದರಿಂದ ಈ ವೊದಲಿನಂತೆ ಹೋರಾಟವು ಅವರ ದಾಂಪತ್ಯಕ್ಕೆ ಅಡ್ಡಿಯಾಗಲಿಲ್ಲ. ಇವರಿಗೂ ಸಹ ಎರಡು ಮಕ್ಕಳಿದ್ದೂ ಇವರನ್ನೆಲ್ಲಾ ವಿನ್ನಿ ಮಂಡೇಲಾ ಅವರೇ ಸಾಕಿ ಸಲುಹಿದರು. ಕಾರಣ ಮಕ್ಕಳಿಬ್ಬರ ಬಾಲ್ಯ ಮತ್ತು ಯೌವನದ ಅವಧಿಯಲ್ಲಿ ನೆಲ್ಸನ್ ಮಂಡೇಲಾ ಅವರು ಇಡೀ ತಮ್ಮ ಬದುಕನ್ನು ಜೈಲಿನಲ್ಲಿ ಕಳೆಯುತ್ತಿದ್ದರು. ಇಂಥ ಕಷ್ಟದ ಏಕಾಂಗಿತನವು ಅವರಿಗೆ ಬಹಳ ದೊಡ್ಡ ಅಡೆತಡೆಯಾಗಲಿಲ್ಲ. ಟ್ರಾನ್ಸ್‌ಕೆ ಪ್ರಾಂತದವರಾದ ವಿನ್ನಿ ಮಂಡೇಲಾರ ತಂದೆ ಅಲ್ಲಿನ ಸ್ಥಳೀಯ ಸರಕಾರದಲ್ಲಿ ಕೃಷಿ ಮಂತ್ರಿಯಾಗಿದ್ದರು. ಹೋರಾಟದ ಕಠಿಣ ದಿನಗಳಲ್ಲಿ ಒಂದಾಗಿದ್ದ ವಿನ್ನಿ ಮಂಡೇಲಾ ಹಾಗೂ ನೆಲ್ಸನ್ ಮಂಡೇಲಾರ ಮಧ್ಯೆ ಉಂಟಾಗಿದ್ದ ಮನಸ್ತಾಪಗಳನ್ನು ಸರಿಪಡಿಸಿಕೊಳ್ಳಲಾರದೆ ಅವರು ಕೆಲವು ಕಾರಣಗಳಿಂದ ೧೯೯೨ರಲ್ಲಿ ದಾಂಪತ್ಯ ಬಂಧನದಿಂದ ಬಿಡುಗಡೆಗೊಳ್ಳಲು ನಿರ್ಧರಿಸಿದ್ದು , ೧೯೯೬ರಲ್ಲಿ ವಿವಾಹ ವಿಚ್ಛೇದನ ಪಡೆದರು. ಇವರಿಬ್ಬರಿಗೂ ಹುಟ್ಟಿದ ಝೆಂನನಿಯನ್ನು ಸ್ವಾಜಿಲ್ಯಾಂಡ್‌ನ ರಾಜಕುಮಾರ ಥುಮಾಂಭುಜಿ ದ್ಲಮಿನಿಗೆ ೧೯೭೩ರಲ್ಲಿಯೇ ಮದುವೆ ಮಾಡಿಕೊಡಲಾಗಿತ್ತು. ಇವಳಿಗೂ ಸಹ ತಂದೆಯ ಯಾವ ನೆನಪುಗಳು ಇರಲಿಲ್ಲ. ಹಾಗೂ ಪ್ರಿಟೋರಿಯಾ ಸರಕಾರವು ಸಹ ಈ ಹಿಂದೆ ತಮ್ಮ ತಂದೆಯ್ನನು ಭೇಟಿ ಮಾಡಲು ಯಾವ ಅವಕಾಶ ಕೊಟ್ಟಿರಲಿಲ್ಲ. ದ್ಲಮಿನಿ ದಂಪತಿಗಳು ಪಿಕ್ ಬೋಥೋ ಸರಕಾರದ ಕಿರುಕುಳಕ್ಕೆ ಹೆದರಿ ಅಮೆರಿಕಾ ದೇಶದಲ್ಲಿರುವ ಬೋಸ್ಟನ್ ಪಟ್ಟಣಕ್ಕೆ ಪಲಾಯನಗೈಯುವಂತೆ ಮಾಡಿತು. ಇವರಿಬ್ಬರಿಗೆ ಹುಟ್ಟಿದ ಪ್ರಿನ್ಸ್ ಸೆಡ್ಜಾದ್ಲಮಿನಿಯು ಸಹ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಹಿತರಕ್ಷಣಾ ಸಂಘಟನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಇವರ ಇನ್ನೊಬ್ಬ ಮಗಳಾದ ಜಿಂದಜಿಯು, ಪ್ರಿಟೋರಿಯಾ ಸರಕಾರವು ಮಂಡೇಲಾ ಅವರನ್ನು ಬಿಡುಗಡೆ ಮಾಡುವ ಷರತ್ತು ಬದ್ಧ ವಿಷಯಗಳಿಗೆ ಸಂಬಂಧಿಸಿದಂತೆ ೧೯೮೫ರಲ್ಲಿ ಹೇಳಿಕೆ ನೀಡುವುದರ ಮೂಲಕ ಜಗತ್ಪ್ರಸಿದ್ದಿ ಆದವಳು. ಈವರೆಗೂ ಜೀವಂತವಾಗಿರುವ ಇವರು ತಮ್ಮ ಬದುಕು ನಿರ್ವಹಣೆಗಾಗಿ ವ್ಯಾಪಾರದಲ್ಲಿ ತೊಡಗಿದ್ದಾರೆ. ೧೯೯೬ರಲ್ಲಿ ವಿನ್ನಿಮಂಡೇಲಾ ಅವರಿಂದ ವಿಚ್ಛೇದನ ಪಡೆದಿದ್ದ ನೆಲ್ಸನ್ ಮಂಡೇಲಾ ಅವರು ತಮ್ಮ ೮೦ನೇ ವರ್ಷದಲ್ಲಿ ಗ್ರಾಕ್ ಮಾಕೆಲ್ ನೀ ಸಿಂಬಿನಿ(ಅವಳನ್ನು ಮಂಡೇಲಾ ಅವರು)ಯನ್ನು ವಿವಾಹವಾದರು. ಇವರು ಮೊಜಾಂಬಿಕ್ ದೇಶದ ಮಾಜಿ ಅಧ್ಯಕ್ಷರಾಗಿದ್ದ ಹಾಗೂ ವಿಮಾನ ಅಪಘಾತದಲ್ಲಿ ಮರಣ ಹೊಂದಿದ ಸಮೊರಾ ಮಾಕೆಲ್ ಅವರ ಪತ್ನಿ ಆಗಿದ್ದಳು. ೧೯೯೮ರಲ್ಲಿ ತಮ್ಮ ಇಳಿ ವಯಸ್ಸಿನಲ್ಲಿ ಇವರಿಬ್ಬರ ನಡುವೆ ಮದುವೆ ಜರುಗಿತು. ಆ ದಿನ ನೆಲ್ಸನ್ ಮಂಡೇಲಾರ ಹುಟ್ಟುಹಬ್ಬವೂ ಆಗಿತ್ತು. ಇಳಿ ವಯಸ್ಸಿನಲ್ಲಿ ಮದುವೆಯಾದ ಈ ಸಂಗತಿಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ರಸವತ್ತಾದ ಚರ್ಚೆಗೆ ಗ್ರಾಸವಾಯಿತು. ಜೋಹಾನ್ಸ್‌ಬರ್ಗ್ ಸಮೀಪದ ಕ್ವಿನುನಲ್ಲಿ ಇವರಿಬ್ಬರೂ ದಂಪತಿಗಳಾಗಿ ಈಗಲೂ ವಾಸವಾಗಿದ್ದಾರೆ. ಹೋರಾಟದ ಜೀವನ[ಬದಲಾಯಿಸಿ] ನೈಲ್ಸನ್ ಮಂಡೇಲಾ ಜೈಲುವಾಸದ ೨೭ ವರ್ಷಗಳ ಶಿಕ್ಷೆಯಲ್ಲಿ ೧೮ ವರ್ಷಗಳ ಕಾಲ ರಾಬೆನ್ ಐಸ್‌ಲ್ಯಾಂಡ್‌ನ ಕಾರಾಗೃಹದಲ್ಲಿ ಕಳೆದರು. ಅವರು ಅನುಭವಿಸಿದ ಶಿಕ್ಷೆ ಹಾಗೂ ಆ ಸಂದರ್ಭದಲ್ಲಿ ಅವರು ತಳೆದ ಅಭಿಪ್ರಾಯಗಳಿಂದ ಇಡೀ ದಕ್ಷಿಣ ಆಫ್ರಿಕಾದ ಕಪ್ಪು ಜನಾಂಗದ ಅದ್ವಿತೀಯ ಮೇರು ನಾಯಕನಾಗಿ ಪ್ರಸಿದ್ದಿಗೆ ಬಂದರು. ಪ್ರಿಟೋರಿಯಾ ಜೈಲಿನಲ್ಲಿ ಜೈಲಿನ ಕ್ರೂರ ಅಧಿಕಾರಿಗಳು ಕೊಡುವ ಅತೀ ಕಷ್ಟದ ಕೆಲಸವನ್ನು ಅವರು ಮಾಡಬೇಕಿತ್ತು. ಕಠೋರವಾದ ಶಿಕ್ಷೆಗೆ ಒಳಪಡಿಸುತ್ತಿದ್ದುದಲ್ಲದೇ ಜೈಲಿನಲ್ಲಿ ಜನಾಂಗ ಹಾಗೂ ವರ್ಣದ ನೀತಿಗಳ ಮೇಲೆ ತಾರತಮ್ಯವನ್ನು ಅಧಿಕಾರಿಗಳು ಅವ್ಯಾಹತವಾಗಿ ಮಾಡುತ್ತಿದ್ದರು. ಕಪ್ಪು ಜನಾಂಗದವರಿಗೆ ಮಾತ್ರ ಅತೀ ಕಡಿಮೆ ಆಹಾರವನ್ನು ಕೊಡುತ್ತಿದ್ದರು. ಅತೀ ಕಷ್ಟದ ಹಾಗೂ ಹೆಚ್ಚಿನ ಕೆಲಸವನ್ನು ಕಪ್ಪು ಕೈದಿಗಳಿಂದ ಮಾತ್ರ ತೆಗೆದುಕೊಳ್ಳುತ್ತಿದ್ದರು. ಸಾಮಾನ್ಯವಾಗಿ ರಾಜಕೀಯ ಕೈದಿಗಳಿಗೆ ಮತ್ತು ಇತರ ಕೈದಿಗಳಿಗೆ ಪ್ರತ್ಯೇಕ ಸೆಲ್‌ನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಆದರೆ ನೆಲ್ಸನ್ ಮಂಡೇಲಾ ಅವರಿಗೆ "ಡಿ" ದರ್ಜೆಯ ಕೈದಿಗಳಿಗೆ ಕೊಡುವ ಸವಲತ್ತನ್ನು ಮಾತ್ರ ನೀಡಲಾಗಿತ್ತು. ಸರ್ಕಾರ ಬಯಸಿದ್ದಲ್ಲಿ ಒಬ್ಬರು ಮಾತ್ರ ಅವರನ್ನೂ ಭೇಟಿ ಮಾಡಬಹುದಾಗಿತ್ತು. ಹಾಗೂ ಆರು ತಿಂಗಳಿಗೊಮ್ಮೆ ಮಾತ್ರ ಅವರಿಗೆ ಬಂದಿರುವ ಪತ್ರವನ್ನು ಒಟ್ಟಾಗಿ ನೀಡಲಾಗುತ್ತಿತ್ತು. ಅಂಥಹದರಲ್ಲಿಯೂ ಸಹ ಅವರಿಗೆ ಬಂದಿರುವ ಪತ್ರಗಳೆಲ್ಲವುಗಳು ಎಲ್ಲ ಹಂತದಲ್ಲಿಯೂ ವಿಚಾರಣೆಗೊಳಗಾಗುತ್ತಿದ್ದವು. ರಾಬಿನ್ ಐಸ್‌ಲ್ಯಾಂಡ್ ಸೆರೆಮನೆಯಿಂದ ಪಾಲ್ಸ್ ಮೂರ್ ಕಾರಾವಾಸಕ್ಕೆ ನೆಲ್ಸನ್ ಮಂಡೇಲಾ ಅವರನ್ನು ಒಳಗೊಂಡಂತೆ ಎಲ್ಲ ಪ್ರಮುಖ ನಾಯಕರನ್ನು ಸ್ಥಳಾಂತರಿಸಲಾಯಿತು. ಕಾರಣ ವರ್ಣಭೇದ ನೀತಿ ವಿರುದ್ಧದ ಹೋರಾಟದ ಸಂಬಂಧವಾಗಿ ಬಂಧಿಸಲ್ಪಟ್ಟು ಲಕ್ಷಾನು ಸಂಖ್ಯೆಯಲ್ಲಿ ಸಾಗರೋಪಾದಿಯಾಗಿ ಬರುತ್ತಿದ್ದ ಯುವ ಆಫ್ರಿಕಾ ಶಕ್ತಿಯ ಸಂಪರ್ಕದಿಂದ ಜೈಲಿನಲ್ಲಿರುವ ಕ್ರಾಂತಿಕಾರಿಗಳನ್ನು ಬೇರ್ಪಡಿಸುವ ಉದ್ದೇಶವನ್ನು ಸರಕಾರ ಹೊಂದಿತ್ತು. ಈ ಜೈಲಿನ ಕೈದಿಗಳ ಪ್ರಭಾವದಿಂದ ಪ್ರೇರಿತವಾಗಿ ಆಫ್ರಿಕಾ ದೇಶದ ಎಲ್ಲ ಜನಸಾಮಾನ್ಯರು ಹೋರಾಟವನ್ನು ಜೀವಂತವಾಗಿ ಸದಾ ಕಾಪಾಡಿಕೊಂಡು ಬಂದಿರುವ ಸಾಕ್ಷಿಗಳಿದ್ದವು. ಈ ಕಾರಣಕ್ಕಾಗಿ ರಾಬಿನ್ ಐಸ್‌ಲ್ಯಾಂಡ್ ಕಾರಾವಾಸವನ್ನು ‘ಮಂಡೇಲಾ ಯುನಿವರ್‌ಸಿಟಿ’ ಎಂದು ಕರೆಯಲಾಗುತಿತ್ತು. ಅಂದರೆ ರಾಬಿನ್ ಐಸ್‌ಲ್ಯಾಂಡ್ ಕಾರಗೃಹವು ಎಷ್ಟೊಂದು ಪರಿಣಾಮವನ್ನು ಅಲ್ಲಿಯ ಸ್ವಾತಂತ್ರ್ಯ ಹೋರಾಟದ ಮೇಲೆ ಮಾಡಿದ್ದಿರಬಹುದೆಂದು ಊಹಿಸಬಹುದಾಗಿದೆ. ಇಂಥ ಆರೋಪದಿಂದ ಮುಕ್ತಗೊಳ್ಳಲು ಸರಕಾರವು ಬೇರೆ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿತು. ಮಂಡೇಲಾರನ್ನು ಒಳಗೊಂಡು ಇನ್ನಿತರ ಪ್ರಮುಖ ಕೈದಿಗಳ ಸ್ಥಳಾಂತರವು ನ್ಯಾಷನಲ್ ಪಾರ್ಟಿಯ ಸರಕಾರ ಹಾಗೂ ಕಪ್ಪು ಜನಾಂಗದ ಮುಖಂಡರ ನಡುವೆ ರಹಸ್ಯವಾಗಿ ಮಾತುಕತೆ ನಡೆಯುವ ಸಲುವಾಗಿ ಮಾಡಲಾಗಿತ್ತು ವಿನಹ ಮತ್ತಾವ ಉದ್ದೇಶವನ್ನು ಸರ್ಕಾರ ಹೊಂದಿರಲಿಲ್ಲ ಎಂದು ಮಂತ್ರಿಯೊಬ್ಬರು ಅಭಿಪ್ರಾಯಿಸುವ ಮೂಲಕ ತೇಪೆ ಹಚ್ಚುವ ಕೆಲಸ ಮಾಡಲಾಯಿತು. ಇಂಥ ಅನೇಕ ಕಷ್ಟಕಾರ್ಣ್ಯಗಳ ಮಧ್ಯೆ ಅರ್ಧಕ್ಕೆ ನಿಂತು ಹೋಗಿದ್ದ ತಮ್ಮ ವಿದ್ಯಾಭ್ಯಾಸವನ್ನು ಜೈಲಿನಲ್ಲಿದ್ದ ಮುಂದುವರೆಸಿ ಲಂಡನ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿಯನ್ನು ಪೂರೈಸಿದರು. ಜೈಲಿನಲ್ಲಿದ್ದಾಗ ನೆಲ್ಸನ್ ಮಂಡೇಲಾ ಅವರಿಗೆ ತಪ್ಪಿಸಿಕೊಳ್ಳುವ ಅವಕಾಶವನ್ನು ಜೈಲು ಅಧಿಕಾರಿಗಳೇ ಸ್ವತಃ ಸೃಷ್ಟಿಸಿದ್ದರು. ಕಾರಣ ಅವರು ಉತ್ತೇಜನಗೊಂಡು ತಪ್ಪಿಸಿಕೊಳ್ಳುವ ಸಮಯದಲ್ಲಿ ಕುತಂತ್ರದಿಂದ ಶೂಟ್ ಮಾಡಿ ಸಾಯಿಸುವ ತಂತ್ರವನ್ನು ಪ್ರಿಟೋರಿಯ ಆಡಳಿತ ರೂಪಿಸಿತ್ತು ಎಂದು ಗುಪ್ತವರದಿಗಳು ತಿಳಿಯಪಡಿಸಿದವು. ಸಶಸ್ತ್ರ ಹೋರಾಟವನ್ನು ಹಿಂತೆಗೆದುಕೊಳ್ಳುವ ಷರತ್ತಿನ ಮೇಲೆ ನೆಲ್ಸನ್ ಮಂಡೇಲಾ ಅವರನ್ನು ಸೆರೆ ವಾಸದಿಂದ ಮುಕ್ತಗೊಳಿಸಲು ಅಧ್ಯಕ್ಷ ಪಿಕ್ ಡಬ್ಲು ಬೋಥೋ ಒಪ್ಪಿದ್ದರು. ಆದರೆ ಈ ಕೊಡಕೊಳ್ಳುವಿಕೆಯ ಒಪ್ಪಂದದ ಮುಂದಿನ ಪರಿಣಾಮಗಳ ಬಗೆಗೆ ಸರಕಾರ ಹಾಗೂ ಎಎನ್‌ಸಿ ಮಧ್ಯೆ ವಾಗ್ವಾದವಾಗಿ ಮತ್ತೆ ಹೆಚ್ಚಿನ ಬಿರುಕು ಉಂಟು ಮಾಡಿತು. ಸ್ವತಃ ಮಂಡೇಲಾ ಅವರೇ ಇದರ ಬಗೆಗೆ ಹೇಳಿಕೆ ನೀಡುತ್ತಾ, ಯಾವುದೇ ಒಬ್ಬ ವ್ಯಕ್ತಿ ‘ವ್ಯಕ್ತಿ ಸ್ವಾತಂತ್ರ್ಯ’ವನ್ನು ಪಡೆಯುವರೆಗೆ ಬಿಡುಗಡೆ ಹಾಗೂ ಸಂಘಟನೆ ಎಂಬ ಒಪ್ಪಂದದ ಮಾತುಗಳೇ ಇಲ್ಲ ಎಂದು ಖಂಡತುಂಡಾಗಿ ಅಭಿಪ್ರಾಯಸಿದರು. ಹೀಗಾಗಿ ತಾತ್ಕಾಲಿಕವಾಗಿ ಹುಟ್ಟಿಕೊಂಡಿದ್ದ ಗೊಂದಲಗಳಿಗೆ ಸ್ವತಹ ಮಂಡೇಲಾ ಅವರೇ ಹೇಳಿಕೆ ನೀಡುವುದರ ಮೂಲಕ ಪೂರ್ಣ ವಿರಾಮ ಹಾಕಿದರು. ಅನಾರೋಗ್ಯದ ಕಾರಣ ೧೯೮೫ರಲ್ಲಿ ತಾತ್ಕಾಲಿಕ ಬಿಡುಗಡೆಗೆ ಸರಕಾರ ಒಪ್ಪಿತು. ಕೇಪ್ ಟೌನ್‌ನ ಆಸ್ಪತ್ರೆಗೆ ಸೇರಿಸಲಾಯಿತು. ಚಿಕಿತ್ಸೆ ಪಡೆಯುತ್ತಿದ್ದ ನೆಲ್ಸನ್ ಮಂಡೇಲಾ ಅವರನ್ನು ರಾಷ್ಟ್ರೀಯ ಪಕ್ಷದ ಸರಕಾರದಲ್ಲಿದ್ದ ಮಂತ್ರಿ ಕೊಬಿ ಕೊಟ್ಸೇ ಮೊಟ್ಟ ಮೊದಲಿಗೆ ಭೇಟಿ ಮಾಡಿದರು. ಇಂಥ ಬೆಳವಣಿಗೆಯು ಮುಂದಿನ ಮಾತುಕತೆಗಳಿಗೆ ದಾರಿ ಮಾಡಿಕೊಟ್ಟಿತು. ಸುಮಾರು ನಾಲ್ಕು ವರ್ಷಗಳ ಕಾಲ ಗಂಭೀರವಾದ ಚರ್ಚೆಗಳು ಎಎನ್‌ಸಿ ಮತ್ತು ಪ್ರಿಟೋರಿಯಾ ಸರಕಾರದ ನಡುವೆ ನಡೆದವು. ಮಂಡೇಲಾ ಅವರನ್ನು ಸೆರೆವಾಸಕ್ಕೆ ದೂಡಿದ ದಿನದಿಂದ ಹಿಡಿದೂ ೧೯೮೫ರ ವರೆಗಿನ ಕಾಲಾವಧಿಯಲ್ಲಿ ಸ್ಥಳೀಯವಾಗಿ, ಆಫ್ರಿಕಾ ಖಂಡದಲ್ಲಿರುವ ರಾಷ್ಟ್ರಗಳಲ್ಲಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರ ಬಿಡುಗಡೆಗಾಗಿ ಅನೇಕ ತರಹದ ತೀವ್ರತರ ಒತ್ತಡಗಳು ಹಾಗೂ ಹೋರಾಟಗಳು ಜೋರಾಗಿ ನಡೆದವು. ೧೯೮೯ರ ಹೊತ್ತಿಗೆ ಮಾನವಹಕ್ಕುಗಳು ಹಾಗೂ ಸ್ವಾತಂತ್ರ್ಯದ ಬಗೆಗೆ ಸಂಬಂಧಿಸಿದ ವಿಷಯಗಳಲ್ಲಿ ಹೊಣೆಗಾರಿಕೆಯಿಂದ ವರ್ತಿಸುತ್ತಿದ್ದ ಅಂತಾರಾಷ್ಟ್ರೀಯ ಸಂಘಟನೆಗಳು ಹಾಗೂ ಬೇರೆ ಬೇರೆ ದೇಶಗಳ ಪ್ರಜ್ಞಾವಂತರು ಅಧ್ಯಕ್ಷ ಪಿ.ಡಬ್ಲ್ಯೂ.ಬೋಥಾ ಮೇಲೆ ತೀವ್ರವಾದ ಒತ್ತಡ ಹೇರಿದರು. ಈ ಹಿನ್ನೆಲೆಯಲ್ಲಿ ನ್ಯಾಷನಲ್ ಪಾರ್ಟಿ ಸರಕಾರ ವಿಧಿಯಿಲ್ಲದೆ ಮಂಡೇಲಾ ಬಿಡುಗಡೆ ಬಗೆಗಿನ ಮಾತುಕತೆಗಳಿಗೆ ಬಗ್ಗಲೇ ಬೇಕಾಯಿತು. ಆದರೆ ದುರದೃಷ್ಟವಶಾತ್ ಇದೇ ವೇಳೆಗೆ ಅಧ್ಯಕ್ಷ ಬೋಥೊ ಅವರು ಪಾರ್ಶ್ವವಾಯು ಹೊಡೆತದಿಂದ ಅಧಿಕಾರ ತ್ಯಜಿಸಬೇಕಾಯಿತು. ಹೀಗಾಗಿ ಆಫ್ರಿಕಾದ ಹೋರಾಟಗಾರರ ಬಗೆಗೆ ಮೃದು ಧೋರಣೆ ತಾಳಿದ್ದ ನ್ಯಾಷನಲ್ ಪಾರ್ಟಿ ಸರಕಾರ ತನ್ನ ನಿಲುವುಗಳಲ್ಲಿನ ಬದಲಾವಣೆಗೆ ಹಿಂದೇಟು ಹಾಕಿತು. ಆದ್ದರಿಂದ ಬಿಡುಗಡೆಯ ನಿರ್ಧಾರ ಮತ್ತೆ ಒಂದು ವರ್ಷ ಕಾಲ ಮುಂದೊಡಿತು. ಆದರೆ ಬಿಡುಗಡೆಗೆ ಸಂಬಂಧಿಸಿದ ಹೋರಾಟಗಳು ವ್ಯಾಪಕಗೊಂಡು ಪರಿಸ್ಥಿತಿ ತುಂಬ ಬಿಗಡಾಯಿಸಿತು. ತೆರವಾದ ಸ್ಥಾನಕ್ಕೆ ಬಂದ ಎಫ್.ಡಬ್ಲ್ಯೂ.ಡಿ.ಕ್ಲರ್ಕ್ (Frederik willem de Klerlc) ಅವರು ೧೯೯೦ರಲ್ಲಿ ನೆಲ್ಸನ್ ಮಂಡೇಲಾ ಅವರನ್ನು ಬಂಧಮುಕ್ತಗೊಳಿಸುವುದಾಗಿ ಘೋಷಿಸಿದರು. ಕಾರಣ ಸರಕಾರಕ್ಕೆ ಇದು ಅನಿವಾರ್ಯವಾಗಿತ್ತು. ಅಧ್ಯಕ್ಷ ಕ್ಲರ್ಕ್ ಅವರು ೨ನೇ ಫೆಬ್ರವರಿ ೧೯೯೦ರಲ್ಲಿ ಎಎನ್‌ಸಿ ಹಾಗೂ ಉಳಿದ ಎಲ್ಲ ಸಂಘಟನೆಗಳ ಮೇಲೆ ಹೇರಿದ್ದ ದಿಗ್ಬಂಧನವನ್ನು ತೆರವುಗೊಳಿಸಿದರು. ಅಲ್ಲದೇ ೧೯೯೦ನೆಯ ಫೆಬ್ರವರಿ ೧೧ರಂದು ಕಾರಾಗ್ರಹ ವಾಸದಿಂದ ನೆಲ್ಸನ್ ಮಂಡೇಲಾ ಅವರಿಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವ ಅವಕಾಶ ನೀಡಲಾಯಿತು. ಈ ಸಂದರ್ಭದಲ್ಲಿ ಅವರು ಹೋರಾಟಗಾರರನ್ನು ಉದ್ದೇಶಿಸಿ ಮಾತನಾಡುತ್ತಾ ನಮ್ಮ ಸಶಸ್ತ್ರ ಹೋರಾಟ ಬಿಳಿಯ ಸರಕಾರ ಮಾಡುತ್ತಿರುವ ವರ್ಣಭೇದ ತಾರತಮ್ಯಗೋಸ್ಕರ ನಿಲುವಿಗೆ ವಿರುದ್ಧವಾಗಿ ಹೊರತು ದೇಶದಲ್ಲಿ ಅಶಾಂತಿ ಹಾಗೂ ಭಯವನ್ನು ಹುಟ್ಟಿಸುವುದಲ್ಲವೆಂದು ಮತ್ತೆ ಪ್ರತಿಪಾದಿಸಿದರು. ಇಂಥ ಆಯ್ಕೆಯ ಹೊರತು ನಮಗೆ ಬೇರೆ ಯಾವ ದಾರಿಗಳಿಲ್ಲ. ಇದನ್ನು ತಪ್ಪಿಸಲು(ಹಿಂಸಾತ್ಮಕ ಹೋರಾಟ) ಬಹುಮತದಿಂದ ಆಯ್ಕೆಗೊಂಡ ಸರಕಾರ ದೇಶದ ಆಡಳಿತವನ್ನು ನಿರ್ವಹಿಸಬೇಕಾಗಿರುವುದು ಅತ್ಯಾವಶ್ಯಕವೆಂದು ದಿಟವಾಗಿ ನುಡಿದರು. ಇದೇ ವೇಳೆಗೆ ಕಪ್ಪು ಜನಾಂಗ ಮಾಡುತ್ತಿದ್ದ ಹೋರಾಟ ಕುರಿತು ಶಾಂತಿಯಿಂದ ಇರುವಂತೆ ಮನವಿ ಮಾಡಿಕೊಂಡರು. ಅಲ್ಲದೇ ಮುಂದಿನ ದಿನಗಳಲ್ಲಿ ನಡೆಯಬಹುದಾದ ಚುನಾವಣೆಗಳಲ್ಲಿ ಎಲ್ಲ ಜನರಿಗೂ ಯಾವ ಭೇದವಿಲ್ಲದೇ ಮತದಾನದ ಪರಮಾಧಿಕಾರ ನೀಡಬೇಕೆಂದು ಒತ್ತಾಯ ಪೂರ್ವಕ ಆಗ್ರಹ ಮಾಡಿದರು. ವೈಯಕ್ತಿಯ ಜೀವನ[ಬದಲಾಯಿಸಿ] ಕೊನೆಯ ದಿನಗಳು[ಬದಲಾಯಿಸಿ] ಪ್ರಶಸ್ತಿಗಳು[ಬದಲಾಯಿಸಿ] ನೆಲ್ಸನ್ ಮಂಡೇಲಾರ ಒಂದು ಪ್ರಶಸ್ತಿ ಪತ್ರ. ಮಂಡೇಲಾರು ತಮ್ಮ ಜೀವನದಲ್ಲಿ ಪಡೆದ ಪ್ರಶಸ್ತಿಗಳು -೧೯೯೧ರಲ್ಲಿ ಭಾರತ ರತ್ನ ಪ್ರಶಸ್ತಿ -೧೯೯೩ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ -೨೦೦೧ರಲ್ಲಿ ಅಂತರ ರಾಷ್ಟ್ರೀಯ ಗಾಂಧಿ ಶಾಂತಿ ಪುರಸ್ಕಾರ ಮಂಡೇಲಾರ ನುಡಿಗಳು[ಬದಲಾಯಿಸಿ] ಕಷ್ಟಗಳು ಕೆಲವರನ್ನು ನುಚ್ಚುನೂರಾಗಿಸುತ್ತವೆ, ಆದರೆ ಕೆಲವೇ ಕೆಲವರನ್ನು ಗಟ್ಟಿಗೊಳಿಸಿ ಬೆಳಸುತ್ತವೆ-ರೊಬ್ಬನ್ ಐಲ್ಯಾಂಡ್‌ನಿಂದ ಪತ್ನಿ ವಿನ್ನಿ ಮಂಡೇಲಾಗೆ ಬರೆದ ಪತ್ರ ಫೆಬ್ರವರಿ ೧೯೭೫ ಅಸೀಮ ಕೋಪ ಮತ್ತು ಹಿಂಸೆಗಳಿಂದ ದೇಶವೂಂದನ್ನು ಕಟ್ಟಲಾಗದು. ನಾವು ನಮ್ಮೆಲ್ಲ ಜನರೂ, ಕರಿಯರು ಮತ್ತು ಬಿಳಿಯರಿಬ್ಬರೂ ಗೆಲ್ಲಬೇಕು. ಅಂತಹ ಫಲಿತಾಂಶ ಪಡೆಯಲು ಶ್ರಮಿಸುತ್ತಿದ್ದೇವೆ-ಯುರೋಪಿಯನ್ ಸಂಸತ್ತಿನಲ್ಲಿ ಮಾಡಿದ ಭಾಷಣ ೧೯೯೦ ಸ್ವತಂತ್ರವಾಗುವುದೆಂದರೆ ಬರಿ ಸಂಕೋಲೆಗಳನ್ನು ಕಳಚುವುದಲ್ಲ. ಬೇರೆಯವರ ಸ್ವಾತಂತ್ರ್ಯವನ್ನು ಗೌರವಿಸುತ್ತ ಬದುಕುವಂತಾಗಬೇಕು-ಲಾಂಗ್ ವಾಕ್ ಟು ಫ್ರೀಡಂ, ೧೯೯೫ ಶತ್ರುವಿನೊಂದಿಗೆ ಶಾಂತಿ ಸಾಧಿಸಬೇಕಿದ್ದರೆ, ಆತನೊಂದಿಗೆ ಕೆಲಸ ಮಾಡಬೇಕು. ಆಗ ಆತ ನಿಮಗೆ ಸಹವರ್ತಿಯಾಗುತ್ತಾನೆ-ಲಾಂಗ್ ವಾಕ್ ಟು ಫ್ರೀಡಂ, ೧೯೯೫ ಮಾನವನ ಒಳ್ಳೆಯತನ ಜ್ಯೋತಿಯಿದ್ದಂತೆ ಅದನ್ನು ಮರೆಮಾಚಬಹುದು, ಆರಿಸಲಾಗದು-ಲಾಂಗ್ ವಾಕ್ ಟು ಫ್ರೀಡಂ, ೧೯೯೫ ನಿಜವಾದ ನಾಯಕರು ಜನರ ಸ್ವಾತಂತ್ರ್ಯಕ್ಕಾಗಿ ಸರ್ವವನ್ನೂ ತ್ಯಾಗ ಮಾಡಲು ಸಿದ್ಧರಾಗಬೇಕು -ಕ್ವಜುಲು-ನಾಟಲ್, ದಕ್ಷಿಣ ಆಫ್ರಿಕಾ, ಏಪ್ರಿಲ್ ೨೫, ೧೯೯೮ ಪದಗಳನ್ನು ಹಗುರಾಗಿ ಬಳಸುವ ಜಾಯಮಾನ ನನ್ನದಲ್ಲ. ಜೈಲಿನಲ್ಲಿ ಕಳೆದ ೨೭ ವಸಂತಗಳಲ್ಲಿ ಮೌನದ ಸಾಂಗತ್ಯ, ಏಕಾಂತಗಳು ಪದಗಳ ಮೌಲ್ಯವನ್ನು ಅರ್ಥಮಾಡಿಸಿದೆ. ಜನರ ಬದುಕು ಮತ್ತು ಸಾವಿನ ಮೇಲೆ ಮಾತು ಬೀರುವ ಗಾಢ ಪರಿಣಾಮವನ್ನು ತಿಳಿಸಿವೆ-ದಕ್ಷಿಣ ಆಫ್ರಿಕಾ ಜುಲೈ ೧೪,೨೦೦೦ ನಾನು ಮಹಾತ್ಮ ಗಾಂಧಿ ಹಾಕಿಕೊಟ್ಟ ನೈತಿಕತೆ, ಸರಳತೆ ಮತ್ತು ಬಡವರ ಬಗ್ಗೆ ಅವರ ಪ್ರೀತಿಯ ಮಟ್ಟವನ್ನು ಮುಟ್ಟುವುದು ಸಾಧ್ಯವೇ ಇಲ್ಲ. ಗಾಂಧಿ ಯಾವುದೇ ದೌರ್ಬಲ್ಯಗಳಿಲ್ಲದ ಮಾನವ ಜೀವಿ. ನಾನು ಅನೇಕ ದೌರ್ಬಲ್ಯಗಳಿಂದ ಕೂಡಿದ ಮಾನವ- ೧೯೯೫ರ ಅಹ್ಮದಾಬಾದ್‌ನಲ್ಲಿ, ಭಾರತಕ್ಕೆ ಭೇಟಿ ಶಿಕ್ಷಣ ಪ್ರಪಂಚವನ್ನು ಬದಲಿಸುವ ಪ್ರಬಲ ಅಸ್ತ್ರ ಒಂದು ಸಮಾಜದ ಆತ್ಮದ ದರ್ಶನವಾಗುವುದು ಅದು ಮಕ್ಕಳನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದು ತೋರಿಸುತ್ತದೆ ಸೆರೆಮನೆಯಲ್ಲಿ ಕಾಲದೊಂದಿಗೆ ನಿಮ್ಮ ಮುಖಾಮುಖಿಯಾಗುತ್ತದೆ. ಅದಕ್ಕಿಂತಲೂ ದಿಗಿಲು ಹುಟ್ಟಿಸುವ ಸಂಗತಿ ಮತ್ತೊಂದಿಲ್ಲ ಜೈಲಿನಲ್ಲಿನ ಕಡು ಕಷ್ಟದ ದಿನಗಳಲ್ಲೂ ಮುಂದೊಂದು ದಿನ ನಾನು ಸ್ವತಂತ್ರನಾಗಿ ಕಾಲಿಗೆ ಮುತ್ತಿಕ್ಕುವ ಇಬ್ಬನಿಯಿಂದ ತೋಯ್ದ ಹುಲ್ಲಿನ ಸುಖವನ್ನು ಅನುಭವಿಸಲಿದ್ದೇನೆ ಎಂಬ ನಂಬುಗೆ ನನಗಿತ್ತು ಮಂಡೇಲಾರ ಬಗ್ಗೆ ಮಾಹಿತಿ ದಕ್ಷಿಣ ಆಫ್ರಿಕಾದ ಸ್ಥಳೀಯ ಕರಿಯರ ಕೋಸ್ಸಾ ಭಾಷೆಯಲ್ಲಿ ಮಂಡೇಲಾ ಹೆಸರು ರೋಲಿಹ್ ಲಾಹ್ಲಾ ಎಂದು. ರೋಲಿಹ್ ಲಾಹ್ಲಾ ಎಂದರೆ ಕಷ್ಟಗಳನ್ನು ಕೆದಕುವವ ಎಂದರ್ಥ. ೧೯೫೭ರಲ್ಲಿ ವೈದ್ಯಕೀಯ ಸಮಾಜ ಸೇವಕಿಯಾಗಿದ್ದ ೨೦ ಹರೆಯದ ಕಪ್ಪು ಸುಂದರಿ ವಿನ್ನಿ ನೋಮ್ ಜಾಮೊ ಮಡಿಕಿಜೆಲಾ ಅವರನ್ನು ಮಂಡೇಲಾ ವರಿಸಿದರು. ಆಗ ವಿನ್ನಿ ತಂದೆ, ನೆನಪಿಡು ಮಗಳೇ, ನೀನು ಮದುವೆಯಾಗುತ್ತಿರುವುದು ವ್ಯಕ್ತಿಯನ್ನಲ್ಲ, ಹೋರಾಟವನ್ನು, ಎಂದಿದ್ದರು. ಮಂಡೇಲಾ ಅವರು ಬಹುವರ್ಷಗಳ ಕಾಲ ಸೆರೆವಾಸ ಅನುಭವಿಸಿದ್ದ ರಾಬ್ಬೆನ್ ನಡುಗಡ್ಡೆ ಜೈಲಿಗೆ ಜನ ಅಭಿಮಾನದಿಂದ ಮಂಡೇಲಾ ವಿಶ್ವವಿದ್ಯಾನಿಲಯ ಎಂದು ಕರೆಯುತ್ತಾರೆ. ಇಲ್ಲಿಗೆ ಬರುವ ಯುವ ಕೈದಿಗಳು ವ್ಯಾಸಂಗ ಮುಂದುವರಿಸಿ ಪದವಿ ಪಡೆಯುವಂತೆ ಮಂಡೇಲಾ ಉತ್ತೇಜಿಸುತ್ತಿದ್ದರಂತೆ. ಅವರಿಗೆ ಸ್ವತಃ ಮಾಸ್ತರಾಗಿ ಪಾಠ ಮಾಡುತ್ತಿದ್ದರಂತೆ. ೧೯೮೦ರ ಮಾರ್ಚ್‌ನಲ್ಲಿ ಜೋಹನ್ಸ್‌ಬರ್ಗ್‌ನಲ್ಲಿ ಮಂಡೇಲಾರ ಬಿಡುಗಡೆ ಕುರಿತು ಅಭಿಪ್ರಾಯ ಸಂಗ್ರಹಿಸಿದಾಗ ಶೇ.58ರಷ್ಟು ಬಿಳಿಯರು ಅವರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದರು. ಲಾಂಗ್ ವಾಕ್ ಟು ಫ್ರೀಡಮ್ ನೆಲ್ಸನ್ ಮಂಡೇಲಾ ಸೆರೆವಾಸದ ಸಮಯದಲ್ಲಿ ತಮ್ಮ ಅನುಭವಗಳನ್ನು ಬರೆಯಲು ಪ್ರಾರಂಭಿಸಿದರು. ಲಾಂಗ್ ವಾಕ್ ಟು ಫ್ರೀಡಮ್ ಅವರ ಪ್ರಸಿದ್ಧ ಆತ್ಮಕಥನ. ಆದರೆ ಇದರಲ್ಲಿ ಎಫ್.ಡಬ್ಲ್ಯೂ.ಡಿ. ಕ್ಲರ್ಕ್ ಆಡಳಿತದಲ್ಲಿ ನಡೆದ ಕ್ರೂರ ಹತ್ಯೆಗಳಾಗಲಿ ಹಾಗೂ ಮಂಡೇಲಾ ಮಾಜಿ ಪತ್ನಿ ವಿನಿಮಂಡೇಲಾ ಅವರು ಅನೇಕ ಹಿಂಸಾಕೃತ್ಯಗಳ ಹಿಂದೆ ಹೊಂದಿದ್ದ ಕೈವಾಡಗಳ ಕುರಿತು ಮುಕ್ತವಾಗಿ ಬರೆಯಲಿಲ್ಲ(ಎಂಬತ್ತು, ತೊಂಭತ್ತರ ದಶಕದ ಕಗ್ಗೊಲೆಗಳು).ಇಂಥ ಕೊರತೆಗಳನ್ನು ಬಿಟ್ಟರೆ ಈ ಕೃತಿಯು ನೆಲ್ಸನ್ ಮಂಡೇಲಾರನ್ನು ಪೂರ್ಣವಾಗಿ ಕಟ್ಟಿಕೊಡುವ ಮಹತ್ವದ ಕೃತಿಯಾಗಿದೆ. ಲೇಖಕ ಜೇಮ್ಸ್ ಜಾರ್ಜ(ಮಂಡೇಲಾ ದಿ ಆಥರೈಸ್ಡ್ ಬಯೋಗ್ರಾಫಿ) ಅವರು ನೆಲ್ಸನ್ ಮಂಡೇಲಾ ಅವರ ವೈಯಕ್ತಿಕ ಕುಟುಂಬದ ಬಗೆಗೆ ಆಸಕ್ತಿದಾಯಕ ವಿಷಯಗಳನ್ನು ತಮ್ಮ ಪುಸ್ತಕಗಳಲ್ಲಿ ಮಂಡಿಸಿದ್ದಾರೆ. ಸಾಂಪ್ಸ್‌ನ್ ಎಂಬ ಲೇಖಕ ಸಹ ಮಂಡೇಲಾರ ಸೆರೆವಾಸದ ದಿನಗಳ ಕುರಿತಂತೆ ಬರೆದು ಪ್ರಕಟಿಸಿದ್ದಾರೆ. ಈ ಮೇಲ್ಕಾಣಿಸಿದ ಕೃತಿಗಳು ಮಂಡೇಲಾರ ಕುರಿತು ವಿವರವಾಗಿ ಬೆಳಕು ಚೆಲ್ಲುವ ಮಹತ್ವದ ಗ್ರಂಥಗಳಾಗಿವೆ ಮಂಡೇಲಾರ ನಿಧನಕ್ಕೆ ಗಣ್ಯರ ಕಂಬನಿ ಜಾಗತಿಕ ವರ್ಣಬೇಧ ನೀತಿ ವಿರೋಧಿ ಹೋರಾಟಗಾರ, ಕೋಟ್ಯಂತರ ಜನರಿಗೆ ಸ್ಪೂರ್ತಿ, ನಿಜವಾದ ಗಾಂಧಿವಾದಿಯಾಗಿದ್ದ ಮಂಡೇಲಾ ನಿಧನಕ್ಕೆ ಜಗತ್ತಿನಾದ್ಯಂತ ಜನರು ಸೂಚಿಸಿದ ಸಂತಾಪ ವಿಶ್ವ ಒಬ್ಬ ದಾರ್ಶನಿಕ, ನ್ಯಾಯಕ್ಕಾಗಿ ದನಿಯೆತ್ತುವ ನಾಯಕ ಮತ್ತು ನೈತಿಕತೆಯ ನೈಜ ದಿಕ್ಸೂಚಿಯನ್ನು ಕಳೆದುಕೊಂಡಿದೆ.-ಕೋಫಿ ಅನ್ನಾನ್. ವಿಶ್ವ ಸಂಸ್ಥೆಯ ಮಾಜಿ ಮಹಾ ಕಾರ್ಯದರ್ಶಿ ನಮ್ಮ ರಾಷ್ಟ್ರ ಶ್ರೇಷ್ಠ ಪುತ್ರನನ್ನು ಕಳೆದುಕೊಂಡಿದೆ. ಜನತೆ ತಂದೆಯನ್ನೇ ಕಳೆದುಕೊಂಡಿದ್ದಾರೆ.-ಜಾಕೊಬ್ ಜುಮಾ, ದಕ್ಷಿಣ ಆಫ್ರಿಕಾದ ಅಧ್ಯಕ್ಷ ನ್ಯಾಯಕ್ಕಾಗಿ ಅಸಾಧಾರಣ ಹೋರಾಟಗಾರರಾಗಿದ್ದ ಮಂಡೇಲಾ ಜನಾಂಗೀಯ ತಾರತಮ್ಯದ ವಿರುದ್ಧ ಜೀವನವಿಡೀ ತ್ಯಾಗ ಮಾಡಿದ ಶ್ರೇಷ್ಠ ವ್ಯಕ್ತಿ. ಸಾಧನೆ, ಪ್ರತಿಷ್ಠೆಗಳಲ್ಲಿ ಜಗತ್ತಿನಲ್ಲಿ ನಿಲ್ಲುವ ಏಕೈಕ ವ್ಯಕ್ತಿತ್ವ ಅವರದು. ಅವರ ಸಾವು ವಿಷಾದನೀಯ.-ಬಾನ್-ಕಿ-ಮೂನ್, ವಿಶ್ವಸಂಸ್ಥೆ ಪ್ರಧಾನ ಕಾರ‌್ಯದರ್ಶಿ ಜಗತ್ತಿನ ಪ್ರಖರ ಬೆಳಕೊಂದು ಮರೆಯಾಗಿ ಹೋಯಿತು.-ಡೇವಿಡ್ ಕ್ಯಾಮರೂನ್, ಬ್ರಿಟನ್ ಪ್ರಧಾನಿ ನಮ್ಮ ಕಾಲದಲ್ಲಿ ಸ್ವಾತಂತ್ರ್ಯ ಮತ್ತು ಸಮಾನತೆಗಾಗಿ ಹೋರಾಡಿದ ಶ್ರೇಷ್ಠ ಶಕ್ತಿ ಮಂಡೇಲಾ. ಇಂಥ ಶ್ರೇಷ್ಠ ವ್ಯಕ್ತಿಯನ್ನು ನಾವು ಅಗಲಿದ್ದರೂ ಅವರ ಕೊಡುಗೆ ಅವಿನಾಶಿ.-ಜಾರ್ಜ್ ಬುಷ್, ಅಮೆರಿಕದ ಮಾಜಿ ಅಧ್ಯಕ್ಷ ಜಾಗತಿಕ ಶಾಂತಿ ದೂತ, ಪ್ರಮುಖ ನಾಯಕ, ಶ್ರೇಷ್ಠ ಮಾನವನನ್ನು ಜಗತ್ತು ಇಂದು ಕಳೆದುಕೊಂಡಿದೆ.-ಬಿಲ್ ಕ್ಲಿಂಟನ್, ಅಮೆರಿಕದ ಮಾಜಿ ಅಧ್ಯಕ್ಷ ಜಗತ್ತು ಮತ್ತು ದಕ್ಷಿಣ ಆಫ್ರಿಕಾಗೆ ಚಾರಿತ್ರಿಕ ಕೊಡುಗೆ ನೀಡಿದ ಮಂಡೇಲಾ ಚೀನಾ ಜನತೆಯ ಹಿರಿಯ ಸ್ನೇಹಿತ.-ಕ್ಸಿ ಜಿನ್‌ಪಿಂಗ್, ಚೀನಾ ಅಧ್ಯಕ್ಷ ರಾಜಕೀಯ ನಾಯಕ ಅನ್ನುವುದಕ್ಕಿಂತ ನೈತಿಕ ನಾಯಕನಾಗಿ ಮಂಡೇಲಾ ನೆನಪಿಸಿಕೊಳ್ಳಬೇಕಾದ ವ್ಯಕ್ತಿತ್ವ.-ಟೋನಿ ಅಬೊಟ್, ಆಸ್ಟ್ರೇಲಿಯಾ ಪ್ರಧಾನಿ ಹೋರಾಟದಲ್ಲಿ ವಿರಮಿಸದೆ ಮಂಡೇಲಾ ಅವರು ಶೌರ‌್ಯ , ಸಾಧನೆ ಮೂಲಕ ದಕ್ಷಿಣ ಆಫ್ರಿಕಾ ಮತ್ತು ಜಗತ್ತಿನ ಇತಿಹಾಸ ಬರೆದವರು.-ಫ್ರಾಂಕೊಯಿಸ್ ಹಾಲಂಡ್, ಫ್ರಾನ್ಸ್ ಅಧ್ಯಕ್ಷರು ಜಗತ್ತಿನ ಬದಲಾವಣೆಗೆ ಪೇರಕಶಕ್ತಿಯಾಗಿದ್ದ ಮಂಡೇಲಾ ಶ್ರೇಷ್ಠ ಮಾನವತಾವಾದಿ. ಮಾನವ ಹಕ್ಕುಗಳು ಮತ್ತು ಸಮಾನತೆಗೆ ಹೋರಾಡಿದ ಧೀಮಂತ.-ಔನ್ ಸಾನ್ ಸು ಚಿ, ಮ್ಯಾನ್ಮಾರ್ ಹೋರಾಟಗಾರ್ತಿ ಆಧುನಿಕ ಜಗತ್ತಿನ ಅತ್ಯುತ್ತಮ ರಾಜಕಾರಣಿ ಮಂಡೇಲಾ. ದೊಡ್ಡ ನೋವು, ಸಂಕಟದಲ್ಲಿ ಬೆಂದಿದ್ದರೂ ಬದುಕಿನ ಕೊನೆಗಳಿಗೆವರೆಗೂ ಮಾನವತೆ ಹಾಗೂ ನ್ಯಾಯದ ಪರವಾಗಿಯೇ ಹೋರಾಡಿದರು. ಆಫ್ರಿಕಾ ಖಂಡ ಸೇರಿದಂತೆ ಇಡೀ ಜಗತ್ತೇ ಮಂಡೇಲಾ ಚೇತನದ ಜತೆ ಬೆಸೆದುಕೊಂಡಿರುವುದು ಅತಿಶಯೋಕ್ತಿಯಲ್ಲ.-ವ್ಲಾಡಿಮಿರ್ ಪುಟಿನ್, ರಷ್ಯಾ ಅಧ್ಯಕ್ಷ ನಮ್ಮೆಲ್ಲರ ಆಶೆ, ಆಶಯ, ಕನಸು ಮತ್ತು ಅಂತಸ್ಸತ್ವದ ಮೂರ್ತ ರೂಪ ಮಂಡೇಲಾ. ನಮ್ಮೆಲ್ಲರ ಅಗ್ಗಳಿಕೆಯ ಪ್ರತಿಬಿಂಬ. ಅವರ ಧೈರ‌್ಯ, ಬದ್ಧತೆಗಾಗಿಯೇ ಜನ ಅವರನ್ನು ಆರಾಧಿಸುತ್ತಾರೆ.-ಆರ್ಚ್ ಬಿಷಪ್ ಡೆಸ್ಮಂಡ್ ಟುಟು ದೇವರು ಕರುಣಾಮಯಿ ದಕ್ಷಿಣ ಆಫ್ರಿಕ ಇತಿಹಾಸದ ಅತ್ಯಂತ ಮಹತ್ವದ ಕ್ಷಣದಲ್ಲಿ ಮಂಡೇಲಾರನ್ನು ದಯಪಾಲಿಸಿದ. ಮಂಡೇಲಾ ನಮ್ಮನ್ನು ಕ್ಷಮೆ ಮತ್ತು ಹೊಂದಾಣಿಕೆಯ ಮಾರ್ಗದಲ್ಲಿ ಮುನ್ನಡೆಸಿದರು. ಹಾಗಾಗಿಯೇ ಅಂತಹ ಸಂಕಷ್ಟದ ಸಮಯದಲ್ಲೂ ದಕ್ಷಿಣ ಆಫ್ರಿಕಾ ಹೊತ್ತಿ ಉರಿಯಲಿಲ್ಲ.-ಆರ್ಚ್ ಬಿಷಪ್ ಡೆಸ್ಮಂಡ್ ಟುಟು ಮಂಡೇಲಾ ನಮ್ಮವರಾಗಿ ಉಳಿದಿಲ್ಲ. ಇತಿಹಾಸದ ಪುಟಗಳನ್ನು ಸೇರಿದ್ದಾರೆ. ಅವರ ಘನತೆ, ಇಚ್ಛಾಶಕ್ತಿ, ಧ್ಯೇಯ ಸಾಧನೆಗಾಗಿ ತಮ್ಮ ಸ್ವಾತಂತ್ರ್ಯವನ್ನು ಬಲಿಕೊಟ್ಟ ಅವರ ಹಿರಿಮೆ ಅನುಕರಣೀಯ.-ಬರಾಕ್ ಒಬಾಮಾ, ಅಮೆರಿಕ ಅಧ್ಯಕ್ಷ ಮಂಡೇಲಾ ತೋರಿದ ಹಾದಿಯಲ್ಲಿ ಎಷ್ಟು ದೂರ ಸಾಗಿದ್ದೇವೆ ಎನ್ನುವುದಕ್ಕಿಂತ, ನಾವು ಆ ಪಥದಲ್ಲಿ ಇನ್ನೆಷ್ಟು ದೂರ ನಡೆಯಬೇಕಿದೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವುದು ಒಳಿತು.-ಮೋರ್ಗಾನ್ ಫ್ರೀಮನ್, ಇನ್‌ವಿಕ್ಟಸ್ ಚಿತ್ರದಲ್ಲಿ ಮಂಡೇಲಾ ಪಾತ್ರ ನಿರ್ವಹಿಸಿದ ನಟ ನಂಬಿಕೆ ಮತ್ತು ಪರಿಶ್ರಮದ ಮಹಾನ್ ಮೂರ್ತಿ ಮೂರ್ತಿ ಮಂಡೇಲಾ ಅವರು ಇನ್ನಿಲ್ಲ. ಆದರೆ, ಸ್ವಾತಂತ್ರ್ಯಕ್ಕಾಗಿ ಹೋರಾಡುವ ಹುರುಪನ್ನು ವಿಶ್ವಕ್ಕೆ ನೀಡಿ ಅವರು ಇಹ ಲೋಕ ತ್ಯಜಿಸಿದ್ದಾರೆ. ಮಂಡೇಲಾರನ್ನು ಎರಡು ಬಾರಿ ಭೇಟಿ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಪೂರ್ವ ಜನ್ಮದ ಪುಣ್ಯ..-ಅಮಿತಾಭ್ ಬಚ್ಚನ್, ಬಾಲಿವುಡ್ ನಟ ಬುದ್ದಿವಂತ ಮಿದುಳು, ಕಷ್ಟಕ್ಕೆ ಮಿಡಿವ ಹೃದಯ ಇವೆರಡೂ ಇರುವ ವ್ಯಕ್ತಿ ತೀರ ವಿರಳ. ಮಂಡೇಲಾ ಆ ಗುಂಪಿಗೆ ಸೇರಿದವರು.-ಅಕ್ಷಯ್ ಕುಮಾರ್, ನಾಯಕ ನಟ ನಂಬಿಕೆ, ಧೈರ್ಯ, ಪ್ರಯಾಸ, ಶಾಂತಿ ಮತ್ತು ಕನಿಕರ ಈ ತಿಳಿಪಡಿಸುವಿಕೆಯ ಒಂದು ಅವಿಭಾಜ್ಯ ಭಾಗವಾಗಿದ್ದ ಮಂಡೇಲಾ ಅವರು ಇಹಲೋಕದೊಂದಿಗೆ ತಮ್ಮ ನಂಟು ಕಳೆದುಕೊಂಡಿದ್ದಾರೆ. ಅವರ ಜೀವನವನ್ನು ಲೋಕೋದ್ಧಾರಕ್ಕಾಗಿ ಮೀಸಲಿಟ್ಟಿದ್ದಕ್ಕೆ ಒಂದು ಥ್ಯಾಂಕ್ಸ್.-ಅನುಪಮ್ ಖೇರ್, ಬಾಲಿವುಡ್ ನಟ ದಕ್ಷಿಣ ಆಫ್ರಿಕಾದಲ್ಲಿ ಮಂಡೇಲಾ ಅವರ ಕುರಿತು ಕಿರುಚಿತ್ರ ತೆಗೆಯುತ್ತಿದ್ದೆ. ನಾನು ತೊಟ್ಟಿದ್ದ ಟಿ-ಶರ್ಟ್‌ನ ಮೇಲೆ 'ವೋಟ್ ಫಾರ್ ಮಂಡೇಲಾ' ಎಂದು ಬರೆದಿತ್ತು. ಅದನ್ನು ನೋಡಿ ಮಂಡೇಲಾ, ಈ ಶರ್ಟ್ ಮೇಲಿರುವ ಸಾಲುಗಳಿಂದ ನೀವು ಬಂಧಿತರಾಗುವ ಸಾಧ್ಯತೆ ಇದೆ ಎಂದು ನಗುತ್ತಲೇ ಹೇಳಿದ್ದರು.-ಕಬೀರ್ ಖಾನ್, ಚಿತ್ರ ನಿರ್ದೇಶಕ ನೆಲ್ಸನ್ ಮಂಡೇಲಾರ ಚಿತ್ರಗಳು ಬಾಹ್ಯಸಂಪರ್ಕ http://www.biography.com/people/nelson-mandela-9397017#! http://www.webcrawler.com/info.wbcrwl.309.07/search/web?q=about+nelson+mandela&cid=132482429&ad.segment=info.wbcrwl.309.07&ad.searchtermmatchtype ನೆಲ್ಸನ್‌ ಮಂಡೇಲಾ ಸ್ಕ್ವೇರ್‌ನಲ್ಲಿ...;ಸಲೀಂ ನದಾಫ್;d: 07 ಜೂನ್ 2020 ಉಲ್ಲೇಖ ಭಾರತ ರತ್ನ ಪುರಸ್ಕೃತರು ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರು ದಕ್ಷಿಣ ಆಫ್ರಿಕಾ
3708
https://kn.wikipedia.org/wiki/%E0%B2%85%E0%B2%AE%E0%B2%B0%E0%B3%8D%E0%B2%A4%E0%B3%8D%E0%B2%AF%20%E0%B2%B8%E0%B3%87%E0%B2%A8%E0%B3%8D
ಅಮರ್ತ್ಯ ಸೇನ್
ಅಮರ್ತ್ಯ ಸೇನ್ (ನವೆಂಬರ್ ೩, ೧೯೩೩) ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞರಾಗಿ ವಿಶ್ವಮಾನ್ಯರಾಗಿದ್ದಾರೆ. ಜೀವನ ರವೀಂದ್ರರ ಶಾಂತಿನಿಕೇತನದಲ್ಲಿ ಜನಿಸಿದ ಅಮರ್ತ್ಯ ಸೇನ್ ಅವರು ಅರ್ಥಶಾಸ್ತ್ರದಲ್ಲಿ ಭಾರತಕ್ಕೆ ವಿಶ್ವಮನ್ನಣೆ ದೊರಕಿಸಿ ನೊಬೆಲ್ ಪಾರಿತೋಷಕ ಪಡೆದವರು. ಅಮರ್ತ್ಯ ಸೇನ್ ಅವರು ಜನಿಸಿದ್ದು ನವೆಂಬರ್ ೩, ೧೯೩೩ರಲ್ಲಿ. ಅಮರ್ತ್ಯ ಸೇನ್ ಅವರ ವಂಶಜರು ಇಂದಿನ ಬಾಂಗ್ಲಾದೇಶದ ಡಾಕ್ಕಾ ಪ್ರದೇಶದಿಂದ ಬಂದವರಾಗಿದ್ದು ಅವರ ಹಿರಿಯರು ರವೀಂದ್ರನಾಥ ಠಾಗೋರ್ರಿಗೆ ಆಪ್ತರಾಗಿಯೂ ಶಾಂತಿನಿಕೇತನದ ಶೈಕ್ಷಣಿಕ ಕಾರ್ಯಕ್ಷೇತ್ರದಲ್ಲಿ ನಿರಂತರ ಸಕ್ರಿಯರಾಗಿಯೂ ಇದ್ದವರು. ಹೀಗಾಗಿ ಅವರ ಜನನದಿಂದ ಮೊದಲ್ಗೊಂಡಂತೆ ಶಾಲಾ ಕಾಲೇಜುಗಳ ವಿದ್ಯಾಭ್ಯಾಸಗಳು ನಡೆದದ್ದೆಲ್ಲಾ ಶಾಂತಿನಿಕೇತನದಲ್ಲೇ. ಮುಂದೆ ಅವರು ಕೆಂಬ್ರಿಡ್ಜ್, ಹಾರ್ವರ್ಡ್ ಅಂತಹ ವಿಶ್ವವಿದ್ಯಾಲಯಗಳಲ್ಲಿ ಓದು, ಅಧ್ಯಾಪನ ಮತ್ತು ಸಂಶೋಧನೆಗಳಲ್ಲಿ ತಮ್ಮ ಬದುಕನ್ನು ನಡೆಸಿದರು. ತಮ್ಮ ೨೩ನೇ ವರ್ಷದಲ್ಲಿಯೇ ಕೊಲ್ಕತ್ತಾದ ಜಾದವ್‌ಪುರ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದರು.ಅಲ್ಲಿಂದ ಪ್ರಾರಂಭವಾದ ಇವರ ಸಾಧನೆಗಳ ಸರಪಳಿ ಅವಿರತವಾಗಿ ಮುಂದುವರಿಯಿತು.೧೯೯೮ ರಿಂದ ೨೦೦೪ರವರೆಗೆ ಕೇಂಬ್ರಿಜ್ ವಿಶ್ವವಿದ್ಯಾನಿಲಯದ ಆಕ್ಸ್‌ಬ್ರಿಜ್‌ಕಾಲೇಜ್‌‌ನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ ಅವರು ಹಾಗೆ ನೇಮಕಗೊಂಡ ಪ್ರಥಮ ಏಷ್ಯನ್ ಎಂಬ ಕೀರ್ತಿಗೆ ಪಾತ್ರರಾದವರು. ಗಣ್ಯ ಅರ್ಥಶಾಸ್ತ್ರಜ್ಞರಾಗಿ ಅಮರ್ತ್ಯ ಸೇನ್ ಅವರು ಮಾನವ ಕಲ್ಯಾಣ ಅರ್ಥಶಾಸ್ತ್ರ (welfare economics) ಮತ್ತು ಸಾಮಾಜಿಕ ಆಯ್ಕೆಗಳ ಪ್ರತಿಪಾದನೆ (social choice theory)ಗಳಲ್ಲಿ ಮಾಡಿರುವ ಮಹತ್ವದ ಕೆಲಸಕ್ಕೆ ವಿಶ್ವಮಾನ್ಯರಾಗಿದ್ದಾರೆ. ಅವರ ಚಿಂತನೆಗಳೆಲ್ಲವೂ ಬಡತನದ ದೌರ್ಭಾಗ್ಯಗಳಿಂದ ಬೆಂದು ಬಳಲಿದ ಜನರ ಕುರಿತಾದ ಖಾಳಜಿಗಳಿಂದ ಕೂಡಿದ್ದಾಗಿರುವುದು ಮಹತ್ವದ ಅಂಶವಾಗಿದೆ. ಈ ಹಿನ್ನೆಲೆಯಲ್ಲಿ ಅವರು ಪ್ರತಿಪಾದಿಸಿದ ‘ಬರಗಾಲಕ್ಕೆ ಕುರಿತಾದ ಕಾರಣಗಳು’ ಮತ್ತು ‘ವಿಶ್ವದಲ್ಲಿ ಆಹಾರ ಕೊರತೆಯನ್ನು ನೀಗಿಸಲು ಕೈಗೊಳ್ಳಬಹುದಾದ ಸೂಕ್ತ ಕ್ರಮಗಳ ಚಿಂತನೆಗಳು’ ವಿಶ್ವದೆಲ್ಲೆಡೆ ಪ್ರಶಂಸೆ ಪಡೆದಿವೆ. 1998ರ ವರ್ಷದಲ್ಲಿ ನೊಬೆಲ್ ಪ್ರಶಸ್ತಿ ಆಯ್ಕೆ ಸಮಿತಿಯು ಅವರ ಮಾನವ ಕಲ್ಯಾಣ ಅರ್ಥಶಾಸ್ತ್ರದಲ್ಲಿನ ಸಾಧನೆಗಳನ್ನು ಪರಿಗಣಿಸಿ ಅವರಿಗೆ ಅರ್ಥಶಾಸ್ತ್ರದ ನೊಬೆಲ್ ಗೌರವವನ್ನು ಸಲ್ಲಿಸಿತು. ಮಹಾನ್ ಪ್ರಭಾವಿಗಳಲ್ಲೊಬ್ಬರು ೨೦೧೦ರ ‘ನ್ಯೂ ಸ್ಟೇಟ್ಸ್ ಮನ್’ ಪತ್ರಿಕೆಯು ಅಮರ್ತ್ಯ ಸೇನ್ ಅವರನ್ನು ವಿಶ್ವದ ಐವತ್ತು ಮಹಾನ್ ಪ್ರಭಾವಿಗಳ ಪಟ್ಟಿಯಲ್ಲಿ ಹೆಸರಿಸಿದೆ. ಇದೇ ಅಭಿಪ್ರಾಯವನ್ನು ಈ ಹಿಂದೆ ‘ಟೈಮ್ಸ್’ ಕೂಡಾ ವ್ಯಕ್ತಪಡಿಸಿತ್ತು. ಅಮರ್ತ್ಯ ಸೇನ್ ಅವರು ವಿಶ್ವ ಸಮುದಾಯದ ‘ಆರ್ಥಿಕ ಶಾಂತಿ ಮತ್ತು ಭದ್ರತಾ ಸಮಿತಿಯ’ ನಿರ್ವಾಹಕರಾಗಿದ್ದಾರೆ. ಇದಲ್ಲದೆ ವಿಶ್ವದ ಆರ್ಥಿಕ ಚಿಂತನೆಗಳ ಬಹುಮುಖ ವೇದಿಕೆಗಳಲ್ಲಿ ಪ್ರಧಾನರೆನಿಸಿದ್ದಾರೆ. ಪುಸ್ತಕಗಳು ಅಮರ್ತ್ಯ ಸೇನ್ ಅವರು ಅರ್ಥಶಾಸ್ತ್ರ ಮತ್ತು ಮಾನವ ಕಲ್ಯಾಣದ ಕುರಿತಾಗಿ ಮೂಡಿಸಿರುವ ಮಹತ್ವದ ಚಿಂತನೆಗಳು ಮತ್ತು ಗ್ರಂಥಗಳೂ ವಿಶ್ವದಾದ್ಯಂತ ಬಹುತೇಕ ಭಾಷೆಗಳಲ್ಲಿ ಮೂಡಿಬಂದಿವೆ. ಅವರು ೩೦ಕೊ ಹೆಚ್ಚು ಕೃತಿಗಳನ್ನು ಹೊರತಂದಿದ್ದು ಈ ಕೆಳಗಿನ ಪ್ರಸಿದ್ಧ ಕೃತಿಗಳು ಅದರಲ್ಲಿ ಸೇರಿವೆ. ದಿ ಆರ್ಗ್ಯುಮೆಂಟೇಟಿವ್ ಇಂಡಿಯನ್ (ವಿತಂಡವಾದಿ ಭಾರತೀಯ) ವಯಲೆನ್ಸ್ ಅಂಡ್ ಐಡೆಂಟಿಟಿ (ಹಿಂಸೆ ಮತ್ತು ನೆಲೆ) ಪ್ರಶಸ್ತಿ ಗೌರವಗಳು ಅಮರ್ತ್ಯ ಸೇನ್ ಅವರಿಗೆ 1998ರ ವರ್ಷದ ನೊಬೆಲ್ ಪ್ರಶಸ್ತಿ ಹಾಗೂ ೧೯೯೯ರ ವರ್ಷದಲ್ಲಿನ ಭಾರತ ಸರ್ಕಾರ ನೀಡುವ ಅತ್ಯುನ್ನತ ಪ್ರಶಸ್ತಿಯಾದ 'ಭಾರತ ರತ್ನ'ವೂ ಸೇರಿದಂತೆ ವಿಶ್ವದಾದ್ಯಂತ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ. ನೊಬೆಲ್ ಪ್ರಶಸ್ತಿ ವಿಜೇತ, ಅಮರ್ತ್ಯ ಸೇನ್ ಅವರಿಗೆ ಸ್ಪೇನ್‌ನ ಉನ್ನತ ಸಾಮಾಜಿಕ ವಿಜ್ಞಾನ ಪ್ರಶಸ್ತಿ, ಕನ್ನಡ ಪ್ರಭ, ೨೬,ಮೇ ೨೦೨೧ ಆಕರಗಳು ಇಂಗ್ಲಿಷ್ ವಿಕಿಪೀಡಿಯಾ ಲೇಖನ ಭಾರತ ರತ್ನ ಪುರಸ್ಕೃತರು ಭಾರತದ ಅರ್ಥಶಾಸ್ತ್ರಜ್ಞರು ನೊಬೆಲ್ ಪ್ರಶಸ್ತಿ ಪುರಸ್ಕೃತ ಭಾರತೀಯರು ನೊಬೆಲ್ ಪ್ರಶಸ್ತಿ ಪುರಸ್ಕೃತರು
3711
https://kn.wikipedia.org/wiki/%E0%B2%B2%E0%B2%A4%E0%B2%BE%20%E0%B2%AE%E0%B2%82%E0%B2%97%E0%B3%87%E0%B2%B6%E0%B3%8D%E0%B2%95%E0%B2%B0%E0%B3%8D
ಲತಾ ಮಂಗೇಶ್ಕರ್
ಲತಾ ಮಂಗೇಶ್ಕರ್ (೨೮ ಸೆಪ್ಟೆಂಬರ್ ೧೯೨೯ - ೬ ಫೆಬ್ರವರಿ ೨೦೨೨) ಭಾರತದ ಪ್ರಸಿದ್ಧ ಗಾಯಕಿಯರಲ್ಲಿ ಒಬ್ಬರು. ಹಿಂದಿ ಚಿತ್ರರಂಗದಲ್ಲಿ ಬಹಳ ಹಾಡುಗಳನ್ನು ಹಾಡಿರುವುದಲ್ಲದೆ ಹಲವಾರು ಭಾರತೀಯ ಭಾಷೆಗಳಲ್ಲಿಯೂ ಹಾಡಿದ್ದಾರೆ. ೧೯೬೭ರಲ್ಲಿ ಬಿಡುಗಡೆಯಾದ "ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ" ಕನ್ನಡ ಚಲನಚಿತ್ರದಲ್ಲಿನ "ಬೆಳ್ಳನೆ ಬೆಳಗಾಯಿತು" ಮತ್ತು "ಎಲ್ಲಾರೆ ಇರತೀರೋ ಎಂದಾರೆ ಬರತೀರೋ" ಹಾಡುಗಳನ್ನು ಹಾಡಿದ್ದಾರೆ. ಬರೋಬರಿ (೩೬) ಭಾಷೆಗಳಲ್ಲಿ ಹಾಡಿದ್ದಾರೆ ಹುಟ್ಟು ಮತ್ತು ಬಾಲ್ಯ ಶಾಸ್ತ್ರೀಯ-ಸಂಗೀತಕಾರ ಮತ್ತು ರಂಗ-ನಟ ಪಂಡಿತ್ ದೀನಾನಾಥ್ ಮಂಗೇಶ್ಕರ್ ಅವರ ಪುತ್ರಿ, ಲತಾ ಮಧ್ಯಪ್ರದೇಶದ ಇಂದೋರಿನಲ್ಲಿ ಜನಿಸಿದರು. ತಾಯಿಯನ್ನು 'ಮಾಯಿ,' ಎಂದೇ ಎಲ್ಲರೂ ಕರೆಯುತ್ತಿದ್ದರು. ತಾಯಿಯ ತವರಿನ ಹೆಸರು ಸೇವಂತಾ. ದೀನಾನಾಥರದು ಎರಡನೆಯ ಮದುವೆ. ಮೊದಲ ಮದುವೆ, 'ನರ್ಮದಾ' ಜೊತೆ. ಆಕೆಯ ಮರಣದ ನಂತರ ತಂಗಿ ಶೇವಂತಾರ ಜೊತೆಗೆ ಮದುವೆಯಾಯಿತು. ಈಕೆಯ ಹೆಸರನ್ನು 'ಶುದ್ಧಮತಿ' ಎಂದು ಹೆಸರಿಟ್ಟರು. 'ಬಲವಂತ್ ಸಂಗೀತ್ ಮಂಡಳಿ' ಎಂಬ ಸಂಸ್ಥೆಯನ್ನು ದೀನಾನಾಥ್ ಅವರು ನಡೆಸುತ್ತಿದ್ದರು. ದೀನಾನಾಥ್ ಒಳ್ಳೆಯ ನಟ, ಗಾಯಕ, ಕೃತಿಶೀಲ ಸಮಾಜಸೇವಕ. ಕೆಲವು ಕಾರಣಗಳಿಂದ ಕಂಪೆನಿ ಮುಚ್ಚಿತು. ದಂಪತಿಗಳಿಗೆ ಲತಾ, ಆಶಾ, ಮೀನಾ, ಉಷಾ ಎಂಬ ನಾಲ್ಕು ಹೆಣ್ಣು ಮಕ್ಕಳಲ್ಲದೆ ಹೃದಯನಾಥ್ ಎಂಬ ಗಂಡುಮಗ. ದೀನಾನಾಥ್ ಮನೆಯಲ್ಲಿ ಕೆಲವು ಮಕ್ಕಳಿಗೆ ಸಂಗೀತ ಪಾಠ ಹೇಳುತ್ತಿದ್ದರು. ಒಂದು ದಿನ ಒಬ್ಬ ಹುಡುಗ ಸಂಗೀತಾಭ್ಯಾಸ ಮಾಡುವಾಗ ತಪ್ಪುತ್ತಿದ್ದುದನ್ನು ಎಳೆಯ ವಯಸ್ಸಿನ ಲತಾ ತಿದ್ದುವುದನ್ನು ಗಮನಿಸಿದ ದೀನಾನಾಥ್ ಮಗಳಲ್ಲಿ ಸಂಗೀತದ ಪ್ರತಿಭೆ ಇರುವುದನ್ನು ಮನಗಂಡರು. ಮರುದಿನದಿಂದಲೇ ಅವರು ಮಗಳಿಗೆ ಮನೆಯಲ್ಲಿ ಸಂಗೀತಪಾಠ ಪ್ರಾರಂಭಿಸಿದರು. ಲತಾ ಅವರ ಮೊದಲ ಹೆಸರು "ಹೇಮಾ" ಎಂದು. ಹೇಮಾಳ ಬಹುಮುಖಪ್ರತಿಭೆಯನ್ನು ತಂದೆ ಗುರುತಿಸಿ, ಒಮ್ಮೊಮ್ಮೆ 'ಹೃದಯಾ', 'ಟಾಟಾಬಾಬಾ,' ಎನ್ನುತ್ತಿದ್ದರು. "ಭಾವ್ ಬಂಧನ್" ನಾಟಕದಲ್ಲಿ ಮಾಡಿದ ಅಭಿನಯನದ ನಂತರ ಅವರ ಹೆಸರು ಲತಾ ಎಂದಾಯಿತು. ಲತಾಗೆ ಔಪಚಾರಿಕ ಶಿಕ್ಷಣವೇನೂ ದೊರೆಯಲಿಲ್ಲ. ಒಂದು ದಿನ ಶಾಲೆಗೆ ಹೋಗಿದ್ದರು. ಮರುದಿನ ತಮ್ಮ ತಂಗಿ ಆಶಾಳ ಜೊತೆ ಶಾಲೆಗೆ ಹೋದಾಗ ಶಿಕ್ಷಕರು ಗದರಿದರಂತೆ. ಸರಿ. ಲತಾ ಮುಂದೆ ಎಂದೂ ಶಾಲೆಯ ಮೆಟ್ಟಿಲು ಹತ್ತುವುದಿಲ್ಲವೆಂದು ಪಣತೊಟ್ಟರು. ಸಣ್ಣ-ಪುಟ್ಟ ನಾಟಕಗಳಲ್ಲಿ ಕಾಣಿಸಿಕೊಂಡರು. ತಾವು ತುಂಬಾ ತುಂಟತನ ಮಾಡುತ್ತಿದ್ದೆ ಎಂದು ಲತಾ ನೆನಪಿಸಿಕೊಂಡಿದ್ದಾರೆ. ಒಮ್ಮೆ ಮನೆಯವರು ಏನನ್ನೋ ತರಲು ಕಿರಾಣಿ ಅಂಗಡಿಗೆ ಕಳಿಸಿದರು. ಲತಾ ಹತ್ತಿರ ಒಂದು ಸವಕಲು ನಾಣ್ಯ ಇತ್ತು. ಅದನ್ನು ಅಂಗಡಿಗೆ ತೆಗೆದುಕೊಂಡು ಹೋಗಿ ಅಂಗಡಿಯವನಿಗೆ "ಇಗೋ ನಿನ್ನ ದುಡ್ಡಿನ ಪೆಟ್ಟಿಗೆಯಲ್ಲಿ ನಾಣ್ಯ ಹಾಕುತ್ತಿದ್ದೇನೆ, ನನಗೆ ಪದಾರ್ಥ ಕೊಡು," ಎಂದು ಅಂಗಡಿಯವನಿಗೆ ಟೋಪಿ ಹಾಕಿದರಂತೆ. ಮನೆಗೆ ಬಂದು ತಮ್ಮ ಕೆಲಸವನ್ನು ಹೆಮ್ಮೆಯಿಂದ ಹೇಳಿಕೊಂಡಾಗ ತಂದೆಯಿಂದ ಚೆನ್ನಾಗಿ ಬೈಸಿಕೊಂಡು ಮತ್ತೆ ಅಂಗಡಿಗೆ ಹೋಗಿ ಕ್ಷಮಾಪಣೆ ಕೇಳಬೇಕಾಯಿತಂತೆ. ರಂಗಭೂಮಿಯಲ್ಲಿ 'ತ್ರಾಟಿಕಾ', 'ಪುಣ್ಯಪ್ರಭಾವ್', 'ಸಂಗೀತ್ ಸೌಭದ್ರ್,' ದಲ್ಲಿ ನಾರದನಪಾತ್ರ. 'ಗುರುಕುಲ್,' 'ಸಂಗೀತ್ ಸೌಭದ್ರ್', ನಾಟಕದ ನಾರದನ ಪಾತ್ರಧಾರಿ ಏನೋ ಕಾರಣದಿಂದ ಬರಲಿಲ್ಲ. ಲತಾ, ತಂದೆಯವರನ್ನು ಒಪ್ಪಿಸಿ ತಾವೇ ಅದನ್ನು ಮಾಡಿದರು. ೮ ವರ್ಷದ ಲತಾ ಒನ್ಸ್ ಮೋರ್, ಗಿಟ್ಟಿಸಿಕೊಂಡರು. ತಂದೆಯೇ ಅವರ ಪ್ರಥಮ ಗುರು. ನಂತರ 'ರಾಮಕೃಷ್ಣ ಬುವಾವಚೆ' ಮತ್ತು 'ಉಸ್ತಾದ್ ಅಮಾನತ್ ಖಾನ್' ಅವರ ಬಳಿ ಸಂಗೀತ ಶಿಕ್ಷಣ ಪಡೆದರು. ಶಾಸ್ತ್ರೀಯ ಸಂಗೀತ ಗಾಯಕಿಯಾಗುವ ಹಂಬಲವಿತ್ತು. ಆದರೆ ತಂದೆ ೪೧ ನೇ ವರ್ಷದಲ್ಲೇ ತೀರಿಕೊಂಡಾಗ ೧೩ ವರ್ಷದ ಬಾಲಕಿ ಲತಾ ಹೆಗಲ ಮೇಲೆ ಮನೆಯ ಜವಾಬ್ದಾರಿ ಬಿತ್ತು. ತಾಯಿ, ೪ ಜನ ತಂಗಿಯರು, ಒಬ್ಬ ತಮ್ಮ, ಇವರುಗಳ ದೊಡ್ಡ ಪರಿವಾರವನ್ನು ನೋಡಿಕೊಳ್ಳಬೇಕಾಗಿ ಬಂತು. ಅವರು ಮರಾಠಿ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಲು ಹೋಗಬೇಕಾಯಿತು. ೧೯೪೨ ರಲ್ಲಿ ಪ್ರಾರಂಭಮಾಡಿದ ಮರಾಠಿ ಚಿತ್ರ ಕಿತೀ ಹಸಾಲ್ ನಲ್ಲಿ ಹಾಡಿದರೂ ಕಾರಣಾಂತರಗಳಿಂದ ಅವರ ಗಾಯನ ಸೇರ್ಪಡೆಯಾಗಲಿಲ್ಲ. 'ಮಂಗಳಗೌರ್' ಚಿತ್ರದಲ್ಲಿ ನಟಿಸಿದ್ದರು. ೧೯೪೭ ರಲ್ಲಿ ಹಿಂದಿ ಚಿತ್ರದಲ್ಲಿ ಹಿನ್ನೆಲೆ ಗಾಯಕಿಯಾಗಿ ಹಾಡುವ ಅವಕಾಶ ಸಿಕ್ಕಿತು. 'ಆಪ್ ಕಿ ಸೇವಾಮೆ', 'ಪಾಂ ಲಾಗೂ ಕರ್ ಚೋರಿರೇ' ಎಂಬ ಹಾಡುಗಳನ್ನು ಹಾಡಿದರು. 'ಹುಸ್ನ್ ಲಾಲ್ ಭಗತ್ ರಾಮ್' ಆಕೆಯ ಕಂಠಶ್ರೀಯನ್ನು ಕೇಳಿ ಮೆಚ್ಚಿ ಸರಿಯಾದ ಅವಕಾಶಗಳನ್ನು ಕೊಟ್ಟರು. ಇಂದೋರ್ನಿಂದ ಲತಾ ಪುಣೆಗೆ ಬಂದರು. ಕೊಲ್ಲಾಪುರದಲ್ಲಿ ಸ್ವಲ್ಪ ದಿನವಿದ್ದು, ೧೯೪೭ ರಲ್ಲಿ ಪರಿವಾರದೊಡನೆ ಮುಂಬಯಿ ನ ನಾನಾ ಚೌಕ್ ನಲ್ಲಿ ಬಂದಿಳಿದರು. 'ಆನಂದ್ ಧನ್' ಎಂಬ ಹೆಸರಿನಿಂದ ಮರಾಠಿಚಿತ್ರಗಳ ಸಂಗೀತನಿರ್ದೇಶನ ಮಾಡುತ್ತಿದ್ದರು. ಮನೆಯಲ್ಲಿ ಮರಾಠಿ ಮಾತಾಡುತ್ತಿದ್ದುದರಿಂದ ಲತಾ ಅವರಿಗೆ ಹಿಂದಿ ಮತ್ತು ಉರ್ದೂ ಮಾತಾಡುವುದು ಸ್ವಲ್ಪ ಕಷ್ಟವಾಗುತ್ತಿತ್ತು. ಒಮ್ಮೆ ರೈಲಿನಲ್ಲಿ ಪ್ರಯಾಣ ಮಾಡುವಾಗ ನಟ ದಿಲೀಪ್ ಕುಮಾರ್ ಇವರ ಹಿಂದಿ ಭಾಷೆಯನ್ನು ಸ್ವಲ್ಪ ಅಣಕಿಸಿ ನಕ್ಕರಂತೆ. ಆಗ ಹಠ ಹಿಡಿದು ಒಬ್ಬ ಮನೆಮೇಷ್ಟ್ರನ್ನು ಹುಡುಕಿ ಅವರಿಂದ ಹಿಂದಿ ಮತ್ತು ಉರ್ದೂ ಸಹಜವಾಗಿ ಮಾತಾಡುವುದನ್ನು ಕಲಿತರು. ಮುಂದೆ ಒಮ್ಮೆ ಅವರು ಒಂದು ಉರ್ದೂ ಗಜಲ್ ರೆಕಾರ್ಡ್ ಮಾಡುವಾಗ ಸ್ಟೂಡಿಯೋಗೇ ಬಂದಿದ್ದ ನರ್ಗಿಸ್ ದತ್ ಅವರ ತಾಯಿ ಲತಾ ಅವರನ್ನು "ನೀನು ಹೀಗೆ ಸಹಜವಾಗಿ ಉಚ್ಚರಿಸುವುದು ಎಲ್ಲಿಂದ ಕಲಿತೆ?" ಎಂದು ಕೇಳಿದರಂತೆ. ಸಂಗೀತದ ಬದುಕು ಲತಾ ಅವರು ಬಹುಶಃ ಹಿಂದಿಯ ಪ್ರತಿಯೊಬ್ಬ ಸಂಗೀತ ನಿರ್ದೇಶಕರ ಜೊತೆ ಕೆಲಸ ಮಾಡಿದ್ದಾರೆ. ಇದಕ್ಕೆ ಒಂದೇ ಅಪವಾದವೆಂದರೆ ಓ.ಪಿ. ನಯ್ಯರ್. ಅದೇ ರೀತಿ ಅವರೊಂದಿಗೆ ಹಿಂದಿಯ ಪ್ರತಿಯೊಬ್ಬ ಗಾಯಕನ ಜೊತೆಯೂ ಹಾಡಿದ್ದಾರೆ. ಹಿಂದಿ ಚಿತ್ರರಂಗದ ಬಹುತೇಕ ನಟಿಯಾರಿಗಾಗಿ ಲತಾ ಹಾಡಿದ್ದಾರೆ. ಐವತ್ತರ ದಶಕದಲ್ಲಿ ಮೇಲೇರಿದ ಅವರ ಕೀರ್ತಿ ಪತಾಕೆ ಕೆಳಕ್ಕೆ ಇಳಿಯಲೇ ಇಲ್ಲ. ಗಜಲ್, ಪ್ರೇಮಗೀತೆ, ಭಜನೆ, ಜನಪದ ಗೀತೆ, ಯುಗಳಗೀತೆ, ಕ್ಲಬ್ ಸಾಂಗ್ ... ಹೀಗೆ ಪ್ರತಿಯೊಂದೂ ಬಗೆಯ ಹಾಡುಗಳನ್ನು ಲತಾ ಹಾಡಿದ್ದಾರೆ. ಹಿಂದಿಯಲ್ಲದೆ ಭಾರತದ ಪ್ರತಿಯೊಂದು ಭಾಷೆಯಲ್ಲೂ ಅವರು ಹಾಡಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಅವರನ್ನು "ಲತಾ ದೀದಿ" ಎಂದೇ ಕರೆಯುತ್ತಾರೆ. ಲತಾ ಅವರು ವಿವಾಹವಾಗಲಿಲ್ಲ. ತಮ್ಮ ಜೀವನವನ್ನು ಸಂಗೀತಕ್ಕೇ ಮುಡಿಪಾಗಿಟ್ಟರು. ಲತಾ ಅವರ ಕುಟುಂಬದಲ್ಲಿ ಪ್ರತಿಯೊಬ್ಬರೂ ಸಂಗೀತ ಕ್ಷೇತ್ರದಲ್ಲಿರುವುದು ಒಂದು ವಿಶೇಷ. ಆಶಾ ಮತ್ತು ಲತಾ, ಉಷಾ ಮತ್ತು ಲತಾ, ಮೀನಾ ಮತ್ತು ಲತಾ ಹಾಡಿರುವ ಕೆಲವು ಯುಗಳಗೀತೆಗಳೂ ಪ್ರಸಿದ್ಧವಾಗಿವೆ. ತಮ್ಮ ಹೃದಯನಾಥ್ ಮಂಗೇಷ್ಕರ್ ಸಂಗೀತ ನಿರ್ದೇಶನದಲ್ಲಿ ಲತಾ ಅನೇಕ ಗೀತೆಗಳನ್ನು ಹಾಡಿದ್ದಾರೆ - ಉದಾ. ಮೀರಾ ಭಜನೆಗಳು. ಲತಾ ಅವರು "ಲೇಕಿನ್" ಎಂಬ ಕಲಾತ್ಮಕ ಚಿತ್ರವನ್ನು ನಿರ್ಮಿಸಿದರು. ಚೀನಾ-ಭಾರತ ಯುದ್ಧದಲ್ಲಿ ಭಾರತದ ಅನೇಕ ಸೈನಿಕರು ತಮ್ಮ ಪ್ರಾಣ ತೆತ್ತರು. ಇವರ ನೆನಪಿನಲ್ಲಿ ಒಂದು ವಿಶೇಷಗೀತೆಯನ್ನು ಪ್ರದೀಪ್ ಎಂಬ ಕವಿ ರಚಿಸಿದರು. ಈ ಗೀತೆಯನ್ನು ಸಿ. ರಾಮಚಂದ್ರ ಅವರ ಸಂಗೀತ ನಿರ್ದೇಶನದಲ್ಲಿ ಲತಾ ಅವರು ೧೯೬೩ ಜನವರಿ ೨೭ರಂದು ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಹಾಡಿದರು. "ಐ ಮೇರೆ ವತನ್ ಕೇ ಲೋಗೋಂ, ಜರಾ ಆಂಖ್ ಮೇ ಭರಲೋ ಪಾನಿ ... " ಎಂದು ಪ್ರಾರಂಭವಾಗುವ ಗೀತೆಯನ್ನು ಕೇಳಿ ಅಂದಿನ ಪ್ರಧಾನಮಂತ್ರಿ ಜವಾಹರಲಾಲ್ ನೆಹರೂ ಅವರ ಕಣ್ಣಿನಲ್ಲಿ ನೀರಾಡಿತು. ಅವರು ಲತಾ ಮಂಗೇಶ್ಕರ್ ಅವರೊಂದಿಗೆ ಕಾರ್ಯಕ್ರಮದ ನಂತರ ಮಾತಾಡಿ "ನೀನು ನನ್ನನ್ನು ಅಳಿಸಿಬಿಟ್ಟೆ," ಎಂದು ಭಾವುಕರಾಗಿ ಹೇಳಿದರಂತೆ. ಈ ಹಾಡನ್ನು ನವದೆಹಲಿಯಲ್ಲಿ ಪ್ರತಿ ಜನವರಿ ೨೬ರ ಸಮಾರಂಭದಲ್ಲಿ ಕೇಳಬಹುದು. ೧೦,೦೦೦ಕ್ಕೂ ಹೆಚ್ಚು ಹಾಡುಗಳನ್ನು ೨೨ ಭಾಷೆಗಳಲ್ಲಿ ಹಾಡಿದ್ದಾರೆ. ಅಮೆರಿಕ, ಯೂರೊಪ್ ಸುತ್ತಿ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಆಕೆಯ ಹಾಡುಗಳ ವಿಶೇಷವೆಂದರೆ, ಅಸಾಧಾರಣ ಸ್ಪಷ್ಟ ಶಬ್ದೋಚ್ಚಾರ, ಶಾಸ್ತ್ರೀಯ ಸಂಗೀತದ ಸ್ವರಬದ್ಧ ಸಂಸ್ಕಾರ, ಗೀತೆಗಳ ಗುಣಮಟ್ಟ, ಸನ್ನಿವೇಶಕ್ಕೆ ನಟಿಯರ ಕಂಠಕ್ಕೆ ಸರಿಯಾಗಿ ಅಳವಡಿಸಿಹಾಡುವ ಕಲೆ. "ಪುಲೆ ವೇಚಿತಾ"- ಲತಾರವರ ಆತ್ಮಚರಿತ್ರೆ. ಮರಣ ಲತಾ ಅವರು ೬ ಫೆಬ್ರವರಿ ೨೦೨೨ರಂದು, ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ತಮ್ಮ ೯೨ ನೇ ವಯಸ್ಸಿನಲ್ಲಿ ನಿಧನರಾದರು. ಪ್ರಶಸ್ತಿಗಳು ೬ ವಿಶ್ವವಿದ್ಯಾಲಯಗಳ ಗೌರವ ಡಾಕ್ಟೊರೇಟ್ (ನ್ಯೂಯಾರ್ಕ್ ವಿಶ್ವವಿದ್ಯಾಲಯವೂ ಸೇರಿದಂತೆ). ಅನೇಕ ಫಿಲ್ಮ್ ಫೇರ್ ಪ್ರಶಸ್ತಿಗಳು ಶಾಂತಿನಿಕೇತನದಿಂದ ದೇಶಿಕೋತ್ತಮ ಪ್ರಶಸ್ತಿ ಆಸ್ಥಾನ ವಿದ್ವಾನ್, ತಿರುಪತಿ ದೇವಸ್ಥಾನಮ್ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ-೧೯೮೯ ಪದ್ಮಭೂಷಣ- ೧೯೬೯ ಪದ್ಮ ವಿಭೂಷಣ- ೧೯೯೯ ಭಾರತರತ್ನ- ೨೦೦೧ ಫ್ರಾನ್ಸ್ ಸರ್ಕಾರ ನೀಡುವ ’ಆಫೀಸರ್ ಆಫ್ ದ ಲೀಜಿಯನ್ ಆಫ್ ಆನರ್’ ಪ್ರತಿಷ್ಠಿತ ಪ್ರಶಸ್ತಿ ಕೆಲವು ಪ್ರಸಿದ್ಧ ಚಿತ್ರ ಗೀತೆಗಳು ಹಿಂದಿ ರಸಿಕ ಬಲಮಾ ...(ಚೋರಿ ಚೋರಿ) ಜ್ಯೋತಿ ಕಲಷ್ ಛಲಕೇ ... (ಭಾಭೀ ಕೀ ಚೂಡಿಯಾಂ) ಯೆ ದಿಲ್ ಔರ್ ಉನ್ ಕೀ ನಿಗಾಹೋಂಕೆ ಸಾಯೇ ... (ಪ್ರೇಮ್ ಪರ್ಬತ್) ಕುಹೂ ಕುಹೂ ಬೋಲೇ ಕೋಯಲಿಯಾ ... (ಸುವರ್ಣ ಸುಂದರಿ) ಪಂಖ್ ಹೋತೀ ತೋ ಉಡ್ ಜಾತೀರೇ ... (ಸೆಹರಾ) ನೈನೋಂ ಮೆ ಬದರಾ ಛಾಯೆ ... (ಮೇರಾ ಸಾಯಾ) ಜಾನೆ ಕೈಸೆ ಸಪನೋಂಮೆ ಖೋಗಯೀ ಅಖಿಯಾಂ ... (ಅನುರಾಧ) ತುಮ್ ನ ಜಾನೆ ಕಿಸ್ ಜಹಾಂಮೆ ಖೋಗಯೇ ... (ಸಜಾ) ಏರೀ ಮೈ ತೋ ಪ್ರೇಮ್ ದಿವಾನಿ ... (ಬಹಾರ್) ಯೂಂ ಹಸರತೋಂ ಕೆ ದಾಗ್ (ಅದಾಲತ್) ಯೆ ಜಿಂದಗೀ ಉಸೀಕಿ ಹೈ ... (ಅನಾರ್ ಕಲೀ), ಮೋಹೆ ಭೂಲ್ ಗಯೇ ಸಾವರಿಯಾಂ (ಬೈಜೂ ಬಾವ್ರಾ) ಧೀರೆಸೆ ಆಜಾರೆ ಅಖಿಯನ್ ಮೇಂ ನಿಂದಿಯಾ ... ರೈನಾ ಬೀತಿ ಜಾಯೇ ... ಪವನ್ ದಿವಾನಿ ... ಕೈಸೆ ಜಾಂವು ಜಮುನಾ ಕೆ ತೀರ್ ... ಮರಾಠಿ ಘನಶ್ಯಾಮ ಸುಂದರಾ, ಶ್ರೀಧರಾ ಅರುಣೋದಯ ಝಾಲ, (ಅಮರ್ ಭೂಪಾಲಿ) ಏರಣಿಚಾ ದೆವ ತುಲ ಠಿಣ್ಗಿ ಠಿಣ್ಗಿ ವಾಹೂಂ, ದೇಸಾದೀ (ಮಾಣಸಾ) ಲೇಕ್ ಲಾಡ್ ಇದು. ಕಿ ಯಾ ಘರ್ ಚೀ. ಕನ್ನಡದಲ್ಲಿ ಲತಾ ಕುರಿತ ಪುಸ್ತಕ 'ಲತಾ ಮಂಗೇಶ್ಕರ್ ರವರ ಜೀವನ ಚರಿತ್ರೆ'-’ಹಾಡುಹಕ್ಕಿಯ ಹೃದಯಗೀತೆ’ ಪುಸ್ತಕವನ್ನು ಹಿರಿಯ ಪತ್ರಕರ್ತ 'ವಸಂತ ನಾಡಿಗೇರ್' ರಚಿಸಿದ್ದಾರೆ. 'ಸುಮುಖ ಪ್ರಕಾಶನ' ಪ್ರಕಟಿಸಿರುವ ಈ ಪುಸ್ತಕವು ೨೭ ಅಕ್ಟೋಬರ್ ೨೦೦೯ರಂದು ಬೆಂಗಳೂರಲ್ಲಿ ಲೋಕಾರ್ಪಣೆಗೊಂಡಿತ್ತು ಉಲ್ಲೇಖಗಳು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರು ಭಾರತ ರತ್ನ ಪುರಸ್ಕೃತರು ಭಾರತೀಯ ಚಲನಚಿತ್ರ ಹಿನ್ನೆಲೆ ಗಾಯಕರು ೧೯೨೮ ಜನನ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು ಹಿನ್ನೆಲೆ ಗಾಯಕಿಯರು ೨೦೨೨ ನಿಧನ ಚಲನಚಿತ್ರ ಗಾಯಕರು
3712
https://kn.wikipedia.org/wiki/%E0%B2%AC%E0%B2%BF%E0%B2%B8%E0%B3%8D%E0%B2%AE%E0%B2%BF%E0%B2%B2%E0%B3%8D%E0%B2%B2%E0%B2%BE%20%E0%B2%96%E0%B2%BE%E0%B2%A8%E0%B3%8D
ಬಿಸ್ಮಿಲ್ಲಾ ಖಾನ್
ಶೆಹನಾಯಿ ವಾದಕ ಉಸ್ತಾದ್ ಬಿಸ್ಮಿಲ್ಲಾ ಖಾನ್ (ಮಾರ್ಚ್ ೨೧, ೧೯೧೬ - ಆಗಸ್ಟ್ ೨೧, ೨೦೦೬) ಭಾರತರತ್ನ ಪಡೆದ ಮೂರನೆಯ ಶಾಸ್ತ್ರೀಯ ಸಂಗೀತಗಾರ. ಇವರಿಗೆ ೨೦೦೧ ರಲ್ಲಿ ಭಾರತದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಜೀವನ ಇವರ ಪೂರ್ವಜರು ಬಿಹಾರಿನ ದುಮ್ರಾಓ ಸಾಮ್ರಾಜ್ಯದವರೆಂದು ಹೇಳಲಾಗುತ್ತದೆ. ಬಿಸ್ಮಿಲ್ಲಾ ಖಾನ್ ತಮ್ಮ ಚಿಕ್ಕಪ್ಪ, ಅಲಿ ಬಕ್ಸ್ ವಿಲಾಯತು ಬಳಿ ಕಲಿತರೆಂದು ಹೇಳಲಾಗುತ್ತದೆ. ಅಲಿ ಬಕ್ಸ್ ವಿಲಾಯತುರವರು ವಾರಣಾಸಿಯ ವಿಶ್ವನಾಥ ದೇವಾಲಯದೊಂದಿಗಿದ್ದವರು. ಇವರು ಕೀರ್ತಿ ಉತ್ತುಂಗಕ್ಕೇರಿದ್ದರೂ ಇವರು ವಾರಣಾಸಿಯ ಸಾಮಾನ್ಯ ಜನರಂತೆ ಜೀವನ ನಡೆಸಿದರು.ಜೀವನದ ಕೊನೆಯವರೆಗು ತಮ್ಮ ಓಡಾಟಕ್ಕಾಗಿ ಸೈಕಲ್ ರಿಕ್ಷಾವನ್ನೆ ಅವಲಂಬಿಸಿದ್ದರು. ಬಿಸ್ಮಿಲ್ಲಾ ಖಾನ್ ರವರಿಗೆ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಮತ್ತು ವಿಶ್ವ ಭಾರತಿ ವಿಶ್ವವಿದ್ಯಾಲಯ, ಶಾಂತಿನಿಕೇತನ ಗಳಿಂದ ಗೌರವಪೂರ್ವಕ ಡಾಕ್ಟರೇಟ್ ಲಭಿಸಿದೆ. ಸಾಧನೆಯ ಹಾದಿ ಶೆಹನಾಯಿಯನ್ನು ಪ್ರಸಿದ್ಧ ಶಾಸ್ತ್ರೀಯ ಸಂಗೀತ ವಾದ್ಯವಾಗಿಸಿದ ಕೀರ್ತಿ ಬಿಸ್ಮಿಲ್ಲಾ ಖಾನ್ ಅವರಿಗೆ ಸಲ್ಲಬೇಕು. ೧೯೩೭ರಲ್ಲಿ ಕಲ್ಕತ್ತದಲ್ಲಿ ನಡೆದ ಅಖಿಲ ಭಾರತ ಸಂಗೀತ ಸಮ್ಮೇಳನದ ಇವರ ವಾದ್ಯ ಕಛೇರಿ ಶೆಹನಾಯಿಯನ್ನು ಪ್ರಮುಖ ವಾದ್ಯಗಳ ಸಾಲಿನಲ್ಲಿ ತಂದು ನಿಲ್ಲಿಸಿತು .೧೯೪೭ರ ಭಾರತದ ಸ್ವಾತಂತ್ರ್ಯದ ಸಂಧರ್ಭದಲ್ಲಿ ಕೆಂಪು ಕೋಟೆಯಲ್ಲಿ ಇವರ ಸಂಗೀತ ಕಛೇರಿ ಆಯೋಜಿಸಲಾಗಿತ್ತು. ಇದೊಂದು ಅವರ ಸಾಧನೆಗೆ ಸಂದ ಗೌರವವೇ ಸರಿ.ಜನವರಿ ೨೬ ೧೯೫೦ರ ಭಾರತ ಗಣರಾಜ್ಯೋತ್ಸವ ಸಂದರ್ಭದಲ್ಲಿ ಖಾನ್ ಕಾಪಿ ರಾಗದಲ್ಲಿ ಕೆಂಪು ಕೋಟೆಯಿಂದ ತಮ್ಮ ನಾದ ಲಹರಿಯನ್ನು ಹರಿಸಿದರು. ಬಿಸ್ಮಿಲ್ಲಾ ಖಾನ್ ಎಂದರೆ ಶೆಹನಾಯಿ ಎನ್ನುವಷ್ಟು ಶೆಹನಾಯಿ ವಾದನದಲ್ಲಿ ಹೆಸರುಗಳಿಸಿದ್ದರು. ಖಾನ್ ರವರು ವಿದೇಶಗಳಲ್ಲು ಪ್ರಸಿದ್ಧರು. ಅಪ್ಘಾನಿಸ್ತಾನ, ಯೂರೋಪ್, ಇರಾನ್, ಇರಾಕ್, ಪಶ್ಚಿಮ ಆಫ್ರಿಕ, ಯುಎಸ್ಎ, ಯು.ಎಸ್.ಎಸ್.ಆರ್, ಕೆನಡಾ, ಹಾಂಗ್ ಕಾಂಗ್, ಜಪಾನ್, ಇದಲ್ಲದೆ ಹಲವು ದೇಶಗಳ ಮುಖ್ಯನಗರಗಳಲ್ಲಿ ಕಛೇರಿ ನಡೆಸಿ ಕೊಟ್ಟಿದ್ದಾರೆ. ಪ್ರಶಸ್ತಿಗಳು ಭಾರತ ರತ್ನ (೨೦೦೧) ಪದ್ಮವಿಭೂಷಣ (೧೯೮೦) ಪದ್ಮಭೂಷಣ (೧೯೬೮) ಪದ್ಮಶ್ರೀ (೧೯೬೧) ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (೧೯೫೬) ಮಧ್ಯಪ್ರದೇಶ ಸರಕಾರದ ತಾನಸೇನ್ ಪ್ರಶಸ್ತಿ (೧೯೬೫) ನೆಹರು ಅಂತರರಾಷ್ಟ್ರೀಯ ಐಕ್ಯತಾ ಪ್ರಶಸ್ತಿ(೧೯೭೩) ಸ್ವರಾಲಯ ಪ್ರಶಸ್ತಿ (ಮದ್ರಾಸ್)(೧೯೯೪) ರಾಜೀವ್ ಗಾಂಧಿ ಸಧ್ಬಾವನ ಪ್ರಶಸ್ತಿ (ಕಾಂಗ್ರೆಸ್ ಪಕ್ಷ) (೧೯೯೪) ಗೌರವಗಳು ಮರಾಠವಾಡ ವಿವಿಯಿಂದ ಡಿ.ಲಿಟ್. (೧೯೮೬) ವಿಶ್ವಭಾರತಿ ಶಾಂತಿನಿಕೇತನದಿಂದ ಡಿ.ಲಿಟ್. (೧೯೮೮) ಬನಾರಸ್ ಹಿಂದು ವಿಶ್ವವಿದ್ಯಾನಿಲಯದಿಂದ ಡಿ.ಲಿಟ್. (೧೯೮೯) ಮಹಾತ್ಮಗಾಂಧಿ ಕಾಶಿ ವಿದ್ಯಾಪೀಠದಿಂದ ಡಿ.ಲಿಟ್. (೧೯೯೫) ಸಂಗೀತ ನಾಟಕ ಅಕಾಡೆಮಿಯ ಫೆಲೊ (೧೯೯೪) ರಾಷ್ಟ್ರೀಯ ಸಂಶೋಧನಾ ಪ್ರೊಫೆಸರ್ ಶಿಪ್ (೧೯೯೫) ಸನಾದಿ ಅಪ್ಪಣ್ಣ ೧೯೭೭ರಲ್ಲಿ ಬಿಡುಗಡೆಯಾದ ಸನಾದಿ ಅಪ್ಪಣ್ಣ ಕನ್ನಡ ಚಲನಚಿತ್ರದಲ್ಲಿ, ಡಾ.ರಾಜ್‍ಕುಮಾರ್ ಅವರ ಶಹನಾಯಿ ವಾದಕರಾಗಿ ಅಭಿನಯಿಸಿದ ದೃಶ್ಯಗಳಿಗೆ ಅವಶ್ಯಕವಾಗಿದ್ದ ಶಹನಾಯಿ ವಾದನವನ್ನು ಬಿಸ್ಮಿಲ್ಲಾ ಖಾನ್ ಅವರು ನುಡಿಸಿದರು. ಜಿ.ಕೆ.ವೆಂಕಟೇಶ್ ಸಂಗೀತದಲ್ಲಿ ಎಸ್.ಜಾನಕಿಯವರು ಹಾಡಿರುವ ಕರೆದರೂ ಕೇಳದೆ ಎಂಬ ಹಾಡಿನಲ್ಲಿ ಬರುವ ಶಹನಾಯಿ ವಾದನವನ್ನು ಬಿಸ್ಮಿಲ್ಲಾ ಖಾನರು ನುಡಿಸಿದ್ದಾರೆ. ಹೊರಗಿನ ಸಂಪರ್ಕಗಳು Documentary about Bismillah Khan: BANARAS, MUSIC OF THE GANGES ಉಸ್ತಾದ್ ಬಿಸ್ಮಿಲ್ಲಾ ಖಾನ್ ಆಂಗ್ಲಲೇಖನ ಭಾರತದ ಸಂಗೀತಕಾರರು ಸಂಗೀತ ಭಾರತ ರತ್ನ ಪುರಸ್ಕೃತರು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು ೧೯೧೬ ಜನನ ೨೦೦೬ ನಿಧನ
3715
https://kn.wikipedia.org/wiki/%E0%B2%A8%E0%B2%BE%E0%B2%97%E0%B2%B0%E0%B2%B9%E0%B3%8A%E0%B2%B3%E0%B3%86%20%E0%B2%B0%E0%B2%BE%E0%B2%B7%E0%B3%8D%E0%B2%9F%E0%B3%8D%E0%B2%B0%E0%B3%80%E0%B2%AF%20%E0%B2%89%E0%B2%A6%E0%B3%8D%E0%B2%AF%E0%B2%BE%E0%B2%A8%E0%B2%B5%E0%B2%A8
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ
೧೯೭೭ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ ನಾಗರಹೊಳೆ ಮಾಹಿತಿಗೆ ಈ ಲೇಖನ ನೋಡಿ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನ (ರಾಜೀವ್ ಗಾಂಧಿ ನ್ಯಾಷನಲ್ ಪಾರ್ಕ್ ಎಂದು ಕರೆಯಲಾಗುತ್ತದೆ), ದಕ್ಷಿಣ ಭಾರತದ ಕರ್ನಾಟಕ ರಾಜ್ಯದಲ್ಲಿ ಕೊಡಗು ಜಿಲ್ಲೆಯ ಮತ್ತು ಮೈಸೂರು ಜಿಲ್ಲೆಯಲ್ಲಿ ರಾಷ್ಟ್ರೀಯ ಉದ್ಯಾನ ಸ್ಥಾಪಿತವಾಗಿದೆ.ಈ ಉದ್ಯಾನವನವನ್ನು ೧೯೯೯ ರಲ್ಲಿ ಇದು ನೀಲಗಿರಿ ಜೀವಗೋಳ ಮೀಸಲು ಪ್ರದೇಶದ ಭಾಗವಾಗಿ ಮೂವತ್ತು ಏಳನೇ ಪ್ರಾಜೆಕ್ಟ್ ಟೈಗರ್ ಹುಲಿ ಮೀಸಲು ಅರಣ್ಯ ಪ್ರದೇಶ ಎಂದು ಘೋಷಿಸಲಾಯಿತು. ೬,೦೦೦ ಕಿಮೀ ೨ ಪಶ್ಚಿಮ ಘಟ್ಟಗಳ ನೀಲಗಿರಿ ಉಪ ಕ್ಲಸ್ಟರ್ (೨,೩೦೦ ಚ ಮೈಲಿ), ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಸೇರಿದಂತೆ, ವಿಶ್ವ ಪರಂಪರೆ ತಾಣದ ಆಯ್ಕೆಗೆ ಸಂಬಂಧಿಸಿದಂತೆ UNESCO ವಿಶ್ವ ಪರಂಪರೆ ಸಮಿತಿಯ ಪರಿಗಣನೆಯ ಅಡಿಯಲ್ಲಿದೆ. ಪಾರ್ಕ್ ಶ್ರೀಮಂತ ಕಾಡುಪ್ರದೇಶ, ಸಣ್ಣ ಹೊಳೆಗಳು, ಬೆಟ್ಟಗಳು, ಕಣಿವೆಗಳು ಮತ್ತು ಜಲಪಾತಗಳನ್ನು ಹೊಂದಿದೆ. ಪಾರ್ಕ್ ಅನೇಕ ಹುಲಿಗಳು, ಭಾರತೀಯ ಕಾಡೆಮ್ಮೆ ಮತ್ತು ಆನೆಗಳು ಆರೋಗ್ಯಕರ ಮಾಂಸಾಹಾರಿ ಪ್ರಾಣಿಗಳ ಬೇಟೆಯ ಅನುಪಾತ ಹೊಂದಿದೆ. ಸ್ಥಳ ಉದ್ಯಾನವನ ಬ್ರಹ್ಮಗಿರಿ ಬೆಟ್ಟಗಳ ಮತ್ತು ದಕ್ಷಿಣ ಕೇರಳ ರಾಜ್ಯದ ಕೆಳಭಾಗಕ್ಕೆ ಹರಡುವ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಇರುತ್ತದೆ. ಇದು ಅಕ್ಷಾಂಶ ೧೨°೧೫'೩೭.೬೯ ನಡುವೆ ಇದ್ದು "ಎನ್ ಮತ್ತು ರೇಖಾಂಶಗಳು ೭೬°೧೭'೩೪.೪" ಇ. ಉದ್ಯಾನವನ ಬಂಡೀಪುರ ನ್ಯಾಷನಲ್ ಪಾರ್ಕ್ ನ ವಾಯುವ್ಯ ದಿಕ್ಕಿನಲ್ಲಿ ಇದೆ ೬೪೩ ಕಿಮೀ ೨ (೨೪೮ ಚದರ ಮೈಲಿ) ಒಳಗೊಳ್ಳುತ್ತದೆ. ಕಬಿನಿ ಜಲಾಶಯ ಎರಡು ಉದ್ಯಾನಗಳನ್ನು ಪ್ರತ್ಯೇಕಿಸುತ್ತದೆ. ೬೮೭ ೯೬೦ ಮೀಟರ್ (೨,೨೫೪ ೩.೧೫೦ ಅಡಿ) ಉದ್ದ ಪಾರ್ಕ್ ಶ್ರೇಣಿಯ ಎತ್ತರದ. ಇದು ೫೦ ಕಿಮೀ (೩೧ ಮೈಲಿ) ಮೈಸೂರು ಪ್ರಮುಖ ನಗರದಿಂದ ದೂರವಿದ್ದು. ಪಕ್ಕದ ಬಂಡೀಪುರ ರಾಷ್ಟ್ರೀಯ ಉದ್ಯಾನ (೮೭೦ ಕಿಮೀ ೨ (೩೪೦ ಚದರ ಮೈಲಿ)), ಮುದುಮಲೈ ರಾಷ್ಟ್ರೀಯ ಉದ್ಯಾನ (೩೨೦ ಕಿಮೀ ೨ (೧೨೦ ಚದರ ಮೈಲಿ)) ಮತ್ತು ವಯನಾಡ್ ವನ್ಯಜೀವಿ ಅಭಯಾರಣ್ಯ (೩೪೪ ಕಿಮೀ ೨ (೧೩೩ ಚದರ ಮೈಲಿ)), ಇದು ಒಟ್ಟಿಗೆ ದಕ್ಷಿಣ ಭಾರತದ , ೨,೧೮೩ ಕಿಮೀ ೨ (೮೪೩ ಚದರ ಮೈಲಿ) ಮೊತ್ತದ ರಕ್ಷಿತ ಪ್ರದೇಶವಾಗಿ ರೂಪಿಸುತ್ತದೆ. ಇತಿಹಾಸ ಉದ್ಯಾನವನ ತನ್ನ ಹೆಸರನ್ನು ನಾಗಾ ಹೊಳೆಗಳು ಉಲ್ಲೇಖಿಸಿ, ಪಡೆಯಲಾಗಿದೆ ಇದರ ಅರ್ಥ ಹಾವು ಮತ್ತು ಹೊಳೆ ಎಂದಾಗಿದೆ. ಪಾರ್ಕ್ ಒಡೆಯರ್ ರಾಜವಂಶದ ರಾಜರು, ಮೈಸೂರು ಕಿಂಗ್ಡಮ್ ಮಾಜಿ ಆಡಳಿತಗಾರರ ವಿಶೇಷ ಬೇಟೆಯ ಮೀಸಲು ಜಾಗ ಆಗಿತ್ತು. ಇದನ್ನು ಒಂದು ವನ್ಯಜೀವಿಗಳ ಅಭಯಾರಣ್ಯ ಎಂದು ೧೯೯೫ ರಲ್ಲಿ ಸ್ಥಾಪಿಸಲಾಯಿತು ಮತ್ತು ಅದರ ಪ್ರದೇಶದಲ್ಲಿ ೬೪೩.೩೯ ಕಿಮೀ (೩೯೯.೭೮ ಮೈಲಿ) ಗೆ ಹೆಚ್ಚಿಸಲಾಗಿದೆ. ರಾಷ್ಟ್ರೀಯ ಪಾರ್ಕ್ ೧೯೮೮ ರಲ್ಲಿ ಮತ್ತು ೧೯೯೯ ರಲ್ಲಿ ಹುಲಿ ಮೀಸಲು ಘೋಷಿಸಲಾಯಿತು ಬೆಂಗಳೂರಿನಿಂದ ೨೩೬ ಕಿಲೋಮೀಟರ್ ಹಾಗೂ ಮೈಸೂರಿನಿಂದ ೯೬ ಕಿಲೋಮೀಟರ್ ದೂರವಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಕರ್ನಾಟಕದ ಅತ್ಯಂತ ಸುಂದರ ಮತ್ತು ದಟ್ಟವಾದ ಅರಣ್ಯಗಳಲ್ಲಿ ಒಂದಾಗಿದೆ. ದಟ್ಟ ಹಸಿರು ವರ್ಣದಿಂದ ಕಂಗೊಳಿಸುವ ಬೆಟ್ಟ, ಗುಡ್ಡ, ಕಣಿವೆಗಳಿಂದ ಮತ್ತು ತೇಗ, ಗಂಧ, ಬೀಟೆ, ಸಿಲ್ವರ್ ಓಕ್ ಮುಂತಾದ ಅಮೂಲ್ಯ ವೃಕ್ಷಗಳಿಂದ ಈ ಅರಣ್ಯ ನಳನಳಿಸುತ್ತಿದೆ. ವಿನಾಶದ ಅಂಚಿನಲ್ಲಿರುವ ಅನೇಕ ಪ್ರಾಣಿ, ಪಕ್ಷಿ ಮತ್ತು ಸಸ್ಯ ಪ್ರಭೇದಗಳನ್ನು ಈ ಕಾಡುಗಳು ಪೋಷಿಸುತ್ತಿವೆ. ಭಾರತದ ರಾಷ್ಟ್ರೀಯ ಪ್ರಾಣಿಯಾದ ಹುಲಿ ಮತ್ತು ರಾಷ್ಟ್ರಪಕ್ಷಿ ನವಿಲುಗಳು ಇಲ್ಲಿ ಸುರಕ್ಷಿತವಾಗಿವೆ. ೫೧೧ ಚದರ ಕಿ.ಮೀ.ವಿಸ್ತೀರ್ಣದಲ್ಲಿ ಹರಡಿರುವ ಈ ಕಾಡು ಜಿಂಕೆ, ಕಾಡು ಕುರಿ(Barking deer) ಕರಡಿ, ಚಿರತೆ, ಆನೆ, ಕಾಡುಪಾಪ, ನೀರುನಾಯಿ, ಮೊಸಳೆ, ಹೆಬ್ಬಾವು, ಮರಕುಟುಕ, ಗ್ರೇಟ್ ಇಂಡಿಯನ್ ಹಾರ್ನ್‌ಬಿಲ್, ಗಿಡುಗ, ಹದ್ದು, ಡೇಗೆ, ಪ್ಯಾಂಗೋಲಿನ್, ಹಾರುವ ಅಳಿಲುಗಳಿಗೆ ತಾಣವಾಗಿದೆ. ಜೇನು ಕುರುಬರು,ಬೆಟ್ಟ ಕುರುಬರು ಹಾಗೂ ಹಕ್ಕಿಪಿಕ್ಕಿಗಳ ನೆಲೆವೀಡು ಕೂಡಾ ಆಗಿದೆ. ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ವಿಶಾಲವಾಗಿ ಹಬ್ಬಿರುವ ಈ ಕಾಡುಗಳು ಕರ್ನಾಟಕ,ಭಾರತವೇ ಅಲ್ಲದೆ ಇಡೀ ವಿಶ್ವದಲ್ಲೇ ಅತ್ಯಂತ ವಿಶೇಷ ಜೀವಿ ವೈವಿಧ್ಯಗಳನ್ನು ಪೋಷಿಸುತ್ತಿವೆ. ನಾಗರಹೊಳೆ, ವೈನಾಡು, ಬಂಡೀಪುರ ಮತ್ತು ಮುದುಮಲೈ ಕಾಡುಗಳನ್ನು ಒಂದು ಸಂರಕ್ಷಿತ ವಲಯವನ್ನಾಗಿ ಗುರುತಿಸಲಾಗಿದೆ. ಕಬಿನಿ, ಲಕ್ಷ್ಮಣ ತೀರ್ಥ, ಮತ್ತು ನಾಗರಹೊಳೆಗಳು ಇಲ್ಲಿಯ ಪ್ರಮುಖ ನದಿಗಳು. 'ನಾಗರ' ಎಂದರೆ ಹಾವಿನ ರೀತಿಯಲ್ಲಿ ಹರಿಯುವ ನದಿ, ತೊರೆಗಳು ಇಲ್ಲಿ ಹರಿಯುವುದರಿಂದ ನಮ್ಮ ಜನಪದರು ಈ ಕಾಡುಗಳನ್ನು 'ನಾಗರಹೊಳೆ' ಎಂದರು. ಈ ನದಿಗಳು ಹಲವಾರು ಸುಂದರ ಜಲಪಾತಗಳನ್ನೂ ಸೃಷ್ಟಿಸಿವೆ. ಉಲ್ಲೇಖಗಳು ಪ್ರವಾಸೋದ್ಯಮ ಮೈಸೂರು ಭಾರತದ ರಾಷ್ಟ್ರೀಯ ಉದ್ಯಾನಗಳು
3720
https://kn.wikipedia.org/wiki/%E0%B2%B2%E0%B2%82%E0%B2%A1%E0%B2%A8%E0%B3%8D
ಲಂಡನ್
ಲಂಡನ್ ಯುನೈಟೆಡ್ ಕಿಂಗ್‌ಡಮ್ ದೇಶದ ರಾಜಧಾನಿ ಮತ್ತು ಯುರೋಪಿಯನ್ ಒಕ್ಕೂಟದ ಅತ್ಯಂತ ದೊಡ್ಡ ನಗರ. ಈ ನಗರವು ವಿಶ್ವದ ಪ್ರಮುಖ ವ್ಯಾಪಾರ, ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳಲ್ಲಿ ಒಂದಾಗಿದೆ. ಉಲ್ಲೇಖಗಳು ಯುರೋಪ್ ಖಂಡದ ರಾಜಧಾನಿ ನಗರಗಳು ಯುನೈಟೆಡ್ ಕಿಂಗ್‍ಡಮ್ ಯುನೈಟೆಡ ಕಿಂಗಡಮ ದಲ್ಲಿ ಶೆಕ್ಸ್ಪಿಯರ್ ಮ್ತ್ತು ಇತರ ಕವಿಗಳು ಪ್ರಮುಖರಾಗಿದ್ದಾರೆ
3721
https://kn.wikipedia.org/wiki/%E0%B2%85%E0%B2%B2%E0%B3%8D%20%E0%B2%95%E0%B3%88%E0%B2%A6%E0%B2%BE
ಅಲ್ ಕೈದಾ
ಅಲ್ ಕೈದಾ ಒಂದು ಅಂತರರಾಷ್ಟ್ರೀಯ ಸುನ್ನಿ ಇಸ್ಲಾಂ ಧಾರ್ಮಿಕ ಉಗ್ರಗಾಮಿ ಸಂಘಟನೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ಷೋಭೆಯುಂಟುಮಾಡುತ್ತಿರುವ ಪ್ರಮುಖ ಭಯೋತ್ಪಾದಕ ಸಂಘಟನೆಯಾಗಿದೆ. ಇದು ಸುಮಾರು ೧೮೮೮ - ೧೯೯೦ರ ಮಧ್ಯ ಸ್ಥಾಪನೆಗೊಂಡಿತು. ಇದು ಸೆಪ್ಟೆಂಬರ್ ೧೧ರ ದಾಳಿಗಳು, ‌ಲಂಡನ್ನಿನ ಜುಲೈ ೭, ೨೦೦೫ರ ಸ್ಪೋಟಗಳು ಮತ್ತಿತರ ಹಲವು ವಿಧ್ವಂಸಕಾರಿ ಚಟುವಟಿಕೆಗಳಿಗೆ ಕಾರಣವಾಗಿರುವ ಒಂದು ಭಯೋತ್ಪಾದಕ ಸಂಘಟನೆ. ಅಮೆರಿಕ, ಬ್ರಿಟನ್ನಂಥ ಪಾಶ್ವಾತ್ಯ ರಾಷ್ಟ್ರಗಳು ಅಲ್ ಖೈದಾ ಸಂಘಟನೆ ಮತ್ತು ಅದರ ಸದಸ್ಯಬಲವನ್ನು ಬಗ್ಗು ಬಡಿಯಲು ಸಮರ ತಂತ್ರಗಳನ್ನು ಹೂಡುತ್ತಿದ್ದರೂ ಆ ಸಂಘಟನೆ ಮತ್ತಷ್ಟು ಶಕ್ತಿಶಾಲಿ ಆಗುತ್ತಿದೆ ಎನ್ನುವುದಕ್ಕೆ ಅಲ್ಖೈದಾ ಮುಖ್ಯಸ್ಥ ಬಿನ್ಲಾಡನ್ ತಲೆಯ ಮೌಲ್ಯ ದುಪ್ಪಟ್ಟಾಗಿರುವುದೇ ಸಾಕ್ಷಿ. ಪ್ರಪಂಚವನ್ನೇ ನೆಲೆಯನ್ನಾಗಿ ಮಾಡಿಕೊಂಡಿರುವ ಈ ಭಯೋತ್ಪಾದಕ ಸಂಘಟನೆ ತನ್ನ ಹಿಂಸಾಕೃತ್ಯಗಳಿಂದ ಪ್ರಪಂಚವನ್ನೆ ನಡುಗಿಸುತ್ತಿದೆ. ಅಲ್ ಖೈದಾ ಎಂದರೆ ಅರೆಬಿಕ್ ಭಾಷೆಯಲ್ಲಿ ನೆಲೆ ಎಂದರ್ಥ. ಸುನ್ನಿ ಪಂಗಡಕ್ಕೆ ಸೇರಿದ ಮೂಲಭೂತವಾದಿಗಳ ಜಿಹಾದಿ ಸಂಘಟನೆ ಇದು. 1989ರ ಆಸುಪಾಸಿನಲ್ಲಿ ಆಫ್ಘಾನಿಸ್ತಾನದಲ್ಲಿ ಸೋವಿಯತ್ ಒಕ್ಕೂಟದ ಅಸ್ತಿತ್ವವನ್ನು ಕೊನೆಗಾಣಿಸಲು ಒಸಾಮ ಬಿನ್ ಲಾಡೆನ್ ಮತ್ತು ಇತರರು ಸೇರಿ ಇದನ್ನು ಕಟ್ಟಿದರು. ಆದರೆ ಮತ್ತಷ್ಟು ಅದರ ಮೂಲ ಹುಡುಕುತ್ತ ಹೋದರೆ ಇದರ ಬೇರು ಇರುವುದು 1978ರಲ್ಲಿ ಸೋವಿಯತ್ ಒಕ್ಕೂಟದ ಪ್ರಾಬಲ್ಯ ಮುರಿಯಲು ಅಮೆರಿಕ ಮತ್ತು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆಗಳು ಆಫ್ಘಾನಿಸ್ತಾನದ ಮುಜಾಹಿದ್ದೀನ್ಗಳಿಗೆ ನೆರವು ನೀಡಿದವು. ಇದಕ್ಕೆ ಇಟ್ಟಹೆಸರು ಆಪರೇಷನ್ ಸೈಕ್ಲೋನ್. ಶೀತಲ ಸಮರದ ಆ ಸಂದರ್ಭದಲ್ಲಿ ಅಮೆರಿಕ ಸಿಐಎ ಸ್ವತಃ ಲಾಡೆನ್ಗೆ ಹಣಕಾಸಿನ ನೆರವು ನೀಡಿತ್ತು. ಸೋವಿಯತ್ ಒಕ್ಕೂಟ ತನ್ನ ಪಡೆಗಳನ್ನು ಹಿಂತೆಗೆದುಕೊಂಡಾಗ ಅಲ್ ಖೈದಾದ ಗೆರಿಲ್ಲಾ ಪಡೆಗಳನ್ನು ಕಾಡಿದ್ದು ನಿರುದ್ಯೋಗ. ಆಗ ಜಿಹಾದ್ನತ್ತ ಅಲ್ಖೈದಾ ಗಮನ ಹರಿಸಿತು. ಮುಸ್ಲಿಂ ರಾಷ್ಟ್ರಗಳಲ್ಲಿ ವಿದೇಶಿ ರಾಷ್ಟ್ರಗಳ ಪ್ರಭಾವವನ್ನು ಕೊನೆಗಾಣಿಸುವುದು, ಅಮೆರಿಕ, ಇಸ್ರೇಲ್ ನಂಥ ರಾಷ್ಟ್ರಗಳನ್ನು ನಾಶ ಮಾಡಿ ಜಾಗತಿಕವಾಗಿ ಹೊಸ ಇಸ್ಲಾಂ ವ್ಯವಸ್ಥೆಯನ್ನು ಅಸ್ತಿತ್ವಕ್ಕೆ ತರುವುದು ಅದರ ಈಗಿನ ಗುರಿ. ಅಮೆರಿಕದ ಕೈಗೂಸಾದ ಅಲ್ ಖೈದಾ ಅದರ ವಿರುದ್ಧವೇ ತಿರುಗಿ ಬಿದ್ದಿದ್ದು ಪರಿಸ್ಥಿತಿಯ ವಿಪರ್ಯಾಸ. ಉಗ್ರಗಾಮಿಗಳಿಗೆ ಪ್ರಚೋದನೆ ನೀಡಿದ ರಾಷ್ಟ್ರಗಳು ಮತ್ತು ವ್ಯಕ್ತಿಗಳಿಗೆ ಅದೇ ವ್ಯವಸ್ಥೆ ತಿರುಗೇಟು ನೀಡುತ್ತಿರುವುದು ಐತಿಹಾಸಿಕ ಮತ್ತು ಪ್ರಚಲಿತ ಸತ್ಯ. ಪಾಕಿಸ್ತಾನ ಇದಕ್ಕೊಂದು ಹಾಲಿ ನಿದರ್ಶನ. ತಾಲಿಬಾನ್ಗಳ ಮೂಲಕ ಆಫ್ಘಾನಿಸ್ತಾನವನ್ನು ತನ್ನ ಭದ್ರನೆಲೆ ಮಾಡಿಕೊಂಡಿದ್ದ ಅಲ್ ಖೈದಾ ಈಗ ಎಲ್ಲ ಮುಸ್ಲಿಂ ರಾಷ್ಟ್ರಗಳಲ್ಲಿ ಸಕ್ರಿಯವಾಗಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳು, ಉತ್ತರ ಆಫ್ರಿಕಾದ ರಾಷ್ಟ್ರಗಳಲ್ಲಿ ವಿವಿಧ ಸಂಘಟನೆಗಳ ಹೆಸರಿನಲ್ಲಿ ಅಲ್ ಖೈದಾ ಈಗಾಗಲೇ ಅಸ್ತಿತ್ವವನ್ನು ಹೊಂದಿದೆ. ಧರ್ಮಕ್ಕಾಗಿ ಪ್ರಾಣ ಕೊಡುವ ವ್ಯಕ್ತಿಗಳು ಅಲ್ ಖೈದಾ ಹೋರಾಟಕ್ಕೆ ಜೀವತುಂಬುತ್ತಲೇ ಇದ್ದಾರೆ. ಮೊದಲು ಸಾಮಾನ್ಯ ಜನರು, ನಿರುದ್ಯೋಗಿಗಳು ಹಣಕ್ಕಾಗಿ ಈ ಸಂಘಟನೆ ಸೇರಿಕೊಂಡು ಬಂದೂಕು ಹಿಡಿದರೆ ಈಗ ಸುಶಿಕ್ಷಿತರೂ ಅಲ್ ಖೈದಾ ಜಾಡಿನಲ್ಲಿ ಸಾಗುತ್ತಿರುವುದು ಘೋರ ದುರಂತ 2000 ದ ಸೆಪ್ಟೆಂಬರ್ 11 ದಾಳಿಯ ಬಳಿಕ. ಅಮೆರಿಕ, ಆಫ್ಘಾನಿಸ್ತಾನದ ಮೇಲೆ ನಡೆಸಿದ ಆಕ್ರಮಣದಿಂದಾಗಿ ಛಿದ್ರವಾಗಿದ್ದ ಅಲ್ ಖೈದಾ ಸಂಘಟನೆ ಈಗ ಮತ್ತೆ ಚಿಗುರಿಕೊಂಡಿದೆ. ಬ್ರಿಟನ್ನಿನಲ್ಲಿ ನಡೆದ ವಿಧ್ವಂಸಕ ಕೃತ್ಯಗಳು ಮತ್ತೊಮ್ಮೆ ಅಲ್ ಖೈದಾದ ಪ್ರಬಲ ಅಸ್ತಿತ್ವವನ್ನು ಸಾಬೀತು ಪಡಿಸಿವೆ. ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಗಡಿಯಲ್ಲಿರುವ ರಕ್ಷಣೆಯನ್ನು ದುರುಪಯೋಗ ಪಡಿಸಿಕೊಂಡಿರುವ ಅಲ್ ಖೈದಾ ಶಕ್ತಿಯೊಂದಿಗೆ ಇನ್ನಷ್ಟು ದಾಳಿಗಳಿಗೆ ಸಜ್ಜಾಗುತ್ತಿದೆ ಎಂದು ಅಮೆರಿಕದ ಭಯೋತ್ಪಾದನಾ ನಿಗ್ರಹ ದಳದ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇತ್ತೀಚಿನ ವಿದ್ಯಮಾನಗಳು ಈ ಅವ್ಯಕ್ತ ಭಯವನ್ನು ಸಮರ್ಥಿಸಿವೆ. ವಿಶ್ವ ವಾಣಿಜ್ಯ ಕೇಂದ್ರದ ಎರಡು ಗೋಪುರಗಳ ಮೇಲೆ ನಡೆಸಿದ ಧಾಳಿಯಿಂದ ಅಲ್ ಖೈದಾ ತನ್ನದೇ ಚರಮಗೀತೆ ಹಾಡಿತು ಎಂದು ಭಾವಿಸಲಾಗಿದೆ. ಈ ಧಾಳಿಯಿಂದ ಕಂಗೆಟ್ಟ ಅಮೆರಿಕ ಅಲ್ ಖೈದಾದ ಕೇಂದ್ರ ಸ್ಥಳವೆಂದು ಭಾವಿಸಲಾದ ಆಫ್ಘಾನಿಸ್ತಾನದ ಮೇಲೆ ಆಕ್ರಮಣ ನಡೆಸಿತು. ತಾಲಿಬಾನ್ಗಳನ್ನು ಹಿಮ್ಮೆಟ್ಟಿಸುವಲ್ಲಿ ಅಮೆರಿಕ ಯಶಸ್ವಿಯಾದರೂ ಅವರನ್ನು ಪುರ್ತಿ ಚಿವುಟಿಹಾಕಲು ಸಾಧ್ಯವಾಗಲಿಲ್ಲ. ಅದಕ್ಕಿಂತ ದೊಡ್ಡ ವೈಫಲ್ಯವೆಂದರೆ ಅಲ್ ಖೈದಾದ ಪರಮೋಚ್ಚ ನಾಯಕ ಒಸಾಮ ಬಿನ್ ಲಾಡೆನ್ನನ್ನು ಹಿಡಿಯಲು ಅಥವಾ ಕೊಲ್ಲಲು ಅಮೆರಿಕ ಮಾಡಿದ ಎಲ್ಲ ಸಮರ ತಂತ್ರವೂ ವಿಫಲವಾಯಿತು. ಲಾಡೆನ್ ಸತ್ತ ವದಂತಿಗಳಿಂದಷ್ಟೇ ಅಮೆರಿಕ ತೃಪ್ತಿ ಪಡಬೇಕಾಯಿತು. ಸತತ ಆರು ವರ್ಷಗಳ ಕಾಲ ಆಫ್ಘಾನಿಸ್ತಾನದ ಮೇಲೆ ಬಾಂಬ್ಗಳ ಸುರಿಮಳೆ ಸುರಿಸಿದರೂ ಅಲ್ ಖೈದಾ ಬಗ್ಗಿದಂತೆ ಕಾಣುತ್ತಿಲ್ಲ. ಬದಲಾಗಿ ಹೊಸ ತಂತ್ರಗಳು, ಊಹಿಸಲೂ ಅಸಾಧ್ಯವಾದ ವ್ಯಕ್ತಿಗಳ ನೆರವಿ ನೊಂದಿಗೆ ಅಲ್ ಖೈದಾ ದಾಳಿಗಳಿಗೆ ಮುಂದಾಗಿದೆ. ಅತೃಪ್ತ ಜನಸಾಮಾನ್ಯರಿಗಿಂತ ಮೇಧಾವಿಗಳ ದೊಡ್ಡ ಪಡೆ ಅಲ್ ಖೈದಾದ ಬತ್ತಳಿಕೆಯಲ್ಲಿರುವುದೇ ದೊಡ್ಡ ಆತಂಕದ ವಿಷಯ. ಇರಾಕ್ ಮೇಲೆ ನಡೆದ ಅಮೆರಿಕದ ಧಾಳಿ ಅಲ್ ಖೈದಾಕ್ಕೆ ಪರೋಕ್ಷ ಪರವಾನಗಿ ಬಂದಂತಿದೆ. ಪಾಶ್ಚಿಮಾತ್ಯ ರಾಷ್ಟ್ರಗಳ ಬಗ್ಗೆ ಇಸ್ಲಾಂ ಧರ್ಮದ ಒಂದು ವರ್ಗದಲ್ಲಿರುವ ದ್ವೇಷವನ್ನು ಮೂಲಭೂತವಾದಿ ಧಾರ್ಮಿಕ ಗುರುಗಳು ಚೆನ್ನಾಗಿಯೇ ಬಳಸಿಕೊಳ್ಳುತ್ತಿದ್ದಾರೆ. ಅಲ್ ಖೈದಾ ದಿನದಿಂದ ದಿನಕ್ಕೆ ಪ್ರಬಲವಾಗುತ್ತಿರುವುದು ಪಾಶ್ಚಿಮಾತ್ಯ ರಾಷ್ಟ್ರಗಳ ತಪ್ಪುಗಳಿಂದಲೇ ಎನ್ನಬಹುದು. ಹಿಂದಿನ ವರ್ಷಗಳಿಗಿಂತ ಅಲ್ ಖೈದಾ ಬಲಗೊಳ್ಳುತ್ತಲೇ ಸಾಗುತ್ತಿದೆ. 2001 ರಿಂದೀಚೆಗೆ ಆ ಸಂಘಟನೆಯ ಉಗ್ರರು ಹೆಚ್ಚು ಸಂಘಟಿತರಾಗಿದ್ದಾರೆ. ಅಮೆರಿಕ ಮತ್ತು ಅದರ ಮಿತ್ರ ಪಕ್ಷಗಳು ತಮ್ಮ ರಕ್ಷಣೆಯನ್ನು ಹೇಗೆ ಬಲಗೊಳಿಸುತ್ತಿವೆಯೋ ಹಾಗೆಯೇ ಅಲ್ ಖೈದಾ ಸಂಘಟನೆಯೂ ರಕ್ಷಣೆಯನ್ನು ಬಿಗಿಗೊಳಿಸುವುದರೊಂದಿಗೆ ತನ್ನ ಬಲವನ್ನೂ ಹೆಚ್ಚಿಸಿಕೊಳ್ಳುತ್ತಿದೆ ಎಂದು ಅಮೆರಿಕದ ಭಯೊತ್ಪಾದನಾ ನಿಗ್ರಹ ತಜ್ಞರ ವರದಿಯಲ್ಲಿ ಹೇಳಲಾಗಿದೆ. ಇತ್ತೀಚೆಗೆ ಅಲ್ ಖೈದಾ ಪರಮೋಚ್ಚ ನಾಯಕ ಒಸಾಮ ಬಿನ್ ಲಾಡೆನ್ ಸಾರ್ವಜನಿಕ ವಾಗಿ ಯಾವುದೇ ಹೇಳಿಕೆ ನೀಡಿಲ್ಲದಿದ್ದರೂ ಅಲ್ ಖೈದಾದ ಯೋಜನೆಯಲ್ಲಿ ಈತ ಪಾತ್ರವಹಿಸುತ್ತಿದ್ದಾನೆ ಎಂದು ಬೇಹುಗಾರಿಕೆ ಸಂಸ್ಥೆಗಳು ಹೇಳಿವೆ. ಇದಕ್ಕಾಗಿ ಅಮೆರಿಕ ಈತನ ತಲೆಯ ಮೌಲ್ಯವನ್ನು ದ್ವಿಗುಣಗೊಳಿಸಿ ಐದು ಕೋಟಿ ಡಾಲರ್ಗೆ ಹೆಚ್ಚಿಸಿದೆ. ಆದರೆ ಅಲ್ಖೈದಾ ತನ್ನ ಆರ್ಥಿಕ ಜೀವನಾಡಿಗಳನ್ನು ಚುರುಕುಗೊಳಿಸಿ, ಜಾಗತಿಕ ಕಾರ್ಯಾಚರಣೆಗೆ ಸಜ್ಜಾಗಿದೆ. ಆಫ್ಘಾನಿಸ್ತಾನ ಮತ್ತು ಇರಾಕ್ಗಳಲ್ಲಿ ದಿನಂಪ್ರತಿ ತನ್ನ ಅಸ್ತಿತ್ವವನ್ನು ಸಾಬೀತು ಪಡಿಸುತ್ತಲೇ ಅಲ್ ಖೈದಾ, ಯುರೋಪ್ ಮತ್ತು ಮುಸ್ಲಿಂ ವಿರೋಧಿ ರಾಷ್ಟ್ರಗಳ ಮೇಲೆರಗಲು ಯೋಜನೆ ರೂಪಿಸುತ್ತಲೇ ಇದೆ. ಗೆರಿಲ್ಲಾ ಸಮರ ತಂತ್ರ ಅಲ್ಖೈದಾದ ದೊಡ್ಡ ಶಕ್ತಿ. ಉಗ್ರರನ್ನು ಎದುರಿಸಲು ಎಷ್ಟೇ ಸಿದ್ಧತೆ ನಡೆಸಿದರೂ ಊಹಿಸಿದ ವಿಧಾನದಲ್ಲಿ ಮೇಲೆರಗುವುದು ಅದರ ತಂತ್ರ. ಹೀಗಾಗಿ ಅಮೆರಿಕದಂಥ ಶಿಸ್ತುಬದ್ಧ ರಾಷ್ಟ್ರವೂ ಅಲ್ ಖೈದಾ ದಾಳಿಯನ್ನು ಎದುರಿಸಲು ವಿಫಲವಾಗುತ್ತಿದೆ. ಏಷ್ಯನ್ ಟೈಮ್ಸ್ ಆನ್ಲೈನ್ ಪತ್ರಿಕೆಯ ವರದಿಯ ಪ್ರಕಾರ ಅಲ್ ಖೈದಾ ಕ್ಷಿಪಣಿ ಮತ್ತು ರಾಕೆಟ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಒಸಾಮ ಬಿನ್ ಲಾಡೆನ್ ಬಳಿ ಪರಮಾಣು ತಂತ್ರಜ್ಞಾನ ಇರುವುದು ಈಗ ರಹಸ್ಯವಾಗಿ ಉಳಿದಿಲ್ಲ. ಪರಮಾಣುಬಾಂಬ್ಗಳನ್ನು ಕೊಂಡೊಯ್ಯಬಲ್ಲ ಕ್ಷಿಪಣಿಗಳನ್ನೂ ಅಲ್ ಖೈದಾ ಹೊಂದಿದೆ ಎಂದರೆ ಅದರ ಶಕ್ತಿಯ ಕಲ್ಪನೆ ಮಾಡಬಹುದು. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ಇಸ್ಲಾಮ್ ಮೂಲಭೂತವಾದಿ ಸಂಘಟನೆಗಳು ಭಯೋತ್ಪಾದನೆ
3733
https://kn.wikipedia.org/wiki/%E0%B2%95%E0%B2%A8%E0%B3%8D%E0%B2%AF%E0%B2%BE%E0%B2%95%E0%B3%81%E0%B2%AE%E0%B2%BE%E0%B2%B0%E0%B2%BF
ಕನ್ಯಾಕುಮಾರಿ
ಕನ್ಯಾಕುಮಾರಿ ದಕ್ಷಿಣ ಭಾರತದಲ್ಲಿ ಮುಖ್ಯ ಭೂಮಿಯ ತುತ್ತ ತುದಿಯಲ್ಲಿರುವ ಊರು. 'ಕನ್ಯಾಕುಮಾರಿ' ಎಂಬ ಹೆಸರು ಪೌರಾಣಿಕ ಕಥೆಯಿಂದ ಬಂದದ್ದು. ಇದಕ್ಕೆ ಕೇಪ್ ಕೊಮೆರಿನ್ ಎಂಬ ಹೆಸರೂ ಇದ್ದಿತು.ಕೇಪ್ ಕಾಮೊರಿನ್ ಎಂದೇ ಹೆಸರುವಾಸಿಯಾದ ಕನ್ಯಾಕುಮಾರಿ ಭಾರತದ ತಮಿಳುನಾಡಿನಲ್ಲಿದೆ. ಭಾರತದ ದಕ್ಷಿಣದ ತುತ್ತ ತುದಿಯಲ್ಲಿ ಕನ್ಯಾಕುಮಾರಿ ಇದೆ. ಕನ್ಯಾಕುಮಾರಿಯು ಹಿಂದೂ ಮಹಾಸಾಗರ, ಬಂಗಾಳ ಕೊಲ್ಲಿ ಮತ್ತು ಅರಬ್ಭಿ ಸಮುದ್ರ ಸೇರುವ ಸ್ಥಳದಲ್ಲಿ ಇದೆ. ಇದರ ವಾಯುವ್ಯ ಮತ್ತು ಪಶ್ಚಿಮ ಭಾಗದಲ್ಲಿ ಕೇರಳ ರಾಜ್ಯವಿದ್ದು, ತಿರುನೆಲ್ವೇಲಿ ಜಿಲ್ಲೆಯು ಇದರ ಉತ್ತರ ಮತ್ತು ಪೂರ್ವ ಭಾಗದಲ್ಲಿ ಬರುತ್ತದೆ. ಕೇರಳದ ರಾಜಧಾನಿ ತಿರುವನಂತಪುರಮ್ ಕನ್ಯಾಕುಮಾರಿಯಿಂದ 85 ಕಿ.ಮೀ ದೂರದಲ್ಲಿದೆ. ಕನ್ಯಕುಮಾರಿಯು ಹುಣ್ಣಿಮೆಯ ದಿನ ಕಣ್ಣು ಕೋರೈಸುವ ಸೂರ್ಯೋದಯ ಮತ್ತು ಸೂರ್ಯಾಸ್ತಕ್ಕೆ ಹೆಸರುವಾಸಿಯಾಗಿದೆ. ಕನ್ಯಾಕುಮಾರಿ ಭಾರತದ ಪ್ರಸಿದ್ಧ ಯಾತ್ರಸ್ಥಳ. ಪತ್ಮಾಭಪುರಮ್ ಅರಮನೆ ಸ್ವಾಮಿ ವಿವೇಕಾನಂದರು ತ್ಸುನಾಮಿ ಉಲ್ಲೇಖನ ಭೂಗೋಳ ಪ್ರವಾಸೋದ್ಯಮ
3734
https://kn.wikipedia.org/wiki/%E0%B2%AA%E0%B3%8D%E0%B2%B0%E0%B3%87%E0%B2%AE%E0%B2%BF%E0%B2%97%E0%B2%B3%20%E0%B2%A6%E0%B2%BF%E0%B2%A8%E0%B2%BE%E0%B2%9A%E0%B2%B0%E0%B2%A3%E0%B3%86
ಪ್ರೇಮಿಗಳ ದಿನಾಚರಣೆ
ಪ್ರೇಮಿಗಳ ದಿನಾಚರಣೆ ವಿಶ್ವದೆಲ್ಲೆಡೆ ಆಚರಿಸಲಾಗುವ ಒಂದು ಹಬ್ಬ. ಇದನ್ನು ಪ್ರತಿ ವರ್ಷ ಫೆಬ್ರವರಿ 14ರಂದು ಆಚರಿಸುತ್ತಾರೆ. ಈ ದಿನ ಪ್ರೇಮಿಗಳು ತಮ್ಮ ಪ್ರೀತಿಯ ಸಂಕೇತವಾಗಿ ಕೆಂಪು ಬಣ್ಣದ ಬಟ್ಟೆಯನ್ನು ತೊಡುತ್ತಾರೆ. ಸಂತ ವೆಲಂಟನ್ ನ ಹೆಸರು ಈ ದಿನಕ್ಕೆ ಇಡಲಾಗಿದೆ. ಅವನು ಪ್ರೇಮಿಗಳನ್ನು ಒಂದು ಗೂಡಿಸುತ್ತಿದ್ದನು. ಮೂರನೇ ಶತಮಾನದಲ್ಲಿ ರೋಮನ್ ಸಾಮ್ರಾಜ್ಯದ ಅಡಿಯಲ್ಲಿ ಕಿರುಕುಳಕ್ಕೊಳಗಾದ ಕ್ರಿಶ್ಚಿಯನ್ನರ ಸೇವೆಗಾಗಿ ರೋಮ್ನ ಸೇಂಟ್ ವ್ಯಾಲೆಂಟೈನ್ ಜೈಲುವಾಸದ ಖಾತೆಯನ್ನು ಒಳಗೊಂಡಂತೆ ಫೆಬ್ರವರಿ 14 ಕ್ಕೆ ಸಂಬಂಧಿಸಿದ ವಿವಿಧ ವ್ಯಾಲೆಂಟೈನ್ಸ್ಗೆ ಸಂಬಂಧಿಸಿದ ಹಲವಾರು ಹುತಾತ್ಮ ಕಥೆಗಳು ಇವೆ. ಆರಂಭಿಕ ಸಂಪ್ರದಾಯದ ಪ್ರಕಾರ, ಸೇಂಟ್ ವ್ಯಾಲೆಂಟೈನ್ ಅನ್ನು ಪುನಃಸ್ಥಾಪಿಸಲಾಯಿತು. ಅವನ ಜೈಲರ್‌ನ ಕುರುಡು ಮಗಳ ದೃಷ್ಟಿ. ದಂತಕಥೆಗೆ ನಂತರದ ಹಲವಾರು ಸೇರ್ಪಡೆಗಳು ಅದನ್ನು ಪ್ರೀತಿಯ ವಿಷಯಕ್ಕೆ ಉತ್ತಮವಾಗಿ ಸಂಬಂಧಿಸಿವೆ: ದಂತಕಥೆಯ 18 ನೇ ಶತಮಾನದ ಅಲಂಕರಣವು ಅವರು ಜೈಲರ್‌ನ ಮಗಳಿಗೆ "ಯುವರ್ ವ್ಯಾಲೆಂಟೈನ್" ಗೆ ವಿದಾಯವಾಗಿ ಸಹಿ ಮಾಡಿದ ಪತ್ರವನ್ನು ಬರೆದಿದ್ದಾರೆ ಎಂದು ಹೇಳುತ್ತದೆ. ಅವನ ಮರಣದಂಡನೆ;ಮತ್ತೊಂದು ಸಂಪ್ರದಾಯವು ಸೇಂಟ್ ವ್ಯಾಲೆಂಟೈನ್ ಮದುವೆಯಾಗಲು ನಿಷೇಧಿಸಲ್ಪಟ್ಟ ಕ್ರಿಶ್ಚಿಯನ್ ಸೈನಿಕರಿಗೆ ಮದುವೆಗಳನ್ನು ಮಾಡಿತು ಎಂದು ಪ್ರತಿಪಾದಿಸುತ್ತದೆ. ದಿನಾಚರಣೆಯನ್ನು ವಿರೋಧಿಸುವವರು ಬಾಹ್ಯ ಸಂಪರ್ಕಗಳು Saint Valentine's Day – BBC Who was St. Valentine? — St Peter Orthodox Christian Church The History of Valentine's Day – History.com, A&E Television Networks. Retrieved February 2, 2010. History of Valentine's Day Christianity Today International. Retrieved February 2, 2010; "Then Again Maybe Don't Be My Valentine", Ted Olsen, 2000-01-02 ಪ್ರಮುಖ ದಿನಗಳು ದಿನಾಚರಣೆಗಳು ಪ್ರೇಮಿಗಳ ದಿನ ಗುಲಾಬಿ ದಿನ ಪ್ರೀತಿ ಪ್ರಪೋಸ್ ದಿನ ಚಾಕೊಲೇಟ್ ದಿನ ಟೆಡ್ಡಿ ಡೇ ಕಿಸ್ ದಿನ ಅಪ್ಪುಗೆಯ ದಿನ
3735
https://kn.wikipedia.org/wiki/%E0%B2%B5%E0%B2%BF%E0%B2%B6%E0%B3%8D%E0%B2%B5%20%E0%B2%AE%E0%B2%B9%E0%B2%BF%E0%B2%B3%E0%B3%86%E0%B2%AF%E0%B2%B0%20%E0%B2%A6%E0%B2%BF%E0%B2%A8
ವಿಶ್ವ ಮಹಿಳೆಯರ ದಿನ
Bold text ಅಂತರಾಷ್ಟ್ರೀಯ ಮಹಿಳೆಯರ ದಿನ - ಹಿನ್ನೋಟ ಪ್ರತಿ ವರ್ಷ ಮಾರ್ಚಿ ೮ ರಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ಪೀಠಿಕೆ ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ "ಅಂತರಾಷ್ಟ್ರೀಯ ಮಹಿಳೆಯರ ದಿನ" ವನ್ನ ಆಚರಿಸುತ್ತಾರೆ. ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮಿಸಲಿರದೇ , ಅದು ರಾಷ್ತ್ಟ್ರೀಯ, ಜನಾಂಗೀಯ, ಭಾಷಾವಾರು, ಸಾಂಸ್ಕ್ರತಿಕ, ಆರ್ಥಿಕ ಅಥವಾ ರಾಜಕೀಯ ಕ್ಷೇತ್ರವಾಗಲಿ, ಎಲ್ಲಾದರಲ್ಲು ತಮ್ಮದೆ ಆದ ಛಾಪನ್ನ ಮೂಡಿಸಿದ್ದಾರೆ. ಮಹಿಳೆಯರ ಈ ಪ್ರಗತಿಯನ್ನ ಗುರುತಿಸಿ ಈ ದಿನವನ್ನು ಅವರಿಗೆ ಅರ್ಪಿಸಲಾಗಿದೆ. ೧೯೭೫ರ "ಅಂತರಾಷ್ಟ್ರೀಯ ಮಹಿಳೆಯರ ದಿನ"ದ ಸಮಯದಲ್ಲಿ, ಮಾರ್ಚ್ ೮ ರಂದು ಸಂಯುಕ್ತ ರಾಷ್ಟ್ರಗಳು ಮಹಿಳಾ ದಿನವನ್ನ ಆಚರಿಸಲು ಆರಂಭಿಸಿದವು. ಎರಡು ವರ್ಷದ ನಂತರ,೧೯೭೭ ರಲ್ಲಿ, "ದಿ ಜನರಲ್ ಅಸ್ಸೆಂಬ್ಲಿ" ಮಹಿಳೆಯರ ಹಕ್ಕು ಮತ್ತು ಶಾಂತಿ ಸ್ಥಾಪನೆಯನ್ನು ಆಯಾ ದೇಶದ ಸದಸ್ಯರು ಗಮನಿಸಿ ತಮ್ಮ ದೇಶದ ಐತಿಹಾಸಿಕ ಮತ್ತು ರಾಷ್ಟ್ರೀಯ ಸಂಪ್ರದಾಯಕ್ಕೆ ತಕ್ಕಂತೆ ಅಳವಡಿಸಿಕೊಳ್ಳುವಂತೆ ಕರೆ ನೀಡಿತು. ಹೀಗೆ ಕರೆನೀಡುವಾಗ ಮಹಿಳೆಯ ಪಾತ್ರ ಹಾಗು ಅವರ ಮೇಲೆ ನಡೆಯುತ್ತಿರುವ ಪಕ್ಷಪಾತವನ್ನು ಗಮನಿಸಿ ಅವರಿಗೆ ಸ್ಪರ್ಧಿಸುವ ಪೂರ್ತಿ ಅವಕಾಶವನ್ನು ನೀಡುವಂತೆ ಘೋಷಿಸಿತು. ಇತಿಹಾಸ "ಅಂತರಾಷ್ಟ್ರೀಯ ಮಹಿಳೆಯರ ದಿನ" ಮೊದಲ ಬಾರಿಗೆ ಹೊರಹೊಮ್ಮಿದ್ದು ಕೂಲಿ ಚಳುವಳಿ(ಲೇಬರ್ ಮೊವ್ಮೆಂಟ್ಸ್) ಚಟುವಟಿಕೆ ಉತ್ತರ ಅಮೆರಿಕಮತ್ತು ಯೂರೋಪ್ ಪ್ರದೇಶಗಳಲ್ಲಿ ನಡೆದಾಗ. ೧೯೦೯: ಸಂಯುಕ್ತ ಸಂಸ್ಥಾನಗಳಲ್ಲಿ ಮೊದಲ "ಅಂತ ರಾಷ್ಟ್ರೀಯ ಮಹಿಳೆಯರ ದಿನ"ಫೆಬ್ರವರಿ ೨೮ ರಂದು ಕಂಡು ಬಂತು. ಅಮೇರಿಕಾದ ಸಾಮಾಜವಾದಿ ಪಕ್ಷ ಈ ದಿನವನ್ನ ಕೆಲಸದ ಪರಿಸ್ಥಿತಿಯನ್ನ ವಿರೋಧಿಸಿ ನ್ಯುಯಾರ್ಕ್ ನಗರದಲ್ಲಿ ನಡೆದ "ಸರ್ಕಾರಿ ಕಾರ್ಮಿಕರ ಚಳುವಳಿ" ಯಲ್ಲಿ ಪ್ರತಿಭಟಿಸಿದ ಮಹಿಳೆಯರಿಗೆ ಅರ್ಪಿಸಲಾರಿತು. ೧೯೧೦: ಅಂತರಾಷ್ಟ್ರೀಯ ಸಮಾಜವಾದಿ ಕೊಪೆಂಹಗೆನ್ ನಲ್ಲಿ ನಡೆದ ಚರ್ಚೆಯಲ್ಲಿ ಅದಿಷ್ಟಿತಗೊಳಿಸಲಾಯಿತು. ಈ ಪ್ರಸ್ಥಾಪವನ್ನು ಅವಿರೋಧವಾಗಿ ೧೦೦ ಮಹಿಳೆಯರು ೧೭ ದೇಶಗಳಿಂದ ಸಹಕರಿಸಿದರು, ಇದು ಫಿನ್ನಿಷ್ ಪಾರ್ಲಿಮೆಂಟ್ ಗೆ ಆಯ್ಕೆಯಾದ ಮೊದಲ ಮೂವರು ಮಹಿಳೆಯರನ್ನೂ ಸಹ ಒಳಗೊಂಡಿತ್ತು. ೧೯೧೧: ಕೊಪೆಂಹಗೆನ್ ನ ಮೊದಲ ಹೆಜ್ಜೆಯ ಫಲಿತಾಂಶವಾಗಿ, ಅಂತರಾಷ್ಟ್ರೀಯ ಮಹಿಳೆಯರ ದಿನವನ್ನ ಮೊದಲ ಬಾರಿಗೆ ಮಾರ್ಚ್ ೧೯ ರಂದು ಆಸ್ಟ್ರೇಲಿಯ,ಡೆನ್ಮಾರ್ಕ್, ಜರ್ಮನಿ ಮತ್ತು ಸ್ವಿಡ್ಜರ್ಲ್ಯಾಂಡ್ ದೇಶಗಳು ಗುರುತಿಸಿದವು. ಅಂದು ಒಂದು ಮಿಲಿಯನ್ ಗಿಂತಲು ಹೆಚ್ಹು ಮಹಿಳೆಯರು ಹಾಗು ಪುರುಷರು ಈ ಚಳುವಳಿಯಲ್ಲಿ ಭಾಗವಹಿಸಿದರು. ಇದಲ್ಲದೇ ಮತಚಲಾಯಿಸುವ ಹಕ್ಕು, ಸಾರ್ವಜನಿಕ ಕಛೇರಿ, ಮಹಿಳೆಯರಿಗೆ ಕೆಲಸ ಮಾಡುವ ಹಕ್ಕು ಹಾಗು ಉದ್ಯೋಗ ತರಬೇತಿಯನ್ನ ಜಾರಿಗೆ ತರಲು ಬೇಡಿಕೆಯಿಟ್ಟಿದ್ದಲ್ಲದೇ ಕೆಲಸದಲ್ಲಿನ ತಾರತಮ್ಯವನ್ನ ವಿರೋಧಿಸಿ ಪ್ರತಿಭಟಿಸಿದರು. ೧೯೧೩-೧೯೧೪ : ಅಂತರಾಷ್ಟ್ರೀಯ ಮಹಿಳೆಯರ ದಿನದ ಆಚರಣೆ "೧ನೇ ವಿಶ್ವ ಯುದ್ಧ"ವನ್ನ ತಡೆಗಟ್ಟುವ ಯಾಂತ್ರಿಕ ಕೌಶಲ್ಯವಾಗಿ ಮಾರ್ಪಟ್ಟಿತು. ಇದೇ ವೇಳೆಯಲ್ಲಿ ಶಾಂತಿ ಚಳುವಳಿಯ ಅಂಗವಾಗಿ ರಷ್ಯಾದ ಮಹಿಳೆಯರು ಫೆಬ್ರವರಿಯ ಕೊನೆಯವಾರದಲ್ಲಿ ವಿಶ್ವ ಮಹಿಳಾ ದಿನವನ್ನ ಆಚರಿಸಿ ಗಮನಸೆಳೆದರು. ಅತ್ತ ಯುರೋಪಿನಲ್ಲಿ ಅದೇ ಸಾಲಿನ ಮಾರ್ಚಿ ೮ ರಂದು ಮಹಿಳೆಯರು ಯುದ್ಧನೀತಿಯನ್ನ ವಿರೋಧಿಸಿ, ಐಕ್ಯಮತ ವನ್ನ ಸಹಕರಿಸಿ ಬ್ರುಹತ್ ಚಳುವಳಿ ನಡೆಸಿದರು. ೧೯೧೭: ಮತ್ತೆ ಯುದ್ಧ ನೀತಿಯನ್ನ ವಿರೋಧಿಸಿ ರಷ್ಯಾದ ಮಹಿಳೆಯರು ಊಟ ಮತ್ತು ಶಾಂತಿ ಚಳುವಳಿಯನ್ನ ಫೆಬ್ರವರಿ ತಿಂಗಳ ಕೊನೆಯಭಾನುವಾರದಲ್ಲಿಇದು ಗ್ರೆಗೊರಿಯನ್ ಕ್ಯಾಲೆಂಡರಿನ ಪ್ರಕಾರ ಮಾರ್ಚಿ ೮) ನಡೆಸಿದರು. ನಾಲ್ಕು ವಾರಗಳ ನಂತರ ರಾಜ ಮನೆತನದ ಆಳ್ವಿಕೆಯನ್ನು ನಿಲ್ಲಿಸಿ ಮತಚಲಾಯಿಸುವ ಅಧಿಕಾರವನ್ನ ಸರ್ಕಾರ ನೀಡಿತು. ಅಂದಿನ ದಿನಗಳಲ್ಲಿ ಮಹಿಳಾ ದಿನಾಚರಣೆ ಮುಂದುವರೆದ ಮತ್ತು ಮುಂದುವರೆಯುತ್ತಿರುವ ದೇಶಗಳಲ್ಲಿ ಹೊಸ ಆಯಮವನ್ನ ಪಡೆಯಿತು. ಬೆಳೆಯುತ್ತಿದ್ದ ಅಂತರಾಷ್ಟ್ರೀಯ ಮಹಿಳಾ ಚಳುವಳಿ, ಅವುಗಳ ಸಾಮರ್ಥ್ಯವನ್ನ ಹೆಚ್ಹಿಸಿದ ನಾಲ್ಕು "ಜಾಗತಿಕ ಸಂಯುಕ್ತ ರಾಷ್ಟ್ರೀಯ ಮಹಿಳಾ ಸಮಾಲೋಚನೆ", ಮಹಿಳಾ ಹಕ್ಕು, ರಾಜಕೀಯ ಹಾಗು ಆರ್ಥಿಕ ಕ್ಷೆತ್ರಗಳಲ್ಲಿ ಭಾಗವಹಿಸುವ ಹಕ್ಕನ್ನ ಪಡೆಯಲು ಪೋಷಿಸಿದವು. ದಿನಕಳೆದಂತೆ ಅಂತರಾಷ್ಟ್ರೀಯ ಮಹಿಳೆಯರ ದಿನ ಬೆಳವಣಿಗೆಯ ಪ್ರತಿಬಿಂಬದ ಜೊತೆಗೆ ಸಾಧರಣ ಮಹಿಳೆಯ ಧೀರತನ ಮತ್ತು ಧೃಡತೆ ದೇಶ ಹಾಗು ಸಮುದಾಯದ ಇತಿಹಾಸದಲ್ಲಿ ವಹಿಸಿದ ಅಸಾಧಾರಣ ಪಾತ್ರವನ್ನ ಬಿಂಬಿಸುತ್ತಾ ಬದಲಾವಣೆಯ ಕರೆಯನ್ನ ನೀಡುತ್ತದೆ. ಸಂಯುಕ್ತ ರಾಷ್ರಗಳು ಮತ್ತು ಲಿಂಗ ಸಮಾನತೆ ೧೯೪೫ ರಲ್ಲಿ ಸಹಿ ಮಾಡಿದ ಸಂಯುಕ್ತ ರಾಷ್ಟ್ರಗಳ ಅಂತರಾಷ್ಟ್ರೀಯ "ಲಿಂಗ ಸಮಾನತಾ ತತ್ವ" ಅಂಗೀಕಾರಕ್ಕೆ ಬಂತು.ಅಲ್ಲಿಯ ನಂತರ ವಿಶ್ವವ್ಯಾಪ್ಯ ಒಪ್ಪಂದ ನೀತಿ, ನಿರ್ದಿಷ್ಟಮಾನ, ಮಹಿಳಾಭಿವ್ರುದ್ದಿ ಕಾರ್ಯಕ್ರಮ ಹಾಗು ಯೋಜನೆಗಳು ಕಾರ್ಯರೂಪಕ್ಕೆ ಬಂದವು. ಕೆಲವರ್ಷಗಳ ನಂತರ ಸಂಯುಕ್ತ ರಾಷ್ರಗಳು ಮತ್ತು ಅದರ ತಾಂತ್ರಿಕ ಏಜೆನ್ಸ್ಸಿಗಳು ಮಾನವ ಹಕ್ಕುಗಳನ್ನ ಅಬಿನಂಧಿಸಿ ಮಹಿಳೆಯರು ಭಾಗವಹಿಸುವುದನ್ನ ಪ್ರೋತ್ಸಾಹಿಸಿದವು. ಮಹಿಳೆಯರನ್ನ ಪ್ರಭಲಗೊಳಿಸುವ ಸಂಯುಕ್ತ ರಾಷ್ರಗಳ ಕಾರ್ಯ ವಿಶ್ವದಾದ್ಯಂತ ಮುಂದುವರೆಯಿತು. Gallery ನೋಡಿ ಭಾರತದಲ್ಲಿ ಸ್ತ್ರೀ ರಕ್ಷಣಾ ಕಾನೂನು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕ್ಲಾರಾ ಜೆಟ್‌ಕಿನ್ ಹೊರಗಿನ ಸಂಪರ್ಕಗಳು ಇತ್ತೀಚಿನ ಸಂಯುಕ್ತ ರಾಷ್ಟ್ರಗಳ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂಸ್ಕರಣ ಮಾಹಿತಿಪಡೆಯಲು ಕೆಳಕಂಡ ಅಂತರ್ಜಾಲವನ್ನ ವೀಕ್ಷಿಸಿ ದಿನಾಚರಣೆಗಳು ಮಾರ್ಚ್
3737
https://kn.wikipedia.org/wiki/%E0%B2%A4%E0%B2%BE%E0%B2%AF%E0%B2%BF%20%E0%B2%A6%E0%B2%BF%E0%B2%A8
ತಾಯಿ ದಿನ
ತಾಯಿಯಂದಿರ ದಿನವನ್ನು ಪ್ರತಿ ವರ್ಷ ಪ್ರಪಂಚದ ಹಲವೆಡೆ ಮೇ ತಿಂಗಳ ಎರಡನೆಯ ಭಾನುವಾರದಂದು ಆಚರಿಸಲಾಗುತ್ತದೆ. ೨೦೦೯ನೆಯ ವರ್ಷದಲ್ಲಿ ಮೇ ೧೦ ಮತ್ತು ೨೦೧೦ರ ವರ್ಷದಲ್ಲಿ ಮೇ ೯ರಂದು ಆಚರಿಸಲಾಗುತ್ತದೆ. ಚರಿತ್ರೆ ತಾಯಂದಿರ ದಿನ ೧೯೦೮ರಲ್ಲಿ ಅಮೆರಿಕದಲ್ಲಿ ಶುರುವಾಗಿತ್ತು. ಅಮೆರಿಕದ ಶಾಂತಿ ಕಾರ್ಯಕರ್ತೆ ಆಗಿದ್ದ ಅನಾ ಜಾರ್ವಿಸ್ ಮದುವೆ ಆಗಿರಲಿಲ್ಲ. ೧೯೦೫ರಲ್ಲಿ ಅನಾ ಅವರ ತಾಯಿ ಮರಣ ಹೊಂದಿದ್ದರು. ತನ್ನ ತಾಯಿಯ ಮೇಲಿದ್ದ ಪ್ರೀತಿಯನ್ನು ವ್ಯಕ್ತಪಡಿಸಲು ಅನಾ ಈ ದಿನವನ್ನು ತಾಯಿಯಂದಿರ ದಿನವಾಗಿ ಆಚರಿಸಲು ಶುರು ಮಾಡಿದ್ದರು. ಇದನ್ನೂ ನೋಡಿ ತಂದೆಯ ದಿನಾಚರಣೆ ಮಕ್ಕಳ ದಿನಾಚರಣೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಉಲ್ಲೇಖಗಳು ದಿನಾಚರಣೆಗಳು ಮೇನ ದಿನಗಳು
3738
https://kn.wikipedia.org/wiki/%E0%B2%B5%E0%B2%BF%E0%B2%B6%E0%B3%8D%E0%B2%B5%20%E0%B2%8E%E0%B2%A1%E0%B3%8D%E0%B2%B8%E0%B3%8D%20%E0%B2%A6%E0%B2%BF%E0%B2%A8
ವಿಶ್ವ ಎಡ್ಸ್ ದಿನ
ಪ್ರತಿ ವರ್ಷ ಡಿಸೆಂಬರ್ ೧ರಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ಎಡ್ಸ್ ಒಂದು ಬೀಕರವಾದ ಕಾಯಿಲೆಯಾಗಿದೆ. ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಈ ಕಾಯಿಲೆ ಉಂಟಾಗುತ್ತದೆ. ಶಾಲಾ ಕಾಲೇಜುಗಳಲ್ಲಿ ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಏಡ್ಸ್ ಪೀಡೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತದೆ. ಪ್ರಮುಖ ದಿನಗಳು ದಿನಾಚರಣೆಗಳು ಆರೋಗ್ಯ
3739
https://kn.wikipedia.org/wiki/%E0%B2%B8%E0%B2%82%E0%B2%AF%E0%B3%81%E0%B2%95%E0%B3%8D%E0%B2%A4%20%E0%B2%B0%E0%B2%BE%E0%B2%B7%E0%B3%8D%E0%B2%9F%E0%B3%8D%E0%B2%B0%20%E0%B2%A6%E0%B2%BF%E0%B2%A8
ಸಂಯುಕ್ತ ರಾಷ್ಟ್ರ ದಿನ
ಪ್ರತಿ ವರ್ಷ ಅಕ್ಟೋಬರ್ ೨೪ರಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ಬಾಹ್ಯಸಂಪರ್ಕಗಳು UN Day ಪ್ರಮುಖ ದಿನಗಳು ದಿನಾಚರಣೆಗಳು
3741
https://kn.wikipedia.org/wiki/%E0%B2%AE%E0%B2%BE%E0%B2%B0%E0%B3%8D%E0%B2%9A%E0%B3%8D%20%E0%B3%AE
ಮಾರ್ಚ್ ೮
- ಮಾರ್ಚ್ ತಿಂಗಳಿನ ಎಂಟನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೬೭ನೆ (ಅಧಿಕ ವರ್ಷದಲ್ಲಿ ೬೮ನೆ) ದಿನ. ಪ್ರಮುಖ ಘಟನೆಗಳು ಜನನ ೧೯೩೫ - ಖ್ಯಾತ ಸಾಹಿತಿ,ಪತ್ರಕರ್ತ ಪಿ.ಲಂಕೇಶ್. ೧೯೩೩ - ಕನ್ನಡ ಹವ್ಯಾಸಿ ರಂಗಭೂಮಿಯ ಮೊಟ್ಟಮೊದಲ ನಟಿ ಹಾಗೂ ಆಕಾಶವಾಣಿ ನಾಟಕಗಳ ನಿರ್ದೇಶಕಿ ಯಮುನಾ ಮೂರ್ತಿ. ನಿಧನ ದಿನಾಚರಣೆಗಳು ವಿಶ್ವ ಮಹಿಳೆಯರ ದಿನ ದಿನಗಳು ಮಾರ್ಚ್
3742
https://kn.wikipedia.org/wiki/%E0%B2%8F%E0%B2%AA%E0%B3%8D%E0%B2%B0%E0%B2%BF%E0%B2%B2%E0%B3%8D%20%E0%B3%A8%E0%B3%A8
ಏಪ್ರಿಲ್ ೨೨
ಪ್ರಮುಖ ಘಟನೆಗಳು ಜನನ ೧೮೧೨ - ಭಾರತದ ಗವರ್ನರ್ ಜನರಲ್ ಆಗಿದ್ದ ಡಾಲ್‌ಹೌಸಿ ೧೮೭೦ - ವ್ಲಾದಿಮಿರ್ ಇಲಿಚ್ ಲೆನಿನ್ ನಿಧನ ೧೯೯೪ - ಅಮೆರಿಕದ ಅಧ್ಯಕ್ಷರಾಗಿದ್ದ ರಿಚರ್ಡ್ ಎಂ.ನಿಕ್ಸನ್ ೧೯೪೨ - ಕನ್ನಡದ ಕಾದಂಬರಿಕಾರ ಗಳಗನಾಥ ದಿನಾಚರಣೆಗಳು ಮಹಾವೀರ ಜಯಂತಿ ಭೂಮಿ ದಿನ ಏಪ್ರಿಲ್ ದಿನಗಳು
3745
https://kn.wikipedia.org/wiki/%E0%B2%85%E0%B2%95%E0%B3%8D%E0%B2%9F%E0%B3%8B%E0%B2%AC%E0%B2%B0%E0%B3%8D%20%E0%B3%A8%E0%B3%AA
ಅಕ್ಟೋಬರ್ ೨೪
ಪ್ರಮುಖ ಘಟನೆಗಳು ಜನನ ನಿಧನ ೨೦೦೬- ಸ ಜ ನಾಗಲೋಟಿ ಮಠ (ಖಾ್ಯತ ವೈದ್ಯರು). ದಿನಾಚರಣೆಗಳು ಸಂಯುಕ್ತ ರಾಷ್ಟ್ರ ದಿನ ದಿನಗಳು ಅಕ್ಟೋಬರ್
3746
https://kn.wikipedia.org/wiki/%E0%B2%AE%E0%B3%87%20%E0%B3%A9%E0%B3%A7
ಮೇ ೩೧
- ಮೇ ತಿಂಗಳಿನ ಮೂವತ್ತೊಂದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೫೧ನೆ (ಅಧಿಕ ವರ್ಷದಲ್ಲಿ ೧೫೨ನೆ) ದಿನ. ಪ್ರಮುಖ ಘಟನೆಗಳು 455 – Emperor Petronius Maximus is stoned to death by an angry mob while fleeing Rome. 1223 – Mongol invasion of the Cumans: Battle of the Kalka River: Mongol armies of Genghis Khan led by Subutai defeat Kievan Rus' and Cumans. 1578 – King Henry III lays the first stone of the Pont Neuf (New Bridge), the oldest bridge of Paris, France. 1669 – Citing poor eyesight, Samuel Pepys records the last event in his diary. ಜನನ ನಿಧನ ದಿನಾಚರಣೆಗಳು ವಿಶ್ವ ತಂಬಾಕು ನಿಷೇಧ ದಿನ ಹೊರಗಿನ ಸಂಪರ್ಕಗಳು ಇತಿಹಾಸದಲ್ಲಿ ಈ ದಿನ ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ ದಿನಗಳು ಮೇ
3747
https://kn.wikipedia.org/wiki/%E0%B2%9C%E0%B3%82%E0%B2%A8%E0%B3%8D%20%E0%B3%AB
ಜೂನ್ ೫
- ಜೂನ್ ತಿಂಗಳ ಐದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೫೬ನೇ ದಿನ (ಅಧಿಕ ವರ್ಷದಲ್ಲಿ ೧೫೭ನೇ ದಿನ). ಈ ದಿನದ ನಂತರ ವರ್ಷದಲ್ಲಿ ೧೪೩ ದಿನಗಳು ಉಳಿದಿರುತ್ತವೆ. ಪ್ರಮುಖ ಘಟನೆಗಳು ವರ್ಷ ೧೮೧೧ - ವೆನೆಜುವೆಲಾ ಸ್ಪೇನ್ ನಿಂದ ಸ್ವಾತಂತ್ರ್ಯ ಘೋಷಿಸಿತು. ವರ್ಷ ೧೯೬೨ - ಆಲ್ಜೀರಿಯಾ ಫ್ರಾನ್ಸ್ ನಿಂದ ಸ್ವಾತಂತ್ರ ಆಗುತ್ತದೆ ವರ್ಷ ೨೦೦೪ - ಮೊದಲನೆಯ ಇಂಡೋನೇಷ್ಯಾ ಅಧ್ಯಕ್ಷೀಯ ಚುನಾವಣೆ ನಡೆಯಿತು. ಜನನ ವರ್ಷ ೧೯೫೪ - ಕನ್ನಡದ ಲೇಖಕಿ, ಕವಯತ್ರಿಯಲ್ಲೊಬ್ಬರಾದ ಲತಾ ರಾಜಶೇಖರ್ ವರ್ಷ ೧೯೬೧ - ರಮೇಶ್ ಕೃಷ್ಣನ್, ಭಾರತದ ಟೆನಿಸ್ ಆಟಗಾರ ಮತ್ತು ತರಬೇತುದಾರ. ನಿಧನ ವರ್ಷ ೧೯೯೬ - ಆಚಾರ್ಯ ಕುಬೆರ್ ನಾಥ್ ರೈ, ಭಾರತೀಯ ಕವಿ ಮತ್ತು ವಿದ್ವಾಂಸ ( ಬಿ. ೧೯೩೩) ವರ್ಷ ೧೯೫೭ - ಅನುಗ್ರಹ ನಾರಾಯಣ್ ಸಿನ್ಹ, ಭಾರತೀಯ ನ್ಯಾಯವಾದಿ ಮತ್ತು ರಾಜಕಾರಣಿ, ಬಿಹಾರದ 1 ನೇ ಉಪ ಮುಖ್ಯಮಂತ್ರಿ ( ಬಿ. ೧೮೮೭) ರಜೆಗಳು/ಆಚರಣೆಗಳು ವಿಶ್ವ ಪರಿಸರ ದಿನ ತಂದೆಯ ದಿನ (ಡೆನ್ಮಾರ್ಕ್) ಭಾರತೀಯ ಆಗಮನ ದಿನ (ಸುರಿನಾಮ್) ಸಂವಿಧಾನದ ದಿನ(ಡೆನ್ಮಾರ್ಕ್) ಸಂವಿಧಾನದ ದಿನ (ಫರೋ ದ್ವೀಪ) ಹೊರಗಿನ ಸಂಪರ್ಕಗಳು ಇತಿಹಾಸದಲ್ಲಿ ಈ ದಿನ ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ ದಿನಗಳು ಜೂನ್
3750
https://kn.wikipedia.org/wiki/%E0%B2%B9%E0%B3%81%E0%B2%A4%E0%B2%BE%E0%B2%A4%E0%B3%8D%E0%B2%AE%E0%B2%B0%20%E0%B2%A6%E0%B2%BF%E0%B2%A8
ಹುತಾತ್ಮರ ದಿನ
ಜನವರಿ ೩೦,೧೯೪೮ - ಭಾರತದೇಶದ ರಾಷ್ತ್ರಪಿತರೆನಿಸಿಕೊಂಡ ಮಹಾತ್ಮ ಗಾಂಧಿಯವರು ಮರಣ ಹೊಂದಿದ ದಿನ .ಈ ದಿನವನ್ನು ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ಹುತಾತ್ಮರ ದಿನವಾಗಿ ಆಚರಿಸಲಾಗುತ್ತದೆ. ಅಹಿಂಸೆ ಮತ್ತು ಶಾಂತಿ ಎಂಬ ಅಸ್ತ್ರದಿಂದಲೇ ಭಾರತಕ್ಕೆ ಸ್ವಾಂತಂತ್ರ್ಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಾತ್ಮಾ ಗಾಂಧಿಯವರ ಮರಣ ದಿನವನ್ನು ಭಾರತದಾದ್ಯಂತ ಈ ಹುತಾತ್ಮರ ದಿನ ಎಂದು ಆಚರಿಸಲಾಗುತ್ತದೆ. ತಮ್ಮ ಬದುಕೇ ತಮ್ಮ ಸಂದೇಶ ಎಂದು ಬದುಕಿನ ಪ್ರತಿ ಗಳಿಗೆಯನ್ನೂ ಮೌಲ್ಯದ ಜೊತೆಯಲ್ಲೇ ಬದುಕಿದ, ಸತ್ಯಕ್ಕಾಗಿ ತಮ್ಮ ಜೀವನವನ್ನೇ ಪ್ರಯೋಗಕ್ಕೊಡ್ಡಿಕೊಂಡ ರಾಷ್ಟ್ರಪಿತ, ಮೋಹನದಾಸ ಕರಮಚಂದ ಗಾಂಧಿ ಹುಟ್ಟಿದ್ದು ಗುಜರಾತಿನ ಪೋರಬಂದರಿನಲ್ಲಿ. ೧೮೬೯ ಅಕ್ಟೋಬರ್ ೨ ರಂದು ಜನಿಸಿದ ಗಾಂಧಿ, ಭೋಗಿಯಾಗಿ ಕೆಲಕಾಲ ಬದುಕಿ, ನಂತರ ವಿಷಯ ಸುಖಗಳ ಕುರಿತು ಜಿಗುಪ್ಸೆ ಹುಟ್ಟಿ ಯೋಗಿಯಾಗಿ ಬದಲಾದವರು. ಅವರ ಹಲವು ನಡೆಗಳು ವಿಮರ್ಶೆಗೊಳಪಟ್ಟು, ವಿವಾದ ಸೃಷ್ಟಿಸಿದ್ದರೂ, ತನ್ನ ಬದುಕೇ ತನ್ನ ಸಂದೇಶ ಎಂಬ ಅವರ ಆತ್ಮವಿಶ್ವಾಸ ನುಡಿ ಅವರನ್ನು ರಾಷ್ಟ್ರಪಿತನನ್ನಾಗಿ ಮಾಡಿದೆ. ೧೯೪೮ ಜನವರಿ ೩೦ರಂದು ಪ್ರಾರ್ಥನೆಗೆಂದು ಬಿರ್ಲಾ ಹೌಸ್ ಗೆ ತೆರಳಿದ್ದ ಅವರ ಮೇಲೆ ನಾಥುರಾಮ್ ಗೋಡ್ಸೆ ಮೂರು ಬಾರಿ ಗುಂಡಿಕ್ಕಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಆ ದಿನ ಇಡೀ ಭಾರತವೂ ಶೋಕ ಸಾಗರದಲ್ಲಿ ಮುಳುಗಿತ್ತು. ಆ ದಿನವನ್ನು ಇಂದಿಗೂ ಹುತಾತ್ಮರ ದಿನವೆಂದು ಆಚರಿಸಲಾಗುತ್ತದೆ ಪ್ರಮುಖ ದಿನಗಳು ದಿನಾಚರಣೆಗಳು
3751
https://kn.wikipedia.org/wiki/%E0%B2%B5%E0%B2%B8%E0%B2%82%E0%B2%A4%20%E0%B2%AA%E0%B2%82%E0%B2%9A%E0%B2%AE%E0%B2%BF
ವಸಂತ ಪಂಚಮಿ
ವಸಂತ ಪಂಚಮಿ, ಬಸಂತ ಪಂಚಮಿ ಅಥವಾ ಶ್ರೀ ಪಂಚಮಿ ಹಿಂದೂ ಧರ್ಮದಲ್ಲಿ ಸರಸ್ವತಿಯನ್ನು ನೆನೆದು ಆಚರಿಸಲ್ಪಡುವಂಥ ಹಬ್ಬ. ಇದನ್ನು ಹಿಂದೂ ಪಂಚಾಂಗದ ಮಾಘ ಮಾಸದ (ಜನವರಿ - ಫೆಬ್ರುವರಿ) ೫ನೆಯ (ಪಂಚಮಿ) ದಿನದಂದು ಆಚರಿಸಲಾಗುತ್ತದೆ. ಪ್ರಮುಖ ದಿನಗಳು ಹಿಂದೂ ಧರ್ಮದ ಹಬ್ಬಗಳು
3752
https://kn.wikipedia.org/wiki/%E0%B2%AE%E0%B2%B9%E0%B2%BE%20%E0%B2%B6%E0%B2%BF%E0%B2%B5%E0%B2%B0%E0%B2%BE%E0%B2%A4%E0%B3%8D%E0%B2%B0%E0%B2%BF
ಮಹಾ ಶಿವರಾತ್ರಿ
ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದು. ಈ ಹಬ್ಬವನ್ನು ಮಾಘ ಮಾಸದ ಬಹುಳ ಚತುರ್ದಶಿಯಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಫೆಬ್ರುವರಿ ಅಥವಾ ಮಾರ್ಚ್ ತಿಂಗಳಿನಲ್ಲಿ ಶಿವರಾತ್ರಿ ಹಬ್ಬ ಬರುತ್ತದೆ. ಇಡೀ ದಿನ ಉಪವಾಸ, ಜಾಗರಣೆಗಳನ್ನು ಮಾಡಿ,೪ ಯಾಮಗಳಲ್ಲೂ ಶಿವ ಪೂಜೆಯನ್ನು ಮಾಡುವ ಮೂಲಕ ಆಚರಿಸಲಾಗುತ್ತದೆ.ಇದರ ಮುಂದಿನ ದಿನ ವಿವಿಧ ರೀತಿಯ ಸಿಹಿ ತಿನಿಸುಗಳನ್ನು ತಯಾರಿಸುವರು.ತಂಬಿಟ್ಟು ಈ ಹಬ್ಬದ ಪ್ರಮುಖ ತಿನಿಸು. ಶಿವರಾತ್ರಿ, ಈ ದಿನದಂದು ಕೈಲಾಸ ವಾಸ ಪರಶಿವನನ್ನು ಕೋಟಿ ಕೋಟಿ ಜನರು ಭಜಿಸಿ ಪೂಜಿಸುತ್ತಾರೆ. ಶಿಶಿರ ಋತುವಿನ ಮಾಘ ಮಾಸದ ಕೃಷ್ಣ ಪಕ್ಷ ಬಹುಳ ಚತುರ್ದಶಿ ಯಂದು ಬರುವ ಶಿವರಾತ್ರಿಯ ದಿನ ಭಕ್ತಾದಿಗಳು ಶಂಭೋ ಶಂಕರನನ್ನು ನೆನೆದು, ಪುನೀತರಾಗುತ್ತಾರೆ.  ತನ್ನ ನಂಬಿ ಬಂದ ಭಕ್ತರ ಇಷ್ಟಾರ್ಥಗಳಿಗೆ ಎಂದಿಗೂ ನಿರಾಸೆ ಮಾಡದ ದಯಾಮಯಿ ಶಿವನಿಗೆ ಶಿವರಾತ್ರಿಯಂದು ದೇಶಾದ್ಯಂತ ವಿಶೇಷ ಪೂಜೆಗಳು ನೆರವೇರುತ್ತವೆ. ಇಡೀ ಭಾರತದಾದ್ಯಂತ ಬಹುತೇಕ ಎಲ್ಲಾ ಭಾಗಗಳಲ್ಲೂ ಆಚರಿಸುವ ಹಬ್ಬ ಇದು. ಈ ಹಬ್ಬದಂದು ದಿನವಿಡೀ ಪೂಜೆ, ಉಪವಾಸ ಮಾಡಿ, ರಾತ್ರಿಯಿಡೀ ಜಾಗರಣೆ ಮಾಡಿ ಶಿವನನ್ನು ಆರಾಧಿಸುವ ಸಂಪ್ರದಾಯವಿದೆ.  ಶಿವಪುರಾಣದಲ್ಲಿ ಶಿವಾರಾತ್ರಿಯ ಆಚರಣೆ ಬಂದಿರುವ ಬಗ್ಗೆ ಒಂದು ಸಣ್ಣ ಕಥೆ ಇದೆ.... ದೇವಲೋಕದಲ್ಲಿ ಒಮ್ಮೆ ಬ್ರಹ್ಮ ಹಾಗೂ ವಿಷ್ಣುವಿನ ನಡುವೆ ಯಾರು ಶ್ರೇಷ್ಠರು ಎಂಬ ವಿಷಯಕ್ಕೆ ವಾಗ್ವಾದಗಳು ನಡೆಯುತ್ತಿದ್ದವು. ಮಹಾ ದೇವತೆಗಳಿಬ್ಬರನ್ನೂ ಸಮಾಧಾನ ಮಾಡುವುದು ದುರ್ಲಭ ಎನಿಸಿದಾಗ, ದೇವತೆಗಳೆಲ್ಲ ಹೋಗಿ ಪರಶಿವನನ್ನು ಬೇಡಿಕೊಳ್ಳುತ್ತಾರೆ. ವಿಷ್ಣು ಹಾಗೂ ಬ್ರಹ್ಮರ ಜಗಳವನ್ನು ಶಮನ ಮಾಡುವಂತೆ ಕೋರಿಕೊಳ್ಳುತ್ತಾರೆ. ಆಗ ವಿಷ್ಣು ಮತ್ತು ಬ್ರಹ್ಮರ ನಡುವೆ ಶಿವ, ಅಗ್ನಿಕಂಭದ ರೂಪದಲ್ಲಿ ಬಂದು ನಿಂತು ತನ್ನ ಮೂಲವನ್ನು ಕಂಡುಹಿಡಿಯಲು ಸೂಚಿಸುತ್ತಾನೆ. ಆಗ ಹಂಸದ ರೂಪ ತಾಳಿದ ಬ್ರಹ್ಮ ಅಗ್ನಿ ಕಂಭದ ಶಿರವನ್ನು ಹುಡುಕಲು ಮೇಲ್ಮುಖವಾಗಿ ಹೊರಡುತ್ತಾನೆ. ವಿಷ್ಣು ವರಾಹವತಾರ ತಾಳಿ ಕಂಭದ ತಳವನ್ನು ನೋಡುವುದಕ್ಕಾಗಿ ಪಾತಾಳಕ್ಕೆ ಇಳಿಯುತ್ತಾನೆ. ಎಷ್ಟೇ ಮುಂದೆ ಸಾಗಿದರೂ ಬ್ರಹ್ಮ ಹಾಗೂ ವಿಷ್ಣು ಇವರಿಬ್ಬರಿಗೂ ಕಂಭದ ಅಂತ್ಯವೇ ಕಾಣುವುದಿಲ್ಲ. ಅನಂತವಾಗಿರುವ ಶಿವನ ಶಕ್ತಿಯನ್ನು ನೋಡಿದ ವಿಷ್ಣು ಹಾಗೂ ಬ್ರಹ್ಮರಿಗೆ ಸತ್ಯದ ಅರಿವಾಗುತ್ತದೆ. ಆದರೆ ಶಿವನ ಜಡೆಯಿಂದ ಕೆಳಗೆ ಬೀಳುತ್ತಿದ್ದ ಕೇತಕಿ ಪುಷ್ಫದ ಬಳಿ ಬ್ರಹ್ಮ , ನೀನು ಎಲ್ಲಿಂದ ಬೀಳುತ್ತಿದ್ದೀಯ ಎಂದು ಪ್ರಶ್ನಿಸುತ್ತಾನೆ. ಆಗ ಆ ಪುಷ್ಪವು ನಾನು ಅಗ್ನಿ ಕಂಭದ ಶಿರದಿಂದ ಬೀಳುತ್ತಿದ್ದೇನೆ ಎಂಬ ಉತ್ತರ ನೀಡುತ್ತದೆ. ಆಗ ಬ್ರಹ್ಮ ಶಿವನಲ್ಲಿಗೆ ಬಂದು ಕೇತಕಿ ಪುಪ್ಪವನ್ನು ತೋರಿಸಿ, ತಾನು ಅಗ್ನಿ ಕಂಭದ ಶಿರಭಾಗವನ್ನು ನೋಡಿರುವುದಾಗಿಯೂ ಅಲ್ಲಿಂದಲೇ ಕೇತಕಿ ಪುಷ್ಪವನ್ನು ತಂದಿರುವುದಾಗಿಯೂ ಹೇಳುತ್ತಾನೆ. ಇವರಿಬ್ಬರ ಮೋಸವನ್ನು ಅರಿತ ಶಿವ, ಬ್ರಹ್ಮನನ್ನು ಯಾರೂ ಪೂಜಿಸಕೂಡದು ಎಂದು ಶಾಪ ನೀಡಿ ಲಿಂಗರೂಪ ತಾಳುತ್ತಾನೆ. ಅಂದು ಮಾಘ ಮಾಸದ ಬಹುಳ ಚತುರ್ದಶಿಯಾಗಿರುತ್ತದೆ. ಹೀಗಾಗಿ, ಶಿವ ಲಿಂಗರೂಪ ತಾಳಿದ ಮಾಘ ಮಾಸದ ಬಹುಳ ಚತುರ್ದಶಿಯಂದು ಶಿವರಾತ್ರಿಯನ್ನು ಆಚರಿಸಲಾಗುತ್ತದೆ.  ಶಿವರಾತ್ರಿಯ ದಿನ ರಾತ್ರಿ ಪೂಜೆಯೇ ವಿಶೇಷ. ಸಾಮಾನ್ಯವಾಗಿ ಎಲ್ಲ ಹಬ್ಬಗಳಲ್ಲಿಯೂ ದೇವರಿಗೆ ಹಗಲು ಪೂಜೆ ನಡೆಯುತ್ತದೆ. ಆದರೆ ಶಿವರಾತ್ರಿ ಮಾತ್ರ ರಾತ್ರಿಯ ಹೊತ್ತು ಪೂಜೆ, ಭಜನೆ ನಡೆಸುವ ವಿಶೇಷ ಆಚರಣೆ. ರಾತ್ರಿ ಎಂದರೆ ಕತ್ತಲು, ಕತ್ತಲು ಎಂದರೆ ಅಜ್ಞಾನ. ಅಜ್ಞಾನವನ್ನು ಕಳೆದು ಸುಜ್ಞಾನ ಬೆಳಗಿಸು ಎಂದು ಆ ಶಿವನನ್ನು ಬೇಡುವ ಶುಭ ದಿನವೇ ಶಿವರಾತ್ರಿ. ಅಜ್ಞಾನ ತುಂಬಿರುವಲ್ಲಿ ಶಿವ ಸಂಚರಿಸಿ ಜ್ಞಾನ ದೀವಿಗೆಯನ್ನು ಬೆಳಗುತ್ತಾನೆ ಎಂಬ ನಂಬಿಕೆ ಇದೆ. ಶಿವನಿಗೆ ಅತೀ ಶ್ರೇಷ್ಠವಾಗಿರುವ ಬಿಲ್ವ ಪತ್ರೆಯನ್ನು ಅರ್ಪಿಸಿ, ತಿಲಗಿ ಪುಷ್ಪ, ತುಳಸಿಯಿಂದ ಶಿವಲಿಂಗವನ್ನು ಅಲಂಕಾರ ಮಾಡಿ ಶಿವನ್ನು ಭಜಿಸಿದರೆ, ಪಾಪಗಳು ಪರಿಹಾರವಾಗುತ್ತವೆ, ಮೋಡಗಳೇ ಇಲ್ಲದ ಶುಭ್ರ ಆಕಾಶದಲ್ಲಿ ಬಂದಿರುವ ಚಂದ್ರನ ಬೆಳಕಿನಲ್ಲಿ ಶಿವನಿಗೆ ಅಭಿಷೇಕ ಮಾಡಿ ಆರಾಧಿಸಿದರೆ ಅತ್ಯಂತ್ರ ಶ್ರೇಷ್ಠ ಎಂಬ ನಂಬಿಕೆಗಳಿವೆ. ಶಿವರಾತ್ರಿಯ ದಿನವಿಡೀ ಉಪವಾಸ ಮಾಡಿ, ಜಾಗರಣೆ ಮಾಡಿ ಶಿವನನ್ನು ಆರಾಧಿಸಿದರೆ ಸಕಲ ಪಾಪಗಳೂ ಕಳೆಯುತ್ತವೆ ಎಂದು ನಂಬಲಾಗಿದೆ.  ಎಲ್ಲಾ ಜೀವರಾಶಿಗಳನ್ನು ಪೊರೆಯುವ ಶಿವ ಎಲ್ಲಾ ಆಡಂಬರಗಳಿಂದ ಮುಕ್ತ. ಆತ ಆಭರಣಪ್ರಿಯನಲ್ಲ, ಅಲಂಕಾರ ಪ್ರಿಯನೂ ಅಲ್ಲ. ಭಸ್ಮವನ್ನು ಬಳಿದುಕೊಂಡು, ಹುಲಿಯ ಚರ್ಮವನ್ನು ಉಟ್ಟು, ಸ್ಮಶಾನದಲ್ಲಿರುವ ಸರಳ ಮತ್ತು ಅಮೋಘ ಶಕ್ತಿ.  ಶಿವನು ಸರಳತೆ, ಪ್ರಾಮಾಣಿಕತೆ ಮತ್ತು ನಿಷ್ಕಲ್ಮಶ ಮನಸ್ಸುಗಳ ಪ್ರತೀಕ. ಛಲಬಿಡದ ಸಾಧನೆಯ ದ್ಯೋತಕ. ಧ್ಯಾನಪ್ರಿಯ ಶಿವ ಭಕ್ತರಿಂದ ಬಯಸುವುದು ನಿಶ್ಕಲ್ಮಶ ಮತ್ತು ಪ್ರಾಮಾಣಿಕ ಭಕ್ತಿ ಮಾತ್ರ. ತೋರಿಕೆಯ ಮತ್ತು ಆಡಂಬರದ ಪೂಜೆಯನ್ನು ಬಯಸದ ಮಹಾದೇವನನ್ನು ಇಂದ್ರಿಯ ನಿಗ್ರಹ, ಧ್ಯಾನ, ಸಂಯಮ ಮತ್ತು ವಿಶ್ವಾಸ ಭರಿತರಾಗಿ ಶಿವರಾತ್ರಿ ಯಂದು ಧ್ಯಾನಿಸಿದರೆ ಆತ ಪ್ರಸನ್ನಗೊಳ್ಳುತ್ತಾನೆ.  ಎಲ್ಲ ಆಡಂಬರಗಳಿಂದ ಮುಕ್ತರಾಗಿ, ಸರಳ ಮನಸ್ಸಿನಿಂದ ಪರಶಿವನನ್ನು ನೆನದು, ಭಜಿಸಿ ಶಿವರಾತ್ರಿಯನ್ನು ಆಚರಿಸೋಣ... ಸರಳತೆ, ಪ್ರಾಮಾಣಿಕತೆ, ಸತ್ಯ ಮತ್ತು ಶಕ್ತಿಯ ದೇವತೆ ಈಶ್ವರ ಲೋಕದಲ್ಲಿರುವ ಸಕಲ ಸಂಕಷ್ಟಗಳಿಗೆ ಪರಿಹಾರ ನೀಡಲಿ ಎಂಬುದು ಎಲ್ಲರ ಕೋರಿಕೆ.. ಎಲ್ಲರಿಗೂ ಮಹಾ ಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು. ಮಹಾ ಶಿವರಾತ್ರಿ, ರುದ್ರನ ಮಂಗಳಕರ ರಾತ್ರಿ ಮಾಘ ಮಾಸ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುವ ಶಿವರಾತ್ರಿ, ಶಿವ ಭಕ್ತರ ಪಾಲಿಗೆ ಮಂಗಳಕರ ರಾತ್ರಿ. ಹಗಲು ಉಪವಾಸವಿದ್ದು, ರಾತ್ರಿ ವೇಳೆ ಜಾಗರಣೆ ಮಾಡಿ, ಶಿವಧ್ಯಾನ ಮಾಡಿ ಶಿವನ ಕೃಪೆಗೆ ಪಾತ್ರವಾಗುವ ಶುಭ ದಿನ. ಈ ದಿನ ಶಿವನನ್ನು ಭಕ್ತಿಯಿಂದ ಪೂಜಿಸಿದರೆ, ತಾವು ಮಾಡಿದ ಪಾಪಗಳೆಲ್ಲವೂ ಪರಿಹಾರವಾಗಿ, ಮೋಕ್ಷ ಪ್ರಾಪ್ತವಾಗುತ್ತದೆ ಎಂಬುದು ಭಕ್ತರ ಬಲವಾದ ನಂಬಿಕೆ. ಮದುವೆಯಾಗದ ಹೆಣ್ಣುಮಕ್ಕಳು ಶಿವಗುಣರೂಪಿಯಾದ ಅನುರೂಪ ಪತಿಗಾಗಿ ಪ್ರಾರ್ಥಿಸಿದರೆ, ಮುತ್ತೈದೆಯರು ಪತಿಯ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸುವುದು ಸಂಪ್ರದಾಯ. ಶಿವರಾತ್ರಿಯಂದು ಶಿವನನ್ನು ಪೂಜಿಸಿದರೆ, ಸುಖ, ಶಾಂತಿ, ಸಮೃದ್ಧಿ ದೊರೆಯುವುದೆಂಬ ನಂಬಿಕೆ ಆಸ್ತಿಕರದು. ಶಿವರಾತ್ರಿಯ ಮಹಿಮೆ: ಕೈಲಾಸವಾಸಿ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನ. ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವತ: ಶಿವನೇ ಪಾರ್ವತಿಯಲ್ಲಿ ಅರುಹಿದ್ದಾನೆ ಎನ್ನುತ್ತದೆ ಶಿವಪುರಾಣ. ಶಿವ-ಪಾರ್ವತಿಯರ ವಿವಾಹ ಮಹೋತ್ಸವದ ದಿನವಿದು ಎಂಬುದು ವಿಶೇಷ. ಹಿಮವಂತನ ಮಗಳು ಪಾರ್ವತಿ ಈ ದಿನದಂದು ರಾತ್ರಿಯಿಡಿ ಶಿವನಾಮ ಪಠಿಸುತ್ತಾ, ತಪಸ್ಸು ಮಾಡಿ, ಶಿವನನ್ನು ಮೆಚ್ಚಿಸಿ, ವಿವಾಹವಾದಳೆಂಬುದು ಪ್ರತೀತಿ. ಶಿವ ರುದ್ರತಾಂಡವನಾಡಿದ ರಾತ್ರಿಯೂ ಇಂದೇ ಎನ್ನಲಾಗುತ್ತದೆ. ದೇವತೆಗಳು ಹಾಗೂ ಅಸುರರ ನಡುವೆ ಸಮುದ್ರ ಮಂಥನ ನಡೆದು ವಿಷ ಉದ್ಭವವಾದಾಗ, ಅದನ್ನು ಶಿವ ಕುಡಿದ. ವಿಷ ಗಂಟಲೊಳಗಿಂದ ಇಳಿಯದಂತೆ ಪಾರ್ವತಿ ಇಡೀ ರಾತ್ರಿ ತಡೆದಳು ಎನ್ನುತ್ತದೆ ಶಿವಪುರಾಣದ ಇನ್ನೊಂದು ಮಹಿಮೆ. ಹಾಗಾಗಿ, ಭಕ್ತರು ಇಡೀ ರಾತ್ರಿ ಎಚ್ಚರವಿದ್ದು, ನೀಲಕಂಠನನ್ನು ಸ್ತುತಿಸುತ್ತಾರೆ. ಭಗೀರಥನ ತಪಸ್ಸಿಗೆ ಮೆಚ್ಚಿ ಇಳೆಗೆ ಇಳಿದು ಬಂದ ಗಂಗೆಯನ್ನು ಶಿವ ತನ್ನ ಜಡೆಯಲ್ಲಿ ತುಂಬಿಸಿಕೊಂಡಿದ್ದ. ಇದರಿಂದ ವಿಚಲಿತನಾದ ಭಗೀರಥ ಗಂಗೆಯನ್ನು ಭೂಮಿಗೆ ಹರಿಸುವಂತೆ ಶಿವನನ್ನು ಪ್ರಾರ್ಥಿಸಿದ. ಆತನ ಭಕ್ತಿಗೆ ಮೆಚ್ಚಿ ಶಿವ ಗಂಗೆಯನ್ನು ಹರಿಯಬಿಟ್ಟಿದ್ದು ಇದೇ ದಿನ ಎನ್ನುತ್ತದೆ ಪುರಾಣ. ಲಿಂಗಪುರಾಣದ ಪ್ರಕಾರ, ಲಿಂಗ ರೂಪಿಯಾಗಿ ಭಕ್ತರಿಗೆ ಅನುಗ್ರಹ ನೀಡಿದ ದಿನವಿದು. ಶಿವನ ಆದಿ ಮತ್ತು ಅಂತ್ಯ ಹುಡುಕಲು ಹೊರಟ ವಿಷ್ಣು ಹಾಗೂ ಬ್ರಹ್ಮನಿಗೆ, ಶಿವರಾತ್ರಿಯಂದು ಶಿವ ಲಿಂಗರೂಪಿಯಾಗಿ ದರ್ಶನ ನೀಡಿದ ಎಂಬುದು ಪ್ರತೀತಿ. ಇದು ಸ್ಕಂದ ಪುರಾಣ ಒಂದು ಭಾಗ ಬೇಡನ ಶಿವಭಕ್ತಿ:  ಶಿವರಾತ್ರಿ ಆಚರಣೆಯ ಕುರಿತಾಗಿ ಪ್ರಚಲಿತದಲ್ಲಿರುವ ಕಥೆಯಿದು. ಹಿಂದೆ ಬೇಡನೊಬ್ಬ ಕಾಡಿನಲ್ಲಿ ಬೇಟೆಗಾಗಿ ತೆರಳಿದ್ದ. ದಿನವಿಡಿ ಅಲೆದರೂ ಆತನಿಗೆ ಯಾವುದೇ ಬೇಟೆ ಸಿಗಲಿಲ್ಲ. ಬೇಟೆ ಅರಸಿ ಹೊರಟ ಬೇಡ ದಾರಿ ತಪ್ಪಿ ಅರಣ್ಯದಲ್ಲೇ ಅಲೆಯತೊಡಗಿದ. ಅದಾಗಲೇ ಸಂಜೆಯಾಗಿತ್ತು. ಕ್ರೂರ ಪ್ರಾಣಿಗಳು ಆತನನ್ನು ಸುತ್ತುವರಿಯತೊಡಗಿದವು. ಭಯಗ್ರಸ್ತನಾದ ಬೇಡ ಮರವೇರಿದ. ಮನದಲ್ಲೇ ಶಿವನನ್ನು ಧ್ಯಾನಿಸುತ್ತಾ ಮರದ ಎಲೆಗಳನ್ನು ಕಿತ್ತು ಕೆಳಗಡೆ ಹಾಕತೊಡಗಿದ. ಆ ಎಲೆಗಳು ಅವನಿಗರಿವಿಲ್ಲದಂತೆಯೇ ಕೆಳಗಡೆಯಿದ್ದ ಶಿವಲಿಂಗದ ಮೇಲೆ ಬೀಳತೊಡಗಿದವು. ಕಾಕತಾಳೀಯವೆಂದರೆ ಆತ ಏರಿದ್ದ ಮರ ಬಿಲ್ವಮರವಾಗಿತ್ತು. ಶಿವರಾತ್ರಿಯಂದು ಪೂರ್ತಿ ಜಾಗರಣೆಯಿದ್ದು, ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸಿದ ಬೇಡನಿಗೆ ಶಿವ ಅಭಯ ನೀಡಿದ. ಶಿವನೇ ಆತನನ್ನು ರಕ್ಷಿಸಿದ ಎಂಬ ಸುದ್ದಿ ಹರಡಿ ಭಕ್ತರು ಶಿವರಾತ್ರಿಯಂದು ಶಿವನನ್ನು ಪೂಜಿಸಲು ಆರಂಭಿಸಿದರು. ಪುಣ್ಯದ ಲವಾಗಿ ಬೇಡ ಮುಂದಿನ ಜನ್ಮದಲ್ಲಿ ರಾಜಾ ಚಿತ್ರಭಾನುವಾಗಿ ಜನಿಸಿದ ಎಂಬುದು ಕಥೆ. ಮಹಾಭಾರತದಲ್ಲಿ ಬರುವ ಈ ಕಥೆಯನ್ನು ಮರಣಶಯ್ಯೆಯಲ್ಲಿ ಮಲಗಿದ್ದ ಭೀಷ್ಮ ಹೇಳಿದನೆಂಬುದು ಪ್ರತೀತಿ. ಶಿವರಾತ್ರಿ ಆಚರಣೆ ಹಿನ್ನೆಲೆ: ೧. ಪ್ರತಿ ಸಂವತ್ಸರದಲ್ಲಿ.. ಶಿಶಿರ ಋತುವಿನ ಮಾಘ ಮಾಸದ ಕೃಷ್ಣಪಕ್ಷ ಚತುರ್ದಶಿಯಂದು... ರಾತ್ರಿ ಸಮಯದಲ್ಲಿ ಶಿವ ಪಾರ್ವತಿ ಜೊತೆಯಲ್ಲಿ ಭೂಮಿಗೆ ಬರುತ್ತಾನೆ.. ಭೂಮಿಯಲ್ಲಿ ಸಂಚರಿಸುತ್ತ ಎಲ್ಲ ಸ್ಥಾವರ ಜಂಗಮ ಲಿಂಗಗಳಲ್ಲಿ ಸಂಕ್ರಮಣ ಗೊಳ್ಳುತ್ತಾನೆ.. ಆ ಸಮಯದಲ್ಲಿ ಅಂದ್ರೆ ಶಿವರಾತ್ರಿ ರಾತ್ರಿ ವೇಳೆಯಲ್ಲಿ ತನ್ನನ್ನು ಯಾರು ಪೂಜಿಸುವರೋ ಅವರ ಪಾಪಗಳು ಪರಿಹಾರವಾಗುತ್ತವೆ ಎಂದು ಸ್ವತಃ ಶಿವನೇ ತಿಳಿಸಿದ್ದಾನೆ ಎಂಬುದರ ಬಗ್ಗೆ ಶಾಸ್ತ್ರೋಕ್ತಿ ಯೂ ಇದೆ. ೨. ಸ್ಕಂದ ಪುರಾಣ ದಲ್ಲಿ ಶಿವರಾತ್ರಿ ಹಬ್ಬದ ಬಗ್ಗೆ ಉಲ್ಲೇಖವಿದೆ.. ಶಿವರಾತ್ರಿಯು ಸಮಯ ಪೂಜೆಗೆ ಬಹು ಪ್ರಾಶಸ್ತ್ಯವಾದ ಸಮಯ... ಆ ದಿನ ರಾತ್ರಿಯಲ್ಲಿ ಮೋಡಗಳಿಲ್ಲದ ಶುಭ್ರ ಆಕಾಶ, ಮಂಗಳಕರ ನಾದ ಶುಭ್ರ ಚಂದ್ರ ಸ್ಪೂರ್ತಿ ಹುಟ್ಟಿಸುವ ಸಂವೇದನಾಶೀಲ ವಾತಾವರಣವನ್ನು ಕಾಣಬಹುದು.. ಈ ಪರ್ವಕಾಲವು ಪೂಜೆಗೆ ಪ್ರಶಸ್ತವಾದ ಕಾಲವಾಗಿದ್ದು ಶಿವನ ಆರಾಧನೆ ಮಾಡಿದರೆ ಪಾಪ ಕರ್ಮಗಳನ್ನು ಕಳೆಯುತ್ತಾನೆ ಎಂಬ ಪ್ರತೀತಿ ಇದೆ. ೩. ತ್ರಯೋದಶಿಯು ಶಕ್ತಿರೂಪವಾದರೆ,, ಚತುರ್ದಶಿಯು ಶಿವರೂಪ. ತ್ರಯೋದಶಿಯು ಚತುರ್ದಶಿಯಲ್ಲಿ ಅಂತರ್ಗತ ವಾಗಿದ್ದರೆ ಅದು ಶಿವಶಕ್ತಿಯೋಗ ವಾಗುತ್ತದೆ. ಅದೆ ಶಿವರಾತ್ರಿಯ ಸಮಯವೆಂದು ಉಕ್ತಿಯೊಂದರಲ್ಲಿ ಉಲ್ಲೇಖವಿದೆ. ಈ ಶುಭ ಪುಣ್ಯದಿನದಂದು ಬ್ರಹ್ಮ ವಿಷ್ಣು ಆದಿಯಾಗಿ ಶಿವನನ್ನು ಪೂಜಿಸಿದ್ದು ಶಿವನೆ ತನಗೆ ಶಿವರಾತ್ರಿ ಪ್ರಿಯವಾದ ದಿನವೆಂದು ಹೇಳಿರುವನೆಂದು ಪ್ರತೀತಿ ಇದೆ.  ೪. 'ಶಿವ ಪುರಾಣ ' ದಲ್ಲಿ ಬರುವ ಬೇಡರ ಕಣ್ಣಪ್ಪನ ಕಥೆ....., ' ಸ್ಕಂದ ಪುರಾಣ 'ದ ಬೇಡ ಚಂದನನ ಕಥೆ..., ' ಗರುಡ ಮತ್ತು ಅಗ್ನಿ ಪುರಾಣ ' ಗಳ ಬೇಡ ಸುಂದರ ಸೇನನ ಕಥೆ... ಈ ಎಲ್ಲ ಕಥೆಗಳಲ್ಲೂ ಒಂದು ವಿಶೆಷವಾದ ಸಾಮ್ಯತೆಯನ್ನು ಕಾಣಬಹುದು.. ಮಹಾ ಶಿವರಾತ್ರಿಯಂದು ಉಪವಾಸ ಮಾಡಿ ಶಿವನಿಗೆ ಅಭಿಷೇಕ ಮಾಡಿ ಬಿಲ್ವ ಪತ್ರೆಗಳನ್ನು ಅರ್ಪಿಸಿದ್ದರಿಂದ ಅವರೆಲ್ಲರಿಗೂ ಸದ್ಗತಿ ಪ್ರಾಪ್ತವಾಯಿತು. ಇದು ಶಿವರಾತ್ರಿ ಪೂಜೆಯ ಫಲದ ಮಹಿಮೆಯನ್ನು ಎತ್ತಿ ತೋರಿಸುತ್ತದೆ. ೫. ದೇವತೆಗಳು ಮತ್ತು ಅಸುರು ಅಮೃತಕ್ಕಾಗಿ ಸಮುದ್ರ ಮಂಥನ ಮಾಡ್ತಿರಬೇಕಾದ್ರೆ ಮೊದ್ಲು ಮಡಿಕೆ ತುಂಬ ಹಾಲಾಹಲ ಉತ್ಪತ್ತಿಯಾಯಿತು.. ಆದ್ರೆ ದೇವತೆಗಳು... ಅಸುರರು ಯಾರೂ ಆ ಹಾಲಾಹಲವನ್ನು ಕುಡಿಯೋಕೆ ಮುಂದಗಲಿಲ್ಲ.. ಆ ಹಾಲಾಹಲ ಇಡೀ ನಭೋಮಂಡಲವನ್ನೇ ನಾಶಮಾಡಬಲ್ಲ ಸಾಮರ್ಥ್ಯವನ್ನು ಹೊಂದಿತ್ತು.. ಹೀಗಾಗಿ ಲೋಕ ಕಲ್ಯಾಣಕ್ಕಾಗಿ ಪರಶಿವನೇ ಆ ಹಾಲಾಹಲವನ್ನು ಕುಡಿದುಬಿಟ್ಟ.. ಅದೇ ಸಮಯಕ್ಕೆ ಪತ್ನಿ ಪಾರ್ವತಿ ದೇವಿ ಬಂದು ಆ ವಿಷ ಶಿವನ ಹೊಟ್ಟೆ ಸೇರದಂತೆ ಗಂಟಲಲ್ಲೇ ತಡೆ ಹಿಡಿದಳು... ವ್ಯಕ್ತಿಗಳು ನಿದ್ರಿಸುತ್ತಿದ್ದರೆ ವಿಷವು ಬೇಗನೆ ದೇಹದ ತುಂಬ ಹರಡುತ್ತದೆ.. ಹೀಗಾಗಿ ದೇವತೆಗಳೆಲ್ಲರೂ ಶಿವನ ಭಜನೆ ಮಾಡಿ ಶಿವನನ್ನು ಎಚ್ಚರವಿರಿಸಿದರು.. ಹೀಗಾಗಿ ಈ ಪವಿತ್ರ ದಿನವನ್ನು ಶಿವರಾತ್ರಿ ಎಂದು ಆಚರಿಸಲಾಗುತ್ತದೆ. ಮಹಾಶಿವರಾತ್ರಿಯ ಉಪವಾಸ ಮತ್ತು ಜಾಗರಣೆಯ ಮಹತ್ವ ೧. ಶಿವನನ್ನು ಪೂಜಿಸುವುದರಿಂದ ಕರುಣಾಮಯಿಯಾದ ಶಿವನು ಸರ್ವರನ್ನು ಅನುಗ್ರಹಿಸುತ್ತಾನೆ ಎಂಬ ಪ್ರತೀತಿ ಇದೆ.. ಬೇಡರ ಕಣ್ಣಪ್ಪನು ಶಿವನನ್ನು ಪೂಜಿಸಿದ್ದರಿಂದ ಅವನನ್ನು ನುಗ್ರಹಿಸಿ ಮುಕ್ತಿ ಮಾರ್ಗ ತೋರಿಸಿದನು.. ' ಸ್ಕಂದ ಪುರಾಣ 'ದ ಪ್ರಕಾರ ಬೇಡ ಚಂದನನಿಗೂ ಶಿವನು ಅನುಗ್ರ ನೀಡಿದ್ದಾನೆ... ' ಗರುಡ ಮತ್ತು ಅಗ್ನಿ ಪುರಾಣ ' ಗಳಲ್ಲಿ ಉಲ್ಲೇಖವಿರುವಂತೆ, ಬೇಡ ಸುಂದರ ಸೇನನಿಗೂ ಶಿವನು ಆಶೀರ್ವಾದಿಸಿದ್ದಾನೆ.. ಹೀಗಾಗಿ ಮಹಾ ಶಿವರಾತ್ರಿಯಂದು ಉಪವಾಸ ಮಾಡಿ ಶಿವನಿಗೆ ಅಭಿಷೇಕ ಮಾಡಿ, ಬಿಲ್ವ ಪತ್ರೆಗಳನ್ನು ಅರ್ಪಿಸುವುದರಿಂದ ಎಲ್ಲರಿಗೂ ಸದ್ಗತಿ ಪ್ರಾಪ್ತವಾಯಿತು.  ೨. ಪ್ರತಿ ವರ್ಷದ ಶಿವರಾತ್ರಿಯ ಸಮಯದಲ್ಲಿ ಶಿವನು, ಪಾರ್ವತಿಯ ಜೊತೆಯಲ್ಲಿ ಭೂಮಿಗೆ ಆಗಮಿಸುತ್ತಾನೆ.. ಭೂ-ಸಂಚಾರ ಮಾಡುತ್ತಾನೆ.. ಎಲ್ಲ ಸ್ಥಾವರ ಜಂಗಮ ಲಿಂಗಗಳಲ್ಲಿ ಸಂಕ್ರಮಣಗೊಳ್ಳುತ್ತಾನೆ.. ಹೀಗಾಗಿ ಶಿವರಾತ್ರಿಯ ಶಿವನನ್ನು ಯಾರು ಪೂಜಿಸುವರೋ ಅವರ ಪಾಪಗಳು ಪರಿಹಾರವಾಗುತ್ತವೆ ಎಂದು ಸ್ವತಃ ಶಿವನೇ ತಿಳಿಸಿದ್ದಾನೆ ಎಂಬುದರ ಬಗ್ಗೆ ಶಾಸ್ತ್ರೋಕ್ತಿ ಇದೆ. ೩. ಮದುವೆಯಾಗದ ಹೆಣ್ಣುಮಕ್ಕಳು ಶಿವಗುಣರೂಪಿಯಾದ ಅನುರೂಪ ಪತಿಗಾಗಿ ಪ್ರಾರ್ಥಿಸಿದರೆ, ಮುತ್ತೈದೆಯರು ಪತಿಯ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸುವುದು ಸಂಪ್ರದಾಯ. ಶಿವರಾತ್ರಿಯಂದು ಶಿವನನ್ನು ಪೂಜಿಸಿದರೆ, ಸುಖ, ಶಾಂತಿ, ಸಮೃದ್ಧಿ ದೊರೆಯುವುದೆಂಬ ನಂಬಿಕೆ ಆಸ್ತಿಕರದು. ೪. ಕರುಣಾಮಯಿಯಾದ ಶಿವನನ್ನು ಭಕ್ತಿ ಪೂರಕವಾಗಿ ಯಾರೇ ಪೂಜಿಸಿದರೂ ಅವರನ್ನು ಅನುಗ್ರಹಿಸುತ್ತಾನೆ.. ಹಿಂದು ಮುಂದು ನೋಡದೇ ಅವರಿಗೆ ಬೇಡಿದ ವರಗಳನ್ನು ನೀಡುತ್ತಾನೆ.. ಭಕ್ತಿಗೆ ಮರುಳಾಗುವ ಶಿವನು ಹೀಗೆ ತನ್ನ ಭಕ್ತರಿಗೆ ಬೇಡಿದ ವರವನ್ನು ನೀಡುವುದರ ಮೂಲಕ ಎಷ್ಟೋ ಸಲ ಸಂಕಟಕ್ಕೆ ಸಿಲುಕಿದ್ದೂ ಇದೆ.. ಆದರೆ ಎಂಥದ್ದೇ ಸಂಕಟವಿದ್ದರೂ ಶಿವನು ಭಕ್ತರನ್ನು ಸದಾ ಅನುಗ್ರಹಿಸುತ್ತಲೇ ಇರುತ್ತಾನೆ.. ಅದಕ್ಕೆ “ಶಿವ ಭಕ್ತನಿಗೆ ನರಕಾ ಇಲ್ಲ” ಅನ್ನೋ ಮಾತಿದೆ. ೫. ಶಿವರಾತ್ರಿಯ ಮತ್ತೊಂದು ವಿಶೆಷವೆಂದರೆ, ಶಿವನು ಪಾರ್ವತಿ ಹಿಮವಂತನ ಮಗಳಾದ ಗಿರಿಜೆಯನ್ನು ಅಂದರೆ ಪಾರ್ವತಿ ದೇವಿಯನ್ನು ವಿವಹವಾಗಿದ್ದು ಶಿವರಾತ್ರಿಯ ದಿನವೇ.. ಪಾರ್ವತಿ ದೇವಿಯು ಶಿವರಾತ್ರಿಯ ಸಮಯದಲ್ಲಿ ಶಿವನನ್ನು ಪ್ರಾರ್ಥಿಸಿ..ಶಿವನ ಜಪ ಮಾಡಿ ಶಿವನನ್ನು ವಲಿಸಿಕೊಂಡು ವಿವಾಹಳಾದಳು... ಅಷ್ಟೇ ಅಲ್ಲ, ಶಿವನು ಸಮುದ್ರ ಮಂಥನದಿಂದ ಉದ್ಭವಿಸಿದ ವಿಷವನ್ನು ಸೇವಿಸಿ, ಜಗತ್ತನ್ನು ವಿನಾಶದಿಂದ ಪಾರು ಮಾಡಿದ್ದು ಕೂಡ ಇದೇ ಸಮಯದಲ್ಲಿ.. ಹೀಗೆ ಹಿಂದೂ ಪುರಾಣಗಳಲ್ಲಿ ಶಿವರಾತ್ರಿಗೆ ಮಹತ್ವದ ಹಿನ್ನೆಲೆ ಇದೆ.. ವೈಜ್ಞಾನಿಕವಾಗಿ ಶಿವರಾತ್ರಿಯ ಆಚರಣೆ ಸೂರ್ಯ ಮತ್ತು ಚಂದ್ರರ ಚಲನೆಯಿಂದಾಗುವ ಎಲ್ಲಾ ಕಾಲ ವ್ಯತ್ಯಾಸಕ್ಕೆ ಈ ನಮ್ಮ ದೇಹ ಹೊಂದಿಕೊಳ್ಳ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಈ ಹಬ್ಬದ ಆಚರಣೆ ಬಹು ಮುಖ್ಯ. ಈ ಸಮಯದಲ್ಲಿ ಛಳಿಗಾಲವು ಮುಗಿದು ಬೇಸಗೆಕಾಲವು ಪ್ರಾರಂಭಗೊಳ್ಳುವುದು. ಅಂದರೆ ಈ ದಿನದಂದು ಚಳಿಗಾಲ ಉತ್ತುಂಗದಲ್ಲಿದ್ದು ಅಂದು ಕೃಷ್ಣ ಪಕ್ಷದ ಕೊನೆಯ ದಿನವೂ ಆಗಿರುತ್ತದೆ. ಈ ದಿನದಲ್ಲಿ ಸೂರ್ಯನ ಶಾಖ ಕಡಿಮೆಯಾಗಿರುತ್ತದೆ ಮತ್ತು ಚಂದ್ರನ ಪ್ರಕಾಶವೂ ಕ್ಷೀಣಿಸಿರುತ್ತದೆ. ನಮ್ಮ ಪೂರ್ವಜರು ಇದನ್ನೆಲ್ಲಾ ಅರಿತೇ ಹಬ್ಬ ಹರಿದಿನಗಳನ್ನು ಆಚರಿಸುತ್ತಿದ್ದರು. ಈ ವ್ಯತ್ಯಯದ ಸಮಯದಲ್ಲಿ ನಮ್ಮ ದೇಹದಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತವೆ. ಈ ಕಾಲ ವ್ಯತ್ಯಾಸದ ಸಮಯದಲ್ಲಿ ನಮ್ಮಲ್ಲಿ ಉಸಿರಾಟದ ತೊಂದರೆ (ನೆಗಡಿ, ಕೆಮ್ಮು, ಶೀತ ಮತ್ತಿತರೆ) ಬರುವುದು. ಈ ದಿನದಂದು ನಾವು ಮಾಡುವ ಶಿವನ ಪೂಜೆ, ಉಪವಾಸಗಳು ನಮಗೆ ತುಂಬಾ ಉಪಯುಕ್ತ. ಅಂದು ಪರಶಿವನಿಗೆ ನೀರಿನ ಅಭಿಷೇಕ ಮತ್ತು ಬಿಲ್ವ ಪತ್ರೆಯ ಪೂಜೆ. ಬಿಲ್ವ ಪತ್ರೆಯಲ್ಲಿ ಉಸಿರಾಟದ ತೊಂದರೆ ನಿವಾರಿಸುವ ಗುಣವಿದೆ. ಬಿಲ್ವವನ್ನು ಲಿಂಗದ ಮೇಲೆ ಹಾಕುವಾಗ ಅದರ ವಾಸನೆ ನಮ್ಮ ದೇಹದ ಒಳಗೆ ಹೋಗುವುದು. ಬಿಲ್ವವನ್ನು ಮೂಸಿ ಎಸೆಯುವುದು ಸರಿಯಾದ ವಿಧಾನ. ಶಿವನ ಲಿಂಗವು ಕಲ್ಲಿನದಾಗಿದ್ದು ಅದರ ಮೇಲೆ ನೀರನ್ನು ಸುರಿಯುವುದರಿಂದ ಬಹಳಷ್ಟು ಶಕ್ತಿ ಹೊರಹೊಮ್ಮುತ್ತದೆ. ಅದೊಂದು ವಿಶಿಷ್ಟ ಕಲ್ಲಿನಿಂದ ಮಾಡಿದ ಲಿಂಗವಾಗಿರುತ್ತದೆ.  ಪೂಜಿಸುವ ದೇಗುಲವನ್ನು ವಾಸ್ತುವಿನ ಪ್ರಕಾರ ಕಟ್ಟಿರುತ್ತಾರೆ. ಈ ಕ್ಷೇತ್ರದಲ್ಲಿ ಹೆಚ್ಚಿನ ಗುರುತ್ವಾಕರ್ಷಣವಿದ್ದು ಅದನ್ನು ಶಿವ ಶಕ್ತಿಯೆಂದೂ ಕರೆಯುವರು. ಇಲ್ಲಿ ಮಂತ್ರಗಳನ್ನು ಪಠಿಸುತ್ತಾ ವಿಶಿಷ್ಟ ಕಲ್ಲಿನಿಂದ ಕೆತ್ತಿರುವ ಲಿಂಗಕ್ಕೆ ನೀರಿನ ಅಭಿಷೇಕ ಮಾಡುವುದರಿಂದ ಸುತ್ತ ಮುತ್ತಲಿಗೆಲ್ಲಾ ಹೆಚ್ಚಿನ ಶಕ್ತಿ ಬರುವುದೆಂಬ ನಂಬಿಕೆ ಇದೆ. ಈ ಹಿಂದೆ ನಾನು ಬರೆದ ಪೂಜಾವಿಧಾನದಂತೆ ಷೋಡಶಾಂಗ ಪೂಜೆ ಮಾಡುವುದು ವಾಡಿಕೆ.  ವೇದೋಕ್ತ ಪೂಜೆ ಮತ್ತು ಆಚರಣೆ ಬಿಲ್ವದ ಎಲೆ ಹೃದಯವನ್ನು ಹೋಲುತ್ತದೆ ಮತ್ತು ಲಿಂಗ ಪರಮಾತ್ಮನ ಪ್ರತೀಕ. ಆದ್ದರಿಂದ ಇವೆರಡರ ಜೊತೆಗೂಡಿಕೆ ಆತ್ಮ ಪರಮಾತ್ಮಗಳ ಮಿಲನ. ರಾತ್ರಿಯು ಅಜ್ಞಾನದ ಸಂಕೇತ ಮತ್ತು ಆ ವೇಳೆಯಲ್ಲಿ ನಿದ್ರೆ ಮಾಡದೇ ಎಚ್ಚರವಾಗಿರುವುದು ತಿಳುವಳಿಕೆಯ ಕಡೆಗೆ ಹೋಗುತ್ತಿರುವ ಸಂಕೇತ. ಹೀಗೆ ಶಿವರಾತ್ರಿಯ ರಾತ್ರಿ ಜಾಗರಣೆ ಮಾಡುವುದು ಮೋಕ್ಷದ ಕಡೆಗೆ ಹೊಗುವುದು ಎಂದು ತತ್ವಗಳು ತಿಳಿಸುತ್ತವೆ.  ಉಪವಾಸ ಮಾಡುವುದು ಎಂದರೆ, ದೇವರಿಗೆ ಹತ್ತಿರವಾಗಿರುವುದು/ದೇವರ ಬಗ್ಗೆ ಚಿಂತಿಸುತ್ತಿರುವುದು ಎಂದು ಅರ್ಥ. ಹೀಗೆ ಆತನ ಧ್ಯಾನದಲ್ಲಿ ಇರುವಾಗ ಊಟ/ತಿಂಡಿಯ ಕಡೆ ಗಮನ ಹೋಗುವುದಿಲ್ಲ. ಜಾಗರಣೆ ಎಂದರೆ, ಜಾಗೃತರಾಗಿರೋದು ಎಂದು. ರಾತ್ರಿಯಲ್ಲಿ ಜಾಗರಣೆ ಮಾಡುವುದರ ಅರ್ಥವೇನು? ರಾತ್ರಿ ಎನ್ನುವುದು ತಮೋ ಗುಣದ ಪ್ರತೀಕ. ಆಲಸ್ಯ, ನಿದ್ರೆ, ಅಹಂಕಾರ, ಅಜ್ಞಾನಗಳ ದ್ಯೋತಕ ನಿಶೆ. ಆ ಸಮಯದಲ್ಲಿ ಜಾಗೃತರಾಗಿರಬೆಕು ಎಂದರೆ, ಅವುಗಳಿಂದ ಜಾಗೃತರಾಗಿರಬೇಕು ಎಂಬರ್ಥ. ಹಾಗೆ ಜಾಗೃತರಾಗಿರುವುದಕ್ಕೆ ನಮಗೆ ಸಹಾಯವನ್ನು ಮಾಡುವವನು ದೇವರು. ಆ ದೇವರನ್ನು ಸ್ಮರಿಸುತ್ತ ಈ ತಮೋ ಗುಣಗಳಿಂದ ಜಾಗೃತರಾಗಿರಬೇಕು ಎನ್ನುವುದರ ಪ್ರತೀಕ ಶಿವರಾತ್ರಿಯ ಜಾಗರಣೆ. ಆ ದಿನ ಬೆಳಗ್ಗೆ ಬೇಗ ಎದ್ದು ಅಭ್ಯಂಜನ ಮಾಡಿ ಶಿವನಿಗೆ ಅಭಿಷೇಕ ಮಾಡುವುದು ರೂಢಿ. ಇಲ್ಲಿ ದಿನವನ್ನು ಮೂರು ಭಾಗಗಳನ್ನಾಗಿ ಮಾಡಿ ರುದ್ರಾಭಿಷೇಕಯುಕ್ತ ಪೂಜೆಯನ್ನು ಮಾಡುವುದು ವಾಡಿಕೆ. ರುದ್ರ ನಮಕ ಚಮಕಗಳನ್ನು ಉಚ್ಚರಿಸುವುದರಿಂದ ಉಸಿರಾಟಕ್ಕೂ ಹೆಚ್ಚಿನ ಶಕ್ತಿ ಬರುವುದು ಮತ್ತು ಬಾಯಿಯಿಂದ ಹೊರ ಹೊಮ್ಮುವ ತರಂಗಗಳಿಂದ ಸುತ್ತ ಮುತ್ತಲಿನ ಪರಿಸರ ಶಕ್ತಿಯುತವಾಗುವುದು.  ಮೊದಲಿಗೆ ಶಿವಲಿಂಗಕ್ಕೆ ಪಂಚಾಮೃತ ಅಭಿಷೇಕವನ್ನೂ ಮಾಡುವರು. ಇದಕ್ಕೆಂದೇ ಮಹಾನ್ಯಾಸವೆಂಬ ಪ್ರಕಾರವಿದೆ. ನಂತರ ನೀರಿನ ಅಭಿಷೇಕವನ್ನು ನಿರಂತರವಾಗಿ ಮಾಡುವರು. ಅಭಿಷೇಕ್ಕಾಗಿಯೇ ಪ್ರತ್ಯೇಕವಾದ ಪಾತ್ರೆ ಇರುವುದು. ಅದರ ತಳಭಾಗದಲ್ಲಿ ರಂದ್ರವಿದ್ದು ಅದನ್ನು ಲಿಂಗದ ಮೇಲೆ ತೂಗು ಬಿಟ್ಟಿರುವರು. ಅದರೊಳಗೆ ನೀರು ತುಂಬಿಸಿದರೆ, ಸಣ್ಣದಾಗಿ ನೀರು ಲಿಂಗದ ಮೇಲೆ ಬೀಳುವುದು. ಕೃಷ್ಣ ಯಜುರ್ವೇದದ ಪ್ರಕಾರವಾದ ರುದ್ರ ನಮಕ ಮತ್ತು ಚಮಕಗಳನ್ನು ಅಭಿಷೇಕದ ಸಂದರ್ಭದಲ್ಲಿ ಪಠಿಸುತ್ತಾರೆ. ಹನ್ನೊಂದು ಬಾರಿ ನಮಕ ಚಮಕಗಳನ್ನು ಹನ್ನೊಂದು ಜನ ಋತ್ವಿಕರು ಪಠಣ ಮಾಡುವುದಕ್ಕೆ ಏಕಾದಶವಾರ ರುದ್ರಾಭಿಷೇಕ ಎಂದು ಕರೆಯುವರು. ಮೊದಲಿಗೆ ಚಮಕದ ಮೂರನೆಯ ಭಾಗವನ್ನು ಉಚ್ಚರಿಸಿ, ನಂತರ ಒಂದು ನಮಕದ ಭಾಗವನ್ನೂ ನಂತರ ಹನ್ನೊಂದು ಚಮಕ ಭಾಗಗಳನ್ನೂ ಪಠಿಸುವರು. ತದನಂತರ ಎರಡನೆಯ ನಮಕದ ಭಾಗವನ್ನೂ ಮತ್ತು ಹನ್ನೊಂದು ಚಮಕ ಭಾಗಗಳನ್ನೂ ಪಠಿಸುವರು. ಹೀಗೆ ನಮಕಗಳ ಹನ್ನೊಂದೂ ಭಾಗವನ್ನು ಪಠಿಸಿ ಅಭಿಷೇಕ ಮಾಡುವರು. ಇದಕ್ಕೆ ಒಂದು ರುದ್ರವೆಂದು ಕರೆಯುವರು. ಬೆಳಗ್ಗೆ, ಸಂಜೆ ಮತ್ತು ರಾತ್ರೆ ಹೀಗೆ ೨೪ ಘಂಟೆಗಳು ಭಗವನ್ನಾಮಸ್ಮರಣೆ ಮಾಡುತ್ತಾ ಜಾಗರಣೆ ಮಾಡುವುದು ಪರಿಪಾಠ. ಅಂದು ಊಟ ಮಾಡದೆ ಅಲ್ಪಾಹಾರ ಸೇವನೆ ಮಾಡುವರು. ಜಾಗರಣೆ, ಹಬ್ಬದ ವಿಶೇಷ ಆಚರಣೆ: ಕಾಶಿ ವಿಶ್ವನಾಥ, ಗೋಕರ್ಣದ ಮಹಾಬಲೇಶ್ವರ, ರಾಮೇಶ್ವರದ ರಾಮೇಶ್ವರ ಸೇರಿದಂತೆ ರಾಜ್ಯ, ದೇಶ, ವಿದೇಶಗಳ ಶಿವದೇವಾಲಯಗಳಲ್ಲಿ ಅಂದು ವಿಶೇಷ ಪೂಜೆ ನಡೆಯುತ್ತದೆ. ಬಿಲ್ವಾರ್ಚನೆ, ರುದ್ರಾಭಿಷೇಕ, ಶಿವನಾಮ ಧ್ಯಾನಗಳ ಮೂಲಕ ಶಿವನನ್ನು ಆರಾಸಲಾಗುತ್ತದೆ. ಇಡೀ ರಾತ್ರಿ ಶಿವದೇವಾಲಯಗಳಲ್ಲಿ ರುದ್ರಪಠಣದ ಜೊತೆ ಜಾಗರಣೆ ನಡೆಯುತ್ತದೆ. ಶಿವರಾತ್ರಿಯಂದು ಬೆಳಗ್ಗೆ ಬೇಗನೆ ಏಳುವ ಭಕ್ತರು, ಸ್ವಾನ ಮಾಡಿ, ಶುಚಿರ್ಭೂತರಾಗಿ ಶಿವದೇವಾಲಯಕ್ಕೆ ತೆರಳುತ್ತಾರೆ. ಕೆಲವರು ಕೈಲಾಸಯಂತ್ರ ರಚಿಸಿ, ಮನೆಯಲ್ಲಿಯೇ ಶಿವನಿಗೆ ವಿಶೇಷ ಪೂಜೆ ನಡೆಸುತ್ತಾರೆ. ಗಂಗಾ, ಬ್ರಹ್ಮಪುತ್ರ, ಕೃಷ್ಣ, ಕಾವೇರಿ, ತ್ರಿವೇಣಿ ಸಂಗಮ ಸೇರಿದಂತೆ ಪುಣ್ಯನದಿಗಳಲ್ಲಿ ಭಕ್ತರು ಸ್ನಾನ ಮಾಡುತ್ತಾರೆ. ಕೆಲವರು ಹಾಲು, ಹಣ್ಣು ಸೇವಿಸಿ ಲಘು ಉಪಹಾರ ಸೇವಿಸಿದರೆ, ಕೆಲವು ಭಕ್ತರು ದಿನವಿಡಿ ಏನನ್ನೂ ತಿನ್ನದೆ, ನೀರನ್ನೂ ಕುಡಿಯದೆ ಉಪವಾಸ ಇರುತ್ತಾರೆ. ಭಸ್ಮ ಲೇಪಿಸಿಕೊಂಡು, ಬಿಲ್ವಾರ್ಚನೆ ಮೂಲಕ ರುದ್ರ ಪಠಣ ಹಬ್ಬದ ಆಚರಣೆಯ ವಿಶೇಷ. ಅಭಿಷೇಕಪ್ರಿಯ ಎಂದೇ ಖ್ಯಾತನಾದ ಶಿವನಿಗೆ ದಿನವಿಡಿ ಹಾಲು, ಜೇನುತುಪ್ಪ ಹಾಗೂ ನೀರಿನ ಅಭಿಷೇಕ ನಡೆಯುತ್ತದೆ. ಪ್ರತಿ 3 ಗಂಟೆಗೊಮ್ಮೆ ಶಿವಲಿಂಗಕ್ಕೆ ಅಭಿಷೇಕ ಮಾಡಲಾಗುತ್ತದೆ. ಬಿಲ್ವಪತ್ರೆ, ತುಳಸಿ, ಶ್ರೀ ಗಂಧ, ಹಾಲು, ಜೇನುತುಪ್ಪಗಳಿಂದ ಅಭಿಷೇಕ ನಡೆಯುತ್ತದೆ. ಶಿವ ಪಂಚಾಕ್ಷರಿ ಮಂತ್ರ "ಓಂ ನಮ: ಶಿವಾಯ", ಹರ ಹರ ಮಹಾದೇವ, ಶಂಭೋ ಶಂಕರ...ಶಿವದೇವಾಲಯಗಳಲ್ಲಿ ಮಾರ್ದನಿಸುತ್ತದೆ. ನಾಲ್ಕು ಆಯಾಮಗಳ ರುದ್ರಪಠಣ, ಶಿವರಾತ್ರಿ ಪೂಜೆಯ ವಿಶೇಷ. ಶಿವಪುರಾಣದ ಪ್ರಕಾರ ರುದ್ರ ಹಾಗೂ ಚಮೆಗಳ ಪಠಣ ಶಿವನಿಗೆ ಅಚ್ಚುಮೆಚ್ಚು. ದೇವಾಲಯಗಳಲ್ಲಿ ಸಂಜೆ 6 ಗಂಟೆಯಿಂದ ಮೊದಲ್ಗೊಂಡು ಮುಂಜಾನೆ 6 ಗಂಟೆಯವರೆಗೆ ರುದ್ರಪಠಣದ ಮೂಲಕ ಶಿವ ಸ್ತುತಿ, ಜಾಗರಣೆ ನಡೆಯುತ್ತದೆ. ಪ್ರತಿ 3 ಗಂಟೆಗೊಮ್ಮೆ ಮಂಗಳಾರತಿ ಮಾಡಲಾಗುತ್ತದೆ. ಬೆಳಗ್ಗೆ 6 ಗಂಟೆಗೆ ಮಹಾಮಂಗಳಾರತಿ ಆಚರಣೆ ಮೂಲಕ ಜಾಗರಣೆ ಮುಕ್ತಾಯಗೊಳ್ಳುತ್ತದೆ. ಮೊದಲನೆಯ ಆಯಾಮದಲ್ಲಿ ಹಾಲು, ಎರಡನೆಯ ಆಯಾಮದಲ್ಲಿ ಮೊಸರು, ಮೂರನೆಯ ಆಯಾಮದಲ್ಲಿ ತುಪ್ಪ ಹಾಗೂ ನಾಲ್ಕನೆಯ ಆಯಾಮದಲ್ಲಿ ಜೇನುತುಪ್ಪಗಳಿಂದ ಶಿವನಿಗೆ ಅಭಿಷೇಕ ಮಾಡುವ ಪದ್ಧತಿಯೂ ಕೆಲವೆಡೆ ಇದೆ. ಉಲ್ಲೇಖಗಳು ಪ್ರಮುಖ ದಿನಗಳು ಹಬ್ಬಗಳು ಹಿಂದೂ ಧರ್ಮದ ಹಬ್ಬಗಳು
3754
https://kn.wikipedia.org/wiki/%E0%B2%B9%E0%B3%8B%E0%B2%B3%E0%B2%BF
ಹೋಳಿ
ಫಾಲ್ಗುಣ ಮಾಸದ ಶುಕ್ಲ ಪಕ್ಷದ ಪೂರ್ಣಿಮೆಯಂದು ಹೋಳಿಹಬ್ಬ ಅಥವಾ ಕಾಮನಹಬ್ಬವನ್ನು ಆಚರಿಸುತ್ತೇವೆ. ಉತ್ತರ ಭಾರತದಲ್ಲಿ ಈ ಹಬ್ಬಕ್ಕೆ ಹೆಚ್ಚು ಮಹತ್ವವಿದೆ. ಪುರಾಣ ಕಾರಣ ಪುರಾಣದಲ್ಲಿ ಉಲ್ಲೇಖವಿರುವ ಕಾಮದಹನದಲ್ಲಿ- ತಾರಕಾಸುರನೆಂಬ ರಾಕ್ಷಸ ರಾಜ ಬ್ರಹ್ಮನ ವರಬಲದ ಸೊಕ್ಕಿನಿಂದ ಲೋಕದಲ್ಲಿ ಮೆರೆಯತೊಡಗಿದಾಗ, ಆತನ ಉಪಟಳ ತಾಳಲಾರದೆ, ಅವನ ಸಂಹಾರಕ್ಕೆ ದೇವತೆಗಳು ಉಪಾಯ ಹೂಡುತ್ತಾರೆ. ಶಿವನಿಗೆ ಜನಿಸಿದ ಏಳು ದಿನದ ಮಗುವಿನಿಂದ ಮಾತ್ರವೇ ತನಗೆ ಸಾವು ಎಂಬ ವರಬಲವೇ ಆತನ ಮದಕ್ಕೆ ಕಾರಣ. ಆದರೆ ಆ ಸಂದರ್ಭದಲ್ಲಿ ಶಿವನು ದಕ್ಷ ಯಜ್ಞದಲ್ಲಿ ದಾಕ್ಷಾಯಿಣಿಯನ್ನು ಕಳೆದುಕೊಂಡು ಭೋಗಸಮಾಧಿಯಲ್ಲಿದ್ದ ಕಾರಣ, ಮತ್ತೊಂದೆಡೆ ಶಿವೆಯೂ ಶಿವನಿಗಾಗಿ ತಪಸ್ಸು ಮಾಡುತ್ತಿದ್ದ ಕಾರಣ, ಅವರಿಬ್ಬರೂ ಒಂದುಗೂಡುವಂತಿರಲಿಲ್ಲ. ದೇವತೆಗಳು ಕಾಮ (ಮನ್ಮಥ)ನ ಮೊರೆ ಹೋದರು. ತತ್ಫಲವಾಗಿ ತನ್ನ ನಿರ್ನಾಮದ ಅರಿವಿದ್ದೂ, ಲೋಕಕಲ್ಯಾಣವೆಂಬ ಅತಿಶಯವಾದ ಪರೋಪಕಾರಾರ್ಥವಾಗಿ ಕಾಮನು ತನ್ನ ಹೂಬಾಣಗಳಿಂದ ಶಿವನನ್ನು ಬಡಿದೆಬ್ಬಿಸಿ, ತಪೋಭಂಗ ಮಾಡುತ್ತಾನೆ. ಕೆರಳಿ ಮೂರನೇ ಚಕ್ಷುವನ್ನು ತೆರೆದ ಈಶ್ವರನ ಕ್ರೋಧಾಗ್ನಿಗೆ ಕಾಮನು ಸುಟ್ಟು ಭಸ್ಮವಾಗುತ್ತಾನೆ. ಕಾಮನರಸಿ ರತಿದೇವಿಯು ಪರಿಪರಿಯಾಗಿ ಶಿವನಲ್ಲಿ ಪತಿಭಿಕ್ಷೆ ಯಾಚಿಸಲು, ಕಾಮನು ಅನಂಗನಾಗಿಯೇ ಇರುತ್ತಾನೆ. ಆದರೆ ಪತ್ನಿಗೆ ಮಾತ್ರ ಶರೀರಿಯಾಗಿ ಕಾಣಿಸುತ್ತಾನೆ ಎಂದು ಶಿವನು ಅಭಯ ನೀಡಿದನೆಂಬುದು ಪುರಾಣ ಕಥನ. ಮತ್ತೊಂದು ಪಾಠಾಂತರದ ಪ್ರಕಾರ- ಪೂರ್ವದಲ್ಲಿ ತಾರಕಾಸುರನೆಂಬ ರಾಕ್ಷಸನಿದ್ದ. ದುರಹಂಕಾರಿಯೂ ಕ್ರೂರಿಯೂ ಆದ ತಾರಕಾಸುರನು ಲೋಕಕಂಟಕನಾಗಿ ಮೆರೆಯುತ್ತಿದ್ದ. ತನಗೆ ಮರಣವು ಬಾರದಿರಲಿ, ಬಂದರೂ ಅದು ಶಿವನಿಗೆ ಜನಿಸಿದ ಏಳು ದಿನದ ಶಿಶುವಿನಿಂದ ಬರಲಿ ಅಂದು ಬ್ರಹ್ಮನಲ್ಲಿ ವರವನ್ನು ಬೇಡಿದ್ದ. ಭೋಗಸಮಾಧಿಯಲ್ಲಿದ್ದ ಶಿವ, ಪಾರ್ವತಿಯ ಜೊತೆ ಸಮಾಗಮ ಹೊಂದಲು ಸಾದ್ಯವಿರಲಿಲ್ಲ. ದೇವತೆಗಳು ನಿರುಪಾಯರಾಗಿ ಪಾರ್ವತಿಯಲ್ಲಿ ಮೋಹ ಹೊಂದುವಂತೆ ಮಾಡಲು ಕಾಮನಲ್ಲಿ ಬೇಡಿದರು. ಕಾಮ (ಮನ್ಮಥ) ಮತ್ತು ಅವನ ಪತ್ನಿ ರತಿದೇವಿ ಈ ಸತ್ಕಾರ್ಯಕ್ಕೆ ಒಪ್ಪಿದರು. ಭೋಗಸಮಾಧಿಯಲ್ಲಿದ್ದ ಶಿವನಿಗೆ ಹೂ ಬಾಣಗಳಿಂದ ಹೊಡೆದು ಸಮಾಧಿಯಿಂದ ಎಚ್ಚರಿಸಿದರು. ಇದರಿಂದ ಕುಪಿತಗೊಂಡ ಶಿವನು ತನ್ನ ಮೂರನೇ ಕಣ್ಣಿಂದ ಕಾಮನನ್ನು ಸುಟ್ಟು ಭಸ್ಮ ಮಾಡಿದನು. ರತಿದೇವಿ ದು:ಖದಿಂದ ಶಿವನಲ್ಲಿ ಪತಿಭಿಕ್ಷೆಯನ್ನು ಬೇಡಿದಳು. ಶಾಂತಗೊಂಡ ಶಿವನು ಪತ್ನಿಯೊಡನೆ ಮಾತ್ರ ಶರೀರಿಯಾಗುವಂತೆ ಕಾಮನಿಗೆ ವರ ಕೊಟ್ಟನು. ಲೋಕಕಲ್ಯಾಣಕ್ಕಾಗಿ ಮನ್ಮಥನು ಅನಂಗನಾದ. ಈ ಘಟನೆ ನಡೆದದ್ದು ಫಾಲ್ಗುಣ ಶುದ್ಧ ಪೂರ್ಣಿಮೆಯಂದು. ಆದ್ದರಿಂದ ಈ ದಿನವನ್ನು "ಕಾಮನ ಹುಣ್ಣಿಮೆ"ಯಾಗಿ ಆಚರಿಸಲ್ಪಡುತ್ತದೆ. ನಾರದ ಪುರಾಣದಲ್ಲಿ ಮತ್ತೊಂದು ಕಥೆ ಬರುತ್ತದೆ. ತಾನೇ ದೇವರು ಎಂದು ಒಪ್ಪಿಕೊಳ್ಳದೆ ಶ್ರೀಹರಿಯನ್ನೇ ಜಗನ್ನಿಯಾಮಕನೆಂದು ಪರಿಭಾವಿಸುವ ತನ್ನದೇ ಕರುಳ ಕುಡಿ ಪ್ರಹ್ಲಾದನನ್ನು ಕೊಲ್ಲಲು, ದೈತ್ಯರಾಜ ಹಿರಣ್ಯಕಶ್ಯಪು ನಾನಾ ವಿಧದ ಪ್ರಯತ್ನಗಳನ್ನು ಮಾಡಿಯೂ ವಿಫಲನಾಗಿ, ಕೊನೆಗೆ, ಬೆಂಕಿಯಿಂದ ರಕ್ಷಣೆ ನೀಡುವ ವಸ್ತ್ರ ಹೊಂದಿರುವ ತಂಗಿ ಹೋಳಿಕಾ (ಹೋಲಿಕಾ)ಳ ಮೊರೆ ಹೋಗುತ್ತಾನೆ. ಅಣ್ಣನ ಅನುಜ್ಞೆಯಂತೆ ಬಾಲ ಪ್ರಹ್ಲಾದನನ್ನು ಹೊತ್ತುಕೊಂಡ ಹೋಳಿಕಾ, ಅಗ್ನಿಕುಂಡ ಪ್ರವೇಶಿಸುತ್ತಾಳೆ. ಆಗ ವಸ್ತ್ರವು ಹಾರಿಹೋಗುತ್ತದೆ, ಹೋಳಿಕಾಳ ದಹನವಾಗುತ್ತದೆ. ವಿಷ್ಣು ಭಕ್ತಾಗ್ರೇಸರ ಪ್ರಹ್ಲಾದ ಬದುಕುಳಿಯುತ್ತಾನೆ. ಮೇಲೆ ಹೇಳಿದ ಎರಡೂ ಪುರಾಣ ಕಥನಗಳ ಸಂದೇಶ ಒಂದೇ. ಕೆಟ್ಟದ್ದನ್ನು ಸುಟ್ಟು ಬಿಡುವುದು; ಕಾಮಕ್ರೋಧಾದಿ ಅರಿಷಡ್ವರ್ಗಗಳನ್ನು ಅಗ್ನಿಕುಂಡದಲ್ಲಿ ಸುಟ್ಟು, ಸದಾಚಾರವನ್ನು ರೂಢಿಸಿಕೊಳ್ಳುವುದು. ಆಸುರೀ ಶಕ್ತಿಗಳ ನಿರ್ನಾಮದ ದ್ಯೋತಕವಾಗಿ ಹೋಳಿ ಅಂದರೆ ಉತ್ಸವಾಗ್ನಿ ಹಾಕುವ ಪದ್ಧತಿ ಉತ್ತರ ಭಾರತದಲ್ಲಿ ಹೆಚ್ಚಾಗಿ ಆಚರಣೆಯಲ್ಲಿದೆ. ಇಂಥದ್ದೊಂದು ಅಮೂಲ್ಯ ಸಂದೇಶ ಸಾರುವ ಮತ್ತು ಆ ಮೂಲಕ ಕೆಡುಕಿಗೆ ಯಾವತ್ತೂ ಸೋಲು ಕಾದಿದೆ ಎಂಬ ಸಂದೇಶ ಸಾರುವ ಹೋಳಿ ಹಬ್ಬ ಅಥವಾ ಕಾಮನ ಹಬ್ಬದ ಆಚರಣೆಯಲ್ಲಿ ಸದುದ್ದೇಶವಿದೆ. ಆಚರಣೆ adareay ಈ ದಿನದಂದು ಅಕ್ಕಿಹಿಟ್ಟು ಮತ್ತು ಅರಿಶಿನ ಬೆರೆಸಿದ ಗುಲಾಲು ತಯಾರಿಸಿ, ಬಿದಿರಿನಿಂದ ಪಿಚಕಾರಿ ತಯಾರಿಸಿ ಬಣ್ಣದಾಟ ಆಡುವರು.onam in kannada story blodsky ರಂಗಿನಾಟದ ನಂತರ ಅಭ್ಯಂಜನ ಸ್ನಾನ ಮಾಡಿ ದೇವರಲ್ಲಿ ಪ್ರಾರ್ಥಿಸಿ ಮನೆಗಳಲ್ಲಿ ವಿಶೇಷ ಅಡಿಗೆಗಳನ್ನು ತಯಾರಿಸುವರು. ಉತdgfdht ರ ಪ್ರದೇಶದಲ್ಲಿ ಜೋಳದ ಹಿಟ್ಟಿನ ಗುಜಿಯಾ ಹಾಗೂ ಪಾಪ್ಡಿ ಜನಪ್ರಿಯವಾಗಿದೆ. ದೆಹಲಿಯಲ್ಲಿ ಈ ದಿನದಂದು ಹತ್ತು ತಲೆಯ ರಾವಣನ ಮೂರ್ತಿಯನ್ನು ಬಿದಿರಿನಿಂದ ತಯಾರಿಸಿ, ಅದಕ್ಕೆ ಹಳೇ ಬಟ್ಟೆಗಳನ್ನೇಲ್ಲ ಧರಿಸಿ ಗಣ್ಯರನ್ನೇಲ್ಲ ಕರೆದು, ಅವರ ಸಮ್ಮುಖದಲ್ಲಿ ಲಂಕೇಶನನ್ನು ಸುಡುವುದು ವಾಡಿಕೆ. ಗ್ರಾಮೀಣ ಪ್ರದೇಶಗಳಲ್ಲಿ ಆ ದಿನ ಊರಿನವರ ಮನೆಯಲ್ಲಿ ಸಿಗುವ ಬೇಡದ ವಸ್ತುಗಳನ್ನೆಲ್ಲ ತಂದು ಒಂದೆಡೆ ಗುಡ್ಡೆ ಮಾಡಿ, ರಾತ್ರಿ ಹುಡುಗನೊಬ್ಬನಿಗೆ ಶಿಖಂಡಿಯ ವೇಷ ಹಾಕಿಸಿ, ಅವನಿಂದ ಊರಿನ ಐದು ಮನೆಗಳಲ್ಲಿ ಭಿಕ್ಷೆ ಬೇಡಿಸಿ ಕರೆತಂದು ಅವನಿಂದ ಆ ಬೇಡದ ವಸ್ತುಗಳ ಗುಡ್ಡೆಗೆ ಬೆಂಕಿ ಇಡಿಸುತ್ತಾರೆ. ಅದೇ ಅವರ ಕಾಮದಹನದ ಹಬ್ಬ. ಉಲ್ಲೇಖಗಳು https://www.holifestival.org/ https://theculturetrip.com/asia/india/articles/what-is-holi-and-why-is-it-celebrated/ https://www.incredibleart.org/links/holi.html ಹಬ್ಬಗಳು ಸಂಸ್ಕೃತಿ
3758
https://kn.wikipedia.org/wiki/%E0%B2%AC%E0%B2%B8%E0%B2%B5%E0%B3%87%E0%B2%B6%E0%B3%8D%E0%B2%B5%E0%B2%B0%20%E0%B2%9C%E0%B2%AF%E0%B2%82%E0%B2%A4%E0%B2%BF
ಬಸವೇಶ್ವರ ಜಯಂತಿ
೧೨ನೇ ಶತಮಾನದಲ್ಲಿ ಸಾಮಾಜಿಕ ಕ್ರಾ೦ತಿಗೆ ಕಾರಣಾರಾದ ಮಹಾನ್ ವ್ಯಕ್ತಿಗಳಲ್ಲಿ ಜಗಜ್ಯೊತಿ ಬಸವಣ್ಣನವರು ಒಬ್ಬರು.ಬಸವಣ್ಣನವರು ಮಾದರಸ ಮತ್ತು ಮಾದಲಾಂಬಿಕೆಯ ಮಗನಾಗಿ ಬಾಗೇವಾಡಿಯಲ್ಲಿ ಜನಿಸಿದರು. ಬಸವಣ್ಣನವರು ಮತ್ತು ಶಿವಶರಣರು ಸ್ವೀಕರಿಸಿ, ಆಚರಿಸಿದ ಸಮಾನತೆ, ಸಾಮಾಜಿಕ ನ್ಯಾಯ, ಕಾಯಕ ಯೋಗ, ಮಹಿಳಾ ಸಬಲೀಕರಣ, ದಲಿತೋದ್ದಾರ ಮತ್ತು ಸಾಮಾಜಿಕ ಕ್ರಾಂತಿಯ ಸಂದೇಶವನ್ನು ಜನತೆಗೆ ನೀಡುವುದು ಶ್ರೀ ಬಸವೇಶ್ಡರ ಜಯಂತಿಯ ಮೂಲ ಉದ್ದೇಶವಾಗಿದೆ. ೧೨ನೇ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಯು ಇಂದು ನಾವು ಎದುರಿಸುತ್ತಿರುವ ಅನೇಕ ಸಾಮಾಜಿಕ ಸಮಸ್ಯೆಗಳಿಗೆ ಉತ್ತರ ನೀಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಪ್ರಮುಖ ದಿನಗಳು ಹಬ್ಬಗಳು
3759
https://kn.wikipedia.org/wiki/%E0%B2%AC%E0%B3%81%E0%B2%A6%E0%B3%8D%E0%B2%A7%20%E0%B2%AA%E0%B3%82%E0%B2%B0%E0%B3%8D%E0%B2%A3%E0%B2%BF%E0%B2%AE
ಬುದ್ಧ ಪೂರ್ಣಿಮ
ಬುದ್ಧ ಪೂರ್ಣಿಮ' ಬೌದ್ಧ ಧರ್ಮೀಯರ ಪವಿತ್ರ ದಿನಗಳಲ್ಲಿ ಒಂದಾಗಿದೆ. ಗೌತಮ ಬುದ್ಧ ಹುಟ್ಟಿದ ದಿನವಾದ ವೈಶಾಖ ಮಾಸದ ಶುಕ್ಲ ಪಕ್ಷ ಹುಣ್ಣಿಮೆ ದಿನದಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಬುದ್ಧ ಪೂರ್ಣಿಮೆ ಬರುತ್ತದೆ. ಪ್ರಮುಖ ದಿನಗಳು ಹಬ್ಬಗಳು ಬೌದ್ಧ ಧರ್ಮ
3762
https://kn.wikipedia.org/wiki/%E0%B2%8F%E0%B2%AA%E0%B3%8D%E0%B2%B0%E0%B2%BF%E0%B2%B2%E0%B3%8D%20%E0%B3%A7%E0%B3%AA
ಏಪ್ರಿಲ್ ೧೪
ಏಪ್ರಿಲ್ ೧೪ - ಏಪ್ರಿಲ್ ತಿಂಗಳ ಹದಿನಾಲ್ಕನೆ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೦೪ನೇ ದಿನ (ಅಧಿಕ ವರ್ಷದಲ್ಲಿ ೧೦೫ನೇ ದಿನ). ಈ ದಿನದ ನಂತರ ವರ್ಷದಲ್ಲಿ, ೨೬೦ ದಿನಗಳಿರುತ್ತವೆ. ಪ್ರಮುಖ ಘಟನೆಗಳು ಜನನ ೧೮೯೧ - ಭಾರತದ ಸಂವಿಧಾನ ಶಿಲ್ಪಿ ಡಾ| ಬಿ.ಆರ್.ಅಂಬೇಡ್ಕರ್. ೧೫೬೩ - ಸಿಖ್ಖರ ಗುರು ಅರ್ಜುನ್‌ದೇವ್. ೧೯೫೦ - ದಕ್ಷಿಣ ಭಾರತದ ಸಂತ ರಮಣ ಮಹರ್ಷಿ. ೧೯೪೮ - ಕನ್ನಡದ ಕಾದಂಬರಿಕಾರ ವಿಜಯ ಸಾಸನೂರ. ೨೦೧೦ - ಸುಮಾರು ೨೭೦೦ ರಲ್ಲಿ ಯೂಷೂ, ಇನ್ಘೈ, ಚೀನಾ ಒಂದು ಪರಿಮಾಣದ ೬.೯ ಭೂಕಂಪ ಸಾವನ್ನಪ್ಪುತ್ತವೆ. ೨೦೧೪ - ಅಬುಜಾ, ನೈಜೀರಿಯಾ ಅವಳಿ ಸ್ಫೋಟ, ಕನಿಷ್ಠ ೭೫ ಜನರ ಸಾವು ಹೊಂದಿದ್ದರು ೨೦೧೪ - ಇನ್ನೂರು ಎಪ್ಪತ್ತಾರನೆಯ ಶಾಲಾಮಕ್ಕಳಾಗಿದ್ದರೆಂದು ಚಿಬೊಕ್ ರಲ್ಲಿ ಬೊಕೊ ಹರಮ್, ಈಶಾನ್ಯ ನೈಜೀರಿಯಾ ಅಪಹರಿಸಿದ ಮಾಡಲಾಗುತ್ತದೆ. ೨೦೧೬ - ಕುಮಾಮೊಟೊ ಭೂಕಂಪಗಳ ಮೊದಲ ಪೂರ್ವಾಘಾತ, ಜಪಾನ್ ಸಂಭವಿಸುತ್ತವೆ. ಮರಣ ೧೯೬೨ - ಪ್ರಸಿದ್ಧ ಎಂಜಿನಿಯರ್ ಹಾಗೂ ಭಾರತರತ್ನ ಸರ್.ಮೋಕ್ಷಗುಂಡಂ ವಿಶ್ವೇಶ್ವರಯ್ಯ(ತಮ್ಮ ೧೦೫ನೇ ವಯಸ್ಸಿನಲ್ಲಿ) ೨೦೧೫ - ರಾಬರ್ಟೊ ಟುಸಿ, ಇಟಾಲಿಯನ್ ಕಾರ್ಡಿನಲ್ ಮತ್ತು ದೇವತಾಶಾಸ್ತ್ರಜ್ಞ ೨೦೧೫ - ಮಲಿಕ್ ಸಿಡಿಬೆ, ಮಾಲಿಯನ್ ಛಾಯಾಗ್ರಾಹಕ ೨೦೧೩ - ಖ್ಯಾತ ಹಿನ್ನೆಲೆ ಗಾಯಕ ಡಾ.ಪಿ.ಬಿ.ಶ್ರೀನಿವಾಸ್ ದಿನಾಚರಣೆಗಳು ಡಾ. ಅಂಬೇಡ್ಕರ ಜಯಂತಿ. ಸೌರಮಾನ ಯುಗಾದಿ. ದಿನಗಳು
3763
https://kn.wikipedia.org/wiki/%E0%B2%9C%E0%B2%A8%E0%B2%B5%E0%B2%B0%E0%B2%BF%20%E0%B3%A8%E0%B3%AC
ಜನವರಿ ೨೬
ಜನವರಿ ೨೬ ಜನವರಿ ತಿಂಗಳಿನ ಇಪ್ಪತ್ತಾರನೇ ದಿನ. ವಿಶೇಷ ಸುದ್ದಿಗಳು ರಾಷ್ಟ್ರೀಯ ಜನನ ೧೯೧೫ - ಕನ್ನಡದ ಸಾಹಿತಿ ಕೆ.ಎಸ್.ನರಸಿಂಹಸ್ವಾಮಿ ನಿಧನ ಭಾರತದ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ದಿನಾಚರಣೆಗಳು ಭಾರತದ ಗಣರಾಜ್ಯೋತ್ಸವ ಜನವರಿ ದಿನಗಳು
3765
https://kn.wikipedia.org/wiki/%E0%B2%B0%E0%B2%95%E0%B3%8D%E0%B2%B7%E0%B2%BE%20%E0%B2%AC%E0%B2%82%E0%B2%A7%E0%B2%A8
ರಕ್ಷಾ ಬಂಧನ
ಅಣ್ಣ ತಂಗಿಯ ಜೀವನದ ಒಂದು ಉತ್ತಮ ಪ್ರೀತಿಯ ಸಂಕೇತ ಒಬ್ಬರನ್ನು ಪರಸ್ಪರ ರಕ್ಷಣೆ ಮಾಡುವ ಮನಸ್ತಾಪವನ್ನು ಹೊಂದಿರುತ್ತಾರೆ. ರಕ್ಷಾ ಬಂಧನ ಪ್ರಾಚೀನ ಕಾಲದಿಂದ ಬಹಳ ಪ್ರಾಮುಖ್ಯತೆ ಹೊಂದಿದೆ ಭಾರತೀಯರು ಶ್ರಾವಣ ಮಾಸದಲ್ಲಿ ಆಚರಿಸುವ ಒಂದು ಹಬ್ಬ. ಆ ದಿನ ಸಹೋದರಿಯರು ತಮ್ಮ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ, ಸೋದರನ ಆಶೀರ್ವಾದವನ್ನು ಬೇಡುತ್ತಾರೆ. ತಂಗಿಯ ರಕ್ಷಣೆ ಅಣ್ಣನಿಂದ, ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಪರಸ್ಪರ ಭ್ರಾತೃತ್ವದ ಭಾವನೆಯನ್ನು ದಟ್ಟ ಗೊಳಿಸುವ ಹಬ್ಬ ಇದಾಗಿದೆ. ಭಾರತದಲ್ಲಿ ಶ್ರಾವಣ ಮಾಸದ ಹುಣ್ಣಿಮೆಯನ್ನು ಯಜುರ್ ಉಪಕರ್ಮ ಎಂದು ಹಿಂದಿನಿಂದ ಆಚರಿಸುತ್ತಿದ್ದಾರೆ. ಈ ದಿನಕ್ಕೆ ಮತ್ತೊಂದು ವಿಶೇಷವಿದೆ. ಮುಂಚೆ ಉತ್ತರ ಭಾರತದಲ್ಲಿ ಮಾತ್ರ ಹೆಚ್ಚು ಪ್ರಚಲಿತವಿದ್ದ 'ರಕ್ಷಾಬಂಧನ' ಅಥವಾ 'ರಾಖಿ' ಹಬ್ಬವನ್ನು ಇತ್ತೀಚಿನ ವರ್ಷಗಳಲ್ಲಿ ಭಾರತದಾದ್ಯಂತ ಎಲ್ಲರೂ ಆಚರಿಸುತ್ತಾರೆ. ಆದರೆ ಅಣ್ಣ ತಂಗಿಯರ ಬಾಂಧವ್ಯವನ್ನು ಪ್ರತಿಯೊಬ್ಬರೂ ಭಾವನಾತ್ಮಕವಾಗಿ ಸ್ಮರಿಸುವ ಈ ದಿನ ಬಾಲ್ಯದ ಅನೇಕ ಸಿಹಿ ಕಹಿ ನೆನಪುಗಳನ್ನು ನಮ್ಮ ಮನದಲ್ಲಿ ಮೂಡಿಸುತ್ತದೆ. ರಕ್ಷಾ ಬಂಧನ ಆಚರಣೆಗೆ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವಿದೆ. ಪ್ರತಿಯೊಬ್ಬ ಸಹೋದರಿಯು ಸಮಾಜದ ದುಷ್ಟಶಕ್ತಿಗಳಿಂದ ರಕ್ಷಿಸೆಂದು ತನ್ನ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟುತ್ತಾಳೆ. ಪ್ರತಿಯೊಬ್ಬ ಸಹೋದರನೂ ಈ ಸಮಯದಲ್ಲಿ ಸಹೋದರಿಯೆಡೆಗೆ ತನ್ನ ಭ್ರಾತತ್ವ ಪ್ರೇಮವನ್ನು ಉಜ್ವಲಗೊಳಿಸಬೇಕೆಂಬುದು ರಕ್ಷಾಬಂಧನ ಹಬ್ಬದ ನೀತಿಯಾಗಿದೆ ಉಲ್ಲೇಖಗಳು https://www.raksha-bandhan.com/ https://timesofindia.indiatimes.com/life-style/events/happy-raksha-bandhan-2018-quotes-rakhi-wishes-messages-sms-facebook-and-whatsapp-status-happy-rakhi-2018/articleshow/65529005.cmshttps://hindi.timesnownews.com/spiritual/article/raksha-bandhan-2018-puja-shubh-muhurat-date-time-to-tie-rakhi/261923 ಪ್ರಮುಖ ದಿನಗಳು ಹಿಂದೂ ಧರ್ಮದ ಹಬ್ಬಗಳು
3767
https://kn.wikipedia.org/wiki/%E0%B2%95%E0%B3%83%E0%B2%B7%E0%B3%8D%E0%B2%A3%20%E0%B2%9C%E0%B2%A8%E0%B3%8D%E0%B2%AE%E0%B2%BE%E0%B2%B7%E0%B3%8D%E0%B2%9F%E0%B2%AE%E0%B2%BF
ಕೃಷ್ಣ ಜನ್ಮಾಷ್ಟಮಿ
ಕೃಷ್ಣ ಜನ್ಮಾಷ್ಟಮಿ ಭಾರತದಲ್ಲಿ ಆಚರಿಸಲ್ಪಡುವ ಒಂದು ಪ್ರಮುಖವಾದ ಹಬ್ಬ. ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ವೈಭವದಿಂದ ಆಚರಿಸಲಾಗುತ್ತದೆ. ಶ್ರೀಕೃಷ್ಣನ ಜನ್ಮದಿನವನ್ನು ಚಾಂದ್ರಮಾನ ರೀತಿಯಲ್ಲಿ ಶ್ರಾವಣ ಕೃಷ್ಣ ಅಷ್ಟಮಿಯಂದು, ಸೌರಮಾನ ರೀತಿಯಲ್ಲಿ ಸಿಂಹಮಾಸದ ರೋಹಿಣಿ ನಕ್ಷತ್ರದ ದಿನ ಆಚರಿಸುತ್ತಾರೆ. ಪುರಾಣ ಹಿನ್ನೆಲೆ ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿ ಕೃಷ್ಣನು ಹುಟ್ಟಿದ ದಿನ. ಅಷ್ಟಮಿಯ ಮಧ್ಯರಾತ್ರಿ, ಕಾರಾಗೃಹದಲ್ಲಿ ಕೃಷ್ಣನ ಜನನವಾಯಿತೆಂದು ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. ಮಥುರಾ ಕೃಷ್ಣನ ಜನ್ಮಸ್ಥಳ. ಕೃಷ್ಣನು ಹುಟ್ಟಿದೊಡನೆ ತಂದೆ ವಸುದೇವ ಅವನನ್ನು ಸೋದರಮಾವನಾದ ಕಂಸನಿಗೆ ತಿಳಿಯದಂತೆ ಗೋಕುಲಕ್ಕೆ ಕರೆದೊಯ್ಯುತ್ತಾನೆ. ಅಲ್ಲಿ ನಂದರಾಜನ ಮನೆಯಲ್ಲಿ ಕೃಷ್ಣನ ನ್ನು ಬಿಟ್ಟು ಬರುತ್ತಾನೆ. ಈ ಕಾರ್ಯಕ್ಕೆ ಪ್ರಕೃತಿಯು ನೆರವಾಗುತ್ತದೆ. ದೇವಕಿ ಕೃಷ್ಣನಿಗೆ ಜನ್ಮ ನೀಡಿದ ತಾಯಿಯಾದರೆ, ಯಶೋದೆ ಅವನನ್ನು ಸಾಕಿ ಬೆಳೆಸಿದ ತಾಯಿ. ಕೃಷ್ಣಜನ್ಮಾಷ್ಟಮಿಯ ದಿನದಂದು, ಮನೆ ಮತ್ತು ದೇವಾಲಯಗಳನ್ನು ಸುಂದರವಾಗಿ ಅಲಂಕರಿಸಲಾಗುತ್ತದೆ. ಕೃಷ್ಣನ ಪುಟ್ಟ ಹೆಜ್ಜೆಗಳನ್ನು ರಂಗೋಲಿಯಲ್ಲಿ ಬರೆದು ಸಂಭ್ರಮಿಸಲಾಗುತ್ತದೆ. ಕೃಷ್ಣನ ವಿಗ್ರಹಗಳನ್ನು ವಿಧವಿಧವಾಗಿ ಅಲಂಕರಿಸಿ, ಬಗೆಬಗೆಯ ತಿಂಡಿಗಳನ್ನು ಮಾಡಿ ಬಾಲ ಕೃಷ್ಣನನ್ನುಪೂಜಿಸಲಾಗುತ್ತದೆ. ಕೆಲವು ಕಡೆ, ಮಧ್ಯರಾತ್ರಿಯವರೆಗೆ ಉಪವಾಸವಿದ್ದು, ನಂತರ ಆಹಾರ ಸ್ವೀಕರಿಸುವ ಸಂಪ್ರದಾಯವಿದೆ. ಉಡುಪಿಯಲ್ಲಿ ಈ ದಿನದಂದು ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ. ಕೃಷ್ಣನು ಭಾದ್ರಪದ ಕೃಷ್ಣ ಅಷ್ಟಮಿಯಂದು ಮಥುರಾ ಊರಿನ ಕಾರಾಗೃಹದಲ್ಲಿ ದೇವಕಿ ಮತ್ತು ವಸುದೇವರಿಗೆ ೮ನೇ ಮಗನಾಗಿ ಜನಿಸಿದನು. ಮಥುರ (ಈಗಿನ ಉತ್ತರಪ್ರದೇಶದ ಮಥುರ ಜಿಲ್ಲೆ]]) ಯಾದವ ಕುಲದ ರಾಜಧಾನಿಯಾಗಿತ್ತು. ಕಂಸ ತಂದೆ ಉಗ್ರಸೇನರನ್ನು ಬಂಧಿನದಲ್ಲಿಟ್ಟು, ತಾನು ರಾಜನಾಗಿದ್ದನು. ನಂತರ ತನ್ನ ಪ್ರೀತಿಪಾತ್ರಳಾದ ತಂಗಿ ದೇವಕಿಗೆ ಮದುವೆ ಮಾಡುತ್ತಾನೆ. ಅಣ್ಣಕಂಸನು ದೇವಕಿ-ವಸುದೇವರ ಮದುವೆಯಾದ ಮೇಲೆ ಅವರನ್ನು ಗಂಡನ ಮನೆಗೆ ಕರೆದೊಯ್ಯುತ್ತಿದ್ದಾಗ, ಅವನಿಗೆ ಒಂದು ಅಶರೀರವಾಣಿ ಕೇಳಿಸಿತು. ಅದರ ಪ್ರಕಾರ ದೇವಕಿಯ ಎಂಟನೇ ಮಗುವೂ ಕಂಸನ ವಧನವನ್ನು ಮಾಡುತ್ತದೆ ಎಂದು. ಇದನ್ನು ಕೇಳಿದ ಕಂಸನು ದೇವಕಿಯನ್ನು ಆ ತಕ್ಷಣವೇ ಕೊಲ್ಲಲು ಹೊರಟನು. ಆಗ ವಸುದೇವನು ಅವನನ್ನು ತಡೆದು ಪ್ರತಿ ಮಗುವನ್ನು ಹುಟ್ಟಿದ ತಕ್ಷಣ ಕಂಸನ ಮಡಿಯಲ್ಲಿ ಅರ್ಪಿಸುವುದು ಎಂದು ಹೇಳಿದನು. ಅವರನ್ನು ಬಂಧಿಸಿ ಅವರಿಗೆ ಹುಟ್ಟಿದ ೭ ಮಕ್ಕಳನ್ನು ಕೊಂದನು. ೮ನೇ ಮಗು ಕೃಷ್ಣನನ್ನು ಅವನಿಗೆ ತಿಳಿಯದ ಹಾಗೆ ಯಮುನಾ ದಾಟಿ ಗೋಕುಲಕ್ಕೆ ಕರೆದು ಕೊಂಡು ಹೋದನು. ಅಲ್ಲಿ ಆಗ ತಾನೆ ಹುಟ್ಟಿದ್ದ ಯಶೋದೆ ಮಗಳನ್ನು ಇಲ್ಲಿಗೆ ತಂದನು. ಆದರೆ ಕಂಸ ಅವಳನ್ನು ಕೊಲ್ಲಲು ಬಂದಾಗ ಅವಳು ವಿಷ್ಣುವಿನ ಸಹಾಯಕಿ ಯೋಗಮಾಯಾ ರೂಪಕ್ಕೆ ಬದಲಾಗಿ ಅವನ ಸಾವಿನ ಬಗ್ಗೆ ಅರಿಯಬೇಕೆಂದು ಹೇಳಿ ಮಾಯವಾದಳು. ಕೃಷ್ಣ ಗೋಕುಲ ಹಾಗೂ ವೃಂದಾವನದಲ್ಲಿ ಬಲರಾಮನ ಜತೆ ಬೆಳೆದು, ಕೊನೇಗೆ ಮಥುರಾಗೆ ಬಂದು ಕಂಸನನ್ನು ಕೊಂದನು. ಬಾಹ್ಯಪುಟಗಳು ಕೃಷ್ಣಾಷ್ಟಮಿ ಉಲ್ಲೇಖಗಳು ಪ್ರಮುಖ ದಿನಗಳು ಹಬ್ಬಗಳು ಹಿಂದೂ ಧರ್ಮದ ಹಬ್ಬಗಳು
3768
https://kn.wikipedia.org/wiki/%E0%B2%97%E0%B2%A3%E0%B3%87%E0%B2%B6%20%E0%B2%9A%E0%B2%A4%E0%B3%81%E0%B2%B0%E0%B3%8D%E0%B2%A5%E0%B2%BF
ಗಣೇಶ ಚತುರ್ಥಿ
ಭಾರತದಲ್ಲಿ ವೈಭವದಿಂದ ಆಚರಿಸಲ್ಪಡುವ ಒಂದು ಹಬ್ಬ. ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ (ಚತುರ್ಥಿಯ) ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಗಣಪತಿಯನ್ನು ಪೂಜಿಸಲಾಗುತ್ತದೆ. ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ಗಣಪತಿಯ ಮೂರ್ತಿಯನ್ನು ವಿಧ್ಯುಕ್ತವಾಗಿ ಪೂಜಿಸಿ, ವ್ರತವೆಂದು ಆಚರಿಸಲಾಗುತ್ತದೆ. ಹಬ್ಬದ ದಿನ ಮೋದಕ, ಕಡುಬು ಎಂಬ ಸಿಹಿ ತಿಂಡಿಯನ್ನು ಮಾಡಿ ಗಣೇಶನಿಗೆ ನೈವೇದ್ಯ ಮಾಡಲಾಗುತ್ತದೆ.. ಪುರಾಣದಲ್ಲಿ ಶಿವಪುರಾಣದಲ್ಲಿ ಹೇಳಿರುವಂತೆ ಗಣಪತಿಯನ್ನು ತುಳಸೀ ದಳದಲ್ಲಿ ಪೂಜಿಸಬಾರದು. ಏಕೆಂದರೆ ತುಳಸಿಯ ದರ್ಶನ ಮತ್ತು ಗಂಧಗಳು ಗಣೇಶ ದೇವರಿಗೆ ಸಂಬಂಧಪಟ್ಟ ಒಳಕೇಂದ್ರಗಳನ್ನು ಮುಚ್ಚುತ್ತವೆ. ಕೇತಕೀ ಪುಷ್ಪದ ಸ್ಪರ್ಶವು ಶಿವನ ದರ್ಶನಕ್ಕೆ ಸಂಬಂಧಪಟ್ಟ ಕೇಂದ್ರಗಳ ಪ್ರಭಾವವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಚೌತಿಯ ಚಂದ್ರನ ದರ್ಶನವೂ ಗಣೇಶನ ಉಪಾಸನೆಗೆ ಪ್ರತಿಬಂಧಕವಾಗಿದೆ. ಸೂರ್ಯನು ಬುದ್ಧಿತತ್ವಕ್ಕೆ ಮತ್ತು ಚಂದ್ರನು ಮನಸ್ತತ್ವಕ್ಕೆ ದೇವತೆ. ಗಣೇಶನ ಆಳ್ವಿಕೆಗೆ ಒಳಪಟ್ಟಿರುವ ಇಪ್ಪತ್ತೊಂದು ತತ್ವಗಳಲ್ಲಿ ಕೊನೆಯದು ಮನಸ್ಸು. ಉಳಿದ ಇಪ್ಪತ್ತು ತತ್ವಗಳಾವುವೆಂದರೆ, ಪಂಚಭೂತಗಳು, ಪಂಚ ಕರ್ಮೇಂದ್ರಿಯಗಳು, ಪಂಚ ಜ್ಞಾನೇಂದ್ರಿಯಗಳು ಮತ್ತು ಪಂಚತನ್ಮಾತ್ರೆಗಳು. ಮನಸ್ಸನ್ನು ಸಂಯಮದಿಂದ ಒಳಗಿನ ಜ್ಞಾನಾಕಾಶದಲ್ಲಿ ಲಯಗೊಳಿಸಿದರೆ ಗಣೇಶನ ಮಹಿಮೆಯ ಅನುಭವ ಉಂಟಾಗುತ್ತದೆ. ಗಣೇಶ ಚತುರ್ಥಿಯ ರಾತ್ರಿ ಇಂತಹ ಸಂಯಮದಲ್ಲಿದ್ದು ಭಗವಂತನ ನಿಜಸ್ವರೂಪವನ್ನು ಅನುಭವಿಸುತ್ತಾ ಆನಂದವಾಗಿರಬೇಕು. ಹಾಗೆ ಮಾಡದೇ ಅದನ್ನು ಹೊರಗಿನ ಆಕಾಶದಲ್ಲಿ ಕಾಣುವ ಚಂದ್ರರೂಪದಲ್ಲಿ ನೋಡುವುದರಲ್ಲಿ ಆಸಕ್ತಿ ಹೊಂದಿದರೆ, ಗಣೇಶನ ಮಹಿಮೆಯ ಅರಿವು ಉಂಟಾಗದೇ ಅವನ ರೂಪವನ್ನು ಹಾಸ್ಯಮಾಡುವ ದುರ್ಬುದ್ಧಿಯುಂಟಾಗುತ್ತದೆ. ಗಣಪತಿ ಪೂಜೆ (ಕೆಲವು ಮಾಹಿತಿಗಳು) ಗಣಾನಾಂ ತ್ವಾ ಗಣಪತಿಂ ಹವಾಮಹೇ, ಕವಿಂ ಕವೀನಾಂ ಉಪಮಶ್ರಮವಸ್ತಮಂ| ಜ್ಯೇಷ್ಠ ರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತ ಆನ:ಶೃಣ್ವನ್ ಊತಿಭಿ: ಸೀದ ಸಾಧನಂ|| (ಯಜುರ್ವೇದ ಸಂಹಿತೆ) ತ್ವಮೇವ ಕೇವಲಂ ಕರ್ತಾಸಿ ತ್ವಮೇವ ಕೇವಲಂ ಧರ್ತಾಸಿ ತ್ವಮೇವ ಕೇವಲಂ ಹರ್ತಾಸಿ ತ್ವಮೇವ ಸರ್ವಂ ಖಲ್ವಿದಂ ಬ್ರಹ್ಮಾಸಿ ತ್ವಂ ಸಾಕ್ಷಾದಾತ್ಮಾಸಿ ಆತ್ಮಂ ತ್ವಂ ಬ್ರಹ್ಮಾ ವಿಷ್ಣುಸ್ತ್ವಂ ರುದ್ರಸ್ತ್ವಂ ಇಂದ್ರಸ್ತ್ವಂ ಅಗ್ನಿಸ್ತ್ವಂ ವಾಯುಸ್ತ್ವಂ ಸೂರ್ಯಸ್ತ್ವಂ ಚಂದ್ರಮಾಸ್ತ್ವಂ ಬ್ರಹ್ಮಭೂರ್ಭುವಸ್ಸುವರೋಮ್ - 'ಗಣೇಶಾಥರ್ವಶೀರ್ಷ'ದಲ್ಲಿ ಆತನನ್ನು ಹೀಗೆ ವರ್ಣಿಸಲಾಗಿದೆ. ಗಣೇಶನ ಹುಟ್ಟು ಯಾಜ್ಞವಲ್ಕ್ಯ ಸ್ಮೃತಿಯ ಪ್ರಕಾರ ಅಂಬಿಕೆಯು ಗಣಪತಿಯ ತಾಯಿ. ಇನ್ನೊಂದು ಕಥೆಯ ಪ್ರಕಾರ ಆತನು ಪಾರ್ವತಿಯ ಮೈಯಿಂದ ಹುಟ್ಟಿದವನು. ಸ್ವರ್ಣಗೌರಿಯ ಮಾನಸ ಪುತ್ರ ಈತ. ಗೌರಿ ತನ್ನ ಮೈಕೊಳೆಯಿಂದ ಆಕೃತಿಯೊಂದನ್ನು ಸೃಷ್ಟಿಸಿ ಅದಕ್ಕೆ ಜೀವತುಂಬಿ ಸ್ನಾನ ಮಾಡಲು ಹೋಗಿರುತ್ತಾಳೆ. ತಾಯಿಯ ಅಣತಿಯಂತೆ ಗಣಪ ಮನೆಯನ್ನು ಕಾಯುತ್ತಿರುತ್ತಾನೆ. ಶಿವನು ಮನೆಗೆ ಹಿಂತಿರುಗಿದಾಗ, ಗಣಪ ಅವನನ್ನು ತಡೆದು ಮನೆಯೊಳಗೆ ಹೋಗಲು ಅಡ್ಡಿಪಡಿಸುತ್ತಾನೆ. ಇದರಿಂದ ಕುಪಿತಗೊಂಡ ಶಿವ ತನ್ನ ತ್ರಿಶೂಲದಿಂದ ಅವನ ಶಿರವನ್ನು ಕತ್ತರಿಸುವನು. ಸ್ನಾನ ಮುಗಿಸಿ ಬಂದ ಗೌರಿ ಮಗನ ಕಳೇಬರ ಕಂಡು ರೋದಿಸುತ್ತಾಳೆ. ಹೆಂಡತಿಯನ್ನು ಸಮಾಧಾನ ಪಡಿಸುವ ಸಲುವಾಗಿ ಶಿವ ತನ್ನ ಗಣಗಳನ್ನು ಕರೆದು ಉತ್ತರ ದಿಕ್ಕಿಗೆ ಯಾರಾದರೂ ತಲೆ ಹಾಕಿ ಮಲಗಿದ್ದರೆ, ಅಂತಹವರ ತಲೆಯನ್ನು ಕತ್ತರಿಸಿ ತರುವಂತೆ ಆಜ್ಞಾಪಿಸುತ್ತಾನೆ. ಅವರು ಉತ್ತರ ದಿಕ್ಕಿನಲ್ಲಿ ಮಲಗಿದ್ದ ಮರಿಯಾನೆ ತಲೆಯನ್ನು ಕತ್ತರಿಸಿ ತರುತ್ತಾರೆ. ನಂತರ ಅದನ್ನು ಗಣಪನ ಶರೀರಕ್ಕೆ ಅಂಟಿಸುವರು. ಹೀಗಾಗಿ ಗಣಪ ಗಜಮುಖನಾಗಿ, ಗಣಗಳ ಅಧಿಪತಿ ಮತ್ತು ಮೊದಲ ಅಗ್ರಪೂಜೆಗೆ ಅರ್ಹನಾಗುತ್ತಾನೆ. ವಿಘ್ನ ವಿನಾಶಕ ವಿನಾಯಕನಾಗಿರುವನು. ಗಣೇಶನ ಹಬ್ಬ ಮೊದಲ ದಿನ ತಾಯಿ ಸ್ವರ್ಣಗೌರಿಯ ಹಬ್ಬ. ಮಾರನೆ ದಿನವೇ ಗಣೇಶನ ಹಬ್ಬ. ತಾಯಿಯನ್ನು ಮರಳಿ ಕರೆದುಕೊಂಡು ಹೋಗುವ ಕೆಲಸ ಗಣಪನದಾಗಿರುವುದರಿಂದ, ತಾಯಿ ಭೂಲೋಕಕ್ಕೆ ಬಂದ ಮಾರನೆ ದಿನವೇ ಅಜ್ಜಿ ಮನೆಗೆ ಬಂದು, ಅಜ್ಜಿ ಮನೆಯಲ್ಲಿ ಮಾಡಿದ ವಿವಿಧ ಭಕ್ಷ್ಯ ಭೋಜನಗಳನ್ನು ಭಕ್ಷಿಸಿ ತಾಯಿಯೊಂದಿಗೆ ಹಿಂತಿರುಗುತ್ತಾನೆ. ಸಾಮಾನ್ಯವಾಗಿ ಈ ಹಬ್ಬ ಭಾದ್ರಪದ ಚೌತಿಯ ದಿನದಂದು ಬರುತ್ತದೆ. ಆ ದಿನ ಯಾರೂ ಚಂದ್ರನನ್ನು ನೋಡಬಾರದು. ಗಣೇಶ ಭೂಲೋಕಕ್ಕೆ ಬಂದ ದಿನವನ್ನು ವಾರಗಟ್ಟಲೆ ಸಂಭ್ರಮದಿಂದ ಆಚರಿಸುವುದು ಅನಾದಿ ಕಾಲದಿಂದಲೂ ರೂಢಿಯಲ್ಲಿದೆ. ಅಂದು ದೇಗುಲಗಳಲ್ಲಿ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ಗಣೇಶನ ಹಬ್ಬದ ವೈಶಿಷ್ಟ್ಯತೆಗಳು ನಮ್ಮ ದೇಶದಲ್ಲಿ ಗಣಪತಿಯ ಪೂಜೆಯು ಅನಾದಿ ಕಾಲದಿಂದಲೂ ನಡೆದು ಬಂದಿದೆ. ಆನೆಗಳ ಹಿಂಡು ಹೊಲ ಗದ್ದೆಗಳಿಗೆ ನುಗ್ಗಿ ಬೆಳೆಯನ್ನು ಹಾಳು ಮಾಡುವುದನ್ನು ತಡೆಯುವ ಸಲುವಾಗಿ ರೈತಾಪಿ ಜನಗಳು ಆನೆಯ ಮುಖವುಳ್ಳ ದೇವನನ್ನು ಪೂಜಿಸಿದರೆ, ಗೋದಾಮುಗಳಲ್ಲಿ ಧಾನ್ಯಗಳನ್ನು ತಿಂದು ಹಾಳು ಮಾಡುವ ಇಲಿಗಳನ್ನೂ ಪೂಜಿಸಿ ಇಬ್ಬರನ್ನೂ ಸಮಾಧಾನಿಸುವುದೂ ಹಬ್ಬದ ಒಂದು ಕಾರಣವೆಂದು ಕೆಲವರು ಹೇಳುವರು. ಅದಲ್ಲದೇ ಹೊಲಗಳಲ್ಲಿ ನಿಲ್ಲಿಸುವ ಬೆರ್ಚಪ್ಪನಿಗೂ ಗಣಪತಿಯಂತೆ ಡೊಳ್ಳು ಹೊಟ್ಟೆಯನ್ನು ಮಾಡಿರುತ್ತಾರೆ. ಇದಲ್ಲದೇ ಗಣಪತಿಯನ್ನು ಬರ್ಮಾ, ಮಲೇಶಿಯಾ, ಇಂಡೋನೇಶಿಯಾ, ಚೀನಾ, ಸುಮಾತ್ರಾ, ಜಾವಾ, ಜಾಪಾನ್ ಮತ್ತಿತರ ದೇಶಗಳಲ್ಲಿಯೂ ಪೂಜಿಸುತ್ತಿದ್ದರು. ವಿಜ್ಞಾನಿಗಳ ಸೃಷ್ಟಿಯ ವಿಕಾಸಕ್ಕೂ ನಮ್ಮ ಪುರಾಣಗಳಲ್ಲಿ ಹೇಳುವ ದಶಾವತಾರ ಕಥೆಗಳಿಗೂ ಹೋಲಿಕೆಯುಂಟು. ಮೊದಲಿಗೆ ನೀರಿನಲ್ಲಿರುವ ಅವತಾರಗಳಾದರೆ, ನಂತರ ಅರ್ಧ ಪ್ರಾಣಿ ಅರ್ಧ ಮನುಷ್ಯ. ಇದರಲ್ಲಿ ಗಣಪತಿಯೂ ಒಂದಾಗಿದೆ. ಗ್ರೀಕರ ಕಲ್ಪನೆಯಲ್ಲಿಯೂ ಇಂತಹ ಉದಾಹರಣೆಗಳಿವೆ.ಗಣಪತಿಯ ಮೂರ್ತಿಯ ಪೂಜೆಗೆ ಮೊದಲು ಸಗಣಿಯಿಂದ ಮಾಡಿ ಅದರ ಮೇಲೆ ಗರಿಕೆಯನ್ನಿಟ್ಟು ಅದನ್ನು ಪಿಳ್ಳೇರಾಯನೆಂದು ಕರೆದು ಅದಕ್ಕೆ ಪೂಜಿಸುವರು. ಮಿಕ್ಕೆಲ್ಲ ದೇವರುಗಳಂತೆ ಇದಕ್ಕೂ ಷೋಡಶಾಂಗ ಪೂಜಾವಿಧಾನದ ರೀತ್ಯಾ ಪೂಜಿಸುವರು. ಪೂಜೆಯ ನಂತರ ಹತ್ತುದಿನಗಳ ವರೇಗೆ ನಿತ್ಯ ಪೂಜೆಯನ್ನು ಮಾಡಿ ೧೦ನೆಯ ದಿನ ಅಂದರೆ ಅನಂತ ಚತುರ್ದಶಿಯ ದಿನದಂದು ವಿಸರ್ಜನೆ ಮಾಡುವರು.ದೇಶದ ವಿವಿದೆಡೆ ವಿವಿಧ ರೀತಿಯಲ್ಲಿ ಗಣಪತಿಯ ಹಬ್ಬವನ್ನಾಚರಿಸುವರು. ದಕ್ಷಿಣ ದೇಶದಲ್ಲಿ ಮನೆ ಮನೆಗಳಲ್ಲಿ ಗಣಪತಿಯ ಮೂರ್ತಿಗೆ ಪೂಜಿಸಿದರೆ, ಮಹಾರಾಷ್ಟ್ರದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಜನಗಳನ್ನು ಒಗ್ಗೂಡಿಸಲು ಆರಂಭಿಸಿದ ಸಾರ್ವಜನಿಕ ಗಣಪತಿ ಪೂಜೆ ಇಂದಿಗೂ ಹಾಗೆಯೇ ಮುಂದುವರೆಯುತ್ತಿದೆ. "ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ ತನ್ನೋ ದಂತಿ: ಪ್ರಚೋದಯಾತ್" ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಅಂತ್ಯಂತ ವಿಜೃಂಭಣೆಯಿಂದ ಈ ಹಬ್ಬವನ್ನು ಆಚರಿಸುತ್ತಾರೆ. ಕರಾವಳಿ ಪ್ರದೇಶದಲ್ಲಿ ತನ್ನದೇ ಆದ ಪರಂಪರೆ ಹೊಂದಿದೆ. ಇಲ್ಲಿ ಡೊಳ್ಳು ಕುಣಿತ,ಹುಲಿವೇಷ, ಯಕ್ಷಗಾನ ಮುಂತಾದವು ಇಲ್ಲಿನ ಗಣೇಶೋತ್ಸವಕ್ಕೆ ಮೆರಗು ತರುತ್ತದೆ. ಕುಂದಾಪುರ, ಶಿರೂರು, ಮಂಗಳೂರು, ಉಡುಪಿ ಮುಂತಾದ ಕಡೆಯಲ್ಲಿ ಸುಂದರವಾದ ಸಂಭ್ರಮದ ಗಣೇಶ ಚತುರ್ಥಿ ನಡೆಯುತ್ತದೆ. ನೋಡಿ ಶ್ರೀ ಸಿದ್ಧಿ ವಿನಾಯಕ ಉಲ್ಲೇಖಗಳು https://www.tripsavvy.com/when-is-ganesh-chaturthi-1539429 https://www.calendarlabs.com/holidays/india/ganesh-chaturthi.php https://www.amritapuri.org/3570/ganesh-chaturthi.aum ಛಾಯಾಚಿತ್ರಗಳು ಪ್ರಮುಖ ದಿನಗಳು ಹಿಂದೂ ಧರ್ಮದ ಹಬ್ಬಗಳು ಹಿಂದೂ ಧರ್ಮ
3778
https://kn.wikipedia.org/wiki/%E0%B2%95%E0%B3%83%E0%B2%B7%E0%B3%8D%E0%B2%A3%20%E0%B2%AE%E0%B2%A0
ಕೃಷ್ಣ ಮಠ
ಕೃಷ್ಣ ಮಠ - ಕರ್ನಾಟಕದ ಪ್ರಸಿದ್ಧ ಯಾತ್ರಾಸ್ಥಳಗಳಲ್ಲಿ ಒಂದಾದ ಉಡುಪಿಯಲ್ಲಿದೆ. ಇಲ್ಲಿರುವ ಶ್ರೀ ಕೃಷ್ಣನ ದೇವಾಲಯವನ್ನೇ ಕೃಷ್ಣ ಮಠ ಎಂದು ಕರೆಯಲಾಗುತ್ತದೆ. ಇಲ್ಲಿರುವ ಕೃಷ್ಣನ ಪ್ರತಿಮೆಯನ್ನು ಶ್ರೀ ಮಧ್ವಾಚಾರ್ಯರು ಸ್ಥಾಪಿಸಿದರು. ಈ ದೇವಾಲಯದ ಪೂಜೆಯನ್ನು ಉಡುಪಿಯಲ್ಲಿರುವ ಅಷ್ಟ ಮಠಗಳು ನೋಡಿಕೊಳ್ಳುತ್ತವೆ. ಪ್ರತಿ ಎರಡು ವರ್ಷಗಳಿಗೊಮ್ಮೆ ಒಂದು ಮಠದಿಂದ ಇನ್ನೊಂದು ಮಠಕ್ಕೆ ಕೃಷ್ಣ ಮಠದ ಪೂಜೆ ಹಸ್ತಾಂತರವಾಗುತ್ತದೆ. ಈ ಸಂದರ್ಭವನ್ನು ಪರ್ಯಾಯ ಮಹೋತ್ಸವ ಎಂದು ಕರೆಯುತ್ತಾರೆ. ಇದನ್ನು ಅತಿ ವೈಭವದಿಂದ ಆಚರಿಸಲಾಗುತ್ತದೆ. ಜನವರಿ ೧೮ರ ಬೆಳಗ್ಗೆ ನಡೆಯುವ ಈ ಉತ್ಸವವನ್ನು ಮೈಸೂರಿನ ದಸರ ಹಬ್ಬದ ಮಾದರಿಯಲ್ಲಿ ವಿಜ್ರಂಭಣೆಯಿಂದ ಆಚರಿಸಲಾಗುವುದು. ಒಮ್ಮೆ ಪರ್ಯಾಯ ಪೂರೈಸಿದ ಮಠಕ್ಕೆ,ಮತ್ತೊಮ್ಮೆ ಕೃಷ್ಣ ಮಠ ಪೂಜೆಯ ಅಧಿಕಾರ ಸಿಗಲು ಹದಿನಾಲ್ಕು (೧೪) ವರ್ಷಗಳು ಹಿಡಿಯುತ್ತವೆ. ಶ್ರೀ ಮಧ್ವಾಚಾರ್ಯರು ಪ್ರಾರಂಭಿಸಿದ ಈ ಪದ್ಧತಿ ಇವತ್ತಿನವರೆಗೂ ಚಾಚೂ ತಪ್ಪದೆ ಮುಂದುವರೆದುಕೊಂಡು ಬಂದಿದೆ. ಕೃಷ್ಣ ಮಠದ ಪ್ರಾಂಗಣದಲ್ಲಿ ಮುಖ್ಯಪ್ರಾಣ, ಗರುಡ, ಸುಬ್ರಹ್ಮಣ್ಯ ಮತ್ತು ನವಗ್ರಹ ಗುಡಿಗಳಿವೆ. ಇತಿಹಾಸ ಉಡುಪಿಯ ಕೃಷ್ಣನನ್ನು ದ್ವಾಪರ ಯುಗದಲ್ಲಿ ದ್ವಾರಕೆಯ ರುಕ್ಮಿಣಿ ಪೂಜಿಸಲ್ಪಡುತ್ತಿದ್ದು ದೇವಶಿಲ್ಪಿ ವಿಶ್ವಕರ್ಮನಿಂದ ರಚಿಸಲ್ಪಟ್ಟಿದೆ. ಶ್ರೀ ಕೃಷ್ಣ ಮಠವನ್ನು ವೈಷ್ಣವರ ಸಂತ ಜಗದ್ಗುರು ಶ್ರೀ ಮಧ್ವಾಚಾರ್ಯರು ೧೩ ನೇ ಶತಮಾನದಲ್ಲಿ ಸ್ಥಾಪಿಸಿದರು. ಇವರು ದ್ವೈತ ವೇದಾಂತ ಶಾಲೆಯ ಸ್ಥಾಪಕರೂ ಕೂಡ. ಮಧ್ವರಿಗೆ ಗೋಪಿಚಂದನದಲ್ಲಿ ಶ್ರೀ ಕೃಷ್ಣನ ವಿಗ್ರಹ ಸಿಕ್ಕಿತೆಂಬ ನಂಬಿಕೆ ಇದೆ. ತಮ್ಮ ತಂತ್ರಸಾರ ಸಂಗ್ರಹದಲ್ಲಿ ಮಧ್ವರೇ ಹೇಳಿರುವ ಹಾಗೆ ವಿಗ್ರಹವು ಪಶ್ಚಿಮಭಿಮುಖವಾಗಿತ್ತು. ಅಷ್ಟ ಮಠಗಳಲ್ಲಿ ಕೂಡ ದೇವರ ವಿಗ್ರಹ ಪಶ್ಚಿಮಕ್ಕೆ ಮುಖ ಹಾಕಿದೆ. ಭಕ್ತರು ದೇವರ ದರ್ಶನವನ್ನು ಒಳಗಿನ ನವಗ್ರಹ ಕಿಂಡಿ ಅಥವಾ ಹೊರಗಿನ ಕನಕನ ಕಿಂಡಿಯ ಮೂಲಕ ಪಡೆಯಬಹುದು. ಮಠವು ಬೆಳಗಿನ ಜಾವ ೫:೩೦ಕ್ಕೆ ತೆರೆಯುತ್ತದೆ. ದೇವರಿಗೆ ೯ ತೂತುಗಳಿರುವ ಬೆಳ್ಳಿಯಿಂದ ಲೇಪಿತವಾದ ಕಿಂಡಿಯಿಂದ ಪೂಜೆ ಮಾಡುವುದು ಇಲ್ಲಿನ ವಿಶೇಷತೆ. ಪ್ರತಿದಿನ ಬಂದ ಭಕ್ತರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯೂ ಇಲ್ಲಿದೆ. ಉಡುಪಿ ಶ್ರೀ ಕೃಷ್ಣ ದೇವಾಲಯದ ಮುಖ್ಯಾಂಶಗಳು ಕನಕನ ಕಿಂಡಿ ಶ್ರೀಕೃಷ್ಣನು ತನ್ನ ಭಕ್ತ ಕನಕದಾಸನಿಗೆ ದರ್ಶನ ನೀಡಿದ್ದಾನೆಂದು ನಂಬಲಾದ ಸಣ್ಣ ಕಿಟಕಿ. ಪುರಾಣದ ಪ್ರಕಾರ, ಕನಕದಾಸ ಕೆಳಜಾತಿಯವರಾಗಿದ್ದು ದೇವಾಲಯಕ್ಕೆ ಪ್ರವೇಶಿಸಲು ಅವಕಾಶವಿರಲಿಲ್ಲ. ಆಗ ಕನಕದಾಸರು ದೇವಾಲಯದ ಹಿಂದೆ ಹೋಗಿ ಗೋಡೆಯ ಸಣ್ಣ ಬಿರುಕು ಮೂಲಕ ಭಗವಂತನನ್ನು ಪ್ರಾರ್ಥಿಸಿದರು. ಅವರ ಭಕ್ತಿಯಿಂದ ಪ್ರಸನ್ನರಾದ ಭಗವಾನ್ ಕೃಷ್ಣನ ಪ್ರತಿಮೆ ತಿರುಗಿ ಅವನಿಗೆ ದರ್ಶನ ನೀಡಿತು. ಪಕ್ಕದಲ್ಲಿಯೇ ಕನಕದಾಸ ಮಂಟಪವಿದೆ, ಇದರಲ್ಲಿ ಸಂತನ ಪ್ರತಿಮೆ ಇದೆ. ದೇವಾಲಯದ ಚಿನ್ನದ ರಥವನ್ನು ಪ್ರವಾಸಿಗರು ನೋಡಬಹುದು. ಉಡುಪಿ ಪರ್ಯಾಯ ಉತ್ಸವವು ಎರಡು ವರ್ಷಗಳಿಗೊಮ್ಮೆ ಆಚರಿಸುವ ಜನಪ್ರಿಯ ಹಬ್ಬವಾಗಿದೆ. ಪರ್ಯಾಯ ಉತ್ಸವದಲ್ಲಿ ಉಡುಪಿಯ ೮ ಮಠಗಳಲ್ಲಿ ದೇವಾಲಯದ ನಿರ್ವಹಣೆಯನ್ನು ಒಂದು ಮಠದಿಂದ ಇನ್ನೊಂದಕ್ಕೆ ವರ್ಗಾವಣೆ ಮಾಡುತ್ತಾರೆ . ಪರ್ಯಾಯ ಉತ್ಸವ ಪರ್ಯಾಯ ಉತ್ಸವದ ಆಚರಣೆಗಳು ಮುಂಜಾನೆಯಿಂದಲೇ ಪ್ರಾರಂಭವಾಗುತ್ತವೆ. ದೇವಾಲಯದ ನಿರ್ವಹಣೆಯನ್ನು ವಹಿಸಿಕೊಳ್ಳಲಿರುವ ಮಠದ ಸ್ವಾಮೀಜಿಗಳು ಪುಷ್ಕರಿಣಿಯಲ್ಲಿ ಪವಿತ್ರ ಸ್ನಾನ ಮಾಡಿ ಶ್ರೀ ಕೃಷ್ಣ ದೇವಸ್ಥಾನಕ್ಕೆ ಪಲ್ಲಕ್ಕಿಯಲ್ಲಿ ಸಾಗುತ್ತಾರೆ. ಮೆರವಣಿಗೆ ಮತ್ತು ಸಾಂಸ್ಕೃತಿಕ ಪ್ರದರ್ಶನಗಳು ಜೊತೆಗಿರುತ್ತವೆ. ಶ್ರೀ ಕೃಷ್ಣ ದೇವಸ್ಥಾನದಲ್ಲಿ, ನಿರ್ವಹಣೆಯನ್ನು ಹಸ್ತಾಂತರಿಸಬೇಕಾದ ಪ್ರಸ್ತುತ ಸ್ವಾಮೀಜಿಗಳು ಅನೇಕ ಆಚರಣೆಗಳನ್ನು ಮಾಡುತ್ತಾರೆ ಮತ್ತು ದೇವಾಲಯದ ಕೀಲಿಗಳು, ಅಕ್ಷಯ ಪಾತ್ರೆ ಮತ್ತು ಇತರ ಪೂಜಾ ಸಾಮಗ್ರಿಗಳನ್ನು ನೀಡಿ ಅಧಿಕಾರ ಹಸ್ತಾಂತರಿಸುತ್ತಾರೆ. ಉತ್ಸವದಲ್ಲಿ ಪಾಲ್ಗೊಳ್ಳುವ ಭಕ್ತರ ಅನುಕೂಲಕ್ಕಾಗಿ ಸಾರ್ವಜನಿಕ ಸೇವೆ ಮತ್ತು ದರ್ಬಾರ್ ಅನ್ನು ಆಮೇಲೆ ನಡೆಸಲಾಗುತ್ತದೆ. ಆಚರಣೆಗಳುಪರ್ಯಾಯ ಉತ್ಸವ ಸಮಯದಲ್ಲಿ ಉಡುಪಿ ನಗರವು ಅತ್ಯುತ್ತಮವಾಗಿ ಶೃಂಗರಿಸಿಕೊಂಡು ಮದುವಣಗಿತ್ತಿಯಂತೆ ಕಾಣುತ್ತದೆ. ಪರ್ಯಾಯ ಉತ್ಸವ ಅಂಗವಾಗಿ ಹಲವಾರು ಶಾಪಿಂಗ್, ಆಹಾರ ಉತ್ಸವ ಮತ್ತು ಮನರಂಜನಾ ಕಾರ್ಯಕ್ರಮಗಳು ಸಂದರ್ಶಕರಿಗೆ ಲಭ್ಯವಿರುತ್ತವೆ. ಪರ್ಯಾಯದ ಇತಿಹಾಸ ಶ್ರೀಮಧ್ವಾಚಾರ್ಯರು ಉಡುಪಿಯಲ್ಲಿ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿದ ನಂತರ ಅದರ ಪೂಜೆಯ ಅಧಿಕಾರವನ್ನು ಕೂಡ ತಮ್ಮ ಪರಂಪರೆಯ ಯತಿಗಳಿಗೆ ನೀಡಿದರು. ಕೃಷ್ಣ ಮಠದ ಪೂಜಾನುಷ್ಠಾನಗಳನ್ನು ಮಧ್ವ ಪರಂಪರೆಯ ಯತಿಗಳು ನಡೆಸಿಕೊಂಡು ಬರುತ್ತಿದ್ದಾರೆ. ಉಡುಪಿಯ ಅಷ್ಟಮಠಗಳ ಯತಿಗಳಿಗೆ ಪರ್ಯಾಯ ಪೂಜೆಯ ಅಧಿಕಾರವನ್ನು ನೀಡಿ ಹರಸಿದವರು ಮಧ್ವಾಚಾರ್ಯರು. ಆ ಬಳಿಕ ಮೊದಲಿಗೆ ಎರಡು ತಿಂಗಳಿಗೊಮ್ಮೆ ಪರ್ಯಾಯ ನಡೆಯುತ್ತಿತ್ತು. ಅದನ್ನು ಮುಂದೆ ಸೋದೆ ಮಠಾಧೀಶರಾಗಿದ್ದ ಶ್ರೀವಾದಿರಾಜತೀರ್ಥರು ಎರಡು ವರ್ಷಗಳ ಅವಧಿಗೆ ವಿಸ್ತರಿಸಿದರು. ವಾದಿರಾಜ ಯತಿಗಳ ಕಾಲದಿಂದ ಇಲ್ಲಿಯವರೆಗೆ ೨೫೧ ಪರ್ಯಾಯಗಳನ್ನು (ಅಂದರೆ ೫೦೦ ವರ್ಷ) ಕಂಡಿದೆ ಉಡುಪಿ. ಅನ್ನದಾನ ಶ್ರೀ ಕೃಷ್ಣ ದೇವಸ್ಥಾನಕ್ಕೆ ಆಗಮಿಸುವ ಪ್ರತಿಯೊಬ್ಬ ಭಕ್ತರಿಗೂ ಅನ್ನದಾನದ ವ್ಯವಸ್ಥೆ ಇರುತ್ತದೆ . ಗೋಶಾಲೆ (ಹಸು ಕೊಟ್ಟಿಗೆ ) ದೇವಾಲಯ ರಥ (ಬ್ರಹ್ಮ ರಥ) ೨೫೦ ವರ್ಷಗಳಷ್ಟು ಹಳೆಯದಾದ ರಥವನ್ನು ವಿಶ್ವವಲ್ಲಭ ತೀರ್ಥರು ತಮ್ಮ ಪರ್ಯಾಯದ ಅವಧಿಯಲ್ಲಿ ಒಂದೂವರೆ ಕೋಟಿ ರೂಪಾಯಿ ವ್ಯಯಿಸಿ ಸಿದ್ದ ಪಡಿಸಿದ್ದರು. ರಥವನ್ನು ನವೀಕರಣ ಮಾಡುವ ಯೋಜನೆಯನ್ನು ಶ್ರೀಗಳು ಕೈಗೆತ್ತಿಕೊಂಡಾಗ ಬಹುತೇಕ ರಥವು ಶಿಥಿಲಗೊಂಡಿತ್ತು. ಹಾಗಾಗಿ, ನೂತನವಾಗಿಯೇ ಶ್ರೀಗಳು ರಥವನ್ನು ನಿರ್ಮಿಸಿ, ಶ್ರೀಕೃಷ್ಣನಿಗೆ ಅರ್ಪಿಸಿದ್ದರು. ಗೋಪಾಲ ಆಚಾರ್ಯ ನೇತೃತ್ವದ ೫೦-೬೦ ಜನರ ತಂಡ ರಥವನ್ನು ನವೀಕರಣಗೊಳಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಸಪ್ತೋತ್ಸವದ ಭಾಗವಾಗಿ ನಡೆಯುವ ಚೂರ್ಣೋತ್ಸವದಲ್ಲಿ ಒಂದು ರಥವನ್ನು (ಬ್ರಹ್ಮರಥ) ಮಾತ್ರ ಎಳೆಯುವ ಪದ್ದತಿಯಿದೆ. ಬ್ರಹ್ಮರಥವನ್ನು ಎಳೆಯಲು ಸಾವಿರಾರು ಭಕ್ತರು ರಥಬೀದಿಯಲ್ಲಿ ಸೇರಿರುತ್ತಾರೆ. ಗರುಡ ಪ್ರದಕ್ಷಿಣೆ ಹಾಕುವ ವೇಳೆ, ಭಕ್ತರು ಗೋವಿಂದ..ಗೋವಿಂದ ಎಂದು ಉದ್ಘರಿಸುತ್ತಾರೆ. ಇದಾದ ನಂತರವಷ್ಟೇ ರಥದ ಮುಂದೆ ಈಡುಗಾಯಿಯನ್ನು ಸ್ವಾಮೀಜಿಗಳು ಒಡೆದು, ನಂತರ ರಥವನ್ನು ಎಳೆಯಲು ಆರಂಭಿಸಲಾಗುತ್ತದೆ. ಮಧ್ವಾಚಾರ್ಯರ ಶಿಷ್ಯರು ಮಧ್ವಾಚಾರ್ಯರಿಗೆ ತುಂಬಾ ಜನ ಶಿಷ್ಯರು ಇದ್ದರು. ಅವರಲ್ಲಿ ಮೊದಲನೆಯವರು ಶ್ರೀ ಸತ್ಯ ತೀರ್ಥರು. ಅಷ್ಟ ಮಠಗಳನ್ನು ಹೊರತುಪಡಿಸಿ ಉಳಿದ ಎಲ್ಲ ಮಠಗಳನ್ನು ಸ್ಥಾಪಿಸಿದ್ದು ಶ್ರೀ ಪದ್ಮನಾಭ ತೀರ್ಥರು. ಅಷ್ಟ ಮಠಗಳ ಆಡಳಿತಕ್ಕೆ ವಳಪಟ್ಟಿದ್ದರಿಂದ ಅವರ ಶಿಷ್ಯರಿಗೆ ಶ್ರೀ ಕೃಷ್ಣನ ಪೂಜೆ ಮಾಡುವ ಯಾವುದೇ ಅಧಿಕಾರ ಇರಲಿಲ್ಲ. ಶ್ರೀ ವಾಮನ ತೀರ್ಥ,ಶೀರೂರು ಮಠ. ಶ್ರೀ ರಾಮ ತೀರ್ಥ, ಕಾಣಿಯೂರು ಮಠ. ಶ್ರೀ ಅಡೋಕ್ಷಜ ತೀರ್ಥ,ಪೇಜಾವರ ಮಠ. ಶ್ರೀ ಹೃಷಿಕೇಶ ತೀರ್ಥ,ಪಲಿಮಾರು ಮಠ. ಶ್ರೀ ನರಹರಿ ತೀರ್ಥ,ಅದಮಾರು ಮಠ. ಶ್ರೀ ಜನಾರ್ಧನ ತೀರ್ಥ,ಕೃಷ್ಣಾಪುರ ಮಠ. ಶ್ರೀ ಉಪೇಂದ್ರ ತೀರ್ಥ,ಪುತ್ತಿಗೆ ಮಠ. ಶ್ರೀ ವಿಷ್ಣು ತೀರ್ಥ,ಸೋದೆ ವಾದಿರಾಜ ಮಠ. ಕೃಷ್ಣ ಮಠ ಮಠದ ದಿನ ನಿತ್ಯದ ಪೂಜೆ ಪುನಸ್ಕಾರವನ್ನು ಅಷ್ಟ ಮಠಗಳು ನೋಡಿಕೊಳ್ಳುತ್ತವೆ. ಪ್ರತಿ ಮಠವು ೨ ವರ್ಷಗಳಿಗೊಮ್ಮೆ ಆವರ್ತಿಕ ಕ್ರಮದ ಅನುಸಾರ ಜವಬ್ದಾರಿ ನೋಡಿಕೊಳ್ಳುತದೆ. ಕೃಷ್ಣ ಮಠವು ಧಾರ್ಮಿಕ ಪದ್ದತಿ,ಆಚಾರ ವಿಚಾರ,ದ್ವೈತ ಮತ್ತು ತತ್ವವಾದ ತತ್ವಶಾಸ್ತ್ರಕ್ಕೆ ಹೆಸರುವಾಸಿಯಾದ ಜಾಗ. ಉಡುಪಿಯಿಂದ ಹುಟ್ಟಿಕೊಂಡ ದಾಸ ಸಾಹಿತ್ಯಕ್ಕೆ ಜನಪ್ರಿಯತೆ ಪಡೆದುಕೊಂಡಿದೆ. ಮಠದ ವೆಚ್ಚಗಳನ್ನು ಅಷ್ಟ ಮಠಗಳು ಮತ್ತು ಭಕ್ತರೇ ಸ್ವತಃ ಸ್ವಯಂಪ್ರೇರಿತವಾಗಿ ನೋಡಿಕೊಳ್ಳುತಾರೆ. ೧೯೭೫ರ ಭೂ ಸುಧಾರಣಾ ಕಾಯಿದೆಯ ಅನುಷ್ಠಾನದಿಂದಾಗಿ ಮಠವು ತನ್ನ ಹಲವಾರು ಭೂಮಿಯನ್ನು ಕಳೆದುಕೊಂಡಿತು. ಕೃಷ್ಣ ಮಠದ ಪೌಳಿಯನ್ನು ನವೀಕರಿಸಿ ಮೇ ೧೮ ೨೦೧೭ ರಂದು ಅದರ ಬ್ರಹ್ಮಕಲಶೋತ್ಸವವನ್ನು ವಿಜೃಂಭಣೆಯಿಂದ ಮಾಡಲಾಯಿತು. ಅಷ್ಟ ಮಠಗಳು ಉಡುಪಿಯ ಅಷ್ಟ ಮಠಗಳೆಂದರೆ: ಪೇಜಾವರ ಮಠ ಅದಮಾರು ಮಠ ಕೃಷ್ಣಾಪುರ ಮಠ ಪುತ್ತಿಗೆ ಮಠ ಶೀರೂರು ಮಠ ಸೋದೆ ಮಠ ಕಾಣಿಯೂರು ಮಠ ಪಲಿಮಾರು ಮಠ ಮಠದ ಬಗೆಗಿನ ತ್ವರಿತ ಮಾಹಿತಿಗಳು ಮುಖ್ಯ ದೇವರು-ಶ್ರೀ ಕೃಷ್ಣ ಭೇಟಿ ನೀಡಲು ಉತ್ತಮ ಸಮಯ-ಶ್ರೀ ಕೃಷ್ಣ ಜನ್ಮಾಷ್ಟಮಿ, ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ. ದೇವಸ್ಥಾನದ ಸಮಯ- ರಾತ್ರಿ ೯ ಗಂಟೆ. ಮೊದಲ ಸೇವೆ-ಉದಯಸ್ತಮಣ ಸೇವೆ,ಬೆಳಿಗ್ಗೆ ೫ ಗಂಟೆ. ಕೊನೆಯ ಸೇವೆ-ಏಕಾಂತ ಸೇವೆ,೯.೩೦ ರಾತ್ರಿ. ವಿಳಾಸ-ರಥ ಬೀದಿ,ತೆಂಕಪೇಟೆ, ಮಾರುತಿ ವೀಥಿಕ,ಉಡುಪಿ,ಕರ್ನಾಟಕ,೫೭೬೧೦೧ ಮಠದಲ್ಲಿ ಆಚರಿಸುವ ಹಬ್ಬಗಳು ೨ ವರ್ಷಕೊಮ್ಮೆ ನಡೆಯುವ ಪರ್ಯಾಯ ಮಹೋತ್ಸವದಂದು ಮಠದ ಆಡಳಿತವನ್ನು ಮುಂದಿನ ಮಠಕ್ಕೆ ಹಸ್ತಾಂತರಿಸಲಾಗುತ್ತದೆ. ಪ್ರತಿಯೊಂದು ಮಠಕ್ಕೂ ಒಂದು ಸ್ವಾಮಿಗಳು ಇರುತ್ತಾರೆ ಹಾಗೂ ಪರ್ಯಾಯದ ಸಮಯದಲ್ಲಿ ಅವರು ಅಧಿಕಾರದಲ್ಲಿರುತ್ತಾರೆ. ಪರ್ಯಾಯವು ೨೦೦೮,೨೦೧೦,೨೦೧೩ ರಂತೆ ಸಹ ವರ್ಷಗಳಲ್ಲಿ ಇರುತ್ತದೆ.ಮಕರ ಸಂಕ್ರಾಂತಿ,ರಥಸಪ್ತಮಿ,ಮಧ್ವ ನವಮಿ,ಹನುಮಾನ ಜಯಂತಿ,ಶ್ರೀ ಕೃಷ್ಣ ಜನ್ಮಾಷ್ಟಮಿ,ನವರಾತ್ರಿ ಮಹೋತ್ಸವ,ವಿಜಯ ದಶಮಿ,ನರಕ ಚತುರ್ದಶಿ,ದೀಪಾವಳಿ,ಗೀತಾ ಜಯಂತಿ ಅಂತಹ ಹಬ್ಬಗಳನ್ನು ಪರ್ಯಾಯ ಮಠವು ಬಹಳ ವಿಜೃಂಭಣೆಯಿಂದ ಆಚರಿಸುತ್ತದೆ. ಮತ್ಸ್ಯ ಜಯಂತಿ ಚೈತ್ರ ಮಾಸದ ಪ್ರಕಾಶಮಾನವಾದ ಹದಿನೈದು ದಿನದಲ್ಲಿ ಕರುಣಾಳುವಾದ ದಿನವನ್ನು ದೇವರು ವಿಷ್ಣುವು ಮೀನಿನ ಮತ್ಸ್ಯ ಅವತಾರವನ್ನು ತೆಗೆದುಕೊಂಡ ದಿನ ಎಂದು ನಂಬಲಾಗಿದೆ. ಆ ದಿನ ಕೃಷ್ಣನ ವಿಗ್ರಹವನ್ನು ಮೀನನ್ನು ಹೋಲುವ ರಕ್ಷಾಕವಚದಿಂದ ಅಲಂಕರಿಸಲಾಗುತ್ತದೆ. ರಾಮ ನವಮಿ ಶ್ರೀರಾಮನು ಚೈತ್ರದ ಪ್ರಕಾಶಮಾನವಾದ ಹದಿನೈದು ದಿನಗಳ ಒಂಬತ್ತನೇ ದಿನದಂದು ಜನಿಸಿದನು. ಅಂದು ಕೃಷ್ಣನ ವಿಗ್ರಹವನ್ನು ಸಾಮಾನ್ಯ ಮಂಥನದ ರಾಡ್ ಮತ್ತು ಹಗ್ಗದ ಬದಲಿಗೆ ಬಿಲ್ಲು ಮತ್ತು ಬಾಣದಿಂದ ಅಲಂಕರಿಸಲಾಗುತ್ತದೆ. ಮಧ್ಯಾಹ್ನ ವಿಶೇಷ ಸೇವೆ ಏರ್ಪಡಿಸಲಾಗಿದೆ. ರಾತ್ರಿ ವೇಳೆ ರಥೋತ್ಸವ ನಡೆಯುತ್ತದೆ. ಶ್ರೀ ಪಲಿಮಾರು ಮಠದ ಸ್ವಾಮೀಜಿಯವರ ವೈಯಕ್ತಿಕ ವಿಗ್ರಹವು ಶ್ರೀರಾಮನದ್ದಾಗಿರುವುದರಿಂದ, ಮಠದ ಅಧಿಕಾರಾವಧಿಯಲ್ಲಿ ರಾಮನ ವಿಶೇಷ ಉತ್ಸವವನ್ನು ವಿಜೃಂಭಣೆಯಿಂದ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತದೆ. ಹನುಮಜಯತಿ ಚೈತ್ರ ಮಾಸದ ಹುಣ್ಣಿಮೆಯಂದು ವಿಗ್ರಹಕ್ಕೆ ವಿಶೇಷ ಭಕ್ಷ್ಯಗಳನ್ನು ಅರ್ಪಿಸಲಾಗುತ್ತದೆ. ಇದು ಮುಖ್ಯ ಪ್ರಾಣದ ದೇಗುಲದಲ್ಲಿ ಹಬ್ಬದ ದಿನವಾಗಿದೆ. ಕುರ್ಮಾ ಜಯಂತಿ ವೈಶಾಖ ಮಾಸದ ಪ್ರಕಾಶಮಾನವಾದ ಹದಿನೈದು ದಿನಗಳಲ್ಲಿ ಎರಡನೇ ದಿನವನ್ನು ಕೂರ್ಮ ಜಯಂತಿ ಎಂದು ಆಚರಿಸಲಾಗುತ್ತದೆ. ವಿಗ್ರಹವನ್ನು ಆಮೆಯಂತೆ ಅಲಂಕರಿಸಲಾಗುತ್ತದೆ. ಅಕ್ಷಯ ತೃತೀಯಾ ವೈಶಾಖದ ಪ್ರಕಾಶಮಾನವಾದ ಹದಿನೈದು ದಿನಗಳಲ್ಲಿ ಮೂರನೇ ದಿನವು ಪರಶುರಾಮನಾಗಿ ವಿಷ್ಣುವಿನ ಅವತಾರವಾದ ದಿನವಾಗಿದೆ. ವಿಗ್ರಹವನ್ನು ಕೈಯಲ್ಲಿ ಕೊಡಲಿಯಿಂದ ಅಲಂಕರಿಸಲಾಗಿದೆ. ಚಿಕ್ಕ ವಿಗ್ರಹವು ಕೈಯಲ್ಲಿ ಕೊಡಲಿಯೊಂದಿಗೆ ವೀರೋಚಿತ ಭಂಗಿಯನ್ನು ಊಹಿಸುತ್ತದೆ.ಇದು ಶ್ರೀ ಪೇಜಾವರ ಮಠದ ಪರಂಪರೆಯಲ್ಲಿ ಆರನೇ ಮಠಾಧೀಶರಾಗಿದ್ದ ಶ್ರೀ ವಿಜಯಧ್ವಜಾಚಾರ್ಯರ ಪುಣ್ಯತಿಥಿ. ಅವರು ಭಾಗವತ ಮಹಾಕಾವ್ಯದ ವ್ಯಾಖ್ಯಾನಕಾರರಾಗಿ ಪ್ರಸಿದ್ಧರಾದರು. ಅವರು ೧೫ ನೇ ಶತಮಾನದಲ್ಲಿ ವಾಸಿಸುತ್ತಿದ್ದರು ಮತ್ತು ಅವರ ವೃಂದಾವನವು ಕಣ್ವ ತೀರ್ಥದಲ್ಲಿದೆ. ವೃಂದಾವನದ ಪಕ್ಕದಲ್ಲಿ ಪಾಪಲ್ ಮರವೂ ಇದೆ, ಅದರ ಅಡಿಯಲ್ಲಿ ಅವರು ತಮ್ಮ ವ್ಯಾಖ್ಯಾನವನ್ನು ಬರೆದಿದ್ದಾರೆಂದು ನಂಬಲಾಗಿದೆ.ಶ್ರೀ ಪೇಜಾವರ ಮಠದ ಅವಧಿಯಲ್ಲಿ ಕೃಷ್ಣ ಮಠದಲ್ಲಿ ವಿಶೇಷ ಉತ್ಸವವನ್ನು ಏರ್ಪಡಿಸಲಾಗುತ್ತದೆ. ಶ್ರೀ ಮಧ್ವಾಚಾರ್ಯರು ನೀಡಿದ ಅಕ್ಷಯಪಾತ್ರವನ್ನು ಅಂದು ವಿಶೇಷ ಪೂಜೆಯೊಂದಿಗೆ ಅರ್ಪಿಸಲಾಗುತ್ತದೆ. ವಸಂತೋತ್ಸವ ಅಕ್ಷಯ ತೃತೀಯಾದಿಂದ ವೈಶಾಖ ಮಾಸದ ಹುಣ್ಣಿಮೆಯವರೆಗೂ ಪ್ರತಿದಿನ ವಿಶೇಷ ವಸಂತೋತ್ಸವ ಅಥವಾ ವಸಂತೋತ್ಸವವನ್ನು ಏರ್ಪಡಿಸಲಾಗುತ್ತದೆ. ಗರ್ಭಗುಡಿಯ ಮುಂಭಾಗದಲ್ಲಿರುವ ಮಂಟಪದಲ್ಲಿ ಸಾಮಾನ್ಯವಾಗಿ ನಡೆಯುವ ಮಂಟಪ ಪೂಜೆಯನ್ನು ಈ ದಿನಗಳಲ್ಲಿ ವಸಂತ ಮಹಲ್‌ನಲ್ಲಿ ಆಚರಿಸಲಾಗುತ್ತದೆ. ವಿವಿಧ ರೀತಿಯ ಕೂಸಂಬರಿ ಪುಳಿಯೋಗರೈ ಇತ್ಯಾದಿಗಳನ್ನು ದೇವರಿಗೆ ಅರ್ಪಿಸಲಾಗುತ್ತದೆ. ವಸಂತ ದ್ವಾದಶಿ ಹನ್ನೆರಡನೆಯ ದಿನದಂದು ವೈಶಾಖದ ಹದಿನೈದು ದಿನಗಳಲ್ಲಿ ಸತ್ಯವತಿಯ ಮೂಲಕ ವೇದವ್ಯಾಸನ ಅವತಾರವನ್ನು ತೆಗೆದುಕೊಂಡನು. ವೇದವ್ಯಾಸರಿಗೆ ವಿಶೇಷ ಪೂಜೆಗಳನ್ನು ಏರ್ಪಡಿಸಲಾಗುತ್ತದೆ.ಮಧ್ಯಾಹ್ನ ಸುಮಾರು ೩ ಗಂಟೆಗೆ ವಿಶೇಷ ಉತ್ಸವವನ್ನು ಏರ್ಪಡಿಸಲಾಗುತ್ತದೆ. ಸಂಚಾರಿ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ವಸಂತ ಮಹಲ್‌ಗೆ ಕೊಂಡೊಯ್ಯಲಾಗುತ್ತದೆ. ದೇವರಿಗೆ ನೈವೇದ್ಯ ಮಾಡಿದ ನಿಂಬೆ ರಸ, ಪುಳಿಯೋಗರೆ, ಕೂಸಂಬರಿ ಮತ್ತು ಇತರ ಭಕ್ಷ್ಯಗಳನ್ನು ಅಲ್ಲಿ ನೆರೆದ ಭಕ್ತರಿಗೆ ವಿತರಿಸಲಾಗುತ್ತದೆ. ಆ ದಿನ ರಾತ್ರಿ ಪ್ರತ್ಯೇಕ ವಸಂತೋತ್ಸವ ನಡೆಯುವುದಿಲ್ಲ. ನರಸಿಂಹ ಜಯಂತಿ ವೈಶಾಖದ ತೇಜಸ್ವಿ ಹದಿನೈದು ದಿನಗಳಲ್ಲಿ ದೇವರು ನರಸಿಂಹನ ಅವತಾರವನ್ನು ಹದಿನಾಲ್ಕನೆಯ ದಿನದಲ್ಲಿ ತೆಗೆದುಕೊಂಡನು. ವಿಶೇಷ ಉತ್ಸವವನ್ನು ಏರ್ಪಡಿಸಲಾಗುತ್ತದೆ, ಆದರೆ ವಿಗ್ರಹಕ್ಕೆ ನರಸಿಂಹನ ಅಲಂಕಾರದ ಸಂಪ್ರದಾಯವಿಲ್ಲ.ಶ್ರೀ ಕೃಷ್ಣಾಪುರ ಮಠ ಮತ್ತು ಶ್ರೀ ಕಾಣಿಯೂರು ಮಠವು ನರಸಿಂಹನ ವಿಶೇಷ ರಥೋತ್ಸವದ ವಿಗ್ರಹಗಳನ್ನು ಹೊಂದಿರುವುದರಿಂದ ಆ ಮಠಗಳ ಪರ್ಯಾಯದ ಸಮಯದಲ್ಲಿ ಅಂದು ಉತ್ಸವಗಳನ್ನು ಏರ್ಪಡಿಸಲಾಗುತ್ತದೆ. ಭಾಗೀರಥಿ ಜನ್ಮದಿನ ಜ್ಯೇಷ್ಠದ ಪ್ರಕಾಶಮಾನವಾದ ಹದಿನೈದು ದಿನಗಳಲ್ಲಿ ಹತ್ತನೇ ದಿನದಂದು ಭಾಗೀರಥಿ ದೇವಿಯು ಜನಿಸುತ್ತಾಳೆ. ಭಗೀರಥನ ಕೋರಿಕೆಯ ಮೇರೆಗೆ ಗಂಗಾನದಿ ಭೂಮಿಗೆ ಬಂದದ್ದು ಇದೇ ದಿನ. ಭಾಗೀರಥಿಯ ದೇಗುಲದಲ್ಲಿ ವಿಶೇಷ ಪೂಜೆಯನ್ನು ಏರ್ಪಡಿಸಲಾಗುತ್ತದೆ. ರಾತ್ರಿ ಅಕಾರ ಉತ್ಸವ ಏರ್ಪಡಿಸಲಾಗುತ್ತದೆ. ಮಹಾಭಿಷೇಕ ಆಷಾಢದ ಪ್ರಕಾಶಮಾನವಾದ ಹದಿನೈದು ದಿನಗಳ ಹತ್ತನೇ ದಿನದಂದು ವಿಗ್ರಹಕ್ಕೆ ವಿಶೇಷ ಅಭಿಷೇಕವನ್ನು ಮಾಡಲಾಗುತ್ತದೆ. ಹಿಂದಿನ ದಿನವೇ ದೇವಾಲಯದ ಆವರಣ, ಎಣ್ಣೆ-ದೀಪ ಹಿಡಿದವರು, ಪೂಜಾ ಸಾಧನಗಳು, ಆಭರಣಗಳು ಇತ್ಯಾದಿಗಳನ್ನು ತೊಳೆದು ಸ್ವಚ್ಛಗೊಳಿಸಲಾಗುತ್ತದೆ. ವಿಗ್ರಹಗಳನ್ನು ಚೆನ್ನಾಗಿ ಉಜ್ಜಲಾಗುತ್ತದೆ ಮತ್ತು ತೊಳೆಯಲಾಗುತ್ತದೆ. ವಿಶೇಷ ಹಬ್ಬವನ್ನು ಸಹ ಆಯೋಜಿಸಲಾಗುತ್ತದೆ. ಪ್ರಥಮೈಕಾದಾಸಿ ಆಷಾಢ ಮಾಸದ ಪ್ರಕಾಶಮಾನವಾದ ಹದಿನೈದು ದಿನಗಳಲ್ಲಿ ಹನ್ನೊಂದನೇ ದಿನವನ್ನು ಪ್ರಥಮೈಕಾದಾಸಿ ಅಥವಾ ಸಾಯಣಿ ಈಕಾದಾಸಿ ಎಂದು ಕರೆಯಲಾಗುತ್ತದೆ. ಮುಂದಿನ ನಾಲ್ಕು ತಿಂಗಳುಗಳನ್ನು ಚತುರ್ಮಾಸ್ಯದ ಅವಧಿ ಎಂದು ಕರೆಯಲಾಗುತ್ತದೆ. ಈ ಅವಧಿಯಲ್ಲಿ ದೇವರು ಯೋಗದ ನಿದ್ರೆ ಎಂದು ಕರೆಯಲ್ಪಡುವ ಸರ್ಪ ಸೀಸದ ಮೇಲೆ ವಿಶ್ರಾಂತಿ ಪಡೆಯುತ್ತಾನೆ ಎಂದು ನಂಬಲಾಗುತ್ತದೆ.ಈ ಈಕಾದಶಿಯ ದಿನದಂದು ವೈಷ್ಣವರು ತಮ್ಮ ಹಣೆ, ಎದೆ ಮತ್ತು ತೋಳುಗಳ ಮೇಲೆ ಮಠದಲ್ಲಿ ಬಿಸಿಮಾಡಿದ ಮುದ್ರೆಯ ಮೂಲಕ ಪವಿತ್ರ ಆಕೃತಿಗಳನ್ನು ಉಬ್ಬುವ ಮೂಲಕ ತಮ್ಮ ದೀಕ್ಷಾ ವಿಧಿಯನ್ನು ಆಚರಿಸುತ್ತಾರೆ. ಇದು ಭಕ್ತರಿಗೆ ಪವಿತ್ರವಾದ ಆಚರಣೆಯಾಗಿದೆ. ಅಂದು ಸುದರ್ಶನ ಹೋಮ ಏರ್ಪಡಿಸಲಾಗುತ್ತದೆ. ಚಕ್ರ ಮತ್ತು ಶಂಖದ ಬೆಳ್ಳಿ ಮುದ್ರೆಗಳನ್ನು ಪವಿತ್ರ ಅಗ್ನಿಯಲ್ಲಿ ಬಿಸಿಮಾಡಲಾಗುತ್ತದೆ ಮತ್ತು ಅವುಗಳನ್ನು ಮೊದಲು ಸ್ವಾಮೀಜಿಯ ಎದೆ, ಹಣೆ ಮತ್ತು ಭುಜಗಳ ಮೇಲೆ ಮತ್ತು ನಂತರ ಭಕ್ತರ ಎದೆ, ಹಣೆ ಮತ್ತು ಭುಜಗಳ ಮೇಲೆ ಮುದ್ರೆಯೊತ್ತಲಾಗುತ್ತದೆ. ಇದು ಒಂದು ರೀತಿಯ ದೀಕ್ಷೆಯಾಗಿದ್ದು, ಪ್ರತಿಯೊಬ್ಬ ವೈಷ್ಣವನೂ ಪ್ರತಿ ವರ್ಷ ಅನುಭವಿಸಬೇಕೆಂದು ನಿರೀಕ್ಷಿಸಲಾಗಿದೆ.ದೂರದ ಊರುಗಳಿಂದ ಬರುವ ಭಕ್ತರು ಅಂದು ಉಡುಪಿಗೆ ಆಗಮಿಸಿ ಮಧ್ವಸರೋವರದ ತೊಟ್ಟಿಯಲ್ಲಿ ಪುಣ್ಯಸ್ನಾನ ಮಾಡಿ ಮುದ್ರಾಧಾರಣೆ ಮಾಡಿ ಹಿಂತಿರುಗುತ್ತಾರೆ.ಆ ದಿನದಿಂದ ಒಂದು ತಿಂಗಳು ಸಾಕ ವ್ರತ ಎಂದು ಕರೆಯಲಾಗುವ ಆಹಾರದ ಮಾಸವಾಗಿ ಆಚರಿಸಲಾಗುತ್ತದೆ. ತರಕಾರಿಗಳು ಮತ್ತು ಮೆಣಸಿನಕಾಯಿಗಳನ್ನು ನಿಷೇಧಿಸಲಾಗಿದೆ. ಹಸಿಬೇಳೆ, ಕಡ್ಲೆಬೇಳೆ ಮತ್ತಿತರ ಪದಾರ್ಥಗಳನ್ನು ಮಾತ್ರ ಅಡುಗೆಗೆ ಬಳಸುತ್ತಾರೆ. ಚಾತುರ್ಮಾಸ್ಯ ಆಷಾಢದ ಹುಣ್ಣಿಮೆಯ ದಿನದಂದು ಸ್ವಾಮೀಜಿಯವರು ವಿಧ್ಯುಕ್ತವಾದ ಕ್ಷೌರವನ್ನು ತೆಗೆದುಕೊಳ್ಳುತ್ತಾರೆ ಮತ್ತು ಇದು ಚತುರಮಾಸ್ಯದ ಆರಂಭವಾಗಿದೆ ಅಥವಾ ನಾಲ್ಕು ಹದಿನೈದು ದಿನಗಳ ಕಾಲ ನಿಗದಿತ ಸ್ಥಳದಲ್ಲಿ ಉಳಿಯುತ್ತದೆ. ದಿನನಿತ್ಯದ ವಿಧಿವಿಧಾನಗಳು ಮುಗಿದ ನಂತರ, ಸ್ವಾಮೀಜಿಯವರು ಭಯಭೀತರಾದ ಮಣ್ಣು ಮತ್ತು ಉರುವಲು ಇರುವ ತಟ್ಟೆಯನ್ನು ಹಿಡಿದುಕೊಂಡು ವಿಗ್ರಹಗಳ ಮುಂದೆ ಭಕ್ತರನ್ನು ಉದ್ದೇಶಿಸಿ ಹೀಗೆ ಹೇಳುತ್ತಾರೆ."ಇದು ಮಳೆಗಾಲ. ದಾರಿಗಳು ಕೀಟಗಳಿಂದ ತುಂಬಿವೆ. ನಾವು ನಮ್ಮ ಚಲನೆಯನ್ನು ನಿರ್ಬಂಧಿಸುತ್ತೇವೆ ಆದ್ದರಿಂದ ಅವುಗಳನ್ನು ನೋಯಿಸಬಾರದು. ಧರ್ಮಗ್ರಂಥಗಳಲ್ಲಿನ ಹೇಳಿಕೆಯ ಪ್ರಕಾರ ಹದಿನೈದು ದಿನಗಳನ್ನು ಒಂದು ತಿಂಗಳಿಗೆ ಸಮಾನವೆಂದು ಪರಿಗಣಿಸಲಾಗುತ್ತದೆ. ಜೀವಿಗಳಿಗೆ ಯಾವುದೇ ಹಾನಿಯಾಗದಂತೆ ನಾಲ್ಕು ಹದಿನೈದು ದಿನಗಳನ್ನು ಇಲ್ಲಿ ನಿಗದಿತ ಸ್ಥಳದಲ್ಲಿ ಕಳೆಯಲು ನಾವು ಪ್ರಸ್ತಾಪಿಸುತ್ತೇವೆ". ಇದಕ್ಕೆ ಮನೆಯವರು ‘ದಯವಿಟ್ಟು ಇಲ್ಲಿಯೇ ಇರಿ ಮತ್ತು ನಿಮ್ಮ ಉಪಸ್ಥಿತಿಯಿಂದ ನಮ್ಮನ್ನು ಅನುಗ್ರಹಿಸಿ’ ಎಂದು ಉತ್ತರಿಸುತ್ತಾರೆ.ಮುಂದಿನ ಎರಡು ತಿಂಗಳುಗಳಲ್ಲಿ ವಿದ್ವಾಂಸರು ವೇದಗಳು, ರಾಮಾಯಣ, ಮಹಾಭಾರತ, ಭಾಗವತ ಮತ್ತು ಮಧ್ವಾಚಾರ್ಯರ ಕೃತಿಗಳನ್ನು ಪಠಿಸುತ್ತಾರೆ.ಈಗ ಆಷಾಢದ ಹುಣ್ಣಿಮೆಯ ದಿನದ ಬದಲಾಗಿ ಚಾತುರ್ಮಾಸ್ಯವು ಆಷಾಢದ ಕರಾಳ ಹದಿನೈದು ದಿನಗಳ ಐದನೇ ದಿನದಿಂದ ಪ್ರಾರಂಭವಾಗುತ್ತದೆ. ಇದು ಟೀಕಾಚಾರ್ಯರ ವಾರ್ಷಿಕೋತ್ಸವದೊಂದಿಗೆ ಸೇರಿಕೊಳ್ಳುತ್ತದೆ. ಈ ಅವಧಿಯ ಈಕಾದಶಿ ಉಪವಾಸದ ದಿನಗಳಲ್ಲಿ ರಾತ್ರಿಯಲ್ಲಿ ಜಾಗರ ಪೂಜೆ ಎಂದು ಕರೆಯಲ್ಪಡುವ ವಿಶೇಷ ಪೂಜೆ ನಡೆಯುತ್ತದೆ. ರಾತ್ರಿ ಪೂಜೆಯ ನಂತರ ಸ್ವಾಮೀಜಿಯವರು ತುಳಸಿಯನ್ನು ಹೊಂದಿರುವ ತಟ್ಟೆಯನ್ನು ತಮ್ಮ ತಲೆಯ ಮೇಲೆ ಹೊತ್ತುಕೊಳ್ಳುತ್ತಾರೆ. ಅವನು ಭಗವಂತನ ಗೋರಿಯನ್ನು ಹಾಡುತ್ತಾ ನೃತ್ಯ ಮಾಡುತ್ತಾನೆ. ಸಂಗೀತಗಾರರು ಮತ್ತು ಪರಿಚಾರಕರು ಭಕ್ತಿಗೀತೆಗಳನ್ನು ಹಾಡುತ್ತಾ ನೃತ್ಯ ಮಾಡುತ್ತಾರೆ. ವಿದ್ವಾಂಸರು ರಾತ್ರಿಯಲ್ಲಿ ಬಹಳ ಸಮಯದವರೆಗೆ ಪವಿತ್ರ ಮಹಾಕಾವ್ಯಗಳನ್ನು ಪಠಿಸುತ್ತಾರೆ. ಮೂರು ಸ್ಥಳಗಳಲ್ಲಿ ಪವಿತ್ರ ಮಹಾಕಾವ್ಯಗಳ ಕುರಿತು ವಿಶೇಷ ಪ್ರವಚನಗಳನ್ನು ಏರ್ಪಡಿಸಲಾಗುತ್ತದೆ. ಅವರು · ಮಧ್ವ ಸರೋವರದಲ್ಲಿ ವೇದಿಕೆ. · ಆಸನದ ಮುಂದೆ ಸಿಂಹಾಸನ ಎಂದು ಕರೆಯಲ್ಪಡುವ ಕೋಣೆಯನ್ನು ಮಾಧ್ವ ಪಿಠಾ ಮತ್ತು ಎಂದು ಕರೆಯಲಾಗುತ್ತದೆ · ಮುಖ್ಯ ಪ್ರಾಣದ ದೇಗುಲದ ದಕ್ಷಿಣ ದ್ವಾರದ ಬಳಿಯ ಚಂದ್ರಸಾಲಾದಲ್ಲಿ. ಭಕ್ತರೊಬ್ಬರು ತೊಟ್ಟಿಗೆ ಇಳಿದು ವಿಗ್ರಹದ ಅರ್ಚನೆಯ ನಂತರ ಹೊರಹೋಗುವ ಸಮಯದಲ್ಲಿ ಪವಿತ್ರ ಗ್ರಂಥಗಳ ಪಠಣ ಕಿವಿಗೆ ಬೀಳುವಂತೆ ಈ ವ್ಯವಸ್ಥೆಯನ್ನು ಮಾಡಲಾಗಿದೆ. ಚಂದ್ರಸಾಲಾದಲ್ಲಿ ಪ್ರತಿದಿನ ಪಠಣ ನಡೆಯುತ್ತದೆ. ಇದಲ್ಲದೆ, ವರ್ಷವಿಡೀ ಪ್ರತಿದಿನದ ಊಟದ ಸಮಯದಲ್ಲಿ ಸಿಂಹಾಸನದಲ್ಲಿ ಮತ್ತು ಕೌಕಿಯಲ್ಲಿ ವಿಶೇಷ ಪಠಣಗಳು ನಡೆಯುತ್ತವೆ. ಜಯತೀತದ ಪುಣ್ಯ ತಿಥಿ ಸಂತ ಜಯತೀರ್ಥರ ವಾರ್ಷಿಕೋತ್ಸವವು ಆಸಾಧದ ಕರಾಳ ಹದಿನೈದು ದಿನಗಳ ಐದನೇ ದಿನದಂದು ಬರುತ್ತದೆ. ಮಾಧವನ ಕೃತಿಗಳ ಶ್ರೇಷ್ಠ ವ್ಯಾಖ್ಯಾನಕಾರರಾಗಿ, ಜಯತೀರ್ಥರನ್ನು ಟೀಕಾಚಾರ್ಯ ಎಂದು ಕರೆಯಲಾಗುತ್ತದೆ ಮತ್ತು ಆದ್ದರಿಂದ ಎಲ್ಲಾ ಮಾಧ್ವರಿಂದ ಗೌರವಿಸಲಾಗುತ್ತದೆ. ಹಾಗಾಗಿ ಆ ದಿನದಂದು ಚಾತುರ್ಮಾಸ್ಯವನ್ನು ಪ್ರಾರಂಭಿಸುವ ವ್ಯವಸ್ಥೆಯು ರೂಢಿಗೆ ಬಂದಿತು. ಅವರ ವಾರ್ಷಿಕೋತ್ಸವವನ್ನು ಉಡುಪಿಯಲ್ಲಿ ಅವರ ಕೃತಿಗಳನ್ನು ಪಠಿಸುವ ಮೂಲಕ ಮತ್ತು ಅವರ ಕೃತಿಗಳ ಕುರಿತು ವಿಶೇಷ ಉಪನ್ಯಾಸಗಳು ಮತ್ತು ಪ್ರವಚನಗಳನ್ನು ನೀಡುವ ಮೂಲಕ ಆಚರಿಸಲಾಗುತ್ತದೆ. ವಿಶೇಷ ಔತಣಕೂಟವನ್ನೂ ಏರ್ಪಡಿಸಲಾಗುತ್ತದೆ. ನಾಗರ ಪಂಚಮಿ ಇದನ್ನು ಶ್ರಾವಣ ಮಾಸದ ಪ್ರಕಾಶಮಾನವಾದ ಹದಿನೈದು ದಿನಗಳ ಐದನೇ ದಿನದಂದು ಆಚರಿಸಲಾಗುತ್ತದೆ. ಬಡಗು ಮಾಳಿಗೆಯ ಮುಂಭಾಗದಲ್ಲಿರುವ ಸುಬ್ರಹ್ಮಣ್ಯ ದೇಗುಲದಲ್ಲಿ ಈ ದಿನ ನಾಗ ದೇವರನ್ನು ಪೂಜಿಸಲಾಗುತ್ತದೆ. ಉಪಾಕರ್ಮ ಋಗ್ವೇದಗಳೆಂದು ಕರೆಯಲ್ಪಡುವ ಕುಲಕ್ಕೆ ಸೇರಿದವರಿಗೆ ದಾರದ ಆಚರಣೆಯು ಸಿಗ್ಮಾ ಮಾಸದ ಸವನ್ನಾ ನಕ್ಷತ್ರದ ದಿನದಂದು ನಡೆಯುತ್ತದೆ. ನಿಮ್ಮ ವೇದ ಶಾಖೆಗೆ ಸೇರಿದವರು ಸಿಗ್ಮಾ ಮಾಸದ ಹುಣ್ಣಿಮೆಯ ದಿನದಂದು ಆಚರಿಸುತ್ತಾರೆ. ಸಿಗ್ಮಾ ಮಾಸದ ನಕ್ಷತ್ರದ ಆತುರದ ದಿನದಂದು ಸಾಮವೇದ ಶಾಖೆಗೆ ಸೇರಿದ ಪುರುಷರು ತಮ್ಮ ಉಪಾಕರ್ಮವನ್ನು ಆಚರಿಸುತ್ತಾರೆ. ಇದು ಸಾಮಾನ್ಯವಾಗಿ ಭಾದ್ರಪದ ಮಾಸದಲ್ಲಿ ಬರುತ್ತದೆ. ಕೃಷ್ಣ ಮಠವು ಈ ಎಲ್ಲಾ ಉಪಾಕರ್ಮ ಆಚರಣೆಗಳನ್ನು ಆಚರಿಸುತ್ತದೆ. ಈ ಎಲ್ಲಾ ಶಾಖೆಗಳಿಗೆ ಸೇರಿದವರು ಮತ್ತು ಉಡುಪಿ ಪಟ್ಟಣದ ಸುತ್ತಮುತ್ತ ವಾಸಿಸುವ ಜನರು ಈ ಆಚರಣೆಗಳಲ್ಲಿ ಭಾಗವಹಿಸುತ್ತಾರೆ ಮತ್ತು ಹೊಸ ಪವಿತ್ರ ದಾರವನ್ನು ಧರಿಸುತ್ತಾರೆ. ಅನಂತೇಶ್ವರ ದೇವಸ್ಥಾನದಲ್ಲಿಯೂ ಋಗುಪಾಕರ್ಮವನ್ನು ಆಚರಿಸಲಾಗುತ್ತದೆ. ಚಂದ್ರೇಶ್ವರ ದೇವಸ್ಥಾನದಲ್ಲಿಯೂ ಆಚರಿಸಲಾಗುತ್ತದೆ. ಪವಿತ್ರ ದಾರವನ್ನು ಪಠಿಸುವ ಸಮಾರಂಭದ ಮೂಲಕ ಸ್ವಾಮೀಜಿಯವರಿಗೆ ಅನ್ವಯಿಸುವುದಿಲ್ಲ ಅವರ ಆಚರಣೆಗಳ ಕೋಲು ಅದರೊಂದಿಗೆ ಪವಿತ್ರ ದಾರವನ್ನು ಹೊಂದಿರುತ್ತದೆ ಮತ್ತು ಆದ್ದರಿಂದ ಅದನ್ನು ಬದಲಾಯಿಸಬೇಕಾಗಿದೆ. ಉಡುಪಿಯ ಸ್ವಾಮೀಜಿಗಳು ಋಗುಪಾಕರ್ಮದ ದಿನದಂದು ಇದನ್ನು ಮಾಡುತ್ತಾರೆ. ಹಯಗ್ರೀವ ಜಯಂತಿ ಶ್ರಾವಣ ಹುಣ್ಣಿಮೆಯನ್ನು ಹಯಗ್ರೀವ ಜಯಂತಿ ಎಂದು ಆಚರಿಸಲಾಗುತ್ತದೆ. ಈ ದಿನವೇ ಪರಮಾತ್ಮನು ಭೂಮಿಯಲ್ಲಿ ಹಯಗ್ರೀವನ ಅವತಾರವನ್ನು ತೆಗೆದುಕೊಂಡನು. ಶ್ರೀ ಸೋದೆ ಮಠಕ್ಕೆ ಇದು ಪ್ರಮುಖ ಹಬ್ಬ. ಇತರ ಮಠಗಳ ಪರ್ಯಾಯದ ಸಮಯದಲ್ಲಿ, ಹಯಗ್ರೀವ ದೇವರ ನೆಚ್ಚಿನ ಖಾದ್ಯವನ್ನು ಅರ್ಪಿಸುವ ಮೂಲಕ ವಿಶೇಷ ಆಚರಣೆಗಳನ್ನು ಮಾಡಲಾಗುತ್ತದೆ. ಅದೇ ದಿನ ಪವಿತ್ರರೂಪನವೂ ನಡೆಯುತ್ತದೆ. ರೇಷ್ಮೆ ಎಳೆಗಳನ್ನು ಮೂರು ಮಡಚಿ ನಂತರ ೧೨, ೨೪ ಅಥವಾ ೩೬ ಪವಿತ್ರ ಗಂಟುಗಳನ್ನು ಕಟ್ಟಲಾಗುತ್ತದೆ. ಅದನ್ನು ಮಾಲೆಯಂತೆ ವಿಗ್ರಹಕ್ಕೆ ಹಾಕಲಾಗುತ್ತದೆ. ಇದನ್ನು ಪವಿತ್ರರೂಪಣ ಎಂದು ಕರೆಯುತ್ತಾರೆ. ಮಾಲೆಯನ್ನು ಅರ್ಪಿಸುವುದರಿಂದ ವರ್ಷಪೂರ್ತಿ ನಡೆಯುವ ಆಚರಣೆಗಳು ಮತ್ತು ಆಚರಣೆಗಳಲ್ಲಿನ ಯಾವುದೇ ನ್ಯೂನತೆಗಳು ಅಥವಾ ದೋಷಗಳು ನಿವಾರಣೆಯಾಗುತ್ತವೆ ಎಂದು ನಂಬಲಾಗಿದೆ. ಈ ಎಳೆಯನ್ನು ಕಲ್ಕಿ ದಾರಾ ಎಂದೂ ಕರೆಯುತ್ತಾರೆ. ಈ ಎಳೆಗಳನ್ನು ವಿಗ್ರಹಕ್ಕೆ ಅರ್ಪಿಸಿದ ನಂತರ ಅವುಗಳನ್ನು ಪ್ರಸಾದದ ಜೊತೆಗೆ ಇತರ ಮಠಗಳಿಗೂ ಕಳುಹಿಸಲಾಗುತ್ತದೆ. ಇವುಗಳನ್ನು ಇತರ ಮನೆಯವರಿಗೂ ಹಂಚಲಾಗುತ್ತದೆ. ದಧಿ ವ್ರತಾರಂಭ ಶ್ರಾವಣದ ಉಜ್ವಲ ಹದಿನೈದು ದಿನದ ಹನ್ನೆರಡನೆಯ ದಿನದಿಂದ ಭಾದ್ರಪದದ ಉಜ್ವಲ ಹದಿನೈದು ದಿನದವರೆಗೆ ಜನರು ದಧಿವ್ರತವನ್ನು ಆಚರಿಸುತ್ತಾರೆ. ಈ ಸಮಯದಲ್ಲಿ ಭಕ್ತರು ಮೊಸರು ಸೇವನೆಯಿಂದ ದೂರವಿರುತ್ತಾರೆ. ಶ್ರೀ ರಾಘವೇಂದ್ರ ಸ್ವಾಮಿಗಳ ವಾರ್ಷಿಕೋತ್ಸವ ಶ್ರೀ ರಾಘವೇಂದ್ರ ಸ್ವಾಮಿಗಳ ವಾರ್ಷಿಕೋತ್ಸವವು ಶ್ರಾವಣ ಮಾಸದ ಕರಾಳ ಹದಿನೈದು ದಿನದ ಎರಡನೇ ದಿನ ಬರುತ್ತದೆ. ಸ್ವಾಮೀಜಿಯವರು ಸಂತರಿಗೆ ವಿಶೇಷ ಸೇವೆಗಳನ್ನು ನೀಡುತ್ತಾರೆ ಮತ್ತು ಔತಣವನ್ನು ಏರ್ಪಡಿಸುತ್ತಾರೆ. ವಿಚಾರ ಸಂಕಿರಣಗಳು ಮತ್ತು ಪ್ರವಚನಗಳು ನಡೆಯುತ್ತವೆ. ರಾಘವೇಂದ್ರನ ಗುಡಿಯಲ್ಲಿ ಮೂರು ದಿನಗಳ ಉತ್ಸವವನ್ನು ಏರ್ಪಡಿಸಲಾಗುತ್ತದೆ. ಶ್ರೀ ಕಾಶ ಜಯಂತಿ ಸಿಗ್ಮಾ ಮಾಸದ ಕರಾಳ ಹದಿನೈದು ದಿನಗಳಲ್ಲಿ ಎಂಟನೇ ದಿನವು ಶ್ರೀ ಕೃಷ್ಣನ ಅವತಾರ ದಿನವಾಗಿದೆ. ಮಧ್ಯರಾತ್ರಿಯಲ್ಲಿ ರೂಮಿಂಗ್ ನಕ್ಷತ್ರವಿದ್ದರೆ ಅದನ್ನು ಜನ್ಮಾಷ್ಟಮಿ ಎಂದು ಕರೆಯಲಾಗುತ್ತದೆ. ಚಂದ್ರನ ಕ್ಯಾಲೆಂಡರ್ ಅನ್ನು ಅನುಸರಿಸುವವರು ಇದನ್ನು ಶ್ರಾವಣ ಮಾಸದ ಕರಾಳ ಹದಿನೈದು ದಿನದ ಎಂಟನೇ ದಿನದಂದು ಆಚರಿಸುತ್ತಾರೆ. ಸೌರ ಕ್ಯಾಲೆಂಡರ್ ಅನ್ನು ಅನುಸರಿಸುವವರು ಸಿಂಹದ ಸೌರ ಮಾಸದಲ್ಲಿ ಕರಾಳ ಹದಿನೈದು ದಿನದ ಎಂಟನೇ ದಿನದಂದು ಆಚರಿಸುತ್ತಾರೆ. ಇದು ಶ್ರಾವಂದ ಮಾಸದಲ್ಲಾಗಲೀ ಅಥವಾ ಭಾದ್ರಪದ ಮಾಸದಲ್ಲಾಗಲೀ ಬರಬಹುದು. ಸಿಂಹ ಮಾಸದ ಎಂಟನೇ ದಿನದಂದು ರೂಹಿಣಿ ನಕ್ಷತ್ರವು ಕಾಣಿಸಿಕೊಳ್ಳುತ್ತದೆ ಎಂಬುದನ್ನು ಗಮನಿಸಬಹುದು. ಆದ್ದರಿಂದ ಈ ಹಬ್ಬವನ್ನು ಆಚರಿಸಲು ಸೌರವ್ಯೂಹವು ಹೆಚ್ಚು ಸೂಕ್ತವೆಂದು ತೋರುತ್ತದೆ. ಹಾಗಾಗಿ ಉಡುಪಿಯಲ್ಲಿ ಇದನ್ನು ಅನುಸರಿಸಲಾಗುತ್ತಿದೆ. ಉಡುಪಿ ಪಟ್ಟಣದಲ್ಲಿ ಕೃಷ್ಣ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಜನರು ದಿನದಂದು ಉಪವಾಸವನ್ನು ಆಚರಿಸುತ್ತಾರೆ. ವಿದ್ವಾಂಸರು ಭಗವದ್ಗೀತೆ, ಭಾಗವತ ಮತ್ತು ಇತರ ಪವಿತ್ರ ಗ್ರಂಥಗಳನ್ನು ಪಠಿಸುತ್ತಾರೆ. ಕೃಷ್ಣನ ವಿಗ್ರಹವನ್ನು ವಿಶೇಷವಾಗಿ ಕ್ರೀಡಾ ಮಗುವಿನಂತೆ ಅಲಂಕರಿಸಲಾಗುತ್ತದೆ. ಚಂದ್ರೋದಯವಾದಾಗ ಮಧ್ಯರಾತ್ರಿಯಲ್ಲಿ ಅವರು ವಿಗ್ರಹಕ್ಕೆ ಚಕ್ಕುಲಿ ಮತ್ತು ಲಡ್ಡಿಗಳಂತಹ ಭಕ್ಷ್ಯಗಳನ್ನು ಅರ್ಪಿಸುತ್ತಾರೆ. ಬಿಲ್ವದ ಹೆದರಿಕೆಯ ಎಲೆಗಳನ್ನು ಅರ್ಪಿಸಲಾಗುತ್ತದೆ. ಭಕ್ತರು ಶಂಖದೊಂದಿಗೆ ನೀರು ಮತ್ತು ಹಾಲನ್ನು ಸುರಿಯುತ್ತಾರೆ. ಸಂಪ್ರದಾಯದಂತೆ ಸಮೀಪದ ಗ್ರಾಮಗಳ ಗೋಪಾಲಕರು ಶ್ರೀಕೃಷ್ಣನ ವಿಗ್ರಹದ ಮುಂದೆ ನೀರು ಮತ್ತು ಹಾಲು ಅರ್ಘ್ಯವನ್ನು ಅರ್ಪಿಸುತ್ತಾರೆ. ದ್ವಾದಶಿಯ ದಿನದಂತೆ ಮರುದಿನವೂ ಮುಂಜಾನೆ ಆಚರಣೆಗಳು ನಡೆಯುತ್ತವೆ. ಮೊಸರು ಕುಡಿಕೆ ಅಂದು ಮಧ್ಯಾಹ್ನ ಶ್ರೀಕೃಷ್ಣನ ಕ್ರೀಡಾ ಫೂ ಮತ್ತು ಕುಣಿತದ ಹಬ್ಬವಾಗಿ ಆಚರಿಸಲಾಗುತ್ತದೆ. ಕೃಷ್ಣನ ವಿಗ್ರಹವನ್ನು ಕಾರ್ ಸ್ಟ್ರೀಟ್ ಸುತ್ತಿ ಮೋಜು ಮಸ್ತಿ ಮಾಡ್ತಾರೆ. ಕೃಷ್ಣನ ವಿಗ್ರಹವನ್ನು ಪಲ್ಲಕ್ಕಿಯಲ್ಲಿ ಕಾರಿನ ಬೀದಿಯಲ್ಲಿ ಸುತ್ತಲಾಗುತ್ತದೆ. ಅರಿಶಿನ ಮತ್ತು ಕುಂಕುಮ ನೀರನ್ನು ಹೊಂದಿರುವ ಮೊಸರು ಕುಡಿಕೆ ಎಂದು ಕರೆಯಲ್ಪಡುವ ಮಣ್ಣಿನ ಮಡಕೆಗಳನ್ನು ಮರದ ಕಂಬಗಳ ಮೇಲ್ಭಾಗದಿಂದ ಅಮಾನತುಗೊಳಿಸಲಾಗಿದೆ. ನೆಗೆಯುವ ಬಟ್ಟೆ ಧರಿಸಿದ ಜನರು ಕೋಲುಗಳಿಂದ ಮಡಕೆಗಳಿಗೆ ಹೊಡೆದು ಮಡಕೆಗಳನ್ನು ಒಡೆಯಲು ಪ್ರಯತ್ನಿಸುತ್ತಾರೆ. ಮೊಸರಿನ ಮಡಕೆಯನ್ನು ಒಡೆದ ಕೃಷ್ಣನ ವಿಗ್ರಹವು ಉಡುಪಿಯ ವಿಗ್ರಹವಾಗಿದೆ. ಇದು ಕೃಷ್ಣನ ಬಾಲ್ಯದ ಕ್ರೀಡೆಗಳ ಪ್ರಮುಖ ಪ್ರಸಂಗವಾಗಿದೆ ಮತ್ತು ಆದ್ದರಿಂದ ಎಲ್ಲಾ ಆಡಂಬರ, ಹಬ್ಬ ಮತ್ತು ವಿನೋದದಿಂದ ಆಚರಿಸಲಾಗುತ್ತದೆ. ಶ್ರೀ ಕೃಷ್ಣನ ಬಾಲ್ಯದ ಕ್ರೀಡೆಗಳಿಗೆ ಸಂಬಂಧಿಸಿದ ಅಲಂಕಾರಿಕ ಡ್ರೆಸ್ ಮೆರವಣಿಗೆಗಳು ಮತ್ತು ಹುಲಿಗಳು, ಕರಡಿಗಳು ಇತ್ಯಾದಿಗಳ ನೃತ್ಯಗಳ ಅನುಕರಣೆಗಳು ಅವನ ಜನ್ಮದಿನದಂದು ಶ್ರೀಕೃಷ್ಣನಿಗೆ ಒಂದು ರೀತಿಯ ಸೇವೆಯಾಗಿ ಮೆರವಣಿಗೆಯ ಮುಂದೆ ಕಾಣಿಸಿಕೊಳ್ಳುತ್ತವೆ. ಎಲ್ಲಾ ಮಠಗಳ ಸ್ವಾಮೀಜಿಗಳು ಈ ಸಾಧಕರಿಗೆ ಉಡುಗೊರೆ ಮತ್ತು ಸಂಭಾವನೆ ನೀಡುತ್ತಾರೆ. ಗಣೇಶ ಚತುರ್ಥಿ=== ಭಾದ್ರಪದ ಮಾಸದ ಪ್ರಕಾಶಮಾನವಾದ ಹದಿನೈದು ದಿನಗಳಲ್ಲಿ ನಾಲ್ಕನೇ ದಿನವನ್ನು ಗಣೇಶನ ಹಬ್ಬವಾಗಿ ಆಚರಿಸಲಾಗುತ್ತದೆ. ಆನೆಯ ಮುಖದ ದೇವರ ಮೂಲಕ ಗಣಪತಿಗೆ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಅಂದು ಶುಭ ಮುಹೂರ್ತದಲ್ಲಿ ಕಲಾವಿದರು ಮಣ್ಣಿನಿಂದ ಮಾಡಿದ ಗಣಪತಿ ಮೂರ್ತಿಯನ್ನು ಬಡಗು ಮಾಳಿಗೆಗೆ ತರುತ್ತಾರೆ. ಇಡೀ ಪ್ರದೇಶವನ್ನು ವಿವಿಧ ರೀತಿಯ ಹೂಗೊಂಚಲುಗಳಿಂದ ಕಲಾತ್ಮಕವಾಗಿ ಅಲಂಕರಿಸಲಾಗಿದೆ. ಇನ್ನು ನಾಲ್ಕು ದಿನ ಕಣ್ಣಿಗೆ ಹಬ್ಬ. ದೇಗುಲದ ಪ್ರವೇಶದ್ವಾರದಲ್ಲಿ ಗಣಪನ ಸಣ್ಣ ವಿಗ್ರಹವೂ ಇದೆ. ವಿಶ್ವಂಭರ ರೂಪದಲ್ಲಿರುವ ಪರಮಾತ್ಮನಿಗೆ ಅಲ್ಲಿ ವಿಶೇಷ ಪೂಜೆಯನ್ನು ಏರ್ಪಡಿಸಲಾಗುತ್ತದೆ. ಪುರೋಹಿತರು ಗಣಹೂಮ ಎಂದು ಕರೆಯಲ್ಪಡುವ ಯಜ್ಞವನ್ನು ಮಾಡುತ್ತಾರೆ. ಸ್ವಾಮೀಜಿಯವರು ಗಣಪತಿಗೆ ವಿಶ್ವಂಭರ ಪ್ರಸಾದವನ್ನು ಅರ್ಪಿಸಿ ಆರತಿಯನ್ನು ಮಾಡುತ್ತಾರೆ. ನಾಲ್ಕು ದಿನಗಳ ಕಾಲ ವಿಶೇಷ ಗಣಪತಿಯನ್ನು ಪೂಜಿಸಿದ ನಂತರ ವಿಗ್ರಹವನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ನಂತರ ಮಧ್ವ ಸರೋವರದಲ್ಲಿ ಮುಳುಗಿಸಲಾಗುತ್ತದೆ. ===ಭೂವರಾಹ ಜಯಂತಿ=== ಭಾದ್ರಪದದ ಪ್ರಕಾಶಮಾನವಾದ ಹದಿನೈದು ದಿನಗಳಲ್ಲಿ ಐದನೇ ದಿನವು ಭೂವರಾಹ ಜಯಂತಿ ಆಚರಿಸುತ್ತಾರೆ. ಸೋದೆ ಮಠದಲ್ಲಿ ಭೂವರಾಹ ಪೀಠಾಧಿಪತಿಯಾಗಿರುವುದರಿಂದ ವಿಶೇಷ ಉತ್ಸವಗಳನ್ನು ಏರ್ಪಡಿಸಲಾಗುತ್ತದೆ. ಶ್ರೀಕೃಷ್ಣ ಮಠದಲ್ಲಿಯೂ ಸಹ ಮೂರ್ತಿಗೆ ಬೇರು ಮತ್ತು ಬಲ್ಬ್‌ಗಳ ವಿಶೇಷ ಭಕ್ಷ್ಯಗಳನ್ನು ಅರ್ಪಿಸಲಾಗುತ್ತದೆ. ===ಕಲ್ಕಿ ಜಯಂತಿ=== ಭಾದ್ರಪದದ ಪ್ರಕಾಶಮಾನವಾದ ಹದಿನೈದು ದಿನಗಳಲ್ಲಿ ಆರನೇ ದಿನವನ್ನು ಕಲ್ಕಿಯ ರೂಪದಲ್ಲಿ ಪರಮಾತ್ಮನಿಗೆ ವಿಶೇಷ ಸೇವೆಗಳೊಂದಿಗೆ ಆಚರಿಸಲಾಗುತ್ತದೆ. ===ದಧಿ ವಾಮನ ಜಯಂತಿ=== ಭಾದ್ರಪದದ ತೇಜಸ್ವಿ ಹದಿನೈದು ದಿನದ ಹನ್ನೆರಡನೆಯ ದಿನದಲ್ಲಿ ವಿಷ್ಣು ದೇವರು ವಾಮನ ಅವತಾರವನ್ನು ತಳೆದು ಭೂಮಿಗಿಳಿದ. ಮೊಸರು ಇಲ್ಲದೆ ಒಂದು ತಿಂಗಳ ಆಹಾರವನ್ನು ಗಮನಿಸಿದ ನಂತರ ಜನರು ತಮ್ಮ ಪ್ರತಿಜ್ಞೆಯನ್ನು ಮುರಿದು ಆ ದಿನ ಮೊಸರು ತೆಗೆದುಕೊಳ್ಳಲು ಪ್ರಾರಂಭಿಸುತ್ತಾರೆ. ವಿಗ್ರಹವನ್ನು ಚಿಕ್ಕ ಹುಡುಗ ವಾಮನನಂತೆ ಅಲಂಕರಿಸಲಾಗುತ್ತದೆ. ಮೊಸರು ಮತ್ತು ಅನ್ನದ ವಿಶೇಷ ನೈವೇದ್ಯವನ್ನು ನೀಡಲಾಗುತ್ತದೆ. ಉತ್ತಮ ಔತಣಕೂಟ ಏರ್ಪಡಿಸಲಾಗುತ್ತದೆ. ಆ ದಿನದಿಂದ ಒಂದು ತಿಂಗಳ ಅವಧಿಯವರೆಗೆ ಆಶ್ವಯುಜದ ಉಜ್ವಲ ಹದಿನೈದು ದಿನಗಳಲ್ಲಿ ಹನ್ನೊಂದನೆಯ ದಿನದವರೆಗೆ ಹಾಲು ತೆಗೆದುಕೊಳ್ಳದಿರುವ ಕ್ಷೀರ ವ್ರತದ ಅವಧಿ ಎಂದು ಕರೆಯಲಾಗುತ್ತದೆ. ===ಅನಂತ ಕ್ಯಾತುರ್ದಾಸಿ=== ಭಾದ್ರಪದ ಮಾಸದ ಹದಿನಾಲ್ಕನೆಯ ದಿನವನ್ನು ಅನಂತನ ವ್ರತ ಎಂದು ಕರೆಯಲಾಗುತ್ತದೆ. ಅನಂತ ಪದ್ಮನಾಭ ದೇವರನ್ನು ನೀರು ತುಂಬಿದ ಮಡಕೆಯಲ್ಲಿ ಆವಾಹನೆ ಮಾಡಿ ತೆಂಗಿನಕಾಯಿ ಮತ್ತು ಹೂವುಗಳಿಂದ ಅಲಂಕರಿಸಲಾಗುತ್ತದೆ. ಹದಿನಾಲ್ಕು ಬಗೆಯ ಭಕ್ಷ್ಯಗಳೊಂದಿಗೆ ವಿಶೇಷ ಪೂಜೆಯನ್ನು ಆಚರಿಸಲಾಗುತ್ತದೆ. ===ನವರಾತ್ರಿ=== ಆಶ್ವಯುಜದ ಪ್ರಕಾಶಮಾನವಾದ ಹದಿನೈದು ದಿನಗಳಲ್ಲಿ ಮೊದಲ ದಿನದಿಂದ ಒಂಬತ್ತನೇ ದಿನದವರೆಗೆ ವಿಗ್ರಹವನ್ನು ನೀಲಿ, ದುರ್ಗಾ, ಸರಸ್ವತಿ ಮುಂತಾದ ದೇವಿಯರ ವೇಷಭೂಷಣಗಳಿಂದ ಅಲಂಕರಿಸಲಾಗುತ್ತದೆ.ನವರಾತ್ರಿಯ ದಿನಗಳಲ್ಲಿ ಮಧ್ವಾಚಾರ್ಯರ ಎಲ್ಲಾ ಕೃತಿಗಳನ್ನು ಪಠಣ ಮಾಡಲಾಗುತ್ತದೆ. ===ಪುಸ್ತಕ ಪೂಜೆ=== ಪವಿತ್ರ ಗ್ರಂಥಗಳ ಸಂಪುಟಗಳನ್ನು ನವರಾತ್ರಿಯ ಆರನೇ ಅಥವಾ ಏಳನೇ ದಿನದಿಂದ ಆರಂಭಗೊಂಡು ಆ ಹದಿನೈದು ದಿನದಲ್ಲಿ ಒಂಬತ್ತನೇ ಅಥವಾ ಹತ್ತನೇ ದಿನದವರೆಗೆ ನಕ್ಷತ್ರಗಳ ಮುಲಾದಿಂದ ಶ್ರಾವಣದ ಅವಧಿಯಲ್ಲಿ ಪೂಜಿಸಲಾಗುತ್ತದೆ. ಚಂದ್ರಸಾಲೆ ಎಂದು ಕರೆಯಲ್ಪಡುವ ಸಭಾಂಗಣದ ಉತ್ತರ ಮೂಲೆಯಲ್ಲಿ ತಾಳೆ ಎಲೆಯ ಹಸ್ತಪ್ರತಿಗಳನ್ನು ಮಂಟಪದಲ್ಲಿ ಜೋಡಿಸಲಾಗಿದೆ, ಅದನ್ನು ಚೆನ್ನಾಗಿ ಅಲಂಕರಿಸಲಾಗಿದೆ. ಶ್ರೀ ವೇದವ್ಯಾಸ ಮತ್ತು ಸರಸ್ವತಿ ದೇವಿಯನ್ನು ಕಲಿಕೆ ಮತ್ತು ಪಾಂಡಿತ್ಯದ ರಕ್ಷಕ ದೇವತೆಗಳಾಗಿ ಪ್ರತಿಪಾದಿಸಲಾಗುತ್ತದೆ. ಮಹಾಪೂಜೆಯ ನಂತರ ಸ್ವಾಮೀಜಿ ವ್ಯಾಸಪೂಜೆ ನೆರವೇರಿಸುತ್ತಾರೆ. ಕೊನೆಯ ದಿನದಂದು ಸಮಾರೋಪದ ಆಚರಣೆಗಳ ನಂತರ ವಿದ್ವಾಂಸರು ತಮ್ಮ ದೀಕ್ಷಾ ಸಮಾರಂಭವನ್ನು ಆಚರಿಸುತ್ತಾರೆ. ===ವಿಜಯ ದಶಮಿ=== ಇದು ಸುಗ್ಗಿಯ ಹಬ್ಬ. ಜೋಳದ ತೆನೆಗಳನ್ನು ವಿಧ್ಯುಕ್ತವಾಗಿ ದೇಗುಲಕ್ಕೆ ತಂದು ಪೂಜಿಸಲಾಗುತ್ತದೆ. ನಂತರ ಅವುಗಳನ್ನು ದೇವಾಲಯದ ವಿವಿಧ ಭಾಗಗಳಿಗೆ ಮತ್ತು ವಸ್ತುಗಳಿಗೆ ಕಟ್ಟಲಾಗುತ್ತದೆ. ಹೊಸ ಅನ್ನವನ್ನು ಬೇಯಿಸಿ ಮೂರ್ತಿಗೆ ನೈವೇದ್ಯ ಮಾಡಲಾಗುತ್ತದೆ ಮತ್ತು ‘ಹೊಸ ಊಟ’ ಎಂಬ ವಿಶೇಷ ಔತಣವನ್ನು ಬಡಿಸಲಾಗುತ್ತದೆ. ಚೆನ್ನ ಕೇಶವನ ಮೂರ್ತಿಯನ್ನು ಪ್ರತಿಷ್ಠಾಪಿಸಿರುವ ಮಠದ ಪೂರ್ವ ಭಾಗದಲ್ಲಿರುವ ದ್ವಾರವನ್ನು ಈ ದಿನದಂದು ಕೋಮಲ ಕದಿರುಗಳನ್ನು ತರಲು ತೆರೆಯಲಾಗುತ್ತದೆ. ಮಧ್ವ ಸರೋವರದಿಂದ ದೇಗುಲದ ಒಳಗೆ ಹೋಗಲು ಔಪಚಾರಿಕವಾಗಿ ಬಳಸಲಾಗುತ್ತಿದ್ದ ಪ್ರವೇಶದ್ವಾರವನ್ನು ಈಗ ವರ್ಷಕ್ಕೊಮ್ಮೆ ಮಾತ್ರ ಬಳಸಲಾಗುತ್ತದೆ. ಅಂದು ಕೌಕಿಯಲ್ಲಿ ವಿಶೇಷ ಔತಣವನ್ನು ಏರ್ಪಡಿಸಲಾಗುತ್ತದೆ. ಉಳಿದೆಲ್ಲ ದಿನಗಳಲ್ಲಿ ಸ್ವಾಮೀಜಿಗಳು ದಕ್ಷಿಣಾಭಿಮುಖವಾಗಿ ಊಟಕ್ಕೆ ಕುಳಿತುಕೊಳ್ಳುತ್ತಾರೆ. ಆದರೆ ಈ ದಿನ ಮಾತ್ರ ಅವರು ಪೂರ್ವಾಭಿಮುಖವಾಗಿ ಕುಳಿತುಕೊಳ್ಳುತ್ತಾರೆ. ===ಬುದ್ಧ ಜಯಂತಿ-ಮಧ್ವ ಜಯಂತಿ=== ವಿಜಯ ದಶಮಿ ದಿನವನ್ನು ಬುದ್ಧ ಜಯಂತಿ ಎಂದೂ ಆಚರಿಸಲಾಗುತ್ತದೆ. ಆ ದಿನ ದೇವರನ್ನು ಬುದ್ಧನ ರೂಪದಲ್ಲಿ ಪೂಜಿಸಲಾಗುತ್ತದೆ. ಮಧ್ವಾಚಾರ್ಯರು ವಿಜಯ ದಶಮಿಯಂದು ಪಾಜಕ ಕ್ಷೇತ್ರದಲ್ಲಿ ಜನಿಸಿದರು. ಆದ್ದರಿಂದ ಕೃಷ್ಣನ ಗುಡಿಯಲ್ಲಿರುವ ಮಧ್ವಾಚಾರ್ಯರ ಮೂರ್ತಿಗೆ ಮತ್ತು ಅನಂತೇಶ್ವರದಲ್ಲಿರುವ ಆಚಾರ್ಯರ ಮೂರ್ತಿಗೆ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ===ಸಮಿ ಪೂಜೆ=== ವಿಜಯೋತ್ಸವದ ಮೆರವಣಿಗೆ ಮತ್ತು ಸ್ವಾಮಿ ವೃಕ್ಷದ ಪೂಜೆ ಒಂದೇ ದಿನ ನಡೆಯುವ ವಿಶೇಷ ಆಚರಣೆಗಳಾಗಿವೆ.ಕಡಿಯಾಳಿಯ ಮಹಿಷ ಮರ್ದಿನಿ ದೇವಸ್ಥಾನಕ್ಕೆ ಎಲ್ಲಾ ರಾಜ ಸಾಮಗ್ರಿಗಳೊಂದಿಗೆ ಸೈನ್ಯದ ಫಲಕವನ್ನು ತೆಗೆದುಕೊಂಡು ಹೋಗಲಾಗುತ್ತದೆ ಮತ್ತು ಅಲ್ಲಿ ಒಂದು ಸಾಮಿ ಮರವನ್ನು ಪೂಜಿಸಲಾಗುತ್ತದೆ. ಮಠದ ಅರ್ಚಕರು ಧಾರ್ಮಿಕ ವಿಧಿವಿಧಾನ ನೆರವೇರಿಸುತ್ತಾರೆ. ಬಳಿಕ ಮಠದ ಆನೆಗೂ ಪೂಜೆ ಸಲ್ಲಿಸಲಾಗುತ್ತದೆ. ===ಪಶ್ಚಿಮ ಜಾಗರ ಪೂಜೆ=== ಆಶ್ವಯುಜದ ತೇಜಸ್ವಿ ಹದಿನೈದು ದಿನದಲ್ಲಿ ಹತ್ತನೆಯ ದಿನದ ಮಧ್ಯರಾತ್ರಿಯಿಂದ ಪ್ರಾರಂಭವಾದ ಒಂದು ತಿಂಗಳ ಅವಧಿಯಲ್ಲಿ ಹನ್ನೊಂದನೆಯ ದಿನದವರೆಗೆ ಕಾರ್ತಿಕ ಹದಿನೈದು ದಿನಗಳು ರಾತ್ರಿಯ ಕೊನೆಯ ಭಾಗದಲ್ಲಿ ಪ್ರತಿದಿನ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ಈ ಸೇವೆಯನ್ನು ಪ್ರತಿದಿನ ರಾತ್ರಿಯ ಕೊನೆಯ ಭಾಗದಲ್ಲಿ ನಡೆಸಲಾಗುತ್ತದೆ. ಈ ಸೇವೆಯನ್ನು ಪಶ್ವಿಮ ಜಾಗರ ಪೂಜೆ ಎಂದು ಕರೆಯುತ್ತಾರೆ ಏಕೆಂದರೆ ಇದನ್ನು ರಾತ್ರಿಯಲ್ಲಿ ಎಚ್ಚರದಿಂದ ನಿರ್ವಹಿಸಲಾಗುತ್ತದೆ. ಕಾರ್ತಿಕ ದಾಮೋದರ ದೇವರನ್ನು ಮೆಚ್ಚಿಸಲು ಇದನ್ನು ನಡೆಸಲಾಗುತ್ತದೆ. ಅಕ್ಕಿ, ಬೆಲ್ಲ, ಹಣ್ಣುಗಳು ಮತ್ತು ತೆಂಗಿನಕಾಯಿಗಳನ್ನು ಅರ್ಪಿಸಲಾಗುತ್ತದೆ ಮತ್ತು ವಿಗ್ರಹದ ಸುತ್ತಲೂ ಆರತಿಯನ್ನು ಮಾಡಲಾಗುತ್ತದೆ. ಈ ಒಂದು ತಿಂಗಳ ಅವಧಿಯನ್ನು ದ್ವಿದಳ ಧಾನ್ಯಗಳನ್ನು ತಿನ್ನದಿರುವ ಆಹಾರಕ್ರಮದ ತಿಂಗಳು ಎಂದೂ ಆಚರಿಸಲಾಗುತ್ತದೆ. ಹಿಂದಿನ ಮೂರು ತಿಂಗಳು ಕ್ರಮವಾಗಿ ತರಕಾರಿಗಳು, ಮೊಸರು ಮತ್ತು ಹಾಲನ್ನು ತಿನ್ನುವುದನ್ನು ತ್ಯಜಿಸಿದರು. ಈ ನಾಲ್ಕನೇ ತಿಂಗಳಲ್ಲಿ ಎಲ್ಲಾ ನಾಡಿಗಳನ್ನು ನಿಷೇಧಿಸಲಾಗಿದೆ ಮತ್ತು ಅಡುಗೆಯಲ್ಲಿ ಬಲ್ಬ್ಗಳು ಮತ್ತು ಬೇರುಗಳನ್ನು ಮಾತ್ರ ಬಳಸಲಾಗುತ್ತದೆ. ===ಆಕಾಶ ದೀಪ=== ಕಾರ್ತಿಕ ಮಾಸದಲ್ಲಿ ಕಾರ್ತಿಕ ದಾಮೋದರನ ಪ್ರಸನ್ನತೆಗಾಗಿ ಆಕಾಶದೀಪಗಳನ್ನು ಬೆಳಗಿಸಲಾಗುತ್ತದೆ. ಅರೆಕಾ ಮರಗಳ ಕಾಂಡಗಳನ್ನು ನೆಡಲಾಗುತ್ತದೆ ಮತ್ತು ಆ ಕಂಬಗಳ ಮೇಲ್ಭಾಗದಲ್ಲಿ ದೀಪಗಳನ್ನು ಬೆಳಗಿಸಲಾಗುತ್ತದೆ. ಇತರ ಮಠಗಳು ಅಂತಹ ಎರಡು ದೀಪಸ್ತಂಭಗಳನ್ನು ವ್ಯವಸ್ಥೆಗೊಳಿಸಿದರೆ ಕೃಷ್ಣ ಮಠವು ನಾಲ್ಕು ಕಂಬಗಳನ್ನು ಹೊಂದಿದೆ. ===ದೀಪಾವಳಿ=== ಆಶ್ವಯುಜ ಮಾಸದ ಕರಾಳ ಹದಿನೈದು ದಿನಗಳಲ್ಲಿ ಹನ್ನೆರಡನೆಯ ದಿನದಿಂದ ದೀಪಗಳ ಮೂಲಕ ಪೂಜೆ ಪ್ರಾರಂಭವಾಗುತ್ತದೆ. ಹೊಸ ದಿನ ಸಂಜೆ ದೇಗುಲದ ದಕ್ಷಿಣ ಭಾಗದಲ್ಲಿ ಎಣ್ಣೆಯ ದೀಪವನ್ನು ದಕ್ಷಿಣಾಭಿಮುಖವಾಗಿ ಬೆಳಗಿಸಲಾಗುತ್ತದೆ ಮತ್ತು ಪುರೋಹಿತರು ಅಕಾಲಿಕ ಮರಣವನ್ನು ದೂರವಿಡಲು ಮತ್ತು ಮನುಕುಲಕ್ಕೆ ಸಮೃದ್ಧಿಯನ್ನು ಪಡೆಯಲು ಮರಣದ ದೇವರನ್ನು ಪ್ರಾರ್ಥಿಸುತ್ತಾರೆ. ಇದನ್ನು ಯಮಾದಿಪ ಎಂದು ಕರೆಯಲಾಗುತ್ತದೆ. ===ಜಲಪುರಾಣ-ಗಂಗಾ ಪೂಜೆ=== ಅದೇ ರಾತ್ರಿ ನೀರು ಕಾಯಿಸಲು ಬಳಸುವ ಲೋಹದ ಮಡಕೆಯನ್ನು ಸ್ವಚ್ಛಗೊಳಿಸಿ ಅಲಂಕರಿಸಲಾಗುತ್ತದೆ. ಮಡಕೆಯ ಬದಿಯಲ್ಲಿ ನೆಲದ ಮೇಲೆ ಸ್ವಸ್ತಿಕದ ಅತೀಂದ್ರಿಯ ಚಿಹ್ನೆಯನ್ನು ಎಳೆಯಲಾಗುತ್ತದೆ ಮತ್ತು ಅದರ ಮೇಲೆ ಸಾಲಿಗ್ರಾಮವನ್ನು ಇರಿಸುವ ಮೂಲಕ ಗಂಗಾ ದೇವಿ ಮತ್ತು ತ್ರಿವಿಕ್ರಮ ದೇವರನ್ನು ಪೂಜಿಸಲಾಗುತ್ತದೆ. ಸ್ವಾಮೀಜಿ ಒಲೆಯಲ್ಲಿ ಬೆಂಕಿ ಹಚ್ಚುತ್ತಾರೆ. ಪಾತ್ರೆಯಲ್ಲಿನ ನೀರನ್ನು ರಾತ್ರಿಯಲ್ಲಿ ಬಿಸಿಮಾಡಲಾಗುತ್ತದೆ. ===ನರಕ ಚತುರ್ದಶಿ=== ಮರುದಿನ ಮುಂಜಾನೆ, ವಿಗ್ರಹದಿಂದ ಹೂವುಗಳನ್ನು ತೆಗೆದ ನಂತರ ಮತ್ತು ನಿರ್ಮಾಲ್ಯ ವಿಸರ್ಜನಾ ಪೂಜೆಯ ನಂತರ ಸ್ವಾಮೀಜಿಯವರು ವಿಗ್ರಹಕ್ಕೆ ಎಣ್ಣೆಯನ್ನು ಹಚ್ಚುತ್ತಾರೆ, ಬಿಸಿನೀರು ಸುರಿದು ಮತ್ತು ಬೇಳೆ ಪುಡಿಯಿಂದ ತೊಳೆಯುತ್ತಾರೆ. ಈ ದಿನ ಕೃಷ್ಣನು ಸೂರ್ಯೋದಯಕ್ಕೆ ಮುಂಚೆ ಎಣ್ಣೆ ಸ್ನಾನ ಮಾಡಿದನು ಮತ್ತು ನರಕಾಸುರನನ್ನು ಸೋಲಿಸಲು ಅಸ್ಸಾಮಿಗೆ ಹೋಗಿದ್ದನೆಂದು ನಂಬಲಾಗಿದೆ. ಆ ಸ್ಮರಣೆಯನ್ನು ಚಿರಸ್ಥಾಯಿಗೊಳಿಸಲು ಈಗ ಆಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಕೃಷ್ಣನಿಗೆ ನೈವೇದ್ಯ ಮಾಡಿದ ಬೇಳೆಯ ಎಣ್ಣೆ ಮತ್ತು ಪುಡಿಯನ್ನು ಎಲ್ಲಾ ಭಕ್ತರಿಗೆ ಹಂಚಲಾಗುತ್ತದೆ. ದೇಹಕ್ಕೆ ಎಣ್ಣೆ ಹಚ್ಚಿ ಸ್ನಾನ ಮಾಡುತ್ತಾರೆ. ಕೌಕಿಯಲ್ಲಿ ವಿಶೇಷ ಔತಣವನ್ನು ಏರ್ಪಡಿಸಲಾಗುತ್ತದೆ. ===ಬಲಿಂದ್ರ ಪೂಜೆ-ಅಲಕ್ಷ್ಮಿ ನಿಸ್ಸರಣ=== ಅದೇ ದಿನ ಅಥವಾ ಮರುದಿನ ರಾತ್ರಿ ಅಮಾವಾಸ್ಯೆ ಬಂದಾಗ ಜನರು ಬಲೀಂದ್ರ ಹಬ್ಬವನ್ನು ಆಚರಿಸುತ್ತಾರೆ ಮತ್ತು ಅಶುಭಗಳನ್ನು ದೂರ ಮಾಡುತ್ತಾರೆ. ಕನಕನ ಕಿಟಕಿಯ ಮುಂಭಾಗದಲ್ಲಿರುವ ಕಾರ್ ಸ್ಟ್ರೀಟ್‌ನಲ್ಲಿ ನೆಲದ ಮೇಲೆ ಬಣ್ಣದ ಪುಡಿ ಬಳಸಿ ಬಲೀಂದ್ರನ ಚಿತ್ರವನ್ನು ಬಿಡಿಸಲಾಗುವುದು. ಅಶುಭ ನಿವಾರಣೆಗೆ ದೀಪಸ್ತಂಭವನ್ನೂ ವ್ಯವಸ್ಥೆ ಮಾಡಲಾಗಿ ರಾತ್ರಿ ದೇಗುಲದಲ್ಲಿ ಸ್ವಾಮೀಜಿಗಳ ಸಮ್ಮುಖದಲ್ಲಿ ಪೂಜೆಯ ನಂತರ ಅರ್ಚಕರು ಬಲೀಂದ್ರನನ್ನು ಮತ್ತು ಅವನ ಮೂಲಕ ವರ್ಮನ ದೇವರನ್ನು ಪೂಜಿಸುತ್ತಾರೆ ಮತ್ತು ಅಶುಭಗಳನ್ನು ನಿವಾರಿಸಲು ಇತರ ಆಚರಣೆಗಳನ್ನು ಮಾಡುತ್ತಾರೆ. ===ಗೋಪೂಜಾ=== ಕಾರ್ತಿಕದ ಪ್ರಕಾಶಮಾನವಾದ ಹದಿನೈದು ದಿನಗಳಲ್ಲಿ ಮೊದಲ ದಿನವನ್ನು ಬಲಿ ಪಾಡ್ಯ ಎಂದು ಕರೆಯಲಾಗುತ್ತದೆ. ಅಂದು ಮಠದ ದನದ ಕೊಟ್ಟಿಗೆಯನ್ನು ಚೆನ್ನಾಗಿ ಅಲಂಕರಿಸುತ್ತಾರೆ. ಹಸುಗಳಿಗೆ ಸ್ನಾನ ಮಾಡಿಸಿ ಹೂವುಗಳಿಂದ ಅಲಂಕರಿಸಲಾಗುತ್ತದೆ. ಆರತಿ ಮಾಡುವ ಮೂಲಕ ವಿಶೇಷ ಖಾದ್ಯಗಳನ್ನು ನೀಡಲಾಗುತ್ತದೆ. ===ತುಳಸಿ ಪೂಜೆ=== ಕೇಶವ ಮತ್ತು ವಿಷ್ಣುವಿನ ಇತರ ಹನ್ನೊಂದು ರೂಪಗಳನ್ನು ತುಳಸಿ ಗಿಡದಲ್ಲಿ ಮೊದಲ ದಿನದಿಂದ ಹನ್ನೆರಡನೆಯ ದಿನದವರೆಗೆ ೧೨ ದಿನಗಳ ಕಾಲ ಪೂಜಿಸಲಾಗುತ್ತದೆ. ರಾತ್ರಿ ಪೂಜೆಯ ನಂತರ ಏರ್ಪಡಿಸುವ ಪೂಜೆಯು ಮಠದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ತೀರ್ಥ ಮಂಟಪದ ಬಳಿ ಇರುವ ತುಳಸಿ ವೃಂದಾವನವನ್ನು ಚೆನ್ನಾಗಿ ಅಲಂಕರಿಸಲಾಗುವುದು. ವಿವಿಧ ಹಂತಗಳಲ್ಲಿ ಎಣ್ಣೆ ಪಾತ್ರೆಗಳನ್ನು ಹೊಂದಿರುವ ಬೃಹತ್ ದೀಪಸ್ತಂಭವನ್ನು ಬೆಳಗಿಸಲಾಗುತ್ತದೆ. ತುಳಸಿ ವೇದಿಕೆಯ ಸುತ್ತಲೂ ಸಂಗೀತಗಾರರು ಹಾಡುತ್ತಾರೆ ಮತ್ತು ನೃತ್ಯ ಮಾಡುತ್ತಾರೆ. ಸ್ವಾಮೀಜಿಯವರು ಕಾಟಿಕ ಚಂದ್ರಮೌಳೀಶ್ವರ ದೇವಸ್ಥಾನಗಳನ್ನು ಗರುಡ ರಥದಲ್ಲಿ ಇರಿಸಲಾಗುತ್ತದೆ ಮತ್ತು ವಿಜೃಂಭಣೆಯಿಂದ ಮತ್ತು ಉತ್ಸವದಿಂದ ಕಾರ್ ಸ್ಟ್ರೀಟ್ ಅನ್ನು ಸುತ್ತುತ್ತಾರೆ. ===ಸುಬ್ರಹ್ಮಣ್ಯ ಷಷ್ಠಿ=== ಮಾರ್ಗಶಿರದ ಹದಿನೈದು ದಿನಗಳಲ್ಲಿ ಆರನೇ ದಿನವನ್ನು ಸುಬ್ರಹ್ಮಣ್ಯ ಷಷ್ಠಿ ಎಂದು ಕರೆಯಲಾಗುತ್ತದೆ. ಸುಬ್ರಹ್ಮಣ್ಯ ಷಷ್ಠಿಯ ದೇಗುಲದಲ್ಲಿ ವಿಶೇಷ ಆಚರಣೆಯನ್ನು ಏರ್ಪಡಿಸಲಾಗಿದೆ. ಮುಂಜಾನೆ ಸುಬ್ರಹ್ಮಣ್ಯ ವಿಗ್ರಹವನ್ನು ಗರುಡ ರಥದಲ್ಲಿ ಕಾರ್ ಸ್ಟ್ರೀಟ್‌ನಲ್ಲಿ ಪ್ರದಕ್ಷಿಣೆ ಹಾಕಲಾಗುತ್ತದೆ. ಕೌಕಿಯಲ್ಲಿ ವಿಶೇಷ ಔತಣವನ್ನು ಏರ್ಪಡಿಸಲಾಗುವುದು. ಒಮ್ಮೆ ಪರ್ಯಾಯದಲ್ಲಿ ಈ ದಿನ ವಸಂತ ಮಂಟಪದಲ್ಲಿ ನಾಗ ಮಂಡಲ ಎಂದು ಕರೆಯಲ್ಪಡುವ ವಿಶೇಷ ಆಚರಣೆಯನ್ನು ನಡೆಸಲಾಗುತ್ತದೆ. ===ಧನುರ್ಮಾಸ ಪೂಜೆ=== ಧನುವಿನ ಸೌರ ಮಾಸದ ಅವಧಿಯಲ್ಲಿ ಹಸಿರು ಬೇಳೆಯನ್ನು ನೀಡುವ ಮೂಲಕ ಮುಂಜಾನೆ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಈ ಮಾಸದಲ್ಲಿ ಭಕ್ತರಿಗೆ ಮುಂಜಾನೆ ಅನ್ನಸಂತರ್ಪಣೆ ಮಾಡಲಾಗುತ್ತದೆ. ===ಧನುರ್ವ್ಯತಿಪಾತ=== ಧನುವಿನ ಸೌರಮಾಸದಲ್ಲಿ ವ್ಯತಿಪಾತ ಯೋಗದ ದಿನದಂದು ಬೆಳಿಗ್ಗೆ ಹಸಿರು ಬೇಳೆಯಿಂದ ಮಾಡಿದ ಭಕ್ಷ್ಯವನ್ನು ಅರ್ಪಿಸುವ ಮೂಲಕ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ===ಧನುರ್ವೈಧೃತಿ=== ಧನುರ್ವ್ಯತಿಪಾತದಂತೆಯೇ ಧನು ಮಾಸದಲ್ಲಿ ವೈಧೃತಿ ಯೋಗದ ದಿನವನ್ನು ವಿಶೇಷ ಆಚರಣೆಯೊಂದಿಗೆ ಆಚರಿಸಲಾಗುತ್ತದೆ. ===ಮುಕ್ಕೋಟಿ ದ್ವಾದಶಿ=== ಮಾರ್ಗಶೀರ್ಷದ ಪ್ರಕಾಶಮಾನವಾದ ಹದಿನೈದು ದಿನಗಳಲ್ಲಿ ಹನ್ನೆರಡನೆಯ ದಿನವನ್ನು ಮುಕ್ಕೂಟಿ ದ್ವಾದಶಿ ಎಂದು ಆಚರಿಸಲಾಗುತ್ತದೆ. ಆ ದಿನವೂ ಹಸಿಬೇಳೆ ಖಾದ್ಯವನ್ನು ಅರ್ಪಿಸಿ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ===ದತ್ತ ಜಯಂತಿ=== ಮಾರ್ಗಶೀರ ಮಾಸದ ಹುಣ್ಣಿಮೆಯ ದಿನವನ್ನು ದತ್ತ ಜಯಂತಿ ಎಂದು ಕರೆಯಲಾಗುತ್ತದೆ. ಈ ದಿನವೇ ಅತ್ರಿಯ ಪತ್ನಿ ಅನಸೂಯರ ಮೂಲಕ ವಿಷ್ಣು ದೇವರು ದತ್ತನಾಗಿ ಜನಿಸಿದನು. ಅಂದು ದತ್ತನಿಗೆ ವಿಶೇಷ ಪೂಜೆಯನ್ನು ಏರ್ಪಡಿಸಲಾಗುತ್ತದೆ. ===ಸಪ್ತೋತ್ಸವ=== ಮಕರ ಸಂಕ್ರಮಣವು ಐದು ದಿನಗಳ ಮೊದಲು ಸಂಕ್ರಮಣದ ನಂತರದ ದಿನದಂದು ಮುಕ್ತಾಯಗೊಳ್ಳಲು ಏಳು ದಿನಗಳ ಹಬ್ಬಗಳ ಸರಣಿಯನ್ನು ಪ್ರಾರಂಭಿಸುತ್ತದೆ. ಇದು ಉಡುಪಿಯ ಅತ್ಯಂತ ಪ್ರಸಿದ್ಧ ಹಬ್ಬ. ಮೊದಲ ಐದು ದಿನಗಳಲ್ಲಿ ಕೇವಲ ಎರಡು ರಥಗಳಾದ ಗರುಡ ರಥ ಮತ್ತು ಚಿಕ್ಕ ರಥಗಳನ್ನು ಮೆರವಣಿಗೆಯಲ್ಲಿ ಹೊರತರಲಾಗುತ್ತದೆ. ಆರನೇ ದಿನ ಸಂಕ್ರಮಣ ದಿನ. ಇದು ಶ್ರೀಕೃಷ್ಣನ ಶ್ರೇಷ್ಠ ಉತ್ಸವ ಎಂದು ಕರೆಯಲ್ಪಡುತ್ತದೆ. ಎಲ್ಲಾ ಮೂರು ರಥಗಳನ್ನು ಏಕಕಾಲದಲ್ಲಿ ಎಳೆಯಲಾಗುತ್ತದೆ. ಕೃಷ್ಣನ ವಿಗ್ರಹವನ್ನು ಬ್ರಹ್ಮ ರಥದಲ್ಲಿ ಇರಿಸಲಾಗಿದೆ. ಚಿಕ್ಕ ರಥದಲ್ಲಿ ಮುಖ್ಯಪ್ರಾಣನ ವಿಗ್ರಹವನ್ನು ಇರಿಸಲಾಗಿದೆ. ಈ ಉತ್ಸವವನ್ನು ವೀಕ್ಷಿಸಲು ಭಾರತದ ಎಲ್ಲಾ ಭಾಗಗಳಿಂದ ಮತ್ತು ವಿದೇಶಗಳಿಂದ ಯಾತ್ರಾರ್ಥಿಗಳು ಬರುತ್ತಾರೆ.ಈ ದಿನದಂದು ಉಡುಪಿಯಲ್ಲಿ ಕೃಷ್ಣನ ವಿಗ್ರಹವನ್ನು ಸ್ಥಾಪಿಸಲಾಗಿದೆ ಎಂದು ನಂಬಲಾಗಿದೆ. ಆದ್ದರಿಂದ ಇದನ್ನು ಪವಿತ್ರ ಸ್ಥಾಪನೆಯ ವಾರ್ಷಿಕೋತ್ಸವ ಎಂದು ಆಚರಿಸಲಾಗುತ್ತದೆ.ಸುವರ್ಣೋತ್ಸವ ಅಥವಾ ಕುರ್ನೂತ್ಸವ ಎಂದು ಕರೆಯಲ್ಪಡುವ ವಿಶೇಷ ಹಬ್ಬವನ್ನು ಏಳನೇ ದಿನದ ಮಹಾ ಪೂಜೆಯ ನಂತರ ಮಧ್ಯಾಹ್ನ ಆಚರಿಸಲಾಗುತ್ತದೆ. ಈ ಉತ್ಸವದಲ್ಲಿ ಬ್ರಹ್ಮ ರಥವನ್ನು ಮೆರವಣಿಗೆಯಲ್ಲಿ ಹೊರತರಲಾಗುತ್ತದೆ, ಇದು ಸರಣಿಯಲ್ಲಿ ಕೊನೆಯದು. ವಿಗ್ರಹವನ್ನು ರಥದಲ್ಲಿ ಕೂರಿಸಿದ ನಂತರ ಸ್ವಾಮೀಜಿ ಆರತಿಯನ್ನು ಬೀಸುತ್ತಾರೆ ಮತ್ತು ನಂತರ ತೆಂಗಿನಕಾಯಿ, ಕಿತ್ತಳೆ, ಬಾಳೆಹಣ್ಣು ಮತ್ತು ಇತರ ವಸ್ತುಗಳನ್ನು ಭಕ್ತರ ಕಡೆಗೆ ಎಸೆಯುತ್ತಾರೆ. ಪ್ರಸಾದವಾಗಿ ಬರುವ ಆ ಹಣ್ಣುಗಳನ್ನು ಹಿಡಿಯಲು ಭಕ್ತರು ಪರಸ್ಪರ ಪೈಪೋಟಿ ನಡೆಸುತ್ತಾರೆ. ಈ ದಿನದ ಗಮನಾರ್ಹ ವೈಶಿಷ್ಟ್ಯವೆಂದರೆ ಎಲ್ಲಾ ಸ್ವಾಮೀಜಿಗಳು ಹಗ್ಗವನ್ನು ಹಿಡಿದು ರಥವನ್ನು ಎಳೆಯುವಲ್ಲಿ ಸಾಮಾನ್ಯ ಜನರೊಂದಿಗೆ ಸೇರುತ್ತಾರೆ. ದೇವರ ಸೇವೆಯ ಈ ಪವಿತ್ರ ಕಾರ್ಯದಲ್ಲಿ ಅವರು ಭಿನ್ನಾಭಿಪ್ರಾಯಗಳನ್ನು ಮರೆತು ಮೂರ್ತಿಯ ಮುಂದೆ ಸಮಾನರಾಗಿ ನಿಲ್ಲುತ್ತಾರೆ. ಮೆರವಣಿಗೆಯು ಪ್ರದಕ್ಷಿಣೆಯನ್ನು ಪೂರ್ಣಗೊಳಿಸಿದ ನಂತರ, ಸ್ವಾಮೀಜಿಗಳು ತಮ್ಮ ಕೈಯಲ್ಲಿ ವಿಗ್ರಹವನ್ನು ಹಿಡಿದು ಮಧ್ವ ಸರೋವರದಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ. ಎಲ್ಲಾ ಭಕ್ತರು ಒಟ್ಟಿಗೆ ಸೇರಿ ಅವಭೃತ ಸ್ನಾನ ಅಥವಾ ಶುದ್ಧೀಕರಣ ಸ್ನಾನ ಎಂದು ಕರೆಯುತ್ತಾರೆ. ಅಂದು ಸಹಸ್ರಾರು ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಗುತ್ತದೆ. ಈ ಹಿಂದೆ ಸ್ವಾಮೀಜಿಗಳು ಭಕ್ತರೊಂದಿಗೆ ರಾಜಾಂಗಣದಲ್ಲಿ ಅನ್ನಸಂತರ್ಪಣೆ ನಡೆಸುತ್ತಿದ್ದರು ಎನ್ನಲಾಗಿದೆ. ಆದರೆ ಅಂದು ಜನಜಂಗುಳಿ ಅನಿಯಂತ್ರಿತವಾಗಿದ್ದರಿಂದ ಈ ವ್ಯವಸ್ಥೆಯನ್ನು ಈಗ ನಿಲ್ಲಿಸಲಾಗಿದ್ದು, ಸ್ವಾಮೀಜಿಗಳು ಕೌಕಿಯಲ್ಲಿ ಊಟ ಸೇವಿಸುತ್ತಾರೆ. ಆ ದಿನ ಹತ್ತು ಸಾವಿರಕ್ಕೂ ಹೆಚ್ಚು ಜನರಿಗೆ ಭೋಜನವನ್ನು ನೀಡಲಾಗುತ್ತದೆ. ===ರಥ ಸಪ್ತಮಿ- ಭೀಷ್ಮಾಸ್ತಮಿ=== ಮಾಘದ ಪ್ರಕಾಶಮಾನವಾದ ಹದಿನೈದು ದಿನಗಳಲ್ಲಿ ಏಳನೇ ದಿನವನ್ನು ರಥ ಸಪ್ತಮಿ ಎಂದು ಕರೆಯಲಾಗುತ್ತದೆ. ಮರುದಿನವನ್ನು ಭೀಮಾಸ್ತಮಿ ಎಂದು ಆಚರಿಸಲಾಗುತ್ತದೆ. ಎರಡೂ ದಿನ ವಿಶೇಷ ಔತಣಕೂಟ ಏರ್ಪಡಿಸಲಾಗುವುದು. ರಾತ್ರಿ ಸೇವೆಯ ನಂತರ ವಿಗ್ರಹವನ್ನು ರಥದಲ್ಲಿ ಮೆರವಣಿಗೆಯಲ್ಲಿ ಹೊರತರಲಾಗುತ್ತದೆ. ===ಮಧ್ವ ನವಮಿ=== ಮಾಘದ ತೇಜಸ್ವಿ ಹದಿನೈದು ದಿನಗಳಲ್ಲಿ ಒಂಬತ್ತನೇ ದಿನವು ಶ್ರೀ ಮಧ್ವಾಚಾರ್ಯರು ಬದರಿಕಾಶ್ರಮಕ್ಕೆ ಹೋಗಿ ಕಣ್ಮರೆಯಾದ ದಿನವಾಗಿದೆ. (1317A.D. ಪಿಂಗಲ ಸಂವತ್ಸರ ಮಾಘ ಶುದ್ಧ ನವಮಿ). ಈ ದಿನವನ್ನು ಅತ್ಯಂತ ವಿಜೃಂಭಣೆಯಿಂದ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತದೆ. ಪರ್ಯಾಯ ಸ್ವಾಮೀಜಿ ಹಾಗೂ ಉಡುಪಿಯಲ್ಲಿ ನೆಲೆಸಿರುವ ಇತರ ಸ್ವಾಮೀಜಿಗಳು ಅಂದು ಅನಂತೇಶ್ವರಕ್ಕೆ ತೆರಳಿ ಮಧ್ವಾಚಾರ್ಯರ ಮೂಲ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಸ್ತೋತ್ರಗಳನ್ನೂ ಪಠಿಸುತ್ತಾರೆ. ಶ್ರೀಕೃಷ್ಣ ಮಠದಲ್ಲಿಯೂ ಮಧ್ವಾಚಾರ್ಯರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಪಂಡಿತರು ಸೂರ್ಯ ಸಾಲಾದಲ್ಲಿ ಮಧ್ವ ವಿಜಯವನ್ನು ಪಠಿಸುತ್ತಾರೆ. ಸಹಸ್ರಾರು ಭಕ್ತರಿಗೆ ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗುವುದು. ಸಂಜೆ ಶ್ರೀ ಮಾಧವಾಚಾರ್ಯರ ಕೃತಿಗಳ ಸಂಪುಟಗಳನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಿ ವಸಂತ ಮಂಟಪದಲ್ಲಿ ಇಡಲಾಗುತ್ತದೆ. ವಿದ್ವಾಂಸರ ವಿಶೇಷ ಸಭೆಯನ್ನು ಕರೆಯಲಾಗುತ್ತದೆ. ಪಾಂಡಿತ್ಯಪೂರ್ಣ ಚರ್ಚೆಗಳಲ್ಲಿ ಭಾಗವಹಿಸಲು ವಿದ್ವಾಂಸರನ್ನು ವಿಶೇಷವಾಗಿ ಸ್ಥಳಗಳಿಂದ ಆಹ್ವಾನಿಸಲಾಗುತ್ತದೆ. ಕೊನೆಯಲ್ಲಿ ಸ್ವಾಮೀಜಿ ಆ ವಿದ್ವಾಂಸರಿಗೆ ಉಡುಗೊರೆಗಳನ್ನು ನೀಡಿ ಗೌರವಿಸುತ್ತಾರೆ. ಉತ್ಸವದಲ್ಲಿ ರಾತ್ರಿ ಬ್ರಹ್ಮರಥವನ್ನು ಮೆರವಣಿಗೆಯಲ್ಲಿ ಹೊರತರಲಾಗುತ್ತದೆ. ===ಶಿವರಾತ್ರಿ=== ಮಾಘದ ಕರಾಳ ಹದಿನೈದು ದಿನಗಳಲ್ಲಿ ಹದಿನಾಲ್ಕನೆಯ ದಿನವನ್ನು ಅನಂತೇಶ್ವರ ಮತ್ತು ಚಂದ್ರೇಶ್ವರನಲ್ಲಿ ವಿಶೇಷ ಪೂಜೆಗಳೊಂದಿಗೆ ಶಿವರಾತ್ರಿ ಎಂದು ಆಚರಿಸಲಾಗುತ್ತದೆ. ಅನಂತೇಶ್ವರದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯುತ್ತದೆ. ನಾಲ್ಕನೇ ದಿನವನ್ನು ಕಾರ್ ಉತ್ಸವವಾಗಿ ಆಚರಿಸಲಾಗುತ್ತದೆ, ಇದರಲ್ಲಿ ಚಂದ್ರಮೌಳೀಶ್ವರ ಮತ್ತು ಅನಂತಾಸನದ ಮೂರ್ತಿಗಳನ್ನು ಬ್ರಹ್ಮ ರಥದಲ್ಲಿ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಲಾಗುತ್ತದೆ. ===ಹೋಳಿ ಹಬ್ಬ-ಕಾಮಾ ದಹನ=== ಫಾಲ್ಗುಣದಲ್ಲಿ ಹುಣ್ಣಿಮೆಯ ದಿನವನ್ನು ಕಾರಿನ ಬೀದಿಗೆ ಕಾಮ ದೇವರ ವಿಗ್ರಹವನ್ನು ತಂದು ಸುಡುವ ಮೂಲಕ ಆಚರಿಸಲಾಗುತ್ತದೆ. ಕಾಮದ ಪ್ರತಿಕೃತಿಯ ದೃಶ್ಯ ದಹನವು ನಮ್ಮ ಹೃದಯದಲ್ಲಿ ಕಾಮವನ್ನು ನಿಗ್ರಹಿಸುವುದನ್ನು ಸಂಕೇತಿಸುತ್ತದೆ. ಮರುದಿನ ಜನರು ಪರಸ್ಪರ ಬಣ್ಣದ ಪುಡಿ ಎರಚಿಕೊಂಡು ಹಬ್ಬ ಆಚರಿಸುತ್ತಾರೆ. ===ವಾದಿರಾಜ ಪುಣ್ಯ ತಿಥಿ=== ಪಾಲ್ಗುಣದ ಕರಾಳ ಹದಿನೈದು ದಿನಗಳಲ್ಲಿ ಮೂರನೇ ದಿನವನ್ನು ಶ್ರೀ ವಾದಿರಾಜ್ ಸ್ಮರಣಾರ್ಥ ದಿನವನ್ನಾಗಿ ಆಚರಿಸಲಾಗುತ್ತದೆ. ಶ್ರೀ ಸೋದೆ ಮಠದ ಪರ್ಯಾಯದ ಸಮಯದಲ್ಲಿ, ಈ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇತರ ಸ್ವಾಮೀಜಿಗಳ ಪರ್ಯಾಯದ ಸಮಯದಲ್ಲಿ ಶ್ರೀ ವಾದಿರಾಜರ ಗೌರವಾರ್ಥ ವಿಶೇಷ ಸೇವೆಗಳನ್ನು ಏರ್ಪಡಿಸಲಾಗುತ್ತದೆ.ಭಕ್ತರಿಗೆ ಭರ್ಜರಿ ಅನ್ನಸಂತರ್ಪಣೆ ಏರ್ಪಡಿಸಲಾಗುತ್ತದೆ. ===ವ್ಯಾಸತೀರ್ಥ ಪುಣ್ಯ ತಿಥಿ' ಫಾಲ್ಗುಣದ ಕರಾಳ ಹದಿನೈದು ದಿನದ ನಾಲ್ಕನೇ ದಿನವನ್ನು ಶ್ರೀ ವ್ಯಾಸರಾಯ ಮಠದ ಶ್ರೀ ವ್ಯಾಸ ತೀರ್ಥರ ಪುಣ್ಯತಿಥಿ ಎಂದು ಆಚರಿಸಲಾಗುತ್ತದೆ. ಕನಕದಾಸರು ಮತ್ತು ವಾದಿರಾಜರಿಂದಾಗಿ ಶ್ರೀ ವ್ಯಾಸತೀರ್ಥರು ಉಡುಪಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಅಂದು ವಿಶೇಷ ಔತಣ ಹಾಗೂ ವಿಚಾರ ಸಂಕಿರಣಗಳನ್ನು ಏರ್ಪಡಿಸಲಾಗುವುದು. ನೋಡಿ ಮಧ್ವಾಚಾರ ಅಷ್ಟ ಮಠಗಳು ಪೇಜಾವರ ಮಠ ಕೃಷ್ಣಾಪುರ ಮಠ ಪುತ್ತಿಗೆ ಮಠ ಕಾಣಿಯೂರು ಮಠ ಬಾಹ್ಯ ಸಂಪರ್ಕಗಳು Sri Krishna Temple, Udupi Temples in Udupi Official Temple Website for Online Offerings and Seva About temple Udupi Shri Krishna photos Udupi Shri Krishna Temple and related information guide ಉಲ್ಲೇಖಗಳು ಹಿಂದೂ ಧರ್ಮ ವಿಕಿ ಇ-ಲರ್ನಿಂಗ್‍ನಲ್ಲಿ ವಿಸ್ತರಿಸಿದ ಲೇಖನ ಕರ್ನಾಟಕದ ಮಠಗಳು ಉಡುಪಿ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ಕ್ಯೂಆರ್ ಕೋಡ್ ಯೋಜನೆ
3779
https://kn.wikipedia.org/wiki/%E0%B2%A4%E0%B2%BE%E0%B2%B0
ತಾರ
ತಾರಾ(ಜನನ 4 ಮಾರ್ಚ್ 1973) ಕನ್ನಡದ ಒಬ್ಬ ಪ್ರತಿಭಾವಂತ ನಟಿ. ತಾರ ಅವರು ತಮಿಳಿನ ಇಂಗೆಯುವ್ ಒರ ಗಂಗಲ್ ಚಿತ್ರದ ಮೂಲಕ ೧೯೮೪ರಲ್ಲಿ ತನ್ನ ಸಿನಿಮಾ ಬದುಕನ್ನು ಪ್ರಾರಂಭಿಸಿದರು. ಹಲವಾರು ಚಿತ್ರಗಳಲ್ಲಿ ಪೋಷಕ ನಟಿಯಾಗಿ ಹಾಗೂ ನಾಯಕಿಯಾಗಿ ಅಭಿನಯಿಸಿದ್ದಾರೆ. ಕಾನೂರು ಹೆಗ್ಗಡತಿ, ಮುನ್ನುಡಿ, ಕಾರ್ಮುಗಿಲು, ಮುಂಜಾನೆಯ ಮಂಜು,ಕರಿಮಲೆಯ ಕಗ್ಗತ್ತಲು, ಮತದಾನ, ನಿನಗಾಗಿ, ಹಸೀನಾ . ಸೈನೈಡ್ ಚಿತ್ರಗಳು ಈಕೆಗೆ ಬಹಳ ಹೆಸರು ತಂದುಕೊಟ್ಟ ಚಿತ್ರಗಳು. ಹಸೀನಾ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿಯನ್ನು ಪಡೆದಿದ್ದಾರೆ. ಇವರ ಮೂಲ ಹೆಸರು ಅನುರಾಧಾ. ತಾರಾಗೆ ಬಂದ ಪ್ರಶಸ್ತಿಗಳು ಅತ್ಯುತ್ತಮ ನಟಿ - ರಾಷ್ಟ್ರಪ್ರಶಸ್ತಿ. ಚಿತ್ರ: ಹಸೀನಾ ಅತ್ಯುತ್ತಮ ನಟಿ - ಕರ್ನಾಟಕ ರಾಜ್ಯ ಪ್ರಶಸ್ತಿ. ಚಿತ್ರ:ಕರಿಮಲೆಯ ಕಗ್ಗತ್ತಲು ಅತ್ಯುತ್ತಮ ನಟಿ - ಕರ್ನಾಟಕ ರಾಜ್ಯ ಪ್ರಶಸ್ತಿ. ಚಿತ್ರ:ಕಾನೂರು ಹೆಗ್ಗಡತಿ ಅತ್ಯುತ್ತಮ ಪೋಷಕ ನಟಿ - ಕರ್ನಾಟಕ ರಾಜ್ಯ ಪ್ರಶಸ್ತಿ. ಚಿತ್ರ:ಮುಂಜಾನೆಯ ಮಂಜು ಅತ್ಯುತ್ತಮ ಹಾಸ್ಯ ನಟಿ - ಚಿತ್ರ: ನಿನಗಾಗಿ ರಾಜಕೀಯ ಜೀವನ ತಾರಾ ಅನುರಾಧ ಅವರು ೨೦೦೯ರಲ್ಲಿ ಭಾರತೀಯ ಜನತಾ ಪಕ್ಷವನ್ನು ಸೇರಿದರು ಮತ್ತು ೨೦೧೨ರಿಂದ ಕರ್ನಾಟಕ ವಿಧಾನ ಪರಿಷತ್ ಸದಸ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾರಾ ಅನುರಾಧ ಅವರು ಅಭಿನಯಿಸಿದ ಚಿತ್ರಗಳು ಉಲ್ಲೇಖಗಳು ಕನ್ನಡ ಸಿನೆಮಾ ಕನ್ನಡ ಚಲನಚಿತ್ರ ನಟಿಯರು ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಾ ಸ್ಪರ್ಧೆಗೆ ವಿಸ್ತರಿಸಿದ ಲೇಖನ
3781
https://kn.wikipedia.org/wiki/%E0%B2%95%E0%B3%86.%E0%B2%B5%E0%B2%BF.%E0%B2%B8%E0%B3%81%E0%B2%AC%E0%B3%8D%E0%B2%AC%E0%B2%A3%E0%B3%8D%E0%B2%A3
ಕೆ.ವಿ.ಸುಬ್ಬಣ್ಣ
ಕೆ.ವಿ.ಸುಬ್ಬಣ್ಣ (ಫೆಬ್ರುವರಿ ೨೦, ೧೯೩೨ - ಜುಲೈ ೧೬, ೨೦೦೫) ಕರ್ನಾಟಕದ ಓರ್ವ ಪ್ರಸಿದ್ಧ ರಂಗಕರ್ಮಿ ಮತ್ತು ಸಾಹಿತಿ. ಜೀವನ ಕೆ.ವಿ.ಸುಬ್ಬಣ್ಣನವರ(ಕುಂಟಗೋಡು ವಿಭೂತಿ ಸುಬ್ಬಣ್ಣ) ಹುಟ್ಟೂರು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹೆಗ್ಗೋಡು. ೧೯೩೨ ಫೆಬ್ರವರಿ ೨೦ ರಂದು ಜನಿಸಿದ ಇವರು ಮುಂದೆ ಹೆಗ್ಗೋಡಿನಂತಹ ಚಿಕ್ಕ ಊರಿನಲ್ಲಿದ್ದುಕೊಂಡೇ ೧೯೪೯ ರಲ್ಲಿ ನೀಲಕಂಠೇಶ್ವರ ನಾಟ್ಯಸೇವಾ ಸಂಘ (ನೀನಾಸಂ)ರಂಗ ಸಂಸ್ಥೆಯನ್ನು ನಿರ್ಮಿಸಿ, ರಂಗ ಚಟುವಟಿಕೆಗಳ ಮೂಲಕ ಅಂತಾರಾಷ್ಟ್ರೀಯ ಗಮನ ಸೆಳೆದರು. ಈ ಮೂಲಕ ಗ್ರಾಮೀಣ ರಂಗಭೂಮಿಗೆ ತನ್ನದೇ ಆದ ಸ್ಥಾನ, ಪ್ರತಿಷ್ಠೆಗಳನ್ನು ತಂದುಕೊಟ್ಟರು. ನೀನಾಸಂ ಸಂಸ್ಥೆ ನಡೆಸುವ ತಿರುಗಾಟ ಇಂದು ಕನ್ನಡ ರಂಗಭೂಮಿಯ ಒಂದು ಅವಿಭಾಜ್ಯ ಅಂಗವಾಗಿದೆ. ಸಾಹಿತಿಯೂ ಆಗಿದ್ದ ಇವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ೨೦೦೫ ಜುಲೈ ೧೬ ರಂದು ಹೃದಯಾಘಾತದಿಂದ ನಿಧನರಾದರು. ಅಕ್ಷರ ಪ್ರಕಾಶನವನ್ನು ಕೆ.ವಿ.ಸುಬ್ಬಣ್ಣನವರು ಹೆಗ್ಗೋಡಿನಲ್ಲಿ ಸ್ಥಾಪಿಸಿದರು. ಕೃತಿಗಳು ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು ನಾಟಕಗಳು ಗಾರ್ಗಿಯ ಕಥೆಗಳು ರಾಜಕೀಯದ ಮಧ್ಯೆ ಬಿಡುವು ಅಭಿಜ್ಞಾನ ಶಾಕುಂತಲ ಸೂಳೆ ಸನ್ಯಾಸಿ ಸುಬ್ಬಣ್ಣ ನಾಟಕಕಾರ ಮಾತ್ರವಲ್ಲದೆ ಅನುವಾದಕ,ಉತ್ತಮ ವಿಮರ್ಶಕ ಹಾಗೂ ಪ್ರಕಾಶಕ ಕೂಡಾ ಆಗಿದ್ದರು.ಚಲನಚಿತ್ರಕ್ಕೆ ಸಂಬಂಧಿಸಿದಂತೆ ೨೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.ಅವರು ಸ್ಥಾಪಿಸಿದ ‘ಅಕ್ಷರ ಪ್ರಕಾಶನ’ವೆಂಬ ಸಂಸ್ಥೆಯೂ ಅತಿ ಮುಖ್ಯ ,ಸಾಹಿತ್ಯಕ್ಷೇತ್ರಕ್ಕೆ ‘ಅಕ್ಷರ ಪ್ರಕಾಶನ’ ಸಲ್ಲಿಸಿದ ಸೇವೆ ಅಪಾರವಾದುದು. ಅಕ್ಷರ ಪ್ರಕಾಶನದ ಮೂಲಕ ೫೦೦ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಸಂದ ಪ್ರಶಸ್ತಿಗಳು ೧೯೯೧ ರಲ್ಲಿ ಫಿಲಿಫೀನ್ಸ್ ಸರ್ಕಾರ ಕೊಡುವ ಪ್ರತಿಷ್ಠಿತ ರಾಮನ್ ಮ್ಯಾಗ್ಸೇಸೆ ಪ್ರಶಸ್ತಿ. ೨೦೦೧-೨೦೦೨ರಲ್ಲಿ ಕಾಳಿದಾಸ ಸಮ್ಮಾನ್ ಪ್ರಶಸ್ತಿ. ೨೦೦೩ರಲ್ಲಿ ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು ಎಂಬ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ. ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ (ಆದರೆ ಸುಬ್ಬಣ್ಣ ಅವರು ಈ ಪ್ರಶಸ್ತಿಯನ್ನು ತಿರಸ್ಕರಿಸಿದ್ದರು). ಸುಬ್ಬಣ್ಣ ಅವರ ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು ಕೃತಿಯಲ್ಲಿ ಕನ್ನಡದ ಸಂದರ್ಭದ ಬಗ್ಗೆ ಅಚ್ಚರಿಗೊಳಿಸುವ ವಿವರಗಳಿವೆ. ಅಲ್ಲಿ ಅವರು ಕನ್ನಡ ಜನಪದದ ಶಕ್ತಿಯ ಕುರಿತು ಬರೆದಿದ್ದಾರೆ. ಅತ್ಯಂತ ಮಹತ್ವದ ಕೃತಿ ಇದು. ಪ್ರತಿ ವರ್ಷ ಅವರು ನಡೆಸುತ್ತಿದ್ದ(ಈಗಲೂ ಮುಂದುವರೆಯುತ್ತಿರುವ) " ಸಂಸ್ಕೃತಿ ಶಿಬಿರ"ದಲ್ಲಿ ಎಲ್ಲ ಬಗೆಯ ಚಿಂತನೆಗಳಿಗೆ ವೇದಿಕೆಯನ್ನೊದಗಿಸಿ ಕರ್ನಾಟಕದೆಲ್ಲಡೆಯಿಂದ ಬಂದ ಶಿಬಿರಾರ್ಥಿಗಳಿಗೆ ಸಂಸ್ಕೃತಿಯ ಪರಿಚಯವನ್ನು, ಚಿಂತಕರ ಸಂಪರ್ಕವನ್ನೂ ಮಾಡಿಸಿದ್ದಾರೆ.ಇವರ ಮಗ ಕೆ.ವಿ.ಅಕ್ಷರ ಸಹ ನಾಟಕ ಹಾಗು ಸಾಹಿತ್ಯ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಕೆ.ವಿ.ಸುಬ್ಬಣ್ಣ ರಂಗಭೂಮಿ ೧೯೨೯ ಜನನ ೨೦೦೫ ನಿಧನ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತರು
3785
https://kn.wikipedia.org/wiki/%E0%B2%A6%E0%B3%87%E0%B2%B6%20%E0%B2%95%E0%B2%BE%E0%B2%B2%20%28%E0%B2%A4%E0%B3%8D%E0%B2%B0%E0%B3%88%E0%B2%AE%E0%B2%BE%E0%B2%B8%E0%B2%BF%E0%B2%95%29
ದೇಶ ಕಾಲ (ತ್ರೈಮಾಸಿಕ)
ದೇಶ ಕಾಲ ಬೆಂಗಳೂರಿನಿಂದ ಪ್ರಕಟವಾಗುವ ತ್ರೈಮಾಸಿಕ ಪತ್ರಿಕೆ. ಸಂಪಾದಕರು: ವಿವೇಕ ಶಾನಭಾಗ. ದೇಶ ಕಾಲ ಐದು ವರ್ಷಗಳನ್ನು ಪೂರೈಸಿದಾಗ ಒಂದು ವಿಶೇಷ ಸಂಚಿಕೆಯನ್ನು ಹೊರತಂದಿತು. ಇದು ಕನ್ನಡ ಸಾಹಿತ್ಯದ ಕಥೆ, ಕಾದಂಬರಿ, ಕಾವ್ಯ, ನಾಟಕ, ವಿಮರ್ಶೆ ಎಲ್ಲಾ ರಂಗಗಳಲ್ಲೂ ಹರಿಯುತ್ತಿರುವ ಹೊಸ ಸಂವೇದನೆಗಳನ್ನು ದಾಖಲಿಸುವುದರೊಂದಿಗೇ ಕನ್ನಡದ ಬಹುಮುಖ್ಯ ಬರಹಗಾರರೆಲ್ಲರ ಬರಹಗಳನ್ನೂ ಒಳಗೊಂಡಿದ್ದು ಒಂದು ಬಗೆಯ ಸಾಹಿತ್ಯ ಚರಿತ್ರೆಯನ್ನೇ ಕಟ್ಟಿಕೊಡುವಂತಿದೆ. ಹೊಸ ಬರಹಗಾರರನ್ನೂ, ಕನ್ನಡದ ಮಹತ್ವದ ಕೃತಿಗಳನ್ನೂ ಗುರುತಿಸುವುದರೊಂದಿಗೇ ತನ್ನ ಬಹು ಮುಖ್ಯ ಬರಹಗಾರರೆಲ್ಲರ ಕುರಿತೂ ಸಾಹಿತಿ ಜಯಂತ ಕಾಯ್ಕಿಣಿಯವರ ಪುಟ್ಟ ಪರಿಚಯವನ್ನು ಒದಗಿಸಿರುವುದು ಮಹತ್ವದ ಅಂಶ. ದೇಶ ಕಾಲ ಕಳೆದ ಐದು ವರ್ಷಗಳಲ್ಲಿ ಕನ್ನಡದ, ದೇಶದ ಇತರ ಭಾಷೆಗಳ ಎಂತೋ ಅಂತೆಯೇ ಜಗತ್ತಿನ ಸಾಹಿತ್ಯವನ್ನು ಕೂಡಾ ಕನ್ನಡಿಗರಿಗೆ ಪರಿಚಯಿಸಿದೆ. ಹೊಸ ಬರಹಗಾರರನ್ನು ಪ್ರೋತ್ಸಾಹಿಸಿದೆ, ತಮ್ಮ ಕಲೆಗಾರಿಕೆಯನ್ನು ಉತ್ತಮಪಡಿಸಿಕೊಳ್ಳುವ ಸವಾಲೊಡ್ಡಿದೆ. ಸಮಯ ಪರೀಕ್ಷೆ ಎನ್ನುವ ಒಂದು ಪ್ರತ್ಯೇಕ ವಿಭಾಗದಲ್ಲಿ ನಾಡು ನುಡಿಯ ಜ್ವಲಂತ ಸಮಸ್ಯೆ, ಚರ್ಚೆ, ವಿದ್ಯಮಾನಗಳನ್ನು ಎತ್ತಿಕೊಂಡು ಪ್ರಾಜ್ಞರಿಂದ ಸಂವಾದ-ಜಿಜ್ಞಾಸೆಗಳು ನಡೆಯುವುದಕ್ಕೆ ವೇದಿಕೆಯೊಂದನ್ನು ನಿರ್ಮಿಸಿ ತನ್ನ ಹೆಸರಿನಂತೆಯೇ ದೇಶಕ್ಕೂ ಕಾಲಕ್ಕೂ ಸಮನ್ವಯಕಾರನ ಕೆಲಸವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದೆ. ಸಂಪಾದಕ ವಿವೇಕ್ ಶಾನಭಾಗ, ವಿನ್ಯಾಸಕಾರ-ಚಿತ್ರಕಾರ ಮತ್ತು ನೀನಾಸಂನ ಪ್ರತಿಭೆ ಚನ್ನಕೇಶವ ಮತ್ತು ಹೆಗ್ಗೋಡಿನ ನೀನಾಸಂನ ಕೆ.ವಿ.ಅಕ್ಷರರ ಶ್ರಮ-ಸಮಯ ಮತ್ತು ಅರ್ಪಣಾ ಮನೋಭಾವವೇ ದೇಶ-ಕಾಲದ ಹಿಂದಿರುವ ಮೂಲಶಕ್ತಿಯಾದರೂ ತಮ್ಮ ತಮ್ಮ ಸಂಪರ್ಕಗಳು, ಸ್ನೇಹಿತರು, ಸಾಹಿತಿಗಳು ಎಲ್ಲರನ್ನೂ ಸೇರಿಸಿಕೊಂಡು ಈ ಪತ್ರಿಕೆ ಸಮೃದ್ಧವಾಗಿ ಬರುತ್ತಿದೆ. ಕನ್ನಡ ತ್ರೈಮಾಸಿಕಗಳು
3794
https://kn.wikipedia.org/wiki/%E0%B2%95%E0%B2%B0%E0%B3%8D%E0%B2%A8%E0%B2%BE%E0%B2%9F%E0%B2%95
ಕರ್ನಾಟಕ
ಕರ್ನಾಟಕವು (ಪೂರ್ವದಲ್ಲಿ ಮೈಸೂರು ರಾಜ್ಯ) ಭಾರತದಲ್ಲಿನ ರಾಜ್ಯವೊಂದು. ಕರ್ನಾಟಕವು ಭಾರತದ ಐದು ಪ್ರಮುಖ ದಕ್ಷಿಣಾತ್ಯ ರಾಜ್ಯಗಳಲ್ಲಿ ಅತಿ ದೊಡ್ಡ ರಾಜ್ಯವು ಹಾಗೂ ದೇಶದ ಆರನೆಯ ದೊಡ್ಡ ರಾಜ್ಯವು. ೧೯೭೩ಕ್ಕೆ ಮೊದಲು ಕರ್ನಾಟಕದ ಹೆಸರು ಮೈಸೂರು ರಾಜ್ಯ ಎಂದಿತ್ತು.ಇದಕ್ಕೆ ಕಾರಣ ಕರ್ನಾಟಕ ಏಕೀಕರಣದ ಮೊದಲ ಸೃಷ್ಟಿ ಮೈಸೂರು ಮಹಾಸಂಸ್ಥಾನವನ್ನು ಆಧರಿಸಿದ್ದು (೧೯೫೦ ರಲ್ಲಿ). ೧೯೫೬ ರಲ್ಲಿ ಸುತ್ತ-ಮುತ್ತಲ ರಾಜ್ಯಗಳ ಕನ್ನಡ ಪ್ರಧಾನ ಪ್ರದೇಶಗಳನ್ನು ಸೇರಿಸಲಾಯಿತು. "ಕರ್ನಾಟಕ" ಎಂಬ ಹೆಸರಿಗೆ ಅನೇಕ ವ್ಯುತ್ಪತ್ತಿಗಳು ಪ್ರತಿಪಾದಿಸಲ್ಪಟ್ಟಿವೆ. ಎಲ್ಲಕ್ಕಿಂತ ಹೆಚ್ಚಾಗಿ ಒಪ್ಪಲ್ಪಟ್ಟಿರುವ ವ್ಯುತ್ಪತ್ತಿ ಎಂದರೆ ಕರ್ನಾಟಕ ಎಂಬುದು "ಕರು+ನಾಡು" ಎಂಬುದರಿಂದ ವ್ಯುತ್ಪತ್ತಿಯನ್ನು ಪಡೆದಿದೆ. ಕರು ನಾಡು ಎಂದರೆ ಕಪ್ಪು ಮಣ್ಣಿನ ನಾಡು, "ಎತ್ತರದ ಪ್ರದೇಶ" ಎಂದು ಅರ್ಥ. ಕರ್ನಾಟಕ ರಾಜ್ಯ ಸಮುದ್ರ ಮಟ್ಟದಿಂದ ಸರಾಸರಿ ಎತ್ತರ ೧೫೦೦ ಅಡಿ ಇದ್ದು ಇದು ಭಾರತದಲ್ಲಿ ಅತಿ ಹೆಚ್ಚಿನ ಸರಾಸರಿ ಎತ್ತರವುಳ್ಳ ರಾಜ್ಯಗಳಲ್ಲಿ ಒಂದು. ಪಶ್ಚಿಮದಲ್ಲಿ ಅರಬ್ಬೀ ಸಮುದ್ರದಿಂದ, ವಾಯವ್ಯದಲ್ಲಿ ಗೋವದಿಂದ, ಉತ್ತರದಲ್ಲಿ ಮಹಾರಾಷ್ಟ್ರದಿಂದ, ಪೂರ್ವದಲ್ಲಿ ತೆಲಂಗಾಣ ಮತ್ತು ಆಂಧ್ರ ಪ್ರದೇಶದಿಂದ, ಆಗ್ನೇಯದಲ್ಲಿ ತಮಿಳುನಾಡಿ ನಿಂದ, ನೈಋತ್ಯದಲ್ಲಿ ಕೇರಳದಿಂದ ಸುತ್ತುವರಿಯಲ್ಪಟ್ಟಿದೆ. ೨೦೦೧ ರ ಜನಗಣತಿಯಂತೆ, ೫ ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಹತ್ತು ಭಾರತೀಯ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಕರ್ನಾಟಕದ ರಾಜಧಾನಿಯಾದ ಬೆಂಗಳೂರು ಮಾತ್ರ ೧.೩೦ ಕೋಟಿಗಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ ನಗರ. ಇತರ ಪ್ರಮುಖ ನಗರಗಳೆಂದರೆ ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ದಾವಣಗೆರೆ, ಬಳ್ಳಾರಿ, ಕಲಬುರಗಿ, ವಿಜಯಪುರ, ಕಾರವಾರ ಮತ್ತು ಬೆಳಗಾವಿ. ಪೂರ್ವ ಶಿಲಾಯುಗದಷ್ಟು ಪ್ರಾಚೀನತೆಯಿರುವ ಕರ್ನಾಟಕವು ಭಾರತದ ಅನೇಕ ಪ್ರಬಲ ಸಾಮ್ರಾಜ್ಯಗಳಿಗೆ ನೆಲೆಬೀಡಾಗಿದೆ. ಈ ಸಾಮ್ರಾಜ್ಯಗಳಿಂದ ಆಶ್ರಯ ಪಡೆದಿರುವ ಅನೇಕ ತತ್ವಜ್ಞಾನಿಗಳು ಮತ್ತು ಕವಿಗಳಿಂದ ಆರಂಭಿಸಲ್ಪಟ್ಟಿರುವ ಸಾಮಾಜಿಕ, ಧಾರ್ಮಿಕ ಹಾಗು ಸಾಹಿತ್ಯಕ ಚಳುವಳಿಗಳು ಇಂದಿನವರೆಗೂ ನಡೆದುಕೊಂಡು ಬಂದಿವೆ. ಕನ್ನಡ ಭಾಷೆಯ ಸಾಹಿತಿಗಳು ಭಾರತದಲ್ಲಿ ಅತಿ ಹೆಚ್ಚು (ಹಿಂದಿ ಭಾಷೆಯಲ್ಲಿ ಬಿಟ್ಟು) ಜ್ಞಾನಪೀಠ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕವು ಭಾರತದ ಶಾಸ್ತ್ರೀಯ ಸಂಗೀತ ಪರಂಪರೆಗಳಾದ ಕರ್ನಾಟಕ ಸಂಗೀತ ಶೈಲಿಗೆ ಹಾಗು ಹಿಂದೂಸ್ಥಾನಿ ಸಂಗೀತ ಶೈಲಿಗೆ ಮಹತ್ತರವಾದ ಕೊಡುಗೆ ನೀಡಿದೆ. ಚರಿತ್ರೆ ಕರ್ನಾಟಕದ ಚರಿತ್ರೆಯು ಪೂರ್ವ ಶಿಲಾಯುಗದಷ್ಟು ಹಳೆಯದಾಗಿದೆ. ಕರ್ನಾಟಕದಲ್ಲಿ ಭೂಶೋಧನೆಯಿಂದ ದೊರೆತಿರುವ ಕೈ-ಕೊಡಲಿಗಳು ಮತ್ತು ಕಡುಗತ್ತಿಗಳು (ಶಿಲೆಯಿಂದ ಮಾಡಲ್ಪಟ್ಟಿರುವ) ಪೂರ್ವ ಶಿಲಾಯುಗದ ಕೈ-ಕೊಡಲಿ ಸಂಸ್ಕ್ರತಿಯ ಇರುವಿಕೆಗೆ ಸಾಕ್ಷಿಯಾಗಿವೆ. ನೂತನ ಶಿಲಾಯುಗ ಹಾಗು ಬೃಹತ್ ಶಿಲಾಯುಗ ಸಂಸ್ಕೃತಿಯ ಕುರುಹುಗಳು ಕೂಡ ಕರ್ನಾಟಕದಲ್ಲಿ ದೊರೆತಿವೆ. ಹರಪ್ಪದಲ್ಲಿ ಭೂಶೋಧನೆಯಿಂದ ದೊರೆತಿರುವ ಚಿನ್ನವು ಕರ್ನಾಟಕದ ಗಣಿಗಳಿಂದ ಆಮದು ಮಾಡಲ್ಪಟ್ಟಿರುವ ವಿಚಾರದಿಂದ ವಿದ್ವಾಂಸರು ಕ್ರಿ.ಪೂ.೩೦೦೦ದಲ್ಲೆ ಕರ್ನಾಟಕ ಮತ್ತು ಸಿಂಧು ಕಣಿವೆ ನಾಗರೀಕತೆ ನಡುವೆ ಸಂಬಂಧಗಳಿದ್ದವೆಂದು ಪ್ರತಿಪಾದಿಸಿದ್ದಾರೆ. ಕ್ರಿ. ಪೂ. ೩೦೦ಕ್ಕಿಂತ ಮೊದಲು, ಕರ್ನಾಟಕದ ಬಹುಪಾಲು ಭಾಗ ಸಾಮ್ರಾಟ್ ಅಶೋಕನ ಮೌರ್ಯ ಸಾಮ್ರಾಜ್ಯ ದ ಭಾಗವಾಗಿತ್ತು (ಚರ್ಚೆ). ತದನಂತರ ನಾಲ್ಕು ಶತಮಾನಗಳ ಕಾಲ ಶಾತವಾಹನರು ಕರ್ನಾಟಕದ ಬಹುಪಾಲು ಭಾಗವನ್ನಾಳಿದರು. ಶಾತವಾಹನರ ಅವನತಿಯು ಪ್ರಪ್ರಥಮ ಪ್ರಾದೇಶಿಕ (ಕನ್ನಡ) ಸಾಮ್ರಾಜ್ಯಗಳಾದ ಕದಂಬ ಸಾಮ್ರಾಜ್ಯ ಮತ್ತು ಪಶ್ಚಿಮ ಗಂಗ ಸಾಮ್ರಾಜ್ಯಗಳ ಉಗಮಕ್ಕೆ ನಾಂದಿಯಾಯಿತು. ಈ ಸಾಮ್ರಾಜ್ಯಗಳ ಸ್ಥಾಪನೆಯು ಪ್ರದೇಶದ ಸ್ವತಂತ್ರ ರಾಜಕೀಯ ಅಸ್ತಿತ್ವದ ಪ್ರಾದುರ್ಭಾವಕ್ಕೆ ಕಾರಣವಾಯಿತು. ಕದಂಬ ಸಾಮ್ರಾಜ್ಯವು ಮಯೂರ ವರ್ಮನಿಂದ ಸ್ಥಾಪಿಸಲ್ಪಟ್ಟಿತು. ಅದರ ರಾಜಧಾನಿ ಬನವಾಸಿಯಾಗಿತ್ತು.ತಲಕಾಡು ಪಶ್ಚಿಮ ಗಂಗ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಈ ಸಾಮ್ರಾಜ್ಯಗಳು ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಉಪಯೋಗಿಸಿದ ಸಾಮ್ರಾಜ್ಯಗಳಲ್ಲಿ ಮೊದಲನೆಯವು. ಹಲ್ಮಿಡಿ ಶಾಸನವು ಮತ್ತು ಬನವಾಸಿಯಲ್ಲಿ ದೊರೆತ ಐದನೆಯ ಶತಮಾನದ ತಾಮ್ರದ ನಾಣ್ಯವು ಇದಕ್ಕೆ ಸಾಕ್ಷಿಯಾಗಿವೆ. ಈ ಸಾಮ್ರಾಜ್ಯಗಳ ನಂತರ ದಖನ್ ಅನ್ನು ಬಹುಪಾಲು ಆಳುತ್ತಿರುವ ಬಾದಾಮಿ ಚಾಲುಕ್ಯರು, ಮಾನ್ಯಖೇಟದ ರಾಷ್ಟ್ರಕೂಟರು, ಪಶ್ಚಿಮ ಚಾಲುಕ್ಯರು ತಮ್ಮ ರಾಜಧಾನಿಗಳನ್ನು ಕರ್ನಾಟಕದಲ್ಲಿ ಸ್ಥಾಪಿಸಿದರು. ಪಶ್ಚಿಮ ಚಾಲುಕ್ಯರು ವಿಶಿಷ್ಟ ಶೈಲಿಯ ವಾಸ್ತುಶಿಲ್ಪ ಮತ್ತು ಕನ್ನಡ ಸಾಹಿತ್ಯಕ್ಕೆ ಆಶ್ರಯ ದಾತರಾಗಿದ್ದರು. ಇದು ೧೨ನೆಯ ಶತಮಾನದ ಹೊಯ್ಸಳ ಕಲೆಗೆ ಪೂರ್ವಗಾಮಿಯಾಗಿದ್ದಿತು. ಕ್ರಿ. ಶ. ೯೯೦-೧೨೧೦ವರೆಗೆ ಕರ್ನಾಟಕದ ಕೆಲವು ಪ್ರದೇಶಗಳು ಚೋಳ ಸಾಮ್ರಾಜ್ಯದ ಆಧೀನವಾಗಿತ್ತು. ಈ ಕಾಲದಲ್ಲಿ ಪಶ್ಚಿಮ ಚಾಲುಕ್ಯರು, ಚೋಳ ಹಾಗೂ ಪೂರ್ವ ಚಾಲುಕ್ಯರ ವಿರುದ್ಧ ನಿರಂತರ ಕಾಳಗದಲ್ಲಿರುತ್ತಿದ್ದರು. ಮೊದಲನೆಯ ಸಹಸ್ರಮಾನದ ಆದಿಯಲ್ಲಿ ಹೊಯ್ಸಳರು ಕರ್ನಾಟಕದಲ್ಲಿ ಪ್ರಬಲರಾದರು. ಹೊಯ್ಸಳರ ಕಾಲದಲ್ಲಿ ಸಾಹಿತ್ಯ ಮತ್ತು ವಾಸ್ತುಶಿಲ್ಪ ಉಚ್ಚ್ರಾಯ ಸ್ಥಿತಿಯನ್ನು ತಲುಪಿದವು. ಇದು ವಿಶಿಷ್ಟ ಕನ್ನಡ ಕಾವ್ಯ ಶೈಲಿಗಳ ಉದಯಕ್ಕೆ ಕಾರಣವಾಯಿತು.ಹೊಯ್ಸಳರ ಕಾಲದಲ್ಲಿ ದೇಗುಲಗಳು ಮತ್ತು ಶಿಲ್ಪಗಳು ವೇಸರ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗುತ್ತಿತ್ತು. ಹೊಯ್ಸಳ ಸಾಮ್ರಾಜ್ಯವು ಆಂಧ್ರ ಪ್ರದೇಶ ಮತ್ತು ತಮಿಳು ನಾಡಿನ ಕೆಲವು ಪ್ರದೇಶಗಳನ್ನು ತನ್ನ ಆಳ್ವಿಕೆಗೆ ಒಳಪಡಿಸಿತ್ತು. ೧೪ನೆಯ ಶತಮಾನದ ಆದಿಯಲ್ಲಿ ಹರಿಹರ ಮತ್ತು ಬುಕ್ಕರಾಯ ವಿಜಯನಗರ ಸಾಮ್ರಾಜ್ಯವನ್ನು ತುಂಗಾ ನದಿ ತೀರದಲ್ಲಿ (ಈಗಿನ ಬಳ್ಳಾರಿ ಜಿಲ್ಲೆ ಯಲ್ಲಿ) ಸ್ಥಾಪಿಸಿದರು. ಹೊಸಪಟ್ಟಣ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ವಿಜಯನಗರ ಸಾಮ್ರಾಜ್ಯವು ಶ್ರೀಕೃಷ್ಣದೇವರಾಯನ ಕಳಿಂಗ ಯುದ್ಧ ಸಾವಿರ 1512 ರಿಂದ 1518 :- ಸೂರ್ಯವಂಶದ ಒಡೆಯ ರಾಜು ಕ್ಷತ್ರಿಯ (ಒಡ್ರ ದೇಶದ Od ಒಡ್ ಸಮಾಜದವರು) ವಂಶಸ್ಥರಾದ ಗಜಪತಿ ಗಳ ರಾಜ್ಯ ವಿಶಾಲವಾಗಿದ್ದು ಇಂದಿನ ಆಂಧ್ರ ಮತ್ತು ತೆಲಂಗಾಣ ಪ್ರದೇಶ ಸಂಪೂರ್ಣ ಒರಿಸ್ಸಾ ವನ್ನು ಒಳಗೊಂಡಿತ್ತು ಉಮ್ಮತ್ತೂರಿನ ಯಶಸ್ಸಿನಿಂದ ಉತ್ತೇಜಿತನಾದ ಶ್ರೀಕೃಷ್ಣದೇವರಾಯನ ಸೂರ್ಯವಂಶದ ಒಡೆಯ ರಾಜು ಕ್ಷತ್ರಿಯ ಗಜಪತಿ ಪ್ರತಾಪರುದ್ರ ದೇವನ ಸ್ವಾಧೀನದಲ್ಲಿದ್ದ ತೆಲಂಗಾಣ ಪ್ರದೇಶದ ತನ್ನ ದೃಷ್ಟಿಯನ್ನು ತಿರುಗಿಸಿದನು ವಿಜಯನಗರ ಸೈನ್ಯ 1512 ರಲ್ಲಿ ಉದಯಗಿರಿ ಕೋಟೆಗೆ ಮುತ್ತಿಗೆ ಹಾಕಿತು ಒಂದು ವರ್ಷದವರೆಗೂ ನಡೆದ ಈ ಮುತ್ತಿಗೆಯಲ್ಲಿ ಕೊನೆಗೆ ಸೂರ್ಯವಂಶದ ಒಡೆಯ ರಾಜು ಕ್ಷತ್ರಿಯ ಗಜಪತಿಯ ಸೈನ್ಯ ಹಸಿವಿನಿಂದ ಶೀತಲವಾಗ ತೊಡಗಿತು ಇದೇ ಸಮಯದಲ್ಲಿ ಶ್ರೀಕೃಷ್ಣದೇವರಾಯನ ಪತ್ನಿಯಾದ ತಿರುಮಲದೇವಿ ಮತ್ತು ಚಿನ್ನಮ್ಮ ದೇವಿ ಅವರೊಂದಿಗೆ ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನ ಮಾಡಿದರು ನಂತರ ಸೂರ್ಯವಂಶದ ಒಡೆಯ ರಾಜು ಕ್ಷತ್ರಿಯ ಗಜಪತಿ ಸೇನೆ ಕೊಂಡವೀಡುರಾಜು ಎಂಬಲ್ಲಿ ವಿಜಯನಗರ ಸೇನೆಗೆ ಎದುರಾಯಿತು ಕೆಲವು ತಿಂಗಳುಗಳಿಂದ ಮುತ್ತಿಗೆ ಹಾಕುತ್ತಿದ್ದರು ಕೆಲವು ಮೊದಮೊದಲು ಸೋಲುಗಳ ನಂತರ ವಿಜಯನಗರ ಸೇನೆ ರಣರಂಗದಿಂದ ಇಂದಿಗೆಯಾಲಾರಂಭಿಸಿತು. ಅದೇ ಸಮಯದಲ್ಲಿ ತಿಮ್ಮರುಸು ಕಂಡುಹಿಡಿದ ಕಾವಲಿಲ್ಲದ ಪೂರ್ವದ ದ್ವಾರದ ರಹಸ್ಯ ದಾರಿಯ ಮೂಲಕ ವಿಜಯನಗರದ ಸೇನೆ ಕೋಟೆಯನ್ನು ಗೆದ್ದು ಆ ಕಾಲದ ಅತಿ ಸಮರ್ಥ ಕತ್ತಿವರಸೆ ಗಾರ ಎಂದು ಹೆಸರಾಗಿದ್ದ ಸೂರ್ಯವಂಶದ ಪ್ರತಾಪರುದ್ರದೇವ ನಮಗ ಯುವರಾಜ ವೀರಭದ್ರನನ್ನು ಸೆರೆಹಿಡಿಯಿತು ಈ ವಿಜಯದ ನಂತರ ತಿಮ್ಮರುಸು ಕೊಂಡವೀಡು ಪ್ರಾಂತ್ಯದ ಮಾಂಡಳೀಕನಾಗಿ ನೇಮಕಗೊಂಡ ಮುಂದೆ ವಿಜಯನಗರ ಸೇನೆಯು ಕೊಂಡಪಲ್ಲಿ ಪ್ರದೇಶದಲ್ಲಿ ಸೂರ್ಯವಂಶದ ಗಜಪತಿ ಸೇನೆಯನ್ನು ಮತ್ತೊಮ್ಮೆ ಮುಖದ ಮೇಲೆ ದಾಳಿ ಮಾಡಿ ವಶಪಡಿಸಿಕೊಳ್ಳ ಬೇಕೆಂದಿದ್ದ ಶ್ರೀ ಕೃಷ್ಣದೇವರಾಯನ ಗಣತಂತ್ರಕ್ಕೆ ಪ್ರತಿಯಾಗಿ ಪ್ರತಾಪರುದ್ರದೇವ ನು ಶ್ರೀಕೃಷ್ಣದೇವರಾಯ ನನ್ನು ಅವನ ಸೇನೆಯೊಂದಿಗೆ ಹೀನಾಯವಾಗಿ ಸೋಲಿಸುವ ಪ್ರತಿ ಯೋಜನೆ ಹಾಕಿದರು ಯೋಜನೆಯ ಪ್ರಕಾರ ಇವೆರಡು ಸೇನೆಗಳು ಕಳಿಂಗ ನಗರದಲ್ಲಿ ಸಂದೇಶಬೇಕಾಗಿತ್ತು ಆದರೆ ಈ ಮಾಹಿತಿಯನ್ನು ಚಾಣಾಕ್ಷ ತಿಮ್ಮರಸು ಪ್ರತಾಪರುದ್ರದೇವ ನತಿಸಿದ ತೆಲುಗು ಭಾಷೆ ಒಬ್ಬನಿಗೆ ಲಂಚ ಕೊಟ್ಟು ಸಂಪಾದಿಸಿದ್ದನ್ನು ಪ್ರತಾಪ ರುದ್ರನ ಯೋಜನೆ ನಡೆಯದೆ ಆತ ತನ್ನ ರಾಜಧಾನಿಯತ್ತ ಹಿಮ್ಮೆಟ್ಟಬೇಕಾಯಿತು ಕೊನೆಗೂ ಆತ ವಿಜಯನಗರ ಸೇನೆಗೆ ಶರಣಾಗಿ ತನ್ನ ಮಗಳನ್ನು ಕೃಷ್ಣದೇವರಾಯನಿಗೆ ಕೊಟ್ಟು ಮದುವೆ ಮಾಡಿದ ಇದರ ನಂತರ ಭಾರತದ ಎರಡು ಪ್ರಬಲ ಸಾಮ್ರಾಜ್ಯಗಳ ನಡುವೆ ಶಾಂತಿ-ಸಾಮರಸ್ಯ ನೆಲೆಸಿ ಸನಾತನ ಧರ್ಮ ಸುರಕ್ಷಿತ ವಾಯಿತು. ಎರಡು ಶತಮಾನಗಳ ಕಾಲ ದಕ್ಷಿಣ ಭಾರತದಲ್ಲಿ ಮುಸ್ಲಿಂ ಸಾಮ್ರಾಜ್ಯಗಳ ಮುನ್ನಡೆಗೆ ತಡೆಗೋಡೆ ಯಾಯಿತು. ೧೫೬೫ರಲ್ಲಿ, ತಾಳಿಕೋಟೆಯ ಯುದ್ಧದಲ್ಲಿ ದಖನ್ ಸುಲ್ತಾನರಿಂದ ವಿಜಯನಗರ ಸಾಮ್ರಾಜ್ಯದ ಪತನ ಕರ್ನಾಟಕದ ರಾಜಕೀಯ ಕ್ಷೇತ್ರದಲ್ಲಿ ಭಾರಿ ಬದಲಾವಣೆ ತಂದಿತು. ಬಹಮನಿ ಸುಲ್ತಾನರ ಪತನಾನಂತರ ವಿಜಯಪುರದ ಸುಲ್ತಾನರು ಪ್ರಾಬಲ್ಯಕ್ಕೆ ಬಂದು, ದಖನ್ ಪ್ರದೇಶವನ್ನು ಆಳುತ್ತಿದ್ದರು. ೧೭ನೆಯ ಶತಮಾನದ ಕೊನೆಯಲ್ಲಿ ವಿಜಯಪುರದ ಸುಲ್ತಾನರು ಮೊಘಲರಿಂದ ಪರಾಭವ ಹೊಂದಿದರು. ಬಹಮನಿ ಮತ್ತು ವಿಜಯಪುರದ ಸುಲ್ತಾನರು ಉರ್ದು ಹಾಗೂ ಪರ್ಷಿಯನ್ ಸಾಹಿತ್ಯ ಮತ್ತು ಇಂಡೋ-ಸಾರಾಸೆನಿಕ್ ವಾಸ್ತುಶಿಲ್ಪವನ್ನು ಪ್ರೋತ್ಸಾಹಿಸುತ್ತಿದ್ದರು. ತದನಂತರದ ಅವಧಿಯಲ್ಲಿ, ಉತ್ತರ ಕರ್ನಾಟಕದ ಕೆಲವು ಪ್ರದೇಶಗಳನ್ನು ಹೈದರಾಬಾದಿನ ನಿಜಾಮರು, ಬ್ರಿಟೀಷರು ಹಾಗೂ ಅನ್ಯ ರಾಜರು ಆಳುತ್ತಿದ್ದರು. ದಕ್ಷಿಣದಲ್ಲಿ ಮೈಸೂರು ರಾಜಮನೆತನದವರು (ವಿಜಯನಗರ ಸಾಮ್ರಾಜ್ಯದ ಸಾಮಂತರಸರು) ಕೆಲಕಾಲ ಸ್ವತಂತ್ರವಾಗಿ ಆಳ್ವಿಕೆ ನಡೆಸುತ್ತಿದ್ದರು. ಎರಡನೆಯ ಕೃಷ್ಣರಾಜ ಒಡೆಯರ್ ಅವರ ಮರಣಾನಂತರ ಮೈಸೂರಿನ ಸೇನಾಧಿಪತಿಯಾಗಿದ್ದ ಹೈದರ್ ಅಲಿಯು ಪ್ರದೇಶದ ಆಡಳಿತವನ್ನು ಕೈಗೆ ತೆಗೆದುಕೊಂಡನು. ಹೈದರ್ ಅಲಿಯ ನಿಧನಾನಂತರ, ಅವನ ಪುತ್ರನಾದ ಟಿಪ್ಪು ಸುಲ್ತಾನನು ಮೈಸೂರಿನ ಅರಸನಾದನು. ಐರೋಪ್ಯರ ವಿಸ್ತರಣೆಯನ್ನು ತಡೆಯಲು ಹೈದರ್ ಅಲಿ ಹಾಗು ಟಿಪ್ಪು ಸುಲ್ತಾನನು ನಾಲ್ಕು ಆಂಗ್ಲೋ-ಮೈಸೂರು ಯುದ್ಧಗಳಲ್ಲಿ ತೊಡಗಿದರು. ನಾಲ್ಕನೆಯ ಹಾಗು ಕೊನೆಯ ಆಂಗ್ಲೋ-ಮೈಸೂರು ಯುದ್ಧವು ಟಿಪ್ಪು ಸುಲ್ತಾನನ ಮರಣಕ್ಕೆ ಮತ್ತು ಬ್ರಿಟೀಷ ಸಾಮ್ರಾಜ್ಯದಲ್ಲಿ ಮೈಸೂರು ರಾಜ್ಯದ ಸೇರ್ಪಡೆಗೆ ಕಾರಣವಾಯಿತು. ಬ್ರಿಟಿಷರು ಮೈಸೂರು ರಾಜ್ಯವನ್ನು ಒಡೆಯರ್ ಮನೆತನದವರಿಗೆ ಹಿಂದಿರುಗಿಸಿದರು ಹಾಗೂ ಬ್ರಿಟಿಷ್ ಸಾಮ್ರಾಜ್ಯದಲ್ಲಿ ರಾಜಪ್ರಭುತ್ವ ಪ್ರದೇಶದ ಸ್ಥಾನಮಾನ ನೀಡಿತು. ಭಾರತಾದ್ಯಂತ ಬ್ರಿಟೀಷರ "ಡಾಕ್ಟ್ರೈನ್ ಆಫ್ ಲ್ಯಾಪ್ಸ್" ರಾಜನೀತಿಯ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದ ಕಾಲದಲ್ಲಿ, ಕರ್ನಾಟಕದಲ್ಲಿ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಮುಂತಾದವರು ೧೮೩೦ರಲ್ಲಿ ಅಂದರೆ ೧೮೫೭ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸುಮಾರು ೩ ದಶಕಗಳ ಹಿಂದೆ ಬ್ರಿಟೀಷರ ವಿರುದ್ಧ ದಂಗೆಯೆದ್ದರು. ತದನಂತರ ಸೂಪ, ಬಾಗಲಕೋಟೆ, ಶೋರಾಪುರ, ನರಗುಂದ ಹಾಗು ದಾಂಡೇಲಿ ಹೀಗೆ ಹಲವೆಡೆಗಳಲ್ಲಿ ದಂಗೆಗಳು ನಡೆಯಿತು. ೧೮೫೭ರ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ನಡೆದ ದಂಗೆಗಳನ್ನು ಮುಂಡರಗಿ ಭೀಮರಾವ್, ಭಾಸ್ಕರ ರಾವ್ ಭಾವೆ, ಹಳಗಳಿ ಬೇಡರು, ವೆಂಕಟಪ್ಪ ನಾಯಕ ಮುಂತಾದವರು ಮುನ್ನಡೆಸಿದರು. ೧೯ನೆಯ ಶತಮಾನದ ಅಂತ್ಯದಲ್ಲಿ ಸ್ವಾತಂತ್ರ್ಯ ಚಳವಳಿಯು ತೀವ್ರವಾಯಿತು. ಕಾರ್ನಾಡ ಸದಾಶಿವರಾವ್, ಆಲೂರು ವೆಂಕಟರಾಯರು, ಎಸ್. ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯ, ನಿಟ್ಟೂರು ಶ್ರೀನಿವಾಸರಾವ್ ಮುಂತಾದವರು ೨೦ನೆಯ ಶತಮಾನದ ಪೂರ್ವದವರೆಗೂ ಸ್ವಾತಂತ್ರ್ಯ ಹೋರಾಟವನ್ನು ಮುಂದುವರೆಸಿಕೊಂಡು ಬಂದರು. Bengaluru city ,Karnataka state, India ಕರ್ನಾಟಕದ ಉದಯ ಭಾರತದ ಸ್ವಾತಂತ್ರ್ಯದ ನಂತರ ಮೈಸೂರು ಸಂಸ್ಥಾನ ಭಾರತದ ಒಕ್ಕೂಟವನ್ನು ಸೇರಿತು. ಮೈಸೂರು ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ "ರಾಜಪ್ರಮುಖ"ರಾದರು. ಒಡೆಯರ ಮನೆತನಕ್ಕೆ ಭಾರತ ಸರ್ಕಾರದಿಂದ ಗೌರವಧನ ೧೯೭೫ರ ವರೆಗೆ ಸಂದಾಯವಾಗುತ್ತಿತ್ತು. ಈ ಮನೆತನದ ಸದಸ್ಯರು ಈಗಲೂ ಮೈಸೂರು ಅರಮನೆಯ ಒಂದು ಭಾಗದಲ್ಲಿ ಇದ್ದಾರೆ. ಏಕೀಕರಣ ಚಳವಳಿಯ ಬಹುಕಾಲದ ಬೇಡಿಕೆಯ ಮೇರೆಗೆ ನವೆಂಬರ್ ೧, ೧೯೫೬ ರಂದು ರಾಜ್ಯ ಪುನಸ್ಸಂಘಟನಾ ಕಾಯಿದೆಗೆ ಅನುಸಾರವಾಗಿ ಮೈಸೂರು ರಾಜ್ಯಕ್ಕೆ ಕೊಡಗು ರಾಜ್ಯ ಹಾಗೂ ಸುತ್ತಲ ಮದರಾಸು, ಹೈದರಾಬಾದ್, ಮತ್ತು ಬಾಂಬೆ ರಾಜ್ಯಗಳ ಕನ್ನಡ-ಪ್ರಧಾನ ಪ್ರದೇಶಗಳು ಸೇರಿ ಏಕೀಕೃತ "ವಿಶಾಲ ಮೈಸೂರು" ಅಸ್ತಿತ್ವಕ್ಕೆ ಬಂದಿತು (ಬಳ್ಳಾರಿ ಜಿಲ್ಲೆ ೧೯೫೩ರಲ್ಲಾಗಲೆ ರಾಜ್ಯಕ್ಕೆ ಸೇರಿತ್ತು). ನವೆಂಬರ್ ೧, ೧೯೭೩ ರಲ್ಲಿ ರಾಜ್ಯದ ಹೆಸರನ್ನು ಕರ್ನಾಟಕ ಎಂದು ಬದಲಾಯಿಸಲಾಯಿತು. ಕರ್ನಾಟಕದ ಹೆದ್ದಾರಿಗಳು ಕರ್ನಾಟಕದ ಹೆದ್ದಾರಿಗಳು : ಕರ್ನಾಟಕ ರಾಜ್ಯದ ಹೆದ್ದಾರಿಗಳು ರಾಜ್ಯದ ಪ್ರಮುಖ ಮಾರ್ಗಗಳಾಗಿದ್ದು, ರಾಜ್ಯದ ಪ್ರಮುಖ ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರ ಹಾಗೂ ಪಟ್ಟಣಗಳನ್ನು ಸಂಪರ್ಕಿಸುತ್ತವಲ್ಲದೆ, ರಾಜ್ಯದಲ್ಲಿನ ಮತ್ತು ನೆರೆಯ ರಾಜ್ಯಗಳಲ್ಲಿನ ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುತ್ತವೆ. ಅವುಗಳನ್ನು ೫ ಭಾಗಗಳಾಗಿ ವಿಂಗಡಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳು ರಾಜ್ಯ ಹೆದ್ದಾರಿಗಳು ಜಿಲ್ಲಾ ಹೆದ್ದಾರಿಗಳು ಜಿಲ್ಲಾ ಮುಖ್ಯ ರಸ್ತೆಗಳು ಗ್ರಾಮೀಣ ರಸ್ತೆಗಳು ಭೌಗೋಳಿಕ ಮೂರು ಭೌಗೋಳಿಕ ಪ್ರದೇಶಗಳು ಕರಾವಳಿ ಕರ್ನಾಟಕ – ಪಶ್ಚಿಮ ಘಟ್ಟಗಳು ಮತ್ತು ಅರಬ್ಬೀ ಸಮುದ್ರದ ನಡುವೆ ಇರುವ ತಗ್ಗಿನ ಪ್ರದೇಶ, ಸಾಕಷ್ಟು ಮಳೆ ಪಡೆಯುತ್ತದೆ. ಮಲೆನಾಡು – ಪಶ್ಚಿಮ ಘಟ್ಟಗಳು, ಅರಬ್ಬೀ ಸಮುದ್ರದ ತೀರದೊಂದಿಗೆ ಸಾಗುವ ಪರ್ವತ ಸರಣಿ, ಸರಾಸರಿ ಸಮುದ್ರ ಮಟ್ಟದಿಂದ ೯೦೦ ಮೀ. ಎತ್ತರದಲ್ಲಿದೆ. ಇಲ್ಲೂ ಸಹ ಸಾಕಷ್ಟು ಮಳೆ ಆಗುತ್ತದೆ. ಬಯಲುಸೀಮೆ – ದಖ್ಖನ್ ಪ್ರಸ್ಥ ಭೂಮಿ (ಅಥವಾ ದಕ್ಷಿಣ ಪ್ರಸ್ಥಭೂಮಿ), ರಾಜ್ಯದ ಒಳನಾಡು, ಮಳೆ ಕಡಿಮೆ ಇರುವ ಪ್ರದೇಶ. ಕರ್ನಾಟಕದ ಜಲಾನಯನ ಪ್ರದೇಶಗಳು ಕರ್ನಾಟಕದ ಬಯಲು ಪ್ರದೇಶದ ಉತ್ತರ ಭಾಗವು ಭಾರತದ ಎರಡನೆಯ ಅತಿ ದೊಡ್ಡ ಶುಷ್ಕ ಪ್ರದೇಶವಾಗಿದೆ. ಕರ್ನಾಟಕದ ಎತ್ತರದ ತುದಿಯು ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಬೆಟ್ಟವಾಗಿದೆ (ಎತ್ತರ ೧೯೨೯ ಮೀ. (೬೩೨೯ ಅಡಿಗಳು)) ಕರ್ನಾಟಕದಲ್ಲಿ ಏಳು ಜಲಾನಯನ ಪ್ರದೇಶಗಳಿವೆ (river basin). ಅವುಗಳೆಂದರೆ: ಕೃಷ್ಣಾ ಜಲಾನಯನ ಪ್ರದೇಶ: ರಾಜ್ಯದ ಉತ್ತರ ಭಾಗದಲ್ಲಿರುವ ಕೃಷ್ಣಾನದಿಯ ಜಲಾನಯನ ಪ್ರದೇಶದಲ್ಲಿ ಪ್ರಧಾನ ಉಪನದಿಗಳಾದ ತುಂಗಭದ್ರಾ, ಮಲಪ್ರಭಾ, ಘಟಪ್ರಭಾ, ಭೀಮಾ ನದಿಗಳು ಹರಿಯುತ್ತವೆ. ಕಾವೇರಿ ಜಲಾನಯನ ಪ್ರದೇಶ: ದಕ್ಷಿಣದ ಕಾವೇರಿ ಜಲಾನಯನ ಪ್ರದೇಶದಲ್ಲಿ ಪ್ರಧಾನ ಉಪನದಿಗಳಾದ ಹಾರಂಗಿ, ಹೇಮಾವತಿ, ಕಬಿನಿ, ಸುವರ್ಣಾವತಿ, ಲಕ್ಷ್ಮಣ ತೀರ್ಥ, ಶಿಂಶಾ, ಅರ್ಕಾವತಿ ನದಿಗಳು ಹರಿಯುತ್ತವೆ. ಗೋದಾವರಿ ಜಲಾನಯನ ಪ್ರದೇಶ: ಗೋದಾವರಿ ಜಲಾನಯನ ಪ್ರದೇಶದಲ್ಲಿ ಪ್ರಧಾನ ಉಪನದಿಯಾದ ಮಂಜೀರಾ ನದಿ ಹರಿಯುತ್ತದೆ. ಪಶ್ಚಿಮಕ್ಕೆ ಹರಿಯುವ ನದಿಗಳ ಜಲಾನಯನ ಪ್ರದೇಶ: ಈ ಪ್ರದೇಶದಲ್ಲಿ ಮಾಂಡವಿ, ಕಾಳಿ, ಗಂಗಾವಲ್ಲಿ, ಅಘನಾಶಿನಿ, ಶರಾವತಿ, ಚಕ್ರಾ, ವಾರಾಹಿ, ನೇತ್ರಾವತಿ, ಬಾರಾಪೋಲ್ ನದಿಗಳು ಹರಿಯುತ್ತವೆ. ಉತ್ತರ ಪಿನಾಕಿನಿ ಜಲಾನಯನ ಪ್ರದೇಶ. ದಕ್ಷಿಣ ಪಿನಾಕಿನಿ ಜಲಾನಯನ ಪ್ರದೇಶ. ಪಾಲಾರ್ ಜಲಾನಯನ ಪ್ರದೇಶ. ಕರ್ನಾಟಕದಲ್ಲಿ ೫ ಪ್ರದೇಶಗಳು ವಾಯುವ್ಯ ಕರ್ನಾಟಕ(ವಿಜಯಪುರ, ಬಾಗಲಕೋಟ, ಗದಗ, ಧಾರವಾಡ, ಹಾವೇರಿ, ಬೆಳಗಾವಿ, ಉತ್ತರ ಕನ್ನಡ) ಈಶಾನ್ಯ ಕರ್ನಾಟಕ (ಕಲಬುರಗಿ, ಬೀದರ್, ಯಾದಗಿರಿ, ಕೊಪ್ಪಳ, ರಾಯಚೂರು, ಬಳ್ಳಾರಿ) ಹಳೇ ಮೈಸೂರು (ಮೈಸೂರು, ರಾಮನಗರ, ಮಂಡ್ಯ, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ತುಮಕೂರು, ಚಿತ್ರದುರ್ಗ,ದಾವಣಗೆರೆ, ಬೆಂಗಳೂರು, ಬೆಂಗಳೂರು ಗ್ರಾಮಾಂತರ) ತುಳುನಾಡು (ಉಡುಪಿ, ದಕ್ಷಿಣ ಕನ್ನಡ) ಕೊಡಗು (ಮಡಿಕೇರಿ) ವಾಯುವ್ಯ ಕರ್ನಾಟಕದ ಎಲ್ಲ ಜಿಲ್ಲೆಗಳು ಬಾಂಬೆ ರಾಜ್ಯದಿಂದ ಬೇರ್ಪಟ್ಟು ಮೈಸೂರು ರಾಜ್ಯಕ್ಕೆ ಸೇರ್ಪಡೆಗೊಂಡಿದ್ದರೆ ಈಶಾನ್ಯ ಕರ್ನಾಟಕದ ಬಹುತೇಕ ಜಿಲ್ಲೆಗಳು ಹೈದರಾಬಾದ್ ರಾಜ್ಯದಿಂದ ಬೇರ್ಪಟ್ಟು ಮೈಸೂರು ರಾಜ್ಯಕ್ಕೆ ಸೇರ್ಪಡೆಗೊಂಡಿವೆ, ತುಳುನಾಡಿನ ಜಿಲ್ಲೆಗಳು ಮದ್ರಾಸ್ ರಾಜ್ಯದಿಂದ ಬೇರ್ಪಟ್ಟು ಮೈಸೂರು ರಾಜ್ಯಕ್ಕೆ ಸೇರ್ಪಡೆಗೊಂಡಿದ್ದರೆ ಕೊಡಗು ಪ್ರತ್ಯೇಕ ರಾಜ್ಯವಾಗಿತ್ತು. ೧೯೫೬ ರಲ್ಲಿ ಬಾಂಬೆ, ಹೈದರಾಬಾದ್, ಮದ್ರಾಸ್ ರಾಜ್ಯಗಳಿಂದ ಬೇರ್ಪಟ್ಟ ಜಿಲ್ಲೆಗಳು ಹಾಗೂ ಕೊಡಗು, ಮೈಸೂರು ರಾಜ್ಯಕ್ಕೆ ಸೇರಿಕೊಂಡು ವಿಶಾಲ ಮೈಸೂರು ರಾಜ್ಯ ಉದಾಯವಾಯಿತು. ಹಾಗೂ ಕಾಲಾನಂತರದಲ್ಲಿ ಮೈಸೂರು ರಾಜ್ಯ ಕರ್ನಾಟಕವಾಯಿತು. ಪ್ರದೇಶವಾರು ಜಿಲ್ಲೆಗಳ ವಿಸ್ತೀರ್ಣ ಈಶಾನ್ಯ ಕರ್ನಾಟಕ: ಬಳ್ಳಾರಿ ವಿಸ್ತೀರ್ಣ: ೮೪೧೯ ಚ. ಕಿಮಿ, ಬೀದರ ವಿಸ್ತೀರ್ಣ: ೫೪೪೮ ಚ. ಕಿಮಿ, ಕಲಬುರಗಿ ವಿಸ್ತೀರ್ಣ: ೧೬೨೨೪ ಚ. ಕಿಮಿ, ಕೊಪ್ಪಳ ವಿಸ್ತೀರ್ಣ: ೮೪೫೮ ಚ. ಕಿಮಿ, ರಾಯಚೂರು ವಿಸ್ತೀರ್ಣ: ೫೫೫೯ ಚ. ಕಿಮಿ, ಯಾದಗಿರಿ (೨೦೧೦ರಲ್ಲಿ ಹೊಸದಾಗಿ ರಚನೆಯಾಗಿದೆ) ವಾಯುವ್ಯ ಕರ್ನಾಟಕ: ಬಾಗಲಕೋಟ ವಿಸ್ತೀರ್ಣ: ೬೫೯೪ ಚ. ಕಿಮಿ, ಬೆಳಗಾವಿ ವಿಸ್ತೀರ್ಣ: ೧೩೪೧೫ ಚ. ಕಿಮಿ, ವಿಜಯಪುರ ವಿಸ್ತೀರ್ಣ: ೧೦೪೭೫ ಚ. ಕಿಮಿ, ಧಾರವಾಡ ವಿಸ್ತೀರ್ಣ: ೪೨೩೦ ಚ. ಕಿಮಿ, ಗದಗ ವಿಸ್ತೀರ್ಣ: ೪೬೫೭ ಚ. ಕಿಮಿ, ಹಾವೇರಿ ವಿಸ್ತೀರ್ಣ: ೪೮೫೧ ಚ. ಕಿಮಿ, ಉತ್ತರ ಕನ್ನಡ ವಿಸ್ತೀರ್ಣ: ೧೦೨೯೧ ಚ. ಕಿಮಿ ಹಳೇ ಮೈಸೂರು: ಬೆಂಗಳೂರು ನಗರ ವಿಸ್ತೀರ್ಣ: ೨೧೯೦ ಚ. ಕಿಮಿ, ಬೆಂಗಳೂರು ಗ್ರಾಮಾಂತರ ವಿಸ್ತೀರ್ಣ: ೫೦೧೫ ಚ. ಕಿಮಿ, ಚಿತ್ರದುರ್ಗ ವಿಸ್ತೀರ್ಣ: ೮೩೮೮ ಚ. ಕಿಮಿ, ದಾವಣಗೆರೆ ವಿಸ್ತೀರ್ಣ: ೬೦೧೮ ಚ್. ಕಿಮಿ, ಕೋಲಾರ ವಿಸ್ತೀರ್ಣ: ೮೨೨೩ ಚ. ಕಿಮಿ, ಶಿವಮೊಗ್ಗ ವಿಸ್ತೀರ್ಣ: ೮೪೬೫ ಚ. ಕಿಮಿ, ತುಮಕೂರು ವಿಸ್ತೀರ್ಣ: ೧೦೫೯೮ ಚ. ಕಿಮಿ, ಚಿಕ್ಕಬಳ್ಳಾಪುರ (ಹೊಸದಾಗಿ ಸೇರ್ಪಡೆಯಾಗಿದೆ), ರಾಮನಗರ (ಹೊಸದಾಗಿ ಸೇರ್ಪಡೆಯಾಗಿದೆ), ಚಾಮರಾಜನಗರ ವಿಸ್ತೀರ್ಣ: ೫೬೮೫ ಚ. ಕಿಮಿ, ಚಿಕ್ಕಮಗಳೂರು ವಿಸ್ತೀರ್ಣ: ೭೨೦೧ ಚ. ಕಿಮಿ, ಹಾಸನ ವಿಸ್ತೀರ್ಣ: ೬೮೧೪ ಚ. ಕಿಮಿ, ಮಂಡ್ಯ ವಿಸ್ತೀರ್ಣ: ೪೯೬೧ ಚ. ಕಿಮಿ, ಮೈಸೂರು ವಿಸ್ತೀರ್ಣ: ೬೨೬೯ ಚ. ಕಿಮಿ ತುಳುನಾಡು: ದಕ್ಷಿಣ ಕನ್ನಡ ವಿಸ್ತೀರ್ಣ: ೪೮೪೩ ಚ. ಕಿಮಿ, ಉಡುಪಿ ವಿಸ್ತೀರ್ಣ: ೩೫೯೮ ಚ. ಕಿಮಿ ಕೊಡಗು: ಕೊಡಗು ವಿಸ್ತೀರ್ಣ: ೪೧೦೨ ಚ. ಕಿಮಿ ಕರ್ನಾಟಕದ ಭೂರಚನೆಗಳು ಧಾರವಾಡದ ಶೀಸ್ಟಗಳು (ಪದರು ಶಿಲೆ) ಮತ್ತು ಪೆಡಸುಕಲ್ಲಿನ (ಗ್ರಾನೈಟ್) ನಯಿಸ್ (gneiss) ಗಳಿಂದ ಮಾಡಲ್ಪಟ್ಟ ಆರ್ಕಿಯನ್ ಸಂಕೀರ್ಣ. ಕಲಡ್ಗಿ ಮತ್ತು ಭೀಮಾ ಸರಣಿಯ ಪ್ರೊಟೆರೋಜೋಯಿಕ್ ಅವಶೇಷ ರಹಿತ ಪದರು ರಚನೆಗಳು. ದಖನ್ ಟ್ರ್ಯಾಪ್ಪಿಯನ್ ಮತ್ತು ಇಂಟರ್-ಟ್ರ್ಯಾಪ್ಪಿಯನ್ ನಿಕ್ಷೇಪಗಳು. ಭೂರಚನೆಯ ತೃತೀಯ ಅವಧಿಯ ಹಾಗು ಇತ್ತೀಚಿನ ಲ್ಯಾಟರೈಟ್ ಗಳು ಮತ್ತು ಮೆಕ್ಕಲು ಮಣ್ಣಿನ ನಿಕ್ಷೇಪಗಳು. ರಾಜ್ಯದ ೬೦% ಭಾಗ ನಯಿಸ್ (gneiss) ಗಳು, ಪೆಡಸುಕಲ್ಲುಗಳು (ಗ್ರಾನೈಟ್) ಹಾಗು ಚಾರ್ನೊಕೈಟ್ ಬಂಡೆಗಳಿಂದ ಕೂಡಿರುವ ಆರ್ಕಿಯನ್ ಸಂಕೀರ್ಣದಿಂದ ಆವೃತವಾಗಿದೆ. ಭೂರಚನೆಯ ತೃತೀಯ ಅವಧಿಯ ಆದಿಯಲ್ಲಿ ಜ್ವಾಲಾಮುಖಿ ಚಟುವಟಿಕೆಯ ನಿಲುಗಡೆಯ ನಂತರ ನಿರ್ಮಾಣ ವಾದ ಲ್ಯಾಟರೈಟ್ ಹೊದಿಕೆಗಳನ್ನು ದಖನ್ ಟ್ರ್ಯಾಪ್ಸಲ್ಲಿರುವ ಹಲವು ಜಿಲ್ಲೆಗಳಲ್ಲಿ ಕಾಣಬಹುದು. ಹನ್ನೊಂದು ರೀತಿಯ ಮಣ್ಣಿನ ವ್ಯವಸ್ಥೆಗಳು ಕರ್ನಾಟಕದಲ್ಲಿ ಹನ್ನೊಂದು ರೀತಿಯ ಮಣ್ಣಿನ ವ್ಯವಸ್ಥೆಗಳಿವೆ: ಎಂಟಿಸೊಲ್ಸ್, ಇನ್ಸೆಪ್ಟಿಸೊಲ್ಸ್, ಮೊಲ್ಲಿಸೊಲ್ಸ್, ಸ್ಪೊಡೊಸೊಲ್ಸ್, ಅಲ್ಫಿಸೊಲ್ಸ್, ಅಲ್ಟಿಸೊಲ್ಸ್, ಆಕ್ಸಿಸೊಲ್ಸ್, ಅರಿಡಿಸೊಲ್ಸ್, ವರ್ಟಿಸೊಲ್ಸ್, ಆಂಡಿಸೊಲ್ಸ್ ಮತ್ತು ಹಿಸ್ಟೊಸೊಲ್ಸ್. ಕರ್ನಾಟಕದ ಮಣ್ಣಿನ ಪ್ರಕಾರಗಳು ಕೃಷಿ ಸಾಮರ್ಥ್ಯದ ಆಧಾರದ ಮೇಲೆ ಕರ್ನಾಟಕದಲ್ಲಿರುವ ಮಣ್ಣನ್ನು ಆರು ಪ್ರಕಾರಗಳಾಗಿ ವಿಂಗಡಿಸಬಹುದು: ಕೆಂಪು ಮಣ್ಣು, ಜೇಡಿ ಮಣ್ಣು, ಕಪ್ಪು ಮಣ್ಣು, ಮೆಕ್ಕಲು ಮಣ್ಣು, ಅರಣ್ಯ ಮಣ್ಣು ಮತ್ತು ಕರಾವಳಿ ಮಣ್ಣು. ಕರ್ನಾಟಕ ನಾಲ್ಕು ಋತುಗಳು ಕರ್ನಾಟಕ ನಾಲ್ಕು ಋತುಗಳನ್ನು ಅನುಭವಿಸುತ್ತದೆ. ಜನವರಿ ಮತ್ತು ಫೆಬ್ರವರಿಯಲ್ಲಿ ಚಳಿಗಾಲ, ಮಾರ್ಚ್ ಮತ್ತು ಮೇಯಲ್ಲಿ ಬೇಸಿಗೆ ಕಾಲ, ಜೂನ್ ನಿಂದ ಸೆಪ್ಟೆಂಬರ್ ವರೆಗೆ ವರ್ಷಾಕಾಲ ಹಾಗು ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ವರ್ಷೋತ್ತರ ಕಾಲ. ಕರ್ನಾಟಕದ ಮೂರು ವಲಯಗಳು ಹವಾಮಾನದ ಆಧಾರದ ಮೇಲೆ ಕರ್ನಾಟಕವನ್ನು ಮೂರು ವಲಯಗಳಾಗಿ ವಿಂಗಡಿಸಬಹುದು: ಕರಾವಳಿ, ಉತ್ತರ ಒಳನಾಡು ಹಾಗು, ದಕ್ಷಿಣ ಒಳನಾಡು. ಇವುಗಳಲ್ಲಿ ಕರಾವಳಿ ವಲಯವು ಅತಿ ಹೆಚ್ಚು ಮಳೆಯನ್ನು ಪಡೆಯುತ್ತದೆ. ಕರಾವಳಿ ವಲಯದ ವಾರ್ಷಿಕ ಸರಾಸರಿ ಮಳೆ ೩೬೩೮.೫ಮಿಲಿಮೀಟರ್ (೧೪೩ ಅಂಗುಲ) ರಾಜ್ಯದ ವಾರ್ಷಿಕ ಸರಾಸರಿ ಮಳೆ ೧೧೩೯ಮಿಲಿಮೀಟರ್ (೪೫ ಅಂಗುಲ)ಗಿಂತ ತುಂಬ ಜಾಸ್ತಿಯಿದೆ. ಹವಾಮಾನ ಕರ್ನಾಟಕದ ಅತಿ ಹೆಚ್ಚು ತಾಪಮಾನವಾದ ೪೫.೬°C (೧೧೪ °F) ರಾಯಚೂರಿನಲ್ಲಿ ದಾಖಲಾಯಿತು. ಕರ್ನಾಟಕದ ಅತಿ ಕಡಿಮೆ ತಾಪಮಾನವಾದ ೨.೮°C (೩೭ °F) ಬೀದರಿನಲ್ಲಿ ದಾಖಲಾಯಿತು. ಕರ್ನಾಟಕದ ಸುಮಾರು ೩೮,೭೨೪ ಚ.ಕಿಮೀ. (೧೪,೯೫೧ ಚ.ಮೈ) ಪ್ರದೇಶವು ಅರಣ್ಯದಿಂದ ಆವೃತವಾಗಿದೆ. ಕರ್ನಾಟಕದ ಅರಣ್ಯ ಪ್ರದೇಶದ ಶೇಕಡಾವಾರು ಸಮಸ್ತ ಭಾರತದ ಸರಾಸರಿಯಾದ ೨೩%ಗಿಂತ ಸ್ವಲ್ಪ ಕಡಿಮೆಯಿದೆ ಹಾಗು ರಾಷ್ಟ್ರೀಯ ಅರಣ್ಯ ನೀತಿಯಲ್ಲಿ ವಿಧಿಸಲಾದ ೩೩%ಗಿಂತ ಗಮನಾರ್ಹವಾಗಿ ಕಡಿಮೆಯಿದೆ. ಕರ್ನಾಟಕದಲ್ಲಿ ಮಳೆ ಜಿಲ್ಲೆಗಳು http://www.mrc.gov.in/sites/all/themes/nexus/images/slideshows/Maps_en/Karnataka_State_En.png ಒಟ್ಟು ೩೧ ಜಿಲ್ಲೆಗಳು ಬಾಗಲಕೋಟೆ ಬೆಂಗಳೂರು ಬೆಂಗಳೂರು ಗ್ರಾಮೀಣ ಬೆಳಗಾವಿ ಬಳ್ಳಾರಿ ಬೀದರ ವಿಜಯಪುರ ಚಾಮರಾಜನಗರ ಚಿಕ್ಕಬಳ್ಳಾಪುರ ಚಿಕ್ಕಮಗಳೂರು ಚಿತ್ರದುರ್ಗ ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಗದಗ ಗುಲ್ಬರ್ಗಾ ಹಾಸನ ಹಾವೇರಿ ಕೊಡಗು ಕೋಲಾರ ಕೊಪ್ಪಳ ಮಂಡ್ಯ ಮೈಸೂರು ರಾಯಚೂರು ಶಿವಮೊಗ್ಗ ತುಮಕೂರು ಉಡುಪಿ ಉತ್ತರ ಕನ್ನಡ ರಾಮನಗರ ಯಾದಗಿರಿ ವಿಜಯನಗರ ಪ್ರತಿಯೊಂದು ಜಿಲ್ಲೆಗೆ ಜಿಲ್ಲಾಧಿಕಾರಿ ಇರುತ್ತಾರೆ. ಸಹಾಯಕ ಕಮಿಷನರ್, ತಹಸೀಲುದಾರ, ಶಿರಸ್ತೆದಾರ/ಸಹಾಯಕ ತಹಸೀಲುದಾರ, ಕಂದಾಯ ಪರಿಶೀಲನಾಧಿಕಾರಿ, ಗ್ರಾಮ ಲೆಕ್ಕಿಗ ಮೊದಲಾದ ಹಲವು ಅಧಿಕಾರಿಗಳು ಜಿಲ್ಲಾಧಿಕಾರಿಗೆ ನೆರವಾಗಲು ಜಿಲ್ಲಾ ಮಟ್ಟದಲ್ಲಿ ಮತ್ತು ತಾಲೂಕು ಮಟ್ಟದಲ್ಲಿ ಇರುತ್ತಾರೆ. ಜಿಲ್ಲೆಯನ್ನು ವಿಭಾಗಿಸಿ ತಾಲೂಕುಗಳನ್ನು ರಚಿಸಲಾಗಿದೆ. ತಾಲೂಕನ್ನು ವಿಭಾಗಿಸಿ ಗ್ರಾಮಗಳನ್ನು ರಚಿಸಲಾಗಿದೆ. ಜಿಲ್ಲಾಡಳಿತದಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಗಳು, ಗ್ರಾಮ ಪಂಚಾಯತ್ ಗಳು, ನಗರಪಾಲಿಕೆಗಳು ಪಾಲ್ಗೊಳ್ಳುತ್ತವೆ. ಜನಸಂಖ್ಯೆ 2011ರ ಜನಗಣತಿ ಪ್ರಕಾರ, ಕರ್ನಾಟಕದ ಜನಸಂಖ್ಯೆಯು 6,11,30,704 ಆಗಿದೆ ಹಾಗು ಇದರಲ್ಲಿ ಪುರುಷರ ಸಂಖ್ಯೆ 3,10,57,742 (50.80%) ಹಾಗು ಸ್ತೀಯರ ಸಂಖ್ಯೆ 3,00,72,962 (49.19%) ಅಂದರೆ ಪ್ರತಿ 1000 ಪುರುಷರಿಗೆ 968 ಸ್ತೀಯರು. 2001/2001ರ ಜನಸಂಖ್ಯೆಕ್ಕಿಂತ 2011/2011ರ ಜನಸಂಖ್ಯೆ 15.67%ರಷ್ಟು ಹೆಚ್ಚಿದೆ. ಜನಸಂಖ್ಯಾ ಸಾಂದ್ರತೆಯು 318.8/ಚ.ಕಿಮೀ.ರಷ್ಟಿದೆ ಹಾಗು ನಗರ ಪ್ರದೇಶಗಳಲ್ಲಿ 38.57% ರಷ್ಟು ಜನ ವಾಸಿಸುತ್ತಾರೆ. ಸಾಕ್ಷರತೆಯು 75.6%ರಷ್ಟಿದೆ,ಇದರಲ್ಲಿ ಪುರುಷರ ಸಾಕ್ಷರತೆಯು 82.85% ಮತ್ತು ಸ್ತೀಯರ ಸಾಕ್ಷರತೆಯು 68.13%ರಷ್ಟಿದೆ. ಜನಸಂಖ್ಯೆಯ 83% ಹಿಂದುಗಳು, 11% ಮುಸಲ್ಮಾನರು, 4% ಕ್ರೈಸ್ತರು, 0.78% ಜೈನರು, 0.73% ಬೌದ್ಧರು ಮತ್ತು ಉಳಿದವರು ಅನ್ಯ ಧರ್ಮದವರು. ಕನ್ನಡವು ಕರ್ನಾಟಕದ ಆಡಳಿತ ಭಾಷೆಯಾಗಿದೆ ಹಾಗು ಸುಮಾರು 64.75%ರಷ್ಟು ಜನರ ಮಾತೃಭಾಷೆಯಾಗಿದೆ. 1991ರಲ್ಲಿ ಕರ್ನಾಟಕದ ಭಾಷಾ ಅಲ್ಪಸಂಖ್ಯಾತರಲ್ಲಿ 9.72% ಉರ್ದು, 8.34% ತೆಲುಗು, 5.46% ತಮಿಳು, 3.95% ಮರಾಠಿ, 3.38% ತುಳು, 1.87% ಹಿಂದಿ, 1.78% ಕೊಂಕಣಿ, 1.69% ಮಲಯಾಳಂ ಮತ್ತು 0.25% ಕೊಡವ ತಕ್ ಮಾತಾಡುವ ಜನರಿದ್ದರು.ಕರ್ನಾಟಕದ ಜನನ ದರವು 19.9 (ಪ್ರತಿ ಸಾವಿರ ಜನರಿಗೆ), ಮೃತ್ಯು ದರವು 7.3 (ಪ್ರತಿ ಸಾವಿರ ಜನರಿಗೆ), ಶಿಶು ಮೃತ್ಯು ದರವು 47 (ಪ್ರತಿ ಸಾವಿರ ಜನನಗಳಿಗೆ), ಮಾತೃ ಮೃತ್ಯು (ಜನನ ಸಮಯದಲ್ಲಿ) ದರವು 213 (ಪ್ರತಿ ಲಕ್ಷ ಜನನಗಳಿಗೆ), ಒಟ್ಟು ಸಂತಾನ ದರವು (ಪ್ರತಿ ಮಹಿಳೆಗೆ ಅವಳ ಸಂತಾನೋತ್ಪತ್ತಿ ಕಾಲದಲ್ಲಿ ಹುಟ್ಟುವ ಮಕ್ಕಳ ಸಂಖ್ಯೆ) 2.1 ಆಗಿದೆ. ಕಡೆಯ ಬಾರಿಗೆ ಇಂತಹ ಗಣತಿ ನಡೆದಿದ್ದು 2011ರಲ್ಲಿ. ಭಾರತದ ಒಟ್ಟು 4,37,06,512 (4.37 ಕೋಟಿ) ಜನ ತಮ್ಮ ಮಾತೃಭಾಷೆ ಕನ್ನಡ ಎಂದು ಹೇಳಿಕೊಳ್ಳುತ್ತಾರೆ ಎಂಬುದನ್ನು ಈ ಗಣತಿ ಕಂಡುಕೊಂಡಿತು. ತನ್ನನ್ನು ಹೊರತುಪಡಿಸಿಯೂ, ತನ್ನ ಮಾತೃಭಾಷೆಯೇ ‘ನಮ್ಮದು ಕೂಡ’ ಎಂದು ಹೇಳಿಕೊಳ್ಳುವವರ ಸಂಖ್ಯೆ 4.37 ಕೋಟಿಗಿಂತ ಹೆಚ್ಚು ಎಂಬುದು ಗೊತ್ತಾದಾಗ ಹೆಮ್ಮೆಯಾಗುವುದು ಸಹಜ. 2001ರ ಅಂಕಿ-ಅಂಶಗಳಿಗೆ ಹೋಲಿಸಿದರೆ ಕನ್ನಡ ಮಾತನಾಡುವವರ ಬೆಳವಣಿಗೆ ಪ್ರಮಾಣ ಶೇಕಡ 16ರಷ್ಟು (ನಿಖರವಾಗಿ ಹೇಳಬೇಕೆಂದರೆ, ಅದು ಶೇಕಡ 15.99ರಷ್ಟು). ಇದು ಕೂಡ ಮೇಲ್ನೋಟಕ್ಕೆ ಒಳ್ಳೆಯ ಚಿತ್ರಣವನ್ನೇ ನೀಡುತ್ತದೆ. ಕನ್ನಡ ಮಾತನಾಡುವವರು ಎಂದು ಜನಗಣತಿ ನೀಡಿರುವ ಅಂಕಿ-ಅಂಶಗಳಲ್ಲಿ ಬಡಗ ಭಾಷಿಗರು (1,33,550 ಜನ), ಕುರುಂಬ ಭಾಷಿಗರು (24,189 ಜನ), "ಇತರ ಭಾಷಿಗರು" (30,244 ಜನ) ಕೂಡ ಸೇರಿದ್ದಾರೆ. ಹಾಗೆಯೇ, ಜನಗಣತಿಯು "ಪ್ರಾಕೃತ" (?) ಎಂದು ಕರೆದಿರುವ 12,257 ಜನ ಕೂಡ ಸೇರಿದ್ದಾರೆ. ಇವನ್ನೆಲ್ಲ ಪರಿಗಣಿಸಿದಾಗ, ಕನ್ನಡವನ್ನೇ ಮಾತನಾಡುವವರ ಸಂಖ್ಯೆ 4,35,06,272ಕ್ಕೆ (4.35 ಕೋಟಿ) ಇಳಿಯುತ್ತದೆ. ಶಿಕ್ಷಣ ಕರ್ನಾಟಕದ ವಿಶ್ವವಿದ್ಯಾಲಯಗಳು ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಧಾರವಾಡ ಕೃಷಿ ವಿಶ್ವವಿದ್ಯಾಲಯ, ರಾಯಚೂರು ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ, ಶಿವಮೊಗ್ಗ ತೋಟಗಾರಿಕೆ ವಿಶ್ವವಿದ್ಯಾಲಯ, ಬಾಗಲಕೋಟೆ ಗುಲ್ಬರ್ಗಾ ವಿಶ್ವವಿದ್ಯಾಲಯ, ಗುಲ್ಬರ್ಗಾ ಮಂಗಳೂರು ವಿಶ್ವವಿದ್ಯಾಲಯ, ಮಂಗಳೂರು ಕುವೆಂಪು ವಿಶ್ವವಿದ್ಯಾನಿಲಯ, ಶಿವಮೊಗ್ಗ ಕನ್ನಡ ವಿಶ್ವವಿದ್ಯಾಲಯ, ಹಂಪಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮೈಸೂರು ತುಮಕೂರು ವಿಶ್ವವಿದ್ಯಾಲಯ, ತುಮಕೂರು ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯ, ಬೆಂಗಳೂರು ದಾವಣಗೆರೆ ವಿಶ್ವವಿದ್ಯಾಲಯ, ದಾವಣಗೆರೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ ಕರ್ನಾಟಕ ಪಶು ವೈದ್ಯಕೀಯ,ಮೀನುಗಾರಿಕೆ ವಿಶ್ವವಿದ್ಯಾನಿಲಯ, ಬೀದರ ಕರ್ನಾಟಕ ರಾಜ್ಯ ಸಂಗೀತ ವಿಶ್ವವಿದ್ಯಾಲಯ, ಮೈಸೂರು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಗೋಟಗೊಡಿ, ಹಾವೇರಿ ಜಿಲ್ಲೆ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಬೆಂಗಳೂರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ, ಗದಗ ಕರ್ನಾಟಕದ ಆರ್ಥಿಕತೆ ಕರ್ನಾಟಕ ಭಾರತ ದೇಶದ ಅತ್ಯಂತ ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ರಾಜ್ಯ. ೨೦೦೮-೦೯ರ ಆರ್ಥಿಕ ಬೆಳವಣಿಗೆ ದರದ ಪ್ರಕಾರವಾಗಿ ರಾಜ್ಯದ ಅಭಿವೃದ್ದಿ ದರವು $೫೮.೨೩ರಷ್ಟಿದೆ ಎಂದು ಅಂದಾಜಿಸಲಾಗಿದೆ. ಹಾಗೆಯೇ ತಲಾದಾಯದಲ್ಲಿಯೂ ಅತ್ಯಂತ ವೇಗದ ಬೆಳವಣಿಗೆಯನ್ನು ಕಳೆದೊಂದು ದಶಕದಲ್ಲಿ ಕರ್ನಾಟಕ ರಾಜ್ಯ ದಾಖಲಿಸಿದೆ. ತಲಾದಾಯದ ಜಿಡಿಪಿ ಅಂಕಿ ಅಂಶಗಳ ಅನುಸಾರ ರಾಜ್ಯವು ದೇಶದ ರಾಜ್ಯಗಳಲ್ಲಿ ೬ ನೇ ಸ್ಥಾನದಲ್ಲಿದೆ. ೨೦೦೬ರ ಸೆಪ್ಟೆಂಬರ್ ತಿಂಗಳವರೆಗೆ ಒಟ್ತು ೭೮,೦೯೭ ರೂಪಾಯಿಗಳ ವಿದೇಶಿ ಬಂಡವಾಳ ಹರಿದು ಬಂದಿರುತ್ತದೆ. ೨೦೦೪ರ ಅಂತ್ಯದ ವೇಳೆಗೆ ರಾಜ್ಯದ ನಿರುದ್ಯೋಗ ಪ್ರಮಾಣ ೪.೯೪% ರಷ್ಟಿದ್ದು ಇದೇ ವೇಳೆ ದೇಶದಲ್ಲಿನ ನಿರುದ್ಯೋಗದ ಪ್ರಮಾಣವು ೫.೯೯% ಇದ್ದುದು ಗಮನಾರ್ಹ ಅಂಶ. ಅದೇ ಸಮಯದಲ್ಲಿ ಕರ್ನಾಟಕದ ಹಣದುಬ್ಬರ ದರವೂ ಕೂಡ ರಾಷ್ತ್ರೀಯ ಹಣದುಬ್ಬರ ದರಕ್ಕಿಂತಲೂ ಕಡಿಮೆ ಯಾಗಿತ್ತು. ರಾಷ್ಟ್ರದ ಹಣದುಬ್ಬರ ಪ್ರಮಾಣ ೪.೭% ಇದ್ದರೆ, ರಾಜ್ಯದ ಹಣದುಬ್ಬರ ದರ ೪.೪% ಇತ್ತು. ದೇಶದಲ್ಲಿನ ಬಡತನದ ಅಂದಾಜು ೨೭% ಆಗಿದ್ದರೆ ಕರ್ನಾಟಕದಲ್ಲಿ ಅದು ೧೭% ಆಗಿರುತ್ತದೆ. ರಾಜ್ಯದಲ್ಲಿ ಒಟ್ಟು ೫೬% ದಷ್ಟು ಮಂದಿ ಕೃಷಿಯಾಧಾರಿತ ಉದ್ಯೋಗಸ್ಥರಾಗಿದ್ದು ಒಟ್ತು ೧೨.೩೧ ಮಿಲಿಯನ್ ಹೆಕ್ಟೇರ್ ನಷ್ಟು ಭೂಮಿಯನ್ನು ಕೃಷಿಗಾಗಿ ಬಳಸಲಾಗುತ್ತಿದೆ, ಇದು ರಾಜ್ಯದ ಒಟ್ಟು ಭೂಪ್ರದೇಶದ ೬೪%ರಷ್ಟಾಗುತ್ತದೆ. ಇದರಲ್ಲಿ ಬಹುತೇಕ ಕೃಷಿ ಚಟುವಟಿಕೆಗಳು ಮಾನ್ಸೂನ್ ಮಾರುತ ತರುವ ಮಳೆಯನ್ನವಲಂಬಿಸಿದ್ದರೆ, ೨೬.೫೫ ದಷ್ಟು ಭೂಮಿಯು ಮಾತ್ರ ನೀರಾವರಿ ಸೌಲಭ್ಯವನ್ನು ಹೊಂದಿದೆ. ಕರ್ನಾಟಕದಲ್ಲಿ ಸಾಕಷ್ಟು ಸಾರ್ವಜನಿಕ ಹಾಗೂ ಖಾಸಗಿ ವಲಯದ ಕೈಗಾರಿಕೆಗಳಿದ್ದು ಅವುಗಳಲ್ಲಿ ಕೆಲ ಪ್ರಮುಖವಾದವುಗಳನ್ನು ಹೀಗೆ ಹೆಸರಿಸಬಹುದು: ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್, ಭಾರತ್ ಹೆವ್ವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್, ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್, ಇನ್ಫೋಸಿಸ್ ಮೊದಲಾದವು. ಅಲ್ಲದೆ ಭಾರತೀಯ ಬಾಹ್ಯಾಕಾಶ ಸಂಸ್ಥೆ, ಭಾರತೀಯ ಶಕಿ ಸಂಪನ್ಮೂಲ ಸಂಶೋಧನಾ ಕೇಂದ್ರ, ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಕೇಂದ್ರದ ಪ್ರಧಾನ ಕಛೇರಿಗಳಿರುವುದು ಕರ್ನಾಟಕದ ಬೆಂಗಳೂರಿನಲ್ಲಿ. ಇದಲ್ಲದೆ ಮಂಗಳೂರಿನಲ್ಲಿ ಮಂಗಳೂರು ರಿಫೈನರಿ ಪೆತ್ರೋಕೆಮಿಕಲ್ಸ್ ಲಿಮಿಟೆಡ್ ಎನ್ನುವ ತೈಲೋತ್ಪನ್ನ ಕೈಗಾರಿಕ ಘಟಕವೂ ಕಾರ್ಯ ನಿರ್ವಹಿಸುತ್ತಿದೆ. ಕರ್ನಾಟಕದಲ್ಲಿ ೧೯೮೦ರಿಂದ ಆರಂಭವಾದ ಮಹಿತಿ ತಂತ್ರಜ್ಞಾನ ಉದ್ಯಮ ಇಂದು ಬೃಹತ್ತಾಗಿ ಬೆಳೆದು ನಿಂತಿದೆ. ೨೦೦೭ ರ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಒಟ್ಟು ಸುಮಾರು ೨೦೦೦ ಮಾಹಿತಿ ತಂತ್ರಜ್ಞಾನ ಘಟಕಗಳಿವೆ. ದೇಶದ ಐಟಿ ದಿಗ್ಗಜ ಸಂಸ್ಥೆಗಳೆನಿಸಿದ ಇನ್ಫೋಸಿಸ್, ವಿಪ್ರೋ ಕೂಡ ಕರ್ನಾಟಕದಲ್ಲಿ ತಮ್ಮ ಪ್ರಧಾನ ಕಛೇರಿಯನ್ನು ಹೊಂದಿವೆ. ೨೦೦೬-೦೭ರ ಅಂಕಿ ಅಂಶಗಳ ಅಂದಾಜಿನ ಪ್ರಕಾರ ದೇಶದ ೩೮% ದಷ್ಟು ಮಾಹಿತಿ ತಂತ್ರಜ್ಞಾನ ರಪ್ತು ವಹಿವಾಟು ಕರ್ನಾಟಕದಿಂದ ಆಗಿರುತ್ತದೆ. ಈ ಎಲ್ಲಾ ಬೆಳವಣಿಗೆಗಳಿಂದಾಗಿ ಬೆಂಗಳೂರು "ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ" ಎಂದು ಪ್ರಸಿದ್ಧವಾಗಿದೆ. ಕರ್ನಾಟಕವು ರೇಷ್ಮೆ ಉದ್ಯಮಕ್ಕೂ ಹೆಸರಾಗಿದ್ದು ರಾಜ್ಯದ ಮೈಸೂರ್ ಸಿಲ್ಕ್ ವಿಶ್ವವ್ಯಾಪಿ ಮನ್ನಣೆ ಹೊಂದಿದೆ. ರಾಜ್ಯ ಸರ್ಕಾರ ಇತ್ತೀಚೆಗೆ ಮುದ್ದೇನಹಳ್ಳಿ ಸಮೀಪ "ಸಿಲ್ಕ್ ಸಿಟಿ" ನಿರ್ಮಾಣಕ್ಕಾಗಿ ಸುಮಾರು ೭೦ ಕೋಟಿ ರೂಪಾಯಿಗಳನ್ನ ವಿನಿಯೋಗಿಸಲು ಮುಂದಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿಯು ಸಹ ರಾಜ್ಯವು ಮುಂಚೂಣಿಯಲ್ಲಿದ್ದು ದೇಶದ ೭ ಪ್ರಧಾನ ರಾಷ್ಟ್ರೀಕೃತ ಬ್ಯಾಂಕುಗಳ ಮೂಲ ನೆಲೆ ಇರುವುದು ಕರ್ನಾಟಕದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿವೆ. ಕರ್ನಾಟಕದ ಹಟ್ಟಿ ಚಿನ್ನದ ಗಣಿಯು ದೇಶದಲ್ಲೇ ಅತಿ ಹೆಚ್ಚು ಮತ್ತು ಪ್ರಾಥಮಿಕ ಚಿನ್ನ ಉತ್ಪಾದಿಸುವ ಏಕೈಕ ಚಿನ್ನದ ಗಣಿಯಾಗಿದೆ. ಕರ್ನಾಟಕದಲ್ಲಿ ಜನಿಸಿದ ಬ್ಯಾಂಕುಗಳು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಗಳನ್ನು ಭಾರತದ ಬ್ಯಾಂಕಿಂಗ್ನ ತೊಟ್ಟಿಲು ಅಂತ ಕರೆಯುತ್ತಾರೆ. 1880 ಮತ್ತು 1935 ರ ನಡುವೆ, ಕರಾವಳಿ ಕರ್ನಾಟಕದಲ್ಲಿ 22 ಬ್ಯಾಂಕುಗಳನ್ನು ಸ್ಥಾಪಿಸಲಾಯಿತು, ಅವುಗಳಲ್ಲಿ ಒಂಬತ್ತು ಮಂಗಳೂರು ನಗರದಲ್ಲೇ ಇದ್ದವು. ಕೆನರಾ ಬ್ಯಾಂಕ್ ಸಿಂಡಿಕೇಟ್ ಬ್ಯಾಂಕ್ ಕಾರ್ಪೊರೇಶನ್ ಬ್ಯಾಂಕ್ ವಿಜಯ ಬ್ಯಾಂಕ್ ವೈಶ್ಯ ಬ್ಯಾಂಕ್ ಕರ್ನಾಟಕ ಬ್ಯಾಂಕ್ ರಾಜಕೀಯ ವ್ಯವಸ್ಥೆ ಕರ್ನಾಟಕದ ಶಾಸಕಾಂಗದ ವ್ಯವಸ್ಥೆ ಭಾರತದ ಸಂಸತ್ತಿನ ವ್ಯವಸ್ಥೆಯನ್ನು ಅನುಕರಿಸುತ್ತದೆ. ಕರ್ನಾಟಕ ವಿಧಾನ ಸಭೆ ಮತ್ತು ಕರ್ನಾಟಕ ವಿಧಾನ ಪರಿಷತ್ತು ಕರ್ನಾಟಕ ಸರ್ಕಾರದ ಎರಡು ಮುಖ್ಯ ಮನೆಗಳು. ವಿಧಾನ ಸಭೆಯ ಸದಸ್ಯರು ನೇರ ಚುನಾವಣೆಗಳಲ್ಲಿ ಚುನಾಯಿತರಾದರೆ, ವಿಧಾನ ಪರಿಷತ್ತಿಗೆ ಪರೋಕ್ಷ ಚುನಾವಣೆಗಳು ನಡೆಯುತ್ತವೆ. ವಿಧಾನ ಸಭೆಯ ಸದಸ್ಯರ ಸಂಖ್ಯೆ ೨೨೪. ವಿಧಾನ ಪರಿಷತ್ತಿನ ಸದಸ್ಯರ ಸಂಖ್ಯೆ ೭೫. ವಿಧಾನ ಸಭೆಯ ಸದಸ್ಯತ್ವದ ಗರಿಷ್ಠ ಅವಧಿ ೫ ವರ್ಷಗಳಾಗಿವೆ. ವಿಧಾನ ಪರಿಷತ್ತಿನ ಸದಸ್ಯತ್ವದ ಗರಿಷ್ಠ ಅವಧಿ ೬ ವರ್ಷಗಳಾಗಿವೆ. ಮೊದಲ ವಿಧಾನ ಸಭೆ ೧೯೫೨ ರಿಂದ ೧೯೫೭ರ ವರೆಗೆ ಸೇರಿತ್ತು. ವಿಧಾನ ಸಭೆಯಲ್ಲಿ ಬಹುಮತ ಹೊಂದಿರುವ ರಾಜಕೀಯ ಪಕ್ಷದ ಅಥವಾ ರಾಜಕೀಯ ಪಕ್ಷಗಳ ಒಕ್ಕೂಟದ ನಾಯಕರು ಮುಖ್ಯಮಂತ್ರಿಗಳಾಗಿ ಆರಿಸಲ್ಪಡುತ್ತಾರೆ. ಇದುವರೆಗೆ ಒಟ್ಟು ೨೨ ಮುಖ್ಯಮಂತ್ರಿಗಳನ್ನು ಕರ್ನಾಟಕ ಕಂಡಿದೆ. ಕರ್ನಾಟಕದಲ್ಲಿ ಸಕ್ರಿಯವಾಗಿರುವ ರಾಜಕೀಯ ಪಕ್ಷಗಳಲ್ಲಿ ಕೆಲವೆಂದರೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್(ಕಾಂ), | ಭಾರತೀಯ ಜನತಾ ಪಕ್ಷ | ಕ್ರಾ೦ತಿರ೦ಗ ಕೆಸಿಪಿ, | ಜನತಾ ದಳ(ಜಾತ್ಯತೀತ), ಉತ್ತಮ ಪ್ರಜಾಕೀಯ ಪಾರ್ಟಿ (UPP) ಇತ್ಯಾದಿ. ಕರ್ನಾಟಕದಿಂದ ಲೋಕ ಸಭೆಗೆ ಆಯ್ಕೆ ಆಗುವವರ ಸಂಖ್ಯೆ ೨೮ ಹಾಗು ರಾಜ್ಯ ಸಭೆಗೆ ಆಯ್ಕೆ ಆಗುವವರ ಸಂಖ್ಯೆ ೧೨. ಸ್ವಾಭಾವಿಕ ಪ್ರದೇಶಗಳು ಕರ್ನಾಟಕ ಅನೇಕ ಅಭಯಾರಣ್ಯಗಳ ತವರು. ಇವು ಚಾಮರಾಜನಗರ ಜಿಲ್ಲೆಯ ಬಂಡೀಪುರ ಅಭಯಾರಣ್ಯ, ಬೆಂಗಳೂರು ಜಿಲ್ಲೆಯ ಬನ್ನೇರುಘಟ್ಟ ಅಭಯಾರಣ್ಯ, ಮೈಸೂರು ಮತ್ತು ಕೊಡಗು ಜಿಲ್ಲೆಗಳ ನಾಗರಹೊಳೆ ಅಭಯಾರಣ್ಯ, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕುದುರೆಮುಖ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂಶಿ ಅಭಯಾರಣ್ಯ. ಅನೇಕ ವನ್ಯ ಮೃಗಧಾಮಗಳು ಸಹ ಕರ್ನಾಟಕದಲ್ಲಿ ಇವೆ. ಅಭಿವೃದ್ಧಿ ಪಶು ಸಾಂಗೋಪನೆ ಕರ್ನಾಟಕವು ಹಾಲು ಉತ್ಪಾದನೆಯಲ್ಲಿ ಗಣನೀಯ ಸಾಧನೆ ಮಾಡಿದೆ. ರಾಜ್ಯ ದಲ್ಲಿ ಒಟ್ಟು ೧.೨೫ ಕೋಟಿ ಜಾನುವಾರುಗಳಿವೆ. ಇತ್ತೀಚೆಗೆ ಜಾನುವಾರುಗಳಿಗೆ ಕಾಲುಬಾಯಿ ಜ್ವರದಿಂದಾಗಿ ೧೪,೪೪೧ (೧೯-೨-೨೦೧೪ ಕ್ಕೆ) ಜಾನುವಾರುಗಳು ಸತ್ತಿವೆ; ಲಸಿಕೆ ಹಾಕುವ ಕಾರ್ಯಕ್ರಮ ನಡೆದಿದೆ. ಹಾಲಿನ ಉತ್ಪಾದನೆ ವರ್ಷಕ್ಕೆ ೪೯ ಲಕ್ಷ ಲೀಟರ್ ನಿಂದ ೫೨-೫೩ ಉತ್ಪಾದನೆ ಆಗುತ್ತದೆ. ಸುಮಾರು ೧೫ ಲಕ್ಷ ಲೀಟರ್ ಅಗತ್ಯಕ್ಕಿಂತ ಹೆಚ್ಚು ಉತ್ಪಾದನೆ ಆಗುತ್ತಿದ್ದು, ಸಿಂಗಪುರ, ರಷ್ಯಾ, ಶ್ರೀಲಂಕಾ, ಮ್ಯನ್ಮಾರ್ ಮೊದಲಾದ ದೇಶಗಳಿಗೆ ರಪ್ತು ಮಾಡಲಾಗುತ್ತಿದೆ (19-2-2014 ಹಾಲು ಮಹಾ ಮಂಡಳಿಯ ನಿರ್ದೇಶಕ – ಎಂ. ಎಸ್. ಪ್ರೇಮನಾಥ್ ಬೆಂಗಳೂರು ಸುದ್ದಿಗೋಷ್ಠಿ – ಸುದ್ದಿಮಾಧ್ಯಮ- ಪ್ರಜಾವಾಣಿ). ಐತಿಹಾಸಿಕ ಸ್ಥಳಗಳು ಬಾದಾಮಿ, ಐಹೊಳೆ, ಪಟ್ಟದಕಲ್ಲು ಹಾಸನ ಜಿಲ್ಲೆಯಲ್ಲಿ ಬೇಲೂರು, ಹಳೇಬೀಡು, ಶ್ರವಣಬೆಳಗೊಳ, ಸಕಲೇಶಪುರ ಸಾಗರ(ವರದಹಳ್ಳಿ,ಇಕ್ಕೇರಿ,ಕೆಳದಿ,ಸಿಗಂದೂರು,ಮಾರಿಕಾಂಬಾ ದೇವಸ್ಥಾನ ಸಾಗರ) ಹಂಪೆ ವಿಜಯಪುರ ಮೈಸೂರು ಮಂಡ್ಯಜಿಲ್ಲೆಯಲ್ಲಿ ಶ್ರೀರಂಗಪಟ್ಟಣ, ಮೇಲುಕೋಟೆ, ಶಿವನ ಸಮುದ್ರ, ಆದಿ ಚುಂಚನಗಿರಿ, ಶಿರಡಿ ಸಾಯಿಬಾಬಾ ಮಂದಿರ, ಕೆರೆಸಂತೆ ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಚಿತ್ರದುರ್ಗ ಭದ್ರಾವತಿ ಬೀದರ್ ಮಾಕಿರೆಡ್ಡೀಪಲ್ಲಿ ಬನವಾಸಿ ಮಾನ್ಯಪುರ ಉಡುಪಿಜಿಲ್ಲೆಯಲ್ಲಿ ಅಷ್ಟಮಠಗಳು, ಮಣಿಪಾಲ ದಕ್ಷಿಣ ಕನ್ನಡಯಲ್ಲಿ ಧರ್ಮಸ್ಥಳ, ಕಟೀಲು, ಉಳ್ಳಾಲ ಕೊಡಗುಜಿಲ್ಲೆಯಲ್ಲಿ ರಾಜಾಸೀಟ್, ಭಾಗಮಂಡಲ, ಬೆಂಗಳೂರು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ # ನಂದಿ ಬೆಟ್ಟ, ಭೋಗ ನಂದೀಶ್ವರ ದೇವಸ್ಥಾನ,ಯೋಗ ನಂದೀಶ್ವರ ದೇವಸ್ಥಾನ, ಸಂಸ್ಕೃತಿ ಕರ್ನಾಟಕದ ಕೆಲವು ಜನಪ್ರಿಯ ಸಾಂಸ್ಕೃತಿಕ ಕಲೆಗಳು: ಸಂಗೀತ: ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತ ಪದ್ಧತಿಯಾದ ಕರ್ನಾಟಕ ಸಂಗೀತ ಉಗಮವಾದದ್ದು ಕರ್ನಾಟಕದಲ್ಲಿಯೇ. ಕರ್ನಾಟಕದಲ್ಲಿ ಜನಪ್ರಿಯವಾಗಿರುವ ಇತರ ಸಂಗೀತ ರೂಪಗಳಲ್ಲಿ ಭಾವಗೀತೆಗಳು, ಸುಗಮ ಸಂಗೀತ, ಚಿತ್ರಗೀತೆಗಳು ಸೇರಿವೆ. ನೃತ್ಯ: ಭಾರತದ ಶಾಸ್ತ್ರೀಯ ನೃತ್ಯ ಪದ್ಧತಿಗಳಲ್ಲಿ ಹೆಸರಾದ ಭರತನಾಟ್ಯ ಕರ್ನಾಟಕದಲ್ಲಿ ಜನಪ್ರಿಯ. ಕರ್ನಾಟಕಕ್ಕೆ ವಿಶಿಷ್ಟವಾದ ಒಂದು ನೃತ್ಯಕಲೆ ಯಕ್ಷಗಾನ. ಡೊಳ್ಳು ಕುಣಿತ ಜಾನಪದ ನೃತ್ಯ ಪದ್ಧತಿಗಳಲ್ಲಿ ಒಂದು. ಸಂಸ್ಕೃತಿಯ ಕೇಂದ್ರವಾದ ಕರ್ನಾಟಕ, ಮೈಸೂರು, ಹಳೇಬೀಡು, ಬೇಲೂರು ಮುಂತಾದ ರಮಣೀಯ ತಾಣಗಳಿಗೆ ಮನೆಯಾಗಿದೆ. ಕಲೆ ಬಿದರಿ ಕಲೆ ಸುಮಾರು ೧೪ನೆ ಶತಮಾನ್ ದಲ್ಲಿ ಬೀದರ್ ಜಿಲ್ಲೆಯಲ್ಲಿ ಜನಿಸಿದ ಪ್ರಾಚಿನ ಕಲೆ ಯಲ್ಲಿ ಒಂದು. ಇವತ್ತಿಗೂ ಈ ಕಲೆಯ ಬೇಡಿಕೆ ದೇಶ-ವಿದೇಶದಲ್ಲಿ ತುಂಬಾ ಇದೆ. ಇತ್ತೀಚಿನ ಕಾಮ್ಮೊನ್ ವೆಅಲ್ಥ್ ಗೇಮ್ಸ್ ನ ಅತಿ ಪ್ರಮುಖ ಗಣ್ಯರಿಗೆ ಭಾರತ ದೇಶದಿಂದ ಬಿದರಿ ಕಲೆ ಉಡುಗೊರೆ ಕೊಡಲಾಗಿತ್ತು. ಮತ್ತೆ ಬಿದರಿ ಕಲೆಯ ಊಡುಗೋರೆ USA ಊ ಎಸ್ ನ ವೈಟ್ ಹೌಸ್ನಲ್ಲಿ ಕೂಡ ಇಡಲಾಗಿದೆ. ಇವು ಬಿದರಿ ಕಲೆಯ ಕೆಲವು ಉಪಾದಿಗಳು.ಇತ್ತೀಚೆಗೆ ಬಿದರಿಕಲೆಗೆ ಹೊಸ ಆಯಾಮಗಳನ್ನು ನೀಡಲಾಗಿದೆ. ಬುದ್ಧನ ರೂಪ ವನ್ನು ಹಿಂದಿ ಗಿಂತಲೂ ವಿಭಿನ್ನವಾಗಿ ಗ್ರಹಿಸಿದ ಶಿಲ್ಪಗಳು ಸಮಕಾಲೀನ ಕುಶಲಿಗಳಿಂದ ಮೂಡಿ ಬಂದಿವೆ. ಧಾರ್ಮಿಕ ಕ್ಷೇತ್ರಗಳು ಕರ್ನಾಟಕ: ಕೆರೆಸಂತೆ ಶ್ರೀ ಮಹಾಲಕ್ಷ್ಮೀ ಲಕ್ಕಮ್ಮ ದೇವಿ ದೇವಸ್ಥಾನ . ಸಾಗರ, ಗಾಣಗಾಪುರ, ಧರ್ಮಸ್ಥಳ, ಶೃಂಗೇರಿ, ಉಡುಪಿ, ಮೇಲುಕೋಟೆ, ಬಸವಕಲ್ಯಾಣ, ಆದಿಚುಂಚನಗಿರಿ, ಬಾಳೆ ಹೊನ್ನೂರು, ಹೊರನಾಡು, ಕಟೀಲು, ಗೋಕರ್ಣ, ಸಿದ್ಧಗಂಗಾ ಮಠ, ದ್ಯಾವನುರು, ಕೊಲ್ಲೂರು, ಮುರುಡೇಶ್ವರ, ಸಿರ್ಸಿ, ಕುಕ್ಕೆ ಸುಬ್ರಹ್ಮಣ್ಯ, ಕೂಡಲ ಸಂಗಮ, ಬನವಾಸಿ, ಸವದತ್ತಿ, ಗೋಲಗುಮ್ಮಟ, ಬಾದಾಮಿ, ಗುರಗುಂಜಿ, ಚಾಮುಂಡಿ ಬೆಟ್ಟ, ನಂಜನಗೂಡು, ನ೦ಬಿನಾಯಕನಹಳ್ಳಿ, ವೈದ್ಯನಾಥೇಶ್ವರ-ವೈದ್ಯನಾಥಪುರ, ಶ್ರೀ ವೈದ್ಯನಾಥೇಶ್ವರ ಸ್ವಾಮಿ, ಅರೆಯೂರು, ತುಮಕೂರು ಉಗ್ರ ನರಸಿಂಹ ಸ್ವಾಮಿ, ಮದ್ದೂರಮ್ಮ-ಮದ್ದೂರು. ಬನಶಂಕರಿ ದೇವಿ – ಬನಶಂಕರಿ,ಝರಣಿ ನೃಸಿಂಹಸ್ವಾಮಿ – ಬೀದರ್, ಗುರುದ್ವಾರ ನಾನಕ್ ಝೀರಾ ಸಾಹಿಬ್ – ಬೀದರ್, ಖಿಳೆಗಾಂವ ಬಸವಣ್ಣ, ಮೂಡಬೂಳ ವೇಣುಗೋಪಾಲ ಸ್ವಾಮಿ ದೇವಾಲಯ, ಗುಲ್ಬರ್ಗಾದ ಕೋಟೆ, ಶರಣಬಸವೇಶ್ವರ ದೇವಾಲಯ, ಬಂದೇನವಾಜ್ ದರ್ಗ, ಬುದ್ಧವಿಹಾರ, ದೇವರಗುಡ್ಡ, ಮೈಲಾರ, ಮಲೆಮಹದೇಶ್ವರ, ನಂಜವದೂತ ಮಠ ಸಿರಾ ಯಲಗೂರು, ಹುಲಿಗಿಯ ಹುಲಿಗೆಮ್ಮ ದೇವಿ. ಇಟಗಿಯ ಭಿಮಕ್ಕನ ಗುಡಿ, ಬೆಂಗಳೂರಿನ ಮೂಡಲಪಾಳ್ಯದ ಭತ್ತಿಲಿಂಗೇಶ್ದವರ ದೇವಾಲಯ ಹಲವು ಧಾರ್ಮಿಕ ಕ್ಷೇತ್ರಗಳಿಂದ ಕೂಡಿದೆ.ಕೆಂಕೆರೆ ಪುರದಮಠದ ಶ್ರೀ ಚನ್ನಬಸವೇಶ್ವರ ದೇವಾಲಯ, ಭಾಷೆಗಳು ಕರ್ನಾಟಕದಲ್ಲಿ ಅನೇಕ ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. ಮುಖ್ಯ ಭಾಷೆಗಳೆ೦ದರೆ ಕನ್ನಡ ತುಳು ಬ್ಯಾರಿ ಭಾಷೆ ಅರೆಭಾಷೆ ಕನ್ನಡ (ಗೌಡ ಕನ್ನಡ) ಕೊಡವ ತಕ್ಕ್ ಕೊಂಕಣಿ ಹವ್ಯಕ ಭಾಷೆ, ಹವಿಗನ್ನಡ ಬಣಜಾರ ಭಾಷೆ (ಲಂಬಾಣಿ) ಉರ್ದೂ ಇತರೆ ಕಡಿಮೆ ಜನ ಬಳಸುವ ಭಾಷೆಗಳು. ತಮಿಳು ತೆಲಗು ಮಲೆಯಾಳಂ ಮಾರವಾಡಿ (ರಾಜಸ್ತಾನ) ಮುಂತಾದುವು. ಪ್ರಮುಖರು ಸಂಗೊಳ್ಳಿ ರಾಯಣ್ಣ ಹಕ್ಕ ಬುಕ್ಕ ಪುರಂದರದಾಸ ಕನಕದಾಸ ಬಸವಣ್ಣ ಮಧ್ವಾಚಾರ್ಯ ಕೆಂಪೇಗೌಡ, ಕೃಷ್ಣದೇವರಾಯ ಜಯಚಾಮರಾಜೇಂದ್ರ ಒಡೆಯರ್ ನಾಲ್ವಡಿ ಕೃಷ್ಣರಾಜ ಒಡೆಯರ್ ಶಿಶುನಾಳ ಶರೀಫ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಎಸ್.ನಿಜಲಿಂಗಪ್ಪ ಬಿ.ಡಿ.ಜತ್ತಿ ಎಸ್.ಆರ್.ಕಂಠಿ ಅ.ನ.ಕೃಷ್ಣರಾಯ ಕುವೆಂಪು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಆಲೂರು ವೆಂಕಟರಾಯರು ಶಿವರಾಮ ಕಾರಂತ ವಿನಾಯಕ ಕೃಷ್ಣ ಗೋಕಾಕ ಡಾ. ದೇಜಗೌ ಡಾ.ಚಂದ್ರಶೇಖರ ಕಂಬಾರ ಯು.ಆರ್.ಅನಂತಮೂರ್ತಿ ಪೂರ್ಣಚಂದ್ರತೇಜಸ್ವಿ ಎಸ್.ಎಲ್. ಭೈರಪ್ಪ ದ.ರಾ.ಬೇಂದ್ರೆ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಜಿ.ಎಸ್. ಶಿವರುದ್ರಪ್ಪ ಪಂಜೆ ಮಂಗೇಶರಾಯ್ ಡಿ.ವಿ.ಗುಂಡಪ್ಪ ಚಿದಾನಂದ ಮೂರ್ತಿ ಸೂರ್ಯನಾಥ ಕಾಮತ್ ಡಿ. ದೇವರಾಜ ಅರಸ್ ಅಕ್ಕಮಹಾದೇವಿ ಕಿತ್ತೂರು ರಾಣಿ ಚೆನ್ನಮ್ಮ ಒನಕೆ ಓಬವ್ವ ಸಂಗೊಳ್ಳಿ ರಾಯಣ್ಣ ಕಾರ್ನಾಡ್ ಸದಾಶಿವ ರಾವ್ ಡಾ.ರಾಜ್ ಕುಮಾರ್ ಡಾ. ವಿಷ್ಣುವರ್ಧನ್ ರಾಜಾರಾಮಣ್ಣ ಯು. ಆರ್. ರಾವ್ ಸಿ. ಎನ್. ಆರ್. ರಾವ್ ಎನ್ ಆರ್ ನಾರಾಯಣ ಮೂರ್ತಿ, ಸವಾಯಿ ಗಂಧರ್ವ ಭೀಮಸೇನ ಜೋಶಿ ಗಂಗೂಬಾಯಿ ಹಾನಗಲ್ ಜಿ.ವೆಂಕಟಸುಬ್ಬಯ್ಯ ಕೆ.ಎಸ್.ನರಸಿಂಹಸ್ವಾಮಿ, ಕೆ.ಎಸ್.ನಿಸಾರ್ ಅಹಮದ್ ತ್ರಿವೇಣಿ ದೇವನೂರು ಮಹಾದೇವ ನಿಟ್ಟೆ ಸಂತೋಷ್‌ ಹೆಗ್ಡೆ ಕಾಗೋಡು ತಿಮ್ಮಪ್ಪ, ಚನ್ನವೀರ ಕಣವಿ ಪಾಟೀಲ ಪುಟ್ಟಪ್ಪ ಶಂಕರ್ ನಾಗ್ ಬಿ.ಎಂ.ಶ್ರೀಕಂಠಯ್ಯ ವೀರೇಂದ್ರ ಹೆಗ್ಗಡೆ ಟಿಪ್ಪು ಸುಲ್ತಾನ್ ರಾಜಕಾರಣದಲ್ಲಿ ಪ್ರಮುಖರು ಕೆಂಗಲ್ ಹನುಮಂತಯ್ಯ ಹೆಚ್.ಡಿ.ದೇವೇಗೌಡ ದೇವರಾಜ್ ಅರಸ್ ಎಸ್. ಬಂಗಾರಪ್ಪ ರಾಮಕೃಷ್ಣ ಹೆಗಡೆ ಹೆಚ್.ಡಿ.ಕುಮಾರಸ್ವಾಮಿ ಸಿದ್ದರಾಮಯ್ಯ ಬಿ.ಎಸ್. ಯಡಿಯೂರಪ್ಪ ಬಸವರಾಜ ಬೊಮ್ಮಾಯಿ ಪ್ರವಾಸೋದ್ಯಮ ಕರ್ನಾಟಕದಲ್ಲಿ ನೈಸರ್ಗಿಕ ಸೌಂದರ್ಯಯುಕ್ತ ಪ್ರದೇಶಗಳು, ಹಾಗು ಐತಿಹಾಸಿಕ ಸ್ಥಳಗಳು ಪ್ರವಾಸೋದ್ಯಮವನ್ನು ಒದಗಿಸುತ್ತವೆ. ಮುಳ್ಳಯ್ಯನಗಿರಿ ಚಿತ್ರಾವಳಿ ಈ ಲೇಖನಗಳನ್ನೂ ನೋಡಿ ಕರ್ನಾಟಕದ ಮುಖ್ಯಮಂತ್ರಿಗಳು ಕರ್ನಾಟಕದ ಜಿಲ್ಲೆಗಳು ಕನ್ನಡ ನೆಲದಲ್ಲಿ ಗಾಂಧಿ ಕರ್ನಾಟಕ ಸರ್ಕಾರ ಕರ್ನಾಟಕದಲ್ಲಿ ಕೃಷಿ ಹೊರಕೊಂಡಿಗಳು ಕನಾ೯ಟಕ ಸಕಾ೯ರದ ಅಧಿಕೃತ ಜಾಲತಾಣ ಕನಾ೯ಟಕ ಗೆಜೆಟ್ ಇಲಾಖೆಯು ಹೊರತಂದಿರುವ ಕನಾ೯ಟಕ ಕೈಪಿಡಿ (ಆಂಗ್ಲ ಆವೃತ್ತಿ) ಇತ್ತೀಚಿನ ಕನಾ೯ಟಕ ಗೆಜೆಟ್ ಪತ್ರಿಕೆ-"ಕನಾ೯ಟಕ ರಾಜ್ಯಪತ್ರ" ಕರ್ನಾಟಕದ ಬಗ್ಗೆ ಮಾಹಿತಿ- ಖಾಸಗಿ ತಾಣ ಅಗ್ರಸ್ಥಾನದಲ್ಲಿ ಕರ್ನಾಟಕ: 23 ಜುಲೈ 2018 ಕನ್ನಡವಡೆಂ ಜ್ಞಾನದ ಭಾಷೆ ; ಎನ್ ಶ್ರೀದೇವಿ ಉಲ್ಲೇಖಗಳು ಕರ್ನಾಟಕ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
3820
https://kn.wikipedia.org/wiki/%E0%B2%A6%E0%B3%8D%E0%B2%B5%E0%B3%80%E0%B2%AA%20%28%E0%B2%9A%E0%B2%B2%E0%B2%A8%E0%B2%9A%E0%B2%BF%E0%B2%A4%E0%B3%8D%E0%B2%B0%29
ದ್ವೀಪ (ಚಲನಚಿತ್ರ)
"ದ್ವೀಪ"ದ ನಿರ್ಮಾಪಕಿ ದಿವಂಗತ ಅಭಿನೇತ್ರಿ ಸೌಂದರ್ಯ. ಅವರು ಇದರಲ್ಲಿ ನಟಿಸಿ ಅಧ್ಬುತವಾದ ಅಭಿನಯವನ್ನೂ ನೀಡಿದ್ದಾರೆ. ಇದು ಪರಿಸರ-ಸಂವೇದನಾಶೀಲ ಲೇಖಕ [ನಾ.ಡಿಸೋಜಾ]ರವರ ಅದೇ ಹೆಸರಿನ ಕಿರು ಕಾದಂಬರಿ ಆಧಾರಿತವತವಾದರೂ,[ಗಿರೀಶ್ ಕಾಸರವಳ್ಳಿ|ಕಾಸರವಳ್ಳಿಯವರು]ಕಥೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದು, ಮುಖ್ಯವಾಗಿ ಅಂತ್ಯವನ್ನು ಬದಲಾಯಿಸಿದ್ದು, ಅದರಿಂದ ಇಡೀ ಕಥೆಗೇ ಒಂದು ಹೊಸ ನೋಟ ಪ್ರಾಪ್ತವಾಗಿದೆ. ಹೊರಗಿನ ಸಂಪರ್ಕಗಳು ದ್ವೀಪ ಕೃತಿ ಅಂತರಜಾಲದಲ್ಲಿ ಕನ್ನಡ ಸಿನೆಮಾ
3827
https://kn.wikipedia.org/wiki/%E0%B2%AE%E0%B2%B8%E0%B2%BE%E0%B2%AF%E0%B2%BF%20%E0%B2%AE%E0%B2%BE%E0%B2%B0%E0%B2%BE
ಮಸಾಯಿ ಮಾರಾ
ಮಸಾಯಿ ಮಾರಾ ಆಫ್ರಿಕಾದ ಕೀನ್ಯಾ ದೇಶದ ಒಂದು ರಾಷ್ಟ್ರೀಯ ಉದ್ಯಾನವನ. ಮಧ್ಯ ಆಫ್ರಿಕಾದ ತಾಂಜೇನಿಯದ ಸೆರೆಂಗೆಟಿ ಅಭಯಾರಣ್ಯದ ಉತ್ತರಭಾಗದಲ್ಲಿ ವಿಶಾಲವಾಗಿ ೩೨೦ ಚದರ ಕಿಲೋಮೀಟರ್ ಪ್ರದೇಶದಲ್ಲಿ ಮುಖ್ಯವಾಗಿ ಹುಲ್ಲುಗಾವಲಿನಂತೆ ಹರಡಿರುವ ಇದು ಇಲ್ಲಿನ ಮಸಾಯಿ ಬುಡಕಟ್ಟು ಮತ್ತು ಮಾರ ನದಿಗಳಿಂದ ತನ್ನ ಹೆಸರನ್ನು ಪಡೆದಿದೆ. ಇಲ್ಲಿನ ವನ್ಯಜೀವಿ ವೈವಿಧ್ಯದಲ್ಲಿ ವಾರ್ಷಿಕವಾಗಿ (ಸೆಪ್ಟೆಂಬರ ಮತ್ತು ಅಕ್ಟೋಬರ ಮಾಸಗಳಲ್ಲಿ) ನೆಡೆಯುವ ಮಹೀ ಮೃಗದ (ವೈಲ್ಡ್ ಬೀಸ್ಟ್) ವಲಸೆಯ ದೃಶ್ಯ ಅತ್ಯಂತ ರೋಚಕವಾದುದು. ಆಫ್ರಿಕಾದಲ್ಲಿ ಅತಿ ಹೆಚ್ಚು ಸಿಂಹಗಳನ್ನು ಹೊಂದಿದ ಪ್ರದೇಶವಾಗಿಯೂ ಇದು ಪ್ರಸಿದ್ಧ ವಾಗಿದೆ. ಸಿಂಹಗಳಲ್ಲದೆ ಚಿರತೆ, ಕಪ್ಪು ಘೇಂಡಾ ಮೃಗ, ನೀರು ಕುದುರೆ, ಜಿರಾಫೆ, ಜೀಬ್ರಾ , ಆನೆ, ಕಿರುಬಾ ಮತ್ತು ಕಾಡೆಮ್ಮೆ ಗಳು ಇಲ್ಲಿ ಜೀವಿಸುತ್ತವೆ. ಇದಲ್ಲದೇ ಹತ್ತಾರು ಬಗೆಯ ಜಿಂಕೆಗಳೂ ಮತ್ತು ೪೫೦ಕ್ಕೂ ಹೆಚ್ಚು ಪಕ್ಷಿಸಂಕುಲಗಳೂ ನೆಲೆಸಿವೆ. ರಾಷ್ಟ್ರೀಯ ಉದ್ಯಾನಗಳು ಕೀನ್ಯಾ
3828
https://kn.wikipedia.org/wiki/%E0%B2%9C%E0%B2%BE%E0%B2%9D%E0%B3%8D%20%E0%B2%B8%E0%B2%82%E0%B2%97%E0%B3%80%E0%B2%A4
ಜಾಝ್ ಸಂಗೀತ
ಜಾಝ್ ಸಂಗೀತ ಪಾಶ್ಚಾತ್ಯ ಸಂಗೀತ ಪ್ರಕಾರಗಳಲ್ಲೊಂದು. ಅಮೇರಿಕ ಸಂಯುಕ್ತ ಸಂಸ್ಥಾನಗಳಿಂದ ಹೊರ ಹೊಮ್ಮಿದ ಮೊಟ್ಟಮೊದಲ ಕಲಾ ಶೈಲಿಯಾಗಿ ಜನಮನ್ನಣೆಯನ್ನು ಗಳಿಸಿದೆ. ಪಶ್ಚಿಮ ಆಫ್ರಿಕಾದ ಸಂಸ್ಕೃತಿ ಮತ್ತು ಸಂಗೀತಾಭಿವ್ಯಕ್ತಿಯಲ್ಲಿ ಬೇರುಗಳನ್ನು ಹೊಂದಿರುವ ಜಾಝ್ ಶೈಲಿಯು ಆಫ್ರಿಕನ್ ಅಮೇರಿಕನ್ ಸಂಗೀತ ಶೈಲಿಯ ಬ್ಲೂಸ್ ಮತ್ತು ರಾಗ್ಯ್ ಗಳಲ್ಲದೇ ಐರೋಪ್ಯರ ಸೈನ್ಯ ಸಂಗೀತದಲ್ಲೂ ಪ್ರಚಲಿತವಾಗಿದೆ. ಇಪ್ಪತ್ತನೇ ಶತಮಾನದಲ್ಲಿ ಅಮೇರಿಕದ ಆಫ್ರಿಕನ್ ಸಮಾಜದಿಂದ ಉಗಮಿಸಿ ೧೯೨೦ರ ಸುಮಾರಿಗೆ ಪ್ರಪಂಚದಾದ್ಯಂತ ಪ್ರಸಿದ್ದವಾಯಿತು. ಜಾಝ್ ಸಂಗೀತದ ಛಾಪು ಪ್ರಪಂಚದಾದ್ಯಂತ ಹಲವಾರು ಸಂಗೀತಗಳ ಮೇಲಾಗಿದೆ. ಸಂಗೀತ
3829
https://kn.wikipedia.org/wiki/%E0%B2%B8%E0%B3%8D%E0%B2%95%E0%B3%8D%E0%B2%AF%E0%B2%BE%E0%B2%82%E0%B2%A1%E0%B2%BF%E0%B2%A8%E0%B3%87%E0%B2%B5%E0%B2%BF%E0%B2%AF
ಸ್ಕ್ಯಾಂಡಿನೇವಿಯ
ಸ್ಕ್ಯಾಂಡಿನೇವಿಯ ಯುರೋಪ್ ಖಂಡದ ಉತ್ತರ ಭಾಗದಲ್ಲಿನ ಸ್ಕ್ಯಾಂಡಿನೇವಿಯ ದ್ವೀಪಕಲ್ಪದ ಸುತ್ತಮುತ್ತಲಿನ ಪ್ರದೇಶ. ಐತಿಹಾಸಿಕವಾಗಿ ನಾರ್ವೆ, ಡೆನ್ಮಾರ್ಕ್ ಮತ್ತು ಸ್ವೀಡನ್ ದೇಶಗಳು ಈ ಪ್ರದೇಶಕ್ಕೆ ಸೇರುತ್ತವೆ. ಕೆಲವೊಮ್ಮೆ ಫಿನ್ಲ್ಯಾಂಡ್ ಕೂಡ ಇದಕ್ಕೆ ಸೇರಿಸಲಾಗುತ್ತದೆ. ವಿರಳವಾಗಿ ಐಸ್ಲ್ಯಾಂಡ್ ಕೂಡ ಸ್ಕ್ಯಾಂಡಿನೇವಿಯದ ಭಾಗವೆಂದು ಭಾವಿಸಲಾಗುತ್ತದೆ. ಮಾನವಿಕ, ಸಾಂಸ್ಕøತಿಕ ಹಾಗೂ ಭಾಷೆಯ ಆಧಾರದ ಮೇಲೆ ಫೆರೋ ದ್ವೀಪಗಳನ್ನು ಈ ಗುಂಪಿಗೆ ಸೇರಿಸಲಾಗಿದೆ. ಈಚೆಗೆ ನಾರ್ಡೆನ್ ಎಂಬ ಪದವನ್ನು ಸ್ಕ್ಯಾಂಡಿನೇವಿಯನ್ ಎಂಬುದಕ್ಕೆ ಪರ್ಯಾಯವಾಗಿ ಬಳಸಲಾಗುತ್ತಿದೆ. ಡೆನ್ಮಾರ್ಕ್, ಫಿನ್‍ಲೆಂಡ್, ಐಸ್‍ಲೆಂಡ್, ನಾರ್ವೆ ಮತ್ತು ಸ್ವೀಡನ್‍ಗಳದು ಒಂದು ಗುಂಪು. ಇವು ಇತರ ಯುರೋಪಿನ ರಾಷ್ಟ್ರಗಳಿಗಿಂತ ಭಿನ್ನ. ಸ್ಕ್ಯಾಂಡಿನೇವಿಯ ಪ್ರದೇಶ ಹೆಸರಿನ ಮೂಲ ಸ್ಕ್ಯಾಂಡಿನೇವಿಯ ಎಂಬ ಶಬ್ದವು ಬಹುಶಃ ಪುರಾತನ ರೋಮನ್ನರು ಬಳಸಿದ ಸ್ಕ್ಯಾಂಡಿಯ ಎಂಬ ಶಬ್ದದಿಂದ ಬಂದದ್ದು. ಬಾಲ್ಟಿಕ್ ಮತ್ತು ಉತ್ತರ ಸಮುದ್ರದ ಪ್ರದೇಶವನ್ನು ಇವರು ಸ್ಕ್ಯಾಂಡಿಯ ಎಂದು ಕರೆದರು. 79ರಲ್ಲಿ ರೋಮನ್ ಬರೆಹಗಾರ ಪ್ಲಿನಿ ಈ ಪ್ರದೇಶವನ್ನು ಸ್ಕ್ಯಾಂಡಿನೇವಿಯ ಎಂದು ಕರೆದ. ಅನಂತರ ಟಾಲೆಮಿ ಇದನ್ನು ಸ್ಕಂಡಿಯಾಯ್ ನೇಸರ್ ಎಂದು ಕರೆದ. ಗ್ರೀಕ್ ಭಾಷೆಯಲ್ಲಿ ನೇಸರ್ ಎಂದರೆ ದ್ವೀಪ. ಮಧ್ಯಯುಗದಲ್ಲಿ ಲ್ಯಾಟಿನ್ ವಿದ್ವಾಂಸರು ಈ ಪ್ರದೇಶವನ್ನು ಸ್ಕ್ಯಾಡಿನೇವಿಯ ಎಂದು ಕರೆದರು. ದಕ್ಷಿಣ ಸ್ವೀಡನ್ನಿನ ಸ್ಕೇನ್ ಎಂಬ ಸ್ಥಳದ ಹೆಸರಿನಿಂದ ಸ್ಕ್ಯಾಂಡಿನೇವಿಯ ಎಂಬ ಹೆಸರು ಬಂತೆಂಬುದಾಗಿ ಕೆಲವು ಸಂಶೋಧಕರ ಮತ. ವಿಸ್ತೀರ್ಣ ಸ್ಕ್ಯಾಂಡಿನೇವಿಯ ಪರ್ಯಾಯ ದ್ವೀಪ. ಉತ್ತರದಲ್ಲಿ ಬೇರೆಂಟ್ ಸಮುದ್ರ, ಪಶ್ಚಿಮದಲ್ಲಿ ನಾರ್ವೇಜಿಯನ್ ಸಮುದ್ರ ಇವೆ. ದಕ್ಷಿಣದಲ್ಲಿ ಡೆನ್ಮಾರ್ಕ್‍ನ್ನು ಉತ್ತರ ಸಮುದ್ರ ಬೇರ್ಪಡಿಸುತ್ತದೆ. ಪೂರ್ವದಲ್ಲಿ ಫಿನ್‍ಲೆಂಡ್‍ನ್ನು ಬಾಲ್ಟಿಕ್ ಸಮುದ್ರ ಹಾಗೂ ಬೊಥನೀಯ ಕೊಲ್ಲಿ ಪ್ರತ್ಯೇಕಿಸಿವೆ. ನಾರ್ವೆಯ ಪಶ್ಚಿಮದಲ್ಲಿ ಫೆರೋದ್ವೀಪಗಳು ಹಾಗೂ ವಾಯವ್ಯದಲ್ಲಿ ಐಸ್‍ಲೆಂಡ್, ಗ್ರೀನ್‍ಲೆಂಡ್‍ಗಳಿವೆ. ನಾರ್ವೆ: ಉ.ಅ. 57057| ದಿಂದ 77011| ಅಕ್ಷಾಂಶಗಳು ಮತ್ತು ಪೂ.ರೇ. 04030| - 31010| ನಡುವೆ ಹಬ್ಬಿದೆ. ಇದರ ವಿಸ್ತೀರ್ಣ 3,23,895 ಚ.ಕಿಮೀ. ಸ್ವೀಡನ್ : ಉ.ಅ. 55020| — 69005| ಹಾಗೂ ಪೂ.ರೇ. 110 — 24010| ನಡುವೆ ಇದೆ. ವಿಸ್ತೀರ್ಣ 4,49,793 ಚ.ಕಿಮೀ. ಸ್ಕ್ಯಾಂಡಿನೇವಿಯ ಪ್ರದೇಶದ ಅತ್ಯಂತ ದೊಡ್ಡ ದೇಶ. ಯುರೋಪಿನಲ್ಲಿ ಇದು 4ನೆಯ ದೊಡ್ಡ ದೇಶ. ಫಿನ್‍ಲೆಂಡ್ : ಉ.ಅ. 59030| - 70005| ಹಾಗೂ ಪೂ.ರೇ. 19007| — 31035| ನಡುವೆ ಇದೆ. ಇದರ ವಿಸ್ತೀರ್ಣ 3,38,000 ಚ.ಕಿಮೀ. ಐಸ್‍ಲೆಂಡ್ : ಉ.ಅ. 63025| — 66032| ಹಾಗೂ ಪ.ರೇ. 13030| — 24030| ನಡುವೆ ಇದೆ. ವಿಸ್ತೀರ್ಣ 1,02,846 ಚ.ಕಿಮೀ. ಡೆನ್ಮಾರ್ಕ್: ಸ್ಕ್ಯಾಂಡಿನೇವಿಯನ್ ರಾಷ್ಟ್ರಗಳಲ್ಲಿ ಅತ್ಯಂತ ಚಿಕ್ಕದಾದ ದೇಶ. ಇದು ಉ.ಅ. 54034| — 57045| ಪ.ರೇ. 8005| — 15012| ಇದೆ. ಇದು ಗ್ರೀನ್‍ಲೆಂಡ್ ಮತ್ತು ಫೆರೋ ದ್ವೀಪಗಳನ್ನು ಹೊಂದಿದೆ. ಪ್ರಾಕೃತಿಕ ವಿಭಾಗಗಳು ಭೂರಚನೆಯ ಆಧಾರದ ಮೇಲೆ ಸ್ಕ್ಯಾಂಡಿನೇವಿಯದಲ್ಲಿ ಎರಡು ಪ್ರಾಕೃತಿಕ ವಿಭಾಗಗಳಿವೆ. 1. ಸ್ಕ್ಯಾಂಡಿನೇವಿಯದ ಪರ್ವತಗಳು : ಇದು ನಾರ್ವೆ, ಸ್ವೀಡನ್, ಫಿನ್‍ಲೆಂಡ್ ಮತ್ತು ಐಸ್‍ಲೆಂಡ್‍ಗಳನ್ನು ಒಳಗೊಂಡಿದೆ. ಇದು ಪುರಾತನವಾದ ಕಠಿಣ ಶಿಲೆಗಳಿಂದ ನಿರ್ಮಿತವಾಗಿದೆ. ಹೆಚ್ಚು ಏರು-ತಗ್ಗುಗಳಿಂದ ಕೂಡಿದೆ. ನಾರ್ವೆಯ ತೀರದಲ್ಲಿ ಕಡಿದಾದ ಇಳಿಜಾರಿದೆ. ಆದರೆ ಬಾಲ್ಟಿಕ್ ಸಮುದ್ರದ ಕಡೆಗೆ ಸ್ವೀಡನ್ನಿನಲ್ಲಿ ಇಳಿಜಾರು ಅಷ್ಟು ಕಡಿದಾಗಿಲ್ಲ. 2. ಪೂರ್ವದ ಮೈದಾನ : ಇದು ದಕ್ಷಿಣ ಪೂರ್ವ ಸ್ವೀಡನ್‍ನಲ್ಲಿ ಹಬ್ಬಿದೆ, ಡೆನ್ಮಾರ್ಕ್‍ನಲ್ಲೂ ಮುಂದುವರಿದಿದೆ. ಇದು ಹಿಮನದಿಯ ಪ್ರಕ್ರಿಯೆಯಿಂದ ರೂಪಿತವಾದದ್ದು. ಸ್ಕ್ಯಾಂಡಿನೇವಿಯನ್ ಹಿಮ ಹಾಳೆ : ಇದು ಪ್ಲೀಸ್ಟೋಸೀನ್ ಹಿಮಯುಗದಲ್ಲಿ ರಚನೆಯಾದ ಒಂದು ದೊಡ್ಡ ಹಿಮಹಾಳೆ. ಇದು ಯುರೋಪಿನ ಬಹುಪಾಲು ಪ್ರದೇಶವನ್ನು ಆಕ್ರಮಿಸಿತ್ತು. ಈ ಹಿಮಯುಗ ಸು. 10,000 ವರ್ಷಗಳ ಹಿಂದೆ ಕೊನೆಗೊಂಡಿತು. ಸ್ಕ್ಯಾಂಡಿನೇವಿಯದ ಹಿಮಹಾಳೆ ಸು. ಉ.ಅ. 480 ವರೆಗೆ ವಿಸ್ತರಿಸಿದ್ದು, 66,00,000 ಚ.ಕಿಮೀ ಪ್ರದೇಶವನ್ನು ಆವರಿಸಿತ್ತು. ಹಿಮನದಿ ಹಿಂದೆ ಸರಿಯತೊಡಗಿದಾಗ ಫಿನ್‍ಲೆಂಡಿನಲ್ಲಿ ಸಾವಿರಾರು ಸರೋವರಗಳ ನಿರ್ಮಾಣವಾಯಿತು. ಆದ್ದರಿಂದ ಅದನ್ನು ಸಾವಿರ ಸರೋವರಗಳ ನಾಡು ಎಂದು ಕರೆಯಲಾಗಿದೆ. ವಾಯುಗುಣ ನಾರ್ವೆ ಮತ್ತು ಸ್ವೀಡನ್‍ಗಳಲ್ಲಿ ಬೇಸಗೆ ತಂಪಾಗಿ ಮೋಡದಿಂದ ಕೂಡಿ ತೇವವನ್ನೊಳಗೊಂಡಿರುತ್ತದೆ. ಚಳಿಗಾಲದಲ್ಲಿ ಹೆಚ್ಚು ತೇವ ಮತ್ತು ತೀವ್ರವಾದ ಚಳಿ ಇರುವುದು. ಚಳಿಗಾಲದಲ್ಲಿ ನಾರ್ವೇಜಿಯನ್ ತೀರದಲ್ಲಿ ಉಷ್ಣಾಂಶ 00ಸೆ. ಗಿಂತ ಕಡಿಮೆ ಇರುತ್ತದೆ. ಜನವರಿಯಲ್ಲಿ ಸರಾಸರಿ ಉಷ್ಣಾಂಶ 80 ಸೆ. ಇದ್ದರೆ, ಜುಲೈ ತಿಂಗಳಲ್ಲಿ ಸುಮಾರು 150ಸೆ.ನಷ್ಟು ಇರುತ್ತದೆ. ದಕ್ಷಿಣ ಯುರೋಪಿಗೆ ಹೋಲಿಸಿದಾಗ ಉತ್ತರದ ಕಡೆಗೆ ಹೋದಂತೆ ಮಳೆ ಕಡಿಮೆಯಾಗುತ್ತದೆ. ಜಲವ್ಯವಸ್ಥೆ ಸ್ಕ್ಯಾಂಡಿನೇವಿಯನ್ ಪರ್ವತಗಳಲ್ಲಿ ಉಗಮಿಸುವ ಅನೇಕ ನದಿಗಳು ಬಾಲ್ಟಿಕ್ ಸಮುದ್ರ ಮತ್ತು ಬಿಸ್ಕೇ ಆಖಾತವನ್ನು ಸೇರುತ್ತವೆ. ಚಳಿಗಾಲದಲ್ಲಿ ಇಲ್ಲಿನ ಬಹುತೇಕ ನದಿಗಳು ಹೆಪ್ಪುಗಟ್ಟಿ, ಬೇಸಗೆಯಲ್ಲಿ ತುಂಬಿ ಹರಿಯುತ್ತವೆ. ಸ್ವೀಡನ್ನಿನ ಪ್ರಮುಖ ನದಿಗಳೆಂದರೆ — ಟಾರ್ನ್, ಕಾಲಿಕ್ಸ್, ಲೂಲ್, ಸ್ಕೆಲ್ಲೆಪ್ಟೆ, ಉಮೆ, ಇಂಡಾಲ್ಸ್, ದಾಲ್, ಕ್ಲಾರ್, ಲಾಗನ್, ಗೋಟಾ ಮತ್ತು ಜುಂಗನ್, ಫಿನ್‍ಲೆಂಡಿನ ಸೇ.20ರಷ್ಟು ಪ್ರದೇಶ ಸರೋವರಗಳಿಂದ ಕೂಡಿದೆ. ಮಜೋಸ್ ಇಲ್ಲಿಯ ಅತಿ ದೊಡ್ಡ ಸರೋವರ. ನಾರ್ವೆಯ ಆಗ್ನೇಯದಲ್ಲಿ ಹರಿಯುವ ಗ್ಲೋಮಾ ಈ ದೇಶದ ಅತ್ಯಂತ ಉದ್ದವಾದ ನದಿ. ಇದು ಜಲಪಾತಗಳಿಂದ ಕೂಡಿ ವೇಗವಾಗಿ ಹರಿಯುತ್ತದೆ. ಸ್ವಾಭಾವಿಕ ಸಸ್ಯವರ್ಗ ಇಲ್ಲಿ ತಂಡ್ರಾ, ಟೈಗಾ ಹಾಗೂ ಮಿಶ್ರ ಅರಣ್ಯಗಳಿವೆ. ಐಸ್‍ಲೆಂಡ್ ಮತ್ತು ಉತ್ತರ ಫಿನ್‍ಲೆಂಡ್‍ನಲ್ಲಿ ತಂಡ್ರಾ ಮಾದರಿ ಸಸ್ಯ ವರ್ಗ, ಪಾಚಿ ಮತ್ತು ಹಾವಸೆಗಳೂ ಇವೆ. ಫಿನ್‍ಲೆಂಡಿನ ಬಹುತೇಕ ಪ್ರದೇಶಗಳಲ್ಲಿ ಎಲೆ ಮೊನಚಾದ ಸಸ್ಯವರ್ಗ ಕಂಡುಬರುವುದು. ಹಾಗೆಯೇ ನಾರ್ವೆ, ಫೆರೋ ದ್ವೀಪಗಳಲ್ಲಿಯೂ ಟೈಗಾ ಹಾಗೂ ಮಿಶ್ರ ಅರಣ್ಯಗಳಿವೆ. ನಾರ್ವೆ, ಫಿನ್‍ಲೆಂಡ್ ಮತ್ತು ಸ್ವೀಡನ್ ದೇಶಗಳು ಆರ್ಥಿಕತೆಯಲ್ಲಿ ಟೈಗಾ ಸಸ್ಯವರ್ಗ ಮಹತ್ತರವಾದ ಪಾತ್ರ ವಹಿಸುತ್ತದೆ. ಪೈನ್, ಸ್ತ್ರೂಸ್, ಫರ್, ಬರ್ಚ್, ಆಲ್ಡರ್, ಪಾಪ್ಲಾರ್ ಹಾಗೂ ವಿಲ್ಲೇ ಮರಗಳು ಇಲ್ಲಿ ಹೆಚ್ಚಾಗಿವೆ. ಮಣ್ಣುಗಳು ಇಲ್ಲಿ ಮುಖ್ಯವಾಗಿ ತೊಳೆಸಿದ ಮಣ್ಣು ಹಾಗೂ ಟಂಡ್ರಾ ಮಣ್ಣು ಹೆಚ್ಚಾಗಿ ಕಂಡುಬರುತ್ತದೆ. ಸ್ಕ್ಯಾಂಡಿನೇವಿಯ ಪರ್ವತಗಳಲ್ಲಿ ಪರ್ವತ ಮಣ್ಣು ಹೆಚ್ಚಾಗಿದ್ದರೆ, ಪೂರ್ವದಲ್ಲಿ ತೊಳಿಸಿದ ಮಣ್ಣು ಹೆಚ್ಚು ಉತ್ತರದಲ್ಲಿ ತಂಡ್ರಾ ಮಣ್ಣು ಕಂಡುಬರುತ್ತದೆ. ಪ್ರಾಣಿವರ್ಗ ಹಿಮಸಾರಂಗ, ಧ್ರುವ ಪ್ರದೇಶದ ನರಿ, ತೋಳ, ಧ್ರುವ ಪ್ರದೇಶದ ಮೊಲ, ನಾನಾ ಬಗೆಯ ಮೀನು ವ್ಯಾಪಕವಾಗಿವೆ. ಡೆನ್ಮಾರ್ಕಿನಲ್ಲಿ ಹೈನುಗಾರಿಕೆ ಹೆಚ್ಚು ಅಭಿವೃದ್ಧಿ ಹೊಂದಿದೆ. ಸಂಪನ್ಮೂಲಗಳು ಉತ್ತರ ಸಮುದ್ರದ ಖಂಡಾವರಣ ಪ್ರದೇಶದ ಕಡೆಯಲ್ಲಿ, ನಾರ್ವೆಯಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ದೊರೆಯುತ್ತದೆ. ಅಲ್ಲದೆ ಕಬ್ಬಿಣಅದಿರು, ತಾಮ್ರ, ಕಲ್ಲಿದ್ದಲು ನಿಕ್ಷೇಪಗಳೂ ಇವೆ. ಐಸ್‍ಲೆಂಡಿನ ಸೇ.93 ರಷ್ಟು ವಿದ್ಯುತ್ ಜಲವಿದ್ಯುತ್ ಕೇಂದ್ರಗಳಿಂದ ಹಾಗೂ ಶೇ.7ರಷ್ಟು ವಿದ್ಯುತ್ ಶಾಖೋತ್ಪನ್ನವಾದದ್ದು. ಕೃಷಿ ಸ್ಕ್ಯಾಂಡಿನೇವಿಯ ಪರ್ವತಗಳಿಂದ ಕೂಡಿದೆ. ವಾಯುಗುಣ ನಿರ್ದಿಷ್ಟ ಬೆಳೆಗಳಿಗೆ ಸಹಾಯಕ. ನಾರ್ವೆಯಲ್ಲಿ ಬಾರ್ಲಿ, ಓಟ್ಸ್, ರೈ, ಆಲೂಗೆಡ್ಡೆ, ಹಣ್ಣು; ಸ್ವೀಡನ್‍ನಲ್ಲಿ ಸಿಹಿಗೆಡ್ಡೆ, ಆಲೂಗೆಡ್ಡೆ ಮೊದಲಾದವು, ಫಿನ್‍ಲೆಂಡಿನಲ್ಲಿ ಆಲೂಗೆಡ್ಡೆ, ಡೈರಿ ಉತ್ಪನ್ನ ಮತ್ತು ಕೆಲವು ಧಾನ್ಯಗಳು ಮುಖ್ಯ ಉತ್ಪನ್ನಗಳು. ಐಸ್‍ಲೆಂಡಿನಲ್ಲಿ ಸೇ.1 ಕ್ಕಿಂತ ಕಡಿಮೆ ಪ್ರದೇಶವು ವ್ಯವಸಾಯಕ್ಕೆ ಅನುಕೂಲವಾಗಿವೆ. ಇಲ್ಲಿಯೂ ಆಲೂಗೆಡ್ಡೆಯನ್ನು ಬೆಳೆಯುತ್ತಾರೆ. ಕೈಗಾರಿಕೆ ಹಡಗು ನಿರ್ಮಾಣ, ಯಂತ್ರೋಪಕರಣ, ಬಟ್ಟೆ, ಕಬ್ಬಿಣ ಮತ್ತು ಉಕ್ಕು, ಚರ್ಮ, ರಾಸಾಯನಿಕ, ಆಹಾರ ಸಂಸ್ಕರಣೆ, ಕಾಗದ, ಅಲ್ಯುಮಿನಿಯಂ, ಗೊಬ್ಬರ ಹಾಗೂ ಇನ್ನಿತರ ಕೈಗಾರಿಕೆಗಳು ಇಲ್ಲಿ ಹೆಚ್ಚು ಅಭಿವೃದ್ಧಿ ಹೊಂದಿದೆ. ಮೃದು ಮರ ವ್ಯಾಪಕವಾಗಿ ದೊರೆಯುವುದರಿಂದ ಹಡಗು ನಿರ್ಮಾಣ ಮತ್ತು ಕಾಗದ ಕೈಗಾರಿಕೆಗಳು ಬೆಳೆದಿವೆ. ಸಾರಿಗೆ ಈ ಪ್ರದೇಶ ಪರ್ವತಮಯದಾದ್ದರಿಂದ ರಸ್ತೆ ಮತ್ತು ರೈಲು ಸಾರಿಗೆ ಹೆಚ್ಚು ಅಭಿವೃದ್ಧಿ ಹೊಂದಿಲ್ಲ. ಆದರೆ ಇಲ್ಲಿನ ಕೈಗಾರಿಕಾ ಕೇಂದ್ರಗಳಿಗೂ ನಗರಗಳಿಗೂ ಉತ್ತಮ ಸಾರಿಗೆ ವ್ಯವಸ್ಥೆಯಿದೆ. ಪ್ರಮುಖ ನಗರಗಳು ನಾರ್ವೆಯ ಸೇ.75ರಷ್ಟು, ಸ್ವೀಡನ್ನಿನ ಸೇ.75 ರಷ್ಟು ಹಾಗೂ ಐಸ್‍ಲೆಂಡ್ ಹಾಗೂ ಡೆನ್ಮಾರ್ಕಿನಲ್ಲಿ ಅತಿ ಹೆಚ್ಚಿನ ಜನರು ನಗರಗಳಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿನ ಪ್ರಮುಖ ನಗರಗಳೆಂದರೆ — ಡೆನ್ಮಾರ್ಕಿನಲ್ಲಿ ಕೋಪೆನ್‍ಹೇಗನ್ (ರಾಜಧಾನಿ), ಓಡೆನ್ಸ್, ಆಲ್‍ಬರ್ಗ್ ಮತ್ತು ರ್ಯಾಂಡರ್, ಫಿನ್‍ಲೆಂಡಿನಲ್ಲಿ ಹೆಲ್ಸಿಂಕಿ (ರಾಜಧಾನಿ), ಟ್ಯಾಂಪರ್ ಮತ್ತು ಎಸ್ಪೊ, ನಾರ್ವೆಯಲ್ಲಿ ಓಸ್ಲೋ (ರಾಜಧಾನಿ), ಬರ್ಗನ್ ಮತ್ತು ಟ್ರಾಂಡ್ರಿಯಂ, ಸ್ವೀಡನ್ನಿನಲ್ಲಿ ಸ್ಟಾಕ್‍ಹೋಮ್ (ರಾಜಧಾನಿ), ಗೋಟೆಬರ್ಗ್ ಮತ್ತು ಉಪ್‍ಸಾಲ. ಭಾಷೆ ನಾರ್ವೆಯಲ್ಲಿ ನಾರ್ವೇಜಿಯನ್, ಸ್ವೀಡನ್‍ನಲ್ಲಿ ಸ್ವೀಡಿಷ್, ಡೆನ್ಮಾರ್ಕ್‍ನಲ್ಲಿ ಡೇನಿಷ್ ಮತ್ತು ಫಿನ್‍ಲೆಂಡಿನಲ್ಲಿ ಫಿನ್ನಿಷ್ ಭಾಷೆಗಳು ಪ್ರಮುಖವಾಗಿವೆ. ಸಾಕ್ಷರತೆ ಡೆನ್ಮಾರ್ಕ್, ಫಿನ್‍ಲೆಂಡ್, ನಾರ್ವೆ ಮತ್ತು ಸ್ವೀಡನ್‍ಗಳಲ್ಲಿ ಸಾಕ್ಷರತಾ ಪ್ರಮಾಣ ಸೇ.100 ರಷ್ಟಿದೆ. ಧರ್ಮ ಇಲ್ಲಿ ಕ್ರೈಸ್ತ ಧರ್ಮಾನುಯಾಯಿಗಳ ಸಂಖ್ಯೆಯೇ ಅಧಿಕವಾಗಿದೆ. ಮಾನವ ಸಂಪನ್ಮೂಲ ಈ ಪ್ರದೇಶದ ರಾಷ್ಟ್ರಗಳಲ್ಲಿ ಜನಸಂಖ್ಯೆ ಮತ್ತು ಜನಸಾಂದ್ರತೆ ಬಹಳ ಕಡಿಮೆ. ನಾರ್ವೆಯಲ್ಲಿ ಜನಸಂಖ್ಯೆ 43,99,993 (1997). ಇಡೀ ಯುರೋಪಿನಲ್ಲಿ ಅತ್ಯಂತ ಕಡೆಮೆ ಜನಸಾಂದ್ರತೆ ಇಲ್ಲಿಯದು. ಇಲ್ಲಿನ ಜನಸಾಂದ್ರತೆ ಪ್ರತಿ ಚ.ಕಿಮೀಗೆ ಕೇವಲ 11. ಸ್ವೀಡನ್ನಿನ ಜನಸಂಖ್ಯೆ 88 ಲಕ್ಷ . ಜನಸಾಂದ್ರತೆ ಚ.ಕಿಮೀಗೆ 20. ಐಸ್‍ಲೆಂಡಿನಲ್ಲಿ ಸರಾಸರಿ ಜನಸಾಂದ್ರತೆ ಚ.ಕಿಮೀಗೆ 3. ಫಿನ್‍ಲೆಂಡಿನ ಜನಸಂಖ್ಯೆ 52. ಲಕ್ಷ ಜನಸಾಂದ್ರತೆ ಚ.ಕಿಮೀಗೆ 15. ಆಮದು ರಫ್ತು ಡೆನ್ಮಾರ್ಕ್, ಫಿನ್‍ಲೆಂಡ್, ನಾರ್ವೆ ಮತ್ತು ಸ್ವೀಡನ್ ರಾಷ್ಟ್ರಗಳಲ್ಲಿ ಆಮದಿಗಿಂತ ರಫ್ತು ಹೆಚ್ಚು ಕಂಡುಬರುತ್ತದೆ. ಸ್ಕ್ಯಾಂಡಿನೇವಿಯದ ನಾಗರಿಕತೆ ಡೆನ್ಮಾರ್ಕ್, ನಾರ್ವೆ, ಸ್ವೀಡನ್ - ಈ ಮೂರು ರಾಜ್ಯಗಳಿಗೆ ಸ್ಕ್ಯಾಂಡಿನೇವಿಯ ಎಂಬ ಸಾಮಾನ್ಯ ಹೆಸರಿದೆ. ಒಮ್ಮೊಮ್ಮೆ ಈ ಹೆಸರು ನಾರ್ವೆ, ಡೆನ್ಮಾರ್ಕ್ ದೇಶಗಳಿಗೆ ಮಾತ್ರವೇ ಅನ್ವಯಿಸುವುದುಂಟು. ಮಧ್ಯಕಾಲೀನಯುಗದಲ್ಲಿ ಈ ಮೂರು ದೇಶಗಳ ಜನಸಮುದಾಯಕ್ಕೆ ನಾರ್ತ್‍ಮೆನ್ (ಉತ್ತರ ದೇಶೀಯರು) ಎಂಬ ಹೆಸರು ಪ್ರಾಪ್ತವಾಗಿತ್ತು. ಭಾಷೆ, ಜೀವನ ಕ್ರಮ, ರಾಜಕೀಯ ಸ್ಥಿತಿಗತಿಗಳು - ಇವೆಲ್ಲ ಈ ಮೂರು ದೇಶಗಳಿಗೂ ಒಂದೇ ಬಗೆಯಾಗಿದ್ದ ಕಾರಣ, ಅಲ್ಲಿಯ ಜನತೆಯೂ ಒಂದೇ ಸಮೂಹವೆಂಬ ಕಲ್ಪನೆ ಮೂಡಿತ್ತು. ಸ್ಕ್ಯಾಂಡಿನೇವಿಯ ಎಂಬ ಹೆಸರು ಈಗ ಭೌಗೋಳಿಕ ದೃಷ್ಟಿಯಿಂದ ವಿರಳವಾಗಿರುವುದಾದರೂ ಸಮೂಹಸೂಚಕವಾಗಿ ಹಾಗೂ ಸಾಹಿತ್ಯ ಚರಿತ್ರೆಯಲ್ಲಿ ಈಗಲೂ ಬಳಕೆಯಲ್ಲಿದೆ. ಈ ಪ್ರಾಂತದ ಪುರಾತನ ಚರಿತ್ರೆಯೂ ರೂಢಿಸಂಪ್ರದಾಯಗಳೂ ನಾರ್ವೆ ಹಾಗೂ ಸ್ವೀಡನ್ ದೇಶಗಳ ದಕ್ಷಿಣಭಾಗಗಳಿಗೆ ಮತ್ತು ಡೇನಿಷ್ ದ್ವೀಪ ಹಾಗೂ ಸಿಂಬ್ರಿಯನ್ ಭೂ ಖಂಡದಲ್ಲೇ ಕೇಂದ್ರೀಕೃತವಾಗಿದ್ದುವು. ಪುರಾತನ ಕಾಲದಲ್ಲಿ ಸ್ಕ್ಯಾಂಡಿನೇವಿಯ ಪ್ರಾಂತದ ಜನರ ಭಾಷೆಗಳು, ಪುರಾಣಗಳು, ರೀತಿನೀತಿಗಳು ಒಂದೇ ಆಗಿದ್ದುವು. ಕ್ರಿಸ್ತಶಕದ ಆರಂಭ ದಲ್ಲೂ ಇವರು ಪ್ರತ್ಯೇಕ ಗುಂಪಾಗಿ ತಲೆಯೆತ್ತಿರಲಿಲ್ಲ. ಸು. 8ನೆಯ ಶತಮಾನದ ಕಾಲಕ್ಕೆ ಈ ಮೂರು ರಾಜ್ಯಗಳು ಭಿನ್ನ ಭಿನ್ನ ರಾಜ್ಯಲಕ್ಷಣ ಪಡೆದು ಯುರೋಪಿನ ಇತಿಹಾಸದಲ್ಲಿ ಪ್ರತ್ಯೇಕ ಸ್ಥಾನ ಪಡೆದುಕೊಳ್ಳ ತೊಡಗಿದುವು. ಆದರೆ 11-12ನೆಯ ಶತಮಾನಗಳತನಕವೂ ಅವುಗಳ ಭಾಷೆಗಳಲ್ಲಿ ವ್ಯತ್ಯಾಸವಿರಲಿಲ್ಲ. ಆಮೇಲೆ ಕ್ರಮೇಣ ಆ ದೇಶಗಳ ರೀತಿನೀತಿಗಳು ಪಲ್ಲಟವಾದುವು. ಭಾಷೆಗಳಲ್ಲೂ ಅಷ್ಟಿಷ್ಟು ಮಾರ್ಪಾಡು ಗಳು ತಲೆದೋರಿ ನಾರ್ವೇಜಿಯನ್, ಸ್ವೀಡಿಷ್, ಡೇನಿಷ್ ಭಾಷೆಗಳು ತಲೆಯೆತ್ತತೊಡಗಿದುವು. ಆದರೆ ಈ ಮೂರು ದೇಶಗಳ ಜನರು ಪರಸ್ಪರರ ಭಾಷೆಗಳನ್ನು ಇಂದಿಗೂ ತಿಳಿಯಬಲ್ಲವರಾಗಿದ್ದಾರೆ. ನಾಗರಿಕತೆಯ ಅರಂಭ ಸ್ಕ್ಯಾಂಡಿನೇವಿಯದಲ್ಲಿ ಮಾನವನ ಜೀವನ ಯಾವಾಗ ಆರಂಭವಾ ಯಿತು ಎಂಬ ವಿಚಾರವಾಗಿ ವಿದ್ವಾಂಸರಲ್ಲಿ ಒಮ್ಮತವಿಲ್ಲ. ಹಿಮಯುಗ ಕಳೆಯುವ ಮುಂಚೆ ಅಲ್ಲಿಗೆ ಮಾನವನ ಪ್ರವೇಶವಾಗಿರಲಿಲ್ಲವೆಂಬುದಂತೂ ಖಚಿತ. ಕ್ರಿ.ಪೂ. ಸು.10,000 - 6,000 ಅವಧಿಯಲ್ಲಿ ಮಾನವ ಈ ಪ್ರದೇಶಕ್ಕೆ ಕಾಲಿಟ್ಟಿರಬೇಕೆಂದು ಈಗಿನ ಊಹೆ. ಎಪಿಪ್ಯಾಲಿಯೋಗ್ರಾಫಿಕ್ ಯುಗ ಸ್ಕ್ಯಾಂಡಿನೇವಿಯದ ಆದ್ಯ ನಾಗರಿಕತೆ ಎಪಿಪ್ಯಾಲಿಯೋಗ್ರಾಫಿಕ್ ಯುಗದಿಂದ ಆರಂಭವಾಗುತ್ತದೆ. ಈ ಯುಗದಲ್ಲಿ ಎರಡು ಹಂತಗಳಿವೆ. ಮೊದಲನೆಯದು ಮಾಗ್ಲೆಮೋಸ್ ಕಾಲ, ಎರಡನೆಯದು ಎರ್ಟೆಬೊಲ್ಲಿ ಕಾಲ. ಮಾಗ್ಲೆಮೋಸ್ ಕಾಲವು ಬಾಲ್ಟಿಕ್ ಸಮುದ್ರ ತೀರದಲ್ಲಿ ಬೆಸ್ತರು ಮಾತ್ರವೇ ವಾಸವಾಗಿದ್ದ ಕಾಲ. ಆಗ ಬಾಲ್ಟಿಕ್ ಸಮುದ್ರ ಸಿಹಿನೀರಿನ ಸರೋವರವಾಗಿತ್ತು. (ಭೂಗರ್ಭವಿe್ಞÁನಿಗಳು ಇದಕ್ಕೆ ಅನ್ಸಿಲಸ್ ಸರೋವರ ಎಂದು ಹೆಸರು ನೀಡಿದ್ದಾರೆ). ಈ ಕಾಲಕ್ಕೆ ಸೇರಿದ ಮೂಳೆ, ಕೊಂಬು ಮತ್ತು ಕಲ್ಲಿನ ಉಪಕರಣಗಳು ಸಿಕ್ಕಿವೆ. ಇವುಗಳಲ್ಲಿ ಮುಳ್ಳುಮುಳ್ಳಾದ ಭರ್ಜಿಯೂ ಒಂದು. ಇದಕ್ಕೆ ಟ್ರಾಂಚೆಟ್ ಎಂದು ಹೆಸರು. ಆಗ ಕುಂಭಕಲೆ ಪರಿಚಿತವಾಗಿರಲಿಲ್ಲ. ಎರ್ಟೆಬೊಲ್ಲಿ ಕಾಲದಲ್ಲಿ ಸಮುದ್ರ ಉಕ್ಕಿ ಬಾಲ್ಟಿಕ್ ಸಮುದ್ರಕ್ಕೆ ಹರಿದು ಬಂತೆಂದೂ ಈ ಸ್ಥಿತಿಗೆ ಬಂದ ಬಾಲ್ಟಿಕ್ ಸಮುದ್ರಕ್ಕೆ ಭೂಗರ್ಭಶಾಸ್ತ್ರಜ್ಞರು ಲಿಟ್ಟೊರಿನಾ ಸಮುದ್ರ ಎಂದೂ ನಾಮಕರಣ ಮಾಡಿದ್ದಾರೆ. ಈ ಯುಗದ ಅವಶೇಷ ಗಳು ಮುಖ್ಯವಾಗಿ ಕಸಕುಪ್ಪೆಗಳ ರೂಪದಲ್ಲಿದ್ದುವು. ಮೂಳೆ, ಕೊಂಬು ಮುಂತಾದ ಸಾಮಗ್ರಿಗಳು ಈ ಕಾಲದಲ್ಲೂ ಬಳಕೆಯಲ್ಲಿದ್ದುವು. ಬಾಚಣಿಗೆಯ ಉಪಯೋಗ ಈ ಜನರಿಗೆ ತಿಳಿದಿತ್ತೆಂದು ತೋರುತ್ತದೆ. ಬೆಂಕಿಯ (ಚಕಮಕಿ) ಉಪಯೋಗ ಕೂಡ ಇವರಿಗೆ ತಿಳಿದಿತ್ತು. ಈ ಯುಗದಲ್ಲಿ ಕುಂಭಕಲೆಯಲ್ಲೂ ಜನ ನುರಿತಿದ್ದರು. ಅಗಲಬಾಯಿಯ ಉಬ್ಬುಹೊಟ್ಟೆಯ ಮಣ್ಣಿನ ಪಾತ್ರೆ ಆಗ ಸರ್ವಸಾಮಾನ್ಯವಾಗಿತ್ತು. ನಾರ್ವೆ, ಸ್ವೀಡನ್ ದೇಶಗಳಲ್ಲೂ ಈ ಬಗೆಯ ಜನವಸತಿಗಳಿದ್ದರ ಬಹುದಾದರೂ ಅವುಗಳ ಬಗೆಗೆ ಈ ತನಕ ತಿಳಿದು ಬಂದ ವಿವರಗಳು ಕಡಿಮೆ. ನಾರ್ವೆದೇಶದ ನಾಸ್ಟ್‍ವೆಟ್ ಎಂಬಲ್ಲಿಯೂ ಸ್ವೀಡನಿನ ಲಿಮ್‍ಹ್ಯಾಮ್ನ್ ಎಂಬಲ್ಲಿಯೂ ದೊರೆತ ಅವಶೇಷಗಳು ಎರ್ಟೆಬೊಲ್ಲಿ ಕಾಲಕ್ಕೇ ಸೇರಿದ್ದಿರಬಹುದೆಂದು ಊಹಿಸಲಾಗಿದೆ. ನಾಯಿಯೊಂದೇ ಈ ಕಾಲದ ಸಾಕು ಪ್ರಾಣಿ. ಕೃಷಿಯ ಪರಿಚಯ ಈ ಜನರಿಗೆ ಇರಲಿಲ್ಲ. ನವ ಶಿಲಾಯುಗ ನಾರ್ವೆ ಮತ್ತು ಸ್ವೀಡನ್ ದೇಶಗಳಲ್ಲಿ ನವ ಶಿಲಾಯುಗದ ಕುರಿತಾಗಿ ತಿಳಿದು ಬಂದಿರುವ ಅಂಶಗಳು ಅಂದಿನ ಶವಸಮಾಧಿ ರೂಢಿಗಳ ಪರಿಶೀಲನೆಯಿಂದ ಲಭಿಸಿದವುಗಳಾಗಿವೆ. ಅಂದಿನ ವಾಸದ ಮನೆಗಳು ಸಾದಾ ರೀತಿಯ ಮಣ್ಣಿನ ಮನೆಗಳಾಗಿದ್ದುವು. ಅವುಗಳಲ್ಲಿ ಪ್ರಾಣಿಗಳ ಮೂಳೆಗಳ ಹೊರತು ಬೇರೇನೂ ದೊರೆತಿಲ್ಲ. ಪ್ರಸಿದ್ಧ ಗೋರಿಗಳೆಲ್ಲ ಬೃಹತ್ ಶಿಲಾ ಸಮಾಧಿಗಳು. ಇವುಗಳಲ್ಲಿ 2,3,4ನೆಯ ಮೊಂಟೇಲಿಯಸ್ ಅವಧಿಗಳಿಗೆ ಸಂಬಂಧಿಸಿದ ಮೂರು ಬಗೆಯ ಸಮಾಧಿಗಳು ಕಂಡು ಬರುತ್ತವೆ. ಡಾಲ್ಮೆನ್ ಎಂಬ ಸಮಾಧಿ ಆ ಕಾಲದ ಆದ್ಯಪ್ರಕಾರದ ಗೋರಿ. ಇದು ಕೋಣೆಯ ರೂಪದಲ್ಲಿದೆ. ಇದರ ಸುತ್ತಲೂ ದೊರಗಾದ ಮೂರು ನಾಲ್ಕು ಕಲ್ಲುಕಂಬಗಳು ನಿಂತಿವೆ; ಛಾವಣಿಗೆ ಕಲ್ಲು ಚಪ್ಪಡಿ ಹೊದಿಸಲಾಗಿದೆ. ಛಾವಣಿ ಮೇಲ್ಗಡೆ ದಿಬ್ಬ ಕಟ್ಟಿರುವುದೂ ಇದೆ. ಈ ಬಗೆಯ ಸಮಾಧಿಗಳೊಳಗೆ ಆಕಾರ ಕೆಡದ ಶವಗಳು ದೊರಕಿವೆ. ಶವಕುಣಿಗಳಲ್ಲಿ ಹೆಚ್ಚಿನ ಅಲಂಕಾರ ವಸ್ತುಗಳೇನೂ ದೊರಕಿಲ್ಲ. ಚಕಮಕಿ ಕಲ್ಲಿನ ಕೆಲವು ಚೂಪು ಕೊಡಲಿಗಳೂ ಅವುಗಳ ಜೊತೆಗೆ ಅಲಂಕೃತ ಕುಂಭಗಳೂ ಹೂಜಿಗಳೂ ದೊರೆತಿವೆ. ಮೂರನೆಯ ಮೊಂಟೇಲಿಯಸ್ ಯುಗದಲ್ಲಿ ವೇಶ್ಮ ಸಮಾಧಿಗಳು ಬಳಕೆಗೆ ಬಂದುವು. ಇವುಗಳ ರಚನೆ ದೊಡ್ಡದು. ವೇಶ್ಮ ಸಮಾಧಿ ದೊಡ್ಡದೊಂದು ಕಲ್ಲಿನ ಕೋಣೆ. ಇದಕ್ಕೆ ಕಲ್ಲಿನ ಗೋಡೆ ಹಾಗೂ ಛಾವಣಿಯಿಂದ ಆವೃತವಾದ ಪ್ರವೇಶ ಮಾರ್ಗವಿರುತ್ತದೆ. ಸ್ವೀಡನ್ ದೇಶದಲ್ಲಿ ದೊರೆತಿರುವ ಇಂಥದೊಂದು ಸಮಾಧಿಯ ಉದ್ದ 9.75ಮೀ, ಅಗಲ 2.7ಮೀ. ಈ ಬಗೆಯ ದೊಡ್ಡ ದೊಡ್ಡ ಸಮಾಧಿಗಳಲ್ಲಿ, ಕೆಲವೊಮ್ಮೆ ಅಸ್ಥಿಪಂಜರಗಳೂ ಸುಡದ ಬೇರೆ ಬೇರೆ ಸಾಮಗ್ರಿಗಳೂ ಕಂಡುಬಂದಿವೆ. ಮುಖ್ಯವಾಗಿ ದಪ್ಪನೆಯ ಚೂಪಾದ ಕೊಡಲಿಗಳು, ತೂತು ಕೊರೆದಿರುವ ಕಲ್ಲಿನ ಕೊಡಲಿಗಳೂ ಬಾಣಗಳೂ ಚಕಮಕಿ ಕಲ್ಲಿನ ಕಠಾರಿಗಳೂ ಮಣಿಗಳೂ ತ್ರಿಕೋಣಾಕೃತಿಯ ಇಲ್ಲವೆ ವೃತ್ತಾಕೃತಿಯ ತಳವುಳ್ಳ ಪಾತ್ರೆಗಳೂ ಹೇರಳವಾಗಿ ದೊರಕಿವೆ. ಈ ಕಾಲದಲ್ಲಿ ವ್ಯಾಪಾರಿವರ್ಗವೂ ಕೃಷಿಕ ಸಮಾಜವೂ ಸುವ್ಯವಸ್ಥಿತ ರೀತಿಯಲ್ಲಿ ಏಳಿಗೆಗೆ ಬಂದಂತೆ ತೋರುವುದು. ಕುದುರೆ, ಕುರಿ, ಹಂದಿ, ಹಸು, ನಾಯಿ ಮೊದಲಾದ ಸಾಕುಪ್ರಾಣಿವರ್ಗದ ಅವಶೇಷಗಳು ಈ ಸಮಾಧಿ ನೆಲೆಗಳಲ್ಲಿ ದೊರೆತಿವೆ. ಬಾರ್ಲಿ, ಗೋದಿ ಮೊದಲಾದ ಬೆಳೆಗಳ ಕೃಷಿ ಆಗ ವಿಪುಲವಾಗಿತ್ತು. ಬೀಕರ್ ಯುಗದಲ್ಲಿ ಸ್ಕ್ಯಾಂಡಿನೇವಿ ಯದಲ್ಲಿ ನಿರ್ಮಿತವಾದ ಕೊಡಲಿ, ಕಠಾರಿ ಮೊದಲಾದ ಆಯುಧಗಳು ಬ್ರಿಟನಿನಲ್ಲೂ ಬಾಲ್ಟಿಕ್ ಮಣಿಖಚಿತ ಹಾರಗಳು ಮಧ್ಯ ಯುರೋಪಿನಲ್ಲೂ ಬ್ರಿಟನ್ ಹಾಗೂ ಮಧ್ಯ ಯುರೋಪಿನ ಸಾಮಗ್ರಿಗಳು ಸ್ಕ್ಯಾಂಡಿನೇವಿಯ ದಲ್ಲೂ ದೊರೆತಿರುವುದರಿಂದ, ಆ ಕಾಲದಲ್ಲಿ ಸ್ಕ್ಯಾಂಡಿನೇವಿಯದ ವ್ಯಾಪಾರ ವಾಣಿಜ್ಯಗಳು ಸಮೃದ್ಧವಾಗಿದ್ದುವೆಂದು ಊಹಿಸಬಹುದಾಗಿದೆ. ಈ ಸಮಾಧಿವೇಶ್ಮಗಳು ಮೊದಮೊದಲು ಸ್ವೀಡನ್, ಡೆನ್ಮಾರ್ಕ್ ದೇಶಗಳ ತೀರಪ್ರದೇಶಗಳಲ್ಲಿ ಎಲ್ಲೆಲ್ಲೂ ಹರಡಿಕೊಂಡಿದ್ದು ದೀರ್ಘ ಶಿಲಾ ವೇಷ್ಟನ ಯುಗದಲ್ಲಿ ನಾರ್ವೆ ದೇಶಕ್ಕೂ ಸ್ವೀಡನ್ ದೇಶದ ಒಳನಾಡಿಗೂ ಬಂದುವು. ಈ ಬಗೆಯ ವಿಶಾಲ ವೇಶ್ಮ ಸಮಾಧಿಗಳ ಜತೆಗೆ, ಒಂದೊಂದು ಶವವನ್ನು ಪ್ರತ್ಯೇಕ ಸಮಾಧಿಯಲ್ಲಿ ಹೂಳುವ ರೂಢಿ ಜಟ್‍ಲೆಂಡ್, ದಕ್ಷಿಣ ಸ್ವೀಡನ್ ಹಾಗೂ ಕೆಲವಾರು ಡೆನ್ಮಾರ್ಕ್ ದ್ವೀಪಗಳಲ್ಲೂ ಬಳಕೆಗೆ ಬಂತು. ಇವುಗಳಲ್ಲಿ ಹಲವು ಸಮಾಧಿಗಳಿಗೆ ಒಂದೇ ದಿನ್ನೆಯ ಆವರಣವಿತ್ತು. ಅವುಗಳ ಎತ್ತರ ಬೇರೆ ಬೇರೆಯಾಗಿತ್ತು. ಇಂಥ ಸಮಾಧಿಗಳಲ್ಲಿ ಕೆಲವು ನೆಲದಡಿಯಲ್ಲಿದ್ದರೆ, ಇನ್ನು ಕೆಲವು ನೆಲದ ಮಟ್ಟದಲ್ಲೇ ಇರುತ್ತವೆ; ಮತ್ತೆ ಕೆಲವು ದಿಣ್ಣೆಯೊಳಗಡೆಯೇ ಇರುತ್ತವೆ. ಈ ಸಮಾಧಿಗಳಲ್ಲಿ ಹೂಜಿಗಳು, ಕುಸುರಿಕೆಲಸದ ತೂತು ಕೊಡಲಿ ಮೊದಲಾದ ವಸ್ತುಗಳು ಕಂಡುಬಂದಿವೆ. ಈ ಬಗೆಯ ಕೊಡಲಿಗಳೂ ಕುಂಭಗಳೂ ಯುರೋಪಿನಲ್ಲಿ ಎಲ್ಲೂ ಕಂಡುಬಂದಿಲ್ಲ. ಈ ಕಾಲದಲ್ಲಿ ಸ್ಕ್ಯಾಂಡಿನೇವಿಯ ಪ್ರಾಂತಕ್ಕೆ ಬೇರೊಂದು ಸಮೂಹದ ಪ್ರವೇಶವಾಗಿದ್ದಿರ ಬೇಕೆಂದೂ ಕೊನೆಗೆ ಆ ಸಮೂಹ ಬೃಹತ್ ಶಿಲಾವೇಶ್ಮ ನಿರ್ಮಾಪಕ ರೊಡನೆ ಬೆರೆತು ಹೋಗಿದ್ದಿರಬೇಕೆಂದೂ ವಿದ್ವಾಂಸರು ಊಹಿಸಿದ್ದಾರೆ. ಏಕೆಂದರೆ ದೀರ್ಘ ಶಿಲಾವೇಷ್ಟನ ಯುಗದಲ್ಲಿ ಬೃಹತ್ ಶಿಲಾಸಮಾಧಿಗಳ ಉಪಸ್ತರಗಳಿಗೂ ಪ್ರತ್ಯೇಕ ಸಮಾಧಿಗಳಲ್ಲಿರುವ ಸಾಮಗ್ರಿಗಳಿಗೂ ರೂಪರಚನೆಯಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ. ಸ್ಕ್ಯಾಂಡಿನೇವಿಯದ ನವ ಶಿಲಾಯುಗವನ್ನು ಕೂಲಂಕಷ ಪರಿಶೀಲನೆ ಮಾಡಿದ ಗಾರ್ಡನ್ ಚೈಲ್ಡ್ ಎಂಬ ಸಂಶೋಧಕ ನವ ಶಿಲಾಯುಗಕ್ಕೂ ಕಂಚುಯುಗಕ್ಕೂ ಈ ಮುಂದಿನಂತೆ ಕಾಲ ನಿರ್ಣಯ ಮಾಡಿದ್ದಾರೆ. ಡಾಲ್ಮೆನ್ ಕಾಲಾವಧಿ (ಮೊಂಟೇಲಿಯಸ್ ಕಾಲಾವಧಿ 11) ಕ್ರಿ.ಪೂ. 2500-2200; ಪ್ರವೇಶ ಮಾರ್ಗ ಸಮನ್ವಿತ ಸಮಾಧಿ ಕಾಲ (ಮೊಂಟೇಲಿಯಸ್ ಕಾಲಾವಧಿ 111) ಕ್ರಿ.ಪೂ. 2200-1650; ದೀರ್ಘ ಶಿಲಾವೇಷ್ಟನ ಕಾಲಾವಧಿ (ಮೊಂಟೇಲಿಯಸ್ ಕಾಲಾವಧಿ) ಕ್ರಿ.ಪೂ. 1650-1500. ಈ ಕೊನೆಯ ಕಾಲಾವಧಿಗೆ ಸಂಬಂಧಪಟ್ಟ ಹಿತ್ತಾಳೆ ಹಾಗೂ ಕಂಚಿನ ಸೂಜಿಗಳೂ ಚಿನ್ನದ ಕಿವಿಯೋಲೆಗಳೂ ಸಿಕ್ಕಿರುವುದ ರಿಂದ ಇವು ಕಂಚುಯುಗದವು ಎಂದು ಭಾವಿಸಬಹುದು. ಕಂಚಿನ ಯುಗ ಸ್ಕ್ಯಾಂಡಿನೇವಿಯ ಕಂಚಿನ ಲೋಹಕ್ಕೆ ಪರದೇಶಗಳನ್ನೇ ಅವಲಂಬಿಸ ಬೇಕಾಗಿತ್ತೆಂದೂ ಸ್ಥಳೀಯವಾಗಿ ದೊರೆಯುತ್ತಿರಲಿಲ್ಲವೆಂದೂ ತೋರುತ್ತದೆ. ಪ್ರಾಯಃ ಆ ಕಾರಣದಿಂದಲೇ ಇರಬೇಕು ಸ್ಕ್ಯಾಂಡಿನೇವಿಯ ದಲ್ಲಿ ಕಂಚುಯುಗ ವಿಳಂಬವಾಗಿ ಪ್ರಾರಂಭವಾಯಿತು. ಕ್ರಿಸ್ತಶಕದ ಆದಿಯ ತನಕವೂ ಈ ಯುಗ ಮುಂದುವರಿಯಿತು. ಈ ಕಾಲದ ಜೀವನಪದ್ಧತಿಯ ವಿವರಗಳನ್ನೂ ಶವಸಮಾಧಿ ರೂಢಿಗಳಿಂದಲೇ ತಿಳಿಯಬೇಕಾಗಿದೆ. ಆಗಿನ ವಸತಿ ವ್ಯವಸ್ಥೆಯನ್ನು ಕುರಿತು ನಮಗೆ ತಿಳಿದು ಬಂದಿರುವ ಅಂಶಗಳು ಕಡಮೆ. ಸ್ಕ್ಯಾಂಡಿನೇವಿಯದ ಕಂಚುಯುಗವನ್ನು ಮೊಂಟೇಲಿಯಸ್ ಮಹಾಶಯ ಆದಿಕಾಲ, ಉತ್ತರ ಕಾಲ ಎಂದು ಸ್ಥೂಲವಾಗಿ ವಿಂಗಡಿಸಿ, ಎರಡರಲ್ಲೂ ಮೂರು ಮೂರು ಉಪವಿಭಾಗಗಳನ್ನು ಕಲ್ಪಿಸಿದ್ದಾನೆ. ಆದಿಕಾಲ ಕ್ರಿ.ಪೂ.100 ರ ತನಕವೂ ಮುಂದುವರಿಯಿತು. ಅಲ್ಲಿಂದ ಪ್ರಾರಂಭವಾದ ಉತ್ತರಕಾಲ ಕ್ರಿಸ್ತಶಕಕ್ಕೆ ಒಂದೆರಡು ಶತಮಾನ ಹಿಂದಿನತಕವೂ ನಡೆದುಬಂತು. ಆದಿ ಕಾಲದ ಕಂಚುಯುಗ ಆದಿಕಾಲದ ಕಂಚುಯುಗದ ಆಯುಧೋಪಕರಣಗಳೆಲ್ಲ ಸಾಮಾನ್ಯವಾಗಿ ಒಂದೇ ಬಗೆಯಾಗಿದ್ದುವು. ಸಾದಾ ರೀತಿಯ ಚಪ್ಪಟೆ ಕೊಡಲಿ, ಪುಟ್ಟ ಚಾಕು-ಇವೆರಡು ಉಪಕರಣಗಳು ಎಲ್ಲ ಕಡೆಯಲ್ಲೂ ಬಳಕೆಯಲ್ಲಿದ್ದುವು. ಪ್ರಾಯಃ ಈ ಕಾಲದಲ್ಲಿ ಲೋಹಕ್ಕಿಂತ ಕಲ್ಲಿಗೇ ಹೆಚ್ಚಿನ ಪ್ರಾಧಾನ್ಯವಿದ್ದಿರಬೇಕು. ಕರಕುಶಲಕಲೆಯಲ್ಲಿ ಸ್ಕ್ಯಾಂಡಿನೇವಿಯದ ಜನ ಸಿದ್ಧಹಸ್ತರಾಗಿದ್ದರು. ಈ ಕಾಲದಲ್ಲಿ ಕಂಚಿನ ಆಭರಣಗಳೂ ಆಯುಧಗಳೂ ಹೇರಳವಾಗಿ ತಯಾರಾದುವು. ಇಷ್ಟೊಂದು ಚೆಲುವಾದ ಆಭರಣಗಳೂ ಆಯುಧಗಳೂ ಉತ್ತರ ಯುರೋಪಿನಲ್ಲಿ ಬೇರೆಲ್ಲೂ ಕಂಡುಬಂದಿಲ್ಲ. ಇವನ್ನು ತಯಾರಿ ಸಲು ಬಳಸಿದ ಎರಕ ಅಚ್ಚುಗಳು ಸಿಕ್ಕಿವೆ; ಇವುಗಳ ಕುಸುರಿ ಕೆಲಸಕ್ಕೂ ಬೇರೆ ದೇಶಗಳ ಆಭರಣಾದಿಗಳ ರೀತಿಗೂ ತುಂಬ ವ್ಯತ್ಯಾಸ ಕಂಡುಬರುತ್ತದೆ. ಆದ್ದರಿಂದ ಇವು ಸ್ಥಳೀಯ ರಚನೆಗಳೆಂಬುದರಲ್ಲಿ ಸಂಶಯವಿಲ್ಲ. ಮಧ್ಯ ಕಂಚುಯುಗದಲ್ಲಿ, ಯುರೋಪಿನಲ್ಲಿ ಸರ್ವಸಾಮಾನ್ಯವಾಗಿದ್ದ ಚಿಲ್ಲಾಣಗಳು(ಕತ್ತಿ) ಸ್ಕ್ಯಾಂಡಿನೇವಿಯದಲ್ಲಿ ಹೆಚ್ಚಾಗಿ ಬಳಕೆಯಲ್ಲಿರಲಿಲ್ಲ. ಬ್ರಿಟನ್ ಮೊದಲಾದ ದೇಶಗಳಲ್ಲಿದ್ದ ದೊಡ್ಡ ಎಲೆಯಾಕಾರದ ಖಡ್ಗ ಸ್ಕ್ಯಾಂಡಿನೇವಿಯಕ್ಕೆ ಸು.1000ಕ್ಕೆ ಮೊದಲೇ ಬಂದಿದ್ದಿತು. ಈ ಬಗೆಯ ಖಡ್ಗಕ್ಕೆ ಇಟಲಿ ದೇಶದಲ್ಲಿದ್ದ ಕಂಚಿನ ಹಿಡಿಕೆಯ ಖಡ್ಗ ಮೂಲವಾಗಿದ್ದಿರಬೇಕೆಂದು ಕೆಲವರ ಅಭಿಪ್ರಾಯ. ಅದು ಹಂಗರಿಯಿಂದ ಬಂದುದೆಂದು ಇನ್ನು ಕೆಲವರ ಊಹೆ. ವೃತ್ತಾಕಾರದ ಗುರಾಣಿಯೊಂದೇ ಅಂದಿನ ರಕ್ಷಣಾಯುಧ. ಆ ಕಾಲದಲ್ಲಿ ಕೊಂಬಿನ ಶಿರಸ್ತ್ರಾಣಗಳೂ ಬಳಕೆಯಲ್ಲಿದ್ದುವೆಂದು ಕೆಲವರ ಅಭಿಮತ. ಕಂಚಿನ ಆಭರಣಗಳ ಜೊತೆಗೆ ಅಲ್ಲಲ್ಲಿ ಚಿನ್ನದ ಆಭರಣಗಳೂ ಕಂಡುಬಂದಿವೆ. ಅವುಗಳಲ್ಲಿ ಉಂಗುರ, ಕಡಗ, ಸೊಂಟಪಟ್ಟಿಯಲ್ಲಿ ಧರಿಸುವ ತ್ರಿಕೋಣಾಕಾರದ ಆಭರಣಗಳು ಮುಖ್ಯವಾದವು. ಕುಸುರಿ ಕೆಲಸದಿಂದ ಕೂಡಿದ ಈ ಬಗೆಯ ಆಭರಣಗಳನ್ನು ತಯಾರಿಸಲು ಈ ಜನ ವಿಶಿಷ್ಟ ಉಪಕರಣಗಳನ್ನು ಬಳಸಿಕೊಂಡಿರಬೇಕೆಂದು ಊಹಿಸಲು ಅವಕಾಶವಿದೆ. ಇಂಥ ನಿಕ್ಷೇಪಗಳು ಸ್ಕ್ಯಾಂಡಿನೇವಿಯದ ಅನೇಕ ಕಡೆ ಕಂಡುಬಂದಿವೆ. ಈ ಕಾಲದಲ್ಲಿ ಶವಸುಡುವ ಪದ್ಧತಿ ರೂಢಿಯಲ್ಲಿರಲಿಲ್ಲ; ಶವವನ್ನು ಶವ ಪೆಟ್ಟಿಗೆಗಳಲ್ಲಿಟ್ಟು ಸಮಾಧಿ ಮಾಡಲಾಗುತ್ತಿತ್ತು. ಇವನ್ನು ಕಲ್ಲಿನಲ್ಲಿ ಅಥವಾ ಮರದಲ್ಲಿ ಮಾಡಿರುತ್ತಿದ್ದರು. ಈ ಸಮಾಧಿಕ್ರಮದಿಂದ ಅಂದಿನ ವೇಷಭೂಷಣಗಳ ಪರಿಚಯ ದೊರಕುತ್ತದೆ. ಡೆನ್ಮಾರ್ಕಿನಲ್ಲಿ ಕಂಡುಬಂದ ಇಂಥದೊಂದು ಪೆಟ್ಟಿಗೆಯಲ್ಲಿ ಪುರುಷನ ಅಸ್ಥಿಪಂಜರದ ಜೊತೆಗೆ ಉಣ್ಣೆಯ ಉದ್ದ ಟೋಪಿ, ದೊಡ್ಡದೊಂದು ಅಂಗವಸ್ತ್ರ, ಒಂದು ಗಿಡ್ಡ ಅಂಗಿ, ಚಿಂದಿ ಕಾಲುಚೀಲ, ಅಳಿದುಳಿದ ತೊಗಲಿನ ಪಾದರಕ್ಷೆಗಳು ಕಂಡುಬಂದಿವೆ. ಅಂಗವಸ್ತ್ರದ ಒಳಭಾಗಕ್ಕೂ ಉಣ್ಣೆಯ ಸೊಂಟಪಟ್ಟಿಗೂ ಅಂಚುಪಟ್ಟಿಗಳಿದ್ದುವು. ಉಣ್ಣೆಯ ಶಾಲನ್ನು ತಲೆದಿಂಬಾಗಿ ಅಳವಡಿಸಲಾಗಿತ್ತು. ದೇಹದ ಎಡಪಕ್ಕದಲ್ಲಿ, ಒರೆಯೊಳಗಿಟ್ಟ ಖಡ್ಗವಿತ್ತು; ಕಾಲಬಳಿ ದೊಡ್ಡದೊಂದು ಪೆಟ್ಟಿಗೆ, ಅದರೊಳಗೆ ಇನ್ನೊಂದು ಪೆಟ್ಟಿಗೆ ಇದ್ದುವು. ಒಳ ಪೆಟ್ಟಿಗೆಯಲ್ಲಿ ಇನ್ನೊಂದು ಟೋಪಿಯೂ ಕೊಂಬಿನ ಬಾಚಣಿಗೆಯೂ ಕಂಚಿನ ಕ್ಷೌರಕತ್ತಿಯೂ ಇದ್ದುವು. ಸಮಾಧಿಯೊಳಗೆ ಹೂತಿಟ್ಟ ಈ ಎಲ್ಲ ವಸ್ತುಗಳನ್ನು ಚರ್ಮದಲ್ಲಿ ಸುತ್ತಿಡಲಾಗಿತ್ತು. ಆರ್ಹಸ್ ಎಂಬ ಸ್ಥಳದ ಬಳಿ, ಬೋರಮ್-ಏಷಾಯ್ ಎಂಬಲ್ಲಿ ಇಂತಹದೇ ಇನ್ನೊಂದು ಸಮಾಧಿಯಿದೆ. ಮರದ ಪೆಟ್ಟಿಗೆಯಲ್ಲಿರುವ ಆ ಶವ ಸ್ತ್ರೀಯೊಬ್ಬಳದು. ಶವದ ಮೈಮೇಲೆ ದೀರ್ಘವಾದ ಉಣ್ಣೆಯ ಒಳ ಉಡುಗೆ, ತೋಳಿನ ಕುಪ್ಪಸ, ಬಲೆಬಲೆಯಾದ ಉಣ್ಣೆದಾರದ ಟೋಪಿ, ಕುಚ್ಚು ಕಟ್ಟಿದ ಉಣ್ಣೆಯ ಸೊಂಟಪಟ್ಟಿ, ನೇಯ್ದ ಉಣ್ಣೆಯ ದೊಡ್ಡದೊಂದು ಅಂಗವಸ್ತ್ರ- ಇವು ಕಂಡುಬಂದಿವೆ. ಸಮಾಧಿಯಲ್ಲಿ ಇನ್ನೊಂದು ಟೋಪಿ, ಪದಕ, ಕೊಂಬಿನ ಬಾಚಣಿಗೆ, ಉಂಗುರ, ಎರಡು ಬಳೆ, ಕೊಂಬಿನ ಹಿಡಿಕೆಯುಳ್ಳ ಕಂಚಿನ ಖಡ್ಗ - ಈ ವಸ್ತುಗಳು ದೊರಕಿವೆ. ಉತ್ತರ ಕಂಚುಯುಗ ಈ ಯುಗದಲ್ಲಿ ಶವದಹನ ಪದ್ಧತಿ ಸರ್ವೇಸಾಮಾನ್ಯವಾಗಿತ್ತು. ಸುಟ್ಟ ಮೂಳೆಗಳನ್ನು ಮೊದಲು ಚಿಕ್ಕ ಪೆಟ್ಟಿಗೆಯಲ್ಲಿರಿಸುತ್ತಿದ್ದರು. ತರುವಾಯ ಅವುಗಳನ್ನು ಮಡಕೆಗೆ ಹಾಕಿ ಮಡಕೆಗಳನ್ನು ಪೆಟ್ಟಿಗೆಯಲ್ಲಿರಿಸುತ್ತಿದ್ದರು. ಕೆಲವೊಮ್ಮೆ ಮೂಳೆಗಳನ್ನು ಬರಿಯ ನೆಲದಲ್ಲಿರಿಸಿ, ಅವುಗಳಿಗೆ ಕಲ್ಲಿನ ಛಾವಣಿ ಹಾಕುತ್ತಿದ್ದರು. ಈ ಮಡಕೆ ಪಾತ್ರೆಗಳು ಸಾಮಾನ್ಯವಾಗಿ ಹೂಜಿ ಇಲ್ಲವೆ ಬೋಗುಣಿಯ ಆಕಾರದಲ್ಲಿದ್ದುವು. ಇವುಗಳಿಗೆ ಕೆಲವೊಮ್ಮೆ ಹಿಡಿಕೆಗಳೂ ಇದ್ದುವು. ಸಮಾಧಿಗಳಲ್ಲಿ ಆಯುಧಗಳನ್ನು ಇರಿಸುವ ರೂಢಿ ವಿರಳವಾಗಿತ್ತು. ಆಯುಧಗಳು ಸಾಮಾನ್ಯವಾಗಿ ಹಿಂದಿನ ಯುಗದ ಆಯುಧಗಳಂತೆಯೇ ಇದ್ದುವು. ಕ್ರಮೇಣ ಹೊಸ ಬಗೆಯ ಅಲಂಕಾರದ ಕ್ರಮ ಬಳಕೆಗೆ ಬಂತು; ನವೀನ ರೀತಿಯ ಆಭರಣಗಳೂ ಗೃಹಕೃತ್ಯದ ಸಾಮಗ್ರಿಗಳೂ ತಯಾರಾದುವು. ಅಂದಚಂದದ ವಿವಿಧ ಕಂಚಿನ ಪಾತ್ರೆಗಳು, ವಿವಿಧ ಆಕಾರದ ಚಾಕುಗಳು, ನಾನಾ ಬಗೆಯ ತೊಡುಗೆಗಳೂ ಬಳಕೆಗೆ ಬರತೊಡಗಿದುವು. ಈ ಸಾಮಗ್ರಿಗಳ ಮೇಲೆ ಕೆತ್ತನೆಗಳಿವೆ. ಕೆಲವು ಸಾಮಗ್ರಿಗಳು ನಾಗಮುರಿಯಂತಿವೆ; ಇನ್ನು ಕೆಲವು ವೃತ್ತಾಕಾರವಾಗಿವೆ; ಮತ್ತೆ ಕೆಲವು ಲಾಡಿಯಂತೆ ಅಲೆಯಲೆಯಾಗಿವೆ. ಇವುಗಳಲ್ಲಿ ಹೆಚ್ಚಿನವು ಇಟಲಿ ದೇಶದಿಂದ ಬಂದ ಸಾಮಗ್ರಿಗಳಂತಿದ್ದುವು; ಆಭರಣಗಳು ಹೆಚ್ಚಾಗಿ ಮಧ್ಯ ಯುರೋಪಿನ ಹಾಲ್‍ಸ್ಟಾಟ್ (ಆದ್ಯ ಲೋಹಯುಗದ) ಸಂಪ್ರದಾಯಕ್ಕೆ ಸೇರಿದವು. ಈ ಯುಗ ಕಂಚುಯುಗಕ್ಕೆ ಸೇರಿರುವುದಾದರೂ ಮಧ್ಯ ಹಾಗೂ ದಕ್ಷಿಣ ಯುರೋಪಿನ ಲೋಹಯುಗದ (ಹಾಲ್‍ಸ್ಟಾಟ್ ಯುಗದ ಸಮಕಾಲೀನ) ನಾಗರಿಕತೆಯಿಂದ ಪ್ರಬಲವಾಗಿ ಪ್ರಭಾವಿತವಾ ಗಿದ್ದಿರಬೇಕು. ಈ ಯುಗದ ಕೊನೆಗಾಲದಲ್ಲಿ ಲಾತೇನೆ ಶೈಲಿಯ ಖಡ್ಗ, ಪದಕ ಮೊದಲಾದ ಕಬ್ಬಿಣ ಸಾಮಾನುಗಳ ಉಪಯೋಗ ರೂಢಿಯಲ್ಲಿದ್ದಿರಬೇಕು. ಇವು ಅಂದಿನ ಸಮಾಧಿಗಳಲ್ಲಿ ಕಂಡುಬಂದಿವೆ. ಇದರಿಂದ ಪ್ರಾಯಃ ಕ್ರಿ.ಪೂ. 1ನೆಯ ಇಲ್ಲವೆ 2ನೆಯ ಶತಮಾನಗಳಲ್ಲಿ ಕಬ್ಬಿಣದ ಬಳಕೆ ಸ್ಕ್ಯಾಂಡಿನೇವಿಯಕ್ಕೆ ಬಂದಿರಬಹು ದೆಂದು ಸೂಚಿತವಾಗುವುದು. ಸ್ವೀಡನ್ ಮತ್ತು ನಾರ್ವೆ ದೇಶಗಳ ಕೆಲವು ಭಾಗಗಳಲ್ಲಿ ಅನೇಕಾನೇಕ ಕೆತ್ತನೆ ಕೃತಿಗಳು ದೊರಕಿವೆ. ಯುದ್ಧ, ಪಶುಪಾಲನೆ, ಸಮುದ್ರಯಾನ ಮೊದಲಾದವನ್ನು ಇವು ಚಿತ್ರಿಸುತ್ತವೆ. ಇವೂ ಕಂಚು ಯುಗಕ್ಕೆ ಸೇರಿದವೆಂದು ಕೆಲವರ ಊಹೆ. ಆದರೆ ಇವುಗಳ ಕಾಲ ಖಚಿತವಾಗಿಲ್ಲ. ಸ್ಕ್ಯಾಂಡಿನೇವಿಂಯ ರೋಮನ್ ಚಕ್ರಾಧಿಪತ್ಯಕ್ಕೆ ಸೇರಿರಲಿಲ್ಲವಾದರೂ ಅಲ್ಲಿಯ ನಾಗರಿಕತೆಯ ಮೇಲೆ ರೋಮ್ ನಾಗರಿಕತೆಯ ಪ್ರಭಾವ ಬಹಳ ದಟ್ಟವಾಗಿ ಆಗಿರುವುದು ಕಂಡುಬರುತ್ತದೆ. ಗಾಟ್‍ಲೆಂಡ್ ದ್ವೀಪದಲ್ಲಿ ಅನೇಕ ರೋಮನ್ ನಾಣ್ಯಗಳು ಸಿಕ್ಕಿವೆ. ದೇಶೀಯ ಕಲಾಕೃತಿಗಳಲ್ಲಿ ರೋಮ್ ಪ್ರಭಾವವನ್ನು ನಿಚ್ಚಳವಾಗಿ ಗುರುತಿಸ ಬಹುದಾಗಿದೆ. ಈ ಕಾಲದಲ್ಲಿ ಕಬ್ಬಿಣದ ಬಳಕೆ ಸರ್ವೇಸಾಮಾನ್ಯವಾಗಿತ್ತು. ಜಟ್‍ಲೆಂಡ್ ಮತ್ತು ಷ್ಲೆಸ್‍ವಿಗ್ ಎಂಬ ಕಡೆ ಹೆಂಟೆ ನೆಲದಲ್ಲಿ ಕಂಡುಬಂದ ನಿಕ್ಷೇಪಗಳಿಂದ ಈ ಕಾಲಕ್ಕೆ ಸಂಬಂಧಿಸಿದ ಮಹತ್ತ್ವದ ಸಂಗತಿಗಳನ್ನು ಅರಿಯಬಹುದಾಗಿದೆ. ಈ ನಿಕ್ಷೇಪಗಳು ಯುದ್ಧ ನಡೆದ ಮೇಲೆ ಜನ ಸಮರ್ಪಿಸಿದ ಕಾಣಿಕೆಗಳಾಗಿರಬಹುದು. ಇವುಗಳಲ್ಲಿ ಹಿಡಿಯುಳ್ಳ ಖಡ್ಗ, ನಾನಾ ಬಗೆಯ ಭರ್ಜಿ, ಕೊಡಲಿ, ಬೆಳ್ಳಿಯ ಶಿರಸ್ತ್ರಾಣ, ಗುರಾಣಿ ಮುಂತಾದ ಸುಂದರ ಸಾಮಗ್ರಿಗಳಿವೆ; ನಾನಾ ರೀತಿಯ ಉಪಕರಣಗಳಿವೆ; ಶೃಂಗಾರ ಸಾಧನಗಳಿವೆ. ಇವುಗಳಲೆಲ್ಲ 23 ಮೀ ಉದ್ದದ, ಮರದ ದೋಣಿ ಅತ್ಯಾಕರ್ಷಕವಾದುದು. ಇದರ ಕಾಲ ಸು. 3ನೆಯ ಶತಮಾನ. ಇದೇ ಬಗೆಯ ಕೆಂಪು ಪೈನ್ ಮರದ ಬೇರೊಂದು ದೋಣಿಯೂ ಕಂಡುಬಂದಿದೆ. 5ನೆಯ ಶತಮಾನದಲ್ಲಿ ರೋಮನ್ ಚಕ್ರಾಧಿಪತ್ಯ ಪತನ ಹೊಂದಿದಮೇಲೆ, ಸ್ಕ್ಯಾಂಡಿನೇವಿಯ ನಾಗರಿಕತೆ ದಕ್ಷಿಣದ ಹಾಗೂ ಬ್ರಿಟನ್ನಿನ ಟ್ಯುಟಾನಿಕ್ ನಾಗರಿಕತೆಯೊಡನೆ ಬೆರೆತು ಸಮೃದ್ಧವಾಗಿ ಬೆಳೆಯಿತು. ಆ ಕಾಲಕ್ಕೆ ಸಂಬಂಧಿಸಿದ ಹೆಚ್ಚಿನ ಸಂಗತಿಗಳೇನೂ ಈ ತನಕ ಬೆಳಕಿಗೆ ಬಂದಿಲ್ಲ. ಆಗ ಚತುಷ್ಕೋಣಾಕೃತಿಯ ಮನೆಗಳೇ ಹೆಚ್ಚು. ಶವಸಮಾಧಿ ರೂಢಿ ಗಳಿಂದಲೇ ಅಂದಿನ ಸಾಮಾಜಿಕ ಪದ್ಧತಿಗಳನ್ನು ಊಹಿಸಬೇಕಾಗಿದೆ. ಶವಸಮಾಧಿ ಹಾಗೂ ಶವದಹನಗಳೆರಡೂ ಬಳಕೆಯಲ್ಲಿದ್ದುವು. ಸಮಾಧಿಯ ಪರಿಕರಗಳು ವಿಪುಲವಾಗಿದ್ದುವು; ಪ್ರಸಾಧನ ಸಾಮಗ್ರಿಗಳು ಚೆಲುವಾಗಿದ್ದುವು. ಇವುಗಳ ಅಲಂಕಾರ ರೀತಿ ಹೊಸಬಗೆಯದಾಗಿತ್ತು. ಆ ಕಾಲದ ಸ್ಕ್ಯಾಂಡಿನೇವಿಯದಲ್ಲೂ ಟ್ಯುಟಾನಿಕ್ ಯುರೋಪಿನಲ್ಲೂ ಅಲಂಕಾರ ಕ್ರಮದಲ್ಲಿ ಸಾಮ್ಯವಿರುವುದು ಕಂಡುಬಂದಿದೆ. ಕಂಚು-ಬೆಳ್ಳಿ-ಚಿನ್ನದ ಸಾಮಗ್ರಿಗಳ ರಚನಾ ತಂತ್ರಗಳೂ ವಿವಿಧವಾಗಿದ್ದುವು. ಚಿನ್ನ-ಬೆಳ್ಳಿಯ ಸಾಮಗ್ರಿಗಳು ಸ್ವೀಡನಿನಲ್ಲಿ ಧಾರಾಳವಾಗಿದ್ದುವು. ಗಾಟ್‍ಲೆಂಡ್ ಪ್ರದೇಶದಲ್ಲಿ ಕೆಂಪು ಹರಳಿನ ಆಭರಣಗಳು ವಿರಳವಾಗಿದ್ದುವು. ರೋಮನ್ ಮತ್ತು ಬೆಜಾóಂಟೀಯನ್ ನಾಣ್ಯಗಳ ರೀತಿಯಲ್ಲಿರುವ ವೃತ್ತಾಕಾರದ ಚಿನ್ನದ ಪದಕ ಸ್ಕ್ಯಾಂಡಿನೇವಿಯಕ್ಕೆ ವಿಶಿಷ್ಟವಾದ ಆಭರಣವಾಗಿತ್ತು. ಗಾಜಿನ ಹಾಗೂ ಮರದ ಪಾತ್ರೆಗಳೂ ಮಣ್ಣಿನ ಮಡಕೆಗಳೂ ಇಲ್ಲಿ ಕಂಡುಬಂದಿವೆ. ವೈಕಿಂಗ್ ಯುಗ ಉತ್ತರ ಪ್ರಾಂತೀಯ ಜನರು ಇಲ್ಲಿಯ ತನಕ ವಿದೇಶ ವಾಣಿಜ್ಯೋದ್ಯಮದಲ್ಲಿ ತೃಪ್ತರಾಗಿದ್ದರು; ಇವರ ಯುದ್ಧ ಕಾರ್ಯಾಚರಣೆ ನಾಡಿನ ಹೊರಗಡೆಗೆ ವ್ಯಾಪಿಸಿರಲಿಲ್ಲ. 8ನೆಯ ಶತಮಾನದಲ್ಲಿ ಇವರು ಸಮುದ್ರಗಳ್ಳರಾಗಿ ನೌಕಾ ಪ್ರಯಾಣಿಕರನ್ನು ಹಿಂಸಿಸತೊಡಗಿದರು. 3-4ನೆಯ ಶತಮಾನಗಳ ಆಂಗ್ಲೊಸ್ಯಾಕ್ಸನ್ ಜನರಂತೆ ಇವರೂ ಮೊದಮೊದಲು ಚಿಕ್ಕ ಪುಟ್ಟ ಸುಲಿಗೆಗಳಿಂದಲೇ ತೃಪ್ತರಾಗುತ್ತಿದ್ದರು. ಆದರೆ ಕ್ರಮೇಣ ಇಂಗ್ಲೆಂಡ್, ಉತ್ತರ ಫ್ರಾನ್ಸ್, ಐರ್ಲೆಂಡ್, ಸ್ಕಾಟ್‍ಲಂಡ್, ಫಾರೋಸ್, ಆರ್ಕ್‍ನೀಸ್, ಷೆಟ್‍ಲೆಂಡ್, ಸಿಸಿಲಿ, ರಷ್ಯ ಮುಂತಾದೆಡೆಗಳಲ್ಲಿ ಬಲಪ್ರಯೋಗದಿಂದ ನೆಲೆಸ ತೊಡಗಿದರು. ಐಸ್‍ಲೆಂಡ್, ಗ್ರೀನ್‍ಲೆಂಡ್, ಅಮೆರಿಕ ದೇಶಗಳನ್ನೂ ಪ್ರವೇಶಿಸಿದರು. ಯುರೋಪಿನಾದ್ಯಂತ ಇವರ ಹಾವಳಿ ಹೆಚ್ಚಿತು. ಕೊನೆಗೆ ಏಷ್ಯಮೈನರ್, ಆಫ್ರಿಕ ಖಂಡಗಳಲ್ಲೂ ಹಸ್ತಕ್ಷೇಪ ಮಾಡಿದರು. ವಿದೇಶ ಸಂಚಾರಕ್ಕೆ ಇವರು ಬಳಸಿದ ಹಡಗುಗಳ ಮಾದರಿಗಳು ಸಿಕ್ಕಿವೆ. ಹಡಗಿನಲ್ಲಿ ಮೃತರಾದವರನ್ನು ಇವರು ಹಡಗುಗಳಲ್ಲಿಟ್ಟು ಹೂತು ಬಿಡುತ್ತಿದ್ದರು. ದಕ್ಷಿಣ ನಾರ್ವೆಯ ಗಾಕ್‍ಸ್ಟಾಡ್ ಎಂಬಲ್ಲಿ ಒಂದು ಚಿಕ್ಕ ಯುದ್ಧನೌಕೆಯೂ ಆಸ್‍ಬರ್ಗ್ ಎಂಬಲ್ಲಿ ರಾಜವಿಹಾರ ನೌಕೆಯೂ ಕಂಡುಬಂದಿವೆ. ಎರಡೂ ಸುಸಜ್ಜಿತವಾಗಿದ್ದುವು. ಯುದ್ಧನೌಕೆಯಲ್ಲಿ ನಾಯಕನ ಶಸ್ತ್ರಾಸ್ತ್ರಗಳು, ಅಶ್ವಗಳು ಮೊದಲಾದವುಗಳಿದ್ದುವು. ವಿಹಾರನೌಕೆಯಲ್ಲಿ ರಾಣಿಯ ಶಯ್ಯೆ, ಪಾತ್ರೆ, ಚಿಮ್ಮಟಿಗೆ, ಆಭರಣ ಇತ್ಯಾದಿಗಳಿದ್ದುವು. ವೈಕಿಂಗ್ ಜನರಿಗೆ ಯುದ್ಧವೇ ಏಕಮಾತ್ರ ವೃತ್ತಿಯಾಗಿರಲಿಲ್ಲ. ಕೃಷಿಯಲ್ಲೂ ಇವರು ಆಸಕ್ತರಾಗಿದ್ದರು. ಇವರ ಕೃಷಿಕಲಾಪಗಳಲ್ಲಿ ಹೆಚ್ಚಾಗಿ ಗುಲಾಮರೇ ನಿಯುಕ್ತರಾಗಿದ್ದರು. ಚಳಿಗಾಲವನ್ನು ಜನರು ಮದ್ಯಪಾನ, ಕಥಾಗೋಷ್ಠಿ, ಕ್ರೀಡಾ ವಿನೋದಗಳಲ್ಲಿ ಕಳೆಯುತ್ತಿದ್ದರು. ಮನೆಯಲ್ಲೇ ತಯಾರಿಸಿದ ಹೆಂಡವನ್ನೂ ಒಣಗಿಸಿದ ಮಾಂಸ, ಮೀನು ಮೊದಲಾದ ಖಾದ್ಯ ಪದಾರ್ಥಗಳನ್ನೂ ಚಳಿಗಾಲಕ್ಕೆಂದು ಕೂಡಿಟ್ಟು ಕೊಳ್ಳುತ್ತಿದ್ದರು. ಅತಿಥಿ ಅಭ್ಯಾಗತರನ್ನು ರಾಜಾತಿಥ್ಯ ಪೂರ್ವಕವಾಗಿ ಬರಮಾಡಿಕೊಳ್ಳುತ್ತಿದ್ದರು. ವೈಕಿಂಗ್ ಜನರು ನೆಲಸಿದ ಕಡೆಗಳಲ್ಲೆಲ್ಲ ಇವರಿಗೆ ಸಂಬಂಧಿಸಿದ ಅವಶೇಷಗಳು ಸಿಕ್ಕಿವೆ. ನಾರ್ವೆ, ಐಸ್‍ಲೆಂಡ್ ಮತ್ತು ಸ್ವೀಡನಿನಲ್ಲಿ 1000ದ ತನಕ ಮೂರ್ತಿಪೂಜೆ ಇದ್ದುದರಿಂದ, ಆ ಹಿಂದಿನ ಯುಗದಲ್ಲಿ ಸಮಾಧಿ ಪರಿಕರಗಳು ವಿಪುಲವಾಗಿದ್ದುವು; ಸಮಾಧಿ ರೂಢಿಗಳು ವೈವಿಧ್ಯಪೂರ್ಣವಾಗಿದ್ದುವು. ಕ್ರೈಸ್ತಧರ್ಮ ಹರಡುವುದಕ್ಕೆ ಮುಂಚೆಯೇ ದಹನಪದ್ಧತಿ ಕಡಮೆಯಾಗುತ್ತ ಬಂದು, ಕೊನೆಗೆ ನಿಂತುಹೋಯಿತು. ಗಂಡಸರ ಶವವನ್ನು ಸುಸಜ್ಜಿತವಾಗಿ, ಆಯುಧ, ಕುದುರೆ, ನಾಯಿ ಮೊದಲಾದ ಇತರ ಪರಿಕರಗಳೊಡನೆ ಹೂಳುತ್ತಿದ್ದರು. ಅವರವರ ದೋಣಿಗಳಲ್ಲಿ ಅವರನ್ನು ಹೂಳುವ ಪದ್ಧತಿ ಹೆಚ್ಚು ಪ್ರಚುರವಾಗಿತ್ತು. ಸ್ತ್ರೀಯರ ಮೃತದೇಹಗಳನ್ನು ಅವರ ಉಡುಪು, ಆಭರಣ ಸಮೇತವಾಗಿಯೇ ಹೂಳುತ್ತಿದ್ದರು. ಡೆನ್ಮಾರ್ಕ್ ದೇಶದಲ್ಲಿ ಶವಗಳನ್ನು ದೋಣಿಗಳಲ್ಲಿಟ್ಟು ಹೂಳುವ ಪದ್ಧತಿಯಿರಲಿಲ್ಲ. ಗಣ್ಯ ವ್ಯಕ್ತಿಗಳ ಶವಗಳನ್ನು ಸಮಾಧಿವೇಶ್ಮಗಳಲ್ಲಿ ಹೂಳುತ್ತಿದ್ದರು. ವೈಕಿಂಗ್ ಜನರ ಯುದ್ಧ ಕಾರ್ಯಾಚರಣೆ ಹೆಚ್ಚಿದಂತೆಲ್ಲ, ಇನ್ನಷ್ಟು ಪರಿಷ್ಕøತವಾದ ಆಯುಧಗಳು ಸಿದ್ಧವಾಗತೊಡಗಿದವು. ಭರ್ಜಿ ಬಳಕೆಯಲ್ಲಿದ್ದರೂ ಕೊಡಲಿಗೆ ಹೆಚ್ಚಿನ ಪ್ರಾಧಾನ್ಯ ದೊರೆಯಿತು. ರಮ್ಯವಾದ ಕೊಂಬಿನ ಆಯುಧಗಳು ಅಂದಿನ ಕಮ್ಮಾರರ ಹಸ್ತ ಕೌಶಲಕ್ಕೆ ನಿದರ್ಶನವಾಗಿವೆ. ಸಮಾಧಿಗಳಲ್ಲಿ ಸ್ವರ್ಣ, ರಜತ ಖಚಿತ ಭವ್ಯ ಖಡ್ಗಾಯುಧಗಳು ಕಂಡುಬಂದಿವೆ. ಶಿರಸ್ತ್ರಾಣ, ಡಾಲು, ಕವಚಗಳೂ ಸಿಕ್ಕಿವೆ. ವೈಕಿಂಗ್‍ರಿಗೆ ಆಯುಧಗಳು ಅತ್ಯಮೂಲ್ಯ ನಿಧಿಗಳಾಗಿದ್ದವು. ಹಡುಗುಗಳಿಗೆ ಹೇಗೋ ಹಾಗೇ ಆಯುಧಗಳಿಗೂ ಇವರು ಅರ್ಥವತ್ತಾದ ಹೆಸರು ಕೊಟ್ಟಿದ್ದರು. ಖಡ್ಗಕ್ಕೆ ಐಸ್ ಆಫ್ ದಿ ಬ್ಯಾಟಲ್, ಭರ್ಜಿಗೆ ಸ್ನೇಕ್ ಆಫ್ ದಿ ಅಟ್ಯಾಕ್, ಕೊಡಲಿಗೆ ವಿಚ್ ಆಫ್ ದಿ ಫೀಲ್ಡ್, ಬಾಣಕ್ಕೆ ಟ್ವಿಗ್ ಆಫ್ ದಿ ಕಾಪ್ರ್ಸ್ ಇತ್ಯಾದಿ ಸುಂದರ ಹೆಸರುಗಳನ್ನು ಇಡುತ್ತಿದ್ದರು. ವೈಕಿಂಗ್ ಯುಗದಲ್ಲಿ ಹೆಚ್ಚು ಕಡಮೆ ಎಲ್ಲ ಸಾಮಗ್ರಿಗಳೂ ಅಲಂಕಾರಿಕವಾಗಿರುತ್ತಿದ್ದವು. ಈ ಅಲಂಕಾರ ಶೈಲಿ ಪ್ರಾಣಿಚಿತ್ರಗಳಿಂದ ಕೂಡಿದ ಸಾಂಪ್ರದಾಯಿಕ ವೆಂಡಲ್ ಶೈಲಿಯನ್ನು ಹೋಲುವುದಾಗಿತ್ತು. ಕೊನೆಗೆ, ಐರ್ಲೆಂಡ್ ಹಾಗೂ ಕ್ಯಾರೊಲಿಂಜಿಯನ್ ಸಾಮ್ರಾಜ್ಯವೇ ಮೊದಲಾದ ವಿದೇಶಗಳ ಸಂಪರ್ಕದಿಂದ, 8ನೆಯ ಶತಮಾನದ ಕೊನೆಗೆ ಹೊಸತೊಂದು ಮಿಶ್ರಶೈಲಿ ರೂಢಿಗೆ ಬಂತು. ಆಸ್‍ಬರ್ಗ್ ನಿಕ್ಷೇಪಗಳಲ್ಲಿ ಈ ಬಗೆಯ ಶೈಲಿಗೆ ನಿದರ್ಶನಗಳು ದೊರೆತಿವೆ. 10ನೆಯ ಶತಮಾನದಲ್ಲಿ ಈ ಶೈಲಿಗೆ ಬದಲಾಗಿ ಜೆಲ್ಲಿಂಜ್ ಶೈಲಿ ಪ್ರಾಧ್ಯಾನ್ಯ ಪಡೆಯಿತು. ಇದರಲ್ಲಿ ಪ್ರಾಣಿಚಿತ್ರ ಇನ್ನಷ್ಟು ನೈಸರ್ಗಿಕವಾಗಿದೆ. ಕೆಲವು ಅಂಶಗಳಲ್ಲಿ ಇದಕ್ಕೂ ವೆಂಡಲ್ ಶೈಲಿಗೂ ಹೋಲಿಕೆಯಿದ್ದರೂ ಜೆಲ್ಲಿಂಜ್ ಶೈಲಿ ಐರಿಷ್, ಇಂಗ್ಲಿಷ್ ಹಾಗೂ ಕ್ಯಾರೊಲಿಂಜಿಯನ್ ಶೈಲಿಗಳ ಪ್ರಭಾವ ಫಲವೆಂದು ತಜ್ಞರು ಅಭಿಪ್ರಾಯಪಡುತ್ತಾರೆ. 11ನೆಯ ಶತಮಾನದಲ್ಲಿ ಕೊಂಚಕಾಲ ಜೆಲ್ಲಿಂಜ್ ಶೈಲಿ ಅದೃಶ್ಯವಾಗಿ ರಿಂಗರೈಕ್ ಶೈಲಿ ರೂಢಿಗೆ ಬಂದಿತ್ತು. ಈ ಶೈಲಿಯಲ್ಲಿ ಎದ್ದು ಕಾಣುವುದು ಹೆಣಿಗೆ ಕೆಲಸ, ಎಲೆ ಬಳ್ಳಿಗಳ ಚಿತ್ರ. ಪ್ರಾಣಿಚಿತ್ರ ಬಹಳ ಕಡಮೆ. ಆದರೆ ಕೆಲಕಾಲಾನಂತರ, ಜೆಲ್ಲಿಂಜ್ ಶೈಲಿ ಅರ್ನೆಸ್ ರೀತಿಯಲ್ಲಿ ಪುನಃ ತಲೆಯೆತ್ತಿತ್ತು. ಕ್ರಿಸ್ತಶಕದಲ್ಲಿ ಮಿಶ್ರಜಾತಿಯ ರೊಮನೆಸ್ಕ್ಯು ಪದ್ಧತಿ ಪ್ರಧಾನವಾಯಿತು. ಲಲಿತಕಲೆ ಕಂಚು ಯುಗದ ಜನರು ಗೀತವಾದ್ಯಗಳಲ್ಲೂ ನೃತ್ಯಕಲೆಯಲ್ಲೂ ಆಸಕ್ತರಾಗಿದ್ದರು. ಈ ಯುಗದ ನಿಕ್ಷೇಪಗಳಲ್ಲಿ ದೊರೆತ 2.29ಮೀ ಉದ್ದದ ಕಂಚಿನ ಕಹಳೆ ಅತ್ಯದ್ಭುತವಾಗಿದೆ. ಈ ವಾದ್ಯಕ್ಕೆ ಲರ್ ಎಂದು ಹೆಸರು. ಈ ಬಗೆಯ ಕಂಚಿನ ಎರಕಕ್ಕೂ ಕಲಾಚಾತುರ್ಯಕ್ಕೂ ಎಣೆಯಾದ ವಾದ್ಯ ಬೇರೊಂದಿಲ್ಲ. ಇದರ ಭವ್ಯರಚನೆ ಇಂದಿಗೂ ವಿಸ್ಮಯಕರವಾಗಿದೆ. ನಾರ್ವೆ, ಡೆನ್ಮಾರ್ಕ್, ಸ್ವೀಡನ್ ದೇಶಗಳ ಎಲ್ಲ ಭಾಗಗಳಲ್ಲೂ ಇದು ಜನಪ್ರಿಯವಾಗಿತ್ತು. ಅನ್ಯಸಂಸ್ಕøತಿಗಳ ಪ್ರಭಾವ ಸ್ಕ್ಯಾಂಡಿನೇವಿಯವನ್ನು ಪ್ರವೇಶಿಸತೊಡಗಿದಂದಿ ನಿಂದ ಲರ್ ವಾದ್ಯದ ಬಳಕೆ ಕಡಮೆಯಾಗುತ್ತ ಬಂತು. ವೈಕಿಂಗ್ ಯುಗದಲ್ಲಿ ಯುರೋಪಿಯನ್ ದೇಶಗಳೊಡನೆ ಸ್ಕ್ಯಾಂಡಿನೇವಿಯದ ಸಂಪರ್ಕ ಮತ್ತಷ್ಟು ಬೆಳೆಯಿತು. ನಾರ್ತ್‍ಮೆನ್ ಜನರು ಇಂಗ್ಲೆಂಡಿಗೆ ಬಂದಾಗ ತಮ್ಮ ಜನಪದ ಸಂಗೀತವನ್ನೂ ತಂದರು. ಸ್ಕ್ಯಾಂಡಿನೇವಿಯದ ದೇಶಗಳಿಗೆ ಕ್ರೈಸ್ತಮತ ಧಾರ್ಮಿಕ ಸಂಗೀತ ಸಾಹಿತ್ಯವನ್ನೊದಗಿಸಿತು. ಹಳೆಯ ಜನಪದ ಗೀತೆಗಳಲ್ಲಿ ಹೆಚ್ಚಿನವು ನೃತ್ಯಗಳಾಗಿದ್ದುವು. ಇವುಗಳಿಗೆ ಪ್ರಾಚೀನ ಫ್ರೆಂಚ್ ವರ್ತುಲ ನೃತ್ಯಗಳೇ ಮೂಲ. ನಾರ್ವೆಗೆ ಸೇರಿದ್ದ ಐಸ್‍ಲೆಂಡಿನಲ್ಲಿ 15ನೆಯ ಶತಮಾನದಲ್ಲಿ, ಪ್ಲೇಗ್ ರೋಗ ಸಂಭವಿಸಿ, ಅದರಿಂದ ಸಾವಿರಾರು ಮಂದಿ ಸತ್ತರು. ಅದರೊಡನೆ ಐಸ್‍ಲೆಂಡಿನ ಅನೇಕ ಗೀತ ಪ್ರಕಾರಗಳೂ ನಾಮಾವಶೇಷವಾದುವು. ನಾರ್ವೆ ದೇಶದ ಪ್ರಾಚೀನ ಗೀತ ನೃತ್ಯಗಳಿಗೂ ಫೆಯಿರೊಯಕ್ ಗೀತಗಳಿಗೂ ಗಮನಾರ್ಹ ವಾದ ಸಾಮ್ಯ ಕಂಡುಬರುವುದು. ವೀರಪುರುಷರ ಪ್ರಣಯಗೀತೆಗಳು ಡೆನ್ಮಾರ್ಕ್ ದೇಶದಲ್ಲಿ ಬಲು ಹಿಂದೆ ಲಿಖಿತರೂಪಕ್ಕಿಳಿದುವು. ನಾರ್ವೆ ದೇಶದಲ್ಲಿ ಸು. 19ನೆಯ ಶತಮಾನದ ಮಧ್ಯಭಾಗದ ತನಕವೂ ಇವು ಜನರ ಬಾಯಲ್ಲೇ ಉಳಿದಿದ್ದುವು. ಉತ್ತರದ ಶುದ್ಧ ಜನಪದ ಸಂಗೀತದ ಹೊರತು ಬೇರೆ ಕಲಾಸಂಗೀತಗಳಲ್ಲಿ ವಿದೇಶ ಪ್ರಭಾವ ಸ್ಪಷ್ಟವಾಗಿ ವ್ಯಕ್ತವಾಗುವುದು. ಇಂದು ಸಮಗ್ರ ಸ್ಕ್ಯಾಂಡಿನೇವಿಯಕ್ಕೆ ವಿಶಿಷ್ಟವಾದ ಏಕರೀತಿಯ ಸಂಗೀತ ಪರಂಪರೆಯೇ ಇಲ್ಲ. ಅದು ಕವಲೊಡೆದು ನಾರ್ವೆ ಸಂಗೀತ, ಡೇನಿಷ್ ಸಂಗೀತ, ಸ್ಪ್ಯಾನಿಷ್ ಸಂಗೀತ ಇತ್ಯಾದಿಯಾಗಿ ಪ್ರತ್ಯೇಕ ರೂಪಗಳನ್ನು ತಾಳಿದೆ. ಆದರೆ ಇವೆಲ್ಲಕ್ಕೂ ಹಿಂದಿನ ನಾರ್ಡಿಕ್ ಸಂಗೀತವೇ ಮೂಲ ಪ್ರೇರಣೆಯೆನ್ನಬಹುದು. ಯುರೋಪ್ ಉತ್ತರ ಯುರೋಪ್
3877
https://kn.wikipedia.org/wiki/%E0%B2%85%E0%B2%AE%E0%B3%83%E0%B2%A4%20%E0%B2%98%E0%B2%B3%E0%B2%BF%E0%B2%97%E0%B3%86
ಅಮೃತ ಘಳಿಗೆ
ಅಮೃತ ಘಳಿಗೆ (ಕನ್ನಡ ಕಲರ್ ಚಲನಚಿತ್ರ - ೧೯೮೪) ದೊಡ್ಡೇರಿ ವೆಂಕಟಗಿರಿ ರಾವ್ ಅವರ 'ಅವಧಾನ' ಎಂಬ ಕಾದಂಬರಿಯೇ ಪುಟ್ಟಣ್ಣ ಕಣಗಾಲ್ ಅವರ ಸೃಜನಶೀಲತೆಯಲ್ಲಿ ಜಯಬೇರಿ ಫಿಲಂಸ್ ಅವರ 'ಅಮೃತ ಘಳಿಗೆ'ಯಾಗಿ ರೂಪುಗೊಂಡಿತು. ಚಿತ್ರದುರ್ಗದ ಬಿ.ಎಲ್. ವೇಣುರವರ ಸಂಭಾಷಣೆ, ವಿಜಯ ಭಾಸ್ಕರರ ಸಂಗೀತ ಮತ್ತು ವಿಜಯ ನಾರಸಿಂಹರ ಚಿತ್ರ ಗೀತೆಗಳನ್ನು ಈ ಚಿತ್ರದಲ್ಲಿ ಬಳಸಲಾಗಿದೆ. ಕಲಾವಿದರಾಗಿ - ಶ್ರೀಧರ್ ಮತ್ತು ಜ್ಯೋತಿ, ಬಿ.ಕೆ. ಶಂಕರ್, ಪದ್ಮಾ ವಾಸಂತಿ, ಉಮಾಶ್ರೀ, ರಾಮಕೃಷ್ಣ ಮತ್ತು ಇತರರು ಅಭಿನಯಿಸಿದ್ದಾರೆ. ವರ್ಷ-೧೯೮೪ ಕನ್ನಡಚಿತ್ರಗಳು ಕಾದಂಬರಿ ಆಧಾರಿತ ಕನ್ನಡ ಚಿತ್ರಗಳು
3928
https://kn.wikipedia.org/wiki/%E0%B2%B8%E0%B2%B9%E0%B2%BE%E0%B2%B0
ಸಹಾರ
ಸಹಾರ ಮರುಭೂಮಿ ಪ್ರಪಂಚದ ಎರಡನೆಯ ದೊಡ್ಡ ಮರುಭೂಮಿಯಾಗಿದೆ. ೯,೦೦೦,೦೦೦ ಚದರ ಕಿ.ಮೀ (೩,೫೦೦,೦೦೦ ಚದರ ಮೈಲಿ)ಗಳಷ್ಟು ವಿಶಾಲವಾಗಿ ಉತ್ತರ ಆಫ್ರಿಕಾದ ಉತ್ತರ ಭಾಗದಲ್ಲಿ ಹರಡಿರುವ ಇದು ೨.೫ ದಶಲಕ್ಷ ವರ್ಷಗಳಷ್ಟು ಹಳೆಯದು. ಸಹಾರ ಎಂದರೆ ಅರಾಬಿಕ್ ಭಾಷೆಯಲ್ಲಿ ಒಣ ಭೂಮಿ ಎಂದರ್ಥ. ಭೂಗೋಳ ಸಹಾರ ಮರುಭೂಮಿಯು ಆಫ್ರಿಕಾದ ಹಲವು ದೇಶಗಳಲ್ಲಿ ಹರಡಿ ಕೊಂಡಿದೆ. ಇದರಲ್ಲಿ ಪ್ರಮುಖ ದೇಶಗಳೆಂದರೆ ಅಲ್ಜೀರಿಯ, ಚಾಡ್, ಈಜಿಪ್ಟ್, ಲಿಬ್ಯ, ಮಾಲಿ, ಮೌರಿಟೇನಿಯ, ಮೊರಾಕೊ, ನೈಜರ್, ಪಶ್ಚಿಮ ಸಹಾರ, ಸುಡಾನ್ ಮತ್ತು ಟ್ಯುನೀಶಿಯ. ಇದನ್ನೂ ನೋಡಿ ವಿಶ್ವದ ಅತಿ ದೊಡ್ಡ ಮರುಭೂಮಿಗಳ ಪಟ್ಟಿ ಮರುಭೂಮಿಗಳು ಭೂಗೋಳ
3930
https://kn.wikipedia.org/wiki/%E0%B2%85%E0%B2%B0%E0%B2%97%E0%B3%81
ಅರಗು
ಪ್ರಾಚೀನ ಕಾಲದಲ್ಲಿಯೆ ಅರಗು ಮತ್ತು ಅರಗಿನ ಹಲವು ಉಪಯೋಗಗಳನ್ನು ಭಾರತೀಯರು ಅರಿತುಕೊಂಡಿದ್ದರೆಂದು ಅಥರ್ವವೇದದಲ್ಲಿ ಅರಗಿನ ಕುರಿತಾದ ಉಲ್ಲೇಖದಿಂದ ತಿಳಿದುಬರುತ್ತದೆ. ಹಿನ್ನೆಲೆ ಮಹಾಭಾರತದ ಅರಗಿನ ಮನೆ (ಲಾಕ್ಷಾಗೃಹ)ಯ ಪ್ರಸಂಗ ಯಾರಿಗೆ ತಿಳಿದಿಲ್ಲ? ಭಾರತೀಯರಿಗೆ ಪರಿಚಿತವಾಗಿದ್ದ ಈ ವಸ್ತುವನ್ನು ಅರಬ್ಬಿ ನಾವಿಕರು ಪ್ರಪಂಚದ ಇತರೆಡೆಗೆ ಪರಿಚಯಿಸಿದರು. ಲಾಕ್ಷಾತರು (ಲಾಕ್ಷಾತರು ಮುತ್ತುಗದ ಮರ, ವೈಜ್ಞಾನಿಕ ನಾಮದ್ವಯ, ಬ್ಯೂಟಿಯಾ ಫ್ರಾಂಡೋಸ, ಬ್ಯೂಟಿಯಾ ಮಾನೋಸ್ವರ್ಮ, ಕುಟುಂಬ: ಪ್ಯಾಪಿಲಿಯೋ ನೇಸಿ) ವೃಕ್ಷವನ್ನಾಶ್ರಯಿಸಿ ಬದುಕುವ, (ಅರಗಿನ ಕೀಟ ಜಾಲಿ (ಅಕೇಶಿಯಾ ಅರೇಬಿಕ) ಬೋರೆ(ಜಿಜಿಪಸ್ ಜುಜಬ) ಹಾಗು ಸಾಲ್ (ಶೋರಿಯಾ ರೊಬಸ್ಟ) ಮುಂತಾದ ಮರಗಳನ್ನೂ ಸಹ ಆಶ್ರಯಿಸಿ ಬದುಕುತ್ತದೆ). ಹೋಮೋಪ್ಟಿರ ಕೀಟಗಳ ಗುಂಪಿಗೆ ಸೇರಿದ, ಅರಗಿನ ಕೀಟದ ವೈಜ್ಞಾನಿಕ ನಾಮದ್ವಯ ಲ್ಯಾಸಿಫೆರಲ್ಯಾಕ(ಟ್ಯಾಖಾರ್ಡಿಯ ಲ್ಯಾಕ). ಹೆಣ್ಣು ಕೀಟ ತನ್ನ ದೇಹದ ಚರ್ಮದಲ್ಲಿರುವ ಗ್ರಂಥಿಗಳಿಂದ ಸ್ರವಿಸುವ ಸ್ರಾವ, ಹೊರವಾತಾವರಣದ ಪ್ರಭಾವದಿಂದ ಗಟ್ಟಿಯಾಗುತ್ತದೆ. ಹೀಗೆ ಗಟ್ಟಿಯಾದ ಸ್ರಾವವೇ ಅರಗು. ಉತ್ಪಾದನೆ ಪಾಕಿಸ್ಥಾನ,ಬರ್ಮ, ಶ್ರೀಲಂಕಾ, ಚೀನಾ, ಮಲಯಗಳಲ್ಲಿಯೂ ಕಂಡು ಬರುವ ಅರಗಿನ ಕೀಟದ ಸಂಖ್ಯಾ ಸಾಂದ್ರತೆ ಅಧಿಕವಾಗಿರುವುದು ಭಾರತದಲ್ಲಿ. ಇಂದಿಗೂ ಪ್ರಪಂಚದ ಅರಗಿನ ಉತ್ಪಾದನೆಯಲ್ಲಿ ಭಾರತದ್ದೆ ಮೇಲುಗೈ, ಸುಮಾರು ಶೇ. ೭೦ರಷ್ಟು. ವಾರ್ಷಿಕ ಉತ್ಪಾದನೆ ೩೦೦೦ಟನ್ ಗೂ ಹೆಚ್ಚು. ಮಧ್ಯಪ್ರದೇಶ, ಅಸ್ಸಾಮ್ ಹಾಗು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಅರಗು ವಾಣಿಜ್ಯ ಬೆಳೆ. ಅರಗಿನಿಂದ ನಮ್ಮ ವಾರ್ಷಿಕ ವಿದೇಶಿ ವಿನಿಮಯ ಸುಮಾರು ರೂ ಹದಿನೈದು ಕೋಟಿ. ವೈಜ್ಞಾನಿಕ ಹಿನ್ನೆಲೆ ಅರಗಿನ ಕೀಟವನ್ನು ಕುರಿತಾದ ಪ್ರಥಮ ವೈಜ್ಞಾನಿಕ ಅಧ್ಯಯನ ೧೭೦೯ರಲ್ಲಿ ಫ್ರಾನ್ಸಿನ ಪಾದ್ರಿ ಟ್ಯಾಖಾರ್ಡ್ ರಿಂದ ನಡೆಯಿತು. ಪ್ರಬುದ್ಧ ಹೆಣ್ಣು ಕೀಟ ಗಂಡು ಕೀಟದೊಂದಿಗೆ ಸಂಯೋಗಗೊಂಡ ನಂತರ ತನ್ನ ಸುತ್ತಲು ನಿರ್ಮಿಸಿಕೊಂಡ ಅರಗಿನ ಕವಚದಲ್ಲಿ ಸುಮಾರು ಮೂರುನೂರರಿಂದ ಐದುನೂರು ಮೊಟ್ಟೆಗಳನ್ನಿಡುತ್ತದೆ. ಕೆಲವೇ ಗಂಟೆಗಳಲ್ಲಿ ಮೊಟ್ಟೆಗಳಿಂದ ಹೊರ ಬರುವ ಕೆಂಪು ಬಣ್ಣದ ನಿಂಫ್ (ಡಿಂಬಕಗಳು), ಅರಗಿನ ಕವಚದಲ್ಲಿರುವ ಸೂಕ್ಷ್ಮ ರಂಧ್ರಗಳ ಮೂಲಕ, ಕವಚದಿಂದ ಹೊರಬಂದು, ಕೆಲಕಾಲ ಕೊಂಬೆಗಳ ಮೇಲೆಲ್ಲಾ ಚಲಿಸಿ, ಅಂತಿಮವಾಗಿ ಯೋಗ್ಯವಾದ ಕೊಂಬೆಯ ಮೇಲೆ ಸ್ಥಿತಿಗೊಂಡು, ತಮ್ಮ ಹೀರುನಳಿಕೆಯಿಂದ ಕೊಂಬೆಯ ರಸಸಾರವನ್ನು ಹೀರುತ್ತಾ ಮುಂದಿನ ಬೆಳವಣಿಗೆಯಲ್ಲಿ ತೊಡಗುತ್ತವೆ. ಡಿಂಬಕಗಳ ಮುಂದಿನ ಬೆಳವಣಿಗೆ ನಡೆಯುವುದು, ಅವುಗಳ ಚರ್ಮದ ಗ್ರಂಥಿಗಳಿಂದ ಸ್ರವಿಸಿದ ಸ್ರಾವ ಹೊರವಾತಾವರಣದ ಸಂಪರ್ಕದಿಂದ ಗಟ್ಟಿಯಾಗಿ ಉಂಟಾದ ಅರಗಿನ ಕವಚದಲ್ಲಿ. ಬೆಳವಣಿಗೆಯ ಹಂತದಲ್ಲಿ ಡಿಂಬಕಗಳು ಮೂರು ಬಾರಿ ಪೊರೆಯನ್ನು ಕಳಚುತ್ತವೆ. ಬೆಳವಣಿಗೆ ಪೂರ್ಣಗೊಂಡ ನಂತರ ಕವಚದಿಂದ ಹೊರಹೊಮ್ಮುವ ಪ್ರಬುದ್ಧ ಕೀಟಗಳಲ್ಲಿ ಗಂಡು ಕೀಟಗಳ ಸಂಖ್ಯೆ ಸರಿಸುಮಾರು ಶೇ. ೩೦ರಿಂದ ೪೦ರಷ್ಟು, ಅಭಾವ ಕಾಲದಲ್ಲಿ ಈ ಸಂಖ್ಯೆ ಮತ್ತೂ ಕಡಿಮೆಯಾಬಹುದು. ಗಮ್ಡು ಕೀಟಗಳಲ್ಲಿ ಕೆಲವು ರೆಕ್ಕೆಗಳನ್ನು ಪಡೆದಿದ್ದರೆ, ಕೆಲವು ರೆಕ್ಕೆರಹಿತವಾಗಿರುತ್ತವೆ. ರೆಕ್ಕೆಗಳಿಂದ ಗಮ್ಡು ಕೀಟಗಳಿಗೆ ಗಮನಾಱವಾದಂತಹ ಯಾವ ಉಪಯೋಗವೂ ಇಲ್ಲದಿರುವುದರಿಂದ, ಈ ವ್ಯತ್ಯಾಸ ಹೆಚ್ಚು ಮಹತ್ವ ಪಡೆದಿಲ್ಲ (ಒಂದು ವೈಜ್ಞಾನಿಕ ವಿಶ್ಲೇಷಣೆಯ ಪ್ರಕಾರ, ಜೀವ ವಿಕಾಸ ಪಥದಲ್ಲಿ, ಮೂಲದಲ್ಲಿ ರೆಕ್ಕೆಗಳಿಂದ ಹಾರುತ್ತಿದ್ದ ಗಂಡು ಕೀಟ, ಕಾಲಕ್ರಮೇಣ ಸರಳೀಕೃತಗೊಂಡು ರೆಕ್ಕೆಗಳನ್ನು ಕಳೆದುಕೊಂಡಿತು). ಇಂದಿನ ಅರಗಿನ ಕೀಟ ಹಾರಲಶಕ್ತವಾದದ್ದು. ಕೆಲವು ಗಂಡು ಕೀಟಗಳಲ್ಲಿ ಇಂದಿಗೂ ಕಂಡು ಬರುವ ರೆಕ್ಕೆಗಳು, ಮೂಲ ಗುಣದ ಇಂದಿನ ತೋರ್ಪಡಿಕೆ. ಗಂಡು ಕೀಟಗಳ ಜೀವಿತಾವಧಿ ಮೂರರಿಂದ ನಾಲ್ಕು ದಿನಗಳು. ಈ ಅವಧಿಯೊಳಗೆ ಗಂಡು ಕೀಟಗಳು ಮಿಂಚಿನಂತೆ ಚಲಿಸಿ ಆದಷ್ಟೂ ಹೆಣ್ಣು ಕೀಟಗಳೊಂದಿಗೆ ಸಂಯೋಗವನ್ನು ನಡೆಸುತ್ತವೆ. ಸಂಯೋಗದ ನಂತರ ಹೆಣ್ಣು ಕೀಟದ ಬೆಳವಣಿಗೆ ತೀವ್ರಗತಿಯಲ್ಲಿರುತ್ತದೆ. ಈ ಸಮಯದಲ್ಲಿ ಅರಗಿನ ಉತ್ಪಾದನೆಯೂ ಹೆಚ್ಚು. ಈ ರೀತಿಯಲ್ಲಿ ಉತ್ಪಾದನೆಗೊಂಡ ಅರಗು ಕೊಂಬೆಗಳ ಮೇಲೆ ಮುದ್ದೆ ಮುದ್ದೆಯಾಗಿ ಹರಡಿಕೊಳ್ಳುತ್ತದೆ. ಅರಗಿನ ಕವಚ ನಿರ್ಮಿಸಿಕೊಂಡ ಹೆಣ್ಣು ಕೀಟ ಮೊಟ್ಟೆಗಳನ್ನಿಡುವ ಕ್ರಿಯೆಯನ್ನು ಆರಂಭಿಸುತ್ತದೆ. ಜೀವನ ಚಕ್ರ ಹೀಗೆಯೆ ಮುಂದುವರೆಯುತ್ತದೆ. ಕೀಟದ ಜೀವನ ಚಕ್ರ ಹೊರ ವಾತಾವರಣದ ಉಷ್ಣತೆಯನ್ನನುಸರಿಸಿ ನಾಲ್ಕರಿಂದ ಎಂಟುವಾರಗಳಲ್ಲಿ ಪೂರ್ಣಗೊಳ್ಳುತ್ತದೆ. ಅರಗಿನ ಕೀಟದಲ್ಲಿ ವರ್ಷಕ್ಕೆ, ಬೇಸಿಗೆ ಹಾಗೂ ಚಳಿಗಾಲದ ಬ್ರೂಡ್ ಎಂಬ ಎರಡು ಚಕ್ರಗಳು ಬರುತ್ತವೆ. ಹೀಗೆ ಉತ್ಪಾದನೆಗೊಂಡ ಅರಗನ್ನು ಮರದಿಂದ ಸಂಗ್ರಹಿಸಿ, ಸಂಸ್ಕರಿಸಿ ಬೇಕಾದ ಆಹಾರಕ್ಕೆ ಅಚ್ಚು ಹೊಯ್ಯಲಾಗುತ್ತದೆ. ಪ್ರಾಚೀನಕಾಲದಿಂದಲೂ ಭಾರತ ಹಾಗು ಪರ್ಷಿಯಾದಲ್ಲಿ, ಅರಗಿನಿಂದ ಉಣ್ಣೆ ಗೆ ಕೆಂಪು ಹಾಗೂ ಕೇಸರಿ ಬಣ್ಣ ಕಟ್ಟಲಾಗುತ್ತದೆ. ೧೯ನೇ ಶತಮಾನದ ಪ್ರಾರಂಭದಲ್ಲಿ ಅರಗಿಗೆ ಇದ್ದಂತಹ ಉಪಯೋಗಗಳು, ಇಂದಿನ ಆಧುನಿಕ ಸಂಶ್ಲೇಷಿತ ರಾಳಗಳ ಅಭಿವೃದ್ಧಿಯಿಂದ ಗಣನೀಯವಾಗಿ ಕ್ಷೀಣಿಸಿವೆ. ಆದರೂ, ಮೆರುಗೆಣ್ಣೆಗಳ, ಮೊಹರಿನ ಮೇಣದ, ಅಲೋಹ ಹಾಗೂ ಲೋಹ, ಲೋಹ ಹಾಗು ಲೋಹಗಳನ್ನು ಬೆಸೆಯಲು,ಪೆಟ್ರೋಲ್ ನಿರೋಧದ ಲೇಪಕ ವಸ್ತುಗಳಲ್ಲಿ ಇಂದಿಗೂ ಅರಗು ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಷೆಲ್ ಲ್ಯಾಕ್ ಹಾಗು ರೆಡ್ ಲ್ಯಾಕ್ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಲ್ಲಿರುವ ಅರಗಿನ ಉಪಉತ್ಪನ್ನಗಳು. ಮಧ್ಯಪ್ರದೇಶದ ಕೆಲವು ಬುಡಕಟ್ಟು ಜನಾಂಗಗಳಲ್ಲಿನ ವೈದ್ಯಕೀಯ ಪದ್ಧತಿಗಳಲ್ಲಿ ಅರಗಿನ ಕೀಟಗಳನ್ನು ಉದರ ಹಾಗೂ ಶ್ವಾಸಕೋಶದ ತೊಂದರೆಗಳಿಗೆ ಔಷಧವಾಗಿ ಬಳಸಲಾಗುತ್ತದೆ. ಚಾಲ್ಸಿಡ್ ಜಾತಿಯ ಕೀಟಗಳು ಹಾಗು ಬೆಂಕಿ, ಅರಗಿನ ವಿಧ್ವಂಸಕಾರಿ ಶತೃಗಳು. ಕೃಷಿ ವಿಧಾನ ಎರಡು ತಿಂಗಳ ಸೆಮಿ ಅಲಾಟಾ (ಅರಗಿನ ಕಟ್ಟಿಗೆ) ಸಸಿಯನ್ನು 12 ಇಂಚು ಉದ್ದ, 12 ಇಂಚು ಅಗಲದ ಗುಂಡಿಯಲ್ಲಿ (ಅರಗಿನಕಟ್ಟಿಗೆ) ಸಸಿಯನ್ನು ನೆಡಬೇಕು. ನರ್ಸರಿಯಲ್ಲಿ ಎರಡು ತಿಂಗಳು ಬೆಳೆದ ಸೆಮಿಅಲಾಟಾ ಗಿಡ ನೆಡಲು ಯೋಗ್ಯವಾದದ್ದು. ಆ ನಂತರದಲ್ಲಿ ಆರು ತಿಂಗಳು ಬೆಳೆದ ಅರಗು ಗಿಡಕ್ಕೆ 5–6 ಇಂಚು ಬೆಳೆದ ಹುಳು ಇರುವ ಅರಗಿನಕಟ್ಟಿಗೆ ಗಿಡದ ಕೊಂಬೆಯನ್ನು ತಂದು ಕಟ್ಟಬೇಕು. ಸದೃಢವಾಗಿ ಬೆಳೆದ ಗಿಡಕ್ಕೆ ಕಟ್ಟಿದಾಗ 15–20 ದಿನಗಳಲ್ಲಿ ಹುಳುವು ಉತ್ತಮವಾಗಿ ಬೆಳೆದ ಗಿಡವನ್ನು ಹುಡುಕಿಕೊಂಡು ಕೊಂಬೆಯನ್ನು ಸೇರಿಕೊಳ್ಳುತ್ತದೆ.ಈ ಪದ್ಧತಿಯನ್ನು ಬ್ರೂಕ್‌ಲ್ಯಾಕ್ ಎಂದು ಕರೆಯುತ್ತಾರೆ. ಅರಗು ತಯಾರಿಕೆ ಯು ಟ್ಯೂಬ್: ಹೊರಗಿನ ಸಂಪರ್ಕಗಳು ಅರಗಿನ ಬಗ್ಗೆ ಸಂಪದ ಜ್ಞಾನವಾಹಿನಿಯಲ್ಲಿ ಲೇಖನ ಉಲ್ಲೇಖ ವಿಜ್ಞಾನ ಕೀಟಗಳು
3939
https://kn.wikipedia.org/wiki/%E0%B2%AE%E0%B2%BE%E0%B2%B5%E0%B3%86
ಮಾವೆ
ಮಾವೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಸಾಲೆತ್ತೂರು ಗ್ರಾಮದ ಒಂದು ಪುಟ್ಟ ಹಳ್ಳಿ. ಅಡಿಕೆ ತೋಟ, ಹಸಿರು ಗದ್ದೆ ಹಾಗೂ ಗುಡ್ಡ ಬೆಟ್ಟಗಳಿಂದ ಸುತ್ತುವರಿದಿರುವ ಸುಂದರವಾದ ತಾಣ. ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆ
3951
https://kn.wikipedia.org/wiki/%E0%B2%B0%E0%B2%BE%E0%B2%9C%E0%B2%BE%20%E0%B2%B0%E0%B2%BE%E0%B2%AE%E0%B2%A3%E0%B3%8D%E0%B2%A3
ರಾಜಾ ರಾಮಣ್ಣ
ಡಾ. ರಾಜಾ ರಾಮಣ್ಣ ಆಧುನಿಕ ಭಾರತದ ಒಬ್ಬ ಅಪ್ರತಿಮ ವಿಜ್ಞಾನಿ. ಭಾರತದ ಮೊದಲನೆ ಅಣು ಬಾಂಬ್ ಕಾರ್ಯಕ್ರಮದ ಹರಿಕಾರರಾಗಿದ್ದ ರಾಜಾ ರಾಮಣ್ಣನವರು ೧೯೭೪ರ ಮೇ ೧೮ರಂದು ರಾಜಸ್ಥಾನದ ಪೋಖ್ರಾನ್‍ನಲ್ಲಿ ಜರುಗಿದ ಭಾರತದ ಪ್ರಥಮ ಪರಮಾಣು ಪರೀಕ್ಷೆಯನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿದರು. ಹೋಮಿ ಜಹಂಗೀರ್ ಭಾಬಾರವರ ಆಪ್ತ ಶಿಷ್ಯರಾಗಿದ್ದ ರಾಜಾ ರಾಮಣ್ಣನವರದು ಬಹುಮುಖ ಪ್ರತಿಭೆ. ಅವರು ಶ್ರೇಷ್ಠ ಪರಮಾಣು ವಿಜ್ಞಾನಿಯಲ್ಲದೆ ದಕ್ಷ ಆಡಳಿತಗಾರ, ಸಮರ್ಥ ಸಂಘಟಕ, ನುರಿತ ಪಿಯಾನೋ ಹಾಗು ವಿಯೋಲ ವಾದಕ, ವೇದೊಪನಿಷದ್ ಪಾರಂಗತ, ಉಪಾಧ್ಯಾಯ, ದಾರ್ಶನಿಕ, ರಾಜ್ಯಸಭೆ ಸದಸ್ಯ, ರಕ್ಷಣಾ ರಾಜ್ಯ ಮಂತ್ರಿ ಸಹ ಆಗಿದ್ದರು. ಜನನ, ಬಾಲ್ಯ, ವಿದ್ಯಾಭ್ಯಾಸ, ವೃತ್ತಿ-ಜೀವನ ರಾಜಾ ರಾಮಣ್ಣನವರ ಜನನ ಜನವರಿ ೨೮, ೧೯೨೫ ರಂದು ಕರ್ನಾಟಕದ ತುಮಕೂರಿನಲ್ಲಾಯಿತು. ಮೈಸೂರಿನ ಗುಡ್ ಷೇಫರ್ಡ್ ಕಾನ್ವೆಂಟ್, ಬೆಂಗಳೂರಿನ ಬಿಷಪ್ ಕಾಟನ್ ಸ್ಕೂಲ್ ಮತ್ತು ಸೇಂಟ್ ಜೋಸೆಫ್ಸ್ ಕಾಲೇಜುಗಳಲ್ಲಿ ಇವರ ಮೊದಲ ವ್ಯಾಸಂಗ ನಡೆಯಿತು. ಮದರಾಸಿನ ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಬಿ ಎಸ್ಸಿ (ಆನರ್ಸ್) ಪದವಿ ಪಡೆದ ನಂತರ ೧೯೪೫ರಲ್ಲಿ ಉನ್ನತ ವ್ಯಾಸಂಗಕ್ಕಾಗಿ ಲಂಡನ್ನಿಗೆ ತೆರಳಿದರು. ಲಂಡನ್ನಿನ ಕಿಂಗ್ಸ್ ಕಾಲೇಜಿನಲ್ಲಿ ಪರಮಾಣು ವಿಜ್ಞಾನ ಅಭ್ಯಸಿಸಿ ೧೯೪೯ ರಲ್ಲಿ ಪಿ. ಎಚ್. ಡಿ. ಪದವಿಯನ್ನು ಪಡೆದರು. ತದನಂತರ ಭಾರತಕ್ಕೆ ಮರಳಿ, 1949 ರಲ್ಲಿ ಇವರು ಮುಂಬಯಿಯ ಟಾಟಾ ವಿಜ್ಞಾನ ಕೇಂದ್ರವನ್ನು ಸೇರಿ ಅಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಭಾರತದಲ್ಲಿ ಭೌತವಿಜ್ಞಾನದ ಅಭಿವೃದ್ಧಿಗಾಗಿ ಶ್ರಮಿಸಿದ ರಾಜಾ ರಾಮಣ್ಣನವರು, ಪರಮಾಣು ಕೇಂದ್ರ ವಿದಳನೆಯ (ನ್ಯೂಕ್ಲಿಯರ್ ಫಿಜನ್) ವಿಷಯದಲ್ಲಿ ಆಳವಾದ ಸಂಶೋಧನೆ ನಡೆಸಿದ್ದರು. 1953 ರಲ್ಲಿ ಇವರು ಟ್ರಾಂಬೆಯ ಪರಮಾಣು ಶಕ್ತಿ ಕೇಂದ್ರದ ನ್ಯೂಕ್ಲಿಯರ್ ಭೌತವಿಜ್ಞಾನ ವಿಭಾಗದ ಮುಖ್ಯಸ್ಥರಾಗಿ ನಿಯೋಜಿತರಾದರು. ಟ್ರಾಂಬೆಯಲ್ಲಿ ಪರಮಾಣು ಶಕ್ತಿ ಕೇಂದ್ರ ಪ್ರಾರಂಭವಾದಾಗಿನಿಂದ ಅದರ ಎಲ್ಲ ಚಟುವಟಿಕೆಗಳಲ್ಲೂ ರಾಜಾ ರಾಮಣ್ಣ ಪಾಲುಗೊಂಡಿದ್ದಾರೆ. ಅಪ್ಸರ, ಸೈರಸ್ ಮತ್ತು ಪೂರ್ಣಿಮ-ಈ ರಿಯಾಕ್ಟರುಗಳ ವಿನ್ಯಾಸ ಮತ್ತು ರಚನೆಯಲ್ಲಿ ಇವರು ವಹಿಸಿದ ಪಾತ್ರ ಮಹತ್ತ್ವಪೂರ್ಣವಾದ್ದು. ವಾನ್ ಡಿ ಗ್ರಾಫ್ ವೇಗೋತ್ಕರ್ಷಕ, ಕಲ್ಕತ್ತದಲ್ಲಿಯ ವ್ಯತ್ಯಸ್ಥಶಕ್ತಿ ಸೈಕ್ಲೋಟ್ರಾನ್ ಮತ್ತು ಕಲ್ಪಾಕಮ್‌ನಲ್ಲಿಯ ಸಂಶೋಧನೆಯ ರಿಯಾಕ್ಟರುಗಳು ಇವರ ಅದಮ್ಯ ನಾಯಕತ್ವಕ್ಕೆ ಸಾಕ್ಷಿಗಳಾಗಿವೆ. ನ್ಯೂಟ್ರಾನ್ ಉಷ್ಣೀಕರಣ, ಮಂದಶಕ್ತಿ ನ್ಯೂಕ್ಲಿಯ ಕ್ರಿಯೆಗಳು, ವಿದಳನ -ಹೀಗೆ ಹಲವು ಪ್ರಕಾರಗಳಲ್ಲಿ ರಾಮಣ್ಣ ಉನ್ನತ ಸಂಶೋಧನೆಗಳನ್ನು ನಡೆಸಿದ್ದಾರೆ. ಇವರು ವಿಜ್ಞಾನ ಕ್ಷೇತ್ರದಲ್ಲಿ ಸಲ್ಲಿಸಿರುವ ಕೆಲಸಕ್ಕಾಗಿ ಇವರಿಗೆ ಅನೇಕ ಬಹುಮಾನಗಳೂ ಫೆಲೋಷಿಪ್‌ಗಳೂ ಸಂದಾಯವಾಗಿವೆ. ಇವರು ಪ್ರಕಟಿಸಿರುವ ಪ್ರೌಢಲೇಖನಗಳ ಸಂಖ್ಯೆ ಎಂಬತ್ತನ್ನು ಮೀರಿವೆ. ಅನೇಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಜ್ಞಾನ ಸಮ್ಮೇಳನಗಳಲ್ಲಿ ಇವರು ಪಾಲುಗೊಂಡಿದ್ದಾರೆ. 1963 ರಲ್ಲಿ ಭಾರತೀಯ ವಿಜ್ಞಾನ ಕಾಂಗ್ರೆಸ್ಸಿನ ಸುವರ್ಣ ಅಧಿವೇಶನದಲ್ಲಿ ಭೌತವಿಜ್ಞಾನ ವಿಭಾಗದ ಅಧ್ಯಕ್ಷತೆಯನ್ನು ಇವರು ವಹಿಸಿದ್ದರು. ರಾಜಾ ರಾಮಣ್ಣ ಭೌತವಿಜ್ಞಾನದಲ್ಲಿ ಅಪೂರ್ವ ಸಿದ್ಧಿ ಪಡೆದಿದ್ದರೂ ಪಾಶ್ಚಾತ್ಯ ಸಂಗೀತದಲ್ಲಿ ಇವರಿಗೆ ವಿಶೇಷ ಪರಿಶ್ರಮವಿತ್ತು. ಭಾರತೀಯ ತತ್ತ್ವಶಾಸ್ತ್ರದಲ್ಲಿ ಆಸಕ್ತಿ ತಳೆದಿದ್ದರು. ಭಾರತದ ಅನೇಕ ವಿಶ್ವವಿದ್ಯಾಲಯಗಳು ಇವರಿಗೆ ಗೌರವ ಡಾಕ್ಟೋರೇಟ್ ಪದವಿಗಳನ್ನು ಇತ್ತು ಗೌರವ ತೋರಿವೆ. 1966 ರಲ್ಲಿ ಭೌತವಿಜ್ಞಾನದ ರೂವಾರಿ ಎನಿಸಿದ್ದ ಹೋಮಿ ಜಹಾಂಗೀರ್ ಭಾಭಾ ಅವರ ನಿಧನದ ಬಳಿಕ ರಾಜಾ ರಾಮಣ್ಣನವರು ೨ ಅವಧಿಗಳಲ್ಲಿ (೧೯೭೨-೧೯೭೮ ಹಾಗು ೧೯೮೧-೮೩) ಭಾಬಾ ಅಣು ಸಂಶೋಧನಾ ಕೇಂದ್ರದ (ಬಿ.ಏ.ಆರ್.ಸಿ ಅಥವಾ ಬಾರ್ಕ್) ನಿರ್ದೇಶಕರಾಗಿದ್ದರು. ಇದರ ಜೊತೆಗೆ ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಸಂಸ್ಥೆ ಮತ್ತು ಹೈದರಾಬಾದಿನ ಎಲೆಕ್ಟ್ರಾನಿಕ್ ಕಾರ್ಪೋರೇಷನ್ನಿನ ಅಧ್ಯಕ್ಷರೂ ಆಗಿದ್ದರು. ೧೯೭೮ ರಿಂದ ೧೯೮೧ ರ ವರೆಗೆ ರಾಜಾ ರಾಮಣ್ಣನವರು ರಕ್ಷಣಾ ಮಂತ್ರಿಯ ವೈಜ್ಞಾನಿಕ ಸಲಹೆಗಾರ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಢಿ ಸಂಸ್ಥೆಯ (ಡಿ.ಆರ್.ಡಿ.ಒ) ಮಹಾ ನಿರ್ದೇಶಕ, ಹಾಗೂ ರಕ್ಷಣಾ ಸಂಶೋಧನ ಕಾರ್ಯದರ್ಶಿ, ಹೀಗೆ ೩ ಹುದ್ದೆಗಳನ್ನು ಏಕಕಾಲದಲ್ಲಿ ನಿರ್ವಹಿಸಿದ್ದರು. ಸೆಪ್ಟೆಂಬರ್ ೧, ೧೯೮೩ ರಲ್ಲಿ ಅಣು ಶಕ್ತಿ ಆಯೋಗ (ಏ.ಇ.ಸಿ) ಹಾಗು ಭಾರತ ಸರ್ಕಾರದ ಅಣು ಶಕ್ತಿ ವಿಭಾಗದ(ಡಿ.ಎ.ಇ) ಕಾರ್ಯದರ್ಶಿ ಹುದ್ದೆಯನ್ನು ಸಹ ಅಲಂಕರಿಸಿ ೧೯೮೭ರಲ್ಲಿ ನಿವೃತ್ತರಾದರು. ತದನಂತರ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಪ್ರೌಢ ಅಧ್ಯಯನ ಸಂಸ್ಥೆಯ (ಎನ್.ಐ.ಎ.ಎಸ್) ಅಧ್ಯಕ್ಷರಾಗಿ ೧೯೮೭ರಿಂದ ೧೯೮೯ರ ವರೆಗೆ ದುಡಿದರು. ಮಹನೀಯರು ದಿವಂಗತರಾದಾಗ ಭಾರತೀಯ ವಿಜ್ಞಾನ ಸಂಸ್ಥೆಯ (ಐ.ಐ.ಎಸ್ಸಿ) ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದರು. ೧೯೯೦ರಲ್ಲಿ ರಾಜಾ ರಾಮಣ್ಣನವರು ವಿ.ಪಿ. ಸಿಂಗ್ ಸರ್ಕಾರದಲ್ಲಿ ಕೆಲಕಾಲ ರಕ್ಷಣಾ ರಾಜ್ಯ ಸಚಿವರಾಗಿದ್ದರು. ತದನಂತರ ೧೯೯೭ರಲ್ಲಿ ರಾಜ್ಯಸಭೆಗೆ ಆಯ್ಕೆಯಾದರು. 1998ರಲ್ಲಿ ಇವರು ಬೆಂಗಳೂರಿನಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಪ್ರಥಮ ಅಣು ಬಾಂಬ್ ಪರೀಕ್ಷೆ ರಾಜಾ ರಾಮಣ್ಣನವರು ಭಾಭಾ ಅಣು ಸಂಶೋಧನಾ ಕೇಂದ್ರದ ನಿರ್ದೇಶಕರಾಗಿದ್ದಾಗ ನಡೆದ ಮುಖ್ಯ ಘಟನೆಯೆಂದರೆ, ಭಾರತದ ಪ್ರಥಮ ಅಣು ಬಾಂಬ್ ಪರೀಕ್ಷೆ. "ಪೋಖ್ರಾನ್-೧" ಅಥವಾ "ಆಪರೇಷನ್ ಸ್ಮೈಲಿಂಗ್ ಬುದ್ಧ" ಎಂದು ಕರೆಯಲಾಗುವ ಈ ಕಾರ್ಯಾಚರಣೆಯನ್ನು ಗೌಪ್ಯವಾಗಿ ಹಾಗು ಯಶಸ್ವಿಯಾಗಿ ನಡೆಸಿದ ಶ್ರೇಯಸ್ಸು ರಾಜಾ ರಾಮಣ್ಣನವರಿಗೆ ಸಲ್ಲುತ್ತದೆ. ಒಳ್ಳೆಯ ಬರಹಗಾರರು ರಾಜಾ ರಾಮಣ್ಣನವರು ಉತ್ತಮ ಬರಹಗಾರರಾಗಿದ್ದರು. ಅವರ ಎರಡು ಉಲ್ಲೇಖನೀಯ ಕೃತಿಗಳೆಂದರೆ, ಸ್ಟ್ರಕ್ಚರ್ ಆಫ್ ಮ್ಯೂಸಿಕ್ ಇನ್ ರಾಗ, ಎಂಡ್ ವೆಸ್ಟೆರ್ನ್ ಸಿಸ್ಟೆಮ್ಸ್ ಹಾಗೂ ಇಯರ್ಸ್ ಆಫ್ ಪಿಲಿಗ್ರಿಮೇಜ್: ಆನ್ ಆಟೋಬಯೋಗ್ರಫಿ ಪ್ರಶಸ್ತಿಗಳು ೧೯೬೩ರಲ್ಲಿ ಶಾಂತಿ ಸ್ವರೂಪ ಭಟ್ನಾಗರ್ ಸ್ಮಾರಕ ಪ್ರಶಸ್ತಿ ೧೯೬೮ರಲ್ಲಿ ಪದ್ಮ ಶ್ರೀ ಪ್ರಶಸ್ತಿ ಪದ್ಮ ಭೂಷಣ ಪದ್ಮ ವಿಭೂಷಣ ಮೇಘನಾಥ್ ಸಾಹಾ ಪದಕ ಓಂ ಪ್ರಕಾಶ್ ಭಾಸಿನ್ ಪ್ರಶಸ್ತಿ 1993 ರಲ್ಲಿ ಇವರಿಗೆ ವಿಶ್ವಭಾರತಿ ವಿಶ್ವವಿದ್ಯಾನಿಲಯ ದೇಶಿಕೋತ್ತಮ ಗೌರವ ಪದವಿಯನ್ನು ನೀಡಿ ಗೌರವಿಸಿತು. ಮರಣ ಶ್ರೀಯುತರು ಸೆಪ್ಟೆಂಬರ್ ೨೪, ೨೦೦೪ ರಂದು ಮುಂಬಯಿನಲ್ಲಿ ಅಸುನೀಗಿದರು. ಇವನ್ನೂ ನೋಡಿ ಭಾರತದ ವಿಜ್ಞಾನಿಗಳು ಉಲ್ಲೇಖಗಳು ವಿಜ್ಞಾನ ಭಾರತದ ವಿಜ್ಞಾನಿಗಳು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು ಕರ್ನಾಟಕದ ವಿಜ್ಞಾನಿಗಳು ಹೊರಗಿನ ಕೊಂಡಿಗಳು Interview with Dr. Raja Ramanna Obituary in rediff.com Biography in Vigyan Prasar Science Portal ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
3952
https://kn.wikipedia.org/wiki/%E0%B2%97%E0%B3%86%E0%B2%9C%E0%B3%8D%E0%B2%9C%E0%B3%86%E0%B2%AA%E0%B3%82%E0%B2%9C%E0%B3%86%20%28%E0%B2%9A%E0%B2%B2%E0%B2%A8%E0%B2%9A%E0%B2%BF%E0%B2%A4%E0%B3%8D%E0%B2%B0%29
ಗೆಜ್ಜೆಪೂಜೆ (ಚಲನಚಿತ್ರ)
ಗೆಜ್ಜೆಪೂಜೆ ಚಲನಚಿತ್ರವು ಕನ್ನಡದ ಖ್ಯಾತ ಲೇಖಕಿ, ಎಂ.ಕೆ.ಇಂದಿರ ಅವರ ಸುಪ್ರಸಿದ್ಧ ಕಾದಂಬರಿಯನ್ನಾಧರಿಸಿದ ಚಿತ್ರ. ಕಾದಂಬರಿಯ ಹೆಸರು ಕೂಡ ಗೆಜ್ಜೆಪೂಜೆ. ಜನಪ್ರಿಯ ನಿರ್ದೇಶಕ, ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದಲ್ಲಿನ ಈ ಚಿತ್ರದಲ್ಲಿನ ತಾರಾಗಣದಲ್ಲಿ ಕಲ್ಪನಾ, ಗಂಗಾಧರ್, ಬಾಲಕೃಷ್ಣ, ಆರತಿ, ವಜ್ರಮುನಿ, ಅಶ್ವಥ್, ಲೋಕನಾಥ್, ಲೀಲಾವತಿ, ಪಂಡರೀಬಾಯಿ, ಸಂಪತ್ ಮುಂತಾದವರು ನಟಿಸಿದ್ದಾರೆ. ಸಂಭಾಷಣೆ ನವರತ್ನರಾಂ ಅವರದು. ವಿಜಯಭಾಸ್ಕರ್ ಸಂಗೀತ ನಿರ್ದೇಶಕರಾಗಿರುವ ಈ ಚಿತ್ರಕ್ಕೆ, ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ ಮತ್ತು ಬಿ.ಕೆ.ಸುಮಿತ್ರ ಅವರ ಹಾಡುಗಾರಿಕೆಯಿದೆ. ಕನ್ನಡ ಚಲನಚಿತ್ರಗಳು ಕಾದಂಬರಿ ಆಧಾರಿತ ಕನ್ನಡ ಚಿತ್ರಗಳು ವರ್ಷ-೧೯೭೦ ಕನ್ನಡಚಿತ್ರಗಳು
3957
https://kn.wikipedia.org/wiki/%E0%B2%9C%E0%B3%8B%E0%B2%B3%E0%B2%A6%20%E0%B2%B0%E0%B3%8A%E0%B2%9F%E0%B3%8D%E0%B2%9F%E0%B2%BF
ಜೋಳದ ರೊಟ್ಟಿ
ಜೋಳದ ರೊಟ್ಟಿ ಅಥವಾ ಭಾಕ್ರಿ ಉತ್ತರ ಕರ್ನಾಟಕದ ಊಟದ ಮುಖ್ಯ ಸಾಮಗ್ರಿ ಹಾಗೂ ಅಲ್ಲಿಯ ಸಂಪ್ರದಾಯದ ಒಂದು ಅವಿಭಾಜ್ಯ ಅಂಗ. ಇದನ್ನು ಅಲ್ಲಿಯ ಮುಖ್ಯವಾದ ಬೆಳೆಯಾದ ಜೋಳದಿಂದ ತಯಾರಿಸಲಾಗುತ್ತದೆ ಹಾಗೂ ಬಿಳಿ ಬಣ್ಣದ್ದಗಿರುತ್ತದೆ. ಸೆಜ್ಜೆಯಿಂದ ತಯಾರಾಗುವ ರೊಟ್ಟಿಯ ಬಣ್ಣ ಸ್ವಲ್ಪ ಹಳದಿ. ಮಹತ್ವ ಇದನ್ನು ತಯಾರಿಸಲು ಯಾವುದೇ ತೈಲ ಪದಾರ್ಥವನ್ನು ಉಪಯೋಗಿಸುವುದಿಲ್ಲ. ಇದು ಬರೀ ಶರ್ಕರದ ಕಂತೆ. ಇದು ಎಲ್ಲ ವಯಸ್ಸಿನವರಿಗೂ ಕೊಡಬಹುದಾದ ಖಾದ್ಯ. ಇದನ್ನು ತಯಾರಿಸುವುದು ಒಂದು ಕಲೆ. ಇದನ್ನು ರೊಟ್ಟಿ ಬಡಿಯುವುದು ಎನ್ನುತ್ತಾರೆ. ಇದನ್ನು ಮಾಡುವುದು ಸುಲಭವಲ್ಲ. ಸಾಮಾನ್ಯವಾಗಿ ಬೆಳಿಗ್ಗೆ ರೊಟ್ಟಿ ಬಡಿಯುವುದರ ಟಪ್-ಟಪ್ ಶಬ್ದವನ್ನು ದೂರದಿಂದಲೆ ಕೇಳಿಯೇ ಉತ್ತರ ಕನ್ನಡಿಗರ ಮನೆಯನ್ನು ಗುರ್ತಿಸಬಹುದು. ವೈವಿಧ್ಯತೆಗಳು ಇದನ್ನು ೨ ರೀತಿಯಾಗಿ ಉಣ್ಣಬಹುದು. ಬಿಸಿ ರೊಟ್ಟಿ ಖಟಿ/ಖಡಕ್ ರೊಟ್ಟಿ ಇದು ಉತ್ತರ ಕರ್ನಾಟಕದಲ್ಲೆ ಪ್ರಸಿದ್ದಿಯನ್ನು ಪಡೆದಿದೆ, ಇಲ್ಲಿರುವ ಗುಲಬರ್ಗಾ ಜಿಲ್ಲೆಯ ಶ್ರೀ ಶರಣ ಬಸವೇಶ್ವರ ದೇವಸ್ಥಾನದ ಮಹಾ ದಾಸೋಹದಲ್ಲಿ ಮತ್ತು ಕೊಪ್ಫಳ ಗವಿಸಿದ್ದೇಶ್ವರ ಜಾತ್ರೆಯ ದಾಸೋಹದಲ್ಲಿ ಸುಮಾರು ೩೦ ದಿನಗಳು ಸುತ್ತಮೂತ್ತಲಿನ ಗ್ರಮಸ್ತರಿಂದ ರೊಟ್ಟಿಗಳು ಸ್ವಿಕೃತಿಗೊಳ್ಳುತ್ತದೆ ಇದು ಪ್ರಖ್ಯಾತಿಯನ್ನೆ ಪಡೆದಿದೆ. ಸಾಮಾನ್ಯವಾಗಿ ಬಿಸಿ ರೊಟ್ಟಿ (ಬುಟ್ಟಿಯಿಂದ ಗಂಗಾಳದ ಬದಲು ತೆವೆಯಿಂದ ಗಂಗಾಳಕ್ಕೆ) ಅಡಿಗೆ ಮನೆಯಲ್ಲೇ ಒಲೆ ಮುಂದೆ ಕೂತು ತಿನ್ನುತ್ತಾರೆ. ಇದು ತುಂಬಾ ಮೃದು ಇದ್ದು ಜೀರ್ಣಿಸಲು ಅತಿ ಸುಲಭ. ಖಟಿ ಅಥವಾ ಖಡಕ್ ರೊಟ್ಟಿಯನ್ನು ಸುಡುವಾಗ ತೆವೆಯ ಮೇಲೆ ಸ್ವಲ್ಪ ಜಾಸ್ತಿ ಹೊತ್ತು ಸುಡುತ್ತಾರೆ. ಹಾಗಾಗಿ ಅದು ಹಪ್ಪಳದ ಹಾಗೆ ಖಡಕ್ ಇರುತ್ತದೆ. ಇದನ್ನು ತುಂಬಾ ದಿನಗಳವರೆಗೆ ಕೆಡದಂತೆ ಇಡಲು ಕೆಲವು ಕಡೆ ಬಿಸಿಲಲ್ಲೂ ಇಡುತ್ತಾರೆ. ಇದನ್ನು 1 ತಿಂಗಳವರೆಗೆ ಸಂಗ್ರಹಿಸಿ ಇಡಬಹುದು. ೨೦೦೫ನೇ ಇಸ್ವಿಯ ಅಗಸ್ಟ್ ಜಲ ಪ್ರಳಯದ ಕಾಲದಲ್ಲಿ ನೆರೆ ಪ್ರಭಾವಿತ ಹಳ್ಳಿಗಳಲ್ಲಿ ಖಟಿ ರೊಟ್ಟಿಗಳನ್ನು ಹಂಚಲಾಗಿತ್ತು. ಉಲ್ಲೇಖಗಳು ಖಾದ್ಯ, ತಿನಿಸು ಉತ್ತರ ಕರ್ನಾಟಕ ಆಹಾರ
3959
https://kn.wikipedia.org/wiki/%E0%B2%B9%E0%B3%81%E0%B2%AC%E0%B3%8D%E0%B2%AC%E0%B2%B3%E0%B3%8D%E0%B2%B3%E0%B2%BF%20%E0%B2%95%E0%B2%A8%E0%B3%8D%E0%B2%A8%E0%B2%A1
ಹುಬ್ಬಳ್ಳಿ ಕನ್ನಡ
ಹುಬ್ಬಳ್ಳಿ ಕನ್ನಡ ಅಥವಾ ಉತ್ತರ ಕರ್ನಾಟಕದ ಕನ್ನಡ ತನ್ನದೇ ಆದ ವಿಶಿಷ್ಟ ಛಾಪು ಹೊಂದಿದೆ. ಇದು ಸಹ ಕನ್ನಡವೇ ಆದರೂ ಉಪಯೋಗಿಸುವ ರೀತಿ, ಶಬ್ದಗಳ ಸಂಗ್ರಹ, ಉಚ್ಛಾರಣೆ, ಪದಗಳ ಪ್ರಯೋಗ ಹೀಗೆ ಎಲ್ಲವೂ ವಿಭಿನ್ನ. ಈ ಮಾತು ಎಲ್ಲಾ ಪ್ರದೇಶಗಳ ಕನ್ನಡಕ್ಕೂ ಅನ್ವಯಿಸುತ್ತದೆ. ಪ್ರದೇಶದಿಂದ-ಪ್ರದೇಶಕ್ಕೆ, ಪ್ರಾಂತ್ಯದಿಂದ-ಪ್ರಾಂತ್ಯಕ್ಕೆ ಕನ್ನಡ ಭಾಷೆ ನಾನಾ ರೀತಿ ಬದಲಾವಣೆ ಹೊಂದಿದೆ. ಆದರೆ ಅಂತರಾಳದಲ್ಲಿ ಕನ್ನಡ ಕನ್ನಡವೇ. ಉತ್ತರ ಕರ್ನಾಟಕದಲ್ಲಿ ಕಂಡು ಬರುವ ಸಾಮಾನ್ಯ ಪದಗಳನ್ನು ಗಮನಿಸಿ. ಅನ್ಯ ಪ್ರದೇಶಗಳ ಕನ್ನಡಿಗರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಉತ್ತರ ಕರ್ನಾಟಕ
3961
https://kn.wikipedia.org/wiki/%E0%B2%A7%E0%B2%BE%E0%B2%B0%E0%B2%B5%E0%B2%BE%E0%B2%A1%20%E0%B2%AA%E0%B3%87%E0%B2%A1
ಧಾರವಾಡ ಪೇಡ
ಧಾರವಾಡ ಪೇಡ ಕರ್ನಾಟಕ ರಾಜ್ಯದ ಹುಬ್ಬಳ್ಳಿ-ಧಾರವಾಡಗಳಲ್ಲಿ ಪ್ರಸಿದ್ಧವಾದ ಸಿಹಿ ತಿಂಡಿಯಾಗಿದೆ. ಈ ಪೇಡದ ಹೆಸರಲ್ಲಿ ಧಾರವಾಡ ಎಂಬ ಸ್ಥಳನಾಮವಿದೆ. ಹಾಗಾಗಿ ಇದು ಉತ್ತರ ಕರ್ನಾಟಕದ ಧಾರವಾಡ ಸ್ಥಳದಲ್ಲಿನ ಉತ್ಪಾದನೆಯಾಗಿದೆ. ಈ ಪೇಡವು ದೇಶಾದ್ಯಂತ ಪ್ರಸಿದ್ಧವಾಗಿದೆ. ಹುಬ್ಬಳ್ಳಿಯಲ್ಲಿ ಈ ಸಿಹಿಯು ಉತ್ತಮ ದರ್ಜೆಯಲ್ಲಿ ಠಾಕೂರರ ಪೇಡೆ ಅಂಗಡಿಯಲ್ಲಿ ದೊರೆಯುತ್ತದೆ. ಈ ಸಿಹಿಯು ಸುಮಾರು ೧೭೫ ವರ್ಷಗಳಷ್ಟು ಹಿಂದಿನಿಂದ ಬಳಕೆಗೆ ಬಂದಿದೆ. ಧಾರವಾಡ ಫೇಡವು ಭಾರತದ ಭೌಗೋಳಿಕ ಚಿಹ್ನೆಗಳಲ್ಲಿ ಒಂದಾಗಿದೆ. ಇದರ GI ಟ್ಯಾಗ್ ಸಂಖ್ಯೆಯು ೮೫ ಆಗಿದೆ. ಇಂಗ್ಲಿಷ್ ಭಾಷೆಯಲ್ಲಿ Pheda/Pedha ಎಂಬ ಪದ ಬಳಕೆಯಲ್ಲಿದೆ. ಆಡುಭಾಷೆಯಲ್ಲಿ ಧಾರವಾಡ ಫೇಡೆ ಅಥವಾ ಧಾರವಾಡ ಪೇಢೆ ಎಂದು ಕರೆಯುವ ಧಾರವಾಡ ನಗರದ ಸ್ವಾದಿಷ್ಟ ಸಿಹಿತಿಂಡಿ. ಇದನ್ನು ಧಾರವಾಡದ ಒಂದು ಭಾಗವಾಗಿಯೇ ಪರಿಗಣಿಸಲಾಗುತ್ತಿದೆ. ಧಾರವಾಡ ಅಂದರೆ ಪೇಡ, ಪೇಡ ಅಂದರೆ ಧಾರವಾಡ ಅನ್ನುವ ರೀತಿ ಇದು ಖ್ಯಾತಿಯನ್ನು ಪಡೆದಿದೆ. "ಠಾಕೂರ ಪೇಡಾ'' ಎಂದು ಮೊದಲು ಕರೆಯಲ್ಪಡುತ್ತಿದ್ದ ಧಾರವಾಡದ ಪೇಡಕ್ಕೆ ಸುಮಾರು ಒಂದೂವರೆ ಶತಮಾನದಷ್ಟು ಸುದೀರ್ಘ ಇತಿಹಾಸವಿದೆ. ಬೇರೆ ಪೇಡಾಗಳಿಗೆ ಹೋಲಿಸಿದರೆ ಇದು ತೀರ ಭಿನ್ನ. ಆದರೆ ತನ್ನದೇ ಆದ ವಿಶಿಷ್ಠ ರುಚಿ ಮತ್ತು ಗುಣಕ್ಕೆ ಹೆಸರುಗಳಿಸಿದೆ. ಶತಮಾನಗಳ ಹಿಂದೆ ಉತ್ತರ ಭಾರತದ ಲಖ್ನೋ ನಗರದಿಂದ ವಲಸೆಬಂದ 'ಥಾಕೂರ್ ಪರಿವಾರ', ಜೀವನೋಪಾಯಕ್ಕಾಗಿ ಪಾರಂಪರಿಕವಾಗಿ ಚಾಲ್ತಿಯಲ್ಲಿದ್ದ 'ಪೇಡಾ' ತಯಾರಿಕೆಯನ್ನು ಧಾರವಾಡದಲ್ಲೂ ಮುಂದುವರೆಸಿದರು. ಮೊದಲು 'ಥಾಕೂರ್ ಫೇಡ' ಎಂದು ಹೇಳಿ ಮಾರುತ್ತಿದ್ದ ಸಿಹಿತಿನಿಸು, ಕಾಲಕ್ರಮೇಣದಲ್ಲಿ 'ಧಾರವಾಡ್ ಪೇಡ' ಎಂಬ ಹೆಸರಿನಿಂದ ಜನಪ್ರಿಯಗೊಂಡಿತು. ಕೇವಲ ಅತ್ಯುತ್ತಮ ರುಚಿ ಮತ್ತು ಗುಣಮಟ್ಟವನ್ನು ಕಾಯ್ದುಕೊಂಡು ಬಂದು ಈಗ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ವಲಯದಲ್ಲೂ ಹೆಸರುಗಳಿಸಿದೆ. ಥಾಕುರ್ ಕುಟುಂಬ ಅತಿ ಶ್ರದ್ಧೆ ಮತ್ತು ಸಂಯಮದಿಂದ ಸಿಹಿತಿಂಡಿ ತಿನಸುಗಳನ್ನು ತಯಾರಿಸುತ್ತಾ ಬಂದಿದೆ. ಅದರಲ್ಲಿ ಪೇಡಕ್ಕೆ ವಿಶೇಷ ಸ್ಥಾನವಿದೆ. ಕೃತಕಬಣ್ಣ ಇಲ್ಲವೇ ರಾಸಾಯನಿಕಗಳ ಬಳಕೆ ಇಲ್ಲದ ಶುದ್ಧವಾದ ಹಾಲು, ಸಕ್ಕರೆಗಳ ಹದವಾದ ಮಿಶ್ರಣದಿಂದ 'ಸ್ವತಃ ಕೈ'ನಿಂದ ತಯಾರಿಸಲ್ಪಡುವ ತನ್ನದೇ ಆದ 'ಸ್ವಾಭಾವಿಕ ಬಣ್ಣ' ಹೊಂದಿದೆ. ಇದರ ಗುಣಮಟ್ಟವನ್ನು ಅತಿ ಎಚ್ಚರಿಕೆಯಿಂದ ಕಾಯ್ದುಕೊಂಡು ಬಂದಿದ್ದಾರೆ ಸೀಮಿತ ಪ್ರಮಾಣದಲ್ಲಿ 'ಪ್ರತಿದಿನವೂ ತಾಜ' ತಯಾರಾಗುವ ಈ ಪೇಡ ಕೊಳ್ಳಲು ಗ್ರಾಹಕರು ಸರತಿಯಲ್ಲಿ ಕಾಯಬೇಕು. 'ಧಾರವಾಡ ಪೇಡಾ'ಕ್ಕೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಪ್ರಶಸ್ತಿ ಪುರಸ್ಕಾರಗಳು ಸನ್. ೧೯೧೩ ರಲ್ಲಿ 'ಲಾರ್ಡ್ ವಿಲಿಂಗ್ಟನ್ ಮೆಡಲ್', ಸನ್. ೧೯೯೯ ರಲ್ಲಿ 'ಕರ್ನಾಟಕ ಸರ್ಕಾರ ಪ್ರಶಸ್ತಿ' ಸನ್. ೨೦೦೧ ರಲ್ಲಿ 'ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ' ಸನ್. ೨೦೦೨ ರಲ್ಲಿ 'ರಾಜೀವ್ ಗಾಂಧಿ ಎಕ್ಸಲೆನ್ಸಿ ಪ್ರಶಸ್ತಿ' ಮುಂತಾದವುಗಳು. ತಯಾರಿಸುವ ವಿಧಾನ ಇದನ್ನು ಹಾಲಿನಿಂದ ತಯಾರಿಸಲಾಗುತ್ತದೆ. ಹಾಲನ್ನು ಕುದಿಸಿ, ಅದರಲ್ಲಿರುವ ನೀರಿನಂಶವನ್ನು ಪೂರ್ಣವಾಗಿ ತೆಗೆಯಲಾಗುತ್ತದೆ. ನಂತರ ಸಕ್ಕರೆ ಬೆರೆಸಿ ಈ ಸಿಹಿ ತಿಂಡಿಯನ್ನು ತಯಾರಿಸಲಾಗುತ್ತದೆ. ಇವನ್ನೂ ನೋಡಿ ಗೋಕಾಕ್ ಕರದಂಟು ಅಮೀನಗಡ ಕರದಂಟು ಮಿರ್ಚಿ ಭಜಿ ಉಲ್ಲೇಖ ಖಾದ್ಯ, ತಿನಿಸು ಆಹಾರ ಭಾರತದ ಭೌಗೋಳಿಕ ಸಂಕೇತಗಳು
3962
https://kn.wikipedia.org/wiki/%E0%B2%AE%E0%B2%BF%E0%B2%B0%E0%B3%8D%E0%B2%9A%E0%B2%BF%20%E0%B2%AD%E0%B2%9C%E0%B2%BF
ಮಿರ್ಚಿ ಭಜಿ
ಮಿರ್ಚಿ ಭಜಿ ಯನ್ನು ಸಾಮಾನ್ಯ ಭಜಿಯ ಹಾಗೆಯೇ ಎಣ್ಣೆಯಲ್ಲಿ ಕರಿದು ತಯಾರಿಸಲಾಗುತ್ತದೆ. ಆದರೆ ವಿಶೇಷತೆಯೆಂದರೆ ಅದರೊಳಗಿರುವ ಖಾರವಾದ ಮಿರ್ಚಿ ಅಂದರೆ ಹಸಿಮೆಣಸಿನಕಾಯಿ. ಇದು ಭಜಿಗೆ ಬೇಕಾದ ರುಚಿಯನ್ನು ನೀಡುತ್ತದೆ. ಉತ್ತರ ಕರ್ನಾಟಕ ಹೆಮ್ಮೆಯ ತಿನಸುಗಳಲ್ಲೊಂದು ಭಜಿಯು ಒಂದು ವಿಶಿಷ್ಟ ಖಾದ್ಯ. ಸಾಮಾನ್ಯವಾಗಿ ಮಿರ್ಚಿಯನ್ನು ಹಸಿಮೆಣಸಿನಕಾಯಿಯನ್ನು ಉಪಯೋಗಿಸಿ ಮಾಡುತ್ತಾರಾದರೂ ಈಗೀಗ ಬದನೆಕಾಯಿಯ ಎರಡು ಅಗಲವಾದ ತೆಳು ಹೋಳುಗಳ ಮಧ್ಯೆ ಹಸಿ ಚಟ್ನಿ ಹಚ್ಚಿ ಮಿರ್ಚಿ ಕರಿದು ಕೊಡುವದೂ ಉಂಟು. ಇದೂ ಕೂಡ ಇತ್ತೀಚೆಗೆ ಜನಪ್ರಿಯವಾಗುತ್ತಿದೆ. ಒಟ್ಟಿನಲ್ಲಿ ಮಿರ್ಚಿಭಜಿ ಉತ್ತರ ಕರ್ನಾಟಕದ ಹೆಮ್ಮೆ. ಭಜಿ ಮಾಡಲು ಬೇಕಾಗುವ ಸಾಮಗ್ರಿಗಳು ಕಡಲೆ ಹಿಟ್ಟು ಹಸಿ ಮೆಣಸಿನಕಾಯಿ ಕಾರದ ಪುಡಿ ಉಪ್ಪು ಸೊಡಾ ಎಣ್ಣೆ ಮಾಡುವ ವಿಧಾನ ಕಪ್ ಕಡಲೆ ಹಿಟ್ಟನ್ನು ತೆಗೆದುಕೊಳ್ಳಬೇಕು. ಅದರಲ್ಲಿ ಸ್ವಲ್ಪ ಖಾರದ ಪುಡಿ ಮತ್ತು ೧ ಚಿಟಿಗೆ ಸೋಡಾ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಸ್ವಲ್ಪ ನೀರನ್ನು ಹಾಕಿ ಕಲಸಿಕೊಳ್ಳಬೇಕು. ಹೆಚ್ಚು ನೀರನ್ನು ಹಾಕಬಾರದು. ೧೦ ನಿಮಿಷದ ನಂತರ ೨ ಕಪ್ ಎಣ್ಣೆಯನ್ನು ಕಾಯಿಸಲು ಇಡಬೇಕು. ಎಣ್ಣೆ ಕಾದ ನಂತರ ಉದ್ದ ಮತ್ತು ದಪ್ಪ ಹಸಿ ಮೆಣಸಿನಕಾಯಿಯನ್ನು ಕಲಸಿದ ಕಡಲೆ ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಬಿಡಬೇಕು. ಅದು ಕಂದು ಬಣ್ಣಕ್ಕೆ ಬಂದ ನಂತರ ತೆಗೆಯಬೇಕು. ಈಗ ನಿಮ್ಮ ಬಿಸಿ ಬಿಸಿ ಮೆಣಸಿನಕಾಯಿ ಬಜ್ಜಿ ತಿನ್ನಲು ರೆಡಿ. ಇವನ್ನೂ ನೋಡಿ ದಾವಣಗೆರೆ ಮೆಣಸಿನಕಾಯಿ ಖಾದ್ಯ/ತಿನಿಸು
3963
https://kn.wikipedia.org/wiki/%E0%B2%97%E0%B2%BE%E0%B2%A6%E0%B3%86
ಗಾದೆ
ಗಾದೆಗಳು ಜನಜನಿತವಾದ ಅನುಭವಿಗಳಿಂದ ನುಡಿಯಲ್ಪಟ್ಟ ಸತ್ಯವಾಕ್ಯಗಳು. ಹಲವು ಬಾರಿ ಈ ವಾಕ್ಯಗಳು ರೂಪಕ, ಉಪಮೆ, ದೀಪಕ, ಅಲಂಕಾರಗಳಾಗಿರುತ್ತವೆ. ಉದಾಹರಣೆಗೆ: ಅತಿಆಸೆ ಗತಿ ಕೇಡು, ಕುಂಬಾರನಿಗೆ ವರುಷ,ದೊಣ್ಣೆಗೆ ನಿಮಿಷ, ಬೆಕ್ಕಿನ ತಲೀ ಮ್ಯಾಲ ದೀಪ ಇಟ್ಹಾಂಗ, ಹೊಳೆಗೆ ಸುರಿದರೂ ಅಳೆದು ಸುರಿಯಬೇಕು, ಕೈ ಕೆಸರಾದರೆ ಬಾಯಿ ಮೊಸರು.(English translation: Sow the seeds to get ripen fruits.) ಹಾವೂ ಸಾಯ್ಬಾರದು, ಕೋಲೂ ಮುರೀಬಾರ್ದು ಮಣ್ಣಿನಿಂದ ಮಣ್ಣಿಗೆ (English: from mud to the mud) ಅರ್ಥ: ಭೂತಾಯಿಯ ಮಡಿಲಲ್ಲಿ ಹುಟ್ಟಿದ ನಾವೆಲ್ಲರೂ ಕಡೆಗೆ ಭೂತಾಯಿಯ ಮಡಿಲಿಗೆ ಸೇರುತ್ತೇವೆ. ಸೊನ್ನೆಯಿಂದ ಸೊನ್ನೆಗೆ (English: from nothing to nothing) ಅರ್ಥ: [ಬೌದ್ಧ ಧರ್ಮದ ಪ್ರಕಾರ,] ಶೂನ್ಯದಿಂದ ಹುಟ್ಟಿದ ಎಲ್ಲವೂ ಕಡೆಗೆ ಶೂನ್ಯದಲ್ಲಿ ವಿಲೀನಗೊಳ್ಳುತ್ತವೆ. [ಹಿಂದೂ ಧರ್ಮದ ಪ್ರಕಾರ], ಪರಮಾತ್ಮನಲ್ಲಿ ಹುಟ್ಟಿದ ಎಲ್ಲವೂ ಕಡೆಗೆ ಪರಮಾತ್ಮನಲ್ಲಿ ಐಕ್ಯಗೊಳ್ಳುತ್ತವೆ. ಹೋಲಿಕೆ/ಉಪಮೆಗೆ ಸಂಭಂಧಿಸಿದ ಗಾದೆಗಳು ಬೆಟ್ಟಕ್ಕೆ ಕಲ್ಲು ಹೊತ್ತ ಹಾಗೆ. ವೇದ ಸುಳ್ಳಾದರು ಗಾದೆ ಸುಳ್ಳಾಗದು. ಮಾತು ಆಡಿದರೆ ಹೋಯ್ತು,ಮುತ್ತು ಒಡೆದರೆ ಹೋಯ್ತು. ಹತ್ತು ಕಟ್ಟುವಲ್ಲಿ ಒಂದು ಮುತ್ತು ಕಟ್ಟು. ಮಾಡಿದ್ದುಣ್ಣೋ ಮಹಾರಾಯ. ದೂರದ ಬೆಟ್ಟ ನುಣ್ಣಗೆ. ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ. ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ. ಜಟ್ಟಿ ಅಡಿಗೆ ಬಿದ್ದರೂ ಮೂಗು ಮೇಲಿದೆ ಅಂದ. ಸಮಯದ ಮಹತ್ವ ಗಾದೆಗಳಲ್ಲಿ ಶಾಪ ನೀನು ಹೋದ ದಾರಿಲಿ ಹಿ೦ದಕ್ಕ ಬರದೆ ಹೊಗ ನಿನ್ನ ಮಾರಿ(=ಮೋರೆ, ಮುಖ) ಮಣ್ಣಾಗೆ ಅಡಗಲಿ ಪಾಪಿಯ(ನ್ನು) ಪಾಪಿ ತಿಂದೋಗಲಿ ನಿನ್ನ ಬಾಯಾಗೆ ಹುಳ ಬೀಳ(-ಲಿ) ನಿನ್ನ ಹೆಣ ಎತ್ತ(-ಲಿ) ನೀ ಡಬ್ಬಿದ್ದು ಸಾಯಿ(=ನೀನು ಡಬ್ಬ ಬಿದ್ದು ಸಾಯಿ, ನೀ ಮಕಾಡೆ ಬಿದ್ದು ಸಾಯಿ) ನಿನ್ನ ಬಾಯಾಗೆ ಮಣ್ಣು ಹಾಕ(-ಲಿ) ನೀ ನೆಗೆದು ಬಿದ್ದು ನಲ್ಲಿಕಾಯಾಗ ನಿನ್ನ ಮನೆ ಎಕ್ಕುಟ್ಟಿ ಹೋಗ(-ಲಿ) (=> ನಿನ್ನ ಮನೆಯಲ್ಲಿ ಎಕ್ಕದ ಗಿಡ ಹುಟ್ಟಿ ಮನೆ ಹಾಳಾಗಿ ಹೋಗಲಿ) ನಿನ್ನ ನಾಲಗೆ ಸೇದು ಹೋಗ(-ಲಿ) ಪ್ರಕೃತಿ/ವ್ಯವಸಾಯಕ್ಕೆ ಸಂಬಂಧಿಸಿದ ಗಾದೆಗಳು ಅಡವಿಯ ದೊಣ್ಣೆ ಪರದೇಸಿಯ ತಲೆ ಅಳಿವುದೇ ಕಾಯ ಉಳಿವುದೇ ಕೀರ್ತಿ ಅಂದು ಬಾ ಅಂದ್ರೆ ಮಿಂದು ಬಂದ ಅಂಗೈ ಹುಣ್ಣಿಗೆ ಕನ್ನಡಿ ಯಾಕೆ ಆಷಾಡದ ಗಾಳಿ ಬೀಸಿ ಬೀಸಿ ಬಡಿವಾಗ, ಹೇಸಿ ನನ್ನ ಜೀವ ಹೆಂಗಸಾಗಬಾರದೇ ಆದ್ರೆ ಒಂದು ಅಡಿಕೆ ಮರ, ಹೋದ್ರೆ ಒಂದು ಗೋಟಡಿಕೆ ಬೇಲೀನೇ ಎದ್ದು ಹೊಲ ಮೇಯ್ದಂತೆ ಹಣ್ಣೆಲೆ ಉದುರುವಾಗ ಚಿಗುರೆಲೆ ನಗುತಿತ್ತು ಹಣ್ಣು ತಿಂದೋನು ನುಣುಚಿ ಕೊಂಡ ಸಿಪ್ಪೆ ತಿಂದೋನು ಸಿಗ್ಹಾಕೊಂಡ ಹದ ಬಂದಾಗ ಅರಗಬೇಕು ಬೆದೆ ಬಂದಾಗ ಬಿತ್ತಬೇಕು ಹಿತ್ತಲ ಗಿಡ ಮದ್ದಲ್ಲ ಹತ್ತರ ಮಾತು ರುಚಿಯಲ್ಲ ಹೊಳೆಗೆ ಸುರಿದರೂ ಅಳೆದು ಸುರಿ ಹುಣ್ಣಿಮೆ ಬರುವತನಕ ಅಮಾಸೆ ನಿಲ್ಲದು, ಅಮಾಸೆ ಬರುವತನಕ ಹುಣ್ಣಿಮೆ ನಿಲ್ಲದು ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪಲ್ಲ ಹುಬ್ಬೆ ಮಳೇಲಿ ಬಿತ್ತಿದರೆ ಹುಲ್ಲೂ ಇಲ್ಲ ಕಾಳೂ ಇಲ್ಲ ಕೌಟುಂಬಿಕ ಗಾದೆಗಳು ಅಟ್ಟಿಕ್ಕಿದೋಳಿಗಿನ್ನ ಬೊಟ್ಟಿಕ್ಕಿದೋಳು ಹೆಚ್ಚು ಆಡೋದು ಮಡಿ ಉಂಬೋದು ಮೈಲಿಗೆ ಆಡಿ ತಪ್ಪ ಬೇಡ ಓಡಿ ಸಿಕ್ಕ ಬೇಡ ಆಡುತ್ತಾ ಆಡುತ್ತಾ ಭಾಷೆ, ಹಾಡುತ್ತಾ ಹಾಡುತ್ತಾ ರಾಗ ಆಳು ಮೇಲೆ ಆಳು ಬಿದ್ದು ದೋಣು ಬರಿದಾಯ್ತು ಹಿತವಿಲ್ಲದ ಗಂಡ ಹಿಂದಿದ್ದರೇನು ಮುಂದಿದ್ದರೇನು ತುತ್ತು ತೂಕ ಕೆಡಿಸ್ತು ಪೂಜೆಗೆ ಅಥವಾ ದೈವಕ್ಕೆ ಸಂಬಂಧಿಸಿದ ಗಾದೆಗಳು ಆಚಾರ್ಯರಿಗೆ ಮಂತ್ರಕ್ಕಿಂತ ಉಗುಳು ಜಾಸ್ತಿ ಆಗೋ ಪೂಜೆ ಆಗುತ್ತಿರಲಿ ಊದೋ ಶಂಖ ಊದಿ ಬಿಡುವ ಆಪತ್ತಿಗೆ ಹರಕೆ, ಸಂಪತ್ತಿಗೆ ಮರವು ಆರು ಯತ್ನ ತನ್ನದು, ಏಳನೇದು ದೇವರಿಚ್ಛೆ ಬಂದದ್ದೆಲ್ಲಾ ಬರಲಿ ಗೋವಿಂದನ ದಯೆಯೊಂದಿರಲಿ ಬಿರಿಯ ಉಂಡ ಬ್ರಹ್ಮನ ಭಿಕ್ಷೆ ಬೇಡಿದನಂತೆ ಭಂಗಿ ದೇವರಿಗೆ ಹೆಂಡಗುಡುಕ ಪೂಜಾರಿ ಸಾವಿರ ಸಲ ಗೋವಿಂದ ಅಂದರು, ಒಬ್ಬ ದಾಸಯ್ಯನಿಗೆ ಭಿಕ್ಷೆ ನೀಡಲಿಲ್ಲ ಊದಿ ಕೆಟ್ಟ ಬೂದಾಳ ದಾಸ ಹಳ್ಳೀ ದೇವರ ತಲೆ ಒಡೆದು, ದಿಲ್ಲೀ ದೇವರ ಹೊಟ್ಟೆ ಹೊರೆದ ಹಾಗೆ ಡಾವರ (=ನೀರಡಿಕೆ) ಹತ್ತಿದಾಗ ದೇವರ ಧ್ಯಾನ ಹೋದ ಬದುಕಿಗೆ ಹನ್ನೆರಡು ದೇವರು ಹಲವು ದೇವರ ಮಾಡಿ ಹಾರುವಯ್ಯ ಕೆಟ್ಟ ಪ್ರದಕ್ಷಿಣೆ ಹಾಕಿದರೆ ಪ್ರಯೋಜನವಿಲ್ಲ, ದಕ್ಷಿಣೆ ಹಾಕಿದರೇಯ ತೀರ್ಥ ಸಿಗೋದು ರಾಮ ಅನ್ನೋ ಕಾಲದಲ್ಲಿ ರಾವಣ ಬುದ್ಧಿ ರಾಮೇಶ್ವರಕ್ಕೆ ಹೋದ್ರೂ ಶನೀಶ್ವರನ ಕಾಟ ತಪ್ಪಲಿಲ್ಲ ಸುಳ್ಳು ದೇವರಿಗೆ ಕಳ್ಳ ಪೂಜಾರಿ ರಾವಣನ ಮಾತಿಗೆ ಮನಸೋತವ, ರಾಮನ ಮಾತಿಗೆ ಜಾಣನಾಗುವನೇ? ಸಂಕಟ ಬಂದಾಗ ವೇಂಕಟರಮಣ ಸಂಬಂಧಗಳನ್ನು ನೆನಪಿಸುವ ಗಾದೆಗಳು ಅಜ್ಜ! ಮದುವೆ ಅಂದ್ರೆ ನನಗೋ ಅಂದ ಅಜ್ಜಿ ಸಾಕಿದ ಮಗ ಬೊಜ್ಜಕ್ಕೂ ಬಾರದು ಅಜ್ಜಿಗೆ ಅರಿವೆಯ ಚಿಂತೆ, ಮಗಳಿಗೆ ಗಂಡನ ಚಿಂತೆ, ಮೊಮ್ಮಗಳಿಗೆ ಕಜ್ಜಾಯದ ಚಿಂತೆ ಅಕ್ಕ ಬರಬೇಕು ಅಕ್ಕಿ ಮುಗೀಬಾರದು ಅಕ್ಕ ನನ್ನವಳಾದ್ರೆ ಬಾವ ನನ್ನವನೇನು ಅಕ್ಕ ಸತ್ತರೆ ಅಮಾಸೆ ನಿಲ್ಲದು, ಅಣ್ಣ ಸತ್ತರೆ ಹುಣ್ಣಿಮೆ ನಿಲ್ಲದು ಅಕ್ಕನ ಚಿನ್ನವಾದ್ರೂ ಅಕ್ಕಸಾಲಿ ಟೊಣೆಯದೆ(=ಕದಿಯದೆ) ಬಿಡ ಅಕ್ಕನ ಹಗೆ ಬಾವನ ನಂಟು ಅಕ್ಕರೆಯ ಅಕ್ಕ ಬಂದಾಗೇ ಸಕ್ಕರೆಯೆಲ್ಲ ಕಹಿ ಆಯ್ತು ಅಕ್ಕರೆಯಿದ್ದಲ್ಲಿ ದುಃಖವುಂಟು ಅಕ್ಕಿ ಅಂದ್ರೆ ಪ್ರಾಣ, ನೆಂಟ್ರು ಅಂದ್ರೆ ಜೀವ ಅಕ್ಕಿ ಸರಿಯಾಗ ಬಾರದು ಅಕ್ಕನ ಮಕ್ಕಳು ಬಡವಾಗ ಬಾರದು ಅಕ್ಕಿಯ ಮೇಗಳ ಆಸೆ, ನೆಂಟರ ಮೇಗಳ ಬಯಕೆ ಅಮ್ಮನ ಮನಸ್ಸು ಬೆಲ್ಲದ ಹಾಗೆ, ಮಗಳ ಮನಸ್ಸು ಕಲ್ಲಿನ ಹಾಗೆ ಅಪ್ಪಂತೋನಿಗೆ ಇಪ್ಪತ್ತೊಂದು ಕಾಯಿಲೆ ಅಪ್ಪನ ಮನೇಲಿ ಸೈ ಅನ್ನಿಸಿಕೊಂಡೋಳು, ಅತ್ತೆ ಮನೇಲೂ ಸೈ ಅನ್ನಿಸಿಕೊಣ್ತಾಳೆ ಅರಗಿನಂತೆ ತಾಯಿ, ಮರದಂತೆ ಮಕ್ಕಳು ಆಗರಕ್ಕೆ ಹೋಗಿ ನನ್ನ ಗಂಡ ಗೂಬೆ ತಂದ ಹಾಕ್ಮಣೆ, ನೂಕ್ಮಣೆ, ಯಾಕ್ಮಣೆ ಹೆತ್ತವರು ಹೆಸರಿಕ್ಕ ಬೇಕು ಅಕ್ಕರೆಯ ಅಕ್ಕ ಬಂದಾಗೇ ಸಕ್ಕರೆಯೆಲ್ಲ ಕಹಿ ಆಯ್ತು ಅಕ್ಕ ಬರಬೇಕು ಅಕ್ಕಿ ಮುಗೀಬಾರದು ತಬ್ಬಲಿ ತಬಕು (ಎಲೆ ಅಡಿಕೆ ತಟ್ಟೆ, ತಂಬಾಕು ತಟ್ಟೆ) ಕದ್ದು ಜಗಲೀಲಿ ಸಿಕ್ಕಿಬಿದ್ದ ತಬ್ಬಲಿಯಾದವನು ಬೊಬ್ಬೆ ಹಾಕಿ ಹೆಬ್ಬುಲಿಯ ಓಡಿಸ್ಯಾನೆ? ತಮ್ಮ ಒಳ್ಳೆಯವನೇ ಸರಿ ಒಮ್ಮಾನಕ್ಕಿಗೆ ಮಾರ್ಗವಿಲ್ಲ ತಮ್ಮ ನಮ್ಮವನಾದರೂ ನಾದಿನಿ ನಮ್ಮವಳಲ್ಲ ತಮ್ಮ ಸಂಗಡ ತಂಗಿಯ ಗಂಡ ದೂರು ಹೇಳಿದರೆ ನಿನಗೇನಪ್ಪ ಗಂಡ-ಹೆಂಡತಿಗೆ ಸಂಬಂಧಿಸಿದ ಗಾದೆಗಳು ಹೆಂಡತಿಯ ಮಾತು ಆಗದಿರಲಿ ಕೊಯ್ದುಕೊಳ್ಳುವಂತೆ ಕತ್ತು. ಒಲ್ಲದ ಗಂಡಂಗೆ ಬೆಣ್ಣೇಲಿ ಕಲ್ಲು ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಗಂಡ-ಹೆಂಡಿರ ಜಗಳ ತಿಂದು/ಉಂಡು ಮಲುಗೊವರೆಗೆ ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು. ತಾಯಿಗೆ ಸಂಬಂಧ ಪಟ್ಟ ಗಾದೆಗಳು ತಾಯಂತೆ ಕರು ನಾಯಂತೆ ಬಾಲ ತಾಯಂತೆ ಮಗಳು ನೂಲಂತೆ ಸೀರೆ ತಾಯಿದ್ದರೆ ತವರು ಮನೆ ನೀರಿದ್ದರೆ ಕೆರೆ ಬಾವಿ ತಾಯಿಲ್ಲದ ತವರು ಕಾಟಕದಿದ್ದ ಅಡವಿ ತಾಯಿ ಒಂದಾದರೂ ಬಾಯಿ ಬೇರೆ ತಾಯಿ ಕಲಿಸಿದ ಊಟ ತಂದೆ ಕಲಿಸಿದ ಬುದ್ಧಿ ತಾಯಿ ಮಾಡಿದ ಹೊಟ್ಟೆ ಊರು ಮಾಡಿದ ಕೊಳಗ ತಾಯಿಯ ಹತ್ತಿರ ತರ್ಕವಲ್ಲ ಗುರುವಿನ ಹತ್ತಿರ ವಿದ್ಯೆಯಲ್ಲ ತಾಯಿ ಕಂಡರೆ ತಲೆ ನೋವು ತಾಯಿಗೆ ಕುಲವಿದ್ದರಷ್ಟೇ ಮಗಳಿಗೂ ಕುಲ ತಾಯಿಗೆ ಸೇರದ್ದು ನಾಯಿಗೂ ಸೇರದು ತಾಯಿ ಬೇಕು ಇಲ್ಲವೆ ಬಾಯಿ ಬೇಕು ತಾಯಿ ಮಾರಿಯಾದರೆ ತರಳನು ಎಲ್ಲಿ ಹೋದಾನು ತಾಯಿನ್ನ ನೋಡಿ ಮಗಳನ್ನ ತಕ್ಕೋ ಹಾಲನ್ನ ನೋಡಿ ಎಮ್ಮೇನ್ನ ತಕ್ಕೋ ತಾಯಿಗಿಂತ ಬಂಧುವಿಲ್ಲ; ಉಪ್ಪಿಗಿಂತ ರುಚಿಯಿಲ್ಲ ಹತ್ತು ಮಕ್ಕಳ ತಾಯಿ ದಾರಿಯಲ್ಲಿ ಸಿಕ್ಕಿದ್ದನ್ನು ತಿಂದಂತೆ. ತಾಯಿ ಬೇಕು ಇಲ್ಲವೇ ಬಾಯಿ ಬೇಕು. ಹೆತ್ತಮ್ಮನಿಗೆ ಹೆಗ್ಗಣವೂ ಮುದ್ದೇ. ವಿದ್ಯೆ ಸಂಬಂಧಿತ ಗಾದೆಗಳು ಬಲು/ಮಹಾ ಗರ್ವ ಅಲ್ಪರ ಸಂಗ ಅಭಿಮಾನ ಭಂಗ. ಓದೋದು ಕಾಶಿ ಖಂಡ,ತಿನ್ನೋದು ಮಶಿ ಕೆಂಡ. ದೇಶ ಸುತ್ತು,ಕೋಶ ಓದು. ವ್ಯಾವಹಾರಿಕ ಗಾದೆಗಳು ಅನ್ನ ಇಕ್ಕಿ ಸಾಕು ಅನ್ನಿಸ ಬಹುದು, ದುಡ್ಡು ಕೊಟ್ಟು ಸಾಕು ಅನ್ನಿಸೋಕಾಗಲ್ಲ ಅನ್ಯಾಯದಿಂದ ಗಳಿಸಿದ್ದು ಅಸಡ್ಡಾಳಾಗಿ ಹೋಯ್ತು ಅರಸು ಆದೀಕ (=ಆದಾಯ) ತಿಂದ, ಪರದಾನಿ ಹೂಸು ಕುಡಿದ ಅರೆಪಾವಿನವರ ಅಬ್ಬರ ಬಹಳ ಅರಿಯದೆ ಮಾಡಿದ ಪಾಪ ಅರಿತಂದು ಪರಿಹಾರ ಅರ್ತಿಗೆ (ಪ್ರೀತಿಗೆ) ಬಳೆ ತೊಟ್ಟು ಕೈ ಕೊಡವಿದರೆ ಹೋದೀತೆ ಅತಿ ಆಸೆ ಗತಿಗೇಡು ಅತಿ ಸ್ನೇಹ ಗತಿ ಕೇಡು ಅತ್ತೆ ಒಡೆದ ಪಾತ್ರೆಗೆ ಬೆಲೆ ಇಲ್ಲ ಅವರವರ ತಲೆಗೆ ಅವರವರದೇ ಕೈ ಅಯ್ಯೋ ಅಂದವರಿಗೆ ಆರು ತಿಂಗಳು ಆಯಸ್ಸು ಕಮ್ಮಿ ಆಲಸಿ-ಮುಂಡೇದಕ್ಕೆ ಎರಡು ಖರ್ಚು, ಲೋಭಿ-ಮುಂಡೇದಕ್ಕೆ ಮೂರು ಖರ್ಚು ಯಾರದೊ ದುಡ್ಡು ಎಲ್ಲಮ್ಮನ ಜಾತ್ರೆ. ಪ್ರಾಣಿ ಸಂಬಂಧಿತ ಗಾದೆಗಳು ಅಂಕೆ ಇಲ್ಲದ ಚತುರೆ, ಲಗಾಮು ಇಲ್ಲದ ಕುದುರೆ ಅರಸನ ಕುದರೆ ಲಾಯದಲ್ಲೆ ಮುಪ್ಪಾಯಿತು ಅರಮನೆಯ ಮುಂದಿರಬೇಡ, ಕುದರೆಯ ಹಿಂದಿರಬೇಡ ಆನೆ ಮೆಟ್ಟಿದ್ದೇ ಸಂದು, ಸೆಟ್ಟಿ ಕಟ್ಟಿದ್ದೇ ಪಟ್ಟಣ ಆನೆಯಂಥದೂ ಮುಗ್ಗರಿಸ್ತದೆ ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ ಬೆಳ್ಳಗಿರುವದೆಲ್ಲ ಹಾಲಲ್ಲ ಬಾಯಲ್ಲಿ ಬಸಪ್ಪ ಹೊಟ್ಟೆಯಲ್ಲಿ ವಿಷಪ್ಪ ಆಕಳು ಕಪ್ಪಾದ್ರೆ ಹಾಲು ಕಪ್ಪೇನು ಅಗಸರ ಕತ್ತೆ ಕೊಂಡು ಹೋಗಿ, ಡೊಂಬರಿಗೆ ತ್ಯಾಗ ಹಾಕಿದ ಹಾಗೆ ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ ಹಳೆ ಮನೆಗೆ ಹೆಗ್ಗಣ ಸೇರಿಕೊಂಡಂಗೆ ಹಂದಿ ತನ್ನ ಚಂದಕ್ಕೆ ವೃಂದಾವನ ಆಡ್ಕೊಣ್ತು ನಾಯಿನ ಕರೆದುಕೊಂಡು ಹೋಗಿ ಸಿಂಹಾಸನದ ಮೇಲೆ ಕೂರಿಸಿದ ಹಾಗಾಯ್ತು ಹುತ್ತ ಬಡಿದರೆ ಹಾವು ಸಾಯುವುದೇ ನಾಯಿಯು ನಮ್ಮನ್ನು ಕಚ್ಚಿದರೆ ನಾಯಿಯನ್ನು ಕಚ್ಚಲು ನಮ್ಮಿಂದ ಆಗುವುದೇ? ಬೆಲ್ಲ ಇದ್ದಲ್ಲಿ ನೊಣ ತಿರುಗಾಡಿದಂತೆ. ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ ಓತಿಕ್ಯಾತಕ್ಕೆ ಬೇಲಿ ಗೂಟ ಸಾಕ್ಷಿ ಆನೆಗೂ ಅಡಿ ತಪ್ಪೀತು ಆನೆಯ ಹೊಟ್ಟೆಗೆ ಅಂಬಲಿ ಬಿಟ್ಟ ಹಾಗೆ ಆನೆ ಬರುವುದಕ್ಕು ಮುನ್ನ ಗಂಟೆ ಸದ್ದು ಆನೆ ಹೋದದ್ದು ದಾರಿ ಹಾವು ಹರಿದದ್ದು ಅಡ್ಡದಾರಿ ಬಿಳಿ ಆನೆ ಸಾಕಿದ ಹಾಗೆ ಇಲಿಯಾಗಿ ನೂರುದಿನ ಬಾಳೋದಕ್ಕಿಂತ ಹುಲಿಯಾಗಿ ಮೂರು ದಿನ ಬಾಳೋದು ಲೇಸು ಇಲಿಯ ವ್ಯಾಜ್ಯಕ್ಕೆ ಬೆಕ್ಕು ಸಾಕ್ಷಿ ಇಲಿ ಹೆಚ್ಚಿದವೆಂದು, ಮನೆಗೆ ಉರಿ ಇಡ ಬಾರದು ಕಾರ್ಯವಾಸಿ ಕತ್ತೆ ಕಾಲು ಕಟ್ಟು ಕೋತಿ ತಾನೂ ಕೆಡೋದಲ್ದೆ ವನಾನೂ ಕೆಡಿಸ್ತು ನಾಯಿ ಬೊಗಳಿದರೆ ದೇವಲೋಕ ಹಾಳೇನು ನಾಯಿ ಬಾಲ ಡೊಂಕು ಹಳೆ ಮನೆಗೆ ಹೆಗ್ಗಣ ಸೇರಿಕೊಂಡಂಗೆ ಹಂದಿ ತನ್ನ ಚಂದಕ್ಕೆ ವೃಂದಾವನ ಆಡ್ಕೊಣ್ತು ಹಾರುವರ ಕೇರೀಲಿ ಹಬ್ಬ ಆದ್ರೆ ಮೂಳನಾಯಿಗೇನು ಓಡಾಟ ಆನೆ ಮೆಟ್ಟಿದ್ದೇ ಸಂದು, ಸೆಟ್ಟಿ ಕಟ್ಟಿದ್ದೇ ಪಟ್ಟಣ ಸಾದೆತ್ತಿಗೆ ಎರಡು ಹೇರು (ಹೊರೆ) ಹುಲಿಯ ಬಣ್ಣವನ್ನು ಮೆಚ್ಚಿ, ನರಿ ತನ್ನ ಕೂದಲನ್ನು ಭಸ್ಮ ಮಾಡಿ ಕೊಂಡಂತೆ. ಇಲಿ ಸಿಕ್ಕರೆ ಬೆಕ್ಕು ಆಗುವುದು ಹುಲಿ. ಬೆಕ್ಕು ಕಣ್ಮುಚ್ಚಿ ಹಾಲು ಕುಡಿದರೆ ಜಗತ್ತಿಗೆ ಗೊತ್ತಾಗಲ್ವಾ? ಮಾರಿ ಕಣ್ಣು ಹೋರಿ ಮ್ಯಾಲೆ, ಕಟುಕನ್ ಕಣ್ಣು ಕುರಿ ಮ್ಯಾಲೆ. ಶಿವ ಪೂಜೇಲಿ ಕರಡಿ ಬಿಟ್ಟಂಗೆ ಎತ್ತೂ ಕೋಣಕ್ಕೆ ಎರಡು ಕೋಡು, ನಮ್ಮ ಅಯ್ಯಂಗಾರ್ಗೆ ಮೂರು ಕೋಡು ಮಂಗನ ಕೈಯಲ್ಲಿ ಮಾಣಿಕ್ಯದಂತೆ. ಬೆಕ್ಕಿನ ತಲೀ ಮ್ಯಾಲ ದೀಪ ಇಟ್ಹಾಂಗ. ಪಕ್ಷಿ ಸಂಬಂಧಿತ ಗಾದೆಗಳು ಕಾಗೆಗೆ ಯಜಮಾನನ ಸ್ಥಾನ ಕೊಟ್ಟರೆ ಮನೆ ತುಂಬಾ ಪಿಷ್ಟ. ತಾಯಿಯನ್ನು ಹೊಡೆಯಬಾರದು, ಗುಬ್ಬಿಯ ಗೂಡನ್ನು ತೆಗೆಯಬಾರದು. ಕೋಳಿ ಕಾಲಿಗೆ ಗೆಜ್ಜೆ ಕಟ್ಟಿದಂಗೆ ಗಿಳಿ ಮಾತಾಡಿದಂಗೆ ಮೆಲ್ಲಗೆ ನುಡಿತಾಳೆ ಕಾಗೆಯ ಕೈಯಲ್ಲಿ ಕೊಟ್ಟರೆ ಕಾರಭಾರ, ಅದು ಮಾಡುವುದೇ ಉಪಕಾರ? ಮರಿ ಮಾಡುವ ಮೊದಲೇ ಮೊಟ್ಟೆಗಳನ್ನು ಎಣಿಸಬೇಡ. ಗಿಣಿ ಸಾಕಿ ಗಿಡುಗದ ಕೈಗೆ ಕೊಟ್ಟರು ಹಕ್ಕಿ ತೆನೆ ತಿಂದು ಹಿಕ್ಕೆ ಇಕ್ಕಿ ಹೋಯ್ತು ಬೇವು ಕಾಗೆಗೆ ಇಂಪು ಮಾವು ಕೋಗಿಲೆಗೆ ಇಂಪು ಹಕ್ಕಿಗಳಿಗೆ ಗೂಡು ಮಕ್ಕಳಿಗೆ ತಾಯಿ ಅವಯವಕ್ಕೆ ಸಂಬಂಧಿಸಿದ ಗಾದೆಗಳು ಬಾಯ್ ತೆವಲು ತೀರಿಸಿಕೊಳ್ಳೋಕೆ ಎಲೆ ಅಡಿಕೆ ಬೇಕು, ಮೈ ತೆವಲು ತೀರಿಸಿಕೊಳ್ಳೋಕೆ ಒಡಂಬಡಿಕೆ ಬೇಕು ಬಾಯಲ್ಲಿ ಬೆಲ್ಲ ಕರುಳು ಕತ್ತರಿ ಚರ್ಮ ಸುಕ್ಕಾದ್ರೆ ಮುಪ್ಪು, ಕರ್ಮ ಮುಕ್ಕಾದ್ರೆ ಮುಕ್ತಿ ಬೆಳ್ಳಯ್ಯ ಕಾಕಾ ಅರಿವಯ್ಯ ಮೂಕ ಧನ ಸಂಬಂಧಿತ ಗಾದೆಗಳು ಹಣ ಅಂದ್ರೆ ಹೆಣವೂ ಬಾಯಿ ಬಿಡ್ತದೆ (ಕನ್ನಡ) ಹಣ ಎರವಲು ತಂದು ಮಣ ಉರುವಲು ಕೊಂಡ (ಕನ್ನಡ) ಹಣ ಇದ್ದೋರಿಗೆ ಏನೆಲ್ಲ, ಗುಣ ಇದ್ದೋರಿಗೆ ಏನಿಲ್ಲ (ಕನ್ನಡ) ಹಣ ಇಲ್ದೋರು ಎದ್ದೂ ಬಿದ್ದಂಗೆ, ಗುಣ ಇಲ್ದೋರು ಇದ್ದೂ ಇಲ್ದಂಗೆ (ಕನ್ನಡ) ಹಣ ಇಲ್ಲದವ ಹೆಣಕ್ಕಿಂತ ಕಡೆ (ಕನ್ನಡ) ದುಡ್ಡಿಗೆ ದುಡ್ಡು ಗಂಟು ಹಾಕಿದ್ಯೋ? ಬೆನ್ನಿಗೆ ಹೊಟ್ಟೆ ಅಂಟು ಹಾಕಿದ್ಯೋ? ಊರಿಗೆ ಸಂಬಂಧಿಸಿದ ಗಾದೆಗಳು ಹಾಳೂರಿಗೆ ಉಳಿದೋನೇ ಗೌಡ, ಬೆಂಗಳೂರಿಗೆ ಬಂದೋನೇ ಬಹದ್ದೂರ ಹಾಳೂರಿಗೆ ಉಳಿದವನೇ ಗೌಡ ಹಾಕೋದು ಬಿತ್ತೋದು ನನ್ನಿಚ್ಛೆ; ಆಗೋದು ಹೋಗೋದು ದೇವರಿಚ್ಛೆ ಊರೆಲ್ಲ ಸೂರೆ ಆದ ಮೇಲೆ ಬಾಗಿಲ ಮುಚ್ಚಿದರು ಊರಿಗಾಗದ ಗೌಡ, ಮೇಲೆರಗುವ ಗಿಡುಗ ಊರು ಬಾವಿಗೆ ಬಿದ್ದರೂ, ಊರ ಬಾಯಿಗೆ ಬೀಳಬಾರದು ಊರು ದೂರಾಯಿತು ಕಾಡು ಹತ್ತಿರಾಯಿತು ಊರೊಗು ಅನ್ತದೆ ಕಾಡು ಬಾ ಅನ್ತದೆ ತರಕಾರಿ/ಹಣ್ಣಿಗೆ ಸಂಬಂಧಿತ ಗಾದೆಗಳು ಹಾಗಲ ಕಾಯಿಗೆ ಬೇವಿನ ಕಾಯಿ ಸಾಕ್ಷಿ ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡ್ಕಂಡ ಹುಣಸೇ ಮುಪ್ಪಾದ್ರೆ ಹುಳಿಯು ಮುಪ್ಪಾ? ತೊಂಡೇಕಾಯಿಯಂತ ತುಟಿ ದಾಳಿಂಬೆಯಂತ ಹಲ್ಲು ಹಸಿದು ಹಲಸು, ಉಂಡು ಮಾವು ಮಾವಿನ ಮರಕ್ಕೂ ಕೋಗಿಲೆಗೂ ನಂಟು ಬೇವಿನ ಹಣ್ಣು ಕಾಗೆಗೆ ಇಷ್ಟ ಸುಲಿದ ಬಾಳೇ ಹಣ್ಣಿನಂತೆ ಬೆಂಡೇಕಾಯಿ ತಿಂದ್ರೆ ಬುದ್ದಿ ಬರ್ತದೆ ಮೂಲಂಗಿ ಮೊಳೆರೋಗ ವಾಸಿ ಮಾಡ್ತದೆ ಬಡತನಕ್ಕೆ ಸಂಬಂಧಿಸಿದ ಗಾದೆಗಳು ಬಯಕೆಗೆ ಬಡವರಿಲ್ಲ ಸಮುದ್ರದ ನೆಂಟಸ್ತನ ಉಪ್ಪಿಗೆ ಬಡತನ ಹೊಟ್ಟೆ ತುಂಬಿದೋರಿಗೆ ಹುಡುಗಾಟ, ಹೊಟ್ಟೆಗಿಲ್ಲದೋರಿಗೆ ಮಿಡುಕಾಟ ಬಡವನ ಹೆಂಡತಿ ಊರಿಗೆಲ್ಲ ಅತ್ತಿಗೆ ಆಹಾರ ಸಂಬಂಧಿತ ಗಾದೆಗಳು ಹಗ್ಗ ತಿನ್ನೋ ಹನುಮಂತ ರಾಯನಿಗೆ ಜ್ವಾಳದ ಶಾವಿಗೆ ಎಷ್ಟು ಕೊಟ್ಟೀಯ ಹಾಲಪ್ಪ ಅಂತ ಹೆಸರಿದ್ದರೂ ಮಜ್ಜಿಗೆಗೆ ಗತಿ ಇಲ್ಲ ಹಾಲಿದ್ದಾಗ ಹಬ್ಬ ಮಾಡು ಹಲ್ಲಿದ್ದಾಗ ಕಡಲೆ ತಿನ್ನು ಹಾಲಿಲ್ಲ ಬಟ್ಟಲಿಲ್ಲ ಗುಟುಕ್ ಅಂದ ಹಾಲು ಕುಡಿದ ಮಕ್ಕಳೇ ಬದುಕಲಿಲ್ಲ ವಿಷ ಕುಡಿದ ಮಕ್ಕಳು ಬದುಕ್ಯಾರೇ ಹಾಲು ಮಾರಿದ್ದು ಹಾಲಿಗೆ ನೀರು ಮಾರಿದ್ದು ನೀರಿಗೆ ಹಾರುವರ ಕೇರೀಲಿ ಹಬ್ಬ ಆದ್ರೆ ಮೂಳನಾಯಿಗೇನು ಓಡಾಟ ಹಬ್ಬ ಹಸನಾಗಲಿ, ಗೋದಿ ಜತನಾಗಲಿ, ಬಂದ ಬೀಗರು ಉಂಡು ಹೋಗಲಿ ಹಸಿದು ಹಲಸಿನ ಹಣ್ಣು ತಿನ್ನು ಉಂಡು ಮಾವಿನ ಹಣ್ಣು ತಿನ್ನು ರಾಗಿ ಇದ್ರೆ ರಾಗ ರಾಗಿ ಇಲ್ದಿದ್ರೆ ರೋಗ ರಾಗಿಕಲ್ಲು ತಿರುಗುವಾಗ ರಾಜ್ಯವೆಲ್ಲಾ ನೆಂಟರು ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ರಸ ಬೆಳೆದು ಕಸ ತಿನ್ನಬೇಡ, ಹಸ ಕಟ್ಟಿ ಮೊಸರಿಗೆ ಪರದಾಡಬೇಡ ಉಗಿದರೆ ತುಪ್ಪ ಕೆಡುತ್ತದೆ, ನುಂಗಿದರೆ ಗಂಟಲು ಕೆಡುತ್ತದೆ ಉಪ್ಪಿಕ್ಕಿದವರನ್ನು ಮುಪ್ಪಿನ ತನಕ ನೆನೆ ಕೈ ಕೆಸರಾದರೆ ಬಾಯಿ ಮೊಸರು. ಹೆಣ್ಣಿಗೆ ಸಂಬಂಧಿಸಿದ ಗಾದೆಗಳು ಹೆಣ್ಣಿಗೆ ಹಠವಿರಬಾರದು, ಗಂಡಿಗೆ ಚಟವಿರಬಾರದು. ಹೆಣ್ಣು ಚಂದ,ಕಣ್ಣು ಕುರುಡು ಅಂದಂಗೆ ಹೆಣು ಮಕ್ಕಳು ಇದ್ದ ಮನೆ ಕನ್ನಡಿಯಂಗೆ ಹೆತ್ತಮ್ಮನ್ನ ತಿನ್ನೋಳು ಅತ್ತೆಯಮ್ಮನ್ನ ಬಿಟ್ಟಾಳ ಹಲ್ಲುಬಿದ್ದ ಮುದುಕಿ ಎಲ್ಲಿ ಬಿದ್ದರೇನು ಹೆಡ್ಡಾಳಾದ್ರೂ ದೊಡ್ಡಾಳು ಮೇಲು ಹೆಂಡ್ರ ಅವಾಂತರ ತಡಿಲಾರದೆ ಗಂಡ ದೇಶಾಂತರ ಹೋದ ಹೆಂಡ್ರನ್ನ ಸಸಾರ (=ತಾತ್ಸಾರ) ಮಾಡಿದ್ರೆ ಸಂಸಾರ ನಿಸ್ಸಾರವಾಗ್ತದೆ ಹೆರಿಗೆ ಬೇನೆ ಕೆಲ ಗಂಟೆ ಗಂಟ, ಬಂಜೆ ಬೇನೆ ಬದುಕಿನ ಗಂಟ ಹೆತ್ತ ಅಮ್ಮನ್ನ ತಿನ್ನೋಳು ಅತ್ತೆಯಮ್ಮನ್ನ ಬಿಟ್ಟಾಳ ರೊಂಡಿಗೆ ಏಟು ಬಿದ್ರೆ ಮೊಂಡಿಗೆ ಮುಲಾಮು ಹಚ್ಚಿದರು ಹಿರಿಯಕ್ಕನ ಚಾಳಿ ಮನೆ ಮಕ್ಕಳಿಗೆಲ್ಲ ಸ್ತ್ರೀ ರೂಪವೇ ರೂಪ, ಶೃಂಗಾರವೇ ರಸ ಸಾವಿರ ಕೊಟ್ಟರೂ ಸವತಿ ಮನೆ ಬೇಡ ಸಾವಿರ ಕುದರೆ ಸರದಾರ ಮನೇ ಹೆಣ್ತಿಗೆ ಪಿಂಜಾರ ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ. ಕುಣಿಯಲಾರದವಳು ನೆಲ ಡೊಂಕು ಅಂದಳಂತೆ ಇಟ್ಟುಕೊಂಡಾಕಿ ಇರೂತನಕ ಕಟ್ಟಿಕೊಂಡಾಕಿ ಕಡೀತನಕ ಓಡಿ ಹೋಗೊಳು ಮೊಸರಿಗೆ ಹೆಪ್ಪು ಹಾಕ್ತಾಳ ಹೆಣ್ಣು ಹುಟ್ಟಿದರೊಂದು ಹುಣ್ಣು ಹುಟ್ಟಿದ ಹಾಗೆ ಹೆಣ್ಣು ಹಡೆದವರ ಮನೆ ನುಣ್ಣಗೆ ಗಂಡು ಹಡೆದವರ ಮನೆ ತಣ್ಣಗೆ ಹೆಣ್ಣು ಜನ್ಮಕ್ಕೆ ಹೆಜ್ಜೆಗೊಂದು ಮುಳ್ಳು ಹೆಣ್ಣಿನ ಬಾಳು ಕಣ್ಣೀರಿನ ಗೋಳು ಹೆಣ್ಣು ಉರಿಸಿದ ಮನೆಯ ಹೆಗ್ಗಂಬ ಉರಿಯಿತು ವಿವಾಹ/ಮದುವೆ ಸಂಬಂಧಿತ ಗಾದೆಗಳು ಹರೆ ಬಡಿದರೂ ಮದುವೆ ಮೊರ ಬಡಿದರೂ ಮದುವೆ ಕನಸಲ್ಲಿ ತಾಳಿಕಟ್ಟಿ ಬೆಳಗಾದ್ಮೇಲೆ ಹೆಂಡತಿ ಹುಡುಕಿದನಂತೆ ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಸಡಗರದಲ್ಲಿ ಮದುವೆ ಮಾಡಿ ಈ ಹೆಣ್ಣು ಯಾರು ಅಂದಳಂತೆ ಅತ್ತೆ ತೂತು ಗತ್ತಲೇಲಿ ತಾತನ ಮದುವೆ ಮದುವೆ ಮಡಿನೋಡು ಮನೆ ಕಟ್ಟಿ ನೋಡು ಮುತ್ತು ಹೆಚ್ಚಾಯ್ತು ಅಂತ ಎಲ್ಲೆಲ್ಲಿಗೋ ಕೊಟ್ರಂತೆ. ಕಾಲಿಗ್ ಬಿದ್ದು ಕಾಲುಂಗ್ರ ಬಿಚ್ಕೊಂಡ್ರಂತೆ ತಾಳಿಗೆ ಬೆಲೆ ಕೊಟ್ಟವಳು ಗಂಡನಿಗೂ ಬೆಲೆ ಕೊಡ್ತಾಳೆ. ಪ್ರೀತಿಸಿ ಮದುವೆಯಾಗು ಅಥವಾ ಮದುವೆಯಾದಮೇಲೆ ಪ್ರೀತಿಸು. ಜಾತಿ ಸಂಬಂಧಿತ ಗಾದೆಗಳು ಹಾರುವಯ್ಯನ ಎಲೆ ಇಂಬ, ಒಕ್ಕಲಿಗನ ಮನೆ ಇಂಬ ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಕುಂಬಾರನ ಮಗಳು ಲಾಭ ಬಂದ ಹೊರತು ಮಡಿಕೆ ಒಡೆಯುವುದಿಲ್ಲ. ಹಾರುವನ ತೊತ್ತಾಗಬೇಡ ಗಾಣಿಗನ ಎತ್ತಾಗಬೇಡ. ಕನ ಊಟಕ್ಕೆ ಸಂಬಂಧಿಸಿದ ಗಾದೆಗಳು ಹೊಟ್ಟೆ ತುಂಬಿದೋರಿಗೆ ಹುಡುಗಾಟ, ಹೊಟ್ಟೆಗಿಲ್ಲದೋರಿಗೆ ಮಿಡುಕಾಟ ಹೊಟ್ಟೆ ತುಂಬಿದ ಮೇಲೆ ಹುಗ್ಗಿ ಮುಳ್ಳು ಮುಳ್ಳು ಹೊಟ್ಟೆ ಉರಿದು ಕೊಳ್ಳೋದು ಒಂದೇಯ, ಹೊಟ್ಟೆ ಇರಿದು ಕೊಳ್ಳೋದು ಒಂದೇಯ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಹುಳ್ಳಿಕಾಳೂ ತಿನ್ನೊ ಮುಕ್ಕ ಒಬ್ಬಟ್ಟಿನ ಹೂರ‍್ಣ ಕೇಳಿದಂಗೆ ಹಸಿದ ಹೊಟ್ಟೆ ತೋರಿಸಿದರೆ ಮಸೆದ ಕತ್ತಿ ತೋರಿಸಿದರು ಹೆತ್ತವರಿಗೆ ಅಂಬಲಿ ಬಿಡದಿದ್ದರೂ, ಹಂಬಲ ಬಿಡದಿದ್ದರೆ ಸಾಕು ಹಿಡಿದ ಕೆಲಸ ಕೈ ಹತ್ತಲ್ಲ, ತಿಂದ ಅನ್ನ ಮೈ ಹತ್ತಲ್ಲ ಹಿಟ್ಟು ಹಳಸಿತ್ತು ನಾಯೂ ಹಸಿದಿತ್ತು ಒಂದು ಹೊತ್ತು ಉಂಡವ ಯೋಗಿ, ಎರಡು ಹೊತ್ತು ಉಂಡವ ಭೋಗಿ, ಮೂರು ಹೊತ್ತು ಉಂಡವ ರೋಗಿ, ನಾಲ್ಕು ಹೊತ್ತು ಉಂಡವನ್ನ ಹೊತ್ತುಕೊಂಡು ಹೋಗಿ ಹಿಡಿದ ಕೆಲಸ ಕೈ ಹತ್ತಲ್ಲ, ತಿಂದ ಅನ್ನ ಮೈ ಹತ್ತಲ್ಲ ರಟ್ಟೆ ಮುರಿದು ರೊಟ್ಟಿ ತಿನ್ನು ಕಟ್ಟೆ ಹಾಕಿ ಅನ್ನ ಉಣ್ಣು ಸೊಪ್ಪುಸೆದೆ ತಿನ್ನೋರ ಒಪ್ಪ ನೋಡು, ತುಪ್ಪತೊಗೆ ತಿನ್ನೋರ ರಂಪ ನೋಡು ಉಡೋಕೆ ಇಲ್ಲದವ ಮೈಲಿಗೆಗೆ ಹೇಸ, ಉಂಬೋಕೆ ಇಲ್ಲದವ ಎಂಜಲಿಗೆ ಹೇಸ ಉಂಡ ಮನೆ ಜಂತೆ ಎಣಿಸಬಾರದು ಉಂಡದ್ದು ಊಟ ಆಗಲಿಲ್ಲ, ಕೊಂಡದ್ದು ಕೂಟ ಆಗಲಿಲ್ಲ ಉಂಬೋಕೆ ಉಡೋಕೆ ಅಣ್ಣಪ್ಪ ಕೆಲಸಕ್ಕಷ್ಟೇ ಇಲ್ಲಪ್ಪ ಉಂಬಾಗ ಉಡುವಾಗ ಊರೆಲ್ಲ ನೆಂಟರು ತುತ್ತು ತೂಕ ಕೆಡಿಸಿತು, ಕುತ್ತು ಜೀವ ಕೆಡಿಸಿತು ತುತ್ತಿಗೆ ತತ್ವಾರವಾದರೂ ನೆತ್ತಿತುಂಬಾ ನಾಮಕ್ಕೆ ಕಡಿಮೆ ಇಲ್ಲ ತಿನ್ನಲು, ಉಣ್ಣಲು ಇದ್ದರೆ ಯಾವತ್ತೂ ನೆಂಟರು. ಮಾಡಿ ಉಣ್ಣು ಬೇಡಿದಷ್ಟು, ತಗಾದೆ ಮಾಡದೇ ಉಣ್ಣು ನೀಡಿದಷ್ಟು. ಹಗೆಗೆ ಸಂಬಂಧಿಸಿದ ಗಾದೆಗಳು ಹಗೆ ಮಾತು ಆತುಕೊಂಡ, ತುಟಿ ಬಿಚ್ಚದೆ ಕೂತುಕೊಂಡ ಹಗೆಯೋನ ಕೊಲ್ಲಾಕೆ ಹಗಲೇನು ಇರುಳೇನು ಹೊರೆ ಹೊತ್ತುಕೊಂಡು ಗ್ರಹಗತಿ ಕೇಳ್ದಂದೆ (ಕನ್ನಡ) ಸಾವಿಗೆ ಸಂಬಂಧಿಸಿದ ಗಾದೆಗಳು ಸತ್ತೋರ ಮಕ್ಕಳು ಇದ್ದೋರ ಕಾಲ್ದಸೀಲಿ ಸತ್ತ ಮೇಲಿನ ಸ್ವರ್ಗಕ್ಕಿಂತ ಇದ್ದ ನರಲೋಕ ವಾಸಿ ಸತ್ತವರಿಗೆ ಸಂಗವಿಲ್ಲ ಕೆಟ್ಟವರಿಗೆ ನೆಂಟರಿಲ್ಲ ಸಾಯೋ ಮುಂದೆ ಸಕ್ಕರೆ ತುಪ್ಪ ತಿನಿಸಿದರಂತೆ ಸಾಯೋ ತನಕ ಶನಿ ಕಾಟ ಆದ್ರೆ ಬಾಳೋದು ಯಾವಾಗ ಸಾಯ್ತಿನಿ ಸಾಯ್ತಿನಿ ಅಂತ ಸಾವಿರ ಕೋಳಿ ತಿಂದನಂತೆ ಶಿವಾ ಅರಿಯದ ಸಾವು ಇಲ್ಲ ಮನಾ ಅರಿಯದ ಪಾಪ ಇಲ್ಲ ಮೃತ್ಯು ಬಂದ ಮೇಲೆ ವೈದ್ಯ ಬಂದ. ಅಕ್ಕ ಸತ್ತರೆ ಅಮಾಸೆ ನಿಲ್ಲದು, ಅಣ್ಣ ಸತ್ತರೆ ಹುಣ್ಣಿಮೆ ನಿಲ್ಲದು ಹುಟ್ಟಿಗೆ ಸಂಬಂಧ ಪಟ್ಟ ಗಾದೆಗಳು ಹುಟ್ಟಿದ ಮನೆ ಹೋಳಿಹುಣ್ಣಿಮೆ ಕೊಟ್ಟ ಮನೆ ಶಿವರಾತ್ರಿ ಹುಟ್ಟಿದಾಗ ಬಂದದ್ದು ಹೂತಾಗ ಹೋದೀತೇನು ಹುಟ್ಟು ಗುಣ ಸುಟ್ಟರೂ ಹೊಗೋದಿಲ್ಲ ಮಾತಿಗೆ ಸಂಬಂಧಿಸಿದ ಗಾದೆಗಳು . ನಾಲಿಗೆಯಿಂದ ಕೆಳಗೆ ಬಿದ್ದರೆ ನರಕ. ಮಾತು ಬೆಳ್ಳಿ, ಮೌನ ಬಂಗಾರ. ಮಾತು ಮನೆ ಮುರೀತು, ತೂತು ಓಲೆ ಕೆಡಿಸಿತು. ಮಾತೇ ಮುತ್ತು; ಮಾತೇ ಮೃತ್ಯು ಇದ್ದದ್ದು ಇದ್ದಂತೆ ಹೇಳಿದರೆ ಹದ್ದಿನಂತ ಮೋರೆ ಆಯಿತು ಉದ್ದುದ್ದ ಮಾತಿನವರ ಮೊಳಕೈ ಮೊಂಡ. ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪೆಟ್ಟು. ಆಡುತ್ತಾ ಆಡುತ್ತಾ ಭಾಷೆ, ಹಾಡುತ್ತಾ ಹಾಡುತ್ತಾ ರಾಗ ಹೇಳಿಕೆ ಮಾತು ಕೇಳಿ ಹೆಂಡ್ರನ್ನ ಬಿಟ್ಟ ನಿಜ ಆಡಿದರೆ ನಿಷ್ಠೂರ ಮುತ್ತು ಒಡೆದರೆ ಹೊಯ್ತು, ಮಾತು ಆಡಿದರೆ ಹೊಯ್ತು ಇದ್ದದ್ದು ಇದ್ದಂತೆ ಹೇಳಿದರೆ ಎದ್ದು ಬಂದು ಎದೆಗೆ ಒದ್ನಂತೆ ಆಗೋ ಪೂಜೆ ಆಗುತ್ತಿರಲಿ ಊದೋ ಶಂಖ ಊದಿ ಬಿಡುವ ಆಚಾರ್ಯರಿಗೆ ಮಂತ್ರಕ್ಕಿಂತ ಉಗುಳು ಜಾಸ್ತಿ ಯುಕ್ತಿಯ ಮಾತು ಮಕ್ಕಳಿಂದಾದರೂ ತಿಳುಕೊ ಬಾಯಲೆಲ್ಲಾ ವೇದಾಂತ, ಮಾಡುವುದೆಲ್ಲಾ ರಾದ್ಧಾಂತ. ಸಜ್ಜನರ ಮಾತು ಸಿಹಿ, ದುರ್ಜನರ ತುತ್ತು ಕಹಿ. ಒಣ ಮಾತು ಒಣಗಿದ ಹುಲ್ಲು, ಒಳ್ಳೆಯ ಮಾತು ಬೆಳ್ಳಗಿನ ಹಾಲು. ಬೇಸರವಿರಬಾರದು, ಅವಸರ ಮಾಡಬಾರದು. ಎಚ್ಚರ ತಪ್ಪಿ ಮಾತನಾಡಬಾರದು, ಹುಚ್ಚನಂತೆ ವರ್ತಿಸಬಾರದು. ಬಿಡುಕು ಮಾತಿಗೆ ಮಾಡಿಕೊಳ್ಳದಿರು ಕೆಡುಕು. ಕೃತಿ ಇಲ್ಲದ ಮಾತು ಕಸ ಬೆಳೆದ ತೋಟವಿದ್ದಂತೆ. ಆಡಿ ತಪ್ಪ ಬೇಡ ಓಡಿ ಸಿಕ್ಕ ಬೇಡ ಆಡೋದು ಮಡಿ ಉಂಬೋದು ಮೈಲಿಗೆ ಸಮಯಕ್ಕೆ ಸಂಬಂಧಿಸಿದ ಗಾದೆಗಳು ಸಮಯಕ್ಕಾದ ಹುಲ್ಲು ಕಡ್ಡಿ ಸಹಸ್ರ ಹೊನ್ನು ಸಮಯಕ್ಕಾದವನೆ ನೆಂಟ ಕೆಲಸಕ್ಕಾದವನೆ ಬಂಟ ಸಮಯಕ್ಕೆ ಬಾರದ ಬುದ್ಧಿ ಸಾವಿರ ಇದ್ದರೂ ಲದ್ಧಿ ಸಮಯಕ್ಕಿಲ್ಲದ ನೆರವು ಸಾವಿರ ಇದ್ದರೂ ಎರವು (ಅನ್ಯ) ಸಮಯದ ಮಹತ್ವ ಸಾಲಕ್ಕೆ ಸಂಬಂಧಿಸಿದ ಗಾದೆಗಳು ಸಾಲ ಅಂದ್ರೆ ಶೂಲ, ಕಾಲ ಅಂದ್ರೆ ಯಮ ಸಾಲಗಾರ ಸುಮ್ಮನಿದ್ದರೂ ಸಾಕ್ಷಿದಾರ ಸುಮ್ಮನಿರ ಸಾಲಗಾರನ ಮನೆಗೆ ಸವುದೆ ಹೊತ್ತರೆ ಮೇಲಣ ಬಡ್ಡಿಗೆ ಸಮವಾಯಿತು ಸೆಟ್ಟಿ ಸಾಲ ಸತ್ತ ಮೇಲೆ ತಿಳೀತು ಚರ್ಮ ಹೋದರೂ ಪರವಾಗಿಲ್ಲ, ಕಾಸು ಹೋಗಬಾರದು ಎಂದಂತೆ. ಮಾತೇ ಮಾಣಿಕ್ಯ ಮೂಗುತಿ ಮುತ್ತೈದೆಗೆ ಲಕ್ಷಣ ಹೊಳೆಯುವುದೆಲ್ಲಾ ಚಿನ್ನವಲ್ಲ. ಅರ್ತಿಗೆ ಬಳೆ ತೊಟ್ಟು ಕೈ ಕೊಡವಿದರೆ ಹೋದೀತೆ ಮನೆ ತುಂಬ ಮುತ್ತಿದ್ದರೆ ...ಗೂ ಪೋಣಿಸಿಕೊಂಡರಂತೆ ಅಕ್ಕಸಾಲಿ ಕಂಡ್ರೆ ಕಪ್ಪೇನೂ ಮೂಗುತಿ ಬೇಡ್ತಂತೆ. ಏಳು ಸುತ್ತು ಓಲೆನ ಏಳೂರಿಂದ ತಂದ್ರಂತೆ ಕಂಡೋರ ಒಡ್ವೆ ಇಕ್ಕೊಂಡು ನೀರ್ ಬೆಳ್ಕಲ್ಲಿ ನೋಡ್ಕಂಡಂಗೆ. ಓಲೆ ಮಾಡ್ಸೋಕೆ ಸಾಲ ಮಾಡ್ದ, ಸಾಲ ತೀರ್ಸೊಕೆ ಮನೆ ಮಾರ್ದ. ಬುಗುಡಿ ಇಕ್ಕಿದೋಳ ಬಡಿವಾರ ನೋಡು. ಬೆರಕೆ/ಇತರೆ ಗಾದೆಗಳು ಹತ್ತರೊಟ್ಟಿಗೆ ಹನ್ನೊಂದು ಜಾತ್ರೆಯೊಟ್ಟಿಗೆ ಗೋವಿಂದು ಹತ್ತು ಜನಕ್ಕೆ ಬಿದ್ದ ನ್ಯಾಯ ಬೇಗ ಸಾಯಕಿಲ್ಲ ಹೂವಿನಿಂದ ನಾರು ಸ್ವರ್ಗ ಸೇರಿತು ತಿಂಗಂಳ ಪುಟ್ಟ ಹಟ್ಟೆಲ್ಲಾ ಹೆಜ್ಜೆ ಹೌದಪ್ಪನ ಮನೇಲಿ ಹೌದಪ್ಪ, ಇಲ್ಲಪ್ಪನ ಮನೇಲಿ ಇಲ್ಲಪ್ಪ ಹೆಸರಿಗೆ ಹೊನ್ನ ಹೆಗ್ಗಡೆ, ಎಸರಿಗೆ ಅಕ್ಕಿ ಇಲ್ಲ ಒಂಡಂಬಡಿಕೆ ಇಂದ ಆಗದು ದಡಂಬಡಿಕೆ ಇಂದ ಆದೀತೇ ಒಂದು ಕಣ್ಣೀಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಒಕ್ಕಣ್ಣರ ನಾಡಿಗೆ ಹೋದ್ರೆ ಒಂದು ಕಣ್ಣು ಮುಚ್ಚಿ ನಡೆಯಬೇಕು ಪಾಪಿ ಸಮುದ್ರ ಹೊಕ್ರೂ ಮೊಣಕಾಲುದ್ದ ನೀರು ಪಾಪ ಅಂದ್ರೆ ಕರ್ಮ ಬರ್ತದೆ ರಾಗ ನೆನೆಪಾದಾಗ ತಾಳ ಮರೆತು ಹೋಯಿತಂತೆ ರಾಜ ಇರೋತನಕ ರಾಣಿ ಭೋಗ ರಾತ್ರಿ ಕಂಡ ಬಾವೀಲಿ ಹಗಲು ಬಿದ್ದಂಗೆ ಸೂಜಿಯಷ್ಟು ಬಾಯಿ ಗುಡಾಣದಷ್ಟು ಹೊಟ್ಟೆ ಸಂದೀಲಿ ಸಮಾರಾಧನೆ ಮಾಡ್ದಂಗೆ ಸಂಸಾರಿ ಸಾವಾಸ ಮಾಡಿ ಸನ್ಯಾಸಿ ಕೆಟ್ಟ ಸನ್ಯಾಸಿ ಸಾವಾಸ ಮಾಡಿ ಸಂಸಾರಿ ಕೆಟ್ಟ ಸಂತೇಲಿ ಮಂತ್ರ ಹೇಳಿದಂಗೆ ಸಂತೆ ಕಟ್ಟೋಕು ಮೊದಲೇ ಸೇರಿದರು ಗಂಟು ಕಳ್ಳರು ಸಂತೆ ಸೇರೋಕೆ ಮೊದಲು ಗಂಟು ಕಳ್ಳರು ಸೇರಿದರು ಸಾದೆತ್ತಿಗೆ ಎರಡು ಹೇರು (ಹೊರೆ) ಸಾವಿರ ಸಲ ಗೋವಿಂದ ಅಂದರು, ಒಬ್ಬ ದಾಸಯ್ಯನಿಗೆ ಭಿಕ್ಷೆ ನೀಡಲಿಲ್ಲ ಸಾವಿರ ವರ್ಷ ಸಾಮು ಮಾಡಿ ಸಾಯೋ ಮುದುಕಿ ಸೊಂಟ ಮುರಿದ ಸವತಿ ಸಣ್ಣವಳಲ್ಲ ದಾಯಾದಿ ಚಿಕ್ಕವನಲ್ಲ ಸೊಕ್ಕಿದ್ದು ಉಕ್ತದೆ ಉಕ್ಕಿದ್ದು ಒಲೆಗೆ ಹಾರ‍್ತದೆ ಸುಂಕದೋನ ಹತ್ರ ಸುಖದುಃಖ ಹೇಳಿಕೊಂಡ ಹಾಗೆ ಶೀಲವಂತರ ಓಣೀಲಿ ಕೋಳಿ ಮಾಯ ಆದವಂತೆ ಶೆಟ್ಟಿ ಸುಂಗಾರ ಆಗೋದರೊಳಗೆ ಪಟ್ಟಣ ಹಾಳಾಯ್ತು ಸಂಸಾರಿ ಸಹವಾಸದಲ್ಲಿ ಸಂನ್ಯಾಸಿ ಕೆಟ್ಟ. ಶಿವರಾತ್ರಿ ಮನೆಗೆ ಏಕಾದಶಿ ಬಂದಂಗೆ ತೇದು ಇಕ್ಕಿದೋಳಿಗಿಂತ ಸಾದು ಇಕ್ಕಿದೋಳು ಹೆಚ್ಚು ತೇಗಿ ತೇಗಿ ಬೀಗಿ ಬಿದ್ದ ತಾಳ ತಪ್ಪಿದ ಬಾಳು, ತಾಳಲಾರದ ಗೋಳು ತಾಮ್ರದ ನಾಣ್ಯ ತಾಯಿ ಮಕ್ಕಳನ್ನ ಕೆಡಿಸ್ತು ತನ್ನೂರಲ್ಲಿ ರಂಗ, ಪರೂರಲ್ಲಿ ಮಂಗ ತುಂಬಿದ ಕೊಡ, ತುಳುಕೋದಿಲ್ಲ ಉದ್ಯೋಗವೇ ಗಂಡಸಿಗೆ ಲಕ್ಷಣ ಹಗಲು ಅರಸನ ಕಾಟ ಇರುಳು ದೆವ್ವದ ಕಾಟ ಹಗ್ಗ ಹರಿಯಲಿಲ್ಲ ಕೋಲು ಮುರಿಯಲಿಲ್ಲ ಹರೆಯಕ್ಕೆ ಬಂದಾಗ ಹಂದಿನೂ ಚಂದ ಹರಿದಿದ್ದೇ ಹಳ್ಳ ನಿಂತಿದ್ದೇ ತೀರ್ಥ ಉರಿಯೋ ಬೆಂಕೀಲಿ ಎಣ್ಣೆ ಹೊಯಿದ ಹಾಗೆ ಉತ್ತಮ ಹೊಲ ಮಧ್ಯಮ ವ್ಯಾಪಾರ ಕನಿಷ್ಠ ಚಾಕರಿ ಉತ್ತಮನು ಎತ್ತ ಹೋದರೂ ಶುಭವೇ ವಶಗೆಡದೆ ಹಸಗೆಡಲ್ಲ ವಿನಾಶ ಕಾಲಕ್ಕೆ ವಿಪರೀತ ಬುದ್ಧಿ ವ್ಯಾಪಾರಕ್ಕೆ ನಿಮಿಷ ಬೇಸಾಯಕ್ಕೆ ವರುಷ ಯಾವ ಚಿಂತೇನೂ ಮಾಡದೋನ ಹೆಂಡ್ತಿ ಗಂಡಿದ್ದೂ ಮುಂಡೆ ಯೋಗ ಇದ್ದಷ್ಟೇ ಭೋಗ ಯೋಗಿ ತಂದದ್ದು ಯೋಗಿಗೆ, ಭೋಗಿ ತಂದದ್ದು ಭೋಗಿಗೆ ಯೋಗ್ಯತೆ ಅರಿಯದ ದೊರೆ ರೋಗ ಅರಿಯದ ವೈದ್ಯ ಒಂದೇ ಯಾರೂ ಇಲ್ಲದ ಊರಿಗೆ ಹೋಗಿ ನೀರು ಮಜ್ಜಿಗೆ ಬಯಸಿದಂತೆ ಯಾರೂ ಇಲ್ಲದ ಮನೆಗೆ ನಾನು ಜೋಗಪ್ಪ ಅಂದ ಯಜಮಾನಿಲ್ಲದ ಮನೆ ಮೇಟಿ ಇಲ್ಲದ ಕಣ ಎರಡೂ ಒಂದೆ ಯಸಗಾತಿಗೆ ದೋಸೆ ಕೊಡೊ ಹೊತ್ತಿಗೆ, ಮೂಸಿಮೂಸಿ ಮೂಗಿನ ಕೆಳಗೆ ಹಾಕಿದ್ಲು ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮುದ್ದೆ ಉಣ್ತಾ ಮಜ್ಜಿಗೆ ಓಡಾಟ ಇತರರ ಕಣ್ಣಿನ ಕಸ ಕಾಣುವುದು, ತನ್ನ ಕಣ್ಣಿನ ಕಸ ಕಾಣುವುದಿಲ್ಲ. ತನ್ನ ಮೊಸರನ್ನು ಯಾರೂ ಹುಳಿ ಅನ್ನುವುದಿಲ್ಲ. ನಾನು ಅಗೆಯುವಲ್ಲಿ ಕಲ್ಲು, ಅಜ್ಜ ಅಗೆಯುವಲ್ಲಿ ಮಣ್ಣು. ದಡ್ಡ ಮನುಷ್ಯ ನೆಲಕ್ಕೆ ಭಾರ, ಅನ್ನಕ್ಕೆ ಖಾರ. ದಡ್ಡನಿಗೆ ಹಗಲು ಕಳೆಯುವುದಿಲ್ಲ, ಒಳ್ಳೆಯವನಿಗೆ ರಾತ್ರಿ ಸಾಲುವುದಿಲ್ಲ. ಶರೀರಕ್ಕೆ ಸುಖ, ಹೊಟ್ಟೆಗೆ ದುಃಖ. ನೂರಾರು ರೋಗಿಗಳನ್ನು ಕೊಂದು ಒಬ್ಬ ವೈದ್ಯ ಆದಂತೆ. ವಿವಿಧ ರೋಗಗಳಿಗೆ ಮದ್ದಿವೆ, ಹೊಟ್ಟೆ ಉರಿಗೆ ಮದ್ದಿಲ್ಲ. ಅಡಿಕೆಕಾಯಿಯನ್ನು ಚೀಲದೊಳಗೆ ಹಾಕಬಹುದು, ಮರ ಆದ ನಂತರ ಹಾಕಬಹುದೇ? ಲಾಭ ನೋಡಿ ಬಾಳೆ ಹಣ್ಣು ತಿಂದಂತೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು. ಹುಣಸೆ ಹುಳಿಯೆಂದು ಅಂಬಡೆ ತಿಂದ ಹಾಗೆ. ಮನೆಯೆಂಬ ಮರ ಮುರಿಯಬಾರದು, ಮನಸ್ಸೆಂಬ ಮಾರ್ಗ ಕತ್ತರಿಸಬಾರದು. ದುಷ್ಟರ ಸಂಗದಿ ನೆರಳು ಕೊಯ್ಯದೆ ಬಿಡದು ಕೊರಳು. ನೀನಾಗದೆ ರಣಹೇಡಿ, ಕೀರ್ತಿ ಪಡೆ ಪ್ರಾಣ ನೀಡಿ. ನಿನ್ನಲ್ಲಿ ನೀ ಹುಡುಕು, ಅರಿಷಡ್ವರ್ಗಗಳ ಹೊರ ಹಾಕು. ಬುದ್ಧಿ ಇದ್ದವನಲ್ಲಿ ಶ್ರದ್ಧೆ, ನಿದ್ದೆ ಬಾರದವನಲ್ಲಿ ವಿದ್ಯೆ. ಉಗಮವಾಗದಿರಲಿ ಹಿಂಸೆ, ಹೆಚ್ಚಿಗೆಯಾಗದಿರಲಿ ಆಸೆ. ನಾಳೆ ಎಂದವನಿಗೆ ಹಾಳು, ಇಂದೇ ಎಂದವನಿಗೆ ಬೀಳಾಗದು ಬಾಳು. ಆಳಾಗದವ ಅರಸನಲ್ಲ, ಹಟ ಹಿಡಿದವ ಸಾಮ್ರಾಟನಲ್ಲ. ಉಂಡಿದ್ದು ಹೊಟ್ಟೆಗಾಗಿ, ಮಾಡಿದ್ದು ಬಟ್ಟೆಗಾಗಿ. ವಿಶ್ವಾಸಿ ನೀನಾಗು, ಘಾತುಕಕ್ಕೆ ಬಗ್ಗದೆ ಮುನ್ನುಗ್ಗು. ಕಣ್ಣಿಗೆ ಕಂಡದ್ದೆಲ್ಲಾ ನುಣ್ಣಗಿರುವುದಿಲ್ಲ. ನಿನ್ನದಲ್ಲ ಸರ್ವ ಆಸ್ತಿ, ಒಳ್ಳೆಯದಲ್ಲ ಗರ್ವ ಜಾಸ್ತಿ. ಮನಸ್ಸು ಇಲ್ಲದಿದ್ದರೆ ಗಟ್ಟಿ, ಎಲ್ಲವೂ ಮೂರಾಬಟ್ಟಿ. ತತ್ವದಲ್ಲಿ ಸತ್ವ ಹುಡುಕು, ವ್ಯಥೆಯಲ್ಲಿ ಕಥೆ ಹುಡುಕು. ಹೋಗುವುದು ಮೂಡಿದ ಹೊತ್ತು, ಹೋಗೋದಿಲ್ಲ ಆಡಿದ ಮಾತು. ದೈವ ಕಾಡುವು ವಿಧಿಗಾಗಿ, ನೀರು ಸಮುದ್ರ ಸೇರುವುದು ನದಿಗಾಗಿ. ಬಡವರ ಕಣ್ಣೀರಿಗೆ ಕರುಣೆ ಬಂದೀತೆ ಬೆಣ್ಣೆಗೆ? ಸಲುಗೆ ಕೊಟ್ಟರೆ ಸಾಕೂ ಹೆಗ್ಗಣವೂ ಸಹ ಏರುವುದು ಹೆಗಲಿಗೆ. ಹುಟ್ಟಿದ ಮಗು ತರುವುದು ತೊಟ್ಟಲಿಗೆ ನಗು. ಸ್ವಾರ್ಥ ಉಳಿಸಿದವ ಪಾಪಾತ್ಮ, ನಿಸ್ವಾರ್ಥ ಗಳಿಸಿದವ ಪುಣ್ಯಾತ್ಮ. ಹಾಲಿಗೆ ಹುಳಿ ಹಿಂಡಿದರೆ ಮೊಸರು, ಮಣ್ಣಿಗೆ ನೀರು ಹಾಕಿದರೆ ಕೆಸರು. ಗದ್ದೆ ಸುಟ್ಟರೂ ಹಾಳಾಗದು ಗಾದೆ. ನಿನ್ನಲ್ಲಿರುವ ಮಾನ ನಿನಗೆ ಕೊಡುವುದು ಬಹುಮಾನ. ಮಾಟ ಮಾಡಿದೋನ ಮನೆ ಹಾಳು. ಒಬ್ಬರ ಕೂಳು ಇನ್ನೊಬ್ಬರ ಕುತ್ತು. ಒಳಿತಾಗಿ ಮುಗಿದಿದ್ದೆಲ್ಲವೂ ಒಳ್ಳೆಯದೇ. ಓಡಿದವನಿಗೆ ಓಣಿ ಕಾಣಲಿಲ್ಲ, ಹಾಡಿದವನಿಗೆ ಹಾದಿ ಕಾಣಲಿಲ್ಲ. ಬರಿಗೈಯವರ ಬಡಿವಾರ ಬಹಳ. ಎಲ್ಲ ಕೆಡುಕಿಗೂ ಮೂಲ ಹೊಟ್ಟೆಕಿಚ್ಚು. ಸ್ವರ್ಗದಲ್ಲಿ ಸೇವೆಗೈಯುವುದಕ್ಕಿಂತ ನರಕದಲ್ಲಿ ಆಳುವುದೇ ಲೇಸು. ಅರೆಗೊಡದ ಅಬ್ಬರವೇ ಬಹಳ. ಆಪತ್ತಿಗಾದವನೇ ನಿಜವಾದ ಗೆಳೆಯ. ಇಂದಿನ ಸೋಲು ನಾಳಿನ ಗೆಲುವು. ಧೈರ್ಯವಿದ್ದವನಿಗೆ ದೈವವೂ ಅನುಕೂಲ. ದುಡ್ಡಿಗಿಂತ ದೊಡ್ಡ ಹೆಸರೇ ಉತ್ತಮ. ಪ್ರಯತ್ನಕ್ಕೆ ಪರಮೇಶ್ವರನೂ ಸಹಾಯ ಮಾಡುವನು. ಉತ್ತಮವಾದ ನಗು ನೇಸರನ ಮಗು. ಸದಾಚಾರಣೆಯ ಉದಾಹರಣೆಯೇ ಉತ್ತಮವಾದ ಉಪದೇಶ. ಪ್ರಾಮಾಣಿಕತೆಯಿಂದಲೇ ಪಾರಮಾರ್ಥ. ಕರೆದುಣ್ಣುವ ಕೆಚ್ಚಲನ್ನು ಕೊರೆದುಂಡ ಹಾಗೆ. ಕಿಡಿ ಸಣ್ಣದಾದರೂ ಕಾಡೆಲ್ಲವನ್ನು ಸುಡುತ್ತದೆ. ನೋಡಿ ನಡೆದವರಿಗೆ ಕೇಡಿಲ್ಲ. ಚಿಂತೆ ಮಾಡಿದರೆ ಸಂತೆ ಸಾಗೀತೆ? ದುಡ್ಡನ್ನು ಕಾದಿಟ್ಟುಕೊಳ್ಳದವನು ಹಣವಂತನು ಹೇಗೆ ಆದಾನು? ಮಕ್ಕಳ ಬಾಯಿಗೆ ಹಣ್ಣು ಕೊಟ್ಟು ಮಣ್ಣು ಬಿಡಿಸು. ಸೀರಿಗೇಡಿಗೆ ಸೀರೆ ಉಡಿಸಿದರೆ ಕೆರಿ ದಂಡಿ ಮ್ಯಾಗ ನಿಂತು ಕೇಕೆ ಹಾಕಿದಳು. ಪೀತಾಂಬರ ಉಟ್ಟರೂ ಕೊತ್ತಂಬರಿ ಮಾರೋದು ತಪ್ಪಲಿಲ್ಲ. ಪೇಚಾಟದಲ್ಲಿ ಬಿದ್ದವನಿಗೆ ಪೀಕಲಾಟವೇ ಗತಿ. ಮಂತ್ರಕ್ಕಿಂತ ಉಗುಳೇ ಹೆಚ್ಚು. ಹಂಪಿಗೆ ಹೋಗುವುದಕ್ಕಿಂತ ಕೊಂಪೆಯಲ್ಲಿರುವುದೇ ಲೇಸು. ಎಡಗಣ್ಣು ಹೊಡೆದರೆ ನಾರಿಗೆ ಶುಭ. ಊಟವೆಂದರೆ ಊರು ಬಿಟ್ಟುಹೋದಂತೆ. ಎಲ್ಲ ಮುಗಿದ ಮೇಲೆ ತೀರ್ಥಯಾತ್ರೆಗೆ ಹೊರಟಂತೆ. ಒಗ್ಗಟ್ಟಿಲ್ಲದ ಊರಲ್ಲಿ ಒಪ್ಪತ್ತೂ ಇರಬೇಡ. ಒಕ್ಕಣ್ಣ ತನಗೆ ಹತ್ತು ಕಣ್ಣು ಅಂತಿದ್ನಂತೆ. ಕಣ್ಣಿಗೂ ಮೂಗಿಗೂ ಮೂರು ಗಾವುದ. ಕಲಹವೇ ಕೇಡಿಗೆ ಮೂಲ. ವೇದ ಸುಳ್ಳಾದರು ಗಾದೆ ಸುಳ್ಳಾಗದು. ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಬರಲ್ಲ. ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ. ಎತ್ತು ಏರಿಗೆಳೀತು, ಕೋಣ ನೀರಿಗೆಳೀತು. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರಂತೆ. ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತ? ಮಂಗ ಮೊಸರು ತಿಂದು ಮೇಕೆ ಬಾಯಿಗೆ ಸವರಿದ ಹಾಗಾಯಿತು. ಮನೆಗೆ ಮಾರಿ, ಊರಿಗೆ ಉಪಕಾರಿ. ಆಳಾಗಬಲ್ಲವನು ಅರಸನಾಗಬಲ್ಲ. ಊರಿಗೆ ದೊರೆ ಆದರೂ ತಾಯಿಗೆ ಮಗನೆ. ಹೆತ್ತವರಿಗೆ ಹೆಗ್ಗಣ ಮುದ್ದು. ಊರೆಲ್ಲ ದೋಚಿಕೊಂಡು ಹೋದಮೇಲೆ ದೊಡ್ಡಿ (ಕೋಟೆ) ಬಾಗಿಲು ಹಾಕಿದರಂತೆ. ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗೀತೇ? ಮಾಡೋದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನ. ಮನಸಿದ್ದರೆ ಮಾರ್ಗ. ಅಡ್ಡಗೋಡೆಯ ಮೇಲೆ ದೀಪ ಇಟ್ಟ ಹಾಗೆ. ಆರಕ್ಕೇರಲಿಲ್ಲ, ಮೂರಕ್ಕೀಳಿಯಲಿಲ್ಲ. ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ. ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಇಷ್ಟ. ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡಂತೆ. ಬೆಳ್ಳಗಿರೋದೆಲ್ಲ ಹಾಲಲ್ಲ, ಹೊಳೆಯೋದೆಲ್ಲ ಚಿನ್ನ ಅಲ್ಲ. ಜಲ ಶೋಧಿಸಿ ನೀರು ತರ್ಬೇಕು, ಕುಲ ಶೋಧಿಸಿ ಹೆಣ್ಣು ತರ್ಬೇಕು. ಚಿಂತೆ ಇಲ್ಲದವನಿಗೆ ಸಂತೆಯಲ್ಲಿಯೂ ನಿದ್ದೆ. ದೇವರು ವರ ಕೊಟ್ಟರು ಪೂಜಾರಿ ಕೊಡೆಬೇಕಲ್ಲ. ಹನುಮಂತಾನೆ ಬಾಲ ಕಡಿತಿರುವಾಗ, ಇವನ್ಯಾವನೋ ಶಾವಿಗೆ ಕೇಳಿದನಂತೆ. ತುಂಬಿದ ಕೊಡ ತುಳುಕುವುದಿಲ್ಲ. ಹನಿ ಹನಿ ಸೇರಿದರೆ ಹಳ್ಳ, ತೆನೆ ತೆನೆ ಸೇರಿದರೆ ಬಳ್ಳ. ಹುಚ್ಚರ ಮದುವೆಯಲ್ಲಿ ಉಂಡವನೇ ಜಾಣ. ಹಾಸಿಗೆ ಇದ್ದಷ್ಟು ಕಾಲು ಚಾಚು ಬೀದೀಲಿ ಹೊಗೊ ಮಾರೀನ ಮನೆಗೆ ಕರೆದಂಗೆ ಮಾಡಿದುಣ್ಣೊ ಮಾರಾಯ ಉಪ್ಪ ತಿಂದ ಮೇಲೆ ನೀರು ಕುಡಿಯಲೇ ಬೆಕು ಆಗೊದೆಲ್ಲ ಒಳ್ಳೆದಕ್ಕೆ ಕಾಲಕ್ಕೆ ತಕ್ಕಂತೆ ನಡಿಯಬೇಕು,ತಾಳಕ್ಕೆ ತಕ್ಕಂತೆ ಕುಣಿಯಬೇಕು ಅನ್ನ ಹಾಕಿದ ಮನೆಗೆ ಕನ್ನ ಹಾಕಬೇಡ ಪಾಲಿಗೆ ಬಂದದ್ದೆ ಪರಮಾನ್ನ. ಕಳ್ಳನ ನಂಬಿದ್ರು ಕುಳ್ಳನ ನಂಬಬೇಡ ನೆಲಕ್ಕೆ ಬಿದ್ದ್ರೂ ಮೀಸೆ ಮಣ್ಣಾಗಿಲ್ಲ ಯಾವ ಹುತ್ತದಲ್ಲಿ ಯಾವ ಹಾವು ಇರುತ್ತೊ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ರೋಗಿ ಬಯಸಿದ್ದು ಹಾಲು-ಅನ್ನ ವೈದ್ಯ ಹೇಳಿದ್ದು ಹಾಲು-ಅನ್ನ ಕಳ್ಳನಿಗೊಂದು ಪಿಳ್ಳೆ ನೆವ ಹೋದೆಯಾ ಪಿಶಾಚಿ ಅಂದ್ರೆ ಬಂದೆಯಾ ಗವಾಕ್ಷೀಲಿ ಹೋದ ಪುಟ್ಟ ಬಂದ ಪುಟ್ಟ ಸೋದರ ಮಾವನ ಚಾಳು ತುಂಡಪುಂಡರ ಪಾಲು ನೆಂಟರೆಲ್ಲ ಖರೆ, ಕಂಟಲೆ ಚೀಲಕ್ಕೆ ಕೈ ಹಾಕಬೇಡ ಅಂಗೈ ಹುಣ್ಣಿಗೆ ಕನ್ನಡಿ ಯಾಕೆ ಹುಣ್ಣಿಮೆ ಬರುವ ತನಕ ಅಮಾಸೆ ನಿಲ್ಲದು, ಅಮಾಸೆ ಬರುವನಕ ಹುಣ್ಣಿಮೆ ನಿಲ್ಲದು ಹಗೆ ಮಾತು ಆತುಕೊಂಡ, ತುಟಿ ಬಿಚ್ಚದೆ ಕೂತುಕೊಂಡ ಮಕ ನೋಡಿ ಮಾರು ಹೋದ, ಗುಣ ನೋಡಿ ದೂರ ಹೋದ ಅಪ್ಪಂತೋನಿಗೆ ಇಪ್ಪತ್ತೊಂದು ಕಾಯಿಲೆ ಅಟ್ಟಿಕ್ಕಿದೋಳಿಗಿನ್ನ ಬೊಟ್ಟಿಕ್ಕಿದೋಳು ಹೆಚ್ಚು ಯಾವ ಕಾಲ ತಪ್ಪಿದರೂ ಸಾವು ಕಾಲ ತಪ್ಪದು ಅಯ್ಯೋ ಅಂದವರಿಗೆ ಆರು ತಿಂಗಳು ಆಯಸ್ಸು ಕಮ್ಮಿ ಪಾಪ ಅಂದ್ರೆ ಕರ್ಮ ಬರ್ತದೆ ಅರಸು ಆದೀಕ (=ಆದಾಯ) ತಿಂದ, ಪರದಾನಿ ಹೂಸು ಕುಡಿದ ಆಳು ಮೇಲೆ ಆಳು ಬಿದ್ದು ದೋಣು ಬರಿದಾಯ್ತು ಇತ್ತಿತ್ತ ಬಾ ಅಂದ್ರೆ ಇದ್ದ ಮನೇನೂ ಕಿತ್ತುಕೊಂಡ ಗವುಜಿ ಗದ್ದಲ ಏನೂ ಇಲ್ಲ, ಗೋವಿಂದ ಭಟ್ಟ ಬಾವೀಲಿ ಬಿದ್ದ ಇದ್ದವರು ಇದ್ದಹಾಗೆ ಸಿದ್ಧಾ ದೇವಿಗೆ ಸಿಡಿಲು ಬಡೀತು ಅಂದು ಬಾ ಅಂದ್ರೆ ಮಿಂದು ಬಂದ ಹಣ ಇದ್ದೋರಿಗೆ ಏನೆಲ್ಲ, ಗುಣ ಇದ್ದೋರಿಗೆ ಏನಿಲ್ಲ: ಹಣ ಇಲ್ದೋರು ಎದ್ದೂ ಬಿದ್ದಂಗೆ, ಗುಣ ಇಲ್ದೋರು ಇದ್ದೂ ಇಲ್ದಂಗೆ ಅಜ್ಜ! ಮದುವೆ ಅಂದ್ರೆ ನನಗೋ ಅಂದ ಅಕ್ಕ ನನ್ನವಳಾದ್ರೆ ಬಾವ ನನ್ನವನೇನು ಅಕ್ಕನ ಹಗೆ ಬಾವನ ನೆಂಟು ಅಕ್ಕರೆಯ ಅಕ್ಕ ಬಂದಾಗೇ ಸಕ್ಕರೆಯೆಲ್ಲ ಕಹಿ ಆಯ್ತು ಅಕ್ಕ ಬರಬೇಕು ಅಕ್ಕಿ ಮುಗೀಬಾರದು ನೀರ ಕಡಿದರೆ ಬೆಣ್ಣೆ ಬಂದಾದೇನೆ ಅಕ್ಕಿಯ ಮೇಗಳ ಆಸೆ, ನೆಂಟರ ಮೇಗಳ ಬಯಕೆ ಅಕ್ಕಿ ಸರಿಯಾಗ ಬಾರದು ಅಕ್ಕನ ಮಕ್ಕಳು ಬಡವಾಗ ಬಾರದು ಅಗಸನ ಬಡಿವಾರವೆಲ್ಲ ಹೆರರ ಬಟ್ಟೆ ಮೇಲೆ ಹಳ್ಳೀ ದೇವರ ತಲೆ ಒಡೆದು, ದಿಲ್ಲೀ ದೇವರ ಹೊಟ್ಟೆ ಹೊರೆದ ಹಾಗೆ ಅಜ್ಜಿಗೆ ಅರಿವೆಯ ಚಿಂತೆ, ಮಗಳಿಗೆ ಗಂಡನ ಚಿಂತೆ, ಮೊಮ್ಮಗಳಿಗೆ ಕಜ್ಜಾಯದ ಚಿಂತೆ ಅಜ್ಜಿ ಸಾಕಿದ ಮಗ ಬೊಜ್ಜಕ್ಕೂ ಬಾರದು ಅಡವಿಯ ದೊಣ್ಣೆ ಪರದೇಸಿಯ ತಲೆ ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಅತಿ ಆಸೆ ಗತಿಗೇಡು ಅತಿ ಸ್ನೇಹ ಗತಿ ಕೇಡು ಅತ್ತೆ ಒಡೆದ ಪಾತ್ರೆಗೆ ಬೆಲೆ ಇಲ್ಲ ಅನ್ಯಾಯದಿಂದ ಗಳಿಸಿದ್ದು ಅಸಡ್ಡಾಳಾಗಿ ಹೋಯ್ತು ಅಬದ್ಧಕ್ಕೆ ಅಪ್ಪಣೆಯೇ ಅಂದ್ರೆ ಬಾಯಿಗೆ ಬಂದಷ್ಟು ಅರಗಿನಂತೆ ತಾಯಿ, ಮರದಂತೆ ಮಕ್ಕಳು ಅರೆಪಾವಿನವರ ಅಬ್ಬರ ಬಹಳ ಅಲ್ಪರ ಸಂಗ ಅಭಿಮಾನ ಭಂಗ ಅಳಿವುದೇ ಕಾಯ ಉಳಿವುದೇ ಕೀರ್ತಿ ಆವು ಕಪ್ಪಾದ್ರೆ ಹಾಲು ಕಪ್ಪೇನು ಆಗರಕ್ಕೆ ಹೋಗಿ ನನ್ನ ಗಂಡ ಗೂಬೆ ತಂದ ಓದೋದು ಕಾಶಿ ಖಂಡ, ತಿನ್ನೋದು ಮಶಿ ಕೆಂಡ ಆಪತ್ತಿಗೆ ಹರಕೆ, ಸಂಪತ್ತಿಗೆ ಮರವು ಆರು ಯತ್ನ ತನ್ನದು, ಏಳನೇದು ದೇವರಿಚ್ಛೆ ಹಾಕೋದು ಬಿತ್ತೋದು ನನ್ನಿಚ್ಛೆ; ಆಗೋದು ಹೋಗೋದು ದೇವರಿಚ್ಛೆ ಆಲಸ್ಯಂ ಅಮೃತಂ ವಿಷಂ ಆಲಸಿ-ಮುಂಡೇದ್ಕೆ ಎರಡು ಖರ್ಚು, ಲೋಭಿ-ಮುಂಡೇದ್ಕೆ ಮೂರು ಖರ್ಚು ಆಸೆ ಹೆಚ್ಚಿತು ಆಯಸ್ಸು ಕಮ್ಮಿ ಆಯಿತು ಆಸೆಗೆ ಕೊನೆಯಿಲ್ಲ ಆಷಾಡದ ಗಾಳಿ ಬೀಸಿ ಬೀಸಿ ಬಡಿವಾಗ, ಹೇಸಿ ನನ್ನ ಜೀವ ಹೆಂಗಸಾಗಬಾರದೇ ಹೆತ್ತವರಿಗೆ ಅಂಬಲಿ ಬಿಡದಿದ್ದರೂ, ಹಂಬಲ ಬಿಡದಿದ್ದರೆ ಸಾಕು ಹೊಟ್ಟೆ ಉರಿದು ಕೊಳ್ಳೋದು ಒಂದೇಯ, ಹೊಟ್ಟೆ ಇರಿದು ಕೊಳ್ಳೋದು ಒಂದೇಯ ಕಣ ಕಾಯಬಹುದು, ಹೆಣ ಕಾಯಾಕೆ (ಬೇಸರದಿಂದ ಹೊತ್ತು ಕಳೆಯಲಿಕ್ಕೆ) ಆಗೊದಿಲ್ಲ ಕತೆ ಹೇಳೋಕೆ ಹ್ಞುಂ-ಗುಟ್ಟೋರಿರಬೇಕು, ನೆಟ್ಟಗೆ ಬಾಳೋಕೆ ಛೀ-ಗುಟ್ಟೋರಿರಬೇಕು ಕಳ್ಳನ ಮನಸ್ಸು ಹುಳ್ಳಗೆ ಸಂತೆ ಸೇರೋಕೆ ಮೊದಲು ಗಂಟು ಕಳ್ಳರು ಸೇರಿದರು ಅಪ್ಪನ ಮನೇಲಿ ಸೈ ಅನ್ನಿಸಿಕೊಂಡೋಳು, ಅತ್ತೆ ಮನೇಲೂ ಸೈ ಅನ್ನಿಸಿ ಕೊಳ್ತಾಳೆ ಅನ್ನ ಇಕ್ಕಿ ಸಾಕು ಅನ್ನಿಸ ಬಹುದು, ದುಡ್ಡು ಕೊಟ್ಟು ಸಾಕು ಅನ್ನಿಸೋಕಾಗಲ್ಲ ಹೆಂಡ್ರನ್ ಸಸಾರ (=ತಾತ್ಸಾರ) ಮಾಡಿದ್ರೆ ಸಂಸಾರ ನಿಸ್ಸಾರವಾಗ್ತದೆ ಹಾಲಿಲ್ಲ ಬಟ್ಟಲಿಲ್ಲ ಗುಟುಕ್ ಅಂದ ಕೊಡೋದು ಕೊಳ್ಳೋದು ಗಂಡಂದು, ಮಜ ಮಾಡೋದು ಹೆಂಡ್ರುದ್ದು ಊರಿಗಾಗದ ಗೌಡ, ಮೇಲೆರಗುವ ಗಿಡುಗ ರೊಂಡಿಗೆ ಏಟು ಬಿದ್ರೆ ಮೊಂಡಿಗೆ ಮುಲಾಮು ಹಚ್ಚಿದರು ಯೋಗ ಇದ್ದಷ್ಟೇ ಭೋಗ ಹಾಕ್ಮಣೆ, ತಾಮ್ರದ ನಾಣ್ಯ ತಾಯಿ ಮಕ್ಕಳನ್ನ ಕೆಡಿಸ್ತು ಮುದ್ದು ಮುದ್ದು ತೊಗಲೆ ಬಿದ್ದು ಬಿದ್ದು ನಗಲೆ ಹೌದಪ್ಪನ ಮನೇಲಿ ಹೌದಪ್ಪ, ಇಲ್ಲಪ್ಪನ ಮನೇಲಿ ಇಲ್ಲಪ್ಪ ಹೋದ ಬದುಕಿಗೆ ಹನ್ನೆರಡು ದೇವರು ಹೋದ್ರೆ ಒಂದು ಕಲ್ಲು, ಬಂದ್ರೆ ಒಂದು ಹಣ್ಣು ಆದ್ರೆ ಒಂದು ಅಡಿಕೆ ಮರ, ಹೋದ್ರೆ ಒಂದು ಗೋಟಡಿಕೆ ಹೋದಾ ಪುಟ್ಟಾ, ಬಂದಾ ಪುಟ್ಟಾ, ಪುಟ್ಟನ ಕಾಲಿಗೆ ನೀರಿಲ್ಲ ಇಕ್ಕಲಾರದ ಕೈ ಎಂಜಲು ಇಕ್ಕುವಳು ನಮ್ಮವಳಾದ್ರೆ ಕೊಟ್ಟಿಗೆಯಲ್ಲಾದರೂ ಉಣಲಕ್ಕು ಇಕ್ಕೇರಿ ತನಕ ಬಳಗ, ಮಾನ ಮುಚ್ಚಲಿಕ್ಕೆ ಅರಿವೆ ಇಲ್ಲ ಹೆಸರಿಗೆ ಹೊನ್ನ ಹೆಗ್ಗಡೆ, ಎಸರಿಗೆ ಅಕ್ಕಿ ಇಲ್ಲ ಇಡೀ ಮುಳುಗಿದರೂ ಮೂಗು ಮೇಲೆ ಇದ್ದ ಊರ ಸುದ್ದಿ ಇದ್ದಲ್ಲಿ ತೆಗೆಯ ಬಾರದು, ಬೇವೂರ ಸುದ್ದಿ ಹೋದಲ್ಲಿ ತೆಗೆಯ ಬಾರದು ಇದ್ದದ್ದು ಹೋಯಿತು ಮದ್ದಿನ ಗುಣದಿಂದ ಇದ್ದಲ್ಲಿ ಗವುಡ ಹೋದಲ್ಲಿ ಕಿವುಡ ತನ್ನೂರಲಿ ರಂಗ, ಪರೂರಲಿ ಮಂಗ ಇಬ್ಬರ ನ್ಯಾಯ, ಮೂರನೇಯವನಿಗೆ ಆದಾಯ ಇಲ್ಲದ ಬದುಕು ಮಾಡಿ ಇಲಿಗೆ ಚಣ್ಣ ಹೊಲಿಸಿದರು ಎಡದ ನೆತ್ತಿಗೆ ಬಡಿದರೆ ಬಲದ ನೆತ್ತಿಗೆ ತಾಕಿತು ಸಂಸಾರಿ ಸಾವಾಸ ಮಾಡಿ ಸನ್ಯಾಸಿ ಕೆಟ್ಟ ಕುಂತು ತಿಂದರೆ, ಕುಡಿಕೆ ಹೊನ್ನೂ ಸಾಲದು ತುಂಬಿದ ಕೊಡ, ತುಳುಕೋದಿಲ್ಲ ಕಾಮಾಲೆ ಕಣ್ಣೊನಿಗೆ ಕಂಡಿದ್ದೆಲ್ಲ ಹಳದಿನೇ ಮದುವೆಯಾಗೋ ಗುಂಡ ಅಂದ್ರೆ ನೀನೇ ನನ್ನ ಹೆಂಡ್ತಿ ಅಂದ ಮಾಡೋದು ದುರಾಚಾರ, ಮನೆ ಮುಂದೆ ಬೃಂದಾವನ ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡಿದರಂತೆ ಮೂರ್ತಿ ಚಿಕ್ಕದಾದ್ರು ಕೀರ್ತಿ ದೊಡ್ಡದು ಹಾಳೂರಿಗೆ ಉಳಿದವನೇ ಗೌಡ ಹಿರೀಅಕ್ಕನ ಚಾಳಿ ಮನೆ ಮಕ್ಕಳಿಗೆಲ್ಲಾ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಜನ ಮರುಳೋ ಜಾತ್ರೆ ಮರುಳೋ ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಕೆಟ್ಟ ಮೇಲೆ ಬುದ್ಧಿ ಬಂತು, ಅಟ್ಟ ಮೇಲೆ ಒಲೆ ಉರಿಯಿತು ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಹಾಗೆ ಕೋಪದಲ್ಲಿ ಕುಯ್ದ ಮೂಗು ಶಾಂತಿಯಲ್ಲಿ ಬಂದೀತೇ ಕೊಟ್ಟದ್ದು ತನಗೆ; ಬಚ್ಚಿಟ್ಟದ್ದು ಪರರಿಗೆ ಕೊಟ್ಟೋನು ಕೋಡಂಗಿ, ಇಸ್ಕೊಂಡೋನು ಈರಭದ್ರ ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಂಡ ಕುಂಬಾರಂಗೆ ವರುಷ; ದೊಣ್ಣೆಗೆ ನಿಮಿಷ ಕೂಸು ಹುಟ್ಟೋಕೆ ಮುಂಚೆ ಕುಲಾವಿ ಹೊಲಿಸಿದರು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಕೈಯಲ್ಲಿ ಶರಣಾರ್ಥಿ, ಕಂಕುಳಲ್ಲಿ ದೊಣ್ಣೆ ಪಾಪಿ ಸಮುದ್ರ ಹೊಕ್ರೂ ಮೊಣಕಾಲುದ್ದ ನೀರು ರಾಮೆಶ್ವರಕ್ಕೆ ಹೋದ್ರೂ ಶನೀಶ್ವರನ ಕಾಟ ತಪ್ಪಲಿಲ್ಲ ಬೇಲಿನೆ ಎದ್ದು ಹೊಲ ಮೇಯಿತಂತೆ ಭಂಗಿ ದೇವರಿಗೆ ಹೆಂಡಗುಡುಕ ಪೂಜರಿ ಎತ್ತು ಈಯಿತು ಅನ್ದರೆ ಕೊಟ್ಟಿಗೆಗೆ ಕಟ್ಟು ಎನ್ದರಂತೆ ಗಂಡ ಹೆಂಡಿರ ಜಗಳ ಉನ್ಡು ಮಲಗೊ ತನಕ ಹಿಡಿದ ಕೆಲಸ ಕೈ ಹತ್ತಲ್ಲ, ತಿಂದ ಅನ್ನ ಮೈ ಹತ್ತಲ್ಲ ಮೇಲೆ ಬಿದ್ದು ಬಂದೋಳು ಮೂರು ಕಾಸಿಗೂ ಕಡೆ ಮೂರೂ ಬಿಟ್ಟೋಳು ಊರಿಗೆ ದೊಡ್ಡೋಳು ಕೋತಿಯಂಥೋನು ಕೆಣಕಿದ, ಮೂತಿಗೆ ಹೆಟ್ಟಿಸಿಕೊಂಡು ತಿಣಕಿದ ಮುಳ್ಳಿನಿಂದ ಮುಳ್ಳು ತೆಗೆ, ಹಗೆಯಿಂದ ಹಗೆ ತೆಗೆ ಆನೆಯಂಥದೂ ಮುಗ್ಗರಿಸ್ತದೆ ಹೆರಿಗೆ ಬೇನೆ ಕೆಲ ಗಂಟೆ ಗಂಟ, ಬಂಜೆ ಬೇನೆ ಬದುಕಿನ ಗಂಟ ಕಟ್ಟಿದ ಕೆರೆಗೆ ಕೋಡಿ ತಪ್ಪಲ್ಲ, ಹುಟ್ಟಿದ ಮನೆಗೆ ಬೇರೆ(ಪಾಲಗುವುದು) ತಪ್ಪಲ್ಲ ದುಡ್ಡಿಗೆ ದುಡ್ಡು ಗಂಟು ಹಾಕಿದ್ಯೋ? ಬೆನ್ನಿಗೆ ಹೊಟ್ಟೆ ಅಂಟು ಹಾಕಿದ್ಯೋ? ಬಿಮ್ಮಗಿದ್ದಾಗ ಹಮ್ಮು, ಬಿಮ್ಮು ತಪ್ಪಿದಾಗ ದಮ್ಮು ಊರು ಬಾವಿಗೆ ಬಿದ್ದರೂ, ಊರ ಬಾಯಿಗೆ ಬೀಳಬಾರದು ವಶಗೆಡದೆ ಹಸಗೆಡಲ್ಲ ಯಜಮಾನಿಲ್ಲದ ಮನೆ ಮೇಟಿ ಇಲ್ಲದ ಕಣ ಎರಡೂ ಒಂದೆ ಯಾರೂ ಇಲ್ಲದ ಊರಿಗೆ ಹೋಗಿ ನೀರು ಮಜ್ಜಿಗೆ ಬಯಸಿದಂತೆ ಯೋಗಿ ತಂದದ್ದು ಯೋಗಿಗೆ, ಭೋಗಿ ತಂದದ್ದು ಭೋಗಿಗೆ ಯಾರೂ ಇಲ್ಲದ ಮನೆಗೆ ನಾನು ಜೋಗಪ್ಪ ಅಂದ ಯಾವ ಕಾಲ ತಪ್ಪಿದರೂ ಸಾವು ಕಾಲ ತಪ್ಪದು ಯಸಗಾತಿಗೆ ದೋಸೆ ಕೊಡೊ ಹೊತ್ತಿಗೆ, ಮೂಸಿಮೂಸಿ ಮೂಗಿನ ಕೆಳಗೆ ಹಾಕಿದ್ಲು ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮುದ್ದೆ ಉಣ್ತಾ ಮಜ್ಜಿಗೆ ಓಡಾಟ ಯೋಗ್ಯತೆ ಅರಿಯದ ದೊರೆ ರೋಗ ಅರಿಯದ ವೈದ್ಯ ಒಂದೇ ರಟ್ಟೆ ಮುರಿದು ರೊಟ್ಟಿ ತಿನ್ನು ಕಟ್ಟೆ ಹಾಕಿ ಅನ್ನ ಉಣ್ಣು ರಸ ಬೆಳೆದು ಕಸ ತಿನ್ನಬೇಡ, ಹಸ ಕಟ್ಟಿ ಮೊಸರಿಗೆ ಪರದಾಡಬೇಡ ರಾಗ ನೆನೆಪಾದಾಗ ತಾಳ ಮರೆತು ಹೋಯಿತಂತೆ ರಾಗಿ ಇದ್ರೆ ರಾಗ ರಾಗಿ ಇಲ್ದಿದ್ರೆ ರೋಗ ರಾಗಿಕಲ್ಲು ತಿರುಗುವಾಗ ರಾಜ್ಯವೆಲ್ಲಾ ನೆಂಟರು ರಾಜ ಇರೋತನಕ ರಾಣಿ ಭೋಗ ರಾತ್ರಿ ಕಂಡ ಬಾವೀಲಿ ಹಗಲು ಬಿದ್ದಂಗೆ ಲಕ್ಕಿ ಸೊಪ್ಪಾದರೂ ಲೆಕ್ಕದ ಮುದ್ದೆ ಉಣಬೇಕು ಲಂಚ ಕೊಟ್ಟು ಮಂಚ ಏರು ವಂಚನೆ ಮಾಡಿ ಕೈಲಾಸ ಏರು ಲಾಭವಿಲ್ಲದ ವ್ಯಾಪಾರ ಕತ್ತೆ ಮೈ ಪರಚಿದಂಗೆ ಲಿಂಗ ಹರಿದ ಮೇಲೆ ಜಂಗಮನ ಹಂಗೇನು ಲೋಕ ತಿಳಿಯಬೇಕು ಲೆಕ್ಕ ಕಲಿಯಬೇಕು ವಿನಾಶ ಕಾಲಕ್ಕೆ ವಿಪರೀತ ಬುದ್ಧಿ ವ್ಯಾಪಾರಕ್ಕೆ ನಿಮಿಷ ಬೇಸಾಯಕ್ಕೆ ವರುಷ ಶಿವರಾತ್ರಿ ಮನೆಗೆ ಏಕಾದಶಿ ಬಂದಂಗೆ ಶಿವಾ ಅರಿಯದ ಸಾವು ಇಲ್ಲ ಮನಾ ಅರಿಯದ ಪಾಪ ಇಲ್ಲ ಶೀಲವಂತರ ಓಣೀಲಿ ಕೋಳಿ ಮಾಯ ಆದವಂತೆ ಶೆಟ್ಟಿ ಸುಂಗಾರ ಆಗೋದರೊಳಗೆ ಪಟ್ಟಣ ಹಾಳಾಯ್ತು ಸಡಗರದಲ್ಲಿ ಮದುವೆ ಮಾಡಿ ಈ ಹೆಣ್ಣು ಯಾರು ಅಂದಳಂತೆ ಅತ್ತೆ ಸತ್ತ ಮೇಲಿನ ಸೊರ್ಗಕ್ಕಿಂತ ಇದ್ದ ನರಲೋಕ ವಾಸಿ ಸತ್ತವರಿಗೆ ಸಂಗವಿಲ್ಲ ಕೆಟ್ಟವರಿಗೆ ನೆಂಟರಿಲ್ಲ ಸತ್ತೋರ ಮಕ್ಕಳು ಇದ್ದೋರ ಕಾಲ್ದಸೀಲಿ ಸಮಯಕ್ಕಾದ ಹುಲ್ಲು ಕಡ್ಡಿ ಸಹಸ್ರ ಹೊನ್ನು ಸಮಯಕ್ಕಾದವನೆ ನೆಂಟ ಕೆಲಸಕ್ಕಾದವನೆ ಬಂಟ ಸಮಯಕ್ಕೆ ಬಾರದ ಬುದ್ಧಿ ಸಾವಿರ ಇದ್ದರೂ ಲದ್ಧಿ ಸಮುದ್ರದ ನೆಂಟಸ್ತನ ಉಪ್ಪಿಗೆ ಬಡತನ ಸವತಿ ಸಣ್ಣವಳಲ್ಲ ದಾಯಾದಿ ಚಿಕ್ಕವನಲ್ಲ ಸಂತೆ ಕಟ್ಟೋಕು ಮೊದಲೇ ಸೇರಿದರು ಗಂಟು ಕಳ್ಳರು ಸಂತೇಲಿ ಮಂತ್ರ ಹೇಳಿದಂಗೆ ಸಂದೀಲಿ ಸಮಾರಾಧನೆ ಮಾಡ್ದಂಗೆ ಸಾಯ್ತಿನಿ ಸಾಯ್ತಿನಿ ಅಂತ ಸಾವಿರ ಕೋಳಿ ತಿಂದನಂತೆ ಸಾಯೋ ತನಕ ಶನಿ ಕಾಟ ಆದ್ರೆ ಬಾಳೋದು ಯಾವಾಗ ಸಾಯೋ ಮುಂದೆ ಸಕ್ಕರೆ ತುಪ್ಪ ತಿನಿಸಿದರಂತೆ ನೀರೆ ನಿನ್ನ ಮಾತು ನಿಜವೇನೆ ಯುಕ್ತಿಯ ಮಾತು ಮಕ್ಕಳಿಂದಾದರೂ ತಿಳುಕೊ ಸಾವಿರ ಕೊಟ್ಟರೂ ಸವತಿ ಮನೆ ಬೇಡ ಸಾವಿರ ಸಲ ಗೋವಿಂದ ಅಂದರು, ಒಬ್ಬ ದಾಸಯ್ಯನಿಗೆ ಭಿಕ್ಷೆ ನೀಡಲಿಲ್ಲ ಸಾವಿರ ವರ್ಷ ಸಾಮು ಮಾಡಿ ಸಾಯೋ ಮುದುಕಿ ಸೊಂಟ ಮುರಿದ ಸುಳ್ಳು ದೇವರಿಗೆ ಕಳ್ಳ ಪೂಜಾರಿ ಸುಂಕದೋನ ಹತ್ರ ಸುಖದುಃಖ ಹೇಳಿಕೊಂಡ ಹಾಗೆ ಸೂಜಿಯಷ್ಟು ಬಾಯಿ ಗುಡಾಣದಷ್ಟು ಹೊಟ್ಟೆ ಸೊಕ್ಕಿದ್ದು ಉಕ್ತದೆ ಉಕ್ಕಿದ್ದು ಒಲೆಗೆ ಹಾರ್ತದೆ ಹಗಲು ಅರಸನ ಕಾಟ ಇರುಳು ದೆವ್ವದ ಕಾಟ ಹಗ್ಗ ತಿನ್ನೋ ಹನುಮಂತ ರಾಯನಿಗೆ ಜ್ವಾಳದ ಶಾವಿಗೆ ಎಷ್ಟು ಕೊಟ್ಟೀಯ ಹಗ್ಗ ಹರಿಯಲಿಲ್ಲ ಕೋಲು ಮುರಿಯಲಿಲ್ಲ ಹಗೆಯೋನ ಕೊಲ್ಲಾಕೆ ಹಗಲೇನು ಇರುಳೇನು ಹಣ್ಣು ತಿಂದೋನು ನುಣುಚಿ ಕೊಂಡ ಸಿಪ್ಪೆ ತಿಂದೋನು ಸಿಗ್ಹಾಕೊಂಡ ಹಣ ಅಂದ್ರೆ ಹೆಣವೂ ಬಾಯಿ ಬಿಡ್ತದೆ ಹಣ್ಣೆಲೆ ಉದುರುವಾಗ ಚಿಗುರೆಲೆ ನಗುತಿತ್ತು ಹತ್ತರೊಟ್ಟಿಗೆ ಹನ್ನೊಂದು ಜಾತ್ರೆಯೊಟ್ಟಿಗೆ ಗೋವಿಂದು ಹತ್ತು ತಿಂಗಂಳ ಪುಟ್ಟ ಹಟ್ಟೆಲ್ಲಾ ಹೆಜ್ಜೆ ಹತ್ತು ಮಕ್ಕಳ ತಾಯಾದರೂ ಸತ್ತ ಮಗನ್ನ ಮರೆಯೊದಿಲ್ಲ ಹತ್ತು ಜನಕ್ಕೆ ಬಿದ್ದ ನ್ಯಾಯ ಬೇಗ ಸಾಯಕಿಲ್ಲ ಹದ ಬಂದಾಗ ಅರಗಬೇಕು ಬೆದೆ ಬಂದಾಗ ಬಿತ್ತಬೇಕು ಹರಿದಿದ್ದೇ ಹಳ್ಳ ನಿಂತಿದ್ದೇ ತೀರ್ಥ ಹರೆ ಬಡಿದರೂ ಮದುವೆ ಮೊರ ಬಡಿದರೂ ಮದುವೆ ಹರೆಯಕ್ಕೆ ಬಂದಾಗ ಹಂದಿನೂ ಚಂದ ಹಲವು ದೇವರ ಮಾಡಿ ಹಾರುವಯ್ಯ ಕೆಟ್ಟ ಹಲ್ಲುಬಿದ್ದ ಮುದುಕಿ ಎಲ್ಲಿ ಬಿದ್ದರೇನು ಹಸಿದ ಹೊಟ್ಟೆ ತೋರಿಸಿದರೆ ಮಸೆದ ಕತ್ತಿ ತೋರಿಸಿದರು ಹಸಿದು ಹಲಸಿನ ಹಣ್ಣು ತಿನ್ನು ಉಂಡು ಮಾವಿನ ಹಣ್ಣು ತಿನ್ನು ಹಾಲಪ್ಪ ಅಂತ ಹೆಸರಿದ್ದರೂ ಮಜ್ಜಿಗೆಗೆ ಗತಿ ಇಲ್ಲ ಹಾಲಿದ್ದಾಗ ಹಬ್ಬ ಮಾಡು ಹಲ್ಲಿದ್ದಾಗ ಕಡಲೆ ತಿನ್ನು ಹಾಲು ಕುಡಿದ ಮಕ್ಕಳೇ ಬದುಕಲಿಲ್ಲ ವಿಷ ಕುಡಿದ ಮಕ್ಕಳು ಬದುಕ್ಯಾರೆ ಹಾಲು ಮಾರಿದ್ದು ಹಾಲಿಗೆ ನೀರು ಮಾರಿದ್ದು ನೀರಿಗೆ ಹಾವೂ ಸಾಯಲಿಲ್ಲ ಕೋಲು ಮುರೀಲಿಲ್ಲ ಹಾಳೂರಿಗೆ ಉಳಿದೋನೇ ಗೌಡ, ಬೆಂಗಳೂರಿಗೆ ಬಂದೋನೇ ಬಹದ್ದೂರ ಹಿಟ್ಟು ಹಳಸಿತ್ತು ನಾಯೂ ಹಸಿದಿತ್ತು ಹಿತವಿಲ್ಲದ ಗಂಡ ಹಿಂದಿದ್ದರೇನು ಮುಂದಿದ್ದರೇನು ಹಿತ್ತಲ ಗಿಡ ಮದ್ದಲ್ಲ ಹತ್ತರ ಮಾತು ರುಚಿಯಲ್ಲ ಹಿರಿಯಕ್ಕನ ಚಾಳಿ ಮನೆಮಕ್ಕಳಿಗೆಲ್ಲ ಹುಟ್ಟಿದ ಮನೆ ಹೋಳಿಹುಣ್ಣಿಮೆ ಕೊಟ್ಟ ಮನೆ ಶಿವರಾತ್ರಿ ಹುಟ್ಟಿದಾಗ ಬಂದದ್ದು ಹೂತಾಗ ಹೋದೀತೇನು ಹುಟ್ಟು ಗುಣ ಸುಟ್ಟರೂ ಹೊಗೊದಿಲ್ಲ ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪಲ್ಲ ಹುತ್ತ ಬಡಿದರೆ ಹಾವು ಸಾಯುವುದೇ ಹುಬ್ಬೆ ಮಳೇಲಿ ಬಿತ್ತಿದರೆ ಹುಲ್ಲೂ ಇಲ್ಲ ಕಾಳೂ ಇಲ್ಲ ಹುಳ್ಳಿಕಾಳೂ ತಿನ್ನೊ ಮುಕ್ಕ ಒಬ್ಬಟ್ಟಿನ ಹೂರ್ಣ ಕೇಳಿದಂಗೆ ಹೆಡ್ಡಾಳಾದ್ರೂ ದೊಡ್ಡಾಳು ಮೇಲು ಹೇಳೊದು ವೇದ ಹಾಕೊದು ಗಾಳ ಹೊಟ್ಟೆ ತುಂಬಿದ ಮೇಲೆ ಹುಗ್ಗಿ ಮುಳ್ಳು ಮುಳ್ಳು ಗಾಳಿ ಬಂದಾಗ ತೂರಿಕೊ, ಧಾರಣೆ ಬಂದಾಗ ಮಾರಿಕೊ ಹೊರೆ ಹೊತ್ತುಕೊಂಡು ಗ್ರಹಗತಿ ಕೇಳ್ದಂದೆ ಕಂಗಾಲಾದರೂ ಹಂಗಾಳಾಗಬಾರದು ಕೊಣನಿಗೆ ಕೊಸೆಯೋ ಸಂಕಟ, ಎಮ್ಮೆಗೆ ಈಯೋ ಸಂಕಟ ನಿಯತ್ತಿಲ್ಲದೋರಿಗೆ ಬರಕತ್ತಿಲ್ಲ ನಾಯಿಗೆ ಕೆಲಸಿಲ್ಲ, ನಿಲ್ಲೋಕೆ ಹೊತ್ತಿಲ್ಲ ನಡತೆ ಕಲಿಯೋದು ಏರುಬಂಡೆ ನಡತೆ ಕೆಡೋದು ಜಾರುಬಂಡೆ ಎಂಟು ವರ್ಷಕ್ಕೆ ನನ್ನ ಮಗ ದಂಟಾದ ಡಾವರ (=ನೀರಡಿಕೆ) ಹತ್ತಿದಾಗ ದೇವರ ಧ್ಯಾನ ದಾಯವಾಗಿ(=ದಾನವಾಗಿ) ಸಿಕ್ಕಿದರೆ, ನನಗೆ ಒಂದಿರಲಿ ನಮ್ಮಪ್ಪನಿಗೆ ಒಂದಿರಲಿ ಮುಲಾಜಿಗೆ ಬಸುರಾಗಿ ಹೇರೋಕೆ ತಾವಿಲ್ಲ ಪ್ರದಕ್ಷಿಣೆ ಹಾಕಿದರೆ ಪ್ರಯೋಜನವಿಲ್ಲ, ದಕ್ಷಿಣೆ ಹಾಕಿದರೇಯ ತೀರ್ಥ ಸಿಗೋದು ತೇದು ಇಕ್ಕಿದೋಳಿಗಿಂತ ಸಾದು ಇಕ್ಕಿದೋಳು ಹೆಚ್ಚು ಬಾಯ್ ತೆವಲು ತೀರಿಸಿಕೊಳ್ಳೋಕೆ ಎಲೆ ಅಡಿಕೆ ಬೇಕು, ಮೈ ತೆವಲು ತೀರಿಸಿಕೊಳ್ಳೋಕೆ ಒಡಂಬಡಿಕೆ ಬೇಕು ತೂತು ಗತ್ತಲೇಲಿ ತಾತನ ಮದುವೆ ತುತ್ತು ತೂಕ ಕೆಡಿಸಿತು, ಕುತ್ತು ಜೀವ ಕೆಡಿಸಿತು ತಾಳ ತಪ್ಪಿದ ಬಾಳು, ತಾಳಲಾರದ ಗೋಳು ಅವರವರ ತಲೆಗೆ ಅವರವರದೇ ಕೈ ಡಂಬು (=ಬೂಟಾಟಿಕೆ) ನನ್ನ ಕೇಳು, ಡಬ್ಬು ನನ್ನ ಹೆಂಡ್ರನ್ನ ಕೇಳು ಉಂಡ ಮನೆ ಜಂತೆ ಎಣಿಸಬಾರದು ಬೆಳ್ಳಯ್ಯ ಕಾಕಾ ಅರಿವಯ್ಯ ಮೂಕ ಕ್ರಮ ಕಾಣದ ನಾಯಿ ಕಪಾಳೆ ನೆಕ್ತು ಸೊಪ್ಪುಸೆದೆ ತಿನ್ನೋರ ಒಪ್ಪ ನೋಡು, ತುಪ್ಪತೊಗೆ ತಿನ್ನೋರ ರಂಪ ನೋಡು ಎಲ್ಲರ ಹಲ್ಲೊಳಗೆ ನುರಿದು ಹೋಗೋದಕ್ಕಿಂತ ಒಣಗಿದ ಹುಲ್ಲೊಳಗೆ ಉರಿದು ಹೋಗೋದು ವಾಸಿ ಹಣ ಎರವಲು ತಂದು ಮಣ ಉರುವಲು ಕೊಂಡ ಸಮಯಕ್ಕಿಲ್ಲದ ನೆರವು ಸಾವಿರ ಇದ್ದರೂ ಎರವು (ಅನ್ಯ) ಉಂಡದ್ದು ಊಟ ಆಗಲಿಲ್ಲ, ಕೊಂಡದ್ದು ಕೂಟ ಆಗಲಿಲ್ಲ ಉಪ್ಪಿಕ್ಕಿದವರನ್ನು ಮುಪ್ಪಿನ ತನಕ ನೆನೆ ಎಂಥೆಂಥ ದೇವರಿಗೇ ಅಂತರಾಟ ಆಗಿರುವಾಗ ಕಾಲ್ಮುರುಕ ದೇವರಿಗೆ ಕೈಲಾಸವೇ ಹೊಳೆಗೆ ಸುರಿದರೂ ಅಳೆದು ಸುರಿ ಹೆಂಡ್ರ ಅವಾಂತರ ತಡಿಲಾರದೆ ಗಂಡ ದೇಶಾಂತರ ಹೋದ ಉಂಬಾಗ ಉಡುವಾಗ ಊರೆಲ್ಲ ನೆಂಟರು ಉಂಬೋಕೆ ಉಡೋಕೆ ಅಣ್ಣಪ್ಪ ಕೆಲಸಕ್ಕಷ್ಟೇ ಇಲ್ಲಪ್ಪ ಉತ್ತಮ ಹೊಲ ಮಧ್ಯಮ ವ್ಯಾಪಾರ ಕನಿಷ್ಠ ಚಾಕರಿ ಕೃಷಿತೋ ನಾಸ್ತಿ ದುರ್ಭಿಕ್ಷಂ ಉದ್ಯೋಗವೇ ಗಂಡಸಿಗೆ ಲಕ್ಷಣ ಉರಿಯೋ ಬೆಂಕೀಲಿ ಎಣ್ಣೆ ಹೊಯಿದ ಹಾಗೆ ಏರಿದವ ಇಳಿದಾನು ಏಳರಲ್ಲಿ ಬರಲೋ? ಎಪ್ಪತ್ತರಲ್ಲಿ ಬರಲೋ? ಕಂಡದ್ದು ಕಾಣೆ ಉತ್ತಮ ಕಂಡದ್ದು ಕಂಡೆ ಮಧ್ಯಮ, ಕಾಣದ್ದು ಕಂಡೆ ಅಧಮ ಒಂಡಂಬಡಿಕೆ ಇಂದ ಆಗದು ದಡಂಬಡಿಕೆ ಇಂದ ಆದೀತೇ ನಯಶಾಲಿ ಆದವನು ಜಯಶಾಲಿ ಆದಾನು ಒಲ್ಲದ ಗಂಡಗೆ ಬೆಣ್ಣೇಲಿ ಕಲ್ಲು ಬಾಯಲ್ಲಿ ಬೆಲ್ಲ ಕರುಳು ಕತ್ತರಿ ಕಚ್ಚುವ ನಾಯಿ ಬೊಗಳದು ಬೊಗಳುವ ನಾಯಿ ಕಚ್ಚದು ಕಳ್ಳನ ಹೆಜ್ಜೆ ಕಳ್ಳನೇ ಬಲ್ಲ ಹಣ ಇಲ್ಲದವ ಹೆಣಕ್ಕಿಂತ ಕಡೆ ಕೀರ್ತಿಯೇ ಕೈಲಾಸ ಅಪಕೀರ್ತಿಯೇ ನರಕ ಕೂತು ಉಣ್ಣೋನಿಗೆ ಕುಡಿಕೆ ಹೊನ್ನು ಸಾಲದು ಕೆಡುವ ಕಾಲಕ್ಕೆ ಬುದ್ಧಿ ಇಲ್ಲ ಮರಣ ಕಾಲಕ್ಕೆ ಮದ್ದಿಲ್ಲ ಕೈಗೆ ಬಂದ ತುತ್ತು ಬಾಯಿಗೆ ಇಲ್ಲ ಕೊಡಲಿ ಕಾವು ಕುಲಕ್ಕೆ ಸಾವು ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಅಡಿಗೆ ಬಿದ್ಫರೂ ಮೀಸೆ ಮೇಲೆ ಬಂಟರ ಅಬ್ಬರ ಸೇವಿನ ಗೊಬ್ಬರ ಊರಿಗೆ ಬಂದ ನೀರೆ ನೀರಿಗೆ ಬಾರದಿರುತ್ತಾಳೆಯೇ? ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಿಗೆ ಹೋಗಿ ಮೊಳ ಹಾಕಿದರು ಧರ್ಮಕ್ಕೆ ಕೊಟ್ಟ ಆಕಳ ಹಲ್ಲು ಎಣಿಸಿದರು ಆಕಳು ದಾನಕ್ಕೆ ಕೊಟ್ರೆ, ಹಲ್ಲು ಹಿಡಿದು ನೊಡಿದ್ರಂತೆ. ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು ಕಾಸಿಗೆ ತಕ್ಕ ಕಜ್ಜಾಯ. ಕಂತೆಗೆ ತಕ್ಕ ಬೊಂತೆ ದಕ್ಷಿಣೆಗೆ ತಕ್ಕ ಪ್ರದಕ್ಷಿಣೆ ಅಗ್ಗದ ಮಾಲು;ಮುಗ್ಗಿದ ಜೋಳ ಹೆತ್ತೋರ್ಗೆ ಹೆಗ್ಗಣ ಮುದ್ದು, ಕಟ್ಗೊಂಡೋರ್ಗೆ ಕೋಡಂಗಿ ಮುದ್ದು. ನಮಸ್ಕಾರ ಮಾಡಲು ಹೋಗಿ ದೇವಸ್ಥಾನದ ಗೋಪುರ ತಲೇ ಮೇಲೆ ಬಿತ್ತು ಊರು ಸುಟ್ಟರೂ ಹನುಮಂತರಾಯ ಹೊರಗೆ ನಮಾಜು ಮಾಡಲು ಹೋಗಿ ಮಸೀದಿ ಕೆಡವಿಕೊಂಡ ಹಾಗೆ ಊರು ಸೂರೆ ಹೋದ ಮೇಲೆ ಕೋಟೆ ಬಾಗಿಲು ಹಾಕಿದರಂತೆ ಅಕ್ಕಿ ಮೇಲೆ ಆಸೆ, ನೆಂಟರ ಮೆಲೆ ಪ್ರೀತಿ ಬಲ್ಲವನೇ ಬಲ್ಲ ಬೆಲ್ಲದ ರುಚಿಯ ಕತ್ತೆಗೇನು ಗೊತ್ತು ಕಸ್ತೂರಿ ವಾಸನೆ ತೋಟ ಶೃಂಗಾರ, ಒಳಗೆ ಗೋಣಿ ಸೊಪ್ಪು ಹೊರಗೆ ಥಳುಕು, ಒಳಗೆ ಹುಳುಕು ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡ್ಕಂಡನಂತೆ ಕಳ್ಳನ ಮನಸ್ಸು ಹುಳ್ಳ ಹುಳ್ಳಗೆ ಹುಣಿಸೆ ಮುಪ್ಪಾದರೂ ಹುಳಿ ಮುಪ್ಪೆ ? ಆಕಳು ಕಪ್ಪಾದರೂ ಹಾಲು ಕಪ್ಪೆ ? ಕಬ್ಬು ಡೊಂಕಾದರೆ ಸಿಹಿ ಡೊಂಕೆ ? ಗೋರ್ಕಲ್ಲ ಮೇಲೆ ಮಳೆಗರೆದಂತೆ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ ರೋಗಿ ಬಯಸಿದ್ದು ಹಾಲು ಅನ್ನ ವೈದ್ಯರು ಹೇಳಿದ್ದು ಹಾಲು ಅನ್ನ ಕುರುಡರ ರಾಜ್ಯದಲ್ಲಿ ಒಕ್ಕಣ್ಣನೇ ರಾಜ ಊರಿಗೆಲ್ಲಾ ಒಬ್ಬಳೇ ಪದ್ಮಾವತಿ ಅಳಿದೂರಿಗೆ ಉಳಿದವನೇ ಗೌಡ ತನ್ನ ಓಣೀಲಿ ನಾಯಿಯೇ ಸಿಂಹ ಯಾರದೋ ದುಡ್ಡು; ಎಲ್ಲಮ್ಮನ ಜಾತ್ರೆ ಗಾಳಿ ಬಂದಾಗ ತೂರಿಕೋ ಕಾಸಿದ್ರೆ ಕೈಲಾಸ ದುಡ್ಡೇ ದೊಡ್ಡಪ್ಪ,ಬುದ್ಧಿ ಅದರಪ್ಪ ಪುರಾಣ ಹೇಳೊಕೆ; ಬದನೆಕಾಯಿ ತಿನ್ನೋಕೆ ಹೇಳೋದು ಶಾಸ್ತ್ರ, ಹಾಕೋದು ಗಾಣ ಹೇಳೋದು ಶಾಸ್ತ್ರ,ತಿನ್ನೋದು ಬದನೆಕಾಯಿ ನೂರು ಜನಿವಾರ ಒಟ್ಟಿಗಿರಬಹುದು; ಮೂರು ಜಡೆ ಒಟ್ಟಿಗಿರುವುದಿಲ್ಲ ಹೆಣ್ಣಿಗೆ ಹೆಣ್ಣೇ ವೈರಿ ಅತಿ ಆಸೆ ಗತಿ ಕೇಡು ವಿನಾಶ ಕಾಲೇ ವಿಪರೀತ ಬುದ್ಧಿ ಆಸೆಯೇ ದು:ಖಕ್ಕೆ ಮೂಲ ಅತಿಯಾದರೆ ಅಮೃತವೂ ವಿಷ ಓಲೆ ಆಸೆಗೆ ಬೆಕ್ಕು ಮೂಗುತಿ ಕಳಕೊಂಡಿತು ಅತಿ ಸ್ನೇಹ ಗತಿ ಕೆಡಿಸಿತು ಹೊಳೆಯಲ್ಲಿ ಹುಣಿಸೇ ಹಣ್ಣು ಕಿವಿಚಿದಂತೆ ಅಟ್ಟದ ಮೇಲಿಂದ ಬಿದ್ದವನಿಗೆ ದಡಿಗೆ ತಗೊಂಡು ಹೇರಿದರಂತೆ ಮೆತ್ತಗಿದ್ದಲ್ಲಿ ಮತ್ತೊಂದು ಗುದ್ದಲಿ ನಿಸ್ಸಹಾಯಕರ ಮೇಲೆ ಹುಲ್ಲುಕಡ್ಡಿ ಸಹ ಭುಸುಗುಡುತ್ತದೆ ಮೆತ್ತಗಿದ್ದವರನ್ನು ಮೊಣಕೈಯಲ್ಲಿ ಗುದ್ದಿದರು ಕೈ ತೋರಿಸಿ ಅವಲಕ್ಷಣ ಅನ್ನಿಸಿಕೊಂಡರಂತೆ ಅಂಗೈ ತೋರಿಸಿ ಅವಲಕ್ಷಣ ಅಂತ ಅನ್ನಿಸಿಕೊಂಡರಂತೆ ಇರಲಾರದೆ ಇರುವೆ ಬಿಟ್ಟುಕೊಂಡು ಕಿರುಗೂರಿಗೆ ಹೋದರಂತೆ ಕಣಿ ಕೇಳುವುದಕ್ಕೆ ದಾರಿಯಲ್ಲಿ ಹೋಗುತ್ತಿದ್ದ ಮಾರಿಯನ್ನು ಕರೆದು ಮನೆಗೆ ಸೇರಿಸಿಕೊಂಡಂತೆ ಬೀದೀಲಿ ಹೋಗೋ ಮಾರೀನ ಮನೆ ಹೊಕ್ಕು ಹೋಗು ಅಂದಂತಾಯ್ತು ಕೊಚ್ಚೆ ಮೇಲೆ ಕಲ್ಲು ಹಾಕಿದಂತೆ ಸಲಿಗೆ ಕೊಟ್ಟ ಸೊಣಗ ಸಟ್ಟುಗ ನೆಕ್ಕಿತಂತೆ ಅಯ್ಯೋ ಪಾಪ ಅಂದ್ರೆ ಅರ್ಧ ಆಯುಸ್ಸು ಬಡವನ ಸಿಟ್ಟು ದವಡೆಗೆ ಮೂಲ ಬಡವನ ಕೋಪ ದವಡೆಗೆ ಮೂಲ ಬಡವ ನೀ ಮಡಗಿದ ಹಾಗಿರು ಕುದಿಯುವ ಎಣ್ಣೆಯಿಂದ ಕಾದ ತವದ ಮೇಲೆ ಬಿದ್ದ ಹಾಗೆ ಬಾಣಲೆಯಿಂದ ಬೆಂಕಿಗೆ ಕುರಿ ಕಾಯೋದಕ್ಕೆ ತೋಳನನ್ನು ಕಳಿಸಿದರಂತೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಕಾಡಿಗೆ ಹೋಗೋ ವಯಸ್ಸಿನಲ್ಲಿ ಬ್ರಾಹ್ಮಣ ಓಂ ಕಲಿತ ಬೆಳೆಯುವ ಪೈರು ಮೊಳಕೆಯಲ್ಲಿ ಮೂರು ವರ್ಷಕ್ಕೆ ಬಂದಿದ್ದು ಮೂವತ್ತು ವರ್ಷಕ್ಕೆ ಬಂತು ಯಥಾ ರಾಜಾ ತಥಾ ಪ್ರಜಾ ನೂಲಿನಂತೆ ಸೀರೆ; ತಾಯಿಯಂತೆ ಮಗಳು ಸಂಕಟ ಬಂದಾಗ ವೆಂಕಟರಮಣ ಉಗುರಿನಲ್ಲಿ ಹೋಗೋ ಚಿಗುರಿಗೆ ಕೊಡಲಿ ಏಕೆ ? ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಆಕಾಶ ನೋಡೊದಕ್ಕೆ ನೂಕುನುಗ್ಗಲೆ ? ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಅಲ್ಪರ ಸಂಗ ಅಭಿಮಾನ ಭಂಗ ಸಗಣಿಯವನೊಡನೆ ಸ್ನೇಹಕ್ಕಿಂತ ಗಂಧದವನ ಜೊತೆ ಗುದ್ದಾಟ ಮೇಲು ಸಗಣಿಯವನ ಸರಸಕ್ಕಿಂತ, ಗಂಧದವನ ಗುದ್ದಾಟ ಮೇಲು ಅಲ್ಪ ವಿದ್ಯಾ ಮಹಾಗರ್ವಿ ಅಂಬಲಿ ಕುಡಿಯುವವನಿಗೆ, ಮೀಸೆ ಹಿಡಿಯುವವನೊಬ್ಬ ಗಂಜಿ ಕುಡಿಯೋನಿಗೆ,ಮೀಸೆ ಹಿಡಿಯುವವನೊಬ್ಬ ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತದೆಯೆ ? ನರಿ ಕೂಗು ಗಿರಿ ಮುಟ್ಟುತ್ತದೆಯೆ ? ದುಡಿಮೆಯೇ ದುಡ್ಡಿನ ತಾಯಿ ಕಾಯಕವೇ ಕೈಲಾಸ ಆಳಾಗಬಲ್ಲವನು ಅರಸಾಗಬಲ್ಲ ಕಷ್ಟ ಪಟ್ಟರೆ ಫಲವುಂಟು ದುಡಿಮೆಯೇ ದೇವರು ಚಿತ್ತಾರದ ಅಂದವನ್ನು ಮಸಿ ನುಂಗಿತು ಸಾವಿರ ಚಿತ್ತಾರ ಮಸಿ ನುಂಗಿತು ಕದ ತಿನ್ನೋವನಿಗೆ ಹಪ್ಪಳ ಈಡಲ್ಲ ರಾವಣಾಸುರನ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ಸಮುದ್ರ ದಾಟಿದವನಿಗೆ ಹಸುವಿನ ಹೆಜ್ಜೆ ದೊಡ್ಡದೆ ಮಾತು ಆಡಿದರೆ ಹೋಯಿತು; ಮುತ್ತು ಒಡೆದರೆ ಹೋಯಿತು ಮಾತು ಬೆಳ್ಳಿ; ಮೌನ ಬಂಗಾರ ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ ಹೊತ್ತಿಗಿಲ್ಲದ ಗಾದೆ, ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ. ಆದ ಕೆಲಸಕ್ಕೆ ಅತ್ತೆಗಳು ಬಂದಂತೆ ಊಟಕ್ಕಿಲ್ಲದ ಉಪ್ಪಿನಕಾಯಿ ...ಕ್ಕೆ ಸಮಾನ ಚೆಲ್ಲಿದ ಹಾಲಿಗೆ ಅತ್ತು ಪ್ರಯೋಜನವಿಲ್ಲ ಬಂದ ದಾರಿಗೆ ಸುಂಕವಿಲ್ಲ ಬೆರಳು ತೋರಿಸಿದರೆ ಹಸ್ತ ನುಂಗಿದರಂತೆ ಉಸ್ ಎಂದರೆ ಉಸಳಿ ಬೇಡಿದ್ದನಂತೆ ಗಂಧ ಹೆಚ್ಚಾಯ್ತು ಅಂತ ಎಲ್ಲೆಲ್ಲಿಗೋ ಬಳಿದುಕೊಂಡರಂತೆ ಅತ್ತ ದರಿ; ಇತ್ತ ಪುಲಿ ಬಿಸಿ ತುಪ್ಪ; ನುಂಗೋದಕ್ಕೂ ಆಗೊಲ್ಲ; ಉಗುಳೋದಕ್ಕೂ ಆಗೊಲ್ಲ ಮನೇಗೆ ಬೆಂಕಿ ಬಿದ್ದಾಗ ಭಾವಿ ತೋಡಕ್ಕೆ ಶುರು ಮಾಡಿದರಂತೆ ಸಂತೆ ಹೊತ್ತಿಗೆ ಮೂರು ಮೊಳ ನೇದ ಹಾಗೆ ಎತ್ತು ಈಯಿತು ಅಂದರೆ ಕೊಟ್ಟಿಗೆಗೆ ಕಟ್ಟು ಅಂದರಂತೆ ಆತುರಗಾರನಿಗೆ ಬುದ್ಧಿ ಮಟ್ಟ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ತನಗೇ ಜಾಗವಿಲ್ಲ; ಕೊರಳಲ್ಲಿ ಡೋಲು ಬೇರೆ ಉಣ್ಣೋಕಿಲ್ಲದಿದ್ದರೂ ಸಣ್ಣಕ್ಕಿ ಅನ್ನ ತಿಂದರು ; ಉಡೋಕಿಲ್ಲದಿದ್ದರೂ ಪಟ್ಟೆ ಸೀರೆ ಉಟ್ಟರು ನದೀನೇ ನೋಡದೆ ಇರೋನು ಸಮುದ್ರ ವರ್ಣನೆ ಮಾಡಿದ ಹಾಗೆ ಐದು ಕುರುಡರು ಆನೆಯನ್ನು ಬಣ್ಣಿಸಿದ ಹಾಗೆ ಸಣ್ಣವರ ನೆರಳು ಉದ್ದವಾದಾಗ ಸೂರ್ಯನಿಗೂ ಮುಳುಗುವ ಕಾಲ ಮಂತ್ರಕ್ಕಿಂತ ಉಗುಳೇ ಜಾಸ್ತಿ ಮೂಗಿಗಿಂತ ಮೂಗುತಿ ಭಾರ ಇಬ್ಬರ ಜಗಳ ಮೂರನೆಯವನಿಗೆ ಲಾಭ ಕೋಣನೆರಡುಂ ಹೋರೆ ಗಿಡುವಿಂಗೆ ಮಿತ್ತು (ರಾಘವಾಂಕ) ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು ಏತಿ ಅಂದರೆ ಪ್ರೇತಿ ಅಂದಂತೆ ಓದುವಾಗ ಓದು; ಆಡುವಾಗ ಆಡು ಓದಿ ಬರೆಯೋ ಕಾಲದಲ್ಲಿ ಆಡಿ ಮಣ್ಣು ಹುಯ್ಕೊಂಡರು ಕೈಯ್ಯಲ್ಲೆ ಬೆಣ್ಣೆ ಇಟ್ಟುಕೊಂಡು,ತುಪ್ಪಕ್ಕೆ ಊರೆಲ್ಲ ಅಲೆದರಂತೆ ಕಂಕುಳಲ್ಲಿ ಮಗು ಇಟ್ಟುಕೊಂಡು ಊರೆಲ್ಲ ಹುಡುಕಿದರಂತೆ ಊರಿಗೆ ಉಪಕಾರಿ, ಮನೆಗೆ ಮಾರಿ ಮನೆಗೆ ಮಾರಿ, ಪರರಿಗೆ ಉಪಕಾರಿ ತಮ್ಮನೇಲಿ ಹೆಗ್ಗಣ ಸತ್ತು ಬಿದ್ದಿದ್ದರೂ ಬೇರೇ ಮನೇ ಸತ್ತ ನೊಣದ ಕಡೆಗೆ ಬೆಟ್ಟು ಮಾಡಿದರು ತನ್ನ ಎಲೇಲಿ ಕತ್ತೆ ಸತ್ತು ಬಿದ್ದಿದ್ರೆ , ಪಕ್ಕದ ಎಲೇಲಿ ನೊಣ ಹೊಡೆಯಕ್ಕೆ ಹೋದ ಕೋತಿಗೆ ಹೆಂಡ ಕುಡಿಸಿದಂತೆ ಮಂಗನ ಕೈಗೆ ಮಾಣಿಕ್ಯ ಕೊಟ್ಟ ಹಾಗೆ ಹೆಂಡ ಕುಡಿದ ಕಪಿಗೆ ಚೇಳು ಕಡಿದ ಹಾಗೆ ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡರು ಅಮ್ಮನವರು ಪಟ್ಟಕ್ಕೆ ಬಂದಾಗ,ಅಯ್ಯನವರು ಚಟ್ಟಕ್ಕೇರಿದರು ಕೆಲಸವಿಲ್ಲದ ಕುಂಬಾರ ಮಕ್ಕಳ ಅಂ.. ತಟ್ಟಿದ ಕೆಲಸವಿಲ್ಲದ ಆಚಾರಿ ಮಗನ ತಲೆ ಕೆತ್ತಿದನಂತೆ ಆರಕ್ಕೆ ಹೆಚ್ಚಿಲ್ಲ; ಮೂರಕ್ಕೆ ಕಡಿಮೆಯಿಲ್ಲ ಆರಕ್ಕೇರಲ್ಲ, ಮೂರಕ್ಕಿಳಿಯಲ್ಲ ಕಳ್ಳನ ಹೆಂಡತಿ ಎಂದಿದ್ದರೂ ಮುಂ.. ಶರಣರ ಬದುಕನ್ನು ಅವರ ಮರಣದಲ್ಲಿ ನೋಡು ಅಯ್ಯಾ ಎಂದರೆ ಸ್ವರ್ಗ; ಎಲವೋ ಎಂದರೆ ನರಕ ಈಸಿ ನೋಡು , ಇದ್ದು ಜೈಸಿ ನೋಡು ಹೂವಿನ ಜೊತೆ ದಾರ ಮುಡಿಯೇರಿತು ಹೂವಿನಿಂದ ನಾರಿಗೂ ಸ್ವರ್ಗ ಗೆದ್ದೆತ್ತಿನ ಬಾಲ ಹಿಡಿದ ಹಾಗೆ ಆರು ದೋಸೆ ಕೊಟ್ರೆ ಅತ್ತೆ ಕಡೆ, ಮೂರು ದೋಸೆ ಕೊಟ್ರೆ ಸೊಸೆ ಕಡೆ ಆರು ದೋಸೆ ಕೊಟ್ರೆ ಅತ್ತೆ ಕಡೇ,ಮೂರು ದೋಸೆ ಕೊಟ್ರೆ ಮಾವನ ಕಡೆ ನಾಯಿ ಬಾಲ ಡೊಂಕು ನಾಯಿ ಬಾಲಕ್ಕೆ ದಬ್ಬೆ ಕಟ್ಟಿದ ಹಾಗೆ ಜಟ್ಟಿ ಜಾರಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಜಟ್ಟಿ ಜಾರಿದರೆ ಅದೂ ಒಂದು ಪಟ್ಟು ಮುದಿ ... ಮಹಾ ಪತಿವ್ರತೆ (ವೃದ್ಧ ನಾರೀ ಪತಿವ್ರತಾ) ಸೂಳೆ ಮುಪ್ಪಾಗಿ ಗೊರವಿತ್ತಿಯಾದಳು ಬಾಯಲ್ಲಿ ಬೆಣ್ಣೆ; ಬಗಲಲ್ಲಿ ದೊಣ್ಣೆ. ಕೂರೆಗೆ ಹೆದರಿ ಸಂತೆಯಲ್ಲಿ ಸೀರೆ ಬಿಚ್ಚಿದರಂತೆ ಕೂರೆಗೆ ಹೆದರಿ ಸೀರೆ ಬಿಚ್ಚೆಸೆದರು ಕಾಸು ಕೊಟ್ಟು ಬ್ರಹ್ಮೇತಿ ತಗೊಂಡರು ದುಡ್ಡು ಕೊಟ್ಟು ದೆವ್ವ ಹಿಡಿಸಿಕೊಂಡ ಹಾಗೆ ಹೆಂಗಸರ ಬುದ್ಧಿ ಮೊಣಕಾಲ ಕೆಳಗೆ ಹೆಂಗಸರ ಬುದ್ಧಿ ಸೊಂಟದಿಂದ ಕೆಳಗೆ ಹಾಡ್ತಾ ಹಾಡ್ತಾ ರಾಗ; ಉಗುಳ್ತಾ ಉಗುಳ್ತಾ ರೋಗ ಹಾಡ್ತಾ ಹಾಡ್ತಾ ರಾಗ , ನರಳ್ತಾ ನರಳ್ತಾ ರೋಗ ಹೊಸ ವೈದ್ಯನಿಗಿಂತ ಹಳೆ ರೋಗಿಯೇ ಮೇಲು ಹೊಸ ಡಾಕ್ಟರ್‌ಗಿಂತ ಹಳೇ ಕಾಂಪೌಂಡರ್ ವಾಸಿ ಉರಿಯೋ ಗಾಯಕ್ಕೆ ಉಪ್ಪು ಸವರಿದಂತೆ ಕುರು ಮೇಲೆ ಬರೆ ಎಳೆದ ಹಾಗೆ ಸಮುದ್ರದ ನೆಂಟಸ್ತನ ; ಉಪ್ಪಿಗೆ ಬಡತನ ಸಮುದ್ರದ ಮದ್ಯೆ ಇದ್ದರೂ ಉಪ್ಪಿಗೆ ಬರವಂತೆ ಕೂಸು ಹುಟ್ಟೋಕೆ ಮುಂಚೆ ಕುಲಾವಿ ಹೊಲಿದ್ರು ರೇಶ್ಮೆ ಶಾಲಿನಲ್ಲಿ ಸುತ್ತಿದ ಚಪ್ಪಲಿ ಏಟು ಉಪ್ಪು ತಿಂದ ಮನೆಗೆ ಎರಡು ಬಗೆಯ ಬಂದ ಅಡಿಕೆ ಕದ್ದ ಮಾನ ಆನೆ ಕೊಟ್ರೂ ಬರೊಲ್ಲ ಅಲ್ಲುಂಟೆ, ಇಲ್ಲುಂಟೆ, ಕಲ್ಲಲ್ಲುಂಟೆ, ಶಿವದಾನ. (ಅವರು) ಚಾಪೆ ಕೆಳಗೆ ತೂರಿದರೆ (ನೀನು) ರಂಗೋಲಿ ಕೆಳಗೆ ತೂರು. ವೇದ ಸುಳ್ಳಾದ್ರು ಗಾದೆ ಸುಳ್ಳಲ್ಲ. ಬೆಂಕಿ ಇಲ್ಲದೆ ಹೊಗೆ ಏಳಲ್ಲ ಹಿತ್ತಲ ಗಿಡ ಮದ್ದಲ್ಲ ಒಲಿದರೆ ನಾರಿ ಮುನಿದರೆ ಮಾರಿ ರಾತ್ರಿ ಎಲ್ಲ ರಾಮಾಯಣ ಕೇಳಿ, ಬೆಳಗಾಗೆದ್ದು ರಾಮಂಗೂ ಸೀತೆಗೂ ಏನು ಸಂಬಂಧ ಅಂದ್ರಂತೆ ಕಳ್ಳನ್ನ ನಂಬಿದ್ರೂ ಕುಳ್ಳನ್ನ ನಂಬಬಾರದು ಮೋಟಾಳಿಗೊಂದು ಚೋಟಾಳು ಮಳ್ಳೀ ಮಳ್ಳಿ ಮಂಚಕ್ಕೆ ಎಷ್ಟು ಕಾಲು ಅಂದ್ರೆ, ಮೂರು ಮತ್ತೊಂದು ಅಂದ್ಲಂತೆ ಹಾಲಿನಲ್ಲಿ ಹುಳಿ ಹಿಂಡಿದಂತೆ ಕೂತು ತಿನ್ನುವವನಿಗೆ ಕುಡಿಕೆ ಹಣ ಸಾಲದು ಹೆಂಡ ಕುಡಿಯುವ ದೇವರಿಗೆ ಹೇ.. ತಿನ್ನುವ ಪೂಜಾರಿ ಬಡವರ ಮನೆ ಊಟ ಚೆನ್ನ, ದೊಡ್ಡವರ ಮನೆ ನೋಟ ಚೆನ್ನ ಈಚಲ ಮರದ ಕೆಳಗೆ ಕುಳಿತು ಮಜ್ಜಿಗೆ ಕುಡಿದ ಹಾಗೆ ಬಾಯಿ ಬಿಟ್ಟರೆ ಬಣ್ಣಗೇಡು ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು ಅಜ್ಜಿಗೆ ಅರಿವೆ ಚಿಂತೆ ಮೊಮ್ಮಗಳಿಗೆ ಮಿಂ..ನ ಚಿಂತೆ ಶಿವಪೂಜೇಲಿ ಕರಡಿ/ಕರಡಿಗೆ ಬಿಟ್ಟ ಹಾಗೆ ಅಡುಗೆ ಮಾಡಿದವಳಿಗಿಂತ ಬಡಿಸಿದವಳೇ ಮೇಲು ಸೀರೆ ಗಂಟು ಬಿಚ್ಚೋವಾಗ ದಾರದ ನಂಟು ಯಾರಿಗೆ ಬೇಕು? ಕುಡಿಯೋ ನೀರಿನಲ್ಲಿ ಬೆರಳಾಡಿಸೋ ಬುದ್ಧಿ (ಕುಡಿಯೋ ನೀರಿನಲ್ಲಿ ... ಅದ್ದುವ ಬುದ್ಧಿ) ಅನುಕೂಲ ಸಿಂಧು; ಅಭಾವ ವೈರಾಗ್ಯ ಹತ್ತಾರು ಜನ ಓಡಾಡೋ ಕಡೇಲಿ ಹುಲ್ಲು ಬೆಳೆಯೊಲ್ಲ ಅತ್ತೆ ಮೇಲಿನ ಕೋಪ ಕೊತ್ತಿ ಮೇಲೆ ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಂಡಂತೆ ಮಾಡಿದೋರ ಪಾಪ ಆಡಿದೋರ ಬಾಯಲ್ಲಿ ದುರ್ಭಿಕ್ಷದಲ್ಲಿ ಅಧಿಕ ಮಾಸ ಬಂದಂತೆ ಹೋದೆಯಾ ಪಿಶಾಚಿ ಅಂದರೆ ಬಂದೆ ಗವಾಕ್ಷೀಲಿ ಅಂದಂತೆ ಹೌದಪ್ಪನ ಚಾವಡಿಯಲ್ಲಿ ಅಲ್ಲಪ್ಪನನ್ನು ಕೇಳುವವರಾರು ? ಹೊಳೆ ನೀರಿಗೆ ದೊಣೆನಾಯ್ಕನ ಅಪ್ಪಣೆ ಏಕೆ ? ರಂಗನ ಮುಂದೆ ಸಿಂಗನೆ ? ಸಿಂಗನ ಮುಂದೆ ಮಂಗನೆ ? ಜಾಣನಿಗೆ ಮಾತಿನ ಪೆಟ್ಟು; ದಡ್ಡನಿಗೆ ದೊಣ್ಣೆಯ ಪೆಟ್ಟು ಬಿರಿಯಾ ಉಂಡ ಬ್ರಾಹ್ಮಣ ಭಿಕ್ಷೆ ಬೇಡಿದ ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು ಅಂಕೆ ಇಲ್ಲದ ಕಪಿ ಲಂಕೆ ಸುಟ್ಟಿತು ಬೆಟ್ಟ ಅಗೆದು ಇಲಿ ಹಿಡಿದಂತೆ ಇಲಿ ಬಂತು ಎಂದರೆ ಹುಲಿ ಬಂತು ಎಂದರು ಇಡಿಯ ಮುಳುಗಿದವನಿಗೆ ಚಳಿಯೇನು?ಮಳೆಯೇನು? ಬೆಕ್ಕಿಗೆ ಚೆಲ್ಲಾಟ: ಇಲಿಗೆ ಪ್ರಾಣಸಂಕಟ ಕೋಣೆಯ ಕೂಸು ಕೊಳೆಯಿತು; ಓಣಿಯ ಕೂಸು ಬೆಳೆಯಿತು ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದಂತೆ ಸತ್ಯಕ್ಕೆ ಸಾವಿಲ್ಲ; ಸುಳ್ಳಿಗೆ ಸುಖವಿಲ್ಲ ದೇವಸ್ಥಾನದಲ್ಲಿ ಊದಿನ ಕಡ್ಡಿ ಹಚ್ಚದಿದ್ದರೂ ಚಿಂತೆಯಿಲ್ಲ; ... ಬಿಡಬೇಡ ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಬಂತು ಸಂಸಾರ ಗುಟ್ಟು; ವ್ಯಾಧಿ ರಟ್ಟು ಮದುವೇಲಿ ಗಂಡು,ಸ್ಮಶಾನ ಯಾತ್ರೇಲಿ ಹೆಣವಾಗೋ ಬಯಕೆ ಐದು ಬೆರಳೂ ಒಂದೇ ಸಮ ಇರೋಲ್ಲ ಕೋಪದಲ್ಲಿ ಕೊಯ್ದ ಮೂಗು ಶಾಂತವಾದ ಮೇಲೆ ಬರುತ್ತದೆಯೆ ? ಮುಖ ನೋಡಿ ಮಣೆ ಹಾಕು ದೀಪದ ಕೆಳಗೆ ಯಾವತ್ತೂ ಕತ್ತಲೇ ಕುರಿ ಕೊಬ್ಬಿದಷ್ಟೂ ಕುರುಬನಿಗೇ ಲಾಭ ತಮ್ಮ ಕೋಳಿ ಕೂಗಿದ್ದರಿಂದಲೇ ಬೆಳಗಾಯಿತು ಎಂದುಕೊಂಡರು ಮಂತ್ರಕ್ಕೆ ಮಾವಿನ ಕಾಯಿ ಉದುರುತ್ತದೆಯೆ ? ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಎಂಜಲು ಕೈಯಲ್ಲಿ ಕಾಗೆ ಓಡಿಸದ ಬುದ್ಧಿ ಸಾವಿರ ಕುದುರೆ ಸರದಾರ, ಮನೆ ಹೆಂಡತಿ ಕಾಸ್ತಾರ ಆಪತ್ತಿಗಾದವನೇ ನೆಂಟ ಶಂಖದಿಂದ ಬಂದರೇ ತೀರ್ಥ ಕೆಟ್ಟ ಕಾಲ ಬಂದಾಗ ಕಟ್ಟಿಕೊಂಡವಳೂ ಕೆಟ್ಟವಳು ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಅಂಕೆಯಲ್ಲಿದ್ದ ಹೆಣ್ಣು, ಮಜ್ಜಿಗೆಯಲ್ಲಿದ್ದ ಬೆಣ್ಣೆ ಕೆಡೊಲ್ಲ ಇದ್ದೋರು ಮೂರು ಜನರಲ್ಲಿ ಕದ್ದೋರು ಯಾರು ? ಮುಳುಗುತ್ತಿರುವವನಿಗೆ ಹುಲ್ಲು ಕಡ್ಡಿಯೂ ಆಸರೆ ಹುಲ್ಲಿನ ಬಣವೇಲಿ ಸೂಜಿ ಹುಡುಕಿದ ಹಾಗೆ ಹೊಳೆ ದಾಟಿದ ಮೇಲೆ ಅಂಬಿಗನ ಹಂಗೇಕೆ ಎಂದರಂತೆ ಅಕ್ಕ ಸತ್ತರೆ ಅಮಾವಾಸ್ಯೆ ನಿಲ್ಲುತ್ತದೆಯೆ ? ಅರವತ್ತಕ್ಕೆ ಅರಳು ಮರಳು ಜನ ಮರುಳೋ ಜಾತ್ರೆ ಮರುಳೋ ಕುಂಟನಿಗೆ ಎಂಟು ಚೇಷ್ಟೆ, ಕುರುಡನಿಗೆ ನಾನಾಚೇಷ್ಟೆ ಬೊಗಳುವ ನಾಯಿ ಕಚ್ಚುವುದಿಲ್ಲ ಕೈಗೆಟುಕದ ದ್ರಾಕ್ಷಿ ಹುಳಿ ದುಷ್ಟರಿಂದ ದೂರವಿರು ಹಂಗಿನ ಅರಮನೆಗಿಂತಾ ಗುಡಿಸಿಲೇ ಮೇಲು ಮುಸುಕಿನೊಳಗೆ ಗುದ್ದಿಸಿಕೊಂಡಂತೆ ಕದ್ದು ತಿಂದ ಹಣ್ಣು, ಪಕ್ಕದ ಮನೆ ಊಟ ಎಂದೂ ಹೆಚ್ಚು ರುಚಿ ಮಿಂಚಿಹೋದ ಕಾರ್ಯಕ್ಕೆ ಚಿಂತಿಸಿ ಫಲವೇನು ? ಹಳೆ ಚಪ್ಪಲಿ, ಹೊಸಾ ಹೆಂಡತಿ ಕಚ್ಚೊಲ್ಲ ರವಿ ಕಾಣದ್ದನ್ನು ಕವಿ ಕಂಡ ಕಾಲಿನದು ಕಾಲಿಗೆ; ತಲೆಯದು ತಲೆಗೆ ವಿದ್ಯೆ ಇಲ್ಲದವನು ಹದ್ದಿಗಿಂತಲೂ ಕಡೆ ಕನ್ನಡಿ ಒಳಗಿನ ಗಂಟು ಕೈಗೆ ದಕ್ಕೀತೆ ? ಅತ್ತೆಗೊಂದು ಕಾಲ; ಸೊಸೆಗೊಂದು ಕಾಲ ಗಣೇಶನನ್ನು ಮಾಡಲು ಹೋಗಿ ಅವರ ಅಪ್ಪನನ್ನು ಮಾಡಿದಂತೆ ಮಾಡಬಾರದ್ದು ಮಾಡಿದರೆ ಆಗಬಾರದ್ದೇ ಆಗುತ್ತೆ ನರಿಗೆ ಹೇಳಿದರೆ ನರಿ ತನ್ನ ಬಾಲಕ್ಕೆ ಹೇಳಿತಂತೆ ಮಹಡಿ ಹತ್ತಿದ ಮೇಲೆ ಏಣಿ ಒದ್ದ ಹಾಗೆ ಹುಟ್ಟಿಸಿದ ದೇವರು ಹುಲ್ಲು ಮೇಯಿಸುತ್ತಾನೆಯೆ ? ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ತಾನೂ ತಿನ್ನ; ಪರರಿಗೂ ಕೊಡ ಗಂಡಸಿಗೇಕೆ ಗೌರಿ ದು:ಖ ? ನಗುವ ಹೆಂಗಸು, ಅಳುವ ಗಂಡಸು ಇಬ್ಬರನ್ನೂ ನಂಬಬಾರದು ಗುಡ್ಡ ಕಡಿದು ಹಳ್ಳ ತುಂಬಿಸಿ ನೆಲ ಸಮ ಮಾಡಿದ ಹಾಗೆ ಹನುಮಂತನೇ ಹಗ್ಗ ತಿನ್ನುವಾಗ ಪೂಜಾರಿಗೆ ಶ್ಯಾವಿಗೆ ಬೇಕಂತೆ ರತ್ನ ತಗೊಂಡು ಹೋಗಿ ಗಾಜಿನ ತುಂಡಿಗೆ ಹೋಲಿಸಿದರು ಗಾಜಿನ ಮನೇಲಿರೋವ್ರು ಅಕ್ಕಪಕ್ಕದ ಮನೇ ಮೇಲೆ ಕಲ್ಲೆಸೆಯಬಾರದು ಉಂಡೂ ಹೋದ; ಕೊಂಡೂ ಹೋದ ಎಲೆ ಎತ್ತೋ ಜಾಣ ಅಂದರೆ ಉಂಡೋರೆಷ್ಟು ಮಂದಿ ಅಂದನಂತೆ ಕೋತಿ ತಾನು ಮೊಸರನ್ನ ತಿಂದು ಮೇಕೆ ಬಾಯಿಗೆ ಒರೆಸಿತಂತೆ ಹಾಡಿದ್ದೇ ಹಾಡಿದ ಕಿಸಬಾಯಿ ದಾಸ ಹಸಿ ಗೋಡೆ ಮೇಲೆ ಹರಳು ಎಸೆದಂತೆ ಕಾಮಾಲೆ ಕಣ್ಣಿನವನಿಗೆ ಲೋಕವೆಲ್ಲಾ ಹಳದಿಯಂತೆ ಕಳೆದುಕೊಂಡ ವಸ್ತುವನ್ನು ಕಳೆದುಹೋದ ಜಾಗದಲ್ಲೇ ಹುಡುಕು ಲಂಘನಮ್ ಪರಮೌಷಧಮ್ ಗಾಳಿ ಗುದ್ದಿ ಮೈ ಕೈ ನೋಯಿಸಿಕೊಂಡಂತೆ ತಲೆ ಗಟ್ಟಿ ಇದೆ ಅಂತ ಕಲ್ಲಿಗೆ ಹಾಯಬಾರದು ಹಳೇ ಗಂಡನ ಪಾದವೇ ಗತಿ ಹಬ್ಬದ ದಿನವೂ ಹಳೇ ಗಂಡನೇ ? ಕಳ್ಳನಿಗೊಂದು ಪಿಳ್ಳೆ ನೆವ ಅಳೋ ... ಮೇಲೆ ಗಳು ಬಿತ್ತು ಸನ್ಯಾಸಿ ಬೆಕ್ಕು ಸಾಕಿದ ಹಾಗೆ ತನ್ನ ಬೆನ್ನು ತಾನೇ ತಟ್ಟಿಕೊಂಡ ಹಾಗೆ ಪಕ್ಕದ ಮನೇಗೆ ಬಿದ್ದ ಬೆಂಕಿ ಬಿಸಿ ತನ್ನ ಮನೇಗೆ ಬೀಳೋವರೆಗೂ ತಾಕಲ್ಲ ಕರೆಯದವರ ಮನೆಗೆ ಕಳಸಗಿತ್ತಿಯಾಗು ಹಂಚಿದವರಿಗೆ ಹಲ್ಲು ಬಾಯಿ ಕುಣೀಲಾರದ ಸೂಳೆ ನೆಲ ಡೊಂಕು ಅಂದ್ಳಂತೆ ದಾಕ್ಷಿಣ್ಯಕ್ಕೆ ಬಸಿರಾದರೆ ಹಡೆಯೋದು ಕಷ್ಟ ಹೊಸದರಲ್ಲಿ ಅಗಸ ಗೋಣಿಯನ್ನು ಎತ್ತಿ ಎತ್ತಿ ಒಗೆದನಂತೆ ಕೈಲಾಗದೋನು ಮೈ ಪರಚಿಕೊಂಡ ಕಜ್ಜಿ ಹೋದರೂ ಕಡಿತ ಹೋಗಲಿಲ್ಲ ಆನೆ ದಾನ ಮಾಡಿದವನು ಸರಪಣಿಗೆ ಜಗಳಾಡುವನೆ ? ಎತ್ತು ಹೊರಬಲ್ಲ ಭಾರವನ್ನು ಕರು ಹೊರಬಲ್ಲುದೆ ? ದೊಡ್ಡವರು ಹೇಳಿದ ಹಾಗೆ ಮಾಡು; ಮಾಡಿದ ಹಾಗೆ ಮಾಡಬೇಡ ಏತಿ ಅಂದರೆ ಪ್ರೇತಿ . ದಂಡಿಗೆ ಹೆದರಲಿಲ್ಲ, ದಾಳಿಗೆ ಹೆದರಲಿಲ್ಲ, ಇನ್ನು ನಿನ್ನ ಗಳಗಂಟೆಗೆ ಶುಭ ನುಡಿಯೋ ಸೋಮ ಅಂದರೆ ಗೂಬೆ ಕಾಣ್ತಲ್ಲೋ ಮಾಮ ಅಂದ ಹಾಗೆ ಹಲವು ಸಲ ಸಾಯುವವನು ಹೇಡಿ,ವೀರಯೋಧನಿಗೊಂದೇ ಸಲ ಸಾವು ನಮ್ಮ ದೇವರ ಸತ್ಯ ನಮಗೆ ಗೊತ್ತಿಲ್ಲವೇ ? ಮುಟ್ಟಿದೋರ ಮೇಲೆ ಬಿಟ್ಟೆ ನನ್ನ ಪ್ರಾಣ ಮಾಡೋರನ್ನು ಕಂಡರೆ ನೋಡು ನನ್ನ ಸಿರೀನ ಮೊಲ ಎಬ್ಬಿಸಿ ...ಕ್ಕೆ ಕೂತರು ಹುಟ್ತಾ ಹುಟ್ತಾ ಅಣ್ಣ ತಮ್ಮಂದಿರು; ಬೆಳೀತಾ ಬೆಳೀತಾ ದಾಯಾದಿಗಳು ಮಗೂನ ಚಿವುಟೋದು, ತೊಟ್ಟಿಲು ತೂಗೋದು ತಾನು ಮಾಡುವುದು ಉತ್ತಮ; ಮಗ ಮಾಡುವುದು ಮಧ್ಯಮ; ಆಳು ಮಾಡುವುದು ಹಾಳು ವೈದ್ಯರ ಹತ್ತಿರ, ವಕೀಲರ ಹತ್ತಿರ ಸುಳ್ಳು ಹೇಳಬೇಡ ಆನೆಗೆ ಚಡ್ಡಿ ಹೊಲಿಸಿದ ಹಾಗೆ ಕಪ್ಪೆ ತಕ್ಕಡೀಲಿ ಹಾಕಿದ ಹಾಗೆ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಕೋತಿ ಕಜ್ಜಾಯ ಹಂಚಿದ ಹಾಗೆ. ಕಬ್ಬಿಣ ಕಾದಿರುವಾಗಲೇ ಬಡಿಯಬೇಕು ಅರ್ಧ ಆದ ಕೆಲಸವನ್ನು ಅರಸನಿಗೂ ತೋರಿಸಬೇಡ ಬೇಲಿಯೇ ಎದ್ದು ಹೊಲ ಮೇದಂತೆ ಪಾಪಿ ಧನ ಪ್ರಾಯಶ್ಚಿತ್ತಕ್ಕೆ ಒಂದು ಒಳ್ಳೇ ಮಾತಿಗೆ ಸುಳ್ಳೇ ಪ್ರಧಾನ ಪಾಲಿಗೆ ಬಂದದ್ದು ಪಂಚಾಮೃತ ಕಂಡ ಕಳ್ಳ ಜೀವ ಸಹಿತ ಬಿಡ ಕಂಡ ಮನೆಗೆ ಕಳ್ಳ ಬಂದ , ಉಂಡ ಮನೆಗೆ ನೆಂಟ ಬಂದ ನೀರಿಳಿಯದ ಗಂಟಲೊಳ್ ಕಡುಬು ತುರುಕಿದಂತಾಯ್ತು (ಮುದ್ದಣ) ಮಕ್ಕಳಿಲ್ಲದ ಮನೆಯಲ್ಲಿ ಅಜ್ಜ ಅಂಬೆಗಾಲಿಟ್ಟ ಅಜ್ಜಿ ನೂತದ್ದೆಲ್ಲಾ ಅಜ್ಜನ ಉಡಿದಾರಕ್ಕೆ. ಮಕ್ಕಳಿಸ್ಕೂಲ್ ಮನೇಲಲ್ವೇ? (ಕೈಲಾಸಂ) ' ಕೋ' ಅನ್ನೋದು ಕುಲದಲ್ಲಿಲ್ಲ ,'ತಾ' ಅನ್ನೋದು ತಾತರಾಯನ ಕಾಲದ್ದು ದೇವನೊಬ್ಬ ನಾಮ ಹಲವು ಸದಾಶಿವನಿಗೆ ಅದೇ ಧ್ಯಾನ ಬಡ ದೇವರನ್ನು ಕಂಡರೆ ಬಿಲ್ಪತ್ರೇನೂ 'ಭುಸ್' ಅಂತಂತೆ ಸಂದೀಲಿ ಸಮಾರಾಧನೆ ಎದ್ದರೆ ಆಳಲ್ಲ ತೂಕಡಿಸುವವನಿಗೆ ಹಾಸಿಗೆ ಹಾಸಿ ಕೊಟ್ಟ ಹಾಗೆ ಪಾಂಡವರು ಪಗಡೆಯಾಡಿ ಕೆಟ್ಟರು ; ಹೆಣ್ಣುಮಕ್ಕಳು ಕವಡೆಯಾಡಿ ಕೆಟ್ಟರು ಮಾಡೋದು ಅನಾಚಾರ ; ಮನೆ ಮುಂದೆ ಬೃಂದಾವನ ಉರಿಯೋ ಬೆಂಕಿಗೆ ತುಪ್ಪ ಸುರಿದ ಹಾಗೆ ಗಾಣಿಗಿತ್ತಿ ಅಯ್ಯೋ ಅಂದರೆ ನೆತ್ತಿ ತಂಪಾದೀತೇ? ಮೊದಲಿದ್ದವಳೇ ವಾಸಿ ಎಬ್ಬಿಸಿದರೆ ಉಣ್ಣೋಳು ಗುಂಪಿನಲ್ಲಿ ಗೋವಿಂದ ನಾಯೀನ ತಗೊಂಡು ಹೋಗಿ ಸಿಂಹಾಸನದ ಮೇಲೆ ಕೂರಿಸಿದರೆ ... ಕಂಡು ಇಳಿಬಿತ್ತು ಚೇಳಿಗೊಂದೇ ಬಸಿರು ; ಬಾಳೆಗೊಂದೇ ಗೊನೆ ಹೀನ ಸುಳಿ ಬೋಳಿಸಿದರೂ ಹೋಗೋದಿಲ್ಲ ಮಾಡಿದರೆ ಮನೆ ; ಹೂಡಿದರೆ ಒಲೆ ಕಣ್ಣು ಕಟ್ಟಿ ಕಾಡಲ್ಲಿ ಬಿಟ್ಟ ಹಾಗೆ ಉಂಡದ್ದೇ ಉಗಾದಿ ; ಮಿಂದದ್ದೇ ದೀವಳಿಗೆ ಕಡ್ಡೀನ ಗುಡ್ಡ ಮಾಡು. ಅತ್ತು ಹೆದರಿಸೋನೊಬ್ಬ ಬರ್ತಾ ಬರ್ತಾ ರಾಯರ ಕುದುರೆ ಕತ್ತೆಯಾಯ್ತು ತಾನು ಕಳ್ಳ ,ಪರರ ನಂಬ ಓಡಿ ಹೋಗೋ ಬಡ್ಡಿ ಹಾಲು ಹೆಪ್ಪಿಟ್ಟಾಳೆ? ಗಡ್ಡಕ್ಕೆ ಬೇರೆ ಸೀಗೇಕಾಯಿ ನೆಂಟರಿಗೆ ದೂರ ; ನೀರಿಗೆ ಹತ್ತಿರ ಕುಲ ಸೋಸಿ ಹೆಣ್ಣು ತಗೊಂಡು ಬಾ ; ಜಲ ಸೋಸಿ ನೀರು ತಗೊಂಡು ಬಾ ಬಾಯಿದ್ದೋರು ಬರಗಾಲದಲ್ಲೂ ಬದುಕಿದರು ಹೆದರಿದವರ ಮೇಲೆ ಕಪ್ಪೆ ಎಸೆದರು ಅಳಿಯ ಮನೆ ತೊಳಿಯ ನಾಯಿ ಮೊಲೇಲಿ ಖಂಡುಗ ಹಾಲಿದ್ದರೇನು, ದೇವರಿಗಿಲ್ಲ ದಿಂಡರಿಗಿಲ್ಲ ಮಾಘ ಕಾವ್ಯ ಮಗನಿಗೆ ಬೇಡ ಮುಂದೆ ಬರೋ ಕೋಡಿಗಿಂತ ಹಿಂದೆ ಬರೋ ಬಾಲಾನೇ ವಾಸಿ ಪಾಯಸ ಮಾಡಿ ನಾಯಿ ಬಾಲದಲ್ಲಿ ತೊಳಸಿದ ಹಾಗೆ ಆತುರಕ್ಕೆ ಅಜ್ಜಿ ಮೈನೆರೆದಳು ಮಾಡಬಾರದ್ದು ಮಾಡಿದರೆ, ಆಗಬಾರದ್ದು ಆಗತ್ತೆ ಹುಡುಕುತ್ತಿದ್ದ ಬಳ್ಳಿ ಕಾಲಿಗೇ ತೊಡರಿಕೊಂಡಿತು ದನ ತಿನ್ನುವವನಿಗೆ ಗೊಬ್ಬರದ ಆಣೆ ಪಾಪಿ ಚಿರಾಯು ಕಣ್ಣು ಕುರುಡಾದರೆ ಬಾಯಿ ಕುರುಡೇ ಅಳಿಯನ ಕುರುಡು ಬೆಳಗಾದರೆ ಗೊತ್ತಾಗತ್ತೆ ಚಿನ್ನದ ಸೂಜೀಂತ ಕಣ್ಣು ಚುಚ್ಚಿಕೊಳ್ಳುವುದಕ್ಕೆ ಆಗುತ್ತದೆಯೇ? ಹಣ ಅಂದರೆ ಹೆಣಾನೂ ಬಾಯಿ ಬಿಡುತ್ತದೆ ಜರಡಿ ಸೂಜಿಗೆ ಹೇಳಿತಂತೆ: ನಿನ್ನ ಬಾಲದಲ್ಲಿ ತೂತು ಅಹಂಕಾರಕ್ಕೆ ಉದಾಸೀನವೇ ಮದ್ದು. ಎಲ್ಲಾ ಜಾಣ, ತುಸು ಕೋಣ. ಹುಚ್ಚು ಬಿಟ್ಟ ಹೊರತು ಮದುವೆ ಆಗೋಲ್ಲ; ಮದುವೆ ಆದ ಹೊರತು ಹುಚ್ಚು ಬಿಡಲ್ಲ ಬೈದು ಹೇಳಿದವರು ಬದುಕಕ್ಕೆ ಹೇಳಿದರು ನಗೋ ಗಂಡಸನ್ನೂ ಅಳೋ ಹೆಂಗಸನ್ನೂ ನಂಬಬೇಡ ವ್ರತ ಕೆಟ್ಟರೂ ಸುಖ ಪಡಬೇಕು ಅಗ್ಗದ ಆಸೆಗೆ ಗೊಬ್ಬರ ತಗೊಂಡರು ಅತ್ತೂ ಕರೆದೂ ಔತಣ ಹೇಳಿಸಿಕೊಂಡರು ನೆಚ್ಚಿನೆಮ್ಮೆ ಕೋಣನನ್ನೀಯಿತು ಬಸವನ ಹಿಂದೆ ಬಾಲ, ಸೂಜಿ ಹಿಂದೆ ದಾರ ಕುದುರೆ ಕಂಡರೆ ಕಾಲುನೋವು ಖಂಡಿತ ವಾದಿ, ಲೋಕ ವಿರೋಧಿ ಅತ್ತೆ ಆಸ್ತೀನ ಅಳಿಯ ದಾನ ಮಾಡಿದ ರಾಮ ರಾಜ್ಯ ಬಂದರೂ ರಾಗಿ ಬೀಸೋದು ತಪ್ಪಲಿಲ್ಲ ಆಡು ಮುಟ್ಟದ ಸೊಪ್ಪಿಲ್ಲ ಊರ ದನ ಕಾದು ದೊಡ್ಡ ಬೋರೇಗೌಡ ಅನ್ನಿಸಿಕೊಂಡ ಹಣ್ಣು ತಿಂದವನು ನುಣುಚಿಕೊಂಡ; ಸಿಪ್ಪೆ ತಿಂದವನು ಸಿಕ್ಕಿ ಹಾಕಿಕೊಂಡ ಗೌರಿ ಹಬ್ಬಕ್ಕೆ ಬಂದ ಗತಿಗೆಟ್ಟ ಅಳಿಯ ಜೀನ ಗಳಿಸಿದ ; ಜಾಣ ತಿಂದ ಶೆಟ್ಟಿ ಬಿಟ್ಟಲ್ಲೆ ಪಟ್ಣ ಉಟ್ಟರೆ ತೊಟ್ಟರೆ ಪುಟ್ಟಕ್ಕ ಚೆನ್ನ ಹಾವು ಸಾಯಬಾರದು ;ಕೋಲು ಮುರಿಯಬಾರದು ಕಾಸಿಗೊಂದು,ಕೊಸರಿಗೆರಡು ಉ.. ಕುಡಿದರೂ ತನ್ನಿಚ್ಚೇಯಿಂದ ಇರಬೇಕು ಸ್ವತಂತ್ರವೋ, ಸ್ವರ್ಗಲೋಕವೋ ಊಟ ತನ್ನಿಚ್ಚೆ, ನೋಟ ಪರರಿಚ್ಚೆ ತಾಳಿದವನು ಬಾಳಿಯಾನು ಲಾಲಿಸಿದರೆ ಮಕ್ಕಳು ; ಪೂಜಿಸಿದರೆ ದೇವರು ಹುಚ್ಚಲ್ಲ, ಬೆಪ್ಪಲ್ಲ, ಶಿವಲೀಲೆ ಅಳಿಯ ಅಲ್ಲ, ಮಗಳ ಗಂಡ ಹೊಟ್ಟೇಲಿರೋ ಸಿಟ್ಟು ರಟ್ಟೇಲಿಲ್ಲ ತಲೆಗೆಲ್ಲಾ ಒಂದೇ ಮಂತ್ರವಲ್ಲ ಬಾಲ ಸುಟ್ಟ ಬೆಕ್ಕಿನ ಹಾಗೆ ಹಿತ್ತಿಲ ಗಿಡ ಮದ್ದಲ್ಲ ಸರಿ ಸರಿಯಾಗಿದ್ರೆ, ಪರಿ ಪರಿ ನೆಂಟರು ಇಷ್ಟನ್ನು ಕಂಡೆಯಾ ಕೃಷ್ಣಂಭಟ್ಟಾ ಅಂದರೆ, ಮುಪ್ಪಿನ ಕಾಲಕ್ಕೆ ಮೂರು ಜನ ಹೆಂಡಿರು ಹಾಕು ಮಣೆ, ನೂಕು ಮಣೆ, ತಳ್ಳು ಮಣೆ, ಯಾಕ್ಮಣೆ (ನೀನು)ಮೊಳ ಬಿಟ್ಟರೆ,(ನಾನು) ಮಾರು ಬಿಡುತ್ತೇನೆ ಕರೆದು ಹೆಣ್ಣು ಕೊಟ್ಟರೆ ಮಲರೋಗ ಬಂತಂತೆ. ಚೇಳಿಗೆ ಪಾರುಪತ್ಯ ಕೊಟ್ಟರೆ ಮನೆಯವರಿಗೆಲ್ಲಾ ಮುಟ್ಟಿಸಿತಂತೆ. ದಿನಾ ಸಾಯೋರಿಗೆ ಅಳೋರ್ ‍ಯಾರು? ಊರು ಅಂದ ಮೇಲೆ ಹೊಲಗೇರಿ ಇಲ್ಲದೆ ಇರುತ್ತದೆಯೇ? ಮೇಯುವುದಕ್ಕೆ ಮುಂದೆ ;ಮೀಯುವುದಕ್ಕೆ ಹಿಂದೆ ಕಡ್ಡೀನ ಗುಡ್ಡ ಮಾಡು ನವಿಲಾಡಿತು ಅಂತ ಕೆಂಬೂತ ಪುಕ್ಕ ತೆರೆಯಿತು ಆಟಕ್ಕುಂಟು,ಲೆಕ್ಕಕ್ಕಿಲ್ಲ ಹಿರೀಮಗ ಆಗಬೇಡ, ಹಿತ್ತಿಲ ಕದ ಆಗಬೇಡ ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ ಆಡಿಕೊಳ್ಳೋರ ಮುಂದೆ ಎಡವಿ ಬಿದ್ದ ಹಾಗೆ ಹಣವಿದ್ದ ಗಂಡನನ್ನು ಮದುವೆಯಾದರೂ ಋಣವಿದ್ದಷ್ಟೇ ಬಾಳು ಬಗ್ಗಿದವನಿಗೆ ಒಂದು ಗುದ್ದು ಜಾಸ್ತಿ ತಾಮ್ರದ ಕಾಸು ತಾಯಿ ಮಕ್ಕಳನ್ನು ಬೇರೆ ಮಾಡ್‌ತಂತೆ ಗಂಡ ಸರಿಯಿದ್ರೆ ಗುಂಡೂ ಪಾವನ ಬೆಳ್ಳಗಿರೋದೆಲ್ಲಾ ಹಾಲಲ್ಲ ಹೊಳೆಯುವುದೆಲ್ಲಾ ಚಿನ್ನವಲ್ಲ ಹಾಸಿಗೆ ಇದ್ದಷ್ಟು ಕಾಲು ಚಾಚು ಉಣ್ಣು ಬಾ ಅಂದ್ರೆ, ಇರಿ ಬಾ ಅಂದ್ರಂತೆ ಇರುವೆಗೆ ಇರುವೆ ಮೈ ಭಾರ, ಆನೆಗೆ ಆನೆ ಮೈ ಭಾರ ಮನಸ್ಸಿದ್ದರೆ ಮಾರ್ಗ ತಲೆಗೆ ಬಿದ್ದ ನೀರು ಕಾಲಿಗೆ ಬೀಳದೆ ಇರುತ್ತದೆಯೇ? ಅದ್ನೇ ಉಂಡೇನ್ ಅತ್ತೆಮ್ನೋರೇ, ಕದ ತೆಗೀರಿ ಮಾವ್ನೋರೇ ಅಂದ್ರಂತೆ ಬಡವೆ ಸೀರೆ ಉಡದೆ ಮಾಸಿತು ಆಕಾಶಕ್ಕೆ ಏಣಿ ಹಾಕಿದ ಹಾಗೆ ಸೇರಿಗೆ ಸವ್ವಾಸೇರು ಒಂದಕ್ಕೆರಡು ದಂಡ, ಹೆಂಡಕ್ಕೆ ರಾಗಿ ದಂಡ ಹುಟ್ಟು ಗುಣ ಸುಟ್ಟರೂ ಹೋಗಲ್ಲ ದೇವರಿಲ್ಲದ ಗುಡಿ;ಯಜಮಾನನಿಲ್ಲದ ಮನೆ ಎರಡೂ ಒಂದೇ ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಅಷ್ಟು ಕಂಡ್ಯ ಅಮಾಸೆ ಕಂಡ್ಯ ; ಹೊಟ್ಟೆ ನೋವಲ್ಲಿ ಕಂಡ್ಯ ಹಾಲು ಅನ್ನವ ನಾಯಿ ಹೆಸರು'ಸಂಪಿಗೆ'ಅಂತ ನಾಯಿಗೆ ವಯಸ್ಸಾದ್ರೆ ಅಜ್ಜ ಅಂತಾರಾ? ಆಕೆಗೆ ಬುದ್ಧಿ ಹೇಳಕ್ಕೆ ಆತನ್ನ ಕರೆಸಿದರೆ, ಆತ ಹೆಂಡ್ತಿನ ಬಿಟ್ಟು ಆರು ವರ್ಷ ಆಗಿತ್ತಂತೆ. ಉತ್ತರನ ಪೌರುಷ ಒಲೆ ಮುಂದೆ;ನಿನ್ನ ಪೌರುಷ ನನ್ನ ಮುಂದೆ ಕೊಟ್ಟೋನು ಕೋಡಂಗಿ;ಇಸಕೊಂಡೋನು ಈರಭದ್ರ ಹಲ್ಲಿದ್ರೆ ಕಡಲೆ ಇಲ್ಲ;ಕಡಲೆ ಇದ್ರೆ ಹಲ್ಲಿಲ್ಲ ಗಂಟೂ ಹೋಯ್ತು;ನಂಟೂ ಹೋಯ್ತು ಅಪ್ಪನ್ನೇ ಅಪ್ಪ ಅನ್ನದೋನು, ಚಿಕ್ಕಪ್ಪನ್ನ ಅಪ್ಪಾ ಅಂತ ಕರೀತಾನಾ? ಊರಿಗೊಂದು ದಾರಿಯಾದ್ರೆ, ಎಡವಟ್ಟಂಗೆ ಅವನದ್ದೇ ದಾರಿ ಹೊಟ್ಟೆ ತುಂಬಿದ ಮೇಲೆ ಹಿಟ್ಟೂ ಕಲ್ಲು ಒನಕೆ ಮುಂಡು ಚಿಗುರಿದಂತೆ ಹುಣಿಸೆ ಮರ ಮುದಿಯಾದ್ರೂ ಕಾಯಿ ಹುಳಿ ಹೋಗಲ್ಲ ಮೂರೂ ಬಿಟ್ಟೋನು, ಊರಿಗೆ ದೊಡ್ಡೋನು ಭಾವಿಗೆ ಬಿದ್ರೆ, ಸಾಲಿಗ್ರಾಮ ಸಿಗ್‌ತಂತೆ ನಾಯಿಗೆ ಹೊತ್ತಿಲ್ಲ; ನಿಲ್ಲಕ್ಕೆ ನೆಲೆಯಿಲ್ಲ ಯಂಕ, ಸೀನ, ನೊಣ ಅಂತ ಮನೇಲಿ ಮೂರೇ ಜನ ಕಂಡೋರ ಮನೆ ರೊಟ್ಟಿಗೆ ಗಿಣ್ಣು ಹಾಲು ಕಾಯಿಸಿದರಂತೆ ತುಂಬೆ ಗಿಡಕ್ಕೆ ಏಣಿ ಹಾಕಿದಂತೆ ಸಾವಿರ ಉಳಿ ಪೆಟ್ಟು, ಒಂದು ಚಿತ್ತಾರ ಕಾಣದಿರೋ ದೇವರಿಗಿಂತ ಕಾಣೋ ಭೂತಾನೇ ವಾಸಿ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರು ಹಿಟ್ಟು ಹಳಸಿತ್ತು; ನಾಯಿ ಹಸಿದಿತ್ತು ಬಡ್ಡಿ ಬಾಯಿಗಂಜ್ತೀಯೋ, ದೊಡ್ಡೆತ್ತಿನ ಕೋಡಿಗಂಜ್ತೀಯೋ ತಾಯೀನೇ ತಿಂದೋಳು, ಅತ್ತೇನ ಬಿಟ್ಟಾಳೆಯೇ? ಒಂದು ಬಿಟ್ಟು ಇನ್ನೊಂದು ಕಟ್ಕೊಂಡ್ರಂತೆ ಸನ್ಯಾಸಿ ಸಂಸಾರ ಕಟ್ಟಿಕೊಂಡ ಹಾಗೆ ಶಿಸ್ತುಗಾರ ಪುಟ್ಟಶಾಮಿ ಎದೆ ಸೀಳಿದ್ರೆ ಮೂರಕ್ಷರಾನೂ ಇಲ್ಲ ತಾಳಕ್ಕೆ ತಕ್ಕ ಮೇಳ ಕಂಡೋರ ಆಸ್ತಿಗೆ ನೀನೇ ಧಣಿ ಕೋಮಟಿ ಕೊಡ ;ಜೈನಿಗ ಬಿಡ ನಿನ್ನ ಹಿತು(ಮುದ್ದು), ನನ್ನ ತಿಂತು ಬೆಟ್ಟ ಮಹಮ್ಮದನ ಬಳಿ ಬರಲ್ಲ, ಮಹಮ್ಮದನೇ ಬೆಟ್ಟದ ಬಳಿ ಹೋಗಬೇಕು ಹುಲಿಗೆ ಹುಣ್ಣು ಎದ್ದ ಹಾಗೆ ಹಂಚು ಕಾಣದ ಕೈ ಕಂಚು ಕಾಣ್ತು ಬರೀ ಕೈಗಿಂತ ವಾಸಿ ಹಿತ್ತಾಳೆ ಕಡಗ ಮನೇಲಿ ಇಲಿ, ಬೀದೀಲಿ ಹುಲಿ ಸೂಳೆಗೆ ಮದುವೆ ಮಾಡಿದ ಹಾಗೆ ಗುರುವಿಗೇ ತಿರುಮಂತ್ರ ಬೆಳಗೂ ಹೆತ್ತ ಮಗೂನ ನಾಯಿ ಕೊಂಡೊಯ್ಯಿತಂತೆ ಎದ್ದೋಗೋ ಮಾತು ಬಿದ್ದೋಗಲಿ ಆಡೋಕಾಗಲ್ಲ, ಅನುಭವಿಸಕ್ಕಾಗಲ್ಲ ಹಾಲಿದ್ದಾಗ ಹಬ್ಬ ;ನೀರಿದ್ದಾಗ ನೇಮ ಅಳಿಲ ಸೇವೆ, ಮಳಲ ಭಕ್ತಿ ಕೆಟ್ಟ ಅಡಿಗೆ ಅಟ್ಟವಳೇ ಜಾಣೆ ಕಿಡಿ ಇಲ್ಲದೆ ಬೆಂಕಿಯಿಲ್ಲ ;ಕಾರಣ ಇಲ್ಲದೆ ಜಗಳವಿಲ್ಲ ಗಂಡಸು ಕೂತು ಕೆಟ್ಟ ;ಹೆಂಗಸು ತಿರುಗಿ ಕೆಟ್ಟಳು ಹತ್ತಿರಕ್ಕೆ ಬಂದರೆ ಹಡಿಕ್ ನಾತ : ದೂರದಲ್ಲಿದ್ದರೆ ಘಮಘಮ ಹೂ-ದವರು ‌ಯಾರು ಅಂದರೆ ಮಾಸಿದ ಸೀರೆಯವರು. ಅಟ್ಟದಿಂದ ಬಿದ್ದವನನ್ನು ದಡಿಗೆ ತೆಗೆದುಕೊಂಡು ಚಚ್ಚಿದರು. ಬಿಟ್ಟಿ ಬಂದದ್ದಾದರೆ ನನಗೂ ಇರಲಿ,ನಮ್ಮ ತಾತಂಗೂ ಇರಲಿ. ಸಾಯ್ತೀನಿ ಸಾಯ್ತೀನಿ ಅಂದೋಳು ಸಾವಿರ ಮುದ್ದೆ ನುಂಗಿದಳಂತೆ. ಸಾಯ್ತೀನಿ ಸಾಯ್ತೀನಿ ಅಂತಾ ಸಾವಿರ ಕೋಳಿ ತಿಂದಳಂತೆ ಸಂತೆ ಸೂಳೆ ನೆಚ್ಚಿಕೊಂಡು ಮನೆ ಹೆಂಡಿರನ್ನ ಬಿಟ್ಟರಂತೆ. ಮನೆ ದೇವರನ್ನ ಮೂಲೆಗಿಟ್ಟು ಬೆಟ್ಟದ ದೇವರಿಗೆ ಬುತ್ತಿ ಹೊತ್ತಂತೆ. ಅಡಿ ಅನ್ನಕ್ಕೆ ಅವಳೇ ಇಲ್ಲೆ ; ಪಿಳ್ಳೆ ಪೇರು ರಾಮಕೃಷ್ಣ !( ಇದು ತಮಿಳು ಭಾಷೆಯ ಗಾದೆಯಾದರೂ ಕನ್ನಡಿಗರಲ್ಲಿ ಹೆಚ್ಚು ಪ್ರಚಲಿತವಿದೆ) ದೇಶ ಸುತ್ತು ; ಕೋಶ ಓದು. ಹೇಳೋರು ಹೆಡ್ಡರಾದರೆ ,ಕೇಳೋರು ಕಿವುಡರೇ? ಕಂಡದ್ದನ್ನು ಕಂಡಹಾಗೆ ಹೇಳಿದರೆ ಕೆಂಡದಂಥಾ ಕೋಪವಂತೆ ಇದ್ದದ್ದನ್ನು ಇದ್ದಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದರಂತೆ ತುಂಬಿದ ಕೊಡ ತುಳುಕುವುದಿಲ್ಲ ಎಲ್ಲರ ಮನೆಯ ದೋಸೆಯೂ ತೂತೆ ! ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿದರಂತೆ ಊರಿಗೆ ಊರ ಚಿಂತೆಯಾದರೆ ಅಜ್ಜಿಗೆ ಅರಿವೆ ಚಿಂತೆಯಂತೆ ಆಳ್ ಮೇಲ್ ಆಳ್ ಬಿದ್ದು ಗೋಣು ಬರಿದಾಯ್ತು ಉತ್ತು ಬಿತ್ತಿದ ಭತ್ತವಾದರೂ ಮಳೆಯಿಲ್ಲದೆ ಮೊಳೆಯದು ಮನೇ ಯಜಮಾನ (ಮನೆಯೊಡೆಯ) ಕುಂತು ಹಾಳು ಅರಣೆ (= ಹಾವು ರಾಣಿ) ಕಡಿದರೆ ಭರಣಿ (=ಪಿಂಗಾಣಿ ಮಡಿಕೆ) ಮದ್ದು ಸಾಲದು ಅಪ್ಪಂಥೋನಿಗೆ ಇಪ್ಪಂತ್ತೊಂದು ಕಾಯಿಲೆ ಸಾಲ ಕೊಳ್ಳುವಾಗ ಒಂದು ರಾಗ, ಸಾಲ ಹೊಳ್ಳಿ ಕೊಡುವಾಗ ನಾನಾ ರಾಗ ಬಾಳಿ ಬದುಕಿದವ ಕಲಿ, ಬಾಳಲಾರದವ ಪಾಠ ಕಲಿತ ತಳಮಳ ತೀರಲಿಲ್ಲ, ಕಳವಳ ಕಳಿಯಲಿಲ್ಲ ಮೋಕ್ಷಮಂತ್ರ ತಿಳಿದವನಿಗೆ ವೇದಮಂತ್ರದ ಗೊಡವೆಯೆ? ಕನಿಗೇಡಿಗೆ(ಸ್ವಾರ್ಥಿಗೆ) ಗತಿ ಇಲ್ಲ ಅರವಲ್ಲದ್ದು (ಧರ್ಮವಲ್ಲದ್ದು) ಮಾಡಿದರೂ ತರವಲ್ಲದ್ದು ಮಾಡಬಾರದು ಹಗೆ ಬಿತ್ತಿ ಬೆಂಕಿ(ಹೊಗೆ) ಬೆಳೆದ ಬರೀ ಮಾತಾಡಿ ಬೈಯ್ಯಿಸಿಕೊಂಡ ಒಪ್ಪದಾ ಮಾತಾಡಿ ಕೋಪಕ್ಕೆ ತುತ್ತಾದ ಹಸನಾದ ಮಾತಿಗೆ ಜೀವ ಬೆಸನಾಯ್ತು ಬಿಟ್ಟವರ ಕಂಡು ಬಿಟ್ಟು ಬಾಳುಗೆಟ್ಟ ಚಿತ್ತದ ಕಳವಳ ನಿಲ್ಲಿಸಿದವರೇ ಉತ್ತಮರು ಸಿರಿ ಬಂದ ಕಾಲದಲಿ ಕರದಲಿ ಧರ್ಮ ಬೇಕು ಎತ್ತ ಹೋದರೂ ಬಿಡದು ಒತ್ತಿ ಕಾಡುವ ವಿಧಿ ಬರೋಳನ್ನು ನೆಚ್ಚಿ ಇರೋಳನ್ನು ಬಿಟ್ಟ ಬುದ್ಧಿ ಉಳ್ಳವನಿಗೆ ಕರ್ಮ ತಿದ್ದಿ ಕೊಡುತಿತ್ತು ಬೆನ್ನಹಿಂದೆ ಬಿದ್ದು (ಓಡಿ)ಬನ್ನ ಪಟ್ಟ ತಕ್ಕುದನ್ನು ಅರಿಯದ ಓದು ಲಕ್ಷ ಓದಿದರೇನು ಬಡವನಿಗೆ ಉಳಿದಷ್ಟೆ ಅಭಿಮಾನ ಬಂದ ಅಥಿತಿಗೆ ಅನ್ನ ಇಕ್ಕದ ಬದುಕು ಯಾತಕ್ಕು ಬೇಡ ಬಡವ ನೀ ಸೆಣಸಿ ಕೆಡಬೇಡ ಸರಿಯಾದ ಎಚ್ಚರಿಕೆ ಇಲ್ಲದೆ ಹರಕೆಯ ಕುರಿಯಾದ ಬಂಧುಗಳಿಲ್ಲದಿರೊ ಬಡತನ ಎಂದಿಗೂ ಬೇಡ ರಸಿಕನ ನುಡಿ ತಿಂಗಳ ಬೆಳಕಿನಂತೆ ಎಂಜಲ ತಿಂದರೂ ಅಂಜದೆ ತಿನ್ನು ಅಂಜುತ್ತಾ ಅಳುಕುತ್ತಾ ತಿಂದ ಅಮೃತ ನಂಜು ಒಳ್ಳಿಹ ಬಳ್ಳಿ ಕಳ್ಳಿಯ ಹಬ್ಬಿತು ಗಂಧದ ಮರವನ್ನು ಸುಟ್ಟು ಬೂದಿಯ ತಂದು ಪೂಸಿದ ಮಾಡಿದ ಕರ್ಮ ಹಿಡಿದೊಯ್ಯದೆ ಬಿಡದು ಜೀವ ಜೀವವ ತಿಂದು ಜೀವಿಸುತಿದೆ ಜಗವೆಲ್ಲ ನಾ ಬಲ್ಲೆ ಅನ್ನೊ ಮಾತು ಎಲ್ಲರಿಗು ಸಲ್ಲದು ತನ್ನ ತಾ ಬಲ್ಲವನೆ ಬಲ್ಲವ ನಕ್ಕು ನುಡಿದವರು ಕಡೆಗೆ ಅಡವಿಯಲಿಕ್ಕಿ ಬರುವರು ಇಟ್ಟ ವಿಭೂತಿ ಪಟ್ಟದಂತೆ ಇಟ್ಟ ವಿಭೂತಿ ಅಳಿದರೆ ಚಟ್ಟ ಹತ್ತಿದಂತೆ ಬಾಲೇರ ಮನಸ್ಸು ನೆಲೆಯಿಲ್ಲ ಹಬ್ಬಕ್ಕೆ ಹೋಗಿ ತಬ್ಬಿಬ್ಬನಾದ ಕೆರೆಗೆ ತೊರೆ ಕೂಡಿ ಸರೋವರವಾಯ್ತು ತನ್ನ ತಾ ತನ್ನಿಂದಲೇ ಅರಿಯಬೇಕು ಕಡಲಲ್ಲಿ ಪುಟಿದ ತೆರೆ ಕಡಲಲ್ಲೇ ಕರಗಿ ಹೋಯ್ತು ಬಣ ಬಣ ಬೆಳಕು ಹರಿದಾಗ ಕತ್ತಲು ಎತ್ತಲೊ ಸಮತೆ ತೊಟ್ಟು(=ಧರಿಸಿ) ಪದವಿ ಮುಟ್ಟು ಇದ್ದೂ ಉಣ್ಣದವನ ಬಾಯಲ್ಲಿ ಕಡೆಗೆ ಮಣ್ಣು ಬಿತ್ತು ಇದ್ದ ಕಾಲದಲ್ಲಿ ಅಟ್ಟುಣ್ಣ ಬೇಕು ದೀನನ ಬೇಡಿ ಬಳಲಿದರೆ ಆತ ಏನು ಕೊಟ್ಟಾನು? ಅಲ್ಲದವನ ಒಡನಾಟ ಮೊಳಕೈಗೆ ಕಲ್ಲು ಬಡಿದಂತೆ ಸುಳ್ಳನ ಮಾತು ಕೆಸರೊಳಗೆ ಮುಳ್ಳು ತುಳಿದಂತೆ ಹೇಮಗೇಡಿ ನೇಮ ಬೆಳಗಿದ ಭಂಗಿ ರಸ ನೆತ್ತಿಗೇರಿ ಬಿಂಗಿಯಂತೆ ಆಡಿದ ಊಡದ ಆವಿಗೆ ಉಣ್ಣದ ಕರುವ ಬಿಟ್ಟಂತೆ ದೈವದ ಸೊಲ್ಲು ಹರಟುವಾತ ಭವದೊಳಗೆ ತೇಲಾಡುತಿದ್ದ ಉರವಣಿಸಿ ಬರೋ ದುಃಖಕ್ಕೆ ಪರಿಣಾಮ ವೈರಿ ಗುಣಗೇಡಿ ಒಡನಾಟ ಯಾವಾಲು ದುಃಖದೇಲ್ ಇದ್ದಂತೆ ಮಾತಿಗೊಂದು ಮಾತು ಬಂತು ವಿಧಿ ಬಂದು ಆತುಕೊಣ್ತು ಮೆಲ್ಲಗೆ ಹರಿಯೋ ನೀರು ಕಲ್ಲ ಕೊರೆದಿತ್ತು ಮಾತಿಂದಲೇ ನಗೆನುಡಿ ಮಾತಿಂದಲೇ ಹಗೆ ಮಾತಿಂದಲೇ ಉಪಚಾರ ಮಾತಿಂದಲೇ ಅಪಚಾರ ಬನ್ನ ಪಟ್ಟುಣ್ಣೋ ಬಿಸಿ ಅನ್ನಕ್ಕಿಂತ ತಂಗುಳೇ ಲೇಸು ತನ್ನ ತಾ ತಿಳಿದು ತಾನು ತಾನಾದುದೆ ಉನ್ನತಿ ಬಸುರಲ್ಲಿ ಬಂದ ಕೂಸು ಮುದ್ದು ಕೊಂಡು ಕೊಟ್ಟದ್ದೂ ಇಲ್ಲ ಹಂಚಿ ಉಂಡದ್ದೂ ಇಲ್ಲ ಸ್ವರ್ಗ ಬೇಕು ಅಂದ ಬಚ್ಚಿಟ್ಟ ಆಸ್ತಿ ಹೊಂಚುತ್ತಿದ್ದವರ ಪಾಲಾಯ್ತು ನಿದ್ದೆ ಗೈಯೋನ ಹೊತ್ತು ನುಂಗ್ತು ಬಡವರ ಮಾತು ನುಡಿ ನುಡಿಗೂ ಬೇಸರ ಅಂಬಲಿಗೆ ಗತಿ ಇಲ್ಲದವ ಕಟ್ಟಾಣಿ ರಂಬೆಯ ಬಯಸಿದ ಒಪ್ಪೊತ್ತು ಕೂಳು ತಪ್ಪಿ ಕಣ್ಣು ಕಾಣಾಕ್ಕಿಲ್ಲ ಕಿವಿ ಕೇಳಾಕ್ಕಿಲ್ಲ ಸೊಕ್ಕುವುದು ಕೆಕ್ಕರಿಸಿ ನೋಡುವುದು ಸೇರಕ್ಕಿಯ ಗುಣ ಭಂಗಿ ರಸ ನೆತ್ತಿಗೇರಿ ಬಿಂಗಿಯಂತಾದ ರಸವಳ್ಳಿ ಹೆಣ್ಣಿಗೆ ರಸಪೂರಿ ಹಣ್ಣಿಗೆ ಮನ ಸೋಲದವರಿಲ್ಲ ಕುಲಗೇಡಿ ಮಗ ಹುಟ್ಟಿ ಕುಲಕ್ಕೇ ಮಸಿ ಬಳಿದ ಹೊತ್ತು ಮೀರಿದ ಮಾತು ತನಗೇ ಕುತ್ತು ತಂತು ಇದ್ದುದ ಉಣ್ಣದವನ ಬಾಯಾಗೆ ಕಡೆಗೆ ಮಣ್ಣು ಬಿತ್ತು ಪರರ ಹಂಗಿಸಿ ಮಂಗ ಅನಿಸಿಕೊಂಡ ಹೆಣ್ಣಿಂದ ರಾವಣ ಕೆಟ್ಟ ಮಣ್ಣಿಂದ ಕೌರವ ಕೆಟ್ಟ ಬೋನದ ಬುತ್ತಿ ತಪ್ಪಿ ಚಿತ್ತವಲ್ಲಭೆಯನ್ನು ಮರೆಸಿತ್ತು ಕಲ್ಲಿನಲ್ಲಿ ಕಳೆಯ ನಿಲ್ಲಿಸಿದ ಗುರುವಿನ ಸೊಲ್ಲಿನಲ್ಲೇ ದೈವ ಭೋಗಿ ಭೋಗದಲ್ಲಿ ನೆರೆದು ರೋಗಿಯಾದ, ಯೋಗಿ ಯೋಗದಲ್ಲಿ ನೆರೆದು ಯೋಗವಾದ ಅರಿತೂ ಮಾಡಿದ ಪಾಪ ವಜ್ರದ ಸೆರೆಯಂತೆ ತಾ ನೊಂದಂತೆ ಬೇರೇರ ನೋವನ್ನೂ ಅರಿಯಬೇಕು ಹೊಲಬನರಿಯದ (ರೀತಿಯಲ್ಲದ) ಮಾತು ತಲೆ ಬೇನೆ: ಹೊಲಬನರಿತು ನುಡಿದ ಮಾತು ಫಲ ಪಕ್ವವಾದಂತೆ ಪ್ರಸ್ತಕ್ಕಿಲ್ಲದ ಮಾತು ಹತ್ತು ಸಾವಿರವಿದ್ದೇನು ಸಾಲ ಕೊಳ್ಳುವಾಗ ಹಾಲು ಕುಡಿದಂತೆ, ಸಾಲ ತಿರುಗಿ ಕೊಡುವಾಗ ಕಿಬ್ಬದಿ ಕೀಲು ಮುರಿದಂತೆ ಇಲ್ಲದ ಕಾಲಕ್ಕೆ ಕಲ್ಲೆದೆ ಬೇಕು ಅಕ್ಕಸಾಲಿಗನ ಮಗ ಚಿಮ್ಮಟ ಹಿಡಿಯುತ್ತಲೇ ಹೊನ್ನ ಕದ್ದ ಸಿದ್ದಿಗಿಂತ ಬಲವಿಲ್ಲ ಬುದ್ಧಿಗಿಂತ ಹಿರಿದಿಲ್ಲ ಅಂಗಾಂಗದಲ್ಲಿ ಪಾಪ ಮಡಗಿಕೊಂಡು ಗಂಗೇಲಿ ಮಿಂದು ಬಂದ ಮೋಕ್ಷಕ್ಕೆ ಜ್ಞಾನ ಬೇಕು ಯೋಗಕ್ಕೆ ಧ್ಯಾನ ಬೇಕು ಅರುಗೆಟ್ಟ ನಿದ್ದೆ (=ಅರಿವಿಲ್ಲದೆ ಮಲಗಿರುವುದು) ಇರಗೆಟ್ಟು (=ಇರವು ಗೆಟ್ಟು) ಸತ್ತಂತೆ ಮದ್ದು ಬುದ್ಧಿ ದೈವ ಒಲ್ಲದೆ ತಿದ್ದವು ಮಂತ್ರ ತಂತ್ರ ದೈವ ಒಲ್ಲದೆ ತನಗೆ ಸ್ವಂತವಲ್ಲ ದೈವ ಒಲ್ಲದೆ ಆಗೋದಿಲ್ಲ ದೈವ ಒಲಿದರೆ ಹೋಗೋದಿಲ್ಲ ಓದಿದ ಓದೆಲ್ಲ ಮೇದ ಕಬ್ಬಿನ ಹಿಪ್ಪೆ, ಓದಿದರ ಅರಿವು ಮೇದ ಕಬ್ಬಿನ ರಸ ವಿದ್ಯೆ ಇಲ್ಲದವನ ಮೋರೆ ಹಾಳೂರ ಹದ್ದಿನಂತೆ ವಿದ್ಯೆ ಬಲ್ಲವ ಇದ್ದಲ್ಲು ಸಲ್ಲುವ ಹೋಗಿದ್ದಲ್ಲು ಸಲ್ಲುವ ವಿದ್ಯೆ ಬಲ್ಲವ ಎಲ್ಲಿದ್ದರು ಸಲ್ಲುವ ಕುಚುಕು ಬುದ್ಧಿ ಹೊಕ್ಕವನು ಕೆಟ್ಟ ಒಪ್ಪವಿಲ್ಲದವಳ ನಗೆ ನುಡಿ ನೋಟ ಎಂದೂ ಸಪ್ಪಗೆ ಒಂದೊಂದು ಕಾಲಕ್ಕೆ ಒಂದೊಂದು ಪರಿ ಸಿರಿತನ ಇರೂತನ ಹಿರಿತನ ಸಿರಿಹೋದ ಮರುದಿನ ಕಿರಿತನ ಸಿರಿತನ ಇರೂತನ ಪಿರಿಪಿರಿ ಸಿರಿಹೋದ ಮರುದಿನ ಕಿರಿಕಿರಿ ಸಿರಿತನ ಇರೂತನ ಹಿರಿತನ ಘನ ಸಿರಿಯಣ್ಣ ಉಳ್ಳನಕ ಹಿರಿಯಣ್ಣ ಇಲ್ಲಾದಗ ನಡಿಯಣ್ಣ ಎಂಟು ಹೊನ್ನು ಘನವಾದ ನಂಟು ತಂತು ಕೂಟಸ್ಥ ಇಲ್ದೋನ ಓದು ಗಿಳಿ ಕಲ್ತ ಪಾಠದಂತೆ ಒಳ್ಳೇ ರಸವಳ್ಳಿ ಕಳ್ಳೀಗಿಡವನ್ನ ಹಬ್ಬಿತು ರಸವಳ್ಳಿ ಹೆಣ್ಣು ಒಲಿವಂತೆ ಮಾಡುವುದು ಎಳ್ಳ ತಿಂದ ಋಣ ತೋಟದ ಕಬ್ಬಿಗಿಂತ, ಪೋಟೆಯ ಜೇನಿಗಿಂತ, ಬಲ್ಲವಳ ಕೂಟ ಲೇಸು ಕಾಡಿಗೆ ಗಣ್ಣ ಚೆಲುವೆ ಮನೆಗೆ ಕೇಡು ತಂದಳು ತೋಟದ ಬೇಲಿಯನ್ನು ದಾಟಿ ನೋಡದವರಾರು ರಂಭೆಯಂಥ ಹೆಣ್ತೀನ ಬಿಟ್ಟು ದೊಂಬಿತಿಯ ಹಿಂದೆ ಹೋದ ಕಣ್ಣಿಗೆ ಒಪ್ಪವಿಲ್ಲದ ಹೆಣ್ಣು ಸಪ್ಪಗೆ ಕಂಡಳು ತಿಂಗಳ ಬೆಳಕಾಗಿ ಬಾಳಿನಲ್ಲಿ ತಂಗಾಳಿ ಹಿಂಗದಿರಲಿ ಮಲ್ಲಿಗೆ ವನದಲ್ಲಿ ತುರುಬಿಲ್ಲದಾಕೆ ಸುಳಿದಂತೆ ಬಂಡಾಟದ ನಡೆ ಚೆಂದ ಮಿಂಡಾಟದ ನುಡಿ ಚೆಂದ ಆರಿದೋಗರಕ್ಕೆ ಮೊಸರಿಕ್ಕಿ ಕಾಗೆಗೆ ಸೂರೆಕೊಟ್ಟರು ದೀಪಕ್ಕೆ ಎಣ್ಣೆಯ ಹುಯ್ಯ್ ಅಂತ ಸುರಿಯುತ್ತಾರೇ ಹುಯ್ಯಂತ ಕೊಡ ಬೇಡ ಸುಮ್ಮನೆ ಕೂರಲು ಬೇಡ ಬಂದರು ಬಾ ಅನ್ನದ ದರ್ಪಕುರುಡರ ಸಾವಸವೇ ಬೇಡ ಮುತ್ತು ಚಿಪ್ಪಲ್ಲಿ ಹುಟ್ಟಿ ಮುಕುಟದ ಮಣಿಯಾಯ್ತು ನೆರೆದ ಸಿರಿ ಜಾವಕ್ಕೆ ಹರಿದು ಹೋಯಿತು ಹೊನ್ನಿನ ಶೃತಿ ಕೇಳಿ ಎಂಥೆಂಥಾವರೆಲ್ಲ ಭ್ರಮೆಗೆ ಬಿದ್ದರು ಬರಿಗೆಟ್ಟ ಬದುಕಿಗಿಂತ ಕೊಂದು ತಿನ್ನೊ ಮಾರಿ ಲೇಸು ಲಕುಮಿ ತೊಲಗಿದ ಬಳಿಕ ಕುಲ ವೀರವಿದ್ದು ಫಲವಿಲ್ಲ ಯೋಗಿಗೆ ರಾಗ ಇರಬಾರದು ಭೋಗಿಗೆ ರೋಗ ಇರಬಾರದು ಮನಸ್ಸಿಲ್ಲದವಳ ಒಡನಾಟ ಮಾತುಮಾತಿಗು ಬೇಸರ ಲಲನೆಯರ ಒಲುಮೆ ತೊಲಗಿದರೆ ಇಲ್ಲ ಇಂಬರಿತು ಕೊಡುವಳೆ ರಂಭೆ ಒಲುಮೆಗೆ ನೋಟ ಬೇಟವೇ ಮೊದಲು ನೀರೆಯ ಓರೆಗಣ್ಣ ನೋಟಕ್ಕೆ ನಾಡೆಲ್ಲ ಕದಡಿತು ಸಿರಿಯವ್ವನದ ಹೆಣ್ಣು ಸಕ್ಕರೆ ಬೊಂಬೆಯಂತೆ ಹಾದರ ಹಾಲು ಸಕ್ಕರೆಯಂತೆ, ಬಯಲಾದರೆ, ಬೇವಿನ ಸಾರದಂತೆ ಚಿತ್ತವಿಲ್ಲದವಳ ಒಡಗೂಟ ನಾಯ್ ಹೆಣಾನ ಹತ್ತಿ ತಿನ್ನುವಂತೆ ಕೋರಿ (=ಚೆಂದುಳ್ಳಿ ಚೆಲುವೆ) ಒಲುಮೆ ತನಗೆ ಅನ್ನೋ ಮಾರನಿಗೆ (=ಚೆಲುವಾಂತನಿಗೆ) ಮಾರಿ ಹಿಡಿಯಿತು. ನಚ್ಚುವುದು ಬೇರೆ ಹೆಣ್ಣು ಒಬ್ಬನ ಮೆಚ್ಚುವುದು ಬೇರೆ ಹೆಣ್ಣಿನ ಬಗೆ/ಮನಸ್ಸ ಬಲ್ಲೋರಿಲ್ಲ ಏರಿ ಮ್ಯಾಗಿನ ಪಂಜು ನೀರೊಳಗೆ ಉರಿಯಿತು ದಾನ ಮಾಡೋಕೆ ಕನಲುವ ಮಾನವ ದಂಡ ಚಕಾರ ಎತ್ತದೆ ತೆರುವ ಕೊಟ್ಟೆ ಅಂತ ಹೇಳಿ ಕೊಡದವನ ಮಾತು ಬೆನ್ನಿಗೆ ಚೂರಿ ಇರಿದಂತೆ ಹೊತ್ತನ್ನು ಕೊಲ್ಲುವ ಮೈಗಳ್ಳಗಿಂತ ಸತ್ತ ಹೆಣ ಲೇಸು ಕೊಡದ ಲೋಭಿ ಮಾತು ಕೊಡಲಿ ಪೆಟ್ಟು ಮಾಡುವವ ಉತ್ತಮ ಆಡಿ ಮಾಡದವ ಅಧಮ ನೀಡುವವ ಉತ್ತಮ ಬೇಡಿದರೂ ನೀಡದವ ಅಧಮ ಆಗ ಬಾ ಈಗ ಬಾ ಹೋಗಿ ಬಾ ಅನ್ನದೆ ಕೊಡುವ ತ್ಯಾಗವಾಗು ಇಚ್ಚೆಯ ಅರಿತು ಕೊಟ್ಟ ನುಚ್ಚೊಂದು ಮಾಣಿಕ್ಯ ಬೇಡಿದರೆ ಇಲ್ಲ ಅನ್ನೋದ್ ಕಷ್ಟ ನೀಡುವರ ಬೇಡ ಅನ್ನೋದ್ ಕಷ್ಟ ಕೈಯೆತ್ತಿ ಕೊಡಲಿಲ್ಲ ಮೈಯ್ಯ ದಂಡಿಸಲಿಲ್ಲ ಪುಣ್ಯದ ಪಾಲು ನನಗಿರಲಿ ಅಂದ ಕೇಡು ಬರೋ ಕಾಲಕ್ಕೆ ಬುದ್ಧಿಗೇಡು ಪ್ರಾರಬ್ಧ ಬಂದ ಕಾಲಕ್ಕೆ ಒಂದಲ್ಲ ಒಂದು ಕೇಡು ಕೋಡಗ ಲಂಕೆಯ ಸುಡುವಾಗ ರಾವಣ ನಾಡ ಕಾಯ್ದಿದ್ದ ನಾಡೆಂದ್ರ ಕಾಡನ್ನ ಸುಡುವಾಗ ದೇವೇಂದ್ರ ಗಾಳೀನ್ನ ನೋಡೊಕೆ ಕಳಿಸಿದ ಬಿದ್ದಲ್ಲಿ ಸೋತಲ್ಲಿ ಹೊದಿದ್ದ ಬುದ್ಧಿ ತಪ್ಪಿತು ಸಾಮವೇದದ ಗಾನ ಭೂಮಿ ದಾನದ ಫಲವ ಜಂಬೂದ್ವೀಪದವರೇ ಬಲ್ಲರು ಜಪ-ತಪ ಉಪವಾಸ ಇದ್ದರೆ ಅಂತಕನ ವಿಪರೀತ ತಪ್ಪೀತೆ ಪುಣ್ಯ ಉಂಡು (=ಸುಖ ಅನುಭೋಗಿಸಿ) ತೀರಿತು, ಪಾಪ ತಿಂದು (=ಕಷ್ಟ ಅನುಭವಿಸಿ) ತೀರಿತು ಮಾಡಿದ ಕರ್ಮ ಬೆನ್ನಾಡಿ ಬಂತು ಕೇಡು ಬರೋ ಕಾಲಕ್ಕೆ ನಂಟೆಲ್ಲ ಹಗೆಯಾಯ್ತು ಏನಾದರೇನು ತಾನು ತಾನಾಗದವರೆಗೆ ದಾನಿಗೆ ದೀನತನ ಸಲ್ಲ, ಜ್ಞಾನಿಗೆ ಮೌನ ಸಲ್ಲ ಸೊಲ್ಲಿನ ಬೇದ ತಿಳಿದ ಕಿರಿಯ ಎಲ್ಲರಿಗೂ ಹಿರಿಯ ಮೊಸರ ಕಡೆದರೆ ಬೆಣ್ಣೆ ಒಸೆದು ಬಂತು ತನ್ನ ತಾನರಿತವಗೇ ತ್ರಿಭುವನ ತನ್ನೊಳಗೆ ಕಂಡಿತ್ತು ದೈವ ಅನ್ನೋದ ಮತ್ತೆಲ್ಲೂ ನೊಡದೆ ತಾನಿದ್ದ ಒತ್ತಿಲೇ ನೋಡು ಪೆದ್ದ ಮರದ ತುದಿಯೇರಿ ಅಣಿತಪ್ಪಿ ಬಿದ್ದು ಸತ್ತ ಸಿರಿ ಸೋಂಕಿದವರ ಪರಿ ಬೇರೆ ಮಾತಿನ ಬೊಮ್ಮ ತೂತಾದ ಮಡಕೆಯ ಪರಿ ಅರಿವಿನ ಹಾದಿ ಬೇರೆ ಅನುಭವಿಗೆ ಬೇರೆ ಮತವಿಲ್ಲ ಕೋಪ ಬೀವುದೇ ಸಮತೆ ಪಾಪ ಅನ್ನೋದಕ್ಕೆ ಕೋಪವೇ ನೆಲೆಗಟ್ಟು ಕೋಟಿ ಕೊಟ್ಟರೂ ಕೂಟ ಕರ್ಮಿಯ ದುಂದುಗವೇ ಬೇಡ ಕೊಲ್ಲದಿರುವುದೇ ಧರ್ಮ ಬಲ್ಲವರಿಗೆ ಅದೇ ಸಮ್ಮತ ಎಲ್ಲರು ಆಸೆ ಬಿಟ್ಟರೆ ಇಲ್ಲಿಯೇ ಕೈಲಾಸ, ಎಲ್ಲವ ಬಯಸಿ ಭ್ರಮಿಸಿದರೆ ಇಲ್ಲಿಯೇ ನರಕ ಒಳ್ಳೇರ ಒಡನಿದ್ದು ಕಳ್ಳ ಒಳ್ಳೇನಾದ ನಲ್ಲೆ ಮುಂದೆ ಸುಳಿದರೆ ಲೋಕದೊಳಗೆ ಒಲ್ಲದವರಾರು ಹೆಣ್ಣಿನ ಸೊಬಗನು ಕಣ್ಣಾರೆ ಕಂಡು ಬಯಸದ ಅಣ್ಣಗಳು ಅದಾರು ಕುಚ ಹೇಮ ಶಸ್ತ್ರ ಸೋಂಕಿದಾಗ ಶುಚಿ ವೀರ ಧೀರರು ಅಚಲಿತರಾದರು ಸಜ್ಜನರ ಸಂಗ ಹೆಜ್ಜೇನು ಸವಿದಂತೆ ಹೃದಯಶೂನ್ಯರ ಒಲವಿಗಿಂತ ಬಲ್ಲವರ ಕದನವೇ ಲೇಸು ಕರಣಗಳ ತಡೆದು ನಿಲಬಾರದು ಒಂದರ ಮೊದಲೊಳಗೆ ಬಂದಿದೆ ಜಗವೆಲ್ಲ ಬಹುಮನದ ಹಾದಿ ಕೈಗೊಂಡರೆ ಸುಖವಿಲ್ಲ ನೆತ್ತಿಯಲ್ಲಿ ಅಮೃತ ಹೊತ್ತು ಸಾವಿಗಂಜಿ ಜಗವೆಲ್ಲ ಸುತ್ತಾಡಿದ ಹೆಣ್ಣಿದ್ದ ಮನೆಗೆ ಎಡತಾಕಿ ಅಣ್ಣಯ್ಯ ಮಣ್ಣಾಗಿ ಹೋದ ಎಲ್ಲವೂ ತಾನಗ ಬಲ್ಲರೆ ಅದುವೇ ಯೋಗ ಕಯ್ಯಾರೆ ಮಾಡುವ ಧರ್ಮ ಲೇಸು ಪಾತ್ರವರಿತು ಜಗದ ಜಾತ್ರೆಗೆ ಸಲ್ಲಬೇಕು ಉಣವಲ್ಲ ಉಡವಲ್ಲದವನ ಒಡವೆ ಕಂಡವರ ಪಾಲಾಯ್ತು ಉಟ್ಟು ಉಡಲಾರ ಕೊಟ್ಟು ಸೈರಿಸಲಾರ ಕೊಟ್ಟುಣ್ಣದ ಗಂಟು ಪರರಿಗೆ ಬಿಟ್ಟು ಹೋದಂತೆ ಕೊಂದ ಪಾಪ ತಿಂದು ಪರಿಹಾರ (=ಕೊಂದ ಪಾಪ/ಕರ್ಮ ತನಗೆ ಅಂಟಿಕೊಂಡು ಅದನ್ನು ತೊಡೆಯುವುದಕ್ಕೆ ಕಷ್ಟ ಅನುಭವಿಸಬೇಕಾಗುತ್ತದೆ) ಒಂದೊಂದು ಹನಿ ಬಿದ್ದು ನಿಂತಲ್ಲಿ ಮಡುವಾಯ್ತು ಊರಿಗೆ ದಾರೀಯ ಯಾರು ತೋರಿದರೇನು ಯಾರಿಗೂ ತೋರದಂತೆ ದೈವ ತನ್ನೊಳಗೆ ಸಾರಿಹುದು ನಿಜವ ಹಿಡಿ ಘಟವ ನೆಚ್ಚದಿರು ದಿಟವೇ ಪುಣ್ಯದ ಪುಂಜ ಸಟೆಯೇ ಪಾಪದ ಬೀಜ ಇಮ್ಮನದಿಂದ ಸುಮ್ಮನೆ ಕೆಟ್ಟೆ (ಕೇಡು) ಧರ್ಮದ ಹಾದಿ ತಿಳಿದವನಿಗೆ ಓದು ವಾದಗಳೇಕೆ ಏನೂ ಇಲ್ಲದವಗೆ ಭಯವಿಲ್ಲ ಬೆರಳು ತೋರುದ್ರೆ ಅಂಗೈನೇ ನುಂಗಿದಂತೆ ಅಕ್ಕಿ ಉಂಡವ ಹಕ್ಕಿ, ಜೋಳ ಉಂಡವ ತೋಳ ಅಕ್ಕಿಲ್ಲ ಬ್ಯಾಳಿಲ್ಲ ಅಕ್ಕನ್ನ ಕರತರಬೇಕು ಅಡೆ ಮಡಕೆಯಲ್ಲ ಇಡೆ ಸಟ್ಟುಗವಲ್ಲ ಅಣ್ಣಿಗೇರ್‍ಯಾಗ ಎಣ್ಣೆ ಮೊಣಕಾಲ ಮಟ್ಟ ನೇರಲೆ ಹಣ್ಣು ಬಲು ಕಪ್ಪು ತಿಂದು ನೋಡಿದರೆ ಬಲು ಸವಿ ಅತ್ತೆ ಮಾಡಿದ್ದು ಅಡಕಲಗೂಡಿಗೆ ಸೊಸೆ ಮಾಡಿದ್ದು ಬೆಳಕಿಗೆ ಅತ್ತೆಯ ಮನಿಯಾಗ ಮುತ್ತಾಗಿ ಇರಬೇಕು ಅಧರಕ್ಕೆ ಕಹಿ ಉದರಕ್ಕೆ ಸಿಹಿ ಅನ್ನ ಹಾಕಿದ ಮನೆಗೆ ಕನ್ನ ಹಾಕಿದಂತೆ ಅಪ್ಪನ ಬಟ್ಟೆಯಾದರು ಚಿಪ್ಪಿಗ ಬಿಡ ಅಯ್ಯೋ ಅಂದರೆ ಅರೆ ವಯಸ್ಸು ಅರಿತೂ ಮಾಡಿದ ಪಾಪ ವಜ್ರಲೇಪ ಅಲಗಿನ ಗಾಯಕ್ಕಿಂತ ಗಲಗಿನ ಗಾಯ ಹೆಚ್ಚು ಅಲಾ ಬಲಾ ಪಾಪಿ ತಲೀ ಮ್ಯಾಲೆ ಸಿಡಿಲು ಬಡಿದರೆ ಅಂಗೈಲಿ ಹಿಡಿದ ಕೊಡೆ ಕಾಪಾಡಿತೇ ಆಗುವ (ಅಡುವ) ವರೆಗಿದ್ದು ಆರುವವರೆಗೆ ಇರಲಾರರೇ ಆಟ ಕೆಟ್ಟರೆ ದೀವಟಿಗೆಯವನ ಸುತ್ತ ಆಡಿ ಉಂಡ ಮೈ ಅಟ್ಟು ಉಂಡೀತೇ? ಆಡೋಣ ಬಾ ಕೆಡಿಸೋಣ ಬಾ ಹೊತ್ತು ಕಳೆದರೆ ಮತ್ತೆ ಬಾರದು ಹೊತ್ತಿರುವಾಗಲೇ ಗೊತ್ತು ಸೇರಬೇಕು ಹೊಕ್ಕು ಬಳಸಿದರೆ ನಂಟು ಹೆಂಡತಿಯಿಲ್ಲದ ಮನೆ ತಂತಿಯಿಲ್ಲದ ವೀಣೆ ಹೆಂಡತಿಯಿಲ್ಲದ ಮನೆ ದೇವರಿಲ್ಲದ ಗುಡಿ ಹೂವ ತರುವ ಮನೆಗೆ ದೇವ ಹುಲ್ಲು ಹೊರುವ ಹುಣ್ಣು ಮಾದರೂ ಕಲೆ ಮಾದೀತೇ ಹುಚ್ಚು ಹೊಳೇ ಬರುವಾಗ ಹೂವಿನ ತೋಟ ಇದಿರೇ ಹಾಲಿಗಿಂತ ಕೆನೆ ರುಚಿ ಹಾರೋ ಹಕ್ಕಿ ಪುಕ್ಕ ಎಣಿಸಿದಂತೆ ಹಿಂದಲ ಮಾತು ಮರಿ ಮುಂದಲ ಬಾಳು ಅರಿ ಹಾಯೋ ಎತ್ತು ಹಾಯ್ದರೂ ಬಂತು ಬಿಟ್ಟರೂ ಬಂತು ಹಾದಿ ತಪ್ಪಿದವನಿಗೆ ಹದಿನೆಂಟು ಹಾದಿ ಮರ ಕಡಿದು ಮೈಮೇಲೆ ಹಾಕಿಕೊಂಡ್ರಂತ ಹರ ಮುನಿದರೆ ಗುರು ಕಾಯ್ವ ಹರಕಿನಲ್ಲಿ ಇಲಿ ಕಡಿಯಿತು ಹತ್ತು ಮಂದಿ ಹುಲ್ಲು ಕಡ್ಡಿ ಒಬ್ಬನ ತಲೆ ಭಾರ ಹಂಪ್ಯಾಗ ಇರೂದಕ್ಕಿಂತ ತನ್ನ ಕೊಂಪ್ಯಾಗ ಇರೂದ್ ಲೇಸು ಹಂಗು ತೊರೆದ ಮೇಲೆ ಲಿಂಗದ ಪರಿವೆ ಏನು ಸೇರಿಗೆ ಸವ್ವಾ ಸೇರು ಸನ್ಯಾಸಿಗೆ ಸುಳ್ಳು ಹೇಳಿದರೂ ನಿಜದ ತಲೆಯ ಮೇಲೆ ಹೊಡೆದಂಗೆ ಹೇಳಬೇಕು ಮೊಂಡ ಮಾವನಿಗೊಬ್ಬ ಭಂಡ ಅಳಿಯ ಸಿಟ್ಟು ಬಂದರೆ ಪಡಿ ಹಿಟ್ಟು ಮುಕ್ಕು ಸರಿದರೆ ಒತ್ತಣ್ಣ ಒತ್ತಿದರೆ ಸರಿಯಣ್ಣ ಸತ್ತು ಕೊಳ್ಳೋ ಸೊರ್‍ಗಕ್ಕಿಂತ ಬದುಕಿ ಕೊಳ್ಳೋ ನರಕ ಲೇಸು ವರಕವಿಗಳ ಮುಂದೆ ನರಕವಿಗಳು ವಿದ್ಯೆ ತೋರಬಾರದು ಬಂಗಾರಕ್ಕೆ ಕುಂದಣವಿಟ್ಟಂತೆ ವಜ್ರಕ್ಕೆ ಸಾಣಿ ಹಿಡಿದಂತೆ ಲಕ್ಷ್ಮಿ ಚಂಚಲೆ ಮೊಂಡ ಕೊಡಲಿ ರಟ್ಟೆಗೆ ಮೂಲ ಮೂಗು ಹಿಡಿದರೆ ಬಾಯಿ ತಾನೇ ತೆರೆಯುವುದು ಮುದುಕೀ ನಿನ್ನಾಟ ಮುಂದೈತಿ ಮುಚ್ಚಿ ಹೇಳಿದರೆ ಒಗಟು ಬಿಚ್ಚಿ ಹೇಳಿದರೆ ಒರಟು ಮಾಳಿಗೆ ಮನೆ ಬೇಕು ಜೋಳಿಗೆ ಹಣ ಬೇಕು ಮಾದೇವನಂಥಾ ಮಗ ಬೇಕು ಗೌರಿಯಂಥಾ ಸೊಸೆ ಬೇಕು ಮಾರಿಯ ಹೋತ ತೋರಣದ ಚಿಗುರು ಬಯಸಿತಂತೆ ಮಾತಿಗೆ ಮಾತುಗಳ ಓತು ಸಾಸಿರ ಉಂಟು ಮಳೇ ನೀರ ಬಿಟ್ಟು ಮಂಜಿನ ನೀರಿಗೆ ಕೈ ಒಡ್ಡಿದಂತೆ ಮರಗಿಣಿಯ ಕೂಡೆ ಆಡಿ ಅರಗಿಣಿ ಕೆಟ್ಟಿತು ಮಂದ್ಯಾಗ ಮಚ್ಚೀಲೆ ಹೊಡೆದು ಸಂದ್ಯಾಗ ಕಾಲು ಹಿಡಿದರು ಮಂಡಕ್ಕಿ ತಿಂದ ಮಗ ಮದ್ದಾನೆ ತರುಬಿದ ಮೃಷ್ಟಾನ್ನ ತಿಂದ ಮಗ ನೊಣ ಝಾಡಿಸಿದ ಮಂದಾಳಿಗೊಂದು ಮುಂದಾಳು ಭಲೆ ಜಟ್ಟಿ ಅಂದ್ರೆ ಕೆಮ್ಮಣ್ಣು ಮುಕ್ಕಿದ ಬೇಕೆಂಬುದು ಬಾಳು ಸಾಕೆಂಬುದು ಸಾವು ಬೆಲ್ಲದ ಸಿಪಾಯಿ ಮಾಡಿ ಇರುವೆ ಹತ್ತರ ಕಳಿಸಿದ ಬೆಣ್ಣೆಯೊಳಗಿನ ಕೂದಲು ತೆಗೆದಂತೆ ಬೆಕ್ಕಿಗೆ ಬೆಣ್ಣೆ ಕಂಡಿತು ಬಡಿಗೆ ಕಾಣಲಿಲ್ಲ ಬೆಕ್ಕಿನ ಕನಸಿನಲ್ಲಿ ಬರೀ ಇಲಿಗಳೇ ಬೆಂದ ಮನೇಲಿ ಹಿರಿದದ್ದೇ ಲಾಭ ಸುಡುವ ಮನೆಯ ಗಳ ಹಿರಿದಂತೆ ಬೆಂಕಿಗೆ ಕರಗದ್ದು ಬಿಸಿಲಿಗೆ ಕರಗೀತೇ ಬೀಳು ಭೂಮಿಗೆ ಬೀಜ ದಂಡ ಬೀಜ ಸಣ್ಣದಾದರೆ ಮರ ಸಣ್ಣದೋ ಮಳೆಗಾಲದೇಲಿ ಚಿಗಿಯೂದಿಲ್ಲ ಬೇಸಿಗೇಲಿ ಒಣಗೂದಿಲ್ಲ ಹುಟ್ಟುವವನ ಅಣ್ಣ ಬೆಳೆಯುವವನ ತಮ್ಮ ಆಸೆ ಮಾತು ಕೊಟ್ಟು ಬಾಸೆ ತಪ್ಪಬಾರ್‍ದು ಇಕ್ಕಟ್ಟಾದರೂ ತನ್ನ ಗುಡಿಲೇ ಚಂದ ಇಕ್ಕಲಾರದ ಕೈ ಎಂಜಲು ಇಟ್ಟ ಶಾಪ ಕೊಟ್ಟವನಿಗೆ ತಟ್ಟೀತು ಇಲ್ಲು ಪೋಗಂಡ ಅಲ್ಲು ಪೋಗಂಡ ಇದ್ದ ಮಕ್ಕಳೇ ಎಣ್ಣೆ ಬೆಣ್ಣೆ ಕಾಣದಿರುವಾಗ ಮತ್ತೊಂದು ಕೊಡೋ ದೇವರೇ ಅಂದಂತೆ ಈರಣ್ಣನ ಮುಂದೆ ಬಸ್ಸಣ್ಣ ಕುಂತಂತೆ ಉಪಾಸ ಇದ್ರೂ ಉಪದ್ರ ಇರಬಾರ್‍ದು ಕಲ್ಲ ನಾಗರ ಕಂಡರೆ ಹಾಲೆರೆವರು ದಿಟ ನಾಗರ ಕಂಡರೆ ಕೊಲ್ಲೆಂಬರು ಉಂಬುವ ಜಂಗಮ ಬಂದರೆ ನಡೆಯೆಂಬರು, ಉಣ್ಣದ ಲಿಂಗಕ್ಕೆ ಬೋನ ಹಿಡಿಯೆಂಬರು ಉಪಕಾರಕ್ಕೋಗಿ ಉಪದ್ರ ಬಂತು ಉರಗಕ್ಕೆ ಹಾಲೆರೆದರೆ ಅದು ತನ್ನ ಗರಳ್ವ ಬಿಡಬಲ್ಲುದೇ ಹಾವಿಗೆ ಹಾಲೆರೆದರೇನು ಫಲ ಗಾಯದ ಮೇಲೆ ಬರೆ ಕೊಟ್ಟಂತೆ ಎಟ್ಟ್ (ಹಟಮಾರಿ) ಗಂಡಗೆ ಖೊಟ್ಟಿ ಹೆಂಡತಿ ಎತ್ತು ಮಾರಿದವಗೆ ಹಗ್ಗದ ಆಸೆಯೇ ಎದ್ದವನು ಗೆದ್ದಾನು ತಲೆ ಸೀಳಿದರೆ ಎರಡಕ್ಷರ ಇಲ್ಲ ಎರವಿನವರು ಎರವು ಕಸಗೊಂಡರೆ ಕೆರವಿನಂತಾಯಿತು ಮೋರೆ ಎಲ್ಲಮ್ಮನ ಗುಡ್ಡದಾಗ ಮುಲ್ಲಾಂದೇನು ಎಲ್ಲಾ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಒಂದು ದುಡ್ಡು ಕೊಡುವೆ ಹಾಡು ದಾಸಯ್ಯ ಎರಡು ದುಡ್ಡು ಕೊಡುವೆ ಬಿಡು ದಾಸಯ್ಯ ಒಡೆದ ಹಾಲು ಹೆಪ್ಪಿಗೆ ಬಂದೀತೇ ಕೆತ್ತೆಂದರೆ ಕೆತ್ತು ಮೆತ್ತೆಂದರೆ ಮೆತ್ತು ಒಳ್ಳೊಳ್ಳೆಯವರು ಉಳ್ಳಾಡುವಾಗ ಗುಳ್ಳವ್ವ ಪಲ್ಲಕ್ಕಿ ಬೇಡಿದಳಂತೆ ಕಂಗಾಲನ ಮನೀಗೆ ಕಂಗಾಲ ಹೋದರೆ ಗಂಗಾಳ ನೆಕ್ಕು ಅಂದಂತೆ ಕಣ್ಣೆರಡಾದರೂ ನೋಟ ಒಂದೇ ಕರ್ಮ ಕಳೆಯುವವರೆಗೆ ಮರ್ಮದಲ್ಲಿರು ಕೆಲಸಿಲ್ಲದ ಗಂಡು ಕರೀ ಒನಕೆ ತುಂಡು ಕರುಬಿದವರ ಮನೆ ಬರಿಮನೆ ಕಲ್ತ ಕೈ ಕದ್ದಲ್ಲದೆ ಬಿಡದು ಕೂಡಿದ ಗಂಡನನ್ನಾದರೂ ಬಿಟ್ತೇನು ಕಲ್ತದ್ದ ಬಿಡಲಾರೆ ಕಲ್ತದ್ ಬಿಟ್ಟೆಯಾ ಕಲಕೇತಿ ಅಂದ್ರೆ ಊರು ಬಿಟ್ರು ನಾ ಕಲ್ತದ್ ಬಿಡಲ್ಲ ಅಂದ್ಲಂತೆ ಕಳ್ಳನ ಕೈಯಲ್ಲಿ ಕೀಲಿಕೈ ಕೊಟ್ಟಂತೆ ಕಳ್ಳನ ಕಾವಲಿಟ್ಟ ಹಾಗೆ ಕಾಲಿಗೆ ಬಿದ್ದು ಕಾಲುಂಗರ ಬಿಚ್ಚಿಕೊಂಡರಂತೆ ಕಾವಿ ಉಟ್ಟವರೆಲ್ಲಾ ಸನ್ಯಾಸಿಗಳಲ್ಲ ಬೂದಿ ಬಳಿದವರೆಲ್ಲ ಬೈರಾಗಿಗಳಲ್ಲ ಕುದಿಯುವುದರೊಳಗಾಗಿ ಮೂರು ಸಾರಿ ಹಳಸಿದಂತೆ ಕೂತುಕೊಂಡು ಹೇಳುವವನ ಕೆಲಸ ಊರು ಮಾಡಿದರೂ ಸಾಲದು ಕೂಳಿಗೆ ಕೇಡು ಭೂಮಿಗೆ ಭಾರ ಕೆಟ್ಟು ಪಟ್ಟಣ ಸೇರು ಇಟ್ಟು ಹಳ್ಳಿ ಸೇರು ಕೆಟ್ಟು ಬದುಕಬಹುದು ಬದುಕಿ ಕೆಡಬಾರದು ಕೆಟ್ಟು ಸೈರಿಸಬಲ್ಲೆ ಕೊಟ್ಟು ಸೈರಿಸಲಾರೆ ಕೆರೆಯ ನೀರ ಕೆರೆಗೆ ಚೆಲ್ಲಿ ವರ ಪಡೆದುಕೊಂಡಂತೆ ಕೈಲಾದವರು ಮಾಡುತ್ತಾರೆ ಕೈಲಾಗದವರು ಆಡುತ್ತಾರೆ ಕೊಂಕಿಗೆ ಕೊಂಕೇ ಮದ್ದು ಕೊಡಲಾರದ ಹೆಣ್ಣಿಗೆ ತೆರವ ಕೇಳಿದರಂತೆ ಕೊಡುವ ದೇವರು ಬಡವನೇ? ಕೊಡುವವನ ಕೈ ಯಾವಾಲು ಮೇಲೆ ಅಪ್ಪ ಗುಡಿ ಕಟ್ಟಿದರೆ ಮಗ ಕಳಸ ಇಟ್ಟ ಕೋಪ ಪಾಪ ತಂತು ಪಾಪ ತಾಪ ತಂತು ಗಂಡ ಹೆಂಡಿರ ಜಗಳದಲ್ಲಿ ಮಕ್ಕಳು ಜಗಳ ಕಲಿತವು ಗಳಕ್ಕನೇ ಉಂಡವ ರೋಗಿ, ಗಳಿಗೆ ಉಂಡವ ಭೋಗಿ ಗಾಣವಾಡದೆ ಎಣ್ಣೆ ಬಂದೀತೇ ಗುಡಿಸಿದ ಮೇಲೆ ಕಸವಿರಬಾರದು ಬಡಿಸಿದ ಮೇಲೆ ಹಸಿವಿರಬಾರದು ಗುರುವಿಗೆ ತಿರುಮಂತ್ರ ಸಂತೇಲಿ ಮನೇ ಮಾಡಿ ಸದ್ದಿಗಂಜೂದೇ ಗೆದ್ದವ ಸತ್ತ ಸೋತವ ಸತ್ತ ಚೌಲದಾಗ ದೌಲು ಮಾಡು ಜನಕ್ಕಂಜದಿದ್ದರೂ ಮನಕ್ಕಂಜಬೇಕು ಹುಟ್ಟಿದವಗೆ ಸಾವು ತಪ್ಪದು ತನಗಿಲ್ಲದ್ದು ಎಲ್ಲಿದ್ದರೇನು ತನ್ನ ತಾನರಿತರೆ ತನ್ನರಿವೆ ಗುರು ತನ್ನ ನೆರಳಿಗೆ ತಾನಂಜಿ ನಡೆಯಬೇಕು ತಬ್ಬಲಿ ದೇವರಿಗೆ ತಂಗಳ ನೈವೇದ್ಯ ತಲೆ ಬಲಿಯಿತು ಅಂತ ಕಲ್ಲಿಗೆ ಹಾಯಬಾರದು ತವರೂರಿನ ದಾರೀಲಿ ಕಲಿಲ್ಲ ಮುಳ್ಳಿಲ್ಲ ತಾ ಅನ್ನೋದು ನಮ್ಮ ತಲತಲಾಂತರಕ್ಕೂ ಇರಲಿ, ಕೊ ಅನ್ನೋದು ನಮ್ಮ ಕುಲಕೋಟಿಗೂ ಬೇಡ ತಾನು ತಿಂದದ್ದು ಮಣ್ಣು ಹೆರರಿಗೆ ಕೊಟ್ಟದ್ದು ಹೊನ್ನು ತಾ ಬಲವೋ ಜಗ ಬಲವೋ ತುಟ್ಟಿಯಾದರೂ ಹೊಟ್ಟೆ ಕೇಳದು ತುಟಿ ಸುಮ್ಮನಿದ್ದರೂ ಹೊಟ್ಟೆ ಸುಮ್ಮನಿರದು ತೊಳೀಲಿಲ್ಲ ಬಳೀಲಿಲ್ಲ ಮೂಗೇಕೆ ಮಸಿಯಾಯ್ತು ದನಿಯಿದ್ದವರು ಅತ್ತರೂ ಚಂದ ನಕ್ಕರೂ ಚಂದ ದುಡಿದದ್ದು ಉಂಡೆಯೋ ಪಡೆದದ್ದು ಉಂಡೆಯೋ ದೂಫ ಹಾಕಿದರೆ ಪಾಪ ಹೋದೀತೇ ನಡೆವರು ಎಡವದೇ ಕುಳಿತವರು ಎಡವುವರೇ ನಾ ಬಡವ ವಾಲಗ ಸಾವಕಾಶ ಊದು ಅಂದಂತೆ ನೇಮ ಉಳ್ಳವನ ಕಂಡರೆ ಯಮನಿಗೂ ಭಯ ನೆಂಟ ನೆರವಲ್ಲ ಕುಂಟ ಜೊತೆಯಲ್ಲ ಪಡುವಣ ಮನೆಗೆ ಮೂಡಣ ದೀಪ ಪಿಶಾಚಿ ಬಿಟ್ಟರೂ ನಿಶಾಚರ ಬಿಡ ಹೆಣ್ಣು ಹೊನ್ನು ಮಣ್ಣು ಇನ್ನೊಬ್ಬರ ಕೈ ಸೇರಿದರೆ ಹೋದಂತೆ ಬಳ್ಳಿಗೆ ಕಾಯಿ ಭಾರವೇ ಬಾಡಿಗೆ ಎತ್ತೆಂದು ಬಡಿದು ಬಡಿದು ಹೂಡಬೇಕೆ ಬಾಳಿ ಬದುಕುವರಿಗೆ ಹಾಳೂರ ಸುದ್ದಿ ಯಾಕೆ ನಿಷ್ಠೆ ಇಲ್ಲದೆ ಎಷ್ಟು ಪೂಜೆ ಮಾಡಿದರೂ ನಷ್ಟ ನಿಷ್ಠೆ ಇಲ್ಲದವನಿಗೆ ದೈವ ಬಟ್ಟ ಬಯಲು ಕಂಡವರ ಕಂಡು ಕೈಕೊಂಡ ಧರ್ಮ ದಂಗು ಬಡಿಸಿತು ಕಂಡವರ ಕಂಡು ಕೈಕೊಂಡ ಕೆಲಸ ಕೆಂಡವಾಯ್ತು ನಿಷ್ಠೆ ಇದ್ದಲ್ಲಿ ದೈವ ಕಲ್ಲುಗುಂಡೊಳಗೆ ಅಡಗಿತ್ತು ಭಕ್ತಿ ಉಳ್ಳಾತಗೆ ಮುಕ್ತಿ ,ಶಕ್ತಿ ಉಳ್ಳಾತಗೆ ಭುಕ್ತಿ ಅರಿತು ಮಾಡದ ದಾನ ತೆರೆದು ನೋಡದ ಕಣ್ಣಂತೆ ಕಾಯ ಕಮಲವೇ ಸೆಜ್ಜೆ ಜೀವ ರತುನವೇ ಜ್ಯೋತಿ ತತ್ವಮಸಿ ಅಂತ ಅನ್ನೋದ್ ಕಲಿ ಅಂದ್ರೆ ತುತ್ತು ಸವಿ ಅಂತ ಉಣ್ನೋದ್ ಕಲ್ತ ಜ್ಯೋತಿಯ ನೆಲೆ ಅರಿತವನೇ ಯೋಗಿ ನೆತ್ತರು ಉಕ್ಕಿದರೆ ಜೀವ ತೊಡಕೀತು ವಿಧಿ ಕಾಣದ ಎಡೆಗಳಿಲ್ಲ ದಾರವಿದ್ದರೆ ಮುತ್ತು ಹಾರವೆಂದನಿಸಿತ್ತು ಕಾಲ ತಪ್ಪಿದ ಬಳಿಕ ನೂರು ಮಾಡಿದರು ಹಾಳು ಮಿಂದು ಮೈಲಿಗೆ ಉಡೊದಾದ್ರೆ ಜಳಕದ ದಂದುಗವೇಕೆ ಮಾಡಿದ ಪಾಪ ದಾನದಿಂದ ಹೋದೀತೆ ಮಿಂದರೆ ಮೈಯ ಕೊಳೆ ಹೋಯ್ತು ಹಿರಿದು ಪಾಪ ಮಾಡಿ ಗಂಗೆಗೆ ಹರಿದರು ಅಕ್ಕರ ಕಲ್ತು ತನ್ನ ಒಕ್ಕಲನ್ನೇ ತಿನ್ನೊದ್ ಕಲ್ತ ವಿಧಿ ಮುನಿದರೆ ಸರಿ ಬೆಸವಾಯ್ತು ಅರಸು ಒಲಿದರೆ ಸಿರಿ ದೆಸೆಯಾಯ್ತು ಆಳಿದ ದೊರೆ ಹುಸಿದರೆ ಅಲ್ಲಿಂದ ಹೇಳದೆ ಹೋಗಬೇಕು ಬಲ್ಲಿದರೊಡನೆ ಸೆಣಸಿ ಮಾತಾಡಿದರೆ ಅಲ್ಲೇ ಬಂತು ಕೇಡು ಮಂತ್ರಿ ಇಲ್ಲದ ರಾಜ್ಯ ಕೀಲು ಮುರಿದ ಯಂತ್ರದಂತೆ ಕತ್ತಿ ವೈರಿ ಕೈಯಲ್ ಕೊಟ್ಟು ಬೆನ್ನ ಮಾಡಿ ನಿಂತನಂತೆ ಕೊಂಡಾಡುತ್ತ ಜಗದ ಇಚ್ಚೆಯನ್ನೆ ನುಡಿದರೆ ಜಗವೆಲ್ಲ ತನ್ನ ಮುದ್ದಾಡುತಿತ್ತು ನಾಡಳಿದು ನಾಡೊಡೆಯನಿಗೆ ಕೇಡು ನಾಡೊಡೆಯ ಅಳಿದು ನಾಡಿಗೆಲ್ಲ ಕೇಡು ಯಾರನ್ನ ನಂಬಿದರು ಆರೈದು ನಂಬಬೇಕು ಬಾಳಿಕೆಗೆಟ್ಟು ಬೆಸಲಾದ ಚೇಳಿನಂತಾದ ಹುಟ್ಟು ಸಾವು ದಿಟವೇ ಆದರೂ ಹೆಜ್ಜೆ ಹೆಜ್ಜೆಗೆ ಅಂಜೂದ್ ತಪ್ಪಲಿಲ್ಲ ಜಿನ ಧರ್ಮವೇ ಜೀವಧರ್ಮ ಮೂಕ ಪ್ರಾಣಿಯ ಕೊಲ್ಲದ್ದು ಜೀವಧರ್ಮ ನೀರೆಯ ಓರೆಗಣ್ಣ ನೋಟಕ್ಕೆ ನಾಡೆಲ್ಲ ಇರಿದಾಡಿತು ಲಲನೆಯರ ಒಲುಮೆ ತೊಲಗಿದರೆ ಇಲ್ಲ ಇಂಬರಿದು ಕೊಡುವಳೆ ರಂಭೆ ತಾನೊಲಿದ ಮಂಕು ಮಾಣಿಕ್ಯ ಹಾಸಿಗೆ ಇದ್ದಷ್ಟು ಕಾಲು ಚಾಚು ಬೀದೀಲಿ ಹೋಗೋ ಮಾರೀನ ಮನೆಗೆ ಕರೆದಂತೆ ಮಾಡಿದ್ದುಣ್ಣೋ ಮಾರಾಯ ಉಪ್ಪು ತಿಂದ ಮ್ಯಾಲೆ ನೀರ ಕುಡಿಯಲೇಬೇಕು ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಆಗೋದೆಲ್ಲಾ ಒಳ್ಳೇದಕ್ಕೆ ಕಾಲಕ್ಕೆ ತಕ್ಕಂತೆ ನಡೆಯಬೇಕು, ತಾಳಕ್ಕೆ ತಕ್ಕಂತೆ ಕುಣಿಯಬೇಕು ಅನ್ನ ಹಾಕಿದ ಮನೆಗೆ ಕನ್ನ ಹಾಕಬೇಡ ಮಾರಿ ಕಣ್ಣು ಹೋರಿ ಮ್ಯಾಲೆ, ಕಟುಕನ ಕಣ್ಣು ಕುರಿ ಮ್ಯಾಲೆ ಪಾಲಿಗೆ ಬಂದದ್ದು ಪಂಚಾಮೃತ ಪರದಾನಿ ಹೂಸು ಕುಡಿದ ಆಳು ಮೇಲೆ ಆಳು ಬಿದ್ದು ದೋಣು ಬರಿದಾಯ್ತು ಇಟ್ಟುಕೊಂಡಾಕಿ ಇರೂತನ ಕಟ್ಟಿಕೊಂಡಾಕಿ ಕಡೀತನ ಹರುವಯ್ಯನ ಎಲೆ ಇಂಬ, ಒಕ್ಕಲಿಗನ ಮನೆ ಇಂಬ ಗವುಜಿ ಗದ್ದಲ ಏನೂ ಇಲ್ಲ, ಗೋವಿಂದ ಭಟ್ಟ ಬಾವೀಲಿ ಬಿದ್ದ ಇದ್ದವರು ಇದ್ದ ಹಾಗೆ ಸಿದ್ಧಾ ದೇವಿಗೆ ಸಿಡಿಲು ಬಡೀತು ಅಂದು ಬಾ ಅಂದ್ರೆ ಮಿಂದು ಬಂದ ಹಣ ಇದ್ದೋರಿಗೆ ಏನೆಲ್ಲ, ಗುಣ ಇದ್ದೋರಿಗೆ ಏನಿಲ್ಲ ಹಣ ಇಲ್ದೋರು ಎದ್ದೂ ಬಿದ್ದಂಗೆ, ಗುಣ ಇಲ್ದೋರು ಇದ್ದೂ ಇಲ್ದಂಗೆ ನೀರೆ ನಿನ್ನ ಮಾತು ನಿಜವೇನೆ ನೀರ ಕಡೆದರೆ ಬೆಣ್ಣೆ ಬಂದಾದೇನೆ ಅಕ್ಕಿಯ ಮೇಗಳ ಆಸೆ, ನೆಂಟರ ಮೇಗಳ ಬಯಕೆ ಅಕ್ಕಿ ಸರಿಯಾಗ ಬಾರದು ಅಕ್ಕನ ಮಕ್ಕಳು ಬಡವಾಗ ಬಾರದು ಅಗಸನ ಬಡಿವಾರವೆಲ್ಲ ಹೆರರ ಬಟ್ಟೆ ಮೇಲೆ ಅಗಸರ ಕತ್ತೆ ಕೊಂಡು ಹೋಗಿ, ಡೊಂಬರಿಗೆ ತ್ಯಾಗ ಹಾಕಿದ ಹಾಗೆ ಹಳ್ಳೀ ದೇವರ ತಲೆ ಒಡೆದು, ದಿಲ್ಲೀ ದೇವರ ಹೊಟ್ಟೆ ಹೊರೆದ ಹಾಗೆ ಅಜ್ಜಿ ಸಾಕಿದ ಮಗ ಬೊಜ್ಜಕ್ಕೂ ಬಾರದು ಅಡವಿಯ ದೊಣ್ಣೆ ಪರದೇಸಿಯ ತಲೆ ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಅರ್ತಿಗೆ ಬಳೆ ತೊಟ್ಟು ಕೈ ಕೊಡವಿದರೆ ಹೋದೀತೆ ಅತ್ತೆ ಒಡೆದ ಪಾತ್ರೆಗೆ ಬೆಲೆ ಇಲ್ಲ ಅನ್ಯಾಯದಿಂದ ಗಳಿಸಿದ್ದು ಅಸಡ್ಡಾಳಾಗಿ ಹೋಯ್ತು ಅಬದ್ಧಕ್ಕೆ ಅಪ್ಪಣೆಯೇ ಅಂದ್ರೆ ಬಾಯಿಗೆ ಬಂದಷ್ಟು ಅರಗಿನಂತೆ ತಾಯಿ, ಮರದಂತೆ ಮಕ್ಕಳು ಅಮ್ಮನ ಮನಸ್ಸು ಬೆಲ್ಲದ ಹಾಗೆ, ಮಗಳ ಮನಸ್ಸು ಕಲ್ಲಿನ ಹಾಗೆ ಅರಸನ ಕುದುರೆ ಲಾಯದಲ್ಲೆ ಮುಪ್ಪಾಯಿತು ಅರೆಪಾವಿನವರ ಅಬ್ಬರ ಬಹಳ ಅಳಿವುದೇ ಕಾಯ ಉಳಿವುದೇ ಕೀರ್ತಿ ಆವು ಕಪ್ಪಾದ್ರೆ ಹಾಲು ಕಪ್ಪೇನು ಆಗೋ ಪೂಜೆ ಆಗುತ್ತಿರಲಿ ಊದೋ ಶಂಖ ಊದಿ ಬಿಡುವ ಆಚಾರ್ಯರಿಗೆ ಮಂತ್ರಕ್ಕಿಂತ ಉಗುಳು ಜಾಸ್ತಿ ಆಡಿ ತಪ್ಪ ಬೇಡ ಓಡಿ ಸಿಕ್ಕ ಬೇಡ ಆಡುತ್ತಾ ಆಡುತ್ತಾ ಭಾಷೆ, ಹಾಡುತ್ತಾ ಹಾಡುತ್ತಾ ರಾಗ ಆಡೋದು ಮಡಿ ಉಂಬೋದು ಮೈಲಿಗೆ ಆನೆ ಮೆಟ್ಟಿದ್ದೇ ಸಂದು, ಸೆಟ್ಟಿ ಕಟ್ಟಿದ್ದೇ ಪಟ್ಟಣ ಆಪತ್ತಿಗೆ ಹರಕೆ, ಸಂಪತ್ತಿಗೆ ಮರವು ಆರು ಯತ್ನ ತನ್ನದು, ಏಳನೇದು ದೇವರಿಚ್ಛೆ ಹಾಕೋದು ಬಿತ್ತೋದು ನನ್ನಿಚ್ಛೆ; ಆಗೋದು ಹೋಗೋದು ದೇವರಿಚ್ಛೆ ಆಲಸಿ-ಮುಂಡೇದ್ಕೆ ಎರಡು ಖರ್ಚು, ಲೋಭಿ-ಮುಂಡೇದ್ಕೆ ಮೂರು ಖರ್ಚು ಆಸೆ ಹೆಚ್ಚಿತು ಆಯಸ್ಸು ಕಮ್ಮಿ ಆಯಿತು ಆಸೆಗೆ ಕೊನೆಯಿಲ್ಲ ಆಷಾಡದ ಗಾಳಿ ಬೀಸಿ ಬೀಸಿ ಬಡಿವಾಗ, ಹೇಸಿ ನನ್ನ ಜೀವ ಹೆಂಗಸಾಗಬಾರದೇ ಹೆತ್ತವರಿಗೆ ಅಂಬಲಿ ಬಿಡದಿದ್ದರೂ, ಹಂಬಲ ಬಿಡದಿದ್ದರೆ ಸಾಕು ಹೊಟ್ಟೆ ಉರಿದು ಕೊಳ್ಳೋದು ಒಂದೇಯ, ಹೊಟ್ಟೆ ಇರಿದು ಕೊಳ್ಳೋದು ಒಂದೇಯ ಹೇಳಿಕೆ ಮಾತು ಕೇಳಿ ಹೆಂಡ್ರನ್ನ ಬಿಟ್ಟ ಸಾದೆತ್ತಿಗೆ ಎರಡು ಹೇರು (ಹೊರೆ) ಹೆತ್ತವರು ಹೆಸರಿಕ್ಕ ಬೇಕು ಕತೆ ಹೇಳೋಕೆ ಹ್ಞುಂ-ಗುಟ್ಟೋರಿರಬೇಕು, ನೆಟ್ಟಗೆ ಬಾಳೋಕೆ ಛೀ-ಗುಟ್ಟೋರಿರಬೇಕು ಹಾಲಿಲ್ಲ ಬಟ್ಟಲಿಲ್ಲ ಗುಟುಕ್ ಅಂದ ಕೊಡೋದು ಕೊಳ್ಳೋದು ಗಂಡಂದು, ಮಜ ಮಾಡೋದು ಹೆಂಡ್ರುದ್ದು ಊರಿಗಾಗದ ಗೌಡ, ಮೇಲೆರಗುವ ಗಿಡುಗ ರೊಂಡಿಗೆ ಏಟು ಬಿದ್ರೆ ಮೊಂಡಿಗೆ ಮುಲಾಮು ಹಚ್ಚಿದರು ತೇಗಿ ತೇಗಿ ಬೀಗಿ ಬಿದ್ದ ತಾಮ್ರದ ನಾಣ್ಯ ಹೌದಪ್ಪನ ಮನೇಲಿ ಹೌದಪ್ಪ, ಇಲ್ಲಪ್ಪನ ಮನೇಲಿ ಇಲ್ಲಪ್ಪ ಹೋದ ಬದುಕಿಗೆ ಹನ್ನೆರಡು ದೇವರು ಹೋದ್ರೆ ಒಂದು ಕಲ್ಲು, ಬಂದ್ರೆ ಒಂದು ಹಣ್ಣು ಆದ್ರೆ ಒಂದು ಅಡಿಕೆ ಮರ, ಹೋದ್ರೆ ಒಂದು ಗೋಟಡಿಕೆ ಹೋದಾ ಪುಟ್ಟಾ, ಬಂದಾ ಪುಟ್ಟಾ, ಪುಟ್ಟನ ಕಾಲಿಗೆ ನೀರಿಲ್ಲ ಇಕ್ಕಲಾರದ ಕೈ ಎಂಜಲು ಇಕ್ಕುವಳು ನಮ್ಮವಳಾದ್ರೆ ಕೊಟ್ಟಿಗೆಯಲ್ಲಾದರೂ ಉಣಲಿಕ್ಕು ಇಕ್ಕೇರಿ ತನಕ ಬಳಗ, ಮಾನ ಮುಚ್ಚಲಿಕ್ಕೆ ಅರಿವೆ ಇಲ್ಲ ಹೆಸರಿಗೆ ಹೊನ್ನ ಹೆಗ್ಗಡೆ,ಎಸರಿಗೆ ಅಕ್ಕಿ ಇಲ್ಲ ಇಡೀ ಮುಳುಗಿದರೂ ಮೂಗು ಮೇಲೆ ಇದ್ದ ಊರ ಸುದ್ದಿ ಇದ್ದಲ್ಲಿ ತೆಗೆಯ ಬಾರದು, ಬೇವೂರ ಸುದ್ದಿ ಹೋದಲ್ಲಿ ತೆಗೆಯ ಬಾರದು ಇದ್ದದ್ದು ಹೇಳಿದರೆ ಹದ್ದಿನಂತ ಮೋರೆ ಆಯಿತು ನಿಜ ಆಡಿದರೆ ನಿಷ್ಠೂರ ಇದ್ದದ್ದು ಹೋಯಿತು ಮದ್ದಿನ ಗುಣದಿಂದ ಇದ್ದಲ್ಲಿ ಗವುಡ ಹೋದಲ್ಲಿ ಕಿವುಡ ತನ್ನೂರಲಿ ರಂಗ, ಪರೂರಲಿ ಮಂಗ ಇಬ್ಬರ ನ್ಯಾಯ, ಮೂರನೇಯವನಿಗೆ ಆದಾಯ ಇಲ್ಲದ ಬದುಕು ಮಾಡಿ ಇಲಿಗೆ ಚಣ್ಣ ಹೊಲಿಸಿದರು ಇಲಿಯ ವ್ಯಾಜ್ಯಕ್ಕೆ ಬೆಕ್ಕು ಸಾಕ್ಷಿ ಇಲಿ ಹೆಚ್ಚಿದವೆಂದು, ಮನೆಗೆ ಉರಿ ಇಡಬಾರದು ಎಡದ ಎತ್ತಿಗೆ ಬಡಿದರೆ ಬಲದ ಎತ್ತಿಗೆ ತಾಕಿತು ಮದುವೆ ಮಡಿನೋಡು ಮನೆ ಕಟ್ಟಿ ನೋಡು ಮಾತು ಬೆಳ್ಳಿ, ಮೌನ ಬಂಗಾರ ಕೈ ಕೆಸರಾದ್ರೆ ಬಾಯಿ ಮೊಸರು ತುಂಬಿದ ಕೊಡ, ತುಳುಕೋದಿಲ್ಲ ಕಾಮಾಲೆ ಕಣ್ಣೋನಿಗೆ ಕಂಡಿದ್ದೆಲ್ಲ ಹಳದಿ ನೀ ಮದುವೆಯಾಗೋ ಗುಂಡ ಅಂದ್ರೆ ನೀನೇ ನನ್ನ ಹೆಂಡ್ತಿ ಅಂದ ಮಾಡೋದು ದುರಾಚಾರ, ಮನೆ ಮುಂದೆ ಬೃಂದಾವನ ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡಿದರಂತೆ ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಮೂರ್ತಿ ಚಿಕ್ಕದಾದ್ರು ಕೀರ್ತಿ ದೊಡ್ಡದು ಹಾಳೂರಿಗೆ ಉಳಿದವನೇ ಗೌಡ ಹಿರೀ ಅಕ್ಕನ ಚಾಳಿ ಮನೆ ಮಕ್ಕಳಿಗೆಲ್ಲಾ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಜನ ಮರುಳೋ ಜಾತ್ರೆ ಮರುಳೋ ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಕಾರ್ಯವಾಸಿ ಕತ್ತೆ ಕಾಲು ಕಟ್ಟು ಕೆಟ್ಟ ಮೇಲೆ ಬುದ್ಧಿ ಬಂತು, ಅಟ್ಟ ಮೇಲೆ ಒಲೆ ಉರಿಯಿತು ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಹಾಗೆ ಕೋಪದಲ್ಲಿ ಕುಯ್ದ ಮೂಗು ಶಾಂತವಾದಾಗ ಬಂದೀತೇ ಕೋತಿ ತಾನೂ ಕೆಡೋದಲ್ದೆ ವನಾನೂ ಕೆಡಿಸ್ತು ಕೊಟ್ಟದ್ದು ತನಗೆ; ಬಚ್ಚಿಟ್ಟದ್ದು ಪರರಿಗೆ ಕೊಟ್ಟೋನು ಕೋಡಂಗಿ, ಇಸ್ಕೊಂಡೋನು ಈರಭದ್ರ ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಂಡ ಕುಂಬಾರಂಗೆ ವರುಷ; ದೊಣ್ಣೆಗೆ ನಿಮಿಷ ಕೈಯಲ್ಲಿ ಶರಣಾರ್ಥಿ, ಕಂಕುಳಲ್ಲಿ ದೊಣ್ಣೆ ನಾಯಿ ಬೊಗಳಿದರೆ ದೇವಲೋಕ ಹಾಳೇನು ನಾಯಿ ಬಾಲ ಡೊಂಕು ಓದಿ ಓದಿ ಮರುಳಾದ ಕೂಚು ಭಟ್ಟ ಪಾಪಿ ಸಮುದ್ರ ಹೊಕ್ಕರು ಮೊಣಕಾಲುದ್ದ ನೀರು ರಾಮೇಶ್ವರಕ್ಕೆ ಹೋದ್ರೂ ಶನೀಶ್ವರನ ಕಾಟ ತಪ್ಪಲಿಲ್ಲ ಸಾವಿರ ಸುಳ್ಳು ಹೇಳಿ ಒಂಡು ಮದುವೆ ಮಾಡು ಬೇಲಿನೆ ಎದ್ದು ಹೊಲ ಮೇಯಿತಂತೆ ಭಂಗಿ ದೇವರಿಗೆ ಹೆಂಡಗುಡುಕ ಪೂಜಾರಿ ಎತ್ತು ಈಯಿತು ಅನ್ದರೆ ಕೊಟ್ಟಿಗೆಗೆ ಕಟ್ಟು ಎನ್ದರಂತೆ ಹಿಡಿದ ಕೆಲಸ ಕೈ ಹತ್ತಲ್ಲ, ತಿಂದ ಅನ್ನ ಮೈ ಹತ್ತಲ್ಲ ಮೇಲೆ ಬಿದ್ದು ಬಂದೋಳು ಮೂರು ಕಾಸಿಗೂ ಕಡೆ ಕೋತಿಯಂಥೋನು ಕೆಣಕಿದ, ಮೂತಿಗೆ ಹೆಟ್ಟಿಸಿಕೊಂಡು ತಿಣಕಿದ ಮುಳ್ಳಿನಿಂದ ಮುಳ್ಳು ತೆಗೆ, ಚರ್ಮ ಸುಕ್ಕಾದ್ರೆ ಮುಪ್ಪು, ಕರ್ಮ ಮುಕ್ಕಾದ್ರೆ ಮುಕ್ತಿ ಹೊಟ್ಟೆ ತುಂಬಿದೋರಿಗೆ ಹುಡುಗಾಟ, ಹೊಟ್ಟೆಗಿಲ್ಲದೋರಿಗೆ ಮಿಡುಕಾಟ ಹೆರಿಗೆ ಬೇನೆ ಕೆಲ ಗಂಟೆ ಗಂಟ, ಬಂಜೆ ಬೇನೆ ಬದುಕಿನ ಗಂಟ ಕಟ್ಟಿದ ಕೆರೆಗೆ ಕೋಡಿ ತಪ್ಪಲ್ಲ, ಹುಟ್ಟಿದ ಮನೆಗೆ ಬೇರೆ(ಪಾಲಗುವುದು) ತಪ್ಪಲ್ಲ ದುಡ್ಡಿಗೆ ದುಡ್ಡು ಗಂಟು ಹಾಕಿದ್ಯೋ? ಬೆನ್ನಿಗೆ ಹೊಟ್ಟೆ ಅಂಟು ಹಾಕಿದ್ಯೋ? ಬಿಮ್ಮಗಿದ್ದಾಗ ಹಮ್ಮು, ಬಿಮ್ಮು ತಪ್ಪಿದಾಗ ದಮ್ಮು ವಶಗೆಡದೆ ಹಸಗೆಡಲ್ಲ ಯಜಮಾನಿಲ್ಲದ ಮನೆ ಮೇಟಿ ಇಲ್ಲದ ಕಣ ಎರಡೂ ಒಂದೆ ಯಾರೂ ಇಲ್ಲದ ಊರಿಗೆ ಹೋಗಿ ನೀರು ಮಜ್ಜಿಗೆ ಬಯಸಿದಂತೆ ಯಾರೂ ಇಲ್ಲದ ಮನೆಗೆ ನಾನು ಜೋಗಪ್ಪ ಅಂದ ಯಾವ ಕಾಲ ತಪ್ಪಿದರೂ ಸಾವು ಕಾಲ ತಪ್ಪದು ಯಸಗಾತಿಗೆ ದೋಸೆ ಕೊಡೊ ಹೊತ್ತಿಗೆ, ಮೂಸಿಮೂಸಿ ಮೂಗಿನ ಕೆಳಗೆ ಹಾಕಿದ್ಲು ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮುದ್ದೆ ಉಣ್ತಾ ಮಜ್ಜಿಗೆ ಓಡಾಟ ಯೋಗ್ಯತೆ ಅರಿಯದ ದೊರೆ ರೋಗ ಅರಿಯದ ವೈದ್ಯ ಒಂದೇ ರಟ್ಟೆ ಮುರಿದು ರೊಟ್ಟಿ ತಿನ್ನು ಕಟ್ಟೆ ಹಾಕಿ ಅನ್ನ ಉಣ್ಣು ರಸ ಬೆಳೆದು ಕಸ ತಿನ್ನಬೇಡ, ಹಸ ಕಟ್ಟಿ ಮೊಸರಿಗೆ ಪರದಾಡಬೇಡ ರಾಗ ನೆನೆಪಾದಾಗ ತಾಳ ಮರೆತು ಹೋಯಿತಂತೆ ರಾಗಿ ಇದ್ರೆ ರಾಗ ರಾಗಿ ಇಲ್ದಿದ್ರೆ ರೋಗ ರಾಗಿಕಲ್ಲು ತಿರುಗುವಾಗ ರಾಜ್ಯವೆಲ್ಲಾ ನೆಂಟರು ರಾಜ ಇರೋತನಕ ರಾಣಿ ಭೋಗ ರಾತ್ರಿ ಕಂಡ ಬಾವೀಲಿ ಹಗಲು ಬಿದ್ದಂಗೆ ರಾಮ ಅನ್ನೋ ಕಾಲದಲ್ಲಿ ರಾವಣ ಬುದ್ಧಿ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಲಕ್ಕಿ ಸೊಪ್ಪಾದರೂ ಲೆಕ್ಕದ ಮುದ್ದೆ ಉಣಬೇಕು ಲಂಚ ಕೊಟ್ಟು ಮಂಚ ಏರು ವಂಚನೆ ಮಾಡಿ ಕೈಲಾಸ ಏರು ಲಾಭವಿಲ್ಲದ ವ್ಯಾಪಾರ ಕತ್ತೆ ಮೈ ಪರಚಿದಂಗೆ ಲಿಂಗ ಹರಿದ ಮೇಲೆ ಜಂಗಮನ ಹಂಗೇನು ಲೋಕ ತಿಳಿಯಬೇಕು ಲೆಕ್ಕ ಕಲಿಯಬೇಕು ವಿನಾಶ ಕಾಲಕ್ಕೆ ವಿಪರೀತ ಬುದ್ಧಿ ವ್ಯಾಪಾರಕ್ಕೆ ನಿಮಿಷ ಬೇಸಾಯಕ್ಕೆ ವರುಷ ಶಿವರಾತ್ರಿ ಮನೆಗೆ ಏಕಾದಶಿ ಬಂದಂಗೆ ಶಿವಾ ಅರಿಯದ ಸಾವು ಇಲ್ಲ ಮನ ಅರಿಯದ ಪಾಪ ಇಲ್ಲ ಶೀಲವಂತರ ಓಣೀಲಿ ಕೋಳಿ ಮಾಯ ಆದವಂತೆ ಶೆಟ್ಟಿ ಸಿಂಗಾರ ಆಗೋದರೊಳಗೆ ಪಟ್ಟಣ ಹಾಳಾಯ್ತು ಸಡಗರದಲ್ಲಿ ಮದುವೆ ಮಾಡಿ ಈ ಹೆಣ್ಣು ಯಾರು ಅಂದಳಂತೆ ಅತ್ತೆ ಸತ್ತ ಮೇಲಿನ ಸೊರ್ಗಕ್ಕಿಂತ ಇದ್ದ ನರಲೋಕ ವಾಸಿ ಸತ್ತವರಿಗೆ ಸಂಗವಿಲ್ಲ ಕೆಟ್ಟವರಿಗೆ ನೆಂಟರಿಲ್ಲ ಸತ್ತೋರ ಮಕ್ಕಳು ಇದ್ದೋರ ಕಾಲ್ದಸೀಲಿ ಸಮಯಕ್ಕಾದ ಹುಲ್ಲು ಕಡ್ಡಿ ಸಹಸ್ರ ಹೊನ್ನು ಸಮಯಕ್ಕಾದವನೆ ನೆಂಟ ಕೆಲಸಕ್ಕಾದವನೆ ಬಂಟ ಸಮಯಕ್ಕೆ ಬಾರದ ಬುದ್ಧಿ ಸಾವಿರ ಇದ್ದರೂ ಲದ್ಧಿ ಸಮುದ್ರದ ನೆಂಟಸ್ತನ ಉಪ್ಪಿಗೆ ಬಡತನ ಸವತಿ ಸಣ್ಣವಳಲ್ಲ ದಾಯಾದಿ ಚಿಕ್ಕವನಲ್ಲ ಸಂತೆ ಕಟ್ಟೋಕು ಮೊದಲೇ ಸೇರಿದರು ಗಂಟು ಕಳ್ಳರು ಸಂತೇಲಿ ಮಂತ್ರ ಹೇಳಿದಂಗೆ ಸಂದೀಲಿ ಸಮಾರಾಧನೆ ಮಾಡ್ದಂಗೆ ಸಾಯೋ ತನಕ ಶನಿ ಕಾಟ ಆದ್ರೆ ಬಾಳೋದು ಯಾವಾಗ ಸಾಲಗಾರ ಸುಮ್ಮನಿದ್ದರೂ ಸಾಕ್ಷಿದಾರ ಸುಮ್ಮನಿರ ಸಾವಿರ ಕುದರೆ ಸರದಾರ ಮನೇ ಹೆಣ್ತಿಗೆ ಪಿಂಜಾರ ಸಾವಿರ ಕೊಟ್ಟರೂ ಸವತಿ ಮನೆ ಬೇಡ ಸುಂಕದೋನ ಹತ್ರ ಸುಖದುಃಖ ಹೇಳಿಕೊಂಡ ಹಾಗೆ ಸೂಜಿಯಷ್ಟು ಬಾಯಿ ಗುಡಾಣದಷ್ಟು ಹೊಟ್ಟೆ ಸೆಟ್ಟಿ ಸಾಲ ಸತ್ತ ಮೇಲೆ ತಿಳೀತು ಸಾವಿರ ವರ್ಷ ಸಾಮು ಮಾಡಿ ಸಾಯೋ ಮುದುಕಿ ಸೊಂಟ ಮುರಿದ ಸೊಕ್ಕಿದ್ದು ಉಕ್ತದೆ ಉಕ್ಕಿದ್ದು ಒಲೆಗೆ ಹಾರ್ತದೆ ಹಗಲು ಅರಸನ ಕಾಟ ಇರುಳು ದೆವ್ವದ ಕಾಟ ಹಗ್ಗ ತಿನ್ನೋ ಹನುಮಂತ ರಾಯನಿಗೆ ಜ್ವಾಳದ ಶಾವಿಗೆ ಎಷ್ಟು ಕೊಟ್ಟೀಯ ಹಗ್ಗ ಹರಿಯಲಿಲ್ಲ ಕೋಲು ಮುರಿಯಲಿಲ್ಲ ಹಗೆಯೋನ ಕೊಲ್ಲಾಕೆ ಹಗಲೇನು ಇರುಳೇನು ಹಣ್ಣು ತಿಂದೋನು ನುಣುಚಿ ಕೊಂಡ ಸಿಪ್ಪೆ ತಿಂದೋನು ಸಿಗ್ಹಾಕೊಂಡ ಹಣ ಅಂದ್ರೆ ಹೆಣವೂ ಬಾಯಿ ಬಿಡ್ತದೆ ಹತ್ತು ತಿಂಗಳ ಪುಟ್ಟ ಹಟ್ಟೆಲ್ಲಾ ಹೆಜ್ಜೆ ಹತ್ತು ಜನಕ್ಕೆ ಬಿದ್ದ ನ್ಯಾಯ ಬೇಗ ಸಾಯಕಿಲ್ಲ ಹದ ಬಂದಾಗ ಅರಗಬೇಕು ಬೆದೆ ಬಂದಾಗ ಬಿತ್ತಬೇಕು ಹರಿದಿದ್ದೇ ಹಳ್ಳ ನಿಂತಿದ್ದೇ ತೀರ್ಥ ಹರೆ ಬಡಿದರೂ ಮದುವೆ ಮೊರ ಬಡಿದರೂ ಮದುವೆ ಹರೆಯಕ್ಕೆ ಬಂದಾಗ ಹಂದಿನೂ ಚಂದ ಹಲವು ದೇವರ ಮಾಡಿ ಹಾರುವಯ್ಯ ಕೆಟ್ಟ ಹಲ್ಲುಬಿದ್ದ ಮುದುಕಿ ಎಲ್ಲಿ ಬಿದ್ದರೇನು ಹಸಿದ ಹೊಟ್ಟೆ ತೋರಿಸಿದರೆ ಮಸೆದ ಕತ್ತಿ ತೋರಿಸಿದರು ಹಾರುವರ ಕೇರೀಲಿ ಹಬ್ಬ ಆದ್ರೆ ಮೂಳನಾಯಿಗೇನು ಓಡಾಟ ಹಾಲಪ್ಪ ಅಂತ ಹೆಸರಿದ್ದರೂ ಮಜ್ಜಿಗೆಗೆ ಗತಿ ಇಲ್ಲ ಹಾಲಿದ್ದಾಗ ಹಬ್ಬ ಮಾಡು ಹಲ್ಲಿದ್ದಾಗ ಕಡಲೆ ತಿನ್ನು ಹಾಲು ಕುಡಿದ ಮಕ್ಕಳೇ ಬದುಕಲಿಲ್ಲ ವಿಷ ಕುಡಿದ ಮಕ್ಕಳು ಬದುಕ್ಯಾರೆ ಹಾಲು ಮಾರಿದ್ದು ಹಾಲಿಗೆ ನೀರು ಮಾರಿದ್ದು ನೀರಿಗೆ ಹಾವೂ ಸಾಯಲಿಲ್ಲ ಕೋಲು ಮುರೀಲಿಲ್ಲ ಹಾಳೂರಿಗೆ ಉಳಿದೋನೇ ಗೌಡ, ಹುಟ್ಟಿದ ಮನೆ ಹೋಳಿಹುಣ್ಣಿಮೆ ಕೊಟ್ಟ ಮನೆ ಶಿವರಾತ್ರಿ ಹುಟ್ಟಿದಾಗ ಬಂದದ್ದು ಹೂತಾಗ ಹೋದೀತೇನು ಹುಟ್ಟು ಗುಣ ಸುಟ್ಟರೂ ಹೊಗೋದಿಲ್ಲ ಹುಬ್ಬೆ ಮಳೇಲಿ ಬಿತ್ತಿದರೆ ಹುಲ್ಲೂ ಇಲ್ಲ ಕಾಳೂ ಇಲ್ಲ ಹುಳ್ಳಿಕಾಳು ತಿನ್ನೊ ಮುಕ್ಕ ಒಬ್ಬಟ್ಟಿನ ಹೂರ್ಣ ಕೇಳಿದಂಗೆ ಹೆಡ್ಡಾಳಾದ್ರೂ ದೊಡ್ಡಾಳು ಮೇಲು ಹೇಳೊದು ವೇದ ಹಾಕೊದು ಗಾಳ ಹೊಟ್ಟೆ ತುಂಬಿದ ಮೇಲೆ ಹುಗ್ಗಿ ಮುಳ್ಳು ಮುಳ್ಳು ಗಾಳಿ ಬಂದಾಗ ತೂರಿಕೊ, ಧಾರಣೆ ಬಂದಾಗ ಮಾರಿಕೊ ಹೊರೆ ಹೊತ್ತುಕೊಂಡು ಗ್ರಹಗತಿ ಕೇಳ್ದಂದೆ ಕೋಣನಿಗೆ ಕೊಸೆಯೋ ಸಂಕಟ, ಎಮ್ಮೆಗೆ ಈಯೋ ಸಂಕಟ ನಿಯತ್ತಿಲ್ಲದೋರಿಗೆ ಬರಕತ್ತಿಲ್ಲ ನಡತೆ ಕಲಿಯೋದು ಏರುಬಂಡೆ ನಡತೆ ಕೆಡೋದು ಜಾರುಬಂಡೆ ಎಂಟು ವರ್ಷಕ್ಕೆ ನನ್ನ ಮಗ ದಂಟಾದ ಡಾವರ (=ನೀರಡಿಕೆ) ಹತ್ತಿದಾಗ ದೇವರ ಧ್ಯಾನ ದಾಯವಾಗಿ(=ದಾನವಾಗಿ) ಸಿಕ್ಕಿದರೆ, ನನಗೆ ಒಂದಿರಲಿ ನಮ್ಮಪ್ಪನಿಗೆ ಒಂದಿರಲಿ ಮುಲಾಜಿಗೆ ಬಸುರಾಗಿ ಹೆರೋಕೆ ತಾವಿಲ್ಲ ಪ್ರದಕ್ಷಿಣೆ ಹಾಕಿದರೆ ಪ್ರಯೋಜನವಿಲ್ಲ, ತೇದು ಇಕ್ಕಿದೋಳಿಗಿಂತ ಸಾದು ಇಕ್ಕಿದೋಳು ಹೆಚ್ಚು ತುತ್ತು ತೂಕ ಕೆಡಿಸಿತು, ಕುತ್ತು ಜೀವ ಕೆಡಿಸಿತು ತಾಳ ತಪ್ಪಿದ ಬಾಳು, ತಾಳಲಾರದ ಗೋಳು ಉಂಡ ಮನೆ ಜಂತೆ ಎಣಿಸಬಾರದು, ತುಪ್ಪತೊಗೆ ತಿನ್ನೋರ ರಂಪ ನೋಡು ಎಲ್ಲರ ಹಲ್ಲೊಳಗೆ ನುರಿದು ಹೋಗೋದಕ್ಕಿಂತ ಒಣಗಿದ ಹುಲ್ಲೊಳಗೆ ಉರಿದು ಹೋಗೋದು ವಾಸಿ ಹಣ ಎರವಲು ತಂದು ಮಣ ಉರುವಲು ಕೊಂಡ ಸಮಯಕ್ಕಿಲ್ಲದ ನೆರವು ಸಾವಿರ ಇದ್ದರೂ ಎರವು (ಅನ್ಯ) ಉಂಡದ್ದು ಊಟ ಆಗಲಿಲ್ಲ, ಕೊಂಡದ್ದು ಕೂಟ ಆಗಲಿಲ್ಲ ಉಪ್ಪಿಕ್ಕಿದವರನ್ನು ಮುಪ್ಪಿನ ತನಕ ನೆನೆ ಎಂಥೆಂಥ ದೇವರಿಗೇ ಅಂತರಾಟ ಆಗಿರುವಾಗ ಕಾಲ್ಮುರುಕ ದೇವರಿಗೆ ಕೈಲಾಸವೇ ಹೊಳೆಗೆ ಸುರಿದರೂ ಅಳೆದು ಸುರಿ ಹೆಂಡ್ರ ಅವಾಂತರ ತಡಿಲಾರದೆ ಗಂಡ ದೇಶಾಂತರ ಹೋದ ಉಂಬಾಗ ಉಡುವಾಗ ಊರೆಲ್ಲ ನೆಂಟರು ಉಂಬೋಕೆ ಉಡೋಕೆ ಅಣ್ಣಪ್ಪ ಕೆಲಸಕ್ಕಷ್ಟೇ ಇಲ್ಲಪ್ಪ ಉಗಿದರೆ ತುಪ್ಪ ಕೆಡುತ್ತದೆ, ನುಂಗಿದರೆ ಗಂಟಲು ಕೆಡುತ್ತದೆ ಉಡೋಕೆ ಇಲ್ಲದವ ಮೈಲಿಗೆಗೆ ಹೇಸ, ಉಂಬೋಕೆ ಇಲ್ಲದವ ಎಂಜಲಿಗೆ ಹೇಸ ಉತ್ತಮನು ಎತ್ತ ಹೋದರೂ ಶುಭವೇ ಉರಿಯೋ ಬೆಂಕೀಲಿ ಎಣ್ಣೆ ಹೊಯಿದ ಹಾಗೆ ಊರು ದೂರಾಯಿತು ಕಾಡು ಹತ್ತರಾಯಿತು ಊರೆಲ್ಲ ಸೂರೆ ಆದ ಮೇಲೆ ಕೋಟೆ ಬಾಗಿಲ ಮುಚ್ಚಿದರು ಎಡವಿದ ಕಾಲು ಎಡವುದು ಹೆಚ್ಚು ಎರಡು ದಾಸರ ನಂಬಿ ಕುರುಡು ದಾಸ ಕೆಟ್ಟ ಎರಡೂ ಕೈ ತಟ್ಟಿದರೆ ಸದ್ದು ಎಲ್ಲರೂ ಪಲ್ಲಕ್ಕಿಲಿ ಕೂತರೆ ಹೊರೋರು ಯಾರು ಎಲ್ಲಾ ಬಣ್ಣ ಮಸಿ ನುಂಗಿತು ಏರಿದವ ಇಳಿದಾನು ಏಳರಲ್ಲಿ ಬರಲೋ? ಎಪ್ಪತ್ತರಲ್ಲಿ ಬರಲೋ? ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಒಕ್ಕಣ್ಣರ ನಾಡಿಗೆ ಹೋದ್ರೆ ಒಂದು ಕಣ್ಣು ಮುಚ್ಚಿ ನಡೆಯಬೇಕು ಒಲ್ಲದ ಗಂಡಗೆ ಬೆಣ್ಣೇಲಿ ಕಲ್ಲು ಬಾಯಲ್ಲಿ ಬೆಲ್ಲ ಕರುಳು ಕತ್ತರಿ ಕಂಡವರ ಮಕ್ಕಳನ್ನು ಬಾವಿಯಲ್ಲಿ ದೂಡಿ ಆಳ ನೋಡಿದ ಹಾಗೆ ಕಡು ಕೋಪ ಬಂದಾಗ ತಡಕೊಂಡವನೇ ಜಾಣ ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು ಕಪ್ಪರ ತಿಪ್ಪೇಲಿಟ್ಟರೆ ತನ್ನ ವಾಸನೆ ಬಿಟ್ಟೀತೇ ಕಬ್ಬು ಡೊಂಕಾದ್ರೆ ಸವಿ ಡೊಂಕೇ ಕಲ್ಲು ಇದ್ದಾಗ ನಾಯಿ ಇಲ್ಲ ನಾಯಿ ಇದ್ದಾಗ ಕಲ್ಲು ಇಲ್ಲ ಕಿಡಿಯಿಂದ ಕಾಡ ಸುಡಬಹುದು ಕೀಲು ಸಣ್ಣದಾದರೂ ಗಾಲಿ ನಡೆಸುತ್ತದೆ ಕುರುಡು ಕಣ್ಣಿಗಿಂತ ಮೆಳ್ಳೆ ಗಣ್ಣು ವಾಸಿ ಬಿದ್ದ ಪೆಟ್ಟಿಗಿಂತ ನಕ್ಕ ಪೆಟ್ಟು ಹೆಚ್ಚು. ಹಾದಿ ಹಣವಡ್ಡ ಹಾದರಗಿತ್ತಿ ಮನೆ ಯಾವುದು. ಹಾರಾಡೋ ಅಪ್ಪುಂಗೆ ತೂರಾಡೋ ಮಗ ಹುಟ್ದಂಗೆ ಹಾರುವಯ್ಯನಿಗೆ ಹರಕೆ ಕಟ್ಟಿದಕ್ಕೆ ಹಳೇ ಪರಕೇಲಿ ಹೋಡ್ದ ಹಾಗೆ ಹಾರುವ ಆಳಲ್ಲ, ಬಾಳೆ ದಡಿಯಲ್ಲ ಹಾರುವರ ಮೋರೆಯಾದರೂ ನೀರಿನಲ್ಲಿ ತೊಳೆಯದಿದ್ದರೆ ನಾರದೆ ಇದ್ದೀತೆ. ಹಾರೋ ಹಕ್ಕಿಗೆ ಹಾದರ ಕಟ್ಟಿದರು. ಹಾರ‍್ಸೋನೋ ತೀರ‍್ಸೋನೋ. ಹಾಲು ಕಾಯಿಸ್ಕೊಂಡು ನಾನಿದ್ದೆ ಹಲ್ಲು ಕಿರ‍್ಕೊಂಡು ನೀ ಬಂದೆ. ಹಾಲುಕ್ಕಿದ ಮನೇಲಿ ಮೇಲ್‍ಗರೀಲಿ. (ಕಾಯಿಲೆ) ಮಾನಿಷ್ಟರು ಮಾನಕ್ಕೆ ಅಂಜಿದರೆ ಮಾನಗೇಡಿ ತನಗೇ ಅಂಜಿದರು ಅಂದನಂತೆ ರಾಯ ಸತ್ತರೂ ಹೆಣ ; ನಾಯಿ ಸತ್ತರೂ ಹೆಣ . ಘಟಾ (ದೇಹ ) ಇದ್ದರೆ ಮಠಾ ಕಟ್ಟಿಸಬಹುದು. ಮನೆಮನೆ ಮುದ್ದೆ ಮಾರಿಗುಡಿ ನಿದ್ದೆ ತಕ್ಕವನಲ್ಲಿ ಹೊಕ್ಕಿದ್ದರೆ ತಕ್ಕಷ್ಟಾದರೂ ಸಿಕ್ಕುವುದು ತಕ್ಕಡಿ ಬಲ್ಲದೇ ಮನೆಯ ಬಡತನವ ತಕ್ಕಡಿ ಸ್ವರೂಪ ತಕ್ಕವನೇ ಬಲ್ಲ ತಗಣೇ ಉಪದ್ರವ ಮಗಳಿಗೂ ಬಿಡಲಿಲ್ಲ ತಗಲುಗಾರನಿಗೆ (= ದಗಲ್ ಬಾಜ್) ಬಗಲ ಮೇಲೆ ಜ್ಞ್ಯಾನ ತಗ್ಗಿದವ ಎಂದಿಗೂ ನುಗ್ಗಾಗ ತಗ್ಗು ದವಸಕ್ಕಾಗಿ ಹಗ್ಗ ಕೊಂಡು ಕೊಂಡ ತಗ್ಗು ಗದ್ದೆಗೆ ಮೂರು ಬೆಳೆ ಎತ್ತರದ ಗದ್ದೆಗೆ ಒಂದೇ ಬೆಳೆ ತಟಕಿನಿಂದ ತಟಪಟವಾಯಿತು ತಟಕು ಬಿದ್ದು ಮಠಾ ಕೆಡಿಸಿತು ತಟಸ್ಥನಾದವನಿಗೆ ತಂಟೆಯೇನು? ತಟದಲ್ಲಾಗಲೀ ಮಠದಲ್ಲಾಗಲೀ ಹಟದ ಜಂಗಮನ ಕಾಟ ತಪ್ಪುವುದಿಲ್ಲ ತಟ್ಟನೆ ಆಡಿದರೆ ಕೊಟ್ಟಷ್ಟು ಫಲ ತಟ್ಟನೆ ಬಾ ಅಂದ್ರೆ ತುಟಿ ಬಿಟ್ಟನಂತೆ ತಡವಿದರೆ ಮಡಿ ಸಹಾ ಕೆಡುವುದು ತಡವ ಮಾಡುವವನ ಗೊಡವೆ ಬೇಡ ತಡೇ ಕಟ್ಟುವವನ ಮುಂದೆ ಮುಡಿಯೇನು ತಣ್ಣಗಿದ್ದರೆ ಮಣ್ಣಾದರೂ ಅಸಾಧ್ಯ ತಣ್ಣೀರು ಆದರೂ ಪುಣ್ಯದಿಂದ ದೊರಕಬೇಕು ತನಗೆ ಬಂದ ಹಾನಿ ದುಡ್ಡಿನಿಂದ ಹೋಯಿತು ತನಗೇ ಇಲ್ಲದವ ಪರರಿಗೆ/ಮಂದಿಗೆ ಏನು ಕೊಟ್ಟಾನು ತನಗೆ ಇಲ್ಲದವಳು ಮಕ್ಕಳಿಗೆ ಏನು ಹೊದಿಸ್ಯಾಳು ತನ್ನ ಮರ‍್ಯಾದೆ ಕೆಟ್ಟವ ಪರರ ಮರ‍್ಯಾದೆ ಇಟ್ಟಾನೆ? ತನ್ನ ನೆರಳು ತಾ ಕಂಡು ನರಳುವವ ಮರುಳನಲ್ಲವೇ? ತನ್ನ ಕಾಲಿಗೆ ತಾನೇ ಶರಣು ಮಾಡಿ ಹರಸಿಕೊಂಡ ಹಾಗೆ ತನ್ನ ಅಕ್ಕನ ಅರಿಯದವಳು ನೆರೆಮನೆ ಬೊಮ್ಮಕ್ಕನ ಬಲ್ಲಳೇ? ಬೆನ್ನ ಹಿಂದೆ ಉರಿಯೋ ತನ್ನ ಸುಖವೇ ಲೋಕದ ಸುಖ, ತನ್ನ ಕಷ್ಟವೇ ಲೋಕದ ಕಷ್ಟ ತನ್ನ ಹೊಟ್ಟೆ ತಾ ಹೊರೆಯದವ ಮುನ್ನಾರ ಸಲಹುವ? ತನ್ನ ತಾನರಿತರೆ ತಾನ್‍ಆದಾನು ತನ್ನ ತಾ ಮರೆತರೆ ತಾ ಹೋದಾನು ತನುವರಿಯದ ನೋವಿಲ್ಲ ಮನವರಿಯದ ತಾಪವಿಲ್ಲ ತಪಸ್ಸಿಗೆಂತ ಹೋಗಿ ಕುಪ್ಪಸಾ ಕಳಕೊಂಡ ತಪಸ್ಸು ಇದ್ದವನೇ ಗಭಸ್ತಿ (=ಕಾಂತಿ) ಉಳ್ಳವನು ತಪ್ಪನೆ ಬಾ (=ತಕ್ಷಣ ಬಾ ) ಅಂದ್ರೆ ತಬ್ಬಲಿಕ್ಕೆ ಬಂದ ಹಾಗೆ ತಪ್ಪಲೇಲಿ ಇದ್ದದ್ದು ಹೋದರೆ ಕಪಾಲದಲ್ಲಿ ಇದ್ದದ್ದು ಹೋದೀತೇ ತಪ್ಪಿ ಬಿದ್ದವನಿಗೆ ತೆಪ್ಪ (=ದೋಣಿ) ಏನು ಮಾಡೀತು ತಪ್ಪಿದವನಿಗೆ ಒಪ್ಪು ಇಲ್ಲ ತಪ್ಪು ಹೊರಿಸಿದವನಿಗೆ ಒಪ್ಪುವವನು ಯಾರು ತರತರವಾಗಿ ಹೇಳಿದ್ದು ಮರೆತರೆ ಮರಕ್ಕಿಂತಾ ಕಡೆ ತರಹರಿಸಾಳಾರದವಳು ಮರಣಕ್ಕೆ ಪಾತ್ರಳು ತರಬಲ್ಲವನ ಹೆಂಡತಿ ಅಡಜಾಣೆ (ಅಡಕವಾದ ಜಾಣ್ಮೆ ಉಳ್ಳವಳು) ತರಲಿಲ್ಲ ಬರಲಿಲ್ಲ ಬರ ಹ್ಯಾಗೆ ಹಿಂಗೀತು ತರಗು (=ಒಣಗಿದ ಎಲೆ) ತಿಂಬುವುದೇ ಪರಮ ಸುಖ ತರಗು ತಿಂಬವನಿಗೆ ಒರಗೊಂದು ಕೇಡು ತರಗು ತಿನ್ನುವವನ ಮನೆಗೆ ಹಪ್ಪಳಕ್ಕೆ ಹೋದರು ತರಗು (ಮರದಿಂದ ಬಿದ್ದ ಒಣ ಎಲೆಗಳು)ಮೊರದಲ್ಲಿ ಹಿಡಿಯದು ‍ ತರಗು ಲಡ್ಡಿಗೆ ಡೊಳ್ಳು ಗಣಪತಿಯೇ ಶ್ರೇಷ್ಠ ತರಗೆಲೆ ಅಡಿಕೆ ತಿರಿದು ತಿನ್ನಬೇಕೆ ತರುವವ ಮರೆತರೆ ಮೊರ ಏನು ಮಾಡೀತು ತರುವವ ಹೋದಮೇಲೆ ಮರಗುವವರುಂಟೇ ತರುಬಿದವಗೂ (=ಅಡ್ಡಕಟ್ಟು, ಹೊಡೆ) ಓಡಿದವಗೂ ಸರಿಪಾಲು ಕಷ್ಟ ತರುಬಿ ಹೋಗುವನ್ನ ಕರುಬಿ (=ಅಸೂಯೆ) ಮಾಡುವುದೇನು? ತರಲೆ ಕೇಳುವವ ಮರುಳಗಿಂತ ಕಡೆ ತಲೆಗೆ ಎಣ್ಣೆ ಇಲ್ಲ ತನು ಮೃಗನಾಭಿ ಬೇಡಿತು ತಲೆ ಚೆನ್ನಾಗಿದ್ದರೆ ಮುಂಡಾಸು ನೂರು ಕಟ್ಟಬಹುದು ತಲೆ ತಾಗಿದ್ದಲ್ಲದೆ ಬುದ್ಧಿ ಬಾರದು ತಲೇ ಸಿಡಿತಕ್ಕೆ ಮಲಶೋಧನೇ ಕೊಂಡ ಹಾಗೆ ತಲೇ ಕೂದಲಿದ್ದರೆ ಎತ್ತ ಬೇಕಾದರು ತುರುಬು ಹಾಕಿಕೊಳ್ಳಬಹುದು ತಲೇ ಕೂದಲಿಲ್ಲದವಳು ತುರುಬು ಬಯಸಿದಳಂತೆ ತಲೇ ಕೂದಲು ಉದ್ದವಿದ್ದವಳು ಹ್ಯಾಗೆ ಕಟ್ಟಿದರೂ ಚಂದ ತಲೇ ಕೂದಲು ನೆರೆಯಾದ ಮೇಲೆ ತಬ್ಬಿಕೊಂಡ ತಬ್ಬಲಿ ಮುರವ (=ತಿರುಕ) ತವಡು ತಿಂಬುವನಿಗೆ ವಯ್ಯಾರ ಯಾಕೆ ತವಡು ತಿಂಬುವವ ಹೋದರೆ ಉಮ್ಮಿ ತಿಂಬುವವ ಬತ್ತಾನೆ ತಳವಾರನಿಗೆ ಪಟ್ಟ ಕಟ್ಟಿದರೆ ಕುಳವಾರು (ಒಕ್ಕಲಿಗರ ಸಮೂಹ) ಹೋದೀತೋ? ತಳಾ ಬಿಟ್ಟು ಬಂಡಿ ಹಾರದು ತಳಿಗೆ ಚಂಬು ಹೋದ ಮೇಲೆ ಮಳಿಗೇ ಬಾಗಿಲು ಮುಚ್ಚಿದ ಹಾಗೆ ತಾ ಕಳ್ಳೆ ಪರರ ನಂಬಳು, ಹಾದರಗಿತ್ತಿ ಗಂಡನ ನಂಬಳು ತಾ ಕಾಣದ ದೇವರು ಪೂಜಾರಿಗೆ ವರ ಕೊಟ್ಟೀತೇ? ತಾಗದೆ ಬಾಗದು ಬಿಸಿಯಾಗದೆ ಬೆಣ್ಣೆ ಕರಗದು ತಾಟುಗಾರ (ಗರ್ವದ ಮನುಷ್ಯ) ಆಟಕ್ಕೆ ಹೋಗಿ ಮೋಟಗಾರನಾಗಿ (ತನ್ನಿಂದಲೇ ತಾ ಮೂರ್ಕನಾಗುವುದು) ಬಿದ್ದ ತಾತಾಚಾರ‍್ಯರ ಮನೆಗೆ ಏನಪ್ಪಣೆ? ತಾನುಂಟೋ? ಮೂರು ಲೋಕವುಂಟೋ? ತಾ ಕೋಡಗ ಪರರ ಅಣಕಿಸಿತು ತಾನು ನೆಟ್ಟ ಬೀಳು (ಬಳ್ಳಿ) ತನ್ನ ಎದೆಗೆ ಹಬ್ಬಿತು ತಾನು ಜಾರಿಬಿದ್ದು ಉಣ್ಣೆಯಂತ ನೆಲ ಅಂದ ತಾನು ತಿಂಬೋದು ಪಲ್ಲೆ ಸೊಪ್ಪು ಹಿರೇ ಕುದರೆ ಚೇಷ್ಟೆ ತಾನು ಬಾಳಲಾರದೆ ವಿಧಿಯ ಬೈದಂತೆ ತಾನು ಗರತಿ ಆದರೆ ಸೂಳೆಗೇರೀಲಿ ಮನೆ ಕಟ್ಟು ತಾನು ಸಾಯಬೇಕು ಸ್ವರ್ಗಾ ಪಡೆಯಬೇಕು ತಾನು ಹೋದರೆ ಮಜ್ಜಿಗೆ ಇಲ್ಲ ಮೊಸರಿಗೆ ಚೀಟು ಹೇಳಿ ಕಳಿಸಿದರೆ ಮೊಸರು ಕೊಟ್ಟಾರೆ ತಾನೂ ಕುಡಿಯ ಕುಡಿಯಲೀಸ ತಾನೊಂದೆಣಿಸಿದರೆ ದೈವವೊಂದೆಣಿಸಿತು ತಾಪತ್ರಯದವನಿಗೆ ತಾಪೆ/ಚಾಪೆ ಯಾಕೆ ಅಮ್ಮನ ಮನಸ್ಸು ಬೆಲ್ಲದ ಹಾಗೆ, ಮಗಳ ಮನಸ್ಸು ಕಲ್ಲಿನ ಹಾಗೆ ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ತೂಗಬಲ್ಲುದು ಕಣ್ಣರಿಯದಿದ್ದರೂ ಕರುಳರಿಯುತ್ತದೆ ಹತ್ತು ಮಕ್ಕಳ ತಾಯಾದರೂ ಸತ್ತ ಮಗನ್ನ ಮರೆಯೊದಿಲ್ಲ ತಾರಕ್ಕೆ (ಎರಡು ಕಾಸಿನ ನಾಣ್ಯ) ಮೂರು ಸೇರು ಉಪ್ಪಾದರೂ ತರುವುದಕ್ಕೆ ಗತಿ ಬೇಡವೋ ತಾರಕ್ಕೊಂದು ಸೀರೆಯಾದರೂ ನಾಯಿ ತಿಕ ಬೆತ್ತಲೆ ತಾರತಮ್ಯ ಅರಿಯದವ ದೊರೆಯಲ್ಲ ಮಾತು ಮೀರಿದವ ಸೇವಕನಲ್ಲ ತಾರುಣ್ಯವೇ ರೂಪು ಕಾರುಣ್ಯವೇ ಗುಣ ತಾರು ಮಾರು ಮಾಡುವವನಿಗೆ ಯಾರು ತಾನೆ ನಂಬ್ಯಾರು ತಾರೇಮರದ ಕಾಯಾದರೂ ಕರೆದರೆ ಬಂದೀತೇ ತಾರೇ ಬಡ್ಡೀ ನೀರಾ ಅಂದ್ರೆ ತರುವೆನು ನಿಲ್ಲೊ ತಿರುಕ ಮುರವ ತಾವು ಮಾಡುವುದು ಗಂಧರ್ವರು ಮಾಡಿದರು ತಾಸಿನ ಗೊತ್ತು ದಾಸಿಗೆ ತಿಳಿದೀತೇ? ತಾಸಿಗೊಂದು ಕೂಸು ಹೆತ್ತರೆ ಈಸೀಸು ಮುತ್ತು ತಾಸಿನ ಬಟ್ಟಲು ನೀರ ಕುಡಿದರೆ ತಾಸಿಗೆ ಕೊಡತೀ ಪೆಟ್ಟು ತಾಳ ತಪ್ಪಿದರೆ ಕುಣಿಯೋದು ತಪ್ಪುವುದಿಲ್ಲ ತಾಳದಲ್ಲಿ ಜಾಣನಾದರೆ ತಾಳಿಕೆ ಇದ್ದೀತೇ ತಾಳಲಾರದ ವಿರಹ ತಿಣುಕಿದರೆ ಹೋದೀತೇ? ತಾಳಿಕೆ (ತಾಳ್ಮೆ) ಉಳ್ಳವನಲ್ಲಿ ಕೇಳಿದರೆ ಕಾಳು ಸಿಕ್ಕುವುದು ತಾಳಿದವ ಬಾಳ್ಯಾನು ತಾಳು ಬಡಿದರೆ ಕಾಳು ಸಿಕ್ಕೀತೇ ತಾಳೆಮರ ಉದ್ದವಾದರೆ ಕೋಳಿಗೆ ಬಂದದ್ದೇನು ತಾಳೆಮರ ದೊಡ್ಡದಾದರೂ ತಾಳೆ ಹೂವಿಗೆ ಸರಿಯಾದೀತೇ ತಾಳೇ ಹಣ್ಣು ತಾನೇ ಬಿದ್ದರೂ ಬಾಳಾದ ಮುರವಗೆ ಬಾಯಿ ಮುಚ್ಚಿತು ತಾಳ್ಮೆ ಇದ್ದ ಪುರುಷರಲ್ಲಿ ಬೀಳು ಬಿದ್ದರೆ ಬಾಳ್ಯಾನು ತಾಳೆ ಹೂವು ಶಿವನಿಗೆ ಆಗದು ಸಂಪಿಗೆಯ ಹೂ ಸಾಲಿಗ್ರಾಮಕೆ ಆಗದು ತಾ ಕೆಡುತ್ತಾ ಏಳು ನೆರೆ ಕೆಡಿಸಿದ ತಿಗಳಗಿತ್ತಿಯ ಬಾಯಿ ಕೆಣಕಬೇಡ ಬೊಗಳೊ ನಾಯಿ ಬಡಿಯಬೇಡ ತಿಗುಳಗೆ ತಿಪ್ಪಯ್ಯಗೆ ಸೂಜಿ ಮೇಲು ಕಳ್ಳಗೆ ಬಾಯಿ ಮೇಲು ತಿಪ್ಪೆಯ ಮೇಲೆ ಕುಂಡ್ರುವವಗೆ ತಕ್ಯೆ ಯಾತಕ್ಕೆ ತಿಪ್ಪೇ ಮೇಲಣ ಅರಿವೆಯಾದರೂ ಕಾಲಿಗೆ ಕಟ್ಟಿದರೆ ಬಿರುದು ತಿಪ್ಪೇ ಮೇಲಣ ದೀಪ ಉಪ್ಪರಿಗೆಯ ಮೇಲೆ ಬಂದೀತೋ? ತಿಪ್ಪೇ ಮ್ಯಾಲೆ ಮಲಗಿ ಉಪ್ಪರಿಗೆ ಕನಸು ಕಂಡ ಹಾಗೆ ತಿಪ್ಪೇ ಮೇಲೇ ಮುಪ್ಪಾದ ಕುಂಬಾರ ತಿರುದುಂಬುವುದಕ್ಕೆ ಬೀದಿ ಹಂಚಿಕೊಂಡ ಹಾಗೆ ತಿರಿತಿರಿಗಿ ಗೋಕರ್ಣಕ್ಕೆ ಹೋಗಿ ತುರಕನಿಂದ ದಬ್ಬೆ ತಿಂದ ತಿರಿತಿರಿಗಿ ತಿಮ್ಮಪ್ಪನ ಹತ್ತರ ಹೋದರೆ ತಿರಿದುಂಬೋದು ತಪ್ಪೀತೇ? ತಿರಿದುಂಬುವ ಭಟ್ಟ ದಕ್ಷಿಣೆಯಾದರೂ ಬಿಟ್ಟಾನು ಭೋಜನ ಸಿಕ್ಕಿದರೆ ಬಿಡಲೊಲ್ಲ ತಿರಿಚಿನಾಪಳ್ಳಿಗೆ ತಿರಿದುಂಬೊದಕ್ಕೆ ಇಲ್ಲಿಂದ ಕೈ ಸವರಿಸಬೇಕೆ ತಿರುಪತಿ ಕ್ಷೌರಿಕರು ತಲೆ ಬೋಳಿಸಿದ ಹಾಗೆ ತಿರುಕನ ಬಳಿಗೆ ತಿರುಕ ಹೋದರೆ ಮರುಕ ತಾ ಬರುವುದೇ? ತಿರುಕನಿಗೆ ಮುರುಕು (ಬೆಡಗು ಕೊಂಕು) ಇದ್ದಾಗ್ಯೂ ತಿರಿದುಂಬುವುದು ತಪ್ಪದು ತಿರುಪದ ಪುಟ್ಟಿಯಲ್ಲಿ ಶನೀಶ್ವರ ಕೂತ ತಿರುಪಿನಂತೆ ಇರಬೇಕು ತಿಳಿದವ ತಿರುಳು ತಿಂದರೂ ಮರುಳು ಹೋಗಲಿಲ್ಲ ತಿರುಳು ಹೋಗಿ ಬೆಂಡು ಉಳೀತು ತಿರೋಕಲ್ಲು ಗಾಳಿಯಿಂದ ಹಾರುವುದೋ ತಿರೋಕಲ್ಲು ಮಳೇಲಿ ಬಿದ್ದರೆ ಮರಕ್ಕಿಂತಾ ಕಡೆಯಾದೀತೇ ತಿಮ್ಮಪ್ಪನ ದಯೆ ತಿಳಿದ ಕಳ್ಳ ತಿರಿಗಿದರೂ ಬಿಡ ತಿಳಿದವನಾದರೂ ಮಲಮೂತ್ರ ಬಿಟ್ಟೀತೇ? ತಿಳಿದವ ಮಾಡ್ಯಾನು ನಳಪಾಕವ ಮಕ್ಕಳ ಹೆತ್ತು ತಿರುಮಲ ದೇವರ ಹೆಸರಿಟ್ಟ ಹಾಗೆ ತೀರಕ್ಕೆ ಬಂದ ಮೇಲೆ ತೆರೆಯ ಭಯವೇ ತೀರದಲ್ಲಿರುವ ಮರಕ್ಕೆ ನೀರು ಯಾತಕ್ಕೆ ತೀರದ ಕಾರ್ಯ ಹಾರಿದರೂ ಆಗದು ಇಂಗು ತೆಂಗು ಇದ್ದರೆ ಮಂಗಮ್ಮನೂ ಅಡಿಗೆ ಮಾಡ್ತಾಳೆ. ಹಪ್ಪಳಕ್ಕೆ ಊರಿತು ; ಸಂಡಿಗೆಗೆ ಏರಿತು. ಉಕ್ಕಿದರೆ ಸಾರಲ್ಲ ; ಸೊಕ್ಕಿದರೆ ಹೆಣ್ಣಲ್ಲ. ಮಘಾ ಮಳೆ ಬಂದಷ್ಟು ಒಳ್ಳೇದು ; ಮನೆ ಮಗ ಉಂಡಷ್ಟೂ ಒಳ್ಳೆಯದು . ಆಶ್ಲೇಷ ಮಳೆ , ಈಸಲಾರದ ಹೊಳೆ. ಹುಬ್ಬೆ ಮಳೇಲಿ ಹುಬ್ಬೆತ್ತಕ್ಕೂ ಆಗಲ್ಲ. ಅಣ್ಣ ಹುಸಿಯಾದರೂ ತಮ್ಮ ತಂಪು ತರದೇ ಹೋಗಲ್ಲ. (ಅಣ್ಣ ಪುನರ್ವಸು ಮಳೆ, ತಮ್ಮ ಪುಷ್ಯ ಮಳೆ) ಆರಿದ್ರಾ ಮಳೆ ಆರದೇ ಹುಯ್ಯುತ್ತೆ. ಅಮ್ಮನ ಮನಸ್ಸು ಬೆಲ್ಲದ ಹಾಗೆ ; ಆರಿದ್ರಾ ಹನಿ ಕಲ್ಲಿನ ಹಾಗೆ. ಮಳೆಗಾಲದ ಮಳೆ ನಂಬಲಾಗದು ; ಮನೆ ಹೆಂಡ್ತಿ ನಗೆ ನಂಬಲಾಗದು. ತುಂತುರು ಮಳೆಯಿಂದ ತೂಬು ಒಡೆದೀತೆ? ಉಪವಾಸ ಇರಬಹುದು , ಉಪದ್ರವ ತಾಳಲಾರದು. ಉಂಡದ್ದೇ ಉಗಾದಿ , ಮಿಂದದ್ದೇ ದೀವಳಿಗೆ , ಹೊಟ್ಟೆಗಿಲ್ಲದ್ದೇ ಏಕಾದಶಿ. ಉದ್ದರಿ ಕೊಟ್ಟು ಸೆಟ್ಟಿ ಕೆಟ್ಟ, ಕಡ ಸಿಕ್ಕು ಬಡವ ಕೆಟ್ಟ. ಉಣ್ಣುವಾಗ ಎರಡು ತುತ್ತು ಕಡಿಮೆ ಉಣ್ಣು. ತಮ್ಮ ಕಲಹಕ್ಕೆ ಐವರು ,ಪರರ ಕಲಹಕ್ಕೆ ನೂರಾ ಐವರು. (ಸುಳಿವು ಪಾಂಡವಕೌರವರು) ತಾನಾಗಿ ಬೀಳುವ ಮರಕ್ಕೆ ಕೊಡಲಿ ಏಟು ಹಾಕಿದ ಹಾಗೆ . ತೀರ್ಥಕ್ಕೆ ಥಂಡಿ, ಪ್ರಸಾದಕ್ಕೆ ಅಜೀರ್ಣ , ಮಂಗಳಾರತಿಗೆ ಉಷ್ಣ (ನಾಜೂಕು ದೇಹಸ್ಥಿತಿ) ಉಂಡರೆ ಉಬ್ಬಸ , ಹಸಿದಿದ್ದರೆ ಸಂಕಟ(ನಾಜೂಕು ದೇಹಸ್ಥಿತಿ) ಊರು ನೋಡಿ ಬಾ ಅಂದರೆ ತೋರಣ ಕಟ್ಟಿ ಬಂದ. . ಎತ್ತು ಚಲೋದಾದರೆ ಇದ್ದ ಊರಲ್ಲೇ ಗಿರಾಕಿ. ಕಟ್ಟಲಿಲ್ಲ ಬಿಚ್ಚಲಿಲ್ಲ ಹಿ೦ಡಿಕೊಳ್ಳೋಕೆ ಹೊತ್ತಾಯ್ತು ಅ೦ದಳು. ಕತ್ತೆ ತಪ್ಪಿಸಿಕೊ೦ಡರೆ ಹುಡುಕುತಾರ್‍ಯೇ? ಆಕಳಿದ್ದವನಿಗೆ ವ್ಯಾಕುಲವಿಲ್ಲ. ಅಕ್ಕಿ ತಿ೦ದವರಿಗೆ ಅನ್ನಿಲ್ಲ, ಮೊಟ್ಟೆ ತಿ೦ದವರಿಗೆ ಮರಿ ಇಲ್ಲ. ಆಕಳ ಹೊಟ್ಟೆಯಲ್ಲಿ ಅಚ್ಚೇರು ಬ೦ಗಾರ. ಉಳೋ ಎತ್ತಾದರೆ ಇರೋ ಊರಿನಲ್ಲಿ ಬೆಲೆಯಾಗದೇ. ಗುಡ್ಡದ ಮೇಲೆ ಕಪಿ ಸತ್ತರೆ ಊರಿಗೆಲ್ಲಾ ಸೂತಕ. ಯಾರ ಹೆ೦ಡ್ತಿ ಎಲ್ಲಿಯಾದರೂ ಹೋಗಲಿ ನಮ್ಮ ಹೆ೦ಡ್ತಿ ನಮ್ಮನೇಲಿರಲಿ ಯಾವ ದೇವರು ವರ ಕೊಟ್ಟರೂ ಗ೦ಡನಿಲ್ಲದೆ ಮಕ್ಕಳಾಗದು. ಲೇ ಅನ್ನಲು ಅವಳೇ ಇಲ್ಲ ಮಗನ ಹೆಸರು ಮುದ್ದುರ೦ಗ. ವೈರವಿದ್ದವನ ಕರೆದು ಮುಖಕ್ಷೌರ ಮಾಡಿಸಿಕೊ೦ಡಹಾಗೆ. ಶ್ಯಾನುಭೋಗರ ಸ೦ಬಳ ಸ೦ತೋಷ ಕೇಳಬೇಡಾ. ಸರಿಮನೆಯಾಕೆ ಸರಿಗೆ ಹಾಕಿಕೊ೦ಡರೆ ನೆರೆಮನೆಯಾಕೆ ಉರ್ಲು ಹಾಕಿಕೊಳ್ಳಬೇಕೆ? ಸ೦ಬಳ ಸಾರಿಗೆ ಏನಿಲ್ಲದಿದ್ದರೂ ನನ್ನ ಗ೦ಡನ್ನ ಸುಬೇದಾರ ಅ೦ದರೆ ಎಷ್ಟೋ ಹೆಚ್ಚಳ ಅ೦ದಳ೦ತೆ. ಸು೦ದರ ಪುರುಷನೆಲ್ಲೆ ಸುಪಣಾತಿ ಅ೦ದ್ರೆ ಸೂಳೆ ಮನೇಲಿ ಸುಖನಿದ್ರೇಲವ್ರೆ ಎ೦ದಳು. ಪಾಪಿ ಚುನಾವಣೆಗೆ ನಿ೦ತರೆ ಮೂರೇ ಓಟು. ಸ್ಟ್ಯಾ೦ಪಿರುವಷ್ಟು ನಾಲಗೆ ಚಾಚು. ಹೆಸರು ಸರಸ್ವತಿ, ಎಡಗೈ ಹೆಬ್ಬೆಟ್ಟಿನ ಸಹಿ. ಕೆಲಸವಿಲ್ಲದ ಶಾನುಭೋಗ ಹಳೆ ಲೆಕ್ಕ ನೋಡಿದ ಹಾಗೆ. ಕಾಸೂ ಹಾಳು ತಲೆಯೂ ಬೋಳು. ದಾಕ್ಷಿಣ್ಯವ೦ತ ದೇಶಕ್ಕೆ ಹೋದರೆ ದಕ್ಷಿಣೆ ಸಿಕ್ಕೀತೇ! ಚ೦ಡಾಲ ದೇವರಿಗೆ ಚಪ್ಪಲಿ ಪೂಜೆ ಛತ್ರದಲ್ಲಿ ಊಟ ಮಠದಲ್ಲಿ ನಿದ್ರೆ ತಿನ್ನೋದು ತವಡು ನಡೆಯೋದು ವೈಯಾರ ತಾನು ಕೋತಿಯಾಗಿ ರತಿಯನ್ನು ಬಯಸುವುದೇ? ದೊಡ್ಡ ಗೌಡನ ಮನೇಲಿ ದೊಡ್ಡ ಗುಡಾಣ ಎತ್ತಿದರೆ ಏನೂ ಇಲ್ಲ. ಮದುವೆ ಆಗೋ ಗ೦ಡಿಗೆ ಅದೇ ಇಲ್ಲ ಅ೦ದ೦ಗೆ. ಆಸೆಯಿ೦ದ ಅಳಿಯ ಬ೦ದ್ರೆ ಮಗಳು ಹೊರಗಾಗಿರೋದೇ? ಅ೦ಗ ತೋರಿಸಿ ಅರ್ಧಾ೦ಗಿಯಾದಳು. ಅಳಿಯನಿಗೆ ದೀಪಾವಳಿ ಮಾವನಿಗೆ ಕೋಪಾವಳಿ. ಆಫೀಸಿನಲ್ಲಿ ಆಫೀಸರ್, ಮನೆಯಲ್ಲಿ ಕುಕ್ಕರ್. . ಅಗಸನ ಸಿಟ್ಟು ಅನ್ಯರ ವಸ್ತ್ರದ ಮೇಲೆ. ಅ೦ಗಳದಾಗೆ ಒದ್ದು ಅಡಿಗೆ ಮನೆಯಲ್ಲಿ ಕಾಲು ಹಿಡಿದ. ಅಶ್ವಥ ಸುತ್ತಿದರೆ ಮಕ್ಕಳಾಗುತ್ತೆ ಅ೦ದ್ರೆ ಸುತ್ತು ಸುತ್ತಿಗೂ ಹೊಟ್ಟೆ ಮುಟ್ಟಿ ನೋಡಿಕೊ೦ಡಳ೦ತೆ. ಎಲ್ಲರೂ ನಗ್ತಾರೆ ಅ೦ಥ ಕಿವುಡ ತಾನೂ ನಕ್ಕ. ಒಡೆಯನಿಗೆ ಹಾಲಿಲ್ಲವೆ೦ದು ಎಮ್ಮೆ ಈಯುತ್ಯೇ? ಕ೦ಡವರ ಮನೇಲಿ ನೋಡು ನನ್ನ ಕೈ ಧಾರಾಳಾವ! ಕುಡಿಯೋದು ಅ೦ಬಲಿ ಮುಕ್ಕಳಿಸೋದು ಪನ್ನೀರು. ಕುರುಡರ ರಾಜ್ಯದಲ್ಲಿ ಒಕ್ಕಣ್ಣನೇ ರಾಜ. ಕದ್ದ ರೊಟ್ಟಿ ಬೇರೆ ದೇವರ ಪ್ರಸಾದ ಬೇರೆ. ಕಡಗ ನೋಡಲಿ ಅ೦ತ ಗುಡಿಸಲು ಸುಟ್ಕೊ೦ಡ ಹಾಗೆ. ಗ್ರಾಮ ಶಾ೦ತಿಗೆ ತಳವಾರ ತಲೆ ಬೋಳಿಸಿಕೊ೦ಡನ೦ತೆ. ಗ೦ಡ ಪಟ್ಟೆ ಸೀರೆ ತರುತ್ತಾನೆ೦ದು ಇದ್ದ ಬಟ್ಟೆ ಸುಟ್ಟಳ೦ತೆ. ಇದ್ದಾಗ ನವಾಬ ಸಾಬ, ಇಲ್ಲದಾಗ ಫಕೀರ ಸಾಬ. ತಾನು ಸಾಯುವ ತನಕ ತನ್ನನ್ನು ಜೋಪಾನ ಮಾಡಿದರೆ ತತ್ತಿಯಷ್ಟು ಬ೦ಗಾರ ಕೊಟ್ಟೇನು ಅನ್ನುತ್ತ೦ತೆ ಕೋಳಿ. . ನಾಯಿಯ ಕನಸೆಲ್ಲ ಮೂಳೇನೇ. ಯಾರ ತೋಟದ ಹುಲ್ಲು ಮೇದಾದ್ರೂ ನಮ್ಮ ಕರು ದೊಡ್ಡದಾಗಲಿ. ವಿರೂಪಾಕ್ಷ ಹ೦ಪೆ ಬಿಡ, ವಿಘ್ನೇಶ್ವರ ಕೊ೦ಪೆ ಬಿಡ. ಸೊಕ್ಕಿದ್ದವನಿಗೆ ಯಾಣ, ರೊಕ್ಕಿದ್ದವನಿಗೆ ಪಟ್ಟಣ. ಹ೦ಪೆಗೆ ಹೋಗದಿದ್ದರೆ ಸ೦ಪಿಗೆ ನೋಡಲಿಲ್ಲವೇ? ನುಡಿಯೊಳು ಹೊಳೆವುದು ನಾಡಿನ ನಡವಳಿ. ನುಡಿಯೊಳು ಕ೦ಪಿಡುವುದು ಬದುಕು ನುಡಿಯಿರದವನಿಗೆ ಇಲ್ಲವು ನಾಡೂ ನುಡಿಯಲಿ ಸಲ್ಲನದಾವುದಕೂ. ಊಟಕ್ಕೇಳೋ ಗು೦ಡ ಅ೦ದ್ರೆ ಯಾವಕ್ಕಿ ಬೇಯಿಸಿದ್ದೀ ಅ೦ದ. ಗಂಡನಿಗೆ ಹೊರಸು ಆಗದು , ಹೆಂಡತಿಗೆ ನೆಲ ಆಗದು! ಕೊಡುವವರದು ಕೊಟ್ಟರೆ ನನಗೇನು ಉಳಿಯಿತು ಅಂದನಂತೆ. ಕೋಳೀ ಕಾಲಿಗೆ ಗೆಜ್ಜೆ ಕಟ್ಟಿದರೆ ತಿಪ್ಪೆ ಕೆದರೋದು ಬಿಟ್ಟೀತೆ? ಕತ್ತೆಯ ಕಾಲು ಮುರಿದರೇನು ? ನಾಯಿಯ ಹಲ್ಲು ಮುರಿದರೇನು? ಕಟ್ಟಿದ ಗೂಟ , ಹಾಕಿದ ಹಲ್ಲು. ಉಂಡರೆ ಉಬ್ಬಸ, ಹಸಿದರೆ ಸಂಕಟ . ಜೋಡಿದ್ದರೆ ನಾಡು ತಿರುಗಬಹುದು. ಆಕಾಶ ಹರಿದು ಬೀಳುವಾಗ ಕೈ ಅಡ್ಡ ಹಿಡಿಯಬಹುದೇ ? ಆಗ-ಭೋಗ ಸೂಳೆ ಪಾಲು , ಗೂರಲು ಉಬ್ಬಸ ಹೆಂಡತಿ ಪಾಲು. ಅಳಿಲು ಏರಿದರೆ ಅರಳಿಮರ ಅಲ್ಲಾಡೀತೆ ? ನಾವೂ ನೀವೂ ನೆಂಟರು , ಗಂತಿಗೆ ಮಾತ್ರ ಕೈ ಹಚ್ಚಬೇಡಿ. ನಾಯಿಯನ್ನು ಹೊಡೆಯಲು ಬಣ್ಣದ ಕೋಲೇ ? ಪದದೊಳಿಲ್ಲ ತಾನರ್ಥದೊಳಿಲ್ಲವು ಪದಾರ್ಥ ಸ೦ಘಾತದೊಳಿಲ್ಲ ಎದೆಎದೆಯನು ಪಿಸು ಮಾತೊಳಗರಳಿಸಿ ಮುದ ಹರಡುವ ಕಲೆ ಋಷಿ ಬಲ್ಲ. ಅಜ್ಜಿಗೆ ಅಕ್ಕಿ ಚಿ೦ತೆಯಾದರೆ ಮೊಮ್ಮಗಳಿಗೆ ಮೂಗುತಿ ಚಿ೦ತೆ ಸೂಳೆ ಕೈಯಲ್ಲಿ ಜೋಳ ಕುಟ್ಟಿಸಿದ ಹಾಗೆ ಮೀಸೆ ಬ೦ದವಗೆ ದೇಶ ಕಾಣದು, ಮೊಲೆ ಬ೦ದವಳಿಗೆ ನೆಲ ಕಾಣದು. ಹೆ೦ಗಸಿನ ಬುದ್ಧಿ ಮೊಣಕಾಲ ಕೆಳಗೆ ಅತೀ ಬುದ್ಧಿ, ಅ೦ಡು ಚಪ್ಪಟೆ! ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯ್ತು. ಕೆಲಸವಿಲ್ಲದ ಬಡಗಿ ಮಗುವಿನ ಕು೦ಡೆ ಕೆತ್ತಿದನ೦ತೆ. ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಮನೆ ಮಗ ಉ೦ಡಷ್ಟೂ ಒಳ್ಳೇದು, ಮಗೆ ಮಳೆ ಬ೦ದಷ್ಟೂ ಒಳ್ಳೇದು. ಆಡಿ ಪೋಕರಿ ಅನ್ನಿಸಿಕೊಳ್ಳುವುದಕಿಂತ ಆಡದೆ ಮೂಗ ಅನ್ನಿಸಿಕೊಳ್ಳುವುದು ಮೇಲು. ಮಾತಿಗೆ ಸಾಯದೇ ಇದ್ದೋನೂ ಏಟಿಗೂ ಸಾಯುವುದಿಲ್ಲ. ಹಾವು ಸಾಯಬಾರದು, ಕೋಲು ಮುರೀಬಾರದು. ಇತ್ತಿತ್ತ ಬಾ ಅಂದರೆ ಇದ್ದ ಮನೆ ಕಿತ್ತುಕೊಂಡರು. ಬೆರಳು ತೋರಿಸಿದರೆ ಅಂಗೈ ನುಂಗಿದಂತೆ. ಅಪ್ಪನ ಕಾಲಕ್ಕೆ ಅರಮನೆ, ಮಗನ ಕಾಲಕ್ಕೆ ಬರೀಮನೆ. ವೇದ ಸುಳ್ಳಾದರು ಗಾದೆ ಸುಳ್ಳಾಗದು. ದೇವರು ವರ ಕೊಟ್ಟರು ಪೂಜಾರಿ ಕೊಡಬೇಕಲ್ಲ. ತುಂಬಿದ ಕೊಡ ತುಳುಕುವುದಿಲ್ಲ. ಗಂಡ ಹೆಂಡಿರ ಜಗಳ ಉಂಡು ಮಲಗೋ ತನಕ. ಹನಿ ಹನಿ ಸೇರಿದರೆ ಹಳ್ಳ, ತೆನೆ ತೆನೆ ಸೇರಿದರೆ ಬಳ್ಳ. ಮು೦ಡೆಯ ಮದುವೆಯಲ್ಲಿ ಉ೦ಡೋನೆ ಜಾಣ. ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪೆಟ್ಟು. ಹಟದಿಂದ ಹೆಣ್ಣು ಕೆಟ್ಟಳು ಚಟದಿಂದ ಗಂಡು ಕೆಟ್ಟ ಗಂಡಸರ ಕೈಯಲ್ಲಿ ಕೂಸು ನಿಲ್ಲದು ಹೆಂಗಸರ ಕೈಯಲ್ಲಿ ಮಾತು ನಿಲ್ಲದು ಎಳ್ಳಿನಲ್ಲಿ ಎಣ್ಣೆ ಅಡಕ ಹಾಲಿನಲ್ಲಿ ಬೆಣ್ಣೆ ಅಡಕ ಮೇಲೆ ಬಸಪ್ಪ ಒಳಗೆ ವಿಷಪ್ಪ ಹೊರಗೆ ಬೆಳಕು ಒಳಗೆ ಕೊಳಕು ಹಿಟ್ಟೂ ಹಳಸಿತ್ತು ನಾಯಿಯೂ ಹಸಿದಿತ್ತು ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಏಕಾದಶಿಯ ಮನೆಗೆ ಶಿವರಾತ್ರಿ ಬಂದ ಹಾಗೆ ಒಪ್ಪವಿಲ್ಲದ ಮಾತು ತುಪ್ಪವಿಲ್ಲದ ಊಟ ಇದ್ದಾಗ ಹಿರಿಯಣ್ಣ ಇಲ್ಲದಾಗ ತಿರಿಯಣ್ಣ ಒಕ್ಕುವುದು ರೈತನ ಗುಣ ನೆಕ್ಕುವುದು ನಾಯಿಯ ಗುಣ ಅರಮನೆಯ ಮುಂದಿರಬೇಡ ಕುದುರೆಯ ಹಿಂದಿರಬೇಡ ತಾಯಿಯಂತೆ ಮಗಳು ನೂಲಿನಂತೆ ಸೀರೆ ಕತ್ತೆಯಂಥ ಅತ್ತೆ ಬೇಕು ಮುತ್ತಿನಂಥ ಗಂಡ ಬೇಕು ಅರಿತರೆ ಮಾತನಾಡು ಮರೆತರೆ ಕೂತು ನೋಡು ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು ಹಾಲು ಕ೦ಡಲ್ಲಿ ಬೆಕ್ಕು ಹೇಲು ಕ೦ಡಲ್ಲಿ ನಾಯಿ ಆಪತ್ತಿಗಾದವನೇ ನೆಂಟ ಕೆಲಸಕ್ಕಾದವನೇ ಭಂಟ ಗಂಜಿಯ ಕುಡಿದರೂ ಗಂಡನ ಮನೆ ಲೇಸು ಒಲಿದರೆ ನಾರಿ ಮುನಿದರೆ ಮಾರಿ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಕಚ್ಚೋ ನಾಯಿ ಬೊಗಳುವುದಿಲ್ಲ ತುಂಬಿದ ಕೊಡ ತುಳುಕುವುದಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ ತಾಳಿದವನು ಬಾಳಿಯಾನು ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ? ಆರಕ್ಕೆ ಏರಲಿಲ್ಲ ಮೂರಕ್ಕೆ ಇಳಿಯಲಿಲ್ಲ ಮುದುಕರಿಗೆ ಮುದ್ದೆ ಕೇಡು ಹಳೇ ಬಟ್ಟೆಗೆ ನೂಲು ಕೇಡು ಲಾಲಿಸಿದರೆ ಮಕ್ಕಳು ಪೂಜಿಸಿದರೆ ದೇವರು ಉತ್ತರೆ ಹೊಲ ಚಂದ ಬಿತ್ತರೆ ಬೆಳೆ ಚಂದ ಹಂಗಿನರಮನೆಗಿಂತ ಕುಂದಣದ ಗುಡಿ ಲೇಸು ಹಸಿದು ಹಲಸು, ಉಂಡು ಮಾವು. ಊರಿಗೆ ಬಂದವಳು ನೀರಿಗೆ ಬರದೆ ಇರುತ್ತಾಳೆಯೆ? ಮನೆಗೆ ಮಾರಿ ಊರಿಗೆ ಉಪಕಾರಿ. ಓಡ್ಹೋಗುವನ ಚಡ್ಡಿ ಹರಕಂಡಷ್ಟೆ ಲಾಭ. ಬರಗಾಲದಲ್ಲಿ ಅಧಿಕಮಾಸ ಬಂದ ಹಾಗೆ. ತಾನೂ ತಿನ್ನ, ಪರರಿಗೂ ಕೊಡ. ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು. ಅಂಗೈ ಹುಣ್ಣಿಗೆ ಕನ್ನಡಿ ಬೇಕೆ? ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿದ. ಇದೇನು ತೋಟದಪ್ಪನ ಛತ್ರಾನ? ಇತರ ಗಾದೆಗಳು ಆಸೆ ಹೆಚ್ಚಿತು ಆಯಸ್ಸು ಕಮ್ಮಿ ಆಯಿತು ಆಸೆಗೆ ಕೊನೆಯಿಲ್ಲ ಅಬದ್ಧಕ್ಕೆ ಅಪ್ಪಣೆಯೇ ಅಂದ್ರೆ ಬಾಯಿಗೆ ಬಂದಷ್ಟು ಅಗಸನ ಬಡಿವಾರವೆಲ್ಲ ಹೆರರ ಬಟ್ಟೆ ಮೇಲೆ ಬೀದೀ ಕೂಸು ಬೆಳೀತು ಕೋಣೇ ಕೂಸು ಕೊಳೀತು ಬಿಮ್ಮಗಿದ್ದಾಗ ಹಮ್ಮು, ಬಿಮ್ಮು ತಪ್ಪಿದಾಗ ದಮ್ಮು ಡಂಬು (=ಬೂಟಾಟಿಕೆ) ನನ್ನ ಕೇಳು, ಡಬ್ಬು (=ದುಡ್ಡು) ನನ್ನ ಹೆಂಡ್ರನ್ನ ಕೇಳು ದಾಯವಾಗಿ(=ದಾನವಾಗಿ) ಸಿಕ್ಕಿದರೆ, ನನಗೆ ಒಂದಿರಲಿ ನಮ್ಮಪ್ಪನಿಗೆ ಒಂದಿರಲಿ ಹೇಳಿಕೆ ಮಾತು ಕೇಳಿ ಹೆಂಡ್ರನ್ನ ಬಿಟ್ಟ ಹೇಳೊದು ವೇದ ಹಾಕೊದು ಗಾಳ ಹೋದಾ ಪುಟ್ಟಾ, ಬಂದಾ ಪುಟ್ಟಾ, ಪುಟ್ಟನ ಕಾಲಿಗೆ ನೀರಿಲ್ಲ ಹೋದ್ರೆ ಒಂದು ಕಲ್ಲು, ಬಂದ್ರೆ ಒಂದು ಹಣ್ಣು ಸಂಸ್ಕೃತ ಗಾದೆಗಳು ಆಲಸ್ಯಂ ಅಮೃತಂ ವಿಷಂ ಅತ್ಯಾಶಾ ಬಹುದುಃಖಾಯ ಅತಿ ಸರ್ವತ್ರ ವರ್ಜಯೇತ್ ಕೃಷಿತೋ ನಾಸ್ತಿ ದುರ್ಭಿಕ್ಷಂ ವಿನಾಶ ಕಾಲೇ ವಿಪರೀತ ಬುದ್ಧಿಃ ಯಥಾ ರಾಜಾ ತಥಾ ಪ್ರಜಾ ಜಾಮಾತೋ ದಶಮೋ ಗ್ರಹಃ ಕಾಂಚಾಣೇನ ಕಾರ್ಯ ಸಿದ್ಧಿಃ ಯತ್ರ ಧೂಮೋ ತತ್ರ ವಹ್ನಿಃ ಆಚಾರಂ ಕುಲಂ ಆಖ್ಯಾತಿ ಶರೀರಮಾದ್ಯಂ ಖಲು ಧರ್ಮ ಸಾಧನಂ ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ ನ ಮಾತುಃ ಪರದೈವತಂ ಬುದ್ಧಿಃ ಯಸ್ಯ ಬಲಂ ತಸ್ಯ ವಿದ್ಯಾ ಪರಾ ದೇವತಾ ಪರೋಪಕಾರಃ ಪುಣ್ಯಾಯ ಪರೋಪಕಾರಾರ್ಥಮಿದಮ್ ಶರೀರಂ ಮೌನಂ ಸಮ್ಮತಿ ಲಕ್ಷಣಂ ಮೌನಂ ಸರ್ವತ್ರ ಸಾಧನಂ ಮೌನೇನ ಕಲಹೋ ನಾಸಿ ರಾಘವಾಯ ಸ್ವಸ್ತಿ ರಾವಣಾಯ ಸ್ವಸ್ತಿ ಶ್ರೇಯಾಂಸಿ ಬಹು ವಿಘ್ನಾನಿ ಸಂಘೇ ಶಕ್ತಿ ಕಲೌಯುಗೇ ವಚನೇ ಕಿಂ ದರಿದ್ರತಾ ವಜ್ರಂ ವಜ್ರೇಣ ಭಿದ್ಯತೇ ಕಂಟಕೇನೈವ ಕಂಟಕೋ ಪರಿಹರ್ತವ್ಯಃ ಶಠಂ ಪ್ರತಿ ಶಠಂ ಸಮಾಚರೇತ್ ಶಕ್ತೇಃ ಯುಕ್ತಿಃ ಗರೀಯಸೀ ಸತ್ಯಮೇವ ಜಯತೇ ನಾನೃತಂ ಸಾಹಸೇ ಶ್ರೀಃ ವಸತಿ ಸರ್ವೇ ಗುಣಾಃ ಕಾಂಚನಮಾಶ್ರಯಂತೇ ಅನ್ನದಾತಾ ಸುಖೀ ಭವ ಆವಶ್ಯಂ ಅನುಭೋಕ್ತವ್ಯಂ ಕೃತಂ ಕರ್ಮ ಶುಭಾಶುಭಂ (=>As you sow, So you reap) ಆಲಸ್ಯಾತ್ ಅಮೃತಂ ವಿಷಂ ವಿದ್ಯಾಧನಂ ಸರ್ವಧನಪ್ರಧಾನಂ ಅಶಾಂತಸ್ಯ ಕುತಸ್ಸುಖಂ ಮಾ ಗೃಧಃ ಕಸ್ಯಸ್ವಿದ್ಧನಂ ಅಲ್ಪವಿದ್ಯಾ ಮಹಾಗರ್ವೀ ನ ಚ ಧರ್ಮೋ ದಯಾಪರಃ ಉದ್ಯಮೇನ ಹಿ ಸಿದ್ಧ್ಯಂತಿ ಕಾರ್ಯಾಣಿ ನ ಮನೋರಥೈಃ ಗುಣಾಃ ಸರ್ವತ್ರ ಪೂಜ್ಯಂತೇ ಚಕ್ರವತ್ ಪರಿವರ್ತಂತೇ ದುಃಖಾನಿ ಚ ಸುಖಾನಿ ಚ ಅಜಾಪುತ್ರಂ ಬಲಿಂ ದದ್ಯಾತ್ (ಆಡಿನ ಮರಿಯನ್ನೇ ಬಲಿಕೊಡುತ್ತಾರೆ) ಉದ್ಯೋಗಂ ಪುರುಷ ಲಕ್ಷಣಂ ಹೊರಗಿನ ಕೊಂಡಿಗಳು ವಿಕಿಪೀಡಿಯ ಕನ್ನಡ ಗಾದೆ (ಕನ್ನಡ) Gade Matugalu in Kannada | 100 ಗಾದೆ ಮಾತುಗಳು ವಿಕಿಪೀಡಿಯ ಕನ್ನಡ ಗಾದೆಗಳು (ಆಂಗ್ಲ) / wikipedia kannada proverbs (English) ಕನ್ನಡ ಗಾದೆಗಳು ಸಂಪದ ಗಾದೆಗಳ ಸಂಗ್ರಹ ಕನ್ನಡಹನಿಗಳಲ್ಲಿ ಗಾದೆಗಳ ಸಂಗ್ರಹ ಕನ್ನಡ ಗಾದೆಗಳು ಮತ್ತು ವಿವರಣೆ ಕನ್ನಡ ಗಾದೆಗಳು ಮತ್ತು ವಿವರಣೆ ಸಾಹಿತ್ಯ ಜಾನಪದ
3967
https://kn.wikipedia.org/wiki/%E0%B2%B6%E0%B3%81%E0%B2%AD%E0%B2%AE%E0%B2%82%E0%B2%97%E0%B2%B3
ಶುಭಮಂಗಳ
ಶುಭಮಂಗಳ ಚಿತ್ರವನ್ನು ೧೯೭೫ರಲ್ಲಿ 'ರಘುನಂದನ್ ಇಂಟರ್ ನ್ಯಾಷನಲ್' ಸಂಸ್ಥೆಗೆ ಪುಟ್ಟಣ್ಣ ಕಣಗಾಲ್ ಅವರು ಚಿತ್ರಕಥೆ ಬರೆದು ನಿರ್ದೇಶಿಸಿದರು. ಮೂಲ ಕಾದಂಬರಿಯನ್ನು 'ವಾಣಿ'ಯವರು ರಚಿಸಿದಾರೆ. ಸಂಭಾಷಣೆ ಬೀಚಿ ಮತ್ತು ಯೋಗಾನರಸಿಂಹ ಅವರದು. ಸಂಗೀತ ವಿಜಯಭಾಸ್ಕರ್ ಅವರದು. ಹಿನ್ನೆಲೆ ಗಾಯನ, ಪಿ.ಬಿ. ಶ್ರೀನಿವಾಸ್, ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿಜಯರಾಂ, ಸುದರ್ಶನ್, ಮತ್ತು ರವಿ. ಈ ಚಿತ್ರದ ತಾರಾಗಣದಲ್ಲಿ, ಶ್ರೀನಾಥ್, ಆರತಿ, ಸೀತಾರಾಂ, ಅಂಬರೀಶ್, ಶಿವರಾಂ, ಆಶ್ವಥ್, ಜಯರಾಂ, ಲೋಕನಾಥ್, ಮತ್ತು ಬಿ.ವಿ.ರಾಧ ಅವರಿದ್ದಾರೆ. ಕಾದಂಬರಿ ಆಧಾರಿತ ಕನ್ನಡ ಚಿತ್ರಗಳು ವರ್ಷ-೧೯೭೫ ಕನ್ನಡಚಿತ್ರಗಳು
3973
https://kn.wikipedia.org/wiki/%E0%B2%A4%E0%B2%B2%E0%B2%95%E0%B2%BE%E0%B2%B5%E0%B3%87%E0%B2%B0%E0%B2%BF
ತಲಕಾವೇರಿ
ದಕ್ಷಿಣ ಭಾರತದ ಪ್ರಮುಖ ನದಿ, ಕಾವೇರಿಯ ಉಗಮ ಸ್ಥಾನ, ತಲಕಾವೇರಿ. ಕರ್ನಾಟಕದ ಕೊಡಗು ಜಿಲ್ಲೆಯಲ್ಲಿದೆ. ಜಿಲ್ಲಾಕೇಂದ್ರವಾದ ಮಡಿಕೇರಿಯಿಂದ ಸುಮಾರು ೪೬ ಕಿ.ಮೀಗಳ ದೂರದಲ್ಲಿ, ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿದೆ. ಕೊಡವರ ಕುಲದೇವತೆಯಾದ ಕಾವೇರಿಯು, ಪ್ರತಿವರ್ಷವೂ ತುಲಾ ಸಂಕ್ರಮಣದಂದು (ಅಕ್ಟೋಬರ್ ತಿಂಗಳಿನಲ್ಲಿ) ಇಲ್ಲಿ ನೀರುಬುಗ್ಗೆಗಳಾಗಿ ಕಾಣಿಸಿಕೊಳ್ಳುತ್ತಾಳೆ. ಇದನ್ನು 'ತೀರ್ಥೋದ್ಭವ' ಎನ್ನುವರು. ಹಲವಾರು ಭಕ್ತರು ಈ ಸಂದರ್ಭದಲ್ಲಿ ಇಲ್ಲಿ ನೆರೆದಿರು ತ್ತಾರೆ. ಈ ಸ್ಥಳವನ್ನು ಶರಪಂಜರ, ಹುಲಿಯ ಹಾಲಿನ ಮೇವು ಚಿತ್ರಗಳಲ್ಲಿ ಚಿತ್ರೀಕರಿಸಲಾಗಿದೆ. ಭೌಗೋಳಿಕ ಸ್ಥಾನ ತಲಕಾವೇರಿ - ದಕ್ಷಿಣಭಾರತದಲ್ಲಿ ಹರಿಯುವ ಕಾವೇರಿ ನದಿಯ ಉಗಮ ಸ್ಥಾನ. ಕರ್ನಾಟಕ ರಾಜ್ಯದಲ್ಲಿರುವ ಕೊಡುಗೆ ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಭಾಗಮಂಡಲ ಹೋಬಳಿಯಲ್ಲಿ ಭಾಗಮಂಡಲದ ಪಶ್ಚಿಮಕ್ಕೆ, ಪಶ್ಚಿಮ ಘಟ್ಟಗಳಲ್ಲಿರುವ ಬ್ರಹ್ಮಗಿರಿಯ ಇಳಿಜಾರಿನಲ್ಲಿ (ಉ.ಅ. 120 25' ; ಪೂ. ರೇ. 750 34') ಇದೆ. ಮಡಿಕೇರಿಯಿಂದ 39 ಕಿಮೀ, ದೂರದಲ್ಲಿರುವ ಭಾಗಮಂಡಲಕ್ಕೂ ತಲಕಾವೇರಿಗೂ 8 ಕಿಮೀ. ಉದ್ದದ ವಾಹನಯೋಗ್ಯ ರಸ್ತೆಯಿದೆ. ಕಾವೇರಿ ನದಿ ಉಗಮ ಕಾವೇರಿಯ ಉಗಮಸ್ಥಾನ 2' * 2' ಯ ಒಂದು ಪುಟ್ಟ ಕೊಳ. ಇದನ್ನು ಕುಂಡಿಗೆ ಎನ್ನುತ್ತಾರೆ. ಇದರ ಪಕ್ಕದಲ್ಲಿ ಉತ್ತರಕ್ಕೆ 4' ಎತ್ತರದ ಒಂದು ಮಂಟಪವಿದೆ. ಕುಂಡಿಗೆಯ ಮುಂದೆ ಒಂದು ಸಣ್ಣ ಕೊಳವಿದೆ. ಕುಂಡಿಗೆಯಿಂದ ಹೊರಟ ನೀರು ಸಣ್ಣ ಕೊಳ ಸೇರಿ ಅಂತರ್ಗಾಮಿಯಾಗಿ ಹರಿದು ಇನ್ನೊಂದು ಕೊಳವನ್ನು ತುಂಬುತ್ತದೆ. ಪುನಃ ನೀರು ಅಂತರ್ಗಾಮಿಯಾಗಿ ಹರಿದು ಕಣಿವೆಯಲ್ಲಿ ಕಾಣಿಸಿಕೊಂಡು ಮುಂದೆ ಹರಿಯುತ್ತದೆ. ಕುಂಡಿಗೆಯಲ್ಲಿ ಕಾವೇರಿ ತೀರ್ಥ ಉದ್ಭವವಾಗುವುದೆಂದು ನಂಬಿಕೆಯಿದೆ. ಪ್ರತಿವರ್ಷ ತುಲಾ ಸಂಕ್ರಮಣದಂದು ಬೆಳಗಿನ ನಿಶ್ಚಿತ ಮುಹೂರ್ತದಲ್ಲಿ ಆ ಕುಂಡಿಗೆಯಿಂದ ನೀರು ಉಕ್ಕಿ ಹರಿಯುತ್ತದೆ. ಆ ಸಮಯಕ್ಕೆ ದೇಶದ ಅನೇಕ ಕಡೆಗಳಿಂದ ಹಿಂದೂ ಯಾತ್ರಾರ್ಥಿಗಳು ಇಲ್ಲಿಗೆ ಬರುತ್ತಾರೆ. ಇಲ್ಲಿ ಸ್ನಾನಮಾಡುತ್ತಾರೆ. ತುಲಾ ಸಂಕ್ರಮಣದಿಂದ ವೃಶ್ಚಿಕ ಸಂಕ್ರಮಣದ ವರೆಗೆ ತಲಕಾವೇರಿಯ ಬಳಿ ಜಾತ್ರೆ ನಡೆಯುತ್ತದೆ. ಇಲ್ಲಿ ಯಾತ್ರಿಕರಿಗೆ ಇಳಿದುಕೊಳ್ಳಲು ವಸತಿಗಳುಂಟು. ಇಲ್ಲಿಂದ ಸು. 300 ಅಡಿ ಎತ್ತರದ ಬ್ರಹ್ಮಗಿರಿಯ ನೆತ್ತಿಯ ಮೇಲೆ ಸಪ್ತಋಷಿಗಳು ಹೋಮ ಮಾಡಿದರೆಂದು ಹೇಳಲಾದ ಏಳು ಸಣ್ಣ ಗುಂಡಿಗಳಿವೆ. ಆಕಾಶ ಶುಭ್ರವಾಗಿರುವಾಗ ಬ್ರಹ್ಮಗಿರಿಯ ತುದಿಯಿಂದ ಬೆಟ್ಟದಪುರದ ಬೆಟ್ಟವೂ ನೀಲಗಿರಿಯೂ ಉತ್ತರದ ಕುದುರೆಮುಖ ಶಿಖರಗಳೂ ಪಶ್ಚಿಮದಲ್ಲಿ ಘಟ್ಟದ ಕೆಳಗಿನ ಕರಾವಳಿಯಲ್ಲಿ ಹಾವುಗಳಂತೆ ಹರಿಯುವ ನದಿಗಳೂ ಅವುಗಳಿಂದಾಚೆಗೆ ಅರಬ್ಬಿ ಸಮುದ್ರವೂ ಕಾಣುತ್ತವೆ. ಪ್ರೇಕ್ಷಣೀಯ ಸ್ಥಳಗಳು ಭಾಗಮಂಡಲದಿಂದ ತಲಕಾವೇರಿಗೆ ಹೋಗುವ ೫.೫ ಕಿಮೀ. ದೂರದ ಕಾಲುದಾರಿಯೊಂದುಂಟು. ಇದರ ನಡುವೆ ಭೀಮನಕಲ್ಲು ಎಂಬ ಒಂದು ಭಾರಿಬಂಡೆಯಿದೆ. ಪಾಂಡವರು ವನವಾಸದ ಸಮಯದಲ್ಲಿ ಇಲ್ಲಿಗೆ ಬಂದಿದ್ದರೆಂದೂ ಭೀಮ ಊಟಮಾಡುವಾಗ ಅನ್ನದಲ್ಲಿ ಸಿಕ್ಕಿದ ಕಲ್ಲನ್ನು ತೆಗೆದಿಟ್ಟನೆಂದೂ ಅದೇ ಭೀಮನಕಲ್ಲು ಎಂದೂ ಜನರಲ್ಲಿ ನಂಬಿಕೆಯಿದೆ. ಭೀಮನಕಲ್ಲಿನಿಂದ ಮುಂದುವರಿದರೆ ಸಿಗುವುದು ಸಲಾಮ್ ಕಲ್ಲು. ಟೀಪು ಸುಲ್ತಾನ (ನೋಡಿ) ಕೊಡಗನ್ನು ವಶಪಡಿಸಿಕೊಂಡು ತಲಕಾವೇರಿಯ ದೇವಸ್ಥಾನಗಳನ್ನು ಕೊಳ್ಳೆ ಹೊಡೆಯಲು ಸೈನ್ಯದೊಂದಿಗೆ ಈ ಕಲ್ಲಿನ ವರೆಗೆ ಬಂದನೆಂದೂ ಇಲ್ಲಿ ನಿಂತು ಕಾವೇರಿಗೆ ನಮಸ್ಕರಿಸಿ ಹಿಂದಿರುಗಿದನೆಂದೂ ಪ್ರತೀತಿಯುಂಟು. ತಲಕಾವೇರಿಯಲ್ಲಿ ಅಗಸ್ತ್ಯ ಋಷಿ ಪ್ರತಿóóಷ್ಠಿಸಿದ್ದೆಂದು ಹೇಳಲಾದ ಲಿಂಗ ಇರುವ ಅಗಸ್ತ್ಯೇಶ್ವರ ದೇವಾಲಯವೂ ಗಣಪತಿ ದೇವಾಲಯವೂ ಇವೆ. ಪರ್ವತ ಶ್ರೇಣಿಗಳು, ಎತ್ತರದ ಕಣಿವೆಗಳು, ಬತ್ತದ ಬಯಲು, ಕಾಫಿ-ಏಲಕ್ಕಿ ತೋಟಗಳು, ಹಸುರು ಕಾಡು-ಇವುಗಳ ನಡುವೆ ಇರುವ ತಲಕಾವೇರಿ ಒಂದು ರಮ್ಯವಾದ ತಾಣ. ಬಾಹ್ಯ ಸಂಪರ್ಕಗಳು Talakaveri Talakaveri Tourism Guide ಕರ್ನಾಟಕದ ಪ್ರಮುಖ ಸ್ಥಳಗಳು ಹಿಂದೂ ಧರ್ಮದ ಪುಣ್ಯ ಕ್ಷೇತ್ರಗಳು
3975
https://kn.wikipedia.org/wiki/%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%A8%E0%B2%BE%E0%B2%A5%20%E0%B2%B8%E0%B2%A4%E0%B3%8D%E0%B2%AF%E0%B2%A8%E0%B2%BE%E0%B2%B0%E0%B2%BE%E0%B2%AF%E0%B2%A3
ವಿಶ್ವನಾಥ ಸತ್ಯನಾರಾಯಣ
ವಿಶ್ವನಾಥ ಸತ್ಯನಾರಾಯಣ (೧೦ ಸೆಪ್ಟೆಂಬರ್ ೧೮೯೫ - ೧೮ ಅಕ್ಟೋಬರ್ ೧೯೭೬) (ತೆಲುಗು: ವಿಶ್ವನಾಥ ಸತ್ಯಾನಾರಾಯಣ) ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ವಿಜಯವಾಡಾದಲ್ಲಿ ೧೮೯೫ ರಲ್ಲಿ ಶೋಭಾನಾದ್ರಿ ಮತ್ತು ಪಾರ್ವತಿಗೆ ಜನಿಸಿದರು. ಅವರು ೨೦ ನೇ ಶತಮಾನದ ತೆಲುಗು ಬರಹಗಾರರಾಗಿದ್ದರು. ಇತಿಹಾಸ, ತತ್ತ್ವಶಾಸ್ತ್ರ, ಧರ್ಮ, ಸಮಾಜಶಾಸ್ತ್ರ, ರಾಜಕೀಯ ವಿಜ್ಞಾನ, ಭಾಷಾಶಾಸ್ತ್ರ, ಮನಃಶಾಸ್ತ್ರ ಮತ್ತು ಪ್ರಜ್ಞೆ ಅಧ್ಯಯನಗಳು, ಜ್ಞಾನಮೀಮಾಂಸೆ, ಸೌಂದರ್ಯಶಾಸ್ತ್ರ ಮತ್ತು ಆಧ್ಯಾತ್ಮಿಕತೆಯ ವಿಶ್ಲೇಷಣೆಗಳಂತಹ ವ್ಯಾಪಕ ಶ್ರೇಣಿಯನ್ನು ಒಳಗೊಂಡ ಕವಿತೆ, ಕಾದಂಬರಿಗಳು, ನಾಟಕ, ಸಣ್ಣ ಕಥೆಗಳು ಮತ್ತು ಭಾಷಣಗಳು ಅವರ ಕೃತಿಗಳಲ್ಲಿ ಸೇರಿದ್ದವು. ಚೆಲ್ಲಪಿಲ್ಲಾ ವೆಂಕಟಾ ಶಾಸ್ತ್ರಿ ಅವರ ವಿದ್ಯಾರ್ಥಿಯಾಗಿದ್ದರು. ಚೆಲ್ಲಪಿಲ್ಲಾ ತಿರುಪತಿ ವೆಂಕಟ ಕವಲು ಡ್ಯುಯೊ, ದಿವಾಕರ್ಲಾ ತಿರುಪತಿ ಶಾಸ್ತ್ರಿ ಮತ್ತು ಚೆಲ್ಲಿಪಿಲ್ಲಾ ವೆಂಕಟ ಶಾಸ್ತ್ರಿ ಎಂಬ ಹೆಸರಿನಿಂದಲೂ ಪರಿಚಿತವಾಗಿತ್ತು. ವಿಶ್ವನಾಥಾ ಅವರ ಕವನ ಶೈಲಿಯು ಪ್ರಕೃತಿಯಲ್ಲಿ ಶಾಸ್ತ್ರೀಯ ಮತ್ತು ಅವನ ಜನಪ್ರಿಯ ಕೃತಿಗಳಲ್ಲಿ ರಾಮಾಯಣ ಕಲ್ಪಾ ವ್ರಕ್ಷುಮು (ರಾಮಾಯಣ ಇಚ್ಛೆ ನೀಡುವ ದೈವಿಕ ಮರ), ಕಿನೇಸನಿ ಪಾಟಲು (ಮೆರ್ಮೇಯ್ಡ್ ಹಾಡುಗಳು) ಮತ್ತು ವೇಯ್ಪದಗಲುಗಳು (ಥೌಸಂಡ್ ಹುಡ್ಸ್) ಸೇರಿವೆ. ಅವರು ಕರಿಮ್ನಗರ್ ಸರ್ಕಾರಿ ಕಾಲೇಜಿನ (೧೯೫೯-೬೧) ಮೊದಲ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು. ಅವರಿಗೆ ಜ್ಞಾನಪೀಠ ಪ್ರಶಸ್ತಿ ಮತ್ತು ೧೯೭೧ ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಯಿತು. ತೆಲುಗು ಸಾಹಿತ್ಯದ ಸುಲಭವಾದ ಗದ್ಯದಲ್ಲಿ ಸಮಾನಾಂತರ "ಮುಕ್ತ-ಪದ್ಯ" ಚಳುವಳಿ ಯತಿ, ಪ್ರಾಸ (ಪ್ರಾಸ) ಮತ್ತು ಚಂದಸ್ (ಮೀಟರ್) ನಂತಹ ಕವಿತೆಯ ಕಟ್ಟುನಿಟ್ಟಿನ ನಿಯಮಗಳಿಗೆ ತೂಗಾಡುವ ಒಬ್ಬ ಧಾರ್ಮಿಕ ವ್ಯಕ್ತಿ ಎಂದು ಟೀಕಿಸಿತು. ಆದರೆ ಇದು ಅವರು ಸೃಷ್ಟಿಸಿದ ವಿವಿಧ ಸಾಹಿತ್ಯದ ಒಂದು ಭಾಗವನ್ನು ಮಾತ್ರ ಒಳಗೊಂಡಿದೆ. ಅದೇ ಸಮಯದಲ್ಲಿ, ತೆಲುಗು ಸಾಹಿತ್ಯದಲ್ಲಿ ಯಾವುದೇ ಸಮಕಾಲೀನರು ಇರಲಿಲ್ಲ, ಅವರು ಆವರಿಸಿಕೊಂಡ ವಿಷಯಗಳ ಆಳ ಮತ್ತು ಸಾಹಿತ್ಯದ ಪಾಂಡಿತ್ಯವನ್ನು ಹೊಂದಿದ್ದರು. ಸಂಕಲಿಸಿದ ಅವರ ನೆನಪುಗಳ ಪುಸ್ತಕವನ್ನು ಬಿಡುಗಡೆ ಮಾಡಲಾಗಿದೆ. ಆರಂಭಿಕ ಜೀವನ ವಿಶ್ವನಾಥ ಸತ್ಯಾನಾರಾಯಣರು ಶೋಭಾನಾದ್ರಿ ಅವರ ಮಗನಾಗಿದ್ದಾರೆ, ಬ್ರಾಹ್ಮಣ ಭೂಮಾಲೀಕನಾಗಿದ್ದಾರೆ, ೧೦ ಸೆಪ್ಟೆಂಬರ್ ೧೮೯೫ ರಲ್ಲಿ ಅವರು ತಮ್ಮ ಪೂರ್ವಿಕರ ಸ್ಥಳವಾದ ನಂದಮುರು, ಕೃಷ್ಣ ಜಿಲ್ಲೆ, ಮದ್ರಾಸ್ ಪ್ರೆಸಿಡೆನ್ಸಿ (ಪ್ರಸ್ತುತ ಆಂಧ್ರಪ್ರದೇಶದ ಉಂಗುತುರ್ ಮಂಡಲ್ನಲ್ಲಿ) ಜನಿಸಿದರು. ಅವರು ವೀಧಿ ಬಡಿ (ಅಕ್ಷರಶಃ ರಸ್ತೆ: ಸ್ಟ್ರೀಟ್ ಶಾಲೆ) ಗೆ ಹೋದರು, ಇದು ಭಾರತದಲ್ಲಿ ೧೯ ನೇ ಮತ್ತು ೨೦ ನೇ ಶತಮಾನದ ಆರಂಭದಲ್ಲಿ ಅನೌಪಚಾರಿಕ ಶಾಲೆಗಳನ್ನು ಗುರುತಿಸಿತು. ಅವರ ಬಾಲ್ಯದ ಸಮಯದಲ್ಲಿ ಹಳ್ಳಿಯ ಸಂಸ್ಕೃತಿ ಸತ್ಯಾನಾರಾಯಣ ರಲ್ಲಿ ದೀರ್ಘಕಾಲೀನ ಪ್ರಭಾವ ಬೀರಿದೆ ಮತ್ತು ಅದರಿಂದ ಬಹಳಷ್ಟು ಕಲಿತಿದ್ದಾರೆ. ಅವರ ಬಾಲ್ಯದ ಸಮಯದಲ್ಲಿ, ಹಲವು ಬೀದಿ ಜಾನಪದ ಕಲೆಯ ಸಾಂಪ್ರದಾಯಿಕ ಪ್ರದರ್ಶನಕಾರರು ಅನೇಕ ರೀತಿಯಲ್ಲಿ ಸತ್ಯಾನ್ಯಾರಾಯಣರು ವಿದ್ಯಾಭ್ಯಾಸ ಮಾಡಿದರು. ಈ ಕಲಾ ಪ್ರಕಾರಗಳಲ್ಲಿ ಕಥೆ-ಹೇಳುವ, ವಿಸ್ತಾರವಾದ ಕವಿತೆ, ಸಂಗೀತ, ಪ್ರದರ್ಶನ, ನೃತ್ಯ, ಇತ್ಯಾದಿಗಳನ್ನು ವಿವಿಧ ರೂಪಗಳಲ್ಲಿ ಒಳಗೊಂಡಿರುತ್ತದೆ. ಅವರು ತಮ್ಮ ಆಲೋಚನೆ ಮತ್ತು ಕಥೆ-ಹೇಳುವಿಕೆಯ ಮೇಲೆ ಆಳವಾದ ಪ್ರಭಾವ ಬೀರಿದರು. ಜಾತಿ ಮತ್ತು ಸಾಮಾಜಿಕ ಅಡೆತಡೆಗಳನ್ನು ಮೀರಿ ಹಳ್ಳಿಗರ ಜೊತೆ ಬಂದವ್ಯ, ಹಳ್ಳಿಯ ಸೌಂದರ್ಯವೂ ಅವರ ಚಿಂತನೆ ಮತ್ತು ಸಿದ್ಧಾಂತವನ್ನು ರೂಪಿಸಿತು. ಅವರ ಮೇಲಿನ ಪ್ರಾಥಮಿಕ ಶಿಕ್ಷಣ ೧೧ ನೇ ವಯಸ್ಸಿನಲ್ಲಿ ಸಮೀಪದ ಪಟ್ಟಣ ಬಂದಾರ್ ನಲ್ಲಿ ನೋಬೆಲ್ ಕಾಲೇಜಿನಲ್ಲಿ ಪಡೆದರು. ಅವರ ತಂದೆ ಶೋಭಾನಾದ್ರಿ ಅವರು ತಮ್ಮ ಸಂಪತ್ತನ್ನು ದಾನ ಮಾಡಿ ಕಳೆದುಕೊಂಡಿರುವ ಕಾರಣದಿಂದ, ನಂದತ ಅವರಿಗೆ ತಿಳಿಯಿತು ಇಂಗ್ಲಿಷ್ ಕೇಂದ್ರಿತ ಶಿಕ್ಷಣವು ತನ್ನ ಮಗನಿಗೆ ಉತ್ತಮ ಜೀವನ ಎಂದು. ಚಿಂತನೆಯ ಶಾಲೆ ವಿಶ್ವನಾಥಾ ಹಲವಾರು ವಿಷಯಗಳಲ್ಲಿ ಸಾಂಪ್ರದಾಯಿಕವಾಗಿ ತರಬೇತಿ ಪಡೆದ ವಿದ್ವಾಂಸರಾಗಿದ್ದರು. ಅವರ ಕಲಿಕೆ ಮತ್ತು ಪಾಂಡಿತ್ಯವು ಹಲವಾರು ಇತರ ಶಾಲೆಗಳಿಗೆ ವಿಸ್ತಾರವಾದರೂ, ಅವರು ಅದ್ವೈತನ ಬಲವಾದ ಸಹಚರರಾಗಿದ್ದರು. ಇತಿಹಾಸ ಇತಿಹಾಸವು ರಾಜರ ಕಥೆಯಲ್ಲ ಆದರೆ ಒಂದು ನಿರ್ದಿಷ್ಟ ಸಮಯದಲ್ಲಿ ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ, ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೌಂದರ್ಯದ ಜೀವನವನ್ನು ಮತ್ತು ಅವರ ವಿಕಸನದ ಬಗ್ಗೆ ತಿಳುವಳಿಕೆ ನೀಡುತ್ತದೆ ಎಂದು ವಿಶ್ವನಾಥ ಅಭಿಪ್ರಾಯಪಟ್ಟಿದ್ದರು. ಕೋಟಾ ವೆಂಕಟಚಲಂ ಅವರ ಕಾಲಾನುಕ್ರಮದ ಆಧಾರದ ಮೇಲೆ ವಿಶ್ವನಾಥ ಮೂರು ಪ್ರಾಚೀನ ಕಾದಂಬರಿಗಳ ಪ್ರಸಿದ್ಧ ಪಾತ್ರಗಳ ಸುತ್ತಲೂ ನೇಯ್ದ ಕಥೆಗಳ ಜೊತೆಗೆ, ಪ್ರಾಚೀನ ಮತ್ತು ಮಧ್ಯಕಾಲೀನ ಸಮಾಜದ ಎಲ್ಲಾ ಅಂಶಗಳನ್ನು ವಿವರಿಸುವ ಮೂರು ಸರಣಿಯ ಕಾದಂಬರಿಗಳನ್ನು ಬರೆದಿದ್ದಾರೆ: . ಪುರಾಣ ವೈರಾ ಗ್ರಂಥಾಲಯವು ಮಹಾಭಾರತದ ಯುದ್ಧದ ನಂತರ ಮಗಧ ರಾಯಲ್ ರಾಜವಂಶದ ಬಗೆಗಿನ ೧೨ ಕಾದಂಬರಿಗಳ ಸರಣಿಯಾಗಿದೆ. ಈ ಸರಣಿಯಲ್ಲಿ, ಎರಡು ಪ್ರವೃತ್ತಿಗಳು ಇವೆ - ಕೃಷ್ಣ ಪ್ರತಿನಿಧಿಸುವ ಧರ್ಮ, ಮತ್ತು ಜಯದಾರ್ಥವು ಮಾನವ ಮನಸ್ಸಿನ ಗಾಢವಾದ ಭಾಗವನ್ನು ಪ್ರತಿನಿಧಿಸುತ್ತದೆ, ಅನ್ಯಾಯದ ಭಾಗ. ಪ್ರತಿಯೊಂದು ೧೨ ಕಾದಂಬರಿಗಳಲ್ಲಿನ ಪ್ರಾಥಮಿಕ ಪಾತ್ರಗಳು ಈ ಎರಡು ಪ್ರವೃತ್ತಿಯ ಪ್ರಭಾವದ ಅಡಿಯಲ್ಲಿ ವರ್ತಿಸುತ್ತವೆ, ಪ್ರತಿಯೊಂದೂ ಅದರ ತಾತ್ಕಾಲಿಕ ವಿಜಯವನ್ನು ಹೊಂದಿದೆ. . ನೇಪಾಳಿ ರಾಜವಂಶ ಕಾರಿತ್ರವು ನೇಪಾಳಿ ರಾಯಲ್ ರಾಜವಂಶಗಳ ಬಗ್ಗೆ ೬ ಕಾದಂಬರಿಗಳ ಸರಣಿಯಾಗಿದೆ. ಈ ಸರಣಿ ಕಾರ್ವಾಕ ಚಿಂತನೆಯ ಶಾಲಾ, ಅದರ ಸಂಕೀರ್ಣತೆಗಳು ಮತ್ತು ಉಪ-ಶಾಲೆಗಳು, ಸಾಮಾಜಿಕ ಜೀವನ ಮತ್ತು ಕಾರ್ವಾಕಗಳಿಂದ ಪ್ರಭಾವಿತವಾಗಿರುವ ಮೌಲ್ಯಗಳನ್ನು ವಿವರಿಸುತ್ತದೆ. . ಕಾಶ್ಮೀರಾ ರಾಜವಂಶ ಕಾರಿತ್ರವು ಕಾಶ್ಮೀರವನ್ನು ಆಳಿದ ರಾಯಲ್ ರಾಜವಂಶಗಳ ಸುತ್ತಲೂ ನೇಯಲ್ಪಟ್ಟ ೬ ಕಾದಂಬರಿಗಳ ಸರಣಿ. ಸಾಹಿತ್ಯಿಕ ವೃತ್ತಿಜೀವನ ವಿಶ್ವನಾಥ ಅವರ ಸಾಹಿತ್ಯ ಕೃತಿಗಳಲ್ಲಿ ೩೦ ಕವಿತೆಗಳು, ೨೦ ನಾಟಕಗಳು, ೬೦ ಕಾದಂಬರಿ, ೧೦ ವಿಮರ್ಶಾತ್ಮಕ ಅಂದಾಜುಗಳು, ೩೨ ಕಿರುಕಥೆಗಳು, ೭೦ ಪ್ರಬಂಧಗಳು, ೫೦ ರೇಡಿಯೋ ನಾಟಕಗಳು, ೧೦ ಇಂಗ್ಲಿಷ್ನಲ್ಲಿ ಪ್ರಬಂಧಗಳು, ೧೦ ಕೃತಿಗಳು ಸಂಸ್ಕೃತ, ಮೂರು ಭಾಷಾಂತರಗಳು, ೧೦೦ ಪರಿಚಯಗಳು ಮತ್ತು ಮುನ್ಸೂಚನೆಗಳು ಮತ್ತು ರೇಡಿಯೋ ಮಾತುಕತೆಗಳು. ಅವರ ಕೆಲವು ಕವಿತೆಗಳು ಮತ್ತು ಕಾದಂಬರಿಗಳನ್ನು ಇಂಗ್ಲಿಷ್, ಹಿಂದಿ, ತಮಿಳು, ಮಲಯಾಳಂ, ಉರ್ದು ಮತ್ತು ಸಂಸ್ಕೃತಕ್ಕೆ ಅನುವಾದಿಸಲಾಗಿದೆ. ಪ್ರಶಸ್ತಿಗಳು ಕವಿಸಮ್ರಾಟ್ ಪ್ರಶಸ್ತಿ ೧೯೬೪ - ಆಂಧ್ರ ವಿಶ್ವವಿದ್ಯಾಲಯದಿಂದ ಕಳಾ ಪ್ರಪೂರಣ ಪ್ರಶಸ್ತಿ ೧೯೪೨ - ಗಜಾರೋಹಣ ವೇಂಕಟೇಶ್ವರ ವಿಶ್ವವಿದ್ಯಾಲಯದಿಂದ ಡಿ.ಲಿಟ್. ೧೯೬೨ - ವಿಶ್ವನಾಥ ಮಧ್ಯಾಕ್ಕರಲುಗೆ ಕೇಂದ್ರ ಸಾಹಿತ್ಯ ಅಕಾಡೆಮೀ ಪ್ರಶಸ್ತಿ ೧೯೭೦ - ಭಾರತ ಸರ್ಕಾರದಿಂದ ಪದ್ಮ ಭೂಷಣ ಪ್ರಶಸ್ತಿ. ೧೯೭೦ - ಆಂಧ್ರಪ್ರದೇಶ್ ಸರ್ಕಾರದಿಂದ ಆಸ್ಥಾನ ಕವಿ. ೧೯೭೧ - ರಾಮಾಯಣ ಕಲ್ಪವೃಕ್ಶಮುಗೆ ಜ್ಞಾನಪೀಠ ಪ್ರಶಸ್ತಿ ಉಲ್ಲೇಖಗಳು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಸಾಹಿತ್ಯ ತೆಲುಗು ಪ್ರಮುಖರು ಜನನ ೧೮೯೫
3976
https://kn.wikipedia.org/wiki/%E0%B2%AD%E0%B3%82%E0%B2%97%E0%B3%8B%E0%B2%B3%20%E0%B2%B6%E0%B2%BE%E0%B2%B8%E0%B3%8D%E0%B2%A4%E0%B3%8D%E0%B2%B0
ಭೂಗೋಳ ಶಾಸ್ತ್ರ
ಭೂಗೋಳ ಶಾಸ್ತ್ರವು ಭೂಮಿಯ ಅಧ್ಯಯನವಾಗಿದೆ. ಇಲ್ಲಿ ಅನೇಕ ಭೂಗೋಳ ಶಾಸ್ತ್ರಕ್ಕೆ ಸಂಬಂಧಿಸಿದ ವಿಷಯಗಳ ಪಟ್ಟಿ ಕೊಡಲಾಗಿದೆ. ನಕ್ಷೆ ಅಕ್ಷಾಂಶ ರೇಖಾಂಶ ಭೂ ಖಂಡಗಳು ಧ್ರುವ ಫೋಟೊ ಗ್ಯಾಲರಿ ಉಲ್ಲೇಖ ವಿಜ್ಞಾನ ಭೂಗೋಳ ಭೂಗೋಳ ಶಾಸ್ತ್ರ
3977
https://kn.wikipedia.org/wiki/%E0%B2%85%E0%B2%95%E0%B3%8D%E0%B2%B7%E0%B2%BE%E0%B2%82%E0%B2%B6
ಅಕ್ಷಾಂಶ
ಖಂಡ ಇಲ್ಲವೆ ದಕ್ಷಿಣ ಭೂಖಂಡದಲ್ಲಿ ಇರುವುದನ್ನು ತಿಳಿಸುತ್ತದೆ. ಆ ಪ್ರದೇಶದ ಹವಾಮಾನವು ಅಕ್ಷಾಂಶದ ಮೇಲೆ ಅವಲಂಬಿತವಾಗಿರುತ್ತದೆ. ಅಳತೆ ಅಕ್ಷಾಂಶವನ್ನು ರೇಖಾ ಗಣಿತದಲ್ಲಿ ಕೋನವನ್ನು ಅಳೆಯುವ ಹಾಗೆಯೆ ಡಿಗ್ರಿ(º)ಯಿಂದ ಅಳೆಯಲಾಗುತ್ತದೆ. ಅಕ್ಷಾಂಶವು ಭೂಮಧ್ಯ ರೇಖೆಯಲ್ಲಿ ೦° ಇರುತ್ತದೆ. ಧ್ರುವಗಳೆಡೆ ಸಾಗಿದಂತೆಲ್ಲ ಅದು ಏರುತ್ತ ಹೋಗಿ, ಧ್ರುವಗಳಲ್ಲಿ ೯೦º ತಲುಪುತ್ತದೆ. ಉತ್ತರ ಧ್ರುವದಲ್ಲಿ ೯೦ºಉ ಇದ್ದರೆ ದಕ್ಷಿಣ ಧ್ರುವದಲ್ಲಿ ೯೦ºದ ಇರುತ್ತದೆ. ಮುಖ್ಯ ಅಕ್ಷಾಂಶಗಳು ಆರ್ಕ್ಟಿಕ್ ವೃತ್ತ (೬೬°33′ ಉತ್ತರ) ಕರ್ಕಾಟಕ ವೃತ್ತ (೨೩°೨೭′ ಉತ್ತರ) ಮಕರ ವೃತ್ತ(೨೩°೨೭′ ದಕ್ಷಿಣ) ಅಂಟಾರ್ಕ್ಟಿಕ್ ವೃತ್ತ (೬೬°೩೩′ ದಕ್ಷಿಣ) ಚುಟುಕು ಭೂಗೋಳ ಶಾಸ್ತ್ರ
4006
https://kn.wikipedia.org/wiki/%E0%B2%B8%E0%B3%8D%E0%B2%95%E0%B3%8B%E0%B2%B5%E0%B2%BF%E0%B2%B2%E0%B3%8D
ಸ್ಕೋವಿಲ್
ಸ್ಕೋವಿಲ್ ಮೆಣಸಿನಕಾಯಿಯ ಖಾರದ ಅಳತೆ. ಕ್ಯಾಪ್ಸಿಕಮ್ ಜೀನಸ್ ನ ಹಣ್ಣುಗಳು ಕ್ಯಾಪ್ಸಾಸಿನ್ ಎಂಬುವ ರಾಸಾಯನಿಕ ಪದಾರ್ಥವನ್ನು ಹೊಂದಿರುವಂತವು. ಕ್ಯಾಪ್ಸಾಸಿನ್ ಕಾವೆಳೆದುಕೊಳ್ಳುವ ನಾಲಿಗೆ ತುದಿಯನ್ನು ಪ್ರಚೋದಿಸುತ್ತದೆ. ಒಟ್ಟು ಸ್ಕೋವಿಲ್ಲೆ ಕಾವು ಅಂಶಗಳು (SHU) ಅವುಗಳಲ್ಲಿರುವ ಕ್ಯಾಪ್ಸಾಸಿನ್ ಮಾತ್ರವನ್ನು ಸೂಚಿಸುತ್ತದೆ. ಹಲವು ಖಾರವಾದ ಸಾಸ್ ಗಳು ಸ್ಕೋವಿಲ್ಲೆ ರೇಟಿಂಗ್ ಗಳನ್ನು ತಮ್ಮ ಜಾಹಿರಾತಿನಲ್ಲೂ ಪ್ರಕಟಿಸಿಕೊಳ್ಳುತ್ತವೆ - ಹೆಚ್ಚು ಬಿಕರಿಯಾಗಲೆಂದು. ಈ‌ ಅಳತೆ ವಿಲ್ಬರ್ ಸ್ಕೋವಿಲ್ಲೆ ಎಂಬುವ ವಿಜ್ಞಾನಿಯ ಮೇಲೆ ಹೆಸರಿಸಲಾಗಿದೆ. ಈ ಅಳತೆಯನ್ನು ಇವನೇ ಸ್ಕೋವಿಲ್ಲೆ ಆರ್ಗನೋಲೆಪ್ಟಿಕ್ ಟೆಸ್ಟ್ ಎಂಬ ೧೯೧೨ ರ ಪ್ರಯೋಗವನ್ನು ಬಳಕೆಗೆ ತಂದ. ಸ್ಕೋವಿಲ್ಲೆ ರೇಟಿಂಗ್ ಗಳ ಪಟ್ಟಿ Scoville ratings may vary considerably within a species—easily by a factor of 10 or more—depending on seed lineage, climate and even soil. This is especially true of habaneros. ಮತ್ತಷ್ಟು ಓದಿ The Journal of the American Pharmacists Association 1912; 1:453-4 ಹೊರಗಿನ ಸಂಪರ್ಕಗಳು Hottest Hot Sauces & Scoville Ratings Pepper Facts Record for Red Savinas ಅಳತೆಗಳು
4008
https://kn.wikipedia.org/wiki/%E0%B2%B6%E0%B2%82%E0%B2%95%E0%B2%B0%E0%B3%8D%20%E0%B2%A8%E0%B2%BE%E0%B2%97%E0%B3%8D
ಶಂಕರ್ ನಾಗ್
ಶಂಕರ್‌ನಾಗ್( (ನಾಗರಕಟ್ಟೆ ಶಂಕರ್) (9 ನವೆಂಬರ್ 1954 - 30 ಸೆಪ್ಟೆಂಬರ್ 1990) ಕನ್ನಡ ಚಿತ್ರರಂಗದ ರಂಗಭೂಮಿ ಮತ್ತು ದೂರದರ್ಶನದಲ್ಲಿ ಕೆಲಸ ಮಾಡಿದ ಭಾರತೀಯ ನಟ, ಚಿತ್ರಕಥೆಗಾರ, ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದರು. ಖ್ಯಾತ ಕಾದಂಬರಿಕಾರ ಆರ್. ಕೆ. ನಾರಾಯಣ್ ಅವರ ಕಿರು ಕಥೆಗಳ ಆಧಾರದ ದೂರದರ್ಶನದ ಮಾಲ್ಗುಡಿ ಡೇಸ್ ನಿರ್ದೇಶನ ಮತ್ತು ನಟಿಸಿದ್ದಾರೆ.ಶಂಕರ್‌ನಾಗ್ ಉದ್ಘಾಟನಾ IFFI ಅತ್ಯುತ್ತಮ ನಟ ಪ್ರಶಸ್ತಿಯನ್ನು (ಪುರುಷ) ವಿಭಾಗದಲ್ಲಿ ಪಡೆದರು: ಸಿಲ್ವರ್ ಪೀಕಾಕ್ ಪ್ರಶಸ್ತಿಯನ್ನು ಅವರು 7ನೇ ರಾಷ್ಟ್ರೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಒಂದಾನೊಂದು ಕಾಲದಲ್ಲಿ ಚಿತ್ರಕ್ಕಾಗಿ ಪಡೆದರು. ಅವರು ಭಾರತೀಯ ರಾಷ್ಟ್ರೀಯ ಪ್ರಶಸ್ತಿ ವಿಜೇತ ಮರಾಠಿ ಚಿತ್ರ 22 ಜೂನ್ 1897 ರ ಸಹ-ಬರಹಗಾರರು . ಅವರು ನಟ ಅನಂತ ನಾಗ್ ಅವರ ಕಿರಿಯ ಸಹೋದರರಾಗಿದ್ದಾರೆ ಜನನ, ವೃತ್ತಿ ಜೀವನ ನವೆಂಬರ್ ೯,೧೯೫೪ ರಂದು ಕರ್ನಾಟಕದ ಹೊನ್ನಾವರ ತಾಲೂಕಿನ ಮಲ್ಲಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಶಂಕರ್‌ನಾಗ್ ಅವರು ಹುಟ್ಟಿದರು.ನಕ್ಷತ್ರ ನಾಮ'ಅವಿನಾಶ'.ಹೀಗೆಂದರೆ ವಿನಾಶವಿಲ್ಲದವನು ಎಂದರ್ಥ.ತಂದೆ ಹೊನ್ನಾವರದ ನಾಗರ ಕಟ್ಟೆಯ ಸದಾನಂದ, ಬಾಲ್ಯದಲ್ಲಿ ಪ್ರೀತಿಯಿಂದ ಮಗನನ್ನು ಕರೆಯುತಿದ್ದ ಹೆಸರು ಭವಾನಿ ಶಂಕರ್. ಶಂಕರ್‌ನಾಗ್ ತನ್ನ ವಿದ್ಯಾಭ್ಯಾಸದ ನಂತರ ಮುಂಬೈಗೆ ತೆರಳಿದರು. ಮುಂಬೈನ ಮರಾಠಿ ಚಿತ್ರಮಂದಿರದ ಕಡೆಗೆ ಆಕರ್ಷಿತರಾದ ಶಂಕರ್‌ನಾಗ್ ತಮಗರಿವಿಲ್ಲದಂತೆ ಮರಾಠಿ ರಂಗಭೂಮಿ ಹವ್ಯಾಸವನ್ನು ಬೆಳೆಸಿಕೊಳ್ಳುತ್ತಾ ಮರಾಠಿ ರಂಗಭೂಮಿಯಲ್ಲಿ ತೀವ್ರವಾಗಿ ತೊಡಗಿಕೊಂಡಿದ್ದರು. ತಮ್ಮ ಗೆಳೆಯರೊಂದಿಗೆ ಅವರು ಚಿತ್ರಕತೆ ರಚಿಸಿದ ಮರಾಠಿ ಚಿತ್ರ ’೨೨ ಜೂನ್ ೧೮೯೭’ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿತ್ತು. ಅಣ್ಣನಂತೆ ತಮ್ಮನು ಬ್ಯಾಂಕ್ ನೌಕರನಾದರೂ ಬ್ಯಾಂಕ್ ವೃತ್ತಿಯ ಜೊತೆಯಲ್ಲಿ ಸಂಗೀತ ಅಭಿರುಚಿ ಇದ್ದ ಕಾರಣ ತಬಲ , ಕೊಳಲು , ಹಾರ್ಮೋನಿಯಂ ಹೀಗೆ ಹಲವಾರು ವಾದ್ಯಗಳನ್ನು ನುಡಿಸಲು ಕಲಿತರು. ಮರಾಠಿ ನಾಟಕಗಳ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭ ಮಾಡಿದರು. ಗಿರೀಶ್ ಕಾರ್ನಾಡರ 'ಒಂದಾನೊಂದು ಕಾಲದಲ್ಲಿ' ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಒಂದಾನೊಂದು ಕಾಲದಲ್ಲಿ ಚಿತ್ರದ ಅಭಿನಯಕ್ಕೆ ಸ್ಪರ್ಧಾರ್ಥಕ ಅಂತರರಾಷ್ಟೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ದೊರೆಯಿತು. ನಂತರದ ೧೨ ವರ್ಷಗಳಲ್ಲಿ ಕನ್ನಡದ ಸುಮಾರು ೯೨ ಚಿತ್ರಗಳಲ್ಲಿ ನಟಿಸಿದರು.ಶಂಕರ್‌ನಾಗ್ ಪ್ರಥಮ ಬಾರಿಗೆ ತ್ರಿಪಾತ್ರದಲ್ಲಿ ಅಭಿನಯಿಸಿದ ಚಿತ್ರ "ಗೆದ್ದ ಮಗ". ತಮ್ಮ ಸಹೋದರ ಅನಂತ ನಾಗ್ ಅವರೊಡನೆ "ಮಿಂಚಿನ ಓಟ", "ಜನ್ಮ ಜನ್ಮದ ಅನುಬಂಧ" ಮತ್ತು "ಗೀತಾ" ಚಿತ್ರಗಳನ್ನು ನಿರ್ಮಿಸಿದರು. ಇದರಲ್ಲಿ "ಜನ್ಮ ಜನ್ಮದ ಅನುಬಂಧ" ಮತ್ತು "ಗೀತಾ" ಚಿತ್ರಗಳು ಇಳಯರಾಜ ಅವರ ಮಧುರ ಸಂಗೀತವನ್ನು ಹೊಂದಿ ಜನಮನ್ನಣೆ ಗಳಿಸಿವೆ. ನಾಟಕಗಳನ್ನು ಮತ್ತು ರಂಗಭೂಮಿಯನ್ನು ಗೌರವಿಸಿ ಶ್ರೀಮಂತಗೊಳಿಸಿದ ಶಂಕರ್ ಅವರು ಗಿರೀಶ ಕಾರ್ನಾಡ ರ "ಅಂಜು ಮಲ್ಲಿಗೆ", "ನೋಡಿ ಸ್ವಾಮಿ ನಾವಿರೋದು ಹೀಗೆ" ಮತ್ತು ಮುಂತಾದ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಭಾರತೀಯ ದೂರದರ್ಶನದಲ್ಲೇ ದಾಖಲೆ ನಿರ್ಮಿಸಿದ ಅತ್ಯಂತ ಜನಪ್ರಿಯವಾದ ಆರ್.ಕೆ. ನಾರಾಯಣ್ ಅವರ "ಮಾಲ್ಗುಡಿ ಡೇಸ್ ಅಥವಾ ಮಾಲ್ಗುಡಿಯ ದಿನಗಳು" ಮತ್ತು ಸ್ವಾಮಿ ಧಾರವಾಹಿಯನ್ನು ನಿರ್ದೇಶಿಸಿದ್ದಾರೆ. ಇಂದು ಸಹ ಇದುವರೆಗೆ ಎಲ್ಲ ತರಹದ ದೂರದರ್ಶನ ಕಾರ್ಯಕ್ರಮಗಳಲ್ಲಿ ಅತಿ ಹೆಚ್ಚು ಜನ ಪ್ರಿಯತೆ ಗಳಿಸಿ ಪಂಡಿತರು, ಬುದ್ಧಿ ಜೀವಿಗಳಿಂದಲೂ ಮೆಚ್ಚುಗೆ ಗಳಿಸಿದ ಮಹೋನ್ನತ ಧಾರವಾಹಿ ‘ಮಾಲ್ಗುಡಿ ಡೇಸ್’. ದಾಂಪತ್ಯ ನಾಟಕ ಬದುಕು ಶಂಕರ್‌ನಾಗ್ ಅವರ ಪತ್ನಿ ಅರುಂಧತಿ ನಾಗ್.ಕಲಾವಿದೆಯಾಗಿದ್ದ ಅರುಂಧತಿ ಅವರನ್ನು ಇಷ್ಟ ಪಟ್ಟ ನಂತರ ಮದುವೆಯಾದರು. ಮಗಳು ಕಾವ್ಯ. ಈ ದಂಪತಿಗಳು ‘ಸಂಕೇತ್’ ಎಂಬ ಹವ್ಯಾಸಿ ರಂಗ ತಂಡವನ್ನು ಕಟ್ಟಿ ‘ಅಂಜುಮಲ್ಲಿಗೆ’, ‘ಬ್ಯಾರಿಸ್ಟರ್’, ‘ಸಂಧ್ಯಾ ಛಾಯ’, ‘ನೋಡಿ ಸ್ವಾಮಿ ನಾವಿರೋದು ಹೀಗೆ’, ‘ಆಟ ಬೊಂಬಾಟ’, ‘ನಾಗಮಂಡಲ’ ಮುಂತಾದ ಸುಂದರ ನಾಟಕಗಳ ನಿರ್ಮಾಣ, ನಿರ್ವಹಣೆಗಳಲ್ಲಿ ಸಕ್ರಿಯ ಪಾತ್ರವಹಿಸಿದರು. ನಾಟಕರಂಗದಲ್ಲಿಯೇ ಪ್ರಾರಂಭದಿಂದ ಒಡನಾಟ ಬೆಳೆಸಿಕೊಂಡಿದ್ದ ಶಂಕರ್‌ನಾಗ್ ದಂಪತಿಗಳು ರಂಗಭೂಮಿಯ ಕಲಾವಿದರಿಗೆ ನೆರವಾಗುವಂತೆ, ನಾಟಕಗಳ ಪ್ರದರ್ಶನ ಸುಗಮವಾಗಿರುವಂತೆ ನಾಟಕಮಂದಿರವೊಂದನ್ನು ನಿರ್ಮಿಸಬೇಕೆಂದಿದ್ದರು. ಆ ಯೋಜನೆಯು ಕಾರ್ಯರೂಪಕ್ಕೆ ಬರುವ ಮುಂಚೆಯೇ ಶಂಕರ್‌ನಾಗ್ ದುರ್ಮರಣಕ್ಕೀಡಾದರು. ಅವರ ಪತ್ನಿ ಅರುಂಧತಿನಾಗ್ ಆ ಯೋಜನೆಯನ್ನು ಮುಂದುವರೆಸಿ, ಕಾರ್ಯರೂಪಕ್ಕೆ ತಂದಿದ್ದಾರೆ.ಆ ರಂಗಮಂದಿರಕ್ಕೆ "ರಂಗಶಂಕರ" ಎಂದು ಹೆಸರಿಟ್ಟರು."ರಂಗಶಂಕರ" ಬೆಂಗಳೂರಿನ ಪ್ರಮುಖ ಸ್ಥಳವೊಂದರಲ್ಲಿ ಕಾರ್ಯನಿರ್ವಹಿಸುತ್ತಿದೆ. ನಿಧನ ಸೆಪ್ಟೆಂಬರ್ ೩೦, ೧೯೯೦ ರಂದು ದಾವಣಗೆರೆಯ ಹಳ್ಳಿಯೊಂದಾದ ಅನಗೋಡು ಹಳ್ಳಿಯಲ್ಲಿ ಜೋಕುರಸ್ವಾಮಿ ಚಿತ್ರದ ಚಿತ್ರೀಕರಣ ನಡೆಯುತ್ತಿರುವ ಸಂದರ್ಭವದು ಬೆಂಗಳೂರಿನಿಂದ ತೆರಳುತ್ತಿದ್ದ ಶಂಕರ್‌ನಾಗ್ ಅವರು ಕಾರು ಅಪಘಾತದಿಂದ ತಮ್ಮ ಕೊನೆಯುಸಿರೆಳೆದರು. ಪ್ರಶಸ್ತಿ, ಗೌರವ ಇವರು ಹಲವಾರು ರಾಜ್ಯಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು ಉದಾಹರಣೆಗೆ ಮಿಂಚಿನ ಓಟ ಮತ್ತು ನೋಡಿ ಸ್ವಾಮಿ ನಾವಿರೋದೆ ಹೀಗೆ ಚಿತ್ರಗಳಿಗೆ ಕ್ರಮವಾಗಿ ದ್ವಿತೀಯ ಅತ್ಯುತ್ತಮ ಚಿತ್ರ (೧೯೭೯-೮೦ರಲ್ಲಿ) ಹಾಗೂ ತೃತೀಯ ಅತ್ಯುತ್ತಮ ಚಿತ್ರ (೧೯೮೩-೮೪ರಲ್ಲಿ) ಪ್ರಶಸ್ತಿಗಳನ್ನು ರಾಜ್ಯಸರ್ಕಾರದ ವತಿಯಿಂದ ತಮ್ಮದಾಗಿಸಿಕೊಂಡರು. ಆಕ್ಸಿಡೆಂಟ್ ೧೯೮೪-೮೫ ರ ಸಾಲಿನ ಪ್ರಥಮ ಅತ್ಯುತ್ತಮ ಚಿತ್ರ ಎಂದು ರಾಜ್ಯ ಸರ್ಕಾರವಷ್ಟೇ ಅಲ್ಲದೆ ಪಾನನಿಷೇಧದ ಬಗೆಗಿನ ಉತ್ತಮ ಚಿತ್ರವೆಂದು ಪರಿಗಣಿತವಾಗಿ ರಜತ ಕಮಲ ಮತ್ತು ನಗದು ಬಹುಮಾನವನ್ನು ರಾಷ್ಟ್ರ ಪ್ರಶಸ್ತಿಯಾಗಿ ಪಡೆದರು. ಕನ್ನಡ ಚಿತ್ರೋದ್ಯಮಕ್ಕೆ ಕಂಪ್ಯೂಟರ್ ಚಾಲಿತ ಶಬ್ದಗ್ರಹಣ ತಂತ್ರಜ್ಞಾನವನ್ನು ಕೊಡುಗೆಯಾಗಿತ್ತ ಸಂಕೇತ್ ಸ್ಟುಡಿಯೋ ಶಂಕರ್‌ನಾಗ್ ಅವರ ಮತ್ತೊಂದು ಕಲಾ ಕೊಡುಗೆಯಾಗಿತ್ತು. ಸುಮಾರು ೯೪ ಚಿತ್ರಗಳಲ್ಲಿ ಅಭಿನಯಿಸಿದ ಶಂಕರ್‌ನಾಗ್, ನಟನೆ ಮತ್ತು ನಿರ್ದೇಶನ ಎರಡರಲ್ಲೂ ಸೈ ಎನ್ನಿಸಿಕೊಂಡವರು. ಅವರ ಚಿತ್ರಗಳನ್ನು ಪ್ರೇಕ್ಷಕರು ಮತ್ತು ವಿಮರ್ಶಕರು ಇಬ್ಬರೂ ಮೆಚ್ಚಿಕೊಂಡದ್ದು ಶಂಕರರ ಹೆಗ್ಗಳಿಕೆ. ನಿಗೂಢ ರಹಸ್ಯ ಶಂಕರ್‌ನಾಗ್ ಅಭಿನಯದ ಕೊನೆಯ ಚಿತ್ರ.. ನಿರ್ದೇಶನದ ಚಿತ್ರಗಳು ಒಂದು ಮುತ್ತಿನ ಕಥೆ ಜನ್ಮ ಜನ್ಮದ ಅನುಬಂಧ ಮಿಂಚಿನ ಓಟ ಗೀತಾ ನೋಡಿ ಸ್ವಾಮಿ ನಾವಿರೋದು ಹೀಗೆ ಹೊಸ ತೀರ್ಪು ಆಕ್ಸಿಡೆಂಟ್ ಒಂದು ಮುತ್ತಿನ ಕಥೆ ಮಾಲ್ಗುಡಿ ಡೇಸ್ ಧಾರಾವಾಹಿ ಲಾಲಚ್ (ಹಿಂದಿ) ಶಂಕರ್‌ನಾಗ್ ಅವರ ಕನಸುಗಳು ನಂದಿ ಬೆಟ್ಟಕ್ಕೆ ರೋಪ್ ವೇ, ಬೆಂಗಳೂರಿಗೆ ಮೆಟ್ರೋ ರೈಲು, ರಂಗಮಂದಿರ ಇವೆಲ್ಲಕ್ಕೂ ನಕ್ಷೆ ತಯಾರಿಸಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆ ಸರ್ಕಾರದ ಮುಂದೆ ಇಟ್ಟಿದ್ದರು ಶಂಕರ್‌ನಾಗ್. ಚಿತ್ರಗಳ ಪಟ್ಟಿ 1) ಒಂದಾನೊಂದು ಕಾಲದಲ್ಲಿ - ೧೯೭೮ 2) ಸೀತಾ ರಾಮು - ೧೯೭೯ 3) ಐ ಲವ್ ಯೂ - ೧೯೭೯ 4) ಪ್ರೀತಿ ಮಾಡು ತಮಾಷೆ ನೋಡು - ೧೯೭೯ 5) ಮಧುಚಂದ್ರ - ೧೯೭೯ 6) ಮಿಂಚಿನ ಓಟ - ೧೯೮೦ 7) ಆಟೋರಾಜ - ೧೯೮೦ 8) ಮೂಗನ ಸೇಡು - ೧೯೮೦ 9) ಹದ್ದಿನ ಕಣ್ಣು - ೧೯೮೦ 10) ಒಂದು ಹೆಣ್ಣು ಆರು ಕಣ್ಣು - ೧೯೮೦ 11) ಆರದ ಗಾಯ - ೧೯೮೦ 12) ರುಸ್ತುಮ್ ಜೋಡಿ - ೧೯೮೦ 13) ಜನ್ಮ ಜನ್ಮದ ಅನುಬಂಧ - ೧೯೮೦ 14) ತಾಯಿಯ ಮಡಿಲಲ್ಲಿ - ೧೯೮೧ 15) ಕುಲಪುತ್ರ - ೧೯೮೧ 16) ಹಣಬಲವೋ ಜನಬಲವೋ - ೧೯೮೧ 17) ಗೀತಾ - ೧೯೮೧ 18) ದೇವರ ಆಟ - ೧೯೮೧ 19) ಭರ್ಜರಿ ಬೇಟೆ - ೧೯೮೧ 20) ಮುನಿಯನ ಮಾದರಿ - ೧೯೮೧ 21) ಜೀವಕ್ಕೆ ಜೀವ - ೧೯೮೧ 22) ಅರ್ಚನ - ೧೯೮೨ 23) ಬೆಂಕಿ ಚೆಂಡು - ೧೯೮೨ 24) ಕಾರ್ಮಿಕ ಕಳ್ಳನಲ್ಲ - ೧೯೮೨ 25) ನ್ಯಾಯ ಎಲ್ಲಿದೆ? - ೧೯೮೨ 26) ಧರ್ಮ ದಾರಿ ತಪ್ಪಿತು - ೧೯೮೨ 27) ಗೆದ್ದಮಗ - ೧೯೮೩ 28) ನ್ಯಾಯ ಗೆದ್ದಿತು - ೧೯೮೩ 29) ಚಂಡಿ ಚಾಮುಂಡಿ - ೧೯೮೩ 30) ಕೆರಳಿದ ಹೆಣ್ಣು - ೧೯೮೩ 31) ಸ್ವರ್ಗದಲ್ಲಿ ಮದುವೆ - ೧೯೮೩ 32) ಆಕ್ರೋಶ - ೧೯೮೩ 33) ನೋಡಿ ಸ್ವಾಮಿ ನಾವಿರೋದು ಹೀಗೆ - ೧೯೮೩ 34) ನಗಬೇಕಮ್ಮ ನಗಬೇಕು - ೧೯೮೪ 35) ರಕ್ತ ತಿಲಕ - ೧೯೮೪ 36) ತಾಳಿಯ ಭಾಗ್ಯ - ೧೯೮೪ 37) ಬೆಂಕಿ ಬಿರುಗಾಳಿ - ೧೯೮೪ 38) ಕಾಳಿಂಗ ಸರ್ಪ - ೧೯೮೪ 39) ಇಂದಿನ ಭಾರತ - ೧೯೮೪ 40) ಬೆದರು ಬೊಂಬೆ - ೧೯೮೪ 41) ಶಪಥ - ೧೯೮೪ 42) ಗಂಡು ಭೇರುಂಡ - ೧೯೮೪ 43) ಪವಿತ್ರ ಪ್ರೇಮ - ೧೯೮೪ 44) ಆಕ್ಸಿಡೆಂಟ್ - ೧೯೮೪ 45) ಆಶಾಕಿರಣ - ೧೯೮೪ 46) ಮಕ್ಕಳಿರಲವ್ವ ಮನೆತುಂಬ - ೧೯೮೪ 47) ಅಪೂರ್ವ ಸಂಗಮ - ೧೯೮೪ 48) ತಾಯಿ ಕನಸು - ೧೯೮೫ 49) ಪರಮೇಶಿ ಪ್ರೇಮ ಪ್ರಸಂಗ - ೧೯೮೫ 50) ಮಾನವ ದಾನವ - ೧೯೮೫ 51) ಕಿಲಾಡಿ ಅಳಿಯ - ೧೯೮೫ 52) ವಜ್ರಮುಷ್ಟಿ - ೧೯೮೫ 53) ಕರಿನಾಗ - ೧೯೮೫ 54) ತಾಯಿಯೆ ನನ್ನ ದೇವರು - ೧೯೮೬ 55) ನಾ ನಿನ್ನ ಪ್ರೀತಿಸುವೆ - ೧೯೮೬ 56) ಅಗ್ನಿ ಪರೀಕ್ಷೆ - ೧೯೮೬ 57) ರಸ್ತೆ ರಾಜ - ೧೯೮೬ 58) ಸಂಸಾರದ ಗುಟ್ಟು - ೧೯೮೬ 59) ತಾಯಿ - ೧೯೮೭ 60) ಈ ಬಂಧ ಅನುಬಂಧ - ೧೯೮೭ 61) ಹುಲಿ ಹೆಬ್ಬುಲಿ - ೧೯೮೭ 62) ಲಾರಿ ಡ್ರೈವರ್ - ೧೯೮೭ 63) ಅಂತಿಮ ಘಟ್ಟ - ೧೯೮೭ 64) ದಿಗ್ವಿಜಯ - ೧೯೮೭ 65) ಶಕ್ತಿ - ೧೯೮೮ 66) ಸಾಂಗ್ಲಿಯಾನ - ೧೯೮೮ 67) ಧರ್ಮಾತ್ಮ - ೧೯೮೮ 68) ಮಿಥಿಲೆಯ ಸೀತೆಯರು - ೧೯೮೮ 69) ತರ್ಕ - ೧೯೮೯ 70) ಮಹಾಯುದ್ಧ - ೧೯೮೯ 71) ಅಂತಿಂಥ ಗಂಡು ನಾನಲ್ಲ - ೧೯೮೯ 72) ವಾಲ್ ಪೋಸ್ಟರ್ - ೧೯೮೯ 73) ಸಿ.ಬಿ.ಐ ಶಂಕರ್ - ೧೯೮೯ 74) ಇದು ಸಾಧ್ಯ - ೧೯೮೯ 75) ರಾಜ ಸಿಂಹ - ೧೯೮೯ 76) ಜಯಭೇರಿ - ೧೯೮೯ 77) ನರಸಿಂಹ - ೧೯೮೯ 78) ಎಸ್.ಪಿ.ಸಾಂಗ್ಲಿಯಾನ ಭಾಗ-೨ - ೧೯೯೦ 79) ರಾಮರಾಜ್ಯದಲ್ಲಿ ರಾಕ್ಷಸರು - ೧೯೯೦ 80) ಮಹೇಶ್ವರ - ೧೯೯೦ 81) ತ್ರೀನೇತ್ರ - ೧೯೯೦ 82) ಆವೇಶ - ೧೯೯೦ 83) ಹೊಸ ಜೀವನ - ೧೯೯೦ 84) ಹಳ್ಳಿಯ ಸುರಾಸುರರು - ೧೯೯೦ 85) ಭಲೇ ಚತುರ - ೧೯೯೦ 86) ಆಟ ಬೊಂಬಾಟ - ೧೯೯೦ 87) ನಿಗೂಢ ರಹಸ್ಯ - ೧೯೯೦ 88) ನಕ್ಕಳಾ ರಾಜಕುಮಾರಿ - ೧೯೯೧ 89) ಪುಂಡಪ್ರಚಂಡ - ೧೯೯೧ 90) ಸುಂದರಕಾಂಡ - ೧೯೯೧ 91) ನಾಗಿಣಿ - ೧೯೯೧ 92) ಪ್ರಾಣ ಸ್ನೇಹಿತ - ೧೯೯೩ 93) ಸರ್ವಸಾಕ್ಷಿ (ಮರಾಠಿ) - ೧೯೭೮ 94) ಉತ್ಸವ್ (ಹಿಂದಿ) - ೧೯೮೪ ಶಂಕರ್‌ನಾಗ್ ಅವರ ರೇಡಿಯೋ ಸಂದರ್ಶನ ಕರಾಟೆ ಕಿಂಗ್ ಶಂಕರ್ ನಾಗ್ ಅವರು ೧೯೮೮ ಜುಲೈನಲ್ಲಿ ಆಕಾಶವಾಣಿಯಲ್ಲಿ ಕೊಟ್ಟ ಸಂದರ್ಶನ ತೂರುರುರೂರು ತೂರುತುರೂರು ತು ಅರೆರೆರೆರೆ ಕ್ಷಮ್ಸಿ ನಿಮ್ಕಡೆ ಗಮನ ಹರಿಲಿಲ್ಲ ಅಂದ್ರೆ ನಿಮ್ಮ ರೇಡಿಯೋ ಟ್ರಾನ್ಸಿಸ್ಟ್ರು ಆನ್ ಆಗಿರ್ಬೋದು ಅಂತ ಯೋಚ್ನೇನೆ ಬರ್ಲಿಲ್ಲ ನೋಡಿ ಅದಕ್ಕೆ ನನ್ ಪಾಡಿಗೆ ಲಲಲಲ ಅಂತ ಬೇಸರವಾಗಿ ಹಾಡ್ತಾ ಇದ್ದೆ ತಿರ್ಗ ಕ್ಷಮ್ಸಿ ನಾನು ಇದೆಲ್ಲ ನನ್ ಪರಿಚಯ ಮಾಡ್ಕೊಳ್ದೇನೆ ಮಾತಾಡ್ತಾಯಿದ್ದೀನಿ ಈಗ ನಿಮ್ಮಲ್ ಯಾರಾದ್ರು ಹೇಳ್ವೋದು ಪರಿಚಯದಲ್ಲಿ ಏನಿದೆ ಮಹರಾಯ ಅಂತ ಇದೆ ಇದೆ ಇದೆ ಸಾರ್ ಪರಿಚಯ ಆದ್ರೆ ನಾವು ನೀವು ಪರಸ್ಪರ ಹತ್ರ ಆಗ್ತಿವಿ ಅಂದ್ರೆ ನನ್ ಮಾತ್ ಕೇಳಿದ್ರೆ ನಿಮ್ಗೆ ಅಥವಾ ನಿಮ್ ಮಾತ್ ಕೇಳಿದ್ರೆ ನನಗೆ ಒಂಥರಾ ಅನುಕಂಪ ಪೂರಿತವಾದ ವಾತಾವರಣ ನಿರ್ಮಿತವಾಗುತ್ತೆ ಅದಕ್ಕೆ ಪರಿಚಯ ನನ್ನ ಹೆಸರು ನಾಗರಕಟ್ಟೆ ಶಂಕರ ಉರುಫ್ ಶಂಕರ್ ನಾಗ್ ಅಂತ ನಮಸ್ಕಾರ ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ ಬಹಳ ದಿನಗಳಾದ್ಮೇಲೆ ನಿಮ್ಮನ್ನ ಭೇಟಿ ಮಾಡ್ತಾಯಿದ್ದೀನಿ ಆದ್ರೆ ಏನ್ ಮಾಡೋದು ಪ್ರಿಯ ಅಭಿಮಾನಿಗಳೆ ಕೆಲ್ಸ ಕೆಲ್ಸ ಕೆಲ್ಸ ಅಂತ ಊರೂರು ಸುತ್ತೋದೆ ಆಯ್ತು ವಿನಾ ಆಲ್ ಇಂಡಿಯಾ ರೇಡಿಯೋ ಸ್ಟೇಷನ್ ಹತ್ರ ಬರೋಕೆ ಆಗ್ಲಿಲ್ಲ ಅಂತು ಇವತ್ ತಮ್ಮೆಲ್ಲರತ್ರ ಮಾತಾಡೋ ಯೋಗ ಇತ್ತು ಅದಕ್ಕೆ ಹಾಜರಾಗಿದ್ದೀನಿ ಮತ್ತೆ ಇಂಥ ಒಂದು ಸುವರ್ಣವಕಾಶ ದೊರಕಿದ ಮೇಲೆ ಒಂದು ಒಳ್ಳೆ ಹಾಡು ಕೇಳುಸ್ಕೊ ಬೇಕಲ್ವ ಸಿನಿಮಾ ನೋಡಿ ಸ್ವಾಮಿ ನಾವಿರೋದು ಹೀಗೆ ನೋಡಿ ಸ್ವಾಮಿ ನೋಡಿ ಸ್ವಾಮಿ ನೋಡಿ ಸ್ವಾಮಿ ನೋಡಿ ಸ್ವಾಮಿ ಅರೆ ನೋಡಿ ಸ್ವಾಮಿ ನಾವಿರೋದು ಹೀಗೆ ನೋಡಿ ಸ್ವಾಮಿ ನಾವಿರೋದು ಹೀಗೆ ನೋಡಿ ಸ್ವಾಮಿ ಸ್ವಾಮಿ ನೋಡಿ ಸ್ವಾಮಿ ನೋಡಿ ಸ್ವಾಮಿ ನಾವ್ ಹೀಗಿರೋದಕ್ಕೆ ಕಾರಣ ಒಂದಾನೊಂದು ಕಾಲ ಅಂದ್ರೆ ಗಿರೀಶ್ ಕಾರ್ನಾಡ್ ಅವರ ಚಿತ್ರ ಒಂದಾನೊಂದು ಕಾಲದಲ್ಲಿ ಆ ಒಂದಾನೊಂದು ಕಾಲದಲ್ಲಿ ಅಂದ್ರೆ ಆ ಸಿನಿಮಾದಲ್ಲಿ ಕೆಲ್ಸ ಮಾಡೊ ಅವಕಾಶ ಸಿಗೊ ಮುಂಚೆ ನಾನು ಬಹಳಷ್ಟು ನಾಟಕಗಳಲ್ಲಿ ಕೆಲ್ಸ ಮಾಡ್ತಾಯಿದ್ದೆ ಪಾತ್ರ ನಿರ್ದೇಶನ ಲೈಟಿಂಗು ಬ್ಯಾಕ್ ಸ್ಟೇಜು ಎಲ್ಲಾ ಬ್ಯಾಂಕಲ್ಲಿ ನೌಕ್ರಿನು ಮಾಡ್ತಾಯಿದ್ದೆ ಮ್ಯಾನೇಜರ್ ಅಲ್ಲ ಅಕೌಂಟೆಂಟ್ ಅಲ್ಲ ಓಸಿಯಾಗಿ ಓಸಿ ರಿ ಓಸಿ ಅಂದ್ರೆ ಗೊತ್ತಿಲ್ವ ನಿಮ್ಗೆ ಆರ್ಡಿನರಿ ಕ್ಲರ್ಕ್ ಆ ಒಂದಾನೊಂದು ಕಾಲದಲ್ಲಿ ಸಾಯಂಕಾಲ ಬ್ಯಾಂಕ್ ನೌಕ್ರಿ ಮುಗ್ಸಿ ಒಂದು ನಾಟ್ಕದ ರಿಹರ್ಸಲ್ ಮಾಡ್ತಿರೊವಾಗ ಗಿರೀಶ್ ಕಾರ್ನಾಡ್ ಅವ್ರು ಬಂದ್ರು ನೋಡುದ್ರು ಮತ್ ಕೇಳುದ್ರು ಸಿನಿಮಾದಲ್ಲಿ ಪಾರ್ಟ್ ಮಾಡ್ತಿಯೇನೋ ಹುಡುಗ ಅಂತ ಸಿನಿಮಾ ಅಂದ್ರೆ ಸ್ವಲ್ಪ ಭಯ ಹೆದ್ರಿಕೆ ಇದ್ದೆ ಇತ್ತು ಆದ್ರು ಧೈರ್ಯ ಮಾಡಿ ಓ ಸಿನಿಮಾ ತಾನೆ ಅದ್ರಲ್ ಏನಂತೆ ಮಾಡಣ ಸಾರ್ ಅಂದೆ ಚಿತ್ರೀಕರಣ ಪ್ರಾರಂಭವಾಯಿತು ದಾಂಡೇಲಿಯ ಗಾಢವಾದ ಸುಂದರವಾದ ಅರಣ್ಯದಲ್ಲಿ ಅದೆ ಒಂದಾನೊಂದು ಕಾಲದ ಚಿತ್ರದ ಈ ಹಾಡು ಒಂದಾನೊಂದು ಕಾಲದಾಗ ಒಂದಾನೊಂದು ಕಾಲದಲ್ಲಿ ಚಿತ್ರೀಕರಣ ಮುಗಿತು ಡಬ್ಬಿಂಗು ಆಯ್ತು ಫಸ್ಟ್ ಪ್ರಿಂಟು ಆಚೆ ಬಂತು ಸುತ್ ಮುತ್ ಇರೊ ಸ್ವಲ್ಪ್ ಜನಗಳು ಅಂದ್ರೆ ಪ್ರಿವ್ಯೂ ನೋಡ್ದೋರು ಪರ್ವಾಗಿಲ್ವೆ ಹುಡ್ಗ ಸುಮಾರಾಗ್ ಅಭಿನಯ ಮಾಡ್ತಾನೆ ಅಂದ್ರು ಈ ಮಾತ್ ಕೇಳಿದ್ದೆ ಕ್ಷಣ ನನ್ನ ಈ ಹುಬ್ಬು ತಲೆಕೂದ್ಲಿಗೆ ಎಗ್ರಿ ಸಿಕ್ಕಾಕೊಬಿಡ್ತು ಇನ್ ಶಾರ್ಟ್ ಸಿನಿಮಾ ಅ್ಯಕ್ಟರ್ ಆಗ್ತಿನಿ ಅಂತ ನಾನು ಕನ್ಸಲ್ಲು ನೆನ್ಕೊಂಡಿರ್ಲಿಲ್ಲ ರಜತ ಪರದೆ ಮೇಲೆ ಮೊದಲ್ನೆ ಸಲ ನನ್ನನ್ನೆ ನಾನು ನೋಡ್ದಾಗ ಒಂತರಾ ಅನ್ನುಸ್ತು ಅಲ್ಲ ಇದ್ಯಾಕ್ ನನ್ ಮೊಗ ಹೀಗ್ ಕಾಣಿಸ್ತಾ ಇದೆ ಅದ್ಯಾಕೆ ನಡೆಯೊವಾಗ ನನ್ ಕೈ ವಂಕ್ ಪಂಕ್ ಆಗಿ ಎಲ್ಲೆಲ್ಲೋ ಹೋಗುತ್ತೆ ಎಕ್ಸೆಟ್ರಾ ಎಕ್ಸೆಟ್ರಾ ಇಂಥ ಯೋಚ್ನೆ ಇರೋವಾಗ ಅಬ್ಬಯ್ಯನಾಯ್ಡು ಅವ್ರ್ ಕಣ್ಣು ನನ್ಮೇಲೆ ಬಿತ್ತು ಮತ್ತೆ ಸೀತಾರಾಮು ಈ ಚಿತ್ರದಲ್ಲಿ ಅಭಿನಯ ಮಾಡೋಕೆ ಅವ್ರ್ ದೊಡ್ ಮನಸ್ ಮಾಡಿ ನನ್ಗೊಂದು ಅವಕಾಶ ಕೊಟ್ರು ಮೊದಲ್ನೆ ದಿನ ಚಿತ್ರೀಕರಣಕ್ ಹೋದ್ರೆ ನನ್ ಹೃದಯ ಅಲ್ಲೇ ನಿಂತ್ ಬಿಡ್ತು ಯಾಕಂದ್ರೆ ಮೊದಲ್ನೆ ದಿನವೆ ಈ ಹಾಡಿನ ಚಿತ್ರೀಕರಣ ಇತ್ತು ಒಂದೇ ಒಂದು ಆಸೆಯು ತೋಳಲಿ ಬಳಸಲು ಒಂದೇ ಒಂದು ಬಯಕೆಯು ನಿನ್ನ ಮುದ್ದಾಡಲು ನಿನ್ನ ಮುದ್ದಾಡಲು ಒಂದೇ ಒಂದು ಆಸೆಯು ತೋಳಲಿ ಬಳಸಲು ಒಂದೇ ಒಂದು ಬಯಕೆಯು ನಿನ್ನ ಮುದ್ದಾಡಲು ನಿನ್ನ ಮುದ್ದಾಡಲು ಈ ಹಾಡಿನ ಚಿತ್ರೀಕರಣ ಮುಗಿಯೊಷ್ಟರಲ್ಲಿ ನಿಂತೋಗಿರು ನನ್ನ ಹೃದಯ ಆಚೆನೇ ಬಂದ್ಬಿಡ್ತು ಅಂದ್ರೆ ಅತಿಶಯೋಕ್ತಿ ಆಗಲಾರದು ಯಾಕೆಂದ್ರೆ ಚಿತ್ರೀಕರಣ ಮುಂಚೆ ನಾನ್ ಎಲ್ಲೂ ಸ್ಕ್ರೀನ್ ಮೇಲೆ ಹಾಡಿರ್ಲಿಲ್ಲ ಡ್ಯಾನ್ಸ್ ಅಂದ್ರೆ ಏನು ಅಂತ ಅದಕ್ ಮುಂಚೆನೆ ಗೊತ್ತಿರ್ಲಿಲ್ಲ ಡೈರೆಕ್ಟರ್ ಸೋಮಶೇಖರ್ ಅವ್ರು ಡ್ಯಾನ್ಸ್ ಮಾಸ್ಟರ್ ಉಡುಪಿ ಜಯರಾಂ ಅವ್ರು ಆ್ಯಕ್ಷನ್ ಅಂದ್ರು ಜಿಗಿತ ಜಿಗಿತ ಸ್ಟೆಪ್ ಹಾಕು ಅಂದ್ರು ನಾನ್ ಪ್ರಯತ್ನ ಮಾಡ್ದೆ ರಿ ಪ್ರಯತ್ನ ಮಾಡ್ದೆ ಆದ್ರೆ ಕೈ ಬರ್ಬೆಕಾಗ್ ಜಾಗ್ ದಲ್ಲಿ ಧೀ ಬರ್ತಾಯಿತ್ತು ಕಾಲ್ ಸರಿ ಬಿದ್ರೆ ಕೈ ಎಲ್ಲೆಲ್ಲೋ ಹೋಗ್ತಾ ಇತ್ತು ಕೊನೆಗ್ ಸುಸ್ತಾಗಿ ಒಂದ್ ಮೂಲೆಲ್ ಹೋಗಿ ಸಿಗರೆಟ್ ಸೇದ್ತಾ ಕುತ್ಕೊಬಿಟ್ಟೆ ಆಗ ಆ ಚಿತ್ರದ ನಾಯಕಿ ಮಂಜುಳಾ ಬಂದ್ರು ಧೈರ್ಯ ಕೊಟ್ರು ಮೊದಲ್ನೆ ಸಲ ಹಾಗ್ ಆಗುತ್ತೆ ಬಿಡಿ ನನ್ ಜೊತೆ ಎಲ್ಲ ಸ್ಟೆಪ್ ಒಂದ್ ಸಲ ಹಾಕ್ ನೋಡಿ ಎಲ್ಲಾ ಸರಿಹೋಗುತ್ತೆ ಬನ್ನಿ ಅಂದ್ರು ಅವರ ಆ ಪ್ರೋತ್ಸಾಹ ಆ ಸಹಾಯ ನಾನೆಂದು ಮರೆಯೊ ಹಾಗಿಲ್ಲ ಆ ಚಿತ್ರ ಬಿಡುಗಡೆ ಆದ ನಂತರ ಮಂಜುಳಾ ಅವ್ರ್ ಜೊತೆಲಿ ಎಷ್ಟೋ ಚಿತ್ರಗಳಲ್ಲಿ ಅಭಿನಯಿಸೊ ಅವಕಾಶ ನನಗ್ ಸಿಕ್ತು ಆದ್ರೆ ಇವತ್ ದುಃಖ ಒಂದೇ ಈಗ್ ಒಳ್ಳೆ ಕಾಲ ಜೊತೆಯಲ್ ಕಳೆಯೋಣ ಅಂದ್ರೆ ಮಂಜುಳಾ ಅವ್ರು ನಮ್ಮ ಜೊತೆಲಿ ಇಲ್ಲ ದಿವಂಗತ ಮಂಜುಳಾ ಅವ್ರ ನೆನಪಿನಲ್ಲಿ ಈ ಹಾಡು ನೀನಿರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ ಕೆಲವು ಸಲ ಮಂಜುಳಾ ಅಂಥ ಒಳ್ಳೆ ನಟಿ ಇವತ್ತು ಇಲ್ಲ ಅಂತ ನಂಬೋಕೆ ಆಗಲ್ಲ ಆದ್ರೆ ಜೀವನ ಇರೋದೆ ಹೀಗೆ ಅನ್ಸುತ್ತೆ ಈ ಜೀವನ ಅನ್ನೋದು ನೂರಾರು ಬಣ್ಣಗಳು ಕೂಡಿ ಎಷ್ಟು ವಿಶಾಲ ಅನ್ಸುತ್ತೆ ಅಷ್ಟೇ ಸಂಕುಚಿತ ಆಗ್ಬಿಡುತ್ತೆ ಒಮ್ಮೆ ತಂಪಾಗಿ ಉದ್ದವಾಗಿ ಕಾಣ್ಸೊ ಮೆತ್ತನೆ ಹಾಸಿಗೆ ಕ್ಷಣಗಳಲ್ಲಿ ಸುರುಳಿಯಾಗಿ ಗತಕಾಲಕ್ಕೆ ಹೋಗ್ ಕೂತ್ಬಿಡುತ್ತೆ ಹೊಸ ರೂಪ ಹೊಸ ಚೈತನ್ಯ ತಂದ್ ಕೊಟ್ಟ ಅನುಭವಗಳು ಕೇವಲ ಒಂದ್ ಸುರುಳಿ ಅಗೋಯ್ತಲ್ಲ ಅಂತ ದುಃಖನು ಆಗುತ್ತೆ ಆದ್ರೆ ಜೀವನ ಮಾತ್ರ ನಡ್ದೆ ನಡಿಯುತ್ತೆ ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ ದೂರ ದೇಶಕ್ಕೆ ಹೋಗೊ ಅವಕಾಶ ಒಂದು ಮುತ್ತಿನ ಕಥೆ ಈ ಚಿತ್ರದಿಂದ ದೊರೆಕ್ತು ಎರಡು ಕಾರಣಗಳಿಂದ ಸಮುದ್ರದ ಆಳಕ್ಕೆ ಹೋಗಿ ಅಂದ್ರೆ ಅಂಡರ್ ವಾಟರ್ ಹೋಗಿ ಚಿತ್ರೀಕರಣ ಮಾಡ್ಬೆಕಾಗಿತ್ತು ಎರಡ್ನೆದು ನೀರಲ್ಲಿ ಆಕ್ಸಿಜನ್ ಮಾಸ್ಕು ಅಥವಾ ಯಾವ್ ಸಹಾಯ ಇಲ್ಲದೆ ಚಿತ್ರೀಕರಣ ಮಾಡ್ಬೆಕಾಗಿತ್ತು ಸ್ವಲ್ಪ ಕಷ್ಟಾನೆ ಆಯ್ತು ಕೊನೆಗೂ ಕೆನಡಾ ಹೋಗಿ ಕ್ಯಾಮರಾ ತಂದು ಲಂಡನಿಗೆ ಹೋಗಿ ಒಂದು ಆಕ್ಟೋಪಸ್ ಮಾಡ್ಸಿ ಮಾಲ್ಡೀವ್ಸ್ ಗೆ ಹೋಗಿ ಜರ್ಮನ್ ಕ್ಯಾಮರಾ ಮ್ಯಾನ್ ಇಟ್ಕೊಂಡು ಅಂಡರ್ ವಾಟರ್ ಶೂಟಿಂಗ್ ಮಾಡಿದ್ವಿ ಹಾಡು ಮುತ್ತೊಂದ ತಂದೆ ಕಡಲಾಳದಿಂದ ಅದೆ ಅಂದ ಇಲ್ಲಿ ಕಂಡೆ ನೀನಿಲ್ಲಿ ಕಂಡ ಈ ಹಾಡಿನ ರೆಕಾರ್ಡಿಂಗು ಬೆಂಗಳೂರಿನ ನಮ್ ಸ್ಟುಡಿಯೋಲೆ ಆಯ್ತು ಅದಕ್ ಮುಂಚೆ ನಾವು ಸಿನಿಮಾ ಹಾಡುಗಳು ಅಥವಾ ಬ್ಯಾಗ್ರೌಂಡ್ ಮ್ಯೂಸಿಕ್ ರೆಕಾರ್ಡ್ ಮಾಡ್ಬೇಕು ಅಂದ್ರೆ ಮದ್ರಾಸು ಅಥವಾ ಬಾಂಬೆಗೆ ಹೋಗಿ ಮಾಡ್ಬೇಕಾಗಿತ್ತು ಯಾಕಂದ್ರೆ ಆ ರೆಕಾರ್ಡಿಂಗ್ ಸೌಲಭ್ಯಗಳು ನಮ್ಮ ಕರ್ನಾಟಕದಲ್ಲಿ ಇರ್ಲಿಲ್ಲ ಅಂತ ಅದಕ್ಕೆ ಪ್ರತಿ ಸಲ ಮದ್ರಾಸು ಅಥವಾ ಬಾಂಬೆಗೆ ಹೋಗಿ ತಿಂಗ್ಳಾಂಗಟ್ಲೆ ಲೈನಲ್ ನಿಂತ್ಕೊಂಡು ನಮಸ್ಕಾರ ಸಾರ್ ನಮಸ್ಕಾರ ಸಾರ್ ಅಂತ ಮಸ್ಕ ಹೊಡ್ದು ರೆಕಾರ್ಡಿಂಗ್ ಮಾಡ್ಬೆಕಾಗಿತ್ತು ಕನ್ನಡ ಚಲನಚಿತ್ರ ನಿರ್ಮಾಪಕರ ಈ ಸ್ಥಿತಿ ನೋಡಿ ಅಯ್ಯೊ ಅನ್ನುಸ್ತು ಅಂದ್ರೆ ಸಿನಿಮಾ ತೆಗೆಯೋದು ಕನ್ನಡ್ದಲ್ಲಿ ನೋಡೊ ಪ್ರೇಕ್ಷಕರು ಕನ್ನಡಿಗರು ಮತ್ತೆ ಸಂಗೀತ ರೆಕಾರ್ಡ್ ಮಾಡೋದು ಮಾತ್ರ ಮದ್ರಾಸ್ನಲ್ಲಿ ಅಂತ ಬಹಳ ಯೋಚ್ನೆ ಆಗ್ಬಿಟಿತ್ತು ಆಗ ಸಿ.ವಿ.ಎಲ್ ಶಾಸ್ತ್ರಿ, ಅನಂತ್ ನಾಗ್, ರಮೇಶ್ ಭಟ್, ಸೂರ್ಯ ರಾವ್ ಅಂತ ಸ್ನೇಹಿತರ ಹತ್ರ ಆರ್ಥಿಕ ಸಹಾಯ ಕೇಳ್ಕೊಂಡು ಬೆಂಗಳೂರಿನ ಕರ್ನಾಟಕ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ ಅವರ ಬೆಂಬಲದಿಂದ ಈ ರೆಕಾರ್ಡಿಂಗ್ ಸ್ಟುಡಿಯೋ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ ಅವರಿಂದ ಉದ್ಘಾಟನೆ ಆಯ್ತು ಕರ್ನಾಟಕದಲ್ಲೂ ಸಿನಿಮಾ ಸಂಗೀತ ಕೂಡ ಬಾರ್ಸೊ ಒಳ್ಳೊಳ್ಳೆ ಕಲಾವಿದರು ಮ್ಯೂಸಿಷಿಯನ್ ಇದ್ದಾರೆ ನಮ್ಮಲ್ಲೂ ಎಲ್ಲಾ ಸೌಲಭ್ಯಗಳಿವೆ ಅನ್ನೊ ಸಂಕೇತವೆ ಈ ಸ್ಟುಡಿಯೋ ಇದೇ ಸ್ಟುಡಿಯೋನಲ್ಲಿ ರೆಕಾರ್ಡ್ ಆಗಿರೊ ಇನ್ನೊಂದ್ ಹಾಡು ರಾಮಕೃಷ್ಣ ರಾಮಕೃಷ್ಣ ರಾಮಕೃಷ್ಣ ಹರೆ ರಾಮಕೃಷ್ಣ ರಾಮಕೃಷ್ಣ ರಾಮಕೃಷ್ಣ ಹರೆ ಸ್ನೇಹಿತರೆ ಇಂಥ ಸಂದರ್ಭಗಳಲ್ಲಿ ಸಂಗೀತ ನಿರ್ದೇಶಕ ಇಳಯರಾಜ ಜ್ಞಾಪಕಕ್ ಬರ್ತಾರೆ ಅತ್ಯಂತ ಪ್ರತಿಭಾಶಾಲಿ ಜೀನಿಯಸ್ ಅಂತ ಕರಿತೀವಲ್ಲ ಅಂಥ ಒಂದು ವ್ಯಕ್ತಿ ಅವ್ರ್ ಸಂಗೀತ ಜಗತ್ತೆ ಬೇರೆ ಆ ಠೇಕಾನೆ ಬೇರೆ ಆ ಲಹರಿನೆ ಬೇರೆ ಅವ್ರ್ ಜೊತೆಲಿ ಮ್ಯೂಸಿಕ್ ಕಂಪೋಸಿಗೆ ಕೂತ್ಕೊಂಡ್ರೆ ಸಮಯ ಹ್ಯಾಗ್ ಕಳಿಯುತ್ತೆ ಅಂತ ಲೆಕ್ಕಾನೆ ಇರೋದಿಲ್ಲ ಯಾವ್ದಾದ್ರು ಒಂದು ಸನ್ನಿವೇಶಕ್ಕೆ ಒಂದು ಟ್ಯೂನು ಕೇಳಿದ್ರೆ ಎಂಟೊಂಭತ್ತು ಟ್ಯೂನು ಚಿಟಿಕೆ ಹೊಡಿಯೊಷ್ಟ್ರಲ್ಲಿ ರೆಡಿ ಮಾಡ್ಬಿಡ್ತಾರೆ ಒಂದಕ್ಕಿಂತ ಒಂದು ಟ್ಯೂನು ಅಂದವಾಗಿ ಇರುತ್ತೆ ಸೊಗಸಾಗಿರುತ್ತೆ ಒಂದು ಸಣ್ಣ ಉದಾಹರಣ ಅಂದ್ರೆ ಗೀತಾ ಚಿತ್ರದ ಈ ಹಾಡು ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು ಹೊಸ ಹರುಷವ ತರುವೆನು ಇನ್ನು ಎಂದು ಓಓ ಎಂಥ ಮಾತಾಡಿದೆ ಹೌದು ಜೊತೆಯಲ್ಲೇ ಇರೋಣ ಅಭಿಮಾನಿಗಳೆ ಯಾವಾಗ್ಲೂ ಹೀಗೆ ಜೊತೆಯಲ್ಲೇ ಇರೋಣ ಆದ್ರೆ ಇದಕ್ಕೆ ನಿಮ್ಮ ಸಹಕಾರ ಸಹಯೋಗ ಅತ್ಯಗತ್ಯ ಅಂದ್ರೆ ನನ್ ಸಿನಿಮಾ ಬಿಡುಗಡೆ ಆದ್ಮೇಲೆ ದಯವಿಟ್ಟು ನನ್ಗೊಂದು ಸಣ್ಣ ಪತ್ರ ಬರಿರಿ ಅಂದ್ರೆ ಸುಮ್ನೆ ಉಪಚಾರಕ್ ಅಲ್ಲ ಏನಿಷ್ಟ ಆಯ್ತುಕಿನ್ನ ಏನಿಷ್ಟ ಆಗ್ಲಿಲ್ಲ ಅಂತ ಒತ್ತಿ ಒತ್ತಿ ಬರಿರಿ ನನ್ನನ್ನ ದಯವಿಟ್ಟು ತಿದ್ದುಪಡಿಸಿ ಈ ಕಾರ್ಯಕ್ರಮ ಕೇಳಿದ್ ನಂತರವೂ ಏನನ್ನಿಸ್ತು ಅಂತ ಎರಡ್ ಲೈನ್ ಬರಿರಿ ನಾನು ಋಣಿ ಆಗಿರ್ತಿನಿ ಮತ್ತೆ ೨೮ ಕ್ರೆಸೆಂಟ್ ರಸ್ತೆ ಬೆಂಗಳೂರು ೧ ದಯವಿಟ್ಟು ಬರಿರಿ ಅಥವಾ ಬನ್ನಿ ನನ್ನ ಬಾಗಿಲು ಸದಾ ತೆರೆದೆ ಇರುತ್ತೆ ತೆರೆದಿದೆ ಮನೆ ಓ ಬಾ ಅತಿಥಿ ಏನಪ್ಪ ಶಂಕರನಾಗ ಅವಾಗ್ಲಿಂದ ಯಾವ್ದೋ ಓಬಿರಾಯನ ಕಾಲದ ಹಳೆ ರೆಕಾರ್ಡೆ ಬಾರಿಸ್ತಾ ಇದಿಯಲ್ಲ ಅಂತ ನನ್ನ ತರುಣ ಸ್ನೇಹಿತರು ಹೇಳ್ವೋದು ಅದಕ್ಕೆ ನನ್ನ ಪುಟಾಣಿ ಸ್ನೇಹಿತನಾದ ರಾಷ್ಟ್ರಪ್ರಶಸ್ತಿ ಪಡೆದ ಮಾಸ್ಟರ್ ಮಂಜುನಾಥ್ ಮಂಜು ನೀವೆಲ್ಲರೂ ನಗ್ಸಿದ ಸ್ವಾಮಿ ಹಾಡಿರೋ ಈ ಹಾಡು ಏನ್ ಹುಡ್ಗಿರೋ ಇದ್ಯಾಂಕಿಗ್ ಆಡ್ತಿರೋ ಲವ್ವು ಲವ್ವು ಲವ್ವು ಅಂತ ಕಣ್ಣಿರಿಡ್ತಿರೊ ಅಯ್ಯಯ್ಯೊ ಕಾರ್ಯಕ್ರಮ ಮುಗಿಯೊ ಸಮಯ ಹತ್ರ ಬರ್ತಾಯಿದೆ ಅಲ್ಲ ಸಮಯ ಇಷ್ಟ್ ಬೇಗ ಕಳ್ದೋಯ್ತಲ್ಲ ಅಂತ ದುಃಖನು ಆಗ್ತಾ ಇದೆ ಆದ್ರೆ ಏನ್ ಮಾಡೋದ್ ಹೇಳಿ ಆಲ್ ಗುಡ್ ಥಿಂಕ್ ಮಸ್ಟ್ ಕಮ್ ಟು ಅಂತ ಏನೊ ಹೇಳ್ತಾರಲ್ಲ ಹಾಗೆ ಸ್ನೇಹಿತರೆ ಈ ಕಾರ್ಯಕ್ರಮ ನಿಮ್ಗೆಲ್ರಿಗೂ ಇಷ್ಟ ಆಗಿದೆ ನಿಮ್ ಸಹಕಾರ ಬೆಂಬಲ ನನ್ಮೇಲೆ ಸದಾ ಇರುತ್ತೆ ಅಂತ ನಾನು ನಂಬ್ಕೊಂಡಿದೀನಿ ಅಂದ್ರೆ ನಾನು ಹೇಗೆ ಇದ್ರು ಅಂದ್ರೆ ಕೋಪ ತಾಪ ಪ್ರೇಮ ಹೀಗೂ ಎಲ್ಲಾ ಇದೆ ನನ್ನಲ್ಲಿ ಆದ್ರೆ ದಯವಿಟ್ಟು ನನ್ನನ್ನ ಸ್ವೀಕರಿಸಿ ದಯವಿಟ್ಟು ಸ್ವೀಕರಿಸಿ ಯಾಕಂದ್ರೆ ಬೇರೆ ದಾರಿನೆ ಇಲ್ಲ ನಮಸ್ಕಾರ ಬರ್ತಿನಿ ಹಾಹಾಹಾ ಆದ್ರೆ ಬರೊಕಿಂತ ಮುಂಚೆ ಒಂದು ಕೊನೆಯ ಪ್ರೀತಿಯ ಹಾಡು ಆಕಾಶದಿಂದ ಜಾರಿ ಭೂಮಿಗೆ ಬಂದ ಉಲ್ಲೇಖಗಳು ಬಾಹ್ಯ ಕೊಂಡಿಗಳು ಕನ್ನಡ ಸಿನೆಮಾ ಕನ್ನಡ ಚಲನಚಿತ್ರ ನಿರ್ದೇಶಕರು ಸಿನಿಮಾ ತಾರೆಗಳು ಕಿರುತೆರೆ ನಿರ್ದೇಶಕರು
4014
https://kn.wikipedia.org/wiki/%E0%B2%AD%E0%B2%BE%E0%B2%B0%E0%B2%A4%E0%B2%A6%20%E0%B2%86%E0%B2%B0%E0%B3%8D%E0%B2%A5%E0%B2%BF%E0%B2%95%20%E0%B2%B5%E0%B3%8D%E0%B2%AF%E0%B2%B5%E0%B2%B8%E0%B3%8D%E0%B2%A5%E0%B3%86
ಭಾರತದ ಆರ್ಥಿಕ ವ್ಯವಸ್ಥೆ
ಭಾರತದ ಆರ್ಥಿಕ ವ್ಯವಸ್ಥೆಯನ್ನು ಅಭಿವೃದ್ಧಿಶೀಲ ಮಾರುಕಟ್ಟೆ ಅರ್ಥವ್ಯವಸ್ಥೆ ಎಂದು ವಿವರಿಸಲಾಗಿದೆ. ಪಿ.ಪಿ.ಪಿ.ವುಳ್ಳ (ಕೊಳ್ಳುವ ಶಕ್ತಿಯ ಸಾಮ್ಯತೆ) ಜಿ.ಡಿ.ಪಿ ಪ್ರಕಾರ ಭಾರತ ವಿಶ್ವದಲ್ಲೇ ಮೂರನೆಯ ಸ್ಥಾನದಲ್ಲಿದೆ ಮತ್ತು ಅಮೇರಿಕನ್ ಡಾಲರಿನಲ್ಲಿನ ಒಟ್ಟೂ ದೇಶಿಯ ಉತ್ಪನ್ನ(ಜಿ.ಡಿ.ಪಿ) ಪ್ರಕಾರ $೬೯೧.೮೭೬ ಕೋಟಿ ಹೊಂದಿ ವಿಶ್ವದಲ್ಲೇ ಐದನೆಯ ಸ್ಥಾನದಲ್ಲಿದೆ. ಐಎಂಎಫ್ ಪ್ರಕಾರ, ತಲಾವಾರು ಆದಾಯದ ಆಧಾರದಲ್ಲಿ, ೨೦೧೮ರಲ್ಲಿ ಭಾರತವು ಜಿಡಿಪಿ ಪ್ರಕಾರ ೧೩೯ನೇ (ನಾಮಮಾತ್ರದ) ಮತ್ತು ಜಿಡಿಪಿ ಪ್ರಕಾರ ೧೧೮ನೇ (ಪಿಪಿಪಿ) ಸ್ಥಾನ ಹೊಂದಿತ್ತು. ೧೯೪೭ರಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ೧೯೯೧ರ ವರೆಗೆ, ಅನುಕ್ರಮದ ಸರ್ಕಾರಗಳು ವ್ಯಾಪಕ ಸರ್ಕಾರಿ ಹಸ್ತಕ್ಷೇಪ ಮತ್ತು ನಿಯಂತ್ರಣವುಳ್ಳ ರಕ್ಷಣಾವಾದಿ ಆರ್ಥಿಕ ನೀತಿಗಳನ್ನು ಪ್ರೋತ್ಸಾಹಿಸಿದವು; ಶೀತಲ ಸಮರದ ಅಂತ್ಯ ಮತ್ತು ೧೯೯೧ ರಲ್ಲಿ ತೀವ್ರ ಪಾವತಿ ಬಾಕಿ ಬಿಕ್ಕಟ್ಟಿನ ಕಾರಣ ಭಾರತವು ಆರ್ಥಿಕ ಉದಾರೀಕರಣದ ವಿಶಾಲ ಕಾರ್ಯಕ್ರಮವನ್ನು ಅಳವಡಿಸಿಕೊಂಡಿತು. ೨೧ನೇ ಶತಮಾನದ ಆರಂಭದಿಂದ, ವಾರ್ಷಿಕ ಸರಾಸರಿ ಜಿಡಿಪಿ ಬೆಳವಣಿಗೆಯು 6% ನಿಂದ 7% ಆಗಿದೆ, ಮತ್ತು ೨೦೧೪ ರಿಂದ ೨೦೧೮ರ ವರೆಗೆ, ಭಾರತವು ಚೀನಾವನ್ನು ಮೀರಿಸಿ ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿದ್ದ ಪ್ರಮುಖ ಅರ್ಥವ್ಯವಸ್ಥೆಯಾಗಿತ್ತು. ಐತಿಹಾಸಿಕವಾಗಿ, ೧ ರಿಂದ ೧೯ನೇ ಶತಮಾನದವರೆಗೆ ಎರಡು ಸಹಸ್ರಮಾನಗಳ ಬಹುತೇಕ ಭಾಗದಲ್ಲಿ ಭಾರತವು ವಿಶ್ವದಲ್ಲಿನ ಅತಿ ದೊಡ್ಡ ಅರ್ಥವ್ಯವಸ್ಥೆಯಾಗಿತ್ತು. ಭಾರತದ ಯುವ ಜನತೆ ಮತ್ತು ಕಡಿಮೆಯಿರುವ ಅನುರೂಪವಾದ ಅವಲಂಬನಾ ಅನುಪಾತ, ಆರೋಗ್ಯಕರ ಉಳಿತಾಯಗಳು ಮತ್ತು ಹೂಡಿಕೆ ದರಗಳ ಕಾರಣದಿಂದ ಭಾರತದ ಅರ್ಥವ್ಯವಸ್ಥೆಯ ದೀರ್ಘಾವಧಿ ಬೆಳವಣಿಗೆಯ ದೃಷ್ಟಿಕೋನವು ಸಕಾರಾತ್ಮಕವಾಗಿದೆ. ಭಾರತವು ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಏಕೀಕರಣವನ್ನು ಹೆಚ್ಚಿಸುತ್ತಿದೆ. ೨೦೧೬ರಲ್ಲಿನ ಅನಾಣ್ಯೀಕರಣ ಮತ್ತು ೨೦೧೭ರಲ್ಲಿ ಸರಕು ಮತ್ತು ಸೇವಾ ತೆರಿಗೆಯನ್ನು ಚಾಲ್ತಿಗೆ ತಂದ ನಂತರ ಆದ ಆಘಾತಗಳ ಕಾರಣ ಅರ್ಥವ್ಯವಸ್ಥೆಯು ೨೦೧೭ರಲ್ಲಿ ನಿಧಾನಿಸಿತು. ಭಾರತದ ಜಿಡಿಪಿಯ ಸುಮಾರು 60% ದೇಶೀಯ ಖಾಸಗಿ ಬಳೆಕೆಯಿಂದ ಚಾಲಿತವಾಗಿದೆ ಮತ್ತು ಭಾರತವು ವಿಶ್ವದ ಆರನೇ ಅತಿ ದೊಡ್ಡ ಗ್ರಾಹಕ ಮಾರುಕಟ್ಟೆಯಾಗಿ ಇರುವುದು ಮುಂದುವರೆದಿದೆ. ಖಾಸಗಿ ಬಳೆಯಲ್ಲದೆ, ಭಾರತದ ಜಿಡಿಪಿಯು ಸರ್ಕಾರಿ ವ್ಯಯ, ಹಣಹೂಡಿಕೆ ಮತ್ತು ರಫ್ತುಗಳಿಂದ ಚಾಲಿತವಾಗಿದೆ. ೨೦೧೮ರಲ್ಲಿ, ಭಾರತವು ಹತ್ತನೇ ಅತಿ ದೊಡ್ಡ ಆಮದುಗಾರ ಮತ್ತು ಹತ್ತೊಂಬತ್ತನೇ ಅತಿ ದೊಡ್ಡ ರಫ್ತುದಾರವಾಗಿತ್ತು. ಭಾರತವು ೧೯೯೫ರಿಂದ ವಿಶ್ವ ವ್ಯಾಪಾರ ಸಂಸ್ಥೆಯ ಸದಸ್ಯವಾಗಿದೆ. ಭಾರತವು ವ್ಯವಹಾರ ನಡೆಸುವ ಸುಗಮತೆಯ ಸೂಚ್ಯಂಕದಲ್ಲಿ ೬೩ನೇ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯ ವರದಿಯಲ್ಲಿ ೬೮ನೇ ಸ್ಥಾನ ಪಡೆದಿದೆ. ೫೨೦ ದಶಲಕ್ಷ ಕಾರ್ಮಿಕರಿರುವ ಭಾರತದ ಕಾರ್ಮಿಕ ಬಲವು ೨೦೧೯ರ ವೇಳೆಗೆ ವಿಶ್ವದ ಎರಡನೇ ಅತಿ ದೊಡ್ಡ ಬಲವಾಗಿದೆ. ವಿಶ್ವದ ಅತಿ ಹೆಚ್ಚಿನ ಸಂಖ್ಯೆಯ ಬಿಲಿಯನೇರ್‌ಗಳಿರುವ ದೇಶಗಳಲ್ಲಿ ಭಾರತ ಒಂದೆನಿಸಿದೆ ಮತ್ತು ಅತಿಯಾದ ಆದಾಯ ಅಸಮಾನತೆಯನ್ನು ಹೊಂದಿದೆ. ಭಾರತವು ವಿಶಾಲವಾದ ಅನೌಪಚಾರಿಕ ಅರ್ಥವ್ಯವಸ್ಥೆಯನ್ನು ಹೊಂದಿರುವುದರಿಂದ, ಕೇವಲ 2% ಭಾರತೀಯರು ಆದಾಯ ತೆರಿಗೆಯನ್ನು ಪಾವತಿಸುತ್ತಾರೆ. ೨೦೦೮ರ ಜಾಗತಿಕ ಹಣಕಾಸು ಬಿಕ್ಕಟ್ಟಿನ ವೇಳೆ, ಅರ್ಥವ್ಯವಸ್ಥೆಯು ಸೌಮ್ಯವಾದ ನಿಧಾನೀಕರಣವನ್ನು ಎದುರಿಸಿತು. ಬೆಳವಣಿಗೆಯನ್ನು ಹೆಚ್ಚಿಸಲು ಮತ್ತು ಬೇಡಿಕೆಯನ್ನು ಸೃಷ್ಟಿಸಲು ಭಾರತವು ಉತ್ತೇಜಕ ಕ್ರಮಗಳನ್ನು (ಹಣಕಾಸಿನ ಮತ್ತು ವಿತ್ತೀಯ ಎರಡೂ) ಕೈಗೊಂಡಿತು; ನಂತರದ ವರ್ಷಗಳಲ್ಲಿ ಆರ್ಥಿಕ ಬೆಳವಣಿಗೆಯು ಪುನರೂರ್ಜಿತವಾಯಿತು. ೨೦೧೭ರ ಪಿಡಬ್ಲ್ಯುಸಿ ವರದಿಯ ಪ್ರಕಾರ, ಪಿಪಿಪಿ ಯಲ್ಲಿನ ಭಾರತದ ಜಿಡಿಪಿಯು ೨೦೧೫೦ರ ವೇಳೆಗೆ ಅಮೇರಿಕವನ್ನು ಹಿಂದೆಹಾಕಬಹುದು. ವಿಶ್ವ ಬ್ಯಾಂಕ್ ಪ್ರಕಾರ, ಸುಸ್ಥಿರವಾದ ಆರ್ಥಿಕ ಬೆಳವಣಿಗೆಯನ್ನು ಸಾಧಿಸಲು ಭಾರತವು ಸಾರ್ವಜನಿಕ ವಲಯದ ಸುಧಾರಣೆ, ಮೂಲಸೌಕರ್ಯ, ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ, ಭೂ ಹಾಗೂ ಕಾರ್ಮಿಕ ನಿಯಂತ್ರಣಗಳನ್ನು ತೆಗೆಯುವುದು, ಹಣಕಾಸು ಅಂತರ್ವೇಶನದ ಮೇಲೆ ಕೇಂದ್ರೀಕರಿಸಬೇಕು ಮತ್ತು ಖಾಸಗಿ ಹಣಹೂಡಿಕೆ ಹಾಗೂ ರಫ್ತುಗಳು, ಶಿಕ್ಷಣ ಹಾಗೂ ಸಾರ್ವಜನಿಕ ಆರೋಗ್ಯವನ್ನು ಉತ್ತೇಜಿಸಬೇಕು. ೨೦೧೯ರಲ್ಲಿ, ಅಮೇರಿಕ, ಚೈನಾ, ಯುಎಇ, ಸೌದಿ ಅರೇಬಿಯಾ, ಹಾಂಗ್ ಕಾಂಗ್, ಇರಾಕ್, ಸಿಂಗಾಪುರ, ಜರ್ಮನಿ, ದಕ್ಷಿಣ ಕೊರಿಯಾ ಮತ್ತು ಸ್ವಿಟ್‍ಜ಼ರ್ಲಂಡ್ ಭಾರತದ ಹತ್ತು ಅತಿ ದೊಡ್ಡ ವ್ಯಾಪಾರ ಪಾಲುದಾರರಾಗಿದ್ದವು. 2018–19 ರಲ್ಲಿ, ಭಾರತದಲ್ಲಿ ವಿದೇಶಿ ನೇರ ಬಂಡವಾಳವು (ಎಫ಼್‍ಡಿಐ) $64.4 ಬಿಲಿಯನ್ ಆಗಿತ್ತು. ಸೇವಾ ವಲಯ, ಕಂಪ್ಯೂಟರ್ ಮತ್ತು ದೂರಸಂಪರ್ಕ ಕೈಗಾರಿಕೆಗಳು ಎಫ಼್‍ಡಿಐ ಒಳಹರಿವಿಗೆ ಮುಂಚೂಣಿಯ ವಲಯಗಳಾಗಿದ್ದವು. ಆಸಿಯಾನ್, ಸ್ಯಾಫ಼್ಟಾ, ಮರ್ಕೊಸುರ್, ದಕ್ಷಿಣ ಕೊರಿಯಾ, ಜಪಾನ್ ಸೇರಿದಂತೆ, ಹಲವಾರು ದೇಶಗಳೊಡನೆ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಹೊಂದಿದೆ. ಕೆಲವು ಇತರ ಒಪ್ಪಂದಗಳು ಜಾರಿಯಲ್ಲಿವೆ ಅಥವಾ ಮಾತುಕತೆಯ ಹಂತದಲ್ಲಿವೆ. ಸೇವಾ ವಲಯವು ಜಿಡಿಪಿಯ 55.6% ನಷ್ಟನ್ನು ರೂಪಿಸುತ್ತದೆ ಮತ್ತು ಅತಿ ವೇಗವಾಗಿ ಬೆಳೆಯುತ್ತಿರುವ ವಲಯವಾಗಿ ಉಳಿದುಕೊಂಡಿದೆ. ಕೈಗಾರಿಕಾ ವಲಯ ಮತ್ತು ಕೃಷಿ ವಲಯಗಳು ಕಾರ್ಮಿಕ ಬಲದ ಬಹುಪಾಲಿಗೆ ಉದ್ಯೋಗ ನೀಡಿದೆ. ಮುಂಬೈ ಷೇರುಪೇಟೆ ಮತ್ತು ರಾಷ್ಟ್ರೀಯ ಷೇರುಪೇಟೆಗಳು (ಎನ್ಎಸ್ಇ) ಮಾರುಕಟ್ಟೆ ನಿಷ್ಕರ್ಷಿತ ಮೌಲ್ಯದ ಪ್ರಕಾರ ವಿಶ್ವದ ಅತಿ ದೊಡ್ಡ ಷೇರುಪೇಟೆಗಳಲ್ಲಿ ಒಂದಾಗಿವೆ. ಭಾರತವು ವಿಶ್ವದ ಆರನೇ ಅತಿ ದೊಡ್ಡ ಉತ್ಪಾದಕವಾಗಿದೆ ಮತ್ತು ಜಾಗತಿಕ ಉತ್ಪಾದನಾ ಪ್ರಮಾಣದ 3% ರಷ್ಟನ್ನು ಪ್ರತಿನಿಧಿಸುತ್ತದೆ ಮತ್ತು 57 ದಶಲಕ್ಷಕ್ಕಿಂತ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ. ಸರಿಸುಮಾರು 70% ಭಾರತೀಯರು ಹಳ್ಳಿಗಳಲ್ಲಿದ್ದಾರೆ ಮತ್ತು ಕೃಷಿಯು ಇವರ ಜೀವನೋಪಾಯದ ಪ್ರಮುಖ ಮೂಲವಾಗಿದೆ. ಕೃಷಿಯು ಭಾರತದ ಜಿಡಿಪಿಗೆ ಸುಮಾರು 50% ನಷ್ಟು ಕೊಡುಗೆ ನೀಡುತ್ತದೆ. ಭಾರತವು $476 ಬಿಲಿಯನ್ ಮೊತ್ತದ ವಿಶ್ವದ ಏಳನೇ ಅತಿ ದೊಡ್ಡ ವಿದೇಶೀ ವಿನಿಮಯ ಮೀಸಲು ನಿಧಿಯನ್ನು ಹೊಂದಿದೆ. ಭಾರತದ ರಾಷ್ಟ್ರೀಯ ಸಾಲವು ಹೆಚ್ಚಿದ್ದು ಜಿಡಿಪಿಯ 68% ನಷ್ಟಿದೆ. ವಿತ್ತೀಯ ಕೊರತೆಯು ಜಿಡಿಪಿಯ 3.4% ನಷ್ಟಿದೆ. ಆದರೆ, ೨೦೧೯ರ ಸಿಎಜಿ ವರದಿಯ ಪ್ರಕಾರ, ವಾಸ್ತವಿಕ ವಿತ್ತೀಯ ಕೊರತೆಯು ಜಿಡಿಪಿಯ 5.85% ನಷ್ಟಿದೆ. ಭಾರತದ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಏರುತ್ತಿರುವ ಹೋಕು ಸಾಲಗಳನ್ನು ಎದುರಿಸುತ್ತಿರುವ ಕಾರಣ ಜಮಾಹಣದ ಬೆಳವಣಿಗೆಯು ಕಡಿಮೆಯಾಗುತ್ತಿದೆ. ಇದೇ ವೇಳೆ ಎನ್‍ಬಿಎಫ಼್‍ಸಿ ವಲಯವು ದ್ರವತೆಯ ಬಿಕ್ಕಟ್ಟಿನಲ್ಲಿ ಮುಳುಗಿದೆ. ಭಾರತವು ಹೆಚ್ಚಿನ ನಿರುದ್ಯೋಗ, ಏರುತ್ತಿರುವ ಆದಾಯ ಅಸಮಾನತೆ, ಮತ್ತು ಒಟ್ಟು ಬೇಡಿಕೆಯಲ್ಲಿ ಪ್ರಮುಖ ಕುಸಿತವನ್ನು ಎದುರಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ, ಸರ್ಕಾರವು ವಿವಿಧ ಆರ್ಥಿಕ ದತ್ತಾಂಶಗಳು, ವಿಶೇಷವಾಗಿ ಜಿಡಿಪಿ ಬೆಳವಣಿಗೆಯನ್ನು ಸೃಷ್ಟನೆ ಮಾಡುತ್ತಿದೆ ಎಂದು ಸ್ವತಂತ್ರ ಅರ್ಥಶಾಸ್ತ್ರಜ್ಞರು ಮತ್ತು ಹಣಕಾಸು ಸಂಸ್ಥೆಗಳು ಆರೋಪಿಸಿವೆ. ಆಹಾರ ಮತ್ತು ಕೃಷಿ ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲಿ ಎರಡನೇ ಸ್ಥಾನ ಪಡೆದಿದೆ. ಕೃಷಿ ರಫ್ತುಗಳು $38.5 ಬಿಲಿಯನ್‍ನಷ್ಟು ಇದ್ದವು. ಕೃಷಿಯ ನಂತರ ನಿರ್ಮಾಣ ಮತ್ತು ಸ್ಥಿರಾಸ್ತಿ ವಲಯವು ಎರಡನೇ ಅತಿ ದೊಡ್ಡ ಉದ್ಯೋಗದಾತವಾಗಿದೆ ಮತ್ತು ಆರ್ಥಿಕ ಚಟುವಟಿಕೆಯನ್ನು ಅಂದಾಜಿಸುವ ಪ್ರಮುಖ ವಲಯವಾಗಿದೆ. ಭಾರತದ ಜವಳಿ ಉದ್ಯಮವು $150 ಬಿಲಿಯನ್‍ನಷ್ಟಿದೆ ಎಂದು ಅಂದಾಜಿಸಲಾಗಿದೆ ಮತ್ತು ಕೈಗಾರಿಕಾ ಪ್ರಮಾಣದ 7% ಹಾಗೂ ಭಾರತದ ಜಿಡಿಪಿಗೆ 2% ನಷ್ಟು ಕೊಡುಗೆ ನೀಡುತ್ತದೆ ಮತ್ತು ೪೫ ದಶಲಕ್ಷಕ್ಕಿಂತ ಹೆಚ್ಚು ಜನರಿಗೆ ನೇರವಾಗಿ ಉದ್ಯೋಗ ನೀಡುತ್ತದೆ. ಭಾರತದ ಐಟಿ ಉದ್ಯಮವು ಐಟಿ ಸೇವೆಗಳ ಪ್ರಮುಖ ರಫ್ತುದಾರವಾಗಿದ್ದು ಇದರ ಆದಾಯ $180 ಬಿಲಿಯನ್‍ನಷ್ಟಿದ್ದು ನಾಲ್ಕು ದಶಲಕ್ಷಕ್ಕಿಂತ ಹೆಚ್ಚು ಜನರಿಗೆ ಉದ್ಯೋಗ ನೀಡುತ್ತಿದೆ. ಭಾರತದ ದೂರಸಂಪರ್ಕ ಉದ್ಯಮವು ಮೊಬೈಲ್ ಫ಼ೋನ್, ಸ್ಮಾರ್ಟ್‌ಫ಼ೋನ್ ಹಾಗೂ ಅಂತರಜಾಲ ಬಳಕೆದಾರರ ಸಂಖ್ಯೆಯ ಪ್ರಕಾರ ವಿಶ್ವದ ಎರಡನೇ ಅತಿ ದೊಡ್ಡ ದೂರಸಂಪರ್ಕ ಉದ್ಯಮವಾಗಿದೆ. ಭಾರತವು ವಿಶ್ವದ ಹತ್ತನೇ ಅತಿ ದೊಡ್ಡ ತೈಲ ಉತ್ಪಾದಕ ಮತ್ತು ಮೂರನೇ ಅತಿ ದೊಡ್ಡ ತೈಲ ಗ್ರಾಹಕವಾಗಿದೆ. ಭಾರತದ ಚಿಲ್ಲರೆ ಮಾರುಕಟ್ಟೆಯ ಮೌಲ್ಯ $672 ಬಿಲಿಯನ್‍ನಷ್ಟಿದ್ದು ಭಾರತದ ಜಿಡಿಪಿಗೆ 10% ಕಿಂತ ಹೆಚ್ಚು ಕೊಡುಗೆ ನೀಡುತ್ತದೆ. ಭಾರತವು ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿರುವ ಇ-ಕಾಮರ್ಸ್ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಭಾರತವು ವಿಶ್ವದ ನಾಲ್ಕನೇ ಅತಿ ದೊಡ್ಡ ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿದೆ. ಗಣಿಗಾರಿಕಾ ವಲಯವು ದೇಶದ ಕೈಗಾರಿಕಾ ಜಿಡಿಪಿಯ 11% ನಷ್ಟು ಮತ್ತು ಒಟ್ಟು ಜಿಡಿಪಿಯ 2.5% ನಷ್ಟು ಕೊಡುಗೆ ನೀಡುತ್ತದೆ. ಭಾರತವು ವಿಶ್ವದ ಎರಡನೇ ಅತಿ ದೊಡ್ಡ ಕಲ್ಲಿದ್ದಲು ಉತ್ಪಾದಕ, ಎರಡನೇ ಅತಿ ದೊಡ್ಡ ಸಿಮೆಂಟ್ ಉತ್ಪಾದಕ, ಎರಡನೇ ಅತಿ ದೊಡ್ಡ ಉಕ್ಕಿನ ಉತ್ಪಾದಕ, ಮತ್ತು ಮೂರನೇ ಅತಿ ದೊಡ್ಡ ವಿದ್ಯುತ್ ಉತ್ಪಾದಕವೂ ಆಗಿದೆ. ಇತಿಹಾಸ ಭಾರತದ ಆರ್ಥಿಕ ಇತಿಹಾಸವನ್ನು ಸ್ಥೂಲವಾಗಿ ಮೂರು ಕಾಲಮಾನದಲ್ಲಿ ವಿಂಗಡಿಸಬಹುದು. ಬ್ರಿಟೀಷ್ ವಸಾಹತುಶಾಹಿ ಆಳ್ವಿಕೆ ಪೂರ್ವ ಕಾಲ (೧೭ ಶತಮಾನಕ್ಕಿಂತ ಮೊದಲಿನ ಕಾಲ) ಬ್ರಿಟೀಷ್ ವಸಾಹತುಶಾಹಿ ಆಳ್ವಿಕೆಯ ಕಾಲ(೧೭ನೆ ಶತಮಾನದಿಂದ ೧೯೪೭ರವರೆಗೆ) ಸ್ವಾತಂತ್ರ್ಯಾನಂತರ ಕಾಲ (೧೯೪೭ರಿಂದ ಪ್ರಸ್ತುತ ಕಾಲದವರೆಗೆ) ವಸಾಹತುಶಾಹಿ ಆಳ್ವಿಕೆ ಪೂರ್ವ ಕಾಲ ಕ್ರಿ.ಪೂ. 2800 ರಿಂದ 1800 ರವರೆಗೆ ಮೆರೆದ ಸಿಂಧೂ ಕಣಿವೆಯ ನಾಗರೀಕತೆಯು ಬಹುತೇಕ ಪಟ್ಟಣ ಪ್ರದೇಶಗಳ ಪಕ್ಕಾ ಒಕ್ಕಲುಗಳನ್ನು ಒಳಗೊಂಡಿತ್ತು. ಇಲ್ಲಿಯ ಜನರು ಬೇಸಾಯ ಮತ್ತು ಪಶುಪಾಲನೆಯನ್ನು ರೂಢಿಸಿಕೊಂಡಿದ್ದರು, ಏಕ ರೀತಿಯ ತೂಕ ಮತ್ತು ಅಳತೆಗಳನ್ನು ಬಳಸುತ್ತಿದ್ದರು,ಆಯುಧೋಪಕರಣಗಳನ್ನು ತಯಾರಿಸುತ್ತಿದ್ದರು ಹಾಗೂ ಇತರ ಪಟ್ಟಣಗಳೋಂದಿಗೆ ವ್ಯಾಪಾರ ಸಂಬಂಧವನ್ನು ಇಟ್ಟುಕೊಂಡಿದ್ದರು. ಸುನಿಯೋಜಿತ ಬೀದಿಗಳು,ಚರಂಡಿ ಹಾಗೂ ನೀರು ಸರಬರಾಜು ವ್ಯವಸ್ಥೆ,ಇವೆಲ್ಲವುಗಳ ಕುರುಹು,ನಗರ ಯೋಜನೆಯಲ್ಲಿ ಇವರಿಗಿದ್ದ ಜ್ಞಾನವನ್ನು ತೋರಿಸುತ್ತದೆ.ಅಷ್ಟೇ ಅಲ್ಲ, ಜಗತ್ತಿನ ಮೊಟ್ಟ ಮೊದಲ ನಗರ ನೈರ್ಮಲ್ಯ ವ್ಯವಸ್ಥೆ ಹಾಗೂ ಸ್ಥಳೀಯ ಸರ್ಕಾರಗಳ ಕೀರ್ತಿಯು ಈ ನಾಗರೀಕತೆಗೆ ಸಲ್ಲುತ್ತದೆ. ಈಗ ಭಾರತದ ಭಾಗವಾಗಿರುವ ಆ ಪ್ರದೇಶದ ಬಹುತೇಕ ಜನರು, ಗ್ರಾಮವಾಸಿಗಳಾಗಿದ್ದು,ಅವರ ಹಣಕಾಸು ವ್ಯವಸ್ಥೆಯು ಬಹಳವಾಗಿ ಪ್ರತ್ಯೇಕವಾಗಿದ್ದು, ಸ್ವಾವಲಂಬಿಯಾಗಿತ್ತು. ಬೇಸಾಯ ಮುಖ್ಯ ಉದ್ಯೋಗವಾಗಿತ್ತು.ಅವರ ಕೃಷಿಯು ಗ್ರಾಮದ ಆಹಾರದ ಅಗತ್ಯಗಳನ್ನಷ್ಟೇ ಅಲ್ಲದೆ, ಬಟ್ಟೆ,ಆಹಾರ ಸಂಸ್ಕರಣೆ, ಕರಕುಶಲ ವಸ್ತುಗಳು ಇತ್ಯಾದಿ ಗ್ರಾಮೀಣ ಕೈಗಾರಿಕೆಗಳ ಕಚ್ಚಾ ವಸ್ತುಗಳನ್ನೂ ಪೂರೈಸುತ್ತಿತ್ತು. ಅನೇಕ ರಾಜರುಗಳು ತಮ್ಮದೇ ಆದ ನಾಣ್ಯಗಳನ್ನು ಚಲಾವಣೆಯಲ್ಲಿಟ್ಟಿದ್ದರೂ, ವಸ್ತು ವಿನಿಮಯ ಕೂಡಾ ಬಹಳ ಕಡೆಗಳಲ್ಲಿ ಬಳಕೆಯಲ್ಲಿತ್ತು.ಗ್ರಾಮಸ್ಥರು ತಮ್ಮ ಬೆಳೆಯ ಒಂದು ಪಾಲನ್ನು ಕಂದಾಯವಾಗಿ ಸಲ್ಲಿಸುವುದೂ, ಕುಶಲ ಕಾರ್ಮಿಕರು ಸುಗ್ಗಿಯ ಕಾಲದಲ್ಲಿ ಬೆಳೆಯ ಒಂದು ಪಾಲನ್ನು ತಮ್ಮ ಸೇವೆಯ ಪ್ರತಿಫಲವಾಗಿ ಪಡೆದುಕೊಳ್ಳುವುದೂ ಚಾಲ್ತಿಯಲ್ಲಿತ್ತು. ಧರ್ಮ, ಅದರಲ್ಲೂ ಮುಖ್ಯವಾಗಿ ಹಿಂದೂ ಧರ್ಮ,ಜಾತಿ ಮತ್ತು ಅವಿಭಕ್ತ ಕುಟುಂಬ ಪಧ್ಧತಿಗಳು ಗ್ರಾಮಗಳ ಆರ್ಥಿಕ ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತಿದ್ದವು. ಜಾತಿ ಪಧ್ಧತಿಯು ಸಾಮಾಜಿಕ ನ್ಯೂನತೆಗಳಿಗೆ ಎಡೆ ಮಾಡಿ ಕೊಟ್ಟಿದ್ದರೂ, ಶ್ರಮ ವಿಭಜನೆ, ಹೊಸ ಕಾರ್ಮಿಕರ ತರಬೇತಿ , ಹಾಗೂ ಕೆಲ ಉತ್ಪಾದಕರು ವಿಶೇಷ ಕಾರ್ಯಕಾರಿ ಪಧ್ಧತಿಯನ್ನು ಉಪಯೋಗಿಸುವುದೇ ಇತ್ಯಾದಿಗಳಿಗೆ ಅನುವು ಮಾಡಿಕೊಟ್ಟು, ಮಧ್ಯಕಾಲದ ಯೂರೋಪಿನ ಗಿಲ್ಡ್ ಗಳಂತೆ ಕಾರ್ಯ ನಿರ್ವಹಿಸುತ್ತಿತ್ತು.ಉದಾಹರಣೆಗೆ, ಕೆಲ ಪ್ರದೇಶಗಳಲ್ಲಿ, ಬಟ್ಟೆಯ ಪ್ರತಿಯೊಂದು ಪ್ರಬೇಧವೂ, ಒಂದೊಂದು ಉಪಜಾತಿಯ ವೈಶಿಷ್ಟ್ಯವಾಗಿತ್ತು. ಬ್ರಿಟಿಷ್ ಆಡಳಿತ ಬರುವ ಕಾಲದಲ್ಲಿ, ಭಾರತ ಬಹುತೇಕ , ಹೊಟ್ಟೆಪಾಡಿಗಾಗಿ, ಸರಳ ತಂತ್ರಜ್ಙಾನ ಬಳಸುತ್ತಿದ್ದ, ಸಾಂಪ್ರದಾಯಿಕ ಕೃಷಿ ಪ್ರಧಾನ ದೇಶವಾಗಿತ್ತು. ಪೈಪೋಟಿಯಂದ ಬೆಳೆಯುತ್ತಿದ್ದ ವಾಣಿಜ್ಯ, ಉದ್ಯಮ ಹಾಗೂ ಋಣ ವ್ಯವಸ್ಥೆಗಳೊಂದಿಗೆ ಇದು ಸಹ ಬಾಳ್ವೆ ಮಾಡುತ್ತಿತ್ತು. ವಸಾಹತುಶಾಹಿ ಆಳ್ವಿಕೆಯ ಕಾಲ ಬ್ರಿಟಿಷ್ ಆಡಳಿತ ಆಸ್ತಿ ಹಕ್ಕು, ಅನಿರ್ಬಂಧಿತ ವ್ಯಾಪಾರ, ಸ್ಥಿರ ವಿನಿಮಯ ದರ, ಏಕ ರೀತಿಯ ನಾಣ್ಯ ಪಧ್ಧತಿ ಹಾಗೂ ತೂಕ ಮತ್ತು ಅಳತೆ ಪದ್ಧತಿ, ಮುಕ್ತ ಸಟ್ಟಾ ಮಾರುಕಟ್ಟೆ ಇವೆಲ್ಲವುಗಳನ್ನೂ ಒಳಗೊಂಡ ಸಾಂಸ್ಥಿಕ ವಾತಾವರಣವನ್ನು ಸೃಷ್ಟಿಸಿತು.ಅಷ್ಟೇ ಅಲ್ಲ, ಚೆನ್ನಾಗಿ ಅಭಿವೃಧ್ಧಿಯಾದ ರೈಲು ಹಾಗೂ ಅಂಚೆ ತಂತಿ ವ್ಯವಸ್ಥೆ, ರಾಜಕೀಯ ಹಸ್ತಕ್ಷೇಪದಿಂದ ಮುಕ್ತವಾಗಿದ್ದ ಆಡಳಿತ ವ್ಯವಸ್ಥೆ, ಆಧುನಿಕ ಕಾನೂನು ವ್ಯವಸ್ಥೆ ಇವುಗಳನ್ನೂ ಬ್ರಿಟಿಷ್ ಆಡಳಿತ ಜಾರಿಗೆ ತಂದಿತು. ಕಾಕತಾಳೀಯವಾಗಿ, ಇದೇ ಸಮಯದಲ್ಲಿ ಜಗತ್ತಿನ ಅರ್ಥಿಕ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳಾಗುತ್ತಿದ್ದವು -ಕೈಗಾರಿಕೀಕರಣ, ಉತ್ಪಾದನೆ ಹಾಗೂ ವಾಣಿಜ್ಯ ವಹಿವಾಟುಗಳಲ್ಲಿ ಹೆಚ್ಚಳ, ರಾಷ್ಟ್ರಗಳು ಅನುಸರಿಸುತ್ತಿದ್ದ ಅರ್ಥಿಕ ಧೋರಣೆಯಲ್ಲಿ ಹೊಸ ವಿಚಾರಗಳು ಇತ್ಯಾದಿ.ಅದರೂ ಬ್ರಿಟಿಷರು ಬಿಟ್ಟು ಹೋದಾಗ ಭಾರತ ಪ್ರಪಂಚದ ಅತಿ ಬಡ ರಾಷ್ಟ್ರಗಳಲ್ಲಿ ಒಂದಾಗಿತ್ತು. ಕೈಗಾರಿಕೆಗಳು ಇದ್ದಲ್ಲೇ ಇದ್ದು, ಅಭಿವೃಧ್ಧಿ ಸ್ಥಗಿತವಾಗಿತ್ತು. ಪದೇ ಪದೇ ಬಂದೆರಗುತ್ತಿದ್ದ ಕ್ಷಾಮದಿಂದ ಕಂಗಾಲಾಗಿದ್ದ ಭಾರತ ಹೆಚ್ಚುತ್ತಿದ್ದ ಜನಸಂಖ್ಯೆಯ ಹಸಿವನ್ನು ನೀಗಿಸಲು ಭಾರತೀಯ ಕೃಷಿ ಅಸಮರ್ಥವಾಗಿತ್ತು. ಈ ಕಾಲದಲ್ಲಿ ಭಾರತ ವಿಶ್ವದ ಅತಿ ಕಮ್ಮಿ ಆಯುಷ್ಯ ಪ್ರಮಾಣ ಹೊಂದಿರುವ ದೇಶವಾಗಿತ್ತು ಮತ್ತು ಅದರ ಜನಸಂಖ್ಯೆಯ ಬಹುಭಾಗ ಆಹಾರ ಪೋಷಣೆಯಿಂದ ವಂಚಿತ ಹಾಗು ಅನಕ್ಷರಸ್ಥವಾಗಿತ್ತು ಕೇಂಬ್ರಿಜ್ ವಿಶ್ವವಿದ್ಯಾನಿಲಯದ ಇತಿಹಾಸಕಾರ ಅಂಗಸ್ ಮ್ಯಾಡಿಸನ್ ರವರ ಅಂದಾಜಿನ ಪ್ರಕಾರ ಜಗತ್ತಿನ ಒಟ್ಟು ಉತ್ಪತ್ತಿಯಲ್ಲಿ ಭಾರತದ ಪಾಲು ೧೭೦೦ರಲ್ಲಿ ಶೇಕಡಾ ೨೨.೬(ಯುರೋಪ್ ಪಾಲು ೨೩.೩%) ಇದ್ದದ್ದು ೧೯೫೨ರಲ್ಲಿ ಕೇವಲ ಶೇಕಡಾ ೩.೮ಕ್ಕೆ ಇಳಿಯಿತು. ಈ ನಿರಾಶಾದಾಯಕ ಪರಿಸ್ಥಿತಿಗೆ, ಸ್ವಾತಂತ್ರ್ಯ ಹೋರಾಟ ಕಾಲದ ಭಾರತೀಯ ಮುಖಂಡರು ಹಾಗೂ "ಎಡ-ರಾಷ್ಟ್ರೀಯವಾದೀ" ಆರ್ಥಿಕ ಇತಿಹಾಸಕಾರರು ಬ್ರಿಟಿಷ್ ಆಳ್ವಿಕೆಯತ್ತ ಬೊಟ್ಟು ಮಾಡಿ ತೋರಿಸಿದರೂ,ವಸಾಹತುಶಾಹಿ ಆಳ್ವಿಕೆ ತಂದ ಬದಲಾವಣೆಗಳು ಹಾಗೂ ಕೈಗಾರಿಕೀಕರಣ ಮತ್ತು ಆರ್ಥಿಕ ಏಕೀಕರಣದತ್ತ ಸಾಗುತ್ತಿದ್ದ ಜಗತ್ತು , ಇವುಗಳ ಒಟ್ಟು ಪರಿಣಾಮದಿಂದ, ಭಾರತದ ಅರ್ಥ ವ್ಯವಸ್ಥೆಯ ಕೆಲವು ಅಂಗಗಳು ಬೆಳೆದಿರುವುದೂ, ಇನ್ನೂ ಕೆಲವು ಅಂಗಗಳು ಕುಂಠಿತವಾಗಿರುವುದೂ,ಆ ಕಾಲದ ಭಾರತೀಯ ಅರ್ಥ ವ್ಯವಸ್ಥೆಯ ಪಕ್ಷಿನೋಟದಲ್ಲಿ ಕಾಣಬರುತ್ತದೆ. ಸ್ವಾತಂತ್ರ್ಯಾನಂತರ ಕಾಲ ಸ್ವಾತಂತ್ರ್ಯಾನಂತರ , ವಸಾಹತುಶಾಹಿ ಅನುಭವ ( ಭಾರತೀಯ ಮುಖಂಡರು ಇದನ್ನು ಶೋಷಣಾತ್ಮಕವಾಗಿ ಕಂಡಿದ್ದರು),ಫೇಬಿಯನ್ ಸಮಾಜವಾದದ ಪರಿಚಯ ಇವುಗಳ ಪ್ರಭಾವದಿಂದ ಭಾರತದ ಆರ್ಥಿಕ ಧೋರಣೆಯು (policy) ರಕ್ಷಣಾತ್ಮಕವಾಯಿತು (protectionist).ಆಮದು ವಸ್ತುಗಳ ಸ್ಡದೇಶೀಕರಣ,ಕೈಗಾರಿಕೀಕರಣ,ಶ್ರಮ (labour)ಹಾಗೂ ಹಣಕಾಸು ರಂಗಗಳಲ್ಲಿ ಸರಕಾರೀ ನಿಯಂತ್ರಣ , ಬೃಹತ್ ಸರಕಾರೀ ಉದ್ಯಮ ರಂಗ, ಖಾಸಗೀ ಉದ್ಯಮಕ್ಕೆ ಕಟ್ಟುಪಾಡುಗಳು , ಕೇಂದ್ರೀಕೃತ ಯೋಜನೆ ಇವೆಲ್ಲವೂ ಈ ಧೋರಣೆಯಲ್ಲಿ ಅಡಕವಾಗಿದ್ದವು.ಭಾರತದ ಮೊಟ್ಟಮೊದಲ ಪ್ರಧಾನ ಮಂತ್ರಿ ಜವಹರಲಾಲ್ ನೆಹರೂ , ಅಂಕಿಅಂಶಜ್ಞ ಪ್ರಶಾಂತ ಚಂದ್ರ ಮಹಲನೋಬಿಸ್‌ರೊಂದಿಗೆ ಈ ಸ್ವತಂತ್ರ ಭಾರತದ ಆರ್ಥಿಕ ಧೋರಣೆಯನ್ನು ಹುಟ್ಟುಹಾಕಿ, ಅದನ್ನು ಜಾರಿಗೆ ತರುವಲ್ಲಿ ಮೇಲ್ವಿಚಾರಣೆ ಮಾಡಿದರು. ಇದರಲ್ಲಿ ಸೋವಿಯತ್ ರಶಿಯಾದ ಕೇಂದ್ರೀಕೃತ ಅಧಿಕಾರ ವ್ಯವಸ್ಥೆಯಂತಲ್ಲದೆ, ಸರಕಾರೀ ಹಾಗೂ ಖಾಸಗೀ ರಂಗಗಳೆರಡಕ್ಕೂ ಅವಕಾಶಗಳಿತ್ತು; ಪ್ರತ್ಯಕ್ಷ ಹಾಗೂ ಪರೋಕ್ಷ ಸರಕಾರೀ ನಿಯಂತ್ರಣಗಳಿದ್ದವು. ಈ ಕಾರಣಗಳಿಂದಾಗಿ, ತಮ್ಮ ಈ ಧೋರಣೆಗೆ ಅವರು ಒಳ್ಳೆಯ ಫಲಿತಾಂಶವನ್ನು ನಿರೀಕ್ಷಿಸಿದ್ದರು. ಬಂಡವಾಳ ಹಾಗೂ ತಾಂತ್ರಿಕತೆಯನ್ನು ಬೇಡುವ ಭಾರೀ ಕೈಗಾರಿಕೆಗಳೊಂದಿಗೆ , ಹೆಚ್ಚು ನಿಪುಣತೆಯ ಅಗತ್ಯವಿಲ್ಲದ , ಕೈಯಿಂದಲೇ ಮಾಡಬಹುದಾದ ಗುಡಿ ಕೈಗಾರಿಕೆಗಳ ಸರಕಾರೀ ಸಹಾಯಧನಕ್ಕೂ ಒತ್ತು ಕೊಟ್ಟ ಈ ಧೋರಣೆಯನ್ನು ಅರ್ಥ ಶಾಸ್ತ್ರಜ್ಞ ಮಿಲ್ಟನ್ ಫ್ರೀಡ್ಮನ್ನರು ಟೀಕಿಸಿ , ಈ ಧೊರಣೆಯಿಂದ ಬಂಡವಾಳ ಹಾಗೂ ಪರಿಶ್ರಮಗಳು ಪೋಲಾಗುವುದಷ್ಟೇ ಅಲ್ಲದೆ, ಸಣ್ಣ ಉದ್ಯಮಗಳ ಬೆಳವಣಿಗೆಯೂ ಕುಂಠಿತವಾಗಬಹುದೆಂದು ಅಭಿಪ್ರಾಯಪಟ್ಟರು. ಎಂಬತ್ತರ ದಶಕದಲ್ಲಿ ಭಾರತದ ಆರ್ಥಿಕ ಅಭಿವೃಧ್ಧಿಯ ಸರಾಸರಿ ವೇಗವು, ಏಶಿಯಾದ ಕೆಲವು ಇತರ ದೇಶಗಳ( ಮುಖ್ಯವಾಗಿ ಪೂರ್ವ ಏಶಿಯಾದ ದೇಶಗಳ) ತೀವ್ರ ಗತಿಗೆ ವ್ಯತಿರಿಕ್ತವಾಗಿ, ಕಡಿಮೆಯಿದ್ದು,ಇದನ್ನು "ಹಿಂದೂ ಅಭಿವೃಧ್ಧಿಯ ವೇಗ" ಎಂದು ಕುಹಕವಾಡಲಾಗುತ್ತಿತ್ತು. ಎಂಭತ್ತರ ನಂತರ ದಾಪುಗಾಲು ಹಾಕತೊಡಗಿದ ಆರ್ಥಿಕ ಬೆಳವಣಿಗೆಗೆ ಎರಡು ಹಂತದ ಸುಧಾರಣೆಗಳು ಕಾರಣವಾದವು. ಒಂದು: ಇಂದಿರಾ ಗಾಂಧಿಯವರು ಶುರುಮಾಡಿ, ರಾಜೀವ ಗಾಂಧಿಯವರು ಮುಂದುವರಿಸಿದ ಖಾಸಗೀ ಉದ್ಯಮ ಪರವಾದ ಸುಧಾರಣೆಗಳು. ಈಗಾಗಲೇ ಕಾರ್ಯನಿರತವಾಗಿರುವ ಉದ್ಯಮಗಳ ಉತ್ಪತ್ತಿಯನ್ನು ವಿಸ್ತರಿಸಲು ವಿಧಿಸಲಾಗಿದ್ದ ಕಟ್ಟುಪಾಡುಗಳನ್ನು ಸಡಿಲಗೊಳಿಸಲಾಯಿತು. ಬೆಲೆ ನಿಯಂತ್ರಣಗಳನ್ನು ತೆಗೆದುಹಾಕಲಾಯಿತು ಹಾಗೂ ಉದ್ಯಮ ರಂಗದ ಮೇಲೆ ವಿಧಿಸಲಾಗಿದ್ದ ಕರವನ್ನು ಕಡಿಮೆ ಮಾಡಲಾಯಿತು. ಎರಡು: ೧೯೯೧ರಲ್ಲಿ ಆಗಿನ ಪ್ರಧಾನಿ ಪಿ.ವಿ. ನರಸಿಂಹರಾವ್ ಮತ್ತು ಅವರ ಹಣಕಾಸು ಮಂತ್ರಿ ಮನಮೋಹನ ಸಿಂಗ್, ಭಾರತ ಎದುರಿಸುತ್ತಿದ್ದ ತೀವ್ರ ಆರ್ಥಿಕ ಸಂಕಟಕ್ಕೆ ಪ್ರತಿಕ್ರಿಯೆಯಾಗಿ, ಪ್ರಾರಂಭಿಸಿದ ಆರ್ಥಿಕ ಉದಾರೀಕರಣ(liberalisation). ಹಣ ಹೂಡಿಕೆ, ಕೈಗಾರಿಕಾ ಹಾಗೂ ಆಮದು ಕ್ಷೇತ್ರಗಳಲ್ಲಿ ಲೈಸೆನ್ಸ್ ರಾಜ್ಯವನ್ನು ತೆಗೆದುಹಾಕಲಾಯಿತು. ಅನೇಕ ರಂಗಳಲ್ಲಿದ್ದ ಸರಕಾರೀ ಏಕಸ್ವಾಮ್ಯವನ್ನು ನಿರ್ಮೂಲಿಸಿ, ಪರದೇಶೀ ಹಣ ಹೂಡಿಕೆಗೆ ಬಹಳಷ್ಟು ಕ್ಷೇತ್ರಗಳಲ್ಲಿ ಪರವಾನಗಿಯನ್ನು ಸ್ವಯಂಚಾಲಿತವಾಗಿಸಲಾಯಿತು (automatic approval ). ಅಂದಿನಿಂದ ಇಲ್ಲಿಯವರೆಗೆ, ಕಾರ್ಮಿಕ ಸಂಘಟನೆಗಳು,ರೈತರು ಇತ್ಯಾದಿ ಪಟ್ಟಭದ್ರ ಶಕ್ತಿಗಳನ್ನೇ ಆಗಲೀ, ಅಥವಾ ಕಾರ್ಮಿಕ ಕ್ಷೇತ್ರದಲ್ಲಿ ಸುಧಾರಣೆಗಳು, ಕೃಷಿಕರ ಸಹಾಯಧನದಲ್ಲಿ ಕಡಿತ ಇತ್ಯಾದಿ ಸಮಸ್ಯಾತ್ಮಕ ಪ್ರಶ್ನೆಗಳನ್ನೇ ಆಗಲೀ, ಎದುರಿಸುವ ಪ್ರಯತ್ನವನ್ನು ಯಾವ ಪಕ್ಷವೂ ಮಾಡಿಲ್ಲದಿದ್ದರೂ ಕೂಡಾ, ಅಧಿಕಾರದಲ್ಲಿದ್ದದ್ದು ಯಾವುದೇ ಪಕ್ಷವಾಗಿರಲಿ, ಉದಾರೀಕರಣ ಸರಿಸುಮಾರಾಗಿ ಅದೇ ದಿಕ್ಕಿನಲ್ಲಿ ಮುಂದೆ ಸಾಗಿದೆ. ಭಾರತದ ಆರ್ಥಿಕತೆ ೨೦೧೪ - ೨೦೧೮ 2018ರಲ್ಲಿ ಭಾರತವು ವಿಶ್ವದಲ್ಲಿ 6ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿತು. ರೂ.176.59 ಲಕ್ಷ ಕೋಟಿಗಳಷ್ಟು ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) (2012ರಲ್ಲಿ 2ಲಕ್ಷ ಕೋಟಿ ಇತ್ತೆಂದು ವರದಿಯಾಗಿದೆ) ಹೊಂದಿರುವ ಭಾರತ, 2017ರಲ್ಲಿ ಫ್ರಾನ್ಸ್‌ ಅನ್ನು 7ನೇ ಸ್ಥಾನಕ್ಕೆ ಹಿಂದಿಕ್ಕಿದೆ ಎಂದು ವಿಶ್ವಬ್ಯಾಂಕ್‌ ಸಿದ್ಧಪಡಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಫ್ರಾನ್ಸ್‌ನ ‘ಜಿಡಿಪಿ’ಯು ರೂ. 175.57 ಲಕ್ಷ ಕೋಟಿಗಳಷ್ಟಿದೆ. ಈ ವರ್ಷದ ಮಾರ್ಚ್‌ ಅಂತ್ಯಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ, ಆರ್ಥಿಕ ವೃದ್ಧಿ ದರವು ಶೇ 7.7ರಷ್ಟು ದಾಖಲಾಗಿದೆ. ಆದರೆ ದೇಶದ ತಲಾ ಆದಾಯವು 2018ರಲ್ಲಿಯೂ ಕಡಿಮೆ ಮಟ್ಟದಲ್ಲಿ ಇದೆ. ಭಾರತದ ತಲಾ ಆದಾಯ ಫ್ರಾನ್ಸ್‌ಗಿಂತ 20 ಪಟ್ಟು ಕಡಿಮೆ ಇದೆ ಎಂದು ರಾಜೀವ್‌ ಕುಮಾರ್, ನೀತಿ ಆಯೋಗದ ಉಪಾಧ್ಯಕ್ಷರು, ಹೇಳಿಕೆ ನೀಡಿದರು.[; ಆದಾಗ್ಯೂ, 2016-17 ಮತ್ತು 2017-18ರಲ್ಲಿ ಕ್ರಮವಾಗಿ 7.1% ಮತ್ತು 6.6% ಕ್ಕೆ, ಭಾಗಶಃ 2016 ರ ಭಾರತೀಯ ಬ್ಯಾಂಕ್ ನೋಟಿನ ರದ್ದು ಮತ್ತು ಗೂಡ್ಸ್ ಮತ್ತು ಸೇವಾ ತೆರಿಗೆ (ಭಾರತ) ದ ತೀವ್ರ ಬದಲಾವಣೆಯ ಪರಿಣಾಮದಿಂದಾಗಿ ಬೆಳವಣಿಗೆ ದರವು ತಗ್ಗಿಸಲ್ಪಟ್ಟಿತ್ತು. ದತ್ತಾಂಶಗಳು ಕೆಳಗಿನ ಪಟ್ಟಿಯು 1980–2018 ಅವಧಿಯಲ್ಲಿನ ಮುಖ್ಯ ಆರ್ಥಿಕ ಸೂಚಕಗಳನ್ನು ತೋರಿಸುತ್ತದೆ. 5% ಗಿಂತ ಕೆಳಗಿರುವ ಹಣದುಬ್ಬರವು ಹಸಿರು ಬಣ್ಣದಲ್ಲಿದೆ. ವಲಯಗಳು ಐತಿಹಾಸಿಕವಾಗಿ, ಭಾರತವು ತನ್ನ ಅರ್ಥವ್ಯವಸ್ಥೆ ಮತ್ತು ಜಿಡಿಪಿಯನ್ನು ಮೂರು ವಲಯಗಳಲ್ಲಿ ವರ್ಗೀಕರಿಸಿ ಅನುಸರಿಸಿದೆ: ಕೃಷಿ, ಕೈಗಾರಿಕೆ, ಮತ್ತು ಸೇವೆಗಳು. ಕೃಷಿಯಲ್ಲಿ ಬೆಳೆಗಳು, ತೋಟಗಾರಿಕೆ, ಹಾಲು ಹಾಗೂ ಪಶು ಸಂಗೋಪನೆ, ಜಲಚರ ಸಾಕಣೆ, ಮೀನುಗಾರಿಕೆ, ರೇಷ್ಮೆಕೃಷಿ, ಹಕ್ಕಿ ಸಾಕಣೆ, ಅರಣ್ಯ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳು ಸೇರಿವೆ. ಕೈಗಾರಿಕೆಯಲ್ಲಿ ವಿವಿಧ ಉತ್ಪಾದನಾ ಉಪವಲಯಗಳು ಸೇರಿವೆ. ಸೇವಾ ವಲಯದ ಭಾರತೀಯ ವ್ಯಾಖ್ಯಾನದಲ್ಲಿ ನಿರ್ಮಾಣ, ಚಿಲ್ಲರೆ ವ್ಯಾಪಾರ, ಸಾಫ಼್ಟ್‌ವೇರ್, ಐಟಿ, ಸಂಪರ್ಕವ್ಯವಸ್ಥೆ, ಆತಿಥ್ಯ, ಮೂಲಸೌಕರ್ಯ ಕಾರ್ಯಗಳು, ಶಿಕ್ಷಣ, ಆರೋಗ್ಯ ಆರೈಕೆ, ಬ್ಯಾಂಕಿಂಗ್ ಹಾಗೂ ವಿಮೆ, ಮತ್ತು ಅನೇಕ ಇತರ ಆರ್ಥಿಕ ಚಟುವಟಿಕೆಗಳು ಸೇರಿವೆ. ಕೃಷಿ ಕೃಷಿ ಮತ್ತು ಅರಣ್ಯ ಕೃಷಿ, ಲಾಗಿಂಗ್ ಮತ್ತು ಮೀನುಗಾರಿಕೆಯಂತಹ ಸಂಬಂಧಿತ ವಲಯಗಳು ಜಿಡಿಪಿಯ 17% ರಷ್ಟನ್ನು ರೂಪಿಸುತ್ತವೆ. ಈ ವಲಯವು ೨೦೧೪ರಲ್ಲಿ ತನ್ನ ಒಟ್ಟು ಕಾರ್ಯಪಡೆಯ 49% ಜನರಿಗೆ ಉದ್ಯೋಗ ನೀಡಿತ್ತು. ೨೦೧೬ರಲ್ಲಿ ಕೃಷಿಯು ಜಿಡಿಪಿಯ 23% ರಷ್ಟನ್ನು ರೂಪಿಸಿತ್ತು, ಮತ್ತು ದೇಶದ ಒಟ್ಟು ಕಾರ್ಯಪಡೆಯ 59% ಜನರಿಗೆ ಉದ್ಯೋಗ ನೀಡಿತ್ತು. ಭಾರತದ ಅರ್ಥವ್ಯವಸ್ಥೆಯು ವೈವಿಧ್ಯಗೊಂಡು ಬೆಳೆದಂತೆ, ೧೯೫೧ರಿಂದ ೨೦೧೧ರ ವರೆಗೆ ಜಿಡಿಪಿಗೆ ಕೃಷಿಯ ಕೊಡುಗೆ ಸ್ಥಿರವಾಗಿ ಇಳಿದಿದೆ. ಆದರೆ ಇದು ಈಗಲೂ ದೇಶದ ಅತಿ ದೊಡ್ಡ ಉದ್ಯೋಗ ಮೂಲ ಮತ್ತು ದೇಶದ ಒಟ್ಟಾರೆ ಸಮಾಜಾರ್ಥಿಕ ಬೆಳವಣಿಗೆಯ ಗಣನೀಯ ಅಂಶವಾಗಿದೆ. ಪಂಚವಾರ್ಷಿಕ ಯೋಜನೆಗಳಲ್ಲಿ ಕೃಷಿ ಮೇಲೆ ಇಡಲಾದ ವಿಶೇಷ ಒತ್ತು ಮತ್ತು ನೀರಾವರಿ, ತಂತ್ರಜ್ಞಾನದಲ್ಲಿ ಸ್ಥಿರವಾದ ಸುಧಾರಣೆಗಳು, ಆಧುನಿಕ ಕೃಷಿ ಅಭ್ಯಾಸಗಳ ಅನ್ವಯ ಮತ್ತು ಹಸಿರು ಕ್ರಾಂತಿಯ ಕಾಲದಿಂದ ಕೃಷಿ ಸಾಲ ಹಾಗೂ ಸಬ್ಸಿಡಿಗಳನ್ನು ಒದಗಿಸಿದ ಕಾರಣದಿಂದ, ಪ್ರತಿ ಘಟಕ ಪ್ರದೇಶದಲ್ಲಿ ಎಲ್ಲ ಬೆಳೆಗಳ ಇಳುವರಿಯು ೧೯೫೦ರಿಂದ ಹೆಚ್ಚಾಗಿದೆ. ಆದರೆ ಅಂತರರಾಷ್ಟ್ರೀಯ ಇಳುವರಿಗೆ ಹೋಲಿಸಿದರೆ ಭಾರತದಲ್ಲಿ ಸರಾಸರಿ ಇಳುವರಿಯು ಸಾಮಾನ್ಯವಾಗಿ ವಿಶ್ವದಲ್ಲಿನ ಅತಿ ಹೆಚ್ಚು ಸರಾಸರಿ ಇಳುವರಿಯ 30% ರಿಂದ 50% ನಷ್ಟಿದೆ ಎಂದು ಬಹಿರಂಗಗೊಳ್ಳುತ್ತದೆ. ಭಾರತೀಯ ಕೃಷಿಗೆ ಪ್ರಧಾನವಾಗಿ ಕೊಡುಗೆ ನೀಡುವ ರಾಜ್ಯಗಳೆಂದರೆ ಉತ್ತರ ಪ್ರದೇಶ, ಪಂಜಾಬ್, ಹರಿಯಾಣಾ, ಮಧ್ಯ ಪ್ರದೇಶ, ಆಂಧ್ರ ಪ್ರದೇಶ, ತೆಲಂಗಾಣ, ಬಿಹಾರ್, ಪಶ್ಚಿಮ ಬಂಗಾಳ, ಗುಜರಾತ್ ಮತ್ತು ಮಹಾರಾಷ್ಟ್ರ.ಭಾರತವು ವಾರ್ಷಿಕವಾಗಿ ಸರಾಸರಿ 1208 ಮಿ.ಮಿ ನಷ್ಟು ಮಳೆಯನ್ನು ಮತ್ತು ಒಟ್ಟು 4000 ಬಿಲಿಯನ್ ಘನ ಮೀಟರ್‌ನಷ್ಟು ಅವಕ್ಷೇಪನವನ್ನು ಪಡೆಯುತ್ತದೆ. ಮೇಲ್ಮೈ ಮತ್ತು ಅಂತರ್ಜಲ ಸೇರಿದಂತೆ ಒಟ್ಟು ಬಳಸಬಲ್ಲ ಜಲ ಸಂಪನ್ಮೂಲಗಳು 1123 ಬಿಲಿಯನ್ ಘನ ಮೀಟರ್‌ನಷ್ಟಿವೆ. ಭೂ ಪ್ರದೇಶದ 546,820 ಚದರ ಕಿ.ಮಿ ಅಥವಾ ಒಟ್ಟು ಕೃಷಿ ಪ್ರದೇಶದ ೩೯% ನಷ್ಟು ನೀರಾವರಿ ಪಡೆದಿದೆ. ಭಾರತದ ಒಳನಾಡು ಜಲ ಸಂಪನ್ಮೂಲಗಳು ಮತ್ತು ಕಡಲ ಸಂಪನ್ಮೂಲಗಳು ಮೀನುಗಾರಿಕಾ ವಲಯದಲ್ಲಿ ಸುಮಾರು ಆರು ಮಿಲಿಯನ್ ಜನರಿಗೆ ಉದ್ಯೋಗವನ್ನು ನೀಡುತ್ತವೆ. ೨೦೧೦ರಲ್ಲಿ, ಭಾರತವು ವಿಶ್ವದ ಆರನೇ ಅತಿ ದೊಡ್ಡ ಮೀನುಗಾರಿಕಾ ಉದ್ಯಮವನ್ನು ಹೊಂದಿತ್ತು. ಭಾರತವು ಹಾಲು, ಸೆಣಬು ಮತ್ತು ದ್ವಿದಳಧಾನ್ಯಗಳ ಅತಿ ದೊಡ್ಡ ಉತ್ಪಾದಕವಾಗಿದೆ ಮತ್ತು ವಿಶ್ವದ ಎರಡನೇ ಅತಿ ದೊಡ್ಡ ಜಾನುವಾರು ಸಮೂಹವನ್ನು (೨೦೧೧ರಲ್ಲಿ ೧೭೦ ದಶಲಕ್ಷ ಪ್ರಾಣಿಗಳು) ಹೊಂದಿದೆ. ಭಾರತವು ಅಕ್ಕಿ, ಗೋಧಿ, ಕಬ್ಬು, ಹತ್ತಿ ಮತ್ತು ಕಡಲೇಕಾಯಿಯ ಎರಡನೇ ಅತಿ ದೊಡ್ಡ ಉತ್ಪಾದಕವಾಗಿದೆ, ಜೊತೆಗೆ ಹಣ್ಣು ಮತ್ತು ತರಕಾರಿಗಳ ಎರಡನೇ ಅತಿ ದೊಡ್ಡ ಉತ್ಪಾದಕವಾಗಿದೆ, ಮತ್ತು ವಿಶ್ವದ ಹಣ್ಣು ಹಾಗೂ ತರಕಾರಿ ಉತ್ಪಾದನೆಯ ೧೦.೯% ಹಾಗೂ ೮.೬% ನಷ್ಟನ್ನು ರೂಪಿಸುತ್ತದೆ. ಭಾರತವು ರೇಷ್ಮೆಯ ಎರಡನೇ ಅತಿ ದೊಡ್ಡ ಉತ್ಪಾದಕ (೨೦೦೫ರಲ್ಲಿ ೭೭,೦೦೦ ಟನ್ನುಗಳು) ಮತ್ತು ಅತಿ ದೊಡ್ಡ ಗ್ರಾಹಕವಾಗಿದೆ. ಭಾರತವು ಗೋಡಂಬಿ ಬೀಜಗಳು ಮತ್ತು ಗೋಡಂಬಿ ಕರಟ ದ್ರವದ ಅತಿ ದೊಡ್ಡ ರಫ್ತುದಾರವಾಗಿದೆ. ೨೦೧೧-೧೨ರಲ್ಲಿ ಗೋಡಂಬಿ ಬೀಜಗಳಿಂದ 4,390 ಕೊಟಿಯಷ್ಟು ವಿದೇಶಿ ಹಣವನ್ನು ಸಂಪಾದಿಸಲಾಯಿತು. ಕೇರಳದ ಕೊಲ್ಲಮ್‍ನಲ್ಲಿ ಸುಮಾರು ೬೦೦ ಗೋಡಂಬಿ ಸಂಸ್ಕರಣಾ ಘಟಕಗಳಿವೆ. ಭಾರತದ ಆಹಾರಧಾನ್ಯ ಉತ್ಪಾದನೆಯು ೨೦೧೫-೧೬ರಲ್ಲಿ ಸುಮಾರು ೨೫೨ ದಶಲಕ್ಷ ಟನ್ನುಗಳಷ್ಟಿತ್ತು. ಭಾರತವು ಬಾಸ್ಮತಿ ಅಕ್ಕಿ, ಗೋಧಿ, ಧಾನ್ಯಗಳು, ಸಂಬಾರ ಪದಾರ್ಥಗಳು, ತಾಜಾ ಹಣ್ಣುಗಳು, ಒಣಫಲಗಳು, ಎಮ್ಮೆ ಮಾಂಸ, ಹತ್ತಿ, ಚಹಾ, ಕಾಫಿ ಮತ್ತು ಇತರ ವಾಣಿಜ್ಯ ಬೆಳೆಗಳಂತಹ ಹಲವಾರು ಕೃಷಿ ಉತ್ಪನ್ನಗಳನ್ನು ರಫ್ತು ಮಾಡುತ್ತದೆ, ವಿಶೇಷವಾಗಿ ಮಧ್ಯಪ್ರಾಚ್ಯ, ಆಗ್ನೇಯ ಹಾಗೂ ಪೂರ್ವ ಏಷ್ಯಾದ ದೇಶಗಳಿಗೆ. ಭಾರತದ ವಿದೇಶಿ ಗಳಿಕೆಯ ಸುಮಾರು ೧೦ ಪ್ರತಿಶತ ಈ ವ್ಯಾಪಾರದಿಂದ ಬರುತ್ತದೆ. ಸುಮಾರು 1530000 ಚದರ ಕಿ.ಮಿ. ನೊಂದಿಗೆ, ಅಮೇರಿಕದ ನಂತರ ಭಾರತವು ಕೃಷಿಯೋಗ್ಯ ಭೂಮಿಯ ಎರಡನೇ ಅತಿ ದೊಡ್ಡ ಪ್ರಮಾಣವನ್ನು ಹೊಂದಿದೆ ಮತ್ತು ಒಟ್ಟು ಭೂಮಿಯ 52% ನಷ್ಟು ಕೃಷಿ ಮಾಡಲ್ಪಟ್ಟಿದೆ. ದೇಶದ ಒಟ್ಟು ಭೂಪ್ರದೇಶವು ಚೈನಾ ಅಥವಾ ಅಮೇರಿಕದ ಮೂರನೇ ಒಂದು ಭಾಗಕ್ಕಿಂತ ಕೇವಲ ಸ್ವಲ್ಪ ಹೆಚ್ಚಿದೆಯಾದರೂ, ಭಾರತದ ಕೃಷಿಯೋಗ್ಯ ಭೂಮಿಯು ಅಮೇರಿಕಕ್ಕಿಂತ ಸ್ವಲ್ಪಮಟ್ಟಿಗೆ ಕಡಿಮೆಯಿದೆ, ಮತ್ತು ಚೈನಾದಕ್ಕಿಂತ ಸ್ವಲ್ಪಮಟ್ಟಿಗೆ ಹೆಚ್ಚಿದೆ. ಆದರೆ, ಕೃಷಿ ಹುಟ್ಟುವಳಿಯು ಅದರ ಸಾಮಾರ್ಥ್ಯದ ಬಹಳ ಹಿಂದೆ ಬಿದ್ದಿದೆ. ಭಾರತದ ಅಲ್ಪ ಉತ್ಪನ್ನತೆಯು ಹಲವಾರು ಅಂಶಗಳ ಪರಿಣಾಮವಾಗಿದೆ. ವಿಶ್ವ ಬ್ಯಾಂಕ್ ಪ್ರಕಾರ, ಭಾರತದ ಹೆಚ್ಚಿನ ಕೃಷಿ ಸಹಾಯಧನಗಳು ರೈತರು ಬೆಳೆಯುತ್ತಿರುವುದನ್ನು ವಿರೂಪಗೊಳಿಸುತ್ತಿವೆ ಮತ್ತು ಉತ್ಪಾದಕತಾ ವರ್ಧಕ ಹೂಡಿಕೆಯನ್ನು ಅಡ್ಡಿಪಡಿಸುತ್ತಿವೆ. ಕೃಷಿಯ ಅತಿಯಾದ ನಿಯಂತ್ರಣವು ವೆಚ್ಚಗಳು, ಬೆಲೆಯ ಅಪಾಯಗಳು ಮತ್ತು ಅನಿಶ್ಚಿತತೆಯನ್ನು ಹೆಚ್ಚಿಸಿದೆ, ಮತ್ತು ಕಾರ್ಮಿಕರು, ಕೃಷಿಕ್ಷೇತ್ರ ಹಾಗೂ ಸಾಲದ ವಿಷಯದಲ್ಲಿ ಸರ್ಕಾರದ ಹಸ್ತಕ್ಷೇಪವು ಮಾರುಕಟ್ಟೆಗೆ ಹಾನಿಮಾಡುತ್ತಿದೆ. ಗ್ರಾಮೀಣ ರಸ್ತೆಗಳು, ವಿದ್ಯುಚ್ಛಕ್ತಿ, ಬಂದರುಗಳು, ಆಹಾರ ಸಂಗ್ರಹ, ಚಿಲ್ಲರೆ ಮಾರುಕಟ್ಟೆಗಳು ಮತ್ತು ಸೇವೆಗಳಂತಹ ಮೂಲಸೌಕರ್ಯಗಳು ಸಾಕಾಗದಷ್ಟು ಪ್ರಮಾಣದಲ್ಲಿವೆ. ಭೂ ಹಿಡುವಳಿಗಳ ಸರಾಸರಿ ಗಾತ್ರವು ಬಹಳ ಚಿಕ್ಕದಾಗಿದ್ದು, 70% ಹಿಡುವಳಿಗಳು ಗಾತ್ರದಲ್ಲಿ ಒಂದು ಹೆಕ್ಟೇರ್‌ಗಿಂತ (2.5 ಎಕ್ರೆ) ಕಡಿಮೆಯಿವೆ. ೨೦೧೬ರ ವೇಳೆಗೆ ಒಟ್ಟು ಬೇಸಾಯಯೋಗ್ಯ ಭೂಮಿಯ ಕೇವಲ 46% ನೀರಿನಿಂದ ಒದಗಿಸಲ್ಪಟ್ಟಿತ್ತು ಎಂಬ ವಾಸ್ತವಾಂಶದಿಂದ ಬಹಿರಂಗವಾದಂತೆ, ನೀರಾವರಿ ಸೌಕರ್ಯಗಳು ಅಪರ್ಯಾಪ್ತವಾಗಿವೆ. ಪರಿಣಾಮವಾಗಿ ರೈತರು ಈಗಲೂ ಮಳೆಯನ್ನು ಅವಲಂಬಿಸಿದ್ದಾರೆ, ನಿರ್ದಿಷ್ಟವಾಗಿ ಮಾನ್ಸೂನ್ ಋತುವನ್ನು. ಇದು ಹಲವುವೇಳೆ ಸಮತೆ ಇಲ್ಲದ್ದಾಗಿದ್ದು ದೇಶದಾದ್ಯಂತ ಅಸಮಾನವಾಗಿ ಹಂಚಿಕೆಯಾಗುತ್ತದೆ. ಹೆಚ್ಚುವರಿ ಎರಡು ಕೋಟಿ ಹೆಕ್ಟೇರು ಭೂಮಿಯನ್ನು (೫ ಕೋಟಿ ಎಕ್ರೆ) ನೀರಾವರಿಯಡಿ ತರುವ ಪ್ರಯತ್ನವಾಗಿ, ವೇಗವರ್ಧಿತ ನೀರಾವರಿ ಪ್ರಯೋಜನ ಕಾರ್ಯಕ್ರಮ (ಎಐಬಿಪಿ) (ಇದಕ್ಕೆ ಕೇಂದ್ರ ಬಜೆಟ್‍ನಲ್ಲಿ 80,000 ಕೋಟಿ ಒದಗಿಸಲಾಗಿತ್ತು) ಸೇರಿದಂತೆ ವಿವಿಧ ಯೋಜನೆಗಳನ್ನು ಪ್ರಯತ್ನಿಸಲಾಗಿದೆ. ಆಹಾರ ಸಂಗ್ರಹ ಮತ್ತು ವಿತರಣಾ ಮೂಲಸೌಕರ್ಯದ ಅಭಾವದ ಕಾರಣದಿಂದಲೂ ಕೃಷಿ ಆದಾಯಗಳಿಗೆ ಅಡ್ಡಿಯಾಗಿದೆ; ಭಾರತದ ಕೃಷಿ ಉತ್ಪಾದನೆಯ ಮೂರನೇ ಒಂದು ಭಾಗವು ಹಾಳಾಗುವುದರಿಂದ ನಷ್ಟವಾಗಿ ಹೋಗುತ್ತಿದೆ. ಉತ್ಪಾದನೆ ಮತ್ತು ಕೈಗಾರಿಕೆ ಕೈಗಾರಿಕೆಯು ಜಿಡಿಪಿಯ 26% ನಷ್ಟು ರೂಪಿಸುತ್ತದೆ ಮತ್ತು ಒಟ್ಟು ಕಾರ್ಯಪಡೆಯ 22% ಗೆ ಉದ್ಯೋಗ ನೀಡುತ್ತದೆ. ವಿಶ್ವ ಬ್ಯಾಂಕ್ ಪ್ರಕಾರ, ೨೦೧೫ರಲ್ಲಿ ಭಾರತದ ಕೈಗಾರಿಕಾ ಉತ್ಪಾದನಾ ಜಿಡಿಪಿ ಹುಟ್ಟುವಳಿಯು ಪ್ರಸ್ತುತ ಅಮೇರಿಕನ್ ಡಾಲರ್ ಆಧಾರದಲ್ಲಿ ವಿಶ್ವದಲ್ಲಿ ಆರನೇ ಅತಿ ದೊಡ್ಡದಾಗಿತ್ತು ($559 ಬಿಲಿಯನ್), ಮತ್ತು ಹಣದುಬ್ಬರಕ್ಕೆ ಹೊಂದಿಸಿದ ಸ್ಥಿರ ೨೦೦೫ರ ಅಮೇರಿಕನ್ ಡಾಲರ್ ಆಧಾರದಲ್ಲಿ ೯ನೇ ಅತಿ ದೊಡ್ಡದಾಗಿತ್ತು ($197.1 ಬಿಲಿಯನ್). ೧೯೯೧ರ ಆರ್ಥಿಕ ಸುಧಾರಣೆಗಳ ಕಾರಣದಿಂದ ಕೈಗಾರಿಕೆ ವಲಯವು ಗಣನೀಯ ಬದಲಾವಣೆಗಳಿಗೆ ಒಳಗಾಯಿತು. ಇದು ಆಮದು ನಿರ್ಬಂಧಗಳನ್ನು ತೆಗೆದುಹಾಕಿತು, ವಿದೇಶೀ ಪೈಪೋಟಿಯನ್ನು ತಂದಿತು, ಕೆಲವು ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ವಲಯದ ಕೈಗಾರಿಕೆಗಳ ಖಾಸಗೀಕರಣಕ್ಕೆ ಕಾರಣವಾಯಿತು, ವಿದೇಶೀ ನೇರ ಬಂಡವಾಳ (ಎಫ಼್‍ಡಿಐ) ವ್ಯವಸ್ಥೆಯನ್ನು ಉದಾರೀಕರಿಸಿತು, ಮೂಲಸೌಕರ್ಯವನ್ನು ಸುಧಾರಿಸಿತು ಮತ್ತು ವೇಗವಾಗಿ ಚಲಿಸುವ ಗ್ರಾಹಕ ಸರಕುಗಳ ಉತ್ಪಾದನೆಯಲ್ಲಿ ವಿಸ್ತರಣೆಗೆ ಕಾರಣವಾಯಿತು. ಉದಾರೀಕರಣದ ನಂತರ, ಭಾರತದ ಖಾಸಗಿ ವಲಯವು ಹೆಚ್ಚು ಅಗ್ಗದ ಚೈನಾದ ಆಮದುಗಳ ಬೆದರಿಕೆ ಸೇರಿದಂತೆ, ಹೆಚ್ಚಿನ ದೇಶೀಯ ಮತ್ತು ವಿದೇಶೀ ಪೈಪೋಟಿಯನ್ನು ಎದುರಿಸಿತು. ಆಗಿನಿಂದ ಭಾರತವು ವೆಚ್ಚಗಳನ್ನು ಕುಗ್ಗಿಸಿ, ನಿರ್ವಹಣೆಯನ್ನು ಉತ್ತಮಗೊಳಿಸಿ, ಮತ್ತು ಅಗ್ಗದ ಕಾರ್ಮಿಕರು ಮತ್ತು ಹೊಸ ತಂತ್ರಜ್ಞಾನದ ಮೇಲೆ ಅವಲಂಬಿಸುವ ಮೂಲಕ ಬದಲಾವಣೆಯನ್ನು ನಿಭಾಯಿಸಿದೆ. ಆದರೆ, ಇದು ಉದ್ಯೋಗ ಸೃಷ್ಟಿಯನ್ನೂ ಕುಗ್ಗಿಸಿದೆ, ಹಿಂದೆ ಶ್ರಮಿಕ ಪ್ರಧಾನ ಪ್ರಕ್ರಿಯೆಗಳ ಮೇಲೆ ಅವಲಂಬಿಸಿದ್ದ ಸಣ್ಣ ಉತ್ಪಾದಕರಲ್ಲೂ. ರಕ್ಷಣಾ ವಲಯ ೧.೩ ದಶಲಕ್ಷಕ್ಕಿಂತ ಹೆಚ್ಚು ಸಕ್ರಿಯ ಸಿಬ್ಬಂದಿಯ ಬಲದೊಂದಿಗೆ, ಭಾರತವು ಮೂರನೇ ಅತಿ ದೊಡ್ಡ ಸೇನಾ ಪಡೆ ಮತ್ತು ಅತಿ ದೊಡ್ಡ ಸ್ವಯಂಸೇವಕ ಸೇನೆಯನ್ನು ಹೊಂದಿದೆ. ಭಾರತೀಯ ಸೇನೆಗೆ ಹಣಕಾಸು ವರ್ಷ 2019-20ರಲ್ಲಿ ಮಂಜೂರು ಮಾಡಲಾದ ಒಟ್ಟು ಬಂಡವಾಳವು ₹3.01 ಲಕ್ಷ ಕೋಟಿಯಾಗಿತ್ತು. ೨೦೨೨ರ ವೇಳೆಗೆ ರಕ್ಷಣಾ ವೆಚ್ಚವು ಅಮೇರಿಕನ್ $62 ಬಿಲಿಯನ್‍ಗೆ ಏರುವುದು ಎಂದು ನಿರೀಕ್ಷಿಸಲಾಗಿದೆ. ವಿದ್ಯುಚ್ಛಕ್ತಿ ವಲಯ ಚೀನಾ ಮತ್ತು ಅಮೇರಿಕದ ನಂತರ ಭಾರತದ ಪ್ರಾಥಮಿಕ ಶಕ್ತಿಯ ಬಳಕೆಯು ೨೦೧೫ ನೇ ವರ್ಷದಲ್ಲಿ 5.3% ಜಾಗತಿಕ ಪಾಲಿನೊಂದಿಗೆ ಮೂರನೇ ಅತಿ ದೊಡ್ಡದಾಗಿತ್ತು. ಕಲ್ಲಿದ್ದಲು ಮತ್ತು ಕಚ್ಚಾತೈಲ ಎರಡೂ ಸೇರಿ ಭಾರತದ ಪ್ರಾಥಮಿಕ ಶಕ್ತಿ ಬಳಕೆಯ 85% ರಷ್ಟನ್ನು ರೂಪಿಸುತ್ತವೆ. ಭಾರತದ ತೈಲ ಸಂಪನ್ಮೂಲಗಳು ದೇಶದ ತೈಲ ಬೇಡಿಕೆಯ 25% ರಷ್ಟನ್ನು ಪೂರೈಸುತ್ತವೆ. ಎಪ್ರಿಲ್ ೨೦೧೫ರ ವೇಳೆಗೆ ಭಾರತದ ಒಟ್ಟು ಸಾಬೀತಾದ ಕಚ್ಚಾತೈಲ ಸಂಪನ್ಮೂಲಗಳು 763.476 ದಶಲಕ್ಷ ಮೆಟ್ರಿಕ್ ಟನ್‍ನಷ್ಟಿದ್ದವು, ಮತ್ತು ಅನಿಲ ಸಂಪನ್ಮೂಲಗಳು ೧,೪೯೦ ಬಿಲಿಯನ್ ಘನ ಮೀಟರ್‌ನಷ್ಟು ಮುಟ್ಟಿದವು. ತೈಲ ಮತ್ತು ನೈಸರ್ಗಿಕ ಅನಿಲ ಪ್ರದೇಶಗಳು ಕಡಲಕರೆಯಾಚೆಗೆ ಬಾಂಬೆ ಹೈ‍ನಲ್ಲಿ, ಕೃಷ್ಣ ಗೋದಾವರಿ ಜಲಾನಯನ ಪ್ರದೇಶದಲ್ಲಿ ಹಾಗೂ ಕಾವೇರಿ ನದಿಮುಖಜ ಭೂಮಿಯಲ್ಲಿ ಸ್ಥಿತವಾಗಿವೆ ಮತ್ತು ಕಡಲಕರೆಯಲ್ಲಿ ಮುಖ್ಯವಾಗಿ ಅಸ್ಸಾಂ, ಗುಜರಾತ್ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿ ಸ್ಥಿತವಾಗಿವೆ. ಭಾರತವು ತೈಲದ ನಾಲ್ಕನೇ ಅತಿ ದೊಡ್ಡ ಬಳಕೆದಾರವಾಗಿದೆ ಮತ್ತು ನಿವ್ವಳ ತೈಲ ಆಮದುಗಳು ೨೦೧೪-೧೫ರಲ್ಲಿ ಸರಿಸುಮಾರು ಅಮೇರಿಕನ್ ೧೮೨.೦೪ ಬಿಲಿಯನ್‍ನಷ್ಟಿದ್ದವು. ಇದು ದೇಶದ ಚಾಲ್ತಿ ಖಾತೆಯ ಕೊರತೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಹೊಂದಿತ್ತು. ಭಾರತದಲ್ಲಿ ಪೆಟ್ರೋಲಿಯಂ ಕೈಗಾರಿಕೆಯು ಬಹುತೇಕವಾಗಿ ಸಾರ್ವಜನಿಕ ವಲಯದ ಕಂಪನಿಗಳನ್ನು ಹೊಂದಿದೆ, ಉದಾ. ಒಎನ್‍ಜಿಸಿ, ಎಚ್‍ಪಿಸಿಎಲ್, ಬಿಪಿಸಿಎಲ್ ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್. ತೈಲ ವಲಯದಲ್ಲಿ ವಿಶ್ವದ ಅತಿ ದೊಡ್ಡ ತೈಲ ಸಂಸ್ಕರಣಾಗಾರ ಸಂಕೀರ್ಣವನ್ನು ನಿರ್ವಹಿಸುವ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‍ನಂತಹ ಕೆಲವು ಪ್ರಮುಖ ಖಾಸಗಿ ಭಾರತೀಯ ಕಂಪನಿಗಳಿವೆ. ೨೦೧೩ರಲ್ಲಿ ಭಾರತವು ವಿದ್ಯುಚ್ಛಕ್ತಿ ಉತ್ಪಾದನೆಯಲ್ಲಿ 4.8% ಜಾಗತಿಕ ಪಾಲಿನೊಂದಿಗೆ ಜಪಾನ್ ಮತ್ತು ರಷ್ಯಾಗಳನ್ನು ಮೀರಿಸಿ ವಿಶ್ವದ ಮೂರನೇ ಅತಿ ದೊಡ್ಡ ಉತ್ಪಾದಕವಾಯಿತು. ಕ್ಯಾಲೆಂಡರ್ ವರ್ಷ ೨೦೧೫ರ ಅಂತ್ಯದ ವೇಳೆ, ಭಾರತವು ವಿದ್ಯುಚ್ಛಕ್ತಿ ಹೆಚ್ಚುವರಿಯನ್ನು ಹೊಂದಿತ್ತು ಮತ್ತು ಅನೇಕ ವಿದ್ಯುತ್ ಸ್ಥಾವರಗಳು ಬೇಡಿಕೆಯ ಅಭಾವದ ಕಾರಣ ನಿಷ್ಕ್ರಿಯವಾಗಿದ್ದವು. ಮೇ ೨೦೧೬ರ ವೇಳೆಗೆ, ಸೌಲಭ್ಯ ವಿದ್ಯುಚ್ಛಕ್ತಿ ವಲಯವು ೩೦೩ ಗೀಗಾವಾಟ್‍ಗಳ ಸ್ಥಾಪಿತ ಸಾಮರ್ಥ್ಯವನ್ನು ಹೊಂದಿತ್ತು. ಇದರಲ್ಲಿ ಉಷ್ಣ ವಿದ್ಯುತ್ 69.8% ರಷ್ಟು, ಜಲವಿದ್ಯುತ್ 15.2% ನಷ್ಟು, ನವೀಕರಿಸಬಹುದಾದ ಶಕ್ತಿ 13.0% ನಷ್ಟು, ಮತ್ತು ಬೈಜಿಕ ವಿದ್ಯುತ್ 2.1% ನಷ್ಟು ಕೊಡುಗೆ ನೀಡಿತ್ತು. ಭಾರತವು ತನ್ನ ಬಹುತೇಕ ದೇಶೀಯ ವಿದ್ಯುಚ್ಛಕ್ತಿ ಬೇಡಿಕೆಯನ್ನು ತನ್ನ ೧೦೬ ಶತಕೋಟಿ ಟನ್‍ಗಳಷ್ಟಿರುವ ಸಾಬೀತಾದ ಕಲ್ಲಿದ್ದಲು ಸಂಪನ್ಮೂಲಗಳ ಮೂಲಕ ಪೂರೈಸಿಕೊಳ್ಳುತ್ತದೆ. ಭಾರತವು ಸೌರ, ಗಾಳಿ ಮತ್ತು ಜೈವಿಕ ಇಂಧನಗಳಂತಹ (ಜಟ್ರೋಫ಼ಾ, ಕಬ್ಬು) ಗಣನೀಯವಾದ ಭವಿಷ್ಯದ ಸಾಮರ್ಥ್ಯವಿರುವ ಕೆಲವು ಪರ್ಯಾಯ ಶಕ್ತಿಮೂಲಗಳಲ್ಲೂ ಸಂಪದ್ಭರಿತವಾಗಿದೆ. ಭಾರತದ ಕ್ಷೀಣಿಸುತ್ತಿರುವ ಯುರೇನಿಯಮ್ ಸಂಪನ್ಮೂಲಗಳು ಅನೇಕ ವರ್ಷಗಳವರೆಗೆ ದೇಶದಲ್ಲಿ ಬೈಜಿಕ ಶಕ್ತಿಯ ಬೆಳವಣಿಗೆಯನ್ನು ಮಂದವಾಗಿಸಿದವು. ತುಮ್ಮಲಪಲ್ಲೆ ಭೂಪ್ರದೇಶದಲ್ಲಿನ ಇತ್ತೀಚಿನ ಶೋಧನೆಗಳು ವಿಶ್ವಾದ್ಯಂತದ ಅಗ್ರ ೨೦ ನೈಸರ್ಗಿಕ ಯುರೇನಿಯಮ್ ನಿಕ್ಷೇಪಗಳ ಪೈಕಿ ಇರಬಹುದು. ಇದು ಮತ್ತು ಅಂದಾಜು ೮೪೬,೪೭೭ ಮೆಟ್ರಿಕ್ ಟನ್‍ಗಳ ಥೋರಿಯಮ್ ನಿಕ್ಷೇಪವು (ವಿಶ್ವದ ನಿಕ್ಷೇಪದ ಸುಮಾರು 25%) ದೀರ್ಘಕಾಲದಲ್ಲಿ ದೇಶದ ಮಹತ್ವಾಕಾಂಕ್ಷಿ ಬೈಜಿಕ ಶಕ್ತಿ ಕಾರ್ಯಕ್ರಮವನ್ನು ಚಾಲನೆ ಮಾಡುವುದು ಎಂದು ನಿರೀಕ್ಷಿಸಲಾಗಿದೆ. ಭಾರತ ಅಮೇರಿಕ ಬೈಜಿಕ ಒಪ್ಪಂದ ಕೂಡ ಭಾರತವು ಇತರ ದೇಶಗಳಿಂದ ಯುರೇನಿಯಮ್‍ನ್ನು ಆಮದು ಮಾಡಿಕೊಳ್ಳುವುದಕ್ಕೆ ದಾರಿ ಮಾಡಿಕೊಟ್ಟಿದೆ. ಶಿಲ್ಪಶಾಸ್ತ್ರ ಶಿಲ್ಪಶಾಸ್ತ್ರವು (ಎಂಜಿನಿಯರಿಂಗ್) ಜಿಡಿಪಿ ಪ್ರಕಾರ ಭಾರತದ ಕೈಗಾರಿಕಾ ವಲಯದ ಅತಿ ದೊಡ್ಡ ಉಪವಲಯವಾಗಿದೆ ಮತ್ತು ರಫ್ತುಗಳ ಪ್ರಕಾರ ಮೂರನೇ ಅತಿ ದೊಡ್ಡದಾಗಿದೆ. ಇದರಲ್ಲಿ ಸಾರಿಗೆ ಉಪಕರಣಗಳು, ಯಂತ್ರೋಪಕರಣಗಳು, ಬಂಡವಾಳ ಸಾಮಗ್ರಿಗಳು, ಪರಿವರ್ತಕಗಳು, ಸ್ವಿಚ್‍ಗೇರ್, ಕುಲುಮೆಗಳು, ಮತ್ತು ತಿರುಗಾಲಿಗಳ ಎರಕಹೊಯ್ದು ಆಕಾರ ಕೊಡಲ್ಪಟ್ಟ ಭಾಗಗಳು, ಮೋಟಾರು ವಾಹನಗಳು ಮತ್ತು ರೇಲ್ವೆ ಸೇರಿವೆ. ಈ ಉದ್ಯಮವು ಸುಮಾರು ನಾಲ್ಕು ದಶಲಕ್ಷ ಕಾರ್ಮಿಕರಿಗೆ ಉದ್ಯೋಗ ನೀಡುತ್ತದೆ. ಮೌಲವರ್ಧಿತ ಆಧಾರದಲ್ಲಿ, ಭಾರತದ ಶಿಲ್ಪಶಾಸ್ತ್ರ ಉಪವಲಯವು ೨೦೧೩-೧೪ರ ವಿತ್ತೀಯ ವರ್ಷದಲ್ಲಿ $67 ಬಿಲಿಯನ್ ಮೌಲ್ಯದ ಶಿಲ್ಪಶಾಸ್ತ್ರ ಸರಕುಗಳನ್ನು ರಫ್ತುಮಾಡಿತು, ಮತ್ತು ಶಿಲ್ಪಶಾಸ್ತ್ರ ಸರಕುಗಳಿಗೆ ದೇಶೀಯ ಬೇಡಿಕೆಯನ್ನು ಭಾಗಶಃ ಪೂರೈಸಿತು.ಭಾರತದ ಶಿಲ್ಪಶಾಸ್ತ್ರ ಉದ್ಯಮವು ಅದರ ಬೆಳೆಯುತ್ತಿರುವ ಕಾರು, ಮೋಟರ್‌ಸೈಕಲ್ ಹಾಗೂ ಸ್ಕೂಟರ್ ಉದ್ಯಮ, ಮತ್ತು ಟ್ರ್ಯಾಕ್ಟರ್‌ನಂತಹ ಉತ್ಪಾದಕತೆ ಯಂತ್ರಸಾಧನಗಳನ್ನು ಒಳಗೊಳ್ಳುತ್ತದೆ. ೨೦೧೧ರಲ್ಲಿ ಭಾರತವು ಸುಮಾರು ೧೮ ದಶಲಕ್ಷ ಪ್ರಯಾಣಿಕ ಹಾಗೂ ಸೌಕರ್ಯ ವಾಹನಗಳನ್ನು ಉತ್ಪಾದಿಸಿ ಜೋಡಿಸಿತು, ಮತ್ತು ಇವುಗಳಲ್ಲಿ ೨.೩ ದಶಲಕ್ಷ ವಾಹನಗಳನ್ನು ರಫ್ತುಮಾಡಿತು. ಭಾರತವು ಟ್ರ್ಯಾಕ್ಟರ್‌ಗಳ ಅತಿ ದೊಡ್ಡ ಉತ್ಪಾದಕ ಮತ್ತು ಅತಿ ದೊಡ್ಡ ಮಾರುಕಟ್ಟೆಯಾಗಿದೆ, ಮತ್ತು ೨೦೧೩ರಲ್ಲಿ ಜಾಗತಿಕ ಟ್ರ್ಯಾಕ್ಟರ್ ಉತ್ಪಾದನೆಯ 29% ನಷ್ಟನ್ನು ರೂಪಿಸಿತ್ತು. ಭಾರತವು ಯಂತ್ರಸಾಧನಗಳ ೧೨ನೇ ಅತಿ ದೊಡ್ಡ ಉತ್ಪಾದಕ ಮತ್ತು ೭ನೇ ಅತಿ ದೊಡ್ಡ ಗ್ರಾಹಕವಾಗಿದೆ. ೨೦೧೬ರಲ್ಲಿ ಮೋಟಾರು ವಾಹನ ಉತ್ಪಾದನಾ ಉದ್ಯಮವು $79 ಶತಕೋಟಿಯಷ್ಟು (ಜಿಡಿಪಿಯ 4%) ಕೊಡುಗೆ ನೀಡಿತು ಮತ್ತು ೬.೭೬ ದಶಲಕ್ಷ ಜನರಿಗೆ (ಕಾರ್ಯಪಡೆಯ 2%) ಉದ್ಯೋಗ ನೀಡಿತು. ರತ್ನಗಳು ಮತ್ತು ಆಭರಣಗಳು ಭಾರತವು ವಜ್ರಗಳು ಮತ್ತು ರತ್ನಗಳನ್ನು ನಯಗೊಳಿಸುವುದಕ್ಕೆ ಮತ್ತು ಆಭರಣಗಳ ಉತ್ಪಾದನೆಗೆ ಅತಿ ದೊಡ್ಡ ಕೇಂದ್ರಗಳಲ್ಲಿ ಒಂದಾಗಿದೆ; ಭಾರತವು ಚಿನ್ನದ ಎರಡು ಅತಿ ದೊಡ್ಡ ಬಳಕೆದಾರರಲ್ಲಿಯೂ ಒಂದಾಗಿದೆ. ಕಚ್ಚಾತೈಲ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ನಂತರ, ಚಿನ್ನ, ಅಮೂಲ್ಯ ಕಲ್ಲುಗಳು, ರತ್ನಗಳು ಹಾಗೂ ಆಭರಣಗಳ ರಫ್ತು ಮತ್ತು ಆಮದು ಭಾರತದ ಜಾಗತಿಕ ವ್ಯಾಪಾರದ ಅತಿ ದೊಡ್ಡ ಭಾಗವನ್ನು ರೂಪಿಸುತ್ತದೆ. ಈ ಉದ್ಯಮವು ಭಾರತದ ಜಿಡಿಪಿಗೆ ಸುಮಾರು 7% ರಷ್ಟು ಕೊಡುಗೆ ನೀಡುತ್ತದೆ, ಮತ್ತು ಭಾರತದ ವಿದೇಶಿ ಹಣ ಗಳಿಕೆಯ ಒಂದು ಪ್ರಮುಖ ಮೂಲವಾಗಿದೆ. ರತ್ನಗಳು ಮತ್ತು ಆಭರಣಗಳ ಉದ್ಯಮವು ೨೦೧೭ರಲ್ಲಿ ಮೌಲ್ಯವರ್ಧಿತ ಆಧಾರದ ಮೇಲೆ ಆರ್ಥಿಕ ಹುಟ್ಟುವಳಿಯಲ್ಲಿ $60 ಬಿಲಿಯನ್‍ನಷ್ಟು ಸೃಷ್ಟಿಸಿತು, ಮತ್ತು ೨೦೨೨ರ ವೇಳೆಗೆ $110 ಬಿಲಿಯನ್‍ನಷ್ಟಕ್ಕೆ ಬೆಳೆಯುವುದೆಂದು ಅಂದಾಜಿಸಲಾಗಿದೆ. ಭಾರತದಲ್ಲಿ ರತ್ನಗಳ ಮತ್ತು ಆಭರಣಗಳ ಉದ್ಯಮವು ಹಲವು ಸಾವಿರ ವರ್ಷಗಳಿಂದ ಆರ್ಥಿಕವಾಗಿ ಸಕ್ರಿಯವಾಗಿದೆ. ೧೮ನೇ ಶತಮಾನದವರೆಗೆ, ಭಾರತವು ವಜ್ರಗಳ ಏಕೈಕ ಪ್ರಮುಖ ವಿಶ್ವಾಸಾರ್ಹ ಮೂಲವಾಗಿತ್ತು. ಈಗ ದಕ್ಷಿನ ಆಫ಼್ರಿಕಾ ಮತ್ತು ಆಸ್ಟ್ರೇಲಿಯಾ ವಜ್ರಗಳು ಮತ್ತು ಅಮೂಲ್ಯ ಲೋಹಗಳ ಪ್ರಮುಖ ಮೂಲಗಳಾಗಿವೆ, ಆದರೆ ಎಂಟ್‍ವರ್ಪ್, ನ್ಯೂ ಯಾರ್ಕ್ ಮತ್ತು ರಾಮಾತ್ ಗಾನ್ ಜೊತೆಗೆ, ಸೂರತ್ ಮತ್ತು ಮುಂಬಯಿಯಂತಹ ಭಾರತದ ನಗರಗಳು ವಿಶ್ವದ ಆಭರಣಗಳ ನಯಗೊಳಿಸುವಿಕೆ, ಕತ್ತರಿಸುವಿಕೆ, ನಿಖರ ನಯಗೆಲಸ, ಪೂರೈಕೆ ಮತ್ತು ವ್ಯಾಪಾರದ ಮುಖ್ಯ ಸ್ಥಳಗಳಾಗಿವೆ. ಇತರ ಕೇಂದ್ರಗಳಂತಿರದೆ, ಭಾರತದಲ್ಲಿನ ರತ್ನಗಳು ಮತ್ತು ಆಭರಣಗಳ ಉದ್ಯಮವು ಮುಖ್ಯವಾಗಿ ಕುಶಲಕರ್ಮಿ ಚಾಲಿತವಾಗಿದೆ; ಈ ವಲಯವು ಕೈ ಚಾಲಿತ, ಬಹಳವಾಗಿ ಹೊಂದಾಣಿಕೆಯಿಲ್ಲದದ್ದಾಗಿದೆ, ಮತ್ತು ಬಹುತೇಕ ಸಂಪೂರ್ಣವಾಗಿ ಕುಟುಂಬ ಸ್ವಾಮ್ಯದ ಕಾರ್ಯಗಳಿಂದ ನಡೆಸಲ್ಪಡುತ್ತದೆ. ಈ ಉಪವಲಯದ ವಿಶಿಷ್ಟ ಸಾಮರ್ಥ್ಯ ಸಣ್ಣ ವಜ್ರಗಳ (ಒಂದು ಕ್ಯಾರಟ್‍ಗಿಂತ ಕಡಿಮೆ) ನಿಖರ ಕತ್ತರಿಸುವಿಕೆ, ನಯಗೊಳಿಸುವಿಕೆ ಮತ್ತು ಸಂಸ್ಕರಣದಲ್ಲಿದೆ. ಭಾರತವು ಹೆಚ್ಚು ದೊಡ್ಡ ವಜ್ರಗಳು, ಮುತ್ತುಗಳು ಮತ್ತು ಇತರ ಅಮೂಲ್ಯ ಕಲ್ಲುಗಳ ಸಂಸ್ಕರಣಕ್ಕೂ ಮುಖ್ಯ ಸ್ಥಾನವಾಗಿದೆ. ಅಂಕಿಅಂಶಗಳ ಪ್ರಕಾರ, ವಿಶ್ವದಲ್ಲಿನ ಯಾವುದೇ ಆಭರಣದಲ್ಲಿ ಕೂಡಿಸಲಾದ ೧೨ ವಜ್ರಗಳಲ್ಲಿ ೧೧ ನ್ನು ಭಾರತದಲ್ಲಿ ಕತ್ತರಿಸಿ ನಯಗೊಳಿಸಲಾಗಿರುತ್ತದೆ. ಭಾರತವು ಚಿನ್ನ ಮತ್ತು ಇತರ ಅಮೂಲ್ಯ ಲೋಹ ಆಧಾರಿತ ಆಭರಣಗಳ ಪ್ರಮುಖ ಸ್ಥಳವೂ ಆಗಿದೆ. ಚಿನ್ನ ಮತ್ತು ಆಭರಣ ಉತ್ಪನ್ನಗಳಿಗೆ ದೇಶೀಯ ಬೇಡಿಕೆಯು ಭಾರತದ ಜಿಡಿಪಿಗೆ ಮತ್ತೊಂದು ಚಾಲಕವಾಗಿದೆ. ಮೂಲಸೌಕರ್ಯಗಳು ಭಾರತದ ಮೂಲಸೌಕರ್ಯ ಮತ್ತು ಸಾರಿಗೆ ವಲಯವು ಅದರ ಜಿಡಿಪಿಗೆ ಸುಮಾರು 5% ನಷ್ಟನ್ನು ಕೊಡುಗೆ ನೀಡುತ್ತದೆ. ೩೧ ಮಾರ್ಚ್ ೨೦೧೫ರ ವೇಳೆಗೆ ಭಾರತವು ೫,೪೭೨,೧೪೪ ಕಿ.ಮಿ. ಗಳಷ್ಟರ ರಸ್ತೆ ಜಾಲವನ್ನು ಹೊಂದಿತ್ತು, ಮತ್ತು ಅಮೇರಿಕದ ನಂತರ ವಿಶ್ವದ ಎರಡನೇ ಅತಿ ದೊಡ್ಡ ರಸ್ತೆ ಜಾಲವಾಗಿದೆ. ಪ್ರತಿ ಚದರ ಕಿ.ಮಿ.ಗೆ ೧.೬೬ ಕಿ.ಮಿ. ನಷ್ಟು ರಸ್ತೆಗಳೊಂದಿಗೆ ಭಾರತದ ರಸ್ತೆ ಜಾಲದ ಪರಿಮಾಣಾತ್ಮಕ ಸಾಂದ್ರತೆಯು ಜಪಾನ್ (೦.೯೧), ಅಮೇರಿಕ (೦.೬೭), ಚೈನಾ (೦.೪೬), ಬ್ರಜ಼ಿಲ್ (೦.೧೮) ಅಥವಾ ರಷ್ಯಾಗಿಂತ (೦.೦೮) ಹೆಚ್ಚಿದೆ. ಗುಣಾತ್ಮಕವಾಗಿ, ಭಾರತದ ರಸ್ತೆಗಳು ಆಧುನಿಕ ಹೆದ್ದಾರಿಗಳು ಮತ್ತು ಕಿರಿದಾದ, ನೆಲಗಟ್ಟು ಮಾಡದ ರಸ್ತೆಗಳ ಮಿಶ್ರಣವಾಗಿವೆ, ಮತ್ತು ಇವನ್ನು ಸುಧಾರಿಸಲಾಗುತ್ತಿದೆ. ೩೧ ಮಾರ್ಚ್ ೨೦೧೫ರ ವೇಳೆಗೆ, ಭಾರತದ 87.05% ರಷ್ಟು ರಸ್ತೆಗಳನ್ನು ನೆಲಗಟ್ಟು ಮಾಡಲಾಗಿತ್ತು. ಜಿ-೨೭ ರಾಷ್ಟ್ರಗಳ ಸಮೂಹದ ಪೈಕಿ, ಪ್ರತಿ ೧೦೦,೦೦೦ ಜನರಿಗೆ ಭಾರತವು ಅತಿ ಕಡಿಮೆ ಕಿಲೊಮೀಟರ್-ದಾರಿ ರಸ್ತೆ ಸಾಂದ್ರತೆಯನ್ನು ಹೊಂದಿರುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತದೆ. ಭಾರತವು ತನ್ನ ಮೂಲಸೌಕರ್ಯವನ್ನು ಸುಧಾರಿಸುತ್ತದೆ. ಮೇ ೨೦೧೪ರ ವೇಳೆಗೆ, ಭಾರತವು ೨೨,೬೦೦ ಕಿ.ಮಿ ಗಿಂತ ಹೆಚ್ಚಿನ ೪ ಅಥವಾ ೬ ಪಥಗಳ ಹೆದ್ದಾರಿಗಳನ್ನು ಮುಗಿಸಿತ್ತು, ಮತ್ತು ಅದರ ಬಹುತೇಕ ಪ್ರಮುಖ ಉತ್ಪಾದನಾ, ವಾಣಿಜ್ಯ ಹಾಗೂ ಸಾಂಸ್ಕೃತಿಕ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸಿತ್ತು. ಭಾರತದ ರಸ್ತೆ ಮೂಲಸೌಕರ್ಯವು 60% ಸಾಗಣೆ ಸರಕುಗಳು ಮತ್ತು 87% ಪ್ರಯಾಣಿಕರನ್ನು ಸಾಗಿಸುತ್ತದೆ. ಭಾರತೀಯ ರೈಲ್ವೆ ವಿಶ್ವದಲ್ಲಿನ ನಾಲ್ಕನೇ ಅತಿ ದೊಡ್ಡ ರೈಲು ಜಾಲವಾಗಿದೆ, ಮತ್ತು 114,500 ಕಿಲೋಮೀಟರ್‌ಗಳಷ್ಟು ಉದ್ದದ ರೈಲು ಕಂಬಿಗಳನ್ನು ಹಾಗೂ ೭,೧೭೨ ರೈಲು ನಿಲ್ದಾಣಗಳನ್ನು ಹೊಂದಿದೆ. ೨೦೧೩ರಲ್ಲಿ ಈ ಸರ್ಕಾರಿ ಸ್ವಾಮ್ಯದ ಮತ್ತು ಸರ್ಕಾರದಿಂದ ನಿಭಾಯಿತ ರೈಲು ಜಾಲವು ದಿನಕ್ಕೆ ಸರಾಸರಿ ೨೩ ದಶಲಕ್ಷ ಪ್ರಯಾಣಿಕರನ್ನು, ಮತ್ತು ಬಿಲಿಯನ್ ಟನ್‍ಗಿಂತ ಹೆಚ್ಚು ಭಾರದ ಸರಕುಗಳನ್ನು ಸಾಗಿಸಿತು. ಭಾರತವು 7,500 ಕಿಲೊಮೀಟರ್‌ಗಳ ಕರಾವಳಿಯನ್ನು ಹೊಂದಿದ್ದು ೧೩ ಪ್ರಮುಖ ಬಂದರುಗಳು ಮತ್ತು ೬೦ ಕಾರ್ಯಕಾರಿ ಅಪ್ರಧಾನ ಬಂದರುಗಳನ್ನು ಹೊಂದಿದೆ. ಇವು ಪರಿಮಾಣದ ಪ್ರಕಾರ ಒಟ್ಟಾಗಿ ದೇಶದ ಬಾಹ್ಯ ವ್ಯಾಪಾರದ 95% ನಷ್ಟು ಮತ್ತು ಮೌಲ್ಯದ ಪ್ರಕಾರ 70% ನಷ್ಟನ್ನು ನಿಭಾಯಿಸುತ್ತವೆ (ಉಳಿದಿರುವುದರ ಬಹುತೇಕ ಭಾಗವನ್ನು ವಾಯುಸಂಚಾರವು ನಿಭಾಯಿಸುತ್ತದೆ). ಮುಂಬಯಿಯ ನವ ಶೇವಾ ಅತಿ ದೊಡ್ಡ ಸಾರ್ವಜನಿಕ ಬಂದರಾಗಿದೆ. ಮುಂದ್ರಾ ಅತಿ ದೊಡ್ಡ ಖಾಸಗಿ ಬಂದರಾಗಿದೆ. ಭಾರತದ ವಿಮಾನ ನಿಲ್ದಾಣ ಸೌಕರ್ಯವು ೧೨೫ ವಿಮಾನ ನಿಲ್ದಾಣಗಳನ್ನು ಒಳಗೊಂಡಿದೆ. ಇವುಗಳಲ್ಲಿ ೬೬ ವಿಮಾನ ನಿಲ್ದಾಣಗಳು ಪ್ರಯಾಣಿಕರು ಮತ್ತು ಸರಕುಗಳು ಎರಡನ್ನೂ ನಿಭಾಯಿಸಲು ಪರವಾನಗಿ ಪಡೆದಿವೆ. ಪೆಟ್ರೋಲಿಯಂ ಉತ್ಪನ್ನಗಳು ಮತ್ತು ರಾಸಾಯನಿಕಗಳು ಪೆಟ್ರೋಲಿಯಂ ಉತ್ಪನ್ನಗಳು ಮತ್ತು ರಾಸಾಯನಿಕಗಳು ಭಾರತದ ಕೈಗಾರಿಕಾ ಜಿಡಿಪಿಗೆ ಪ್ರಮುಖ ಕೊಡುಗೆ ನೀಡುತ್ತವೆ, ಮತ್ತು ಒಟ್ಟಾಗಿ ಇವುಗಳು ಭಾರತದ ರಫ್ತು ಆದಾಯಗಳ ೩೪% ಗಿಂತ ಹೆಚ್ಚು ಕೊಡುಗೆ ನೀಡುತ್ತವೆ. ಭಾರತವು ದಿನಕ್ಕೆ ೧.೨೪ ದಶಲಕ್ಷ ಬ್ಯಾರಲ್ ಕಚ್ಚಾತೈಲವನ್ನು ಸಂಸ್ಕರಿಸುವ ಜಾಮ್‍ನಗರ್‌ನಲ್ಲಿರುವ ವಿಶ್ವದ ಅತಿ ದೊಡ್ಡ ಸಂಸ್ಕರಣಾ ಸಂಕೀರ್ಣ ಸೇರಿದಂತೆ, ಅನೇಕ ತೈಲ ಸಂಸ್ಕರಣಾಗಾರಗಳು ಮತ್ತು ಪೆಟ್ರೊಕೆಮಿಕಲ್ ಉದ್ಯಮಗಳನ್ನು ಹೊಂದಿದೆ. ಪರಿಮಾಣದ ಪ್ರಕಾರ, ಭಾರತದ ರಾಸಾಯನಿಕ ಉದ್ಯಮವು ಏಷ್ಯಾದ ಮೂರನೇ ಅತಿ ದೊಡ್ಡ ಉತ್ಪಾದಕವಾಗಿದೆ, ಮತ್ತು ದೇಶದ ಜಿಡಿಪಿಗೆ ೫% ನಷ್ಟು ಕೊಡುಗೆ ನೀಡುತ್ತದೆ. ಭಾರತವು ಕೃಷಿ ರಾಸಾಯನಿಕಗಳು, ಪಾಲಿಮರ್‌ಗಳು ಹಾಗೂ ಪ್ಲಾಸ್ಟಿಕ್‍ಗಳು, ಬಣ್ಣಗಳು ಮತ್ತು ವಿವಿಧ ಕಾರ್ಬನಿಕ ಹಾಗೂ ಅಕಾರ್ಬನಿಕ ರಾಸಾಯನಿಕಗಳ ಐದು ಅತಿ ದೊಡ್ಡ ಉತ್ಪಾದಕರಲ್ಲಿ ಒಂದಾಗಿದೆ. ದೊಡ್ಡ ಉತ್ಪಾದಕ ಮತ್ತು ರಫ್ತುದಾರವಾಗಿರುವ ಹೊರತಾಗಿಯೂ, ದೇಶೀಯ ಬೇಡಿಕೆಗಳ ಕಾರಣ ಭಾರತವು ರಾಸಾಯನಿಕಗಳ ನಿವ್ವಳ ಆಮದುದಾರವಾಗಿದೆ. ರಾಸಾಯನಿಕ ಉದ್ಯಮವು ಹಣಕಾಸು ವರ್ಷ ೨೦೧೮ರಲ್ಲಿ ಅರ್ಥವ್ಯವಸ್ಥೆಗೆ $163 ಶತಕೋಟಿಯಷ್ಟು ಕೊಡುಗೆ ನೀಡಿತು ಮತ್ತು ೨೦೨೫ರ ವೇಳೆಗೆ $300–400 ಶತಕೋಟಿಯಷ್ಟು ಮುಟ್ಟುವುದು ಎಂದು ನಿರೀಕ್ಷಿಸಲಾಗಿದೆ. ೨೦೧೬ರಲ್ಲಿ ಈ ಉದ್ಯಮವು 17.33 ದಶಲಕ್ಷ ಜನರಿಗೆ (ಕಾರ್ಯಪಡೆಯ 4%) ಉದ್ಯೋಗ ನೀಡಿತು. ಔಷಧ ವಸ್ತುಗಳು ಭಾರತದ ಔಷಧವಸ್ತುಗಳ ಉದ್ಯಮವು ಇತ್ತೀಚಿನ ವರ್ಷಗಳಲ್ಲಿ ವಿಶ್ವದ ಆರೋಗ್ಯ ಆರೈಕೆ ಉತ್ಪನ್ನಗಳ ಪ್ರಮುಖ ಉತ್ಪಾದಕವಾಗುವಷ್ಟು ಬೆಳೆದಿದೆ. ಭಾರತವು ೬೦,೦೦೦ ಕ್ಕಿಂತ ಹೆಚ್ಚು ಸಾಮಾನ್ಯ ಮುದ್ರೆಯ ಔಷಧಿಗಳು ಸೇರಿದಂತೆ, ಮೌಲ್ಯದ ಪ್ರಕಾರ ೨೦೧೧ರಲ್ಲಿ ಜಾಗತಿಕ ಔಷಧಿ ಪೂರೈಕೆಯ ಸುಮಾರು 8% ನಷ್ಟನ್ನು ಉತ್ಪಾದಿಸಿತು. ಈ ಉದ್ಯಮವು ೨೦೦೫ರಲ್ಲಿ $6 ಬಿಲಿಯನ್‍ನಿಂದ ೨೦೧೬ರಲ್ಲಿ $36.7 ಬಿಲಿಯನ್‍ಗೆ ಬೆಳೆಯಿತು, ಅಂದರೆ 17.46% ನಷ್ಟು ಸಂಯುಕ್ತ ವಾರ್ಷಿಕ ಬೆಳವಣಿಗೆ ದರದಲ್ಲಿ (ಸಿಎಜಿಆರ್). ಇದು 15.92% ಸಿಎಜಿಆರ್ ದರದಲ್ಲಿ ಬೆಳೆದು ೨೦೨೦ರಲ್ಲಿ $55 ಬಿಲಿಯನ್‍ಗೆ ಮುಟ್ಟುವದೆಂದು ನಿರೀಕ್ಷಿಸಲಾಗಿದೆ. ೨೦೨೦ರ ವೇಳೆಗೆ ಭಾರತವು ವಿಶ್ವದ ಆರನೇ ಅತಿ ದೊಡ್ಡ ಔಷಧವಸ್ತುಗಳ ಮಾರುಕಟ್ಟೆ ಆಗುವುದೆಂದು ನಿರೀಕ್ಷಿಸಲಾಗಿದೆ. ಇದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕೈಗಾರಿಕಾ ಉಪವಲಯಗಳಲ್ಲಿ ಒಂದಾಗಿದೆ ಮತ್ತು ಭಾರತದ ರಫ್ತು ಸಂಪಾದನೆಯಲ್ಲಿ ಪ್ರಮುಖ ಕೊಡುಗೆದಾರವಾಗಿದೆ. ಗುಜರಾತ್ ರಾಜ್ಯವು ಔಷಧವಸ್ತುಗಳು ಮತ್ತು ಸಕ್ರಿಯ ಔಷಧಿ ಘಟಕಾಂಶಗಳ (ಎಪಿಐ) ಉತ್ಪಾದನೆ ಮತ್ತು ರಫ್ತಿಗೆ ಕೇಂದ್ರವಾಗಿದೆ. ವಸ್ತ್ರ ೨೦೧೫ರಲ್ಲಿ ಭಾರತದಲ್ಲಿನ ಜವಳಿ ಮತ್ತು ಉಡುಪು ಮಾರುಕಟ್ಟೆಯು $108.5 ಬಿಲಿಯನ್‍ನಷ್ಟಾಗಿತ್ತು ಎಂದು ಅಂದಾಜಿಸಲಾಗಿತ್ತು. ೨೦೨೩ರ ವೇಳೆಗೆ ಇದು $226 ಬಿಲಿಯನ್ ಗಾತ್ರವನ್ನು ಮುಟ್ಟುವದೆಂದು ನಿರೀಕ್ಷಿಸಲಾಗಿದೆ. ಈ ಉದ್ಯಮವು ೩೫ ದಶಲಕ್ಷಕ್ಕಿಂತ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ. ಮೌಲ್ಯದ ಪ್ರಕಾರ, ಜವಳಿ ಉದ್ಯಮವು ಭಾರತದ ಕೈಗಾರಿಕಾ ಜಿಡಿಪಿಯ 7%, ಜಿಡಿಪಿಯ 2%, ಮತ್ತು ದೇಶದ ರಫ್ತು ಸಂಪಾದನೆಯ 15% ನಷ್ಟನ್ನು ರೂಪಿಸುತ್ತದೆ. 2017-18 ನೇ ವಿತ್ತೀಯ ವರ್ಷದಲ್ಲಿ ಭಾರತವು $39.2 ಬಿಲಿಯನ್ ಮೌಲ್ಯದ ಜವಳಿಯನ್ನು ರಫ್ತುಮಾಡಿತು. ಇತ್ತೀಚಿನ ವರ್ಷಗಳಲ್ಲಿ ಭಾರತದ ಜವಳಿ ಉದ್ಯಮವು ಇಳಿತವಾಗುತ್ತಿದ್ದ ವಲಯದಿಂದ ವೇಗವಾಗಿ ಅಭಿವೃದ್ಧಿಗೊಳ್ಳುತ್ತಿರುವ ವಲಯವಾಗಿ ಪರಿವರ್ತನೆಗೊಂಡಿದೆ. 2004–2005 ರಲ್ಲಿ ಈ ಉದ್ಯಮವನ್ನು ಅನೇಕ ಪ್ರತಿಬಂಧಗಳಿಂದ, ಮುಖ್ಯವಾಗಿ ಹಣಕಾಸು ಪ್ರತಿಬಂಧಗಳಿಂದ ಮುಕ್ತಗೊಳಿಸಿದ ನಂತರ, ಸರ್ಕಾರವು ದೇಶೀಯ ಹಾಗೂ ವಿದೇಶೀ ಎರಡೂ ಬಗೆಯ ಭಾರಿ ಹೂಡಿಕೆ ಒಳಹರಿವುಗಳಿಗೆ ಅನುಮತಿ ನೀಡಿತು. ೨೦೦೪ ರಿಂದ ೨೦೦೮ರ ವರೆಗೆ, ಜವಳಿ ಉದ್ಯಮದೊಳಗೆ ಒಟ್ಟು ಹಣಹೂಡಿಕೆಯು 27 ಬಿಲಿಯನ್ ಡಾಲರ್‌ನಷ್ಟು ಬೆಳೆಯಿತು. ಲುಧಿಯಾನ ಭಾರತದಲ್ಲಿನ 90% ಉಣ್ಣೆ ಬಟ್ಟೆಗಳನ್ನು ಉತ್ಪಾದಿಸುತ್ತದೆ ಮತ್ತು ಭಾರತದ ಮ್ಯಾಂಚೆಸ್ಟರ್ ಎಂದು ಕರೆಯಲ್ಪಡುತ್ತದೆ. ತಿರುಪ್ಪೂರು ಹೊಸೈರಿ, ಹೆಣೆದ ಉಡುಪುಗಳು, ಸಾಂದರ್ಭಿಕ ಉಡುಪುಗಳು ಮತ್ತು ಕ್ರೀಡಾ ಉಡುಪುಗಳ ಮುಂಚೂಣಿಯ ಮೂಲವೆಂದು ಸಾರ್ವತ್ರಿಕ ಮನ್ನಣೆಯನ್ನು ಪಡೆದಿದೆ. ಇಚಲ್‍ಕರಂಜಿಯಂತಹ ವಿಸ್ತರಿಸುತ್ತಿರುವ ಜವಳಿ ಕೇಂದ್ರಗಳು ದೇಶದಲ್ಲಿ ಬಹಳ ಹೆಚ್ಚಿನ ತಲಾವಾರು ಆದಾಯಗಳ ಪ್ರಯೋಜನವನ್ನು ಪಡೆಯುತ್ತಿವೆ. ಭಾರತದ ಹತ್ತಿ ಹೊಲಗಳು, ನೂಲು ಮತ್ತು ಜವಳಿ ಉದ್ಯಮವು ಸ್ವಲ್ಪ ಬಾಲಕಾರ್ಮಿಕರು (1%) ಸೇರಿದಂತೆ, ಭಾರತದಲ್ಲಿ ೪೫ ದಶಲಕ್ಷ ಜನರಿಗೆ ಉದ್ಯೋಗ ನೀಡುತ್ತದೆ. ಈ ವಲಯವು ೧೮ ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 400,000 ಮಕ್ಕಳಿಗೆ ಉದ್ಯೋಗ ನೀಡಿದೆ ಎಂದು ಅಂದಾಜಿಸಲಾಗಿದೆ. ತಿಳ್ಳು ಮತ್ತು ಕಾಗದ ಭಾರತದಲ್ಲಿನ ತಿಳ್ಳು ಮತ್ತು ಕಾಗದದ ಉದ್ಯಮವು ವಿಶ್ವದಲ್ಲಿ ಕಾಗದದ ಒಂದು ಪ್ರಮುಖ ಉತ್ಪಾದಕರಲ್ಲಿ ಒಂದಾಗಿದೆ ಮತ್ತು ಹೊಸ ಉತ್ಪಾದನಾ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಭಾರತದಲ್ಲಿನ ಕಾಗದ ಮಾರುಕಟ್ಟೆಯು 2017-18ರಲ್ಲಿ ರೂ. ೬೦,೦೦೦ ಕೋಟಿ ಮೌಲ್ಯದ್ದಾಗಿತ್ತೆಂದು ಅಂದಾಜಿಸಲಾಗಿತ್ತು ಮತ್ತು 6-7% ನಷ್ಟು ಸಿಎಜಿಆರ್ ದರವನ್ನು ದಾಖಲಿಸಿತ್ತು. ಕಾಗದಕ್ಕಾಗಿ ದೇಶೀಯ ಬೇಡಿಕೆಯು 2007-08ರ ವಿತ್ತವರ್ಷದಲ್ಲಿ ಸುಮಾರು ೯ ದಶಲಕ್ಷ ಟನ್‍ಗಳಿಂದ 2017-18ರಲ್ಲಿ ೧೭ ದಶಲಕ್ಷ ಟನ್‍ಗಿಂತ ಹೆಚ್ಚಾಗಿ ಬಹುತೇಕ ದ್ವಿಗುಣವಾಯಿತು. ಭಾರತದಲ್ಲಿ ಕಾಗದದ ವಾರ್ಷಿಕ ತಲಾವಾರು ಬಳಕೆಯು ಸುಮಾರು 13–14 ಕೆ.ಜಿ.ಯಾಗಿದ್ದು ಜಾಗತಿಕ ಸರಾಸರಿಯಾದ 57 ಕೆ.ಜಿ. ಗಿಂತ ಕಡಿಮೆಯಿದೆ. ಸೇವೆಗಳು ಸೇವಾ ವಲಯವು ಭಾರತದ ಜಿಡಿಪಿಯಲ್ಲಿ ಅತಿ ದೊಡ್ಡ ಪಾಲು ಹೊಂದಿದೆ, ೧೯೫೦ರಲ್ಲಿ 15% ನಷ್ಟಿದ್ದ ಇದು ೨೦೧೨ರಲ್ಲಿ 57% ಗೆ ಏರಿತು. ನಾಮಮಾತ್ರದ ಜಿಡಿಪಿ ಪ್ರಕಾರ ಇದು ಏಳನೇ ಅತಿ ದೊಡ್ಡ ಸೇವ ವಲಯವಾಗಿದೆ, ಮತ್ತು ಕೊಳ್ಳುವ ಶಕ್ತಿಯನ್ನು ಪರಿಗಣಿಸಿದಾಗ ಮೂರನೇ ಅತಿ ದೊಡ್ಡದ್ದಾಗಿದೆ. ಸೇವ ವಲಯವು 27% ಕಾರ್ಯಪಡೆಗೆ ಉದ್ಯೋಗ ನೀಡುತ್ತದೆ. ಮಾಹಿತಿ ತಂತ್ರಜ್ಞಾನ ಮತ್ತು ವ್ಯಾಪಾರ ಪ್ರಕ್ರಿಯೆ ಹೊರಗುತ್ತಿಗೆಗಳು ಅತಿ ವೇಗವಾಗಿ ಬೆಳೆಯುತ್ತಿರುವ ವಲಯಗಳ ಪೈಕಿ ಒಂದಾಗಿವೆ, ಮತ್ತು 1997–98 ಹಾಗೂ 2002–03 ವಿತ್ತೀಯ ವರ್ಷಗಳ ನಡುವೆ 33.6% ಸಂಚಿತ ಆದಾಯ ಬೆಳವಣಿಗೆ ದರವನ್ನು ಹೊಂದಿದ್ದವು, ಮತ್ತು ರಲ್ಲಿ ದೇಶದ ಒಟ್ಟು ರಫ್ತುಗಳಿಗೆ 25% ನಷ್ಟು ಕೊಡುಗೆ ನೀಡಿದ್ದವು. ವಿಮಾನಯಾನ 2017ರಲ್ಲಿ 158 ದಶಲಕ್ಷ ಪ್ರಯಾಣಿಕರ ವಾಯು ಸಂಚಾರವನ್ನು ದಾಖಲಿಸಿ ಭಾರತವು ವಿಶ್ವದ ನಾಲ್ಕನೇ ಅತಿ ದೊಡ್ಡ ವಿಮಾನಯಾನ ಮಾರುಕಟ್ಟೆಯಾಗಿದೆ. ೨೦೨೦ರ ವೇಳೆಗೆ ಈ ಮಾರುಕಟ್ಟೆಯು ೮೦೦ ವಿಮಾನಗಳನ್ನು ಹೊಂದಿರುವುದು ಎಂದು ಅಂದಾಜಿಸಲಾಗಿದೆ. ಇದು ಜಾಗತಿಕ ಪರಿಮಾಣಗಳ 4.3% ನಷ್ಟನ್ನು ರೂಪಿಸುತ್ತದೆ. ಈ ಮಾರುಕಟ್ಟೆಯು 2037ರ ವೇಳೆಗೆ ವಾರ್ಷಿಕವಾಗಿ 520 ದಶಲಕ್ಷದಷ್ಟು ಪ್ರಯಾಣಿಕ ಸಂಚಾರವನ್ನು ದಾಖಲಿಸುವುದು ಎಂದು ನಿರೀಕ್ಷಿಸಲಾಗಿದೆ. ವಿಮಾನಯಾನವು ೨೦೧೭ರಲ್ಲಿ ಭಾರತದ ಜಿಡಿಪಿಗೆ $30 ಬಿಲಿಯನ್‍ನಷ್ಟು ಕೊಡುಗೆ ನೀಡಿತು, ಮತ್ತು 7.5 ದಶಲಕ್ಷ ಉದ್ಯೋಗಗಳಿಗೆ ಆಧಾರವಾಯಿತು - 390,000 ನೇರವಾಗಿ, ಮೌಲ್ಯ ಸರಪಳಿಯಲ್ಲಿ 570,000 ಮತ್ತು ಪ್ರವಾಸೋದ್ಯಮದ ಮೂಲಕ 6.2 ದಶಲಕ್ಷ ಎಂದು ಐಎಟಿಎ ಅಂದಾಜಿಸಿತು. ಭಾರತದಲ್ಲಿನ ನಾಗರಿಕ ವಿಮಾನಯಾನವು ತನ್ನ ಆರಂಭಗಳನ್ನು ೧೮ ಫ಼ೆಬ್ರುವರಿ ೧೯೧೧ ಗೆ ಗುರುತಿಸುತ್ತದೆ. ಅಂದು ಒಬ್ಬ ಫ಼್ರೆಂಚ್ ವಿಮಾನ ಚಾಲಕನಾಗಿದ್ದ ಆನ್ರಿ ಪೆಕೆಟ್ ಹಂಬರ್ ಬೈಪ್ಲೇನ್‍ನಲ್ಲಿ ೬,೫೦೦ ಪತ್ರಗಳನ್ನು ಅಲಾಹಾಬಾದ್‍ನಿಂದ ನೈನಿಗೆ ಸಾಗಿಸಿದನು. ನಂತರ ೧೫ ಅಕ್ಟೋಬರ್ ೧೯೩೨ರಂದು, ಜೆ.ಆರ್.ಡಿ. ಟಾಟ ಪತ್ರಗಳ ಸರಕನ್ನು ವಿಮಾನದಲ್ಲಿ ಕರಾಚಿಯಿಂದ ಜೂಹು ವಿಮಾನ ನಿಲ್ದಾಣಕ್ಕೆ ಸಾಗಿಸಿದರು. ಮುಂದೆ ಅವರ ವಿಮಾನ ಸಂಸ್ಥೆಯು ಏರ್ ಇಂಡಿಯಾ ಆಯಿತು ಮತ್ತು ಇದು ಅಟ್ಲಾಂಟಿಕ್ ಮಹಾಸಾಗರವನ್ನು ದಾಟಿದ ಏಷ್ಯಾದ ಮೊದಲ ವಿಮಾನ ಸಂಸ್ಥೆಯಾಗಿತ್ತು, ಜೊತೆಗೆ ಜೆಟ್‍ಗಳನ್ನು ಹಾರಾಟ ಮಾಡಿದ ಏಷ್ಯಾದ ಮೊದಲ ವಿಮಾನ ಸಂಸ್ಥೆಯಾಗಿತ್ತು. ರಾಷ್ಟ್ರೀಕರಣ ಮಾರ್ಚ್ ೧೯೫೩ರಲ್ಲಿ, ಆಗ ಅಸ್ತಿತ್ವದಲ್ಲಿದ್ದ ಖಾಸಗಿ ಒಡೆತನದ ಎಂಟು ದೇಶೀಯ ವಿಮಾನಯಾನ ಸಂಸ್ಥೆಗಳನ್ನು ಇಂಡಿಯನ್ ಏರ್‌ಲೈನ್ಸ್ ಆಗಿ ಮತ್ತು ಟಾಟಾ ಗುಂಪಿನ ಒಡೆತನದ ಏರ್ ಇಂಡಿಯಾವನ್ನು ಅಂತರರಾಷ್ಟ್ರೀಯ ಸೇವೆಗಳಿಗಾಗಿ ಸರಳಗೊಳಿಸಿ ರಾಷ್ಟ್ರೀಕರಿಸಲು ಭಾರತದ ಸಂಸತ್ತು ವಾಯು ನಿಗಮಗಳ ಕಾಯಿದೆಯನ್ನು ಅಂಗೀಕರಿಸಿತು. ೧೯೭೨ರಲ್ಲಿ ಅಂತರರಾಷ್ಟ್ರೀಯ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವನ್ನು ರಚಿಸಲಾಯಿತು ಮತ್ತು ೧೯೮೬ರಲ್ಲಿ ರಾಷ್ಟ್ರೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವನ್ನು ರಚಿಸಲಾಯಿತು. ಏರ್ ಇಂಡಿಯಾ ಫ಼್ಲೈಟ್ ೧೮೨ ದ ಅಪಘಾತದ ನಂತರ ನಾಗರಿಕ ವಿಮಾನಯಾನ ಭದ್ರತೆ ವಿಭಾಗವನ್ನು ೧೯೮೭ರಲ್ಲಿ ಸ್ಥಾಪಿಸಲಾಯಿತು. ಅವಿನಿಯಮನ ಸರ್ಕಾರವು ೧೯೯೧ ರಲ್ಲಿ ನಾಗರಿಕ ವಿಮಾನಯಾನ ವಲಯವನ್ನು ಅವಿನಿಮಯನಗೊಳಿಸಿ ೧೯೯೪ರ ವರೆಗೆ 'ಏರ್ ಟ್ಯಾಕ್ಸಿ' ಯೋಜನೆಯಡಿ ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ಬಾಡಿಗೆ ಮತ್ತು ನಿಗದಿತವಲ್ಲದ ಸೇವೆಗಳನ್ನು ನಡೆಸಲು ಬಿಟ್ಟಿತು. ೧೯೯೪ರಲ್ಲಿ ವಾಯು ನಿಗಮಗಳ ಕಾಯಿದೆಯನ್ನು ರದ್ದುಮಾಡಿದ ನಂತರ ಖಾಸಗಿ ವಿಮಾನಯಾನ ಸಂಸ್ಥೆಗಳು ಆಗಿನಿಂದ ನಿಗದಿತ ಸೇವೆಗಳನ್ನು ನಡೆಸಲು ಅನುಮತಿ ಪಡೆದವು. ಜೆಟ್‌ ಏರ್ವೇಸ್, ಏರ್ ಸಹಾರಾ, ಮೋದಿಲುಫ಼್ಟ್, ದಮಾನಿಯಾ ಏರ್ವೇಸ್ ಹಾಗೂ ಎನ್ಇಪಿಸಿ ಏರ್‌ಲೈನ್ಸ್ ನಂತಹ ಖಾಸಗಿ ವಿಮಾನಯಾನ ಸಂಸ್ಥೆಗಳು ಈ ಅವಧಿಯಲ್ಲಿ ದೇಶೀಯ ಕಾರ್ಯಾಚರಣೆಗಳನ್ನು ಆರಂಭಿಸಿದವು. ಅವಿನಿಯಮನದ ನಂತರ ವಿಮಾನಯಾನ ಉದ್ಯಮವು ಕ್ಷಿಪ್ರ ಪರಿವರ್ತನೆಯನ್ನು ಅನುಭವಿಸಿತು. ಹಲವಾರು ಕಡಿಮೆ ವೆಚ್ಚದ ವಿಮಾನ ಸಂಸ್ಥೆಗಳು 2004–05ರಲ್ಲಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದವು. ಪ್ರಮುಖವಾದ ಹೊಸ ಪ್ರವೇಶಕರಲ್ಲಿ ಏರ್‌ ಡೆಕ್ಕನ್‌, ಏರ್ ಸಹಾರಾ, ಕಿಂಗ್‌ಫಿಷರ್ ಏರ್‌‍ಲೈನ್ಸ್, ಸ್ಪೈಸ್ ಜೆಟ್, ಗೋಏರ್, ಪ್ಯಾರಮೌಂಟ್ ಏರ್ವೇಸ್ ಮತ್ತು ಇಂಡಿಗೋ ಸೇರಿದ್ದವು. ಕಿಂಗ್‍ಫ಼ಿಷರ್ ಏರ್‌ಲೈನ್ಸ್ ೧೫ ಜೂನ್ ೨೦೦೫ರಂದು 3 ಬಿಲಿಯನ್ ಡಾಲರ್ ಮೌಲ್ಯದ ಏರ್‌ಬಸ್ ಎ೩೮೦ ವಿಮಾನಕ್ಕೆ ಕೋರಿಕೆ ಸಲ್ಲಿಸಿದ ಮೊದಲ ಭಾರತೀಯ ವಿಮಾನಯಾನ ಸಂಸ್ಥೆಯಾಯಿತು. ಆದರೆ, ಆರ್ಥಿಕ ನಿಧಾನೀಕರಣ ಮತ್ತು ಏರುತ್ತಿರುವ ಇಂಧನ ಹಾಗೂ ಕಾರ್ಯಾಚರಣಾ ವೆಚ್ಚಗಳ ಕಾರಣ ಭಾರತದ ವಿಮಾನಯಾನವು ಹೆಣಗಾಡಿತು. ಇದು ಏಕೀಕರಣ, ಸ್ವಾಮ್ಯಸ್ವಾಧೀನಗಳು ಮತ್ತು ಸ್ಥಗಿತಗೊಳಿಸುವಿಕೆಗಳಿಗೆ ಕಾರಣವಾಯಿತು. ೨೦೦೭ರಲ್ಲಿ, ಏರ್ ಸಹಾರಾವನ್ನು ಜೆಟ್ ಏರ್ವೇಸ್ ಮತ್ತು ಏರ್ ಡೆಕ್ಕನ್‍ನ್ನು ಕಿಂಗ್‍ಫ಼ಿಷರ್ ಏರ್ಲೈನ್ಸ್ ಖರೀದಿಸಿದವು. ಪ್ಯಾರಮೌಂಟ್ ಏರ್ವೇಸ್ ೨೦೧೦ ರಲ್ಲಿ ತನ್ನ ಕಾರ್ಯಾಚರಣೆಗಳನ್ನು ನಿಲ್ಲಿಸಿತು ಮತ್ತು ಕಿಂಗ್‌ಫ಼ಿಷರ್ ೨೦೧೨ ರಲ್ಲಿ ಮುಚ್ಚಿತು. ೨೦೧೩ರಲ್ಲಿ ಎಟಿಹಾಡ್ ಏರ್ವೇಸ್ ಜೆಟ್ ಏರ್ವೇಸ್‍ನಲ್ಲಿ ೨೪% ಪಾಲನ್ನು ಖರೀದಿಸಲು ಒಪ್ಪಿಕೊಂಡಿತು. ಏರ್ ಏಷ್ಯಾ ಮತ್ತು ಟಾಟಾ ಸನ್ಸ್ ನಡುವೆ ಸಂಯುಕ್ತ ಉದ್ಯಮವಾಗಿ ಕಾರ್ಯನಿರ್ವಹಿಸಲು ಆರಂಭಿಸಿದ, ಕಡಿಮೆ ವೆಚ್ಚದ ವಿಮಾನ ಸಂಸ್ಥೆಯಾದ ಏರ್ ಏಷ್ಯಾ ಇಂಡಿಯಾ ೨೦೧೪ ರಲ್ಲಿ ಆರಂಭವಾಯಿತು. 2013-14 ರ ವೇಳೆಗೆ, ಇಂಡಿಗೊ ಮತ್ತು ಗೋಏರ್ ಮಾತ್ರ ಲಾಭಗಳನ್ನು ಹುಟ್ಟಿಸುತ್ತಿದ್ದವು. ೨೦೦೫ ಮತ್ತು ೨೦೧೭ ರ ನಡುವೆ ಸರಾಸರಿ ದೇಶೀಯ ಪ್ರಯಾಣಿಕ ವಿಮಾನ ಶುಲ್ಕವು ಹಣದುಬ್ಬರಕ್ಕೆ ಸರಿಹೊಂದಿಸಿದ ಮೇಲೆ ೭೦% ನಷ್ಟು ತಗ್ಗಿತು. ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳು ೨೦೧೬ರಲ್ಲಿ ಹಣಕಾಸು ಸೇವೆಗಳ ಉದ್ಯಮವು $809 ಶತಕೋಟಿಯಷ್ಟು ಕೊಡುಗೆ ನೀಡಿತು (ಜಿಡಿಪಿಯ 37%) ಮತ್ತು ೧೪.೧೭ ದಶಲಕ್ಷ ಜನರಿಗೆ (ಕಾರ್ಯಪಡೆಯ 3%) ಉದ್ಯೋಗ ನೀಡಿತು. ಬ್ಯಾಂಕಿಂಗ್ ವಲಯವು $407 ಶತಕೋಟಿಯಷ್ಟು ಕೊಡುಗೆ ನೀಡಿತು (ಜಿಡಿಪಿಯ 19%) ಮತ್ತು ೫.೫ ದಶಲಕ್ಷ ಜನರಿಗೆ (ಕಾರ್ಯಪಡೆಯ 1%) ಉದ್ಯೋಗ ನೀಡಿತು. ಭಾರತದ ಹಣದ ಮಾರುಕಟ್ಟೆಯನ್ನು ಖಾಸಗಿ, ಸಾರ್ವಜನಿಕ ಮತ್ತು ವಿದೇಶೀ ಒಡೆತನದ ವಾಣಿಜ್ಯ ಬ್ಯಾಂಕುಗಳು ಮತ್ತು ಸಹಕಾರಿ ಬ್ಯಾಂಕುಗಳು (ಒಟ್ಟಾಗಿ ಇವನ್ನು 'ವರ್ಗೀಕೃತ ಬ್ಯಾಂಕುಗಳು' ಎಂದು ಕರೆಯಲಾಗುತ್ತದೆ) ಇರುವ ಸಂಘಟಿತ ವಲಯ; ಮತ್ತು ಪ್ರತ್ಯೇಕ ಅಥವಾ ಕುಟುಂಬ ಒಡೆತನದ ಸ್ಥಳೀಯ ಬ್ಯಾಂಕರುಗಳು ಅಥವಾ ಸಾಲ ನೀಡುವವರು ಮತ್ತು ಬ್ಯಾಂಕಿಂಗೇತರ ಹಣಕಾಸು ಕಂಪನಿಗಳು ಸೇರಿರುವ ಅಸಂಘಟಿತ ವಲಯವಾಗಿ ವರ್ಗೀಕರಿಸಲಾಗುತ್ತದೆ. ಗ್ರಾಮೀಣ ಮತ್ತು ಉಪನಗರ ಪ್ರದೇಶಗಳಲ್ಲಿ ಸಾಂಪ್ರದಾಯಿಕ ಬ್ಯಾಂಕುಗಳ ಬದಲಾಗಿ ಅಸಂಘಟಿತ ವಲಯ ಮತ್ತು ಕಿರುಸಾಲಕ್ಕೆ ಆದ್ಯತೆ ನೀಡಲಾಗುತ್ತದೆ, ವಿಶೇಷವಾಗಿ ಅನುತ್ಪಾದಕ ಉದ್ದೇಶಗಳಿಗಾಗಿ, ಉದಾ. ಸಮಾರಂಭಗಳಿಗೆ ಅಲ್ಪಾವಧಿಯ ಸಾಲಗಳು. ಪ್ರಧಾನ ಮಂತ್ರಿ ಇಂದಿರಾ ಗಾಂಧಿ ೧೯೬೯ರಲ್ಲಿ ೧೪ ಬ್ಯಾಂಕ್‍ಗಳನ್ನು ರಾಷ್ಟ್ರೀಕರಿಸಿದರು. ೧೯೮೦ರಲ್ಲಿ ಮತ್ತೆ ಇತರ ಆರು ಬ್ಯಾಂಕ್‍ಗಳನ್ನು ರಾಷ್ಟ್ರೀಕರಿಸಿ ಬ್ಯಾಂಕ್‍ಗಳು ತಮ್ಮ ಸಾಮಾಜಿಕ ಮತ್ತು ಅಭಿವೃದ್ಧಿ ಸಂಬಂಧಿ ಗುರಿಗಳನ್ನು ಪೂರೈಸುವುದನ್ನು ಖಚಿತಪಡಿಸಲು ತಮ್ಮ ಒಟ್ಟು ಸಾಲದ 40% ನಷ್ಟನ್ನು ಕೃಷಿ, ಲಘು ಕೈಗಾರಿಕೆ, ಚಿಲ್ಲರೆ ವ್ಯಾಪಾರ ಮತ್ತು ಸಣ್ಣ ವ್ಯಾಪಾರ ಸೇರಿದಂತೆ ಆದ್ಯತೆಯ ವಲಯಗಳಿಗೆ ನೀಡಬೇಕು ಎಂದು ಕಡ್ಡಾಯ ಮಾಡಿದರು. ಅಂದಿನಿಂದ, ಬ್ಯಾಂಕ್ ಶಾಖೆಗಳ ಸಂಖ್ಯೆಯು ೧೯೬೯ ರಲ್ಲಿ ೮,೨೬೦ ರಿಂದ ೨೦೦೭ರಲ್ಲಿ ೭೨,೧೭೦ಕ್ಕೆ ಏರಿತು ಮತ್ತು ಒಂದು ಶಾಖೆಯು ಒಳಗೊಳ್ಳುವ ಜನರ ಸಂಖ್ಯೆಯು ಇದೇ ಅವಧಿಯಲ್ಲಿ ೬೩,೮೦೦ರಿಂದ ೧೫,೦೦೦ ಕ್ಕೆ ಇಳಿಯಿತು. ಒಟ್ಟು ಬ್ಯಾಂಕ್ ಜಮಾಗಳು 1970–71 ರಲ್ಲಿ ಇದ್ದದ್ದು 2008–09 ರಲ್ಲಿ ರಷ್ಟಕ್ಕೆ ಹೆಚ್ಚಿತು. ಗ್ರಾಮೀಣ ಶಾಖೆಗಳ ಸಂಖ್ಯೆಯು ೧೯೬೯ರಲ್ಲಿ ೧,೮೬೦ ಅಥವಾ ಒಟ್ಟು ಸಂಖ್ಯೆಯ ೨೨% ನಷ್ಟಿದ್ದದ್ದು ೨೦೦೭ರಲ್ಲಿ ೩೦,೫೯೦ ಅಥವಾ ೪೨% ನಷ್ಟಕ್ಕೆ ಏರಿತು. ಈ ಏರಿಕೆಯ ಹೊರತಾಗಿಯೂ 500,000 ಹಳ್ಳಿಗಳ ಪೈಕಿ 32,270 ಹಳ್ಳಿಗಳು ಮಾತ್ರ ಒಂದು ಅನುಸೂಚಿತ ಬ್ಯಾಂಕ್‍ನಿಂದ ಸೇವೆ ಪಡೆಯುತ್ತಿವೆ. 2006–07 ರಲ್ಲಿ ಭಾರತದ ನಿವ್ವಳ ದೇಶೀಯ ಉಳಿತಾಯಗಳು ಜಿಡಿಪಿಯ 32.8% ನಷ್ಟಿದ್ದವು ಮತ್ತು ಇದು ಹೆಚ್ಚಿನ ಪ್ರಮಾಣದಲ್ಲಿದೆ. ವೈಯಕ್ತಿಕ ಉಳಿತಾಯಗಳ ಅರ್ಧಕ್ಕಿಂತ ಹೆಚ್ಚು ಭಾಗವು ಜಮೀನು, ಮನೆಗಳು, ದನಗಳು ಮತ್ತು ಚಿನ್ನದಂತಹ ಭೌತಿಕ ಆಸ್ತಿಗಳಲ್ಲಿ ಹೂಡಿಕೆಯಾಗಿದೆ. ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ವಲಯದ ಬ್ಯಾಂಕ್‍ಗಳು ಬ್ಯಾಂಕಿಂಗ್ ಉದ್ಯಮದ ಒಟ್ಟು ಸ್ವತ್ತುಗಳ 75% ಕ್ಕಿಂತ ಹೆಚ್ಚನ್ನು ಹೊಂದಿವೆ. ಖಾಸಗಿ ಮತ್ತು ವಿದೇಶಿ ಬ್ಯಾಂಕ್‍ಗಳು ಅನುಕ್ರಮವಾಗಿ 18.2% ಮತ್ತು 6.5% ರಷ್ಟನ್ನು ಹೊಂದಿವೆ. ಉದಾರೀಕರಣವಾದಾಗಿನಿಂದ, ಸರ್ಕಾರವು ಗಮನಾರ್ಹ ಬ್ಯಾಂಕಿಂಗ್ ಸುಧಾರಣೆಗಳನ್ನು ಅನುಮೋದಿಸಿದೆ. ಒಟ್ಟುಗೂಡಿಸುವಿಕೆಯನ್ನು ಪ್ರೋತ್ಸಾಹಿಸುವ ಸುಧಾರಣೆಗಳು, ಸರ್ಕಾರಿ ಹಸ್ತಕ್ಷೇಪವನ್ನು ಕಡಿಮೆಮಾಡುವುದು ಮತ್ತು ಲಾಭದಾಯಕತೆ ಹಾಗೂ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವಂತಹ ಕೆಲವು ಸುಧಾರಣೆಗಳು ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ಸಂಬಂಧಿಸಿವೆ. ಇತರ ಸುಧಾರಣೆಗಳು ಬ್ಯಾಂಕಿಂಗ್ ಮತ್ತು ವಿಮಾ ವಲಯಗಳನ್ನು ಖಾಸಗಿ ಮತ್ತು ವಿದೇಶಿ ಕಂಪನಿಗಳಿಗೆ ತೆರೆದಿವೆ. ಹಣಕಾಸು ತಂತ್ರಜ್ಞಾನ ರಾಷ್ಟ್ರೀಯ ತಂತ್ರಾಂಶ ಮತ್ತು ಸೇವಾ ಕಂಪನಿಗಳ ಸಂಘದ (ನ್ಯಾಸ್ಕೊಮ್) ವರದಿಯ ಪ್ರಕಾರ, ಭಾರತವು ಫ಼ಿನ್‍ಟೆಕ್ ಕ್ಷೇತ್ರದಲ್ಲಿ ೨೦೧೫ರಲ್ಲಿ ಸುಮಾರು $420 ದಶಲಕ್ಷದಷ್ಟು ಹೂಡಿಕೆಯೊಂದಿಗೆ ಸುಮಾರು ೪೦೦ ಕಂಪನಿಗಳನ್ನು ಹೊಂದಿದೆ. ಫ಼ಿನ್‍ಟೆಕ್ ತಂತ್ರಾಂಶ ಮತ್ತು ಸೇವೆಗಳ ಮಾರುಕಟ್ಟೆಯು ೨೦೨೦ರ ವೇಳೆಗೆ ೧.೭ ಪಟ್ಟು ಬೆಳೆದು $8 ಶತಕೋಟಿಯಷ್ಟು ಮೌಲ್ಯದ್ದಾಗುವುದು ಎಂದೂ ನ್ಯಾಸ್ಕೊಮ್‍ನ ವರದಿ ಅಂದಾಜಿಸಿತು. ಭಾರತದ ಫ಼ಿನ್‍ಟೆಕ್ ಕ್ಷೇತ್ರವನ್ನು ಮುಂದೆ ಹೇಳಲಾದ ರೀತಿಯಲ್ಲಿ ವಿಭಾಗಿಸಲಾಗಿದೆ – 34% ಸಂದಾಯ ಸಂಸ್ಕರಣೆಯಲ್ಲಿ, ಇದನ್ನು ಅನುಸರಿಸಿ 32% ಬ್ಯಾಂಕಿಂಗ್‍ನಲ್ಲಿ ಮತ್ತು ವ್ಯಾಪಾರ, ಸಾರ್ವಜನಿಕ ಹಾಗೂ ಖಾಸಗಿ ಮಾರುಕಟ್ಟೆಗಳಲ್ಲಿ 12%. ಮಾಹಿತಿ ತಂತ್ರಜ್ಞಾನ ಭಾರತದಲ್ಲಿನ ಮಾಹಿತಿ ತಂತ್ರಜ್ಞಾನ (ಐಟಿ) ಉದ್ಯಮವು ಎರಡು ಮುಖ್ಯ ಘಟಕಗಳನ್ನು ಹೊಂದಿದೆ: ಐಟಿ ಸೇವೆಗಳು ಮತ್ತು ವ್ಯಾಪಾರ ಪ್ರಕ್ರಿಯೆ ಹೊರಗುತ್ತಿಗೆ (ಬಿಪಿಒ). ಈ ವಲಯವು ಭಾರತದ ಜಿಡಿಪಿಗೆ ತನ್ನ ಕೊಡುಗೆಯನ್ನು ೧೯೯೮ರಲ್ಲಿ 1.2% ನಿಂದ 2012 ರಲ್ಲಿ 7.5% ಗೆ ಹೆಚ್ಚಿಸಿದೆ. ನ್ಯಾಸ್ಕೊಮ್ ಪ್ರಕಾರ, ಈ ವಲಯವು ೨೦೧೫ರಲ್ಲಿ 147 ಶತಕೋಟಿ ಅಮೇರಿಕನ್ ಡಾಲರ್‌ಗಳಷ್ಟು ಆದಾಯವನ್ನು ಒಟ್ಟುಗೂಡಿಸಿತು. ಇದರಲ್ಲಿ ರಫ್ತು ಆದಾಯವು 99 ಶತಕೋಟಿ ಅಮೇರಿಕನ್ ಡಾಲರ್‌ಗಳಷ್ಟಿತ್ತು ಮತ್ತು ದೇಶೀಯ ಆದಾಯವು 48 ಶತಕೋಟಿ ಅಮೇರಿಕನ್ ಡಾಲರ್‌ಗಳಷ್ಟಿತ್ತು ಮತ್ತು 13% ಕಿಂತ ಹೆಚ್ಚು ಬೆಳೆಯಿತು. ಹೆಚ್ಚಿನ ವಿಶೇಷೀಕರಣ, ಕಡಿಮೆ ವೆಚ್ಚದ, ಬಹಳ ಕೌಶಲಯುತ, ನಿರರ್ಗಳವಾಗಿ ಇಂಗ್ಲಿಷ್ ಮಾತನಾಡಬಲ್ಲ ಕಾರ್ಮಿಕರ ದೊಡ್ಡ ಪೂರೈಕೆಯ ಲಭ್ಯತೆ - ಜೊತೆಗೆ ಭಾರತದ ಸೇವಾ ರಫ್ತುಗಳಲ್ಲಿ ಆಸಕ್ತಿ ಹೊಂದಿದ, ಅಥವಾ ತಮ್ಮ ಕಾರ್ಯಗಳನ್ನು ಹೊರಗುತ್ತಿಗೆ ಕೊಡಲು ನೋಡುತ್ತಿದ್ದ ವಿದೇಶೀ ಗ್ರಾಹಕರಿಂದ ಹೆಚ್ಚಿದ ಬೇಡಿಕೆಯು ಹೊಂದಾಣಿಕೆಯಾಗಿದ್ದು ಐಟಿ ವಲಯದಲ್ಲಿನ ಬೆಳವಣಿಗೆಗೆ ಕಾರಣವೆಂದು ಹೇಳಲಾಗಿದೆ. ದೇಶದ ಜಿಡಿಪಿಯಲ್ಲಿ ಭಾರತದ ಐಟಿ ಉದ್ಯಮದ ಪಾಲು 2005–06 ರಲ್ಲಿ 4.8% ನಷ್ಟಿದ್ದದ್ದು 2008 ರಲ್ಲಿ 7% ಕ್ಕೆ ಹೆಚ್ಚಿತು. ೨೦೦೯ರಲ್ಲಿ, ಏಳು ಭಾರತೀಯ ವ್ಯಾಪಾರ ಸಂಸ್ಥೆಗಳು ವಿಶ್ವದಲ್ಲಿನ ೧೫ ಅಗ್ರ ತಂತ್ರಜ್ಞಾನ ಹೊರಗುತ್ತಿಗೆ ಕಂಪನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದವು. ಭಾರತದಲ್ಲಿನ ಹೊರಗುತ್ತಿಗೆ ಉದ್ಯಮದಲ್ಲಿರುವ ವ್ಯಾಪಾರ ಪ್ರಕ್ರಿಯೆ ಹೊರಗುತ್ತಿಗೆ ಸೇವೆಗಳು ಮುಖ್ಯವಾಗಿ ಬಹುರಾಷ್ಟ್ರೀಯ ಸಂಸ್ಥೆಗಳ ಪಾಶ್ಚಾತ್ಯ ಕಾರ್ಯಾಚರಣೆಗಳಿಗೆ ನೆರವಾಗುತ್ತವೆ. ೨೦೧೨ರ ವೇಳೆಗೆ, ಹೊರಗುತ್ತಿಗೆ ವಲಯದಲ್ಲಿ ಸುಮಾರು 2.8 ದಶಲಕ್ಷ ಜನರು ಕೆಲಸ ಮಾಡುತ್ತಿದ್ದರು. ವಾರ್ಷಿಕ ಆದಾಯಗಳು ಸುಮಾರು $11 ಶತಕೋಟಿಯಷ್ಟಿದ್ದು, ಜಿಡಿಪಿಯ ಸುಮಾರು 1% ನಷ್ಟಿವೆ. ಭಾರತದಲ್ಲಿ ಪ್ರತಿ ವರ್ಷ ಸುಮಾರು 2.5 ದಶಲಕ್ಷ ಜನರು ಪದವೀಧರರಾಗುತ್ತಾರೆ. ಕೌಶಲದ ಅಭಾವಗಳ ಕಾರಣ ವೇತನಗಳು ಶೇಕಡ 10–15 ರಷ್ಟು ಹೆಚ್ಚಾಗುತ್ತಿವೆ. ವಿಮೆ ಭಾರತವು ೨೦೧೩ರಲ್ಲಿ ವಿಶ್ವದಲ್ಲಿನ ಹತ್ತನೇ ಅತಿ ದೊಡ್ಡ ವಿಮಾ ಮಾರುಕಟ್ಟೆಯಾಯಿತು, ೨೦೧೧ರಲ್ಲಿ ೧೫ನೇ ಸ್ಥಾನದಲ್ಲಿತ್ತು. ೨೦೧೩ರಲ್ಲಿ $66.4 ಶತಕೋಟಿಯಷ್ಟು ಒಟ್ಟು ಮಾರುಕಟ್ಟೆಯ ಗಾತ್ರದಷ್ಟಿದ್ದ ಇದು ವಿಶ್ವದ ಪ್ರಮುಖ ಅರ್ಥವ್ಯವಸ್ಥೆಗಳಿಗೆ ಹೋಲಿಸಿದರೆ ಸಣ್ಣದಾಗಿದೆ, ಮತ್ತು ೨೦೧೭ರಲ್ಲಿ ಭಾರತದ ವಿಮಾ ಮಾರುಕಟ್ಟೆಯು ವಿಶ್ವದ ವಿಮಾ ವ್ಯಾಪಾರದ ಕೇವಲ 2% ನಷ್ಟನ್ನು ರೂಪಿಸಿತ್ತು. ೨೦೧೮ರಲ್ಲಿ ಭಾರತದ ಜೀವ ಮತ್ತು ಅಜೀವ ವಿಮಾ ಉದ್ಯಮವು ಒಟ್ಟು ನಿವ್ವಳ ವಿಮಾ ಕಂತುಗಳಲ್ಲಿ $86 ಶತಕೋಟಿಯಷ್ಟು ಸಂಗ್ರಹಿಸಿತು. ಜೀವವಿಮೆಯು ವಿಮಾ ಮಾರುಕಟ್ಟೆಯ 75.41% ನಷ್ಟನ್ನು ರೂಪಿಸುತ್ತದೆ ಮತ್ತು ಉಳಿದದ್ದು ಸಾಮಾನ್ಯ ವಿಮೆಯಾಗಿದೆ. ಭಾರತದಲ್ಲಿರುವ 52 ವಿಮಾ ಕಂಪನಿಗಳಲ್ಲಿ, 24 ಜೀವವಿಮಾ ವ್ಯವಹಾರದಲ್ಲಿ ಸಕ್ರಿಯವಾಗಿವೆ. ವಿಶೇಷೀಕೃತ ವಿಮಾಗಾರರಾದ ರಫ್ತು ಸಾಲ ಖಾತರಿ ನಿಗಮ ಮತ್ತು ಕೃಷಿ ವಿಮಾ ಕಂಪನಿ (ಎಐಸಿ) ಸಾಲ ಖಾತರಿ ಮತ್ತು ಬೆಳೆ ವಿಮೆಯನ್ನು ನೀಡುತ್ತವೆ. ಇದು ಹವಾಮಾನ ವಿಮೆ ಮತ್ತು ನಿರ್ದಿಷ್ಟ ಬೆಳೆಗಳಿಗೆ ಸಂಬಂಧಿಸಿದ ವಿಮೆಯಂತಗ ಹಲವಾರು ಹೊಸದಾದ ಉತ್ಪನ್ನಗಳನ್ನು ಪರಿಚಯಿಸಿದೆ. ಜೀವ ವಿಮಾದಾರರಲ್ಲದ ವಿಮಾದಾರರು ಒಪ್ಪಿಕೊಂಡ ವಿಮಾಕಂತುಗಳು 2010–11 ನೇ ವರ್ಷದಲ್ಲಿ 42,576 ಕೋಟಿಯಷ್ಟಿತ್ತು (425 ಶತಕೋಟಿ). 2009–10 ವರ್ಷದಲ್ಲಿ ಇದು 34,620 ಕೋಟಿಯಷ್ಟಿತ್ತು (346 ಶತಕೋಟಿ). ಎಲ್ಲದ್ದಕ್ಕೂ ಸಮಾನವಾಗಿ ಮಾಡಿದ ಸುಂಕ ದರಗಳಲ್ಲಿನ ಕಡಿತಗಳನ್ನು ಪರಿಗಣಿಸಿದರೆ, ಈ ಬೆಳವಣಿಗೆಯು ತೃಪ್ತಿಕರವಾಗಿದೆ. ಖಾಸಗಿ ವಿಮಾದಾರರು ಒಪ್ಪಿಕೊಂಡ ವಿಮಾಕಂತುಗಳು 17,424 ಕೋಟಿಯಷ್ಟಿದ್ದವು (174 ಶತಕೋಟಿ). 2009–10 ರಲ್ಲಿ ಇದು 13,977 ಕೋಟಿಯಷ್ಟಿತ್ತು (140 ಶತಕೋಟಿ). ಭಾರತದಲ್ಲಿನ ವಿಮಾ ವ್ಯವಹಾರವು ವಿಮಾ ಪ್ರವೇಶದ ತಗ್ಗಿದ ಮಟ್ಟಗಳನ್ನು ಹೊಂದಿ ಚೆನ್ನಾಗಿ ವಿಕಾಸಗೊಂಡಿರಲಿಲ್ಲ. ಚಿಲ್ಲರೆ ವ್ಯಾಪಾರ ೨೦೧೬ರಲ್ಲಿ, ಸಗಟು ವ್ಯಾಪಾರವನ್ನು ಹೊರತುಪಡಿಸಿ, ಚಿಲ್ಲರೆ ಉದ್ಯಮವು $482 ಶತಕೋಟಿಯಷ್ಟು ಕೊಡುಗೆ ನೀಡಿತು (ಜಿಡಿಪಿಯ 22%) ಮತ್ತು 249.94 ದಶಲಕ್ಷ ಜನರಿಗೆ (ಕಾರ್ಯಪಡೆಯ 57%) ಉದ್ಯೋಗ ನೀಡಿತ್ತು. ಈ ಉದ್ಯಮವು ಕೃಷಿಯ ನಂತರ ಭಾರತದಲ್ಲಿನ ಎರಡನೇ ಅತಿ ದೊಡ್ಡ ಉದ್ಯೋಗದಾತವಾಗಿದೆ. ಭಾರತದ ಚಿಲ್ಲರೆ ಮಾರುಕಟ್ಟೆಯು $600 ಶತಕೋಟಿಯಷ್ಟಿದೆ ಎಂದು ಅಂದಾಜಿಸಲಾಗಿದೆ ಮತ್ತು ಆರ್ಥಿಕ ಮೌಲ್ಯದ ಪ್ರಕಾರ ವಿಶ್ವದಲ್ಲಿನ ಐದು ಅಗ್ರ ಚಿಲ್ಲರೆ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಭಾರತವು ವಿಶ್ವದಲ್ಲಿನ ಅತಿ ವೇಗವಾಗಿ ಬೆಳೆಯುತ್ತಿರುವ ಚಿಲ್ಲರೆ ಮಾರುಕಟ್ಟೆಗಳಲ್ಲಿ ಒಂದನ್ನು ಹೊಂದಿದೆ, ಮತ್ತು ೨೦೨೦ರ ವೇಳೆಗೆ $1.3 ಟ್ರಿಲಿಯನ್ ಮುಟ್ಟುವುದು ಎಂದು ಅಂದಾಜಿಸಲಾಗಿದೆ. ೨೦೧೮ರಲ್ಲಿ ಭಾರತದಲ್ಲಿನ ಇ-ಕಾಮರ್ಸ್ ಚಿಲ್ಲರೆ ಮಾರುಕಟ್ಟೆಯ ಮೌಲ್ಯ $32.7 ಶತಕೋಟಿಯಷ್ಟಾಗಿತ್ತು, ಮತ್ತು ೨೦೨೨ರ ವೇಳೆಗೆ $71.9 ಶತಕೋಟಿ ಮುಟ್ಟುವುದೆಂದು ನಿರೀಕ್ಷಿಸಲಾಗಿದೆ. ಭಾರತದ ಚಿಲ್ಲರೆ ಉದ್ಯಮವು ಮುಖ್ಯವಾಗಿ ಸ್ಥಳೀಯ ಸಣ್ಣ ಅಂಗಡಿಗಳು, ಮಾಲೀಕ ನೇಮಿತ ಅಂಗಡಿಗಳು ಮತ್ತು ಬೀದಿ ವ್ಯಾಪಾರಿಗಳನ್ನು ಒಳಗೊಂಡಿದೆ. ಚಿಲ್ಲರೆ ಸೂಪರ್‌ಮಾರ್ಕೆಟ್‌ಗಳು ವಿಸ್ತರಿಸುತ್ತಿದ್ದು, ೨೦೦೮ರಲ್ಲಿ ಇವುಗಳ ಮಾರುಕಟ್ಟೆ ಪಾಲು 4% ನಷ್ಟಿತ್ತು. ೨೦೧೨ರಲ್ಲಿ, ಸರ್ಕಾರವು ಮಲ್ಟಿಬ್ರ್ಯಾಂಡ್ ಚಿಲ್ಲರೆ ವ್ಯಾಪಾರದಲ್ಲಿ 51% ಎಫ಼್‍ಫ಼ಿಐ ಮತ್ತು ಸಿಂಗಲ್ ಬ್ರ್ಯಾಂಡ್ ಚಿಲ್ಲರೆ ವ್ಯಾಪಾರದಲ್ಲಿ 100% ಎಫ಼್‍ಡಿಐಗೆ ಅನುಮತಿ ನೀಡಿತು. ಆದರೆ ಹಿಂತುದಿಯ ಮಳಿಗೆ ಮೂಲಸೌಕರ್ಯ ಹಾಗೂ ರಾಜ್ಯಮಟ್ಟದ ಪರವಾನಗಿಗಳ ಕೊರತೆ ಮತ್ತು ಕೆಂಪುಪಟ್ಟಿಯು ಸಂಘಟಿತ ಚಿಲ್ಲರೆ ವ್ಯಾಪಾರದ ಬೆಳವಣಿಗೆಯನ್ನು ಸೀಮಿತಗೊಳಿಸುವುದು ಮುಂದುವರಿಸಿವೆ. ಒಂದು ಅಂಗಡಿಯು ವ್ಯಾಪಾರಕ್ಕಾಗಿ ತೆರೆಯುವ ಮುನ್ನ "ನಾಮಫಲಕ ಪರವಾನಗಿಗಳು" ಮತ್ತು "ಶೇಖರಣಾ ವಿರೋಧಿ ಕ್ರಮಗಳಂತಹ" ಮೂವತ್ತಕ್ಕಿಂತ ಹೆಚ್ಚು ನಿಯಂತ್ರಣಗಳಿರುವ ಅನುಸರಣೆಯನ್ನು ಮಾಡಬೇಕಾಗುತ್ತದೆ. ರಾಜ್ಯದಿಂದ ರಾಜ್ಯದಿಂದ ರಾಜ್ಯಕ್ಕೆ, ಮತ್ತು ರಾಜ್ಯಗಳ ಒಳಗೆ ಕೂಡ ಸರಕುಗಳನ್ನು ಚಲಿಸಲು ತೆರಿಗೆಗಳಿವೆ. ದ ವಾಲ್ ಸ್ಟ್ರೀಟ್ ಜರ್ನಲಿ ಪ್ರಕಾರ, ಮೂಲಸೌಕರ್ಯ ಮತ್ತು ಸಮರ್ಥ ಚಿಲ್ಲರೆ ಜಾಲಗಳ ಕೊರತೆಯಿಂದ ಭಾರತದ ಕೃಷಿ ಉತ್ಪನ್ನದ ಮೂರನೇ ಒಂದು ಭಾಗ ಹಾಳಾಗುವ ಮೂಲಕ ನಷ್ಟವಾಗುತ್ತದೆ. ಪ್ರವಾಸೋದ್ಯಮ ೨೦೧೭ರಲ್ಲಿ ಪ್ರವಾಸೋದ್ಯಮವು ₹15.24 ಲಕ್ಷ ಕೋಟಿಯಷ್ಟನ್ನು ಅಥವಾ ದೇಶದ ಜಿಡಿಪಿಯ 9.4% ನಷ್ಟು ಸೃಷ್ಟಿಸಿತು ಮತ್ತು 41.622 ದಶಲಕ್ಷ ಉದ್ಯೋಗಗಳಿಗೆ ಆಧಾರವಾಯಿತು (ದೇಶದ ಒಟ್ಟು ಉದ್ಯೋಗದ 8%) ಎಂದು ವಿಶ್ವ ಪ್ರಯಾಣ ಮತ್ತು ಪ್ರವಾಸ ಮಂಡಳಿಯು ಲೆಕ್ಕಹಾಕಿತು. 2028ರ ವೇಳೆಗೆ ಈ ವಲಯವು 6.9% ವಾರ್ಷಿಕ ದರದೊಂದಿಗೆ ಬೆಳೆದು ₹32.05 ಲಕ್ಷ ಕೋಟಿಯಷ್ಟು (ಜಿಡಿಪಿಯ 9.9%) ಮುಟ್ಟುವುದು ಎಂದು ಮುನ್ನುಡಿಯಲಾಗಿದೆ. ೨೦೧೬ ರಲ್ಲಿ 8.89 ಪ್ರವಾಸಿಗಳಿಗೆ ಹೋಲಿಸಿದರೆ ೨೦೧೭ರಲ್ಲಿ ೧೦ ದಶಲಕ್ಷಕ್ಕಿಂತ ಹೆಚ್ಚು ವಿದೇಶೀ ಪ್ರವಾಸಿಗರು ಭಾರತದಲ್ಲಿ ಆಗಮಿಸಿ, 15.6% ನಷ್ಟು ಬೆಳವಣಿಗೆಯನ್ನು ದಾಖಲಿಸಿತು. ೨೦೧೫ರಲ್ಲಿ ಭಾರತವು ಪ್ರವಾಸೋದ್ಯಮ ಸಂದಾಯಗಳಿಂದ ವಿದೇಶಿ ವಿನಿಮಯದಲ್ಲಿ $21.07 ಶತಕೋಟಿಯಷ್ಟು ಸಂಪಾದಿಸಿತು. ಭಾರತಕ್ಕೆ ಅಂತರರಾಷ್ಟ್ರೀಯ ಪ್ರವಾಸೋದ್ಯಮವು ೧೯೯೭ರಲ್ಲಿ 2.37 ದಶಲಕ್ಷ ಆಗಮನಗಳಿಂದ ೨೦೧೫ರಲ್ಲಿ 8.03 ದಶಲಕ್ಷ ಆಗಮನಗಳಿಗೆ ಬೆಳೆದು ಸ್ಥಿರವಾದ ಬೆಳವಣಿಗೆಯನ್ನು ಕಂಡಿದೆ. ಅಮೇರಿಕವು ಭಾರತಕ್ಕೆ ಅಂತರರಾಷ್ಟ್ರೀಯ ಪ್ರವಾಸಿಗಳ ಅತಿ ದೊಡ್ಡ ಮೂಲವಾಗಿದೆ. ಐರೋಪ್ಯ ಒಕ್ಕೂಟದ ರಾಷ್ಟ್ರಗಳು ಮತ್ತು ಜಪಾನ್ ಅಂತರರಾಷ್ಟ್ರೀಯ ಪ್ರವಾಸಿಗಳ ಇತರ ಪ್ರಮುಖ ಮೂಲಗಳಾಗಿವೆ. 10% ಗಿಂತ ಕಡಿಮೆ ಅಂತರರಾಷ್ಟ್ರೀಯ ಪ್ರವಾಸಿಗಳು ತಾಜ್ ಮಹಲ್‍ಗೆ ಭೇಟಿ ನೀಡುತ್ತಾರೆ. ಬಹುಪಾಲು ಪ್ರವಾಸಿಗಳು ಇತರ ಸಾಂಸ್ಕೃತಿಕ, ವಿಷಯಾಧಾರಿತ ಮತ್ತು ರಜಾದಿನಗಳ ಪ್ರಯಾಣವನ್ನು ಮಾಡುತ್ತಾರೆ. 12 ದಶಲಕ್ಷಕ್ಕಿಂತ ಹೆಚ್ಚು ಭಾರತೀಯ ನಾಗರಿಕರು ಪ್ರತಿ ವರ್ಷ ಪ್ರವಾಸೋದ್ಯಮಕ್ಕಾಗಿ ಅಂತರರಾಷ್ಟ್ರೀಯ ಪ್ರಯಾಣ ಮಾಡುತ್ತಾರೆ. ಭಾರತದೊಳಗಿನ ದೇಶೀಯ ಪ್ರವಾಸೋದ್ಯಮವು ಸುಮಾರು 740 ದಶಲಕ್ಷ ಭಾರತೀಯ ಪ್ರಯಾಣಿಕರನ್ನು ಸೇರಿಸುತ್ತದೆ. ಭಾರತವು ತನ್ನ ಆರೋಗ್ಯ ಆರೈಕೆ ಅರ್ಥವ್ಯವಸ್ಥೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ವೈದ್ಯಕೀಯ ಪ್ರವಾಸೋದ್ಯಮ ವಲಯವನ್ನು ಹೊಂದಿದೆ. ಇದು ಕಡಿಮೆ ವೆಚ್ಚದ ಆರೋಗ್ಯ ಸೇವೆಗಳು ಮತ್ತು ದೀರ್ಘಕಾಲಿಕ ಆರೈಕೆಯನ್ನು ನೀಡುತ್ತದೆ. ಅಕ್ಟೋಬರ್ ೨೦೧೫ರಲ್ಲಿ, ವೈದ್ಯಕೀಯ ಪ್ರವಾಸೋದ್ಯಮ ವಲಯವು $3 ಶತಕೋಟಿ ಮೌಲ್ಯದ್ದಾಗಿತ್ತು ಎಂದು ಅಂದಾಜಿಸಲಾಗಿದೆ. ೨೦೨೦ರ ವೇಳೆಗೆ ಇದು $7–8 ಶತಕೋಟಿಗೆ ಬೆಳೆಯುವುದು ಎಂದು ಅಂದಾಜಿಸಲಾಗಿದೆ. 2014ರಲ್ಲಿ, 184,298 ವಿದೇಶಿ ರೋಗಿಗಳು ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಲು ಭಾರತಕ್ಕೆ ಪ್ರಯಾಣ ಮಾಡಿದರು. ಮಾಧ್ಯಮ ಮತ್ತು ಮನೋರಂಜನಾ ಉದ್ಯಮ ಭಾರತದ ಮಾಧ್ಯಮ ಮತ್ತು ಮನೋರಂಜನಾ ಉದ್ಯಮವು ೧೧.೭% ನಷ್ಟು ಸಿಎಜಿಆರ್‌ನ್ನು ದಾಖಲಿಸಿ ೨೦೧೭ ರಲ್ಲಿ $30.364 ಶತಕೋಟಿ ಗಾತ್ರದಿಂದ ೨೦೨೨ರ ವೇಳೆಗೆ $52.683 ಶತಕೋಟಿ ಗಾತ್ರಕ್ಕೆ ಬೆಳೆಯುವುದು ಎಂದು ಆಸೋಚಾಮ್-ಪಿಡ್ಬ್ಯುಸಿಯ ಒಂದು ಜಂಟಿ ಅಧ್ಯಯನವು ಅಂದಾಜಿಸಿತು. ಈ ಅವಧಿಯಲ್ಲಿ ದೂರದರ್ಶನ, ಚಲನಚಿತ್ರ ಮತ್ತು ಓವರ್ ದ ಟಾಪ್ ಸೇವೆಗಳು ಉದ್ಯಮದ ಒಟ್ಟಾರೆ ಬೆಳವಣಿಗೆಯ ಹೆಚ್ಚುಕಡಿಮೆ ಅರ್ಧದಷ್ಟನ್ನು ರೂಪಿಸುವವು ಎಂದೂ ಈ ಅಧ್ಯಯನವು ಮುನ್ನುಡಿಯಿತು. ಆರೋಗ್ಯ ರಕ್ಷಣೆ ಏರುತ್ತಿರುವ ಆದಾಯಗಳು, ಹೆಚ್ಚಿನ ಆರೋಗ್ಯ ಅರಿವು, ಜೀವನಶೈಲಿ ರೋಗಗಳ ಹೆಚ್ಚಿದ ಆದ್ಯತೆ, ಮತ್ತು ಆರೋಗ್ಯ ವಿಮೆಯ ಸುಧಾರಿತ ಬಳಕೆಯಿಂದ ಉತ್ತೇಜಿತವಾಗಿ ಭಾರತದ ಆರೋಗ್ಯ ರಕ್ಷಣಾ ವಲಯವು ೨೦೧೫ ರಿಂದ ೨೦೨೦ರ ನಡುವೆ 29% ಸಿಎಜಿಆರ್‌ನೊಂದಿಗೆ ಬೆಳೆದು $280 ಶತಕೋಟಿ ಮುಟ್ಟುವುದು ಎಂದು ನಿರೀಕ್ಷಿಸಲಾಗಿದೆ. ಭಾರತದಲ್ಲಿನ ಆಯುರ್ವೇದ ಉದ್ಯಮವು ೨೦೧೮ರಲ್ಲಿ $4.4 ಶತಕೋಟಿಯಷ್ಟು ಮಾರುಕಟ್ಟೆ ಗಾತ್ರವನ್ನು ದಾಖಲಿಸಿತು. ೨೦೨೫ರ ವರೆಗೆ ಈ ಉದ್ಯಮವು 16% ಸಿಎಜಿಆರ್‌ನೊಂದಿಗೆ ಬೆಳೆಯುವುದು ಎಂದು ಭಾರತೀಯ ಉದ್ಯಮ ಒಕ್ಕೂಟವು ಅಂದಾಜಿಸುತ್ತದೆ. ಹೆಚ್ಚುಕಡಿಮೆ 75% ಮಾರುಕಟ್ಟೆಯು ಲಿಖಿತ ಸೂಚಿಯಿಲ್ಲದ ವೈಯಕ್ತಿಕ ಆರೈಕೆ ಮತ್ತು ಸೌಂದರ್ಯೋತ್ಪನ್ನಗಳನ್ನು ಒಳಗೊಂಡಿದೆ. ಆಯುರ್ವೇದಿಕ ಯೋಗಕ್ಷೇಮ ಅಥವಾ ಆಯುರ್ವೇದಿಕ ಪ್ರವಾಸೋದ್ಯಮ ಸೇವೆಗಳು ಮಾರುಕಟ್ಟೆಯ 15% ನಷ್ಟನ್ನು ರೂಪಿಸಿದ್ದವು. ಜಾರಿವ್ಯವಸ್ಥೆ ೨೦೧೬ರಲ್ಲಿ ಭಾರತದಲ್ಲಿನ ಜಾರಿವ್ಯವಸ್ಥೆ ಉದ್ಯಮವು $160 ಶತಕೋಟಿಗಿಂತ ಹೆಚ್ಚು ಮೌಲ್ಯವುಳ್ಳದ್ದಾಗಿತ್ತು, ಮತ್ತು ಹಿಂದಿನ ಐದು ವರ್ಷಗಳ ಅವಧಿಯಲ್ಲಿ 7.8% ಸಿಎಜಿಆರ್‌ನೊಂದಿಗೆ ಬೆಳೆಯಿತು. ಈ ಉದ್ಯಮವು ಸುಮಾರು ೨೨ ದಶಲಕ್ಷ ಜನರಿಗೆ ಉದ್ಯೋಗ ನೀಡುತ್ತದೆ. ೨೦೨೦ರ ವೇಳೆಗೆ ಇದು $215 ಶತಕೋಟಿಯಷ್ಟು ಗಾತ್ರವನ್ನು ತಲುಪುವುದು ಎಂದು ನಿರೀಕ್ಷಿಸಲಾಗಿದೆ. ವಿಶ್ವ ಬ್ಯಾಂಕ್‍ನ ೨೦೧೬ರ ಜಾರಿವ್ಯವಸ್ಥೆಯ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ ೧೬೦ ದೇಶಗಳ ಪೈಕಿ ಭಾರತವು ೩೫ನೇ ಸ್ಥಾನ ಪಡೆಯಿತು. ಮುದ್ರಣ ಉದ್ಯಮ ಭಾರತದಲ್ಲಿನ ಮುದ್ರಣ ಮತ್ತು ಮುದ್ರಣ ಪ್ಯಾಕೇಜಿಂಗ್ ಉದ್ಯಮವು ಬೆಳೆಯುತ್ತಿದೆ; ಜನರು ಈ ಪ್ರಮುಖ ಉದ್ಯಮದಲ್ಲಿ ಈಗ ತೀವ್ರ ಆಸಕ್ತಿ ತೋರಿಸುತ್ತಿದ್ದಾರೆ. ಭಾರತದಲ್ಲಿ ೩೬ಕ್ಕಿಂತ ಹೆಚ್ಚು ಮುದ್ರಣ ಸಂಸ್ಥೆಗಳಿವೆ ಮತ್ತು ಇವುಗಳಲ್ಲಿ ಕೆಲವು ಸ್ನಾತಕೋತ್ತರ ಶಿಕ್ಷಣವನ್ನು ನೀಡುತ್ತಿವೆ. ಪ್ರತಿ ವರ್ಷ ೩೫೦೦ ಕ್ಕಿಂತ ಹೆಚ್ಚು ಹೊಸ ಮುದ್ರಣ ಇಂಜಿನಿಯರಿಂಗ್ ಪದವೀಧರರು ಉದ್ಯಮಕ್ಕೆ ಸೇರಿಕೊಳ್ಳುತ್ತಾರೆ. ಇನ್ನೂ ಹಲವರು ಮುದ್ರಣ ಅಂಗಡಿಗಳಲ್ಲಿ ಕೆಲಸದ ಅವಧಿಯಲ್ಲಿ ತರಬೇತಿ ಪಡೆಯುತ್ತಾರೆ. ಮುದ್ರಣ ವಿಶೇಷವಾಗಿ ಪ್ಯಾಕೇಜಿಂಗ್ ಉದ್ಯಮವು ಈಗ ಒಂದು ಪ್ರಮುಖ ಉದ್ಯಮವಾಗಿದೆ. ೧೯೮೯ರಿಂದ ಮುದ್ರಣ ಜೊತೆಗೆ ಪ್ಯಾಕೇಜಿಂಗ್ ಉದ್ಯಮದ ಬೆಳವಣಿಗೆ ದರವು ೧೪% ಗಿಂತ ಹೆಚ್ಚಿದೆ ಎಂದು ಹೇಳಲಾಗಿದೆ. ದೂರಸಂಪರ್ಕ 2014–15 ರಲ್ಲಿ ದೂರಸಂಪರ್ಕ ವಲಯವು ₹2.20 ಲಕ್ಷ ಕೋಟಿಯಷ್ಟು ಆದಾಯವನ್ನು ಸೃಷ್ಟಿಸಿತು (ಒಟ್ಟು ಜಿಡಿಪಿಯ 1.94%). ೩೧ ಆಗಸ್ಟ್ ೨೦೧೬ರ ವೇಳೆಗೆ 1.053 ಶತಕೋಟಿ ಚಂದಾದಾರರೊಂದಿಗೆ ದೂರವಾಣಿ ಬಳಕೆದಾರರ (ಸ್ಥಿರ ಮತ್ತು ಚರ ಫೋನು ಎರಡೂ) ಸಂಖ್ಯೆಯ ಪ್ರಕಾರ ಭಾರತವು ವಿಶ್ವದಲ್ಲಿನ ಎರಡನೇ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ದೂರಸಂಪರ್ಕ ನಿರ್ವಾಹಕರಲ್ಲಿ ತೀವ್ರ ಪೈಪೋಟಿಯ ಕಾರಣ, ಭಾರತವು ವಿಶ್ವದಲ್ಲಿನ ಅತಿ ಕಡಿಮೆ ಕರೆ ಶುಲ್ಕಗಳಲ್ಲಿ ಒಂದನ್ನು ಹೊಂದಿದೆ. ಭಾರತವು ವಿಶ್ವದ ಮೂರನೇ ಅತಿ ದೊಡ್ಡ ಅಂತರಜಾಲ ಬಳಕೆದಾರ ಮೂಲವನ್ನು ಹೊಂದಿದೆ. ೩೧ ಮಾರ್ಚ್ ೨೦೧೬ರ ವೇಳೆಗೆ, ದೇಶದಲ್ಲಿ 342.65 ದಶಲಕ್ಷ ಅಂತರಜಾಲ ಚಂದಾದಾರರಿದ್ದರು. ೨೦೧೨ರ ವೇಳೆ ಭಾರತದಲ್ಲಿ 554 ದಶಲಕ್ಷಕ್ಕಿಂತ ಹೆಚ್ಚು ಟಿವಿ ಗ್ರಾಹಕರಿದ್ದಾರೆ ಎಂದು ಉದ್ಯಮದ ಅಂದಾಜುಗಳು ಸೂಚಿಸುತ್ತವೆ. ಚಂದಾದಾರರ ಸಂಖ್ಯೆಯ ಪ್ರಕಾರ ಭಾರತವು ವಿಶ್ವದಲ್ಲಿನ ಅತಿ ದೊಡ್ಡ ನೇರವಾಗಿ ಮನೆಗಿನ (ಡಿಟಿಎಚ್) ದೂರದರ್ಶನ ಮಾರುಕಟ್ಟೆಯಾಗಿದೆ. ೨೦೧೬ರ ವೇಳೆ, ದೇಶದಲ್ಲಿ 84.80 ದಶಲಕ್ಷ ಡಿಟಿಎಚ್ ಚಂದಾದಾರರಿದ್ದರು. ಗಣಿಗಾರಿಕೆ ಮತ್ತು ನಿರ್ಮಾಣ ಗಣಿಗಾರಿಕೆ ೨೦೧೬ರಲ್ಲಿ ಗಣಿಗಾರಿಕೆಯು $63 ಬಿಲಿಯನ್‍ನಷ್ಟು ಕೊಡುಗೆ ನೀಡಿತು (ಜಿಡಿಪಿಯ 3%) ಮತ್ತು 20.14 ದಶಲಕ್ಷ ಜನರಿಗೆ ಉದ್ಯೋಗ ನೀಡಿತು (ಕಾರ್ಯಪಡೆಯ 5%). ೨೦೦೯ರಲ್ಲಿ ಭಾರತದ ಗಣಿಗಾರಿಕೆ ಉದ್ಯಮವು ಪರಿಮಾಣದ ಪ್ರಕಾರ ವಿಶ್ವದಲ್ಲಿ ಖನಿಜಗಳ ನಾಲ್ಕನೇ ಅತಿ ದೊಡ್ಡ ಉತ್ಪಾದಕವಾಗಿತ್ತು ಮತ್ತು ಮೌಲ್ಯದ ಪ್ರಕಾರ ಎಂಟನೇ ಅತಿ ದೊಡ್ಡ ಉತ್ಪಾದಕವಾಗಿತ್ತು. 2013ರಲ್ಲಿ, ಭಾರತವು ೮೯ ಖನಿಜಗಳನ್ನು ಗಣಿಗಾರಿಕೆ ಮಾಡಿ ಸಂಸ್ಕರಿಸಿತು. ಇವುಗಳಲ್ಲಿ ನಾಲ್ಕು ಇಂಧನ ಖನಿಜಗಳು, ಮೂರು ಪರಮಾಣು ಶಕ್ತಿ ಖನಿಜಗಳಾಗಿದ್ದವು ಮತ್ತು ೮೦ ಇಂಧನೇತರ ಖನಿಜಗಳಾಗಿದ್ದವು. 2011–12ರಲ್ಲಿ ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ವಲಯವು ಪರಿಮಾಣದ ಪ್ರಕಾರ ಖನಿಜ ಉತ್ಪಾದನೆಯ 68% ನಷ್ಟನ್ನು ರೂಪಿಸಿತ್ತು. ಹುಟ್ಟುವಳಿ ಮೌಲ್ಯದ ಪ್ರಕಾರ ಭಾರತದ ಗಣಿಗಾರಿಕೆ ಉದ್ಯಮದ ಸುಮಾರು 50% ನಷ್ಟು ಎಂಟು ರಾಜ್ಯಗಳಲ್ಲಿ ಒಟ್ಟುಗೂಡಿದೆ: ಒಡಿಶಾ, ರಾಜಸ್ಥಾನ, ಛತ್ತಿಸ್‍ಗಢ್, ಆಂಧ್ರ ಪ್ರದೇಶ, ತೆಲಂಗಾಣ, ಝಾರ್ಖಂಡ್, ಮಧ್ಯಪ್ರದೇಶ ಮತ್ತು ಕರ್ನಾಟಕ. ಮೌಲದ್ಯ ಪ್ರಕಾರ ಹುಟ್ಟುವಳಿಯ ಹೆಚ್ಚಿನ 25% ಕಡಲಕರೆಯಾಚೆಯ ತೈಲ ಮತ್ತು ಅನಿಲ ಸಂಪನ್ಮೂಲಗಳಿಂದ ಬರುತ್ತದೆ. ೨೦೧೦ರಲ್ಲಿ ಭಾರತವು ಸುಮಾರು ೩,೦೦೦ ಗಣಿಗಳನ್ನು ನಿರ್ವಹಿಸಿತು. ಇವುಗಳಲ್ಲಿ ಅರ್ಧದಷ್ಟು ಕಲ್ಲಿದ್ದಲು, ಸುಣ್ಣ ಕಲ್ಲು ಮತ್ತು ಕಬ್ಬಿಣದ ಅದಿರುಗಳಾಗಿದ್ದವು. ಹುಟ್ಟುವಳಿ ಮೌಲ್ಯದ ಆಧಾರದಲ್ಲಿ, ಭಾರತವು ಅಭ್ರಕ, ಕ್ರೋಮೈಟ್, ಕಲ್ಲಿದ್ದಲು, ಕಂದು ಕಲ್ಲಿದ್ದಲು, ಕಬ್ಬಿಣದ ಅದಿರು, ಬಾಕ್ಸೈಟ್, ಬೆರೈಟ್, ಸತುವು ಮತ್ತು ಮ್ಯಾಂಗನೀಸ್‍ನ ಐದು ಅತಿ ದೊಡ್ಡ ಉತ್ಪಾದಕರ ಪೈಕಿ ಒಂದಾಗಿತ್ತು; ಅನೇಕ ಇತರ ಖನಿಜಗಳ ಹತ್ತು ಅತಿ ದೊಡ್ಡ ಜಾಗತಿಕ ಉತ್ಪಾದಕರಲ್ಲಿ ಒಂದಾಗಿತ್ತು. ೨೦೧೩ ರಲ್ಲಿ ಭಾರತವು ಉಕ್ಕಿನ ನಾಲ್ಕನೇ ಅತಿ ದೊಡ್ಡ ಉತ್ಪಾದಕವಾಗಿತ್ತು, ಮತ್ತು ಅಲ್ಯುಮಿನಿಯಂನ ಏಳನೇ ಅತಿ ದೊಡ್ಡ ಉತ್ಪಾದಕವಾಗಿತ್ತು. ಭಾರತದ ಖನಿಜ ಸಂಪನ್ಮೂಲಗಳು ಅಗಾಧವಾಗಿವೆ. ಆದರೆ, ಇದರ ಗಣಿಗಾರಿಕಾ ಉದ್ಯಮವು ಇಳಿತವಾಗಿದೆ – ೨೦೦೦ರಲ್ಲಿ ಜಿಡಿಪಿಗೆ 3% ಕೊಡುಗೆ ನೀಡುತ್ತಿದ್ದ ಈ ಉದ್ಯಮದ ಕೊಡುಗೆ ೨೦೧೦ ರಲ್ಲಿ 2.3% ಗೆ ಇಳಿಯಿತು. ಈ ಉದ್ಯಮವು ೨.೯ ದಶಲಕ್ಷ ಜನರಿಗೆ ಉದ್ಯೋಗ ನೀಡಿತ್ತು ಮತ್ತು ಒಟ್ಟು ಕಾರ್ಮಿಕರಲ್ಲಿ ಇದರ ಪ್ರತಿಶತ ಕಡಿಮೆಯಾಗುತ್ತಿದೆ. ಭಾರತವು ಕಲ್ಲಿದ್ದಲು ಸೇರಿದಂತೆ ಅನೇಕ ಖನಿಜಗಳ ನಿವ್ವಳ ಆಮದುದಾರವಾಗಿದೆ. ಸಂಕೀರ್ಣ ಪರವಾನಗಿ, ನಿಯಂತ್ರಕ ಹಾಗೂ ಆಡಳಿತ ಪ್ರಕ್ರಿಯೆಗಳು, ಸಾಲದಿರುವ ಮೂಲಸೌಕರ್ಯ, ಬಂಡವಾಳ ಸಂಪನ್ಮೂಲಗಳ ಕೊರತೆ, ಮತ್ತು ಪಾರಿಸರಿಕವಾಗಿ ಸಮರ್ಥನೀಯ ತಂತ್ರಜ್ಞಾನಗಳ ನಿಧಾನ ಅಳವಡಿಕೆಯ ಕಾರಣ ಭಾರತದ ಗಣಿಕಾರಿಕಾ ವಲಯವು ಇಳಿತವಾಗುತ್ತಿದೆ. ಕಬ್ಬಿಣ ಮತ್ತು ಉಕ್ಕು ವಿತ್ತೀಯ ವರ್ಷ 2014–15ರಲ್ಲಿ, ಭಾರತವು ಕಚ್ಚಾ ಉಕ್ಕಿನ ಮೂರನೇ ಅತಿ ದೊಡ್ಡ ಉತ್ಪಾದಕವಾಗಿತ್ತು ಮತ್ತು ಸರಂಧ್ರ ಕಬ್ಬಿಣದ ಅತಿ ದೊಡ್ಡ ಉತ್ಪಾದಕವಾಗಿತ್ತು. ಈ ಕೈಗಾರಿಕೆಯು ೯೧.೪೬ ದಶಲಕ್ಷ ಟನ್ನು ಸಿದ್ಧ ಉಕ್ಕನ್ನು ಮತ್ತು ೯.೭ ದಶಲಕ್ಷ ಟನ್ ಬೀಡುಕಬ್ಬಿಣವನ್ನು ಉತ್ಪಾದಿಸಿತು. ಭಾರತದಲ್ಲಿ ಬಹುತೇಕ ಕಬ್ಬಿಣ ಮತ್ತು ಉಕ್ಕನ್ನು ಕಬ್ಬಿಣದ ಅದಿರಿನಿಂದ ಉತ್ಪಾದಿಸಲಾಗುತ್ತದೆ. ನಿರ್ಮಾಣ ೨೦೧೬ರಲ್ಲಿ ನಿರ್ಮಾಣ ಉದ್ಯಮವು $288 ಶತಕೋಟಿಯಷ್ಟು ಕೊಡುಗೆ ನೀಡಿತು (ಜಿಡಿಪಿಯ 13%) ಮತ್ತು 60.42 ದಶಲಕ್ಷ ಜನರಿಗೆ ಉದ್ಯೋಗ ನೀಡಿತು (ಕಾರ್ಯಪಡೆಯ 14%). ವಿದೇಶೀ ವ್ಯಾಪಾರ ಮತ್ತು ಹೂಡಿಕೆ ವಿದೇಶೀ ವ್ಯಾಪಾರ ೧೯೯೧ರ ಉದಾರೀಕರಣದವರೆಗೆ, ತನ್ನ ಅರ್ಥವ್ಯವಸ್ಥೆಯನ್ನು ರಕ್ಷಿಸಲು ಮತ್ತು ಸ್ವಾವಲಂಬನೆಯನ್ನು ಸಾಧಿಸಲು ಭಾರತವು ಬಹಳ ಮಟ್ಟಿಗೆ ಉದ್ದೇಶಪೂರ್ವಕವಾಗಿ ವಿಶ್ವ ಮಾರುಕಟ್ಟೆಗಳಿಂದ ವಿವಿಕ್ತಗೊಂಡಿತ್ತು. ವಿದೇಶಿ ವ್ಯಾಪಾರವು ಆಮದು ಸುಂಕಗಳು, ರಫ್ತು ತೆರಿಗೆಗಳು ಮತ್ತು ಪರಿಮಾಣಾತ್ಮಕ ನಿರ್ಬಂಧಗಳಿಗೆ ಒಳಪಟ್ಟಿತ್ತು. ವಿದೇಶಿ ನೇರ ಬಂಡವಾಳವು ಮೇಲಿನ ಮಿತಿಯ ಷೇರು ಒಡೆತನ, ತಂತ್ರಜ್ಞಾನ ವರ್ಗಾವಣೆ, ರಫ್ತು ಬಾಧ್ಯತೆಗಳು ಮತ್ತು ಸರ್ಕಾರಿ ಅನುಮೋದನೆಗಳಿಂದ ನಿರ್ಬಂಧಿತವಾಗಿತ್ತು; ಕೈಗಾರಿಕಾ ವಲಯದಲ್ಲಿನ ಬಹುತೇಕ 60% ಹೊಸ ಎಫ಼್‍ಡಿಐಗೆ ಈ ಅನುಮೋದನೆಗಳು ಅಗತ್ಯವಿದ್ದವು. ಈ ನಿರ್ಬಂಧಗಳ ಕಾರಣ ೧೯೮೫ ಮತ್ತು ೧೯೯೧ರ ನಡುವೆ ಭಾರತದಲ್ಲಿನ ಎಫ಼್‍ಡಿಐ ಸರಾಸರಿ ಕೇವಲ ಸುಮಾರು $200 ದಶಲಕ್ಷದಷ್ಟಿತ್ತು; ಬಂಡವಾಳ ಹರಿವುಗಳ ದೊಡ್ಡ ಪ್ರತಿಶತ ವಿದೇಶಿ ನೆರವು, ವಾಣಿಜ್ಯ ಸಾಲ ಮತ್ತು ಅನಿವಾಸಿ ಭಾರತೀಯರ ಇಡುಗಂಟುಗಳಾಗಿದ್ದವು. ಸ್ವಾತಂತ್ರದ ನಂತರದ ಮೊದಲ ೧೫ ವರ್ಷಗಳಲ್ಲಿ ಆ ಅವಧಿಯ ಸರ್ಕಾರದಿಂದ ವ್ಯಾಪಾರ ನೀತಿಯ ಸಾಮಾನ್ಯ ಉಪೇಕ್ಷೆಯ ಕಾರಣ ಭಾರತದ ರಫ್ತುಗಳು ಜಡವಾಗಿದ್ದವು; ಅದೇ ಅವಧಿಯಲ್ಲಿ ಮುಂಚಿನ ಕೈಗಾರಿಕೀಕರಣದೊಂದಿಗೆ, ಆಮದುಗಳಲ್ಲಿ ಮುಖ್ಯವಾಗಿ ಯಂತ್ರೋಪಕರಣಗಳು, ಕಚ್ಚಾ ವಸ್ತುಗಳು ಮತ್ತು ಗ್ರಾಹಕ ಸರಕುಗಳು ಸೇರಿದ್ದವು. ಉದಾರೀಕರಣವಾದಾಗಿನಿಂದ, ಭಾರತದ ಅಂತರರಾಷ್ಟ್ರೀಯ ವ್ಯಾಪಾರದ ಮೌಲ್ಯವು ವೇಗವಾಗಿ ಏರಿಕೆಯಾಗಿದೆ. ಜಿಡಿಪಿಗೆ ಸರಕುಗಳು ಮತ್ತು ಸೇವೆಗಳಲ್ಲಿನ ಒಟ್ಟು ವ್ಯಾಪಾರದ ಕೊಡುಗೆಯು 1990–91 ರಲ್ಲಿ 16% ಇದ್ದದ್ದು 2009–10 ರಲ್ಲಿ 47% ಗೆ ಏರಿತು. ೨೦೧೫ರಲ್ಲಿ ವಿದೇಶಿ ವ್ಯಾಪಾರವು ಭಾರತದ ಜಿಡಿಪಿಯ 48.8% ರಷ್ಟನ್ನು ರೂಪಿಸಿತು. ಜಾಗತಿಕವಾಗಿ, ಭಾರತವು ಬಿಕರಿ ಮಾಲಿನ ವ್ಯಾಪಾರದಲ್ಲಿನ ರಫ್ತುಗಳ 1.44% ನಷ್ಟು ಹಾಗೂ ಆಮದುಗಳ 2.12% ನಷ್ಟನ್ನು ರೂಪಿಸುತ್ತದೆ, ಮತ್ತು ವಾಣಿಜ್ಯಿಕ ಸೇವೆಗಳ ವ್ಯಾಪಾರದಲ್ಲಿನ ರಫ್ತುಗಳ 3.34% ನಷ್ಟು ಹಾಗೂ ಆಮದುಗಳ 3.31% ನಷ್ಟನ್ನು ರೂಪಿಸುತ್ತವೆ. ಐರೋಪ್ಯ ಒಕ್ಕೂಟ, ಚೈನಾ, ಅಮೇರಿಕ ಮತ್ತು ಸಂಯುಕ್ತ ಅರಬ್ ಸಂಸ್ಥಾನ ಭಾರತದ ಪ್ರಮುಖ ವ್ಯಾಪಾರ ಪಾಲುದಾರರಾಗಿವೆ. 2006–07 ರಲ್ಲಿ, ಪ್ರಮುಖ ರಫ್ತು ಸರಕುಗಳಲ್ಲಿ ಇಂಜಿನಿಯರಿಂಗ್ ಸರಕುಗಳು, ಪೆಟ್ರೋಲಿಯಂ ಉತ್ಪನ್ನಗಳು, ರಾಸಾಯನಿಕಗಳು ಹಾಗೂ ಔಷಧ ವಸ್ತುಗಳು, ರತ್ನಗಳು ಹಾಗೂ ಆಭರಣಗಳು, ಬಟ್ಟೆ ಹಾಗೂ ಉಡುಪುಗಳು, ಕೃಷಿ ಉತ್ಪನ್ನಗಳು, ಕಬ್ಬಿಣದ ಅದಿರು ಮತ್ತು ಇತರ ಖನಿಜಗಳು ಸೇರಿದ್ದವು. ಪ್ರಮುಖ ಆಮದು ಸರಕುಗಳಲ್ಲಿ ಕಚ್ಚಾತೈಲ ಹಾಗೂ ಸಂಬಂಧಿತ ಉತ್ಪನ್ನಗಳು, ಯಂತ್ರೋಪಕರಣಗಳು, ವಿದ್ಯುನ್ಮಾನ ಸರಕುಗಳು, ಚಿನ್ನ ಮತ್ತು ಬೆಳ್ಳಿ ಸೇರಿದ್ದವು. ನವೆಂಬರ್ ೨೦೧೦ರಲ್ಲಿ, ರಫ್ತುಗಳು ವರ್ಷದಿಂದ ವರ್ಷಕ್ಕೆ 22.3% ರಷ್ಟು ಏರಿ ೧೮.೮೮ ಶತಕೋಟಿ ಡಾಲರ್‌ನಷ್ಟಾದವು, ಮತ್ತು ಆಮದುಗಳು 7.5% ನಷ್ಟು ಏರಿ ೨೭.೭೮ ಶತಕೋಟಿ ಡಾಲರ್‌ನಷ್ಟಾದವು. ಅದೇ ತಿಂಗಳಿಗೆ ವ್ಯಾಪಾರ ಖೋತಾ 2009 ರಲ್ಲಿ ೧೦.೪ ಶತಕೋಟಿ ಡಾಲರ್‌ನಷ್ಟಿದ್ದದ್ದು 2010ರಲ್ಲಿ ೮.೯ ಶತಕೋಟಿ ಡಾಲರ್‌ಗಳಿಗೆ ಇಳಿಯಿತು. ಪಾವತಿ ಬಾಕಿ ಸ್ವಾತಂತ್ರ್ಯದ ಕಾಲದಿಂದ, ಚಾಲ್ತಿ ಲೆಕ್ಕದಲ್ಲಿನ ಭಾರತದ ಪಾವತಿ ಬಾಕಿಯು ಅಭಾವಾತ್ಮಕವಾಗಿದೆ. ಪಾವತಿ ಬಾಕಿ ಬಿಕ್ಕಟ್ಟಿನ ಕಾರಣ ಕೈಗೊಳ್ಳಲಾದ ೧೯೯೦ರ ದಶಕದ ಆರ್ಥಿಕ ಉದಾರೀಕರಣವಾದಾಗಿನಿಂದ ಭಾರತದ ರಫ್ತುಗಳು ಸ್ಥಿರವಾಗಿ ಏರಿ 1990–91ರಲ್ಲಿ 66.2% ನಿಂದ ಹೆಚ್ಚಾಗಿ 2002–03ರಲ್ಲಿ ತನ್ನ ಆಮದುಗಳ 80.3% ನಷ್ಟನ್ನು ಒಳಗೊಂಡಿತು. ಆದರೆ, ಜಾಗತಿಕ ಆರ್ಥಿಕ ಕುಸಿತ, ನಂತರ ವಿಶ್ವ ವ್ಯಾಪಾರದಲ್ಲಿನ ಸಾಮಾನ್ಯ ನಿಧಾನಗೊಳ್ಳುವಿಕೆಯ ಕಾರಣ 2008–09ರಲ್ಲಿ ಆಮದುಗಳ ಪ್ರತಿಶತವಾಗಿ ರಫ್ತುಗಳು 61.4% ಗೆ ಇಳಿದವು. ಬೆಳೆಯುತ್ತಿರುವ ಭಾರತದ ತೈಲ ಆಮದಿನ ಬಿಲ್ಲು ಹೆಚ್ಚಿನ ಚಾಲ್ತಿ ಲೆಕ್ಕದ ಕೊರತೆಯ ಹಿಂದಿನ ಮುಖ್ಯ ಚಾಲಕವಾಗಿದೆ ಎಂದು ಗಮನಿಸಲಾಗಿದೆ. ಇದು 2008–09ರಲ್ಲಿ $118.7 ಶತಕೋಟಿಗೆ, ಅಥವಾ ಜಿಡಿಪಿಯ 11.11%ಗೆ ಏರಿತು. ೨೦೧೦ರ ಜನವರಿ ಮತ್ತು ಅಕ್ಟೋಬರ್ ನಡುವೆ ಭಾರತವು $82.1 ಶತಕೋಟಿ ಮೌಲ್ಯದ ಕಚ್ಚಾತೈಲವನ್ನು ಆಮದು ಮಾಡಿಕೊಂಡಿತು. ಭಾರತದ ಅರ್ಥವ್ಯವಸ್ಥೆಯು ೨೦೦೨ ರಿಂದ ೨೦೧೨ರ ವರೆಗೆ ಪ್ರತಿ ವರ್ಷ ವ್ಯಾಪಾರ ಕೊರತೆಯನ್ನು ಅನುಭವಿಸಿದೆ. 2011–12ರಲ್ಲಿ ಸರಕುಗಳ ವ್ಯಾಪಾರ ಕೊರತೆಯು $189 ಶತಕೋಟಿಯಷ್ಟಿತ್ತು. ಚೈನಾದೊಂದಿಗೆ ಭಾರತದ ವ್ಯಾಪಾರ ಕೊರತೆಯು ಅತಿ ಹೆಚ್ಚಾಗಿದೆ, ೨೦೧೩ರಲ್ಲಿ ಇದು ಸುಮಾರು $31 ಶತಕೋಟಿಯಷ್ಟಿತ್ತು.ಅರ್ಥವ್ಯವಸ್ಥೆಯ ಉದಾರೀಕರಣವಾದಾಗಿನಿಂದ ಬಾಹ್ಯ ನೆರವು ಮತ್ತು ರಿಯಾಯಿತಿ ಋಣದ ಮೇಲಿನ ಭಾರತದ ಅವಲಂಬನೆಯು ಕಡಿಮೆಯಾಗಿದೆ. ಋಣದ ಅನುಪಾತವು 1990–91 ರಲ್ಲಿ 35.3% ಇದ್ದದ್ದು 2008–09 ರಲ್ಲಿ 4.4% ಗೆ ಇಳಿಯಿತು. ಭಾರತದಲ್ಲಿ, ಸಂಸ್ಥೆಗಳಿಗೆ ಹಣದ ಹೆಚ್ಚುವರಿ ಮೂಲವನ್ನು ಒದಗಿಸಲು ಸರ್ಕಾರವು ಬಾಹ್ಯ ವಾಣಿಜ್ಯಿಕ ಸಾಲಗಳು (ಇಸಿಬಿಗಳು), ಅಥವಾ ಅನಿವಾಸಿ ಸಾಲಗಾರರಿಂದ ವಾಣಿಜ್ಯಿಕ ಸಾಲಗಳಿಗೆ ಅನುಮತಿ ನೀಡಿದೆ. ೧೯೯೯ರ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯಡಿ ಭಾರತೀಯ ರಿಜ಼ರ್ವ್ ಬ್ಯಾಂಕ್ (ಆರ್‌ಬಿಐ) ಹೊರಡಿಸಿದ ಇಸಿಬಿ ಕಾರ್ಯನೀತಿ ಮಾರ್ಗಸೂಚಿಗಳ ಮೂಲಕ ಹಣಕಾಸು ಸಚಿವಾಲಯವು ಇವುಗಳ ಮೇಲ್ವಿಚಾರಣೆ ಮಾಡಿ ಇವುಗಳನ್ನು ನಿಯಂತ್ರಿಸುತ್ತದೆ. ಭಾರತದ ವಿದೇಶಿ ವಿನಿಮಯ ಮೀಸಲು ನಿಧಿಯು ಮಾರ್ಚ್ ೧೯೯೧ರಲ್ಲಿ $5.8 ಶತಕೋಟಿಯಿಂದ ಎಪ್ರಿಲ್ ೨೦೧೮ರಲ್ಲಿ $426 ಶತಕೋಟಿಗೆ ಸ್ಥಿರವಾಗಿ ಬೆಳೆದಿದೆ. ೨೦೧೨ರಲ್ಲಿ, ಭಾರತದ ಅರ್ಥವ್ಯವಸ್ಥೆಯ ಬೆಳವಣಿಗೆ ಮತ್ತು ಸಶಕ್ತತೆಯನ್ನು ಉಲ್ಲೇಖಿಸಿ ಯುನೈಟಡ್ ಕಿಂಗ್ಡಮ್ ಭಾರತಕ್ಕೆ ಎಲ್ಲ ಹಣಕಾಸು ನೆರವಿಗೆ ಅಂತ್ಯವನ್ನು ಘೋಷಿಸಿತು. ೨೦೧೩ರಲ್ಲಿ ಭಾರತದ ಚಾಲ್ತಿ ಲೆಕ್ಕದ ಅಭಾವವು ಸಾರ್ವಕಾಲಿಕ ಎತ್ತರವನ್ನು ಮುಟ್ಟಿತು. ಐತಿಹಾಸಿಕವಾಗಿ ಭಾರತವು ತನ್ನ ಚಾಲ್ತಿ ಲೆಕ್ಕದ ಕೊರತೆಯನ್ನು ವಿದೇಶಿ ಮಾರುಕಟ್ಟೆಗಳಲ್ಲಿನ ಕಂಪನಿಗಳ ಸಾಲಗಳು ಅಥವಾ ಅನಿವಾಸಿ ಭಾರತೀಯರಿಂದ ರವಾನೆಯಾದ ಹಣ ಮತ್ತು ಸ್ವತ್ತುಗಳ ಒಳಹರಿವುಗಳ ಮೂಲಕ ತುಂಬಿಕೊಂಡಿದೆ. ಎಪ್ರಿಲ್ ೨೦೧೬ ರಿಂದ ಜನೆವರಿ ೨೦೧೭ರ ವರೆಗೆ, ೧೯೯೧ರಿಂದ ಮೊದಲ ಬಾರಿಗೆ ಭಾರತವು ತನ್ನ ಕೊರತೆಯನ್ನು ವಿದೇಶಿ ನೇರ ಬಂಡವಾಳದ ಒಳಹರಿವುಗಳ ಮೂಲಕ ತುಂಬಿಸಿಕೊಳ್ಳುತ್ತಿತ್ತು ಎಂದು ಆರ್‌ಬಿಐ ದತ್ತಾಂಶಗಳು ತೋರಿಸಿದವು. ಈ ಬೆಳವಣಿಗೆಯು ಸಮರ್ಥನೀಯ ಬೆಳವಣಿಗೆಗಾಗಿ ದೇಶದ ಆರ್ಥಿಕ ಅಡಿಪಾಯವನ್ನು ಬಲಪಡಿಸುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಾಮರ್ಥ್ಯದಲ್ಲಿ ದೀರ್ಘಾವಧಿಯ ಹೂಡಿಕೆದಾರರ ಬೆಳೆಯುತ್ತಿರುವ ವಿಶ್ವಾಸದ ಗುರುತಾಗಿದೆ ಎಂದುದಿ ಎಕನಾಮಿಕ್‌ ಟೈಮ್ಸ್ ಗಮನಿಸಿತು. ವಿದೇಶಿ ನೇರ ಬಂಡವಾಳ ಪಿಪಿಪಿ ಪ್ರಕಾರ ವಿಶ್ವದಲ್ಲಿನ ಮೂರನೇ ಅತಿ ದೊಡ್ಡ ಅರ್ಥವ್ಯವಸ್ಥೆಯಾಗಿರುವ ಭಾರತವು ವಿದೇಶಿ ನೇರ ಬಂಡವಾಳವನ್ನು ಆಕರ್ಷಿಸಿದೆ. ವರ್ಷ ೨೦೧೧ ರ ಅವಧಿಯಲ್ಲಿ, ಭಾರತದೊಳಗೆ ಎಫ಼್‍ಡಿಐ ಒಳಹರಿವು $36.5 ಶತಕೋಟಿಯಷ್ಟಿತ್ತು, ಮತ್ತು 2010ರ ಅಂಕಿಅಂಶವಾದ $24.15 ಶತಕೋಟಿಗಿಂತ 51.1% ಹೆಚ್ಚಿತ್ತು. ಭಾರತದ ಪ್ರಾಬಲ್ಯಗಳೆಂದರೆ ದೂರಸಂಪರ್ಕ, ಮಾಹಿತಿ ತಂತ್ರಜ್ಞಾನ ಮತ್ತು ಮೋಟಾರುವಾಹನ ಘಟಕಗಳು, ರಾಸಾಯನಿಕಗಳು, ಉಡುಪುಗಳು, ಔಷಧವಸ್ತುಗಳು ಹಾಗೂ ಆಭರಣಗಳಂತಹ ಇತರ ಗಮನಾರ್ಹ ಕ್ಷೇತ್ರಗಳು. ವಿದೇಶೀ ಹೂಡಿಕೆಗಳ ಏರಿಕೆಯ ಹೊರತಾಗಿಯೂ, ಕಟ್ಟುನಿಟ್ಟಿನ ಎಫ಼್‍ಡಿಐ ನೀತಿಗಳು ಗಣನೀಯವಾದ ಅಡೆತಡೆಗಳಾಗಿದ್ದವು. ಕಾಲ ಕಳೆದಂತೆ, ಭಾರತವು ಅನೇಕ ಎಫ಼್‍ಡಿಐ ಸುಧಾರಣೆಗಳನ್ನು ಅಳವಡಿಸಿಕೊಂಡಿದೆ. ಭಾರತವು ಕೌಶಲವುಳ್ಳ ವ್ಯವಸ್ಥಾಪಕ ಹಾಗೂ ತಾಂತ್ರಿಕ ಪರಿಣಿತಿಯ ದೊಡ್ಡ ಪೂರೈಕೆಯನ್ನು ಹೊಂದಿದೆ. ಮಧ್ಯಮ ವರ್ಗದ ಜನಸಂಖ್ಯೆಯ ಗಾತ್ರ ೩೦೦ ದಶಲಕ್ಷದಷ್ಟಿದೆ ಮತ್ತು ಇದು ಬೆಳೆಯುತ್ತಿರುವ ಗ್ರಾಹಕ ಮಾರುಕಟ್ಟೆಯನ್ನು ಪ್ರತಿನಿಧಿಸುತ್ತದೆ. ಭಾರತವು ೨೦೦೫ರಲ್ಲಿ ತನ್ನ ಎಫ಼್‍ಡಿಐ ನೀತಿಯನ್ನು ಉದಾರೀಕರಿಸಿ ಸಾಹಸೋದ್ಯಮಗಳಲ್ಲಿ ಎಫ಼್‍ಡಿಐ ಪಾಲನ್ನು 100% ವರೆಗೆ ಇರುವುದಕ್ಕೆ ಅನುಮತಿಸಿತು. ಕೈಗಾರಿಕಾ ನೀತಿಯ ಸುಧಾರಣೆಗಳು ಕೈಗಾರಿಕ ಪರವಾನಗಿ ಆವಶ್ಯಕತೆಗಳನ್ನು ಗಣನೀಯವಾಗಿ ಕಡಿಮೆಮಾಡಿವೆ, ವಿಸ್ತರಣೆ ಮೇಲಿನ ನಿರ್ಬಂಧಗಳನ್ನು ತೆಗೆದಿವೆ ಮತ್ತು ವಿದೇಶಿ ತಂತ್ರಜ್ಞಾನ ಹಾಗೂ ಹೂಡಿಕೆಗೆ ಸುಲಭ ಪ್ರವೇಶಾಧಿಕಾರವನ್ನು ಸುಗಮಗೊಳಿಸಿವೆ. ಸ್ಥಿರಾಸ್ತಿ ವಲಯದ ಮೇಲ್ಮುಖವಾದ ಬೆಳವಣಿಗೆ ವಕ್ರರೇಖೆಯ ಸ್ವಲ್ಪ ಶ್ಲಾಘನೆ ಅಭಿವೃದ್ಧಿ ಹೊಂದುತ್ತಿರುವ ಅರ್ಥವ್ಯವಸ್ಥೆ ಮತ್ತು ಉದಾರೀಕೃತ ಎಫ಼್‍ಡಿಐ ವ್ಯವಸ್ಥೆಗೆ ಸಲ್ಲಬೇಕು. ಮಾರ್ಚ್ ೨೦೦೫ರಲ್ಲಿ, ಸರ್ಕಾರವು ಸಂಕಲಿತ ಮೂಲಸೌಕರ್ಯ ಮತ್ತು ಮನೆಗಳು, ವಾಣಿಜ್ಯಿಕ ಆವರಣಗಳು, ಆಸ್ಪತ್ರೆಗಳು, ಶೈಕ್ಷಣಿಕ ಸಂಸ್ಥೆಗಳು, ಮನೋರಂಜನಾ ಸೌಕರ್ಯಗಳು ಮತ್ತು ನಗರ ಹಾಗೂ ಪ್ರದೇಶ ಮಟ್ಟದ ಮೂಲಸೌಕರ್ಯ ಸೇರಿರುವ ನಿರ್ಮಾಣಾಭಿವೃದ್ಧಿ ಯೋಜನೆಗಳು ಸೇರಿದಂತೆ ನಿರ್ಮಾಣ ವಲಯದಲ್ಲಿ 100% ಎಫ಼್‍ಡಿಐಗೆ ಅನುಮತಿ ನೀಡಲು ನಿಯಮಗಳನ್ನು ತಿದ್ದುಪಡಿ ಮಾಡಿತು. ೨೦೧೨ ಮತ್ತು ೨೦೧೪ರ ನಡುವೆ, ಭಾರತವು ಈ ಸುಧಾರಣೆಗಳನ್ನು ರಕ್ಷಣಾ, ದೂರಸಂಪರ್ಕ, ತೈಲ, ಚಿಲ್ಲರೆ ವ್ಯಾಪಾರ, ವಿಮಾನಯಾನ ಮತ್ತು ಇತರ ವಲಯಗಳಿಗೆ ವಿಸ್ತರಿಸಿತು. ೨೦೦೦ರಿಂದ ೨೦೧೦ರ ವರೆಗೆ, ದೇಶವು ಎಫ಼್‌ಡಿಐ ಆಗಿ $178 ಶತಕೋಟಿಯಷ್ಟನ್ನು ಆಕರ್ಷಿಸಿತು. ಗಣನೀಯ ತೆರಿಗೆ ಅನುಕೂಲಗಳನ್ನು ಪರಿಗಣಿಸಿ ಆ ದೇಶದ ಮೂಲಕ ಅಂತರರಾಷ್ಟ್ರೀಯ ಬಂಡವಾಳವನ್ನು ಸಾಗಿಸುವ ಕಾರಣದಿಂದ ಮಾರಿಷಸ್‍ನಿಂದ ಅತಿ ಹೆಚ್ಚಿನ ಪ್ರಮಾಣದ ಹೂಡಿಕೆಯಾಗುತ್ತಿದೆ – ಭಾರತ ಮತ್ತು ಮಾರಿಷಸ್ ನಡುವಿನ ಒಂದು ತೆರಿಗೆ ಒಪ್ಪಂದದ ಕಾರಣ ಇಮ್ಮಡಿ ತೆರಿಗೆಯು ತಪ್ಪುತ್ತಿದೆ, ಮತ್ತು ಮಾರಿಷಸ್ ಬಂಡವಾಳ ಲಾಭ ತೆರಿಗೆಯ ಧಾಮವಾಗಿದೆ, ಪರಿಣಾಮವಾಗಿ ಶೂನ್ಯ ತೆರಿಗೆಯ ಎಫ಼್‍ಡಿಐ ಸಂಪರ್ಕಮಾರ್ಗವು ಸೃಷ್ಟಿಯಾಗಿದೆ. ೨೦೧೫ರಲ್ಲಿ ಎಫ಼್‌ಡಿಐ ಭಾರತದ ಜಿಡಿಪಿಯ 2.1% ರಷ್ಟನ್ನು ರೂಪಿಸಿತು. ಕಳೆದ ಮೂರು ವರ್ಷಗಳಲ್ಲಿ ಸರ್ಕಾರವು ೨೧ ವಲಯಗಳಿಗೆ ಅನ್ವಯಿಸುವ ೮೭ ವಿದೇಶಿ ಬಂಡವಾಳದ ನೇರ ನಿಯಮಗಳನ್ನು ಸಡಿಲಿಸಿರುವುದರಿಂದ, ಭಾರತದಲ್ಲಿ ಎಫ಼್‍ಡಿಐ ಒಳಹರಿವುಗಳು ೨೦೧೬ ಮತ್ತು ೨೦೧೭ರ ನಡುವೆ $60.1 ಶತಕೋಟಿಯನ್ನು ತಲುಪಿದವು. ಹೊರಹರಿವುಗಳು ೨೦೦೦ರಿಂದ, ಭಾರತೀಯ ಕಂಪನಿಗಳು ವಿದೇಶದಲ್ಲಿ ವಿಸ್ತರಿಸಿವೆ, ಮತ್ತು ಭಾರತದ ಹೊರಗೆ ಎಫ಼್‍ಡಿಐ ಹೂಡಿಕೆ ಮಾಡಿ ಉದ್ಯೋಗಗಳನ್ನು ಸೃಷ್ಟಿಸಿವೆ. ೨೦೦೬ ರಿಂದ ೨೦೧೦ರ ವರೆಗೆ, ಭಾರತದ ಹೊರಗೆ ಭಾರತೀಯ ಕಂಪನಿಗಳ ಎಫ಼್‍ಡಿಐದ ಮೊತ್ತ ಅದರ ಜಿಡಿಪಿಯ 1.34 ಪ್ರತಿಶತವಾಗಿತ್ತು. ಭಾರತೀಯ ಕಂಪನಿಗಳು ಎಫ಼್‍ಡಿಐ ನ್ನು ಬಳಸಿ ಅಮೇರಿಕ, ಯೂರೋಪ್ ಮತ್ತು ಆಫ಼್ರಿಕಾದಲ್ಲಿ ಕಾರ್ಯಾಚರಣೆಗಳನ್ನು ಆರಂಭಿಸಿವೆ. ಭಾರತದ ಟಾಟಾ ಕಂಪನಿ ಯುನೈಟಡ್ ಕಿಂಗ್ಡಮ್‍ನ ಅತಿ ದೊಡ್ಡ ಉತ್ಪಾದಕ ಮತ್ತು ಖಾಸಗಿ ವಲಯದ ಉದ್ಯೋಗದಾತವಾಗಿದೆ. ಹಣರವಾನೆ ೨೦೧೫ ರಲ್ಲಿ, ಇತರ ದೇಶಗಳಿಂದ ಭಾರತಕ್ಕೆ ಒಟ್ಟು $68.91 ಶತಕೋಟಿಯಷ್ಟು ಹಣವನ್ನು ರವಾನೆ ಮಾಡಲಾಗಿತ್ತು, ಮತ್ತು ಭಾರತದಲ್ಲಿನ ವಿದೇಶೀ ಕಾರ್ಮಿಕರು ತಮ್ಮ ತವರು ದೇಶಗಳಿಗೆ ಒಟ್ಟು $8.476 ಶತಕೋಟಿಯಷ್ಟು ಹಣವನ್ನು ರವಾನೆ ಮಾಡಿದ್ದರು. ಯುಎಇ, ಅಮೇರಿಕ ಮತ್ತು ಸೌದಿ ಅರೇಬಿಯಾ ಭಾರತಕ್ಕೆ ಹಣ ರವಾನಿಸಿದ ಅಗ್ರ ಮೂಲಗಳಾಗಿದ್ದವು. ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ನೇಪಾಳ ಭಾರತದಿಂದ ಹಣರವಾನೆಯನ್ನು ಸ್ವೀಕರಿಸಿದ ಅಗ್ರ ದೇಶಗಳಾಗಿದ್ದವು. ೨೦೧೫ರಲ್ಲಿ ಭಾರತಕ್ಕೆ ರವಾನೆಯಾದ ಹಣವು ದೇಶದ ಜಿಡಿಪಿಯ 3.32% ನಷ್ಟಿತ್ತು. ವಿಲೀನಗಳು ಮತ್ತು ಸ್ವಾಧೀನಗಳು ೧೯೮೫ ಮತ್ತು ೨೦೧೮ರ ನಡುವೆ ಭಾರತದ ಒಳಗೆ (ಒಳಬರುವ) ಮತ್ತು ಹೊರಗೆ (ಹೊರಹೋಗುವ) 20,846 ಒಪ್ಪಂದಗಳನ್ನು ಘೋಷಿಸಲಾಗಿದೆ. ಇದು ಒಟ್ಟು ಅಮೇರಿಕನ್ $618 ಶತಕೋಟಿಯಷ್ಟು ಮೌಲ್ಯವಾಗುತ್ತದೆ. ಮೌಲ್ಯದ ಪ್ರಕಾರ, ಹೆಚ್ಚುಕಡಿಮೆ ೬೦ ಶತಕೋಟಿ ಡಾಲರ್ ಮೌಲ್ಯದ ಒಪ್ಪಂದಗಳೊಂದಿಗೆ ೨೦೧೦ ಅತ್ಯಂತ ಸಕ್ರಿಯ ವರ್ಷವಾಗಿತ್ತು. ಅತಿ ಹೆಚ್ಚು ಒಪ್ಪಂದಗಳನ್ನು ೨೦೦೭ ರಲ್ಲಿ ಮಾಡಿಕೊಳ್ಳಲಾಯಿತು (1,510). ಕೆಳಗೆ ಭಾರತೀಯ ಕಂಪನಿಗಳು ಭಾಗವಹಿಸಿರುವ ಅಗ್ರ ೧೦ ಒಪ್ಪಂದಗಳ ಪಟ್ಟಿಯಿದೆ: ಚಲಾವಣೆ ಭಾರತದ ರೂಪಾಯಿಯು ಭಾರತದ ಏಕೈಕ ನ್ಯಾಯಸಮ್ಮತ ದ್ರವ್ಯವಾಗಿದೆ, ಮತ್ತು ಇದನ್ನು ನೆರೆಯ ನೇಪಾಳ ಮತ್ತು ಭೂತಾನ್‍ನಲ್ಲಿಯೂ ನ್ಯಾಯಸಮ್ಮತ ದ್ರವ್ಯವಾಗಿ ಸ್ವೀಕರಿಸಲಾಗುತ್ತದೆ. ಇವೆರಡು ದೇಶಗಳು ತಮ್ಮ ಚಲಾವಣೆಯನ್ನು ಭಾರತದ ರೂಪಾಯಿಯ ಮಟ್ಟದಲ್ಲಿಡುತ್ತವೆ. ರೂಪಾಯಿಯನ್ನು ೧೦೦ ಪೈಸೆಗಳಾಗಿ ವಿಭಜಿಸಲಾಗುತ್ತದೆ. 2,000 ರ ನೋಟು ಅತಿ ಹೆಚ್ಚು ವರ್ಗರಾಶಿಯ ಬ್ಯಾಂಕ್‍ನೋಟಾಗಿದೆ; ೫೦ ಪೈಸೆಯ ನಾಣ್ಯವು ಚಲಾವಣೆಯಲ್ಲಿರುವ ಅತಿ ಕಡಿಮೆ ವರ್ಗರಾಶಿಯ ನಾಣ್ಯವಾಗಿದೆ. ೩೦ ಜೂನ್ ೨೦೧೧ರಿಂದ, ೫೦ ಪೈಸೆಗಿಂತ ಕೆಳಗಿನ ಎಲ್ಲ ವರ್ಗರಾಶಿಗಳು ನ್ಯಾಯಸಮ್ಮತ ಚಲಾವಣೆಯಾಗಿ ಉಳಿದಿಲ್ಲ. ಭಾರತದ ವಿತ್ತಿಯ ವ್ಯವಸ್ಥೆಯನ್ನು ದೇಶದ ಕೇಂದ್ರೀಯ ಬ್ಯಾಂಕ್ ಆದ ಭಾರತೀಯ ರಿಜ಼ರ್ವ್ ಬ್ಯಾಂಕ್ (ಆರ್‌ಬಿಐ) ನಿರ್ವಹಿಸುತ್ತದೆ. ೧ ಎಪ್ರಿಲ್ ೧೯೩೫ರಲ್ಲಿ ಸ್ಥಾಪನೆಯಾದ ಮತ್ತು ೧೯೪೯ರಲ್ಲಿ ರಾಷ್ಟ್ರೀಕರಣಗೊಂಡ ಆರ್‌ಬಿಐ ರಾಷ್ಟ್ರದ ವಿತ್ತೀಯ ಪ್ರಾಧಿಕಾರ, ವಿತ್ತೀಯ ವ್ಯವಸ್ಥೆಯ ನಿಯಂತ್ರಕ ಹಾಗೂ ಮೇಲ್ವಿಚಾರಕ, ಸರ್ಕಾರದ ಬ್ಯಾಂಕರ್, ವಿದೇಶೀ ಹಣದ ಮೀಸಲು ನಿಧಿಯ ರಕ್ಷಕ, ಮತ್ತು ಚಲಾವಣೆಯನ್ನು ಹೊರಡಿಸುವ ಕಾರ್ಯನಿರ್ವಹಿಸುತ್ತದೆ. ಇದನ್ನು ನಿರ್ದೇಶಕರ ಒಂದು ಕೇಂದ್ರ ಮಂಡಳಿಯು ನಿರ್ವಹಿಸುತ್ತದೆ. ಭಾರತ ಸರ್ಕಾರವು ನೇಮಿಸುವ ಒಬ್ಬ ಗವರ್ನರ್ ಇದರ ಮುಖ್ಯಸ್ಥನಾಗಿರುತ್ತಾನೆ. ವಿತ್ತೀಯ ನೀತಿ ಸಮಿತಿಯು ಮಾನಕ ಬಡ್ಡಿ ದರಗಳನ್ನು ನಿಗದಿಪಡಿಸುತ್ತದೆ. ರೂಪಾಯಿಯು ಸ್ಥಿರ ವಿನಿಮಯ ದರದ ಮೂಲಕ ೧೯೨೭ ರಿಂದ ೧೯೪೬ರ ವರೆಗೆ ಬ್ರಿಟಿಷ್ ಪೌಂಡ್‍ಗೆ, ಮತ್ತು ನಂತರ ೧೯೭೫ರ ವರೆಗೆ ಅಮೇರಿಕದ ಡಾಲರ್‌ಗೆ ಸಂಪರ್ಕ ಹೊಂದಿತ್ತು. ಸೆಪ್ಟೆಂಬರ್ ೧೯೭೫ರಲ್ಲಿ ಇದನ್ನು ಅಪಮೌಲ್ಯೀಕರಿಸಿ ಸ್ಥಿರ ಸಮಾನ ದರದ ಪದ್ಧತಿಯ ಬದಲು ನಾಲ್ಕು ಪ್ರಮುಖ ಅಂತರರಾಷ್ಟ್ರೀಯ ಚಲಾವಣೆಗಳ ಬುಟ್ಟಿಯ ಪದ್ಧತಿ ಜಾರಿಗೊಂಡಿತು: ಬ್ರಿಟಿಷ್ ಪೌಂಡ್, ಅಮೇರಿಕದ ಡಾಲರ್, ಜಪಾನ್‍ನ ಯೆನ್ ಮತ್ತು ಡೊಯ್ಚಿ ಮಾರ್ಕ್. ೧೯೯೧ರಲ್ಲಿ, ಅದರ ಅತಿ ದೊಡ್ಡ ವ್ಯಾಪಾರ ಪಾಲುದಾರವಾಗಿದ್ದ ಸೋವಿಯಟ್ ಒಕ್ಕೂಟದ ಪತನದ ನಂತರ, ಭಾರತವು ಗಂಭೀರವಾದ ವಿದೇಶಿ ವಿನಿಮಯದ ಬಿಕ್ಕಟ್ಟನ್ನು ಎದುರಿಸಿತು. ರೂಪಾಯಿಯನ್ನು ೧ ಮತ್ತು ೨ ಜುಲೈಗಳಂದು ಎರಡು ಹಂತಗಳಲ್ಲಿ ಸುಮಾರು 19% ನಷ್ಟು ಅಪಮೌಲ್ಯೀಕರಿಸಲಾಯಿತು. ೧೯೯೨ ರಲ್ಲಿ, ಉದಾರೀಕೃತ ವಿನಿಮಯ ದರ ವ್ಯವಸ್ಥೆಯನ್ನು (ಎಲ್ಇಆರ್‌ಎಮ್ಎಸ್) ಪರಿಚಯಿಸಲಾಯಿತು. ಎಲ್ಇಆರ್‌ಎಮ್ಎಸ್ ನ ಅಡಿ, ರಫ್ತುದಾರರು ಆರ್‌ಬಿಐ ನಿರ್ಧರಿತ ವಿನಿಮಯ ದರದಲ್ಲಿ ಆರ್‌ಬಿಐಗೆ ತಮ್ಮ ವಿದೇಶಿ ವಿನಿಮಯ ಗಳಿಕೆಯ ಶೇಕಡ 40 ರಷ್ಟನ್ನು ಒಪ್ಪಿಸಬೇಕಾಗಿತ್ತು; ಉಳಿದ 60% ನ್ನು ಮಾರುಕಟ್ಟೆ ನಿರ್ಧರಿತ ವಿನಿಮಯ ದರದ ಪ್ರಕಾರ ಪರಿವರ್ತಿಸಬಹುದಾಗಿತ್ತು. ೧೯೯೪ರಲ್ಲಿ, ರೂಪಾಯಿಯು ಕೆಲವು ಬಂಡವಾಳ ನಿಯಂತ್ರಣಗಳೊಂದಿಗೆ ಚಾಲ್ತಿ ಖಾತೆಯ ಮೇಲೆ ಪರಿವರ್ತಿತವಾಗಬಲ್ಲದ್ದಾಗಿತ್ತು. ೧೯೯೧ ರಲ್ಲಿ ತೀವ್ರ ಅಪಮೌಲ್ಯೀಕರಣ ಮತ್ತು ೧೯೯೪ ರಲ್ಲಿ ಚಾಲ್ತಿ ಖಾತೆ ಪರಿವರ್ತನೀಯತೆಗೆ ಬದಲಾವಣೆಯ ನಂತರ, ರೂಪಾಯಿಯ ಮೌಲ್ಯವು ಬಹುತೇಕವಾಗಿ ಮಾರುಕಟ್ಟೆ ಶಕ್ತಿಗಳಿಂದ ನಿರ್ಧಾರಿತವಾಗಿದೆ. 2000–2010 ದಶಕದ ಅವಧಿಯಲ್ಲಿ ರೂಪಾಯಿಯು ಸಾಕಷ್ಟು ಸ್ಥಿರವಾಗಿದೆ. ಅಕ್ಟೋಬರ್ 2018 ರಲ್ಲಿ, ರೂಪಾಯಿಯು ಅಮೇರಿಕದ ಡಾಲರ್ ಎದುರು ಸಾರ್ವಕಾಲಿಕ ನಿಮ್ನ ಮಟ್ಟವಾದ 74.90 ನ್ನು ಮುಟ್ಟಿತು. ಆದಾಯ ಮತ್ತು ಬಳಕೆ ಭಾರತದ ತಲಾವಾರು ಒಟ್ಟು ರಾಷ್ಟ್ರೀಯ ಆದಾಯವು ೨೦೦೨ರಿಂದ ಹೆಚ್ಚಿನ ಬೆಳವಣಿಗೆ ದರಗಳನ್ನು ಅನುಭವಿಸಿತ್ತು. 2002–03 ರಲ್ಲಿ 19,040 ನಷ್ಟಿದ್ದ ಇದು 2010–11 ರಲ್ಲಿ 53,331 ಕ್ಕೆ ಏರಿ ಮೂರು ಪಟ್ಟಾಯಿತು. ಈ ಎಂಟು ವರ್ಷಗಳಲ್ಲಿ ಪ್ರತಿಯೊಂದು ವರ್ಷದಲ್ಲಿ ಸರಾಸರಿ 13.7% ನಷ್ಟು ಬೆಳೆಯಿತು, ಮತ್ತು 2010–11 ನಲ್ಲಿ 15.6% ನಷ್ಟು ಗರಿಷ್ಠ ಬೆಳವಣಿಗೆಯಾಯಿತು. ಆದರೆ ಹಣದುಬ್ಬರಕ್ಕೆ ಹೊಂದಿಸಿದ ರಾಷ್ಟ್ರದ ತಲಾವಾರು ಆದಾಯದಲ್ಲಿನ ಬೆಳವಣಿಗೆಯು 2010–11 ರಲ್ಲಿ 5.6% ನಷ್ಟು ನಿಧಾನಗೊಂಡಿತು, ಮತ್ತು ಹಿಂದಿನ ವರ್ಷ 6.4% ಇತ್ತು. ಈ ಬಳಕೆಯ ಮಟ್ಟಗಳು ವ್ಯಕ್ತಿಗತ ಆಧಾರದಲ್ಲಿವೆ. ಭಾರತದಲ್ಲಿ 2011 ನಲ್ಲಿ ಸರಾಸರಿ ಕೌಟುಂಬಿಕ ಆದಾಯವು ಮನೆಗೆ ತಲಾ $6,671 ನಷ್ಟಿತ್ತು. ೨೦೧೧ರ ಜನಗಣತಿಯ ದತಾಂಶಗಳ ಪ್ರಕಾರ, ಭಾರತವು ಸುಮಾರು ೩೩೦ ದಶಲಕ್ಷ ಮನೆಗಳು ಮತ್ತು ೨೪೭ ದಶಲಕ್ಷ ಕುಟುಂಬಗಳನ್ನು ಹೊಂದಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತದ ಕುಟುಂಬದ ಗಾತ್ರವು ಕಡಿಮೆಯಾಗಿದೆ. 50% ಕುಟುಂಬಗಳು ನಾಲ್ಕು ಅಥವಾ ಕಡಿಮೆ ಸದಸ್ಯರನ್ನು ಹೊಂದಿವೆ, ಮತ್ತು ಪ್ರತಿ ಕುಟುಂಬದಲ್ಲಿ ಬದುಕಿರುವ ಅಜ್ಜ ಅಜ್ಜಿಯರು ಸೇರಿದಂತೆ ಸರಾಸರಿಯಾಗಿ 4.8 ಸದಸ್ಯರಿದ್ದಾರೆ ಎಂದು ೨೦೧೧ರ ಜನಗಣತಿಯು ವರದಿಮಾಡಿತು. ಈ ಕುಟುಂಬಗಳು ಸುಮಾರು $1.7 ಟ್ರಿಲಿಯನ್‍ನಷ್ಟು ಜಿಡಿಪಿಯನ್ನು ಸೃಷ್ಟಿಸಿದವು. ಸುಮಾರು 67% ಕುಟುಂಬಗಳು ಅಡಿಗೆಗಾಗಿ ಉರುವಲು, ಬೆಳೆ ಶೇಷಗಳು ಅಥವಾ ಬೆರಣಿಯನ್ನು ಬಳಸುತ್ತವೆ; 53% ಕುಟುಂಬಗಳು ತಮ್ಮ ಮನೆಯಲ್ಲಿ ನೈರ್ಮಲ್ಯ ಅಥವಾ ಚರಂಡಿ ಸೌಕರ್ಯಗಳನ್ನು ಹೊಂದಿಲ್ಲ; 83% ಕುಟುಂಬಗಳು ನಗರ ಪ್ರದೇಶಗಳಲ್ಲಿ ತಮ್ಮ ಮನೆಯಲ್ಲಿ ಅಥವಾ ತಮ್ಮ ಮನೆಯಿಂದ ೧೦೦ ಮೀಟರ್ ದೂರದಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ತಮ್ಮ ಮನೆಯಿಂದ ೫೦೦ ಮೀಟರ್ ದೂರದಲ್ಲಿ ನೀರಿನ ಪೂರೈಕೆಯನ್ನು ಹೊಂದಿವೆ; 67% ಕುಟುಂಬಗಳು ವಿದ್ಯುಚ್ಛಕ್ತಿಯನ್ನು ಪಡೆದಿವೆ; 63% ಕುಟುಂಬಗಳು ಲ್ಯಾಂಡ್‍ಲೈನ್ ಅಥವಾ ಮೊಬೈಲ್ ದೂರವಾಣಿ ಸೇವೆಯನ್ನು ಹೊಂದಿವೆ; 43% ಕುಟುಂಬಗಳು ಒಂದು ಟಿ.ವಿ.ಯನ್ನು ಹೊಂದಿವೆ; 26% ಕುಟುಂಬಗಳು ದ್ವಿಚಕ್ರ ಅಥವಾ ನಾಲ್ಕು ಗಾಲಿಗಳ ಮೋಟಾರು ವಾಹನವನ್ನು ಹೊಂದಿವೆ ಎಂದು ಬಳಕೆಯ ವಿನ್ಯಾಸಗಳು ಗಮನಿಸುತ್ತವೆ. ೨೦೦೧ಕ್ಕೆ ಹೋಲಿಸಿದರೆ, ಈ ಆದಾಯ ಮತ್ತು ಬಳಕೆಯ ಪ್ರವೃತ್ತಿಗಳು ಮಧ್ಯಮದಿಂದ ಗಮನಾರ್ಹವಾದ ಸುಧಾರಣೆಗಳನ್ನು ಪ್ರತಿನಿಧಿಸುತ್ತವೆ. ಅಧಿಕ ಆದಾಯದ ಕುಟುಂಬಗಳ ಸಂಖ್ಯೆ ಕಡಿಮೆ ಆದಾಯದ ಕುಟುಂಬಗಳ ಸಂಖ್ಯೆಗಿಂತ ಹೆಚ್ಚಿದೆ ಎಂದು ೨೦೧೦ರಲ್ಲಿನ ಒಂದು ವರದಿ ಸಾಧಿಸಿತು. ನ್ಯೂ ವರ್ಲ್ಡ್ ವೆಲ್ತ್ ದೇಶಗಳ ಒಟ್ಟು ಸಂಪತ್ತನ್ನು ಪತ್ತೆಹಚ್ಚುವ ವರದಿಗಳನ್ನು ಪ್ರಕಟಿಸುತ್ತದೆ. ದೇಶದ ಸಂಪತ್ತನ್ನು ದೇಶದ ಎಲ್ಲ ನಿವಾಸಿಗಳು ಹೊಂದಿರುವ ಖಾಸಗಿ ಸಂಪತ್ತಾಗಿ ಅಳೆಯಲಾಗುತ್ತದೆ. ನ್ಯೂ ವರ್ಲ್ಡ್ ವೆಲ್ತ್ ಪ್ರಕಾರ, ಭಾರತದ ಒಟ್ಟು ಸಂಪತ್ತು ೨೦೦೭ರಲ್ಲಿ $3,165 ಶತಕೋಟಿಯಷ್ಟಿದ್ದು ೨೦೧೭ರಲ್ಲಿ $8,230 ಶತಕೋಟಿಗೆ (೧೬೦% ನಷ್ಟು ಬೆಳವಣಿಗೆ ದರ) ಹೆಚ್ಚಿತು. ಭಾರತದ ಒಟ್ಟು ಸಂಪತ್ತು ೨೦೧೭ರಲ್ಲಿ $8.23 ಟ್ರಿಲಿಯನ್‍ನಿಂದ ೨೦೧೮ರಲ್ಲಿ $8.148 ಟ್ರಿಲಿಯನ್ ಆಗಿ ೧% ನಷ್ಟು ಕಡಿಮೆಯಾಗಿ ಭಾರತವು ವಿಶ್ವದಲ್ಲಿನ ಆರನೇ ಅತಿ ಶ್ರೀಮಂತ ರಾಷ್ಟ್ರವೆಂದೆನಿಸಿಕೊಂಡಿತು. ಭಾರತದ 20,730 ಬಹು ಲಕ್ಷಾಧಿಪತಿಗಳು (ವಿಶ್ವದಲ್ಲಿ ೭ನೇ ಅತಿ ಹೆಚ್ಚು) ಮತ್ತು 118 ಶತಕೋಟ್ಯಧಿಪತಿಗಳಿದ್ದಾರೆ (ವಿಶ್ವದಲ್ಲಿ ೩ನೇ ಅತಿ ಹೆಚ್ಚು). 327,100 ಉನ್ನತ ಒಟ್ಟು ಸಂಪತ್ತಿನ ವ್ಯಕ್ತಿಗಳೊಂದಿಗೆ (ಎಚ್ಎನ್‍ಡಬ್ಲ್ಯುಐ) ಭಾರತವು ವಿಶ್ವದಲ್ಲಿ ೯ನೇ ಅತಿ ಹೆಚ್ಚು ಸಂಖ್ಯೆಯ ಎಚ್ಎನ್‍ಡಬ್ಲ್ಯುಐಗಳನ್ನು ಹೊಂದಿದೆ. ೨೦೧೮ರಲ್ಲಿ $941 ಶತಕೋಟಿಯಷ್ಟು ಒಟ್ಟು ನಿವ್ವಳ ಸಂಪತ್ತು ಹೊಂದಿದ್ದ ಮುಂಬಯಿ ಭಾರತದ ಅತಿ ಶ್ರೀಮಂತ ನಗರ ಮತ್ತು ವಿಶ್ವದಲ್ಲಿನ ೧೨ನೇ ಅತಿ ಶ್ರೀಮಂತ ನಗರವಾಗಿದೆ. ಈ ನಗರದಲ್ಲಿ ಇಪ್ಪತ್ತೆಂಟು ಶತಕೋಟ್ಯಧಿಪತಿಗಳು ವಾಸವಾಗಿದ್ದು ವಿಶ್ವಾದ್ಯಂತವಾಗಿ ಒಂಭತ್ತನೆ ಸ್ಥಾನ ಪಡೆದಿದೆ. ೨೦೧೬ರ ವೇಳೆಗೆ, ಭಾರತದಲ್ಲಿನ ಮುಂದಿನ ಅತಿ ಶ್ರೀಮಂತ ನಗರಗಳೆಂದರೆ ದೆಹಲಿ ($450 ಶತಕೋಟಿ), ಬೆಂಗಳೂರು ($320 ಶತಕೋಟಿ), ಹೈದರಾಬಾದ್ ($310 ಶತಕೋಟಿ), ಕೊಲ್ಕತ್ತಾ ($290 ಶತಕೋಟಿ), ಚೆನ್ನೈ ($150 ಶತಕೋಟಿ) ಮತ್ತು ಗುರ್‌ಗಾಂವ್ ($110 ಶತಕೋಟಿ). ೨೦೧೮ರಲ್ಲಿ ಭಾರತದಿಂದ ೫,೦೦೦ ಎಚ್ಎನ್‍ಡಬ್ಲ್ಯುಐಗಳು (ಅಥವಾ ದೇಶದ ಸುಮಾರು ೨% ಎಚ್ಎನ್‍ಡಬ್ಲ್ಯುಐಗಳು) ವಲಸೆ ಹೋದರು ಎಂದು ನ್ಯೂ ವರ್ಲ್ ವೆಲ್ತ್ ಪ್ರಕಟಿಸಿದ ಜಾಗತಿಕ ಸಂಪತ್ತು ವಲಸೆ ಪರಿಷ್ಕರಣೆ ವರದಿ ಕಂಡುಕೊಂಡಿತು. ವಲಸೆ ಹೋದ ಅಗ್ರ ದೇಶಗಳ ಪೈಕಿ ಆಸ್ಟ್ರೇಲಿಯಾ, ಕೆನಡಾ ಮತ್ತು ಅಮೇರಿಕ ಇದ್ದವು. ಭಾರತದಲ್ಲಿನ ಖಾಸಗಿ ಸಂಪತ್ತು ೧೮೦% ನಷ್ಟು ಬೆಳೆದು ೨೦೨೮ರ ವೇಳೆಗೆ $22,814 ಶತಕೋಟಿ ತಲುಪುವುದು ಎಂದೂ ಈ ವರದಿ ಅಂದಾಜಿಸಿತು. ಬಡತನ ಮೇ ೨೦೧೪ರಲ್ಲಿ, ವಿಶ್ವ ಬ್ಯಾಂಕ್ ತನ್ನ ಬಡತನ ಗಣನಾ ವಿಧಾನವನ್ನು ಪರಿಶೀಲಿಸಿ, ಪರಿಷ್ಕರಣೆಗಳನ್ನು ಪ್ರಸ್ತಾಪಿಸಿತು. ಈ ಪರಿಷ್ಕೃತ ವಿಧಿವಿಧಾನಗಳ ಪ್ರಕಾರ, ಭಾರತದಲ್ಲಿ ಬಡತನ ರೇಖೆಯ ಕೆಳಗೆ 179.6 ದಶಲಕ್ಷ ಜನರಿದ್ದರು. ವಿಶ್ವದ ಒಟ್ಟು ಜನಸಂಖ್ಯೆಯ 17.5% ನಷ್ಟನ್ನು ಹೊಂದಿದ್ದ ಭಾರತ, ೨೦೧೩ ರಲ್ಲಿ ವಿಶ್ವದ ಕಡುಬಡವರಲ್ಲಿ ಭಾರತದ ಪಾಲು 20.6% ಆಗಿತ್ತು. 2005–2006ರ ಒಂದು ಸಮೀಕ್ಷೆಯ ಪ್ರಕಾರ, ಭಾರತವು ದೀರ್ಘಕಾಲಿಕವಾಗಿ ನ್ಯೂನ ಪೋಷಿತ ೫ ವರ್ಷ ವಯಸ್ಸಿಗಿಂತ ಕಡಿಮೆಯಿರುವ ೬೧ ದಶಲಕ್ಷ ಮಕ್ಕಳನ್ನು ಹೊಂದಿತ್ತು. ೧೯೯೦ ಮತ್ತು ೨೦೧೦ರ ನಡುವೆ, ಭಾರತವು ೫ ವರ್ಷಕ್ಕಿಂತ ಕಡಿಮೆಯವರ ಮರಣ ಪ್ರಮಾಣದಲ್ಲಿ ೪೫ ಪ್ರತಿಶತ ಇಳಿತವನ್ನು ಸಾಧಿಸಿತು ಎಂದು ೨೦೧೧ರ ಒಂದು ಯೂನಿಸೆಫ಼್ ವರದಿ ಹೇಳಿತು. ಈಗ ಭಾರತವು ಈ ಮಾಪನದಲ್ಲಿ ೧೮೮ ದೇಶಗಳಲ್ಲಿ ೪೬ನೇ ಸ್ಥಾನ ಪಡೆದಿದೆ. ೧೯೬೦ರ ದಶಕದ ಮುಂಚಿನ ವರ್ಷಗಳಿಂದ, ಬಡತನವನ್ನು ತಗ್ಗಿಸಲು ಅನುಕ್ರಮದ ಸರ್ಕಾರಗಳು ಕೇಂದ್ರ ಯೋಜನೆಯಡಿ ವಿವಿಧ ಯೋಜನೆಗಳನ್ನು ಕಾರ್ಯಗತಗೊಳಿಸಿವೆ. ಇವುಗಳಿಗೆ ಭಾಗಶಃ ಯಶಸ್ಸು ದೊರೆತಿದೆ. ೨೦೦೫ರಲ್ಲಿ, ಸರ್ಕಾರವು ಭಾರತದ ಎಲ್ಲ ಜಿಲ್ಲೆಗಳಲ್ಲಿನ ಪ್ರತಿಯೊಂದು ಗ್ರಾಮೀಣ ಮನೆಗೆ ೧೦೦ ದಿನಗಳ ಕನಿಷ್ಠ ಕೂಲಿಯ ಉದ್ಯೋಗವನ್ನು ಖಾತರಿಗೊಳಿಸುವ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು (ಮನರೇಗಾ) ಜಾರಿಗೊಳಿಸಿತು. ೨೦೧೧ರಲ್ಲಿ, ಭ್ರಷ್ಟ ಅಧಿಕಾರಿಗಳು, ಹಣದ ಮೂಲವಾಗಿ ಕೊರತೆ ಹಣಕಾಸು ಪೂರೈಕೆ, ಯೋಜನೆಯಡಿ ನಿರ್ಮಿಸಲ್ಪಟ್ಟ ಮೂಲಸೌಕರ್ಯದ ಕಳಪೆ ಗುಣಮಟ್ಟ ಮತ್ತು ಅನುದ್ದೇಶಿತ ವಿನಾಶಕಾರಿ ಪರಿಣಾಮಗಳ ಕಾರಣದಿಂದ ಇದನ್ನು ವ್ಯಾಪಕವಾಗಿ ಟೀಕಿಸಲಾಯಿತು ಮತ್ತು ಇದು ವಿವಾದದಿಂದ ಆವರಿಸಲ್ಪಟ್ಟಿತು. ಈ ಕಾರ್ಯಕ್ರಮವು ಕೆಲವು ಸಂದರ್ಭಗಳಲ್ಲಿ ಗ್ರಾಮೀಣ ಬಡತನವನ್ನು ಕಡಿಮೆಮಾಡಲು ನೆರವಾಗಿದೆ ಎಂದು ಇತರ ಅಧ್ಯಯನಗಳು ಸೂಚಿಸುತ್ತವೆ. ಭಾರತದ ಆರ್ಥಿಕ ಬೆಳವಣಿಗೆಯು ಸುಸ್ಥಿರ ಉದ್ಯೋಗ ಮತ್ತು ಬಡತನವನ್ನು ಕಡಿಮೆಮಾಡುವುದಕ್ಕೆ ಚಾಲಕವಾಗಿದೆ ಎಂದು ಇನ್ನೂ ಇತರ ಅಧ್ಯಯನಗಳು ವರದಿ ಮಾಡುತ್ತವೆ. ಆದರೆ ಗಣನೀಯ ಸಂಖ್ಯೆಯ ಜನರು ಬಡವರಾಗಿ ಉಳಿದಿದ್ದಾರೆ. ೨೦೦೬ ಮತ್ತು ೨೦೧೬ರ ನಡುವೆ ಭಾರತವು ೨೭೧ ದಶಲಕ್ಷ ಜನರನ್ನು ಬಡತನದಿಂದ ಹೊರಗೆ ಎತ್ತಿ ಈ ಅವಧಿಯಲ್ಲಿ ಸ್ವತ್ತುಗಳು, ಅಡುಗೆ ಇಂಧನ, ನೈರ್ಮಲ್ಯ ಮತ್ತು ಪೌಷ್ಟಿಕತೆಯಂತಹ ಕ್ಷೇತ್ರಗಳಲ್ಲಿ ಉತ್ತಮವಾದ ಸುಧಾರಣೆಗಳೊಂದಿಗೆ ಬಹುಆಯಾಮದ ಬಡತನ ಸೂಚ್ಯಂಕದ ಪರಿಮಾಣಗಳಲ್ಲಿ ಅತಿ ವೇಗದ ಕಡಿತವನ್ನು ದಾಖಲಿಸಿತು. ೨೦೧೯ರ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತವು (೧೧೭ ದೇಶಗಳಲ್ಲಿ) ೧೦೨ನೇ ಸ್ಥಾನ ಪಡೆಯಿತು ಮತ್ತು ತೀವ್ರತೆಯಲ್ಲಿ 'ಗಂಭೀರ' ಎಂದು ವರ್ಗೀಕರಿಸಲ್ಪಟ್ಟಿತು. ಉದ್ಯೋಗ ಕೃಷಿ ಮತ್ತು ಸಂಬಂಧಿತ ವಲಯಗಳು 2009–10 ರಲ್ಲಿ ಒಟ್ಟು ಕಾರ್ಯಪಡೆಯ ಸುಮಾರು ೫೨.೧% ರಷ್ಟನ್ನು ರೂಪಿಸಿದ್ದವು. ಕಾಲ ಕಳೆದಂತೆ ಉದ್ಯೋಗದಲ್ಲಿರುವ ಕಾರ್ಮಿಕರ ಪ್ರತಿಶತದಲ್ಲಿ ಕೃಷಿ ಉದ್ಯೋಗವು ಕಡಿಮೆಯಾಗಿದೆಯಾದರೂ, ನಿರ್ಮಾಣ ಮತ್ತು ಮೂಲಸೌಕರ್ಯ ಸೇರಿದಂತೆ ಸೇವೆಗಳ ಭಾಗವು ಉದ್ಯೋಗದಲ್ಲಿ ಸ್ಥಿರವಾಗಿ ಬೆಳೆದಿದೆ ಮತ್ತು 2012–13 ರಲ್ಲಿ 20.3% ರಷ್ಟನ್ನು ರೂಪಿಸಿತ್ತು. ಒಟ್ಟು ಕಾರ್ಯಪಡೆಯಲ್ಲಿ, 7% ಸಂಘಟಿತ ವಲಯದಲ್ಲಿದೆ. ಇದರಲ್ಲಿ ಮೂರನೇ ಎರಡು ಭಾಗ ಸರ್ಕಾರ ನಿಯಂತ್ರಿತ ಸಾರ್ವಜನಿಕ ವಲಯದಲ್ಲಿದೆ. ಸುಮಾರು 51.2% ಕಾರ್ಯಪಡೆಯು ಸ್ವ ಉದ್ಯೋಗಿಯಾಗಿದೆ. 2005–06ರ ಒಂದು ಸಮೀಕ್ಷೆಯ ಪ್ರಕಾರ, ಉದ್ಯೋಗ ಮತ್ತು ಸಂಬಳಗಳಲ್ಲಿ ಲಿಂಗ ಅಂತರವಿದೆ. ಗ್ರಾಮೀಣ ಪ್ರದೇಶಗಳಲ್ಲಿ, ಪುರುಷರು ಮತ್ತು ಮಹಿಳೆಯರಿಬ್ಬರೂ ಮುಖ್ಯವಾಗಿ ಸ್ವ ಉದ್ಯೋಗಿಗಳಾಗಿದ್ದಾರೆ, ಬಹುತೇಕವಾಗಿ ಕೃಷಿಯಲ್ಲಿ. ನಗರ ಪ್ರದೇಶಗಳಲ್ಲಿ, ೨೦೦೬ರಲ್ಲಿ ಸಂಬಳವಿರುವ ಕೆಲಸವು ಗಂಡಸರು ಮತ್ತು ಹೆಂಗಸರು ಇಬ್ಬರಿಗೂ ಉದ್ಯೋಗದ ಅತಿ ದೊಡ್ಡ ಮೂಲವಾಗಿತ್ತು. ಭಾರತದಲ್ಲಿ ನಿರುದ್ಯೋಗವು ದೀರ್ಘಕಾಲೀನ (ಮರೆಮಾಚಲ್ಪಟ್ಟ) ನಿರುದ್ಯೋಗದ ವಿಶೇಷ ಗುಣವನ್ನು ಹೊಂದಿದೆ. ಬಡತನ ಮತ್ತು ನಿರುದ್ಯೋಗ ಇವೆರಡೂ ಇತ್ತೀಚಿನ ದಶಕಗಳಲ್ಲಿ ಲಕ್ಷಾನುಗಟ್ಟಲೆ ಬಡ ಮತ್ತು ಕೌಶಲ್ಯರಹಿತ ಜನರು ಜೀವನೋಪಾಯದ ಹುಡುಕಾಟದಲ್ಲಿ ನಗರ ಪ್ರದೇಶಗಳಿಗೆ ಹೋಗುವಂತೆ ಮಾಡಿದೆ. ಇವೆರಡರ ನಿರ್ಮೂಲನೆಯ ಗುರಿಹೊಂದಿರುವ ಸರ್ಕಾರದ ಯೋಜನೆಗಳು ವ್ಯಾಪಾರಗಳನ್ನು ಪ್ರಾರಂಭಿಸಲು, ಕೌಶಲಗಳನ್ನು ಉತ್ತಮಗೊಳಿಸಲು, ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಸ್ಥಾಪಿಸಲು, ಸರ್ಕಾರಗಳಲ್ಲಿ ಮೀಸಲಾತಿ, ಇತ್ಯಾದಿಗಳಿಗೆ ಹಣಕಾಸು ನೆರವು ನೀಡುವ ಮೂಲಕ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುತ್ತವೆ. ಉದಾರೀಕರಣದ ನಂತರ ಸಾರ್ವಜನಿಕ ವಲಯದ ತಗ್ಗಿದ ಪಾತ್ರದ ಕಾರಣದಿಂದ ಉಂಟಾದ ಸಂಘಟಿತ ಉದ್ಯೋಗದಲ್ಲಿನ ಇಳಿತವು ಉತ್ತಮ ಶಿಕ್ಷಣದ ಮೇಲೆ ಕೇಂದ್ರೀಕರಿಸುವ ಅಗತ್ಯದ ಮೇಲೆ ಮತ್ತಷ್ಟು ಒತ್ತು ನೀಡಿ ಇನ್ನಷ್ಟು ಸುಧಾರಣೆಗಳಿಗೆ ರಾಜಕೀಯ ಒತ್ತಡವನ್ನು ಸೃಷ್ಟಿಸಿದೆ. ಅಭಿವೃದ್ಧಿಶೀಲ ದೇಶಗಳ ಗುಣಮಟ್ಟಗಳ ಪ್ರಕಾರವೂ ಭಾರತದ ಕಾರ್ಮಿಕ ನಿಯಂತ್ರಣಗಳು ತ್ರಾಸದಾಯಕವಾಗಿವೆ, ಮತ್ತು ಪರಿಸರವನ್ನು ಉದ್ಯೋಗ ಸೃಷ್ಟಿಗೆ ಹೆಚ್ಚು ಅನುಕೂಲಕರವಾಗಿ ಮಾಡಲು ಇವನ್ನು ತೆಗೆದುಹಾಕುವಂತೆ ಅಥವಾ ಮಾರ್ಪಾಡು ಮಾಡುವಂತೆ ವಿಶ್ಲೇಷಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ೧೧ನೇ ಪಂಚವಾರ್ಷಿಕ ಯೋಜನೆಯೂ ಬೇಕಾಗಿರುವ ಪರವಾನಗಿಗಳ ಮತ್ತು ಇತರ ಅಧಿಕಾರಶಾಹಿ ಅನುಮತಿಗಳ ಸಂಖ್ಯೆಯನ್ನು ಕಡಿಮೆಮಾಡುವ ಮೂಲಕ ಉದ್ಯೋಗ ಸೃಷ್ಟಿಗೆ ಹಿತಕರವಾದ ಪರಿಸರವನ್ನು ಸೃಷ್ಟಿಸುವ ಅಗತ್ಯವನ್ನು ಗುರುತಿಸಿದೆ. ಶಿಕ್ಷಣ ವ್ಯವಸ್ಥೆಯಲ್ಲಿನ ಅಸಮಾನತೆಗಳು ಮತ್ತು ಅಭಾವಗಳನ್ನು ಒಂದು ಅಡೆತಡೆಯೆಂದು ಗುರುತಿಸಲಾಗಿದೆ. ಇವು ಹೆಚ್ಚಿದ ಉದ್ಯೋಗಾವಕಾಶಗಳ ಲಾಭಗಳು ಸಮಾಜದ ಎಲ್ಲ ವಲಯಗಳಿಗೆ ತಲುಪುವುದನ್ನು ತಡೆಗಟ್ಟುತ್ತವೆ. ಭಾರತದಲ್ಲಿ ಬಾಲ ಕಾರ್ಮಿಕ ಪದ್ಧತಿಯು ಬಡತನದಲ್ಲಿ ಬೇರುಗಳನ್ನು ಹೊಂದಿರುವ ಸಂಕೀರ್ಣವಾದ ಸಮಸ್ಯೆಯಾಗಿದೆ. ೧೯೯೦ರ ದಶಕದಿಂದ, ಬಾಲ ಕಾರ್ಮಿಕ ಪದ್ಧತಿಯನ್ನು ನಿವಾರಿಸಲು ಸರ್ಕಾರವು ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಇವುಗಳಲ್ಲಿ ಶಾಲೆಗಳ ಸ್ಥಾಪನೆ, ಉಚಿತ ಶಾಲಾ ಊಟದ ಕಾರ್ಯಕ್ರಮಗಳ ಪ್ರಾರಂಭ, ವಿಶೇಷ ತನಿಖಾ ಕೋಶಗಳ ಸೃಷ್ಟಿ, ಇತ್ಯಾದಿಗಳು ಸೇರಿವೆ. ಭಾರತದಲ್ಲಿನ ಬಾಲಕಾರ್ಮಿಕ ಪದ್ಧತಿ ಮೇಲಿನ ಇತ್ತೀಚಿನ ಅಧ್ಯಯನಗಳು ಕೈಗಾರಿಕೆಗಳ ಕೆಲವು ವಿವಿಕ್ತ ಪ್ರದೇಶಗಳಲ್ಲಿ ಮಕ್ಕಳನ್ನು ನೇಮಿಸಿಕೊಳ್ಳಲಾಗಿದೆ, ಆದರೆ ಒಟ್ಟಾರೆಯಾಗಿ, ತುಲನಾತ್ಮಕವಾಗಿ ಕಡಿಮೆ ಸಂಖ್ಯೆಯಲ್ಲಿ ಭಾರತೀಯ ಮಕ್ಕಳು ಉದ್ಯೋಗ ಮಾಡುತ್ತಿದ್ದಾರೆಂದು ಪತ್ತೆಹಚ್ಚಿವೆ ಎಂದು ಲೇಖಕಿ ಸೋನಾಲ್ಡೆ ದೇಸಾಯಿ ಹೇಳಿದರು. ೧೦ ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಾರ್ಮಿಕರು ಈಗ ಅಪರೂಪವಾಗಿದ್ದಾರೆ. 10–14 ವಯೋವರ್ಗದಲ್ಲಿ, ಕೇವಲ ೨% ಮಕ್ಕಳು ಕೂಲಿಗಾಗಿ ಕೆಲಸಮಾಡುತ್ತಾರೆ, ಅನ್ಯ ೯% ಮಕ್ಕಳು ಬಿತ್ತನೆ ಮತ್ತು ಬೆಳೆಗಳ ಕೊಯ್ಲಿನಂತಹ ಹೆಚ್ಚಿನ ಕೆಲಸದ ಬೇಡಿಕೆಯ ಸಮಯದಲ್ಲಿ ತಮ್ಮ ತಂದೆತಾಯಿಗಳಿಗೆ ನೆರವಾಗಲು ತಮ್ಮ ಮನೆಯಲ್ಲಿ ಅಥವಾ ಗ್ರಾಮೀಣ ಹೊಲಗಳಲ್ಲಿ ಕೆಲಸಮಾಡುತ್ತಾರೆ ಎಂದು ಇತ್ತೀಚಿನ ಸಮೀಕ್ಷೆಗಳು ಕಂಡುಕೊಂಡಿವೆ. ಭಾರತವು ವಿಶ್ವದಾದ್ಯಂತ ಅತಿ ಹೆಚ್ಚಿನ ಸಂಖ್ಯೆಯ ವಲಸಿಗರನ್ನು ಹೊಂದಿದೆ (ಅಂದಾಜು ೧೬ ದಶಲಕ್ಷ ಜನರು). ಇವರಲ್ಲಿ ಅನೇಕರು ವಿದೇಶದಲ್ಲಿ ಕೆಲಸಮಾಡಿ ಹಣವನ್ನು ಸ್ವದೇಶದಲ್ಲಿರುವ ತಮ್ಮ ಕುಟುಂಬಗಳಿಗೆ ರವಾನೆ ಮಾಡುತ್ತಾರೆ. ಮಧ್ಯಪ್ರಾಚ್ಯ ಪ್ರದೇಶವು ವಿದೇಶವಾಸಿ ಭಾರತೀಯರ ಉದ್ಯೋಗದ ಅತಿ ದೊಡ್ಡ ಮೂಲವಾಗಿದೆ. ಸೌದಿ ಅರೇಬಿಯಾದ ಕಚ್ಚಾತೈಲ ಉತ್ಪಾದನೆ ಮತ್ತು ಮೂಲಸೌಕರ್ಯ ಉದ್ಯಮವು ೨ ದಶಲಕ್ಷಕ್ಕಿಂತ ಹೆಚ್ಚಿನ ವಲಸಿಗ ಭಾರತೀಯರಿಗೆ ಉದ್ಯೋಗ ನೀಡಿದೆ. ಸಂಯುಕ್ತ ಅರಬ್ ಎಮಿರೇಟ್ಸ್‌ನಲ್ಲಿನ ದುಬೈ ಮತ್ತು ಅಬು ಧಾಬಿಯಂತಹ ನಗರಗಳು ಇತ್ತೀಚಿನ ದಶಕಗಳಲ್ಲಿನ ನಿರ್ಮಾಣ ಭರಾಟೆಯ ಸಮಯದಲ್ಲಿ ಅನ್ಯ ೨ ದಶಲಕ್ಷ ಭಾರತೀಯರಿಗೆ ಉದ್ಯೋಗ ನೀಡಿವೆ. 2009–10ರಲ್ಲಿ, ವಿದೇಶದಲ್ಲಿರುವ ಭಾರತೀಯ ವಲಸೆ ಕಾರ್ಮಿಕರು ರವಾನಿಸಿದ ಹಣವು ೫೫.೫ ಶತಕೋಟಿ ಡಾಲರ್‌ಗಳಷ್ಟಿತ್ತು. ಇದು ವಿಶ್ವದಲ್ಲಿ ಅತಿ ಹೆಚ್ಚಿನ ಪ್ರಮಾಣವಾಗಿದೆ, ಆದರೆ ಎಫ಼್‍ಡಿಐನಲ್ಲಿ ಅವುಗಳ ಪಾಲು ಸುಮಾರು ೧% ನಷ್ಟಿದ್ದು ಕಡಿಮೆಯಿದೆ. ಆರ್ಥಿಕ ಸಮಸ್ಯೆಗಳು ಭ್ರಷ್ಟಾಚಾರ ಭಾರತದಲ್ಲಿ ಭ್ರಷ್ಟಾಚಾರವು ವ್ಯಾಪಕವಾದ ಸಮಸ್ಯೆಯಾಗಿದೆ. ೨೦೦೫ರಲ್ಲಿ ಟ್ರಾನ್‍ಸ್ಪರೆನ್ಸಿ ಇಂಟರ್‌ನ್ಯಾಷನಲ್ (ಟಿಐ) ನಡೆಸಿದ ಅಧ್ಯಯನದಲ್ಲಿ ಸಮೀಕ್ಷೆಗೊಳಗಾದ ಅರ್ಧಕ್ಕಿಂತ ಹೆಚ್ಚು ಜನ ಹಿಂದಿನ ವರ್ಷದಲ್ಲಿ ಒಂದು ಸಾರ್ವಜನಿಕ ಕಚೇರಿಯಲ್ಲಿ ಒಂದು ಕೆಲಸ ಮಾಡಿಸಿಕೊಳ್ಳಲು ಲಂಚ ನೀಡಿದ ಅಥವಾ ಪ್ರಭಾವವನ್ನು ಬಳಸಿದ ನೇರವಾದ ಅನುಭವ ಹೊಂದಿದ್ದು ಕಂಡುಬಂದಿತು. ಇದನ್ನು ಅನುಸರಿಸಿ ೨೦೦೮ರಲ್ಲಿ ನಡೆಸಿದ ಒಂದು ಅಧ್ಯಯನವು ಈ ಪ್ರಮಾಣವು ೪೦ ಪ್ರತಿಶತವೆಂದು ಕಂಡುಕೊಂಡಿತು. ೨೦೧೧ರಲ್ಲಿ, ಸಾರ್ವಜನಿಕ ವಲಯದ ಭ್ರಷ್ಟಾಚಾರದ ಗ್ರಹಿಸಿದ ಮಟ್ಟದಲ್ಲಿ ೧೮೩ ದೇಶಗಳಲ್ಲಿ ಭಾರತವು ೯೫ನೇ ಸ್ಥಾನಪಡೆಯಿತು. ೨೦೧೬ರ ವೇಳೆಗೆ, ಭಾರತದಲ್ಲಿ ಭ್ರಷ್ಟಾಚಾರ ಇಳಿದು ಅದರ ಸ್ಥಾನ ೭೯ಕ್ಕೆ ಸುಧಾರಿಸಿತು. ೧೯೯೬ರಲ್ಲಿ, ಕೆಂಪುಪಟ್ಟಿ, ಆಡಳಿತಶಾಹಿ ಮತ್ತು ಲೈಸೆನ್ಸ್ ರಾಜ್‍ಗಳು ಸಂಸ್ಥೀಕರಣಗೊಂಡ ಭ್ರಷ್ಟಾಚಾರ ಮತ್ತು ಅದಕ್ಷತೆಗೆ ಒಂದು ಕಾರಣವೆಂದು ಎಂದು ಸೂಚಿಸಲಾಗಿತ್ತು. ಭ್ರಷ್ಟಾಚಾರದ ಕಾರಣಗಳಲ್ಲಿ ಅತಿಯಾದ ನಿಯಂತ್ರಣಗಳು ಹಾಗೂ ಮಂಜೂರಾತಿ ಅಗತ್ಯಗಳು, ಕಡ್ಡಾಯದ ವ್ಯಯಿಸುವ ಕಾರ್ಯಕ್ರಮಗಳು, ಸರ್ಕಾರಿ ನಿಯಂತ್ರಣದ ಸಂಸ್ಥೆಗಳಿಂದ ಕೆಲವು ಸರಕುಗಳು ಹಾಗೂ ಸೇವೆ ಒದಗಿಸುವವರ ಏಕಸ್ವಾಮ್ಯ, ವಿವೇಚನಾಧಿಕಾರಗಳಿರುವ ಅಧಿಕಾರಶಾಹಿ, ಮತ್ತು ಪಾರದರ್ಶಕ ಕಾನೂನುಗಳು ಹಾಗೂ ಪ್ರಕ್ರಿಯೆಗಳ ಕೊರತೆ ಸೇರಿವೆ ಎಂದು ಹೆಚ್ಚು ಇತ್ತೀಚಿನ ವರದಿಗಳು ಸೂಚಿಸಿದವು. ಸೇವೆಗಳ ಗಣಕೀಕರಣ, ವಿವಿಧ ಕೇಂದ್ರ ಹಾಗೂ ರಾಜ್ಯ ನಿಗಾ ಆಯೋಗಗಳು ಮತ್ತು ೨೦೦೫ರ ಮಾಹಿತಿ ಹಕ್ಕು ಕಾಯ್ದೆಗಳು (ಇದರ ಪ್ರಕಾರ ಸರ್ಕಾರಿ ಅಧಿಕಾರಿಗಳು ನಾಗರಿಕರು ಕೇಳಿದ ಮಾಹಿತಿಯನ್ನು ಒದಗಿಸಬೇಕು ಇಲ್ಲದಿದ್ದರೆ ದಂಡನಾತ್ಮಕ ಕ್ರಮವನ್ನು ಎದುರಿಸಬೇಕು) ಭ್ರಷ್ಟಾಚಾರವನ್ನು ಗಣನೀಯವಾಗಿ ಕಡಿಮೆಮಾಡಿ ಕ್ಲೇಶನಿವಾರಣೆಗೆ ದಾರಿಗಳನ್ನು ತೆರೆದಿವೆ. ೨೦೧೧ರಲ್ಲಿ, ಬಹುತೇಕ ಖರ್ಚುಗಳು ಅವುಗಳ ಉದ್ದೇಶಿತ ಗ್ರಾಹಿಗಳನ್ನು ತಲುಪುವಲ್ಲಿ ವಿಫಲವಾಗುತ್ತವೆಂದು ಭಾರತದ ಸರ್ಕಾರವು ತೀರ್ಮಾನಕ್ಕೆ ಬಂದಿತು, ಏಕೆಂದರೆ ದೊಡ್ಡ ಮತ್ತು ಅಸಮರ್ಥ ಅಧಿಕಾರಶಾಹಿಯು ಸ್ವಲ್ಪ ಪಾಲನ್ನು ಕಬಳಿಸುತ್ತದೆ. ಭಾರತದ ಗೈರುಹಾಜರಿ ಪ್ರಮಾಣಗಳು ವಿಶ್ವದಲ್ಲಿನ ಅತಿ ಕಳಪೆ ಪ್ರಮಾಣಗಳ ಪೈಕಿ ಇವೆ; ೨೫% ಸರ್ಕಾರಿ ವಲಯದ ಶಿಕ್ಷಕರು ಮತ್ತು ೪೦% ಸರ್ಕಾರಿ ಸ್ವಾಮ್ಯದ ಸರ್ಕಾರಿ ವಲಯದ ವೈದ್ಯಕೀಯ ಕಾರ್ಮಿಕರು ಕಾರ್ಯಸ್ಥಳದಲ್ಲಿ ಕಂಡುಬರುವುದಿಲ್ಲ ಎಂದು ಒಂದು ಅಧ್ಯಯನವು ಕಂಡುಕೊಂಡಿತು. ಅದೇ ರೀತಿ, ಭಾರತೀಯ ವಿಜ್ಞಾನಿಗಳು ಎದುರಿಸುವ ಅನೇಕ ಸಮಸ್ಯೆಗಳಿವೆ. ಪಾರದರ್ಶಕತೆ, ಯೋಗ್ಯತಾಶಾಹಿ ವ್ಯವಸ್ಥೆ, ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನದ ಮೇಲ್ವಿಚಾರಣೆ ನೋಡಿಕೊಳ್ಳುವ ಅಧಿಕಾರಿಶಾಹಿ ಸಂಸ್ಥೆಗಳ ಕೂಲಂಕಷ ಪರೀಕ್ಷೆಗೆ ಬೇಡಿಕೆಗಳಿವೆ. ಭಾರತವು ಭೂಗತ ಅರ್ಥವ್ಯವಸ್ಥೆಯನ್ನು ಹೊಂದಿದ್ದು, ಸ್ವಿಸ್ ಬ್ಯಾಂಕ್‍ಗಳಲ್ಲಿ ಹೆಚ್ಚುಕಡಿಮೆ $1,456 ಶತಕೋಟಿಯಷ್ಟು ಹಣ ಅಡಗಿಸಿಟ್ಟಿದ್ದು ಭಾರತವು ಕಾಳಧನದ ವಿಶ್ವವ್ಯಾಪಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ೨೦೦೬ರ ಒಂದು ವರದಿಯು ಆಪಾದಿಸಿತು. ಇದು ದೇಶದ ಒಟ್ಟು ಬಾಹ್ಯ ಸಾಲದ ೧೩ ಪಟ್ಟಾಗುತ್ತದೆ. ಸ್ವಿಸ್ ಬ್ಯಾಂಕಿಂಗ್ ಸಂಘವು ಈ ಆಪಾದನೆಗಳನ್ನು ನಿರಾಕರಿಸಿದೆ. ಪ್ರಧಾನಮಂತ್ರಿ ಮೋದಿ ೮ ನವೆಂಬರ್ ೨೦೧೬ರಂದು ತೆಗೆದುಕೊಂಡ ಇತ್ತೀಚಿನ ಕ್ರಮವು ಕಾಳಧನವನ್ನು ಅರ್ಥವ್ಯವಸ್ಥೆಯೊಳಗೆ ವಾಪಸು ಮಾಡುವ ಸಲುವಾಗಿ ಎಲ್ಲ ೫೦೦ ಮತ್ತು ೧೦೦೦ ರೂಪಾಯಿಯ ಬ್ಯಾಂಕ್‍ನೋಟ್‍ಗಳ ಅಮಾನ್ಯೀಕರಣವನ್ನು (ಇವುಗಳನ್ನು ಹೊಸ ೫೦೦ ಮತ್ತು ೨೦೦೦ ರೂಪಾಯಿ ನೋಟಿಗಳಿಂದ ಬದಲಿಸಲಾಯಿತು) ಒಳಗೊಂಡಿತ್ತು. ಶಿಕ್ಷಣ ಪ್ರಾಥಮಿಕ ಶಿಕ್ಷಣದ ಹಾಜರಿ ಪ್ರಮಾಣವನ್ನು ಹೆಚ್ಚಿಸುವಲ್ಲಿ ಮತ್ತು ಸಾಕ್ಷರತೆಯನ್ನು ಜನಸಂಖ್ಯೆಯ ಸುಮಾರು ಶೇಕಡ ೭೫ಕ್ಕೆ ವಿಸ್ತರಿಸುವಲ್ಲಿ ಭಾರತವು ಪ್ರಗತಿ ಸಾಧಿಸಿದೆ. ೧೯೯೧ರಲ್ಲಿ ೫೨.೨% ಇದ್ದ ಸಾಕ್ಷರತಾ ಪ್ರಮಾಣ ೨೦೧೧ರಲ್ಲಿ ೭೪.೦೪% ಗೆ ಏರಿತು. ಪ್ರಾಥಮಿಕ ಮಟ್ಟದಲ್ಲಿ ಶಿಕ್ಷಣದ ಹಕ್ಕನ್ನು ೨೦೦೨ರ ಎಂಭತ್ತಾರನೇ ತಿದ್ದುಪಡಿಯ ಅಡಿಯಲ್ಲಿನ ಮೂಲಭೂತ ಹಕ್ಕುಗಳಲ್ಲಿ ಒಂದಾಗಿ ಮಾಡಲಾಗಿದೆ, ಮತ್ತು ಎಲ್ಲ ಮಕ್ಕಳಿಗೆ ಉಚಿತ ಶಿಕ್ಷಣವನ್ನು ಒದಗಿಸುವ ಉದ್ದೇಶಕ್ಕೆ ನೆರವಾಗಲು ಕಾನೂನನ್ನು ಜಾರಿಗೊಳಿಸಲಾಗಿದೆ. ಆದರೆ, ಸಾಕ್ಷರತಾ ಪ್ರಮಾಣವು ವಿಶ್ವವ್ಯಾಪಿ ಸರಾಸರಿಗಿಂತ ಕಡಿಮೆಯಿದೆ ಮತ್ತು ಶಿಕ್ಷಣವನ್ನು ನಡುವೆ ನಿಲ್ಲಿಸುವ ಪ್ರಮಾಣ ದೇಶದಲ್ಲಿ ಹೆಚ್ಚಿದೆ. ಸಾಕ್ಷರತಾ ಪ್ರಮಾಣಗಳು ಮತ್ತು ಶೈಕ್ಷಣಿಕ ಅವಕಾಶಗಳು ಪ್ರದೇಶ, ಲಿಂಗ, ನಗರ ಹಾಗೂ ಗ್ರಾಮೀಣ ಪ್ರದೇಶಗಳು, ಮತ್ತು ವಿಭಿನ್ನ ಸಾಮಾಜಿಕ ಗುಂಪುಗಳು ಬದಲಾದಂತೆ ಬದಲಾಗುತ್ತವೆ. ಆರ್ಥಿಕ ಅಸಮಾನತೆಗಳು ಬಡತನ, ಮೂಲಸೌಕರ್ಯದ ಲಭ್ಯತೆ ಮತ್ತು ಸಮಾಜಾರ್ಥಿಕ ಅಭಿವೃದ್ಧಿಯ ಸಂಬಂಧವಾಗಿ, ಭಾರತದ ವಿಭಿನ್ನ ರಾಜ್ಯಗಳು ಮತ್ತು ಪ್ರಾಂತ್ಯಗಳ ನಡುವೆ ಇರುವ ತೀವ್ರವಾದ ಮತ್ತು ಬೆಳೆಯುತ್ತಿರುವ ಪ್ರಾದೇಶಿಕ ವ್ಯತ್ಯಾಸಗಳು ಭಾರತದ ಆರ್ಥಿಕ ವ್ಯವಸ್ಥೆಯು ಎದುರಿಸುತ್ತಿರುವ ಗಂಭೀರ ಸಮಸ್ಯೆಯಾಗಿದೆ. ಆರು ಕಡಿಮೆ ಆದಾಯದ ರಾಜ್ಯಗಳಾದ – ಅಸ್ಸಾಂ, ಛತ್ತೀಸ್‍ಗಢ್, ನಾಗಾಲ್ಯಾಂಡ್, ಮಧ್ಯ ಪ್ರದೇಶ, ಒಡಿಶಾ ಮತ್ತು ಉತ್ತರ ಪ್ರದೇಶಗಳಲ್ಲಿ – ಭಾರತದ ಜನಸಂಖ್ಯೆಯ ಮೂರನೇ ಒಂದು ಭಾಗ ನೆಲೆಸಿದೆ. ಆದಾಯ, ಸಾಕ್ಷರತಾ ಪ್ರಮಾಣಗಳು, ಆಯುರ್ನಿರೀಕ್ಷೆ ಮತ್ತು ಇರುವ ಪರಿಸ್ಥಿತಿಗಳ ಸಂಬಂಧವಾಗಿ ರಾಜ್ಯಗಳ ನಡುವೆ ಗಂಭೀರವಾದ ಅಸಮಾನತೆಗಳಿವೆ. ಪಂಚವಾರ್ಷಿಕ ಯೋಜನೆಗಳು, ವಿಶೇಷವಾಗಿ ಉದಾರೀಕರಣ ಪೂರ್ವ ಯುಗದಲ್ಲಿ, ಆಂತರಿಕ ಪ್ರದೇಶಗಳಲ್ಲಿ ಕೈಗಾರಿಕಾಭಿವೃದ್ಧಿಯನ್ನು ಪ್ರೋತ್ಸಾಹಿಸುವ ಮತ್ತು ಕೈಗಾರಿಕೆಗಳನ್ನು ರಾಜ್ಯಗಳಾದ್ಯಂತ ಹಂಚುವ ಮೂಲಕ ಪ್ರಾದೇಶಿಕ ಅಸಮಾನತೆಗಳನ್ನು ತಗ್ಗಿಸಲು ಪ್ರಯತ್ನಿಸಿದವು. ಇದರ ಪರಿಣಾಮಗಳು ನಿರುತ್ಸಾಹಗೊಳಿಸುವಂತಿವೆ ಏಕೆಂದರೆ ಈ ಕ್ರಮಗಳು ಅದಕ್ಷತೆಯನ್ನು ಹೆಚ್ಚಿಸಿದವು ಮತ್ತು ಪರಿಣಾಮಕಾರಿ ಕೈಗಾರಿಕಾ ಬೆಳವಣಿಗೆಗೆ ತಡೆಯೊಡ್ಡಿದವು. ಸುವಿಕಸಿತ ಮೂಲಸೌಕರ್ಯ ಮತ್ತು ಸುಶಿಕ್ಷಿತ ಹಾಗೂ ಕೌಶಲ್ಯಯುತ ಕಾರ್ಯಪಡೆಯನ್ನು ಹೊಂದಿರುವ ಹೆಚ್ಚು ಮುಂದುವರಿದ ರಾಜ್ಯಗಳು ಉದಾರೀಕರಣದಿಂದ ಪ್ರಯೋಜನ ಪಡೆಯಲು ಹೆಚ್ಚು ಉತ್ತಮ ಸ್ಥಿತಿಯಲ್ಲಿವೆ ಏಕೆಂದರೆ ಇವು ಉತ್ಪಾದನಾ ಮತ್ತು ಸೇವಾ ವಲಯಗಳನ್ನು ಆಕರ್ಷಿಸುತ್ತವೆ. ಕಡಿಮೆ ಅಭಿವೃದ್ಧಿಹೊಂದಿದ ರಾಜ್ಯಗಳ ಸರ್ಕಾರಗಳು ತೆರಿಗೆ ತಗ್ಗಿಸುವ ಮತ್ತು ಅಗ್ಗದ ಭೂಮಿಯನ್ನು ನೀಡುವ ಮೂಲಕ ಅಸಮಾನತೆಗಳನ್ನು ಕಡಿಮೆಮಾಡಲು ಪ್ರಯತ್ನಿಸಿವೆ, ಮತ್ತು ಇತರ ವಲಯಗಳಿಗಿಂತ ಹೆಚ್ಚು ವೇಗವಾಗಿ ಅಭಿವೃದ್ಧಿಹೊಂದಬಹುದಾದ ಪ್ರವಾಸೋದ್ಯಮದಂತಹ ವಲಯಗಳ ಮೇಲೆ ಕೇಂದ್ರೀಕರಿಸಿವೆ. ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ (ಯುಎನ್‍ಡಿಪಿ) ಪ್ರಕಾರ, ಭಾರತದ ಆದಾಯ ಜಿನಿ ಗುಣಾಂಕವು 33.9 ಆಗಿದೆ. ಒಟ್ಟಾರೆ ಆದಾಯ ಹಂಚಿಕೆಯು ಪೂರ್ವ ಏಷ್ಯಾ, ಲ್ಯಾಟಿನ್ ಅಮೇರಿಕಾ ಮತ್ತು ಆಫ಼್ರಿಕಾಗಿಂತ ಹೆಚ್ಚು ಏಕಪ್ರಕಾರವಾಗಿದೆ ಎಂದು ಇದು ಸೂಚಿಸುತ್ತದೆ. ಭಾರತದ ಒಟ್ಟು ಸಂಪತ್ತಿನ 48% ನಷ್ಟನ್ನು ಹೆಚ್ಚಿನ ಒಟ್ಟು ಆದಾಯವಿರುವ ವ್ಯಕ್ತಿಗಳು ಹೊಂದಿದ್ದಾರೆ ಎಂದು ನ್ಯೂ ವರ್ಲ್ಡ್ ವೆಲ್ತ್ ಪ್ರಕಟಿಸಿದ ಜಾಗತಿಕ ಸಂಪತ್ತು ವಲಸೆ ಅವಲೋಕನ ೨೦೧೯ ವರದಿಯು ಅಂದಾಜಿಸಿತು. ಭಾರತದ ಆರ್ಥಿಕ ವಿಸ್ತರಣೆಯು ಬಡವರ ಪರವೋ ಅಥವಾ ಬಡತನ ವಿರೋಧಿಯೋ ಎಂಬ ಬಗ್ಗೆ ಮುಂದುವರಿದ ಚರ್ಚೆ ನಡೆದಿದೆ. ಆರ್ಥಿಕ ಬೆಳವಣಿಗೆಯು ಬಡವರ ಪರವಾಗಿದೆ ಮತ್ತು ಭಾರತದಲ್ಲಿನ ಬಡತನವನ್ನು ಕಡಿಮೆಮಾಡಿದೆ ಎಂದು ಅಧ್ಯಯನಗಳು ಸೂಚಿಸುತ್ತವೆ. ಭದ್ರತಾಪತ್ರಗಳ ಮಾರುಕಟ್ಟೆಗಳು ಜುಲೈ ೧೮೭೫ರಲ್ಲಿ ಮುಂಬೈ ಷೇರುಪೇಟೆ ಮತ್ತು ೧೮೯೪ರಲ್ಲಿ ಅಹ್ಮದಾಬಾದ್ ಷೇರುಪೇಟೆಯ ಆರಂಭದೊಂದಿಗೆ ಭಾರತದ ಭದ್ರತಾಪತ್ರ ಮಾರುಕಟ್ಟೆಗಳ ಬೆಳವಣಿಗೆಯು ಆರಂಭವಾಯಿತು. ಅಂದಿನಿಂದ, ೨೨ ಇತರ ಷೇರುಪೇಟೆಗಳು ಭಾರತೀಯ ನಗರಗಳಲ್ಲಿ ವ್ಯವಹಾರ ನಡೆಸಿವೆ. ೨೦೧೪ರಲ್ಲಿ, ಭಾರತದ ಷೇರುಪೇಟೆಯು ಮಾರುಕಟ್ಟೆ ನಿಷ್ಕರ್ಷಿತ ಮೌಲ್ಯದ ಪ್ರಕಾರ ವಿಶ್ವದ ೧೦ ನೇ ಅತಿ ದೊಡ್ಡ ಮಾರುಕಟ್ಟೆಯಾಯಿತು, ದಕ್ಷಿಣ ಕೊರಿಯಾ ಮತ್ತು ಆಸ್ಟ್ರೇಲಿಯಾದವುಗಳ ಸ್ವಲ್ಪ ಮೇಲೆ. ವಿಶ್ವ ಷೇರುಪೇಟೆಗಳ ಒಕ್ಕೂಟದ ಪ್ರಕಾರ, ಫ಼ೆಬ್ರುವರಿ ೨೦೧೫ರ ವೇಳೆಗೆ, ಭಾರತದ ಎರಡು ಪ್ರಮುಖ ಷೇರುಪೇಟೆಗಳಾದ ಬಿಎಸ್ಇ ಮತ್ತು ಭಾರತದ ರಾಷ್ಟ್ರೀಯ ಷೇರುಪೇಟೆಗಳು (ಎನ್ಎಸ್ಇ) $1.71 ಟ್ರಿಲಿಯನ್ ಮತ್ತು $1.68 ಟ್ರಿಲಿಯನ್‍ನಷ್ಟು ಮಾರುಕಟ್ಟೆ ನಿಷ್ಕರ್ಷಿತ ಮೌಲ್ಯವನ್ನು ಹೊಂದಿದ್ದವು. ಎನ್‍ವೈಎಸ್ಇ ಮತ್ತು ನ್ಯಾಸ್‍ಡ್ಯಾಕ್‍ಗೆ ಹೋಲಿಸಿದರೆ ಭಾರತದಲ್ಲಿನ ಆರಂಭಿಕ ಸಾರ್ವಜನಿಕ ಅರ್ಪಣೆಯ (ಐಪಿಒ) ಮಾರುಕಟ್ಟೆಯು ಚಿಕ್ಕದಾಗಿದ್ದು ೨೦೧೩ರಲ್ಲಿ $300 ದಶಲಕ್ಷದಷ್ಟು ಮತ್ತು ೨೦೧೨ರಲ್ಲಿ $1.4 ಶತಕೋಟಿಯಷ್ಟು ಸಂಗ್ರಹಿಸಿತು. ತಗ್ಗಿದ ಐಪಿಒ ಚಟುವಟಿಕೆಯು ಮಾರುಕಟ್ಟೆ ಪರಿಸ್ಥಿತಿಗಳು, ನಿಧಾನವಾದ ಸರ್ಕಾರಿ ಸಮ್ಮತಿ ಪ್ರಕ್ರಿಯೆಗಳು ಮತ್ತು ಸಂಕೀರ್ಣವಾದ ನಿಬಂಧನೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ಅರ್ನ್ಸ್ಟ್ ಮತ್ತು ಯಂಗ್ ಹೇಳಿತು. ೨೦೧೩ಕ್ಕಿಂತ ಮೊದಲು, ಭಾರತದ ಕಂಪನಿಗಳು ಮೊದಲು ಭಾರತದಲ್ಲಿ ಒಂದು ಐಪಿಒವನ್ನು ಮುಗಿಸುವ ಮುನ್ನ ಅಂತರರಾಷ್ಟ್ರೀಯವಾಗಿ ತಮ್ಮ ಭದ್ರತಾಪತ್ರಗಳನ್ನು ದಾಖಲಿಸುವಂತಿರಲಿಲ್ಲ. ೨೦೧೩ರಲ್ಲಿ, ಈ ಭದ್ರತಾಪತ್ರದ ಕಾನೂನುಗಳನ್ನು ಸುಧಾರಿಸಲಾಯಿತು ಮತ್ತು ಈಗ ಭಾರತೀಯ ಕಂಪನಿಗಳು ತಾವು ಎಲ್ಲಿ ಮೊದಲು ದಾಖಲಿಸಲು ಬಯಸುತ್ತವೆಂಬುದನ್ನು ಆಯ್ಕೆಮಾಡಬಹುದು: ವಿದೇಶದಲ್ಲಿ, ದೇಶೀಯವಾಗಿ, ಅಥವಾ ಒಂದೇ ಕಾಲದಲ್ಲಿ ಎರಡೂ ಕಡೆ. ಇದರ ಜೊತೆಗೆ, ಮೊದಲೇ ದಾಖಲಾಗಿರುವ ಕಂಪನಿಗಳ ವಿದೇಶಿ ದಾಖಲೆಗಳನ್ನು ಸರಾಗವಾಗಿಸಲು, ಭಾರತೀಯ ಕಂಪನಿಗಳಲ್ಲಿ ಖಾಸಗಿ ಸಮಭಾಗ ಮತ್ತು ಅಂತರರಾಷ್ಟ್ರೀಯ ಹೂಡಿಕೆದಾರರಿಗೆ ದ್ರವತೆಯನ್ನು ಹೆಚ್ಚಿಸಲು ಭದ್ರತಾಪತ್ರಗಳ ಕಾನೂನುಗಳನ್ನು ಪರಿಷ್ಕರಿಸಲಾಗಿದೆ. ನೋಡಿ ಭಾರತ ಗಣರಾಜ್ಯದ ಇತಿಹಾಸ ಹೊರ ಸಂಪರ್ಕ ‘ಇಂಡಿಯಾ ಅನ್‌ಮೇಡ್‌: ಹೌ ದಿ ಮೋದಿ ಗೌರ‍್ನಮೆಂಟ್‌ ಬ್ರೋಕ್‌ ದಿ ಎಕಾನಮಿ’ ಪುಸ್ತಕದಲ್ಲಿ ತಪ್ಪು ಆರ್ಥಿಕ ನೀತಿಗಳ ಬಗ್ಗೆ ತರಾಟೆ;;-ಅರ್ಥ ವ್ಯವಸ್ಥೆಯ ಬೆನ್ನೆಲುಬು ಮುರಿದ ಪ್ರಧಾನಿ ಮೋದಿ: ಮಾಜಿ ಬಿಜೆಪಿಯ ಅರ್ಥಮಂತ್ರಿ ಯಶವಂತ್ ಸಿನ್ಹಾ ಆರೋಪ;ಪಿಟಿಐ;: 22 ಡಿಸೆಂಬರ್ 2018; ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಆರ್ಥ ವವ್ಯಸ್ಥೆಯ ಬೆನ್ನೆಲುಬು ಮುರಿದ್ದಾರೆ ಎಂದು ಮಾಜಿ ಹಣಕಾಸು ಸಚಿವ ಯಶವಂತ್ ಸಿನ್ಹಾ ಆರೋಪಿಸಿದ್ದಾರೆ.’ ಎಂದು ಬಿಜೆಪಿ ಪಕ್ಷದ ಸಿನ್ಹಾ ಹೇಳಿದ್ದಾರೆ. ೨೦೧೯ರ ಆರ್ಥಿಕ ಹಿಂಜರಿತಕ್ಕೆ ಉತ್ತರ: ಉಲ್ಲೇಖ ಭಾರತ ಭಾರತದ ಅರ್ಥ ವ್ಯವಸ್ಥೆ
4032
https://kn.wikipedia.org/wiki/%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95%E0%B2%B0%20%E0%B2%A6%E0%B2%BF%E0%B2%A8%E0%B2%BE%E0%B2%9A%E0%B2%B0%E0%B2%A3%E0%B3%86
ಶಿಕ್ಷಕರ ದಿನಾಚರಣೆ
ಶಿಕ್ಷಕರ ದಿನಾಚರಣೆ ಶಿಕ್ಷಕರ ದಿನಾಚರಣೆಯು ಅನೇಕ ದೇಶಗಳಲ್ಲಿ ಆಚರಿಸಲಾಗುತ್ತದೆ. ಭಾರತದಲ್ಲಿ ಸರ್ವೆಪಲ್ಲಿ ರಾಧಾಕೃಷ್ಣನ್ರ ಗೌರವಾರ್ಥವಾಗಿ ಅವರ ಜನ್ಮದಿನವಾದ ಸೆಪ್ಟೆಂಬರ್ ೫ ರಂದು ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ಸರ್ವೆಪಲ್ಲಿ ರಾಧಾಕೃಷ್ಣನ್ರವರು [[ಭಾರತದ ರಾಷ್ಟ್ರಪತಿಗಳು|ಭಾರತದ
4033
https://kn.wikipedia.org/wiki/%E0%B2%AE%E0%B3%82%E0%B2%B0%E0%B3%8D%E0%B2%96%E0%B2%B0%20%E0%B2%A6%E0%B2%BF%E0%B2%A8%E0%B2%BE%E0%B2%9A%E0%B2%B0%E0%B2%A3%E0%B3%86
ಮೂರ್ಖರ ದಿನಾಚರಣೆ
ಮೂರ್ಖರ ದಿನಾಚರಣೆಯನ್ನು ವಿಶ್ವದಾದ್ಯಂತ ಏಪ್ರಿಲ್ ೦೧ ರಂದು ಆಚರಿಸಲಾಗುತ್ತದೆ. ಈ ದಿನವು ವದಂತಿ ಹಾಗೂ ಬಡಪಾಯಿಗಳನ್ನು ಗೋಳು ಹೊಯ್ದುಕೊಳ್ಳುವ ತುಂಟಾಟಗಳಿಗಾಗಿ ಪ್ರಸಿದ್ಧವಾಗಿದೆ. ಇತಿಹಾಸ ಮೂರ್ಖರ ದಿನಾಚರಣೆ ಎಂದಿನಿಂದ ಯಾರಿಂದ ಏಕೆ ಶುರುವಾಯಿತು ಎಂಬ ಬಗ್ಗೆ ಸ್ಪಷ್ಟ ಪುರಾವೆಗಳು ಸಿಕ್ಕಿಲ್ಲ. ಆದರೆ ೧೬ನೆಯ ಶತಮಾನದಲ್ಲಿ ನಡೆದ ಪಂಚಾಂಗ ಪದ್ಧತಿ ಬದಲಾವಣೆಯೇ ಇದಕ್ಕೆ ಕಾರಣವೆಂದು ಸಾಮಾನ್ಯವಾಗಿ ನಂಬಲಾಗಿದೆ. ರೋಮನ್ ಕಾಲದಿಂದಲೂ ನೂತನ ವರ್ಷದ ಆಚರಣೆಯನ್ನು ಮಾರ್ಚ್ ೨೫ ರಿಂದ ಪ್ರಾರಂಭಿಸಿ, ಒಂದು ವಾರದ ವರೆಗೆ ಆಚರಿಸಿ, ಏಪ್ರಿಲ್ ೦೧ರಂದು ಮುಕ್ತಾಯಗೊಳಿಸುತಿದ್ದರು. ಫ್ರಾನ್ಸಿನ ದೊರೆ ಒಂಭತ್ತನೆಯ ಚಾರ್ಲ್ಸ್ ೧೫೮೨ ರಲ್ಲಿ ಹೊಸ ಗ್ರೆಗೋರಿಯನ್ ಕ್ಯಾಲೆಂಡರ್ ಪದ್ಧತಿ ಘೋಷಿಸಿದ. ಹೊಸ ಪಂಚಾಂಗ ಪದ್ಧತಿ ಪ್ರಕಾರ ಜನವರಿ ೦೧, ನೂತನ ವರ್ಷದ ದಿನವಾಗಿತ್ತು. ಹಲವಾರು ಜನರಿಗೆ ಈ ಘೋಷಣೆ ತಲುಪಲಿಲ್ಲ ಹಾಗೂ ಅವರು ಸಂಪ್ರದಾಯ ಮುರಿಯಲು ನಿರಾಕರಿಸಿದರು ಎನ್ನಲಾಗಿದೆ. ಇಂಥವರನ್ನು 'ಮೂರ್ಖರು' ಎಂದು ಗೇಲಿ ಮಾಡಿ ಏಪ್ರಿಲ್ ೦೧ ಅನ್ನು ಅವರ ದಿನಾಚರಣೆಯಾಗಿ ಆಚರಿಸಲಾಗುತ್ತದೆ ಎಂದು ಪ್ರತೀತಿ. ಆಚರಣೆ ಇಂದಿಗೂ ಉದಯ ಟಿವಿ, ಈ-ಟಿವಿ ಕನ್ನಡ, ಎಂ.ಟಿ.ವಿ ಹಾಗೂ ಚಾನೆಲ್ ವಿ ಮುಂತಾದ ಕಿರುತೆರೆ ವಾಹಿನಿಗಳಲ್ಲಿ ಏಪ್ರಿಲ್ ೦೧ರಂದು ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ದಿನಾಚರಣೆಗಳು ಏಪ್ರಿಲ್
4040
https://kn.wikipedia.org/wiki/%E0%B2%87%E0%B2%82%E0%B2%A6%E0%B2%BF%E0%B2%B0%E0%B2%BE%20%E0%B2%97%E0%B3%8B%E0%B2%B8%E0%B3%8D%E0%B2%B5%E0%B2%BE%E0%B2%AE%E0%B2%BF
ಇಂದಿರಾ ಗೋಸ್ವಾಮಿ
ಇಂದಿರಾ ಗೋಸ್ವಾಮಿ(ಜನನ: ೧೯೪೨ - ೨೦೧೧) - ಸಮಕಾಲೀನ ಅಸ್ಸಾಮಿ ಸಾಹಿತ್ಯದ ಪ್ರಮುಖ ಲೇಖಕಿ . ಅಸ್ಸಾಮಿನ ಗುವಾಹಟಿಯವರು. ಮದುವೆಯಾದ ಕೆಲ ಸಮಯದಲ್ಲೇ, ತಮ್ಮ ಪತಿಯನ್ನು ಕಳೆದುಕೊಂಡ ಅವರ ಬಹಳಷ್ಟು ಕೃತಿಗಳಲ್ಲಿ ವಿಧವೆಯರ ಬದುಕಿನ ಚಿತ್ರಣಗಳಿವೆ. ಇಂದಿರಾ ಗೋಸ್ವಾಮಿ ಎಂಬುದು ಅವರು ಬರವಣಿಗೆಗೆ ಬಳಸಿಕೊಂಡ ಹೆಸರು. ಅವರ ನಿಜನಾಮ, ಮಮೋನಿ ರಾಯ್ಸೊಮ್ ಗೋಸ್ವಾಮಿ. <p> ಅವರ ಕಾದಂಬರಿಗಳು ತಮ್ಮ ಕಥಾಹಂದರಗಳ ನಾವೀನ್ಯತೆ ಹಾಗೂ ಸ್ವಂತಿಕೆಗೆ ಹೆಸರಾಗಿವೆ. ಪ್ರಮುಖ ಕೃತಿಗಳು ಅಹಿರಾನ್ ನೀಲಕಂಠಿ ಬ್ರಜ ದಂತಲ್ ಹಾತೀರ್ ಉನೆ ಖಾವಾ ಹೌದಾ ಆಧಲೇಖ ದಸ್ತಾವೇಜ್ (ಆತ್ಮಕಥನ) ಪ್ರಶಸ್ತಿಗಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೨೦೦೦ ಜ್ಞಾನಪೀಠ ಪ್ರಶಸ್ತಿ ಸಾಹಿತಿಗಳು ಅಸ್ಸಾಮಿ ಸಾಹಿತ್ಯ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು
4042
https://kn.wikipedia.org/wiki/%E0%B2%B5%E0%B3%8D%E0%B2%AF%E0%B2%BE%E0%B2%9F%E0%B2%BF%E0%B2%95%E0%B2%A8%E0%B3%8D%20%E0%B2%A8%E0%B2%97%E0%B2%B0
ವ್ಯಾಟಿಕನ್ ನಗರ
ವ್ಯಾಟಿಕನ್ ನಗರ - ಕ್ರೈಸ್ತರ ಪ್ರಮುಖ ಧಾರ್ಮಿಕ ಸ್ಥಳಗಳಲ್ಲೊಂದು. ವ್ಯಾಟಿಕನ್ ನಗರ-ಅಧಿಕೃತವಾಗಿ, 'ವ್ಯಾಟಿಕನ್ ನಗರ ರಾಜ್ಯ'. ವ್ಯಾಟಿಕನ್ ನಗರವು ಕ್ರಿಶ್ಚಿಯನ್ನರ ಅತ್ಯುಚ್ಚ ಧರ್ಮಗುರು ಪೋಪ್ ಅವರು ನೆಲೆಸಿರುವ ಸ್ಥಳ. ರೋಮ್ ನಗರದ ಮಧ್ಯಭಾಗದಲ್ಲಿ ಸ್ಥಿತವಾಗಿರುವ ವ್ಯಾಟಿಕನ್ ನಗರವು, ಸ್ವತಂತ್ರ ದೇಶವಾಗಿದೆ ಮತ್ತು 'ಪ್ರಪಂಚದಲ್ಲಿಯೇ ಅತ್ಯಂತ ಸಣ್ಣ ರಾಷ್ಟ್ರ'ವೆಂಬ ಹೆಗ್ಗಳಿಕೆಯನ್ನು ಪಡೆದಿದೆ. ಹೋಲಿ ಸೀ ಈ ನಗರದ ಅಧಿಕಾರವನ್ನು ಹೋಲಿ ಸೀ ಎಂಬ ರೋಮನ್ ಕ್ಯಾಥೋಲಿಕ್ ಚರ್ಚ್ ಪೀಠವು ನೆಡೆಸುತ್ತದೆ. ಈ ದೇಶದ ನಾಯಕತ್ವವನ್ನು ಮತ್ತು ಆಡಳಿತವನ್ನು ಪೋಪ್ ರವರಿಗೆ ನೀಡಲಾಗಿದೆ ಮತ್ತು ಸರ್ಕಾರದ ಪ್ರಮುಖರಾಗಿ ವ್ಯಾಟಿಕನ್ ರಾಜ್ಯ ಕಾರ್ಯದರ್ಶಿಯವರಿಗೂ ಮತ್ತು ವ್ಯಾಟಿಕನ್ ರಾಜ್ಯಪಾಲರಿಗೂ ಅಡಳಿತ ವಹಿಸಲಾಗಿದೆ. ಈಗಿನ ಪೋಪ್ ಪದವಿಯನ್ನು, ಪೋಪ್ ಹದಿನಾರನೇ ಬೆನೆಡಿಕ್ಟ್ ಅಲಂಕರಿಸಿದ್ದಾರೆ. ವಿಶ್ವದ ಅತಿದೊಡ್ಡ ಇಗರ್ಜಿ ಈ ನಗರದ ಮಧ್ಯಭಾಗದಲ್ಲಿ ತೆರೆದ ಕ್ರೈಸ್ತ ಧರ್ಮ ಗುರುಗಳು ಇರುವ ದೇವಾಲಯವಿದೆ. ಇದು ಪ್ರಪಂಚದಲ್ಲಿಯೇ ಅತಿ ದೊಡ್ಡ ಕ್ರೈಸ್ತ ದೇವಾಲಯ. ಈ ದೇವಾಲಯ ಧರ್ಮ ಪ್ರವರ್ತಕ ಸಂತ ಪೀಟರ್ ಅವರ ಸಮಾಧಿಯ ಮೇಲೆ ನಿರ್ಮಿಸಲ್ಪಟ್ಟಿದೆ. ಇಷ್ಟೇ ಅಲ್ಲದೆ ವ್ಯಾಟಿಕನ್ ಸಿಟಿಯಲ್ಲಿ ಮೈಕೆಲೆಂಜಲೋ ಮತ್ತಿತರರು ರಚಿಸಿದ ಕಲಾಕೃತಿಗಳ ಸಂಗ್ರಹ ಹಾಗೂ ವೈವಿಧ್ಯ ಶೈಲಿಯ ಕಟ್ಟಡ ವಿನ್ಯಾಸಗಳನ್ನು ಕಾಣಬಹುದು. ಇತಿಹಾಸ ಪ್ರವಾಸೋದ್ಯಮ ವಿಶ್ವ ಪರಂಪರೆಯ ತಾಣಗಳು
4043
https://kn.wikipedia.org/wiki/%E0%B2%95%E0%B2%A8%E0%B3%8D%E0%B2%A8%E0%B2%A1%20%E0%B2%95%E0%B2%BE%E0%B2%97%E0%B3%81%E0%B2%A3%E0%B2%BF%E0%B2%A4
ಕನ್ನಡ ಕಾಗುಣಿತ
ಕನ್ನಡ ಕಾಗುಣಿತವು ಕನ್ನಡ ಅಕ್ಷರಮಾಲೆಯಲ್ಲಿನ ಪ್ರತಿಯೊಂದು ವ್ಯಂಜನಗಳಿಗೂ ಪ್ರತಿಯೊಂದು ಸ್ವರವನ್ನು ಸೇರಿಸುವುದು ಹೇಗೆ ಎಂದು ತಿಳಿಸಿಕೊಡುವ ವ್ಯಾಕರಣದ ಕ್ರಮ. ಉದಾ: ಸ್ ವ್ಯಂಜನಕ್ಕೆ ಅ ಸ್ವರವನ್ನುಸೇರಿಸಿದಾಗ, ಸ ಬರುತ್ತದೆ. ರ್ ವ್ಯಂಜನಕ್ಕೆ ಓ ಸ್ವರವನ್ನು ಸೇರಿಸಿದಾಗ, ರೋ ಬರುತ್ತದೆ. ಒಂದು ವ್ಯಂಜನದ ಸಂಪೂರ್ಣ ಕಾಗುಣಿತ, ಆ ವ್ಯಂಜನದ ಎಲ್ಲಾ ಸ್ವರಗಳೊಂದಿಗಿನ ಸಂಬಂಧವನ್ನು ತೋರಿಸುತ್ತದೆ. ಕಾಗುಣಿತ ಬಳಕೆ ಯಾಕೆ ಬೇಕು? ಭಾರತದ ಯಾವುದೇ ಭಾಷೆಯಲ್ಲಿ ವಾಕ್ಯಗಳಲ್ಲಿ ಹೃಸ್ವ ಮತ್ತು ದೀರ್ಘ ಅಕ್ಷರಗಳನ್ನು ಬಳಸುವಾಗ ತುಂಬ ಜಾಗ್ರತೆಯಿಂದಿರಬೇಕು. ತಪ್ಪು ಪದಗಳ ಬಳಕೆಯಿಂದ ತಪ್ಪು ಅರ್ಥಗಳು ಬರುವ ಪದಗಳನ್ನು ಬಳಸುತ್ತೇವೆ. ಉದಾಹರಣೆಗೆ ಕನ್ನಡದಲ್ಲಿ ಬಳಕೆಯಾದ ಕೆಲವು ವಾಕ್ಯಗಳನ್ನು ಗಮನಿಸಬಹುದು. ಅವನಿಗೆ ಬಲ ಇದೆ, ಅವನಿಗೆ ಬಾಲ ಇದೆ. ನನಗೆ ಪುರಿ ಕೊಡಿ, ನನಗೆ ಪೂರಿ ಕೊಡಿ. ಬಿಡಿ ಕಾಸು ಸಿಕ್ಕಿದರೆ ಬೀಡಿ ತೆಗೆದುಕೋ. ಬಹಳ ಮೆರೆಯುವವನು ಮೇರೆ ತಪ್ಪುತ್ತಾನೆ. ನಾವು ಬೇರೆ ಬೇರೆ ಜನಗಳ ಜೊತೆ ಬೆರೆಯಬೇಕು. ಮೊದಲು ಮನೆಯನ್ನು ಹೊಗು ಆಮೆಲೆ ತೋಟಕ್ಕೆ ಹೋಗು ಕಾಗುಣಿತ ಪಟ್ಟಿ ಕನ್ನಡ ಕಾಗುಣಿತ ಸಂಪೂರ್ಣ ಪಟ್ಟಿ ಕನ್ನಡ ಕಾಗುಣಿತ ಅಕ್ಷರ ಚಿತ್ರ ಗ್ಯಾಲರಿ ಉಲ್ಲೇಖ ಕನ್ನಡ ಕನ್ನಡ ವ್ಯಾಕರಣ
4048
https://kn.wikipedia.org/wiki/%E0%B2%AE%E0%B2%B9%E0%B2%BE%E0%B2%AC%E0%B3%8B%E0%B2%A7%E0%B2%BF%20%E0%B2%A6%E0%B3%87%E0%B2%B5%E0%B2%BE%E0%B2%B2%E0%B2%AF
ಮಹಾಬೋಧಿ ದೇವಾಲಯ
ಮಹಾಬೋಧಿ ದೇವಾಲಯ ಸಂಕೀರ್ಣವು ಬೋಧಗಯಾ ದಲ್ಲಿರುವ ಬೌದ್ಧ ದೇವಾಲಯ. ಬಿಹಾರ ರಾಜ್ಯದ ಪಾಟ್ನಾ ನಗರದಿಂದ ೯೬ ಕಿ.ಮೀ. ಗಳ ದೂರದಲ್ಲಿರುವ ಇದು ಸಿದ್ದಾರ್ಥ ಗೌತಮನು ಬುದ್ಧನಾಗಿ ಪರಿವರ್ತಿತನಾದ ಪುಣ್ಯಸ್ಥಳವೆಂದೂ ಪ್ರಸಿಧ್ಧವಾಗಿದೆ. ಈ ದೇವಾಲಯದ ಪಕ್ಕದಲ್ಲೇ 'ಬುದ್ಧನ ಬೋಧಿ ವೃಕ್ಷ'ವಿದೆ. ಕರ್ನಾಟಕದ ರಾಜಧಾನಿಯಾದ ಬೆ೦ಗಳೂರಿನಲ್ಲಿ ದಕ್ಷಿಣ ಭಾರತದಲ್ಲೇ ದೊಡ್ಡದಾದ ಮತ್ತೊ೦ದು ಮಹಾಬೋಧಿ ದೇವಾಲಯವಿದೆ. ಇತಿಹಾಸ ಐತಿಹಾಸಿಕ ಸ್ಥಳಗಳು ಪ್ರವಾಸೋದ್ಯಮ ವಿಶ್ವ ಪರಂಪರೆಯ ತಾಣಗಳು ಬಿಹಾರ
4050
https://kn.wikipedia.org/wiki/%E0%B2%A7%E0%B3%8D%E0%B2%AF%E0%B2%BE%E0%B2%A8%E0%B3%8D%20%E0%B2%9A%E0%B2%82%E0%B2%A6%E0%B3%8D
ಧ್ಯಾನ್ ಚಂದ್
ಧ್ಯಾನ್ ಚಂದ್ (ಆಗಸ್ಟ್ ೨೯, ೧೯೦೫ - ಡಿಸೆಂಬರ್ ೩, ೧೯೭೯) ವಿಶ್ವ ಕ್ರೀಡಾ ಇತಿಹಾಸದಲ್ಲಿ ಅವಿಸ್ಮರಣೀಯಯರು. ಮೇಜರ್ ಧ್ಯಾನ್ ಚಂದ್ ಸಿಂಗ್ ಭಾರತವಷ್ಟೇ ಅಲ್ಲ, ಪ್ರಪಂಚದಲ್ಲಿಯೇ ಅತ್ಯಂತ ಶ್ರೇಷ್ಠ ಹಾಕಿ ಪಟು. ಇಡೀ ಪ್ರಪಂಚದಲ್ಲಿಯೇ ಇಲ್ಲಿಯವರೆಗೆ ಇವರನ್ನು ಸರಿಗಟ್ಟುವ ಯಾವ ಆಟಗಾರನೂ ಇಲ್ಲ ಎಂಬುದು ಅಚ್ಚರಿಯ ಸಂಗತಿ. ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ನನ್ನು ಬೆರಗುಗೊಳಿಸಿದ ಕ್ರೀಡಾ ಮಾಂತ್ರಿಕ. ಭಾರತ ಸರ್ಕಾರವು ಇವರಿಗೆ 'ಪದ್ಮ ವಿಭೂಷಣ' ಪ್ರಶಸ್ತಿಯನ್ನು ನೀಡಿದೆ. ದಾದಾ ಎಂದು ಪ್ರೀತಿಯಿಂದ ಕರೆಯಲ್ಪಡುತ್ತಿದ್ದ 'ಧ್ಯಾನ್' ವರನ್ನು ಅವರ ಕೋಚ್ 'ಪಂಕಜ್ ಗುಪ್ತ' ಅವರು 'ಚಾಂದ್' (ಚಂದ್ರ) ಎಂದು ಕರೆಯುತ್ತಿದ್ಧರು. ಅಲ್ಲದೇ ತಮ್ಮ ಶಿಷ್ಯ ಚಂದ್ರನಂತೆ ಬೆಳಗುತ್ತಾನೆ ಎಂದೂ ಭವಿಷ್ಯ ನುಡಿದಿದ್ದರು. ಉತ್ತರ ಪ್ರದೇಶ ದ ಪ್ರಯಾಗ್ ನಲ್ಲಿ ರಜಪೂತ್ ಕುಟುಂಬವೊಂದರಲ್ಲಿ ಆಗಸ್ಟ್ ೨೯ ೧೯೦೫ರಲ್ಲಿ ಧ್ಯಾನ್ ಚಂದ್ ಜನಿಸಿದರು. ಅವರ ತಂದೆ ಭಾರತೀಯ ಬ್ರಿಟೀಶ್ ಸೈನ್ಯದಲ್ಲಿ ಹವಾಲ್ದಾರ್ ಅಗಿದ್ದರು. ಪ್ರಯಾಗದಿಂದ ತದನಂತರ ಕುಟುಂಬವು 'ಝಾನ್ಸಿ' ನಗರಕ್ಕೆ ವಲಸೆ ಬಂದಿತು. ಹಾಕಿ ಆಟಗಾರನಾಗಿದ್ದು ಧ್ಯಾನ್ ಚಂದ್ ಶಾಲೆಯಲ್ಲಿ ಓದಿದ್ದು ಅತೀ ಕಡಿಮೆ. ಹದಿನಾರನೇ ವಯಸ್ಸಿಗೇ ಸೈನ್ಯಕ್ಕೆ ಸೇರಿದರು. ಕ್ರೀಡೆಯಲ್ಲೂ ಅಂತಹ ವಿಶೇಷ ಪರಿಣತಿ ಇರಲಿಲ್ಲ. ಸೈನ್ಯದಲ್ಲಿ ಸ್ನೇಹ ಪೂರ್ಣ ಪಂದ್ಯಗಳಲ್ಲಿ ಎಲ್ಲರೊಂದಿಗೆ ಆಡುತ್ತಿದ್ದರು. ೧೪ನೇ ಪಂಜಾಬ್ ರೆಜಿಮೆಂಟ್ ಸೇರಿದ ಧ್ಯಾನ್ ನನ್ನು ಸುಬೇದಾರ್-ಮೇಜರ್ ಭೋಲೆ ತಿವಾರಿಯವರು ಗಮನಿಸಿದರು. ಈತ ಆಡುವ ಆಟದಲ್ಲಿ ಏನೋ ವಿಶೇಷವಿದೆ ಎಂದು ಕಂಡ ಇವರು ಚಂದ್ ಅವರಿಗೆ ವೈಯಕ್ತಿಕವಾಗಿ ನಿಗಾವಹಿಸಿ ಹಾಕಿ ಆಟದ ವಿಶೇಷತೆಗಳ ಬಗೆಗೆ ಉತ್ತಮ ತರಬೇತಿ ನೀಡಿದರು. ಹೀಗೆ ಅವರು ಅಂದಿನ ಭಾರತೀಯ ಸೈನ್ಯದಲ್ಲಿ ಹಾಗೂ ವಿವಿಧ ವಲಯಗಳ ತಂಡಗಳ ಮಟ್ಟದಲ್ಲಿ ಆಡತೊಡಗಿದ ಮುಂದೆ ಅಂತರರಾಷ್ಟ್ರೀಯ ಮಟ್ಟದ ಆಟಗಾರರಾಗಿ ರೂಪುಗೊಂಡರು. ಅಂತರರಾಷ್ಟ್ರೀಯ ಮಟ್ಟದಲ್ಲಿ ೧೯೨೮ರಲ್ಲಿ ಭಾರತೀಯ ಹಾಕೀ ತಂಡವನ್ನು ಸೇರಿದ ಧ್ಯಾನ್ ಚಂದ್ ಅವರಿಗೆ, ನೆದರ್ ಲ್ಯಾಂಡ್ ನ ಆಮ್ ಸ್ಟೆರ್ ಡ್ಯಾಮ್ ನಲ್ಲಿ ಆಯೋಜಿಸಲಾದ ೧೯೨೮ರ ಬೇಸಗೆಯ ಒಲಂಪಿಕ್ ನಲ್ಲಿ ಭಾಗವಹಿಸುವ ಅವಕಾಶ ದೊರೆಯಿತು. ೩-೦ ಗೋಲ್ ಗಳಲ್ಲಿ ೨ ನ್ನು ಗಳಿಸುವ ಮೊಲಕ ಭಾರತೀಯ ತಂಡಕ್ಕೆ ನೆದರ್ ಲ್ಯಾಂಡನ್ನು ಸೋಲಿಸಲು ಸಹಾಯ ಮಾಡಿದ ಧ್ಯಾನ್ ಚಂದರ ಆಟಕ್ಕೇ ನೆರೆದ ಜನರು ಬೆರಗಾದರು. ಈ ಸರಣಿಯಲ್ಲಿ ಭಾರತೀಯ ಹಾಕಿ ತಂಡಕ್ಕೆ ಒಲಂಪಿಕ್ ಸ್ವರ್ಣ ಪದಕವು ದೊರೆತಿತು. ಧ್ಯಾನ್ ಹಂದ್ ೧೯೩೨ ಹಾಗು ೧೯೩೬ ರಲ್ಲಿ ನೆಡದ ಒಲಂಪಿಕ್ಸ್ ಗಳಲ್ಲಿ ಸ್ವರ್ಣ ಪದಕ ಪಡೆದ ಭಾರತದ ತಂಡದ ಸದಸ್ಯರಾಗಿದ್ದರು. ಹೀಗೆ ತಾವು ಆಡಿದ ಮೂರೂ ಒಲಿಂಪಿಕ್ಸ್ ಕ್ರೀಡೆಗಳಲ್ಲೂ ಭಾರತಕ್ಕೆ ಚಿನ್ನದ ಪದಕ ದೊರಕುವಲ್ಲಿ ಅವರು ಮಹತ್ತರವಾದ ಪಾತ್ರ ವಹಿಸಿದರು. ಆಡಿದ ಮೂರು ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ಒಟ್ಟು ಹನ್ನೆರಡು ಪಂದ್ಯಗಳಲ್ಲಿ ಧ್ಯಾನ್ ಚಂದ್ ಗಳಿಸಿದ ಒಟ್ಟು ಗೋಲುಗಳ ಸಂಖ್ಯೆ ೩೩. ದಂತಕತೆ ಧ್ಯಾನ್ ಚಂದ್ ಎಂಬ ಹೆಸರು ಒಂದು ರೀತಿಯಲ್ಲಿ ದಂತ ಕಥೆಯೇಆಗಿದೆ. ಆ ಕಾಲದಲ್ಲಿ ಫುಟ್ ಬಾಲ್ ಆಟದಲ್ಲಿ ಪೀಲೆ, ಕ್ರಿಕೆಟ್ಟಿನಲ್ಲಿ ಡೊನಾಲ್ಡ್ ಬ್ರಾಡ್ ಮನ್ ಅವರ ಸಾಧನೆಗಳು ಎಂತಿವೆಯೋ ಅಂತದ್ದೇ ಮಟ್ಟದ ಹೆಸರು ಧ್ಯಾನ್ ಚಂದ್ ಅವರದ್ದು. ಅವರ ಬಗೆಗಿರುವ ಕೆಲವು ಕಥಾನಕಗಳು ಹೀಗಿವೆ. ಒಮ್ಮೆ ಧ್ಯಾನ್ ಚಂದ್ ಅವರು ಆಡಿದ ಪಂದ್ಯದಲ್ಲಿ ಅವರಿಗೆ ಒಂದೂ ಗೋಲು ಗಳಿಸಲು ಸಾಧ್ಯವಾಗಲಿಲ್ಲವಂತೆ. ಕಡೆಗೆ ಧ್ಯಾನ್ ಚಂದ್ ಅವರು ಮ್ಯಾಚ್ ರೆಫರಿ ಅವರೊಂದಿಗೆ ವಾಗ್ವಾದ ಹೂಡಿ ನೇರವಾಗಿ “ಈ ಕ್ರೀಡಾಂಗಣದಲ್ಲಿ ಇರುವ 'ಗೋಲ್ ಪೋಸ್ಟ್' ಅಳತೆ ಅಸಮರ್ಪಕವಾದುದು, ಹಾಕಿ ಆಟದ ಅಂತರರಾಷ್ಟ್ರೀಯ ನಿಯಮಾವಳಿಗಳಿಗೆ ವ್ಯತಿರಿಕ್ತವಾದದ್ದು” ಎಂದು ನುಡಿದರಂತೆ. ಧ್ಯಾನ್ ಚಂದ್ ಅವರ ಅಭಿಪ್ರಾಯವನ್ನು ಮನ್ನಿಸಿ ನಿಜವಾದ ಅಳತೆ ಮಾಡಿದಾಗ ಧ್ಯಾನ್ ಚಂದ್ ಅವರ ಅಭಿಪ್ರಾಯ ಅಕ್ಷರಷಃ ನಿಜವಾಗಿತ್ತು. ೧೯೩೬ರ ಒಲಿಂಪಿಕ್ಸ್ ಪಂದ್ಯದಲ್ಲಿ ಭಾರತ ತಂಡವು ಜಯಗಳಿಸಿದ ನಂತರದಲ್ಲಿ, ಎಲ್ಲೆಡೆಯಲ್ಲೂ ಧ್ಯಾನ್ ಚಂದ್ ಅವರ ಹಾಕಿ ಮಾಂತ್ರಿಕತೆಯ ಆಟ ಪ್ರಸಿದ್ಧಿ ಪಡೆದು, ಪ್ರೇಕ್ಷಕರು ಇವರ ಆಟ ನೋಡಲು ಮುಗಿಬೀಳುತ್ತಿದ್ದರು. ಒಂದು ಜರ್ಮನ್ ಪತ್ರಿಕೆ ನೀಡಿದ ವರದಿ ಹೀಗಿತ್ತು. "ಹಾಕಿ ಆಟ ಇದೀಗ ಮ್ಯಾಜಿಕ್ ಷೋ ಕೂಡಾ ಆಗಿದೆ. ಭಾರತೀಯ ಹಾಕಿ ಆಟದ ಮ್ಯಾಜಿಕ್ ವ್ಯಕ್ತಿಯಾದ ಧ್ಯಾನ್ ಚಂದ್ ಅವರ ಆಟ ನೋಡಲಿಕ್ಕೆ ಇಂದು ಹಾಕಿ ಕ್ರೀಡಾಂಗಣಕ್ಕೆ ತಪ್ಪದೆ ಬನ್ನಿ". ಬರ್ಲಿನ್ ಒಲಿಂಪಿಕ್ಸ್ ಕ್ರೀಡೆಗಳಲ್ಲಿ ಧ್ಯಾನ್ ಚಂದ್ ಅವರ ಆಟ ಕಂಡ ಅಡೋಲ್ಫ್ ಹಿಟ್ಲರ್ ಧ್ಯಾನ್ ಚಂದ್ ಅವರಿಗೆ ಜರ್ಮನಿ ತಂಡದ ಪರವಾಗಿ ಆಡಲು ನೀಡಿದ ಪ್ರಲೋಭನೆಗಳೆಂದರೆ "ಬ್ರಿಟಿಷ್ ಸೇನೆಯಲ್ಲಿ ಮೇಜರ್ ಹುದ್ದೆ, ಜರ್ಮನಿಯ ಪೌರತ್ವ, ಕೊಲೋನೆಲ್ ಗೌರವದ ಕೊಡುಗೆ. ಆದರೆ ಇದನ್ನು ಧ್ಯಾನ್ ಚಂದರು ಸ್ವೀಕರಿಸಲಿಲ್ಲ. ಕ್ರಿಕೆಟ್ ಆಟದ ಸಾರ್ವಕಾಲಿಕ ತಾರೆ ಡಾನ್ ಬ್ರಾಡ್ ಮನ್, ಒಮ್ಮೆ ಅಡಿಲೈಡ್ ನಲ್ಲಿ ಧ್ಯಾನ್ ಚಂದ್ ಅವರನ್ನು ಮುಖಾ ಮುಖಿಯಾದಾಗ ಕೇಳಿದರಂತೆ "ಏನಪ್ಪಾ, ನಾವು ಕ್ರಿಕೆಟ್ನಲ್ಲಿ ರನ್ ಬಾರಿಸುವಂತೆ ನೀನು ಗೋಲುಗಳನ್ನು ಬಾರಿಸುತ್ತೀಯಲ್ಲ" ಎಂದು. ಜನಪ್ರಿಯತೆ ಧ್ಯಾನ್ ಚಂದ್ ಅವರಿಗೆ ಭಾರತದಲ್ಲಿ ಒಂದು ಪುತ್ಥಳಿ ಇರುವುದು ಏನೂ ವಿಶೇಷವಲ್ಲ ಬಿಡಿ. ಅವರ ಪುತ್ಥಳಿಯನ್ನು ಮೊದಲು ಸ್ಥಾಪಿಸಿದ್ದು ಆಸ್ಟ್ರಿಯಾದ ವಿಯೆನ್ನಾದಲ್ಲಿ ಎಂದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರ ಪ್ರಸಿದ್ಧಿ ಎಷ್ಟಿತ್ತೆಂಬುದನ್ನು ಊಹಿಸಬಹುದಾಗಿದೆ. ವಿದಾಯ ಎರಡನೆ ವಿಶ್ವಯುದ್ದ ಮುಗಿದ ಬಳಿಕವು ಕೆಲಕಾಲ ಆಡಿದ ಧ್ಯಾನ್ ಚಂದ್ ೧೯೪೮ರಲ್ಲಿ ತಮ್ಮ ೪೨ನೆ ವಯಸ್ಸಿನಲ್ಲಿ ಹಾಕಿ ಆಟದಿಂದ ನಿವೃತ್ತರಾದರು. ಧ್ಯಾನ್ ಚಂದರ ಸಹೊದರ ರೂಪ್ ಸಿಂಗ್ ಕೂಡ ಉತ್ತಮ ಆಟಗಾರರಾಗಿದ್ದರು. ಧ್ಯಾನ್ ಚಂದರ ಪುತ್ರ ಅಶೋಕ್ ಕುಮಾರ್ ಕೂಡ ಹಾಕಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಧ್ಯಾನ್ ಚಂದ್ ಜನ್ಮದಿನವಾದ ಆಗಸ್ಟ್ ೨೯ರ ದಿನವನ್ನು ಭಾರತದಲ್ಲಿ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಅವರು ೧೯೭೯ರ ಡಿಸೆಂಬರ್ ೩ರಂದು ನಿಧನರಾದರು ಬಾಹ್ಯ ಕೊಂಡಿಗಳು Dhyan Chand at PeopleForever.org The Indian who captivated even Hitler, Qaiser Mohammad Ali, Rediff.com Feature: Hockey's Genius - Dhyan Chand , Rohit Brijnath, PlanetFieldHockey.com Gulu Ezekiel and K. Arumugam, Great Indian Olympians K. Arumugam, Dhyan Chand Centenary, Hockey Yearbook 2006. A tribute to Dhyan Chand, Rediff.com ಕ್ರೀಡಾಪಟುಗಳು ಭಾರತದ ಕ್ರೀಡಾಪಟುಗಳು ಹಾಕಿ ಆಟಗಾರರು
4053
https://kn.wikipedia.org/wiki/%E0%B2%B5%E0%B3%80%E0%B2%A3%E0%B3%86%20%E0%B2%B8%E0%B3%81%E0%B2%AC%E0%B3%8D%E0%B2%AC%E0%B2%A3%E0%B3%8D%E0%B2%A3
ವೀಣೆ ಸುಬ್ಬಣ್ಣ
ವೀಣೆ ಸುಬ್ಬಣ್ಣ, ಹಳೆ ಮೈಸೂರು ಸಂಸ್ಥಾನದ ಶ್ರೇಷ್ಟ ಸಂಗೀತ ಕಲಾವಿದರಲ್ಲೊಬ್ಬರು. ಸುಬ್ಬಣ್ಣನವರ ಜನ್ಮ ೧೮೫೪ರಲ್ಲಿ ಪ್ರತಿಭಾವಂತ ಹಾಗು ಪ್ರತಿಷ್ಟಿತ ವೈಣಿಕರ ವಂಶದಲ್ಲಾಯಿತು. ಈ ವೈಣೆಕರ ತಲೆಮಾರಿನಲ್ಲಿ ಸುಬ್ಬಣ್ಣನವರದ್ದು ೨೫ನೆ ತಲೆ. ಸುಬ್ಬಣ್ಣನವರು ವೀಣಾ ತರಬೇತಿಯನ್ನು ತಮ್ಮ ತಂದೆಯವರಾದ ದೊಡ್ಡ ಶೇಷಣ್ಣನವರಲ್ಲಿ ಮೈಸೂರು ಸಂಸ್ಥಾನದ ಇನ್ನೊಬ್ಬ ಶ್ರೇಷ್ಟ ವೈಣಿಕರಾದ ವೀಣೆ ಶೇಷಣ್ಣನವರ ಜೊತೆಯಲ್ಲಿ ಕಲಿತರು. ಸುಬ್ಬಣ್ಣನವರು ತಂದೆ ದೊಡ್ಡ ಶೇಷಣ್ಣನವರು ಮೈಸೂರು ಆಸ್ಥಾನದ ಕಲಾವಿದರಾಗಿದ್ದರು. ಸುಬ್ಬಣ್ಣ ಮೈಸೂರಿನ ಪ್ರಸಿದ್ದ ವಾಗ್ಗೇಯಕಾರಾದ ಸದಾಶಿವರಾಯರ ಬಳಿ ಹಾಡುಗಾರಿಕೆಯಲ್ಲಿ ಕೂಡ ಶಿಕ್ಷಣ ಪಡೆದರು. ವೀಣೆ ಹಾಗು ಹಾಡುಗಾರಿಕೆಯಲ್ಲಿ ನಿಷ್ಣಾತರಾದ ಸುಬ್ಬಣ್ಣನವರನ್ನು ಮೈಸೂರಿನ ಅರಸರಾದ ಚಾಮರಾಜ ಒಡೆಯರು ತಮ್ಮ ಆಸ್ತಾನದ ವಿದ್ವಾಂಸರನ್ನಾಗಿ ನೇಮಿಸಿದರು. ಅನೇಕ ರಾಜ್ಯಗಳು ಹಾಗು ಸಂಸ್ತಾನಗಳಲ್ಲಿ ತಮ್ಮ ಸಂಗೀತ ಪ್ರತಿಭೆಯನ್ನು ತೋರಿ ಸುಬ್ಬಣ್ಣನವರು ವೈಣಿಕ ಕೇಸರಿ, ವೈಣಿಕ ವರಚೂಡಾಮಣಿ, ವೈಣಿಕ ಪ್ರವೀಣಂ ಇತ್ಯಾದಿ ಬಿರುದುಗಳನ್ನು ಪಡೆದರು. ಶ್ರೀಯುತರು ೧೯೩೦ರಲ್ಲಿ ನಂಜನಗೂಡಿನಲ್ಲಿ ನಡೆದ ಕರ್ನಾಟಕ ಸಂಗೀತ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ ಗೌರವಕ್ಕೆ ಕೂಡ ಪಾತ್ರರಾದರು. ಒಂದು ಕಾಲದಲ್ಲಿ ಆಗರ್ಭ ಶ್ರೀಮಂತರಾಗಿದ್ದ ಸನ್ಮಾನ್ಯರು ಕೊಡುಗೈ ದಾನಿ ಹಾಗು ಸಂಗೀತ ಕಲಾಪೋಷಕರು ಕೂಡ ಆಗಿದ್ದರು. ಅವರು ತಮ್ಮ ಮನೆಯಲ್ಲಿಯೆ ಹಲವಾರು ಸಂಗೀತಗಾರರ ಕಛೇರಿಗಳನ್ನು ಏರ್ಪಡಿಸಿ, ಸಂಗೀತಗಾರರಿಗೆ ಉಚಿತ ಸನ್ಮಾನವನ್ನು ಕೂಡ ಮಾಡುತಿದ್ದರು. ೮೫ ವರ್ಷಗಳ ತುಂಬು ಜೀವನ ನೆಡಸಿದ ಸುಬ್ಬಣ್ಣನವರು ೧೯೩೯ರಲ್ಲಿ ದಿವಂಗತರಾದರು. ಭಾರತದ ಸಂಗೀತಗಾರರು ಶಾಸ್ತ್ರೀಯ ಸಂಗೀತಗಾರರು ಕಲಾವಿದರು
4055
https://kn.wikipedia.org/wiki/%E0%B2%85%E0%B2%AC%E0%B3%8D%E0%B2%A6%E0%B3%81%E0%B2%B2%E0%B3%8D%20%E0%B2%95%E0%B2%B0%E0%B3%80%E0%B2%82%20%E0%B2%96%E0%B2%BE%E0%B2%A8%E0%B3%8D
ಅಬ್ದುಲ್ ಕರೀಂ ಖಾನ್
ಉಸ್ತಾದ್ ಅಬ್ದುಲ್ ಕರೀಂ ಖಾನ್ (ನವೆಂಬರ್ ೧೦,೧೮೭೨ - ೧೯೩೭) ಅವರ ಜೀವಿತ ಕಾಲದಲ್ಲಿ ಹಿಂದೂಸ್ತಾನಿ ಸಂಗೀತದ ಮೇರುವಾಗಿ ಗುರುತಿಸಲ್ಪಟ್ಟವರು. ೨೦ನೇ ಶತಮಾನದ ಉತ್ತಮ ಸಂಗೀತ ಪಟುಗಳಲ್ಲೊಬ್ಬರು. ಉತ್ತರ ಪ್ರದೇಶದ, ದೆಹಲಿಯ ಹತ್ತಿರದ ಕಿರಾಣಾದಲ್ಲಿ ಕಿರಾಣಾ ಘರಾಣ್ಯ ಕುಟುಂಬದಲ್ಲಿ ಜನಿಸಿದರು (ಕಿರಾಣಾ ಘರಾಣೆಯ ಪ್ರಮುಖರಲ್ಲಿ ಉಸ್ತಾದ್ ಗುಲಾಂ ಅಲಿ ಮತ್ತು ಗುಲಾಂ ಮೌಲಾ ಅತ್ಯಂತ ಪ್ರಸಿಧ್ಧರು). ಇವರ ತಂದೆ ಕಾಲೇ ಖಾನ್ ಅವರು ಗುಲಾಂ ಅಲಿಯವರ ಮೊಮ್ಮಗ. ಕರೀಂ ಖಾನರು ತಮ್ಮ ಸಂಗೀತ ವಿಧ್ಯಾಭ್ಯಾಸವನ್ನು ಚಿಕ್ಕಪ್ಪ ನಾನ್ಹೇ ಖಾನ್ ಮತ್ತು ತಂದೆಯವರ ಬಳಿ ಪ್ರಾರಂಭಿಸಿದರು. ಇವರು ಹಾಡು ಗಾರಿಕೆಯಲ್ಲದೇ ಸಾರಂಗೀ, ವೀಣೆ, ಸಿತಾರ್ ಮತ್ತು ತಬಲಾ ಗಳಲ್ಲಿ ಪರಿಣಿತರಾಗಿದಾರು. ಮುಂಬಯಿ ವಾಸ ಕರೀಮ ಖಾನ ಹಾಗು ಅವರ ಸೋದರ ಅಬ್ದುಲ್ ಹಕ್ ಇವರೀರ್ವರೂ ಬರೋಡಾದ ಮಹಾರಾಜರ ಆಸ್ಥಾನ ಗಾಯಕರಾಗಿದ್ದರು. ಅಲ್ಲಿ ಕರೀಮ ಖಾನರಿಗೆ ಸರದಾರ ಮಾರುತಿರಾವ ಮಾನೆಯವರ ಪುತ್ರಿ ತಾರಾಬಾಯಿಯೊಂದಿಗೆ ಪರಿಚಯವಾಗಿ, ಪ್ರೇಮ ಬೆಳೆಯಿತು. ಇವರೀರ್ವರೂ ಮದುವೆಯಾಗಲು ಬಯಸಿದಾಗ ಬರೋಡೆಯ ಮಹಾರಾಜರು ಈ ಪ್ರೇಮಿಗಳನ್ನು ಬರೋಡೆಯಿಂದ ಹೊರಹಾಕಿದರು. ಕರೀಮ ಖಾನ ಹಾಗು ತಾರಾಬಾಯಿ ಮುಂಬಯಿಗೆ ಬಂದು ನೆಲೆಸಿದರು. ಆದರೆ ೧೯೨೨ರಲ್ಲಿ ತಾರಾಬಾಯಿ ಅಬ್ದುಲ್ ಕರೀಮ ಖಾನರನ್ನು ತ್ಯಜಿಸಿದಳು. ಕರ್ನಾಟಕ ಸಂಪರ್ಕ ಅಬ್ದುಲ್ ಕರೀಮ ಖಾನರಿಗೆ ಮೈಸೂರು ಸಂಸ್ಥಾನದ ಒಡೆಯರಿಂದ ದೊರೆಯುತ್ತಿದ್ದ ಆಹ್ವಾನದ ಮೇರೆಗೆ ಖಾನಸಾಹೇಬರು ಮೇಲಿಂದ ಮೇಲೆ ಮೈಸೂರಿಗೆ ಹೋಗುತ್ತಿದ್ದರು. ಮೈಸೂರು ಒಡೆಯರು ಅವರಿಗೆ ಸಂಗೀತರತ್ನ ಎನ್ನುವ ಬಿರುದನ್ನು ನೀಡಿದ್ದಾರೆ. ಖಾನಸಾಹೇಬರು ತ್ಯಾಗರಾಜರ ಎರಡು ಕೀರ್ತನೆಗಳನ್ನೂ ಸಹ ಹಾಡಿದ್ದಾರೆ. ಧಾರವಾಡ,ಹುಬ್ಬಳ್ಳಿ,ಕುಂದಗೋಳ ಅಬ್ದುಲ್ ಕರೀಮ ಖಾನರು ಧಾರವಾಡ ಹಾಗು ಹುಬ್ಬಳ್ಳಿಗೆ ಬಂದಾಗ ಗಂಗೂಬಾಯಿ ಹಾನಗಲ್ ಅವರ ಮನೆಗೂ ಬಂದು (-ಅವರಿನ್ನೂ ಆಗ ಚಿಕ್ಕ ಬಾಲಕಿ-), ಅವರ ತಾಯಿ ಅಂಬಾಬಾಯಿಯವರನ್ನು ಭೇಟಿಯಾಗಿ ಅವರ ಹಾಡುಗಾರಿಕೆಯನ್ನು ಕೇಳುತ್ತಿದ್ದರು.ಹುಬ್ಬಳ್ಳಿಯಲ್ಲಿಯ ಸಿದ್ಧಾರೂಡ ಮಠಕ್ಕೆ ತಪ್ಪದೆ ಭೆಟ್ಟಿಕೊಟ್ಟು ಅಲ್ಲಿ ಹಾಡುತ್ತಿದ್ದರು. ಅಲ್ಲಿ ಒಂದು ದಿನ ಗ್ವಾಲಿಯರ ಘರಾನಾದ ಹಾಡುಗಾರ ರೆಹಮತ್ ಖಾನರವರ ಸಂಗೀತ ಕೇಳಿದ ಖಾನಸಾಹೇಬರು ಬೆರಗಾಗಿ ಹೋದರು. ಅವರಂತೆ ತಾನೂ ಹಾಡಬೇಕು, ತನ್ನ ಧ್ವನಿ ತಂತಿಯ ಹಾಗಾಗಬೇಕು ಎಂದು ಶ್ರದ್ದೆಯಿಂದ ಪ್ರಯತ್ನಿಸಿ, ಕೊನೆಗೂ ಅದನ್ನು ಸಾಧಿಸಿದರು. ಶಿಷ್ಯವೃಂದ ಕುಂದಗೋಳದ ಸವಾಯಿ ಗಂಧರ್ವರು ಖಾನಸಾಹೇಬರ ಸುಪ್ರಸಿದ್ಧ ಶಿಷ್ಯರು. ೧೯೧೩ರಲ್ಲಿ ಖಾನ ಸಾಹೇಬರು ಪುಣೆಯಲ್ಲಿ ಆರ್ಯ ಸಂಗೀತ ವಿದ್ಯಾಲಯವನ್ನು ಸ್ಥಾಪಿಸಿದರು. ಜೊತೆಗೆ ಮಿರಜದಲ್ಲಿ ಸಹ ಶಿಕ್ಷಣ ನೀಡುತ್ತಿದ್ದರು. ನಿಧನ ಖಾನಸಾಹೆಬರು ೧೯೩೭ರಲ್ಲಿ ಮಿರಜದಲ್ಲಿ ನಿಧನರಾದರು. ಸ್ಮೃತಿ ಸಮಾರಾಧನೆ ೧೯೪೧ರಲ್ಲಿ ಸವಾಯಿ ಗಂಧರ್ವರ ಶಿಷ್ಯೆಯಾದ ಕೃಷ್ಣಾಬಾಯಿಯವರು ಹುಬ್ಬಳ್ಳಿಯಲ್ಲಿ ಖಾನಸಾಹೇಬರ ಸ್ಮೃತಿದಿನ ಆಚರಿಸಲಾರಂಭಿಸಿದರು. ಅವರ ಶಿಷ್ಯವರ್ಗದ ಹಾಗು ಸಂಗೀತಪ್ರೇಮಿಗಳ ಸಹಕಾರದಿಂದ ಈ ಕಾರ್ಯಕ್ರಮ ಇನ್ನೂ ಮುಂದುವರೆಯುತ್ತಿದೆ. ಬಾಹ್ಯ ಸಂಪರ್ಕಗಳು 78 rpm recordings of Ustad's music Abdul Karim Khan recordings available on www.sarangi.info ಭಾರತದ ಸಂಗೀತಗಾರರು ಶಾಸ್ತ್ರೀಯ ಸಂಗೀತಗಾರರು ಹಿಂದುಸ್ತಾನಿ ಸಂಗೀತ
4057
https://kn.wikipedia.org/wiki/%E0%B2%AE%E0%B2%B2%E0%B3%8D%E0%B2%B2%E0%B2%BF%E0%B2%95%E0%B2%BE%E0%B2%B0%E0%B3%8D%E0%B2%9C%E0%B3%81%E0%B2%A8%20%E0%B2%AE%E0%B2%A8%E0%B3%8D%E0%B2%B8%E0%B3%82%E0%B2%B0%E0%B3%8D
ಮಲ್ಲಿಕಾರ್ಜುನ ಮನ್ಸೂರ್
ಮಲ್ಲಿಕಾರ್ಜುನ ಭೀಮರಾಯಪ್ಪ ಮನ್ಸೂರ್ (೧೯೧೧–೧೯೯೨) ಒಬ್ಬ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ. ಇವರು ಜೈಪುರ-ಅತ್ರೋಲಿ ಘರಾನಾದ 'ಖಯಾಲಿ' ಶೈಲಿಯ ಸಂಗಿತಗಾರರಾಗಿದ್ದರು. ಇವರಿಗೆ ೩ ಪದ್ಮ ಪ್ರಶಸಿಗಳನ್ನು ನೀಡಿ ಭಾರತ ಸರ್ಕಾರ ಗೌರವಿಸಿದೆ: ೧೯೭೦ರಲ್ಲಿ ಪದ್ಮಶ್ರೀ, ೧೯೭೬ರಲ್ಲಿ ಪದ್ಮ ಭೂಷಣ, ಮತ್ತು ೧೯೯೨ರಲ್ಲಿ ಪದ್ಮವಿಭೂಷಣ. ಮಲ್ಲಿಕಾರ್ಜುನ ಮನ್ಸೂರ್' ಕನ್ನಡ ನಾಡು ಕಂಡ ಶ್ರೇಷ್ಠ ಸಂಗೀತ ಪ್ರತಿಭೆ. ಇವರು ಹಾಡಿದ್ದು ಹಿಂದೂಸ್ತಾನಿ ಖಯಾಲ್ ಸಂಗೀತ ಶೈಲಿಯ ಜೈಪುರಿ-ಅತ್ರೊಲಿ ಘರಾಣೆಯಯಲ್ಲಿ. ನೀಲಕಂಠ ಬುವಾ ಮತ್ತು ಪ್ರಖ್ಯಾತ ಸಂಗೀತಕಾರ ಅಲ್ಲಾದಿಯಾ ಖಾನ್ ಅವರ ಪುತ್ರರಾದ ಮಂಜಿ ಖಾನ್ ಹಾಗೂ ಬುರಜಿ ಖಾನ್ ಇವರ ಸಂಗೀತ ಗುರುಗಳಲ್ಲಿ ಪ್ರಮುಖರಾಗಿದ್ದಾರೆ. ಸುಮಾರು ೬೦ ವರುಷಗಳಿಗಿಂತ ಹೆಚ್ಚು ಕಾಲ ದೇಶ-ವಿದೇಶಗಳಲ್ಲಿ ಸಂಗೀತ ಸುಧೆಯನ್ನು ಹರಿಸಿದ ಮಹಾನ್ ಸಂಗೀತಗಾರ ಮಲ್ಲಿಕಾರ್ಜುನ ಮನ್ಸೂರ್. ಬಾಲ್ಯದಲ್ಲಿ ನಾಟಕಗಳಲ್ಲಿ ಪಾತ್ರ ಮಾಡಿ, ಪ್ರಹ್ಲಾದ, ಧ್ರುವ, ನಾರದ ಮೊದಲಾದ ಪಾತ್ರಗಳ ಅಭಿನಯಕ್ಕಾಗಿ ಅಪಾರ ಜನಪ್ರಿಯತೆ ಗಳಿಸಿದರೂ, ಸಂಗೀತದ ಒಲವು ಅವರನ್ನು ಸಂಗೀತದ ಸಾಧನೆಗೆ ಕರೆದೊಯ್ಯಿತು. ಬಡ ಕುಟುಂಬದಿಂದ ಬಂದ ಮಲ್ಲಿಕಾರ್ಜುನ ಮನ್ಸೂರ್, ಸರಳ ಜೀವನ, ವಿನಯತೆ ಮತ್ತು ನೇರನುಡಿಗಾಗಿ ಪ್ರಸಿದ್ಧರು. ಸಂಗೀತವೇ ನನ್ನ ಜೀವನ, ನನ್ನ ಕಾಯಕ ಮತ್ತು ಪೂಜೆ ಎಂದು ಹೇಳಿ, ಬಾಳಿದವರು ಮಲ್ಲಿಕಾರ್ಜುನ ಮನ್ಸೂರ್. ಮಹಾತ್ಮ ಗಾಂಧೀಜಿ ಮತ್ತು ಧಾರವಾಡದ ಮುರುಘಾ ಮಠದ ಮೃತ್ಯುಂಜಯ ಮಹಾಸ್ವಾಮಿಗಳವರಿಂದ ಪ್ರಭಾವಿತರಾದ ಇವರು, ವಚನ ಸಂಗೀತಕ್ಕಾಗಿ ನೀಡಿದ ಕೊಡುಗೆ ಅಪಾರ. ಇವರು ತಮ್ಮ ಜೀವನ ಚಿತ್ರವನ್ನು "ನನ್ನ ರಸಯಾತ್ರೆ" ಎಂಬ ಹೆಸರಿನ ಪುಸ್ತಕದಲ್ಲಿ ದಾಖಲಿಸಿದ್ದಾರೆ. ದೇಶದ ಪ್ರತಿಷ್ಠತ ಪ್ರಶಸ್ತಿ ಕಾಳಿದಾಸ ಸಮ್ಮಾನ್ ಪಡೆದ ಪ್ರಥಮ ಕನ್ನಡಿಗ ಸಂಗೀತಗಾರರು ಇವರು. ಕರ್ನಾಟಕ ವಿಶ್ವವಿದ್ಯಾಲಯವು ಇವರಿಗೆ ಗೌರವ ಡಾಕ್ಟರೇಟ್ ನೀಡಿದೆ.ಭಾರತ ಸರಕಾರ ಇವರಿಗೆ ಪದ್ಮವಿಭೂಷಣಪ್ರಶಸ್ತಿಯನ್ನಿತ್ತು ಗೌರವಿಸಿದೆ. ಪ್ರಚಾರ, ರಾಜಕೀಯದಿಂದ ದೂರ ಉಳಿದ ಮಲ್ಲಿಕಾರ್ಜುನ ಮನ್ಸೂರ್ ಪ್ರಶಸ್ತಿಗಳು,ಸನ್ಮಾನಗಳಿಗಾಗಿ ಹಾತೊರಯಲಿಲ್ಲ. ಇವರ ಸುಪುತ್ರ ರಾಜಶೇಖರ ಮನ್ಸೂರ್ ತಂದೆಯಂತೆ ಪ್ರಸಿದ್ಧ ಸಂಗೀತಕಾರರಾಗಿದ್ದಾರೆ. ವೃತ್ತಿಜೀವನ ಮನ್ಸೂರ್ ಅವರು ದೊಡ್ಡ ಪ್ರಮಾಣದ ಅಪರೂಪದ (ಅಪ್ರಚಲಿತ) ರಾಗಗಳಾದ ಶುದ್ಧ ನಾಟ, ಅಸಾ ಜೋಜಿಯ, ಹೇಮ್ ನಾಟ್ , ಲಚಚಾಕ್, ಖಾತ್, ಶಿವಮತ್ ಭೈರವ್, ಬಿಹಾರಿ, ಸಂಪೂರ್ಣ ಮಾಲ್ಕೌಂಸ್, ಲಾಜವಂತಿ, ಅಡಂಬರಿ ಕೇದಾರ್, ಏಕ್ ನಿಶಾದ್ ಬಿಹಾಗ್ಡಾ ಮತ್ತು ಬಹಾದುರಿ ತೋಡಿ ಗಳನ್ನು ಜನಪ್ರಿಯಗೊಳಿಸಿದರು. ಹಾಡಿನ ಭಾವನಾತ್ಮಕ ವಿಷಯವನ್ನು ಅವರು ಕಳೆದುಕೊಳ್ಳದೇ ನಿರಂತರ, ಮಧುರ ಮತ್ತು ಮೀಟರ್ನಲ್ಲಿ ಹಾಡುತ್ತಿದ್ದರು ಅವರ ಧ್ವನಿ ಮತ್ತು ಶೈಲಿ ಮಂಜಿ ಖಾನ್ ಮತ್ತು ನಾರಾಯಣರಾವ್ ವ್ಯಾಸ್ನಂತೆ ಹೋಲುತ್ತಿತ್ತು, ಆದರೆ ಕ್ರಮೇಣ ಅವರು ತಮ್ಮ ಸ್ವಂತ ಶೈಲಿಯ ಚಿತ್ರಣವನ್ನು ಅಭಿವೃದ್ಧಿಪಡಿಸಿದರು. ಅವರು ಅವರ ಮಾಸ್ಟರ್ಸ್ ವಾಯ್ಸ್ ಜೊತೆಗೆ ಸಂಗೀತ ನಿರ್ದೇಶಕರಾಗಿದ್ದರು ಮತ್ತು ಆಲ್ ಇಂಡಿಯಾ ಆಕಾಶವಾಣಿ ಕೇಂದ್ರ ಧಾರವಾಡದಲ್ಲಿ ಸಂಗೀತ ಸಲಹೆಗಾರಾಗಿದ್ದರು. ಬಾಹ್ಯ ಸಂಪರ್ಕಗಳು Preserving Aprachalit Ragas by Rajshekhar Mansur Photo of Mallikarjun Mansur Mallikarjun Mansur : The Man and the Musician by H Y Sharada Prasad Streams of Mansur singing Dhwani - A BKF Mallikarjun Mansur Annual Music Festival, started in 2004 Preserving Aprachalit Ragas by Rajshekhar Mansur ಉಲ್ಲೇಖಗಳು + ೧೯೧೧ ಜನನ ೧೯೯೨ ನಿಧನ ಸಂಗೀತಗಾರರು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು ಭಾರತದ ಸಂಗೀತಕಾರರು ಹಿಂದುಸ್ತಾನಿ ಸಂಗೀತ ಭಾರತದ ಸಂಗೀತಗಾರರು
4059
https://kn.wikipedia.org/wiki/%E0%B2%95%E0%B3%81%E0%B2%AE%E0%B2%BE%E0%B2%B0%20%E0%B2%97%E0%B2%82%E0%B2%A7%E0%B2%B0%E0%B3%8D%E0%B2%B5
ಕುಮಾರ ಗಂಧರ್ವ
ಕುಮಾರ ಗಂಧರ್ವ (ಏಪ್ರಿಲ್ ೮,೧೯೨೪ - ಜನವರಿ ೧೨,೧೯೯೨) ಖ್ಯಾತ ಹಿಂದುಸ್ತಾನಿ ಗಾಯಕರು. ಇವರ ನೆನಪಿನಲ್ಲಿ ಬೆಳಗಾವಿ ಜಿಲ್ಲಾಡಳಿತ ಕುಮಾರ ಗಂಧರ್ವ ರಂಗ ಮಂದಿರ ವನ್ನು ನಿರ್ಮಿಸಿದೆ. ಜೀವನ ಕುಮಾರ ಗಂಧರ್ವರ ಜನ್ಮನಾಮ ಶಿವಪುತ್ರ ಕೊಂಕಾಳಿಮಠ. ಇವರು ಏಪ್ರಿಲ್‌ ೮, ೧೯೨೪ರಂದು ಬೆಳಗಾವಿ ಜಿಲ್ಲೆಯ ಸೂಳಿಭಾವಿಯಲ್ಲಿ ಜನಿಸಿದರು. ಇವರದ್ದು ಬಾಲಪ್ರತಿಭೆ. ಇನ್ನೂ ದಟ್ಟಡಿ ಇಡುವಾಗ ಒಂದು ದಿನ 'ನನಗೆ ಹಾಡಲು ಬರುತ್ತದೆ' ಎಂದ ಬಾಲಕನಿಗೆ ಹಾಡಲು ಬಂದೇ ಬಿಟ್ಟಿತ್ತು. ತಂದೆ ಸಿದ್ಧರಾಮಯ್ಯ ಸ್ವತಃ ಸಂಗೀತಗಾರರಾಗಿದ್ದರು. ಸೋದರಮಾವ ಕಲ್ಲಯ್ಯಸ್ವಾಮಿ ಸಂಬರಗಿಮಠ ಶಿರಹಟ್ಟಿ ವೆಂಕೋಬರಾಯರ ನಾಟಕ ಕಂಪನಿ, ವಾಮನರಾವ ಮಾಸ್ತರರ ನಾಟಕ ಕಂಪನಿ ಮತ್ತು ಸೀಮೀಕೇರಿ ನಾಟಕ ಕಂಪನಿಗಳಲ್ಲಿ ಗಾಯಕ ನಟರಾಗಿದ್ದರು. ಅವರು ಕುಮಾರ ಗಂಧರ್ವರಿಗೆ ನಾಲ್ಕು ವರ್ಷದವರಿದ್ದಾಗಲೆ ಸಂಗೀತದೀಕ್ಷೆ ನೀಡಿದರು. ಆ ಮೇಲೆ, ತಂದೆ ಜವಾಬ್ದಾರಿ ವಹಿಸಿಕೊಂಡರು. ಐದು ವರ್ಷದ ಬಾಲಕನಾಗಿದ್ದಾಗ ದಾವಣಗೆರೆಯಲ್ಲಿ ಪ್ರಥಮ ಕಚೇರಿ ನೀಡಿದರು. ಅದೊಂದು ದಾಖಲೆ. ಆರು ವರ್ಷದವನಿದ್ದಾಗ ಅವನ ಗಾಯನ ಕೇಳಿ ಗುಲ್ಬರ್ಗಾ ಜಿಲ್ಲೆಯ ಗುರುಕಲ್ಮಠದ ಶಾಂತವೀರ ಸ್ವಾಮಿಗಳು “ಓಹೋ! ಇವನು ಕುಮಾರ ಗಂಧರ್ವ” ಎಂದು ಉದ್ಗರಿಸಿದರು. ಆ ಹೆಸರೇ ಸ್ಥಿರವಾಯಿತು. ಅದೇ ಅವರ ಕಾಯಂ ಹೆಸರಾಯಿತು. ತಂದೆ ಮತ್ತು ಮಗ ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಗದಗ ಮುಂತಾದೆಡೆ ಕಾರ್ಯಕ್ರಮ ನೀಡಿದರು. ಕುಮಾರ ಗಂಧರ್ವನ ಸಂಗೀತಯಾತ್ರೆ ಕಲಕತ್ತಾ, ಆಗ್ರಾ, ಕರಾಚಿ, ನಾಗಪುರ ಮೂಲಕ ಮುಂಬಯಿಗೆ ಕೊಂಡೊ ಯ್ದಿತು. ಮಗನ ಪ್ರತಿಭೆಗೆ ಸಂಸ್ಕಾರದ ಅಗತ್ಯವನ್ನು ಮನಗಂಡ ಸಿದ್ಧರಾಮಯ್ಯನವರು ಕುಮಾರ ಗಂಧರ್ವನನ್ನು ಮುಂಬಯಿಯ ಪ್ರೊ. ಬಿ.ಆರ್. ದೇವಧರ ಅವರಲ್ಲಿ ಕರೆದೊಯ್ದರು. ದೇವಧರರು ಕುಮಾರಗಂಧರ್ವನಿಗೆ ತನ್ನದೇ ಪ್ರತಿಭೆಯನ್ನು ವಿಕಸಿಸಿಕೊಳ್ಳಲು ಪ್ರೋತ್ಸಾಹಿಸಿದರು. ಕುಮಾರ ಗಂಧರ್ವನಿಗೆ ರಾಗಗಳನ್ನು ಆಲಿಸಿ ಗೊತ್ತಿತ್ತು. ಕಲಿತು ಅಲ್ಲ, ದೇವಧರರು ಈ ಕೊರತೆಯನ್ನು ತುಂಬಿದರು. ಕುಮಾರ ಗಂಧರ್ವ 1933 ರಿಂದ 1943ರ ವರೆಗೆ ದೇವಧರರಲ್ಲಿ ಅಭ್ಯಾಸ ಮಾಡಿದರು. ಮುಂದೆ ಅಂಜನಿಬಾಯಿ ಮಾಲ್ಪೆಕರರು ಕುಮಾರ ಗಂಧರ್ವರಿಗೆ ಸಂಗೀತ ದೃಷ್ಟಿ ನೀಡಿದರು. ದೇವಧರರಲ್ಲಿ ಸಹಪಾಠಿಯಾಗಿದ್ದ ಮಂಗಳೂರಿನ ಭಾನುಮತಿ ಕಂಸರನ್ನು ಕುಮಾರ ಗಂಧರ್ವರು ಮದುವೆಯಾದರು. ಭಾನುಮತಿ ಕುಮಾರ ಗಂಧರ್ವರಲ್ಲಿ ತಮ್ಮ ಸಂಗೀತಾಭ್ಯಾಸ ಮುಂದುವರಿಸಿದರು. ಎರಗಿದ ದುರಂತ 1947ರಲ್ಲಿ ದುರಂತ ಎರಗಿತು. ಕುಮಾರ ಗಂಧರ್ವರಿಗೆ ಗಂಭೀರ ಪುಪ್ಪುಸ ಕ್ಷಯರೋಗ ತಗಲಿತು. ಇಂದಿನಂತೆ ಅಂದು ಕ್ಷಯರೋಗಕ್ಕೆ ಸಮರ್ಥ ಔಷಧೋಪಚಾರ ಇರಲಿಲ್ಲ. ಕುಮಾರ ಗಂಧರ್ವರ ಒಂದು ಪಪ್ಪುಸವನ್ನೆ ತೆಗೆಯಬೇಕಾಯಿತು. ಒಂದು ದಿನ ಪತ್ನಿ ಧೈರ್ಯ ಕಳೆದುಕೊಂಡು ಅತ್ತುಬಿಟ್ಟರು. ಎದೆಗುಂದದೆ ಕುಮಾರ ಗಂಧರ್ವ ಭರವಸೆ ನೀಡಿದರು: “ಚಿಂತಿಸದಿರು. ನಾನು ಹಾಡದ ವಿನಾ ಸಾಯುವುದಿಲ್ಲ.” ಜಾನಪದ ಸಂಗ್ರಹ ಕುಮಾರ ಗಂಧರ್ವ ಅವರಿಗೆ ಅನಾರೋಗ್ಯದ ಸಂದರ್ಭದಲ್ಲಿ ಹಾಡಲು ನಿಷೇಧವಿದ್ದರೂ ಸದಾಕಾಲ ಅವರ ಮನ ಸಂಗೀತವನ್ನೇ ಚಿಂತಿಸುತ್ತಿತ್ತು. ಮಾಳವಾ ಪ್ರದೇಶದ ಜಾನಪದ ಸಂಗೀತವನ್ನು ಅರಗಿಸಿಕೊಳ್ಳತೊಡಗಿದರು. ಇದಕ್ಕಾಗಿ ಬಹಳಷ್ಟು ಲೋಕಗೀತೆಗಳನ್ನು ಸಂಗ್ರಹಿಸಿದರು. ಅನೇಕ ಬೀಜಗಳು ಅಸ್ತಿತ್ವದಲ್ಲಿದ್ದ ರಾಗಗಳಿಗೆ ಸರಿಹೊಂದುತ್ತಿದ್ದವು. ಇನ್ನು ಕೆಲವಕ್ಕೆ ಹೊಸ ರಾಗರೂಪಗಳನ್ನು ಸೃಷ್ಟಿಸಿದರು. ಲೋಕಸಂಗೀತ ಮತ್ತು ಶಾಸ್ತ್ರೀಯ ಸಂಗೀತಗಳ ಬೆಸುಗೆ ಕುಮಾರ ಗಂಧರ್ವರ ವಿಶಿಷ್ಟ ಕೊಡುಗೆ. ಅನಾರೋಗ್ಯ ಒಂದು ವರವಾಯಿತು ಅನಾರೋಗ್ಯ ಒಂದು ರೀತಿಯಲ್ಲಿ ವರವೇ ಆಯಿತು. “ಅನಾರೋಗ್ಯಕ್ಕಿಂತ ಮೊದಲು ನಾನು ಸಂಗೀತವನ್ನು ಗಿಳಿಪಾಠದಂತೆ ಪುನರುಕ್ತಿಸುತ್ತಿದ್ದೆ. ಅನಾರೋಗ್ಯ ನನ್ನ ಆಂತರ್ಯದ ಬಾಗಿಲನ್ನು ತೆರೆಯಿತು” ಎಂದರು ಕುಮಾರ ಗಂಧರ್ವ. ಹಾಗಾಗಿಯೆ, ಅವರ ಸಂಗೀತಕ್ಕೆ ದಾರ್ಶನಿಕ ಮತ್ತು ಧ್ಯಾನಾತ್ಮಕ ಗಂಧವಿದೆ. ಸಂಗೀತದಲ್ಲಿ ಮರುಹುಟ್ಟು ಕುಮಾರ ಗಂಧರ್ವರು ಇನ್ನೇನು ಕಚೇರಿಗಳನ್ನು ಪುನರಾರಂಭಿಸಬೇಕು ಎನ್ನುವಷ್ಟರಲ್ಲಿ ಕುಮಾರ ಗಂಧರ್ವರು ಮಡದಿ ಭಾನುಮತಿಯನ್ನು ಕಳೆದುಕೊಂಡರು. ಶಿಷ್ಯಳಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ವಸುಂಧರಾ ಶ್ರೀಖಂಡೆ ಕೈಹಿಡಿದರು. ಜನವರಿ ೧೨, ೧೯೫೪. ಅಲಹಾಬಾದಿನ ಪ್ಯಾಲೆಸ್‌ ಥಿಯೇಟರ್ ಸಜ್ಜಾಗಿ ನಿಂತಿತ್ತು. ಏಳು ವರ್ಷದ ಮೌನದ ನಂತರ ಕುಮಾರ ಗಂಧರ್ವರ ಪ್ರಥಮ ಕಚೇರಿ. ಅವರ ಸಂಗೀತಯಾತ್ರೆಯಲ್ಲಿ ಅಲಹಾಬಾದದ್ದೂ ಮಹತ್ವದ ಪಾತ್ರ. ಹನ್ನೊಂದು ವರ್ಷದವರಿದ್ದಾಗ ಅಖಿಲ ಭಾರತ ಸಂಗೀತ ಸಮ್ಮೇಳನದಲ್ಲಿ ಹಾಡಿ ಹೆಸರು ಮಾಡಿದ್ದೂ ಈ ಅಲಹಾಬಾದಿನಲ್ಲೇ! ಈಗ ಮಧುರ ನಿರೀಕ್ಷೆಯ ವಾತಾವರಣ. ಕುಮರ ಗಂಧರ್ವರ ಧ್ವನಿ ಬದಲಾಗಿತ್ತು. ಅವರ ಶೈಲಿ ಮಂದ ಮಾರುತದಂತಿತ್ತು. ಅವರ ಭಿನ್ನ ಗಾಯನಶೈಲಿ ಸ್ವೀಕೃತವಾಯಿತು. ಅಭಿನಂದಿತವಾಯಿತು. ಕುಮಾರ ಗಂಧರ್ವ ಸಂಗೀತಾತ್ಮಕವಾಗಿ ಮರುಹುಟ್ಟು ಪಡೆದರು. ಹಲವು ಘರಾಣೆಗಳ ಉತ್ತಮಾಂಶಗಳನ್ನು ಹೀರಿಕೊಂಡಿದ್ದರೂ ಕುಮಾರ ಗಂಧರ್ವರ ಸೃಜನಶೀಲ ಚೇತನ ಘರಾಣೆ ಗಡಿಗಳನ್ನು ಮೀರಿತ್ತು. ಪ್ರಚಲಿತ ರಾಗಗಳನ್ನು ಪ್ರಸ್ತುಪಡಿಸುವಲ್ಲಿಯೆ ತೃಪ್ತಿ ಕಾಣದ ಕುಮಾರ ಗಂಧರ್ವ ಲೋಕಸಂಗೀತದ ಆದಿಮಲೋಕಕ್ಕೆ ಹೊರಳಿದರು. ಅಲ್ಲಿಂದ ಪುಟಿದೆದ್ದವು ಕುಮಾರ ಗಂಧರ್ವರ ಧುನ್‌ ಉಗಮ ರಾಗಗಳು. ಅವರು ೧೨ ರಾಗಗಳನ್ನು ಸೃಷ್ಟಿಸಿದ್ದಾರೆ: ಲಗನ ಗಾಂಧಾರ, ಮಾಲವತಿ, ಭಾವಮತ ಭೈರವ, ಸಾಂಜರಿ, ಮಘವಾ, ಸಹೇಲಿ ತೋಡಿ, ಮಧು ಸೂರಜ, ರಾಹಿ, ಅಹಿರಮೋಹಿನಿ, ಸೋಹನಿ ಭಟಿಯಾರ, ನಿಂದಿಯಾರಿ ಮತ್ತು ಗಾಂಧಿ ಮಲ್ಹಾರ. ಅನೇಕ ಸೃಷ್ಟಿಕರ್ತರು ತಾವು ಸೃಷ್ಟಿಸಿದ ರಾಗಗಳನ್ನು ಜನಪ್ರಿಯಗೊಳಿಸುವಲ್ಲಿ, ನೆಲೆಗೊಳಿಸುವಲ್ಲಿ ವಿಫಲರಾಗಿದ್ದಿದೆ. *ಆದರೆ, ಕುಮಾರ ಗಂಧರ್ವ ತಮ್ಮ ಎಲ್ಲ ರಚನೆಗಳನ್ನು ಕಚೇರಿಗಳಲ್ಲಿ ಹಾಡಿ ಶ್ರೋತೃಗಳನ್ನು ತಲೆದೂಗಿಸುತ್ತಿದ್ದರು. ಅದೇ ಮಾತನ್ನು ಗಾಂಧಿ ಮಲ್ಹಾರ ರಾಗದ ಬಗೆಗೆ ಹೇಳುವಂತಿಲ್ಲ. ಕುಮಾರ ಗಂಧರ್ವರ ಜೋಡು ರಾಗಗಳು ವಿರಳ ನವಿರನ್ನು ಹೊಂದಿವೆ. ಇದೂ ಅಲ್ಲದೆ, ಕುಮಾರ ಗಂಧರ್ವರು ಅಸ್ತಿತ್ವದಲ್ಲಿದ್ದ ರಾಗಗಳನ್ನು ಮತ್ತು ತಮ್ಮವೇ ರಾಗಗಳನ್ನು ಋತುಮಾನಕ್ಕನುಗುಣವಾಗಿ ವರ್ಗೀಕರಿಸಿ ಹಾಡುತ್ತಿದ್ದರು: ಗೀತ ವರ್ಷಾ (ಮಳೆಗಾಲ), ಗೀತ ಹೇಮಂತ (ಚಳಿಗಾಲ), ಗೀತ ವಸಂತ (ವಸಂತ ಕಾಲ), “ತ್ರಿವೇಣಿ”ಯು ಸೂರದಾಸ, ಕಬೀರ ಮತ್ತು ಮೀರಾ ಭಜನಗಳ ಗುಚ್ಛ. ಈ ಸಂತಕವಿಗಳ ಕೃತಿಗಳು, ಅವರ ಕಾಲ ಮತ್ತು ಪರಿಸರ, ಘಟನೆಗಳ ಸ್ಥಳ ಮೊದಲಾದವುಗಳ ವ್ಯಾಪಕ ಅಧ್ಯಯನದ ಫಲ ಈ ಗುಚ್ಛ. ಆದುದರಿಂದ, ಕುಮಾರ ಗಂಧರ್ವ ಈ ಭಜನೆಗಳಿಗೆ ಅವುಗಳ ರಚನೆಕಾರರ ವ್ಯಕ್ತಿತ್ವಕ್ಕೆ ತಕ್ಕಂಥ ರಾಗಗಳನ್ನು ಆಯ್ಕೆ ಮಾಡಲು ಸಾಧ್ಯವಾಯಿತು. ಈ ಸಂತರ ಆತ್ಮವನ್ನೇ ಪ್ರವೇಶಿಸಿರುವರೊ ಎನ್ನವಂತೆ ಈ ಭಜನಗಳನ್ನು ಅಷ್ಟೊಂದು ಭಾವನಾತ್ಮಕವಾಗಿ ಹಾಡುತ್ತಿದ್ದರು. ಭಜನೆಗಳು ಶಾಸ್ತ್ರೀಯ ಸಂಗೀತ ಕಚೇರಿಯ ಒಪ್ಪಿತ ಅಂಗವಾಗಿರುವುದಕ್ಕೆ ಕುಮಾರ ಗಂಧರ್ವರೆ ಬಹುಮಟ್ಟಿನ ಕಾರಣ. ಭಾರಿ ಯಶಸ್ಸು ಪಡೆದ ಅವರ “ಸುನತಾ ಹೈ ಗುರು ಗ್ಯಾನಿ” ಭಜನ ಇದೆಲ್ಲದಕ್ಕೆ ನಾಂದಿ ಹಾಡಿತು. ವಾಗ್ಗೇಯಕಾರ ಕುಮಾರ ಗಂಧರ್ವರು ೧೯೬೫ರಲ್ಲಿ ಅನೂಪ ರಾಗ ವಿಲಾಸ ಎಂಬ ಪುಸ್ತಕ ಪ್ರಕಟಿಸಿದರು. ಅದು ಅವರ ಹತ್ತು ವರ್ಷಗಳ ಸಂಶೋಧನೆಯ ಫಲ. ಅದರಲ್ಲಿ, ಪರಂಪರಾಗತ ರಾಗಗಳಿಗೆ ೧೦೭, ತಮ್ಮವೇ ರಾಗಗಳಿಗೆ ೧೭ ಮತ್ತು ಮಿಶ್ರ ರಾಗಗಳಿಗೆ ೧೨, ಹೀಗೆ ಒಟ್ಟು ೧೩೬ ಚೀಜು ಗಳಿವೆ. ತನ್ಮೂಲಕ ಕುಮಾರ ಗಂಧರ್ವರು ೧೮ನೆಯ ಶತಮಾನದ ಸದಾರಂಗ, ಅದಾರಂಗ, ಮನರಂಗ, ಹರರಂಗ ಮತ್ತು ೨೦ನೆಯ ಶತಮಾನದ ಅಲ್ಲಾದಿಯಾ ಖಾನ, ಫೈಯಾಜ ಖಾನ (ಪ್ರೇಮಪ್ರಿಯಾ), ವಿಲಾಯತ ಹುಸೇನ ಖಾನ್‌ ಅಗ್ರಾವಾಲೆ (ಪ್ರಾಣಪ್ರಿಯಾ), ಜಗನ್ನಾಥ ಬುವಾ ಪುರೋಹಿತ (ಗುಣಿದಾಸ), ಪಂಡಿತ ಎಸ್‌.ಎನ್‌. ರತನ್‌ಜನಕರ (ಸುಜನ), ಮಾಸ್ಟರ ಕೃಷ್ಣ ಮೊದಲಾದ ವಾಗ್ಗೇಯಕಾರರ ಮಾಲಿಕೆಗೆ ಸೇರಿದರು. ಧ್ಯಾನಾತ್ಮಕ ಅಭಿವ್ಯಕ್ತಿ ಕುಮಾರ ಗಂಧರ್ವರಿಗೆ ರಾಗಗಳು ಸ್ವರಗಳ ಸಂಯೋಜನೆ ಮತ್ತು ಪರಿವರ್ತನೆ ಮಾತ್ರವಾಗಿರಲಿಲ್ಲ. ಸಜೀವವಾಗಿದ್ದವು. ಹಾಗಾಗಿ, ಅವರ ಗಾಯನವೆಂದರೆ ತೀವ್ರ ಧ್ಯಾನಾತ್ಮಕ ಅಭಿವ್ಯಕ್ತಿಯಾಗಿದ್ದವು. ಚಿರಪರಿಚಿತ ಪರಂಪರಾಗತ ರಾಗಗಳೂ ಅವರ ಹಾಡಿಕೆಯಲ್ಲಿ ಹೊಸ ರೂಪ ತಳೆಯುತ್ತಿದ್ದವು. ಅನಿರೀಕ್ಷಿತ ಕೋನಗಳಿಂದ ತೋರ್ಪಡುತ್ತಿದ್ದವು. ಸೂಕ್ಷ್ಮದರ್ಶಕದಲ್ಲಿ ನೋಡುತ್ತಿರುವ ಅನುಭವವಾಗುತ್ತಿತ್ತು. ಗೌರವ, ಪ್ರಶಸ್ತಿಗಳು ಕುಮಾರ ಗಂಧರ್ವರಿಗೆ ಸಂದ ಕೆಲವು ಗೌರವಗಳು ಇಂತಿವೆ: ಉಜ್ಜನಿಯ ವಿಕ್ರಮ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌, ೧೯೭೩ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, ೧೯೯೦ ಪದ್ಮವಿಭೂಷಣ, ಕಾಳಿದಾಸ ಸಮ್ಮಾನ ೧೯೮೪. ಪರಿವಾರ ಕುಮಾರ ಗಂಧರ್ವರ ಮಡದಿ ವಸುಂಧರಾ, ಮಗಳು ಕಲಾಪಿನಿ ಕೋಂಕಾಳಿ ಹಾಗು ಮಗ ಮುಕುಲ ಶಿವಪುತ್ರ ಸಹ ಹಿಂದುಸ್ತಾನಿ ಸಂಗೀತಗಾರರು. ಸತ್ಯಶೀಲ ದೇಶಪಾಂಡೆ ಇವರ ಪ್ರಮುಖ ಶಿಷ್ಯರು. ವಿದಾಯ ೧೯೯೨ ಜನೆವರಿಯಲ್ಲಿ ಕುಮಾರ ಗಂಧರ್ವರು ನಿಧನರಾದರು. ಬಾಹ್ಯ ಸಂಪರ್ಕಗಳು ಕುಮಾರ ಗಂಧರ್ವ ಮ್ಯೂಸಿಕ್ ಇಂಡಿಯ ಆನ್ಲೈನ್‌ನಲ್ಲಿ ಕುಮಾರ ಗಂಧರ್ವ ಮಾಹಿತಿ ಕೃಪೆ ಸದಾನಂದ ಕನವಳ್ಳಿ ಅವರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಗ್ರಂಥ ‘ಕಲಾಚೇತನದಲ್ಲಿ ಮೂಡಿಸಿರುವ ಲೇಖನ ಸಂಗೀತ ಭಾರತದ ಸಂಗೀತಗಾರರು ಹಿಂದುಸ್ತಾನಿ ಸಂಗೀತ ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು
4061
https://kn.wikipedia.org/wiki/%E0%B2%AC%E0%B2%A1%E0%B3%87%20%E0%B2%97%E0%B3%81%E0%B2%B2%E0%B2%BE%E0%B2%82%20%E0%B2%85%E0%B2%B2%E0%B2%BF%20%E0%B2%96%E0%B2%BE%E0%B2%A8%E0%B3%8D
ಬಡೇ ಗುಲಾಂ ಅಲಿ ಖಾನ್
ಉಸ್ತಾದ್ ಬಡೇ ಗುಲಾಂ ಅಲಿಖಾನ್ ಹುಟ್ಟಿದ್ದು ೧೯೦೨ರಲ್ಲಿ - ಬ್ರಿಟಿಷ್ ಇಂಡಿಯಾದಲ್ಲಿದ್ದ ಲಾಹೋರ್ ಪ್ರಾಂತ್ಯದ ಕಸೂರ್ ನಲ್ಲಿ(ಈಗಿನ ಪಾಕಿಸ್ತಾನ). ಇವರು ಇಪ್ಪತ್ತನೇ ಶತಮಾನದ ಶ್ರೇಷ್ಠ ಹಿಂದುಸ್ತಾನಿ ಗಾಯಕರಲ್ಲಿ ಪ್ರಮುಖರು. ಪಶ್ಚಿಮ ಪಂಜಾಬ್ ನಲ್ಲಿರುವ ಸಂಗೀತಮಯ ಕುಟುಂಬದಲ್ಲಿ ಜನಿಸಿದ ಇವರು ಜೀವನದ ಎಲ್ಲಾ ಏಳುಬೀಳುಗಳನ್ನು ಕಂಡು ಆ ಅನುಭವಗಳ ಸಾರಹೀರಿ ಬೆಳೆದರು. ೧೯೪೪ರ ಹೊತ್ತಿಗೆ ಹಿಂದುಸ್ತಾನಿ ಸಂಗೀತದ ಅನಭಿಷಿಕ್ತ ಸಾಮ್ರಾಟರೆನಿಸಿಕೊಂಡರು. ಉಲ್ಲೇಖನಗಳು ಹಿಂದುಸ್ತಾನಿ ಸಂಗೀತ
4077
https://kn.wikipedia.org/wiki/%E0%B2%AB%E0%B2%BF%E0%B2%B2%E0%B2%BF%E0%B2%AA%E0%B3%8D%20%E0%B2%97%E0%B3%8D%E0%B2%B2%E0%B2%BE%E0%B2%B8%E0%B3%8D
ಫಿಲಿಪ್ ಗ್ಲಾಸ್
ಫಿಲಿಪ್ ಗ್ಲಾಸ್ (ಜನ್ಮ - ಜನವರಿ ೩೧, ೧೯೩೭) ಅಮೇರಿಕ ದ ಪ್ರತಿಭಾವಂತ ಸಂಗೀತಗಾರ. ಇವರು ಅನೇಕ ನಾಟಕ ಮತ್ತು ಹಾಲಿವುಡ್ ಚಲನಚಿತ್ರಗಳಿಗೆ ಸಂಗೀತವನ್ನು ನೀಡಿದ್ದಾರೆ. ಇವರ ಸಂಗೀತವನ್ನು ವಿಮರ್ಶಕರು "ಸರಳ ಶೈಲಿ" ಎಂದು ಬಣ್ಣಿಸಿದರೂ ಫಿಲಿಪ್ ಅದನ್ನು "ನಾಟಕೀಯ" ಎಂದೇ ಪರಿಗಣಿಸುತ್ತಾರೆ. ಬಾಹ್ಯ ಸಂಪರ್ಕಗಳು Philip Glass Q&A, Guardian, 29 November 2008 NewMusicBox cover: Philip Glass (includes video) Art of the States: Philip Glass Piece in the Shape of a Square (1967) Mad Rush performed by Andrew Drannon, Belvedere Chamber Music Festival, June 2012 Review of The Perfect American (2013), Philip Glass's opera about Walt Disney Einstein on the Beach, Dance No. 2 (piano), performed by Andrew Drannon, Luna Nova Ensemble (www.lunanoval.org) ಸಂಗೀತಗಾರರು ಪಾಶ್ಚಾತ್ಯ ಸಂಗೀತಗಾರರು
4079
https://kn.wikipedia.org/wiki/%E0%B2%AA%E0%B2%82%E0%B2%A1%E0%B2%BF%E0%B2%A4%E0%B3%8D%20%E0%B2%AD%E0%B2%9C%E0%B2%A8%E0%B3%8D%20%E0%B2%B8%E0%B3%8A%E0%B2%AA%E0%B3%8A%E0%B2%B0%E0%B2%BF
ಪಂಡಿತ್ ಭಜನ್ ಸೊಪೊರಿ
ಪಂಡಿತ್ ಭಜನ್ ಸೊಪೊರಿ ಭಾರತದ ಅತ್ಯಂತ ಶ್ರೇಷ್ಠ ಸಂತೂರ್ ಪಟು. ಪದ್ಮಶ್ರೀ, ಸಂಗೀತ ನಾಟಕ ಅಕಾಡೆಮಿ ಮತ್ತು ದೆಹಲಿ ತೆಲುಗು ಅಕಾಡೆಮಿ ಮತ್ತು ಹಲವಾರು ಪ್ರಶಸ್ತಿಗಳಿಂದ ಪುರಸೃತರಾಗಿದ್ದಾರೆ. ಸೂಫಿಯಾನಾ ಘರಾಣೆಯಲ್ಲಿ ಜನ್ಮಿಸಿದ ಇವರು, ಸಂತೂರ್ ವಾದ್ಯ ಸಂಗೀತಕ್ಕೆ ಅಂತರ ರಾಷ್ಟ್ರೀಯ ಮನ್ನಣೆ ಗಳಿಸಿಕೊಟ್ಟರು. ಸಂಗೀತಗಾರರು ವಾದ್ಯ ಸಂಗೀತಗಾರರು ಭಾರತದ ಸಂಗೀತಗಾರರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಹಿಂದುಸ್ತಾನಿ ಸಂಗೀತ